• Latest

ಭ್ರಷ್ಟಾಚಾರ: ತನಿಖೆಗೆ ಬಂದ ಅಧಿಕಾರಿಯದೇ ಮತ್ತೊಂದು ಹಗರಣ!

22 hours ago

ನಿವೇಶನ ಖರೀದಿಯಲ್ಲಿ ಅಕ್ರಮದ ವಾಸನೆ: ಸಾಹಿತ್ಯ ಅಧ್ಯಕ್ಷರ ಸ್ಪಷ್ಟನೆ!

1 hour ago
Ashiya's wish is to protect the environment.

ಪರಿಸರ ಸಂರಕ್ಷಣೆಯೇ ಆಶೀಯಾ ಆಶಯ

3 hours ago
ADVERTISEMENT
Injustice to the Namdhari community: Even if people die here there is no suitable place to cremate them!

ನಾಮಧಾರಿ ಸಮುದಾಯಕ್ಕೆ ಅನ್ಯಾಯ: ಇಲ್ಲಿ ಜನ ಸತ್ತರೂ ಸುಡಲು ಸೂಕ್ತ ಸ್ಮಶಾನವಿಲ್ಲ!

3 hours ago
Sirsi Liar MLA VS Fake Fighter!

ಶಿರಸಿ: ಸುಳ್ಳುಗಾರ ಶಾಸಕ V/S ನಕಲಿ ಹೋರಾಟಗಾರ!

6 hours ago
Prediction for July 23 2025

2025 ಅಗಷ್ಟ 6ರ ದಿನ ಭವಿಷ್ಯ

21 hours ago
ADVERTISEMENT
Wednesday, August 6, 2025
mobiletime.in
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
No Result
View All Result
mobiletime.in
No Result
View All Result
  • ಲೇಖನ
  • ವಾಣಿಜ್ಯ
  • ನಮ್ಮೂರು – ನಮ್ಮ ಜಿಲ್ಲೆ
  • ಜನಮತ‌
  • ನಿಮ್ಮ ಭವಿಷ್ಯ-ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
ADVERTISEMENT

ಭ್ರಷ್ಟಾಚಾರ: ತನಿಖೆಗೆ ಬಂದ ಅಧಿಕಾರಿಯದೇ ಮತ್ತೊಂದು ಹಗರಣ!

mobiletime.inby mobiletime.in
in ನಮ್ಮೂರು - ನಮ್ಮ ಜಿಲ್ಲೆ
ADVERTISEMENT

`ಯಲ್ಲಾಪುರದ ದೇಹಳ್ಳಿ ಗ್ರಾಮ ಪಂಚಾಯತದಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆದಿದ್ದು, ಈ ಬಗ್ಗೆ ದೂರು ನೀಡಲಾಗಿದೆ. ಆದರೆ, ತನಿಖೆ ನಡೆಸಲು ಬಂದ ಅಧಿಕಾರಿಯೂ ಭ್ರಷ್ಟರ ಜೊತೆ ರಾಜಿ-ಸಂಧಾನದ ಮಾತುಕಥೆ ನಡೆಸಿದ್ದಾರೆ’ ಎಂದು ಆ ಭಾಗದ ನಾಗರಾಜ ಚಾಪೆತೋಟ ದೂರಿದ್ದಾರೆ. ತನಿಖಾಧಿಕಾರಿ ವಿರುದ್ಧವೇ ಲೋಕಾಯುಕ್ತ ದೂರು ನೀಡುವುದಾಗಿ ಅವರು ಘೋಷಿಸಿದ್ದಾರೆ.

ADVERTISEMENT

ಸಾರ್ವಜನಿಕ ಸೇವಾ ಕೇಂದ್ರದ ಮುಖ್ಯಸ್ಥ ಧೀರಜ ತಿನ್ನೇಕರ್ ಹಾಗೂ ಗ್ರಾ ಪಂ ಸದಸ್ಯ ವಿಶ್ವನಾಥ ಹಳೆಮನೆ ಜೊತೆ ನಾಗರಾಜ ಚಾಪೆತೋಟ ಸುದ್ದಿಗೋಷ್ಠಿ ನಡೆಸಿದ್ದು, ನರೆಗಾ ಒಂಬುಡ್ಸಮೆನ್ ಸಿ ಟಿ ನಾಯ್ಕ ವಿರುದ್ಧ ಹಲವು ಆರೋಪ ಮಾಡಿದ್ದಾರೆ. `ದೇಹಳ್ಳಿಯ ಶಾಲಾ ಮೈದಾನ ಸಮತಟ್ಟು ಕಾಮಗಾರಿಗೆ 2021-22ರಲ್ಲಿ 4 ಲಕ್ಷ ರೂ ಕ್ರಿಯಾಯೋಜನೆ ಮಾಡಲಾಗಿತ್ತು. ಆದರೆ, ಸುಮಾರು 70 ಸಾವಿರ ರೂ ಖರ್ಚಾಗಿದೆ. ಕಾಮಗಾರಿ ನಡೆದು ಪೂರ್ಣ ಬಿಲ್ ಆಗಿದ್ದರೂ ಕಾಮಗಾರಿಯೇ ನಡೆದಿಲ್ಲ ಎಂದು ಪಿಡಿಓ ತಪ್ಪು ಮಾಹಿತಿ ನೀಡಿದ್ದಾರೆ. ಸರಿಯಾದ ಮಾಹಿತಿ ಕೊಡದೇ ಇದ್ದಾಗ ಈ ಬಗ್ಗೆ ಜಿಲ್ಲಾ ಒಂಬುಡ್ಸಮನ್ ಅವರಿಗೆ ದೂರಿದರೂ ಸರಿಯಾಗಿ ತನಿಖೆಯಾಗಿಲ್ಲ’ ಎಂದವರು ದೂರಿದರು.

`ಒಂಬುಡ್ಸಮನ್ ಸಿ ಟಿ ನಾಯ್ಕ ಅವರು ತನಿಖೆಗೆ ಬಂದು ತಾ ಪಂA ಕಚೇರಿಯಲ್ಲಿ ಕೂತಿದ್ದರು. ಆ ದಿನ ಪಿಡಿಒ ನಸ್ರೀನ ಭಾನು ಗೈರಾಗಿದ್ದರು. ಕಾಮಗಾರಿ ವಿಚಾರವಾಗಿ ಕೈಗೊಂಡ ಕ್ರಮದ ಬಗ್ಗೆ ಕೇಳಿದಾಗ ತಾ ಪಂಗೆ ವರದಿ ನೀಡುವಂತೆ ನೋಟೀಸ್ ನೀಡಿದ್ದಾಗಿ ಒಂಬುಡ್ಸಮನ್ ಹೇಳಿದ್ದು, ಜುಲೈ 5ರಂದು ಮತ್ತೊಮ್ಮೆ ವಿಚಾರಣೆಗಾಗಿ ಕರೆದಾಗಲೂ ಪಿಡಿಒ ಹಾಜರಾಗಿಲ್ಲ’ ಎಂದು ವಿವರಿಸಿದರು.

Advertisement. Scroll to continue reading.
ADVERTISEMENT
ADVERTISEMENT

`ಜುಲೈ 31ರಂದು ಸ್ಥಳ ಪರಿಶೀಲನೆಗೆ ಸ್ಥಳ ಭೇಟಿ ನಡೆಯಿತು. ಆದರೆ, ಆ ದಿನ ವಿಡಿಯೋ ಚಿತ್ರಿಕರಣಕ್ಕೆ ಅವಕಾಶ ಕೊಡಲಿಲ್ಲ. ಈ ಬಗ್ಗೆ ಪ್ರಶ್ನಿಸಿದಾಗ ಅಧಿಕಾರಿಗಳು ನಮ್ಮ ವಿರುದ್ಧ ಕಿಡಿಕಾರಿದರು’ ಎನ್ನುತ್ತ ಆ ದಿನದ ಪರಿಸ್ಥಿತಿ ಬಗ್ಗೆ ನಾಗರಾಜ ಚಾಪೆತೋಟ ವಿವರಿಸಿದರು. ಗ್ರಾ.ಪಂ ಸದಸ್ಯ ವಿಶ್ವನಾಥ ಹಳೆಮನೆ ಮಾತನಾಡಿ `ಕಾಮಗಾರಿಯಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆದಿದೆ. 25 ಕೂಲಿಗಳ ಹೆಸರು ಹಾಕಿ ಬೇರೆ 13 ಜನರ ಖಾತೆಗಳಿಗೆ ಹಣ ವರ್ಗಾಯಿಸಲಾಗಿದೆ. ನಕಲಿ ಸಹಿ ಹಾಕಿರುವ ಅನುಮಾನವಿದೆ’ ಎಂದರು.

`ಈ ಕಾಮಗಾರಿಯಲ್ಲಿ ಭ್ರಷ್ಟಾಚಾರ ನಡೆದಿದ್ದರೂ ಒಂಬುಡ್ಸಮನ್ ಸರಿಯಾದ ತನಿಖೆ ನಡೆಸಿಲ್ಲ. ಪಿಡಿಒ ಸರಿಯಾದ ಮಾಹಿತಿ ನೀಡಿಲ್ಲ. ತನಿಖೆ ನಡೆಸಲು ಬಂದ ಅಧಿಕಾರಿಗಳೇ ಭ್ರಷ್ಟಾಚಾರದಲ್ಲಿ ತೊಡಗಿರುವ ಶಂಕೆಯಿದೆ. ಹೀಗಾಗಿ ಲೋಕಾಯುಕ್ತ ದೂರು ನೀಡಲಾಗುತ್ತದೆ’ ಎಂದು ಹೇಳಿದರು.

Share this:

  • Click to share on Facebook (Opens in new window) Facebook
  • Click to share on X (Opens in new window) X
ADVERTISEMENT

Discussion about this post

Previous Post

ಯಲ್ಲಾಪುರ: ಗಾಂಧೀ ಕುಟುಂಬಕ್ಕೆ ಇಲ್ಲ ರಕ್ಷಣೆ!

Next Post

ಸರಾಯಿ ನಶೆಯಲ್ಲಿ ಇಲಿ ಪಾಷಣ ಕುಡಿದ!

Mobile Media Network ಒಂದೇ ಸಂಸ್ಥೆ – ಹಲವು ಸೇವೆ

Preloader Image
1
2
8
7
6
5
4
3
ADVERTISEMENT
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ

Terms of Service     Privacy Policy

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

error: Content is protected !!
No Result
View All Result
  • ಲೇಖನ
  • ವಾಣಿಜ್ಯ
  • ನಮ್ಮೂರು – ನಮ್ಮ ಜಿಲ್ಲೆ
  • ಜನಮತ‌
  • ನಿಮ್ಮ ಭವಿಷ್ಯ-ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ

Developed by Naik & Co © Copyright Publisher of Mobile Media Network

ನಿಮ್ಮ ಸಹಾಯಕ್ಕೆ ನಾನಿದ್ದೇನೆ! 😊✋

ADVERTISEMENT