24 ವರ್ಷಗಳಿಂದ ಸೇನೆಯಲ್ಲಿ ಸೈನಿಕರಾಗಿ ಸೇವೆ ಸಲ್ಲಿಸುತ್ತಿದ್ದ ಶಶಿಕಾಂತ ಕೃಷ್ಣ ಭಾವ (ಗೋಸಾವಿ) ಅವರು ಮುಂದಿನ ಆರು ತಿಂಗಳ ನಂತರ ನಿವೃತ್ತಿಯಾಗಬೇಕಿತ್ತು. ಆದರೆ, ದೇಶ ಸೇವೆಯಲ್ಲಿರುವಾಗಲೇ ಅನಾರೋಗ್ಯಕ್ಕೆ ಒಳಗಾಗಿ ಅವರು ಸಾವನಪ್ಪಿದರು.
ADVERTISEMENT
ಉತ್ತರ ಕನ್ನಡ ಜಿಲ್ಲೆಯ ಜೊಯಿಡಾದ ರಾಮನಗರದ ಶಶಿಕಾಂತ ಕೃಷ್ಣ ಭಾವ (ಗೋಸಾವಿ) ಅವರು ಬಾಲ್ಯದಿಂದಲೂ ದೇಶದ ಬಗ್ಗೆ ಅಪಾರ ಅಭಿಮಾನ ಹೊಂದಿದ್ದರು. ತಾವು ಕಂಡ ಕನಸಿನಂತೆ ಅವರು ದೇಶ ಸೇವೆ ಮಾಡಲು ಸೇನೆ ಸೇರಿದ್ದರು. ಅತ್ಯಂತ ಶಿಸ್ತು-ಸಂಯಮದಿoದ ವರ್ತಿಸುತ್ತಿದ್ದ ಅವರು ಸೇನೆಯಲ್ಲಿ ಹೆಸರು ಮಾಡಿದ್ದರು.
ಕಳೆದ ನಾಲ್ಕು ತಿಂಗಳ ಹಿಂದೆ ಅವರಿಗೆ ಅನಾರೋಗ್ಯ ಕಾಡಿತು. ಆರೋಗ್ಯದಲ್ಲಿ ಏರುಪೇರಾದ ಕಾರಣ ಆಸ್ಪತ್ರೆಗೆ ದಾಖಲಾದರು. ಆದರೆ, ಚಿಕಿತ್ಸೆ ಫಲಕಾರಿ ಆಗಲಿಲ್ಲ. ಮಂಗಳವಾರ ರಾತ್ರಿ ಅವರು ಭೂ ಲೋಕದ ಯಾತ್ರೆ ಮುಗಿಸಿದರು. ಬುಧವಾರ ರಾತ್ರಿ ಊರಿಗೆ ಅವರ ಶರೀರ ಬರಲಿದೆ.
ADVERTISEMENT
Discussion about this post