ಹಳಿಯಾಳ ಮೂಲದ ವಾಲ್ಟರ್ ಫರ್ನಾಂಡಿಸ್ ಅವರ ಲಿವರ್ ಹಾಳಾಗಿದ್ದರೂ ಅವರು ನಾಲ್ಕು ವರ್ಷ ಬದುಕಿದ್ದು, ಕೊಳೆತ ಸ್ಥಿತಿಯಲ್ಲಿ ಅವರ ಶವ ಸಿಕ್ಕಿದೆ. ಈ ಸಾವಿನ ಬಗ್ಗೆ ಶಿರಸಿಯಲ್ಲಿ ಶಿಕ್ಷಕರಾಗಿದ್ದ ಅವರ ಸಹೋದರ ಅಲೆಕ್ಸ ಫರ್ನಾಂಡಿಸ್ ಅನುಮಾನವ್ಯಕ್ತಪಡಿಸಿದ್ದಾರೆ.
ಅಲೆಕ್ಸ ಫರ್ನಾಂಡಿಸ್ ಅವರು ಶಿರಸಿಯ ನೀಲೆಕಣಿ ಬಳಿಯ ಅಗಸೆಬಾಗಿಲು ಬಳಿ ವಾಸವಾಗಿದ್ದರು. ಖಾಸಗಿ ಶಾಲೆಯಲ್ಲಿ ಶಿಕ್ಷಕರಾಗಿದ್ದ ಅವರು ಈಚೆಗೆ ನಿವೃತ್ತರಾಗಿದ್ದರು. ನಿವೃತ್ತಿ ನಂತರ ಅವರು ತಮ್ಮ ಮೂಲ ಊರಾದ ಹಳಿಯಾಳದ ಕಾನ್ವೆಂಟ್ ರೋಡಿನ ಮನೆಯಲ್ಲಿ ವಾಸವಿದ್ದರು.
ಅಲೆಕ್ಸ ಫರ್ನಾಂಡಿಸ್ ಅವರೇ ಹೇಳಿಕೊಂಡoತೆ ಅವರ ಸಹೋದರ ವಾಲ್ಟರ್ ಫರ್ನಾಂಡಿಸ್ ವಿಪರೀತ ಸರಾಯಿ ಕುಡಿಯುತ್ತಿದ್ದರು. ನಾಲ್ಕು ವರ್ಷದ ಹಿಂದೆ ವಾಲ್ಟರ್ ಫರ್ನಾಂಡಿಸ್ ಅವರಿಗೆ ಲಿವರ್ ಸಮಸ್ಯೆ ಕಾಣಿಸಿಕೊಂಡಿತ್ತು. ಕ್ರಮೇಣ ಲಿವರ್ ಸಂಪೂರ್ಣವಾಗಿ ಹಾಳಾಗಿತ್ತು. ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ವಾಲ್ಟರ್ ಫರ್ನಾಂಡಿಸ್ ಅವರು ಜುಲೈ 18ರಂದು ಜೀವಂತವಾಗಿದ್ದರು.
ಆದರೆ, ಜುಲೈ 23ರಂದು ಕೊಳೆತ ಸ್ಥಿತಿಯಲ್ಲಿ ವಾಲ್ಟರ್ ಫರ್ನಾಂಡಿಸ್ ಅವರ ಶವ ಸಿಕ್ಕಿದೆ. ಹೀಗಾಗಿ ಅವರ ಸಾವಿನಲ್ಲಿ ಅನೇಕ ಸಂಶಯ ಕಾಡುತ್ತಿದೆ ಎಂಬುದು ಅಲೆಕ್ಸ ಫರ್ನಾಂಡಿಸ್ ಅವರ ದೂರು. ಈ ಬಗ್ಗೆ ಅಲೆಕ್ಸ ಫರ್ನಾಂಡಿಸ್ ಅವರು ಶಿರಸಿ ನಗರಠಾಣೆ ಪೊಲೀಸರ ಬಳಿ ಹೇಳಿಕೊಂಡಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಶುರು ಮಾಡಿದ್ದಾರೆ.
Discussion about this post