ಕುಮಟಾ ತಾಲೂಕಾ ಪಂಚಾಯತ ಕಚೇರಿ ಕಟ್ಟಡದಲ್ಲಿದ್ದ ಶಾಸಕರ ಕಚೇರಿಯನ್ನು ಸೋಮವಾರ ಮೂರೂರು ರಸ್ತೆಯ ಆಡಳಿತ ಸೌಧದ ಕಟ್ಟಡಕ್ಕೆ ಸ್ಥಳಾಂತರಿಸಲಾಗಿದೆ. ಶಾಸಕ ದಿನಕರ ಶೆಟ್ಟಿ ಈ ದಿನ ಕಚೇರಿ ಪ್ರವೇಶಿಸಿದ್ದು, ಜನರ ಸಮಸ್ಯೆ ಆಲಿಸಿದ್ದಾರೆ.
`ಅನೇಕ ಮುಖ್ಯ ಕಚೇರಿಗಳು ಇದೀಗ ಆಡಳಿತ ಸೌಧದಲ್ಲಿದೆ. ಇದೀಗ ಶಾಸಕರ ಕಚೇರಿಯನ್ನು ಇಲ್ಲಿ ಸ್ಥಳಾಂತರಿಸಲಾಗಿದ್ದು, ನಾನು ನಿತ್ಯ ಇಲ್ಲಿಗೆ ಬರುತ್ತೇನೆ’ ಎಂದು ದಿನಕರ ಶೆಟ್ಟಿ ಹೇಳಿದರು. `ಸಾರ್ವಜನಿಕ ಕೆಲಸಗಳಿಗೆ ಜನ ನೇರವಾಗಿ ನನ್ನನ್ನು ಸಂಪರ್ಕಿಸಿ. ನನ್ನಿಂದ ಆಗುವ ಕೆಲಸವನ್ನು ತಕ್ಷಣ ಮಾಡಿಕೊಡುತ್ತೇನೆ’ ಎಂಬ ಅಭಯ ನೀಡಿದರು.
ದೇವರ ಪೂಜೆ ಮಾಡುವ ಮೂಲಕ ಶಾಸಕರು ಕಚೇರಿಯಲ್ಲಿ ಮೊದಲ ದಿನ ಕಳೆದರು. ಬಿಜೆಪಿ ಮುಖಂಡ ಡಾ ಜಿ ಜಿ ಹೆಗಡೆ ಹಾಗೂ ಅನೇಕ ಬಿಜೆಪಿ ಕಾರ್ಯಕರ್ತರು ಶಾಸಕರ ಕಚೇರಿ ಪ್ರವೇಶಿಸಿ ವಾತಾವರಣ ಗಮನಿಸಿದರು. ಉಪವಿಭಾಗಾಧಿಕಾರಿ ಕಲ್ಯಾಣಿ ಹಾಗೂ ತಹಶೀಲ್ದಾರ ಶ್ರೀಕೃಷ್ಣ ಕಾಮಕರ್ ಕಚೇರಿ ಉದ್ಘಾಟನೆಗೆ ಸಾಕ್ಷಿಯಾದರು. ಪ್ರಮುಖರಾದ ಗಣೇಶ ಪಂಡಿತ, ಗಜಾನನ ಗುನಗಾ, ಸುಮತಿ ಭಟ್ಟ ಇನ್ನಿತರರು ಶಾಸಕರಿಗೆ ಹೂಗುಚ್ಚ ವಿತರಿಸಿದರು.
Discussion about this post