`ಐಕಾನ್ಸ್ ಆಪ್ ಬಿಜಿನೆಸ್ ಮ್ಯಾಗಜೀನ್’ ಕೊಡುವ `ಅತ್ಯುತ್ತಮ ಉದ್ಯಮಿ’ ಪ್ರಶಸ್ತಿಗೆ ಪರ್ಲ್ ಮಡ್ ಕನ್ಸ್ಟ್ರಕ್ಷನ್ ಸಂಸ್ಥೆಯ ಸ್ಥಾಪಕ ವಿನಾಯಕ ಕುಮಟಾಕರ ಆಯ್ಕೆಯಾಗಿದ್ದು, ವಿಶೇಷ ನಿರ್ಮಾಣ ಸಾಧನೆಗಾಗಿ ಅವರು ಗೌರವ ಸ್ವೀಕರಿಸಿದ್ದಾರೆ.
ಪರಿಸರ ಸ್ನೇಹಿಹಾಗೂ ಸ್ಥಳೀಯ ಸಮುದಾಯಗಳನ್ನು ಬೆಂಬಲಿಸುವ ಕಟ್ಟಡ ತಂತ್ರಜ್ಞಾನಗಳ ಅಭ್ಯುದಯದಲ್ಲಿ ಸಂಸ್ಥೆಯ ಮಹತ್ವಪೂರ್ಣ ಪಾತ್ರವನ್ನು ಗುರುತಿಸಿ ಅವರಿಗೆ ಈ ಪ್ರಶಸ್ತಿ ನೀಡಲಾಗಿದೆ. ಸಂಸ್ಥೆ 2013 ರಲ್ಲಿ ಆರಂಭಗೊAಡಿದ್ದು ಕರ್ನಾಟಕ ಮತ್ತು ಗೋವಾದ ಕರಾವಳಿ ಭಾಗಗಳಲ್ಲಿ ನೈಸರ್ಗಿಕ ವಸ್ತುಗಳಿಂದ ಕಟ್ಟಡ ನಿರ್ಮಿಸುತ್ತದೆ. ಕಡಿಮೆ ವೆಚ್ಚದ, ವೇಗದ ಮತ್ತು ಆರೋಗ್ಯಪೂರ್ಣ ಮನೆ, ರೇಸಾರ್ಟ್, ಕಾಟೇಜ್, ರೆಸ್ಟೋರೆಂಟ್ ನಿರ್ಮಿಸಲು ಈ ಸಂಸ್ಥೆ ಪ್ರಮುಖ ಪಾತ್ರ ವಹಿಸಿದೆ. ಈ ದಿಕ್ಕಿನಲ್ಲಿ ದಶಕಕ್ಕಿಂತ ಹೆಚ್ಚು ಸಮಯದಿಂದ ಶ್ರಮಿಸುತ್ತಿದೆ.
ಈ ಪ್ರಶಸ್ತಿ ಬಗ್ಗೆ ಸಂತೋಷ ವ್ಯಕ್ತಪಡಿಸಿದ ಅವರು `ಈ ಗೌರವವು ನನಗಷ್ಟೇ ಅಲ್ಲ. ಇದು ನಮ್ಮ ತಂಡದ ಶ್ರಮ’ ಎಂದು ಪ್ರತಿಕ್ರಿಯಿಸಿದ್ದಾರೆ. `ನಾವು ನಿರ್ಮಿಸುವ ಪ್ರತಿಯೊಂದು ಕಟ್ಟಡ ಪ್ರಕೃತಿಯೊಂದಿಗೆ ಸಂಪರ್ಕ ಹೊಂದಿದ್ದು, ಸಮುದಾಯ, ಪ್ರಕೃತಿ ಮತ್ತು ಗ್ರಾಹಕ ಸ್ನೇಹಿ ಗುಣಗಳನ್ನು ಉತ್ತೇಜಿಸುತ್ತದೆ’ ಎಂದವರು ವಿವರಿಸಿದ್ದಾರೆ.