ಭಟ್ಕಳದಿಂದ ಕಾರವಾರ ಕಾರಾಗೃಹಕ್ಕೆ ಬರುತ್ತಿದ್ದ ಕೈದಿಯೊಬ್ಬ ಕುಮಟಾದಲ್ಲಿ ಕಾರಿನಿಂದ ಕೆಳಗೆ ಹಾರಿ ಪರಾರಿಯಾಗಿದ್ದು, ಆತನಿಗಾಗಿ ಶೋಧ ಮುಂದುವರೆದಿದೆ.
ಭಟ್ಕಳದ ನ್ಯಾಯಾಲಯವೂ ಭಟ್ಕಳದ ಯಲ್ವಡಾಕಾಪುರ ಗಣೇಶನಗರ ಬಳಿಯ ಪುರವರ್ಗದ ಸಮೀರ್ ಭಾಷಾ ವಿರುದ್ಧ ವಾರೆಂಟ್ ಹೊರಡಿಸಿತ್ತು. ಜುಲೈ 25ರಂದು ಆತನನ್ನು ವಶಕ್ಕೆಪಡೆಯಲಾಗಿದ್ದು, ಅದೇ ದಿನ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ಅದಾದ ನಂತರ ಸಮೀರ್ ಭಾಷಾ ಅವರನ್ನು ಕಾರವಾರದ ಕಾರಾಗೃಹಕ್ಕೆ ಸ್ಥಳಾಂತರ ಕಾರ್ಯ ನಡೆಯುತ್ತಿತ್ತು.
ಭಟ್ಕಳ ನ್ಯಾಯಾಲಯದ ಬೇಲಿಪ್ ಕೆಲಸ ಮಾಡುವ ಗೋಪಾಲಕೃಷ್ಣ ಕುಡಾಳಕರ್ ಅವರು ಬಾಡಿಗೆ ಕಾರು ಮಾಡಿ ಅದರಲ್ಲಿ ಆರೋಪಿಯನ್ನು ಕೂರಿಸಿ ಕರೆದೊಯ್ಯುತ್ತಿದ್ದರು. ಆ ಕಾರು ಕುಮಟಾದ ಹೊಳಗದ್ದೆ ಟೋಲ್ ಬಳಿ ನಿಧಾನವಾಗಿದ್ದು, ಕಿಟಕಿ ಪಕ್ಕ ಕೂತಿದ್ದ ಸಮೀರ್ ಭಾಷಾ ಒಮ್ಮೆಗೆ ಬಾಗಿಲು ತೆರೆದು ಕಾರಿನಿಂದ ಹಾರಿದರು.
ಆರೋಪಿಯನ್ನು ಹಿಡಿಯಲು ಗೋಪಾಲಕೃಷ್ಣ ಕುಡಾಳಕರ್ ಸಾಕಷ್ಟು ಪ್ರಯತ್ನ ಮಾಡಿದರು. ಆದರೆ, ಆತ ಸಿಗಲಿಲ್ಲ. ಹೀಗಾಗಿ ತಕ್ಷಣ ಅವರು ಪೊಲೀಸರಿಗೆ ಫೋನ್ ಮಾಡಿದರು. ಪೊಲೀಸರು ಹುಡುಕಿದರೂ ಸಮೀರ್ ಭಾಷಾ ಪತ್ತೆ ಆಗಲಿಲ್ಲ. ಹೀಗಾಗಿ ಗೋಪಾಲಕೃಷ್ಣ ಕುಡಾಳಕರ್ ಅವರು ಕುಮಟಾ ಪೊಲೀಸ್ ಠಾಣೆಗೆ ಬಂದು ಆತ ಪರಾರಿಯಾದ ಬಗ್ಗೆ ದೂರು ದಾಖಲಿಸಿದರು.
Discussion about this post