ಆಧ್ಯಾತ್ಮ ಚಿಂತನೆ ಪ್ರಸರಿಸುತ್ತಿರುವ ಆದಿ ಚುಂಚನಗಿರಿ ಮಠ ಶೈಕ್ಷಣಿಕ ಕ್ರಾಂತಿಯ ಮೂಲಕ ಜನ-ಜೀವನ ಅಭಿವೃದ್ಧಿಗೆ ಶ್ರಮಿಸುತ್ತಿದೆ. ಉತ್ತರ ಕನ್ನಡ ಜಿಲ್ಲೆಯ ಕುಮಟಾದ ಮಿರ್ಜಾನಿನಲ್ಲಿಯೂ ಆದಿ ಚುಂಚನಗಿರಿ ಆಡಳಿತಕ್ಕೆ ಒಳಪಟ್ಟ ವಿದ್ಯಾಲಯವಿದೆ. ಇಲ್ಲಿ ಒಂದೇ ಸೂರಿನ ಅಡಿ ಸಮಗ್ರ ಶಿಕ್ಷಣ ನೀಡುತ್ತಿದೆ.
ನರ್ಸರಿಯಿಂದ PUCವರೆಗಿನ ಶಿಕ್ಷಣಕ್ಕೆ ಈ ಸಂಸ್ಥೆ ಪ್ರಸಿದ್ಧಿಪಡೆದಿದೆ. ಸಂಸ್ಕಾರಯುತ ಶಿಕ್ಷಣ ನೀಡುವಲ್ಲಿ ಈ ಸಂಸ್ಥೆ ಮುಂಚೂಣಿಯಲ್ಲಿದ್ದು, ಮಕ್ಕಳ ಶ್ರೇಯೋಭಿವೃದ್ಧಿಗಾಗಿ ಆಡಳಿತ ಮಂಡಳಿ ನಿರಂತರವಾಗಿ ದುಡಿಯುತ್ತಿದೆ. ಪ್ರತಿಯೊಬ್ಬರ ಮಾತು ಆಲಿಸುವ ಆಡಳಿತ ವರ್ಗ, ಮೃದು ಮನಸ್ಸಿನ ಸಿಬ್ಬಂದಿ, ನುರಿತ ಶಿಕ್ಷಕರು ಇಲ್ಲಿನ ವಿಶೇಷ. ಸಂಪನ್ಮೂಲ ವ್ಯಕ್ತಿಗಳ ಸಂವಹನಕ್ಕೆ ಈ ಸಂಸ್ಥೆ ಅವಕಾಶ ಕಲ್ಪಿಸಿದ್ದು, ಮಕ್ಕಳ ಆಸಕ್ತಿಗೆ ಅನುಗುಣವಾಗಿ ಅವರನ್ನು ಪ್ರೋತ್ಸಾಹಿಸಲಾಗುತ್ತದೆ. ಇಲ್ಲಿನ ಕಾಲೇಜು ಸ್ಟೇಟ್ ಬೋರ್ಡ ಪಠ್ಯಕ್ರಮ ಅನುಸರಿಸುತ್ತದೆ. ಶಾಲೆಯೂ CBSE ಆಧಾರಿತ ಶಿಕ್ಷಣ ಪದ್ಧತಿಯನ್ನು ಅಳವಡಿಸಿಕೊಂಡಿದೆ.
ಆದಿ ಚುಂಚನಗಿರಿ ಮಠದ ಈ ವಿದ್ಯಾ ಸಂಸ್ಥೆ ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುತ್ತಿದೆ. ಬಾಲ್ಯದಲ್ಲಿಯೇ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಮನೋಭಾವನೆ ಬೆಳೆಸುವ ಪ್ರಯತ್ನವನ್ನು ಈ ಶಿಕ್ಷಣ ಸಂಸ್ಥೆ ಮಾಡುತ್ತದೆ. ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ನೀಡಲಾಗುತ್ತದೆ. ವಿದ್ಯಾರ್ಥಿಗಳಿಗೆ ವಸತಿ ಸೌಲಭ್ಯ, ಆರೋಗ್ಯಕರ ಜೀವನಕ್ಕೆ ಅನುಕೂಲಕರ ವ್ಯವಸ್ಥೆಗಳು ಇಲ್ಲಿವೆ.
ಗುಣಮಟ್ಟದ ಶಿಕ್ಷಣಕ್ಕೆ ಇಲ್ಲಿ ಒತ್ತು ನೀಡಲಾಗುತ್ತದೆ. ಇಲ್ಲಿ ಕಲಿತ ವಿದ್ಯಾರ್ಥಿಗಳು ಉತ್ತಮ ಪ್ರಜೆಗಳಾಗಿ ರೂಪುಗೊಂಡಿದ್ದು, ದೇಶ-ವಿದೇಶಗಳಲ್ಲಿ ಉನ್ನತ ಹುದ್ದೆಯಲ್ಲಿದ್ದಾರೆ. ಸದ್ಯ ಕುಮಟಾದ ಮಿರ್ಜಾನಿನಲ್ಲಿರುವ ಶಿಕ್ಷಣ ಸಂಸ್ಥೆಯಲ್ಲಿ ಪ್ರವೇಶಾತಿ ಪ್ರಕ್ರಿಯೆ ಶುರುವಾಗಿದೆ.
ನಿಮ್ಮ ಮಕ್ಕಳಿಗೆ ಅತ್ಯುತ್ತಮ ಶಿಕ್ಷಣ ಕೊಡಿಸಲು ಇಲ್ಲಿ ಫೋನ್ ಮಾಡಿ:
990033912 / 8618651938
ಅಥವಾ
8310016454 / 7892602617 / 9901168720

#sponsored