# Mobiletime.in > Mobile Media Network LLP ## Posts - [ದಾಂಡೇಲಪ್ಪ ಜಾತ್ರೆಗೆ ಜನವೋ ಜನ!](https://mobiletime.in/2025/10/crowds-at-the-dandelappa-fair/): ದಾಂಡೇಲಿಯ ಮಿರಾಶಿಗಲ್ಲಿಯಲ್ಲಿ ವಿಜಯ ದಶಮಿ ದಿನ ನಡೆಯುವ ದಾಂಡೇಲಪ್ಪ ಜಾತ್ರೆಗೆ ನಿರೀಕ್ಷೆಗೂ ಮೀರಿ ಜನ ಬಂದಿದ್ದಾರೆ. ಭಕ್ತರು ದೇವರ ದರ್ಶನ ಮಾಡಿ ತಮ್ಮ ಇಷ್ಟಾರ್ಥ ಸಿದ್ದಿಗಾಗಿ ಪ್ರಾರ್ಥಿಸಿದ್ದಾರೆ. ಜಾತ್ರೆ ಅಂಗವಾಗಿ ಗುರುವಾರ ಬೆಳಗ್ಗೆ ಪಲ್ಲಕ್ಕಿ ಮೆರವಣಿಗೆ ನಡೆಯಿತು. ಹಾಲಮಟ್ಟಿ ದೇವಸ್ಥಾನದಲ್ಲಿ ಸುಮಂಗಲಿಯರ ಪೂರ್ಣ ಕುಂಭದ ಜೊತೆ ಮೆರವಣಿಗೆ ಸಾಗಿತು. ನಂತರ ಪೂಜೆ ಸಲ್ಲಿಸಿ ಜಾತ್ರಾ ಮಹೋತ್ಸವಕ್ಕೆ ಚಾಲನೆ ನೀಡಲಾಯಿತು. ಹಳಿಯಾಳ ರಸ್ತೆಯ ಮೂರನೇ ನಂಬರ್ ಗೇಟಿನ ಹಾಲಮಡ್ಡಿ ರಸ್ತೆಯ ಇಕ್ಕಲಗಳಲ್ಲಿ ಬಗೆ ಬಗೆಯ ಆಟಕ್ಕೆ ಹಾಗೂ ದಿನಸಿ ಅಂಗಡಿಗಳು ಬಂದಿದ್ದವು. ಅಲ್ಲಿನ ಮಳಿಗೆಗಳು ಜಾತ್ರೆಯ ಸಂಭ್ರಮ ಹೆಚ್ಚಿಸಿದವು. ಆಗಮಿಸಿದ ಭಕ್ತರಿಗೆ ವಿವಿಧ ಸಂಘಟನೆಯವರು ಉಪಚರಿಸಿದರು. ದಿನವಿಡೀ ಭಕ್ತರಿಗೆ ತಿಂಡಿ ತಿನಿಸು ಪಾನೀಯ ಹಾಗೂ ಮಹಾಪ್ರಸಾದ ವಿತರಣೆ ನಡೆಯಿತು. ಜಾತ್ರೆ ಅಂಗವಾಗಿ ಬುಧವಾರ ಬೆಳಗ್ಗೆಯೇ ಭಕ್ತರು ಕ್ಷೇತ್ರಕ್ಕೆ ಬಂದಿದ್ದರು. ಸಾಲಿನಲ್ಲಿ ನಿಂತ ಜನ ದೇವರಿಗೆ ಹಣ್ಣು-ಹಂಪಲು ಅರ್ಪಿಸಿ ಬೇಡಿಕೊಂಡರು. ಹರಕೆ ಹೊತ್ತ ಭಕ್ತರು ತಮ್ಮ ಹರಕೆ ತೀರಿಸಿದರು. ಅದಾದ ನಂತರ ದೇವಸ್ಥಾನದ ಸುತ್ತಲೂ ದಿಂಡ ನಮಸ್ಕಾರ ಹಾಕಿ ತುಲಾಭಾರ ಸೇವೆ ಮಾಡಿದರು. ಬೇರೆ ಬೇರೆ ಧರ್ಮದವರು ಸಹ ಈ ಉತ್ಸವದಲ್ಲಿ ಭಾಗಿಯಾಗಿದ್ದು ವಿಶೇಷವಾಗಿತ್ತು. ಹೊರ ರಾಜ್ಯದ ಸಾವಿರಾರು ಭಕ್ತರು ಜಾತ್ರೆಯಲ್ಲಿ ಕಾಣಿಸಿಕೊಂಡರು. - [ಆಕ್ಷೆಪಣೆ ಹಿನ್ನಲೆ ಈ ವರದಿ ಪ್ರಸಾರಕ್ಕೆ ತಾತ್ಕಾಲಿಕ ತಡೆ ನೀಡಲಾಗಿದೆ](https://mobiletime.in/2025/10/a-flirt-caught-on-camera-the-one-who-called-him-for-work-also-called-him-for-sx/): ಗೂಗಲ್ ಆಡ್‌ಸೆನ್ಸ್ ತಂಡದ ಆಕ್ಷೆಪಣೆ ಸಲ್ಲಿಕೆ ಹಿನ್ನಲೆ ಈ ವರದಿ ಪ್ರಸಾರಕ್ಕೆ ತಾತ್ಕಾಲಿಕ ತಡೆ ನೀಡಲಾಗಿದೆ - [2025 ಅಕ್ಟೊಬರ್ 2ರ ದಿನ ಭವಿಷ್ಯ](https://mobiletime.in/2025/10/prediction-for-october-2-2025/): ಮೇಷ ರಾಶಿ: ನಿಮ್ಮ ಜೀವನವನ್ನು ಉತ್ತಮವಾಗಿ ರೂಪಿಸಿಕೊಳ್ಳುವ ಆಯ್ಕೆ ನಿಮ್ಮ ಮುಂದಿದೆ. ಬೇರೆಯವರ ಮಾತು ಕೇಳುವ ಬದಲು ಸರಿಯಾದ ನಿರ್ಣಯ ಮಾಡಿ. ವೃಷಭ ರಾಶಿ: ಹಳೆಯ ಸ್ನೇಹಿತರ ಭೇಟಿ ಆಗಲಿದೆ. ಸ್ನೇಹಿತರ ಮೂಲಕ ಹೊಸ ಅವಕಾಶಗಳು ಸಿಗಲಿದೆ. ನೀವು ಮಾಡಿದ ಸಣ್ಣ ಪ್ರಯತ್ನ ಸಹ ಉತ್ತಮ ಫಲ ಕೊಡಲಿದೆ. ಮಿಥುನ ರಾಶಿ: ಬೇರೆಯವರು ಹೇಳಿದ ಮಾತಿಗೆ ಬೇಸರಿಸಿ ಪ್ರಯೋಜನವಿಲ್ಲ. ನಿಮ್ಮ ಕುಟುಂಬದವರು ಸದಾ ನಿಮ್ಮ ಬೆಂಬಲಕ್ಕೆ ಇರುತ್ತಾರೆ. ಜೀವನದಲ್ಲಿ ಯಶಸ್ಸುಪಡೆಯಲು ಶ್ರಮ ಅಗತ್ಯ. ಕರ್ಕ ರಾಶಿ: ಜಗಳ, ಗಲಾಟೆ, ವಿವಾದಗಳು ನಿಮಗೆ ಒಳ್ಳೆಯದಲ್ಲ. ಒತ್ತಡದ ಬದುಕಿನಿಂದ ಹೊರಬರಲು ಪ್ರಯತ್ನಿಸಿ. ತಾಳ್ಮೆಯೇ ನಿಮ್ಮ ಸಾಧನೆಯ ಸೂತ್ರವಾಗಲಿದೆ. ಸಿಂಹ ರಾಶಿ: ಖರೀದಿ ಯೋಜನೆಗಳಿದ್ದರೆ ಅದನ್ನು ಮುಂದೂಡಿ. ಹೊಸ ನಿರ್ಧಾರಗಳನ್ನು ಕೈಗೊಳ್ಳುವ ಮುನ್ನ ಸಾಕಷ್ಟು ವಿಚಾರ ಮಾಡಿ. ಕುಟುಂಬದ ಜೊತೆ ಕಾಲ ಕಳೆಯಿರಿ. ಕನ್ಯಾ ರಾಶಿ: ನಿಮ್ಮ ಮನಸ್ಸು ಚಂಚಲ ಸ್ಥಿತಿಯಲ್ಲಿದ್ದು, ಶಾಂತ ಚಿತ್ತದಿಂದ ಯೋಚನೆ ಮಾಡುವುದು ಅಗತ್ಯ. ನೀವು ವಾಹನಗಳನ್ನು ಓಡಿಸುವುದು ಒಳಿತಲ್ಲ. ಅನಿವಾರ್ಯವಾಗಿದ್ದರೆ ನಿಧಾನವಾಗಿ ವಾಹನ ಓಡಿಸಿ. ತುಲಾ ರಾಶಿ: ನಿಮ್ಮ ಆದಾಯ ವೃದ್ಧಿ ಆಗಲಿದೆ. ಲಾಭದಾಯಿಕ ಅವಕಾಶಗಳು ನಿಮ್ಮನ್ನು ಅರೆಸಿ ಬರಲಿದೆ. ಒತ್ತಡ ಮುಕ್ತ ಜೀವನಕ್ಕಾಗಿ ಧ್ಯಾನ ಮಾಡಿ. ವೃಶ್ಚಿಕ ರಾಶಿ: ಮಿತ್ರರ ಸಹಕಾರದಿಂದ ಹೊಸ ರೀತಿಯ ಸಂಘಟನೆಗಳ ರಚನೆಗೆ ಅವಕಾಶವಿದೆ. ಹೊಸ ಆದಾಯ ಮೂಲಗಳು ಹುಟ್ಟಿಕೊಳ್ಳಲಿದೆ. ಆರೋಗ್ಯದಲ್ಲಿ ಕೊಂಚ ಬದಲಾವಣೆಯ ಲಕ್ಷಣಗಳಿವೆ. ಧನು ರಾಶಿ: ವೃತ್ತಿಯಲ್ಲಿ ಬೆಳವಣಿಗೆಗೆ ಗುರು-ಹಿರಿಯರ ಸಹಕಾರ ಸಿಗಲಿದೆ. ನಿಮ್ಮ ಮನಸ್ಸು ಪ್ರಸನ್ನತೆಯಿಂದ ಕೂಡಿರಲಿದ್ದು, ಉತ್ಸಾಹ ಹೆಚ್ಚಾಗಲಿದೆ. ಚಿನ್ನ, ಭೂಮಿ ಮೇಲಿನ ಹೂಡಿಕೆಗೆ ಸೂಕ್ತ ಸಮಯ. ಮಕರ ರಾಶಿ: ಪ್ರೀತಿ-ಪ್ರೇಮ ವಿಷಯಗಳನ್ನು ಇನ್ನಷ್ಟು ಗಾಡವಾಗಿ ನಿಮ್ಮನ್ನು ಕಾಡಲಿದೆ. ಧಾರ್ಮಿಕ ಕಾರ್ಯಗಳು ಸರಾಗವಾಗಿ ಸಾಗಲಿದೆ. ಮದುವೆ ಆಗದವರಿಗೆ ಸಂಗಾತಿಯ ಬಗ್ಗೆ ಸುಳಿವು ಸಿಗಲಿದೆ. ಕುಂಭ ರಾಶಿ: ನೀವು ಮಾಡುವ ಕೆಲಸದಲ್ಲಿ ಸಣ್ಣಪುಟ್ಟ ತಪ್ಪುಗಳಾಗುವ ಸಾಧ್ಯತೆಯಿದ್ದು, ತಪ್ಪುಗಳನ್ನು ತಿದ್ದಿ ಮುನ್ನಡೆಯುವುದು ಮುಖ್ಯ. ಕ್ರಿಯಾತ್ಮಕ ಚಟುವಟಿಕೆಗಳಲ್ಲಿ ತೊಡಗಲಿದ್ದೀರಿ. ಸಾಧನೆ ಮಾಡುವ ಕಡೆ ಗಮನಹರಿಸಿ. ಮೀನ ರಾಶಿ: ಹೊಸ ಯೋಜನೆಗಳು ನಿಮ್ಮ ಯಶಸ್ಸಿಗೆ ದಾರಿ ತೋರಲಿದೆ. ಪ್ರೀತಿ ವಿಷಯವಾಗಿ ತಮಾಷೆ ಮಾಡಬೇಡಿ. ಆಕಸ್ಮಿಕ ಖರ್ಚು ವೆಚ್ಚಗಳು ಬರುವ ಸಾಧ್ಯತೆಯಿರುವುದರಿಂದ ಆರೋಗ್ಯದಲ್ಲಿ ಎಚ್ಚರಿಕೆವಹಿಸಿ. - [ಮಹಾತ್ಮ ನಡೆದ ದಾರಿ: ಕಾರವಾರದಲ್ಲಿ ಗಾಂಧೀಜಿ ಹೆಜ್ಜೆ ಗುರುತು](https://mobiletime.in/2025/10/the-path-walked-by-the-mahatma-gandhijis-footprints-in-karwar/): 90 ವರ್ಷದ ಹಿಂದೆ ಉತ್ತರ ಕನ್ನಡ ಜಿಲ್ಲೆಗೆ ಗಾಂಧೀಜಿ ಬಂದಿದ್ದರು. ಕುದುರೆ ಏರಿ ಬರುತ್ತಿದ್ದ ಗಾಂಧೀಜಿ ಅವರನ್ನು ನೋಡಲು ಆ ಕಾಲದಲ್ಲಿಯೇ 2 ಸಾವಿರ ಜನ ಸೇರಿದ್ದರು. ಅವರೆಲ್ಲರೂ ಗಾಂಧೀಜಿ ಅವರು ಮಾಡಿದ ಅಸ್ಪçಶ್ಯತೆ ವಿರುದ್ಧದ ಭಾಷಣ ಕೇಳಿ ಪುಳಕಿತರಾದರು. 1934 ಫೆ 27ರಂದು ಮಹಾತ್ಮಾ ಗಾಂಧೀಜಿ ಉಡುಪಿಯಿಂದ ಕಾರವಾರಕ್ಕೆ ಆಗಮಿಸಿದ್ದರು. ನಗರಕ್ಕೆ ಬಂದಿದ್ದ ಗಾಂಧೀಜಿ ಇಲ್ಲಿನ ವಾಮಾನಶ್ರಮ ರಸ್ತೆಯಲ್ಲಿರುವ ಹಳದಿಪುರ ಎಂಬಾತರ ಮನೆಯಲ್ಲಿ ತಂಗಿದ್ದರು. ಮರುದಿನ ಮುಂಜಾನೆ ಅಸ್ಪೃಶ್ಯತೆಯ ಕುರಿತು ಸಾವಿರಾರು ಜನರನ್ನು ಉದ್ದೇಶಿಸಿ ಮಾತನಾಡಿದ್ದರು. ಆ ವೇಳೆ ಕಾರವಾರ ನಗರಾಡಳಿತ ಅಧ್ಯಕ್ಷರಾಗಿದ್ದ ಪಿ.ಎಸ್.ಮುಜುಂದಾರ್, ಹಿಂದು ಮಹಾಸಭಾದ ಅಧ್ಯಕ್ಷ ಎಂ ಬಿ ಬರ‍್ಕರ್. ಉದ್ಯಮಿ ಕೆ ಆರ್.ಹಳದಿಪುರಕರ್ ಹಾಗೂ ಹೊರ ಜಿಲ್ಲೆಗಳ ಹಲವು ಗಣ್ಯರು ಗಾಂಧಿಜೀಯವರನ್ನು ಆತ್ಮೀಯವಾಗಿ ಬರಮಾಡಿಕೊಂಡು ಆತಿಥ್ಯ ನೀಡಿದ್ದರು. ಗಾಂಧೀಜಿ ನಡೆದ ಹೆಜ್ಜೆಗಳು ಹಳದಿಪುರ ಕುಟುಂಬದವರ ಮನದಲ್ಲಿ ಮೆಲಕು ಹಾಕುತ್ತಿವೆ. ಹಳದಿಪುರಕರ್ ಅವರ ಮನೆಯ ಆವರಣದಲ್ಲಿ ಸೆ 28ರ ಬೆಳಗ್ಗೆ ಗಾಂಧೀಜಿ ಪ್ರಾರ್ಥನೆ ನಡೆಸಿದ್ದರು. ಅದಾದ ನಂತರ ಸಾರ್ವಜನಿಕ ಸಭೆ ನಡೆಸಿದ್ದರು. ನಂತರ ಅವರಿಗೆ ಸ್ಥಳಿಯರು ಸಾಗವಾನಿ ಮರದಿಂದ ಮಾಡಿದ ಹಾಗೂ ನಗರಾಡಳಿತದಿಂದ ಬೆಳ್ಳಿಯಲ್ಲಿ ಸ್ಮರಣಿಕೆ ನೀಡಲಾಯಿತು. ಅದನ್ನು ಸ್ಥಳದಲ್ಲೇ ಗಾಂಧೀಜಿ ಹರಾಜು ಹಾಕಿದರು. ಹಳದಿಪುರಕರ್ ಕುಟುಂಬ ಎರಡನ್ನೂ 532ರೂಪಾಯಿ ನೀಡಿ ಖರೀದಿಸಿತ್ತು. ಗಾಂಧಿಜೀ ಅವರು ಕಾರವಾರಕ್ಕೆ ಬಂದಾಗಿನ ಚಿತ್ರಗಳು. ಅವರಿಗೆ ನೀಡಿದ ಸ್ಮರಣಿಕೆಗಳು ಇಂದಿಗೂ ಹಳದಿಪುರಕರ್ ಮನೆಯಲ್ಲಿ ಕಾಣಸಿಗುತ್ತವೆ. ಮಹಾತ್ಮಾ ಗಾಂಧೀಜಿ ಕಾರವಾರಕ್ಕೆ ಬಂದು 9 ದಶಕ ಕಳೆದಿವೆ. ಅವರ ಹೆಜ್ಜೆ ಗುರುತುಗಳನ್ನು ರಕ್ಷಿಸುವ ಕಾರ್ಯ ಕಾರವಾರದ ಹಳದಿಪುರಕರ್ ಕುಟುಂಬ ಕುಡಿ ಮಾಡುತ್ತಿದೆ. ಹಳದಿಪುರ ಅವರ ಮನೆಯಲ್ಲಿ ಇಂದಿಗೂ ಗಾಂಧೀಜಿ ಅವರು ಬಂದಿದ್ದ ಸಂದರ್ಭದ ಫೊಟೊಗಳು, ಸ್ಮರಣಿಕೆಗಳನ್ನು ಸಂರಕ್ಷಿಸಿಡಲಾಗಿದೆ. - [ಕಾಂಗ್ರೆಸ್ ಕಟ್ಟಾಳುವಿಗೆ ಸಿಕ್ಕಿದ ಅಧ್ಯಕ್ಷ ಹುದ್ದೆ!](https://mobiletime.in/2025/10/congress-stalwart-gets-the-post-of-president/): ಕಳೆದ 20 ವರ್ಷಗಳಿಂದ ಕಾಂಗ್ರೆಸ್ ಕಾರ್ಯಕರ್ತರಾಗಿ ಶ್ರಮಿಸಿದ ಯಲ್ಲಾಪುರದ ಸತೀಶ್ ನಾಯ್ಕ ಅವರಿಗೆ ಕೆಪಿಸಿಸಿ ಯಲ್ಲಾಪುರ ಕಾಂಗ್ರೆಸ್ ನಗರ ಘಟಕದ ಅಧ್ಯಕ್ಷ ಸ್ಥಾನ ನೀಡಿದೆ. ಆ ಮೂಲಕ ಪಕ್ಷದ ಸಭೆ-ಸಮಾರಂಭಗಳಲ್ಲಿ ಬ್ಯಾನರ್ ಕಟ್ಟುವ ಕೆಲಸದಿಂದಹಿಡಿದು ವೇದಿಕೆ ನಿರ್ಮಾಣದವರೆಗೂ ದುಡಿದ ಕಾರ್ಯಕರ್ತನನ್ನು ಕಾಂಗ್ರೆಸ್ ಗುರುತಿಸಿದೆ. ಸತೀಶ ನಾಯ್ಕ ಅವರು ಶಾಸಕ ಶಿವರಾಮ ಹೆಬ್ಬಾರ್ ಅವರ ಗರಡಿಯಲ್ಲಿ ಪಳಗಿದವರು. ಎರಡು ದಶಕಗಳಿಂದ ಅವರು ಶಿವರಾಮ ಹೆಬ್ಬಾರ್ ಅವರ ಜೊತೆಯಿದ್ದಾರೆ. ಮಂಜುನಾಥ ನಗರದ ಮೂಲ ನಿವಾಸಿಯಾಗಿರುವ ಅವರು ಆ ಭಾಗದ ವಾರ್ಡ ಸದಸ್ಯರಾಗಿಯೂ ಅವರು ಕೆಲಸ ಮಾಡುತ್ತಿದ್ದಾರೆ. ತುರ್ತು ಸನ್ನಿವೇಶಗಳಲ್ಲಿ ಜನ ಫೋನ್ ಮಾಡಿದಾಗ ತಕ್ಷಣ ಸ್ಥಳಕ್ಕೆ ಹೊಗಿ ಅವರ ಸಮಸ್ಯೆ ಆಲಿಸುತ್ತಿದ್ದಾರೆ. ಕಲೆ, ಸಾಹಿತ್ಯದ ವಿಷಯದಲ್ಲಿಯೂ ಸತೀಶ ನಾಯ್ಕ ಅವರು ಮುಂಚೂಣಿಯಲ್ಲಿದ್ದಾರೆ. ಪಟ್ಟಣ ಪಂಚಾಯತ ಅಧ್ಯಕ್ಷ ಆಕಾಂಕ್ಷಿಯಾಗಿದ್ದ ಸತೀಶ್ ನಾಯ್ಕ ಅವರಿಗೆ ಕೊನೆಕ್ಷಣದಲ್ಲಿ ಆ ಹುದ್ದೆ ಕೈ ತಪ್ಪಿತ್ತು. ಪಟ್ಟಣ ಪಂಚಾಯತ ಅಧಿಕಾರ ಅವಧಿ ಮುಗಿಯುವ ಸಮಯದಲ್ಲಿ ಅವರಿಗೆ ಪಕ್ಷ ನಗರ ಘಟಕದ ಅಧ್ಯಕ್ಷ ಸ್ಥಾನ ನೀಡಿದೆ. ಶಾಸಕ ಶಿವರಾಮ ಹೆಬ್ಬಾರ್ ಅವರ ಜೊತೆ ಮಾಜಿ ಶಾಸಕ ವಿ ಎಸ್ ಪಾಟೀಲ್, ಕೆಪಿಸಿಸಿ ಸದಸ್ಯ ವಿವೇಕ್ ಹೆಬ್ಬಾರ್, ಪ್ರಮುಖರಾದ ವಿಜಯ್ ಮಿರಾಶಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ ಎಸ್ ಭಟ್ ಅವರ ಶಿಫಾರಸ್ಸಿನಿಂದ ಸತೀಶ್ ನಾಯ್ಕ ಅವರಿಗೆ ಈ ಹುದ್ದೆ ಸಿಕ್ಕಿದೆ. ಮುಂದಿನ ಚುನಾವಣೆಗೆ ಈ ಹುದ್ದೆ ಮಹತ್ವಪೂರ್ಣವಾಗಿದೆ. - [ವಿಷ ಪ್ರಾಶನ: ಚಾಲಕನ ಸಾವಿನಲ್ಲಿ ಅನುಮಾನ!](https://mobiletime.in/2025/10/poisoning-suspicion-in-drivers-death/): ಶಿರಸಿಯ ಪ್ರವೀಣ ಭೋವಿ ಅವರ ಲಾರಿಗೆ ಚಾಲಕರಾಗಿ ಕೆಲಸ ಮಾಡುತ್ತಿದ್ದ ಆಕಾಶ ಮಾಳಿ ಅವರು ವಿಷ ಕುಡಿದಿದ್ದಾರೆ. ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿ ಎರಡು ದಿನ ಆರೈಕೆ ಮಾಡಿದರೂ ಅವರು ಬದುಕಲಿಲ್ಲ. ಶಿರಸಿ ಕಸ್ತೂರಿಬಾ ನಗರದ ಸೂಫಾ ಸರ್ಕಲ್ ಬಳಿ ಆಕಾಶ ಮಾಳಿ (33) ಅವರು ವಾಸವಾಗಿದ್ದರು. ಚಾಲಕರಾಗಿ ಪರಿಣಿತಿಪಡೆದಿದ್ದ ಅವರು ಕೆಲಸ ಅರೆಸಿ ಗಣೇಶ ನಗರದ ಪ್ರವೀಣ ಭೋವಿ ಅವರ ಬಳಿ ಹೋಗಿದ್ದರು. ಪ್ರವೀಣ ಭೋವಿ ಅವರು ಆಕಾಶ ಮಾಳಿ ಅವರಿಗೆ ತಮ್ಮ ಲಾರಿ ಕೊಟ್ಟು ಜೀವನ ನಿರ್ವಹಣೆಗೆ ದಾರಿ ಮಾಡಿಕೊಟ್ಟಿದ್ದರು. ಹೀಗಾಗಿ ಆಕಾಶ ಮಾಳಿ ಅವರು ಕಳೆದ ಐದಾರು ತಿಂಗಳಿನಿoದ ಪ್ರವೀಣ ಬೋವಿ ಅವರ ಲಾರಿಗೆ ಚಾಲಕರಾಗಿ ಕೆಲಸ ಮಾಡಿಕೊಂಡಿದ್ದರು. ಈಚೆಗೆ ಆಕಾಶ ಮಾಳಿ ಅವರು ಮಾನಸಿಕವಾಗಿ ಕುಗ್ಗಿದ್ದರು. ಅವರ ಸಮಸ್ಯೆ ಏನು ಎಂದು ಯಾರಿಗೂ ಹೇಳಿರಲಿಲ್ಲ. ಸಾಕಷ್ಟು ಒತ್ತಡದಲ್ಲಿ ಅವರು ಕೆಲಸ ಮಾಡುತ್ತಿದ್ದರು. ಆಕಾಶ ಮಾಳಿ ಅವರು ಮನಸ್ಸಿಗೆ ಬೇಸರವಾಗಿದ್ದ ಕಾರಣ ಸೆಪ್ಟೆಂಬರ್ 29ರ ಮಧ್ಯಾಹ್ನ ಶಿರಸಿ ಬನವಾಸಿ ರಸ್ತೆಯ ಟಿಪ್ಪು ನಗರ ಕಾಲೇಜಿನ ಬಳಿ ಹೋಗಿದ್ದರು. ಅಲ್ಲಿಯೇ ಅವರು ಯಾವುದೋ ವಿಷ ಪದಾರ್ಥ ಸೇವಿಸಿದರು. ತೀವೃ ಪ್ರಮಾಣದಲ್ಲಿ ಅಸ್ವಸ್ಥರಾದ ಆಕಾಶ ಮಾಳಿ ಅವರನ್ನು ಶಿರಸಿಯ ಪಂಡಿತ ಆಸ್ಪತ್ರೆಗೆ ದಾಖಲಿಸಲಾಯಿತು. ಅಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ಹುಬ್ಬಳ್ಳಿಯ ಕಿಮ್ಸ್’ಗೆ ಕರೆದೊಯ್ಯಲಾಯಿತು. ಎರಡು ದಿನಗಳ ಕಾಲ ಅವರಿಗೆ ನಿರಂತರ ಆರೈಕೆ ನಡೆಯಿತು. ಕೊನೆಕ್ಷಣದವರೆಗೂ ಆಕಾಶ ಮಾಳಿ ಅವರನ್ನು ಬದುಕಿಸಿಕೊಳ್ಳುವ ಪ್ರಯತ್ನ ನಡೆಯಿತು. ಆದರೆ, ಅದು ಪ್ರಯೋಜನಕ್ಕೆ ಬರಲಿಲ್ಲ. ಅಕ್ಟೊಬರ್ 1ರ ನಸುಕಿನಲ್ಲಿ ಆಕಾಶ ಮಾಳಿ ಅವರು ಸಾವನಪ್ಪಿದರು. ಅವರ ಜೊತೆ ಆ ಸಾವಿನ ಕಾರಣವೂ ಸಾವನಪ್ಪಿತು. ಹೀಗಾಗಿ ಆಕಾಶ ಮಾಳಿ ಅವರ ಸಾವಿನ ವಿಷಯದಲ್ಲಿ ಸಂಶಯ ಕಾಡಿತು. ಆಕಾಶ ಮೌಳಿ ಅವರ ತಂದೆ ಜಗದೀಶ ಮಾಳಿ ಅವರು ಸಾವಿನ ಬಗ್ಗೆ ಸಂಶಯವಿರುವುದಾಗಿ ಪೊಲೀಸರಿಗೆ ತಿಳಿಸಿದ್ದು, ಶಿರಸಿ ಗ್ರಾಮೀಣ ಠಾಣೆ ಪೊಲೀಸರು ತನಿಖೆ ನಡೆಸುವ ಉದ್ದೇಶದಿಂದ ಪ್ರಕರಣ ದಾಖಲಿಸಿದರು. `ಆತ್ಮಹತ್ಯೆ ಅಪರಾಧ’ - [ಒಂದೇ ದಿನ ಎರಡು ಅವಘಡ: ಜನರ ಜೀವ ಉಳಿಸಿದ ಚಾಲಕ!](https://mobiletime.in/2025/10/two-accidents-in-one-day-driver-saves-lives/): ಉತ್ತರ ಕನ್ನಡ ಜಿಲ್ಲೆಯ ಎರಡು ಕಡೆ ಬುಧವಾರ ಮಧ್ಯಾಹ್ನ ಬಸ್ ಅಪಘಾತ ನಡೆದಿದೆ. ಚಾಲಕರ ಸಮಯ ಪ್ರಜ್ಞೆಯಿಂದಾಗಿ ಎರಡೂ ಕಡೆ ದೊಡ್ಡ ಅವಘಡ ನಡೆದಿಲ್ಲ. ಶಿರಸಿಯ ಬನವಾಸಿ ಚಂದ್ರಗುತ್ತಿ ಮಾರ್ಗದ ಬಾಶಿ ಬಳಿ ಬಸ್ಸು ರಸ್ತೆ ಅಂಚಿಗೆ ಸರಿದಿದೆ. ದೊಡ್ಡ ಪ್ರಮಾಣದಲ್ಲಿ ಗಿಡ-ಗಂಟಿಗಳು ಬೆಳೆದಿದ್ದರಿಂದ ಬಸ್ಸು ಅದಕ್ಕೆ ಡಿಕ್ಕಿಯಾಗಿ ಅಲ್ಲಿಯೇ ನಿಂತಿದೆ. ಮುಂಡಗೋಡಿನ ಸನವಳ್ಳಿ ಬಳಿ ಸಹ ಬಸ್ಸಿನ ಸ್ಟೇರಿಂಗ್ ತುಂಡಾಗಿ ಬಸ್ಸು ರಸ್ತೆ ಬದಿಗೆ ವಾಲಿದೆ. ಕೊಂಚ ಆಯತಪ್ಪಿದರೂ ಬಸ್ಸಿನಲ್ಲಿದ್ದವರೆಲ್ಲರೂ ಪೆಟ್ಟು ಮಾಡಿಕೊಳ್ಳುವ ಅಪಾಯವಿದ್ದು, ಈ ಎರಡು ಕಡೆ ಚಾಲಕರ ಚಾಣಾಕ್ಷತನದಿಂದ ಪ್ರಯಾಣಿಕರು ಜೀವಾಪಾಯದಿಂದ ಪಾರಾಗಿದ್ದಾರೆ. ಬನವಾಸಿಯಿಂದ ಚಂದ್ರಗುತ್ತಿಗೆ ಸಾಗುವ ರಸ್ತೆ ಬದಿಯಲ್ಲಿ ದೊಡ್ಡ ಪ್ರಮಾಣದಲ್ಲಿ ಜಗ್ಗೆ ಬೆಳೆದಿದೆ. ಇದರಿಂದ ಆ ಮಾರ್ಗದಲ್ಲಿ ಎದುರಿನಿಂದ ಬರುವ ವಾಹನಗಳು ಚಾಲಕರಿಗೆ ಕಾಣುತ್ತಿಲ್ಲ. ಎದುರಿನಿಂದ ಏಕಾಏಕಿ ವಾಹನ ಬಂದ ಕಾರಣ ಬಾಶಿ ಬಳಿ ಸಂಚರಿಸುತ್ತಿದ್ದ ಬಸ್ಸಿನ ಚಾಲಕ ಬಸ್ಸನ್ನು ಎಡಕ್ಕೆ ತಿರುಗಿಸಿದ್ದು, ಈ ವೇಳೆ ಬಸ್ಸು ನಿಯಂತ್ರಣ ತಪ್ಪಿತು. ಬಸ್ಸು ಕಂದಕಕ್ಕೆ ಬೀಳುವ ಅಪಾಯ ಅರಿತ ಚಾಲಕ ತಕ್ಷಣ ಬಸ್ಸನ್ನು ನಿಯಂತ್ರಿಸಿ ಜನರ ಜೀವ ಉಳಿಸಿದರು. ಬಂಕಾಪುರದಿoದ ಮುಂಡಗೋಡಿಗೆ ಬರುತ್ತಿದ್ದ ಬಸ್ಸು ಸನವಳ್ಳಿಯಲ್ಲಿ ಸ್ಟೇರಿಂಗ್ ತುಂಡಾಯಿತು. ಆ ಸ್ಟೇರಿಂಗ್ ಚಾಲಕರ ಕೈಗೆ ಬಂದಿತು. ಈ ವೇಳೆ ಬಸ್ಸು ವಾಲಿದ್ದು, ಕಂದಕದ ಕಡೆ ತಿರುಗಿತು. ತಕ್ಷಣ ಚಾಲಕ ಬ್ರೆಕ್ ಅದುಮಿ ಬಸ್ಸನ್ನು ತಮ್ಮ ನಿಯಂತ್ರಣಕ್ಕೆ ತಂದರು. ಆ ಮೂಲಕ ಬಸ್ಸಿನ ಒಳಗಿದದ 40 ಜನರ ಜೀವ ಕಾಪಾಡಿದರು. ಡಕೋಟಾ ಎಕ್ಸಪ್ರೆಸ್ ಬಸ್ಸು ಓಡಿಸಿದ ಕಾರಣ ಈ ಅವಾಂತರ ನಡೆದ ಬಗ್ಗೆ ಪ್ರಯಾಣಿಕರು ದೂರಿದರು. `ಶಿರಸಿಯ ಬಾಶಿಯಲ್ಲಿ ರಸ್ತೆ ಪಕ್ಕ ಗಿಡ-ಗಂಟಿಗಳನ್ನು ಕಟಾವು ಮಾಡದ ಕಾರಣ ನಿತ್ಯವೂ ಈ ಭಾಗದಲ್ಲಿ ಅವಘಡ ನಡೆಯುತ್ತಿದೆ. ಶಾಲಾ ಮಕ್ಕಳು ಹೆಚ್ಚಿಗೆ ಓಡಾಟ ನಡೆಸುವ ಈ ರಸ್ತೆಯಲ್ಲಿ ಅಪಾಯ ಆಗುವ ಮೊದಲೇ ಎಚ್ಚೆತ್ತುಕೊಳ್ಳಬೇಕು’ ಎಂದು ಭಾಶಿ ಗ್ರಾಮ ಪಂಚಾಯತ ಸದ್ಯಸ ಗಜಾನನ ಎಂ ಗೌಡ ಅವರು ಆಕ್ರೋಶದಿಂದ ಮಾತನಾಡಿದರು. ತುರ್ತು ಕ್ರಮ ಆಗದೇ ಇದ್ದರೆ ಉಗ್ರ ಹೋರಾಟ ನಡೆಸುವುದಾಗಿಯೂ ಎಚ್ಚರಿಸಿದರು. - [ಕೆಂಪು ಕಾರು-ಕಪ್ಪು ಮನುಷ್ಯ: ದಾರಿ ಕೇಳುವ ನೆಪದಲ್ಲಿ ದರೋಡೆ!](https://mobiletime.in/2025/10/red-car-black-man-robbery-under-the-pretext-of-asking-for-directions/): ದಾರಿ ಕೇಳುವ ನೆಪದಲ್ಲಿ ರಸ್ತೆಯಲ್ಲಿ ಹೋಗುವವರನ್ನು ನಿಲ್ಲಿಸಿ ಅವರ ಬಳಿಯಿದ್ದ ವಸ್ತುಗಳನ್ನು ದರೋಡೆ ಮಾಡುವ ತಂಡ ಎಲ್ಲಡೆ ತಿರುಗಾಡುತ್ತಿದೆ. ಉತ್ತರ ಕನ್ನಡ ಜಿಲ್ಲೆಯ ಇಬ್ಬರು ಈ ತಂಡದವರ ಬಳಿ ಸಿಕ್ಕಿಬಿದ್ದಿದ್ದು, ಡಕಾಯಿತರ ಹೆಡೆಮುರಿ ಕಟ್ಟುವುದಕ್ಕಾಗಿ ಪೊಲೀಸರು ಕಾದು ಕುಳಿತಿದ್ದಾರೆ. ಕೆಂಪು ಬಣ್ಣದ ಶಿಪ್ಟ್ ಕಾರಿನಲ್ಲಿ ಡಕಾಯಿತರು ತಿರುಗುತ್ತಿದ್ದಾರೆ. ನಿರ್ಜನ ಪ್ರದೇಶದಲ್ಲಿ ಸಂಚರಿಸುವವರನ್ನು ನಿಲ್ಲಿಸಿ ರಸ್ತೆ ಕೇಳುವ ನೆಪದಲ್ಲಿ ಅವರನ್ನು ದರೋಡೆ ಮಾಡುತ್ತಿದ್ದಾರೆ. ಕಾರಿನಲ್ಲಿ ಬರುವ ಡಕಾಯಿತರು ಕನ್ನಡದಲ್ಲಿಯೇ ಮಾತನಾಡುತ್ತಾರೆ. ಈಗಾಗಲೇ ಮೂರು ದರೋಡೆ ಪ್ರಕರಣಗಳು ನಡೆದಿದ್ದು, ಒಬ್ಬರ ಬಳಿಯಿದ್ದ 8 ಸಾವಿರ ರೂ ಹಣ ಡಕಾಯಿತರ ಪಾಲಾಗಿದೆ. ಮತ್ತೊಬ್ಬರ ಮೊಬೈಲ್ ಹಾಗೂ 5 ಸಾವಿರ ರೂ ದುಡ್ಡನ್ನು ಕಾರಿನಲ್ಲಿ ಬಂದವರು ದೋಚಿದ್ದಾರೆ. ಮುಂಡಗೋಡು ಗಡಿಭಾಗದ ತಡಸ್ ಬಳಿ ಶಿರಸಿ ಹಾಗೂ ಮುಂಡಗೋಡಿನ ವ್ಯಕ್ತಿಯೊಬ್ಬರನ್ನು ಅಡ್ಡಗಟ್ಟಿ ಕಾರಿನಲ್ಲಿದ್ದವರು ದರೋಡೆ ಮಾಡಿದ್ದಾರೆ. ಕಳೆದ ನಾಲ್ಕು ದಿನಗಳಿಂದ ಡಕಾಯಿತರ ಸಂಚಾರ ಜೋರಾಗಿದ್ದು, ಮುಂಡಗೋಡು ಭಾಗದಲ್ಲಿ ಪೊಲೀಸರು ರಾತ್ರಿಯಿಡೀ ಗಸ್ತು ತಿರುಗುತ್ತಿದ್ದಾರೆ. ಹೀಗಾಗಿ ಸದ್ಯ ಆ ಭಾಗದಲ್ಲಿ ಡಕಾಯಿತರ ಸುಳಿವು ಇಲ್ಲ. ತಡಸ್ ಪೊಲೀಸರು ಪ್ರಕರಣ ದಾಖಲಿಸಿ ಡಕಾಯಿತರ ಶೋಧ ನಡೆಸುತ್ತಿದ್ದಾರೆ. ಬೈಕು, ಕಾರಿನಲ್ಲಿ ಹೋಗುವವರನ್ನು ಈ ಡಕಾಯಿತರು ತಡೆದು ನಿಲ್ಲಿಸುತ್ತಿದ್ದಾರೆ. ವಿಳಾಸ ಕೇಳುವ ಅಥವಾ ಇನ್ಯಾವುದೇ ವಿಷಯವಾಗಿ ಮಾತನಾಡಿಸಿ ದಾಳಿ ಮಾಡುತ್ತಿದ್ದಾರೆ. ಮುಂಡಗೋಡು ವ್ಯಾಪ್ತಿಯಲ್ಲಿ ಕಟ್ಟೆಚ್ಚರವಹಿಸಲಾಗಿದೆ. ಉಳಿದ ಕಡೆಯೂ ಅನುಮಾನಾಸ್ಪದ ವ್ಯಕ್ತಿಗಳ ಮೇಲೆ ನಿಗಾವಹಿಸಲಾಗಿದೆ. ಅದಾಗಿಯೂ ಡಕಾಯಿತರು ಕಣ್ತಪ್ಪಿಸಿ ಬೇರೆ ಮಾರ್ಗಗಳಿಂದ ಜಿಲ್ಲೆ ಪ್ರವೇಶಿಸುವ ಸಾಧ್ಯತೆಗಳಿವೆ. ಅನುಮಾನಾಸ್ಪದ ಕಾರು ಅಥವಾ ವ್ಯಕ್ತಿಗಳು ಕಾಣಿಸಿದರೆ ಕೂಡಲೇ ಇಲ್ಲಿ ಫೋನ್ ಮಾಡಿ 9480805258, 8105727893 ಅಥವಾ 9591512294 - [ಸರಣಿ ಅಪಘಾತ: ಒಬ್ಬರ ಸಾವು.. ಹಲವರಿಗೆ ನೋವು](https://mobiletime.in/2025/10/serial-accident-one-dead-many-hurt/): ಬಸ್ಸು-ಲಾರಿ-ಬೈಕು ಹಾಗೂ ಟೆಂಪೋ ನಡುವೆ ಜೊಯಿಡಾದಲ್ಲಿ ಅಪಘಾತವಾಗಿದೆ. ಈ ಅಪಘಾತದಲ್ಲಿ ಒಬ್ಬರು ಸಾವನಪ್ಪಿದ್ದು, ಐವರು ಗಂಭೀರ ಪ್ರಮಾಣದಲ್ಲಿ ಗಾಯಗೊಂಡಿದ್ದಾರೆ. ಇನ್ನೂ ಅನೇಕರಿಗೆ ನೋವಾಗಿದೆ. ರಾಮನಗರ-ಆನಮೋಡ್-ಗೋವಾ ರಾಷ್ಟಿçÃಯ ಹೆದ್ದಾರಿಯಲ್ಲಿ ಈ ಅವಘಡ ನಡೆದಿದೆ. ಹೈದರಬಾದಿನಿಂದ ಗೋವಾಗೆ ತೆರಳುತ್ತಿದ್ದ ವಿ ಆರ್ ಎಲ್ ಬಸ್ಸು ಬುಧವಾರ ಬೆಳಗ್ಗೆ ಜೊಯಿಡಾದ ರಾಮನಗರ ಮಾರ್ಗವಾಗಿ ಸಂಚರಿಸುತ್ತಿತ್ತು. ಹೆದ್ದಾರಿಯಲ್ಲಿ ಎದುರಿಗಿದ್ದ ಲಾರಿಯನ್ನು ಬಸ್ಸು ಹಿಂದಿಕ್ಕಿತು. ಆಗ, ಮುಂದಿನಿAದ ಟೆಂಪೋ ಬಂದಿದ್ದು, ವೇಗದಲ್ಲಿದ್ದ ವಿ ಆರ್ ಎಲ್ ಬಸ್ಸು ಟೆಂಪೋಗೆ ಡಿಕ್ಕಿಯಾಯಿತು. ಈ ವೇಳೆ ಆ ಟೆಂಪೋಗೆ ಹಿಂದಿನಿAದ ಬರುತ್ತಿದ್ದ ಬೈಕು ಡಿಕ್ಕಿಯಾಯಿತು. ವಿ ಆರ್ ಎಲ್ ಬಸ್ಸು ಟೆಂಪೋಗೆ ಗುದ್ದಿದ ಪರಿಣಾಮ ಟೇಂಪೊದಲ್ಲಿದ್ದ ಚಾಲಕ ಅಲ್ಲಿಯೇ ಸಾವನಪ್ಪಿದರು. ಅದಾದ ನಂತರ ಬಸ್ಸು ಪಕ್ಕದಲ್ಲಿದ್ದ ಲಾರಿಗೂ ಡಿಕ್ಕಿಯಾಗಿದ್ದು, ಮ್ಯಾಂಗನಿಸ್ ಅದಿರು ತುಂಬಿದ್ದ ಲಾರಿ ಅಲ್ಲಿ ಪಲ್ಟಿಯಾಯಿತು. ಟೆಂಪೋ ಹಿಂದೆ ಬೈಕ್ ಓಡಿಸಿಕೊಂಡು ಬರುತ್ತಿದ್ದ ಕಿರಣ ಪಾಟೀಲ್ ಅವರು ಈ ಅಪಘಾತದಲ್ಲಿ ಗಾಯಗೊಂಡರು. ಬಸ್ಸಿನಲ್ಲಿದ್ದ ನಾಲ್ವರು ಪ್ರಯಾಣಿಕರು ಗಂಭೀರ ಪೆಟ್ಟು ಮಾಡಿಕೊಂಡರು. ಈ ಸರಣಿ ಅಪಘಾತದಲ್ಲಿ ನಾಲ್ಕು ವಾಹನಗಳು ಜಖಂ ಆಗಿವೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಕ್ರೇನ್ ಸಹಾಯದಿಂದ ಅಪಘಾತವಾದ ವಾಹನಗಳನ್ನು ರಸ್ತೆ ಬದಿಗೆ ಸರಿಸಲಾಗಿದ್ದು, ಉಳಿದ ವಾಹನ ಓಡಾಟಕ್ಕೆ ಸಮಸ್ಯೆ ಇಲ್ಲ. ಸಾವನಪ್ಪಿದವರು ಹಾಗೂ ಗಾಯಗೊಂಡವರ ಮಾಹಿತಿ ಬರಬೇಕಿದ್ದು, ಗಾಯಾಳುಗಳನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಸಾಗಿಸಲಾಗಿದೆ. - [ಸೆಕೆಂಡ್ ಹ್ಯಾಂಡ್ ಸೇಲ್: ಶವಕ್ಕೆ ಹೊದಸಿದ ಬಟ್ಟೆಗಳಿಗೂ ಬಾರೀ ಡಿಮ್ಯಾಂಡು!](https://mobiletime.in/2025/10/second-hand-sale-there-is-a-high-demand-for-even-clothes-used-to-wrap-a-corpse/): ಉತ್ತರ ಕನ್ನಡ ಜಿಲ್ಲೆಯಲ್ಲಿಯೂ ಇದೀಗ ಕೆಜಿ ಲೆಕ್ಕಾಚಾರದಲ್ಲಿ ಬಟ್ಟೆ ಮಾರಾಟ ಮಳಿಗೆಗಳು ಬಂದಿದೆ. ರಸ್ತೆ ಬದಿಗಳಲ್ಲಿಯೂ ಅಪರಿಚಿತ ವ್ಯಾಪಾರಿಗಳು ಬಟ್ಟೆ ಮಾರಾಟ ಮಾಡುತ್ತಿದ್ದಾರೆ. ಎಲ್ಲಾ ಬ್ರಾಂಡಿನ ಬಟ್ಟೆಗಳು ಒಂದೇ ಕಡೆ ಸಿಗುತ್ತಿವೆ. ಆದರೆ, ಈ ಮಾರಾಟದ ಬಗ್ಗೆ ಅನೇಕ ಅನುಮಾನಗಳುವ್ಯಕ್ತವಾಗುತ್ತಿವೆ. ಈ ಮೊದಲು ಇಂಥ ಬಟ್ಟೆ ಖರೀದಿಸಿದ ಜನ ತಮ್ಮ ಕೆಟ್ಟ ಅನುಭವಗಳ ಬಗ್ಗೆ ಹೇಳಿದ್ದಾರೆ. `ಶ್ರೀಮಂತರ ಮನೆಗಳಲ್ಲಿ ಬಳಸಿ ಬಿಸಾಡಿದ ಬಟ್ಟೆ, ಅಪಘಾತದಲ್ಲಿ ಸಾವನಪ್ಪಿದವರ ಬಟ್ಟೆಗಳನ್ನು ಇಲ್ಲಿ ತಂದು ಮಾರಾಟ ಮಾಡಲಾಗುತ್ತಿದೆ. ಅನಾಥ ಆಶ್ರಮದ ಹೆಸರಿನಲ್ಲಿ ಮನೆ ಮನೆಗೆ ಬಂದು ಬಟ್ಟೆ ಸಂಗ್ರಹಿಸುವ ಜನ ಆ ಬಟ್ಟೆಗಳನ್ನು ಮತ್ತೆ ನವೀಕರಿಸಿ ಊರೂರು ಅಲೆದಾಡಿ ಮಾರಾಟ ಮಾಡುವವರಿಗೆ ಕೊಡುತ್ತಾರೆ’ ಎಂದವರು ಹೇಳಿದ್ದಾರೆ. `ಮಹಾನಗರಗಳಲ್ಲಿ ನಡೆಯುವ ಅಪಘಾತಗಳಲ್ಲಿ ಸಾವನಪ್ಪಿದವರ ಮೈಮೇಲಿನ ಬಟ್ಟೆಗಳನ್ನು ಕೆಲವರುಪಡೆಯುತ್ತಾರೆ. ಅಂಥ ಬಟ್ಟೆಗಳನ್ನು ತೊಳೆದು ಇಸ್ತ್ರಿ ಮಾಡಿ ಬೇರೆ ಬೇರೆ ಬ್ರಾಂಡುಗಳ ಹೆಸರಿನಲ್ಲಿ ಮಾರಾಟ ಮಾಡಲಾಗುತ್ತದೆ’ ಎಂಬರ್ಥದಲ್ಲಿಯೂ ಕೆಲವರು ಜಾಲತಾಣದಲ್ಲಿ ಕಮೆಂಟ್ ಮಾಡಿದ್ದಾರೆ. `ನಂಬಿಕೆಗೆ ಅರ್ಹ ಖಾಯಂ ಮಳಿಗೆಗಳಲ್ಲಿ ಖರೀದಿ ಮಾಡಿದರೆ ಮರುದಿನ ಹೋಗಿ ಪ್ರಶ್ನಿಸಬಹುದು. ಆನ್‌ಲೈನ್ ಮೂಲಕ ಖರೀದಿಸಿದರೂ ಇಷ್ಟವಾಗದೇ ಇದ್ದರೆ ಅಂಥವುಗಳನ್ನು ಮರಳಿಸಬಹುದು. ಆದರೆ, ನಾಲ್ಕು ದಿನ ಸೇಲ್ ಸೇಲ್ ಎಂದು ಕೆಜಿ ಲೆಕ್ಕಾಚಾರದಲ್ಲಿ ಬಟ್ಟೆ ಮಾರಾಟ ಮಾಡಿ, ನಂತರ ಊರು ಬಿಟ್ಟು ಹೋಗುವವರನ್ನು ಹಿಡಿಯುವುದಾದರೂ ಹೇಗೆ?’ ಎಂದು ಜನ ಪ್ರಶ್ನಿಸುತ್ತಿದ್ದಾರೆ. `ಕೆಜಿಗೆ 700ರೂ ಕೊಟ್ಟು ಬಟ್ಟೆ ಖರೀದಿಸಿದಾಗ ತನಗೂ ಇಂಥ ಕೆಟ್ಟ ಅನುಭವ ಆಗಿದೆ’ ಎಂದು ವಿಡಿಯೋವೊಂದರ ಅಡಿಭಾಗ ಆದ್ಯಾ ಹೆಗಡೆ ಅವರು ಅನಿಸಿಕೆ ಹಂಚಿಕೊoಡಿದ್ದಾರೆ. `ಸೆಕೆಂಡ್ ಸೆಲ್?’ ಎಂದು ಗೌರಿ ಹೆಗಡೆ ಅವರು ಪ್ರಶ್ನಾರ್ಥಕ ರೂಪದಲ್ಲಿ ಬರೆದುಕೊಂಡಿದ್ದಾರೆ. `ಕೆಲವೊಮ್ಮೆ ಪ್ರಚಾರಕ್ಕಾಗಿ ಕೆಲ ಕಂಪನಿಯವರು ಕಡಿಮೆ ದರದಲ್ಲಿ ಬಟ್ಟೆ ಮಾರಾಟ ಮಾಡುತ್ತಾರೆ. ಬೆಂಗಳೂರು ಸೇರಿ ವಿವಿಧ ಕಡೆ ಇಂಥ ಕಂಪನಿಗಳಿವೆ. ಆದರೆ, ಅಲ್ಲಿ ಒಂದೇ ಬ್ರಾಂಡಿನ ಬಟ್ಟೆಗಳು ಕಡಿಮೆ ದರದಲ್ಲಿ ಸಿಗುತ್ತದೆ. ಸದ್ಯ ಎಲ್ಲಾ ಕಂಪನಿ ಬಟ್ಟೆಗಳು ಒಂದೇ ಕಡೆ ಬೊಗಸೆ ತುಂಬಿ ಕೊಡುವುದು ಅನುಮಾನಕ್ಕೆ ಕಾರಣ’ ಎನ್ನುವವರು ಇದ್ದಾರೆ. ಕೆಲವರು ಕೆಟ್ಟ ಅನುಭವ ಹಂಚಿಕೊoಡಿದ್ದು, ಕೆಲ ಸಮಯದ ನಂತರ ಆ ಬರಹಗಳು ಡಿಲಿಟ್ ಆಗುತ್ತಿದೆ. ಎಲ್ಲವೂ ಸರಿಯಾಗಿಯೇ ಇದ್ದರೆ ಡಿಲಿಟ್ ಮಾಡಿಸುವುದು ಏತಕೆ? ಎಂಬ ಅನುಮಾನವೂ ಕಾಡುತ್ತಿದೆ. ಮಾರಾಟಕ್ಕೆ ಬಂದ ಬಟ್ಟೆಗಳು ಸೆಕೆಂಡ್ ಸೇಲಾ? ಅಥವಾ ಶವಗಳಿಗೆ ಹೊದೆಸಿದ ಬಟ್ಟೆಗಳಾ? ಶ್ರೀಮಂತರು ಬಳಸಿ ಬಿಸಾಡಿದವನ್ನು ತಂದು ಮಾರಲಾಗುತ್ತಿದೆಯಾ? ಅಥವಾ ಅನಾಥಾಶ್ರಮದ ಹೆಸರಿನಲ್ಲಿ ಸಂಗ್ರಹಿಸಿದವಾ? ಎನ್ನುವುದರ ಬಗ್ಗೆ ಎಲ್ಲಿಯೂ ಖಚಿತತೆ ಇಲ್ಲ. - [2025 ಅಕ್ಟೊಬರ್ 1ರ ದಿನ ಭವಿಷ್ಯ](https://mobiletime.in/2025/09/prediction-for-october-1-2025/): ಮೇಷ ರಾಶಿ: ನಿಮ್ಮೊಳಗಿನ ಬುದ್ದಿವಂತಿಕೆ ಹೂಡಿಕೆ ವಿಷಯದಲ್ಲಿ ಲಾಭ ಕೊಡಲಿದೆ. ವೃತ್ತಿಯಲ್ಲಿ ಗೌರವ ಹಾಗೂ ಸಾಮಾಜಿಕ ಮನ್ನಣೆ ಸಿಗಲಿದೆ. ಸಂಗಾತಿ ಜೊತೆ ಮುಕ್ತವಾಗಿ ನಿಮ್ಮ ಭಾವನೆಯನ್ನು ಹಂಚಿಕೊಳ್ಳಿ. ವೃಷಭ ರಾಶಿ: ಉದ್ಯೋಗ ಹಾಗೂ ವ್ಯವಹಾರ ಅವಕಾಶಗಳು ವೃದ್ಧಿ ಆಗಲಿದ್ದು, ಆರ್ಥಿಕ ಸ್ಥಿತಿ ಚನ್ನಾಗಿರಲಿದೆ. ಪರಿಶ್ರಮಕ್ಕೆ ತಕ್ಕ ಫಲ ಸಿಗಲಿದೆ. ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಯಶಸ್ಸು ಸಾಧ್ಯವಿದೆ. ಮಿಥುನ ರಾಶಿ: ಸಾಮಾಜಿಕ ಕೆಲಸಗಳನ್ನು ಉತ್ಸಾಹದಿಂದ ಮಾಡಿ. ಹಣ ಹೂಡಿಕೆ ವಿಷಯದಲ್ಲಿ ಎಚ್ಚರಿಕೆ ಬೇಕು. ಕೆಲಸದ ಒತ್ತಡ ಸಹಜವಾಗಿದ್ದು, ವಾದ-ವಿವಾದ ನಿಮಗೆ ಒಳ್ಳೆಯದಲ್ಲ. ಕರ್ಕ ರಾಶಿ: ಉದ್ಯೋಗದ ವಿಷಯದಲ್ಲಿ ಯಶಸ್ಸು ಸಿಗಲಿದೆ. ನಿಮ್ಮ ಗೌರವ ಹೆಚ್ಚಾಗಲಿದೆ. ಹೊಸ ಖರೀದಿ ಸಾಧ್ಯವಿದೆ. ನಿಮ್ಮ ಸಂತೋಷ ಹೆಚ್ಚಾಗಲಿದೆ. ಸಿಂಹ ರಾಶಿ: ನಿಮ್ಮ ಕೆಲಸಕ್ಕೆ ಕುಟುಂಬದವರ ಬೆಂಬಲ ಸಿಗುತ್ತದೆ. ಐಷಾರಾಮಿ ಜೀವನಕ್ಕೆ ಅಗತ್ಯ ವಸ್ತು ಸಿಗಲಿದೆ. ಉದ್ಯೋಗ ಸರಾಗವಾಗಿ ಸಾಗಲಿದೆ. ಪ್ರೀತಿ-ಪ್ರೇಮ ವಿಷಯದಲ್ಲಿ ಪ್ರಗತಿ ಆಗಲಿದೆ. ಕನ್ಯಾ ರಾಶಿ: ಪ್ರೇಮ ಜೀವನದಲ್ಲಿ ತೊಡಕು ಆಗುವ ಲಕ್ಷಣವಿದ್ದು, ಎಚ್ಚರಿಕೆ ಅಗತ್ಯ. ಪೂಜೆ ಹಾಗೂ ಧಾರ್ಮಿಕ ಕಾರ್ಯದಲ್ಲಿ ಭಾಗವಹಿಸುವುದು ಉತ್ತಮ. ಖರ್ಚು-ವೆಚ್ಚಗಳು ನಿಯಂತ್ರಣದಲ್ಲಿರಲಿ. ತುಲಾ ರಾಶಿ: ಆಪ್ತರ ಜೊತೆ ಸಮಯ ಕಳೆಯುವುದು ಮುಖ್ಯ. ಆರ್ಥಿಕ ವ್ಯವಸ್ಥೆ ಸರಿಯಾಗಿ ಸಾಗಲಿದ್ದು, ಹೂಡಿಕೆ ಬಗ್ಗೆ ಚಿಂತಿಸಿ. ಹಳೆಯ ಕೆಟ್ಟ ವಿಷಯಗಳನ್ನು ಮರೆಯುವುದು ಆರೋಗ್ಯಕ್ಕೆ ಹಿತ. ವೃಶ್ಚಿಕ ರಾಶಿ: ನಿಮ್ಮ ಸೃಜನಶೀಲ ಕೆಲಸಗಳಿಗೆ ವೇದಿಕೆ ಸಿಗಲಿದೆ. ಹಣ ಲಾಭ ಆಗಲಿದೆ. ಆಸ್ತಿ ಖರೀದಿ ವಿಷಯಕ್ಕೂ ಯೋಗ್ಯ ಸಮಯ. ನಾಯಕತ್ವ ಗುಣ ಬೆಳಸಿಕೊಳ್ಳಿ. ಧನು ರಾಶಿ: ಕೌಟುಂಬಿಕ ಜೀವನದಲ್ಲಿ ಶಾಂತಿ ನೆಲೆಸುವುದರಿಂದ ಮಾನಸಿಕ ನೆಮ್ಮದಿ ಸಿಗಲಿದೆ. ಸಾಮಾಜಿಕ ಜೀವನದಲ್ಲಿ ಮನ್ನಣೆ ಸಿಗಲಿದೆ. ಹೊಸ ಬಗೆಯ ಜವಾಬ್ದಾರಿಗಳು ದೊರೆಯಲಿದೆ. ಮಕರ ರಾಶಿ: ವಾಹನ ಖರೀದಿಗೆ ಸೂಕ್ತ ಸಮಯ ಬಂದಿದೆ. ಹೂಡಿಕೆಗೆ ಈ ದಿನ ಸೂಕ್ತವಲ್ಲ. ಶಾಲೆ ಹಾಗೂ ಶೈಕ್ಷಣಿಕ ಕೆಲಸದ ಬಗ್ಗೆ ಗಮನಹರಿಸಿ. ಕುಂಭ ರಾಶಿ: ನಿಮ್ಮ ಜೀವನದಲ್ಲಿ ದೊಡ್ಡ ಬದಲಾವಣೆಯ ಸಮಯ ಬಂದಿದ್ದು, ಅವಕಾಶಗಳನ್ನು ಅರೆಸಿ. ಕಾನೂನು ವಿಷಯದಲ್ಲಿ ನಿಮಗೆ ಗೆಲುವು ಸಿಗಲಿದೆ. ಪ್ರವಾಸ ಯೋಜನೆಗಳು ಯಶಸ್ವಿ ಆಗಲಿದೆ. ಮೀನ ರಾಶಿ: ನಿಮ್ಮ ಅನೇಕ ದಿನದ ಕನಸು ನೆರವೇರುವ ಸಮಯ ಬಂದಿದೆ. ನಿಂತ ಕೆಲಸಗಳು ನಿಧಾನವಾಗಿ ಸಾಗಲಿದೆ. ಹೊಸ ಆದಾಯದ ಮೂಲ ಸಿಗಲಿದೆ. - [ಕಾರವಾರ | ಅರ್ಬನ್ ಬ್ಯಾಂಕಿಗೆ ಹೊಸ ಅಧಿಕಾರಿ: ಮುಳುಗುವ ದೋಣಿಗೆ ಮಹಿಳಾ ಸಾರಥಿ!](https://mobiletime.in/2025/09/karwar-new-officer-for-urban-bank-a-woman-is-the-helmsman-of-a-sinking-boat/): ಕಾರವಾರ ಅರ್ಬನ್ ಬ್ಯಾಂಕ್‌ಗೆ ಲಿಕ್ವಿಡೇಟರ್ ಆಗಿ ಮಮತಾ ನಾಯಕ ಅವರು ನೇಮಕವಾಗಿದ್ದಾರೆ. ಮಂಗಳವಾರ ಅವರು ತಮ್ಮ ಅಧಿಕಾರ ಸ್ವೀಕರಿಸಿದ್ದಾರೆ. `ಆರ್‌ಬಿಐ ನಿರ್ದೇಶನದಂತೆ ಇಷ್ಟು ದಿನ ಬಂದ್ ಆಗಿದ್ದ ಕಾರವಾರ ಅರ್ಬನ್ ಬ್ಯಾಂಕು ಇದೀಗ ಮತ್ತೆ ಕೆಲಸ ಶುರು ಮಾಡಲಿದೆ. ಎಲ್ಲಾ ಸಿಬ್ಬಂದಿ ಕರ್ತವ್ಯಕ್ಕೆ ಮರಳಲಿದ್ದಾರೆ. ಗ್ರಾಹಕರ ಠೇವಣಿ ಹಣದ ವಿಮಾ ಮೊತ್ತ ನೀಡಲು ಅಗತ್ಯ ಕ್ರಮ ಜರುಗಿಸಲಾಗುತ್ತದೆ’ ಎಂದು ಮಮತಾ ನಾಯಕ ಅವರು ಮಾಹಿತಿ ನೀಡಿದರು. `ಗ್ರಾಹಕರ 33.65 ಕೋಟಿ ರೂ ಹಣಕ್ಕೆ ವಿಮೆ ಸಿಗಲಿದೆ. ಇದರ ಕುರಿತಾದ ಷರತ್ತುಗಳ ಬಗ್ಗೆ ತಿಳಿದು ಮುಂದಿನ ಪ್ರಕ್ರಿಯೆ ನಡೆಸಲಾಗುತ್ತದೆ. 2 ಸಾವಿರಕ್ಕೂ ಅಧಿಕ ಜನರಿಗೆ ಪರಿಹಾರ ಬರಬೇಕಿದ್ದು, ಅದನ್ನು ಕೊಡಿಸುವುದೇ ನಮ್ಮ ಮೊದಲ ಕೆಲಸ’ ಎಂಬ ಭರವಸೆ ನೀಡಿದರು. `ಕ್ಲೇಮು ವಿತರಿಸಿದ ನಂತರ ಬ್ಯಾಂಕಿಗೆ ಬರಬೇಕಾದ ಸಾಲ ವಸೂಲಾತಿ ಗಮನಿಸಲಾಗುತ್ತದೆ. ಮೊದಲಿನ ಮಾದರಿಯಲ್ಲಿ ಬ್ಯಾಂಕು ಕೆಲಸ ಮಾಡಲಿದ್ದು, ಲಿಕ್ವಿಡೇಟರ್ ನೇತೃತ್ವದಲ್ಲಿ ಎಲ್ಲ ಸಿಬ್ಬಂದಿಗಳು ಕಾರ್ಯ ನಿರ್ವಹಿಸಲಿದ್ದಾರೆ. ಸಾಲ ವಸೂಲಾತಿಗೆ ಈ ಹಿಂದಿನ ಕ್ರಮಗಳನ್ನು ಅನುಸರಿಲಾಗುತ್ತದೆ’ ಎಂದು ತಿಳಿಸಿದರು. - [ಬಿಜೆಪಿ ಬೆಂಬಲಿತರಿಗೆ ಕಾಂಗ್ರೆಸ್ ಶಾಸಕರ ಅಭಯ!](https://mobiletime.in/2025/09/congress-mlas-appeal-to-bjp-supporters/): ಬಿಜೆಪಿ ಬೆಂಬಲಿತ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಘಟಕದವರು ಶಿರಸಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಎದುರು ಪ್ರತಿಭಟಿಸಿದ್ದು, ಶಾಸಕ ಭೀಮಣ್ಣ ನಾಯ್ಕ ಅವರು ವಿದ್ಯಾರ್ಥಿಗಳ ಸಮಸ್ಯೆ ಆಲಿಸಿದ್ದಾರೆ. ವಿದ್ಯಾರ್ಥಿಗಳ ಪ್ರತಿಭಟನೆ ಬಗ್ಗೆ ಅರಿತ ಭೀಮಣ್ಣ ನಾಯ್ಕ ಅವರು ತಮ್ಮ ಕೆಲಸ ಕಾರ್ಯ ಮೊಟಕುಗೊಳಿಸಿ ಕಾಲೇಜಿನ ಬಳಿ ಆಗಮಿಸಿದರು. `ಕಾಲೇಜು ಪ್ರಾರಂಭವಾಗಿ ತಿಂಗಳು ಕಳೆದರೂ ಅತಿಥಿ ಉಪನ್ಯಾಸಕರ ನೇಮಕವಾಗಿಲ್ಲ. ಹೀಗಾಗಿ ತರಗತಿಗಳು ಸರಿಯಾಗಿ ನಡೆಯುತ್ತಿಲ್ಲ’ ಎಂದು ವಿದ್ಯಾರ್ಥಿಗಳು ಶಾಸಕರ ಗಮನಕ್ಕೆ ತಂದರು. ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ನ ವಿಭಾಗ ಸಂಚಾಲಕರಾದ ಸಂಜಯ್ ಗಾಂವಕಾರ ಅವರು ಸರ್ಕಾರದ ನಡೆಯನ್ನು ಖಂಡಿಸಿದರು. `ಸರ್ಕಾರಿ ಕಾಲೇಜುಗಳಲ್ಲಿ ಸರಿಯಾದ ಶಿಕ್ಷಣ ಸಿಗದ ಕಾರಣ ವಿದ್ಯಾರ್ಥಿಗಳಿಗೆ ಅನ್ಯಾಯವಾಗಿದೆ. ಗ್ಯಾರಂಟಿ ಸರ್ಕಾರ ಈಗ ಏನು ಮಾಡುತ್ತಿದೆ? ಎಂದವರು ಪ್ರಶ್ನಿಸಿದರು. ಈ ವೇಳೆ ಉಸ್ತುವಾರಿ ಸಚಿವ ಮಂಕಾಳು ವೈದ್ಯ ಅವರಿಗೂ ವಿದ್ಯಾರ್ಥಿಗಳು ಫೋನ್ ಮಾಡಿದರು. ಆದರೆ, ಮಂಕಾಳು ವೈದ್ಯ ಅವರು ಫೋನ್ ಕರೆ ಸ್ವೀಕರಿಸಲಿಲ್ಲ. ಹೀಗಾಗಿ ಪ್ರತಿಭಟನಾಕಾರರು ಇನ್ನಷ್ಟು ಆಕ್ರೋಶವ್ಯಕ್ತಪಡಿಸಿದರು. `ಬಡ ವಿದ್ಯಾರ್ಥಿಗಳ ಬಗ್ಗೆ ಜನಪ್ರತಿನಿಧಿಗಳಿಗೆ ಕಿಂಚಿತ್ತು ಕಾಳಜಿಯಿಲ್ಲ’ ಎಂದು ರಿತೇಶ ಶಾನಭೋಗ ಬೇಸರವ್ಯಕ್ತಪಡಿಸಿದರು. `ಸಮಸ್ಯೆ ಪರಿಹಾರ ಆಗದೇ ಇದ್ದರೆ ಶಾಸಕರ ಕಚೇರಿ ಎದುರು ಪ್ರತಿಭಟಿಸುತ್ತೇವೆ’ ಎಂದು ಶಶಾಂಕ್ ನಾಯ್ಕ ಎಚ್ಚರಿಸಿದರು. `ಈಗಾಗಲೇ 20,000 ಕ್ಕಿಂತ ಹೆಚ್ಚು ಅರ್ಹ ಅಭ್ಯರ್ಥಿಗಳು ಯುಜಿಸಿ ನಿಯಮಾವಳಿ ಅನ್ವಯ ಅರ್ಹತೆ ಪಡೆದು ಸರ್ಕಾರಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಲು ತಯಾರಿದ್ದಾರೆ, ಆದ್ದರಿಂದ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಖಾಲಿ ಇರುವ ಎಲ್ಲಾ ಉಪನ್ಯಾಸಕರ ನೇಮಕಾತಿ ಪ್ರಕ್ರಿಯೆಯನ್ನು ತ್ವರಿತವಾಗಿ ಪೂರ್ಣಗೊಳಿಸಲು ಕ್ರಮ ಕೈಗೊಳ್ಳಬೇಕು’ ಎಂದು ಪ್ರತಿಭಟನಾಕಾರರು ಆಗ್ರಹಿಸಿದರು. `ಪ್ರತಿ ವರ್ಷ ಅತಿಥಿ ಉಪನ್ಯಾಸಕರ ನೇಮಕಾತಿ ಸಂದರ್ಭದಲ್ಲಿ ಹಲವಾರು ಕಾರಣಗಳಿಗೆ ವಿಳಂಬ ಧೋರಣೆ ಅನುಸರಿಸುತ್ತಿರುವುದು ಗೊಂದಲಕ್ಕೆ ಕಾರಣವಾಗಿದೆ. ಈ ನಿಟ್ಟಿನಲ್ಲಿ ಸರ್ಕಾರ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು. ಪದವಿ ಕಾಲೇಜುಗಳಲ್ಲಿ ಗುಣಮಟ್ಟದ ಶಿಕ್ಷಣ ನೀಡುವುದನ್ನು ಕಾತರಿಪಡಿಸಿಕೊಳ್ಳುವ ದೃಷ್ಟಿಯಿಂದ ಯುಜಿಸಿ ನಿಯಮಾವಳಿ ಅನ್ವಯ ಅರ್ಹತೆಪಡೆದ ಅತಿಥಿ ಉಪನ್ಯಾಸಕರನ್ನು ನೇಮಿಸಿಕೊಳ್ಳಲು ಸರ್ಕಾರ ಆಸಕ್ತಿ ವಹಿಸಬೇಕು’ ಎಂದು ಒತ್ತಾಯಿಸಿದರು. ಸಮಸ್ಯೆ ಆಲಿಸಿದ ಶಾಸಕ ಭೀಮಣ್ಣ ನಾಯ್ಕ ಪರಿಹಾರ ಕಲ್ಪಿಸುವ ಆಶ್ವಾಸನೆ ನೀಡಿ, ಅಲ್ಲಿಂದ ತೆರಳಿದರು. - [ಭಾವಿಕೇರಿ ಗ್ರಾಮಸಭೆ: ಕೇಣಿ ಬಂದರು ವಿರುದ್ಧ ಜನಾಕ್ರೋಶ](https://mobiletime.in/2025/09/bhavikeri-gram-sabha-public-anger-against-keni-port/): ಅಂಕೋಲಾದ ಕೇಣಿಯಲ್ಲಿ ಖಾಸಗಿ ವಾಣಿಜ್ಯ ಬಂದರು ನಿರ್ಮಾಣದ ವಿರುದ್ಧ ಧ್ವನಿ ಜೋರಾಗಿದೆ. ಭಾವಿಕೇರಿ ಗ್ರಾಮ ಸಭೆಯಲ್ಲಿ ಮೀನುಗಾರರ ಜೊತೆ ಸಾರ್ವಜನಿಕರು ಕೈ ಜೋಡಿಸಿದ್ದು, ಬಂದರು ವಿರುದ್ಧ ಠರಾವು ಮಾಡಲು ಹಕ್ಕೊತ್ತಾಯ ಮಾಡಿದರು. `ಕೇಣಿಯಲ್ಲಿ ಬೃಹತ್ ವಾಣಿಜ್ಯ ಬಂದರು ಬೇಡ ಎಂದು ಗ್ರಾಪಂ ಆಡಳಿತ ಮಂಡಳಿ ಠರಾವು ಪಾಸು ಮಾಡಬೇಕು. ಈ ನಿರ್ಣಯವನ್ನು ಎಲ್ಲರ ಮುಂದೆ ಓದಬೇಕು’ ಎಂದು ಕೇಣಿ ಭಾಗದ ಮೀನುಗಾರ ಪ್ರಮುಖ ಸಂಜೀವ ಬಲೆಗಾರ ಅವರು ಗ್ರಾಮ ಸಭೆಯಲ್ಲಿ ಅಧ್ಯಕ್ಷರು ಮತ್ತು ಅಧಿಕಾರಿಗಳನ್ನು ಒತ್ತಾಯಿಸಿದರು. ಅನೇಕರು ಇದಕ್ಕೆ ಬೆಂಬಲವ್ಯಕ್ತಪಡಿಸಿದರು. ಮೀನುಗಾರರು ಹಾಗೂ ರೈತರು ಇದೇ ಗ್ರಾಮ ಸಭೆಯಲ್ಲಿ `ಠರಾವು ಪಾಸು ಮಾಡಬೇಕು’ ಎಂದು ಪಟ್ಟು ಹಿಡಿದರು. `ಭಾವಿಕೇರಿ ಗ್ರಾಪಂ ವ್ಯಾಪ್ತಿಯಲ್ಲಿ 400 ಮೀನುಗಾರ ಕುಟುಂಬಗಳ ಸಹಿತ 8000 ದಷ್ಟು ಜನಸಂಖ್ಯೆ ಇದ್ದರೂ ವರದಿಯ ಪ್ರಕಾರ ಸಿಆರಝೆಡ್ ವ್ಯಾಪ್ತಿಯಲ್ಲಿ ಜನವಸತಿ ಇಲ್ಲದ ಬಂಜರು ಭೂಮಿ ಎಂದು ಉಲ್ಲೇಖಿಸಲಾಗಿದೆ. ಹಾಗಾದರೆ ಗ್ರಾಮ ಪಂಚಾಯತ ಪ್ರಕಾರ ಇಲ್ಲಿ ಜನ ಬದುಕಿದ್ದಾರೋ? ಇಲ್ಲ ಸತ್ತಿದ್ದಾರೋ?’ ಎಂದು ಜನ ಪ್ರಶ್ನಿಸಿದರು. `JSW ಕಂಪನಿ ಸುಳ್ಳನ್ನೇ ಬಂಡವಾಳವಾಗಿಟ್ಟುಕೊAಡು ಬಂದರು ನಿರ್ಮಾಣಕ್ಕೆ ಮುಂದಾಗಿದೆ. ಯಾವುದೇ ಬಂದರು ಬರಲು ಬಿಡುವುದಿಲ್ಲ’ ಎಂದು ಜನ ಹೇಳಿದರು. ಮೀನುಗಾರಿಕಾ ಇಲಾಖೆಯ ತಾಲೂಕಾಮಟ್ಟದ ಅಧಿಕಾರಿಗಳು ಗ್ರಾಮ ಸಭೆಯಿಂದ ದೂರವುಳಿದ ಬಗ್ಗೆ ಆಕ್ರೋಶವ್ಯಕ್ತವಾಯಿತು. ಮೀನುಗಾರಿಕಾ ಇಲಾಖೆಯವರನ್ನು ಕರೆಯಿಸಿ ಪ್ರತ್ಯೇಕ ಸಭೆ ನಡೆಸುವಂತೆ ಜನ ಒತ್ತಾಯಿಸಿದರು. ಕೊನೆಗೆ ಗ್ರಾಪಂ ಅಧ್ಯಕ್ಷೆ ದೀಪಾ ನಾಯಕ ಮಾತನಾಡಿ `ಮೀನುಗಾರರಿಂದಹಿಡಿದು ಪ್ರತಿಯೊಬ್ಬರಿಗೂ ಸಮಸ್ಯೆಯಾಗುತ್ತದೆ. ನಿಮ್ಮ ಹೊರತಾಗಿ ನಾನು ಯಾವುದೇ ನಿರ್ಣಯವನ್ನು ತೆಗೆದುಕೊಳ್ಳಲು ಸಾಧ್ಯವಿಲ್ಲ. ನಿಮ್ಮ ನಿರ್ಣಯವೇ ನನ್ನ ನಿರ್ಣಯವಾಗಿರುತ್ತದೆ’ ಎಂದರು. `ನಮ್ಮ ಗ್ರಾಪಂ ವ್ಯಾಪ್ತಿಯಲ್ಲಿ ಈ ಬಂದರು ಬೇಡ’ ಎಂದು ಠರಾವು ಮಾಡಲು ಒಪ್ಪಿಗೆ ಸೂಚಿಸಿದರು. ನೋಡಲ್ ಅಧಿಕಾರಿ ವಿನಾಯಕ ನಾಯ್ಕ, ಗ್ರಾಪಂ ಅಭಿವೃದ್ಧಿ ಅಧಿಕಾರಿ ಮಹಾದೇವ ಗೌಡ, ಗ್ರಾಪಂ ಉಪಾಧ್ಯಕ್ಷೆ ಅನಿತಾ ನಾಯಕ, ಸದಸ್ಯರಾದ ಪಾಂಡು ಗೌಡ, ಸುಕ್ರು ಗೌಡ, ವೆಂಕಟೇಶ ಹರಿಕಂತ್ರ, ಜ್ಞಾನೇಶ್ವರ ಹರಿಕಂತ್ರ, ಕಮಲಾ ಆಗೇರ್ ಇತರರು ಬಂದರು ವಿರೋಧಿ ವಿಷಯವಾಗಿ ಮಾತನಾಡಿದರು. - [5 ರೂಪಾಯಿ ಕೇಳಿದವ 10 ಲಕ್ಷ ರೂ ಯಾಮಾರಿಸಿದ!](https://mobiletime.in/2025/09/the-person-who-asked-for-5-rupees-ended-up-selling-10-lakh-rupees/): ಅಪರಿಚಿತ ಮೊಬೈಲ್ ಅಪ್ಲಿಕೇಶನ್ ಮೂಲಕ 5ರೂ ಪಾವತಿಸಲು ಹೋಗಿದ್ದ ಕೈಗಾ ಅಣು ವಿದ್ಯುತ್ ಘಟಕದ ನಿವೃತ್ತ ಉದ್ಯೋಗಿಯೊಬ್ಬರು 10 ಲಕ್ಷಕ್ಕೂ ಅಧಿಕ ಪ್ರಮಾಣದ ಹಣ ಕಳೆದುಕೊಂಡಿದ್ದಾರೆ. ಕಸ್ಟಮರ್ ಕೇರ್ ಸಿಬ್ಬಂದಿ ಎಂದು ಸಹಾಯ ಮಾಡುವ ನೆಪದಲ್ಲಿ ಮಾತನಾಡಿಸಿದ ವಂಚಕರು ಬಸವನಗೌಡ ನಾಗನೂರಿ ಅವರ ಬ್ಯಾಂಕ್ ಖಾತೆಯಲ್ಲಿದ್ದ ಹಣ ಲಪಟಾಯಿಸಿದ್ದಾರೆ. ಕಾರವಾರದ ಕೈಗಾ ಅಣು ವಿದ್ಯುತ್ ಘಟಕದಲ್ಲಿ ಬಸವನಗೌಡ ನಾಗನೂರಿ ಅವರು ಉದ್ಯೋಗಿಯಾಗಿದ್ದರು. ಸದ್ಯ ಮಲ್ಲಾಪುರ ಟೌನ್‌ಶಿಪ್ಪಿನಲ್ಲಿ ವಾಸವಾಗಿರುವ ಅವರಿಗೆ 60 ವರ್ಷ ತುಂಬಿತ್ತು. ಹೀಗಾಗಿ ಅವರು ನಿವೃತ್ತಿಪಡೆದಿದ್ದು, ಮುಂದೆ ಹುಬ್ಬಳ್ಳಿಯಲ್ಲಿ ವಾಸ ಮಾಡಲು ಉದ್ದೇಶಿಸಿದ್ದರು. ಅದಕ್ಕಾಗಿ ನವನಗರದಲ್ಲಿ ಮನೆ ಕಟ್ಟುವ ಕೆಲಸ ಶುರು ಮಾಡಿದ್ದರು. ಮನೆ ಕೆಲಸ ಚುರುಕಾಗಿ ಸಾಗುತ್ತಿದ್ದು, ಅಡುಗೆ ಮನೆಗೆ ಅಗತ್ಯವಿರುವ ಚಿಮಣಿ ಖರೀದಿಗೆ ಅವರು ಗೂಗಲ್ ಮೊರೆ ಹೋದರು. ಸೆಪ್ಟೆಂಬರ್ 29ರಂದು ಬಸವನಗೌಡ ನಾಗನೂರಿ ಅವರು ಗೂಗಲ್ ಮೂಲಕ ಚಿಮಣಿ ಹುಡುಕಾಟ ನಡೆಸುತ್ತಿದ್ದರು. ಆಗ, ಅವರಿಗೆ ಗ್ಲೇನ್ ಕಂಪನಿಯ ಚಿಮಣಿ ಕಾಣಿಸಿತು. ಆದರೆ, ಅದನ್ನು ಖರೀದಿಸಲು ಸಾಧ್ಯವಾಗಲಿಲ್ಲ. ಹೀಗಾಗಿ ಕಂಪನಿಯ ಕಸ್ಟಮರ್ ಕೇರ್ ಸಂಖ್ಯೆ ಹುಡುಕಿದರು. ಗೂಗಲ್ ಸರ್ಚ ಮಾಡಿದಾಗ ಸಿಕ್ಕಿದ ಕಸ್ಟಮರ್ ಕೇರ್ ಸಂಖ್ಯೆಗೆ ಫೋನ್ ಮಾಡಿದರು. ಆಗ, ಅಪರಿಚಿತನೊಬ್ಬ ಕರೆ ಸ್ವೀಕರಿಸಿದ್ದು, 5 ರೂ ಪಾವತಿಸಿ ಕಸ್ಟಮರ್ ಕೇರ್’ಗೆ ರಿಜಿಸ್ಟರ್ ಮಾಡಿಕೊಳ್ಳುವಂತೆ ಸೂಚಿಸಿದರು. 5 ರೂ ಹಣ ಪಾವತಿಗಾಗಿ ಮೊಬೈಲಿನಲ್ಲಿ ಹೆಲ್ಪ ಡೆಸ್ಕ್ ಹಾಸ್ಟ್ ಎಂಬ ಅಪ್ಲಿಕೇಶನ್ ಡೌನ್ಲೋಡ್ ಮಾಡಿಸಿದರು. ಅದರ ಮೂಲಕ 5 ರೂ ಪಾವತಿಸಲು ತಿಳಿಸಿದರು. ಬಸವನಗೌಡ ನಾಗನೂರಿ ಅವರು ಕಸ್ಟಮರ್ ಕೇರ್ ಸಿಬ್ಬಂದಿ ಹೇಳಿದ ಮಾತಿನ ಪ್ರಕಾರ ಆ ಅಪ್ಲಿಕೇಶನ್ ಮೂಲಕ ತಮ್ಮ ಎಸ್‌ಬಿಐ ಬ್ಯಾಂಕ್ ಖಾತೆ ತೆರೆದರು. 5 ರೂ ಹಣವನ್ನು ಪಾವತಿ ಮಾಡಿದರು. ಅದಾಗಿ ನಿಮಿಷ ಕಳೆಯುವುದರೊಳಗೆ ಬಸವನಗೌಡ ನಾಗನೂರಿ ಅವರ ಬ್ಯಾಂಕ್ ಖಾತೆಯಲ್ಲಿದ್ದ 5 ಲಕ್ಷ ರೂ ಹಣ ಕಣ್ಮರೆಯಾಯಿತು. ಏನಾಯಿತು? ಎಂದು ತಿಳಿಯುವಷ್ಟರಲ್ಲಿ ಮತ್ತೆ 5 ಲಕ್ಷ ರೂ ಹಣ ಕಳೆದುಹೋಯಿತು. ಅದಾದ ನಂತರ ಉಳಿದ ಮತ್ತೆ 95 ಸಾವಿರ ರೂ ಸಹ ವಂಚಕರ ಪಾಲಾಯಿತು. 10.95 ಲಕ್ಷ ರೂ ಕಳೆದುಕೊಂಡ ಬಸವನಗೌಡ ನಾಗನೂರಿ ಅವರಿಗೆ ತಾವು ಮೋಸ ಹೋಗಿರುವುದು ಗೊತ್ತಾಯಿತು. ಮನೆ ನಿರ್ಮಾಣಕ್ಕಾಗಿ ಮಡಗಿದ್ದ ಕಾಸು ಕಳೆದುಕೊಂಡ ಅವರು ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ಬಂದರು. ತಮಗಾದ ಕೆಟ್ಟ ಅನುಭವದ ಬಗ್ಗೆ ತಿಳಿಸಿದರು. ಕಾರವಾರದ ಸೈಬರ್ ಕ್ರೈಂ ಪೊಲೀಸರು ಅವರಿಗೆ ಸಮಾಧಾನ ಮಾಡಿದ್ದು, `ಅಪರಿಚಿತ ಅಪ್ಲಿಕೇಶನ್’ಗಳನ್ನು ಮೊಬೈಲಿನಿಂದ ಡಿಲಿಟ್ ಮಾಡಿ’ ಎಂದು ಅರಿವು ಮೂಡಿಸಿದರು. ವಂಚಕರ ವಿರುದ್ಧ ಪ್ರಕರಣವನ್ನು ದಾಖಲಿಸಿದರು. ನಿಮಗೆ ಏನೇ ಬೇಕಾದರೂ ಅಧಿಕೃತ ಡೀಲರ್’ನಿಂದ ಖರೀದಿಸಿ. ಅಮೇಜಾನ್ ಮೂಲಕ ಖರೀದಿಗೆ ಇಲ್ಲಿ ಕ್ಲಿಕ್ಕಿಸಿ: AMAZON - [ಮಂಚಿಕೇರಿ ಯುವಕನ ಮರಣಕ್ಕೆ ಮಾನಸಿಕ ಚಿಂತೆ ಕಾರಣ](https://mobiletime.in/2025/09/mental-distress-is-the-reason-for-the-death-of-a-manchikeri-youth/): ಅಲ್ಲಿ-ಇಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದ ಯಲ್ಲಾಪುರದ ಮಹೇಶ ಪಟಗಾರ್ ಅವರು ಮಂಗಳವಾರ ನೇಣಿಗೆ ಶರಣಾಗಿದ್ದಾರೆ. ಮಾನಸಿಕ ಚಿಂತೆಯೇ ಅವರ ಅವರ ಆತ್ಮಹತ್ಯೆಗೆ ಕಾರಣ ಎಂದು ಅಂದಾಜಿಸಲಾಗಿದೆ. ಯಲ್ಲಾಪುರದ ಮಂಚಿಕೇರಿ ಬಳಿಯ ಮಾದನಸರದಲ್ಲಿ ಮಹೇಶ ಜಟ್ಟಿ ಪಟಗಾರ ಅವರು ವಾಸವಾಗಿದ್ದರು. ಕೂಲಿ ಕೆಲಸ ಮಾಡಿಕೊಂಡು ನೆಮ್ಮದಿಯಿಂದ ಇದ್ದ ಅವರು ತಮ್ಮ 29ನೇ ವಯಸ್ಸಿನಲ್ಲಿಯೇ ಸಾವನಪ್ಪಿದರು. ಸೆಪ್ಟೆಂಬರ್ 30ರ ಬೆಳಗ್ಗೆ 8.30ರವರೆಗೆ ಸರಿಯಾಗಿಯೇ ಇದ್ದ ಮಹೇಶ ಪಟಗಾರ ಅವರು 9.30ರ ಅವಧಿಯಲ್ಲಿ ಶವವಾಗಿದ್ದರು. ಯಾರಿಗೂ ಅರಿಯದ ಯಾವುದೋ ಒಂದು ವಿಷಯದ ಬಗ್ಗೆ ಮಹೇಶ ಪಟಗಾರ ಅವರು ಚಿಂತಿಸುತ್ತಿದ್ದರು. ಆ ಚಿಂತೆಯಲ್ಲಿಯೇ ಅವರು ಮನೆಯ ಕೋಣೆಯೊಳಗೆ ನೇಣಿಗೆ ಶರಣಾಗಿದ್ದಾರೆ. ಮಗನನ್ನು ಕಳೆದುಕೊಂಡ ಜಟ್ಟಿ ಪಟಗಾರ ಅವರು ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಯಲ್ಲಾಪುರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಮಾದನಸರದ ಮಹೇಶ ಜಟ್ಟಿ ಪಟಗಾರ (29) ಮೃತ ಯುವಕ. ಕೂಲಿ ಕೆಲಸ ಮಾಡಿಕೊಂಡಿದ್ದ ಈತ, ಮನೆಯ ಕೊಠಡಿಯೊಳಗಿನ ಜಂತಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಾವಿಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ. ಈ ಕುರಿತು ಅವರ ತಂದೆ ಜಟ್ಟಿ ಪಟಗಾರ ದೂರು ನೀಡಿದ್ದು, ಯಲ್ಲಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. - [ನೇಣಿಗೆ ಶರಣಾದ ವೆಲ್ಡಿಂಗ್ ಕೆಲಸಗಾರ](https://mobiletime.in/2025/09/welding-worker-hanged-himself/): ಮುಂಡಗೋಡದಲ್ಲಿ ವೆಲ್ಡಿಂಗ್ ಕೆಲಸ ಮಾಡಿಕೊಂಡಿದ್ದ ರವಿಚಂದ್ರ ಎಗೇನವರ್ ಆತ್ಮಹತ್ಯೆಗೆ ಶರಣಾಗಿದ್ದಾರೆ. ಅವರ ಈ ದಿಢೀರ್ ದುಡುಕು ನಿರ್ಧಾರಕ್ಕೆ ಕಾರಣ ಏನು ಎಂದು ಕುಟುಂಬದವರಿಗೂ ಗೊತ್ತಾಗಲಿಲ್ಲ. ಮುಂಡಗೋಡದ ಕೊಪ್ಪದಲ್ಲಿ ರವಿಚಂದ್ರ ಎಗೇನವರ್ (35) ಅವರು ವಾಸವಾಗಿದ್ದರು. ವೆಲ್ಡಿಂಗ್ ಕೆಲಸ ಮಾಡಿಕೊಂಡು ಅವರು ಜೀವನ ನಿರ್ವಹಣೆ ಮಾಡುತ್ತಿದ್ದರು. ದುಡಿದ ಹಣವನ್ನು ಅವರು ಸರಾಯಿ ಸೇವನೆಗೆ ಮೀಸಲಿಟ್ಟಿದ್ದು, ಈಚೆಗೆ ಅವರ ಕುಡಿತದ ಚಟ ವಿಪರೀತವಾಗಿತ್ತು. ಕಳೆದ ಕೆಲ ದಿನಗಳಿಂದ ರವಿಚಂದ್ರ ಎಗೇನವರ್ ಅವರು ಬೇಸರದಲ್ಲಿದ್ದರು. ಆದರೆ, ಬೇಸರದ ಬಗ್ಗೆ ಯಾರಲ್ಲಿಯೂ ಬಾಯ್ಬಿಟ್ಟು ಹೇಳಿರಲಿಲ್ಲ. ಹೀಗಿರುವಾಗ ಸೆಪ್ಟೆಂಬರ್ 29ರಂದು ಅವರು ಹೆಗಲ ಮೇಲೆ ಟವಲ್ ಹಾಕಿಕೊಂಡು ಅಡುಗೆ ಮನೆಗೆ ಹೋಗಿದ್ದು, ಅಲ್ಲಿರುವ ಕಬ್ಬಿಣದ ಜಂತಿಗೆ ಉರುಳು ಹಾಕಿಕೊಂಡರು. ಟವಲ್ ಬಳಸಿ ನೇಣಿಗೆ ಶರಣಾದ ಅವರನ್ನು ಸೆಪ್ಟೆಂಬರ್ 30ರಂದು ಮನೆಯವರು ನೋಡಿದರು. ಬೇಥಸ್ತಾ ಬ್ಯಾಂಕಿನಲ್ಲಿ ಕೆಲಸ ಮಾಡುವ ತಮ್ಮ ಉದಯಕುಮಾರ ಏಗೇನವರ್ ಅವರು ಅಣ್ಣನ ಸಾವಿನ ಬಗ್ಗೆ ಪೊಲೀಸರಿಗೆ ತಿಳಿಸಿದರು. ಮುಂಡಗೋಡು ಪೊಲೀಸರು ಪ್ರಕರಣ ದಾಖಲಿಸಿದರು. - [ಹೃದಯ ರೋಗ: ಮಗಳ ಸಾವಿನಲ್ಲಿ ತಾಯಿಗೆ ಸಂಶಯ](https://mobiletime.in/2025/09/heart-disease-mother-suspects-daughters-death/): ಯಲ್ಲಾಪುರದ ಸುಜಾತಾ ಸಿದ್ದಿ ಅವರ ಪುತ್ರಿ ಮಾಲಾ ಸಿದ್ದಿ ಅವರು ಹಳಿಯಾಳದಲ್ಲಿ ಸಾವನಪ್ಪಿದ್ದಾರೆ. ಈ ಸಾವಿನಲ್ಲಿ ಸಂಶಯವಿರುವುದಾಗಿ ಸುಜಾತಾ ಸಿದ್ದಿ ಅವರು ಹೇಳಿದ್ದಾರೆ. ಸುಜಾತಾ ಸಿದ್ದಿ ಅವರು ಯಲ್ಲಾಪುರದ ಇಡಗುಂದಿಯಲ್ಲಿ ವಾಸವಾಗಿದ್ದಾರೆ. 33 ವರ್ಷದ ಮಾಲಾ ಸಿದ್ದಿ ಅವರನ್ನು ಹಳಿಯಾಳದ ಅಪ್ಪಾರಾವ್ ಸಿದ್ದಿ ಅವರಿಗೆ ವಿವಾಹ ಮಾಡಿಕೊಡಲಾಗಿತ್ತು. ಹಳಿಯಾಳದ ಕುಂಬಾರಕೊಪ್ಪದಲ್ಲಿ ಮಾಲಾ ಸಿದ್ದಿ ಅವರು ವಾಸವಾಗಿದ್ದರು. ಎರಡು ವರ್ಷದ ಹಿಂದೆ ಮಾಲಾ ಸಿದ್ದಿ ಅವರಿಗೆ ಹೃದಯ ರೋಗ ಕಾಣಿಸಿತ್ತು. ಸಾಕಷ್ಟು ಬಾರಿ ಅವರು ಚಿಕಿತ್ಸೆಪಡೆದಿದ್ದರು. ಅದರಿಂದ ಅವರು ಕ್ರಮೇಣ ಚೇತರಿಸಿಕೊಳ್ಳುತ್ತಿದ್ದರು. ಹೀಗಿರುವಾಗ ಸೆಪ್ಟೆಂಬರ್ 28ರ ರಾತ್ರಿ ಅವರು ಉಸಿರಾಟ ನಿಲ್ಲಿಸಿದರು. ಸೆಪ್ಟೆಂಬರ್ 29ರ ನಸುಕಿನಲ್ಲಿ ಮಾಲಾ ಸಿದ್ದಿ ಅವರು ಸಾವನಪ್ಪಿರುವುದು ಗಮನಕ್ಕೆ ಬಂದಿತು. ಮಾಲಾ ಸಿದ್ದಿ ಅವರು ಹೇಗೆ ಸತ್ತರು? ಎಂದು ಸುಜಾತಾ ಸಿದ್ದಿ ಅವರಿಗೆ ಗೊತ್ತಾಗಲಿಲ್ಲ. ಮಗಳ ಸಾವಿನ ಸಮಗ್ರ ತನಿಖೆಗಾಗಿ ಅವರು ಪೊಲೀಸರ ಮೊರೆ ಹೋದರು. ಸಾವಿನಲ್ಲಿ ಸಂಶಯವಿರುವುದಾಗಿ ಹಳಿಯಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದರು. ಪೊಲೀಸರು ಈ ಬಗ್ಗೆ ವಿಚಾರಿಸುತ್ತಿದ್ದಾರೆ. - [ಮನೆ ನಿರ್ಮಾಣ: ಕಳ್ಳರ ಕಾಟಕ್ಕೆ ಗುತ್ತಿಗೆದಾರ ಸುಸ್ತು!](https://mobiletime.in/2025/09/house-construction-contractors-are-tired-of-the-threat-of-thieves/): ಕುಮಟಾದ ಗುತ್ತಿಗೆದಾರ ವಿಶಾಲ ನಾಯಕ ಅವರು ಅಂಕೋಲಾದಲ್ಲಿ ಮನೆ ನಿರ್ಮಾಣ ಗುತ್ತಿಗೆಪಡೆದಿದ್ದು, ಮನೆ ಕಟ್ಟುವ ಸ್ಥಳದಲ್ಲಿ ಅವರು ತಂದಿರಿಸಿದ್ದ ಸಾಮಗ್ರಿಗಳನ್ನು ಕಳ್ಳರು ದೋಚಿದ್ದಾರೆ. ಕುಮಟಾ ಬರ್ಗಿ ಕುರಿಗದ್ದೆಯ ವಿಶಾಲ ನಾಯಕ ಅವರು ಗುತ್ತಿಗೆದಾರರಾಗಿ ಕೆಲಸ ಮಾಡುತ್ತಿದ್ದಾರೆ. ಅವರು ಅಂಕೋಲಾದ ಆಂದ್ಲೆಯಲ್ಲಿ ಮನೆ ನಿರ್ಮಾಣದ ಗುತ್ತಿಗೆ ಮಾಡಿಕೊಂಡಿದ್ದಾರೆ. ಈ ಹಿನ್ನಲೆ ಅಲ್ಲಿ ಕಟ್ಟಡ ಕೆಲಸ ಶುರು ಮಾಡಿದ್ದು, ಅಗತ್ಯವಿರುವ ಸಾಮಗ್ರಿಗಳನ್ನು ಕಟ್ಟಡದ ಬಳಿ ದಾಸ್ತಾನು ಮಾಡುತ್ತಿದ್ದಾರೆ. ಮನೆ ಕೆಲಸ ವೇಗವಾಗಿ ನಡೆಯುತ್ತಿದ್ದು, ಸದ್ಯ ಸ್ಲಾಪ್ ಹಾಕುವವರೆಗೆ ಬಂದಿದೆ. ಸ್ಲಾಪ್ ಹಾಕುವುದಕ್ಕಾಗಿ ವಿಶಾಲ ನಾಯಕ ಅವರು ಕಬ್ಬಿಣದ ಪ್ಲೇಟುಗಳನ್ನು ದಾಸ್ತಾನು ಮಾಡಿದ್ದರು. ಅಗಸ್ಟ 20ರಂದು ಅವರು ಅಲ್ಲಿ ಕಬ್ಬಿಣ ತಂದು ರಾಶಿ ಹಾಕಿದ್ದರು. ಸೆಪ್ಟೆಂಬರ್ 21ರಂದು ವಿಶಾಲ ನಾಯಕ ಅವರು ಕಟ್ಟಡದ ಬಳಿ ಹೋದಾಗ ಅಲ್ಲಿ ದಾಸ್ತಾನು ಮಾಡಿದ್ದ ಕಬ್ಬಿಣ ಕಾಣೆಯಾಗಿತ್ತು. ಸೆಂಟ್ರಿAಗ್ ಕೆಲಸಕ್ಕೆ ಅಗತ್ಯವಿದ್ದ 58 ಪ್ಲೇಟುಗಳನ್ನು ಕಳ್ಳರು ಎಗರಿಸಿದ್ದರು. ಜೊತೆಗೆ ಅಲ್ಲಿದ್ದ ಶೆಡ್ಡನ್ನು ಮುರಿದಿದ್ದರು. ಶೆಡ್ಡಿನ ಒಳಗಿದ್ದ ರಾಡ್ ಕಟಿಂಗ್ ಮಿಶನ್, ಸುತ್ತಿಗೆ, ಕಬ್ಬಿಣದ ಲಿವರ್’ನ್ನು ಅಪಹರಿಸಿದ್ದರು. ಇದರಿಂದ ಸುಮಾರು 30 ಸಾವಿರ ರೂ ನಷ್ಟ ಅನುಭವಿಸಿದ ವಿಶಾಲ ನಾಯಕ ಅವರು ಕಳ್ಳರ ಪತ್ತೆಗಾಗಿ ಪೊಲೀಸರ ಮೊರೆ ಹೋದರು. ಅಂಕೋಲಾ ಪೊಲೀಸರು ಪ್ರಕರಣ ದಾಖಲಿಸಿದ್ದು, ತನಿಖೆ ನಡೆಸಿದ್ದಾರೆ. - [ಜಾತಿ ಸಮೀಕ್ಷೆ: ಸರ್ಕಾರಿ ಸಿಬ್ಬಂದಿಗೆ ಸ್ವತ್ವ ಪರೀಕ್ಷೆ!](https://mobiletime.in/2025/09/caste-survey-asset-test-for-government-employees/): ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಹೆಸರಿನಲ್ಲಿ ಸರ್ಕಾರ ಜಾತಿ ಬಗ್ಗೆ ಪ್ರಶ್ನಿಸುತ್ತಿದೆ. ಇದರೊಂದಿಗೆ ಕುಟುಂಬದ ಹಿನ್ನಲೆ, ಆಧಾರ್ ಕಾರ್ಡ ಜೊತೆ ಆಸ್ತಿ, ಆಭರಣಗಳ ಬಗ್ಗೆಯೂ ಮಾಹಿತಿ ಕಲೆ ಹಾಕುತ್ತಿದೆ. `ಈ ಎಲ್ಲಾ ಪ್ರಶ್ನೆಗಳಿಗೆ ಸರ್ಕಾರಿ ಸಿಬ್ಬಂದಿ ಸ್ವಯಂ ಪ್ರೇರಣೆಯಿಂದ ಉತ್ತರಿಸಬೇಕು. ಜೊತೆಗೆ ಗಣತಿದಾರರು ಮನೆಯವರೆಗೆ ಬರುವವರೆಗೆ ಕಾಯದೇ ಆನ್‌ಲೈನ್ ಮೂಲಕ ಭಾಗವಹಿಸಿ ಮಾಹಿತಿ ಒದಗಿಸಬೇಕು’ ಎಂದು ಜಿಲ್ಲಾಡಳಿತ ಹೇಳಿದೆ. ರಾಜ್ಯ ಹಿಂದುಳಿದ ವರ್ಗಗಳ ಆಯೋಗದಿಂದ ರಾಜ್ಯದ ಎಲ್ಲಾ ನಾಗರಿಕರ ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಗತಿಗಳ ಕುರಿತು ನಿಖರ ಮಾಹಿತಿ ಸಂಗ್ರಹಿಸುವ ಕಾರ್ಯ ಜೋರಾಗಿದೆ. ಈಗಾಗಲೇ ರಾಜ್ಯಾದ್ಯಂತ ಸಮೀಕ್ಷೆ ಕಾರ್ಯ ಶುರುವಾಗಿದ್ದು, ಅನೇಕ ಶಿಕ್ಷಕರು ಮನೆ ಮನೆಗೆ ಭೇಟಿ ನೀಡುತ್ತಿದ್ದಾರೆ. `ಈ ಸಮೀಕ್ಷೆಗಾಗಿ ಮನೆಗಳಿಗೆ ಗಣತಿದಾರರು ಬರುವವರೆಗೆ ಕಾಯದೇ ಜಿಲ್ಲೆಯ ಎಲ್ಲಾ ಸರ್ಕಾರಿ ಅಧಿಕಾರಿಗಳು ಮತ್ತು ಸಿಬ್ಬಂದಿ ಸ್ವಯಂ ಘೋಷಣೆ ಮೂಲಕ ಆನ್‌ಲೈನ್‌ನಲ್ಲಿ ಸಮೀಕ್ಷೆಯಲ್ಲಿ ಭಾಗವಹಿಸಬೇಕು’ ಎಂದು ಅಪರ ಜಿಲ್ಲಾಧಿಕಾರಿ ಸಾಜಿದ್ ಮುಲ್ಲಾ ಹೇಳಿದ್ದಾರೆ. ಅವರು ಮಂಗಳವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಆನ್‌ಲೈನ್ ಸಭೆ ನಡೆಸಿದ ಅವರು `ಈಗಾಗಲೇ ಗುರುತಿಸಲಾಗಿರುವ ಎಲ್ಲಾ ಮನೆಗಳಿಗೆ ಗಣತಿದಾರರು ಭೇಟಿ ನೀಡುತ್ತಿದ್ದಾರೆ. ಅವರು ಗಣತಿ ಕಾರ್ಯ ನಡೆಸುತ್ತಿದ್ದು, ಸರ್ಕಾರಿ ಅಧಿಕಾರಿಗಳು ಮತ್ತು ಸಿಬ್ಬಂದಿ ಗಣತಿದಾರರ ಆಗಮನಕ್ಕಾಗಿ ನಿರೀಕ್ಷಿಸಬಾರದು’ ಎಂದು ಸೂಚಿಸಿದ್ದಾರೆ. ಪ್ರತಿಯೊಬ್ಬ ಸರ್ಕಾರಿ ಸಿಬ್ಬಂದಿಯೂ `ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ’ ವೆಬ್‌ಸೈಟ್ ಕ್ಲಿಕ್ ಮಾಡಿ, ಮಾಹಿತಿ ನೀಡಬೇಕು’ ಎಂದವರು ಹೇಳಿದ್ದಾರೆ. `ಹೆಚ್ಚು ಸಿಬ್ಬಂದಿ ಹೊಂದಿದ ಪೊಲೀಸ್, ಆರೋಗ್ಯ, ಶಿಕ್ಷಣ, ಜಿಲ್ಲಾ ಪಂಚಾಯತ್ ಮೊದಲಾದ ಇಲಾಖೆಯವರು ಈ ಬಗ್ಗೆ ಕೆಲಸ ಶುರು ಮಾಡಬೇಕು. ಹೊರಗುತ್ತಿಗೆ ಸಿಬ್ಬಂದಿ ಸಹ ಸ್ವಯಂ ಪ್ರೇರಣೆಯಿಂದ ಈ ಸಮೀಕ್ಷೆಯಲ್ಲಿ ಭಾಗವಹಿಸಬೇಕು’ ಎಂದವರು ಹೇಳಿದ್ದಾರೆ. `ಪಡಿತರ ಚೀಟಿ, ಮತದಾರರ ಚೀಟಿ ಮತ್ತು ಆಧಾರ್ ದಾಖಲೆಗಳನ್ನು ಸಿದ್ದವಾಗಿದ್ದಲ್ಲಿ 15 ನಿಮಿಷದ ಒಳಗೆ ಸಮೀಕ್ಷೆ ಮುಗಿಸಲು ಸಾಧ್ಯ. ಮುಂದಿನ 2 ದಿನಗಳು ರಜೆ ಇದ್ದು, ಬಿಡುವಿನ ಅವಧಿಯಲ್ಲಿ ಸರ್ಕಾರಿ ನೌಕರರು ಕುಟುಂಬದ ಸಮೀಕ್ಷೆ ಮುಗಿಸಬೇಕು. ಅಕ್ಟೊಬರ್ 3ರಂದು ಎಲ್ಲಾ ಇಲಾಖೆಯವರು ಈ ವಿಷಯದ ಪ್ರಗತಿ ವರದಿ ಸಲ್ಲಿಸಬೇಕು’ ಎಂದವರು ಸೂಚಿಸಿದ್ದಾರೆ. ಈ ಸಭೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ ನೀರಜ್, ಜಿಲ್ಲಾ ವಾರ್ತಾಧಿಕಾರಿ ಬಿ ಶಿವಕುಮಾರ್, ನಗರಾಭಿವೃಧ್ದಿ ಕೋಶದ ಯೋಜನಾ ನಿರ್ದೇಶಕ ಜಹೀರ್ ಅಬ್ಬಾಸ್, ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಶಿವಕ್ಕ ಮಾದರ, ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಉಮೇಶ್ ಇದ್ದರು. ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯಲ್ಲಿ ಭಾಗವಹಿಸಲು ಇಲ್ಲಿ ಕ್ಲಿಕ್ ಮಾಡಿ: ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆ - [ಧರ್ಮಸ್ಥಳ: ಪಾದಯಾತ್ರೆ ನಡೆಸಿದ ಮುಂಬೈ ಭಕ್ತ!](https://mobiletime.in/2025/09/dharamsthala-a-mumbai-devotee-who-went-on-a-padayatra/): ಶ್ರೀಕ್ಷೇತ್ರ ಧರ್ಮಸ್ಥಳದ ಕುರಿತು ಅಪಪ್ರಚಾರ ನಡೆದಿರುವುದನ್ನು ಮುಂಬೈಯ ಜಯಪ್ರಕಾಶ್ ಶೆಟ್ಟಿ ಅವರು ಖಂಡಿಸಿದ್ದಾರೆ. ಕ್ಷೇತ್ರದ ಮಹಿಮೆ ಸಾರುವುದಕ್ಕಾಗಿ ಅವರು ಮುಂಬೈಯಿAದ ಧರ್ಮಸ್ಥಳಕ್ಕೆ ಪಾದಯಾತ್ರೆ ಮಾಡಿದ್ದಾರೆ. ದೆಹಲಿ, ಅಮೃತಸರ, ಶಬರಮತಿ ಸೇರಿ ದೇಶದ ನಾನಾ ಭಾಗ ಸಂಚರಿಸಿದ ಅವರು ಧರ್ಮಸ್ಥಳ ತಲುಪಿದರು. ಅದಾದ ನಂತರ ಉತ್ತರ ಕನ್ನಡ ಜಿಲ್ಲೆಯ ಮಾರ್ಗವಾಗಿ ಅವರು ಮುಂಬೈಗೆ ತೆರಳುತ್ತಿದ್ದು, ಮಂಗಳವಾರ ಕುಮಟಾಗೆ ಆಗಮಿಸಿದರು. ರಾಷ್ಟçಧ್ವಜ ಹಿಡಿದು ಸಂಚರಿಸುತ್ತಿರುವ ಜಯಪ್ರಕಾಶ ಶೆಟ್ಟಿ ಅವರು ಇಲ್ಲಿಯೂ ತಮ್ಮನ್ನು ಭೇಟಿ ಆದವರಿಗೆ ಧರ್ಮಸ್ಥಳದ ಮಹತ್ವದ ಬಗ್ಗೆ ಅವರು ತಿಳಿಸಿದ್ದಾರೆ. 50ವರ್ಷದ ಜಯಪ್ರಕಾಶ ಶೆಟ್ಟಿ ಅವರು ಈಗಾಗಲೇ ಧರ್ಮಸ್ಥಳ ಪರ ಪ್ರಚಾರ ನಡೆಸಲು 11 ಸಾವಿರ ಕಿಮೀ ಪಾದಯಾತ್ರೆ ಮಾಡಿದ್ದಾರೆ. ಜನಸಾಮಾನ್ಯರ ಸಮಾಜ ಕಲ್ಯಾಣ ಕೇಂದ್ರದ ಆಗ್ನೇಲ್ ರೋಡ್ರಿಗಸ್ ಹಾಗೂ ಸುಧಾಕರ ನಾಯ್ಕ ಅವರು ಜಯಪ್ರಕಾಶ ಶೆಟ್ಟಿ ಅವರನ್ನು ಮಾತನಾಡಿಸಿದರು. ಆಗ `ಹಸಿದ ಪ್ರತಿಯೊಬ್ಬರಿಗೂ ಧರ್ಮಸ್ಥಳದಲ್ಲಿ ಹೊಟ್ಟೆ ತುಂಬ ಊಟ ಕೊಡಲಾಗುತ್ತದೆ. 15 ರೂಪಾಯಿಗೆ ಇಲ್ಲಿ ವಸತಿ ವ್ಯವಸ್ಥೆ ಸಿಗುತ್ತದೆ. ಆದರೆ, ಕೆಲವರು ಅನಗತ್ಯವಾಗಿ ಧರ್ಮಸ್ಥಳಕ್ಕೆ ಕೆಟ್ಟ ಹೆಸರು ಬರುವ ಹಾಗೇ ಮಾಡಿದ್ದಾರೆ. ಅದನ್ನು ಹೋಗಲಾಡಿಸುವ ಪ್ರಯತ್ನವಾಗಿ ಪಾದಯಾತ್ರೆ ನಡೆಸಿದ್ದೇನೆ’ ಎಂದು ಜಯಪ್ರಕಾಶ ಶೆಟ್ಟಿ ಅವರು ಹೇಳಿದರು. `ಯಾವುದೇ ಧರ್ಮದ ವಿರುದ್ಧ ಇಲ್ಲಸಲ್ಲದ ಆರೋಪ ಮಾಡುವುದು ಸರಿಯಲ್ಲ. ಧಾರ್ಮಿಕ ಭಾವನೆಗಳಿಗೆ ಧಕ್ಕೆ ಮಾಡಿರುವುದು ನೋವು ತಂದಿದೆ. ಶ್ರೀಕ್ಷೇತ್ರಕ್ಕೆ ಕೆಟ್ಟ ಹೆಸರು ತರಲು ಪ್ರಯತ್ನಿಸಿದವರ ಬಗ್ಗೆ ನಾನೇನು ಹೇಳುವುದಿಲ್ಲ. ಅವರನ್ನು ಆ ಮಂಜುನಾಥ ಸ್ವಾಮಿಯೇ ನೋಡಿಕೊಳ್ಳುತ್ತಾನೆ’ ಎಂದು ಜಯಪ್ರಕಾಶ ಶೆಟ್ಟಿ ಪ್ರತಿಕ್ರಿಯಿಸಿದರು - [ಸರ್ಕಾರಿ ಆಸ್ಪತ್ರೆಗೆ ಸರ್ಜರಿ: ಕೋಟಿ ರೂ ಕಾಮಗಾರಿ ಕಳಪೆ!](https://mobiletime.in/2025/09/surgery-for-government-hospital-crores-of-poor-work/): ಬಹುಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಕಾರವಾರದ ಮೆಡಿಕಲ್ ಕಾಲೇಜು ಆವರಣದ ಸರ್ಕಾರಿ ಆಸ್ಪತ್ರೆ ಕಾಮಗಾರಿ ಕಳಪೆಯಾಗಿದೆ. ಉದ್ಘಾಟನೆಗೂ ಮುನ್ನವೇ ಕಟ್ಟಡದ ಕೆಲ ಭಾಗ ಕುಸಿತ ಕಂಡಿದೆ! ಕಾರವಾರದಲ್ಲಿ ಈ ದಿನ ಭೂಕಂಪನವೂ ಆಗಿಲ್ಲ. ದೊಡ್ಡ ಸದ್ದು-ಗದ್ದಲವೂ ಕೇಳಲ್ಪಟ್ಟಿಲ್ಲ. ಆದರೂ, ಕಾರವಾರ ವೈದ್ಯಕೀಯ ವಿಜ್ಞಾನ ಕೇಂದ್ರದ ಹೊಸ ಕಟ್ಟಡ ಅಲ್ಲಾಡಿತು. ಕಟ್ಟಡದ ಗೋಡೆಗಳು ಮೊದಲೇ ಬಿರುಕು ಮೂಡಿದ್ದು, ಮಳೆಗಾಲದಲ್ಲಿ ಕಟ್ಟಡದ ಒಳಗೆ ನೀರು ಸೋರುತ್ತಿತ್ತು. ಮಂಗಳವಾರ ಮೊದಲ ಮಹಡಿ ಹಾಗೂ ಎರಡನೇ ಮಹಡಿಯ ಮೇಲ್ಚಾವಣಿ ಕುಸಿದು ಬಿದ್ದಿತು. 1980ರ ಅವಧಿಯಲ್ಲಿ ಕಾರವಾರದಲ್ಲಿ ಸಿವಿಲ್ ಆಸ್ಪತ್ರೆ ಕಟ್ಟಡ ನಿರ್ಮಿಸಲಾಗಿದ್ದು, ಅದು ಶಿಥಿಲವಾಗಿತ್ತು. ಹೀಗಾಗಿ ಹೊಸ ಕಟ್ಟಡ ಕಟ್ಟುವ ಕಾರ್ಯ ನಡೆಯಿತು. ವೈದ್ಯಕೀಯ ವಿಜ್ಞಾನ ಕಾಲೇಜು ಅಧೀನದಲ್ಲಿ 450 ಹಾಸಿಗೆಯ ಆಸ್ಪತ್ರೆ ನಿರ್ಮಿಸುವ ಕೆಲಸವನ್ನು ಬಿಎಸ್‌ಆರ್ ಕನ್ಸಟ್ರಕ್ಷನ್ ಕಂಪನಿ ಗುತ್ತಿಗೆಪಡೆಯಿತು. ಕಟ್ಟಡ ಪೂರ್ಣಗೊಳ್ಳುವ ಮೊದಲೇ ಹಳೆಯ ಆಸ್ಪತ್ರೆಯಲ್ಲಿದ್ದ ರೋಗಿಗಳನ್ನು ಅಲ್ಲಿ ಸ್ಥಳಾಂತರಿಸಲಾಯಿತು. ರೋಗಿಗಳು ಆ ಕಟ್ಟಡದಲ್ಲಿರುವಾಗಲೇ ಕಟ್ಟಡದ ಇನ್ನಷ್ಟು ಕಾಮಗಾರಿ ನಡೆಯುತ್ತಿತ್ತು. ಎರಡನೇ ಮಹಡಿಯ ಕೆಲಸ ಮುಂದುವರೆದಿದ್ದು, ಅಲ್ಲಿನ ಗೋಡೆಗಳು ಬಿರುಕು ಮೂಡಿದ್ದವು. ಕಟ್ಟಡದ ಅಲ್ಲಲ್ಲಿ ನೀರು ಸೋರುತ್ತಿದ್ದು, ಗೋಡೆಗಳು ಒದ್ದೆಯಾಗಿದ್ದವು. ಮಂಗಳವಾರ ಆ ಮಹಡಿಯ ಮೇಲ್ಬಾಗ ಅಳವಡಿಸಿದ್ದ ಪಿಓಪಿ ಪರದೆ ಕುಸಿದಿದೆ. ಕಟ್ಟಡದಲ್ಲಿ ನಿರ್ಮಾಣವಾಗುತ್ತಿದ್ದ ಸರ್ಜರಿ ವಿಭಾಗ ಹಾಗೂ ಶಸ್ತç ಚಿಕಿತ್ಸೆ, ಉಪನ್ಯಾಸಕರ ಕೊಠಡಿ ಭಾಗದಲ್ಲಿ ಮೇಲ್ಚಾವಣಿ ಕುಸಿತ ಉಂಟಾಗಿದೆ. ಕುಸಿತದ ಅವಧಿಯಲ್ಲಿ ಸ್ಥಳದಲ್ಲಿ ಯಾರು ಇರಲಿಲ್ಲ. ಹೀಗಾಗಿ ಪಿಓಪಿ ತುಂಡುಗಳು ತಲೆ ಮೇಲೆ ಬಿದ್ದಿಲ್ಲ. ಜನಶಕ್ತಿಯಿಂದ ಸಾರ್ವಜನಿಕ ಹಿತಾಸಕ್ತಿ ಈ ಕಟ್ಟಡ ಇನ್ನೂ ಉದ್ಘಾಟನೆ ಆಗಿಲ್ಲ. ಅಧಿಕೃತವಾಗಿ ಹಸ್ತಾಂತರವೂ ಆಗಿಲ್ಲ. ಅದಕ್ಕೂ ಮೊದಲೇ ಕಳಪೆ ಕಾಮಗಾರಿಯ ಪ್ರದರ್ಶನವಾಗಿದೆ. ಈ ಬಗ್ಗೆ ಮಾಹಿತಿ ಅರಿತ ಜನಶಕ್ತಿ ವೇದಿಕೆ ಅಧ್ಯಕ್ಷ ಮಾಧವ ನಾಯಕ ಸ್ಥಳ ಪರಿಶೀಲನೆ ಮಾಡಿದರು. ತಹಶೀಲ್ದಾರ್ ನಿಶ್ಚಲ್ ನರೋನಾ ಅವರನ್ನು ಕರೆಯಿಸಿ ಕಾಮಗಾರಿಯ ಕಳಪೆಯನ್ನು ವಿವರಿಸಿದರು. ಸುಮಾರು 200 ಕೋಟಿ ರೂ ವೆಚ್ಚದಲ್ಲಿ ಕಟ್ಟಡ ನಿರ್ಮಿಸುತ್ತಿದ್ದು, ಉದ್ಘಾಟನೆಗೂ ಮುನ್ನವೇ ಗೋಡೆಗಳಲ್ಲಿ ಬಿರುಕು ಬಂದ ಬಗ್ಗೆ ಅವರು ಆಕ್ಷೇಪಿಸಿದರು. ಇಡೀ ಕಟ್ಟಡದ ಗುಣಮಟ್ಟವನ್ನು ಮರುಪರಿಶೀಲನೆಗೆ ಒಳಪಡಿಸಬೇಕು ಎಂದು ಅವರು ಜಿಲ್ಲಾಡಳಿತಕ್ಕೆ ಪತ್ರ ನೀಡಿದರು. - [ಅರಬೈಲ್ ಘಟ್ಟದಲ್ಲಿ ಅಪಘಾತ: ಡಸ್ಟರ್ ಕಾರು ಧಗ ಧಗ!](https://mobiletime.in/2025/09/accident-at-arabil-ghat-duster-car-catches-fire/): ಯಲ್ಲಾಪುರದಿಂದ ಕುಮಟಾಗೆ ಹೋಗುತ್ತಿದ್ದ ಡಸ್ಟರ್ ಕಾರು ಅರಬೈಲ್ ಘಟ್ಟದ ಬಳಿ ಬೆಂಕಿಗೆ ಆಹುತಿಯಾಗಿದೆ. ಸೋಮವಾರ ತಡರಾತ್ರಿ ಈ ಅನಾಹುತ ನಡೆದಿದೆ. ಯಲ್ಲಾಪುರದ ಉದ್ಯಮನಗರ ಬಳಿಯ ರೂಪೇಶ ನಾಯ್ಕ ಅವರು ಸೋಮವಾರ ರಾತ್ರಿ ಹುಬ್ಬಳ್ಳಿ-ಅಂಕೋಲಾ ಹೆದ್ದಾರಿಯಲ್ಲಿ ಕಾರು ಓಡಿಸುತ್ತಿದ್ದರು. ಅವರ ಜೊತೆ ಅಕ್ಷಯ ನಾಯ್ಕ ಎಂಬಾತರು ಇದ್ದರು. ಆರತಿಬೈಲ್ ಘಟ್ಟದಲ್ಲಿ ಎದುರಿನಿಂದ ದಿಡೀರ್ ಆಗಿ ಇನ್ನೊಂದು ವಾಹನ ಬಂದಿದ್ದು, ರೂಪೇಶ ನಾಯ್ಕ ಅವರು ಅಪಘಾತ ತಪ್ಪಿಸುವುದಕ್ಕಾಗಿ ಕಾರನ್ನು ಏಕಾಏಕಿ ತಿರುಗಿಸಿದರು. ಶೇಡಿಕೇರೆ ತಿರುವಿನ ಬಳಿ ಕಾರು ಮುಂದಿದ್ದ ತಡೆಗೋಡೆಯ ಕಟ್ಟೆಗೆ ಡಿಕ್ಕಿಯಾಯಿತು. ಡಿಕ್ಕಿ ರಭಸಕ್ಕೆ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡಿತು. ಹೊಗೆ ಬರುತ್ತಿರುವುದನ್ನು ನೋಡಿದ ರೂಪೇಶ ನಾಯ್ಕ ಹಾಗೂ ಅಕ್ಷಯ ನಾಯ್ಕ ಕಾರಿನಿಂದ ಇಳಿದರು. ಏನಾಗಿದೆ? ಎಂದು ನೋಡುವಷ್ಟರಲ್ಲಿ ಬೆಂಕಿ ಆವರಿಸಿತು. ಕಾರಿಗೆ ಹೊತ್ತಿದ ಬೆಂಕಿ ಆರಿಸುವ ಪ್ರಯತ್ನ ಮಾಡಿದರೂ ಅದು ಫಲ ಕೊಡಲಿಲ್ಲ. ಹೀಗಾಗಿ ಅವರು ಅಗ್ನಿಶಾಮಕದಳಕ್ಕೆ ಫೋನ್ ಮಾಡಲು ಪ್ರಯತ್ನಿಸಿದರು. ಆದರೆ, ಅಲ್ಲಿ ಸರಿಯಾಗಿ ಮೊಬೈಲ್ ನೆಟ್‌ವರ್ಕ ಸಿಗಲಲ್ಲ. ಅದಾಗಿಯೂ, ನೆಟ್‌ವರ್ಕ ಹುಡುಕಿ ಅಗ್ನಿಶಾಮಕ ಸಿಬ್ಬಂದಿಗೆ ಫೋನ್ ಮಾಡಿದರು. ಪೊಲೀಸರಿಗೂ ವಿಷಯ ಮುಟ್ಟಿಸಿದರು. ಪಿಎಸ್‌ಐ ಸಿದ್ದು ಗುಡಿ ಅವರು ಅಗ್ನಿಶಾಮಕ ಸಿಬ್ಬಂದಿ ಜೊತೆ ಸ್ಥಳಕ್ಕೆ ತೆರಳಿದರು. ಹೊತ್ತಿ ಉರಿಯುತ್ತಿದ್ದ ಕಾರಿಗೆ ಅಗ್ನಿಶಾಮಕ ಸಿಬ್ಬಂದಿ ನೀರು ಹಾಯಿಸಿದರು. ರಾತ್ರಿ ಆಗಿದ್ದರಿಂದ ವಾಹನ ಸಂಚಾರ ಹೆಚ್ಚಿರಲಿಲ್ಲ. ಆದರೂ, ಕಾರಿನ ಬೆಂಕಿ ಇನ್ನಿತರ ಕಡೆ ವ್ಯಾಪಿಸುವ ಅಪಾಯವಿದ್ದು ಅದನ್ನು ಅಗ್ನಿಶಾಮಕ ಸಿಬ್ಬಂದಿ ತಡೆದರು. ಕಾರಿನಲ್ಲಿದ್ದ ರೂಪೇಶ ನಾಯ್ಕ ಹಾಗೂ ಅಕ್ಷಯ ನಾಯ್ಕ ಮೊದಲೇ ಕೆಳಗಿಳಿದಿದ್ದರಿಂದ ಅಪಾಯದಿಂದ ಪಾರಾದರು. ಆದರೆ, ಅವರ ಕೆಲ ದಾಖಲೆಗಳು ಕಾರಿನ ಒಳಗೆ ಸಿಲುಕಿ ಸುಟ್ಟು ಹೋಗಿದ್ದವು. ಕಾರು ಗೋಡೆಗೆ ಗುದ್ದಿದಾಗ ರೇಡಿಯೇಟರ್ ಸಮಸ್ಯೆಯಿಂದ ಬೆಂಕಿ ಕಾಣಿಸಿದ ಅನುಮಾನವ್ಯಕ್ತವಾಗಿದೆ. ಕೆಲ ದಿನಗಳ ಹಿಂದೆಯೂ ಅರಬೈಲ್ ಘಟ್ಟದಲ್ಲಿ ಆಲ್ಟೋ ಕಾರು ಅಗ್ನಿಗೆ ಆಹುತಿಯಾಗಿತ್ತು. ಆ ಸ್ಥಳದಿಂದ ಅನತಿ ದೂರದಲ್ಲಿಯೇ ಇದೀಗ ಡಸ್ಟರ್ ಕಾರು ಕರಕಲಾಗಿದೆ. - [ಸಾಮಾನ್ಯ ರೋಗಕ್ಕೆ ಸಾಮಾನ್ಯ ಚಿಕಿತ್ಸೆ: ನಿತ್ಯದ ಬದುಕಿಗೆ ಆಯುರ್ವೇದ](https://mobiletime.in/2025/09/common-treatment-for-common-diseases-ayurveda-for-everyday-life/): ಆಯುರ್ವೇದ ಚಿಕಿತ್ಸೆ ನೀಡುವ ವೈದ್ಯರಲ್ಲಿ ವಿಶೇಷ ತಜ್ಞರು ಹೆಚ್ಚಾಗಿದ್ದಾರೆ. ಆದರೆ, ದೈನಂದಿನ ಸಾಮಾನ್ಯ ಆರೋಗ್ಯ ಸಮಸ್ಯೆ ಪರಿಹಾರ ನೀಡುವ ಆಯುರ್ವೇದ ವೈದ್ಯರ ಸಂಖ್ಯೆ ವಿರಳವಾಗಿದೆ. ನಿತ್ಯದ ಬದುಕಿನಲ್ಲಿ ಆಯುರ್ವೇದ ಅಳವಡಿಕೆ ಇಂದಿನ ಅನಿವಾರ್ಯಗಳಲ್ಲಿ ಒಂದಾಗಿದೆ. ವೇಗದ ಜೀವನದಲ್ಲಿ ಜನರು ದೈನಂದಿನ ಆರೋಗ್ಯ ಸಮಸ್ಯೆಗಳಿಗೆ ತಕ್ಷಣ ಪರಿಣಾಮಕಾರಿ ಮತ್ತು ನೈಸರ್ಗಿಕ ಪರಿಹಾರಗಳನ್ನು ಹುಡುಕುತ್ತಿದ್ದಾರೆ. ಸಮಯ-ಪರೀಕ್ಷಿತ, ಸುರಕ್ಷಿತ ಔಷಧಗಳನ್ನು ಬಳಸಿ ದೈನಂದಿನ ಕಾಯಿಲೆಗಳಿಗೆ ತ್ವರಿತ ಪರಿಹಾರ ಬಯಸುತ್ತಿದ್ದಾರೆ. ದೀರ್ಘ ಚಿಕಿತ್ಸಾ ಪದ್ಧತಿಗಳಿಲ್ಲದೇ ಅವುಗಳನ್ನು ಕಾರ್ಯಗತಗೊಳಿಸಲು ಹೆಚ್ಚಿನವರು ಆಸಕ್ತರಾಗಿದ್ದಾರೆ. ದಿನನಿತ್ಯದ ಆರೋಗ್ಯ ಸಮಸ್ಯೆಗಳನ್ನು ಚಿಕಿತ್ಸೆ ಮಾಡುವ ಈ ವಿಧಾನವು ಆಧುನಿಕ ಆರೋಗ್ಯ ಸೇವೆಯಲ್ಲಿ ಆಯುರ್ವೇದ ಸಾಮಾನ್ಯ ಚಿಕಿತ್ಸೆ ಏಕೆ ಅತ್ಯಗತ್ಯವಾಗಿದೆ ಎಂಬುದರ ನಿಜವಾದ ಸಾರವನ್ನು ಪ್ರತಿನಿಧಿಸುತ್ತದೆ. ದೈನಂದಿನ ಆರೋಗ್ಯಕ್ಕಾಗಿ ಆಯುರ್ವೇದ ಸಾಮಾನ್ಯ ಚಿಕಿತ್ಸೆಯನ್ನು ಅರ್ಥಮಾಡಿಕೊಳ್ಳುವುದು ಮುಖ್ಯ. ಸಾಮಾನ್ಯ ಕಾಯಿಲೆಗಳಿಗೆ ಆಯುರ್ವೇದ ಸಾಮಾನ್ಯ ಚಿಕಿತ್ಸೆಯು ಕೇಂದ್ರೀಕರಿಸುತ್ತದೆ. ನೈಸರ್ಗಿಕ ಔಷಧಗಳನ್ನು ಬಳಸಿ, ತತ್ಕ್ಷಣ ರೋಗಲಕ್ಷಣ ಪರಿಹಾರ ಸಾಧ್ಯವಿದೆ. ಮೂಲಭೂತ ಜೀವನಶೈಲಿ ಬದಲಾವಣೆಗಳ ಮೂಲಕ ರೋಗ ಮರುಕಳಿಸುವಿಕೆ ತಡೆಯುವ ಪ್ರಯತ್ನ ಮಾಡಬಹುದಾಗಿದೆ. ಯಾವುದೇ ಅಡ್ಡಪರಿಣಾಮಗಳಿಲ್ಲದೇ ಆಯುರ್ವೇದ ನಿತ್ಯದ ಬದುಕಿನಲ್ಲಿ ಕೆಲಸ ಮಾಡುತ್ತದೆ. ವಾರಗಳ ಸಿದ್ಧತೆ ಮತ್ತು ನಿರ್ವಹಣೆಯ ಅಗತ್ಯವಿರುವ ಸಂಕೀರ್ಣ ಆಯುರ್ವೇದ ಚಿಕಿತ್ಸೆಗಳಿಗಿಂತ ಭಿನ್ನವಾಗಿ ಸಾಮಾನ್ಯ ಚಿಕಿತ್ಸಾ ಪರಿಹಾರಗಳನ್ನು ಕಾಣಲು ಸಾಧ್ಯವಿದೆ. ಆಯುರ್ವೇದ ಔಷಧ ತಯಾರಿಸಲು ಮತ್ತು ನಿರ್ವಹಣೆ ಸುಲಭ. ವೆಚ್ಚ ಕಡಿಮೆ ಜೊತೆಗೆ ಪರಿಣಾಮಕಾರಿಯಾಗಿರಲಿದೆ. ಔಷಧ ಬಳಕೆ, ಅದನ್ನು ಅರ್ಥಮಾಡಿಕೊಳ್ಳಲು ಮತ್ತು ಅನುಸರಿಸಲು ಸುಲಭವಾಗಿದೆ. ತಕ್ಷಣಕ್ಕೆ ಅನುಷ್ಠಾನಕ್ಕೆ ಸೂಕ್ತ. ಜೊತೆಗೆ ತೀವ್ರ ಪರಿಸ್ಥಿತಿಗಳಿಗೆ ಪರಿಣಾಮಕಾರಿಯಾಗಿ ಕೆಲಸ ಮಾಡಲಿದೆ. ಜೀರ್ಣಕ್ರಿಯೆ ಸಮಸ್ಯೆ, ಮಲಬದ್ಧತೆ, ಉಸಿರಾಟದ ಸಮಸ್ಯೆ, ಸಾಮಾನ್ಯ ಶೀತ, ಕೆಮ್ಮು, ಗಂಟಲು ನೋವು, ತಲೆನೋವು ಮತ್ತು ಮೈ ಕೈ ನೋವು ನೋವುಗಳಿಗೆ ಇಲ್ಲಿ ಪರಿಹಾರವಿದೆ. ಸ್ನಾಯುವಿನ ನೋವು ಮತ್ತು ಗಟ್ಟಿತನ, ಚರ್ಮ ಮತ್ತು ಬಾಹ್ಯ ಸಮಸ್ಯೆಗಳು ಆಯುರ್ವೇದರಿಂದ ದೂರವಾಗುತ್ತದೆ. ಸಣ್ಣ ಗಾಯಗಳು, ಮಾನಸಿಕ ಮತ್ತು ಭಾವನಾತ್ಮಕ ಒತ್ತಡ, ಆತಂಕ ಮತ್ತು ಅಶಾಂತಿ, ನಿದ್ರಾಹೀನತೆ ಮತ್ತು ನಿದ್ರೆ ಸಮಸ್ಯೆಗಳಿಗೆ ಸೂಕ್ತ ಔಷಧಿಗಳಿವೆ. ದೈನಂದಿನ ಆರೋಗ್ಯ ಸಮಸ್ಯೆಗಳಿಗೆ ತಕ್ಷಣದ, ಸುರಕ್ಷಿತ ಮತ್ತು ಪರಿಣಾಮಕಾರಿ ಪರಿಹಾರಗಳನ್ನು ಒದಗಿಸುವ ಮೂಲಕ ಆಯುರ್ವೇದ ಆರೋಗ್ಯ ರಕ್ಷಣೆಯಲ್ಲಿನ ನಿರ್ಣಾಯಕ ಪಾತ್ರವಹಿಸಿದೆ. ಶೇ 80ರಷ್ಟು ಆರೋಗ್ಯ ಸಮಸ್ಯೆಗಳಿಗೆ ಆಯುರ್ವೇದ ಪರಿಣಾಮ ಬೀರುತ್ತದೆ. ಲೇಖಕರು: ಡಾ ರವಿಕಿರಣ ಪಟವರ್ಧನ ಶಿರಸಿ - [ವರ್ಕ ಪ್ರಂ ಹೋಂ: ಗಂಡನಿಗೂ ಗೊತ್ತಿಲ್ಲದೇ ಲಕ್ಷ ರೂ ಖಾಲಿ ಮಾಡಿದ ಪತ್ನಿ!](https://mobiletime.in/2025/09/work-at-home-wife-spends-lakhs-of-rupees-without-her-husband-even-knowing/): ಉದ್ಯೋಗ ಹುಡುಕಾಟದಲ್ಲಿದ್ದ ಜೊಯಿಡಾದ ರಮಾದೇವಿ ಅವರು `ವರ್ಕ ಪ್ರಂ ಹೋಂ’ ನಂಬಿ ಲಕ್ಷ ರೂ ಕಳೆದುಕೊಂಡಿದ್ದಾರೆ. ಎರಡು ಬಾರಿ ಮೋಸ ಹೋದ ನಂತರ ಬೇರೆ ದಾರಿ ಇಲ್ಲದೇ ವಂಚನೆಯ ಬಗ್ಗೆ ತಮ್ಮ ಗಂಡನಲ್ಲಿ ಹೇಳಿದ್ದಾರೆ! ರಮಾದೇವಿ ಅವರು ಕ್ಯಾಸಲರಾಕ್ ಸರ್ಕಾರಿ ಆಸ್ಪತ್ರೆ ಹತ್ತಿರ ವಾಸವಾಗಿದ್ದಾರೆ. ಮಾಡಲು ಕೆಲಸವಿಲ್ಲದ ಕಾರಣ ಅವರು ಉದ್ಯೋಗ ಹುಡುಕಾಟದಲ್ಲಿದ್ದರು. ಹೀಗಿರುವಾಗ ಅವರಿಗೆ ಅಗಸ್ಟ 19ರಂದು ಇನಸ್ಟಾಗ್ರಾಮಿನ ಮೂಲಕ ಅನನ್ಯ ಪಟೇಲ್ ಎಂಬಾತರು ಸ್ನೇಹಿತರಾದರು. `ಸಣ್ಣ ಸಣ್ಣ ಟಾಸ್ಕ್ ಕೊಡುವೆ. ಅದನ್ನು ಮುಗಿಸಿದರೆ ಕಾಸು ಕೊಡುವೆ’ ಎಂದು ಅನನ್ಯ ಪಟೇಲ್ ಹೇಳಿದರು. ರಮಾದೇವಿ ಅವರು ಅದನ್ನು ಖುಷಿಯಿಂದ ಒಪ್ಪಿದರು. ಕೊಟ್ಟ ಮಾತಿನ ಪ್ರಕಾರ ಅನನ್ಯ ಪಟೇಲ್ ಅವರು ಮೊದಲು 120ರೂ ಹಾಗೂ ನಂತರ 200ರೂಪಾಯಿಗಳನ್ನು ರಮಾದೇವಿ ಅವರ ಖಾತೆಗೆ ಜಮಾ ಮಾಡಿದರು. ಏನೂ ಕೆಲಸ ಮಾಡದೇ 320ರೂ ಬ್ಯಾಂಕ್ ಖಾತೆಗೆ ಬಂದಿದ್ದಕ್ಕಾಗಿ ರಮಾದೇವಿ ಅವರು ಇಡೀ ದಿನ ಖುಷಿಯಾಗಿದ್ದರು. ಅಗಸ್ಟ 21ರಂದು ಅನನ್ಯ ಪಟೇಲ್ ಅವರು ಮತ್ತೊಂದು ಟಾಸ್ಕ್ ಕೊಡುವುದಾಗಿ ಹೇಳಿದರು. 500ರೂ ಹೂಡಿಕೆ ಮಾಡಿದರೆ 910ರೂ ಸಿಗುವ ಟಾಸ್ಕ್ ಅದಾಗಿದ್ದು, `ಇದಕ್ಕಾಗಿ ಬೀಟ್ ಕಾಯಿನ್ ಅಕೊಂಟ್ ತೆಗೆಯಬೇಕು’ ಎಂದರು. ಅನನ್ಯ ಪಟೇಲ್ ಅವರು ಈ ವೇಳೆ ಸಾಯಿಲ್ ಹುಸೈ ಎಂಬಾತರನ್ನು ಫೋನ್ ಮೂಲಕವೇ ಪರಿಚಯಿಸಿದರು. ಪೂಜಾ, ರಾವಿ, ಬಿರೇಂದ್ರ ಕುಮಾರ, ದೀಪಾಂಕರ ದೇ ಎಂಬಾತರ ಜೊತೆ ರಮಾದೇವಿಯವರನ್ನು ಸೇರಿಸಿ ಅವರೆಲ್ಲರೂ ಒಂದು ಟೆಲಿಗ್ರಾಂ ಗ್ರೂಪ್ ಮಾಡಿದರು. ಅಲ್ಲಿ ಎಲ್ಲರಿಗೂ 3 ಸಾವಿರ, 10 ಸಾವಿರ, 30 ಸಾವಿರ ರೂ ಹೂಡಿಕೆ ಮಾಡುವ ಟಾಸ್ಕ್ ಕೊಟ್ಟರು. ರಮಾದೇವಿ ಅವರನ್ನು ಹೊರತುಪಡಿಸಿ ಎಲ್ಲರೂ ಆ ಹಣ ಹೂಡಿಕೆ ಮಾಡಿದ ದಾಖಲೆ ನೀಡಿದರು. ಆ ದಾಖಲೆ ನೋಡಿ ಪ್ರಭಾವಕ್ಕೆ ಒಳಗಾಗಿ ರಮಾದೇವಿ ಅವರು ಹಣ ಹೂಡಿದರು. ಈ ವೇಳೆ ಅನನ್ಯ ಪಟೇಲ್ ಅವರು ಶ್ವೇತಾ ಎಂಬಾತರನ್ನು ಪರಿಚಯಿಸಿ ತೆರೆಯಿಂದ ಮರೆಯಾದರು. ಶ್ವೇತಾ ಅವರು ರಮಾದೇವಿ ಅವರ ಬಳಿ `ನೀವು ಹೂಡಿಕೆ ಮಾಡುವಾಗ ತಪ್ಪು ಮಾಡಿದ್ದೀರಿ. ಇದಕ್ಕಾಗಿ ಮತ್ತೆ 50 ಸಾವಿರ ರೂ ಹೂಡಿಕೆ ಮಾಡಿದರೆ ಮಾತ್ರ ನಿಮ್ಮ ಬೀಟ್ ಕಾಯಿನ್ ಅಕೊಂಟ್ ಸರಿಯಾಗುತ್ತದೆ’ ಎಂದರು. ಅದನ್ನು ನಂಬಿದ ರಮಾದೇವಿ ಅವರು 50 ಸಾವಿರ ರೂ ಕೊಟ್ಟರು. ಆಗ, `ಮತ್ತೆ 1 ಲಕ್ಷ ರೂ ಹೂಡಿಕೆ ಮಾಡಿದರೆ ಲಾಭ ಸಿಗುತ್ತದೆ’ ಎಂದು ನಂಬಿಸಿದರು. ಟೆಲಿಗ್ರಾಮ್ ಗ್ರೂಪಿನಲ್ಲಿರುವ ಎಲ್ಲರೂ ಹೂಡಿಕೆ ಮಾಡಿರುವುದನ್ನು ನೋಡಿ ರಮಾದೇವಿ ಅವರು 1 ಲಕ್ಷ ರೂ ನೀಡಿದರು. `ನೀವು ಮೊದಲು ತಪ್ಪಾಗಿ ಹಣ ಹೂಡಿದ ಕಾರಣ ಒಂದೇ ಸಲ ಹಣ ಮರಳಿಸಲು ಆಗುವುದಿಲ್ಲ’ ಎಂದ ಶ್ವೇತಾ ಅವರು 5 ಸಾವಿರ ರೂ ಹಿಂತಿರುಗಿಸಿ ಮತ್ತೆ ಹಣಕ್ಕೆ ಬೇಡಿಕೆ ಇಟ್ಟರು. ಈವರೆಗೆ 193700ರೂ ಹೂಡಿಕೆ ಮಾಡಿ, 6230ರೂ ಮಾತ್ರ ಹಿಂಪಡೆದಿದ್ದ ರಮಾದೇವಿ ಅವರು ಈ ಬಾರಿ ಶ್ವೇತಾ ಅವರು ಹೇಳಿದ ಕಡೆ ಹಣ ಹೂಡಲಿಲ್ಲ. ಆದರೆ, ಕಾವ್ಯಾ ಅಗರವಾಲ್ ಎಂಬಾತರನ್ನು ಪರಿಚಯಿಸಿಕೊಂಡ ರಮಾದೇವಿ ಅವರು ಅವರು ಹೇಳಿದ ಕಡೆ ಹಣ ಹೂಡಿದರು. `800ರೂ ಹೂಡಿಕೆ 14999ರೂ ಲಾಭ ಕೊಡುವೆ’ ಎಂದು ಇನಸ್ಟಾಗ್ರಾಮಿನ ಮೂಲಕ ಪರಿಚಯವಾದ ಕಾವ್ಯ ಅಗರವಾಲ್ ಅವರು ಹೇಳಿದನ್ನು ನಂಬಿ ಇನ್ನಷ್ಟು ಹಣ ಹೂಡಿದರು. `ಯುಎಸ್ ಡಾಲರ್ ವರ್ಗಾವಣೆ ಮಾಡಬೇಕು. ನೀವು ನಮ್ಮ ಕಂಪನಿ ಉದ್ಯೋಗಿಯಾಗಬೇಕು. ಹೆಚ್ಚಿನ ಲಾಭಬರಲು ಕಾಯಬೇಕು. ಜಿಎಸ್‌ಟಿ ಪ್ರತ್ಯೇಕವಾಗಿ ಪಾವತಿಸಬೇಕು’ ಎಂಬುದನ್ನು ಸೇರಿ ಅನೇಕ ಸುಳ್ಳು ಹೇಳಿದ ಕಾವ್ಯ ಅಗರವಾಲ್ ಅವರು 55549ರೂ ಹಣಪಡೆದು ವಂಚಿಸಿದರು. ವರ್ಕ ಪ್ರಂ ಹೋಂ ಹುಡುಕಾಟಕ್ಕೆ ಹೋಗಿ ಎರಡು ಬಾರಿ ಮೋಸ ಹೋದ ರಮಾದೇವಿ ಅವರು ತಮ್ಮ ಬ್ಯಾಂಕ್ ಖಾತೆಯಲ್ಲಿದ್ದ ಎಲ್ಲಾ ಹಣ ಕಳೆದುಕೊಂಡರು. ಬೇರೆ ದಾರಿ ತೋರದೇ ಪತಿ ಸುರೇಶ ಅವರಿಗೆ ಹೇಳಿದರು. ಅದಾದ ನಂತರ 1930ಗೆ ಫೋನ್ ಮಾಡಿದ್ದು, ರಾಮನಗರ ಪೊಲೀಸರಿಗೂ ಮಾಹಿತಿ ನೀಡಿದರು. ಸದ್ಯ `ವಂಚಕರನ್ನು ಹುಡುಕಿ, ನನ್ನ ಹಣ ಮರಳಿಸಿ’ ಎಂದವರು ಪೊಲೀಸ್ ಪ್ರಕರಣ ದಾಖಲಿಸಿದ್ದಾರೆ. - [ದಾರಿಹೋಕರ ಮೇಲೆ ಜೇನು ಹುಳು ದಾಳಿ](https://mobiletime.in/2025/09/honeybee-attack-on-passersby/): ಗೋಕರ್ಣ ಬಳಿ ರಸ್ತೆ ಮೇಲೆ ನಡೆದು ಹೋಗುತ್ತಿದ್ದ ಮೂವರ ಮೇಲೆ ಹೆಜ್ಜೇನು ದಾಳಿ ನಡೆಸಿದೆ. ಜೇನು ಹುಳುವಿನ ದಾಳಿಗೆ ಬೆದರಿ ಆ ಮೂವರು ದಿಕ್ಕೆಟ್ಟು ಓಡಿದ್ದಾರೆ. ಸೋಮವಾರ ಬಂಕಿಕೊಡ್ಲದ ಅಡಿಗೋಣ ರಸ್ತೆ ಮಾರ್ಗವಾಗಿ ಸಂಚರಿಸುವವರಿಗೆ ಜೇನು ಹುಳುಗಳು ಕಚ್ಚಿವೆ. ಶೇಖರ ಆಗೇರ ಹಾಗೂ ಅವರ ಇಬ್ಬರು ಸ್ನೇಹಿತರು ಈ ಮಾರ್ಗವಾಗಿ ಸಂಚರಿಸಿದ್ದು, ಅವರು ದಾಳಿಗೆ ತುತ್ತಾಗಿ ಕಂಗಾಲಾಗಿದ್ದಾರೆ. ಜೇನು ದಾಳಿ ಪರಿಣಾಮ ಶೇಖರ ಆಗೇರ್ ಅವರು ತೀವೃ ಪ್ರಮಾಣದಲ್ಲಿ ಅಸ್ವಸ್ಥರಾಗಿದ್ದಾರೆ. ಶೇಖರ ಆಗೇರ್ ಅವರ ಜೊತೆ ಸಂಚರಿಸುತ್ತಿದ್ದ ಮತ್ತಿಬ್ಬರು ಜೇನು ಹುಳುಗಳಿಂದ ಕಚ್ಚಿಸಿಕೊಂಡಿದ್ದಾರೆ. ತಕ್ಷಣ ಶೇಖರ ಆಗೇರ್ ಹಾಗೂ ಮತ್ತೊಬ್ಬರು ಬಂಕಿಕೊಡ್ಲದ ಆರೋಗ್ಯ ಕೇಂದ್ರಕ್ಕೆ ಆಗಮಿಸಿ ಚಿಕಿತ್ಸೆ ಪಡೆದಿದ್ದಾರೆ. ಇನ್ನೊಬ್ಬರಿಗೆ ಜೇನು ಕಚ್ಚಿದ್ದರೂ ಅವರು ಮನೆಯಲ್ಲಿಯೇ ಆರೈಕೆಪಡೆಯುತ್ತಿದ್ದಾರೆ. ಅವರಿಗೆ ಕಚ್ಚಿದ ನೋವುಹೊರತುಪಡಿಸಿ ಬೇರೆ ಸಮಸ್ಯೆ ಆಗಿಲ್ಲ. ಶೇಖರ ಆಗೇರ್ ಅವರು ಪ್ರಾಥಮಿಕ ಚಿಕಿತ್ಸೆ ನಂತರವೂ ಚೇತರಿಸಿಕೊಂಡಿಲ್ಲ. ಹೀಗಾಗಿ ಅವರನ್ನು ಅಂಕೋಲಾ ತಾಲೂಕು ಆಸ್ಪತ್ರೆಗೆ ಕಳುಹಿಸಲಾಗಿದ್ದು, ಚಿಕಿತ್ಸೆ ನಡೆಯುತ್ತಿದೆ. - [ಸರ್ಕಾರಿ ಸಾಲ: ಈ ಯೋಜನೆ ಬ್ರಾಹ್ಮಣರಿಗೆ ಮಾತ್ರ!](https://mobiletime.in/2025/09/government-loan-this-scheme-is-only-for-brahmins/): ಹೊಟೇಲು, ಹೈನುಗಾರಿಕೆ, ಗುಡಿ ಕೈಗಾರಿಕೆ, ಟಾಕ್ಸಿ ಖರೀದಿ ಸೇರಿ ವಿವಿಧ ವ್ಯಾಪಾರ ವಹಿವಾಟು ನಡೆಸುವ ಬ್ರಾಹ್ಮಣರಿಗೆ ಸರ್ಕಾರ ಸಾಲ ಕೊಡಲು ಆಸಕ್ತಿವಹಿಸಿದೆ. ಈ ಯೋಜನೆಗೆ ಆನ್‌ಲೈನ್ ಮೂಲಕವೇ ಅರ್ಜಿ ಸ್ವೀಕರಿಸಲಾಗುತ್ತದೆ. ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಈ ಯೋಜನೆಯನ್ನು ಜಾರಿಗೆ ತಂದಿದೆ. ಹಸು ಸಾಕುವವರು ಸಹ ಈ ಯೋಜನೆಗೆ ಅರ್ಜಿ ಸಲ್ಲಿಸಬಹುದಾಗಿದ್ದು, ಸರ್ಕಾರದಿಂದ ನೇರವಾಗಿ ಸಾಲ ಸೌಲಭ್ಯ ಒದಗಿಸಲಾಗುತ್ತದೆ. ಆರ್ಥಿಕವಾಗಿ ಹಿಂದುಳಿದ ಬ್ರಾಹ್ಮಣ ಸಮುದಾಯದವರನ್ನು ಮುಖ್ಯವಾಹಿನಿಗೆ ತರುವುದು ಈ ಯೋಜನೆಯ ಮುಖ್ಯ ಉದ್ದೇಶ. ಅಗತ್ಯವಿರುವವರು ಕನಿಷ್ಟ 1 ಲಕ್ಷ ರೂ ಸಾಲಪಡೆಯಬೇಕು. ಗರಿಷ್ಟ 2 ಲಕ್ಷ ರೂವರೆಗೆ ಸಾಲ ಕೊಡಲಾಗುತ್ತದೆ. ಇದಕ್ಕೆ ಶೇ 4ರ ವಾರ್ಷಿಕ ಬಡ್ಡಿ ವಿಧಿಸಲಾಗುತ್ತಿದ್ದು, ಘಟಕ ವೆಚ್ಚದ ಮೇಲೆ ಸರ್ಕಾರದ ಸಬ್ಸಿಡಿಯೂ ಸಿಗುತ್ತದೆ. ಅರ್ಜಿದಾರರ ಆಧಾರಿಗೆ ಮೊಬೈಲ್ ನಂ ಲಿಂಕ ಆಗಿದ್ದು, ಬ್ಯಾಂಕ್ ಖಾಎ ಸೀಡ್ ಆಗಿದ್ದರೆ ಅನುಕೂಲ. ಕನಿಷ್ಟ 18 ವರ್ಷ ಮೇಲ್ಪಟ್ಟ ಹಾಗೂ ಗರಿಷ್ಟ 64 ವರ್ಷದೊಳಗಿನವರು ಅರ್ಜಿ ಸಲ್ಲಿಸಲು ಯೋಗ್ಯರು. ಬ್ರಾಹ್ಮಣ ಸಮುದಾಯದ ಸಾಮಾನ್ಯ ವರ್ಗಕ್ಕೆ ಸೇರಿದ ಯಾರೂ ಬೇಕಾದರೂ ಈ ಯೋಜನೆಗೆ ಅರ್ಜಿ ಸಲ್ಲಿಸಲು ಅರ್ಹರು. ಆರ್ಥಿಕವಾಗಿ ಹಿಂದುಳಿದ ಬಗ್ಗೆ ಪ್ರಮಾಣ ಪತ್ರ ಸಲ್ಲಿಸುವುದು ಕಡ್ಡಾಯ. ಒಂದು ಕುಟುಂಬದಿoದ ಒಬ್ಬರಿಗೆ ಮಾತ್ರ ಅರ್ಜಿ ಸ್ವೀಕರಿಸಲು ಅವಕಾಶವಿದ್ದು, ಅದರಲ್ಲಿಯೂ ಮಹಿಳೆಯರಿಗೆ ಶೇ 33ರ ಮೀಸಲಾತಿ ಕೊಡಲಾಗಿದೆ. ದಿವ್ಯಾಂಗರಿಗೆ ಶೇ 5ರ ಮೀಸಲಾತಿ ಇದೆ. 1 ಲಕ್ಷರೂ ಮೌಲ್ಯದ ಘಟಕಕ್ಕೆ 20 ಸಾವಿರ ರೂ ಹಾಗೂ 2 ಲಕ್ಷ ರೂ ಮೌಲ್ಯದ ಘಟಕಕ್ಕೆ 40 ಸಾವಿರ ರೂ ಸಬ್ಸಿಡಿ ಸಿಗಲಿದೆ. ಸ್ವಯಂ ಉದ್ಯೋಗದಲ್ಲಿ ಆಸಕ್ತಿವಿರುವ ಅರ್ಹರು ಇದಕ್ಕೆ ಅರ್ಜಿ ಸಲ್ಲಿಸಬಹುದಾಗಿದ್ದು, ಅರ್ಜಿ ಸಲ್ಲಿಸಲು ಅಕ್ಟೊಬರ್ 31ಕ್ಕೆ ಕೊನೆ ದಿನ. ಇನ್ನೇನಾದರೂ ಮಾಹಿತಿ ಬೇಕಾದರೆ ಇಲ್ಲಿ ಫೋನ್ ಮಾಡಿ: 7975633671 - [ಟಾಟಾ ಬೈ ಬೈ: ಗುಹೆ ತೊರೆದು ತವರಿಗೆ ಹಾರಿದ ರಷ್ಯಾ ಮಹಿಳೆ!](https://mobiletime.in/2025/09/tata-bye-bye-russian-woman-leaves-cave-and-flies-home/): ಗೋಕರ್ಣ ಗುಹೆಯಲ್ಲಿ ವಾಸವಾಗಿದ್ದ ರಷ್ಯಾ ಮಹಿಳೆ ಹಾಗೂ ಮಕ್ಕಳಿಗೆ ತವರಿಗೆ ಮರಳಲು ನ್ಯಾಯಾಲಯದ ಅನುಮತಿ ಸಿಕ್ಕಿದೆ. ಈ ಹಿನ್ನಲೆ ಸೋಮವಾರ ರಷ್ಯಾದ ನೀನಾ ಕುಟೀನಾ ಹಾಗೂ ಆಕೆಯ ಇಬ್ಬರು ಮಕ್ಕಳು ಭಾರತ ತೊರೆದಿದ್ದಾರೆ. ಗೋಕರ್ಣದ ರಾಮತೀರ್ಥ ಬಳಿಯ ಗುಡ್ಡದ ಗವಿಯಲ್ಲಿ ನೀನಾ ಕುಟೀನಾ ವಾಸವಾಗಿದ್ದರು. ತಮ್ಮ ಮಕ್ಕಳಾದ ಪ್ರೆಯಾ (06) ಹಾಗೂ ಅಮಾ (4) ಅವರ ಜೊತೆ ನೀನಾ ಕುಟೀನಾ ಅವರು ಅಪಾಯಕಾರಿ ರೀತಿಯಲ್ಲಿ ಬದುಕುತ್ತಿದ್ದರು. 2025ರ ಜುಲೈ 10ರಂದು ಗೋಕರ್ಣ ಪೊಲೀಸರು ವಿದೇಶಿ ಮಹಿಳೆ ಹಾಗೂ ಮಕ್ಕಳು ಗುಹೆಯಲ್ಲಿರುವುದನ್ನು ಪತ್ತೆ ಮಾಡಿದ್ದರು. ಆ ಮೂವರ ಮನವೊಲೈಸಿ ಗುಹೆಯಿಂದ ಹೊರಗೆ ತಂದಿದ್ದರು. ನoತರದ ವಿಚಾರಣೆಯಲ್ಲಿ ನೀನಾ ಕುಟೀನಾ ಅವರ ವೀಸಾ ಅವಧಿ ಮುಗಿದಿರುವುದು ಅರಿವಿಗೆ ಬಂದಿತ್ತು. ಅನೇಕ ದಿನಗಳಿಂದ ಆ ಮೂವರು ಅಲ್ಲಿಯೇ ವಾಸವಾಗಿರುವುದು ಗೊತ್ತಾಗಿತ್ತು. ಅಪಾಯದ ಸ್ಥಿತಿಯಲ್ಲಿದ್ದ ಅವರನ್ನು ಪೊಲೀಸರು ರಕ್ಷಿಸಿ ತುಮಕೂರಿನಲ್ಲಿರುವ ವಿದೇಶಿಗರ ನಿಗಾ ಕೇಂದ್ರಕ್ಕೆ ಕಳುಹಿಸಿದ್ದರು. ಅದಾದ ನಂತರ ನೀನಾ ಕುಟೀನಾ ಅವರ ಪತಿ ಡೋರ್‌ಶ್ಲೋಮೋ ಗೋಲ್ಡ್ಸ್ಟೈನ್ ಭಾರತಕ್ಕೆ ಬಂದಿದ್ದು, ಪತ್ನಿಯನ್ನು ರಷ್ಯಾಗೆ ಕಳುಹಿಸುವಂತೆ ಹೈಕೋರ್ಟ ಮೊರೆ ಹೋಗಿದ್ದರು. ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಬಿ ಎಂ ಶ್ಯಾಮಪ್ರಸಾದ್ ಅವರ ಪೀಠ ತನಿಖೆ ನಡೆಸಿ ರಷ್ಯಾಗೆ ಕಳುಹಿಸಲು ಸೂಚಿಸಿತ್ತು. ವಿಚಾರಣೆ ವೇಳೆ `ತಾಯಿ ಮಗು ಯಾವ ಉದ್ದೇಶಕ್ಕೆ ಗುಹೆಯಲ್ಲಿದ್ದರು?’ ಎಂದು ನ್ಯಾಯಾಲಯಕ್ಕೆ ಉತ್ತರಿಸಲಿಲ್ಲ. ಹೀಗಾಗಿ `ರಷ್ಯಾದ ಅನುಮತಿಯ ಮೇರೆಗೆ ಭಾರತಕ್ಕೆ ಬಂದಿರುವ ಮಹಿಳೆ ಮತ್ತು ಮಕ್ಕಳ ವೀಸಾ ಮುಗಿದರೂ ಭಾರತದಲ್ಲಿ ನೆಲೆಸಿದ್ದರು. ಮಹಿಳೆ ಹಾಗೂ ಮಕ್ಕಳು ವಿದೇಶಕ್ಕೆ ತೆರಳಲು ದಾಖಲೆ ಒದಗಿಸುವುದು ಕೇಂದ್ರ ಸರ್ಕಾರಕ್ಕೆ ಬಿಟ್ಟ ವಿಚಾರ’ ಎಂದು ನ್ಯಾಯಾಲಯ ಹೇಳಿತ್ತು. ಕೇಂದ್ರ ಸರ್ಕಾರವನ್ನು ಪ್ರತಿನಿಧಿಸಿದ್ದ ಹೆಚ್ಚುವರಿ ಸಾಲಿಸಿಟರ್ ಜನರಲ್ ಕೆ ಅರವಿಂದ್ ಕಾಮತ್ ಅವರು `ಮಗುವಿನ ವಂಶವಾಹಿ ದಾಖಲೆ ಆಧಾರದಲ್ಲಿ ರಷ್ಯಾ ಪ್ರಜೆಗೆ ಇಲ್ಲಿನ ಪರಿಸ್ಥಿತಿ ಬಗ್ಗೆ ಮಾಹಿತಿ ನೀಡಲಾಗಿದೆ. ರಷ್ಯಾ ಆಡಳಿತವೂ ತುರ್ತು ಪ್ರವಾಸದ ದಾಖಲೆ ಒದಗಿಸಿದೆ. ಸೆಪ್ಟೆಂಬರ್ 25ರಿಂದ ಅಕ್ಟೋಬರ್ 9ರವರೆಗೆ ತುರ್ತು ಪ್ರವಾಸಕ್ಕೆ ಅನುಮತಿಯಿದ್ದು, ತಾಯಿ ಮತ್ತು ಮಕ್ಕಳು ತಕ್ಷಣ ತೆರಳಲು ಅನುಮತಿ ಬೇಕು’ ಎಂದು ಕೋರಿದ್ದರು. ಈ ಹಿನ್ನಲೆ ರಷ್ಯಾ ಮಹಿಳೆಗೆ ತವರಿಗೆ ಮರಳಲು ನ್ಯಾಯಾಲಯ ಅನುಮತಿ ನೀಡಿತು. ಡಿಎನ್‌ಎ ಪರೀಕ್ಷೆ ನಡೆಸಿದಾಗ ಆ ಇಬ್ಬರು ಮಕ್ಕಳು ನೀನಾ ಕುಟೀನಾ ಅವರದ್ದೇ ಎಂದು ಅರಿವಾಯಿತು. ಗೋಕರ್ಣ ಪಿಎಸ್‌ಐ ಶಶಿಧರ ಕೆ ಎಚ್ ನೇತೃತ್ವದಲ್ಲಿ ಪೊಲೀಸ್ ಸಿಬ್ಬಂದಿ ಪರಮೇಶ್ವರ ಬಿ ಇನ್ನಿತರರು ಸೋಮವಾರ ಬೆಂಗಳೂರು ವಿಮಾನ ನಿಲ್ದಾಣದ ಮೂಲಕ ನೀನಾ ಕುಟೀನಾ ಹಾಗೂ ಮಕ್ಕಳನ್ನು ರಷ್ಯಾಗೆ ಕಳುಹಿಸಿದರು. - [ಮಳೆ ಬಂದರೂ ನಿಲ್ಲಲ್ಲ ಈ ಹೋರಾಟ!](https://mobiletime.in/2025/09/this-fight-wont-stop-even-if-it-rains/): ಸುಪ್ರೀಂ ಕೋರ್ಟಿನ ನಿರ್ದೇಶನದಂತೆ ಅರಣ್ಯ ಹಕ್ಕು ಅರ್ಜಿ ಪುನರ್ ಪರಿಶೀಲನೆ ನಡೆಯದ ಕಾರಣ ಅಕ್ಟೊಬರ್ 4ರಂದು ಶಿರಸಿಯಲ್ಲಿ ದೊಡ್ಡ ಪ್ರಮಾಣದಲ್ಲಿ ಮೇಲ್ಮನವಿ ಅಭಿಯಾನ ನಡೆಸಲು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ನಿರ್ಧರಿಸಿದೆ. `ಗಾಳಿ-ಮಳೆ-ಚಳಿಯನ್ನು ಲೆಕ್ಕಿಸದೇ ಆ ದಿನ ಸಹಸ್ರ ಸಹಸ್ರ ಸಂಖ್ಯೆಯ ಜನ ಹೋರಾಟ ನಡೆಸಲು ನಿರ್ಧರಿಸಿದ್ದಾರೆ’ ಎಂದು ನ್ಯಾಯವಾದಿ ರವೀಂದ್ರ ನಾಯ್ಕ ಪ್ರಕಟಿಸಿದ್ದಾರೆ. ಸೋಮವಾರ ಪೂರ್ವಭಾವಿ ಸಭೆ ನಡೆಸಿದ ಅವರು `ಈ ಅಭಿಯಾನ ರಾಜ್ಯಮಟ್ಟದ ಐತಿಹಾಸಿಕ ಕಾರ್ಯಕ್ರಮ ಆಗಲಿದೆ. ಅರಣ್ಯವಾಸಿಗಳ ಮಹಾ ಸಂಗ್ರಾಮ ಸಾಕ್ಷಿಯಾಗಲಿದೆ’ ಎಂದಿದ್ದಾರೆ. `ರಾಜ್ಯ ಸರ್ಕಾರವು ಪುನರ್ ಪರಿಶೀಲನೆ ಜರುಗಿಸದೇ ತಿರಸ್ಕರಿಸಿದ ಅರ್ಜಿಯ ವರದಿ ಸುಪ್ರೀಂ ಕೊರ್ಟಗೆ ಸಲ್ಲಿಕೆಯಾದ ಹಿನ್ನಲೆ ಇದರ ಮುಂದಿನ ವಿಚಾರಣೆ ಅಕ್ಟೊಬರ್ 14ರಂದು ನಡೆಯಲಿದೆ’ ಎಂದು ರವೀಂದ್ರ ನಾಯ್ಕ ಅವರು ಮಾಹಿತಿ ನೀಡಿದ್ದಾರೆ. `ಸರ್ಕಾರದ ನಿರ್ಧಾರದಿಂದ ಅರ್ಜಿ ಪುನರ್ ಪರಿಶೀಲಿಸದೇ ತಿರಸ್ಕರಿಸಲಾಗಿದೆ. ಈ ವರದಿಯಿಂದ ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ ಅರ್ಜಿ ಸಲ್ಲಿಸಿದ ಪ್ರತಿಯೊಬ್ಬರಿಗೂ ಅನ್ಯಾಯವಾಗಿದೆ. ಹೀಗಾಗಿ ಅವರೆಲ್ಲರೂ ಆಕ್ಷೇಪಣೆ ಸಲ್ಲಿಸುವುದು ಅನಿವಾರ್ಯ’ ಎಂದವರು ವಿವರಿಸಿದ್ದಾರೆ. `ಅಕ್ಟೊಬರ್ 4ರಂದು ರಾಜ್ಯ ಮಟ್ಟದ ಐತಿಹಾಸಿಕ ಕಾರ್ಯಕ್ರಮ ಸಂಘಟಿಸಲು ಅರಣ್ಯವಾಸಿಗಳು ನಿರ್ಧರಿಸಿದ್ದಾರೆ’ ಎಂದು ಸಂಘಟನೆ ಜಿಲ್ಲಾ ಸಂಚಾಲಕ ಇಬ್ರಾಹೀಂ ಗೌಡಳ್ಳಿ ಹೇಳಿದರು. ಪ್ರಮುಖರಾದ ನೆಹರು ನಾಯ್ಕ ಬಿಳೂರು, ಎಮ್ ಆರ್ ನಾಯ್ಕ ಕಂಡ್ರಾಜಿ, ಚಂದ್ರು ಶಾನಭಾಗ ಬಂಡಲ್, ಪರಮೇಶ್ವರ ಗೌಡ ಕುದರಗೋಡ, ರಾಜು ನರೇಬೈಲ್, ಅಬ್ದುಲ್ ರಫೀಕ್, ಶಂಭು ದೇವು ಮರಾಠಿ, ತಿಮ್ಮ ಗಣಪತಿ ಗೌಡ, ಗುಲಾಬ್ ಭಾಷಾ ಉಂಚಳ್ಳಿ ಇತರರು ಹೋರಾಟಕ್ಕೆ ಸಜ್ಜಾಗಿದ್ದಾರೆ. - [ಬಡವರ ಭೂಮಿ ಅನ್ಯರ ಪಾಲು: ಅನಿವಾಸಿಗಳಿಂದ ಅಂಕೋಲಾಗೆ ಆತಂಕ!](https://mobiletime.in/2025/09/poor-peoples-land-is-being-taken-by-strongers-ankola-is-worried-about-non-residents/): ಉತ್ತರ ಕನ್ನಡ ಜಿಲ್ಲೆಯ ಕರಾವಳಿ ಭಾಗದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಅನಿವಾಸಿ ಭಾರತೀಯರು ಹಾಗೂ ಹೊರರಾಜ್ಯದವರು ಭೂಮಿ ಖರೀದಿಸುತ್ತಿರುವುದಕ್ಕೆ ಸಾಮಾಜಿಕ ಕಾರ್ಯಕರ್ತ ಲಿಂಗರಾಜ ಯಶವಂತ ನಾಯ್ಕ ಅವರು ಆತಂಕವ್ಯಕ್ತಪಡಿಸಿದ್ದಾರೆ. ಹೀಗೆ ಮುಂದುವರೆದರೆ ಸ್ಥಳೀಯರ ವಸತಿಗೂ ಭೂಮಿ ಸಿಗುವುದು ಕಷ್ಟವಾಗಿದ್ದು, ಇದಕ್ಕೆ ನಿಯಂತ್ರಣ ಅಗತ್ಯ ಎಂದು ಅವರು ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದಾರೆ. ಹೊನ್ನಾವರದ ಲಿಂಗರಾಜ ಯಶವಂತ ನಾಯ್ಕ ಅವರು ಭೂಮಿ ಹಾಗೂ ಹೂಡಿಕೆ ವಿಷಯದಲ್ಲಿ ಜನ ಜಾಗೃತಿ ಕೆಲಸ ಮಾಡುತ್ತಿದ್ದಾರೆ. ಭಟ್ಕಳದಿಂದ ಕಾರವಾರದವರೆಗೆ ಸಮೀಕ್ಷೆ ನಡೆಸಿದ ಅವರಿಗೆ ಈಚೆಗೆ ಹೊರಭಾಗದ ಅನೇಕರು ಇಲ್ಲಿ ಭೂಮಿ ಖರೀದಿಸಿದ ವಿಷಯ ಗಮನಕ್ಕೆ ಬಂದಿದೆ. ಅದರಲ್ಲಿಯೂ ಅಂಕೋಲಾ ಬಳಿ ಸಾಕಷ್ಟು ಪ್ರಮಾಣದಲ್ಲಿ ಅನಿವಾಸಿ ಭಾರತೀಯರು ಹಾಗೂ ಹೊರ ರಾಜ್ಯದವರು ಜಾಗ ಖರೀದಿಸುತ್ತಿದ್ದು, ಭವಿಷ್ಯದ ಬದಲಾವಣೆಗಳ ಬಗ್ಗೆ ಅಅವರು ಮುಖ್ಯಮಂತ್ರಿಗಳ ಗಮನಸೆಳೆಯುವ ಪ್ರಯತ್ನ ಮಾಡಿದ್ದಾರೆ. `ಸಾಗರಮಾಲಾ ಯೋಜನೆ ಅಡಿ ತದಡಿ ಪ್ರದೇಶ ಅಭಿವೃದ್ಧಿ ಆಗಲಿದೆ. ಕೇಣಿಯಲ್ಲಿ ಖಾಸಗಿ ಬಂದರು ಬರುವ ಸಾಧ್ಯತೆಗಳಿವೆ. ಅಂಕೋಲಾದಲ್ಲಿ ವಿಮಾನ ನಿಲ್ದಾಣ ಸೇರಿ ಇನ್ನಿತರ ಅನೇಕ ಅಭಿವೃದ್ಧಿ ಆಗಲಿದೆ. ಇದರಿಂದ ಆ ಭಾಗದ ಪ್ರವಾಸೋದ್ಯಮ ಬೆಳವಣಿಗೆ ಹೆಚ್ಚಾಗಲಿದೆ. ಇದನ್ನು ಅರಿತು ಅನೇಕ ಅನಿವಾಸಿ ಭಾರತೀಯರು ಅಂಕೋಲಾದಲ್ಲಿ ಭೂಮಿ ಖರೀದಿಸುತ್ತಿದ್ದಾರೆ. ಹೊರ ರಾಜ್ಯದ ಜನ ಸಹ ಇಲ್ಲಿ ಭೂಮಿ ಮೇಲೆ ಹೂಡಿಕೆ ಮಾಡಿದ್ದಾರೆ. ಇದರಿಂದ ಭವಿಷ್ಯದಲ್ಲಿ ಸ್ಥಳೀಯರಿಗೆ ಸಮಸ್ಯೆಯಾಗುವ ಸಾಧ್ಯತೆಗಳು ಹೆಚ್ಚಿವೆ’ ಎಂದವರು ವಿವರಿಸಿದ್ದಾರೆ. `ಸದ್ಯ ಈ ಭಾಗದಲ್ಲಿ ಪ್ರತಿ ಗುಂಟೆಗೆ 5-10 ಲಕ್ಷ ರೂ ದರದಲ್ಲಿ ಭೂಮಿಯ ಬೆಲೆಯಿದೆ. ಅನೇಕ ಯೋಜನೆಗಳು ಜಾರಿಯಾದ ನಂತರ ಗುಂಟೆಗೆ 50 ಲಕ್ಷ ರೂ ಬೆಲೆ ಬಂದರೂ ಅಚ್ಚರಿಯಿಲ್ಲ. ಅಂಥ ಪರಿಸ್ಥಿತಿಯಲ್ಲಿ ಕನ್ನಡಿಗರು ತಿಂಗಳಿಗೆ 30 ಸಾವಿರ ರೂ ಬಾಡಿಗೆ ಕೊಟ್ಟು ನೆಲೆಸಬೇಕಾದ ಸ್ಥಿತಿ ನಿರ್ಮಾಣವಾಗಲಿದ್ದು, ಅಲ್ಪ ಹಣದ ಆಸೆಗೆ ಇದೀಗ ಅನ್ಯರಿಗೆ ಭೂಮಿ ಮಾರಾಟ ಮಾಡಿದವರು ಪಶ್ಚಾತಾಪಪಡೆಬೇಕಾದ ಪರಿಸ್ಥಿತಿ ಎದುರಾಗಬಹುದು’ ಎಂದವರು ಅಂದಾಜಿಸಿದ್ದಾರೆ. `ಸಿoಗಾಪುರದಲ್ಲಿ ಸಿಎನ್‌ಜಡ್ ಡೆವಲಪ್ ಆದಾಗ ಸಹ ಹೀಗೆ ಆಗಿತ್ತು. ಕೊನೆಗೆ ಅಲ್ಲಿಯ ಜನರ ವಸತಿಗೆ ಭೂಮಿ ಇಲ್ಲದ ಹಾಗಾಯಿತು. ಹೀಗಾಗಿ ಅನ್ಯರು ಇಲ್ಲಿ ಭೂಮಿ ಖರೀದಿಸದಂತೆ ತಡೆಯಬೇಕು. ಜನ ಸಹ ಭೂಮಿ ಮಾರಾಟ ಮಾಡುವಾಗ ಅನ್ಯರಿಗೆ ಕೊಡುವುದನ್ನು ತಪ್ಪಿಸಬೇಕು’ ಎಂದವರು ಮನವಿ ಮಾಡಿದ್ದಾರೆ. `ಗಿಡ-ಮರ ಬೆಳೆಸಲು ಯೋಗ್ಯವಿಲ್ಲದ ಭೂಮಿಯನ್ನು ಡಿಪಾರೆಸ್ಟ್ ಮಾಡಿ ಅದನ್ನು ಜನರಿಗೆ ಕೊಡಬೇಕು’ ಎಂದು ಸಹ ಲಿಂಗರಾಜ ಯಶವಂತ ನಾಯ್ಕ ಅವರು ಮುಖ್ಯಮಂತ್ರಿಗಳಿಗೆ ಬರೆದ ಪತ್ರದಲ್ಲಿ ವಿವರಿಸಿದ್ದಾರೆ. - [ಶರಾವತಿ ಉಳಿಸುವಂತೆ ಸಹಿ ಅಭಿಯಾನ: ರಾಷ್ಟ್ರಪತಿಗೆ ಪತ್ರ](https://mobiletime.in/2025/09/signature-campaign-to-save-sharavati-letter-to-the-president/): ಹೊನ್ನಾವರದ ಗೇರುಸೊಪ್ಪದಲ್ಲಿ ನಿರ್ಮಿಸಲು ಉದ್ದೇಶಿಸಿದ ಶರಾವತಿ ಪಂಪ್ ಸ್ಟೋರೇಜ್ ಯೋಜನೆಗೆ ಜನಸಾಮಾನ್ಯರ ಸಮಾಜ ಕಲ್ಯಾಣ ಕೇಂದ್ರ ವಿರೋಧವ್ಯಕ್ತಪಡಿಸಿದೆ. ಈ ಯೋಜನೆಯನ್ನು ತಡೆಯುವಂತೆ ಕುಮಟಾ ಸಹಾಯಕ ಆಯುಕ್ತರ ಮೂಲಕ ರಾಷ್ಟ್ರಪತಿಗಳಿಗೆ ಪತ್ರ ರವಾನಿಸಲಾಗಿದೆ. `ಉತ್ತರ ಕನ್ನಡ ಜಿಲ್ಲೆಯ ಗೇರುಸೊಪ್ಪ ಅತ್ಯಂತ ಅಪರೂಪದ ಕಾಡುಹೊಂದಿದೆ. ವಿನಾಶದ ಅಂಚಿನಲ್ಲಿರುವ ಶಿಂಗಳಿಕ ಇಲ್ಲಿ ವಾಸಿಸುತ್ತಿದೆ. ಈ ಯೋಜನೆ ಜಾರಿಯಾದರೆ ಕಾಡಿನ ಜೊತೆ ಊರಿನವರಿಗೆ ಸಹ ಸಮಸ್ಯೆ ಆಗಲಿದೆ’ ಎಂದು ಜನಸಾಮಾನ್ಯರ ಸಮಾಜ ಕಲ್ಯಾಣ ಕೇಂದ್ರದವರು ಹೇಳಿದ್ದಾರೆ. `ಶರಾವತಿ ಪಂಪ್ ಸ್ಟೋರೇಜ್ ಅವೈಜ್ಞಾನಿಕ ಯೋಜನೆಯಾಗಿದೆ. ಕೇಂದ್ರ ಸರ್ಕಾರ ಸಹ ಇದಕ್ಕೆ ಒಪ್ಪಿಗೆ ಸೂಚಿಸಿದ ಬಗ್ಗೆ ಮಾಹಿತಿಯಿದ್ದು, ಕೂಡಲೇ ಇಂಥ ಯೋಜನೆಯನ್ನು ತಡೆಯಬೇಕು’ ಎಂದು ಕೇಂದ್ರದ ಅಧ್ಯಕ್ಷ ಆಗ್ನೇಲ್ ರೋಡ್ರಿಗಸ್ ಅವರು ಒತ್ತಾಯಿಸಿದ್ದಾರೆ. `ಶರಾವತಿ ಪಂಪ್ ಸ್ಟೋರೆಜ್ ಯೋಜನೆಯಿಂದ ವಿದ್ಯುತ್ ಉತ್ಪಾದನೆಗಿಂತ ಹೆಚ್ಚಿನ ಪ್ರಮಾಣದಲ್ಲಿ ವಿದ್ಯುತ್ ನಷ್ಟ ಆಗಲಿದೆ. ಅನೇಕರು ಈ ಯೋಜನೆಯಿಂದ ಬೀದಿಗೆ ಬರಲಿದ್ದಾರೆ. ಅಪಾರ ಪ್ರಮಾಣದಲ್ಲಿ ಅರಣ್ಯ ನಾಶ, ವನ್ಯಜೀವಿ ಸಂತತಿ ಹಾನಿ ಮಾಡುವ ಈ ಯೋಜನೆ ಅನುಷ್ಠಾನ ಯೋಗ್ಯವಲ್ಲ’ ಎಂದವರು ವಿವರಿಸಿದ್ದಾರೆ. `ಈ ಪ್ರಮಾಣದಲ್ಲಿ ಜನ ವಿರೋಧ ಇದ್ದರೂ ಯೋಜನೆಗೆ ಆಸಕ್ತಿವಹಿಸುವುದು ಸರಿಯಲ್ಲ’ ಎಂದವರು ಹೇಳಿದ್ದಾರೆ. `ಈ ಯೋಜನೆ ಸ್ಥಗಿತಗೊಳಿಸುವಂತೆ ಸರ್ಕಾರಕ್ಕೆ ಸೂಚನೆ ನೀಡಬೇಕು’ ಎನ್ನುವ ಬಗ್ಗೆ ಜನ ಸಹಿ ಸಂಗ್ರಹಿಸಿದ ಅವರು ಸಹಾಯಕ ಆಯುಕ್ತ ಶ್ರವಣಕುಮಾರ ಅವರ ಮೂಲಕ ಪತ್ರ ರವಾನಿಸಿದ್ದಾರೆ. ಸಾಮಾಜಿಕ ಕಾರ್ಯಕರ್ತ ಸುಧಾಕರ ನಾಯ್ಕ, ಮುನ್ನಾ ಸಾಬ್, ತ್ಯಾಗರಾಜ್ ಮುಕ್ರಿ ಇತರರು ಯೋಜನೆಗೆ ವಿರೋಧವ್ಯಕ್ತಪಡಿಸಿದ್ದಾರೆ. - [ಸಮೀಕ್ಷೆ: ನಿಮ್ಮ ಜಾತಿಯ ಬಗ್ಗೆ ನೀವೇ ಬರೆಯಿರಿ!](https://mobiletime.in/2025/09/survey-write-about-your-species-yourself/): ಗೊಂದಲದ ಗೂಡಾಗಿದ್ದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿನ ಅನೇಕ ಸಮಸ್ಯೆಗಳು ಒಂದೊoದಾಗಿ ಬಗೆಹರಿಯುತ್ತಿವೆ. ಈ ನಡುವೆ ಸರ್ಕಾರ ನಮ್ಮ ಬಗ್ಗೆ ನಾವೇ ಬರೆದುಕೊಳ್ಳಲು ಅವಕಾಶ ಕೊಟ್ಟಿದೆ. ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ಅಂಗವಾಗಿ ಸರ್ಕಾರ ಮೊದಲು ಹೆಸ್ಕಾಂ ಸಿಬ್ಬಂದಿ ಬಳಸಿ ಪ್ರತಿ ಮನೆಗೂ ಸ್ಟಿಕ್ಕರ್ ಅಂಟಿಸುವ ಕೆಲಸ ಮಾಡಿತ್ತು. ಅದಾದ ನಂತರ ಶಿಕ್ಷಕರನ್ನು ಬಳಸಿಕೊಂಡು ಮನೆ ಮನೆ ಭೇಟಿ ಕಾರ್ಯಕ್ರಮ ಆಯೋಜಿಸಿತ್ತು. ಆದರೆ, ಈ ಅವಧಿಯಲ್ಲಿ ಶಿಕ್ಷಕರು ಸಾಕಷ್ಟು ಸಮಸ್ಯೆ ಅನುಭವಿಸಿದ್ದರು. ಗುಡ್ಡಗಾಡು ಜಿಲ್ಲೆಯಾದ ಉತ್ತರ ಕನ್ನಡದಲ್ಲಿ ಈ ಸಮೀಕ್ಷೆ ನಡೆಸುವುದು ಕಷ್ಟ ಎಂದು ಅನೇಕರು ಅಭಿಪ್ರಾಯವ್ಯಕ್ತಪಡಿಸಿದ್ದರು. ಮೊದಲ ಎರಡು ದಿನ ಶಿಕ್ಷಕರು ಅನೇಕ ಬಗೆಯ ತೊಂದರೆಗಳನ್ನು ಅನುಭವಿಸಿದ್ದರು. ಶಿಕ್ಷಕರ ಜೊತೆ ಕಂದಾಯ ಅಧಿಕಾರಿಗಳು ಸಹ ತಲೆಬಿಸಿ ಮಾಡಿಕೊಂಡಿದ್ದರು. ಕ್ರಮೇಣ ಆ ಸಮಸ್ಯೆಗಳನ್ನು ದೂರ ಮಾಡುವ ನಿಟ್ಟಿನಲ್ಲಿ ಸರ್ಕಾರ ಚಿಂತಿಸಿದ್ದು, ಪರ್ಯಾಯ ದಾರಿಗಳನ್ನು ಹುಡುಕಿತು. ಸಮೀಕ್ಷೆ ನಡೆಸಲು ಮೊಬೈಲ್ ನೆಟ್‌ವರ್ಕ ಅನಿವಾರ್ಯವಾಗಿದ್ದು, ಉತ್ತರ ಕನ್ನಡ ಜಿಲ್ಲೆಯಲ್ಲಿ ನೆಟ್‌ವರ್ಕ ಸಿಗದಿರುವುದೇ ದೊಡ್ಡ ಸಮಸ್ಯೆ ಆಗಿತ್ತು. ಸದ್ಯ ನೆಟ್‌ವರ್ಕ ಇಲ್ಲದ ಪ್ರದೇಶಗಳಲ್ಲಿ ವಿಶೇಷ ಶಿಬಿರಗಳನ್ನು ಆಯೋಜಿಸಿ ಸಮೀಕ್ಷೆ ನಡೆಸಲಾಗುತ್ತಿದೆ. ಸಮೀಕ್ಷಾ ಕಾರ್ಯಕ್ಕಾಗಿ ಜಿಲ್ಲೆಯಲ್ಲಿ 2916 ಬ್ಲಾಕುಗಳನ್ನು ರಚಿಸಲಾಗಿದೆ. 3056 ಗಣತಿದಾರರನ್ನು ನೇಮಿಸಲಾಗಿದೆ. 326860 ಮನೆಗಳನ್ನು ಸಮೀಕ್ಷೆ ಮಾಡುವ ಗುರಿ ಹೊಂದಲಾಗಿದೆ. ಇದರ ಮುಂದುವರೆದ ಭಾಗವಾಗಿ ರಾಜ್ಯ ಹಿಂದುಳಿದ ವರ್ಗಗಳ ಆಯೋಗವೂ ಸಾರ್ವಜನಿಕರು ಸಹ ಸ್ವಯಂ ಪ್ರೇರಣೆಯಿಂದ ಈ ಗಣತಿಯಲ್ಲಿ ಭಾಗವಹಿಸುವ ಅವಕಾಶ ಕೊಟ್ಟಿದೆ. ಅದರ ಪ್ರಕಾರ ಪ್ರತಿಯೊಬ್ಬರು ತಮ್ಮ ಮೊಬೈಲ್ ಮೂಲಕ ಅವರವರ ವಿವರ ದಾಖಲಿಸುವ ಆಯ್ಕೆಗಳಿವೆ. ಏನು ಮಾಡಬೇಕು? ನಮ್ಮ ಜಾತಿ, ಶೈಕ್ಷಣಿಕ ಹಾಗೂ ಸಾಮಾಜಿಕ ವಿವರದ ಬಗ್ಗೆ ಸರ್ಕಾರಕ್ಕೆ ಮಾಹಿತಿ ನೀಡಲು ಬಯಸುವವರು ಸರ್ಕಾರ ನೀಡಿದ `ಸಾಮಾಜಿಕ ಹಾಗೂ ಶೈಕ್ಷಣಿಕ ಗಣತಿ’ಯ https://kscbcselfdeclaration.karnataka.gov.in/ ಲಿಂಕ್ ಕ್ಲಿಕ್ ಮಾಡಬೇಕು. ಅಲ್ಲಿ ತೆರೆದುಕೊಳ್ಳುವ ಪುಟದಲ್ಲಿ `ನಾಗರಿಕ’ ಎಂದು ಆಯ್ಕೆ ಮಾಡಿಕೊಳ್ಳಬೇಕು. ಅದಾದ ನಂತರ ನಿಮ್ಮ ಮೊಬೈಲ್ ಸಂಖ್ಯೆ ನಮೂದಿಸಬೇಕು. ಆಗ, OTP ಬರಲಿದ್ದು, ಅದನ್ನು ದಾಖಲಿಸಬೇಕು. ನOತರ ತೆರೆಯುವ ಪುಟದಲ್ಲಿ ತಮ್ಮ ಸಮೀಕ್ಷೆಯ ಸ್ಥಿತಿ ಗತಿ ಕುರಿತಂತೆ ಮಾಹಿತಿ ಒದಗಿಸಲಾಗುತ್ತದೆ. ಸಮೀಕ್ಷೆ ಬಾಕಿ ಇದ್ದಲ್ಲಿ `ಇನ್ನೂ ಯಾವುದೇ ಕುಟುಂಬ ಸದಸ್ಯರನ್ನು ಸೇರಿಸಿಲ್ಲ’ ಎಂಬ ಅರ್ಜಿ ಭರ್ತಿ ಮಾಡಬೇಕು. ಅದಾದ ನಂತರ `ಆರಂಭಿಸಿ’ ಎಂಬ ಸಂದೇಶ ಕಾಣಲಿದ್ದು, `ಹೊಸ ಸಮೀಕ್ಷೆ ಆರಂಭಿಸಿ’ ಎಂಬುದನ್ನು ಕ್ಲಿಕ್ ಮಾಡಬೇಕು. ನಂತರದ ಪುಟದಲ್ಲಿ ಈಗಾಗಲೇ ತಮ್ಮ ಮನೆಗೆ ಅಂಟಿಸಲಾಗಿರುವ ಸ್ಟಿಕರ್ ನಲ್ಲಿರುವ UHID ಸಂಖ್ಯೆ ಯನ್ನು ದಾಖಲಿಸಿ ಅಗತ್ಯವಿರುವ ಮಾಹಿತಿಯನ್ನು ಬರೆಯಬೇಕು. ಈ ಸಮೀಕ್ಷೆಗೆ ದಾಖಲೆಗಳ ಮಾಹಿತಿ ನೀಡುವ ಅವಶ್ಯಕತೆ ಇರುವುದರಿಂದ ತಮ್ಮ ಕುಟುಂಬದ ಸದಸ್ಯರ ರೇಷನ್ ಕಾರ್ಡ್, ಆಧಾರ್ ಕಾರ್ಡ್ ಮತದಾರರ ಗುರುತಿನ ಚೀಟಿ, ವಿಕಲಚೇತರನರಾಗಿದ್ದರೆ ಅಂಗವಿಕಲ ಪ್ರಮಾಣ ಪತ್ರದ ದಾಖಲೆಗಳನ್ನು ಜೊತೆಗಿದ್ದರೆ ಸುಲಭವಾಗಿ ಸಮೀಕ್ಷೆಯಲ್ಲಿ ಭಾಗವಹಿಸಲು ಸಾಧ್ಯ. ಈ ಸಮೀಕ್ಷೆ ಯಶಸ್ವಿಯಾಗಿ ಮುಗಿದ ನಂತರ ಮೊಬೈಲಿಗೆ ಮೆಸೆಜ್ ಬರಲಿದೆ. ನಿಮ್ಮ ಮೊಬೈಲ್ ಮೂಲಕ ನೀವೇ ಗಣತಿಯಲ್ಲಿ ಭಾಗವಹಿಸಲು ಇಲ್ಲಿ ಕ್ಲಿಕ್ಕಿಸಿ: `ಸಾಮಾಜಿಕ ಹಾಗೂ ಶೈಕ್ಷಣಿಕ ಗಣತಿ’ - [2025 ಸೆಪ್ಟೆಂಬರ್ 30ರ ದಿನ ಭವಿಷ್ಯ](https://mobiletime.in/2025/09/prediction-for-september-30-2025/): ಮೇಷ ರಾಶಿ: ನೀವು ಅಂದುಕೊoಡಿರುವ ಕೆಲಸಗಳು ನಿಧಾನವಾಗಲಿದೆ. ಆತುರದ ನಿರ್ಧಾರಗಳನ್ನು ಮಾಡಬೇಡಿ. ಮನಸ್ಸು ಶಾಂತವಾಗಿರಿಸಿಕೊoಡಷ್ಟು ನಿಮಗೆ ಒಳ್ಳೆಯದು. ವೃಷಭ ರಾಶಿ: ನಿಮ್ಮ ಉದ್ಯೋಗದಲ್ಲಿ ಹೊಸ ಜವಾಬ್ದಾರಿಗಳು ಬರಲಿದೆ. ಬುದ್ದಿವಂತಿಕೆಯಿAದ ಕೆಲಸ ಮಾಡಿದರೆ ನಿಮ್ಮ ಬಾರ ಕಡಿಮೆ ಆಗಲಿದೆ. ನಿಮ್ಮ ಚಿಂತನೆಗಳನ್ನು ಕಾರ್ಯರೂಪಕ್ಕೆ ತರಲು ಸೂಕ್ತ ಸಮಯ. ಮಿಥುನ ರಾಶಿ: ನೀವು ಮಾಡುವ ಕೆಲಸದಲ್ಲಿ ತಾಳ್ಮೆ ಅಗತ್ಯ. ಭಾವನಾತ್ಮಕ ಬದಲಾವಣೆಗಳಿಗೆ ಸಿದ್ಧರಾಗಿರಿ. ಮನಸ್ಸಿನ ಶಾಂತಿಗಾಗಿ ದೇವರ ಧ್ಯಾನ ಮಾಡಿ. ಕರ್ಕ ರಾಶಿ: ನೀವು ಕೈಕೊಂಡಿರುವ ಹೊಸ ಯೋಜನೆಗಳು ಯಶಸ್ವಿಯಾಗಲಿದೆ. ಕುಟುಂಬದವರ ಜೊತೆ ಸರಿಯಾಗಿ ಮಾತನಾಡಿ, ಸಮಸ್ಯೆಗಳನ್ನು ಆಲಿಸಿ. ಆರ್ಥಿಕ ವಿಚಾರಗಳಲ್ಲಿ ಎಚ್ಚರಿಕೆ ಅಗತ್ಯ. ಸಿಂಹ ರಾಶಿ: ಹೊಸ ವಿಷಯ ಕಲಿಯಲು ಈ ದಿನ ಸೂಕ್ತ. ಜೀವನದಲ್ಲಿ ಸಂತೋಷವಾಗಿರಲು ಚಟುವಟಿಕೆಯಿಂದ ಬದುಕಿ. ನಿಮ್ಮ ಮಾತಿನ ಬಗ್ಗೆ ಗಮನವಿರಲಿ. ಕನ್ಯಾ ರಾಶಿ: ಅಗತ್ಯಕ್ಕಿಂತಲೂ ಹೆಚ್ಚಿನದಾಗಿ ಯಾವುದಕ್ಕೂ ಸ್ಪಂದಿಸಬೇಡಿ. ನಿಮ್ಮ ಮಾತು ನಿಮ್ಮ ನಿಗ್ರಹದಲ್ಲಿರದಿದ್ದರೆ ಸಮಸ್ಯೆ ಆಗಬಹುದು. ಹಣಕಾಸು ವ್ಯವಹಾರಗಳಲ್ಲಿ ಲಾಭ ಆಗಲಿದೆ. ತುಲಾ ರಾಶಿ: ಹೊಸ ಅವಕಾಶಗಳು ನಿಮ್ಮನ್ನು ಅರೆಸಿ ಬರಲಿದೆ. ಕೌಟುಂಬಿಕ ವಿಷಯದಲ್ಲಿ ಸಮತೋಲನ ಕಾಯ್ದುಕೊಳ್ಳಿ. ಖರ್ಚು-ವೆಚ್ಚಗಳ ಬಗ್ಗೆ ನಿಗಾವಹಿಸಿ. ಅನೇಕ ದಿನದ ಸಮಸ್ಯೆ ದೂರವಾಗಲಿದೆ. ವೃಶ್ಚಿಕ ರಾಶಿ: ಉದ್ಯೋಗ ಕ್ಷೇತ್ರದಲ್ಲಿ ಮಹತ್ವಪೂರ್ಣ ಸಾಧನೆ ಸಾಧ್ಯವಿದೆ. ಆರೋಗ್ಯದ ವಿಷಯದಲ್ಲಿ ಜಾಗೃತರಾಗಿರಿ. ಆಯಾಸವಾದರೆ ಕೂಡಲೇ ವಿಶ್ರಾಂತಿಪಡೆಯುವುದು ಸೂಕ್ತ. ಧನು ರಾಶಿ: ಹೂಡಿಕೆ ವಿಚಾರಗಳ ಕಡೆ ಗಮನಕೊಡಿ. ಶೇರು, ಸೈಟು, ಚಿನ್ನ ಖರೀದಿಗೆ ಈ ದಿನ ಸೂಕ್ತವಾಗಿದೆ. ಸ್ನೇಹಿತರ ಜೊತೆ ಜಗಳ ಒಳ್ಳೆಯದಲ್ಲ. ಮಕರ ರಾಶಿ: ಕುಟುಂಬದವರ ಸಹಕಾರದಿಂದ ಏಳಿಗೆ ಸಾಧ್ಯವಿದೆ. ಕೆಲಸದ ವಿಷಯದಲ್ಲಿ ಸೋಮಾರಿತನ ಬೇಡ. ಹಳೆಯ ಸ್ನೇಹಿತರನ್ನು ನೆಪಿಸಿಕೊಳ್ಳಿ. ಕುಂಭ ರಾಶಿ: ನಿಮ್ಮೊಳಗೆ ಹೊಸ ಹೊಸ ಚಿಂತನೆಗಳು ಬರಲಿದೆ. ಉತ್ತಮ ಚಿಂತನೆಗಳನ್ನು ಜಾರಿಗೊಳಿಸಲು ತಡ ಮಾಡಬೇಡಿ. ಕಾರ್ಯಕ್ಷೇತ್ರದಲ್ಲಿ ಉತ್ತಮ ಬೆಳವಣಿಗೆ ಆಗಲಿದೆ. ಮೀನ ರಾಶಿ: ನಿಮ್ಮ ಮನಸಿಗೆ ಹಿತವಾಗುವ ಕೆಲಸ ಮಾಡಿ. ಜೀವನದಲ್ಲಿ ಯಾವುದು ಮುಖ್ಯ ಎಂಬುದರ ಬಗ್ಗೆ ಚಿಂತಿಸಿ. ಮಾಡುವ ಕೆಲಸದಲ್ಲಿ ಉತ್ತಮ ಫಲ ಸಿಗಲಿದೆ. - [ಬೈಕಿಗೆ ಗುದ್ದಿದ ಶ್ರೀಕುಮಾರ ಬಸ್ಸು!](https://mobiletime.in/2025/09/srikumar-bus-hits-bike/): ಬೆಂಗಳೂರಿನಿoದ ಕಾರವಾರಕ್ಕೆ ಬರುವ ಶ್ರೀಕುಮಾರ ಬಸ್ಸು ಬೈಕಿಗೆ ಗುದ್ದಿದೆ. ಪರಿಣಾಮ ಬೈಕ್ ಸವಾರ ಮಂಜುನಾಥ ಗಡಕರ್ ಅವರ ಕಾಲಿಗೆ ಪೆಟ್ಟಾಗಿದೆ. ಯಲ್ಲಾಪುರದ ನಾಯ್ಕನಕೆರೆ ಸುಧೀಂದ್ರ ಭಟ್ಟ ಅವರು ಭಾನುವಾರ ಶ್ರೀಕುಮಾರ ಬಸ್ಸು ಓಡಿಸುತ್ತಿದ್ದರು. ಸಿದ್ದಾಪುರದ ನೀಡಗೋಡಿನ ಮಂಜುನಾಥ ಗಡಕರ್ ಅವರು ಈ ವೇಳೆ ಬೈಕು ಓಡಿಸುತ್ತಿದ್ದರು. ಮಂಜುನಾಥ ಗಡಕರ್ ಅವರು ಎಲ್ & ಟಿ ಕಂಪನಿಯ ಸುಪ್ರವೈಸರ್ ಆಗಿದ್ದು, ಅವರು ಕಾರವಾರದಿಂದ ಅರ್ಗಾ ಕಡೆ ಹೊರಟಿರುವಾಗ ಅಂಕೋಲಾದಿAದ ಕಾರವಾರ ಕಡೆ ಬರುತ್ತಿದ್ದ ಬಸ್ಸು ಡಿಕ್ಕಿಯಾಯಿತು. ಕಾರವಾರದ ಸಂಕ್ರುಭಾಗ ಘಟ್ಟದಲ್ಲಿ ಬೈಕಿಗೆ ಬಸ್ಸಿನ ಹಿಂದಿನ ಭಾಗ ತಾಗಿತು. ಪರಿಣಾಮ ಮಂಜುನಾಥ ಗಡಕರ್ ಅವರು ಬೈಕಿನಿಂದ ಬಿದ್ದರು. ಕಾಲಿಗೆ ಪೆಟ್ಟು ಮಾಡಿಕೊಂಡರು. ಅದಾದ ನಂತರ ಮಂಜುನಾಥ ಗಡಕರ್ ಅವರು ಸುಧೀಂದ್ರ ಭಟ್ಟ ಅವರ ಅತಿಯಾದ ವೇಗದ ಚಾಲನೆ ಅಪಘಾತಕ್ಕೆ ಕಾರಣ ಎಂದು ಪೊಲೀಸ್ ದೂರು ನೀಡಿದರು. - [ದರೋಡೆಗೆ ಬಂದವರು ಕಾರು ಬಿಟ್ಟು ಓಡಿದರು!](https://mobiletime.in/2025/09/the-robbers-abandoned-the-car-and-ran-away/): ದರೋಡೆ ಮಾಡಲು ಶಿರಸಿಗೆ ಬಂದಿದ್ದ ಡಕಾಯಿತರು ತಮ್ಮ ಕಾರನ್ನು ರಸ್ತೆ ಬದಿಯ ಕಾಲುವೆಗೆ ಹಾಯಿಸಿ ಪರಾರಿಯಾಗಿದ್ದಾರೆ. ಪೊಲೀಸರು ಆ ಡಕಾಯಿತರ ಹುಡುಕಾಟ ನಡೆಸಿದ್ದಾರೆ. ಭಾನುವಾರ ಶಿರಸಿಯ ಮಾರುತಿ ಹನುಮಂತ ಮರಾಠೆ ಅವರು ಬೈಕಿನಲ್ಲಿ ಹೋಗುತ್ತಿದ್ದರು. ಮಾರಿಕಾಂಬಾ ಕ್ರೀಡಾಂಗಣ ಎದುರಿನ ಕೆಇಬಿ ರಸ್ತೆಯ ನಿವಾಸಿಯಾದ ಮಾರುತಿ ಮರಾಠೆ ಅವರ ಮೇಲೆ ಕಾರಿನಲ್ಲಿ ಬಂದವರು ಹಲ್ಲೆಗೆ ಯತ್ನಿಸಿದರು. ಆ ಡಕಾಯಿತರಿಂದ ಮಾರುತಿ ಮರಾಠೆ ಅವರು ತಪ್ಪಿಸಿಕೊಳ್ಳಲು ಯತ್ನಿಸಿದರು. ಅದಾಗಿಯೂ ಅವರು ಮಾರುತಿ ಅವರನ್ನು ಅಡ್ಡಗಟ್ಟಿ ದರೋಡೆಗೆ ಪ್ರಯತ್ನಿಸಿದರು. ಕಾರಿನಲ್ಲಿದ್ದ ಡಕಾಯಿತರು ಮಾರುತಿ ಮರಾಠೆ ಅವರ ಬೈಕಿಗೆ ತಮ್ಮ ವಾಹನ ಡಿಕ್ಕಿ ಮಾಡಿದರು. ಅದಾದ ನಂತರ ಮಾರುತಿ ಮರಾಠೆ ಅವರ ಬಳಿಯಿದ್ದ ಚಿನ್ನ ಕಸಿಯುವ ಪ್ರಯತ್ನ ಮಾಡಿದರು. ಈ ವೇಳೆ ಕಾರು ಗಟಾರಕ್ಕೆ ಬಿದ್ದಿದ್ದು, ಮಾರುತಿ ಮರಾಠೆ ಅವರು ದಾಳಿಯಿಂದ ತಪ್ಪಿಸಿಕೊಂಡರು. ಕಾರು ಗಟಾರದಿಂದ ಮೇಲೆ ಬರಲಿಲ್ಲ. ಆಗ, ಕಂಗಾಲಾದ ಡಕಾಯಿತರು ಆ ಕಾರನ್ನು ಅಲ್ಲಿಯೇ ಬಿಟ್ಟು ಓಡಿದರು. ಆ ಕಾರಿನಲ್ಲಿ ನಾಲ್ವರು ಇದ್ದ ಬಗ್ಗೆ ಶಂಕಿಸಲಾಗಿದೆ. ಮಾರುತಿ ಮರಾಠಿ ಅವರು ಇದರಿಂದ ಆಘಾತಕ್ಕೆ ಒಳಗಾಗಿದ್ದಾರೆ. ಮಾರುತಿ ಮರಾಠಿ ಅವರು ಆಸ್ಪತ್ರೆಗೆ ತೆರಳಿ ಚಿಕಿತ್ಸೆಪಡೆಯುತ್ತಿದ್ದಾರೆ. ಡಿವೈಎಸ್ಪಿ ಗೀತಾ ಪಾಟೀಲ, ಸಿಪಿಐ ಶಶಿಕಾಂತ ವರ್ಮಾ, ಹೊಸ ಮಾರುಕಟ್ಟೆ ಠಾಣೆ ಪಿಎಸ್‌ಐ ಬಸವರಾಜ ಕನಶೆಟ್ಟಿ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಜೊತೆಗೆ ಮಾರುತಿ ಮರಾಠಿ ಅವರಿಂದ ಪೊಲೀಸರು ಮಾಹಿತಿಪಡೆದಿದ್ದಾರೆ. - [ಇಲಿ ಪಾಷಣದ ಪರಿಣಾಮ: ಮೂರು ಆಸ್ಪತ್ರೆ ಸುತ್ತಿದರೂ ಬದುಕದ ಪರಶುರಾಮ!](https://mobiletime.in/2025/09/effects-of-rat-poison-parashurama-did-not-survive-despite-being-taken-to-three-hospitals/): ಹಳಿಯಾಳದ ಪರಶುರಾಮ ವಡ್ಡರ್ ಅವರು ಇಲಿ ಪಾಷಣ ಸೇವಿಸಿದ ಪರಿಣಾಮ ಸಾವನಪ್ಪಿದ್ದಾರೆ. ಅವರನ್ನು ಉಳಿಸಿಕೊಳ್ಳುವುದಕ್ಕಾಗಿ ಕುಟುಂಬದವರು ಮೂರು ಆಸ್ಪತ್ರೆಗೆ ಕರೆದೊಯ್ದರೂ ಬದುಕಿಸಲು ಸಾಧ್ಯವಾಗಲಿಲ್ಲ. ಹಳಿಯಾಳದ ಸಿದ್ದರಾಮೇಶ್ವರಗಲ್ಲಿಯಲ್ಲಿ ಪರಶುರಾಮ ವಡ್ಡರ್ (45) ಅವರು ವಾಸವಾಗಿದ್ದರು. ಸರಾಯಿ ಸೇವನೆ ವ್ಯಸನಕ್ಕೆ ಒಳಗಾಗಿದ್ದ ಅವರು ಸೆಪ್ಟೆಂಬರ್ 26ರ ರಾತ್ರಿ ಮನೆಯಲ್ಲಿದ್ದ ಇಲಿ ಪಾಷಣ ಸೇವಿಸಿದ್ದರು. ಸೆ 27ರ ಬೆಳಗ್ಗೆ ಅವರು ವಿಲವಿಲ ಒದ್ದಾಡುತ್ತಿದ್ದು, ಇದನ್ನು ನೋಡಿದ ಕುಟುಂಬದವರು ಆಸ್ಪತ್ರೆಗೆ ದಾಖಲಿಸಿದರು. ಮೊದಲು ಪರಶುರಾಮ ವಡ್ಡರ್ ಅವರನ್ನು ಹಳಿಯಾಳ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಲಾಯಿತು. ನಂತರ ಅವರನ್ನು ಧಾರವಾಡ ಆಸ್ಪತ್ರೆಗೆ ದಾಖಲು ಮಾಡಲಾಯಿತು. ಅದಾದ ಮೇಲೆ ಹುಬ್ಬಳ್ಳಿಗೆ ಕರೆದೊಯ್ದು ಅಲ್ಲಿನ ಕಿಮ್ಸ್ ಆಸ್ಪತ್ರೆಗೆ ಸೇರಿಸುವ ಪ್ರಯತ್ನ ನಡೆಯಿತು. ಆದರೆ, ಇಲಿ ಪಾಷಣ ಸೇವಿಸಿ 10 ತಾಸು ಕಳೆದಿತ್ತು. ಹೀಗಾಗಿ ಅವರನ್ನು ಬದುಕಿಸಿಕೊಳ್ಳಲು ಆಗಲಿಲ್ಲ. ಪರಶುರಾಮ ವಡ್ಡರ್ ಅವರ ಸಾವಿನ ಬಗ್ಗೆ ಕೃಷ್ಣ ವಡ್ಡರ್ ಅವರು ಪೊಲೀಸರಿಗೆ ತಿಳಿಸಿದರು. ಹಳಿಯಾಳ ಪೊಲೀಸರು ಪ್ರಕರಣ ದಾಖಲಿಸಿದರು. - [ಗಾಂಧೀ ಜಯಂತಿಗೂ ಬಿಡುವು ನೀಡದ ಮಳೆ!](https://mobiletime.in/2025/09/rain-that-didnt-stop-even-on-gandhi-jayanti/): ಉತ್ತರ ಕನ್ನಡ ಜಿಲ್ಲೆಯಲ್ಲಿ ಮಳೆ ಮುಂದುವರೆದಿದೆ. ಅಕ್ಟೊಬರ್ 2ರವರೆಗೂ ಜಿಲ್ಲೆಯಲ್ಲಿ ಮಳೆಯಾಗುವ ಬಗ್ಗೆ ಉತ್ತರ ಕನ್ನಡ ಜಿಲ್ಲಾಡಳಿತ ಮಾಹಿತಿ ಪ್ರಕಟಿಸಿದೆ. ಭಾರತೀಯ ಹವಾಮಾನ ಇಲಾಖೆ ಹಾಗೂ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದವರು ನೀಡಿದ ಸೂಚನೆ ಪ್ರಕಾರ ಜಿಲ್ಲಾಡಳಿತ ಮಳೆ ಮಾಹಿತಿ ರವಾನಿಸಿದೆ. ಅದರ ಪ್ರಕಾರ, ಕರಾವಳಿ ತಾಲೂಕುಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಳೆಯಾಗುವ ಮುನ್ಸೂಚನೆಯಿದೆ. ಮಲೆನಾಡು ಪ್ರದೇಶದಲ್ಲಿಯೂ ಮಳೆ ಮುಂದುವರೆಯಲಿದೆ. ಹೀಗಾಗಿ ಅಕ್ಟೊಬರ್ 2ರವರೆಗೂ ಯಲ್ಲೊ ಅಲರ್ಟ ಘೋಷಿಸಲಾಗಿದೆ. ಮಳೆ ಹಿನ್ನಲೆ ಅರಬ್ಬಿ ಸಮುದ್ರದ ವಾತಾವರಣ ಸಹ ಸರಿ ಇಲ್ಲದ ಕಾರಣ ಸಣ್ಣ ಹಾಗೂ ಮಧ್ಯಮ ಗಾತ್ರದ ದೋಣಿಗಳು ಮೀನುಗಾರಿಕೆ ತೆರಳದಂತೆ ಸೂಚಿಸಲಾಗಿದೆ. ಸಾರ್ವಜನಿಕರು ಸಹ ಸಮುದ್ರದ ಕಡೆ ಹೋಗಬಾರದು ಎಂದು ಎಚ್ಚರಿಕೆ ನೀಡಲಾಗಿದೆ. ನದಿ ಹಾಗೂ ನೀರಿರುವ ಪ್ರದೇಶಗಳಿಗೂ ತೆರಳದಂತೆ ಜಿಲ್ಲಾಡಳಿತ ಸೂಚನೆ ರವಾನಿಸಿದೆ. ಪಾಲಕರು ಮಕ್ಕಳ ಬಗ್ಗೆ ಗಮನಹರಿಸಬೇಕು. ಸಮುದ್ರತೀರಕ್ಕೆ ಮಕ್ಕಳು ಹೋಗದಂತೆ ಜಾಗೃತರಾಗಿರಬೇಕು. ಸಮುದ್ರ ತೀರದಲ್ಲಿ ಯಾವುದೇ ಮನರಂಜನಾ ಚಟುವಟಿಕೆಗಳನ್ನು ನಡೆಸಬಾರದು ಎಂದು ಸೂಚಿಸಲಾಗಿದೆ. ತುರ್ತು ಸೇವೆಗಾಗಿ 08382-229857 ಹಾಗೂ ವಾಟ್ಸಪ್ ಸಂಖ್ಯೆ 9483511015 ಸಂಪರ್ಕಿಸುವAತೆ ಜಿಲ್ಲಾಡಳಿತ ತಿಳಿಸಿದೆ. - [ಗೋಕರ್ಣ: `ಅಡಿ'ಯಿಂದ `ಮುಡಿ'ಯವರೆಗೂ ಗಾಂಜಾ ಅಮಲು!](https://mobiletime.in/2025/09/gokarna-ganja-addiction-from-head-to-toe/): ಕುಮಟಾ ಹಾಗೂ ಗೋಕರ್ಣದಲ್ಲಿ ಗಾಂಜಾ ಸೇವಿಸುವವರ ಸಂಖ್ಯೆ ಹೆಚ್ಚಾಗಿದ್ದು, ಪೊಲೀಸರು ಗಾಂಜಾ ವ್ಯಸನಿಗಳ ಬೆನ್ನು ಬಿದ್ದಿದ್ದಾರೆ. ಅಮಲಿನಲ್ಲಿರುವವರನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಿ ಗಾಂಜಾ ಸೇವನೆ ದೃಢವಾದ ತಕ್ಷಣ ಪ್ರಕರಣ ದಾಖಲಿಸುತ್ತಿದ್ದಾರೆ. ಗೋಕರ್ಣದ ಸಂತೋಷ ವಿಶ್ವೇಶ್ವರ ಅಡಿ ಅವರು ಗಾಂಜಾ ಸೇವಿಸಿ ಸಿಕ್ಕಿ ಬಿದ್ದಿದ್ದಾರೆ. ಕುಮಟಾದ ಪ್ರಸಾದ ನಾಗಪ್ಪ ಹೊಸಳ್ಳಿ ಅವರು ಗಾಂಜಾ ಅಮಲಿನಲ್ಲಿರುವಾಗ ಪೊಲೀಸರು ದಾಳಿ ಮಾಡಿದ್ದಾರೆ. ಅವರಿಬ್ಬರನ್ನು ವೈದ್ಯಕೀಯ ಪರೀಕ್ಷೆಗೆ ರವಾನಿಸಿದಾಗ `ಪಾಸಿಟಿವ್’ ವರದಿ ಬಂದಿದ್ದು ಇಬ್ಬರ ವಿರುದ್ಧವೂ ಕಾನೂನು ಕ್ರಮ ಜರುಗಿಸಿದ್ದಾರೆ. ಗೋಕರ್ಣ ಆಲದಕೇರಿಯ ಸಂತೋಷ ವಿಶ್ವೇಶ್ವರ ಅಡಿ ಅವರು ಸೆ 27ರಂದು ಕುಡ್ಲೇ ಹಿಲ್‌ಟಾಪ್ ರಸ್ತೆಯ ಮಹಾಬಲ ವ್ಯಾಲಿ ವಸತಿ ಗೃಹದ ಬಳಿ ಅಮಲು ಪದಾರ್ಥ ಸೇವನೆ ಮಾಡಿದ್ದರು. ಗೋಕರ್ಣ ಪಿಐ ಶ್ರೀಧರ ಎಸ್ ಆರ್ ಅವರು ದಾಳಿ ನಡೆಸಿ ಅವರನ್ನು ವಶಕ್ಕೆಪಡೆದರು. ಕುಮಟಾದ ಅಂಗಡಿಕೇರಿ ಹೊಟೇಲ್ ಕೆಲಸ ಮಾಡುವ ಪ್ರಸಾದ ನಾಗಪ್ಪ ಹೊಸಳ್ಳಿ ಅವರು ಮೂರುರು ಗುಡ್ಡದ ಮೇಲೆ ಹೊಗೆ ಎಳೆಯುತ್ತಿದ್ದರು. ಪೊಲೀಸ್ ಉಪನಿರೀಕ್ಷಕ ಮಯೂರ ಪಟ್ಟಣಶೆಟ್ಟಿ ಅವರು ಅಲ್ಲಿ ದಾಳಿ ಮಾಡಿದರು. ಈ ಇಬ್ಬರಿಗೂ ಪೊಲೀಸರು ಗಾಂಜಾ ಸೇವನೆಯ ದುಷ್ಪರಿಣಾಮದ ಬಗ್ಗೆ ಪಾಠ ಮಾಡಿದ್ದಾರೆ. - [ಮಾಟ ಮಂತ್ರದ ಭಯ: ಪ್ರಾಣಬಿಟ್ಟ ಯುವಕ!](https://mobiletime.in/2025/09/fear-of-witchcraft-a-young-man-lost-his-life/): ಮಾಟ ಮಂತ್ರಕ್ಕೆ ಹೆದರಿದ ಮುಂಡಗೋಡದ ಮಿತಿಲೇಶ ಶಿಂಗೆ ಅವರು ಕ್ರಿಮಿನಾಶಕ ಸೇವಿಸಿ ಸಾವನಪ್ಪಿದ್ದಾರೆ. ತೀವೃ ಅಸ್ವಸ್ಥರಾದ ಅವರನ್ನು ಚಿಕಿತ್ಸೆಗೆ ದಾಖಲಿಸಿದರೂ ಜೀವ ಉಳಿಸಿಕೊಳ್ಳಲು ಆಗಲಿಲ್ಲ. ಮುಂಡಗೋಡಿನ ಅಂಬೇಡ್ಕರ ಓಣಿಯಲ್ಲಿ ಮಿತಿಲೇಶ ಶಿಂಗೆ (24) ಅವರು ವಾಸವಾಗಿದ್ದರು. ಕೂಲಿ ಕೆಲಸ ಮಾಡಿಕೊಂಡು ಬದುಕುತ್ತಿದ್ದ ಅವರ ಜೀವನ ಚನ್ನಾಗಿಯೇ ಇತ್ತು. ಆದರೆ, ಅವರ ತಲೆಯೊಳಗೆ ಮಾಟ-ಮಂತ್ರದ ಕ್ರಿಮಿ ಕೂತಿತು. `ಯಾರೋ ತನಗೆ ಗಾಳಿ ಮಾಡಿಸಿದ್ದಾರೆ’ ಎಂದವರು ಎಲ್ಲಾ ಕಡೆ ಹೇಳಿಕೊಂಡಿದ್ದರು. ಅದೇ ವಿಷಯವಾಗಿ ಮಾನಸಿಕವಾಗಿ ಕುಗ್ಗಿದ್ದರು. ಕಳೆದ 2 ತಿಂಗಳಿನಿAದಲೂ ಮಿತಿಲೇಶ ಶಿಂಗೆ ಅಸ್ವಸ್ಥರಾಗಿದ್ದರು. ಮಾಟ-ಮಂತ್ರ-ಗಾಳಿ ಸುದ್ದಿ ವಿಷಯವಾಗಿ ಅವರು ಸಾಕಷ್ಟು ತಲೆ ಕೆಡಿಸಿಕೊಂಡಿದ್ದರು. ಅದೇ ನೋವಿನಲ್ಲಿ ಸೆಪ್ಟೆಂಬರ್ 25ರ ರಾತ್ರಿ ಅವರು ಮನೆಯಲ್ಲಿದ್ದ ಕ್ರಿಮಿನಾಶಕ ಕುಡಿದರು. ಆರೋಗ್ಯದಲ್ಲಿ ಏರುಪೇರಾದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಕಿಮ್ಸ್’ಗೆ ಕರೆದೊಯ್ಯಲಾಯಿತು. ಅದಾಗಿಯೂ ಮಿತಿಲೇಶ ಶಿಂಗೆ ಅವರನ್ನು ಬದುಕಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಈ ಬಗ್ಗೆ ಧಾರವಾಡದಲ್ಲಿರುವ ಮಿತಿಲೇಶ ಶಿಂಗೆ ಅವರ ತಂಗಿ ಪಲ್ಲವಿ ವಡ್ಡರ್ ಅವರು ಮುಂಡಗೋಡು ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿದರು. - [ಗುಂಡಿನ ಜೊತೆ ಸಿಕ್ಕಿಬಿದ್ದ ಶಿಖಾರಿ ಶೂರ!](https://mobiletime.in/2025/09/shikhari-shura-caught-with-a-bullet/): ಮುಂಡಗೋಡಿನ ಹನುಮಂತ ಚರಾಟಕರ ಅವರು ಲೈಸನ್ಸಪಡೆಯದೇ ಬಂದೂಕುಹೊoದಿದ್ದು, ಅರಣ್ಯ ಸಿಬ್ಬಂದಿ ಅದನ್ನು ಪತ್ತೆ ಮಾಡಿದ್ದಾರೆ. ಅರಣ್ಯಾಧಿಕಾರಿಗಳು ನೀಡಿದ ದೂರಿ ಅನ್ವಯ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಮುಂಡಗೋಡು ಮೈನಳ್ಳಿಯ ಹನುಮಂತ ಚರಾಟಕರ ಅವರು ಅಕ್ರಮವಾಗಿ ಬಂದೂಕು ಹೊಂದಿದ್ದರು. ವನ್ಯಪ್ರಾಣಿಗಳ ಬೇಟೆಗಾಗಿ ಅದನ್ನು ಬಳಸುತ್ತಿದ್ದರು. ಸಜೀವ ಗುಂಡುಗಳನ್ನು ಸಹ ಅವರು ಜೊತೆಗಿರಿಸಿಕೊಂಡಿದ್ದರು. ಆಗಾಗ ಅವರು ಶಿಖಾರಿಗೆ ಹೋಗುತ್ತಿದ್ದರು. ಹೀಗಾಗಿ ಅರಣ್ಯ ಇಲಾಖೆಯವರು ಸಹ ಹನುಮಂತ ಚರಾಟಕರ ಅವರ ಮೇಲೆ ಕಣ್ಣಿಟ್ಟಿದ್ದರು. ಸೆ 12ರಂದು ಗೋದನಾಳ ಹುಣಶೆಟ್ಟಿಕೊಪ್ಪದ ಬಳಿ ಹನುಮಂತ ಚರಾಟಕರ ಅವರು ಬಂದೂಕು ಹಿಡಿದು ಓಡಾಡುತ್ತಿದ್ದರು. ಅದನ್ನು ಅರಣ್ಯ ಸಿಬ್ಬಂದಿ ನೋಡಿದರು. ಅರಣ್ಯ ಸಿಬ್ಬಂದಿಯನ್ನು ನೋಡಿದ ಹನುಮಂತ ಚರಾಟಕರ ಅವರು ಕಾಡಿನ ಕಡೆ ಓಡಿದರು. ಅರಣ್ಯ ಸಿಬ್ಬಂದಿ ಸಹ ಅವರ ಬೆನ್ನತ್ತಿದರು. ಕಾಡಿನಲ್ಲಿ ಹನುಮಂತ ಚರಾಟಕರ ಅವರು ಬಂದೂಕಿನ ಜೊತೆಗೆ ಸಿಕ್ಕಿ ಬಿದ್ದರು. ಆ ಬಂದೂಕನ್ನು ಹುಣಶೆಟ್ಟಿಕೊಪ್ಪ ಶಾಖೆಯ ಉಪರಣ್ಯಾಧಿಕಾರಿ ಗುರಪ್ಪ ಗಮನಿಸಿದರು. ಜೊತೆಗಿದ್ದ 7 ಸಜೀವ ಗುಂಡುಗಳನ್ನು ವೀಕ್ಷಿಸಿದರು. `ಇದಕ್ಕೆ ಪರವಾನಿಗೆ ಇದೆಯಾ?’ ಎಂದು ಪ್ರಶ್ನಿಸಿದರು. ದಾಖಲೆ ತೋರಿಸುವಂತೆ ಕೇಳಿದಾಗ ಹನುಮಂತ ಚರಾಟಕರ ಮಾತನಾಡಲಿಲ್ಲ. ಹೀಗಾಗಿ ಗುರಪ್ಪ ಅವರು ಮೇಲಧಿಕಾರಿಗಳಿಗೆ ವರದಿ ಸಲ್ಲಿಸಿದರು. ಅದಾದ ನಂತರ ಮುಂಡಗೋಡು ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದರು. - [ಬಡಿತ ನಿಲ್ಲಿಸಿದ ಹೃದಯ: ವಾಕಿಂಗ್ ಮಾಡುತ್ತಿದ್ದ ಉಪನ್ಯಾಸಕನಿಗೆ ಆಘಾತ](https://mobiletime.in/2025/09/heart-stops-beating-lecturer-shocked-while-walking/): ಸಿದ್ದಾಪುರದಲ್ಲಿ ಉಪನ್ಯಾಸಕಾರಿದ್ದ ಕುಮಟಾದ ವಿನು ಭಟ್ಟ ಅವರು ಹೃದಯಘಾತದಿಂದ ಸಾವನಪ್ಪಿದ್ದಾರೆ. ದಿಢೀರ್ ಆಗಿ ಕುಸಿದು ಬಿದ್ದ ಅವರನ್ನು ಆಸ್ಪತ್ರೆಗೆ ಸಾಗಿಸಿದರೂ ಪ್ರಯೋಜನವಾಗಿಲ್ಲ. ಕುಮಟಾ ಕಾಗಲಮಾನೀರ ಮೂಲದ ವಿನು ವಿಶ್ವನಾಥ ಭಟ್ಟ (40) ಅವರು ಉಪನ್ಯಾಸಕರಾಗಿದ್ದರು. ಸಿದ್ದಾಪುರದಲ್ಲಿ ವಾಸವಾಗಿದ್ದ ಅವರು ನಿತ್ಯ ವಾಕಿಂಗ್ ಮಾಡುವ ಹವ್ಯಾಸ ಹೊಂದಿದ್ದರು. ಅವರು ಹೃದಯ ರೋಗದಿಂದ ಬಳಲುತ್ತಿದ್ದರೂ ತಮ್ಮ ನಿಯಮಿತ ವ್ಯಾಯಾಮವನ್ನು ಬಿಟ್ಟಿರಲಿಲ್ಲ. ಆರೋಗ್ಯದ ಬಗ್ಗೆ ಅಪಾರ ಕಾಳಜಿ ಇದ್ದ ಕಾರಣ ನಿತ್ಯವೂ ಅವರು ವಾಕಿಂಕ್ ಮಾಡುತ್ತಿದ್ದರು. ಸೆಪ್ಟೆಂಬರ್ 26ರಂದು ಅವರು ಸಂಜೆ 6.30ಕ್ಕೆ ವಾಕಿಂಗ್ ಹೊರಟಿದ್ದರು. ಅವರಕೊಪ್ಪ ಕಡಗೇರಿ ರಸ್ತೆಯಲ್ಲಿ ಹೊರಟ ಅವರು ಅವರಕೊಪ್ಪದ ಬಳಿ ದಿಢೀರ್ ಆಗಿ ಕುಸಿದು ಬಿದ್ದರು. ತಕ್ಷಣ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ, ಅದರಿಂದ ಯಾವ ಪ್ರಯೋಜನವೂ ಆಗಲಿಲ್ಲ. ಆಸ್ಪತ್ರೆಗೆ ತರುವ ಮೊದಲೇ ವಿನು ಭಟ್ಟ ಅವರು ಸಾವನಪ್ಪಿದ ಬಗ್ಗೆ ವೈದ್ಯರು ಹೇಳಿದರು. ಈ ಎಲ್ಲಾ ವಿಷಯಗಳ ಬಗ್ಗೆ ವಿನು ಭಟ್ಟ ಅವರ ತಮ್ಮನ ಮಗ ಮೂರೂರಿನ ಮಹಾಂತೇಶ ಭಟ್ಟ ಅವರು ಪೊಲೀಸರಿಗೆ ಮಾಹಿತಿ ನೀಡಿದರು. ಸಿದ್ದಾಪುರ ಪೊಲೀಸರು ಪ್ರಕರಣ ದಾಖಲಿಸಿದರು. - [ಅತಿ ವೇಗ ತಂದ ಅನಾಹುತ: ಕಿರವತ್ತಿ ಕಟ್ಟಡ ಕಾರ್ಮಿಕ ಇನ್ನಿಲ್ಲ](https://mobiletime.in/2025/09/a-disaster-brought-on-by-extreme-speed-kiravatti-construction-worker-is-no-more/): ಯಲ್ಲಾಪುರದ ಕಿರವತ್ತಿ ಬಳಿ ಭಾನುವಾರ ಬೈಕು ಹಾಗೂ ಕಂಟೇನರ್ ನಡುವೆ ಅಪಘಾತವಾಗಿದೆ. ಕಂಟೇನರ್ ಗುದ್ದಿದ ರಭಸಕ್ಕೆ ಬೈಕ್ ಸವಾರ ಸ್ಥಳದಲ್ಲಿಯೇ ಸಾವನಪ್ಪಿದ್ದಾರೆ. ಬೈಕಿನಲ್ಲಿದ್ದ ಮತ್ತೊಬ್ಬರಿಗೆ ಗಂಭೀರ ಪ್ರಮಾಣದಲ್ಲಿ ಗಾಯವಾಗಿದೆ. ಯಲ್ಲಾಪುರದ ಕಿರವತ್ತಿಯ ಅಲ್ಕೇರಿ ತಿರುವಿನ ಬಳಿ ಈ ಅಪಘಾತ ನಡೆದಿದೆ. ಬೈಕ್ ಓಡಿಸುತ್ತಿದ್ದ ಬೈಲಂದೂರಿನ ಕಟ್ಟಡ ಕಾರ್ಮಿಕ ಚಾಯಪ್ಪ ಸೋಮಾಪುರಕರ್ (45) ಸ್ಥಳದಲ್ಲಿಯೇ ಸಾವನಪ್ಪಿದ್ದಾರೆ. ಬೈಕಿನಿಂದ ಹೆದ್ದಾರಿಗೆ ಬಿದ್ದ ಚಾಯಪ್ಪ ಸೋಮಾಪುರಕರ್ ಅವರ ಮೈಮೇಲೆ ಲಾರಿ ಹತ್ತಿದೆ. ಲಾರಿ ಚಕ್ರ ತಲೆಗೆ ತಾಗಿದ್ದರಿಂದ ಚಾಯಪ್ಪ ಸೋಮಾಪುರಕರ್ ಅವರು ಅಲ್ಲಿಯೇ ಕೊನೆ ಉಸಿರೆಳೆದಿದ್ದಾರೆ. ಆ ಬೈಕಿನಲ್ಲಿ ಸಹಸವಾರರಾಗಿದ್ದ ಪ್ರಭಾಕರ ಸೋಮಾಪುರಕರ್ ಅವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಅವರಿಗೆ ಯಲ್ಲಾಪುರದ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಲಾಯಿತು. ಅದಾದ ನಂತರ ಹೆಚ್ಚಿನ ಚಿಕಿತ್ಸೆ ಅಗತ್ಯವಿರುವ ಕಾರಣ ಪ್ರಭಾಕರ ಸೋಮಾಪುರಕರ್ ಅವರನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಜಯಂತಿ ನಗರದ ರುದ್ರಪ್ಪ ವಾಲ್ಮೀಕಿ ಅವರು ನೀಡಿದ ದೂರಿನ ಪ್ರಕಾರ, ಅತಿ ವೇಗ ಈ ಅಪಘಾತಕ್ಕೆ ಕಾರಣವಾಗಿದೆ. ಯಲ್ಲಾಪುರದಿಂದ ಹುಬ್ಬಳ್ಳಿ ಕಡೆ ಹೋಗುತ್ತಿದ್ದ ಲಾರಿಗೆ ಕಿರವತ್ತಿಯಿಂದ ಯಲ್ಲಾಪುರ ಕಡೆ ಬರುತ್ತಿದ್ದ ಬೈಕು ಡಿಕ್ಕಿಯಾಗಿದ್ದು, ಡಿಕ್ಕಿ ರಭಸಕ್ಕೆ ಬೈಕು ಲಾರಿಯ ಎಡಭಾಗದ ಚಕ್ರಕ್ಕೆ ಸಿಲುಕಿದೆ. ಮುಂದೆ ಹೋಗುತ್ತಿದ್ದ ವಾಹನ ಹಿಂದಿಕ್ಕುವುದಕ್ಕಾಗಿ ಚಾಯಪ್ಪ ಸೋಮಾಪುರಕರ್ ಅವರು ವೇಗವಾಗಿ ಬೈಕ್ ಓಡಿಸಿ ಲಾರಿಗೆ ಡಿಕ್ಕಿ ಹೊಡೆದಿದ್ದಾರೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದಾರೆ. - [ಸಾಲ ಮಾಡಿ ಗೋವಾ ಸುತ್ತಾಡಿದವ ಕಾರವಾರದಲ್ಲಿ ಕಾಳಿ ನದಿಗೆ ಹಾರಿದ!](https://mobiletime.in/2025/09/a-man-who-had-taken-a-loan-and-wandered-around-goa-jumped-into-the-kali-river-in-karwar/): ಕಂಡ ಕಂಡವರ ಬಳಿ ಸಾಲ ಮಾಡಿ ಗೊವಾ ತಿರುಗಾಟ ಮಾಡಿದ ಸರ್ಕಾರಿ ಅಧಿಕಾರಿಯೊಬ್ಬರು ಕೊನೆಗೆ ಕಾಳಿ ನದಿಗೆ ಹಾರಿದ್ದಾರೆ. ನದಿ ಅಂಚಿನ ಗಿಡಗಂಟಿಗಳಲ್ಲಿ ಅವರ ಶವ ಸಿಕ್ಕಿದೆ. ಬೆಂಗಳೂರು ನೀರು ಸರಬರಾಜು ಒಳಚರಂಡಿ ಮಂಡಳಿಯಲ್ಲಿ ಎಂ ಕೆ ಚಂದ್ರಶೇಖರ್ (49) ಅವರು ವಾಟರ್ ಇನ್ಸಪೆಕ್ಟರ್ ಆಗಿದ್ದರು. ಕೈ ತುಂಬ ಸಂಬಳ ಸಿಕ್ಕರೂ ತಮ್ಮ ಐಷಾರಾಮಿ ಜೀವನಕ್ಕಾಗಿ ಅವರು ವಿವಿಧ ಬ್ಯಾಂಕುಗಳಲ್ಲಿ ಅವರು ಸಾಲ ಮಾಡಿದ್ದರು. ಜೊತೆಗೆ ಸಿಕ್ಕ ಸಿಕ್ಕವರ ಬಳಿ ಅವರು ಸಾಲಪಡೆದಿದ್ದರು. ಉನ್ನತ ಹುದ್ದೆ ಇದ್ದರೂ ಸರಿಯಾಗಿ ಕೆಲಸಕ್ಕೆ ಹೋಗುತ್ತಿರಲಿಲ್ಲ. ಜೊತೆಗೆ ಎಂ ಕೆ ಚಂದ್ರಶೇಖರ್ ಅವರು ದುಶ್ಚಟಗಳಿಗೆ ದಾಸರಾಗಿದ್ದರು. ತಮ್ಮಲ್ಲಿದ್ದ ಹಣ ಬಳಸಿ ಗೋವಾಗೆ ಹೋದ ಎಂ ಕೆ ಚಂದ್ರಶೇಖರ್ ಅವರು ಅಲ್ಲಿ ಎಲ್ಲಾ ಕಡೆ ತಿರುಗಾಡಿದ್ದರು. ನಾಲ್ಕು ದಿನಗಳ ಹಿಂದೆ ಅವರು ಕಾರವಾರಕ್ಕೆ ಬಂದಿದ್ದು, ಕಾಳಿ ನದಿಗೆ ಹಾರಿದರು. ಸೆ 26ರ ರಾತ್ರಿ ಜನ ಸದಾಶಿವಗಡ ಕಣಸಗೇರಿಯ ಬಂದರವಾಡದಲ್ಲಿ ಅವರ ಶವ ನೋಡಿದರು. ಗಿಡಗಂಟಿ ನಡುವೆ ಶವ ಸಿಕ್ಕಿಬಿದ್ದಿದ್ದು, ಅದನ್ನು ಎಂ ಕೆ ಚಂದ್ರಶೇಖರ್ ಅವರ ಮಾವ ಆರ್ ಆರ್ ನಾಗರಾಜ ಅವರು ಗುರುತಿಸಿದರು. ತಮ್ಮ ಅಳಿಯನ ಸಾವಿನ ಬಗ್ಗೆ ಅವರು ಚಿತ್ತಾಕುಲ ಪೊಲೀಸರಿಗೆ ವರದಿ ಒಪ್ಪಿಸಿದರು. ಪೊಲೀಸರು ಪ್ರಕರಣ ದಾಖಲಿಸಿದರು. - [ಪ್ರಕೃತಿ ನಡುವೆ ಪಯಣ: ನೇಚರ್ ಸ್ಟೇ ಎಂಬ ಪ್ರವಾಸಿಗರ ಸ್ವರ್ಗ!](https://mobiletime.in/2025/09/a-journey-amidst-nature-a-tourist-paradise-called-nature-stay/): ದಟ್ಟವಾದ ಕಾಡು, ತಂಪಾಗಿ ಬೀಸುವ ಗಾಳಿ, ಜುಳು ಜುಳು ಹರಿಯುವ ಜಲ, ಅಡಿಕೆ ಮರದ ಸಾಲುಗಳನ್ನು ಆಹ್ವಾದಿಸುತ್ತ ಮಲೆನಾಡಿನ ಕುರುಕಲು ತಿಂಡಿ ತಿನ್ನುವ ಮೋಜು ಅನುಭವಿಸಿದವರಿಗೆ ಮಾತ್ರ ಗೊತ್ತು. ಹತ್ತಾರು ಜಲಪಾತ, ಬಗೆ ಬಗೆಯ ಚಾರಣ ಸ್ಥಳ, ಗುಡ್ಡಗಾಡು ಉತ್ಪನ್ನಗಳ ಖರೀದಿ, ಮನಸ್ಸು ಹಾಗೂ ದೇಹಕ್ಕೆ ಮದ ನೀಡುವ ಮಸಾಜ್, ಗುಣಮಟ್ಟದ ಊಟ-ಉಪಹಾರ ಸೇರಿ ಪ್ರವಾಸೋದ್ಯಮದ ಸಂಪೂರ್ಣ ಖುಷಿಪಡೆಯಬೇಕು ಎನ್ನುವವರು ಯಲ್ಲಾಪುರದ Uk Nature Stay‘ಗೆ ಬರಬೇಕು. ಉತ್ತರ ಕನ್ನಡ ಜಿಲ್ಲೆಯ ಪ್ರವಾಸೋದ್ಯಮ ನಕ್ಷೆಗೆ ಯಲ್ಲಾಪುರದ `Uk Nature Stay‘ ಕೊಡುಗೆ ಅಪಾರ. ಒಂದೇ ಸಂಸ್ಥೆಯ ಅಡಿ ಹಲವು ಬಗೆಯ ಪ್ರವಾಸೋದ್ಯಮ ಚಟುವಟಿಕೆಗಳ ಅನುಭೂತಿಪಡೆಯಲು `ಯುಕೆ ನೇಚರ್ ಸ್ಟೇ‘ಗಿಂತ ಉತ್ತಮ ಸ್ಥಳ ಬೇರೆ ಇಲ್ಲ. `ಕಾಡು ಅರಿಯಬೇಕು. ಇಲ್ಲಿನ ವಿಸ್ಮಯಗಳನ್ನು ಕಣ್ತುಂಬಿಕೊಳ್ಳಬೇಕು’ ಎಂದು ಬಯಸಿ ನಿರಂಜನ್ ಭಟ್ಟ ಅವರ ಒಡನಾಟಕ್ಕೆ ಬಂದವರಿಗೆ ಎಂದಿಗೂ ನಷ್ಟವಿಲ್ಲ. ಸ್ನೇಹಮಯ ವ್ಯಕ್ತಿತ್ವ, ಕುಟುಂಬದ ಪ್ರೀತಿ, ಮನೆ ಊಟದ ಸೊಬಗು, ಬಂಧು ಬಳಗದವರಿಂದಲೂ ಕೊಡಲಾಗದ ಆಥಿತ್ಯಕ್ಕೆ ಇಲ್ಲಿ ಎಂದಿಗೂ ಬರವಿಲ್ಲ. `ಪ್ರತಿ ದಿನವೂ ಹೊಸ ದಿನ’ ಎಂಬುದು ಯುಕೆ ನೇಚರ್ ಸ್ಟೇಯಲ್ಲಿನ ಆಯಾಮ. ಹೀಗಾಗಿ ಪ್ರತಿ ಬಾರಿಯೂ ಇಲ್ಲಿ ಹೊಸ ಹೊಸ ವಿಷಯ ಪರಿಚಯಿಸಲಾಗುತ್ತದೆ. ಹೊಸ ಹೊಸ ಯೋಜನೆಗಳನ್ನು ಅನುಷ್ಠಾನಕ್ಕೆ ತರಲಾಗುತ್ತದೆ. ಆಗಮಿಸುವ ಅತಿಥಿಗಳಿಗೆ ವಿಶೇಷವಾದ ನೀರಾ ಕೊಡುವ ಮೂಲಕ ಇಲ್ಲಿನ ಅತಿಥಿ ಸತ್ಕಾರ ಶುರುವಾಗಲಿದ್ದು, ಅವರವರ ಇಚ್ಚೆಗೆ ಅನುಸಾರವಾಗಿ ಊಟ-ಆಟ-ಪಾಠ ನಡೆಯುತ್ತದೆ. ಫೈರ್ ಕ್ಯಾಂಪ್, ಬಾಡಿ ಮಸಾಜ್, ಜಲ ಸಾಹಸ ಚಟುವಟಿಕೆ, ಈಜು-ಮೋಜು, ಇನ್ನಿತರ ಸಾಹಸಿ ಕ್ರೀಡೆಗಳು ಇಲ್ಲಿವೆ. ಸಂಜೆ ವೇಳೆಯ ಮನರಂಜನೆಗಾಗಿ ಯಕ್ಷಗಾನ, ಬುಡಕಟ್ಟು ನೃತ್ಯ ಸೇರಿ ಹಲವು ಸಾಂಪ್ರದಾಯಿಕ ಪದ್ಧತಿ ಜೀವಂತವಾಗಿರಿಸಿಕೊAಡಿದ್ದು ಇಲ್ಲಿನ ವಿಶೇಷ. ಆಯುರ್ವೇದಿಕ್ ಮಸಾಜ್-ಅತ್ಯದ್ಬುತ ಅನುಭವ ಹಳ್ಳಿ ಸೊಬಗಿನ ಉತ್ಪನ್ನ ಮಾರುಕಟ್ಟೆ ವ್ಯವಸ್ಥೆ, ಜೇನು ಕೃಷಿ, ಶಾಲಾ ಮಕ್ಕಳ ಪ್ರವಾಸ, ಅಪರೂಪದ ನೀರಾ ಮಾರಾಟ ಸೇರಿ ಈಗಾಗಲೇ ಹಲವು ಬಗೆಯ ಸೇವೆ ಒದಗಿಸುತ್ತಿರುವ ಯುಕೆ ನೇಚರ್ ಸ್ಟೇ ಸದ್ಯ `ಆಯುರ್ವೇದಿಕ್ ಮಸಾಜ್ ಸೆಂಟರ್’ ತೆರೆದಿದೆ. ಪ್ರತಿಯೊಬ್ಬರಿಗೂ ಕೈಗೆಟಕುವ ದರದಲ್ಲಿ ಅವರ ಆರೋಗ್ಯ ವೃದ್ಧಿಗೆ ಮಸಾಜ್ ಮಾಡಬೇಕು ಎಂಬುದು ನೇಚರ್ ಸ್ಟೇ ಕನಸು. 1200ರೂ ದರದಲ್ಲಿ ನುರಿತ ಸಿಬ್ಬಂದಿ ಮೂಲಕ ಕಾಡಿನ ಸೊಪ್ಪು-ಶಕ್ತಿಯುತ ಬೇರುಗಳ ಎಣ್ಣೆ ಬಳಸಿ ಇಲ್ಲಿ ಮಸಾಜ್ ಮಾಡುತ್ತಿದ್ದಾರೆ. ಪ್ರಾಚೀನ ಕಾಲದ ಪದ್ಧತಿ ಅನುಸರಿಸಿ ಅಪರೂಪದ ಗಿಡ ಮೂಲಿಕೆಗಳಿಂದ ತೆಗೆದ ಎಣ್ಣೆಯಿಂದ ಇಲ್ಲಿ ಮಸಾಜ್ ಮಾಡಲಾಗುತ್ತದೆ. ಸ್ನಾಯುವಿನ ಮೇಲಿನ ಒತ್ತಡ ನಿವಾರಣೆಗಾಗಿ ಪ್ರತಿಯೊಬ್ಬರು ಆಗಾಗ ಮಸಾಜ್ ಪ್ರಕ್ರಿಯೆಗೆ ಒಳಗಾಗುವುದು ಸೂಕ್ತ. ಅದರಲ್ಲಿಯೂ ಮಂಡಿ ನೋವು, ಕೈ-ಕಾಲು ನೋವು, ಬೆನ್ನು ನೋವು ಸಮಸ್ಯೆಯಿಂದ ಬಳಲುತ್ತಿರುವವರಿಗೆ ಈ ಆಯುರ್ವೇದಿಕ್ ಮಸಾಜ್ ಪರಿಣಾಮಕಾರಿ. ದೇಹದಲ್ಲಿರುವ ವಿಷ ಹೋಗಲಾಡಿಸಿ ರೋಗ ನಿರೋಧಕ ಶಕ್ತಿ ಹೆಚ್ಚಿಸುವಲ್ಲಿಯೂ ಆಯುರ್ವೇದಿಕ್ ಗಿಡ ಮೂಲಿಕೆಗಳ ಎಣ್ಣೆ ಬಳಸಿ ಮಾಡುವ ಮಸಾಜ್ ಪ್ರಯೋಜನಕರ. ಇಲ್ಲಿ ಮಸಾಜ್ ಮಾಡಿಸಿಕೊಳ್ಳುವುದರಿಂದ ಎಲ್ಲಾ ಅಂಗಾoಗಗಳ ಬಳಿಯಲ್ಲಿನ ಮಾಂಸ-ಖoಡಗಳು ಬಲಗೊಳ್ಳುತ್ತವೆ. ಕೀಲು ನೋವು ಕಡಿಮೆ ಆಗುತ್ತದೆ. ದೇಹದ ಫ್ಲೆಕ್ಸಿಬಿಲಿಟಿ ಅಭಿವೃದ್ಧಿ ಆಗುತ್ತದೆ. ಚರ್ಮದಲ್ಲಿ ಪೌಷ್ಟಿಕಾಂಶಗಳು ಹೆಚ್ಚಾಗುತ್ತವೆ. ದೇಹದ ದುಗ್ಧರಸ ವ್ಯವಸ್ಥೆ ಉತ್ತೇಜಿತಗೊಳ್ಳುತ್ತದೆ. ದೇಹದಲ್ಲಿನ ವಿಷಕಾರಿ ಅಂಶಗಳು ದೂರವಾಗುತ್ತವೆ. ದೇಹದ ತೂಕ ಕಡಿಮೆ ಆಗುತ್ತದೆ. ಕಣ್ಣುಗಳ ನೋವು ಕಡಿಮೆ ಆಗಿ ದೃಷ್ಟಿ ದೋಷ ಸರಿ ಹೋಗುತ್ತದೆ. ರಜೆ ಹಾಗೂ ವಾರಾಂತ್ಯದ ಅವಧಿಯಲ್ಲಿ ಮಸಾಜ್ ಮಾಡಿಸಿಕೊಳ್ಳಲು ಬರುವವರ ಸಂಖ್ಯೆ ಹೆಚ್ಚಿರುವುದರಿಂದ ಮುಂಚಿತವಾಗಿ 9449567673ಗೆ ಫೋನ್ ಮಾಡಿ ಮಾತನಾಡುವುದು ಉತ್ತಮ. ಗ್ಲೋಬಲ್ ಅವಾರ್ಡ 9 ಎಕರೆ ವಿಶಾಲವಾದ ಯುಕೆ ನೇಚರ್ ಸ್ಟೇ ಆವರಣದಲ್ಲಿ ಪರಿಸರ ಸಮತೋಲನ ಕಾಪಾಡಲಾಗಿದೆ. ಹಲವು ಬಗೆಯ ಗಿಡಗಳಿವೆ. ಅದರಲ್ಲಿಯೂ ಮುಖ್ಯವಾಗಿ ಆಯುರ್ವೇದ ಸಸ್ಯಗಳ ಸಂರಕ್ಷಣೆಗೆ ಒತ್ತು ನೀಡಲಾಗಿದೆ. ಪಶ್ಚಿಮ ಘಟ್ಟದ ಮೂಲ ಸಂಸ್ಕೃತಿ ಉಳಿಸಿ ಬೆಳಸಲು ನೆರವಾಗುವ ರೋಸ್‌ವುಡ್, ಸ್ಯಾಂಡಲ್, ಸೀಸಮ್, ಮಾಟಿ, ಹೋಣೆ, ನಂದಿ, ಕೂಕಂ, ಸಂಪಿಗೆ ಮೊದಲ ಗಿಡಗಳನ್ನು ಹಾಗೇ ಉಳಿಸಿಕೊಂಡು ರೆಸಾರ್ಟ ನಿರ್ಮಿಸಲಾಗಿದೆ. ಬಗೆ ಬಗೆಯ ಹಣ್ಣು-ತರಕಾರಿಗಳನ್ನು ಇಲ್ಲಿ ಬೆಳೆಸಲಾಗಿದೆ. 50ರಷ್ಟು ಜೇನು ಗೂಡುಗಳಿದ್ದು, ಅತಿಥಿಗಳಿಗೆ ತಾಜಾ ಜೇನು ತುಪ್ಪದ ಜೊತೆ ಜೇನು ರಕ್ಷಣೆಯ ಪಾಠ ಮಾಡಲಾಗುತ್ತದೆ. ಇನ್ನೂ 150 ಜನ ಒಟ್ಟಿಗೆ ಬಂದರೂ ಇಲ್ಲಿ ಊಟ-ವಸತಿ ಸೌಲಭ್ಯವಿದೆ. ವಿಶ್ವದ ಗಮನಸೆಳೆದ ಸಾತೋಡ್ಡಿ ಜಲಪಾತ, ಮಾಗೋಡು ಜಲಪಾತ, ಯಾಣ ಗುಹೆ, ವಿಭೂತಿ ಜಲಪಾತ, ಶಿವಪುರ ತೂಗು ಸೇತುವೆ, ಸಹಸ್ರಲಿಂಗ ಸೇರಿ ಅನೇಕ ಸ್ಥಳಗಳು ಇಲ್ಲಿಂದ ಹತ್ತಿರ. ನೈಸರ್ಗಿಕ ತಾಣಗಳನ್ನು ಗುರಿಯಾಗಿರಿಸಿಕೊಂಡು ಪ್ರವಾಸಿಗರನ್ನು ಅಲ್ಲಿ ಕರೆದೊಯ್ಯಲಾಗುತ್ತದೆ. ಇಷ್ಟಾರ್ಥ ಸಿದ್ಧಿಗೆ ಪ್ರಸಿದ್ಧಿಪಡೆದ ಗಂಟೆ ಗಣಪತಿ ದೇವಾಲಯ ಸಹ ಇಲ್ಲಿಂದ 1ಕಿ.ಮೀ ದೂರದಲ್ಲಿದೆ. ಹಲವು ಸತ್ವಗಳನ್ನು ಒಳಗೊಂಡ ಸ್ಥಳೀಯ ಗಿಡಮೂಲಿಕೆ ಬಳಸಿ ಸಿದ್ಧಪಡಿಸಿದ ಕಷಾಯ ಸಹ ಯುಕೆ ನೇಚರ್ ಸ್ಟೇ ವಿಶೇಷಗಳಲ್ಲಿ ಒಂದು. ಯುಕೆ ನೇಚರ್ ಸ್ಟೇ ಸಾಧನೆ ಗಮನಿಸಿದ ವಿಶ್ವವಾಣಿ ಪತ್ರಿಕೆ ಈ ರೆಸಾರ್ಟಗೆ `ಗ್ಲೋಬಲ್ ಅಚ್ಯುಮೆಂಟ್ ಅವಾರ್ಡ’ ನೀಡಿ ಗೌರವಿಸಿದೆ. ಇದರೊಂದಿಗೆ ವಿಶ್ವವಾಣಿ ಹಾಗೂ ಲೋಕಧ್ವನಿ ಪತ್ರಿಕೆಯಲ್ಲಿ ನಿರಂಜನ್ ಭಟ್ಟ ಅವರ ಸಾಧನೆಯ ಬಗ್ಗೆ ವಿಶೇಷ ಲೇಖನ ಸಹ ಪ್ರಕಟವಾಗಿದೆ. ಆಯುರ್ವೇದ ಮಸಾಜ್ ಕುರಿತು ಜನ ಹೇಳುವುದೇನು? ವಿಡಿಯೋ ಇಲ್ಲಿ ನೋಡಿ.. #Sponsored - [`ಸರ್ಕಾರಿ ಸಬ್ಸಿಡಿ ಜೊತೆ ಸುರಕ್ಷಿತ ಯಂತ್ರೋಪಕರಣ'](https://mobiletime.in/2025/09/safe-machinery-with-government-subsidy/): ಆಧುನಿಕ ಕೃಷಿ ಪದ್ಧತಿ ಬಗ್ಗೆ ಆಳವಾದ ಅಧ್ಯಯನ, ಯಂತ್ರ ಬಳಕೆ ಬಗ್ಗೆ ಉಚಿತ ಕಾರ್ಯಾಗಾರ, ಮನೆ ಮನೆಗೆ ತೆರಳಿ ವೈಜ್ಞಾನಿಕ ಮಾಹಿತಿ ಹಾಗೂ ಕೃಷಿ ಯಂತ್ರೋಪಕರಣಗಳ ಸುರಕ್ಷತ ಬಳಕೆ ಬಗ್ಗೆ ರೈತರಲ್ಲಿ ಅರಿವು ಮೂಡಿಸಲು `ಸುರಕ್ಷಾ ಅಗ್ರೋ ಟೆಕ್’ ಶ್ರಮಿಸುತ್ತಿದೆ. ಹುಬ್ಬಳ್ಳಿ ಹಾಗೂ ಬಾಗಲಕೋಟೆಯಲ್ಲಿ ಕೃಷಿ ಯಂತ್ರೋಪಕರಣ ಸೇವೆ ನೀಡುತ್ತಿರುವ ಸುರಕ್ಷಾ ಅಗ್ರೋ ಟೆಕ್ ಇದೀಗ ಯಲ್ಲಾಪುರದಲ್ಲಿಯೂ ತನ್ನ ಶಾಖೆ ತೆರೆದಿದೆ. `ಸುರಕ್ಷಾ ಅಗ್ರೋ ಟೆಕ್’ನಲ್ಲಿ ಖರೀದಿಸುವ ಕೃಷಿ ಯಂತ್ರೋಪಕರಣಗಳಿಗೆ ಸರ್ಕಾರದ ಸಬ್ಸಿಡಿ ಸಿಗುತ್ತದೆ. ಸುರಕ್ಷಾ ಅಗ್ರೋ ಟೆಕ್ ಸ್ವತಃ ಯಂತ್ರೋಪಕರಣಗಳನ್ನು ಉತ್ಪಾದಿಸುವ ಘಟಕವನ್ನು ಹೊಂದಿದ್ದು, ಗುಣಮಟ್ಟದ ವಿಷಯದಲ್ಲಿ ಎಂದಿಗೂ ಇಲ್ಲಿ ರಾಜಿ ಇಲ್ಲ. ಕೃಷಿ ಕಾಯಕಕ್ಕೆ ಅನುಕೂಲವಾಗುವ ಅನೇಕ ಯಂತ್ರೋಪಕರಣಗಳು ಇಲ್ಲಿ ಸಿಗುತ್ತದೆ. ಯಂತ್ರೋಪಕರಣಗಳ ಮಾರಾಟದ ಜೊತೆ ಅದರ ದುರಸ್ಥಿಗೂ ಸಹ ಇಲ್ಲಿ ನುರಿತ ಕೆಲಸಗಾರರಿದ್ದಾರೆ. ಸ್ವತಃ ಕೃಷಿ ಕುಟುಂಬದವರಾಗಿರುವ ಮಂಜುನಾಥ ಎನ್ ಎಚ್ ಅವರು 15 ವರ್ಷಗಳ ಹಿಂದೆ `ಸುರಕ್ಷಾ ಅಗ್ರೋ ಟೆಕ್’ ಎಂಬ ಕಂಪನಿ ಕಟ್ಟಿದರು. ರೈತರ ಹೊಲಗಳಿಗೆ ತೆರಳಿ ಯಂತ್ರೋಪಕರಣಗಳ ಬಗ್ಗೆ ಮಾಹಿತಿ ನೀಡುವುದನ್ನು ಅವರು ರೂಡಿಸಿಕೊಂಡರು. ಮನೆ ಬಾಗಿಲಿನಲ್ಲಿ ಯಂತ್ರಗಳನ್ನು ತೆಗೆದುಕೊಂಡು ಹೋಗಿ ಅದರ ಬಳಕೆಯ ವಿಧಾನಗಳ ಬಗ್ಗೆ ರೈತರಲ್ಲಿ ಅರಿವು ಮೂಡಿಸಿದರು. ಯಂತ್ರಗಳ ಸುರಕ್ಷಿತ ಬಳಕೆ, ಅವುಗಳ ನಿರ್ವಹಣೆ ಹಾಗೂ ಆಧುನಿಕ ಕೃಷಿ ಪದ್ಧತಿ ಮೂಲಕ ಕಡಿಮೆ ಬೆಲೆಯಲ್ಲಿ ಅತ್ಯಧಿಕ ಆದಾಯಪಡೆಯುವ ವಿಧಾನಗಳ ಬಗ್ಗೆ ರೈತರಿಗೆ ಮಾಹಿತಿ ನೀಡಿದರು. ಕೃಷಿ ಸೇವಾ ಮಳಿಗೆಯಲ್ಲಿ ಸ್ವತಃ ದುಡಿಯುವುದರ ಜೊತೆ ಇನ್ನಷ್ಟು ಜನರಿಗೆ ತಮ್ಮ ಕಂಪನಿ ಮೂಲಕ ಉದ್ಯೋಗವನ್ನು ನೀಡಿದರು. ಈ ಶ್ರಮದ ಫಲವಾಗಿ ರೈತರು `ಸುರಕ್ಷಾ ಅಗ್ರೋ ಟೆಕ್’ ಮೇಲೆ ಅಪಾರ ವಿಶ್ವಾಸವಿಟ್ಟರು. ಆ ವಿಶ್ವಾಸಕ್ಕೆ ಎಂದಿಗೂ ಧಕ್ಕೆ ಬಾರದಂತೆ ಕಂಪನಿ ನೌಕರರು ನಡೆದುಕೊಂಡರು. ಈ ನಡುವೆ ಯಂತ್ರೋಪಕರಣ ಖರೀದಿಸಿದ ಕೆಲವರು ಸರ್ಕಾರದಿಂದ ಜಮಾ ಆಗಬೇಕಾದ ಸಬ್ಸಿಡಿಗೆ ಅಲೆದಾಡುತಿರುವುದು ಅಲ್ಲಿನವರ ಗಮನಕ್ಕೆ ಬಂದಿತು. ಆಗ, ಸರ್ಕಾರದಿಂದ ರೈತರ ಬ್ಯಾಂಕ್ ಖಾತೆಗೆ ನೇರ ಸಬ್ಸಿಡಿ ಜಮಾ ಆಗುವ ಹೊಣೆಯನ್ನು ಸುರಕ್ಷಾ ಅಗ್ರೋ ಟೆಕ್ ಸಿಬ್ಬಂದಿವಹಿಸಿಕೊoಡರು. ರೈತರು ಕಚೇರಿಯಿಂದ ಕಚೇರಿಗೆ ಅಲೆಯುವುದನ್ನು ತಪ್ಪಿಸಲು ಯೋಜನೆ ರೂಪಿಸಿದರು. ರೈತರ ಮೂಲಕ ಅಗತ್ಯ ದಾಖಲೆಪಡೆದು ಬಾಂಕ್ ಖಾತೆಗೆ ಸಬ್ಸಿಡಿ ಹಣ ಜಮಾ ಆಗುವಂತೆ ಮಾಡಿದರು. ಇದರೊಂದಿಗೆ ರೈತರ ಮನೆಗೆ ಕೃಷಿ ಯಂತ್ರೋಪಕರಣಗಳನ್ನು ತಲುಪಿಸಿದರು. ರೈತರ ದಾಖಲೆಗಳನ್ನು ಕ್ರಮಬದ್ಧವಾಗಿ ಜೋಡಿಸುವುದರ ಜೊತೆ ಅವರಿಗೆ ಸಬ್ಸಿಡಿ ದೊರೆಯುವಂತೆ ಮಾಡುವ ಕೆಲಸದಲ್ಲಿ ಸುರಕ್ಷಾ ಅಗ್ರೋ ಟೆಕ್ ಸಿಬ್ಬಂದಿ ನೆರವಾಗಿರುವುದು ಸರ್ಕಾರಿ ಅಧಿಕಾರಿಗಳ ಒತ್ತಡವನ್ನು ಕಡಿಮೆ ಮಾಡಿತು. ಹೀಗಾಗಿ ಕೃಷಿ ವಲಯದಲ್ಲಿ ಸುರಕ್ಷಾ ಅಗ್ರೋ ಟೆಕ್ ಸಾಕಷ್ಟು ಜನಪ್ರಿಯತೆಯನ್ನುಪಡೆಯಿತು. ಸದ್ಯ ಆರು ಬಗೆಯ ಕೃಷಿ ಉಪಕಾರಿ ಯಂತ್ರಗಳು ಸುರಕ್ಷಾ ಅಗ್ರೋ ಟೆಕ್ ಕಂಪನಿಯಲ್ಲಿದೆ. ಕರ್ನಾಟಕದಲ್ಲಿಯೇ ಮೊದಲ ಬಾರಿ ಸುರಕ್ಷಾ ಅಗ್ರೋ ಟೆಕ್ ಸಿದ್ಧಪಡಿಸಿದ ಮೂರು ಚಕ್ರದ ಕಳೆ ತೆಗೆಯುವ ಯಂತ್ರ (ಮಿನಿ ಟಾಕ್ಟರ್) ಅತ್ಯಂತ ಪ್ರಸಿದ್ಧಿಪಡೆದಿದೆ. 1ಎಕರೆ ಕ್ಷೇತ್ರದಲ್ಲಿನ ಕಳೆ ತೆಗೆಯಲು 3 ಸಾವಿರ ರೂ ವೆಚ್ಚ ಮಾಡುತ್ತಿರುವ ಜನರ ನಡುವೆ ಈ ಯಂತ್ರ ಬರೇ 100ರೂ ವೆಚ್ಚದಲ್ಲಿ 1 ಎಕರೆಯ ಕಳೆ ತೆಗೆಯುತ್ತದೆ. ಇಲ್ಲಿ ಭೇಟಿ ನೀಡಿ ಸುರಕ್ಷಾ ಆಗ್ರೋ ಟೆಕ್ ಉದ್ಯಮ ನಗರ, ಯಲ್ಲಾಪುರ ಇಲ್ಲಿ ಫೋನ್ ಮಾಡಿ 9449275223 ಅಥವಾ 9108851760   - [ಕೌಶಲ್ಯವೃದ್ಧಿಗೆ ಆನ್‌ಲೈನ್ ತರಬೇತಿ: ನವೋದಯ ಪ್ರವೇಶಕ್ಕೂ ಇದುವೇ ಸೂಕ್ತ ತರಗತಿ!](https://mobiletime.in/2025/09/online-classes-for-skill-development-decent-training-for-admission-to-prestigious-schools/): `ತಮ್ಮ ಮಕ್ಕಳಿಗೆ ಅತ್ಯುತ್ತಮ ಶಿಕ್ಷಣ ಕೊಡಿಸಬೇಕು. ಪ್ರತಿಷ್ಠಿತ ಶಾಲೆಗಳಲ್ಲಿ ಪ್ರವೇಶ ಪಡೆಯಬೇಕು’ ಎಂಬುದು ಪ್ರತಿಯೊಬ್ಬರ ಪಾಲಕರ ಕನಸು. ಸಾವಿರಾರು ಪಾಲಕರ ಈ ಕನಸು ಈಡೇರಿಸುವುದಕ್ಕಾಗಿ `ಜ್ಞಾನಶ್ರೀ ನವೋದಯ ತರಬೇತಿ ಕೇಂದ್ರ’ ಶ್ರಮಿಸುತ್ತಿದೆ. ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡು ಹಾಗೂ ಶಿರಸಿಯಲ್ಲಿ ಶಾಖೆಹೊಂದಿರುವ ಜ್ಞಾನಶ್ರೀ ನವೋದಯ ತರಬೇತಿ ಕೇಂದ್ರವೂ ಆನ್‌ಲೈನ್ ಹಾಗೂ ಆಫ್‌ಲೈನ್ ಮೂಲಕ ಮಕ್ಕಳ ವಿದ್ಯಾರ್ಜನೆಗೆ ನೆರವು ನೀಡುತ್ತಿದೆ. ಶಾಲೆಗೆ ಹೋಗುವ ಪ್ರತಿಯೊಬ್ಬ ಮಗುವು ಬಿಡುವಿನ ವೇಳೆಯಲ್ಲಿ ತರಬೇತಿಪಡೆಯುವಂತೆ ಇಲ್ಲಿ ಸಮಯ ಹೊಂದಾಣಿಕೆ ಮಾಡಲಾಗಿದೆ. ಬೆಳಗ್ಗೆ 6ರಿಂದ 8ಗಂಟೆಯವರೆಗೆ ಹಾಗೂ ಸಂಜೆ 5ರಿಂದ 7ಗಂಟೆಯವರೆಗೆ ಜ್ಞಾನಶ್ರೀ ನವೋದಯ ತರಬೇತಿ ಕೇಂದ್ರದ ತರಬೇತಿ ನಡೆಯುತ್ತದೆ. 3ನೇ ತರಗತಿ ಮೇಲ್ಪಟ್ಟ ಎಲ್ಲಾ ಮಕ್ಕಳು ಇಲ್ಲಿನ ತರಬೇತಿಗೆ ಅರ್ಹರು. ಇಲ್ಲಿ ತರಬೇತಿಪಡೆದ 125ಕ್ಕೂ ಅಧಿಕ ಚಿಣ್ಣರು ಪ್ರತಿಷ್ಠಿತ ನವೋದಯಕ್ಕೆ ಆಯ್ಕೆಯಾಗಿದ್ದಾರೆ. 30ರಷ್ಟು ಮಕ್ಕಳು ಸೈನಿಕ ಶಾಲೆಗೆ ಅರ್ಹತೆಪಡೆದಿದ್ದಾರೆ. 450ಕ್ಕೂ ಅಧಿಕ ಮಕ್ಕಳು ಮುರಾರ್ಜಿ ಶಾಲೆಯ ಪ್ರವೇಶಪಡೆದು ವಿದ್ಯಾರ್ಜನೆಯಲ್ಲಿ ನಿರತರಾಗಿದ್ದಾರೆ. ಸಿಬಿಎಸ್‌ಸಿ ಶಾಲೆಯಲ್ಲಿ ಎಂಟು ವರ್ಷ ಹಾಗೂ ನವೋದಯ ಶಾಲೆಯಲ್ಲಿ ಐದು ವರ್ಷ ಕೆಲಸ ಮಾಡಿದ ಅನುಭವಹೊಂದಿದ ಯೋಗೇಂದ್ರ ರೇವಣಕರ್ ಅವರು ಜ್ಞಾನಶ್ರೀ ನವೋದಯ ತರಬೇತಿ ಕೇಂದ್ರದ ರೂವಾರಿ. ತಮ್ಮ ಅನುಭಗಳ ಆಧಾರದ ಮೇರೆಗೆ 10 ವರ್ಷಗಳ ಹಿಂದೆ ಅವರು ಈ ಸಂಸ್ಥೆ ಸ್ಥಾಪಿಸಿದರು. ಮುಂಡಗೋಡದ ಬಂಕಾಪುರ ರಸ್ತೆಯಲ್ಲಿ ತರಗತಿ ನಡೆಸಿದ ಅವರು ಸದ್ಯ ಹುಬ್ಬಳ್ಳಿ ರಸ್ತೆಯಲ್ಲಿ ಕಚೇರಿ ಹೊಂದಿದ್ದಾರೆ. ಬೇಡಿಕೆ ಹೆಚ್ಚಿದ ಪರಿಣಾಮ ಶಿರಸಿಯಲ್ಲಿ ಸಹ ಶಾಖೆಯೊಂದನ್ನು ಮುನ್ನಡೆಸುತ್ತಿದ್ದಾರೆ. ಪ್ರತಿ ತರಗತಿಗೆ 60 ಜನರಿಗೆ ಮಾತ್ರ ಪ್ರವೇಶ ಕಲ್ಪಿಸಿ, ಪ್ರತಿಯೊಬ್ಬ ವಿದ್ಯಾರ್ಥಿಗಳ ಬಗ್ಗೆ ವೈಯಕ್ತಿಕ ಗಮನವಿರಿಸಿ ಪಾಠ ಮಾಡುವುದು ಇಲ್ಲಿನ ವಿಶೇಷ. ಇನ್ನೂ 3ನೇ ತರಗತಿಗೆ ಪ್ರವೇಶಪಡೆದ ಮಗುವಿಗೆ ಇಲ್ಲಿ ಗಣಿತ ಹಾಗೂ ಇಂಗ್ಲಿಷ್ ಕುರಿತು ಕಲಿಸಲಾಗುತ್ತದೆ. ಅದರೊಂದಿಗೆ ಕಂಪ್ಯುಟರ್ ಸೇರಿ ಅನೇಕ ಬಗೆಯ ಕೌಶಲ್ಯಗಳ ಬಗ್ಗೆ ಪರಿಣಿತಿ ನೀಡಲಾಗುತ್ತದೆ. ಇದಕ್ಕಾಗಿಯೇ 15 ವರ್ಷಕ್ಕೂ ಅಧಿಕ ಅನುಭವವಿರುವ 7 ನುರಿತ ಶಿಕ್ಷಕರು ದುಡಿಯುತ್ತಿದ್ದಾರೆ. ಸ್ಮಾರ್ಟ ಕ್ಲಾಸ್ ಆಧಾರಿತ ಶಿಕ್ಷಣ ಪದ್ಧತಿ ಇಲ್ಲಿದ್ದು, ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಜ್ಞಾನಶ್ರೀ ನವೋದಯ ತರಬೇತಿ ಕೇಂದ್ರ ಉತ್ತಮ ಆಯ್ಕೆ. ನಿಮ್ಮ ಮಕ್ಕಳನ್ನು ಪ್ರತಿಷ್ಠಿತ ನವೋದಯ ಅಥವಾ ಸೈನಿಕ ಶಾಲೆಗೆ ಕಳುಹಿಸಲು ಇಚ್ಚಿಸುವಿರಾ? ಹಾಗಾದರೆ ಮಗುವಿನ ಕೌಶಲ್ಯ ಅಭಿವೃದ್ಧಿಗಾಗಿ ಜ್ಞಾನಶ್ರೀ ನವೋದಯ ತರಬೇತಿ ಕೇಂದ್ರಕ್ಕೆ ಸೇರಿಸಿ… ಇನ್ನೂ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಫೋನ್ ಮಾಡಿ: 9742235329 #Sponsored - [ಕರೊನಾ ವೇಳೆ ಕಂಪನಿ ಕಟ್ಟಿದ ಕಥೆ: ಕನಸಿನ ಉದ್ಯೋಗಕ್ಕೆ ಯಶಸ್ಸಿನ ದಾರಿ!](https://mobiletime.in/2025/09/the-story-of-building-a-company-during-corona-the-path-to-success-for-a-dream-job/): ಕೊರೊನಾ ಕಾಲಘಟ್ಟದಲ್ಲಿ ಊರಿಗೆ ಮರಳಿದ ಮೂವರು ಉದ್ಯೋಗ ಕೊಡಿಸುವ ಸಂಸ್ಥೆ ಸ್ಥಾಪಿಸಿದ್ದು, ನಾಲ್ಕು ವರ್ಷದ ಅವಧಿಯಲ್ಲಿ `ಯುವಜಯ ಪೌಂಡೇಶನ್’ 700ಕ್ಕೂ ಅಧಿಕ ನಿರುದ್ಯೋಗಿಗಳಿಗೆ ಬದುಕುವ ದಾರಿ ತೋರಿಸಿದೆ. ಕೊರೊನಾದಂಥಹ ಸಂಕಷ್ಟದ ಅವಧಿಯಲ್ಲಿ ಊರಿಗೆ ಮರಳಿದ 11 ಜನರಿಗೆ ಈ ಸಂಸ್ಥೆಯೇ ಅರೆಕಾಲಿಕ ಉದ್ಯೋಗವನ್ನು ಒದಗಿಸಿದೆ. ಕೊರೊನಾ ಅವಧಿಯಲ್ಲಿ ಅನೇಕ ಕಂಪನಿಗಳು ನಷ್ಟಕ್ಕೆ ಒಳಗಾಗಿದ್ದವು. ಲಕ್ಷಾಂತರ ಜನ ಉದ್ಯೋಗ ಕಳೆದುಕೊಂಡಿದ್ದರು. ಅದಕ್ಕಿಂತ ಮುಖ್ಯವಾಗಿ ಆಗಷ್ಟೇ ಭವಿಷ್ಯದ ಕನಸು ಕಂಡಿದ್ದ ಗ್ರಾಮೀಣ ಪ್ರತಿಭೆಗಳು ಮನೆಯಲ್ಲಿಯೇ ಕಮರಿಹೋಗುವ ಆತಂಕ ಎದುರಿಸುತ್ತಿದ್ದರು. ಸಮಾಜದ ಮುಖ್ಯವಾಹಿನಿಗೆ ಬರಬೇಕಿದ್ದ ಗ್ರಾಮೀಣ ಪದವಿದರರ ಪ್ರತಿಭಾನ್ವೇಶಣೆ ಬಗ್ಗೆ ಚಿಂತಿಸಿದ ಗಿರೀಶ ನಾಗನೂರು ಹಾಗೂ ಕಾರ್ತಿಕ ಹೆಗಡೆ ಒಟ್ಟಾಗಿ ಆ ವೇಳೆ `ಯುವಜಯ ಪೌಂಡೇಶನ್’ ಸ್ಥಾಪಿಸಿದರು. ಗಿರೀಶ ನಾಗನೂರು ಅವರು ಐಟಿ ಕಂಪನಿಯಲ್ಲಿ ಉನ್ನತ ಹುದ್ದೆಯಲ್ಲಿದ್ದರು. ಕಾರ್ತಿಕ ಹೆಗಡೆ ಅವರು ಸ್ವಯಂ ಸೇವಾ ಸಂಸ್ಥೆಯೊoದರಲ್ಲಿ 16 ವರ್ಷದ ಅನುಭವಪಡೆದಿದ್ದರು. ಸ್ನೇಹಿತರೊಬ್ಬರು ಯುವಜಯ ಪೌಂಡೇಶನ್’ಗೆ ಆಧಾರ ಸ್ಥಂಬವಾಗಿದ್ದು, ಈ ಮೂವರು ಸೇರಿ 2021ರ ಮೇ ತಿಂಗಳಿನಿoದ ಗ್ರಾಮೀಣ ಪದವಿಧರರಿಗೆ ಉಚಿತ ತರಬೇತಿ ನೀಡಲು ಶುರು ಮಾಡಿದರು. ಕೊರೊನಾ ಕಾಲಘಟ್ಟದ ಅವಧಿಯಲ್ಲಿ ಆನ್‌ಲೈನ್ ಮೂಲಕ ತರಬೇತಿ ಕೊಟ್ಟ ಯುವಜನ ಪೌಂಡೇಶನ್ ಅದಾದ ಮೇಲೆ ಆಫ್‌ಲೈನ್ ಮೂಲಕವೂ ತರಬೇತಿ ನೀಡುವ ಕಾಯಕ ಮುಂದುವರೆಸಿತು. ಪರಿಣಾಮ ಗ್ರಾಮೀಣ ಭಾಗದ ಪ್ರತಿಭಾನ್ವಿತರು ಪ್ರತಿಷ್ಠಿತ ಕಂಪನಿ ಸೇರಿ ಕನಸಿನ ಉದ್ಯೋಗ ಆರಿಸಿಕೊಂಡರು. `ಗ್ರಾಮೀಣ ಭಾಗದ ಪದವಿದರರಿಗೆ ಉದ್ಯೋಗಕ್ಕಾಗಿ ಎಲ್ಲಿ ಹೋಗಬೇಕು? ಯಾರನ್ನು ಸಂಪರ್ಕಿಸಬೇಕು. ಬೆಂಗಳೂರಿಗೆ ಹೋದರೂ ಅಲ್ಲಿ ಯಾವ ಕಂಪನಿಯನ್ನು ಸಂದರ್ಶಿಸಬೇಕು? ಎಂಬ ಮಾಹಿತಿ ಇರಲಿಲ್ಲ. ಅಂಥವರಿಗೆ ಯೋಗ್ಯ ಮಾರ್ಗದರ್ಶನ ನೀಡುವುದರ ಜೊತೆ ಉದ್ಯೋಗ ನೇಮಕಾತಿಯ ಸಂಪೂರ್ಣ ಮಾಹಿತಿ ನೀಡುವುದಕ್ಕಾಗಿ ಯುವಜನ ಪೌಂಡೇಶನ್ ಶ್ರಮಿಸುತ್ತಿದೆ’ ಎಂದು ಕಾರ್ತಿಕ ಹೆಗಡೆ ವಿವರಿಸಿದರು. ಸದ್ಯ ಶಿರಸಿ, ಚಿತ್ರದುರ್ಗ, ಮುಂಡಗೋಡ ಮೂರು ಕಡೆ ಈ ಸಂಸ್ಥೆಯ ತರಬೇತಿ ನಡೆಯುತ್ತಿದೆ. ಉಡುಪಿಯಲ್ಲಿ ಸಹ ತರಬೇತಿ ಕೇಂದ್ರ ತೆರೆಯುವ ಸಿದ್ಧತೆ ನಡೆದಿದೆ. ಅಂಡಮಾನ್ ನಿಕೋಬಾರ್ ಹಾಗೂ ತಮಿಳುನಾಡಿನವರಿಗೆ ಆನ್‌ಲೈನ್ ಮೂಲಕ ತರಬೇತಿ ನೀಡಿ ಉದ್ಯೋಗವಕಾಶದ ಮಾಹಿತಿ ನೀಡಲಾಗಿದೆ. ಈಗಲೂ ಆನ್‌ಲೈನ್ ಮೂಲಕ ತರಬೇತಿಗೆ ಹಾಜರಾಗುವವರಿಗೆ ಅವಕಾಶ ನೀಡಲಾಗುತ್ತದೆ. ಯುವಜಯ ಪೌಂಡೇಶನ್’ನ ತರಬೇತಿಪಡೆದ ಅಭ್ಯರ್ಥಿಗಳು ಹೇಳುವುದೇನು? ವಿಡಿಯೋ ನೋಡಿ.. ಇನ್ನಷ್ಟು ಮಾಹಿತಿ ಮುಂದೆ ಓದಿ.. ಸದ್ಯ 5 ಸಾವಿರ ರೂಪಾಯಿಗೆ ಎರಡು ತಿಂಗಳ ಕಾಲ ಯುವಜಯ ಪೌಂಡೇಶನ್ ಉದ್ಯೋಗ ನೇಮಕಾತಿ ತರಬೇತಿ ನೀಡುತ್ತದೆ. ಯುವಜಯ ಪೌಂಡೇಶನ್’ನ ತರಬೇತಿಯ ಅವಧಿ ಬೆಳಗ್ಗೆ 10ರಿಂದ 12.30. ಮಧ್ಯಾಹ್ನ ಮಧ್ಯಾಹ್ನ 2ರಿಂದ 4.30. ಬೇರೆ ಬೇರೆ ಊರುಗಳಿಂದ ಆಗಮಿಸುವ ಪುರುಷ ಹಾಗೂ ಮಹಿಳಾ ಅಭ್ಯರ್ಥಿಗಳಿಗೆ ಪ್ರತ್ಯೇಕ ಪಿಜಿ ವ್ಯವಸ್ಥೆಯನ್ನು ಕಲ್ಪಿಸಲಾಗುತ್ತದೆ. ಪ್ರತಿಷ್ಠಿತ ಕಂಪನಿಗಳಲ್ಲಿ ಉದ್ಯೋಗಪಡೆಯಲು ಅಗತ್ಯವಿರುವ ಕೌಶಲ್ಯದ ಬಗ್ಗೆ ಇಲ್ಲಿ ಕಲಿಸಲಾಗುತ್ತದೆ. ಎರಡು ತಿಂಗಳ ತರಬೇತಿ ಮುಗಿಸಿದ ಅಭ್ಯರ್ಥಿಗಳನ್ನು ಬೆಂಗಳೂರಿಗೆ ಕರೆದೊಯ್ದು, ಅಲ್ಲಿ 10ಕ್ಕೂ ಅಧಿಕ ಕಂಪನಿಯ ಸಂದರ್ಶನ ಎದುರಿಸಲು ಯುವಜಯ ಪೌಂಡೇಶನ್ ಪ್ರೇರೇಪಿಸುತ್ತದೆ. ಅಭ್ಯರ್ಥಿಗೆ ಸೂಕ್ತವೆನಿಸುವ ಉದ್ಯೋಗ ಸಿಗುವವರೆಗೂ ಯುವಜಯ ಪೌಂಡೇಶನ್ ಬೆನ್ನೆಲುಬಾಗಿರುತ್ತದೆ. ಸದ್ಯ ಯುವಜಯ ಪೌಂಡೇಶನ್’ನ ತರಬೇತಿಪಡೆದವರು 52ಕ್ಕೂ ಅಧಿಕ ಕಂಪನಿಗಳಲ್ಲಿ ಉದ್ಯೋಗದಲ್ಲಿದ್ದಾರೆ. ಮೊದಲ ಬ್ಯಾಚಿನಲ್ಲಿ ತರಬೇತಿಪಡೆದವರು ಉನ್ನತ ಹುದ್ದೆಯಲ್ಲಿದ್ದಾರೆ. ಸಾಧನೆ ಮಾಡಬೇಕು. ಯೋಗ್ಯ ಉದ್ಯೋಗಪಡೆಯಬೇಕು ಎಂದರೆ ಮೊದಲ ಎರಡು ವರ್ಷ ಕಷ್ಟಪಡಲು ಸಿದ್ಧರರಿರಬೇಕು. ಮೊದಲ ಮೆಟ್ಟಿಲು ಹತ್ತಿದ ನಂತರ ಅವಕಾಶಗಳು ಹುಡುಕಿಬರಲಿದ್ದು, ಆ ನಂತರದ ದುಡಿಮೆ ಸುರಳಿತ’ ಎಂದು ಯುವಜಯ ಪೌಂಡೇಶನ್ ಮೂಲಕ ತರಬೇತಿಪಡೆದು ಉದ್ಯೋಗಪಡೆದ ಗಾಯತ್ರಿ ಅವರು ಅನಿಸಿಕೆ ಹಂಚಿಕೊ0ಡರು. ಸದ್ಯ ಯುವಜಯ ಪೌಂಡೇಶನ್’ನ ತರಬೇತಿಗಾಗಿ ಪ್ರವೇಶ ಶುರುವಾಗಿದೆ. ನಿಮ್ಮಲ್ಲಿರುವ ಕೌಶಲ್ಯ ಹೆಚ್ಚಿಸಿಕೊಂಡು ಕನಸಿನ ಉದ್ಯೋಗಪಡೆಯಲು ಇಲ್ಲಿ ವಾಟ್ಸಪ್ ಮಾಡಿ: 8088549193 #Sponsored     - [ನಿರುದ್ಯೋಗಿಗಳಿಗೆ ಕೌಶಲ್ಯ ತರಬೇತಿ: ಇಲ್ಲಿ ಕಲಿತವರಿಗೆ ಖಚಿತ ಉದ್ಯೋಗ!](https://mobiletime.in/2025/09/skill-training-for-the-unemployed-guaranteed-employment-for-those-who-learn-here/): ಬಗೆ ಬಗೆಯ ಸಾಮಾಜಿಕ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಯಲ್ಲಾಪುರದ ರಂಗ ಸಹ್ಯಾದ್ರಿ ಟ್ರಸ್ಟ್ ನಿರುದ್ಯೋಗಿಗಳಿಗೆ ಕೌಶಲ್ಯ ಅಭಿವೃದ್ಧಿ ತರಬೇತಿಯನ್ನು ನೀಡುತ್ತಿದೆ. ತರಬೇತಿಪಡೆದವರಿಗೆ ಉದ್ಯೋಗ ಒದಗಿಸಿಕೊಡುವ ಜೊತೆ ಸ್ವ ಉದ್ಯೋಗ ಮಾಡುವವರಿಗೂ ಈ ಸಂಸ್ಥೆ ಬೆನ್ನೆಲುಬಾಗಿದೆ. ಯಲ್ಲಾಪುರ ಬಸ್ ನಿಲ್ದಾಣದ ಮೊದಲ ಮಹಡಿಯಲ್ಲಿ ರಂಗ ಸಹ್ಯಾದ್ರಿ ಟ್ರಸ್ಟಿನ ಅಂಗಸ0ಸ್ಥೆ `ಕೆನರಾ ರಿಫ್ರಿಜರೇಷನ್ ಎಸಿ ಟೆಕ್ನಿಶಿಯನ್ ಮತ್ತು ಎಲೆಕ್ಟ್ರಿಕಲ್ ತರಬೇತಿ ಸಂಸ್ಥೆ’ ಕಾರ್ಯನಿರ್ವಹಿಸುತ್ತಿದೆ. ಓದು-ಬರಹ ಬರದವರಿಗೆ ಸಹ ಇಲ್ಲಿ ಕೌಶಲ್ಯ ತರಬೇತಿ ನೀಡಿ, ಅವರವರ ಕುಟುಂಬ ನಡೆಸಲು ಅಗತ್ಯವಿರುವಷ್ಟು ಆದಾಯ ಕಲ್ಪಿಸುತ್ತದೆ. ಅರ್ದಕ್ಕೆ ಓದು ನಿಲ್ಲಿಸಿದವರಿಗೆ ಸಹ ಇಲ್ಲಿ ಕಲಿಕೆಗೆ ಸಾಕಷ್ಟು ಅವಕಾಶಗಳಿದೆ. ಕೆನರಾ ರಿಫ್ರಿಜರೇಷನ್ ಎಸಿ ಟೆಕ್ನಿಶಿಯನ್ ಮತ್ತು ಎಲೆಕ್ಟ್ರಿಕಲ್ ತರಬೇತಿ ಸಂಸ್ಥೆಯಲ್ಲಿ ಸದ್ಯ 6 ತಿಂಗಳ ತರಬೇತಿಯನ್ನು ಸಂಯೋಜಿಸಲಾಗಿದೆ. ಈ ಆರು ತಿಂಗಳ ತರಬೇತಿಯಲ್ಲಿ ಭಾಗವಹಿಸಿದ ಪ್ರತಿಯೊಬ್ಬರಿಗೂ ಸಂಸ್ಥೆಯೇ ಉದ್ಯೋಗ ಕೊಡಿಸುತ್ತದೆ. ವಿದ್ಯುತ್ ಉಪಕರಣಗಳ ಬಗ್ಗೆ ತರಬೇತಿ ನೀಡುವುದು ಈ ಸಂಸ್ಥೆಯ ಮುಖ್ಯ ಕೆಲಸ. ಅದರಲ್ಲಿಯೂ ಮುಖ್ಯವಾಗಿ ಇಲ್ಲಿ ಪ್ರಾಯೋಗಿಕ ತರಬೇತಿ ನೀಡಲಾಗುತ್ತದೆ. ಬೇರೆ ಬೇರೆ ಊರಿನಿಂದ ಬರುವವರಿಗೆ ಸಂಸ್ಥೆಯೇ ಹಾಸ್ಟೇಲ್ ವ್ಯವಸ್ಥೆಯನ್ನು ಮಾಡುತ್ತಿದೆ. 2016ರಲ್ಲಿ ಶುರುವಾದ ಈ ಸಂಸ್ಥೆ ಈವರೆಗೆ ನೂರಾರು ಜನರಿಗೆ ಉದ್ಯೋಗದ ದಾರಿ ತೋರಿದೆ. ಇಲ್ಲಿ ತರಬೇತಿ ಮುಗಿಸಿದವರಿಗೆ ಕನಿಷ್ಟ 24 ಸಾವಿರ ರೂ ವೇತನದ ಉದ್ಯೋಗವನ್ನು ದೊರಕಿಸಿಕೊಡಲಾಗುತ್ತದೆ. ಇನ್ನೂ ಬೇರೆ ಬೇರೆ ಊರುಗಳಿಗೆ ತೆರಳಿ ಉದ್ಯೋಗ ಮಾಡಲು ಮನಸ್ಸಿಲ್ಲದವರಿಗೆ ಸಂಸ್ಥೆಯ ಮೂಲಕವೇ ಸ್ವ ಉದ್ಯೋಗದ ಮಾರ್ಗದರ್ಶನ ನೀಡಲಾಗುತ್ತದೆ. ಊರಿನಲ್ಲಿಯೇ ಉಳಿದು ಟಿವಿ, ಫ್ಯಾನು, ಪ್ರಿಜ್, ಎಸಿ, ಮಿಕ್ಸರ್-ಗ್ರಾಂಡರ್ ದುರಸ್ತಿ ನಡೆಸುವವರಿಗೆ ಈ ಸಂಸ್ಥೆ ಪ್ರೋತ್ಸಾಹ ನೀಡುತ್ತಿದೆ. ಕೆನರಾ ರಿಫ್ರಿಜರೇಷನ್ ಎಸಿ ಟೆಕ್ನಿಶಿಯನ್ ಮತ್ತು ಎಲೆಕ್ಟ್ರಿಕಲ್ ತರಬೇತಿ ಸಂಸ್ಥೆಯಲ್ಲಿ ತರಬೇತಿಪಡೆದ ಅಭ್ಯರ್ಥಿಗಳು ಹೇಳುವುದೇನು? ವಿಡಿಯೋ ನೋಡಿ.. ಇನ್ನಷ್ಟು ವಿಷಯ ಮುಂದೆ ಓದಿ.. ಪ್ರತಿಯೊಬ್ಬರ ಮನೆಯಲ್ಲಿಯೂ ವಿದ್ಯುತ್ ಸಾಮಗ್ರಿಗಳ ಬಳಕೆಯಲ್ಲಿದ್ದು, ಅದರ ದುರಸ್ತಿ ಸೇವೆಯ ಮೂಲಕ ಬದುಕು ಕಟ್ಟಿಕೊಳ್ಳುವವರಿಗಾಗಿ ಕೆನರಾ ರಿಫ್ರಿಜರೇಷನ್ ಎಸಿ ಟೆಕ್ನಿಶಿಯನ್ ಮತ್ತು ಎಲೆಕ್ಟ್ರಿಕಲ್ ತರಬೇತಿ ಸಂಸ್ಥೆ ಶ್ರಮಿಸುತ್ತಿದೆ. ವಿದ್ಯುತ್ ಉಪಕರಣಗಳ ಸುರಕ್ಷಿತ ಬಳಕೆ ವಿಧಾನಗಳೊಂದಿಗೆ ಅವುಗಳ ದುರಸ್ತಿ ಮಾಡುವ ಬಗ್ಗೆ ಕೆನರಾ ರಿಫ್ರಿಜರೇಷನ್ ಎಸಿ ಟೆಕ್ನಿಶಿಯನ್ ಮತ್ತು ಎಲೆಕ್ಟ್ರಿಕಲ್ ತರಬೇತಿ ಸಂಸ್ಥೆ ಮಾಹಿತಿ ನೀಡಿದೆ. ಉದ್ಯೋಗವಿಲ್ಲದೇ ಸಮಸ್ಯೆಯಲ್ಲಿದ್ದ ನನಗೆ ಈ ತರಬೇತಿ ಪಡೆದಿದ್ದರಿಂದ ಯೋಗ್ಯ ಬದುಕು ನನ್ನದಾಗಿದೆ’ ಎಂದು ಕಿರವತ್ತಿಯ ಶಬ್ಬಿರ್ ವಂತಿ ಅನಿಸಿಕೆ ಹಂಚಿಕೊoಡಿದ್ದಾರೆ. ಸದ್ಯ ಕೆನರಾ ರಿಫ್ರಿಜರೇಷನ್ ಎಸಿ ಟೆಕ್ನಿಶಿಯನ್ ಮತ್ತು ಎಲೆಕ್ಟ್ರಿಕಲ್ ತರಬೇತಿ ಸಂಸ್ಥೆಯಲ್ಲಿ ತರಬೇತಿ ಪಡೆಯುವವರಿಗಾಗಿ ಪ್ರವೇಶಾತಿ ಶುರುವಾಗಿದೆ. ಪ್ರತಿ ದಿನ ಬೆಳಗ್ಗೆ 9.30ರಿಂದ ಮಧ್ಯಾಹ್ನ 2.30ರವರೆಗೆ ತರಬೇತಿ ನೀಡಲಾಗುತ್ತದೆ. ಪ್ರವೇಶಾತಿಗೆ ಜೂನ್ 5 ಕೊನೆಯ ದಿನವಾಗಿದ್ದು, ನಿಮ್ಮ ಪ್ರವೇಶ ಕಾಯ್ದಿರಿಸಲು ಇಲ್ಲಿ ಫೋನ್ ಮಾಡಿ: 7795762900 ಅಥವಾ 8088822907 #Sponsored - [ಸಮಗ್ರ ಶಿಕ್ಷಣ-ಸಂಸ್ಕಾರಯುತ ಶಿಕ್ಷಣ: ಇದುವೇ ಆದಿ ಚುಂಚನಗಿರಿ ಮಠದ ಧ್ಯೇಯ!](https://mobiletime.in/2025/09/comprehensive-education-cultured-education-this-is-the-mission-of-adi-chunchanagiri-math/): ವಿಶ್ವದ ಎಲ್ಲಡೆ ಆಧ್ಯಾತ್ಮ ಚಿಂತನೆ ಪ್ರಸರಿಸುತ್ತಿರುವ ಆದಿ ಚುಂಚನಗಿರಿ ಮಠ ಶೈಕ್ಷಣಿಕ ಕ್ರಾಂತಿಯ ಮೂಲಕ ಜನ-ಜೀವನ ಅಭಿವೃದ್ಧಿಗೆ ಶ್ರಮಿಸುತ್ತಿದೆ. ಉತ್ತರ ಕನ್ನಡ ಜಿಲ್ಲೆಯ ಕುಮಟಾದ ಮಿರ್ಜಾನಿನಲ್ಲಿಯೂ ಆದಿ ಚುಂಚನಗಿರಿ ಆಡಳಿತಕ್ಕೆ ಒಳಪಟ್ಟ ವಿದ್ಯಾಲಯವಿದೆ. ಇಲ್ಲಿ ಒಂದೇ ಸೂರಿನ ಅಡಿ ಸಮಗ್ರ ಶಿಕ್ಷಣ ನೀಡುತ್ತಿದೆ. ನರ್ಸರಿಯಿಂದ ಪಿಯುಸಿವರೆಗಿನ ಶಿಕ್ಷಣಕ್ಕೆ ಈ ಸಂಸ್ಥೆ ಪ್ರಸಿದ್ಧಿಪಡೆದಿದೆ. ಸಂಸ್ಕಾರಯುತ ಶಿಕ್ಷಣ ನೀಡುವಲ್ಲಿ ಈ ಸಂಸ್ಥೆ ಮುಂಚೂಣಿಯಲ್ಲಿದ್ದು, ಮಕ್ಕಳ ಶ್ರೇಯೋಭಿವೃದ್ಧಿಗಾಗಿ ಆಡಳಿತ ಮಂಡಳಿ ನಿರಂತರವಾಗಿ ದುಡಿಯುತ್ತಿದೆ. ಪ್ರತಿಯೊಬ್ಬರ ಮಾತು ಆಲಿಸುವ ಆಡಳಿತ ವರ್ಗ, ಮೃದು ಮನಸ್ಸಿನ ಸಿಬ್ಬಂದಿ, ನುರಿತ ಶಿಕ್ಷಕರು ಇಲ್ಲಿನ ವಿಶೇಷ. ಸಂಪನ್ಮೂಲ ವ್ಯಕ್ತಿಗಳ ಸಂವಹನಕ್ಕೆ ಈ ಸಂಸ್ಥೆ ಅವಕಾಶ ಕಲ್ಪಿಸಿದ್ದು, ಮಕ್ಕಳ ಆಸಕ್ತಿಗೆ ಅನುಗುಣವಾಗಿ ಅವರನ್ನು ಪ್ರೋತ್ಸಾಹಿಸಲಾಗುತ್ತದೆ. ಇಲ್ಲಿನ ಕಾಲೇಜು ಸ್ಟೇಟ್ ಬೋರ್ಡ ಪಠ್ಯಕ್ರಮ ಅನುಸರಿಸುತ್ತದೆ. ಶಾಲೆಯೂ ಸಿಬಿಎಸ್‌ಸಿ ಆಧಾರಿತ ಶಿಕ್ಷಣ ಪದ್ಧತಿಯನ್ನು ಅಳವಡಿಸಿಕೊಂಡಿದೆ. ಆದಿ ಚುಂಚನಗಿರಿ ಮಠದ ಈ ವಿದ್ಯಾ ಸಂಸ್ಥೆ ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುತ್ತಿದೆ. ಬಾಲ್ಯದಲ್ಲಿಯೇ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಮನೋಭಾವನೆ ಬೆಳೆಸುವ ಪ್ರಯತ್ನವನ್ನು ಈ ಶಿಕ್ಷಣ ಸಂಸ್ಥೆ ಮಾಡುತ್ತದೆ. ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ನೀಡಲಾಗುತ್ತದೆ. ವಿದ್ಯಾರ್ಥಿಗಳಿಗೆ ವಸತಿ ಸೌಲಭ್ಯ, ಆರೋಗ್ಯಕರ ಜೀವನಕ್ಕೆ ಅನುಕೂಲಕರ ವ್ಯವಸ್ಥೆಗಳು ಇಲ್ಲಿವೆ. ಆದಿ ಚುಂಚನಗಿರಿ ಶಿಕ್ಷಣ ಸಂಸ್ಥೆಯ ವಿಶೇಷ ಏನು? ವಿಡಿಯೋ ಇಲ್ಲಿ ನೋಡಿ.. https://www.youtube.com/watch?si=SmtPsD6bkVYN7-MZ&v=g–J0spif0o&feature=youtu.be ಗುಣಮಟ್ಟದ ಶಿಕ್ಷಣಕ್ಕೆ ಇಲ್ಲಿ ಒತ್ತು ನೀಡಲಾಗುತ್ತದೆ. ಇಲ್ಲಿ ಕಲಿತ ವಿದ್ಯಾರ್ಥಿಗಳು ಉತ್ತಮ ಪ್ರಜೆಗಳಾಗಿ ರೂಪುಗೊಂಡಿದ್ದು, ದೇಶ-ವಿದೇಶಗಳಲ್ಲಿ ಉನ್ನತ ಹುದ್ದೆಯಲ್ಲಿದ್ದಾರೆ. ಸದ್ಯ ಕುಮಟಾದ ಮಿರ್ಜಾನಿನಲ್ಲಿರುವ ಶಿಕ್ಷಣ ಸಂಸ್ಥೆಯಲ್ಲಿ ಪ್ರವೇಶಾತಿ ಪ್ರಕ್ರಿಯೆ ಶುರುವಾಗಿದೆ. ನಿಮ್ಮ ಮಕ್ಕಳಿಗೆ ಅತ್ಯುತ್ತಮ ಶಿಕ್ಷಣ ಕೊಡಿಸಲು ಇಲ್ಲಿ ಫೋನ್ ಮಾಡಿ: 990033912 / 8618651938 ಅಥವಾ 8310016454 / 7892602617 / 9901168720 #sponsored - [ಗ್ರಾಮೀಣ ಮಕ್ಕಳಿಗೂ ಗುಣಮಟ್ಟದ ಶಿಕ್ಷಣ: ಎಜುಕೇರ್ ಆಂಗ್ಲ ಮಾಧ್ಯಮ ಶಾಲೆ ಎಲ್ಲಕ್ಕಿಂತ ವಿಭಿನ್ನ!](https://mobiletime.in/2025/09/quality-education-for-rural-children-too-educare-english-medium-school-is-different-from-all-others/): ಗ್ರಾಮೀಣ ಭಾಗದ ಮಕ್ಕಳಿಗೂ ಗುಣಮಟ್ಟದ ಶಿಕ್ಷಣ ಸಿಗಬೇಕು ಎಂಬ ನಿಟ್ಟಿನಲ್ಲಿ ದಾವಣಗೆರೆಯ ಲಕ್ಷ್ಮೀರಂಗನಾಥ ಎಜ್ಯುಕೇಶನ್ ಟ್ರಸ್ಟಿನವರು ಕಾರವಾರದಲ್ಲಿ `ಎಜುಕೇರ್ ಆಂಗ್ಲ ಮಾಧ್ಯಮ ಶಾಲೆ’ ಸ್ಥಾಪಿಸಿದರು. 2006ರಲ್ಲಿ ಆರು ಮಕ್ಕಳಿಂದ ಶುರುವಾದ ಶಾಲೆಯಲ್ಲಿ ಇದೀಗ 250 ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ನಗರ ಪ್ರದೇಶದ ಮಕ್ಕಳು ಮಾತ್ರ ಇಂಗ್ಲಿಷ್ ಶಾಲೆಗೆ ಹೋಗುವುದನ್ನು ಕಂಡ ಲಕ್ಷ್ಮೀರಂಗನಾಥ ಎಜ್ಯುಕೇಶನ್ ಟ್ರಸ್ಟಿನ ಸಂಸ್ಥಾಪಕ ಅಧ್ಯಕ್ಷ ಬಿ ಶರಣಪ್ಪ ಅವರು `ಗ್ರಾಮೀಣ ಭಾಗದ ಮಕ್ಕಳನ್ನು ಮುಖ್ಯವಾಹಿನಿಗೆ ತರಬೇಕು’ ಎಂದು ಕನಸು ಕಂಡರು. ಈ ಕನಸು ಈಡೇರಿಕೆಗಾಗಿ ಅವರು ಗ್ರಾಮೀಣ ಮಕ್ಕಳ ಸರ್ವತೋಮುಖ ಅಭಿವೃದ್ಧಿಯ ಹೊಣೆಯನ್ನು ಅವರು `ಎಜುಕೇರ್ ಆಂಗ್ಲ ಮಾಧ್ಯಮ ಶಾಲೆ’ಯ ಪ್ರಾಚಾರ್ಯೆ ನಾಗರತ್ನ ಅವರಿಗೆವಹಿಸಿದರು. 2006ರಿಂದಲೂ ತಮ್ಮಲ್ಲಿ ಬಂದ ಮಕ್ಕಳಿಗೆ ಸಂಸ್ಕಾರಯುತ ಶಿಕ್ಷಣ ನೀಡಲು `ಎಜುಕೇರ್ ಆಂಗ್ಲ ಮಾಧ್ಯಮ ಶಾಲೆ’ಯ ಪ್ರಾಚಾರ್ಯೆ ನಾಗರತ್ನ ಅವರು ಶ್ರಮಿಸುತ್ತಿದ್ದಾರೆ. ಸಂಪನ್ಮೂಲ ವ್ಯಕ್ತಿಗಳ ಸಹಕಾರ, ಶಿಕ್ಷಕರ ನಿರಂತರ ಪ್ರಯತ್ನ, ಗುಣಾತ್ಮಕ ಶಿಕ್ಷಣದ ಪ್ರಭಾವದಿಂದ ಶಾಲೆ ಸ್ಥಾಪನೆಯಾದ ವರ್ಷದಿಂದ ಈವರೆಗೂ `ಎಜುಕೇರ್ ಆಂಗ್ಲ ಮಾಧ್ಯಮ ಶಾಲೆ ಶೇ 100ರ ಫಲಿತಾಂಶ ದಾಖಲಿಸುತ್ತಿದೆ. ಎಲ್ಲಾ ಕಡೆ ಎಸ್‌ಎಸ್‌ಎಲ್‌ಸಿ ನಂತರ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ನೀಡಲಾಗುತ್ತದೆ. ಆದರೆ, ಎಜುಕೇರ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ 6ನೇ ತರಗತಿ ಪ್ರವೇಶಪಡೆದವರಿಗೆ JEE, NEET ಪರೀಕ್ಷೆ ಎದುರಿಸುವ ವಿಧಾನಗಳ ಬಗ್ಗೆ ಕಲಿಸಲಾಗುತ್ತದೆ. ಮಕ್ಕಳಲ್ಲಿ ಆತ್ಮಸ್ಥೈರ್ಯ ಹೆಚ್ಚಿಸಿ, ಅವರನ್ನು ಉತ್ತಮ ಪ್ರಜೆಗಳನ್ನಾಗಿಸಲು ಈ ಶಾಲೆ ನಿತ್ಯವೂ ಶ್ರಮಿಸುತ್ತಿದೆ. ಅದರ ಪರಿಣಾಮವಾಗಿ ಇಲ್ಲಿSSLC ಪರೀಕ್ಷೆ ಎದುರಿಸಿದ ಅನೇಕ ಮಕ್ಕಳು ಪ್ರತಿಷ್ಠಿತ ವಿದ್ಯಾಸಂಸ್ಥೆಗಳಲ್ಲಿ ಮುಂದಿನ ಶಿಕ್ಷಣಕ್ಕಾಗಿ ಆಯ್ಕೆಯಾಗಿದ್ದಾರೆ. ರಾಜ್ಯ-ರಾಷ್ಟ್ರಮಟ್ಟದ ಸ್ಪರ್ಧೆಗಳಲ್ಲಿಯೂ ಇಲ್ಲಿನ ಮಕ್ಕಳು ಸಾಧನೆ ಮಾಡಿದ್ದಾರೆ. ಪಠ್ಯದ ಜೊತೆ ಕರಾಟೆ, ಅಭ್ಯಾಕಾಸ್, ನೃತ್ಯ, ಗಾಯನ ಸೇರಿ ಅನೇಕ ತರಬೇತಿಗಳನ್ನು ಇಲ್ಲಿನ ಮಕ್ಕಳಿಗೆ ನೀಡಲಾಗುತ್ತದೆ. ಅವರವರ ಆಸಕ್ತಿ ಗುರುತಿಸಿ ಅದಕ್ಕೆ ಪ್ರೋತ್ಸಾಹಿಸುವ ನುರಿತ ಶಿಕ್ಷಕರು ಈ ಶಾಲೆಯಲ್ಲಿದ್ದಾರೆ. ಎಜುಕೇರ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಪ್ರತಿ ಮಗುವಿಗೂ ಕಂಪ್ಯುಟರ್ ಶಿಕ್ಷಣ ಕೊಡಲಾಗುತ್ತದೆ. ಈ ಶಾಲೆಯಲ್ಲಿ ಪ್ರತಿ ಮಗುವಿಗೂ ಕಂಪ್ಯುಟರ್ ಕಲಿಸಲಾಗುತ್ತದೆ. ಉತ್ತರ ಕನ್ನಡ ಜಿಲ್ಲೆಯಲ್ಲಿಯೇ ಮೊದಲ ಸ್ಮಾರ್ಟ ಕ್ಲಾಸ್ ಅಳವಡಿಸಿಕೊಂಡ ಶಾಲೆ ಎಂಬ ಹೆಗ್ಗಳಿಗೆಗೂ ಪಾತ್ರವಾಗಿದೆ. ಈ ಶಾಲೆಯ ಸಾಧನೆ ನೋಡಿದ ಗ್ಲೋಬಲ್ ಎಜುಕ್ರಿವ್ ಸಂಸ್ಥೆಯೂ ಚನೈಯನಲ್ಲಿ ನಡೆದ ಕಾರ್ಯಕ್ರಮದಲ್ಲಿ `ಎಕ್ಸಲೆಂಟ್ ಸ್ಕೂಲ್’ ಎಂಬ ಅವಾರ್ಡ ನೀಡಿದೆ. ಮಕ್ಕಳ ಸುರಕ್ಷತೆಗೆ ಹೆಚ್ಚಿನ ಆದ್ಯತೆ: `ಎಜುಕೇರ್ ಆಂಗ್ಲ ಮಾಧ್ಯಮ ಶಾಲೆ’ಯ ಬಸ್ಸು ಪ್ರತಿ ದಿನ ಬೆಳಗ್ಗೆ ವಿವಿಧ ಹಳ್ಳಿಗಳಿಗೆ ಸಂಚರಿಸುತ್ತದೆ. ಸುರಕ್ಷಿತವಾಗಿ ಮಕ್ಕಳನ್ನು ಶಾಲಾ ಆವರಣಕ್ಕೆ ಕರೆತರುತ್ತದೆ. ಶಾಲೆ ಮುಗಿದ ನಂತರ ಮಕ್ಕಳನ್ನು ಮತ್ತೆ ಮನೆಗೆ ಬಿಡುವ ಹೊಣೆಯನ್ನು ಈ ಸಂಸ್ಥೆವಹಿಸಿಕೊ0ಡಿದೆ. ಶಾಲೆಯ ಆವರಣದೊಂದಿಗೆ ಸುತ್ತಲು ಸಿಸಿ ಕ್ಯಾಮರಾ ಅಳವಡಿಸಿ ಸುರಕ್ಷತೆಗೆ ಒತ್ತು ನೀಡಲಾಗಿದೆ. ಎಲ್ಲವೂ ಇಲ್ಲೆ! LKG ಪ್ರವೇಶಪಡೆದ ಮಗು SSLC ಮುಗಿಸುವವರೆಗೂ ಇಲ್ಲಿ ಶಿಕ್ಷಣಕ್ಕೆ ಅವಕಾಶವಿದೆ. ಇಲ್ಲಿ ಬೇರೆ ಬೇರೆ ಭಾಗದಿಂದ ಬರುವ ಸಂಪನ್ಮೂಲ ವ್ಯಕ್ತಿಗಳು ಮಕ್ಕಳಿಗೆ ವಿಶೇಷ ಪಾಠ ಮಾಡುತ್ತಾರೆ. ಪ್ರತಿ ವಿದ್ಯಾರ್ಥಿಗೂ ಇಂಗ್ಲೀಷ್ ವಿಷಯವಾಗಿ ಆನ್‌ಲೈನ್ ತರಗತಿಯನ್ನು ನಡೆಸಲಾಗುತ್ತದೆ. ಕೋವಿಡ್ ಸಮಯದಲ್ಲಿ ಸಹ ನಿತ್ಯವೂ ಆನ್‌ಲೈನ್ ಮೂಲಕ ಮಕ್ಕಳನ್ನು ಮಾತನಾಡಿಸಿ ಅವರ ವಿದ್ಯಾಬ್ಯಾಸ, ಆರೋಗ್ಯದ ಬಗ್ಗೆ ಶಿಕ್ಷಕರು ಕಾಳಜಿವಹಿಸಿದ್ದು, ಇಲ್ಲಿನ ಶಿಕ್ಷಕರು ಮಕ್ಕಳ ಜೊತೆ ಭಾವನಾತ್ಮಕವಾಗಿ ಬೆಸೆದುಕೊಂಡಿದ್ದಾರೆ. ಇಲ್ಲಿ ನಡೆಯುವ ರಜಾ ಅವಧಿಯಲ್ಲಿನ ಶಿಬಿರಗಳ ಕ್ರಿಯಾತ್ಮಕ ಚಟುವಟಿಕೆಗಳು ಬೇರೆ ಎಲ್ಲಿಯೂ ಸಿಗದು! ಆರೋಗ್ಯ ಶಿಕ್ಷಣಕ್ಕಾಗಿ ಬೆಬಿ ಅವಾರ್ಡ! ಎಜುಕೇರ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಈ ವರ್ಷದಿಂದ `ಬೆಬಿ ಅವಾರ್ಡ’ ಎಂಬ ವಿನೂತನ ಯೋಜನೆಯನ್ನು ಜಾರಿಗೆ ತರಲಾಗಿದೆ. ನವಜಾತ ಶಿಶು, ಬಾಣಂತಿ ಹಾಗೂ ಎರಡು ವರ್ಷದೊಳಗಿನ ಮಕ್ಕಳಿಗೆ ಶುಚಿತ್ವ ಹಾಗೂ ಆರೋಗ್ಯದ ಬಗ್ಗೆ ಈ ಯೋಜನೆ ಕಾಳಜಿವಹಿಸುತ್ತದೆ. ಮಕ್ಕಳ ಜೊತೆ ಅವರ ತಾಯಿಗೂ ಆರೋಗ್ಯ ಶಿಕ್ಷಣ ನೀಡಿ, ಮನೆಯ ವಾತಾವರಣವನ್ನು ಶುಚಿತ್ವವಾಗಿರಿಸಿಕೊಳ್ಳುವ ಆಂದೋಲನ ಇದಾಗಿದೆ. ಮಕ್ಕಳ ಶುಚಿತ್ವ ಹಾಗೂ ಆರೋಗ್ಯ ಕಾಪಾಡುವಲ್ಲಿ ಕಾಳಜಿವಹಿಸಿದ 125 ಪಾಲಕರಿಗೆ `ಬೆಬಿ ಅವಾರ್ಡ’ ನೀಡಿ ಗೌರವಿಸಲಾಗುತ್ತದೆ. ಪ್ರವೇಶ ಪ್ರಕಟಣೆ: ಮೌಲ್ಯಾಧಾರಿತ ಶಿಕ್ಷಣದಿಂದ ಪ್ರಸಿದ್ಧಿಪಡೆದ `ಎಜುಕೇರ್ ಆಂಗ್ಲ ಮಾಧ್ಯಮ ಶಾಲೆ’ಯ ಪ್ರವೇಶಾತಿ ಪ್ರಕಟಣೆ ಹೊರಬಿದ್ದಿದೆ. ನಿಮ್ಮ ಮಕ್ಕಳ ಪ್ರವೇಶ ಪ್ರಕಟಣೆಗಾಗಿ ಇಲ್ಲಿ ಭೇಟಿ ನೀಡಿ.. ಎಜುಕೇರ್ ಆಂಗ್ಲ ಮಾಧ್ಯಮ ಶಾಲೆ ಅಮದಳ್ಳಿ, ಕಾರವಾರ ಇಲ್ಲಿ ಫೋನ್ ಮಾಡಿ: 8431251118 ಅಥವಾ 9481914911 Sponsored   - [ಇಂಗ್ಲೀಷ್ ಎಂದರೆ ಭಯ ಬೇಡ.. ಆಂಗ್ಲ ಕಲಿಗೆ ಇದೀಗ ಇನ್ನಷ್ಟು ಸರಳ!](https://mobiletime.in/2025/09/dont-be-afraid-of-english-learning-english-is-now-even-easier/): ಉದ್ಯೋಗಕ್ಕಾಗಿ ಕೌಶಲ್ಯ ಅಭಿವೃದ್ಧಿಪಡಿಸಿಕೊಳ್ಳುವಲ್ಲಿ ಇಂಗ್ಲೀಷ್ ಅನಿವಾರ್ಯ. ಆತ್ಮಸ್ಥೈರ್ಯ ಹೆಚ್ಚಳದ ಜೊತೆ ಸಂವಹನ ಕೌಶಲ್ಯ, ಬರವಣಿಗೆ, ವೇದಿಕೆಯಲ್ಲಿನ ಮಾತುಗಾರಿಕೆಯನ್ನು ಅಳವಡಿಸಿಕೊಳ್ಳಲು `ಪ್ಯಾಟ್ಸ್ ಇಂಗ್ಲಿಷ್ ಕ್ಲಾಸ್’ ಯೋಗ್ಯ ಆಯ್ಕೆ. ಕಾರವಾರದ ಮಾರುತಿ ದೇವಾಲಯದ ಎದುರು ಹೊಸದಾಗಿ ಇಂಗ್ಲಿಷ್ ಕಲಿಕೆಯ ತರಗತಿ ಶುರುವಾಗಿದೆ. ಈಗಾಗಲೇ ದೇಶ-ವಿದೇಶಗಳಲ್ಲಿ ತರಗತಿ ನಡೆಸುತ್ತಿರುವ `ಪ್ಯಾಟ್ಸ್ ಇಂಗ್ಲಿಷ್ ಕ್ಲಾಸ್’ ಕಾರವಾರದಲ್ಲಿಯೂ ಶಾಖೆ ತೆರೆದಿದೆ. ಸ್ಪರ್ಧಾತ್ಮಕ ಯುಗದಲ್ಲಿ ಇಂಗ್ಲಿಷ್ ಕಲಿಕೆ ಅನಿವಾರ್ಯವಾಗಿರುವುದನ್ನು ಮನಗಂಡು ಕಾರವಾರದಲ್ಲಿ ಏಪ್ರಿಲ್ 1ರಿಂದ `ಪ್ಯಾಟ್ಸ್ ಇಂಗ್ಲಿಷ್ ಕ್ಲಾಸ್’ನ ತರಗತಿ ನಡೆಸಲಾಗುತ್ತಿದೆ. ಆನ್‌ಲೈನ್ ಜೊತೆ ಇದೇ ಮೊದಲ ಬಾರಿ ಆಫ್‌ಲೈನ್ ಮೂಲಕವೂ ಇಲ್ಲಿ ಕಲಿಕೆಗೆ ಅವಕಾಶವಿದೆ. ಆಂಗ್ಲ ಭಾಷೆಯಲ್ಲಿ ಪ್ರಭುತ್ವ ಸಾಧಿಸಿರುವ ಪ್ಯಾಟ್ರಿಷಿಯ ಅಗಸ್ಥಿನ್ ಅವರು `ಪ್ಯಾಟ್ಸ್ ಇಂಗ್ಲಿಷ್ ಕ್ಲಾಸ್’ನ ರೂವಾರಿ. ಹುಬ್ಬಳ್ಳಿಯ ಸಿಬಿಎಸ್‌ಸಿ ಶಾಲೆ, ಕಾರವಾರದ ಕೇಂದ್ರೀಯ ವಿದ್ಯಾಲಯ ಹಾಗೂ ನೇವಿಯ ಕೇಂದ್ರಿಯ ವಿದ್ಯಾಲಯದಲ್ಲಿಯೂ ಪ್ಯಾಟ್ರಿಷಿಯ ಅಗಸ್ಥಿನ್ ಅವರು ಶಿಕ್ಷಕಿಯಾಗಿ ಸೇವೆ ಸಲ್ಲಿಸಿದ್ದಾರೆ. 10 ವರ್ಷದ ಅನುಭವದ ನಂತರ 2024ರ ಏಪ್ರಿಲ್’ನಲ್ಲಿ ಆನ್‌ಲೈನ್ ಇಂಗ್ಲಿಷ್ ತರಬೇತಿ ಶುರು ಮಾಡಿದ ಅವರು ಈವರೆಗೆ 400ಕ್ಕೂ ಅಧಿಕ ಜನರಿಗೆ ಇಂಗ್ಲಿಷ್ ಹೇಳಿಕೊಟ್ಟಿದ್ದಾರೆ. ದೇಶದ ನಾನಾ ಭಾಗಗಳಲ್ಲಿ `ಪ್ಯಾಟ್ಸ್ ಇಂಗ್ಲಿಷ್ ಕ್ಲಾಸ್’ ತರಗತಿ ನಡೆಸುತ್ತಿದೆ. ಜೊತೆಗೆ ಬಾಂಗ್ಲಾದೇಶ, ಅಮೇರಿಕಾ, ಅರಬ್ ದೇಶಗಳಲ್ಲಿಯೂ `ಪ್ಯಾಟ್ಸ್ ಇಂಗ್ಲಿಷ್ ಕ್ಲಾಸ್’ನ ಶಾಖೆಗಳಿವೆ. ಒಟ್ಟು 17 ಶಾಖೆಗಳಲ್ಲಿ ತರಗತಿ ನಡೆಯುತ್ತಿದೆ. ಪ್ರತಿಯೊಬ್ಬ ಅಭ್ಯರ್ಥಿಯ ಬಗ್ಗೆ ವೈಯಕ್ತಿಕ ಗಮನಹರಿಸಿ ಸಂವಹನ ನಡೆಸುವುದು ಈ ತರಗತಿಯ ವಿಶೇಷ. ಇಂಗ್ಲಿಷ್ ಬರವಣಿಗೆ, ಮಾತುಗಾರಿಕೆ ಜೊತೆ ಅನೇಕ ಕೌಶಲ್ಯಗಳ ಬಗ್ಗೆ ಇಲ್ಲಿ ಮಾಹಿತಿ ನೀಡಲಾಗುತ್ತದೆ. ಇಷ್ಟು ದಿನಗಳ ಕಾಲ ಆನ್‌ಲೈನ್ ಮೂಲಕ ಮಾತ್ರ ತರಗತಿ ನಡೆಸುತ್ತಿದ್ದ `ಪ್ಯಾಟ್ಸ್ ಇಂಗ್ಲಿಷ್ ಕ್ಲಾಸ್’ ಇದೇ ಮೊದಲ ಬಾರಿಗೆ ಆಫ್‌ಲೈನ್ ತರಗತಿಗೆ ಸಿದ್ಧಗೊಂಡಿದೆ. ಖುದ್ದು ತರಗತಿಗೆ ಹಾಜರಾಗಲು ಸಾಧ್ಯವಾಗದವರಿಗೆ ಮೊದಲಿನಂತೆ ಆನ್‌ಲೈನ್ ತರಗತಿಗಳು ಸಹ ನಡೆಯಲಿದೆ. `ಕಲಿಕೆಗೆ ವಯಸ್ಸಿನ ಮಿತಿ ಇಲ್ಲ’ ಎಂಬುದನ್ನು ಒತ್ತಿ ಹೇಳುವ ಪ್ಯಾಟ್ಸ್ ಇಂಗ್ಲಿಷ್ ಕ್ಲಾಸ್’ನ ಶಿಕ್ಷಕರು ಮನೆಯಲ್ಲಿಯೇ ಕುಳಿತು ಮಹಿಳೆಯರು ಸಹ ಆನ್‌ಲೈನ್ ಮೂಲಕ ತರಗತಿಗೆ ಹಾಜರಾಗುವ ಅವಕಾಶ ಕಲ್ಪಿಸಿದ್ದಾರೆ. ಮಕ್ಕಳ ಪರಿಪೂರ್ಣ ವ್ಯಕ್ತಿತ್ವ ವಿಕಸನಕ್ಕೆ ಅನುಕೂಲವಾಗುವಂತೆ ಇಲ್ಲಿ ಭಾಷಾ ಕಲಿಕೆ ಸಾಧ್ಯವಿದೆ. ಪ್ರತಿ ಅಭ್ಯರ್ಥಿಗೂ ABCDಯಿಂದ ಹಿಡಿದು ವೇದಿಕೆಯಲ್ಲಿ ಭಾಷಣ ಮಾಡುವವರೆಗೆ ತರಬೇತಿ ನೀಡಲಾಗುತ್ತದೆ. ಸದ್ಯ ಎರಡು ತಿಂಗಳ ಕಾಲ ಆಫ್‌ಲೈನ್ ತರಗತಿಗೆ ಚಾಲನೆ ದೊರೆಯುತ್ತಿದೆ. ಪ್ರತಿಯೊಬ್ಬರಿಗೂ ಡಿಜಿಟಲ್ ಕೈಪಿಡಿ ನೀಡಿ ಮಾಹಿತಿ ಒದಗಿಸಲಾಗುತ್ತದೆ. ಇಂಗ್ಲಿಷ್ ಕಲಿಕೆಯ ಇನ್ನಷ್ಟು ಮಾಹಿತಿ ಹಾಗೂ ಪ್ರವೇಶಕ್ಕಾಗಿ ಇಲ್ಲಿ ಭೇಟಿ ಕೊಡಿ: ಪ್ಯಾಟ್ಸ್ ಇಂಗ್ಲಿಷ್ ಕ್ಲಾಸ್ ಮಾರುತಿ ದೇವಸ್ಥಾನ ಎದುರು ಕಾರವಾರ ಅಥವಾ ಇಲ್ಲಿ ಫೋನ್ ಮಾಡಿ: 9663628981 Sponsored - [ಬೇಸಿಗೆ ಶಿಬಿರ: ಇಲ್ಲಿ ಬಂದರೆ ಅಜ್ಜಿ ಮನೆಗೆ ಬಂದ ಅನುಭವ!](https://mobiletime.in/2025/09/summer-camp-coming-here-feels-like-coming-home-to-grandma/): ಕಳೆದ 8 ವರ್ಷಗಳಿಂದ ಪ್ರೋಪಾತ್ ಅಕಾಡೆಮಿಯವರು ಯಲ್ಲಾಪುರ ಬಸ್ ನಿಲ್ದಾಣದ ಮೊದಲ ಮಳಿಗೆಯಲ್ಲಿ ಬೇಸಿಗೆ ಶಿಬಿರ ಆಯೋಜಿಸುತ್ತಿದ್ದಾರೆ. 2025ರ ಏಪ್ರಿಲ್ 1ರಿಂದ ಈ ವರ್ಷದ ಶಿಬಿರ ಶುರುವಾಗಲಿದ್ದು, ಈ ಶಿಬಿರ ಮಕ್ಕಳಿಗೆ ಅಜ್ಜಿ ಮನೆಯ ಅನುಭವ ನೀಡುತ್ತದೆ. 4 ವರ್ಷದಿಂದ 16 ವರ್ಷದ ಮಕ್ಕಳಿಗಾಗಿ ಪ್ರೋಪಾತ ಅಕಡೆಮಿಯವರು ಶಿಬಿರ ಆಯೋಜಿಸುತ್ತ ಬಂದಿದ್ದಾರೆ. ಯೋಗ, ನೀತಿ ಕಥೆ, ಶುಚಿತ್ವದ ಅರಿವು, ಇಂಗ್ಲಿಷ್ ಕಲಿಕೆ, ಅಬಾಕಸ್, ನೃತ್ಯ, ಚಿತ್ರಕಲೆ, ಚೆಸ್, ಕೇರಂ, ಹಾಡುಗಾರಿಕೆ, ಶ್ಲೋಕ ಪಠಣ, ರಂಗೋಲಿ ಕಲಿಕೆ ಸೇರಿ ಹಲವು ವಿಷಯಗಳನ್ನು ಮಕ್ಕಳಿಗೆ ಕಲಿಸಲಾಗುತ್ತದೆ. ಶಿಬಿರದ ಪ್ರವೇಶಕ್ಕೆ 1 ಸಾವಿರ ರೂ ಶುಲ್ಕವಿದ್ದು, ರಿಕ್ಷಾ-ಗೂಡ್ಸ-ಟಾಕ್ಸಿ ಚಾಲಕರ ಮಕ್ಕಳಿಗೆ ಶೇ 50ರಷ್ಟು ರಿಯಾಯತಿ ಘೋಷಿಸಲಾಗಿದೆ. ಇದರೊಂದಿಗೆ ಗ್ರಾಮೀಣ ಭಾಗದ ಮಕ್ಕಳು, ಒಂದೇ ಮನೆಯಿಂದ ಬರುವ ಎರಡು ಮಕ್ಕಳಿಗೂ ಪ್ರವೇಶ ಶುಲ್ಕದಲ್ಲಿ ವಿಶೇಷ ವಿನಾಯಿತಿ ನೀಡಲಾಗುತ್ತದೆ. ಪ್ರೋಪಾತ್ ಅಕಾಡೆಮಿಯವರು ಸ್ವರ್ಣ ಟ್ಯೂಶನ್ ಕ್ಲಾಸೆಸ್ ಯಲ್ಲಾಪುರ ಬಸ್ ನಿಲ್ದಾಣದ ಮೊದಲ ಮಹಡಿಯಲ್ಲಿ ವರ್ಷವೀಡಿ ವಿವಿಧ ಚಟುವಟಿಕೆ ಆಯೋಜಿಸುತ್ತಾರೆ. ಇಲ್ಲಿ ನಿರಂತರ ಅಬಾಕಾಸ್ ತರಬೇತಿ ನಡೆಯುತ್ತಿದ್ದು, ಬೇಸಿಗೆ ರಜೆಯ ಅವಧಿಯಲ್ಲಿ ವಿಶೇಷ ಶಿಬಿರ ನಡೆಸಲಾಗುತ್ತದೆ. ಬೆಂಕಿ ಇಲ್ಲದೇ ಅಡುಗೆ ಮಾಡುವುದನ್ನು ಸೇರಿ ತುರ್ತು ಸನ್ನಿವೇಶಗಳನ್ನು ಎದುರಿಸುವಿಕೆಯ ಬಗ್ಗೆ ಮಕ್ಕಳಿಗೆ ಇಲ್ಲಿ ಪ್ರಾಯೋಗಿಕ ಮಾಹಿತಿ ನೀಡಲಾಗುತ್ತದೆ. ಪ್ರತಿ ವರ್ಷ 100ಕ್ಕೂ ಅಧಿಕ ಮಕ್ಕಳು ಶಿಬಿರದಲ್ಲಿ ಭಾಗವಹಿಸುತ್ತಿದ್ದು, ಸಂಪನ್ಮೂಲ ವ್ಯಕ್ತಿಗಳು ಅವರಿಗೆ ವಿಶೇಷ ತರಬೇತಿ ನೀಡುತ್ತಿದ್ದಾರೆ. ಜ್ಯೋತಿ ಸಂತೋಷ ನಾಯ್ಕ ಹಾಗೂ ಸಂತೋಷ ನಾರಾಯಣ ನಾಯ್ಕ ಈ ಶಿಬಿರದ ರೂವಾರಿ. ಸಂಧ್ಯಾ ಭಟ್ಟ ಅವರು ಇಂಗ್ಲಿಷ್ ಕಲಿಕೆಯ ಹೊಣೆ ಹೊತ್ತಿದ್ದಾರೆ. ಸುಮಂಗಲಾ ಕಲ್ಮಠ ಅವರು ಯೋಗ ತರಬೇತಿ ನಡೆಸಿಕೊಡುತ್ತಾರೆ. ಅನಂತ ಗುನಗಾ ಅವರು ಚಿತ್ರಕಲೆಯ ಕುರಿತು ಮಕ್ಕಳಲ್ಲಿ ಆಸಕ್ತಿ ಹುಟ್ಟಿಸುತ್ತಾರೆ. ಹುಬ್ಬಳ್ಳಿಯ ಸಂಜನಾ ಆಚಾರ್ಯ ಹಾಗೂ ಅಮಯ್ ಖಾನಾಪುರಕುರ ಅವರು ನೃತ್ಯವನ್ನು ಕಲಿಸುತ್ತಾರೆ. ಬೆಂಕಿ ಇಲ್ಲದೇ ಅಡುಗೆ ಮಾಡುವ ವಿಧಾನದ ಬಗ್ಗೆ ರೂಪಾ ಪಾಠಣಕರ್ ಪ್ರಾಯೋಗಿಕ ತರಗತಿ ನಡೆಸುತ್ತಾರೆ. ಮಹೆಕ್ ಅವರು ಮೆಹಂದಿ ಹಾಗೂ ರಂಗೋಲಿ ತರಬೇತಿ ನೀಡುತ್ತಾರೆ. ಇನ್ನೂ ಪ್ರತಿ ವಾರ ಸಂಪನ್ಮೂಲ ವ್ಯಕ್ತಿಗಳು ಆಗಮಿಸಿ ವಿವಿಧ ತರಬೇತಿ ನೀಡುತ್ತಾರೆ. ಈ ಮೊದಲು ಡಾ ಸೌಮ್ಯ ಹಾಗೂ ಡಾ ಸುಚೇತಾ ಮದ್ಗುಣಿ ಅವರು ಆಗಮಿಸಿ ಮಕ್ಕಳಿಗೆ ಶುಚಿತ್ವ, ಆರೋಗ್ಯದ ಬಗ್ಗೆ ಅರಿವು ಮೂಡಿಸಿದ್ದರು. ಹಿರಿಯ ಪೊಲೀಸ್ ಅಧಿಕಾರಿಗಳು ಸಹ ಈ ಶಿಬಿರಕ್ಕೆ ಬಂದು ಕಾಯ್ದೆ-ಕಾನೂನುಗಳ ಬಗ್ಗೆ ಪಾಠ ಮಾಡುತ್ತಾರೆ. ಮಕ್ಕಳಿಗೆ ಒಂದು ದಿನದ ಪ್ರವಾಸ ಹಾಗೂ ಪಾಲಕರಿಗೆ ವಿವಿಧ ಆಟದ ಸ್ಪರ್ಧೆಯಿರುವುದು ಈ ಶಿಬಿರದ ಇನ್ನೊಂದು ವಿಶೇಷ. ಪ್ರತಿ ದಿನ ಬೆಳಗ್ಗೆ 10ಗಂಟೆಯಿoದ ಮಧ್ಯಾಹ್ನ 1.30ರವರೆಗೆ ಶಿಬಿರ ನಡೆಯಲಿದೆ. ಗುರುಹಿರಿಯರ ಬಗ್ಗೆ ಮಕ್ಕಳಲ್ಲಿ ಗೌರವ ಮೂಡಿಸುವ ಉದ್ದೇಶದಿಂದ ಮಾತೃ ವಂದನಾ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತದೆ. ಈ ಶಿಬಿರಕ್ಕೆ ನಿಮ್ಮ ಮಕ್ಕಳನ್ನು ಸೇರಿಸಲು ಇಲ್ಲಿ ಫೋನ್ ಮಾಡಿ: 7619517880, 7892236019 ಅಥವಾ 7019900957 Sponsored - [ಉತ್ತಮ ಭವಿಷ್ಯಕ್ಕಾಗಿ ಆರೋಗ್ಯಕರ ಶಿಕ್ಷಣ: ವೈದ್ಯರ ಕನಸು ನನಸು ಮಾಡಿದ ಕೆನರಾ ಎಕ್ಸಲೆನ್ಸ್ ಕಾಲೇಜು!](https://mobiletime.in/2025/09/healthy-education-for-a-better-future-canara-excellence-college-makes-a-doctors-dream-come-true/): ಆರೋಗ್ಯ ಕ್ಷೇತ್ರಕ್ಕೆ ದೊಡ್ಡ ಪ್ರಮಾಣದಲ್ಲಿ ಕೊಡುಗೆ ನೀಡಿರುವ ಡಾ ಜಿ ಜಿ ಹೆಗಡೆ ಅವರು `ಗುಣಮಟ್ಟದ ಶಿಕ್ಷಣದಿಂದ ಮಾತ್ರ ಬದಲಾವಣೆ ಸಾಧ್ಯ’ ಎಂದು ಪ್ರತಿಪಾದಿಸಿದವರು. ಈ ಹಿನ್ನಲೆ ಅವರು ಕುಮಟಾದ ಗೋರೆಯಲ್ಲಿ ಕೆನರಾ ಎಕ್ಸಲೆನ್ಸ್ ಕಾಲೇಜು ಶುರು ಮಾಡಿದರು. ನೂರಾರು ವಿದ್ಯಾರ್ಥಿಗಳ ಭವಿಷ್ಯ ರೂಪಿಸಿದ ಆ ಕಾಲೇಜು ಮೂರು ವರ್ಷದೊಳಗೆ ದೊಡ್ಡ ಹೆಮ್ಮರವಾಗಿ ಬೆಳೆದಿದೆ. ಮೌಲ್ಯಾಧಾರಿತ ಶಿಕ್ಷಣದ ಜೊತೆ ಸಂಸ್ಕಾರವನ್ನು ಕಲಿಸಿಕೊಡುವಲ್ಲಿ ಕೆನರಾ ಎಕ್ಸಲೆನ್ಸ್ ಕಾಲೇಜು ಮೊದಲ ಪಂಕ್ತಿಯಲ್ಲಿದೆ. ಪಠ್ಯದ ಜೊತೆ ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆ ಸೇರಿ ನಾನಾ ವಿಭಾಗಗಳಲ್ಲಿ ಇಲ್ಲಿನ ಮಕ್ಕಳು ಸಾಕಷ್ಟು ಸಾಧನೆ ಮಾಡಿದ್ದಾರೆ. ಪ್ರತಿ ವಿಷಯದಲ್ಲಿಯೂ ಅತ್ಯಂತ ಪ್ರಬುದ್ಧತೆಯನ್ನು ಹೊಂದಿದ ಉಪನ್ಯಾಸಕರು, ಸೌಜನ್ಯದಿಂದ ವರ್ತಿಸುವ ಸಿಬ್ಬಂದಿ ಈ ಕಾಲೇಜಿನ ಯಶಸ್ಸಿಗೆ ಮೂಲ ಕಾರಣ. ಉತ್ತರ ಕನ್ನಡ ಜಿಲ್ಲೆಯೆಂದರೆ ನಿಸರ್ಗ ರಮಣೀಯ ತಾಣ. ಅದರಲ್ಲಿಯೂ ಕರಾವಳಿಯ ಸಮುದ್ರ ಹಾಗೂ ಮಲೆನಾಡಿನ ಬೆಟ್ಟ ಗುಡ್ಡಗಳನ್ನು ಹೊಂದಿದ ಕುಮಟಾ ಪ್ರಕೃತಿ ಆರಾಧಕರ ತವರೂರು. ಅಲ್ಲಿನ ಗೋರೆ ಗುಡ್ಡ ಶ್ರೀ ಗೋಪಾಲಕೃಷ್ಣ ದೇವರ ಆರಾಧ್ಯ ಕ್ಷೇತ್ರ. ಇಂಥ ಪರಿಸರದಲ್ಲಿ ಪಡೆದ ಶಿಕ್ಷಣ ವಿದ್ಯಾರ್ಥಿಗಳ ಪಾಲಿಗೆ ಎಂದಿಗೂ ಮರೆಲಾಗದ ಅನುಭೂತಿ ನೀಡುವುದು ಸಹಜ. ಹೀಗಾಗಿ ರಾಜ್ಯದ ನಾನಾ ಭಾಗಗಳಿಂದ ವಿದ್ಯಾರ್ಥಿಗಳು ಶಿಕ್ಷಣ ಅರೆಸಿ ಇಲ್ಲಿಗೆ ಬರುತ್ತಾರೆ. ಹೀಗೆ ಬರುವ ಪ್ರತಿ ವಿದ್ಯಾರ್ಥಿಯ ಬಗ್ಗೆಯೂ ವೈಯಕ್ತಿಕ ಕಾಳಜಿವಹಿಸಿ ಅವರಿಗೆ ಜ್ಞಾನಧಾರೆಯೆರೆಯುವುದರಲ್ಲಿ ಕೆನರಾ ಎಕ್ಸಲೆನ್ಸ್ ಕಾಲೇಜು ಆಡಳಿತ ಮಂಡಳಿ ಶ್ರಮಿಸುತ್ತಿದೆ. ಕೆನರಾ ಎಕ್ಸಲೆನ್ಸ್ ಪಿಯು ಕಾಲೇಜು ಸ್ಥಾಪನೆಯಾದ 2021ರ ಅಕ್ಟೋಬರ್ 1ರ ದಿನ ಶಿಕ್ಷಣ ಕ್ಷೇತ್ರಕ್ಕೆ ಹೊಸ ಮೈಲುಗಲ್ಲು. ವಿಜ್ಞಾನ ಹಾಗೂ ವಾಣಿಜ್ಯ ವಿಭಾಗದ ಜೊತೆ ಎರಡು ವರ್ಷ NEET, JEE, CET, CA, CS ಫೌಂಡೇಶನ್ ಮುಂತಾದ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕೇಂದ್ರವನ್ನು ಸಹ ಈ ಕಾಲೇಜಿನಲ್ಲಿ ಸ್ಥಾಪಿಸಲಾಗಿದೆ. ವಿಶೇಷ ಪರಿಣತಿಪಡೆದಿರುವ ನುರಿತ ತಜ್ಞರು ಈ ಕಾಲೇಜಿಗೆ ಆಗಮಿಸಿ ವಿವಿಧ ಪರೀಕ್ಷೆಗಳನ್ನು ಎದುರಿಸಲು ವಿದ್ಯಾರ್ಥಿಗಳನ್ನು ಪ್ರೇರೇಪಿಸುತ್ತಾರೆ. ಅಗತ್ಯ ತರಬೇತಿಯನ್ನು ನೀಡಿ ಪ್ರೋತ್ಸಾಹಿಸುತ್ತಾರೆ. ವಿದ್ಯಾರ್ಥಿಗಳ ಸಂಪೂರ್ಣ ವ್ಯಕ್ತಿತ್ವ ವಿಕಸನಕ್ಕೆ ಅಗತ್ಯವಿರುವ ಯೋಗ, ಧ್ಯಾನ, ಪ್ರಾಣಾಯಾಮ, ಭಜನೆ, ಶ್ಲೋಕ, ಭಗವದ್ಗೀತಾ ಪಠಣಗಳಿಗೂ ಈ ಕಾಲೇಜು ಒತ್ತು ನೀಡಿದೆ. ಶ್ರೀ ಜಿ ಎನ್ ಹೆಗಡೆ ಟ್ರಸ್ಟ್ (ರಿ) ಅಡಿ ನಡೆಯುತ್ತಿರುವ ಈ ಕಾಲೇಜಿನಲ್ಲಿ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ವಸತಿ ವ್ಯವಸ್ಥೆಯಿದೆ. ಶುದ್ಧ ಸಾತ್ವಿಕ ಆಹಾರವನ್ನು ಮಕ್ಕಳಿಗೆ ಉಣಬಡಿಸಲಾಗುತ್ತದೆ. ಸ್ವತಃ ವೈದ್ಯರಾಗಿರುವ ಕಾರಣ ಡಾ ಜಿ ಜಿ ಹೆಗಡೆ ಅವರು ಪ್ರತಿ ಮಕ್ಕಳ ಆರೋಗ್ಯದ ಬಗ್ಗೆ ಅಪಾರ ಕಾಳಜಿಹೊಂದಿದ್ದು, ಗುಣಮಟ್ಟದ ಶಿಕ್ಷಣದ ಜೊತೆ ವಿದ್ಯಾರ್ಥಿಗಳ ಆರೋಗ್ಯದ ವಿಷಯದಲ್ಲಿ ಇಲ್ಲಿ ಎಂದಿಗೂ ರಾಜಿ ಮಾಡಿಕೊಳ್ಳುವವರಿಲ್ಲ. `ಜ್ಞಾನವೆಂದರೆ ಶಾಸ್ತ್ರ ಮತ್ತು ಆಚಾರ್ಯೋಪದೇಶದಿಂದ ಉಂಟಾಗುವ ಆತ್ಮ ತತ್ವದ ತಿಳುವಳಿಕೆ. ಅಂಥ ಜ್ಞಾನ, ಶಿಕ್ಷಣ ಹಾಗೂ ಸಂಸ್ಕಾರದ ಜೊತೆ ದೊರೆತಾಗ ವಿದ್ಯಾರ್ಥಿಗಳ ವ್ಯಕ್ತಿತ್ವ ಅತ್ಯುತ್ತಮವಾಗಿ ರೂಪುಗೊಳ್ಳುವುದರಲ್ಲಿ ಯಾವುದೇ ಅನುಮಾನವಿಲ್ಲ. ಈ ನಿಟ್ಟಿನಲ್ಲಿ ಕುಮಟಾದ ಗೋರೆಯ ಕೆನರಾ ಎಕ್ಸಲೆನ್ಸ್ ಕಾಲೇಜು ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗೆ ಬದ್ಧವಾಗಿದೆ’ ಎಂದು ಡಾ ಜಿ ಜಿ ಹೆಗಡೆ ಹೆಮ್ಮೆಯಿಂದ ಮಾತನಾಡಿದರು. `SSLC ಮುಗಿದ ನಂತರ ಯಾವ ಕಾಲೇಜು ಸೂಕ್ತ ಎಂದು ಹುಡುಕಾಟ ನಡೆಸಿದಾಗ ಕೆನರಾ ಎಕ್ಸಲೆನ್ಸ್ ಕಾಲೇಜು ಕಾಣಿಸಿತು. ಅಲ್ಲಿ ಪ್ರವೇಶ ಪಡೆದಿರುವುದರಿಂದ ನನ್ನ ಜೀವನದ ದಿಕ್ಕು ಬದಲಾಯಿತು’ ಎಂದು ಈ ಕಾಲೇಜಿನ ಮಾಜಿ ವಿದ್ಯಾರ್ಥಿನಿ ವೈಶಾಲಿ ಭಟ್ಟ ಅನಿಸಿಕೆ ಹಂಚಿಕೊ0ಡರು. CA ಪೌಂಡೇಶನ್ ಪರೀಕ್ಷೆಯ ಮೊದಲ ಹಂತವನ್ನು ಪ್ರಥಮ ಪ್ರಯತ್ನದಲ್ಲಿಯೇ ಮುಗಿಸಿ ಸಾಧನೆ ಮಾಡಿದ ದಾಖಲೆ ವೈಶಾಲಿ ಭಟ್ಟ ಅವರದ್ದು. JEE ಮೇನ್ಸ್’ನಲ್ಲಿ ರಾಜ್ಯಕ್ಕೆ 9ನೇ ಸ್ಥಾನಪಡೆದಿರುವ ಕುಮಾರ ಭಟ್ಟ ಸಹ ಇದೇ ಕಾಲೇಜಿನ ವಿದ್ಯಾರ್ಥಿ. ಇದರೊಂದಿಗೆ ವಾಣಿಜ್ಯ, CS ಪೌಂಡೇಶನ್, ವೈದ್ಯಕೀಯ ವಿಭಾಗ, ವಿವಿಧ ಎಂಜಿನಿಯರಿ0ಗ್ ಕಾಲೇಜು ಹಾಗೂ ಕೆಸಿಇಟಿಗೆ ಸಹ ಈ ಕಾಲೇಜಿನ ಮೂಲಕ ಅನೇಕರು ಆಯ್ಕೆಯಾಗಿದ್ದಾರೆ. ಅಂದ ಹಾಗೇ, 4ನೇ ವರ್ಷದ ಕಾಲೇಜು ಪ್ರವೇಶ ಶುರುವಾಗಿದೆ. ಉತ್ತಮ ಭವಿಷ್ಯಕ್ಕಾಗಿ ಆರೋಗ್ಯಕರ ಶಿಕ್ಷಣ ಬಯಸುವವರಿಗೆ ಕೆನರಾ ಎಕ್ಸಲೆನ್ಸ್ ಕಾಲೇಜು ಸದಾ ಸ್ವಾಗತಿಸುತ್ತದೆ. ಇಲ್ಲಿ ಭೇಟಿ ಕೊಡಿ: ಕೆನರಾ ಎಕ್ಸಲೆನ್ಸ್ ಕಾಲೇಜು ಗೋರೆ, ಪೋಸ್ಟ: ಧಾರೇಶ್ವರ ಕುಮಟಾ ತಾಲೂಕು, ಉತ್ತರ ಕನ್ನಡ ಜಿಲ್ಲೆ ಇಲ್ಲಿ ಫೋನ್ ಮಾಡಿ: 9663119845 9986580703 9449477473 ಅಥವಾ 948206380 #Sponsored   - [ಕೊಗ್ರೇ ನ್ಯಾಚುರಲ್ಸ್: ಬಾರ್ಡೋಲಿ ಸೀಮೆಯಲ್ಲಿ ಗಾಣದ ಎಣ್ಣೆ ಕಂಪು!](https://mobiletime.in/2025/09/kograi-naturals-bardoli-region-is-producing-gana-oil/): ದೇಶಿಯ ಗೋವುಗಳ ಬಗ್ಗೆ ಅಪಾರ ಪ್ರೀತಿ ಹೊಂದಿದ ಗುರು ನಾಯಕ ಹಾಗೂ ಅಕ್ಷಯಾ ನಾಯಕ ದಂಪತಿ ಗೋ ರಕ್ಷಣೆ ಜೊತೆ ಅವುಗಳನ್ನು ನಿತ್ಯವೂ ಆರಾಧಿಸುತ್ತಿದ್ದಾರೆ. ಯಾರಿಗೂ ಬೇಡವಾದ ಗಂಡು ಕರುಗಳನ್ನು ಸಹ ಅವರು ಅಕ್ಕರೆಯಿಂದ ಸಾಕಿ ಬೆಳಸಿದ್ದಾರೆ. ಅಷ್ಟೇ ಅಲ್ಲ, ದೇಶಿಯ ತಳಿಯ ಎತ್ತುಗಳನ್ನು ಬಳಸಿಕೊಂಡು ಅವರು ಸಾಂಪ್ರದಾಯಿಕ ಶೈಲಿಯ ಎಣ್ಣೆ ಗಾಣವನ್ನು ನಿರ್ಮಿಸಿದ್ದಾರೆ! ಬಾಲ್ಯದಿಂದಲೂ ಗುರು ನಾಯಕ ಅವರಿಗೆ ಗೋವುಗಳ ಮೇಲೆ ಎಲ್ಲಿಲ್ಲದ ಪ್ರೀತಿ. ಅವರನ್ನು ವರಿಸಿದ ಅಕ್ಷಯಾ ನಾಯಕ ಅವರಿಗೂ ಗೋವುಗಳನ್ನು ಕಂಡರೆ ಅಷ್ಟೇ ಅಕ್ಕರೆ. ಉತ್ತಮ ವೇತನದ ಉದ್ಯೋಗವಿದ್ದರೂ ಕೊರೊನಾ ಕಾಲಘಟ್ಟದಲ್ಲಿ ಆ ಉದ್ಯೋಗ ತೊರೆದು ತವರಿಗೆ ಬಂದ ಈ ದಂಪತಿಯನ್ನು ಸೆಳೆದಿದ್ದು ಸಾವಯವ ಕೃಷಿ. ಆರೋಗ್ಯ ಕಾಳಜಿ ಬಗ್ಗೆ ಕೊರೊನಾ ಕಲಿಸಿದ ಪಾಠದ ಪರಿಣಾಮ ಅವರು `ಕೊಗ್ರೇ ನ್ಯಾಚುರಲ್ಸ’ ಎಂಬ ಹೆಸರಿನ ಅಡಿ ಶುದ್ಧ ಎಣ್ಣೆ ಸಂಸ್ಕರಣಾ ಘಟಕ ಸ್ಥಾಪಿಸಿದರು. ನಾಲ್ಕು ಸಾವಿರ ವರ್ಷಗಳ ಹಿಂದಿನ ಶೈಲಿಯಲ್ಲಿ ಸಾಂಪ್ರದಾಯಿಕ ವಿಧಾನ ಅನುಸರಿಸಿ ಅವರು ಎತ್ತಿನಗಾಣದಿಂದ ತೆಗೆಯುವ ಎಣ್ಣೆಗೆ ಇದೀಗ ಎಲ್ಲಡೆ ಬೇಡಿಕೆ! ಬೆಟ್ಟ ಭೂಮಿಯಲ್ಲಿ ಸಮೃದ್ಧ ಕೃಷಿ! ಅಂಕೋಲಾದಿoದ 6ಕಿಮೀ ದೂರದ ಸಿಂಗನಮಕ್ಕಿಯಲ್ಲಿ ಗುರು ನಾಯಕ ಅವರಿಗೆ ಪಿತ್ರಾರ್ಜಿತವಾಗಿ ಎರಡುವರೆ ಎಕರೆ ಬೇಣವಿದೆ. `ಆ ಬೇಣದಲ್ಲಿ ಏನೂ ಮಾಡಲು ಸಾಧ್ಯವಿಲ್ಲ’ ಎಂದವರೇ ಹೆಚ್ಚು. ಆದರೆ, ಮೂರೇ ವರ್ಷದಲ್ಲಿ ಆಡಿಕೊಂಡವರೆಲ್ಲರೂ ಹುಬ್ಬೇರಿಸುವ ರೀತಿಯಲ್ಲಿ ಗುರು ನಾಯಕ ದಂಪತಿ ಮೂರು ವರ್ಷದಲ್ಲಿ ದುಡಿದು ತೋರಿಸಿದ್ದಾರೆ. ಗೇರು ಹಣ್ಣಿನ ಗಿಡಗಳಿಂದ ಕೂಡಿದ್ದ ಆ ಬೆಟ್ಟದಲ್ಲಿ ಬಗೆ ಬಗೆಯ ಹಣ್ಣಿನ ಗಿಡಗಳನ್ನು ಅವರು ಬೆಳೆದಿದ್ದಾರೆ. ಮನೆ ಬಳಕೆಗೆ ಅಗತ್ಯವಿರುವ ತರಕಾರಿಯನ್ನು ಅವರು ಅಲ್ಲಿ ಬೆಳೆಯುತ್ತಾರೆ. ಒಂದಷ್ಟು ಜಾಗವನ್ನು ಕಾಡು ಕೃಷಿಗೆ ಮೀಸಲಿಟ್ಟಿದ್ದಾರೆ. ಇದೆಲ್ಲದರ ನಡುವೆ ತಾವು ಪ್ರೀತಿಯಿಂದ ಸಾಕಿದ ದೇಶಿ ತಳಿಯ ಜಾನುವಾರುಗಳ ಬಳಕೆಗೆ ಹುಲ್ಲುಗಾವಲು ನಿರ್ಮಿಸಿದ್ದಾರೆ. ಉತ್ತಮ ಓದು, ಓದಿಗೆ ತಕ್ಕ ಉದ್ಯೋಗ, ಉದ್ಯೋಗಕ್ಕೆ ಅರ್ಹ ವೇತನ ಸಿಗುತ್ತಿದ್ದರೂ ಗ್ರಾಮೀಣ ಭಾಗದಲ್ಲಿ ಹಾಳು ಬಿದ್ದಿದ್ದ ಬೆಟ್ಟದ ಭೂಮಿಯಲ್ಲಿ ಮಾಡಿದ ಸಾಹಸ ಒಂದೆರಡಲ್ಲ. ಊರಿಗೆ ಮರಳಿದ ನಂತರ ಮೊದಲು ಕೊಟ್ಟಿಗೆ ನಿರ್ಮಿಸಿದ ಅವರು ಮಲೆನಾಡ ಗಿಡ್ಡ ಆಕಳನ್ನು ಸಾಕಿದರು. ಆ ಹಸುವಿಗೆ ಹುಟ್ಟಿದ ಎರಡು ಗಂಡು ಕರುಗಳನ್ನು ಮಕ್ಕಳ ಹಾಗೇ ಜೋಪಾನ ಮಾಡಿದರು. ನಂತರ ಗೀರ್ ಹಾಗೂ ಹಳ್ಳಿಕಾರ್ ಎತ್ತುಗಳನ್ನು ಖರೀದಿಸಿದರು. ಆ ಎತ್ತುಗಳನ್ನು ಬಳಸಿಕೊಂಡು ಎಣ್ಣೆ ಗಾಣದ ಘಟಕವನ್ನು ಶುರು ಮಾಡಿದರು. ಆ ಮೂಲಕ ಅನುಪಯುಕ್ತ ಜಾಗವನ್ನು ಸಹ ಅವರು ಸಮರ್ಥವಾಗಿ ಬಳಸಿಕೊಂಡರು. ಕೊಟ್ಟಿಗೆಯಲ್ಲಿ ಗಂಡು ಕರು ಹುಟ್ಟಿದರೆ ಅದನ್ನು ಖಸಾಯಿಖಾನೆಗೆ ಕಳುಹಿಸುವವರ ನಡುವೆ ಗುರು ನಾಯಕ ದಂಪತಿ ಆ ಗಂಡು ಕರುವನ್ನು ಫೋಷಿಸಿ ಅವುಗಳ ಗಂಜಲ-ಗೊಬ್ಬರದಿoದ ಸಾವಯವ ಕೃಷಿ ಮಾಡುತ್ತಿದ್ದಾರೆ. ಎತ್ತಿನ ಗಾಣದಿಂದ ಸಿದ್ಧಪಡಿಸಿದ ಎಣ್ಣೆ ಏಕೆ ಶ್ರೇಷ್ಠ? ವಿಡಿಯೋ ನೋಡಿ.. ಇನ್ನಷ್ಟು ವಿಷಯ ಮುಂದೆ ಓದಿ.. ಯoತ್ರೋಪಕರಣಗಳ ಭರಾಟೆ, ಎಲ್ಲೆಂದರಲ್ಲಿ ತಲೆಯೆತ್ತಿರುವ ಗಿರಣಿಗಳ ನಡುವೆ ಅಪ್ಪಟ ದೇಶಿಯ ಸಂಸ್ಕೃತಿಯಲ್ಲಿ ಎತ್ತುಗಳನ್ನು ಬಳಸಿ ಗಾಣದಿಂದ ಎಣ್ಣೆ ತೆಗೆಯುವ ಪದ್ಧತಿ ಕರಾವಳಿ ಭಾಗದ ಅಂಕೋಲಾ ಬಿಟ್ಟು ಬೇರೆ ಎಲ್ಲಿಯೂ ಇಲ್ಲ. ಪುರಾತನ ಶೈಲಿಯಲ್ಲಿ ಈಗಲೂ ತೆಂಗು ಹಾಗೂ ಶೆಂಗಾ ಎಣ್ಣೆಯನ್ನು ತಯಾರಿಸುತ್ತಾರೆ. ಎಣ್ಣೆ ತಯಾರಿಸಿದ ನಂತರ ದೊರೆಯುವ ಹಿಂಡಿಯನ್ನು ಜಾನುವಾರುಗಳ ಪೌಷ್ಠಿಕತೆಗೆ ಬಳಸುತ್ತಾರೆ. ಕೋಳಿಗಳಿಗೂ ಅದನ್ನು ಆಹಾರವಾಗಿ ನೀಡುತ್ತಾರೆ. ಇದರೊಂದಿಗೆ ಶೇಂಗಾ ಹಿಂಡಿ 50ರೂ ಹಾಗೂ ಕೊಬರಿ ಹಿಂಡಿಯನ್ನು 20ರೂ ಕೆಜಿ ದರದಲ್ಲಿ ಮಾರಾಟ ಮಾಡುತ್ತಾರೆ. ಉಳಿದವನ್ನು ತೋಟದ ಗೊಬ್ಬರವನ್ನಾಗಿ ಬಳಸುತ್ತಾರೆ. ಗ್ರಾಮಗಳ ಅಭಿವೃದ್ಧಿಗೆ ಒತ್ತು: ಇನ್ನೂ `ಗಿರಣಿ ಮೂಲಕ ಎಣ್ಣೆ ತೆಗೆಯುವುದರಿಂದ ಅಲ್ಲಿನ ಬಿಸಿಗೆ ಪೌಷ್ಠಿಕ ಅಂಶಗಳು ಸುಟ್ಟು ಹೋಗುತ್ತವೆ. ಎತ್ತಿನ ಗಾಣದ ಮೂಲಕ ಎಣ್ಣೆ ತೆಗೆಯುವುದರಿಂದ ಪೌಷ್ಠಿಕ ಅಂಶಗಳು ಎಣ್ಣೆಯಲ್ಲಿಯೇ ಉಳಿಯುತ್ತವೆ’ ಎಂದು ಗುರು ನಾಯಕ ಕಂಡುಕೊoಡಿದ್ದಾರೆ. ಗುರು ನಾಯಕ ಅವರು ರೈತರು ನೀಡಿದ ಕೊಬ್ಬರಿಯನ್ನು ಸಹ ಉತ್ತಮ ಬೆಲೆಗೆ ಖರೀದಿಸುತ್ತಾರೆ. ಯೋಗ್ಯ ಬೆಲೆಗೆ ಎಣ್ಣೆಯನ್ನು ಬ್ರಾಂಡಿoಗ್ ಮಾಡಿ ಮಾರಾಟ ಮಾಡುತ್ತಾರೆ. ಈ ಕೆಲಸಕ್ಕಾಗಿ ಅವರು ಇಬ್ಬರನ್ನು ನೇಮಿಸಿಕೊಂಡಿದ್ದು, ಕೆಲಸಗಾರರ ಕುಟುಂಬ ಸಹ ಈ ಎಣ್ಣೆ ತಯಾರಿಕಾ ಘಟಕದಿಂದ ಬದುಕು ಕಟ್ಟಿಕೊಂಡಿದೆ. ಇನ್ನೂ ಯಾವುದಾದರೂ ಬಿಸ್ಕತ್/ಚಾಕಲೇಟ್ ಕಂಪನಿಯವರು ಕೊಬರಿ ಹಿಂಡಿ ಖರೀದಿಸಲು ಆಸಕ್ತಿವಹಿಸಿದರೆ ಅದನ್ನು ಪೂರೈಸಲು ಗುರು ನಾಯಕ ದಂಪತಿ ಸಿದ್ಧವಾಗಿದ್ದಾರೆ. ಇನ್ನೂ ಅವರು ಬಳಸುತ್ತಿರುವ ಗಾಣ ಸಹ ಬೇರೆ ಕಡೆಯಿಂದ ಖರೀದಿ ಮಾಡಿದಲ್ಲ. ಸ್ವತಃ ಆಲೋಚನೆಯಿಂದ ಗಾಣ ಸಿದ್ದಪಡಿಸಿ ಗುರು ನಾಯಕ ಅವರು ಅದರಲ್ಲಿ ಯಶಸ್ವಿಯಾಗಿದ್ದಾರೆ. ಮೊದಲು ಮರದ ಗಾಣ ತಯಾರಿಸುವ ಯೋಜನೆಯಲ್ಲಿದ್ದ ಗುರು ನಾಯಕ ಅವರಿಗೆ ಕಲ್ಲಿನ ಗಾಣ ಸಿದ್ದಪಡಿಸಲು ನೆರವಾದವರು ಅವರ ಮಾವ ನಾರಾಯಣ ನಾಯಕರು. ಕುದ್ರಿಗೆಯ ಅಕ್ಷಯಾ ರೈಸ್ ಮಿಲ್ ಮಾಲಕರಾಗಿರುವ ಅವರು ಸಾಕಷ್ಟು ಮುತುವರ್ಜಿವಹಿಸಿ ಗಾಣ ತಯಾರಿಕೆಗೆ ನೆರವಾಗಿದ್ದಾರೆ. ಇನ್ನೂ ಈ ಘಟಕಕ್ಕೆ ಭೇಟಿ ನೀಡಿದ್ದ ನ್ಯಾಯವಾದಿ ನಾಗರಾಜ ನಾಯಕ ಅವರು `ಕೋಗ್ರೆ ನ್ಯಾಚುರಲ್ಸ್’ ಎಂಬ ಹೆಸರು ಸೂಚಿಸಿದ್ದು, ಅದೇ ಹೆಸರಿನಲ್ಲಿ ಶುದ್ಧ ಎಣ್ಣೆ ತಯಾರಿಕಾ ಘಟಕ ಮುನ್ನಡೆಯುತ್ತಿದೆ. ಸಾಂಪ್ರದಾಯಿಕ ಶೈಲಿಯ ಗಾಣದಿಂದ ಪಡೆದ ಎಣ್ಣೆ ಖರೀದಿಗೆ… ರೈತರ ಬಳಿಯಿರುವ ಕೊಬ್ಬರಿಯನ್ನು ಯೋಗ್ಯ ಬೆಲೆಯೊಂದಿಗೆ ಮಾರಾಟಕ್ಕೆ… ಹಾಗೂ ಕೊಬ್ಬರಿಯ ಹಿಂಡಿ ಅಗತ್ಯವಿದ್ದವರಿಗೆ ಈ ಲೇಖನ ಸಹಕಾರಿ… `ಕೊಗ್ರೇ ನ್ಯಾಚುರಲ್ಸ’ ಗುರು ನಾಯಕ ಅವರ ಸಂಪರ್ಕ ಸಂಖ್ಯೆ: 9945918672 - [ಬಳಸಿ ಬಿಸಾಡುವ ಬಟ್ಟೆಯಿಂದ ಚಂದದ ಅಲಂಕಾರ: ಸ್ವಾವಲಂಬಿ ಮಹಿಳೆಯರಿಗಾಗಿ ಮಾರ್ಚ 2ಕ್ಕೆ ಉಚಿತ ಕಾರ್ಯಾಗಾರ!](https://mobiletime.in/2025/09/beautiful-decoration-from-disposable-clothes-free-workshop-for-self-sufficient-women-on-march-2/): ಬಿಡುವಿನ ವೇಳೆ ಹವ್ಯಾಸಕ್ಕಾಗಿ ಬಟ್ಟೆಗಳಿಂದ ಹೂ ತಯಾರಿಸುವುದನ್ನು ಶುರು ಮಾಡಿದ ಶಿರಸಿಯ ಪ್ರಜ್ಞಾ ಹೆಗಡೆ ಇದೀಗ ಅದನ್ನು ತಮ್ಮ ಮುಖ್ಯ ವೃತ್ತಿಯನ್ನಾಗಿಸಿಕೊಂಡಿದ್ದಾರೆ. ಕೃತಕ ಹೂ ಮಾಲೆ ತಯಾರಿಕೆಯಿಂದಲೇ ಅವರು 30 ಮಹಿಳೆಯರಿಗೆ ಉದ್ಯೋಗವನ್ನು ನೀಡಿದ್ದಾರೆ. ಮಹಿಳೆಯರನ್ನು ಸ್ವಾವಲಂಬಿಯನ್ನಾಗಿಸುವ ಗುರಿಯೊಂದಿಗೆ ಮಾರ್ಚ 2ರಂದು ಶಿರಸಿಯಲ್ಲಿ ಕಾರ್ಯಾಗಾರವನ್ನು ಸಹ ಅವರು ಆಯೋಜಿಸಿದ್ದಾರೆ. ಮೊದಲು ನೈಸರ್ಗಿಕವಾಗಿ ದೊರೆಯುವ ಹೂವುಗಳಿಂದ ಪ್ರಜ್ಞಾ ಹೆಗಡೆ ಅಂದದ ಮಾಲೆ ತಯಾರಿಸುತ್ತಿದ್ದರು. ನಂತರ ಬಳಸಿ ಬಿಸಾಡುವ ಬಟ್ಟೆಗಳನ್ನು ಬಳಸಿ ಹೂವುಗಳನ್ನು ತಯಾರಿಸಿದ್ದು, ಅದರಿಂದ ಮಾಲೆಯೊಂದನ್ನು ರಚಿಸಿದರು. ಅವರು ಪ್ರಾಯೋಗಿಕವಾಗಿ ಸಿದ್ದಪಡಿಸಿದ ಬಟ್ಟೆಯ ಹೂಮಾಲೆ ವಿಭಿನ್ನವಾಗಿದ್ದು, ಎಲ್ಲರನ್ನು ಆಕರ್ಷಿಸಿತು. ನೈಜ ಹೂವಿನಂತೆಯೇ ಗೋಚರಿಸುವ ಬಟ್ಟೆಯ ಕೃತಕ ಹೂವಿನ ಮಾಲೆ ಬಹುಬೇಗ ಪ್ರಸಿದ್ಧಿ ಪಡೆಯಿತು. ಗ್ರಾಮೀಣ ಪ್ರದೇಶದ ಮಹಿಳೆಯರೊಂದಿಗೆ ನಗರವಾಸಿಗಳ ಮನ ಗೆಲ್ಲುವಲ್ಲಿ ಕೃತಕ ಹೂವಿನ ಮಾಲೆ ಯಶಸ್ವಿಯಾಯಿತು. ಪ್ಲಾಸ್ಟಿಕ್ ಹೂವಿನ ಮಾಲೆಗಳಿಗಿಂತ ಮೃದು, ಅಧಿಕ ಬಾಳಿಕೆ ಹಾಗೂ ಅತ್ಯುನ್ನತ ಗುಣಮಟ್ಟದ ಹೂವುಗಳು ಪ್ರಜ್ಞಾ ಹೆಗಡೆ ಅವರ ಕೈಯಲ್ಲಿ ಅರಳಿದವು. ಬಳಸಿ ಬಿಸಾಡುವ ಬಟ್ಟೆಗಳನ್ನು ಅವರು ಪ್ರಯೋಜನಕ್ಕೆ ತಂದರು. ಕ್ರಮೇಣ ಇನ್ನಷ್ಟು ಮಹಿಳೆಯರನ್ನು ತಮ್ಮೊಂದಿಗೆ ಸೇರಿಸಿಕೊಂಡರು. ಕೃತಕ ಹೂವಿನ ಮಾಲೆಗಳಿಗೆ ಉತ್ತಮ ಬೇಡಿಕೆ ಬಂದ ಕಾರಣ ಕರಕುಶಲ ವಿಧಾನಗಳ ಬಗ್ಗೆ ಇನ್ನಿತರರಿಗೂ ಕಲಿಸಿಕೊಟ್ಟರು. ಆ ಮೂಲಕ ತಾವು ಆರ್ಥಿಕ ಸ್ವಾವಲಂಬಿಯಾಗುವುದರೊಡನೆ ತಮ್ಮನ್ನು ನಂಬಿದವರನ್ನು ಬೆಳೆಸಿದರು. ಸಿದ್ದಾಪುರ ತಾಲೂಕಿನ ನಾಣಿಕಟ್ಟಾ ಪ್ರಜ್ಞಾ ಹೆಗಡೆ ಅವರ ತವರು. ಸದ್ಯ ನೀಲೇಕಣಿಯ ವಡಗೇರಿಯಲ್ಲಿ ಅವರ ವಾಸ. ಪಿಯುಸಿ ಓದಿರುವ ಅವರು ಶಿರಸಿ ಕೆಎಚ್‌ಬಿ ಕಾಲೋನಿಯಲ್ಲಿ ಪುಟ್ಟದೊಂದು ಯುನಿಟ್ ನಿರ್ಮಿಸಿಕೊಂಡಿದ್ದಾರೆ. ಮೊದಲ ಐದು ತಿಂಗಳು ವೈಫಲ್ಯ ಅನುಭವಿಸಿದರೂ ನಿರಂತರ ಪ್ರಯತ್ನದಿಂದ ಬಟ್ಟೆಯ ಹೂ ಮಾಲೆಗಳ ಲೋಕದಲ್ಲಿ ಪ್ರಜ್ಞಾ ಹೆಗಡೆ ಬದುಕು ಕಟ್ಟಿಕೊಂಡಿದ್ದಾರೆ. ಹೀಗಾಗಿ ಕಳೆದ ಆರು ವರ್ಷಗಳಿಂದ ಪ್ರಜ್ಞಾ ಹೆಗಡೆ ಅವರು ಹೂ ಮಾಲೆ ತಯಾರಿಸುತ್ತಿದ್ದಾರೆ. ಅವರು ತಯಾರಿಸಿದ ಬಟ್ಟೆಯ ಕೃತಕ ಹೂ ಮಾಲೆಗಳು ಪ್ರಪಂಚದ ಬೇರೆ ಬೇರೆ ಭಾಗಗಳಿಗೆ ರಪ್ತಾಗುತ್ತದೆ. ಆನ್‌ಲೈನ್ ಮಾರುಕಟ್ಟೆ ವ್ಯವಸ್ಥೆ ಅವರನ್ನು ಮುನ್ನಡೆಸುತ್ತಿದೆ. ಬಿಡುವಿನ ವೇಳೆ ಶ್ರದ್ಧೆ – ಸಹನೆಯಿಂದ ಈ ಕೆಲಸ ಮಾಡಿದರೆ ಪ್ರತಿಯೊಬ್ಬ ಮಹಿಳೆಯರು ಉತ್ತಮ ಆದಾಯದೊಂದಿಗೆ ಬದುಕಬಹುದು ಎಂದು ಪ್ರಜ್ಞಾ ಹೆಗಡೆ ತೋರಿಸಿಕೊಟ್ಟಿದ್ದಾರೆ. ಇನ್ನೂ ಅಚ್ಚರಿಯ ಸಂಗತಿ ಎಂದರೆ, ನೈಸರ್ಗಿಕ ಹೂಮಾಲೆಗಳಿಗಿಂತಲೂ ಬಟ್ಟೆಯಿಂದ ತಯಾರಿಸುವ ಹೂಮಾಲೆಗಳ ದರ ಅಗ್ಗ. ಒಮ್ಮೆ ಖರೀದಿಸಿದವರು 10 ವರ್ಷದವರೆಗೂ ನಿರಂತರವಾಗಿ ಬಳಸಿದರೂ ಅದರ ಅಂದ ಮಾಸಲ್ಲ. ಹೀಗಾಗಿ ಸಭೆ-ಸಮಾರಂಭಗಳ ಅಲಂಕಾರಗಳಿಗೆ ಈ ಬಗೆಯ ಹೂ ಮಾಲೆಗಳು ಹೆಚ್ಚಾಗಿ ಬಳಕೆಯಾಗುತ್ತವೆ. ಮದುವೆ-ಮುಂಜಿ ಸೇರಿ ಬಗೆ ಬಗೆಯ ಶುಭ ಕಾರ್ಯಕ್ರಮಗಳಲಂತೂ ಇದೀಗ ಬಟ್ಟೆಯ ಹೂ ಮಾಲೆಗಳದ್ದೇ ಅಬ್ಬರ ಇನ್ನಷ್ಟು ಹೆಚ್ಚಾಗಿದೆ. ಮಹಿಳೆಯರ ಆರ್ಥಿಕ ಸ್ವಾವಲಂಬನೆಗಾಗಿ ಶ್ರಮಿಸುತ್ತಿರುವ ಪ್ರಜ್ಞಾ ಹೆಗಡೆ ಇನ್ನಷ್ಟು ಮಹಿಳೆಯರನ್ನು ತಮ್ಮೊಂದಿಗೆ ಕರೆದೊಯ್ಯಲು ಸಿದ್ಧರಾಗಿದ್ದಾರೆ. ಇದಕ್ಕಾಗಿ ಮಾರ್ಚ 2ರಂದು ಅವರು ಶಿರಸಿಯಲ್ಲಿ ವಿಶೇಷ ಕಾರ್ಯಾಗಾರವನ್ನು ಆಯೋಜಿಸಿದ್ದಾರೆ. ಶಿಬಿರದಲ್ಲಿ ಭಾಗವಹಿಸಿದವರಿಗೆ ಹೂ ಮಾಲೆ ತಯಾರಿಕೆಯ ವಿಧಾನಗಳ ಬಗ್ಗೆ ಮಾಹಿತಿ ಕೊಡುತ್ತಾರೆ. ಬಿಡುವಿನ ವೇಳೆ ಮಹಿಳೆಯರು ಸಿದ್ಧಪಡಿಸುವ ಬಟ್ಟೆಯ ಹೂ ಮಾಲೆಗಳನ್ನು ಸಹ ಅವರೇ ಖರೀದಿಸುತ್ತಾರೆ. ತರಬೇತಿಗೆ ಬರುವಾಗ ಆಧಾರ್ ಕಾರ್ಡ ಜೊತೆ ಎರಡು ಫೋಟೋ ತರಲು ಮರೆಯದಿರಿ. ಪ್ರಜ್ಞಾ ಹೆಗಡೆ ಅವರೊಂದಿಗೆ ಮಾತನಾಡಲು ಇಲ್ಲಿ ಫೋನ್ ಮಾಡಿ: 8660605953 ಕಾರ್ಯಾಗಾರ ಉಚಿತ. ಮಹಿಳಾ ಸ್ವಾವಲಂಬನೆ ನಿಶ್ಚಿತ! #sponsored - [ಸಹಕಾರಿ ಕ್ಷೇತ್ರಕ್ಕೆ ಮಾದರಿ ಈ ಸೊಸೈಟಿ: ಸೇಫ್ ಸ್ಟಾರ್ ಎಂಬ ಸೇಫ್ ಲಾಕರ್!](https://mobiletime.in/2025/09/this-organization-is-a-model-for-the-cooperative-sector-a-safe-locker-called-safe-star/): ಸ್ನೇಹಮಯ ಆಡಳಿತ ಮಂಡಳಿ, ಸೌಜನ್ಯದಿಂದ ವರ್ತಿಸುವ ಸಿಬ್ಬಂದಿ, ಸದಸ್ಯರ ಸಹಕಾರವೇ ಸೇಫ್ ಸ್ಟಾರ್ ಸ್ಟಾರ್ ಸೌಹಾರ್ದ ಸಹಕಾರಿ ನಿಯಮಿತದ ಯಶಸ್ಸಿಗೆ ಕಾರಣ. `ಒಟ್ಟಿಗೆ ಬೆಳೆಯೋಣ’ ಎಂಬ ತತ್ವದ ಅಡಿ ಕಾರ್ಯ ನಿರ್ವಹಿಸುತ್ತಿರುವ ಈ ಸೊಸೈಟಿ ಜನರ ಅಗತ್ಯಕ್ಕೆ ಅನುಗುಣವಾಗಿ ಆರ್ಥಿಕ ಬೆಂಬಲ ನೀಡುವುದರೊಂದಿಗೆ ವರ್ಷದಿಂದ ವರ್ಷಕ್ಕೆ ಇನ್ನಷ್ಟು ವಿಸ್ತಾರವಾಗಿ ಬೆಳೆಯುತ್ತಿದೆ. ಜನರ ಸಮಸ್ಯೆಗಳನ್ನು ಬಹುಬೇಗ ಅರ್ಥ ಮಾಡಿಕೊಂಡು ತ್ವರಿತ ರೀತಿಯಲ್ಲಿ ಸಾಲ ನೀಡುವ ವಿಷಯದಲ್ಲಿ ಸೇಫ್ ಸ್ಟಾರ್ ಸೌಹಾರ್ದ ಸಹಕಾರಿ ನಿಯಮಿತ ಮುಂಚೂಣಿಯಲ್ಲಿದೆ. ಉಳಿತಾಯದ ಹಣ ಹೂಡಿಕೆ ಮಾಡಿದ ಠೇವಣಿದಾರರಿಗೆ ಸಹ ಆಕರ್ಷಕ ಬಡ್ಡಿ ನೀಡಿ ಹಣಕಾಸಿನ ಭದ್ರತೆಯನ್ನು ಈ ಸೊಸೈಟಿ ನೀಡುತ್ತಿದೆ. ಸೌಜನ್ಯದಿಂದ ವರ್ತಿಸುವ ಸಿಬ್ಬಂದಿ, ಕಷ್ಟದ ವೇಳೆ ಮಾನವೀಯ ನೆಲೆಯಲ್ಲಿ ನೆರವಾಗುವ ಆಡಳಿತ ಮಂಡಳಿಯವರು ಪರಸ್ಪರ ಸಹಕಾರದ ಮನೋಭಾವನೆಯಿಂದ ಸೊಸೈಟಿಯನ್ನು ಮುನ್ನಡೆಸುತ್ತಿದ್ದಾರೆ. ಸದಸ್ಯರು ಸಹ ಆರ್ಥಿಕ ಶಿಸ್ತು ಕಾಪಾಡಿಕೊಂಡು `ನಮ್ಮ ಸೊಸೈಟಿ ನಮ್ಮ ಹೆಮ್ಮೆ’ ಎಂದು ಮಾತನಾಡುತ್ತಾರೆ. ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದಲ್ಲಿ 2011ರ ಅವಧಿಯಲ್ಲಿ ಸೇಫ್ ಸ್ಟಾರ್ ಸೌಹಾರ್ದ ನಿಯಮಿತ ಸ್ಥಾಪನೆಯಾಯಿತು. ಜಿಲ್ಲೆಯ ಆರ್ಥಿಕ ಪರಿಸ್ಥಿತಿ ಸುಧಾರಣೆ ಹಾಗೂ ಬಡ-ಮಧ್ಯಮ ವರ್ಗದ ಜನರ ಆರ್ಥಿಕ ಸುಧಾರಣೆಗೆ ಯೋಜಿಸಿದ ಜಿ ಜಿ ಶಂಕರ್ ಅವರು ಆರ್ಥಿಕ ಸಂಸ್ಥೆಗೆ ಅಡಿಪಾಯ ಹಾಕಿದರು. ಸಂಸ್ಥಾಪಕ ಅಧ್ಯಕ್ಷರೇ ಈಗಲೂ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದು, ಅವರು ಸಹಕಾರಿ ತತ್ವದ ನಿಯಮಾವಳಿಗಳನ್ನು ಅಚ್ಚುಕಟ್ಟಾಗಿ ಪಾಲಿಸುವುದರ ಜೊತೆ ಜನರ ನೋವು-ನಲಿವಿಗೂ ಸ್ಪಂದಿಸುವ ಕೆಲಸ ಮಾಡುತ್ತಿದ್ದಾರೆ. ಅಡಿಕೆ, ತೆಂಗು ಬೆಳೆಯ ಜೊತೆ ಮೀನುಗಾರಿಕೆಯನ್ನು ನಡೆಸುವ ಹೊನ್ನಾವರದ ಜನ ಆರ್ಥಿಕ ಸಂಕಷ್ಟದಲ್ಲಿದ್ದರು. ಅಲ್ಲಿನ ಹಣಕಾಸಿನ ಪರಿಸ್ಥಿತಿಯನ್ನು ಅರಿತ ಜಿ ಜಿ ಶಂಕರ್ ಅವರು ಜನರ ಅಭಿಲಾಶೆಗಳಿಗೆ ಸ್ಪಂದಿಸುವುದಕ್ಕಾಗಿ ಸೊಸೈಟಿಯನ್ನು ತೆರೆದರು. ಸ್ವಾವಲಂಭಿ ಬದುಕು ಅರೆಸುತ್ತಿರುವವರಿಗೆ ಆರ್ಥಿಕ ನೆರವು ನೀಡಿ ಅವರನ್ನು ಮುಖ್ಯವಾಹಿನಿಗೆ ತರುವುದು ಸೊಸೈಟಿಯ ಮೂಲ ಉದ್ದೇಶವಾಗಿತ್ತು. ಕೆಲವೇ ವರ್ಷಗಳಲ್ಲಿ ಸೊಸೈಟಿ ಉತ್ತರ ಕನ್ನಡ ಜಿಲ್ಲೆಯ ಎಲ್ಲಡೆ ವಿಸ್ತರಿಸಿಕೊಂಡು ಅನೇಕರಿಗೆ ನೆರವಾಯಿತು. ಈಚೆಗೆ ಇಲ್ಲಿನವರ ಸೇವೆ ನೋಡಿದ ಹೊರ ಜಿಲ್ಲೆಯ ಜನರು ಸೇಫ್ ಸ್ಟಾರ್ ಸೊಸೈಟಿಯ ಅಗತ್ಯವಿರುವ ಬಗ್ಗೆ ಬೇಡಿಕೆ ಸಲ್ಲಿಸಿದರು. ಅದರ ಪ್ರಕಾರ ಉತ್ತರ ಕನ್ನಡ ಜಿಲ್ಲೆಗೆ ಮಾತ್ರ ಸೀಮಿತವಾಗಿದ್ದ ಈ ಸೊಸೈಟಿ ನೆರೆ ಜಿಲ್ಲೆಗಳಲ್ಲಿಯೂ ತನ್ನ ಕೈಗಳನ್ನು ವಿಸ್ತರಿಸಿತು. ಇದೀಗ ಶಿವಮೊಗ್ಗ, ಉಡುಪಿ ಜಿಲ್ಲೆ ಸೇರಿ 18 ಕಡೆ ಸೊಸೈಟಿಯ ಶಾಖೆಗಳಿವೆ. ಸಾಕಷ್ಟು ಬ್ಯಾಂಕು, ಸೇವಾ ಸಹಕಾರಿ ಸಂಘಗಳಿದ್ದರೂ ಜನರಿಗೆ ಸಮಯಕ್ಕೆ ಸರಿಯಾಗಿ ಸಾಲ ಸಿಗುತ್ತಿರಲಿಲ್ಲ. ಹಣ ಇದ್ದವರಿಗೆ ಸಹ ಹೂಡಿಕೆಗೆ ಉತ್ತಮ ಜಾಗ ಗೊತ್ತಿರಲಿಲ್ಲ. ಸೇಫ್ ಸ್ಟಾರ್ ಸೌಹಾರ್ದ ನಿಯಮಿತ ಈ ಎರಡು ಸಮಸ್ಯೆಗೆ ಪರಿಹಾರ ಹುಡುಕಿತು. ರಾಷ್ಟ್ರೀಯ ಬ್ಯಾಂಕುಗಳಲ್ಲಿ ಅನುಸರಿಸುವ ಆರ್ಥಿಕ ಶಿಸ್ತನ್ನು ಅಳವಡಿಸಿಕೊಂಡರೂ ಅಲ್ಲಿನ ದೊಡ್ಡ ದೊಡ್ಡ ನಿಯಮಗಳು ಇಲ್ಲಿಲ್ಲ. ಕಾಗದ ಪತ್ರಗಳಿಗಾಗಿ ಅನಗತ್ಯ ಅಲೆದಾಟಕ್ಕೂ ಸೊಸೈಟಿ ಅವಕಾಶ ಮಾಡಿಕೊಡಲಿಲ್ಲ. ಸದಸ್ಯರಿಗೆ ಅಪಘಾತ ಪರಿಹಾರ ಸೇರಿ ಅನೇಕ ದೂರದೃಷ್ಠಿಯ ಯೋಜನೆಗಳು ಸೇಫ್ ಸ್ಟಾರ್ ಸ್ಟಾರ್ ಸೌಹಾರ್ದ ಸಹಕಾರಿ ನಿಯಮಿತದಲ್ಲಿವೆ. `10 ವರ್ಷದವರಿಂದ ಹಿಡಿದು 70 ವರ್ಷದವರೆಗೂ ಈ ಸೊಸೈಟಿಯಲ್ಲಿ ವಿಮಾ ಸೌಲಭ್ಯವಿದೆ. ವಿಮಾ ಕಂತನ್ನು ಸೊಸೈಟಿಯಿಂದಲೇ ತುಂಬಿಕೊಳ್ಳುವ ಆಯ್ಕೆಗಳಿವೆ. ಏಳು ವರ್ಷದಲ್ಲಿ ಹೂಡಿಕೆ ಹಣ ದುಪ್ಪಟ್ಟು ಮಾಡುವ ಯೋಜನೆಯಿದೆ. ಮನೆ ಸಾಲ, ವಾಹನ ಖರೀದಿ ಸೇರಿ ಎಲ್ಲಾ ಬಗೆಯ ಸಾಲಗಳಿಗೂ ಸಂಸ್ಥೆಯವರು ಆರ್ಥಿಕ ನೆರವು ನೀಡುತ್ತಿದ್ದಾರೆ. ಈ ಕಾರಣದಿಂದಲೇ ರಾಜ್ಯ ಸೌಹಾರ್ದ ಸಹಕಾರಿ ನೀಡುವ ಶ್ರೇಷ್ಟ ಸಹಕಾರಿ ಪ್ರಶಸ್ತಿ ಸಹ ಸಿಕ್ಕಿದೆ’ ಎಂದು ಸೊಸೈಟಿಯ ಮುಖ್ಯ ವ್ಯವಸ್ಥಾಪಕ ಮಹೇಶ ಶೆಟ್ಟಿ ಹೆಮ್ಮೆಯಿಂದ ಹೇಳಿಕೊಂಡರು. ಸೇಫ್ ಸ್ಟಾರ್ ಸೌಹಾರ್ದ ಸಹಕಾರಿಯ ಆಡಳಿತ ಮಂಡಳಿ ಸಹ ಅಷ್ಟೇ ಚುರುಕು. ಸೊಸೈಟಿ ಅಧ್ಯಕ್ಷ ಜಿ ಜಿ ಶಂಕರ್ ಉದ್ದಿಮೆದಾರರು. ಉಪಾಧ್ಯಕ್ಷ ನಾಗರಾಜ ಇಂದ್ರ ಅವರು ವೈದಿಕರು. ನಿರ್ದೇಶಕರಾದ ಗೋಪಾಲಕೃಷ್ಣ ಹೆಗಡೆ ಕೃಷಿಕರು, ಮಾರುತಿ ಗೌಡ ಗುತ್ತಿಗೆದಾರರು, ಸಂಪನ್ಮೂಲ ವ್ಯಕ್ತಿಯಾದ ಗುಣಮಾಲ ಇಂದ್ರ ಅವರು ಸಹ ಈ ಸೊಸೈಟಿಯ ನಿರ್ದೇಶಕರಾಗಿದ್ದಾರೆ. ನಿವೃತ್ತ ಪಿಡಿಓ ಗೋಪಾಲಕೃಷ್ಣ ಭಟ್ಟ, ಹಣಕಾಸು ಸಲಹೆಗಾರ ಲಿಫರ್ಡ ರೋಡ್ರಿಗ್ಸ್, ಸಾರಿಗೆ ಉದ್ಯಮಿ ರಾಜೇಶ ದೇಸಾಯಿ, ನಿವೃತ್ತ ಅಧಿಕಾರಿಗಳಾದ ಲಕ್ಷö್ಮಣ ಪಟಗಾರ, ಸುಬ್ರಾಯ ಭಟ್ಟ, ನರಸಿಂಹ ಪಟಗಾರ ಅವರು ಬ್ಯಾಂಕಿನ ಆರ್ಥಿಕ ಶಿಸ್ತಿನ ಅಡಿಗಲ್ಲುಗಳಾಗಿದ್ದಾರೆ. ಗುತ್ತಿಗೆದಾರರಾದ ಪಾತೋನ್ ಫರ್ನಾಂಡಿಸ್, ಉದ್ದಿಮೆದಾರ ನಾಗೇಶ ದೇವಾಡಿಗ, ಸಮಾಜ ಸೇವಕ ವೆಂಕಟ್ರಮಣ ಕಿಮಾನಿಕರ್ ಸಹ ಸೊಸೈಟಿಯ ನಿರ್ದೇಶಕರಾಗಿ ಆಧಾರ ಸ್ಥಂಬದoತೆ ಕಾರ್ಯನಿರ್ವಹಿಸುತ್ತಿದ್ದಾರೆ. #Sponsored - [ಬಂಜೆತನ ನಿವಾರಣೆಗೆ ಮದ್ದು: ಬಸಿರು ಎಂಬ ಭರವಸೆಯ ಕೂಸು ಇದೀಗ ನನಸು!](https://mobiletime.in/2025/09/a-cure-for-infertility-the-hoped-for-baby-boy-is-now-a-reality/): ಮದುವೆಯಾಗಿ ಒಂದೆರಡು ವರ್ಷವಾದರೂ ಮಕ್ಕಳಾಗದೇ ಇದ್ದ ದಂಪತಿಗೆ ಬಸಿರು ಎಂಬ ಪದವೇ ನಡುಗಿಸಿಬಿಡುತ್ತದೆ. ಬದಲಾದ ಜೀವನ ಶೈಲಿ, ಮಾನಸಿಕ ಒತ್ತಡ, ಆಹಾರ ವಿಧಾನದಲ್ಲಿನ ಲೋಪದಿಂದ ಅನೇಕರು ಸಂತಾನ ಭಾಗ್ಯ ದೊರೆಯದೇ ಹಿಂಸೆ ಅನುಭವಿಸುತ್ತಿದ್ದಾರೆ. ಅಂಥವರಿಗೆ ವೈಜ್ಞಾನಿಕ ಮಾರ್ಗದರ್ಶನ ನೀಡುವುದಕ್ಕಾಗಿ ಹುಬ್ಬಳ್ಳಿಯ ಬಂಜೆತನ ನಿವಾರಣಾ ತಜ್ಞೆ ಡಾ ವಿನುತಾ ಕುಲಕರ್ಣಿ ಯಲ್ಲಾಪುರಕ್ಕೆ ಬರುತ್ತಿದ್ದಾರೆ! `ಈಚೆಗೆ ಸಂತಾನಹೀನತೆ ಎಂಬುದು ತೀರಾ ಸಾಮಾನ್ಯ ಸಮಸ್ಯೆ. ಅದಕ್ಕಾಗಿ ಅನೇಕರು ಜೀವನವಿಡೀ ಕೊರಗುತ್ತಿದ್ದು, ಆ ಕೊರಗು ದೂರ ಮಾಡಲು ಸಾಧ್ಯ’ ಎಂಬುದು ಡಾ ವಿನುತಾ ಕುಲಕರ್ಣಿ ಅವರು ಮಾತು. `ಯಲ್ಲಾಪುರದ ದೀಪಾ ಭಟ್ಟ ಅವರಿಗೆ ಮದುವೆಯಾಗಿ ಮೂರು ವರ್ಷವಾದರೂ ಮಕ್ಕಳಾಗಿರಲಿಲ್ಲ. ಕಳೆದ ವರ್ಷ ಅವರು ಚಿಕಿತ್ಸೆಗೆ ಬಂದಿದ್ದು, ನುರಿತ ವೈದ್ಯರು ನೀಡಿದ ಸಲಹೆಯನ್ನು ಪಾಲಿಸಿದ್ದರು. ಅದರ ಫಲವಾಗಿ ಈ ವರ್ಷ ಅವರ ಮುದ್ದಿನ ಮಗು ಮಡಲಿನಲ್ಲಿದೆ’ ಎಂದು ಡಾ ವಿನುತಾ ಕುಲಕರ್ಣಿ ಅವರು ನೈಜ ನಿದರ್ಶನಗಳೊಂದಿಗೆ ವಿವರಿಸಿದರು. ಮಕ್ಕಳಾಗದಿರುವಿಕೆಗೆ ಮಹಿಳೆ ಮಾತ್ರ ಕಾರಣವಲ್ಲ. ಪುರುಷರಲ್ಲಿಯೂ ಶೇ 40 ರಷ್ಟು ಹಾಗೂ ಮಹಿಳೆಯರಲ್ಲಿಯೂ ಶೇ 40ರಷ್ಟು ನ್ಯೂನ್ಯತೆಗಳಿರುತ್ತವೆ. ಇನ್ನೂ ಶೇ 20ರಷ್ಟು ಕಾರಣ ನಿಗೂಢವಾಗಿದ್ದು, ಅದನ್ನು ಪತ್ತೆ ಮಾಡಿ ಸಂತಾನ ಫಲ ದೊರೆಯುವಂತೆ ಮಾಡುವುದು ನುರಿತ ವೈದ್ಯರ ಹೊಣೆ. ದಂಪತಿ ಜೊತೆ ಮುಕ್ತ ಮನಸ್ಸಿನಿಂದ ಮಾತನಾಡಲಿರುವ ಡಾ ವಿನುತಾ ಕುಲಕರ್ಣಿ ಅವರು ಅವರಿಗೆ ಅಗತ್ಯ ಚಿಕಿತ್ಸೆಯನ್ನು ನೀಡುತ್ತಾರೆ. ಪುರುಷ ಹಾಗೂ ಮಹಿಳೆಯನ್ನು ತಪಾಸಣೆಗೆ ಒಳಪಡಿಸಿ ಸಮಸ್ಯೆಯನ್ನು ಅವರಿಗೆ ಅರ್ಥ ಮಾಡಿಸಿ ಅಗತ್ಯ ಚಿಕಿತ್ಸೆ ನೀಡುವುದರಿಂದಲೇ ಡಾ ವಿನುತಾ ಕುಲಕರ್ಣಿ ಅವರು ಪ್ರಸಿದ್ಧಿ. ಸಂತಾನಹೀನತೆ ಬಗ್ಗೆ ಡಾ ವಿನುತಾ ಕುಲಕರ್ಣಿ ಹೇಳುವುದೇನು? ವಿಡಿಯೋ ನೋಡಿ.. ಸುದ್ದಿ ಮುಂದೆ ಓದಿ.. ಫೆ 17ರಂದು ಯಲ್ಲಾಪುರದ ದೇವಿ ದೇವಸ್ಥಾನ ರಸ್ತೆಯಲ್ಲಿನ ಎಪಿಎಂ & ಕ್ಲಿನಿಕ್’ಗೆ ಡಾ ವಿನುತಾ ಕುಲಕರ್ಣಿ ಅವರು ಅವರು ಆಗಮಿಸುತ್ತಿದ್ದಾರೆ. ಅಂದು ಮಧ್ಯಾಹ್ನ 2 ಗಂಟೆಯಿoದ ಸಂಜೆ 5 ಗಂಟೆಯವರೆಗೂ ಡಾ ವಿನುತಾ ಕುಲಕರ್ಣಿ ಅವರು ಮಾತಿಗೆ ಸಿಗುತ್ತಾರೆ. `ಮಕ್ಕಳಾಗಿಲ್ಲ ಎಂಬ ಕೊರಗು ಬೇಡ’ ಎಂದು ಅವರು ದಂಪತಿಗೆ ಧೈರ್ಯ ಹೇಳುತ್ತಿದ್ದು, ವಾರಸುದಾರರನ್ನು ಪಡೆಯಲು ಅನುಸರಿಸಬೇಕಾದ ವಿಧಾನಗಳ ಬಗ್ಗೆ ಆಗಮಿಸಿದವರಿಗೆ ಮಾಹಿತಿ ನೀಡಲಿದ್ದಾರೆ. ಆ ದಿನದ ಕಾರ್ಯಾಗಾರ ಸಂಪೂರ್ಣ ಉಚಿತವಾಗಿದೆ. ಚಿಕಿತ್ಸೆಗೆ ಬರುವವರಿಗೂ ಅವರು ವಿಶೇಷ ರಿಯಾಯಿತಿ ಘೋಷಿಸಿದ್ದಾರೆ. ಇಲ್ಲಿ ಫೋನ್ ಮಾಡಿ.. ಹೆಸರು ನೋಂದಾಯಿಸಿ: 8431812420 / 08419-262387 #Sponsored - [ಶ್ರೀ ವೀರಾಂಜಿನೇಯ | ಬಾಸುಕಿ ಎಂಬುದು ಜಗತ್ತಿನ ಅತಿ ಚಿಕ್ಕ UPS!](https://mobiletime.in/2025/09/shree-veeranjineya-basuki-is-the-worlds-smallest-ups/): ಕಳೆದ 3 ವರ್ಷಗಳಿಂದ ಶಿರಸಿ ಹಾಗೂ ಸುತ್ತಮುತ್ತಲಿನ ಜನರಿಗೆ ಎಲೆಕ್ಟ್ರಿಕ್ ಉಪಕರಣ ಮಾರಾಟ ಹಾಗೂ ದುರಸ್ಥಿ ಸೇವೆ ಒದಗಿಸಿದ ಸಿಂಪಿಗಲ್ಲಿಯ ಶ್ರೀ ವೀರಾಂಜಿನೇಯ ಎಲೆಕ್ಟ್ರಿಕ್’ನವರು ಇದೀಗ ಹಲವು ವಿಶೇಷತೆಗಳನ್ನು ಒಳಗೊಂಡ ಬಾಸುಕಿ ಲೀಥಿಯಂ ಬ್ಯಾಟರಿಯನ್ನು ಪರಿಚಯಿಸಿದ್ದಾರೆ. ಆಕರ್ಷಕ ವಿನ್ಯಾಸ, ಸ್ಪರ್ಧಾತ್ಮಕ ಬೆಲೆ, ಅತ್ಯಂತ ಹಗುರ ಹಾಗೂ ಕಿಂಚಿತ್ತು ನಿರ್ವಹಣೆಯಿಲ್ಲದ ಲೀಥಿಯಂ ಬ್ಯಾಟರಿ ಮಾರುಕಟ್ಟೆಗೆ ಬಂದಿದೆ. ಶ್ರೀ ವೀರಾಂಜಿನೇಯ ಎಲೆಕ್ಟ್ರಿಕ್ ಮೂಲಕ ಅದು ಉತ್ತರ ಕನ್ನಡ ಜಿಲ್ಲೆಯ ಎಲ್ಲಾ ತಾಲೂಕುಗಳಿಗೂ ಪೂರೈಕೆಯಾಗುತ್ತಿದೆ. ಐದು ಅಣೆಕಟ್ಟು ಹಾಗೂ ಕೈಗಾ ಅಣು ವಿದ್ಯುತ್ ಘಟಕದ ಮೂಲಕ ಉತ್ತರ ಕನ್ನಡ ಜಿಲ್ಲೆ ದೇಶಕ್ಕೆ ವಿದ್ಯುತ್ ಪೂರೈಕೆ ಮಾಡುತ್ತಿದೆ. ಆದರೆ, ಈ ಗುಡ್ಡಗಾಡು ಜಿಲ್ಲೆಯಲ್ಲಿ ನಿರಂತರ ವಿದ್ಯುತ್ ಪೂರೈಕೆ ಕಷ್ಟಕರ. ಮಳೆಗಾಲದಲ್ಲಿ ಪ್ರತಿ 10-15 ನಿಮಿಷಕ್ಕೆ ವಿದ್ಯುತ್ ಕಡಿತ ಸಾಮಾನ್ಯ. ಗುಡುಗು-ಸಿಡಿಲಿನಂಥ ಸನ್ನಿವೇಶದಲ್ಲಿ ಟಿವಿ, ಫ್ಯಾನ್ ಸೇರಿ ಹಲವು ವಿದ್ಯುತ್ ಉಪಕರಣಗಳು ಹಾಳಾಗುವುದು ಇಲ್ಲಿನವರಿಗೆ ಹೊಸತಲ್ಲ. ಆದರೆ, ಬಸುಕಿ ಲೀಥಿಯಂ ಯುಪಿಎಸ್ ಅಳವಡಿಸಿದರೆ ವಿದ್ಯುತ್ ಉಪಕರಣ ಹಾಳಾಗುವ ಚಿಂತೆಯಿಲ್ಲ. ವಿದ್ಯುತ್ ಕಡಿತ ಆಯಿತು ಎಂಬ ತಲೆಬಿಸಿಯಿಲ್ಲ! ಸಾಮಾನ್ಯವಾಗಿ ಎಲ್ಲಾ UPS ಕಂಪನಿಯೂ ಬ್ಯಾಟರಿ ಹಾಗೂ ಇನ್ವರ್ಟರನ್ನು ಬೇರೆ ಬೇರೆಯಾಗಿರಿಸುತ್ತದೆ. ಅವರೆಡು ಸೇರಿ ಕನಿಷ್ಟ 80 ಕೆಜಿ ತೂಕವಿರುತ್ತದೆ. ಬೇರೆ ಬೇರೆ UPS’ಗಳಿಗೆ ಡಿಸ್ಟಿರಿಯಲ್ ವಾಟರ್ ಕಡ್ಡಾಯ. ಜೊತೆಗೆ ಆಗಾಗ UPS ಕುರಿತು ನಿಗಾವಹಿಸಬೇಕಾಗುತ್ತದೆ. ಆದರೆ, ಬಾಸುಕಿ ಲೀಥಿಯಂ UPS’ನಲ್ಲಿ ಹಾಗಲ್ಲ. ಬ್ಯಾಟರಿ ಹಾಗೂ ಯುಪಿಎಸ್ ಒಟ್ಟಿಗೆ ಇದ್ದು, ಬರೇ 22 ಕೆಜಿ ತೂಕವಿರುತ್ತದೆ. ಇದಕ್ಕೆ ಡಿಸ್ಟಿರಿಯಲ್ ವಾಟರ್ ಅಗತ್ಯವಿಲ್ಲ. ಒಮ್ಮೆ ಒಂದು ಕಡೆ ಸ್ಥಾಪಿಸಿದರೆ ವರ್ಷಗಳ ಕಾಲ ಯುಪಿಎಸ್ ಕಡೆ ಗಮನಹರಿಸಬೇಕಾದ ಅವಷ್ಯಕತೆಯೂ ಬರುವುದಿಲ್ಲ! ಇನ್ನೂ ಬಾಸುಕಿ ಲೀಥಿಯಂ ಯುಪಿಎಸ್’ನ್ನು ಎಲ್ಲಿ ಬೇಕಾದರೂ ಸುಲಭವಾಗಿ ಕೊಂಡೊಯ್ಯಬಹುದು. ಮನೆ ಮೂಲೆಯ ಗೋಡೆಗೆ ಸುರಕ್ಷಿತವಾಗಿ ತೂಗಿ ಹಾಕಬಹುದು. ಅತಿ ಚಿಕ್ಕ UPS ಇದಾಗಿರುವ ಕಾರಣ ಅತ್ಯಂತ ಕಡಿಮೆ ಜಾಗ ಸಾಕು. ಬ್ಯಾಟರಿ ಚಾರ್ಜ ಮಾಡಿದ ನಂತರ ವಿದ್ಯುತ್ ಇಲ್ಲದ ಸ್ಥಳಗಳಿಗೂ ಒಯ್ದು ಬಳಸಬಹುದು. ವಿದ್ಯುತ್ ಇಲ್ಲದ ಸ್ಥಳಗಳಲ್ಲಿ ಸೋಲಾರ್ ಅಳವಡಿಸಿ ಚಾರ್ಜ ಮಾಡುವ ಅವಕಾಶವನ್ನು ಸಹ ಬಸುಕಿ ಯುಪಿಎಸ್ ಒದಗಿಸುತ್ತದೆ. ಇನ್ನೂ ಸಾಮಾನ್ಯ ಯುಪಿಎಸ್ ಪೂರ್ತಿಯಾಗಿ ಚಾರ್ಜ ಆಗಲು 2 ಯುನಿಟ್ ವಿದ್ಯುತ್ ಜೊತೆ 12 ತಾಸು ಸಮಯಬೇಕು. ಆದರೆ, ಲೀಥಿಯಂ ಯುಪಿಎಸ್ ಪೂರ್ತಿ ಚಾರ್ಜ ಆಗಲು 1 ಯನಿಟ್ ವಿದ್ಯುತ್ ಜೊತೆ 6 ತಾಸಿನ ಸಮಯ ಸಾಕು. ಬಾಸುಕಿ ಲೀಥಿಯಂ UPS’ನ ಪ್ರಯೋಜನಗಳೇನು? ವಿಡಿಯೋ ನೋಡಿ.. ಆ ನಂತರ ಮುಂದೆ ಓದಿ.. ಶ್ರೀ ವೀರಾಂಜಿನೇಯ ಎಲೆಕ್ಟ್ರಿಕ್’ನವರು ಒದಗಿಸುತ್ತಿರುವ ಬಾಸುಕಿ ಯುಪಿಎಸ್ ಕನ್ನಡಿಗರ ಸಂಸ್ಥೆ. ಇಲ್ಲಿ ಕೆಲಸ ಮಾಡುವ ಉದ್ಯೋಗಿಗಳಿಂದಹಿಡಿದು ಆಡಳಿತ ಮಂಡಳಿಯವರೆಗೆ ಎಲ್ಲರೂ ಕನ್ನಡಿಗರು. 5 ವರ್ಷಗಳ ಇನ್ವರ್ಟರ್ ವಾರಂಟಿ ಜೊತೆ 10 ವರ್ಷಗಳ ಕಾಲದ ಬ್ಯಾಟರಿ ಬಾಳಿಕೆಗೂ ಕಂಪನಿ ಭರವಸೆಯೇ ಗ್ಯಾರಂಟಿ. 1ಕೆವಿಯಿಂದ 10 ಕೆವಿವರೆಗಿನ ಯುಪಿಎಸ್’ಗಳು ಶ್ರೀ ವೀರಾಂಜಿನೇಯ ಎಲೆಕ್ಟ್ರಿಕ್’ನಲ್ಲಿ ಲಭ್ಯ. ಲೀಥಿಯಂ ಬ್ಯಾಟರಿ UPS’ನ್ನು ಕಣ್ಣಾರೆ ನೋಡಿ, ಪರೀಕ್ಷಿಸಬೇಕೆ? ಹಾಗಾದರೆ, ಇಲ್ಲಿ ಭೇಟಿ ಕೊಡಿ: ಶ್ರೀ ವೀರಾಂಜಿನೇಯ ಎಲೆಕ್ಟ್ರಿಕ್, ಸಿಂಪಿಗಲ್ಲಿ, ಶಿರಸಿ ಅಥವಾ ಇಲ್ಲಿ ಫೋನ್ ಮಾಡಿ: 9611708009 #Sponsored - [ಅಂದದ ಮನೆಗೆ ಚಂದದ ಅಲಂಕಾರ: ಅಚ್ಚುಕಟ್ಟಾದ ವಿನ್ಯಾಸ.. ಅತ್ಯಂತ ಆಪ್ತ ಆ ನಿವಾಸ!](https://mobiletime.in/2025/09/beautiful-decoration-for-a-beautiful-house-neat-interior-design-the-most-intimate-residence/): ವಾಸದ ಮನೆ, ಕೆಲಸ ಮಾಡುವ ಕಚೇರಿ, ಊಟಕ್ಕೆ ಹೋಗುವ ಹೊಟೇಲು, ರೋಗಿಗಳ ಆರೈಕೆಗೆ ಮೀಸಲಿರುವ ಆಸ್ಪತ್ರೆ.. ಎಲ್ಲಾ ಕಡೆ ಕಟ್ಟಡದ ಹೊರ ಸೌಂದರ್ಯದ ಹಾಗೇ ಒಳ ವಿನ್ಯಾಸ ಸಹ ಗಮನ ಸೆಳೆಯುತ್ತದೆ. ದಿನ ನಿತ್ಯದ ಬಹುಪಾಲು ಸಮಯ ಕಳೆಯುವ ಕಟ್ಟಡಗಳಲ್ಲಿ ಮನಸ್ಸಿಗೆ ಮದ ನೀಡುವ ವಿನ್ಯಾಸಗಳಿರುವುದು ಅಷ್ಟೇ ಮುಖ್ಯ. ಹೀಗಾಗಿ ಎಲ್ಲಾ ಕಡೆ ಕಟ್ಟಡಗಳ ಒಳ ವಿನ್ಯಾಸದ ಕ್ಷೇತ್ರ ವೇಗವಾಗಿ ಬೆಳೆಯುತ್ತಿದ್ದು, `ABC ಅಲ್ಯುಮಿನಿಯಂ ಇಂಟೀರಿಯರ್’ ಸಹ ಈ ಕ್ಷೇತ್ರದಲ್ಲಿ ಅಪಾರವಾದ ಅನುಭವವನ್ನು ಹೊಂದಿದೆ. ಕೇರಳ ಮೂಲದ `ABC ಅಲ್ಯುಮಿನಿಯಂ ಇಂಟೀರಿಯರ್’ನವರು ಇದೀಗ ಉತ್ತರ ಕನ್ನಡ ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿಯೂ ತಮ್ಮ ಕ್ಷೇತ್ರ ವಿಸ್ತರಿಸಿದ್ದಾರೆ. ಇಲ್ಲಿನ ಹಲವು ಮನೆ, ಕಚೇರಿ ಹಾಗೂ ಇನ್ನಿತರ ಕಟ್ಟಡಗಳಿಗೆ ಅವರು ಅಚ್ಚುಕಟ್ಟಾದ ಒಳ ವಿನ್ಯಾಸವನ್ನು ಮಾಡಿಕೊಟ್ಟಿದ್ದಾರೆ. ತುಕ್ಕು ಬಾರದ ಉಪಕರಣಗಳನ್ನು ಬಳಸಿ ಗುಣಮಟ್ಟದ ಕೆಲಸ ಮಾಡಿಕೊಡುವಲ್ಲಿ ಎಬಿಸಿ ಅಲ್ಯುಮಿನಿಯಂ ವರ್ಕ ಸಿಬ್ಬಂದಿ ಪರಿಣಿತಿ ಪಡೆದಿದ್ದಾರೆ. ಚಿಕ್ಕದಾದ ಮನೆಯನ್ನು ಸಹ ಚೊಕ್ಕದಾಗಿರಿಸಿಕೊಳ್ಳುವಲ್ಲಿ ಒಳ ವಿನ್ಯಾಸ ನೆರವಾಗುತ್ತದೆ. ಮನೆಯ ಸೌಂದರ್ಯ ಹೆಚ್ಚಿಸುವುದರ ಜೊತೆ ಅಲಂಕಾರಕ್ಕೆ ಇಲ್ಲಿ ಹೆಚ್ಚಿನ ಪ್ರಾಮುಖ್ಯತೆ. ಕಟ್ಟಡದ ಸಣ್ಣ ಸಣ್ಣ ಪ್ರದೇಶಗಳನ್ನು ಅಂದದ ರೀತಿಯಲ್ಲಿ ಬಳಕೆ ಮಾಡಿಕೊಳ್ಳುವವರಿಗೆ ಒಳ ವಿನ್ಯಾಸ ಅತಿ ಅಗತ್ಯ. ಇದೆಲ್ಲದರ ಜೊತೆ ಕಟ್ಟಡದ ಒಳ-ಹೊರ ವಾತಾವರಣ ಸುಂದರವಾಗಿದ್ದರೆ ಅಲ್ಲಿರುವವರ ಮನಸ್ಸು ನೆಮ್ಮದಿಯಿಂದಿರುತ್ತದೆ. ಕಟ್ಟಡಗಳಿಗೆ ಬಳಸುವ ಬಣ್ಣ, ಸಾಮಗ್ರಿ, ಪೀಠೋಪಕರಣ, ನೆಲಹಾಸು, ಲೈಟಿಂಗ್ ಒಳ ವಿನ್ಯಾಸದ ಪ್ರಮುಖ ವಿಷಯಗಳು. ಮೊದಲು ಒಳ ವಿನ್ಯಾಸದ ಬಗ್ಗೆ ನಗರದ ಜನ ವಿಶೇಷ ಆಸಕ್ತಿವಹಿಸುತ್ತಿದ್ದು, ಇದೀಗ ಗ್ರಾಮೀಣ ಭಾಗದಲ್ಲಿ ಸಹ ವ್ಯಾಪಕ ಪ್ರಮಾಣದಲ್ಲಿ ಮನೆ ಅಲಂಕಾರಗಳಿಗೆ ಒತ್ತು ನೀಡುತ್ತಿದ್ದಾರೆ. ಹೀಗಾಗಿ ಎಬಿಸಿ ಅಲ್ಯುಮಿನಿಯಂ ವರ್ಕಿನವರು ಗ್ರಾಮೀಣ ಭಾಗದ ಕಟ್ಟಡಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಿ ಸೇವೆ ಒದಗಿಸುತ್ತಿದ್ದಾರೆ. ಮಧ್ಯಮ ವರ್ಗದ ಜನರ ಮನೆಯನ್ನು ಸಹ ಐಷಾರಾಮಿ ಮನೆಯ ಅನುಭೂತಿ ನೀಡುವಲ್ಲಿ ಒಳಾಂಗಣ ವಿನ್ಯಾಸ ಮಹತ್ವದ ಪಾತ್ರವಹಿಸಿದೆ. ಅತ್ಯಂತ ಹಳೆಯ ಮನೆಗಳನ್ನು ಸಹ ಒಳ ವಿನ್ಯಾಸ ಪದ್ಧತಿ ಅನುಸರಿಸಿ ಆಧುನಿಕ ಮನೆಯನ್ನಾಗಿ ಮಾಡುವ ಶಕ್ತಿ ಎಬಿಸಿ ಅಲ್ಯುಮಿನಿಯಂ ವರ್ಕ’ನ ಸಿಬ್ಬಂದಿಗಿದೆ. ಕಡಿಮೆ ಹಣ ವೆಚ್ಚ ಮಾಡಿ ಐಷಾರಾಮಿ ಮನೆಯ ಅನುಭೂತಿ ಪಡೆಯಲು ಒಳ ವಿನ್ಯಾಸ ಅತ್ಯತ್ತಮ ಆಯ್ಕೆ. ಟಿವಿ ಯುನಿಟ್, ಅಡುಗೆಮನೆ, ಶೌಚಾಲಯ, ವಾಲ್‌ರೂಪ್, ಕೆಲವೇ ಕೆಲ ಕೊಠಡಿಗಳ ಒಳ ವಿನ್ಯಾಸ ಮಾಡಿಕೊಡಲು ಸಹ `ABC ಅಲ್ಯುಮಿನಿಯಂ ಇಂಟೀರಿಯರ್ ಸಿಬ್ಬಂದಿ ಸಿದ್ಧರಿದ್ದಾರೆ. ನಿಮ್ಮ ಮನೆ-ಕಚೇರಿಯನ್ನು ಸಹ ಇನ್ನಷ್ಟು ಸುಂದರವಾಗಿಸಲು ಇಲ್ಲಿ ಫೋನ್ ಮಾಡಿ: 9481314420 ಅಥವಾ ಇಲ್ಲಿ ವಾಟ್ಸಪ್ ಮಾಡಿ: 6282592690 #Sponsored  - [ಮನೆ - ತೋಟ | ಪ್ರತಿಯೊಬ್ಬರ ಸುರಕ್ಷತೆ ಈ ಕ್ಯಾಮರಾ ಹೊಣೆ!](https://mobiletime.in/2025/09/house-garden-this-camera-is-responsible-for-everyones-safety/): ಶಾನವಳ್ಳಿಯ ನಾಗರಾಜ ಭಟ್ಟ ಅವರು ಮೂರು ವರ್ಷದ ಹಿಂದೆ ತಮ್ಮ ತೋಟಕ್ಕೆ ಸೋಲರ್ ಆಧಾರಿತ ಸಿಸಿ ಕ್ಯಾಮರಾ ಹಾಕಿಸಿದ್ದರು. ಈವರೆಗೆ ಒಮ್ಮೆಯೂ ಅದು ಕೈ ಕೊಟ್ಟಿಲ್ಲ! ಕುಂತ್ರೆಬೈಲ್’ನ ಗಜಾನನ ಹೆಗಡೆ ಅವರು ತಮ್ಮ ಮನೆ ಮಾಳಿಗೆ ಮೇಲೆ ಸೋಲಾರ್ ಆಧಾರಿತ ಸಿಸಿ ಕ್ಯಾಮರಾ ಅಳವಡಿಸಿದ್ದರು. ಈಗಲೂ ಮನೆಯ ನಾಲ್ಕು ದಿಕ್ಕುಗಳಲ್ಲಿನ ಆಗು-ಹೋಗುಗಳ ಬಗ್ಗೆ ಅವರು ಮೊಬೈಲ್’ನಲ್ಲಿಯೇ ನೋಡುತ್ತಾರೆ. ಸಿದ್ದಾಪುರದ ಅರುಣ ಶಾಂತರಾಜ್ ಅವರ ಹೊಲದಲ್ಲಿ ಕರೆಂಟ್ ಇಲ್ಲ. ವೈಫೈ ಸಿಗ್ನಲ್ ಸಹ ಸಿಗಲ್ಲ. ಕಾಡುಪ್ರಾಣಿ ಹಾವಳಿ ತಡೆಗಾಗಿ ಅವರು ಸೋಲಾರ್ ಸಿಸಿ ಕ್ಯಾಮರಾ ಹಾಕಿಸಿದ್ದು, ಪ್ರಾಣಿಗಳು ಹೊಲಕ್ಕೆ ಬಂದ ತಕ್ಷಣ ಕ್ಯಾಮರಾ ಸದ್ದು ಮಾಡುತ್ತಿದೆ! ಉತ್ತರ ಕನ್ನಡ ಜಿಲ್ಲೆಯ ಎಲ್ಲಾ ತಾಲೂಕುಗಳಿಯೂ ಶಿರಸಿಯ ಅಂಬಿಕಾ ಎಲೆಕ್ಟಿಕಲ್ ಅವರು ಸೋಲಾರ್ ಆಧಾರಿತ ಸಿಸಿ ಕ್ಯಾಮರಾ ಅಳವಡಿಸುತ್ತಾರೆ. ಗ್ರಾಮೀಣ ಭಾಗದ ಮೂಲೆ ಮೂಲೆಗೂ ತೆರಳಿ ಸೇವೆ ಒದಗಿಸುತ್ತಾರೆ. ಸಣ್ಣ ಸಣ್ಣ ಅಂಗಡಿಗಳಿoದ ಹಿಡಿದು ದೊಡ್ಡ ದೊಡ್ಡ ಮಳಿಗೆಯವರು ಸಹ ಈ ಕ್ಯಾಮರಾ ಅಳವಡಿಸಿದ್ದು, ಒಂದು ವರ್ಷದ ಅವಧಿಯ ವಾರಂಟಿಯನ್ನು ಅವರು ನೀಡುತ್ತಾರೆ. ಕಳ್ಳರ ಕಾಟ, ವನ್ಯಜೀವಿ ಉಪಟಳ, ಅಪರಿಚಿತರ ಆಗಮನ, ಅಪರಾಧ ತಡೆ ಸೇರಿ ಎಲ್ಲಾ ಬಗೆಯ ಭೀತಿಯನ್ನು ಈ ಕ್ಯಾಮರಾ ದೂರ ಮಾಡುತ್ತಿದೆ. `ಇನ್ನೂ ಸೋಲಾರ್ ಆಧಾರಿತ ಸಿಸಿ ಕ್ಯಾಮರಾಗೆ ಪದೇ ಪದೇ ನಿರ್ವಹಣೆ ಬೇಕಾಗಿಲ್ಲ. ದುಬಾರಿ ಖರ್ಚು ಅದಕ್ಕಿಲ್ಲ. ನೆಟ್‌ವರ್ಕ ಪ್ರದೇಶದಲ್ಲಿ ಕ್ಯಾಮರಾವಿರಿಸಿ ಸಿಮ್ ಅಳವಡಿಸಿದರೆ ನಿಮ್ಮ ಕೆಲಸ ಮುಗೀತು. ನಂತರ ಎಲ್ಲಿ ಬೇಕಾದರೂ ಕುಳಿತು ಕ್ಯಾಮರಾ ಮುಂದಿನ ದೃಶ್ಯಾವಳಿ ನೋಡಲು ಸಾಧ್ಯ. ನೆಟ್‌ವರ್ಕ ಬಾರದ ಪ್ರದೇಶದಲ್ಲಿಯೂ ಕ್ಯಾಮರಾ ಕೆಲಸ ಮಾಡುತ್ತದೆ. ಹಗಲಿನಲ್ಲಿ ಮಾತ್ರವಲ್ಲದೇ ರಾತ್ರಿ ವೇಳೆಯಲ್ಲಿಯೂ ಈ ಕ್ಯಾಮರಾ ಸ್ಪಷ್ಟವಾಗಿ ಕೆಲಸ ಮಾಡುತ್ತದೆ’ ಎಂದು ಅಭಿಷೇಕ ನಾಯ್ಕ ತಿಳಿಸಿದರು. `ಕುಳಿತ ಸ್ಥಳದಿಂದಲೇ ಕ್ಯಾಮರಾವನ್ನು ಯಾವ ದಿಕ್ಕಿಗೆ ಬೇಕಾದರೂ ತಿರುಗಿಸಬಹುದು. ಕ್ಯಾಮರಾ ಮುಂದಿರುವ ವ್ಯಕ್ತಿ ಜೊತೆ ನೇರವಾಗಿ ಮಾತನಾಡಬಹುದು. ಅಗತ್ಯಬಿದ್ದಾಗ ಅಲರ್ಟ ಮೆಸೇಜ್ ರವಾನಿಸಹುದು. ಎಲ್ಲಕ್ಕಿಂತ ಮುಖ್ಯವಾಗಿ ನಿಮ್ಮ ಮನೆ-ತೋಟದ ಸುರಕ್ಷತೆಯನ್ನು ಸದಾ ಕಾಪಾಡಬಹುದು. ಒಂದೇ ಒಂದು ಕ್ಯಾಮರಾದಿಂದ ಹಲವು ಬಗೆಯ ಪ್ರಯೋಜನಗಳಿವೆ’ ಎಂದು ರಾಕೇಶ ನಾಯ್ಕ ವಿವರಿಸಿದರು. ಅಂಬಿಕಾ ಎಲೆಕ್ಟಿಕಲ್ ಮಳಿಗೆಯವರು ಕಟ್ಟಡಗಳ ವೈಯರಿಂಗ್, ಫ್ಯಾನ್-ಪಂಪ್ ರಿಪೇರಿ ಸೇರಿ ಎಲ್ಲಾ ಬಗೆಯ ಎಲೆಕ್ಟಿçಕಲ್ ಕೆಲಸವನ್ನು ಮಾಡುತ್ತಾರೆ. ಸಿಸಿ ಕ್ಯಾಮರಾ ಅಳವಡಿಕೆ ಸೇರಿ ಅವರ ಸೇವೆ ಅಗತ್ಯವಿದ್ದವರು ಇಲ್ಲಿ ಫೋನ್ ಮಾಡಿ: 6362189206 # Sponsored - [ಸೇವೆಗೂ ಸಿದ್ಧ.. ಉದ್ಯೋಗ ನೀಡಲು ಬದ್ಧ: ವೃದ್ಧರ ಪಾಲಿನ ಆಶಾಕಿರಣ ಈ ಚೈತನ್ಯ!](https://mobiletime.in/2025/09/ready-to-serve-committed-to-providing-employment-this-spirit-is-a-ray-of-hope-for-the-elderly/): ವೃದ್ಧರ ನೋವು, ಅಂಗವಿಕಲರ ಅಂತರಾಳ, ಕೈಲಾಗದವರಿಗೆ ನೆರವು ನೀಡುವ ಜೊತೆ ಸೇವಾ ಮನೋಭಾವನೆಯಿಂದ ದುಡಿಯುವ ಕೈಗಳಿಗೆ ಕಾಸು ಕೊಡುವ ಸಂಸ್ಥೆ ಚೈತನ್ಯ ಪೌಂಡೇಶನ್. ಬೆಂಗಳೂರಿನಲ್ಲಿ ಪ್ರಧಾನ ಕಚೇರಿ ಹಾಗೂ ಶಿರಸಿಯಲ್ಲಿ ಶಾಖಾ ಕಚೇರಿ ಹೊಂದಿರುವ ಚೈತನ್ಯ ಪೌಂಡೇಶನ್ ಕಳೆದ 16 ವರ್ಷಗಳಿಂದ ನೂರಕ್ಕೂ ಅಧಿಕ ವೃದ್ಧರ ಪಾಲಿಗೆ ಆಶಾಕಿರಣವಾಗಿದೆ. ಅದೇ ಪ್ರಮಾಣದಲ್ಲಿ ಯುವಕ-ಯುವತಿಯರಿಗೆ ಉದ್ಯೋಗವಕಾಶವನ್ನು ನೀಡಿದೆ. ಮನೆ ಮನೆಯಲ್ಲಿಯೂ ವೃದ್ಧರು-ಅಶಕ್ತರು ಇರುವುದು ಸಾಮಾನ್ಯ. ರೋಗಿ ಹಾಗೂ ಆರೈಕೆದಾರರ ನಡುವೆ ಸಂಪರ್ಕ ಸೇತುವಾಗಿರುವ ಈ ಸಂಸ್ಥೆ ಅಶಕರ ಬೇಕು-ಬೇಡಗಳಿಗೆ ತ್ವರಿತವಾಗಿ ಸ್ಪಂದಿಸುತ್ತದೆ. ಸಮಯಕ್ಕೆ ಸರಿಯಾಗಿ ಔಷಧಿ ವಿತರಣೆ, ಅಶಕ್ತರ ಊಟ-ತಿಂಡಿ ವ್ಯವಸ್ಥೆ, ಆರೋಗ್ಯದ ಬಗ್ಗೆ ಕಾಳಜಿವಹಿಸುವುದರಲ್ಲಿ ಚೈತನ್ಯ ಪೌಂಡೇಶನ್ ಕೊಡುಗೆ ಅಪಾರ. ಬಿಡುವಿಲ್ಲದ ಕೆಲಸ, ಸಂಸಾರದ ಜಂಜಾಟದಿoದ ಅಶಕ್ತರ ಕುರಿತು ಗಮನಹರಿಸಲಾಗದವರಿಗೆ ಹೆಚ್ಚಿನ ಒತ್ತು ಕೊಟ್ಟು ಈ ಸಂಸ್ಥೆ ಸೇವೆ ಕೊಡುತ್ತದೆ. ಮುಖ್ಯವಾಗಿ ವೃದ್ಧರು, ಅಂಗವಿಕಲರು, ರೋಗಿಗಳ ಆರೈಕೆಗಾಗಿ ಚೈತನ್ಯ ಸಂಸ್ಥೆ ಜನರನ್ನು ನೇಮಿಸುತ್ತದೆ. ನೊಂದವರ ಜೊತೆ ಸೌಜನ್ಯದಿಂದ ವರ್ತಿಸಿ ಅವರ ಆಗು-ಹೋಗುಗಳ ಬಗ್ಗೆ ಕಾಳಜಿವಹಿಸುವವರಿಗೆ ಆದ್ಯತೆ ಕೊಡಲಾಗುತ್ತದೆ. ಇದಕ್ಕಾಗಿ ರಾಜ್ಯದ ಎಲ್ಲಾ ಭಾಗಗಳಿಂದಲೂ ಉದ್ಯೋಗ ನೇಮಕಾತಿ ನಡೆಸುತ್ತದೆ. ಅಗತ್ಯವಿದ್ದವರಿಗೆ ಯೋಗ್ಯ ಸಿಬ್ಬಂದಿ ಸೇವೆ ನೀಡುವಲ್ಲಿ ಚೈತನ್ಯ ಪೌಂಡೇಶನ್ ಮುಂಚೂಣಿಯಲ್ಲಿದೆ. ಅಶಕ್ತರ ಆರೈಕೆಗಾಗಿ ಸ್ವಂತ ವೃದ್ಧಾಶ್ರಮವನ್ನು ಸಹ ಚೈತನ್ಯ ಪೌಂಡೇಶನ್ ಹೊಂದಿದೆ. ಚೈತನ್ಯ ಪೌಂಡೇಶನ್ ಸೇವೆಗೆ ಜಾತಿ-ಧರ್ಮದ ಹಂಗಿಲ್ಲ. ಲಿಂಗ ತಾರತಮ್ಯದ ಬೇದವಿಲ್ಲ. ಕನಿಷ್ಠ ಶುಲ್ಕದೊಂದಿಗೆ ಗರಿಷ್ಠ ಸೇವೆ ನೀಡುವ ಕಾರಣ ನಿತ್ಯ ನೂರಾರು ಫೋನ್ ಚೈತನ್ಯ ಕಚೇರಿಗೆ ಬರುತ್ತದೆ. ವೈದ್ಯಕೀಯ ಕ್ಷೇತ್ರದಲ್ಲಿ ಉದ್ಯೋಗ ಬಯಸಿ ಬಂದ ಯಾರನ್ನು ಸಂಸ್ಥೆಯವರು ಮರಳಿ ಕಳುಹಿಸುವುದಿಲ್ಲ. ಗರ್ಭಿಣಿ, ಬಾಣಂತಿ, ವೃದ್ಧರು, ಅಂಗವಿಕಲರು, ಬುದ್ದಿಮಾಂದ್ಯರು ಸೇರಿ ಎಲ್ಲಾ ಬಗೆಯ ಅಶಕ್ತರ ಸೇವೆ ಹಾಗೂ ಉದ್ಯೋಗ ಅಗತ್ಯವಿದ್ದವರು ಇಲ್ಲಿ ಫೋನ್ ಮಾಡಿ: 9845577311 #Sponsored - [SSLC ನಂತರ ಮುಂದೇನು? ಮಕ್ಕಳ ಭವಿಷ್ಯ ಬದಲಿಸುವ ಅರ್ಜುನ!](https://mobiletime.in/2025/09/what-next-after-sslc-arjuna-who-changes-the-future-of-children/): SSLC ನಂತರ ಮುಂದೇನು? ಎಂಬುದು ಪ್ರತಿಯೊಬ್ಬ ವಿದ್ಯಾರ್ಥಿಗಳಿಗೂ ಕಾಡುವ ಪ್ರಶ್ನೆ. ಪರೀಕ್ಷೆ ಫಲಿತಾಂಶದ ತರುವಾಯ ವಿದ್ಯಾಕಾಶಿ ಧಾರವಾಡಕ್ಕೆ ಶಿಕ್ಷಣ ಅರೆಸಿ ಹೋಗುವವರಿಗೆ ಎದುರಾಗುವುದು ನೂರಾರು ಕಾಲೇಜು. ಅದರಲ್ಲಿಯೂ, ಉತ್ತಮ ಆಡಳಿತ ಮಂಡಳಿ, ನುರಿತ ಸಿಬ್ಬಂದಿ, ಅತ್ಯುನ್ನತ ಉಪನ್ಯಾಸಕ ವರ್ಗ, ವಿಶಾಲವಾದ ಕಾಲೇಜು ಕ್ಯಾಂಪಸ್ಸಿನ ಸ್ನೇಹಮಯ ವಾತಾವರಣದಲ್ಲಿ ಕಲಿಕೆ ಬಯಸುವವರಿಗೆ ಅರ್ಜುನ ಪಿಯು ಕಾಲೇಜಿಗಿಂತಲೂ ಉತ್ತಮ ಆಯ್ಕೆ ಇಲ್ಲ! ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವನೆ ಬೆಳಸಬೇಕು ಎಂಬುದು ಅರ್ಜುನ ಕಾಲೇಜಿನ ಮುಖ್ಯ ಉದ್ದೇಶ. ಹೀಗಾಗಿ SSLC ಪಾಸಾದ ವಿದ್ಯಾರ್ಥಿಗಳನ್ನು ಪಿಯುಸಿ ವಿಜ್ಞಾನ ವಿಭಾಗಕ್ಕಾಗಿ ಅರ್ಜುನ ಕಾಲೇಜು ಕರೆಯುತ್ತದೆ. ಇಲ್ಲಿ ಪ್ರವೇಶ ಪಡೆಯುವ ವಿದ್ಯಾರ್ಥಿಗಳಿಗೆ ವೈಜ್ಞಾನಿಕ ದಾಖಲೆಗಳ ಆಧಾರದಲ್ಲಿ ಜ್ಞಾನಾರ್ಜನೆ ಮಾಡಿಸುತ್ತದೆ. ವಿದ್ಯಾರ್ಥಿಗಳು ಹಾಗೂ ವಿಜ್ಞಾನಿಗಳ ನಡುವೆ ಸಂವಾದ, ಚರ್ಚೆ, ಕ್ಷೇತ್ರ ಭೇಟಿ ಅಧ್ಯಯನಗಳಿಂದಲೂ ಅರ್ಜುನ ಕಾಲೇಜು ಪ್ರಸಿದ್ಧಿ ಪಡೆದಿದೆ. ದೇಶಕ್ಕೆ ಅತ್ಯುತ್ತಮ ವಿಜ್ಞಾನಿಗಳನ್ನು ಕೊಡುಗೆಯಾಗಿ ನೀಡುವ ಕಾಯಕದಲ್ಲಿ ಅರ್ಜುನ ಪಿಯು ಕಾಲೇಜು ಮುಂಚೂಣಿಯಲ್ಲಿದೆ. 2019ರಲ್ಲಿ 25 ವಿದ್ಯಾರ್ಥಿಗಳಿಂದ ಶುರುವಾದ ಈ ಕಾಲೇಜು ಐದು ವರ್ಷದಲ್ಲಿ ಶೈಕ್ಷಣಿಕ ವಿಷಯವಾಗಿ ಹೆಮ್ಮರವಾಗಿ ಬೆಳೆದಿದೆ. ಸುಸಜ್ಜಿತವಾದ ಕಟ್ಟಡ, ಆಟದ ಮೈದಾನ, ಅತ್ಯಾಧುನಿಕ ಪ್ರಯೋಗಾಲಯ, ಅಚ್ಚುಕಟ್ಟಾದ ವಿದ್ಯಾರ್ಥಿ ನಿಲಯ, ಕಲಿಕೆ ಜೊತೆ ವಿದ್ಯಾರ್ಥಿಗಳ ಆರೋಗ್ಯದ ಬಗ್ಗೆಯೂ ಕಾಳಜಿವಹಿಸುವುದು ಇಲ್ಲಿನ ವಿಶೇಷ. ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಧಾರವಾಡದ ಸರಸ್ವತಿಪುರದಲ್ಲಿರುವ ಅರ್ಜುನ ಕಾಲೇಜು ವಿದ್ಯೆಗೆ ಮಾತ್ರ ಸೀಮಿತವಲ್ಲ. ವಿದ್ಯೆ ಕಲಿತವರಿಗೆ ಯೋಗ್ಯ ಉದ್ಯೋಗ ದೊರಕಿಸುವುದಕ್ಕೆ ಸಹ ಪ್ರಯತ್ನಿಸುತ್ತದೆ. ಈ ಹಿನ್ನಲೆ ಪ್ರತಿ ವಿದ್ಯಾರ್ಥಿಗಳಿಗೂ ಇಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳ ಕುರಿತು ತರಬೇತಿ ನೀಡಲಾಗುತ್ತದೆ. ಈ ಕಾಲೇಜಿನಲ್ಲಿರುವ ಎಲ್ಲಾ ಉಪನ್ಯಾಸಕರು IIT/NIT/ M.Sc ಪದವಿಧೀರರು. ಸ್ಪರ್ಧಾತ್ಮಕ ಪರೀಕ್ಷೆಗಳಾದ JEE Mains/JEE, Advanced/NEET/KVPY/  KCET ತರಬೇತಿ ನೀಡುವಲ್ಲಿಯೂ ಅವರೆಲ್ಲರೂ ಪರಿಣಿತರು! ಮಕ್ಕಳ ಸಾಧನೆ ನಿರಂತರ! ಪ್ರತಿಷ್ಠಿತ ಎನ್‌ಡಿಎ ಪರೀಕ್ಷೆಯಲ್ಲಿ ಅರ್ಜುನ ಕಾಲೇಜಿನ ವಿದ್ಯಾರ್ಥಿಗಳು ನಿರಂತರ ಸಾಧನೆ ಮಾಡುತ್ತಿದ್ದಾರೆ. ಕಳೆದ ವರ್ಷ 9 ವಿದ್ಯಾರ್ಥಿಗಳು ಈ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದು, ಈ ಬಾರಿ ಪರೀಕ್ಷೆ ಎದುರಿಸಿದ ಐವರು ಅತ್ಯುತ್ತಮ ಸಾಧನೆ ಮಾಡಿದ್ದಾರೆ. ನೀಟ್ ಪರೀಕ್ಷೆಯಲ್ಲಿ 625 ಅಂಕ ಪಡೆದಿರುವ ಗೌಥಮ ಪಟೇಲ್, 601 ಅಂಕಪಡೆದು ಸಾಧನೆ ಮಾಡಿರುವ ಪ್ರಜ್ಞಾ ಈಶ್ವರಪ್ಪಗೋಳ್ ಸೇರಿ ಅನೇಕರು ಅರ್ಜುನ ಕಾಲೇಜಿನ ಕೀರ್ತಿ ಹೆಚ್ಚಿಸಿದ್ದಾರೆ. ಹೈದರಾಬಾದಿನ ಐಟಿಐನಲ್ಲಿ ಓದುತ್ತಿರುವ ಸಿದ್ದಾಪುರದ ರಜತ್ ಹೆಗಡೆ, `ತಮ್ಮ ಸಾಧನೆಗೆ ಅರ್ಜುನ ಕಾಲೇಜು ಕಾರಣ’ ಎಂದು ನೆನೆಯುತ್ತಾರೆ. ಇಲ್ಲಿ ಕಲಿತ ಪ್ರಣವ ಕಾಮತ್ ವಾರಣಾಸಿಯಲ್ಲಿ ಐಟಿಐ ಪ್ರವೇಶ ಪಡೆದಿದ್ದಾರೆ. ಧಾರವಾಡ ಐಟಿಐ ಪ್ರವೇಶಿಸಿದ ಅಹ್ಮದ್ ನಬಿಲ್, ಕಲ್ಬುರ್ಗಿಯ ನೈಟಿ ಕಾಲಿಕಟ್ ಪ್ರವೇಶಿಸಿದ ಸಾತ್ವಿಕ್ ಬಲ್ಬುರ್ಗಿ, ಐಐಐಟಿ ಹೈದ್ರಾಬಾದಿನಲ್ಲಿರುವ ನಂದನ್ ಕಾಮತ್, ಧಾರವಾಡದ ಐಐಐಟಿಯಲ್ಲಿರುವ ತೇಜಸ್ವಿ ಮದ್ಗುಣಿ, ಹರ್ಷ ಕುಡ್ತರರ್ಕರ ಸಹ ಅರ್ಜುನ ಕಾಲೇಜಿನ ಹಿರಿಮೆಯ ಬಗ್ಗೆ ಮಾತನಾಡುತ್ತಾರೆ. ಅರ್ಜುನ ಕಾಲೇಜಿನ ಮೂವರು ವಿದ್ಯಾರ್ಥಿಗಳು ಈ ವರ್ಷ ಸರ್ಕಾರಿ ಮೆಡಿಕಲ್ ವಿಭಾಗದಲ್ಲಿ ಸ್ಥಾನ ಪಡೆದಿದ್ದಾರೆ. ಸಾಮಾನ್ಯ ವಿದ್ಯಾರ್ಥಿಯನ್ನು ಸಂಪನ್ಮೂಲ ವ್ಯಕ್ತಿಯನ್ನಾಗಿ ರೂಪಿಸುವಲ್ಲಿ ಧಾರವಾಡದ ಅರ್ಜುನ ಪಿಯು ವಿಜ್ಞಾನ ಕಾಲೇಜಿನ ಕೊಡುಗೆ ಅಪಾರ. ನಿಮ್ಮ ಮಗುವನ್ನು ಭವಿಷ್ಯದ ವಿಜ್ಞಾನಿಯನ್ನಾಗಿಸಲು ಅರ್ಜುನ ಕಾಲೇಜಿಗೆ ಬನ್ನಿ.. ಡಿಸೆಂಬರ್ 22 ಹಾಗೂ 29ರಂದು ಧಾರವಾಡದ ಅರ್ಜುನ ಕಾಲೇಜಿನಲ್ಲಿ ಪ್ರವೇಶಾತಿ ಪರೀಕ್ಷೆ ನಡೆಯಲಿದೆ. ಇದರೊಂದಿಗೆ ಡಿಸೆಂಬರ್ 25ರಂದು ಬೆಳಗ್ಗೆ 10 ಗಂಟೆಗೆ ಶಿರಸಿಯ ಮಹಾಲಿಂಗಪ್ಪಭೂಮ ಶಾಲೆಯಲ್ಲಿ ಪ್ರವೇಶ ಪರೀಕ್ಷೆಯನ್ನು ಆಯೋಜಿಸಲಾಗಿದೆ. ಅದೇ ದಿನ ಮಧ್ಯಾಹ್ನ 3 ಗಂಟೆಗೆ ಯಲ್ಲಾಪುರದ ಸರ್ಕಾರಿ ಪಿಯು ಕಾಲೇಜಿನಲ್ಲಿ ಪ್ರವೇಶಾತಿ ಪರೀಕ್ಷೆ ನಡೆಯಲಿದೆ. ಜನವರಿ 5ರಂದು ಕುಮಟಾದಲ್ಲಿ ಪರೀಕ್ಷೆಯನ್ನು ನಡೆಸಲಾಗುತ್ತಿದೆ. ಇಲ್ಲಿ ಭೇಟಿ ಕೊಡಿ: ಅರ್ಜುನ ಪದವಿಪೂರ್ವ ಕಾಲೇಜು ಶಾನಭಾಗ ಕಟ್ಟಡ, ಟೋಲ್ ನಾಕಾ ಸಮೀಪ ಪಿಬಿ ರಸ್ತೆ, ಸರಸ್ವತಿಪುರ, ಧಾರವಾಡ ವೆಬ್‌ಸೈಟ್ ವೀಕ್ಷಣೆಗೆ ಇಲ್ಲಿ ಕ್ಲಿಕ್ಕಿಸಿ:  https://www.arjunaedugroups.com/ ಇನ್ನಷ್ಟು ಮಾಹಿತಿಗೆ ಇಲ್ಲಿ ಫೋನ್ ಮಾಡಿ: 9845845796, 8073371598, 8073211871 #sponsored     - [ಮನೆ ಮನೆಯಲ್ಲಿಯೂ ಮನೆ ಮಾತಾಗಿರುವ ಕೆ ಎಸ್ ಫುಡ್ ಪ್ರೊಡೆಕ್ಟ್](https://mobiletime.in/2025/09/ks-food-product-is-a-household-word-in-every-household/): ಕೆ ಎಸ್ ಫುಡ್ ಪ್ರೊಡೆಕ್ಟ್ ಇದೀಗ ರಾಜ್ಯದ ಎಲ್ಲಡೆ ವಿಸ್ತರಿಸಿಕೊಂಡಿದೆ. ಗುಣಮಟ್ಟದ ಉತ್ಪನ್ನವನ್ನು ಎಲ್ಲಡೆ ವಿತರಿಸುವ ಹೊಣೆ ಹೋರುವವರಿಗಾಗಿ ಹುಡುಕಾಟವೂ ನಡೆದಿದೆ. ಒಂದುವರೆ ವರ್ಷದ ಹಿಂದೆ ಯಲ್ಲಾಪುರದ ಕಾಳಮ್ಮನಗರದ ಕೃಷ್ಣ ಸುರೇಮಾನ್ ಕುಟುಂಬದವರು `ಕೆ ಎಸ್ ಫುಡ್ ಪ್ರೊಡೆಕ್ಟ್’ ಎಂಬ ಆಹಾರ ಪದಾರ್ಥಗಳ ತಯಾರಿಕೆಯನ್ನು ಶುರು ಮಾಡಿದರು. ಒಂದು ಕೆಜಿ ಶೆಂಗಾ ಪುಡಿಯಿಂದ ಶುರುವಾದ ಈ ಮಾರುಕಟ್ಟೆ ಇದೀಗ ಉತ್ತರ ಕನ್ನಡ ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿಯೂ ಆವರಿಸಿಕೊಂಡಿದೆ. ವಿವಿಧ ತಾಲೂಕಿನ ಸುಪರ್ ಮಾರ್ಟ ಹಾಗೂ ಕಿರಾಣಿ ಅಂಗಡಿಗಳಲ್ಲಿ ಈ ಉತ್ಪನ್ನ ಸಿಗುತ್ತದೆ. ಅದಾಗಿಯೂ ಎಲ್ಲಾ ತಾಲೂಕಿನ ಎಲ್ಲಾ ಮಳಿಗೆಗಳಲ್ಲಿ ಈ ಉತ್ಪನ್ನ ಪೂರೈಸುವ ಕನಸಿದ್ದು, ಅದಕ್ಕಾಗಿ ಡೀಲರ್’ಗಳ ಹುಡುಕಾಟ ನಡೆದಿದೆ. ಎಫ್‌ಎಸ್‌ಎಸ್‌ಐ ಪರವಾನಿಗೆ ಪಡೆದಿರುವ ಕೆ ಎಸ್ ಪುಡ್ ಪ್ರೊಡೆಕ್ಟ ಪ್ರಸ್ತುತ ಆರು ಬಗೆಯ ಉತ್ಪನ್ನಗಳನ್ನು ಸಿದ್ಧಪಡಿಸುತ್ತಿದೆ. ಬ್ಯಾಡಗಿಖಾರದ ಪುಡಿಯಿಂದ ಸಿದ್ಧವಾಗುವ ಸಾಂಬಾರಪುಡಿ ಅತ್ಯಂತ ಪ್ರಸಿದ್ಧಿ. ಬಗೆ ಬಗೆಯ ಖಾದ್ಯಕ್ಕೂ ಇದು ಯೋಗ್ಯ. ಇದರೊಂದಿಗೆ ಮಸಾಲ ಖಾರದಪುಡಿ, ಶೆಂಗಾ ಚಟ್ನಿಪುಡಿ, ಪುಠಾಣಿ ಚಟ್ನಿಪುಡಿ, ಅಗಸೆ ಚಟ್ನಿಪುಡಿ ಹಾಗೂ ಗುರೆಳ್ಳು ಚಟ್ನಿಪುಡಿ ಬಾಯಲ್ಲಿ ನೀರು ತರಿಸುತ್ತದೆ. ನಿಮ್ಮ ಊರಿನಲ್ಲಿ ಕೆ ಎಸ್ ಪುಡ್ ಪ್ರಾಡೆಕ್ಟ್ ಮಳಿಗೆ ಸ್ಥಾಪನೆ ಹಾಗೂ ಪೂರೈಕೆಗಾಗಿ ಇಲ್ಲಿ ಫೋನ್ ಮಾಡಿ: 9741814274 #Sponsored - [ಸೇವೆ ಜೊತೆ ಸಂಬಳ | ತರಬೇತಿಯೊಂದಿಗೆ ಉದ್ಯೋಗ: ಇಲ್ಲಿ ಕನಿಷ್ಟ ವೇತನವೇ 25 ಸಾವಿರ ರೂ!](https://mobiletime.in/2025/09/employment-with-service-25-thousand-rupees-salary-during-the-training-period-itself/): ವೈದ್ಯಕೀಯ ಕ್ಷೇತ್ರದಲ್ಲಿ ಆಸಕ್ತಿ ಹೊಂದಿದವರಿಗೆ ದಾಸ್ ಸೇವಾ ಸಂಸ್ಥೆ ಉದ್ಯೋಗದ ದಾರಿ ತೋರುತ್ತಿದೆ. ಕಳೆದ 23 ವರ್ಷಗಳಿಂದ ರೋಗಿ ಹಾಗೂ ಆರೈಕೆದಾರರ ನಡುವೆ ಸಂಪರ್ಕ ಕೊಂಡಿಯಾಗಿ ಈ ಸಂಸ್ಥೆ ಕೆಲಸ ಮಾಡುತ್ತಿದೆ. ದಾಸ್ ಸೇವಾ ಸಂಸ್ಥೆಯ ಮುಖ್ಯ ಕಚೇರಿ ಮಂಗಳೂರು. ಅದಾಗಿಯೂ, ಬೆಂಗಳೂರು, ಹುಬ್ಬಳ್ಳಿ, ಬೆಳಗಾವಿ, ಶಿವಮೊಗ್ಗ, ಹಾಸನ, ದಾವಣಗೆರೆ, ಬಳ್ಳಾರಿ ಸೇರಿ ರಾಜ್ಯದ ನಾನಾ ಭಾಗಗಳಲ್ಲಿ ಈ ಸಂಸ್ಥೆ ಕಾರ್ಯ ನಿರ್ವಹಿಸುತ್ತದೆ. ಅಭ್ಯರ್ಥಿಗೆ ಯೋಗ್ಯ ತರಬೇತಿ ನೀಡುವ ದಾಸ್ ಸೇವಾ ಸಂಸ್ಥೆ ತರಬೇತಿಯ ಅವಧಿಯಲ್ಲಿಯೇ 25 ಸಾವಿರ ವೇತನ ನೀಡುವ ಭರವಸೆ ನೀಡಿದೆ. ರೋಗಿ ಹಾಗೂ ಆರೈಕೆದಾರರ ನಡುವೆ ಭಾವನಾತ್ಮಕ ಸಂಬoಧ ಬೆಸೆಯುವಲ್ಲಿ ಈ ಸಂಸ್ಥೆ ಸೇತುವೆಯಾಗಿದೆ. ದಾಸ್ ಸೇವಾ ಸಂಸ್ಥೆಗೆ ಅನಿಲ ದಾಸ್ ರೂವಾರಿ. ಹಲವು ನರ್ಸಿಂಗ್ ಹೋಂ ಜೊತೆ ಅವರು ನಿರಂತರ ಸಂಪರ್ಕದಲ್ಲಿದ್ದಾರೆ. ಪುರುಷ ಹಾಗೂ ಮಹಿಳಾ ಅಭ್ಯರ್ಥಿಗಳಿಗೆ ಅಗತ್ಯ ತರಬೇತಿ ನೀಡಿ ಅವರಿಗೆ ತಕ್ಕ ಉದ್ಯೋಗವನ್ನು ಒದಗಿಸುತ್ತಾರೆ. ಕನಿಷ್ಟ 7ನೇ ತರಗತಿ ಮುಗಿಸಿದ ಯಾರು ಬೇಕಾದರೂ ಇಲ್ಲಿ ತರಬೇತಿಗೆ ಬರಬಹುದು. ಉಚಿತ ಊಟ-ವಸತಿ ಜವಾಬ್ದಾರಿಯನ್ನು ಅವರೇ ನೋಡಿಕೊಳ್ಳುತ್ತಾರೆ. ತರಬೇತಿ ಅವಧಿ ಮುಗಿದ ನಂತರ ಆಸ್ಪತ್ರೆ, ವೃದ್ಧಾಶ್ರಮ ಸೇರಿ ವಿವಿಧ ಕಡೆ ಖಾಯಂ ಉದ್ಯೋಗವನ್ನು ಕಲ್ಪಿಸುತ್ತಾರೆ. ಈ ಸಂಸ್ಥೆಯ ಕಾಯಕ ಮೆಚ್ಚಿ ಗ್ಲೋಬಲ್ ಸ್ಕೋಲರ್ ಪೌಂಡೇಶನ್ `ಉದ್ಯೋಗ ರತ್ನ’ ಎಂಬ ಪ್ರಶಸ್ತಿ ನೀಡಿ ಗೌರವಿಸಿದೆ. ಗರ್ಭಿಣಿ, ಬಾಣಂತಿ, ವೃದ್ಧರು, ಅಶಕ್ತರ ಸೇವೆ ಮಾಡಲು ಆಸಕ್ತಿ ಇದ್ದವರಿಗೆ ದಾಸ್ ಸಂಸ್ಥೆ ಸಹಕಾರಿ. ಮಗು-ಬಾಣಂತಿ ಆರೈಕೆ, ವೃದ್ಧ-ಅಶಕ್ತರ ಸಲಹೆಗೆ ಜನ ಬೇಕಾದವರೂ ಈ ಸಂಸ್ಥೆಗೆ ಕರೆ ಮಾಡಬಹುದು. ದಾಸ್ ಸೇವಾ ಸಂಸ್ಥೆಯ ಸೇವೆ ನಿಮಗೆ ಅಗತ್ಯವಿದ್ದರೆ ಈಗಲೇ ಫೋನ್ ಮಾಡಿ: 9845495055 #Sponsored - [ಕಾರವಾರ | ಕರಾವಳಿ ಮೀನು ಖಾದ್ಯಕ್ಕೆ ಮತ್ತೊಂದು ಹೊಟೇಲ್!](https://mobiletime.in/2025/09/karwar-another-hotel-for-coastal-fish-dishes/): ಕರಾವಳಿಯ ಮೀನು ಖಾದ್ಯಕ್ಕೆ ಸೋಲದ ನಾಲಿಗೆಯಿಲ್ಲ. ಅದರಲ್ಲಿಯೂ ಕಾರವಾರದಲ್ಲಿ ಬಹುತೇಕರು ಮೀನು ಇಲ್ಲದೇ ಜನ ಊಟ ಮಾಡುವುದಿಲ್ಲ! ಕಾರವಾರ ಬಸ್ ನಿಲ್ದಾಣದ ಹತ್ತಿರ ಹಳದಿಪುರ ಪೆಟ್ರೋಲ್ ಬಂಕ್ ಬಳಿ ಕರಾವಳಿ ಖಾದ್ಯಗಳನ್ನು ಒಳಗೊಂಡ `ಡ್ರೀಮ್ ಹೊಟೇಲ್’ನ್ನು ಭಾನುವಾರ ಉದ್ಘಾಟನೆಯಾಗಿದೆ. ಕುಮಟಾ ಮದ್ಗುಣಿಯ ಸಚಿನ್ ಎಂ ಪಟಗಾರ ಹಾಗೂ ರಾಘವೇಂದ್ರ ಪ್ರಕಾಶ ತೆಂಡುಲ್ಕರ್ ಜೊತೆಯಾಗಿ ಈ ಉದ್ಯಮಕ್ಕೆ ಪಾದಾರ್ಪಣೆ ಮಾಡಿದರು. ಮೊದಲು ಅಂಗಡಿ ವ್ಯಾಪಾರ ನಡೆಸುತ್ತಿದ್ದ ಅವರು ಹೊಟೇಲ್ ಮಾಡುವುದಾಗಿ ಹೇಳಿದಾಗ ಅವರು ಕುಟುಂಬದವರು ಸಹಕಾರ ನೀಡಿದ್ದಾರೆ. `ಸಚಿನ್ ಹಾಗೂ ರಾಘವೇಂದ್ರ ಅವರ ಅಮ್ಮನೇ ಅಲ್ಲಿ ಮುಖ್ಯ ಅಡುಗೆ ತಯಾರಿಕರಾಗಿದ್ದು, ಮೀನು ಖಾದ್ಯಗಳನ್ನು ಸಿದ್ಧಪಡಿಸುವಲ್ಲಿ ಅವರು ಎತ್ತಿದ ಕೈ. ಹೀಗಾಗಿ ಈ ಹೊಟೇಲ್’ಗೆ ಹೋದವರಿಗೆ ಅಮ್ಮನ ಕೈ ರುಚಿಯ ನೆನಪಾಗುತ್ತದೆ’ ಎಂದು ಅಕ್ತಾರ್ ಸಯ್ಯದ್ ಅನುಭವ ಹಂಚಿಕೊoಡರು. `ಭಾನುವಾರ ನಾನು ವೆಜ್ ಮೊಮ್ಮೋಸ್’ ಫಿಂಗರ್ ಚಿಪ್ಸ ಹಾಗೂ ದಂ ಬಿರಿಯಾನಿ ಅಸ್ವಾದಿಸಿದೆ. ಹೊಸ ಸಾಹಸಕ್ಕೆ ಇಳಿದ ತರುಣರು ಗುಣಮಟ್ಟದ ಆಹಾರ ನೀಡುವಲ್ಲಿ ಸಫಲರಾಗಿದ್ದಾರೆ’ ಎಂದವರು ಅಭಿಪ್ರಾಯ ವ್ಯಕ್ತಪಡಿಸಿದರು. ಭಾನುವಾರ ಸಂತೆ ಮಾರುಕಟ್ಟೆಗೆ ಬಂದ ಅನೇಕರು ಇಲ್ಲಿ ತೆರಳಿ ಊಟ ಸವಿದರು. ಸಂಜೆ ವೇಳೆ ಹಲವರು ಭೇಟಿ ನೀಡಿ ಸಂತಸ ವ್ಯಕ್ತಪಡಿಸಿದರು. - [ಮನೆಲೇ ಮಾಡಿದ್ದು... ಅಮ್ಮನೇ ಮಾಡಿದ್ದು... ನೀವು ಬಳಸಿ.. ನಿಮ್ಮವರಿಗೂ ತಿಳಿಸಿ!](https://mobiletime.in/2025/09/homemade-beauty-enhancer/): 13 ಗಿಡ ಮೂಲಿಕೆಯಿಂದ ಸಿದ್ದಪಡಿಸಿದ ತಯಾರಿಸಿದ ಸೌಂದರ್ಯ ವರ್ಧಕ ಮಾರುಕಟ್ಟೆಯಲ್ಲಿ ಭಾರೀ ಸದ್ದು ಮಾಡುತ್ತಿದೆ. ಸೌಂದರ್ಯ ವರ್ಧಕದ ಬಗ್ಗೆ ಕಾನೂನು ಸಲಹೆಗಾರರಾದ ಸಿರಿ ವಾನಳ್ಳಿ ಅವರು ಮಾಡಿದ ವಿಡಿಯೋ ಸಹ ಅಷ್ಟೇ ಪ್ರಮಾಣದಲ್ಲಿ ವೈರಲ್ ಆಗಿದೆ. ಕೆಮಿಕಲ್ ಉತ್ಪನ್ನಗಳ ಹಾವಳಿ ನಡುವೆ ಸಿರಿ ವಾನಳ್ಳಿ ಅವರ ತಾಯಿ ನೈಸರ್ಗಿಕ ಉತ್ಪನ್ನಗಳನ್ನು ಬಳಸಿ ಮಾಡಿದ `Sparkle’ ಎಂಬ ಬ್ರಾಂಡ್ ಅಡಿ ಸಿಗುವ ಉತ್ಪನ್ನ ಇದಾಗಿದೆ. ಸಂಪೂರ್ಣ ನೈಸರ್ಗಿಕ ವಿಧಾನದಲ್ಲಿ ತಯಾರಾದ ಇದನ್ನು ಬಳಸಿದರೆ ಮೊಡವೆ, ಪಿಗ್ಮೆಂಟೇಶನ್  ದೂರಮಾಡಬಹುದು. ಮುಖದ ಹೊಳಪು ಹಾಗೂ ತ್ವಚೆ ಕಾಪಾಡಲು ಸಹ ಈ ಉತ್ಪನ್ನ ಅತ್ಯಂತ ಸಹಕಾರಿ. 150ರೂ ಮಾತ್ರ. ಹೀಗಾಗಿ ಇತರೆ ಕೆಮಿಕಲ್ ಉತ್ಪನ್ನಗಳಷ್ಟು ಇದು ದುಬಾರಿಯೂ ಅಲ್ಲ! 7019240128ಗೆ ಕರೆ ಮಾಡಿ, ಉತ್ಪನ್ನ ಉಪಯೋಗಿಸಿ ನೋಡಿ.. ಈ ಮಾಹಿತಿ ಉಪಯುಕ್ತ ಅನಿಸಿದರೆ ನಿಮ್ಮ ಬಳಗದಲ್ಲಿ ಶೇರ್ ಮಾಡಿ.. ಉತ್ಪನ್ನದ ಉಪಯೋಗದ ಬಗ್ಗೆ ಸಿರಿ ವಾನಳ್ಳಿ ಅವರು ತಿಳಿಸಿದ ಚಂದದ ವಿಡಿಯೋ ಇಲ್ಲಿ ನೋಡಿ..     - [ಸ್ವಂತ ಊರಿನಲ್ಲಿಯೇ ಸ್ವ ಉದ್ಯೋಗ: ಕೃಷಿ ಸೇವೆಗೆ `ಭರತ್ ಟೂಲ್ಸ್' ಹೆಸರುವಾಸಿ!](https://mobiletime.in/2025/09/self-employment-in-your-own-hometown-bharat-tools-is-famous-for-its-agricultural-services/): ಚಿಕ್ಕದೊಂದು ಬ್ರೆಶ್ ಕಟರ್ ರಿಪೇರಿಗೆ ಹುಬ್ಬಳ್ಳಿ-ಧಾರವಾಡ ಸುತ್ತಾಡಿಕೊಂಡು ಬಂದ ಯಲ್ಲಾಪುರದ ಪ್ರಶಾಂತ ನಾಯ್ಕ ಕೊನೆಗೆ ಶಿರಸಿಯ `ಭರತ್ ಟೂಲ್ಸ್’ ಮುಂದೆ ನಿಂತಿದ್ದರು. ಎಲ್ಲಿಯೂ ರಿಪೇರಿ ಆಗದ ಮೋಟಾರ್ ಅರ್ದ ದಿನದ ಒಳಗೆ ಅಂಕಿತ ಹೆಗಡೆ ದುರಸ್ತಿ ಮಾಡಿಕೊಟ್ಟಿದ್ದರು. ಇದಕ್ಕಾಗಿ ಅವರು ಪಡೆದ ಶುಲ್ಕ 350ರೂ! ಶಿರಸಿ ಸಾಲಕಣಿಯ ಗಣಪತಿ ಸಹ ಪೇಟೆ ಕಡೆ ಬಂದಾಗ `ಭರತ್ ಟೂಲ್ಸ್’ ಕಡೆ ಬಾರದೇ ಮನೆಗೆ ಮರಳುವುದಿಲ್ಲ. ಆ ದಿನ ಯಾವುದೇ ವ್ಯವಹಾರ ಇಲ್ಲದಿದ್ದರೂ ಒಮ್ಮೆ ಮಳಿಗೆಗೆ ಬಂದು ಅಂಕಿತ ಹೆಗಡೆಯರನ್ನು ಮಾತನಾಡಿಸುವುದು ಅವರ ರೂಢಿ. ಸಣ್ಣಪುಟ್ಟ ರಿಪೇರಿಗಳಿಂದ ಹಿಡಿದು ದೊಡ್ಡ ದೊಡ್ಡ ಸಾಮಗ್ರಿ ಖರೀದಿಯವರೆಗೂ ಗಣಪತಿಯವರು ಅನೇಕರನ್ನು ಇವರಲ್ಲಿ ಕಳುಹಿಸುತ್ತಾರೆ. ಹೀಗೆ ಉತ್ತಮ ಸೇವೆ ಗಮನಿಸಿ ಅಂಕಿತ್ ಹೆಗಡೆ ಅವರಿಗೆ ಬೆಂಬಲಿಸುತ್ತಿರುವವವರು ಹಲವರಿದ್ದಾರೆ. ಸಾಲ್ಕಣಿ ಬಳಿಯಿರುವ ಕಳಲೆಮಕ್ಕಿಯ ಅಂಕಿತ್ ಹೆಗಡೆ ಐಟಿಐ ಓದಿದ್ದಾರೆ. ಕಾಲೇಜು ಮುಗಿಸಿದ ನಂತರ ಪ್ರತಿಷ್ಟಿತ ಕಂಪನಿಗಳಲ್ಲಿ ದೊಡ್ಡ ಸಂಬಳದ ಉದ್ಯೋಗ ಸಿಕ್ಕರೂ ಆ ಅವಕಾಶವನ್ನು ನಿರಾಕರಿಸಿದ ಅಂಕಿತ್ ಹೆಗಡೆ ಯಲ್ಲಾಪುರ ರಸ್ತೆಯ ಶೆಟ್ಟಿ ಕಾಂಪ್ಲೇಕ್ಸಿನಲ್ಲಿ ಪುಟ್ಟದೊಂದು ಮಳಿಗೆ ನಡೆಸುತ್ತಿದ್ದಾರೆ. ಪವನ್ ಬಜಾಜ್ ಆಟೋ ಶೋ ರೂಂ ಎದುರು ಕಾಣುವ `ಭರತ್ ಟೂಲ್ಸ್’ನಲ್ಲಿ ಅವರು ಇಡೀ ದಿನ ಕಳೆಯುತ್ತಾರೆ. `ಭರತ್’ ಹೆಸರಿನಲ್ಲಿಯೇ ಮೋಟಾರು ತಯಾರಿಕೆಯ ಬ್ರಾಂಡ್ ಮಾಡುವ ವಿಚಾರವನ್ನೂ ಅವರು ಹೊಂದಿದ್ದಾರೆ. ಕಾಲೇಜು ನಂತರ ಮೆಕಾನಿಕ್ ಅಂಗಡಿಯೊoದರಲ್ಲಿ ತರಬೇತಿಪಡೆದ ಅಂಕಿತ್ ಹೆಗಡೆ ನಂತರ 10 ಲಕ್ಷ ರೂ ಹೂಡಿಕೆ ಮಾಡಿ ಸ್ವಂತ ಮಳಿಗೆ ಶುರು ಮಾಡಿದರು. ಗ್ರಾಮೀಣ ಭಾಗದಲ್ಲಿ ಕೃಷಿಕರು ಅನುಭವಿಸುತ್ತಿರುವ ಕಷ್ಟ ನೋಡಿದ ಅವರು ಕೃಷಿಗೆ ಅಗತ್ಯವಿರುವ ಸಲಕರಣೆಗಳ ಸೇವೆಗೆ ಮುಂದಾದರು. ಪ್ರಸ್ತುತ ಕೃಷಿ ಚಟುವಟಿಕೆಗಳಿಗೆ ಬೆನ್ನೆಲುಬಾಗಿರುವ ಅವರು ಕೃಷಿಗೆ ಸಂಬoಧಿಸಿದ ಎಲ್ಲಾ ಉಪಕರಣಗಳ ದುರಸ್ತಿ ಮಾಡುತ್ತಾರೆ. ಜೊತೆಗೆ ಅಗತ್ಯ ಸಾಮಗ್ರಿಗಳ ಮಾರಾಟದಲ್ಲಿಯೂ ಮುಂದಿದ್ದಾರೆ. ಜನರೇಟರ್ ಸೇರಿದಂತೆ ವಿವಿಧ ಪರಿಕ್ಕರಗಳು ಅವರಲ್ಲಿ ಬಾಡಿಗೆ ಆಧಾರದಲ್ಲಿಯೂ ಸಿಗುತ್ತದೆ. ಸಣ್ಣ ಮಿಕ್ಸರಿನಿಂದ ಹಿಡಿದು ದೊಡ್ಡ ದೊಡ್ಡ ಯಂತ್ರಗಳವರೆಗೆ ಎಲ್ಲವನ್ನು ದುರಸ್ತಿ ಮಾಡಿಕೊಡುವಲ್ಲಿ ಅಂಕಿತ್ ಹೆಗಡೆ ಮುಂದಿದ್ದಾರೆ. ಪ್ರಸ್ತುತ ಹಾಸನದ ಬಾಲಸುಬ್ರಹ್ಮಣ್ಯ ಅವರೊಂದಿಗೆ ಮಾತುಕತೆ ನಡೆಸಿರುವ ಅಂಕಿತ್ ಹೆಗಡೆ ಅಗತ್ಯವಿದ್ದವರಿಗೆ ಅತ್ಯಂತ ಸ್ಪರ್ಧಾತ್ಮಕ ದರದಲ್ಲಿ `ಹೈಟೆಕ್ ದೋಟಿ’ಯನ್ನು ವಿತರಿಸುತ್ತಿದ್ದಾರೆ. ಇತರೆ ಮಳಿಗೆಗಳಲ್ಲಿ 7 ಸಾವಿರ ರೂ ಬೆಲೆಗೆ ಸಿಗುವ ಕೆಲ ಯಂತ್ರೋಪಕರಣಗಳು `ಭರತ್ ಟೂಲ್ಸ್’ನವರಲ್ಲಿ 3500ರೂಪಾಯಿಗೆ ಸಿಗುತ್ತದೆ. ಇಲ್ಲಿನ ವಸ್ತುಗಳು ದರದಲ್ಲಿ ಕಡಿಮೆ ಇದೆಯೇ ವಿನ: ಗುಣಮಟ್ಟದಲ್ಲಿ ಕಡಿಮೆ ಇಲ್ಲ. `ಭರತ್ ಟೂಲ್ಸ್’ನ ವಿಳಾಸ: ಅಂಕಿತ್ ಹೆಗಡೆ ಶೆಟ್ಟಿ ಕಾಂಪ್ಲೇಕ್ಸ್, ಯಲ್ಲಾಪುರ ರಸ್ತೆ ಶಿರಸಿ – 581402 ಫೋನ್ ನಂ: 8310501788 ಅಥವಾ 9900244823 #Sponsored - [ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್' ಜೊತೆ ಕೈ ಜೋಡಿಸಿ!](https://mobiletime.in/2025/09/join-hands-with-trek-using-a-digital-trick/): `ಪ್ರವಾಸೋದ್ಯಮ ನಕ್ಷೆಯಲ್ಲಿ ಉತ್ತರ ಕನ್ನಡ ಜಿಲ್ಲೆ ಚಿನ್ನದ ಗುರುತು. ದೇಶ-ವಿದೇಶಗಳಿಂದ ಪ್ರವಾಸಿಗರನ್ನು ಸೆಳೆಯುವ ಶಕ್ತಿ ಈ ಜಿಲ್ಲೆಗಿದೆ. ಆದರೆ, ಇಲ್ಲಿಗೆ ಬರುವ ಪ್ರವಾಸಿಗರನ್ನು ಉಳಿಸಿಕೊಳ್ಳುವ ಆತಿಥ್ಯವನ್ನು ನೀಡುವ Resort, Homestay’ಗಳು ಸಾಕಷ್ಟು ಇದ್ದರೂ ಕೂಡ ಅವರು ಮತ್ತೆ ಮತ್ತೆ ಇಲ್ಲಿಗೆ ಬರುವಂತೆ ಮಾಡುವ ಶಕ್ತಿಯ ಕೊರತೆಯಿದ್ದು, ಅವರನ್ನು ಮತ್ತೆ ಮತ್ತೆ ಆಕರ್ಷಿಸುವ ಕೆಲಸ  ಪ್ರವಾಸೋದ್ಯಮ ಕ್ಷೇತ್ರದಲ್ಲಿರುವವರಿಗೆ ಆ ಬಗ್ಗೆ ತರಬೇತಿ ಹಾಗೂ ಮಾಹಿತಿ ನೀಡುವ ಸಂಸ್ಥೆ ನಮ್ಮದು’ ಎನ್ನುತ್ತ ಮಾತು ಶುರು ಮಾಡಿದರು ಶಿರಸಿಯ ಸುಹಾಸ್. ಕಳೆದ 20 ವರ್ಷಗಳಿಂದ ಪ್ರವಾಸೋದ್ಯಮದಲ್ಲಿ ನಾನಾ ಬಗೆಯ ಸಾಹಸಗಳನ್ನು ಮಾಡಿದ ಸುಹಾಸ್  20 ವರ್ಷಗಳಿಂದ `ಟ್ರೆಕ್’ ಎಂಬ ಸಂಸ್ಥೆಯನ್ನು ಮುನ್ನೆಡೆಸುತ್ತಿದ್ದಾರೆ. ಪ್ರವಾಸೋದ್ಯಮ ಚಟುವಟಿಕೆಯಲ್ಲಿರುವವರಿಗೆ ಸೂಕ್ತ ಮಾರ್ಗದರ್ಶನ, ಡಿಜಿಟಲ್ ಮಿಡಿಯಾ (Digital Media) ಬಳಕೆ, ರೆಸಾರ್ಟ ಹಾಗೂ ಹೋಂ ಸ್ಟೇ ಸಿಬ್ಬಂದಿಗೆ ಅತಿಥಿ ಸತ್ಕಾರ ಕುರಿತು ಸೂಕ್ತ ತರಬೇತಿ ನೀಡುವುದು ಸಂಸ್ಥೆಯ ಮುಖ್ಯ ಉದ್ದೇಶ. ಜೊತೆಗೆ ರೆಸಾರ್ಟಗಳಿಗೆ ಪ್ರವಾಸಿಗರನ್ನು ಆಕರ್ಷಿಸುವ ವಿಧಾನಗಳ ಬಗ್ಗೆಯೂ ಅವರು ಹೇಳಿಕೊಡುತ್ತಾರೆ. ಎಲ್ಲಾ ಬಗೆಯ ಸಾಮಾಜಿಕ ಜಾಲತಾಣ ವಿಷಯದಲ್ಲಿ `ಟ್ರೆಕ್’ ಸಂಸ್ಥೆ Resort ಗಳ ಬೆನ್ನೆಲುಬಾಗಿ ನಿಲ್ಲುತ್ತದೆ. ಪ್ರವಾಸೋದ್ಯಮ ದ ಡಿಜಿಟಲ್ ಮೀಡಿಯವನ್ನು ಸಂಪೂರ್ಣವಾಗಿ ಕೌಶ್ಯಲ್ಯತೆಯ ಮೂಲಕ ನಡೆಸುವ ಒಂದು ಕೌಶಲ್ಯಯುತ ತಂಡವೇ ಅವರ ಜೊತೆಯಲ್ಲಿ ಇದೆ. ಪ್ರವಾಸೋದ್ಯಮ ಚಟುವಟಿಕೆಗಳಲ್ಲಿ ತೊಡಗಿರುವವರಿಗೆ ಪ್ರವಾಸಿಗರನ್ನು ಆಕರ್ಷಿಸಲು ಅಗತ್ಯವಿರುವ ವಿಡಿಯೋ, ಲೇಖನಗಳನ್ನು ಈ ಸಂಸ್ಥೆ ಸಿದ್ಧಪಡಿಸಿಕೊಡುತ್ತದೆ. ಸ್ಥಳೀಯ ಆಹಾರ ಉತ್ಪನ್ನಗಳ ಬಗ್ಗೆ ಪರ ಊರಿನವರಿಗೆ ಪ್ರೀತಿ ಹುಟ್ಟಿಸಿ ಉತ್ತಮ ಮಾರುಕಟ್ಟೆಯನ್ನು ಒದಗಿಸುತ್ತದೆ. ಒಟ್ಟಾರೆಯಾಗಿ `ಡಿಜಿಟಲ್ ರೆಪ್ಯುಟೇಶನ್ ಮ್ಯಾನೇಜಮೆಂಟ್’ (Digital Reputation Management) ಕೆಲಸವನ್ನು ಕಳೆದ 7 ವರ್ಷಗಳಿಂದ `ಟ್ರೆಕ್’ ಸಂಸ್ಥೆ ಮಾಡುತ್ತಿದೆ. ಕರ್ನಾಟಕ ಹಾಗೂ ಮಹಾರಾಷ್ಟದ 70ಕ್ಕೂ ಅಧಿಕ Resortಗಳಿಗೆ ತೃಪ್ತಿ ಆಗುವ ರೀತಿ ಸೇವೆ ನೀಡುತ್ತಿರುವ ಹಿರಿಮೆ `ಟ್ರೆಕ್’ ಸಂಸ್ಥೆಯದ್ದಾಗಿದೆ. ಅನೇಕ Resortಗಳಿಗೆ ಸಾಮಾಜಿಕ ಜಾಲತಾಣಗಳ ಬಗ್ಗೆ ಹೆಚ್ಚಿನ ಅರಿವಿಲ್ಲ. ಕೆಲವರಿಗೆ ಅರಿವಿದ್ದರೂ ಅದರ ಮೂಲಕ ಪ್ರವಾಸಿಗರನ್ನು ಸೆಳೆಯಲು ಸಮಯವಿಲ್ಲ. ಅಂಥವರಿಗೆ `ಟ್ರೆಕ್’ ಸಂಸ್ಥೆ ನೆರವು ನೀಡುತ್ತದೆ. ಪ್ರವಾಸೋದ್ಯಮಿಗಳ ರೆಸಾರ್ಟ ಅಥವಾ ಹೋಂ ಸ್ಟೇ ಹೆಸರಿನಲ್ಲಿ ವಿವಿಧ ಸಾಮಾಜಿಕ ಜಾಲತಾಣಗಳಲ್ಲಿ ಖಾತೆ ತೆರೆದು ಅದರ ಮೂಲಕ ಆಸಕ್ತ ಪ್ರವಾಸಿಗರನ್ನು ಆಕರ್ಷಿಸುತ್ತದೆ. ಬೇರೆ ಬೇರೆ ದೇಶಗಳಲ್ಲಿರುವ ಪ್ರವಾಸಿಗರ ಬಗ್ಗೆ ಅಧ್ಯಯನ ನಡೆಸಿ, ಅವರ ಆಗುಹೋಗುಗಳ ಬಗ್ಗೆ ಅರಿತು ಅವರನ್ನು ಇಲ್ಲಿನ ರೆಸಾರ್ಟಗಳಿಗೆ ಸಂಪರ್ಕ ಬೆಸೆಯುವ ಕೆಲಸವನ್ನು `ಟ್ರೆಕ್’ ಸಂಸ್ಥೆ ಮಾಡುತ್ತಿದೆ. ನಮ್ಮನೆಗೆ ಬನ್ನಿ! ಮಾಹಿತಿಪೂರ್ಣ ಚಾರಣ, ಪೃಕೃತಿ ಶಿಬಿರಗಳನ್ನು ಆಯೋಜಿಸಿ ಅನುಭವ ಇರುವ ಸುಹಾಸ್ ಹೆಗಡೆ ಜಿಲ್ಲೆಯ ಪ್ರವಾಸಿತಾಣಗಳ ಬಗ್ಗೆ ದಶಕಗಳ ಹಿಂದೆಯೇ ಪುಸ್ತಕವೊಂದನ್ನು ಪರಿಚಯಿಸಿದ್ದರು. `ನಮ್ಮನೆಗೆ ಬನ್ನಿ!’ ಎನ್ನುತ್ತ ಬೇರೆ ಬೇರೆ ಊರಿನ ಪ್ರವಾಸಿಗರನ್ನು ಇಲ್ಲಿ ಕರೆತಂದು ಆತಿಥ್ಯ ನೀಡುತ್ತಿದ್ದವರು. ಇದೀಗ ಇನ್ನೂ ಒಂದು ಹೆಜ್ಜೆ ಮುನ್ನಡೆದು ಯಾವ ದೇಶದ ಪ್ರವಾಸಿಗರು ಯಾವ ದೇಶಕ್ಕೆ ಬರಲು ಆಸಕ್ತರಾಗಿದ್ದಾರೆ? ಎಂಬುದನ್ನು ಅಭ್ಯಯಿಸಿ ಅವರನ್ನು ಇಲ್ಲಿನ ಸಂಸ್ಕೃತಿಯ ಜೊತೆ ಬೆಸೆಯುವ ಕೆಲಸ ಮಾಡುತ್ತಿದ್ದಾರೆ. ಕರಾವಳಿ ಹಾಗೂ ಮಲೆನಾಡಿನ ವಿಭಿನ್ನ ಆಚರಣೆಯನ್ನು ಪರಿಚಯಿಸಲು ಆಸಕ್ತರಿರುವ ಪ್ರವಾಸೋದ್ಯಮಿಗಳಿಗಾಗಿ `ಟೂರಿಸಮ್ ರಿಲೆಟೆಡ್ ಎಂಟ್ರಟೇನ್ಮೆAಟ್ ಕಂಪನಿ’ಯನ್ನು ಮುನ್ನಡೆಸುತ್ತಿದ್ದಾರೆ. ರೆಸಾರ್ಟ ಹಾಗೂ ಹೋಂಸ್ಟೆಗಳ ಡಿಜಿಟಲ್ ಹಾಗೂ ಸೋಶಿಯಲ್ ಮೀಡಿಯಾಗಳನ್ನು ಸಂಪೂರ್ಣವಾಗಿ, ಕೌಶಲ್ಯಭರಿತವಾಗಿ ಮುನ್ನಡೆಸಲು ಇವರನ್ನು ಸಂಪರ್ಕಿಸಬಹುದು `ಟ್ರೆಕ್’ ಸಂಸ್ಥೆಯ ವೆಬ್: www.travelcicada.com `ಟ್ರೆಕ್’ ಸಂಸ್ಥೆಯ ಮೋ: 9448331531 Sponsored - [ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ](https://mobiletime.in/2025/09/there-are-many-opportunities-for-investment-here/): ದುಡ್ಡು ಬೆಳೆಯಬೇಕು ಎಂದರೆ ಅದನ್ನು ಸರಿಯಾದ ಸಮಯಕ್ಕೆ ಸರಿಯಾದ ಮಾರ್ಗದಲ್ಲಿ ಹೂಡಿಕೆ ಮಾಡಬೇಕು. ಅಗತ್ಯಕ್ಕೆ ಅನುಗುಣವಾಗಿ ಸಾಲ ಬೇಕು ಎಂದರೂ ಯೋಗ್ಯ ಬ್ಯಾಂಕ್ ಹುಡುಕಬೇಕು. ಈ ಎರಡು ಕೆಲಸಗಳಿಗೆ ಜಿಲ್ಲೆಯ ಹಲವು ತಾಲೂಕುಗಳಲ್ಲಿ ಸೇವೆ ನೀಡುತ್ತಿರುವ ಯುಕೆ ಸೌಹಾರ್ದ ಕ್ರೆಡಿಟ್ ಕೋ ಆಪರೇಟಿವ್ ಬ್ಯಾಂಕ್  ಉತ್ತಮ ಆಯ್ಕೆ. ಸೇವಾ ಮನೋಭಾವನೆಯ ಸಿಬ್ಬಂದಿ, ನ್ಯಾಯಯುತ ಬೇಡಿಕೆಗಳಿಗೆ ಸ್ಪಂಧಿಸುವ ಆಡಳಿತ ವರ್ಗ, ಲಕ್ಷ ಸಂಖ್ಯೆಯಲ್ಲಿರುವ ಸಂತೃಪ್ತ ಗ್ರಾಹಕರು ಬ್ಯಾಂಕಿನ ಯಶಸ್ಸಿಗೆ ಕಾರಣ.2001ರಲ್ಲಿ ಸ್ಥಾಪನೆಯಾದ ಈ ಬ್ಯಾಂಕ್ ಪ್ರಸ್ತುತ 10 ಶಾಖೆಯನ್ನು ಹೊಂದಿದೆ. ಕುಮಟಾ, ಶಿರಸಿ, ಸಿದ್ದಾಪುರ, ದಾಂಡೇಲಿ, ಮುಂಡಗೋಡ, ಹೊನ್ನಾವರ ತಾಲೂಕುಗಳಲ್ಲಿ ಸೇವೆ ದೊರೆಯುತ್ತದೆ. ಎಲ್ಲಾ ರೀತಿಯ ವಿಮೆ, ಪ್ರಯಾಣದ ಟಿಕೆಟ್ ಕಾಯ್ದಿರಿಸುವಿಕೆ, ಇ-ಸ್ಟಾಂಪ್ ಜೊತೆ ವಿದೇಶಿ ಹಣ ವಿನಿಮಯದ ಕೆಲಸವನ್ನು ಇಲ್ಲಿನ ಸಿಬ್ಬಂದಿ ಮಾಡಿಕೊಡುತ್ತಾರೆ.ಇನ್ನೂ ಸಾಲದ ವಿಷಯಕ್ಕೆ ಬಂದರೆ ವಾಹನ ಸಾಲ, ವೈಯಕ್ತಿಕ ಸಾಲ, ಚಿನ್ನದ ಸಾಲ, ಭೂ ಖರೀದಿ ಸೇರಿದಂತೆ ಇನ್ನಿತರ ಸಾಲಗಳನ್ನು ಅತ್ಯಂತ ಸ್ಪರ್ಧಾತ್ಮಕ ಬಡ್ಡಿದರದಲ್ಲಿ ನೀಡುತ್ತಾರೆ. ಜಿಲ್ಲೆಯಲ್ಲಿಯೇ ಮೊದಲ ಬಾರಿ ಸಹಕರಿ ವಲಯಕ್ಕೆ ಕೋರ್ ಬ್ಯಾಂಕಿoಗ್ ಪದ್ಧತಿ ತಂದ ಹಿರಿಮೆ ಈ ಬ್ಯಾಂಕಿನದು. ಇದರಿಂದ ಈ ಬ್ಯಾಂಕಿನಲ್ಲಿ ಖಾತೆ ತೆರೆದ ವ್ಯಕ್ತಿ ಅದೇ ಬ್ಯಾಂಕಿನ ಯಾವುದೇ ತಾಲೂಕಿನ ಯಾವುದೇ ಶಾಖೆಯಲ್ಲಿ ವ್ಯವಹಾರ ಮಾಡಬಹುದಾದ ಅವಕಾಶ ನೀಡಲಾಗಿದೆ. ಮುಂದಿನ ವರ್ಷ ಬೆಳ್ಳಿ ಹಬ್ಬ ಆಚರಿಸಲಿರುವ ಯುಕೆ ಸೌಹಾರ್ದ ಕ್ರೆಡಿಟ್ ಕೋ ಆಪರೇಟಿವ್ ಬ್ಯಾಂಕ್ ತನ್ನ ಗ್ರಾಹಕರಿಗಾಗಿ ಆನ್ ಲೈನ್ ಬ್ಯಾಂಕ್ ಆಫ್’ನ್ನು ಅಭಿವೃದ್ಧಿಪಡಿಸುತ್ತಿದೆ. ಪ್ರಸ್ತುತ ಹೂಡಿಕೆದಾರರಿಗೂ ಇಲ್ಲಿ ಠೇವಣಿಗೂ ಆಕರ್ಷಕ ಬಡ್ಡಿ ನೀಡಲಾಗುತ್ತಿದ್ದು ಸೈನಿಕ, ವಿಧವೆ, ಅಂಗವಿಕಲ ಹಾಗೂ ಸಂಘ ಸಂಸ್ಥೆಯವರು ಠೇವಣಿ ಇರಿಸಿದಲ್ಲಿ ಅವರಿಗೆ ಹೆಚ್ಚುವರಿ ಬಡ್ಡಿ ಹಾಕಿ ನೀಡಲಾಗುತ್ತದೆ. ಎರಡು ಸಲ ಉತ್ತಮ ಸಹಕಾರಿ ಪ್ರಶಸ್ತಿಯೂ ಹೊಂದಿರುವ ಯುಕೆ ಸೌಹಾರ್ದ ಕ್ರೆಡಿಟ್ ಕೋ ಆಪರೇಟಿವ್ ಕಾಗದರಹಿತ ಆಡಳಿತ ನಡೆಸುವ ಪ್ರಯತ್ನದಲ್ಲಿದೆ. #Sponsored - [ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ](https://mobiletime.in/2025/09/a-golden-touch-for-a-healthy-child/): ನಿಮ್ಮ ಮನೆಯಲ್ಲಿ ಐದು ವರ್ಷಕ್ಕಿಂತ ಚಿಕ್ಕ ವಯಸ್ಸಿನ ಮಕ್ಕಳಿದ್ದಾರಾ? ಹಾಗಿದ್ದರೆ, ಅವರನ್ನು ಒಮ್ಮೆ ಡಾ ಜಿಪಿ ಭಟ್ಟ ಮದ್ಗುಣಿ ಸ್ಮಾರಕ ಆಯುರ್ ಸೇವಾ ಭವನದ ವೈದ್ಯಾಧಿಕಾರಿ ಡಾ ಸುಚೇತಾ ಮದ್ಗುಣಿ ಅವರಲ್ಲಿ ಕರೆತನ್ನಿ! ಮಕ್ಕಳಲ್ಲಿನ ರೋಗ ನಿರೋಧಕ ಶಕ್ತಿ ಹೆಚ್ಚಳ, ಆಗಾಗ ಕಾಡುವ ರೋಗಗಳ ನಿವಾರಣೆಗೆ ಇಲ್ಲಿ ಗಿಡಮೂಲಿಕೆಗಳ ಔಷಧಿಯಿದೆ. ನೆನಪಿನ ಶಕ್ತಿ ವೃದ್ದಿ, ಮಕ್ಕಳಲ್ಲಿನ ಹಠ ಹಾಗೂ ಚಂಚಲ ಸ್ವಭಾವ, ಹಾಸಿಗೆಯಲ್ಲಿ ಮೂತ್ರ ಮಾಡುವಿಕೆ, ದೃಷ್ಠಿದೋಷ ಹಾಗೂ ಇನ್ನಿತರ ಅಲರ್ಜಿಗಳನ್ನು ಸಹ ಈ `ಸ್ವರ್ಣಬಿಂಧು ಪ್ರಾಶನ’ದಿಂದ ದೂರವಾಗುತ್ತದೆ.ಪುರಾತನ ವೈದ್ಯಕೀಯ ಪದ್ಧತಿಯಾದ ಆಯುರ್ವೇದದಲ್ಲಿ ಆಚಾರ್ಯ ಕಾಶ್ಯಪರು ಸ್ವರ್ಣಪ್ರಾಶನ ವಿಧಿಯ ಬಗ್ಗೆ ಕಾಶ್ಯಪ ಸಂಹಿತಾದಲ್ಲಿ ವಿವರಿಸಿದ್ದು, ಡಾ ಸುಚೇತಾ ಮದ್ಗುಣಿ ಅವರು ಇದನ್ನು ಅಧ್ಯಯನ ನಡೆಸಿದ್ದಾರೆ. ಬಂಗಾರದ ಭಸ್ಮವನ್ನು ತುಪ್ಪದಲ್ಲಿ ಮಿಶ್ರಣ ಮಾಡಿ ಪುಷ್ಯ ನಕ್ಷತ್ರದಂದು ಮಗುವಿಗೆ ಎರಡು ಹನಿ ಉಣಿಸುವ ಪ್ರಕ್ರಿಯೆಯೇ ಸ್ವರ್ಣಾಮೃತಬಿಂಧು ಪ್ರಾಶನ. ಮಗು ಹುಟ್ಟಿದ ಒಂದು ತಿಂಗಳಿನಿ0ದ ಹಿಡಿದು 16 ವರ್ಷದವರೆಗಿನ ಮಕ್ಕಳಿಗೆ ಈ ಚಿಕಿತ್ಸೆ ಸೂಕ್ತ. ಪ್ರತಿ ತಿಂಗಳ ಪುಷ್ಯ ನಕ್ಷತ್ರದಂದು ಮಾಡುವುದು ವೈಜ್ಞಾನಿಕವಾಗಿಯೂ ಶ್ರೇಷ್ಠ. ಡಾ ಮದ್ಗುಣಿಯವರು ಗಿಡಮೂಲಕೆಗಳಿಂದ ಸ್ವತಃ ಔಷಧಿಗಳನ್ನು ತಯಾರಿಸುತ್ತಾರೆ. ಗಿಡಗಳನ್ನು ಗ್ರಾಮೀಣ ಭಾಗದಲ್ಲಿ ವಾಸಿಸುವ ಗುಡ್ಡಗಾಡು ಜನರಿಂದ ಸಂಗ್ರಹಿಸುತ್ತಾರೆ.ಇನ್ನೂ, 1955ರಲ್ಲಿ ಸ್ಥಾಪನೆಯಾದ ಡಾ ಮದ್ಗುಣಿ ಆಸ್ಪತ್ರೆ ಇದೀಗ ಯಲ್ಲಾಪುರ ತಾಲೂಕಿನ ಶಿರಸಿ ರಸ್ತೆಯಲ್ಲಿರುವ ಕೆಇಬಿ ಎದುರು ಕಾರ್ಯ ನಿರ್ವಹಿಸುತ್ತಿದೆ. `ಆಯುರ್ ಸೇವಾ ಭವನ’ವೂ ಸ್ವರ್ಣಾಮೃತ ಬಿಂದು ಪ್ರಾಶನ ಹಾಗೂ ಶುದ್ಧ ಆಯುರ್ವೇದ ಚಿಕಿತ್ಸಾ ಪದ್ಧತಿ’ಯಿಂದ ಪ್ರಸಿದ್ಧಿ ಪಡೆದಿದೆ. ಮೂಲತಃ ಕುಮಟಾ ಮದ್ಗುಣಿಯವರಾದ ಆಯುರ್ವೇದ ತಜ್ಞ ಡಾ ಜಿ ಪಿ ಭಟ್ಟ ಮದ್ಗುಣಿ ಅವರು ದಾಂಡೇಲಿಯಲ್ಲಿ ಆಸ್ಪತ್ರೆ ಸ್ಥಾಪಿಸುವ ಚಿಂತನೆಯಲ್ಲಿದ್ದರು. ಆ ವೇಳೆ ಯಲ್ಲಾಪುರದಲ್ಲಿ ವೈದ್ಯಕೀಯ ಸೌಲಭ್ಯಗಳಿಲ್ಲದಿರುವುದನ್ನು ಅರಿತು ಇಲ್ಲಿನ ದೇವಿ ಮೈದಾನದ ಬಳಿ ಆಸ್ಪತ್ರೆ ಶುರು ಮಾಡಿದರು. 1960ರ ದಶಕದಲ್ಲಿ ಕಳಚೆಯಂಥ ಗುಡ್ಡಗಾಡು ಪ್ರದೇಶಗಳಿಗೂ ಸೈಕಲ್ ಮೇಲೆ ಸಂಚರಿಸಿ ಅವರು ಜನರಿಗೆ ಚಿಕಿತ್ಸೆ ನೀಡುತ್ತಿದ್ದರು.ಇದೀಗ ಅವರ ಸೊಸೆ ಡಾ ಸುಜೇತಾ ಮದ್ಗುಣಿ ಅವರು ಆಸ್ಪತ್ರೆಯನ್ನು ಮುನ್ನಡೆಸುತ್ತಿದ್ದಾರೆ. `ಡಾ ಜಿಪಿ ಭಟ್ಟ ಸ್ಮಾರಕ ಆಯುಷ್ ಸೇವಾ ಟ್ರಸ್ಟ್’ ಮೂಲಕ ಆಯುರ್ವೇದ ಸೇವೆ, ಆರೋಗ್ಯ ಶಿಕ್ಷಣ ಹಾಗೂ ಆಯುರ್ವೇದ ಶಿಬಿರ, ಆಯುರ್ವೇದ ಮಾಹಿತಿ, ದೇಶಿ ಸಂಸ್ಕೃತಿ ಮತ್ತು ಯೋಗದ ಬಗ್ಗೆ ಅರಿವು ಮೂಡಿಸುತ್ತಿದ್ದಾರೆ.ಸ್ಥಳೀಯ ಮಾತ್ರವಲ್ಲದೇ, ಹೊರ ಪ್ರದೇಶದವರು ಸಹ ವೆಬ್  https://www.drmadguniayurseva.com ಮೂಲಕ ಸಂಪರ್ಕಿಸಿ ಬರುತ್ತಾರೆ. ಚಿಕಿತ್ಸೆಗೆ ಬರುವವರು 8088008754ಗೆ ಕರೆ ಮಾಡಿ ಬರುವುದು ಉತ್ತಮ. ಅಂದ ಹಾಗೇ, ಐದು ವರ್ಷದ ಒಳಗಿನ ಮಕ್ಕಳ ಸ್ವರ್ಣಬಿಂಧು ಪ್ರಾಶನಕ್ಕೆ ಸೇವಾ ಶುಲ್ಕ 100ರೂ ಮಾತ್ರ. ಇಲ್ಲಿ `ಪಂಚಕರ್ಮ’ ಚಿಕಿತ್ಸೆ ಸಹ ಲಭ್ಯ. `ಸ್ವರ್ಣಾಮೃತಬಿಂಧು ಪ್ರಾಶನದಿಂದ ನನ್ನ ಮಗುವಿನ ಆರೋಗ್ಯ ಸಾಕಷ್ಟು ಸುಧಾರಣೆಯಾಗುವುದನ್ನು ಗಮನಿಸಿದ್ದೇನೆ’ ಎಂದು ಜಂಬೇಸಾಲಿನ ಶ್ರೀಲತಾ ರಾಜೀವ ಹೆಗಡೆ ಅನುಭವ ಹಂಚಿಕೊ0ಡರು. #Sponsored - [ಒಂದೇ ಕೋರ್ಸಿನಲ್ಲಿ ಎರಡು ಪದವಿ: ಉತ್ತಮ ಶಿಕ್ಷಕರಾಗಲು PUC ಪಾಸಾಗಿದ್ದರೆ ಸಾಕು!](https://mobiletime.in/2025/10/two-degrees-in-one-course-passing-puc-is-enough-to-become-a-good-teacher/): ಉತ್ತರ ಕನ್ನಡ ಜಿಲ್ಲೆಯಲ್ಲಿ ಶಿಕ್ಷಣ ಸಂಸ್ಥೆಗಳಿಗೇನೂ ಕೊರತೆ ಇಲ್ಲ. ಆದರೆ, ಉತ್ತಮ ಶಿಕ್ಷಕರನ್ನು ರೂಪಿಸಿ ಒಂದೇ ಸೂರಿನ ಅಡಿ ಸಮಗ್ರ ಶಿಕ್ಷಣ ನೀಡುವ ಶಿಕ್ಷಣ ಸಂಸ್ಥೆಗಳು ಇಲ್ಲಿ ದೊಡ್ಡ ಪ್ರಮಾಣದಲ್ಲಿಲ್ಲ. ಈ ವಿಷಯ ಅರಿತ ಅಂಕೋಲಾದ ಗೋಖಲೆ ಸೆಂಟನರಿ ಕಾಲೇಜು ಇದೇ ಮೊದಲ ಬಾರಿಗೆ ನವದೆಹಲಿಯ ಎನ್.ಸಿ.ಟಿ.ಇ ಜಾರಿಗೊಳಿಸಿದ ನಾಲ್ಕು ವರ್ಷಗಳ ಸಂಯುಕ್ತ ಶಿಕ್ಷಕರ ಪದವಿ ಕೋರ್ಸನ್ನು ಜಿಲ್ಲೆಗೆ ಪರಿಚಯಿಸಿದೆ. B.A.B.Ed ಹಾಗೂ B.Sc. B.Ed (ITEP) ಪದವಿಯನ್ನು ಇಲ್ಲಿ ಶುರು ಮಾಡಲಾಗಿದೆ. ಅಂಕೋಲಾದ ಗೋಖಲೆ ಸೆಂಟನರಿ ಕಾಲೇಜು ಚುಟುಕು ಬ್ರಹ್ಮ ದಿನಕರ ದೇಸಾಯಿ ಅವರು ಹುಟ್ಟುಹಾಕಿದ ಕೆನರಾ ವೆಲ್ ಫೇರ್ ಟ್ರಸ್ಟಿನ ಅಂಗಸ0ಸ್ಥೆ. `ಗ್ರಾಮೀಣ ಭಾಗದ ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ಸಿಗಬೇಕು’ ಎಂಬ ದಿನಕರ ದೇಸಾಯಿ ಅವರ ಕನಸಿಗೆ ಈ ಕಾಲೇಜು ಸದಾ ನೀರೆರೆಯುತ್ತಿದೆ. ಸದ್ಯ ಮೌಲ್ಯಾಧಾರಿತ ಶಿಕ್ಷಣ ನೀಡಲು ಅಗತ್ಯವಿರುವ ಶಿಕ್ಷಕರನ್ನು ಸಿದ್ಧಪಡಿಸುವ ಕೌಶಲ್ಯಾಭಿವೃದ್ಧಿ ಕೋರ್ಸನ್ನು ಅಭ್ಯರ್ಥಿಗಳ ಮುಂದಿರಿಸಿದೆ. ಮೌಲ್ಯಾಧಾರಿತ ಶಿಕ್ಷಣ ಒದಗಿಸುವಲ್ಲಿ ಮುಂಚೂಣಿಯಲ್ಲಿರುವ ಅಂಕೋಲಾದ ಗೋಖಲೆ ಸೆಂಟನರಿ ಕಾಲೇಜು ಇದೀಗ ಉತ್ತಮ ಶಿಕ್ಷಕರನ್ನು ರೂಪಿಸುವ ಕೆಲಸ ಮಾಡುತ್ತಿದೆ. ಇದಕ್ಕಾಗಿ ರಾಜ್ಯದಲ್ಲಿಯೇ ಮೊದಲ ಬಾರಿ ಅನುದಾನಿತ ಪದವಿ ಕಾಲೇಜುಗಳಲ್ಲಿ ಗೋಖಲೆ ಸೆಂಟಿನರಿ ಕಾಲೇಜು ವಿಶೇಷ ಕೋರ್ಸವೊಂದನ್ನು ಪರಿಚಯಿಸಿದೆ. ರಾಜ್ಯದಲ್ಲಿಯೇ ಮೊದಲ ಬಾರಿಗೆ B.A.B.Ed ಹಾಗೂ B.Sc. B.Ed (ITEP) ಕೋರ್ಸನ್ನು ಒಟ್ಟಿಗೆ ಕಲಿಸುವ ಕಾಯಕ ಇಲ್ಲಿ ಶುರುವಾಗಿದೆ. ಭವಿಷ್ಯದ ಭಾರತಕ್ಕೆ ಉತ್ತಮ ಪ್ರಜೆಗಳನ್ನು ರೂಪಿಸುವಲ್ಲಿ ಶಿಕ್ಷಕರ ಕೊಡುಗೆ ಅಪಾರ. ಶಿಸ್ತಿನ ಶಿಕ್ಷಕರನ್ನು ರೂಪಿಸುವಲ್ಲಿ ಅಂಕೋಲಾದ ಗೋಖಲೆ ಸೆಂಟನರಿ ಕಾಲೇಜಿನ ಅನುಭವಗಳು ಆಧಾರ. ಈ ಕಾಲೇಜಿನಲ್ಲಿ ಕಲಿತ ಅನೇಕ ಮಕ್ಕಳು ಸದ್ಯ ದೇಶ-ವಿದೇಶದಲ್ಲಿ ಉದ್ಯೋಗದಲ್ಲಿದ್ದಾರೆ. ಅದರಲ್ಲಿಯೂ ಮುಖ್ಯವಾಗಿ ಸಮಾಜಕ್ಕೆ ಉನ್ನತ ಕೊಡುಗೆ ನೀಡುತ್ತಿದ್ದಾರೆ. ಮಕ್ಕಳ ಭವಿಷ್ಯವನ್ನು ಉತ್ತಮವಾಗಿಸುವ ಉಪನ್ಯಾಸಕರು ಇಲ್ಲಿದ್ದು, ಅದರ ಮುಂದುವರೆದ ಭಾಗವಾಗಿ ಈ ಕಾಲೇಜು ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೆ ಅಗತ್ಯವಿರುವ ಶಿಕ್ಷಕರಿಗೆ ತರಬೇತಿ ನೀಡುವ ಕೆಲಸಕ್ಕೆ ಮುನ್ನಡಿಯಿಟ್ಟಿದೆ. ದಿನಕರ ದೇಸಾಯಿಯವರು ಕೆನರಾ ವೆಲ್ ಫೇರ್ ಟ್ರಸ್ಟಿನ ಮೂಲಕ ಸ್ಥಾಪಿಸಿದ ಜನತಾ ವಿದ್ಯಾಲಯಗಳೆಂಬ ಜ್ಞಾನ ದೇಗುಲಗಳು ಈಗಲೂ ಅಕ್ಷರ ಲೋಕವನ್ನು ಬೆಳಗುತ್ತಿವೆ. ಹಿಂದುಳಿದ ಸಮುದಾಯಗಳಲ್ಲಿ ಶಿಕ್ಷಣ ಪ್ರಸರಣ ಮಾಡಿ ಅನ್ನ ಮತ್ತು ಅರಿವಿನ ಮಾರ್ಗ ತೋರಿಸಿದ ಅವರ ನಡೆ-ನುಡಿಯನ್ನು ಗೋಖಲೆ ಸೆಂಟನರಿ ಕಾಲೇಜು ಅಕ್ಷರಶಃ ಪಾಲಿಸುತ್ತಿದೆ. ಶಿಕ್ಷಣ ಪ್ರಸರಣಕ್ಕಾಗಿ ಅಗತ್ಯವಿರುವ ಶಿಕ್ಷಕರನ್ನು ರೂಪಿಸುವ ಈ ಕಾಯಕಕ್ಕೆ ಕರ್ನಾಟಕ ವಿಶ್ವವಿದ್ಯಾಲಯವೂ ಅಧಿಕೃತ ಮುದ್ರೆ ಒತ್ತಿದೆ. ಹಳ್ಳಿಗಾಡಿನ ರೈತರು, ಕಾರ್ಮಿಕರ ಮಕ್ಕಳು ಸಹ ಉನ್ನತ ಶಿಕ್ಷಣಪಡೆದು ಶಿಕ್ಷಕರಾಗಬೇಕು ಎಂಬ ಕನಸಿಗೆ ಈ ಕೋರ್ಸು ಯೋಗ್ಯವಾಗಿದೆ. ಪ್ರಾಥಮಿಕ ಮತ್ತು ಪೌಢಶಿಕ್ಷಣ ಹಂತದಲ್ಲಿ ಬೋಧಿಸಲು ಅಗತ್ಯವಿರುವ ಶಿಕ್ಷಕರನ್ನು ರೂಪಿಸುವುದು ಈ ಕೋರ್ಸಿನ ಮುಖ್ಯ ಉದ್ದೇಶ. ಕಲಾ ಮತ್ತು ವಿಜ್ಞಾನ ವಿಭಾಗಗಳ ವಿವಿಧ ಐಚ್ಛಿಕ ವಿಷಯಗಳ ಜೊತೆಗೆ ವಿದ್ಯಾರ್ಥಿಗಳು ಪ್ರಾಯೋಗಿಕ ಪಾಠ ಪ್ರವಚನಗಳ ಅನುಭವ ಇಲ್ಲಿ ಸಿಗುತ್ತದೆ. ಬೋಧನಾ ಉಪಕರಣಗಳ ತಯಾರಿಕೆ, ಪ್ರಯೋಗಾಲಯ ಪ್ರಾತ್ಯಕ್ಷಿಕೆಗಳ ಬಗ್ಗೆಯೂ ಅರಿವು ಮೂಡಿಸಲಾಗುತ್ತದೆ. ವಿದ್ಯಾರ್ಥಿಗಳ ನೆಚ್ಚಿನ ಶಿಕ್ಷಕರಾಗುವುದು ಹೇಗೆ? ಎಂಬ ವಿಷಯವನ್ನು ಇಲ್ಲಿ ಕಲಿಸಲಾಗುತ್ತದೆ. ಮುಂದಿನ ದಿನದಲ್ಲಿ 2 ವರ್ಷಗಳ ಬಿ.ಎಡ್.ಕೋರ್ಸ್ ರೂಪಾಂತರಗೊಳ್ಳಲಿದ್ದು, 4 ವರ್ಷಗಳ ಸಂಯುಕ್ತ ಶಿಕ್ಷಕರ ಪದವಿ ಕೋರ್ಸ್ ಅನಿವಾರ್ಯವಾಗಲಿದೆ. ಸರ್ಕಾರಿ, ಖಾಸಗಿ ವಲಯದಲ್ಲಿನ ಉದ್ಯೋಗಕ್ಕೂ ಈ ಪದವಿ ಪೂರೈಸುವುದು ಕಡ್ಡಾಯವಾಗಲಿದೆ. ಈ ಕೋರ್ಸನ್ನು ಯಶಸ್ವಿಯಾಗಿ ಪೂರೈಸುವ ವಿದ್ಯಾರ್ಥಿಗಳು ಎರಡು ಪದವಿಗಳನ್ನು ಏಕಕಾಲಕ್ಕೆ ಪಡೆಯುತ್ತಾರೆ. ಅಂಥ ವಿದ್ಯಾರ್ಥಿಗಳಿಗೆ ಸ್ನಾತಕೋತ್ತರ ಪದವಿಯನ್ನು ಎರಡು ಪ್ರಧಾನ ವಿಷಯಗಳಲ್ಲಿ ವ್ಯಾಸಂಗ ಮಾಡಲು ಅವಕಾಶ ಸಿಗುತ್ತದೆ. ಈ ಕೋರ್ಸು ಆಯ್ಕೆ ಮಾಡಿಕೊಳ್ಳಲು ಪಿಯುಸಿ ಪರೀಕ್ಷೆಯಲ್ಲಿ ಶೇ 50ರ ಅಂಕದೊoದಿಗೆ ಪಾಸಾಗಿರಬೇಕು. ಜೊತೆಗೆ 2025ರ ಏಪ್ರಿಲ್ 29ರಂದು ಎನ್‌ಟಿಎ ನಡೆಸಿದ ಪ್ರವೇಶ ಪರೀಕ್ಷೆಗೆ ಹಾಜರಾಗಿರಬೇಕು. ನಾಲ್ಕು ವರ್ಷ ಅವಧಿಯ ಈ ಕೋರ್ಸ ಪದವಿಧರ ಶಿಕ್ಷಕ ಹುದ್ದೆಗೆ ಸೂಕ್ತ ವಿದ್ಯಾರ್ಹತೆ ಎಂದು ರಾಜ್ಯ ಸರ್ಕಾರ ಗೆಜೆಟ್ ಮೂಲಕ ಪ್ರಕಟಿಸಿದೆ. ಶಿಕ್ಷಕರ ಪ್ರಶಿಕ್ಷಣ ತರಬೇತಿಗೆ ಮಾನ್ಯತೆ ನೀಡುವ ರಾಷ್ಟ್ರೀಯ ಶಿಕ್ಷಣ ಮಂಡಳಿ ಈ ಕೋರ್ಸಿಗೆ ಮಾನ್ಯತೆ ಕೊಟ್ಟಿದೆ. ಮಾಹಿತಿ ಕೊರತೆ ಇದ್ದವರಿಗೆ ಕಾಲೇಜಿನವರು ಅರಿವು ಮೂಡಿಸಲು ಸದಾ ಸಿದ್ಧವಾಗಿದ್ದಾರೆ. ಹೀಗಾಗಿ ಶಿಕ್ಷಕರಾಗಲು ಕನಸು ಕಂಡವರಿಗೆ ಈ ಕೋರ್ಸ ಸೂಕ್ತ ಆಯ್ಕೆಯಾಗಿದ್ದು, ಕಾಲೇಜು ಪ್ರವೇಶಕ್ಕೆ ಯಾವುದೇ ಆತಂಕ ಬೇಡ. ಈ ಮಾಹಿತಿಯನ್ನು ಆಸಕ್ತರಿಗೆ ಶೇರ್ ಮಾಡಿ ಇನ್ನೆನ್ನಾದರೂ ಗೊಂದಲವಿದ್ದರೆ ಇಲ್ಲಿ ಫೋನ್ ಮಾಡಿ: 8971930563, 9964428710, 9448573190, 9901940588 #sponsored - [2025 ಅಕ್ಟೋಬರ್ 10ರ ದಿನ ಭವಿಷ್ಯ](https://mobiletime.in/2025/10/prediction-for-october-10-2025-2/): ಮೇಷ ರಾಶಿ: ಉದ್ಯೋಗ, ವ್ಯವಹಾರದಲ್ಲಿ ಪ್ರಗತಿ ಸಾಧ್ಯವಿದ್ದು ಬದಲಾವಣೆಗೆ ಸಿದ್ಧವಾಗಿರಿ. ಆರೋಗ್ಯದ ಬಗ್ಗೆ ಚಿಂತಿಸುವುದರ ಜೊತೆ ಕೋಪವನ್ನು ತಪ್ಪಿಸಿ. ಕಲಾ ಆರಾಧನೆ ಒಳ್ಳೆಯದು. ವೃಷಭ ರಾಶಿ: ಐಷಾರಾಮಿ ಜೀವನಕ್ಕಾಗಿ ಸೌಕರ್ಯಗಳಲ್ಲಿ ಹೆಚ್ಚಳವಾಗಲಿದೆ. ಕುಟುಂಬದ ಸಮಸ್ಯೆ ಬಗೆಹರಿಯಲಿದೆ. ಆಪ್ತರು ಹಣ ಕೇಳುವ ಸಾಧ್ಯತೆಯಿದೆ. ಮಿಥುನ ರಾಶಿ: ಅನೇಕ ದಿನಗಳಿಂದ ಬಾಕಿಯಿರುವ ಹಣ ಮರಳಿ ಸಿಗಲಿದೆ. ಪರಿಶ್ರಮಕ್ಕೆ ಫಲ ಸಿಗಲಿದೆ. ಸ್ಪರ್ಧಾತ್ಮಕ ಪರೀಕ್ಷೆಗಳು ಯಶಸ್ವಿಯಾಗಿ ನಡೆಯಲಿದೆ. ಕರ್ಕ ರಾಶಿ: ಕಾನೂನು ವಿಚಾರಗಳಿಂದ ದೂರವಿರುವುದು ಉತ್ತಮ. ಕಳೆದ ವಸ್ತು ಮರಳಿ ಸಿಗುವ ಸಾಧ್ಯತೆಯಿದೆ. ನಿಮ್ಮ ಮಾತು ಹಿತವಾಗಿರಲಿ. ಸಿಂಹ ರಾಶಿ: ಬಹುದಿನದ ಕೆಲಸ ಈ ದಿನ ಮುಗಿಯಲಿದೆ. ಕುಟುಂಬದಲ್ಲಿ ವಿವಾದ ಸಾಧ್ಯತೆಯಿದ್ದು, ಜಾಣ್ಮೆಯಿಂದ ಅದನ್ನು ಬಗೆಹರಿಸಿ. ನಿಮ್ಮ ಭಾವನೆಗಳನ್ನು ನಿಯಂತ್ರಿಸಿ. ಕನ್ಯಾ ರಾಶಿ: ಆಪ್ತರ ಮದುವೆಯಲ್ಲಿ ಅಡೆತಡೆ ಆಗುವ ಸಾಧ್ಯತೆಯಿದೆ. ಸಮಸ್ಯೆಗಳ ಬಗ್ಗೆ ಸಂಗಾತಿ ಜೊತೆ ಚರ್ಚಿಸಿ. ಸೋಮಾರಿತನ ನಿಮಗೆ ಸೂಕ್ತವಲ್ಲ. ತುಲಾ ರಾಶಿ: ಹೊಸ ಅವಕಾಶಗಳು ಎದುರು ನೋಡುತ್ತಿದ್ದು, ಅದನ್ನು ಬಳಸಿಕೊಳ್ಳುವ ಅಗತ್ಯ ನಿಮಗಿದೆ. ಸಾಮಾಜಿಕ ಚಟುವಟಿಕೆಗಳಿಂದ ಯಶಸ್ಸು ಸಿಗಲಿದೆ. ಪೂಜಾ ಕಾರ್ಯಗಳು ಒಳಿತು ಮಾಡಲಿದೆ. ವೃಶ್ಚಿಕ ರಾಶಿ: ನಿಮ್ಮ ಕೆಲಸದ ವಿಷಯದಲ್ಲಿ ಪ್ರಗತಿ ಸಾಧ್ಯವಿದೆ. ಹಣಕಾಸಿನ ಲಾಭಗಳು ಆಗಲಿದೆ. ಆರೋಗ್ಯದ ಬಗ್ಗೆ ಕಾಳಜಿ ಅಗತ್ಯ. ಧನು ರಾಶಿ: ಹೊಸ ಭರವಸೆಗಳು ಸಿಗಲಿದೆ. ಸ್ನೇಹಿತರ ಜೊತೆ ಉತ್ತಮ ಸಂವಾದ ನಡೆಯಲಿದೆ. ಹಣಕಾಸಿನಲ್ಲಿ ಸುಧಾರಣೆ ಆಗಲಿದೆ. ಮಕರ ರಾಶಿ: ಆರ್ಥಿಕ ವ್ಯವಹಾರ ಸರಾಗವಾಗಿ ಸಾಗಲಿದೆ. ಆಪ್ತರ ನಡುವೆ ಜಗಳವಾಗುವ ಲಕ್ಷಣವಿದೆ. ಹೊಸ ಕೆಲಸದ ಶುರುವಿಗೆ ಸಕಾಲ. ಕುಂಭ ರಾಶಿ: ನಿಮ್ಮ ನಿರೀಕ್ಷೆಗಳು ಈಡೇರಲಿದೆ. ಸ್ನೇಹಿತರ ಸಹಾಯ ಸಿಗಲಿದೆ. ಸಮಸ್ಯೆಗಳನ್ನು ದೂರ ಮಾಡಿಕೊಳ್ಳಲು ನಿಮ್ಮೊಳಗೆ ಆಲೋಚನೆ ಬೆಳೆಯಲಿದೆ. ಮೀನು ರಾಶಿ: ವೃತ್ತಿಯಲ್ಲಿ ಸಕಾರಾತ್ಮಕ ಬದಲಾವಣೆ ಆಗಲಿದೆ. ಬಂಧು-ಮಿತ್ರರ ಸಹಕಾರ ಸಿಗಲಿದೆ. ಸ್ವಚ್ಚತೆ ಬಗ್ಗೆ ಗಮನಕೊಡಿದ್ದರೆ ರೋಗಬಾಧೆಯ ಲಕ್ಷಣವಿದೆ. - [ಸಾಮಾಜಿಕ ಸಮೀಕ್ಷೆಯ ಆತುರ: ಬಿದ್ದು ಪೆಟ್ಟುಮಾಡಿಕೊಂಡ ಗಣತಿದಾರ](https://mobiletime.in/2025/10/social-survey-rush-census-worker-falls-and-injures-himself/): ಸರ್ಕಾರ ಸೂಚಿಸಿದ ಪ್ರಕಾರ ತರಾತುರಿಯಲ್ಲಿ ಸಮೀಕ್ಷೆ ಮುಗಿಸುವುದಕ್ಕಾಗಿ ಜೋರಾಗಿ ಬೈಕ್ ಓಡಿಸಿದ ಶಿಕ್ಷಕ ಪ್ರಕಾಶ ಗಾವಡಿ ಅವರು ಬೈಕಿನಿಂದ ಬಿದ್ದು ಪೆಟ್ಟು ಮಾಡಿಕೊಂಡಿದ್ದಾರೆ. ಸದ್ಯ ಅವರು ಆಸ್ಪತ್ರೆಗೆ ತೆರಳಿ ಚಿಕಿತ್ಸೆಪಡೆದಿದ್ದಾರೆ. ಕುಮಟಾ ಕಗಾಲ ಮೂಲದ ಪ್ರಕಾಶ ಮೋಹನ ಗಾವಡಿ (44) ಅವರು ಕಾರವಾರ ಕೆಇಬಿ ರಸ್ತೆ ಬಳಿ ವಾಸವಾಗಿದ್ದರು. ಶಿಕ್ಷಕರಾಗಿರುವ ಅವರನ್ನು ಸರ್ಕಾರ ಸಾಮಾಜಿಕ ಹಾಗೂ ಶೈಕ್ಷಣಿಕ ಗಣತಿಗೆ ನಿಯೋಜಿಸಿತ್ತು. ತಮಗೆವಹಿಸಿದ್ದ ಕೆಲಸವನ್ನು ಬೇಗ ಮುಗಿಸಬೇಕು ಎಂಬ ಅವಸರದಲ್ಲಿ ಅವರು ವೇಗವಾಗಿ ಬೈಕ್ ಓಡಿಸುತ್ತಿದ್ದರು. ಅಕ್ಟೊಬರ್ 9ರಂದು ಶಿರವಾಡ ಕಡೆ ಅವರು ಜೋರಾಗಿ ಬೈಕ್ ಓಡಿಸುತ್ತಿದ್ದರು. ಮೋಹನ ಗಾವಡಿ ಅವರ ಬೈಕಿಗೆ ನಾಗರಕೇರಿ ಬಿಷಪ್ ಮನೆ ಬಳಿ ದನ ಅಡ್ಡ ಬಂದಿತು. ಆ ದನಕ್ಕೆ ಶಿಕ್ಷಕರ ಬೈಕ್ ಗುದ್ದಿತು. ಪರಿಣಾಮ ಮೋಹನ ಗಾವಡಿ ಅವರು ಬೈಕಿನಿಂದ ಬಿದ್ದು ಕೈಗೆ ನೋವು ಮಾಡಿಕೊಂಡರು. ಶೇಜವಾಡ ಶಿಕ್ಷಕ ವೀರೇಂದ್ರ ನಾಯ್ಕ ಅವರು ಅಪಘಾತದ ಬಗ್ಗೆ ಅರಿತು ಮೋಹನ ಗಾವಡಿ ಅವರ ಆರೋಗ್ಯ ವಿಚಾರಿಸಿದರು. ಅದಾದ ನಂತರ `ಮೋಹನ ಗಾವಡಿ ಅವರ ಅತಿ ವೇಗದ ಬೈಕ್ ಚಾಲನೆಯೇ ಈ ಅಪಘಾತಕ್ಕೆ ಕಾರಣ’ ಎಂದು ಅವರ ವಿರುದ್ಧವೇ ಪೊಲೀಸ್ ದೂರು ನೀಡಿದರು. - [ದೋಣಿ ಮುಳುಗಿತು.. ಬದುಕು ನಡುಗಿತು!](https://mobiletime.in/2025/10/the-boat-sank-life-was-shaken/): ಲಕ್ಷಾಂತರ ರೂ ಸಾಲ ಮಾಡಿ ಅಂಕೋಲಾದ ಸರಸ್ವತಿ ಬಾನಾವಳಿಕರ್ ಅವರುಪಡೆದಿದ್ದ ದೋಣಿ ಸಮುದ್ರದಲ್ಲಿ ಮುಳುಗಿದೆ. ಅಲೆಗಳ ಅಬ್ಬರಕ್ಕೆ ದೋಣಿಯ ಯಂತ್ರೋಪಕರಣಗಳು ನೆನೆದು ಹಾಳಾಗಿವೆ. ಅಂಕೋಲಾದ ಬೇಲಿಕೇರಿ ಬಂದರಿನಲ್ಲಿ `ಶ್ರೀ ಶಾರದಾಂಬಾ’ ಹೆಸರಿನ ದೋಣಿ ಲಂಗರು ಹಾಕಿತ್ತು. ಗುರುವಾರ ಅಬ್ಬರಿಸಿದ ಅರಬ್ಬಿ ಸಮುದ್ರದ ಅಲೆಗಳು ಆ ದೋಣಿಯನ್ನು ಬುಡಮೇಲು ಮಾಡಿತು. ಪರಿಣಾಮ ದೋಣಿಯ ಒಳಗಿದ್ದ ಬಲೆ ಹಾಗೂ ಇನ್ನಿತರ ಸಾಮಗ್ರಿಗಳು ನೀರುಪಾಲಾದವು. ಬುಧವಾರ ರಾತ್ರಿಯಿಂದ ಅರಬ್ಬಿ ಸಮುದ್ರದಲ್ಲಿ ಅಲೆಗಳ ಅಬ್ಬರ ಜೋರಾಗಿದ್ದು, ಗುರುವಾರ ನಸುಕಿನಲ್ಲಿ ದೋಣಿ ಮುಗುಚಿ ಬಿದ್ದಿತು. ವಿಷಯ ಅರಿತು ಪೊಲೀಸ್, ಕರಾವಳಿ ಕಾವಲುಪಡೆ ಹಾಗೂ ಮೀನುಗಾರಿಕಾ ಸಿಬ್ಬಂದಿ ಕ್ರೇನ್ ಮೂಲಕ ದೋಣಿ ಮೇಲೆತ್ತುವ ಪ್ರಯತ್ನ ಮಾಡಿದರು. ಬೇಲಿಕೇರಿ ಬಂದರಿನಲ್ಲಿ ಸರಿಯಾಗಿ ತಡೆಗೋಡೆ ಇಲ್ಲದಿರುವುದು ಅಲೆಗಳ ಅಬ್ಬರಕ್ಕೆ ಕಾರಣ ಎಂದು ಜನ ಹೇಳಿದರು. ಶಾಸಕರು-ಸಚಿವರಿಗೆ ಹೇಳಿದರೂ ಅಲೆಗಳನ್ನು ತಡೆಯುವ ತಡೆಗೋಡೆ ನಿರ್ಮಿಸಿಲ್ಲ ಎಂದು ಆಕ್ರೋಶವ್ಯಕ್ತಪಡಿಸಿದರು. ತಡೆಗೋಡೆ ನಿರ್ಮಿಸದೇ ಇದ್ದರೆ ಪ್ರತಿಭಟಿಸುವುದಾಗಿಯೂ ಎಚ್ಚರಿಸಿದರು. - [ಚಿನ್ನ ಕೊಟ್ಟ ಅಜ್ಜಿಗೆ ಕಲ್ಲು ಕೊಟ್ಟ ಡಕಾಯಿತರು!](https://mobiletime.in/2025/10/the-bandits-gave-stones-to-the-grandmother-who-gave-them-gold/): `ದಾಂಡೇಲಿ ಬಾಂಬುನಗರದ ಬಳಿ ಡಕಾಯಿತರು ಚಾಕು ಹಿಡಿದು ನಿಂತಿದ್ದಾರೆ’ ಎಂದು ಹೆದರಿಸಿದ ಅಪರಿಚಿತರು ಬಗೂರನಗರದ ಶಾಂತಾ ಪವಾರ್ ಅವರ ಬಳಿಯಿದ್ದ ಚಿನ್ನದ ಸರ ಹಾಗೂ ಬಳೆ ಅಪಹರಿಸಿದ್ದಾರೆ. ಚಾಕು ಹಿಡಿದಿದ್ದ ಡಕಾಯಿತರಿಂದ ಚಿನ್ನ ರಕ್ಷಿಸಿಕೊಳ್ಳುವ ಆತುರಕ್ಕೆ ಬಿದ್ದ 85ರ ವೃದ್ಧೆ ಶಾಂತಾ ಪವಾರ್ ಅವರು ತಮ್ಮ ಮೈಮೇಲಿದ್ದ 2 ಲಕ್ಷ ರೂ ಬೆಲೆಯ ಆಭರಣವನ್ನು ಕಳ್ಳರ ಕೈಗೆ ಕೊಟ್ಟಿದ್ದಾರೆ! ದಾಂಡೇಲಿಯ ಬಂಗೂರುನಗರದ ಓಲ್ಡ್ ಡಿ ಆರ್ ಟಿ ಬಳಿ ಶಾಂತಾ ಯಲ್ಲಪ್ಪ ಪವಾರ್ ಅವರು ವಾಸವಾಗಿದ್ದಾರೆ. ಅಕ್ಟೊಬರ್ 8ರಂದು ಅವರ ಮನೆಗೆ ಬಂದ ವ್ಯಕ್ತಿಯೊಬ್ಬರು `ಪೋಸ್ಟ್ ಆಫಿಸರ್ ನಿಮ್ಮನ್ನು ಕರೆಯುತ್ತಿದ್ದಾರೆ’ ಎಂದು ಹೇಳಿದರು. ಹೀಗಾಗಿ ಶಾಂತಾ ಪವಾರ್ ಅವರು ಅಪರಿಚಿತನ ಜೊತೆ ಹೊರಟರು. ಮಂಕಿ ಕ್ಯಾಪ್ ಹಾಕಿದ್ದ ಆತ ಕೆಲ ದೂರ ಕರೆದೊಯ್ಯುವಾಗ ಅಲ್ಲಿ ಇನ್ನೊಬ್ಬ ದಡೂತಿ ದೇಹದ ವ್ಯಕ್ತಿ ಎದುರಿಗೆ ಸಿಕ್ಕರು. `ಬಾಂಬು ಗೇಟ್ ಬಳಿ ಕೆಲವರು ಚಾಕು ಹಿಡಿದು ನಿಂತಿದ್ದಾರೆ’ ಎಂದು ಆ ದಡೂತಿ ದೇಹದ ವ್ಯಕ್ತಿ ಹೆದರಿಸಿದರು. `ನಿಮ್ಮ ಆಭರಣ ಕೊಡಿ. ಅದನ್ನು ಈ ಜೀಲದಲ್ಲಿ ಭದ್ರವಾಗಿರಿಸಿ ಕೊಡುವೆ’ ಎಂದು ನಂಬಿಸಿದರು. ಇದನ್ನು ನಂಬಿದ ಶಾಂತಾ ಪವಾರ್ ಅವರು ಕತ್ತಿನಲ್ಲಿದ್ದ ಸರ ಹಾಗೂ ಕೈಯಲಿದ್ದ ಬಳೆಗಳನ್ನು ಅವರ ಕೈಗೆ ಕೊಟ್ಟರು. `ಅಲ್ಲಿ ನೋಡಿ ಚಾಕು ಹಿಡಿದವರು’ ಎಂದು ಕೈ ತೋರಿಸಿದ ದಡೂತಿ ದೇಹದ ವ್ಯಕ್ತಿ ಬಂಗಾರವನ್ನು ಜೇಬಿಗಿಳಿಸಿದರು. ಬೂದಿ ಬಣ್ಣದ ಚೀಲದ ಒಳಗೆ ಎರಡು ಕಲ್ಲುಗಳನ್ನು ಹಾಕಿ ಅಜ್ಜಿಯ ಕೈಗೆ ಕೊಟ್ಟರು. ಅದಾದ ನಂತರ ಆ ಅಪರಿಚಿತರು ಅಲ್ಲಿಂದ ಕಣ್ಮರೆಯಾದರು. ತಮ್ಮ ಬಳಿಯಿದ್ದ ಕೈ ಚೀಲ ತೆರೆದು ನೋಡಿದ ಅಜ್ಜಿಗೆ ಅದರೊಳಗೆ ಕಲ್ಲುಗಳಿರುವುದು ಕಾಣಿಸಿತು. ತಮಗಾದ ಮೋಸದ ಬಗ್ಗೆ ಅವರು ದಾಂಡೇಲಿ ಪೊಲೀಸರಿಗೆ ದೂರು ನೀಡಿದರು. ಪೊಲೀಸರು ಪ್ರಕರಣ ದಾಖಲಿಸಿದ್ದು, ನಿಜವಾದ ಡಕಾಯಿತರು ಶೋಧ ನಡೆಸಿದ್ದಾರೆ. - [ಎಲ್ಲಾ ಬಿಟ್ಟು ಗಾಂಜಾ ನೆಟ್ಟ ಬಾಲಕೃಷ್ಣ ಭಟ್ಟ!](https://mobiletime.in/2025/10/balakrishna-bhatt-who-left-everything-behind-and-planted-marijuana/): ಸಿದ್ದಾಪುರದಲ್ಲಿ ಪುರೋಹಿತರಾಗಿರುವ ಬಾಲಕೃಷ್ಣ ಭಟ್ಟರು ತಮ್ಮ 32ನೇ ವಯಸ್ಸಿನಲ್ಲಿಯೇ ದುಶ್ಚಟಗಳಿಗೆ ದಾಸರಾಗಿದ್ದಾರೆ. ಮಾದಕ ವಸ್ತು ಸೇವಿಸಿ ಅಲೆದಾಡುತ್ತಿದ್ದ ಅವರನ್ನು ಪೊಲೀಸರು ಹಿಡಿದಿದ್ದಾರೆ. ಸಿದ್ದಾಪುರದ ಕ್ಯಾದಗಿ ಬಳಿಯ ಹೆಬ್ಬಕುಳಿಯಲ್ಲಿ ಬಾಲಕೃಷ್ಣ ಸುಬ್ರಾಯ ಭಟ್ಟ ಅವರು ವಾಸವಾಗಿದ್ದಾರೆ. ಪುರೋಹಿತ್ಯ ಕೆಲಸ ಮಾಡಿ ಕಾಸು ಸಂಪಾದಿಸುವ ಅವರು ಬಿಡುವಿನ ವೇಳೆ ದುಶ್ಚಟಗಳ ಮೊರೆ ಹೋಗುತ್ತಾರೆ. ಅಕ್ಟೊಬರ್ 8ರಂದು ಅವರು ಗಾಂಜಾ ಸೇವಿಸಿ ಅನುಚಿತವಾಗಿ ವರ್ತಿಸುತ್ತಿರುವಾಗ ಸಿದ್ದಾಪುರ ಪೊಲೀಸ್ ಉಪನಿರೀಕ್ಷಕಿ ಗೀತಾ ಸಿರ್ಸಿಕರ್ ಅವರ ಬಳಿ ಸಿಕ್ಕಿಬಿದ್ದಿದ್ದಾರೆ. ಸಿದ್ದಾಪುರ ಪಟ್ಟಣದ ಹೊಸೂರು-ಕುಮಟಾ ರಸ್ತೆಯಲ್ಲಿ ಗೀತಾ ಸಿರ್ಸಿಕರ್ ಅವರು ಸಂಚರಿಸುವಾಗ ಬಾಲಕೃಷ್ಣ ಭಟ್ಟರು ಅದೇ ರಸ್ತೆಯಲ್ಲಿ ಅಲೆದಾಡುತ್ತಿದ್ದರು. ಶಂಕರಮಠದ ಬಳಿ ಪೊಲೀಸರು ಅವರನ್ನು ಹಿಡಿದು ವಿಚಾರಣೆಗೆ ಒಳಪಡಿಸಿದರು. ಸಾರ್ವಜನಿಕ ರಸ್ತೆಯಲ್ಲಿ ಅಸಹಜ ವರ್ತನೆ ಗಮನಿಸಿ ಹಲವು ಪ್ರಶ್ನೆಗಳನ್ನು ಹಾಕಿದರು. ಮಾತನಾಡಲು ತೊದಲುತ್ತಿದ್ದ ಬಾಲಕೃಷ್ಣ ಭಟ್ಟರು ಕೊನೆಗೆ ಗಾಂಜಾ ಸೇವಿಸಿರುವುದನ್ನು ಒಪ್ಪಿಕೊಂಡರು. ನಶೆಯಲ್ಲಿ ಗಲಾಟೆ ಮಾಡುವ ಸಾಧ್ಯತೆ ಹಿನ್ನಲೆ ಪೊಲೀಸರು ಅವರನ್ನು ವಶಕ್ಕೆಪಡೆದರು. ಸಾರ್ವಜನಿಕರಿಗೆ ಉಪಟಳ ನೀಡದಂತೆ ತಡೆಯುವುದಕ್ಕಾಗಿ ಅವರನ್ನು ಸರ್ಕಾರಿ ಆಸ್ಪತ್ರೆಗೆ ತಂದು ಕೂರಿಸಿದರು. ಅಲ್ಲಿನ ವೈದ್ಯರು ಬಾಲಕೃಷ್ಣ ಭಟ್ಟರನ್ನು ಪರೀಕ್ಷೆ ಮಾಡಿ, ಅವರು ಗಾಂಜಾ ಸೇವಿಸಿದನ್ನು ದೃಢಪಡಿಸಿದರು. ಹೀಗಾಗಿ ಪೊಲೀಸರು ಅವರ ವಿರುದ್ಧ ಪ್ರಕರಣ ದಾಖಲಿಸಿ, ಕಾನೂನು ಕ್ರಮ ಜರುಗಿಸಿದರು. - [ರೀಲ್ಸ್ ಮಾಡಿ.. 50 ಸಾವಿರ ಗೆಲ್ಲಿ!](https://mobiletime.in/2025/10/make-reels-win-50-thousand/): ಗುಡ್ಡ, ಬೆಟ್ಟ, ನದಿ, ತೊರೆ, ಜಲಪಾತಗಳನ್ನು ಹೊಂದಿದ ಉತ್ತರ ಕನ್ನಡ ಜಿಲ್ಲೆ ಎಂದರೆ ಫೋಟೋಗ್ರಾಫರ್’ಗಳಿಗೆ ಹಬ್ಬ. ಅದರಲ್ಲಿಯೂ ಸಣ್ಣಪುಟ್ಟ ವಿಡಿಯೋ ಮಾಡಿ ಹರಿಬಿಡುವವರಿಗೆ ಇಲ್ಲಿನ ಪರಿಸರ ಸದಾ ಹಸಿರು. ಹೀಗಾಗಿ ರೀಲ್ಸ್ ಮಾಡುವವರಿಗೆ ಸಹ ಉತ್ತರ ಕನ್ನಡ ಎಂದರೆ ಅಚ್ಚುಮೆಚ್ಚು. ಅಂಥವರಿಗಾಗಿ ಇದೀಗ ಸರ್ಕಾರವೇ ಒಂದು ಅವಕಾಶ ನೀಡಿದ್ದು, ಪರಿಸರ ಸಂರಕ್ಷಣೆ ಕುರಿತು ರೀಲ್ಸ್ ಮಾಡಿದವರಿಗೆ ಬಹುಮಾನ ನೀಡುವುದಾಗಿ ಘೋಷಿಸಿದೆ. ಉತ್ತರ ಕನ್ನಡ ಜಿಲ್ಲೆಯ ಬಂದರು ಯೋಜನೆಗಳ ಜಾರಿಗೆ ಸಿದ್ಧತೆ ನಡೆದಿದೆ. ಹೆಚ್ಚುವರಿ ಅಣು ಘಟಕ ಸ್ಥಾಪನೆಯ ತಯಾರಿ ಜೋರಾಗಿದೆ. ಪಂಪ್ ಸ್ಟೋರೇಜ್ ಹೆಸರಿನಲ್ಲಿ ಭೂಗತ ಯೋಜನೆಯೊಂದರ ಶುರು ಮಾಡಲು ಸರ್ಕಾರ ಮನಸ್ಸು ಮಾಡಿದೆ. ಗಣಿಗಾರಿಕೆ, ಮರಳುಗಾರಿಗೆ ಸದ್ದಿಲ್ಲದೇ ನಡೆಯುತ್ತಿದೆ. ನದಿ ತಿರುವು ಯೋಜನೆಗಳ ಅನುಷ್ಠಾನಕ್ಕೂ ನಾನಾ ಕಸರತ್ತು ನಡೆಯುತ್ತಿದೆ. ಅಪರೂಪದ ವನ್ಯಜೀವಿಗಳ ಮೇಲೆ ಆಕ್ರಮಣ ಮುಂದುವರೆದಿದೆ. ಪರಿಸರ ಹೋರಾಟ ಹಾಗೂ ಪರಿಸರ ಸಂರಕ್ಷಣೆ ವಿಷಯದಲ್ಲಿ ಉತ್ತರ ಕನ್ನಡ ಜಿಲ್ಲೆಯ ಕೊಡುಗೆ ಅಪಾರ. ವಿವಿಧ ಯೋಜನೆಗಳಿಂದ ಆಗುತ್ತಿರುವ ಪರಿಸರ ನಾಶದ ಬಗ್ಗೆ ಸರ್ಕಾರಕ್ಕೆ ಮನವರಿಕೆ ಮಾಡಲು ರೀಲ್ಸ್ ಸ್ಪರ್ಧೆ ಸಹಾಯಕಾರಿ. ಹವ್ಯಾಸಕ್ಕಾಗಿ ರೀಲ್ಸ ಮಾಡುವವರ ಜೊತೆ ಹೊಸಬರಿಗೆ ಸಹ ಇಲ್ಲಿ ಅವಕಾಶವಿದ್ದು, ನಿಮ್ಮೊಳಗಿನ ಸಾಮಾಜಿಕ ಸಂದೇಶವನ್ನು ಸರ್ಕಾರಕ್ಕೆ ತಲುಪಿಸಲು ಈ ಸ್ಪರ್ಧೆ ವೇದಿಕೆ ಆಗಲಿದೆ. ಈ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ 50 ಸಾವಿರ ರೂ, ಎರಡನೇ ಬಹುಮಾನ 25 ಸಾವಿರ ರೂ ಹಾಗೂ 3ನೇ ಬಹುಮಾನ 10 ಸಾವಿರ ರೂಪಾಯಿಗಳಿವೆ. ಕಾಫಿರೈಟ್ ಇಲ್ಲದ ಮ್ಯೂಸಿಕ್ ಬಳಸಿ ರೀಲ್ಸ್ ಮಾಡುವಂತೆ ಸೂಚಿಸಲಾಗಿದೆ. ಅಕ್ಟೊಬರ್ 10ರಿಂದ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಸುವರ್ಣ ಮಹೋತ್ಸವ ಸಮಾರಂಭ ಆಯೋಜಿಸುತ್ತಿದ್ದು, ಅದರ ಅಂಗವಾಗಿ ರೀಲ್ಸ್ ಸ್ಪರ್ಧೆ ನಡೆಸುತ್ತಿದೆ. 60 ಸೆಕೆಂಡಿನ ರೀಲ್ಸ್ ಮಾಡಿ ಅದನ್ನು `ರೀಲ್ಸ ವಿಡಿಯೋ ಸ್ಪರ್ಧೆ’ ನ್ನು ಕ್ಲಿಕ್ ಮಾಡಿ ಅಪ್ಲೋಡ್ ಮಾಡಬೇಕು. ನೀವು ಮಾಡಿದ ರೀಲ್ಸಗಳನ್ನು ಇನಸ್ಟಾಗ್ರಾಮಿಗೆ ಹಾಕಿ #kspcb_official ಗೆ ಟ್ಯಾಗ್ ಮಾಡಿದರೆ ಇನ್ನಷ್ಟು ಅನುಕೂಲ. `ರೀಲ್ಸ್ ಮಾಡುವ ನಿಮ್ಮ ಬಳಗಕ್ಕೆ ಈ ಮಾಹಿತಿ ಶೇರ್ ಮಾಡಿ’ - [ಬೀದಿ ನಾಯಿ ಕಾಟಕ್ಕೆ ಇಲ್ಲ ಕಡಿವಾಣ: ಸಂತಾನ ಚಿಕಿತ್ಸೆಗೆ ಡೀಸಿ ಸೂಚನೆ](https://mobiletime.in/2025/10/no-end-to-the-stray-dog-menace-dci-issues-notice-for-sterilisation/): ಉತ್ತರ ಕನ್ನಡ ಜಿಲ್ಲೆಯ ಅನೇಕ ಕಡೆ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದೆ. ಚಿಕ್ಕ ಮಕ್ಕಳು, ವೃದ್ಧರನ್ನು ಗುರಿಯಾಗಿರಿಸಿಕೊಂಡು ಬೀದಿ ನಾಯಿಗಳ ಆಕ್ರಮಣ ನಡೆಯುತ್ತಿದೆ. ಈ ಸಮಸ್ಯೆ ಜಿಲ್ಲಾಡಳಿತದ ಗಮನಕ್ಕೆ ಬಂದಿದ್ದು, ಬೀದಿ ನಾಯಿಗಳ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮ ಜರುಗಿಸುವಂತೆ ಡೀಸಿ ಕೆ ಲಕ್ಷ್ಮೀಪ್ರಿಯಾ ಸೂಚಿಸಿದ್ದಾರೆ. `ಬೀದಿನಾಯಿಗಳ ಹಾವಳಿಯನ್ನು ನಿಯಂತ್ರಿಸುವ ಉದ್ದೇಶದಿಂದ ಜಿಲ್ಲೆಯ ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳು ಮತ್ತು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿನ ಬೀದಿನಾಯಿಗಳಿಗೆ ಸಂತಾನಹರಣ ಚಿಕಿತ್ಸೆ ಮಾಡಲು ಅಗತ್ಯ ಕ್ರಮ ಜರುಗಿಸಬೇಕು’ ಎಂದವರು ಸೂಚಿಸಿದರು. `ಈಗಾಗಲೇ ಮಿಷನ್ ರೇಬಿಸ್ ಕಾರ್ಯಕ್ರಮದಡಿಯಲ್ಲಿ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಬೀದಿ ನಾಯಿಗಳಿಗೆ ಸಂತಾನ ಹರಣ ಚಿಕಿತ್ಸೆಯನ್ನು ಕೈಗೊಂಡಿದ್ದು, ಶಿರಸಿಯಲ್ಲಿ 1580 ಬೀದಿನಾಯಿಗಳಿಗೆ ಸಂತಾನಹರಣ ಚಿಕಿತ್ಸೆ ಮಾಡಲಾಗಿದೆ. ಕಾರವಾರದಲ್ಲಿಯೂ ಈ ಕಾರ್ಯ ಪ್ರಗತಿಯಲ್ಲಿದೆ. ಇದೇ ರೀತಿಯಲ್ಲಿ ಜಿಲ್ಲೆಯ ಉಳಿದ ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳು ತಮ್ಮ ವ್ಯಾಪ್ತಿಯಲ್ಲಿ ಈ ಕಾರ್ಯ ಮುಗಿಸಬೇಕು’ ಎಂದು ಸೂಚಿಸಿದರು. ಗ್ರಾಮ ಪಂಚಾಯತ್ ಮಟ್ಟದಲ್ಲಿಯೂ ಸಹ ಈ ಕಾರ್ಯಕ್ರಮವನ್ನು ಆಯೋಜಿಸುವಂತೆ ಜಿಲ್ಲಾ ಪಂಚಾಯತ್ ಅಧಿಕಾರಿಗಳಿಗೆ ತಿಳಿಸಿದರು. ಬೀದಿ ನಾಯಿಗಳ ಕಡಿತಕ್ಕೆ ಸೂಕ್ತ ಚಿಕಿತ್ಸೆ ನೀಡಲು ಔಷಧಗಳ ಕೊರತೆಯಾಗದಂತೆ ಅಗತ್ಯ ಮುನ್ನೆಚ್ಚರಿಕೆವಹಿಸುವಂತೆ ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು. `ಎಲ್ಲಾ ಆರೋಗ್ಯ ಕೇಂದ್ರಗಳಲ್ಲಿ ಅಗತ್ಯ ಪ್ರಮಾಣದ ಔಷಧ ದಾಸ್ತಾನು ಇರುವಂತೆ ನೋಡಿಕೊಳ್ಳಬೇಕು’ ಎಂದರು. `ಪಶು ಸಂಜೀವಿನಿ ಆಂಬುಲೈನ್ಸ್ ನ ಉಚಿತ ದೂರವಾಣಿ ಸಂಖ್ಯೆ 1962ಗೆ ರೈತರು ಮತ್ತು ಜಾನುವಾರು ಮಾಲೀಕರು ಕರೆ ಮಾಡಿದಾಗ ಕೆಲವೊಮ್ಮೆ ಕಾಲ್ ಡ್ರಾಪ್ ಆಗುತ್ತಿರುವ ಕುರಿತು ದೂರುತಿದ್ದು, ಕರೆ ಮಾಡುವ ಸಂದರ್ಭದಲ್ಲಿ ಯಾವುದೇ ರೀತಿಯ ತಾಂತ್ರಿಕ ಸಮಸ್ಯೆಗಳು ಕಂಡುಬಾರದAತೆ ನೋಡಿಕೊಳ್ಳಬೇಕು. ಕರೆಯಿಂದ ಸ್ವೀಕರಿಸುವ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸಿ, ಉತ್ತಮ ಗುಣಮಟ್ಟದ ಚಿಕಿತ್ಸೆ ನೀಡುವ ಬಗ್ಗೆ ಸೇವಾ ಪೂರೈಕೆದಾರರಿಗೆ ಕಟ್ಟುನಿಟ್ಟಿನ ಸೂಚನೆ ನೀಡಬೇಕು’ ಎಂದು ನಿರ್ದೇಶನ ನೀಡಿದರು. `ಈ ವರ್ಷ ಏಪ್ರಿಲಿನಿಂದ ಸೆಪ್ಟಂಬರಿನವರೆಗೆ ಪಶು ಸಂಜೀವಿನಿ ಆಂಬುಲೈನ್ಸ್ ಮೂಲಕ ಸ್ವೀಕರಿಸಿರುವ 7493 ಕರೆಗಳಿಗೆ ಸ್ಪಂದಿಸಿ ಪಶುಗಳಿಗೆ ಚಿಕಿತ್ಸೆ ನೀಡಲಾಗಿದೆ. ಆಂಬುಲೈನ್ಸ್ ಸೇವೆಯಲ್ಲಿ ಯಾವುದೇ ವ್ಯತ್ಯಯವಾಗದಂತೆ ಕ್ರಮ ಕೈಗೊಳ್ಳುವಂತೆ ಜಿಲ್ಲೆಯಲ್ಲಿ ಆಂಬುಲೈನ್ಸ್ ಸೇವೆ ನೀಡುತ್ತಿರುವ ಸಂಸ್ಥೆಯ ಸಂಯೋಜಕರಿಗೆ ಸೂಚನೆ ನೀಡಲಾಗುತ್ತದೆ’ ಎಂದು ಪಶುಪಾಲನಾ ಇಲಾಖೆ ಉಪ ನಿರ್ದೇಶಕ ಡಾ ಮೋಹನ್ ಕುಮಾರ್ ತಿಳಿಸಿದರು. ಕಾಲುಬಾಯಿ ಜ್ವರದ ವಿರುದ್ಧದ ಲಸಿಕಾ ಕಾರ್ಯಕ್ರಮವನ್ನು ಜಿಲ್ಲೆಯಾದ್ಯಂತ ಏಕಕಾಲದಲ್ಲಿ ಹಮ್ಮಿಕೊಳ್ಳುವಂತೆ ಮತ್ತು ಇದೇ ಅವಧಿಯಲ್ಲಿ ಚರ್ಮಗಂಟು ರೋಗದ ವಿರುದ್ಧ ಲಸಿಕೆಯನ್ನು ಕೂಡಾ ಒಟ್ಟಿಗೆ ನೀಡುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಲಾಯಿತು. ಈಗಾಗಲೇ ನಿರ್ಮಾಣವಾಗಿರುವ ಗೋಶಾಲೆಗಳ ನಿರ್ವಹಣೆ ಮತ್ತು ಬೀಡಾಡಿ ದನಗಳ ನಿಯಂತ್ರಣ ಕುರಿತಂತೆ ಸಭೆಯಲ್ಲಿ ಚರ್ಚೆ ನಡೆಯಿತು. ಈ ಸಭೆಯಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕೃಷ್ಣಮೂರ್ತಿ, ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಪ್ರಕಾಶ್ ಹಾಲಮ್ಮನವರ್, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಜಹೀರ್ ಅಬ್ಬಾಸ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾನೀರಜ್, ಪೌರಾಯುಕ್ತ ಜಗದೀಶ್ ಹುಲಗೆಜ್ಜಿ ಇದ್ದರು. - [ಮುಕ್ತಿಕ್ಷೇತ್ರದಲ್ಲಿ ಸತ್ತರೂ ಸುಖ ಇಲ್ಲ!](https://mobiletime.in/2025/10/there-is-no-happiness-even-if-you-die-in-the-land-of-liberation/): ಮುಕ್ತಿ ಕ್ಷೇತ್ರ ಎಂದು ಭಾವಿಸಲಾದ ಗೋಕರ್ಣದಲ್ಲಿ ಅತಿ ಹೆಚ್ಚು ಸಾವು-ನೋವು ಸಂಭವಿಸುತ್ತಿದ್ದು, ಅಲ್ಲಿನ ಶವಾಗಾರದ ದುಸ್ಥಿತಿಯಿಂದಾಗಿ `ಸತ್ತರೂ ಸುಖವಿಲ್ಲ’ ಎನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ. ಗೋಕರ್ಣದಲ್ಲಿ ಈಚೆಗೆ ಅಪಘಾತ, ಸಮುದ್ರ ಅವಘಡ ಸಾಮಾನ್ಯವಾಗಿದೆ. ಗಾಯಗೊಂಡವರಿಗೆ ಇಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ತುರ್ತು ಚಿಕಿತ್ಸೆ ನೀಡಲಾಗುತ್ತದೆ. ಆದರೆ, ಸಾವನಪ್ಪಿದವರಿಗೆ ಮರಣೋತ್ತರ ಪರೀಕ್ಷೆಗೆ ಸಮಸ್ಯೆ ಆಗುತ್ತಿದೆ. ಪ್ರಸಿದ್ಧ ಪ್ರವಾಸಿ ಹಾಗೂ ಪುಣ್ಯಕ್ಷೇತ್ರವಾದ ಗೋಕರ್ಣದಲ್ಲಿ ಈಚೆಗೆ ಸಮುದ್ರ ಸ್ನಾನ, ಸೆಲ್ಪಿ ಹುಚ್ಚಿಗೆ ಸಾವನಪ್ಪುವವರ ಸಂಖ್ಯೆ ಹೆಚ್ಚಾಗಿದೆ. ವಾರ್ಷಿಕ ಸರಿ ಸುಮಾರು 40 ಶವ ಪರೀಕ್ಷೆ ಇಲ್ಲಿ ನಡೆಯುತ್ತಿದ್ದು, ಶವಪರೀಕ್ಷೆಗೆ ಸಾಹಸ ಮಾಡಬೇಕಾದ ಅನಿವಾರ್ಯ ಸೃಷ್ಠಿಯಾಗಿದೆ. ಶವಾಗಾರದ ಹಳೆಯ ಕಟ್ಟಡ ಸರಿಯಾಗಿಲ್ಲ. ಹೊಸ ಕಟ್ಟಡ ಪೂರ್ಣವಾಗಿಲ್ಲ ಎಂಬ ತೊಂದರೆ ಇಲ್ಲಿ ಕಾಡುತ್ತಿದೆ. ಮೂರು ವರ್ಷಗಳ ಹಿಂದೆ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸಮುದಾಯ ಆರೋಗ್ಯ ಕೇಂದ್ರವನ್ನಾಗಿ ಮೇಲ್ದರ್ಜೇಗೇರಿಸಲು ಸರ್ಕಾರದಿಂದ ಹಣ ಮಂಜೂರಾಗಿ ನೂತನ ಕಟ್ಟಡ ನಿರ್ಮಾಣಕ್ಕೆ ಅಡಿಗಲ್ಲು ಹಾಕಲಾಗಿತ್ತು, ಇದರ ಪರಿಣಾಮ ಹಳೆ ಕಟ್ಟಡ ಸಂಪೂರ್ಣ ನೆಲಸಮಗೊಳಿಸಲಾಯಿತು. ಈ ವೇಳೆ ಶವಾಗಾರದ ವಿದ್ಯುತ್ ಸಂಪರ್ಕ ಹಾಗೂ ನೀರಿನ ಪೂರೈಕೆ ಕಡಿತಗೊಂಡಿತ್ತು. ವೈದ್ಯಕೀಯ ಸೇವೆಯನ್ನು ದಾನಿಗಳ ನೆರವಿನಿಂದ ಕಟ್ಟಿದ ಹೊರರೋಗಿಗಳ ವಿಭಾಗದ ಕಟ್ಟಡದಲ್ಲಿ ಶುರು ಮಾಡಲಾಯಿತು. ಈ ವೇಳೆ ಮರಣೋತ್ತರ ಪರೀಕ್ಷಾ ಕೊಠಡಿಗೆ ವಿದ್ಯುತ್ ಸಂಪರ್ಕ ನೀಡಲಾಗಿದ್ದು, ನೀರಿನ ಪೈಪ್ ಲೈನ್ ಸಮಸ್ಯೆ ಹಾಗೇ ಇದೆ. ಇನ್ನೂ ಗುಡ್ಡದ ಮೇಲಿರುವ ಶವ ಪರೀಕ್ಷೆ ಕಟ್ಟಡಕ್ಕೆ ತೆರಳಲು ಸಾಹಸ ಅನಿವಾರ್ಯ. ಆಧುನಿಕ ಪದ್ದತಿಯಲ್ಲಿನ ಹಲವು ಸೌಕರ್ಯಗಳು ಇಲ್ಲಿಲ್ಲ. ನೂತನವಾಗಿ ಶವಾಗಾರದ ಕಟ್ಟಡವನ್ನ ಆರೋಗ್ಯ ಕೇಂದ್ರದಲ್ಲಿ ನಿರ್ಮಿಸಲಾಗಿದ್ದು, ಕೆಲಸ ನಿಧಾನಗತಿಯಲ್ಲಿ ಸಾಗುತ್ತಿದೆ. ಇದನ್ನ ಶೀಘ್ರವಾಗಿ ಪೂರ್ಣಗೊಳಿಸಿ ಬಳಕೆ ಮಾಡಬೇಕು ಎಂಬ ಆಗ್ರಹ ಕೇಳಿಬಂದಿದೆ. ಸದ್ಯ ಪ್ರವಾಸಿಗರು ಆಕಸ್ಮಿಕ ಸಾವನ್ನಪ್ಪಿದಾಗ ದೂರದ ಊರಿವ ಕುಟುಂಬದವರು ಇಲ್ಲಿ ಬರಲು ಒಂದೆರಡು ದಿನ ಬೇಕಾಗುತ್ತಿದ್ದು, ಅಲ್ಲಿಯವರೆಗೆ ಶವ ಕಾದಿಡಲು ಇಲ್ಲಿ ವ್ಯವಸ್ಥೆ ಇಲ್ಲ. ಜೊತೆಗೆ ಮರಣೋತ್ತರ ಪರೀಕ್ಷೆ ನಡೆಸುವಾಗ ಗ್ರಾಮ ಪಂಚಾಯತ ಸ್ವಚ್ಚತಾ ಸಿಬ್ಬಂದಿಯನ್ನು ಬಳಸಿಕೊಳ್ಳಲಾಗುತ್ತದೆ. ಅನುಭವಿ ಸಿಬ್ಬಂದಿ ಕೊರತೆ ಆಸ್ಪತ್ರೆಗೆ ಕಾಡುತ್ತಿದೆ. ತುರ್ತು ಸಂದರ್ಭದಲ್ಲಿ ಇಲ್ಲಿನ ಆಡಳಿತ ವೈದ್ಯಾಧಿಕಾರಿಗಳೇ ಎಲ್ಲವನ್ನು ಮಾಡಬೇಕಾದ ಪರಿಸ್ಥಿತಿಯಿದೆ. - [ವಿದೇಶದಲ್ಲಿ ಒಟ್ಟಿಗಿದ್ದರು.. ಭಾರತಕ್ಕೆ ಬಂದು ಬೇರೆಯಾದರು!](https://mobiletime.in/2025/10/they-were-together-abroad-but-they-came-to-india-and-got-separated/): ವಿದೇಶದಲ್ಲಿ ವಿವಾಹವಾಗಿ ಒಟ್ಟಿಗೆ ಬದುಕು ಕಂಡುಕೊoಡಿದ್ದ ದಾಂಡೇಲಿಯ ಸನಾ ಅತ್ತಾರ್ ಹಾಗೂ ವಿನೋದಕುಮಾರ ಬಿಜ್ಜಂ ಭಾರತಕ್ಕೆ ಬಂದು ಬೇರೆಯಾಗಿದ್ದಾರೆ. ಸದ್ಯ ವಿನೋದಕುಮಾರ್ ಬಿಜ್ಜಂ ಅವರು ಕಾಣೆಯಾಗಿದ್ದು, `ಪತಿಯನ್ನು ಹುಡುಕಿಕೊಡಿ’ ಎಂದು ಸನಾ ಅತ್ತಾರ್ ಅವರು ಪೊಲೀಸರ ಮೊರೆ ಹೋಗಿದ್ದಾರೆ. ಸನಾ ಅತ್ತಾರ್ ಅವರು ಲಂಡನ್’ನಲ್ಲಿ ಸ್ಟಾಫ ನರ್ಸ ಆಗಿದ್ದರು. ವಿನೋದಕುಮಾರ ಬಿಚ್ಚಂ ಅವರು ಸಹ ಅದೇ ದೇಶದಲ್ಲಿದ್ದರು. ಅವರಿಬ್ಬರು ವಿವಾಹವಾಗಿ ಏಳು ವರ್ಷ ಸಂಸಾರ ನಡೆಸಿದರು. ಅದಾದ ನಂತರ ಈ ದಂಪತಿ ಭಾರತಕ್ಕೆ ಮರಳಿದ್ದು, ಕೌಟುಂಬಿಕ ಕಲಹವೊಂದು ಅವರನ್ನು ಕಾಡಿತು. ಸೆಪ್ಟೆಂಬರ್ 29ರ ಮಧ್ಯಾಹ್ನ ಮನೆಯಲ್ಲಿ ನಡೆದ ಜಗಳದಿಂದ ವಿನೋದಕುಮಾರ ಬಿಜ್ಜಂ ಅವರು ಬೇಸರಿಸಿಕೊಂಡರು. ಭಿನ್ನಾಭಿಪ್ರಾಯದಿಂದ ನೊಂದ ಅವರು `ನನಗೆ ಏನೂ ಬೇಡ’ ಎನ್ನುತ್ತ ಮನೆಯಿಂದ ಹೊರಹೋದರು. ಎಷ್ಟು ಹೊತ್ತಾದರೂ ಅವರು ಮರಳದ ಕಾರಣ ಸನಾ ಅತ್ತಾರ್ ಅವರು ಆತಂಕಕ್ಕೆ ಒಳಗಾದರು. ವಾರ ಕಳೆದರೂ ಪತಿ ಮರಳದ ಕಾರಣ ಪೊಲೀಸರ ಮೊರೆ ಹೋದರು. ಪ್ರಕರಣ ದಾಖಲಿಸಿದ ಪೊಲೀಸರು ವಿನೋದಕುಮಾರ ಬಿಜ್ಜಂ ಅವರಿಗಾಗಿ ಹುಡುಕಾಟ ನಡೆಸಿದರು. ಲಭ್ಯ ಮಾಹಿತಿ ಪ್ರಕಾರ ಪೊಲೀಸರಿಗೆ ವಿನೋದಕುಮಾರ ಬಿಚ್ಚಂ ಅವರ ಕುರಿತು ಸಣ್ಣ ಸುಳಿವು ಸಿಕ್ಕಿದೆ. ಅವರ ಮನವೊಲೈಸಿ ಮನೆಗೆ ಕರೆತರುವ ಪ್ರಯತ್ನ ನಡೆದಿದೆ. - [ಬ್ಯಾಟರಿ ಕದ್ದ ಕಳ್ಳರು!](https://mobiletime.in/2025/10/thieves-stole-the-battery/): ಕುಮಟಾದ ಗಿಬ್ ಸರ್ಕಲ್ ಬಳಿಯಿರುವ ಬಾಬಾ ಕಾಂಪ್ಲೆಕ್ಸಿನಲ್ಲಿ ಕಳ್ಳತನವಾಗಿದೆ. ಅಲ್ಲಿನ ಸ್ಯಾಮನ್ ಎಂಟರ್ ಪ್ರೈಸಸ್’ಗೆ ನುಗ್ಗಿದ ಕಳ್ಳರು ಬ್ಯಾಟರಿಗಳನ್ನು ಕದ್ದಿದ್ದಾರೆ. ಅಕ್ಟೊಬರ್ 7ರ ಸಂಜೆ ನ ಸ್ಯಾಮನ್ ಕುಮಟಾದ ಗಿಬ್ ಸರ್ಕಲ್ ಬಳಿಯಿರುವ ಬಾಬಾ ಕಾಂಪ್ಲೆಕ್ಸಿನಲ್ಲಿ ಕಳ್ಳತನವಾಗಿದೆ. ಅಲ್ಲಿನ ಸ್ಯಾಮನ್ ಎಂಟರ್ ಪ್ರೈಸಸ್’ಗೆ ನುಗ್ಗಿದ ಕಳ್ಳರು ಬ್ಯಾಟರಿಗಳನ್ನು ಕದ್ದಿದ್ದಾರೆ.’ ಒಳಗೆ 100ಎಎಚ್’ನ 12 ಬ್ಯಾಟರಿಗಳಿದ್ದವು. ಅಕ್ಟೊಬರ್ 8ರ ಬೆಳಗ್ಗೆ ಬಂದು ನೋಡಿದಾಗ ಅವು ನಾಪತ್ತೆಯಾಗಿದ್ದವು. ಮಳಿಗೆಯ ಶಟರ್ಸ ಒಡೆದ ಕಳ್ಳರು ಅಲ್ಲಿದ್ದ 12 ಬ್ಯಾಟರಿಗಳನ್ನು ಎಗರಿಸಿದ್ದಾರೆ. ಅದಕ್ಕೂ ಮುನ್ನ ಕಳ್ಳರು ಮಳಿಗೆಯ ಗ್ಲಾಸುಗಳನ್ನು ಒಡೆದು ಪುಡಿಪುಡಿ ಮಾಡಿದ್ದಾರೆ. ಹರವೆಟ್ಟಾ ಬಳಿಯ ಗುಡಾಳದ ಗಣೇಶ ಗೌಡ ಅವರು ಸ್ಯಾಮನ್ ಎಂಟರ್ ಪ್ರೈಸಸ್”ನ ಸೇಲ್ಸ & ಸರ್ವೀಸ್ ಮ್ಯಾನೇಜರ್ ಆಗಿದ್ದು, ಕಳ್ಳತನ ಅವರ ಗಮನಕ್ಕೆ ಬಂದಿದೆ. ಈ ಹಿನ್ನಲೆ ಗಣೇಶ ಗೌಡ ಅವರು ಕಳ್ಳರ ಹುಡುಕಾಟಕ್ಕಾಗಿ ಪೊಲೀಸ್ ದೂರು ನೀಡಿದ್ದಾರೆ. `8 ಸಾವಿರ ರೂ ಮೌಲ್ಯದ 12 ಬ್ಯಾಟರಿ ಕಳ್ಳತನದಿಂದ 96 ಸಾವಿರ ನಷ್ಟವಾಗಿದ್ದು, ಕಳ್ಳರನ್ನು ಹುಡುಕಿ ಬ್ಯಾಟರಿ ಮರಳಿಸಿ’ ಎಂದವರು ಮನವಿ ಮಾಡಿದ್ದಾರೆ. ಪ್ರಕರಣ ದಾಖಲಿಸಿದ ಪೊಲೀಸರು ಕಳ್ಳರ ಶೋಧ ಶುರು ಮಾಡಿದ್ದಾರೆ. - [ಹುಬ್ಬಳ್ಳಿಯ ಈ ರೈಲು ತಾಳಗುಪ್ಪಕ್ಕೆ ತೆರಳಲಿದೆ.. ಶಿರಸಿಯಲ್ಲಿ ಸರ್ವೆ ಕಾರ್ಯ ಶುರುವಾಗಿದೆ!](https://mobiletime.in/2025/10/this-train-from-hubballi-will-go-to-talaguppa-survey-work-has-begun-in-sirsi/): ಭವಿಷ್ಯದಲ್ಲಿ ಹುಬ್ಬಳ್ಳಿಯಿಂದ ಹೊರಡುವ ರೈಲು ಶಿರಸಿ ಮಾರ್ಗವಾಗಿ ತಾಳಗುಪ್ಪಕ್ಕೆ ತೆರಳಲಿದ್ದು, ಈ ಮಾರ್ಗದ ರೈಲು ಹಳಿ ನಿರ್ಮಾಣ ಸಮೀಕ್ಷೆ ಜೋರಾಗಿದೆ. ಈ ಯೋಜನೆಗಾಗಿ ಕಳೆದ ವರ್ಷವೇ ಗಡಿ ಗುರುತು ಮಾಡಲಾಗಿದ್ದರೂ ಇದೀಗ ಎರಡನೇ ಹಂತರ ಸರ್ವೇ ಶುರುವಾಗಿದೆ. ಈ ಮಾರ್ಗದ ರೈಲ್ವೇ ಯೋಜನೆಗೆ ಕೇಂದ್ರ ಸರ್ಕಾರ ಸಮ್ಮತಿ ಸೂಚಿಸಿದೆ. ಸಿದ್ದಾಪುರ ರೈಲು ಹೋರಾಟ ಸಮಿತಿ ಸಹ ಈ ಯೋಜನೆಗಾಗಿ ಸಾಕಷ್ಟು ಹೋರಾಟ ನಡೆಸಿದೆ. ಸಾಧ್ಯವಾದಷ್ಟರ ಮಟ್ಟಿಗೆ ಅರಣ್ಯ ಭೂಮಿ ತಪ್ಪಿಸಿ ಕೃಷಿ ಹಾಗೂ ಪಾಳುಬಿದ್ದ ಭೂಮಿ ಬಳಸಿಕೊಂಡು ರೈಲ್ವೆ ಮಾರ್ಗ ಸಿದ್ಧಪಡಿಸಲಾಗುತ್ತಿದೆ. ಸದ್ಯ ಬೆಂಗಳೂರಿನ ಆರ್ ವಿ ಕಂಪನಿಯ ಎರಡು ತಂಡ ಸ್ಥಳಕ್ಕೆ ಭೇಟಿ ನೀಡಿ ಸಮೀಕ್ಷೆ ಮಾಡುತ್ತಿದೆ. ಬೆಟ್ಟ-ಗುಡ್ಡಗಳು ಹೆಚ್ಚಿರುವ ಮಲೆನಾಡು ಪ್ರದೇಶದಲ್ಲಿ ಬಯಲು ಹಾಗೂ ಗದ್ದೆ ಮಾರ್ಗಗಳಲ್ಲಿ ರೈಲು ಸಂಚಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಹೀಗಾಗಿ ಗುಡ್ಡ ಪ್ರದೇಶವಿರುವ ಹದಿನಾರನೇ ಮೈಲುಕಲ್ಲು, ನಾಣಿಕಟ್ಟಾ, ಕಾನಸೂರು, ಅಜ್ಜಿಬಳ-ಕಾನಗೋಡ ಭಾಗಗಳಲ್ಲಿ ರೈಲ್ವೆ ಮಾರ್ಗ ಬರುವ ಸಾಧ್ಯತೆಗಳಿಲ್ಲ. ಸಂರಕ್ಷಿತ ಅರಣ್ಯ ಪ್ರದೇಶದಿಂದಲೂ ರೈಲು ಮಾರ್ಗ ಅಂತರ ಕಾಯ್ದುಕೊಂಡಿದೆ. ಮಾಹಿತಿಗಳ ಪ್ರಕಾರ ಶಿರಸಿ ಅಂಡಗಿ ಮಾರ್ಗವಾಗಿ 3ಕಿಮೀ ಆಚೆಗೆ ಸರ್ವೇ ನಡೆದಿದ್ದು, ಎಲ್ಲವೂ ಸರಿಯಾಗಿ ನಡೆದರೆ 2 ವರ್ಷದೊಳಗೆ ಭೂ ಸ್ವಾಧೀನ ಪ್ರಕ್ರಿಯೆ ನಡೆಯಲಿದೆ. ಸಾಧ್ಯವಾದಷ್ಟರ ಮಟ್ಟಿಗೆ ಪರಿಸರ ಹಾನಿ ತಪ್ಪಿಸಿ ಹೊಸ ಮಾರ್ಗ ರಚಿಸಲಾಗಿದೆ ರೈಲ್ವೆ ಇಲಾಖೆಯ ಪ್ರಿಲಿಮಿನರಿ ಎಂಜಿನಿಯರಿoಗ್ & ಟ್ರಾಫಿಕ್ ಸರ್ವೆಯಲ್ಲಿ ಹೊಸ ಬ್ರಾಡ್‌ಗೇಜ್ ರೈಲ್ವೆ ಮಾರ್ಗ ಹಾಗೂ ರೈಲು ನಿಲ್ದಾಣಗಳ ಕುರಿತು ವಿವರ ಪ್ರಕಟಿಸಲಾಗಿದೆ. ಅದರ ಪ್ರಕಾರ ತಾಳಗುಪ್ಪಾದಿಂದ ಕಾವಂಚೂರು ಮಾರ್ಗವಾಗಿ ಸಿದ್ದಾಪುರಕ್ಕೆ ಆಗಮಿಸುವ ಈ ರೈಲು ಮಾರ್ಗ ನಂತರ ಕುಣಜಿ-ತೆಲಗುಂದ್ಲಿ- ಒಡ್ಡಿನಕೊಪ್ಪ ಮಾರ್ಗವಾಗಿ ಶಿರಸಿಗೆ ಬರಲಿದೆ. ನಂತರ ಮಳಲಗಾಂವ್-ಕಾತೂರು ಮಾರ್ಗವಾಗಿ ಮುಂಡಗೋಡಕ್ಕೆ ತೆರಳಲಿದೆ. ತದನಂತರದಲ್ಲಿ ತಡಸ ಮೂಲಕ ಹುಬ್ಬಳ್ಳಿ ರೈಲ್ವೆ ನಿಲ್ದಾಣ ತಲುಪಲಿದೆ. ಸಿದ್ದಾಪುರ ತಾಲೂಕಿನ ಕಾವಂಚೂರು, ಸಿದ್ದಾಪುರ ಹಾಗೂ ಕುಣಜಿಯಲ್ಲಿ ರೈಲ್ವೆ ನಿಲ್ದಾಣ ಸ್ಥಾಪನೆಗೆ ಉದ್ದೇಶಿಸಲಾಗಿದೆ. ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನಲ್ಲಿ ತೆಲಗುಂದ್ಲಿ, ಶಿರಸಿ ತಾಲೂಕಿನಲ್ಲಿ ಒಡ್ಡಿನಕೊಪ್ಪ, ಒಕ್ಕಲಕೊಪ್ಪ, ಗೌಡಳ್ಳಿ, ಮಳಲಗಾಂವ್ ಹಾಗೂ ಗೋಟಗಾಡಿ ಬಳಿ ನಿಲ್ದಾಣ ಸ್ಥಾಪನೆಗೆ ನಕ್ಷೆ ಸಿದ್ಧವಾಗಿದೆ. ಮುಂಡಗೋಡ ತಾಲೂಕಿನಲ್ಲಿ ಕಾತೂರು, ಮುಂಡಗೋಡ ಹಾಗೂ ಅಷ್ಟಕಟ್ಟಿಯಲ್ಲಿ ರೈಲು ನಿಲ್ದಾಣ ಸ್ಥಾಪಿಸುವ ಪ್ರಸ್ತಾವನೆ ನಕ್ಷೆಯಲ್ಲಿದೆ. ಹಾವೇರಿ ಜಿಲ್ಲೆಯಲ್ಲಿ ತಡಸ ಹಾಗೂ ಧಾರವಾಡ ಜಿಲ್ಲೆಯಲ್ಲಿ ಬೆಳಗಲಿ ಬಳಿ ರೈಲ್ವೆ ನಿಲ್ದಾಣ ಬರಲಿದೆ. ತಾಳಗುಪ್ಪಾ-ಹುಬ್ಬಳ್ಳಿ ಮಾರ್ಗದಲ್ಲಿ ಸಿದ್ದಾಪುರ-ಶಿರಸಿ-ಮುಂಡಗೋಡ ಹಾಗೂ ತಡಸಗಳು ಪ್ರಮುಖ ನಿಲ್ದಾಣಗಳಾಗಲಿದೆ. ಸಿದ್ದಾಪುರ ನಿಲ್ದಾಣವು ಸಿದ್ದಾಪುರ-ಕೊಂಡ್ಲಿ ನಡುವಿನ ಗದ್ದೆ ಬಯಲಿನಲ್ಲಿ ರೈಲ್ವೆ ಮಾರ್ಗದ 17 ಹಾಗೂ 18 ಕಿಲೋಮೀಟರ್ ನಡುವೆ ನಿರ್ಮಾಣವಾಗಲಿದೆ. ಶಿರಸಿ ನಿಲ್ದಾಣವು ಗೌಡಳ್ಳಿಯಿಂದ ಮುಂದೆ ಒಕ್ಕಲಕೊಪ್ಪ ಬಳಿ ರೈಲ್ವೆ ಮಾರ್ಗದ 66ನೇ ಕಿಲೋಮೀಟರ್‌ನಲ್ಲಿ ನಿರ್ಮಾಣವಾಗಲಿದೆ. ಮುಂಡಗೋಡ ರೈಲ್ವೆ ನಿಲ್ದಾಣವು ಮುಂಡಗೋಡ ಪಟ್ಟಣದಿಂದ 4 ಕಿಲೋಮೀಟರ್ ದೂರದಲ್ಲಿ ರೈಲ್ವೆ ಮಾರ್ಗದ 116 ಹಾಗೂ 117ನೇ ಕಿಲೋಮೀಟರ್ ನಡುವೆ ನಿರ್ಮಾಣವಾಗಲಿದೆ. ತಡಸ ನಿಲ್ದಾಣವು ತಡಸ ಪಟ್ಟಣದಿಂದ 2 ಕಿಲೋಮೀಟರ್ ದೂರದಲ್ಲಿ ರೈಲ್ವೆ ಮಾರ್ಗದ 142 ಹಾಗೂ 143ನೇ ಕಿಲೋಮೀಟರ್ ನಡುವೆ ನಿರ್ಮಾಣವಾಗಲಿದೆ. ಶಿರಸಿ-ಹಾವೇರಿ ರೈಲ್ವೆ ಮಾರ್ಗ ನಿರ್ಮಾಣದ ಯೋಜನೆಗೂ ಪೂರಕವಾಗುವಂತೆ ಈ ರೈಲ್ವೆ ಮಾರ್ಗ ಸಿದ್ಧಪಡಿಸಲಾಗಿದೆ. ಅದರ ಪ್ರಕಾರ ಶಿರಸಿ ತಾಲೂಕಿನ ಮಳಲಗಾಂವ್‌ನಲ್ಲಿ ಜಂಕ್ಷನ್ ಆಗುವ ಸಾಧ್ಯತೆ ಹೆಚ್ಚಿದೆ. - [ಐದು ದಶಕದ ನಂತರ ಸಿಕ್ಕಿತು ಸರ್ಕಾರಿ ದಾಖಲೆ!](https://mobiletime.in/2025/10/government-document-found-after-five-decades/): 50 ವರ್ಷಗಳಿಂದ ಯಾವುದೇ ದಾಖಲೆ ಇಲ್ಲದೇ ಬದುಕುತ್ತಿದ್ದ ನೀಲಾ ಸಿದ್ದಿ ಅವರಿಗೆ ಇದೀಗ ಮತದಾನದ ಹಕ್ಕು ಸಿಕ್ಕಿದೆ. WHR ಆರ್ ಕೆ ಪೌಂಡೇಶನ್’ನ ವಿಶ್ವ ಮಾನವ ಹಕ್ಕು ಸಂಘಟನೆಯವರು ನೀಲಾ ಸಿದ್ದಿ ಅವರಿಗೆ ಈ ದಾಖಲೆ ಮಾಡಿಸಿಕೊಟ್ಟಿದ್ದಾರೆ. ಯಲ್ಲಾಪುರದ ಉಮ್ಮಚ್ಗಿ ಸುತ್ತಮುತ್ತಲ ಪ್ರದೇಶದಲ್ಲಿ ನೀಲಾ ನಾಗ್ಯಾ ಸಿದ್ದಿ ಅವರು ಅಲೆದಾಡುತ್ತಿದ್ದರು. ಒಂಟಿಯಾಗಿ ಬದುಕುತ್ತಿದ್ದ ಅವರ ಬಳಿ ಈವರೆಗೂ ಯಾವುದೇ ದಾಖಲೆಗಳಿರಲಿಲ್ಲ. ಅಲ್ಪ ಪ್ರಮಾಣದ ಬುದ್ದಿಮಾಂದ್ಯರಾಗಿರುವ ಅವರು ಅಲ್ಲಿ-ಇಲ್ಲಿ ಕೂಲಿ ಮಾಡಿ ಬದುಕುತ್ತಿದ್ದರು. ನೀಲಾ ಸಿದ್ದಿ ಅವರಿಗೆ ಸ್ವಂತ ಸೂರು ಸಹ ಇರಲಿಲ್ಲ. ಮೂರು ತಿಂಗಳ ಹಿಂದೆ ಡ್ಬುಎಚ್‌ಆರ್ ಆರ್ ಕೆ ಪೌಂಡೇಶನ್’ನ ವಿಶ್ವ ಮಾನವ ಹಕ್ಕು ಸಂಘಟನೆಯ ಜಿಲ್ಲಾ ಸಮಿತಿ ಸದಸ್ಯೆ ಗೀತಾ ಪುಟ್ಟ ಸಿದ್ದಿ ಅವರಿಗೆ ಈ ವಿಷಯ ಗೊತ್ತಾಯಿತು. ಗೀತಾ ಸಿದ್ದಿ ಅವರು ನೀಲಾ ಸಿದ್ದಿ ಅವರಿಗೆ ಯಲ್ಲಾಪುರದ ಉಮ್ಮಚ್ಗಿ ಬಳಿಯ ನಂದಿಭಾವಿಯಲ್ಲಿ ಚಿಕ್ಕ ಜೋಪಡಿ ನಿರ್ಮಿಸಿಕೊಟ್ಟರು. ತಮ್ಮ ಮನೆ ಸಮೀಪವೇ ಆ ಜೋಪಡಿಯಿದ್ದು, ನಿತ್ಯ ಊಟ-ತಿಂಡಿಯನ್ನು ಸಹ ಬಿಡಿಸಿದರು. ಮೂರು ತಿಂಗಳ ಅಲೆದಾಟ ನಡೆಸಿ ನೀಲಾ ಸಿದ್ದಿ ಅವರಿಗೆ ಚುನಾವಣಾ ಆಯೋಗದ ಗುರುತಿನ ಪತ್ರ ಮಾಡಿಸಿಕೊಟ್ಟರು. ಸದ್ಯ ನೀಲಾ ಸಿದ್ದಿ ಅವರಿಗೆ ಆಧಾರ್ ಕಾರ್ಡ, ರೇಶನ್ ಕಾರ್ಡಗಾಗಿ ಗೀತಾ ಸಿದ್ದಿ ಅವರು ಓಡಾಡುತ್ತಿದ್ದಾರೆ. ನೀಲಾ ಸಿದ್ದಿ ಅವರು ಅನಾರೋಗ್ಯಕ್ಕೆ ಒಳಗಾದಾಗ ಅವರ ಆಸ್ಪತ್ರೆ ತಿರುಗಾಟದ ಹೊಣೆಯನ್ನು ಗೀತಾ ಸಿದ್ದಿ ಅವರು ವಹಿಸಿಕೊಂಡಿದ್ದಾರೆ. `ನೀಲಾ ಸಿದ್ದಿ ಅವರ ಬಳಿ ಯಾವುದೇ ದಾಖಲೆಗಳಿಲ್ಲದ ಕಾರಣ ಯಾವ ಸರ್ಕಾರಿ ಸೌಲಭ್ಯವೂ ಸಿಗುತ್ತಿರಲಿಲ್ಲ. ಸದ್ಯ ಅವರಿಗೆ ಮತದಾನ ಹಕ್ಕು ಬಂದಿದ್ದು, ಉಳಿದ ಸೌಕರ್ಯ ಒದಗಿಸಲು ಶ್ರಮಿಸಲಾಗುತ್ತಿದೆ’ ಎಂದು ಗೀತಾ ಸಿದ್ದಿ ಅವರು ಹೇಳಿದ್ದಾರೆ. ಗುರುತು-ಪರಿಚಯ ಇಲ್ಲದ ಮಹಿಳೆಗೆ ನೆರವಾದ  WHR ಆರ್ ಕೆ ಪೌಂಡೇಶನ್ ವಿಶ್ವ ಮಾನವ ಹಕ್ಕು ಸಂಘಟನೆಯ ಕೆಲಸ ಜನ ಮೆಚ್ಚುಗೆಗೆ ಪಾತ್ರವಾಗಿದೆ. - [ಶವ ಸಾಗರ.. ಅಂತ್ಯ ಸಂಸ್ಕಾರ](https://mobiletime.in/2025/10/the-ocean-of-corpses-the-funeral/): ಯಲ್ಲಾಪುರ ಅಂಕೋಲಾ ಗಡಿಭಾಗದ ಕೆಳಾಸೆ-ಕೈಗಡಿ ಹೊಳೆಯಲ್ಲಿ ಮುಳುಗಿದ್ದ ಸಾಗರ ದೇವಾಡಿಗ ಅವರು ಶವವಾಗಿ ಸಿಕ್ಕಿದ್ದಾರೆ. ಮೂರು ದಿನಗಳ ಹುಡುಕಾಟದ ನಂತರ ಗುರುವಾರ ನದಿ ಆಳದಲ್ಲಿ ಸಾಗರ ದೇವಾಡಿಗ ಅವರ ಶವ ದೊರೆತಿದೆ. ಯಲ್ಲಾಪುರದ ಸಬಗೇರಿಯ ಸಾಗರ್ ರಾಮಾ ದೇವಾಡಿಗ (23) ಅವರು ಮಂಗಳವಾರ ತಮ್ಮ ಸ್ನೇಹಿತರ ಜೊತೆ ಬೇಡ್ತಿ-ಗಂಗಾವಳಿ ನದಿ ಬಳಿ ಹೋಗಿದ್ದರು. ದಿನೇಶ, ಪುನಿತ್ ಹಾಗೂ ವಿನೋದ ಅವರ ಜೊತೆ ಸೇರಿ ಅವರು ಅಲ್ಲಿ ಪಾರ್ಟಿ ಮಾಡಿದ್ದರು. ಅದಾದ ನಂತರ ನದಿ ಅಂಚಿಗೆ ತೆರಳಿದ ಸಾಗರ ದೇವಾಡಿಗ ಕಾಲು ಜಾರಿ ನೀರಿಗೆ ಬಿದ್ದರು. ಆಪ್ತ ಸ್ನೇಹಿತನ ಹುಟ್ಟುಹಬ್ಬದ ದಿನವೇ ಸಾಗರ ದೇವಾಡಿಗ ಅವರು ನೀರು ಪಾಲಾದರು. ಅಕ್ಕನ ಮಗ ಸಾಗರ ದೇವಾಡಿಗ ಅವರು ನೀರು ಪಾಲಾದ ಬಗ್ಗೆ ಕಾಳಮ್ಮ ನಗರದ ರವಿ ದೇವಾಡಿಗ ಅವರು ಅಂಕೋಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಹುಡುಕಾಟಕ್ಕೆ ಪೊಲೀಸರ ನೆರವು ಯಾಚಿಸಿದ್ದರು. ಮಂಗಳವಾರ ಸಂಜೆ 4.30ರ ಅವಧಿಗೆ ಈ ಅವಘಡ ನಡೆದಿದ್ದು, ಆ ದಿನ ರಾತ್ರಿಯವರೆಗೂ ಹುಡುಕಾಟ ನಡೆಯಿತು. ಮರುದಿನ ಬೆಳಗ್ಗೆಯೂ ಮತ್ತೆ ಶೋಧ ಶುರುವಾಯಿತು. ಆದರೆ, ಸಾಗರ ದೇವಾಡಿಗ ಅವರ ಬಗ್ಗೆ ಯಾವ ಸುಳಿವು ಸಿಕ್ಕಿರಲಿಲ್ಲ. ಗುರುವಾರ ಮತ್ತೆ ಹುಡುಕಾಟ ಮುಂದುವರೆದಿದ್ದು, ಮಧ್ಯಾಹ್ನದ ಅವಧಿಗೆ ನೀರಿನಾಳದಲ್ಲಿ ಶವ ಕಾಣಿಸಿತು. ಆ ಶವವನ್ನು ಮೇಲೆತ್ತಿದಾಗ ಅದು ಸಾಗರ ದೇವಾಡಿಗ ಅವರ ದೇಹ ಎಂಬುದು ಖಚಿತವಾಯಿತು. ಪೊಲೀಸರು, ಅಗ್ನಿಶಾಮಕ ಸಿಬ್ಬಂದಿ ಜೊತೆ ಸ್ಥಳೀಯ ಸಿದ್ದಿ ಸಮುದಾಯದವರು ಸಾಗರ ದೇವಾಡಿಗ ಅವರ ಹುಡುಕಾಟ ನಡೆಸಿದ್ದರು. ಗಣಪ ಸಿದ್ದಿ, ರಾಮಾ ಸಿದ್ದಿ, ವೆಂಕ ಸಿದ್ದಿ ಹಾಗೂ ನಾರಾಯಣ ಸಿದ್ದಿ ಅವರ ತಂಡ ಹಗಲು ರಾತ್ರಿ ಕಾಡು-ಮೇಡು ಅಲೆದಿದ್ದರು. ಸಾಗರ ದೇವಾಡಿಗ ಮುಳುಗಿದ 500ಮೀ ದೂರದಲ್ಲಿ ಸದ್ಯ ಶವ ಸಿಕ್ಕಿದೆ. - [ಪತ್ರ ಬರೆದ ಪುತ್ರ ಸುರಕ್ಷಿತ!](https://mobiletime.in/2025/10/the-son-who-wrote-the-letter-is-safe/): ಅಕ್ರಮ ಕಟ್ಟಡವನ್ನು ಸಕ್ರಮಗೊಳಿಸುವ ಒತ್ತಡಕ್ಕೆ ಮಣಿಯದ ಕುಮಟಾ ಪುರಸಭೆ ಕಂದಾಯ ನಿರೀಕ್ಷಕ ವೆಂಕಟೇಶ ಆರ್ ಅವರು ಮೊನ್ನೆ ನಾಪತ್ತೆಯಾಗಿದ್ದು, ಸದ್ಯ ಅವರು ಬೆಳಗಾವಿಯಲ್ಲಿ ಸುರಕ್ಷಿತವಾಗಿದ್ದಾರೆ. ಕುಮಟಾ ಶಾಸಕ ದಿನಕರ ಶೆಟ್ಟಿ ಹಾಗೂ ಪುರಸಭೆ ಮುಖ್ಯಾಧಿಕಾರಿ ಎಂ ಆರ್ ಸ್ವಾಮಿ ಅವರ ಹೆಸರು ಉಲ್ಲೇಖಿಸಿ ವೆಂಕಟೇಶ್ ಆರ್ ಅವರು ಪತ್ರ ಬರೆದಿದ್ದರು. ಕುಮಟಾ ರಾಷ್ಟಿಯ ಹೆದ್ದಾರಿ ಅಂಚಿನಲ್ಲಿರುವ ವಿನಾಯಕ ಹೊಟೇಲ್ ಅನಧಿಕೃತವಾಗಿದ್ದರೂ ಆ ಕಟ್ಟಡಕ್ಕೆ ಅಧಿಕೃತ ಮುದ್ರೆ ಒತ್ತುವಂತೆ ಪುರಸಭೆ ಮುಖ್ಯಾಧಿಕಾರಿ ಎಂ ಆರ್ ಸ್ವಾಮಿ ಅವರು ಒತ್ತಡ ಹೇರಿದ ಬಗ್ಗೆ ವಿವರಿಸಿದ್ದರು. ಜೊತೆಗೆ ಮೇಲಧಿಕಾರಿಗಳ ಒತ್ತಡ, ಮಾನಸಿಕ ಹಿಂಸೆ ಹಾಗೂ ಜಾತಿ ನಿಂದನೆಯ ಬಗ್ಗೆ ಅವರು ಪತ್ರದಲ್ಲಿ ವಿವರವಾಗಿ ಬರೆದಿದ್ದರು. ಹಣಕಾಸು ವ್ಯವಹಾರದ ಬಗ್ಗೆಯೂ ಅವರು ಪತ್ರದಲ್ಲಿ ತಿಳಿಸಿದ್ದರು. ಅದಾದ ನಂತರ ವೆಂಕಟೇಶ್ ಆರ್ ಅವರು ಕಣ್ಮರೆಯಾಗಿದ್ದು, ಕುಟುಂಬದವರ ಜೊತೆ ಸಹದ್ಯೋಗಿಗಳಿಗೂ ಆತಂಕ ಶುರುವಾಗಿತ್ತು. ಈ ಎಲ್ಲಾ ಹಿನ್ನಲೆ ವೆಂಕಟೇಶ ಆರ್ ಅವರ ತಾಯಿ ಆಶಾ ಹರಿಜನ ಅವರು ಮಗ ನಾಪತ್ತೆಯಾದ ಬಗ್ಗೆ ಭಟ್ಕಳ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಜೊತೆಗೆ ಕುಮಟಾ ಪುರಸಭೆ ಮುಖ್ಯಾಧಿಕಾರಿ ಎಂ ಆರ್ ಸ್ವಾಮಿ ಅವರ ಅವರು ಎರಡು ತಿಂಗಳಿನಿAದ ಮಾನಸಿಕ ಹಿಂಸೆ ನೀಡಿದ ಬಗ್ಗೆ ಕುಮಟಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಈ ಬಗ್ಗೆ ಅರಿತ ವೆಂಕಟೇಶ್ ಆರ್ ಅವರು ತಾಯಿಗೆ ಫೋನ್ ಮಾಡಿದರು. `ತಾನು ಬೆಳಗಾವಿಗೆ ಬಂದಿದ್ದೇನೆ’ ಎಂದವರು ಮಾಹಿತಿ ನೀಡಿದರು. ಈ ಹಿನ್ನಲೆ ಪೊಲೀಸರು ಬೆಳಗಾವಿಗೆ ಹೋಗಿ ವೆಂಕಟೇಶ್ ಆರ್ ಅವರನ್ನು ಮನವೊಲೈಸಲು ಪ್ರಯತ್ನಿಸಿದರು. ತಮಗಾದ ಹಿಂಸೆ, ಅವಮಾನದ ಬಗ್ಗೆ ವೆಂಕಟೇಶ್ ಆರ್ ಅವರು ಪೊಲೀಸರ ಬಳಿ ಹೇಳಿದ್ದು, ಅವರನ್ನು ಜಿಲ್ಲೆಗೆ ಕರೆತರುವ ಪ್ರಯತ್ನ ನಡೆದಿದೆ. ವೆಂಕಟೇಶ್ ಆರ್ ಅವರು ಬರೆದ ಪತ್ರ ನೋಡಿದವರು ಅನಾಹುತ ನಡೆದ ಬಗ್ಗೆ ಅನುಮಾನವ್ಯಕ್ತಪಡಿಸಿದ್ದು, ಅವರೆಲ್ಲರೂ ಇದೀಗ ನಿರಾಳರಾಗಿದ್ದಾರೆ. - [ಅಧೀನ ಅಧಿಕಾರಿಗೆ ಕಿರುಕುಳ: ಶಿಸ್ತು ಕ್ರಮಕ್ಕೆ ಆಗ್ರಹ](https://mobiletime.in/2025/10/harassment-of-subordinate-demand-for-disciplinary-action/): ಕುಮಟಾ ಪುರಸಭೆಯ ಕಂದಾಯ ನಿರೀಕ್ಷಕ ವೆಂಕಟೇಶ ಆರ್ ಅವರ ಮೇಲೆ ಒತ್ತಡ ತಂದ ಪುರಸಭೆ ಮುಖ್ಯಾಧಿಕಾರಿ ಎಂ ಆರ್ ಸ್ವಾಮಿ ಅವರ ವಿರುದ್ಧ ಕಠಿಣ ಕ್ರಮಕ್ಕಾಗಿ ಕರ್ನಾಟಕ ರಣಧೀರ ವೇದಿಕೆ ಪಟ್ಟು ಹಿಡಿದಿದೆ. ಈ ಬಗ್ಗೆ ಜಿಲ್ಲೆಯ ಹಲವು ಕಡೆ ವೇದಿಕೆ ಪದಾಧಿಕಾರಿಗಳು ಸರ್ಕಾರವನ್ನು ಒತ್ತಾಯಿಸಿದ್ದಾರೆ. ಕರ್ನಾಟಕ ರಣಧೀರ ವೇದಿಕೆಯ ಜಿಲ್ಲಾ ಘಟಕದಿಂದ ಸಂಘಟನೆ ಜಿಲ್ಲಾಧ್ಯಕ್ಷ ಸೂರಜ್ ನಾಯ್ಕ ಅವರು ಅಂಕೋಲಾ ತಹಶೀಲ್ದಾರ್ ಕಚೇರಿ ಮೂಲಕ ಸರ್ಕಾರಕ್ಕೆ ಪತ್ರ ರವಾನಿಸಿದರು. `ಅನುಕಂಪದ ಆಧಾರದ ಮೇಲೆ ಸರ್ಕಾರಿ ಸೇವೆಗೆ ಸೇರಿದ್ದ ವೆಂಕಟೇಶ ಆರ್ ಅವರು ತಮ್ಮ ಮೇಲಾಧಿಕಾರಿಗಳ ಕಿರುಕುಳದಿಂದ ಬೇಸತ್ತಿದ್ದಾರೆ. ಜಾತಿ ನಿಂದನೆ, ಅಶ್ಲೀಲ ಪದ ಬಳಕೆಯಿಂದ ಅವರ ಬೇಸತ್ತಿರುವ ಬಗ್ಗೆ ಪತ್ರ ಬರೆದ್ದಾರೆ. ಕಿರಿಯ ಅಧಿಕಾರಿಗಳ ಮೇಲೆ ಮೇಲಧಿಕಾರಿಗಳ ಒತ್ತಡ ತಪ್ಪಿಸಬೇಕು’ ಎಂದು ಅವರು ಆಗ್ರಹಿಸಿದರು. `ಅಧೀನ ಅಧಿಕಾರಿ ತಪ್ಪು ಮಾಡಿದರೆ ಕಾನೂನಿನ ಪ್ರಕಾರ ನೋಟಿಸ್ ನೀಡಬೇಕು. ಅದಾದ ನಂತರ ಶಿಸ್ತು ಕ್ರಮ ಜರುಗಿಸಬೇಕು. ಆದರೆ, ಕೆಟ್ಟದಾಗಿ ನಿಂದಿಸುವುದು ಸರಿಯಲ್ಲ’ ಎಂದು ಪ್ರಮುಖರಾದ ಚೇತನ್ ನಾಯ್ಕ, ಕಿರಣ್ ಗಾಂವಕರ್, ಐಶ್ವರ್ಯ ನಾಯ್ಕ್, ವಿವೇಕ್ ಐಗಳ, ಮಹೇಶ್ ಗೌಡ, ಸುಭಾಷ ನಾಯ್ಕ, ರಘುನಾಥ ನಾಯ್ಕ, ಚರಣ ನಾಯ್ಕ ಹೇಳಿದರು. `ಅಂಕೋಲಾ ಪುರಸಭೆಯಲ್ಲಿ ಅಧಿಕಾರದಲ್ಲಿರುವಾಗ ಸಹ ಎಂ ಆರ್ ಸ್ವಾಮಿ ಅವರು ಅಧೀನ ಅಧಿಕಾರಿಗಳಿಗೆ ಪೀಡಿಸುತ್ತಿದ್ದರು’ ಎಂದು ಸಂಘಟನೆಯವರು ಸ್ಮರಿಸಿದರು. `ಎಂ ಆರ್ ಸ್ವಾಮಿ ಅವರನ್ನು ತಕ್ಷಣ ಅಮಾನತುಗೊಳಿಸಬೇಕು. ಸಿಸಿ ಕ್ಯಾಮರಾ ದಾಖಲೆ ಪರಿಶೀಲಿಸಿ ಅವರ ವಿರುದ್ಧ ಕ್ರಮ ಜರುಗಿಸಬೇಕು’ ಎಂದು ಆಗ್ರಹಿಸಿದರು. ವೇದಿಕೆಯ ಮಹಿಳಾ ವಿಭಾಗದ ಜಿಲ್ಲಾಧ್ಯಕ್ಷೆ ಸುಪ್ರಿಯಾ ನಾಯ್ಕ್ ಪತ್ರವನ್ನು ಓದಿದ್ದು, ಅದನ್ನು ಜಿಲ್ಲಾಡಳಿತಕ್ಕೆ ರವಾನಿಸಲಾಯಿತು. ಭಟ್ಕಳ, ಕುಮಟಾದಲ್ಲಿಯೂ ಸಂಘಟನೆಯವರು ಮನವಿ ಸಲ್ಲಿಸಿದರು. ಕುಮಟಾದಲ್ಲಿ ಸಂಘಟನೆ ತಾಲೂಕು ಘಟಕದ ಅಧ್ಯಕ್ಷ ಸಮೀರ್ ಎಮ್ ಮಿರ್ಜಾನಕರ್ ಹಾಗೂ ಸದಸ್ಯರುಗಳಾದ ಮಂಜುನಾಥ್ ಹಳ್ಳೆರ, ವೆಂಕಟೇಶ್ ನಾಯ್ಕ, ಹಾಗೂ ಇರ್ಫಾನ್ ಕಾಜಿ ಮನವಿ ಸಲ್ಲಿಸಿದರು. ಭಟ್ಕಳದಲ್ಲಿ ಭಟ್ಕಳ ತಾಲೂಕು ಘಟಕದ ಅಧ್ಯಕ್ಷ ಮಂಜುನಾಥ್ ಶನಿಯಾರ ನಾಯ್ಕ ಹಾಗೂ ಪದಾಧಿಕಾರಿಗಳಾದ ರಾಜೇಶ್ ಆಚಾರಿ, ರತ್ನಾಕರ್ ನಾಯ್ಕ್ ಜೊತೆ ಸದಸ್ಯರು ಮನವಿ ಸಲ್ಲಿಸಿದರು.   - [2025 ಅಕ್ಟೊಬರ್ 09ರ ದಿನ ಭವಿಷ್ಯ](https://mobiletime.in/2025/10/prediction-for-october-9-2025/): ಮೇಷ ರಾಶಿ: ನಿಮ್ಮ ಶ್ರಮಕ್ಕೆ ತಕ್ಕ ಲಾಭ ಸಿಗಲಿದೆ. ಸಹದ್ಯೋಗಿಗಳ ಸಹಕಾರ ಸ್ಮರಿಸಿ. ವಿರೋಧಿಗಳು ನಿಮ್ಮನ್ನು ಕಾಡಿಸಲಿದ್ದು, ಧೈರ್ಯವೇ ನಿಮಗೆ ಸಾಧನ. ವೃಷಭ ರಾಶಿ: ಒತ್ತಡ ಹಾಗೂ ಹಣಕಾಸು ಸಮಸ್ಯೆ ಆವರಿಸಲಿದೆ. ಕುಟುಂಬದಲ್ಲಿ ಕಲಹ ಆಗುವ ಸಾಧ್ಯತೆಯಿದೆ. ಅನ್ಯಾಯಗಳನ್ನು ಸಹಿಸದಿರಿ. ಮಿಥುನ ರಾಶಿ: ವೃತ್ತಿಯಲ್ಲಿ ಸಾಧನೆಗೆ ಅವಕಾಶ ಸಿಗಲಿದ್ದು, ಅದನ್ನು ಸರಿಯಾಗಿ ಬಳಸಿಕೊಳ್ಳಿ. ಆರ್ಥಿಕವಾಗಿ ಸರಿಯಾಗಿ ನಿರ್ಧಾರ ಪ್ರಕಟಿಸಿ. ಪರಿಸರ ಪ್ರವಾಸ ನಿಮಗೆ ಆರಾಮದಾಯಕ. ಕರ್ಕ ರಾಶಿ: ವೃತ್ತಿ ಜೀವನದಲ್ಲಿ ಲಾಭ ಆಗಲಿದೆ. ದೈಹಿಕ ಶ್ರಮದ ಕೆಲಸ ಮಾಡುವಾಗ ಜಾಗರೂಕತೆ ಅಗತ್ಯ. ಪ್ರಯಾಣದ ಲಕ್ಷಣಗಳಿವೆ. ಸಿಂಹ ರಾಶಿ: ಜೀವನದಲ್ಲಿ ಏರಿಳಿತ ಸಾಮಾನ್ಯ. ಕುಟುಂಬದ ಸಮಸ್ಯೆಗಳನ್ನು ಬಗೆಹರಿಸುವ ಪ್ರಯತ್ನ ಮಾಡಿ. ಯೋಗ-ಧ್ಯಾನ ಮಾಡುವುದು ಉತ್ತಮ. ಕನ್ಯಾ ರಾಶಿ: ವಿವಾಹದ ವಿಷಯದಲ್ಲಿ ಗೊಂದಲ ಬಗೆಹರಿಯಲಿದೆ. ಮಿತ್ರರ ನೆರವಿನಿಂದ ಹಣಕಾಸು ಲಾಭ ಆಗಲಿದೆ. ಕ್ರಿಯಾತ್ಮಕ ಚಟುವಟಿಕೆಗಳಿಂದ ಯಶಸ್ಸು ಸಿಗಲಿದೆ. ತುಲಾ ರಾಶಿ: ನೀವು ಮಾಡುವ ಕೆಲಸ ಉನ್ನತಿಯ ಕಡೆ ಒಯ್ಯುತ್ತದೆ. ಆರೋಗ್ಯ ಸಮಸ್ಯೆಗಳಿಂದ ಎಚ್ಚರವಾಗಿರಿ. ಜಗಳದಿಂದ ದೂರವಿರಿ. ವೃಶ್ಚಿಕ ರಾಶಿ: ನಿಮ್ಮ ಪಾಡಿಗೆ ನೀವು ನಿಮ್ಮ ಕೆಲಸ ಮಾಡಿ. ಸಭೆಗಳಲ್ಲಿ ಅಭಿಪ್ರಾಯ ಹೇಳುವುದು ಬೇಡ. ವೈವಾಹಿಕ ಸಮಸ್ಯೆಗಳು ದೂರವಾಗಲಿದೆ. ಧನು ರಾಶಿ: ಒಳ್ಳೆಯ ಕೆಲಸ ಶುರು ಮಾಡಲು ಉತ್ತಮ ದಿನವಲ್ಲ. ವಾಹನ ಹಾಗೂ ವಸತಿ ವಿಷಯವಾಗಿ ಸಮಸ್ಯೆ ಕಾಡಲಿದೆ. ಸಾಲಗಾರರ ಕಾಟ ಹೆಚ್ಚಾಗಲಿದೆ. ಶಿವನ ಆರಾಧನೆ ಮನಸ್ಸಿಗೆ ಸಮಾಧಾನ ನೀಡಲಿದೆ. ಮಕರ ರಾಶಿ: ಕಡಿಮೆ ಶ್ರಮದಲ್ಲಿ ಹೆಚ್ಚು ಲಾಭ ತರುವ ದಿನ. ಸ್ನೇಹಿತರ ಸಹಕಾರದಿಂದ ಯಶಸ್ಸು ಸಿಗಲಿದೆ. ವಿರೋಧಿಗಳಿಗೆ ಹಿನ್ನಡೆ ಆಗಲಿದೆ. ಕುಂಭ ರಾಶಿ: ಹಣಕಾಸು ಪರಿಸ್ಥಿತಿ ಸಾಧಾರಣವಾಗಿರಲಿದೆ. ಅನಗತ್ಯ ವಾದ-ವಿವಾದ ಆಗಬಹುದು. ಹಳೆ ಸ್ನೇಹಿತರ ಭೇಟಿ ಸಮಾಧಾನ ಕೊಡಲಿದೆ. ಮೀನ ರಾಶಿ: ಆರ್ಥಿಕ ಪ್ರಗತಿ ಆಗಲಿದೆ. ಕಠಿಣ ಪರಿಸ್ಥಿತಿಗಳನ್ನು ಸಮರ್ಥವಾಗಿ ಎದುರಿಸುತ್ತೀರಿ. ಹಣಕಾಸು ಭಿನ್ನಾಭಿಪ್ರಾಯಗಳು ಬಗೆಹರಿಯಲಿದೆ. - [ದೇವರಕಾಡಿನಲ್ಲಿ ಅಡಗಿದ್ದ ಹೊಗೆ ಮಾನವ!](https://mobiletime.in/2025/10/the-smoke-that-hid-in-the-forest-of-god-is-a-human/): ಯಲ್ಲಾಪುರದ ಲಕ್ಷ್ಮಣ ಮರಾಠಿ ಅವರು ದೇವರಕಾಡು ಅರಣ್ಯ ಪ್ರದೇಶದಲ್ಲಿ ಗಾಂಜಾ ಸೇವಿಸಿ ಸಿಕ್ಕಿಬಿದ್ದಿದ್ದಾರೆ. ಪೊಲೀಸ್ ಉಪನಿರೀಕ್ಷಕ ಶೇಡಜಿ ಚೌಹಾಣ ಅವರು ಲಕ್ಷ್ಮಣ ಮರಾಠಿ ಅವರ ವಿರುದ್ಧ ಕಾನೂನು ಕ್ರಮ ಜರುಗಿಸಿದ್ದಾರೆ. ಮುಂಡಗೋಡು ರಸ್ತೆಯ ರವೀಂದ್ರ ನಗರದಲ್ಲಿ ಲಕ್ಷ್ಮಣ ಮಹೇಶ ಮರಾಠಿ (21) ಕೂಲಿ ಕೆಲಸ ಮಾಡಿಕೊಂಡಿದ್ದರು. ಸಣ್ಣ ವಯಸ್ಸಿನಲ್ಲಿಯೇ ದುಶ್ಚಟಕ್ಕೆ ದಾಸರಾದ ಅವರು ಈಚೆಗೆ ಗಾಂಜಾ ಗುಂಗಿಗೆ ಬಿದ್ದಿದ್ದರು. ಕದ್ದು ಮುಚ್ಚಿ ಗಾಂಜಾ ಸೇವಿಸುವುದಕ್ಕಾಗಿ ಅವರು ದೇವರ ಕಾಡು ಪ್ರವೇಶಿಸಿದ್ದರು. ಅಕ್ಟೊಬರ್ 8ರಂದು ಮುಂಡಗೋಡು ರಸ್ತೆಯ ದೇವರಕಾಡಿನ ಬಳಿ ಅವರು ಗಾಂಜಾ ಸೇದಿ ಹೊಗೆ ಬಿಡುತ್ತಿದ್ದರು. ಅದೇ ಮಾರ್ಗವಾಗಿ ಸಂಚರಿಸುತ್ತಿದ್ದ ಯಲ್ಲಾಪುರ ಪಿಎಸ್‌ಐ ಶೇಡಜಿ ಚೌಹಾಣ ಅವರು ಹೊಗೆ ಮಾನವನನ್ನು ವಿಚಾರಣೆಗೆ ಒಳಪಡಿಸಿದರು. ವೈದ್ಯಕೀಯ ಪರೀಕ್ಷೆಯಲ್ಲಿ ಲಕ್ಷ್ಮಣ ಮರಾಠಿ ಗಾಂಜಾ ಸೇವಿಸಿದ್ದು ದೃಢವಾಯಿತು. ಪೊಲೀಸರು ಪ್ರಕರಣ ದಾಖಲಿಸಿ - [ಹಕ್ಕಿಗಾಗಿ ಹೋರಾಟ: ಮುಖ್ಯಮಂತ್ರಿ ಭೇಟಿಯಾದ ವಕೀಲ](https://mobiletime.in/2025/10/fighting-for-rights-lawyer-meets-chief-minister/): ಬೆಂಗಳೂರಿಗೆ ಹೋಗಿರುವ ಶಿರಸಿಯ ವಕೀಲ ರವೀಂದ್ರ ನಾಯ್ಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ್ದಾರೆ. ಅರಣ್ಯ ಅತಿಕ್ರಮಣದಾರರ ಸಮಸ್ಯೆಯ ಬಗ್ಗೆ ಅವರು ಗಮನಸೆಳೆದಿದ್ದಾರೆ. ವಿಧಾನಸೌಧ ಪ್ರವೇಶಿಸಿದ ರವೀಂದ್ರ ನಾಯ್ಕ ಅವರು ಅಲ್ಲಿ ಕಾನೂನು ಸಚಿವ ಎಚ್ ಕೆ ಪಾಟೀಲ ಅವರನ್ನು ಮಾತನಾಡಿಸಿದರು. ಅದಾದ ನಂತರ ಅವರ ಜೊತೆಗೆ ತೆರಳಿ ಮುಖ್ಯಮಂತ್ರಿಗಳನ್ನು ಭೇಟಿಯಾದರು. ಈ ವೇಳೆ `ಅರಣ್ಯವಾಸಿಗಳ ಭೂಮಿ ಹಕ್ಕಿನ ಸಮಸ್ಯೆಗೆ ಸರ್ಕಾರ ಗಂಭೀರವಾಗಿ ಚಿಂತಿಸುತ್ತಿದ್ದು, ಅರಣ್ಯ ಹಕ್ಕು ಕಾಯಿದೆ ಅನುಷ್ಠಾನದಲ್ಲಿ ಸರ್ಕಾರ ಸಕ್ರಿಯೆವಾಗಿದೆ’ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಪುನರ್ ಪರೀಶೀಲನಾ ಪ್ರಕ್ರಿಯೆ ಜರುಗಿಸದೇ ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ ಅರ್ಜಿ ತಿರಸ್ಕರಿಸಿದ ವರದಿ ಕೇಂದ್ರ ಸರಕಾರಕ್ಕೆ ಸಲ್ಲಿಕೆಯಾದ ಬಗ್ಗೆ ರವೀಂದ್ರ ನಾಯ್ಕ ಆಕ್ಷೇಪಿಸಿದರು. ಸಚಿವ ಸತೀಶ್ ಜಾರಕಿಹೊಳೆ, ಹೆಚ್ ಸಿ ಮಹದೇವಪ್ಪ ಅವರು `ಅರಣ್ಯವಾಸಿಗಳ ಪರ ಸರಕಾರ ನಿರ್ಧಾರ ಇರುತ್ತದೆ’ ಎಂಬ ಭರವಸೆ ನೀಡಿದರು. ಸಚಿವ ಮಂಕಾಳ ವೈದ್ಯ ಮತ್ತು ಯೋಜನಾ ಆಯೋಗದ ಅಧ್ಯಕ್ಷ ಆರ್ ವಿ ದೇಶಪಾಂಡೆ ಸಹ ಇದೇ ಮಾತು ಹೇಳಿದ ಬಗ್ಗೆ ರವೀಂದ್ರ ನಾಯ್ಕ ಅವರು ವಿವರಿಸಿದರು. - [ಕಬ್ಬು ಬೆಳೆಗಾರರಿಗೆ ಡೀಸಿ ಅಭಯ](https://mobiletime.in/2025/10/dci-protection-for-sugarcane-growers/): `ಉತ್ತರ ಕನ್ನಡ ಜಿಲ್ಲೆಯಲ್ಲಿ ಕಬ್ಬು ಬೆಳೆಯುವ ರೈತರ ಎಲ್ಲಾ ಸಮಸ್ಯೆಗಳಿಗೆ ಜಿಲ್ಲಾಡಳಿತ ಸ್ಪಂದಿಸಲಿದೆ. ಬೆಳೆಗಾರರಿಗೆ ಎಲ್ಲಾ ರೀತಿಯ ಬೆಂಬಲ ನೀಡಲಾಗುತ್ತದೆ’ ಎಂದು ಜಿಲ್ಲಾಧಿಕಾರಿ ಕೆ ಲಕ್ಷ್ಮೀಪ್ರಿಯಾ ಹೇಳಿದ್ದಾರೆ. ಹಳಿಯಾಳದಲ್ಲಿ ಸಭೆ ನಡೆಸಿದ ಅವರು `ಕಬ್ಬು ಬೆಳೆಗಾರರ ಬಹುಕಾಲದ ಬೇಡಿಕೆಯಾದ ಕಬ್ಬು ಕಾರ್ಖಾನೆಯ ಮುಂಭಾಗದಲ್ಲಿ ಕಬ್ಬು ತೂಕ ಅಳತೆ ಮಾಡುವ ಯಂತ್ರ ಅಳವಡಿಕೆ ಬೇಡಿಕೆ ಕುರಿತು ಸ್ಪಷ್ಠ ನಿರ್ಧಾರ ಪ್ರಕಟವಾಗಬೇಕು. ಈ ಬಾರಿಯ ಕಬ್ಬು ನುರಿಯುವ ಹಂಗಾಮು ಪ್ರಾರಂಭವಾಗುವ ಒಳಗೆ ಕಾರ್ಖಾನೆ ಮುಂಭಾಗ ತೂಕ ಮಾಡುವ ಯಂತ್ರ ಅಳವಡಿಸಬೇಕು’ ಎಂದು ಸೂಚಿಸಿದರು. `ಕಬ್ಬು ಕಟಾವಣೆ ಮಾಡಲಾದ 2023-24ನೇ ಸಾಲಿನಲ್ಲಿ ರೈತರಿಂದ ಹೆಚ್ಚುವರಿ ಆಕರಣೆ ಮಾಡಲಾದ ಹೆಚ್ ಅಂಡ್ ಟಿ ದರ ರೂ 256ನ್ನು ರೈತರಿಗೆ ಮರುಪಾವತಿ ಮಾಡುವಂತೆ ಕಬ್ಬು ಆಯುಕ್ತರು ಆದೇಶ ಮಾಡಿದ್ದಾರೆ. ಅದಾಗಿಯೂ ಆ ಹಣ ಪಾವತಿ ಆಗಿಲ್ಲ’ ಎಂದು ರೈತರು ದೂರಿದರು. `2023-24ರಲ್ಲಿನ ಹೆಚ್ಚುವರಿ ಮೊತ್ತ 256 ರೂಗಳಂತೆ ಒಟ್ಟು 26 ಕೋಟಿ ಮೊತ್ತವನ್ನು ಕಾರ್ಖಾನೆಯವರು ರೈತರಿಗೆ ನೀಡುವಂತೆ ಕಬ್ಬು ಆಯುಕ್ತರಿಂದ ನೀಡಿದ್ದ ಆದೇಶವನ್ನು ಪಾಲನೆ ಮಾಡದ ಬಗ್ಗೆ ನೋಟಿಸ್ ನೀಡಲಾಗಿದೆ. ಕಾರ್ಖಾನೆಯವರು ಇದರ ವಿರುದ್ಧ ಹೈಕೋರ್ಟ್ ಮೊರೆ ಹೋಗಿದ್ದಾರೆ. ಅಲ್ಲಿ ಕೂಡ ಎರಡು ವಾರಗಳ ತಡೆಯಜ್ಞೆ ನೀಡಲಾಗಿದೆ. ಅದನ್ನು ಧಾರವಾಡದ ನ್ಯಾಯಾಲಯಕ್ಕೆ ತರಲು ಪ್ರಯತ್ನಿಸಲಾಗುತ್ತಿದೆ’ ಎಂದು ಅಧಿಕಾರಿಗಳು ಮಾಹಿತಿ ನೀಡಿದರು. `ಕಳೆದ ವರ್ಷದಂತೆ ಈ ವರ್ಷ ಕೂಡ ಕಬ್ಬು ಕಟಾವನೆ ಕುರಿತು ಆದ್ಯತಾ ಪಟ್ಟಿ ಪ್ರಕಟ ಮಾಡಬೇಕು. ಇಲ್ಲಿ ಮಳೆಗಾಲ ಸಮಯದಲ್ಲಿ ಹೆಚ್ಚಾಗಿ ರಸ್ತೆಗಳು ಹಾಳಗುವುದು ಸಾಮಾನ್ಯವಾಗಿದ್ದು, ಕಳೆದ ವರ್ಷ ಮಾಡಲಾದ ರಸ್ತೆಗಳು ಹಾಳಾಗಿರುವ ನಿರ್ದಿಷ್ಟ ರಸ್ತೆಗಳನ್ನು ಗುರುತಿಸಲಾಗಿದೆ. ಅದನ್ನು ಗುತ್ತಿಗೆದಾರರೆ ನಿರ್ವಹಣೆ ಮಾಡಬೇಕು. ಸರ್ಕಾರದಿಂದ ಯಾವುದೇ ಹೆಚ್ಚುವರಿ ಅನುದಾನ ನೀಡುವುದಿಲ್ಲ. ಒಂದು ವೇಳೆ ನಿರ್ವಹಣೆ ಮಾಡದೇ ಇದ್ದಲ್ಲಿ ಗುತ್ತಿಗೆದಾರರ ಮೇಲೆ ಸೂಕ್ತ ಕ್ರಮ ಜರುಗಿಸಬೇಕು; ಎಂದು ಡೀಸಿ ಸೂಚಿಸಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ ಎನ್, ಉಪವಿಭಾಗಾಧಿಕಾರಿ ಶ್ರವಣಕುಮಾರ್, ಅಪರ ಜಿಲ್ಲಾಧಿಕಾರಿ ಸಾಜೀದ್ ಮುಲ್ಲಾ, ಧಾರವಾಡದ ಉಪ ವಿಭಾಗಾಧಿಕಾರಿ ಸಲೀಂ ಹುಸೇನ್ ಇತರರಿದ್ದರು. - [ಸಾಕು ನಾಯಿ ಸಹವಾಸದಿಂದ ಮಾಲಕನಿಗೆ ಸಂಕಷ್ಟ!](https://mobiletime.in/2025/10/owner-suffers-from-companionship-with-pet-dog/): ರಾತ್ರಿ ವೇಳೆ ನಾಯಿ ಹಿಡಿದು ರಸ್ತೆ ಬದಿ ಅಲೆದಾಡುತ್ತಿದ್ದ ಕುಮಟಾದ ಗಜಾನನ ಕೋಡಿಯಾ ಅವರು ಕಾಲು ಮುರಿದುಕೊಂಡಿದ್ದಾರೆ. ಗಾಯಗೊಂಡ ಅವರು ಸದ್ಯ ಆಸ್ಪತ್ರೆಗೆ ದಾಖಲಾಗಿದ್ದಾರೆ. ಕುಮಟಾ ಗೂಡೆಅಂಗಡಿಯ ಗಜಾನನ ಕೋಡಿಯಾ ಅವರು ಕೌರಿಕರಾಗಿದ್ದಾರೆ. ದಿನವಿಡೀ ದುಡಿಯುವ ಅವರು ರಾತ್ರಿ ತಾವು ಪ್ರೀತಿಯಿಂದ ಸಾಕಿದ ನಾಯಿ ಜೊತೆ ಸಮಯ ಕಳೆಯುತ್ತಾರೆ. ರಾತ್ರಿ 10 ಗಂಟೆ ನಂತರ ಅವರು ನಾಯಿ ಕತ್ತಿಗೆ ಸರಪಳಿ ಹಾಕಿ ವಾಕಿಂಕ್ ಹೊರಡುತ್ತಿದ್ದರು. ಆ ವೇಳೆ ನಾಯಿಯನ್ನು ಮೂತ್ರ ವಿಸರ್ಜನೆಗೆ ಕರೆದೊಯ್ಯುವ ಅಭ್ಯಾಸಹೊಂದಿದ್ದರು. ಅಕ್ಟೊಬರ್ 3ರ ರಾತ್ರಿ 10 ಗಂಟೆಗೆ ಅವರು ನಾಯಿ ಹಿಡಿದು ರಸ್ತೆ ಬದಿಗೆ ಬಂದರು. ಆದರೆ, ಆ ನಾಯಿಯೇ ಗಜಾನನ ಕೋಡಿಯಾ ಅವರನ್ನು ರಸ್ತೆ ನಡುವೆ ಕರೆದೊಯ್ಯಿತು. ಹೀಗಿರುವಾಗ ಗುಡೇಅಂಗಡಿಯ ಚರಣ ನಾಯ್ಕ ಅವರು ಹೊಲನಗದ್ದೆಯಿಂದ ಬಾಡ ಕಡೆ ಸ್ಕೂಟಿಯಲ್ಲಿ ಬರುತ್ತಿದ್ದು, ಆ ಸ್ಕೂಟಿಗೆ ನಾಯಿ ಅಡ್ಡ ಬಂದಿತು. ಗಡಿಬಿಡಿಯಲ್ಲಿ ಚರಣ ನಾಯ್ಕ ಅವರು ಸ್ಕೂಟಿಯನ್ನು ತಿರುಗಿಸಿದರು. ಆಗ, ಸ್ಕೂಟಿ ಗಜಾನನ ಕೋಡಿಯಾ ಅವರಿಗೆ ಗುದ್ದಿತು. ಪರಿಣಾಮ ಗಜಾನನ ಕೋಡಿಯಾ ಅವರು ನೆಲಕ್ಕೆ ಬಿದ್ದರು. ಅವರ ಎಡಕಾಲಿನ ತೊಡೆಗೆ ಗಂಭೀರ ಪ್ರಮಾಣದಲ್ಲಿ ಪೆಟ್ಟಾಯಿತು. ತಮ್ಮನಿಗೆ ಆದ ಅಪಘಾತದ ಬಗ್ಗೆ ಮಂಜುನಾಥ ಕೋಡಿಯಾ ಅವರು ಕುಮಟಾ ಠಾಣೆಗೆ ಮಾಹಿತಿ ನೀಡಿ, ಪೊಲೀಸ್ ಪ್ರಕರಣ ದಾಖಲಿಸಿದರು. - [ಅಲ್ಲಿ-ಇಲ್ಲಿ ಅಲೆದಾಡುತ್ತಿದ್ದ ವ್ಯಸನಿಯ ದುಡುಕು ನಿರ್ಧಾರ](https://mobiletime.in/2025/10/the-rash-decision-of-a-wandering-addict/): ಯಲ್ಲಾಪುರದ ಲಕ್ಷ್ಮೀ ಸಿದ್ದಿ ಅವರ ಮನೆ ಬಳಿ ಸುಳಿದಾಡುತ್ತಿದ್ದ ಮಂಜುನಾಥ ಸಿದ್ದಿ ಅವರು ಲಕ್ಷ್ಮೀ ಸಿದ್ದಿ ಅಡಿಕೆ ತೋಟದ ಬಳಿಯೇ ಆತ್ಮಹತ್ಯೆಗೆ ಶರಣಾಗಿದ್ದಾರೆ. ಅವರ ಈ ದುಡುಕು ನಿರ್ಧಾರಕ್ಕೆ ಕಾರಣ ಗೊತ್ತಾಗಿಲ್ಲ. ಯಲ್ಲಾಪುರದ ಉಮ್ಮಚ್ಗಿ ಬಳಿಯ ಮಾವಿನಕಟ್ಟಾದ ಮಂಜುನಾಥ ಸುಬ್ರಹ್ಮಣ್ಯ ಸಿದ್ದಿ (30) ಅವರು ಕೂಲಿ ಕೆಲಸ ಮಾಡಿಕೊಂಡಿದ್ದರು. ಸರಾಯಿ ಕುಡಿಯುವ ಚಟಕ್ಕೆ ಅವರು ಅಂಟಿಕೊAಡಿದ್ದರು. ಆಗಾಗ ಭರಣಿ ಗ್ರಾಮದ ಲಕ್ಷ್ಮೀ ಸಿದ್ದಿ ಅವರ ಮನೆಗೆ ಭೇಟಿ ನೀಡುತ್ತಿದ್ದರು. ಹೀಗಿರುವಾಗ ಅಕ್ಟೊಬರ್ 7ರಂದು ಸಹ ಅವರು ಲಕ್ಷ್ಮೀ ಸಿದ್ದಿ ಅವರ ಮನೆ ಬಳಿ ಸುಳಿದಾಡಿದ್ದರು. ಮಧ್ಯಾಹ್ನದ ಅವಧಿಯಲ್ಲಿ ಲಕ್ಷ್ಮೀ ಸಿದ್ದಿ ಅವರ ತೋಟಕ್ಕೆ ಹೋದ ಮಂಜುನಾಥ ಸಿದ್ದಿ ಅವರು ಅಲ್ಲಿಯೇ ಆತ್ಮಹತ್ಯೆಗೆ ಶರಣಾದರು. ಅಲ್ಲಿರುವ ಅಡಿಕೆ ತೋಟದ ಅಂಚಿನಲ್ಲಿದ್ದ ಕಾಡು ಮರಕ್ಕೆ ಮಂಜುನಾಥ ಸಿದ್ದಿ ಅವರು ನೇತಾಡುತ್ತಿದ್ದರು. ಸಂಜೆ ವೇಳೆ ಅವರ ಆತ್ಮಹತ್ಯೆಯ ವಿಷಯ ಗೊತ್ತಾಗಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದಾರೆ. ಮಂಜುನಾಥ ಸಿದ್ದಿ ಅವರ ತಂದೆ ಸುಬ್ರಹ್ಮಣ್ಯ ಸಿದ್ದಿ ಅವರು ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.   - [ಕೋಟಿ ರೂ ಲೂಟಿ: ಜೊಯಿಡಾ ಜನರ ಕಿಡಿ!](https://mobiletime.in/2025/10/crores-of-rupees-looted-people-of-zoida-are-furious/): ಅರಣ್ಯ ಇಲಾಖೆಯಲ್ಲಿ ನಡೆದ ಅಕ್ರಮ, ಅವ್ಯವಹಾರದ ತನಿಖೆ ಜೊತೆ ಅರಣ್ಯಾಧಿಕಾರಿಗಳ ದಬ್ಬಾಳಿಕೆಗೂ ಕಡಿವಾಣ ಹಾಕುವಂತೆ ಜೊಯಿಡಾದ ಜನ ಆಗ್ರಹಿಸಿದ್ದಾರೆ. ಕುಂಬಾರವಾಡಾ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಕಚೇರಿ ಎದುರು ಜಮಾಯಿಸಿದ ಜನ ತಮ್ಮ ಬೇಡಿಕೆ ಈಡೇರದೇ ಇದ್ದರೆ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಸಿದ್ದಾರೆ. `ಅಕ್ಟೊಬರ್ 30ರ ಒಳಗೆ ತಹಶೀಲ್ದಾರ್ ಮಧ್ಯಸ್ಥಿಕೆಯಲ್ಲಿ ಅರಣ್ಯ ಅಧಿಕಾರಿಗಳು ಹಾಗೂ ಹೋರಾಟಗಾರರ ಸಭೆ ನಡೆಯಬೇಕು. ಇಲ್ಲವಾದಲ್ಲಿ ದಾಂಡೇಲಿ ಡಿಎಫ್‌ಓ ಕಚೇರಿ ಎದುರು ಉಗ್ರ ಹೊರಾಟ ನಡೆಸುತ್ತೇವೆ’ ಎಂದು ಅಲ್ಲಿನವರು ಹೇಳಿದ್ದು, ಸಭೆ ನಡೆಸುವ ಭರವಸೆ ಹಿನ್ನಲೆ ಬುಧವಾರದ ಹೋರಾಟವನ್ನು ಹಿಂಪಡೆದಿದ್ದಾರೆ. `ಅರಣ್ಯ ಇಲಾಖೆ ದೌರ್ಜನ್ಯ ಹಾಗೂ ಪ್ಯಾಕೇಜ್ ವಿಷಯದಲ್ಲಿ 152 ಕೋಟಿ ಹಗರಣ ನಡೆದಿದ್ದು, ಆ ಬಗ್ಗೆ ಸಮಗ್ರ ತನಿಖೆ ನಡೆಯಬೇಕು’ ಎಂದು ಪ್ರತಿಭಟನಾಕಾರರು ಆಗ್ರಹಿಸಿದರು. ಕುಣಬಿ ಸಮಾಜ ಜಿಲ್ಲಾ ಅಧ್ಯಕ್ಷ ಸುಭಾಷ ಗಾವಡಾ ಮಾತನಾಡಿ `ಈ ಕಾಡು, ಜಮೀನು ಜನರ ಹಕ್ಕು. ಇದನ್ನು ಮೊಟಕುಗೊಳಿಸುವ ಹುನ್ನಾರ ಸಹಿಸುವುದಿಲ್ಲ. ಪರಿಸರ ರಕ್ಷಣೆ ಸ್ಥಳೀಯರ ರಕ್ತದಲ್ಲಿದ್ದು, ಸರ್ಕಾರಿ ಹಣ ದುರುಪಯೋಗ ಸಹಿಸುವುದಿಲ್ಲ’ ಎಂದರು. `ಬಿಎಸ್‌ಎನ್‌ಎಲ್ ನೆಟವರ್ಕ ಸ್ಥಾಪನೆಗೆ ಸಹ ಅರಣ್ಯ ಇಲಾಖೆ ತೊಂದರೆ ಮಾಡುತ್ತಿದೆ’ ಎಂದು ದತ್ತಾರಾಮ ದೇಸಾಯಿ ದೂರಿದರು. ಕೃಷಿ ಸಮಾಜದ ಜಿಲ್ಲಾಧ್ಯಕ್ಷ ಗೋಪಾಲ ಭಟ್ ಮಾತನಾಡಿ `ಅರಣ್ಯ ಹಕ್ಕು ಕಾಯ್ದೆಯ ಸಾಮುದಾಯಿಕ ಹಕ್ಕು ಜಾರಿ ಮಾಡಿದರೆ ಇಲ್ಲಿ ಅರಣ್ಯ ಇಲಾಖೆಯೇ ಇರುವುದಿಲ್ಲ. ಜನರ ಪರವಾಗಿರುವ ಕಾನೂನಿನಲ್ಲಿ ಜನ ಹಕ್ಕು ಕೇಳಿಪಡೆಯಬೇಕಾಗಿದ್ದು, ಜನಪ್ರತಿನಿಧಿಗಳು ಜನಪರವಾಗಿರಬೇಕು’ ಎಂದರು. `ಅರಣ್ಯ ರಕ್ಷಕರು ಜನರ ಮನೆಗೆ ನುಗ್ಗಿ ದಬ್ಬಾಳಿಕೆ ಮಾಡುತ್ತಿದ್ದಾರೆ. ಅರಣ್ಯ ಇಲಾಖೆಯವರಿಂದಲೇ ಕಾಡು ನಾಶವಾಗುತ್ತಿದೆ’ ಎಂದು ಪ್ರತಿಭಟನಾಕಾರರು ಕೆಲ ನಿದರ್ಶನಗಳನ್ನು ನೀಡಿದರು. `ಕಾಳಿ ಹುಲಿ ಯೋಜನೆ ವ್ಯಾಪ್ತಿಯಲ್ಲಿ ವಾಸಿಸುವ ಮೂಲನಿವಾಸಿಗಳಿಗೆ ಅಧಿಕಾರಿಗಳು ಅನಗತ್ಯ ತೊಂದರೆ ಮಾಡುತ್ತಿದ್ದಾರೆ. ಬೇರೆ ಬೇರೆ ಭಾಗದ ಕರಡಿ, ಹುಲಿಗಳನ್ನು ಇಲ್ಲಿ ಬಿಟ್ಟು ಜನರಲ್ಲಿ ಭಯ ಹುಟ್ಟಿಸಲಾಗುತ್ತಿದೆ’ ಎಂದು ದೂರಿದರು. - [ಬಸ್ಸಿಗಾಗಿ ಕಾಯುತ್ತಿದ್ದವನ ಮೇಲೆ ಹತ್ತಿದ ಬಸ್ಸು!](https://mobiletime.in/2025/10/a-bus-ran-over-a-man-waiting-for-a-bus/): ಬಸ್ಸಿಗಾಗಿ ಕಾಯುತ್ತಿದ್ದ ಶಿರಸಿಯ ಅಶೋಕ ಕುಲಕರ್ಣಿ ಅವರ ಮೇಲೆ ಕೆಎಸ್‌ಆರ್‌ಟಿಸಿ ಬಸ್ಸು ಹತ್ತಿದೆ. ಪರಿಣಾಮ ಅವರ ಕೈಗೆ ಭಾರೀ ಪ್ರಮಾಣದಲ್ಲಿ ಗಾಯವಾಗಿದ್ದು, ಚಿಕಿತ್ಸೆಗಾಗಿ ಅವರು ಧಾರವಾಡಕ್ಕೆ ಹೋಗಿದ್ದಾರೆ. ಅಕ್ಟೊಬರ್ 6ರಂದು ಯಲ್ಲಾಪುರ ನಾಕಾದ ಬಳಿ ಅಶೊಕ ಕುಲಕರ್ಣಿ ಅವರು ನಿಂತಿದ್ದರು. ಅವರು ತಮ್ಮ ಕೆಲಸದ ಸಲುವಾಗಿ ಹಳೆ ಬಸ್ ನಿಲ್ದಾಣಕ್ಕೆ ಹೋಗುವವರಿದ್ದು, ಬಸ್ಸಿಗಾಗಿ ಕಾಯುತ್ತಿದ್ದರು. ಆ ವೇಳೆ ಕೆಎಸ್‌ಆರ್‌ಟಿಸಿ ಬಸ್ಸನ್ನು ಚಾಲಕ ಗಣೇಶ ನಾಯ್ಕ ಅವರು ಓಡಿಸಿಕೊಂಡು ಬಂದರು. ಅಶೋಕ ಕುಲಕರ್ಣಿ ಅವರು ಬಸ್ಸಿಗೆ ಅಡ್ಡಲಾಗಿ ಕೈ ಮಾಡಿದ್ದರಿಂದ ಗಣೇಶ ನಾಯ್ಕ ಅವರು ಬಸ್ಸು ನಿಲ್ಲಿಸಿದರು. ಅಶೋಕ ಕುಲಕರ್ಣಿ ಅವರು ಬಸ್ಸಿನ ಮೆಟ್ಟಿಲು ಹತ್ತುತ್ತಿರುವಾಗಲೇ ನಿರ್ವಾಹಕಿ ಪದ್ಮಾವತಿ ಅವರು ಸೀಟಿ ಹೊಡೆದರು. ಗಣೇಶ ನಾಯ್ಕ ಅವರು ಏಕಾಏಕಿ ಬಸ್ಸು ಮುಂದೆ ಚಲಾಯಿಸಿದ್ದರಿಂದ ಅಶೋಕ ಕುಲಕರ್ಣಿ ಅವರು ಮೆಟ್ಟಿಲಿನಿಂದ ಕೆಳಗೆ ಬಿದ್ದರು. ಆಗ, ಅವರ ಎಡಗೈ ಮೇಲೆ ಬಸ್ಸಿನ ಹಿಂದಿನ ಚಕ್ರ ಹತ್ತಿತು. ಗಾಯಗೊಂಡ ಅವರನ್ನು ಅಲ್ಲಿದ್ದ ಜನ ಟಿಎಸ್‌ಎಸ್ ಆಸ್ಪತ್ರೆಗೆ ಸೇರಿಸಿದರು. ಭಾರೀ ಪ್ರಮಾಣದಲ್ಲಿ ರಕ್ತ ಬರುವುದನ್ನು ನೋಡಿದ ಟಿಎಸ್‌ಎಸ್ ವೈದ್ಯರು ಅಶೋಕ ಕುಲಕರ್ಣಿ ಅವರನ್ನು ಧಾರವಾಡಕ್ಕೆ ಕರೆದೊಯ್ಯುವಂತೆ ಸೂಚಿಸಿದರು. ಸದ್ಯ ಅಶೋಕ ಕುಲಕರ್ಣಿ ಅವರು ಧಾರವಾಡದ ಎಸ್‌ಡಿಎಂ ಆಸ್ಪತ್ರೆಯಲ್ಲಿ ಚಿಕಿತ್ಸೆಪಡೆಯುತ್ತಿದ್ದಾರೆ. ಅಶೋಕ ಕುಲಕರ್ಣಿ ಅವರ ಸಂಬAಧಿಕರಾದ ರಾಮನಬೈಲಿನ ಮಹಾವೀರ ನಿಲಯದ ಅರ್ಚಕ ಮಹಾವೀರ ಆಲೂರು ಅವರು ಈ ಎಲ್ಲಾ ವಿಷಯಗಳ ಬಗ್ಗೆ ಮಾಹಿತಿಪಡೆದರು. ಅಶೋಕ ಕುಲಕರ್ಣಿ ಅವರು ನೀಡಿದ ಮಾಹಿತಿ ಆಧಾರದಲ್ಲಿ ಅವರು ಪೊಲೀಸ್ ಠಾಣೆಗೆ ಬಂದರು. ಬಸ್ ಚಾಲಕ ಹಾಗೂ ನಿರ್ವಾಹಕಿ ವಿರುದ್ಧ ಅವರು ಶಿರಸಿ ಸಂಚಾರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿದರು. - [ದಾಂಡೇಲಿ: ದಾಂಡಿಯಾ ನೋಡುತ್ತಿದ್ದ ಡಿಲೆವರಿ ಬಾಯ್'ಗೆ ಥಳಿತ!](https://mobiletime.in/2025/10/dandeli-delivery-boy-who-was-watching-dandiya-beaten-up/): ದಾಂಡೇಲಿಯ ಡಿಲೆವರಿ ಬಾಯ್ ಅಬ್ಬಾಸ್‌ಅಲಿ ಹುಲಕೇರಿ ಅವರಿಗೆ ಮೂವರು ಥಳಿಸಿದ್ದಾರೆ. ಈ ಹೊಡೆದಾಟ ತಪ್ಪಿಸಲು ಬಂದ ಮಹಿಳೆಯರಿಬ್ಬರು ಪೆಟ್ಟು ತಿಂದಿದ್ದಾರೆ. ದಾoಡೇಲಿ ಗಾಂಧಿನಗರ ಬಳಿಯ ಮಾರುತಿನಗರದ ಆಶ್ರಯ ಕಾಲೋನಿಯಲ್ಲಿ ಅಬ್ಬಾಸ್‌ಅಲಿ ಹುಲಕೇರಿ ಅವರು ವಾಸವಾಗಿದ್ದಾರೆ. ಡಿಲೆವರಿ ಬಾಯ್ ಆಗಿ ಕೆಲಸ ಮಾಡಿಕೊಂಡಿದ್ದ ಅವರು ಅಕ್ಟೊಬರ್ 1ರಂದು ದಾಂಡಿಯಾ ನೋಡಲು ಹೋಗಿದ್ದರು. ಅಲ್ಲಿ ದಾಂಡೇಲಿಯ ಆಶಿಪ್ ನರಗುಂದ, ಗಾಂಧಿನಗರದ ಸಮೀರ ಕುಟ್ಟಿ ಹಾಗೂ ಜಮೀರ್ ಸಹ ಆಗಮಿಸಿದ್ದರು. ಅವರೆಲ್ಲರೂ ಕುಡಿದು ಗಲಾಟೆ ಮಾಡಿದ್ದರು. ಈ ವೇಳೆ ಅಬ್ಬಾಸ್‌ಅಲಿ ಹುಲಕೇರಿ ಹಾಗೂ ಆ ಮೂವರ ನಡುವೆ ಜಗಳ ಶುರುವಾಗಿತ್ತು. ದಾಂಡಿಯಾ ಅವಧಿಯಲ್ಲಿ ಜಗಳ ಮಾಡುವುದು ಬೇಡ ಎಂದು ಅಬ್ಬಾಸ್‌ಅಲಿ ಎಲ್ಲವನ್ನು ಸಹಿಸಿಕೊಂಡಿದ್ದರು. ಆದರೆ, ಆಶಿಪ್ ನರಗುಂದ, ಸಮೀರ ಕುಟ್ಟಿ ಹಾಗೂ ಜಮೀರ್ ಆ ದಿನ ಆದ ಅವಮಾನವನ್ನು ಮರೆತಿರಲಿಲ್ಲ. ಅಕ್ಟೊಬರ್ 5ರಂದು ರಾತ್ರಿ 12ಗಂಟೆ ಆಸುಪಾಸಿಗೆ ಅಬ್ಬಾಸ್‌ಅಲಿ ಹುಲಕೇರಿ ಅವರು ತಮ್ಮ ದೊಡ್ಡಮ್ಮನ ಮನೆಗೆ ಹೋಗಿದ್ದರು. ಅಲ್ಲಿಗೆ ಬಂದ ಆಶಿಪ್ ನರಗುಂದ, ಸಮೀರ ಕುಟ್ಟಿ ಹಾಗೂ ಜಮೀರ್ ಗಲಾಟೆ ಶುರು ಮಾಡಿದರು. ಅಬ್ಬಾಸ್‌ಅಲಿ ಹುಲಕೇರಿ ಅವರ ತಾಯಿಗೆ ಕೆಟ್ಟದಾಗಿ ಬೈದು ಅಬ್ಬಾಸ್‌ಅಲಿ ಹುಲಕೇರಿ ಅವರಿಗೆ ಕಟ್ಟಿಗೆಯಿಂದ ಹೊಡೆದರು. ಅಬ್ಬಾಸ್‌ಅಲಿ ಹುಲಕೇರಿ ಅವರ ದೊಡ್ಡಮ್ಮ ಪಾತಿಮಾ ಹಾಗೂ ಅಕ್ಕನ ಮಗಳು ಸಾನಿಯಾ ಕುಟ್ಟಿ ಈ ಹೊಡೆದಾಟ ತಪ್ಪಿಸುವ ಪ್ರಯತ್ನ ಮಾಡಿದರು. ಆಗ, ಜಲಾಲ ಕುಟ್ಟಿ ಅವರು ಪಾತಿಮಾ ಅವರ ಮೇಲೆಯೂ ಕೈ ಮಾಡಿದರು. ಸಾನಿಯಾ ಅವರ ಕಪಾಳಕ್ಕೆ ಬಾರಿಸಿದರು. ಆ ಮೂವರು ಸೇರಿ ಸಾನಿಯಾ ಅವರ ಬೆನ್ನು, ಹೊಟ್ಟೆಗೆ ತುಳಿದು ನೋವು ಮಾಡಿದರು. ಅದಾದ ನಂತರ ಅಬ್ಬಾಸ್‌ಅಲಿ ಅವರು ಆಸ್ಪತ್ರೆ ಸೇರಿದ್ದು, ಚಿಕಿತ್ಸೆಪಡೆದು ಪೊಲೀಸ್ ದೂರು ನೀಡಿದರು. ದಾಂಡೇಲಿ ನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ. - [ನದಿಯಲ್ಲಿ ಮುಳುಗಿದ ಸಾಗರ: ಇನ್ನೂ ಸಿಕ್ಕಿಲ್ಲ!](https://mobiletime.in/2025/10/ocean-drowned-in-the-river-not-found-yet/): ಯಲ್ಲಾಪುರ-ಅಂಕೋಲಾ ಗಡಿಭಾಗದ ಕೆಳಾಸೆ ಕಾಡಿನ ಅಂಚಿನಲ್ಲಿರುವ ಕೈಗಡಿ ಹೊಳೆಯಲ್ಲಿ ಮುಳುಗಿದ ಉದ್ಯಮನಗರದ ಸಾಗರ ದೇವಾಡಿಗ ಅವರು ಈವರೆಗೂ ಸಿಕ್ಕಿಲ್ಲ. ಮಂಗಳವಾರ ಸಂಜೆ ಸಾಗರ ದೇವಾಡಿಗ ಅವರು ಸ್ನೇಹಿತರ ಜೊತೆ ಕಾಡಿಗೆ ಹೋಗಿದ್ದರು. ಗಂಗಾವಳಿ ನದಿ ಅಂಚಿನಲ್ಲಿ ಅವರು ಬರ್ತಡೆ ಪಾರ್ಟಿ ಮಾಡಿದ್ದರು. ದಿನೇಶ, ಪುನಿತ್, ವಿನೋದ ಅವರ ಜೊತೆ ಸಾಗರ ಅವರು ಆನಂದದ ಕ್ಷಣ ಕಳೆದಿದ್ದರು. ಅದಾದ ನಂತರ ಸಾಗರ ದೇವಾಡಿಗ ಅವರು ನದಿ ಅಂಚಿಗೆ ಹೋಗಿದ್ದು, ಕಾಲು ಜಾರಿ ನೀರಿಗೆ ಬಿದ್ದರು. ಸಾಗರ ದೇವಾಡಿಗ ಅವರು ನೀರಿನಲ್ಲಿ ಮುಳುಗುತ್ತಿರುವುದನ್ನು ಅವರ ಸ್ನೇಹಿತರು ನೋಡಿದರು. ಆದರೆ, ಸಾಗರ್ ದೇವಾಡಿಗ ನೀರಿನಿಂದ ಮುಂದೆ ಸಾಗಿದ್ದು ಕಾಣಲಿಲ್ಲ. ಮೇಲೆ ಬಂದಿದ್ದು ಅರಿವಾಗಲಿಲ್ಲ. ಮಂಗಳವಾರ ರಾತ್ರಿಯಿಡೀ ಅಲ್ಲಿ ಕಾರ್ಯಾಚರಣೆ ನಡೆದಿದ್ದು, ಬುಧವಾರ ಸಹ ಹುಡುಕಾಟ ಮುಂದುವರೆಯಿತು. ಬುಧವಾರ ಸಂಜೆಯವರೆಗೆ ನದಿ ಆಳದಲ್ಲಿ ಶೋಧ ನಡೆದರೂ ಸಾಗರ ದೇವಾಡಿಗ ಅವರು ಸಿಗಲಿಲ್ಲ. ಸದ್ಯ ಸ್ಥಳೀಯರ ಜೊತೆ ಯಲ್ಲಾಪುರ-ಅಂಕೋಲಾ ಪೊಲೀಸರು ಸಾಗರ ದೇವಾಡಿಗ ಅವರ ಹುಡುಕಾಟ ನಡೆಸಿದ್ದಾರೆ. ಸ್ಥಳೀಯ ಸಿದ್ದಿ ಸಮುದಾಯದವರು ರಾತ್ರಿಯೂ ಅಲ್ಲಿಯೇ ಇದ್ದು ಶೋಧ ನಡೆಸುತ್ತಿದ್ದಾರೆ. - [ಕಬ್ಬಡ್ಡಿ ಆಟದಲ್ಲಿ ಡಿಶುಂ ಡಿಶುಂ!](https://mobiletime.in/2025/10/dishum-dishum-in-the-kabaddi-game/): ಭಟ್ಕಳದಲ್ಲಿ ನಡೆದ ಕಬ್ಬಡ್ಡಿ ಪಂದ್ಯಾವಳಿಯಲ್ಲಿ ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದಿದೆ. ಈ ಹೊಡೆದಾಟದಲ್ಲಿ ಗಾಯಗೊಂಡವರು ಆಸ್ಪತ್ರೆ ಸೇರಿದ್ದಾರೆ. ಭಟ್ಕಳದ ಹೆಬಳೆಯಲ್ಲಿ ಅಕ್ಟೊಬರ್ 7ರಂದು ಕಬ್ಬಡ್ಡಿ ಪಂದ್ಯಾವಳಿ ನಡೆಯುತ್ತಿತ್ತು. ಬಾಲಕರಿಗಾಗಿ ಅವರು ಈ ಆಟ ಆಯೋಜಿಸಿದ್ದು, ವಿವಿಧ ತಂಡಗಳು ಉತ್ಸಾಹದಿಂದ ಭಾಗವಹಿಸಿದ್ದವು. ಆಟದಲ್ಲಿ ಗೆಲ್ಲುವ ವಿಷಯವಾಗಿ ಎರಡು ಗುಂಪಿನ ನಡುವೆ ಸ್ಪರ್ಧೆ ನಡೆದಿದ್ದು, ಮೊದಲು ಆರೋಗ್ಯಕರವಾಗಿ ನಡೆದ ಸ್ಪರ್ಧೆ ನಂತರ ಅನಾಹುತಕ್ಕೆ ಕಾರಣವಾಯಿತು. ಮಾವಿನಕುರ್ವಾದ ತಲಗೋಡಿನ ವ್ಯಾಪಾರಿ ಈಶ್ವರ ನಾಯ್ಕ ಅವರು ದೂರಿದ ಪ್ರಕಾರ, ಶಿರಾಲಿ ಮಾವಿನಕಟ್ಟೆಯ ಲಕ್ಷ್ಮೀಶ ದೇವಾಡಿಗ ಹಾಗೂ ರವಿ ದೇವಾಡಿಗ ಅವರು ಈ ಆಟವನ್ನು ಹಾಳು ಮಾಡಿದರು. ಈ ಪಂದ್ಯಾವಳಿ ವೀಕ್ಷಣೆಗೆ ಹೋಗಿದ್ದ ಈಶ್ವರ ನಾಯ್ಕ ಅವರಿಗೂ ಹೊಡೆದಾಟ ಬೇಸರ ಮೂಡಿಸಿದ್ದು, ಅವರು ಪೊಲೀಸರಿಗೆ ಮಾಹಿತಿ ನೀಡಿದರು. ಕಬ್ಬಡ್ಡಿ ಪಂದ್ಯಾವಳಿಯಲ್ಲಿ ಮೋಹನ ನಾಯಕ ಅವರಿಗೆ ಲಕ್ಷ್ಮೀಶ ದೇವಾಡಿಗ ಹಾಗೂ ರವಿ ದೇವಾಡಿಗ ಅವರು ಕಬ್ಬಿಣದಿಂದ ಹೊಡೆದರು. ಪರಿಣಾಮ ಮೋಹನ ಅವರು ಗಾಯಗೊಂಡಿದ್ದು, ಸದ್ಯ ಅವರು ಕುಂದಾಪುರ ಆಸ್ಪತ್ರೆಯಲ್ಲಿ ಚಿಕಿತ್ಸೆಪಡೆಯುತ್ತಿದ್ದಾರೆ. ಇದಕ್ಕೆ ಪ್ರತಿಯಾಗಿ ಲಕ್ಷ್ಮೀಶ ದೇವಾಡಿಗ ಸಹ ಪೊಲೀಸರಿಗೆ `ತಮ್ಮದೇನು ತಪ್ಪಿಲ್ಲ’ ಎಂದಿದ್ದಾರೆ. `ಹೆಬಳೆಯ ಗೊರಟಕೇರಿಯಲ್ಲಿ ಬಾಲಕರ ಕಬ್ಬಡಿ ಆಯೋಜಿಸಲಾಗಿತ್ತು. ತಾನು ಎರಡು ತಂಡ ತೆಗೆದುಕೊಂಡು ಹೋಗಿದ್ದು, ಆ ಎರಡು ತಂಡ ಉತ್ತಮವಾಗಿ ಆಡಿ ಸಮಿಫೈನಲ್ ತಲುಪಿತ್ತು. ಇದನ್ನು ಸಹಿಸದೇ ತಲಗೋಡಿನ ಸೃಜನ, ಚರಣ, ಹರ್ಷ ಹಾಗೂ ಇತರರು ಸೇರಿ ತಮ್ಮ ಮೇಲೆ ದಾಳಿ ನಡೆಸಿದ್ದಾರೆ. ಕಬ್ಬಿಣದ ಬಳೆಯಿಂದ ಹೊಡೆದು ಗಾಯ ಮಾಡಿದ್ದಾರೆ’ ಎಂದು ಲಕ್ಷ್ಮೀಶ ದೇವಾಡಿಗ ಅವರು ದೂರಿದ್ದಾರೆ. ರವಿ ದೇವಾಡಿಗ, ಲಕ್ಷ್ಮೀಶ ದೇವಾಡಿಗ ಜೊತೆ ನ ಸೃಜನ, ಚರಣ, ಹರ್ಷ ಹಾಗೂ ಇತರರ ವಿರುದ್ಧ ಭಟ್ಕಳ ಗ್ರಾಮೀಣ ಠಾಣೆ ಪೊಲೀಸರು ಪ್ರಕರಣ ದಾಖಲಿಸಿದ್ದು, ತನಿಖೆ ಶುರು ಮಾಡಿದ್ದಾರೆ. - [ಶಾಸಕರಿಗೆ ಸಂಕಟ-ಅಧಿಕಾರಿಗೆ ಕಂಟಕ: ಪತ್ರ ಬರೆದು ಪರಾರಿಯಾದ ಕಂದಾಯ ನಿರೀಕ್ಷಕ!](https://mobiletime.in/2025/10/mlas-in-distress-officials-in-trouble-revenue-inspector-flees-after-writing-a-letter/): ಅಕ್ರಮ ಕಟ್ಟಡವನ್ನು ಸಕ್ರಮ ಎಂದು ದಾಖಲೆ ಸೃಷ್ಠಿಸಲು ಸಾಧ್ಯವಾಗದ ಕಾರಣ ಕುಮಟಾ ಪುರಸಭೆಯಲ್ಲಿ ಕಂದಾಯ ನಿರೀಕ್ಷಕ ವೆಂಕಟೇಶ ಆರ್ ಅವರು ಕಣ್ಮರೆಯಾಗಿದ್ದಾರೆ. ಇದಕ್ಕೂ ಮುನ್ನ ಅವರು ಅಕ್ರಮ-ಅವ್ಯವಹಾರಗಳ ಬಗ್ಗೆ ಪತ್ರ ಬರೆದಿದ್ದು, ಅದರಲ್ಲಿ ಶಾಸಕ ದಿನಕರ ಶೆಟ್ಟಿ ಹಾಗೂ ಪುರಸಭೆ ಮುಖ್ಯಾಧಿಕಾರಿ ಎಂ ಆರ್ ಸ್ವಾಮಿ ಅವರ ಹೆಸರು ಉಲ್ಲೇಖಿಸಿದ್ದಾರೆ. ಪ್ರಾಥಮಿಕ ಮಾಹಿತಿಗಳ ಪ್ರಕಾರ, ವೆಂಕಟೇಶ ಆರ್ ಅವರು ಭಟ್ಕಳ ಮೂಲದವರಾಗಿದ್ದಾರೆ. ಅವರ ತಂದೆ ನಂತರ ಅನುಕಂಪದ ಆಧಾರದಲ್ಲಿ ಈ ಹುದ್ದೆಗೆ ಬಂದಿದ್ದರು. ರಾಷ್ಟಿಯ ಹೆದ್ದಾರಿ ಅಂಚಿನಲ್ಲಿರುವ ವಿನಾಯಕ ಹೊಟೇಲ್ ಅನಧಿಕೃತವಾಗಿದ್ದರೂ ಆ ಕಟ್ಟಡಕ್ಕೆ ಅಧಿಕೃತ ಮುದ್ರೆ ಒತ್ತುವಂತೆ ಪುರಸಭೆ ಮುಖ್ಯಾಧಿಕಾರಿ ಎಂ ಆರ್ ಸ್ವಾಮಿ ಅವರು ಒತ್ತಡ ತಂದಿದ್ದರು. ಆದರೆ, ಇದಕ್ಕೆ ವೆಂಕಟೇಶ ಆರ್ ಅವರು ಒಪ್ಪಿರಲಿಲ್ಲ. ಹೀಗಾಗಿ ಎಂ ಆರ್ ಸ್ವಾಮಿ ಅವರು ವೆಂಕಟೇಶ್ ಆರ್ ಅವರನ್ನು ಸಾರ್ವಜನಿಕವಾಗಿ ನಿಂದಿಸಿದ್ದರು. ವೆoಕಟೇಶ್ ಆರ್ ಅವರು ಬರೆದ ಪತ್ರದ ಪ್ರಕಾರ, ಪುರಸಭೆ ಮುಖ್ಯಾಧಿಕಾರಿ ಎಂ ಆರ್ ಸ್ವಾಮಿ ಅವರಿಗೆ ಆ ಕಟ್ಟಡವನ್ನು ಅಧಿಕೃತಗೊಳಿಸಲು ಶಾಸಕ ದಿನಕರ ಶೆಟ್ಟಿ ಅವರ ಒತ್ತಡವಿತ್ತು. ಜೊತೆಗೆ ಈ ಕೆಲಸ ಆದರೆ ಎಂ ಆರ್ ಸ್ವಾಮಿ ಅವರಿಗೆ 4 ಲಕ್ಷ ರೂ ಹಣ ಸಿಗುತ್ತಿತ್ತು. ಹೀಗಾಗಿ ಎಂ ಆರ್ ಸ್ವಾಮಿ ಅವರು ತಮ್ಮ ಅಧೀನ ಅಧಿಕಾರಿ ವೆಂಕಟೇಶ ಆರ್ ಅವರ ಮೂಲಕ ಆ ಕೆಲಸ ಮಾಡಿಸಲು ಮುಂದಾಗಿದ್ದರು. ಆದರೆ, ಇದಕ್ಕೆ ವೆಂಕಟೇಶ್ ಆರ್ ಅವರು ಒಪ್ಪದ ಕಾರಣ ಬೈಗುಳ ಸ್ವೀಕರಿಸುತ್ತಿದ್ದರು. ಕಳೆದ ಎರಡು ತಿಂಗಳಿನಿAದ ವೆಂಕಟೇಶ್ ಆರ್ ಅವರು ಇದೇ ವಿಷಯವಾಗಿ ಮಾನಸಿಕ ಒತ್ತಡಕ್ಕೆ ಸಿಲುಕಿದ್ದರು. ಪುರಸಭೆಗೆ ಮುಖ್ಯಾಧಿಕಾರಿಯಾಗಿ ಎಂ ಆರ್ ಸ್ವಾಮಿ ಬಂದ ದಿನದಿಂದಲೂ ವೆಂಕಟೇಶ್ ಆರ್ ಅವರನ್ನು ಹಿಯಾಳಿಸುತ್ತಿದ್ದರು. ಅಕ್ಟೊಬರ್ 7ರಂದು ಸಂಜೆ ಎಲ್ಲರ ಮುಂದೆ ಕಾನೂನುಬಾಹಿರ ಕೆಲಸ ಮಾಡುವಂತೆ ಸೂಚನೆ ನೀಡಿದ್ದು, ಆಗಲೂ ವೆಂಕಟೇಶ್ ಆರ್ ಅವರು ಒಪ್ಪಲಿಲ್ಲ. ಆಗ, `ನೀನು ಕೀಳು ಜಾತಿಯವ’ ಎಂದು ಎಂ ಆರ್ ಸ್ವಾಮಿ ಅವರು ನಿಂದಿಸಿದರು. ಜೊತೆಗೆ `ನಿನ್ನ ತಂದೆಯ ಹಾಗೇ ನಿನ್ನ ಬುದ್ದಿ’ ಎಂದು ಹಿಯಾಳಿಸಿದರು. ಈ ವೇಳೆ ಎಂ ಆರ್ ಸ್ವಾಮಿ ಅವರು ಮದ್ಯಪಾನ ಮಾಡಿದ ಆರೋಪವನ್ನು ಎದುರಿಸುತ್ತಿದ್ದು, `ಈ ಕೆಲಸ ಮಾಡದೇ ಇದ್ದರೆ ನೋಟಿಸ್ ಕೊಡುವೆ. ನಿನ್ನ ಕೆಲಸದಿಂದ ತೆಗೆಯುವೆ’ ಎಂದು ಬೆದರಿಸಿದ ಬಗ್ಗೆ ವೆಂಕಟೇಶ್ ಆರ್ ಅವರು ತಾವು ಬರೆದಿಟ್ಟ ಪತ್ರದಲ್ಲಿ ವಿಷಯ ಪ್ರಸ್ತಾಪಿಸಿದ್ದಾರೆ. `ತಂದೆ-ತಾಯಿ ಬಗ್ಗೆ ಕೆಟ್ಟದಾಗಿ ಬೈದಿರುವುದನ್ನು ಸಹಿಸಲಾಗುತ್ತಿಲ್ಲ. ತಮ್ಮನನ್ನು ಚನ್ನಾಗಿ ನೋಡಿಕೋ’ ಎಂದು ವೆಂಕಟೇಶ್ ಆರ್ ಅವರು ತಾಯಿಗೆ ಬರೆದ ಪತ್ರ ಹರಿದಾಡುತ್ತಿದೆ. - [ಬಡವನ ರಕ್ತ ಹಿಂಡಿದ ಆಸ್ಪತ್ರೆಯ ಬಿಲ್!](https://mobiletime.in/2025/10/the-hospital-bill-that-drained-the-poor-mans-blood/): ಕಾನ್ಸರಿನಿಂದ ಬಳಲುತ್ತಿರುವ ಕುಮಟಾದ ಜನಾರ್ಧನ ಮುಕ್ರಿ (19) ಅವರು ಬೆಂಗಳೂರಿನ `ನಾರಾಯಣ ಹೆಲ್ತ್’ ದಾಖಲಾಗಿದ್ದಾರೆ. ಅದು-ಇದು ಚಿಕಿತ್ಸೆ ಎಂದು ಆಸ್ಪತ್ರೆಯವರು 3.30 ಲಕ್ಷ ರೂ ಬಿಲ್ ಮಾಡಿದ್ದು, ಆ ಹಣ ಪಾವತಿಸಲಾಗದೇ ಅವರು ಕೊರಗುತ್ತಿದ್ದಾರೆ. ಕುಮಟಾದ ಹಳಕಾರ ಗ್ರಾಮದ ಮಾರು ಮುಕ್ರಿ ಅವರು ಕೂಲಿ ಕೆಲಸ ಮಾಡಿ ಬದುಕು ಕಟ್ಟಿಕೊಂಡಿದ್ದಾರೆ. ಅವರ ಮಗ ಜನಾರ್ಧನ ಮುಕ್ರಿ ಅವರು 7ನೆ ತರಗತಿಯಲ್ಲಿರುವಾಗ ಅನಾರೋಗ್ಯ ಕಾಡಿದ್ದು, ವೈದ್ಯರನ್ನು ಭೇಟಿ ಮಾಡಿದಾಗ ಕಾನ್ಸರ್ ಆವರಿಸಿರುವುದು ಗೊತ್ತಾಗಿದೆ. ವಿವಿಧ ಆಸ್ಪತ್ರೆಗಳಿಗೆ ಮಗನನ್ನು ಕರೆದೊಯ್ದ ಮಾರು ಮುಕ್ರಿ ಅವರು ಕೊನೆಗೆ ವಿಧಿ ಇಲ್ಲದೇ ನಾರಾಯಣ ಹೆಲ್ತಗೆ ಹೋಗಿದ್ದಾರೆ. ಅಲ್ಲಿನ ವೈದ್ಯರು ಜನಾರ್ಧನ ಮುಕ್ರಿ ಅವರಿಗೆ ವಿವಿಧ ಚಿಕಿತ್ಸೆ ನೀಡಿದರೂ ಅವರ ಆರೋಗ್ಯದಲ್ಲಿ ಮಾತ್ರ ಚೇತರಿಕೆ ಆಗಿಲ್ಲ. ಈ ನಡುವೆ ಮಾರು ಮುಕ್ರಿ ಅವರಿಗೆ ಆಸ್ಪತ್ರೆಯವರು ಬಿಲ್ ಪಾವತಿಸುವಂತೆ ಸೂಚಿಸಿದ್ದಾರೆ. ಈಗಾಗಲೇ 7 ಲಕ್ಷ ರೂ ಸಾಲ ಮಾಡಿಕೊಂಡಿರುವ ಮಾರು ಮುಕ್ರಿ ಅವರು ಇದೀಗ ಆಸ್ಪತ್ರೆಯವರು ನೀಡಿದ 3.30 ಲಕ್ಷ ರೂ ಮೌಲ್ಯದ ಬಿಲ್ ನೋಡಿ ತಲೆ ಮೇಲೆ ಕೈ ಹೊತ್ತು ಕುಳಿತಿದ್ದಾರೆ. 9 ದಿನದ ಆರೈಕೆಗೆ 3.30 ಲಕ್ಷ ರೂ ಪಾವತಿಸಬೇಕು ಎಂದು ಅರಿತು ಅವರು ಕಂಗಾಲಾಗಿದ್ದಾರೆ. `ತಮ್ಮಲ್ಲಿ ಅಷ್ಟೊಂದು ಹಣ ಇಲ್ಲ’ ಎಂದು ಮಾರು ಮುಕ್ರಿ ಅವರು ಆಸ್ಪತ್ರೆಯವರಲ್ಲಿ ಹೇಳಿದ್ದು, `ಬಿಲ್ ಪಾವತಿಸದೇ ರೋಗಿಯನ್ನು ಬಿಡುವುದಿಲ್ಲ’ ಎಂದು ಅಲ್ಲಿನವರು ಹೇಳಿದ್ದಾರೆ. ಮಗನನ್ನು ಆಸ್ಪತ್ರೆಯಿಂದ ಬಿಡಿಸಿಕೊಳ್ಳಲಾಗದೇ ಅವರು ಕುಮಟಾಗೆ ಮರಳಿದ್ದು, ನೆರವಿಗಾಗಿ ಜನಸಾಮಾನ್ಯರ ಸಮಾಜ ಕಲ್ಯಾಣ ಕೇಂದ್ರದ ಬಾಗಿಲು ಬಡಿದಿದ್ದಾರೆ. ಈ ಹಿಂದೆ ಸಹ ಮಾರು ಮುಕ್ರಿ ಅವರು ಮಂಗಳೂರಿನ ಆಸ್ಪತ್ರೆಗೆ ಮಗನನ್ನು ದಾಖಲಿಸಿದ್ದರು. ಆ ವೇಳೆಯಲ್ಲಿಯೂ ಅವರು ನೆರವಿಗಾಗಿ ಮುಖ್ಯಮಂತ್ರಿ ಕಚೇರಿಯ ಮೊರೆ ಹೋಗಿದ್ದರು. ಆದರೆ, ಅಲ್ಲಿಂದ ಯಾವುದೇ ಸಹಾಯ ಸಿಕ್ಕಿರಲಿಲ್ಲ. ಸದ್ಯ ಆಸ್ಪತ್ರೆ ವಿವರ, ಬಿಲ್ ದಾಖಲೆ ಗಮನಿಸಿದ ಆಗ್ನೇಲ್ ರೋಡ್ರಿಗಸ್ ಅವರು ಬುಧವಾರ ಮುಖ್ಯಮಂತ್ರಿ ಕಚೇರಿಗೆ ಫೋನ್ ಮಾಡಿದರು. ಬಡ ಕುಟುಂಬದ ಪರಿಸ್ಥಿತಿ ವಿವರಿಸಿ ಮುಖ್ಯಮಂತ್ರಿ ಪರಿಹಾರ ನಿಧಿ ಅಡಿ ನೆರವು ನೀಡುವಂತೆ ಕೋರಿದರು. ಮುಖ್ಯಮಂತ್ರಿ ಪರಿಹಾರ ನಿಧಿ ವಿಭಾಗದಲ್ಲಿ ಕೆಲಸ ಮಾಡುವುದಾಗಿ ಪರಿಚಯಿಸಿಕೊಂಡ ಕರ್ಕಿಯ ವಿನೋದ ಅವರು ದಾಖಲೆಗಳನ್ನು ಪರಿಶೀಲಿಸಿ ಸಹಾಯ ಮಾಡುವ ಬಗ್ಗೆ ಮಾತನಾಡಿದರು. ಇದಕ್ಕಾಗಿ ರೋಗಿಯ ಆಧಾರ್, ಪಡಿತರ ಹಾಗೂ ಆಸ್ಪತ್ರೆಯ ದಾಖಲೆಗಳನ್ನು ತರಿಸಿಕೊಂಡರು. - [ಅಡಕತ್ತರಿಯಲ್ಲಿ ಸಿಲುಕಿದ ಅಡಿಕೆ ಬೆಳೆಗಾರ!](https://mobiletime.in/2025/10/areca-nut-farmer-caught-in-the-crossfire/): ಕಳೆದ ಮೂರು ವರ್ಷಗಳಿಗೆ ಹೋಲಿಸಿದರೆ ಈ ಬಾರಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಅಡಿಕೆ ಫಸಲು ತೀರಾ ಕಡಿಮೆಯಿದೆ. ಹವಾಮಾನ ವೈಪರಿತ್ಯದ ಕಾರಣದಿಂದ ಅಡಿಕೆಗೆ ಬಗೆ ಬಗೆಯ ರೋಗಗಳು ಬಾದಿಸುತ್ತಿದೆ. ಬಿಸಿಲು-ಮಳೆ ವ್ಯತ್ಯಾಸದಿಂದಾಗಿ ಕೆಲವಡೆ ಮೂರು ಬಾರಿ ಮದ್ದು ಹೊಡೆದರು ಕೊಳೆ ರೋಗ ನಿಯಂತ್ರಣಕ್ಕೆ ಬಂದಿಲ್ಲ. ಕಳೆದ ವರ್ಷದ ಎಲೆಚುಕ್ಕಿ ರೋಗದಿಂದ ಅಡಿಕೆ ಮರಗಳು ಚೇತರಿಸಿಕೊಂಡಿಲ್ಲ. ಈ ನಡುವೆ ತೋಟದಲ್ಲಿ ಬೀಳುತ್ತಿರುವ ಹಣ್ಣಡಿಕೆ ಒಣಗಿಸಲು ಯೋಗ್ಯ ಬಿಸಿಲು ಬರುತ್ತಿಲ್ಲ. ಅತಿವೃಷ್ಠಿ ಕಾರಣಕ್ಕೆ ಬಹುತೇಕ ಅಡಿಕೆ ಸಿಂಗಾರ ಕೊಳೆತಿದ್ದು, ಈ ಬಾರಿ ಅಡಿಕೆಗೆ ಉತ್ತಮ ದರವಿದ್ದರೂ ರೈತರ ಬಳಿ ಬೇಡಿಕೆಗೆ ಅನುಗುಣವಾಗಿ ಅಡಿಕೆ ಪೂರೈಸಲು ಆಗುತ್ತಿಲ್ಲ. ಜಿಲ್ಲೆಯ ಹಲವು ಕಡೆ ಬೆಳಗ್ಗೆ ಬಿಸಿಲಿದ್ದರೆ ಮಧ್ಯಾಹ್ನದ ವೇಳೆ ಮಳೆಯಾಗುತ್ತಿದೆ. ಬಿಸಿಲು ಬಂದಿದೆ ಎಂದು ಅಡಿಕೆ ಒಣಗಿಸಲು ಮುಂದಾದ ಕೆಲವೇ ಕ್ಷಣದಲ್ಲಿ ಮೋಡ ಕಾಣಿಸುತ್ತಿದೆ. ಮೊದಲೇ ಅತಿವೃಷ್ಠಿ ಕಾರಣದಿಂದ ಅಡಿಕೆ ಹಾಳಾಗಿರುವ ಚಿಂತೆಯಲ್ಲಿರುವ ರೈತರಿಗೆ ಮಳೆ-ಮೋಡದ ವಾತಾವರಣ ತಲೆಬಿಸಿ ಮಾಡುತ್ತಿದೆ. ಅಳಿದುಳಿದ ಅಡಿಕೆಯನ್ನು ಉಳಿಸಿಕೊಳ್ಳಲು ಅಡಿಕೆ ಬೆಳೆಗಾರರು ನಾನಾ ಬಗೆಯ ಕಸರತ್ತು ಮಾಡುತ್ತಿದ್ದಾರೆ. ಅನೇಕ ಕಡೆ ತೋಟದಲ್ಲಿ ಬಿದ್ದ ಅಡಿಕೆ ಹೆಕ್ಕಲು ಸರಿಯಾದ ಕೂಲಿ ಆಳುಗಳು ಸಿಗುತ್ತಿಲ್ಲ. ಹೆಕ್ಕಿದ ಅಡಿಕೆಯನ್ನು ಹಾಗೇ ಮಾರುಕಟ್ಟೆಗೆ ಒಯ್ಯುವ ಅವಕಾಶವಿದ್ದರೂ ಅಲ್ಲಿ ಕೂಲಿ ಆಳಿಗೆ ಪಾವತಿಸಿದ ಮೊತ್ತವೂ ಸಿಗುತ್ತಿಲ್ಲ. ಶಿರಸಿ, ಸಿದ್ದಾಪುರ, ಯಲ್ಲಾಪುರ ಹಾಗೂ ಮುಂಡಗೋಡ ಭಾಗದಲ್ಲಿ ಅಕ್ಟೊಬರ್ 3ನೇ ವಾರದಿಂದ ಹಸಿ ಅಡಿಕೆ ಕೊಯ್ಲಿನ ಹಂಗಾಮು ಶುರುವಾಗಲಿದ್ದು, ಅದಕ್ಕೂ ಪೂರ್ವ ಹಣ್ಣಾದ ಅಡಿಕೆ ಪರಿಸ್ಥಿತಿ ಯಾರಿಗೂ ಬೇಡ. ಸದ್ಯ ಶೇ 25ರ ಪ್ರಮಾಣದಲ್ಲಿ ಅಡಿಕೆ ಹಣ್ಣಾಗಿದೆ. ಅವುಗಳಲ್ಲಿ ಕೆಲವು ನೆಲಕ್ಕೆ ಬೀಳುತ್ತಿದೆ. ಶಿರಸಿ ಭಾಗದಲ್ಲಿ ಪ್ರತಿ ವರ್ಷ ಅಕ್ಟೋಬರ್ ತಿಂಗಳಲ್ಲಿ ಹಲವು ರೈತರು ಮೊದಲ ಹಂತದ ಗೋಟಡಿಕೆ ಕೊಯ್ಲು ಆರಂಭಿಸುತ್ತಿದ್ದರು. ಆದರೆ ಈ ಬಾರಿ ಮಾತ್ರ ನಿರಂತರ ಮಳೆಯ ಕಾರಣಕ್ಕೆ ಅಡಿಕೆ ಈಗಾಗಲೇ ಹಣ್ಣಾಗಿ ನೆಲಕ್ಕೆ ಬೀಳುತ್ತಿದ್ದು, ಕೊಯ್ಲು ಮಾಡದೇ ಬಿಡುವ ಹಾಗಿಲ್ಲ. ಬಿಸಿಲು ಸರಿಯಾಗಿಲ್ಲದ ಕಾರಣ ಒಣ ಹಾಕಿದ ಅಡಿಕೆ ಗುಣಮಟ್ಟ ಕಾಯ್ದುಕೊಳ್ಳುತ್ತಿಲ್ಲ. ಕಪ್ಪು ಬಣ್ಣದ ಚಾಲಿ ಪ್ರಮಾಣ ಹೆಚ್ಚಾಗುತ್ತಿದೆ. ತೋಟದಲ್ಲಿ ಉದುರಿದ ಹಣ್ಣಡಿಕೆ ಕನಿಷ್ಟ 20 ದಿನವಾದರೂ ಒಳ್ಳೆಯ ಬಿಸಿಲಿಗೆ ಬೇಯಬೇಕಿದ್ದು, ಸದ್ಯ ನಿರಂತರವಾಗಿ 20 ದಿನದ ಬಿಸಿಲು ಯಾವ ಊರಿನಲ್ಲಿಯೂ ಬಿದ್ದಿಲ್ಲ. ಕೆಲವರಲ್ಲಿ ಮಾತ್ರ ಪಾಲಿಹೌಸ್ ಹಾಗೂ ಡ್ರಯರ್ ವ್ಯವಸ್ಥೆಯಿದ್ದು, ಅವರನ್ನು ಬಿಟ್ಟು ಉಳಿದವರು ಅಡಿಕೆ ಒಣಗಿಸಲಾಗದೇ ಕಂಗಾಲಾಗಿದ್ದಾರೆ. - [ಗಿಡಮೂಲಿಕೆಗಳಲ್ಲಿ ಅಡಗಿದೆ ಸೌಂದರ್ಯದ ರಹಸ್ಯ: ಎಲ್ಲರ ಬಳಕೆಗೂ ಲಭ್ಯ ಈ ಸಾರಾ ಕುಂಕುಮಾದಿ ತೈಲ](https://mobiletime.in/2025/10/the-secret-of-beauty-lies-in-herbs-this-sara-kumkumadi-oil-is-available-for-everyone-to-use/): ನಿತ್ಯದ ಬಳಕೆಯಲ್ಲಿನ ನೈಸಗಿರ್ಕ ಪದಾರ್ಥಗಳು ಆರೋಗ್ಯದ ಜೊತೆ ಸೌಂದರ್ಯ ವೃದ್ಧಿಗೂ ಪೂರಕ. ಈ ರಹಸ್ಯ ಅರಿತ ಪೈನಾಯ್ಕ ಹರ್ಬಲ್ ಬ್ಯೂಟಿ LLP’ ಕಂಪನಿಯೂ ಭಾರತೀಯ ಪರಂಪರೆಯಲ್ಲಿ ಅನಾಧಿಕಾಲದಿಂದಲೂ ಬಳಸುತ್ತಿದ್ದ ಗಿಡ ಮೂಲಿಕೆ ಪದ್ಧತಿಗೆ ಮರುಸ್ಪರ್ಶ ನೀಡಿದೆ. 24 ಗಿಡಮೂಲಿಕೆಗಳ ಸತ್ವದ ಆಧಾರದಲ್ಲಿ ಸಿದ್ಧಪಡಿಸಿದ `ಸಾರಾ ಕುಂಕುಮಾದಿ ತೈಲ’ ಮಾರುಕಟ್ಟೆಯಲ್ಲಿ ಮುಂಚೂಣಿಯಲ್ಲಿದೆ. ಪ್ರತಿಯೊಬ್ಬರಿಗೂ ಚರ್ಮ ಸುಕ್ಕಾಗುವುದು, ಮುಖದ ಕಾಂತಿ ಕುಗ್ಗುವುದು, ಸೌಂದರ್ಯ ಮಾಸುವುದು ಸಾಮಾನ್ಯ. ಇದನ್ನು ತಡೆಯಲು ಅನೇಕರು ಕೆಮಿಕಲ್ ಉತ್ಪನ್ನಗಳ ಮೊರೆ ಹೋಗುತ್ತಿದ್ದು, ರಾಸಾಯನಿಕಗಳಿಂದ ಅಡ್ಡ ಪರಿಣಾಮವೇ ಹೆಚ್ಚು. ರಾಸಾಯನಿಕ ಮುಕ್ತ ಜೀವನ ನಡೆಸಬೇಕು ಎನ್ನುವವವರಿಗಾಗಿ ಸಂಪೂರ್ಣ ಸಾವಯವ ಉತ್ಪನ್ನಗಳಿಂದ ಸಿದ್ಧಪಡಿಸಿದ ಸಾರಾ ಕುಂಕುಮಾದಿ ತೈಲ ಸಹಕಾರಿ. ಗುಡ್ಡಗಾಡಿನ ಗಿಡಮೂಲಿಕೆಗಳ ರಹಸ್ಯ ಅರಿತ ತಜ್ಞರು ಅದನ್ನು ಸಾರಾ ಕುಂಕುಮಾದಿ ತೈಲದಲ್ಲಿ ಅಳವಡಿಸಿದ್ದಾರೆ. ಅರಶಿನ, ಚಂದನ, ಕೇಸರಿ, ಬಾದಾಮಿ ಸೇರಿ ಹಲವು ಉತ್ಪನ್ನಗಳ ಸಮಗ್ರ ಮಿಶ್ರಣದ ಸತ್ವ ಸಾರಾ ಕುಂಕುಮಾದಿ ತೈಲದಲ್ಲಿ ಅಡಗಿದೆ. ರಾತ್ರಿ ಮಲಗುವ ಮುನ್ನ ಪ್ರತಿ ದಿನ ಎರಡು ಹನಿಯಂತೆ ಇದನ್ನು ಬಳಸಿದಲ್ಲಿ ಬೇರೆ ಸೌಂದರ್ಯ ವರ್ಧಕಗಳನ್ನು ಬಳಸುವ ಅಗತ್ಯವೇ ಇಲ್ಲ ಎಂಬುದು ಗ್ರಾಹಕರ ಮಾತು. ಐದು ವರ್ಷದ ಹಿಂದೆ ಶುರುವಾದ `ಪಾನಿಕ್ ಹರ್ಬಲ್ ಬ್ಯೂಟಿ’ ಕಂಪನಿ ಸದ್ಯ 60 ಜನರಿಗೆ ಉದ್ಯೋಗ ನೀಡಿದೆ. ವಿವಿಧ ಎಜನ್ಸಿಗಳ ಮೂಲಕ ಉತ್ಪನ್ನ ವಿತರಣೆ ಕಾರ್ಯ ನಡೆಯುತ್ತಿದೆ. 11 ಸಾವಿರ ಖಾಯಂ ಗ್ರಾಹಕರನ್ನು ಹೊಂದಿದೆ. ಈ ಉತ್ಪನ್ನಕ್ಕೆ ವಿದೇಶಗಳಿಂದ ಸಹ ಬೇಡಿಕೆ ಬರುತ್ತಿದ್ದು, ಖ್ಯಾತ ನಟ-ನಟಿಯರಿಗೆ ಸಾರಾ ಕುಂಕುಮಾದಿ ತೈಲ ಆಪ್ತ ಆಯ್ಕೆಯಾಗಿ ಗುರುತಿಸಿಕೊಂಡಿದೆ. ನಿರ0ತರವಾಗಿ ಈ ತೈಲ ಬಳಕೆಯಿಂದ ಎಲ್ಲಾ ಬಗೆಯ ಚರ್ಮ ಸಮಸ್ಯೆ ದುರವಾಗಲಿದೆ.ಮುಪ್ಪು ತಡೆಯುವ ವಿಧಾನದಲ್ಲಿಯೂ ಈ ತೈಲದ ಪಾತ್ರವಿದೆ. ಪುರುಷ ಹಾಗೂ ಮಹಿಳೆ ಎಂಬ ಬೇದವಿಲ್ಲದೇ ಎಲ್ಲರೂ ಇದನ್ನು ಬಳಸಬಹುದಾಗಿದ್ದು, ಒಮ್ಮೆ ಈ ತೈಲ ಬಳಸಿದವರು ಅದನ್ನು ಇನ್ನೊಬ್ಬರಿಗೆ ಶಿಫಾರಸ್ಸು ಮಾಡುತ್ತಿದ್ದಾರೆ. ಸಾರಾ ಕುಂಕುಮಾದಿ ತೈಲ ಆಪ್ತರಿಗೆ ಉಡುಗರೆ ನೀಡಲು ಉತ್ತಮ ಆಯ್ಕೆ. ಉತ್ಪನ್ನ ಖರೀದಿಗೆ ಇಲ್ಲಿ ವಾಟ್ಸಪ್ ಮಾಡಿ: 9632529959 ಅಥವಾ 9986152236 ಅಥವಾ ಈ ವೆಬ್‌ಸೈಟ್‌ಗೆ ಭೇಟಿ ನೀಡಿ: https://www.painaik.com/ #sponsored  - [ಮೊದಲು ಭೂಮಿ ನೋಡಿ.. ನಂತರವೇ ಮಾತುಕಥೆಗೆ ಬನ್ನಿ!](https://mobiletime.in/2025/10/first-look-at-the-land-then-come-to-the-conversation/): `ಕಾಡಿನ ನಡುವೆ ಪುಟ್ಟ ಜೋಪಡಿ ನಿರ್ಮಿಸಿ ವಾಸಿಸಬೇಕು. ಅಲ್ಲಿ ಎಲ್ಲಾ ಬಗೆಯ ಮೂಲಭೂತ ಸೌಕರ್ಯವೂ ಜೊತೆಗಿರಬೇಕು’ ಎಂದು ಬಯಸುವವರು ಕುಮಟಾ-ಗೋಕರ್ಣ ನಡುವಿನ ಪ್ರದೇಶದಲ್ಲಿ ಭೂಮಿ ಖರೀದಿಸಬೇಕು. ಉತ್ತಮ ರಸ್ತೆ, ವರ್ಷಪೂರ್ತಿ ನೀರಿನ ಜೊತೆ ನಿವೃತ್ತಿಯ ನಂತರ ಸಮೃದ್ಧಿ ಬಯಸುವವರಿಗೂ ಈ ಪ್ರದೇಶ ಸೂಕ್ತ. ಉತ್ತರ ಕನ್ನಡ ಜಿಲ್ಲೆಯ ಹೃದಯಭಾಗವಾದ ಯಾಣ-ಗೋಕರ್ಣದ ನಡುವೆ 3.13 ಎಕರೆ ಜಾಗ ಮಾರಾಟಕ್ಕಿದೆ. ಅವರವರ ಅಗತ್ಯಕ್ಕೆ ಅನುಗುಣವಾಗಿ ಗುಂಟೆ ಲೆಕ್ಕದಲ್ಲಿಯೂ ಜಾಗ ಸಿಗುತ್ತದೆ. ಇಲ್ಲವೇ ಮೂರುಕಾಲು ಎಕರೆಯನ್ನು ಖರೀದಿಸುವವರಿಗೂ ಯೋಗ್ಯ ಬೆಲೆಗೆ ಜಾಗ ಕೊಡಲಾಗುತ್ತದೆ. ಯಾಣದಿಂದ 10ಕಿಮೀ ಹಾಗೂ ಗೋಕರ್ಣದಿಂದ 24ಕಿಮೀ ದೂರದಲ್ಲಿರುವ ಈ ಜಾಗ ಪ್ರವಾಸೋದ್ಯಮ ಚಟುವಟಿಕೆ ನಡೆಸುವರಿಗೆ ಸಹ ಹೇಳಿ ಮಾಡಿಸಿದ ಪ್ರದೇಶ. ಕಾರಣ ಪ್ರಸಿದ್ಧ ವಿಭೂತಿ ಜಲಪಾತ ಸಹ ಇಲ್ಲಿಂದ 8ಕಿಮೀ ಮಾತ್ರ. ಜೊತೆಗೆ ಮಿರ್ಜಾನ್ ಕೋಟೆ, ಕಡಲತೀರಗಳೆಲ್ಲವೂ ಇಲ್ಲಿಂದ ತೀರಾ ಹತ್ತಿರ. ಈ ಹಸಿರು ಕೃಷಿ ಭೂಮಿಗೆ ಯಾವುದೇ ತಂಟೆ ತಕರಾರಿಲ್ಲ. ಅಕ್ಕ-ಪಕ್ಕದವರ ಕಿರಿಕಿರಿಯಿಲ್ಲ. ಈಗಾಗಲೇ ವಿವಿಧ ಬ್ಯಾಂಕುಗಳು ಜಾಗದ ಮೇಲೆ ಸಾಲವನ್ನು ನೀಡಿದ್ದರಿಂದ ದಾಖಲೆಗಳ ಬಗ್ಗೆಯೂ ಅನುಮಾನಪಡಬೇಕಾಗಿಲ್ಲ. ಅದಾಗಿಯೂ, ದಾಖಲೆಗಳ ಪರಿಶೀಲನೆಗೆ ಸಾಕಷ್ಟು ಅವಕಾಶವಿದ್ದು, ಭೂ ಪರಿವರ್ತನೆಗೆ ಸಹ ಹೆಚ್ಚಿನ ಓಡಾಟ ಬೇಕಾಗಿಲ್ಲ. ರೆಸಾರ್ಟ, ಯೋಗ ಕೇಂದ್ರ, ಸಾವಯವ ಕೃಷಿ ಅಥವಾ ವಿಲ್ಲಾ ಬಗೆಯ ಮನೆ ನಿರ್ಮಿಸಲು ಈ ಜಾಗ ಅತ್ಯುತ್ತಮ. ಇದರೊಂದಿಗೆ ಆಯುರ್ವೇದ ಗಿಡಮೂಲಿಕೆ, ಸಂಶೋಧನೆಗಳಿಗೂ ಇಲ್ಲಿ ಸಾಕಷ್ಟು ಅವಕಾಶಗಳಿವೆ. ಸುತ್ತಲು ಹಸಿರಿನ ಕಾಡು, ವರ್ಷವಿಡೀ ಹರಿಯುವ ನೀರಿಗೆ ಇಲ್ಲಿ ಎಂದಿಗೂ ಬರಗಾಲವಿಲ್ಲ. ಈ ಜಾಗ ಫಾರ್ಮ ಹೌಸ್, ಹೋಂ ಸ್ಟೇ, ರೆಸಾರ್ಟ ಅಥವಾ ಆಯುರ್ವೇದ ಚಿಕಿತ್ಸಾ ಕೇಂದ್ರಕ್ಕೆ ಸೂಕ್ತ ಪ್ರದೇಶ. ಪ್ರವಾಸೋದ್ಯಮ ಚಟುವಟಿಕೆಗೆ ಸಾಕಷ್ಟು ಅವಕಾಶಗಳಿರುವುದರಿಂದ ಇದೀಗ ಹಣ ಹೂಡಿಕೆ ಮಾಡಿದರೂ 5-10 ವರ್ಷದಲ್ಲಿ ಶೇ 50ರಷ್ಟು ಬೆಲೆ ಏರಿಕೆ ಸಾಧ್ಯ. ಸದ್ಯ ಒಂದು ಎಕರೆಗೆ 35 ಲಕ್ಷ ರೂ ಹಾಗೂ 3 ಎಕರೆಗೆ 99 ಲಕ್ಷ ರೂಪಾಯಿ ದರದಲ್ಲಿ ಈ ಕ್ಷೇತ್ರ ಮಾರಾಟಕ್ಕಿದೆ. ಕರಾವಳಿ ಭಾಗದಲ್ಲಿ ಅತ್ಯಂತ ವೇಗವಾಗಿ ಪರಿಸರ ಪ್ರವಾಸೋದ್ಯಮ ಬೆಳವಣಿಗೆಯಾಗುತ್ತಿದ್ದು, ದಿನದಿಂದ ದಿನಕ್ಕೆ ಭೂಮಿಯ ಬೆಲೆಯೂ ಏರಿಕೆಯಾಗುತ್ತಿದೆ. ಅದಾಗಿಯೂ ಈ ಪ್ರದೇಶದಲ್ಲಿ 1ಗುಂಟೆಗೆ 1.10 ಲಕ್ಷ ರು ಆಸುಪಾಸಿನಲ್ಲಿ ಜಾಗ ಕೊಡಲಾಗುತ್ತಿದೆ. ಮೂರುಕಾಲು ಎಕರೆ ಭೂಮಿಯೂ ಬೇಕು ಎಂದವರು ಕೋಟಿ ರೂಪಾಯಿಗಿಂತಲೂ ಕಡಿಮೆ ಬೆಲೆಗೆ ಈ ಜಾಗ ಖರೀದಿಸಲು ಸಾಧ್ಯ. ಮೊದಲು ಭೂಮಿ ನೋಡಿ.. ನಂತರವೇ ಮಾತುಕಥೆಗೆ ಬನ್ನಿ! ಮತ್ತೆನಾದರೂ ಗೊಂದಲವಿದ್ದರೆ ಮರೆಯದೇ ಫೋನ್ ಮಾಡಿ: 9620942230 ಅಥವಾ 9611231166 - [ಗೃಹ ಕೈಗಾರಿಕೆ: ದರ ದುಬಾರಿಯಲ್ಲ.. ಗುಣಮಟ್ಟದಲ್ಲಿ ರಾಜಿ ಇಲ್ಲ!](https://mobiletime.in/2025/10/home-industry-the-price-is-not-expensive-there-is-no-compromise-on-quality/): ಆಲೋವೆರಾ, ತೆಂಗಿನ ಎಣ್ಣೆ ಮೊದಲಾದ ವಸ್ತುಗಳನ್ನು ಬಳಸಿ ಕಮಲಾ ಪೂಜಾರಿ ಅವರು ಸಾಬೂನು ಸಿದ್ದಪಡಿಸುತ್ತಾರೆ. ಊರಿನಿಂದ ಊರಿಗೆ ಅಲೆದಾಡಿ ಅವುಗಳನ್ನು ಅವರು ಮಾರಾಟ ಮಾಡುತ್ತಾರೆ. ಮನೆಯಲ್ಲಿಯೇ ತಯಾರಾಗುವ ಈ ಸಾಬೂನು ದರ ದುಬಾರಿ ಅಲ್ಲ. ಗುಣಮಟ್ಟದಲ್ಲಿಯೂ ಅವರು ರಾಜಿ ಮಾಡಿಕೊಂಡಿಲ್ಲ! ಯಲ್ಲಾಪುರ ತಾಲೂಕಿನ ಮಂಚಿಕೇರಿ ಬಳಿಯ ಬೈಚಗೋಡದಲ್ಲಿ ಕಮಲಾ ಪೂಜಾರಿ ಅವರು ವಾಸವಾಗಿದ್ದಾರೆ. ಮೊದಲು ಕೂಲಿ ಕೆಲಸ ಮಾಡಿಕೊಂಡಿದ್ದ ಅವರು ಕಳೆದ ನಾಲ್ಕು ವರ್ಷಗಳಿಂದ ಗೃಹ ಕೈಗಾರಿಕೆಯತ್ತ ಒಲವು ತೋರಿದ್ದು, ಸದ್ಯ ಮನೆಯಲ್ಲಿಯೇ ಉದಬತ್ತಿ, ಸಾಬೂನು, ಫಿನಾಯಲ್ ಸೇರಿ ವಿವಿಧ ವಸ್ತುಗಳನ್ನು ತಯಾರಿಸುತ್ತಾರೆ. ಧರ್ಮಸ್ಥಳ ಗ್ರಾಮೀಣಾಭಿವೃದ್ದಿ ಸಂಸ್ಥೆಯಲ್ಲಿ ಕಮಲಾ ಪೂಜಾರಿ ಅವರು ಒಂದು ದಿನದ ಕರಕುಶಲ ತಯಾರಿಕೆ ತರಬೇತಿಪಡೆದಿದ್ದರು. ಅದಾದ ನಂತರ ಒಂದು ಸಾವಿರ ರೂ ಹಣ ನೀಡಿ ಶಿರಸಿಯ ವಿವೇಕಾನಂದ ರಾಯ್ಕರ್ ಅವರ ಬಳಿ ತರಬೇತಿಪಡೆದರು. ಅದಾದ ಮೇಲೆ ಶಿರಸಿಯ ಪೂಜಾ ಅಸೋಶಿಯೇಟ್ಸ್ ಮೂಲಕ ಕಚ್ಚಾ ವಸ್ತುಗಳನ್ನು ತಂದು ಮನೆಯಲ್ಲಿ ಕೆಲಸ ಶುರು ಮಾಡಿದರು. ಮನೆ ಸುತ್ತಮುತ್ತಲಿನ ಕೆಲವರಿಗೆ ಮೊದಲು ಆ ಉತ್ಪನ್ನಗಳನ್ನು ಮಾರಾಟ ಮಾಡಿದರು. ಅದಾದ ನಂತರ ಮಂಚಿಕೇರಿ-ಉಮ್ಮಚ್ಗಿ ಮೊದಲಾದ ಕಡೆ ತೆರಳಿ ಮಾರಾಟ ಶುರು ಮಾಡಿದರು. ಬಿಡುವಿನ ವೇಳೆ ಉತ್ಪನ್ನ ತಯಾರಿಕೆ ಹಾಗೂ ಉಳಿದ ದಿನಗಳಲ್ಲಿ ಮನೆ ಮನೆ ತಿರುಗಿ ಉತ್ಪನ್ನ ಮಾರಾಟ ಮಾಡುವುದನ್ನು ಅವರು ಕಾಯಕವನ್ನಾಗಿಸಿಕೊಂಡರು. ಸಿದ್ದಪಡಿಸಿದ ಉತ್ಪನ್ನಗಳನ್ನು ಅವರು ದೊಡ್ಡ ಮಟ್ಟದಲ್ಲಿ ಪ್ರಚಾರ ಮಾಡಲಿಲ್ಲ. ಅದಾಗಿಯೂ ಗುಣಮಟ್ಟದ ವಸ್ತುಗಳನ್ನು ಖರೀದಿಸಿದ ಜನ ಮನೆಗೆ ಆಗಮಿಸಿ ಸಾಬೂನು-ಉದಬತ್ತಿ ಖರೀದಿಸಿದರು. ದಿನದಿಂದ ದಿನಕ್ಕೆ ಕಮಲಾ ಪೂಜಾರಿ ಅವರು ನಡೆಸುತ್ತಿರುವ ಮಾರುಕಟ್ಟೆ ವಿಸ್ತಾರವಾಗುತ್ತಿದ್ದು, ತಾವು ಸಿದ್ದಪಡಿಸಿದ ಉತ್ಪನ್ನಗಳನ್ನು ಅಂಚೆ ಮೂಲಕವೂ ಅವರು ವಿವಿಧ ಊರುಗಳಿಗೆ ರವಾನಿಸಲು ಸಿದ್ಧವಾಗಿದ್ದಾರೆ. ಕಮಲಾ ಪೂಜಾರಿ ಅವರ ಪತಿ ಶ್ರೀನಿವಾಸ ಪೂಜಾರಿ ಅವರು ಈ ಉದ್ದಿಮೆಯಲ್ಲಿ ಸಹಕಾರ ನೀಡುತ್ತಿದ್ದಾರೆ. ಮನೆಯಲ್ಲಿಯೇ ತಯಾರಿಸಿದ ನೈಸರ್ಗಿಕ ಉತ್ಪನ್ನಗಳು ನಿಮಗೂ ಅಗತ್ಯವಿದ್ದರೆ ಇಲ್ಲಿ ಫೋನ್ ಮಾಡಿ: 8431380590 #sponsored - [2025 ಅಕ್ಟೊಬರ್ 08ರ ದಿನ ಭವಿಷ್ಯ](https://mobiletime.in/2025/10/prediction-for-october-8-2025/): ಮೇಷ ರಾಶಿ: ನೀವು ಮಾಡುವ ಕೆಲಸದಲ್ಲಿ ಧೈರ್ಯವಾಗಿರಿ. ಸಂವಹನ ಕೊರತೆ ಸಮಸ್ಯೆ ಆಗದಂತೆ ಎಚ್ಚರವಹಿಸಿ. ಮಾನಸಿಕ ಒತ್ತಡದ ಕೆಲಸಗಳನ್ನು ಮಾಡಬೇಡಿ. ವೃಷಭ ರಾಶಿ: ಹಣಕಾಸಿನ ವಿಷಯದಲ್ಲಿ ಸಣ್ಣ ಪ್ರಮಾಣದ ಲಾಭ ಸಿಗಲಿದೆ. ನಿಮ್ಮ ನಿರ್ಧಾರಗಳು ಸರಿಯಾದ ದಾರಿಯಲ್ಲಿರಲಿ. ಆರೋಗ್ಯದ ಕಡೆ ಗಮನಹರಿಸಿ. ಮಿಥುನ ರಾಶಿ: ನಿಮ್ಮ ಆಸಕ್ತಿ ಹೊಸ ವಿಷಯದ ಕಡೆ ಇರಲಿ. ಉದ್ಯೋಗದ ವಿಷಯದಲ್ಲಿ ಪ್ರಗತಿ ಆಗಲಿದೆ. ಯೋಗ ಹಾಗೂ ಧ್ಯಾನ ನಿಮಗೆ ಉತ್ತಮ ವಾತಾವರಣ ನೀಡಲಿದೆ. ಕರ್ಕ ರಾಶಿ: ಸನ್ನಿವೇಶಗಳನ್ನು ಸರಿಯಾಗಿ ನಿಭಾಯಿಸಿ. ಆತ್ಮಿಯರ ಒಡನಾಟ ತಪ್ಪಿಸಿಕೊಳ್ಳಬೇಡಿ. ವ್ಯಾಪಾರದಲ್ಲಿ ಲಾಭ ಆಗಲಿದೆ. ಸಿಂಹ ರಾಶಿ: ಸ್ನೇಹಿತರ ಜೊತೆ ಸಮಯ ಸಿಗಲಿದೆ. ಉದ್ಯೋಗ ವಿಷಯದಲ್ಲಿ ಬದಲಾವಣೆ ಆಗಲಿದೆ. ಕಷ್ಟದ ಸನ್ನಿವೇಶಗಳು ಎದುರಾಗಬಹುದು. ಕನ್ಯಾ ರಾಶಿ: ಉದ್ಯೋಗದ ವಿಷಯದಲ್ಲಿ ಉತ್ಸಾಹ ಕಡಿಮೆ ಆಗಲಿದೆ. ಜೀವನಕ್ಕೆ ಹೊಸ ಕ್ರಿಯಾಶೀಲತೆ ಅಗತ್ಯವಿದೆ. ಹಳೆ ಸಮಸ್ಯೆಗಳು ದೂರವಾಗಿ ಹೊಸ ಸಮಸ್ಯೆ ಬರುವ ಲಕ್ಷಣವಿದೆ. ತುಲಾ ರಾಶಿ: ನಿಮ್ಮ ಕ್ರಿಯಾತ್ಮಕ ಚಟುವಟಿಕೆಗಳಿಗೆ ಬೆಲೆ ಸಿಗಲಿದೆ. ಖರ್ಚು ವೆಚ್ಚಗಳು ಹೆಚ್ಚಾಗಲಿದೆ. ಆರೋಗ್ಯದ ಕಡೆ ಗಮನಹರಿಸುವುದು ಅಗತ್ಯ. ವೃಶ್ಚಿಕ ರಾಶಿ: ಹಳೆಯ ಜವಾಬ್ದಾರಿಗಳಿಂದ ಮುಕ್ತರಾಗುವಿರಿ. ಹೊಸ ಹೊಣೆಯನ್ನು ಹೋರುವಿರಿ. ಮಾನಸಿಕ ನೆಮ್ಮದಿಗೆ ಅಗತ್ಯವಿರುವ ಕೆಲಸ ಮಾಡಿ. ಧನು ರಾಶಿ: ಕಡಿಮೆ ಕೆಲಸವೂ ನಿಮಗೆ ಹೆಚ್ಚು ಫಲ ಕೊಡಲಿದೆ. ಯಶಸ್ಸು ನಿಮ್ಮ ಹತ್ತಿರದಲ್ಲಿದೆ. ಹಣಕಾಸಿನ ಸ್ಥಿರತೆ ಸಾಧಿಸುವುದು ಮುಖ್ಯ. ಮಕರ ರಾಶಿ: ದೂರದ ಊರಿನ ಪ್ರಯಾಣ ಈ ದಿನ ಬೇಡ. ಕೆಲಸದಲ್ಲಿ ಸಾಧನೆ ಆಗಬೇಕು ಎಂದರೆ ತಾಳ್ಮೆ ಅಗತ್ಯ. ಪುಸ್ತಕ ಓದು ನಿಮ್ಮ ಜ್ಞಾನ ಅಭಿವೃದ್ಧಿಗೆ ಸಹಾಯಕ. ಕುಂಭ ರಾಶಿ: ಉದ್ಯೋಗ-ವ್ಯಾಪಾರದಲ್ಲಿ ಸುಧಾರಣೆ ಸಾಧ್ಯವಿದೆ. ಕುಟುಂಬದವರ ಆಗು-ಹೋಗುಗಳಿಗೆ ಸ್ಪಂದಿಸಿ. ಧಾರ್ಮಿಕ ಚಟುವಟಿಕೆಯಲ್ಲಿ ಭಾಗವಹಿಸುವಿರಿ. ಚಿಕ್ಕ ಸಮಸ್ಯೆ ನಿಮ್ಮನ್ನು ಕಾಡಬಹುದು. ಮೀನ ರಾಶಿ: ಸಣ್ಣ ಸಣ್ಣ ಸವಾಲುಗಳು ಸಹ ನೀವು ಕಳೆಗುಂದುವAತೆ ಮಾಡಬಹುದು. ನೆಮ್ಮದಿಗಾಗಿ ಧ್ಯಾನ ಮಾಡಿ. ಹಣಕಾಸು ಲಾಭ ಆಗಲಿದೆ. - [ಬದುಕಿಗೆ ಮಾರಕವಾದ ಬರ್ತಡೆ ಪಾರ್ಟಿ!](https://mobiletime.in/2025/10/a-life-threatening-birthday-party/): ಯಲ್ಲಾಪುರ-ಅಂಕೋಲಾ ಗಡಿಭಾಗದ ಕೆಳಾಸೆ ಹೊಳೆಯಲ್ಲಿ ಯುವಕನೊಬ್ಬ ಕೊಚ್ಚಿ ಹೋಗಿದ್ದು, ಶೋಧ ಕಾರ್ಯ ನಡೆಯುತ್ತಿದೆ. ಹೊಳೆಯಲ್ಲಿ ಯುವಕ ಮುಳುಗಿದ್ದು, ಆತ ಬದುಕಿದರೆ ಅದೇ ದೊಡ್ಡ ಪವಾಡ! ಮಂಗಳವಾರ ಸಂಜೆ ಯಲ್ಲಾಪುರದ ಸಬಗೇರಿಯ ಸಾಗರ್ ರಾಮಾ ದೇವಾಡಿಗ (23) ಅವರು ಅರಬೈಲ್ ಬಳಿ ಹೋಗಿದ್ದರು. ಕೆಳಾಸೆ ಹೊಳೆ ಬಳಿ ಅವರು ಬರ್ತಡೆ ಪಾರ್ಟಿ ಮಾಡುತ್ತಿದ್ದರು. ಸ್ನೇಹಿತರಾದ ದಿನೇಶ, ಪುನಿತ್, ವಿನೋದ ಸಹ ಇದ್ದರು. ಮೋಜು-ಮಸ್ತಿಯಲ್ಲಿರುವಾಗ ಸಾಗರ ದೇವಾಡಿಗ ಅವರು ನೀರಿನ ಕಡೆ ಹೋದರು. ಬರ್ತಡೆ ಅಂಗವಾಗಿ ಹೊಳೆ ಅಂಚಿನ ಕಾಡಿನಲ್ಲಿ ಬರ್ತಡೆ ಪಾರ್ಟಿ ಮಿತಿ ಮೀರಿತ್ತು. ಪರಿಣಾಮ ಆ ಹೊಳೆಯಲ್ಲಿ ಅವರು ಕೊಚ್ಚಿ ಹೋಗಿದ್ದು, ಇದರಿಂದ ಅವರ ಸ್ನೇಹಿತರು ಆತಂಕಕ್ಕೆ ಒಳಗಾದರು. ಸಾಹರ ಕೊಚ್ಚಿಹೋದ ಬಗ್ಗೆ ಅಕ್ಕಪಕ್ಕದವರಿಗೆ ವಿಷಯ ಮುಟ್ಟಿಸಿದರು. ಪೊಲೀಸರು ಸಹ ಸ್ಥಳಕ್ಕೆ ಬಂದು ಶೋಧ ನಡೆಸಿದರು. ಆದರೆ, ಸಾಗರ ಅವರ ಸುಳಿವು ಸಿಗಲಿಲ್ಲ. ರಾತ್ರಿಯವರೆಗೂ ಹುಡುಕಾಟ ಮುಂದುವರೆದಿದೆ. - [ಮನೆಯಿಂದ ಹೊರಟ ಮೀನುಗಾರ: ಮರಳಿ ಬಂದಿದ್ದು ಆತನ ಶವ!](https://mobiletime.in/2025/10/a-fisherman-left-home-his-body-returned/): ಗೋಕರ್ಣದ ನಾಗೇಶ ಅಂಬಿಗ ಅವರು ಭಟ್ಕಳದ ಕಡೆ ಮೀನುಗಾರಿಕೆಗೆ ಹೋದಾಗ ಸಾವನಪ್ಪಿದ್ದಾರೆ. ಮುರುಡೇಶ್ವರದ ಜಲವಿಜಯ ಬೋಟಿನಲ್ಲಿ ಅವರು ಕುಸಿದು ಬಿದ್ದಿದ್ದು, ಅಲ್ಲಿಯೇ ಕೊನೆಯುಸಿರೆಳೆದಿದ್ದಾರೆ. ಗೋಕರ್ಣ ಬಳಿಯ ಬೇಲಿಹಿತ್ಲದ ನಾಗೇಶ ಮಹಾಬಲೇಶ್ವರ ಅಂಬಿಗ (48) ಅವರು ಮೀನುಗಾರಿಕೆಯಲ್ಲಿ ಪರಿಣಿತಿಪಡೆದಿದ್ದರು. ಅಕ್ಟೊಬರ್ 6ರಂದು ಅವರು ಮುರುಡೇಶ್ವರದ ನಿತ್ಯಾನಂದ ನಾರಾಯಣ ಖಾರ್ವಿ ಅವರ ಬೋಟಿನ ಕೆಲಸಕ್ಕೆ ಹೋಗಿದ್ದರು. ಜಲವಿಜಯ ಎಂಬ ಯಾಂತ್ರಿಕೃತ ಬೋಟಿನಲ್ಲಿ ಅವರು ಅರಬ್ಬಿ ಸಮುದ್ರಕ್ಕೆ ಇಳಿದಿದ್ದರು. ಆ ಬೋಟು ಎಂಟು ನಾಟಿಕಲ್ ಮೈಲು ದೂರ ಸಾಗಿದಾಗ ನಾಗೇಶ ಅಂಬಿಗ ಅವರು ಕುಸಿದು ಬಿದ್ದರು. ಬೋಟಿನಲ್ಲಿ ಬಿದ್ದ ಅವರನ್ನು ಇನ್ನಿತರ ಮೀನುಗಾರರು ಉಪಚರಿಸಿದ್ದು, ನಂತರ ಆಸ್ಪತ್ರೆಗೆ ಸಾಗಿಸಿದರು. ಆದರೆ, ನಾಗೇಶ ಅಂಬಿಗ ಅವರು ಬದುಕಲಿಲ್ಲ. ಈ ಬಗ್ಗೆ ಅವರ ಸಹೋದರ ಮಂಜುನಾಥ ಅಂಬಿಗ ಅವರು ಪೊಲೀಸರಿಗೆ ತಿಳಿಸಿದರು. ಭಟ್ಕಳ ಗ್ರಾಮೀಣ ಠಾಣೆ ಪೊಲೀಸರು ಪ್ರಕರಣ ದಾಖಲಿಸಿದರು. - [ಉದ್ಯೋಗ ಕೊಡಿಸುವುದೇ ಆತನ ಉದ್ಯೋಗ!](https://mobiletime.in/2025/10/his-job-is-to-provide-employment/): ಹೊನ್ನಾವರದ ಹೆರಅಂಗಡಿಯ ಜಾಫರ್ ಮುಕ್ತೇಸರ್ ಅವರು ವಿದೇಶದಲ್ಲಿ ನೌಕರಿ ಕೊಡಿಸುವುದಾಗಿ ನಂಬಿಸಿ ಹಣಪಡೆಯುತ್ತಾರೆ. ಆದರೆ, ಹಣ ಕೊಟ್ಟವರಿಗೆ ನೌಕರಿಯೂ ಸಿಕ್ಕಿಲ್ಲ. ಕೊಟ್ಟ ಹಣವೂ ಮರಳಿ ಬಂದಿಲ್ಲ! ಜಾಫರ್ ಮುಕ್ತೇಸರ್ ಅವರ ಜೊತೆ ಇನ್ನಿತರರು ಈ ಕೆಲಸದಲ್ಲಿ ಕೈ ಜೋಡಿಸಿದ್ದು, ಈಗಾಗಲೇ ಹಲವರಿಗೆ ಮೋಸ ಮಾಡಿದ್ದಾರೆ. ಹೀಗಾಗಿ `ಉದ್ಯೋಗ ಕೊಡಿಸುವುದಾಗಿ ಹಣಪಡೆದು ವಂಚಿಸುವ ಜಾಲದವರನ್ನು ಬಂಧಿಸಬೇಕು’ ಎಂದು ಮಂಗಳೂರಿನ ಕರ್ನಾಟಕ ಗಡಿನಾಡು ರಕ್ಷಣಾ ವೇದಿಕೆ ಮುಖಂಡ ಸಿದ್ದಿಕ್ ತಲಪಾಡಿ ಆಗ್ರಹಿಸಿದ್ದಾರೆ. `ಹೊನ್ನಾವರದ ಹೆರಂಗಡಿ ಮೂಲದ ಜಾಫರ್ ಹುಸೇನ್ ಮುಕ್ತೇಸರ್, ನೌಶಾದ್ @ ನೌಶಾ ಖ್ವಾಜಾ ದಾವೂದ್ ಹಾಗೂ ಹೈದರಾಬಾದ್ ಮೂಲದ ಸುಜಾತಾ ಜಮ್ಮಿ ಕುಂಟಾ ಸೇರಿ ಕುವೈತ್‌ನಲ್ಲಿ ಉದ್ಯೋಗ ಕೊಡಿಸುವುದಾಗಿ ಉತ್ತರ ಕನ್ನಡ ಸೇರಿದಂತೆ ರಾಜ್ಯ ಹಾಗೂ ಹೊರ ರಾಜ್ಯದ ಹಲವರಿಗೆ ವಂಚನೆ ಮಾಡಿದ್ದಾರೆ. ಈ ಬಗ್ಗೆ ಕೇರಳದ ವಯ್ಯಲಪರಕ್ಕೋಡದ ಬಿಜ್ಜು ದಾಮೋದರನ್ ಉದಯಂತಜಿAತಿಲ್ ಹೊನ್ನಾವರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ’ ಎಂದವರು ಮಾಹಿತಿ ನೀಡಿದರು. `33ಕ್ಕೂ ಹೆಚ್ಚು ಜನರಿಗೆ ವಂಚನೆ ಮಾಡಿರುವ ಆರೋಪ ಇದ್ದು ಈಗಾಗಲೇ ವಂಚನೆಗೊಳಗಾದವರು ಹೊನ್ನಾವರ ಪೊಲೀಸ್ ಠಾಣೆಗೆ ಹಾಜರಾಗಿ ಸಾಕ್ಷಿಯಾಗುತ್ತಿದ್ದಾರೆ. ಜಾಪರ್ ಮುಕ್ತೆಸರ್ ಕುವೇತ್‌ನಲ್ಲಿ ಡಿಫೆನ್ಸ್ಲ್ಲಿ 48 ಉದ್ಯೋಗಾವಕಾಶಗಳಿವೆ ಎಂದು ತನ್ನ ಪರಿಚಯಸ್ಥರು ಹಾಗೂ ಏಜೆಂಟರುಗಳ ಮೂಲಕ ಜನರನ್ನು ಒಟ್ಟೂಗೂಡಿಸಿ ಹಣ ಹಾಕಿಸಿಕೊಂಡಿದ್ದಾರೆ. ಇದನ್ನು ನಂಬಿದ ಬಿಜ್ಜು ದಾಮೋದರನ್ 33 ಜನರ ಪಾಸ್‌ಪೋರ್ಟ್ ಮತ್ತು ದಾಖಲೆಗಳನ್ನು ಒದಗಿಸಿದ್ದಾರೆ. ಬಳಿಕ ನಕಲಿ ಉದ್ಯೋಗ ಆಫರ್ ಲೆಟರ್‌ಗಳನ್ನು ಕಳುಹಿಸಿ, ಪ್ರತಿಯೊಬ್ಬ ಅಭ್ಯರ್ಥಿಯಿಂದ 3 ಲಕ್ಷ ರೂ ಪಡೆದು ಸುಮಾರು 52 ಲಕ್ಷ ರೂ ಮೋಸ ಮಾಡಿದ್ದಾರೆ’ ಎಂದು ವಿವರಿಸಿದರು. `ಜಾಫರ್ ಮುಕ್ತೇಸರ್ ಸದ್ಯ ಹೊನ್ನಾವರದಲ್ಲಿದ್ದು, ಕುವೈತ್ ಹಾಗೂ ಕೆನಡಾ ಪೋನ್ ನಂಬರ್ ಬಳಸಿ ವ್ಯವಹಾರ ಮಾಡುತ್ತಾರೆ. ಮತ್ತೆ ಅಮಾಯಕರಿಗೆ ಉದ್ಯೋಗ ಆಸೆ ಹುಟ್ಟಿಸಿ ವಂಚನೆ ಮಾಡುವ ಸಾಧ್ಯತೆ ಹೆಚ್ಚಿರುವುದರಿಂದ ಕೂಡಲೇ ಅವರನ್ನು ಬಂಧಿಸಬೇಕು’ ಎಂದು ಆಗ್ರಹಿಸಿದರು. `ದಾನ-ಧರ್ಮದ ಹೆಸರಿನಲ್ಲಿಯೂ ಜಾಫರ್ ಮುಕ್ತೇಸರ್ ಜನರನ್ನು ಯಾಮಾರಿಸುತ್ತಿದ್ದಾರೆ. ಅಮಾಯಕರಿಗೆ ವಂಚನೆ ಮಾಡಿ ನೀಡುವ ಹಣವನ್ನು ಸ್ಥಳೀಯರು ಧಾರ್ಮಿಕ ಕಾರ್ಯಗಳಿಗೂ ಬಳಸಬಾರದು’ ಎಂದು ಮನವಿ ಮಾಡಿದರು. - [ಮರದಿಂದ ಬಿದ್ದ ಕುಶಲಕರ್ಮಿ: ಸಾವು!](https://mobiletime.in/2025/10/craftsman-falls-from-tree-death/): ಅಂಕು-ಡೊoಕಾದ ತೆಂಗಿನ ಮರವನ್ನು ಚೈನ್‌ಪುಲ್ಲಿ ಬಳಸಿ ನೇರ ಮಾಡುವ ಹೊನ್ನಾವರದ ಮಂಜುನಾಥ ಮುಕ್ರಿ ಅವರು ಆ ಕೆಲಸ ಮಾಡುವಾಗಲೇ ಮರದಿಂದ ಬಿದ್ದು ಸಾವನಪ್ಪಿದ್ದಾರೆ. 8 ಅಡಿ ಎತ್ತರದಿಂದ ನೆಲಕ್ಕೆ ಬಿದ್ದ ಅವರನ್ನು ಆಸ್ಪತ್ರೆಗೆ ಸಾಗಿಸಿದರೂ ಅದರಿಂದ ಪ್ರಯೋಜನ ಆಗಲಿಲ್ಲ. ಹೊನ್ನಾವರದ ಕಕ್ಕಾರ ಹೂಜಿಮುರಿಯ ಮಂಜುನಾಥ ಮುಕ್ರಿ (46) ಅವರು ಬಾಲ್ಯದಿಂದಲೂ ಶ್ರಮಜೀವಿ ಆಗಿದ್ದರು. ಅಂಕು-ಡೊ0ಕಾದ ಅಡಿಕೆ ಮರವನ್ನು ಸಹ ಅವರು ನೇರ ಮಾಡುವ ಚಾಣಾಕ್ಷತನಹೊಂದಿದ್ದರು. ಜೊತೆಗೆ ವಿದ್ಯುತ್ ರಿಪೇರಿಯಂಥ ಇಲೆಕ್ಟಿçಕಲ್ ಕೆಲಸವನ್ನು ಅವರು ಜವಾಬ್ದಾರಿಯಿಂದ ಮಾಡುತ್ತಿದ್ದರು. ಹೀಗಾಗಿ ಕಡತೋಕ ಹೆಬ್ಳೆಕೊಪ್ಪದ ಮಂಜುನಾಥ ರಾಮಕೃಷ್ಣ ಭಟ್ಟರ ಮನೆ ಕೆಲಸಕ್ಕೆ ಹೋಗಿದ್ದರು. ಅಲ್ಲಿರುವ ತೆಂಗಿನಮರಗಳನ್ನು ನೇರ ಮಾಡುವ ಬಗ್ಗೆ ಅವರು ಮಾತನಾಡಿದ್ದರು. ಮಂಗಳವಾರ ಈ ಕೆಲಸಕ್ಕಾಗಿ ಮಂಜುನಾಥ ಮುಕ್ರಿ ಅವರು ಕಡತೋಕ ಹೆಬ್ಳೆಕೊಪ್ಪದ ಗೋಪಾಲಕೃಷ್ಣ ಭಟ್ಟ, ಗಣೇಶ ಭಟ್ಟ, ನಾರಾಯಣ ಮುಕ್ರಿ ಅವರ ಜೊತೆ ಸೇರಿ ತೋಟದಲ್ಲಿದ್ದ ತೆಂಗಿನ ಮರಗಳನ್ನು ನೇರ ಮಾಡುವ ಕೆಲಸ ಶುರು ಮಾಡಿದ್ದರು. ಒಂದೋoದೇ ಮರ ಸರಿ ಮಾಡುತ್ತ ಅವರೆಲ್ಲರೂ ತೋಟ ಸುತ್ತಾಡಿದರು. ಮಧ್ಯಾಹ್ನ 12ಗಂಟೆಯವರೆಗೂ ಎಲ್ಲಾ ಕೆಲಸ ಸರಾಗವಾಗಿ ಸಾಗಿತು. ಅದಾದ ನಂತರ ಮಂಜುನಾಥ ಮುಕ್ರಿ ಅವರು ಇನ್ನೊಂದು ತೆಂಗಿನ ಮರಕ್ಕೆ ತಮ್ಮ ಬಳಿಯಿದ್ದ ಸ್ಟಾಂಡ್ ಹಾಕಿದರು. 8 ಅಡಿ ಎತ್ತರದಲ್ಲಿ ಮಣೆ ಕಟ್ಟಿ ಅದರ ಮೇಲೆ ಕುಳಿತು ಚೈನ್‌ಪುಲ್ಲಿ ಎಳೆಯಲು ಶುರು ಮಾಡಿದರು. ಈ ವೇಳೆ ಅವರು ಆಯತಪ್ಪಿ ನೆಲಕ್ಕೆ ಬಿದ್ದಿದ್ದು, ನಂತರ ಮಾತನಾಡಲಿಲ್ಲ. ಮಂಜುನಾಥ ಮುಕ್ರಿ ಅವರ ಭಾವ ರಾಜೇಶ ಮುಕ್ರಿ ಅವರಿಗೆ ಗೋಪಾಲಕೃಷ್ಣ ಭಟ್ಟರು ವಿಷಯ ಮುಟ್ಟಿಸಿದರು. ಅಲ್ಲಿನ ಪುರಂದರ ಮುಕ್ರಿ ಅವರ ಜೊತೆ ಕೇರಿಯ ಜನ ಬಂದು ಮಂಜುನಾಥ ಮುಕ್ರಿ ಅವರನ್ನು ರಿಕ್ಷಾ ಮೇಲೆ ಹಾಕಿದರು. ಕಡತೋಕದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಹೋದಾಗ ಅಲ್ಲಿನ ವೈದ್ಯರು ಬೇರೆ ಕಡೆ ಹೋಗುವಂತೆ ತಿಳಿಸಿದರು. ಖಾಸಗಿ ಆಂಬುಲೆನ್ಸ ಮೂಲಕ ಮಂಜುನಾಥ ಮುಕ್ರಿ ಅವರನ್ನು ಹೊನ್ನಾವರ ಆಸ್ಪತ್ರೆಗೆ ತರಲಾಯಿತು. ಆದರೆ, ಈಗಾಗಲೇ ಮಂಜುನಾಥ ಮುಕ್ರಿ ಸಾವಪ್ಪಿದ ಬಗ್ಗೆ ವೈದ್ಯರು ಘೋಷಿಸಿದರು. - [ನನಗೂ ಪ್ರೀ.. ನಿನಗೂ ಪ್ರೀ.. ಕಡಲಿಗೆ ಬಂದವರಿಗೆಲ್ಲ ಮೀನು ಪ್ರೀ!](https://mobiletime.in/2025/10/free-for-me-too-free-for-you-too-free-fish-for-everyone-who-comes-to-the-sea/): ಕಾರವಾರ-ಅಂಕೋಲಾ ಭಾಗದ ಕಡಲತೀರದಲ್ಲಿ ಬರಪೂರ ಮೀನು ಸಿಗುತ್ತಿದೆ. ರಾಶಿ ರಾಶಿ ಮೀನು ಕಡಲತೀರಕ್ಕೆ ಬಂದು ಬೀಳುತ್ತಿದ್ದು, ಅದನ್ನು ಆರಿಸಲು ನೂರಾರು ಜನ ಮುಗಿ ಬಿದ್ದಿದ್ದಾರೆ. ಸಾಮಾನ್ಯವಾಗಿ ಯುಗಾದಿಯಿಂದ ದೀಪಾವಳಿ ಹಬ್ಬದ ಅವಧಿಯಲ್ಲಿ ಸಮುದ್ರದಲ್ಲಿನ ವಾತಾವರಣ ಬದಲಾವಣೆ ಆಗುತ್ತದೆ. ಸಮುದ್ರ ಉಷ್ಣತೆಯಿಂದ ತಂಪು ವಾತಾವರಣಕ್ಕೆ ತಿರುಗುವ ಅವಧಿಯಲ್ಲಿ ಅಲ್ಲಿನ ಮೀನುಗಳು ಕಡಲತೀರಕ್ಕೆ ಅಪ್ಪಳಿಸುತ್ತವೆ. ಲಕ್ಷಾಂತರ ಸಂಖ್ಯೆಯಲ್ಲಿ ಒಟ್ಟಿಗೆ ವಾಸಿಸುವ ತರ‍್ಲೆ ಮೀನು ತೀರ ಪ್ರದೇಶದ ಮರಳಿಗೆ ಬರುತ್ತಿದ್ದು, ಅತ್ಯಂತ ಶುಚಿ-ರುಚಿಯಾದ ಈ ಮೀನು ಸವಿಯಲು ಜನ ಹಾತೊರೆಯುತ್ತಿದ್ದಾರೆ. ಮೂರು ದಿನದ ಹಿಂದೆ ಅಂಕೋಲಾದ ಹಾರವಾಡದಲ್ಲಿ ಭೂತಾಯಿ ಮೀನಿನ ಸುಗ್ಗಿ ನಡೆದಿತ್ತು. ಮಂಗಳವಾರ ಬೆಳಗ್ಗೆ ಕಾರವಾರದ ಮಾಜಾಳಿಯಿಂದ ದೇವಭಾಗದವರೆಗೆ ಮೀನುಗಳು ದಡಕ್ಕೆ ಬಂದಿದ್ದವು. ಉಚಿತವಾಗಿ ಮೀನು ಸಿಗುವ ಸುದ್ದಿ ಕೇಳಿ ನೂರಾರು ಜನ ಅಲ್ಲಿ ಹೋಗಿ ಮೀನು ಆರಿಸಿದರು. ಮನೆಯಿಂದ ತಂದ ಬುಟ್ಟಿಗಳಲ್ಲಿ ಮೀನು ತುಂಬಿಕೊAಡು ಹೋಗಿ ಬಗೆ ಬಗೆಯ ಖಾದ್ಯ ಮಾಡಿದರು. `ಮಳೆಗಾಲದ ಅವಧಿಯಲ್ಲಿ ಸಮುದ್ರ ವಾತಾವರಣ ತಂಪಾಗಿದ್ದು, ಬೇಸಿಗೆ ಶುರುವಾಗುವಾಗ ಅಲ್ಲಿ ಕಾವು ಶುರುವಾಗುತ್ತದೆ. ಈ ಅವಧಿಯಲ್ಲಿ ದಿಡೀರ್ ಹವಾಮಾನ ಬದಲಾವಣೆ ಆಗುವುದರಿಂದ ಮೀನುಗಳು ದಡಕ್ಕೆ ಬರುವುದು ಸಾಮಾನ್ಯ’ ಎಂದು ಪ್ರಮೋದ ಹರಿಕಂತ್ರ ವಿವರಿಸಿದರು. `ಮಂಗಳವಾರ ಮಾಜಾಳಿಯಿಂದ ದೇವಭಾಗದವರೆಗೆ 2ಕಿಮೀ ಪ್ರದೇಶದಲ್ಲಿ ಮೀನು ಸಿಕ್ಕಿದೆ. ಅತ್ಯಂತ ಆರೋಗ್ಯಕರವಾಗಿರುವ ಭೂತಾಯಿ ಮೀನು ಸೇವನೆಯಿಂದ ಮನುಷ್ಯರ ಆರೋಗ್ಯ ವೃದ್ಧಿಯೂ ಸಾಧ್ಯ’ ಎಂದವರು ವಿವರಿಸಿದರು. ದಡದ ಮೇಲೆ ರಾಶಿ-ರಾಶಿ ಮೀನು ಕಂಡು ಸ್ಥಳೀಯರಲ್ಲಿ ಸಂಭ್ರಮ ಕಾಣಿಸಿತು. ಸಮುದ್ರದ ಅಲೆಗಳ ಹೊಡೆತಕ್ಕೆ ದಡಕ್ಕೆ ಬಂದ ಮೀನು ಆರಿಸಲು ಪೈಪೋಟಿ ಕಾಣಿಸಿತು. ಬೆಳಗ್ಗೆ 8 ಗಂಟೆಯಿoದ 10 ಗಂಟೆ ಅವಧಿಯಲ್ಲಿ ಮೀನು ದಡಕ್ಕೆ ಬಂದಿದ್ದು, 30 ನಿಮಿಷದ ಅವಧಿಯಲ್ಲಿ ಬಹುತೇಕ ಮೀನು ಕಾರವಾರಿಗರ ಮನೆ ಸೇರಿತ್ತು. ಕಡಲತೀರಕ್ಕೆ ಬಂದ ಮೀನು-ಜನ ಮುಗಿಬಿದ್ದು ಆರಿಸಿದ ವಿಡಿಯೋ ಇಲ್ಲಿ ನೋಡಿ.. - [ಹಬ್ಬದ ಮಾತು ಕುಲಗೆಡಿಸಿದ ಅಣ್ಣ-ಅತ್ತಿಗೆ!](https://mobiletime.in/2025/10/brother-sister-in-law-who-spoiled-the-festive-occasion/): ಅಂಕೋಲಾದ ಸಂಗೀತಾ ಮಡಿವಾಳ ಹಾಗೂ ಅವರ ಅಣ್ಣ ರಾಜು ನಾಯ್ಕ ನಡುವೆ ಆಸ್ತಿ ವಿಷಯವಾಗಿ ಕಲಹ ಶುರುವಾಗಿದೆ. ರಾಜು ನಾಯ್ಕ ಅವರ ಪತ್ನಿ ರಾಜೇಶ್ವರಿ ನಾಯ್ಕ ಅವರು ಇದೇ ಕಾರಣದಿಂದ ಸಂಗೀತಾ ಮಡಿವಾಳ ಅವರ ಜೊತೆ ಮುನಿಸಿಕೊಂಡಿದ್ದಾರೆ. ಅoಕೋಲಾದ ಹಾರವಾಡದಲ್ಲಿ ಸಂಗೀತಾ ಪ್ರವೀಣ ಮಡಿವಾಳ ಅವರು ವಾಸವಾಗಿದ್ದಾರೆ. ಅವರ ಅಣ್ಣ ರಾಜು ನಾಯ್ಕ ಅವರು ತಮ್ಮ ಪತ್ನಿ ರಾಜೇಶ್ವರಿ ನಾಯ್ಕ ಅವರ ಜೊತೆ ಅದೇ ಊರಿನಲ್ಲಿ ವಾಸವಾಗಿದ್ದಾರೆ. ಈ ಎರಡು ಕುಟುಂಬದ ನಡುವೆ ಆಸ್ತಿ ವಿಷಯವಾಗಿ ವೈಮನಸ್ಸಿದ್ದು, ಅದು ಎರಡು ಕಡೆಯವರ ನೆಮ್ಮದಿ ಕೆಡಿಸಿದೆ. ಸೆಪ್ಟೆಂಬರ್ 14ರಂದು ಸಹ ಆಸ್ತಿ ವಿಷಯ ಈ ಎರಡು ಕುಟುಂಬದವರ ನಡುವಿನ ಜಟಾಪಟಿಗೆ ಕಾರಣವಾಗಿದೆ. ಆ ದಿನ ಸಂಜೆ 4.30ಕ್ಕೆ ಸಂಗೀತಾ ಮಡಿವಾಳ ಅವರು ಮಾಘ ಕಾರ್ಯಕ್ರಮದ ಬಗ್ಗೆ ಮಾತನಾಡುತ್ತಿದ್ದರು. ಹಬ್ಬದ ಸಂಭ್ರಮದ ಬಗ್ಗೆ ಅವರು ಹೇಳುತ್ತಿರುವಾಗ ರಾಜೇಶ್ವರಿ ನಾಯ್ಕ ಅವರು ಮದ್ಯೆ ಮಾತನಾಡಿದರು. ರಾಜು ನಾಯ್ಕ ಅವರು ಆ ಮಾತಿಗೆ ಧ್ವನಿಯಾದರು. ಈ ಮಾತುಕಥೆ ಜಗಳದ ಸ್ವರೂಪಪಡೆಯಿತು. ರಾಜು ನಾಯ್ಕ, ರಾಜೇಶ್ವರಿ ನಾಯ್ಕ ಹಾಗೂ ಸಂಗೀತಾ ಮಡಿವಾಳರ ನಡುವೆ ಕಲಹ ಶುರುವಾಯಿತು. ರಾಜು ನಾಯ್ಕ ಹಾಗೂ ರಾಜೇಶ್ವರಿ ನಾಯ್ಕ ಸೇರಿ ಸಂಗೀತಾ ಮಡಿವಾಳ ಅವರ ಮೈ ಮುಟ್ಟಿದರು. ಅವರನ್ನು ದೂಡಿ ನೆಲಕ್ಕೆ ಬೀಳಿಸಿದರು. ಆಸ್ತಿ ವಿಚಾರದ ಬಗ್ಗೆ ಅವರು ಜಗಳ ಮಾಡಿ ರಂಪಾಟ ಮಾಡಿದರು. ಹಬ್ಬದ ಮಾತುಕಥೆ ಅಲ್ಲಿಗೆ ಮುಕ್ತಾಯವಾದ ಬಗ್ಗೆ ಸಂಗೀತಾ ಮಡಿವಾಳ ಅವರು ಬೇಸರಿಸಿಕೊಂಡರು. ತಮ್ಮ ಮೈ ಮುಟ್ಟಿದ ಅಣ್ಣ-ಅತ್ತಿಗೆಯ ವಿರುದ್ಧ ಸಂಗೀತಾ ಮಡಿವಾಳ ಅವರು ಪೊಲೀಸ್ ಠಾಣೆಯ ಮೆಟ್ಟಿಲೇರಿದರು. ಅಂಕೋಲಾ ಪೊಲೀಸರು ಎರಡು ಕಡೆಯವರಿಗೆ ಸಮಾಧಾನ ಮಾಡಿ ಕಳುಹಿಸಿದರು. ಆದರೆ, ಇದಕ್ಕೆ ತೃಪ್ತರಾಗದ ಸಂಗೀತಾ ಮಡಿವಾಳ ಅವರು ಕೋರ್ಟಿನ ಮೊರೆ ಹೋದರು. ತಮ್ಮ ಮೈ ಮುಟ್ಟಿದವರಿಗೆ ಶಿಕ್ಷೆ ಆಗಬೇಕು ಎಂದು ನ್ಯಾಯಾಧೀಶರಲ್ಲಿ ಕೇಳಿಕೊಂಡರು. ನ್ಯಾಯಾಲಯದ ಸೂಚನೆ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿದರು. - [ತುತ್ತು ಕೊಟ್ಟ ತಾಯಿಗೆ ಬಡಿಗೆ ಬೀಸಿದ ಪುತ್ರ!](https://mobiletime.in/2025/10/son-hits-mother-who-slapped-him/): ಹೊನ್ನಾವರದ ಮಣಿಕಂಠ ನಾಯ್ಕ ಅವರು ನಿತ್ಯವೂ ತಮ್ಮ ತಾಯಿ ಮೀರಾ ನಾಯ್ಕ ಅವರಿಗೆ ಕೋಲಿನಿಂದ ಹೊಡೆಯುತ್ತಾರೆ. ತಂದೆ ಉದಯ ನಾಯ್ಕ ಅವರ ಮೇಲೆಯೂ ಮಣಿಕಂಠ ನಾಯ್ಕ ಅವರು ಕೈ ಮಾಡಿದ್ದಾರೆ. ಹೊನ್ನಾವರದ ಮಂಕಿ ಬಳಿಯ ಹೊಸಪಟ್ಟಣದ ರಾಮನಗರದಲ್ಲಿ ಉದಯ ನಾಯ್ಕ ಹಾಗೂ ಮೀರಾ ನಾಯ್ಕ ದಂಪತಿ ವಾಸವಾಗಿದ್ದಾರೆ. ಅವರ ಮಗ ಮಣಿಕಂಠ ನಾಯ್ಕ (29) ಅವರು ಕೂಲಿ ಕೆಲಸ ಮಾಡುತ್ತಿದ್ದು, ಆ ದುಡಿಮೆಯೇ ಈ ದಂಪತಿ ಜೀವನಕ್ಕೆ ಆಧಾರ. ಆದರೆ, ಮಣಿಕಂಠ ನಾಯ್ಕ ಅವರು ಈಚೆಗೆ ದುಶ್ಚಟಗಳ ದಾಸರಾಗಿದ್ದಾರೆ. `ಸರಾಯಿ ಸೇವನೆ ಒಳ್ಳೆಯದಲ್ಲ’ ಎಂದು ಹೇಳಿದ ಕಾರಣ ತಂದೆ-ತಾಯಿ ಮೇಲೆ ಕೈ ಮಾಡುವುದನ್ನು ಕಲಿತಿದ್ದಾರೆ. ಪ್ರತಿ ದಿನ ಕುಡಿದು ಮನೆಗೆ ಬರುವ ಮಣಿಕಂಠ ನಾಯ್ಕ ಅವರು ಕುಟುಂಬದವರಿಗೆ ನೆಮ್ಮದಿಯಿಂದ ನಿದ್ದೆ ಮಾಡಲು ಬಿಡುತ್ತಿಲ್ಲ. ಪಾಲಕರಿಂದಲೂ ಮಗನ ಕಾಟವನ್ನು ಸಹಿಸಲು ಆಗುತ್ತಿಲ್ಲ. ಅಕ್ಟೊಬರ್ 5ರಂದು ಮಧ್ಯಾಹ್ನ ಉದಯ ನಾಯ್ಕ ಅವರು ಊಟ ಮಾಡಿ ಮಲಗಿದ್ದಾಗ ಸರಾಯಿ ಸೇವಿಸಿ ಬಂದ ಮಣಿಕಂಠ ನಾಯ್ಕ ಅವರು ಏಕಾಏಕಿ ಬೈಗುಳ ಶುರು ಮಾಡಿದ್ದಾರೆ. ಈ ಬಗ್ಗೆ ಪ್ರಶ್ನಿಸಿದಾಗ ಬಡಿಗೆಯಿಂದ ಉದಯ ನಾಯ್ಕ ಅವರ ಮೇಲೆ ಹಲ್ಲೆ ನಡೆಸಿದ್ದಾರೆ. ಜಗಳದ ಬಗ್ಗೆ ವಿಚಾರಿಸಲು ಬಂದ ಮೀರಾ ನಾಯ್ಕ ಅವರ ಮೇಲೆಯೂ ಮಣಿಕಂಠ ನಾಯ್ಕ ಅವರು ಕೈ ಮಾಡಿದ್ದಾರೆ. ಕೋಲಿನಿಂದ ಹೊಡೆದ ಪರಿಣಾಮ ಈ ದಂಪತಿಯ ಮುಖ, ತಲೆಗೆ ಪೆಟ್ಟಾಗಿದೆ. ಮಗನ ಕಾಟ ಸಹಿಸಲಾಗದೇ ಉದಯ ನಾಯ್ಕ ಅವರು ಪೊಲೀಸರ ಮೊರೆ ಹೋಗಿದ್ದಾರೆ. ಮಂಕಿ ಪೊಲೀಸರು ಪ್ರಕರಣ ದಾಖಲಿಸಿದ್ದು, ತನಿಖೆ ಶುರು ಮಾಡಿದ್ದಾರೆ. - [ಶಾಲೆಗೆ ರಜೆ: ಶಿಕ್ಷಕರ ಸಂತಸ!](https://mobiletime.in/2025/10/school-holiday-teachers-are-happy/): ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಪೂರ್ಣಗೊಳ್ಳದ ಹಿನ್ನಲೆ ಅಕ್ಟೋಬರ್ 8ರಿಂದ 11ರವರೆಗೆ ಶಾಲಾ ಸಮಯದಲ್ಲಿ ಬದಲಾವಣೆ ಮಾಡಿದಕ್ಕೆ ಕರ್ನಾಟಕ ರಾಜ್ಯ ಮಾಧ್ಯಮಿಕ ಶಾಲಾ ನೌಕರರ ಸಂಘ ಕಾರವಾರ ಘಟಕ ವಿರೋಧವ್ಯಕ್ತಪಡಿಸಿದ್ದು, ಅದಾದ ಕೆಲವೇ ಗಂಟೆಗಳಲ್ಲಿ ಸರ್ಕಾರ ಶಾಲೆಗಳಿಗೆ ರಜೆ ಘೋಷಿಸಿದೆ. ಈ ಹಿನ್ನಲೆ ಮಾಧ್ಯಮಿಕ ಶಾಲಾ ನೌಕರರ ಸಂಘದವರು ಸಂತಸವ್ಯಕ್ತಪಡಿಸಿದ್ದಾರೆ. ಸರ್ಕಾರ ಮೊದಲು ಶಾಲಾ ಸಮಯದಲ್ಲಿ ಬದಲಾವಣೆ ಮಾಡಲು ಮುಂದಾಗಿತ್ತು. ಅದರ ಪ್ರಕಾರ `ಬೆಳಗ್ಗೆ 8ರಿಂದ 1ಗಂಟೆಯವರೆಗೆ ಶಿಕ್ಷಕರು ಶಾಲಾ ಕೆಲಸ ಮುಗಿಸಬೇಕು. ಅದಾದ ನಂತರ ಸಮೀಕ್ಷೆಯಲ್ಲಿ ತೊಡಗಬೇಕು’ ಎಂದು ಸೂಚಿಸಲಾಗಿತ್ತು. ಕರ್ನಾಟಕ ರಾಜ್ಯ ಮಾಧ್ಯಮಿಕ ಶಾಲಾ ನೌಕರರ ಸಂಘದ ಕಾರವಾರ ಘಟಕ ಇದಕ್ಕೆ ವಿರೋಧವ್ಯಕ್ತಪಡಿಸಿತ್ತು. ಈ ಆದೇಶವನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿತ್ತು. `ಶಿಕ್ಷಕರು ದಸರಾ ರಜೆಯನ್ನು ಅನುಭವಿಸದೇ ಸಮೀಕ್ಷಾ ಕಾರ್ಯದಲ್ಲಿ ತೊಡಗಿದ್ದಾರೆ. ಹೀಗಿರುವಾಗ ಮತ್ತೆ ಒತ್ತಡದ ಕೆಲಸ ಅಸಾಧ್ಯ’ ಎಂದು ಶಿಕ್ಷಕರು ಹೇಲಿದ್ದರು. ಮಕ್ಕಳ ಮಾನಸಿಕ ಸ್ಥಿತಿಯ ಒತ್ತಡದ ಬಗ್ಗೆಯೂ ಶಿಕ್ಷಕರು ವಿವರಿಸಿದ್ದರು. ಗುಡ್ಡಗಾಡು ಪ್ರದೇಶದಲ್ಲಿ ಮತ್ತು ಶಾಲಾ ವಾಹನದಲ್ಲಿ ಹೋಗುವ ವಿದ್ಯಾರ್ಥಿಗಳಿಗೆ ಸಮಯಕ್ಕೆ ಸರ್ಕಾರಿ ಬಸ್ಸುಗಳ ಸಮರ್ಪಕ ವ್ಯವಸ್ಥೆ ಇಲ್ಲದಿರುವುದನ್ನು ಗಮನಕ್ಕೆ ತಂದಿದ್ದರು.ಈ ಎಲ್ಲಾ ವಿಷಯ ಪರಿಗಣಿಸಿ ಸಕಾರ ಶಾಲೆಗೆ ನೀಡಿದ ರಜಾ ಅವಧಿಯನ್ನು ವಿಸ್ತರಿಸಿದೆ. ಇದಕ್ಕೆ ರಾಜ್ಯ ಮಾಧ್ಯಮಿಕ ಶಾಲಾ ನೌಕರರ ಸಂಘದ ಕಾರವಾರ ಅಧ್ಯಕ್ಷ ಜೈ ರಂಗನಾಥ ಬಿ ಎಸ್ ಸಂತಸವ್ಯಕ್ತಪಡಿಸಿದರು. - [ನ್ಯಾಯಾಧೀಶರಿಗೆ ಅವಮಾನ: ರೈತ ಸಂಘದ ಖಂಡನೆ](https://mobiletime.in/2025/10/insult-to-judges-farmers-association-condemns/): ಸುಪ್ರೀo ಕೋರ್ಟಿನ ವಕೀಲ ರಾಕೇಶ ಕಿಶೋರ್ ಅವರು ಸೋಮವಾರ ನ್ಯಾಯಾಧೀಶ ಬಿ ಆರ್ ಗವಾಯಿ ಅವರ ಮೇಲೆ ಚಪ್ಪಲಿ ಎಸೆದಿದ್ದು, ಈ ಕ್ರಮವನ್ನು ಕರ್ನಾಟಕ ಪ್ರಾಂತ ರೈತ ಸಂಘ ಖಂಡಿಸಿದೆ. `ಸನಾತನ ಧರ್ಮ ರಕ್ಷಣೆ ಬಗ್ಗೆ ಮಾತನಾಡುವ ವಕೀಲರೊಬ್ಬರು ನ್ಯಾಯಾಧೀಶರ ಮೇಲೆ ಚಪ್ಪಲಿ ಎಸೆದಿರುವುದು ಸರಿಯಲ್ಲ’ ಎಂದು ಕರ್ನಾಟಕ ಪ್ರಾಂತ ರೈತ ಸಂಘದ ಅಧ್ಯಕ್ಷ ಶಾಂತಾರಾಮ ನಾಯಕ ಅವರು ಹೇಳಿದ್ದಾರೆ. `ಮುಖ್ಯ ನ್ಯಾಯಮೂರ್ತಿಗಳ ಮೇಲಿನ ದಾಳಿ ಆಘಾತಕಾರಿ, ಆಸಹನೆಯ ಪರಾಕಷ್ಠೆ ಪ್ರತೀಕ’ ಎಂದು ಅವರು ವಿವರಿಸಿದ್ದಾರೆ. `ದೇಶದ ಅತ್ಯುನ್ನತ ನ್ಯಾಯಾಂಗ ಸಂಸ್ಥೆಯಾಗಿರುವ ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಮೂರ್ತಿ ಸ್ಥಾನದಲ್ಲಿ ಪರಿಶಿಷ್ಟ ಜಾತಿಯ ವ್ಯಕ್ತಿ ಒಬ್ಬರು ಕುಳಿತಿರುವುದನ್ನು ಸನಾತನ ಧರ್ಮ ರಕ್ಷಕನ ಅಸಹನೆಗೆ ಮೂಲ ಕಾರಣ. ನರೇಂದ್ರ ಮೋದಿ ಅವರ ಅಧಿಕಾರದ ಅವಧಿಯಲ್ಲಿ ದೇಶದ ಎಲ್ಲಡೆ ಪ್ರತಿ ದಿನ ಇಂಥ ಅಸಹನೆಗಳು ವ್ಯಕ್ತವಾಗುತ್ತಿದ್ದು, ಅದು ಇದೀಗ ಕೋರ್ಟ ಆವರಣವನ್ನು ತಲುಪಿದೆ. ಹಿರಿಯ ವಕೀಲರಾದ ರಾಕೇಶ ಕಿಶೋರ್ ಈ ರೀತಿ ವರ್ತಿಸಿದ್ದು ಸರಿಯಲ್ಲ’ ಎಂದವರು ಬೇಸರವ್ಯಕ್ತಪಡಿಸಿದ್ದಾರೆ. `ಬಿಜೆಪಿ ಮಖಂಡರು ಈಚೆಗೆ ಜಾತಿವಾದಿ, ಮನುವಾದಿ ಮತ್ತು ಸಮುದಾಯ ವಿರೋಧಿ ಹೇಳಿಕೆ ನೀಡುತ್ತಿದ್ದಾರೆ. ಹೀಗಾಗಿ ಇಂಥ ಕೃತ್ಯ ಮಾಡುವವರಿಗೆ ಧೈರ್ಯ ಹೆಚ್ಚಾಗಿದೆ’ ಎಂದು ರೈತ ಸಂಘದ ಕಾರ್ಯದರ್ಶಿ ಶ್ಯಾಮನಾಥ ನಾಯ್ಕ ಅವರು ಅಭಿಪ್ರಾಯಪಟ್ಟಿದ್ದಾರೆ. `ತಮ್ಮ ಮೇಲೆ ದಾಳಿನಡೆದರೂ ಸಂಯಮದಿAದ ವರ್ತಿಸಿರುವ ನ್ಯಾಯಮೂರ್ತಿಗಳ ನಡೆ ಅಭಿನಂದನಾರ್ಹ. ಪ್ರಜಾಪ್ರಭುತ್ವ ಹಾಗೂ ಸಂವಿಧಾನ ಪ್ರೇಮಿಗಳು ಈ ಮತೀಯ ಮನಸ್ಥಿತಿಯ ಹೀನ ಕೃತ್ಯವನ್ನು ಖಂಡಿಸಬೇಕು’ ಎಂದವರು ಹೇಳಿದ್ದಾರೆ. - [ಅಜ್ಜಿಗೆ ಆದ ಅನ್ಯಾಯದ ವಿರುದ್ಧ ಉಗ್ರ ಹೋರಾಟ!](https://mobiletime.in/2025/10/fierce-fight-against-injustice-to-grandmother/): `ಕುಮಟಾದಲ್ಲಿ 72 ವರ್ಷದ ರಾಧಾ ಆಚಾರಿ ಅವರು ಅನುಭವಿಸುತ್ತಿರುವ ಕಷ್ಟಗಳ ಬಗ್ಗೆ ಅರಿಯದೇ ಅಧಿಕಾರಿಗಳು ಅವರಿಗೆ ಅನ್ಯಾಯ ಮಾಡಿದ್ದಾರೆ. ಹೀಗಾಗಿ ಈ ಅನ್ಯಾಯದ ವಿರುದ್ಧ ಹೋರಾಟ ಅನಿವಾರ್ಯ’ ಎಂದು ಜನಸಾಮಾನ್ಯರ ಸಮಾಜ ಕಲ್ಯಾಣ ಕೇಂದ್ರದ ಆಗ್ನೇಲ್ ರೋಡ್ರಿಗಸ್ ಹೇಳಿದ್ದಾರೆ. `ಅಧಿಕಾರಿಗಳು ನೈಜ ಪರಿಸ್ಥಿತಿ ಗಮನಿಸದೇ ವೃದ್ಧೆಗೆ ಸಂದ್ಯಾ ಸುರಕ್ಷಾ ಯೋಜನೆ ಸಿಗದಂತೆ ಮಾಡಿದ್ದಾರೆ’ ಎಂದವರು ದೂರಿದ್ದಾರೆ. `ರಾಧಾ ಆಚಾರಿ ಅವರು ಸಂದ್ಯಾ ಸುರಕ್ಷಾ ಯೋಜನೆಗೆ ಅರ್ಜಿ ಸಲ್ಲಿಸುವುದಕ್ಕಾಗಿ ಆದಾಯ ಪ್ರಮಾಣ ಪತ್ರಕ್ಕೆ ಅರ್ಜಿ ಹಾಕಿದ್ದರು. ಆದರೆ, ಅಧಿಕಾರಿಗಳು ಅವರಿಗಿರುವ ಆದಾಯಕ್ಕಿಂತಲೂ ಹೆಚ್ಚಿನ ಮೊತ್ತ ನಮೂದಿಸಿ ಪ್ರಮಾಣ ಪತ್ರ ಕೊಟ್ಟಿದ್ದಾರೆ. ಸದ್ಯ ಗೃಹಲಕ್ಷ್ಮಿ ಹಣ ಬಿಟ್ಟು ಬೇರೆ ಯಾವ ಆದಾಯವೂ ಈ ಕುಟುಂಬಕ್ಕಿಲ್ಲ. ಅದಾಗಿಯೂ ಕಂದಾಯ ನಿರೀಕ್ಷಕರು ಈ ವೃದ್ಧ ಕುಟುಂಬ ಗುಡಿ ಕೈಗಾರಿಕೆ ಮಾಡುವ ಬಗ್ಗೆ ಹೇಳಿದ್ದು, ಅದಕ್ಕೆ ದಾಖಲೆಗಳಿಲ್ಲ’ ಎಂದು ವಿವರಿಸಿದ್ದಾರೆ. `ಕಂದಾಯ ನಿರೀಕ್ಷಕರು ನೀಡಿದ ವರದಿಗೆ ತಹಶೀಲ್ದಾರರು ಕಣ್ಮುಚ್ಚಿ ಸಹಿ ಮಾಡಿದ್ದಾರೆ. ಅರ್ಜಿದಾರರ ಪರಿಸ್ಥಿತಿ ನೋಡಿದರೆ ಕಂದಾಯ ನಿರೀಕ್ಷಕರ ವರದಿ ಸತ್ಯವಲ್ಲ ಎಂಬುದು ಅರಿವಾಗುತ್ತದೆ. ದಾಯಾದಿಗಳು ನೀಡಿದ ಹೇಳಿಕೆ ಆಧಾರದಲ್ಲಿ ಅಧಿಕಾರಿಗಳು ವೃದ್ಧೆಗೆ ಅನ್ಯಾಯ ಮಾಡಿದ್ದು, ಅನಾರೋಗ್ಯಕ್ಕೆ ಒಳಗಾಗಿರುವ ರಾಧಾ ಅವರು ಗುಡಿ ಕೈಗಾರಿಕೆ ಮಾಡಲು ಹೇಗೆ ಸಾಧ್ಯ?’ ಎಂದು ಪ್ರಶ್ನಿಸಿದ್ದಾರೆ. `ಬಿಪಿ, ಶುಗರ್ ಸೇರಿ ವಿವಿಧ ಸಮಸ್ಯೆಯಿಂದ ಅವರು ಬಳಲುತ್ತಿದ್ದಾರೆ. ಅಂಥವರಿಗೆ ಅಧಿಕ ಆದಾಯವಿರುವ ಬಗ್ಗೆ ಅಧಿಕಾರಿಗಳು ಬರೆದಿದ್ದು, ತಹಶೀಲ್ದಾರರು ವೃದ್ಧೆಯ ಮನೆಗೆ ಭೇಟಿ ನೀಡಿ ಸಮಸ್ಯೆ ಆಲಿಸಬೇಕು’ ಎಂದು ಆಗ್ರಹಿಸಿದ್ದಾರೆ. `ಎಕರೆಗಟ್ಟಲೆ ಭೂಮಿ ಹೊಂದಿದವರಿಗೆ ಕಡಿಮೆ ಆದಾಯವಿರುವ ಪ್ರಮಾನ ಪತ್ರ ಕೊಡಲಾಗುತ್ತದೆ. ಏನೂ ಆದಾಯ ಇಲ್ಲದವರಿಗೆ ಅನ್ಯಾಯ ಮಾಡಲಾಗುತ್ತಿದೆ. ತಹಶೀಲ್ದಾರ್ ಕಚೇರಿಯಲ್ಲಿ ಭ್ರಷ್ಟಾಚಾರ ನಡೆಯುತ್ತಿದ್ದು, ಅದರ ಪರಿಣಾಮ ಬಡವರ ಅನ್ನ ಕಸಿಯಲಾಗುತ್ತಿದೆ. ಈ ಬಗ್ಗೆ ಲೋಕಾಯುಕ್ತ ಕಚೇರಿಗೆ ದೂರು ನೀಡಲಾಗುತ್ತದೆ’ ಎಂದವರು ಹೇಳಿದ್ದಾರೆ. ಸಾಮಾಜಿಕ ಕಾರ್ಯಕರ್ತ ಸುಧಾಕರ ನಾಯ್ಕ ಅವರು ಇದಕ್ಕೆ ಧ್ವನಿಗೂಡಿಸಿದ್ದಾರೆ. - [ಜಾತಿ ಸಮೀಕ್ಷೆ | ಶಾಲೆಗೆ ರಜೆ: ಸಾವನಪ್ಪಿದವರ ಕುಟುಂಬಕ್ಕೆ ಪರಿಹಾರ!](https://mobiletime.in/2025/10/caste-survey-school-holiday-relief-for-the-families-of-those-who-died/): ರಾಜ್ಯದಲ್ಲಿ ನಡೆಯುತ್ತಿರುವ ಸಾಮಾಜಿಕ ಹಾಗೂ ಶೈಕ್ಷಣಿಕ ಗಣತಿಗೆ ಶಿಕ್ಷಕರನ್ನು ನಿಯೋಜಿಸಿದ ಕಾರಣ ಅಕ್ಟೊಬರ್ 18ರವರೆಗೂ ಶಾಲೆಗಳಿಗೆ ರಜೆ ಘೋಷಿಸಿ ಸರ್ಕಾರ ನಿರ್ಧಾರ ಪ್ರಕಟಿಸಿದೆ. ಸರ್ಕಾರಿ ಹಾಗೂ ಅನುದಾನಿತ ಶಾಲೆಗಳಿಗೆ ಈ ರಜೆ ಅನ್ವಯ ಆಗಲಿದೆ. ಹಿಂದುಳಿದ ವರ್ಗಗಳ ಆಯೋಗದಿಂದ ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕ ಸಮೀಕ್ಷೆ ಅಕ್ಟೊಬರ್ 7ರಂದು ಮುಗಿಯಬೇಕಿತ್ತು. ಅಕ್ಟೊಬರ್ 8ರಿಂದ ಶಾಲೆಗಳು ಶುರುವಾಗಬೇಕಿತ್ತು. ಆದರೆ, ಈವರೆಗೂ ಸಮೀಕ್ಷೆ ಪೂರ್ಣವಾಗದ ಕಾರಣ ಶಾಲೆಗಳ ರಜಾ ಅವಧಿ ವಿಸ್ತರಿಸಲಾಗಿದೆ. ಸಂಪುಟ ಸಹೋದ್ಯೋಗಿಗಳ ಜೊತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚರ್ಚಿಸಿ ಶಾಲೆ ರಜೆಯ ಅವಧಿ ವಿಸ್ತರಿಸಿದ್ದಾರೆ. `ಕೆಲವು ಜಿಲ್ಲೆಯಲ್ಲಿ ಸಮೀಕ್ಷೆ ಕಾರ್ಯ ಮುಗಿದಿದೆ. ಇನ್ನೂ ಕೆಲವು ಕಡೆ ಮುಗಿದಿಲ್ಲ. ಶಿಕ್ಷಕರ ಮನವಿ ಮೇರೆಗೆ ರಜೆ ಘೋಷಿಸಲಾಗಿದೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಸಾವನಪ್ಪಿದವರ ಕುಟುಂಬಕ್ಕೆ ಪರಿಹಾರ `ರಾಜ್ಯದಲ್ಲಿ 1.20 ಲಕ್ಷ ಶಿಕ್ಷಕರು ಸಮೀಕ್ಷೆ ಕಾರ್ಯದಲ್ಲಿ ಭಾಗಿಯಾಗಿದ್ದಾರೆ. ದ್ವಿತೀಯ ಪಿಯುಸಿ ಪರೀಕ್ಷೆ ಸಹ ಇದೇ ಅವಧಿಯಲ್ಲಿ ನಡೆಯುತ್ತಿದ್ದು, ಪರೀಕ್ಷಾ ಕಾರ್ಯದಲ್ಲಿ ತೊಡಗಿದವರಿಗೆ ಸಮೀಕ್ಷೆಯಲ್ಲಿ ವಿನಾಯತಿ ನೀಡಲಾಗಿದೆ. ರಜೆ ವಿಸ್ತರಣೆ ಹಿನ್ನಲೆ 12 ದಿನ ಸಮೀಕ್ಷೆಗೆ ಅವಕಾಶ ಸಿಗಲಿದ್ದು, ಅಕ್ಟೋಬರ್ 18ರೊಳಗೆ ಪೂರ್ಣ ಪ್ರಮಾಣದಲ್ಲಿ ಸಮೀಕ್ಷೆ ಮುಗಿಸಬೇಕು’ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. `ಸಮೀಕ್ಷೆ ಕಾರ್ಯಕ್ಕೆ ಹಿಂದೇಟು ಹಾಕಿದವರಿಗೆ ಶಿಕ್ಷೆ ವಿಧಿಸಲಾಗುತ್ತದೆ’ ಎಂದು ಅವರು ಎಚ್ಚರಿಸಿದ್ದಾರೆ. `ಸರ್ವೆ ಕಾರ್ಯದಲ್ಲಿ ಮೂವರು ಸಾವನಪ್ಪಿದ್ದು, ಅವರ ಕುಟುಂಬಕ್ಕೆ 20 ಲಕ್ಷ ರೂ ಪರಿಹಾರ ಕೊಡುತ್ತೇವೆ’ ಎಂದು ಸೀಎಂ ಸಿದ್ದರಾಮಯ್ಯ ಘೋಷಿಸಿದ್ದಾರೆ. ಉತ್ತರ ಕನ್ನಡದಲ್ಲಿ ಪ್ರಗತಿ ಸೋಮವಾರ ಸಂಜೆಯ ಮಾಹಿತಿ ಪ್ರಕಾರ ಉತ್ತರ ಕನ್ನಡ ಜಿಲ್ಲೆಯಲ್ಲಿ 282838 ಮನೆಗಳ ಸಮೀಕ್ಷೆ ಮುಗಿದಿದೆ. ಹೀಗಾಗಿ ಈ ಸಮೀಕ್ಷಾ ಕಾರ್ಯದಲ್ಲಿ ಶೇ 86.53ರಷ್ಟು ಪ್ರಗತಿ ಆಗಿದೆ. - [ಅನುದಾನಿತ ಶಾಲೆ: ಇಲ್ಲಿ 35 ವರ್ಷ ದುಡಿದವರಿಗೂ ಪಿಂಚಣಿ ಇಲ್ಲ!](https://mobiletime.in/2025/10/aided-school-even-those-who-have-worked-here-for-35-years-have-no-pension/): 30-35 ವರ್ಷಗಳ ಕಾಲ ಅನುದಾನಿತ ಶಾಲಾ ಶಿಕ್ಷಕರನ್ನು ದುಡಿಸಿಕೊಳ್ಳುವ ಸರ್ಕಾರ ನಿವೃತ್ತಿ ನಂತರ ಪಿಂಚಣಿ ಕೊಡದೇ ಮನೆಗೆ ಕಳುಹಿಸುತ್ತಿದೆ. ಸುದೀರ್ಘ ಸೇವೆ ಸಲ್ಲಿಸಿದರೂ ನಿವೃತ್ತಿ ನಂತರ ಆ ಶಿಕ್ಷಕರಿಗೆ ಯಾವ ಸೌಲಭ್ಯವೂ ಸಿಗುತ್ತಿಲ್ಲ. ರಾಜ್ಯದಲ್ಲಿ 50 ಸಾವಿರಕ್ಕೂ ಅಧಿಕ ಶಿಕ್ಷಕರು ಅನುದಾನಿತ ಶಾಲೆಗಳಲ್ಲಿದ್ದಾರೆ. ಅವರೆಲ್ಲರೂ ಈಗ ಸಂಘಟಿತರಾಗುತ್ತಿದ್ದಾರೆ. ಅಖಿಲ ಕರ್ನಾಟಕ ಹಾಗೂ ಪಿಂಚಣಿ ವಂಚಿತ ಅನುದಾನಿತ ಶಾಲಾ ಕಾಲೇಜುಗಳ ನೌಕರರ ಸಂಘದ ಸಭೆ ಯಲ್ಲಾಪುರಲ್ಲಿ ನಡೆದಿದ್ದು, ಸಂಘದ ಬಲವರ್ಧನೆ ಬಗ್ಗೆ ಚರ್ಚಿಸಲಾಗಿದೆ. ಈ ಸಭೆಯಲ್ಲಿ ಸಂಘದ ರಾಜ್ಯಾಧ್ಯಕ್ಷ ಜಿ ಹನುಮಂತಪ್ಪ ಅವರು ಭಗವಹಿಸಿ `ಸಂಘಟನೆ ಒಂದೇ ನೌಕರರ ಸಮಸ್ಯೆಗೆ ಪರಿಹಾರ’ ಎಂದು ಘೋಷಿಸಿದ್ದಾರೆ. `ಸರ್ಕಾರ ಪ್ರಣಾಳಿಕೆಯಲ್ಲಿ ಪ್ರಕಟಿಸಿದ ಹಾಗೇ ಹಳೆ ಪಿಂಚಣಿ ಯೋಜನೆ ಜಾರಿಗೆ ತರಬೇಕು. ಇಲ್ಲವಾದರೆ ನಮ್ಮ ಪ್ರತಿಭಟನೆ ಎದುರಿಸಬೇಕು’ ಎಂದು ಅವರು ಎಚ್ಚರಿಸಿದ್ದಾರೆ. `ಸರ್ಕಾರ ಅನುದಾನಿತ ಶಾಲೆಯವರನ್ನು ಮಲತಾಯಿ ಮಕ್ಕಳ ರೀತಿ ನೋಡುತ್ತಿದೆ. ನಿವೃತ್ತಿ ನಂತರ ಅನುದಾನಿತ ಶಾಲೆ ಸಿಬ್ಬಂದಿ ಸಮಸ್ಯೆಗೆ ಸಿಲುಕುತ್ತಿದ್ದಾರೆ’ ಎಂದು ವಿವರಿಸಿದರು. `ಸರ್ಕಾರಿ ನೌಕರರಿಗೆ ನೀಡುತ್ತಿರುವ ಆರೋಗ್ಯ ಸಂಜೀವಿನಿ ಸಹ ಈ ಶಿಕ್ಷಕರಿಗೆ ಸಿಗುತ್ತಿಲ್ಲ. 23 ವರ್ಷಗಳಿಂದ ಅನುದಾನಿತ ಪ್ರಾಥಮಿಕ ಶಾಲೆಯಲ್ಲಿ ಖಾಲಿಯಿರುವ ಹುದ್ದೆಯನ್ನು ಭರ್ತಿ ಮಾಡಿಲ್ಲ’ ಎಂದು ದೂರಿದರು. `ಸರ್ಕಾರಿ ನೌಕರರು ಶಿಶು ಪಾಲನೆ ರಜೆಗೆ ಹೋದರೆ ಅವರ ವೇತನವನ್ನು ಸರ್ಕಾರ ನೀಡುತ್ತದೆ. ಆದರೆ, ಅನುದನಿತ ಶಾಲಾ ಸಿಬ್ಬಂದಿಗೆ ಈ ಸೌಕರ್ಯ ಇಲ್ಲ. ಸರ್ಕಾರಿ ನೌಕರರು ಕರ್ತವ್ಯದ ವೇಳೆ ಮರಣಹೊಂದಿದರೆ ಶವ ಸಂಸ್ಕಾರಕ್ಕೆ ಕಲ್ಯಾಣ ನಿಧಿ ಬಳಕೆ ಆಗುತ್ತದೆ. ಆದರೆ, ಆ ಕಲ್ಯಾಣ ನಿಧಿಗಳಿಗೆ ನಮ್ಮ ಅನುದಾನಿತ ಶಾಲಾ ಕಾಲೇಜುಗಳ ನೌಕರರ ಹಣಪಡೆದರೂ ಅದರ ಬಳಕೆಗೆ ಕೊಡುತ್ತಿಲ್ಲ’ ಎಂದು ವಿವರಿಸಿದರು. `ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ 143 ದಿನ ಹೋರಾಟ ನಡೆಯಿತು. ಆಗ ನೀಡಿದ ಭರವಸೆಗಳು ಈಡೇರಿಲ್ಲ’ ಎಂದು ಕಿಡಿಕಾರಿದರು. ಪ್ರಮುಖರಾದ ಬಸಪ್ಪ ತಳವಾರ್, ಡಿ ಆರ್ ಹೆಗಡೆ, ಶಿವಾನಂದ ಬಡಿಗೇರ್, ವಿನಾಯಕ ಶೇಟ, ಮುಕ್ತಾ ಶಂಕರ ಇತರರು ಭಾಗವಹಿಸಿದ್ದರು. ಎಂ ರಾಜಶೇಖರ, ವೆಂಕಟ್ರಮಣ ಭಟ್ಟ, ನೆಲ್ಸನ ಗೋನ್ಸಾಲ್ವಿಸ ಕಾರ್ಯಕ್ರಮ ನಿರ್ವಹಿಸಿದರು. - [ದುಡ್ಡಿಗೆ ಲಕ್ಷ್ಮೀ.. ಸಹಕಾರಿ ಕ್ಷೇತ್ರಕ್ಕೆ ಸರಸ್ವತಿ!](https://mobiletime.in/2025/10/lakshmi-for-money-saraswati-for-the-cooperative-sector/): ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಸಹಕಾರಿ ಸಂಸ್ಥೆಗಳು ಕೆಲಸ ಮಾಡಬೇಕು. ಸಹಕಾರಿ ಸಂಘದಲ್ಲಿ ಆ ನಿಟ್ಟಿನಲ್ಲಿ ಕೆಲಸ ಮಾಡಲು ಅವರಿಗೆ ಡಿಸಿಸಿ ಬ್ಯಾಂಕಿನ ಸಹಕಾರಬೇಕು. ಆ ಸಹಕಾರ ಸಿಗಲು ಡಿಸಿಸಿ ಬ್ಯಾಂಕಿನಲ್ಲಿ ಉತ್ತಮ ಆಡಳಿತವಿರಬೇಕು. ಉತ್ತಮ ಆಡಳಿತಕ್ಕಾಗಿ ಅಲ್ಲಿ ಒಳ್ಳೆಯ ನಿರ್ದೇಶಕರಿರಬೇಕು. ಆ ಒಳ್ಳೆಯ ನಿರ್ದೇಶಕರು ವಿದ್ಯಾವಂತರಾಗಿರಬೇಕು. ಅಷ್ಟೇ ಪ್ರಮಾಣದಲ್ಲಿ ಪ್ರಬುದ್ಧರೂ ಆಗಿರಬೇಕು. ಈ ಎಲ್ಲಾ ಅರ್ಹತೆಹೊಂದಿರುವ ಸರಸ್ವತಿ ಎನ್ ರವಿ ಅವರು ಡಿಸಿಸಿ ಬ್ಯಾಂಕಿಗೆ ನಿರ್ದೇಶಕರಾಗಿ ಆಯ್ಕೆಯಾಗಬೇಕು. ಸರಸ್ವತಿ ಎನ್ ರವಿ ಅವರು ಶಿರಸಿಯ ಸ್ಕೋಡ್‌ವೆಸ್ ಸಹಕಾರಿ ಸಂಸ್ಥೆಯ ಸಾರಥಿ. ಎಂಬಿಎ ಸ್ನಾತಕೋತರ ಪದವಿಧರೆಯಾಗಿರುವ ಅವರು ಹಣಕಾಸು ಮತ್ತು ಆಡಳಿತ ವಿಷಯದಲ್ಲಿ ಸಾಕಷ್ಟು ಅರಿವುಹೊಂದಿದ್ದಾರೆ. ಅವರ ಓದು, ನಿರಂತರ ಅಧ್ಯಯನ, ಪ್ರವಾಸದ ಅನುಭವದ ಆಧಾರದಲ್ಲಿ ಸರಸ್ವತಿ ಎನ್ ರವಿ ಅವರು ಸಹಕಾರಿ ಕ್ಷೇತ್ರದ ದಿಗ್ಗಜರಾಗಿ ಗುರುತಿಸಿಕೊಂಡಿದ್ದಾರೆ. ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿಯ ನಿರ್ದೇಶಕರಾಗಿದ್ದ ಅವರು ಸಹಕಾರಿ ವ್ಯವಸ್ಥೆಯ ಆಳ-ಅಗಲದ ಅರಿವು ಹೊಂದಿದ್ದಾರೆ. ಸಹಕಾರಿ ಸಂರಕ್ಷಣೆಯಲ್ಲಿನ 11 ವರ್ಷ ಅನುಭವ ಅವರನ್ನು ಕೆಡಿಸಿಸಿ ಬ್ಯಾಂಕ್ ನಿರ್ದೇಶಕ ಮಂಡಳಿಯ ಅಂಗಳದವರೆಗೆ ಕರೆತಂದಿದೆ. ಕೆಡಿಸಿಸಿ ಬ್ಯಾಂಕಿನ ನಿರ್ದೇಶಕ ಸ್ಥಾನ ದೊರೆತ ನಂತರ ಬ್ಯಾಂಕ್ ಉನ್ನತಿಗೆ ಹೊಸ ದಿಕ್ಕು ಒದಗಿಸುವ ವಿಶ್ವಾಸದಲ್ಲಿ ಅವರು ಕೆಲಸ ಮಾಡುತ್ತಿದ್ದಾರೆ. `ಸಹಕಾರಿ ಸಂಸ್ಥೆಗಳು ರೈತರಿಗೆ ಅನುಕೂಲಕರವಾಗಿರಬೇಕು. ಸಮಯಕ್ಕೆ ಸರಿಯಾಗಿ ಸಾಲ ಸಿಗಬೇಕು. ರೈತರ ಕಷ್ಟಗಳ ಬಗ್ಗೆ ಧ್ವನಿಯಾಗಬೇಕು. ಹವಾಮಾನ ಅನಾನುಕೂಲ ಪರಿಸ್ಥಿತಿಯಲ್ಲಿ ಬೆಳೆಗಾರರು ಅನುಭವಿಸುವ ಸಮಸ್ಯೆ, ಸಕಾಲಕ್ಕೆ ಬಾರದ ಬೆಳೆ ವಿಮೆ, ತುರ್ತು ಸನ್ನಿವೇಶಗಳನ್ನು ಎದುರಿಸಬಹುದಾದ ನಾಯಕತ್ವ ಇದ್ದವರು ಕೆಡಿಸಿಸಿ ಬ್ಯಾಂಕಿನ ನಿರ್ದೇಶಕರಾಗಬೇಕು. ಆಗ ಮಾತ್ರ ಸಹಕಾರಿ ವ್ಯವಸ್ಥೆ ಸರಿದಾರಿಯಲ್ಲಿರುತ್ತದೆ’ ಎಂಬುದು ವಿಜಯಲಕ್ಷ್ಮೀ ಹೆಗಡೆ ಡೊಂಬೆಕಾಯಿ ಅವರ ಅನಿಸಿಕೆ. ಸರಸ್ವತಿ ಎನ್ ರವಿ ಅವರು ಯಾವುದೇ ಬಣದಲ್ಲಿ ಗುರುತಿಸಿಕೊಂಡವರಲ್ಲ. ಸ್ವತಂತ್ರö?? ಅಭ್ಯರ್ಥಿಯಾಗಿ ಸ್ಪರ್ಧಿಸಿದ ಅವರು ಎಲ್ಲರ ಜೊತೆ ಉತ್ತಮ ಸಂಬoಧಹೊoದಿದ್ದು, ಹಿರಿಯರ ಪ್ರೇರಣೆ-ಹಾರೈಕೆಯೇ ಅವರಿಗೆ ಶ್ರೀರಕ್ಷೆಯಾಗಿದೆ. ಕಡಿಮೆ ಬಡ್ಡಿದರದಲ್ಲಿ ಹೆಚ್ಚು ಮೊತ್ತದ ಸಾಲ, ತುರ್ತು ಹಣಕಾಸು ಪರಿಸ್ಥಿತಿ ನಿಭಾಯಿಸುವ ಜಾಣ್ಮೆ, ಸಮಸ್ಯೆಗಳಿಗೆ ತ್ವರಿತವಾಗಿ ಸ್ಪಂದಿಸುವ ನಾಯಕತ್ವ ಗುಣಹೊಂದಿದ ಮಹಿಳಾ ಸಹಕಾರಿ ಸರಸ್ವತಿ ಎನ್ ರವಿ ಅವರು ಡಿಸಿಸಿ ಬ್ಯಾಂಕ್ ನಿರ್ದೇಶಕರಾಗಲಿ ಎಂಬುದು ಕುಮಟಾದ ಸುನಂದಾ ಪೈ ಅವರ ಅಂಬೋಣ. - [2025 ಅಕ್ಟೋಬರ್ 07ರ ದಿನ ಭವಿಷ್ಯ](https://mobiletime.in/2025/10/prediction-for-october-07-2025/): ಮೇಷ ರಾಶಿ: ಆತ್ಮವಿಶ್ವಾಸದಿಂದ ಕೆಲಸ ಮಾಡಿದರೆ ನಿಮ್ಮ ಹಣಕಾಸಿನ ಚಿಂತೆ ದೂರವಾಗಿದೆ. ಉದ್ಯೋಗ ಸ್ಥಳದಲ್ಲಿ ನೆಮ್ಮದಿಯ ವಾತಾವರಣ ಸಿಗಲಿದೆ. ದಾನ ಮಾಡಿದರೆ ಉತ್ತಮ ಫಲ ಸಿಗಲಿದೆ. ವೃಷಭ ರಾಶಿ: ನಿಮ್ಮ ಅದೃಷ್ಟ ಚನ್ನಾಗಿರುವುದರಿಂದ ಯಶಸ್ಸಿನ ದಾರಿ ಸುಲಭವಾಗಿರಲಿದೆ. ಉದ್ಯೋಗದಲ್ಲಿ ಉನ್ನತ ಹುದ್ದೆ ಸಿಗಲಿದೆ. ಒಳ್ಳೆಯ ಸುದ್ದಿಗಳು ಕೇಳಿ ಬರಲಿದೆ. ಮಿಥುನ ರಾಶಿ: ತಂದೆ-ತಾಯಿ ಆಶೀರ್ವಾದದಿಂದ ಆಸ್ತಿ ಖರೀದಿ ಸಾಧ್ಯವಿದೆ. ಖರ್ಚುಗಳನ್ನು ನಿಯಂತ್ರಿಸಿದರೆ ನಿಮ್ಮ ಸಂಪತ್ತು ವೃದ್ಧಿ ಆಗಲಿದೆ. ವಾಹನ ಪ್ರಯಾಣದಲ್ಲಿ ಎಚ್ಚರಿಕೆ ಅಗತ್ಯ. ಕರ್ಕ ರಾಶಿ: ದೊಡ್ಡ ಪ್ರಮಾಣದಲ್ಲಿ ಆದಾಯ ಹರಿದುಬರಲಿದೆ. ವ್ಯಾಪಾರ-ವಹಿವಾಟುಗಳು ಚನ್ನಾಗಿರಲಿವೆ. ನಿಮ್ಮ ಆತುರದ ನಿರ್ಧಾರಗಳು ದಿಢೀರ್ ಸಮಸ್ಯೆಗೆ ಕಾರಣವಾಗಲಿದೆ. ಸಿಂಹ ರಾಶಿ: ಸಾಮಾಜಕ ಹಾಗೂ ರಾಜಕೀಯ ಕ್ಷೇತ್ರದಲ್ಲಿದ್ದವರಿಗೆ ಯಶಸ್ಸು ಸಿಗಲಿದೆ. ನಿಮ್ಮ ಜವಾಬ್ದಾರಿಗಳು ಹೆಚ್ಚಾಗಲಿದೆ. ಶತ್ರುಗಳ ಕುತಂತ್ರದಿoದ ಬೇಸರವಾಗಲಿದೆ. ಕನ್ಯಾ ರಾಶಿ: ಶೃದ್ಧೆಯಿಂದ ಮಾಡಿದ ಕೆಲಸ ಮುಂದೆ ಫಲ ಕೊಡಲಿದೆ. ನಿಮ್ಮ ವಿರುದ್ಧದ ವಾತಾವರಣವನ್ನು ಶಾಂತಿಯಿAದ ನಿಭಾಯಿಸಿ. ಸರ್ಕಾರಿ ಕೆಲಸಗಳಿಗೆ ಅರ್ಜಿ ಹಾಕಲು ಉತ್ತಮ ದಿನ. ತುಲಾ ರಾಶಿ: ನಿಮ್ಮ ಹಣಕಾಸಿನ ಸಮಸ್ಯೆ ಸದ್ಯಕ್ಕೆ ದೂರವಾದರೂ ಎಚ್ಚರಿಕೆ ಅಗತ್ಯ. ಹೊಸ ಆದಾಯಕ್ಕಾಗಿ ಅನ್ವೇಷಿಸಿ. ಗೌರವ ಸಿಗಲಿದೆ. ವೃಶ್ಚಿಕ ರಾಶಿ: ನಿಮ್ಮ ಖ್ಯಾತಿ ಇನ್ನಷ್ಟು ವಿಸ್ತಾರವಾಗಲಿದೆ. ಆರ್ಥಿಕ ಪರಿಸ್ಥಿತಿ ಬಲವಾಗುತ್ತದೆ. ಮಿತ್ರರ ಜೊತೆ ಮಾತನಾಡಿದರೆ ಮನಸ್ಸು ಹಗುರವಾಗಲಿದೆ. ಧನು ರಾಶಿ: ಹಣಕಾಸಿನ ಸಮಸ್ಯೆ ದೂರವಾಗಲಿದೆ. ನಷ್ಟವಾದ ಉದ್ಯೋಗ ಮರಳಿ ಸಿಗಲಿದೆ. ಹನುಮಂತನ ಆರಾಧನೆ ನಿಮಗೆ ಒಳಿತು ಮಾಡುತ್ತದೆ. ಮಕರ ರಾಶಿ: ನಿಮ್ಮ ಕೆಲಸ ಕಾರ್ಯಗಳಲ್ಲಿ ಮೆಚ್ಚುಗೆಯ ಮಾತುಗಳು ಬರಲಿದೆ. ಧನ ಆಗಮನದ ನಿರೀಕ್ಷೆಯಿದೆ. ಪರೀಕ್ಷೆಗಳು ಸರಾಗವಾಗಿ ಸಾಗಲಿದೆ. ಈ ದಿನ ವಾಹನ ಬಳಕೆ ಬೇಡ. ಕುಂಭ ರಾಶಿ: ಹಳೆಯ ಬಾಕಿ ವಸೂಲಾತಿ ಆಗಲಿದೆ. ದೇಹಕ್ಕೆ ಸುಸ್ತಾಗಬಹುದು. ಆಸ್ತಿ ವ್ಯವಹಾರದಲ್ಲಿ ಜಾಗರೂಕತೆ ಅಗತ್ಯ. ಮೀನ ರಾಶಿ: ಆರೋಗ್ಯ ಮತ್ತು ದಾಂಪತ್ಯದಲ್ಲಿ ಸಾಮರಸ್ಯ ಮುಖ್ಯ. ಪ್ರೀತಿ-ಪ್ರೇಮ ವಿಷಯದಲ್ಲಿ ಉತ್ತಮ ಫಲ. ಸಾಮಾಜಿಕ ಮನ್ನಣೆ ಸಿಗಲಿದೆ. ಕೌಶಲ್ಯ ವೃದ್ಧಿಗೆ ಪ್ರಯತ್ನಿಸಿ. - [ಚಿನ್ನ ತುಂಬಿದ ಬ್ಯಾಗು: ಮುಂಡಗೋಡದಲ್ಲಿ ಕಳಿತು.. ಯಲ್ಲಾಪುರದಲ್ಲಿ ಸಿಕ್ಕಿತು!](https://mobiletime.in/2025/10/a-bag-full-of-gold-it-was-stolen-in-mundagoda-found-in-yellapur/): ಮುಂಡಗೋಡದಲ್ಲಿ ಕಾಣೆಯಾಗಿದ್ದ ಬ್ಯಾಗು ಯಲ್ಲಾಪುರದಲ್ಲಿ ಸಿಕ್ಕಿದೆ. ಪೊಲೀಸರು ಅದನ್ನು ಜೋಪಾನವಾಗಿ ವಾರಸುದಾರರಿಗೆ ಕೊಟ್ಟಿದ್ದಾರೆ. ಮುಂಡಗೋಡಿನ ಕೆಂದಲಗೇರಿಯ ರೇಷ್ಮಾಬಾನು ಹುಸೇನ್ ಸಾಬ್ ಅವರು ಅಕ್ಟೊಬರ್ 4ರಂದು ತಮ್ಮ ಬ್ಯಾಗು ಕಳೆದುಕೊಂಡಿದ್ದರು. ಮುಂಡಗೋಡಿನ ಬಸ್ ನಿಲ್ದಾಣದ ಬಳಿ ಅವರ ಬ್ಯಾಗು ಕಾಣೆಯಾಗಿತ್ತು. ಬೆಲೆ ಬಾಳುವ ಬೆಳ್ಳಿ – ಬಂಗಾರದ ಆಭರಣಗಳು ಆ ಬ್ಯಾಗಿನಲ್ಲಿದ್ದವು. ಬ್ಯಾಗ್ ಕಾಣೆಯಾದ ಬಗ್ಗೆ ಅವರು ಆತಂಕಕ್ಕೆ ಒಳಗಾಗಿದ್ದರು. ಎಲ್ಲಾ ಕಡೆ ಹುಡುಕಿದರೂ ಬ್ಯಾಗ್ ಸಿಗದ ಕಾರಣ ಪೊಲೀಸರ ಮೊರೆ ಹೋಗಿದ್ದರು. ಮುಂಡಗೋಡು ಪೊಲೀಸರು ವಿವಿಧ ಆಯಾಮಗಳಲ್ಲಿ ಬ್ಯಾಗಿನ ಹುಡುಕಾಟ ನಡೆಸಿದರು. ಯಲ್ಲಾಪುರದ ತಾಲೂಕಿನಲ್ಲಿ ಆ ಬ್ಯಾಗ್ ಇರುವ ಬಗ್ಗೆ ಪೊಲೀಸರಿಗೆ ಮಾಹಿತಿ ಸಿಕ್ಕಿತು. ಇಡಗುಂದಿಯ ಬಳಿ ವ್ಯಕ್ತಿಯೊಬ್ಬರ ಬಳಿ ವಿಚಾರಿಸಿದಾಗ ರೇಷ್ಮಾಬಾನು ಅವರ ಬ್ಯಾಗ್ ಇದ್ದ ಜಾಗ ತೋರಿಸಿದರು. ಆ ಬ್ಯಾಗನ್ನು ವಶಕ್ಕೆಪಡೆದ ಪೊಲೀಸರು ಮುಂಡಗೋಡಿಗೆ ತೆರಳಿದರು. ರೇಷ್ಮಾಬಾನು ಅವರನ್ನು ಪೊಲೀಸ್ ಠಾಣೆಗೆ ಕರೆಯಿಸಿ, ಕಳೆದು ಹೋಗಿದ್ದ ಬ್ಯಾಗಿನಲ್ಲಿದ್ದ ವಸ್ತುಗಳ ವಿವರಪಡೆದರು. ನಿಜವಾಗಿಯೂ ರೇಷ್ಮಾಬಾನು ಅವರದ್ದೇ ಬ್ಯಾಗ್ ಎಂದು ಖಚಿತಪಡಿಸಿಕೊಂಡು ಅದನ್ನು ಅವರಿಗೆ ಹಸ್ತಾಂತರಿಸಿದರು. ಬೆಲೆ ಬಾಳುವ ಆಭರಣ ಮರಳಿ ಸಿಕ್ಕಿದ್ದಕ್ಕಾಗಿ ರೇಷ್ಮಾಬಾನು ಅವರು ಸಂತಸಗೊoಡರು. - [ಕ್ಯಾಮರಾ ಕಣ್ಣಿನಲ್ಲಿ ಚಿರತೆ ಬಂಧನ](https://mobiletime.in/2025/10/leopard-caught-on-camera/): ದಾoಡೇಲಿ ಕಾಡಿನಲ್ಲಿ ಅಲೆದಾಡುವ ಚಿರತೆ ಸೋಮವಾರ ನಸುಕಿನಲ್ಲಿ ಕ್ಯಾಮರಾ ಕಣ್ಣಿಗೆ ಬಿದ್ದಿದೆ. ದಾಂಡೇಲಿ ಪ್ರವಾಸಕ್ಕೆ ಬಂದಿದ್ದ ವ್ಯಕ್ತಿಯೊಬ್ಬರು ಚಿರತೆಯ ಚಲನ-ವಲನ ಚಿತ್ರಿಸಿದ್ದಾರೆ. ಮುಂಜಾನೆ 2 ಗಂಟೆ ಅವಧಿಯಲ್ಲಿ ದಾಂಡೇಲಿಯಿAದ 10ಕಿಮೀ ದೂರದಲ್ಲಿ ಚಿರತೆ ಕಾಣಿಸಿದೆ. ರಸ್ತೆ ಮೇಲೆ ಚಿರತೆ ಓಡಾಡಿಕೊಂಡಿದ್ದು, ಗಣೇಶಗುಡಿ ಕಡೆ ಹೋಗುತ್ತಿದ್ದವರು ಅದನ್ನು ತಮ್ಮ ಮೊಬೈಲಿನಲ್ಲಿ ಸೆರೆ ಹಿಡಿದಿದ್ದಾರೆ. 10ನೇ ನಂಬರ್ ಸೇತುವೆ ಹತ್ತಿರ ಈ ಚಿರತೆ ಓಡಾಡಿದ ದೃಶ್ಯ ಸೆರೆ ಸಿಕ್ಕಿದೆ. ದಾಂಡೇಲಿ ವನ್ಯಜೀವಿ ಪ್ರದೇಶದಲ್ಲಿ ಚಿರತೆ ಓಡಾಟ ಸಾಮಾನ್ಯವಾಗಿದೆ. ಅನೇಕ ಪ್ರವಾಸಿಗರ ಕಣ್ಣಿಗೆ ಈ ಚಿರತೆ ಕಾಣಿಸಿಕೊಂಡಿದೆ. ರಸ್ತೆ ಮದ್ಯೆ ಚಿರತೆ ಓಡಾಟ ಈ ಭಾಗದಲ್ಲಿ ಸಹಜವಾಗಿದ್ದು, ಬೇರೆ ಬೇರೆ ಊರುಗಳಿಂದ ಬರುವವರಿಗೆ ವನ್ಯಜೀವಿ ದರ್ಶನ ಅಪರೂಪವೆನಿಸಿದೆ. - [ಸರ್ಕಾರಿ ಭೂಮಿ ಕಂಡವರ ಪಾಲು!](https://mobiletime.in/2025/10/the-share-of-those-who-have-seen-government-land/): ಕುಮಟಾದ ನಾಡುಮಾಸ್ಕೇರಿ ಬಳಿ ಸರ್ಕಾರಿ ಜಾಗ ಅನಧಿಕೃತ ಮಾರಾಟದ ಆರೋಪ ಕೇಳಿ ಬಂದಿದೆ. ಅಲ್ಲಿನ ಗ್ರಾ ಪಂ ಅಧ್ಯಕ್ಷ ಈಶ್ವರ ಗೌಡ ಅವರೇ ಈ ಬಗ್ಗೆ ದೂರಿದ್ದು, ಜಿಲ್ಲಾಡಳಿತದ ವಿರುದ್ಧ ಅವರು ಕಿಡಿಕಾರಿದ್ದಾರೆ. ಸುದ್ದಿಗಾರರ ಜೊತೆ ಮಾತನಾಡಿದ ಅವರು `ಸರ್ಕಾರಿ ಜಾಗ ಅಕ್ರಮ ಮಾರಾಟದ ಬಗ್ಗೆ 5 ಬಾರಿ ಜಿಲ್ಲಾಡಳಿತಕ್ಕೆ ದೂರು ನೀಡಲಾಗಿದೆ. ಆದರೆ, ಈವರೆಗೂ ಜಿಲ್ಲಾಡಳಿತ ಕ್ರಮ ಜರುಗಿಸಿಲ್ಲ’ ಎಂದು ಆಕ್ಷೇಪಿಸಿದರು. `ಹೊರ ರಾಜ್ಯದ ಕೆಲವರು ಅಕ್ರಮವಾಗಿ ಇಲ್ಲಿ ಜಾಗಪಡೆದಿದ್ದಾರೆ. ಬೆಲೆ ಬಾಳುವ ಭೂಮಿ ರಕ್ಷಣೆಗೆ ಸರ್ಕಾರ ಆಸಕ್ತಿವಹಿಸಿಲ್ಲ’ ಎಂದವರು ಅಸಮಧಾನವ್ಯಕ್ತಪಡಿಸಿದರು. `ಸರ್ಕಾರಿ ಭೂಮಿ ಅನ್ಯರ ಪಾಲಾಗುವುದನ್ನು ತಪ್ಪಿಸುವಂತೆ ಸಾಕಷ್ಟು ಬಾರಿ ಒತ್ತಡ ಹೇರಲಾಗಿದೆ. ಆದರೆ, ಅದರಿಂದ ಯಾವ ಪ್ರಯೋಜನವೂ ಆಗಿಲ್ಲ. ಕಾಟಾಚಾರಕ್ಕೆ ಸರ್ವೇ ಮಾಡಿ ಅಧಿಕಾರಿಗಳು ಪ್ರಕರಣ ಕೈ ಬಿಟ್ಟಿದ್ದಾರೆ’ ಎಂದು ದೂರಿದರು. `ಈ ಭಾಗದಲ್ಲಿ ಸುಪ್ರೀಂ ಕೋರ್ಟ್ ಆದೇಶದ ವಿರುದ್ಧವಾಗಿ ಕಟ್ಟಡ ನಿರ್ಮಾಣ ನಡೆದಿದೆ. ನ್ಯಾಯಾಲಯದ ಆದೇಶವಿದ್ದರೂ ಅನಧಿಕೃತ ಕಟ್ಟಡ ತೆರವಾಗಿಲ್ಲ. ಸಹಾಯಕ ಆಯುಕ್ತರು ಹಾಗೂ ತಹಶೀಲ್ದಾರರಿಗೆ ಮನವಿ ಸಲ್ಲಿಸಿದರೂ ಪ್ರಯೋಜನಕ್ಕೆ ಬಂದಿಲ್ಲ ಎಂದವರು ವಿವರಿಸಿದರು. `ಗೋಮಾಳದ ಜಾಗವನ್ನು ಕೆಲವರು ಅತಿಕ್ರಮಿಸಿದ್ದಾರೆ. ಪ್ರಶ್ನಿಸಿದವರ ವಿರುದ್ಧ ದಬ್ಬಾಳಿಕೆ ಮಾಡುತ್ತಿದ್ದಾರೆ. ಈ ಎಲ್ಲಾ ಕೃತ್ಯದ ಹಿಂದೆ ರಾಜಕೀಯದವರ ಕೈವಾಡವಿದೆ’ ಎಂದು ಅನುಮಾನವ್ಯಕ್ತಪಡಿಸಿದರು. `ಮುಂದಿನ ಮೂರು ತಿಂಗಳ ಒಳಗೆ ಕಾನೂನಿನ ಪ್ರಕಾರ ಕ್ರಮವಾಗಬೇಕು. ಇಲ್ಲವಾದಲ್ಲಿ ಹೈಕೋರ್ಟಿನಲ್ಲಿ ಪ್ರಕರಣ ದಾಖಲಿಸುವುದು ಅನಿವಾರ್ಯ’ ಎಂದು ಎಚ್ಚರಿಸಿದರು. ಗ್ರಾಪಂ ಉಪಾಧ್ಯಕ್ಷೆ ವಿಜಯಾ ಕೆ ನಾಯ್ಕ, ರವಿ, ನಾಗರಾಜ ತಾಂಡೇಲ, ರಾಜೇಶ ನಾಯ್ಕ, ಗಿರಿಜಾ ಗೌಡ, ಮಾದೇವಿ ಗೌಡ, ಮೀನಾಕ್ಣಿ ಆಗೇರ, ಚಂದ್ರಶೇಖರ ನಾಯ್ಕ, ದಯಾನಂದ ಮೆಹ್ತಾ, ಸವಿತಾ ನಾಯ್ಕ, ರಾಘವೇಂದ್ರ ಗೌಡ ಇತರರು ಇದಕ್ಕೆ ಧ್ವನಿಗೂಡಿಸಿದರು. - [`ಹೆಲ್ಮೆಟ್ ಧರಿಸಿ.. ಬೈಕ್ ಓಡಿಸಿ'](https://mobiletime.in/2025/10/wear-a-helmet-ride-a-bike/): ಬೈಕ್ ಸವಾರರು ಹೆಲ್ಮೆಟ್ ಧರಿಸದೇ ವಾಹನ ಓಡಿಸುವುದನ್ನು ನೋಡಿದ ಪೊಲೀಸ್ ಅಧೀಕ್ಷಕ ದೀಪನ್ ಎಂ ಎನ್ ಅವರು ಈ ಬಗ್ಗೆ ಜನ ಜಾಗೃತಿಗೆ ಬೈಕ್ ರ‍್ಯಾಲಿ ನಡೆಸಿದ್ದಾರೆ. `ಹೆಲ್ಮೆಟ್ ಧರಿಸಿ.. ಬೈಕ್ ಓಡಿಸಿ’ ಎಂದು ಅವರು ಸಾರ್ವಜನಿಕರಿಗೆ ಕರೆ ನೀಡಿದ್ದಾರೆ. ಉತ್ತರಕನ್ನಡ ಜಿಲ್ಲೆಯಲ್ಲಿ 2024ರಲ್ಲಿ ಹೆಲ್ಮೆಟ್ ಧರಿಸದೇ ವಾಹನ ಚಲಾಯಿಸಿದ ಪರಿಣಾಮ 18 ಜನ ಸಾವನಪ್ಪಿದ್ದಾರೆ. 33 ಅಪಘಾತಗಳು ನಡೆದಿದ್ದು, ಅನೇಕರು ಗಾಯಗೊಂಡಿದ್ದಾರೆ. 2025 ರಲ್ಲಿ 64 ಅಪಘಾತ ನಡೆದಿದ್ದು, 35 ಜನ ಸಾವನಪ್ಪಿದ್ದಾರೆ. ಈ ಹಿನ್ನಲೆ ಪೊಲೀಸ್ ಅಧೀಕ್ಷಕ ದೀಪನ್ ಎಂ ಎನ್ ಅವರು ಜನರ ಜೀವ ಉಳಿಸುವ ಮಹತ್ವದ ಕಾರ್ಯಕ್ರಮಕ್ಕೆ ಮುಂದಾಗಿದ್ದಾರೆ. ಮದ್ಯಪಾನ ಮಾಡಿ ವಾಹನ ಓಡಿಸುವವರಿಗೂ ಅವರು ಅರಿವು ಮೂಡಿಸಿದ್ದಾರೆ. 2023ರಿಂದ ಈವರೆಗೆ 745 ಜನ ಮದ್ಯಪಾನ ಮಾಡಿ ವಾಹನ ಓಡಿಸುವ ಮೂಲಕ ಸಿಕ್ಕಿ ಬಿದ್ದಿದ್ದು, ಆ ಪೈಕಿ 467 ಜನರ ಚಲನಾ ಪರವಾನಿಗೆಯನ್ನು ರದ್ದು ಮಾಡಲಾಗಿದೆ. ಈ ಎಲ್ಲಾ ವಿಷಯಗಳ ಬಗ್ಗೆ ಜನರಿಗೆ ತಿಳಿಸಲು ಉತ್ತರ ಕನ್ನಡ ಜಿಲ್ಲೆಯ ಅನೇಕ ಕಡೆ ಸೋಮವಾರ ಬೈಕ್ ಸವಾರರಿಗೆ ಜಾಗೃತಿ ಮೂಡಿಸುವ ಕೆಲಸ ನಡೆದಿದೆ. ಸಾವಿರಾರು ಸಂಖ್ಯೆಯಲ್ಲಿ ಪೊಲೀಸರು ಹೆಲ್ಮೆಟ್ ಧರಿಸಿ ಬೈಕ್ ಓಡಿಸುವ ಮೂಲಕ ಜನರಿಗೆ ಅರಿವು ಮೂಡಿಸಿದ್ದಾರೆ. - [ಹೆಗಡೆರ ಮನೆ: ಕಂಬಳಿ ಕೊಂಡೊಯ್ದು ಚಳಿ ಬಿಡಿಸಿದ ಪೊಲೀಸರು!](https://mobiletime.in/2025/10/hegdes-house-police-took-away-blankets-to-cool-off-the-cold/): ಶಿರಸಿಯ ವಿನಾಯಕ ಹೆಗಡೆ ಅವರು ತಮ್ಮ ಮನೆ ಬಳಿ ನಡೆಸುತ್ತಿದ್ದ ಜೂಜಾಟಕ್ಕೆ ಪೊಲೀಸರು ತಡೆ ಒಡ್ಡಿದ್ದಾರೆ. ಹಣದ ಜೊತೆ ಇಸ್ಪಿಟ್ ಎಲೆ ಹರಡಿಕೊಂಡಿದ್ದ ಹೆಗಡೆರ ಮನೆಯ ಕಂಬಳಿಯನ್ನು ಸಹ ಬಿಡದೇ ಪೊಲೀಸರು ಜಪ್ತು ಮಾಡಿದ್ದಾರೆ. ಅಕ್ಟೊಬರ್ 4ರಂದು ಶಿರಸಿ ಜಾನ್ಮನೆ ಬಳಿಯ ಕೂರ್ಸೆಮನೆಯ ವಿನಾಯಕ ಹೆಗಡೆ ಅವರು ತಮ್ಮ ಬಳಗದವರನ್ನು ಜೂಜಾಡಲು ಆಮಂತ್ರಿಸಿದ್ದರು. ಆ ದಿನ ರಾತ್ರಿ 9.45 ಆದರೂ ವಿನಾಯಕ ಹೆಗಡೆ ಅವರ ಮನೆಗೆ ಹೋಗುವ ರಸ್ತೆ ಬದಿ ದೀಪ ಬೆಳಗುತ್ತಿತ್ತು. ಆ ದೀಪದ ಬೆಳಕಿನಲ್ಲಿ ಬಲವಳ್ಳಿ ನೆಬ್ಬೂರಿನ ಹರೀಶ ಭಟ್ಟ, ಜಾನ್ಮನೆ ನೆಬ್ಬೂರಿನ ವಿಶ್ವನಾಥ ಭಟ್ಟ, ನವಿಲಗಾರ ಹತ್ತರಗಿಯ ಗಜಾನನ ಹೆಗಡೆ ಹಾಗೂ ರೇವಣಕಟ್ಟಾದ ರಾಮಚಂದ್ರ ಭಟ್ಟ ಕವಳ ತೂಪಿ, ಹರಟೆ ಹೊಡೆಯುತ್ತಿದ್ದರು. ಜೊತೆಗೆ ಅಲ್ಲಿ ಹಾಸಿದ್ದ ಕಂಬಳಿ ಮೇಲೆ ಕುಳಿತು ಅವರೆಲ್ಲರೂ ಅಂದರ್ ಬಾಹರ್ ಆಟದಲ್ಲಿ ತೊಡಗಿದ್ದರು. ಸಾರ್ವಜನಿಕ ಸ್ಥಳದಲ್ಲಿ ರಾತ್ರಿಯಿಡೀ ಕಾನೂನುಬಾಹಿರ ಆಟ ನಡೆಯುವ ಬಗ್ಗೆ ಅರಿತ ಅಲ್ಲಿನವರೊಬ್ಬರು ಈ ಬಗ್ಗೆ ಪೊಲೀಸರಿಗೆ ಫೋನ್ ಮಾಡಿದರು. ತಮ್ಮ ವ್ಯಾಪ್ತಿಯಲ್ಲಿ ಅಕ್ರಮ ಆಟ ನಡೆಯುವುದನ್ನು ಸಹಿಸದ ಶಿರಸಿ ಗ್ರಾಮೀಣ ಠಾಣೆ ಪಿಎಸ್‌ಐ ಅಶೋಕ್ ರಾಥೋಡ್ ಅವರು ತನಿಖೆಗಾಗಿ ಅಲ್ಲಿಗೆ ಹೋದರು. ಕೂರ್ಸೆಮನೆ ರಸ್ತೆ ಬದಿ ಅಂದರ್ ಬಾಹರ್ ಆಡುತ್ತಿರುವುದನ್ನು ನೋಡಿ ಪೊಲೀಸ್ ತಂಡದ ಜೊತೆ ಅವರು ದಾಳಿ ಮಾಡಿದರು. ಆಗ, ಕಂಬಳಿ ಮೇಲೆ ಇಸ್ಪಿಟ್ ಎಲೆಗಳು ಹರಡಿ ಬಿದ್ದವು. ಜೊತೆಗೆ 13730ರೂ ಹಣವೂ ಅಲ್ಲಿ ಕಾಣಿಸಿತು. ಚಾರ್ಜಿಂಗ್ ಬ್ಯಾಟರಿ ಬೆಳಕಿನಲ್ಲಿ ಇಸ್ಪಿಟ್ ಆಡುತ್ತಿದ್ದ ಐದು ಜನರನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದರು. ಇಸ್ಪಿಟ್ ಎಲೆ, ಕಂಬಳಿ, ಬ್ಯಾಟರಿಯನ್ನು ವಶಕ್ಕೆಪಡೆದು ಅವರೆಲ್ಲರ ವಿರುದ್ಧ ಪ್ರಕರಣ ದಾಖಲಿಸಿದರು. - [ಪ್ರೀತಿಸಿ ಮದುವೆ ಆದವ ಪತ್ನಿಗೆ ಕತ್ತಿ ಬೀಸಿದ!](https://mobiletime.in/2025/10/a-man-who-married-for-love-stabbed-his-wife-with-a-sword/): ಭಟ್ಕಳದ ಸುಧಾ ನಾಯ್ಕ ಹಾಗೂ ಅಣ್ಣಪ್ಪ ನಾಯ್ಕ ದಾಂಪತ್ಯದಲ್ಲಿ ಬಿರುಕು ಮೂಡಿದೆ. ಸುಧಾ ನಾಯ್ಕ ಅವರಿಗೆ ಅಣ್ಣಪ್ಪ ನಾಯ್ಕ ಅವರು ನಿತ್ಯವೂ ಹಿಂಸೆ ನೀಡುತ್ತಿದ್ದು, ಇದನ್ನು ಪ್ರಶ್ನಿಸಿದ ಕಾರಣ ಕತ್ತಿ ಬೀಸಿದ್ದಾರೆ. ಭಟ್ಕಳದ ಹೊಳಗದ್ದೆ ಕಡೆಯವರಾದ ಸುಧಾ ನಾಯ್ಕ ಅವರು 14 ವರ್ಷಗಳ ಹಿಂದೆ ಬಳಕೆ ಬಳಿಯ ಕೊಚ್ರೆಯ ಅಣ್ಣಪ್ಪ ನಾಯ್ಕ ಅವರನ್ನು ಪ್ರೀತಿಸಿ ಮದುವೆ ಆಗಿದ್ದರು. ಮೊದಲ ಮೂರು ವರ್ಷ ಅವರಿಬ್ಬರು ಸುಂದರ ಸಂಸಾರ ನಡೆಸಿದ್ದರು. ಅದಾದ ನಂತರ ಅಣ್ಣಪ್ಪ ನಾಯ್ಕ ಅವರಿಗೆ ಪತ್ನಿ ಮೇಲೆ ಸಂಶಯ ಶುರುವಾಯಿತು. ಆ ಸಂಶಯ ಹೊಡೆದಾಟಕ್ಕೆ ಕಾರಣವಾಯಿತು. ಸುಧಾ ನಾಯ್ಕ ಅವರ ಮೇಲೆ ಹಲ್ಲೆ ಮಾಡುವುದು ಅಣ್ಣಪ್ಪ ನಾಯ್ಕ ಅವರಿಗೆ ಸಾಮಾನ್ಯ ವಿಷಯವಾಯಿತು. ಮಾನಸಿಕ ಹಿಂಸೆಗೆ ಕೊನೆಯೇ ಇರಲಿಲ್ಲ. ಅಕ್ಟೊಬರ್ 5ರ ಸಂಜೆ ಅಣ್ಣಪ್ಪ ನಾಯ್ಕ ಅವರು ಮಕ್ಕಳಿಗೆ ಹೊಡೆಯುತ್ತಿದ್ದರು. ಅದನ್ನು ಸುಧಾ ನಾಯ್ಕ ಅವರ ಬಳಿ ಸಹಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಮಕ್ಕಳಿಗೆ ಹೊಡೆಯುವುದನ್ನು ತಪ್ಪಿಸಲು ಸುಧಾ ನಾಯ್ಕ ಅವರು ಜೋರಾಗಿ ಬೊಬ್ಬೆ ಹಾಕಿದರು. `ನಿನ್ನದು ದಿನಾ ಹೀಗೆ ಆಯಿತು. ನಾವು ಮನೆ ಬಿಟ್ಟು ಹೋಗುತ್ತೇವೆ’ ಎಂದು ಸುಧಾ ನಾಯ್ಕ ಅವರು ಧೈರ್ಯದಿಂದ ಮಾತನಾಡಿದರು. ಇದೇ ವಿಷಯವಾಗಿ ಅವರು ದೊಡ್ಡದಾಗಿ ಅಬ್ಬರಿಸಿದರು. ಇದರಿಂದ ಅಣ್ಣಪ್ಪ ನಾಯ್ಕ ಅವರ ಸಿಟ್ಟು ನೆತ್ತಿಗೇರಿದ್ದು, ಮನೆಯಲ್ಲಿದ್ದ ಕತ್ತಿ ತೆಗೆದುಕೊಂಡು ಸುಧಾ ನಾಯ್ಕ ಅವರ ಕಡೆ ಬೀಸಿದರು. ಸುಧಾ ನಾಯ್ಕ ಅವರು ತಪ್ಪಿಸಿಕೊಳ್ಳಲು ಯತ್ನಿಸಿದರೂ ಅದು ಸಾಧ್ಯವಾಗಲಿಲ್ಲ. ಪರಿಣಾಮ ಅವರ ಬೆನ್ನಿಗೆ ಗಾಯವಾಯಿತು. ಅಣ್ಣಪ್ಪ ನಾಯ್ಕ ಅವರ ಉಗ್ರ ಅವತಾರ ನೋಡಿದ ಸುಧಾ ನಾಯ್ಕ ಅವರ ಅಣ್ಣನ ಮಗ ರಾಘವೇಂದ್ರ ನಾಯ್ಕ ಇನ್ನಷ್ಟು ಆಕ್ರಮಣ ತಪ್ಪಿಸುವ ಪ್ರಯತ್ನ ಮಾಡಿದರು. ಆದರೆ, ಅದು ಸಾಧ್ಯವಾಗಲಿಲ್ಲ. ಅಣ್ಣಪ್ಪ ನಾಯ್ಕ ಅವರು ಈ ವೇಳೆ ರಾಘವೇಂದ್ರ ನಾಯ್ಕ ಅವರಿಗೂ ಎರಡು ಏಟು ಹೊಡೆದರು. ಅವರ ಕೈ ಹಿಡಿದು ನೋವು ಮಾಡಿದರು. ಬೆರಳಿಗೂ ಗಾಯ ಮಾಡಿದರು. `ಈ ವಿಷಯದ ಬಗ್ಗೆ ಪೊಲೀಸರಿಗೆ ದೂರು ಕೊಟ್ಟರೆ ಕೊಲೆ ಮಾಡುವೆ’ ಎಂದು ಬೆದರಿಸಿದರು. ಅದಾಗಿಯೂ ಸುಧಾ ನಾಯ್ಕ ಅವರು ಹೆದರಲಿಲ್ಲ. ಪತಿ ಕಾಟದ ವಿರುದ್ಧ ಅವರು ಪೊಲೀಸರ ಬಳಿ ವಿವರಿಸಿದರು. ಭಟ್ಕಳ ಪೊಲೀಸರು ಪ್ರಕರಣ ದಾಖಲಿಸಿದ್ದು, ತನಿಖೆ ಶುರು ಮಾಡಿದರು. - [ಶಿರಸಿ | ಗಲ್ಲಿ ಗಲ್ಲಿಗೂ ಕಳ್ಳರು.. ಮನೆ ಮನೆಗೂ ಪೊಲೀಸರು!](https://mobiletime.in/2025/10/sirsi-thieves-in-every-street-police-in-every-house/): ರಾಜ್ಯದ ಎಲ್ಲಡೆ `ಮನೆ ಮನೆಗೂ ಪೊಲೀಸ್’ ಅಭಿಯಾನ ನಡೆಯುತ್ತಿದೆ. ಅದಕ್ಕೆ ವಿರುದ್ಧ ಎಂಬoತೆ ಶಿರಸಿಯಲ್ಲಿ ಗಲ್ಲಿ ಗಲ್ಲಿಯೂ ಕಳ್ಳರ ಕಾಟ ಜೋರಾಗಿದೆ. ಕಳ್ಳರ ಕಾಟದಿಂದ ತಪ್ಪಿಸಿಕೊಳ್ಳುವುದು ಒಂಟಿ ಮನೆ ಮಾಲಕರಿಗೆ ದೊಡ್ಡ ಸವಾಲಾಗಿದೆ. ಕಳೆದ ಕೆಲ ದಿನಗಳಿಂದ ಶಿರಸಿಯಲ್ಲಿ ಕಳ್ಳತನ ಪ್ರಕರಣಗಳು ಹೆಚ್ಚಾಗಿದೆ. ಮನೆಯ ಬೀಗ ಒಡೆದು ಒಳ ನುಗ್ಗುವ ಕಳ್ಳರು ಜೋಪಾನವಾಗಿರಿಸಿಕೊಂಡಿದ್ದ ಚಿನ್ನಾಭರಣ ದೋಚಿ ಪರಾರಿಯಾಗುತ್ತಿದ್ದಾರೆ. ಕಳೆದ ಎರಡು ದಿನದಲ್ಲಿ ಮೂರು ಕಡೆ ಕಳ್ಳರು ತಮ್ಮ ಕೈ ಚಳಕ ಪ್ರದರ್ಶಿಸಿದ್ದಾರೆ. ಮಾರಿಕಾಂಬಾ ನಗರದ ಹಾಲೊಂಡ ಬಳಿಯ ಉದ್ಯಮಿ ಉದಯ ನಾಯ್ಕ ಅವರ ಮನೆಗೆ ಕಳ್ಳರು ಕನ್ನ ಹಾಕಿದ್ದಾರೆ. ಮನೆ ಬಾಗಿಲು ಮುರಿದು ಹಣ ಬಂಗಾರ ಕದ್ದು ಪರಾರಿಯಾಗಿದ್ದಾರೆ. ಲಯನ್ಸ ನಗರದ ಗುತ್ತಿಗೆದಾರ ವೆಂಕಟೇಶ ಆನಂದ ಕಡಿಮನೆ ಅವರ ಮನೆಗೂ ಕಳ್ಳರು ಆಗಮಿಸಿದ್ದು, ಅಲ್ಲಿಯೂ ಬೆಲೆ ಬಾಳುವ ಬಂಗಾರದ ಒಡವೆಗಳನ್ನು ದೋಚಿದ್ದಾರೆ. ಮಾರಿಕಾಂಬಾ ನಗರದ ಶಿಕ್ಷಕಿ ರಮಾ ಗೋವಿಂದ ನಾಯ್ಕ ಅವರು ಸಹ ಕಳ್ಳರ ಕಾಟಕ್ಕೆ ಬೇಸತ್ತು ಪೊಲೀಸರ ನೆರವು ಯಾಚಿಸಿದ್ದಾರೆ. ಶಿಕ್ಷಕಿ ರಮಾ ನಾಯ್ಕ ಅವರು ಅಕ್ಟೊಬರ್ 2ರಂದು ಸಿದ್ದಾಪುರದ ಮನಮನೆಗೆ ಹೊಗಿದ್ದರು. ಅಲ್ಲಿ ಅವರ ರೆಸಾರ್ಟ ಇದ್ದು, ಅಲ್ಲಿ ಹೋಗಿ ಬರುವುದರೊಳಗೆ ಕಳ್ಳರು ಅವರ ಮನೆಗೆ ನುಗ್ಗಿ ಹೊರ ಬಿದ್ದಿದ್ದರು. ಅಕ್ಟೊಬರ್ 5ರಂದು ಅವರು ಮನೆಗೆ ಮರಳಿದಾಗ ಕಳ್ಳತನವಾಗಿರುವುದು ಅರಿವಿಗೆ ಬಂದಿತು. ಮನೆಯ ಬಾಗಿಲು ಭದ್ರಪಡಿಸಿದ್ದರೂ ಕಳ್ಳರು ಅದನ್ನು ಮುರಿದು ಒಳಗೆ ನುಗ್ಗಿದ್ದರು. ರಮಾ ನಾಯ್ಕ ಅವರ ಬೆಡ್ ರೂಮಿನಲ್ಲಿದ್ದ 48 ಸಾವಿರ ರೂ ಹಣ, 7 ಲಕ್ಷ ರೂ ಮೌಲ್ಯದ ಬಂಗಾರದ ಆಭರಣವನ್ನು ಕಳ್ಳರು ದೋಚಿದ್ದರು. ಜೊತೆಗೆ 50 ಸಾವಿರ ರೂ ಮೌಲ್ಯದ ಬೆಳ್ಳಿಯ ತಾಟುಗಳನ್ನು ಅವರು ಒಯ್ದಿದ್ದರು. ಲಯನ್ಸ ನಗರದ 4ನೇ ಕ್ರಾಸಿನಲ್ಲಿರುವ ಸಿವಿಲ್ ಗುತ್ತಿಗೆದಾರ ವೆಂಕಟೇಶ ಕಡೆಮನೆ ಅವರಿಗೂ ಕಳ್ಳರು ಸಾಕಷ್ಟು ಕಾಟ ಕೊಟ್ಟಿದ್ದು, ಅವರು ವೈಕುಂಠ ಸಮಾರಾಧನೆಗೆ ಹೋಗಿ ಬರುವಷ್ಟರಲ್ಲಿ ಇಡೀ ಮನೆ ದೋಚಿದ್ದರು. ಅಕ್ಟೊಬರ್ 4ರಂದು ವೆಂಕಟೇಶ ಕಡೆಮನೆ ಅವರು ಮನೆಗೆ ಬೀಗ ಹಾಕಿ ಕುಮಟಾಗೆ ಹೋಗಿದ್ದರು. ಅಲ್ಲಿನ ಬೋಗ್ರಿಬೈಲಿನಲ್ಲಿ ಪತ್ನಿ ತಂದೆಯ ವೈಕುಂಠ ಸಮಾರಾಧನೆಯಲ್ಲಿ ಭಾಗವಹಿಸಿದ್ದರು. ಅಕ್ಟೊಬರ್ 5ರಂದು ಮರಳಿ ಬಂದಾಗ ಮನೆ ಬಾಗಿಲು ಚೌಕಟ್ಟು ವಿಕಾರವಾಗಿತ್ತು. ಕಳ್ಳರು ಅವರ ಮನೆಯೊಳಗೆ ನುಗ್ಗಿ ಬೆಡ್ ರೂಮಿನಲ್ಲಿದ್ದ ಹಣ ಎಗರಿಸಿದ್ದರು. ಬಟ್ಟೆಗಳನ್ನು ಚಲ್ಲಾಪಿಲ್ಲಿಯಾಗಿಸಿದ್ದರು. 4 ಲಕ್ಷ ರೂ ಹಣ, 3 ಲಕ್ಷದ ಬಂಗಾರದ ಸರ, 2 ಲಕ್ಷದ ಮುತ್ತಿನ ಹಾರ, 1.5 ಲಕ್ಷ ರೂ ಮೌಲ್ಯದ ಉಂಗುರ, 3 ಲಕ್ಷ ರೂ ಮೌಲ್ಯದ ಕಿವಿಯೋಲೆಗಳನ್ನು ಕದ್ದಿದ್ದರು. ಈ ಎಲ್ಲಾ ಕಳ್ಳತನ ಪ್ರಕರಣದಲ್ಲಿಯೂ ಮನೆ ಮಾಲಕರು ಪೊಲೀಸರ ಮೊರೆ ಹೋಗಿದ್ದು, ಪೊಲೀಸರು ಸಹ ಕಳ್ಳರ ಹುಡುಕಾಟಕ್ಕೆ ನಾನಾ ಪ್ರಯತ್ನ ಮಾಡಿದ್ದಾರೆ. - [ಆದಾಯ ದಾಖಲೆ ಹೆಚ್ಚಳ: ವೃದ್ಧೆಗೆ ಅನ್ಯಾಯ!](https://mobiletime.in/2025/10/record-increase-in-income-injustice-for-the-elderly/): ಕುಮಟಾದ ಉಪ್ಪಾರಕೇರಿಯಲ್ಲಿ ವಾಸವಾಗಿರುವ 72ವರ್ಷದ ರಾಧಾ ಆಚಾರಿ ಅವರು ಆದಾಯ ಪ್ರಮಾಣ ಪತ್ರಕ್ಕಾಗಿ ತಹಶೀಲ್ದಾರ್ ಕಚೇರಿಗೆ ಅರ್ಜಿ ಸಲ್ಲಿಸಿದ್ದಾರೆ. ಆದರೆ, ಅವರ ಆದಾಯ ಮಿತಿ ಹೆಚ್ಚಾಗಿರುವ ಕಾರಣ ಪ್ರಮಾಣ ಪತ್ರ ಸಿಕ್ಕಿಲ್ಲ. ಹೀಗಾಗಿ ವೃದ್ಧೆಗೆ ಅನ್ಯಾಯವಾಗಿದೆ ಎಂದು ಜನಸಾಮಾನ್ಯರ ಸಮಾಜ ಕಲ್ಯಾಣ ಕೇಂದ್ರದವರು ದೂರಿದ್ದಾರೆ. `ರಾಧಾ ಆಚಾರಿ ಅವರ ಮಕ್ಕಳಿಗೆ ಮದುವೆಯಾಗಿದೆ. ಮಗ ಪ್ರತ್ಯೇಕವಾಗಿ ವಾಸವಾಗಿದ್ದು, 80 ವರ್ಷದ ಗಂಡನ ಆರೈಕೆಯಲ್ಲಿ ರಾಧಾ ಆಚಾರಿ ಅವರಿದ್ದಾರೆ. ಸರ್ಕಾರದಿಂದ ಸಿಗುವ ಪಡಿತರ ಅಕ್ಕಿ ಹಾಗೂ ಗೃಹಲಕ್ಷ್ಮಿ ಹಣವೇ ಈ ಕುಟುಂಬಕ್ಕೆ ಆಧಾರವಾಗಿದೆ. ವಯೋಸಹಜ ರೋಗದಿಂದ ಬಳಲುತ್ತಿರುವ ಅವರ ಕುಟುಂಬಕ್ಕೆ ಸಂದ್ಯಾ ಸುರಕ್ಷಾ ಯೋಜನೆ ಅಡಿ ಅರ್ಜಿ ಹಾಕಲು ಆದಾಯ ಪ್ರಮಾಣ ಪತ್ರ ಅಗತ್ಯವಿದ್ದು, ಅದು ಸಿಗುತ್ತಿಲ್ಲ’ ಎಂದು ಜನಸಾಮಾನ್ಯರ ಸಮಾಜ ಕಲ್ಯಾಣ ಕೇಂದ್ರದ ಅಧ್ಯಕ್ಷ ಆಗ್ನೇಲ್ ರೋಡ್ರಿಗಸ್ ಅವರು ದೂರಿದ್ದಾರೆ. `ಸಂದ್ಯಾ ಸುರಕ್ಷಾ ಯೋಜನೆ ಅಡಿ ರಾಧಾ ಆಚಾರಿ ಅವರಿಗೆ 1200ರೂ ಸಿಕ್ಕರೆ ಅದು ಅವರ ಕುಟುಂಬಕ್ಕೆ ಆಧಾರವಾಗುತ್ತಿತ್ತು. ಆದರೆ, ಅಧಿಕಾರಿಗಳು ಲಂಚಕ್ಕಾಗಿ ಅವರಿಗೆ ಅನ್ಯಾಯ ಮಾಡಿದ್ದಾರೆ. ಹಿರಿಯ ನಾಗರಿಕರಿಗೆ ಟಾಸ್ಕ್ ಫೋರ್ಸ್ ಸಮಿತಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಧ್ಯಕ್ಷರಾಗಿದ್ದು, ಅಧಿಕಾರಿಗಳ ವಿರುದ್ಧ ಅವರಿಗೆ ದೂರು ನೀಡಲಾಗಿದೆ’ ಎಂದು ಆಗ್ನೇಲ್ ರೋಡ್ರಿಗಸ್ ವಿವರಿಸಿದ್ದಾರೆ. `ಈ ಮೊದಲು ಪಿಂಚಣಿ ವಂಚಿತರಾದವರ ಬಗ್ಗೆ ಸಹ ಜಿಲ್ಲಾಧಿಕಾರಿ ಹಾಗೂ ಮಾನವ ಹಕ್ಕು ಆಯೋಗಕ್ಕೆ ದೂರು ಸಲ್ಲಿಸಲಾಗಿತ್ತು. ಅದಾದ ನಂತರ ಅವರ ಸಮಸ್ಯೆ ಬಗೆಹರಿದಿತ್ತು’ ಎಂಬ ವಿಷಯದ ಬಗ್ಗೆ ಸಾಮಾಜಿಕ ಕಾರ್ಯಕರ್ತ ಸುಧಾಕರ ನಾಯ್ಕ ಅವರು ಗಮನಸೆಳೆದಿದ್ದಾರೆ. - [ಮಹಿಳೆ ಮೈ ಮುಟ್ಟಿದ ಪ್ರಕರಣ: ಸೈಲ್'ಗೆ ಜೈಲ್!](https://mobiletime.in/2025/10/womans-touching-case-sail-goes-to-jail/): ಮಹಿಳೆಯೊಬ್ಬರ ಮೈ ಮುಟ್ಟಿದ ಕಾರವಾರದ ಮನೋಜ ಸೈಲ್’ಗೆ ನ್ಯಾಯಾಲಯ ಜೈಲು ಶಿಕ್ಷೆ ವಿಧಿಸಿದೆ. ಮಾಡಿದ ತಪ್ಪಿಗೆ 8 ಸಾವಿರ ರೂ ದಂಡವನ್ನು ಪಾವತಿಸಲು ಸೂಚಿಸಿದೆ. 2019ರ ಸೆಪ್ಟೆಂಬರ್ 1ರ ರಾತ್ರಿ ಕಾರವಾರದ ಮಾಜಾಳಿಯ ಬಜಾರಿನ ಮನೋಜ ಸೈಲ್ ಮಹಿಳೆಯೊಬ್ಬರ ಮೇಲೆ ಕಣ್ಣು ಹಾಕಿದ್ದರು. ಆ ರಾತ್ರಿ ಮಹಿಳೆ ವಾಸವಿದ್ದ ಮನೆ ಬಳಿ ಬಂದ ಮನೋಜ ಸೈಲ್ ಹಿಂದಿನ ಬಾಗಿಲು ಬಡಿದಿದ್ದರು. ಮಹಿಳೆ ಬಾಗಿಲು ತೆರೆದಾಗ ಅವರ ಕೈ ಹಿಡಿದು ಎಳೆದಿದ್ದರು. ಮಹಿಳೆ ಮೈಮೇಲಿದ್ದ ಬಟ್ಟೆಯನ್ನು ಹರಿದಿದ್ದರು. ಜೊತೆಗೆ ಮಹಿಳೆಗೆ ಗಾಯಪಡಿಸಿ ನೋವುಂಟು ಮಾಡಿದ್ದರು. ಈ ಹಿನ್ನಲೆ ಮಾನಭಂಗಕ್ಕೆ ಯತ್ನಿಸಿದ ಬಗ್ಗೆ ಚಿತ್ತಾಕುಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. 2025ರ ಸೆ 29ರಂದು ಈ ಪ್ರಕರಣ ವಿಚಾರಣೆಗೆ ಬಂದಿತು. ನ್ಯಾಯವಾದಿ ವೆಂಕಟೇಶ ಗೌಡ ಅವರು ಮಹಿಳೆ ಪರ ವಾದ ಮಂಡಿಸಿದರು. ನ್ಯಾಯಾಧೀಶ ಧನರಾಜ ಎಸ್ ಎಂ ಅವರು ಆ ವಾದ ಆಲಿಸಿ ಸಾಕ್ಷಿಗಳ ವಿಚಾರಣೆ ನಡೆಸಿದರು. ಚಿತ್ತಾಕುಲ ಪಿಎಸ್‌ಐ ಪರಶುರಾಮ ಮಿರ್ಚಗಿ, ಪಿಎಸ್‌ಐ ನರಸಿಂಹಲು, ಸಂತೋಷ ನಾಯ್ಕ, ಪೊಲೀಸ್ ಸಿಬ್ಬಂದಿ ರಫಿಕ್ ಮುಲ್ಲಾ, ಶ್ರೀಕಾಂತ ನಾಯ್ಕ, ಆಂಜಿನೇಯ ಎಚ್ ಕೆ, ಗಣೇಶ ನಾಯ್ಕ ಇನ್ನಿತರರು ವಿವಿಧ ದಾಖಲೆಗಳನ್ನು ಹಾಜರುಪಡಿಸಿದರು. ವಿಚಾರಣೆ ನಡೆಸಿದ ನ್ಯಾಯಾಧೀಶ ಧನರಾಜ ಎಸ್ ಎಂ ಅವರು ಆರೋಪಿ ಮನೋಜ ಸೈಲ್’ಗೆ 1 ವರ್ಷ ಜೈಲು ಶಿಕ್ಷೆ ಜೊತೆ 8 ಸಾವಿರ ರೂ ದಂಡ ಪಾವತಿಗೆ ಆದೇಶಿಸಿದರು. ತಪ್ಪಿತಸ್ಥನಿಗೆ ಶಿಕ್ಷೆ ಕೊಡಿಸಲು ಶ್ರಮಿಸಿದ ಅಧೀನ ಅಧಿಕಾರಿ-ಸಿಬ್ಬಂದಿಗೆ ಪೊಲೀಸ್ ಅಧೀಕ್ಷಕ ದೀಪನ ಎಂ ಎನ್, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕೃಷ್ಣಮೂರ್ತಿ, ಜಗದೀಶ ಎಂ, ಡಿವೈಎಸ್ಪಿ ಎಸ್ ವಿ ಗಿರೀಶ ಹಾಗೂ ಸಿಪಿಐ ಪ್ರಕಾಶ ದೇವಾಡಿಗ ಅವರು ಅಭಿನಂದಿಸಿದರು. - [ಸರ್ಕಾರದ ಬಳಿ ಕಾಸಿಲ್ಲ: ಅಧಿಕಾರಿಗಳ ಕಾರಿಗೆ ಇನ್ಸುರೆನ್ಸ ಇಲ್ಲ!](https://mobiletime.in/2025/10/the-government-has-no-money-the-officials-cars-have-no-insurance/): ಖಾಸಗಿ ವಾಹನ ಸವಾರರ ದಾಖಲೆ ಪರಿಶೀಲಿಸುವ ಪೊಲೀಸರು ಸರ್ಕಾರಿ ವಾಹನದ ದಾಖಲೆಗಳ ಬಗ್ಗೆ ಪ್ರಶ್ನಿಸುತ್ತಿಲ್ಲ. ಹೀಗಾಗಿ ಸರ್ಕಾರಿ ವಾಹನಗಳ ದಾಖಲೆ ಸರಿ ಇಲ್ಲದಿದ್ದರೂ ಅದನ್ನು ಕೇಳುವವರಿಲ್ಲ! ಮೊನ್ನೆ ಕುಮಟಾದಲ್ಲಿ ಸಹಾಯಕ ಆಯುಕ್ತ ಶ್ರವಣಕುಮಾರ ಅವರು ಬಳಸುತ್ತಿದ್ದ ಕಾರು ಅಪಘಾತವಾಗಿದೆ. ಅಪಘಾತದ ವೇಳೆ ಆ ಕಾರಿನಲ್ಲಿ ಹಿರಿಯ ಅಧಿಕಾರಿಗಳಿರಲಿಲ್ಲ. ಕಾರಿನಲ್ಲಿದ್ದ ಸರ್ಕಾರಿ ಸಿಬ್ಬಂದಿ ಹಾಗೂ ಚಾಲಕರಿಗೆ ಅಪಘಾತದಿಂದ ದೊಟ್ಟ ಪೆಟ್ಟಾಗಲಿಲ್ಲ. ಆದರೆ, ಅಪಘಾತದ ಅವಧಿಯಲ್ಲಿ ಆ ಕಾರಿಗೆ ಇನ್ಸುರೆನ್ಸ ಸಹ ಇರಲಿಲ್ಲ! ಅಕ್ಟೊಬರ್ 4ರಂದು ಸಹಾಯಕ ಆಯುಕ್ತ ಶ್ರವಣಕುಮಾರ ಅವರ ಕಾರಿನ ಚಾಲಕ ರಜೆಯಲ್ಲಿದ್ದರು. ಹೀಗಾಗಿ ತಹಶೀಲ್ದಾರ್ ಕಚೇರಿಯ ಚಾಲಕರನ್ನು ಸಹಾಯಕ ಆಯುಕ್ತರು ತಮ್ಮ ಕಾರಿಗೆ ನೇಮಿಸಿದ್ದರು. ಆ ದಿನ ವೇಗವಾಗಿ ಬಂದ ಶ್ರೀಕುಮಾರ ಬಸ್ಸು ಸಹಾಯಕ ಆಯುಕ್ತರು ಬಳಸುವ ಕಾರಿಗೆ ಗುದ್ದಿತು. ಪರಿಣಾಮ ಕಾರಿನ ಜೊತೆ ಬಸ್ಸು ಜಖಂ ಆಯಿತು. ಕಾರಿನಲ್ಲಿದ್ದ ಸರ್ಕಾರಿ ಸಿಬ್ಬಂದಿಯೊಬ್ಬರ ಬೆನ್ನಿಗೆ ಸಣ್ಣ ಪ್ರಮಾಣದಲ್ಲಿ ನೋವಾಗಿದ್ದು ಬಿಟ್ಟರೆ ಬೇರೆ ಸಮಸ್ಯೆ ಆಗಲಿಲ್ಲ. ದುರಂತ ನಡೆದಿದ್ದರೂ ಕಾನೂನಾತ್ಮಕವಾಗಿ ಪರಿಹಾರಪಡೆಯಲು ಸರ್ಕಾರಿ ಕಾರಿಗೆ ವಿಮೆಯೂ ಇರಲಿಲ್ಲ! ಕುಮಟಾ ಸಹಾಯಕ ಆಯುಕ್ತರಿಗೆ ನೀಡಲಾದ ಆ ಕಾರು ಮೂಲತಃ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯದ್ದಾಗಿದೆ. ಹೀಗಾಗಿ ಈ ಕಾರಿನ ಎಲ್ಲಾ ಕಡತಗಳು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಕಚೇರಿಯಲ್ಲಿಯೇ ಇವೆ. ಹೀಗಾಗಿ ವಿಮಾ ಅವಧಿ ಮುಗಿದ ಬಗ್ಗೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದಲೇ ಕರ್ನಾಟಕ ಸರ್ಕಾರದ ವಿಮಾ ಇಲಾಖೆಗೆ ಪತ್ರ ರವಾನೆಯಾಗಬೇಕಿತ್ತು. ಮಾತೃ ಇಲಾಖೆಯಿಂದಲೇ ಕಾರಿನ ವಿಮಾ ಕಂತು ಪಾವತಿ ಆಗಬೇಕಿದ್ದು, ಕಾರನ್ನು ಉಪವಿಭಾಗಾಧಿಕಾರಿಗಳಿಗೆ ನೀಡಿದ ಆ ಇಲಾಖೆ ಅಧಿಕಾರಿಗಳು ವಿಮೆ ಬಗ್ಗೆ ಯೋಚಿಸಿಲ್ಲ. ಹೀಗಾಗಿ ಸಕಾಲದಲ್ಲಿ ಸರ್ಕಾರ ವಿಮಾ ಕಂತು ಪಾವತಿಸಿದ ಕಾರಣ ಅಪಘಾತದ ಅವಧಿಯಲ್ಲಿ ವಿಮೆ ಚಾಲನೆಯಲ್ಲಿರಲಿಲ್ಲ. ವಿಮಾ ಕಂತು ಪಾವತಿ ಸಮಸ್ಯೆ ಬಗ್ಗೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಧಿಕಾರಿ ಶಿವಕ್ಕ ಮಾದರ್ ಅವರಿಗೆ ಫೋನ್ ಮಾಡಿದರೂ ಅವರು ಕರೆ ಸ್ವೀಕರಿಸಿಲ್ಲ. ತಮ್ಮ ಇಲಾಖೆಯ ವಾಹನದ ಕಾರಿನ ವಿಮಾ ಅವಧಿ ಮುಗಿದಿರುವ ವಿಷಯ ಅವರಿಗೂ ಅರಿವಿರುವ ಹಾಗಿಲ್ಲ. ಅಪಘಾತಕ್ಕೆ ಕಾರಣವಾದ ಶ್ರೀಕುಮಾರ ಬಸ್ಸಿನ ದಾಖಲೆಗಳು ಸರಿಯಾಗಿದ್ದ ಕಾರಣ ಬಸ್ಸಿನ ವಿಮೆ ಆಧಾರದಲ್ಲಿ ಸರ್ಕಾರಿ ಕಾರಿನ ದುರಸ್ಥಿ ನಡೆಯಲಿದ್ದು, ಪೊಲೀಸ್ ವಶದಲ್ಲಿರುವ ವಾಹನ ಈ ದಿನ ಬಿಡುಗಡೆಯಾಗುವ ಸಾಧ್ಯತೆಯಿದೆ. - [ಸಹಕಾರಿ ಸರಸ್ವತಿಗೆ ಸಿಗಬೇಕು ಡಿಸಿಸಿ ನಿರ್ದೇಶಕ ಸ್ಥಾನ](https://mobiletime.in/2025/10/saraswati-of-cooperatives-should-get-the-post-of-dcc-director/): ಕೆಡಿಸಿಸಿ ಬ್ಯಾಂಕಿನ 105 ವರ್ಷದ ಇತಿಹಾಸದಲ್ಲಿ ಈವರೆಗೆ ಒಬ್ಬರು ಮಹಿಳಾ ನಿರ್ದೇಶಕರಾಗಿಲ್ಲ. ಶತಮಾನದ ಅವಧಿಯಲ್ಲಿ ಈ ಬ್ಯಾಂಕು ಒಮ್ಮೆಯೂ ಮಹಿಳಾ ನಿರ್ದೇಶಕರನ್ನು ನೋಡಿಲ್ಲ! ಎಲ್ಲಡೆ ಮಹಿಳೆಯರಿಗೆ ಶೇ 33ರ ಮೀಸಲಾತಿ ಬಗ್ಗೆ ಚರ್ಚೆ ನಡೆಯುತ್ತಿದೆ. ಆದರೆ, ಬ್ಯಾಂಕಿoಗ್ ವಲಯದಲ್ಲಿ ಮಹಿಳಾ ಮೀಸಲಾತಿ ಎಂಬುದು ದೊಡ್ಡ ಪ್ರಮಾಣದಲ್ಲಿಲ್ಲ. ಹೀಗಾಗಿ ಕೆಡಿಸಿಸಿ ಬ್ಯಾಂಕಿನ ನಿರ್ದೇಶಕ ಮಂಡಳಿಯಲ್ಲಿ ಈವರೆಗೂ ಮಹಿಳೆಯರು ಮುಖ್ಯ ವಾಹಿನಿಗೆ ಬಂದಿಲ್ಲ. ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಕೆಡಿಸಿಸಿ ಬ್ಯಾಂಕಿನ ನಿರ್ದೇಶಕ ಸ್ಥಾನಕ್ಕೆ ಸರಸ್ವತಿ ಎನ್ ರವಿ ಅವರು ಆಸಕ್ತಿಹೊಂದಿದ್ದಾರೆ. ಬ್ಯಾಂಕಿನ ಪ್ರತಿನಿಧಿಯಾಗುವುದಕ್ಕಾಗಿ ಅವರು ಹಿರಿಯ ಸಹಕಾರಿಗಳ ಆಶೀರ್ವಾದದೊಂದಿಗೆ ಓಡಾಟ ನಡೆಸಿದ್ದಾರೆ. ಸಹಕಾರಿ ಕ್ಷೇತ್ರದಲ್ಲಿನ ಅನುಭವವೇ ಸರಸ್ವತಿ ಎನ್ ರವಿ ಅವರಿಗೆ ಶ್ರೀರಕ್ಷೆ. ಅವರ ಸೌಮ್ಯ ಸ್ವಭಾವ, ಅನ್ಯಾಯದ ವಿರುದ್ಧ ಹೋರಾಡುವ ಹಠ, ಪಾರದರ್ಶಕ ಆಡಳಿತದ ಮನಸ್ಸು ಹಾಗೂ ಉನ್ನತ ವಿದ್ಯಾರ್ಹತೆ ಸಹಕಾರಿ ಕ್ಷೇತ್ರದ ಯಶಸ್ಸಿಗೆ ಸಹಕಾರಿ. ಇದೇ ಆಧಾರದಲ್ಲಿ ಸರಸ್ವತಿ ಎನ್ ರವಿ ಅವರು ಪ್ರಜ್ಞಾವಂತ ಮತದಾರರ ಮನವೊಲೈಸುವ ಕೆಲಸ ಮಾಡುತ್ತಿದ್ದಾರೆ. ಹಿರಿಯ ಸಹಕಾರಿಗಳ ಸಹಕಾರದಲ್ಲಿ ಅವರು ಮತ ಯಾಚನೆ ಶುರು ಮಾಡಿದ್ದು, ಪ್ರಚಾರದ ಅವಧಿಯಲ್ಲಿ ಉತ್ತಮ ಸ್ಪಂದನೆ ಸಿಗುತ್ತಿದೆ. ಈಗಾಗಲೇ ಜಿಲ್ಲೆಯ ಎಲ್ಲಾ ಕಡೆ ಓಡಾಡಿರುವ ಅವರು ಒಂದು ಸುತ್ತಿನ ಪ್ರಚಾರ ಮುಗಿಸಿದ್ದಾರೆ. `ಸಹಕಾರಿ ಕ್ಷೇತ್ರ ಶುದ್ಧವಾಗಿರಬೇಕು ಎಂದರೆ ಮತದಾರರ ಮನಸ್ಸು ವಿಶಾಲವಾಗಿರಬೇಕು’ ಎಂದು ಅವರು ಅನೇಕರಿಗೆ ಮನವರಿಕೆ ಮಾಡಿದ್ದಾರೆ. ಸಹಕಾರಿ ಕ್ಷೇತ್ರದ ಭವಿಷ್ಯ ಚಿಂತನೆಗಳನ್ನು ಅವರು ಮತದಾರರಿಗೆ ತಿಳಿಸಿ ಅವರ ಮನ ಗೆಲ್ಲುತ್ತಿದ್ದಾರೆ. 20 ವರ್ಷದ ಸಾಮಾಜಿಕ ಜೀವನದ ಜೊತೆ 11 ವರ್ಷದ ಸಹಕಾರಿ ರಂಗ ಸರಸ್ವತಿ ಎನ್ ರವಿ ಅವರ ಗೆಲುವು ಸುಲಭವಾಗಿಸುವ ಸಾಧ್ಯತೆಗಳಿವೆ. `ಸೊಸೈಟಿಗಳಲ್ಲಿ ಸಾಲಪಡೆಯುವುದರಿಂದಹಿಡಿದು ಅಲ್ಲಿ ಕೆಲಸ ಮಾಡುವ ಸಿಬ್ಬಂದಿಗಳವರೆಗೆ ಸಾವಿರಾರು ಸಮಸ್ಯೆಗಳಿವೆ. ಅಂಥ ಸಮಸ್ಯೆಗಳನ್ನು ಸಮರ್ಥವಾಗಿ ನಿಭಾಯಿಸಲು ಕೆಡಿಸಿಸಿ ಬ್ಯಾಂಕಿಗೆ ಉತ್ತಮ ನಿರ್ದೇಶಕ ಮಂಡಳಿ ಅಗತ್ಯವಿದೆ. ಸರ್ವರ ಸಹಕಾರ ಬಯಸಿ ನಾನು ಕೆಡಿಸಿಸಿ ಬ್ಯಾಂಕಿನ ಚುನಾವಣೆಗೆ ಸ್ಪರ್ಧಿಸುತ್ತಿದ್ದು, ಇಷ್ಟು ವರ್ಷಗಳ ಕಾಲ ನನ್ನನ್ನು ನೋಡಿದ ಮತದಾರರು ಈ ಚುನಾವಣೆ ಮೂಲಕ ಕೆಡಿಸಿಸಿ ಬ್ಯಾಂಕಿಗೆ ಮಹಿಳಾ ನಿರ್ದೇಶಕರನ್ನು ಆರಿಸುವ ವಿಶ್ವಾಸವಿದೆ’ ಎಂದು ಸರಸ್ವತಿ ಎನ್ ರವಿ ಅವರು ಪ್ರತಿಕ್ರಿಯಿಸಿದ್ದಾರೆ. - [2025 ಅಕ್ಟೊಬರ್ 06ರ ದಿನ ಭವಿಷ್ಯ](https://mobiletime.in/2025/10/2025-october-06-day-prediction/): ಮೇಷ ರಾಶಿ: ಕೆಲಸದ ವಿಷಯದಲ್ಲಿ ತೊಡಕು ಆಗಲಿದೆ. ಹೆಚ್ಚಿನ ಶ್ರಮಪಡೆಬೇಡಿ. ಅಗತ್ಯವಿದ್ದಾಗ ವಿರಾಮಪಡೆಯಿರಿ. ಹಣಕಾಸು ವಿಷಯದಲ್ಲಿ ಎಚ್ಚರಿಕೆವಹಿಸಿ. ವೃಷಭ ರಾಶಿ: ಉದ್ಯೋಗ ಸ್ಪರ್ಧೆ ಏರ್ಪಡಲಿದೆ. ಕುಟುಂಬದಲ್ಲಿ ಸಂತೋಷ ವಾತಾವರಣ ಕಾಣಲಿದೆ. ಆರೋಗ್ಯದ ವಿಷಯದಲ್ಲಿ ಗಮನವಿರಲಿ. ಮಿಥುನ ರಾಶಿ: ಕೆಲಸ ಮಾಡಿದ ಶ್ರಮ ಫಲ ಕೊಡಲಿದೆ. ಜನರಿಂದ ಗೌರವ ಸಿಗಲಿದೆ. ಹೂಡಿಕೆ ವಿಷಯದಲ್ಲಿ ಲಾಭ ಸಿಗಲಿದೆ. ಕರ್ಕ ರಾಶಿ: ಆರೋಗ್ಯಕರ ಜೀವನಕ್ಕಾಗಿ ತರಕಾರಿ ಸೇವನೆ ಮಾಡಿ. ಹೊಸ ಸಂಪರ್ಕಗಳು ಪ್ರಗತಿಯ ಕಡೆ ಕರೆದೊಯ್ಯುತ್ತವೆ. ಸಿಂಹ ರಾಶಿ: ವ್ಯಾಪಾರ-ವ್ಯವಹಾರದಲ್ಲಿ ಏಳಿಗೆ ಆಗಲಿದೆ. ಕೆಲಸದಲ್ಲಿ ಶ್ರದ್ಧೆ ಅಗತ್ಯ. ಮನಶಾಂತಿಗೆ ಧ್ಯಾನ ಮಾಡಿ. ಕನ್ಯಾ ರಾಶಿ: ನಿಮಗೆ ಈ ದಿನ ಅದೃಷ್ಟ ಚನ್ನಾಗಿರಲಿದೆ. ಕೆಲಸದ ವಿಷಯದಲ್ಲಿ ತಾಳ್ಮೆ ಅಗತ್ಯ. ತುಲಾ ರಾಶಿ: ಶತ್ರುಗಳ ಬಗ್ಗೆ ಜಾಗೃತರಾಗಿರಿ. ಪ್ರಯಾಣಕ್ಕೆ ಒಳ್ಳೆಯ ದಿನವಲ್ಲ. ಸಂಜೆ ವೇಳೆ ಪರಿಸ್ಥಿತಿ ಬದಲಾಗಲಿದೆ. ವೃಶ್ಚಿಕ ರಾಶಿ: ನಿರುದ್ಯೋಗಗಳಿಗೆ ಶುಭ ಸುದ್ದಿ ಸಿಗಲಿದೆ. ಹಣದ ಆದಾಯ ವೃದ್ಧಿ ಆಗಲಿದೆ. ಶನಿ ದೇವರ ಅನುಗ್ರಹಕ್ಕೆ ಪ್ರಾರ್ಥಿಸಿ. ಧನು ರಾಶಿ: ಸಮಾಜಿಕ ಕಾರ್ಯಗಳಲ್ಲಿ ಯಶಸ್ಸು ಸಿಗಲಿದೆ. ನಿಮ್ಮ ಗೌರವ ಹೆಚ್ಚಾಗುತ್ತದೆ. ಆರೋಗ್ಯ ಉತ್ತಮವಾಗಿರಲಿದೆ. ಮಕರ ರಾಶಿ: ಈ ದಿನ ನಿಮಗೆ ಒಳ್ಳೆಯ ಅವಕಾಶಗಳು ಸಿಗಲಿದೆ. ಹೊಸ ಪರಿಚಯಗಳಿಂದ ಜೀವನದಲ್ಲಿ ಸಂತೋಷಕರ ವಾತಾವರಣ ಮೂಡಲಿದೆ. ಕುಂಭ ರಾಶಿ: ವಾದ-ವಿವಾದಗಳಿಂದ ದೂರವಿರಿ. ನಿಮ್ಮ ಪ್ರಯತ್ನಗಳು ಫಲ ಕೊಡಲಿದೆ. ವ್ಯವಹಾರ ಉತ್ತಮವಾಗಿರಲಿದೆ. ಮೀನ ರಾಶಿ: ಶತ್ರುಗಳ ಸಮಸ್ಯೆ ದೂರವಾಗಲಿದೆ. ಹೂಡಿಕೆಗೆ ಯೋಗ್ಯ ಸಮಯ. ಯಶಸ್ಸಿಗಾಗಿ ಶ್ರಮ ಅಗತ್ಯ. - [ಸ್ಕೂಟಿಗೆ ಗುದ್ದಿದ ಬಸ್ಸು: ಸ್ಥಳದಲ್ಲಿಯೇ ಸವಾರ ಸಾವು!](https://mobiletime.in/2025/10/bus-hits-a-scooty-rider-dies-on-the-spot/): ಭಟ್ಕಳದಲ್ಲಿ ನಿಧಾನವಾಗಿ ಚಲಿಸುತ್ತಿದ್ದ ಸ್ಕೂಟಿಗೆ ವೇಗವಾಗಿ ಬಂದ ಬಸ್ಸು ಡಿಕ್ಕಿ ಹೊಡೆದಿದೆ. ಅದೇ ಬಸ್ಸಿನ ಚಕ್ರಕ್ಕೆ ಸಿಲುಕಿ ಸ್ಕೂಟಿ ಸವಾರ ಸುಂದರ ಆಚಾರಿ ಅವರು ಸಾವನಪ್ಪಿದ್ದಾರೆ. ಅಕ್ಟೊಬರ್ 5ರಂದು ಭಟ್ಕಳ ಕೆಬಿ ರಸ್ತೆಯ ಆನಂದ ಮಾಧವ ನಾಯ್ಕ ಅವರು ಕುಂದಾಪುರದಿoದ ಭಟ್ಕಳದ ಕಡೆ ಬಸ್ಸು ಓಡಿಸಿಕೊಂಡು ಬರುತ್ತಿದ್ದರು. ಮುಟ್ಟಳ್ಳಿ ಬೈಪಾಸ್ ಹತ್ತಿರ ಸುಂದರ ಆಚಾರಿ ಅವರು ಸ್ಕೂಟಿ ಓಡಿಸಿಕೊಂಡು ಹೋಗುತ್ತಿದ್ದರು. ವೇಗವಾಗಿ ಬಂದ ಬಸ್ಸು ಸ್ಕೂಟಿಗೆ ಡಿಕ್ಕಿ ಹೊಡೆಯಿತು. ಪರಿಣಾಮ ಸುಂದರ ಆಚಾರಿ ಅವರು ನೆಲಕ್ಕೆ ಬಿದ್ದರು. ಆಗ, ಬಸ್ಸಿನ ಹಿಂದಿನ ಚಕ್ರ ಸುಂದರ ಆಚಾರಿ ಅವರ ತಲೆಮೇಲೆ ಹತ್ತಿದ್ದು, ಹೆಲ್ಮೆಟ್ ಒಡೆಯಿತು. ತಲೆಯಿಂದ ರಕ್ತ ಚಿಮ್ಮಿ ಅವರು ಸಾವನಪ್ಪಿದರು. ಮುಂಡಳ್ಳಿಯ ಸಿವಿಲ್ ಗುತ್ತಿಗೆದಾರ ಗುರುರಾಜ ಆಚಾರಿ ಅವರು ಈ ಬಗ್ಗೆ ಭಟ್ಕಳ ಪೊಲೀಸರಿಗೆ ಮಾಹಿತಿ ನೀಡಿ, ಪ್ರಕರಣ ದಾಖಲಿಸಿದರು. - [ಮತ್ತೊಂದು ಸರಗಳ್ಳತನ: ಹೊನ್ನಾವರದಲ್ಲಿ ಕಳ್ಳರ ಕಾಟ!](https://mobiletime.in/2025/10/another-chain-robbery-thieves-on-the-loose-in-honnavar/): ಹೊನ್ನಾವರದ ಮುತೂಡ ಫೈನಾನ್ಸಿನಿಂದ ಚಿನ್ನ ಬಿಡಿಸಿಕೊಂಡು ಮನೆಗೆ ಹೊರಟಿದ್ದ ಮಹಿಳೆಯ ಬ್ಯಾಗ್ ಕಳ್ಳತನವಾಗಿದೆ. ಚಿನ್ನಾಭರಣಗಳ ಜೊತೆ ಬ್ಯಾಗಿನಲ್ಲಿದ್ದ ಹಣವೂ ಕಳ್ಳರ ಪಾಲಾಗಿದೆ. ಹಳದಿಪುರದ ಬನ್ಸಾಪ್ ಶಾರಿಕ್ ಶೇಖ್ (28) ಅವರು ಅಕ್ಟೊಬರ್ 4ರ ಸಂಜೆ ಮುತೂಡ್ ಫೈನಾನ್ಸಿಗೆ ಹೋಗಿದ್ದರು. ಅಲ್ಲಿಂದ ಚಿನ್ನ ಬಿಡಿಸಿಕೊಂಡು ಮನೆ ಕಡೆ ಹೊರಟಿದ್ದರು. ಶರಾವತಿ ಸರ್ಕಲಿನಲ್ಲಿ ಬಸ್ಸಿಗಾಗಿ ಅವರು ಕಾಯುತ್ತಿದ್ದು, ಬಸ್ಸು ಬಂದ ನಂತರ ಅದನ್ನು ಏರಿದರು. ಬಸ್ಸಿನಲ್ಲಿ ಅವರು ತಮ್ಮ ಬ್ಯಾಗ್ ನೋಡಿದಾಗ ಅದರ ಜಿಪ್ ತೆರೆದಿತ್ತು. ಬ್ಯಾಗಿನ ಒಳಗೆ ಕೈ ಹಾಕಿ ನೋಡಿದಾಗ ಅದರಲ್ಲಿ ಪರ್ಸ ಇರಲಿಲ್ಲ. ಚಿನ್ನ ಸಹ ಕಾಣಲಿಲ್ಲ. ಬಸ್ಸಿನ ಒಳಗೆ ಪೂರ್ತಿಯಾಗಿ ಅವರು ಹುಡುಕಾಟ ನಡೆಸಿದ್ದು, ಚಿನ್ನ ಸಿಗಲಿಲ್ಲ. 80 ಸಾವಿರ ರೂ ಮೌಲ್ಯದ ಬಂಗಾರದ ಚೈನು, 8 ಸಾವಿರದ ಕಿವಿಯ ರಿಂಗು ಹಾಗೂ 8 ಸಾವಿರ ರೂ ನಗದು ಕಳ್ಳತನವಾಗಿರುವ ಬಗ್ಗೆ ಅವರು ಪೊಲೀಸ್ ದೂರು ನೀಡಿದರು. ನಿನ್ನೆ ಸಹ ಹೊನ್ನಾವರದಲ್ಲಿ ಸರಗಳ್ಳತನ ನಡೆದಿದ್ದು, ಆ ಬಗ್ಗೆಯೂ ಮಹಿಳೆಯೊಬ್ಬರು ಪೊಲೀಸರ ಮೊರೆ ಹೋಗಿದ್ದರು. - [ಕಾರಿಗೆ ಗುದ್ದಿದ ಬೈಕು: ಸಹಸವಾರ ಸಾವು!](https://mobiletime.in/2025/10/bike-hits-car-rider-dies/): ದಾಂಡೇಲಿಯಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಹಳಿಯಾಳದ ಕಟ್ಟಡ ಕಾರ್ಮಿಕರೊಬ್ಬರು ಸಾವನಪ್ಪಿದ್ದಾರೆ. ತಿರುವಿನಿಂದ ಕೂಡಿದ ರಸ್ತೆಯಲ್ಲಿ ಬೈಕು ಹಾಗೂ ಕಾರಿನ ನಡುವೆ ಅಪಘಾತ ನಡೆದಿದೆ. ಹಳಿಯಾಳ ಖಾಮರೊಳ್ಳಿಯಲ್ಲಿ ಗೌಂಡಿ ಕೆಲಸ ಮಾಡುವ ಅಕ್ಷಯ ಪುಂಡಳಿಕ ಧಾರವಾಡಕರ (24) ಅವರು ಅದೇ ಊರಿನ ಗೌಂಡಿ ಸೋಮನಾಥ ಮಲ್ಲೇಶ ಡಿಗಿ (30) ಅವರ ಜೊತೆ ಬೈಕಿನಲ್ಲಿ ಸಂಚರಿಸುತ್ತಿದ್ದರು. ಅಕ್ಟೊಬರ್ 4ರಂದು ಹಳಿಯಾಳದಿಂದ ದಾಂಡೇಲಿ ಕಡೆ ಅಕ್ಷಯ ಧಾರವಾಡಕರ್ ಅವರು ಹೊರಟಿದ್ದರು. ಅವರ ಬೈಕಿನ ವೇಗ ಎಂದಿಗಿAತ ಜಾಸ್ತಿಯಾಗಿದ್ದು, ತಿರುವುಗಳಿಂದ ಕೂಡಿದ ರಸ್ತೆಯಲ್ಲಿ ಸಹ ಬೈಕಿನ ವೇಗ ತಗ್ಗಲಿಲ್ಲ. ಇದೇ ವೇಳೆ ದಾಂಡೇಲಿಯಿ0ದ ಹಳಿಯಾಳದ ಕಡೆ ಇಕೋ ಕಾರು ಸಂಚರಿಸುತ್ತಿದ್ದು, ರಸ್ತೆಯ ಬಲ ಬದಿಗೆ ಬಂದ ಬೈಕು ಆ ಕಾರಿಗೆ ಡಿಕ್ಕಿ ಹೊಡೆಯಿತು. ಪರಿಣಾಮ ಅಕ್ಷಯ ಧಾರವಾಡಕರ ಅವರ ಕೈ-ಕಾಲಿಗೆ ಪೆಟ್ಟಾಯಿತು. ತೊಡೆಯ ಬಳಿಯೂ ಅವರಿಗೆ ಗಾಯವಾಯಿತು. ಅವರ ಬೈಕಿನಲ್ಲಿ ಹಿಂದೆ ಕೂತಿದ್ದ ಸೋಮನಾಥ ಡಿಗಿ ಅವರ ತಲೆಗೆ ಪೆಟ್ಟಾಗಿತ್ತು. ಹತ್ತಿರ ಹೋಗಿ ನೋಡಿದಾಗ ಸೋಮನಾಥ ಡಿಗಿ ಅವರ ತೊಡೆಗೆ ಆದ ಪೆಟ್ಟಿನಿಂದ ಅವರು ಅಲ್ಲಿಯೇ ಸಾವನಪ್ಪಿದ್ದರು. ತುಮಕೂರಿನ ಕಾಂತರಾಜ ಅವರು ಈ ಅಪಘಾತ ನೋಡಿದ್ದು, ಅವರು ದಾಂಡೇಲಿ ಪೊಲೀಸರಿಗೆ ಮಾಹಿತಿ ನೀಡಿದರು. ವೇಗವಾಗಿ ಬೈಕ್ ಓಡಿಸಿದ ಅಕ್ಷಯ ಧಾರವಾಡಕರ್ ವಿರುದ್ಧ ದಾಂಡೇಲಿ ಪೊಲೀಸರು ಪ್ರಕರಣ ದಾಖಲಿಸಿ, ಕಾನೂನು ಕ್ರಮ ಜರುಗಿಸಿದರು. - [ವ್ಯಸನದ ವಿರುದ್ಧ ಹೋರಾಟ: ಕೈ ಮುಗಿದರೂ ಕೇಳಲಿಲ್ಲ.. ಕಾಲಿಗೆ ಬಿದ್ದರೂ ಕ್ಷಮಿಸಲಿಲ್ಲ!](https://mobiletime.in/2025/10/even-though-the-hand-was-exhausted-they-didnt-listen-even-though-they-fell-at-the-feet-they-didnt-forgive/) - [ಮಾಲಕನ ಹಪಾಹಪಿತನಕ್ಕೆ ಕಾರ್ಮಿಕ ಸಾವು!](https://mobiletime.in/2025/10/worker-dies-due-to-employers-malice/): ಮುಂಡಗೋಡ ಬಸ್ ನಿಲ್ದಾಣ ಎದುರು ಅನ್ನದಾತ ಅಗ್ರೋ ಕೆಮಿಕಲ್ಸ್ ಅಂಗಡಿ ಮಾಲಕ ಮೀರಸಾಬ ಜಮಾದಾರ್ ಅವರ ಹಪಾಹಪಿತನಕ್ಕೆ ಹಮಾಲಿ ಕೆಲಸ ಮಾಡುವ ದಿವಾನಸಾಬ್ ಗನ್ನುಮಿಯಾ ಅವರು ಸಾವನಪ್ಪಿದ್ದಾರೆ. ಧಾರವಾಡ ಮೂಲದ ಮೀರಸಾಬ ಜಮಾದಾರ್ ಅವರು ಸದ್ಯ ಮುಂಡಗೋಡು ಕೆಎಚ್‌ಬಿ ಕಾಲೋನಿಯಲ್ಲಿ ವಾಸವಾಗಿದ್ದಾರೆ. ಅವರು ತಡರಾತ್ರಿಯವರೆಗೂ ಹಮಾಲಿಗಳನ್ನು ದುಡಿಸುತ್ತಾರೆ. ಹಮಾಲಿ ಕೆಲಸ ಮಾಡುವವರು ತಮಗೆ ಸುಸ್ತಾದ ಬಗ್ಗೆ ತಿಳಿಸಿದರೂ ಅದಕ್ಕೆ ಅವಕಾಶ ಕೊಡದೇ ದುಡಿಸಿಕೊಳ್ಳುತ್ತಾರೆ. ಸೆಪ್ಟೆಂಬರ್ 29ರ ರಾತ್ರಿ ಮುಂಡಗೋಡಿನ ದೇಶಪಾಂಡೆ ನಗರದ ರುಸ್ತುಮಾಶಾ ಬಾಬಾಸಾಬ್ ಹಾಗೂ ಕೊಪ್ಪದ ಓಣಿಯ ದಿವಾನಸಾಬ್ ಗನ್ನುಮಿಯಾ ಅವರನ್ನು ರಾತ್ರಿ 11.45ರವರೆಗೂ ಮೀರಸಾಬ ಜಮಾದಾರ್ ಅವರು ದುಡಿಸಿದ್ದಾರೆ. ಅದರ ಪರಿಣಾಮ ಕೆಲಸ ಮಾಡುತ್ತಲೇ ಆಯಾಸಗೊಂಡಿದ್ದ ದಿವಾನಸಾಬ್ ಗನ್ನುಮಿಯಾ ಅವರು ಕುಸಿದು ಬಿದ್ದು ಸಾವನಪ್ಪಿದ್ದಾರೆ. ಮೀರಸಾಬ ಜಮಾದಾರ್ ಅವರು ಗೊಬ್ಬರ ಅಂಗಡಿ ಮಾಲಕರಾಗಿದ್ದು, ಹಾವೇರಿಯ ಪ್ರಶಾಂತ ಅರಳೇಶ್ವರ ಅವರ ಟಾಕ್ಟರಿನ ಮೂಲಕ ಗೊಬ್ಬರ ತರಿಸಿದ್ದರು. ಅದನ್ನು ಕಾಲಿ ಮಾಡಲು ದಿವಾನಸಾಬ್ ಗನ್ನುಮಿಯಾ ಹಾಗೂ ರುಸ್ತುಮಾಶಾ ಬಾಬಾಸಾಬ್ ಅವರಿಗೆ ವಹಿಸಿದ್ದರು. ರಾತ್ರಿ 11.45 ಆಗಿದ್ದರಿಂದ `ನಾಳೆ ಎಲ್ಲಾ ಗೊಬ್ಬರ ಖಾಲಿ ಮಾಡುತ್ತೇವೆ’ ಎಂದರೂ ಮೀರಸಾಬ ಜಮಾದಾರ್ ಒಪ್ಪಿರಲಿಲ್ಲ. ಟಾಕ್ಟರ್ ಚಾಲಕ ಪ್ರಶಾಂತ ಅರಳೇಶ್ವರ ಸಹ `ನಾಳೆ ಟಾಕ್ಟರಿಗೆ ಬೇರೆ ಕೆಲಸವಿದೆ. ಈಗಲೇ ಖಾಲಿ ಮಾಡಿ’ ಎಂದು ಒತ್ತಾಯಿಸಿದ್ದರು. ದಿನವಿಡೀ ದುಡಿದು ದಣಿದಿದ್ದರೂ ಆ ಇಬ್ಬರು ರಾತ್ರಿಯೂ ಹಮಾಲಿ ಕೆಲಸ ಮಾಡುತ್ತಿದ್ದರು. ಆದರೆ, ಗೊಬ್ಬರ ಖಾಲಿ ಮಾಡಲು ಬೇಕಿರುವ ಕನಿಷ್ಟ ಉಪಕರಣಗಳನ್ನು ಸಹ ಮೀರಸಾಬ ಜಮಾದಾರ್ ಅವರು ಕೊಟ್ಟಿರಲಿಲ್ಲ. `ಟಾಕ್ಟರಿನಿಂದ ಗೊಬ್ಬರ ಹೊತ್ತು ಇಳಿಯುವುದಕ್ಕಾಗಿ ಹಲಿಗೆ ಬೇಕು’ ಎಂದರೂ ಅದನ್ನು ಪೂರೈಸಿರಲಿಲ್ಲ. ಜೊತೆಗೆ ಕೆಲ ಕಾಲ ವಿಶ್ರಾಂತಿಪಡೆಯಲು ಅವಕಾಶ ನೀಡಿರಲಿಲ್ಲ. ಅದಾಗಿಯೂ ಅವರಿಬ್ಬರು ಕಷ್ಟಪಟ್ಟು ಗೊಬ್ಬರ ಖಾಲಿ ಮಾಡುತ್ತಿದ್ದರು. ಈ ವೇಳೆ ಗೊಬ್ಬರ ಹೊತ್ತ ದಿವಾನಸಾಬ್ ಗನ್ನುಮಿಯಾ ಅವರು ಕಾಲು ಜಾರಿ ಮೆಟ್ಟಿಲ ಮೇಲೆ ಬಿದ್ದರು. ಅಲ್ಲಿಯೇ ಅವರು ಕೊನೆಯುಸಿರೆಳೆದರು. ಗೊಬ್ಬರ ಅಂಗಡಿ ಮಾಲಕ ಮೀರಸಾಬ ಜಮಾದಾರ್ ಹಾಗೂ ಟಾಕ್ಟರ್ ಚಾಲಕ ಪ್ರಶಾಂತ ಅರಳೇಶ್ವರ ಅವರ ಒತ್ತಡ ಈ ಅವಘಡಕ್ಕೆ ಕಾರಣ ಎಂದು ರುಸ್ತುಮಾಶಾ ಬಾಬಾಸಾಬ್ ಅವರು ಪೊಲೀಸರ ಮುಂದೆ ಬಾಯ್ಬಿಟ್ಟರು. ಪೊಲೀಸರು ಅವರಿಬ್ಬರ ವಿರುದ್ಧ ಪ್ರಕರಣ ದಾಖಲಿಸಿದರು. - [ಅಂಗನವಾಡಿ ಅಕ್ಕೋರಿನ ಅನುಮಾನಾಸ್ಪದ ಸಾವು!](https://mobiletime.in/2025/10/suspicious-death-of-anganwadi-sister/): ಜೊಯಿಡಾದ ತಿನೈಘಾಟ್ ಸೇತುವೆ ಬಳಿ ಮಹಿಳೆಯೊಬ್ಬರ ಶವ ಸಿಕ್ಕಿದೆ. ಶವದ ಬಳಿ ಮೊಬೈಲ್ ಸಹ ದೊರೆತಿದ್ದು, ಅದರಲ್ಲಿ ಅಡಗಿದ್ದ ಮೆಸೆಜ್ ಕೊಲೆಯ ಅನುಮಾನ ಹುಟ್ಟು ಹಾಕಿದೆ. ಬೆಳಗಾವಿ – ಗೋವಾ ರಾಷ್ಟ್ರೀಯ ಹೆದ್ದಾರಿಯ ತಿನೈಘಾಟ್ ಸೇತುವೆ ಕೆಳಗಿನ ನೀರಿನಲ್ಲಿ ಶನಿವಾರ ರಾತ್ರಿ ಚಾಲಕರೊಬ್ಬರು ಈ ಶವ ನೋಡಿದ್ದಾರೆ. ನಂತರ ಅಲ್ಲಿನ ಜನ ಪೊಲೀಸರಿಗೆ ಮಾಹಿತಿ ನೀಡಿದರು. ನಂದಗಡದ ದುರ್ಗಾನಗರದ ಬಳಿ ವಾಸವಾಗಿದ್ದ ಅಶ್ವಿನಿ ಬಾಬುರಾವ ಪಾಟೀಲ (50) ಅವರು ಸಾವನಪ್ಪಿದನ್ನು ಅಲ್ಲಿದ್ದವರು ಖಚಿತಪಡಿಸಿದರು. ಅಶ್ವಿನಿ ಪಾಟೀಲ ಅವರು ಅಂಗನವಾಡಿ ಕಾರ್ಯಕರ್ತೆಯಾಗಿ ಕೆಲಸ ಮಾಡುತ್ತಿದ್ದರು. ಅವರ ಶವದ ಬಳಿಯಿದ್ದ ಮೊಬೈಲನ್ನು ಪೊಲೀಸರು ಗಮನಿಸಿದ್ದು, ಅದರಲ್ಲಿ ಎರಡು ವಿಭಿನ್ನ ಮೆಸೆಜ್ ಕಾಣಿಸಿತು. ಅಶ್ವಿನಿ ಪಾಟೀಲ ಅವರು ಅಕ್ಟೊಬರ್ 2ರಂದು ಕೇಕೇರಿ ಜಾತ್ರೆಗೆ ಹೋಗಿದ್ದರು. ಜಾತ್ರೆ ಮುಗಿಸಿದ ಅವರು ಮನೆ ಕಡೆ ಮರಳಿದ್ದು, ಕೊನೆಯದಾಗಿ ಬಿಡಿ ಬಳಿ ಜನ ಅವರನ್ನು ನೋಡಿದ್ದರು. ಆದರೆ, ಅವರು ಮನೆಗೆ ತಲುಪಿರಲಿಲ್ಲ. ಅಶ್ವಿನಿ ಪಾಟೀಲ ಅವರ ಪುತ್ರ ತಾಯಿಗಾಗಿ ಎಲ್ಲಾ ಕಡೆ ಹುಡುಕಾಟ ನಡೆಸಿ ಪೊಲೀಸರ ಮೊರೆ ಹೋಗಿದ್ದರು. ಶನಿವಾರ ಸಿಕ್ಕ ಶವದ ಪಕ್ಕದಲ್ಲಿದ್ದ ಮೊಬೈಲಿನಲ್ಲಿ `ತಾನು ಬೆಂಗಳೂರಿಗೆ ಹೋರಟಿರುವೆ’ ಎಂದು ಅಶ್ವಿನಿ ಪಾಟೀಲ ಅವರು ಮೆಸೆಜ್ ಮಾಡಿರುವುದು ಕಾಣಿಸಿತು. ಅದರೊಂದಿಗೆ `ತಾನು ಆತ್ಮಹತ್ಯೆ ಮಾಡಿಕೊಳ್ಳುವೆ’ ಎಂಬ ಸಂದೇಶ ಸಹ ಅದೇ ಮೊಬೈಲಿನಲ್ಲಿತ್ತು. ಶವದ ಮೇಲೆ ಗಾಯದ ಗುರುತುಗಳಿದ್ದರಿಂದ ಕೊಲೆಯ ಶಂಕೆವ್ಯಕ್ತವಾಯಿತು. ರಾಮನಗರ ಪೊಲೀಸರು ಪ್ರಕರಣದ ಮಾಹಿತಿ ಕಲೆಹಾಕಲಾಗುತ್ತಿದ್ದು, ತಲೆ ಹಾಗೂ ಮುಖದ ಮೇಲೆ ಗಂಭೀರ ಪ್ರಮಾಣದಲ್ಲಿ ಗಾಯವಾಗಿರುವುದನ್ನು ಗಮನಿಸಿದರು. ಸದ್ಯ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಅದಾದ ನಂತರವೇ ಸಾವಿನ ಕಾರಣ ಗೊತ್ತಾಗಲಿದೆ. ಪೊಲೀಸರು ಎಲ್ಲಾ ಆಯಾಮಗಳಿಂದ ತನಿಖೆ ನಡೆಸುತ್ತಿದ್ದಾರೆ. ತಿನ್ನೆಘಾಟ್ ಹಾಗೂ ಖಾನಾಪುರ ಪ್ರದೇಶದಲ್ಲಿ ಸಾವಿನ ಬಗ್ಗೆ ಬಗೆ ಬಗೆಯ ಚರ್ಚೆ ನಡೆದಿದೆ. ಆತಂಕದ ವಾತಾವರಣವೂ ಕಾಣಿಸಿದೆ. - [ಪೊಲೀಸರ ಮುಂದೆ ಮಾರಾಮಾರಿ!](https://mobiletime.in/2025/10/fight-in-front-of-the-police/): ಯಲ್ಲಾಪುರದ ಕಿರವತ್ತಿ ಜಯಂತಿನಗರದದಲ್ಲಿ ಪೊಲೀಸರ ಮುಂದೆಯೇ ಮಾರಾಮಾರಿ ನಡೆದಿದೆ. ಸಾರ್ವಜನಿಕ ಸ್ಥಳದಲ್ಲಿ ಶಾಂತಿ ಕದಡಿದ ಕಾರಣ ಎಂಟು ಜನರ ವಿರುದ್ಧ ಪೊಲೀಸರು ಸುಮೋಟೋ ಪ್ರಕರಣ ದಾಖಲಿಸಿದ್ದಾರೆ. ಅಕ್ಟೊಬರ್ 3ರ ನಸುಕಿನ 1 ಗಂಟೆಗೆ ಪೊಲೀಸ್ ಸಿಬ್ಬಂದಿ ರಾಘವೇಂದ್ರ ಮೂಳೆ ಅವರು ಗಸ್ತು ತಿರುಗುತ್ತಿದ್ದರು. ಜಯಂತಿ ನಗರದ ಕನ್ನಡ ಶಾಲೆಯ ಬಳಿ ಅವರಿಗೆ ದೊಡ್ಡ ಗಲಾಟೆ ಕೇಳಿಸಿತು. ಹತ್ತಿರ ಹೋಗಿ ನೋಡಿದಾಗ ಅಲ್ಲಿ ಒಂದಷ್ಟು ಜನ ಹೊಡೆದಾಟ ನಡೆಸಿದ್ದರು. ರಾಘವೇಂದ್ರ ಮೂಳೆ ಅವರು ಆ ಹೊಡೆದಾಟ ತಪ್ಪಿಸಲು ಪ್ರಯತ್ನಿಸಿದರು. ಅವರ ಜೊತೆಗಿದ್ದ ಪೊಲೀಸ್ ಸಿಬ್ಬಂದಿ ಅಕ್ಷಯ ಮರಾಠಿ, ಪರಮೇಶ ಎಸ್ ಕೆ ಅವರು `ಹೊಡೆದಾಟ ನಡೆಸಬೇಡಿ’ ಎಂದು ಎಂದು ಬುದ್ದಿ ಹೇಳಿದರು. ಆದರೆ, ಅಲ್ಲಿದ್ದವರು ಪೊಲೀಸರ ಮಾತು ಕೇಳಲಿಲ್ಲ. ಕೊನೆಗೆ ಪೊಲೀಸರು ಗದರಿಸಿದಾಗ ಆ ಎಂಟು ಜನ ಅಲ್ಲಿಂದ ಓಡಿ ಹೋದರು. ಅದನ್ನು ಸ್ಥಳೀಯ ಮುಖಂಡ ತೆಹಮತುಲ್ಲಾ ಅಬ್ಬಿಗೇರಿ ಅವರು ನೋಡಿದ್ದು, ಪೊಲೀಸರು ಅಬ್ಬಿಗೇರಿ ಅವರನ್ನು ಸಾಕ್ಷಿದಾರರನ್ನಾಗಿ ಮಾಡಿದರು. ಜೊತೆಗೆ ಕಿರವತ್ತಿಯ ಜಯಂತಿನಗರದ ಲಕ್ಷ್ಮಣ ಅಡಿವೆಪ್ಪ ಜಂಗಳಿ, ಅಡಿವೆಪ್ಪ ಲಕ್ಷ್ಮಣ ಜಂಗಳಿ, ಮಹೇಶ ಲಕ್ಷ್ಮಣ ಜಂಗಳಿ, ದ್ಯಾಮಣ್ಣ ಅಡಿವೆಪ್ಪ ಜಂಗಳಿ, ಮಂಜುನಾಥ ಸುರೇಶ ಸಿದ್ದಪ್ಪನವರ್, ಶಿವಾನಂದ ಬಸವಣ್ಣೆಪ್ಪ ರೊಟ್ಟಿಗೌಡರ್, ಅಭಿಷೇಕ ಮುದುಕಪ್ಪ ವರದಾನಿ, ನಿತೀನ ಕರಿಬಸಪ್ಪ ವರದಾನಿ ವಿರುದ್ಧ ಪ್ರಕರಣ ದಾಖಲಿಸಿದರು. - [ಅದು ದೊಡ್ಡ ಬೆಕ್ಕಲ್ಲ.. ಚಿಕ್ಕ ಚಿರತೆ!](https://mobiletime.in/2025/10/thats-not-a-big-cat-a-small-leopard/): ಕಾಡಿನಲ್ಲಿರುವ ತಾಯಿ ಬಿಟ್ಟು ಶಿರಸಿಗೆ ಬಂದ ಮರಿ ಚಿರತೆ ಜನಸ್ನೇಹಿಯಾಗಿದೆ. ಗೌಡಳ್ಳಿ ಬಳಿ ಚಿರತೆ ನೋಡಿದ ಜನ ಅದನ್ನು ಮುದ್ದಿಸಲು ಶುರು ಮಾಡಿದ್ದಾರೆ! ಭಾನುವಾರ ಶಿರಸಿ ತಾಲೂಕಿನ ಗೌಡಳ್ಳಿ ಹತ್ತಿರದ ಖಾನ ನಗರದ ರಸ್ತೆಯಲ್ಲಿ ಚಿರತೆಯೊಂದು ಕಾಣಿಸಿತು. ಮೊದಲು ಜನ ಅದನ್ನು ಬೆಕ್ಕು ಎಂದು ಭಾವಿಸಿದ್ದರು. ಆದರೆ, ಬೆಕ್ಕಿಗಿಂತಲೂ ಗಾತ್ರದಲ್ಲಿ ದೊಡ್ಡದಾಗಿರುವುದು ಹಾಗೂ ಮೈಮೇಲೆ ಚುಕ್ಕಿಗಳಿರುವ ಕಾರಣ ಅದು ಚಿರತೆ ಎಂದು ಸ್ಪಷ್ಠವಾಯಿತು. ಜನ ಹತ್ತಿರ ಹೋದರೂ ಚಿರತೆ ಹೆದರಲಿಲ್ಲ. ಜನರನ್ನು ನೋಡಿ ತನ್ನ ವ್ಯಾಘ್ರ ಸ್ವರೂಪವನ್ನು ಪ್ರದರ್ಶಿಸಲಿಲ್ಲ. ಈ ಮರಿ ಚಿರತೆಯನ್ನು ನೋಡಿದ ಜನರು ಪ್ರೀತಿಯಿಂದ ಮೈ ಮುಟ್ಟಿದ್ದಾರೆ. ಆ ವೇಳೆಯಲ್ಲಿಯೂ ಚಿರತೆ ವಿರೋಧವ್ಯಕ್ತಪಡಿಸಿಲ್ಲ. ಅದಾದ ನಂತರ ಕೆಲವರು ಚಿರತೆಯ ವಿಡಿಯೋ ಮಾಡಿದ್ದಾರೆ. ಮನುಷ್ಯ ಮುಟ್ಟಿದರೂ ಚಿರತೆ ಅಲ್ಲಿಂದ ಓಡದಿರುವುದು ಅಚ್ಚರಿ ತಂದಿದೆ. ಜೊತೆಗೆ ಅತ್ಯಂತ ಸೌಮ್ಯವಾಗಿ ವರ್ತಿಸಿರುವುದು ಸಹ ವಿಶೇಷವೆನಿಸಿದೆ. `ಗೌಡಳ್ಳಿ ಬಳಿ ಚಿರತೆ ಕಾಣಿಸಿಕೊಂಡಿದ್ದು ಸತ್ಯ. ತನ್ನ ಪಾಡಿಗೆ ತಾನು ಆ ಚಿರತೆ ಕಾಡು ಸೇರಿದೆ. ಕೆಲವರು ಚಿರತೆಯನ್ನು ಮುಟ್ಟಿದ ವಿಡಿಯೋ ಬಂದಿದ್ದು, ಆ ವಿಡಿಯೋ ಇಲ್ಲಿಯದೆಯಾ? ಎನ್ನುವುದರ ಬಗ್ಗೆ ಖಚಿತವಾಗಿಲ್ಲ’ ಎಂದು ಶಿರಸಿ ವಲಯ ಅರಣ್ಯಾಧಿಕಾರಿ ಗಿರೀಶ ಅವರು ಮಾಹಿತಿ ನೀಡಿದರು. ಅತ್ಯಂತ ನಿತ್ರಾಣಗೊಂಡಿದ್ದರಿAದ ಚಿರತೆ ಈ ರೀತಿ ವರ್ತಿಸಿರುವ ಬಗ್ಗೆ ಜನ ಮಾತನಾಡಿದರು. ಜನರ ಕೈಗೆ ಸಿಕ್ಕ ಚಿರತೆಯ ವಿಡಿಯೋ ಇಲ್ಲಿ ನೋಡಿ.. - [ಎಸಿ ಕಾರಿಗೆ ಅಪಘಾತದ ಬಿಸಿ!](https://mobiletime.in/2025/10/the-ac-car-was-hot-enough-to-cause-an-accident/): ಕುಮಟಾದ ಸಹಾಯಕ ಆಯುಕ್ತ ಶ್ರವಣಕುಮಾರ ಅವರ ಬಳಕೆಯಲ್ಲಿದ್ದ ಕಾರು ಅಪಘಾತಕ್ಕೀಡಾಗಿದೆ. ಶ್ರೀಕುಮಾರ ಬಸ್ಸು ಅವರ ಕಾರಿಗೆ ಹಿಂದಿನಿoದ ಗುದ್ದಿದೆ. ಅಕ್ಟೊಬರ್ 4ರಂದು ಕುಮಟಾಗೆ ಹಿರಿಯ ನ್ಯಾಯಾಧೀಶರೊಬ್ಬರು ಆಗಮಿಸಿದ್ದರು. ಶಿಷ್ಟಾಚಾರದ ಪ್ರಕಾರ ಸಹಾಯಕ ಆಯುಕ್ತ ಶ್ರವಣಕುಮಾರ ಅವರು ನ್ಯಾಯಾಧೀಶರ ಜೊತೆ ಇರಬೇಕಿತ್ತು. ಆದರೆ, ಶ್ರವಣಕುಮಾರ ಅವರ ಕಾರಿನ ಚಾಲಕ ಆ ದಿನ ರಜೆಯಲ್ಲಿದ್ದು, ತಹಶೀಲ್ದಾರ್ ಕಚೇರಿಯ ಚಾಲಕನನ್ನು ತಮ್ಮ ಕಾರಿನ ಕರ್ತವ್ಯಕ್ಕೆ ನಿಯೋಜಿಸಿಕೊಂಡಿದ್ದರು. ತಹಶೀಲ್ದಾರ್ ಕಚೇರಿಯ ಜೀಪ್ ಚಾಲಕ ಸಾರಂಗ ಮುಕ್ರಿ ಅವರು ಸಮಯಕ್ಕೆ ಸರಿಯಾಗಿ ಉಪವಿಭಾಗಾಧಿಕಾರಿ ಶ್ರವಣಕುಮಾರ ಅವರ ವಸತಿಗೃಹದ ಬಳಿ ಹೋಗಿದ್ದರು. ಗಿಬ್ ಸರ್ಕಲ್ ದಾಟಿ ಮುಂದಿನ ಸರ್ಕಲ್ ಬಳಿ ಸಾರಂಗ ಮುಕ್ರಿ ಅವರು ಕಾರಿಗೆ ಇಂಡಿಕೇಟರ್ ಹಾಕಿ ತಿರುಗಿಸುತ್ತಿದ್ದರು. ಈ ವೇಳೆ ಗುಣವಂತೆ ಬೆಳಗೋಡುವಿನ ಪ್ರಶಾಂತ ಮಂಜುನಾಥ ಗೌಡ ಅವರು ಶ್ರೀಕುಮಾರ ಬಸ್ಸು ಓಡಿಸುತ್ತಿದ್ದರು. ಸರ್ಕಾರಿ ಜೀಪು ಎದುರಿಗಿರುವುದನ್ನು ನೋಡಿಯೂ ಅವರು ಅಲ್ಲಿಂದ ಹಂಪನ್ನು ವೇಗವಾಗಿ ಹಾರಿಸಿದರು. ಅದಾದ ನಂತರ ಜೀಪಿಗೆ ಬಂದು ಬಸ್ಸು ಗುದ್ದಿದರು. ಹೆಗಡೆ ಹಳಗೇರಿಯ ಸಾರಂಗ ಮುಕ್ರಿ ಅವರು ನುರಿತ ಚಾಲಕರಾಗಿದ್ದು, ಇನ್ನೂ 24 ವರ್ಷದ ಪ್ರಶಾಂತ ಗೌಡ ಅವರಿಗೆ ಬುದ್ದಿ ಹೇಳಿದರು. ಶ್ರೀಕುಮಾರ ಬಸ್ಸನ್ನು ವೇಗವಾಗಿ ಓಡಿಸದಂತೆ ತಿಳಿಸಿದರು. ಆಗ, ಪ್ರಶಾಂತ ಗೌಡ ಅವರು ಆದ ತಪ್ಪಿಗೆ ಕ್ಷಮೆ ಕೋರಿದರು. ಆದರೆ, ಕುಮಟಾ ಕಡೆಯಿಂದ ಹೊನ್ನಾವರ ಕಡೆ ಹೋಗುವ ಬಸ್ಸು ಹಿಂದಿನಿAದ ಸರ್ಕಾರಿ ಜೀಪಿಗೆ ಗುದ್ದಿದ್ದರಿಂದ ಎರಡು ವಾಹನಗಳು ಜಖಂ ಆಗಿದ್ದವು. ಆ ವೇಳೆ ಶ್ರವಣಕುಮಾರ ಅವರು ಕಾರಿನಲ್ಲಿರಲಿಲ್ಲ. ಸರ್ಕಾರಿ ಕಾರಿನಲ್ಲಿ ಚಾಲಕನ ಜೊತೆ ಸಿಬ್ಬಂದಿ ಒಬ್ಬರಿದ್ದು, ಅವರು ಪ್ರಾಣಾಪಾಯದಿಂದ ಪಾರಾದರು. ಅಪಘಾತದಿಂದ ಸರ್ಕಾರಿ ಆಸ್ತಿಗೆ ನಷ್ಟವಾದ ಕಾರಣ ಸಾರಂಗ ಮುಕ್ರಿ ಅವರು ಪೊಲೀಸ್ ದೂರು ದಾಖಲಿಸಿದರು. - [ಶಾಲಾ ಶಿಕ್ಷಕರಿಗೆ ಪಿಂಚಣಿ ಸಮಸ್ಯೆ: ಸೋಮವಾರ ಸಭೆ](https://mobiletime.in/2025/10/pension-issue-for-school-teachers-meeting-on-monday/): ಶಿರಸಿ ಶೈಕ್ಷಣಿಕ ಜಿಲ್ಲೆಯ ಅನುದಾನಿತ ಶಾಲಾ ಶಿಕ್ಷಕರು ಅನುಭವಿಸುತ್ತಿರುವ ಸಮಸ್ಯೆಗಳ ಬಗ್ಗೆ ಚರ್ಚಿಸುವುದಕ್ಕಾಗಿ ಪಿಂಚಣಿ ವಂಚಿತ ಅನುದಾನಿತ ಶಾಲಾ ಕಾಲೇಜುಗಳ ನೌಕರರ ಸಂಘದ ಅಧ್ಯಕ್ಷ ಜಿ ಹನುಮಂತಪ್ಪ ಅವರು ಜಿಲ್ಲೆಗೆ ಬರುತ್ತಿದ್ದಾರೆ. ಅಕ್ಟೊಬರ್ 6ರ ಸೋಮವಾರ ಮಧ್ಯಾಹ್ನ 3 ಗಂಟೆಗೆ ಅವರು ಯಲ್ಲಾಪುರದಲ್ಲಿ ಶಿಕ್ಷಕರ ಸಭೆ ನಡೆಸಲಿದ್ದಾರೆ. ಯಲ್ಲಾಪುರದ ಹೋಲಿ ರೋಜರಿ ಪ್ರೌಢಶಾಲೆಯ ಸಭಾ ಭವನದಲ್ಲಿ ಅನುದಾನಿತ ನೌಕರರ ಹಕ್ಕುಗಳು ಹಾಗೂ ಸಂಘದ ಬಲವರ್ಧನೆಗಾಗಿ ಈ ಸಭೆ ಆಯೋಜಿಸಲಾಗಿದೆ. ಅನುದಾನಿತ ಶಾಲೆಗಳಲ್ಲಿ ದುಡಿಯುವ ಶಿಕ್ಷಕರು ವಿವಿಧ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಅದರಲ್ಲಿಯೂ ಮುಖ್ಯವಾಗಿ ಪಿಂಚಣಿ ವಿಷಯವಾಗಿ ಅವರೆಲ್ಲರೂ ಒಗ್ಗಟ್ಟಿನಿಂದ ಹೋರಾಟ ನಡೆಸಿದ್ದು, ಈ ವಿಷಯವಾಗಿ ನ್ಯಾಯಾಲಯದಲ್ಲಿ ಸಹ ಪ್ರಕರಣ ನಡೆಯುತ್ತಿದೆ. ಅಕ್ಟೋಬರ್ 17ರಂದು ನ್ಯಾಯಾಲಯದ ಆದೇಶ ಹೊರಬರುವ ಸಾಧ್ಯತೆ ಹಿನ್ನಲೆ ಯಲ್ಲಾಪುರದಲ್ಲಿ ಸಭೆ ಕರೆಯಲಾಗಿದೆ. ಈ ಹಿಂದೆ ಬೆಂಗಳೂರಿನಲ್ಲಿ ನಡೆದ ಹೋರಾಟ, ನ್ಯಾಯಾಲಯದ ಆದೇಶದ ನಂತರ ಮಾಡಬೇಕಾದ ಕೆಲಸ, ಪಿಂಚಣಿ ವಿಷಯವಾಗಿ ಸರ್ಕಾರದ ಮಟ್ಟದಲ್ಲಿ ನಡೆದ ಬೆಳವಣಿಗೆ, ನಿವೃತ್ತಿ ಅಂಚಿನಲ್ಲಿರುವ ನೌಕರರ ಪರಿಸ್ಥಿತಿ ಹಾಗೂ ನಿವೃತ್ತಿ ಆಗಿರುವ ಶಿಕ್ಷಕರ ಆಗು-ಹೋಗುಗಳ ಮೇಲೆ ಈ ಸಭೆ ಬೆಳಕು ಚೆಲ್ಲಲಿದೆ. ಶಾಲೆಯಲ್ಲಿ ಮಕ್ಕಳ ದಾಖಲಾತಿ ಕೊರತೆ ಹಾಗೂ ಕಡಿಮೆ ಫಲಿತಾಂಶದ ನೆಪದಿಂದ ಶಿಕ್ಷಕರ ಸಂಬಳಕ್ಕೆ ಕತ್ತರಿ ಬಿದ್ದಿರುವ ವಿಷಯದ ಬಗ್ಗೆಯೂ ಚರ್ಚಿಸಲಾಗುತ್ತದೆ. ಇದರೊಂದಿಗೆ ಜ್ಯೋತಿ ಸಂಜೀವಿನಿ ಆರೋಗ್ಯ ಸೌಲಭ್ಯದ ಬಗ್ಗೆಯೂ ಸಭೆಯಲ್ಲಿ ಮಾಹಿತಿ ನೀಡಲಾಗುತ್ತದೆ. ಸಂಘಟನೆಯ ಕಾನೂನು ಹೋರಾಟ ಸಮಿತಿಯ ನಾಗರಾಜಪ್ಪ ಬುಕ್ಕಾಂಬುದಿ, ರಾಜ್ಯ ಸಂಚಾಲಕ ಜಾಲಮಂಗಲ ನಾಗರಾಜ್ ಸಹ ಈ ಸಭೆಯಲ್ಲಿ ಭಾಗವಹಿಸಲಿದ್ದಾರೆ. ಶಿರಸಿಯ ಶೈಕ್ಷಣಿಕ ಜಿಲ್ಲೆಯ ಪ್ರಾಥಮಿಕ, ಪ್ರೌಢ, ಪದವಿ ಪೂರ್ವ, ಪದವಿ, ಡಿಪ್ಲೊಮೊ, ಐಟಿಐ, ಬಿಇಡಿ, ಇಂಜಿನಿಯರಿoಗ್ ಕಾಲೇಜುಗಳ ಸಿಬ್ಬಂದಿಗಾಗಿ ಈ ಸಭೆ ಆಯೋಜಿಸಲಾಗಿದೆ. ಭಾಗವಹಿಸುವವರಿಗೆ ಇನ್ನೂ ಏನಾದರೂ ಗೊಂದಲವಿದ್ದರೆ ಇಲ್ಲಿ ಫೋನ್ ಮಾಡಿ: 9980959108 ಅಥವಾ 9449787901 - [ಅತಿ ವೇಗ: ಪಾದಚಾರಿಯ ಜೀವ ತೆಗೆದ ಶಾಲಾ ಬಸ್ ಚಾಲಕ](https://mobiletime.in/2025/10/speeding-school-bus-driver-kills-pedestrian/): ಭಟ್ಕಳದ ಅಲಿ ಪಬ್ಲಿಕ್ ಸ್ಕೂಲ್’ನ ಬಸ್ಸು ಗುದ್ದಿದ ಪರಿಣಾಮ ಪಾದಚಾರಿಯೊಬ್ಬರು ಸಾವನಪ್ಪಿದ್ದಾರೆ. ಶಾಲಾ ಬಸ್ ಚಾಲಕ ಅಬ್ದುಲ್ ಕಾದರ ಶೇಖ್ ಅವರ ಅತಿವೇಗ ಹಾಗೂ ದುಡುಕುತನದ ಚಾಲನೆಯಿಂದ 15 ದಿನ ನರಳಾಡಿದ ವೃದ್ಧರು ಮಂಗಳೂರು ಆಸ್ಪತ್ರೆಯಲ್ಲಿ ಪ್ರಾಣ ಬಿಟ್ಟಿದ್ದಾರೆ. ಸೆಪ್ಟೆಂಬರ 18ರಂದು ಅಲಿ ಪಬ್ಲಿಕ್ ಸ್ಕೂಲ್ ಬಸ್ಸು ಭಟ್ಕಳದ ತೆಂಗಿನಗುoಡಿ ಕ್ರಾಸಿನಿಂದ ಎಸ್ ಭಟ್ಕಳ ಸರ್ಕಲ್ ಕಡೆ ಚಲಿಸುತ್ತಿತ್ತು. ಬೆಳಗ್ಗೆ 11.30ರ ವೇಳೆಗೆ ಅಂಥ ಗಡಿಬಿಡಿ ಇಲ್ಲದಿದ್ದರೂ ಅಬ್ದುಲ್ ಕಾದರ ಶೇಖ್ ಅವರು ಬಸ್ಸನ್ನು ವೇಗವಾಗಿ ಓಡಿಸುತ್ತಿದ್ದರು. ಕಾಮಾಕ್ಷಿ ಪೆಟ್ರೋಲ್ ಬಂಕಿನ ಬಳಿ ತಮಿಳುನಾಡಿನ ವೆಟ್ಟಪ್ಪ ಕೃಷ್ಣಗಿರಿ ಅವರು ರಸ್ತೆ ದಾಡುತ್ತಿದ್ದರು. ಅವರನ್ನು ನೋಡಿಯೂ ಅಬ್ದುಲ್ ಕಾದರ ಶೇಖ್ (68) ಅವರು ಬಸ್ಸಿನ ವೇಗ ತಗ್ಗಿಸಲಿಲ್ಲ. ಹೀಗಾಗಿ ಆ ಬಸ್ಸು ವೆಟ್ಟಪ್ಪ ಅವರಿಗೆ ಡಿಕ್ಕಿಯಾಯಿತು. ಈ ಅಪಘಾತದ ರಭಸಕ್ಕೆ ವೆಟ್ಟಪ್ಪ ಕೃಷ್ಣಗಿರಿ ಅವರು ಅಲ್ಲಿಯೇ ಬಿದ್ದರು. ಅವರ ತಲೆಗೆ ಗಂಭೀರ ಪ್ರಮಾಣದಲ್ಲಿ ಪೆಟ್ಟಾಗಿತ್ತು. ಮೈ-ಕೈಗಳಿಗೆ ಸಹ ನೋವಾಗಿತ್ತು. ಪ್ರಜ್ಞೆಯೂ ತಪ್ಪಿತ್ತು. ವೆಟ್ಟಪ್ಪ ಅವರನ್ನು ಚಿಕಿತ್ಸೆಗಾಗಿ ಮಂಗಳೂರಿಗೆ ಕರೆದೊಯ್ಯಲಾಯಿತು. ಅಲ್ಲಿನ ವೆನ್ಲಾಕ್ ಆಸ್ಪತ್ರೆಯಲ್ಲಿ ಅವರಿಗೆ ಸಾಕಷ್ಟು ಆರೈಕೆ ಮಾಡಲಾಯಿತು. ಆದರೆ, ಇದರಿಂದ ಪ್ರಯೋಜನ ಆಗಲಿಲ್ಲ. 15 ದಿನಗಳ ಕಾಲ ನರಳಾಡಿದ ವೆಟ್ಟಪ್ಪ ಅವರು ಅಕ್ಟೊಬರ್ 4ರಂದು ತಮ್ಮ ಪ್ರಾಣ ಬಿಟ್ಟರು. ಅಪಘಾತದಲ್ಲಿ ಗಾಯಗೊಂಡಿದ್ದ ವೆಟ್ಟಪ್ಪ ಅವರನ್ನು ಉಳಿಸಿಕೊಳ್ಳಲಾಗದ ಬಗ್ಗೆ ಆಸ್ಪತ್ರೆಯವರು ಭಟ್ಕಳ ಪೊಲೀಸರಿಗೆ ಇ-ಮೇಲ್ ಮಾಡಿದರು. ಗಣೇಶ ಹಾರ್ಡವೇರ್ ಹತ್ತಿರ ಪ್ಲೆಕ್ಸ ಪ್ರಿಂಟರ್ ಕೆಲಸ ಮಾಡುವ ಮಹ್ಮದ್ ರಿಜ್ವಾನ್ ಅವರು ಅಲಿ ಪಬ್ಲಿಕ್ ಸ್ಕೂಲ್’ನ ಬಸ್ ಚಾಲಕ ಅಬ್ದುಲ್ ಕಾದರ ಶೇಖ್ ವಿರುದ್ಧ ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿದರು. `ನಿಧಾನವಾಗಿ ವಾಹನ ಓಡಿಸಿ.. ಸುರಕ್ಷತಾ ಕ್ರಮ ಅನುಸರಿಸಿ’ - [ಚೌಕಿಮನೆಯಲ್ಲಿ ಕೆಟ್ಟ ಅನುಭವ: ಆ ವಿಷಯ ಸಂಪೂರ್ಣ ಸತ್ಯವಲ್ಲ!](https://mobiletime.in/2025/10/bad-experience-at-chowkimane-thats-not-entirely-true/): `ಯಕ್ಷ ಕಲಾವಿದೆ ಅಶ್ವಿನಿ ಕೊಂಡದಕುಳಿ ಅವರು ಮಾಡಿದ ಭಾಷಣದಲ್ಲಿನ ವಿಷಯ ಎಲ್ಲವೂ ಸತ್ಯವಲ್ಲ. ಬಾಲ್ಯದಿಂದಲೂ ಯಕ್ಷಗಾನದಲ್ಲಿ ತೊಡಗಿರುವ ನನಗೆ ಎಲ್ಲಿಯೂ ಪುರುಷ ಕಲಾವಿದರಿಂದ ಸಮಸ್ಯೆ ಆಗಿಲ್ಲ’ ಎಂದು ಮತ್ತೊಬ್ಬ ಮಹಿಳಾ ಯಕ್ಷ ಕಲಾವಿದೆ ನಾಗಶ್ರೀ ಜಿ ಎಸ್ ಗೀಜಗಾರು ಅವರು ಹೇಳಿದ್ದಾರೆ. `ಎಲ್ಲಾ ಕ್ಷೇತ್ರದಲ್ಲೂ ಹೆಣ್ಣಿನ ಕುರಿತಾದ ದ್ವಂಧ್ವ ಭಾವಗಳು ಇದ್ದೇ ಇರುತ್ತದೆ. ಆದರೆ, ಅಶ್ವಿನಿ ಅವರು ಪುರುಷರ ಬಗ್ಗೆ ಆರೋಪಿಸುವ ಬದಲು ತಮಗಾದ ಕೆಟ್ಟ ಅನುಭವದ ವಿವರಣೆ ಕೊಡಬೇಕು’ ಎಂದವರು ಹೇಳಿದ್ದಾರೆ. ಅಶ್ವಿನಿ ಕೊಂಡದಕುಳಿ ಅವರ ತಂದೆ ರಾಮಚಂದ್ರ ಹೆಗಡೆ ಅವರ `ಯಕ್ಷಚಂದ್ರ’ ಕೃತಿ ಬಿಡುಗಡೆ ಕಾರ್ಯಕ್ರಮದ ವೇಳೆ ಅಶ್ವಿನಿ ಕೊಂಡದಕುಳಿ ಅವರು ಮಾಡಿದ ಭಾಷಣ ವಿವಾದಕ್ಕೆ ಕಾರಣವಾಗಿದೆ. ಯಕ್ಷಚಂದ್ರ ಕೃತಿಯಲ್ಲಿ ಸಹ ವಿವಿಧ ಕಲಾವಿದರ ಬಗ್ಗೆ ಹಗುರವಾಗಿ ಬಿಂಬಿಸಿದ ಆರೋಪಗಳಿದ್ದು, ಅಶ್ವನಿ ಅವರು ಭಾಷಣದಲ್ಲಿ ಪುರುಷ ಕಲಾವಿದರ ಬಗ್ಗೆ ಹಗುರವಾಗಿ ಮಾತನಾಡಿದ್ದಾರೆ. ತಮ್ಮ ತಂದೆಯನ್ನು ಸಮರ್ಥಿಸುವ ಬರದಲ್ಲಿ ಉಳಿದ ಕಲಾವಿದರ ನಡತೆಯ ಬಗ್ಗೆ ಅವರು ಬೇಸರದಲ್ಲಿ ಮಾತನಾಡಿದ್ದಾರೆ. `ಚೌಕಿಮನೆಯಲ್ಲಿ ಸ್ತ್ರೀ ಕಲಾವಿದರ ಬಗ್ಗೆ ಕೀಳಾಗಿ ಮಾತನಾಡುತ್ತಾರೆ’ ಎಂಬುದು ಅಶ್ವಿನಿ ಕೊಂಡದಕುಳಿ ಅವರ ಅನುಭವ ಹಂಚಿಕೊ0ಡಿದ್ದಾರೆ. ಆದರೆ, ಇದಕ್ಕೆ ಪ್ರತಿಯಾಗಿ `ಯಕ್ಷಗಾನದ ಚೌಕಿಮನೆಯಲ್ಲಿ ಮಹಿಳಾ ಕಲಾವಿದರ ಬಗ್ಗೆ ಹಗುರವಾಗಿ ಮಾತನಾಡಲಾಗುತ್ತದೆ ಎಂಬ ವಿಷಯ ಸತ್ಯವಲ್ಲ. ತಮಗೆ ಎಲ್ಲಿಯೂ ಈ ರೀತಿಯ ಅನುಭವ ಆಗಿಲ್ಲ’ ಎಂದು ನಾಗಶ್ರೀ ಜಿ ಎಸ್ ಗೀಜಗಾರು ಅವರು ಹೇಳಿದ್ದಾರೆ. `ಯಕ್ಷಗಾನ ಕುಟುಂಬದಲ್ಲಿ ಹುಟ್ಟಿ ಬೆಳೆದ ನನಗೆ ಅಪ್ಪ ಅಮ್ಮನ ಪ್ರೋತ್ಸಾಹದಿಂದ ಬಾಲ್ಯದಿಂದಲೂ ವೇಷ ಮಾಡುವ ಉತ್ಸಾಹ. ಸ್ವಲ್ಪ ಹೆಜ್ಜೆ ಕಲಿತು ಅನೇಕ ಮೇಳಗಳಲ್ಲಿ ಭಾಗವಹಿಸಿದ್ದೇನೆ. ತಂಡಗಳಲ್ಲಿ ಹಲವಾರು ದಿಗ್ಗಜ ಯಕ್ಷಗಾನ ಕಲಾವಿದರೊಂದಿಗೆ ಪಾತ್ರ ನಿರ್ವಹಿಸಿದ್ದೇನೆ. ಆದರೆ, ಅಶ್ವಿನಿ ಅವರು ಹೇಳಿದ ಹಾಗೇ ಎಲ್ಲಿಯೂ ಕೆಟ್ಟ ಅನುಭವ ಆಗಿಲ್ಲ’ ಎಂದು ನಾಗಶ್ರೀ ಜಿ ಎಸ್ ಗೀಜಗಾರು ಅವರು ಹೇಳಿದ್ದಾರೆ. ಸಹ ಕಲಾವಿದರು ನನ್ನೊಂದಿಗೆ ಚೌಕಿಯಲ್ಲಾಗಲೀ, ರಂಗದಲ್ಲಾಗಲೀ ತಮ್ಮೊಂದಿಗೆ ಗೌರವಯುತವಾಗಿ ನಡೆದುಕೊಂಡಿದ್ದಾರೆ’ ಎಂದು ಅವರು ವಿವರಿಸಿದ್ದಾರೆ. `ಹೆಣ್ಣು ಯಾವುದೇ ಕ್ಷೇತ್ರದಲ್ಲಿ ತೊಡಗಿಕೊಂಡಾಗ ತಿರುಗಿನೋಡುವವರ ಸಂಖ್ಯೆ ಜಾಸ್ತಿ. ಕೆಲವರಲ್ಲಿ ಅಬ್ಬಾ! ಎನ್ನುವ ಗೌರವ ಭಾವ.. ಕೆಲವರಲ್ಲಿ ಆ ಹೆಣ್ಣು ನಮಗೆ ಸರಿಸಮಾನರಾ? ಎಂಬ ಕ್ಷುಲ್ಲಕ ಭಾವ ಇದ್ದೇ ಇರುತ್ತದೆ. ಎಲ್ಲಾ ಕ್ಷೇತ್ರದಲ್ಲೂ ಹೆಣ್ಣಿನ ಕುರಿತಾದ ದ್ವಂಧ್ವ ಇರಲಿದ್ದು, ಇದಕ್ಕೆ ಯಕ್ಷಗಾನ ಸಹ ಹೊರತಾಗಿಲ್ಲ. ಆದರೆ, ಯಕ್ಷಗಾನದ ಚೌಕಿ ಹಾಗೂ ರಂಗದಲ್ಲಿ ಅಂಥ ಋಣಾತ್ಮಕ ಅನುಭವ ಈವರೆಗೂ ನನಗೆ ಆಗಿಲ್ಲ. ಅಶ್ವಿನಿ ಕೊಂಡಾಕುಳಿ ಹೇಳಿಕೆಗೆ ಅವರೇ ವಿವರಣೆ ಕೊಡಬೇಕು’ ಎಂದವರು ಹೇಳಿದ್ದಾರೆ. `ರಂಗದಲ್ಲಿ ನನ್ನ ಪಾತ್ರ ಮುಖ್ಯವಾಹಿನಿಗೆ ಬರಲು ಚಿಟ್ಟಾಣಿ ಅಜ್ಜ, ಧಾರೇಶ್ವರರು, ಜಲವಳ್ಳಿಯವರು, ಹೆರಂಜಾಲು ಗೋಪಾಲಣ್ಣ, ತೀರ್ಥಳ್ಳಿ ಗೋಪಾಲಣ್ಣ, ಜಲವಳ್ಳಿ ವಿದ್ಯಣ್ಣ, ಎಂ ಕೆಯವರು, ಯಲಗುಪ್ಪ ಸುಬ್ಬಣ್ಣ, ನೀಲ್ಕೋಡು ಶಂಕರಣ್ಣ, ಚಿಟ್ಟಾಣಿ ಮಾವ, ನಾಗೇಂದ್ರಣ್ಣ, ಕಾಸರಕೋಡು, ಉದಯಣ್ಣ, ಕಿರಾಡಿ ಎಲ್ಲರೂ ಕಾರಣರಾಗಿದ್ದಾರೆ. ನಾನು ರಂಗದಲ್ಲಿ ಕಂಡ ಪ್ರತಿಯೊಬ್ಬ ಕಲಾವಿದರೂ ತಮ್ಮ ಮನೆಯ ಹೆಣ್ಣುಮಕ್ಕಳಂತೆಯೇ ನೋಡುವ ವಿಶಾಲ ಹೃದಯಗಳಿಗೆ ಸದಾ ನಮಿಸುವೆ’ ಎಂದು ನಾಗಶ್ರೀ ಜಿ ಎಸ್ ಗೀಜಗಾರು ಹೇಳಿದ್ದಾರೆ. `ಯಕ್ಷಗಾನದಿಂದ ದೊರೆತ ಅನೇಕಾನೇಕ ಸೋದರರಿಗೆ ನಾನು ಎಷ್ಟು ಕೃತಜ್ಞತೆ ಹೇಳಿದರೂ ಕಡಿಮೆ’ ಎಂದವರು ತಿಳಿಸಿದ್ದಾರೆ. - [ಶಿರಸಿ ಮತ್ತು ಸಂಘ ಪರಿವಾರ: RSS ಕಾರ್ಯಕರ್ತರಿಗೆ ಇಲ್ಲಿ ಚಿಕಿತ್ಸೆ ಉಚಿತ!](https://mobiletime.in/2025/10/sirsi-and-sangh-parivar-free-treatment-here-for-rss-workers/): `ಸೇವೆಯೇ ಧರ್ಮ, ನಿಷ್ಠೆಯೇ ಮಾರ್ಗ’ ಎಂಬ ತತ್ವದ ಅಡಿ ನಡೆಯುತ್ತಿರುವ ನಮ್ಮ ನಿಮ್ಮೆಲ್ಲರ ಸ್ವಯಂ ಸೇವಕರ ಸಂಘಕ್ಕೆ ಇದೀಗ ಶತಮಾನದ ಸಂಭ್ರಮ. 1925-2025ರವರೆಗೆ ಎಲ್ಲಿಯೂ ಎಡವದೇ ಮುನ್ನುಗ್ಗುತ್ತಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘದ ಜೊತೆ ಶಿರಸಿಗೆ ಅಪರೂಪದ ಸಂಬ0ಧವಿದೆ. ಆ ಸಂಬoಧಕ್ಕೆ ಸಾಕ್ಷಿಯಾಗಿ ಶಿರಸಿಯಲ್ಲಿ ಈಗಲೂ RSS ಕಾರ್ಯಕರ್ತರಿಗೆ ವೈದ್ಯ ಕುಟುಂಬವೊoದು ಉಚಿತ ವೈದ್ಯಕೀಯ ಚಿಕಿತ್ಸೆ ನೀಡುತ್ತಿದೆ! ಸಂಘದ ದ್ವಿತೀಯ ಸರಸಂಘಚಾಲಕರಾದ ಮಾಧವ ಸದಾಶಿವ ಗೋಳವಲ್ಕರ್ ಗುರೂಜಿ ಅವರು (1906-1973) ತಮ್ಮ ಜೀವನದುದ್ದಕ್ಕೂ ಭಾರತದ ಅನೇಕ ಪ್ರಾಂತ್ಯಗಳಿಗೆ ಪ್ರವಾಸ ಮಾಡಿದರು. ಅವರ ಕಾರ್ಯಶೈಲಿಯಲ್ಲಿ ಒಂದು ವಿಶೇಷತೆ ಅಡಗಿತ್ತು. ಅವರು ಯಾವುದೇ ಊರಿನಲ್ಲಿ ಮೂರು ದಿನಕ್ಕಿಂತ ಹೆಚ್ಚು ಕಾಲ ವಾಸಿಸುತ್ತಿರಲಿಲ್ಲ. ಕೆಲವರ ಅಂಬೋಣದ0ತೆ, ನಿರಂತರ ಪ್ರವಾಸ ಅವರ ಜೀವನದ ಭಾಗವಾಗಿತ್ತು. ಆದರೆ ಶಿರಸಿ ಮಾತ್ರ ಅವರ ಜೀವನದಲ್ಲಿ ಹೊಸ ಅಧ್ಯಾಯ ತೆರೆಯಿತು. ಗುರೂಜಿಯವರು ಶಿರಸಿಗೆ ಎರಡು ಬಾರಿ ಭೇಟಿ ನೀಡಿದ್ದರು. ಆ ಎರಡು ಸಲವೂ ಅವರು ಎರಡು ತಿಂಗಳಿಗಿ0ತ ಹೆಚ್ಚು ದಿನ ಇಲ್ಲಿಯೇ ವಾಸವಾಗಿದ್ದರು. ಇದನ್ನು ಶಿರಸಿಗೆ ಸಿಕ್ಕ ಅಪರೂಪ ಹಾಗೂ ಅಸಾಧಾರಣ ಗೌರವ ಎಂದೇ ಭಾವಿಸಲಾಗುತ್ತದೆ. ಆಯುರ್ವೇದ ಚಿಕಿತ್ಸೆಗಾಗಿ ಭೇಟಿ ಗುರೂಜಿಯವರ ಶಿರಸಿ ಪ್ರವಾಸದ ಮುಖ್ಯ ಕಾರಣ ಆರೋಗ್ಯ ಚಿಕಿತ್ಸೆಯಾಗಿತ್ತು. ಶಿರಸಿಯ ಖ್ಯಾತ ಆಯುರ್ವೇದ ವೈದ್ಯರಾದ ವೈದ್ಯ ಗಣಪತರಾವ ಪಟವರ್ಧನ ಅವರ ಸಂಶೋಧನಾತ್ಮಕ ಚಿಕಿತ್ಸಾ ಪದ್ಧತಿಯ ಬಗ್ಗೆ ಗುರೂಜಿಯವರಿಗೆ ಮಾಹಿತಿ ಸಿಕ್ಕಿತ್ತು. ವೈದ್ಯ ಪಟವರ್ಧನರು ಕೇವಲ ಶಾಸ್ತ್ರೀಯ ಆಯುರ್ವೇದವನ್ನು ಅನುಸರಿಸುವವರಲ್ಲ ಎಂಬ ಸತ್ಯ ಅರಿವಾಗಿತ್ತು. ವೈದ್ಯ ಪಟವರ್ಧನರು ತಮ್ಮದೇ ಆದ ಸಂಶೋಧನೆಗಳ ಆಧಾರದ ಮೇಲೆ ವಿಶೇಷ ಚಿಕಿತ್ಸಾ ಪದ್ಧತಿಗಳನ್ನು ಅಭಿವೃದ್ಧಿಪಡಿಸಿದ್ದರು. ಅದೇ ಆಧಾರದಲ್ಲಿ ವೈದ್ಯರು ಸ್ವತಃ ಪ್ರತಿದಿನ ಗುರೂಜಿಯವರಿಗೆ ಚಿಕಿತ್ಸೆ ನೀಡುತ್ತಿದ್ದರು. ಈ ಚಿಕಿತ್ಸೆಯ ಫಲಪ್ರದತೆಯೇ ಗುರೂಜಿಯವರನ್ನು ಶಿರಸಿಯಲ್ಲಿ ದೀರ್ಘಕಾಲ ಉಳಿಯುವಂತೆ ಮಾಡಿತು. ಗುರೂಜಿಯವರ ರವಿದರ್ಶನ-ಪತ್ರ ವ್ಯವಹಾರ ಗುರೂಜಿಯವರು ಶಿರಸಿಯ ಹೋಸಪೇಟೆ ರಸ್ತೆಯಲ್ಲಿರುವ ಕಾಶಿನಾಥ ಮೂಡಿಯವರ `ರವಿದರ್ಶನ’ ನಿವಾಸದಲ್ಲಿ ವಾಸವಾಗಿದ್ದರು. ಶಿರಸಿಯ ಶುದ್ಧ ಪರಿಸರ ಮತ್ತು ಪ್ರಶಾಂತ ವಾತಾವರಣವೂ ಅವರ ಆರೋಗ್ಯ ಸುಧಾರಣೆಗೆ ಸಹಕಾರಿಯಾಗಿತ್ತು. ಈಗಲೂ ಸಾಕ್ಷಿಯಾಗಿರುವ ಗುರೂಜಿಯವರು ಮತ್ತು ವೈದ್ಯ ಪಟವರ್ಧನರ ನಡುವಿನ ಪತ್ರ ವ್ಯವಹಾರವು ಈ ಸಂಬ0ಧದ ಆತ್ಮೀಯತೆಯನ್ನು ತೋರಿಸುತ್ತದೆ. ಗುರೂಜಿಯವರ ಕಾರ್ಯದರ್ಶಿಯವರು ವೈದ್ಯರಿಗೆ ಬರೆದ ಮೊದಲ ಪತ್ರದಲ್ಲಿ ಗುರೂಜಿಯವರ ಆರೋಗ್ಯ ಸ್ಥಿತಿ ಮತ್ತು ಚಿಕಿತ್ಸೆಯ ಅಗತ್ಯದ ಬಗ್ಗೆ ಮಾಹಿತಿಗಳಿವೆ. ನಂತರ ಗುರೂಜಿಯವರೇ 8 ಬಾರಿ ವೈದ್ಯರಿಗೆ ಪತ್ರ ಬರೆದಿದ್ದಾರೆ. ಸಾಮಾನ್ಯವಾಗಿ ಗುರೂಜಿಯವರು ತಮ್ಮ ಕಾರ್ಯದರ್ಶಿಗಳ ಮೂಲಕವೇ ಪತ್ರ ಬರೆಸುತ್ತಿದ್ದರು. ಆದರೆ, ಶಿರಸಿಯ ವೈದ್ಯರಿಗೆ ಅವರು ಸ್ವತಃ ಪತ್ರ ಬರೆದಿದನ್ನು ಗಮನಿಸಿದರೆ ವೈಯಕ್ತಿಕ ಪತ್ರಗಳು ವೈದ್ಯರ ಮೇಲಿನ ಅವರ ವಿಶ್ವಾಸ ಮತ್ತು ಗೌರವಕ್ಕೆ ಸಾಕ್ಷಿಯಾಗಿದೆ. ಈ ಎಲ್ಲಾ ಪತ್ರಗಳು ಪಟವರ್ಧನ ಕುಟುಂಬದ ಸಂಗ್ರಹದಲ್ಲಿ ಸುರಕ್ಷಿತವಾಗಿವೆ. ಗುರೂಜಿಯವರು ಸ್ವತಃ ಬರೆದ ಈ ಪತ್ರಗಳು ಕರ್ನಾಟಕದಲ್ಲೇ ಶಿರಸಿಯಲ್ಲಿ ಮಾತ್ರ ಲಭ್ಯವಿರುವ ಅಪರೂಪದ ಐತಿಹಾಸಿಕ ದಾಖಲೆಗಳಾಗಿವೆ. ತಲೆಮಾರುಗಳ ಸೇವಾ ಸಂಪ್ರದಾಯ: ಪಟವರ್ಧನ ಕುಟುಂಬದ ಸೇವಾ ಸಂಪ್ರದಾಯ ಮೂರು ತಲೆಮಾರುಗಳವರೆಗೆ ನಿರಂತರವಾಗಿ ಮುಂದುವರೆದಿದೆ. ವೈದ್ಯ ಗಣಪತರಾವ ಪಟವರ್ಧನ ಅವರದ್ದು ಮೊದಲ ತಲೆಮಾರಾಗಿದ್ದು, ಅವರೇ ಗುರೂಜಿಯವರಿಗೆ ಆಯುರ್ವೇದ ಚಿಕಿತ್ಸೆ ನೀಡಿದ ವೈದ್ಯರು. ಅವರ ಸಂಶೋಧನಾತ್ಮಕ ಚಿಕಿತ್ಸಾ ಪದ್ಧತಿಯು ಗುರೂಜಿಯವರ ಪೂರ್ಣ ನಂಬಿಕೆಯನ್ನು ಗಟ್ಟಿಗೊಳಿಸಿತ್ತು. ನಂತರ ಅವರ ಪುತ್ರ ಡಾ ಅರವಿಂದ ಪಟವರ್ಧನ ತಂದೆಯ ಸೇವಾ ಸಂಪ್ರದಾಯವನ್ನು ಮುಂದುವರಿಸಿದರು. ಸಂಘದ ಕಾರ್ಯಕರ್ತರಿಗೆ ನಿರಂತರವಾಗಿ ಚಿಕಿತ್ಸೆ ನೀಡಿದರು. ಡಾ ರವಿಕಿರಣ ಪಟವರ್ಧನ ಅವರು ಪ್ರಸ್ತುತ ಶಿರಸಿಯಲ್ಲಿ ಆಯುರ್ವೇದ ವೈದ್ಯರಾಗಿ ಕಾರ್ಯನಿರತರಾಗಿದ್ದಾರೆ. ಅವರು ರಾಷ್ಟ್ರೀಯ ಸ್ವಯಂಸೇವಕ ಸಂಘದ ಪೂರ್ಣಾವಧಿ ಕಾರ್ಯಕರ್ತರಿಗೆ ನಿಸ್ವಾರ್ಥವಾಗಿ ಚಿಕಿತ್ಸೆ ನೀಡುತ್ತಲೇ ಇದ್ದಾರೆ. ತೃತೀಯ ತಲೆಮಾರಿನ ಅವಧಿಯಲ್ಲಿ ಅವರು ತಮ್ಮ ತಾತ-ಮುತ್ತಾತನವರು ಆರಂಭಿಸಿದ ಸೇವಾ ಸಂಪ್ರದಾಯವನ್ನು ಗೌರವಪೂರ್ವಕವಾಗಿ ಮುನ್ನಡೆಸಿದ್ದಾರೆ. ಗುರೂಜಿಯವರನ್ನು ಸೆಳೆದ ಶಿರಸಿ: ಶಿರಸಿ ವೈದ್ಯರ ಪರಿಣಾಮಕಾರಿ ಚಿಕಿತ್ಸೆ ಗುರೂಜಿಯವರ ಶಿರಸಿ ಸೆಳೆತಕ್ಕೆ ಮುಖ್ಯ ಕಾರಣ. ವೈದ್ಯ ಪಟವರ್ಧನರ ಸಂಶೋಧನಾತ್ಮಕ ಆಯುರ್ವೇದ ಚಿಕಿತ್ಸೆಯು ಗುರೂಜಿಯವರ ಆರೋಗ್ಯದಲ್ಲಿ ಗಣನೀಯ ಸುಧಾರಣೆ ತಂದಿತು. ಜೊತೆಗೆ ಶಿರಸಿಯ ಶುದ್ಧ ಪರಿಸರ, ಮಲೆನಾಡಿನ ಶಾಂತ, ಶುದ್ಧ ವಾತಾವರಣವು ಆರೋಗ್ಯ ಚೇತರಿಕೆಗೆ ಅನುಕೂಲಕರವಾಗಿತ್ತು. ವೈದ್ಯರು ಮತ್ತು ಗುರೂಜಿಯವರ ನಡುವೆ ವೈದ್ಯ-ರೋಗಿ ಸಂಬ0ಧಕ್ಕಿ0ತ ಮೀರಿ ಆತ್ಮೀಯ ಸ್ನೇಹ ಬೆಳೆದಿತ್ತು. ರವಿದರ್ಶನ ಮನೆಯ ಕುಟುಂಬದ ಪ್ರೀತಿಯ ಆತಿಥ್ಯ ಸಹ ಗುರೂಜಿಯವರನ್ನು ತಿಂಗಳುಗಳ ಕಾಲ ಇಲ್ಲಿಯೇ ಉಳಿಸಿಕೊಂಡಿತು. ಶಿರಸಿಯು ಕೇವಲ ಗುರೂಜಿಯವರಿಗೆ ಚಿಕಿತ್ಸೆ ನೀಡಿದ ನಗರವಲ್ಲ. ಸಂಘದ ಕಾರ್ಯಕರ್ತರಿಗೆ ತಲೆಮಾರುಗಳ ಕಾಲ ನಿಸ್ವಾರ್ಥ ಸೇವೆ ನೀಡಿದ ಹಾಗೂ ಈಗಲೂ ನೀಡುತ್ತಿರುವ ಊರು. ಹೀಗಾಗಿ 2025ರಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘವು ತನ್ನ 100ನೇ ವರ್ಷವನ್ನು ಆಚರಿಸುತ್ತಿದೆ. ಈ ಶತಮಾನೋತ್ಸವದಲ್ಲಿ ಶಿರಸಿಯ ಈ ಐತಿಹಾಸಿಕ ಕೊಡುಗೆಯ ಸ್ಮರಣೆ ಅತ್ಯಂತ ಮಹತ್ವದ್ದಾಗಿದೆ. ಮಾಹಿತಿ: ಡಾ ರವಿಕಿರಣ ಪಟವರ್ಧನ, ಆಯುರ್ವೇದ ವೈದ್ಯರು - [2025 ಅಕ್ಟೋಬರ್ 05ರ ದಿನದ ಭವಿಷ್ಯ](https://mobiletime.in/2025/10/prediction-for-october-05-2025/): ಮೇಷ ರಾಶಿ: ಆರೋಗ್ಯದ ಬಗ್ಗೆ ಗಮನಹರಿಸಿ. ಹಣಕಾಸು ನಿರ್ವಹಣೆಯ ಬಗ್ಗೆ ಕಾಳಜಿ ಅಗತ್ಯ. ಕೆಲಸದಲ್ಲಿ ಒಗ್ಗಟ್ಟು ಅನಿವಾರ್ಯ. ವೃಷಭ ರಾಶಿ: ನಿಮ್ಮೊಳಗಿನ ಧೈರ್ಯ ಉತ್ಸಾಹ ಹೆಚ್ಚಿಸಲಿದೆ. ಕೆಲಸದಲ್ಲಿ ಹೊಸ ಯೋಜನೆಗಳನ್ನು ಕಾರ್ಯಗತಗೊಳಿಸಲು ಉತ್ತಮ ಸಮಯ. ಯೋಗ ಹಾಗೂ ಧ್ಯಾನ ಮಾಡಿ. ಮಿಥುನ ರಾಶಿ: ನಿಮ್ಮ ಮಾತು ಬೇರೆಯವರ ಮೇಲೆ ಹೆಚ್ಚಿನ ಪ್ರಭಾವ ಬೀರಲಿದೆ. ಸ್ನೇಹಿತರ ಸಹಾಯ ಸಿಗಲಿದೆ. ವ್ಯವಹಾರಗಳು ವೃದ್ಧಿ ಆಗಲಿದೆ. ಕರ್ಕ ರಾಶಿ: ದಾಂಪತ್ಯ ಜೀವನ ಉತ್ತಮವಾಗಿರಲಿದೆ. ವಿದ್ಯಾ ದೇವರ ಆರಾಧನೆ ಮಾಡಿದರೆ ಉತ್ತಮ. ಅನಗತ್ಯ ಜಗಳ ನಿಮಗೆ ಒಳ್ಳೆಯದಲ್ಲ. ಸಿಂಹ ರಾಶಿ: ನಿಮ್ಮ ಮನಸ್ಸನ್ನು ಉತ್ತಮ ವಿಚಾರದ ಕಡೆ ಸೆಳೆಯಿರಿ. ಕೆಲಸ ಅಧಿಕ ಆದಾಗ ವಿಶ್ರಾಂತಿ ಅಗತ್ಯ. ಶಾಂತಿ ಹಾಗೂ ಧೈರ್ಯದಿಂದ ಕೆಲಸ ಮಾಡಿ. ಕನ್ಯಾ ರಾಶಿ: ನಿಮ್ಮ ಕೆಲಸದ ವಿಷಯದಲ್ಲಿ ಕೌಶಲ್ಯ ಅಳವಡಿಸಿಕೊಳ್ಳಿ. ಅಪರಿಚಿತರ ಬಳಿ ಮಾತನಾಡುವಾಗ ಎಚ್ಚರಿಕೆವಹಿಸಿ. ನಿಮ್ಮ ಜೀವನಕ್ಕೆ ನೇರ ನಡವಳಿಕೆ ಉತ್ತಮ. ತುಲಾ ರಾಶಿ: ಆದಾಯದ ಮೂಲಗಳು ವೃದ್ಧಿ ಆಗಲಿದೆ. ಸಮಾಧಾನದಿಂದ ಮಾಡುವ ಕೆಲಸ ಫಲ ಕೊಡಲಿದೆ. ಹಣಕಾಸು ವಿಷಯದಲ್ಲಿ ಸ್ಥಿರತೆ ಕಾಣಲಿದೆ. ವೃಶ್ಚಿಕ ರಾಶಿ: ವೈಯಕ್ತಿಕ ಜೀವನದಲ್ಲಿ ಬೇರೆಯವರ ದಾಳಿ ಆಗುವ ಲಕ್ಷಣವಿದೆ. ಆಯಾಸ ತಪ್ಪಿಸಿ, ಚಟುವಟಿಕೆಯಿಂದ ಕೆಲಸ ಮಾಡಲು ಪ್ರಯತ್ನಿಸಿ. ನಿಮ್ಮ ಆರೋಗ್ಯದ ಕಡೆ ಗಮನಕೊಡಿ. ಧನು ರಾಶಿ: ನಿಮ್ಮ ಹಳೆಯ ಯೋಜನೆಗಳು ಫಲ ಕೊಡಲಿದೆ. ಹೊಸ ಉದ್ಯೋಗಗಳು ಅರೆಸಿ ಬರಲಿದೆ. ಕುಟುಂಬದವರ ಜೊತೆ ಕಾಲ ಕಳೆಯಿರಿ. ಮಕರ ರಾಶಿ: ಜೀವನದಲ್ಲಿ ಶಿಸ್ತು ಅಳವಡಿಸಿಕೊಳ್ಳಿ. ನಿವೃತ್ತಿ ಅಂಚಿನಲ್ಲಿದ್ದವರು ಭವಿಷ್ಯದ ಜೀವನದ ಬಗ್ಗೆ ಚಿಂತಿಸಿ. ಕೆಲಸದ ವಿಷಯದಲ್ಲಿ ರಾಜಿ ಬೇಡ. ಕುಂಭ ರಾಶಿ: ಪ್ರವಾಸದ ಅವಧಿಯಲ್ಲಿ ಆರೋಗ್ಯ ಹದಗೆಡುವ ಸಾಧ್ಯತೆಗಳಿವೆ. ಕುಟುಂಬದವರ ಜೊತೆ ಸಹನೆಯಿಂದ ವರ್ತಿಸಿ. ನಿಮ್ಮ ಮನಸ್ಸಿನಲ್ಲಿ ಉತ್ತಮ ಆಲೋಚನೆ ಮಾತ್ರ ಬರುವಂತೆ ನೋಡಿಕೊಳ್ಳಿ. ಮೀನ ರಾಶಿ: ನಿಮ್ಮ ಬುದ್ಧಿವಂತಿಕೆಯ ನಿರ್ಧಾರಗಳು ಫಲ ಕೊಡಲಿದೆ. ಉದ್ಯೋಗದ ವಿಷಯದಲ್ಲಿ ಜವಾಬ್ದಾರಿ ಹೆಚ್ಚಲಿದೆ. ಶ್ರಮಕ್ಕೆ ತಕ್ಕ ಫಲ ಸಿಗಲಿದೆ. - [ಸರ್ಕಾರಿ ಹರಾಜು: ಯಲ್ಲಾಪುರ ಪೊಲೀಸರಿಂದ ಬೈಕು-ಕಾರು ಮಾರಾಟ!](https://mobiletime.in/2025/10/government-auction-yellapur-police-sell-bikes-and-cars/): ಅಕ್ಟೊಬರ್ 13ರಂದು ಯಲ್ಲಾಪುರ ಪೊಲೀಸರು ವಿವಿಧ ವಾಹನಗಳ ಹರಾಜು ನಡೆಸಲಿದ್ದಾರೆ. ಒಂದು ಕಾರು ಹಾಗೂ 13 ಬೈಕುಗಳನ್ನು ಆ ದಿನ ಹರಾಜು ನಡೆಸಲು ನಿರ್ಧರಿಸಲಾಗಿದೆ. ವಿವಿಧ ಅಪರಾಧ ಪ್ರಕರಣಗಳಲ್ಲಿ ಯಲ್ಲಾಪುರ ಪೊಲೀಸರು ಜಪ್ತು ಮಾಡಿದ ವಾಹನಗಳನ್ನು ಹರಾಜು ಮಾಡಲು ಸಕಾರ ಆಸಕ್ತಿವಹಿಸಿದೆ. ನ್ಯಾಯಾಲಯ ಸಹ ಇದಕ್ಕೆ ಸಮ್ಮತಿ ನೀಡಿದೆ. ಹೀಗಾಗಿ ಅಕ್ಟೋಬರ್ 13ರಂದು ಬೆಳಗ್ಗೆ 10 ಗಂಟೆಗೆ ಹರಾಜು ಪ್ರಕ್ರಿಯೆ ಶುರುವಾಗಲಿದೆ. ಹರಾಜಿನ ಪೈಕಿ ಕೆಲ ವಾಹನಗಳು ಸುಸ್ಥಿತಿಯಲ್ಲಿದೆ. ಉಳಿದವು ಗುಜುರಿಗೆ ಯೋಗ್ಯವಾಗಿದೆ. ಹೀಗಾಗಿ ಯಥಾ ಸ್ಥಿತಿಯಲ್ಲಿ ವಾಹನಗಳ ಹರಾಜು ನಡೆಯಲಿದ್ದು, ಅತಿ ಹೆಚ್ಚು ಮೊತ್ತ ಕೂಗಿದವರಿಗೆ ಆ ವಾಹನಗಳು ಸಿಗಲಿದೆ. ಯಲ್ಲಾಪುರದ ಪೊಲೀಸ್ ವಸತಿ ಗೃಹದ ಬಳಿ ಹರಾಜು ನಡೆಯಲಿದೆ. ಆಸಕ್ತ ಖರೀದಿದಾರರು ಆ ದಿನ ಆ ಸಮಯಕ್ಕೆ ಅಲ್ಲಿ ಹಾಜರಿದ್ದರೆ ಸಾಕು. ಇನ್ನೂ ಏನಾದರೂ ಮಾಹಿತಿ ಬೇಕಿದ್ದರೆ ಇಲ್ಲಿ ಫೋನ್ ಮಾಡಿ: 9480805273 - [ಅತಿಕ್ರಮಣ ಜಮೀನಿಗೆ ಅಕ್ರಮ ಪ್ರವೇಶ: ಹೊಡೆದಾಟ!](https://mobiletime.in/2025/10/illegal-entry-into-encroached-land-fight/): ಮೂರು ತಿಂಗಳ ಹಿಂದೆ ಮಾವಿನ ತೋಟಕ್ಕೆ ಎಮ್ಮೆ ಮೇಯಿಸಲು ಬಿಟ್ಟವರ ವಿರುದ್ಧ ಯಲ್ಲಾಪುರದ ಗೋಯಾ ಬಾಬು ಅಡೋಳಕರ್ ಅವರು ಕಾನೂನು ಸಮರ ಸಾರಿದ್ದಾರೆ. ತಮ್ಮ ತೋಟಕ್ಕೆ ನುಗ್ಗಿ ಮಾವಿನ ಹಣ್ಣು ಕದ್ದವರ ವಿರುದ್ಧ ಅವರು ಪೊಲೀಸ್ ದೂರು ನೀಡಿದ್ದಾರೆ. ಯಲ್ಲಾಪುರ ಹೊಸಳ್ಳಿಯ ದಾಂಡೇಲಿವಾಡದಲ್ಲಿ ಗೋಯಾ ಬಾಬು ಅಡೋಳಕರ್ ಅವರು ಅತಿಕ್ರಮಣ ಜಮೀನು ಮಾಡಿದ್ದಾರೆ. ಅವರ ತಂದೆಯವರ ಹೆಸರಿನಲ್ಲಿ ಜಮೀನಿನ ಜಿಪಿಎಸ್ ದಾಖಲೆಗಳಿವೆ. ಹೀಗಿರುವಾಗ ಬೈಲಂದೂರು ಗೌಳಿವಾಡದ ಬಕ್ಕು ದೋಂಡು ತೋರತ್, ಬಾಬು ದೋಂಡು ತೋರತ್, ಜಿಲ್ಲು ದೋಂಡು ತೋರತ್ ಹಾಗೂ ಜನ್ನು ಬಾಬು ತೋರತ್ ಅವರು ಪದೇ ಪದೇ ಆ ಜಮೀನಿನ ಒಳಗೆ ಪ್ರವೇಶಿಸುತ್ತಿದ್ದಾರೆ. ಇದನ್ನು ಗೋಯಾ ಬಾಬು ಅಡೋಳಕರ್ ಅವರು ಸಹಿಸುತ್ತಿಲ್ಲ. ಎದುರುದಾರರು ತಾವು ಸಾಕಿದ ಎಮ್ಮೆಯನ್ನು ಸಹ ಗೋಯಾ ಬಾಬು ಅಡೋಳಕರ್ ಅವರ ಜಮೀನಿನ ಒಳಗೆ ಮೇವಿಗೆ ಬಿಡುತ್ತಾರೆ. ಇದೇ ವಿಷಯವಾಗಿ ಎರಡು ಕುಟುಂಬದ ನಡುವೆ ಜಗಳ ನಡೆಯುತ್ತಿದ್ದು, ಮೂರು ತಿಂಗಳ ಹಿಂದೆ ಗೋಯಾ ಬಾಬು ಅಡೋಳಕರ್ ಅವರ ಜಮೀನಿನಲ್ಲಿದ್ದ ಮಾವಿನ ಹಣ್ಣುಗಳು ಸಹ ಕಳ್ಳತನವಾಗಿವೆ. ಅಕ್ರಮವಾಗಿ ಜಮೀನಿಗೆ ಪ್ರವೇಶಿಸಿ ಮಾವಿನಹಣ್ಣು ಕೊಯ್ದಿರುವುದು ಹಾಗೂ ಎಮ್ಮೆಯನ್ನೂ ಜಮೀನಿಗೆ ಮೇಯಲು ಬಿಟ್ಟು ಬೆಳೆ ಹಾಳು ಮಾಡಿದ ವಿಚಾರ ಹೊಡೆದಾಟದ ಸ್ವರೂಪ ಪಡೆದಿದೆ. ಸೆಪ್ಟೆಂಬರ್ 5ರಂದು ಗೋಯಾ ಬಾಬು ಅಡೋಳಕರ್ ಅವರ ಜಮೀನಿನಲ್ಲಿದ್ದ ಅವರ ತಾಯಿಯ ಮೇಲೆ ನಾಲ್ವರು ಹಲ್ಲೆ ಮಾಡಿದ್ದಾರೆ. ಈ ಬಗ್ಗೆ ನ್ಯಾಯಾಲಯದ ಮೊರೆ ಹೋದ ಗೋಯಾ ಬಾಬು ಅಡೋಳಕರ್ ಅವರು ಪೊಲೀಸರ ಮೇಲೆ ಒತ್ತಡ ತಂದು ಪ್ರಕರಣ ದಾಖಲಾಗುವಂತೆ ಮಾಡಿದ್ದಾರೆ. ಪೊಲೀಸರು ಸದ್ಯ ಈ ಪ್ರಕರಣದ ವಿಚಾರಣೆ ನಡೆಸುತ್ತಿದ್ದಾರೆ. - [ಹಕ್ಕಿಗಾಗಿ ಹೋರಾಟ: ಆತಂಕದಿoದಲೇ ಅರ್ಜಿ ಹಿಡಿದು ಅಲೆದಾಡಿದ ಅತಿಕ್ರಮಣದಾರ](https://mobiletime.in/2025/10/fighting-for-rights-a-trespasser-wandered-around-without-any-fear-holding-a-petition/): ಅರಣ್ಯ ಅತಿಕ್ರಮಣದಾರರ ಮೇಲ್ಮನವಿ ವಿಷಯವಾಗಿ ಶನಿವಾರ ಶಿರಸಿಯಲ್ಲಿ 20 ಸಾವಿರಕ್ಕೂ ಅಧಿಕ ಅರ್ಜಿಗಳು ಅರಣ್ಯ ಇಲಾಖೆಯ ಕಡತ ಸೇರಿವೆ. ಉತ್ತರ ಕನ್ನಡ ಜಿಲ್ಲೆಯ ನಾನಾ ಭಾಗಗಳಿಂದ ಬಂದ ಅರಣ್ಯ ಅತಿಕ್ರಮಣದಾರರ ಆತಂಕದಿoದಲೇ ತಮ್ಮ ಮೇಲ್ಮನವಿ ಸಲ್ಲಿಸಿದ್ದಾರೆ. ಸರ್ಕಾರದ ಮುಖ್ಯ ಕಾರ್ಯದರ್ಶಿ ಮಾಡಿದ ಎಡವಟ್ಟಿನಿಂದಾಗಿ ಅರಣ್ಯ ಅತಿಕ್ರಮಣದಾರರು ಹಕ್ಕು ವಂಚಿತರಾಗುವ ಸಾಧ್ಯತೆಯಿದ್ದು, ಇದೇ ಇಂದಿನ ಮುಖ್ಯ ವಿಷಯವಾಗಿತ್ತು. ಅಲ್ಲಿ ಭಾಗವಹಿಸಿದ ಪ್ರತಿಯೊಬ್ಬರು ಅರಣ್ಯ ಭೂಮಿ ಹಕ್ಕಿನ ವಂಚಿತವಾಗುವ ಭಯದಲ್ಲಿದ್ದರು. ಬುಡಕಟ್ಟು ಜನಾಂಗದವರ ಜೊತೆ ಆದಿವಾಸಿಗಳು, ಕರಾವಳಿಯ ಭಾಗದ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಕಾಣಿಸಿದರು. `ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ಸುಪ್ರೀಂ ಕೊರ್ಟನ ನಿರ್ದೇಶನ ಮತ್ತು ಕೇಂದ್ರ ಸರ್ಕಾರದ ಮಾರ್ಗದರ್ಶನದ ವ್ಯತಿರಿಕ್ತವಾಗಿ ಎರಡುವರೇ ಲಕ್ಷಕ್ಕೂ ಮಿಕ್ಕಿ ಅರ್ಜಿಗಳನ್ನ ತಿರಸ್ಕರಿಸಿ ವರದಿ ಸಲ್ಲಿಸಿದ್ದಾರೆ. ಈ ಹಿನ್ನಲೆಯಲ್ಲಿ ಮುಖ್ಯ ಕಾರ್ಯದರ್ಶೀಗಳ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಲಾಗುತ್ತದೆ’ ಎಂದು ನ್ಯಾಯವಾದಿ ರವೀಂದ್ರ ನಾಯ್ಕ ಈ ವೇಳೆ ಘೋಷಿಸಿದರು. - [ಚಡ್ಡಿ ಧರಿಸಿ ಬಂದವ ಕತ್ತಿಗೆ ಕೈ ಹಾಕಿದ!](https://mobiletime.in/2025/10/the-one-who-came-wearing-shorts-put-his-hand-to-the-sword/): ಹೊನ್ನಾವರದಲ್ಲಿ ನಡೆದು ಹೋಗುತ್ತಿದ್ದ ವೃದ್ಧೆಯ ಮೇಲೆ ಕಣ್ಣು ಹಾಕಿದ ಕಳ್ಳನೊಬ್ಬ ಅವರ ಕತ್ತಿನಲ್ಲಿದ್ದ ಬಂಗಾರದ ಮಾಂಗಲ್ಯ ಸರ ಎಗರಸಿ ಪರಾರಿಯಗಿದ್ದು, ಆ ಅಪರಿಚಿತನಿಗಾಗಿ ಪೊಲೀಸರು ಶೋಧ ನಡೆಸಿದ್ದಾರೆ. ಅಕ್ಟೊಬರ್ 3ರ ಬೆಳಗ್ಗೆ ಹೊನ್ನಾವರ ಹೇರಂಗಡಿ ಗುಡ್ಡೆಕೇರಿಯ ಮಾದೇವಿ ರಾಮ ನಾಯ್ಕ (67) ಅವರು ತಮ್ಮ ಮನೆಯಾದ ಭಕ್ತಿನಹೊಂಡದ ಕಡೆ ನಡೆದು ಹೋಗುತ್ತಿದ್ದರು. ಬಿಳಿ ಬಣ್ಣದ ಅಂಗಿ-ಕಪ್ಪು ಬಣ್ಣದ ಚಡ್ಡಿ ಧರಿಸಿ ಬಂದ ಕಳ್ಳನೊಬ್ಬ ಅವರ ಕತ್ತಿನಲ್ಲಿದ್ದ 35 ಗ್ರಾಂ ಬಂಗಾರವನ್ನು ದೋಚಿದರು. 2.10 ಲಕ್ಷ ರೂ ಮೌಲ್ಯದ ಮಾಂಗಲ್ಯ ಕಳೆದುಕೊಂಡ ಅವರು ಬೊಬ್ಬೆ ಹಾಕಿದರೂ ಸಹ ಕಳ್ಳನನ್ನು ಹಿಡಿಯಲು ಆಗಲಿಲ್ಲ. ಕಳ್ಳನ ಚಹರೆ ವಿವರಿಸಿದ ಮಾದೇವಿ ನಾಯ್ಕ ಅವರು ಪೊಲೀಸ್ ದೂರು ನೀಡಿದ್ದಾರೆ. ಹೊನ್ನಾವರ ಪೊಲೀಸರು ಪ್ರಕರಣ ದಾಖಲಿಸಿದ್ದು, ಸರಗಳ್ಳನ ಹುಡುಕಾಟ ನಡೆಸಿದ್ದಾರೆ. `ಬೆಲೆ ಬಾಳುವ ಆಭರಣಗಳನ್ನು ಕಳ್ಳರಿಗೆ ಕಾಣುವ ಹಾಗೇ ಪ್ರದರ್ಶಿಸಬೇಡಿ’ ಎಂದು ಮಾದೇವಿ ನಾಯ್ಕ ಅವರಿಗೆ ಪೊಲೀಸರು ತಿಳಿಸಿದರು. - [ಪಾಲಕರ ನಿದ್ದೆಗೆಡಿಸಿದ ಭಯಾನಕ ಶಿಶು!](https://mobiletime.in/2025/10/a-terrifying-baby-that-woke-up-its-parents/): ಭಟ್ಕಳದಲ್ಲಿ ಜನಿಸಿದ ವಿಚಿತ್ರ ಮಗುವೊಂದು ಪಾಲಕರ ನಿದ್ದೆಗೆಡಿಸಿದೆ. ವೈದ್ಯರು ಸಹ ಮಗುವನ್ನು ನೋಡಿ ಅಚ್ಚರಿವ್ಯಕ್ತಪಡಿಸಿದ್ದಾರೆ. ಭಟ್ಕಳದ ಗರ್ಭಿಣಿಯೊಬ್ಬರು ಖಾಸಗಿ ನರ್ಸಿಂಗ್ ಹೋಂ’ಗೆ ನಿಯಮಿತ ಭೇಟಿ ನೀಡುತ್ತಿದ್ದರು. ಅಲ್ಲಿ ಅವರು ತಮ್ಮ ಆರೋಗ್ಯ ತಪಾಸಣೆ ನಡೆಸುತ್ತಿದ್ದು, ಮಗುವಿನ ಬೆಳವಣಿಗೆ ಸರಿಯಾಗಿಯೇ ಇತ್ತು. ಗರ್ಭಿಣಿಯ ಸ್ಕಾನಿಂಗ್ ಅಥವಾ ಇನ್ಯಾವುದೇ ಸಮಯದಲ್ಲಿ ಯಾವ ವಿಚಿತ್ರವೂ ಅರಿವಿಗೆ ಬರಲಿಲ್ಲ. ಅದೇ ಖಾಸಗಿ ನರ್ಸಿಂಗ್ ಹೋಂ’ನಲ್ಲಿ ಅವರು ಮೂರು ದಿನದ ಹಿಂದೆ ಮಗುವಿಗೆ ಜನ್ಮ ನೀಡಿದರು. ಆದರೆ, ಜನಿಸಿದ ಮಗು ಎಲ್ಲರಿಗಿಂತಲೂ ವಿಭಿನ್ನವಾಗಿತ್ತು. ಮಗುವಿನ ಸ್ವರ, ಅಳು ಸಾಮಾನ್ಯ ಶಿಶುಗಳ ಹಾಗೆಯೇ ಇದೆ. ಆದರೆ, ದೇಹದ ರೂಪ ಮಾತ್ರ ವಿಚಿತ್ರವಾಗಿದೆ. ಮೈಮೇಲಿನ ಚರ್ಮದ ಮೇಲೆ ಮತ್ತೊಂದು ರಕ್ಷಣಾ ಪರದೆ ಬೆಳೆದಿದ್ದು, ಆ ಹೆಣ್ಣು ಮಗುವನ್ನು ನೋಡಿದ ವೈದ್ಯರು ಸಹ ಅಚ್ಚರಿವ್ಯಕ್ತಪಡಿಸಿದ್ದಾರೆ. ಇನ್ನೂ ಆ ಮಗು ಇನ್ನಿತರ ಮಕ್ಕಳಿಗಿಂತಲೂ ದಷ್ಟಪುಷ್ಟವಾಗಿದೆ. ಆರೋಗ್ಯದಲ್ಲಿಯೂ ದೊಡ್ಡ ವ್ಯತ್ಯಾಸವಿಲ್ಲ. ಆ ಬಾಣಂತಿಯ ಮೂರನೇ ಮಗು ಇದಾಗಿದ್ದು, ಮೊದಲ ಎರಡು ಮಕ್ಕಳು ಸಹಜವಾಗಿದ್ದಾರೆ. ಸದ್ಯ ಆ ಮಗುವನ್ನು ಮಣಿಪಾಲ ಆಸ್ಪತ್ರೆಗೆ ಸಾಗಿಸಿ ಅಲ್ಲಿ ಆರೈಕೆ ಮಾಡಲಾಗುತ್ತಿದೆ. - [ಸ್ಕೋಡ್‌ವೆಸ್ ಸಾರಥಿಗೆ ಹೊಸ ಜವಾಬ್ದಾರಿ](https://mobiletime.in/2025/10/new-responsibility-for-skodves-sarathi/): ಆರ್ಯಈಡಿಗ, ನಾಮಧಾರಿ, ಬಿಲ್ಲವ ಸಮುದಾಯದ ಗುರುಮಠವಾದ ಶ್ರೀರಾಮ ಕ್ಷೇತ್ರದ ಶಿರಸಿ ವಿಭಾಗಾಧ್ಯಕ್ಷರಾಗಿ ವೆಂಕಟೇಶ ಎಲ್ ನಾಯ್ಕ ಅವರು ನೇಮಕವಾಗಿದ್ದಾರೆ. ಸ್ಕೋಡ್‌ವೆಸ್ ಮೂಲಕ ಜನಸ್ನೇಹಿ ಕಾರ್ಯಕ್ರಮ ನಡೆಸುತ್ತಿರುವ ಅವರ ಸೇವೆ ಗಮನಿಸಿ ಬೃಹ್ಮಾನಂದ ಸರಸ್ವತೀ ಸ್ವಾಮೀಜಿ ಅವರು ವೆಂಕಟೇಶ ನಾಯ್ಕ ಅವರಿಗೆ ಈ ಜವಾಬ್ದಾರಿ ನೀಡಿದ್ದಾರೆ. ಶಿರಸಿಯ ಸುಪ್ರಿಯಾ ಇಂಟರ್‌ನ್ಯಾಷನಲ್ ಹೋಟೇಲಿನಲ್ಲಿ ಶನಿವಾರ ಬೃಹ್ಮಾನಂದ ಸರಸ್ವತೀ ಸ್ವಾಮೀಜಿಯವರ ಪಾದಪೂಜೆ ನಡೆಯಿತು. ವಿಶೇಷ ಅಭಿನಂದನಾ ಪಾದಪೂಜಾ ಸೇವಾ ಕಾರ್ಯಕ್ರಮದಲ್ಲಿ ವಿವಿಧ ತಾಲೂಕಿನ ಗಣ್ಯರು ಭಾಗವಹಿಸಿದ್ದರು. ಗುರು-ಹಿರಿಯರ ಸಮ್ಮುಖದಲ್ಲಿ ಸ್ವಾಮೀಜಿ ವೆಂಕಟೇಶ ನಾಯ್ಕ ಅವರಿಗೆ ಜವಾಬ್ದಾರಿ ನೀಡಿದರು. ಸಾಮಾಜಿಕ ಹಾಗೂ ಧಾರ್ಮಿಕ ಕ್ಷೇತ್ರಗಳಲ್ಲಿ ವೆಂಕಟೇಶ ನಾಯ್ಕ ಅವರು ಶ್ರಮಿಸುತ್ತಿದ್ದಾರೆ. ಅನೇಕ ಸಂಘ-ಸAಸ್ಥೆಗಳ ಅಭಿವೃದ್ಧಿಗಾರಿ ಅವರು ದುಡಿದಿದ್ದಾರೆ. ಇದೀಗ ಶಿರಸಿ, ಸಿದ್ದಾಪುರ, ಯಲ್ಲಾಪುರ, ಮುಂಡಗೋಡ, ಹಳಿಯಾಳ, ದಾಂಡೇಲಿ ವ್ಯಾಪ್ತಿಯಲ್ಲಿ ಸಮಾಜ ಮತ್ತು ಶ್ರೀ ರಾಮ ಕ್ಷೇತ್ರದ ಧಾರ್ಮಿಕ ಸಂಘಟನೆಯ ಹೊಣೆಯನ್ನು ಅವರು ಸಂತಸದಿAದ ಒಪ್ಪಿಕೊಂಡಿದ್ದಾರೆ. ಈ ವೇಳೆ ಶಿರಸಿ ತಾಲೂಕು ಆರ್ಯಈಡಿಗ, ನಾಮಧಾರಿ, ಬಿಲ್ಲವ ಅಭಿವೃದ್ಧಿ ಸಂಘದ ಅಧ್ಯಕ್ಷರಾಗಿ ಶಿರಸಿ-ಸಿದ್ದಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಭೀಮಣ್ಣ ನಾಯ್ಕ ಅವರು ನೇಮಕವಾಗಿದ್ದಾರೆ. ಜೊತೆಗೆ ಸಿದ್ದಾಪುರದ ಕೆ ಜಿ. ನಾಯ್ಕ, ವಿ ಎನ್ ನಾಯ್ಕ, ಶಿರಸಿಯ ಗಣಪತಿ ನಾಯ್ಕ ದೇವಿಕೆರೆ, ಶ್ರೀನಿವಾಸ ನಾಯ್ಕ, ಆನಂದ ನಾಯ್ಕ, ನಾಗೇಶ ನಾಯ್ಕ, ಭಟ್ಕಳದ ಶ್ರೀಧರ ನಾಯ್ಕ, ಕೃಷ್ಣ ನಾಯ್ಕ, ಮೋಹನ್ ನಾಯ್ಕ, ಹೊನ್ನಾವರದ ಟಿ.ಟಿ. ನಾಯ್ಕ, ವಾಮನ ನಾಯ್ಕ, ಕುಮಟಾದ ಮಂಜುನಾಥ ನಾಯ್ಕ, ಹೆಚ್ ಆರ್ ನಾಯ್ಕ, ಅಂಕೋಲಾದ ನಾಗೇಶ ನಾಯ್ಕ, ಯಲ್ಲಾಪುರದ ನರಸಿಂಹ ನಾಯ್ಕ ಸೇರಿ ಅನೇಕರು ಶ್ರೀಗಳ ಆಶೀರ್ವಾದಪಡೆದರು. - [ಎಲ್ಲರಿಗೂ ಗೊತ್ತಿರುವ ಕಳ್ಳ.. ಪೊಲೀಸರಿಗೆ ಮಾತ್ರ ಸಿಗುತ್ತಿಲ್ಲ!](https://mobiletime.in/2025/10/the-thief-everyone-knows-only-the-police-cant-find-him/): ಯಲ್ಲಾಪುರದ ಮಂಚಿಕೇರಿ ಹಾಗೂ ಸುತ್ತಲಿನ ಭಾಗದಲ್ಲಿ ಪದೇ ಪದೇ ಕಳ್ಳತನ ನಡೆಯುತ್ತಿದ್ದು, ಕಳ್ಳ ಯಾರು? ಎಂಬುದು ಎಲ್ಲರಿಗೂ ಗೊತ್ತಿದೆ. ಆದರೆ, ಪೊಲೀಸರ ಬಳಿ ಮಾತ್ರ ಆತನನ್ನು ಹಿಡಿಯಲು ಆಗುತ್ತಿಲ್ಲ! ಅನೇಕರು ತಮ್ಮಲ್ಲಿರುವ ಚಿನ್ನಾಭರಣಗಳನ್ನು ಸಾರ್ವಜನಿಕವಾಗಿ ಪ್ರದರ್ಶಿಸುತ್ತಿದ್ದಾರೆ. ಅಗತ್ಯವಿಲ್ಲದಿದ್ದರೂ ಅಂಥವುಗಳನ್ನು ಮೈಮೇಲೆ ಧರಿಸಿ ಎಲ್ಲಾ ಕಡೆ ಸುತ್ತಾಡುತ್ತಿದ್ದಾರೆ. `ಚಿನ್ನ ಹಾಗೂ ಬೆಲೆಬಾಳುವ ಆಭರಣಗಳನ್ನು ಬ್ಯಾಂಕ್ ಲಾಕರಿನಲ್ಲಿರಿಸಿ’ ಎಂದು ಪೊಲೀಸರು ಅರಿವು ಮೂಡಿಸಿದರೂ ಜನ ಜಾಗೃತರಾಗಿಲ್ಲ. ಹೀಗಾಗಿ ಒಂಟಿ ಮನೆ, ಚಿನ್ನಾಭರಣ ಧರಿಸುವ ಮಹಿಳೆಯರ ಮನೆಯನ್ನು ಗುರಿಯಾಗಿರಿಸಿಕೊಂಡ ವ್ಯಕ್ತಿಯೊಬ್ಬ ಪದೇ ಪದೇ ಕಳ್ಳತನ ಮಾಡಿ ಪರಾರಿಯಾಗುತ್ತಿದ್ದು, ಆತನನ್ನು ಬಂಧಿಸುವುದು ಮಾತ್ರ ಸವಾಲಾಗಿದೆ. ಏನೂ ಇಲ್ಲದ ಬಡವ ದಿಢೀರ್ ಶ್ರೀಮಂತನಾಗಿರುವುದು, ಐಷಾರಾಮಿ ಕಾರುಗಳಲ್ಲಿ ಓಡಾಡುವುದು ನೋಡಿದ ಜನ ಆತನೇ ಕಳ್ಳ ಎಂದು ಗುರುತಿಸಿದ್ದಾರೆ. ಸಿಸಿ ಕ್ಯಾಮರಾ ದಾಖಲೆಗಳಲ್ಲಿ ಸಹ ಆತ ಕಳ್ಳತನ ಮಾಡಿರುವುದು ಗೊತ್ತಾಗಿದೆ. ಆದರೆ, ಪೊಲೀಸರು ಬಂಧಿಸಲು ಹೋದಾಗ ಮಾತ್ರ ಆತ ಸಿಗುತ್ತಿಲ್ಲ. ಆಗಾಗ ಊರಿನಲ್ಲಿ ಕಾಣಿಸಿಕೊಳ್ಳುವ ಆ ಕಳ್ಳನ ಬಗ್ಗೆ ಜನ ಪೊಲೀಸರಿಗೆ ಮಾಹಿತಿ ನೀಡಿದರೂ ತಕ್ಷಣ ಕಾಡು ಸೇರುವ ಅವನ ಶೋಧ ಸಾಧ್ಯವಾಗುತ್ತಿಲ್ಲ. ಈ ಎಲ್ಲಾ ಹಿನ್ನಲೆ ಗ್ರಾಪಂ ಜನಪ್ರತಿನಿಧಿಗಳ ಒಕ್ಕೂಟದ ಜಿಲ್ಲಾಧ್ಯಕ್ಷ ಎಂ ಕೆ ಭಟ್ಟ ಯಡಳ್ಳಿ ಅವರು ಶನಿವಾರ ಪೊಲೀಸರ ಮೇಲೆ ತಮ್ಮ ಅಸಮಧಾನವ್ಯಕ್ತಪಡಿಸಿದರು. `ಯಲ್ಲಾಪುರ ಪೊಲೀಸರು ತುಂಬಾ ಒಳ್ಳೆಯವರಾದ ಕಾರಣದಿಂದಲೇ ಕಳ್ಳನನ್ನು ಹಿಡಿಯಲು ಆಗುತ್ತಿಲ್ಲ’ ಎಂಬ ಅರ್ಥದಲ್ಲಿ ಅವರು ಮಾತನಾಡಿದರು. ಕೊನೆಗೆ `ಯಲ್ಲಾಪುರದಲ್ಲಿ ಪೊಲೀಸ್ ಇಲಾಖೆ ನಿಷ್ಕ್ರಿಯವಾಗಿರುವಂತೆ ತೋರುತ್ತಿದೆ’ ಎಂಬ ಮಾತನ್ನು ಆಡಿದರು. ಕಳ್ಳರನ್ನು ಪತ್ತೆ ಹಚ್ಚದ ಕಾರಣ ಅನುಮಾನಗಳನ್ನುವ್ಯಕ್ತಪಡಿಸಿದರು. `ಯಲ್ಲಾಪುರ ಪಟ್ಟಣದಲ್ಲಿಯೂ ಕಳ್ಳತನವಾಗಿದೆ. ಇಡಗುಂದಿ, ಮಂಚಿಕೇರಿ, ಕುಂದರಗಿ ಭಾಗಗಳಲ್ಲಿ ಆಗಾಗ ಕಳ್ಳತನ ನಡೆಯುತ್ತಲೇ ಇದೆ. ಸಾರ್ವಜನಿಕರ ಸಹಕಾರ ಸಿಕ್ಕರೂ ಕಳ್ಳ ಮಾತ್ರ ಸಿಗುತ್ತಿಲ್ಲ. ಕಳೆದ ಮೂರು ತಿಂಗಳಿನಿAದ ಕಳ್ಳತನ ಪ್ರಕರಣ ಹೆಚ್ಚಾಗಿದ್ದು, ಕುಂದರಗಿಯಲ್ಲಿ ನಡೆದ ಸಭೆಯಲ್ಲಿ ಡಿ ವೈ ಎಸ್ ಪಿ ಗೀತಾ ಪಾಟೀಲ ಅವರು ೧೫ ದಿನಗಳ ಒಳಗೆ ಕಳ್ಳನನ್ನು ಹಿಡಿಯುವುದಾಗಿ ನೀಡಿದ ಭರವಸೆ ಸಹ ಈಡೇರಿಲ್ಲ’ ಎಂದು ಅಸಮಧಾನವ್ಯಕ್ತಪಡಿಸಿದರು. `ಕಿರವತ್ತಿ, ಕುಂದುರ್ಗಿ ಯಲ್ಲಾಪುರದಲ್ಲಿ ಸಿಸಿ ಕ್ಯಾಮರಾಗಳಿವೆ. ಆದರೂ, ಕಳ್ಳನನ್ನು ಹಿಡಿಯಲು ಆಗಿಲ್ಲ. ಕಳ್ಳರ ಕಾಟ ಮಿತಿ ಮೀರಿದ್ದು, ಮುಂದಿನ ೧೦ ದಿನದಲ್ಲಿ ಆತನ ಬಂಧನ ಆಗದೇ ಇದ್ದರೆ ಪೊಲೀಸ್ ಠಾಣೆ ಎದುರು ಪ್ರತಿಭಟನೆ ಅನಿವಾರ್ಯ’ ಎಂದು ಎಚ್ಚರಿಸಿದರು. ಅಡ್ಡದಾರಿಗೆ ದೊಡ್ಡವರೇ ಮಾಲಕರು! `ಯಲ್ಲಾಪುರದಲ್ಲಿ ರಾಜಾರೋಷವಾಗಿ ಅಕ್ರಮ ಚಟುವಟಿಕೆಗಳು ನಡೆಯುತ್ತಿದೆ. ಅಕ್ರಮ ಸರಾಯಿ, ಗಾಂಜಾ ಮಾರಾಟದ ಬಗ್ಗೆ ಪೊಲೀಸರು ತಲೆಕೆಡಿಸಿಕೊಂಡಿಲ್ಲ. ಹಲವು ಕಡೆ ಗಣ್ಯರೇ ಅಕ್ರಮ ಚಟುವಟಿಕೆ ನಡೆಸುತ್ತಿದ್ದಾರೆ. ಪೊಲೀಸರ ದಕ್ಷತೆಗೆ ಪ್ರಭಾವಿಗಳು ಕಡಿವಾಣ ಹಾಕುತ್ತಿದ್ದಾರೆ’ ಎಂಬ ಅನುಮಾನವ್ಯಕ್ತಪಡಿಸಿದರು. ಈ ಒಕ್ಕೂಟದ ಪ್ರಮುಖರಾದ ಸತ್ಯನಾರಾಯಣ ಹೆಗಡೆ, ಕೆ ಟಿ ಹೆಗಡೆ, ಸದಾಶಿವ ಚಿಕ್ಕೋತ್ತಿ, ಸುಬ್ಬಣ್ಣ ಉದ್ದಾಬೈಲ್, ವಿಶ್ವೇಶ್ವರ ಏಕಾನ್, ಸುನಂದಾ ಮರಾಠಿ, ಪ್ರಕಾಶ ಶಾಪೂರಕರ್ ಇತರರು ಈ ಎಲ್ಲಾ ಮಾತಿಗೆ ಧ್ವನಿಗೂಡಿಸಿದರು. - [ಎಮ್ಮೆ ಬದುಕಿತು.. ಸ್ಕೂಟಿ ಸವಾರ ಸಾವನಪ್ಪಿದ!](https://mobiletime.in/2025/10/the-buffalo-survived-the-scooty-rider-died/): ಶುಕ್ರವಾರ ಸಂಜೆ ದಾಂಡೇಲಿಯಲ್ಲಿ ಸ್ಕೂಟಿ ಸವಾರನೊಬ್ಬ ಎಮ್ಮೆಗೆ ಗುದ್ದಿದ್ದು, ಎಮ್ಮೆ ಪ್ರಾಣಾಪಾಯದಿಂದ ಪಾರಾಗಿದೆ. ಆದರೆ, ಆ ಅಪಘಾತದಲ್ಲಿ ಸ್ಕೂಟಿ ಸವಾರ ಬದುಕಲಿಲ್ಲ. ಭಾಷಾ ಸಾಬ್ ಸನದಿ (50) ಅವರು ಶುಕ್ರವಾರ ಸಂಜೆ ಸ್ಕೂಟಿ ಸವಾರಿ ನಡೆಸಿದ್ದರು. ದಾಂಡೇಲಿಯಿoದ ಹೊರಟ ಅವರು ಕುಳಗಿಗೆ ಹೋಗುವವರಿದ್ದರು. ಆದರೆ, ಕುಳಗಿ ತಲಪುವ ಮುನ್ನವೇ ಅವರ ಸ್ಕೂಟಿ ಅಪಘಾತಕ್ಕೀಡಾಯಿತು. ಈ ಮಾರ್ಗದ ರಸ್ತೆಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ಜಾನುವಾರುಗಳ ಓಡಾಟವಿದ್ದರೂ, ಅದನ್ನು ಲೆಕ್ಕಿಸದೇ ಭಾಷಾ ಸಾಬ್ ಸನದಿ ಅವರು ಸ್ಕೂಟಿ ಓಡಿಸುತ್ತಿದ್ದರು. ಕುಳಗಿ ಸಮೀಪದಲ್ಲಿರುವಾಗಲೇ ಸ್ಕೂಟಿಯ ವೇಗವೂ ಜೋರಾಗಿದ್ದು ರಸ್ತೆಯಲ್ಲಿದ್ದ ಎಮ್ಮೆಗೆ ಆ ಸ್ಕೂಟಿ ಗುದ್ದಿತು. ಗುದ್ದಿದ ರಭಸಕ್ಕೆ ಸ್ಕೂಟಿ ಜೊತೆ ಭಾಷಾ ಸಾಬ್ ಸನದಿ ಅವರು ಬಿದ್ದು ಪೆಟ್ಟು ಮಾಡಿಕೊಂಡರು. ಅಲ್ಲಿಯೇ ಸಾವನಪ್ಪಿದರು. ಭಾಷಾ ಸಾಬ್ ಸನದಿ ಅವರು ಕುಳಗಿ ಗ್ರಾಮದವರಾಗಿದ್ದರು. ಸದ್ಯ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದಾರೆ. ದಾಂಡೇಲಿ ಗ್ರಾಮೀಣ ಠಾಣೆಯ ಪೊಲೀಸರು ಕಾನೂನು ಕ್ರಮ ಜರುಗಿಸಿದ್ದಾರೆ. - [2 ಲಕ್ಷ ರೂಪಾಯಿಗೆ ಇಲ್ಲ ವಾರಸುದಾರ!](https://mobiletime.in/2025/10/no-heir-for-2-lakh-rupees/): ಹಿಟ್ & ರನ್ ಪ್ರಕರಣದಲ್ಲಿ ಅಪರಿಚಿತ ವಾಹನ ಬಡಿದು ಸಾವನಪ್ಪಿದವರ ಸಂಬoಧಿಕರಿಗೆ ಸರ್ಕಾರ 2 ಲಕ್ಷ ರೂ ಪರಿಹಾರ ಕೊಡುತ್ತದೆ.  ಆದರೆ, ಯಲ್ಲಾಪುರದಲ್ಲಿ ನಡೆದ ಅಪರಿಚಿತ ವಾಹನ ಅಪಘಾತದಲ್ಲಿ ಅಪರಿಚಿತ ಭಿಕ್ಷುಕ ಸಾವನಪ್ಪಿದ್ದು, ಪರಿಹಾರಪಡೆಯಲು ಸಹ ಸಂಬoಧಿಕರು ಬಂದಿಲ್ಲ! ಕೆಲ ದಿನಗಳಿಂದ ಯಲ್ಲಾಪುರ ಹಾಗೂ ಸುತ್ತಲಿನ ಪ್ರದೇಶದಲ್ಲಿ 70 ವರ್ಷದ ಭಿಕ್ಷುಕರೊಬ್ಬರು ಅಲೆದಾಡುತ್ತಿದ್ದರು. ಸೆಪ್ಟೆಂಬರ್ 15ರ ರಾತ್ರಿ 11 ಗಂಟೆಗೆ ಯಲ್ಲಾಪುರ ತೆಂಗಿನಗೇರಿ ಬಳಿ ವಾಹನವೊಂದು ಅವರಿಗೆ ಗುದ್ದಿತು. ಗಂಭೀರ ಪ್ರಮಾಣದಲ್ಲಿ ಗಾಯಗೊಂಡ ಭಿಕ್ಷುಕನನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಯಿತು. ಅದಾದ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸ್’ಗೆ ರವಾನಿಸಲಾಯಿತು. ಆದರೆ, ಅದರಿಂದ ಅಪರಿಚಿತ ಭಿಕ್ಷುಕನನ್ನು ಉಳಿಸಿಕೊಳ್ಳಲು ಆಗಲಿಲ್ಲ. ಅಪಘಾತಕ್ಕೆ ಕಾರಣವಾದ ವಾಹನವನ್ನು ಗುರುತಿಸಲು ಸಾಧ್ಯವಾಗಿಲ್ಲ. ಅಕ್ಟೊಬರ್ 2ರಂದು ಗಾಯಗೊಂಡಿದ್ದ ಭಿಕ್ಷುಕ ಸಾವನಪ್ಪಿದರು. ಭಿಕ್ಷುಕನ ಹೆಸರು-ವಿಳಾಸ ಹುಡುಕಲು ಪೊಲೀಸರು ಹರಸಾಹಸ ನಡೆಸಿದರು. ಭಿಕ್ಷುಕ ಸಾವನಪ್ಪಿದ ವಿಷಯ ಅವರ ಸಂಬAಧಿಕರಿಗೆ ಗೊತ್ತಾಗಲಿಲ್ಲ. ವಾರಸುದಾರರಿಗೂ ಆ ಬಗ್ಗೆ ಮಾಹಿತಿ ಸಿಗಲಿಲ್ಲ. ಹೀಗಾಗಿ ಭಿಕ್ಷುಕನಿಗೆ ಆದ ಅಪಘಾತ ಹಾಗೂ ಸಾವಿನ ಬಗ್ಗೆ ಯಾರೂಪೊಲೀಸ್ ದೂರು ನೀಡಿರಲಿಲ್ಲ. ಇದನ್ನು ಅರಿತ ತಟಗಾರ ಕ್ರಾಸಿನಲ್ಲಿರುವ ಕ್ರೇನ್ ಆಪರೇಟರ್ ಉಮ್ರಾನ್ ಸನದಿ ಅವರು ಭಿಕ್ಷುಕನಿಗೆ ಆದ ಅಪಘಾತ ಹಾಗೂ ಸಾವಿನ ಬಗ್ಗೆ ಪೊಲೀಸ್ ದೂರು ನೀಡಿದರು. ಸದ್ಯ ಯಲ್ಲಾಪುರ ಪೊಲೀಸರು ಭಿಕ್ಷುಕನ ವಾರಸುದಾರರ ಹುಡುಕಾಟ ನಡೆಸಿದ್ದಾರೆ. ಸಾವನಪ್ಪಿದ ಅಪರಿಚಿತ ಬಿಕ್ಷÄಕನ ಬಗ್ಗೆ ನಿಮಗೆನಾದರೂ ಗೊತ್ತಿದ್ದರೆ ಇಲ್ಲಿ ಫೋನ್ ಮಾಡಿ: 9480805257 ಅಥವಾ 9480805273 - [ಯಕ್ಷ ಕನ್ಯೆಗೆ ಸಂಕಟ-ಕ0ಟಕ!](https://mobiletime.in/2025/10/the-yaksha-maiden-is-in-trouble/): ಖ್ಯಾತ ಯಕ್ಷಗಾನ ತಾರೆ ಅಶ್ವಿನಿ ಕೊಂಡದಕುಳಿ ಅವರು ಇದೀಗ ವಿವಾದದ ಕೇಂದ್ರವಾಗಿದ್ದಾರೆ. ತಮ್ಮ ತಂದೆಯ ನಡೆಯನ್ನು ಸಮರ್ಥಿಸಿಕೊಳ್ಳುವ ಬರದಲ್ಲಿ ಅಶ್ವಿನಿ ಕೊಂಡದಕುಳಿ ಅವರು ಬೇರೆ ಕಲಾವಿದರ ಬಗ್ಗೆ ಹಗುರವಾಗಿ ಮಾತನಾಡಿದ್ದಾರೆ. ಅದರಲ್ಲಿಯೂ `ಯಕ್ಷಗಾನ ಚೌಕಿಯಲ್ಲಿ ಹೆಣ್ಣು ಮಕ್ಕಳನ್ನು ಕೆಟ್ಟದಾಗಿ ನೋಡುತ್ತಾರೆ’ ಎಂಬರ್ಥದಲ್ಲಿ ಅಶ್ವಿನಿ ಅವರು ಮಾತನಾಡಿದ್ದು, ಈ ಮಾತನ್ನು ಇನ್ನಿತರ ಪ್ರಸಿದ್ಧ ಕಲಾವಿದರು ಸಹಿಸಿಕೊಂಡಿಲ್ಲ. ಅಶ್ವಿನಿ ಕೊಂಡದಕುಳಿ ಅವರು ಪ್ರಸಿದ್ಧ ಯಕ್ಷ ನಟ ಕೊಂಡದಕುಳಿ ರಾಮಚಂದ್ರ ಹೆಗಡೆ ಅವರ ಪುತ್ರಿ. ಬಾಲ್ಯದಿಂದಲೂ ಯಕ್ಷಗಾನದ ಬಗ್ಗೆ ಅಪಾರ ಆಸಕ್ತಿಹೊಂದಿರುವ ಅಶ್ವಿನಿ ಅವರಿಗೆ ಈ ಕಲೆ ರಕ್ತಗತವಾಗಿ ಬಂದಿದೆ. ಹುಟ್ಟಿನಿಂದಲೇ ತಂದೆಯ ಪಾತ್ರ ನೋಡಿ ಬೆಳೆದ ಅವರು ಸಹಜವಾಗಿ ಯಕ್ಷಗಾನವನ್ನು ರೂಢಿಸಿಕೊಂಡರು. ಪುರುಷರೇ ಪ್ರಧಾನವಾಗಿದ್ದ ಯಕ್ಷಗಾನ ವೇದಿಕೆಯಲ್ಲಿ ತಮ್ಮ ಹೆಜ್ಜೆ ಮೂಡಿಸಿದರು. ತಮ್ಮ ಜೀವನ ಸಂಗಾತಿಯ ಆಯ್ಕೆಯಲ್ಲಿಯೂ ಅವರು ಕಲಾವಿದರಿಗೆ ಆದ್ಯತೆ ನೀಡಿದ್ದು, ಯಕ್ಷ ಕಲಾವಿದ ಕಡಬಾಳ ಉದಯ ಹೆಗಡೆ ಅವರನ್ನು ವರಿಸಿದರು. ಅವರು ಯಕ್ಷಗಾನದ ಜೊತೆ ಅವರು ವಿವಿಧ ಬಗೆಯ ಸಾಮಾಜಿಕ ಸೇವೆ, ಜನಪರ ಕಾಳಜಿಯನ್ನು ಹೊಂದಿದ್ದಾರೆ. ಬಡ ಕಲಾವಿದರಿಗೆ ನೆರವು ನೀಡಿದ ನೂರಾರು ಉದಾಹರಣೆಗಳಿವೆ. ಆದರೆ, ಈವರೆಗೂ ಅಶ್ವಿನಿ ಕೊಂಡದಕುಳಿ ಅವರ ವಿರುದ್ಧ ಅಂಥ ಆರೋಪ-ಅಪಸ್ವರಗಳು ಕೇಳಿಬಂದಿರಲಿಲ್ಲ. ಇದೇ ಮೊದಲ ಬಾರಿ ಅವರು ಆಡಿದ ಮಾತಿನ ವಿರುದ್ಧ ಕಲಾವಿದರೇ ಬೇಸರಿಸಿಕೊಂಡಿದ್ದು, ಕೆಲವರು `ಅಶ್ವಿನಿ ಅವರ ಜೊತೆಗೂಡಿ ಇನ್ಯಾವಾಗಲೂ ರಂಗ ಪ್ರವೇಶ ಮಾಡುವುದಿಲ್ಲ’ ಎಂದು ಶಪಥ ಮಾಡಿದ್ದಾರೆ. `ಅಶ್ವಿನಿ ಅವರು ಕ್ಷಮೆ ಕೇಳಿದರೂ ಸಹ ಅವರನ್ನು ಕ್ಷಮಿಸುವುದಿಲ್ಲ’ ಎಂದಿದ್ದಾರೆ. ಅಶ್ವಿನಿ ಕೊಂಡದಕುಳಿ ಅವರ ತಂದೆ ರಾಮಚಂದ್ರ ಹೆಗಡೆ ಅವರ `ಯಕ್ಷಚಂದ್ರ’ ಕೃತಿ ಬಿಡುಗಡೆ ಕಾರ್ಯಕ್ರಮ ಈ ವಿವಾದದ ಮೂಲವಾಗಿದೆ. ಯಕ್ಷಚಂದ್ರ ಕೃತಿಯಲ್ಲಿ ಸಹ ವಿವಿಧ ಕಲಾವಿದರ ಬಗ್ಗೆ ಹಗುರವಾಗಿ ಬಿಂಬಿಸಿದ ಆರೋಪಗಳಿವೆ. ಬೆಂಗಳೂರಿನಲ್ಲಿ ನಡೆದ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಅಶ್ವಿನಿ ಕೊಂಡದಕುಳಿ ಅವರು ಪುರುಷ ಕಲಾವಿದರ ನಡತೆಯ ಬಗ್ಗೆ ಭಾಷಣ ಮಾಡಿದ್ದು, `ನನ್ನ ತಂದೆ ಅಂಥವರಲ್ಲ’ ಎಂದಿದ್ದಾರೆ. ಇದಕ್ಕೆ ಪ್ರತಿಯಾಗಿ `ರಾಮಚಂದ್ರ ಹೆಗಡೆ ಸಹ ಸಂಭಾವಿತರಲ್ಲ’ ಎಂದು ಯಕ್ಷಗಾನ ಅಕಾಡೆಮಿ ಸದಸ್ಯ ವಿದ್ಯಾದರ ಜಲವಳ್ಳಿ ಅವರು ಪ್ರತಿಕ್ರಿಯಿಸಿದ್ದಾರೆ. `ಚೌಕಿಮನೆಯಲ್ಲಿ ಸ್ತ್ರೀ ಕಲಾವಿದರ ಬಗ್ಗೆ ಕೀಳಾಗಿ ಮಾತನಾಡುತ್ತಾರೆ’ ಎಂಬುದು ಅಶ್ವಿನಿ ಕೊಂಡದಕುಳಿ ಅವರ ಅನುಭವ. `ಚೌಕಿಮನೆಯಲ್ಲಿ ಯಾರೂ ಮಹಿಳಾ ಕಲಾವಿದರ ಬಗ್ಗೆ ಕಟ್ಟದಾಗಿ ಮಾತನಾಡುವುದಿಲ್ಲ. ಅಶ್ವಿನಿ ಕೊಂಡದಕುಳಿ ಅವರನ್ನು ಸಹ ಎಲ್ಲರೂ ತಂಗಿಯ ರೀತಿ ನೋಡಿದ್ದೇವೆ’ ಎಂಬುದು ನೀಲಕೋಡ ಶಂಕರ ಹೆಗಡೆ ಅವರ ಸಮರ್ಥನೆ. `ಯಕ್ಷಗಾನದ ಮೇರು ನಟರಾದ ಚಿಟ್ಟಾಣಿ ರಾಮಚಂದ್ರ ಹೆಗಡೆ, ಶಂಬು ಹೆಗಡೆ ಕೆರೆಮನೆ, ಚಿನ್ನಪ್ಪ ಶೆಟ್ಟಿ, ಯಲಗುಪ್ಪಾ ಸುಬ್ರಹ್ಮಣ್ಯ ಹೆಗಡೆ ಹಾಗೂ ವಿದ್ಯಾದರ ಜಲವಳ್ಳಿ ಅವರ ಬಗ್ಗೆ ಯಕ್ಷಚಂದ್ರ ಕೃತಿಯಲ್ಲಿ ತಪ್ಪಾಗಿ ಬಿಂಬಿಸಲಾಗಿದೆ. ಜಲವಳ್ಳಿ ವೆಂಕಟೇಶ ರಾವ್ ಅವರ ಬಗ್ಗೆ ಒಂದು ಕಡೆ ಹೊಗಳಿ, ಮತ್ತೊಂದು ಕಡೆ ಅವಹೇಳನ ಮಾಡಲಾಗಿದೆ. ಕೊಳಗಿಬೀಸ್ ಹಾಗೂ ಬೆಂಗಳೂರಿನ ರವೀಂದ್ರ ಕಲಾ ಕ್ಷೇತ್ರದಲ್ಲಿ ಕೊಂಡದಕುಳಿ ರಾಮಚಂದ್ರ ಹೆಗಡೆ ಅವರು ಮಾಡಿದ ತಪ್ಪಿನಿಂದ ಪ್ರೇಕ್ಷಕರು ಮುಜುಗರಕ್ಕೆ ಒಳಗಾಗಿದ್ದು, ಕೃತಿಯಲ್ಲಿ ಅದನ್ನು ತಿರುಚಲಾಗಿದೆ’ ಎಂಬುದು ವಿದ್ಯಾದರ ಜಲವಳ್ಳಿ ಅವರ ಮಾತು. `ಕೃತಿಗಳು ದಾಖಲೆ ರೂಪದಲ್ಲಿ ಶಾಶ್ವತವಾಗಿರುವುದರಿಂದ ಅದರಲ್ಲಿ ತಪ್ಪು ಸಂದೇಶ ಹೋಗಬಾರದು’ ಎಂದವರು ಹೇಳುತ್ತಾರೆ. ಹೀಗಾಗಿ `ಯಕ್ಷಚಂದ್ರ ಕೃತಿಯನ್ನು ಹಿಂಪಡೆಯಬೇಕು. ಇಲ್ಲವಾದಲ್ಲಿ ಕಾನೂನು ಮೊರೆ ಹೋಗುವುದು ಅನಿವಾರ್ಯ’ ಎಂದು ಎಚ್ಚರಿಸಿದ್ದಾರೆ. - [2025 ಅಕ್ಟೋಬರ್ 04ರ ದಿನದ ಭವಿಷ್ಯ](https://mobiletime.in/2025/10/prediction-for-october-04-2025/): ಮೇಷ ರಾಶಿ: ನಿಮ್ಮ ಕೆಲಸ ಕಾರ್ಯಗಳನ್ನು ಶುರು ಮಾಡಲು ಅನುಕೂಲಕರವಾದ ದಿನ. ಆರೋಗ್ಯದಲ್ಲಿ ಕೊಂಚ ಏರುಪೇರಾಗುವ ಸಾಧ್ಯತೆಗಳಿವೆ. ಸಮತೋಲನದ ಆಹಾರ ಪದ್ಧತಿ ಅನುಸರಿಸಿ. ವೃಷಭ ರಾಶಿ: ಹೊಸ ಸ್ನೇಹಿತರ ಭೇಟಿ ಆಗಲಿದೆ. ವ್ಯಾಪಾರ-ವಹಿವಾಟುಗಳು ಸರಾಗವಾಗಿ ಸಾಗಲಿದೆ. ಆರೋಗ್ಯದ ವಿಷಯದಲ್ಲಿ ಕಾಳಜಿವಹಿಸುವುದು ಮುಖ್ಯ. ಮಿಥುನ ರಾಶಿ: ಸಾಮಾಜಿಕ ಕ್ಷೇತ್ರದಲ್ಲಿ ನಿಮಗೆ ಹೆಚ್ಚು ಗೌರವ ಸಿಗಲಿದೆ. ಆಯಾಸ ಆದಾಗ ಇನ್ನಷ್ಟು ದುಡಿಯುವ ಬದಲು ಕೆಲ ಕಾಲ ವಿಶ್ರಾಂತಿಪಡೆಯಿರಿ. ನಿಮ್ಮ ಯೋಜನೆಗಳು ಕಾರ್ಯರೂಪಕ್ಕೆ ಬರಲಿದೆ. ಕರ್ಕ ರಾಶಿ: ನಿಮ್ಮ ವೃತ್ತಿ ಬೆಳವಣಿಗೆಗೆ ಉತ್ತಮ ಅವಕಾಶ ಬರಲಿದ್ದು, ಅದನ್ನು ಸರಿಯಾಗಿ ಬಳಸಿಕೊಳ್ಳಿ. ಮೇಲಧಿಕಾರಿಗಳ ಮುಂದೆ ಚಂಚಲತೆಯಿAದ ವರ್ತಿಸಬೇಡಿ. ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದರಿಂದ ಶ್ರೇಯಸ್ಸು ಹೆಚ್ಚಲಿದೆ. ಸಿಂಹ ರಾಶಿ: ನಿಮ್ಮ ನಾಯಕತ್ವ ಗುಣದ ಬಗ್ಗೆ ಮೆಚ್ಚುಗೆವ್ಯಕ್ತವಾಗಲಿದೆ. ಹಣಕಾಸು ವಿಷಯ ನಿರ್ವಹಣೆಯಲ್ಲಿ ಶಿಸ್ತು ರೂಡಿಸಿಕೊಳ್ಳಿ. ನಿಮ್ಮೊಳಗಿನ ಪ್ರತಿಭೆಯನ್ನು ಸರಿಯಾಗಿ ಬಳಸಿಕೊಂಡರೆ ಯಶಸ್ಸು ಖಚಿತ. ಕನ್ಯಾ ರಾಶಿ: ನಿಮ್ಮ ಕೆಲಸದಲ್ಲಿ ಹೆಚ್ಚಿನ ಹೊಣೆಗಾರಿಕೆ ಬರಲಿದೆ. ಆತ್ಮ ವಿಶ್ವಾಸದಿಂದ ಮಾಡುವ ಕೆಲಸ ಯಶಸ್ಸಿಗೆ ಕಾರಣವಾಗಲಿದೆ. ಹೊಸ ಯೋಜನೆಗಳು ಕಾರ್ಯರೂಪಕ್ಕೆ ತರಲು ಸಕಾಲ. ತುಲಾ ರಾಶಿ: ಆಪ್ತರ ಜೊತೆ ಸಮಾಲೋಚನೆಯಿಂದ ಸ್ನೇಹ ಗಟ್ಟಿ ಆಗಲಿದೆ. ಹೊಸ ವಿಷಯಗಳು ನಿಮ್ಮನ್ನು ಆವರಿಸಲಿದೆ. ಜೀವನದಲ್ಲಿ ಸಾರ್ಥಕ ಮನೋಭಾವವನ್ನು ತಾಳಲಿದ್ದೀರಿ. ವೃಶ್ಚಿಕ ರಾಶಿ: ಸಂಕಟ ಹಾಗೂ ಸವಾಲುಗಳನ್ನು ನೀವು ಸಮರ್ಥವಾಗಿ ಎದುರಿಸುತ್ತೀರಿ. ನಿಮ್ಮ ಮನಸ್ಸಿನಲ್ಲಿ ದೃಢವಾದ ವಿಷಯ ಬೇರೂರಲಿದೆ. ಪ್ರೀತಿ-ಪ್ರೇಮದ ವಿಷಯದಲ್ಲಿ ಎಚ್ಚರಿಕೆ ಅಗತ್ಯ. ಧನು ರಾಶಿ; ಹೊಸ ಅವಕಾಶಗಳಿಗಾಗಿ ಪ್ರಯಾಣದ ಸಾಧ್ಯತೆಗಳಿವೆ. ನಿಮ್ಮ ಓದು-ಅಧ್ಯಯನ ಭವಿಷ್ಯದಲ್ಲಿ ಉಪಯೋಗಕ್ಕೆ ಬರಲಿದೆ. ಉತ್ತಮ ಸಂವಹನ ನಿಮಗೆ ಪ್ರಯೋಜನಕಾರಿ. ಮಕರ: ಕೆಲಸದ ವಿಷಯದಲ್ಲಿ ದೊಡ್ಡ ಸಾಧನೆ ಸಾಧ್ಯವಿದೆ. ಕುಟುಂಬದವರ ಜೊತೆ ಒಗ್ಗಟ್ಟಿನಿಂದ ಕೆಲಸ ಮಾಡಿದರೆ ಉತ್ತಮ. ಹೊಸ ತಂತ್ರಗಳನ್ನು ಅನುಸರಿಸುವುದು ಅನಿವಾರ್ಯವಾಗಲಿದೆ. ಕುಂಭ ರಾಶಿ: ನಿಮ್ಮ ಆರೋಗ್ಯದಲ್ಲಿ ಚೇತರಿಕೆ ಆಗಲಿದ್ದು, ಇಡೀ ದಿನ ಉತ್ಸಾಹದಿಂದ ಕೂಡಿರಲಿದೆ. ಆರ್ಥಿಕ ವಿಷಯಗಳು ಪ್ರಗತಿ ಕಾಣಲಿದೆ. ಕನಸಿನ ಯೋಜನೆಗಳು ಯಶಸ್ಸು ಕೊಡಲಿದೆ. ಮೀನ ರಾಶಿ: ಆರೋಗ್ಯದಲ್ಲಿ ವ್ಯತ್ಯಾಸವಾದರೆ ನೀವೇ ಚಿಕಿತ್ಸೆಪಡೆಯುವ ಬದಲು ವೈದ್ಯರನ್ನು ಭೇಟಿ ಮಾಡಿ. ಕುಟುಂಬದವರ ಜೊತೆ ಕೋಪ ಮಾಡಿಕೊಳ್ಳುವುದು ಒಳ್ಳೆಯದಲ್ಲ. ಜೂಜಾಟಗಳಿಂದ ದೂರವಿರುವುದು ಉತ್ತಮ. - [ದಿನವೂ ದುಡಿದು ತಿನ್ನುವವರಿಗೆ ಜೂಜಾಟದ ಚಟ!](https://mobiletime.in/2025/10/gambling-addiction-for-those-who-work-hard-every-day/): ಶಿರಸಿಯ ರವೀಶ ನಾಯ್ಕ ಅವರ ಮನೆಗೆ ಹೋಗುವ ದಾರಿಯಲ್ಲಿ ಅಂದರ್ ಬಾಹರ್ ಆಡುತ್ತಿದ್ದವರ ಮೇಲೆ ಪೊಲೀಸರು ದಾಳಿ ಮಾಡಿದ್ದಾರೆ. ಈ ವೇಳೆ ಕೂಲಿ ಕಾರ್ಮಿಕ, ಹಣ್ಣಿನ ಅಂಗಡಿ ಮಾಲಕ, ಕಟ್ಟಡ ಕಾರ್ಮಿಕ, ಪೆಂಡಾಲ್ ಕೆಲಸಗಾರ ಸೇರಿ ಆರು ಜನ ಸಿಕ್ಕಿಬಿದ್ದಿದ್ದಾರೆ. ಸೆಪ್ಟೆಂಬರ್ 1ರ ರಾತ್ರಿ ಶಿರಸಿ ಮೇಲಿನ ಓಣಿಕೇರಿ ಮಂಗನಮಕ್ಕಿ ಬಳಿ ಕೆಲವರು ಅಂದರ್ ಬಾಹರ್ ಆಡುತ್ತಿದ್ದರು. ಈ ವಿಷಯ ಅರಿತ ಶಿರಸಿ ಗ್ರಾಮೀಣ ಪೊಲೀಸ್ ಠಾಣೆಯ ಪಿಎಸ್‌ಐ ಸಂತೋಷಕುಮಾರ ಎಂ ಅವರು ತಮ್ಮ ಸಿಬ್ಬಂದಿ ಜೊತೆ ಅಲ್ಲಿಗೆ ಹೋದರು. ಆಗ ಮಂಗನಮಕ್ಕಿ ಕಾನಮೂಲೆಯಲ್ಲಿ ಪೆಂಡಾಲ್ ಕೆಲಸ ಮಾಡುವ ರವೀಶ ಮಾಸ್ತಿ ನಾಯ್ಕ ಅವರು ಇಸ್ಪಿಟ್ ಆಡಿಸುತ್ತಿದ್ದರು. ಕಕ್ಕಳ್ಳಿ ಶಿರಗುಣಿಯ ಅಣ್ಣಪ್ಪ ಪುಟ್ಟ ಗೌಡ, ಇಂದಿರಾನಗರದ ಬಳಿಯ ಕನವಳ್ಳಿಯ ಹಣ್ಣಿನ ವ್ಯಾಪಾರಿ ನದೀಮ್ ನಹಿಮ್, ಕನವಳ್ಳಿಯ ಗೌಂಡಿ ಸರ್ಫರಾಜ ಹಸನಸಾಬ್ ಶೇಖ್ ವಾನಳ್ಳಿಯ ಕೂಲಿ ಕಾರ್ಮಿಕ ಮಂಜಾ ಸರವ್ ಗೌಡ ಹಾಗೂ ವಾನಳ್ಳಿಯ ಚಂದ್ರಶೇಖರ ರಾಮ ಶೇರುಗಾರ ಅವರು ಇಸ್ಪಿಟ್ ಎಲೆಗಳ ಜೊತೆ ದುಡ್ಡು ಹರಡಿ ಕೂತಿದ್ದರು. ಪಿಎಸ್‌ಐ ಸಂತೋಷಕುಮಾರ ಎಂ ಅವರು ಆ ಎಲ್ಲರ ಮೇಲೆ ದಾಳಿ ನಡೆಸಿದರು. ಈ ವೇಳೆ ಅಲ್ಲಿದ್ದ ಇಸ್ಪಿಟ್ ಎಲೆ, 6420ರೂ ಹಣ ಸಿಕ್ಕಿತು. ಜೊತೆಗೆ ಇಸ್ಪಿಟ್ ಆಟಕ್ಕೆ ಬಳಸಿದ್ದ ಸಾಮಗ್ರಿಗಳನ್ನು ಪೊಲೀಸರು ವಶಕ್ಕೆಪಡೆದರು. ಕಾನೂನುಬಾಹಿರ ಆಟ ಆಡಿದ ಕಾರಣ ಅವರೆಲ್ಲರ ವಿರುದ್ಧ ಪ್ರಕರಣ ದಾಖಲಿಸಿದರು.     - [ಜನರಿಗೆ ದೂರವಾರ ಗ್ರಾ ಪಂ ಕಚೇರಿ: ಪ್ರತಿಭಟನೆ!](https://mobiletime.in/2025/10/gram-panchayat-office-closed-to-the-public-protest/): ಮಳೆಗಾಲದ ಅವಧಿಯಲ್ಲಿ ಹೊನ್ನಾವರದ ಕೋಡಾಣಿ ಗ್ರಾಮ ಪಂಚಾಯತ ಕಚೇರಿಯನ್ನು ತಾತ್ಕಾಲಿಕವಾಗಿ ಬೇರೆ ಕಡೆ ಸ್ಥಳಾಂತರ ಮಾಡಲಾಗಿದ್ದು, ನೀಡಿದ ಭರವಸೆಯಂತೆ ಈವರೆಗೂ ಗ್ರಾ ಪಂ ಕಚೇರಿ ಮೂಲ ಕಟ್ಟಡಕ್ಕೆ ಮರಳಿಲ್ಲ. ಈ ಹಿನ್ನಲೆ ಆ ಭಾಗದ ಜನ ಶುಕ್ರವಾರ ಪ್ರತಿಭಟನೆ ನಡೆಸಿದ್ದಾರೆ. ಕೊಡಾಣಿ ಗ್ರಾಪಂ ಕಾರ್ಯಾಲಯವನ್ನು ಸೆಪ್ಟೆಂಬರ್ 30ರ ಒಳಗೆ ಮೂಲ ಕಟ್ಟಡಕ್ಕೆ ಸ್ಥಳಾಂತರಿಸುವ ಬಗ್ಗೆ ಭರವಸೆ ನೀಡಲಾಗಿತ್ತು. ಜೂನ್ 18ರಂದು ನಡೆದ ಸಭೆಯಲ್ಲಿ ಹೊಸ ಕಚೇರಿ ತಾತ್ಕಾಲಿಕ ಎಂದು ಅಧಿಕಾರಿಗಳು ಹೇಳಿದ್ದು, ಅವರು ನುಡಿದಂತೆ ನಡೆಯಲಿಲ್ಲ. ಸೆಪ್ಟೆಂಬರ್ 30ರ ಅವಧಿ ಮುಗಿದರೂ ಕಚೇರಿ ಮೊದಲಿದ್ದ ಸ್ಥಳಕ್ಕೆ ಬಂದಿಲ್ಲ. ಈ ಹಿನ್ನಲೆ ಗ್ರಾಮದ ಜನ ಆಕ್ರೋಶವ್ಯಕ್ತಪಡಿಸಿದರು. ಪ್ರತಿಭಟನೆ ವೇಳೆ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಮತ್ತು ಗ್ರಾಪಂ ಪಿಡಿಓ ಕಚೇರಿ ಬಳಿ ಇಲ್ಲದ ಕಾರಣ ಘೋಷಣೆ ಕೂಗಿದರು. ಪಿಡಿಒ ಉದ್ದೇಶ ಪೂರ್ವಕವಾಗಿ ರಜೆ ಹಾಕಿದ್ದಾರೆ ಎಂದು ದೂರಿದರು. ಕೂಡಲೇ ಮೂಲ ಸ್ಥಳಕ್ಕೆ ಕಚೇರಿ ಸ್ಥಳಾಂತರ ಮಾಡದಿದ್ದರೆ ಗ್ರಾಮ ಪಂಚಾಯತ್ ಕಚೇರಿಯಲ್ಲಿಯೇ ಪ್ರತಿಭಟನೆ ಮುಂದುವರಿಸುವುದಾಗಿ ಗ್ರಾಪಂ ಸದಸ್ಯ ಜಯಂತ ನಾಯ್ಕ ಅವರು ಎಚ್ಚರಿಸಿದರು. ಸ್ಥಳಕ್ಕೆ ಆಗಮಿಸಿದ ತಾಪಂ ಆಡಳಿತಾಧಿಕಾರಿ ಎನ್ ಆರ್. ಹೆಗಡೆ ಅವರು, `ಮೂಲ ಕಟ್ಟಡದ ಸ್ಥಳ ಪರಿಶೀಲನೆ ಮಾಡಿ ವರದಿ ನೀಡುವಂತೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ಪತ್ರ ಬರೆಯಲಾಗುತ್ತದೆ. ಸೋಮವಾರದೊಳಗೆ ನಿರ್ಣಯ ತೆಗೆದುಕೊಳ್ಳಲಾಗುವುದು’ ಎಂಬ ಭರವಸೆ ನೀಡಿದರು. ಹೀಗಾಗಿ ಪ್ರತಿಭಟನಾಕಾರರು ಸುಮ್ಮನಾದರು. - [ಮುಂಡಗೋಡ: ನೋಂದಣಾಧಿಕಾರಿಗಳಿಗೆ ನಡುಕ ಹುಟ್ಟಿಸಿದ ಯೂಟೂಬರ್ ಮುಕೆಳೆಪ್ಪ!](https://mobiletime.in/2025/10/mundagoda-youtuber-mukelappa-has-left-the-registrars-in-awe/): ನಕಲಿ ವಿಳಾಸ ದಾಖಲೆ ನೀಡಿ ಮುಂಡಗೋಡದಲ್ಲಿ ಮದುವೆಯಾದ ಯೂಟೂಬರ್ ಮುಕಳೆಪ್ಪ ಮಾಡಿದ ಅವಾಂತರಕ್ಕೆ ಅಲ್ಲಿನ ನೋಂದಣಾಧಿಕಾರಿ-ಸಿಬ್ಬoದಿ ಬೆದರಿದ್ದಾರೆ. ಹೀಗಾಗಿ ನೋಂದಣಾಧಿಕಾರಿ ಕಚೇರಿಗೆ ಬೀಗ ಹಾಕಿ ಅಲ್ಲಿನವರು ಹೋಗಿದ್ದು, ಈ ದಿನ ಬೇರೆ ತಾಲೂಕಿನ ಅಧಿಕಾರಿಗಳು ಆಗಮಿಸಿ ಜನರ ಕೆಲಸ ಶುರು ಮಾಡಿದ್ದಾರೆ. ನಕಲಿ ದಾಖಲೆ ನೀಡಿ ವಿವಾಹ ನೋಂದಣಿ ಮಾಡಿದ ಕಾರಣ ಉಪನೋಂದಣಿ ಅಧಿಕಾರಿ ಮತ್ತು ಅಲ್ಲಿನ ಸಿಬ್ಬಂದಿ ವಿರುದ್ಧ ಪೊಲೀಸ್ ಪ್ರಕರಣ ದಾಖಲಾಗಿತ್ತು. ಸೆಪ್ಟೆಂಬರ್ 22ರಂದು ಪ್ರಕರಣ ದಾಖಲಾಗಿದ್ದು, ಸೆಪ್ಟೆಂಬರ್ 24ರಂದು ಅಧಿಕಾರಿ-ಸಿಬ್ಬಂದಿ ನಾಪತ್ತೆ ಆಗಿದ್ದರು. ಹೀಗಾಗಿ ನೋಂದಣಾಧಿಕಾರಿ ಕಚೇರಿ ಬಾಗಿಲು ತೆರೆಯುವವರು ಸಹ ಇರಲಿಲ್ಲ. ಇದರಿಂದ ಸಾರ್ವಜನಿಕ ಕೆಲಸಗಳಿಗೆ ಸಮಸ್ಯೆ ಆಗುತ್ತಿದ್ದು, ಈ ದಿನ ಯಲ್ಲಾಪುರ ಮತ್ತು ಸಿದ್ದಾಪುರ ಉಪನೋಂದಣಿ ಕಚೇರಿಯ ಸಿಬ್ಬಂದಿ ಆಗಮಿಸಿ ಬಾಗಿಲು ತೆರೆದರು. ಏಕಾಏಕಿ ಅಧಿಕಾರಿ ಹಾಗೂ ಸಿಬ್ಬಂದಿ ರಜೆ ಮಾಡಿದ್ದರಿಂದ ಜನ ಸಮಸ್ಯೆ ಅನುಭವಿಸಿದ್ದರು. ಸರ್ಕಾರಿ ಸಿಬ್ಬಂದಿ ವಿರುದ್ಧ ಆಕ್ರೋಶವ್ಯಕ್ತಪಡಿಸಿದ್ದರು. ಈ ಹಿನ್ನಲೆ ಸದ್ಯ ಯಲ್ಲಾಪುರ ಹಾಗೂ ಸಿದ್ದಾಪುರ ಉಪನೋಂದಣಿ ಕಚೇರಿಯ ಸಿಬ್ಬಂದಿಯನ್ನು ಮುಂಡಗೋಡಿಗೆ ನಿಯೋಜಿಸಲಾಗಿದೆ. - [ಬಾವಿಯಲ್ಲಿ ಸಿಕ್ಕಿತು ವಿನಾಯಕನ ಶವ](https://mobiletime.in/2025/10/vinayaks-body-found-in-a-well/): 20 ವರ್ಷಗಳಿಂದ ಒಂಟಿಯಾಗಿ ಬದುಕುತ್ತಿದ್ದ ಕುಮಟಾ ಉಪ್ಪಾರಕೇರಿಯ ವಿನಾಯಕ ಅಡಕೊಳ್ಳಿ ಅವರು ಬಾವಿಗೆ ಬಿದ್ದು ಸಾವನಪ್ಪಿದ್ದಾರೆ. ಐದು ದಿನಗಳ ನಂತರ ಅವರು ಬಾವಿಗೆ ಬಿದ್ದ ವಿಷಯ ಹೊರ ಪ್ರಪಂಚಕ್ಕೆ ಗೊತ್ತಾಗಿದೆ. ಕುಮಟಾದ ಹೊಸ ಬಸ್ ನಿಲ್ದಾಣದ ಬಳಿ ವಿನಾಯಕ ಅಡಕೊಳ್ಳಿ ಅವರು ವಾಸವಾಗಿದ್ದರು. ಕಳೆದ 20 ವರ್ಷಗಳಿಂದ ಅವರು ಅಲ್ಲಿ ಒಂಟಿಯಾಗಿ ಜೀವನ ನಡೆಸುತ್ತಿದ್ದರು. ಮಾನಸಿಕವಾಗಿಯೂ ಅವರು ಕುಗ್ಗಿದ್ದರು. ತೀರಾ ಅಸ್ವಸ್ಥರಂತೆ ವರ್ತಿಸುತ್ತಿದ್ದರು. ಸೆಪ್ಟೆಂಬರ್ 27ರಂದು ಮಧ್ಯಾಹ್ನ 12 ಗಂಟೆ ಆಸುಪಾಸಿನಲ್ಲಿ ಜನ ಅವರನ್ನು ನೋಡಿದ್ದರು. ಅಕ್ಟೊಬರ್ 2ರಂದು ಅವರು ಉಪ್ಪಾರಕೇರಿಯ ಬಾವಿಯಲ್ಲಿ ತೇಲುತ್ತಿದ್ದರು. ಅವರನ್ನು ಮೇಲೆತ್ತಿದಾಗ ಜೀವ ಇರಲಿಲ್ಲ. ಮಾನಸಿಕ ಖಿನ್ನತೆಗೆ ಒಳಗಾಗಿ ಅವರು ಆತ್ಮಹತ್ಯೆ ಮಾಡಿಕೊಂಡ ಅನುಮಾನ ಕಾಡುತ್ತಿದೆ. ಈ ವಿಷಯವನ್ನು ವಿನಾಯಕ ಅಡಕೊಳ್ಳಿ ಅವರ ಬಾವ ವಿಷ್ಣು ಸಭಾಹಿತ ಅವರು ಪೊಲೀಸರಿಗೆ ತಿಳಿಸಿದರು. ಕುಮಟಾ ಪೊಲೀಸರು ಪ್ರಕರಣ ದಾಖಲಿಸಿದರು. - [ಸಂಘದ ಸಾಲದ ಜೊತೆ ಕೈಗಡ: ಸಾವು!](https://mobiletime.in/2025/10/hand-in-hand-with-the-sanghas-debt-death/): ಸಂಘದಲ್ಲಿ ಮಾಡಿದ ಸಾಲದ ತಲೆಬಿಸಿಯಲ್ಲಿದ್ದ ಸಿದ್ದಾಪುರದ ಸತೀಶ ನಾಯ್ಕ ಅವರು ಅದೇ ನೋವಿನಲ್ಲಿ ವಿಷ ಸೇವಿಸಿದ್ದಾರೆ. ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿದರೂ ಅವರು ಬದುಕಲಿಲ್ಲ. ಸಿದ್ದಾಪುರದ ಹೊನ್ನೆಬಿಡಾರ ಕ್ಯಾದಗಿಯಲ್ಲಿ ಸತೀಶ ನಾಯ್ಕ ಅವರು ವಾಸವಾಗಿದ್ದರು. ಕೃಷಿಕರಾಗಿದ್ದ ಅವರು ಸರಾಯಿ ಸೇವನೆಯನ್ನು ರೂಡಿಸಿಕೊಂಡಿದ್ದರು. ನಿತ್ಯವು ಮದ್ಯ ಸೇವನೆ ಮಾಡಿ ಮನೆಗೆ ಬರುತ್ತಿದ್ದರು. ಸಂಘದ ಸಾಲ ಹಾಗೂ ಅವರಿವರ ಬಳಿ ಕೈಗಡಪಡೆದಿದನ್ನು ತೀರಿಸಲಾಗದ ನೋವಿನಲ್ಲಿ ಅವರು ಇನ್ನಷ್ಟು ಮದ್ಯ ಸೇವಿಸಲು ಶುರು ಮಾಡಿದ್ದರು. ತಮಗಿರುವ ನೋವು, ಸಾಲಗಾರರ ಕಾಟದ ಬಗ್ಗೆ ಸತೀಶ ನಾಯ್ಕ ಅವರು ಪತ್ನಿ ಶಶಿಕಲಾ ಅವರ ಬಳಿಯೂ ಹೇಳುತ್ತಿದ್ದರು. ಸಾಲ ತೀರಿಸಲಾಗದ ಕಾರಣ ಅಕ್ಟೊಬರ್ 1ರಂದು ಅವರು ವಿಷ ಸೇವಿಸಿದರು. ಅಸ್ವಸ್ಥರಾದ ಸತೀಶ ನಾಯ್ಕ ಅವರನ್ನು ಸ್ನೇಹಿತರು ಆಸ್ಪತ್ರೆಗೆ ದಾಖಲಿಸಿದರು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಸೇರಿಸಿದರು. ಆದರೆ, ಅಲ್ಲಿಯೂ ಅವರನ್ನು ಉಳಿಸಿಕೊಳ್ಳಲು ಆಗಲಿಲ್ಲ. ವೈದ್ಯರು ಸಾಕಷ್ಟು ಶ್ರಮಿಸಿದರೂ ಸತೀಶ ನಾಯ್ಕ ಅವರು ಅದಕ್ಕೆ ಸ್ಪಂದಿಸಲಿಲ್ಲ. ಪತಿ ಸಾವಿನ ಬಗ್ಗೆ ಶಶಿಕಲಾ ಅವರು ಸಿದ್ದಾಪುರ ಪೊಲೀಸ್ ಠಾಣೆಗೆ ಮಾಹಿತಿ ನೀಡಿ, ಪ್ರಕರಣ ದಾಖಲಿಸಿದರು.   - [Sorry, our servers are currently busy. our servers are currently busy](https://mobiletime.in/2025/10/the-policeman-who-gave/): 503 Error our servers are currently busy. our servers are currently busy - [ಮನೆಯಲ್ಲಿದ್ದ ಮನುಷ್ಯ ದಿಢೀರ್ ನಾಪತ್ತೆ](https://mobiletime.in/2025/10/man-in-house-suddenly-disappears/): ಶಿರಸಿ ಹೊಸಗದ್ದೆಯ ಪದ್ಮನಾಭ ಹೆಗಡೆ ಅವರು ದಿಡೀರ್ ನಾಪತ್ತೆ ಆಗಿದ್ದಾರೆ. ನಾಲ್ಕು ದಿನ ಹುಡುಕಾಟ ನಡೆಸಿದರೂ ಅವರು ಸಿಕ್ಕಿಲ್ಲ. ಶಿರಸಿ ಹುಲೆಕಲ್ ಬಳಿಯ ಹೊಸಗದ್ದೆ ನಕ್ಷೆಯಲ್ಲಿ ಪದ್ಮನಾಭ ಹೆಗಡೆ ಅವರು ವಾಸವಾಗಿದ್ದರು. ಅವರು ಕೃಷಿ ಕೆಲಸ ಮಾಡಿಕೊಂಡಿದ್ದರು. ಸೆಪ್ಟೆಂಬರ್ 29ರಂದು ಸಂಜೆಯವರೆಗೂ ಮನೆಯಲ್ಲಿದ್ದ ಅವರು ನಂತರ ಯಾರಿಗೂ ಕಾಣಿಸಲಿಲ್ಲ. ಪದ್ಮನಾಭ ಹೆಗಡೆ ಅವರ ದಿಢೀರ್ ಕಣ್ಮರೆಯ ಬಗ್ಗೆ ಕುಟುಂಬದವರು ಆತಂಕಕ್ಕೆ ಒಳಗಾಗಿದ್ದಾರೆ. ಎಲ್ಲಾ ಕಡೆ ಅವರ ಹುಡುಕಾಟ ನಡೆಸಿದ್ದಾರೆ. ಆದರೆ, ಈವರೆಗೆ ಎಲ್ಲಿಯೂ ಅವರ ಸುಳಿವು ಸಿಕ್ಕಿಲ್ಲ. ಶಿರಸಿ ಗ್ರಾಮೀಣ ಠಾಣೆಯಲ್ಲಿಯೂ ದೂರು ನೀಡಿದ್ದಾರೆ. ಅವರ ಫೋಟೋ ಹಿಡಿದು ಎಲ್ಲಾ ಕಡೆ ಕಳುಹಿಸಿದ್ದು, ಪೊಲೀಸರು ಸಹ ಪದ್ಮನಾಭ ಹೆಗಡೆ ಅವರ ಹುಡುಕಾಟದಲ್ಲಿದ್ದಾರೆ. ಪದ್ಮನಾಭ ಹೆಗಡೆ ಅವರು ಮನೆಯಿಂದ ಹೊರ ಹೋಗುವ ಮೊದಲು ಯಾರಿಗೂ ಹೇಳಿಲ್ಲ. ಎಲ್ಲಿ ಹೋಗುವೆ? ಎಂದು ಸಹ ಅವರು ಮಾಹಿತಿ ನೀಡಿಲ್ಲ. ಹೀಗಾಗಿ ಅವರ ಹುಡುಕಾಟ ಸವಾಲಾಗಿದ್ದು, ಕೋಳಿಗಾರ ಬಳಿಯ ಸಿಂಗನಳ್ಳಿ ಹಲಸರಗಿಯ ಶ್ರೀಧರ ಹೆಗಡೆ ಅವರು ಅವರ ಬಗ್ಗೆ ಮಾಹಿತಿ ಸಿಕ್ಕರೆ ತಿಳಿಸುವಂತೆ ಪೋಸ್ಟರ್ ಸಿದ್ಧಪಡಿಸಿ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. - [ಸೆಲ್ಪಿ ಹುಚ್ಚಿಗೆ ಜೀವ ಬಿಟ್ಟ ಪ್ರವಾಸಿಗ!](https://mobiletime.in/2025/10/a-tourist-lost-his-life-due-to-selfie-madness/): ಗೋಕರ್ಣದ ಓಂ ಕಡಲತೀರದಲ್ಲಿರುವ ಕಲ್ಪಂಡೆಗಳ ಮೇಲೆ ನಿಂತು ಸೆಲ್ಪಿ ತೆಗೆದುಕೊಳ್ಳುತ್ತಿದ್ದ ಪ್ರವಾಸಿಗರೊಬ್ಬರು ಅರಬ್ಬಿ ಅಲೆಗಳಿಗೆ ಕೊಚ್ಚಿ ಹೋಗಿದ್ದಾರೆ. ಸೆಲ್ಪಿ ಹುಚ್ಚಿಗೆ 45 ವರ್ಷದ ವ್ಯಕ್ತಿ ಸಾವನಪ್ಪಿದ್ದಾರೆ. ಶಿವಮೊಗ್ಗದಿಂದ ಒಟ್ಟು 10 ಜನ ಶುಕ್ರವಾರ ಗೋಕರ್ಣಕ್ಕೆ ಬಂದಿದ್ದರು. ತಮ್ಮ ಬಳಗದವರ ಜೊತೆ ಅವರೆಲ್ಲರೂ ಸಮುದ್ರ ಸ್ನಾನ ಮಾಡುತ್ತಿದ್ದರು. ಈ ವೇಳೆ ಆ ಗುಂಪಿನಲ್ಲಿದ್ದ ಅಸ್ಲಾಂ ಎಂಬಾತರಿಗೆ ಫೋಟೋ ಕ್ಲಿಕ್ಕಿಸಿಕೊಳ್ಳುವ ಮನಸ್ಸಾಯಿತು. ಹೀಗಾಗಿ ಕೈಯಲ್ಲಿ ಮೊಬೈಲ್ ಹಿಡಿದು ಜಾರುತ್ತಿರುವ ಕಲ್ಬಂಡೆಗಳ ಮೇಲೆ ಹತ್ತಿದರು. ಒಂದೆರಡು ಸೆಲ್ಪಿಯನ್ನು ಕ್ಲಿಕ್ಕಿಸಿದರು. ಆ ವೇಳೆಗೆ ಬಂದ ದೊಡ್ಡ ಅಲೆಯೊಂದು ಅವರಿಗೆ ಬಡಿದಿದ್ದು, ಮೊಬೈಲ್ ಜೊತೆ ಅವರು ನೀರಿಗೆ ಬಿದ್ದರು. ಅಸ್ಲಾಂ ಅವರಿಗೆ ಈಜು ಸರಿಯಾಗಿ ಬರುತ್ತಿರಲಿಲ್ಲ. ಹೀಗಾಗಿ ಅಲೆಗಳ ಅಬ್ಬರದಲ್ಲಿ ಅವರು ಕೊಚ್ಚಿ ಹೋಗಿದ್ದು, ಈಜಿ ದಡ ಸೇರುವ ಪ್ರಯತ್ನವೂ ಫಲ ಕೊಡಲಿಲ್ಲ. ನೀರಿಗೆ ಬಿದ್ದ ತಕ್ಷಣ ಅವರು ಒಮ್ಮೆಲೆ ಉಸಿರು ಒಳ ತೆಗೆದುಕೊಂಡಿದ್ದು, ಗಾಳಿ ಜೊತೆ ನೀರು ಮೂಗಿನೊಳಗೆ ಹೋಯಿತು. ಪರಿಣಾಮ ಅಸ್ಲಾಂ ಅವರು ಸಮುದ್ರದ ನೀರಿನಲ್ಲಿಯೇ ತಮ್ಮ ಪ್ರಾಣ ಬಿಟ್ಟರು. ಅಸ್ಲಾಂ ಅವರು ನೀರಿಗೆ ಬಿದ್ದಿರುವುದನ್ನು ನೋಡಿದ ಉಳಿದವರು ಅಲ್ಲಿದ್ದ ರಕ್ಷಣಾ ಸಿಬ್ಬಂದಿಗೆ ಮಾಹಿತಿ ನೀಡಿದರು. ರಕ್ಷಣಾ ಸಿಬ್ಬಂದಿ ಅಸ್ಲಾಂ ಅವರ ರಕ್ಷಣೆಗೆ ನೀರಿಗೆ ಹಾರಿದರು. ಅವರನ್ನು ದಡಕ್ಕೆ ಎಳೆದು ತಂದು ನೋಡಿದಾಗ ಸಾವನಪ್ಪಿರುವುದು ಅರಿವಿಗೆ ಬಂದಿತು. ಅಸ್ಲಾo ಅವರ ಶವವನ್ನು ಸದ್ಯ ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಸಮುದ್ರದ ಬಂಡೆ ಮೇಲೆ ನಿಲ್ಲದಂತೆ ನಾಮಫಲಕ ಅಳವಡಿಸಿದರೂ ಜನ ಸೆಲ್ಪಿ ಹುಚ್ಚಿಗೆ ಅಪಾಯಕಾರಿ ಸನ್ನಿವೇಶ ಎದುರಿಸುತ್ತಿದ್ದು, ಇದರಿಂದ ಸಾವು-ನೋವಿನ ಪ್ರಮಾಣ ಹೆಚ್ಚಾಗಿದೆ. ರಕ್ಷಣಾ ಸಿಬ್ಬಂದಿ ಜನರ ಹುಚ್ಚಾಟ ತಡೆಗೆ ಹರಸಾಹಸ ನಡೆಸುತ್ತಿದ್ದು, ಅದಾಗಿಯೂ ಇಲ್ಲಿ ಪ್ರವಾಸಿಗರು ಕೇಳುತ್ತಿಲ್ಲ. - [ಬಾಲ ನಟಿಗೆ ಪ್ರಶಸ್ತಿಯ ಪುರಸ್ಕಾರ](https://mobiletime.in/2025/10/child-actress-receives-award/): ಶಿವಮೊಗ್ಗದ ಬಾಲ ನಟಿ ಋತು ಸ್ಪರ್ಶ ಅವರಿಗೆ ಬೆಂಗಳೂರು ಅಂತರಾಷ್ಟ್ರೀಯ ಮಕ್ಕಳ ಚಲನಚಿತ್ರೋತ್ಸವದಲ್ಲಿ ಅತ್ಯುತ್ತಮ ಬಾಲ ಕಲಾವಿದೆ ಎಂಬ ಪುರಸ್ಕಾರ ಸಿಕ್ಕಿದೆ. ಮಕ್ಕಳ ಚಲನಚಿತ್ರೋತ್ಸವದ ಎರಡನೇ ಆವೃತ್ತಿಯಲ್ಲಿ ಅವರು ಈ ಪ್ರಶಸ್ತಿ ಸ್ವೀಕರಿಸಿದ್ದಾರೆ. ಋತು ಸ್ಪರ್ಶ ಅವರು ಟೆಕ್ವಾಂಡೋ ಗರ್ಲ್ ಚಿತ್ರದಲ್ಲಿ ನಟಿಸಿದ್ದರು. ಅವರ ನಟನೆಗೆ ಅಂತರಾಷ್ಟ್ರೀಯ ಮಕ್ಕಳ ಚಲನಚಿತ್ರೋತ್ಸವ ವೇದಿಕೆ ಮೆಚ್ಚುಗೆ ವ್ಯಕ್ತಪಡಿಸಿದ್ದು, ಅನೇಕರು ಬಾಲ ಕಲಾವಿದೆಯ ಅಭಿನಯನವನ್ನು ಕೊಂಡಾಡಿದರು. ಉಲ್ಲಾಸ್ ಸ್ಕೂಲ್ ಆಫ್ ಸಿನಿಮಾಸ್ ಅವರು ಈ ಕಾರ್ಯಕ್ರಮ ಆಯೋಜಿಸಿದ್ದು, ಅಚ್ಚುಕಟ್ಟಾದ ಕಾರ್ಯಕ್ರಮ ಗಮನಸೆಳೆಯಿತು. ದಕ್ಷಿಣ ಕೊರಿಯಾದ ಸಮರ ಕಲೆಯಾದ ಟೆಕ್ವಾಂಡೋ ಅಭ್ಯಾಸ ಮಾಡಿರುವ ಅವರು ಈಜು, ಗಾಯನ ಹಾಗೂ ನಟನೆಯಲ್ಲಿ ಮುಂಚೂಣಿಯಲ್ಲಿದ್ದಾರೆ. ತಮ್ಮ ಮೂರನೇ ವಯಸ್ಸಿನಲ್ಲಿ ಟೆಕ್ವಾಂಡೋ ಅಭ್ಯಾಸ ಮಾಡಿದ ಅವರು ಹಲವು ಟೂರ್ನಮೆಂಟ್’ಗಳಲ್ಲಿ ಭಾಗವಹಿಸಿ ಪ್ರಶಸ್ತಿ ಪಡೆದಿದ್ದಾರೆ. ಶಿವಮೊಗ್ಗ ಜಿಲ್ಲೆಯ ಪ್ರವೀಣ್ ಭಾನು ಮತ್ತು ಡಾ ಸುನಿತಾ ಪ್ರವೀಣ್ ಅವರ ಏಕೈಕ ಪುತ್ರಿಯಾಗಿರುವ ಋತು ಸ್ಪರ್ಶ ಅವರು ಬಾಲ್ಯದಿಂದಲೇ ಅಭಿನಯನದ ಕಡೆ ಆಸಕ್ತಿವಹಿಸಿದ್ದಾರೆ. 12 ವರ್ಷದ ಅವರು ಸದ್ಯ ರಾಜಾಜಿನಗರದ ಶ್ರೀ ಸಾಯಿ ವಿದ್ಯಾಲಯದಲ್ಲಿ ಏಳನೇ ತರಗತಿಯಲ್ಲಿ ಓದುತ್ತಿದ್ದಾರೆ. 2024ರಲ್ಲಿ ಬಿಡುಗಡೆಯಾದ ಟೆಕ್ವಾಂಡೋ ಗರ್ಲ್ ಚಿತ್ರಕಾಗಿ ಹಲವಾರು ಪ್ರಶಸ್ತಿಗಳನ್ನು ಪಡೆದಿದ್ದಾರೆ. ವಿಯೆಟ್ನಾಂ ಅಂತರಾಷ್ಟ್ರೀಯ ಚಲನಚಿತ್ರದಲ್ಲಿ ಅತ್ಯುತ್ತಮ ಬಾಲ ನಟಿ, ಕರ್ನಾಟಕ ರಾಜ್ಯದ ಚಂದನವನ ಫಿಲಂ ಕ್ರಿಟಿಕ್ ಪ್ರಶಸ್ತಿ, ಏಶಿಯನ್ ನೆಟ್ ಅಂತರಾಷ್ಟ್ರೀಯ ಚಿತ್ರೋತ್ಸವದಲ್ಲಿ ಅತ್ಯುತ್ತಮ ಬಾಲ ನಟ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳನ್ನು ಪಡೆದಿದ್ದಾರೆ. ಚಿತ್ರಸಂತೆ ಪ್ರಶಸ್ತಿಯನ್ನು ಅವರು ಪಡೆದಿದ್ದಾರೆ. - [2025 ಅಕ್ಟೊಬರ್ 3ರ ದಿನ ಭವಿಷ್ಯ](https://mobiletime.in/2025/10/prediction-for-october-3-2025/): ಮೇಷ ರಾಶಿ: ನಕಾರಾತ್ಮಕ ವಿಚಾರಗಳಿಂದ ದೂರವಿದ್ದರೆ ಈ ದಿನ ಗೆಲುವು ಸಾಧ್ಯ. ಹಣಕಾಸು ವಿಷಯದಲ್ಲಿ ಎಚ್ಚರಿಕೆ ಅಗತ್ಯ. ಅನಾರೋಗ್ಯ ಕಾಡುವ ಸಾಧ್ಯತೆಗಳಿದೆ. ವೃಷಭ ರಾಶಿ: ಆಪ್ತರ ಸಹಾಯ ಸಿಗಲಿದೆ. ಹಣಕಾಸಿನ ಲಾಭ ಆಗಲಿದೆ. ನಿಮ್ಮ ಕೆಲಸ ನಿಧಾನವಾಗಿ ಸಾಗಲಿದೆ. ಆತಂಕದ ಸಮಯ ಬರಬಹುದು. ಮಿಥುನ ರಾಶಿ: ನಿಮ್ಮ ಹೊಸ ಪ್ರಯತ್ನ ಯಶಸ್ಸು ಕೊಡಲಿದೆ. ಸರ್ಕಾರಿ ಕೆಲಸಗಳು ಬಗೆಹರಿಯುವ ಸಾಧ್ಯತೆಯಿದೆ. ಸಮಸ್ಯೆಗಳು ದೂರವಾಗಲಿದೆ. ಕರ್ಕ ರಾಶಿ: ಹಣಕಾಸು ವಿಷಯದಲ್ಲಿ ಮುನ್ನಚ್ಚರಿಕೆ ಅಗತ್ಯ. ಹಿರಿಯರ ಸಲಹೆಪಡೆದು ಮುನ್ನುಗ್ಗುವುದು ಒಳಿತು. ಕುಟುಂಬದವರ ಒಳಿತಿನ ಬಗ್ಗೆ ಚಿಂತಿಸಿ. ಸಿoಹ ರಾಶಿ: ಆರ್ಥಿಕ ವಿಷಯಗಳಲ್ಲಿ ಸುಧಾರಣೆ ಆಗಲಿದೆ. ಸ್ನೇಹಿತರ ಜೊತೆ ಚನ್ನಾಗಿರಿ. ಪೈಪೋಟಿ ನೀಡುವವರ ಬಗ್ಗೆ ತಲೆಕೆಡಿಸಿಕೊಳ್ಳುವುದು ಬೇಡ. ಕನ್ಯಾ ರಾಶಿ: ಹೊಸ ಮಾತುಕಥೆಗಳು ಸರಾಗವಾಗಿ ಸಾಗಲಿದೆ. ಒಪ್ಪಂದಗಳನ್ನು ಮಾಡಿಕೊಳ್ಳಲು ಒಳ್ಳೆಯ ದಿನ. ವ್ಯಾಪಾರಿಗಳಿಗೆ ಲಾಭ ಆಗಲಿದೆ. ತುಲಾ ರಾಶಿ: ಪ್ರಯೋಗಶೀಲ ಕೃಷಿಕರಿಗೆ ಈ ದಿನ ಒಳ್ಳೆಯದಾಗಲಿದೆ. ವೃತ್ತಿ ಜೀವನದಲ್ಲಿ ಹೊಸ ಅವಕಾಶಗಳು ಬರಲಿದೆ. ಹಿರಿಯರು ಹೇಳಿದ ದಾರಿಯಲ್ಲಿ ನಡೆಯುವುದು ಉತ್ತಮ. ವೃಶ್ಚಿಕ ರಾಶಿ: ವೈಯಕ್ತಿಕ ವಿಷಯಗಳ ಬಗ್ಗೆ ಗಮನಹರಿಸಿ. ಹಣಕಾಸು ವಿಷಯದಲ್ಲಿ ಬೇರೆಯವರ ಮಾತು ಕೇಳಬೇಡಿ. ನಿಮ್ಮ ಕೆಲಸದ ಬಗ್ಗೆ ಮೆಚ್ಚುಗೆವ್ಯಕ್ತವಾಗಲಿದೆ. ಧನು ರಾಶಿ: ಸಾಮಾಜಿಕ ಚಟುವಟಿಕೆಯಲ್ಲಿ ಭಾಗವಹಿಸಿದರೆ ನಿಮ್ಮನ್ನು ಜನ ಗುರುತಿಸಲಿದ್ದಾರೆ. ಹಣಕಾಸು ಲಾಭ ಆಗಲಿದೆ. ಸ್ನೇಹಿತರ ಸಹಾಯಪಡೆದು ಕೆಲಸ ಮಾಡುವುದು ಸೂಕ್ತ. ಮಕರ ರಾಶಿ: ಸಂಗೀತ ಹಾಗೂ ಕಲಾ ಚಟುವಟಿಕೆಯಲ್ಲಿ ಭಾಗವಹಿಸುವ ಅವಕಾಶವಿದೆ. ಹಳೆಯ ಸ್ನೇಹಿತರು ಭೇಟಿ ಆಗಲಿದ್ದಾರೆ. ಆರೋಗ್ಯ ಸುಧಾರಣೆ ಆಗಲಿದೆ. ಕುಂಭ ರಾಶಿ: ಕಚೇರಿ ಕೆಲಸಗಳು ಇನ್ನಷ್ಟು ತಡವಾಗಲಿದೆ. ಆರೋಗ್ಯ ಸುಧಾರಣೆ ಆಗಲಿದೆ. ತುರ್ತು ಸನ್ನಿವೇಶವನ್ನು ಉಪಾಯದಿಂದ ನಿಭಾಯಿಸಿ. ಮೀನ ರಾಶಿ: ಲಾಭದ ನಿರೀಕ್ಷೆ ನಿಮ್ಮನ್ನು ಹುಸಿ ಮಾಡುವುದಿಲ್ಲ. ಹೊಸ ಭರವಸೆಗಳು ಸಿಗಲಿವೆ. ಹಿರಿಯರ ಅನುಗ್ರಹದಿಂದ ಸಾಧನೆ ಸಾಧ್ಯವಿದೆ. - [ದಾಂಡೇಲಿ: ಸಾವಿರ ಜನರ ಸಮ್ಮುಖದಲ್ಲಿ ದುಷ್ಟಶಕ್ತಿಗಳ ಸಾಮೂಹಿಕ ಸಂಹಾರ!](https://mobiletime.in/2025/10/dandeli-mass-extermination-of-evil-spirits-in-the-presence-of-thousands-of-people/): ದಾoಡೇಲಿ ವೆಸ್ಟಕೋಸ್ಟ್ ಪೆಪರ್‌ಮಿಲ್ಲಿನ ಡಿಲೇಕ್ಸ ಮೈದಾನದಲ್ಲಿ ಗುರುವಾರ ರಾತ್ರಿ ರಾವಣ, ಕುಂಭಕರ್ಣ ಮತ್ತು ಮೇಘನಾಥರ ಪ್ರತಿಕೃತಿಗಳಿಗೆ ಪಟಾಕಿ ಅಂಟಿಸಿ ಸಿಡಿಸಲಾಯಿತು. ಆ ಮೂಲಕ ಆ ಭಾಗದ ದುಷ್ಟಶಕ್ತಿಗಳನ್ನು ಸಂಹಾರ ಮಾಡಿದ ಬಗ್ಗೆ ಅಲ್ಲಿನವರು ಸಂಭ್ರಮಿಸಿದರು. ಸAಜೆ ರಾಮ ಮಂದಿರದಿoದ ಶ್ರೀ ರಾಮಚಂದ್ರನ ಪಲ್ಲಕಿ ಉತ್ಸವ ಡಿಲಕ್ಸ್ ಮೈದಾನಕ್ಕೆ ಆಗಮಿಸಿದ್ದು, ರಂಗು ರಂಗಿನ ಸಿಡಿಮದ್ದುಗಳು ಸ್ಪೋಟವಾದವು. ಆಕಾಶದ ಕಡೆ ಚಿಮ್ಮಿದ ಸಿಡಿಮದ್ದುಗಳು ಬಾನಂಗಳದಲ್ಲಿ ಬಣ್ಣ ಬಣ್ಣದ ಚಿತ್ತಾರ ಮೂಡಿಸಿದವು. ಆಗ ನೆರೆದಿದ್ದ ಜನ ಹರ್ಷೋದ್ಘಾರದಿಂದ ಕೂಗಿದರು. ಒಂದು ಗಂಟೆಗೂ ಅಧಿಕ ಕಾಲ ಸಿಡಿಮದ್ದಿನ ಪ್ರದರ್ಶನ ನಡೆಯಿತು. ಹಳಿಯಾಳ, ಜೊಯಿಡಾ, ಯಲ್ಲಾಪುರ, ಧಾರವಾಡ, ಹುಬ್ಬಳ್ಳಿ ಮತ್ತು ಇನ್ನಿತರ ಭಾಗದ ಜನ ರಾಮಲೀಲಾ ಉತ್ಸವ ವೀಕ್ಷಣೆಗೆ ಆಗಮಿಸಿದ್ದರು. 51 ಅಡಿ ಎತ್ತರದ ರಾವಣ ಮತ್ತು 48 ಅಡಿ ಎತ್ತರದ ಕುಂಭಕರ್ಣ ಮತ್ತು ಮೇಘನಾಥರ ಪ್ರತಿಕೃತಿಗಳನ್ನು ಸುಡಲಾಯಿತು. 10 ಸಾವಿರಕ್ಕೂ ಅಧಿಕ ಜನ ಇದಕ್ಕೆ ಸಾಕ್ಷಿಯಾದರು. - [ಹಣಕಾಸು ವಿಷಯದಲ್ಲಿ ಕಲಹ: ನಡುಬೀದಿಯಲ್ಲಿ ಹೊಡೆದಾಟ!](https://mobiletime.in/2025/10/financial-dispute-fight-in-the-middle-of-the-street/): ಹಣಕಾಸು ವಿಷಯವಾಗಿ ಕಾರವಾರದಲ್ಲಿ ಹೊಡೆದಾಟ ನಡೆದಿದೆ. ಕಡವಾಡ ಸುಲ್ತಾನಪುರದ ಮಹಮದ್ ರಯಾನ್ ಹಾಗೂ ಕಡವಾಡದ ಮಹಾದೇವ ದೇವಸ್ಥಾನದ ಬಳಿಯ ಕಾರ್ತಿಕ ಕಡವಾಡಕರ್ ಪರಸ್ಪರ ಹೊಡೆದಾಡಿಕೊಂಡಿದ್ದಾರೆ. ಈ ವೇಳೆ ದೀಪಿಕಾ ಕಡವಾಡಕರ ಹಾಗೂ ಅಮೋಘ ಕಡವಾಡಕರ್ ಸಹ ಮಹಮದ್ ರಯಾನ್ ಅವರಿಗೆ ಬೆದರಿಕೆ ಒಡ್ಡಿದ್ದಾರೆ. ಮಹಮದ್ ರಯಾನ್ ಅವರು ವರ್ಷದ ಹಿಂದೆ ಪ್ಲಿಪ್ ಕಾರ್ಟ ಡಿಲೆವರಿ ಬಾಯ್ ಆಗಿ ಕೆಲಸ ಮಾಡಿಕೊಂಡಿದ್ದರು. ಆ ಅವಧಿಯಲ್ಲಿ ಕಾರ್ತಿಕ ಕಡವಾಡಕರ್ ಅವರು ಆನ್‌ಲೈನ್ ಮೂಲಕ 3 ಸಾವಿರ ರೂ ಬೆಲೆಯ ಶೂ ಆರ್ಡರ್ ಮಾಡಿದ್ದರು. ಮಹಮದ್ ರಯಾನ್ ಅವರು ಕಾರ್ತಿಕ ಕಡವಾಡಕರ್ ಅವರ ಮನೆಗೆ ಶೂ ಡಿಲೆವರಿ ಮಾಡಲು ಹೋಗಿದ್ದರು. ಆಗ, ಕಾರ್ತಿಕ ಕಡವಾಡಕರ್ ಅವರು `ತನ್ನ ಬಳಿ ದುಡ್ಡಿಲ್ಲ. ಈಗ ನೀನೇ ದುಡ್ಡು ಕೊಡು. ನಂತರ ನಾನು ಮರಳಿಸುವೆ’ ಎಂದಿದ್ದರು. ಆಗ, ಮಹಮದ್ ರಯಾನ್ ಅವರು 3 ಸಾವಿರ ರೂ ಹಣ ಪಾವತಿಸಿ ಆ ಬೂಟು ಬಿಡಿಸಿಕೊಟ್ಟಿದ್ದರು. ಅದಾಗಿ ಒಂದು ವರ್ಷ ಕಳೆದರೂ 3 ಸಾವಿರ ರೂಪಾಯಿಯನ್ನು ಕಾರ್ತಿಕ ಕಡವಾಡಕರ್ ಅವರು ಮರು ಪಾವತಿ ಮಾಡಿರಲಿಲ್ಲ. ಈ ಬಗ್ಗೆ ಮಹಮದ್ ರಯಾನ್ ಸಾಕಷ್ಟು ಬಾರಿ ಕೇಳಿದ್ದರು. ಆದರೆ, ಕಾರ್ತಿಕ ಕಡವಾಡಕರ್ ಆ ಹಣ ಮಾತ್ರ ಕೊಡುತ್ತಿರಲಿಲ್ಲ. ಮೂರು ವಾರದ ಹಿಂದೆ ಹಣದ ವಿಷಯವಾಗಿ ಕಡವಾಡ-ಸುಂಕೇರಿ ಸೇತುವೆ ಬಳಿ ಕಾರ್ತಿಕ ಕಡವಾಡಕರ ಹಾಗೂ ಮಹಮದ್ ರಯಾನ್ ನಡುವೆ ಜಗಳ ನಡೆಯಿತು. ಆಗ, `ನಿನ್ನ ಹಣ ಕೊಡುವುದೇ ಇಲ್ಲ’ ಎಂದು ಕಾರ್ತಿ ಕಡವಾಡಕರ್ ಜೋರಾಗಿ ಹೇಳಿದ್ದರು. ಹೀಗಿರುವಾಗ ಅಕ್ಟೊಬರ್ 1ರಂದು ದಾಂಡಿಯಾ ನೋಡಲು ಸುಲ್ತಾನಪುರ ರಸ್ತೆಯಲ್ಲಿ ಮಹಮದ್ ರಯಾನ್ ಅವರು ನಡೆದು ಹೋಗುತ್ತಿದ್ದರು. ಆಗ, ಕಾರ್ತಿಕ ಕಡವಾಡಕರ್ ಹಾಗೂ ದೀಪಿಕಾ ಕಡವಾಡಕರ್ ಅಲ್ಲಿ ಸ್ಕೂಟಿಯಲ್ಲಿ ಬಂದು ಮಹಮದ್ ರಯಾನ್ ಅವರನ್ನು ಅಡ್ಡಗಟ್ಟಿದರು. ಆಗಲೂ ಅವರಿಬ್ಬರು ಜಗಳ ಶುರು ಮಾಡಿದ್ದು, ಕಾರ್ತಿಕ ಕಡವಾಡಕರ್ ಅವರು ತಮ್ಮ ಕೈಯಲ್ಲಿರುವ ಕಬ್ಬಿಣದ ಬಳೆಯಿಂದ ಮಹಮದ್ ರಯಾನ್ ಅವರಿಗೆ ಹೊಡೆದರು. ಪರಿಣಾಮ ಮಹಮದ್ ರಯಾನ್ ಅವರು ಆಸ್ಪತ್ರೆ ಸೇರಿದರು. ಆ ವೇಳೆ ಅಮೋಘ ಕಡವಾಡಕರ್ ಫೋನ್ ಮಾಡಿ ಜೀವ ಬೆದರಿಕೆ ಒಡ್ಡಿದ ಬಗ್ಗೆ ಮಹಮದ್ ರಯಾನ್ ಅವರು ಪೊಲೀಸ್ ದೂರು ನೀಡಿದರು. - [ಕಾರ್ ಮೆಕಾನಿಕ್‌'ನ ನಶೆ ಇಳಿಸಿದ PSI](https://mobiletime.in/2025/10/psi-found-the-car-mechanic-intoxicated/): ಯಲ್ಲಾಪುರದ ಯುವಕರಿಬ್ಬರು ಅಮಲಿನಲ್ಲಿರುವಾಗ ಪೊಲೀಸರು ಅವರನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಅಮಲಿನಲ್ಲಿದ್ದ ಅವರಿಬ್ಬರು ಸರಿಯಾಗಿ ಮಾತನಾಡದ ಕಾರಣ ವೈದ್ಯಕೀಯ ತಪಾಸಣೆಗೆ ಒಳಪಡಿಸಿದ್ದು, ಆ ವೇಳೆ ಅವರು ಗಾಂಜಾ ನಶೆಯಲ್ಲಿರುವುದು ದೃಢವಾಗಿದೆ. ಯಲ್ಲಾಪುರದ ವಿನಾಯಕ ನಗರದಲ್ಲಿರುವ ಅಂಗನವಾಡಿ ಬಳಿ ಅದೇ ಭಾಗದ ಕಾರ್ ಮೆಕಾನಿಕ್ ರಾಜೇಶ ರತ್ನಾಕರ ಆಚಾರಿ ಅಲೆದಾಡುತ್ತಿದ್ದರು. ಅವರ ಜೊತೆ ವಿನಾಯಕ ನಗರದ ದರ್ಶನ್ ವೆಂಕಟೇಶ ಆಚಾರಿ ಸಹ ಇದ್ದರು. ಅಕ್ಟೊಬರ್ 2ರಂದು ಪಿಎಸ್‌ಐ ರಾಜಶೇಖರ ವಂದಲಿ ಅವರು ಇಬ್ಬರನ್ನು ಮಾತನಾಡಿಸಿದರು. ಆದರೆ, ಅವರಿಬ್ಬರು ಆ ಕ್ಷಣದಲ್ಲಿ ಮಾತನಾಡುವ ಸ್ಥಿತಿಯಲ್ಲಿರಲಿಲ್ಲ. ಹೀಗಾಗಿ ಪೊಲೀಸರು ಅವರಿಬ್ಬರನ್ನು ಆಸ್ಪತ್ರೆಗೆ ಕರೆದೊಯ್ದರು. ನಶೆಯಲ್ಲಿದ್ದ ರಾಜೇಶ ರತ್ನಾಕರ ಆಚಾರಿ ಹಾಗೂ ದರ್ಶನ್ ವೆಂಕಟೇಶ ಆಚಾರಿ ಇಬ್ಬರನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಿದರು. ತಪಾಸಣಾ ವರದಿಯಲ್ಲಿ ಅವರಿಬ್ಬರು ಗಾಂಜಾ ಸೇವಿಸಿದ ಬಗ್ಗೆ ಪಾಸಿಟಿವ್ ವರದಿ ಬಂದಿತು. ಹೀಗಾಗಿ ಪೊಲೀಸರು ಕಾನೂನಿನ ಪ್ರಕಾರ ಪ್ರಕರಣ ದಾಖಲಿಸಿದರು. ಸದ್ಯ ಸಹಾಯಕ ಪೊಲೀಸ್ ಉಪನಿರೀಕ್ಷಕಿ ರೇಣುಕಾ ಬೆಳಗಟ್ಟಿ ಅವರು ಈ ಪ್ರಕರಣದ ತನಿಖೆ ಶುರು ಮಾಡಿದ್ದಾರೆ. - [ಗೋಕರ್ಣ: ಲಾಡ್ಜ್-ರೆಸಾರ್ಟ ಕೆಲಸಗಾರರ ನಡುವೆ ಮಾರಾಮಾರಿ!](https://mobiletime.in/2025/10/gokarna-fight-between-lodge-resort-workers/): ಗೋಕರ್ಣಕ್ಕೆ ಬರುವ ಪ್ರವಾಸಿಗರಿಗೆ ರೂಮು ಕೊಡಿಸುವುವ ವಿಷಯದಲ್ಲಿ ಆ ಭಾಗದ ಲಾಡ್ಜು ಹಾಗೂ ಹೋಂ ಸ್ಟೇ ಕೆಲಸಗಾರರು ಹೊಡೆದಾಟ ಮಾಡಿಕೊಂಡಿದ್ದಾರೆ. ಪೊಲೀಸರು ಅವರೆಲ್ಲರ ವಿರುದ್ಧ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿದ್ದು, ಕಾನೂನು ಕ್ರಮ ಜರುಗಿಸಿದ್ದಾರೆ. ಪೊಲೀಸ್ ಸಿಬ್ಬಂದಿ ಕಿರಣಕುಮಾರ್ ಅವರು ಅಕ್ಟೊಬರ್ 1ರಂದು ಓಂ ಬೀಚ್ ಕಡೆ ಹೋಗುತ್ತಿದ್ದರು. ಮೇಲಿನಕೇರಿ ರಸ್ತೆಯಲ್ಲಿ ಗಲಾಟೆ ನಡೆಯುತ್ತಿರುವುದು ಅವರಿಗೆ ಗೊತ್ತಾಯಿತು. ಹತ್ತಿರ ಹೋಗಿ ನೋಡಿದಾಗ ಅಲ್ಲಿ 9 ಜನ ಹೊಡೆದಾಡುತ್ತಿದ್ದರು. ಸಾರ್ವಜನಿಕರು ಹಾಗೂ ಪ್ರವಾಸಿಗರ ಮುಂದೆಯೇ ಅವರು ಕೆಟ್ಟದಾಗಿ ಬೈದುಕೊಳ್ಳುತ್ತಿದ್ದರು. ವಿಸ್ಮಯ ಲಾಡ್ಜಿನಲ್ಲಿ ಕೆಲಸ ಮಾಡುವ ಹನೆಹಳ್ಳಿ ಚರ್ಚಿನ ಬಳಿಯ ಮಹೇಶ ಮೋಹನ ನಾಯ್ಕ, ಸುಖಸಾಗರ ಲಾಡ್ಜಿನಲ್ಲಿ ಕೆಲಸ ಮಾಡುವ ಗಂಗೆಕೊಳ್ಳದ ಸತ್ಯನಾರಾಯಣ ಅರ್ಜುನ ಮೋರ್ಚೆ, ಸುಖಸಾಗರ ಲಾಡ್ಜಿನಲ್ಲಿ ಕೆಲಸ ಮಾಡುವ ಗೋಕರ್ಣ ಮೇಲಿನಕೇರಿಯ ಸಾಗರ ರಾಮಚಂದ್ರ ನಾಯ್ಕ ದೊಡ್ಡ ಗಲಾಟೆ ಮಾಡುತ್ತಿದ್ದರು. ಗೀಮ್ ಹೋಂ ಸ್ಟೇಯಲ್ಲಿ ಕೆಲಸ ಮಾಡುವ ಅಂಕೋಲಾ ಬೆಳಲೆಯ ವಿಜಯ ರಾಮಚಂದ್ರ ಹರಿಕಂತ್ರ, ಸಾಯಿಮಾತಾ ಲಾಡ್ಜಿನಲ್ಲಿ ಕೆಲಸ ಮಾಡುವ ಕುಮಟಾ ವಾಲಗಳ್ಳಿಯ ವಿರಾಜ ದೇವರಾಜ ನಾಯ್ಕ, ಕೃಷ್ಣ ಆಯುಷ್ ಹೋಂ ಸ್ಟೇಯಲ್ಲಿ ಕೆಲಸ ಮಾಡುವ ಕುಮಟಾ ಚಿನ್ನದಕೇರಿಯ ಪ್ರದೀಪ ನಾರಾಯಣ ಶೆಟ್ಟಿ ಸಹ ಕೈ ಕೈ ಮಿಲಾಯಿಸುತ್ತಿದ್ದರು. ನಿಶಾ ಹೋಂ ಸ್ಟೇಯಲ್ಲಿ ಕೆಲಸ ಮಾಡುವ ಗೋಕರ್ಣ ಮೇಲಿನಕೇರಿಯ ಸುರೇಶ ನಾಗೇಶ ಗೌಡ, ಸುಖಸಾಗರದಲ್ಲಿ ಕೆಲಸ ಮಾಡುವ ಮೇಲಿನಕೇರಿಯ ರಾಜು ಶಿವಾ ಹುಲಸ್ವಾರ ಹಾಗೂ ಶಾರದಾ ಲಾಡ್ಜಿನಲ್ಲಿ ಕೆಲಸ ಮಾಡುವ ಕುಮಟಾ ಚಿನ್ನದಕೇರಿಯ ಬಸವರಾಜ ಬಸಪ್ಪ ಶಿರೂರು ಸಹ ಅಲ್ಲಿ ಗೊಂದಲ ಎಬ್ಬಿಸಿದ್ದರು. ಗೋಕರ್ಣಕ್ಕೆ ಬರುವ ಪ್ರವಾಸಿಗರನ್ನು ತಮ್ಮ ಲಾಡ್ಜಿಗೆ ಕರೆದೊಯ್ಯುವ ವಿಷಯವಾಗಿ ಅವರೆಲ್ಲರ ನಡುವೆ ಅನಾರೋಗ್ಯಕರ ಸ್ಪರ್ಧೆ ನಡೆದಿತ್ತು. ಪರಿಣಾಮ ಅವರವರಲ್ಲಿಯೇ ಈ ಹೊಡೆದಾಟ ಶುರುವಾಗಿತ್ತು. ಪೊಲೀಸ್ ಸಿಬ್ಬಂದಿ ಕಿರಣಕುಮಾರ್ ಅವರು ಹೊಡೆದಾಟ ತಪ್ಪಿಸುವ ಪ್ರಯತ್ನ ಮಾಡಿದರು. ಆದರೆ, ಅವರು ಪೊಲೀಸರ ಮಾತು ಕೇಳುವ ಸ್ಥಿತಿಯಲ್ಲಿರಲಿಲ್ಲ. ಪೊಲೀಸರ ಮುಂದೆಯೇ ಹೊಡೆದಾಟ ನಡೆಸಿ ಶಾಂತಿ ಭಂಗ ನಡೆಸಿದ ಕಾರಣ ಕಿರಣಕುಮಾರ ಅವರು ಮೇಲಧಿಕಾರಿಗಳಿಗೆ ಮಾಹಿತಿ ನೀಡಿದರು. ಅಲ್ಲಿಂದ ಸೂಚನೆ ಬಂದಿದ್ದರಿAದ ಹೊಡೆದಾಡಿದವರ ವಿರುದ್ಧ ಪೊಲೀಸರು ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿದರು.   - [ಮಾವನಿಗೆ ಮೋಸ ಮಾಡಿದ ಅಳಿಯ!](https://mobiletime.in/2025/10/the-son-in-law-who-cheated-on-his-father-in-law/): ಕಾರವಾರದ ಸಿವಿಲ್ ಗುತ್ತಿಗೆದಾರ ಪ್ರೀತಂ ಮಾಸೂರಕರ್ ಅವರಿಗೆ ಅವರ ಸೋದರಳಿಯ ಚಿರಾಗ ಮಾಸೂರಕರ್ ಅವರೇ ಮೋಸ ಮಾಡಿದ್ದಾರೆ. ಚಿರಾಗ ಮಾಸೂರಕರ್ ಅವರ ಜೊತೆ ಅಬ್ಬಾಸ್ ಬೇರಿ ಹಾಗೂ ಸಾಹಿಲ್ ಬೇರಿ ಸಹ ಅನ್ಯಾಯದ ಹಣದಲ್ಲಿ ಪಾಲುಪಡೆದಿದ್ದಾರೆ. ಕಾರವಾರದ ಕೈಕಿಣಿ ರಸ್ತೆಯ ರಾಯ್ಕರ್ ಮೆನರ್ ಬಳಿ ಪ್ರೀತಂ ಮಾಸೂರಕರ್ ಅವರು ವಾಸವಾಗಿದ್ದಾರೆ. ಅವರು ತಮಗೆ ಪೂರ್ವಜರಿಂದ ಬಂದ ಬೈತಖೋಲದ ಭೂಮಿಯಲ್ಲಿ ಶೆಡ್ ನಿರ್ಮಿಸಿದ್ದು, ಅದರಲ್ಲಿ ವಿವಿಧ ಸಾಮಗ್ರಿಗಳನ್ನು ದಾಸ್ತಾನು ಮಾಡಿದ್ದರು. ಅಲ್ಲಿ ವಿವಿಧ ಕಟ್ಟಡ ನಿರ್ಮಾಣ ಸಾಮಗ್ರಿ, ಬಗೆ ಬಗೆಯ ಯಂತ್ರೋಪಕರಣ, ವಿದ್ಯುತ್ ಫಿಟಿಂಗ್ ಸಾಮಗ್ರಿ, ಪೈಪು ಹಾಗೂ ಹಾರ್ಡವೇರ್ ಸಾಮಗ್ರಿಗಳನ್ನು ಅವರು ಇರಿಸಿದ್ದರು. ಪ್ರೀತಂ ಮಾಸೂರಕರ್ ಅವರ ಸೋದರಳಿಯರಾಗಿರುವ ಬೈತಖೋಲದ ಚಿರಾಗ ಮಾಸೂರಕರ್ ಅವರು ಆ ಕಟ್ಟಡದ ಉಸ್ತುವಾರಿ ನೋಡಿಕೊಳ್ಳುತ್ತಿದ್ದರು. ಹೀಗಿರುವಾಗ ಚಿರಾಗ ಮಾಸೂರಕರ್ ಅವರಿಗೆ ಹಣಕಾಸಿನ ಅಗತ್ಯ ಎದುರಾಗಿದ್ದು, ಪ್ರೀತಂ ಮಾಸೂರಕರ್ ಅವರ ಕಟ್ಟಡದಲ್ಲಿದ್ದ 19 ಲಕ್ಷ ರೂ ಮೌಲ್ಯದ ಸಾಮಗ್ರಿಗಳನ್ನು ಮಾರಾಟ ಮಾಡುವ ವಿಚಾರಕ್ಕೆ ಬಿದ್ದರು. 19 ಲಕ್ಷ ರೂ ಮೌಲ್ಯದ ಸಾಮಗ್ರಿಗಳನ್ನು ಅವರು ಬರೇ 70 ಸಾವಿರ ರೂಪಾಯಿಗೆ ಮಾರಾಟ ಮಾಡಿದರು. ಕಡಿಮೆ ಬೆಲೆಗೆ ಬಹಳ ವಸ್ತು ಸಿಗುವುದಾಗಿ ಅರಿತ ಕಾರವಾರ ಕೆಇಬಿ ರಸ್ತೆಯ ಅಬ್ಬಾಸ್ ಬೇರಿ ಹಾಗೂ ಸಾಹಿಲ್ ಬೇರಿ ಸೇರಿ ಅಲ್ಲಿದ್ದ ಎಲ್ಲಾ ಸಾಮಗ್ರಿಗಳನ್ನು ಖರೀದಿಸಿದರು. ಸೆಪ್ಟೆಂಬರ್ 21ರಂದು ಪ್ರೀತಂ ಮಾಸೂರಕರ್ ಅವರು ತಮ್ಮ ತಂದೆಯ ಶ್ರಾದ್ಧ ಮಾಡಲು ಆ ಕಟ್ಟಡದ ಬಳಿ ಹೋದರು. ಆಗ, ಅಲ್ಲಿ ತಾವಿರಿಸಿದ್ದ ಲಕ್ಷಾಂತರ ರೂ ಮೌಲ್ಯದ ವಸ್ತುಗಳು ಕಾಣಲಿಲ್ಲ. ಚಿರಾಗ ಮಾಸೂರಕರ್ ಅವರನ್ನು ಕರೆದು ವಿಚಾರಿಸಿದಾಗ ಅಬ್ಬಾಸ್ ಬೇರಿ ಹಾಗೂ ಸಾಹಿಲ್ ಬೇರಿ ಅವರಿಗೆ ಎಲ್ಲಾ ವಸ್ತು ಮಾರಾಟ ಮಾಡಿದನ್ನು ಒಪ್ಪಿಕೊಂಡರು. ತಮಗೆ ಮಾಹಿತಿ ನೀಡದೇ ಎಲ್ಲಾ ವಸ್ತು ಮಾರಾಟ ಮಾಡಿದ ಚಿರಾಗ ಮಾಸೂರಕರ್ ಹಾಗೂ ಅದನ್ನು ಖರೀದಿಸಿದ ಅಬ್ಬಾಸ್ ಬೇರಿ ಹಾಗೂ ಸಾಹಿಲ್ ಬೇರಿ ವಿರುದ್ಧ ಪ್ರೀತಂ ಮಾಸೂರಕರ್ ಅವರು ಪೊಲೀಸ್ ದೂರು ನೀಡಿದರು. ಕಾರವಾರ ಶಹರ ಪೊಲೀಸ್ ಠಾಣೆಯವರು ಪ್ರಕರಣ ದಾಖಲಿಸಿದರು. - [ದೀಪಾವಳಿ | ಡಬಲ್ ಧಮಾಕಾ: ಒಂದು ಮೊಬೈಲ್ ಖರೀದಿಗೆ ಮತ್ತೊಂದು ಮೊಬೈಲ್ ಉಚಿತ!](https://mobiletime.in/2025/10/diwali-double-dhamaka-buy-one-mobile-and-get-another-free/): ಗಣೇಶ ಹಬ್ಬದ ಅವಧಿಯಲ್ಲಿ ಮೊಬೈಲ್ ಖರೀದಿಸಿದರೆ ಟಿವಿಯನ್ನು ಉಡುಗರೆಯಾಗಿ ನೀಡಿದ್ದ ಯಲ್ಲಾಪುರದ `AVM Galaxy Hub’  ದೀಪಾವಳಿ ಹಬ್ಬಕ್ಕೆ ಇನ್ನಷ್ಟು ಉಡುಗರೆಗಳನ್ನು ಹೊತ್ತು ತಂದಿದೆ. ದಿನದಿಂದ ದಿನಕ್ಕೆ ಚಿನ್ನದ ದರದ ಜೊತೆ ಬೆಳ್ಳಿ ದರವೂ ದುಬಾರಿಯಾಗುತ್ತಿದ್ದು, ಮೊಬೈಲ್ ಖರೀದಿಸಿದ ಪ್ರತಿಯೊಬ್ಬರಿಗೂ ದೀಪಾವಳಿ ಹಬ್ಬಕ್ಕೆ ಬೆಳ್ಳಿ ನಾಣ್ಯ ಕೊಡಲು `ಎವಿಎಂ ಗ್ಯಾಲಾಕ್ಸಿ ಹಬ್’ ನಿರ್ಧರಿಸಿದೆ. ಇದರ ಜೊತೆ ಎಂದಿನ0ತೆ ಐದು ವಿಶೇಷ ಉಡುಗರೆಗಳು ಸಿಗಲಿದೆ! ಗಣೇಶ ಹಬ್ಬದ ಅವಧಿಯಲ್ಲಿ ಸಾಕಷ್ಟು ಜನರಿಗೆ ಮೊಬೈಲ್ ಖರೀದಿಸಲು ಸಾಧ್ಯವಾಗಿರಲಿಲ್ಲ. ಮತ್ತೊಮ್ಮೆ ಆಫರ್ ನೀಡುವಂತೆ ಒತ್ತಾಯಿಸಿದ ಹಿನ್ನಲೆ ದೀಪಾವಳಿ ಹಬ್ಬಕ್ಕೆ ಹೊಸದೊಂದು ಆಫರ್ ಇಲ್ಲಿ ನೀಡಲಾಗಿದೆ. ಮೊದಲಿನಂತೆ ಈಗಲೂ ಆನ್‌ಲೈನ್’ಗಿಂತ ಕಡಿಮೆ ಬೆಲೆಗೆ ಬರಪೂರ ಉಡುಗರೆಗಳ ಜೊತೆ ಮೊಬೈಲ್ ಖರೀದಿಸಲು ಯಲ್ಲಾಪುರದ `ಎವಿಎಂ ಗ್ಯಾಲಾಕ್ಸಿ ಹಬ್’ ಸಿದ್ಧವಾಗಿದೆ. ಯಲ್ಲಾಪುರ ಬಸ್ ನಿಲ್ದಾಣದ ಕೂಗಳತೆ ದೂರದಲ್ಲಿ `ಎವಿಎಂ ಗ್ಯಾಲಾಕ್ಸಿ ಹಬ್’ ಮಳಿಗೆಯಿದೆ. ಶಾಸಕರ ಕಚೇರಿ ರಸ್ತೆಗೆ ಹೊಂದಿಕೊoಡು ಸುಸಜ್ಜಿತ ಮೊಬೈಲ್ ಮಳಿಗೆ ಜನರನ್ನು ಆಕರ್ಷಿಸುತ್ತಿದೆ. ಇದೇ ಮೊದಲ ದೀಪಾವಳಿ ಹಬ್ಬವನ್ನು ಆಚರಿಸುತ್ತಿರುವ ಈ ಮೊಬೈಲ್ ಮಳಿಗೆ ಅದೇ ಖುಷಿಯಲ್ಲಿ ಹಲವು ಬಗೆಯ ಗ್ರಾಹಕ ಸ್ನೇಹಿ ಯೋಜನೆಗಳನ್ನು ಜಾರಿಗೊಳಿಸಿದೆ. 100ಕ್ಕೂ ಅಧಿಕ ನಮೂನೆಯ ಮೊಬೈಲ್’ಗಳು ಈ ಮಳಿಗೆಯಲ್ಲಿದೆ. ಬೇರೆ ಎಲ್ಲಿಯೂ ಸಿಗದ ಬೆಲೆಯಲ್ಲಿ ಮೊಬೈಲ್ ನೀಡಲಾಗುತ್ತಿದೆ. ಈ ಹಿಂದೆ ತಿಳಿಸಿದಂತೆ ಹುಬ್ಬಳ್ಳಿ, ಶಿರಸಿ, ಕಾರವಾರ, ಭಟ್ಕಳ ಸೇರಿ ಎಲ್ಲಾ ಕಡೆ ಸುತ್ತಾಡಿ ಬಂದರೂ ಈ ಬೆಲೆಗೆ ಈ ಬಗೆಯ ಮೊಬೈಲ್ ಜೊತೆ ನಿಶ್ಚಿತ ಉಡುಗರೆಯನ್ನು ಬೇರೆ ಯಾರೂ ಕೊಡುತ್ತಿಲ್ಲ! ಈ ಬಾರಿ Oppo Reno 13 Pro ಅಥವಾ Oppo Reno 14 Pro ಮೊಬೈಲ್ ಖರೀದಿಸಿದರೆ ಇನ್ನೊಂದು ಸ್ಮಾರ್ಟಫೋನ್ ಉಚಿತವಾಗಿ ನೀಡಲಾಗುತ್ತಿದೆ. 20 ಸಾವಿರ ರೂ ಬೆಲೆಯ ಯಾವುದೇ ಮೊಬೈಲ್ ಖರೀದಿಸಿದರೂ 10 ಗ್ರಾಂ ಬೆಳ್ಳಿ ನಾಣ್ಯವನ್ನು ಕೊಡಲಾಗುತ್ತಿದೆ. ಮೊಬೈಲ್’ಗೆ ಅನುಕೂಲಕರವಾಗಿರುವ ಐದು ಹೆಚ್ಚುವರಿ ಉಡುಗರೆಗಳನ್ನು ಸಹ ಇಲ್ಲಿ ಉಚಿತವಾಗಿ ನೀಡಲಾಗುತ್ತಿದೆ. ಮೊಬೈಲ್ ಜೊತೆ ಟಿವಿ ಖರೀದಿಸಿದರೂ ಇಲ್ಲಿ ವಿಶೇಷ ಆಫರ್’ಗಳಿವೆ. ಮೊಬೈಲ್ ರಿಪೇರಿ ಸೇವೆಗಳ ಮೇಲೆಯೂ ಭರ್ಜರಿ ಡಿಸ್ಕೊಂಟ್ ನೀಡಲಾಗಿದೆ. ಹೀಗಾಗಿ ಮನೆಯಲ್ಲಿರುವ ಹಾಳಾದ ಮೊಬೈಲ್’ಗಳ ದುರಸ್ಥಿಗೂ ಇನ್ಮುಂದೆ ಅಲ್ಲಿ-ಇಲ್ಲಿ ಓಡಾಡಬೇಕಿಲ್ಲ. ಗ್ಲಾಸ್ ಒಡೆದ ಮೊಬೈಲುಗಳನ್ನು ಸಹ `ಗಾಲಾಕ್ಸಿ ಹಬ್’ ಮಳಿಗೆಯಲ್ಲಿ ಸರಿಪಡಿಸಲಾಗುತ್ತದೆ. ಮೊಬೈಲುಗಳಲ್ಲಿನ ಎಲ್ಲಾ ಸಮಸ್ಯೆಗಳಿಗೂ ಇಲ್ಲಿ ಪರಿಹಾರ ಒದಗಿಸಲಾಗುತ್ತದೆ. 30 ನಿಮಿಷದೊಳಗೆ ಒಡೆದ ಮೊಬೈಲ್ ಡಿಸಪ್ಲೆ ಬದಲಿಸಿಕೊಡುವ ನುರಿತ ಸಿಬ್ಬಂದಿ ಇಲ್ಲಿದ್ದಾರೆ. ಮೊಬೈಲ್ ಡಿಸಪ್ಲೆ ಸರಿಪಡಿಸಲು ಬಂದವರಿಗೆ ಸಹ ಉಡುಗರೆಗಳನ್ನು ಕೊಟ್ಟು ಕಳುಹಿಸಲಾಗುತ್ತದೆ. ಮೊಬೈಲ್ ಇರಲಿ.. ಟಿವಿಯೇ ಆಗಿರಲಿ.. ಹಬ್ಬದ ಖರೀದಿಗೆ ಇನ್ನೇಕೆ ತಡ? ಈಗಲೇ ಬನ್ನಿ… ಉಡುಗರೆಗಳ ಜೊತೆ ಖುಷಿ ಅನುಭವಿಸಿ!… ಮಾಹಿತಿಗೆ ಇಲ್ಲಿ ಫೋನ್ ಮಾಡಿ: 9448361519 #sponsored - [2025 ಅಕ್ಟೊಬರ್ 18ರ ದಿನ ಭವಿಷ್ಯ](https://mobiletime.in/2025/10/prediction-for-october-18-2025/): ಮೇಷ ರಾಶಿ: ಈ ದಿನ ಕಾರ್ಯಕ್ಷಮತೆಯಿಂದ ಕೂಡಿರುತ್ತದೆ. ಸಾಮಾಜಿಕ ಚಟುವಟಿಕೆಗಳಲ್ಲಿ ಮುನ್ನಡೆ ಸಾಧ್ಯವಿದೆ. ಹಣಕಾಸು ವ್ಯವಹಾರದಲ್ಲಿ ಜಾಣತನ ಬೇಕು. ವೃಷಭ ರಾಶಿ: ಕಾರ್ಯ ಕ್ಷೇತ್ರದಲ್ಲಿ ಸಹೋದ್ಯೋಗಿಗಳ ಬೆಂಬಲ ಸಿಗಲಿದೆ. ಮನಸ್ಥಿತಿಯಲ್ಲಿ ಬದಲಾವಣೆ ಕಾಣಬಹುದು. ಕುಟುಂಬದಲ್ಲಿ ಸಣ್ಣ ಸಣ್ಣ ಸಂಭ್ರಮ ಸಾಧ್ಯತೆಗಳಿವೆ. ಮಿಥುನ ರಾಶಿ: ಆರ್ಥಿಕ ಪರಿಸ್ಥಿತಿ ಸರಿಯಾಗಿರುವುದಿಲ್ಲ. ಗೆಳೆಯರಿಂದ ಬರುವ ಮುಖ್ಯ ಮಾಹಿತಿಗಳನ್ನು ಗಮನಿಸಿ. ಹಿರಿಯರ ಆಶೀರ್ವಾದಪಡೆದು ಕೆಲಸ ಮಾಡಿ. ಕರ್ಕ ರಾಶಿ: ಕೆಲಸಗಳಲ್ಲಿ ನಿರಂತರ ಪ್ರಯತ್ನ ಅಗತ್ಯ. ಖರ್ಚು ನಿಯಂತ್ರಣ ಮಾಡಬೇಕು. ಆರೋಗ್ಯದ ವಿಷಯದಲ್ಲಿ ಜಾಗೃತರಾಗಿರಿ. ಸಿಂಹ ರಾಶಿ: ವೃತ್ತಿ ಜೀವನದಲ್ಲಿ ಪ್ರಗತಿ ಸಾಧ್ಯ. ಹಣಕಾಸು ವಿಷಯದಲ್ಲಿ ಸಮತೋಲನ ಅಗತ್ಯ. ಕಲಿಕೆಯಲ್ಲಿ ಯಶಸ್ಸು ಸಿಗಲಿದೆ. ಕನ್ಯಾ ರಾಶಿ: ಆರೋಗ್ಯದ ವಿಚಾರದಲ್ಲಿ ಉತ್ತಮ ಬೆಳವಣಿಗೆ ಆಗಲಿದೆ. ಕೆಲಸದ ವಿಷಯದಲ್ಲಿ ಸಾಧನೆ ಸಾಧ್ಯವಿದೆ. ತುಲಾ ರಾಶಿ: ಮನಸ್ಸಿನ ಯೋಜನೆ ಕಾರ್ಯರೂಪಕ್ಕೆ ಬರಲಿದೆ. ಕುಟುಂಬದಿAದ ಆನಂದ ಸಿಗಲಿದೆ. ಒಳ್ಳೆಯ ಹೆಸರು ಬರಲಿದೆ. ವೃಶ್ಚಿಕ ರಾಶಿ: ಕಾರ್ಯದಲ್ಲಿ ಯಶಸ್ಸು ಸಾಧ್ಯವಿದೆ. ಹಣಕಾಸು ಲಾಭ ಆಗಲಿದೆ. ಹೊಸ ಕಲಿಕೆಗೆ ಅವಕಾಶ ಸಿಗಲಿದೆ. ಧನು ರಾಶಿ: ಹೊಸ ಯೋಜನೆಗಳು ಶುರುವಾಗಲಿದೆ. ಸಂತೋಷದ ಕ್ಷಣಗಳನ್ನು ಅನುಭವಿಸುತ್ತೀರಿ. ಆರೋಗ್ಯದಲ್ಲಿ ಕಾಳಜಿ ಅಗತ್ಯ. ಮಕರ ರಾಶಿ: ಕೆಲಸದ ವಿಷಯದಲ್ಲಿ ಗಂಭೀರವಾಗಿರಿ. ಆರೋಗ್ಯ ಸುಧಾರಣೆ ಆಗಲಿದೆ. ಅನಗತ್ಯ ಚಿಂತೆ ಒಳ್ಳೆಯದಲ್ಲ. ಕುಂಭ ರಾಶಿ: ನಿಮ್ಮ ಕೆಲಸ ಕಾರ್ಯಗಳು ಸರಾಗವಾಗಿ ಸಾಗಲಿದೆ. ಕೌಟುಂಬಿಕ ವಿಷಯಗಳಿಗೆ ಒತ್ತು ಕೊಡಿ. ಸ್ನೇಹಿತರು ಹಾಗೂ ಸಂಬoಧಿಕರನ್ನು ಗೌರವಿಸಿ. ಮೀನ ರಾಶಿ: ನೂತನ ಯೋಜನೆಗಳಲ್ಲಿ ನಿಮ್ಮ ಜವಾಬ್ದಾರಿ ಹೆಚ್ಚಲಿದೆ. ಹಣಕಾಸು ಪ್ರಗತಿ ಆಗಲಿದೆ. ಕಲಿಕೆಗೆ ಉತ್ತಮ ದಿನವಾಗಿದೆ. - [ಪಾರ್ಟಿಗೆ ಕರೆದು ಕೊಲೆ ಮಾಡಿದರು!](https://mobiletime.in/2025/10/they-invited-him-to-a-party-and-murdered-him/): ಯಲ್ಲಾಪುರ-ಅಂಕೋಲಾದ ಕೈಗಾಡಿ ಹೊಳೆಯಲ್ಲಿ ಶವವಾಗಿದ್ದ ಸಾಗರ ದೇವಾಡಿಗ ಅವರ ಪ್ರಕರಣ ಹೊಸ ತಿರುವುಪಡೆದಿದೆ. `ಸಾಗರ ದೇವಾಡಿಗ ಅವರನ್ನು ಸ್ನೇಹಿತರೆಲ್ಲರೂ ಸೇರಿ ಕೊಲೆ ಮಾಡಿದ್ದಾರೆ’ ಎಂದು ಸಾಗರ್ ದೇವಾಡಿಗ ಅವರ ತಂದೆ ರಾಮಾ ದೇವಾಡಿಗ ದೂರಿದ್ದಾರೆ. ಕೊಲೆ ಪ್ರಕರಣ ದಾಖಲಿಸದ ಅಂಕೋಲಾ ಪೊಲೀಸರ ವಿರುದ್ಧವೂ ಅವರು ಅಸಮಧಾನವ್ಯಕ್ತಪಡಿಸಿದ್ದಾರೆ. ಸ್ನೇಹಿತರ ಹುಟ್ಟುಹಬ್ಬ ಆಚರಣೆಗಾಗಿ ಯಲ್ಲಾಪುರ ಪಟ್ಟಣದ ಸಬಗೇರಿಯ ಸಾಗರ ದೇವಾಡಿಗ ಅವರು ಕೈಗಡಿ ಹೊಳೆ ಬಳಿ ಹೋದಾಗ ಕಾಲು ಜಾರಿ ಬಿದ್ದ ಅನುಮಾನವಿತ್ತು. 3 ದಿನದ ನಂತರ ಅವರ ಶವ ಸಿಕ್ಕಿತ್ತು. ಆದರೆ ಇದೀಗ ಸಾಗರ ದೇವಾಡಿಗ ಅವರ ತಂದೆ `ತನ್ನ ಮಗ ಸಹಜವಾಗಿ ಸತ್ತಿಲ್ಲ. ಬರ್ತಡೆ ಪಾರ್ಟಿ ನೆಪದಲ್ಲಿ ಸ್ನೇಹಿತರೇ ಕೊಲೆ ಮಾಡಿದ್ದಾರೆ’ ಎಂದು ಹೇಳಿದ್ದಾರೆ. ಈ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಲಿಖಿತ ದೂರು ನೀಡಿದ್ದಾರೆ. `ಅಕ್ಟೋಬರ್ 7ರಂದು ಸಾಗರ ದೇವಾಡಿಗ ಅವರಿಗೆ ಪುನಿತ್ ಅಶೋಕ ಗೊಂದಳೆ ಅವರು ಕರೆ ಮಾಡಿ, `ನನ್ನ ಹುಟ್ಟುಹಬ್ಬ ಇದೆ. ಕವಡಿಕೆರೆ ಬಳಿ ಪಾರ್ಟಿ ಮಾಡೋಣ ಬಾ’ ಎಂದಿದ್ದರು. ಪಾರ್ಟಿಗೆ ಕವಡಿಕೆರೆಗೆ ಹೋಗಬೇಕಿದ್ದ ಸಾಗರ ದೇವಾಡಿಗ ಕೈಗಡಿಗೆ ಹೋಗಿದ್ದು ಹೇಗೆ?’ ಎಂದು ರಾಮಾ ದೇವಾಡಿಗ ಪ್ರಶ್ನಿಸಿದ್ದಾರೆ. `ಆ ದಿನ ಮಧ್ಯಾಹ್ನ 3ಗಂಟೆಗೆ ಮನೆಗೆ ಮರಳಬೇಕಿದ್ದ ಸಾಗರ ದೇವಾಡಿಗ ಸಂಜೆ ಆದರೂ ಬರಲಿಲ್ಲ. 6 ಗಂಟೆ ವೇಳೆಗೆ ರವಿ ದೇವಾಡಿಗ ಫೋನ್ ಮಾಡಿ ಸಾಗರ ದೇವಾಡಿಗ ಅವರು ನೀರಿನಲ್ಲಿ ಕಾಣೆಯಾದ ವಿಷಯ ತಿಳಿಸಿದರು. ಅದಾದ ನಂತರ ಪುನೀತ ಗೊಂದಳೆ ಜೊತೆ ದಿನೇಶ ಪ್ರಭಾಕರ ನಾಯ್ಕ, ವಿನೋದ ಗೊಂದಳೆ, ನಾಗರಾಜ ಭಟ್ಟ, ರಾಹುಲ್ ಜೊತೆ ಸಾಗರ ದೇವಾಡಿಗ ತೆರಳಿರುವುದು ಗೊತ್ತಾಯಿತು. ಅವರ ಜೊತೆ ಇನ್ನಷ್ಟು ಜನ ಹುಡುಕಾಟ ನಡೆಸಿದ್ದು, ಅನತಿ ದೂರದಲ್ಲಿ ಆಗ ಸಾಗರ ದೇವಾಡಿಗ ಅವರ ಪ್ಯಾಂಟ್, ಕನ್ನಡಕ, ಶೂ ಕಾಣಿಸಿದೆ. ಅದಾಗಿ ಮೂರು ದಿನದ ನಂತರ ಶವ ಸಿಕ್ಕಿದೆ. ಸ್ನೇಹಿತರು ಪೊಲೀಸ್ ಠಾಣೆಯಲ್ಲಿ ನೀಡಿದ ಹೇಳಿಕೆಯಲ್ಲಿ ಸಾಗರ ದೇವಾಡಿಗ ಈಜಲು ನದಿಗೆ ಇಳಿದ ಬಗ್ಗೆ ಮಾಹಿತಿಯಿದ್ದು, ಸಾಗರ ದೇವಾಡಿಗ ಅವರಿಗೆ ಈಜಲು ಬರುತ್ತಿರಲಿಲ್ಲ’ ಎಂದವರು ವಿವರಿಸಿದ್ದಾರೆ. `5.30ಕ್ಕೆ ಸಾಗರ ದೇವಾಡಿಗ ನೀರಿನಲ್ಲಿ ಕಾಣೆಯಾದ ಬಗ್ಗೆ ಹೇಳಲಾಗಿದೆ. ಆದರೆ, 6 ಗಂಟೆ ಅವಧಿಗೆ ಸ್ನೇಹಿತರು ಪೊಲೀಸ್ ಹೇಳಿಕೆ ನೀಡಿದ್ದಾರೆ. ನೀರಿಗೆ ಮುಳುಗಿದ ಸ್ನೇಹಿತನ ಹುಡುಕಾಟ ನಡೆಸದೇ ಅರ್ದ ಗಂಟೆ ಅವಧಿಯಲ್ಲಿ ಪೊಲೀಸ್ ಠಾಣೆಗೆ ಬಂದು ಹೇಳಿಕೆ ನೀಡಿರುವುದು ಅನುಮಾನಕ್ಕೆ ಕಾರಣ’ ಎಂದು ರಾಮಾ ದೇವಾಡಿಗ ಅವರು ಹೇಳಿದ್ದಾರೆ. `ಎಲ್ಲರೂ ಸೇರಿ ಸಾಗರ ದೇವಾಡಿಗ ಅವರನ್ನು ನೀರಿಗೆ ದೂಡಿ ಕೊಲೆ ಮಾಡಿದ್ದಾರೆ’ ಎಂದು ದೂರಿದ್ದಾರೆ. `ಈ ಬಗ್ಗೆ ಅಂಕೋಲಾ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದರೂ ಅಲ್ಲಿನ ಪೊಲೀಸರು ದೂರು ಸ್ವೀಕರಿಸಿಲ್ಲ ಎಂದು ರಾಮಾ ದೇವಾಡಿಗ ಅವರು ಅಸಮಧಾನವ್ಯಕ್ತಪಡಿಸಿದ್ದಾರೆ. - [ಕೊನೆಗೂ ಸಿಕ್ಕಿಬಿದ್ದ ಹಾಸಣಗಿಯ ಕಳ್ಳ!](https://mobiletime.in/2025/10/the-thief-from-hassan-is-finally-caught/): ಯಲ್ಲಾಪುರ ಹಾಗೂ ಸುತ್ತಲಿನ ಪ್ರದೇಶದಲ್ಲಿ ನಿರಂತರ ಕಳ್ಳತನ ಮಾಡುತ್ತಿದ್ದ ಈಶ್ವರ ಸಿದ್ದಿ ಕೊನೆಗೂ ಸಿಕ್ಕಿಬಿದ್ದಿದ್ದು, ಆತನ ಬಳಿಯಿದ್ದ ಲಕ್ಷಾಂತರ ರೂ ಮೌಲ್ಯದ ಒಡವೆಗಳನ್ನು ಪೊಲೀಸರು ವಶಕ್ಕೆಪಡೆದಿದ್ದಾರೆ. ಯಲ್ಲಾಪುರದ ಹಾಸಣಗಿಯ ಮಡಿವಾಳಕೇರಿಯ ಈಶ್ವರ ಮಂಜುನಾಥ ಸಿದ್ಧಿ ಅವರು ಅನೇಕ ಮನೆಗಳಿಗೆ ಕನ್ನ ಹಾಕಿದ್ದರು. ಊರಿನ ಎಲ್ಲರಿಗೂ ಕಳ್ಳತನ ಮಾಡಿದ ವ್ಯಕ್ತಿಯ ಬಗ್ಗೆ ಅರಿವಿದ್ದರೂ ಕಳ್ಳನನ್ನು ಮಾತ್ರ ಹಿಡಿಯಲು ಸಾಧ್ಯವಾಗಿರಲಿಲ್ಲ. ಪೊಲೀಸರು ಈಶ್ವರ ಸಿದ್ದಿ ಹಿಡಿಯುವ ಪ್ರಯತ್ನ ಮಾಡಿದರೂ ಅದು ಫಲ ಕೊಟ್ಟಿರಲಿಲ್ಲ. ಹೀಗಾಗಿ ಮಂಚಿಕೇರಿ ಹಾಗೂ ಸುತ್ತಲಿನ ಭಾಗದ ಜನ ಪೊಲೀಸರ ವಿರುದ್ಧ ತಿರುಗಿಬಿದ್ದಿದ್ದರು. ಕಳ್ಳನನ್ನು ಹಿಡಿಯದೇ ಇದ್ದರೆ ಪ್ರತಿಭಟನೆ ನಡೆಸುವುದಾಗಿಯೂ ಎಚ್ಚರಿಸಿದ್ದರು. ಪ್ರತಿ ಬಾರಿ ಪೊಲೀಸರು ಹಿಡಿಯಲು ಹೋದಾಗಲು ಈಶ್ವರ ಸಿದ್ದಿ ಕಾಡಿನ ಕಡೆ ಓಡುತ್ತಿದ್ದರು. ಇಲ್ಲವೇ ಊರು ಬಿಟ್ಟು ಹೊರಡುತ್ತಿದ್ದರು. ನಾನಾ ತಂತ್ರಗಳನ್ನು ಪ್ರಯೋಗಿಸಿದರೂ ಅದು ಪ್ರಯೋಜನಕ್ಕೆ ಬಂದಿರಲಿಲ್ಲ. ಈಶ್ವರ ಸಿದ್ದಿ ವಿರುದ್ಧ ನಾಲ್ಕು ಕಳ್ಳತನ ಪ್ರಕರಣಗಳಿದ್ದು, ಅವೆಲ್ಲವೂ ಹಗಲಿನಲ್ಲಿಯೇ ನಡೆದದ್ದಾಗಿದ್ದವು. ಪೊಲೀಸ್ ಠಾಣೆಯ ಸಮೀಪವೇ ನಡೆದ ಕಳ್ಳತನ ಪ್ರಕರಣದಲ್ಲಿಯೂ ಈಶ್ವರ ಸಿದ್ಧಿ ಅವರ ಬಂಧನ ಸಾಧ್ಯವಾಗಿರಲಿಲ್ಲ. ಈ ಎಲ್ಲಾ ವಿಷಯ ಪೊಲೀಸರನ್ನು ಮುಜುಗರಕ್ಕೆ ಸಿಲುಕಿಸಿತ್ತು. ಒಳ್ಳೆಯ ಅಧಿಕಾರಿಗಳು ಎಂದು ಗುರುತಿಸಿಕೊಂಡವರ ಒಳ್ಳೆಯತನಕ್ಕೆ ಈಶ್ವರ ಸಿದ್ದಿ ಪ್ರಕರಣ ಕಪ್ಪು ಚುಕ್ಕೆ ಆಗಿತ್ತು. ಈ ಎಲ್ಲಾ ಹಿನ್ನಲೆ ಪೊಲೀಸರು ಈಶ್ವರ ಸಿದ್ದಿ ಬಂಧನಕ್ಕೆ ವಿಶೇಷ ತಂಡ ರಚಿಸಿದರು. ಪೊಲೀಸ್ ಅಧೀಕ್ಷಕ ದೀಪನ್ ಎಂ ಎನ್ ಅವರು ತಮ್ಮ ತಂಡ ಸಿದ್ಧಪಡಿಸಿದರು. ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕೃಷ್ಣಮೂರ್ತಿ, ಜಗದೀಶ ಎಂ ಹಾಗೂ ಡಿವೈಎಸ್ಪಿ ಗೀತಾ ಪಾಟೀಲ್ ಅವರು ಈಶ್ವರ ಸಿದ್ದಿ ಬಂಧನಕ್ಕೆ ಕಾರ್ಯತಂತ್ರ ರಚಿಸಿದರು. ಅಕ್ಟೊಬರ್ 17ರಂದು ಈಶ್ವರ ಸಿದ್ದಿ ಅಂಕೋಲಾದ ಬಾಳೆಗುಳಿ ಕ್ರಾಸಿನ ಬಳಿ ಅಲೆದಾಡುತ್ತಿದ್ದರು. ಯಲ್ಲಾಪುರ ಪಿಐ ರಮೇಶ ಹಾನಾಪುರ, ಪಿಎಸ್‌ಐ ರಾಜಶೇಖರ ವಂದಲಿ, ಮಹಾವೀರ ಕಾಂಬಳೆ. ಸಿದ್ದಪ್ಪ ಗುಡಿ ಹಾಗೂ ಶೇಡಜಿ ಚೌಹಾಣ್ ಅವರ ಜೊತೆ ಪೊಲೀಸ್ ಸಿಬ್ಬಂದಿ ಬಸವರಾಜ ಹಗೇರಿ, ಮಹಮದ್ ಶಫಿ, ಶೋಭಾ ನಾಯ್ಕ, ಗಿರೀಶ ಲಮಾಣಿ, ಪರಮೇಶ್ವರ, ರೇಖಾ ಎಂ ಸೇರಿ ಈಶ್ವರ ಸಿದ್ದಿ ಮೇಲೆ ದಾಳಿ ಮಾಡಿದರು. ಅಲ್ಲಿಯೇ ಈಶ್ವರ ಸಿದ್ದಿ ಅವರನ್ನು ಬಂಧಿಸಿ ನ್ಯಾಯಾಲಯಕ್ಕೆ ಒಪ್ಪಿಸಿದರು. ಈ ವೇಳೆ ಈಶ್ವರ ಸಿದ್ದಿ ಅವರ 18 ಲಕ್ಷ ರೂ ಮೌಲ್ಯದ 137 ಗ್ರಾಂ ಚಿನ್ನದ ಆಭರಣಗಳು ಸಿಕ್ಕಿದವು. ಅದರೊಂದಿಗೆ 80 ಸಾವಿರ ರೂ ಮೌಲ್ಯದ ಸ್ಕೂಟಿಯೊಂದನ್ನು ಪೊಲೀಸರು ವಶಕ್ಕೆಪಡೆದರು. - [ಆರ್ಥಿಕ ಸಂಕಷ್ಟ: ಸರ್ಕಾರದಿಂದಲೇ ಸಮಾಪನೆಗೆ ಸಿದ್ಧವಾದ ಸಹಕಾರಿ ಸಂಘ!](https://mobiletime.in/2025/10/financial-distress-cooperative-society-ready-to-be-liquidated-by-the-government-itself/): ಆರ್ಥಿಕ ಸಂಕಷ್ಟ ಹಾಗೂ ಸರ್ಕಾರಿ ನಿಯಮ ಉಲ್ಲಂಘನೆ ಕಾರಣದಿಂದ ಅಂಕೋಲಾದ ಶ್ರೀ ವಿನಾಯಕ ಸೌಹಾರ್ದ ಪತ್ತಿನ ಸಹಕಾರಿ ನಿಯಮಿತದ ಬಾಗಿಲು ಮುಚ್ಚಿದೆ. ಈ ಸಂಘವನ್ನು ಸಂಪೂರ್ಣವಾಗಿ ಸಮಾಪನೆಗೊಳಿಸಲು ಸರ್ಕಾರ ಮುಂದಾಗಿದೆ. ಅoಕೋಲಾದ ಕಾಕರಮಠ ರಸ್ತೆಯಲ್ಲಿ ಶ್ರೀ ವಿನಾಯಕ ಸೌಹಾರ್ದ ಪತ್ತಿನ ಸಹಕಾರಿ ಸಂಘ ಕೆಲಸ ನಿರ್ವಹಿಸುತ್ತಿತ್ತು. ಕರ್ನಾಟಕ ರಾಜ್ಯ ಸೌಹರ್ದ ಸಹಕಾರಿ ಸಂಘಗಳ ಕಾಯ್ದೆ 1997 ರಡಿಯಲ್ಲಿ ಈ ಸಂಘ ನೋಂದಣಿಯೂ ಆಗಿತ್ತು. 2004ರ ಅವಧಿಯಲ್ಲಿ ನೋಂದಣಿ ಆದ ಸಂಘ ಆರ್ಥಿಕ ಶಿಸ್ತು ಕಾಪಾಡಿರಲಿಲ್ಲ. ಜೊತೆಗೆ ಸಂಘದ ಬೈಲಾಗಳನ್ನು ಸರಿಯಾಗಿ ನಿರ್ವಹಣೆ ಮಾಡಿರಲಿಲ್ಲ. ಈ ಸಹಕಾರಿಯು ಬೈಲಾ ರೀತಿಯಂತೆ ಕಾರ್ಯನಿರ್ವಹಿಸದಿರುವುದು ಸರ್ಕಾರದ ಗಮನಕ್ಕೂ ಬಂದಿತ್ತು. ಅದಾದ ನಂತರ ಸಂಘವೇ ತನ್ನ ಕಾರ್ಯಚಟುವಟಿಕೆಯನ್ನು ಸ್ಥಗಿತಗೊಳಿಸಿತ್ತು. ಈ ಹಿನ್ನಲೆ ಸರ್ಕಾರವೇ ಸದ್ಯ ಅಂಕೋಲಾದ ಶ್ರೀ ವಿನಾಯಕ ಸೌಹಾರ್ದ ಪತ್ತಿನ ಸಹಕಾರಿ ನಿಯಮಿತದ ಸಮಾಪನೆಗೆ ಮುಂದಾಗಿದೆ. ಈ ಬಗ್ಗೆ ಸಾರ್ವಜನಿಕರಿಗೆ ಹಾಗೂ ಸಂಘದ ಸದಸ್ಯರಿಗೆ ಮಾಹಿತಿಯನ್ನು ರವಾನಿಸಿದೆ. ಅಂಕೋಲಾದ ಶ್ರೀ ವಿನಾಯಕ ಸೌಹಾರ್ದ ಪತ್ತಿನ ಸಹಕಾರಿ ಸಂಘವೂ ಕುಮಟಾ ಉಪವಿಭಾಗದ ವ್ಯಾಪ್ತಿಯಲ್ಲಿ ಬರುತ್ತದೆ. ಹೀಗಾಗಿ ಅಲ್ಲಿನ ಸಹಕಾರ ಸಂಘಗಳ ಸಹಾಯಕ ನಿಬಂಧಕರು ಪ್ರಕಟಣೆ ನೀಡಿದ್ದು, ಅದರ ಮೂಲಕ ಸಂಘದ ಸಮಾಪನೆ ಬಗ್ಗೆ ಆಕ್ಷಪಣೆ ಇದ್ದರೆ ಸಲ್ಲಿಸಲು ಅವಕಾಶ ನೀಡಿದ್ದಾರೆ. ಆಕ್ಷೇಪಣೆ ಸಲ್ಲಿಸಲು ಸಹ ಅಕ್ಟೊಬರ್ 30 ಕೊನೆ ದಿನ. ಸಹಕಾರ ಸಂಘಗಳ ಸಹಾಯಕ ನಿಬಂಧಕರು, ಕುಮಟಾ ಉಪ ವಿಭಾಗ ಕಚೇರಿಗೆ ದಾಖಲೆಗಳೊಂದಿಗೆ ಆಕ್ಷೆಪಣೆ ಸಲ್ಲಿಸಲು ಕೊನೆಯ ಅವಕಾಶ ನೀಡಲಾಗಿದೆ. - [ಅಕ್ರಮ ಆಟಕ್ಕೆ ಅನುಮತಿ ಕೋರಿದ ಅಧ್ಯಕ್ಷ!](https://mobiletime.in/2025/10/the-president-sought-permission-for-an-illegal-game/): ಅಂದರ್ ಬಾಹರ್, ಕುಟುಕುಟಿ ಮಂಡಳ ಸೇರಿ ವಿವಿಧ ಕಾನೂನುಬಾಹಿರ ಆಟಗಳಿಗೆ ಅವಕಾಶ ಕೊಡಬೇಕು ಎಂದು ಸಂಘಟನೆಯೊoದು ಪೊಲೀಸ್ ಅಧೀಕ್ಷಕರಿಗೆ ಪತ್ರ ರವಾನಿಸಿದೆ. `ಈ ಆಟಗಳಿಗೆ ಅವಕಾಶ ಕೊಡದೇ ಜಾತ್ರೆ-ಉತ್ಸವಗಳಿಗೆ ಸಹ ಅನುಮತಿ ಕೊಡಬಾರದು’ ಎಂದು ಆ ಸಂಘಟನೆ ಒತ್ತಾಯಿಸಿದೆ! ಕುಮಟಾದಲ್ಲಿ ಪ್ರಧಾನ ಕಚೇರಿ ಹೊಂದಿರುವ ಉತ್ತರ ಕನ್ನಡ ಜಿಲ್ಲಾ ಶ್ರಮಜೀವಿ ಕಟ್ಟಡ ಮತ್ತು ಇತರೆ ನಿರ್ಮಾಣ ಹಾಗೂ ಅಸಂಘಟಿತ ಕಾರ್ಮಿಕರ ಸಂಘ ಪೊಲೀಸರ ಮುಂದೆ ಇಂಥಹದೊAದು ವಿಚಿತ್ರ ಬೇಡಿಕೆಯಿಟ್ಟಿದೆ. ಸಂಘದ ಜಿಲ್ಲಾಧ್ಯಕ್ಷ ಮಂಜು ಜೈನ್ ಅವರು ಕುಮಟಾ ಪೊಲೀಸ್ ವೃತ್ತ ನಿರೀಕ್ಷಕರ ಮೂಲಕ ಪೊಲೀಸ್ ಅಧೀಕ್ಷಕರಿಗೆ ಈ ಪತ್ರ ಕೊಡಲು ಮುಂದಾಗಿದ್ದಾರೆ. `ದೀಪಾವಳಿ ಹಬ್ಬದ ಅವಧಿಯಲ್ಲಾದರೂ ಈ ಆಟಗಳಿಗೆ ಮುಕ್ತ ಅವಕಾಶ ಕೊಡಬೇಕು. ಸಾಂಪ್ರದಾಯಿಕ ಆಟಗಳಾದ ಹೊಂಡೆ, ಕಲರ್ ಚಾಯ್ಸ, ಸೋಲಕಾಯಿಗಳಿಗೂ ತೊಂದರೆ ಕೊಡಬಾರದು’ ಎಂದು ಈ ಸಂಘಟನೆಯವರು ಕೇಳಿಕೊಂಡಿದ್ದಾರೆ. `ಅಕ್ಟೊಬರ್ 19ರಿಂದ 22ರವರೆಗೆ ದೀಪಾವಳಿ ಹಬ್ಬದ ಪ್ರಯುಕ್ತ ಈ ಎಲ್ಲಾ ಬಗೆಯ ಜೂಜಾಟಗಳಿಗೆ ಅವಕಾಶ ಕೊಡಿ’ ಎಂದು ಮನವಿ ಮಾಡಿದ್ದಾರೆ. `ಒಂದಾನು ವೇಳೆ ಇದಕ್ಕೆ ಅವಕಾಶ ಕೊಡದೇ ಇದ್ದರೆ ಕುಮಟಾ ಹಬ್ಬ, ಜಾತ್ರೆ ಉತ್ಸವಕ್ಕೂ ಅನುಮತಿ ಕೊಡಬೇಡಿ’ ಎಂದು ಹೇಳಿದ್ದಾರೆ. `ನಾವು ಸೂಚಿಸಿದ ಆಟಗಳಿಗೆ ಅನುಮತಿ ಕೊಡದೇ ಉತ್ಸವ-ಜಾತ್ರೆಗಳಿಗೆ ಮಾತ್ರ ಅನುಮತಿ ಕೊಟ್ಟರೆ ಉಗ್ರ ಹೋರಾಟ ನಡೆಸುವುದಾಗಿಯೂ ಸಂಘಟನೆಯ ಅಧ್ಯಕ್ಷ ಮಂಜು ಜೈನ್ ಜೊತೆ ಎಂ ಉಮೇಶ, ದಾಮೋದರ ಉಪ್ಪಾರ್ ಇನ್ನಿತರರು ಎಚ್ಚರಿಸಿದ್ದಾರೆ! ಅಕ್ರಮ ಆಟಕ್ಕೆ ಅನುಮತಿ ಕೋರಿದವರು ಹೇಳಿದ್ದೇನು? ವಿಡಿಯೋ ನೋಡಿ.. - [ಕೆಲಸ ಕೊಟ್ಟವರು ಸಂಬಳ ಕೊಡಲಿಲ್ಲ: ದೀಪಾವಳಿ ಹಬ್ಬಕ್ಕೂ ದುಡ್ಡಿಲ್ಲ!](https://mobiletime.in/2025/10/the-employer-did-not-pay-the-salary-no-money-even-for-diwali/): ಕಾರವಾರದ ಕಿಮ್ಸ್ ಒಳಗೆ ಡಿ ದರ್ಜೆಯ ನೌಕರರಾಗಿ ಅಂಕೋಲಾದ ಸ್ಕಾಯ್‌ಲೈನ್ ಎಂಟರ್ ಪ್ರೈಸಸ್ ಮೂಲಕ ನೇಮಕವಾದ ಅಸ್ನೋಟಿಯ ಕಿಶನ್ ವಾರಿಕ್ ಅವರಿಗೆ ಎಜನ್ಸಿಯವರು ಸಮಯಕ್ಕೆ ಸರಿಯಾಗಿ ಸಂಬಳ ಕೊಟ್ಟಿಲ್ಲ. ಪ್ರಶ್ನಿಸಿದರೆ 2 ಲಕ್ಷ ರೂ ಮೌಲ್ಯದ ಡಿಸೇಲ್ ಕದ್ದ ಅಪವಾದ ಹೋರಿಸುತ್ತಿದ್ದು, ಇದರಿಂದ ಮನನೊಂದ ಅವರು ಆತ್ಮಹತ್ಯೆಯ ನಿರ್ಧಾರ ಮಾಡಿದ್ದಾರೆ! ಡಿ ದರ್ಜೆಯ ನೌಕರರಿಗೆ ಡ್ರೈವಿಂಗ್ ಕೆಲಸ ಕೊಟ್ಟಿದ್ದು ಮೊದಲ ಅಪರಾಧ. ಅದಾಗಿಯೂ ಸಮಯಕ್ಕೆ ಸರಿಯಾಗಿ ಸಂಬಳ ಕೊಡದೇ ಕೆಲಸಗಾರನ ಮೇಲೆ ಕಳ್ಳತನದ ಆರೋಪ ಹೋರಿಸಿದ್ದು ಮತ್ತೊಂದು ವಿವಾದ. ಡಿ ದರ್ಜೆಯ ನೌಕರರಾದ ಕಿಶನ್ ವಾರಿಕ್ ಅವರನ್ನು 2020ರಿಂದ ಜಿಲ್ಲಾ ಸರ್ಜನ್ ಅವರ ವಾಹನ ಚಾಲಕರಾಗಿ ದುಡಿಸಿಕೊಳ್ಳಲಾಗುತ್ತಿದೆ. ಸಂಬಳದ ವಿಷಯದಲ್ಲಿ ಸಾಕಷ್ಟು ಸಮಸ್ಯೆ ಅನುಭವಿಸಿದರೂ ಕಿಶನ್ ವಾರಿಕ್ ಅವರು ಅದನ್ನು ಸಹಿಸಿಕೊಂಡು ಕೆಲಸ ಮಾಡುತ್ತಿದ್ದಾರೆ. ಅದಾಗಿಯೂ ಕಳೆದ ಮೂರು ತಿಂಗಳಿನಿoದ ಅವರಿಗೆ ಎಜನ್ಸಿಯವರು ವೇತನ ಕೊಡದೇ ಕಾಡಿಸುತ್ತಿದ್ದಾರೆ. ಸಂಬಳ ಆಗದ ಬಗ್ಗೆ ಕಿಶನ್ ವಾರಿಕ್ ಅವರು ಕಿಮ್ಸ ನಿರ್ದೇಶಕಿ ಡಾ ಪೂರ್ಣಿಮಾ ಅವರನ್ನು ಪ್ರಶ್ನಿಸಿದ್ದಾರೆ. ಆದರೆ, `ಎಜನ್ಸಿ ಮೂಲಕ ನೇಮಕವಾದವರಿಗೆ ವೇತನ ಪಾವತಿಸುವುದು ನಮಗೆ ಸಂಬoಧಿಸಿದಲ್ಲ’ ಎಂದು ಪೂರ್ಣಿಮಾ ಅವರು ಹೇಳುತ್ತಾರೆ. ಅಂಕೋಲಾದ ಸ್ಕಾಯ್‌ಲೈನ್ ಎಂಟರ್ ಪ್ರೈಸಸ್ ಎಜನ್ಸಿಯವರನ್ನು ಪ್ರಶ್ನಿಸಿದರೆ 2 ಲಕ್ಷ ರೂ ಮೌಲ್ಯದ ಡಿಸೇಲ್ ಕದ್ದಿದ್ದು, ಆ ಹಣ ಪಾವತಿಸಿದರೆ ಮೂರು ಕಾಸಿನ ಸಂಬಳ ಕೊಡುವುದಾಗಿ ಹೇಳುತ್ತಾರೆ. ಜಿಲ್ಲಾ ಸರ್ಜನ್ ವಾಹನಕ್ಕೆ 2 ಲಕ್ಷ ರೂ ಮೌಲ್ಯದ ಡಿಸೇಲ್ ಒಟ್ಟಿಗೆ ಹಾಕಲು ಸಾಧ್ಯವಿಲ್ಲ. ಸರ್ಕಾರಿ ವಾಹನದಲ್ಲಿನ ಡಿಸೇಲ್ ನಿಜವಾಗಿಯೂ ಕಳ್ಳತನ ನಡೆದಿದ್ದರೆ ಆ ಬಗ್ಗೆ ಪೊಲೀಸ್ ದೂರು ದಾಖಲಿಸಿದವರಿಲ್ಲ. ಕಿಶನ್ ವಾರಿಕ್ ಅವರಿಗೆ ಓದು-ಬರಹ ಬರಲ್ಲ. ಹೀಗಾಗಿ ಅವರು ಡಿ ದರ್ಜೆಯ ಕೆಲಸಕ್ಕೆ ಮಾತ್ರ ಯೋಗ್ಯರಾಗಿದ್ದು, ವಾಹನ ಓಡಿಸುವ ಕೌಶಲ್ಯ ಹೊಂದಿದ್ದಾರೆ. ಆದರೆ, ಸರ್ಕಾರಿ ವಾಹನದ ಲಾಗ್ ಬುಕ್ ಬರೆಯುವುದು-ಮೀಟರ್ ಓದುವುದು ಅವರಿಗೆ ಅರಿವಿಲ್ಲ. ಹೀಗಿರುವಾಗ ಅವರ ಮೇಲೆ ಬಂದ 2 ಲಕ್ಷ ರೂ ಮೌಲ್ಯದ ಅಪವಾದವೇ ದೊಡ್ಡ ಹೊರೆಯಾಗಿದೆ. ಸಂಬಳ ಸಿಗದ ಕಾರಣ ದೀಪಾವಳಿ ಆಚರಣೆಯೂ ಕತ್ತಲೆಯಿಂದ ಕೂಡಿದೆ. ಈ ನಡುವೆ ಕಿಶನ್ ವರಕ್ ಅವರನ್ನು ಏಕಾಏಕಿ ಕೆಲಸದಿಂದಲೇ ತೆಗೆಯಲಾಗಿದೆ. ಆತ್ಮಹತ್ಯೆಗೆ ನಿರ್ಧರಿಸಿದ್ದ ಕಿಶನ್ ವರಕ್ ಅವರು ಜನಶಕ್ತಿ ವೇದಿಕೆ ಅಧ್ಯಕ್ಷ ಮಾಧವ ನಾಯಕ ಅವರನ್ನು ಭೇಟಿ ಮಾಡಿದ್ದು, ಮಾಧವ ನಾಯಕ ಅವರು ಕಾರ್ಮಿಕ ನಿರೀಕ್ಷಕರಿಗೆ ಫೋನ್ ಮಾಡಿದ್ದಾರೆ. ಕಾರ್ಮಿಕ ನಿರೀಕ್ಷಕ ವೆಂಕಟೇಶ ಬಾಬು ಅವರು ಕಿಶನ್ ವರಕ್ ಅವರಿಗೆ ಸಮಾಧಾನ ಮಾಡಿ ಧೈರ್ಯ ಹೇಳಿದ್ದಾರೆ. ಹೀಗಾಗಿ ಕಿಶನ್ ವರಕ್ ಅವರು ಆತ್ಮಹತ್ಯೆ ನಿರ್ಧಾರದಿಂದ ಹಿಂದೆ ಸರಿದಿದ್ದು, ನ್ಯಾಯಕ್ಕಾಗಿ ಹೋರಾಟ ನಡೆಸುತ್ತಿದ್ದಾರೆ. ಕಿಶನ್ ವರಕ್ ಅವರು ಹೇಳಿದ್ದೇನು? ವಿಡಿಯೋ ಇಲ್ಲಿ ನೋಡಿ.. - [ಹಸಿರು ದೀಪಾವಳಿ: ಹ್ಯಾಪಿ ದೀಪಾವಳಿ!](https://mobiletime.in/2025/10/green-diwali-happy-diwali/): ಉತ್ತರ ಕನ್ನಡ ಜಿಲ್ಲೆಯ ಜನತೆಗೆ ಜಿಲ್ಲಾಧಿಕಾರಿ ಕೆ ಲಕ್ಷ್ಮೀಪ್ರಿಯಾ ಅವರು ದೀಪಾವಳಿ ಶುಭಾಷಯ ಕೋರಿದ್ದಾರೆ. ಜೊತೆಗೆ `ಹಸಿರು ಪಟಾಕಿಗಳನ್ನು ಮಾತ್ರ ಬಳಸಿ’ ಎಂದು ಅವರು ಕರೆ ನೀಡಿದ್ದಾರೆ. ಅದರಲ್ಲಿಯೂ `ಸರ್ಕಾರ ಸೂಚಿಸಿದ ಸಮಯದಲ್ಲಿ ಮಾತ್ರ ಪಟಾಕಿ ಬಳಸಿ’ ಎಂದವರು ಮನವಿ ಮಾಡಿದ್ದಾರೆ. `ಪ್ರತಿ ವರ್ಷವು ದೀಪಾವಳಿ ಹಬ್ಬವನ್ನು ಸಂಪ್ರಾದಾಯಿಕವಾಗಿ ದೇಶದಾದ್ಯಂತ ಆಚರಿಸಲಾಗುತ್ತಿದೆ. ದೀಪಾವಳಿ ಹಬ್ಬವನ್ನು ದೀಪಗಳ ಸಾಲಿನ ಮೂಲಕ ಆಚರಿಸಿ ಮನಸ್ಸಿನ ಕತ್ತಲನ್ನು ಹೊರದೂಡಿ ಬೆಳಕಿನಡೆಗೆ ಸಾಗುವ ಸಂದೇಶವನ್ನು ಸಾರುವುದು ಸಾಮಾನ್ಯವಾಗಿತ್ತು. ಈ ಬಾರಿಯ ದೀಪಾವಳಿಯ ಹಬ್ಬವನ್ನು ಅದಷ್ಟು ದೀಪಗಳನ್ನು ಬೆಳಗಿಸಿ ಸಂಭ್ರಮಿಸೋಣ. ಮಾಲಿನ್ಯರಹಿತ ದೀಪಾವಳಿ ಹಬ್ಬ ಆಚರಿಸೋಣ’ ಎಂದವರು ಕರೆ ನೀಡಿದ್ದಾರೆ. `ದೀಪಾವಳಿ ಹಬ್ಬದ ಸಂದರ್ಭದಲ್ಲಿ ನಿಷೇಧಿತ ಪಟಾಕಿಗಳನ್ನು ಸಿಡಿಸಬೇಡಿ. ಪಟಾಕಿ ಸಿಡಿಸಿದರೆ ಶಬ್ದ ಮಾಲಿನ್ಯ, ವಾಯು ಮಾಲಿನ್ಯ ಹಾಗೂ ಘನತ್ಯಾಜ್ಯ ಉತ್ಪಾದನೆಯಾಗಿ ಪರಿಸರ ಮಾಲಿನ್ಯ ಹೆಚ್ಚಾಗುತ್ತದೆ’ ಎಂಬುದನ್ನು ಜಿಲ್ಲಾಧಿಕಾರಿಗಳು ನೆನಪಿಸಿದ್ದಾರೆ. `ದೀಪಾವಳಿ ಹಬ್ಬದ ಆಚರಣೆಯ ಸಂದರ್ಭದಲ್ಲಿ ಕೇವಲ ಹಸಿರು ಪಟಾಕಿಗಳನ್ನು ಮಾತ್ರ ಬಳಸಬೇಕು. ಅದನ್ನು ಯಾವುದೇ ಪ್ರಾಣಿ, ಪಕ್ಷಿಗಳು, ಮಕ್ಕಳು ಹಾಗೂ ವೃದ್ಧರಿಗೆ ತೊಂದರೆಯಾಗದAತೆ ಮುನ್ನಚ್ಚರಿಕೆವಹಿಸಬೇಕು. ಆಸ್ಪತ್ರೆ, ಶಿಕ್ಷಣ ಸಂಸ್ಥೆ, ವೃದ್ಧ ಹಾಗೂ ಅನಾಥಾಶ್ರಮಗಳ ಸುತ್ತಮುತ್ತ ಪಟಾಕಿ ಸಿಡಿಸುವುದನ್ನು ನಿಷೇಧಿಸಿದೆ’ ಎಂದವರು ಅರಿವು ಮೂಡಿಸಿದ್ದಾರೆ. `ಪಟಾಕಿ ಸಿಡಿತದಿಂದ ಬರುವ ಹೊಗೆ ಅಸ್ತಮಾ ರೋಗಿಗಳು ಹೃದ್ರೋಗಿಗಳು, ವಯೋವೃದ್ಧರು, ಚಿಕ್ಕ ಮಕ್ಕಳ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟುಮಾಡುತ್ತದೆ. ಹೀಗಾಗಿ ಎಲ್ಲಾ ಪಟಾಕಿ ಮಾರಾಟ ಮಾಡುವ ಮಳಿಗೆಗಳಿಗೆ ಕೇವಲ ಹಸಿರು ಪಟಾಕಿಗಳನ್ನು ಮಾತ್ರ ಮಾರಾಟ ಮಾಡಬೇಕು. ಸಾರ್ವಜನಿಕರು ಖರೀದಿಸುವ ಮುನ್ನ ಪಟಾಕಿಯ ಮೇಲಿರುವ ಹಸಿರು ಚಿಹ್ನೆಗಳನ್ನು ಪರೀಕ್ಷಿಸಬೇಕು. ಪಟಾಕಿಯನ್ನು ಸಿಡಿಸುವ ಸಂದರ್ಭದಲ್ಲಿ ಚಿಕ್ಕ ಮಕ್ಕಳ ಜೊತೆ ಪೋಷಕರು ಇದ್ದು, ಅವಘಡಗಳು ನಡೆಯದಂತೆ ನೋಡಿಕೊಳ್ಳಬೇಕು’ ಎಂದವರು ಮನವಿ ಮಾಡಿದ್ದಾರೆ. ನೀವು ಖರೀದಿಸುವ ಪಟಾಕಿಯಲ್ಲಿ ಈ ಚಿಹ್ನೆ ಇದ್ದರೆ ಮಾತ್ರ ಅದು ಹಸಿರು ಪಟಾಕಿ - [ಅರೆಬರೆಯಾಗಿ ನಡೆದ ಆಪರೇಶನ್ ಹಂದಿ ಕಾರ್ಯಾಚರಣೆ!](https://mobiletime.in/2025/10/operation-handi-was-a-half-baked-operation/): ಮುಂಡಗೋಡು ಪಟ್ಟಣದ ಎಲ್ಲಡೆ ಹಂದಿ ಹಾವಳಿ ಹೆಚ್ಚಾಗಿದೆ. ಬೇರೆ ಬೇರೆ ಊರಿನಿಂದ ಇಲ್ಲಿ ಹಂದಿ ತಂದು ಬಿಡಲಾಗುತ್ತಿದ್ದು, ಅಂಥ ಹಂದಿಗಳನ್ನು ಹಿಡಿದು ಬೇರೆಡೆ ಸಾಗಿಸುವ ಕೆಲಸ ಶುರುವಾಗಿದೆ. ಮುಂಡಗೋಡಿನ ಗಲ್ಲಿ ಗಲ್ಲಿಗಳಲ್ಲಿಯೂ ಹಂದಿಗಳಿವೆ. ಸ್ವಚ್ಚತೆಗೆ ಈ ಹಂದಿಗಳು ಮಾರಕವಾಗಿರುವ ಬಗ್ಗೆ ಜನ ದೂರುತ್ತಿದ್ದಾರೆ. ಜೊತೆಗೆ ವಿವಿಧ ವಾಹನಗಳಿಗೆ ಅಡ್ಡಬಂದು ಅವು ಅಪಘಾತಕ್ಕೂ ಕಾರಣವಾಗುತ್ತಿವೆ. ಈ ಎಲ್ಲಾ ಹಿನ್ನಲೆ ಪಟ್ಟಣ ಪಂಚಾಯತದವರು `ಆಪರೇಶನ್ ಹಂದಿ ಕಾರ್ಯಾಚರಣೆ’ ಶುರು ಮಾಡಿದ್ದಾರೆ. ಆದರೆ, ಇದಕ್ಕೆ ಹಂದಿ ಸಾಕಣಿಗೆ ಮಾಡುವವರು ವಿರೋಧವ್ಯಕ್ತಪಡಿಸಿದರು. ಅದಾಗಿಯೂ, ಪಟ್ಟಣ ಪಂಚಾಯತದವರು ಕೆಲ ಹಂದಿಗಳನ್ನು ಹಿಡಿದರು. ಅದನ್ನು ವಾಹನವೊಂದಕ್ಕೆ ತುಂಬಿಸಿ ಬೇರೆ ಕಡೆ ಕೊಂಡೊಯ್ದರು. `ಹಂದಿಗಳನ್ನು ಬೇರೆ ಕಡೆ ಸಾಗಿಸುವಂತೆ ಸೂಚನೆ ನೀಡಿದರೂ ಅದನ್ನು ಸಾಕುವವರು ಕೇಳಲಿಲ್ಲ. ಹೀಗಾಗಿ ಟೆಂಡರ್ ಕರೆದು ಅದರ ಸಾಗಾಟ ಕೆಲಸ ಮಾಡಿದ್ದೇವೆ’ ಎಂದು ಅಧಿಕಾರಿಗಳು ಮಾಹಿತಿ ನೀಡಿದರು. `ಪಟ್ಟಣ ಪಂಚಾಯತದವರು ಹಂದಿ ಸಾಗಾಟಕ್ಕೆ ಸೂಕ್ತ ಸಮಯ ನೀಡಲಿಲ್ಲ. ಇನ್ನಷ್ಟು ದಿನ ಕಾಲಾವಕಾಶ ನೀಡಿದರೆ ನಾವೇ ಬೇರೆ ಕಡೆ ಸಾಗಿಸುತ್ತೇವೆ’ ಎಂದು ಸಾಕಾಣಿಕಾದಾರರು ಹೇಳಿದರು. `ಬೇರೆಯವರಿಗೆ ಹಂದಿ ಹಿಡಿಯಲು ಅವಕಾಶ ಕೊಡಬೇಡಿ’ ಎಂದು ಮನವಿ ಮಾಡಿದರು. `ಸಾರ್ವಜನಿಕರಿಗೆ ತೊಂದರೆ ನೀಡುವ ನಿಟ್ಟಿನಲ್ಲಿ ಸಾಕಷ್ಟು ಹಂದಿಗಳಿವೆ. ಹಂದಿಗಳ ಸಂಖ್ಯೆ ನಿಯಂತ್ರಣಕ್ಕೆ ಬರುವವರೆಗೂ ಕಾರ್ಯಾಚರಣೆ ನಡೆಯಲಿದೆ’ ಎಂದು ಪ ಪಂ ಮುಖ್ಯಾಧಿಕಾರಿ ಸಂತೋಷಕುಮಾರ ಎಚ್ ಹೇಳಿದ್ದಾರೆ. - [ಇಂದಿರಾ ಕ್ಯಾಂಟೀನಿಗೆ ಅರೆಜೀವ!](https://mobiletime.in/2025/10/indira-canteen-is-half-dead/): ಅಂತೂ-ಇoತೂ ಎರಡು ತಿಂಗಳ ಹಿಂದೆ ಶಿರಸಿಯಲ್ಲಿ ಶುರುವಾದ ಇಂದಿರಾ ಕ್ಯಾಂಟಿನ್ ಮುಚ್ಚುವ ಹಂತ ತಲುಪಿದ್ದು, ಶುಕ್ರವಾರ ಬೆಳಗ್ಗೆ ಆರು ಗಂಟೆಗೆ ನಗರಸಭೆ ಅಧಿಕಾರಿಗಳು ಕ್ಯಾಂಟಿನ್ ಬಗಿಲು ತೆಗೆಸಿದ್ದಾರೆ. ಗುರುವಾರ ರಾತ್ರಿಯೇ ಖಾಲಿ ಆದ ಅಕ್ಕಿ-ಬೇಳೆ ಮೊದಲಾದ ಸಾಮಗ್ರಿಗಳನ್ನು ತರಿಸಿ ಸಮಸ್ಯೆಯನ್ನು ಸರಿಪಡಿಸಿದ್ದಾರೆ. ಅನೇಕ ವರ್ಷಗಳ ನಂತರ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆಗಳಲ್ಲಿ ಒಂದಾದ ಇಂದಿರಾ ಕ್ಯಾಂಟಿನ್ ಶಿರಸಿಯ ಐದು ಸರ್ಕಲ್ ಬಳಿ ಶುರುವಾಗಿದೆ. ಆದರೆ, ಶುರುವಾದ 60 ದಿನಗಳ ಒಳಗೆಯೇ ಕ್ಯಾಂಟಿನ್ ಸೊರಗಲು ಶುರುವಾಗಿದ್ದು, ಗುರುವಾರ ಸಂಜೆ ಇಲ್ಲಿ ದಿನಸಿ ಸಾಮಗ್ರಿಗಳ ಅಭಾವ ಕಾಣಿಸಿತು. ರಾತ್ರಿ ಊಟಕ್ಕೆ ಬಂದವರು ಅಕ್ಕಿ, ಬೆಳೆ, ತರಕಾರಿ, ಎಣ್ಣೆ ಖಾಲಿ ಆಗಿರುವುದನ್ನು ಗಮನಿಸಿದ್ದರು. ಬುಧವಾರವೇ ಅಕ್ಕಿ ಖಾಲಿ ಆಗದ ಕಾರಣ ಗುರುವಾರ ಬೆಳಗ್ಗೆ ಇಡ್ಲಿ ಸಹ ಸಿದ್ಧವಾಗಿರಲಿಲ್ಲ. ಶುಕ್ರವಾರ ಕ್ಯಾಂಟೀನ್ ಹೇಗೆ ಆರಂಭಿಸಬೇಕು? ಎನ್ನುವ ಚಿಂತೆಯಲ್ಲಿ ಅಲ್ಲಿನ ಕೆಲಸಗಾರರು ಮುಳುಗಿದ್ದರು. ಕ್ಯಾಂಟಿನಿನಲ್ಲಿ ಊಟ-ತಿಂಡಿ ಸಿಗದ ಕಾರಣ ಗ್ರಾಹಕರು ಬೇಸರದಲ್ಲಿದ್ದರು. ಕ್ಯಾಂಟಿನಿಗೆ ಸಾಮಗ್ರಿ ಪೂರೈಸುವ ಅಂಗಡಿಯವರಿಗೆ 25 ಸಾವಿರ ರೂ ಬಾಕಿಯಿರುವುದು ಗಮನಕ್ಕೆ ಬಂದಿತು. ಕಾಸು ಕೊಡದೇ ಸಾಮಗ್ರಿ ಪೂರೈಸುವುದಿಲ್ಲ ಎಂದು ಅಂಗಡಿಯವರು ಹೇಳಿದ್ದರಿಂದ ರಾತ್ರಿ ಊಟಕ್ಕೆ ಅನ್ನವಿರಲಿಲ್ಲ. ಗುರುವಾರ ಮಧ್ಯಾಹ್ನ ಮಾಡಿದ ಅನ್ನ ಮಾತ್ರ ಬಾಕಿಯಿದ್ದು, ರಾತ್ರಿ ಊಟಕ್ಕೆ ಅನ್ನವಿರಲಿಲ್ಲ. ಅಕ್ಕಿ, ಬೆಳೆ, ತರಕಾರಿ ಯವುದೇ ವಸ್ತು ಬಾರದೇ ಇದ್ದಿದ್ದರಿಂದ ಶುಕ್ರವಾರ ತಿಂಡಿ, ಅಡುಗೆಗೆ ಸಮಸ್ಯೆ ಕಾಡುತ್ತಿತ್ತು. ಜೊತೆಗೆ ಏಳು ಕೆಲಸಗಾರರ ಪೈಕಿ ಮೂವರು ಮಾತ್ರ ಕೆಲಸಕ್ಕಿದ್ದರು. ಪಾತ್ರೆ ತೊಳೆಯುವುದು, ಅಡುಗೆ ಮಾಡುವುದರಿಂದಹಿಡಿದು ಗುಡಿಸಿ ಒರೆಸುವವರೆಗೂ ಎಲ್ಲವನ್ನು ಅವರೇ ಮಾಡುತ್ತಿದ್ದರು. ಈ ಎಲ್ಲಾ ವಿಷಯಗಳ ಬಗ್ಗೆ ನಗರಸಭೆ ಅಧಿಕಾರಿಗಳ ಗಮನಕ್ಕೆ ಬಂದಿದ್ದು, ಕೂಡಲೇ ಅಧಿಕಾರಿಗಳು ಕ್ಯಾಂಟಿನ್’ಗೆ ಧಾವಿಸಿದರು. ರಾತ್ರಿಯೇ ಸಾಮಗ್ರಿಗಳನ್ನು ತರಿಸಿದ್ದು, ಯಾರಿಗೂ ಸಮಸ್ಯೆ ಆಗಬಾರದು ಎಂದು ಸೂಚಿಸಿದರು. ಜೊತೆಗೆ ಶುಕ್ರವಾರ ಬೆಳಗ್ಗೆ ಸಹ ಅಧಿಕಾರಿಗಳು ಆರು ಗಂಟೆಗೆ ಕ್ಯಾಂಟಿನ್ ಎದುರು ಹಾಜರಿದ್ದರು. ಅದಾಗಿಯೂ `ಮೊದಲಿದ್ದ ಗುಣಮಟ್ಟದ ಆಹಾರ ಈಗ ಸಿಗುತ್ತಿಲ್ಲ’ ಎಂದು ಖಾಯಂ ಗ್ರಾಹಕರು ಹೇಳಿದರು. - [ಶಾಸಕರ ಕಾಲಿಗೆ ಬಿದ್ದ ಕಂದಾಯ ನಿರೀಕ್ಷಕ!](https://mobiletime.in/2025/10/revenue-inspector-falls-at-the-feet-of-mla/): ಶಾಸಕ ದಿನಕರ ಶೆಟ್ಟಿ ಹಾಗೂ ಪುರಸಭೆ ಮುಖ್ಯಾಧಿಕಾರಿ ಎಂ ಆರ್ ಸ್ವಾಮಿ ಅವರ ಹೆಸರುಬರೆದು ಪರಾರಿಯಾಗಿದ್ದ ಕುಮಟಾ ಪುರಸಭೆ ಕಂದಾಯ ನಿರೀಕ್ಷಕ ವೆಂಕಟೇಶ ಆರ್ ಅವರು ಮರಳಿ ಬಂದಿದ್ದು, ಇದೀಗ ಅವರು ತಮ್ಮ ತಾಯಿ ಜೊತೆ ಶಾಸಕ ದಿನಕರ ಶೆಟ್ಟಿ ಅವರನ್ನು ಭೇಟಿ ಮಾಡಿದ್ದಾರೆ. `ನನ್ನನ್ನು ಕ್ಷಮಿಸಿಬಿಡಿ’ ಎಂದು ಶಾಸಕರಲ್ಲಿ ಮನವಿ ಮಾಡಿದ್ದಾರೆ. `ವೆಂಕಟೇಶ್ ಅವರ ಮುಖವನ್ನು ನೋಡಿಲ್ಲ. ಫೋನ್ ಸಹ ಮಾಡಿಲ್ಲ’ ಎಂದು ದಿನಕರ ಶೆಟ್ಟಿ ಮಾಧ್ಯಮದವರ ಮುಂದೆ ಹೇಳಿಕೆ ನೀಡಿದ ಬೆನ್ನಲ್ಲೆ ವೆಂಕಟೇಶ್ ಆರ್ ಅವರು ತಮ್ಮ ತಾಯಿ ಜೊತೆ ಶಾಸಕರನ್ನು ಭೇಟಿ ಮಾಡಿ ಮುಖ ಕಾಣಿಸಿದ್ದಾರೆ. ಭಟ್ಕಳದ ವೆಂಕಟೇಶ್ ಆರ್ ಅವರು ಕುಮಟಾ ಪುರಸಭೆಯಲ್ಲಿ ಕಂದಾಯ ನಿರೀಕ್ಷಕರಾಗಿದ್ದರು. ಅನುಕಂಪದ ಆಧಾರದಲ್ಲಿ ಅವರು ತಂದೆಯ ನೌಕರಿಪಡೆದಿದ್ದು, ಕಟ್ಟುನಿಟ್ಟಾಗಿ ಕೆಲಸ ಮಾಡಿಕೊಂಡಿದ್ದರು. ಅಕ್ರಮ ಕಟ್ಟಡವನ್ನು ಸಕ್ರಮಗೊಳಿಸುವ ಒತ್ತಡಕ್ಕೆ ಮಣಿಯದ ಅವರು ತಮ್ಮ ಮೇಲೆ ಒತ್ತಡ ತಂದ ಪುರಸಭೆ ಮುಖ್ಯಾಧಿಕಾರಿ ಎಂ ಆರ್ ಸ್ವಾಮಿ ಅವರ ವಿರುದ್ಧ ಪತ್ರ ಬರೆದಿದ್ದರು. ಆ ಪತ್ರದಲ್ಲಿ ಶಾಸಕ ದಿನಕರ ಶೆಟ್ಟಿ ಅವರ ಹೆಸರನ್ನು ಸಹ ಉಲ್ಲೇಖಿಸಿದ್ದರು. ಅದಾದ ನಂತರ ವೆಂಕಟೇಶ್ ಆರ್ ಅವರು ಕಾಣೆಯಾಗಿದ್ದು, ಅನೇಕ ಗೊಂದಲಗಳಿಗೆ ಕಾರಣವಾಗಿತ್ತು. ವೆಂಕಟೇಶ ಆರ್ ಅವರ ತಾಯಿ ಆಶಾ ಹರಿಜನ ಅವರು ಮಗನ ಕಣ್ಮರೆ ಬಗ್ಗೆ ಹಾಗೂ ಮೇಲಧಿಕಾರಿಗಳು ನೀಡಿದ ಹಿಂಸೆ ಬಗ್ಗೆ ಎರಡು ಪೊಲೀಸ್ ಪ್ರಕರಣ ದಾಖಲಿಸಿದ್ದರು. ಅದಾದ ನಂತರ ವೆಂಕಟೇಶ್ ಆರ್ ಅವರು ತಾಯಿಗೆ ಫೋನ್ ಮಾಡಿ ಸಮಾಧಾನ ಮಾಡಿದ್ದರು. ಫೋನ್ ಜಾಡು ಹಿಡಿದ ಪೊಲೀಸರು ವೆಂಕಟೇಶ್ ಅವರನ್ನು ಬೆಳಗಾವಿಯಲ್ಲಿ ಹುಡುಕಿ ಅವರನ್ನು ಕೇಂದ್ರಸ್ಥಾನಕ್ಕೆ ಕರೆತಂದಿದ್ದರು. ಈ ವಿಷಯ ಎಲ್ಲಡೆ ಚರ್ಚೆ ನಡೆದಿದ್ದು, ರಾಜಕೀಯ ಪಕ್ಷಗಳ ಟೀಕೆಗಳಿಗೂ ಕಾರಣವಾಗಿತ್ತು. ಕುಮಟಾ ಪುರಸಭೆಯಲ್ಲಿನ ಅಕ್ರಮ-ಅವ್ಯವಹಾರಗಳ ವಿಷಯದ ಬಗ್ಗೆ ಬರೆದ ಪತ್ರದಲ್ಲಿ ಕುಮಟಾ ರಾಷ್ಟಿಯ ಹೆದ್ದಾರಿ ಅಂಚಿನಲ್ಲಿರುವ ವಿನಾಯಕ ಹೊಟೇಲ್ ಅನಧಿಕೃತವಾಗಿದ್ದರೂ ಆ ಕಟ್ಟಡಕ್ಕೆ ಅಧಿಕೃತ ಮುದ್ರೆ ಒತ್ತುವಂತೆ ಪುರಸಭೆ ಮುಖ್ಯಾಧಿಕಾರಿ ಎಂ ಆರ್ ಸ್ವಾಮಿ ಅವರು ಒತ್ತಡ ಹೇರಿದ ಬಗ್ಗೆ ವಿವರಿಸಿದ್ದರು. ಅದರಲ್ಲಿ 4 ಲಕ್ಷ ರೂ ವ್ಯವಹಾರದ ಬಗ್ಗೆ ವೆಂಕಟೇಶ್ ಆರ್ ಅವರು ಬರೆದಿದ್ದು, ಪುರಸಭೆ ಮುಖ್ಯಾಧಿಕಾರಿಗಳಿಗೆ ಶಾಸಕ ದಿನಕರ ಶೆಟ್ಟಿ ಅವರ ಒತ್ತಡವಿರುವ ಬಗ್ಗೆ ನಮೂದಿಸಿದ್ದರು. ಆದರೆ, ಇದನ್ನು ದಿನಕರ ಶೆಟ್ಟಿ ಅವರು ಅಲ್ಲಗಳೆದಿದ್ದರು. `ಈವರೆಗೂ ವೆಂಕಟೇಶ್ ಅವರ ಮುಖವನ್ನು ನೋಡಿಲ್ಲ. ಫೋನು ಮಾಡಿಲ್ಲ’ ಎಂದು ದಿನಕರ ಶೆಟ್ಟಿ ಹೇಳಿದ್ದರು. ಈ ಎಲ್ಲಾ ಬೆಳವಣಿಗೆ ಬೆನ್ನಲ್ಲೆ ವೆಂಕಟೇಶ್ ಆರ್ ಅವರು ಶಾಸಕ ದಿನಕರ ಶೆಟ್ಟಿ ಅವರನ್ನು ಭೇಟಿ ಮಾಡಿದ್ದಾರೆ. ತಮಗಾದ ಸಮಸ್ಯೆಗಳ ಬಗ್ಗೆ ಅವರು ವಿವರಿಸಿದ್ದು, ಅನಗತ್ಯವಾಗಿ ಶಾಸಕರ ಹೆಸರು ಪ್ರಸ್ತಾಪಿಸಿದಕ್ಕೆ ಕ್ಷಮೆ ಕೋರಿದ್ದಾರೆ. `ವಿನಾಕಾರಣ ಆರೋಪ ಬಂದಿದ್ದರಿAದ ನನಗೂ ಬೇಸರವಾಗಿತ್ತು. ಸತ್ಕರ್ಮ ಹಾಗೂ ಧರ್ಮ ನಮ್ಮನ್ನು ಕಾಪಾಡುತ್ತದೆ ಎಂಬುದಕ್ಕೆ ಇದೇ ಸಾಕ್ಷಿ’ ಎಂದು ಶಾಸಕ ದಿನಕರ ಶೆಟ್ಟಿ ಹೇಳಿದ್ದು, ವೆಂಕಟೇಶ್ ಆರ್ ಅವರನ್ನು ಮನ್ನಿಸಿದ್ದಾರೆ. - [ಆಸ್ಪತ್ರೆ ವಿಷಯದಲ್ಲಿ ಒಂದಾದ ಸೈಲ್-ಉಳ್ವೇಕರ್!](https://mobiletime.in/2025/10/sail-ulvekar-united-on-the-hospital-issue/): ತೋಳೆ ಮೀನು ಚುಚ್ಚಿ ಸಾವನಪ್ಪಿದ ಯುವ ಮೀನುಗಾರ ಅಕ್ಷಯ ಮಾಜಾಳಿಕರ ಅವರ ಪ್ರಕರಣವನ್ನು ಕಾರವಾರ ಶಾಸಕ ಸತೀಶ್ ಸೈಲ್ ಹಾಗೂ ವಿಧಾನ ಪರಿಷತ್ ಸದಸ್ಯ ಗಣಪತಿ ಉಳ್ವೇಕರ್ ಗಂಭೀರವಾಗಿ ಪರಿಗಣಿಸಿದ್ದಾರೆ. ವಿವಿಧ ಹಂತದ ಅಧಿಕಾರಿ ಹಾಗೂ ಮುಖಂಡರ ಸಭೆ ನಡೆಸಿದ ಈ ಜನಪ್ರತಿನಿಧಿಗಳು ತುರ್ತು ಸನ್ನಿವೇಶದ ಅವಧಿಯಲ್ಲಿ ಆಸ್ಪತ್ರೆ ಉಪಯೋಗಕ್ಕೆ ಬರುವ ನಿಟ್ಟಿನಲ್ಲಿ ಮೇಲ್ದರ್ಜೆಗೇರಿಸುವ ಬಗ್ಗೆ ಹಾಗೂ ಸುಸಜ್ಜಿತ ಆಸ್ಪತ್ರೆ ನಿರ್ಮಿಸುವ ಬಗ್ಗೆ ಮಾತನಾಡಿದ್ದಾರೆ. `ಸಾಕಷ್ಟು ಶ್ರಮವಹಿಸಿ ನಾವು ಮೆಡಿಕಲ್ ಕಾಲೇಜು ಮಾಡಿದ್ದೇವೆ. ಹಲವು ಹೋರಾಟದ ನಂತರ ಕಾರವಾರಕ್ಕೆ ಮೆಡಿಕಲ್ ಕಾಲೇಜು ಸಿಕ್ಕಿದೆ. ಆದರೆ, ಇಲ್ಲಿನ ಸೇವೆ ಸರಿಯಾಗಿ ಜನರಿಗೆ ಸಿಗುತ್ತಿಲ್ಲ. ಇಲ್ಲಿನ ಸಮಸ್ಯೆಗಳನ್ನು ಸರ್ಕಾರದ ಮಟ್ಟದಲ್ಲಿ ಚರ್ಚಿಸಿ ಅದನ್ನು ಬಗೆಹರಿಸುವುದು ನಮ್ಮ ಗುರಿ’ ಎಂದು ಶಾಸಕ ಸತೀಶ್ ಸೈಲ್ ಸಭೆಯಲ್ಲಿ ಹೇಳಿದ್ದಾರೆ. ವಿಧಾನ ಪರಿಷತ್ ಸದಸ್ಯ ಗಣಪತಿ ಉಳ್ವೇಕರ್ ಅವರು ಸಹ `ಜನರ ದೂರುಗಳನ್ನು ಗಂಭೀರವಾಗಿ ಪರಿಗಣಿಸಿ ಆಸ್ಪತ್ರೆಯಲ್ಲಿ ಅಗತ್ಯ ಸೌಕರ್ಯ ಒದಗಿಸಬೇಕಿದೆ. ಯಾರಿಗೆ ಏನೇ ಸಮಸ್ಯೆ ಇದ್ದರೂ ಅದನ್ನು ಜನಪ್ರತಿನಿಧಿಗಳ ಗಮನಕ್ಕೆ ತರಬೇಕು’ ಎಂದು ಮನವಿ ಮಾಡಿದ್ದಾರೆ. `ಅಕ್ಷಯ ಮಾಜಾಳಿಕರ್ ಅವರಂಥ ಯುವಕರ ಸಾವು ಎಲ್ಲರಿಗೂ ನೋವು ತಂದಿದೆ. ಇಂಥ ದುರ್ಘಟನೆಗಳು ಎಂದೆAದಿಗೂ ಮರುಕಳಿಸಬಾರದು. ವಿಷ ಜಂತು ಕಚ್ಚಿದ ತಕ್ಷಣ ಆಸ್ಪತ್ರೆಯಲ್ಲಿ ತುರ್ತು ಚಿಕಿತ್ಸೆ ಅಗತ್ಯವಿದ್ದು, ಅದಕ್ಕೆ ಬೇಕಾದ ಎಲ್ಲಾ ಸಿದ್ಧತೆಗಳು ಸಿದ್ಧವಾಗಿರಬೇಕು’ ಎಂದು ಈ ಎರಡೂ ಶಾಸಕರು ಕಿಮ್ಸ್ ವೈದ್ಯರಿಗೆ ಸೂಚಿಸಿದರು. `ಆಸ್ಪತ್ರೆಯಲ್ಲಿ ಸೇವೆಯಲ್ಲಿರುವ ವೈದ್ಯರ ಹೆಸರು ಹಾಗೂ ಹುದ್ದೆಯನ್ನು ಕಡ್ಡಾಯವಾಗಿ ನಾಮಫಲಕದಲ್ಲಿ ಬರೆಯಬೇಕು. ವೈದ್ಯರು ತಕ್ಷಣ ಸಿಗುವಂತೆ ನೋಡಿಕೊಳ್ಳಲು ಅವರ ಮೊಬೈಲ್ ಸಂಖ್ಯೆಯನ್ನು ನಮೂದಿಸಬೇಕು’ ಎಂದು ತಾಕೀತು ಮಾಡಿದರು. RTO ವಿರುದ್ಧ ಆಕ್ಷೇಪ! ಸರ್ಕಾರಿ ಆಸ್ಪತ್ರೆಯಲ್ಲಿರುವ ಆಂಬುಲೆನ್ಸಗೆ ಅಗತ್ಯ ಕಾಗದಪತ್ರ ಒದಗಿಸಲು ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಅಸಡ್ಡೆ ತೋರಿರುವ ಬಗ್ಗೆ ಈ ಸಭೆಯಲ್ಲಿ ಕಿಮ್ಸ್ ನಿರ್ದೇಶಕಿ ಪೂರ್ಣಿಮಾ ಅವರು ಅಸಮಧಾನವ್ಯಕ್ತಪಡಿಸಿದರು. ಶಾಸಕ ಸತೀಶ್ ಸೈಲ್ ಈ ಬಗ್ಗೆ ಅಧಿಕಾರಿಗಳನ್ನು ಪ್ರಶ್ನಿಸಿ ಗರಂ ಆದರು. ಸಾರಿಗೆ ಅಧಿಕಾರಿಗಳನ್ನು ಸಭೆಗೆ ಕರೆಯಿಸಿದ ಅವರು `ಸಾರ್ವಜನಿಕ ಸೇವೆಗೆ ಆಂಬುಲೆನ್ಸ ಸಿಗುವಂತೆ ಅಗತ್ಯ ದೃಢೀಕರಣ ಒದಗಿಸಿ’ ಎಂದು ಸೂಚಿಸಿದರು. - [ಕರಾಳ ರಾತ್ರಿಯ ಕರುಳ ಬಳ್ಳಿಯ ಕಥೆ: ಮೂರು ಮರಿ ತಿಂದ ಕರಿ ಚಿರತೆ!](https://mobiletime.in/2025/10/a-dark-nights-tale-of-the-intestinal-cord-the-black-leopard-that-ate-three-cubs/): ಕಾರವಾರದ ಕದ್ರಾದಲ್ಲಿನ ಕೊಟ್ಟಿಗೆಗೆ ನುಗ್ಗುವ ಕರಿ ಚಿರತೆ ಅಲ್ಲಿರುವ ಮರಿಗಳನ್ನು ಮಾತ್ರ ಗುರಿಯಾಗಿರಿಸಿಕೊಂಡು ಕೊಲ್ಲುತ್ತಿದೆ. ಆಕಳು ಹಾಗೂ ಎಮ್ಮೆ ಮರಿಗಳ ಕರಳು ತಿಂದು ಕರಿ ಚಿರತೆ ಕಾಡು ಸೇರುತ್ತಿದೆ. ಕಾರವಾರದ ಕದ್ರಾ ವಲಯದ ಬೋರೆ ಗ್ರಾಮದಲ್ಲಿ ಕೊಟ್ಟಿಗೆಯಲ್ಲಿ ಕಟ್ಟಿದ್ದ ಜಾನುವಾರುಗಳ ಮೇಲೆ ಗುರುವಾರ ರಾತ್ರಿ ಚಿರತೆ ದಾಳಿ ಮಾಡಿದೆ. ಕೊಟ್ಟಿಗೆಯಲ್ಲಿದ್ದ ಮೂರು ಮರಿಗಳನ್ನು ಚಿರತೆ ಅರೆಬರೆಯಾಗಿ ಭಕ್ಷಿಸಿದೆ. ಶುಕ್ರವಾರ ಬೆಳಗ್ಗೆ ಮೂರು ಜಾನುವಾರುಗಳು ಸಾವನಪ್ಪಿದನ್ನು ನೋಡಿ ಕೊಟ್ಟಿಗೆ ಮಾಲಕರು ಕಂಗಾಲಾಗಿದ್ದಾರೆ. ಕೊಟ್ಟಿಗೆ ತುಂಬ ರಕ್ತಮಯವಾಗಿದ್ದು, ಅಲ್ಲಿ ಎರಡು ಎಮ್ಮೆ ಕರುಗಳು ರಕ್ತಸಿಕ್ತವಾಗಿ ಬಿದ್ದು ಸಾವನಪ್ಪಿದ್ದವು. ಇನ್ನೊಂದು ಕರುವಿನ ಹೊಟ್ಟೆಯೇ ಕಾಣೆಯಾಗಿದ್ದು, ಕರಳು ಅರ್ದ ಹೊರ ಬಂದಿತ್ತು. ಈ ಭಾಗದಲ್ಲಿ ಚಿರತೆ ಓಡಾಟ ಸಾಮಾನ್ಯವಾಗಿದ್ದರೂ ಕೊಟ್ಟಿಗೆಗೆ ನುಗ್ಗಿದ ನಿದರ್ಶನಗಳು ಕಡಿಮೆಯಿದ್ದವು. ಅದರಲ್ಲಿಯೂ ಒಂದೇ ದಿನ ಮೂರು ಮರಿಗಳ ಮೇಲೆ ಆಕ್ರಮಣ ನಡೆದಿದ್ದು ಅಪರೂಪದಲ್ಲಿಯೇ ಅಪರೂಪ. ಸದ್ಯ ಸ್ಥಳಕ್ಕೆ ಅರಣ್ಯ ಇಲಾಖೆಯ ಅಧಿಕಾರಿಗಳು ಆಗಮಿಸಿದ್ದಾರೆ. ಚಿರತೆ ಹೆಜ್ಜೆ ಗುರುತನ್ನು ಅವರು ಗಮನಿಸಿದ್ದಾರೆ. ಜನ ವಸತಿ ಪ್ರದೇಶದಲ್ಲಿ ಚಿರತೆ ಕಾಣಿಸಿದರೆ ಕೂಡಲೇ ಮಾಹಿತಿ ಕೊಡಿ ಎಂದು ಅರಣ್ಯ ಸಿಬ್ಬಂದಿ ಹೇಳಿದ್ದಾರೆ. - [ಒಂದು ಸಾವು-ಹಲವರಿಗೆ ನೋವು: ಪ್ರವಾಸಕ್ಕೆ ಬಂದವರಿಗೆ ಪ್ರಯಾಸ!](https://mobiletime.in/2025/10/one-death-many-suffering-a-hardship-for-those-who-came-for-a-trip/): ಬೆಂಗಳೂರಿನಿoದ ಗೋವಾ ಪ್ರವಾಸಕ್ಕೆ ಬರುತ್ತಿದ್ದ ಟೂರ್ ಅಂಡ್ ಟ್ರಾವೆಲ್ಸ್ ವಾಹನವೊಂದು ಜೊಯಿಡಾದಲ್ಲಿ ಅಪಘಾತಕ್ಕೀಡಾಗಿದೆ. ಪರಿಣಾಮ ಪ್ರವಾಸಿಗರೊಬ್ಬರು ಸಾವನಪ್ಪಿದ್ದಾರೆ. ಶುಕ್ರವಾರ ಬೆಳಗ್ಗೆ ಜಳಕಟ್ಟಿ ಬಳಿ ಈ ಅಪಘಾತ ನಡೆದಿದೆ. ಕುಟುಂಬದ ಸದಸ್ಯರೆಲ್ಲರೂ ಸೇರಿ ಪ್ರವಾಸಕ್ಕೆ ಹೊರಟಿದ್ದು, ಅವರಿಗೆ ಪರಿಚಿತವಲ್ಲದ ಊರಿನಲ್ಲಿ ಅಪಘಾತವಾಗಿದ್ದರಿಂದ ಅವರೆಲ್ಲರೂ ಪರದಾಡಿದರು. ತುರ್ತು ಸಹಾಯಕ್ಕೆ ಅವರು ಸ್ಥಳೀಯರ ಮೊರೆ ಹೋಗಿದ್ದು, ರಾಮನಗರದ ಜನ ಗಾಯಾಳುಗಳ ನೆರವಿಗೆ ಬಂದರು. ಏಳು ಜನರಿದ್ದ ವಾಹನ ಪಲ್ಟಿಯಾಗಿದ್ದು, ಪರಿಣಾಮ ಒಬ್ಬರು ಸಾವಪ್ಪಿದರು. ವಾಹನ ಓಡಿಸುತ್ತಿದ್ದ ಚಾಲಕ ಪ್ರಜ್ವಲ್ (25) ಸಾವನಪ್ಪಿದವರಾಗಿದ್ದಾರೆ. ಅವರು ಸಹ ಬೆಂಗಳೂರಿನ ನಿವಾಸಿಯಾಗಿದ್ದು, ಗಾಯಗೊಂಡ ಉಳಿದವರನ್ನು ಆಸ್ಪತ್ರೆಗೆ ಸಾಗಿಸಲಾಗಿದೆ. ಆಂಬುಲೆನ್ಸ ಮೂಲಕ ಗಾಯಾಳುಗಳು ರಾಮನಗರ ಆರೋಗ್ಯ ಕೇಂದ್ರದಲ್ಲಿ ಪ್ರಾಥಮಿಕ ಚಿಕಿತ್ಸೆಪಡೆದರು. ಅದಾದ ನಂತರ ಹೆಚ್ಚಿನ ಚಿಕಿತ್ಸೆಗೆ ಬೇರೆ ಕಡೆ ಕರೆದೊಯ್ಯಲಾಗಿದೆ. - [ಕಾರಿನ ಸದ್ದಿಗೆ ಗುರಾಯಿಸಿದ ಕಾಡಿನ ರಾಜ!](https://mobiletime.in/2025/10/tiger-roaming-in-kaiga-forest-the-king-of-the-jungle-growled-at-the-sound-of-a-car/): ಕಾರವಾರದ ಕೈಗಾ ಕಾಡಿನ ಬಳಿ ಅಂಕೋಲಾದ ಕರಿಕಲ್ ನಾರಾಯಣ ಹೆಗಡೆ ಅವರಿಗೆ ಪಟ್ಟೆ ಹುಲಿ ಕಾಣಿಸಿದೆ. ಹುಲಿ ಓಡಾಟದ ವಿಡಿಯೋ ಮಾಡಿದ ಅವರು ಅದನ್ನು ತಮ್ಮ ಬಳಗದಲ್ಲಿ ಹಂಚಿದ್ದಾರೆ. ಈ ಮಾರ್ಗದಲ್ಲಿ ಈಚೆಗೆ ಪದೇ ಪದೇ ಹುಲಿ ದರ್ಶನವಾಗುತ್ತಿದೆ. 2023ರ ಅವಧಿಯಲ್ಲಿ ಕೈಗಾ ಅಣು ವಿದ್ಯುತ್ ಘಟಕದ ಉದ್ಯೋಗಿಯೊಬ್ಬರಿಗೆ ಇಲ್ಲಿ ಹುಲಿ ಕಾಣಿಸಿಕೊಂಡಿತ್ತು. ಅದನ್ನು ಅವರು ಮೊಬೈಲ್ ಕ್ಯಾಮರಾದಲ್ಲಿ ಸೆರೆಹಿಡಿದಿದ್ದರು. ರಸ್ತೆ ಪಕ್ಕದಲ್ಲಿದ್ದ ಹುಲಿ ಕೈಗಾ ಉದ್ಯೋಗಿ ಚೇತನ ಅವರ ಕಾರಿನ ಬಳಿ ಬಂದಿರುವುದು ವಿಡಿಯೋದಲ್ಲಿ ಸೆರೆಯಾಗಿತ್ತು. 2024ರ ಜುಲೈ ತಿಂಗಳಿನಲ್ಲಿಯೂ ಇದೇ ಮಾರ್ಗವಾಗಿ ಸಂಚರಿಸುತ್ತಿದ್ದ ಸಾಯಿ ಬಿಜ್ಜೂರು ಎಂಬಾತರಿಗೆ ಹುಲಿ ದರ್ಶನವಾಗಿತ್ತು. ಅದನ್ನು ಸಹ ಅವರು ಕ್ಯಾಮರಾದಲ್ಲಿ ಸೆರೆ ಹಿಡಿದಿದ್ದರು. ಅದಾದ ನಂತರ 2025ರ ಸೆಪ್ಟೆಂಬರ್ ಅವಧಿಯಲ್ಲಿ ಹಗಲಿನಲ್ಲಿಯೇ ಇಲ್ಲಿ ಹುಲಿ ಓಡಾಟ ಜೋರಾಗಿತ್ತು. ಸೆಪ್ಟೆಂಬರ್ 12ರಂದು ಬಾರೆ ಘಟ್ಟದ ಪ್ರದೇಶದಲ್ಲಿ ಹುಲಿ ಓಡಾಡಿದನ್ನು ಜಿಕೆ ರಾಮ್ ಕಂಪನಿಯ ವಾಹನ ಚಾಲಕ ಸೈನಾಥ ನಾಯಕ್ ಅವರು ಕಂಡಿದ್ದರು. ಸುಮಾರು 20 ನಿಮಿಷಗಳ ಕಾಲ ಹುಲಿ ರಸ್ತೆಯಲ್ಲಿ ಓಡಾಡಿದ ದೃಶ್ಯವನ್ನು ಅವರು ಸೆರೆ ಹಿಡಿದಿದ್ದರು. ಸದ್ಯ ಅಂಕೋಲಾದ ಕರಿಕಲ್ ನಾರಾಯಣ ಹೆಗಡೆ ಅವರು ಕೈಗಾ-ಕಾರವಾರ ರಸ್ತೆಯಲ್ಲಿ ಸಂಚರಿಸುವಾಗ ಹುಲಿ ನೋಡಿದ್ದಾರೆ. ಕೃಷಿಕ ಸಮಾಜದ ಅಧ್ಯಕ್ಷರು ಆಗಿರುವ ನಾರಾಯಣ ಹೆಗಡೆ ಅವರು ಕೃಷಿ-ತೋಟಗಳಿಗೆ ನೀರಾವರಿ ಕಾಯಕದಲ್ಲಿ ತೊಡಗಿದ್ದಾರೆ. ಕೈಗಾ ಬಳಿ ರೈತರನ್ನು ಭೇಟಿ ಮಾಡಿ ಅವರ ಭೂಮಿಗೆ ನೀರು ಹಾಯಿಸುವ ಕೆಲಸಕ್ಕಾಗಿ ಅವರು ಆ ಮಾರ್ಗಕ್ಕೆ ತೆರಳಿದ್ದರು. ಅಕ್ಟೊಬರ್ 16ರಂದು ಅವರು ತಮ್ಮ ಪತ್ನಿ ಗೀತಾ ಹೆಗಡೆ ಅವರ ಜೊತೆ ಕೈಗಾದ ಕೃಷಿ ಕ್ಷೇತ್ರಕ್ಕೆ ತೆರಳಿ ಯಲ್ಲಾಪುರದ ಕಡೆ ಮರಳುತ್ತಿದ್ದರು. ಹರ್ಟುಗಾ ಬಳಿ ನಾರಾಯಣ ಹೆಗಡೆ ಅವರ ಕಾರನ್ನು ಹುಲಿ ಅಟ್ಟಗಟ್ಟಿತು. ಬೆಳಗ್ಗೆ 11.45ರಿಂದ 12.20ರವರೆಗೆ ಈ ಹುಲಿ ರಸ್ತೆ ಮೇಲೆ ಸಂಚರಿಸಿದ್ದು, ಕಾರು ಜೋರಾಗಿ ಚಲಿಸಲು ಅವಕಾಶವನ್ನು ಮಾಡಿಕೊಡಲಿಲ್ಲ. ಸುಮಾರು ಒಂದುವರೆ ಕಿಮೀ ದೂರ ಹುಲಿ ರಸ್ತೆ ಮೇಲೆ ಸಂಚರಿಸಿದ್ದು, ನಾರಾಯಣ ಹೆಗಡೆ ಅವರು ಅದರ ಹಿಂದೆ ನಿಧಾನವಾಗಿ ಕಾರು ಓಡಿಸಿದರು. ಒಂದರೆಡು ಬಾರಿ ದಾರಿ ಬಿಡುವಂತೆ ಕೋರಿ ಕಾರಿನ ಹಾರ್ನ ಅದುಮಿದರಾದರೂ ಹುಲಿ ದಾರಿ ಬಿಡಲಿಲ್ಲ. ಕಾರಿನ ಕಡೆ ತಿರುಗಿ ಹುಲಿ ಗುರ್ ಗುರ್ ಎಂದಾಗ ಅವರು ಪದೇ ಪದೇ ಹಾರ್ನ ಹೊಡೆಯುವುದನ್ನು ಬಿಟ್ಟರು. `ರಾತ್ರಿ ಸಂಚಾರದ ವೇಳೆ ಹುಲಿ ಅನೇಕ ಬಾರಿ ಕಾಣಿಸಿದೆ. ಆದರೆ, ಹಗಲಿನ ವೇಳೆ ರಸ್ತೆಯ ಮೇಲೆ ಹುಲಿ ಕಾಣಿಸಿದ್ದು ಇದೇ ಮೊದಲು’ ಎಂದು ನಾರಾಯಣ ಹೆಗಡೆ ಅವರು ಹೇಳಿದರು. ವಿಡಿಯೋ ಇಲ್ಲಿ ನೋಡಿ.. - [ರೋಟರಿಗೂ ಪ್ರಥಮ.. ಕೆಡಿಸಿಸಿಗೂ ಪ್ರಥಮ!](https://mobiletime.in/2025/10/a-first-for-rotary-a-first-for-kdcc/): 64 ವರ್ಷಗಳ ಐತಿಹ್ಯಹೊಂದಿರುವ ಶಿರಸಿ ರೋಟರಿ ಕ್ಲಬ್ಬಿನ ಪ್ರಥಮ ಮಹಿಳಾ ಕಾರ್ಯದರ್ಶಿಯಾಗಿ ಸರಸ್ವತಿ ಎನ್ ರವಿ ಅವರು ಸೇವೆ ಸಲ್ಲಿಸಿದ್ದಾರೆ. ಸದ್ಯ ಅವರು 105 ವರ್ಷಗಳ ಇತಿಹಾಸಹೊಂದಿದ ಕೆಡಿಸಿಸಿ ಬ್ಯಾಂಕಿನ ಮೊದಲ ಮಹಿಳಾ ನಿರ್ದೇಶಕರಾಗುವ ಉತ್ಸಾಹದಲ್ಲಿದ್ದಾರೆ. ಸಹಕಾರಿ ಸಂಸ್ಥೆ ಮಾತೃಸಂಸ್ಥೆಯಾದ ಕೆಡಿಸಿಸಿ ಬ್ಯಾಂಕಿನ ನಿರ್ದೇಶಕ ಸ್ಥಾನಬಯಸಿ ಸರಸ್ವತಿ ಎನ್ ರವಿ ಅವರು ನಾಮಪತ್ರ ಸಲ್ಲಿಸಿದ್ದಾರೆ. ಯಾವುದೇ ಆಮೀಷ-ಒತ್ತಡಗಳಿಗೆ ಒಳಗಾಗದೇ ಕಾರ್ಯ ನಿರ್ವಹಿಸುವುದಾಗಿ ಅವರು ಘೋಷಿಸಿದ್ದಾರೆ. ರೋಟರಿ ಕ್ಲಬ್, ಕೆಡಿಸಿಸಿ ಬ್ಯಾಂಕ್ ಮಾತ್ರವಲ್ಲದೇ ಸರಸ್ವತಿ ಎನ್ ರವಿ ಅವರು ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿಗೆ ಉತ್ತರ ಕನ್ನಡ ಜಿಲ್ಲೆ ಪ್ರತಿನಿಧಿಸಿದ ಪ್ರಥಮ ಮಹಿಳಾ ನಿರ್ದೇಶಕರಾಗಿದ್ದಾರೆ. ಬೆಳಗಾವಿ ವಿಭಾಗದಲ್ಲಿಯೇ ಪ್ರಥಮವಾಗಿ ರಚಿತವಾದ ಉತ್ತರ ಕನ್ನಡ ಜಿಲ್ಲಾ ಸೌಹಾರ್ದ ಸಹಕಾರಿಗಳ ಪ್ರಥಮ ಒಕ್ಕೂಟದ ಪ್ರಥಮ ಪ್ರವರ್ತಕ ನಿರ್ದೇಶಕರಾಗಿಯೂ ಅವರು ಗುರುತಿಸಿಕೊಂಡಿದ್ದಾರೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ರಾಜ್ಯಮಟ್ಟದಲ್ಲಿ ಕಾರ್ಯನಿರ್ವಹಿಸುತ್ತಿರುವ ಪ್ರಥಮ ಮಹಿಳಾ ಸೌಹಾರ್ದ ಸಹಕಾರಿಯ ಪ್ರಥಮ ಅಧ್ಯಕ್ಷರಾಗಿಯೂ ಅವರು ಕೆಲಸ ಮಾಡಿದ್ದಾರೆ. ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿಯ 2017-2022ರ ಅವಧಿಯ ಆಡಳಿತ ಮಂಡಳಿಯ ಏಕೈಕ ಚುನಾಯಿತ ಮಹಿಳಾ ನಿರ್ದೇಶಕಿಯೂ ಆಗಿದ್ದಾರೆ. ಇದೆಲ್ಲದರ ಜೊತೆ ಸ್ಕೊಡವೆಸ್ ಸಂಸ್ಥೆಯ ಪ್ರಥಮ ಮಹಿಳಾ ಕಾರ್ಯದರ್ಶಿಯಾಗಿಯೂ ಅವರು ಸೇವೆಯಲ್ಲಿದ್ದಾರೆ. ಹತ್ತು ಹಲವು ಸಂಘ-ಸOಸ್ಥೆಗಳಲ್ಲಿ ಪ್ರಥಮ ಮಹಿಳೆಯಾಗಿ ಗುರುತಿಸಿಕೊಂಡಿರುವ ಅವರು ಕೆಡಿಸಿಸಿ ಬ್ಯಾಂಕಿನ ಮೊದಲ ಮಹಿಳಾ ನಿರ್ದೇಶಕರಾಗುವ ಸಾಧ್ಯತೆಗಳು ಹೆಚ್ಚಾಗಿವೆ. ಈ ಬ್ಯಾಂಕಿನ 105 ವರ್ಷಗಳ ಇತಿಹಾಸದಲ್ಲಿ ಒಬ್ಬ ಮಹಿಳೆ ಸಹ ನಿರ್ದೇಶಕರಾಗಿಲ್ಲ ಎಂಬ ವಿಷಯ ಸಹಕಾರಿ ವಲಯದ ಹಿರಿಯರಿಗೆ ಮನವರಿಕೆಯಾಗಿದ್ದು, `ಈ ಬಾರಿಯಾದರೂ ಮಹಿಳೆಗೆ ಅವಕಾಶ ನೀಡೋಣ’ ಎಂಬ ಮಾತು ದಟ್ಟವಾಗಿದೆ. ಸದ್ಯ ಕೆಡಿಸಿಸಿ ಬ್ಯಾಂಕಿನ ಚುನಾವಣೆಯಲ್ಲಿ ಎರಡು ಬಣಗಳಿಂದ ಪ್ರಚಾರ ಕಾರ್ಯ ನಡೆಯುತ್ತಿದೆ. ಆದರೆ, ಸರಸ್ವತಿ ಎನ್ ರವಿ ಅವರು ಈ ಎರಡೂ ಬಣಗಳಲ್ಲಿಲ್ಲ. ಅವರು ಸಂಪೂರ್ಣ ಸ್ವತಂತ್ರ ಅಭ್ಯರ್ಥಿಯಾಗಿ ನಿರ್ದೇಶಕ ಸ್ಥಾನಕ್ಕೆ ಆಕಾಂಕ್ಷಿಯಾಗಿದ್ದು, ಬ್ಯಾಂಕಿನ ಆಡಳಿತಾತ್ಮಕ ದೃಷ್ಠಿಯಿಂದ ಎಲ್ಲರ ಜೊತೆಯೂ ಉತ್ತಮ ನಂಟು ಹೊಂದಿದ್ದಾರೆ. ಮಹಿಳಾ ಪ್ರಾತಿನಿಧ್ಯ, ಎಲ್ಲಾ ಸಹಕಾರಿ ಸಂಘಗಳಿಗೂ ಸಮಾನ ಅವಕಾಶಗಳು ಸಿಗಬೇಕು ಎಂಬ ಸಾಮಾಜಿಕ ನ್ಯಾಯಕ್ಕಾಗಿ ಅವರು ಚುನಾವಣೆಗೆ ಸ್ಪರ್ಧಿಸಿರುವ ಬಗ್ಗೆ ಪ್ರಚಾರದ ಅವಧಿಯಲ್ಲಿ ಹೇಳುತ್ತಿದ್ದಾರೆ. `ರಾಜ್ಯ ಮತ್ತು ರಾಷ್ಟಮಟ್ಟದ ಸಂಸ್ಥೆಗಳ ಸದಸ್ಯರಾಗಿ ಕಾರ್ಯನಿರ್ವಹಿಸಿದ ಅನುಭವದ ಹಿನ್ನೆಲೆಯಲ್ಲಿ ಕೆಡಿಸಿಸಿ ಬ್ಯಾಂಕ್ ನಿರ್ದೇಶಕ ಮಂಡಳಿಗೆ ಸರಸ್ವತಿ ಎನ್ ರವಿ ಅವರ ಆಯ್ಕೆ ಯೋಗ್ಯ’ ಎಂಬುದು ಹೇಮಲತಾ ಚೌಗುಲೆ ಹಾಗೂ ಸ್ವಾತಿ ಶೆಟ್ಟಿ, ಲಲಿತಾ ಹೆಗಡೆ, ಭಾಗೀರತಿ ನಾಯ್ಕ ಅವರ ಮಾತು. `ಬ್ಯಾಂಕ್ ಆಡಳಿತ ವ್ಯವಸ್ಥೆಯಲ್ಲಿ ನಾರಿಶಕ್ತಿ ಪ್ರದರ್ಶನಕ್ಕೆ ಇದೊಂದು ಉತ್ತಮ ಅವಕಾಶ. ಸಹಕಾರಿ ದುರಿಣರು ಈ ಬಗ್ಗೆ ಚಿಂತಿಸಿ ಸರಸ್ವತಿ ಎನ್ ರವಿ ಅವರಿಗೆ ಅವಕಾಶ ಮಾಡಿಕೊಡಬೇಕು’ ಎಂಬುದು ಗೀತಾ ಹಣಬರ್, ವೀಣಾ ಮೊಗೇರ, ಸರೋಜಾ ಗಂಗೊಳ್ಳಿ ಅವರ ಮನವಿ. - [2025 ಅಕ್ಟೊಬರ್ 17ರ ದಿನ ಭವಿಷ್ಯ](https://mobiletime.in/2025/10/prediction-for-october-17-2025/): ಮೇಷ ರಾಶಿ: ನಿಮ್ಮ ಧೈರ್ಯ ಹಾಗೂ ನಿರಂತರ ಪ್ರಯತ್ನಕ್ಕೆ ಜಯ ಸಿಗಲಿದೆ. ಸಂಬAಧಗಳಲ್ಲಿ ಸಮಾಧಾನವಿರುತ್ತದೆ. ಆರೋಗ್ಯದ ಮೇಲೆ ಗಮನಕೊಡಿ. ಮನಸ್ಸು ಶಾಂತವಾಗಿರಲಿ. ವೃಷಭ ರಾಶಿ: ನಿಮ್ಮ ಮನಸ್ಸು ಈ ದಿನ ಸ್ಥಿರವಾಗಿರಬೇಕು. ಕೆಲಸದಲ್ಲಿನ ಅಭಿಪ್ರಾಯಗಳು ನಿಮ್ಮ ಮೇಲೆ ಪ್ರಭಾವ ಬೀರಲಿದ್ದು, ಏನೇ ಬಂದರೂ ಎದುರಿಸಿ. ಆರೋಗ್ಯದಲ್ಲಿ ಸುಧಾರಣೆ ಕಂಡುಬರುತ್ತದೆ. ಮಿಥುನ ರಾಶಿ: ನಿಮ್ಮ ಸಂವಹನ ಕೌಶಲ್ಯದಿಂದ ಕೆಲಸ ಸರಾಗವಾಗಲಿದೆ. ಹೊಸ ಜ್ಞಾನ ಪಡೆಯಲು ಅವಕಾಶ ಸಿಗಲಿದೆ. ಪ್ರಯಾಣದ ಯೋಗವಿದೆ. ಕರ್ಕ ರಾಶಿ: ಗುರು-ಹಿರಿಯರ ಜೊತೆ ತಾಳ್ಮೆಯಿಂದ ನಡೆದುಕೊಳ್ಳಿ. ಒತ್ತಡ ಕಡಿಮೆ ಮಾಡಿಕೊಳ್ಳುವುದು ಅಗತ್ಯ. ಹಳೆಯ ಕೆಲಸಗಳನ್ನು ಬೇಗ ಮುಗಿಸಿ. ಸಿಂಹ ರಾಶಿ: ಕಾರ್ಯಕ್ಷೇತ್ರದಲ್ಲಿ ಯಶಸ್ಸು ಸಿಗಲಿದೆ. ಹಣಕಾಸು ವಿಷಯದಲ್ಲಿ ಎಚ್ಚರಿಕೆ ಅಗತ್ಯ. ಗೆಳೆಯರನ್ನು ಭೇಟಿ ಮಾಡುವಿರಿ. ಕನ್ಯಾ ರಾಶಿ: ಪುನರಾವರ್ತಿತ ಸಮಸ್ಯೆಗಳು ದೂರವಾಗುವ ಲಕ್ಷಣವಿದೆ. ಪರಸ್ಪರ ಸಹಕಾರದಿಂದ ಯಶಸ್ಸು ಸಾಧ್ಯ. ತುಲಾ ರಾಶಿ: ಆರೋಗ್ಯ ಹಾಗೂ ಆಹಾರದಲ್ಲಿ ಸಮತೋಲನ ಅಗತ್ಯವಿದೆ. ಕಠಿಣ ಪರಿಶ್ರಮದಿಂದ ಮಾತ್ರ ಯಶಸ್ಸು ಸಿಗಲಿದೆ. ವೃಶ್ಚಿಕ ರಾಶಿ: ಗುರಿ ಸಾಧನೆಗಾಗಿ ಶ್ರಮಿಸಿ. ಅನಗತ್ಯವಾದ ವಾದ-ಜಗಳದಿಂದ ದೂರವಿರಿ. ಉತ್ತಮ ಆರೋಗ್ಯಕ್ಕಾಗಿ ವ್ಯಾಯಾಮ ಮಾಡಿ. ಧನು ರಾಶಿ: ಪ್ರಯಾಣದ ಜೊತೆಯೇ ಕಲಿಕೆಗೆ ಅವಕಾಶವಿದೆ. ಆಧ್ಯಾತ್ಮಿಕ ಕ್ಷೇತ್ರದಲ್ಲಿ ಬೆಳವಣಿಗೆ ಸಾಧ್ಯವಿದೆ. ಹಣಕಾಸು ವಿಷಯ ಉತ್ತಮವಾಗಿರಲಿದೆ. ಮಕರ ರಾಶಿ: ಆರೋಗ್ಯದಲ್ಲಿ ಏರುಪೇರಾಗುವ ಸಾಧ್ಯತೆಯಿದೆ. ಧೈರ್ಯದಿಂದ ನಡೆಯಿರಿ. ಆರ್ಥಿಕವಾಗಿ ಲಾಭ ಸಿಗಲಿದೆ. ಕುಂಭ ರಾಶಿ: ಸಾಮಾಜಿಕ ಕ್ಷೇತ್ರದಲ್ಲಿ ಗುರುತಿಸಿಕೊಳ್ಳುವಿರಿ. ಹಣಕಾಸು ಉತ್ತಮವಾಗಿರಲಿದೆ. ಹೊಸ ಆಲೋಚನೆಗಳು ಬರಲಿದೆ. ಮೀನ ರಾಶಿ: ನಿಮ್ಮ ಭಾವನೆಗಳು ಅತಿಯಾಗದಂತೆ ನಿಯಂತ್ರಿಸಿ. ಹೂಡಿಕೆಗೆ ಯೋಗ್ಯ ಸಮಯವಲ್ಲ. ಮನಸ್ಸು ಶಾಂತವಾಗಿರಲು ಧ್ಯಾನ ಮಾಡಿ. - [ಅತಿಯಾದ ವ್ಯಸನ: ಆತ್ಮಹತ್ಯೆಗೆ ಮಾನಸಿಕ ಖಿನ್ನತೆ ಕಾರಣ!](https://mobiletime.in/2025/10/excessive-addiction-mental-depression-is-the-cause-of-suicide/): ಕುಮಟಾದಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದ ವಿನಾಯಕ ನಾಯ್ಕ ಅವರು ಆತ್ಮಹತ್ಯೆಗೆ ಶರಣಾಗಿದ್ದಾರೆ. ವಿಪರೀತ ವ್ಯಸನಕ್ಕೆ ಒಳಗಾಗಿದ್ದ ಅವರು ಮಾನಸಿಕ ಖಿನ್ನತೆಯಿಂದ ನೇಣು ಹಾಕಿಕೊಂಡು ಸಾವನಪ್ಪಿದ್ದಾರೆ. ಕುಮಟಾದ ಮಿರ್ಜಾನಿನ ಜನತಾ ಪ್ಲಾಟಿನಲ್ಲಿ ವಿನಾಯಕ ನಾಯ್ಕ (30) ಅವರು ವಾಸವಾಗಿದ್ದರು. ಕೂಲಿ ಕೆಲಸ ಮಾಡುತ್ತಿದ್ದ ಅವರು ನಿತ್ಯವೂ ಸರಾಯಿ ಸೇವಿಸುತ್ತಿದ್ದರು. ಸರಾಯಿ ಸೇವನೆ ಹೆಚ್ಚಾದ ಪರಿಣಾಮ ಮಾನಸಿಕವಾಗಿ ಅವರು ಕುಗ್ಗಿದ್ದರು. ಸರಾಯಿ ಸೇವನೆ ಬಿಡುವಂತೆ ಅವರ ಪತ್ನಿ ಪ್ರೇಮಾ ನಾಯ್ಕ ಅವರು ತಿಳಿಸಿದರೂ ಅದನ್ನು ವಿನಾಯಕ ನಾಯ್ಕ ಅವರು ಗಂಭೀರವಾಗಿ ಪರಿಗಣಿಸಿರಲಿಲ್ಲ. ಹೀಗಿರುವಾಗ 16ರ ನಸುಕಿನಲ್ಲಿ ವಿನಾಯಕ ನಾಯ್ಕ ಅವರು ಮಿರ್ಜಾನ್ ದರ್ಗಾ ಕ್ರಾಸ್ ಬಳಿ ಅಂಗಡಿ ಬಳಿ ಹೋಗಿದ್ದರು. ಅಂಗಡಿಗೆ ಬಾಗಿಲು ಹಾಕಿರುವುದನ್ನು ನೋಡಿ ಅಲ್ಲಿರುವ ಜಂತಿಗೆ ಲುಂಗಿ ಬಿಚ್ಚಿ ಕಟ್ಟಿದರು. ನಂತರ ಅದೇ ಲುಂಗಿಯಿAದ ವಿನಾಯಕ ನಾಯ್ಕ ಅವರು ನೇಣು ಹಾಕಿಕೊಂಡರು. ಬೆಳಗ್ಗೆ ಶವ ನೋಡಿದ ಪ್ರೇಮಾ ನಾಯ್ಕ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿದರು. ಕುಮಟಾ ಪಿಎಸ್‌ಐ ಮಂಜುನಾಥ ಗೌಡರ್ ಅವರು ತನಿಖೆ ನಡೆಸುತ್ತಿದ್ದಾರೆ. - [ಗೃಹಮಂಡಳಿಯ ಗ್ರಹಚಾರ: ದಂಡಪಿoಡ ಅಧಿಕಾರಿಗಳಿಗೆ ಧಿಕ್ಕಾರ!](https://mobiletime.in/2025/10/home-boards-arrest-defiant-to-the-penal-officers/): ಪ್ರಧಾನಮಂತ್ರಿ ಆವಾಸ್ ಯೋಜನೆ ಅಡಿ ದಾಂಡೇಲಿಯ ಅಂಬೇವಾಡಿಯಲ್ಲಿ ಎಂಟು ವರ್ಷಗಳಿಂದ ಮನೆ ನಿರ್ಮಾಣ ಕೆಲಸ ನಡೆಯುತ್ತಿದ್ದು, ಈವರೆಗೂ ಆ ಮನೆಗಳು ಫಲಾನುಭವಿಗಳಿಗೆ ಸಿಕ್ಕಿಲ್ಲ. ಹೀಗಾಗಿ ಅಲ್ಲಿನ ಅಕ್ರಮದ ವಿರುದ್ಧ ಅಕ್ರಂ ಖಾನ್ ಪ್ರತಿಭಟನೆ ಶುರು ಮಾಡಿದ್ದಾರೆ. ರಾಜ್ಯ ಗೃಹ ಮಂಡಳಿಯಿAದ ಪ್ರಧಾನ ಮಂತ್ರಿ ಆವಾಸ್ ಯೋಜನೆ ಅಡಿ ಮನೆ ನಿರ್ಮಾಣ ಕಾರ್ಯ ನಡೆದಿದೆ. ಬೆಂಗಳೂರಿನ ಕಂಪನಿ ಇದರ ಗುತ್ತಿಗೆಪಡೆದಿದೆ. ಸಾವಿರ ಮನೆಗಳ ಪೈಕಿ 100 ಮನೆಗಳನ್ನು ಮಾತ್ರ ವಿತರಿಸಲಾಗಿದ್ದು, ಉಳಿದ ಮನೆ ಬಗ್ಗೆ ಪ್ರಶ್ನಿಸಿದವರಿಗೆ ಉತ್ತರ ಸಿಗುತ್ತಿಲ್ಲ. ಎಲ್ಲರಿಗೂ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿ ದಾಂಡೇಲಿ ಸಮಗ್ರ ಅಭಿವ್ರದ್ಧಿ ಹೋರಾಟ ಸಮಿತಿಯ ಅಧ್ಯಕ್ಷ ಅಕ್ರಂ ಖಾನ ಅವರು ನಗರಸಭೆ ಕಚೇರಿ ಎದುರು ಧರಣಿ ಶುರು ಮಾಡಿದ್ದಾರೆ. `ಮಂಡಳಿಯೂ 1106 ಫಲಾನುಭವಿಗಳಿಗೆ ಮನೆ ವಿತರಿಸುವುದಾಗಿ ತಿಳಿಸಿ ಹಣಪಡೆದಿದೆ. ಪ್ರತಿಯೊಬ್ಬ ಫಲಾನುಭವಿ 50-70 ಸಾವಿರ ಹಣ ಪಾವತಿಸಿದ್ದಾರೆ. 12 ತಿಂಗಳ ನಂತರ ಮನೆ ಕೊಡುವ ಭರವಸೆ ಈಗಲೂ ಈಡೇರಿಲ್ಲ. 53 ಕೋಟಿ ರೂಪಾಯಿ ವೆಚ್ಚದ 1106 ಮನೆಗಳ ನಿರ್ಮಾಣ ಕಾಮಗಾರಿ ಮುಗಿಯುವ ಮುನ್ನ ಗುತ್ತಿಗೆ ಕಂಪನಿ 38 ಕೋಟಿ ರೂ ಹಣದ ಬಿಲ್ ಪಾವತಿಸಿಕೊಂಡಿದೆ’ ಎಂದು ಹಣಕಾಸು ಅಕ್ರಮದ ಮಾಹಿತಿಯನ್ನು ಹೋರಾಟಗಾರರು ಬಿಚ್ಚಿಟ್ಟರು. `ಮನೆಯ ಕನಸು ಕಂಡ ಸಾವಿರಾರು ಜನರಿಗೆ ಅನ್ಯಾಯವಾಗಿದೆ. ಅಧಿಕಾರಿಗಳ ಜೊತೆ ಜನಪ್ರತಿನಿಧಿಗಳು ಈ ಸಮಸ್ಯೆ ಆಲಿಸಿ ಪರಿಹಾರ ಒದಗಿಸಬೇಕು’ ಎಂದು ಪ್ರತಿಭಟನಾಕಾರರು ಆಗ್ರಹಿಸಿದರು. - [ಸ್ಕೂಟರಿಗೆ ಗುದ್ದಿದ ಲಾರಿ: PUC ವಿದ್ಯಾರ್ಥಿ ಸಾವು](https://mobiletime.in/2025/10/puc-student-dies-after-being-hit-by-lorry-on-scooter/): ಭಟ್ಕಳದ ಮೊಹಮ್ಮದ್ ಎಂಬಾತರಿಗೆ ಕೇರಳದ ಲಾರಿ ಗುದ್ದಿದ ಪರಿಣಾಮ ಅವರು ನಡುರಸ್ತೆಯಲ್ಲಿ ಹೆಣವಾಗಿದ್ದಾರೆ. ವೇಗವಾಗಿ ಲಾರಿ ಚಲಾಯಿಸಿದ ಅಭಿಲಾಶ್ ಕುಮಾರ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಫಿರ್ದೋಸ್ ನಗರದ ಮಹಮ್ಮದ್ @ ಮಹಮ್ಮದ್ ಅನಿಸ್ ಮೊತಶ್ಯಾಮ್ (18) ಅವರು ಅಲಿ ಪಬ್ಲಿಕ್ ಶಾಲೆಯಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿಯಾಗಿದ್ದರು. ಕುಂದಾಪುರ ಕಡೆಯಿಂದ ಹೊನ್ನಾವರ ಕಡೆಗೆ ಅತಿವೇಗವಾಗಿ ಬಂದ ಲಾರಿ ತೆಂಗಿನಗುAಡಿ ಕ್ರಾಸ್ ಬಳಿ ಮುಂದೆ ಸಾಗುತ್ತಿದ್ದ ಸ್ಕೂಟರಿಗೆ ಡಿಕ್ಕಿ ಹೊಡೆಯಿತು. ಆ ಸ್ಕೂಟಿಯಲ್ಲಿದ್ದ ಮಹಮದ್ ಅವರು ನೆಲಕ್ಕೆ ಬಿದ್ದಿದ್ದು, ಲಾರಿಯ ಹಿಂದಿನ ಚಕ್ರ ಅವರ ತಲೆ ಒಡೆಯಿತು. ಮಹಮದ್ ಅವರು ಅಲ್ಲಿಯೇ ತಮ್ಮ ಪ್ರಾಣಬಿಟ್ಟರು. ಬುಧವಾರ ರಾತ್ರಿ ಈ ಅಪಘಾತ ನಡೆದಿದ್ದು, ಅಪಘಾತದ ನಂತರ ಬೈಕಿಗೆ ಸಿಕ್ಕಿಬಿದ್ದು ಆ ಲಾರಿ ನಿಂತಿತು. ವೇಗವಾಗಿದ್ದ ಲಾರಿ ಅಡಿಗೆ ಬೈಕ್ ಸಿಕ್ಕಿ ಬೀಳದೇ ಇದ್ದಿದ್ದರೆ ಇನ್ನಷ್ಟು ಅವಘಡಗಳು ನಡೆಯುವ ಸಾಧ್ಯತೆಗಳಿತ್ತು. ರಕ್ತದ ಮಡುವಿನಲ್ಲಿ ಯುವಕನ ಶವ ಬಿದ್ದಿರುವುದನ್ನು ನೋಡಿ ಜನ ಜಮಾಯಿಸಿದರು. ಲಾರಿ ಚಾಲಕನ ವಿರುದ್ಧ ಆಕ್ರೋಶವ್ಯಕ್ತಪಡಿಸಿದರು. ಲಾರಿ ಚಾಲಕನನ್ನು ಬಂಧಿಸಿದ ಪೊಲೀಸರು ಲಾರಿಯನ್ನು ವಶಕ್ಕೆಪಡೆದರು. ಮಹಮದ್ ಅವರ ಶವವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದರು. - [ಅಮಾಯಕನಿಗೆ ಥಳಿತ: ಪ್ರಶ್ನಿಸಿದವನಿಗೆ ಹೊಡೆತ!](https://mobiletime.in/2025/10/an-innocent-person-is-beaten-the-one-who-questioned-him-is-beaten/): ಭಟ್ಕಳದಲ್ಲಿ ಅಮಾಯಕರಿಗೆ ಅನಗತ್ಯವಾಗಿ ಥಳಿಸುವ ಪ್ರಕರಣಗಳು ಹೆಚ್ಚಾಗುತ್ತಿದೆ. ಹೊಡೆದಾಟ ತಪ್ಪಿಸಲು ಹೋಗುವವರು ಸಹ ಪೆಟ್ಟು ತಿನ್ನುತ್ತಿದ್ದಾರೆ. ಇಂಥಹುದೇ ಒಂದು ಪ್ರಕರಣದಲ್ಲಿ ಮಹಮದ್ ರೋಹೇಬ್ ಸಹ ಹಲ್ಲೆಗೆ ಒಳಗಾಗಿದ್ದಾರೆ. 19 ವರ್ಷದ ಮಹಮದ್ ರೋಹೇಬ್ ಅವರು ಭಟ್ಕಳದ ಪುರವರ್ಗ ಮುಗಳಿಹೊಂಡದ 3ನೇ ಕ್ರಾಸಿನ ಭಾಷಾ ಹೌಸ್ ನಿವಾಸಿ. ಅಕ್ಟೊಬರ್ 11ರ ರಾತ್ರಿ 9.30ಕ್ಕೆ ಅವರು ನೆಹರು ರಸ್ತೆಯ ಕಡೆ ಹೋಗಿದ್ದರು. ಅಲ್ಲಿನ ರಂಜನ್ ಗ್ಯಾಸ್ ಎಜನ್ಸಿ ಎದುರು ಎಂಟು ಜನ ಸೇರಿ ಒಬ್ಬನಿಗೆ ಹೊಡೆಯುತ್ತಿದ್ದರು. ಇದನ್ನು ನೋಡಿದ ಮಹಮದ್ ರೋಹೇಬ್ ಅವರು ಆ ಹುಡುಗನ ಪರ ಧ್ವನಿ ಎತ್ತಿದರು. ಪರಿಣಾಮ ಅಲ್ಲಿದ್ದ ಜನ ಮಹಮದ್ ರೋಹೇಬ್ ಅವರನ್ನು ಹಿಡಿದು ಥಳಿಸಿದರು. ಬದ್ರಿಯಾ ಕಾಲೋನಿಯ ಹಮ್ದಾನ್ ಅವರು ಅಮಾಯಕನಿಗೆ ಹೊಡೆಯುತ್ತಿರುವುದನ್ನು ಮಹಮದ್ ರೋಹೇಬ್ ಅವರು ನೋಡಿದ್ದರು. ಹಮ್ದಾನ್ ಅವರನ್ನು ಉದ್ದೇಶಿಸಿ `ಆತನಿಗೆ ಏಕೆ ಹೊಡೆಯುತ್ತೀರಿ?’ ಎಂದು ಪ್ರಶ್ನಿಸಿದ್ದರು. `ಅಡ್ಡ ಬಂದರೆ ನಿನಗೂ ಹೊಡೆಯುವೆ’ ಎಂದು ಕೂಗಿದ ಹಮ್ದಾನ್ ಕೈಯಿಂದ ಒಂದು ಏಟು ಕೊಟ್ಟರು. ಇದನ್ನು ಮಹಮದ್ ರೋಹೇಬ್ ವಿರೋಧಿಸಿದಾಗ ಉಳಿದವರು ಸೇರಿ ಥಳಿಸಲು ಶುರು ಮಾಡಿದರು. ಮಹಮದ್ ರೋಹೇಬ್ ಅಲ್ಲಿಂದ ತಪ್ಪಿಸಿಕೊಂಡು ಓಡಿದರೂ ಸಹ ಅವರು ಬಿಡಲಿಲ್ಲ. ಹಿಂಬಾಲಿಸಿಕೊAಡು ಬಂದು ಇನ್ನಷ್ಟು ಪೆಟ್ಟು ಕೊಟ್ಟು ಪರಾರಿಯಾದರು. ಅದಾದ ನಂತರ ಅಕ್ಟೊಬರ 13ರ ರಾತ್ರಿ ಮಹಮದ್ ರೋಹೇಬ್ ಅವರ ಗೆಳೆಯ ಮಹಮ್ಮದ್ ನಿಹಾದ್ ಅವರು ಮನೆಗೆ ಹೊರಟಿದ್ದರು. ಆಗಲೂ, ಹೂವಿನಪೇಟೆಯ ಹಿಮಾಚಲ ಸ್ಟೋರ್ಸಿನ ಬಳಿ ಬೈಕಿನಲ್ಲಿ ಬಂದ ಕೆಲವರು ಅವರನ್ನು ಅಡ್ಡಗಟ್ಟಿದರು. ಆ ದಿನ ಹೊಡೆಪೆಟ್ಟಿನಲ್ಲಿ ಭಾಗಿಯಾಗಿದ್ದ ಬದ್ರಿಯಾ ಕಾಲೋನಿಯ ಹಮ್ದಾನ್ ಜೊತೆ ಕಾರಗದ್ದೆಯ ಸೆನಾನ್ ಮುಬಾರಕ್, ಫಾರುಕ್ ಸ್ಟಿಟಿನ ಮಾನ್ ಅಕ್ರಮಿ. ಶಾದ್ಲಿಸ್ಟಿಟಿನ ಮೊಹಮದ್ ಕಾಶೀಮ್, ಇಸ್ಸಾ ಹಾಗೂ ಬಿಲಾಲ್ ಸೇರಿ `ನೀನು ಮಹಮದ್ ರೋಬರಿಗೆ ಬೆಂಬಲ ಕೊಡುತ್ತೀಯಾ?’ ಎಂದು ಪ್ರಶ್ನಿಸಿದರು. ಮಹಮ್ಮದ್ ನಿಹಾದ್ ಅವರಿಗೂ ಅವರೆಲ್ಲರೂ ಜೀವ ಬೆದರಿಕೆ ಒಡ್ಡಿದರು. ಮೊದಲ ದಿನ ಸಹಿಸಿಕೊಂಡಿದ್ದ ಮಹಮದ್ ರೋಹೇಬ್ ಅವರು ಮರುದಿನ ಗೆಳೆಯನಿಗೂ ಬೆದರಿಸಿದನ್ನು ನೋಡಿ ಸುಮ್ಮನೆ ಕೂರಲಿಲ್ಲ. ಭಟ್ಕಳ ಶಹರ ಪೊಲೀಸ್ ಠಾಣೆಗೆ ತೆರಳಿ ಆ ಎಲ್ಲರ ವಿರುದ್ಧ ದೂರು ನೀಡಿದರು. ಪೊಲೀಸರು ಪ್ರಕರಣ ದಾಖಲಿಸಿದರು. - [ಶಿರಸಿ: ಕಿರಾಣಿ ವ್ಯಾಪಾರಿಗೆ ಮಟ್ಕಾ ಕಲಿಸಿದ ಪ್ರಕಾಶ](https://mobiletime.in/2025/10/sirsi-prakash-teaches-matka-to-a-grocery-shopkeeper/): ಶಿರಸಿಯಲ್ಲಿ ಕಿರಾಣಿ ಅಂಗಡಿ ನಡೆಸುತ್ತಿದ್ದ ಅನಿಲ ಫರ್ನಾಂಡಿಸ್ ಅವರಿಗೆ ಪ್ರಕಾಶ ಹೆಗಡೆ ಅವರು ಕಮಿಷನ್ ಆಸೆ ತೋರಿಸಿ ಕಾನೂನುಬಾಹಿರ ಕೆಲಸ ಮಾಡಿಸುತ್ತಿದ್ದು, ಪೊಲೀಸರು ಇದನ್ನು ಪತ್ತೆ ಮಾಡಿದ್ದಾರೆ. ಪ್ರಕಾಶ ಹೆಗಡೆ ಅವರ ಮಾತು ಕೇಳಿ ಮಟ್ಕಾ ಆಡಿಸುತ್ತಿದ್ದ ಅನಿಲ ಫರ್ನಾಂಡಿಸ್ ಸಹ ಇದೀಗ ಸಂಕಷ್ಟಕ್ಕೆ ಸಿಲುಕಿದ್ದಾರೆ. ಶಿರಸಿ ಗಾಂಧೀನಗರ 8ನೇ ಕ್ರಾಸ್ ಅನಿಲ ರೋಜಾರ್ ಫರ್ನಾಂಡಿಸ್ ಅವರು ತಮ್ಮ ಪಾಡಿಗೆ ತಾವಿದ್ದರು. ತಮ್ಮ ಕಿರಾಣಿ ಅಂಗಡಿ ಮೂಲಕ ದಿನಸಿ ಮಾರಾಟ ಮಾಡಿ ಅವರು ಬದುಕು ನಡೆಸುತ್ತಿದ್ದರು. ಶಿರಸಿ ಸಂಪೆಕಟ್ಟುವಿನ ಪ್ರಕಾಶ ಶ್ರೀಪಾದ ಹೆಗಡೆ ಅವರು ಅನೀಲ ಹೆಗಡೆ ಅವರನ್ನು ಒಮ್ಮೆ ಭೇಟಿಯಾದರು. ಕಿರಾಣಿ ವ್ಯಾಪಾರದ ಜೊತೆ ಇನ್ನಷ್ಟು ದುಡಿಯುವ ಆಲೋಚನೆ ಬಗ್ಗೆ ವಿಷಯ ಪ್ರಸ್ತಾಪಿಸಿದರು. ಪ್ರಕಾಶ ಹೆಗಡೆ ಅವರು ಅನಿಲ ಫರ್ನಾಂಡಿಸ್ ಅವರಿಗೆ ಕುಳಿತಲ್ಲಿಯೇ ದುಡ್ಡು ಮಾಡುವ ಆಸೆ ತೋರಿಸಿದರು. ಅಂಕಿ-ಸAಖ್ಯೆಯ ಆಟ ಆಡಿ ಕಾಸು ಗೆಲ್ಲುವ ಯೋಜನೆ ವಿವರಿಸಿದರು. ಕಾನೂನುಬಾಹಿರವಾಗಿದ್ದರೂ ಮಟ್ಕಾ ಆಡಿಸುವಂತೆ ಅನಿಲ ಫರ್ನಾಂಡಿಸ್ ಅವರನ್ನು ಪ್ರೇರೇಪಿಸಿದರು. ಕಡಿಮೆ ಕೆಲಸದಿಂದ ಹೆಚ್ಚು ಹಣಗಳಿಸುವ ವಿಧಾನ ಅರಿತ ಅನಿಲ ಫರ್ನಾಂಡಿಸ್ ಅವರು ಸಹ ಪ್ರಕಾಶ ಹೆಗಡೆ ಅವರ ಜೊತೆ ಕೈ ಜೋಡಿಸಿದರು. ಅಕ್ಟೊಬರ್ 14ರಂದು ಅನಿಲ ಫರ್ನಾಂಡಿಸ್ ಅವರು ನಿಲೇಕಣಿ ಸುಬ್ರಹ್ಮಣ್ಯ ರಸ್ತೆ ಕಡೆ ಹೋಗುವ ರಸ್ತೆ ಮೇಲೆ ನಿಂತಿದ್ದರು. ಅಲ್ಲಿ ಬರುವ ಜನರನ್ನು ನಿಲ್ಲಿಸಿ `ಅದೃಷ್ಠದ ಆಟ ಆಡಿ’ ಎಂದು ಹಣಪಡೆಯುತ್ತಿದ್ದರು. ಶಿರಸಿ ನಗರ ಠಾಣೆ ಪಿಎಸ್‌ಐ ನಾಗಪ್ಪ ಅವರು ಇದನ್ನು ಗಮನಿಸಿದರು. ತಮ್ಮ ತಂಡದ ಜೊತೆ ನಾಗಪ್ಪ ಅವರು ಅನಿಲ ಫರ್ನಾಂಡಿಸ್ ಅವರ ಅಕ್ರಮ ಸಂಪಾದನೆಯನ್ನು ತಡೆದರು. ಆ ವೇಳೆ ಸಂಗ್ರಹಿಸಿದ್ದ 700ರೂ ಹಣವನ್ನು ಜಪ್ತು ಮಾಡಿದರು. ಆಗ, ಅನಿಲ ಫನಾಂಡಿಸ್ ಸತ್ಯ ಬಾಯ್ಬಿಟ್ಟಿದ್ದು `ಇದರಲ್ಲಿ ನನ್ನದೇನೂ ಇಲ್ಲ. ಪ್ರಕಾಶ ಹೆಗಡೆ ಅವರು ಹೇಳಿದಂತೆ ಮಾಡಿದ್ದೇನೆ’ ಎಂದರು. ಮಟ್ಕಾ ಬುಕ್ಕಿ ಪ್ರಕಾಶ ಹೆಗಡೆ ಅವರ ಹೆಸರು ಸೇರಿಸಿ ಅನಿಲ ಫರ್ನಾಂಡಿಸ್ ಅವರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದರು. - [ಕುಮಟಾ: ಶಾಸಕರ ಸೂಚನೆಗೆ ಕವಡೆ ಕಾಸಿನ ಕಿಮ್ಮತ್ತಿಲ್ಲ!](https://mobiletime.in/2025/10/kumata-the-mlas-instructions-are-not-worth-a-penny/): ಕುಮಟಾದ ಗೋಕರ್ಣ ಕಡಲತೀರದಲ್ಲಿ ಕಳೆದ ವರ್ಷ ಗೋಕರ್ಣ ಉತ್ಸವ ನಡೆಸಲು ಅಲ್ಲಿದ್ದ ಗೋಪುರ ತೆರವುಗೊಳಿಸಲಾಗಿದ್ದು, ಗೋಪುರ ಮರು ನಿರ್ಮಾಣಕ್ಕೆ ಶಾಸಕರು ಸೂಚನೆ ನೀಡಿ ವರ್ಷ ಕಳೆದರೂ ಆ ಕೆಲಸ ನಡೆದಿಲ್ಲ. ಹೀಗಾಗಿ ಬೇರೆಯವರ ಜೀವ ಉಳಿಸಲು ತಮ್ಮ ಜೀವ ಪಣಕ್ಕಿಡುವ ಸಾಹಸಿ ಜೀವ ರಕ್ಷಕರಿಗೆ ಕಡಲ ತೀರದಲ್ಲಿ ಸರಿಯಾದ ಸೂರಿಲ್ಲ! ಏಳು ವರ್ಷಗಳ ಹಿಂದೆ ಗೋಕರ್ಣ ಕಡಲತೀರದಲ್ಲಿ ಖಾಸಗಿ ಕಂಪನಿಯವರು ವಾಚ್ ಟವರ್ ಮಾದರಿಯ ಗೋಪುರ ನಿರ್ಮಿಸಿ ಕೊಟ್ಟಿದ್ದರು. ಅಲೆಗಳ ಅಬ್ಬರಕ್ಕೆ ಆ ಗೋಪುರ ಕೊಚ್ಚಿ ಹೋಗುತ್ತಿದ್ದು, ಅದನ್ನೇ ಸರಿಪಡಿಸಿ ಬಳಸಲಾಗುತ್ತಿತ್ತು. ಕಳೆದ ವರ್ಷ ಶಿವರಾತ್ರಿ ಅವಧಿಯಲ್ಲಿ ಕಡಲಿನಲ್ಲಿ ಗೋಕರ್ಣ ಉತ್ಸವ ನಡೆಸಲು ನಿರ್ಧರಿಸಲಾಗಿದ್ದು, ಆ ವೇಳೆ ಅಲ್ಲಿದ್ದ ಗೋಪುರವನ್ನು ತೆರವು ಮಾಡಲು ಉದ್ದೇಶಿಸಲಾಯಿತು. ಆಗ, ಜೀವ ರಕ್ಷಕ ಸಿಬ್ಬಂದಿ ಆತಂಕವ್ಯಕ್ತಪಡಿಸಿದರು. ಗ್ರಾಮ ಪಂಚಾಯತದವರು 15 ದಿನದಲ್ಲಿ ಹೊಸ ಗೋಪುರ ನಿರ್ಮಿಸುವ ಭರವಸೆ ನೀಡಿ ಅದನ್ನು ತೆರವು ಮಾಡಿದರು. ಶಾಸಕ ದಿನಕರ ಶೆಟ್ಟಿ ಅವರು ಸಹ ಹೊಸ ಗೋಪುರ ನಿರ್ಮಿಸುವಂತೆ ಅಧಿಕಾರಿಗಳಿಗೆ ತಾಕೀತು ಮಾಡಿದರು. ಆದರೆ, ಅದಾಗಿ ವರ್ಷ ಕಳೆದರೂ ಗೋಪುರ ಮಾತ್ರ ನಿರ್ಮಾಣವಾಗಲಿಲ್ಲ. ಮೊದಲಿದ್ದ ಗೋಪುರ ಮುರಿದು ಬೀಳುವ ಸ್ಥಿತಿಯಲ್ಲಿತ್ತು. ಅದಾಗಿಯೂ ಜೀವರಕ್ಷಕ ಸಿಬ್ಬಂದಿ ಅದರ ಅಡಿ ತಮ್ಮ ರಕ್ಷಣಾ ಸಲಕರಣೆಗಳನ್ನಿರಿಸುತ್ತಿದ್ದರು. ಗೋಪುರದ ಮೇಲ್ಬಾಗ ಕುಳಿತು ಅವರು ಸಮುದ್ರ ಚಟುವಟಿಕೆ ವೀಕ್ಷಿಸುತ್ತಿದ್ದರು. ಅಪಾಯದಲ್ಲಿ ಸಿಲುಕಿದವರನ್ನು ತಕ್ಷಣ ರಕ್ಷಿಸಲು ಆ ಗೋಪುರ ಸಹಕಾರಿಯಾಗಿದ್ದು, ಇದೀಗ ಅದು ಇಲ್ಲವಾಗಿದೆ. ಸದ್ಯ ಜೀವರಕ್ಷ ಸಲಕರಣೆಯನ್ನ ಶುದ್ದ ಕುಡಿಯುವ ನೀರಿನ ಘಟಕದ ಇಕ್ಕಟ್ಟಾದ ಜಾಗದಲ್ಲಿರಿಸಲಾಗಿದೆ. ಜೋರು ಮಳೆ ಬಂದರೆ ಜೀವ ರಕ್ಷಕರು ಛತ್ರಿ ಹಿಡಿದು ಕಾರ್ಯಾಚರಣೆ ಮಾಡುವ ಸ್ಥಿತಿಯಿದೆ. ಬೇಸಿಗೆಯಲ್ಲಿ ಅವರ ನೆತ್ತಿಯ ಮೇಲೆ ಬಿಸಲು ಬೀಳುತ್ತಿದ್ದು, ದಿನವಿಡೀ ಕಡಲತೀರದಲ್ಲಿ ನಿಲ್ಲುವುದು ಅನಿವಾರ್ಯವಾಗಿದೆ. ಇದೆಲ್ಲದರ ನಡುವೆ ಕುಡ್ಲೆ ಕಡಲತೀರದಲ್ಲಿ ನಿರ್ಮಿಸಿದ ವೀಕ್ಷಣಾ ಗೋಪುರ ಸಹ ತುಕ್ಕು ಹಿಡಿದು ತುಂಡಾಗಿದೆ. ಓಂ ಕಡಲತೀರದಲ್ಲಿನ ಗೋಪುರ ಅರ್ಧ ಮರಳಿನಲ್ಲಿ ಹೂತು ಹೋಗಿದೆ. ನಿತ್ಯವೂ ಸಾವಿರಾರು ಪ್ರವಾಸಿಗರು ಬರುವ ಈ ಕ್ಷೇತ್ರದಲ್ಲಿ ಕೆಲಸ ಮಾಡುವ ಜೀವ ರಕ್ಷಕರ ಜೀವಕ್ಕೆ ಇಲ್ಲಿ ಬೆಲೆಯಿಲ್ಲ ಎಂಬ ಮಾತು ಕೇಳಿಬಂದಿದೆ. - [ಅಶುಚಿತ್ವ: ಅಸುರಕ್ಷಿತವಾಗಿರುವ ಅಂಗನವಾಡಿ!](https://mobiletime.in/2025/10/uncleanness-anganwadi-that-is-unsafe/): ಹೊನ್ನಾವರದ ಕಾಸರಕೋಡಿನ ಬಳಿಯಿರುವ ಹಿರೇಮಠ್ ಅಂಗನವಾಡಿ ಅವ್ಯವಸ್ಥೆಯ ಆಗರವಾಗಿದೆ. ಇಲ್ಲಿನ ಕಟ್ಟಡ ಶಿಥಿಲಗೊಂಡಿದ್ದು, ಕಟ್ಟಡ ಸುತ್ತ ಗಿಡಗಂಟಿಗಳು ಹೇರಳವಾಗಿ ಬೆಳೆದಿದೆ. ಹೀಗಾಗಿ ಅಂಗನವಾಡಿಯಲ್ಲಿನ ಮಕ್ಕಳಿಗೆ ಅಸುರಕ್ಷತೆ ಕಾಡುತ್ತಿದೆ. ಈ ಅಂಗನವಾಡಿಯ ಮೇಲ್ಚಾವಣಿಗೆ ಅಂಟಿರುವ ರೀಪು-ಪಕಾಸಿಗೆ ವರಲೆ ಕಾಟ ಜೋರಾಗಿದೆ. ಮರದ ನಾಟಾಗಳು ತುಂಡಾಗುತ್ತಿದ್ದು, ಮಕ್ಕಳ ಮೇಲೆ ಬೀಳುವ ಅಪಾಯವಿದೆ. ಅಂಗನವಾಡಿ ಸುತ್ತಲಿನ ಪ್ರದೇಶ ಅಶುಚಿತ್ವದಿಂದ ಕೂಡಿದೆ. ಅಲ್ಲಿ ಬೆಳೆದ ಗಿಡಗಳ ಮೂಲಕ ಹಾವು-ಹುಳ ಹುಪಡಿಗಳು ಕಟ್ಟಡದ ಒಳಗೆ ನುಸುಳುತ್ತಿವೆ. ಇಷ್ಟೆಲ್ಲ ಸಮಸ್ಯೆಯಿದ್ದರೂ ಅಧಿಕಾರಿಗಳು ಮಾತ್ರ ಅಂಗನವಾಡಿ ಮಕ್ಕಳ ಸುರಕ್ಷತೆ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ಈ ಅಂಗನವಾಡಿಗೆ ಸದ್ಯ ನೀರಿನ ಸಮಸ್ಯೆ ಸಹ ಕಾಡುತ್ತಿದೆ. ದೂರದಲ್ಲಿರುವ ಬೋರ್ ನೀರು ಅಂಗನವಾಡಿಗೆ ಬರುತ್ತಿಲ್ಲ. ಶಿಕ್ಷಕರು ಈ ಬಗ್ಗೆ ಮೇಲಧಿಕಾರಿಗಳಿಗೆ ತಿಳಿಸಿದರೂ ಸಮಸ್ಯೆ ಬಗೆಹರಿದಿಲ್ಲ. ಸಮೀಪದ ಸರ್ಕಾರಿ ಶಾಲೆ ಸಹ ಮುಚ್ಚಿ ಹೋಗಿದ್ದು, ಅಲ್ಲಿಯೂ ಲಕ್ಷಾಂತರ ರೂ ಮೌಲ್ಯದ ಪೀಠೋಪಕರಣಗಳು ಹಾಳಾಗುತ್ತಿದೆ. ಕುಮಟಾದ ಜನಸಾಮಾನ್ಯರ ಸಮಾಜ ಕಲ್ಯಾಣ ಕೇಂದ್ರದ ಅಧ್ಯಕ್ಷ ಆಗ್ನೇಲ್ ರೋಡ್ರಿಗಸ್ ಹಾಗೂ ಸುಧಾಕರ ನಾಯ್ಕ ಗುರುವಾರ ಅಂಗನವಾಡಿಗೆ ಭೇಟಿ ನೀಡಿ ಅಲ್ಲಿನ ವ್ಯವಸ್ಥೆ ಪರಿಶೀಲಿಸಿದರು. `ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯವರು ಅಂಗನವಾಡಿಯ ಪರಿಸ್ಥಿತಿ ಗಮನಿಸಬೇಕು. ಜಿಲ್ಲಾಧಿಕಾರಿಗಳು ಈ ಬಗ್ಗೆ ಗಮನಹರಿಸಬೇಕು’ ಎಂದವರು ಆಗ್ರಹಿಸಿದರು. - [KDCC ಚುನಾವಣೆ: ಅಬಲೆಯ ವಿರುದ್ಧ ಅಪಪ್ರಚಾರ!](https://mobiletime.in/2025/10/kdcc-elections-slander-against-abalaya/): ಕೆಡಿಸಿಸಿ ಚುನಾವಣೆಗೆ ದಿನಗಣನೆ ಶುರುವಾಗಿದ್ದು, ಪ್ರಚಾರದ ಪ್ರಮಾಣದಲ್ಲಿಯೇ ಅಪಪ್ರಚಾರವೂ ಜೋರಾಗಿದೆ. ಈ ಬ್ಯಾಂಕಿನ 105 ವರ್ಷಗಳ ಇತಿಹಾಸದಲ್ಲಿ ಒಬ್ಬ ಮಹಿಳೆ ಸಹ ನಿರ್ದೇಶಕರಾಗಿಲ್ಲ. ಹೀಗಾಗಿ ಮಹಿಳಾ ಪ್ರಾತಿನಿಧ್ಯತೆಯನ್ನು ಪ್ರತಿಪಾದಿಸುವ ಉದ್ದೇಶದಿಂದ ಪ್ರಥಮ ಬಾರಿಗೆ ಸರಸ್ವತಿ ಎನ್ ರವಿ ಅವರು ಚುನಾವಣೆಗೆ ಸ್ಪರ್ಧಿಸಿದ್ದು, ಅಪಪ್ರಚಾರ ಅವರನ್ನು ಬಿಟ್ಟಿಲ್ಲ! `ಯಾವುದೇ ವ್ಯಕ್ತಿ ಅಥವಾ ಬಣದ ಪ್ರತಿನಿಧಿಯಾಗಿ ನಾನು ಚುನಾವಣೆಗೆ ಸ್ಪರ್ಧಿಸಿಲ್ಲ. ನಾನು ನಾಮಪತ್ರ ಹಿಂಪಡೆಯುತ್ತೇನೆ ಎಂಬ ಅಪಪ್ರಚಾರದಲ್ಲಿಯೂ ಹುರುಳಿಲ್ಲ’ ಎಂದು ಬಾರಿಗೆ ಸರಸ್ವತಿ ಎನ್ ರವಿ ಅವರು ಶಿರಸಿಯಲ್ಲಿ ಸುದ್ದಿಗಾರರ ಬಳಿ ಹೇಳಿಕೊಂಡರು. `ಅನಾವಶ್ಯಕ ಅಪಪ್ರಚಾರ ಮಾಡುತ್ತಿರುವುದು ನನ್ನ ಸ್ಫರ್ಧೆಯನ್ನು ಹತ್ತಿಕ್ಕುವ ಪ್ರಯತ್ನವಾಗಿದೆ. ನಾನು ಮಹಿಳಾ ಪ್ರಾತಿನಿಧ್ಯ, ಎಲ್ಲಾ ಸಹಕಾರಿ ಸಂಘಗಳಿಗೂ ಸಮಾನ ಅವಕಾಶಗಳು ಸಿಗಬೇಕು ಎಂಬ ಸಾಮಾಜಿಕ ನ್ಯಾಯಕ್ಕಾಗಿ ಚುನಾವಣೆಗೆ ಸ್ಫರ್ಧಿಸಿದ್ದೇನೆ. ಇದನ್ನು ಹೊರತುಪಡಿಸಿ ಯಾರ ಒತ್ತಡ ಅಥವಾ ಆಮೀಷಕ್ಕೆ ಬಲಿಯಾಗಿಲ್ಲ’ ಎಂದವರು ಸ್ಪಷ್ಟಪಡಿಸಿದರು. `ಸ್ಕೊಡ್‌ವೆಸ್ ಮಹಿಳಾ ಸೌಹಾರ್ದ ಸಹಕಾರಿಯ ಅಧ್ಯಕ್ಷೆಯಾಗಿ, ಕರ್ನಾಟಕ ರಾಜ್ಯ ಸಂಯುಕ್ತ ಸೌಹಾರ್ದ ಸಹಕಾರಿಯ ನಿರ್ದೇಶಕಿಯಾಗಿ, ಉತ್ತರ ಕನ್ನಡ ಜಿಲ್ಲಾ ಸೌಹಾರ್ದ ಸಹಕಾರಿಗಳ ಒಕ್ಕೂಟದ ಸಂಸ್ಥಾಪಕ ನಿರ್ದೇಶಕಿಯಾಗಿ, ಶಿರಸಿಯ ರೋಟರಿ ಸಂಸ್ಥೆಯ ಪ್ರಥಮ ಮಹಿಳಾ ಕಾರ್ಯದರ್ಶಿಯಾಗಿ, ಸ್ಕೊಡ್‌ವೆಸ್ ಸಂಸ್ಥೆಯ ಮುಖ್ಯ ಹಣಕಾಸು ಹಾಗೂ ಆಡಳಿತಾಧಿಕಾರಿಯಾಗಿ, ಶಾಲ್ಮಲಾ ಅಗ್ರೋ ಫೇರ್ ಎಂಡ್ ಇಲೈಟ್ ಸರ್ವಿಸಸ್ ಪ್ರೆöÊವೇಟ್ ಲಿ ಕಂಪನಿಯ ನಿರ್ದೇಶಕಿಯಾಗಿ ಕೆಲಸ ಮಾಡಿದ್ದೇನೆ. ಹಲವಾರು ರಾಜ್ಯ ಮತ್ತು ರಾಷ್ಟಮಟ್ಟದ ಸಂಸ್ಥೆಗಳ ಸದಸ್ಯಳಾಗಿ ಕಾರ್ಯನಿರ್ವಹಿಸಿದ ಅನುಭವದ ಹಿನ್ನೆಲೆಯಲ್ಲಿ ಕೆಡಿಸಿಸಿ ಬ್ಯಾಂಕಿನ ಚುನಾವಣೆಗೆ ಸ್ಫರ್ಧಿಸುತ್ತಿದ್ದೇನೆ. ನನಗೆ ಯಾವುದೇ ಬಣದ ಸಹಕಾರವಿಲ್ಲದಿದ್ದರೂ ಅದರ ಭಯವಿಲ್ಲ. ಯಾವುದೇ ಬಣದ ವಿರುದ್ಧದ ಸ್ಫರ್ಧೆಯೂ ನನ್ನದಲ್ಲ’ ಎಂದವರು ಹೇಳಿದರು. `ಸಹಕಾರಿ ಕ್ಷೇತ್ರದಲ್ಲಿ ಪಾರದರ್ಶಕ ಚುನಾವಣೆಯಾಗಬೇಕು’ ಎಂಬ ಆಶಯವ್ಯಕ್ತಪಡಿಸಿದರು. `ಜಿಲ್ಲೆಯ ಸಹಕಾರಿಗಳಿಗೆ ರಾಜ್ಯದಲ್ಲಿಯೇ ವಿಶೇಷ ಗೌರವವಿದೆ. ಯಾವುದೇ ಸಂದರ್ಭದಲ್ಲೂ ಆಸೆ, ಆಮಿಷಗಳಿಗೆ ಮರುಳಾಗಿ ತಾವು ಪ್ರತಿನಿಧಿಸುವ ಸಂಸ್ಥೆಗಳಿಗೆ ದ್ರೋಹ ಬಗೆಯುವುದಿಲ್ಲ. ಸಹಕಾರಿ ಮತದಾರರು ಬುದ್ಧಿವಂತ ಸುಸಂಸ್ಕೃತರು. 105 ವರ್ಷಗಳಲ್ಲಿ ಪ್ರಥಮ ಬಾರಿಗೆ ಕೆಡಿಸಿಸಿ ಬ್ಯಾಂಕಿನ ಚುನಾವಣೆಗೆ ಸ್ಫರ್ಧಿಸುತ್ತಿರುವ ನನ್ನ ಅನುಭವ ಮತ್ತು ಸಾಮರ್ಥ್ಯವನ್ನು ನೋಡಿ ಮತದಾನ ಮಾಡುತ್ತಾರೆ ಎಂಬ ನಂಬಿಕೆ ನನಗಿದೆ. ಚುನಾವಣೆಯಲ್ಲಿ ಯಾವುದೇ ಫಲಿತಾಂಶ ಬಂದರೂ ಅದನ್ನು ಗೌರವಯುತವಾಗಿ ಸ್ವೀಕರಿಸುತ್ತೇನೆ. ದಯವಿಟ್ಟು ಸಹಕಾರಿ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ ಕಳೆದ 15-20 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ನನ್ನ ಹೋರಾಟಕ್ಕೆ ಎಲ್ಲಾ ಸಹಕಾರಿಗಳು ಕೈ ಜೋಡಿಸಬೇಕು’ ಎಂದು ಮನವಿ ಮಾಡಿದರು. ಪ್ರಮುಖರಾದ ಹೇಮಲತಾ ಚೌಗುಲೆ, ಗೀತಾ ಹಣಬರ್, ವೀಣಾ ಮೊಗೇರ, ಸರೋಜಾ ಗಂಗೊಳ್ಳಿ, ಸ್ವಾತಿ ಶೆಟ್ಟಿ, ಲಲಿತಾ ಹೆಗಡೆ, ಭಾಗೀರತಿ ನಾಯ್ಕ, ರೇಖಾ ನಾಯ್ಕ ಹಾಗೂ ಮಾನಸ ಹೆಗಡೆ ಅವರು ಸರಸ್ವತಿ ಎನ್ ರವಿ ಅವರಿಗೆ ಬೆಂಬಲವಾಗಿದ್ದರು. - [ಹೆದ್ದಾರಿ ಹೊಂಡಕ್ಕೆ ಹೆದರಿದ ಹೊರಟ್ಟಿ ಕಾರು!](https://mobiletime.in/2025/10/a-car-sped-away-from-a-pothole-on-the-highway/): ಅಂಕೋಲಾದಿoದ ಹುಬ್ಬಳ್ಳಿ ಕಡೆ ಹೊರಟಿದ್ದ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರ ಕಾರು ಯಲ್ಲಾಪುರದಲ್ಲಿ ಹೊಂಡ ಹಾರಿದೆ. ಜೊತೆಗೆ ಆ ಕಾರಿನ ಚಕ್ರ ಅಲ್ಲಿಯೇ ಸ್ಪೋಟಗೊಂಡಿದೆ. ಪರಿಣಾಮ ಬಸವರಾಜ ಹೊರಟ್ಟಿ ಅವರು ಸಮಯಕ್ಕೆ ಸರಿಯಾಗಿ ಹುಬ್ಬಳ್ಳಿಗೆ ತೆರಳಲಾರದೇ ಸಮಸ್ಯೆ ಅನುಭವಿಸಿದರು. ಬುಧವಾರ ರಾತ್ರಿ ಬಸವರಾಜ ಹೊರಟ್ಟಿ ಅವರು ಹೆದ್ದಾರಿ ಮೂಲಕ ಹುಬ್ಬಳ್ಳಿಗೆ ಹೋಗುತ್ತಿದ್ದರು. ಯಲ್ಲಾಪುರ ಕಡೆಯಿಂದ ಹುಬ್ಬಳ್ಳಿ ಕಡೆಗೆ ಹೊರಟಿದ್ದ ಹೊರಟ್ಟಿಯವರ ಕಾರು ಕೋಳಿಕೇರಿ ಹಾಗೂ ಮಾವಳ್ಳಿ ಕ್ರಾಸ್ ನಡುವಿನ ಪ್ರದೇಶದಲ್ಲಿ ಹಾಳಾಯಿತು. ಅಲ್ಲಿ ಮೊಬೈಲ್ ನೆಟ್‌ವರ್ಕ ಸಹ ಸರಿಯಾಗಿ ಇರಲಿಲ್ಲ. ಅವರಿವರಿಗೆ ಫೋನ್ ಮಾಡಿದ ಬಸವರಾಜ ಹೊರಟ್ಟಿ ಅವರು ಕೊನೆಗೆ ಸಂಕಲ್ಪ ಅಧ್ಯಕ್ಷ ಪ್ರಮೋದ ಹೆಗಡೆ ಅವರಿಗೆ ಫೋನ್ ಮಾಡಿದರು. ಪ್ರಮೋದ ಹೆಗಡೆ ಅವರು ಸ್ಥಳಕ್ಕೆ ಬಂದು ತಮ್ಮ ಕಾರನ್ನು ಬಸವರಾಜ ಹೊರಟ್ಟಿ ಅವರಿಗೆ ಕೊಟ್ಟರು. ಪೊಲೀಸರೂ ಸ್ಥಳಕ್ಕೆ ಬಂದು ಬಸವರಾಜ ಹೊರಟ್ಟಿ ಅವರ ಕಾರಿಗೆ ಬೇರೆ ಟೈರ್ ಅಳವಡಿಸಲು ವ್ಯವಸ್ಥೆ ಮಾಡಿದರು. ಬಸವರಾಜ ಹೊರಟ್ಟಿ ಅವರ ಕಾರು ವೇಗವಾಗಿ ಚಲಿಸಿದರೂ ಚಾಲಕನ ಸಮಯ ಪ್ರಜ್ಞೆಯಿಂದ ಇನ್ನಷ್ಟು ದೊಡ್ಡ ಸಮಸ್ಯೆ ಆಗಲಿಲ್ಲ. ರಾಜ್ಯದ ಎಲ್ಲಡೆ ರಸ್ತೆಗಳಲ್ಲಿ ಗುಂಡಿ ತುಂಬಿದ್ದು, ಇದಕ್ಕೆ ಯಲ್ಲಾಪುರ ಹೆದ್ದಾರಿ ಸಹ ಹೊರತಾಗಿಲ್ಲ. ನಿತ್ಯ ಇಲ್ಲಿ ಅನೇಕ ವಾಹನ ಹಾಳಾಗುತ್ತಿದ್ದು ಪ್ರಭಾವಿ ರಾಜಕಾರಣಿಯೂ ಆಗಿರುವ ಬಸವರಾಜ ಹೊರಟ್ಟಿ ಅವರೇ ಸಮಸ್ಯೆ ಅನುಭವಿಸಿದ್ದು ಸರ್ಕಾರವನ್ನು ಮುಜುಗರಕ್ಕೆ ಸಿಲುಕಿಸಿತು. - [ಆ ಮೂರು ವಾರದೊಳಗೆ ಈ ಕೆಲಸ ಮಾಡಿಬಿಡಿ!](https://mobiletime.in/2025/10/get-this-done-within-those-three-weeks/): `ಹುಟ್ಟು-ಸಾವಿನ 21ದಿನದ ಒಳಗೆ ನೋಂದಣಿ ಮಾಡುವುದು ಕಡ್ಡಾಯವಾಗಿದ್ದು, ಯಾವುದೇ ಕಾರಣಕ್ಕೂ ವಿಳಂಭವಾಗದAತೆ ಎಚ್ಚರಿಕೆವಹಿಸಿ’ ಎಂದು ಜಿಲ್ಲಾಧಿಕರಿ ಕೆ ಲಕ್ಷ್ಮೀಪ್ರಿಯ ಸೂಚಿಸಿದ್ದಾರೆ. ಜನನ ಮರಣ ನೊಂದಣಿ ಸಮನ್ವಯ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು `ಉತ್ತರ ಕನ್ನಡ ಜಿಲ್ಲೆಯಲ್ಲಿ ಸಂಭವಿಸುವ ಜನನ ಮತ್ತು ಮರಣದ ನೋಂದಣಿ ಮಾಡುವ ಬಗ್ಗೆ ಅಧಿಕಾರಿಗಳು ಅರಿವು ಮೂಡಿಸಬೇಕು. ನೋಂದಣಿ ನಂತರ ಡಿಜಿಟಲ್ ಸಿಗ್ನೇಜರ್ ಹೊಂದಿರುವ ಪ್ರಮಾಣ ಪತ್ರವನ್ನು ವಿತರಿಸಬೇಕು’ ಎಂದು ನಿರ್ದೇಶನ ನೀಡಿದ್ದಾರೆ. `ಪ್ರತಿ ತಾಲೂಕುಗಳಲ್ಲಿಯೂ ತಹಶೀಲ್ದಾರ್ ಅಧ್ಯಕ್ಷತೆಯಲ್ಲಿ ಸಮನ್ವಯ ಸಮಿತಿ ಸಭೆ ನಡೆಸಬೇಕು. ಜನನ ಮರಣದ ನೋಂದಣಿ ಸಮಯದಲ್ಲಿ ದಿನಾಂಕ ತಪ್ಪಾಗಿ ನಮೂದಾಗದ ರೀತಿ ಎಚ್ಚರಿಕೆವಹಿಸಬೇಕು’ ಎಂದವರು ಸೂಚಿಸಿದರು. `ತಾಲೂಕು ಮಟ್ಟದಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ಸಂರಕ್ಷಣಾಧಿಕಾರಿಗಳು, ನೊಂದಣಾಧಿಕಾರಿಗಳು, ಉಪನೋಂದಣಾಧಿಕಾರಿಗಳು, ಖಾಸಗಿ ಆಸ್ಪತ್ರೆಯ ವೈದ್ಯಾಧಿಕಾರಿಗಳು ಹಾಗೂ ಆಪರೇಟರ್‌ಗಳಿಗೆ ತರಬೇತಿ ನೀಡಬೇಕು. ಮರಣ ಕಾರಣದ ಪ್ರಮಾಣಪತ್ರಗಳನ್ನು ಕಡ್ಡಾಯವಾಗಿ ನೀಡುವ ಕುರಿತಂತೆ ಆರೋಗ್ಯ ಇಲಾಖೆಯ ಮೂಲಕ ಜಿಲ್ಲೆಯಲ್ಲಿನ ಎಲ್ಲಾ ಆಸ್ಪತ್ರೆಗಳಿಗೆ ನಿರ್ದೇಶನ ನೀಡಬೇಕು’ ಎಂಬ ಸೂಚನೆ ನೀಡಿದ್ದಾರೆ. ಜನನ ಮರಣದ ನೊಂದಣಿಯ ದಾಖಲೆಗಳನ್ನು ಶಾಶ್ವತವಾಗಿ ಕಾಯ್ದಿರಿಸುವ ಕುರಿತಂತೆ ಅವುಗಳನ್ನು ಸ್ಕಾನಿಂಗ್ ಮತ್ತು ಡಿಜಿಟಲೈಶನ್ ಮಾಡುವ ಕುರಿತಂತೆ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿಗೆ ಅವರು ಸೂಚಿಸಿದ್ದಾರೆ. `ಜಿಲ್ಲೆಯಲ್ಲಿ ಪ್ರಸಕ್ತ ಕ್ಯಾಲೆಂಡರ್ ವರ್ಷದಲ್ಲಿ ಇದುವರೆಗೆ 6494 ಗಂಡು ಮತ್ತು 6049 ಹೆಣ್ಣು ಮಗುವಿನ ಜನನವಾಗಿದೆ. 4771 ಪುರುಷರು ಮತ್ತು 3681 ಮಹಿಳೆಯರು ವಿವಿಧ ಕಾರಣಗಳಿಂದ ಮರಣ ಹೊಂದಿದ್ದಾರೆ’ ಎಂದು ಈ ಸಭೆಯಲ್ಲಿ ಮಾಹಿತಿ ನೀಡಲಾಗಿದೆ. ಉಪ ವಿಭಾಗಾಧಿಕಾರಿ ಶ್ರವಣ ಕುಮಾರ್, ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಸೋಮಶೇಖರ್ ಮೇಸ್ತಾ, ಕ್ರಿಮ್ಸ್ ಡೀನ್ ಡಾಪೂರ್ಣಿಮಾ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ ನೀರಜ್, ನಗರಾಭಿವೃಧ್ದಿ ಕೋಶದ ಯೋಜನಾ ನಿರ್ದೇಶಕ ಜಹೀರ್ ಅಬ್ಬಾಸ್, ಮಹಿಳಾ ಮತ್ತು ಮಕ್ಕಳ ಅಭಿವೃಧ್ದಿ ಇಲಾಖೆ ಉಪನಿರ್ದೇಶಕ ಕೃಷ್ಣಪ್ಪ ಸಭೆಯಲ್ಲಿದ್ದರು. - [ಮನುಷ್ಯನನ್ನು ಕೊಂದ ಮೊನಚಾದ ಮೀನು!](https://mobiletime.in/2025/10/the-spiky-fish-that-killed-a-man/): ಮೀನುಗಾರಿಕೆಗೆ ತೆರಳಿದ್ದ ಕಾರವಾರದ ಮೀನುಗಾರ ಅಕ್ಷಯ ಮಾಜಾಳಿಕರ್ ಅವರ ಹೊಟ್ಟೆಗೆ ಮೊನಚಾದ ಮೀನು ಚುಚ್ಚಿದೆ. ವೈದ್ಯಕೀಯ ನೆರವುಪಡೆದರೂ ಅದು ಫಲಕಾರಿಯಾಗದೇ ಅಕ್ಷಯ ಮಾಜಾಳಿಕರ್ ಅವರು ಸಾವನಪ್ಪಿದ್ದಾರೆ. ಮಾಜಾಳಿ ದಾಂಡೇಭಾಗದಲ್ಲಿ ಅಕ್ಷಯ ಮಾಜಾಳಿಕರ್ (24) ಅವರು ವಾಸವಾಗಿದ್ದರು. ಉತ್ತಮ ಈಜುಗಾರರಾಗಿದ್ದ ಅವರು ಮೀನುಗಾರಿಕೆ ನಡೆಸಿ ಜೀವನ ನಡೆಸುತ್ತಿದ್ದರು. ಅಕ್ಟೊಬರ್ 14ರಂದು ಅಕ್ಷಯ ಮಾಜಾಳಿಕರ್ (24) ಅವರು ಮೀನುಗಾರಿಕೆಗೆ ಹೋಗಿದ್ದರು. ಆಳ ಸಮುದ್ರ ಪ್ರವೇಶಿಸಿದಾಗ ಅಲ್ಲಿದ್ದ ಕಾಂಡಿ ಮೀನು ದೋಣಿ ಮೇಲ್ಬಾಗದವರೆಗೆ ಹಾರಿತು. ಆ ಮೀನು ಅಕ್ಷಯ ಮಾಜಾಳಿಕರ್ ಅವರ ಹೊಟ್ಟೆಗೆ ಚುಚ್ಚಿತು. 10 ಇಂಚು ಉದ್ದದ ಮೀನು ಚುಚ್ಚಿದ ಪರಿಣಾಮ ಅಕ್ಷಯ ಅವರ ಹೊಟ್ಟೆ ತಳಭಾಗ ಸೀಳು ಬಿದ್ದಿತ್ತು. ಗಾಯಗೊಂಡ ಅಕ್ಷಯ ಮಾಜಾಳಿಕರ್ ಅವರು ಆಸ್ಪತ್ರೆಗೆ ದಾಖಲಾದರು. ಎರಡು ದಿನಗಳ ಕಾಲ ಅಕ್ಷಯ ಮಾಜಾಳಿಕರ್ ಅವರು ಚಿಕಿತ್ಸೆಪಡೆದಿದ್ದರು. ಕಾರವಾರ ವೈದ್ಯಕೀಯ ವಿಜ್ಞಾನ ಕಾಲೇಜಿನವರು ಅಕ್ಷಂiÀi ಮಾಜಾಳಿಕರ್ ಅವರಿಗೆ ಚಿಕಿತ್ಸೆ ನೀಡಿದ್ದರು. ಚುಚ್ಚಿದ ಗಾಯಕ್ಕೆ ಹೊಲಿಗೆ ಹಾಕಿ ಮನೆಗೆ ಕಳುಹಿಸಿದ್ದರು. . ಆದರೆ, ನೋವು ಕಡಿಮೆ ಆಗದ ಕಾರಣ ಅಕ್ಷಯ ಮಾಜಾಳಿಕರ್ ಅವರು ಮತ್ತೆ ಆಸ್ಪತ್ರೆಗೆ ಮರಳಿದ್ದು, ಗುರುವಾರ ಬೆಳಗ್ಗೆ ಸಾವನಪ್ಪಿದರು. ವೈದ್ಯರು ಸರಿಯಾಗಿ ಚಿಕಿತ್ಸೆಕೊಡದ ಪರಿಣಾಮ ಅಕ್ಷಯ ಮಾಜಾಳಿಕರ್ ಅವರು ಸಾವನಪ್ಪಿದ ಬಗ್ಗೆ ಮೀನುಗಾರರು ದೂರಿದರು. ವೈದ್ಯರ ವಿರುದ್ಧ ಪ್ರತಿಭಟನೆ ಮೊನಚಾದ ಮೀನಿನ ಮೂತಿ ಅಕ್ಷಯ ಅವರ ಹೊಟ್ಟೆಯೊಳಗೆ ಹೋಗಿದ್ದು, ಅದೇ ಸಾವಿಗೆ ಕಾರಣ ಎಂಬ ಶಂಕೆವ್ಯಕ್ತವಾಗಿದೆ. ಸೂಕ್ತ ಚಿಕಿತ್ಸೆ ನೀಡದ ಕಾರಣ ಅಕ್ಷಂiÀi ಮಾಜಾಳಿಕರ್ ಸಾವನಪ್ಪಿರುವ ಬಗ್ಗೆ ಮೀನುಗಾರರು ಆಕ್ರೋಶವ್ಯಕ್ತಪಡಿಸಿದ್ದಾರೆ. ಸಾವನಪ್ಪಿದ ಯುವಕನ ಸಂಬAಧಿಕರು ಆಸ್ಪತ್ರೆ ಬಳಿ ಜಮಾಯಿಸಿದ್ದಾರೆ. ಕಿಮ್ಸ್ ವೈದ್ಯರ ವಿರುದ್ಧ ನೂರಾರು ಜನ ಪ್ರತಿಭಟನೆ ನಡೆಸಿದ್ದಾರೆ. ಆಸ್ಪತ್ರೆ ಆವರಣದಲ್ಲಿ ಇದೀಗ `ಬೇಕೇ ಬೇಕು.. ನ್ಯಾಯ ಬೇಕು’ ಎಂಬ ಧ್ವನಿ ಮೊಳಗುತ್ತಿದೆ. `ಸರಿಯಾಗಿ ಚಿಕಿತ್ಸೆ ನೀಡದೇ ಯುವ ಮೀನುಗಾರನ ಸಾವಿಗೆ ಕಾರಣರಾದ ವೈದ್ಯರನ್ನು ಅಮಾನತು ಮಾಡಬೇಕು’ ಎಂದು ಅಲ್ಲಿದ್ದವರು ಆಗ್ರಹಿಸುತ್ತಿದ್ದಾರೆ. `ಇಲ್ಲಿ ಚಿಕಿತ್ಸೆ ಸಾಧ್ಯವಿಲ್ಲ ಎಂದಾದರೆ ಬೇರೆ ಕಡೆ ರವಾನಿಸಬೇಕು. ಸ್ಕಾನ್ ಸಹ ಮಾಡದೇ ಚಿಕಿತ್ಸೆ ನೀಡಲಾಗಿದೆ’ ಎಂದು ಅಕ್ಷಯ ಅವರ ಆಪ್ತರು ಅಸಮಧಾನವ್ಯಕ್ತಪಡಿಸಿದರು. - [ವೃದ್ಧರ ಪಾಲಿನ ಆಶಾಕಿರಣ ಈಶ್ವರೀಯ ವಿಶ್ರಾಮಧಾಮ!](https://mobiletime.in/2025/10/a-ray-of-hope-for-the-elderly-a-divine-resting-place/): ಕಳೆದ ಎಂಟು ವರ್ಷಗಳಿಂದ ಅನಾಥ ಸ್ಥಿತಿಯಲ್ಲಿದ್ದ ಯಲ್ಲಾಪುರದ ಈಶ್ವರಿಯ ವಿಶ್ವವಿದ್ಯಾಲಯಕ್ಕೆ ಇದೀಗ ಮರು ಚೈತನ್ಯ ಸಿಕ್ಕಿದೆ. ವೃದ್ಧರ ಪಾಲಿಗೆ ಆಶಾಕಿರಣವಾಗಬಹುದಾದ `ವಿಶ್ರಾಮಧಾಮ’ ಇಲ್ಲಿ ಸ್ಥಾಪನೆಯಾಗಿದೆ. ಮುಂಡಗೋಡು ರಸ್ತೆಯಲ್ಲಿರುವ ಈಶ್ವರೀಯ ವಿಶ್ವವಿದ್ಯಾಲಯದ ಆಸ್ತಿ ಮಾರಾಟವಾಗಿದೆ’ ಎಂದು ಕೆಲ ವರ್ಷಗಳಿಂದ ಊಹಾಪೋಹಗಳು ಕೇಳಿ ಬಂದಿತ್ತು.  ಆದರೆ, ಆ ಎಲ್ಲಾ ಊಹಾಪೋಹಗಳಿಗೆ ಈಶ್ವರಿ ವಿಶ್ವವಿದ್ಯಾಲಯದ ಹುಬ್ಬಳ್ಳಿ ವಲಯದ ನಿರ್ದೇಶಕ ಬಸವರಾಜ ರಾಜಋಷಿ ಅವರು ತೆರೆ ಎಳೆದಿದ್ದಾರೆ. `ಯಾರೇ ಖರೀದಿಗೆ ಬಂದರೂ ಸಂಸ್ಥೆ ಮಾರಾಟವಾಗಲು ಬಿಡುವುದಿಲ್ಲ’ ಎಂದವರು ಹೇಳಿದ್ದಾರೆ. `ಸಾಕಷ್ಟು ಕಷ್ಟಪಟ್ಟು ಇಲ್ಲಿ ಸಂಸ್ಥೆ ಕಟ್ಟಲಾಗಿದೆ. ಸಾವಿರಾರು ಜನ ಸಹೋದರ-ಸಹೋದರಿಯರು ಇಲ್ಲಿ ಕಟ್ಟಡ ಕಟ್ಟಲು ಶ್ರಮಿಸಿದ್ದಾರೆ. ಸರ್ಕಾರದಿಂದ ಯಾವ ಅನುದಾನ ಪಡೆಯದೇ ಸ್ವಂತ ಶ್ರಮದಿಂದ ಈ ತಪೋವನ ಸಿದ್ಧಗೊಂಡಿದೆ. ಹುಬ್ಬಳ್ಳಿಯಲ್ಲಿ ಅಭಿವೃದ್ಧಿ ಕೆಲಸ ಶುರು ಮಾಡಿದ ಕಾರಣ ಯಲ್ಲಾಪುರದ ಈಶ್ವರಿ ವಿಶ್ವವಿದ್ಯಾಲಯದ ಕಡೆ ಗಮನಹರಿಸಲು ಸಾಧ್ಯವಾಗಿರಲಿಲ್ಲ. ಇದೀಗ ಮತ್ತೆ ತಪೋವನದ ಚಟುವಟಿಕೆಗಳು ಆರಂಭವಾಗಿದೆ’ ಎಂದವರು ವಿವರಿಸಿದರು. ಈಶ್ವರೀಯ ವಿಶ್ವವಿದ್ಯಾಲಯದಲ್ಲಿಯೇ ಜೀವನ ಸವೆಸಿ ವೃದ್ಧಾಪ್ಯದಲ್ಲಿರುವವರ ವಿಶ್ರಾಂತಿಗಾಗಿ ಈ ವಿಶ್ರಾಮಧಾಮ ಆರಂಭಿಸಿದ್ದೇವೆ. ಆಧ್ಯಾತ್ಮದ ಆಸಕ್ತರ ತಪಸ್ಸಿಗೆ ಆಸಕ್ತರಾದವರಿಗೆ ಇಲ್ಲಿ ಆಹ್ವಾನವಿದ್ದು, ಸರ್ವಧರ್ಮ ಸಮನ್ವಯವಾದ ಆಧ್ಯಾತ್ಮದ ಬೋಧನೆಯನ್ನು ತಪೋವನದಲ್ಲಿ ಮಾಡಲಾಗುತ್ತಿದೆ’ ಎಂದು ತಿಳಿಸಿದರು. `ಶಿಕ್ಷಕರು, ಅಂಗನವಾಡಿ ಕಾರ್ಯಕರ್ತರ ಮೂಲಕ ಮಕ್ಕಳಿಗೆ ಜೀವನ ಮೌಲ್ಯಗಳನ್ನು ಕಲಿಸುವ ಕಾರ್ಯವನ್ನು ಈ ಹಿಂದೆ ತಪೋವನದಲ್ಲಿ ಮಾಡಲಾಗುತ್ತಿತ್ತು. ಕರೊನಾ ಸಂದರ್ಭದಲ್ಲಿ ಅದನ್ನು ಮುಂದುವರೆಸಲು ಸಾಧ್ಯವಾಗಿರಲಿಲ್ಲ. ಸರ್ಕಾರದ ತರಬೇತಿ ಯೋಜನೆಗಳು ಶುರುವಾದರೆ ಗ್ರಾಮೀಣ ಭಾಗದ ಮಕ್ಕಳ ವ್ಯಕ್ತಿತ್ವ ಮೌಲ್ಯಯುತವಾಗಿ ಬೆಳೆಯಲು ಸಾಧ್ಯ’ ಎಂದವರು ಅನಿಸಿಕೆಹಂಚಿಕೊAಡರು. ಹುಬ್ಬಳ್ಳಿ ವಲಯ ಸಂಚಾಲಕಿ ನಿರ್ಮಲಾ, ಗುಂತಕಲ್ ಸಂಚಾಲಕಿ ಶಕುಂತಲಾ, ಹುಬ್ಬಳ್ಳಿಯ ವಿಜಯಾ, ಧಾರವಾಡದ ಸಂಚಾಲಕಿ ಜಯಂತಿ, ದಾವಣಗೆರೆ ತಪೋವನದ ಸಂಚಾಲಕಿ ಲೀಲಾ, ಶಿರಸಿಯ ಸಂಚಾಲಕಿ ವೀಣಾ ಅವರು ಭವಿಷ್ಯದ ಯೋಜನೆಗಳ ಬಗ್ಗೆ ವಿವರಿಸಿದರು. - [2025 ಅಕ್ಟೊಬರ್ 16ರ ದಿನ ಭವಿಷ್ಯ](https://mobiletime.in/2025/10/2025-october-16-prediction/): ಮೇಷ ರಾಶಿ: ನಿಮ್ಮೊಳಗಿನ ಆಲೋಚನೆ-ಚಿಂತನೆಗಳಿಗೆ ಸ್ಪಷ್ಟ ದಾರಿ ಸಿಗಲಿದೆ. ದುಡಿಮೆಗೆ ತಕ್ಕ ಫಲ ಬರಲಿದೆ. ವಾದ ವಿವಾದಗಳಿಗೆ ದೂರ ಇದ್ದಷ್ಟು ಉತ್ತಮ. ವೃಷಭ ರಾಶಿ: ನಿಮ್ಮ ಆರ್ಥಿಕ ಸ್ಥಿತಿ ಬಲವಾಗಲಿದೆ. ಕುಟುಂಬದಲ್ಲಿ ಸಂತಸದ ವಾತಾವರಣ ಕಾಣಲಿದೆ. ಕೆಲಸದಲ್ಲಿ ಒತ್ತಡ ಜಾಸ್ತಿಯಾದರೂ ನಿಮ್ಮ ಧೈರ್ಯದ ನಿಧಾರ ನೆರವಾಗಲಿದೆ. ಮಿಥುನ ರಾಶಿ: ನಿಮ್ಮ ಮನಸಿನಲ್ಲಿರುವ ಯೋಜನೆಗಳು ಯಶಸ್ವಿಯಾಗುವ ಸಾಧ್ಯತೆಯಿದೆ. ಸ್ವಂತ ವ್ಯವಹಾರದಲ್ಲಿ ಲಾಭ ಸಿಗಲಿದೆ. ನಿಮ್ಮ ಪ್ರಯತ್ನ ವ್ಯರ್ಥ ಆಗುವುದಿಲ್ಲ. ಕರ್ಕ ರಾಶಿ: ಅನೇಕ ದಿನಗಳಿಂದ ಬಾಕಿಯಿರುವ ಕೆಲಸಗಳು ಪೂರ್ಣಗೊಳ್ಳುತ್ತವೆ. ಉತ್ತಮ ಆಹಾರ ಸೇವನೆ ಮಾಡಿ. ನಿರ್ಧಾರ ಪ್ರಕಟಿಸುವಾಗ ತಾಳ್ಮೆ ಅಗತ್ಯ. ಸಿಂಹ ರಾಶಿ: ನಿಮ್ಮ ಆಸೆ-ಆಕಾಂಕ್ಷೆಗಳು ಈಡೇರಲಿದೆ. ಆದಾಯದಲ್ಲಿ ವೃದ್ಧಿ ಆಗಲಿದ್ದು, ಸಂತೋಷ ಕಾಣುವಿರಿ. ಆತುರದ ನಿರ್ಣಯಗಳನ್ನು ಮಾಡಬೇಡಿ. ಕನ್ಯಾ ರಾಶಿ: ಹೊಸ ಅವಕಾಶಗಳ ನಿರೀಕ್ಷೆ ಉತ್ತಮ. ದುಡಿಮೆ ಫಲವಾಗಿ ಸಂತೋಷ ಸಿಗಲಿದೆ. ಆರ್ಥಿಕವಾಗಿ ಉನ್ನತಿ ಸಾಧ್ಯವಿದೆ. ತುಲಾ ರಾಶಿ: ವೃತ್ತಿಯಲ್ಲಿ ನಿರೀಕ್ಷಿತ ಬದಲಾವಣೆ ಆಗಲಿದೆ. ಹಳೆಯ ಸಮಸ್ಯೆಗಳು ದೂರವಾಗಲಿದೆ. ಕಳ್ಳಕಾಕರ ಬಗ್ಗೆ ಎಚ್ಚರಿಕೆವಹಿಸಿ. ವೃಶ್ಚಿಕ ರಾಶಿ: ಹಳೆ ಯೋಜನೆಗಳ ಪುನರಾವರ್ತನೆ ಬೇಡ. ಪತ್ನಿ ಬೆಂಬಲಪಡೆದು ಹೊಸ ಯೋಜನೆ ಬಗ್ಗೆ ಯೋಚಿಸಿ. ಆರೋಗ್ಯದ ಬಗ್ಗೆ ಜಾಗೃತಿ ಅಗತ್ಯ. ಧನು ರಾಶಿ: ಪ್ರವಾಸದ ಯೋಗವಿದ್ದು, ಇಷ್ಟದ ಸ್ಥಳಗಳಿಗೆ ಭೇಟಿ ನೀಡಿ. ಹಳೆಯ ಬಾಕಿ ವಸೂಲಿ ಆಗಲಿದೆ. ಕಚೇರಿ ಕೆಲಸಗಳು ಸರಿಯಾಗಿ ನಡೆಯುತ್ತವೆ. ಮಕರ ರಾಶಿ: ಉದ್ಯೋಗದ ವಿಷಯದಲ್ಲಿ ನಿಮ್ಮ ಧೈರ್ಯ ಹೆಚ್ಚಾಗಲಿದೆ. ಆರೋಗ್ಯ ಸರಿಯಾಗಿರಿಸಿಕೊಳ್ಳಿ. ಸ್ಪೂರ್ತಿಯಿಂದ ಕೆಲಸ ಮಾಡಿ. ಕುಂಭ ರಾಶಿ: ಕುಟುಂಬದ ಜವಾಬ್ದಾರಿಗಳನ್ನು ಸರಿಯಾಗಿ ನಿಭಾಯಿಸಿ. ದೈಹಿಕ ಶ್ರಮ ಹೆಚ್ಚಾದರೆ ಆಯಾಸ ಸಹಜವಾಗಲಿದ್ದು, ಅಗತ್ಯವಿದ್ದಾಗ ಆರಾಮ್ ಮಾಡಿ. ಸ್ನೇಹಿತರ ಜೊತೆ ಸರಿಯಾಗಿ ಮಾತನಾಡಿ. ಮೀನ ರಾಶಿ: ಆದಾಯದಲ್ಲಿ ಕುಂಠಿತವಾಗಲಿದ್ದು, ಕೆಲಸ ಸಹ ನಿಧಾನವಾಗಲಿದೆ. ಹಿರಿಯರ ಸಲಹೆ ನಿಮ್ಮ ನೆರವಿಗೆ ಬರಲಿದೆ. ಆರೋಗ್ಯ ವಿಷಯದಲ್ಲಿ ಕಾಳಜಿ ಅಗತ್ಯ. - [ತಂದೆಗೆ ಕಾನ್ಸರ್.. ಬಾವನಿಗೆ ಅಪಘಾತ: ನಂದಿನಿಗೆ ನೋಯಿಸಿದ ಕಪ್ಪು ಕಾರಿನ ಕಳ್ಳ!](https://mobiletime.in/2025/10/father-has-cancer-brother-in-law-has-an-accident-black-car-thief-who-hurt-nandini/): ತಂದೆಗೆ ಆವರಿಸಿದ ಕಾನ್ಸರ್ ರೋಗದ ಬಗ್ಗೆ ಚಿಂತೆಯಲ್ಲಿದ್ದ ಶಿರಸಿಯ ನಂದಿನಿ ಅವರಿಗೆ ಮತ್ತೊಂದು ಆಘಾತವಾಗಿದೆ. ತಂದೆಯ ಆರೋಗ್ಯ ವಿಚಾರಿಸಿಕೊಂಡು ಬರುತ್ತಿರುವಾಗ ಕಪ್ಪು ಬಣ್ಣದ ಕಾರೊಂದು ನಂದಿನಿ ಅವರ ಬಾವ ರಾಜು ಪೂಜಾರಿ ಅವರಿಗೆ ಡಿಕ್ಕಿ ಹೊಡೆದಿದೆ. ಶಿರಸಿಯ ಸರಕುಳಿ ಬಳಿಯ ತಟ್ಟಿಕೈ ಊರಿನಲ್ಲಿ ನಂದಿನಿ ಅಂಬಿಗ ಅವರು ವಾಸವಾಗಿದ್ದಾರೆ. ನಂದಿನಿ ಅವರ ತಂದೆ ಚಂದ್ರು ಅಂಬಿಗ ಅವರಿಗೆ ಕಾನ್ಸರ್ ಕಾಣಿಸಿದ ಕಾರಣ ಅವರು ಬೆಂಗಳೂರಿಗೆ ಹೋಗಿದ್ದಾರೆ. ಅಲ್ಲಿನ ಕಿದ್ವಾಯಿ ಆಸ್ಪತ್ರೆಯಲ್ಲಿ ಚಂದ್ರು ಅಂಬಿಗ ಅವರ ಚಿಕಿತ್ಸೆ ನಡೆಯುತ್ತಿದೆ. ಹೀಗಿರುವಾಗ ನಂದಿನಿ ಅಂಬಿಗ ಅವರು ಒಣಿಕೇರಿ ಬೆಂಗಳೆಯ ಆಚಾರಿ ಕೆಲಸ ಮಾಡುವ ತಮ್ಮ ಬಾವ ರಾಜು ಪೂಜಾರಿ ಅವರ ಜೊತೆ ಬೆಂಗಳೂರಿಗೆ ಹೋಗಿದ್ದರು. ತಂದೆಯ ಆರೋಗ್ಯ ವಿಚಾರಿಸಿ ಅವರು ಅಕ್ಟೊಬರ್ 13ರಂದು ಶಿರಸಿಗೆ ಮರಳಲು ಬಸ್ ಹತ್ತಿದ್ದರು. ಆ ಬಸ್ಸು ಶಿರಸಿ ಕೇಂದ್ರ ಬಸ್ ನಿಲ್ದಾಣದ ಬಳಿ ನಿಂತಿದ್ದು, ಹೊಸ ಬಸ್ ನಿಲ್ದಾಣದ ಬಳಿ ಬೈಕ್ ಇತ್ತು. ಬೈಕಿನ ಬಳಿ ತೆರಳುವುದಕ್ಕಾಗಿ ನಂದಿನಿ ಅಂಬಿಗ ಹಾಗೂ ರಾಜು ಪೂಜಾರಿ ಅವರು ನಡೆದು ಹೋಗುತ್ತಿದ್ದರು. ಶಿರಸಿಯ ಸಿಪಿ ಬಜಾರ್, ಝೂ ಸರ್ಕಲ್ ದಾಟಿದ ಅವರಿಬ್ಬರು ಹುಲೆಕಲ್ ರಸ್ತೆ ಕಡೆ ತಿರುಗಿದ್ದರು. ರಾತ್ರಿ 11.15ಕ್ಕೆ ಅವರು ಹುಲೆಕಲ್ ರಸ್ತೆಯ ಪೊಲೀಸ್ ಕ್ವಾಟರ್ಸ ಬಳಿ ತಲುಪಿದ್ದು, ಆಗ ವೇಗವಾಗಿ ಕಾರೊಂದು ನುಗ್ಗಿ ಬಂದಿತು. ನಡೆದು ಹೋಗುತ್ತಿದ್ದ ರಾಜು ಪೂಜಾರಿ ಅವರಿಗೆ ಆ ಕಪ್ಪು ಬಣ್ಣದ ಕಾರು ಡಿಕ್ಕಿಯಾಯಿತು. ಪರಿಣಾಮ ರಾಜು ಪೂಜಾರಿ ಅವರ ಹಣೆ, ಕೈ, ಕಾಲಿಗೆ ಗಾಯವಾಯಿತು. ಡಿಕ್ಕಿ ಹೊಡದ ಕಾರು ಸ್ಥಳದಲ್ಲಿ ನಿಲ್ಲಲಿಲ್ಲ. ಗಾಯಾಳುವಿನ ಉಪಚಾರವನ್ನು ಮಾಡಲಿಲ್ಲ. ಹೀಗಾಗಿ ನಂದಿನಿ ಪೂಜಾರಿ ಅವರು ರಾಜು ಪೂಜಾರಿ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದರು. ಅದಾದ ನಂತರ ಅಪರಿಚಿತ ಕಪ್ಪು ಕಾರಿನ ವಿರುದ್ಧ ಕ್ರಮಕ್ಕಾಗಿ ಅವರು ಪೊಲೀಸರ ಮೊರೆ ಹೋದರು. ಶಿರಸಿ ಸಂಚಾರ ಪೊಲೀಸ್ ಠಾಣೆಯವರು ಈ ಪ್ರಕರಣ ದಾಖಲಿಸಿದ್ದು, ಕಪ್ಪು ಕಾರಿನ ಹುಡುಕಾಟ ನಡೆಸಿದ್ದಾರೆ. - [ಬೈಕಿಗೆ ಗುದ್ದಿದ ಕಾರು: ಸವಾರ ಸಾವು!](https://mobiletime.in/2025/10/car-hits-bike-rider-dies/): ಮುಂಡಗೋಡು ಬಂಕಾಪುರ ರಸ್ತೆಯ ಸನವಳ್ಳಿ ಗ್ರಾಮದ ರಾಮಕೃಷ್ಣ ಹೆಗಡೆ ಅವರ ಜಮೀನಿನ ಬಳಿ ಕಾರೊಂದು ಎದುರಿಗಿದ್ದ ಬೈಕಿಗೆ ಡಿಕ್ಕಿಯಾಗಿದೆ. ಪರಿಣಾಮ ಬೈಕ್ ಸವಾರ ಸಾವನಪ್ಪಿದ್ದಾರೆ. ಅಕ್ಟೊಬರ್ 14ರ ಮದ್ಯಾಹ್ನ ಯಲ್ಲಾಪುರದ ಮೇಲಿನಭರಣಿಯ ಚಂದ್ರಶೇಖರ ನಾಯ್ಕ ಅವರು ಮುಂಡಗೋಡಿದAದ ಬಂಕಾಪುರ ಕಡೆ ಕಾರು ಓಡಿಸುತ್ತಿದ್ದರು. ಅದೇ ಮಾರ್ಗವಾಗಿ ಮುಂಡಗೋಡು ನಂದಿಪುರದ ಮೀನು ವ್ಯಾಪಾರಿ ಮಲ್ಲೇಶಿ ತಳವಾರ (45) ಅವರು ಬೈಕಿನಲ್ಲಿ ಹೋಗುತ್ತಿದ್ದರು. ಜೋರಾಗಿ ಬಂದ ಕಾರು ಹಿಂದಿನಿoದ ಬೈಕಿಗೆ ಡಿಕ್ಕಿ ಹೊಡೆಯಿತು. ಪರಿಣಾಮ ಮಲ್ಲೇಶಿ ತಳವಾರ ಅವರು ನೆಲಕ್ಕೆ ಬಿದ್ದು ಪೆಟ್ಟು ಮಾಡಿಕೊಂಡರು. ಗಾಯಗೊಂಡ ಅವರನ್ನು ಮುಂಡಗೋಡಿನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಯಿತು. ನಂತರ ಹೆಚ್ಚಿನ ಚಿಕಿತ್ಸೆಗೆ ಹುಬ್ಬಳ್ಳಿಯ ಕಿಮ್ಸ್’ಗೆ ಸೇರಿಸಲಾಯಿತು. ಆದರೆ, ಮಲ್ಲೇಶಿ ತಳವಾರ್ ಅವರು ಬದುಕಲಿಲ್ಲ. ಅಪಘಾತದಿಂದ ಆದ ಸಾವಿನ ಬಗ್ಗೆ ನಂದಿಪುರದ ಸುನೀಲ ಕಟ್ಟಿಮನಿ ಅವರು ಪೊಲೀಸರಿಗೆ ಮಾಹಿತಿ ನೀಡಿದರು. ಮುಂಡಗೋಡು ಪೊಲೀಸರು ಚಂದ್ರಶೇಖರ ನಾಯ್ಕ ಅವರ ವಿರುದ್ಧ ಪ್ರಕರಣ ದಾಖಲಿಸಿದರು.   - [ಶಂಬು ಗೌಡನ ಕಾಟಕ್ಕೆ ನಲುಗಿದ ಶಾರದಾ!](https://mobiletime.in/2025/10/sharada-is-terrified-by-shambu-gowdas-threat/): ಹೊನ್ನಾವರದ ಶಂಬು ಗೌಡ ಅವರು ನಡುರಾತ್ರಿ ಶಾರದಾ ಅವರ ಮನೆಗೆ ನುಗ್ಗಿದ್ದಾರೆ. ಶಾರದಾ ಗೌಡ ಅವರು ದೊಡ್ಡದಾಗಿ ಬೊಬ್ಬೆ ಹಾಕಿದಾಗ ಕತ್ತಲ ದಾರಿಯಲ್ಲಿ ಶಂಬು ಗೌಡ ಅವರು ಓಡಿ ಪರಾರಿಯಾಗಿದ್ದಾರೆ. ಹೊನ್ನಾವರದ ಮುಗಳಿ ಗುಣವಂತೆಯಲ್ಲಿ ಶಾರದಾ ಗೌಡ ಅವರು ವಾಸವಾಗಿದ್ದಾರೆ. ಅದೇ ಊರಿನ ಶಂಬು ಗೌಡ ಅವರು ಶಾರದಾ ಗೌಡ ಅವರಿಗೆ ಕಾಟ ಕೊಡುತ್ತಿದ್ದು, ಅಕ್ಟೊಬರ್ 14ರ ನಸುಕಿನ 3 ಗಂಟೆಗೆ ಶಂಬು ಗೌಡರು ಶಾರದಾ ಗೌಡ ಅವರ ಮನೆಗೆ ನುಗ್ಗಿದರು. ಶಾರದಾ ಗೌಡ ಅವರು ಮಲಗಿರುವ ಕೋಣೆ ಪ್ರವೇಶಿಸಿ `ಶಾರದಾ.. ಶಾರದಾ’ ಎಂದು ಪಿಸುಮಾತಿನಲ್ಲಿ ಕರೆದರು. ನಿದ್ದೆ ಮಾಡುತ್ತಿದ್ದ ಶಾರದಾ ಗೌಡ ಅವರು ಒಮ್ಮೆಲೆ ಎಚ್ಚರಗೊಂಡಿದ್ದು, ಶಂಬು ಗೌಡರ ಅವತಾರ ನೋಡಿ ಬೆಚ್ಚು ಬಿದ್ದರು. `ಮನೆ ಒಳಗೆ ಏಕೆ ಬಂದೆ?’ ಎಂದು ಶಾರದಾ ಗೌಡ ಪ್ರಶ್ನಿಸಿದರು. `ದೊಡ್ಡದಾಗಿ ಕೂಗಬೇಡ’ ಎಂದು ಶಂಬು ಗೌಡ ಮನವಿ ಮಾಡಿದರು. ಆದರೂ ಶಾರದಾ ಗೌಡ ಅವರು ದೊಡ್ಡದಾಗಿ ಕೂಗಲು ಶುರು ಮಾಡಿದರು. `ಜೋರಾಗಿ ಕೂಗಿದರೆ ಕುತ್ತಿಗೆ ಅದುಮುವೆ’ ಎಂದು ಶಂಬು ಗೌಡ ಅವರು ಬೆದರಿಸಿದರು. ಅದಾಗಿಯೂ ಶಾರದಾ ಗೌಡ ಬೊಬ್ಬೆ ಹೊಡೆಯುವುದನ್ನು ನಿಲ್ಲಿಸಲಿಲ್ಲ. ಇದರಿಂದ ಬೆದರಿದ ಶಂಬು ಗೌಡ ಅವರು ಕತ್ತಲ ದಾರಿಯಲ್ಲಿ ಓಡಿ ಪರಾರಿಯಾದರು. ಅಕ್ಟೊಬರ್ 15ರಂದು ಬೆಳಗ್ಗೆ ಮತ್ತೆ ಶಾರದಾ ಗೌಡ ಅವರ ಮನೆ ಬಳಿ ಬಂದ ಶಂಬು ಗೌಡ ಅವರು `ನೀವು ಓಡಾಡುವ ದಾರಿ ಬಂದ್ ಮಾಡುವೆ’ ಎಂದು ಹೆದರಿಸಿದರು. ಈ ಎಲ್ಲಾ ವಿದ್ಯಮಾನಗಳ ಬಗ್ಗೆ ಶಾರದಾ ಗೌಡ ಅವರು ಮಂಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದರು. - [ಊರೂರು ಸುತ್ತಾಡಿಸಿದ ವೈದ್ಯ ಮದುವೆ ಆಗಲು ನಿರಾಕರಿಸಿದ!](https://mobiletime.in/2025/10/the-doctor-who-wandered-around-the-village-refused-to-get-married/): ಭಟ್ಕಳದ ವೈದ್ಯರೊಬ್ಬರು ಮಹಿಳೆಯೊಬ್ಬರಿಗೆ ಮದುವೆಯಾಗುವುದಾಗಿ ನಂಬಿಸಿ ಮೋಸ ಮಾಡಿದ್ದಾರೆ. ಆ ವೈದ್ಯರ ಜೊತೆ ಮದುವೆ ಮಾಡಿಸುವಂತೆ ಕೋರಿ ಆ ಮಹಿಳೆ ಇದೀಗ ಪೊಲೀಸರ ಮೊರೆ ಹೋಗಿದ್ದಾರೆ. ಭಟ್ಕಳದ ಹೆಬಳೆ ಗಾಂಧೀನಗರದಲ್ಲಿ ವಾಸಿಸುವ 25 ವರ್ಷದ ಮಹಿಳೆಯನ್ನು ಆಜಾದ್ ನಗರದ ಆರನೇ ಕ್ರಾಸಿನ ಡಾ ನಾಸೀರ್ ಅಹ್ಮದ್ ಎಂ ಎಂ ಅಲಿ ಸಾಹೇಬ್ ಅವರು ಪುಸಲಾಯಿಸಿದ್ದರು. ಮದುವೆ ಆಗುವುದಾಗಿ ನಂಬಿಸಿ ಆ ಮಹಿಳೆಯನ್ನು ಭಟ್ಕಳ, ಹೊನ್ನಾವರ, ಚಿಕ್ಕಮಗಳೂರು ಹಾಗೂ ಬೆಂಗಳೂರಿಗೆ ಕರೆದೊಯ್ದು ಸುತ್ತಾಡಿಸಿದ್ದರು. ತಿರುಗಾಟದ ನಂತರ ಅವರು ಆ ಮಹಿಳೆಯನ್ನು ಲಾಡ್ಜಿಗೆ ಕರೆದೊಯ್ದು ದೈಹಿಕವಾಗಿಯೂ ಬಳಸಿಕೊಂಡಿದ್ದರು. 10 ದಿನಗಳ ಕಾಲ ಬೇರೆ ಬೇರೆ ಮಹಿಳೆ ಜೊತೆ ಸುತ್ತಾಟ ನಡೆಸಿದ ಡಾ ನಾಸೀರ್ ಅಹ್ಮದ್ ಆ ಅವಧಿಯಲ್ಲಿ ಮದುವೆ ಆಗುವ ಭರವಸೆ ನೀಡಿದ್ದರು. ಆದರೆ, ನಂತರ ತಮ್ಮ ಮಾತಿನ ವರಸೆ ಬದಲಿಸಿದರು. ಬಲವಂತವಾಗಿ ಬಲಾತ್ಕಾರ ನಡೆಸಿದಲ್ಲದೇ ಈ ವಿಷಯ ಯಾರಿಗಾದರೂ ಹೇಳಿದರೆ ಕೊಲೆ ಮಾಡುವ ಬೆದರಿಕೆ ಒಡ್ಡಿದರು. ಅದಾಗಿಯೂ ಆ ಮಹಿಳೆ ತಮಗಾದ ಮೋಸ, ವಂಚನೆ, ಅಪಹರಣ, ಅತ್ಯಾಚಾರ ಹಾಗೂ ಅನ್ಯಾಯದ ಬಗ್ಗೆ ಪೊಲೀಸ್ ದೂರು ನೀಡಿದರು. ಪೊಲೀಸರು ಪ್ರಕರಣ ದಾಖಲಿಸಿದ್ದು, ತನಿಖೆ ಶುರು ಮಾಡಿದ್ದಾರೆ. - [ಕದ್ದ ಕಾರಿನ ಜೊತೆ ಸಿಕ್ಕಿಬಿದ್ದ ಬ್ಯಾಟರಿ ಕಳ್ಳ!](https://mobiletime.in/2025/10/battery-thief-caught-with-stolen-car/): ಬ್ಯಾಟರಿ ಕದ್ದ ಪ್ರಕರಣದಲ್ಲಿ ಪಂಚನಾಮೆ ವೇಳೆ ಕುಮಟಾ ಪೊಲೀಸರ ಬಳಿಯಿಂದ ತಪ್ಪಿಸಿಕೊಂಡು ಪರಾರಿಯಾಗಿದ್ದ ಭಟ್ಕಳದ ಆಟೋ ಚಾಲಕ ಪೌಜಾನ್ ಅಹ್ಮದ್ ಮತ್ತೆ ಸಿಕ್ಕಿಬಿದ್ದಿದ್ದು, ಪೊಲೀಸರು ಆತನನ್ನು ನ್ಯಾಯಾಲಯಕ್ಕೆ ಒಪ್ಪಿಸಿದ್ದಾರೆ. ಭಟ್ಕಳದ ತಗ್ಗರಗೋಡಿನ ಜಾಲಿ ಬಳಿ ಪೌಜಾನ್ ಅಹ್ಮದ್ ವಾಸವಾಗಿದ್ದರು. ಆಟೋ ಚಾಲಕರಾಗಿ ಕೆಲಸ ಮಾಡಿಕೊಂಡಿದ್ದ ಅವರಿಗೆ ಕಳ್ಳತನದ ಖಯಾಲಿ ಜೋರಾಗಿತ್ತು. ವಿವಿಧ ಮನೆ, ಮಳಿಗೆಗಳಿಗೆ ಪೌಜಾನ್ ಅಹ್ಮದ್ ಕನ್ನ ಹಾಕಿದ್ದರು. ಅದರಂತೆ ಅಕ್ಟೊಬರ್ 8ರಂದು ತಮ್ಮ ಸಹಚರರ ಜೊತೆ ಸೇರಿ ಕುಮಟಾದ ಕುಮಟಾದ ಗಿಬ್ ಸರ್ಕಲ್ ಬಳಿಯ ಅಮರಾನ್ ಬ್ಯಾಟರಿ ಶಾಪ್‌ನಲ್ಲಿ 8 ಸಾವಿರ ರೂ ಮೌಲ್ಯದ 12 ಬ್ಯಾಟರಿ ಕಳ್ಳತನ ಮಾಡಿದ್ದರು. ಕಳ್ಳತನ ಪ್ರಕರಣ ದಾಖಲಿಸಿದ ಪೊಲೀಸರು ಪೌಜಾನ್ ಅಹ್ಮದ್ ಅವರನ್ನು ಬಂಧಿಸಿದ್ದರು. ಅದರೊಂದಿಗೆ ಭಟ್ಕಳ ಗುಳ್ಮೆಯ ಟೈಲ್ಸ ಕಾರ್ಮಿಕ ಮಹಮೊದ್ ಸುಫಿಯಾನ್ ಸಹ ಸಿಕ್ಕಿಬಿದ್ದಿದ್ದರು. ಪಂಚನಾಮೆ ವೇಳೆ ಪೌಜಾನ್ ಅಹ್ಮದ್ ಪೊಲೀಸರಿಂದ ತಪ್ಪಿಸಿಕೊಂಡು ಪರಾರಿಯಾಗಿದ್ದರು. ಮತ್ತೆ ಹುಡುಕಾಟ ನಡೆಸಿದ ಪೊಲೀಸರು ಮಂಡ್ಯದ ಬಳಿ ಪೌಜಾನ್ ಅಹ್ಮದ್ ಅವರನ್ನು ಬಂಧಿಸಿದರು. ಬAಧನದ ವೇಳೆ ಪೌಜಾನ್ ಅಹ್ಮದ್ ಬಳಿ ಕಾರೊಂದು ಸಿಕ್ಕಿದೆ. ಆ ಕಾರು ಸಹ ಕಳ್ಳತನ ಮಾಡಿದ ಬಗ್ಗೆ ಮಾಹಿತಿ ಲಭಿಸಿದೆ. ಈ ಇಬ್ಬರು ಆರೋಪಿತರ ವಿರುದ್ಧ ಬೈಂದೂರು, ಗಂಗೊಳ್ಳಿ, ಭಟ್ಕಳದಲ್ಲಿ ಸಹ ಕಳ್ಳತನ ಪ್ರಕರಣಗಳಿವೆ. - [ಮದುವೆ ಮನೆಯಲ್ಲಿ ಮಾರಾಮಾರಿ!](https://mobiletime.in/2025/10/a-fight-breaks-out-at-the-wedding-house/): ಮದುವೆಗೆ ಬಂದಿದ್ದ ಸಂಬ0ಧಿಕರ ನಡುವೆ ಭಟ್ಕಳದಲ್ಲಿ ಹೊಡೆದಾಟ ನಡೆದಿದೆ. ಈ ಹೊಡೆದಾಟದಲ್ಲಿ ಒಟ್ಟು ಐವರು ಗಾಯಗೊಂಡಿದ್ದಾರೆ. ಭಟ್ಕಳ ತಾಲೂಕಿನ ಹೆಬಳೆ ಗ್ರಾಮಪಂಚಾಯಿತ್ ವ್ಯಾಪ್ತಿಯ ಹನೀಫಾಬಾದ್‌ನ ಮದುವೆ ಹಾಲ್ ಮುಂದೆ ಮೂರು ದಿನಗಳ ಹಿಂದೆ ಹೊಡೆದಾಟ ನಡೆದಿದೆ. ಹೊಡೆದಾಟದ ವಿಡಿಯೋ ವೈರಲ್ ಆಗಿದ್ದು, ಅದೇ ಆಧಾರದಲ್ಲಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಮಾಹಿತಿಗಳ ಪ್ರಕಾರ ಮದುವೆಗೆ ಬಂದಿದ್ದ ಯುವಕರ ನಡುವೆ ತಮ್ಮ ವಾಹನ ಪಾರ್ಕಿಂಗ್ ವಿಚಾರಕ್ಕಾಗಿ ಜಗಳ ಶುರುವಾಯಿತು. ಮಾತಿಗೆ ಮಾತು ಬೆಳೆದು ಜಗಳ ದೊಡ್ಡವಾಯಿತು. ಕೊನೆಗೆ ಅದು ಹೊಡೆದಾಟದ ಸ್ವರೂಪಪಡೆಯಿತು. ಅಲ್ಲಿದ್ದ ಕೆಲವರು ಇದನ್ನು ವಿಡಿಯೋ ಮಾಡಿದ್ದು, ಅದು ಇದೀಗ ವೈರಲ್ ಆಗಿದೆ. ಹೊಡೆದಾಟದ ವೇಳೆ ಎರಡು ಗುಂಪಿನವರು ಪರಸ್ಪರ ಬೈದುಕೊಂಡಿದ್ದಾರೆ. ಕೆಟ್ಟದ್ದಾಗಿ ನಿಂದಿಸಿಕೊAಡಿದ್ದಾರೆ. ಹೊಡೆದಾಟದ ಸುದ್ದಿ ಕೇಳಿ ಪೊಲೀಸರು ಸ್ಥಳಕ್ಕೆ ಧಾವಿಸಿ ಸಮಾಧಾನ ಮಾಡಿದರೂ ಪ್ರಯೋಜನವಾಗಿಲ್ಲ. ಭಟ್ಕಳ ಗ್ರಾಮೀಣ ಠಾಣೆಯ ಇನ್ಸ್ಪೆಕ್ಟರ್ ಮಂಜುನಾಥ ಲಿಂಗಾರೆಡ್ಡಿ ತಮ್ಮ ಸಿಬ್ಬಂದಿ ಜೊತೆ ತೆರಳಿ ಹೊಡೆದಾಟ ನಿಲ್ಲಿಸುವ ಕೆಲಸ ಮಾಡಿದರಾದರೂ ಅಲ್ಲಿದ್ದವರು ಶಾಂತಿ ಕಾಪಾಡಲಿಲ್ಲ. ಸ್ಥಳದಲ್ಲಿ ಗಂಭೀರ ಸ್ವರೂಪದ ವಾತಾವರಣ ನಿರ್ಮಾಣವಾಗಿ ಸಾರ್ವಜನಿಕ ಶಾಂತಿ ಭಂಗವಾಗುವ ಸಾಧ್ಯತೆ ಹಿನ್ನಲೆ ಪೊಲೀಸರು ಕಾನೂನು ಕ್ರಮ ಜರುಗಿಸಿದರು. ಹನೀಫಾಬಾದ್‌ನ ಉಜೇಫ್ ಸೈದ ಅಬ್ದುಲ್ ಖಾದರ, ಸೈಯ್ಯದ ಉಮೇರ ಸೈಯ್ಯದ ಅಬ್ದುಲ್ ಖಾದಿರ, ಉಮೇರ ರುಕ್ಕುದ್ದೀನ್ ಉಬೇದುಲ್ಲಾ, ಮುಗೇರ್ ಎಂ ಜೆ ಮಂಜೂರ ಎಂ ಎನ್, ಆಜಾದನಗರ 6ನೇ ಕ್ರಾಸ್‌ನ ಇಬಾದುಲ್ಲಾ ಸಾದೀಕಟಾನ, ದೇವಿನಗರ ಜಾಲಿಯ ಅಬ್ದುಲ್ ರಹೀಮ ಮಹಮ್ಮದ್ ಹುಸೇನ್, ಮೂಸಾನಗರದ ಮುಸ್ತಾಕ್ ಮಕ್ಖುಲ್ ಹಾಗೂ ದೇವಿನಗರದ ತಾಹೀರ ಮಹಮ್ಮದ್ ಹುಸೇನ್ ಹೊಡೆದಾಟದಲ್ಲಿ ಭಾಗಿಯಾಗಿರುವುದು ಗೊತ್ತಾಗಿದೆ. ಅವರ ವಿರುದ್ಧ ಭsÀಟ್ಕಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. - [ಮಾದಕ ಮೋಹ: ಹೊನ್ನಾವರದಲ್ಲಿ ಸಿಕ್ಕಿಬಿದ್ದ ಶಿರಸಿಯ ಚಾಲಕ!](https://mobiletime.in/2025/10/drug-addiction-driver-from-sirsi-caught-in-honnavar/): ಶಿರಸಿ ಸಿಗಂದೂರೇಶ್ವರಿ ನಿಲಯದಲ್ಲಿ ವಾಸಿಸುವ ಮಣಿರಾಜ ತಲಗೇರಿ ಅವರು ಮಾದಕ ವ್ಯಸನ ಸೇವಿಸಿ ಹೊನ್ನಾವರ ಪಿಎಸ್‌ಐ ಮಂಜುನಾಥ ಅವರ ಬಳಿ ಸಿಕ್ಕಿಬಿದ್ದಿದ್ದಾರೆ. ಪೊಲೀಸ್ ಸಿಬ್ಬಂದಿ ಪೊಲೀಸ್ ಸಿಬ್ಬಂದಿ ಪ್ರಶಾಂತ ನಾಯ್ಕ ಹಾಗೂ ಮಂಜುನಾಥ ಕೊಂತಿಕಲ್ ಸೇರಿ ಮಣಿರಾಜ ತಲಗೇರಿ ಅವರನ್ನು ವೈದ್ಯಕೀಯ ಪರೀಕ್ಷೆಗೆ ಕರೆದೊಯ್ದಿದ್ದು, ತಪಾಸಣೆಯಲ್ಲಿ ಗಾಂಜಾ ಸೇವನೆ ದೃಢವಾಗಿದೆ. ಶಿರಸಿ ಟಿಎಸ್‌ಎಸ್ ರಸ್ತೆಯ ಜನತಾ ಬಜಾರ್ ಬಳಿಯ ಸಿಗಂದೂರೇಶ್ವರಿ ನಿಲಯದಲ್ಲಿ ಟಿ ಎನ್ ಮಣಿರಾಜ ತಲಗೇರಿ ಅವರು ವಾಸವಾಗಿದ್ದಾರೆ. ಚಾಲಕರಾಗಿರುವ ಅವರು ಸದ್ಯ ಹೊನ್ನಾವರದ ಕೆಳಗಿನಪಾಳ್ಯದ ತ್ರಿಶೂಲ ನಿವಾಸ ಹಿಂದೆ ವಸತಿ ಕಂಡುಕೊAಡಿದ್ದಾರೆ. ಅಕ್ಟೊಬರ್ 14ರಂದು ಅವರು ಮಾದಕ ವ್ಯಸನ ಸೇವಿಸಿ ಎಲ್ಲೆಂದರಲ್ಲಿ ಅಲೆದಾಡುತ್ತಿದ್ದು, ಈ ವೇಳೆಯಲ್ಲಿಯೇ ಪೊಲೀಸರ ಬಳಿ ಸಿಕ್ಕಿಬಿದ್ದಿದ್ದಾರೆ. ಹೊನ್ನಾವರ ಪಿಎಸ್‌ಐ ಮಂಜುನಾಥ ಅವರು ಪೊಲೀಸ್ ಸಿಬ್ಬಂದಿ ಪ್ರಶಾಂತ ನಾಯ್ಕ, ಮಂಜುನಾಥ ಕೊಂತಿಕಲ್ ಜೀಪ್ ಚಾಲಕ ಸಂತೋಷ ನಾಯ್ಕ ಹಾಗೂ ಮತ್ತೊಬ್ಬ ಸಿಬ್ಬಂದಿ ಮಂಜುನಾಥ ಅವರ ಜೊತೆ ಸೇರಿ ಗಸ್ತು ತಿರುಗುತ್ತಿದ್ದರು. ಹೊನ್ನಾವರ ಹೆದ್ದಾರಿ ಮೂಲಕ ಅವರು ಆರೋಳ್ಳಿ ಕಡೆ ಪ್ರವೇಶಿಸಿದ್ದರು. ಹೆದ್ದಾರಿ ಇಳಿಜಾರಿನಲ್ಲಿ ಅನುಮಾನಾಸ್ಪದವಾಗಿ ತಿರುಗುತ್ತಿದ್ದ ಮಣಿರಾಜ ತಲಗೇರಿ ಅವರನ್ನು ಪೊಲೀಸರು ನೋಡಿದರು. ಹತ್ತಿರ ಹೋಗಿ ಮಾತನಾಡಿಸಿದಾಗ ಮಣಿರಾಜ ತೆಲಗೇರಿ ಅವರ ಬಾಯಿಂದ ಕೆಟ್ಟ ವಾಸನೆ ಬಂದಿತು. ಆ ಕ್ಷಣಕ್ಕೆ ಮಣಿರಾಜ ತೆಲಗೇರಿ ಅವರು ಗಾಂಜಾ ಸೇವಿಸಿರುವುದನ್ನು ಒಪ್ಪಿಕೊಂಡರು. ಅದಾಗಿಯೂ ಪೊಲೀಸರು ಅವರನ್ನು ಆಸ್ಪತ್ರೆಗೆ ಕರೆದೊಯ್ದು ತಪಾಸಣೆ ನಡೆಸಿದರು. ವೈದ್ಯರು ಸಹ ಗಾಂಜಾ ಸೇವನೆಯ ವರದಿ ನೀಡಿದರು. ಈ ಹಿನ್ನಲೆ ಮಣಿರಾಜ ತಲಗೇರಿ ಅವರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದರು. - [ಅಬ್ಬುದಾದಾ MBBS: ವೆಲ್‌ಫೆರ್ ಆಸ್ಪತ್ರೆಯಲ್ಲಿ ಡುಪ್ಲಿಕೇಟ್ ಡಾಕ್ಟರ್!](https://mobiletime.in/2025/10/abudada-mbbs-duplicate-doctor-at-welfare-hospital/): ನಕಲಿ ವೈದ್ಯಕೀಯ ಪ್ರಮಾಣ ಪತ್ರದ ಜೊತೆ ಉಡುಪಿಯ ವ್ಯಕ್ತಿಯೊಬ್ಬರು ಉತ್ತರ ಕನ್ನಡದ ರೋಗಿಗಳ ಆರೈಕೆ ಮಾಡಿದ್ದು, ಅಧಿಕಾರಿಗಳ ತಪಾಸಣೆ ವೇಳೆ ನಕಲಿ ವೈದ್ಯರ ಅಸಲಿತನ ಬಹಿರಂಗವಾಗಿದೆ. ಉಡುಪಿಯ ಅಬುಮಹ್ಮದ್ ಎಂಬಾತರು ನಕಲಿ MBBS ಸರ್ಟಿಪಿಕೇಟ್ ಜೊತೆ ಭಟ್ಕಳಕ್ಕೆ ಆಗಮಿಸಿದ್ದು, ಇಲ್ಲಿನ ವೆಲಫೆರ್ ಆಸ್ಪತ್ರೆಯಲ್ಲಿ ಉದ್ಯೋಗವನ್ನು ಪಡೆದಿದ್ದಾರೆ! ಉಡುಪಿ ಜಿಲ್ಲೆಯ ಗಂಗೋಳ್ಳಿಯ ಅಬುಮಹ್ಮದ್ ಅವರಿಗೆ ಮಾಡಲು ಕೆಲಸವಿರಲಿಲ್ಲ. ಉದ್ಯೋಗಕ್ಕೆ ಬೇಕಾದ ವಿದ್ಯಾರ್ಹತೆ ಸಹ ಅವರಿಗೆ ಗೊತ್ತಿರಲಿಲ್ಲ. ಅದಾಗಿಯೂ ಅವರು ನಕಲಿ ವಿದ್ಯಾಬ್ಯಾಸದ ಪ್ರಮಾಣ ಪತ್ರಪಡೆದಿದ್ದರು. ಆ ಪ್ರಮಾಣ ಪತ್ರದ ಪ್ರಕಾರ ಅಬುಮಹ್ಮದ್ ಅವರು MBBS ಓದಿದ ವೈದ್ಯರಾಗಿದ್ದರು! ಅದೇ ನಕಲಿ ಸರ್ಟಿಫಿಕೇಟ್ ಆಧಾರದಲ್ಲಿ ಅವರು ಭಟ್ಕಳಕ್ಕೆ ಬಂದರು. ಇಲ್ಲಿನ ವೆಲ್‌ಫೆರ್ ಆಸ್ಪತ್ರೆಗೆ ಭೇಟಿ ನೀಡಿದರು. 2024ರ ಅಕ್ಟೊಬರ್ 7ರಂದು ಅಬುಮಹ್ಮದ್ ಅವರು ಸಂದರ್ಶನವನ್ನು ಎದುರಿಸಿದರು. ಎಲ್ಲಾ ಪ್ರಶ್ನೆಗಳಿಗೂ ಚುಟುಕಾಗಿ ಉತ್ತರಿಸಿದ ಅಬುಮಹ್ಮದ್ ಅವರ ರೀತಿ ಸಂದರ್ಶನಕಾರರಿಗೆ ಇಷ್ಟವಾಗಿದ್ದು, ಅವರನ್ನು ವೈದ್ಯಕೀಯ ಹುದ್ದೆಗೆ ಆಸ್ಪತ್ರೆಯವರು ನೇಮಿಸಿಕೊಂಡರು. ಆದರೆ, ಅಬುಮಹ್ಮದ್ ಅವರು ಕರ್ನಾಟಕ ಮೆಡಿಕಲ್ ಕೌನ್ಸಿಲ್’ನ ಪ್ರಮಾಣ ಪತ್ರವನ್ನೇ ನಕಲು ಮಾಡಿದ್ದು ಆ ವೇಳೆ ಆಸ್ಪತ್ರೆಯವರ ಗಮನಕ್ಕೂ ಬರಲಿಲ್ಲ. ಒಂದು ವರ್ಷಗಳ ಕಾಲ ವೆಲ್‌ಫೆರ್ ಆಸ್ಪತ್ರೆಯಲ್ಲಿ ಪಾರ್ಟ ಟೈಂ ಆಧಾರದಲ್ಲಿ ಅಬುಮಹ್ಮದ್ ಅವರು ವೈದ್ಯರಾಗಿದ್ದರು. ಅನೇಕ ರೋಗಿಗಳ ಆರೋಗ್ಯವನ್ನು ಅವರು ವಿಚಾರಿಸಿ ಔಷಧಿ ಕೊಟ್ಟಿದ್ದರು. ಇದಕ್ಕಾಗಿ ಆಸ್ಪತ್ರೆಯವರು ಸಹ ಅಬುಮಹ್ಮದ್ ಅವರಿಗೆ ಕೈ ತುಂಬ ಸಂಬಳ ಕೊಡುತ್ತಿದ್ದರು. ಆದರೆ, 2025ರ ಸೆಪ್ಟೆಂಬರ್ 2ರಂದು ಆಸ್ಪತ್ರೆಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯವರು ಭೇಟಿ ನೀಡಿದರು. ಅವರು ನಡೆಸಿದ ತಪಾಸಣೆಯಲ್ಲಿ ಅಬುಮಹ್ಮದ್ ಅವರ ನೈಜ ಬಣ್ಣ ಬಯಲಾಯಿತು. ಅಕ್ಟೊಬರ್ 10ರಂದು ಜಿಲ್ಲಾ ಆರೋಗ್ಯಾಧಿಕಾರಿಗಳಿಂದ ವೆಲ್‌ಫೆರ್ ಆಸ್ಪತ್ರೆಯವರಿಗೆ ಪತ್ರ ಬಂದಿದ್ದು, ನಕಲಿ ಡಾಕ್ಟರ್ ವಿರುದ್ಧ ಪ್ರಕರಣ ದಾಖಲಿಸುವಂತೆ ಸೂಚಿಸಲಾಯಿತು. ಎಂ ಬಿ ಬಿ ಎಸ್ ಡಾಕ್ಟರ್ ಎಂದು ನಂಬಿಸಿ ಆಸ್ಪತ್ರೆ ಜೊತೆ ರೋಗಿಗಳಿಗೂ ಮೋಸ ಮಾಡಿದ ನಕಲಿ ಪ್ರಮಾಣ ಪತ್ರ ಹೊಂದಿರುವ ಅಬುಮಹ್ಮದ್ ವಿರುದ್ಧ ವೆಲ್‌ಫೆರ್ ಆಸ್ಪತ್ರೆ ಆಡಳಿತಾಧಿಕಾರಿ ಸಯ್ಯದ್ ಅಬ್ದುಲ್ ಅವರು ದೂರು ನೀಡಿದರು. ಭಟ್ಕಳ ಪೊಲೀಸರು ಪ್ರಕರಣ ದಾಖಲಿಸಿದ್ದು, ತನಿಖೆ ನಡೆಸುತ್ತಿದ್ದಾರೆ. - [ಎಲ್ಲೆಂದರಲ್ಲಿ ಸಂಚರಿಸುತ್ತಿದ್ದ ಲಾರಿ ಚಾಲಕ: ಸಂಚಾರಿ ಪೊಲೀಸರ ಸಾಹಸದಿಂದ ಸಿಕ್ಕಿಬಿದ್ದ!](https://mobiletime.in/2025/10/lorry-driver-who-was-roaming-everywhere-caught-by-traffic-polices-daring-move/): ಕಾರವಾರದ ಬಿಣಗಾ ಬಳಿ ಸೈಕಲ್ ಸವಾರನಿಗೆ ಲಾರಿ ಗುದ್ದಿ ಪರಾರಿಯಾಗಿದ್ದ ಎಸ್ ಖಾಸೀಮ್ ಎಂಬಾತ 21 ವರ್ಷಗಳ ನಂತರ ಪೊಲೀಸರಿಗೆ ಸಿಕ್ಕಿಬಿದ್ದಿದ್ದು, ಆತನಿಗೆ ಪೊಲೀಸರು ಜೈಲೂಟ ಹಾಕಿಸಿದ್ದಾರೆ. 2004ರಲ್ಲಿ ಕಾರವಾರದ ಬಿಣಗಾದಲ್ಲಿ ಅಪಘಾತ ನಡೆದಿತ್ತು. ಸೈಕಲ್ ಸವಾರಿ ಮಾಡುತ್ತಿದ್ದ ವ್ಯಕ್ತಿಯೊಬ್ಬರಿಗೆ ಲಾರಿ ಗುದ್ದಿತ್ತು. ಪರಿಣಾಮ ಸೈಕಲ್ ಸವಾರ ಸ್ಥಳದಲ್ಲಿಯೇ ಸಾವನಪ್ಪಿದ್ದರು. ಆ ಕ್ಷಣಕ್ಕೆ ಲಾರಿ ಚಾಲಕನನ್ನು ಪೊಲೀಸರು ಬಂಧಿಸಿದ್ದರು. ಆದರೆ, ನ್ಯಾಯಾಲಯದಿಂದ ಜಾಮೀನುಪಡೆದಿದ್ದ ಬೆಂಗಳೂರಿನ ಸಿವಿ ರಾಮನ್ ನಗರದ ಲಾರಿ ಚಾಲಕ ಎಸ್ ಖಾಸೀಮ್ ನಂತರ ಈ ಕಡೆ ತಲೆಹಾಕಿರಲಿಲ್ಲ. ನ್ಯಾಯಾಲಯದ ನೋಟಿಸ್ ಜಾರಿಯಾದರೂ ನ್ಯಾಯಾಧೀಶರ ಮುಂದೆ ಮಾತ್ರ ಹಾಜರಾಗಿರಲಿಲ್ಲ. ಪೊಲೀಸರು ಆ ದಿನದಿಂದಲೂ ಆರೋಪಿ ಹುಡುಕಾಟ ನಡೆಸುತ್ತಿದ್ದರು. ಬೆಂಗಳೂರಿನ ವಿಳಾಸದಲ್ಲಿಯೂ ಖಾಸೀಮ್ ಸಿಗುತ್ತಿರಲಿಲ್ಲ. ಆತನ ಲಾರಿಗೆ ಜಿಪಿಎಸ್ ಇದ್ದರೂ ಪೊಲೀಸರ ಬಳಿ ಆತನನ್ನು ಹಿಡಿಯಲು ಸಾಧ್ಯವಾಗಿರಲಿಲ್ಲ. ಅದಾಗಿಯೂ ಸಾಕಷ್ಟು ಸಾಹಸ ನಡೆಸಿದ ಪೊಲೀಸರು ವಿವಿಧ ತಂತ್ರಜ್ಞಾನದ ಮೊರೆ ಹೋದರು. ಕಾರವಾರ ಸಂಚಾರ ಪೊಲೀಸ್ ಠಾಣೆಯ ಪಿಎಸ್‌ಐ ಶ್ರೀಕಾಂತ ರಾಠೋಡ ಅವರು ಆರೋಪಿ ಗುರುತಿಸುವಲ್ಲಿ ಶ್ರಮಿಸಿದರು. ಬಳ್ಳಾರಿಯಲ್ಲಿ ಆತ ಅಡಿಗಿರುವುದನ್ನು ಪೊಲೀಸರು ಹುಡುಕಿದರು. ಕೊನೆಗೆ ಈ ದಿನ ಅಲ್ಲಿಗೆ ತೆರಳಿ ಖಾಸಿಮ್’ನನ್ನು ಹಿಡಿದರು. ನಂತರ ಆರೋಪಿಯನ್ನು ನ್ಯಾಯಾಲಯಕ್ಕೆ ಒಪ್ಪಿಸಿದರು. - [ಅನ್ನಭಾಗ್ಯಕ್ಕೆ ಕನ್ನ: ಅಕ್ಕಿ ಕದ್ದವರು ಅಂದರ್!](https://mobiletime.in/2025/10/the-one-who-stole-the-rice-is-andar/): ಅನ್ನಭಾಗ್ಯ ಯೋಜನೆ ಅಡಿ ಸರ್ಕಾರ ಬಡವರಿಗೆ ವಿತರಿಸಬೇಕಿದ್ದ ಅಕ್ಕಿಯನ್ನು ಕದ್ದು ಸಾಗಿಸುತ್ತಿದ್ದವರು ಭಟ್ಕಳದಲ್ಲಿ ಸಿಕ್ಕಿ ಬಿದ್ದಿದ್ದಾರೆ. ಅಕ್ಕಿ ಸಾಗಿಸುತ್ತಿದ್ದ ಲಾರಿಸಹಿತ ಚಾಲಕನನ್ನು ಪೊಲೀಸರು ವಶಕ್ಕೆಪಡೆದಿದ್ದಾರೆ. ಭಟ್ಕಳದ ನೂರ ಮಸೀದಿ ಹತ್ತಿರ ಅಕ್ಕಿ ತುಂಬಿದ ಲಾರಿ ಸಂಚರಿಸುತ್ತಿತ್ತು. ಅದರಲ್ಲಿ 3.23 ಲಕ್ಷ ರೂ ಮೌಲ್ಯದ 9,500 ಕೆಜಿ ಸಾಗಾಟವಾಗುತ್ತಿತ್ತು. ಆ ಅಕ್ಕಿಯನ್ನು ಕದ್ದು ಸಾಗಿಸುತ್ತಿರುವುದು ಆಹಾರ ನಿರೀಕ್ಷಕ ಉದಯ ದ್ಯಾಮಪ್ಪ ತಳವಾರ ಅವರ ಗಮನಕ್ಕೆ ಬಂದಿತು. ಡಿವೈಎಸ್ಪಿ ಮಹೇಶ್ ಕೆ ಎಂ ಅವರ ನೆರವುಪಡೆದು ಅಧಿಕಾರಿಗಳು ದಾಳಿ ನಡೆಸಿದರು. ಅಕ್ರಮ ಅಕ್ಕಿ ಸಾಗಾಟಗಾರ ಮೋಹಮ್ಮದ್ ಸಮೀರ್ ಭಟ್ಕಳ ಲಾರಿಯಲ್ಲಿ ಅಕ್ಕಿ ಸಾಗಿಸುತ್ತಿರುವ ಬಗ್ಗೆ ಅರಿವಾಗಿದ್ದು, ವಾಹನದ ಚಾಲಕ ಪ್ರವೀಣ್ ಎನ್ ಆರ್ ಅವರನನು ಪೊಲೀಸರು ವಶಕ್ಕೆಪಡೆದರು. ಆದರೆ, ಪ್ರಮುಖ ಆರೋಪಿ ಸಿಕ್ಕಿ ಬೀಳಲಿಲ್ಲ. ಪಿಎಸೈ ನವೀನ್ ನಾಯ್ಕ ಅವರು ಪ್ರಕರಣ ದಾಖಲಿಸಿದ್ದು, ಅಕ್ಕಿ ಜೊತೆ ಲಾರಿಯನ್ನು ಜಪ್ತು ಮಾಡಿದ್ದಾರೆ. - [ಗೃಹಲಕ್ಷ್ಮೀ: ದೀಪಾವಳಿ ಒಳಗೆ ಬರಲಿದೆ ಗ್ಯಾರಂಟಿ ದುಡ್ಡು!](https://mobiletime.in/2025/10/grihalakshmi-guaranteed-money-will-come-by-diwali/): ಗೃಹಲಕ್ಷ್ಮೀ ಯೋಜನೆಯಡಿ ಈಗಾಗಲೇ ಬಿಡುಗಡೆಯಾಗಿರುವ ಜುಲೈ ತಿಂಗಳ ಮೊತ್ತವನ್ನು ಎರಡು ದಿನಗಳ ಒಳಗೆ ಫಲಾನುಭವಿಗಳ ಖಾತೆಗೆ ಜಮೆ ಮಾಡುವಂತೆ ಉತ್ತರ ಕನ್ನಡ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಸತೀಶ್ ನಾಯ್ಕ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಅವರ ಮಾತಿನ ಪ್ರಕಾರ ಅಧಿಕಾರಿಗಳು ನಡೆದುಕೊಂಡರೆ ದೀಪಾವಳಿ ಹಬ್ಬದ ಒಳಗೆ ಗೃಹಲಕ್ಷ್ಮೀಯರ ಖಾತೆಗೆ ಹಣ ಜಮಾ ಆಗಲಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಗೃಹಲಕ್ಷ್ಮೀ ಯೋಜನೆಯಡಿ ಶೇ 99.96ರಷ್ಟು ಸಾಧನೆಯಾಗಿದೆ. ಬಾಕಿ ಉಳಿದಿರುವ ಮಹಿಳೆಯರನ್ನು ಯೋಜನೆಯ ವ್ಯಾಪ್ತಿಗೆ ಒಳಪಡಿಸಲು ಸತೀಶ ನಾಯ್ಕ ಅವರು ಪ್ರಯತ್ನಿಸುತ್ತಿದ್ದಾರೆ. ಯೋಜನೆಯ ನೋಂದಣಿಯಲ್ಲಿ ಕೆಲ ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡಿದೆ. ಅದನ್ನು ಬಗೆಹರಿಸಲು ತಾಲೂಕುವಾರು ಅದಾಲತ್ ನಡೆಸಲು ಅವರು ಸೂಚಿಸಿದ್ದಾರೆ. ಆ ಮೂಲಕ `ಯಾವುದೇ ಫಲಾನುಭವಿ ಯೋಜನೆಯಿಂದ ಹೊರಗುಳಿಯದಂತೆ ಎಚ್ಚರವಹಿಸಬೇಕು’ ಎಂದವರು ಸೂಚಿಸಿದ್ದಾರೆ. `ಕಾಂಗ್ರೆಸ್ ಸರ್ಕಾರ ಜಾರಿಗೆ ತಂದ ಗ್ಯಾರಂಟಿ ಯೋಜನೆಯ ಸಾಧನೆಯಲ್ಲಿ ಉತ್ತರ ಕನ್ನಡ ಜಿಲ್ಲೆ ಮುಂಚೂಣಿಯಲ್ಲಿದೆ. ಈ ಸಾಧನೆಗೆ ಗ್ಯಾರಂಟಿ ಪ್ರಾಧಿಕಾರದ ಎಲ್ಲಾ ತಾಲೂಕುಗಳು ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಹಾಗೂ ಇಲಾಖೆಯ ಅಧಿಕಾರಿಗಳ ಪರಸ್ಪರ ಸಮನ್ವಯತೆ ಕಾರಣ’ ಎಂದು ಸತೀಶ ನಾಯ್ಕ ಅವರು ಹೇಳಿದ್ದಾರೆ. `ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಗೊಳಿಸುವಲ್ಲಿ ಯಾವುದೇ ಗಂಭೀರ ಸಮಸ್ಯೆ ಕಂಡು ಬಂದಿಲ್ಲ. ಯಾವುದೇ ಮಧ್ಯವರ್ತಿಗಳ ಹಾವಳಿ ಇಲ್ಲಿಲ್ಲ. ಭ್ರಷ್ಟಾಚಾರಕ್ಕೆ ಸಹ ಅವಕಾಶ ಇಲ್ಲ’ ಎಂದವರು ವಿವರಿಸಿದ್ದಾರೆ. `ಶಕ್ತಿ ಯೋಜನೆಯ ಮೂಲಕ ಸಾರಿಗೆ ಇಲಾಖೆಗೆ ಆರ್ಥಿಕವಾಗಿ ಚೈತನ್ಯ ನೀಡಿದ್ದರೂ ಕೂಡಾ ಬಸ್‌ಗಳು ಆಗಾಗ್ಗೆ ಮಾರ್ಗ ಮಧ್ಯೆ ಕೆಟ್ಟು ನಿಲ್ಲುತ್ತಿದೆ. ಸಾರಿಗೆ ಸಂಸ್ಥೆಯ ಅಧಿಕಾರಿಗಳಿಗೆ ವಾಹನಗಳಿಗೆ ದುರಸ್ತಿ ಸಂದರ್ಭದಲ್ಲಿ ಉತ್ತಮ ಗುಣಮಟ್ಟದ ಬಿಡಿಭಾಗಗಳನ್ನು ಅಳವಡಿಸುವ ಜೊತೆಗೆ ಗ್ರಾಮೀಣ ಭಾಗದ ಸಂಚಾರದಲ್ಲಿ ಯಾವುದೇ ತೊಂದರೆಯಾಗದAತೆ ಗಮನ ಹರಿಸಬೇಕು’ ಎಂದವರು ಸಲಹೆ ನೀಡಿದ್ದಾರೆ. `ಬಸ್ ನಿಲ್ದಾಣಗಳಲ್ಲಿ ಪ್ರಯಾಣಿಕರಿಗೆ ಉತ್ತಮ ಶೌಚಾಲಯಗಳ ವ್ಯವಸ್ಥೆ ಮತ್ತು ಬಸ್ ನಿಲ್ದಾಣದಲ್ಲಿ ಅಗತ್ಯ ದುರಸ್ತಿ ಕಾರ್ಯಗಳನ್ನು ಕೈಗೊಳ್ಳುವ ಮೂಲಕ ಸಾರ್ವಜನಿಕರಿಗೆ ಎಲ್ಲಾ ಅಗತ್ಯ ಮೂಲಭೂತ ಸೌಲಭ್ಯಗಳನ್ನು ಒದಗಿಸಬೇಕು’ ಎಂದು ಹೇಳಿದ್ದಾರೆ. `ಯುವನಿಧಿ ಯೋಜನೆಯ ಮೂಲಕ ಈಗಾಗಲೇ ನೆರವು ಪಡೆಯುತ್ತಿರುವವರಿಗೆ ಕಡ್ಡಾಯವಾಗಿ ಕೌಶಲ್ಯಾಭಿವೃದ್ದಿ ತರಬೇತಿ ನೀಡಬೇಕು. ಜೊತೆಗೆ ತರಬೇತಿಯ ನಂತರ ಅವರಿಗೆ ಉದ್ಯೋಗ ದೊರಕಿಸಲು ಅಧಿಕಾರಿಗಳು ಕ್ರಮ ವಹಿಸಬೇಕು’ ಎಂದು ಸೂಚಿಸಿದ್ದಾರೆ. `ಜಿಲ್ಲೆಯಲ್ಲಿ ಪಂಚ ಗ್ಯಾರಂಟಿ ಯೋಜನೆಗಳಡಿಯಲ್ಲಿ ಇದುವರೆಗೆ ಅನ್ನಭಾಗ್ಯ ಯೋಜನೆಯಡಿ 152.51 ಕೋಟಿ ರೂ, ಶಕ್ತಿ ಯೋಜನೆಯಡಿ 13.72 ಕೋಟಿ ಮಹಿಳೆಯರಿಗೆ 404.49 ಕೋಟಿ ರೂ, ಗೃಹಲಕ್ಷ್ಮೀ ಯೋಜನೆಯಡಿ 32,823 ಮಹಿಳೆಯರಿಗೆ 1299.20 ಕೋಟಿ ರೂ, ಯುವನಿಧಿ ಯೋಜನೆಯಡಿ 15.30 ಕೋಟಿ ರೂ, ಗೃಹ ಜ್ಯೋತಿ ಯೋಜನೆಯಡಿ 455.84 ಕೋಟಿ ರೂ ನೆರವು ಒದಗಿಸಲಾಗಿದೆ’ ಎಂದವರು ಮಾಹಿತಿ ನೀಡಿದ್ದಾರೆ. ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷ ಜನಾರ್ಧನ ಕುಪ್ಪ ದೇವಾಡಿಗ, ನಾಗರಾಜ್ ಎಂ ಮುರ್ಡೇಶ್ವರ, ಸದಸ್ಯರಾದ ಪಾಂಡುರAಗ ಗೌಡ ಅಂಕೋಲಾ, ರಾಜೇಂದ್ರ ಎಚ್.ರಾಣೆ ಕಾರವಾರ, ದೇವಿದಾಸ ನಾಗೇಶ ಶಾನುಭಾಗ ಯಲ್ಲಾಪುರ, ಅಣ್ಣಪ್ಪ ಮಹಾಬಲೇಶ್ವರ ನಾಯ್ಕ ಮಂಕಿ, ರಾಜು ಮಂಜಪ್ಪ ನಾಯ್ಕ ಭಟ್ಕಳ, ಅಶೋಕ್ ಕೃಷ್ಣ ಗೌಡ ಕುಮಟಾ, ಜಿಲ್ಲಾ ಪಂಚಾಯತ್ ಮುಖ್ಯ ಲೆಕ್ಕಾಧಿಕಾರಿ ಆನಂದ್‌ಸಾ ಹಬೀಬ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಕೃಷ್ಣಪ್ಪ, ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ ಉಪನಿರ್ದೇಶಕ ಮಂಜುನಾಥ ರೇವಣಕರ, ಜಿಲ್ಲಾ ಉದ್ಯೋಗಾಧಿಕಾರಿ ವಿನೋದ್ ನಾಯ್ಕ್, ಕೌಶಲ್ಯಾಭಿವೃದ್ಧಿ ಇಲಾಖೆಯ ಸಹಾಯಕ ನಿರ್ದೇಶಕ ರಜತ್ ಕುಮಾರ್ ಹಬ್ಬು ಇದ್ದರು. - [ಅನ್ಯಾಯದ ವಿರುದ್ಧ ದೂರು ಕೊಡಿ!](https://mobiletime.in/2025/10/complain-against-injustice/): ಸರ್ಕಾರಿ ಕಚೇರಿಯಲ್ಲಿ ಕೆಲಸ ಮಾಡುವ ಅಧಿಕಾರಿಗಳು ಕಿರಿಯ ನೌಕರರಿಗೆ ಕಿರುಕುಳ ನೀಡಿದರೆ ಜನಸಾಮಾನ್ಯರ ಸಮಾಜ ಕಲ್ಯಾಣ ಕೇಂದ್ರಕ್ಕೆ ಮಾಹಿತಿ ಕೊಡುವಂತೆ ಕೇಂದ್ರದ ಅಧ್ಯಕ್ಷ ಆಗ್ನೇಲ್ ರೋಡ್ರಿಗಸ್ ಮನವಿ ಮಾಡಿದ್ದಾರೆ. `ಅನೇಕ ಬಾರಿ ಮೇಲಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ದಾಖಲೆ ತಿದ್ದುಪಡಿ, ನ್ಯಾಯದ ವಿರುದ್ಧ ಕೆಲಸ ಮಾಡುವಂತೆ ಒತ್ತಡ ತರುತ್ತಾರೆ. ಅಂಥ ಸನ್ನಿವೇಶದಲ್ಲಿ ಸಣ್ಣ ನೌಕರರಿಯಲ್ಲಿರುವವರು ಕಿರುಕುಳ ಅನುಭವಿಸುತ್ತಾರೆ. ಸರ್ಕಾರಕ್ಕೆ ಮೋಸ ಮಾಡುವಂತೆ ಒತ್ತಡ ಬಂದಾಗ ಅದನ್ನು ಸಹಿಸದೇ ಜೀವಹಾನಿ ಮಾಡಿಕೊಳ್ಳುವ ಸಾಧ್ಯತೆ ಹೆಚ್ಚಿದ್ದು, ಅಂಥಹ ಕೆಲಸಗಳಿಗೆ ಮುಂದಾಗಬೇಡಿ’ ಎಂದು ಜನಸಾಮಾನ್ಯರ ಸಮಾಜ ಕಲ್ಯಾಣ ಕೇಂದ್ರದವರು ಮನವಿ ಮಾಡಿದ್ದಾರೆ. `ಈಚೆಗೆ ರಾಜ್ಯದ ಎಲ್ಲಡೆ ಭ್ರಷ್ಟ ಅಧಿಕಾರಿ ಹಾಗೂ ರಾಜಕಾರಣಿಗಳು ಅಧಿಕಾರ ದುರುಪಯೋಗಪಡಿಸಿಕೊಳ್ಳುತ್ತಿದ್ದು, ಜನರಿಗೆ ಅನ್ಯಾಯ ಮಾಡುತ್ತಿದ್ದಾರೆ. ಪರಿಣಾಮ ಕೆಳಹಂತದ ಹೊರಗುತ್ತಿಗೆ ನೌಕರರು ಸಮಸ್ಯೆ ಅನುಭವಿಸುತ್ತಿದ್ದಾರೆ. ಅಂಥ ನೌಕರರು ಹೆದರದೇ 7892221590ಗೆ ಫೋನ್ ಮಾಡಬಹುದು’ ಎಂದು ಸಾಮಾಜಿಕ ಕಾರ್ಯಕರ್ತ ಸುಧಾಕರ ನಾಯ್ಕ ಅವರು ಹೇಳಿದ್ದಾರೆ. - [ಸ್ವಾಮೀಜಿಗಳ ಸಾನಿಧ್ಯದಲ್ಲಿ ಸಂಕಲ್ಪ ಉತ್ಸವ.. ಐದು ದಿನವೂ ಸಂಸ್ಕೃತಿಯ ಸುಗ್ಗಿ!](https://mobiletime.in/2025/10/sankalpa-utsav-in-the-presence-of-swamiji-a-harvest-of-culture-for-five-days/): ತಾಳಮದ್ದಲೆ, ಯಕ್ಷಗಾನ, ಭರತನಾಟ್ಯ ಸೇರಿ ಬಗೆ ಬಗೆಯ ಮನರಂಜನಾ ಕಾರ್ಯಕ್ರಮಗಳ ಜೊತೆ ಈ ಬಾರಿಯ ಸಂಕಲ್ಪ ಉತ್ಸವ ಐದು ಸ್ವಾಮೀಜಿಯವರ ಸಾನಿಧ್ಯಕ್ಕೆ ಸಾಕ್ಷಿಯಾಗಲಿದೆ. ಸಂಕಲ್ಪ ಉತ್ಸವದ ಮೊದಲ ದಿನವಾದ ಅಕ್ಟೋಬರ್ 31ರಂದು ಸಂಜೆ 5.30ಕ್ಕೆ ಸ್ವರ್ಣವಲ್ಲೀ ಶ್ರೀಗಳು ಉತ್ಸವದ ವೇದಿಕೆಗೆ ಬರಲಿದ್ದಾರೆ. ಅವರ ಜೊತೆ ಎಡನೀರು ಶ್ರೀಗಳು ಸೇರಿ ಉತ್ಸವವನ್ನು ಉದ್ಘಾಟಿಸಲಿದ್ದಾರೆ. 5 ದಿನದ ಉತ್ಸವದಲ್ಲಿ ಶಿರಳಗಿ ಬ್ರಹ್ಮಾನಂದ ಭಾರತಿ ಶ್ರೀಗಳು, ಬಾರ್ಕೂರು ಶ್ರೀಗಳು, ನೆಲೆಮಾವು ಶ್ರೀಗಳು ಹಾಗೂ ರಾಘವೇಶ್ವರ ಭಾರತೀ ಸ್ವಾಮೀಜಿ ಭಾಗವಹಿಸಲಿದ್ದಾರೆ. ಯಲ್ಲಾಪುರದ ಸಂಕಲ್ಪ ಸೇವಾ ಸಂಸ್ಥೆ ಕಳೆದ 38 ವರ್ಷಗಳಿಂದ `ಸಂಕಲ್ಪ ಉತ್ಸವ’ ನಡೆಸುತ್ತಿದೆ. 39ನೇ ವರ್ಷದ ಉತ್ಸವ ಅಕ್ಟೊಬರ್ 31ರಿಂದ ನವೆಂಬರ್ 4ವರೆಗೆ ಪಟ್ಟಣದ ಗಾಂಧಿ ಕುಟೀರದಲ್ಲಿ ನಡೆಯಲಿದೆ. `ರಾಜ್ಯದಲ್ಲಿಯೇ ನಿರಂತರವಾಗಿ ಸಾಂಸ್ಕೃತಿಕ ತೇರನ್ನೆಳೆಯುತ್ತಿರುವ ಕೆಲವೇ ಸಂಸ್ಥೆಗಳಲ್ಲಿ ಸಂಕಲ್ಪವೂ ಒಂದಾಗಿದೆ. ಕನ್ನಡ ಜೀವನ ಹಬ್ಬ ಸಂಸ್ಕೃತಿಯ ಸುಗ್ಗಿ ಇದಾಗಿದ್ದು, ನಾಡಿನ ನೂರಾರು ಕಲಾವಿದರನ್ನು ಬೆಳೆಸಿದ ಹೆಗ್ಗಳಿಕೆ ಹೊಂದಿದೆ’ ಎಂದು ಸಂಕಲ್ಪ ಸಂಸ್ಥೆ ಅಧ್ಯಕ್ಷ ಪ್ರಮೋದ ಹೆಗಡೆ ಹೇಳಿದ್ದಾರೆ. `ಯಕ್ಷಗಾನ, ತಾಳಮದ್ದಲೆ, ಭರತನಾಟ್ಯ, ಕೀರ್ತನೆ, ಸಂಗೀತ, ನಾಟಕ, ಗಮಕ ವಾಚನ, ಭಜನೆ ನಡೆಯಲಿದೆ. ಪುಸ್ತಕ ಬಿಡುಗಡೆ, ರಾಷ್ಟ್ರಭಕ್ತಿ ಕಾರ್ಯಕ್ರಮ, ನಿವೃತ್ತ ಸೈನಿಕರಿಗೆ, ಸಾಧಕರಿಗೆ ಸನ್ಮಾನ, ಪುರಾಣ ಲಹರಿ ಕಾರ್ಯಕ್ರಮ ನಡೆಯಲಿದೆ. ಗೋ ಉತ್ಪನ್ನ ಮಳಿಗೆ, ಆಯುರ್ವೇದ ತಪಾಸಣಾ ಶಿಬಿರ ಆಯೋಜಿಸಲಾಗಿದೆ. ತಮ್ಮ ಪುತ್ರರಾದ ಪ್ರಶಾಂತ ಹೆಗಡೆ ಹಾಗೂ ಪ್ರಸಾದ ಹೆಗಡೆ ಸೇರಿ ಈ ಎಲ್ಲಾ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ’ ಎಂದು ವಿವರಿಸಿದರು. ಸಂಕಲ್ಪ ಸಂಸ್ಥೆಯ ಸಂಚಾಲಕ ಪ್ರಸಾದ ಹೆಗಡೆ ಮಾತನಾಡಿ `ಈ ಬಾರಿ ವಿವಿಧ ಕ್ಷೇತ್ರಗಳ ಸಾಧಕರಾದ ಬಿ ಎನ್ ವಾಸರೆ, ರಾಮನಾಥ ಭಟ್ಟ, ಯಮುನಾ ನಾಯ್ಕ, ಕಲ್ಲಪ್ಪ ನಾಯ್ಕ, ನರಸಿಂಹ ಸಾತೊಡ್ಡಿ, ಸುಬ್ರಾಯ ಬಿದ್ರೆಮನೆ, ಚಿದಾನಂದ ಹರಿಜನ, ಡಾ ನಾರಾಯಣ ಹುಳ್ಸೆ ಅವರಿಗೆ ಸಂಕಲ್ಪ ಪ್ರಶಸ್ತಿ ನೀಡಿ ಗೌರವಿಸಲಾಗತ್ತದೆ’ ಎಂದರು. ಸಂಸ್ಥೆಯ ಸದಸ್ಯ ಸಿ ಜಿ ಹೆಗಡೆ ಮಾತನಾಡಿ `ಪ್ರತಿ ದಿನ ಸುಬ್ರಹ್ಮಣ್ಯ ಚಿಟ್ಟಾಣಿ ಅವರ ನೇತೃತ್ವದಲ್ಲಿ ಪ್ರಸಿದ್ಧ ಕಲಾವಿದರಿಂದ ಬಬ್ರುವಾಹನ, ಗದಾಯುದ್ಧ, ಕಾಳಿದಾಸ, ದ್ರೌಪದಿ ಪ್ರತಾಪ, ಪಾಂಚಜನ್ಯ ಯಕ್ಷಗಾನ ಪ್ರದರ್ಶನ ನಡೆಯಲಿದೆ’ ಎಂಬ ಮಾಹಿತಿ ತಿಳಿಸಿದರು. ಸಂಸ್ಥೆಯ ಸದಸ್ಯ ಬಾಬು ಬಾಂದೇಕರ್ ಇದ್ದರು. - [ಕಳಪೆ ಕಾಮಗಾರಿ ಬಗ್ಗೆ ಕಾಗೇರಿ ಬೇಸರ!](https://mobiletime.in/2025/10/kageri-is-upset-about-the-poor-workmanship/): ಉತ್ತರ ಕನ್ನಡ ಜಿಲ್ಲೆಯಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳ ಬಗ್ಗೆ ಸಂಸದ ವಿಶ್ವೇಶ್ವರ ಹೆಗಡೆ ತೀವೃ ಪ್ರಮಾಣದಲ್ಲಿ ಅಸಮಧಾನವ್ಯಕ್ತಪಡಿಸಿದ್ದಾರೆ. `ಕಾಶ್ಮೀರದ ಚಿನಾಬ್‌ನಂಥ ದುರ್ಗಮ ಪ್ರದೇಶದಲ್ಲಿ ವಿಶ್ವದ ಅತ್ಯಂತ ಎತ್ತರದ ರೈಲ್ವೆ ಸೇತುವೆಯನ್ನು ನಿಗಧಿತ ಅವಧಿಯೊಳಗೆ ಮುಕ್ತಾಯಗೊಳಿಸಲಾಗುತ್ತಿದೆ. ಆದರೆ, ಉತ್ತರ ಕನ್ನಡ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳು ಕಾಲಮಿತಿ ಮೀರಿದರೂ ಮುಕ್ತಾಯವಾಗುತ್ತಿಲ್ಲ’ ಎಂದವರು ತಮ್ಮ ಬೇಸರವ್ಯಕ್ತಪಡಿಸಿದ್ದಾರೆ. ಜಿಲ್ಲಾಧಿಕಾರಿ ಕಚೇರಿಯಲ್ಲಿ ಅಧಿಕಾರಿಗಳ ಸಭೆ ನಡೆಸಿದ ಅವರು ಅಸ್ತವ್ಯಸ್ಥ ಹೆದ್ದಾರಿಗಳ ಬಗ್ಗೆ ಸಮಗ್ರ ವರದಿ ವಾಚಿಸಿದರು. `ಬಹುತೇಕ ರಸ್ತೆಗಳು ಗುಂಡಿಮಯವಾಗಿದ್ದು, ವಾಹನಗಳ ಸುಗಮ ಸಂಚಾರಕ್ಕೆ ಅಡಚಣೆಯಾಗಿವೆ. ರಸ್ತೆ ಹದಗೆಟ್ಟಿರುವ ಬಗ್ಗೆ ಜನ ಸರ್ಕಾರವನ್ನು ಟೀಕಿಸುತ್ತಿದ್ದಾರೆ. ಜನರ ಅಭಿಪ್ರಾಯ ಆಡಳಿತ ವರ್ಗಕ್ಕೆ ಕಪ್ಪು ಚುಕ್ಕೆಯಾಗಿದೆ’ ಎಂದು ಕಾಗೇರಿ ಹೇಳಿದ್ದಾರೆ. `ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಜನರ ಜೀವದ ಜತೆ ಆಟವಾಡದೇ ರಸ್ತೆ ಗುಂಡಿಗಳನ್ನು ಮುಚ್ಚುವ ಕೆಲಸ ಮಾಡಬೇಕು. ರಸ್ತೆಯ ತಿರುವುಗಳಲ್ಲಿ ಸೂಚನಾ ಫಲಕ ಹಾಗೂ ರಿಪ್ಲೆಕ್ಟರ್ ಅಳವಡಿಸುವ ಮೂಲಕ ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸಬೇಕು’ ಎಂದವರು ಸೂಚಿಸಿದ್ದಾರೆ. `ಯಲ್ಲಾಪುರದ ಅರಬೈಲ್ ಘಾಟ್‌ನ ತಿರುವಿನಲ್ಲಿ ಪದೇ ಪದೇ ಅಪಘಾತವಾಗುತ್ತಿದೆ. ಈ ಕುರಿತು ಗಮನ ಹರಿಸದ ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳು ಅಪಘಾತ ವಲಯವನ್ನು ಬಿಟ್ಟು ಬೇರೆ ಕಡೆ ದುರಸ್ತಿ ಕಾರ್ಯ ಮಾಡಿ ಏನು ಪ್ರಯೋಜನ? ಎಂದು ವಿಶ್ವೇಶ್ವರ ಹೆಗಡೆ ಕಾಗೇರಿ ಪ್ರಶ್ನಿಸಿದ್ದಾರೆ. `ಅಪಘಾತವಾಗುವ ಸ್ಥಳಗಳಲ್ಲಿನ ರಸ್ತೆ ತಿರುವನ್ನು ಅಗಲೀಕರಣ ಮಾಡಬೇಕು’ ಎಂದು ಅವರು ಸೂಚಿಸಿದ್ದಾರೆ. `ರಾಷ್ಟ್ರೀಯ ಹೆದ್ದಾರಿ, ಆರ್‌ಬಿಐ ಸಂಸ್ಥೆಯ ಅಧಿಕಾರಿಗಳು ಮತ್ತು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ರಾಷ್ಟ್ರೀಯ ಹೆದ್ದಾರಿ 66ರ ಕಾಮಗಾರಿಯನ್ನು ಶೀಘ್ರವಾಗಿ ಪೂರ್ಣಗೊಳಿಸಬೇಕು. ಚಿಕ್ಕ ಪುಟ್ಟ ಸಮಸ್ಯೆಗಳಿದ್ದರೆ ಜಿಲ್ಲಾಧಿಕಾರಿಗಳ ಗಮನಕ್ಕೆ ತರಬೇಕು. ಯಾವುದೇ ಕಾರಣಕ್ಕೂ ನಿರ್ಲಕ್ಷö್ಯಸಹಿಸುವುದಿಲ್ಲ’ ಎಂದವರು ಎಚ್ಚರಿಸಿದ್ದಾರೆ. ಹೆಚ್ಚು ಅಪಘಾತ ಸಂಭವಿಸುವ ಸ್ಥಳಗಳನ್ನು ಗುರುತಿಸಿ ಅಪಘಾತಗಳಿಗೆ ಕಾರಣಗಳ ಕುರಿತ ವರದಿಯನ್ನು ಸಂಬoಧಪಟ್ಟ ಅಧಿಕಾರಿಗಳಿಗೆ ಸಲ್ಲಿಸುವಂತೆ ಸಂಸದರು ಪೊಲೀಸ್ ಇಲಾಖೆಗೆ ಸೂಚಿಸಿದರು. `ಪೊಲೀಸ್ ಇಲಾಖೆಯಿಂದ ಗುರುತಿಸಿರುವ ಸ್ಥಳಗಳಲ್ಲಿ ಸ್ಪಷ್ಟವಾಗಿ ಗೋಚರಿಸುವಂತೆ ಸೂಚನಾ ಫಲಕ ಮತ್ತು ರಿಪ್ಲೆಕ್ಟರ್‌ಗಳನ್ನು ಅಳವಡಿಸಬೇಕು’ ಎಂದು ನಿರ್ದೇಶಿಸಿದರು. `ಹೆದ್ದಾರಿಗಳಲ್ಲಿ ಬೀಡಾಡಿ ದನಗಳಿಂದ ಅಪಘಾತಗಳಾಗುವುದನ್ನು ತಡೆಯುವ ನಿಟ್ಟಿನಲ್ಲಿ ಮುಂಜಾಗ್ರತ್ತಾ ಕ್ರಮವಾಗಿ ವಾರಸುದಾರರು ಇಲ್ಲದಿರುವ ಬೀಡಾಡಿ ದನಗಳನ್ನು ನಿಯಂತ್ರಿಸಬೇಕು’ ಎಂದು ಪಶುಪಾಲನಾ ಇಲಾಖೆ ಹಾಗೂ ನಗರ ಸ್ಥಳೀಯ ಸ್ಥಳೀಯ ಸಂಸ್ಥೆಗಳಿಗೆ ತಿಳಿಸಿದರು. `ಪ್ರಸ್ತುತ ನಡೆಯುತ್ತಿರುವ ರಾಷ್ಟ್ರೀಯ ಹೆದ್ದಾರಿ, ಲೋಕೋಪಯೋಗಿ ಇಲಾಖೆ ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಕಾಮಗಾರಿಗಳಲ್ಲಿ ಕಳಪೆ ಗುಣಮಟ್ಟ ಕಂಡುಬoದಲ್ಲಿ ಅದನ್ನು ಸಹಿಸುವುದಿಲ್ಲ. ಕಾಮಗಾರಿಯಲ್ಲಿ ನಿರ್ಲಕ್ಷತನ ತೋರುವ ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಿ’ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಸೂಚಿಸಿದರು. `ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳು ಜಿಲ್ಲೆಗೆ ಶಾಪವಾಗಿ ಪರಿಣಮಿಸಿವೆ. ಕಾಮಗಾರಿ ಆರಂಭಗೊoಡು ಇಷ್ಟು ವರ್ಷಗಳು ಕಳೆದರೂ ಇನ್ನೂ ಸಂಪೂರ್ಣವಾಗಿಲ್ಲ. ರಸ್ತೆ ಅಪಘಾತಗಳಿಂದ ಜನರು ಸಾವಿಗೀಡಾಗುತ್ತಿದ್ದಾರೆ. ಇದರಿಂದಾಗಿ ಜಿಲ್ಲೆಯ ಎಲ್ಲಾ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಸಾರ್ವಜನಿಕರಿಂದ ನಿರಂತರ ಟೀಕೆಗಳನ್ನು ಎದುರಿಸುತ್ತಿದ್ದಾರೆ’ ಎಂದು ತೀವ್ರ ಅಸಮಧಾನ ವ್ಯಕ್ತಪಡಿಸಿದರು. ಸಭೆಯಲ್ಲಿ ಜಿಲ್ಲಾಧಿಕಾರಿ ಕೆ ಲಕ್ಷ್ಮೀಪ್ರಿಯಾ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ದಿಲೀಷ್ ಶಶಿ, ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ.ಎನ್, ಅಪರ ಜಿಲ್ಲಾಧಿಕಾರಿ ಸಾಜಿದ್ ಮುಲ್ಲಾ,  ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕ ಶಿವಕುಮಾರ್ ಹಾಗೂ ಹೆದ್ದಾರಿ, ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಮತ್ತಿತರರು ಇದ್ದರು. - [ಟೇಬಲ್ ಟೆನ್ನಿಸ್: YTSS ವಿದ್ಯಾರ್ಥಿನಿಯರ ಸಾಧನೆ](https://mobiletime.in/2025/10/table-tennis-achievements-of-ytss-students/): ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಯಲ್ಲಾಪುರದ YTSS ಶಿಕ್ಷಣ ಸಂಸ್ಥೆ ಶ್ರಮಿಸುತ್ತಿದ್ದು, ಅಲ್ಲಿನ ಮಕ್ಕಳು ಸಹ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡುತ್ತಿದ್ದಾರೆ. ಸದ್ಯ ಶಿರಸಿಯಲ್ಲಿ ನಡೆದ ಜಿಲ್ಲಾ ಮಟ್ಟದ ಸ್ಪರ್ಧೆಯಲ್ಲಿಯೂ ಉತ್ತಮ ಸಾಧನೆ ಮಾಡಿದ ವೈಟಿಎಸ್‌ಎಸ್ ವಿದ್ಯಾರ್ಥಿನಿಯರು ನಿರ್ಣಾಯಕರ ಮನಗೆದ್ದಿದ್ದಾರೆ. 14 ವರ್ಷದ ಒಳಗಿನ ಮಕ್ಕಳಿಗಾಗಿ ಶಿರಸಿಯಲ್ಲಿ ಟೇಬಲ್ ಟೆನ್ನಿಸ್ ಸ್ಪರ್ಧೆ ನಡೆದಿದೆ. ಇದರಲ್ಲಿ ವೈಟಿಎಸ್‌ಎಸ್ ಆಂಗ್ಲ ಮಾಧ್ಯಮ ಶಾಲೆಯ ಐವರು ವಿದ್ಯಾರ್ಥಿನಿಯರು ಭಾಗವಹಿಸಿ ಬಹುಮಾನಪಡೆದಿದ್ದಾರೆ. ಇಲ್ಲಿನ ಶರಧಿ ಮೊಗೇರ್, ರೇಣುಕಾ ಶಿರೂರ್, ಅವನಿ ಜಾಧವ, ಅದಿತಿ ಜೋಗಿ, ಅನಿಷಾ ಭಟ್ ಅವರು ತಾಲೂಕಾ ಮಟ್ಟದ ಸ್ಪರ್ಧೆಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದರು. ಹೀಗಾಗಿ ಅವರನ್ನು ಜಿಲ್ಲಾಮಟ್ಟದ ಟೇಬಲ್ ಟೆನ್ನಿಸ್ ಸ್ಪರ್ಧೆಗೆ ಕಳುಹಿಸಲಾಗಿತ್ತು. ಅಲ್ಲಿಯೂ ಅವರು ಅತ್ಯುತ್ತಮ ಪ್ರದರ್ಶನ ನೀಡಿ ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸುವ ಅರ್ಹತೆಪಡೆದಿದ್ದಾರೆ. ಜಿಲ್ಲಾಮಟ್ಟದ ಟೇಬಲ್ ಟೆನ್ನಿಸ್ ಸ್ಪರ್ಧೆ ಈ ಐವರ ತಂಡ ಮೊದಲ ಸ್ಥಾನಪಡೆದಿದೆ. ಈ ಎಲ್ಲಾ ಮಕ್ಕಳನ್ನು ಶಿಕ್ಷಕರು ಹಾಗೂ ಪಾಲಕರು ಅಭಿನಂದಿಸಿದ್ದಾರೆ. ಜೊತೆಗೆ `ರಾಜ್ಯಮಟ್ಟದ ಸ್ಪರ್ಧೆಯಲ್ಲಿಯೂ ವೈಟಿಎಸ್‌ಎಸ್ ಸಂಸ್ಥೆ ಮಕ್ಕಳು ಬಹುಮಾನ ಗೆದ್ದುಬರಲಿ’ ಎಂದು ಶಾಲಾ ಆಡಳಿತ ಮಂಡಳಿಯವರು ಹಾರೈಸಿದ್ದಾರೆ. `ಶಾಲೆಯಲ್ಲಿ ಮಕ್ಕಳ ಸಾಧನೆಗೆ ಪೂರಕವಾದ ಪ್ರೋತ್ಸಾಹ ದೊರೆಯುತ್ತಿದೆ. ಶೈಕ್ಷಣಿಕ ಚಟುವಟಿಕೆಗಳ ಜೊತೆ ಕ್ರೀಡಾ ಚಟುವಟಿಕೆಗಳಿಗೂ ಒತ್ತು ನೀಡಿದ ಪರಿಣಾಮ ಮಕ್ಕಳು ರಾಜ್ಯಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ’ ಎಂದು ವೈ ಟಿ ಎಸ್ ಎಸ್‌ನ ಮಾಜಿ ವಿದ್ಯಾರ್ಥಿನಿಯೂ ಆಗಿರುವ ನ್ಯಾಯವಾದಿ ಅಮೀನಾ ಶೇಖ್ ಅವರು ತಿಳಿಸಿದರು. - [2025ರ ಅಕ್ಟೊಬರ್ 15ರ ದಿನ ಭವಿಷ್ಯ](https://mobiletime.in/2025/10/prediction-for-october-15-2025/): ಮೇಷ ರಾಶಿ: ನೀವು ಮಾಡುವ ಹೊಸ ಪ್ರಯತ್ನಗಳು ಯಶಸ್ಸು ಕಾಣಲಿದೆ. ಕುಟುಂಬದಲ್ಲಿ ಸಂತೋಷ ವಾತಾವರಣ ಮೂಡಿಬರಲಿದೆ. ಸ್ನೇಹಿತರ ಜೊತೆ ಸಂಭಾಷಣೆ ಮಾಡಿದರೆ ಸಹಾಯ ಆಗುತ್ತದೆ. ವೃಷಭ ರಾಶಿ: ಆರೋಗ್ಯದ ಕಡೆ ಗಮನಹರಿಸುವುದು ಮುಖ್ಯ. ಆರ್ಥಿಕ ವಿಷಯದಲ್ಲಿ ಯಶಸ್ಸು ಸಿಗಲಿದೆ. ಕೆಲಸದ ವಿಷಯದಲ್ಲಿ ಜಾಗೃತಿವಹಿಸಿ. ಮಿಥುನ ರಾಶಿ: ಹಳೆಯ ಸ್ನೇಹಿತರ ಸಂಪರ್ಕ ಸಾಧ್ಯವಿದೆ. ಬಾಕಿ ಕೆಲಸಗಳು ಪೂರ್ಣವಾಗಲಿದೆ. ವ್ಯವಹಾರದಲ್ಲಿ ಲಾಭ ಸಿಗಲಿದೆ. ಕರ್ಕ ರಾಶಿ: ಆರೋಗ್ಯದಲ್ಲಿ ಸುಧಾರಣೆ ಆಗಲಿದೆ. ಹೊಸ ಜವಾಬ್ದಾರಿಗಳು ನಿಮಗೆ ಸಿಗಲಿದೆ. ಹಣಕಾಸು ಒತ್ತಡ ಕಡಿಮೆ ಆಗಲಿದ್ದು, ಕುಟುಂಬದಲ್ಲಿಯೂ ಸಾಮರಸ್ಯ ಮೂಡಲಿದೆ. ಸಿಂಹ ರಾಶಿ: ಮಕ್ಕಳ ವಿಷಯವಾಗಿ ಸಂತೋಷ ಮೂಡಲಿದೆ. ಕೆಲಸದ ವಿಷಯದಲ್ಲಿ ತೃಪ್ತಿ ಸಿಗಲಿದೆ. ಸ್ನೇಹಿತರ ಸಹಾಯ ಸ್ಮರಿಸಿ. ಕನ್ಯಾ ರಾಶಿ: ಆರೋಗ್ಯದಲ್ಲಿ ಏರಿಳಿತ ಸಾಮಾನ್ಯ. ನಿಮ್ಮ ವ್ಯವಹಾರ ವೃದ್ಧಿಗಾಗಿ ಡಿಜಿಟಲ್ ವೇದಿಕೆಗಳನ್ನು ಬಳಸಿಕೊಳ್ಳಿ. ಕುಟುಂಬದ ಜೊತೆ ಮುಕ್ತವಾಗಿ ಮಾತನಾಡಿ. ತುಲಾ ರಾಶಿ: ವೃತ್ತಿಯಲ್ಲಿ ಬದಲಾವಣೆ ಸಾಧ್ಯವಿದ್ದು, ಹೊಸ ಸಂಪರ್ಕಗಳು ಲಾಭ ತರಲಿದೆ. ಪ್ರೀತಿ-ಪ್ರೇಮದ ವಿಷಯಗಳು ಸರಿಯಾಗಿ ಕೂಡಿ ಬರಲಿದೆ. ಆರ್ಥಿಕ ಪರಿಸ್ಥಿತಿ ಸುಧಾರಣೆ ಆಗಲಿದೆ. ವೃಶ್ಚಿಕ ರಾಶಿ: ಉದ್ಯೋಗದಲ್ಲಿ ಪ್ರಗತಿ ಕಾಣಲಿದೆ. ನಿಮ್ಮ ಯೋಜನೆಗಳು ಪೂರ್ಣವಾಗಲಿದೆ. ಆಹಾರ ಸೇವನೆ ವಿಷಯದಲ್ಲಿ ಮುನ್ನಚ್ಚರಿಕೆ ಅಗತ್ಯ. ಧನು ರಾಶಿ: ನಿಮ್ಮ ಕೆಲಸದ ವಿಷಯದಲ್ಲಿ ಶ್ರಮ ಅಗತ್ಯ. ವ್ಯಾಪಾರದಲ್ಲಿನ ಒಪ್ಪಂದಗಳು ಕೈಗೂಡಲಿದೆ. ಕುಟುಂಬದಲ್ಲಿನ ಒಡನಾಟ ಆಪ್ತವಾಗಿರಲಿದೆ. ಮಕರ ರಾಶಿ: ಈ ದಿನ ಜಗಳ ಮಾಡಿದರೆ ವಿಕೋಪಕ್ಕೆ ತೆರಳುವ ಸಾಧ್ಯತೆಗಳಿವೆ. ಹಣಕಾಸು ವಿಷಯದಲ್ಲಿ ಸುಧಾರಣೆ ಸಾಧ್ಯವಿದೆ. ಯಾವುದೇ ನಿರ್ಧಾರ ತೆಗೆದುಕೊಳ್ಳುವ ಮುನ್ನ ಯೋಚಿಸಿ. ಕುಂಭ ರಾಶಿ: ಉದ್ಯೋಗದಲ್ಲಿ ಬದಲಾವಣೆ ಲಕ್ಷಣಗಳಿವೆ. ಉದ್ಯೋಗ ಸ್ಥಳದಲ್ಲಿ ಒತ್ತಡಗಳು ಬರಲಿದೆ. ಮನೆಯಲ್ಲಿನ ಸಮಸ್ಯೆಗಳು ದೂರವಾಗಲಿದೆ. ಮೀನ ರಾಶಿ: ಕೆಲಸದಲ್ಲಿ ಒತ್ತಡ ಕಡಿಮೆ ಆಗಲಿದ್ದು, ನಿಮ್ಮ ಕೆಲಸ ಬೇರೆಯವರ ಗಮನಸೆಳೆಯುತ್ತದೆ. ಹಣಕಾಸು ವ್ಯವಹಾರದಲ್ಲಿ ಎಚ್ಚರಿಕೆವಹಿಸಿ. ಕುಟುಂಬದಲ್ಲಿ ಸಂತೋಷ ವಾತಾವರಣ ಸಿಗಲಿದೆ. - [ವಿಚಾರಣೆಯಿಲ್ಲದೇ ಮುಂದೂಡಿಕೆ: ದೆಹಲಿಗೆ ದೌಡಾಯಿಸಿದ್ದ ವಕೀಲರಿಗೆ ನಿರಾಸೆ!](https://mobiletime.in/2025/10/adjournment-without-hearing-lawyers-who-rushed-to-the-court-are-disappointed/): ಅರಣ್ಯ ಹಕ್ಕು ಕಾಯಿದೆಯ ಮೌಲ್ಯತೆ ಮತ್ತು ತಿರಸ್ಕರಿಸಿದ ಅರ್ಜಿಯ ಒಕ್ಕಲೆಬ್ಬಿಸುವ ಪ್ರಕರಣದ ವಿಷಯವಾಗಿ ವಾದ ಮಂಡಿಸಲು ದೆಹಲಿಗೆ ಹೋಗಿದ್ದ ಶಿರಸಿಯ ನ್ಯಾಯವಾದಿ ರವೀಂದ್ರ ನಾಯ್ಕ ಅವರಿಗೆ ನಿರಾಸೆಯಾಗಿದೆ. ಅಕ್ಟೊಬರ್ 14ರಂದು ನಡೆಯಬೇಕಿದ್ದ ಪ್ರಕರಣದ ವಿಚಾರಣೆಯನ್ನು ತ್ರಿಸದಸ್ಯ ನ್ಯಾಯಮೂರ್ತಿಗಳ ಪೀಠ ಮುಂದೂಡಿದೆ. ಎಲ್ಲವೂ ಅಂದುಕೊoಡoತೆ ನಡೆದಿದ್ದರೆ, ಈ ದಿನ ಸರ್ವೋಚ್ಛ ನ್ಯಾಯಾಲಯದ ನ್ಯಾಯಮೂರ್ತಿಗಳಾದ ಸೂರ್ಯಕಾಂತ, ಜಾಯಿಮಲ್ಯ ಮತ್ತು ಬಜಾಶಿ ಒಳಗೊಂಡ ತ್ರಿ ಸದಸ್ಯತ್ವ ನ್ಯಾಯಪೀಠದಲ್ಲಿ ವಿಚಾರಣೆ ಆಗಬೇಕಿತ್ತು. ನ್ಯಾಯಪೀಠದಲ್ಲಿ ವಿಚಾರಣೆಯ ಕ್ರಮ ಸಂಖ್ಯೆ ಸಹ ನಿಗಧಿಯಾಗಿದ್ದು, ಸಂಖ್ಯೆ 41ಕ್ಕಾಗಿ ಎಲ್ಲರೂ ಕಾಯುತ್ತಿದ್ದರೂ ಸಮಯದ ಅಭಾವದ ಕಾರಣದಿಂದ ಈ ದಿನ ಆ ಪ್ರಕರಣ ವಿಚಾರಣೆಗೆ ಬರಲಿಲ್ಲ. ಅರಣ್ಯ ಹಕ್ಕು ಕಾಯಿದೆ ಮೌಲ್ಯತೆ ರದ್ದು ಪಡಿಸುವ ಉದ್ದೇಶದಿಂದ 2008ರಲ್ಲಿ ವೈಲ್ಡ ಲೈಪ್ ಪಸ್ಟ್ ಸೊಸೈಟಿ ಮತ್ತು ಇನ್ನಿತರ 8 ಪರಿಸರ ಸಂಘಟನೆಗಳು ಸುಪ್ರೀಂ ಕೋರ್ಟಗೆ ಅರ್ಜಿ ಸಲ್ಲಿಸಿದ್ದವು. ಕೇಂದ್ರ ಸರ್ಕಾರ ಮತ್ತು ದೇಶದ 31 ರಾಜ್ಯಗಳ ವಿರುದ್ಧ ಸಲ್ಲಿಕೆಯಾದ ಅರ್ಜಿಗೆ ಈ ದಿನ ಅಂತಿಮ ವಿಚಾರಣೆ ನಡೆಸಲು ದಿನಾಂಕ ನಿಗದಿಯಾಗಿತ್ತು. ಸದ್ಯ ವಿಚಾರಣೆಯ ಹೊಸ ದಿನಾಂಕ ಪ್ರಕಟವಾಗಬೇಕಿದೆ. - [ಅಗ್ನಿ ಅವಘಡ: ಬಡವನ ಮನೆ ಸಾಮಗ್ರಿ ಭಸ್ಮ!](https://mobiletime.in/2025/10/fire-accident-poor-mans-house-burnt-to-ashes/): ಗೋಕರ್ಣದ ಗಂಗೆಕೊಳ್ಳದ ಮಾರುತಿ ತಾಂಡೇಲ ಅವರ ಮನೆಗೆ ಬೆಂಕಿ ಬಿದ್ದಿದೆ. ಪರಿಣಾಮ ಮನೆಯಲ್ಲಿದ್ದ ಹಣದ ಜೊತೆ ದಿನ ಬಳಕೆ ಉಪಕರಣಗಳು ಸುಟ್ಟು ಕರಕಲಾಗಿದೆ. ವಿವಿಧ ದಾಖಲೆಗಳು ಸಹ ಭಸ್ಮವಾಗಿದೆ. ಮಂಗಳವಾರ ಮುಂಜಾನೆ ಮಾರುತಿ ತಾಂಡೇಲ ಅವರು ಗಂಗಾಮಾತಾ ದೇವಾಲಯಕ್ಕೆ ಹೋಗಿದ್ದರು. ಅಲ್ಲಿ ನಡೆಯುವ ಶಿವ-ಗಂಗಾ ವಿವಾಹ ನಿಶ್ಚಿತಾರ್ಥ ಉತ್ಸವದ ಬಗ್ಗೆ ಅವರು ಮಾಹಿತಿಪಡೆಯುತ್ತಿದ್ದರು. ಆ ವೇಳೆ ಮನೆಗೆ ಬೆಂಕಿ ಬಿದ್ದ ಬಗ್ಗೆ ಅವರಿಗೆ ಫೋನ್ ಬಂದಿದ್ದು, ತಕ್ಷಣ ಅಲ್ಲಿಂದ ಓಡಿ ಬಂದರು. ಆದರೆ, ಅಷ್ಟರೊಳಗೆ ಮನೆಯೊಳಗಿದ್ದ ವಸ್ತುಗಳು ಕರಕಲಾಗಿದ್ದವು. ಮನೆಯ ಒಳಗಿದ್ದ ಎರಡು ಫ್ಯಾನ್, ಪ್ರಿಜ್, ರೇಷನ್ ಕಾರ್ಡ ಸೇರಿ ಅನೇಕ ಮುಖ್ಯ ವಸ್ತುಗಳು ಬೆಂಕಿಗೆ ಆಹುತಿಯಾದವು. ನಾಡುಮಾಸ್ಕೇರಿ ಗ್ರಾ ಪಂ ಅಧ್ಯಕ್ಷ ಈಶ್ವರ ಗೌಡ, ಉಪಾಧ್ಯಕ್ಷೆ ವಿಜಯಾ ನಾಯ್ಕ, ಸದಸ್ಯರಾದ ಚಂದ್ರಶೇಖರ ನಾಯ್ಕ, ನಾಗರಾಜ ತಾಂಡೇಲ ಇನ್ನಿತರರು ಮನೆಗೆ ಭೇಟಿ ನೀಡಿ, ನಷ್ಟ ಆದವರಿಗೆ ಸಮಾಧಾನ ಹೇಳಿದರು. ಅಗ್ನಿ ಅವಘಡಕ್ಕೆ ನಿಖರ ಕಾರಣ ಅರಿವಿಗೆ ಬರಲಿಲ್ಲ. - [ಸೆಲ್ಪಿ ರಾಣಿಯ ಸೊಕ್ಕು ಕರಗಿಸಿದ ಪೌರಾಡಳಿತ!](https://mobiletime.in/2025/10/selpi-ranis-arrogance-dissolved-municipal-administration/): ಅಂಕೋಲಾ ಪುರಸಭೆಯೊಳಗೆ ನಡೆದ ಅಕ್ರಮ-ಅವ್ಯವಹಾರಿಗಳ ವಿಷಯವಾಗಿ ಅಲ್ಲಿನ ಇಬ್ಬರು ಮಹಿಳಾ ಅಧಿಕಾರಿಗಳಿಗೆ ಸರ್ಕಾರ ಅಮಾನತು ಶಿಕ್ಷೆವಿಧಿಸಿದೆ. ಪುರಸಭೆ ಮುಖ್ಯಾಧಿಕಾರಿ ಎಚ್ ಅಕ್ಷತಾ ಹಾಗೂ ಕಿರಿಯ ಅಭಿಯಂತರರಾಗಿದ್ದ ಶೈಲಜಾ ನಾಯಕ ಅವರು ತಮಗಿದ್ದ ಅಧಿಕಾರದಿಂದ ಅಮಾನತಾಗಿದ್ದಾರೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಜಿಲ್ಲಾಧಿಕಾರಿಯಾಗಿಯೂ ಕೆಲಸ ಮಾಡಿರುವ ಪೌರಾಡಳಿತ ನಿರ್ದೇಶನಾಲಯದ ಶಿಸ್ತು ಪ್ರಾಧಿಕಾರಿ ಪ್ರಭುಲಿಂಗ್ ಕವಳಿಕಟ್ಟಿ ಆದೇಶ ಅವರಿಬ್ಬರ ಅಮಾನತು ಆದೇಶಕ್ಕೆ ಸಹಿ ಮಾಡಿದ್ದಾರೆ. ಅಂಕೋಲಾ ಪುರಸಭೆಯ ಮುಖ್ಯಾಧಿಕಾರಿ ಎಚ್ ಅಕ್ಷತಾ ಹಾಗೂ ಕಿರಿಯ ಅಭಿಯಂತರ ಶೈಲಜಾ ನಾಯಕ ಸೇರಿಕೊಂಡು ತಮ್ಮ ಅಧಿಕಾರ ದುರುಪಯೋಗಪಡಿಸಿಕೊಂಡಿರುವುದು ಸಾಭೀತಾದ ಹಿನ್ನಲೆ ಅವರು ಈ ಶಿಸ್ತು ಕ್ರಮ ಜರುಗಿಸಿದ್ದಾರೆ. ಪುರಸಭೆ ಅಧ್ಯಕ್ಷ ಸೂರಜ್ ನಾಯ್ಕ ಹಾಗೂ 19 ಸದಸ್ಯರು ಈ ಅಕ್ರಮದ ಬಗ್ಗೆ ಧ್ವನಿ ಎತ್ತಿ ಜಿಲ್ಲಾಧಿಕಾರಿ ಹಾಗೂ ಯೋಜನಾಧಿಕಾರಿಗಳಿಗೆ ದೂರು ಸಲ್ಲಿಸಿದ್ದರು. ದೂರಿನ ತನಿಖೆ ನಡೆಸಿದಾಗ ಅಕ್ರಮಗಳು ಕಾಣಿಸಿದ್ದವು. ತನಿಖೆ ವೇಳೆ ನೋಟಿಸ್ ನೀಡಿದರೂ ಮಹಿಳಾ ಅಧಿಕಾರಿಗಳಿಬ್ಬರೂ ಸರಿಯಾಗಿ ಸ್ಪಂದಿಸರಲಿಲ್ಲ. ಪ್ರಾಥಮಿಕ ತನಿಖೆಯಲ್ಲಿ ಲೋಪ ಎಸಗಿರುವ ಬಗ್ಗೆ ಸಾಭೀತಾದ ಹಿನ್ನೆಲೆ ಪೌರಾಡಳಿತ ನಿರ್ದೇಶನಾಯಲ ಕ್ರಮ ಜರುಗಿಸಿತು. - [ಕುಮಟಾ: ರಾಜ್ಯದ ಎಲ್ಲಡೆ ಭ್ರಷ್ಟರ ಭೇಟೆ!](https://mobiletime.in/2025/10/kumta-a-hunt-for-the-corrupt-everywhere-in-the-state/): ರಾಜ್ಯದ ಎಲ್ಲಡೆ ಭ್ರಷ್ಟರನ್ನು ಹುಡುಕಿ ಅವರ ಆಸ್ತಿ-ಪಾಸ್ತಿ ಜಪ್ತು ಮಾಡಿರುವ ಲೋಕಾಯುಕ್ತರು ಭ್ರಷ್ಟರ ನೆಂಟರ ಮನೆ-ಮಳಿಗೆ ಮೇಲೆಯೂ ದಾಳಿ ನಡೆಸಿದ್ದಾರೆ. ಹೀಗಾಗಿ ಕುಮಟಾದ ವೈಭವ ಪ್ಯಾಲೇಸ್ ಮೇಲೆಯೂ ಮಂಗಳವಾರ ಲೋಕಾಯುಕ್ತರ ಕಾರ್ಯಾಚರಣೆ ನಡೆದಿದೆ. ಉತ್ತರ ಕನ್ನಡ ಜಿಲ್ಲೆಯ ಕುಮಟಾ ಮೂಲದ ಎಲ್ ಪಿ ನಾಯ್ಕ ಅವರು ಉಡುಪಿಯಲ್ಲಿ ಪ್ರಾದೇಶಿಕ ಸಾರಿಗೆ ಅಧಿಕಾರಿಯಾಗಿದ್ದಾರೆ. ಆರ್ ಟಿ ಓ ಕಚೇರಿಯ ಎಲ್ಲಾ ವ್ಯವಹಾರ ನೋಡಿಕೊಳ್ಳುವ ಅವರು ತಮ್ಮ ಆದಾಯಕ್ಕೂ ಮೀರಿ ಆಸ್ತಿ ಮಾಡಿದ್ದಾರೆ. ಹೀಗಾಗಿ ಎಲ್ ಪಿ ನಾಯ್ಕ ಅವರ ಆಸ್ತಿ ಮೇಲೆ ಲೋಕಾಯುಕ್ತರು ಕಣ್ಣಾಡಿಸಿದ್ದಾರೆ. ಈ ವೇಳೆ ಸಾಕಷ್ಟು ಪ್ರಮಾಣದಲ್ಲಿ ಅಕ್ರಮ ಆಸ್ತಿ ಪತ್ತೆಯಾಗಿದೆ. ಇದರೊಂದಿಗೆ ಎಲ್ ಪಿ ನಾಯ್ಕ ಅವರು ಬೇನಾಮಿ ಹೆಸರಿನಲ್ಲಿಯೂ ದುಡ್ಡು ಮಾಡಿದ ಅನುಮಾನವಿದ್ದು, ಈ ಹಿನ್ನಲೆ ಅವರ ಆಪ್ತರ ಮನೆ-ಮಳಿಗೆ ಮೇಲೆಯೂ ದಾಳಿ ಮಾಡಿದ್ದಾರೆ. ಎಲ್ ಪಿ ನಾಯ್ಕ ಅವರ ಬಾವ ಶೈಲೇಶ ನಾಯ್ಕ ಅವರು ಕುಮಟಾದ ನೆಲ್ಲಿಕೇರಿಯಲ್ಲಿದ್ದಾರೆ. ಅವರು ವೈಭವ ಪ್ಯಾಲೇಸ್ ಎಂಬ ಮಳಿಗೆ ನಡೆಸುತ್ತಿದ್ದಾರೆ. ಲೋಕಾಯುಕ್ತ ಅಧಿಕಾರಿಗಳು ವೈಭವ ಪ್ಯಾಲೇಸ್ ಹಾಗೂ ಅದರ ಹಿಂದಿರುವ ನಿವಾಸದ ಮೇಲೆ ದಾಳಿ ಮಾಡಿ ವಿವಿಧ ದಾಖಲೆಗಳನ್ನು ಜಪ್ತು ಮಾಡಿದ್ದಾರೆ. ಸಮೀಪದ `ವರುಣ ಆರ್ಕೇಡಾ’ ಮೇಲೆಯೂ ಲೋಕಾಯುಕ್ತರು ದಾಳಿ ಮಾಡಿದ್ದು, ಅಲ್ಲಿಯೂ ಅನೇಕ ದಾಖಲೆಗಳನ್ನು ಪರಿಶೀಲಿಸಿದ್ದಾರೆ. ಅಕ್ರಮ ಸಂಪಾದನೆಯ ಸಂಪತ್ತುಗಳ ಹೂಡಿಕೆ ಪತ್ತೆಗಾಗಿ ಈ ದಾಳಿ ನಡೆದಿದೆ. ಮಂಗಳವಾರ ಸಂಜೆ ದಾಳಿ ಮುಕ್ತಾಯವಾಗಿದ್ದು, ಆ ವೇಳೆ ದೊಡ್ಡ ಬಾಕ್ಸಿನಲ್ಲಿ ಅಧಿಕಾರಿಗಳು ರಾಶಿ ರಾಶಿ ದಾಖಲೆಗಳನ್ನು ಒಯ್ದಿದ್ದಾರೆ. ದಾಳಿ ಅವಧಿಯಲ್ಲಿ ಸಿಕ್ಕಿದ ಅನುಮಾನಾಸ್ಪದ ವಸ್ತು-ವಿಷಯದ ರಹಸ್ಯ ಹೊರಬಿದ್ದಿಲ್ಲ. - [ಗುಡುಗು: ತಹಶೀಲ್ದಾರ್ ಕಚೇರಿಗೆ ಬರಸಿಡಿಲು!](https://mobiletime.in/2025/10/thunderstorm-lightning-strikes-the-tahsildars-office/): ಉತ್ತರ ಕನ್ನಡ ಜಿಲ್ಲೆಯ ಕೆಲಭಾಗದಲ್ಲಿ ಗುಡುಗುಸಹಿತ ಮಳೆಯಾಗಿದ್ದು, ಕುಮಟಾ ತಹಶೀಲ್ದಾರ್ ಕಚೇರಿಗೆ ಸಿಡಿಲು ಬಡೆದಿದೆ. ಪರಿಣಾಮ ಆಡಳಿತ ಸೌಧದ ನಾಮಫಲಕದ ಎರಡು ಅಕ್ಷರ ಕಣ್ಮರೆಯಾಗಿದೆ. ಗುರುವಾರ ಮಧ್ಯಾಹ್ನ ಕುಮಟಾದಲ್ಲಿ ಗುಡುಗುಸಹಿತ ಮಳೆ ಸುರಿಯಿತು. ಈ ನಡುವೆ ಸಿಡಿಲು ಕಾಣಿಸಿಕೊಂಡಿತು. ತಾಸುಗಳ ಕಾಲ ಸುರಿದ ಮಳೆಯಿಂದ ಜನ ಹೈರಣಾದರು. ಮೂರೂರು ರಸ್ತೆಯಲ್ಲಿರುವ ತಾಲೂಕಾ ಆಡಳಿತ ಸೌಧದ ಕಟ್ಟಡಕ್ಕೆ ಸಿಡಿಲು ಬಡಿದಿದ್ದು, ಕಟ್ಟಡದ ಮುಂದಿನ ಭಾಗಕ್ಕೆ ಹಾನಿ ಸಂಭವಿಸಿತು. ಅಲ್ಲಿ `ತಾಲೂಕಾ ಆಡಳಿತ ಸೌಧ’ ಹಾಗೂ `ಕುಮಟಾ’ ಎಂದು ಲಗತ್ತಿಸಿದ್ದ ಅಕ್ಷರಗಳು ಸಿಡಿಲಿಗೆ ತುಂಡಾದವು. ತಳಭಾಗ ಬಂದು ನೋಡಿದರೂ ಆ ಅಕ್ಷರಗಳು ಕಾಣಲಿಲ್ಲ. ಹೀಗಾಗಿ ಸಿಡಿಲಿನ ಆರ್ಭಟಕ್ಕೆ ಆ ಅಕ್ಷರಗಳು ಸುಟ್ಟಿರುವ ಶಂಕೆವ್ಯಕ್ತವಾಯಿತು. ಸಿಡಿಲಿನ ಅಬ್ಬರಕ್ಕೆ ತಾಲೂಕಾ ಆಡಳಿತ ಸೌಧದ ವಿದ್ಯುತ್ ಸಂಪರ್ಕ ಕಡಿತಗೊಂಡಿತು. ಹೀಗಾಗಿ ಸರ್ಕಾರಿ ಕಚೇರಿ ಒಳಭಾಗ ಕತ್ತಲು ಆವರಿಸಿದ್ದು, ಕೆಲಸ ಕಾರ್ಯಗಳಿಗೆ ಸಮಸ್ಯೆ ಆಯಿತು. ಮಳೆ ಜೋರಾಗಿದ್ದ ಕಾರಣ ಆ ಕ್ಷಣಕ್ಕೆ ವಿದ್ಯುತ್ ಸಂಪರ್ಕ ಸರಿಪಡಿಸುವ ಕೆಲಸ ಮಾಡಲಿಲ್ಲ. ಸಿಡಿಲಿನಿಂದ ವಿದ್ಯುತ್ ಸಂಪರ್ಕ ಕಡಿತವಾಗಿದನ್ನು ತಹಶೀಲ್ದಾರ್ ಶ್ರೀಕೃಷ್ಣ ಕಾಮಕರ್ ಅವರು ದೃಢೀಕರಿಸಿದರು. ತಹಶೀಲ್ದಾರ್ ಕಚೇರಿ ಮಾತ್ರವಲ್ಲದೇ ಕುಮಟಾದ ಅನೇಕ ಕಡೆ ಸಿಡಿಲಿನ ಕಾರಣ ವಿದ್ಯುತ್ ವಾಹಕಗಳು ಸುಟ್ಟು ಹೋದವು. ಸಂಜೆ ವೇಳೆ ಮಳೆ ಕೊಂಚ ಕಡಿಮೆಯಾಗಿದ್ದು, ಹೆಸ್ಕಾಂ ಸಿಬ್ಬಂದಿ ಅದನ್ನು ಸರಿಪಡಿಸುವ ಕೆಲಸ ಶುರು ಮಾಡಿದರು. - [ಅಪಘಾತ: ಮಹಿಳೆಯ ಹಲ್ಲು ಮುರಿತ!](https://mobiletime.in/2025/10/accident-womans-tooth-broken/): ಯಲ್ಲಾಪುರದ ಇಡಗುಂದಿ ಬಳಿ ಎರಡು ಕಾರುಗಳ ನಡುವೆ ಅಪಘಾತ ನಡೆದಿದೆ. ಈ ಅಪಘಾತದಲ್ಲಿ ಮೂವರಿಗೆ ಪೆಟ್ಟಾಗಿದ್ದು, ಕಾರಿನಲ್ಲಿದ್ದ ಮಹಿಳೆಯೊಬ್ಬರ ಎರಡು ಹಲ್ಲು ಮುರಿದಿದೆ. ಯಲ್ಲಾಪುರದ ಇಡಗುಂದಿಯಲ್ಲಿ ಪುರೋಹಿತರಾಗಿರುವ ಮಹೇಶ ಹರಿ ಭಟ್ಟ ಅವರು ಶಾಂತಿಕಾ ಗಂಗಾಧರ ಗಾಂವ್ಕರ ಅವರ ಜೊತೆ ಸೋಮವಾರ ಸಂಜೆ ಕಾರಿನಲ್ಲಿ ಸಂಚರಿಸುತ್ತಿದ್ದರು. ಯಲ್ಲಾಪುರದಿಂದ ಇಡಗುಂದಿಯ ಕಡೆ ಮಹೇಶ ಭಟ್ಟ ಅವರ ಕಾರು ವೇಗವಾಗಿ ಹೊರಟಿತ್ತು. ಅದೇ ಸಮಯದಲ್ಲಿ ಧಾರವಾಡದ ವಿಶ್ವನಾಥ ಶೆಟ್ಟಿ ಅವರು ಇನ್ನಷ್ಟು ವೇಗವಾಗಿ ಕಾರು ಓಡಿಸಿಕೊಂಡು ಬಂದಿದ್ದರು. ಅಂಕೋಲಾದಿAದ ಯಲ್ಲಾಪುರ ಕಡೆ ವೇಗವಾಗಿ ಬಂದ ವಿಶ್ವನಾಥ ಶೆಟ್ಟಿ ಅವರ ಕಾರು ಮಹೇಶ ಭಟ್ಟ ಅವರ ಕಾರಿಗೆ ಡಿಕ್ಕಿಯಾಯಿತು. ಬಳಗಾರ್ ಕ್ರಾಸಿನ ಬಳಿ ನಡೆದ ಈ ಅಪಘಾತದಲ್ಲಿ ಮಹೇಶ ಭಟ್ಟ ಅವರ ಕಾಲಿಗೆ ಪೆಟ್ಟಾಯಿತು. ಶಾಂತಿಕಾ ಗಾಂವ್ಕರ್ ಅವರಿಗೂ ಗಾಯವಾಗಿದ್ದು, ತಲೆ ಹಿಂಬಾಗಕ್ಕೆ ನೋವಾಯಿತು. ಜೊತೆಗೆ ಶಾಂತಿಕಾ ಗಾಂವ್ಕರ್ ಅವರ ಬಾಯೊಳಗಿದ್ದ ಎರಡು ಹಲ್ಲುಗಳು ಮುರಿದು ಬಿದ್ದವು. ವಿಶ್ವನಾಥ ಶೆಟ್ಟಿ ಅವರು ಸಹ ಅಪಘಾತದಲ್ಲಿ ಗಾಯಗೊಂಡರು. ಈ ಅಪಘಾತದಲ್ಲಿ ಎರಡೂ ವಾಹನಗಳು ಜಖಂಗೊoಡಿತು. ಗಾಯಗೊಂಡ ಮೂವರಿಗೂ ಯಲ್ಲಾಪುರ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಯಿತು. ಕಾರು ಚಾಲಕ ವಿಶ್ವನಾಥ ಅಮರ ಶೆಟ್ಟಿ ಅವರ ವಿರುದ್ಧ ಮಹೇಶ ಭಟ್ಟ ಅವರು ಪೊಲೀಸ್ ದೂರು ನೀಡಿದರು. - [ಬಜೆಟ್ ಮೇಲೆ ನಿಂತಿದೆ ಸತೀಶ್ ಸೈಲ್'ರ ರಾಜಕೀಯ ಭವಿಷ್ಯ!](https://mobiletime.in/2025/10/satish-sails-political-future-rests-on-the-budget/): ರಾಜಕೀಯದಿಂದ ನಿವೃತ್ತಿಪಡೆಯುವುದಾಗಿ ಈ ಹಿಂದೆ ಸಾಕಷ್ಟು ಬಾರಿ ತಾಯಿ ಹಾಗೂ ಮಗಳ ಮೇಲೆಯೂ ಆಣೆ ಮಾಡಿದ್ದ ಶಾಸಕ ಸತೀಶ್ ಸೈಲ್ ಮಂಗಳವಾರ ಮತ್ತೆ ಅದೇ ಮಾತು ಪುನರುಚ್ಚರಿಸಿದ್ದಾರೆ. `ಸುಸಜ್ಜಿತ ಆಸ್ಪತ್ರೆ ಮಂಜೂರಿ ಮಾಡದೇ ಇದ್ದರೆ ರಾಜಕೀಯದಿಂದ ನಿವೃತ್ತಿ ಆಗುವೆ’ ಎಂದವರು ಈ ದಿನ ಹೇಳಿದ್ದಾರೆ. `ಮುಂದಿನ ಸಲ ಚುನಾವಣೆಗೆ ನಿಲ್ಲಲ್ಲ’ ಎಂದು ಸತೀಶ್ ಸೈಲ್ ಅನೇಕ ಭಾಷಣಗಳಲ್ಲಿ ಹೇಳಿದ್ದರು. `ನನಗೆ ರಾಜಕೀಯ ಅಗತ್ಯವಿಲ್ಲ’ ಎಂದು ಸಹ ಅವರು ಹೇಳಿಕೊಂಡಿದ್ದರು. ತಮ್ಮ ಭಾಷಣದಲ್ಲಿ ಸಹ ಅವರು ತಾಯಿ ಹಾಗೂ ಮಗಳ ಮೇಲೆ ಆಣೆ ಮಾಡಿ ರಾಜಕೀಯದಿಂದ ದೂರವಿರುವ ಬಗ್ಗೆ ಮಾತನಾಡಿದ್ದರು. ಮಂಗಳವಾರ ಸಹ ಅವರು ರಾಜಕೀಯ ನಿವೃತ್ತಿಯ ಬಗ್ಗೆ ಮಾತನಾಡಿದ್ದಾರೆ. `ಮುಂದಿನ ಬಜೆಟ್ ಒಳಗೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಮಂಜೂರು ಮಾಡಿಸದಿದ್ದರೆ ರಾಜಕೀಯ ನಿವೃತ್ತಿ ಖಚಿತ. ಬೇರೆ ಯಾವ ಪಕ್ಷವನ್ನು ಸೇರದೇ ಮನೆಗೆ ಮರಳುತ್ತೇನೆ’ ಎಂದವರು ಹೇಳಿದ್ದಾರೆ. `ಆಸ್ಪತ್ರೆ ನಿರ್ಮಾಣ ಸಾಧ್ಯವಿಲ್ಲ ಎಂದಾದರೆ ನಾನು ಜನ ಸೇವೆಗೆ ಯೋಗ್ಯನಲ್ಲ ಎಂದರ್ಥ. ಹೀಗಾಗಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಮಂಜೂರಿಗಾಗಿ ಮುಖ್ಯಮಂತ್ರಿಗಳ ಜೊತೆ ಮಾತನಾಡಿದ್ದೇನೆ. ನವೆಂಬರ್ ತಿಂಗಳಿನಲ್ಲಿ ಭೇಟಿ ಆಗಲು ಅವರು ಹೇಳಿದ್ದು, ಮಾರ್ಚ ಅವಧಿಯಲ್ಲಿ ನಡೆಯುವ ಬಜೆಟಿನಲ್ಲಿ ಆಸ್ಪತ್ರೆ ಮಂಜೂರಾಗುವ ಭರವಸೆಯಿದೆ. ಅದು ಆಗಿಲ್ಲ ಎಂದಾದರೆ ನಾನು ರಾಜಕೀಯದಿಂದ ನಿವೃತ್ತನಾಗುತ್ತೇನೆ’ ಎಂದವರು ಮಾಧ್ಯಮಗಳ ಮುಂದೆ ಹೇಳಿದ್ದಾರೆ. `ಬಜೆಟಿನಲ್ಲಿ ಸುಸಜ್ಜಿತ ಆಸ್ಪತ್ರೆ ನಿರ್ಮಾಣ ಆಗದೇ ಇದ್ದರೆ ಬೇರೆ ಯಾವ ಪಕ್ಷಕ್ಕೂ ಹೋಗುವುದಿಲ್ಲ. ಯಾವ ಕೆಲಸವನ್ನು ಮಾಡುವುದಿಲ್ಲ. ಮನೆಗೆ ಮರಳುತ್ತೇನೆ’ ಎಂದಿದ್ದಾರೆ. `ಸರ್ಕಾರ ನೀಡಿದ 5 ಯೋಜನೆಗಳು ಉತ್ತಮವಾಗಿದೆ. ಸರ್ಕಾರದ ಮೇಲೆ ನನಗೆ ನಂಬಿಕೆಯಿದ್ದು, ಆಸ್ಪತ್ರೆ ಘೋಷಣೆ ಆಗಿಯೇ ಆಗುತ್ತದೆ’ ಎಂದವರು ವಿಶ್ವಾಸದ ಮಾತನಾಡಿದ್ದಾರೆ. `ಸರ್ಕಾರಕ್ಕೆ ನಾನು ಎಚ್ಚರಿಕೆ ನೀಡುತ್ತಿಲ್ಲ. ವಿನಂತಿ ಮಾಡಿದ್ದೇನೆ’ ಎಂದು ಸಹ ಹೇಳಿದ್ದಾರೆ. - [ಅಭಿವೃದ್ಧಿಗಾಗಿ ದುಡಿದವರಿಗೆ ನಯಾಪೈಸೆ ಸಿಕ್ಕಿಲ್ಲ!](https://mobiletime.in/2025/10/those-who-worked-for-development-havent-received-a-single-penny/): ಸಾಕಷ್ಟು ಮನವಿ, ಹೋರಾಟದ ಎಚ್ಚರಿಕೆ ನೀಡಿದರೂ ಕಾರವಾರ ನಗರಸಭೆ ಗುತ್ತಿಗೆದಾರರು ಮಾಡಿದ ಕೆಲಸಕ್ಕೆ ಪ್ರತಿಯಾಗಿ ಹಣ ಬಿಡುಗಡೆ ಮಾಡಿಲ್ಲ. ಇದರಿಂದ ಅಸಮಧಾನಕ್ಕೆ ಒಳಗಾದ ಗುತ್ತಿಗೆದಾರರು ಮಂಗಳವಾರ ಮತ್ತೆ ಜಿಲ್ಲಾಧಿಕಾರಿ ಕೆ ಲಕ್ಷ್ಮೀಪ್ರಿಯಾ ಅವರನ್ನು ಭೇಟಿಯಾಗಿ ಹೋರಾಟದ ಎಚ್ಚರಿಕೆ ನೀಡಿದರು. ಕಾರವಾರ ನಗರಸಭೆಯ ಬೇಜವಬ್ದಾರಿತನದ ಬಗ್ಗೆ ತಾಲೂಕಾ ನೋಂದಾಯಿತ ಗುತ್ತಿಗೆದಾರರ ಸಂಘದ ಅಧ್ಯಕ್ಷ ವಿಜಯ ಬಿಲಿಯ ಅವರು ಅಸಮಧಾನವ್ಯಕ್ತಪಡಿಸಿದರು. `ಸೆಪ್ಟೆಂಬರ್ 22ರಂದು ನಡೆದ ಸಭೆಯಲ್ಲಿ ಬಾಕಿ ಮೊತ್ತ ಪಾವತಿಸುವಂತೆ ಮನವಿ ಸಲ್ಲಿಸಲಾಗಿತ್ತು. ಈ ಬಗ್ಗೆ ನಗರಸಭೆ ಪೌರಾಯುಕ್ತರನ್ನು ಭೇಟಿ ಮಾಡಿ ಪ್ರಶ್ನಿಸಿದರೂ ಯಾವುದೇ ಮಾಹಿತಿ ಸಿಕ್ಕಿಲ್ಲ’ ಎಂದು ಸಂಘದ ಉಪಾಧ್ಯಕ್ಷ ಛತ್ರಪತಿ ಮಾಳ್ಸೆಕರ್, ಪ್ರಮುಖರಾದ ಸತೀಶ ವಿ ನಾಯ್ಕ, ರಾಮನಾಥ ನಾಯ್ಕ ಮೊದಲಾದವರು ಸಿಡಿಮಿಡಿಗೊಂಡರು. `ಗುತ್ತಿಗೆದಾರರು ಸಾಲ ಮಾಡಿ ಸರ್ಕಾರದ ಕೆಲಸ ಮಾಡಿಕೊಟ್ಟಿದ್ದಾರೆ. ಅಭಿವೃದ್ಧಿ ಕೆಲಸಕ್ಕೆ ಗುತ್ತಿಗೆದಾರರು ಆದ್ಯತೆ ಕೊಟ್ಟಿದ್ದಾರೆ. ಅಗತ್ಯವಿರುವಾಗ ಗುತ್ತಿಗೆದಾರರನ್ನು ಬಳಸಿಕೊಂಡ ನಗರಸಭೆ ನಂತರ ನಡುನೀರಿನಲ್ಲಿ ಕೈ ಬಿಟ್ಟಿದೆ. ಸಾಕಷ್ಟು ಬಾರಿ ತಿಳಿಸಿದರೂ ಪ್ರಾಮಾಣಿಕವಾಗಿ ದುಡಿದ ಹಣ ಪಾವತಿ ಮಾಡುತ್ತಿಲ್ಲ’ ಎಂದು ಗುತ್ತಿಗೆದಾರರಾದ ದೀಪಕ ಕುಡಾಳಕರ್, ಕೃಷ್ಣಾನಂದ ನಾಯ್ಕ, ಉದಯ ಕೋಠಾರಕರ್, ರಾಜೇಂದ್ರ ಅಂಚೆಕರ್, ಮನೋಜ ನಾಯಕ ಅವರು ಜಿಲ್ಲಾಧಿಕಾರಿಗಳಿಗೆ ವಿವರಿಸಿದರು. `2021-22ನೇ ಸಾಲಿನಿಂದಲೂ ಮಾಡಿದ ಕೆಲಸದ ಹಣ ಪಾವತಿ ಆಗಿಲ್ಲ. ಹಳೆಯ ಕಾಮಗಾರಿಯ ಮೊತ್ತವನ್ನು ಮೊದಲು ಪಾವತಿ ಮಾಡಬೇಕು. ಅದಾದ ನಂತರವೇ ಹೊಸ ಕಾಮಗಾರಿ ನಡೆಸಲು ನಿರ್ದೇಶನ ನೀಡಬೇಕು. ಈ ಬಗ್ಗೆ ನಗರಸಭೆ ಪೌರಾಯುಕ್ತರಿಗೆ ಸ್ಪಷ್ಠ ನಿರ್ದೇಶನ ನೀಡಬೇಕು’ ಎಂದು ಅವರೆಲ್ಲರೂ ಸೇರಿ ಒತ್ತಾಯಿಸಿದರು. - [ಅಧ್ಯಕ್ಷನ ಮನೆಗೆ ಹೊದಿಕೆಯಾದ ಗ್ರಾ ಪಂ ಮೇಲ್ಚಾವಣಿ!](https://mobiletime.in/2025/10/the-roof-of-the-village-council-that-covered-the-presidents-house/): ಜೊಯಿಡಾದ ಪ್ರಧಾನಿಯಲ್ಲಿ ಗ್ರಾಮ ಪಂಚಾಯತ ಅಧೀನದಲ್ಲಿದ್ದ ಕಟ್ಟಡದ ಮೇಲ್ಚಾವಣಿ ತೆಗೆದ ಗ್ರಾ ಪಂ ಅಧ್ಯಕ್ಷ ಶಾಂತಾರಾಮ ಅವರು ಅದನ್ನು ತಮ್ಮ ಮನೆಗೆ ಹೊದಿಕೆ ಮಾಡಿಕೊಂಡಿದ್ದಾರೆ. ಮೇಲ್ಚಾವಣಿ ತೆಗೆಯುವ ಮುನ್ನ ಅವರು ಸಂಬoಧಿಸಿದ ಪ್ರಾಧಿಕಾರದ ಅನುಮತಿಯನ್ನು ಸಹ ಪಡೆದಿಲ್ಲ! ಪ್ರಧಾನಿ ಗ್ರಾಮ ಪಂಚಾಯತ ಸಮೀಪ ಕೆಲ ವಾಣಿಜ್ಯ ಮಳಿಗೆಗಳಿದ್ದವು. ಆ ಮಳಿಗೆಗಳನ್ನು ಗ್ರಾಮ ಪಂಚಾಯತವೇ ನಿರ್ವಹಣೆ ಮಾಡುತ್ತಿತ್ತು. ಆದರೆ, ಮಂಗಳವಾರ ಮಧ್ಯಾಹ್ನ ಆ ಕಟ್ಟಡದ ಮೇಲೆ ಗ್ರಾಮ ಪಂಚಾಯತ ಅಧ್ಯಕ್ಷರ ಕೆಟ್ಟ ದೃಷ್ಠಿ ಬಿದ್ದಿತು. ದಿಢೀರ್ ಆಗಿ ಕಟ್ಟಡದ ಛಾವಣಿಗಳನ್ನು ತೆರವು ಮಾಡಿದ ಅವರು ಅದನ್ನು ತಮ್ಮ ಮನೆಗೆ ಹೊದಸಿದರು. ಬೆಳಗ್ಗೆ ಸರಿಯಾಗಿದ್ದ ಕಟ್ಟಡ ಸಂಜೆ ವೇಳೆ ಬೋಳಾಗಿದ್ದು ನೋಡಿ ಜನ ಅಚ್ಚರಿಗೆ ಒಳಗಾದರು. ಕಳೆದ ಒಂದು ವರ್ಷದ ಹಿಂದೆ ಗ್ರಾಮ ಪಂಚಾಯತ ಮೂಲಕವೇ ಆ ಕಟ್ಟಡ ಕೆಡವಿ ಹೊಸ ಕಟ್ಟಡ ನಿರ್ಮಾಣದ ಮಾತುಕಥೆ ನಡೆದಿತ್ತು. ಈ ಬಗ್ಗೆ ಗ್ರಾಮ ಪಂಚಾಯತ ನಿರ್ಧಾರವನ್ನು ಪ್ರಕಟಿಸಿತ್ತು. ಆದರೆ, ಕಟ್ಟಡ ತೆರವಿಗೆ ಯಾರಿಗೂ ಜವಾಬ್ದಾರಿ ನೀಡಿರಲಿಲ್ಲ. ಕಾನೂನಾತ್ಮಕವಾಗಿ ಹರಾಜು ಪ್ರಕ್ರಿಯೆ ಸಹ ನಡೆದಿರಲಿಲ್ಲ. ಈ ನಡುವೆಯೇ ಗ್ರಾ ಪಂ ಅಧ್ಯಕ್ಷರು ತಮ್ಮ ಅಧಿಕಾರ ದುರುಪಯೋಗಪಡಿಸಿಕೊಂಡು ವಾಣಿಜ್ಯ ಮಳಿಗೆಗೆ ಕೈ ಹಾಕಿದ್ದಾರೆ. ಕಟ್ಟಡದ ಮೇಲ್ಚಾವಣಿ ತುಂಡರಿಸಿ ಅದನ್ನು ಮನೆಗೆ ಒಯ್ದಿದ್ದಾರೆ. ಕುಡಿಯುವ ನೀರು ಸೇರಿ ಇನ್ನಿತರ ವಿಷಯದಲ್ಲಿಯೂ ಗ್ರಾ ಪಂ ಅಧ್ಯಕ್ಷರ ಹಸ್ತಕ್ಷೇಪ ಜೋರಾಗಿದ್ದು, ಅವರ ನಡೆಗೆ ಅಲ್ಲಿನ ಜನ ಅಸಮಧಾನವ್ಯಕ್ತಪಡಿಸಿದ್ದಾರೆ. - [RSS ಸಿದ್ದಾಂತ ಒಪ್ಪದ ಕಾಂಗ್ರೆಸ್ ಬ್ರಾಹ್ಮಣ!](https://mobiletime.in/2025/10/congress-brahmin-who-does-not-agree-with-rss-ideology/): `RSS ಆಕ್ರಮಣಕಾರಿ’ ಎಂಬ ನಿಟ್ಟಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಬರೆದ ಪತ್ರವನ್ನು ಆರೋಗ್ಯ ಸಚಿವ ದಿನೇಶ ಗುಂಡುರಾವ್ ಅವರು ಸಮರ್ಥಿಸಿಕೊಂಡಿದ್ದಾರೆ. `ರಾಜಕೀಯದಲ್ಲಿ ಮುಳುಗಿರುವ ಆರ್ ಎಸ್ ಎಸ್ ಸರ್ಕಾರಿ ಸ್ಥಳಗಳನ್ನು ಬಳಕೆ ಮಾಡುವುದನ್ನು ಸಹಿಸಲ್ಲ’ ಎಂದವರು ಹೇಳಿದ್ದಾರೆ. ಮಂಗಳವಾರ ಯಲ್ಲಾಪುರದಲ್ಲಿ ಮಾತನಾಡಿದ ಅವರು `RSS ಒಂದು ಖಾಸಗಿ ಸಂಸ್ಥೆ. ಬಿಜೆಪಿ ಜೊತೆ ಸೇರಿ ಅದು ರಾಜಕೀಯ ಕೆಲಸ ಮಾಡುತ್ತಿದೆ. ರಾಜಕೀಯದಲ್ಲಿ ಮುಳುಗಿರುವ RSS ಸರ್ಕಾರಿ ಸ್ಥಳಗಳನ್ನು ಬಳಸಿಕೊಳ್ಳಲು ಅವಕಾಶ ಕೊಡಲ್ಲ. ಸರ್ಕಾರಿ ಶಾಲೆ, ಕಾಲೇಜು, ಆವರಣಗಳನ್ನು ಅವರು ಉಪಯೋಗಿಸುವುದು ಸರಿಯಲ್ಲ. ಅದಕ್ಕೆ ಅವಕಾಶವನ್ನು ಕೊಡುವುದಿಲ್ಲ’ ಎಂದಿದ್ದಾರೆ. `ರಾಜಕೀಯೇತರ ಉದ್ದೇಶದ ಸಂಸ್ಥೆ ಆಗಿದ್ದರೆ ಯಾವುದೇ ತೊಂದರೆ ಇರಲಿಲ್ಲ. ಆದರೆ, ಆರ್ ಎಸ್ ಎಸ್ ರಾಜಕೀಯ ಬಿಟ್ಟು ಬೇರೆನೂ ಮಾಡುತ್ತಿಲ್ಲ. ಆರ್ ಎಸ್ ಎಸ್ ನಿಷೇಧದ ಬಗ್ಗೆ ನಾನು ಮಾತನಾಡಲ್ಲ. ಅವರ ಕೆಲಸ ಅವರು ಮಾಡುವುದಕ್ಕೆ ಅಭ್ಯಂತರ ಇಲ್ಲ. ಆದರೆ, ಸರ್ಕಾರಿ ಸ್ಥಳದಲ್ಲಿ ಸಂಘದ ಚಟುವಟಿಕೆಗಳಿಗೆ ಅವಕಾಶ ಇಲ್ಲ’ ಎಂದು ಪುನರುಚ್ಚರಿಸಿದರು. `ಬಿಜೆಪಿ ಹಾಗೂ ಆರ್ ಎಸ್ ಎಸ್ ಎರಡೂ ಒಂದೇ’ ಎಂದವರು ಹೇಳಿದರು. ಇದಕ್ಕೂ ಮುನ್ನ ಕಿರವತ್ತಿಯಲ್ಲಿ ಆರೋಗ್ಯ ಕೇಂದ್ರ ಕಟ್ಟಡ ಉದ್ಘಾಟನೆ ಕಾರ್ಯಕ್ರಮದಲ್ಲಿ ಯಲ್ಲಾಪುರ ಶಾಸಕ ಶಿವರಾಮ ಹೆಬ್ಬಾರ್, ಸವದತ್ತಿ ಶಾಸಕ ವಿಶ್ವಾಸ ವೈದ್ಯ ಹಾಗೂ ಆರೋಗ್ಯ ಸಚಿವ ದಿನೇಶ ಗುಂಡುರಾವ್ ಭಾಗವಹಿಸಿದ್ದರು. `ರಾಜ್ಯದಲ್ಲಿ ನಾಲ್ವರು ಬ್ರಾಹ್ಮಣ ಶಾಸಕರಿದ್ದು, ಅದರಲ್ಲಿ ಮೂವರು ಈ ವೇದಿಕೆಯಲ್ಲಿದ್ದಾರೆ. ಹಳಿಯಾಳ ಶಾಸಕ ಆರ್ ವಿ ದೇಶಪಾಂಡೆ ಅವರು ಮಾತ್ರ ಭಾಗವಹಿಸಿಲ್ಲ. ನಾವೆಲ್ಲರೂ ಸೇರಿ ರಾಜ್ಯದ ಅಭಿವೃದ್ಧಿಗೆ ಶ್ರಮಿಸುತ್ತಿದ್ದು, ಬಿಜೆಪಿಗರು ಅನಗತ್ಯ ಟೀಕೆ ಮಾಡುತ್ತಿದ್ದಾರೆ’ ಎಂದು ದೂರಿದರು. ವೇದಿಕೆಯಲ್ಲಿದ್ದ ವಿಧಾನ ಪರಿಷತ್ ಸದಸ್ಯ ಶಾಂತರಾಮ ಸಿದ್ದಿ ಅವರನ್ನು ಉದ್ದೇಶಿಸಿ `ನಮ್ಮ ಸರ್ಕಾರ ಸಾಧನೆ ಮಾಡಿದೆ’ ಎಂದರು. ತಕ್ಷಣ ಪ್ರತಿಕ್ರಿಯಿಸಿದ ಶಾಂತರಾಮ ಸಿದ್ದಿ `ಬಿಜೆಪಿಯ ನನ್ನ ಸ್ನೇಹಿತರು ಮಾತ್ರವಲ್ಲ, ನಾನು ಕಾಂಗ್ರೆಸ್ ಟೀಕಿಸುತ್ತೇನೆ’ ಎಂದರು. ತಮ್ಮ ಮಾತು ಮುಂದುವರೆಸಿದ ದಿನೇಶ ಗುಂಡುರಾವ್ ಅವರು `ರಾಜ್ಯದಲ್ಲಿ ಅನುದಾನಕ್ಕೆ ಕೊರತೆ ಇಲ್ಲ. ಆಶಕಿರಣ ಯೋಜನೆ ಅಡಿ ಉಚಿತ ಕನ್ನಡಕ, ಅನ್ನಭಾಗ್ಯ ಯೋಜನೆ ಅಡಿ ಅಕ್ಕಿ ಜೊತೆ ಇನ್ನಿತರ ಪೌಷ್ಠಿಕ ಆಹಾರ ಮನೆಗೆ ತಲುಪಿಸಲು ಸರ್ಕಾರ ಬದ್ಧವಾಗಿದೆ’ ಎಂದರು. `ಬಿಪಿ & ಶುಗರ್ ನಿಯಂತ್ರಣಕ್ಕೆ ಜೀವನಶೈಲಿ ಸರಿಪಡಿಸಿಕೊಳ್ಳಿ. ಆರೋಗ್ಯ ಚನ್ನಾಗಿದ್ದರೆ ಮಾತ್ರ ಎಲ್ಲವೂ ಸರಿಯಾಗಿರುತ್ತದೆ’ ಎಂದು ನೆರೆದಿದ್ದ ಸಭೀಕರಿಗೆ ಸಚಿವರು ಕಿವಿಮಾತು ಹೇಳಿದರು. ಸರ್ಕಾರಿ ಸಾಧನೆ ಹಾಗೂ ಆಸ್ಪತ್ರೆ ನಿರ್ಮಾಣಕ್ಕಾಗಿ ನಡೆದ ಶ್ರಮದ ಬಗ್ಗೆ ಶಾಸಕ ಶಿವರಾಮ ಹೆಬ್ಬಾರ್ ಇದೇ ವೇದಿಕೆಯಲ್ಲಿ ಮಾತನಾಡಿದರು. - [ಮಾರಿಕಾಂಬಾ ಜಾತ್ರೆ: ಭವಿಷ್ಯ ನುಡಿದ ಭೂತೇಶ್ವರ!](https://mobiletime.in/2025/10/marikamba-fair-bhuteshwara-made-a-prediction/): ಶಿರಸಿ ಜಾತ್ರೆ ದಿನಾಂಕ ಘೋಷಿಸಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟರ್ ಹರಿದಾಡುತ್ತಿದ್ದು, ಇದರ ಮೂಲ ಹುಡುಕಾಟ ನಡೆಸಿದಾಗ ಆರ್ಥಿಕ ಸಂಸ್ಥೆಯೊoದರ ತರಾತುರಿಯ ನಿರ್ಧಾರ ಹೊರಬಿದ್ದಿದೆ. 2026ರ ಕ್ಯಾಲೆಂಡರ್ ಪ್ರಕಟಿಸಿದ ಭೂತೇಶ್ವರ ಪತ್ತಿನ ಸಹಕಾರಿ ಸಂಘ ನಿಯಮಿತ ಆ ದಿನದರ್ಶಿಕೆಯಲ್ಲಿ ಫೆ 24ರಿಂದ ಮರ್ಚ 4ರವರೆಗೆ ಶಿರಸಿ ಜಾತ್ರೆ ಎಂದು ನಮೂದಿಸಿದ್ದು, ಅದೇ ಆಧಾರದಲ್ಲಿ ಜಾಲತಾಣಗಳಲ್ಲಿ ಜಾತ್ರೆಯ ಚರ್ಚೆ ಹರಿದಾಡುತ್ತಿದೆ. ಆರ್ಥಿಕ ಶಿಸ್ತು, ಸ್ನೇಹಮಯ ಆಡಳಿತ ಮಂಡಳಿ ಹಾಗೂ ಉತ್ತಮ ಸಿಬ್ಬಂದಿಯನ್ನು ಹೊಂದಿರುವ ಭೂತೇಶ್ವರ ಪತ್ತಿನ ಸಹಕಾರಿ ಸಂಘವೂ ಈ ಬಾರಿ ರಜತ ಮಹೋತ್ಸವದ ಸಂಭ್ರಮದಲ್ಲಿದೆ. 25 ವರ್ಷಗಳ ಹಿಂದೆ ವಸಂತ ಶೆಟ್ಟಿ ಅವರು ನೆಟ್ಟ ಗಿಡ ಇದೀಗ ಹೆಮ್ಮರವಾಗಿ ಬೆಳೆದಿದ್ದು, ಭೂತೇಶ್ವರ ಪತ್ತಿನ ಸಹಕಾರಿ ಸಂಘ ಜನರ ವಿಶ್ವಾಸಗಳಿಸಿದೆ. ಮುದ್ದತಿ ಠೇವುಗಳ ಮೇಲೆ ಆಕರ್ಷಕ ಬಡ್ಡಿ, ಸಾಲ ನೀಡುವ ವಿಷಯದಲ್ಲಿಯೂ ಆರೋಗ್ಯಕರ ಪೈಪೋಟಿ ಜೊತೆ ಅತ್ಯಾಧುನಿಕ ತಂತ್ರಜ್ಞಾನ ಅಳವಡಿಸಿಕೊಂಡು ಈ ಸಹಕಾರಿ ಸಂಘ ಮುನ್ನಡೆಯುತ್ತಿದೆ. ಸಂಘ ಶುರುವಿನಿಂದ ಈವರೆಗೂ ಲಾಭದಲ್ಲಿಯೇ ಮುನ್ನಡೆದಿರುವುದರಿಂದ ಜನ ಸಂಘದ ನಡೆ-ನುಡಿಯ ಮೇಲೆ ನಂಬಿಕೆಯಿಟ್ಟಿದ್ದಾರೆ. ಪ್ರತಿ ವರ್ಷ ಕ್ಯಾಲೆಂಡರ್ ಮುದ್ರಿಸುವ ಈ ಸಂಘವೂ 2026ರ ಕ್ಯಾಲೆಂಡರ್’ನ್ನು ಸಹ ಎರಡು ತಿಂಗಳ ಮುಂಚಿತವಾಗಿ ಮುದ್ರಿಸಿದೆ. ಆ ಕ್ಯಾಲೆಂಡರಿನಲ್ಲಿ ಶಿರಸಿ ಜಾತ್ರೆಯ ದಿನಾಂಕ ಬರೆಯಲಾಗಿದ್ದು, ವಿಶ್ವಾಸಾರ್ಹ ಸಹಕಾರಿ ಸಂಘ ನೀಡಿದ ಮಾಹಿತಿಯೇ ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಪ್ರಮಾಣದಲ್ಲಿ ಹರಿದಾಡಿದೆ. `ಯುಗಾದಿ ಹಬ್ಬದ ನಂತರದ ದಿನ ಲೆಕ್ಕಾಚಾರ, ಮುಹೂರ್ತಗಳ ಅಧ್ಯಯನ ಆಧಾರ ಹಾಗೂ ಉನ್ನತ ಮೂಲಗಳ ಮಾಹಿತಿ ಆಧರಿಸಿ ಕ್ಯಾಲೆಂಡರಿನಲ್ಲಿ ಶಿರಸಿ ಜಾತ್ರೆಯ ದಿನಾಂಕ ನಮೂದಿಸಲಾಗಿದೆ. ನಮ್ಮ ಊರಿನ ಹೆಮ್ಮೆಯ ಜಾತ್ರೆಯ ಬಗ್ಗೆ ಅಭಿಮಾನದಿಂದ ಜನರಿಗೆ ಅರಿವು ಮೂಡಿಸುವ ಹಾಗೂ ದೇವಿ ಭಕ್ತರಿಗೆ ಮುಂಚಿತ ಮಾಹಿತಿ ನೀಡುವ ಉದ್ದೇಶಕ್ಕಾಗಿ ಮಾತ್ರ ದಿನದರ್ಶಿಕೆಯಲ್ಲಿ ವಿವರ ಬರೆಯಲಾಗಿದೆ. ಅದನ್ನು ಹೊರತುಪಡಿಸಿ ತಪ್ಪು ತಿಳುವಳಿಕೆಯ ಅನ್ಯ ಉದ್ದೇಶಗಳಿಲ್ಲ’ ಎಂದು ಭೂತೇಶ್ವರ ಪತ್ತಿನ ಸಹಕಾರಿ ಸಂಘ ನಿಯಮಿತದ ವ್ಯವಸ್ಥಾಪಕ ವಿನಾಯಕ ಶೇಟ್ ಅವರು ಸ್ಪಷ್ಠಪಡಿಸಿದರು. `ಜಾತ್ರೆಯ ದಿನಾಂಕ ಅಧಿಕೃತವಾಗಿ ಘೋಷಣೆ ಆಗಿಲ್ಲ. ಪದ್ಧತಿಯ ಪ್ರಕಾರ ರಾಯಸ ಪತ್ರ ಸಿದ್ಧಪಡಿಸಿ ಆ ಮೂಲಕ ಸಾರ್ವಜನಿಕರಿಗೆ ಜಾತ್ರೆಯ ಬಗ್ಗೆ ಮಾಹಿತಿ ನೀಡಲಾಗುತ್ತದೆ. ಪೂಜೆ, ಕಾರ್ಯಕ್ರಮ, ವಿವಾಹ ಮಹೋತ್ಸವ, ರಥೋತ್ಸವ, ವಿಸರ್ಜನೆಯಿಂದ ಪುನರ್ ಪ್ರತಿಷ್ಠೆಯವರೆಗೆ ಪ್ರತಿಯೊಂದು ಮುಹೂರ್ತದ ಬಗ್ಗೆಯೂ ಅಧಿಕೃತವಾಗಿ ಆಗಲೇ ಗೊತ್ತಾಗಲಿದೆ. ಅಲ್ಲಿಯವರೆಗೂ ತಾಳ್ಮೆಯಿಂದ ಕಾಯುವುದು ಅಗತ್ಯ. ಈಗಲೇ ಏನನ್ನು ಹೇಳಲು ಅಸಾಧ್ಯ’ ಎಂದು ಮಾರಿಕಾಂಬಾ ದೇವಾಲಯ ಆಡಳಿತ ಮಂಡಳಿಯ ಉಪಾಧ್ಯಕ್ಷ ಸುಧೀರ ಹಂಡ್ರಾಲ್ ಅವರು ತಿಳಿಸಿದರು. ಶಿರಸಿ ಜಾತ್ರೆಯ ಅಧಿಕೃತ ದಿನಾಂಕ ದೇವಾಲಯದ ಆಡಳಿತ ಮಂಡಳಿಯಿoದ ಪ್ರಕಟವಾಗಿಲ್ಲ. ಆದರೆ, ಕ್ಯಾಲೇಂಡರ್ ಹಾಗೂ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಆ ದಿನಾಂಕದಲ್ಲಿ ಜಾತ್ರೆ ನಡೆಯಲ್ಲ ಎಂದು ಸಹ ಆಡಳಿತ ಮಂಡಳಿ ಹೇಳಿಲ್ಲ. ಹೀಗಾಗಿ `ಜಾತ್ರೆ ದಿನಾಂಕ ಘೋಷಣೆ ಆಗಿಲ್ಲ’ ಎಂದು ಆಡಳಿತ ಮಂಡಳಿ ಹೇಳಿದ್ದು ಸತ್ಯವಾಗಿದ್ದರೂ `ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ದಿನಾಂಕ ಸುಳ್ಳು’ ಎಂದು ದೇವಾಲಯದವರು ಹೇಳಿಲ್ಲ. ಆದ್ದರಿಂದ ಜಾತ್ರೆ ದಿನಾಂಕದ ಬಗ್ಗೆ ದೇವಾಲಯ ಆಡಳಿತ ಆಡಳಿತ ಮಂಡಳಿಯವರು ಪದ್ಧತಿ ಪ್ರಕಾರ ಘೋಷಣೆ ಮಾಡುವುದು ಮಾತ್ರ ಬಾಕಿಯಿದ್ದು, ಅದಕ್ಕೂ ಮುನ್ನ ಸಹಕಾರಿ ಸಂಘ ಕೊಂಚ ಆತುರ ಪ್ರದರ್ಶಿಸಿದ್ದು ಗೊಂದಲಕ್ಕೆ ಕಾರಣವಾಗಿದೆ. - [2025 ಅಕ್ಟೋಬರ್ 14ರ ದಿನ ಭವಿಷ್ಯ](https://mobiletime.in/2025/10/prediction-for-october-14-2025/): ಮೇಷ ರಾಶಿ: ಹೊಸ ಕಾರ್ಯ-ಯೋಜನೆಗಳು ಯಶಸ್ವಿ ಆಗಿ ನಡೆಯಲಿದೆ. ಹಣ ವ್ಯವಹಾರಗಳು ಚೇತರಿಕೆ ಆಗಲಿದೆ. ಆರೋಗ್ಯದಲ್ಲಿ ಸುಧಾರಣೆ ಕಾಣಲಿದೆ. ವೃಷಭ ರಾಶಿ: ನಿಮ್ಮ ನಡೆ-ನುಡಿಯ ಬಗ್ಗೆ ಬಂಧು ಬಳಗವರ ಮೆಚ್ಚುಗೆ ಸಿಗಲಿದೆ. ಮನಸ್ಸಿಗೆ ನೆಮ್ಮದಿಯ ವಾತಾವರಣ ಕಾಣಲು ಸಾಧ್ಯವಿದೆ. ಯಾತ್ರೆಗಳು ಸರಾಗವಾಗಿ ಆಗುತ್ತದೆ. ಮಿಥುನ ರಾಶಿ: ಸ್ಪರ್ಧಾತ್ಮಕ ಪರೀಕ್ಷೆಗಳು ಸರಿಯಾಗಿ ಸಾಗಲಿದೆ. ಕುಟುಂಬದಲ್ಲಿ ಸಮಾದಾನಕರ ಸಂಗತಿಗಳು ನಡೆಯಲಿದೆ. ಸ್ನೇಹಿತರ ಜೊತೆ ಉತ್ತಮ ಸಾಂಗತ್ಯ ಸಿಗಲಿದೆ. ಕರ್ಕ ರಾಶಿ: ಮಹತ್ವದ ನಿರ್ಧಾರಗಳನ್ನು ಪಡೆಯಲು ಉತ್ತಮ ಸಮಯ. ವೈದ್ಯಕೀಯ ಸಮಸ್ಯೆಗೆ ಪರಿಹಾರ ಸಾಧ್ಯ. ಮಕ್ಕಳ ವಿಷಯದಲ್ಲಿ ಸಂತೋಷಕರ ವಾತಾವರಣವಿರಲಿದೆ. ಸಿಂಹ ರಾಶಿ: ಹೊಸ ಅವಕಾಶಗಳು ಬರಲಿದೆ. ಕುಟುಂಬದಲ್ಲಿ ಸಂತೋಷದ ಕ್ಷಣಗಳು ಬರಲಿದೆ. ಆರೋಗ್ಯದ ಬಗ್ಗೆ ಕಾಳಜಿವಹಿಸಿ. ಕನ್ಯಾ ರಾಶಿ: ವ್ಯಾಪಾರದಲ್ಲಿ ಲಾಭ ಸಿಗಲಿದೆ. ಮನೆಯಲ್ಲಿನ ಕಾರ್ಯಕ್ರಮಗಳು ಸರಾಗವಾಗಿ ನಡೆಯಲಿದೆ. ಒತ್ತಡ ಕಡಿಮೆ ಆಗಲಿದೆ. ತುಲಾ ರಾಶಿ: ಸಾಮಾಜಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಅವಕಾಶ ಸಿಗಲಿದೆ. ಗೆಳೆಯರ ಜೊತೆ ಸಂತೋಷದ ಕ್ಷಣಗಳನ್ನು ಅನುಭವಿಸುತ್ತೀರಿ. ಕೌಟುಂಬಿಕ ವಿಚಾರಗಳ ಬಗ್ಗೆ ಮಾತನಾಡುವ ಸಮಯ ವೃಶ್ಚಿಕ ರಾಶಿ: ದುಡಿಮೆಗೆ ತಕ್ಕ ಫಲ ಸಿಗಲಿದೆ. ಆರ್ಥಿಕ ರೀತಿ ವಿಭಿನ್ನವಾಗಿರಲಿದೆ. ಉದ್ಯೋಗದಲ್ಲಿ ಬದಲಾವಣೆ ಸಾಧ್ಯತೆಗಳಿವೆ. ಧನು ರಾಶಿ: ವಿದ್ಯೆ ವಿಷಯದಲ್ಲಿ ಒತ್ತಡ ಕಡಿಮೆ ಆಗಲಿದೆ. ಆರ್ಥಿಕ ಸುಧಾರಣೆ ಸಾಧ್ಯವಿದೆ. ಪ್ರಯಾಣ ಒಳ್ಳೆಯದಲ್ಲ. ಮಕರ ರಾಶಿ: ಉದ್ಯೋಗದ ವಿಷಯದಲ್ಲಿ ಪ್ರಗತಿ ಆಗಲಿದೆ. ಆರೋಗ್ಯದಲ್ಲಿ ಸುಧಾರಣೆ ಸಾಧ್ಯವಿದೆ. ಮಕ್ಕಳ ಜೊತೆ ಸಮಯ ಕಳೆಯುವುದು ಮುಖ್ಯ. ಕುಂಭ ರಾಶಿ: ಕೆಲಸದ ವಿಷಯದಲ್ಲಿ ಹೆಚ್ಚಿನ ಹೊಣೆಗಾರಿಕೆ ಬರಲಿದೆ. ಆರೋಗ್ಯದ ಬಗ್ಗೆ ಕಾಳಜಿ ಅಗತ್ಯ. ಆರ್ಥಿಕ ಸುಧಾರಣೆ ಆಗಲಿದೆ. ಮೀನ ರಾಶಿ: ಹಣಕಾಸಿನ ವಿಷಯದಲ್ಲಿ ಜಾಗೃತಿ ಅಗತ್ಯ. ಆರೋಗ್ಯದಲ್ಲಿ ಏರುಪೇರಾದರೆ ಆಸ್ಪತ್ರೆಗೆ ಭೇಟಿ ನೀಡಿ. ಅಗತ್ಯವಿದ್ದರೆ ವಿಶ್ರಾಂತಿಪಡೆಯಿರಿ. - [ಅರಣ್ಯ ಹಕ್ಕು: ಅಕ್ಟೊಬರ್ 14ಕ್ಕೆ ವಿಚಾರಣೆ](https://mobiletime.in/2025/10/forest-rights-hearing-on-october-14/): ಅರಣ್ಯ ಹಕ್ಕು ಕಾಯದೆಯ ಮೌಲ್ಯತೆ ಮತ್ತು ಅರಣ್ಯ ಹಕ್ಕು ಕಾಯಿದೆಯಲ್ಲಿ ತಿರಸ್ಕರಿಸಿದ ಅರ್ಜಿಯ ಒಕ್ಕಲೆಬ್ಬಿಸುವ ಪ್ರಕರಣಕ್ಕೆ ಸಂಬoಧಿಸಿ ಅಕ್ಟೊಬರ್ 14ರಂದು ತ್ರೀಸದಸ್ಯತ್ವ ನ್ಯಾಯಮೂರ್ತಿಗಳ ನ್ಯಾಯ ಪೀಠದಲ್ಲಿ ಅಂತಿಮ ವಿಚಾರಣೆ ಜರುಗಲಿದೆ. ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳಾದ ಸೂರ್ಯಕಾಂತ, ಜಾಯಿಮಲ್ಯ ಮತ್ತು ಬಜಾಶಿ ಒಳಗೊಂಡ ತ್ರೀ ಸದಸ್ಯತ್ವ ನ್ಯಾಯಪೀಠ ವಿಚಾರಣೆ 41ನೇ ಕ್ರಮ ಸಂಖ್ಯೆಯಲ್ಲಿ ವಿಚರಣೆಗೆ ಬರಲಿದೆ. ಅರಣ್ಯ ಹಕ್ಕು ಕಾಯಿದೆ ಮೌಲ್ಯತೆ ರದ್ದು ಪಡಿಸುವ ಉದ್ದೇಶದಿಂದ 2008ರಲ್ಲಿ ವೈಲ್ಡ್ ಲೈಪ್ ಪಸ್ಟ್ ಸೊಸೈಟಿ ಮತ್ತು ಇನ್ನಿತರ ಎಂಟು ಪರಿಸರ ಸಂಘಟನೆಗಳು ಸುಪ್ರೀಂ ಕೊರ್ಟಗೆ ಅರ್ಜಿ ಸಲ್ಲಿಸಿ ಕೇಂದ್ರ ಸರ್ಕಾರ ಮತ್ತು ದೇಶದ 31 ರಾಜ್ಯಗಳ ವಿರುದ್ದ ಅರ್ಜಿ ಸಲ್ಲಿಸಿದ ಪ್ರಕರಣ ಇದಾಗಿದೆ. ಅರಣ್ಯವಾಸಿಗಳ ಭೂಮಿ ಹಕ್ಕಿಗೆ ಸಂಬoಧಿಸಿ ನಿರಂತರ ಹೋರಾಟ ಮಾಡುತ್ತಿರುವ ರಾಜ್ಯ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ಪ್ರಕರಣದ ವಿಷಯವಾಗಿ ಸ್ವಪ್ರೇರಣೆಯಿಂದ ದೆಹಲಿಗೆ ಹೋಗಿದ್ದಾರೆ. ಸುಪ್ರೀಂ ಕೊರ್ಟನಲ್ಲಿ ನಿವೃತ್ತ ನ್ಯಾಯಮೂರ್ತಿ ಎಚ್ ಎನ್ ನಾಗಮೋಹನ್‌ದಾಸ ಅವರ ಮಾರ್ಗದರ್ಶನದಲ್ಲಿ ಉನ್ನತ ಮಟ್ಟದ ಕಾನೂನು ತಜ್ಞರ ತಂಡಗಳ ಮೂಲಕ ಅರಣ್ಯವಾಸಿಯ ಪರವಾದ ವಿಚಾರವನ್ನು ಮಂಡಿಸಲು ಅವರು ಸಿದ್ಧತೆ ನಡೆಸಿದ್ದಾರೆ. - [ನೀರು ಕೊಟ್ಟರೂ ಕುಡಿದವ ಮಲಗಿದಲ್ಲಿಯೇ ಉಸಿರು ನಿಲ್ಲಿಸಿದ!](https://mobiletime.in/2025/10/even-though-they-gave-him-water-he-stopped-breathing-while-he-was-still-asleep/): ಭಟ್ಕಳದಲ್ಲಿ ಅಲೆದಾಡುತ್ತಿದ್ದ ಭಿಕ್ಷುಕನೊಬ್ಬ ನೀರು ಕೊಟ್ಟು ಉಪಚರಿಸಿದರೂ ಆ ನೀರು ಸೇವಿಸದೇ ಸಾವನಪ್ಪಿದ್ದು, ಆ ಅಪರಿಚಿತ ಭಿಕ್ಷುಕನ ವಾರಸುದಾರರ ಹುಡುಕಾಟ ನಡೆದಿದೆ. ಮುರುಡೇಶ್ವರ ಬಳಿಯ ಮಾವಳ್ಳಿ-1 ಸಮೀಪದ ನರೇಕುಳಿಯ ನಾಗರಾಜ ದೇವಾಡಿಗ ಅವರು ಶಿರಾಳಿಯಲ್ಲಿ ಶ್ರೀವಲ್ಲಿ ಸೂಪರ್ ಮಾರ್ಕೇಟ್ ನಡೆಸುತ್ತಿದ್ದಾರೆ. ಅಕ್ಟೊಬರ್ 12ರಂದು ಅಂದಾಜು 55 ವರ್ಷದ ಭಿಕ್ಷುಕ ಆಗಮಿಸಿದರು. ಸೂಪರ್ ಮಾರ್ಕೇಟ್ ಮುಂದೆ ಆಯಾಸಗೊಂಡು ಕುಳಿತಿದ್ದ ಭಿಕ್ಷುಕನಿಗೆ ನಾಗರಾಜ ದೇವಾಡಿಗ ಅವರು ನೀರು ಕೊಟ್ಟರು. ಆತನ ಆರೋಗ್ಯ ವಿಚಾರಿಸಿದರು. ಆದರೆ, ಆತ ಜಾಸ್ತಿ ಮಾತನಾಡಲಿಲ್ಲ. ಕೊಟ್ಟ ನೀರನ್ನು ಕುಡಿಯಲಿಲ್ಲ. ಆ ದಿನ ರಾತ್ರಿ 11 ಗಂಟೆಗೆ ಸೂಪರ್ ಮಾರ್ಕೇಟಿಗೆ ಬೀಗ ಹಾಕಿ ನಾಗರಾಜ ದೇವಾಡಿಗ ಅವರು ಮನೆಗೆ ಹೋದರು. ಅಕ್ಟೊಬರ್ 13ರ ಬೆಳಗ್ಗೆ 10ಗಂಟೆಗೆ ಅವರು ಸೂಪರ್ ಮಾರ್ಕೇಟ್ ತೆರೆಯಲು ಹೋದಾಗ ಆ ಭಿಕ್ಷುಕ ಅಲ್ಲಿಯೇ ಇದ್ದರು. ಆದರೆ, ಅವರು ಮಾತನಾಡುವ ಸ್ಥಿತಿಯಲ್ಲಿರಲಿಲ್ಲ. ಅದಾದ ನಂತರ ಆ ಭಿಕ್ಷುಕ ಸಾವನಪ್ಪಿರುವುದು ಗೊತ್ತಾಯಿತು. ನಾಗರಾಜ ದೇವಾಡಿಗ ಅವರು ಈ ಬಗ್ಗೆ ಪೊಲೀಸರಿಗೆ ತಿಳಿಸಿದ್ದು, ಅಪರಿಚಿತ ಭಿಕ್ಷುಕ ಸಾವನಪ್ಪಿದ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿದರು. - [ಔಷಧಿ ಅರೆಸಿ ಬಂದವ ಡಾಕ್ಟರ್ ತಲೆಗೆ ಹೊಡೆದ!](https://mobiletime.in/2025/10/a-doctor-who-came-to-ask-for-medicine-was-hit-on-the-head/): ಸಮಯಕ್ಕೆ ಸರಿಯಾಗಿ ಸರ್ಕಾರದಿಂದ ಔಷಧ ಪೂರೈಕೆ ಆಗದ ಪರಿಣಾಮ ಪಶುವೈದ್ಯರೊಬ್ಬರು ಪೆಟ್ಟು ತಿಂದಿದ್ದಾರೆ. ಪೆಟ್ಟು ತಿಂದ ವೈದ್ಯರು ಇದೀಗ ನ್ಯಾಯಕ್ಕಾಗಿ ಪೊಲೀಸರ ಮೊರೆ ಹೋಗಿದ್ದಾರೆ. ಜೊಯಿಡಾದ ರಾಮನಗರದಲ್ಲಿ ಎಚ್ ರಾಮಚಂದ್ರ ಯಾದವ್ ಅವರು ಪಶುವೈದ್ಯರಾಗಿದ್ದಾರೆ. ಸರ್ಕಾರಿ ಸೌಲಭ್ಯವನ್ನು ಹೈನುಗಾರರಿಗೆ ಕೊಡುವಲ್ಲಿ ಅವರು ಶ್ರಮಿಸುತ್ತಿದ್ದಾರೆ. ಹೀಗಿರುವಾಗ ರಾಮನಗರದ ದುರ್ಗಾದೇವಿಗಲ್ಲಿಯ ದಿನೇಶ ತುಕಾರಾಮ ಮಿರಾಶಿ ಪಶು ಆಸ್ಪತ್ರೆಗೆ ಬಂದರು. `ಮೇಕೆಗೆ ಉಣ್ಣೆ ಔಷಧಿ ಬೇಕು’ ಎಂದು ಅವರು ಕೇಳಿದರು. ಬಾಟಲಿ ಇಲ್ಲದೇ ಖಾಲಿ ಕೈಯಲ್ಲಿ ಬಂದ ದಿನೇಶ ಮಿರಾಶಿ ಅವರಿಗೆ ಬಾಟಲಿ ತೆಗೆದುಕೊಂಡು ಬರುವಂತೆ ರಾಮಚಂದ್ರ ಯಾದವ್ ಅವರು ಸೂಚಿಸಿದರು. ಅದಾದ ನಂತರ `ಮೇಕೆಗೆ ಲಿವರ್ ಟಾನಿಕ್ ಬೇಕು. ಅದನ್ನಾದರೂ ಕೊಡಿ’ ಎಂದು ದಿನೇಶ ಮಿರಾಶಿ ಕೇಳಿದರು. `ಆ ಔಷಧಿ ಸರ್ಕಾರದಿಂದ ಪೂರೈಕೆ ಆಗಿಲ್ಲ. ಈ ತಿಂಗಳ ಕೊನೆಗೆ ಬರಬಹುದು’ ಎಂದು ವೈದ್ಯರು ಹೇಳಿದರು. ಇದರಿಂದ ಸಿಟ್ಟಾದ ದಿನೇಶ ಮಿರಾಶಿ `ಟಾನಿಕ್ ಇಲ್ಲ ಎಂದಾದರೆ ಚಿಕಿತ್ಸಾಲಯ ಏಕೆ? ಡಾಕ್ಟರ್ ಏಕೆ?’ ಎಂದು ದಬಾಯಿಸಿದರು. ಅದಾದ ನಂತರ ಮರಾಠಿ ಭಾಷೆಯಲ್ಲಿ ಬೈದ ದಿನೇಶ ಮಿರಾಶಿ ಡಾಕ್ಟರ್ ತಲೆ ಮೇಲೆ ಕುಟ್ಟಿದರು. ತಲೆಯ ಹಿಂಬಾಗ ಎರಡು ಏಟು ಹೊಡೆದರು. ಇದರಿಂದ ನೋವು ಅನುಭವಿಸಿದ ವೈದ್ಯರು ಮೇಲಾಧಿಕಾರಿಗಳಿಗೆ ವರದಿ ಒಪ್ಪಿಸಿದರು. ಮೇಲಧಿಕಾರಿಗಳ ಸೂಚನೆ ಮೇರೆಗೆ ರಾಮನಗರ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದರು. - [ಗಣೇಶ ಹಬ್ಬ: ಇಲ್ಲಿ ಮೊಬೈಲ್ ಖರೀದಿಸಿದರೆ ಟಿವಿ ಉಚಿತ!](https://mobiletime.in/2025/10/ganesh-festival-buy-a-mobile-here-and-get-a-free-tv/): ಗಣೇಶ ಹಬ್ಬದ ಅವಧಿಯಲ್ಲಿ ಮೊಬೈಲ್ ಖರೀದಿಗೆ ಹುಡುಕಾಟ ನಡೆಸಿದ್ದೀರಾ? ಹಾಗಾದರೆ, ಆನ್‌ಲೈನ್’ಗಿಂತ ಕಡಿಮೆ ಬೆಲೆಗೆ ಬರಪೂರ ಉಡುಗರೆ ಜೊತೆ ಮೊಬೈಲ್ ಖರೀದಿಸಲು ಯಲ್ಲಾಪುರಕ್ಕೆ ಬನ್ನಿ! ಯಲ್ಲಾಪುರ ಬಸ್ ನಿಲ್ದಾಣದ ಶಾಸಕರ ಕಚೇರಿ ರಸ್ತೆಗೆ ಹೊಂದಿಕೊoಡು `ಗ್ಯಾಲಾಕ್ಸಿ ಹಬ್’ ಹೊಸದಾಗಿ ಶುರುವಾಗಿದೆ. ಇದೇ ಮೊದಲ ಗಣೇಶ ಉತ್ಸವ ಆಚರಿಸುತ್ತಿರುವ ಈ ಮೊಬೈಲ್ ಮಳಿಗೆ ಅದೇ ಖುಷಿಯಲ್ಲಿ ಹಲವು ಬಗೆಯ ಗ್ರಾಹಕಸ್ನೇಹಿ ಯೋಜನೆಗಳನ್ನು ಜಾರಿಗೊಳಿಸಿದೆ. 100ಕ್ಕೂ ಅಧಿಕ ನಮೂನೆಯ ಮೊಬೈಲ್’ಗಳು ಈ ಮಳಿಗೆಯಲ್ಲಿದೆ. ಬೇರೆ ಎಲ್ಲಿಯೂ ಸಿಗದ ಬೆಲೆಯಲ್ಲಿ ಮೊಬೈಲ್ ನೀಡಲಾಗುತ್ತಿದೆ. ಹುಬ್ಬಳ್ಳಿ, ಶಿರಸಿ, ಕಾರವಾರ, ಭಟ್ಕಳ ಸೇರಿ ಎಲ್ಲಾ ಕಡೆ ಸುತ್ತಾಡಿ ಬಂದರೂ ಈ ಬೆಲೆಗೆ ಈ ಬಗೆಯ ಮೊಬೈಲ್ ಜೊತೆ ನಿಶ್ಚಿತ ಉಡುಗರೆಯನ್ನು ಬೇರೆ ಯಾರೂ ಕೊಡುತ್ತಿಲ್ಲ! ನಿನ್ನೆ ಮೊಬೈಲ್ ಖರೀದಿಸಲು ಬಂದ ಗ್ರಾಹಕರೊಬ್ಬರು ಮೊಬೈಲ್ ಜೊತೆ ಟಿವಿಯನ್ನು ಮನೆಗೆ ಒಯ್ದಿದ್ದಾರೆ. Vivo x200fe ಹಾಗೂ Oppo reno 14 pro ಮೊಬೈಲ್ ಖರೀದಿಸಿದವರಿಗೆ ಇಲ್ಲಿ 24 ಇಂಚಿನ ಟಿವಿಯನ್ನು ಉಡುಗರೆಯಾಗಿ ಕೊಡಲಾಗುತ್ತಿರುವುದೇ ಇದಕ್ಕೆ ಕಾರಣ. ಇದರೊಂದಿಗೆ ಮತ್ತೆ ಐದು ಉಡುಗರೆಗಳನ್ನು ಮಳಿಗೆಯವರು ಗ್ರಾಹಕರಿಗೆ ನೀಡಿದ್ದಾರೆ. ಮತ್ತೊಬ್ಬರು ಮೊಬೈಲ್ ಖರೀದಿ ಜೊತೆ ಡ್ರೋಣ್ ಕ್ಯಾಮರಾವನ್ನು ಮನೆಗೆ ಒಯ್ದಿದ್ದಾರೆ. Vivo v60 ಮೊಬೈಲ್ ಜೊತೆ ಇಲ್ಲಿ ಡ್ರೋಣ್ ಕ್ಯಾಮರಾವನ್ನು ಉಚಿತವಾಗಿ ಕೊಡಲಾಗುತ್ತಿದೆ. ಮೊಬೈಲ್ ಮಾತ್ರವಲ್ಲ, ಟಿವಿ ಖರೀದಿಸಿದರೂ ಇಲ್ಲಿ ಉಡುಗರೆಗಳು ಉಚಿತ! ಮನೆಯಲ್ಲಿರುವ ಹಾಳಾದ ಮೊಬೈಲ್’ಗಳ ದುರಸ್ಥಿಗೂ ಇನ್ಮುಂದೆ ಅಲ್ಲಿ-ಇಲ್ಲಿ ಓಡಾಡಬೇಕಿಲ್ಲ. ಗ್ಲಾಸ್ ಒಡೆದ ಮೊಬೈಲುಗಳನ್ನು ಸಹ `ಗಾಲಾಕ್ಸಿ ಹಬ್’ ಮಳಿಗೆಯಲ್ಲಿ ಸರಿಪಡಿಸಲಾಗುತ್ತದೆ. ಮೊಬೈಲುಗಳಲ್ಲಿನ ಎಲ್ಲಾ ಸಮಸ್ಯೆಗಳಿಗೂ ಇಲ್ಲಿ ಪರಿಹಾರ ಒದಗಿಸಲಾಗುತ್ತದೆ. 30 ನಿಮಿಷದೊಳಗೆ ಒಡೆದ ಮೊಬೈಲ್ ಡಿಸಪ್ಲೆ ಬದಲಿಸಿಕೊಡುವ ನುರಿತ ಸಿಬ್ಬಂದಿ ಇಲ್ಲಿದ್ದಾರೆ. ಮೊಬೈಲ್ ಡಿಸಪ್ಲೆ ಸರಿಪಡಿಸಲು ಬಂದವರಿಗೆ ಸಹ ಉಡುಗರೆಗಳನ್ನು ಕೊಟ್ಟು ಕಳುಹಿಸಲಾಗುತ್ತದೆ. ಮೊಬೈಲ್ ಇರಲಿ.. ಟಿವಿಯೇ ಆಗಿರಲಿ.. ಹಬ್ಬದ ಖರೀದಿಗೆ ಇನ್ನೇಕೆ ತಡ? ಈಗಲೇ ಬನ್ನಿ… ಉಡುಗರೆಗಳ ಜೊತೆ ಖುಷಿ ಅನುಭವಿಸಿ!… ಮಾಹಿತಿಗೆ ಇಲ್ಲಿ ಫೋನ್ ಮಾಡಿ: 9448361519 ಗಾಲಾಕ್ಸಿ ಹಬ್ ಉದ್ಘಾಟನೆ ಸಡಗರ ಹೇಗಿತ್ತು? ಆ ವಿಡಿಯೋ ನೋಡಿ.. #sponsored  - [ಡಿವೈಡರ್ ಹಾರಿದ ಬೈಕ್ ಸವಾರ: ಪ್ರತ್ಯಕ್ಷದರ್ಶಿಯೇ ದೂರುದಾರ!](https://mobiletime.in/2025/10/biker-who-jumped-the-divider-eyewitness-is-the-complainant/): ಹೊನ್ನಾವರದಲ್ಲಿ ರಾಷ್ಟ್ರೀಯ ಹೆದ್ದಾರಿಯ ಡಿವೈಡರ್ ಮೂಲಕ ಬೈಕ್ ದಾಟಿಸುತ್ತಿದ್ದ ವಸಂತ ಗೌಡ ಅವರಿಗೆ ಕಾರು ಡಿಕ್ಕಿಯಾಗಿದೆ. ಪರಿಣಾಮ ಅವರು ಗಂಭೀರ ಪ್ರಮಾಣದಲ್ಲಿ ಗಾಯಗೊಂಡಿದ್ದಾರೆ. ಅಕ್ಟೊಬರ್ 12ರ ಸಂಜೆ ಮಾವಿನಕಟ್ಟಾ ಮೂಲದ ವಸಂತ ದೇವು ಗೌಡ ಅವರು ಬೈಕಿನಲ್ಲಿ ಹೊರಟಿದ್ದರು. ತರಾತುರಿಯಲ್ಲಿ ಮಂಕಿಗೆ ಹೋಗಬೇಕಿದ್ದ ಅವರು ಇಡಗುಂಜಿ ತಿರುವಿನ ಬಳಿಯಿರುವ ಡಿವೈಡರ್ ಸಂದಿಯಲ್ಲಿ ಅವರು ಬೈಕ್ ನುಗ್ಗಿಸಿದ್ದರು. ಈ ವೇಳೆ ಹೊನ್ನಾವರದಿಂದ ಉಡುಪಿ ಕಡೆ ಶೃಂಗೇರಿಯ ಸಂಕೇತ ಕೊಪ್ಪ ಅವರು ಕಾರು ಓಡಿಸುತ್ತಿದ್ದರು. ಆ ಕಾರು ವಸಂತ ಗೌಡ ಅವರ ಬೈಕಿಗೆ ಬಡಿಯಿತು. ಪರಿಣಾಮ ಬೈಕಿನ ಜೊತೆ ವಸಂತ ಗೌಡ ಅವರು ನೆಲಕ್ಕೆ ಬಿದ್ದರು. ಈ ಅಪಘಾತದಲ್ಲಿ ಬೈಕು ಜಖಂ ಆಯಿತು. ಕಾರಿನ ಮುಂಬಾಗವೂ ಒಡೆಯಿತು. ವಸಂತ ಗೌಡ ಅವರಿಗೆ ಪೆಟ್ಟಾಗಿದ್ದು, ಕಾಲಿಗೆ ಗಂಭೀರ ಪ್ರಮಾಣದಲ್ಲಿ ಗಾಯವಾಯಿತು. ಅಲ್ಲಿದ್ದ ಜನ ವಸಂತ ಗೌಡ ಅವರನ್ನು ಹೊನ್ನಾವರ ಆಸ್ಪತ್ರೆಗೆ ದಾಖಲಿಸಿದರು. ಅದಾದ ನಂತರ ಹೆಚ್ಚಿನ ಚಿಕಿತ್ಸೆಗೆ ಕಾರವಾರದ ಕಿಮ್ಸ್’ಗೆ ಕಳುಹಿಸಿದರು. ಈ ಅಪಘಾತವನ್ನು ಮಾವಿನಕಟ್ಟಾದ ಪ್ರಮೋದ ಈಶ್ವರ ನಾಯ್ಕ ಅವರು ನೋಡಿದರು. ಬೈಕ್ ಸವಾರನ ಜೊತೆ ಕಾರು ಚಾಲಕನದ್ದು ತಪ್ಪಿರುವ ಬಗ್ಗೆ ಅವರು ಪೊಲೀಸರಿಗೆ ತಿಳಿಸಿದರು. ಹೀಗಾಗಿ ಮಂಕಿ ಪೊಲೀಸರು ವಸಂತ ದೇವು ಗೌಡ ಜೊತೆ ಸಂಕೇತ ಕೊಪ್ಪ ಅವರ ವಿರುದ್ಧವೂ ಪ್ರಕರಣ ದಾಖಲಿಸಿದರು. - [ಖರ್ಗೆ ನಿಲುವು ಖಂಡಿಸಿದ ಬಿಜೆಪಿಗ](https://mobiletime.in/2025/10/bjp-condemns-kharges-stance/): `ಸಚಿವ ಸಂಪುಟದಿAದ ಕೈಬಿಡುವ ಆತಂಕದಲ್ಲಿ ಪ್ರಚಾರಪಡೆಯುವ ಉದ್ದೇಶದಿಂದ ಪ್ರಿಯಾಂಕ್ ಖರ್ಗೆ ಆರ್ ಎಸ್ ಎಸ್ ವಿರುದ್ಧ ಪಿತೂರಿ ಮಾಡುತ್ತಿದ್ದಾರೆ’ ಎಂದು ಬಿಜೆಪಿ ಮುಖಂಡ ರಾಮು ನಾಯ್ಕ ಹೇಳಿದ್ದಾರೆ. `ಸಾರ್ವಜನಿಕ ಸ್ಥಳಗಳಲ್ಲಿ ಆರ್ ಎಸ್ ಎಸ್ ಚಟುವಟಿಕೆಗಳನ್ನು ನಿಷೇಧಿಸುವ ಪ್ರಿಯಾಂಕ್ ಖರ್ಗೆ ಅವರ ಹೇಳಿಕೆ ಹುಚ್ಚುತನದ ಪರಮಾವಧಿ’ ಎಂದು ಅವರು ಹೇಳಿದ್ದಾರೆ. `ಕಳೆದ ನೂರು ವರ್ಷಗಳಲ್ಲಿ ಮೂರು ತಲೆಮಾರು ಕಳೆದು ಹೋದರೂ ಸಂಘ-ಪರಿವಾರದವರನ್ನು ಬಡಿಯಲು ಕಾಂಗ್ರೆಸ್ಸಿನಿAದ ಆಗಲಿಲ್ಲ. ಆ ಪಕ್ಷದ ರಾಜಕೀಯ ನೇತಾರ ರಾಜೀವ ಗಾಂಧಿ, ಅವರಮ್ಮ ಇಂದಿರಾ ಗಾಂಧಿ, ಅವರಪ್ಪ ಜವಾಹರಲಾಲ ನೆಹರು ಯಾರಿಂದಲೂ ಸಂಘವನ್ನು ಬಗ್ಗಿಸಲು ಆಗಲಿಲ್ಲ. ಆರ್ ಎಸ್ ಎಸ್ ಇನ್ನೂ ಬೆಳೆಯುತ್ತಲೇ ಇದ್ದು, ಸಂಘ ರಾಷ್ಟ್ರವ್ಯಾಪಿ ಹೆಮ್ಮರವಾಗಿ ಬೆಳೆದಿದೆ’ ಎಂದವರು ವಿವರಿಸಿದ್ದಾರೆ. `ಆರ್ ಎಸ್ ಎಸ್ ನಿಷೇಧ ಅಸಾಧ್ಯ ಎಂಬುದು ಖರ್ಗೆ ಅವರಿಗೂ ಗೊತ್ತು. ಆದರೆ, ತಾನು ಸಂಘವನ್ನು ಇಷ್ಟು ಬಹಿರಂಗವಾಗಿ ಟೀಕಿಸಿದ ಕಾರಣಕ್ಕಾಗಿಯಾದರೂ ರಾಹುಲ್ ಗಾಂಧಿ ಪ್ರಸನ್ನರಾಗಿ, ತಮ್ಮ ಸಚಿವ ಸ್ಥಾನ ಅಬಾಧಿತವಾಗಿ ಉಳಿಯಸಬಹುದು ಎಂಬ ಲೆಕ್ಕಾಚಾರದಿಂದ ಅವರು ಹುಚ್ಚುತನ ಪ್ರದರ್ಶಿಸಿದ್ದಾರೆ’ ಎಂದು ರಾಮು ನಾಯ್ಕ ವಿಶ್ಲೇಷಿಸಿದ್ದಾರೆ. - [RTI ಅಸ್ತ್ರ: 36 ರೂಪಾಯಿಗೆ ತಕರಾರು ಸಲ್ಲಿಸಿದ ಹೊರಾಟಗಾರ!](https://mobiletime.in/2025/10/rti-weapon-a-street-vendor-filed-a-complaint-for-36-rupees/): RTI ಅಡಿ ಸಲ್ಲಿಸಿದ ಅರ್ಜಿಗೆ ದಾಖಲೆ ಒದಗಿಸದೇ 36 ರೂ ಹಣ ಪಾವತಿಸುವಂತೆ ಸೂಚಿಸಿದ ಕಾರಣ ಕುಮಟಾದ ಜನಸಾಮಾನ್ಯರ ಸಮಾಜ ಕಲ್ಯಾಣ ಕೇಂದ್ರದ ಅಧ್ಯಕ್ಷ ಆಗ್ನೇಲ್ ರೋಡ್ರಿಗಿಸ್ ತಕರಾರು ಸಲ್ಲಿಸಿದ್ದಾರೆ. ಬಡತನ ರೇಖೆಗಿಂತ ಕೆಳಗಿರುವ ಅರ್ಜಿದಾರರಿಗೆ 100 ಪುಟ ಉಚಿತವಾಗಿ ಕೊಡದೇ ಹಣ ಪಾವತಿಸಲು ಸೂಚಿಸಿದ ಕಾರಣ ಅವರು ಸಿಡಿಮಿಡಿಗೊಂಡಿದ್ದಾರೆ. ಕುಮಟಾ ಜನತಾ ಪ್ಲೋಟಿನ ಆಗ್ನೇಲ್ ರೋಡ್ರಿಗಿಸ್ ಅವರು ಕುಮಟಾ ತಹಶೀಲ್ದರ್ ಕಚೇರಿಗೆ ಮಾಹಿತಿ ಹಕ್ಕು ಕಾಯ್ದೆ ಅಡಿ ಅರ್ಜಿ ಸಲ್ಲಿಸಿದ್ದರು. ಸೆ 20ರಂದು ಅವರು ಸಲ್ಲಿಸಿದ ಅರ್ಜಿಯಲ್ಲಿ `ಇಂದಿರಾ ಗಾಂಧಿ ಪಿಂಚಣಿ ಯೋಜನೆಯಡಿ ಫಲಾನುಭವಿಗಳ ಕಡತ’ ನೀಡುವಂತೆ ಕೋರಿದ್ದರು. ಇದಕ್ಕೆ ಪ್ರತಿಯಾಗಿ ತಹಶೀಲ್ದಾರ್ ಶ್ರೀಕೃಷ್ಣ ಕಾಮ್ಕರ್ ಅವರು ಹಿಂಬರಹ ನೀಡಿದ್ದು, `18 ಪುಟಗಳ ಕಡತಕ್ಕೆ 36ರೂ ಹೆಚ್ಚುವರಿಯಾಗಿ ಪಾವತಿಸಬೇಕು’ ಎಂದು ಸೂಚಿಸಿದ್ದಾರೆ. `ಅರ್ಜಿ ಜೊತೆ 10ರೂ ಮೌಲ್ಯದ ಪೋಸ್ಟಲ್ ಆರ್ಡರ್ ಹಾಗೂ ಪಡಿತರ ಚೀಟಿ ಲಗತ್ತಿಸಿದರೂ ಹೆಚ್ಚುವರಿ ಹಣ ಕೇಳಲಾಗಿದೆ’ ಎಂಬುದು ಅರ್ಜಿದಾರ ಆಗ್ನೆಲ್ ರೋಡಿಗ್ರಸ್ ಅವರ ಆರೋಪ. ಮಾಹಿತಿ ನೀಡದ ಅಧಿಕಾರಿಗೆ ದಂಡ ವಿಧಿಸಲು ಕೋರಿ ಮೇಲ್ಮನವಿ ಸಲ್ಲಿಸುವುದಾಗಿ ಆಗ್ನೇಲ್ ರೋಡಿಗ್ರಸ್ ಹೇಳಿದ್ದಾರೆ. - [ಬೆಳಗಾವಿಯಿಂದ ಭಟ್ಕಳಕ್ಕೆ ಅಕ್ರಮ ಸಾಗಾಟ: ಗೋ ಹಂತಕರಿಗೆ ಯಲ್ಲಾಪುರ ಪೊಲೀಸರ ಕಾಟ!](https://mobiletime.in/2025/10/illegal-transportation-from-belgaum-to-bhatkal-yellapur-polices-threat-to-cow-killers/): ವಧೆ ಮಾಡುವ ಉದ್ದೇಶದಿಂದ ಬೆಳಗಾವಿಯಿಂದ ಭಟ್ಕಳಕ್ಕೆ ಸಾಗಿಸುತ್ತಿದ್ದ ಗೋವುಗಳನ್ನು ಯಲ್ಲಾಪುರ ಪೊಲೀಸರು ಹಿಡಿದಿದ್ದಾರೆ. ಬೆಳಗಾವಿಯಿಂದ ಕಲಘಟಕಿವರೆಗಿನ ಎಲ್ಲಾ ಪೊಲೀಸ್ ಠಾಣೆಯವರು ಬಿಟ್ಟು ಕಳುಹಿಸಿದ ವಾಹನಕ್ಕೆ ಅಡ್ಡಲಾಗಿ ಯಲ್ಲಾಪುರ ಪೊಲೀಸರು ಕೈ ಮಾಡಿದ್ದು, ಪಿಎಸ್‌ಐ ಶೇಡಜಿ ಚೌಹಾಣ್ ಹಾಗೂ ರಾಜಶೇಖರ ವಂದಲಿ ಸೇರಿ ಆರು ಜಾನುವಾರುಗಳ ಪ್ರಾಣ ಕಾಪಾಡಿದರು. ಭಟ್ಕಳದ ಬೆಳಕಂಡ ಮುತ್ತಳ್ಳಿಯ ರಬ್ಬಾನಿ ಬಾಬಾಸಾಬ ಕಚವಿ ಎಂಬಾತರು ಅಕ್ರಮ ಜಾನುವಾರು ಸಾಗಾಟವನ್ನು ಕಸುಬು ಮಾಡಿಕೊಂಡಿದ್ದರು. ತಮ್ಮ ಬುಲೆರೊ ವಾಹನಕ್ಕೆ ಭಟ್ಕಳದ ಮಹಮ್ಮದ್ ಸಿದ್ದಿಕ್ ಅಬ್ದುಲ್ ಅಮೀರ್ ಮಜಾರ ಎಂಬಾತರನ್ನು ಚಾಲಕರನ್ನಾಗಿ ನೇಮಿಸಿಕೊಂಡಿದ್ದರು. ಭಟ್ಕಳದ ಅಲ್ತಾಪ ಎಂಬಾತರನ್ನು ಜೊತೆಗಿರಿಸಿಕೊಂಡು ಅವರು ಬೆಳಗಾವಿಯಿಂದ ಭಟ್ಕಳಕ್ಕೆ ಹಿಂಸಾತ್ಮಕ ರೂಪದಲ್ಲಿ ಗೋವುಗಳ ಸಾಗಾಟ ಮಾಡುತ್ತಿದ್ದರು. ಬೆಳಗಾವಿಯಿಂದ ಹೊರಟ ಆ ವಾಹನಕ್ಕೆ ಯಾವ ಪೊಲೀಸರು ಕೈ ಮಾಡಲಿಲ್ಲ. ಕೈ ಮಾಡಿದರೂ ಅಕ್ರಮ ಜಾನುವಾರು ಸಾಗಾಟಗಾರರನ್ನು ಪ್ರಶ್ನಿಸಲಿಲ್ಲ. ಹೀಗಾಗಿ ರಾಜಾರೋಷವಾಗಿ ಅವರು ರಾಷ್ಟ್ರೀಯ ಹೆದ್ದಾರಿ ಮೂಲಕ ಯಲ್ಲಾಪುರವನ್ನು ಪ್ರವೇಶಿಸಿದರು. ಆದರೆ, ಯಲ್ಲಾಪುರ ಪೊಲೀಸರು ಆ ವಾಹನವನ್ನು ತಡೆದರು. ಮಲಬಾರ್ ಹೊಟೇಲ್ ಬಳಿ ಪಿಕಪ್ ತಡೆದು ನಿಲ್ಲಿಸಿದಾಗ ಅದರಲ್ಲಿದ್ದ ರಬ್ಬಾನಿ ಬಾಬಾಸಾಬ ಕಚವಿ ಹಾಗೂ ಅಲ್ತಾಪ್ ಗಾಡಿಯಿಂದ ಹಾರಿ ಪರಾರಿಯಾದರು. ಮಹಮ್ಮದ್ ಸಿದ್ದಿಕ್ ಅಬ್ದುಲ್ ಅಮೀರ್ ಮಜಾರ ಸಿಕ್ಕಿಬಿದ್ದರು. ಪಿಕಪ್ ವಾಹನ ತಪಾಸಣೆ ನಡೆಸಿದಾಗ ಅದರಲ್ಲಿ ಆರು ಜಾನುವಾರುಗಳಿದ್ದವು. ಅತ್ಯಂತ ಹಿಂಸಾತ್ಮಕ ರೀತಿಯಲ್ಲಿ ಅವುಗಳನ್ನು ಕಟ್ಟಲಾಗಿತ್ತು. ಒಂದು ಆಕಳು, ಎರಡು ಹೋರಿ ಹಾಗೂ ಮೂರು ಸಣ್ಣ ದನಗಳನ್ನು ಪೊಲೀಸರು ಬಿಡುಗಡೆ ಮಾಡಿದರು. ಪಿಕಪ್ ವಾಹನ ಚಾಲಕ ಕೈ ಮುಗಿದು ಬೇಡಿಕೊಂಡರು ಅಕ್ರಮ ಜಾನುವಾರು ಸಾಗಾಟಗಾರರ ಜೊತೆ ಪೊಲೀಸರು ರಾಜಿ ಆಗಲಿಲ್ಲ. ಓಡಿ ಹೋದವರ ಹೆಸರನ್ನು ಸೇರಿಸಿ ಮೂವರ ವಿರುದ್ಧ ಪ್ರಕರಣ ದಾಖಲಿಸಿದರು. ಹಿಂಸಾತ್ಮಕವಾಗಿ ತುಂಬಿಕೊoಡು ಕಲಘಟಗಿ ಕಡೆಯಿಂದ ಅಂಕೋಲಾ ಕಡೆಗೆ ಸಾಗಿಸುತ್ತಿದ್ದರು. ಪಟ್ಟಣದ ಮಲಬಾರ್ ಹೋಟೆಲ್ ಬಳಿ ಪೊಲೀಸರು ದಾಳಿ ನಡೆಸಿ ಜಾನುವಾರುಗಳನ್ನು ರಕ್ಷಿಸಿದ್ದಾರೆ. - [ಪತ್ನಿ ಬಿಟ್ಟು ಪರಾರಿಯಾದವ ಪೊಲೀಸರ ಅತಿಥಿ!](https://mobiletime.in/2025/10/the-guest-of-the-police-who-escaped-from-his-wife/): ಪತ್ನಿಗೆ ಥಳಿಸಿ ಆಕೆಯ ಒಡವೆ ಕದ್ದು ಪರದೇಶಕ್ಕೆ ಪರಾರಿಯಾಗಿದ್ದ ಮುಂಡಗೋಡಿನ ಅರ್ಫಾಜ ಅಹ್ಮದ ಹುಸೇನ ಮಿರ್ಜಾನಕರ ಅವರನ್ನು ಎರಡು ವರ್ಷದ ನಂತರ ಪೊಲೀಸರು ಬಂಧಿಸಿದ್ದಾರೆ. ಮುಂಬೈ ವಿಮಾನ ನಿಲ್ದಾಣದಲ್ಲಿ ಅವರು ಸಿಕ್ಕಿಬಿದ್ದಿದ್ದಾರೆ. ಮುಂಡಗೋಡದ ಕೆಎಚ್‌ಬಿ ಕಾಲೋನಿಯ ಇರಮಸಭಾ ಅವರು ಅರ್ಫಾಜ ಅಹ್ಮದ ಹುಸೇನ ಮಿರ್ಜಾನಕರ ಅವರನ್ನು ಮದುವೆ ಆಗಿದ್ದರು. ಮದುವೆ ಆದ ಶುರುವಿನಲ್ಲಿ ಅವರಿಬ್ಬರು ಚನ್ನಾಗಿಯೇ ಇದ್ದರು. ನಂತರ ಅರ್ಫಾಜ ಪತ್ನಿಯನ್ನು ಪೀಡಿಸಲು ಶುರು ಮಾಡಿದರು. ವರದಕ್ಷಿಣೆ ತಂದುಕೊಡುವoತೆ ಅವರು ಕಾಡಿಸುತ್ತಿದ್ದರು. ಅರ್ಫಾಜ ಅವರು ವರದಕ್ಷಿಣೆ ಕೊಡದ ಕಾರಣದಿಂದ ನಿತ್ಯ ಜಗಳ ಮಾಡುತ್ತಿದ್ದರು. ಇದೇ ವಿಷಯವಾಗಿ ಅರ್ಫಾಜ ಅವರು ಇರಮಸಭಾ ಅವರ ಮೇಲೆ ಕೈ ಮಾಡಿದ್ದರು. ಇರಮಸಭಾ ಅವರಿಗೆ ತವರುಮನೆಯವರು ಉಡುಗರೆಯಾಗಿ ಕೊಟ್ಟಿದ್ದ 12 ತೊಲೆ ಬಂಗಾರದ ಆಭರಣವನ್ನು ಕಿತ್ತುಕೊಂಡಿದ್ದ ಅರ್ಫಾಜ ಅವರು ಇರಮಸಭಾ ಅವರನ್ನು ಮನೆಯಿಂದ ಹೊರಹಾಕಿದ್ದರು. ಇನ್ನಷ್ಟು ವರದಕ್ಷಿಣೆ ಕೊಡದೇ ಇದ್ದರೆ ಸೀಮೆಎಣ್ಣೆ ಸುರಿದು ಸುಡುವುದಾಗಿ ಬೆದರಿಸಿದ್ದರು. 2022ರ ಡಿಸೆಂಬರ್ 17ರಂದು ಇರಮಸಭಾ ಅವರು ಗಂಡನಮನೆಗೆ ಹೋದಾಗ ಅಲ್ಲಿದ್ದ ಐವರು ಅವರನ್ನು ರಸ್ತೆಗೆ ದೂಡಿದ್ದರು. ಜೀವ ಬೆದರಿಕೆಯಿರುವ ಬಗ್ಗೆ ಇರಮಸಭಾ ಅವರು ಪೊಲೀಸ್ ದೂರು ನೀಡಿದ್ದರು. ಮುಖ್ಯ ಆರೋಪಿಯಾದ ಅರ್ಫಾಜ್ ಅಹಮ್ಮದ ಹುಸೇನ್ ಮಿರ್ಜಾನಕರ್ ಎರಡು ವರ್ಷಗಳಿಂದ ನ್ಯಾಯಾಲಯಕ್ಕೆ ಬಂದಿರಲಿಲ್ಲ. ಆತನ ಬಗ್ಗೆ ಕಿಂಚಿತ್ತು ಸುಳಿವು ಇರಲಿಲ್ಲ. ಅರ್ಫಾಜ ಅವರು ಹೊರದೇಶದಲ್ಲಿರುವ ಬಗ್ಗೆ ಮಾಹಿತಿಯಿದ್ದು, ಲುಕ್‌ಔಟ್ ನೋಟಿಸ್ ಹೊರಡಿಸಲಾಗಿತ್ತು. ಈ ನಡುವೆ ಭಾನುವಾರ ಅರ್ಫಾಜ ಮುಂಬೈಗೆ ಬಂದ ಮಾಹಿತಿ ಅರಿತು ಪೊಲೀಸರು ಅಲ್ಲಿಗೆ ಹೋದರು. ಅರ್ಫಾಜರನ್ನು ಅಲ್ಲಿಯೇ ವಶಕ್ಕೆಪಡೆದು ನ್ಯಾಯಾಲಯಕ್ಕೆ ಒಪ್ಪಿಸಿದರು. - [50 ಅಡಿ ಆಳಕ್ಕೆ ಬಿದ್ದರೂ ಬದುಕಿದ ಎತ್ತು!](https://mobiletime.in/2025/10/an-ox-survived-after-falling-50-feet/): ಕಾರವಾರದಲ್ಲಿ 50 ಅಡಿ ಆಳಕ್ಕೆ ಬಿದ್ದ ಎತ್ತು ಅಪಾಯದಿಂದ ಪಾರಾಗಿದೆ. ಕಿಂಚಿತ್ತು ಗಾಯ ಮಾಡಿಕೊಳ್ಳದೇ ಆ ಎತ್ತು ಬಾವಿಯಿಂದ ಮೇಲೆದ್ದು ಬಂದಿದೆ. ಕಾರವಾರದ ಗಾಂವಕರವಾಡ ಮಲ್ಲಿಕಾರ್ಜುನ ದೇವಸ್ಥಾನ ಹತ್ತಿರದ ಬಾವಿಯೊಳಗೆ ಎತ್ತು ಬಿದ್ದಿತ್ತು. ಇದನ್ನು ನೋಡಿದ ಜನ ಅಗ್ನಿಶಾಮಕ ಸಿಬ್ಬಂದಿಗೆ ಫೋನ್ ಮಾಡಿದರು. ಶಾಂತರಾಮ ಗಾಂವಕರ ಅವರು ಅಗ್ನಿಶಾಮಕ ಸಿಬ್ಬಂದಿಗೆ ಬರುವಂತೆ ಮನವಿ ಮಾಡಿದರು. ತಮ್ಮ ವಾಹನದ ಜೊತೆ ಬಂದ ರಕ್ಷಣಾ ಸಿಬ್ಬಂದಿ ಎತ್ತಿನ ಪರಿಸ್ಥಿತಿ ಅವಲೋಕಿಸಿದರು. ಬಾವಿಯ ಆಳದಲ್ಲಿ ಎತ್ತು ಹೊರಳಾಡುತ್ತಿರುವುದನ್ನು ನೋಡಿದ ಅವರು ಉಪಾಯವಾಗಿ ಅದನ್ನು ಮೇಲೆತ್ತುವ ಕೆಲಸ ಶುರು ಮಾಡಿದರು. ಅಗ್ನಿಶಾಮಕ ಠಾಣಾಧಿಕಾರಿ ಮಹಾಬಲೇಶ್ವರ ಗೌಡ ಅವರ ನೇತೃತ್ವದಲ್ಲಿ ಕಾರ್ಯಾಚರಣೆ ಶುರುವಾಯಿತು. ಒಂದುವರೆ ತಾಸುಗಳ ಕಾಲ ಅಗ್ನಿಶಾಮಕ ಠಾಣೆ ಸಿಬ್ಬಂದಿ ರಾಜೇಶ್ ಎಂ ರಾಣೆ, ವಿನಾಯಕ ಎಂ ನಾಯ್ಕ, ಟೋನಿ ಅಲೆಕ್ಸ್ ಬಾರಾಭೋಜ, ಪ್ರವೀಣ ಕೆ ನಾಯ್ಕ, ಕುಮಾರ ಕೆ ಎಸ್ ಹಾಗೂ ಭರತ ಕುಮಾರ ಸಾಹಸ ನಡೆಸಿದರು. ಯಂತ್ರವನ್ನು ಬಾವಿಗಿಳಿಸಿದ ಅವರು ಹಗ್ಗದಿಂದ ಎತ್ತನ್ನು ಕಟ್ಟಿದರು. ನಿಧಾನವಗಿ ಹಗ್ಗ ಎಳೆದಂತೆ ಎತ್ತು ಮೇಲೆ ಬಂದಿತು. ಪಾತಾಳದಲ್ಲಿದ್ದ ಎತ್ತು ಭೂಮಿ ಕಂಡ ತಕ್ಷಣ ಲವಲವಿಕೆಯಿಂದ ಓಡಲು ಶುರು ಮಾಡಿತು. - [ಜಿಂಕೆ ಕೊಂದವ ಮಾಂಸ ಬಿಟ್ಟು ಹೋದ!](https://mobiletime.in/2025/10/the-deer-killer-left-the-meat-behind/): ಯಲ್ಲಾಪುರ ಅರಣ್ಯ ವಿಭಾಗ ವ್ಯಾಪ್ತಿಯಲ್ಲಿ ಶಿಕಾರಿ ಶೂರರ ಸಂಖ್ಯೆ ಹೆಚ್ಚಾಗಿದೆ. ಕಳ್ಳ ಬಂದೂಕು ಹೊಂದಿರುವ ಕೆಲವರು ರಾತ್ರಿ ವೇಳೆ ಕಾಡು ತಿರುಗುತ್ತಿದ್ದಾರೆ. ಪರಿಣಾಮ ಮಂಚಿಕೇರಿ ಅರಣ್ಯ ವಲಯದಲ್ಲಿ ಚಿಂಕೆಯೊoದು ಗುಂಡಿನ ಏಟಿಗೆ ಬಲಿಯಾಗಿದೆ. ಮಂಚಿಕೇರಿ ಅರಣ್ಯ ವ್ಯಾಪ್ತಿಯಲ್ಲಿ ಅಪರೂಪದ ಜೀವ ಸಂಕುಲವಿದ್ದು, ವನ್ಯಜೀವಿ ಪ್ರಬೇದವೂ ಹೇರಳವಾಗಿದೆ. ಹೀಗಾಗಿ ಈ ಭಾಗದಲ್ಲಿ ರಾತ್ರಿ ವೇಳೆ ಕಾಡು ಸುತ್ತುವವರ ಸಂಖ್ಯೆಯೂ ಅಧಿಕ ಪ್ರಮಾಣದಲ್ಲಿದೆ. ಕೆಲ ತಿಂಗಳ ಹಿಂದೆ ಇದೇ ಭಾಗದಲ್ಲಿ ಬಂದೂಕು ಹಿಡಿದು ಓಡಾಡುತ್ತಿದ್ದ ವ್ಯಕ್ತಿಯನ್ನು ಪೊಲೀಸರು ಹಿಡಿದಿದ್ದರು. ಆ ವೇಳೆ ಬಂದೂಕಿಗೆ ಪರವಾನಿಗೆ ಇಲ್ಲದಿರುವುದು ಗಮನಕ್ಕೆ ಬಂದಿತ್ತು. ಅದಾದ ನಂತರ ಅರಣ್ಯ ಸಿಬ್ಬಂದಿ ಎಚ್ಚೆತ್ತುಕೊಳ್ಳಲಿಲ್ಲ. ಪರವಾನಿಗೆ ಇಲ್ಲದಿರುವ ಬಂದೂಕುದರಿಗಳನ್ನು ಗುರುತಿಸುವ ಕೆಲಸ ಮಾಡಲಿಲ್ಲ. ಅದರ ಪರಿಣಾಮವಾಗಿ ಯಾರಿಗೂ ತೊಂದರೆ ಮಾಡದ ಮುಗ್ದ ಜೀವಿಗಳು ಗುಂಡೇಟಿಗೆ ಬಲಿಯಾಗುತ್ತಿದೆ. ಕಳ್ಳ ಭೇಟೆಗಾರರು ರಾಜಾರೋಷವಾಗಿ ಬೆಟ್ಟ ತಿರುಗುತ್ತಿದ್ದಾರೆ. ಈಗಲೂ ಮಂಚಿಕೇರಿ ಅರಣ್ಯ ಪ್ರದೇಶದಲ್ಲಿ ತಡರಾತ್ರಿ ಚಿಂಕೆಯೊAದರ ಶಿಕಾರಿ ನಡೆದಿದೆ. ತುಡುಗುಣಿಯಲ್ಲಿ ಭೇಟೆಗಾರರು ಜಿಂಕೆ ಕೊಂದು ಪರಾರಿಯಾಗಿದ್ದಾರೆ. ಗುಂಡಿನ ಸದ್ದು ಕೇಳಿದ ಬಗ್ಗೆ ಜನ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದು, ಅಲ್ಲಿ ತೆರಳಿದಾಗ ಜಿಂಕೆ ಸಾವನಪ್ಪಿರುವುದು ಗೊತ್ತಾಗಿದೆ. ಅರಣ್ಯ ಸಿಬ್ಬಂದಿ ಬರುವುದನ್ನು ನೋಡಿದ ಶಿಕಾರಿ ಶೂರರು ಅಲ್ಲಿಂದ ಕಾಲ್ಕಿತ್ತಿದ್ದಾರೆ. ಬ್ಯಾಟರಿ ಬೆಳಕು ನೋಡಿಯೇ ಬಂದೂಕುದಾರಿಗಳು ಓಡಿಹೋಗಿರುವ ಅನುಮಾನವಿದೆ. `ಜಿಂಕೆ ಸಾವನಪ್ಪಿದ ಬಗ್ಗೆ ನ್ಯಾಯಾಲಯಕ್ಕೆ ಮಾಹಿತಿ ನೀಡಲಾಗಿದೆ. ಆರೋಪಿತರ ಹುಡುಕಾಟ ನಡೆದಿದೆ’ ಎಂದು ಮಂಚಿಕೇರಿ ವಲಯ ಅರಣ್ಯಾಧಿಕಾರಿ ಬಸವರಾಜ ಬೋಚಳ್ಳಿ ಮಾಹಿತಿ ನೀಡಿದರು. - [ಮುಕಳೆಪ್ಪನ ಮದುವೆ: ಮೌನ ಮುರಿದ ಮುತಾಲಿಕ್!](https://mobiletime.in/2025/10/mukaleppas-marriage-muthalik-broke-the-silence/): ಮುಸ್ಲಿಂ ಸಮುದಾಯದ ಯೂಟೂಬರ್ ಮುಕಳೆಪ್ಪ ನಕಲಿ ವಿಳಾಸ ದಾಖಲೆ ನೀಡಿ ಹಿಂದು ಹುಡುಗಿಯನ್ನು ಮದುವೆಯಾಗಿ ಮೂರು ತಿಂಗಳು ಕಳೆದಿದ್ದು, ಇದೀಗ ಈ ವಿಷಯವಾಗಿ ಪ್ರಮೋದ ಮುತಾಲಿಕ್ ಹೋರಾಟ ಶುರು ಮಾಡಿದ್ದಾರೆ. ಮುಂಡಗೋಡದಲ್ಲಿ ನಡೆದ ಈ ಮದುವೆ ವಿರುದ್ಧ ಕಿಡಿಕಾರಿದ ಅವರು `ಗಲಬೆ-ಗಲಾಟೆ ಆಗುವುದಕ್ಕಿಂತ ಮುಂಚೆ ಸರ್ಕಾರ ಕ್ರಮ ಜರುಗಿಸಬೇಕು’ ಎಂದು ಆಗ್ರಹಿಸಿದ್ದಾರೆ. ಹುಬ್ಬಳ್ಳಿಯ ಮುಕಳೆಪ್ಪ ಧಾರವಾಡದ ಗಾಯತ್ರಿ ಅವರನ್ನು ವಿವಾಹವಾಗಿದ್ದರು. ಮುಕಳೆಪ್ಪ ಅವರು ಮುಂಡಗೋಡಿನ ನೋಂದಣಾಧಿಕಾರಿ ಕಚೇರಿ ಮೂಲಕ ಈ ವಿವಾಹವಾಗಿದ್ದು, ಮುಂಡಗೋಡು ನೋಂದಣಾಧಿಕಾರಿಗಳ ಕಚೇರಿ ಅಧಿಕಾರಿ-ಸಿಬ್ಬಂದಿ ವಿರುದ್ಧ ಗಾಯತ್ರಿ ಅವರ ತಾಯಿ ಶಿವಕ್ಕ ಅವರು ಪೊಲೀಸ್ ದೂರು ದಾಖಲಿಸಿದ್ದರು. ಬಂಧನದ ಭೀತಿ ಹಿನ್ನಲೆ ಆ ಕಚೇರಿ ಅಧಿಕಾರಿ-ಸಿಬ್ಬಂದಿ ಪರಾರಿಯಾಗಿದ್ದರು. ಅದಾದ ನಂತರ ಬೇರೆ ತಾಲೂಕಿನ ಅಧಿಕಾರಿಗಳು ಕಚೇರಿ ಬಾಗಿಲು ತೆರೆದು ಕೆಲಸ-ಕಾರ್ಯ ಶುರು ಮಾಡಿದ್ದರು. ಇದಕ್ಕೂ ಮುಂಚೆ ಮುಕಳೆಪ್ಪನ ವಿರುದ್ಧ ಸಾಕಷ್ಟು ಪ್ರತಿಭಟನೆಗಳು ನಡೆದಿದ್ದವು. ಹುಬ್ಬಳ್ಳಿ-ಧಾರವಾಡ ಭಾಗದಲ್ಲಿ ಸಹ ಜನ ಆಕ್ರೋಶವ್ಯಕ್ತಪಡಿಸಿದ್ದರು. ಪ್ರಮೋದ ಮುತಾಲಿಕ್ ಅವರು ಈ ವಿಷಯವಾಗಿ ಇಷ್ಟು ದಿನಗಳ ಕಾಲ ಮೌನವಾಗಿದ್ದು, ಎಷ್ಟೇ ಹೋರಾಟ ನಡೆದಿರೂ ಪ್ರಯೋಜನವಾಗದ ಹಿನ್ನಲೆ ಅವರು ಕಾರವಾರಕ್ಕೆ ಆಗಮಿಸಿ ಜಿಲ್ಲಾಡಳಿತದ ಅಧಿಕಾರಿಗಳನ್ನು ಭೇಟಿ ಮಾಡಿದರು. ಈ ವೇಳೆ ನಕಲಿ ವಿಳಾಸ ದಾಖಲೆ ನೀಡಿ ಹಿಂದು ಹುಡುಗಿಯನ್ನು ಮದುವೆ ಆದ ಯೂಟೂಬರ್ ಮುಕಳೆಪ್ಪ ವಿರುದ್ಧ ಹಿಂದು ಜಾಗರಣಾ ವೇದಿಕೆ ಮುಖ್ಯಸ್ಥ ಪ್ರಮೋದ ಮುತಾಲಿಕ್ ಕಿಡಿಕಾರಿದರು. `ಒಂದು ತಿಂಗಳಿನಿAದ ಪ್ರತಿಭಟನೆ ನಡೆಯುತ್ತಿದ್ದರೂ ಯಾವುದೇ ಕ್ರಮ ಆಗಿಲ್ಲ. ವಿವಾಹ ನೋಂದಣಿ ಮಾಡಿಸಿದ ಅಧಿಕಾರಿಗಳ ಅಮಾನತು ಆಗಬೇಕು’ ಎಂದು ಆಗ್ರಹಿಸಿದರು. `ಹಿಂದು ಹುಡುಗಿಯರನ್ನು ಪುಸಲಾಯಿಸಿ ಗೋಮಾಂಸ ತಿನ್ನಿಸಲಾಗಿಸುತ್ತಿದೆ. ನಂತರ ಅವರಿಗೆ ಬುರ್ಕಾ ಹಾಕಿಸುವ ಕೆಲಸ ನಡೆಯುತ್ತಿದೆ. ನಕಲಿ ದಾಖಲೆ ನೀಡಿ ಮದುವೆ ಮಾಡಿದರೂ ಕೇಳುವವರಿಲ್ಲ. ದೂರು ನೀಡಿದರೂ ಕ್ರಮ ಜರುಗಿಸಿಲ್ಲ ಎಂದಾದರೆ ಕಲ್ಲು ತೆಗೆದುಕೊಂಡು ಹೊಡೆಯಬೇಕಾ? ಅಥವಾ ಬೆಂಕಿ ಹಚ್ಚಿ ಪ್ರತಿಭಟಿಸಬೇಕಾ?’ ಎಂದು ಪ್ರಶ್ನಿಸಿದರು. `ತನಿಖೆಯೂ ಆಗಿಲ್ಲ.. ಬಂಧನವೂ ಆಗಿಲ್ಲ ಎಂದರೆ ನಾವು ಒದ್ದು ತರ್ತಿವಿ’ ಎಂದು ಎಚ್ಚರಿಸಿದರು. `ನಕಲಿ ದಾಖಲೆಪಡೆದು ಮದುವೆ ಮಾಡಿದವರು ಕೋಟಿ ವೆಚ್ಚದ ಮನೆ ಕಟ್ಟಿದ್ದಾರೆ. ಅವರ ಆದಾಯದ ಮೂಲಗಳ ಬಗ್ಗೆ ತನಿಖೆ ನಡೆಯಬೇಕು. ಇಲ್ಲವಾದಲ್ಲಿ ನಮ್ಮ ದಾರಿ ನಾವು ಹಿಡಿಯುತ್ತೇವೆ’ ಎಂದರು. `ರಾಜ್ಯದ ಎಲ್ಲಡೆ ಬೆಂಕಿ ಹತ್ತುವ ಮುನ್ನ ಕ್ರಮ ಆಗಬೇಕು. ಹೀಗಾಗಿ ಮತ್ತೊಮ್ಮೆ ಜಿಲ್ಲಾಡಳಿತಕ್ಕೆ ಮನವಿ ನೀಡುತ್ತಿದ್ದೇವೆ’ ಎಂದರು. ಈ ಪ್ರಕರಣದಲ್ಲಿ ಪೊಲೀಸರು ಶಾಮೀಲಾಗಿರುವ ಅನುಮಾನವ್ಯಕ್ತಪಡಿಸಿದರು.   - [ಜನರೇ ಘೋಷಿಸಿದ ಶಿರಸಿ ಜಾತ್ರೆ!](https://mobiletime.in/2025/10/the-sirsi-fair-was-announced-by-the-people-themselves/): ಫೆಬ್ರವರಿ 24ರಿಂದ ಮಾರ್ಚ ಮಾರ್ಚ 4ರವರೆಗೆ ಶಿರಸಿ ಜಾತ್ರೆ ನಡೆಯುವ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಬಗೆ ಬಗೆಯ ಪೋಸ್ಟರ್ ಸಿದ್ದಪಡಿಸಿದ ಸೋಶಿಯಲ್ ಮಿಡಿಯಾ ಶೂರರು ಅದನ್ನು ಎಲ್ಲಾ ಕಡೆ ಹಬ್ಬಿಸುತ್ತಿದ್ದಾರೆ. ಹೀಗಾಗಿ `ಜಾತ್ರೆ ದಿನಾಂಕ ಇನ್ನೂ ಘೋಷಣೆ ಆಗಿಲ್ಲ’ ಎಂದು ಮಾರಿಕಾಂಬಾ ದೇವಾಲಯ ಆಡಳಿತ ಮಂಡಳಿಯವರೇ ಹೇಳಿದರೂ ಜನ ಅದನ್ನು ನಂಬುವ ಸ್ಥಿತಿಯಲ್ಲಿಲ್ಲ! ಶಿರಸಿ ಜಾತ್ರೆ ದಿನಾಂಕ ಘೋಷಣೆಗೆ ಅದರದ್ದೇ ಆದ ರೀತಿ-ನೀತಿಗಳಿವೆ. ಸಾವಿರಾರು ಜನರಿಗೆ ಸಾಕ್ಷಿಯಾಗಿ ಮಾರಿಕಾಂಬಾ ದೇವಿ ಸಮ್ಮುಖದಲ್ಲಿಯೇ ಜಾತ್ರೆ ದಿನಾಂಕ ಘೋಷಣೆಯಾಗುತ್ತದೆ. ಕನಿಷ್ಟ ಮೂರು ತಿಂಗಳ ಮುಂದೆ ಜಾತ್ರೆ ದಿನಾಂಕ ಘೋಷಣೆ ಆಗಲಿದ್ದು, ಅದರೊಂದಿಗೆ ಪೂಜೆ, ಕಾರ್ಯಕ್ರಮ, ವಿವಾಹ ಮಹೋತ್ಸವ, ರಥೋತ್ಸವ, ವಿಸರ್ಜನೆಯಿಂದ ಪುನರ್ ಪ್ರತಿಷ್ಠೆಯವರೆಗೆ ಪ್ರತಿಯೊಂದು ಮುಹೂರ್ತವನ್ನು ನಿಗದಿ ಮಾಡಲಾಗುತ್ತದೆ. ಈ ಎಲ್ಲಾ ಪ್ರಕ್ರಿಯೆ ನಡೆಯುವ ಮೊದಲು ಮೂಲ ದೇವಸ್ಥಾನದ ಅರ್ಚಕರು `ರಾಯಸ ಪತ್ರ’ ಸಿದ್ಧಪಡಿಸುತ್ತಾರೆ. ಆ ಪತ್ರವನ್ನು ದೇವಿ ಮುಂದಿರಿಸಿ ವಿಶೇಷ ಪೂಜೆ ಸಲ್ಲಿಸುತ್ತಾರೆ. ಜನಪ್ರತಿನಿಧಿಗಳು, ಅಧಿಕಾರಿಗಳು, ಭಕ್ತರು ಹಾಗೂ ಸಾರ್ವಜನಿಕರ ಮುಂದೆ ತುಂಬಿದ ಸಭೆಯಲ್ಲಿ ಆ ರಾಯಸ ಪತ್ರವನ್ನು ಓದಿದ ನಂತರ ಅಧಿಕೃತವಾಗಿ ಜಾತ್ರೆ ಕೆಲಸಗಳು ಶುರುವಾಗುತ್ತದೆ. ಆದರೆ, ಇದ್ಯಾವುದರ ಬಗ್ಗೆ ಮಾಹಿತಿಯೇ ಇಲ್ಲದ ಸೋಶಿಯಲ್ ಮೀಡಿಯಾ ಶೂರರು ಅವರೇ ಜಾತ್ರೆ ದಿನಾಂಕ ಘೋಷಿಸಿದ್ದಾರೆ. ದೇವಾಲಯದ ಆಡಳಿತ ಮಂಡಳಿಯನ್ನು ಹೊರಗಿಟ್ಟು ಸೋಶಿಯಲ್ ಮಿಡಿಯಾದಲ್ಲಿಯೇ ಜಾತ್ರೆ ನಡೆಸುವ ಸಿದ್ಧತೆಯಲ್ಲಿದ್ದಾರೆ! ವಿವಿಧ ಮಾಧ್ಯಮಗಳಲ್ಲಿಯೂ `ಜಾತ್ರೆ ದಿನಾಂಕ ಘೋಷಣೆ ಆಗಿಲ್ಲ’ ಎಂದು ಆಡಳಿತ ಮಂಡಳಿಯವರು ಸ್ಪಷ್ಠನೆ ನೀಡಿದ್ದಾರೆ. ಆದರೆ, ಅಧಿಕೃತ ಮಾಧ್ಯಮಗಳಲ್ಲಿ ಪ್ರಕಟವಾದ ಸತ್ಯ ಸಂದೇಶಕ್ಕಿAತಲೂ ಸಾಮಾಜಿಕ ಜಾಲತಾಣದಲ್ಲಿನ ಸುಳ್ಳು ಸುದ್ದಿ ವ್ಯಾಪಕ ಪ್ರಮಾಣದಲ್ಲಿ ಹರಿದಾಡುತ್ತಿದೆ. ಸೋಮವಾರ ಸಹ ಸತ್ಯಕ್ಕಿಂತಲೂ ಪ್ರಭಾವಶಾಲಿಯಾಗಿ ಜಾತ್ರೆಯ ಸುಳ್ಳು ಸುದ್ದಿ ಬರುತ್ತಿದೆ. ಫೇಸ್ಬುಕ್, ಇನಸ್ಟಾಗ್ರಾಮ್, ವಾಟ್ಸಪ್ ಸೇರಿ ಹಲವು ಕಡೆ ಇದೀಗ ಶಿರಸಿ ಜಾತ್ರೆಯ ವಿಷಯ ಹರಿದಾಡುತ್ತಿದೆ. ಸುಳ್ಳು ಸುದ್ದಿಯ ಬಗ್ಗೆ ಅರಿಯದ ಜನ ಅದನ್ನು ಇನ್ನಷ್ಟು ಹೆಚ್ಚಿನ ಪ್ರಮಾಣದಲ್ಲಿ ತಮ್ಮ ಬಳಗದ ಜೊತೆ ಹಂಚಿಕೊಳ್ಳುತ್ತಿದ್ದಾರೆ. ಕಳೆದ ನಾಲ್ಕು ದಿನಗಳಿಂದ ಸಾಮಾಜಿಕ ಜಾಲತಾಣದಲ್ಲಿ ಶಿರಸಿ ಜಾತ್ರೆಯ ಪೋಸ್ಟರ್ ಹರಿದಾಡುತ್ತಿದೆ. ಅದರೊಂದಿಗೆ ಮಾರಿಕಾಂಬಾ ದೇವಿ ಭಕ್ತಿಗೀತೆಗಳನ್ನು ಪ್ರಸಾರ ಮಾಡಲಾಗುತ್ತಿದೆ. ಮೊದಲು ಒಂದೆರಡು ಪೇಜ್’ಗಳಲ್ಲಿ ಮಾತ್ರ ಕಾಣಿಸಿಕೊಂಡಿದ್ದ ಜಾತ್ರೆ ಪೋಸ್ಟರ್ ಇದೀಗ ಮತ್ತೆ ಹಲವು ಕಡೆ ಹರಿದಾಡುತ್ತಿದೆ. ಶಿರಸಿ ಮಾರಿಕಾಂಬಾ ಆಡಳಿತ ಮಂಡಳಿಯವರೇ ಅಧಿಕೃತವಾಗಿ `ಜಾತ್ರೆ ದಿನಾಂಕ ಘೋಷಣೆ ಆಗಿಲ್ಲ’ ಎಂದು ಹೇಳಿದ್ದಾರೆ. ಆದರೆ, ಸೋಶಿಯಲ್ ಮಿಡಿಯಾದಲ್ಲಿ ಹಂಚಿಕೆಯಾದ ಸುಳ್ಳು ಸುದ್ದಿ ಮಾತ್ರ ಡಿಲಿಟ್ ಆಗಿಲ್ಲ! - [2025 ಅಕ್ಟೋಬರ್ 13ರ ದಿನ ಭವಿಷ್ಯ](https://mobiletime.in/2025/10/prediction-for-october-13-2025/): ಮೇಷ ರಾಶಿ: ಸ್ನೇಹಿತರ ಜೊತೆ ಸಮಯ ಕಳೆಯುವಿರಿ. ಆರ್ಥಿಕ ವಿಚಾರಗಳಲ್ಲಿ ಲಾಭ ಆಗಲಿದೆ. ನಿರ್ಧಾರ ಪ್ರಕಟಿಸುವಾಗ ಎಚ್ಚರಿಕೆ ಅಗತ್ಯ. ವೃಷಭ ರಾಶಿ: ಕುಟುಂಬ ಸದಸ್ಯರ ಸಹಕಾರದಿಂದ ವ್ಯಾಪಾರದಲ್ಲಿ ಯಶಸ್ಸು ಸಾಧ್ಯ. ಇಷ್ಟಪಡುವ ಕಾರ್ಯಗಳು ಸರಾಗವಾಗಿ ಸಾಗಲಿದೆ. ಸಂಜೆ ಸಮಯ ಸಂತೋಷಕರವಾಗಿರಲಿದೆ. ಮಿಥುನ ರಾಶಿ: ಸ್ನೇಹಿತರಿಂದ ಆಮಂತ್ರಣ ಸಿಗಲಿದೆ. ಹಿರಿಯರ ಸಲಹೆ ಪ್ರಯೋಜನಕ್ಕೆ ಬರಲಿದೆ. ಮನರಂಜನೆ ವಿಷಯದಲ್ಲಿ ಆಸಕ್ತಿ ಬರಲಿದೆ. ಕರ್ಕ ರಾಶಿ: ಹಳೆಯ ಯೋಜನೆಗಳು ಮುನ್ನಡೆ ಸಾಧಿಸಲಿದೆ. ವೃತ್ತಿಪರ ಬೆಳವಣಿಗೆ ಸಾಧ್ಯವಿದೆ. ಸಂಜೆ ಸಂತೋಷದ ಕ್ಷಣಗಳು ಸಿಗಲಿದೆ. ಸಿಂಹ ರಾಶಿ: ಮಹತ್ವದ ನಿರ್ಣಯಗಳಿಗೆ ಈ ದಿನ ಸೂಕ್ತ. ಹಣಕಾಸು ವಿಚಾರಕ್ಕೆ ಶಕ್ತಿ ಬರಲಿದೆ. ರಾಜಕೀಯ ಅಥವಾ ಸಾಮಾಜಿಕ ಸಭೆಗಳಲ್ಲಿ ಭಾಗವಹಿಸುವ ಅವಕಾಶ ಸಿಗಲಿದೆ. ಕನ್ಯಾ ರಾಶಿ: ಕಾರ್ಯಕ್ಷೇತ್ರದಲ್ಲಿ ಬದಲಾವಣೆ ಸಾಧ್ಯವಿದೆ. ಸಣ್ಣ ಸಣ್ಣ ತೊಂದರೆ ಸಾಮಾನ್ಯ. ಕುಟುಂಬದ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ. ತುಲಾ ರಾಶಿ: ಆರೋಗ್ಯದ ವಿಷಯಗಳಲ್ಲಿ ಜಾಗೃತಿ ಮುಖ್ಯ. ಹೊಸ ಹೊಣೆಗಾರಿಕೆ ನಿಮ್ಮನ್ನು ಆವರಿಸಲಿದೆ. ಚೈತನ್ಯದಿಂದ ದಿನ ಕಳೆಯುವಿರಿ. ವೃಶ್ಚಿಕ ರಾಶಿ: ಆರ್ಥಿಕ ವ್ಯವಹಾರದ ಬಗ್ಗೆ ಎಚ್ಚರಿಕೆ ಅಗತ್ಯ. ದುಡುಕು ನಿರ್ಧಾರಗಳು ಬೇಡ. ಆರೋಗ್ಯದ ಬಗ್ಗೆ ಆತಂಕ ಇಲ್ಲ. ಧನು ರಾಶಿ: ವೃತ್ತಿ ಕ್ಷೇತ್ರದಲ್ಲಿ ಒಳ್ಳೆಯ ಬದಲಾವಣೆಗಳು ಆಗಲಿದೆ. ಹೊಸ ಅವಕಾಶಗಳು ಅರೆಸಿಬರಲಿದೆ. ವಾಹನ ಚಾಲನೆ ಮಾಡುವಾಗ ಎಚ್ಚರಿಕೆ ಅಗತ್ಯ. ಮಕರ ರಾಶಿ: ಸ್ನೇಹಿತರ ಜೊತೆ ಮಾತುಕತೆ ಸರಾಗವಾಗಿ ಸಾಗಲಿದೆ. ದೈನಿಂದಿನ ಜೀವನದಲ್ಲಿ ಉತ್ತಮ ಫಲ ಸಿಗಲಿದೆ. ಹಿರಿಯರ ಮಾರ್ಗದರ್ಶನದಲ್ಲಿ ಮುನ್ನಡೆಯಿರಿ. ಕುಂಭ ರಾಶಿ: ನಿಮ್ಮ ಪ್ರಯತ್ನಕ್ಕೆ ತಕ್ಕ ಫಲ ಸಿಗಲಿದೆ. ಜೀವನದಲ್ಲಿನ ಉತ್ಸಾಹ ಚನ್ನಾಗಿರಲಿದೆ. ಆರ್ಥಿಕ ಲಾಭ ಸಾಧ್ಯವಿದೆ. ಹಿರಿಯರ ಉಪದೇಶವನ್ನು ಗಂಭೀರವಾಗಿಪರಿಗಣಿಸಿ. ಮೀನ ರಾಶಿ: ಸಂತೋಷದ ಸುದ್ದಿ ಕೇಳಿಬರಲಿದೆ. ಆರೋಗ್ಯ ಸಾಧಾರಣವಾಗಿರಲಿದೆ. ಕುಟುಂಬದ ಸದಸ್ಯರಿಂದ ಪ್ರೋತ್ಸಾಹ ದೊರೆಯಲಿದೆ. ಪ್ರಯಾಣದ ಲಕ್ಷಣಗಳಿವೆ. - [ಮಂಗನಿಗೆ ಹೊಡೆದ ಪೆಟ್ಟು ತಾಗಿದ್ದು ಮಾಣಿಗೆ: ಬಾಲಕನ ಕುಂಡೆ ಸೀಳಿದ ಏರ್‌ಗನ್ ಗುಂಡು!](https://mobiletime.in/2025/10/waiter-gets-hit-by-monkey-airgun-bullet-splits-boys-buttocks/): ತಿoಗಳ ನಂತರ ಶಿರಸಿಯಲ್ಲಿ ಮತ್ತೆ ಏರಗನ್ ಗುಂಡು ಸದ್ದು ಮಾಡಿದ್ದು, ಈ ಬಾರಿ ಆ ಗುಂಡು ಬಾಲಕನ ಕುಂಡೆಯೊಳಗೆ ಸಿಕ್ಕಿ ಬಿದ್ದಿದೆ. TSS ಆಸ್ಪತ್ರೆಯ ವೈದ್ಯರು ಹರಸಾಹಸದಿಂದ ಗುಂಡು ಹೊರತೆಗೆದು ಬಾಲಕನ ಜೀವ ಕಾಪಾಡಿದ್ದಾರೆ. ಸೆಪ್ಟೆಂಬರ್ 5ರಂದು ಸಹ ಶಿರಸಿಯ ಸೋಮನಳ್ಳಿಯಲ್ಲಿ ಗುಂಡಿನ ಸದ್ದು ಕೇಳಿಸಿತ್ತು. ಮಂಗನ ಕಾಯಲು ಬಂದಿದ್ದ ನಿತೀಶ್ ಎಂಬಾತರು ಮಾಡಿದ ತಪ್ಪಿಗೆ 9 ವರ್ಷದ ಕರಿಯಪ್ಪ ಎಂಬಾತರು ಸಾವನಪ್ಪಿದ್ದರು. ಇದೀಗ ಮತ್ತೆ ಅಂಥಹುದೇ ವಿದ್ಯಮಾನ ಮರುಕಳಿಸಿದ್ದು, ಟಿಎಸ್‌ಎಸ್ ವೈದ್ಯರ ಸಾಹಸದಿಂದಾಗಿ ಬಾಲಕನಿಗೆ ಮರುಜನ್ಮ ಸಿಕ್ಕಿದೆ. ಆದರೂ ಆ ಬಾಲಕನಿಗೆ ನೋವು ಕಾಡುತ್ತಿದೆ. ಶಿರಸಿಯ ಬನವಾಸಿ ಬಳಿಯ ನರೂರಿನ ರಘುನಂದನ ದತ್ತು ಭಟ್ಟ ಅವರು ತಮ್ಮ ತೋಟದ ಕೆಲಸಕ್ಕೆ ಅದೇ ಊರಿನ ನಾಗರಾಜ ಮಂಜಯ್ಯ ಚನ್ನಪ್ಪ ಅವರನ್ನು ನೇಮಿಸಿಕೊಂಡಿದ್ದರು. ನಾಗರಾಜ ಚನ್ನಯ್ಯ ಅವರು ಭಟ್ಟರ ತೋಟ ಸುತ್ತಾಡಿ ಅಲ್ಲಿ ಬರುವ ಮಂಗನನ್ನು ಓಡಿಸುವ ಕೆಲಸ ಮಾಡುತ್ತಿದ್ದರು. ಬರಿಗೈಯಲ್ಲಿ ಹೋದರೆ ಮಂಗ ಓಡುವುದಿಲ್ಲ ಎಂದು ನಾಗರಾಜ ಚನ್ನಯ್ಯ ಅವರು ಏರಗನ್ ಹಿಡಿದು ಕಾಡು ಸುತ್ತುತ್ತಿದ್ದರು. ಅಕ್ಟೊಬರ್ 9ರ ಸಂಜೆ ನಾಗರಾಜ ಚನ್ನಯ್ಯ ಅವರು ಏರಗನ್ ಒಳಗೆ ಗುಂಡು ತುಂಬಿ ತೋಟಕ್ಕೆ ಹೋಗಿದ್ದರು. ಈ ವೇಳೆ ನರೂರ ಭಟ್ಟರಕೇರಿಯಲ್ಲಿ ಬದುಕು ಕಟ್ಟಿಕೊಂಡ ಅಣ್ಣಪ್ಪ ನಾಯ್ಕ ಅವರ ಮಕ್ಕಳು ಅಲ್ಲಿನ ಸಾತಕೇರೆ ಏರಿ ಮೇಲೆ ಆಡುತ್ತಿದ್ದರು. ಅಣ್ಣಪ್ಪ ನಾಯ್ಕ ಅವರ ಮಕ್ಕಳಾದ ಕೌಶಿಕ್ ನಾಯ್ಕ, ಕಿಶನ್ ನಾಯ್ಕ ಅವರು ತಮ್ಮ ಗೆಳೆಯ ಆದಿ, ದಿಶಾಂತ ಅವರ ಜೊತೆ ಆಟದಲ್ಲಿ ಮಗ್ನರಾಗಿದ್ದರು. ಈ ವೇಳೆ ತೋಟದಿಂದ ಬೆಟ್ಟದ ಕಡೆ ನಾಗರಾಜ ಚನ್ನಯ್ಯ ಅವರು ಮಂಗನ ಗುಂಪು ಓಡಿಸಿಕೊಂಡು ಬಂದರು. `ಹೂ ಹೋ’ ಎಂದು ಬೊಬ್ಬೆ ಹಾಕುತ್ತ ಬಂದ ನಾಗರಾಜ ಚೆನ್ನಯ್ಯ ಅವರು ಮಂಗಗಳಿಗೆ ಏರಗನ್ ತೋರಿಸಿದರು. ಆ ಮಂಗಗಳು ಸಾತಕೇರೆ ಏರಿ ಹತ್ತಿದ್ದು, ಕೈಯಲ್ಲಿದ್ದ ಏರಗನ್ ಟ್ರಿಗರ್ ಅದುಮಿದರು. ಆ ಗುಂಡು ನೇರವಾಗಿ ಕೌಶಿಕ್ ನಾಯ್ಕ ಅವರ ತೊಡೆಗೆ ತಾಗಿತು. ವ್ಯಾಪಕ ಪ್ರಮಾಣದಲ್ಲಿ ರಕ್ತ ಸುರಿದಿದ್ದು, ಇದನ್ನು ನೋಡಿದ ನಾಗರಾಜ ಚನ್ನಯ್ಯ ಅವರು ಅಲ್ಲಿಂದ ಓಡಿ ಪರಾರಿಯಾದರು. ಆ ಸಮಯದಲ್ಲಿ ಪೇಟೆಗೆ ಹೋಗಿದ್ದ ಅಣ್ಣಪ್ಪ ನಾಯ್ಕ ಅವರು ರಾತ್ರಿ ಮನೆಗೆ ಬಂದರು. ಆಗ, ಅಣ್ಣಪ್ಪ ನಾಯ್ಕ ಅವರ ಪತ್ನಿ ಆತಂಕದಲ್ಲಿದ್ದರು. ಕೌಶಿಕ್ ನಾಯ್ಕ ದೊಡ್ಡದಾಗಿ ಅಳುತ್ತಿದ್ದರು. `ಏನಾಯಿತು?’ ಎಂದು ಪ್ರಶ್ನಿಸಿದಾಗ ಕೌಶಿಕ್ ನಾಯ್ಕ ಕುಂಡೆ ಕಾಣಿಸಿದರು. ಅಲ್ಲಿ ಗುಂಡುಗಳಿರುವುದನ್ನು ಅಣ್ಣಪ್ಪ ನಾಯ್ಕ ಅವರು ನೋಡಿದರು. ಗಂಭೀರ ಪ್ರಮಾಣದಲ್ಲಿ ಗಾಯವಾಗಿರುವುದನ್ನು ಗಮನಿಸಿ ಮಗುವನ್ನು ಆಸ್ಪತ್ರೆಗೆ ದಾಖಲಿಸಿದರು. ಅದಾದ ನಂತರ ನಾಗರಾಜ ಚೆನ್ನಯ್ಯ ಅವರನ್ನು ವಿಚಾರಿಸಲು ಹೋದರು. `ಮಂಗ ಹೆದರಿಸಲು ಹಾರಿಸಿದ ಗುಂಡು ಆಕಸ್ಮಿಕವಾಗಿ ಟ್ರಿಗರ್ ಒತ್ತಿ ಬಾಲಕಿಗೆ ತಾಗಿತು. ಹೀಗಾಗಿ ಹೆದರಿ ಮನೆಗೆ ಬಂದಿದ್ದು, ನಿಮಗೆ ಹೇಳೋಣ ಅನ್ನುವಷ್ಟರಲ್ಲಿ ನೀವೇ ಮನೆಗೆ ಬಂದುಬಿಟ್ಟಿರಿ’ ಎಂದು ನಾಗರಾಜ ಚನ್ನಯ್ಯ ಅವರು ಸಬೂಬು ಹೇಳಿದರು. ಅಕ್ಟೊಬರ್ 11ರವರೆಗೆ ಮಗನಿಗೆ ಚಿಕಿತ್ಸೆ ನೀಡಿದ ಅಣ್ಣಪ್ಪ ನಾಯ್ಕ ಅವರು ಮಗ ಚೇತರಿಸಿಕೊಂಡ ಕಾರಣ ಮನೆಗೆ ಕರೆತಂದರು. ಅದಾದ ನಂತರ ಅಕ್ಟೊಬರ್ 12ರಂದು ಬನವಾಸಿ ಪೊಲೀಸ್ ಠಾಣೆಗೆ ತೆರಳಿ ಗುಂಡಿನ ಕಥೆ ವಿವರಿಸಿದರು. ಪೊಲೀಸರು ನಾಗರಾಜ ಚೆನ್ನಯ್ಯ ಅವರ ವಿರುದ್ಧ ಪ್ರಕರಣ ದಾಖಲಿಸಿದರು. - [ಶಿಕಾರಿ ಶೂರರಿಗೆ ದಕ್ಕಲಿಲ್ಲ ಕಾಡು ಮಾಂಸ!](https://mobiletime.in/2025/10/the-brave-hunters-did-not-get-any-wild-meat/): ಶಿರಸಿಯಲ್ಲಿ ಕಾಡು ಪ್ರಾಣಿ ಹತ್ಯೆ ಮಾಡಿದ ದುರುಳರಿಗೆ ಅದರ ಮಾಂಸ ಸೇವಿಸುವ ಭಾಗ್ಯ ಸಿಕ್ಕಿಲ್ಲ. ಕಾಡು ಮಾಂಸ ಬೇಯಿಸುವಾಗಲೇ ಅರಣ್ಯಾಧಿಕಾರಿಗಳು ದಾಳಿ ಮಾಡಿ ಮಾಂಸಪ್ರಿಯರ ಊಟಕ್ಕೆ ಕತ್ತರಿ ಹಾಕಿದ್ದಾರೆ! ಶಿರಸಿ-ಹುಬ್ಬಳ್ಳಿ ರಸ್ತೆಯ ಮುಡೇಬೈಲ್‌ನ ಗಂಗಾಧರ ಗೌಡ, ಶಂಕರ ಗೌಡ ಹಾಗೂ ಶಂಕರ ನಾಯ್ಕ ಸೇರಿ ಶಿಕಾರಿಗೆ ಹೋಗಿದ್ದರು. ರವಿ ಗೌಡ ಹಾಗೂ ಗಣಪತಿ ಗೌಡ ಸಹ ಅವರ ಬೆನ್ನಿಗೆ ಬಿದ್ದಿದ್ದರು. ಈ ಎಲ್ಲರೂ ಸೇರಿ ಕಾಡು ಹಂದಿಯನ್ನು ಭೇಟೆ ಆಡಿದ್ದರು. ಹಂದಿ ಮಾಂಸವನ್ನು ಸರಿಯಾಗಿ ಬೇಯಿಸಿ ಅದನ್ನು ಸಮಪಾಲು ಮಾಡುವ ಬಗ್ಗೆ ಎಲ್ಲರೂ ಮಾತನಾಡಿಕೊಂಡಿದ್ದರು. ಅದರ ಪ್ರಕಾರ ಕಾಡು ಹಂದಿ ಮಾಂಸವನ್ನು ಅವರು ಬೇಯಿಸುತ್ತಿದ್ದರು. ಗುಂಡಿನ ಸದ್ದು ಕೇಳಿದ ಆ ಊರಿನ ಜನ ಅರಣ್ಯಾಧಿಕಾರಿಗಳಿಗೆ ಫೋನ್ ಮಾಡಿದ್ದರು. ಅರಣ್ಯಾಧಿಕಾರಿಗಳು ವಿಚಾರಿಸಿದಾಗ ಐವರು ಕಾಡಿನ ಕಡೆ ಹೋಗಿದ್ದ ವಿಷಯ ಗೊತ್ತಾಯಿತು. ಅದೇ ಸುಳಿವಿನ ಆಧಾರದಲ್ಲಿ ಅರಣ್ಯಾಧಿಕಾರಿಗಳು ದಾಳಿ ನಡೆಸಿದ್ದು, ಮಾಂಸ ಬೇಯಿಸುತ್ತಿದ್ದವರು ಸಿಕ್ಕಿ ಬಿದ್ದರು. ಐವರಲ್ಲಿ ಮೂವರನ್ನು ಬನವಾಸಿ ಅರಣ್ಯ ವಿಭಾಗದ ಅಧಿಕಾರಿಗಳು ಬಂಧಿಸಿದರು. ಇಬ್ಬರು ಪರಾರಿಯಾದರು. ಗಂಗಾಧರ ಗೌಡ, ಶಂಕರ ಗೌಡ ಹಾಗೂ ಶಂಕರ ನಾಯ್ಕ ಸಿಕ್ಕಿಬಿದ್ದವರಾಗಿದ್ದಾರೆ. ರವಿ ಗೌಡ ಹಾಗೂ ಗಣಪತಿ ಗೌಡ ಕಾಡಿನ ಕಡೆ ಓಡಿದ್ದು, ಅವರ ಹುಡುಕಾಟ ಮುಂದುವರೆದಿದೆ. - [ಭಟ್ಟರ ಮನೆಯಲ್ಲಿ ಬುಸುಗುಟ್ಟ ನಾಗಪ್ಪ](https://mobiletime.in/2025/10/nagappa-who-was-a-drunkard-at-bhatts-house/): ಯಲ್ಲಾಪುರದ ಆರ್ ಜಿ ಭಟ್ಟ ಅವರ ಮನೆಗೆ ನಾಗರ ಹಾವಿನ ಆಗಮನವಾಗಿದ್ದು, ಎನಿಮಲ್ ವೆಲ್‌ಫೆರ್ & ರಿಸರ್ಜ ಪೌಂಡೇಶನ್ ಕಾರ್ಯಕರ್ತರು ಆ ಹಾವನ್ನು ರಕ್ಷಿಸಿ ಕಾಡಿಗೆ ಬಿಟ್ಟಿದ್ದಾರೆ. ಯಲ್ಲಾಪುರದ ಆನಗೋಡಿನಲ್ಲಿ ಆರ್ ಜಿ ಭಟ್ಟ ಅವರು ಸ್ಲಾಪಿನ ಮನೆ ಹೊಂದಿದ್ದಾರೆ. ಆ ಮನೆಗೆ ತಾಗಿ ಗಿಡ ಬೆಳೆದಿದ್ದು, ಇಲಿ ಬೆನ್ನಟ್ಟಿದ ನಾಗರಹಾವು ಆ ಹೂವಿನ ಗಿಡದ ಮೂಲಕ ಮನೆ ಒಳಗೆ ಪ್ರವೇಶಿಸಿದೆ. ಆದರೆ, ಮನೆಯೊಗೆ ಟೈಲ್ಸ ಹಾಗೂ ಗ್ರಾನೆಟ್ ಅಳವಡಿಸಿದ ಕಾರಣ ಹಾವಿಗೆ ಮುಂದೆ ಚಲಿಸಲು ಸಾಧ್ಯವಾಗಲಿಲ್ಲ. ಹೀಗಾಗಿ ಅಲ್ಲಿದ್ದ ಟಿಪಾಯಿ ಅಡಿ ಹಾವು ಆಶ್ರಯಪಡೆದಿದ್ದು, ಅದಾದ ನಂತರ ಸಮೀಪದ ಪುಸ್ತಕ ರಾಶಿಯಲ್ಲಿ ಅವಿತುಕೊಂಡಿದೆ. ಹಾವನ್ನು ನೋಡಿದ ಆರ್ ಜಿ ಭಟ್ಟ ಕುಟುಂಬದವರು ಹೌಹಾರಿದ್ದಾರೆ. ಅದಾದ ನಂತರ ಅರಣ್ಯ ಇಲಾಖೆಯವರಿಗೆ ಫೋನ್ ಮಾಡಿದ್ದು, ಅರಣ್ಯ ಇಲಾಖೆಯವರು ಉರಗ ತಜ್ಞ ಅಕ್ಬರ್ ಅವರ ಫೋನ್ ನಂ ಕೊಟ್ಟಿದ್ದಾರೆ. ಅಕ್ಬರ್ ಅವರು ಎನಿಮಲ್ ವೆಲ್‌ಫೆರ್ & ರಿಸರ್ಜ ಪೌಂಡೇಶನ್’ನ ದತ್ತಾತ್ರೇಯ ಮುರ್ಕುಟೆ ಅವರ ಜೊತೆ ಆನಗೋಡಿನ ಭಟ್ಟರ ಮನೆಗೆ ಭೇಟಿ ನೀಡಿದ್ದಾರೆ. ಆವರೆಗೂ ನಾಗರ ಹಾವು ಪುಸ್ತಕ ರಾಶಿಯ ಅಡಿಯೇ ಅವಿತಿದ್ದು, ಉರಗ ತಜ್ಞರು ಅದನ್ನು ಉಪಾಯವಾಗಿ ಹೊರತೆಗೆದರು. ಹಾವಿನ ಬಗ್ಗೆ ಅರಿವು ಮೂಡಿಸಿ ಅದನ್ನು ಅರಣ್ಯಕ್ಕೆ ಬಿಟ್ಟರು. ಹಾವು ಆಗಮನದಿಂದ ಆತಂಕಗೊoಡಿದ್ದ ಭಟ್ಟರ ಕುಟುಂಬದವರು ನಿರಾಳರಾದರು. - [ಎಣ್ಣೆ ಏಟಿಗೆ ಎಣ್ಣೆ ಲಾರಿ ಪಲ್ಟಿ ಮಾಡಿದ ಚಾಲಕ!](https://mobiletime.in/2025/10/driver-who-overturned-oil-truck-due-to-oil-spill/): ಕಂಠಪೂರ್ತಿ ಮದ್ಯ ಸೇವಿಸಿ ಎಣ್ಣೆ ತುಂಬಿದ ಲಾರಿ ಚಾಲಯಿಸಿದ ಚಾಲಕನೊಬ್ಬ ಆ ಲಾರಿಯನ್ನು ಅಂಕೋಲಾದ ಹಾರವಾಡದಲ್ಲಿ ಪಲ್ಟಿ ಮಾಡಿದ್ದು, ರಸ್ತೆ ಪೂರ್ತಿ ಎಣ್ಣೆ ಬಿದ್ದಿದೆ. ರಸ್ತೆಪೂರ್ತಿ ಎಣ್ಣೆ ಚಲ್ಲಾಪಿಲ್ಲಿಯಾಗಿ ಬಿದ್ದಿದ್ದರಿಂದ ಇತರೆ ವಾಹನ ಸವಾರರು ತೊಂದರೆ ಅನುಭವಿಸಿದರು. ಶುಕ್ರವಾರ ರಾತ್ರಿ 11 ಗಂಟೆ ವೇಳೆಗೆ ಎಣ್ಣೆ ತುಂಬಿದ ಲಾರಿ ಪಲ್ಟಿಯಾಗಿದೆ. ಈ ಲಾರಿ ಮಂಗಳೂರಿನಿAದ ಗೋವಾ ಕಡೆ ಸಂಚರಿಸುತ್ತಿದ್ದು, ಅದರಲ್ಲಿ ಪ್ರಿಯಾ ಆಯಲ್ ಕಂಪನಿಯ ಅಡುಗೆ ಎಣ್ಣೆ ಸಾಗಾಟವಾಗುತ್ತಿತ್ತು. ಏಕಮುಖ ಮಾರ್ಗದಲ್ಲಿ ತಪ್ಪಾಗಿ ಸಂಚರಿಸಿದ ಲಾರಿ ಹಾರವಾಡದ ಬಳಿ ಪಲ್ಟಿಯಾಯಿತು. ಅಪಘಾತದ ವಿಷಯ ಕೇಳಿ ಆಂಬುಲೆನ್ಸಿನವರು ಅಲ್ಲಿಗೆ ಧಾವಿಸಿದರು. ಪೊಲೀಸರು ಸ್ಥಳಕ್ಕೆ ಬಂದಿದ್ದರು. ಲಾರಿಯಲ್ಲಿದ್ದ ಚಾಲಕ ಹಾಗೂ ನಿರ್ವಾಹಕ ಪ್ರಾಣಾಪಾಯದಿಂದ ಪಾರಾಗಿದನ್ನು ನೋಡಿ ಎಲ್ಲರೂ ನಿಟ್ಟುಸಿರು ಬಿಟ್ಟರು. ಅಪಘಾತದಿಂದ ಲಾರಿಯಲ್ಲಿದ್ದ ಎಣ್ಣೆ ರಸ್ತೆಗೆ ಹರಿದಿದ್ದು, ವಾಹನ ಸಂಚಾರ ಅಸ್ತವ್ಯಸ್ಥವಾಗಿತ್ತು. ಬೆಳಗ್ಗೆ ಅವಧಿಗೆ ಸಂಚಾರ ಸುಗಮವಾಯಿತು. - [ಹೊಂಡದ ಗುಂಡಿಯೇ ಜೀವ ರಕ್ಷಕ!](https://mobiletime.in/2025/10/the-hole-in-the-hole-is-a-lifesaver/): ರಸ್ತೆಗೆ ಬಿದ್ದ ಗುಂಡಿ ಮುಚ್ಚಲು ಯೊಗ್ಯತೆ ಇಲ್ಲದ ಸರ್ಕಾರ `ರಸ್ತೆಗುಂಡಿಗಳಿoದ ಅಪಘಾತ ಪ್ರಮಾಣ ಕಡಿಮೆ ಆಗಿದೆ’ ಎಂದು ಬಿಂಬಿಸಿದೆ. ರಸ್ತೆ ಗುಂಡಿಗೆ ಜನ ಬಿದ್ದು ಸಾವನಪ್ಪಿದ ಉದಾಹರಣೆಗಳಿದ್ದರೂ ಅದನ್ನು ಮರೆಮಾಚಿ `ಗುಂಡಿ ಮುಚ್ಚದಿರುವುದೇ ದೊಡ್ಡ ಸಾಧನೆ’ ಎನ್ನುತ್ತಿದೆ. ಉತ್ತರ ಕನ್ನಡ ಜಿಲ್ಲೆಯ ಉದ್ದಗಲಕ್ಕೂ ರಸ್ತೆ ಸರಿಯಿಲ್ಲ. ರಾಷ್ಟ್ರೀಯ ಹೆದ್ದಾರಿಯಿಂದಹಿಡಿದು ಗ್ರಾಮೀಣ ರಸ್ತೆಯವರೆಗೆ ಎಲ್ಲಾ ಕಡೆ ರಸ್ತೆ ಹಾಳಾಗಿದೆ. ಅದಕ್ಕಿಂತ ಮುಖ್ಯವಾಗಿ ರಸ್ತೆಯಲ್ಲಿ ದೊಡ್ಡ ದೊಡ್ಡ ಗಾತ್ರದ ಗುಂಡಿಗಳು ಬಿದ್ದಿವೆ. ರಸ್ತೆ ರಿಪೇರಿಗೆ ಆಗ್ರಹಿಸಿ ಈಗಾಗಲೇ ಜನ ಸಿಡಿದೆದ್ದಿದ್ದಾರೆ. ಅನೇಕ ಕಡೆ ಹೋರಾಟಗಳು ನಡೆದಿವೆ. ಇನ್ನೂ ಅನೇಕ ಸಂಘಟನೆಯವರು ಹೋರಾಟದ ಎಚ್ಚರಿಕೆ ನೀಡಿದ್ದಾರೆ. ಸರ್ಕಾರದ ಕ್ರಮವನ್ನು ಹಲವು ಖಂಡಿಸಿದ್ದಾರೆ. ವಾಹನ ಸವಾರರ ಸಮಸ್ಯೆ ಬಗ್ಗೆ ಲಾರಿ ಮಾಲಕ ಸಂಘದವರು ಆಕ್ರೋಶವ್ಯಕ್ತಪಡಿಸುತ್ತಿದ್ದಾರೆ. ಇಷ್ಟೆಲ್ಲ ನಡೆದರೂ ಸರ್ಕಾರ ಮಾತ್ರ ರಸ್ತೆ ಗುಂಡಿ ಮುಚ್ಚುವ ಕೆಲಸ ಮಾಡುತ್ತಿಲ್ಲ. ಕಾರಣ ಸರ್ಕಾರದ ಪ್ರಕಾರ ರಸ್ತೆ ಗುಂಡಿಗಳಿರುವುದರಿoದಲೇ ಅಪಘಾತದ ಪ್ರಮಾಣ ಕಡಿಮೆಯಾಗಿದೆ. ಈ ಬಗ್ಗೆ ಕರ್ನಾಟಕ ಪೊಲೀಸ್ 2024ನೇ ಸಾಲಿನ ರಸ್ತೆ ಅಪಘಾತ ವರದಿಯಲ್ಲಿ ಲೆಕ್ಕಾಚಾರವನ್ನು ಸಹ ನಮೂದಿಸಲಾಗಿದೆ. ಡಾಂಬರು ರಸ್ತೆಗಳಲ್ಲಿ ಡಾಂಬರು ಕಾಣುತ್ತಿಲ್ಲ. ಕಡಿ ರಸ್ತೆಗಳಲ್ಲಿನ ಕಲ್ಲುಗಳು ಮೇಲೆದ್ದಿವೆ. ಹೆದ್ದಾರಿ ಹೊಂಡಗಳಿಗೆ ಹೊಣೆ ಯಾರು? ಎಂಬ ಪ್ರಶ್ನೆ ಜನರನ್ನು ಕಾಡುತ್ತಿದೆ. ಈ ಎಲ್ಲಾ ರಸ್ತೆಗಳಲ್ಲಿ ಬಿದ್ದಿರುವ ಗುಂಡಿಗಳಿAದ ಜನ ಹೈರಾಣಾಗಿದ್ದಾರೆ. ಗುಂಡಿಗಳಿoದ ಅಪಘಾತ, ಸಾವು-ನೋವು ಸಂಭವಿಸುತ್ತಿದೆ. ಆದರೆ, ಇದಕ್ಕೆ ತದ್ವಿರುದ್ಧವಾಗಿ ಪೊಲೀಸ್ ಇಲಾಖೆ ವರದಿ ಸಿದ್ಧಪಡಿಸಿದ್ದು, ರಸ್ತೆ ಗುಂಡಿಗಳಿAದ ಅಪಘಾತ, ಸಾವು, ನೋವು ಹಿಂದಿನ ವರ್ಷಕ್ಕಿಂತ ಕಡಿಮೆಯಾಗಿದೆ ಎಂದು ಉಲ್ಲೇಖಿಸಿದೆ. `ರಾಜ್ಯದಲ್ಲಿ ಕಳೆದ ವರ್ಷದಿಂದ ವಿಪರೀತ ಮಳೆಯಾಗಿ ರಸ್ತೆಗಳು ಹಾಳಾಗುತ್ತಿವೆ. ಈ ಎಲ್ಲದರ ನಡುವೆ ರಾಜ್ಯ ಪೊಲೀಸ್ ಇಲಾಖೆ ಇತ್ತೀಚೆಗೆ ಬಿಡುಗಡೆ ಮಾಡಿದ 2024ನೇ ಸಾಲಿನ ರಸ್ತೆ ಅಪಘಾತ ವರದಿಯಲ್ಲಿ `ರಸ್ತೆ ಗುಂಡಿಗಳಿoದ ಅಪಘಾತ ಮತ್ತು ಜೀವ ಹಾನಿ ಹಿಂದಿನ ವರ್ಷಕ್ಕಿಂತ ಕಡಿಮೆಯಾಗಿದೆ. 2023ನೇ ಸಾಲಿಗೆ ಹೋಲಿಸಿದರೆ ಶೇ.60 ರಷ್ಟು ಗುಂಡಿ ಅಪಘಾತ ಇಳಿದಿದೆ’ ಎಂದು ಬರೆಯಲಾಗಿದೆ. `ರಾಜ್ಯದಲ್ಲಿ 2023ರಲ್ಲಿ ಗುಂಡಿಗಳ ಸಮಸ್ಯೆ ಇದ್ದರೂ ಈಗಿರುವಷ್ಟು ಅತಿಯಾಗಿರಲಿಲ್ಲ. ಆ ವರ್ಷ ರಾಜ್ಯದಲ್ಲಿ ರಸ್ತೆ ಗುಂಡಿಗಳಿAದ 237 ಅಪಘಾತಗಳು ಆಗಿವೆ. ಅಂಥ ಸ್ಥಿತಿಯ 2024ರ ವರ್ಷದಲ್ಲಿ ಗುಂಡಿಗಳಿAದ 93 ಅಪಘಾತವಷ್ಟೇ ಆಗಿವೆ. ಅದರಿಂದ 24 ಜನ ಮೃತಪಟ್ಟಿದ್ದು, 118 ಪ್ರಯಾಣಿಕರು ಗಂಭೀರ ಗಾಯಗೊಂಡಿದ್ದಾರೆ’ ಎಂಬ ಲೆಕ್ಕಾಚಾರ ಸರ್ಕಾರದ ಮುಂದಿದೆ. ರಾಜ್ಯದಲ್ಲಿ 2024ನೇ ಸಾಲಿನಲ್ಲಿ ನಡೆದಿರುವ ಒಟ್ಟು 43,062 ಅಪಘಾತದಲ್ಲಿ 12,390 ಜನ ಮೃತಪಟ್ಟಿದ್ದಾರೆ. ಅದರಲ್ಲಿ 34,623 ಅಪಘಾತಗಳು ನೇರವಾದ ರಸ್ತೆಯಲ್ಲಿ ನಡೆದಿದ್ದು, ಅದರಲ್ಲಿಜ ಒಟ್ಟು 10,186 ಜನ ಮೃತಪಟ್ಟಿದ್ದಾರೆ’ ಎಂದು ವರದಿಯಲ್ಲಿದೆ. - [ಸರ್ಕಾರವೇ ಹೇಳಿದ ಸತ್ಯ: ಮಕ್ಕಳ ಆರೋಗ್ಯ ಹದಗೆಡಲು ಈ ಸಿರಪ್ ಕಾರಣ!](https://mobiletime.in/2025/10/this-syrup-is-the-reason-for-the-deterioration-of-childrens-health/): ಕೆಮ್ಮಿನ ಸಿರಪ್ ದುರುಯೋಗದಿಂದ ಮಕ್ಕಳಲ್ಲಿ ಗಂಭೀರ ಪ್ರಮಾಣದ ಆರೋಗ್ಯ ಸಮಸ್ಯೆ ಕಾಡುತ್ತಿದೆ. ಅಂಥ ಸಿರಪ್ ಮಾರುಕಟ್ಟೆಗೆ ಬಂದು ಅನೇಕರು ಬಳಸಿದ ತರುವಾಯ ಈ ವಿಷಯ ಸರ್ಕಾರದ ಗಮನಕ್ಕೆ ಬಂದಿದೆ. ಮಕ್ಕಳ ಆರೋಗ್ಯ ಕಾಪಾಡುವುದಕ್ಕಾಗಿ ಸಿರಪ್ ಬಳಕೆಗೆ ಸರ್ಕಾರ ಮಾರ್ಗದರ್ಶನ ಹೊರಡಿಸಿದೆ. ಚಿಕ್ಕ ಮಕ್ಕಳಿಗೆ ಕೆಮ್ಮಿನ ಸಿರಪ್‌ಗಳನ್ನು ನೀಡಬೇಡಿ `2 ವರ್ಷಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಕೆಮ್ಮು ಅಥವಾ ಶೀತದ ಸಿರಪ್‌ಗಳನ್ನು ನೀಡಬೇಡಿ’ ಎಂದು ಸರ್ಕಾರ ಮನವಿ ಮಾಡಿದೆ. `2ರಿಂದ 5 ವರ್ಷಗಳ ವಯಸ್ಸಿನ ಮಕ್ಕಳಿಗೆ ಸರಿಯಾದ ವೈದ್ಯಕೀಯ ಪರೀಕ್ಷೆಯ ನಂತರ ತಜ್ಞ ವೈದ್ಯರ ನಿರ್ದಿಷ್ಟ ಸಲಹೆ ಮೇರೆಗೆ ಮಾತ್ರ ಔಷಧಿಗಳನ್ನು ನೀಡಬೇಕು’ ಎಂದು ಸೂಚಿಸಲಾಗಿದೆ. `ದೊಡ್ಡ ಮಕ್ಕಳಿಗೆ ಸಹ ಕೆಮ್ಮಿನ ಸಿರಪ್‌ಗಳನ್ನು ವೈದ್ಯರ ಸಲಹೆಯ ಮೇರೆಗೆ ಮಾತ್ರ ಬಳಸಬೇಕು. ಸಾಧ್ಯವಾದಷ್ಟು ಕಡಿಮೆ ಅವಧಿಗೆ ಕನಿಷ್ಠ ಅಗತ್ಯವಿರುವ ಡೋಸ್ ಮಾತ್ರ ಬಳಸಬೇಕು. ಬಹು ಔಷಧಿಗಳ ಸಂಯೋಜನೆ ಇರುವ ಸಿರಪ್‌ಗಳನ್ನು ಉಪಯೋಗಿಸಬಾರದು’ ಎಂದು ಸೂಚಿಸಲಾಗಿದೆ. ಸುರಕ್ಷಿತ ಮನೆಮದ್ದುಗಳು ಹೆಚ್ಚಿನ ಸಂದರ್ಭಗಳಲ್ಲಿ ಮಕ್ಕಳಲ್ಲಿ ಕೆಮ್ಮು ಮತ್ತು ಶೀತವು ಸೌಮ್ಯವಾಗಿರುತ್ತದೆ. ಸುರಕ್ಷಿತವಾದ ಕ್ರಮಗಳಿಂದ ನಿಧಾನವಾಗಿ ಉತ್ತಮಗೊಳ್ಳುತ್ತದೆ. ಪೋಷಕರು ಮಕ್ಕಳಿಗೆ ಸಾಕಷ್ಟು ದ್ರವ ಪದಾರ್ಧಗಳನ್ನು ನೀಡುವುದು. ಸಾಕಷ್ಟು ವಿಶ್ರಾಂತಿ ಮತ್ತು ನಿದ್ರೆ ಮಾಡಲು ಅವಕಾಶ ನೀಡುವುದು. ಪೌಷ್ಟಿಕ ಆಹಾರವನ್ನು ನೀಡಬೇಕು ಎಂದು ಸೂಚಿಸಲಾಗಿದೆ. ಸ್ವಯಂ ಔಷಧೋಪಚಾರ ಮಾಡಬೇಡಿ `ವೈದ್ಯರು ಪ್ರಿಸ್ಕಿçಪ್ಷನ್ ಇಲ್ಲದೇ ಕೆಮ್ಮಿನ ಸಿರಪ್‌ಗಳನ್ನು ಎಂದಿಗೂ ಖರೀದಿಸಬೇಡಿ. ಈ ಹಿಂದೆ ಬಳಸಿ ಉಳಿದ ಔಷಧಿಗಳನ್ನು ಅಥವಾ ಇತರರು ಶಿಫಾರಸು ಮಾಡಿದ ಔಷಧಿಗಳನ್ನು ಬಳಸುವುದನ್ನು ನಿಲ್ಲಿಸಿ. ಯಾವುದೇ ಅಸಹಜ ಪ್ರತಿಕ್ರಿಯೆ, ನಿದ್ರಾವಸ್ಥೆ, ವಾಂತಿ ಅಥವಾ ಉಸಿರಾಟದ ತೊಂದರೆಯನ್ನು ತಕ್ಷಣ ಹತ್ತಿರದ ತಜ್ಞ ವೈದ್ಯರಿಗೆ ವರದಿ ಮಾಡಿ. ಯಾವಾಗಲೂ ಔಷಧದ ಅವಧಿ ಮಗಿಯುವ ದಿನಾಂಕಗಳನ್ನು ಪರಿಶೀಲಿಸಿ ಮತ್ತು ಲೇಬಲ್‌ಗಳನ್ನು ಎಚ್ಚರಿಕೆಯಿಂದ ಓದಿ’ ಎಂದು ಸರ್ಕಾರ ಸೂಚನೆ ನೀಡಿದೆ. `ಮಕ್ಕಳಲ್ಲಿ ಉಸಿರಾಟದ ತೊಂದರೆ ಅಥವಾ ವೇಗವಾಗಿ ಉಸಿರಾಟ, ನಿರಂತರ ಅಥವಾ ಉಲ್ಪಣಗೊಳ್ಳುತ್ತಿರುವ ಕೆಮ್ಮು, ಅತಿಯಾದ ಜ್ವರ ಅಥವಾ ಆಹಾರ ತಿರಸ್ಕರಿಸುವುದು. ನಿದ್ರಾವಸ್ಥೆ ಅಥವಾ ಅಸಹಜ ಪ್ರತಿಕ್ರಿಯೆ ಲಕ್ಷಣಗಳು ಕಂಡು ಬಂದರೆ ತಕ್ಷಣ ಹತ್ತಿರದ ಆರೋಗ್ಯ ಕೇಂದ್ರಗಳನ್ನು ಸಂಪರ್ಕಿಸಬೇಕು. ಮಕ್ಕಳ ಆರೋಗ್ಯ ಮತ್ತು ಸುರಕ್ಷತೆಯ ಹಿತದೃಷ್ಠಿಯಿಂದ, ಔಷಧಿಗಳ ತರ್ಕಬದ್ದ ಬಳಕೆಯನ್ನು ಉತ್ತೇಜಿಸಲು ಮತ್ತು ಕೆಮ್ಮು ಸಿರಪ್‌ಗಳ ಅನುಚಿತ ಬಳಕೆಯಿಂದ ಉಂಟಾಗುವ ಹಾನಿಯನ್ನು ತಡೆಗಟ್ಟಲು ಈ ಎಲ್ಲಾ ಸಲಹೆಗಳನ್ನು ಪಾಲಿಸಬೇಕು’ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಪ್ರಕಟಿಸಿದೆ. - [2025 ಅಕ್ಟೋಬರ್ 12ರ ದಿನ ಭವಿಷ್ಯ](https://mobiletime.in/2025/10/prediction-for-october-12-2025/): ಮೇಷ ರಾಶಿ: ನಿಮ್ಮ ಆದಾಯ ಏರಿಕೆಯಾಗಲಿದ್ದು, ಸಾಮಾಜಿಕ ಕಾರ್ಯಕ್ರಮಗಳಲ್ಲಿಯೂ ನೀವು ಗಮನಸೆಳೆಯುವಿರಿ. ಅಧ್ಯಯನದ ವಿಷಯಗಳು ನಿಮ್ಮ ವೃತ್ತಿ ಜೀವನವನ್ನು ಸುರಳಿತವಾಗಿಸುತ್ತದೆ. ಯಾತ್ರೆ-ಪ್ರವಾಸಕ್ಕೆ ಸರಿಯಾದ ಸಮಯ. ವೃಷಭ ರಾಶಿ: ಸಾಮಾಜಿಕ ಸಂಪರ್ಕ ಅಭಿವೃದ್ಧಿ ಆದಷ್ಟು ನಿಮ್ಮ ಬೆಳವಣಿಗೆ ಹೆಚ್ಚಾಗಲಿದೆ. ವ್ಯವಹಾರದಲ್ಲಿ ಯಶಸ್ಸು ಸಿಗಲಿದೆ. ಕಡಿಮೆ ಬೆಲೆಗೆ ಹೆಚ್ಚು ಖರೀದಿ ಎಂಬ ಮೋಸಕ್ಕೆ ಒಳಗಾಗಬೇಡಿ. ಮಿಥುನ ರಾಶಿ: ಕುಟುಂಬದವರ ಬೆಂಬಲದಿ0ದ ಎಲ್ಲಾ ಕೆಲಸಗಳು ಸರಾಗವಾಗಿ ಸಾಗಲಿದೆ. ಹೊಸ ವಿಷಯಗಳ ಕಲಿಕೆಗೆ ಯೋಗ್ಯ ಸಮಯ ಕೂಡಿಬರಲಿದೆ. ಹಣಕಾಸು ಪರಿಸ್ಥಿತಿ ಸರಿಯಾಗಿರಲಿದೆ. ಕರ್ಕ ರಾಶಿ: ಖರ್ಚು ವೆಚ್ಚಗಳ ಬಗ್ಗೆ ಗಮನಹರಿಸಿ. ಮೋಸ ಮಾಡುವವರ ಬಗ್ಗೆ ಎಚ್ಚರಿಕೆ ಇರಲಿ. ಉದ್ಯೋಗ ಶಾಂತ ರೀತಿಯಲ್ಲಿ ಸಾಗಲಿದೆ. ಸಿಂಹ ರಾಶಿ: ವೃತ್ತಿ ಜೀವನದಲ್ಲಿ ಬದಲಾವಣೆಯ ಸಮಯ ಬರಲಿದೆ. ಹಣಕಾಸಿನ ಹರಿವು ಚನ್ನಾಗಿ ಆಗಲಿದೆ. ಹೊಸ ವಸ್ತು ಖರೀದಿಗೆ ಯೋಗ್ಯ ದಿನ. ಕನ್ಯಾ ರಾಶಿ: ಕೆಲಸದ ಸ್ಥಳದಲ್ಲಿ ಪ್ರೀತಿಯ ವಾತಾವರಣ ಸಿಗಲಿದೆ. ಹಣಕಾಸು ಹೂಡಿಕೆ ಅಥವಾ ಹೊಸ ಯೋಜನೆಗಳಿಗೆ ಒಳ್ಳೆಯ ದಿನವಾಗಿದೆ. ಆರೋಗ್ಯದ ಬಗ್ಗೆ ಕಾಳಜಿವಹಿಸಿ. ತುಲಾ ರಾಶಿ: ನೀವು ಕೈಗೊಂಡ ಕಾರ್ಯ ಯಶಸ್ವಿಯಾಗಿ ನಡೆಯಲಿದೆ. ಕೆಲಸದಲ್ಲಿ ಸಾಧನೆ ಸಾಧ್ಯವಿದೆ. ದೂರ ಪ್ರಯಾಣ ಈ ದಿನ ಒಳ್ಳೆಯದಲ್ಲ. ವೃಶ್ಚಿಕ ರಾಶಿ: ಬಂಧು ಮಿತ್ರದಿಂದ ಒಳ್ಳೆಯ ಸುದ್ದಿಗಳು ಬರಲಿದೆ. ಆರೋಗ್ಯ ಸಮಸ್ಯೆ ಕಾಡಬಹುದು. ಉದ್ಯೋಗ ಹಾಗೂ ಹಣಕಾಸು ವಿಷಯದಲ್ಲಿ ಪ್ರಗತಿ ಆಗಲಿದೆ. ಧನು ರಾಶಿ: ಹಣಕಾಸು ವಿಭಜನೆಗಳು ಸರಿಯಾಗಿ ಆಗಲಿದೆ. ಕುಟುಂಬದ ಒಳತಿಗಾಗಿ ನಿಮ್ಮ ಶ್ರಮ ಅನಿವಾರ್ಯವಾಗಲಿದೆ. ಆರೋಗ್ಯ ಚೇತರಿಕೆ ಆಗಲಿದೆ. ಹೊಸ ಕಾರ್ಯಗಳು ಯಶಸ್ವಿ ಆಗುತ್ತದೆ. ಮಕರ ರಾಶಿ: ನಿಮ್ಮ ಕೆಲಸದಲ್ಲಿ ಹೊಸ ಜವಾಬ್ದಾರಿ ಬರಲಿದೆ. ಹಣಕಾಸು ವೆಚ್ಚದಲ್ಲಿ ನಿಯಂತ್ರಣ ಅಗತ್ಯ. ಆರೋಗ್ಯದ ಬಗ್ಗೆ ಕಾಳಜಿಯಿರಲಿ. ಸೌಂದರ್ಯ ಹಾಳಾಗದಂತೆ ಗಮನಿಸಿ. ಕುಂಭ ರಾಶಿ: ಉದ್ಯೋಗ ಸಮಸ್ಯೆಗಳಿಗೆ ಸ್ನೇಹಿತರಿಂದ ಪರಿಹಾರ ಸಿಗಲಿದೆ. ಪ್ರಯಾಣದ ಯೋಗ ಕೂಡಿ ಬರಲಿದೆ. ನಿಮ್ಮ ಗುರಿ ಸಾಧನೆ ಸಾಧ್ಯವಿದೆ. ಮೀನ ರಾಶಿ: ಮಾನಸಿಕ ನೆಮ್ಮದಿಗಾಗಿ ಧ್ಯಾನ ಮಾಡಿ. ಆರ್ಥಿಕ ವಿಷಯಗಳು ಪ್ರಗತಿ ಆಗಲಿದೆ. ಕುಟುಂಬದಲ್ಲಿ ಉತ್ತಮ ವಾತಾವರಣ ಸಿಗಲಿದೆ. ಶೈಕ್ಷಣಿಕ ಕೆಲಸಗಳು ಸರಾಗವಾಗಿ ಸಾಗಲಿದೆ. ಪ್ರಯಾಣದ ವೇಳೆ ಎಚ್ಚರಿಕೆ ಅಗತ್ಯ. - [ಕಳ್ಳತನಕ್ಕೆ ಬಂದವನಿಗೆ ಕಪಾಳ ಮೋಕ್ಷ!](https://mobiletime.in/2025/10/a-slap-is-salvation-for-the-one-who-comes-for-theft/): ಕಾರವಾರದಲ್ಲಿ ಕಳ್ಳತನಕ್ಕೆ ಯತ್ನಿಸಿದ ಯುವಕನಿಗೆ ಜನ ಕೆನ್ನೆಗೆ ಬಾರಿಸಿದ್ದಾರೆ. ಅದಾದ ನಂತರ ಪೊಲೀಸರನ್ನು ಸ್ಥಳಕ್ಕೆ ಕರೆಯಿಸಿ ಕಳ್ಳನನ್ನು ಅವರಿಗೆ ಒಪ್ಪಿಸಿದ್ದಾರೆ. ಕಾರವಾರದ ಜಾಂಬಾ ಬಳಿಯ ಮನೆಗೆ ಕಳ್ಳನೊಬ್ಬ ನುಗ್ಗಲು ಯತ್ನಿಸಿದ್ದ. ಈ ವೇಳೆ ಮನೆಯಲ್ಲಿದ್ದ ನಾಯಿ ಜೋರಾಗಿ ಬೊಗಳಿದ್ದು, ಆಗ ಊರಿನವರು ಆತನನ್ನು ಹಿಡಿದಿದ್ದಾರೆ. ಒಟ್ಟು ಮೂವರು ಕಳ್ಳರು ಕದಿಯಲು ಬಂದಿದ್ದು, ಇಬ್ಬರು ಓಡಿ ಪರಾರಿಯಾಗಿದ್ದಾರೆ. ಒಬ್ಬ ಮಾತ್ರ ಜನರ ಕೈಗೆ ಸಿಕ್ಕಿ ಬಿದ್ದಿದ್ದರಿಂದ ಎಲ್ಲರೂ ಸೇರಿ ಆತನಿಗೆ ಥಳಿಸಿದ್ದಾರೆ. ಕಳ್ಳತನಕ್ಕೆ ಯತ್ನಿಸಿದವನನ್ನು ಊರಿನ ಜನ ಕಂಬಕ್ಕೆ ಕಟ್ಟಿ ಹಾಕಿದ್ದಾರೆ. ಅದಾದ ನಂತರ ಪೊಲೀಸರಿಗೆ ಫೋನ್ ಮಾಡಿದ್ದು, ಗ್ರಾಮೀಣ ಠಾಣೆ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದಾರೆ. ಮಾಹಿತಿಗಳ ಪ್ರಕಾರ ಆ ಮೂವರು ಕಳ್ಳರು ಬೇರೆ ರಾಜ್ಯದವರಾಗಿದ್ದು, ಕಳ್ಳತನ ಮಾಡಿಯೇ ಜೀವನ ನಡೆಸುತ್ತಿರುವುದಾಗಿ ಹೇಳಲಾಗಿದೆ. - [ವಿದೇಶದಲ್ಲಿ ಕೆಲಸ: ನಂಬಿದವರಿಗೆ ಮೋಸ!](https://mobiletime.in/2025/10/working-abroad-deception-to-those-who-trust/): ವಿದೇಶದಲ್ಲಿ ಉದ್ಯೋಗ ಕೊಡುವುದಾಗಿ ನಂಬಿಸಿ ಅನೇಕರಿಗೆ ಮೋಸ ಮಾಡುತ್ತಿದ್ದ ಹೊನ್ನಾವರದ ಕಚೇರಿಯೊಂದರ ಮೇಲೆ ಬೆಂಗಳೂರಿನ ವಲಸಿಗರ ರಕ್ಷಣಾ ಇಲಾಖೆಯರು ದಾಳಿ ಮಾಡಿದ್ದಾರೆ. ಟ್ರಾವೆಲ್ ಟಚ್ ಟೂರ್ಸ್ & ಟ್ರಾವೆಲ್ಸ್ ರ‍್ಯಾನ್ ಗ್ರೂಪ್) ಎಂಬ ಕಚೇರಿಯಲ್ಲಿನ ದಾಖಲೆಗಳನ್ನು ಅಧಿಕಾರಿಗಳು ಪರಿಶೀಲಿಸಿದ್ದಾರೆ. ಅನೇಕ ದಾಖಲೆಗಳನ್ನು ವಶಕ್ಕೆಪಡೆದು ವಿಚಾರಣೆ ನಡೆಸಿದ್ದಾರೆ. ಹೊನ್ನಾವರದ ಶರಾವತಿ ಸರ್ಕಲಿನಲ್ಲಿ ಈ ಕಂಪನಿ ಕಾರ್ಯ ನಿರ್ವಹಿಸುತ್ತಿದ್ದು ಭಟ್ಕಳ, ಹೊನ್ನಾವರವರನ್ನು ಗುರಿಯಾಗಿರಿಸಿಕೊಂಡು ಅನೇಕರನ್ನು ಯಾಮಾರಿಸಿತ್ತು. ಅನೇಕರು ಈ ಕಂಪನಿಗೆ ಕಾಸು ಕೊಟ್ಟು ಮೋಸ ಹೋಗಿದ್ದರು. ಮೋಸ ಹೋದವರ ಮಾಹಿತಿ ಆಧಾರದಲ್ಲಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ದಾಳಿಯಲ್ಲಿ ನೂರಾರು ಬಗೆಯ ಪಾಸ್‌ಪೋರ್ಟಗಳು ಸಿಕ್ಕಿವೆ. ವಲಸಿಗರ ರಕ್ಷಣಾ ಇಲಾಖೆಯ ಬೆಂಗಳೂರು ಕಚೇರಿಯ ಅಧಿಕಾರಿ ಅವನೀಶ್ ಶುಕ್ಲಾ ನೇತೃತ್ವದಲ್ಲಿ ಈ ದಾಳಿ ನಡೆದಿದೆ. ತನಿಖೆಗೆ ಸಂಬAಧಿಸಿದ ಪ್ರಮುಖ ದಾಖಲೆಗಳು, ರಿಜಿಸ್ಟರ್‌ಗಳು ಮತ್ತು ಇತರ ಸಾಮಗ್ರಿಗಳನ್ನು ಅಧಿಕಾರಿಗಳು ವಶಕ್ಕೆಪಡೆದಿದ್ದಾರೆ. ಮಾಹಿತಿಗಳ ಪ್ರಕಾರ, ಇಸ್ರೇಲ್ ಮತ್ತು ಗಲ್ಫ್ ದೇಶಗಳಲ್ಲಿ ಸೂಪರ್ ಮಾರ್ಕೆಟ್ ಸಿಬ್ಬಂದಿ ಹುದ್ದೆಗಳನ್ನು ಭರವಸೆ ನೀಡಿ ಅಭ್ಯರ್ಥಿಗಳಿಂದ ಹಲವು ಲಕ್ಷ ರೂಪಾಯಿಗಳನ್ನು ಸಂಗ್ರಹಿಸಿತ್ತು. ಸೆಪ್ಟೆಂಬರ್ 9ರಂದು ವಲಸಿಗರ ರಕ್ಷಣಾ ಇಲಾಖೆ ನೀಡಿದ ನೋಟಿಸ್‌ಗೆ ಕಂಪನಿ ಕ್ಯಾರೇ ಎನ್ನದೇ ತನ್ನ ಅಕ್ರಮ ಚಟುವಟಿಕೆಗಳನ್ನು ಮುಂದುವರೆಸಿತ್ತು. ಇದಲ್ಲದೆ, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್‌ನಂತಹ ಸಾಮಾಜಿಕ ಮಾಧ್ಯಮಗಳ ಮೂಲಕ ಅನಧಿಕೃತ ನೇಮಕಾತಿ ಸೇವೆಗಳನ್ನು ಪ್ರಚಾರ ಮಾಡುತ್ತಿರುವುದು ಗಮನಕ್ಕೆ ಬಂದಿದೆ. - [ಪತ್ನಿ ಶೀಲ ಶಂಕಿಸಿದ ಪತಿ: ಬೆಂಕಿಯಲ್ಲಿ ಬೆಂದಿತು ಬಡಜೀವ!](https://mobiletime.in/2025/10/husband-suspected-his-wife-of-cheating-poor-thing-burned-in-fire/): ಬೆಂಕಿಯ ಜ್ವಾಲೆಯಲ್ಲಿ ಬೆಂದ ಯಲ್ಲಾಪುರದ ಜನ್ನಿ ಅವರು ಏಳು ದಿನ ನರಳಾಡಿ ಸಾವನಪ್ಪಿದ್ದಾರೆ. ಪತ್ನಿ ಶೀಲ ಶಂಕಿಸಿ ಬಾಬು ಅವರೇ ಪತ್ನಿಗೆ ಬೆಂಕಿ ಹಚ್ಚಿ ಕೊಂದಿದ್ದಾರೆ! ಯಲ್ಲಾಪುರದ ಕಿರವತ್ತಿ ಬೊಂಬಡಿಕೊಪ್ಪದ ಜನ್ನಿ ಬಾಬು ಖಾತ್ರೋಟ ಅವರು ವಾಸವಾಗಿದ್ದರು. ಅದೇ ಊರಿನ ಬಾಬು ಎಕ್ಕು ಖಾತ್ರೋಡ ಅವರನ್ನು ಜನ್ನಿ ಅವರು ವರಿಸಿದ್ದರು. ಈ ದಂಪತಿ ಕೂಲಿ ಕೆಲಸ ಮಾಡಿ ಬದುಕು ಕಟ್ಟಿಕೊಂಡಿದ್ದರು. ಆದರೆ, ಬಾಬು ಅವರಿಗೆ ಪತ್ನಿ ಮೇಲೆ ನಂಬಿಕೆಯಿರಲಿಲ್ಲ. ಹೀಗಾಗಿ ಮದುವೆ ಆದ ದಿನದಿಂದಲೂ ಬಾಬು ಅವರು ಜನ್ನಿ ಅವರನ್ನು ಪೀಡಿಸುತ್ತಿದ್ದರು. ಪತ್ನಿ ಶೀಲದ ಬಗ್ಗೆ ಅವರು ಪದೇ ಪದೇ ಅನುಮಾನವ್ಯಕ್ತಪಡಿಸಿ ಕಾಡಿಸುತ್ತಿದ್ದರು. ಅಕ್ಟೊಬರ್ 3ರಂದು ಬಾಬು ಖಾತ್ರೋಟ ಅವರು ಪತ್ನಿ ಬಳಿ ಜಗಳವಾಡಿದರು. ಆ ವೇಳೆ ಮತ್ತೆ ಪತ್ನಿಯ ಶೀಲದ ಬಗ್ಗೆ ಮಾತನಾಡಿದರು. ಕೆಟ್ಟದಾಗಿ ಬೈದು ನಿಂದಿಸಿದರು. `ನೀ ಮೊದಲಿನಿಂದ ಬೇರೆಯವರ ಜೊತೆಯಿದ್ದ ವಿಷಯ ಗೊತ್ತಿದೆ’ ಎಂದು ಕೂಗಾಡಿದರು. `ನನ್ನನ್ನು ಏಕೆ ಬೈಯುವೆ?’ ಎಂದು ಜನ್ನಿ ಖಾತ್ರೋಟ ಮರುಪ್ರಶ್ನೆ ಹಾಕಿದರು. ಇದರಿಂದ ಏಕಾಏಕಿ ಸಿಟ್ಟಾದ ಬಾಬು ಖಾತ್ರೋಟ ಅವರು ಬೈಕಿಗೆ ಹಾಕಲು ತಂದಿದ್ದ ಪೆಟ್ರೋಲ್ ಕ್ಯಾನ್ ಬಳಿ ತೆರಳಿದರು. ಜನ್ನಿ ಅವರ ಮೈಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದರು. ಮೈಗೆ ಬೆಂಕಿ ಅಂಟಿಸಿಕೊAಡ ಜನ್ನಿ ಅವರು ದೊಡ್ಡದಾಗಿ ಬೊಬ್ಬೆ ಹೊಡೆಯುತ್ತ ತಮ್ಮ ತವರು ಮನೆ ಕಡೆ ಓಡಿದರು. ತವರು ಮನೆಯವರು ಬೆಂಕಿಯನ್ನು ಆರಿಸಿ ಜನ್ನಿಯವರನ್ನು ರಕ್ಷಿಸುವ ಪ್ರಯತ್ನ ಮಾಡಿದರು. ಅದಾದ ನಂತರ ಜನ್ನಿ ಖಾತ್ರೋಟ ಅವರ ಸಹೋದರ ಗಂಗಾರಾಮ ಬಾಬು ಎಡಗೆ ಅವರು ಪೊಲೀಸರಿಗೆ ಫೋನ್ ಮಾಡಿದರು. ಪೊಲೀಸರು ಬಂದು ಜನ್ನಿ ಅವರನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದರು. ಅದಾದ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಜನ್ನಿ ಅವರನ್ನು ಹುಬ್ಬಳ್ಳಿಯ ಕಿಮ್ಸ್’ಗೆ ದಾಖಲಿಸಲಾಯಿತು. ತನಗಾದ ಅನ್ಯಾಯದ ಬಗ್ಗೆ ಜನ್ನಿ ಅವರು ಆಸ್ಪತ್ರೆಯಲ್ಲಿರುವಾಗಲೇ ಪೊಲೀಸ್ ಹೇಳಿಕೆ ನೀಡಿದ್ದರು. ಎರಡು ದಿನಗಳ ಕಾಲ ಚಿಕಿತ್ಸೆಪಡೆದ ಜನ್ನಿ ಅವರು ಅಕ್ಟೊಬರ್ 5ರಂದು ತವರು ಮನೆಗೆ ಮರಳಿದರು. ಮತ್ತೆ ಐದು ದಿನಗಳ ಕಾಲ ಇಲ್ಲಿಯೇ ಆರೈಕೆಗೆ ಒಳಗಾದರು. ಆದರೆ, ಮೈ ಸುಟ್ಟ ಕಾರಣ ಅವರು ನಿತ್ಯವೂ ನರಳುತ್ತಿದ್ದು, ಅಕ್ಟೊಬರ್ 10ರಂದು ಪ್ರಾಣಬಿಟ್ಟರು. ಅಕ್ಕನ ಸಾವಿಗೆ ಕಾರಣನಾದ ಬಾಬು ಎಕ್ರು ಖಾತ್ರೋಟ ವಿರುದ್ಧ ಅವರ ಭಾವ ಗಂಗಾರಾಮ ಬಾಬು ಎಡಗೆ ಪೊಲೀಸರಿಗೆ ಮಾಹಿತಿ ನೀಡಿದರು. ಗಂಗಾರಾಮ ಬಾಬು ಎಡಗೆ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದರು. ಪಿಎಸ್‌ಐ ರಾಜಶೇಖರ ವಂದಲಿ ಈ ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.   - [ವಿದ್ಯುತ್ ಅವಘಡ: ಅಗ್ನಿಗೆ ಆಹುತಿಯಾದ ಕೃಷಿ ಗೋದಾಮು](https://mobiletime.in/2025/10/electrical-accident-agricultural-warehouse-gutted-in-fire/): ಯಲ್ಲಾಪುರದಲ್ಲಿ ಹಣ್ಣು-ಕಾಯಿ ಮಾರಾಟ ಮಾಡಿಕೊಂಡಿದ್ದ ದೊಡ್ಡಬೇಣದ ಶಿವಾನಂದ ಮರಾಠಿ ಅವರ ಮಳಿಗೆಗೆ ಬೆಂಕಿ ಬಿದ್ದಿದೆ. ಅಗ್ನಿಶಾಮಕ ಸಿಬ್ಬಂದಿ ಆಗಮಿಸಿ ಆ ಬೆಂಕಿ ಆರಿಸಿದ್ದಾರೆ. ಯಲ್ಲಾಪುರದ ಐಬಿ ರಸ್ತೆಯ ಪಕ್ಕದಲ್ಲಿ ಶಿವಾನಂದ ಮರಾಠಿ ಅವರು ಕೃಷಿ ಗೋಡೌನ್ ಹೊಂದಿದ್ದರು. ಅವರು ರೈತರಿಂದ ಕಾಯಿ-ಪಲ್ಲೆ ಖರೀದಿಸಿ ಅದನ್ನು ಅಗತ್ಯವಿದ್ದವರಿಗೆ ಪೂರೈಸುತ್ತಿದ್ದರು. ತಮ್ಮ ಗೋದಾಮಿನಲ್ಲಿ ತೆಂಗಿನಕಾಯಿಗಳನ್ನು ಅವರು ದಾಸ್ತಾನು ಮಾಡಿದ್ದರು. ಜೇನುತುಪ್ಪ, ಅಡಿಕೆ ಹಾಳೆ ಪ್ಲೇಟುಗಳನ್ನು ಸಹ ಅವರು ಮಾರಾಟ ಮಾಡುತ್ತಿದ್ದರು. ಶನಿವಾರ ನಸುಕಿನಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಕಾರಣದಿಂದ ಅವರ ಗೋದಾಮಿಗೆ ಅಗ್ನಿ ಸ್ಪರ್ಶವಾಯಿತು. ಅಲ್ಲಿ ಬೆಂಕಿ ಉರಿದ ಪರಿಣಾಮ ಗೋದಾಮಿನಲ್ಲಿದ್ದ 10 ಸಾವಿರ ಅಡಕೆ ಹಾಳೆಯ ಪ್ಲೇಟುಗಳು, 80 ಲೀಟರ್ ಜೇನುತುಪ್ಪ, ಲೋಟ-ಚಮಚ, ಅಗರಬತ್ತಿಗಳು ನಾಶವಾದವು. ಇದರೊಂದಿಗೆ 6 ಕ್ವಿಂಟಲ್ ಬಾಳೆಕಾಯಿ, 1 ಟನ್ ಬರಡು ತೆಂಗಿನ ಕಾಯಿಗಳು ಅಗ್ನಿಗೆ ಆಹುತಿಯಾದವು. ಈ ವಿದ್ಯುತ್ ಅವಘಡದಿಂದ ಶಿವಾನಂದ ಮರಾಠಿ ಅವರಿಗೆ ಲಕ್ಷಾಂತರ ರೂ ನಷ್ಟವಾಗಿದೆ. ಅಗ್ನಿಶಾಮಕ ದಳದ ಎಫ್ ಎಸ್ ಒ ಶಂಕರಪ್ಪ ಅಂಗಡಿ, ಸಿಬ್ಬಂದಿ ಪ್ರಣಯ ಕೊಚ್ರೆಕರ್, ನಾಗರಾಜ ನಾಯಕ, ಅಮಿತ್ ಗುನಗಿ, ಸಲೀಂ ನದಾಫ, ಶಿವಾನಂದ ಕೋಡಿ ಬೆಂಕಿ ಆರಿಸಿದರು. - [ಅಂಕೋಲಾ: ಮತ್ತೊಂದು ದೋಣಿ ದುರಂತ!](https://mobiletime.in/2025/10/ankola-another-boat-tragedy/): ಅoಕೋಲಾದ ಬೇಲೆಕೇರಿ ಬಂದರಿನಲ್ಲಿ ಲಂಗರು ಹಾಕಿದ್ದ ಮತ್ತೊಂದು ದೋಣಿ ದುರಂತಕ್ಕೀಡಾಗಿದೆ. ಮೊನ್ನೆಯಷ್ಟೇ ದೋಣಿಯೊಂದು ಮುಗುಚಿ ಬಿದ್ದಿದ್ದು, ಶುಕ್ರವಾರ ರಾತ್ರಿ ಮತ್ತೆ ಇಂಥಹುದೇ ಅವಘಡ ನಡೆದಿದೆ. ಮೂರು ದಿನದಲ್ಲಿ ಎರಡು ದೋಣಿ ಮುಳುಗಡೆಯಿಂದಾಗಿ ಮೀನುಗಾರರು ಆತಂಕಕ್ಕೀಡಾಗಿದ್ದಾರೆ. ಈ ಭಾಗದ ಮೀನುಗಾರರು ಮೊದಲೇ ಆರ್ಥಿಕ ಸಂಕಷ್ಟದಲ್ಲಿದ್ದಾರೆ. ಹೀಗಿರುವಾಗ ಅರಬ್ಬಿ ಸಮುದ್ರದ ಅಲೆಗಳು ಅಲ್ಲಿನವರನ್ನು ಇನ್ನಷ್ಟು ಬಡವರನ್ನಾಗಿಸುತ್ತಿದೆ. ಸಾಲ ಮಾಡಿ ದೋಣಿ ಖರೀದಿಸಿದ ಮೀನುಗಾರರು ನಿರಂತರ ಅವಘಡಗಳಿಂದ ಕೆಂಗಟ್ಟಿದ್ದಾರೆ. ಬಂದರಿನಲ್ಲಿ ಸೂಕ್ತ ಅಲೆ ತಡೆಗೋಡೆ ಇಲ್ಲದಿರುವುದೇ ಈ ಅವಾಂತರಗಳಿಗೆ ಕಾರಣವಾಗಿದೆ. ಶುಕ್ರವಾರ ರಾತ್ರಿ ಶ್ರೀಕಾಂತ ತಾಂಡೇಲ ಅವರಿಗೆ ಸೇರಿದ್ದ ಶ್ರೀ ದುರ್ಗಾಪ್ರಸಾದ ಪರ್ಶೀಯನ್ ಬೋಟು ಮುಳುಗಡೆಯಾಗಿದೆ. ಪರಿಣಾಮ ದೋಣಿ ಮಾಲಕರಿಗೆ ಲಕ್ಷಾಂತರ ರೂ ಹಾನಿಯಾಗಿದೆ. ಬೇಲೆಕೇರಿ ಬಂದರು ಪ್ರದೇಶದಲ್ಲಿ ಅನೇಕ ವರ್ಷಗಳಿಂದ ಹೂಳು ತೆಗೆದಿಲ್ಲ. ಬಂದರು ಪ್ರದೇಶದಲ್ಲಿ ಹೂಳು ಎತ್ತದಿರುವುದು ದೋಣಿಗಳ ಪಾಲಿಗೆ ಮಾರಕವಾಗಿದೆ. ಹೂಳು ತುಂಬಿದ ಬಂದರಿನಲ್ಲಿ ಆಳ ಕಡಿಮೆಯಿರುವುದರಿಂದ ದೋಣಿಗಳು ಅಲ್ಲಿ ಲಂಗರು ಹಾಕಲು ಸಮಸ್ಯೆ ಅನುಭವಿಸುತ್ತಿವೆ. ಮೀನುಗಾರಿಕಾ ಇಲಾಖೆಯ ವಿರುದ್ಧ ಆ ಭಾಗದ ಜನ ಆಕ್ರೋಶವ್ಯಕ್ತಪಡಿಸಿದ್ದಾರೆ. ಒಂದು ದೋಣಿಯನ್ನು ಅವಲಂಭಿಸಿ ಅನೇಕ ಕುಟುಂಬಗಳು ಬದುಕುತ್ತಿವೆ. ದೋಣಿ ದುರಂತದಿAದ ದೋಣಿ ಮಾಲಕರಿಗೆ ಮಾತ್ರವಲ್ಲದೇ, ಅದನ್ನು ನಂಬಿದ ಕುಟುಂಬಗಳು ಅತಂತ್ರಕ್ಕೆ ಒಳಗಾಗುತ್ತಿದ್ದಾರೆ. ಹೂಳು ತೆಗೆಯದಿರುವುದು ಹಾಗೂ ಅಲೆ ತಡೆಗೋಡೆ ನಿರ್ಮಿಸಿದ ಕಾರಣ ಒಂದಕೊAದು ದೋಣಿಗಳು ಡಿಕ್ಕಿಯಾಗಿಯೂ ಹಾನಿ ಸಂಭವಿಸುತ್ತಿದೆ. ಮುಳುಗಿದ ದೋಣಿ ಮೇಲೆತ್ತಲು ಕ್ರೋನ್, ಪಂಪ್, ಯಂತ್ರ ಬಳಸುವುದು ಸಹ ಬಡ ಮೀನುಗಾರರ ಪಾಲಿಗೆ ದೊಡ್ಡ ಹೊರೆಯಾಗಿದೆ. - [ಪುರಸಭೆಯಲ್ಲಿ ಅಕ್ರಮ: ತನಿಖೆಗೆ ಆಗ್ರಹ](https://mobiletime.in/2025/10/illegality-in-the-municipality-demand-for-investigation/): `ಕುಮಟಾ ಪುರಸಭೆಯಲ್ಲಿ ನಡೆದ ಎಲ್ಲಾ ಅಕ್ರಮ-ಅವ್ಯವಹಾರಗಳ ಬಗ್ಗೆ ಸಮಗ್ರ ತನಿಖೆ ನಡೆಸಬೇಕು’ ಎಂದು ಜನಸಾಮಾನ್ಯರ ಸಮಾಜ ಕಲ್ಯಾಣ ಕೇಂದ್ರ ಆಗ್ರಹಿಸಿದೆ. ಈ ಬಗ್ಗೆ ಸಂಘಟನೆಯವರು ರಾಜ್ಯಪಾಲರಿಗೂ ದೂರು ರವಾನಿಸಿದ್ದಾರೆ. `ಅಕ್ರಮ ಕಟ್ಟಡವನ್ನು ಸಕ್ರಮ ಮಾಡುವುದಕ್ಕಾಗಿ ಕೆಲ ರಾಜಕಾರಣಿಗಳು ಹಾಗೂ ಅಧಿಕಾರಿಗಳು ದುಡ್ಡಿನ ಹಿಂದೆ ಬಿದ್ದಿದ್ದಾರೆ. ಈ ಬಗ್ಗೆ ಕುಮಟಾ ಪುರಸಭೆ ಕಂದಾಯ ಅಧಿಕಾರಿ ವೆಂಕಟೇಶ್ ಹರಿಜನ ಅವರು ಬರೆದ ಪತ್ರ ಸಾಕ್ಷಿಯಾಗಿದ್ದು, ಈ ಆರೋಪವನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ನಡೆಸಬೇಕು’ ಎಂದು ಕೇಂದ್ರದ ಅಧ್ಯಕ್ಷ ಆಗ್ನೆಲ್ ರೋಡ್ರಿಗಸ್ ಒತ್ತಾಯಿಸಿದ್ದಾರೆ. `ಕುಮಟಾ ಪುರಸಭೆಯಲ್ಲಿ ಮೊದಲಿನಿಂದಲೂ ವ್ಯಾಪಕ ಭ್ರಷ್ಟಾಚಾರ ನಡೆಯುತ್ತಿದೆ. ರಾಜಕೀಯ ಮುಖಂಡರೊಬ್ಬರು 4ಲಕ್ಷ ರೂಪಾಯಿ ಆಮೀಷ ಒಡ್ಡಿದ ಬಗ್ಗೆ ಪತ್ರದಲ್ಲಿ ಬರೆಯಲಾಗಿದೆ. ರಾಜಕೀಯ ಮುಖಂಡರಿoದ ನೌಕರರ ಮೇಲೆ ದಬ್ಬಾಳಿಕೆ ನಡೆಯುತ್ತಿದೆ. ಭ್ರಷ್ಟ ಅಧಿಕಾರಿಗಳು ಹಾಗೂ ದುಷ್ಟ ರಾಜಕಾರಣಿಗಳ ಒತ್ತಡದಿಂದ ಅಧೀನ ಅಧಿಕಾರಿ ಆತ್ಮಹತ್ಯೆಗೆ ಶರಣಾಗುವ ಸನ್ನಿವೇಶ ಎದುರಾಗಿದೆ’ ಎಂದವರು ವಿವರಿಸಿದರು. ನಿವೃತ್ತ ಅಧಿಕಾರಿ ನಾಗೇಶ್ ಹುಲಸ್ವಾರ, ಪ್ರಮುಖರಾದ ಸುಧಾಕರ ನಾಯ್ಕ್, ಕೃಷ್ಣ ಪಟಗಾರ, ಶ್ರೀದರ ಹರಿಕಾಂತ್, ಪಾಂಡು ಪಟಗಾರ, ಆನಂದ ಪಟಗಾರ, ಗಜಾನನ ಪಟಗಾರ, ಅಮೀನ್ ಸಯ್ಯದ್, ವಲಿ ಅಹಮದ್, ಮಹಾಬಲಿ, ಕೃಷ್ಣ ಪಟಗಾರ, ಮಂಜುನಾಥ್ ಅಂಬಿಗ, ಕೃಷ್ಣ ಪಟಗಾರ, ಪಾಂಡು ನಾಯ್ಕ್, ಈಶ್ವರ ನಾಯ್ಕ್, ಆನಂದು ಪಟಗಾರ, ದತ್ತ ಪಟಗಾರ ಇದ್ದರು. - [ಮಾಸ್ ಅವತಾರದಲ್ಲಿ ಬಾಸು!](https://mobiletime.in/2025/10/basu-in-the-form-of-a-mass/): ಭವ್ಯ ಆ್ಯಕ್ಷನ್ ಥ್ರಿಲ್ಲರ್ ‘ಕಟ್ಟಾಳನ್’ ಚಿತ್ರದ ಬಹುನಿರೀಕ್ಷಿತ ಫಸ್ಟ್ ಲುಕ್ ಪೋಸ್ಟರ್ ಈಗ ಬಿಡುಗಡೆಯಾಗಿದೆ. ಕ್ಯೂಬ್ಸ್ ಎಂಟರ್‌ಟೈನ್‌ಮೆಂಟ್ಸ್ ಮತ್ತು ನಿರ್ಮಾಪಕ ಷರೀಫ್ ಮೊಹಮ್ಮದ್ ಅವರ ಈ ಬೃಹತ್ ಪ್ರಾಜೆಕ್ಟ್‌ನಲ್ಲಿ, ನಟ ಆ್ಯಂಟನಿ ವರ್ಗೀಸ್ ಪೆಪೆ ಅವರು ಸಂಪೂರ್ಣ ಮಾಸ್ ಮತ್ತು ರೌದ್ರಾವತಾರದಲ್ಲಿ ಅಬ್ಬರಿಸಿದ್ದಾರೆ. ಆ್ಯಂಟನಿ ಅವರ ಜ್ವಲಂತ ಕಣ್ಣುಗಳು, ಕೆಂಪಾಗಿರುವ ಗೊಂದಲಮಯ ಕೇಶವಿನ್ಯಾಸ, ತುಟಿಗಳ ನಡುವೆ ಉರಿಯುತ್ತಿರುವ ಸಿಗಾರ್ – ಈ ಎಲ್ಲಾ ಅಂಶಗಳು ಪೋಸ್ಟರ್‌ಗೆ ಒಂದು ವಿಶಿಷ್ಟವಾದ ಕಚ್ಚಾ (Rugged) ತೀವ್ರತೆಯನ್ನು ನೀಡಿವೆ. ರಕ್ತದಿಂದ ಮಲಿನವಾದ ಮುಖ ಮತ್ತು ಕೈಗಳು ಚಿತ್ರದ ಆ್ಯಕ್ಷನ್ ಧಮಕವನ್ನು ಎತ್ತಿ ತೋರಿಸುತ್ತಿದ್ದು, ಇದುವರೆಗೆ ಕಾಣದಷ್ಟು ಉಗ್ರ ಹೊಸ ಆ್ಯಂಟನಿಯನ್ನು ತೆರೆಗೆ ಪರಿಚಯಿಸಲಿದೆ. ಪ್ಯಾನ್-ಇಂಡಿಯನ್ ಹಿಟ್ ಮಾರ್ಕೊ ನಂತರ, ಇದು ಕ್ಯೂಬ್ಸ್ ಎಂಟರ್‌ಟೈನ್‌ಮೆಂಟ್ಸ್ನ ಮತ್ತೊಂದು ದೊಡ್ಡ ಸವಾಲಿನ ಪ್ರಯತ್ನ. ಚೊಚ್ಚಲ ನಿರ್ದೇಶಕ ಪಾಲ್ ಜಾರ್ಜ್ ಅವರ ಕಲ್ಪನೆಯಲ್ಲಿ ಮೂಡಿಬರುತ್ತಿರುವ ಈ ಚಿತ್ರ, ಮಲಯಾಳಂನ ಅತಿ ದೊಡ್ಡ ಪೂಜೆ ಸಮಾರಂಭದೊಂದಿಗೆ ಪ್ರಾರಂಭವಾಗಿತ್ತು. ಇದೊಂದು ಪ್ಯಾನ್-ಇಂಡಿಯನ್ ದೃಶ್ಯಕಾವ್ಯವಾಗಿ ಪ್ರೇಕ್ಷಕರನ್ನು ತಲುಪಲಿದೆ. ಸಂಗೀತದ ವಿಚಾರಕ್ಕೆ ಬಂದರೆ, ಕಂಟಾರಾ ಮತ್ತು ಮಹಾರಾಜ ಚಿತ್ರಗಳ ಮೂಲಕ ದಕ್ಷಿಣ ಭಾರತದಾದ್ಯಂತ ಖ್ಯಾತಿ ಗಳಿಸಿದ ನಮ್ಮ ಪ್ರತಿಭಾವಂತ ಸಂಗೀತ ನಿರ್ದೇಶಕ ಬಿ. ಅಜನೀಶ್ ಲೋಕನಾಥ್ ಅವರು ಕಟ್ಟಾಳನ್ ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದಾರೆ. ಥೈಲ್ಯಾಂಡ್‌ನಲ್ಲಿ ಚಿತ್ರೀಕರಿಸಿದ ಅಪಾಯಕಾರಿ ಆ್ಯಕ್ಷನ್ ಸೀಕ್ವೆನ್ಸ್‌ಗಳಿಗೆ ಓಂಗ್-ಬಾಕ್ ಚಿತ್ರಗಳ ಖ್ಯಾತಿಯ ವಿಶ್ವ ವಿಖ್ಯಾತ ಸಾಹಸ ನಿರ್ದೇಶಕ ಕೇಚಾ ಕಾಂಫಕ್ಡೀ ಅವರ ತಂಡ ಸಂಯೋಜನೆ ಮಾಡಿದೆ. ಕುತೂಹಲಕಾರಿ ಸಂಗತಿ ಏನೆಂದರೆ, ಓಂಗ್-ಬಾಕ್ ಸಿನಿಮಾಗಳ ಮೂಲಕ ಹೆಸರು ಮಾಡಿದ ಆನೆ ಪಾಂಗ್ ಸಹ ಈ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದೆ. ಚಿತ್ರದಲ್ಲಿ ತೆಲುಗು ನಟ ಸುನೀಲ್ (ಪುಷ್ಪ, ಜೈಲರ್ ೨ ಖ್ಯಾತಿ), ಕಬೀರ್ ದುಹಾನ್ ಸಿಂಗ್, ರಾಜ ತಿರಂದಾಸು, ಬೇಬಿ ಜೀನ್, ಪಾರ್ಥ್ ತಿವಾರಿ, ಹಾಗೂ ಮಲಯಾಳಂನ ಹಿರಿಯ ಕಲಾವಿದರಾದ ಜಗದೀಶ್ ಮತ್ತು ಸಿದ್ದಿಕ್ ಸೇರಿದಂತೆ ಬಹು ದೊಡ್ಡ ತಾರಾಬಳಗವಿದೆ. ಮಲಯಾಳಂ, ತಮಿಳು, ತೆಲುಗು, ಕನ್ನಡ, ಮತ್ತು ಹಿಂದಿ ಭಾಷೆಗಳಲ್ಲಿ ಬಿಡುಗಡೆಯಾಗಲಿರುವ ಕಟ್ಟಾಳನ್ ಭಾರತೀಯ ಚಿತ್ರರಂಗದ ಗಮನ ಸೆಳೆಯುವುದರಲ್ಲಿ ಸಂಶಯವಿಲ್ಲ. ಈ ಹೊಸ ಮಾಸ್ ಲುಕ್ ಬಗ್ಗೆ ನಿಮ್ಮ ಅನಿಸಿಕೆ ಏನು? - [ಕೈಗೆ ಸಿಕ್ಕ ಕಳ್ಳ ಕಪೌಂಡ್ ಹಾರಿ ಓಡಿದ!](https://mobiletime.in/2025/10/the-thief-ran-away-with-the-stolen-compound/): ಕುಮಟಾದ ಗಿಬ್ ಸರ್ಕಲ್ ಬಳಿಯ ಬ್ಯಾಟರಿ ಅಂಗಡಿಗೆ ನುಗ್ಗಿ ದರೋಡೆ ಮಾಡಿದ್ದ ಕಳ್ಳನನ್ನು ಪೊಲೀಸರು ಬಂಧಿಸಿದ್ದು, ವಿಚಾರಣೆ ವೇಳೆ ಆತ ಪರಾರಿಯಾಗಿದ್ದರಿಂದ ಪೊಲೀಸರು ತಲೆಕೆಡಿಸಿಕೊಂಡಿದ್ದಾರೆ. ಕುಮಟಾದ ಗಿಬ್ ಸರ್ಕಲ್ ಬಳಿಯ ಅಮರಾನ್ ಬ್ಯಾಟರಿ ಶಾಪ್‌ನಲ್ಲಿ 8 ಸಾವಿರ ರೂ ಮೌಲ್ಯದ 12 ಬ್ಯಾಟರಿ ಕಳ್ಳತನ ನಡೆದಿತ್ತು. ಈ ಬಗ್ಗೆ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಶುರು ಮಾಡಿದ್ದರು. ಅನುಮಾನದ ಮೇರೆಗೆ ಭಟ್ಕಳದ ಇಬ್ಬರನ್ನು ವಶಕ್ಕೆಪಡೆದಿದ್ದರು. ಅವರೇ ಕಳ್ಳತನದಲ್ಲಿ ಭಾಗಿಯಾಗಿದ್ದು ಮೇಲ್ನೋಟಕ್ಕೆ ಪೊಲೀಸರಿಗೆ ಅರಿವಾಯಿತು. ಅವರನ್ನು ವೈದ್ಯಕೀಯ ತಪಾಸಣೆಗೆ ಕರೆದೊಯ್ಯುವಾಗ ಪೌಜಾನ್ ಅಹ್ಮದ್ ಎಂಬ ಕಳ್ಳ ಪರಾರಿಯಾಗಿದ್ದು, ಪೊಲೀಸರು ಆತನನ್ನು ಹಿಡಿಯಲು ಶ್ರಮಿಸಿದರು. ಆದರೆ, ಆ ಕಳ್ಳ ಮಾತ್ರ ಸಿಗಲಿಲ್ಲ. ಆಸ್ಪತ್ರೆಯ ಕಂಪೌoಡ್ ಹಾರಿ ಕಳ್ಳ ಪರಾರಿಯಾಗಿದ್ದರಿಂದ ಪೊಲೀಸರು ಕಪೌಂಡ್ ಹಾರಿದರು. ಆದರೆ, ಈ ವೇಳೆ ಪೊಲೀಸರು ಗಾಯಗೊಂಡರು. ಆರೋಪಿ ಬಗ್ಗೋಣ ರಸ್ತೆಯ ಸಿಂಧೂರು ಬೇಕರಿ ಪಕ್ಕದ ಗೇಟ್ ಒಳಗಿಂದ ತಪ್ಪಿಸಿಕೊಂಡಿರುವುದನ್ನು ಜನ ನೋಡಿದ್ದಾರೆ. ಶುಕ್ರವಾರ ರಾತ್ರಿ ಆತ ಪರಾರಿಯಾಗಿದ್ದು, ಕತ್ತಲಿನಲ್ಲಿ ಹುಡುಕಾಟ ಸಾಧ್ಯವಾಗಲಿಲ್ಲ. ಹಳೇ ಹೆರವಟ್ಟಾ, ಬಗ್ಗೋಣ ಸೇರಿ ಎಲ್ಲಾ ಕಡೆ ಹುಡುಕಾಟ ನಡೆದಿದ್ದು, ಫೋಟೋದಲ್ಲಿರುವ ಕಳ್ಳನನ್ನು ಕಂಡರೆ ಪೊಲೀಸರಿಗೆ ಫೋನ್ ಮಾಡುವಂತೆ ಸೂಚಿಸಲಾಗಿದೆ. - [ನಮ್ಮನೆ ಹಬ್ಬ: ಅವರೆಲ್ಲರೂ ಬರ್ತಿದ್ದಾರೆ.. ನೀವು ಬನ್ನಿ!](https://mobiletime.in/2025/10/our-festival-they-are-all-coming-you-come/): ಶಿರಸಿಯ ಬೆಟ್ಟಕೊಪ್ಪದಲ್ಲಿ ಪ್ರತಿ ವರ್ಷ ನಡೆಯುವ `ನಮ್ಮನೆ ಹಬ್ಬ’ಕ್ಕೆ ಈ ಬಾರಿ ಚಲನಚಿತ್ರ ಕ್ಷೇತ್ರದಲ್ಲಿ ಅನುಪಮ ಸಾಧನೆ ಮಾಡಿದ ಬಿ ಜಯಶ್ರೀ ಅವರು ಆಗಮಿಸಲಿದ್ದಾರೆ. ಅವರ ಜೊತೆ ಔಷಧೀಯ ಕ್ಷೇತ್ರದಲ್ಲಿ ಜಗತ್ತಿಗೆ ಉಪಕಾರಿಯಾಗುವ ಕಾರ್ಯ ಮಾಡುತ್ತಿರುವ ರಾಮನಂದನ ಹೆಗಡೆ ದೊಡ್ಮನೆ ಹಾಗೂ ಬಹುಮುಖ ಪ್ರತಿಭೆಯ ವಿದ್ಯಾರ್ಥಿ ತೇಜಸ್ವಿ ಗಾಂವಕರ ಅವರು ಬರುತ್ತಿದ್ದಾರೆ. ಡಿಸೆಂಬರ್ ಮೊದಲ ವಾರದಲ್ಲಿ `ನಮ್ಮನೆ ಹಬ್ಬ’ ನಡೆಯಲಿದ್ದು, ಈ ಹಬ್ಬದಲ್ಲಿ ಈ ಮೂವರು ಸಾಧಕರಿಗೆ `ನಮ್ಮನೆ ಸಾಧಕ’ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ. ಸಾಹಿತ್ಯ, ಸಾಂಸ್ಕೃತಿಕ, ಗ್ರಾಮಾಭ್ಯುದಯ ಕೆಲಸ ಮಾಡುತ್ತಿರುವ ವಿಶ್ವಶಾಂತಿ ಸೇವಾ ಟ್ರಸ್ಟ್ ವಾರ್ಷಿಕವಾಗಿ ನೀಡುವ ಪ್ರತಿಷ್ಠಿತ `ನಮ್ಮನೆ ಪ್ರಶಸ್ತಿ’ಯನ್ನು ಪ್ರಕಟಿಸಿದೆ. ರಂಗಭೂಮಿ ಮತ್ತು ಚಲನಚಿತ್ರ ಕ್ಷೇತ್ರದಲ್ಲಿ ಅನುಪಮ ಸಾಧನೆ ಮಾಡಿದ ಬಿ ಜಯಶ್ರೀ ಹಾಗೂ ಔಷಧ ಕ್ಷೇತ್ರದಲ್ಲಿ ಸಾಧನೆ ಮಾಡುತ್ತಿರುವ ಉತ್ತರ ಕನ್ನಡ ಮೂಲದ ರಾಮನಂದನ ಹೆಗಡೆ ದೊಡ್ಮನೆ ಅವರಿಗೆ ನಮ್ಮನೆ ಸಾಧಕ ಪ್ರಶಸ್ತಿ, ಕಿಶೋರ ಪುರಸ್ಕಾರವನ್ನು ಬಹುಮುಖ ಪ್ರತಿಭೆಯ ವಿದ್ಯಾರ್ಥಿ ತೇಜಸ್ವಿ ಗಾಂವಕರಗೆ ನೀಡಲಾಗುತ್ತಿದೆ. ರಂಗಭೂಮಿಗೊಬ್ಬರೇ ಜಯಶ್ರೀ! ಕನ್ನಡ ನಾಡಿನ ಅಗ್ರಮಾನ್ಯ ಕಲಾವಿದೆ ಬಿ ಜಯಶ್ರೀ ಅವರು ಭಾರತೀಯ ರಂಗಭೂಮಿಯ ಪ್ರಸಿದ್ಧ ನಟಿ, ನಿರ್ದೇಶಕಿ ಹಾಗೂ ಗಾಯಕಿ. ರಂಗಭೂಮಿ ಜೊತೆಗೆ ಚಲನಚಿತ್ರ, ಕಿರುತೆರೆಗಳಲ್ಲಿಯೂ ಅವರು ಅಭಿನಯಿಸಿದ್ದರೆ. ಡಬ್ಬಿಂಗ್ ಕಲಾವಿದೆಯಾಗಿ ಹಲವಾರು ಚಿತ್ರಗಳಿಗೆ ಹಿನ್ನೆಲೆ ಧ್ವನಿ ನೀಡಿದ್ದಾರೆ. ಅವರು ಹಾಡಿದ ಹಲವು ಹಾಡುಗಳೇ ಸಿನೆಮಾಗಳನ್ನು ಪ್ರಸಿದ್ಧಗೊಳಿಸಿದ್ದಿವೆ. ಗುಬ್ಬಿ ವೀರಣ್ಣ ಅವರ ಮೊಮ್ಮಗಳಾದ ಜಯಶ್ರೀ ಅವರು ಚಿಕ್ಕಂದಿನಿ0ದಲೇ ರಂಗಭೂಮಿಯ ನಂಟು ಬೆಳಸಿಕೊಂಡು ದೇಶದ ಗಮನ ಸೆಳೆದಿದ್ದಾರೆ. ಹವ್ಯಾಸಿ ನಾಟಕ ಸಂಸ್ಥೆಯಾಗಿರುವ ಸ್ಪಂದನ ಥಿಯೇಟರ್ ನ ಸೃಜನಶೀಲ ನಿರ್ದೇಶಕರಾಗಿ ಅನೇಕ ನಾಟಕಗಳನ್ನು ನಿರ್ದೇಶಿಸಿದ್ದಾರೆ. 2010 ರಿಂದ 2016 ರವರೆಗೆ ಅವರು ರಾಜ್ಯಸಭೆಯ ನಾಮನಿರ್ದೇಶಿತ ಸದಸ್ಯರಾಗಿ ಕಾರ್ಯನಿರ್ವಹಿಸಿದ್ದರು. 75ರ ವಯಸ್ಸಿನಲ್ಲೂ ರಂಗಭೂಮಿಯಲ್ಲಿ ಕ್ರಿಯಾಶೀಲರಾಗಿದ್ದು, ಯುವ ಸಮುದಾಯವನ್ನು ಕಲಾ ಮಂದಿರಕ್ಕೆ ಸೆಳೆಯುವ ಕಾಯಕ ಮಾಡುತ್ತಿದ್ದಾರೆ. ಜೀವದಾಯಿನಿ ಔಷಧ ಕೊಟ್ಟು ಜೀವ ಉಳಿಸಿದವರು ಮೂಲತಃ ಸಿದ್ದಾಪುರ ತಾಲ್ಲೂಕಿನ ದೊಡ್ಮನೆ ಮೂಲದ ರಾಮನಂದನ ಹೆಗಡೆ ಅವರು ಜಗತ್ತೇ ಕೋವಿಡ್ ಸಂಕಷ್ಟದಲ್ಲಿದ್ದಾಗ ಜೀವದ ಹಂಗು ತೊರೆದು ಲಸಿಕೆಗಳಿಗೆ ಅಗತ್ಯವಾದ ಮೂಲಭೂತ ವಸ್ತುಗಳನ್ನು ಪೂರೈಸಿದವರು. ಆ ಮೂಲಕ ಪ್ರಪಂಚದ ಸಂಕಷ್ಟವನ್ನು ದೂರಮಾಡಲು ಹೆಗಲುಕೊಟ್ಟಿದ್ದಾರೆ. ಆ ಕಾಲದಲ್ಲೇ ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡದಿಂದ ರಸಾಯನಶಾಸ್ತ್ರದಲ್ಲಿ ಪದವಿ ಹಾಗೂ ಸ್ನಾತಕೋತ್ತರ ಪದವಿ ಪಡೆದು, 1978ರಲ್ಲಿ ನಂದು ಕೆಮಿಕಲ್ ಇಂಡಸ್ಟ್ರೀಸ್ ಸ್ಥಾಪಿಸಿ ಅನೇಕರಿಗೆ ಉದ್ಯೋಗದಾತರೂ ಆಗಿದ್ದಾರೆ. ಔಷಧೋದ್ಯಮ ಕ್ಷೇತ್ರದ ಮೂಲಕ ಮಾನವನ ಕಲ್ಯಾಣಕ್ಕೆ ಜೀವ ರಕ್ಷಣಾ ಸಂಯೋಗಗಳನ್ನು ತಯಾರಿಸಿ, ಮನೆ ಹೊರಗೆ ಬರಲೂ ಹೆದರುವ ಕಾಲದಲ್ಲಿ ಜನರಿಗೆ ಲಸಿಕೆಯ ಅಭಯ ನೀಡುವಲ್ಲಿ ಇವರ ಹಾಗೂ ಇವರ ಸಂಸ್ಥೆಯ ಕೊಡುಗೆ ತೆರೆಯ ಹಿಂದೆಯೂ ಅಪಾರವಾಗಿದೆ. ಸಲಾಯನ್ (ಐವೀ) ದ್ರಾವಣಗಳು, ಡಯಾಲಿಸಿಸ್, ಲಸಿಕೆಗಳು, ಎಲೆಕ್ಟ್ರೋಲೈಟ್ಸ್, ಪೋಷಕಾಂಶ ಪೂರಕಗಳು ಹಾಗೂ ವೈಯಕ್ತಿಕ ಆರೈಕೆಗೆ ಬಳಸುವ ಅನೇಕ ಉತ್ಪನ್ನಗಳ ತಯಾರಿಕೆಯಲ್ಲಿ ತೊಡಗಿಕೊಂಡಿದ್ದಾರೆ. 45 ವರ್ಷಗಳ ಅನುಭವದೊಂದಿಗೆ ವಿಶ್ವಪ್ರಸಿದ್ಧ ಸಕ್ರೀಯ ಔಷಧ ಪದಾರ್ಥ ತಯಾರಿಕಾ ಸಂಸ್ಥೆಯಾಗಿ ಕಂಪನಿಯನ್ನು ಬೆಳೆಸಿದ್ದಾರೆ. ನಂದು ಕೆಮಿಕಲ್ಸ್ ಮೂಲಕ ವಿಶ್ವದ 20ಕ್ಕೂ ಹೆಚ್ಚು ದೇಶಗಳಿಗೆ ಔಷಧ ಮತ್ತು ಅದರ ಉತ್ಪನ್ನ, ಪರಿಕರಗಳನ್ನು ರಫ್ತು ಮಾಡುತ್ತಿದ್ದಾರೆ. ಭಾರತದಲ್ಲಿ ತಯಾರಾಗುವ 10 ಐವೀ ಬಾಟಲಿಗಳಲ್ಲಿ 8 ಬಾಟಲಿಗಳಲ್ಲಿ ನಂದು ಕಂಪನಿಯ ಉತ್ಪನ್ನಗಳೇ ಸೇರಿವೆ ಎಂಬುದು ವಿಶೇಷ. ಇನ್ನು ಇವರ ಸಾಧನೆಗೆ ಐದು ಬಾರಿ ರಫ್ತು ಪ್ರಶಸ್ತಿ, ಗ್ರಾಹಕರಿಂದ ಉತ್ತಮ ಪೂರೈಕೆದಾರ ಪ್ರಶಸ್ತಿ ಹಾಗೂ ಕೋವಿಶೀಲ್ಡ್ ಲಸಿಕೆಗೆ ಮುಖ್ಯ ಸಂಯೋಗ ಒದಗಿಸಿದಕ್ಕಾಗಿ ವಿಶೇಷ ಗೌರವ, ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಂಡಳಿಯಿAದ ವಾಣಿಜ್ಯ ರತ್ನ ಪ್ರಶಸ್ತಿ, 2024ರಲ್ಲಿ ವಿಶ್ವ ಹವ್ಯಕ ಸಮ್ಮೇಳನದಲ್ಲಿ ಹವ್ಯಕ ಸ್ಪೂರ್ತಿ ರತ್ನ ಪ್ರಶಸ್ತಿ ಪಡೆದಿದ್ದಾರೆ. ಅನೇಕ ಸಾಮಾಜಿಕ ಮತ್ತು ಸಾಂಸ್ಕೃತಿಕ ಸಂಘಟನೆಗಳ ಜೊತೆಗೆ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಕಿಶೋರ ಪುರಸ್ಕಾರ ಚಿಕ್ಕಂದಿನಿoದಲೇ ಯಕ್ಷಗಾನ ಮತ್ತು ಸಾಹಿತ್ಯ ಕ್ಷೇತ್ರದಲ್ಲಿ ಅಪಾರ ಆಸಕ್ತಿ ಬೆಳೆಸಿಕೊಂಡಿರುವ ಬಹುಮುಖ ಪ್ರತಿಭೆಯುಳ್ಳ ಅಂಕೋಲಾ ತಾಲೂಕಿನ ತೇಜಸ್ವಿ ರಾಮಕೃಷ್ಣ ಗಾಂವಕರ ಹೆಗ್ಗಾರು ಅವರಿಗೆ ಇದೇ ವೇದಿಕೆಯಲ್ಲಿ ಕಿಶೋರ ಪುರಸ್ಕಾರ ನೀಡಲಾಗುತ್ತಿದೆ. ತೇಜಸ್ವಿ ಗಾಂವ್ಕರ ಅವರು ಎಳೆಯ ವಯಸ್ಸಿನಲ್ಲೇ `ಯಕ್ಷತೇಜ’ ಕವನ ಸಂಕಲನ ಮತ್ತು `ಹೃದಯದ ಮಾತು ಕೇಳು ನನ್ನ ಒಲವೇ’ ಕಾದಂಬರಿಯನ್ನು ಪ್ರಕಟಿಸಿದ್ದಾರೆ. ರಾಜ್ಯಮಟ್ಟದ ಅನೇಕ ಕವಿಗೋಷ್ಠಿಗಳು ಮತ್ತು ಸಾಹಿತ್ಯ ಸಮ್ಮೇಳನಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದಾರೆ. ಕೀರ್ತನಾಚತುರನಾಗಿಯೂ ಅವರು ಗಮನ ಸೆಳೆದಿದ್ದಾರೆ. `ನೈಜ ಸಾಧಕರಿಗೇ ಪ್ರಶಸ್ತಿ ಸಿಗಬೇಕು ಹಾಗೂ ಬೆಳೆವ ಸಿರಿ ಬೆಂಬಲಿಸಬೇಕು ಎಂಬ ಕಾರಣಕ್ಕೆ ಯಾರಿಂದಲೂ ಯಾವುದೇ ಅರ್ಜಿ ಪಡೆಯದೇ ಆಯ್ಕೆ ಸಮಿತಿಯು ಪ್ರಶಸ್ತಿ ಪುರಸ್ಕೃತರನ್ನು ಆಯ್ಕೆ ಮಾಡಿದೆ’ ಎಂದು ವಿಶ್ವಶಾಂತಿ ಸೇವಾ ಟ್ರಸ್ಟ್’ನ ಕಾರ್ಯದರ್ಶಿ ಗಾಯತ್ರೀ ರಾಘವೇಂದ್ರ ಅವರು ಹೇಳಿದ್ದಾರೆ. - [ಊಟ ಸರಿ ಇಲ್ಲ.. ನಿದ್ದೆ ಬರ್ತಿಲ್ಲ!](https://mobiletime.in/2025/10/im-not-eating-well-i-cant-sleep/): ಕಾರವಾರದ ಬಾಡ ಬಳಿಯ ಕಾಜುಭಾಗದಲ್ಲಿರುವ  ಬಾಲಕಿಯರ ವಸತಿ ನಿಲಯ ಅವ್ಯವಸ್ಥೆಯ ಆಗರವಾಗಿದೆ. ಸಾಕಷ್ಟು ಬಾರಿ ತಿಳಿಸಿದರೂ ಅಲ್ಲಿನ ಸಮಸ್ಯೆಯನ್ನು ಅಧಿಕಾರಿಗಳು ಪರಿಗಣಿಸಿಲ್ಲ. ಹೀಗಾಗಿ ಅಲ್ಲಿನ ವಿದ್ಯಾರ್ಥಿನಿಯರು ಶುಕ್ರವಾರ ರಾತ್ರಿ ದಿಢೀರ್ ಪ್ರತಿಭಟನೆ ನಡೆಸಿದ್ದಾರೆ. ಹಾಸ್ಟೇಲ್ ವಾರ್ಡನ್ ಊಟಕ್ಕೆ ಕರೆದರೂ ಮಕ್ಕಳು ಹೋಗಿಲ್ಲ. ಆರೋಗ್ಯ ಸಮಸ್ಯೆ, ಅಶುಚಿತ್ವ, ಅಸಮರ್ಪಕ ಆಹಾರ ವಿತರಣೆಯ ಬಗ್ಗೆ ವಿದ್ಯಾರ್ಥಿನಿಯರು ಆಕ್ರೋಶವ್ಯಕ್ತಪಡಿಸಿದರು. `ಕೊಳೆತ ತರಕಾರಿ ಹಾಕಿ ಅಡುಗೆ ಮಾಡಲಾಗುತ್ತಿದೆ. ಸೊಳ್ಳೆಗಳ ಕಾಟಕ್ಕೆ ನಿಯಂತ್ರಣವಿಲ್ಲ. ಶೌಚಾಲಯ ಸ್ವಚ್ಚತೆ ಸರಿಯಾಗಿಲ್ಲ’ ಎಂದು ವಿದ್ಯಾರ್ಥಿನಿಯರು ದೂರಿದರು. ವಾರ್ಡನ್ ಮಂಜುಳ ಅವರ ಬಗ್ಗೆಯೂ ಸಾಕಷ್ಟು ಆರೋಪ ಮಾಡಿ, ಕಿಡಿಕಾರಿದರು. ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಿರುವ ವಿಷಯ ಕೇಳಿ ರಾತ್ರಿಯೇ ಅಧಿಕಾರಿಗಳು ಹಾಸ್ಟೇಲಿಗೆ ಭೇಟಿ ನೀಡಿ ಸಮಸ್ಯೆ ಆಲಿಸಿದರು. `ಮೊದಲು ಊಟ ಮಾಡಿ, ನಂತರ ಸಮಸ್ಯೆ ಆಲಿಸೋಣ’ ಎಂದು ಅಧಿಕಾರಿಗಳು ಹೇಳಿದರೂ ವಿದ್ಯಾರ್ಥಿನಿಯರು ಪಟ್ಟು ಬಿಡಲಿಲ್ಲ. ಅದಾದ ನಂತರ ಹಾಸ್ಟೆಲ್ ಒಳಗಿನ ಅವ್ಯವಸ್ಥೆಗಳನ್ನು ಅಧಿಕಾರಿಗಳು ಪರಿಶೀಲನೆ ಮಾಡಿದರು. ಕಾರವಾರದ ತಹಶೀಲ್ದಾರ್ ನಿಶ್ಚಲ್ ನೊರೊನ್ಹಾ ಹಾಗೂ ಹಿಂದುಳಿದ ವರ್ಗ ಕಲ್ಯಾಣ ಇಲಾಖೆಯ ಉಪನಿರ್ದೇಶಕಿ ಶಿವಕ್ಕ ಮಾದರ ಹಾಸ್ಟೇಲ್ ಒಳಗೆ ಗಮನಿಸಿ ವಾರ್ಡನ್ ಮಂಜುಳಾ ಅವರಿಗೆ ನೋಟಿಸ್ ಜಾರಿ ಮಾಡಿದರು. ಅದಾದ ನಂತರ ಉತ್ತಮ ಊಟ, ಸ್ವಚ್ಚತೆಗೆ ಆದ್ಯತೆ ಕೊಡುವ ಭರವಸೆ ನೀಡಿದರು. `ವಿದ್ಯಾರ್ಥಿನಿಯರ ಬಳಿಯೇ ಎಲ್ಲಾ ಕೆಲಸ ಮಾಡಿಸುತ್ತಾರೆ’ ಎಂದು ಪ್ರತಿಭಟನಾಕಾರರು ಅಳಲು ತೋಡಿಕೊಂಡರು. - [2025 ಅಕ್ಟೋಬರ್ 11ರ ದಿನ ಭವಿಷ್ಯ](https://mobiletime.in/2025/10/prediction-for-october-11-2025/): ಮೇಷ ರಾಶಿ: ಹೊಸ ಆಲೋಚನೆಗಳ ಮೇಲೆ ಮಾಡುವ ಕೆಲಸಕ್ಕೆ ಫಲ ಸಿಗಲಿದೆ. ಆರ್ಥಿಕ ಪರಿಸ್ಥಿತಿ ಸಮತೋಲನದಲ್ಲಿದ್ದು, ದುಡಿದಷ್ಟು ಲಾಭ ಸಿಗಲಿದೆ. ವೃಷಭ ರಾಶಿ: ಕುಟುಂಬದವರ ಆಗು-ಹೋಗುಗಳಿಗೆ ಸರಿಯಾಗಿ ಸ್ಪಂದಿಸುವುದರ ಮೂಲಕ ಸಂತೋಷದ ಜೀವನ ನಡೆಸಿ. ಅವಕಾಶಗಳನ್ನು ಸರಿಯಾಗಿ ಬಳಸಿಕೊಳ್ಳಿ. ಮಿಥುನ ರಾಶಿ: ಧ್ಯಾನದ ಮೂಲಕ ಶಾಂತಿ ಅರೆಸಿ. ಧೈರ್ಯದಿಂದ ಸಮಸ್ಯೆಗಳನ್ನು ಎದುರಿಸಿ. ಹೊಸ ಜವಾಬ್ದಾರಿ ಸ್ವೀಕರಿಸಿ. ಕರ್ಕ ರಾಶಿ: ನಿಮ್ಮ ನಿರ್ಧಾರ ಭಾವನಾತ್ಮಕ ವಿಚಾರದಿಂದ ದೂರವಿರಲಿ. ತಾಳ್ಮೆ ಕಳೆದುಕೊಳ್ಳಬೇಡಿ. ಭರವಸೆ ಹೆಚ್ಚಾದಷ್ಟು ಕೆಲಸದಲ್ಲಿ ವೇಗ ಸಿಗಲಿದೆ. ಸಿಂಹ ರಾಶಿ: ನಿಮ್ಮ ಆತ್ಮವಿಶ್ವಾಸ ಹೆಚ್ಚಾಗಲಿದೆ. ಕೋಪವನ್ನು ನಿಯಂತ್ರಿಸಿ. ಹೊಸ ಸಾಧ್ಯತೆಗಳು ಎದುರಾಗಲಿದೆ. ಕನ್ಯಾ ರಾಶಿ: ಕೆಲಸದ ಬಗ್ಗೆ ಹೆಚ್ಚಿನಗಮನಹರಿಸಿ. ಆರೋಗ್ಯದ ಬಗ್ಗೆ ಗಮನಹರಿಸಿ. ಧಾರ್ಮಿಕ ಕಾರ್ಯಕ್ರಮದಲ್ಲಿ ಆಸಕ್ತಿ ಮೂಡಲಿದೆ. ತುಲಾ ರಾಶಿ: ಹಣಕಾಸು ಸ್ಥಿತಿ ಸುಧಾರಣೆ ಆಗಲಿದೆ. ಉದ್ಯೋಗ ಹಾಗೂ ವ್ಯಾಪಾರದಲ್ಲಿ ಅವಕಾಶಗಳಿವೆ. ಪ್ರೀತಿ ಸಂಬAಧಗಳು ಗಾಡವಾಗಲಿದೆ. ವೃಶ್ಚಿಕ ರಾಶಿ: ರಾಜಕೀಯದಲ್ಲಿರುವವರಿಗೆ ಯಶಸ್ಸು ಸಿಗಲಿದೆ. ಕನಸುಗಳು ಈಡೇರುವ ಸಮಯ ಬಂದಿದೆ. ಕುಟುಂಬದ ಸಮಸ್ಯೆಗಳನ್ನು ಆಲಿಸಿ ಪರಿಹಾರ ಹುಡುಕುವುದು ಅನಿವಾರ್ಯ. ಧನು ರಾಶಿ: ಧ್ಯಾನ ಹಾಗೂ ಯೋಗದಲ್ಲಿ ಆಸಕ್ತಿ ಮೂಡಲಿದೆ. ಭವಿಷ್ಯದ ಯೋಜನೆಗಳ ಬಗ್ಗೆ ಚಿಂತಿಸುವಿರಿ. ಆರ್ಥಿಕ ಸ್ಥಿತಿ ಸುಧಾರಣೆ ಆಗಲಿದೆ. ಮಕರ ರಾಶಿ: ನಿಮ್ಮ ಶ್ರಮಕ್ಕೆ ತಕ್ಕ ಫಲ ಸಿಗಲಿದೆ. ಧರ್ಮದ ವಿಷಯದಲ್ಲಿ ಬೆಂಬಲ ದೊರೆಯಲಿದೆ. ಹೊಸ ಪರಿಚಯಗಳು ಅರೆಸಿ ಬರಲಿದೆ. ಕುಂಭ ರಾಶಿ: ಉದ್ಯೋಗದಲ್ಲಿ ಪ್ರಗತಿ ಆಗಲಿದೆ. ಧಾರ್ಮಿಕ ಕಾರ್ಯಕ್ರಮಗಳಲ್ಲಿ ಆಸಕ್ತಿ ಮೂಡಲಿದೆ. ಸಾಧನೆ ಸಾಧ್ಯವಿದೆ. ಮೀನ ರಾಶಿ: ವ್ಯವಹಾರದಲ್ಲಿ ಸುಧಾರಣೆ ಸಾಧ್ಯವಿದೆ. ಆರೋಗ್ಯದ ಮೇಲೆ ಕಾಳಜಿಯಿರಲಿ. ನಿಮ್ಮ ಉದ್ಯೋಗವೂ ಪ್ರಗತಿ ಆಗಲಿದೆ. - [ವಾಟ್ಸಪ್ಪಿಗೆ ಬಂದಿತು ನೀಲಿಚಿತ್ರ: ಬೌದ್ಧ ಬಿಕ್ಕುವಿಗೆ ತಂದಿತು ದೊಡ್ಡ ಸಂಕಟ!](https://mobiletime.in/2025/10/a-blue-picture-was-posted-on-whatsapp-it-caused-great-suffering-to-a-buddhist-monk/): ಸಣ್ಣ ಸಣ್ಣ ಮಕ್ಕಳ ನೀಲಿ ಚಿತ್ರವನ್ನು ವಾಟ್ಸಪ್ ಮೂಲಕ ಅವರಿವರಿಗೆ ಕಳುಹಿಸಿದ ಮುಂಡಗೋಡಿನ ಬೌದ್ಧ ಬಿಕ್ಕುವಿಗೆ ಸಂಕಷ್ಟ ಎದುರಾಗಿದೆ. ಆ ಸನ್ಯಾಸಿಗೂ ವಿನಾಯತಿ ನೀಡದೇ ಪೊಲೀಸರು ಪ್ರಕರಣ ದಾಖಲಿಸಿದ್ದು, ಕಾನೂನು ಪಾಠ ಶುರು ಮಾಡಿದ್ದಾರೆ. ಮುಂಡಗೋಡಿನ ತಟ್ಟಿಹಳ್ಳಿ ನಗ್ರೆಹೌಸ್ ಬಳಿಯ ಸೋನಮ್ ಚೋಮ್ಫೆಲ್ ಅವರು ಬೌದ್ಧ ಸನ್ಯಾಸಿಯಾಗಿದ್ದಾರೆ. ಲಾಮಾ ಕ್ಯಾಂಪ್ 2ರಲ್ಲಿ ಅವರು ವಾಸಿಸುತ್ತಿದ್ದಾರೆ. ಬಾಲ್ಯದಲ್ಲಿಯೇ ಅವರ ತಂದೆ ಟೆಂಬಾ ಟ್ಸೆರಿಂಗ್ ಅವರು ಮಗನನ್ನು ಆಶ್ರಮಕ್ಕೆ ಬಿಟ್ಟಿದ್ದು, ಧರ್ಮ ಅಧ್ಯಯನಕ್ಕೆ ಕೂರಿಸಿದ್ದರು. ಆದರೆ, ಧರ್ಮದ ದಾರಿಯಲ್ಲಿ ನಡೆಯಬೇಕಿದ್ದ ಸೋನಮ್ ಚೋಮ್ಫೆಲ್ ಪೊಲಿ ಸ್ನೇಹಿತರ ಸಹವಾಸ ಮಾಡಿದರು. ಅಡ್ಡದಾರಿ ಹಿಡಿದ ಅವರು ತಮ್ಮ ವಾಟ್ಸಪ್ ಮೂಲಕ ಅವರಿವರಿಗೆ ಕೆಟ್ಟ ಸಂದೇಶ ಕಳುಹಿಸುವುದನ್ನು ರೂಢಿಸಿಕೊಂಡರು. ಸುಪ್ರೀo ಕೋರ್ಟ ಆದೇಶದ ಅನ್ವಯ ಭಾರತ ಸರ್ಕಾರ 2019ರ ಏಪ್ರಿಲ್ 29ರಂದು ಕಾಣೆಯಾದ ಹಾಗೂ ಶೋಷಿತ ಮಕ್ಕಳ ವಿರುದ್ಧದ ಲೈಂಗಿಕ ದೌರ್ಜನ್ಯ ತಡೆಗೆ ಪ್ರತ್ಯೇಕ ಅಂತರ್ಜಾಲ ವ್ಯವಸ್ಥೆಯನ್ನು ತಂದಿತು. ಇದಕ್ಕಾಗಿ ಎನ್‌ಸಿಎಂಸಿಇ ಎಂಬ ವೆಬ್ ಪೋರ್ಟಲನ್ನು ಸರ್ಕಾರ ತೆರೆಯಿತು. ಆ ವೆಬ್ ಪೋರ್ಟಲಿನಲ್ಲಿ ಕರ್ನಾಟಕಕ್ಕೆ ಸಂಬAಧಿಸಿದ ಮಕ್ಕಳ ದೂರುಗಳು ದಾಖಲಾಗುತ್ತಿದ್ದು, ಅದನ್ನು ಬೆಂಗಳೂರಿನ ಸಿಐಡಿ ತಂಡ ಗಮನಿಸಿತು. 2025ರ ಜನವರಿ 28ರಂದು ಬೌದ್ಧ ಬಿಕ್ಕು ಸೋನಮ್ ಚೋಮ್ಫೆಲ್ ಅವರು ವಾಟ್ಸಪ್ ಮೂಲಕ ಮಕ್ಕಳ ಅಶ್ಲೀಲ ಚಿತ್ರ ಹರಡುತ್ತಿರುವುದು ಗೊತ್ತಾಯಿತು. ಈ ಪ್ರಕರಣ ಉತ್ತರ ಕನ್ನಡ ಜಿಲ್ಲೆಗೆ ಸಂಬoಧಿಸಿದ್ದoದ ವಿಷಯ ಕಾರವಾರದ ಸಿಇಎನ್ ಅಪರಾಧ ಪೊಲೀಸ್ ಠಾಣೆಯ ವ್ಯಾಪ್ತಿಗೆ ಒಳಪಟ್ಟಿತು. ಸಿಇಎನ್ ಪೊಲೀಸ್ ಠಾಣೆಯ ಉಪನಿರೀಕ್ಷಕ ಮಂಚೇಶ್ವರ ಚಂದಾವರ ಅವರು ಲಭ್ಯ ದಾಖಲೆ ಪರಿಶೀಲಿಸಿದರು. ಅಪ್ರಾಪ್ತರ ಅಶ್ಲೀಲ ವಿಡಿಯೋ ಅಪ್ಲೋಡ್ ಮಾಡಿದ್ದು ಮೇಲ್ನೋಟಕ್ಕೆ ಸಾಭೀತಾಗಿದ್ದರಿಂದ ಸೋನಮ್ ಚೋಮ್ಫೆಲ್ ವಿರುದ್ಧ ಪ್ರಕರಣ ದಾಖಲಿಸಿದರು. - [ಬೈಕಿನಲ್ಲಿ ಬರುವವನೇ ಸರಗಳ್ಳ!](https://mobiletime.in/2025/10/the-one-who-comes-on-a-bike-is-the-thief/): `ಅಲ್ಲಿ ಡಕಾಯಿತರಿದ್ದಾರೆ’ ಎಂದು ಬೆದರಿಸಿ ದಾಂಡೇಲಿ ಅಜ್ಜಿಯ ಆಭರಣ ಅಪಹರಿಸಿದ್ದ ನಿಜವಾದ ಡಕಾಯಿತರ ಚಿತ್ರ ಬಹಿರಂಗವಾಗಿದೆ. ಬೈಕಿನಲ್ಲಿ ಬಂದ ಆಗಂತುಕರು ಅಜ್ಜಿಯ ಒಡವೆ ಕದ್ದು ಪರಾರಿಯಾಗಿದ್ದು, ಸಿಸಿ ಕ್ಯಾಮರಾದಲ್ಲಿ ಅವರ ಚಲನ-ವಲನ ಸೆರೆಯಾಗಿದೆ. `ದಾಂಡೇಲಿ ಬಾಂಬುನಗರದ ಬಳಿ ಡಕಾಯಿತರು ಚಾಕು ಹಿಡಿದು ನಿಂತಿದ್ದಾರೆ’ ಎಂದು ಇಬ್ಬರು ದಾಂಡೇಲಿಯ ಬಂಗೂರುನಗರದ ಓಲ್ಡ್ ಡಿ ಆರ್ ಟಿ ಬಳಿ ಶಾಂತಾ ಯಲ್ಲಪ್ಪ ಪವಾರ್ ಅವರನ್ನು ಬೆದರಿಸಿದ್ದರು. ಶಾಂತಾ ಪವಾರ್ ಅವರ ಬಳಿಯಿದ್ದ ಒಡವೆಗಳನ್ನು ಜೋಪಾನ ಮಾಡಿ ಕೊಡುವೆ ಎಂದು ತಿಳಿಸಿದ ಆ ಆಗಂತುಕರು ಬೂದಿ ಬಣ್ಣದ ಬಟ್ಟೆಯಲ್ಲಿ ಹಾಕಿದ್ದರು. ಶಾಂತಾ ಪವಾರ್ ಅವರು ಮನೆಗೆ ಬಂದು ನೋಡಿದಾಗ ಆ ಬಟ್ಟೆಯಲ್ಲಿ ಎರಡು ಕಲ್ಲುಗಳು ಮಾತ್ರ ಇದ್ದವು. ಆ ಅಪರಿಚಿತರು ಶಾಂತಾ ಪವಾರ್ ಅವರ ಬಳಿಯಿದ್ದ ಚಿನ್ನದ ಸರ ಹಾಗೂ ಬಳೆ ಅಪಹರಿಸಿದ್ದರು. ಚಾಕು ಹಿಡಿದಿದ್ದ ಡಕಾಯಿತರಿಂದ ಚಿನ್ನ ರಕ್ಷಿಸಿಕೊಳ್ಳುವ ಆತುರಕ್ಕೆ ಬಿದ್ದ 85ರ ವೃದ್ಧೆ ಶಾಂತಾ ಪವಾರ್ ಅವರು ತಮ್ಮ ಮೈಮೇಲಿದ್ದ 2 ಲಕ್ಷ ರೂ ಬೆಲೆಯ ಆಭರಣವನ್ನು ಕಳ್ಳರ ಕೈಗೆ ಕೊಟ್ಟು ಮೋಸ ಹೋಗಿದ್ದರು. ಅಕ್ಟೊಬರ್ 8ರಂದು ಈ ಎಲ್ಲಾ ವಿದ್ಯಮಾನ ನಡೆದಿದ್ದು, ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಶುರು ಮಾಡಿದರು. ಆಗ ಡಕಾಯಿತರ ಹೆಸರಿನಲ್ಲಿ ಬೆದರಿಸಿ ವಂಚನೆ ಮಾಡುವ ಡಕಾಯಿತರ ಮುಖ ಸಿಸಿ ಕ್ಯಾಮರಾದಲ್ಲಿ ಸೆರೆ ಸಿಕ್ಕಿತು. ಅಜ್ಜಿಯ ಚಿನ್ನ ಕದ್ದು ಕಲ್ಲು ಕೊಟ್ಟ ಅವರ ಹುಡುಕಾಟ ಮುಂದುವರೆದಿದೆ. - [ನಗರಸಭೆ ಹೆಸರಿನಲ್ಲಿ ಅಪರಿಚಿತರ ವಸೂಲಿ: ಸದ್ದು ಮಾಡದ ಫೋನ್ ನಂಬರ್ ನೀಡಿದ ಅಧಿಕಾರಿ!](https://mobiletime.in/2025/10/unidentified-people-extorting-money-in-the-name-of-the-municipal-council-an-officer-gave-an-unlisted-phone-number/): ಶಿರಸಿ ನಗರಸಭೆ ಹೆಸರಿನಲ್ಲಿ ಮನೆ ಮನೆಗೆ ತೆರಳಿ ಹಣ ವಸೂಲಿ ಮಾಡುತ್ತಿದ್ದ ಇಬ್ಬರ ಫೋಟೋ ಬಹಿರಂಗವಾಗಿದೆ. ಆದರೆ, `ಹಣ ವಸೂಲಿ ಮಾಡುವವರ ಬಗ್ಗೆ ಮಾಹಿತಿ ಕೊಡಿ’ ಎಂದು ಶಿರಸಿ ನಗರಸಭೆ ನೀಡಿದ ಸಂಖ್ಯೆಗೆ ಫೋನ್ ಸಂಪರ್ಕವೇ ಇಲ್ಲ! ಶಿರಸಿಯ ವಿವಿಧ ಗಲ್ಲಿ ಗಲ್ಲಿಗೆ ತೆರಳುವ ಇಬ್ಬರು ನಗರಸಭೆ ಹೆಸರಿನಲ್ಲಿ ಹಣ ಕೇಳಿದ್ದಾರೆ. ಹಣ ಕೊಟ್ಟವರಿಗೆ ಅಧಿಕೃತ ರಸೀದಿ ಕೊಟ್ಟಿಲ್ಲ. ಕೊಟ್ಟ ಹಣಕ್ಕೆ ತಕ್ಕ ಕೆಲಸವನ್ನು ಮಾಡಿಕೊಟ್ಟಿಲ್ಲ. ಹೀಗಾಗಿ ಹಣ ಕೊಟ್ಟವರು ನಗರಸಭೆಯನ್ನು ಪ್ರಶ್ನಿಸಿದ್ದು, ಆ ವೇಳೆ ನಗರಸಭೆಗೆ ಸಂಬoಧವೇ ಇಲ್ಲದವರು ಅಧಿಕಾರಿಗಳ ಹೆಸರಿನಲ್ಲಿ ಹಣ ವಸೂಲಿ ಮಾಡಿರುವುದು ಗೊತ್ತಾಗಿದೆ. ನಗರಸಭೆ ಹೆಸರು ಹಾಳಾಗುತ್ತಿರುವುದರಿಂದ ಆತಂಕಕ್ಕೆ ಒಳಗಾದ ಪೌರಾಯುಕ್ತರು ತುರ್ತು ಪ್ರಕಟಣೆ ಬಿಡುಗಡೆ ಮಾಡಿದ್ದಾರೆ. `ನಗರಸಭೆ ಹೆಸರನ್ನು ಹೇಳಿ ಹಣ ಕೇಳುವವರನ್ನು ನಂಬಬೇಡಿ’ ಎಂದು ಅಲ್ಲಿನ ಅಧಿಕಾರಿಗಳು ಹೇಳಿದ್ದಾರೆ. ಅಪರಿಚಿತರು ಹಣ ಕೇಳಿದರೆ ತಕ್ಷಣ 08384-226338ಗೆ ಫೋನ್ ಮಾಡುವಂತೆ ಮನವಿಯನ್ನು ಮಾಡಿದ್ದಾರೆ. ಆದರೆ, ಆ ಫೋನ್ ನಂ ಸರಿಯಾಗಿಲ್ಲ. ಫೋನ್ ಮಾಡಿದರೆ `ಔಟ್ ಆಫ್ ಆರ್ಡರ್’ ಎಂಬ ಧ್ವನಿ ಬರುತ್ತಿದ್ದು, ಆ ಸಂಖ್ಯೆಗೆ ಫೋನ್ ಸಂಪರ್ಕವೇ ಇಲ್ಲ! ಇನ್ನೂ, ನಗರಸಭೆ ನೀಡಿದ ಪ್ರಕಟಣೆಯಲ್ಲಿ `ಅಪರಿಚಿತರು ಹಣ ಕೇಳಿದರೆ ಪೊಲೀಸ್ ದೂರು ನೀಡಿ’ ಎಂದು ಕೋರಲಾಗಿದೆ. ಹೀಗಾಗಿ ನಗರಸಭೆ ಹೆಸರಿನಲ್ಲಿ ಯಾರೇ ಹಣ ಕೇಳಿದರೂ ಪೊಲೀಸರಿಗೆ ಫೋನ್ ಮಾಡುವುದು ಮಾತ್ರ ಜನರಿಗಿರುವ ದಾರಿಯಾಗಿದೆ. - [ಅನಾರೋಗ್ಯ: ಅಧಿಕಾರದಲ್ಲಿರುವಾಗಲೇ ಅಸುನೀಗಿದ ಅಧ್ಯಕ್ಷೆ!](https://mobiletime.in/2025/10/illness-the-president-died-while-in-office/): ಹೊನ್ನಾವರದ ಹಳದಿಪುರ ಗ್ರಾಮ ಪಂಚಾಯತ ಅಧ್ಯಕ್ಷೆ ಪುಷ್ಪಾ ನಾಯ್ಕ ಅವರು ಅಧಿಕಾರದಲ್ಲಿರುವಾಗಲೇ ಅನಾರೋಗ್ಯ ಕಾರಣದಿಂದ ನಿಧನರಾಗಿದ್ದಾರೆ. ಅನಾರೋಗ್ಯ ಹಿನ್ನಲೆ ಅವರನ್ನು ಆಸ್ಪತ್ರೆಗೆ ಸೇರಿಸಿದರೂ ಪ್ರಯೋಜನವಾಗಲಿಲ್ಲ. ಪುಷ್ಪಾ ನಾಯ್ಕ ಅವರು ಕಾಂಗ್ರೆಸ್ ಕಾರ್ಯಕರ್ತರಾಗಿದ್ದರು. ಅವರ ಶ್ರಮಕ್ಕೆ ತಕ್ಕ ಹಾಗೇ ಹಳದಿಪುರ ಗ್ರಾಮ ಪಂಚಾಯತದಲ್ಲಿ ಅಧ್ಯಕ್ಷ ಸ್ಥಾನ ಸಿಕ್ಕಿತ್ತು. ತಮ್ಮ ಅಧಿಕಾರ ವ್ಯಾಪ್ತಿಯಲ್ಲಿ ಹಲವು ಜನಪರ ಕೆಲಸಗಳನ್ನು ಅವರು ಮಾಡಿದ್ದರು. ಪುಷ್ಪಾ ನಾಯ್ಕ ಅವರ ಪತಿ ಮಹೇಶ ನಾಯ್ಕ ಅವರು ಕಾಂಗ್ರೆಸ್ ಮುಖಂಡರಾಗಿ ಗುರುತಿಸಿಕೊಂಡಿದ್ದರು. ಮಹೇಶ ನಾಯ್ಕ ಅವರು ಸಹ ಹೊನ್ನಾವರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ ಪಕ್ಷ ಸಂಘಟನೆ ಮಾಡಿದ್ದರು. ಅಲ್ಪ ಕಾಲದ ಅನಾರೋಗ್ಯಕ್ಕೆ ಒಳಗಾದ ಪುಷ್ಪಾ ನಾಯ್ಕ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಯಿತು. ಅಲ್ಲಿನ ವೈದ್ಯರು ನಿರಂತರ ಚಿಕಿತ್ಸೆ ನೀಡಿದರು. ಆದರೆ, ಪುಷ್ಪಾ ನಾಯ್ಕ ಅವರ ಆರೋಗ್ಯದಲ್ಲಿ ಚೇತರಿಕೆ ಕಾಣಲಿಲ್ಲ. ಶುಕ್ರವಾರ ಬೆಳಗ್ಗೆ ಅವರು ಕೊನೆಯುಸಿರೆಳೆದರು. ಪುಷ್ಪಾ ನಾಯ್ಕ ಅವರ ದೇಹವನ್ನು ಹಳದಿಪುರ ಗ್ರಾಮ ಪಂಚಾಯತ ಬಳಿಯಿರಿಸಿದ್ದು, ಅನೇಕರು ಅಂತಿಮ ದರ್ಶನಪಡೆದರು.     - [ಬುದ್ದಿ ಇಲ್ಲದವನ ಮಾತಿಗೆ ಬದ್ದ ಎನ್ನದ ಶಾಸಕ!](https://mobiletime.in/2025/10/the-mla-said-that-he-fell-for-the-words-of-a-mindless-person/): `ಬುದ್ದಿ ಇದ್ದವರಿಗೆ ಏನಾದರೂ ಹೇಳಬಹುದು. ಬುದ್ದಿಯೇ ಇಲ್ಲದಿದ್ದವರಿಗೆ ಏನು ಹೇಳಿಯೂ ಪ್ರಯೋಜನವಿಲ್ಲ’ ಎಂದು ಕುಮಟಾ ಶಾಸಕ ದಿನಕರ ಶೆಟ್ಟಿ ಹೇಳಿದ್ದಾರೆ. ಜೆಡಿಎಸ್ ಮುಖಂಡ ಸೂರಜ ನಾಯ್ಕ ವಿರುದ್ಧ ಕಿಡಿಕಾರಿದ ದಿನಕರ ಶೆಟ್ಟಿ, ಸೂರಜ ನಾಯ್ಕ ಸೋನಿ ಅವರ ಭ್ರಷ್ಟಾಚಾರದ ಬಗ್ಗೆಯೂ ಮಾತನಾಡಿದ್ದಾರೆ. `ಭ್ರಷ್ಟಾಚಾರ, ಭ್ರಷ್ಟಾಚಾರ ಎಂದು ಕೂಗುವ ಸೂರಜ ನಾಯ್ಕ ಸೋನಿ ಅವರು ತಮ್ಮ ಭ್ರಷ್ಟಾಚಾರದ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕು. ಸೂರಜ ನಾಯ್ಕ ಸೋನಿ ಅವರ ಧರ್ಮಪತ್ನಿ ಜಿಲ್ಲಾ ಪಂಚಾಯತ ಸದಸ್ಯರಾಗಿದ್ದಾಗ ಅಭಿವೃದ್ಧಿ ಕೆಲಸದ ಕಮಿಷನ್ ಹಣಪಡೆದಿದನ್ನು ನೆನಪಿಸಿಕೊಳ್ಳಬೇಕು’ ಎಂದು ದಿನಕರ ಶೆಟ್ಟಿ ಹೇಳಿದ್ದಾರೆ. `ಸೂರಜ ನಾಯ್ಕ ಸೋನಿ ಅವರಿಗೆ ಸಾಕಷ್ಟು ಸಂಬoಧಿಕರಿದ್ದಾರೆ. ಅವರು ಹೇಳಿದನ್ನೆಲ್ಲ ವಾಟ್ಸಪ್ ಮೂಲಕ ಬಿಡುತ್ತಾರೆ. ನನಗೆ ಅಂಥ ಸಂಬoಧಿಕರಿಲ್ಲ. ಹೀಗಾಗಿ ನಾನು ಹೇಳಿದಲ್ಲ ವಾಟ್ಸಪ್ ಬರುವುದಿಲ್ಲ’ ಎಂದಿದ್ದಾರೆ. `ಪುರಸಭೆ ಕಂದಾಯ ನಿರೀಕ್ಷಕ ವೆಂಕಟೇಶ್ ನಾಪತ್ತೆ ಪ್ರಕರಣದಲ್ಲಿ ತನ್ನ ಕೈವಾಡ ಏನೂ ಇಲ್ಲ. ಆತ ಕೆಲಸಕ್ಕೆ ಸೇರಿದ ದಿನದಿಂದ ಈವರೆಗೂ ಆತನನ್ನು ನೋಡಿಲ್ಲ. ಫೋನ್ ಕೂಡ ಮಾಡಿಲ್ಲ. ವೆಂಕಟೇಶ ಬರೆದ ಪತ್ರದಲ್ಲಿಯೂ ನಾನು ಭ್ರಷ್ಟಾಚಾರದಲ್ಲಿ ತೊಡಗಿರುವ ವಿಷಯ ಇರಲಿಲ್ಲ. ಪುರಸಭೆ ಮುಖ್ಯಾಧಿಕಾರಿ 4 ಲಕ್ಷ ರೂ ಹಣಪಡೆಯುವ ಬಗ್ಗೆ ಪತ್ರದಲ್ಲಿದ್ದು, ನನ್ನ ವಿರುದ್ಧ ಸೂರಜ ನಾಯ್ಕ ಅವರು ಮಾಡಿದ ಆರೋಪದಲ್ಲಿ ಸತ್ಯವಿಲ್ಲ’ ಎಂದು ಸಮರ್ಥಿಸಿಕೊಂಡರು. `ವಿರೋಧಿಗಳು ಪತ್ರವನ್ನು ಓದಿ-ತಿಳಿದು ಆರೋಪ ಮಾಡಬೇಕು. ಈಚೆಗೆ ಅವರು ಹಾಕಿದ ಪ್ರಕರಣದಲ್ಲಿ ನನ್ನ ಪರವಾಗಿ ತೀರ್ಪು ಬಂದಿದ್ದರಿAದ ಹತಾಶರಾಗಿ ಭ್ರಷ್ಟಾಚಾರದ ಆರೋಪ ಮಾಡುತ್ತಿದ್ದಾರೆ’ ಎಂದು ದಿನಕರ ಶೆಟ್ಟಿ ದೂರಿದರು. `ಸತ್ಯಕ್ಕೆ ಸಾವಿಲ್ಲ. ಸುಳ್ಳಿಗೆ ಸುಖವಿಲ್ಲ ಎಂದು ನಾನು ನಂಬಿದ್ದೇನೆ. ನಾನು ಮಾಡಿದ ಒಳ್ಳೆಯ ಕೆಲಸಗಳು ನನಗೆ ಶ್ರೀರಕ್ಷೆಯಾಗಿದೆ. ಪುರಸಭೆ ಕಂದಾಯ ನಿರೀಕ್ಷಕ ವೆಂಕಟೇಶ್ ಅವರ ಜೀವ ಮುಖ್ಯವಾಗಿದ್ದು, ಅವರು ಮರಳಿ ಬಂದಿದ್ದಾರೆ. ನಾನು ಅಭಿವೃದ್ಧಿಪರವಾಗಿದ್ದು, ನನ್ನ ಮೇಲೆ ಬರುವ ಆರೋಪಗಳಿಗೆ ಇನ್ಮುಂದೆ ಪ್ರತಿಕ್ರಿಯಿಸಲ್ಲ’ ಎಂದು ದಿನಕರ ಶೆಟ್ಟಿ ಸ್ಪಷ್ಟಪಡಿಸಿದರು. - [ಮನೆಗೆ ಬರ್ತಾರೆ.. ಔಷಧಿ ಕೊಡ್ತಾರೆ.. ಮೋಸ ಮಾಡ್ತಾರೆ!](https://mobiletime.in/2025/10/they-come-home-give-medicine-cheat/): ಆರೋಗ್ಯ ಸಿಬ್ಬಂದಿ ಹೆಸರಿನಲ್ಲಿ ಮನೆ ಮನೆಗೆ ಭೇಟಿ ನೀಡಿ ಮಹಿಳೆಯರನ್ನು ವಂಚಿಸುವ ಜಾಲವೊಂದು ಜಿಲ್ಲೆಗೆ ಕಾಲಿರಿಸಿದೆ. ಕಾರವಾರದ ಪ್ರಮೋದ ನಾಯ್ಕ ಅವರ ಕುಟುಂಬ ಇಂಥ ಮೋಸದ ಬಲೆಗೆ ಬಿದ್ದಿದೆ. ಉಚಿತ ಚಿಕಿತ್ಸೆ ಎಂಬ ನೆಪದಲ್ಲಿ ಜನರನ್ನು ಮಾತನಾಡಿಸುವ ಈ ಜನ ಅವರ ಮನೆಗೆ ತೆರಳಿ ಔಷಧಿ ಕೊಡುತ್ತಾರೆ. ಔಷಧಿಯ ಮೊತ್ತ ದುಬಾರಿ ಎಂದು ತಿಳಿಸಿ ಹಣಪಡೆಯುತ್ತಾರೆ. ನಂತರ ಆ ಹಣ ಮರಳಿ ಸಿಗುತ್ತದೆ ಎಂದು ಸಹ ನಂಬಿಸಿ ಅಲ್ಲಿಂದ ಪರಾರಿಯಾಗುತ್ತಾರೆ. ಕಾರವಾರದ ಪ್ರಮೋದ ನಾಯ್ಕ ಅವರು ಇಂಥ ಮೋಸಕ್ಕೆ ಬಲಿಯಾಗಿದ್ದು, ನ್ಯಾಯಕ್ಕಾಗಿ ಪೊಲೀಸರ ಮೊರೆ ಹೋಗಿದ್ದಾರೆ. ಸದಾಶಿವಗಡದ ದೇಸಾಯಿವಾಡದಲ್ಲಿ ಪ್ರಮೋದ ವಿಶ್ರಾಮ ನಾಯ್ಕ ಅವರು ಕಿರಾಣಿ ಅಂಗಡಿ ನಡೆಸುತ್ತಿದ್ದಾರೆ. ಅಕ್ಟೊಬರ್ 9ರಂದು ಪ್ರಮೋದ ನಾಯ್ಕ ಅವರ ಅಂಗಡಿ ಬಳಿ ಬಂದ ಅಪರಿಚಿತರು ಉಚಿತ ಔಷಧಿಯ ಆಫರ್ ನೀಡಿದರು. ಪ್ರಮೋದ ನಾಯ್ಕ ಅವರ ಮನೆ ವಿಳಾಸಪಡೆದು ಬೈಕಿನಲ್ಲಿ ಅಲ್ಲಿಗೆ ತೆರಳಿದರು. 35-40 ವರ್ಷದ ಆ ಇಬ್ಬರು ಆಗಂತುಕರು `ಮಕ್ಕಳಾಗದವರಿಗೆ ಮೆಡಿಸಿನ್ ಕೊಡುತ್ತೇವೆ’ ಎಂದು ನಂಬಿಸಿದರು. ಪ್ರಮೋದ ನಾಯ್ಕ ಅವರ ಪತ್ನಿ ಅಕ್ಷತಾ ನಾಯ್ಕ ಅವರು ಇದನ್ನು ನಂಬಿದರು. `ಔಷಧ ವೆಚ್ಚ 40 ಸಾವಿರ ರೂಪಾಯಿ. ಅದು ನಿಮಗೆ ಮರಳಿ ಸಿಗುತ್ತದೆ’ ಎಂದು ತಿಳಿಸಿ ಹಣಪಡೆದರು. ಉಪಯೋಗಕ್ಕೆ ಬಾರದ ಔಷಧಿ-ದ್ರಾವಣ ನೀಡಿ ಅವರಿಬ್ಬರು ಅಲ್ಲಿಂದ ಪರಾರಿಯಾದರು. ಮನೆಗೆ ಬಂದ ಪ್ರಮೋದ ನಾಯ್ಕ ಅವರಿಗೆ ಈ ವಿಷಯ ಗೊತ್ತಾಯಿತು. ಅಪರಿಚಿತರ ವಿರುದ್ಧ ಅವರು ಪೊಲೀಸ್ ದೂರು ನೀಡಿದರು. ಸದ್ಯ ಚಿತ್ತಾಕುಲ ಪೊಲೀಸರು ಪ್ರಕರಣ ದಾಖಲಿಸಿದ್ದು, ವಂಚಕರ ಹುಡುಕಾಟ ಶುರು ಮಾಡಿದ್ದಾರೆ. - [ಕುಡಿತದ ಚಟ: ಬೀದಿಗೆ ಬಿದ್ದ ರೋಗಿ ಬದುಕು ನರಕ!](https://mobiletime.in/2025/10/alcohol-addiction-life-is-hell-for-a-patient-who-has-fallen-onto-the-streets/): ಪೀಡ್ಸ ರೋಗವಿದ್ದರೂ ಸರಾಯಿ ಕುಡಿಯುವ ಚಟ ಬಿಡದ ಮುಂಡಗೋಡು ಮೂಲದ ಮೌಲಲಿ ಚಪ್ಪರಬಂದ್ ಅವರು ಶಿರಸಿಯ ವಾನಳ್ಳಿ ಬಳಿ ರಸ್ತೆ ಬದಿಗೆ ಬಿದ್ದು ಸಾವನಪ್ಪಿದ್ದಾರೆ. ಜಟಕಮಕೊಡ್ಲುವಿನಲ್ಲಿ ಬಿದ್ದ ಅವರನ್ನು ಆಸ್ಪತ್ರೆಗೆ ತಂದರೂ ಪ್ರಯೋಜನವಾಗಲಿಲ್ಲ. ಮುಂಡಗೋಡು ಕಾತೂರು ನಂದಿಪುರದ ಮೌಲಲಿ ಚಪ್ಪರಬಂದ್ (42) ಅವರು ಕೆಲ ವರ್ಷಗಳಿಂದ ಶಿರಸಿಯಲ್ಲಿ ವಾಸವಾಗಿದ್ದರು. ಶಿರಸಿಯ ಬಾರಗದ್ದೆ ಹಾಗೂ ಸುತ್ತಲಿನ ಪ್ರದೇಶದಲ್ಲಿ ಅವರು ಕೂಲಿ ಕೆಲಸ ಮಾಡಿಕೊಂಡಿದ್ದರು. ಅವರಿಗೆ ಪಿಡ್ಸ ರೋಗ ಕಾಣಿಸಿದ್ದು, ಅದಾದ ನಂತರ ಕುಡಿತದ ಚಟ ಇನ್ನಷ್ಟು ಏರಿಕೆಯಾಗಿತ್ತು. ಮದ್ಯಪಾನ ಒಳ್ಳೆಯದಲ್ಲ ಎಂದರೂ ಅವರು ಕೇಳುವ ಸ್ಥಿತಿಯಲ್ಲಿರಲಿಲ್ಲ. ಅಕ್ಟೊಬರ್ 8ರ ಸಂಜೆ ಮೌಲಲಿ ಚಪ್ಪರಬಂದ್ ಅವರು ವಾನಳ್ಳಿಯ ಜಟಕಕೊಡ್ಲುವಿನಲ್ಲಿ ಬಿದ್ದಿದ್ದರು. ಅದನ್ನು ನೋಡಿದ ಅವರ ಪತ್ನಿ ರಮೇಜಾ ಮೌಲಾಲಿ ಅವರು ಮೌಲಲಿ ಚಪ್ಪರಬಂದ್ ಅವರನ್ನು ಆಸ್ಪತ್ರೆಗೆ ಸೇರಿಸುವ ಕೆಲಸ ಮಾಡಿದರು. ಆದರೆ, ಆಸ್ಪತ್ರೆಗೆ ಸೇರಿಸಲು ರಾತ್ರಿ 8 ಗಂಟೆ ಆಗಿದ್ದು, ಅಷ್ಟರೊಳಗೆ ಮೌಲಲಿ ಚಪ್ಪರಬಂದ್ ಅವರು ಸಾವನಪ್ಪಿದ್ದರು. ರಮೇಜಾ ಮೌಲಾಲಿ ಅವರು ಈ ಬಗ್ಗೆ ಶಿರಸಿ ಗ್ರಾಮೀಣ ಪೊಲೀಸ್ ಠಾಣೆಗೆ ಮಾಹಿತಿ ನೀಡಿ, ಪ್ರಕರಣ ದಾಖಲಿಸಿದರು. - [ಅಂಕಿ-ಸoಖ್ಯೆಯೇ ಅಲ್ಲಿನವರ ಬದುಕು: ಅದೃಷ್ಠದ ಆಟಕ್ಕೆ ಅವರೇ ವಾರಸುದಾರರು!](https://mobiletime.in/2025/10/numbers-are-the-lifeblood-of-the-people-there-they-are-the-heirs-to-a-game-of-chance/): ಉತ್ತರ ಕನ್ನಡ ಜಿಲ್ಲೆಯ ಗಲ್ಲಿ ಗಲ್ಲಿಗಳಲ್ಲಿಯೂ ಮಟ್ಕಾ ಆಟ ಜೋರಾಗಿದೆ. ಗೂಡಂಗಡಿಕಾರರು, ಹೊಟೇಲ್ ಕಾರ್ಮಿಕರು, ಚಾಲಕರು ಸೇರಿ ಕೂಲಿ ಕಾರ್ಮಿಕರು ಸಹ ಕಾನೂನುಬಾಹಿರ ಮಟ್ಕಾ ಆಡಿಸಿ ಕಾಸು ಮಾಡಿಕೊಳ್ಳುತ್ತಿದ್ದಾರೆ. ಬಡ ವ್ಯಾಪಾರಿಗಳಿಗೆ ಕಮಿಷನ್ ಆಸೆ ತೋರಿಸಿ ಅವರನ್ನು ದುರುಪಯೋಗಪಡಿಸಿಕೊಳ್ಳುವ ಮಟ್ಕಾ ಬುಕ್ಕಿಗಳ ಸಂಖ್ಯೆಯೂ ಜಿಲ್ಲೆಯಲ್ಲಿ ಕಡಿಮೆ ಇಲ್ಲ. ಪ್ರತಿ ತಾಲೂಕಿನಲ್ಲಿಯೂ 2-3 ಜನ ಮಟ್ಕಾ ಬುಕ್ಕಿಗಳಿದ್ದು, ಅವರ ಅಡಿ ನೂರಾರು ಜನ ಈ ಆಟ ಆಡಿಸುತ್ತಿದ್ದಾರೆ. ಕಾರವಾರದಲ್ಲಿ ಸುಭಾಷ್ ಎಂಬಾತರು ಮಟ್ಕಾ ಆಟದ ರೂವಾರಿಯಾಗಿದ್ದಾರೆ. ಅವರ ವಿಳಾಸ ಈವರೆಗೂ ಸಿಗದ ಕಾರಣ ಪೊಲೀಸರು ಹುಡುಕಾಟದಲ್ಲಿದ್ದಾರೆ. ಅಂಕೋಲಾದ ರವಿ ನಾಯ್ಕ ಅವರು ಕಾರವಾರದ ಮಲ್ಲಾಪುರ ಭಾಗದಲ್ಲಿ ಹಿಡಿತಹೊಂದಿದ್ದು, ಅಲ್ಲಿ ಮಟ್ಕಾ ಬುಕ್ಕಿಯಾಗಿ ಅಂಗಡಿಕಾರರಿಗೆ ಆಮೀಷ ಒಡ್ಡುತ್ತಿದ್ದಾರೆ. ಕುಮಟಾದ ಹೆರವಟ್ಟಾದ ವಿನೋದ ಭಂಡಾರಿ ಮಟ್ಕಾ ಬುಕ್ಕಿಯಾಗಿದ್ದಾರೆ. ಶಿರಸಿ ಗಿಡಮಾವಿನಕಟ್ಟಾದ ವಿಜಯ ನಾರಾಯಣ ದೇವಾಡಿಗ, ರಾಘು ಶೆಟ್ಟಿ, ವಿವೇಕಾನಂದ ನಗರದ ರಾಹುಲ್ ಶಿವಕುಮಾರ ದೇವಗಿ ಮಟ್ಕಾ ಬುಕ್ಕಿಯಾಗಿ ಕಾಸು ಸಂಪಾದಿಸುತ್ತಿದ್ದಾರೆ. ಬನವಾಸಿಯಲ್ಲಿ ವಿಜಯ ನಾರಾಯಣ ದೇವಾಡಿಗ ಅವರ ಜೊತೆ ಶಿರಸಿಯ ಉದಯ ಶೆಟ್ಟಿ ಸಹ ಮಟ್ಕಾ ಸಂಖ್ಯೆ ಸಂಖ್ಯೆ ಮಾರಾಟ ದಂದೆಯಲ್ಲಿದ್ದಾರೆ. ಶಿರಸಿಯಲ್ಲಿ ಮೀನು ಮಾರುಕಟ್ಟೆ ಬಳಿಯ ಪಾವಲು ಅಂದ್ರು ವಾಜ್ ಸಹ ಮಟ್ಕಾ ಬುಕ್ಕಿಯಾಗಿದ್ದು, ಅಂಗಡಿಕಾರರು ಸಂಗ್ರಹಿಸಿದ ಹಣಪಡೆಯುತ್ತಿದ್ದಾರೆ. ದಾಂಡೇಲಿ ಪಟೇಲ್ ನಗರದ ನಿಜಾಮುದ್ದಿನ್ ಮಹಮದ್ ನದಾಫ್ ತಮ್ಮ ಗ್ಯಾರೇಜು ಕೆಲಸದ ಜೊತೆಯಲ್ಲಿಯೇ ಮಟ್ಕಾ ಬುಕ್ಕಿಯಾಗಿಯೂ ಪ್ರಸಿದ್ಧಿಪಡೆದಿದ್ದಾರೆ. ಹಳಿಯಾಳ ಸೆಂಟ್ ಜೋವರ್ ನಿವಾಸಿ ಸಂತಾನ್ ಅಂತೋನ್ ಡಿಸೋಜಾ ಅವರು ಮೀನು ಮಾರುಕಟ್ಟೆ ಬಳಿ ಪಾನ್ ಅಂಗಡಿ ನಡೆಸುತ್ತಿದ್ದು, ಅಲ್ಲಿಂದಲೇ ಇಡೀ ತಾಲೂಕಿನ ಮಟ್ಕಾ ವ್ಯವಹಾರ ನೋಡಿಕೊಳ್ಳುತ್ತಾರೆ. ಹಳಿಯಾಳದ ಭಜಂತ್ರಿ ಗಲ್ಲಿಯ ಮಂಜುನಾಥ ಹನುಮಂತ ಕೋಳಿಪುಚ್ಚ ಅವರು ಸಹ ಕಾನೂನುಬಾಹಿರ ಆಟದ ರೂವಾರಿಯಾಗಿದ್ದಾರೆ. ಭಟ್ಕಳದಲ್ಲಿ ಜಾಲಿ ಬಳಿಯ ತಲಗೇರಿಯ ರೂಪೇಶ ನಾಯ್ಕ ಹಾಗೂ ಹೆಬಳೆ ಗಾಂಧೀನಗರದ ಈಶ್ವರ ನಾರಾಯಣ ನಾಯ್ಕ ಅವರು ಮಟ್ಕಾ ಬುಕ್ಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಭಟ್ಕಳದಲ್ಲಿ ಹೆಬಳೆ ಹಡೀನದ ಶ್ರೀಧರ ದೇವಯ್ಯ ನಾಯ್ಕ ಅವರು ಬುಕ್ಕಿಯಾಗಿ ಓಡಾಡಿಕೊಂಡಿದ್ದಾರೆ. ಜೊತೆಗೆ ಭಟ್ಕಳದಲ್ಲಿ ಬೇಂಗ್ರೆ ಮೂಡಶಿರಾಲಿಯ ನಾಗರಾಜ ಭೈರಪ್ಪ ನಾಯ್ಕ, ಜಗದೀಶ ನಾಯ್ಕ ಎಂಬಾತರು ಮಟ್ಕಾ ಬುಕ್ಕಿಯಾಗಿ ದುಡ್ಡು ಮಾಡುತ್ತಿದ್ದಾರೆ. ಹೊನ್ನಾವರದ ದಿಬ್ಬಣಗಲ್ಲಿನ ಮಣಿಕಂಠ ಶಂಕರ್ ಗೌಡ ಅವರು ಸಹ ಕೂಲಿ ಕೆಲಸದ ಜೊತೆ ಮಟ್ಕಾ ಹಿಂದೆ ಬಿದ್ದಿದ್ದಾರೆ. ಅಮಾಯಕರನ್ನು ಬಳಸಿಕೊಂಡು ಅವರಿಗೆ ಕಮಿಷನ್ ಆಸೆ ಒಡ್ಡಿ ಕಾನೂನುಬಾಹಿರ ಮಟ್ಕಾ ಆಡಿಸುತ್ತಿದ್ದಾರೆ. ಹೊನ್ನಾವರದಲ್ಲಿ ಕಮಟೆಹಿತ್ಲದ ಮಾರುತಿ ಸುಬ್ರಾಯ ಭಂಡಾರಿ ಅವರು ಮಟ್ಕಾ ಬುಕ್ಕಿಯಾಗಿ ವಿವಿಧ ಅಂಗಡಿಕಾರರಿಗೆ ಕಮಿಷನ್ ಆಧಾರದಲ್ಲಿ ಕೆಲಸ ಕೊಟ್ಟಿದ್ದಾರೆ. ಮುಂಡಗೋಡು ಹಳ್ಳೂರಿ ಓಣಿಯ ವಿನಾಯಕ ಶೇಟ್ ಅವರು ಮಟ್ಕಾ ಬುಕ್ಕಿಯಾಗಿದ್ದು, ಯಲ್ಲಾಪುರ ತಾಲೂಕಿನಲ್ಲಿಯೂ ಅವರು ಹಿಡಿತ ಹೊಂದಿದ್ದಾರೆ. ಕಿರವತ್ತಿ ಭಾಗದಲ್ಲಿ ವಿನಾಯಕ ಶೇಟ್ ಅವರ ಅಧೀನದಲ್ಲಿ ಮಟ್ಕಾ ಆಟ ಆಡಿಸುವವರಿದ್ದಾರೆ. ಮುಂಡಗೋಡಿನ ಹೊಟೇಲ್ ಕೆಲಸ ಮಾಡುವ ಮಂಜುನಾಥ ಗಂಗಾಧರ ನೂಲನೂರು ಸಹ ಮಟ್ಕಾ ಬುಕ್ಕಿಯಾಗಿ ಕಾಸು ಮಾಡಿದ್ದಾರೆ. ಅಂಕೋಲಾದಲ್ಲಿ ರಾಜಾ ನಾಯ್ಕ ಹಾಗೂ ಲಕ್ಕಣ್ಣ ಗಾಂವ್ಕರ ಅವರು ಮಟ್ಕಾ ಬುಕ್ಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಹಳಿಯಾಳದಲ್ಲಿ ಪಾನ್ ಅಂಗಡಿ ನಡೆಸುವ ದುರ್ಗಾನಗರದ ಪರಶುರಾಮ ಬೇರು ಬೈಲಪ್ಪಗೋಳ್ ಹಾಗೂ ಸಿದ್ದಾಪುರದಲ್ಲಿ ರಾಜಮಾರ್ಗದ ರಾಜು ಪೈ ಮಟ್ಕಾ ಆಟದ ಒಡೆಯರಾಗಿದ್ದಾರೆ. ಈ ಎಲ್ಲರ ಹೆಸರು ಸರ್ಕಾರಿ ದಾಖಲೆಗಳಲ್ಲಿ ನಮೂದಾಗಿದ್ದು, ಅನೇಕ ಬಾರಿ ಅವರ ವಿರುದ್ಧ ಪ್ರಕರಣಗಳು ದಾಖಲಾಗಿವೆ. ಆದರೆ, ಅವರರೂ ತಮ್ಮ ಹಳೆ ಚಾಳಿ ಬಿಟ್ಟಿಲ್ಲ. ಪೊಲೀಸರು ಸಹ ತಮ್ಮ ದಾಳಿ ನಿಲ್ಲಿಸಿಲ್ಲ. - [ಸೊಪ್ಪಿನ ಬೆಟ್ಟದಲ್ಲಿ ಅಡಗಿದ್ದ ಜವರಾಯ: ಮರದಿಂದ ಬಿದ್ದವ ಮೃತ್ಯು!](https://mobiletime.in/2025/10/javaraaya-who-was-hiding-in-the-green-hill-he-died-after-falling-from-the-tree/): ಅಡಿಕೆ ತೋಟಕ್ಕೆ ಸೊಪ್ಪು ಹೊದೆಸುವುದಕ್ಕಾಗಿ ಕಾಡಿಗೆ ಹೋಗಿದ್ದ ಯಲ್ಲಾಪುರದ ಗಣಪತಿ ಭಟ್ಟ ಅವರು ಅಕಾಲಿಕ ಮರಣಕ್ಕೀಡಾಗಿದ್ದಾರೆ. ಮರ ಹತ್ತಿ ಸೊಪ್ಪು ಕಡಿಯುವಾಗ ಕೆಳಗೆ ಬಿದ್ದ ಅವರು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಯಲ್ಲಾಪುರದ ಮಾಗೋಡು ಕಾಲೋನಿ ಬಳಿಯ ಮೇಲಿನ ತಾರಿಮನೆಯಲ್ಲಿ ಗಣಪತಿ ನಾರಾಯಣ ಭಟ್ಟ ಅವರು ವಾಸವಾಗಿದ್ದರು. ತಮ್ಮ 62ನೇ ವಯಸ್ಸಿನಲ್ಲಿಯೂ ಅವರು ಉತ್ಸಾಹದಿಂದ ಕೃಷಿ ಕೆಲಸ ಮಾಡಿಕೊಂಡಿದ್ದರು. ನಿತ್ಯವೂ ಬೆಟ್ಟ-ಗುಡ್ಡಗಳನ್ನು ಅಲೆದಾಡುವುದು, ತೋಟ ಸುತ್ತುವುದು ಅವರ ಕಾಯಕವಾಗಿತ್ತು. ಅಕ್ಟೊಬರ್ 9ರಂದು ಅವರು ತೋಟಕ್ಕೆ ಸೊಪ್ಪು ಹಾಕಲು ನಿರ್ಧರಿಸಿದ್ದರು. ಆ ದಿನ ಸಂಜೆಯವರೆಗೂ ಕೃಷಿ ಕಾಯಕ ನಡೆಸಿದ ಗಣಪತಿ ಭಟ್ಟರು ಸಂಜೆಯಾದರೂ ಕೆಲಸ ಮಾಡುತ್ತಿದ್ದರು. ಸಂಜೆ 5.30ರ ವೇಳೆಗೆ ಸೊಪ್ಪು ಕಡಿಯುವುದಕ್ಕಾಗಿ ಮರ ಏರಿದ್ದರು. ಕೊಂಚ ಎಡವಿದ ಅವರು ಕಾಡು ಜಾತಿಯ ಮರದಿಂದ ಅವರು ಜಾರಿ ಬಿದ್ದರು. ನೆಲಕ್ಕೆ ಬಿದ್ದು ಗಾಯಗೊಂಡಿದ್ದ ಗಣಪತಿ ಭಟ್ಟ ಅವರನ್ನು ಯಲ್ಲಾಪುರದ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ, ಅದರಿಂದ ಪ್ರಯೋಜನವಾಗಲಿಲ್ಲ. ಸಂಜೆ 6.30ಕ್ಕೆ ವೈದ್ಯರು ಗಣಪತಿ ಭಟ್ಟರ ಸಾವಿನ ಘೋಷಣೆ ಮಾಡಿದರು. ತಂದೆಯ ಸಾವಿನ ಬಗ್ಗೆ ಅವರ ಮಗ ರಾಜೇಶ ಭಟ್ಟ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದು, ಪ್ರಕರಣ ದಾಖಲಿಸಿದರು. `ಕೃಷಿ ಕೆಲಸ ಮಾಡುವಾಗ ಜಾಗೃತರಾಗಿರಿ’ - [ಹಳೆಯ ಅತಿಕ್ರಮಣದಾರರಿಗೆ ಇಲ್ಲ ಹೊಸ ಆತಂಕ!](https://mobiletime.in/2025/10/no-new-worries-for-old-invaders/): `2005ಕ್ಕೂ ಮೊದಲು ಅರಣ್ಯ ಭೂಮಿ ಅತಿಕ್ರಮಿಸಿ ಬದುಕು ಕಟ್ಟಿಕೊಂಡವರಿಗೆ ಯಾವುದೇ ತೊಂದರೆ ಮಾಡುವುದಿಲ್ಲ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದ್ದಾರೆ. `ಅರಣ್ಯ ಹಕ್ಕು ಕಾಯ್ದೆಯ ಪರಿಣಾಮಕಾರಿ ಅನುಷ್ಠಾನಕ್ಕೆ ಜಿಲ್ಲಾಡಳಿತಕ್ಕೆ ಸೂಚನೆ ನೀಡಲಾಗುತ್ತದೆ. ಅರ್ಹರು ಭೂಮಿ ಹಕ್ಕಿನಿಂದ ವಂಚಿತರಾಗದoತೆ ಎಚ್ಚರಿಕೆವಹಿಸಲಾಗುತ್ತದೆ’ ಎಂದು ಉತ್ತರ ಕನ್ನಡ ಜಿಲ್ಲಾ ಅರಣ್ಯ ಭೂಮಿ ಸಾಗುವಳಿದಾರರ ಹೋರಾಟ ಸಮಿತಿಯ ಅಧ್ಯಕ್ಷ ಚಂದ್ರಕಾoತ ಕೊಚರೇಕರ ಅವರಿಗೆ ಮುಖ್ಯಮಂತ್ರಿಗಳು ಭರವಸೆ ನೀಡಿದ್ದಾರೆ. ಚಂದ್ರಕಾ0ತ ಕೊಚರೇಕರ ಅವರು ಪ್ರಮುಖರಾದ ಜಿ ಎಂ ಶೆಟ್ಟಿ, ಪಿ ಟಿ ನಾಯ್ಕ, ಗಣೇಶ ನಾಯ್ಕ ಅವರ ಜೊತೆ ಬೆಂಗಳೂರಿಗೆ ಹೋಗಿದ್ದರು. ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ವೈದ್ಯರ ಜೊತೆ ಮುಖ್ಯಮಂತ್ರಿಗಳನ್ನು ಅವರು ಭೇಟಿ ಮಾಡಿದರು. ಅರಣ್ಯ ಹಕ್ಕು ಅರ್ಜಿಗಳನ್ನು ಸಾರಾ ಸಗಟು ತಿರಸ್ಕರಿಸಿದ ಪರಿಣಾಮ ಎದುರಾದ ಸಮಸ್ಯೆಗಳ ಬಗ್ಗೆ ಸಿದ್ದರಾಮಯ್ಯ ಅವರಿಗೆ ಮನವರಿಕೆ ಮಾಡಿದರು. ಅರಣ್ಯ ಭೂಮಿಯಲ್ಲಿನ ಬಗರ ಹುಕುಂ ಸಾಗುವಳಿಗೆ ಸಂಬoಧಿಸಿ 1980ರ ಅರಣ್ಯ ಸಂರಕ್ಷಣಾ ಕಾಯ್ದೆಯಡಿ ಮರುಸಮೀಕ್ಷೆ ನಡೆಸುವದು ಸೇರಿ ಅರಣ್ಯ ಹಕ್ಕುಕಾಯ್ದೆಯ ಪರಿಣಾಮಕಾರಿ ಅನುಷ್ಠಾನಗೊಳಿಸಿ ಜನರಿಗೆ ಭೂಮಿಯ ಹಕ್ಕು ಕೊಡಿಸಬೇಕು ಎಂದು ಒತ್ತಾಯಿಸಿದರು. ಅರಣ್ಯ ಹಕ್ಕು ಕಾಯ್ದೆಯ ಪರಿಣಾಮಕಾರಿ ಅನುಷ್ಠಾನಕ್ಕೆ ಅಗತ್ಯ ಸಲಹೆಗಳನ್ನು ನೀಡಿದರು. ಈ ವೇಳೆ `ಸರಕಾರ ಅರಣ್ಯ ಭೂಮಿ ಸಾಗುವಳಿದಾರರ ಹಿತರಕ್ಷಣೆ ಮಾಡಲು ಬದ್ಧವಾಗಿದೆ. ವಸತಿ ಮತ್ತು ಜೀವನೋಪಾಯಕ್ಕೆ ಅರಣ್ಯ ಭೂಮಿಯನ್ನು ಅವಲಂಬಿಸಿರುವ ಬಡ ಜನರು ಆತಂಕಪಡುವ ಅಗತ್ಯವಿಲ್ಲ’ ಎಂದು ಮುಖ್ಯಮಂತ್ರಿಗಳು ತಿಳಿಸಿದರು. ಅರಣ್ಯ ಭೂಮಿಯಲ್ಲಿನ ಒತ್ತುವರಿಯ ನೈಜ ಸ್ಥಿತಿಯ ಕುರಿತು ಅರಣ್ಯ ಮತ್ತು ಕಂದಾಯ ಇಲಾಖೆಯ ಅಧಿಕಾರಿಗಳಿಂದ ಜಂಟಿ ಸ್ಥಳ ತನಿಖೆ ನಡೆಸಿ ಉಪವಿಭಾಗೀಯ ಸಮಿತಿಗೆ ವರದಿ ಸಲ್ಲಿಸುವಂತೆ ಸಿದ್ದರಾಮಯ್ಯ ಅವರು ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಸೂಚಿಸಿದರು. ಅದಾದ ನಂತರ ಈ ನಿಯೋಗದವರು ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ನಿರ್ದೇಶಕ ಟಿ ಯೋಗೇಶ ಅವರನ್ನು ಸಹ ಭೇಟಿ ಮಾಡಿದ್ದು, ಸುಪ್ರೀಂ ಕೋರ್ಟಿಗೆ ಅರಣ್ಯವಾಸಿಗಳ ಪರ ಸರ್ಕಾರದಿಂದ ಅಗತ್ಯ ದ್ರಡೀಕರಣ ಸಲ್ಲಿಸುವಂತೆ ಮನವಿ ಮಾಡಿತು. - [ಊಟ ವಸತಿ ಉಚಿತ-ಕೌಶಲ್ಯವೃದ್ಧಿ ಖಚಿತ: ದುಡ್ಡು ಕೊಡ್ತಾರೆ.. ಕೆಲಸವನ್ನು ಕಲಿಸುತ್ತಾರೆ!](https://mobiletime.in/2025/10/they-give-money-they-teach-you-the-job/): ಉತ್ತರ ಕನ್ನಡ ಜಿಲ್ಲೆಯ ಪ್ರವಾಸೋದ್ಯಮ ಬೆಳವಣಿಗೆಗೆ ಶ್ರಮಿಸುತ್ತಿರುವ ಯಲ್ಲಾಪುರದ ಯುಕೆ ನೇಚರ್ ಸ್ಟೇ ಪ್ರವಾಸೋದ್ಯಮದ ಮೂಲಕವೇ ಉದ್ಯೋಗ ಸೃಷ್ಠಿಗೆ ಮುಂದಾಗಿದೆ. ದುಡಿಯುವ ಕೈಗಳಿಗೆ ಕಾಸು ಕೊಟ್ಟು ತರಬೇತಿಯನ್ನು ನೀಡುವ ಯೋಜನೆಯೊಂದನ್ನು ಯುಕೆ ನೇಚರ್ ಸ್ಟೇ ಪರಿಚಯಿಸಿದೆ. ನಿಸರ್ಗದೊಳಗೇ ಬದುಕಿ, ಹೊಸದನ್ನು ಕಲಿಯುವ ಒಂದು ಜೀವನ ಶೈಲಿ ರೂಡಿಸಿಕೊಳ್ಳುವವರಿಗೆ ಈ ರೆಸಾರ್ಟ ಕರೆಯುತ್ತಿದೆ! ಸುತ್ತಲು ನೈಸರ್ಗಿಕ ಕಾಡು-ಮೇಡು, ತಣ್ಣಗೆ ಹರಿಯುವ ಹೊಳೆ, ನಸುಕಿನ ಮಂಜಿನಲ್ಲಿ ಎಚ್ಚರವಾದಾಗ ಇಂಪಾಗಿ ಕೇಳುವ ಹಕ್ಕಿಗಳ ಕೂಗು. ಆ ರೆಸಾರ್ಟಿನಲ್ಲಿ ಚಿಲಿಪಿಲಿ ನಾದದ ಜೊತೆ ಆರಂಭವಾಗುವ ದಿನ. ಇದೆಲ್ಲವನ್ನು ಆಹ್ವಾದಿಸಿ ಒಂದು ವರ್ಷ ಕಳೆಯುವುದೇ ಒಂದು ಸೊಬಗು. ಅದರಲ್ಲಿಯೂ ಗ್ರಾಮೀಣ ಭಾಗದ ನಿರುದ್ಯೋಗಿಗಳನ್ನು ಗುರಿಯಾಗಿರಿಸಿಕೊಂಡು ಯುಕೆ ನೇಚರ್ ಸ್ಟೇ ರೂಪಿಸಿದ `ನೇಚರ್ ಸ್ಟೇ ಮ್ಯಾನೇಜ್ಮೆಂಟ್ ತರಬೇತಿ’ ಮುಗಿಸಿದರೆ ಹೊಸ ಜೀವನ ಶೈಲಿ ಜೊತೆ ಭವಿಷ್ಯ ನಿರ್ಮಾಣದ ಮಾರ್ಗ ಸಿಗುವುದು ಖಚಿತ. ಆಟವಾಡುತ್ತಲೇ ಪಾಠ ಕಲಿಯಿರಿ! ಯುಕೆ ನೇಚರ್ ಸ್ಟೇ’ಯಲ್ಲಿ ಗುರುಕುಲ ಪದ್ಧತಿಯ ಆಧಾರದಲ್ಲಿ ಅತಿಥಿ ಸತ್ಕಾರ ಮಾಡುವ ವಿಧಾನಗಳ ಬಗ್ಗೆ ಇಲ್ಲಿ ಅಭ್ಯರ್ಥಿಗಳಿಗೆ ಒಂದು ವರ್ಷದ ತರಬೇತಿ ನೀಡಲಾಗುತ್ತದೆ. ತರಬೇತಿ ಅವಧಿಯಲ್ಲಿ ಪ್ರತಿಯೊಬ್ಬರಿಗೂ ಉಚಿತ ಊಟ, ವಸತಿ, ವೈಫೈ ಹಾಗೂ ಬಟ್ಟೆಗಳ ಜೊತೆ ಮಾಸಿಕ 3 ಸಾವಿರ ರೂ ಗೌರವಧನ ನೀಡಲಾಗುತ್ತದೆ. ವರ್ಷದ ಕಲಿಕೆ ನಂತರ ವಿವಿಧ ಹೊಟೇಲ್, ರೆಸಾರ್ಟ, ಹೋಂ ಸ್ಟೇಗಳಲ್ಲಿ ಉದ್ಯೋಗ ಅವಕಾಶ ಒದಗಿಸಲಾಗುತ್ತದೆ. ಪ್ರವಾಸೋದ್ಯಮ ವಿಷಯವಾಗಿ ಸ್ವಂತ ಉದ್ಯೋಗ ಬಯಸುವವರಿಗೂ ಯುಕೆ ನೇಚರ್ ಸ್ಟೇ ಬೆಂಬಲ ನೀಡುತ್ತದೆ. ಹೋಂ ಸ್ಟೇ, ರೆಸಾರ್ಟ ನಿರ್ಮಾಣದ ಕನಸು ಹೊಂದಿದವರಿಗೆ ಪ್ರಾಯೋಗಿಕ ತರಬೇತಿಗಳ ಮೂಲಕ ಅವರ ಕೌಶಲ್ಯ ವೃದ್ಧಿಸುವ ಕಾರ್ಯ ನವೆಂಬರ್ 1ರಿಂದ ಶುರುವಾಗುತ್ತಿದೆ. ಶಾಲೆಯ ತರಗತಿಗಳಲ್ಲಿ ಅಥವಾ ಪುಸ್ತಕದ ಪುಟಗಳಲ್ಲಿ ಕಲಿಯುವ ವಿಷಯಗಳು ಹೆಚ್ಚಿನ ಸಂದರ್ಭಗಳಲ್ಲಿ ಬದುಕಿನ ನೈಜ ಅನುಭವ ನೀಡಲು ಸೋತುಬಿಡುತ್ತವೆ. ಒಬ್ಬ ವಿದ್ಯಾರ್ಥಿ ಹೋಟೆಲ್ ಮ್ಯಾನೇಜ್ಮೆಂಟ್ ಪುಸ್ತಕ ಓದಿದರೂ, ಅವರಿಗೆ ಆ ಅನುಭವ ಕೇವಲ ಪುಸ್ತಕದಿಂದಷ್ಟೇ ಸಿಕ್ಕುವುದಿಲ್ಲ. ಇದನ್ನು ಅರಿತ ಯುಕೆ ನೇಚರ್ ಸ್ಟೇಯ ನಿರಂಜನ ಭಟ್ಟ ಹಾಗೂ ಸೌಮ್ಯಾ ಭಟ್ಟ ದಂಪತಿ ಪ್ರಕೃತಿಯ ನಡುವೆ ಪ್ರಾಯೋಗಿಕ ಪಾಠ ಮಾಡುವ ವಿಧಾನಕ್ಕೆ ಮುಂದಾಗಿದ್ದಾರೆ. ಕಾಡಿನ ಜ್ಞಾನ ಬಿತ್ತರಿಸುವ ನುರಿತ ತಜ್ಞರು ಇಲ್ಲಿ ಮಾತಿಗೆ ಸಿಗುತ್ತಾರೆ. ಔಷಧಗಳ ಸತ್ವವಿರುವ ಗಿಡ ಮೂಲಿಕೆಗಳ ಪರಿಚಯ, ಪ್ರಾಣಿ-ಪಕ್ಷಿಗಳ ಬದುಕಿನ ಆಳ ಅಧ್ಯಯನ ಸೇರಿ ಅನೇಕ ವಿಷಯಗಳ ಬಗ್ಗೆ ಇಲ್ಲಿ ಅರಿವು ಮೂಡಿಸಲಾಗುತ್ತದೆ. ಪೃಕೃತಿ ಜೊತೆ ಬೆರೆತು ಪರಿಸರ ಆಹ್ವಾದಿಸಿ! ಯುಕೆ ನೇಚರ್ ಸ್ಟೇ `ಅತಿಥಿ ದೇವೋ ಭವ’ ಎಂಬ ಭಾರತೀಯ ಪರಂಪರೆಯ ಮೌಲ್ಯವನ್ನು ಆಧುನಿಕ ರೀತಿಯಲ್ಲಿ ಜೀವಂತಗೊಳಿಸಿದೆ. ಇಲ್ಲಿನ ೯ ಎಕರೆ ಪ್ರದೇಶದಲ್ಲಿ 5 ಸಾವಿರಕ್ಕೂ ಹೆಚ್ಚು ಸಸ್ಯಗಳು, ಅರಣ್ಯ, ಔಷಧಿ, ಹಣ್ಣು ಮತ್ತು ಹೂವಿನ ಗಿಡಗಳಿವೆ. ಅರಣ್ಯದ ವಾತಾವರಣದ ಜೊತೆ ಮಾನವನ ವಾಸ ಹಾಗೂ ವಿಶ್ರಾಂತಿಗೆ ಯೋಗ್ಯ ಪರಿಸರ ಇಲ್ಲಿದೆ. ಇಂತಹ ನೆಮ್ಮದಿ ಎಲ್ಲರಿಗೂ ಸಿಗಬೇಕು ಎಂಬ ನಿಟ್ಟಿನಲ್ಲಿ ನಿರಂಜನ್ ಮತ್ತು ಸೌಮ್ಯ ಅವರು ಶ್ರಮಿಸುತ್ತಿದ್ದಾರೆ. ಸದ್ಯ ಆಯೋಜಿಸಿರುವ ಒಂದು ವರ್ಷದ ಕೋರ್ಸಿನಲ್ಲಿ ಗುಡ್ಡ-ಬೆಟ್ಟಗಳ ತಿರುಗಾಟ ನಡೆಸಿ ಅರಣ್ಯ ಜ್ಞಾನ ವೃದ್ಧಿಸುವ ಗುರುಗಳು ಜೊತೆಗಿರುತ್ತಾರೆ. ಅತಿಥಿಯನ್ನು ಹಸನ್ಮುಖಿಯಾಗಿ ಸ್ವಾಗತಿಸುವದರಿಂದಹಿಡಿದು ಅವರ ಆಗುಹೋಗುಗಳಿಗೆ ಸ್ಪಂದಿಸುವ ಪ್ರತಿಯೊಂದನ್ನು ಇಲ್ಲಿ ಕಲಿಸುತ್ತಾರೆ. ಗ್ರಾಹಕರೊಂದಿಗೆ ಹೇಗೆ ಸಂಯಮದಿoದ ರ‍್ತಿಸಬೇಕೆಂಬ ಸಾಮಾನ್ಯಪ್ರಜ್ಞೆ ಜೊತೆ ಅವರ ಮನಗೆಲ್ಲುವ ವಿಧಾನವನ್ನು ತಿಳಿಸುತ್ತಾರೆ. ಕರ‍್ಸ ಮುಗಿಸಿದ ನಂತರ ಅಗತ್ಯವಿದ್ದವರಿಗೆ ಉದ್ಯೋಗ.. ಸ್ವ ಉದ್ಯೋಗ ಮಾಡುವವರಿಗೆ ಬೆಂಬಲ ಕೊಡುತ್ತಾರೆ. ಇಲ್ಲಿ ನೀವೇನು ಕಲಿಯುತ್ತೀರಿ? * ನಿಸರ್ಗ ಗುರುಕುಲ ಜೀವನ: ಯೋಗ, ಧ್ಯಾನ, ತೋಟಗಾರಿಕೆ, ಶಾಶ್ವತ ಜೀವನ ಪಾಠಗಳು. * ಹಾಸ್ಪಿಟಾಲಿಟಿ ನಿರ್ವಹಣೆ: ಫ್ರಂಟ್ ಆಫೀಸ್, ಅಡುಗೆ, ಹೌಸ್ಕೀಪಿಂಗ್, ಅತಿಥಿ ಸಂವಹನ. * ಇಕೋ ಟೂರಿಸಂ: ಟ್ರೆಕ್, ಕ್ಯಾಂಪಿAಗ್, ಸಾಹಸ ನಿರ್ವಹಣೆ. * ಮಾರ್ಕೆಟಿಂಗ್: ಸೋಷಿಯಲ್ ಮೀಡಿಯಾ, ಬ್ರೋಶರ್, ಶಾರ್ಟ್ ವಿಡಿಯೋ ಸಿದ್ಧತೆ. * ಮ್ಯಾನೇಜ್ಮೆಂಟ್: ಸ್ವಂತ ಹೋಮ್ಸ್ಟೇ ಸ್ಥಾಪನೆ, ಬಜೆಟಿಂಗ್, ಮಾನವ ಸಂಪನ್ಮೂಲ ಮತ್ತು ವೆಂಡರ್ ನಿರ್ವಹಣೆ * ಇಂಟರ್ನ್ಶಿಪ್: ನೈಜ ಅತಿಥಿ ಅನುಭವದ ಆಧಾರದ ಮೇಲೆ ಪ್ರಾಜೆಕ್ಟ್. * ಪ್ರಮಾಣಪತ್ರ ಹಾಗೂ ಉದ್ಯೋಗ ಮಾರ್ಗದರ್ಶನ. ತರಬೇತಿ ನಂತರದ ಫಲಿತಾಂಶ * ಹಾಸ್ಪಿಟಾಲಿಟಿ ಕ್ಷೇತ್ರದಲ್ಲಿ ತಕ್ಷಣ ಉದ್ಯೋಗ. *ಸ್ವಂತ ಹೋಮ್ಸ್ಟೇ ಅಥವಾ ರೆಸಾರ್ಟ್ ಆರಂಭಿಸಲು ಮಾರ್ಗದರ್ಶನ. * ಯುಕೆ ನೇಚರ್ ಸ್ಟೇ ಪ್ರಮಾಣಪತ್ರ ಹಾಗೂ ಪ್ಲೇಸ್ಮೆಂಟ್ ನೆರವು. * ನೈಜ ಅನುಭವದ ಮೂಲಕ ನಿರ್ವಹಣಾ ಕೌಶಲ್ಯ. ಇಲ್ಲಿ ನಿಮಗೇನು ಸಿಗುತ್ತದೆ? *ನೈಸರ್ಗಿಕ ವಾತಾವರಣದ ವಸತಿ. *ಸಸ್ಯಾಹಾರ ಮತ್ತು ಹೈಜೀನಿಕ್ ಆಹಾರ. *ವೈ-ಫೈ, ಯೂನಿಫಾರ್ಮ್ ಹಾಗೂ ಬಟ್ಟೆ. ಮಾಸಿಕ 3 ಸಾವಿರ ರೂ ಆರ್ಥಿಕ ನೆರವು. *ಸಾಂಸ್ಕೃತಿಕ ಮತ್ತು ವ್ಯಕ್ತಿತ್ವ ವಿಕಸನ ಚಟುವಟಿಕೆಗಳು *ಸಂವಹನ ಕೌಶಲ್ಯ, ಅರ್ಜಿ ಮಾಹಿತಿ, ಅತಿಥಿ ಸತ್ಕಾರದ ಸಂಪೂರ್ಣ ತರಬೇತಿ*ಉದ್ಯೋಗ ಅಥವಾ ಪ್ರವಾಸೋದ್ಯಮದಲ್ಲಿನ ಸ್ವ ಉದ್ಯೋಗಕ್ಕೆ ಬೆಂಬಲ ಎಲ್ಲಿ ಬರುವುದು? ಯಾರನ್ನು ಸಂಪರ್ಕಿಸುವುದು? ಈ ತರಬೇತಿ ಯಲ್ಲಾಪುರದ ಸುಂಗನಮಕ್ಕಿಯ ಯುಕೆ ನೇಚರ್ ಸ್ಟೇ ರೆಸಾರ್ಟಿನಲ್ಲಿ ನಡೆಯಲಿದೆ. ಸದ್ಯ 25 ಅಭ್ಯರ್ಥಿಗಳಿಗೆ ಮಾತ್ರ ತರಬೇತಿ ಕೊಡಲಾಗುತ್ತದೆ. ಅಕ್ಟೊಬರ್ 31ರ ಒಳಗೆ 9449567673ಗೆ ವಾಟ್ಸಪ್ ಮೂಲಕ ಸಂಪರ್ಕಿಸಿದರೆ ಇನ್ನಷ್ಟು ವಿವರ ಸಿಗಲಿದೆ. #Sponsored   - [2025 ಅಕ್ಟೊಬರ್ 26ರ ದಿನ ಭವಿಷ್ಯ](https://mobiletime.in/2025/10/prediction-for-october-26-2025/): ಮೇಷ ರಾಶಿ: ನಿಮ್ಮ ಆತ್ಮವಿಶ್ವಾಸ ಹೆಚ್ಚಾಗಿಗಲಿದ್ದು, ಹೊಸ ಅವಕಾಶಗಳು ಅರೆಸಿಬರಲಿದೆ. ಎಲ್ಲ ಕಾರ್ಯಗಳಲ್ಲೂ ಶಾಂತ ಮನಸ್ಸಿನಿಂದ ಮುಂಚೂಣಿಯನ್ನು ಸಾಧಿಸುವಿರಿ. ಹಣಕಾಸು ವಿಷಯದಲ್ಲಿ ಎಚ್ಚರಿಕೆವಹಿಸಿ. ವೃಷಭ ರಾಶಿ: ನಿಮ್ಮ ಶ್ರಮದ ಫಲ ಈ ದಿನ ಸಿಗಲಿದೆ. ಕೆಲಸಗಳಲ್ಲಿನ ಶ್ರದ್ಧೆ ನಿಮ್ಮ ಬೆಳವಣಿಗೆಗೆ ಸಹಕಾರಿಯಾಗಲಿದೆ. ಹಳೆ ವ್ಯವಹಾರಗಳನ್ನು ನವೀಕರಿಸುವ ಅವಕಾಶ ಸಿಗಲಿದೆ. ಮಾನಸಿಕ ಶಾಂತಿ ದೊರೆಯುತ್ತದೆ. ಮಿಥುನ ರಾಶಿ: ಹೊಸ ಕಲಿಕೆ ಮತ್ತು ಸಂಚಾರಕ್ಕೆ ಸೂಕ್ತ ದಿನ. ಸಂಬoಧಗಳಲ್ಲಿ ಸ್ಪಷ್ಟತೆ ಸಿಗಲಿದೆ. ನಿಮ್ಮ ಮಾತು ತುಂಬಾ ಭಾವಪೂರ್ಣವಾಗಲಿದೆ. ದುಡುಕಿನ ನಿರ್ಧಾರಗಳು ಬೇಡ. ಕರ್ಕ ರಾಶಿ: ಕುಟುಂಬದಲ್ಲಿ ಸಂವಾದ ಹಾಗೂ ಸಹಕಾರ ಹೆಚ್ಚಲಿದೆ. ಕೆಲಸದ ಜಾಗದಲ್ಲಿ ಪ್ರಗತಿ ಸಾಧ್ಯವಿದೆ. ಅನೇಕ ಯೋಜನೆಗಳ ನಿರ್ವಹಣೆ ಯಶಸ್ವಿಯಾಗಲಿದೆ. ಸಿಂಹ ರಾಶಿ: ಸೃಜನಾತ್ಮಕ ಕೆಲಗಳಿಂದ ನಿಮ್ಮ ಶಕ್ತಿ ಹೆಚ್ಚಲಿದೆ. ಹಣಕಾಸಿನದಲ್ಲಿ ಲಾಭ ಆಗಲಿದೆ. ಹೋರಾಟದಲ್ಲಿಯೂ ಯಶಸ್ಸು ಸಿಗಲಿದೆ. ಕನ್ಯಾ ರಾಶಿ: ಕಾರ್ಮಿಕರ ಹಾಗೂ ವ್ಯವಹಾರದ ಕ್ಷೇತ್ರದಲ್ಲಿ ಲಾಭ ಸಿಗಲಿದೆ. ಶ್ರದ್ಧೆಯೊಂದಿಗೆ ಮಾಡಿದ ಕೆಲಸದಲ್ಲಿ ಜಯ ಖಚಿತ. ಪ್ರೀತಿ- ಪ್ರೇಮ ವಿಷಯಗಳು ಸರಾಗವಾಗಲಿದೆ. ತುಲಾ ರಾಶಿ: ನಿಮ್ಮೊಳಗಿನ ಧೈರ್ಯ ಮತ್ತು ಆತ್ಮವಿಶ್ವಾಸ ಹೆಚ್ಚಳವಾಗಲಿದೆ. ಉದ್ಯೋಗ ಹಾಗೂ ವ್ಯವಹಾರದಲ್ಲಿ ಅವಕಾಶ ಸಿಗಲಿದೆ. ಪ್ರಯಾಣದ ಸಾಧ್ಯತೆಗಳಿವೆ. ವೃಶ್ಚಿಕ ರಾಶಿ: ಜೀವನದಲ್ಲಿ ಬದಲಾವಣೆಗಳನ್ನು ಸ್ವೀಕರಿಸಿ. ಉದ್ದೇಶಗಳು ದಢವಾಗಿರಲಿ. ಜೀವನದ ಹೊಸ ದಿಕ್ಕು ಕಾಣಲಿದೆ. ಧನು ರಾಶಿ: ಉತ್ಸಾಹದಿಂದ ಮಾಡದ ಕೆಲಸಗಳಲ್ಲಿ ಯಶಸ್ಸು ಸಾಧ್ಯವಿದೆ. ಹಣಕಾಸಿನಲ್ಲಿ ಲಾಭ ಆಗಲಿದೆ. ಬೌಧ್ಧಿಕ ಚಟುವಟಿಕೆಗಳಿಗೆ ಸಮಯ ಮೀಸಲಿಡುವುದು ಅನಿವಾರ್ಯ. ಮಕರ ರಾಶಿ: ಕಾರ್ಯಕ್ಷೇತ್ರದಲ್ಲಿ ಶ್ರೇಷ್ಠ ಗಳಿಕೆ ಸಾಧ್ಯವಿದೆ. ಹಣಕಾಸು ಯೋಜನೆಗಳಲ್ಲಿ ಯಶಸ್ಸು ಸಿಗಲಿದೆ. ಧೈರ್ಯದಿಂದ ಕೆಲಸ ಮಾಡುವುದು ಮುಖ್ಯ. ಕುಂಭ ರಾಶಿ: ಹೊಸ ಆದಾಯದ ಮೂಲ ಕಾಣಲಿದೆ. ವ್ಯಾಪಾರದಲ್ಲಿ ಸುಧಾರಣೆ ಸಾಧ್ಯವಿದೆ. ಸಾಮಾಜಿಕ ಬಲ ಮತ್ತು ಸಹಕಾರದ ಜೊತೆ ಆತ್ಮವಿಶ್ವಾಸ ಹೆಚ್ಚಳವಾಗಲಿದೆ. ಮೀನ ರಾಶಿ: ಸಂವಹನ ಕೌಶಲ್ಯದಿಂದ ನಿಮ್ಮ ಸೃಜನಶೀಲ ಚಟುವಟಿಕೆ ಹೆಚ್ಚಲಿದೆ. ಕಾರ್ಯಕ್ಷೇತ್ರಗಳಲ್ಲಿ ಉತ್ತಮ ದಾರಿ ಸಿಗಲಿದೆ. ಆರೋಗ್ಯ ಉತ್ತಮವಾಗಿರಲಿದೆ. - [ಕಬ್ಬು ಬೆಳೆಗಾರರ ಆಕ್ರೋಶ: ಕಾರ್ಖಾನೆಯವರ ಹಗ್ಗ ಜಗ್ಗಾಟ!](https://mobiletime.in/2025/10/sugarcane-growers-outrage-factory-workers-tug-of-war/): ಕಬ್ಬು ಬೆಳೆಗಾರರು ವಿವಿಧ ಸಮಸ್ಯೆಗಳ ಬಗೆಹರಿಸುವಂತೆ ಆಗ್ರಹಿಸಿ ಮೂರು ದಿನಗಳಿಂದ ಹಳಿಯಾಳದಲ್ಲಿ ಪ್ರತಿಭಟಿಸುತ್ತಿದ್ದರೂ, ಕಾರ್ಖಾನೆಯವರು ಪ್ರತಿಭಟನಾಕಾರರ ಬೇಡಿಕೆಗೆ ಸ್ಪಂದಿಸಿಲ್ಲ. ಹೀಗಾಗಿ ಮೂರನೇ ದಿನದ ರಾತ್ರಿಯೂ ಪ್ರತಿಭಟನೆ ಮುಂದುವರೆದಿದೆ. `ಮಾತುಕತೆ ಅಂತಿಮವಾಗದೇ ಇರುವುದರಿಂದ ರೈತರ ನಡುವೆ ಯಾವುದೇ ದ್ವಿ ಪಕ್ಷೀಯ ಒಪ್ಪಂದವಾಗಿಲ್ಲ. ಸಮಸ್ಯೆ ಬಗೆಹರಿಯದ ಹೊರತು ಕಬ್ಬು ಕಟಾವು ಮಾಡಲು ಯಾವುದೇ ಒತ್ತಡ ಹಾಕುವಂತಿಲ್ಲ ಎಂದು ಪ್ರತಿಭಟನಾಕಾರರು ಆಗ್ರಹಿಸಿದರೂ ಸ್ಥಳ ಭೇಟಿ ಮಾಡುವ ಕಾರ್ಖಾನೆ ಪ್ರತಿನಿಧಿಗಳು ರೈತರನ್ನು ಪುಸಲಾಯಿಸುತ್ತಿದ್ದಾರೆ. ತಪ್ಪು ಮಾಹಿತಿ ನೀಡಿ ಕಬ್ಬು ಕಟಾವು ಮಾಡಿಸಿದಲ್ಲದೇ ರೈತರ ಮದ್ಯೆ ಒಡಕು ಮೂಡಿಸುವ ಪ್ರಯತ್ನ ಮಾಡಿದ್ದಾರೆ’ ಎಂದು ಪ್ರತಿಭಟನಾಕಾರರು ದೂರಿದರು. ಕಬ್ಬು ಬೆಳೆಗಾರರ ಹಿತಸಂರಕ್ಷಣ ಸಮಿತಿಯ ಅಧ್ಯಕ್ಷ ನಾಗೇಂದ್ರ ಜಿವೋಜಿ, ಕಬ್ಬು ಬೆಳೆಗಾರರ ಸಂಘದ ಜಿಲ್ಲಾಧ್ಯಕ್ಷ ಸಂದೀಪಕುಮಾರ ಬೊಬಾಟಿ, ತಾಲೂಕಾಧ್ಯಕ್ಷ ಶಂಕರ ಕಾಜಗಾರ, ಕಾರ್ಯದರ್ಶಿ ಅಶೋಕ ಮೇಟಿ, ಹಿರಿಯ ರೈತ ಮುಖಂಡ ಪ್ರಕಾಶ ಪಾಕರಿ, ಸಾತೋರಿ ಗೋಡಿಮನಿ, ರಾಮದಾಸ ಬೆಳಗಾಂವಕರ, ಬಳಿರಾಮ ಮೋರೆ ಇತರರು ಈ ಬಗ್ಗೆ ಪೊಲೀಸರಿಗೆ ದೂರು ನೀಡಿದರು. ರೈತರ ಧರಣಿ ಅಹೋರಾತ್ರಿ ಮುಂದುವರೆಯುವ ಬಗ್ಗೆ ಘೋಷಿಸಿದರು. - [ಆತ್ಮಹತ್ಯೆ ಬೆದರಿಕೆ ಒಡ್ಡಿದವನ ಅನುಮಾನಾಸ್ಪದ ಸಾವು!](https://mobiletime.in/2025/10/suspicious-death-of-a-man-who-threatened-suicide/): ಕಳೆದ ವರ್ಷ ಹಿರಿಯ ಅಧಿಕಾರಿಗಳ ಕಿರುಕುಳ ಹಿನ್ನಲೆ ಆತ್ಮಹತ್ಯೆ ಬೆದರಿಕೆ ಒಡ್ಡಿದ್ದ ಶಿರಸಿ ಅಬಕಾರಿ ಇಲಾಖೆಯ ವಾಹನ ಚಾಲಕ ದುರ್ಗಪ್ಪ ಗಾಯಕವಾಡ ಅವರು ಅನುಮಾನಾಸ್ಪದ ರೀತಿ ಸಾವನಪ್ಪಿದ್ದಾರೆ. ಅವರ ಸಾವಿನ ತನಿಖೆಗಾಗಿ ಕುಟುಂಬದವರು ದೂರು ನೀಡಿದ್ದಾರೆ. ಶಿರಸಿಯ ಅಬಕಾರಿ ಇಲಾಖೆಯಲ್ಲಿ ದುರ್ಗಪ್ಪ ಗಾಯಕವಾಡ ಅವರು ವಾಹನ ಚಾಲಕರಾಗಿ ಕೆಲಸ ಮಾಡಿಕೊಂಡಿದ್ದರು. ಮರಾಠಿಕೊಪ್ಪದಲ್ಲಿ ವಾಸವಾಗಿರುವ ಅವರು ಮದ್ಯ ಸೇವಿಸಿ ಕಚೇರಿಗೆ ಬರುತ್ತಿದ್ದ ಕಾರಣ ಮೇಲಧಿಕಾರಿಗಳು ಅವರಿಗೆ ಬುದ್ದಿ ಹೇಳಿದ್ದರು. ಆ ಅವಧಿಯಲ್ಲಿ ಅಬಕಾರಿ ಉಪಅಧೀಕ್ಷಕ ಶಿವಪ್ಪ ಎಚ್ ಎಸ್ ಅವರು ದುರ್ಗಪ್ಪ ಗಾಯಕವಾಡರ ವರ್ತನೆಯ ಬಗ್ಗೆ ಮೇಲಧಿಕಾರಿಗಳಿಗೆ ಸಹ ದೂರು ನೀಡಿದ್ದರು. ದುರ್ಗಪ್ಪ ಗಾಯಕವಾಡ ಅವರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ ಆ ವರದಿಯನ್ನು ಸಹ ಮೇಲಧಿಕಾರಿಗಳಿಗೆ ರವಾನಿಸಿದ್ದರು. ಈ ಹಿನ್ನಲೆ ಚಾಲಕನ ಮೇಲೆ ಶಿಸ್ತು ಕ್ರಮ ಜರುಗಿಸುವಂತೆ ಪ್ರಾಧಿಕಾರದಿಂದ ಅಬಕಾರಿ ಉಪನಿರೀಕ್ಷಕರಿಗೆ ಸೂಚನೆ ಬಂದಿತ್ತು. 2024ರ ಸೆ 19ರಂದು ಚಾಲಕ ದುರ್ಗಪ್ಪ ಎಂ ಗಾಯಕವಾಡ ಅವರಿಗೆ ಅಬಕಾರಿ ಉಪನಿರೀಕ್ಷಕ ಶಿವಪ್ಪ ಎಚ್ ಎಸ್ ಅವರು ನೋಟಿಸ್ ನೀಡಿದ್ದರು. ನೋಟಿಸ್ ನೋಡಿ ಸಿಟ್ಟಾದ ಚಾಲಕ `ನಾನು ಸಾವಿಗೆ ಶರಣಾಗುವೆ’ ಎಂದು ಕಾರವಾರ ವಿಳಾಸದೊಂದಿಗೆ ಅಬಕಾರಿ ಆಯುಕ್ತರಿಗೆ ಪತ್ರ ರವಾನಿಸಿದ್ದರು. `ಹಿರಿಯ ಅಧಿಕಾರಿಗಳ ಕಿರುಕುಳದಿಂದ ನಾನು ಸಾವನಪ್ಪುತ್ತೇನೆ. ನನ್ನ ಸಾವಿಗೆ ಹಿರಿಯ ಅಧಿಕಾರಿಗಳೇ ಕಾರಣ’ ಎಂದು ಪತ್ರದ ಮೂಲಕ ಬೆದರಿಕೆ ಒಡ್ಡಿದ್ದರು. ಇದನ್ನು ಅರಿತ ಶಿವಪ್ಪ ಅವರು ಅದೇ ದಿನ ರಾತ್ರಿ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದರು. 2025ರ ಅಕ್ಟೊಬರ್ 23ರಂದು ಮರಾಠಿಕೊಪ್ಪದ ಬಾಡಿಗೆ ಮನೆಯಲ್ಲಿ ದುರ್ಗಪ್ಪ ಗಾಯಕವಾಡ ಅವರು ಸಾವನಪ್ಪಿದ್ದಾರೆ. `ದುರ್ಗಪ್ಪ ಗಾಯಕವಾಡ ಅವರು ವಿಪರೀತ ಸರಾಯಿ ಕುಡಿಯುತ್ತಿದ್ದರು’ ಎಂದು ಅವರ ಧಾರವಾಡದಲ್ಲಿರುವ ಅವರ ಮಗ ಕಾರ್ತಿಕ ಗಾಯಕವಾಡ ಅವರು ಒಪ್ಪಿದ್ದಾರೆ. ಅದರೊಂದಿಗೆ ಅವರ ಸಾವಿನಲ್ಲಿ ಸಂಶಯವನ್ನು ವ್ಯಕ್ತಪಡಿಸಿದ್ದು, ಶಿರಸಿ ಹೊಸ ಮಾರುಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. - [ಉಸಿರಾಟ ಸಮಸ್ಯೆ: ದುಡಿಯುವ ಕಾರ್ಮಿಕನ ಕೊನೆಯುಸಿರು!](https://mobiletime.in/2025/10/respiratory-problem-the-last-breath-of-a-working-worker/): ಅತಿಯಾದ ವಾಂತಿಯಿoದ ಅಸ್ವಸ್ಥರಾದ ಕುಮಟಾದ ಲೋಕೇಶ ಗೌಡ ಅವರನ್ನು ಕುಟುಂಬದವರು ಎರಡು ಆಸ್ಪತ್ರೆಗೆ ಕರೆದೊಯ್ದರೂ ಪ್ರಯೋಜನಕ್ಕೆ ಬರಲಿಲ್ಲ. ಚಿಕಿತ್ಸೆಗೆ ಸ್ಪಂದಿಸದೇ ಅವರು ಸಾವನಪ್ಪಿದ್ದಾರೆ. ಕುಮಟಾದ ಗೋಕರ್ಣ ಬಳಿಯ ಚೌಡಗೇರಿಯಲ್ಲಿ ಲೋಕೇಶ ಸಣ್ಣು ಗೌಡ ಅವರು ವಾಸವಾಗಿದ್ದರು. ಕೂಲಿ ಕೆಲಸ ಮಾಡಿ ಅವರು ಬದುಕು ಕಟ್ಟಿಕೊಂಡಿದ್ದರು. ಉಸಿರಾಟ ಸಮಸ್ಯೆಯಿಂದ ಬಳಲುತ್ತಿದ್ದ ಅವರು ಅದಕ್ಕೆ ಚಿಕಿತ್ಸೆಪಡೆದಿದ್ದರು. ಅಕ್ಟೊಬರ್ 24ರಂದು ಚೌಡಗೇರಿಯ ಮನೆಯಲ್ಲಿ ಅವರು ವಾಂತಿ ಮಾಡಿಕೊಂಡರು. ತೀವೃ ಅಸ್ವಸ್ಥರಾದ ಲೋಕೇಶ ಗೌಡ ಅವರನ್ನು ಅಂಕೋಲಾ ಆಸ್ಪತ್ರೆಗೆ ಕರೆತರಲಾಯಿತು. ಅಲ್ಲಿಂದ ಹೆಚ್ಚಿನ ಚಿಕಿತ್ಸೆಗೆ ಕಾರವಾರ ಜಿಲ್ಲಾಸ್ಪತ್ರೆಗೆ ಸಾಗಿಸಲಾಯಿತು. ಆದರೆ, ಅದರಿಂದ ಯಾವ ಪ್ರಯೋಜನವೂ ಬರಲಿಲ್ಲ. ಚಿಕಿತ್ಸೆಗೆ ಸ್ಪಂದಿಸದೇ ಅವರು ಕೊನೆಯುಸಿರೆಳೆದರು. ಅವರ ಅಣ್ಣ ನಾಗು ಗೌಡ ಅವರು ಈ ಬಗ್ಗೆ ಗೋಕರ್ಣ ಪೊಲೀಸರಿಗೆ ತಿಳಿಸಿ, ಪ್ರಕರಣ ದಾಖಲಿಸಿದರು. - [ಕೆಡಿಸಿಸಿ: ಈ ಕ್ಷಣದ ಮಾಹಿತಿ!](https://mobiletime.in/2025/10/kdcc-information-of-the-moment/): ಕೆಡಿಸಿಸಿ ಬ್ಯಾಂಕ್ ಚುನಾವಣೆ ಮತ ಎಣಿಕೆ ಪ್ರಕ್ರಿಯೆ ಮುಕ್ತಾಯವಾಗಿದೆ. 16 ನಿರ್ದೇಶಕ ಸ್ಥಾನಕ್ಕೆ ನಡೆದ ಆಯ್ಕೆ ಪ್ರಕ್ರಿಯೆ ಪೈಕಿ 7 ಕ್ಷೇತ್ರದ ಫಲಿತಾಂಶ ಹೊರಬಿದ್ದಿದೆ. ಉಳಿದ ಕ್ಷೇತ್ರಗಳ ಮತ ಎಣಿಕೆ ವಿಚಾರ ನ್ಯಾಯಾಲಯದ ಮೆಟ್ಟಿಲೇರಿದ್ದು, ಅದರ ಭವಿಷ್ಯ ಹೊರಬರಬೇಕಿದೆ. ಮುಂದಿನ ಐದು ವರ್ಷಗಳ ಆಡಳಿತ ಮಂಡಳಿ ಚುನಾವಣೆಗೆ ಶನಿವಾರ ಮತದಾನ ನಡೆದಿದ್ದು, ಅದೇ ದಿನ ಸಂಜೆ ಉಪವಿಭಾಗಾಧಿಕಾರಿ ಕಾವ್ಯರಾಣಿ ಫಲಿತಾಂಶ ಪ್ರಕಟಿಸಿದ್ದಾರೆ. ಚುನಾವಣಾ ಪ್ರಕ್ರಿಯೆಯಲ್ಲಿ ಶಾಸಕ ಶಿವರಾಮ್ ಹೆಬ್ಬಾರ್ ಮತ್ತು ಉಸ್ತುವಾರಿ ಸಚಿವ ಮಂಕಾಳ ವೈದ್ಯ ಬಣಗಳ ನಡುವೆ ಸ್ಪರ್ಧೆ ನಡೆದಿದ್ದು, ಈವರೆಗಿನ ಫಲಿತಾಂಶದಲ್ಲಿ ಶಿವರಾಮ ಹೆಬ್ಬಾರ್ ಬಣದವರು ಮುನ್ನಡೆ ಸಾಧಿಸಿದ್ದಾರೆ. ಚುನಾವಣೆಗೂ ಮೊದಲು ಮಂಕಾಳು ವೈದ್ಯ ಬಣದಿಂದ ಇಬ್ಬರು ಹಾಗೂ ಹೆಬ್ಬಾರ್ ಬಣದಿಂದ ಒಬ್ಬರು ಅವಿರೋಧವಾಗಿ ಆಯ್ಕೆಯಾಗಿದ್ದು, ಉಳಿದವರ ನಡುವೆ ನಡೆದ ಪೈಪೋಟಿಗೆ ಈ ದಿನ ತೆರೆಬಿದ್ದಿದೆ. ಶಿವರಾಮ ಹೆಬ್ಬಾರ್ ಬಣದಿಂದ ಕುಮಟಾದಲ್ಲಿ ಬಣದ ರಾಜಗೋಪಾಲ ಅಡಿ 9 ಮತಗಳನ್ನು ಪಡೆದು ಗೆಲುವು ಸಾಧಿಸಿದ್ದಾರೆ. ಅವರ ವಿರುದ್ಧ ನಿಂತಿದ್ದ ಗಜಾನನ ಪೈ ಅವರಿಗೆ ಒಂದು ಮತ ಸಹ ಬಿದ್ದಿಲ್ಲ. ಶ್ರೀಧರ ಭಾಗ್ವತ್ 6 ಮತ ಸಿಕ್ಕಿದೆ. ಹಳಿಯಾಳದಲ್ಲಿ ಎಸ್ ಎಲ್ ಘೋಟ್ನೇಕರ್ 9 ಮತಪಡೆದು ಗೆದ್ದಿದ್ದಾರೆ. ಪ್ರತಿಸ್ಪರ್ಧಿ ಸುಭಾಸ್ ಕೊರ್ವೇಕರ್ 4 ಮತ ಮಾತ್ರ ಪಡೆದಿದ್ದಾರೆ. ಜೋಯಿಡಾದಿಂದ ಕೃಷ್ಣ ದೇಸಾಯಿ 5 ಮತಪಡೆದು ಗೆದ್ದಿದ್ದಾರೆ. ಅಲ್ಲಿ ಪುರುಷೋತ್ತಮ ಕಾಮತ್ 4 ಮತಪಡೆದು ಸೋಲು ಅನುಭವಿಸಿದ್ದಾರೆ. ಮುಂಡಗೋಡದಿAದ ಎಷ್ ಎಮ್ ನಾಯ್ಕ 8 ಮತ ಪಡೆದು ಗೆದ್ದಿದ್ದು, ಎಲ್ ಟಿ ಪಾಟೀಲ್ 5 ಮತಪಡೆದು ಸೋಲು ಕಂಡಿದ್ದಾರೆ. - [ಕೆಡಿಸಿಸಿ: ಸಚಿವರ ಆಪ್ತರನ್ನು ಸೋಲಿಸಿದ ಶಾಸಕ!](https://mobiletime.in/2025/10/kdcc-mla-who-defeated-ministers-close-aides/): ಕೆಡಿಸಿಸಿ ಬ್ಯಾಂಕ್ ನಿರ್ದೇಶಕ ಸ್ಥಾನಕ್ಕಾಗಿ ಶಾಸಕ ಶಿವರಾಮ ಹೆಬ್ಬಾರ್ ಹಾಗೂ ಸಚಿವ ಮಂಕಾಳು ವೈದ್ಯ ಬಣದ ನಡುವೆ ನಡೆದ ಹಣಾಹಣಿಯಲ್ಲಿ ಶಾಸಕ ಶಿವರಾಮ ಹೆಬ್ಬಾರ್ ಬಣದವರು ಮುನ್ನಡೆ ಸಾಧಿಸಿದ್ದಾರೆ. ಶಿವರಾಮ ಹೆಬ್ಬಾರ್ ಸಹ 6ನೇ ಬಾರಿ ಈ ಚುನಾವಣೆಯಲ್ಲಿ ಗೆದ್ದಿದ್ದಾರೆ. `ಯಾವುದೇ ಆಮಿಷ, ಅಹಂಕಾರ, ದರ್ಪಕ್ಕೆ ಮತದಾರರು ಮಣಿಯಲಿಲ್ಲ. ಹೀಗಾಗಿ ತಾನು ಈ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದೇನೆ’ ಎಂದು ಶಿವರಾಮ ಹೆಬ್ಬಾರ್ ಗೆಲುವಿನ ನಂತರ ಮಾಧ್ಯಮಕ್ಕೆ ಮೊದಲ ಪ್ರತಿಕ್ರಿಯೆ ನೀಡಿದ್ದಾರೆ. `ಜಿಲ್ಲೆಯ ರೈತರ ಹಾಗೂ ಸಹಕಾರಿ ಸಂಘಗಳ ಹಿತ ಕಾಯುವುದೇ ನನ್ನ ಆದ್ಯತೆ’ ಎಂದವರು ಘೋಷಿಸಿದ್ದಾರೆ. ಶಿವರಾಮ ಹೆಬ್ಬಾರ್ ಅವರ ವಿರುದ್ಧ ಸ್ಪರ್ಧಿಸಿದ್ದ ಗೋಪಾಲಕೃಷ್ಣ ಗಾಂವ್ಕರ್ ಅವರು ಸೋಲು ಅನುಭವಿಸಿದ್ದು, ಶಿವರಾಮ ಹೆಬ್ಬಾರ್ ಅವರು ತಮ್ಮ ಬಣದಿಂದ ಸ್ಪರ್ಧಿಸಿದ್ದ ಮುಂಡಗೋಡಿನ ಎಚ್ ಎಂ ನಾಯ್ಕ ಅವರನ್ನು ಗೆಲ್ಲಿಸಿದ್ದಾರೆ. ಆ ಮೂಲಕ ಮಂಕಾಳು ವೈದ್ಯ ಬಣದ ಎಲ್ ಟಿ ಪಾಟೀಲ್ ಅವರಿಗೆ ಸೋಲಿನ ರುಚಿ ತೋರಿಸಿದ್ದಾರೆ. ಎಲ್.ಟಿ.ಪಾಟೀಲ ಅವರು ಐದು ಮತಪಡೆದಿದ್ದು, ಎಂ ಎಚ್ ನಾಯ್ಕ ಅವರು 8 ಮತಗಳನ್ನು ಪಡೆದು ಗೆಲುವಿನ ನಗೆ ಬೀರಿದ್ದಾರೆ. ಈವರೆಗಿನ ಲೆಕ್ಕಾಚಾರದ ಪ್ರಕಾರ ಶಿವರಾಮ್ ಹೆಬ್ಬಾರ್ ಬಣದ 6 ಜನ ಅಭ್ಯರ್ಥಿಗಳು ಗೆದ್ದಿದ್ದಾರೆ. ಮಂಕಾಳು ವೈದ್ಯ ಬಣದ ಇಬ್ಬರು ಮಾತ್ರ ಗೆದ್ದಿದ್ದಾರೆ. ಅರ್ಬನ್ ಬ್ಯಾಂಕ್ ಹಾಗೂ ಕೃಷಿಯೇತರ ಸಹಕಾರ ಸಂಘಗಳ ಕ್ಷೇತ್ರದ ಪೈಕಿ ಮೋಹನ ನಾಯಕ ಗೋಕರ್ಣ ಅವರು 92 ಮತಪಡೆದಿದ್ದು, ಮೋಹನ ನಾಯಕ ಅವರು 90 ಮತಪಡೆದಿದ್ದಾರೆ. ಮಹಿಳಾ ಅಭ್ಯರ್ಥಿಯಾಗಿ ಕಣಕ್ಕಿಳಿದ ಸರಸ್ವತಿ ಎನ್ ರವಿ ಅವರಿಗೆ 4 ಮತಗಳು ಬಿದ್ದಿವೆ. ವಸಂತ ನಾಯಕ ಅವರು 21 ಮತಗಳನ್ನುಪಡೆದಿದ್ದಾರೆ. ಹಳಿಯಾಳ ಕ್ಷೇತ್ರದಿಂದ ಮಾಜಿ ಎಂಎಲ್‌ಸಿ ಎಸ್ ಎಲ್ ಘೋಟ್ನೆಕರ್ ಗೆಲುವಿನ ನಗೆ ಬೀರಿದ್ದಾರೆ. ಮಂಕಾಳು ವೈದ್ಯ ಬಣದಿಂದ ಸ್ಪರ್ಧಿಸಿದ್ದ ಸುಭಾಶ್ ಕೊರ್ವೆಕರ್ ಸೋತಿದ್ದಾರೆ. ಅಂಕೋಲಾ, ಕುಮಟಾ, ತಾಲ್ಲೂಕು ಒಕ್ಕಲುತನ ಹುಟ್ಟುವಳಿ ಮಾರಾಟ ಸಂಘಗಳ ಕ್ಷೇತ್ರದಲ್ಲಿ ಹೆಬ್ಬಾರ್ ಬಣದವರು ಮುನ್ನಡೆ ಸಾಧಿಸಿದ್ದು ಯಲ್ಲಾಪುರ ಹಾಗೂ ಹಳಿಯಾಳ ಕ್ಷೇತ್ರಗಳು ಶಿವರಾಮ ಹೆಬ್ಬಾರ್ ಅವರ ತಕ್ಕೆಗೆ ಸಿಕ್ಕಿವೆ. ಗೋಕರ್ಣದ ರಾಜಗೋಪಾಲ ಅಡಿ ಗೆದ್ದಿದ್ದಾರೆ. ಜೊಯಿಡಾದ ಕೃಷ್ಣ ದೇಸಾಯಿ ಅವರು ಗೆದ್ದಿದ್ದಾರೆ.  ಮಂಕಾಳು ವೈದ್ಯ ಬಣದಿಂದ ಭಟ್ಕಳ ಹಾಗೂ ಹೊನ್ನಾವರ ಕ್ಷೇತ್ರಗಳಲ್ಲಿ ಮಾತ್ರ ಅವಿರೋಧ ಆಯ್ಕೆ ನಡೆದಿದೆ. 46 ಮತಗಳ ಎಣಿಕೆಗೆ ನ್ಯಾಯಾಲಯ ತಡೆಯಾಜ್ಞೆಯಿದ್ದು, ಇನ್ನೂಳಿದ ಮಾಹಿತಿಯನ್ನೊಳಗೊಂಡ ಪ್ರತ್ಯೇಕ ವರದಿ ಶೀಘ್ರದಲ್ಲಿಯೇ ಪ್ರಸಾರವಾಗಲಿದೆ.   - [ಗಾಂಜಾ ಗುಂಗಿನಲ್ಲಿದ್ದ ಆಟೋ ಚಾಲಕ!](https://mobiletime.in/2025/10/auto-driver-under-the-influence-of-marijuana/): ಶಿರಸಿಯ ಗಲ್ಲಿ ಗಲ್ಲಿಗಳಲ್ಲಿಯೂ ಗಾಂಜಾ ವ್ಯಸನಿಗಳ ಸಂಖ್ಯೆ ಜೋರಾಗಿದ್ದು, ಆಟೋ ಚಾಲಕ ವೆಂಕಟೇಶ ಪಾವಸ್ಕರ್ ಸಹ ಈ ದುಶ್ಚಟದ ದಾಸರಾಗಿದ್ದಾರೆ. ಟಿಎಸ್‌ಎಸ್ ರಸ್ತೆಯ ಗದ್ದೆವಾಮನ ಅಂಗಡಿ ಬಳಿ ಆಟೋ ಚಾಲಕರಾಗಿರುವ ವೆಂಕಟೇಶ ಶಿವಪ್ಪ ಪಾವಸ್ಕರ್ ಅವರು ಗಾಂಜಾ ಸೇವಿಸಿ ಸಿಕ್ಕಿಬಿದ್ದಿದ್ದಾರೆ. ಕಾನೂನುಬಾಹಿರ ಕೆಲಸ ಮಾಡಿದ ಕಾರಣ ಪೊಲೀಸರು ಅವರ ವಿರುದ್ಧ ಕಠಿಣ ಕ್ರಮ ಜರುಗಿಸಿದ್ದಾರೆ. ಅಕ್ಟೊಬರ್ 23ರಂದು ಆನೆಹೊಂಡ ಕಚ್ಚಾ ರಸ್ತೆಯಲ್ಲಿ ವೆಂಕಟೇಶ ಪಾವಸ್ಕರ್ ಅವರು ಓಡಾಡುತ್ತಿದ್ದರು. ಶಿರಸಿ ನಗರ ಪೊಲೀಸ್ ಠಾಣೆಯ ಪಿಎಸ್‌ಐ ನಾಗಪ್ಪ ಅವರು ತಮ್ಮ ತಂಡದ ಜೊತೆ ಆ ಭಾಗಕ್ಕೆ ಹೋಗಿದ್ದು, ವೆಂಕಟೇಶ ಪಾವಸ್ಕರ್ ಅವರನ್ನು ನೋಡಿದರು. ವೆಂಕಟೇಶ್ ಪಾವಸ್ಕರ್ ಅವರು ಆ ಅವಧಿಯಲ್ಲಿ ಎಂದಿನAತೆ ಇರಲಿಲ್ಲ. ಹೀಗಾಗಿ ಪೊಲೀಸರು ಅವರನ್ನು ಮಾತನಾಡಿಸಿದರು. ನಂತರ ವೆಂಕಟೇಶ್ ಪಾವಸ್ಕರ್ ಅವರನ್ನು ಆಸ್ಪತ್ರೆಗೆ ಕರೆತಂದು ವೈದ್ಯಕೀಯ ವಿಚಾರಣೆಗೆ ಒಳಪಡಿಸಿದರು. ಆಗ ವೈದ್ಯಾಧಿಕಾರಿಗಳು ಗಾಂಜಾ ಸೇವನೆಯನ್ನು ದೃಢಪಡಿಸಿದರು. ಈ ಹಿನ್ನಲೆ ಆಟೋ ಚಾಲಕ ವೆಂಕಟೇಶ್ ಪಾವಸ್ಕರ್ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದರು. `ಮಾದಕ ವ್ಯಸನ ಆರೋಗ್ಯಕ್ಕೆ ಹಾನಿಕರ’ - [ಗೋಡೆಗೆ ಗುದ್ದಿದ ಗೂಡ್ಸ್: ಒಂದು ಸಾವು.. ಒಬ್ಬರಿಗೆ ನೋವು!](https://mobiletime.in/2025/10/goods-hit-the-wall-one-death-one-pain/): ಶಿರಸಿ ಕುಮಟಾ ರಸ್ತೆಯ ಹಾರುಗಾರದಲ್ಲಿ ಮಹೇಂದ್ರಾ ಸುಪ್ರೋ ಗೂಡ್ಸ ರಸ್ತೆ ಬದಿಯ ಮೋರಿಗೆ ಗುದ್ದಿದೆ. ಪರಿಣಾಮ ಆ ವಾಹನದಲ್ಲಿದ್ದ ಮಹಾಬಲೇಶ್ವರ ಗೌಡ ಅವರು ಸಾವನಪ್ಪಿದ್ದಾರೆ. ಅಕ್ಟೊಬರ್ 23ರ ಸಂಜೆ ಸಿದ್ದಾಪುರ ನಡಗಾರಮನೆಯ ಮಹಾಬಲೇಶ್ವರ ತಿಮ್ಮಾ ಗೌಡ (48) ಅವರು ಗೂಡ್ಸ ಓಡಿಸಿಕೊಂಡು ಹೊರಟಿದ್ದರು. ಆ ವಾಹನದಲ್ಲಿ ಕಮಲಾಕರ ತಿಮ್ಮಾ ಗೌಡ ಅವರು ಜೊತೆಯಿದ್ದರು. ಶಿರಸಿ-ಕುಮಟಾ ಮಾರ್ಗವಾಗಿ ಸಂಚರಿಸುತ್ತಿದ್ದ ಗೂಡ್ಸ್ ಹಾರುಗಾರದ ಬಳಿ ರಸ್ತೆ ಅಂಚಿನ ಗೋಡೆಗೆ ಗುದ್ದಿತು. ಗೂಡ್ಸ್ ಗೋಡೆಗೆ ಡಿಕ್ಕಿಹೊಡೆದ ರಭಸಕ್ಕೆ ಮಹಾಬಲೇಶ್ವರ ಗೌಡ ಅವರು ಅಲ್ಲಿಯೇ ಸಾವನಪ್ಪಿದರು. ಅವರ ಜೊತೆಯಿದ್ದ ಕಮಲಾಕರ ತಿಮ್ಮಾ ಗೌಡ ಅವರು ಕಾಲು ಹಾಗೂ ಮುಖಕ್ಕೆ ಪೆಟ್ಟು ಮಾಡಿಕೊಂಡರು. ಈ ಅಪಘಾತದ ಬಗ್ಗೆ ಕಿಬ್ಬಳ್ಳಿಯ ಭಾಸ್ಕರ ನಾಯ್ಕ ಅವರು ಪೊಲೀಸರಿಗೆ ಮಾಹಿತಿ ನೀಡಿದರು. ಶಿರಸಿ ಸಂಚಾರ ಪೊಲೀಸ್ ಠಾಣೆಯವರು ಪ್ರಕರಣ ದಾಖಲಿಸಿದರು. `ನಿಧಾನವಾಗಿ ಚಲಿಸಿ.. ವಾಹನ ಓಡಿಸುವಾಗ ಜಾಗೃತೆವಹಿಸಿ’ - [ಪಟಾಕಿ ಸಿಡಿಸಿ ಬೈಕ್ ಓಡಿಸಿದರು.. ಜೈಲು ಸೇರಿ ಮುದ್ದೆ ಮುರಿದರು!](https://mobiletime.in/2025/10/they-burst-firecrackers-and-rode-their-bikes-they-ended-up-in-jail-and-broke-the-law/): ಅಡ್ಡಾದಿಡ್ಡಿ ಬೈಕ್ ಓಡಿಸುತ್ತ ಪಟಾಕಿ ಸಿಡಿಸಿ ಮೋಜು-ಮಸ್ತಿ ಮಾಡಿದ ಯುವಕರಿಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಅವರ ವಿರುದ್ಧ ಪ್ರಕರಣ ದಾಖಲಿಸಿ ಕಾನೂನು ಕ್ರಮವನ್ನು ಜರುಗಿಸಿದ್ದಾರೆ. ಕಾರವಾರದ ನಂದನಗದ್ದಾದ ಸಮಾದೇವಿ ದೇವಸ್ತಾನದ ಆದಿತ್ಯ ಸಂದೀಪ ಹುಲ್ಗೇಕರ್ ಹಾಗೂ ವಿದೀಶ ಸಂದೀಪ ಜೋಗಳೇಕರ್ ಅಡ್ಡಾದಿಡ್ಡಿ ಬೈಕ್ ಓಡಿಸಿ ಪೊಲೀಸರ ಬಳಿ ಸಿಕ್ಕಿಬಿದ್ದಿದ್ದಾರೆ. ಹೆಲ್ಮೆಟ್ ಧರಿಸಿದೇ ಬೈಕ್ ಓಡಿಸಿದ ಅವರಿಬ್ಬರು ಬೈಕು ಚಲಿಸುವಾಗಲೇ ಪಟಾಕಿ ಸಿಡಿಸಿ ರಾಕೇಟ್ ಹಾರಿಸಿದ ವಿಡಿಯೋ ವೈರಲ್ ಆಗಿದೆ. ಇದೇ ವಿಡಿಯೋ ಆಧಾರದಲ್ಲಿ ಪೊಲೀಸರು ಅವರಿಬ್ಬರನ್ನು ವಶಕ್ಕೆಪಡೆದಿದ್ದಾರೆ. ದೀಪಾವಳಿ ಅಂಗವಾಗಿ ಪಟಾಕಿ ಖರೀದಿಸಿದ್ದ ಅವರಿಬ್ಬರು ಅದನ್ನು ಅಸುರಕ್ಷತಾ ವಿಧಾನದಲ್ಲಿ ಸಿಡಿಸಿದ್ದರು. ಕಾರವಾರದ ಟೋಲನಾಕಾ ಬಾಂಡಿಶೆಟ್ಟಾ ಕಡೆ ಹೋಗುವ ರಸ್ತೆಯಲ್ಲಿ ಬೈಕ್ ಓಡಿಸುತ್ತಲೇ ಪಟಾಕಿ ಸಿಡಿಸುತ್ತಿದ್ದರು. ಆದಿತ್ಯ ಸಂದೀಪ ಹುಲ್ಗೇಕರ್ ಅವರು ಜೋರಾಗಿ ಬೈಕ್ ಓಡಿಸುತ್ತಿದ್ದು, ಹಿಂಬದಿ ಸವಾರ ವಿದೀಶ ಸಂದೀಪ ಜೋಗಳೇಕರ್ ಪಟಾಕಿ ಹಚ್ಚಿದ್ದರು. ವೇಗವಾಗಿ ಚಲಿಸುವ ಬೈಕಿನಲ್ಲಿ ಅವರಿಬ್ಬರೂ ಜೋರಾಗಿ ಕೇಕೇ ಹಾಕುತ್ತ ಹೊರಟಿದ್ದರು. ಇದನ್ನು ಇನ್ನೊಂದು ಬೈಕಿನಲ್ಲಿದ್ದವರು ವಿಡಿಯೋ ಮಾಡಿದ್ದರು. ಆ ವಿಡಿಯೋವನ್ನು ಯುವಕರಿಬ್ಬರು ಎಲ್ಲಡೆ ಹಂಚಿಕೊAಡು ತಾವು ಮಾಡಿದ ಸಾಹಸದ ಬಗ್ಗೆ ಬಣ್ಣಿಸುತ್ತಿದ್ದರು. ಅಕ್ಟೊಬರ್ 22ರಂದು ಈ ವಿಡಿಯೋ ಕಾರವಾರದ ಸಂಚಾರಿ ಪೊಲೀಸ್ ಠಾಣೆ ಪಿಎಸ್‌ಐ ಶ್ರೀಕಾಂತ ರಾತೋಡ್ ಅವರಿಗೆ ಕಾಣಿಸಿತು. ಶ್ರೀಕಾಂತ ರಾತೋಡ್ ಅವರು ಆ ಬೈಕಿನ ಜೊತೆ ಬೈಕ್ ಸವಾರರನ್ನು ಕರೆಯಿಸಿ ಮಾತನಾಡಿದರು. ಕಾನೂನಿನಪ್ರಕಾರ ತಪ್ಪು ಮಾಡಿದ ಕಾರಣ ಅವರಿಬ್ಬರನ್ನು ವಶಕ್ಕೆಪಡೆದರು. ಬೈಕನ್ನು ಜಪ್ತು ಮಾಡಿದರು. `ಸಂಚಾರಿ ನಿಯಮ ಪಾಲಿಸಿ.. ಕಾನೂನು ಗೌರವಿಸಿ’ ಬೈಕಿನಲ್ಲಿ ಪಟಾಕಿ ಸಿಡಿಸಿದ ಹಾಗೂ ಪೊಲೀಸ್ ಕ್ರಮದ ವಿಡಿಯೋ ಇಲ್ಲಿ ನೋಡಿ.. - [ಜೀವ ರಕ್ಷಕರ ಜೀವಕ್ಕೆ ಇಲ್ಲ ರಕ್ಷಣೆ!](https://mobiletime.in/2025/10/there-is-no-protection-for-the-lives-of-lifeguards/): ತಮ್ಮ ಜೀವದ ಹಂಗು ತೊರೆದು ಬೇರೆಯವರ ಜೀವ ರಕ್ಷಿಸುವ ಜೀವ ರಕ್ಷಕ ಸಿಬ್ಬಂದಿಗೆ ಸರ್ಕಾರ ಸಕಾಲದಲ್ಲಿ ಸಂಬಳ ಕೊಡುತ್ತಿಲ್ಲ. ಗಾಳಿ, ಮಳೆ, ಚಳಿ ಲೆಕ್ಕಿಸದೇ ಬಿಸಿಲಿನಲ್ಲಿಯೂ ಶ್ರಮಿಸುವ ಜೀವ ರಕ್ಷಕ ಸಿಬ್ಬಂದಿ ಸಾವಿರಾರು ಸಮಸ್ಯೆ ಅನುಭವಿಸುತ್ತಿದ್ದು, ಅವರ ಅಳಲು ಯಾರಿಗೂ ಕೇಳುತ್ತಿಲ್ಲ. ಉತ್ತರ ಕನ್ನಡ ಜಿಲ್ಲೆಯ ಕರಾವಳಿ ಭಾಗದಲ್ಲಿ ಪದೇ ಪದೇ ಅವಘಡಗಳು ನಡೆಯುತ್ತಿದೆ. ಇಲ್ಲಿ ಅಳವಡಿಸಲಾದ ಸೂಚನಾ ಫಲಕಗಳನ್ನು ಮೀರಿ ಪ್ರವಾಸಿಗರು ಆಪತ್ತಿಗೆ ಸಿಲುಕುತ್ತಿದ್ದಾರೆ. ಅಪಾಯದಲ್ಲಿರುವವರನ್ನು ರಕ್ಷಿಸುವುದಕ್ಕಾಗಿಯೇ ಸರ್ಕಾರ ಕಡಲತೀರದಲ್ಲಿ ಜೀವ ರಕ್ಷಕ ಸಿಬ್ಬಂದಿ ನೇಮಿಸಿದೆ. ಆದರೆ, ಜೀವ ರಕ್ಷಕ ಸಿಬ್ಬಂದಿಯ ಜೀವಕ್ಕೆ ಇಲ್ಲಿ ರಕ್ಷಣೆ ಇಲ್ಲ. ಉತ್ತರ ಕನ್ನಡ ಜಿಲ್ಲೆಯಲ್ಲಿ ದುಡಿಯುತ್ತಿರುವ ಜೀವ ರಕ್ಷಕ ಸಿಬ್ಬಂದಿಯ ನೌಕರಿ ಖಾಯಂ ಅಲ್ಲ. ಅವರಿಗೆ ಕನಿಷ್ಟ ಪ್ರಮಾಣದ ಸೇವಾ ಭದ್ರತೆಯನ್ನು ಸರ್ಕಾರ ಒದಗಿಸಿಲ್ಲ. ರಕ್ಷಣಾ ಕಾರ್ಯಾಚರಣೆಗೆ ಅಗತ್ಯವಿರುವ ಸಲಕರಣೆಗಳನ್ನು ಸಹ ಪೂರೈಸುತ್ತಿಲ್ಲ. ಅಗತ್ಯಕ್ಕೆ ಅನುಗುಣವಾಗಿ ಸಿಬ್ಬಂದಿ ನೇಮಕಾತಿ ನಡೆಯುತ್ತಿಲ್ಲ. ಕಡಲತೀರದಲ್ಲಿ ಕೂರಲು ವಿಶ್ರಾಂತಿ ಕೊಠಡಿಗಳು ಸಹ ಸರಿಯಾಗಿಲ್ಲ. ಈ ಸಮಸ್ಯೆಗಳಿಂದ ಬೇಸತ್ತು ಜೀವ ರಕ್ಷಕ ಸಿಬ್ಬಂದಿ ಕೆಲಸ ಬಿಟ್ಟರೆ ಆ ಸ್ಥಳಕ್ಕೆ ಹೊಸ ಸಿಬ್ಬಂದಿ ನೇಮಿಸಲಾಗುತ್ತದೆ. ಆದರೆ, ಹೊಸ ಸಿಬ್ಬಂದಿಗೆ ತರಬೇತಿ ನೀಡುವ ಕೆಲಸ ನಡೆಯುತ್ತಿಲ್ಲ. ತರಬೇತಿ ಇಲ್ಲದವರನ್ನು ಕಡಲತೀರಕ್ಕೆ ನೇಮಿಸಿದರೆ ಅವರಿಂದ ರಕ್ಷಣೆ ಹೇಗೆ ಸಾಧ್ಯ? ಎಂಬ ಪ್ರಶ್ನೆಗೆ ಉತ್ತರವಿಲ್ಲ. ಜೀವ ರಕ್ಷಕ ಸಿಬ್ಬಂದಿಗೆ ಕಳೆದ 8 ವರ್ಷಗಳಿಂದ ಒಮ್ಮೆಯೂ ಸಂಬಳ ಏರಿಕೆ ಆಗಿಲ್ಲ. ತಿಂಗಳಿಗೆ ಸರಿಯಾಗಿ ಸಂಬಳವೂ ಆಗಲ್ಲ. ತುಕ್ಕು ಹಿಡಿದ ಸಲಕರಣೆಗಳನ್ನು ಬದಲಿಸುವಂತೆ ಕೋರಿದರೂ ಅದನ್ನು ಬದಲಿಸುತ್ತಿಲ್ಲ. ಅನೇಕ ಕಡಲತೀರದಲ್ಲಿ ವಾಚ್ ಟವರ್ ಅಗತ್ಯವಿದ್ದು, ಅದನ್ನು ಸರ್ಕಾರ ನಿರ್ಮಿಸಿಲ್ಲ. ಕಡಲತೀರಗಳಲ್ಲಿ ಕೆಲವಡೆ ಅಗತ್ಯ ಸಿಬ್ಬಂದಿ ನೇಮಿಸಲಾಗಿದ್ದು, ಅದನ್ನುಹೊರತುಪಡಿಸಿ ಸಿದ್ದಾಪುರದ ಬುರುಡೆ ಜಲಪಾತ ಹಾಗೂ ಅಂಕೋಲಾದ ವಿಭೂತಿ ಜಲಪಾತದಲ್ಲಿ ಸಿಬ್ಬಂದಿ ನೇಮಕಾತಿ ನಡೆದಿದೆ. ಉಳಿದ ಜಲಪಾತಗಳಲ್ಲಿ ಜೀವ ರಕ್ಷಕ ಸಿಬ್ಬಂದಿ ನೇಮಕಾತಿಯೂ ನಡೆದಿಲ್ಲ. `ಕಡಲತೀರದಲ್ಲಿ ನಿತ್ಯ ಒಂದಿಲ್ಲೊoದು ಅವಘಡ ನಡೆಯುತ್ತಿದ್ದು, ಜೀವ ರಕ್ಷಕ ಸಿಬ್ಬಂದಿಯಿAದ ಅನೇಕರ ಜೀವ ಉಳಿದಿದೆ. ಅಂಥ ಜೀವ ರಕ್ಷಕ ಸಿಬ್ಬಂದಿಯ ಸಮಸ್ಯೆಗಳನ್ನು ಸರ್ಕಾರ ಅರಿತು ಪರಿಹಾರ ಒದಗಿಸಬೇಕು. ಇಲ್ಲವಾದಲ್ಲಿ ಈ ಬಗ್ಗೆ ಹೋರಾಟ ಅನಿವಾರ್ಯ’ ಎಂದು ಮೀನುಗಾರ ಮುಖಂಡ ಉಮಾಕಾಂತ ಹೊಸಕಟ್ಟ ಎಚ್ಚರಿಸಿದ್ದಾರೆ. - [ಮೂರು ಕಾಸಿನ ಸಂಬಳಕ್ಕಿದ್ದವ ಮೂರು ಕೋಟಿ ಕೊಳ್ಳೆಹೊಡೆದ!](https://mobiletime.in/2025/10/a-man-who-earned-three-paise-a-month-looted-three-crores/): ಕರ್ನಾಟಕ ಬ್ಯಾಂಕ್ ಉದ್ಯೋಗಿಯಾಗಿದ್ದ ಮಂಜುನಾಥ ಭಟ್ಟ ಅವರು ಅದೇ ಬ್ಯಾಂಕಿಗೆ ಮೋಸ ಮಾಡಿದ್ದಾರೆ. ಜೊತೆಗೆ ಗ್ರಾಹಕರು ಠೇವಣಿಯಿರಿಸಿದ್ದ ಕೋಟ್ಯಾಂತರ ರೂಪಾಯಿಯನ್ನು ಅವರು ಕೊಳ್ಳೆಹೊಡೆದಿದ್ದಾರೆ! ಸಿದ್ದಾಪುರ ತಾಲೂಕಿನ ಹೆಗ್ಗರಣಿಯ ಮಂಜುನಾಥ ಶ್ರೀಧರ ಭಟ್ಟ ಅವರು 2013ರ ಅಗಸ್ಟ 5ರಂದು ಕರ್ನಾಟಕ ಬ್ಯಾಂಕ್ ಸೇರಿದರು. ಪ್ರೊಬಶನರಿ ಕ್ಲರ್ಕ ಆಗಿ ಕೆಲಸಕ್ಕೆ ಸೇರಿದ ಅವರು 2014ರ ಡಿಸೆಂಬರ್ 24ರಂದು ಪದೋನ್ನತಿಪಡೆದು ಚನ್ನಗಿರಿ ಶಾಖೆಗೆ ವರ್ಗವಾದರು. ಅದಾದ ನಂತರ 2023ರ ಜನವರಿ 20ರಂದು ಸಿದ್ದಾಪುರ ಶಾಖೆಗೆ ವರ್ಗವಾಗಿ ಬಂದರು. ಹಲಗೇರಿಯ ಅರಮನೆಯಲ್ಲಿ ವಾಸವಾಗಿರುವ ಅವರು ಕರ್ನಾಟಕ ಬ್ಯಾಂಕ್ ಗ್ರಾಹಕ ಸೇವಾ ಕೇಂದ್ರದ ಉಸ್ತುವಾರಿ ನೋಡಿಕೊಳ್ಳುತ್ತಿದ್ದರು. ಗ್ರಾಹಕ ಸೇವಾ ಸಹಾಯಕನಾಗಿ ಕೆಲಸ ಮಾಡುತ್ತಿದ್ದ ಮಂಜುನಾಥ ಭಟ್ಟ ಅವರು ಬ್ಯಾಂಕ್ ಖಾತೆ ಹೊಂದಿದ ಗ್ರಾಹಕರಿಗೆ ವಿವಿಧ ಸೇವೆ ಒದಗಿಸುವ ಮಹತ್ವದ ಹೊಣೆಗಾರಿಕೆಯನ್ನುವಹಿಸಿಕೊಂಡಿದ್ದರು. ಹೀಗಾಗಿ ಗ್ರಾಹಕರ ಖಾತೆಗಳನ್ನು ಆಪರೇಟ್ ಮಾಡುವ ಅಧಿಕಾರ ಮಂಜುನಾಥ ಭಟ್ಟ ಅವರಿಗಿತ್ತು. ಅದನ್ನು ದುರುಪಯೋಗಪಡಿಸಿಕೊಂಡು ಅವರು ಸರಿಸುಮಾರು 3.51ಕೋಟಿ ರೂ ಲೂಟಿ ಮಾಡಿದ್ದಾರೆ. ಮುಖ್ಯವಾಗಿ ಹಿರಿಯ ನಾಗರಿಕರು ಹಾಗೂ ಅಪರಿಚಿತ ಗ್ರಾಹಕರ ಖಾತೆಯಲ್ಲಿದ್ದ ಹಣವನ್ನು ತಮ್ಮ ಬ್ಯಾಂಕ್ ಖಾತೆಗೆ ವರ್ಗಾಯಿಸಿಕೊಂಡು ಮೋಸ ಮಾಡಿದ್ದಾರೆ. 2025ರ ಸೆಪ್ಟೆಂಬರ್ 29ರಂದು ಈ ಪ್ರಕರಣ ಬೆಳಕಿಗೆ ಬಂದಿದೆ. ಆ ದಿನ ಬ್ಯಾಂಕ್ ಗ್ರಾಹಕ ಮಹಾಬಲೇಶ್ವರ ಆರ್ ಹೆಗಡೆ ಅವರು ಸಿದ್ದಾಪುರ ಶಾಖೆಗೆ ಬಂದು ತಮ್ಮ ಠೇವಣಿ ನವೀಕರಣಕ್ಕೆ ಅರ್ಜಿ ಸಲ್ಲಿಸಿದ್ದರು. ಆದರೆ, ಒಂದು ವರ್ಷ ಮೊದಲೇ ಅವರ 440500ರೂ ಮೌಲ್ಯದ ಠೇವಣಿ ಮುಕ್ತಾಯವಾದ ಬಗ್ಗೆ ಬ್ಯಾಂಕಿನ ಕಂಪ್ಯುಟರ್ ಮಾಹಿತಿ ಕಾಣಿಸಿತು. ಮಹಾಬಲೇಶ್ವರ ಹೆಗಡೆ ಅವರ ಕೈಯಲ್ಲಿದ್ದ ಠೇವಣಿ ಪತ್ರ ನೋಡಿದಾಗ ಅದು ನಕಲಿ ಎಂದು ಅರಿವಾಯಿತು. ಕರ್ನಾಟಕ ಬ್ಯಾಂಕ್ ಹೆಸರಿನಲ್ಲಿಯೇ ನಕಲಿ ರಸೀದಿ ಹಾಗೂ ಪ್ರಮಾಣ ಪತ್ರ ನೀಡಿದವರ ಹುಡುಕಾಟ ನಡೆಸಿದಾಗ ಮಂಜುನಾಥ ಭಟ್ಟ ಅವರ ಮುಖವಾಡ ಕಳಚಿ ಬಿದ್ದಿತು. ಅದಾದ ನಂತರ ಬ್ಯಾಂಕಿನವರು ಆಂತರಿಕ ತನಿಖೆ ನಡೆಸಿದರು. ಆಗ, ಮಂಜುನಾಥ ಭಟ್ಟರು ಮಹಾಬಲೇಶ್ವರ ಆರ್ ಹೆಗಡೆ ಅವರ ಠೇವಣಿಯನ್ನು ಮುರಿದು, ಆ ಹಣವನ್ನು ತಮ್ಮ ಐಸಿಐಸಿಐ ಬ್ಯಾಂಕ್ ಖಾತೆಗೆ ವರ್ಗಾಯಿಸಿಕೊಂಡಿರುವುದು ಗೊತ್ತಾಯಿತು. ಗ್ರಾಹಕರಿಗೆ ಈ ವಿಷಯ ಅರಿವಾಗದ ಹಾಗೇ ಮಾಡಲು ಎಸ್ ಎಂ ಎಸ್ ಸೇವೆ ಸ್ಥಗಿತಗೊಳಿಸಿದ್ದು ಸಹ ಈ ವೇಳೆ ಗಮನಕ್ಕೆಬಂದಿತು. ಆಂತರಿಕ ತನಿಖೆ ಮುಂದುವರೆದಾಗ ಮಹಾಬಲೇಶ್ವರ ಹೆಗಡೆ ಅವರಂತೆ ಅನೇಕರಿಗೆ ಮಂಜುನಾಥ ಭಟ್ಟ ಅವರು ವಂಚಿಸಿರುವುದು ಗೊತ್ತಾಯಿತು. ಬ್ಯಾಂಕ್ ಗ್ರಾಹಕರ ಠೇವಣಿ ಮುಚ್ಚಿ, ಎಸ್‌ಎಂಎಸ್ ಅಲರ್ಟ ಸೇವೆ ರದ್ದುಗೊಳಿಸಿ ಗ್ರಾಹಕರಿಗೆ ಠೇವಣಿ ಮುಂದುವರೆದ ಬಗ್ಗೆ ನಕಲಿ ಪ್ರಮಾಣ ಪತ್ರ ನೀಡಿದ ಅನೇಕ ನಿರ್ದಶನಗಳು ಸಿಕ್ಕವು. ಕರ್ನಾಟಕ ಬ್ಯಾಂಕಿನವರು ಇನ್ನಷ್ಟು ಆಳಕ್ಕೆ ತನಿಖೆ ನಡೆಸಿದಾಗ ಒಟ್ಟು 3,51,84.349ರೂ ಹಣಕಾಸಿನ ಅವ್ಯವಹಾರ ಕಾಣಿಸಿತು. ಈ ಎಲ್ಲಾ ಹಣವೂ ಕರ್ನಾಟಕ ಬ್ಯಾಂಕಿನ ಉದ್ಯೋಗಿ ಮಂಜುನಾಥ ಭಟ್ಟರೇ ಕಬಳಿಸಿರುವುದು ನೋಡಿ ಬ್ಯಾಂಕಿನ ಶಾಖಾ ಪ್ರಬಂಧಕ ಶಂಬುಲಿoಗ ಭಟ್ಟ ಅವರು ಆಘಾತಕ್ಕೆ ಒಳಗಾದರು. ಈ ಎಲ್ಲಾ ವಿಷಯಗಳ ಬಗ್ಗೆ ಮೇಲಧಿಕಾರಿಗಳಿಗೆ ಅವರು ಮಾಹಿತಿ ನೀಡಿದ್ದು, ಕೊನೆಗೆ ಮೂರುವರೆ ಕೋಟಿ ರೂ ವಂಚಿಸಿ ಬ್ಯಾಂಕಿಗೆ ಮೂರು ನಾಮ ಹಾಕಿದ ಮಂಜುನಾಥ ಭಟ್ಟರ ವಿರುದ್ಧ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದರು. `ಮಂಜುನಾಥ ಭಟ್ಟ ಒಬ್ಬರೇ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಹಣ ಲೂಟಿ ಹೊಡೆಯುವ ಧೈರ್ಯ ಮಾಡಿರಲಿಕ್ಕಿಲ್ಲ. ಅವರ ಜೊತೆ ಇನ್ನಿತರರು ಶಾಮೀಲಾಗಿದ್ದಾರೆ’ ಎಂಬ ಶಂಕೆಯಿದೆ. ನಿಮ್ಮ ಮೊಬೈಲಿಗೆ ಬ್ಯಾಂಕ್ ಎಸ್‌ಎಎಸ್ ಬರುತ್ತಿದೆಯಾ? ನಿಮ್ಮ ಬಳಿಯಿರುವ ಠೇವಣಿ ಅಸಲಿಯಾ? ನಕಲಿಯಾ? ಈಗಲೇ ಪರಿಕ್ಷಿಸಿಕೊಳ್ಳಿ! - [ಮುಂದುವರೆದ ಮಳೆ: ಶಾಲೆಗೆ ರಜೆ!](https://mobiletime.in/2025/10/continued-rain-school-holiday/): ಕರಾವಳಿ ಭಾಗದಲ್ಲಿ ಭಾರೀ ಪ್ರಮಾಣದ ಗಾಳಿ-ಮಳೆ ಹಿನ್ನಲೆ ಕಾರವಾರದ ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ಪ್ರಾಥಮಿಕ, ಪ್ರೌಢಶಾಲೆಗಳಿಗೆ ಈ ರಜೆ ನಿಯಮ ಅನ್ವಯ ಆಗಲಿದೆ. ಕಾರವಾರ ಕ್ಷೇತ್ರ ಶಿಕ್ಷಣಾಧಿಕಾರಿಗಳು ಈ ರಜೆ ಘೋಷಿಸಿದ್ದಾರೆ. ತಹಶೀಲ್ದಾರರ ಸೂಚನೆ ಮೇರೆಗೆ ರಜೆ ನಿರ್ಣಯ ಮಾಡಿದ್ದಾರೆ. ವಿದ್ಯಾರ್ಥಿಗಳ ಸುರಕ್ಷತೆ ಮತ್ತು ಅನಾಹುತ ತಪ್ಪಿಸಲು ಮುನ್ನೆಚ್ಚರಿಕೆಯ ಕ್ರಮವಾಗಿ ಶನಿವಾರಕ್ಕೆ ಮಾತ್ರ ಸಿಮಿತಗೊಳಿಸಿ ರಜೆ ನೀಡಲಾಗಿದೆ. ಎಂದಿನಂತೆ, ಈ ರಜಾ ಅವಧಿಯ ಪಾಠವನ್ನು ಬೇರೆ‌ ದಿನ ಹೊಂದಾಣಿಕೆ ಮಾಡಿಕೊಳ್ಳಲಾಗುತ್ತದೆ. ಮಕ್ಕಳ ಸುರಕ್ಷತೆ ಬಗ್ಗೆ ಪಾಲಕರು ಗಮನಹರಿಸುವಂತೆ ಸೂಚಿಸಲಾಗಿದೆ. - [2025 ಅಕ್ಟೊಬರ್ 25ರ ದಿನ ಭವಿಷ್ಯ](https://mobiletime.in/2025/10/prediction-for-october-25-2025/): ಮೇಷ ರಾಶಿ: ಧೈರ್ಯದಿಂದ ಮಾತನಾಡಿದರೆ ಮಾತ್ರ ನಿಮ್ಮ ಕೆಲಸ ಆಗುತ್ತದೆ. ಹಣಕಾಸು ವಿಷಯದಲ್ಲಿ ಸ್ನೇಹಿತರ ಸಹಾಯ ಸಿಗಲಿದೆ. ವೃಷಭ ರಾಶಿ: ಕುಟುಂಬದಲ್ಲಿ ಸಮಾಧಾನ ಕಾಣಲಿದೆ. ಕಾರ್ಯದಲ್ಲಿ ಪ್ರತಿಫಲ ಸಿಗಲಿದೆ. ಆತ್ಮವಿಶ್ವಾಸ ಹೆಚ್ಚಾಗುತ್ತದೆ. ಮಿಥುನ ರಾಶಿ: ನಿಮ್ಮ ಹೊಸ ಯೋಜನೆಗಳಿಗೆ ಪ್ರೋತ್ಸಾಹ ಸಿಗಲಿದೆ. ಸಹೋದ್ಯೋಗಿಗಳ ಬೆಂಬಲ ಸಾಧ್ಯವಿದೆ. ಹಣಕಾಸು ಸ್ಥಿರತೆ ಕಾಪಾಡುವುದು ಮುಖ್ಯ. ಕರ್ಕ ರಾಶಿ: ಕಾರ್ಯದಲ್ಲಿ ಸುಧಾರಣೆ ಆಗಲಿದೆ. ಬಂಧುಗಳೊAದಿಗೆ ಸಮಯ ಕಳೆಯಿರಿ. ಹಣಕಾಸಿನ ನಿರ್ವಹಣೆ ಹಾಗೂ ಆರೋಗ್ಯ ಸ್ಥಿರವಾಗಿರಲಿ. ಸಿಂಹ ರಾಶಿ: ಹೊಸ ಯೋಜನೆ ಆರಂಭಕ್ಕೆ ಸೂಕ್ತ ದಿನ. ಕೆಲಸದ ವಿಷಯದಲ್ಲಿ ಸೋಮಾರಿತನ ಬೇಡ. ಆರೋಗ್ಯದಲ್ಲಿ ಚೇತರಿಕೆ ಸಾಧ್ಯವಿದೆ. ಕನ್ಯಾ ರಾಶಿ: ಕೆಲಸದಲ್ಲಿ ನಿಷ್ಠೆ ಅಗತ್ಯ. ಹಣಕಾಸಿನಲ್ಲಿ ಲಾಭ ಆಗಲಿದೆ. ಸಹೋದ್ಯೋಗಿಗಳ ಸಹಾಯ ಸಿಗಲಿದೆ. ತುಲಾ ರಾಶಿ: ನಿಮ್ಮ ಗುರಿ ಈಡೇರಿಕೆಗೆ ಪ್ರಯತ್ನಿಸಿ. ಕೆಲಸ-ಕಾರ್ಯದಲ್ಲಿ ಯಶಸ್ಸು ಖಚಿತ. ಜನ ಸಂಪರ್ಕದಿAದ ಲಾಭ ಆಗಲಿದೆ. ವೃಶ್ಚಿಕ ರಾಶಿ: ಕಠಿಣ ಕೆಲಸಕ್ಕೆ ಫಲ ದೊರೆಯಲಿದೆ. ಹಣ ಲಾಭ ಸಾಧ್ಯವಿದೆ. ಆರೋಗ್ಯದ ಬಗ್ಗೆ ಕಾಳಜಿವಹಿಸಿ ಧನು ರಾಶಿ: ಕುಟುಂಬದಲ್ಲಿ ಸಮಾಧಾನ ಸಿಗಲಿದೆ. ಹಣಕಾಸು ಹೂಡಿಕೆ ಸರಳವಾಗಿರಲಿದೆ. ಸಂತೋಷದ ಕ್ಷಣಗಳನ್ನು ಅನುಭವಿಸುತ್ತೀರಿ. ಮಕರ ರಾಶಿ: ಆರೋಗ್ಯವನ್ನು ಕಾಪಾಡಲು ವ್ಯಾಯಾವ ಅಗತ್ಯ. ಕಾಯಕದಲ್ಲಿ ಶೃದ್ಧೆಯಿರಲಿ. ಸಾಧನೆ ಮಾಡಲು ಇನ್ನಷ್ಟು ಪ್ರಯತ್ನ ಬೇಕು. ಕುಂಭ ರಾಶಿ: ಸಂತೋಷದಿoದ ದಿನ ಕಳೆಯುವಿರಿ. ಸಂಕಟಗಳು ದೂರವಾಗಲಿದೆ. ಆರೋಗ್ಯದಲ್ಲಿ ಬದಲಾವಣೆ ಆಗಲಿದೆ. ಮೀನ ರಾಶಿ: ಅಲಂಕಾರಿಕ ವಿಷಯಗಳ ಬಗ್ಗೆ ಆಸಕ್ತಿ ಮೂಡಲಿದೆ. ಮನಸ್ಸಿನ ಶಾಂತಿಗಾಗಿ ಧ್ಯಾನ ಮಾಡಿ. ವ್ಯಾಯಾಮವೂ ನಿಮಗೆ ಅನುಕೂಲಕರ. - [ಮುರಿದು ಬಿದ್ದ ಮಾವಿನ ಮರ: ಗಾಳಿ ಮಳೆಗೆ ಸಿಲುಕಿದ ಬೈಕ್ ತತ್ತರ!](https://mobiletime.in/2025/10/a-broken-mango-tree-a-bike-caught-in-the-wind-and-rain-is-left-reeling/): ಕರಾವಳಿ ಭಾಗದಲ್ಲಿ ಭಾರೀ ಪ್ರಮಾಣದ ಗಾಳಿ-ಮಳೆಯಾಗುತ್ತಿದ್ದು, ಕಾರವಾರದಲ್ಲಿ ಮಾವಿನ ಮರವೊಂದು ಬಿದ್ದು 15ಕ್ಕೂ ಅಧಿಕ ಬೈಕ್ ಜಖಂ ಆಗಿದೆ. ಈ ಅವಧಿಯಲ್ಲಿ ಮರದ ಅಡಿ ನಿಂತಿದ್ದ ಹಸು ಸಾವನಪ್ಪಿದೆ. ಶುಕ್ರವಾರ ಮಧ್ಯಾಹ್ನ ಸುರಿದ ಮಳೆಗೆ ಕಾರವಾರದ ಬಿಣಗಾ ಹಾಗೂ ಸುತ್ತಲಿನ ಪ್ರದೇಶದ ಜನ ಸಂಕಷ್ಟ ಅನುಭವಿಸಿದರು. ಲಿಟಲ್ ಬಿಣಗಾ ತೆರಳುವ ಮಾರ್ಗದಲ್ಲಿ ಮರವೊಂದು ಮುರಿದು ಬಿದ್ದಿತು. ನೇವಿ ಗೇಟಿನ ಬಳಿ ನಿಲ್ಲಿಸಿದ್ದ 15ಕ್ಕೂ ಅಧಿಕ ಬೈಕುಗಳು ಮರದ ಅಡಿ ಸಿಲುಕಿದವು. ಆ ಬೈಕುಗಳೆಲ್ಲವೂ ಜಖಂ ಆಗಿದೆ. ಮರ ಬಿದ್ದಾಗ ಅಲ್ಲಿದ್ದ ಹಸುವೊಂದು ಮೋರಿಗೆ ಬಿದ್ದು ಸಾವನಪ್ಪಿದೆ. ಇನ್ನೊಂದು ಹಸುವಿಗೆ ಗಂಭೀರ ಪ್ರಮಾಣದಲ್ಲಿ ಪೆಟ್ಟಾಗಿದೆ. ಜಖಂ ಆದ ಬೈಕುಗಳು ನೌಕಾನೆಲೆಗೆ ಕೆಲಸಕ್ಕೆ ತೆರಳುವ ಸಿಬ್ಬಂದಿಯದ್ದಾಗಿದೆ. ಅಗ್ನಿಶಾಮಕ ಸಿಬ್ಬಂದಿ, ಪೊಲೀಸರು, ನೌಕಾ ಸಿಬ್ಬಂದಿ ಜೊತೆ ಐಆರ್‌ಬಿ ಕಂಪನಿ ಕೆಲಸಗಾರರು ಸೇರಿ ಮರ ತೆರವು ಕಾರ್ಯಾಚರಣೆ ನಡೆಸಿದ್ದಾರೆ. - [ಕಾಳಸಂತೆಯಲ್ಲಿ ಸಿಗುವ ಸರ್ಕಾರಿ ಅಕ್ಕಿಗೆ ಕಡಿವಾಣ!](https://mobiletime.in/2025/10/government-rice-available-in-kalasante-is-being-restricted/): ಸರ್ಕಾರ ಬಡವರಿಗೆ ವಿತರಿಸುವ ಅಕ್ಕಿಯನ್ನು ಕದ್ದು ಸಾಗಿಸುತ್ತಿದ್ದ ಏಳು ಜನ ಭಟ್ಕಳ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ. ಪಡಿತರ ಯೋಜನೆಯ ಅಕ್ಕಿಯನ್ನು ಅಕ್ರಮವಾಗಿ ಸಂಗ್ರಹಿಸಿ ಸಾಗಿಸುತ್ತಿರುವವರ ಮೇಲೆ ಪೊಲೀಸರು ಕಾನೂನು ಕ್ರಮ ಜರುಗಿಸಿದ್ದಾರೆ. ಸಿಪಿಐ ಮಂಜುನಾಥ ಲಿಂಗಾರೆಡ್ಡಿ ಅವರ ನೇತೃತ್ವದಲ್ಲಿ ಈ ಕಾರ್ಯಾಚರಣೆ ನಡೆದಿದ್ದು, ಆಹಾರ ನಿರೀಕ್ಷಕ ಉದಯ ತಳವಾರ ಅವರು ಕಳ್ಳರನ್ನು ಹುಡುಕಿಕೊಟ್ಟಿದ್ದಾರೆ. ಭಟ್ಕಳ ಗಣೇಶ ನಗರದ ಸಮೀರ ಮುಗಳಿಹೊಂಡ, ಮಾಗಡಿ ರಾಮನಗರದ ಮಲ್ಲಿಕಾರ್ಜುನ ಆರ್, ತುಮಕೂರಿನ ನಿತೀನ ಹೆಚ್ ಎನ್ ಹಾಗೂ ಭಟ್ಕಳ ಗಣೇಶ ನಗರದ ಸಬೂಲ್ ಮುಗಳಿಹೊಂಡ ಅಕ್ರಮ ಅಕ್ಕಿ ಸಾಗಾಟದ ವೇಳೆ ಸಿಕ್ಕಿಬಿದ್ದಿದ್ದಾರೆ. ಈ ದಾಳಿಯಲ್ಲಿ 228 ಚೀಲಗಳಲ್ಲಿ ಒಟ್ಟು 11,400 ಕ್ವಿಂಟಲ್ ಅಕ್ಕಿ ಅಕ್ರಮ ಸಾಗಾಟವಾಗುತ್ತಿರುವುದನ್ನು ತಡೆಯಲಾಗಿದೆ. ಈ ಅಕ್ಕಿಯ ಮೌಲ್ಯ ಸುಮಾರು 3,87,600 ರೂಪಾಯಿಗಳಾಗಿದೆ. ಅಕ್ರಮವಾಗಿ ಅಕ್ಕಿ ಸಾಗಾಟಕ್ಕೆ ಬಳಸಿದ್ದ ಅಶೋಕ ಲೈಲೆಂಡ್ ಲಾರಿ, ಮಾರುತಿ ಓಮ್ಮಿ ಮತ್ತು ಅಶೋಕ ಲೈಲೆಂಡ್ ದೋಸ್ತ್ ವಾಹನಗಳನ್ನು ಪೊಲೀಸರು ಜಪ್ತು ಮಾಡಿದ್ದಾರೆ. ಈ ಕುರಿತು ಆಹಾರ ನಿರೀಕ್ಷಕ ಉದಯ ತಳವಾರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ತನಿಖೆ ನಡೆಯುತ್ತಿದೆ. - [ವಾಟ್ಸಪ್ ಸಂದೇಶ ತಂದಿತು ಸಂಕಷ್ಟ!](https://mobiletime.in/2025/10/a-whatsapp-message-brought-trouble/): ಯಲ್ಲಾಪುರ ಪಟ್ಟಣ ಪಂಚಾಯತ ಸದಸ್ಯ ಸೋಮೇಶ್ವರ ನಾಯ್ಕ ಅವರು ಮಹಿಳೆಯೊಬ್ಬರಿಗೆ ಮೆಸೆಜ್ ಮಾಡಿದ್ದಾರೆ. ಇದನ್ನು ಸಹಿಸದ ಮಹಿಳೆ ಮೆಸೆಜ್ ಮಾಡಿದ ಬಗ್ಗೆ ಆಕ್ಷೇಪಿಸಿ ಪೊಲೀಸ್ ದೂರು ನೀಡಿದ್ದಾರೆ. ಸೋಮೇಶ್ವರ ನಾಯ್ಕ ಅವರು ಯಲ್ಲಾಪುರದ ರವೀಂದ್ರ ನಗರವನ್ನು ಪ್ರತಿನಿಧಿಸಿ ಪಟ್ಟಣ ಪಂಚಾಯತ ಸದಸ್ಯರಾಗಿದ್ದಾರೆ. ಅವರ ವಿರುದ್ಧ ಇದೀಗ ಮಹಿಳೆಯೊಬ್ಬರಿಗೆ ಅಶ್ಲೀಲ ಮೆಸೆಜ್ ಮಾಡಿದ ಆರೋಪ ಎದುರಾಗಿದೆ. ವಾಟ್ಸಪ್ ಮೂಲಕ ಕೆಟ್ಟದಾಗಿ ಮೆಸೆಜ್ ಮಾಡಿದ ಬಗ್ಗೆ ಸಂತ್ರಸ್ತೆ ದೂರಿದ್ದಾರೆ. `ಯಲ್ಲಾಪುರದ ರವೀಂದ್ರನಗರದ ಪಟ್ಟಣ ಪಂಚಾಯಿತಿ ಸದಸ್ಯ ಸೋಮೇಶ್ವರ ನಾಯ್ಕ (ಸೋಮು ನಾಯ್ಕ) ತನಗೆ ವಾಟ್ಸಪ್ ನಲ್ಲಿ ಅಶ್ಲೀಲ ಮೆಸೆಜ್ ಕಳುಹಿಸಿದ್ದಾರೆ. ಆ ಮೂಲಕ ಲೈಂಗಿಕ ಕಿರುಕುಳ ನೀಡಿದ್ದಾರೆ’ ಎಂದು ಮಹಿಳೆ ಯಲ್ಲಾಪುರ ಪೊಲೀಸರಲ್ಲಿ ಅಳಲು ತೋಡಿಕೊಂಡಿದ್ದಾರೆ. ಈ ಹಿನ್ನಲೆ ಪೊಲೀಸರು ಸೋಮೇಶ್ವರ ನಾಯ್ಕ ಅವರ ವಿರುದ್ಧ ಪ್ರಕರಣ ದಾಖಲಿಸಿದ್ದು, ತನಿಖೆ ಶುರು ಮಾಡಿದ್ದಾರೆ. - [ಬಾಲಕಿಯನ್ನು ಬೆತ್ತಲೆಗೊಳಿಸಿದ ಫೇಸ್ಬುಕ್ ಪ್ರೀತಿ!](https://mobiletime.in/2025/10/facebook-love-that-made-a-girl-naked/): ಫೇಸ್ಬುಕ್ ಹಾಗೂ ಇನಸ್ಟಾಗ್ರಾಂ ಮೂಲಕ ಪರಿಚಿತರಾದ ಮೂವರು ಹೊನ್ನಾವರದ ಬಾಲಕಿಯನ್ನು ಫುಸಲಾಯಿಸಿ ಆಕೆಯನ್ನು ಅಮಾನವೀಯ ರೀತಿಯಲ್ಲಿ ಬಳಸಿಕೊಂಡಿದ್ದಾರೆ. ದೈಹಿಕ ಸಂಪರ್ಕಕ್ಕೆ ಒಳಗಾದ ಬಾಲಕಿ ಗರ್ಭಿಣಿಯಾಗಿದ್ದು, ಆ ಮೂವರನ್ನು ಪೊಲೀಸರು ವಶಕ್ಕೆಪಡೆದು ವಿಚಾರಣೆ ನಡೆಸಿದ್ದಾರೆ. ಬಾಲಕಿಯೊಬ್ಬರಿಗೆ ಸಾಮಾಜಿಕ ಜಾಲತಾಣದ ಮೂಲಕ ಹೊನ್ನಾವರದ ಮಾವಿನಕೂರ್ವಾದ ಅಭಿ ಗೌಡ (22) ಕವಲಕ್ಕಿಯ ಹೇಮಂತ ನಾಯ್ಕ (21) ಹಾಗೂ ಗೇರುಸೊಪ್ಪ ಮೂಲದ ಸದ್ಯ ಇಡಗುಂಜಿಯಲ್ಲಿ ವಾಸವಿರುವ ದೇವೇಂದ್ರ ನಾಯ್ಕ (26) ಪರಿಚಯವಾಗಿದೆ. ಎರಡು ತಿಂಗಳ ಹಿಂದೆ ಪರಿಚಿತರಾದ ಸ್ನೇಹಿತರ ಜೊತೆ ಬಾಲಕಿ ಅಲ್ಲಿ-ಇಲ್ಲಿ ಸುತ್ತಾಟ ಮಾಡಿದ್ದು, ಅಭಿ ಗೌಡ ಅವರು ಬಾಲಕಿಯನ್ನು ತಮ್ಮ ಕಾರಿನಲ್ಲಿ ಕರೆದೊಯ್ದಿದ್ದಾರೆ. ಅಭಿ ಗೌಡ ಅವರು ಬಾಲಕಿಯನ್ನು ಮೊದಲು ದೈಹಿಕವಾಗಿ ಬಳಸಿಕೊಂಡಿದ್ದಾರೆ. ನoತರ ಹೇಮಂತ ನಾಯ್ಕ ಅವರು ಬಾಲಕಿಯನ್ನು ಮುರ್ಡೇಶ್ವರದ ಲಾಡ್ಜ್’ಗೆ ಕರೆದೊಯ್ದು ಅನಾಚಾರ ಮಾಡಿದ್ದು, ಇದೇ ವೇಳೆ ದೇವೇಂದ್ರ ನಾಯ್ಕ ಸಹ ಬಾಲಕಿಯ ಜೊತೆ ಸರಸವಾಡಿದ ಬಗ್ಗೆ ದೂರಲಾಗಿದೆ. ಅದಾದ ನಂತ ಇಕೋ ಬೀಚ್‌ನಲ್ಲಿ ಅಪ್ರಾಪ್ತೆ ಜೊತೆ ಆರೋಪಿತರು ದೈಹಿಕ ಸಂಪರ್ಕ ನಡೆಸಿದ ಬಗ್ಗೆ ವಿಚಾರಣೆ ನಡೆಯುತ್ತಿದೆ. ಕೆಲವು ದಿನಗಳ ಹಿಂದೆ ಅಪ್ರಾಪ್ತೆಯ ಆರೋಗ್ಯದಲ್ಲಿ ವ್ಯತ್ಯಾಸವಾಗಿದೆ. ಆ ವೇಳೆ ಬಾಲಕಿ ತಾಯಿ ಜೊತೆ ವೈದ್ಯಕೀಯ ಪರೀಕ್ಷೆಗೆ ಹೋದಾಗ ಗರ್ಭಧಾರಣೆಯಾಗಿರುವುದು ದೃಢಪಟ್ಟಿದೆ. ವಿಚಾರಣೆ ವೇಳೆ ಅಪ್ರಾಪ್ತೆಯು ಮೂವರು ನಡೆಸಿದ ಕಾಮದಾಟದ ಬಗ್ಗೆ ಹೇಳಿಕೆ ನೀಡಿದ್ದು, ಅದೇ ಆಧಾರದಲ್ಲಿ ಪೊಲೀಸರು ಪೊಕ್ಸೋ ಕಾಯ್ದೆ ಅಡಿ ಪ್ರಕರಣ ದಾಖಲಿಸಿದ್ದಾರೆ. - [ಸ್ಕೂಟರ್ ಡಿಕ್ಕಿಯಲ್ಲಿ ಲಕ್ಷ ರೂ ಕಾಸು!](https://mobiletime.in/2025/10/one-lakh-rupees-lost-in-scooter-collision/): ವಿದೇಶಿ ನೋಟುಗಳನ್ನು ಅಕ್ರಮವಾಗಿ ವಿನಿಮಯ ಮಾಡುತ್ತಿದ್ದ ಜಾಲವನ್ನು ಭಟ್ಕಳ ಪೊಲೀಸರು ಹಿಡಿದಿದ್ದಾರೆ. ಗೋವಾದಿಂದ ಭಟ್ಕಳಕ್ಕೆ ಸ್ಕೂಟರಿನಲ್ಲಿ ಸಾಗಾಟವಾಗುತ್ತಿದ್ದ 8 ಲಕ್ಷ ರೂ ಮೌಲ್ಯದ 156 ವಿದೇಶಿ ಕರೆನ್ಸಿಯ ನೋಟುಗಳು ಪೊಲೀಸರಿಗೆ ಸಿಕ್ಕಿದೆ. ಭಟ್ಕಳದ ಚಿನ್ನದಪಳ್ಳಿ ಬಳಿಯ ಹೌಸ್ ಮುಸ್ಟಾ ಸ್ಟಿಟ್ ರುಕ್ಮುದ್ದಿನ್ ಸುಲ್ತಾನ್ ಭಾಷಾ ಅವರು THE UNITED STATES OF AMERICA ಎಂದು ಬರೆದ ನೋಟುಗಳನ್ನು ಸಾಗಿಸುತ್ತಿದ್ದರು. ಅಕ್ಟೊಬರ್ 22ರ ರಾತ್ರಿ ಭಟ್ಕಳದ ಪೊಲೀಸ್ ನಿರೀಕ್ಷಕ ದಿವಾಕರ ಪಿ ಎಂ ಅವರು ರುಕ್ಮುದ್ದಿನ್ ಸುಲ್ತಾನ್ ಭಾಷಾ ಅವರ ಸ್ಕೂಟರ್ ತಪಾಸಣೆ ನಡೆಸಿದರು. ಆಗ ಅಕ್ರಮವಾಗಿ ವಿದೇಶಿ ಕರೆನ್ಸಿ ಸಾಗಾಟ ಪ್ರಕರಣ ಬೆಳಕಿಗೆ ಬಂದಿತು. ಈ ನೋಟುಗಳ ಸಾಗಾಣಿಕೆಗೆ ಪರವಾನಿಗೆ ಒದಗಿಸುವಂತೆ ಪೊಲೀಸರು ಕೋರಿದರು. ಆದರೆ, ರುಕ್ಮುದ್ದಿನ್ ಸುಲ್ತಾನ್ ಭಾಷಾ ಅವರ ಬಳಿ ಯಾವುದೇ ಅನುಮತಿ ಪತ್ರಗಳಿರಲಿಲ್ಲ. ಪೊಲೀಸರು ತೀವೃವಾಗಿ ವಿಚಾರಣೆ ನಡೆಸಿದಾಗ ಈ ನೋಟುಗಳನ್ನು ಭಟ್ಕಳದ ಕಪ್ಪಾ ಮಜೀದ್ ಅವರಿಗೆ ಕೊಡಲು ತಂದಿರುವುದಾಗಿ ಅವರು ಬಾಯ್ಬಿಟ್ಟರು. ರುಕ್ಮುದ್ದಿನ್ ಸುಲ್ತಾನ್ ಭಾಷಾ ಹಾಗೂ ಕಪ್ಪಾ ಮಜೀದ್ ಯಾವ ಉದ್ದೇಶಕ್ಕಾಗಿ ವಿದೇಶಿ ನೋಟುಗಳ ಹಿಂದೆ ಬಿದ್ದಿದ್ದಾರೆ? ಎನ್ನುವುದರ ಬಗ್ಗೆ ವಿಚಾರಣೆ ನಡೆಯುತ್ತಿದೆ. ಪೊಲೀಸರು ಅವರಿಬ್ಬರ ವಿರುದ್ಧವೂ ಪ್ರಕರಣ ದಾಖಲಿಸಿದ್ದು, ತನಿಖೆ ನಡೆಸುತ್ತಿದ್ದಾರೆ. - [ಬೆನ್ನುನೋವು ಸಹಿಸದೇ ಸಾವನಪ್ಪಿದ ಕೃಷಿಕ!](https://mobiletime.in/2025/10/a-farmer-died-from-back-pain/): ಆರು ತಿಂಗಳ ಬೆನ್ನು ನೋವು ಹಾಗೂ ಮೂರು ತಿಂಗಳ ಜಾಂಡಿಸ್ ಸಹಿಸಿಕೊಳ್ಳಲಾಗದ ಸಿದ್ದಾಪುರದ ಕೃಷಿಕ ಕಿರಣಕುಮಾರ ಆಲಳ್ಳಿಮಠ ಅವರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಕಳೆನಾಶಕ ಸೇವಿಸಿ ಒದ್ದಾಡುತ್ತಿದ್ದ ಅವರನ್ನು ಎರಡು ಆಸ್ಪತ್ರೆಗೆ ದಾಖಲಿಸಿದರೂ ಪ್ರಯೋಜನವಾಗಲಿಲ್ಲ. ಸಿದ್ದಾಪುರದ ಇಟಗಿಯ ಕಿರಣಕುಮಾರ ಆಲಳ್ಳಿಮಠ ಅವರು ಉತ್ತಮ ಕೃಷಿಕರಾಗಿದ್ದರು. ಆದರೆ, ಆರು ತಿಂಗಳ ಹಿಂದೆ ಅವರಿಗೆ ಬೆನ್ನು ನೋವು ಕಾಣಿಸಿಕೊಂಡಿತು. ಸಿದ್ದಾಪುರ, ಶಿವಮೊಗ್ಗ, ಮಂಗಳೂರು ಸೇರಿ ವಿವಿಧ ಕಡೆ ಅವರು ಚಿಕಿತ್ಸೆಪಡೆದರು. ಆದರೆ, ಅದರಿಂದ ಪ್ರಯೋಜನವಾಗಲಿಲ್ಲ. ಮೂರು ತಿಂಗಳ ಹಿಂದೆ ಕಿರಣಕುಮಾರ ಆಲಳ್ಳಿಮಠ ಅವರಿಗೆ ಬಿಳಿ ಜಾಂಡಿಸ್ ಕಾಡಿತು. ಆಗಲೂ ಅವರು ಸಿದ್ದಾಪುರ, ಸಾಗರ ಮಂಗಳೂರು ಆಸ್ಪತ್ರೆ ಅಲೆದಾಟ ಮಾಡಿದರು. ಆದರೆ, ಅದರಿಂದ ಯಾವ ಪ್ರಯೋಜನವೂ ಆಗದ ಕಾರಣ ಅಕ್ಟೊಬರ್ 19ರಂದು ತೋಟಕ್ಕೆ ಹೋಗಿ ಕಳೆನಾಶಕ ಸೇವಿಸಿದರು. ಅಸ್ವಸ್ಥಗೊಂಡ ಅವರನ್ನು ಸಾಗರದ ಸಮುಖ ಆಸ್ಪತ್ರೆಗೆ ದಾಖಲು ಮಾಡಲಾಯಿತು. ಅಕ್ಟೊಬರ್ 20ರಂದು ಮಂಗಳೂರಿನ ಎಜೆ ಆಸ್ಪತ್ರೆ ಸಾಗಿಸಲಾಯಿತು. ಆದರೆ, ಈ ಎರಡೂ ಆಸ್ಪತ್ರೆಯ ಚಿಕಿತ್ಸೆಗೆ ಕಿರಣಕುಮಾರ ಅವರು ಸ್ಪಂದಿಸಲಿಲ್ಲ. ಅಕ್ಟೊಬರ್ 23ರಂದು ಅವರು ಸಾವನಪ್ಪಿದರು. ಕಿರಣಕುಮಾರ ಅವರ ತಂದೆ ಮಲ್ಲಿಕಾರ್ಜುನ ಆಲಳ್ಳಿಮಠ ಅವರು ಈ ಬಗ್ಗೆ ಸಿದ್ದಾಪುರ ಪೊಲೀಸರಿಗೆ ಮಾಹಿತಿ ನೀಡಿ, ಪ್ರಕರಣ ದಾಖಲಿಸಿದರು. - [ಭೂ ವ್ಯಾಜ್ಯ: ಕೋರ್ಟಿಗೆ ಹೋದ ಆಟೋ ಚಾಲಕನಿಗೆ ಹಿಗ್ಗಾಮುಗ್ಗ ಥಳಿತ!](https://mobiletime.in/2025/10/land-dispute-auto-driver-brutally-beaten-up-for-going-to-court/): ಶಿರಸಿಯ ಆಟೋ ಚಾಲಕ ಶರತ್ ಪಾವಸ್ಕರ್ ಅವರನ್ನು ಅವರ ಅಕ್ಕನ ಮಕ್ಕಳಾದ ಆದಿತ್ಯ ಅಲಗೇರಿಕರ್ ಹಾಗೂ ಆದರ್ಶ ಅಲಗೇರಿಕರ್ ಸೇರಿ ಥಳಿಸಿದ್ದಾರೆ. ಈಗಾಗಲೇ ಭೂ ವ್ಯಾಜ್ಯದ ವಿಷಯವಾಗಿ ಕೋರ್ಟು-ಕಚೇರಿ ಅಲೆದಾಡುತ್ತಿರುವ ಶರತ್ ಪಾವಸ್ಕರ್ ಅವರು ಇದೀಗ ಮತ್ತೊಮ್ಮೆ ನ್ಯಾಯಾಲಯದ ಮೊರೆ ಹೋಗಿದ್ದು, ಆದಿತ್ಯ ಅಲಗೇರಿಕರ್ ಹಾಗೂ ಆದರ್ಶ ಅಲಗೇರಿಕರ್ ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹಿಸಿದ್ದಾರೆ. ಶಿರಸಿಯ ಆಟೋ ಚಾಲಕ ಶರತ್ ಪಾವಸ್ಕರ್ ಅವರು ನರಬೈಲಿನ ಸರ್ವೇ ನಂ 6ರಲ್ಲಿ ಭೂಮಿ ಹೊಂದಿದ್ದಾರೆ. ಅಲ್ಲಿಯೇ ಅವರು ಮನೆ ನಿರ್ಮಿಸಿಕೊಂಡು ವಾಸವಾಗಿದ್ದಾರೆ. ಆದರೆ `ಆ ಮನೆ ತಮಗೆ ಸೇರದ್ದು’ ಎಂದು ಅದೇ ಊರಿನಲ್ಲಿರುವ ಅವರ ಅಕ್ಕ ನಂದಾ ಅವರು ಕಿರಿಕಿರಿ ಮಾಡುತ್ತಿದ್ದಾರೆ. ಅಕ್ಕನ ಮಕ್ಕಳಾದ ಆದಿತ್ಯ ಅಲಗೇರಿಕರ್ ಹಾಗೂ ಆದರ್ಶ ಅಲಗೇರಿಕರ್ ಸಹ ಆಸ್ತಿಗಾಗಿ ಜಗಳಕ್ಕೆ ಬರುತ್ತಿದ್ದು, ತಂಟೆ-ತಕರಾರಿನಿAದಾಗಿ ಶರತ್ ಪಾವಸ್ಕರ್ ಅವರು ಸಮಸ್ಯೆಗೆ ಸಿಲುಕಿದ್ದಾರೆ. ಇದೇ ಭೂ ವ್ಯಾಜ್ಯದ ವಿಷಯವಾಗಿ ಶರತ್ ಪಾವಸ್ಕರ್ ಅವರು ನ್ಯಾಯಾಲಯದಲ್ಲಿ ದಾವೆ ಹೂಡಿದ್ದು, ಅದರ ವಿಚಾರಣೆ ನಡೆಯುತ್ತಿದೆ. ನ್ಯಾಯಾಲಯದ ಮೊರೆ ಹೋದ ಶರತ್ ಪಾವಸ್ಕರ್ ಅವರ ವಿರುದ್ದ ಆದಿತ್ಯ ಅಲಗೇರಿಕರ್ ಹಾಗೂ ಆದರ್ಶ ಅಲಗೇರಿಕರ್ ಅವರ ಸಿಟ್ಟು ಹೆಚ್ಚಾಗಿದೆ. ಅದೇ ಸಿಟ್ಟಿನಲ್ಲಿ ಆದರ್ಶ ಅಲಗೇರಿಕರ್ ಅವರು ಅಕ್ಟೊಬರ್ 14ರಂದು ಶರತ್ ಪಾವಸ್ಕರ್ ಅವರ ಮನೆ ಬಳಿ ಬಂದು ಗಲಾಟೆ ಮಾಡಿದ್ದಾರೆ. ಮನೆ ಮುಂದಿನ ಬೇಲಿ ಮುರಿದು ರಂಪಾಟ ನಡೆಸಿದ್ದಾರೆ. ಅದರೊಂದಿಗೆ ಶರತ್ ಪಾವಸ್ಕರ್ ಅವರ ಆಟೋ ಸಂಚಾರಕ್ಕೆ ತೊಂದರೆ ಆಗುವಂತೆ ಅಲ್ಲಿ ಬೇಲಿ ಗೂಟ ನೆಟ್ಟಿದ್ದಾರೆ. ಆ ಗೂಟ ತೆಗೆಯಲು ಹೋದಾಗ ಆದಿತ್ಯ ಅವರು ಮಾವನ ಕಪಾಳಕ್ಕೆ ಬಾರಿಸಿದ್ದಾರೆ. ಆದರ್ಶ ಅವರು ಈ ವೇಳೆ ಕೈಯಿಂದ ಗುದ್ದಿ ನೋವು ಮಾಡಿದ್ದಾರೆ. ಅವರಿಬ್ಬರು ಸೇರಿ ಶರತ್ ಪಾವಸ್ಕರ್ ಅವರನ್ನು ನೆಲಕ್ಕೆ ಬೀಳಿಸಿದ್ದಾರೆ. ಈ ಎಲ್ಲಾ ವಿಷಯದ ಬಗ್ಗೆ ಶರತ್ ಪಾವಸ್ಕರ್ ಅವರು ಪೊಲೀಸರಿಗೆ ದೂರಿದ್ದು, ಅದಾದ ನಂತರ ನ್ಯಾಯಾಲಯದ ಮೊರೆ ಹೋಗಿ ಅಕ್ಕನ ಮಕ್ಕಳ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. `ಸಣ್ಣ-ಪುಟ್ಟ ವ್ಯಾಜ್ಯಗಳನ್ನು ರಾಜಿಮೂಲಕ ಬಗೆಹರಿಸಿ. ರಾಜಿ ಸಂದಾನಕ್ಕಾಗಿ ಲೋಕ ಅದಾಲತಿನಲ್ಲಿ ಭಾಗವಹಿಸಿ - [ಮಗಳ ಮೇಲೆ ಕೈ ಮಾಡಿದ ಕೊರಗು: ವಿಷ ಕುಡಿದ ಚಾಲಕ!](https://mobiletime.in/2025/10/a-driver-who-was-drunk-and-abused-his-daughter/): ಅಂಕೋಲಾದಲ್ಲಿ ಚಾಲಕರಾಗಿದ್ದ ಮಹಾಂತೇಶ ಮಕಮನಿ ಅವರು ಮಗಳ ಮೇಲೆ ಕೈ ಮಾಡಿದ್ದಾರೆ. ಮಗಳಿಗೆ ಹೊಡೆದ ನೋವು ತಾಳಲಾರದೇ ಅವರು ವಿಷ ಸೇವಿಸಿ ಸಾವನಪ್ಪಿದ್ದಾರೆ. ಅಂಕೋಲಾದ ಬಾಳೆಗುಳಿಯಲ್ಲಿ ಮಹಾಂತೇಶ ಮಕಮನಿ (40) ಅವರು ವಾಸವಾಗಿದ್ದರು. ಚಾಲಕರಾಗಿ ಅವರು ಕೆಲಸ ಮಾಡಿಕೊಂಡಿದ್ದರು. ಮಹಾಂತೇಶ ಮಕಮನಿ ಅವರ ವಿರುದ್ಧ ನ್ಯಾಯಾಲಯದಲ್ಲಿ ಪ್ರಕರಣವೊಂದು ಬಾಕಿಯಿದ್ದು, ಸದಾ ಅದೇ ಗುಂಗಿನಲ್ಲಿರುತ್ತಿದ್ದರು. ಅಕ್ಟೊಬರ್ 3ರಂದು ಬೆಳಗ್ಗೆ ಅವರು ತಮ್ಮ ಜೊತೆಯಿದ್ದ ಮಗಳ ಮೇಲೆ ಕೈ ಮಾಡಿದರು. ಸಿಟ್ಟಿನಲ್ಲಿ ಮಗಳ ಮೇಲೆ ಕೈ ಮಾಡಿ ಗಲಾಟೆ ಮಾಡಿದರು. ಅದಾದ ನಂತರ ಮಗಳಿಗೆ ಹೊಡೆದ ಕೊರಗು ಮಹಾಂತೇಶ ಮಕಮನಿ ಅವರನ್ನು ಕಾಡಿಸಲು ಶುರುವಾಯಿತು. ತಮ್ಮನ್ನು ತಾವು ಸಮಾಧಾನ ಮಾಡಿಕೊಳ್ಳಲು ಸಾಧ್ಯವಾಗದ ಅವರು ಆತ್ಮಹತ್ಯೆಯ ನಿರ್ಧಾರ ಮಾಡಿದರು. ಬಾಳೆಗುಳಿಯ ಮನೆಯಲ್ಲಿ ತಂದಿರಿಸಿದ್ದ ಕ್ರಿಮಿನಾಶಕ ಸೇವಿಸಿದರು. ಇದನ್ನು ನೋಡಿದ ಕುಟುಂಬದವರು ತಕ್ಷಣ ಅವರನ್ನು ಅಂಕೋಲಾದ ಆಸ್ಪತ್ರೆಗೆ ಸಾಗಿಸಿದರು. ಮಹಾಂತೇಶ ಮಕಮನಿ ಅವರ ಪರಿಸ್ಥಿತಿ ಗಂಭೀರವಾಗಿದ್ದ ಕಾರಣ ಅವರನ್ನು ಅಂಕೋಲಾದಿoದ ಕಾರವಾರ ಜಿಲ್ಲಾಸ್ಪತ್ರೆಗೆ ಕಳುಹಿಸಲಾಯಿತು. ಅಲ್ಲಿ ಚಿಕಿತ್ಸೆ ನೀಡಿದ ವೈದ್ಯರು ಹುಬ್ಬಳ್ಳಿಯ ಕಿಮ್ಸ್’ಗೆ ಶಿಫಾರಸ್ಸು ಮಾಡಿದರು. ಕಿಮ್ಸ ಆಸ್ಪತ್ರೆಯಲ್ಲಿ ಮಹಾಂತೇಶ ಮಕಮನಿ ಅವರಿಗೆ ಚಿಕಿತ್ಸೆ ಮುಂದುವರೆದಿತ್ತು. ಆದರೆ, 14 ದಿನಗಳ ನಿರಂತರ ಚಿಕಿತ್ಸೆಯಿಂದ ಅವರು ಚೇತರಿಸಿಕೊಳ್ಳಲಿಲ್ಲ. ಅಕ್ಟೊಬರ್ 22ರಂದು ಹುಬ್ಬಳ್ಳಿ ಆಸ್ಪತ್ರೆಯಲ್ಲಿಯೇ ಮಹಾಂತೇಶ ಮಕಮನಿ ಅವರು ಕೊನೆಯುಸಿರೆಳೆದರು. ಬಾಗಲಕೋಟೆಯ ಗುಳೆದಗಟ್ಟದಲ್ಲಿರುವ ಮಹಾಂತೇಶ ಮಕಮನಿ ಅವರ ತಂದೆ ನಾರಾಯಣ ಮಕಮನಿ ಅವರು ಮಗನ ಸಾವಿನ ಬಗ್ಗೆ ವಿಚಾರಿಸಿದರು. ಕೋರ್ಟ ಪ್ರಕರಣದ ಬೇಸರದಲ್ಲಿ ಅವರು ಮಗಳ ಮೇಲೆ ಕೈ ಮಾಡಿರುವ ವಿಚಾರ ತಿಳಿಯಿತು. ವಿಷ ಪ್ರಾಷನದಿಂದ ಮಗ ಸಾವನಪ್ಪಿರುವುದನ್ನು ಅರಿತ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದು, ಅಂಕೋಲಾ ಪೊಲೀಸರು ಪ್ರಕರಣ ದಾಖಲಿಸಿದರು. - [ಕೆಸರು ಗದ್ದೆಯಲ್ಲಿ ಸಿಕ್ಕಿತು ಸೈನಿಕನ ಶವ!](https://mobiletime.in/2025/10/soldiers-body-found-in-a-muddy-field/): ಕಾರವಾರದ ಕೆಸರು ಗದ್ದೆಯಲ್ಲಿ ಮಾಜಿ ಸೈನಿಕರೊಬ್ಬರ ಶವ ಸಿಕ್ಕಿದೆ. ಅಮದಳ್ಳಿಯ ಬಳಿ ಶವ ನೋಡಿದ ಜನ ಸ್ಥಳಕ್ಕೆ ಪೊಲೀಸರನ್ನು ಕರೆಯಿಸಿದ್ದಾರೆ. ಶುಕ್ರವಾರ ಮಧ್ಯಾಹ್ನ ಅಮದಳ್ಳಿ ಗ್ರಾಮದಲ್ಲಿ ಅದೇ ಊರಿನ ಮಾಜಿ ಸೈನಿಕ ರವಿ ಗಾಂವಕರ (44) ಅವರು ಸಾವನಪ್ಪಿದ್ದಾರೆ. ಕಾರವಾರ ಗ್ರಾಮೀಣ ಪೊಲೀಸ್ ಠಾಣೆಯ ಸಿಬ್ಬಂದಿ ಶವ ಸಿಕ್ಕ ಜಾಗ ಪರಿಶೀಲನೆ ನಡೆಸಿದ್ದಾರೆ. ಸ್ಥಳದಲ್ಲಿ ಜನರು ಜಮಾಯಿಸುತ್ತಿದ್ದು, ಮಾಜಿ ಸೈನಿಕನ ಸಾವಿನ ಬಗ್ಗೆ ಚರ್ಚೆ ನಡೆದಿದೆ. ಕೆಸರು ಗದ್ದೆಯ ರಾಡಿಯಲ್ಲಿ ರವಿ ಗಾಂವಕರ ಅವರ ಶವ ಸಿಕ್ಕಿದ್ದು, ಸದ್ಯ ಅದನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಕಾರವಾರ ಜಿಲ್ಲಾಸ್ಪತ್ರೆಯಲ್ಲಿ ಶವ ಪರೀಕ್ಷೆಯ ವಿಧಿ-ವಿಧಾನಗಳು ನಡೆಯುತ್ತಿದೆ. ಎರಡು ದಿನದ ಹಿಂದೆಯೇ ರವಿ ಗಾಂವಕರ ಅವರು ಸಾವನಪ್ಪಿದ ಅನುಮಾನಗಳಿವೆ. ರವಿ ಗಾಂವಕರ ಅವರ ಸಾವಿಗೆ ಸ್ಪಷ್ಟ ಕಾರಣ ಗೊತ್ತಾಗಿಲ್ಲ. ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆ ಶುರು ಮಾಡಿದ್ದಾರೆ. - [ಜನಪರ ಜಿಲ್ಲಾಧಿಕಾರಿ ವಿರುದ್ಧ ಜನಸಾಮಾನ್ಯರ ದೂರು!](https://mobiletime.in/2025/10/complaints-from-common-people-against-the-pro-people-district-magistrate/): ಜನಪರ ಜಿಲ್ಲಾಧಿಕಾರಿ ಎಂದು ಗುರುತಿಸಿಕೊಂಡಿರುವ ಕೆ ಲಕ್ಷ್ಮೀಪ್ರಿಯಾ ಅವರು ಜನ ಸಾಮಾನ್ಯರ ಬಗ್ಗೆ ಕಾಳಜಿವಹಿಸಿಲ್ಲ ಎಂದು ದೂರಿ ಜನಸಾಮಾನ್ಯರ ಸಮಾಜ ಕಲ್ಯಾಣ ಕೇಂದ್ರದವರು ದೂರಿದ್ದಾರೆ. ವಿವಿಧ ದಾಖಲೆಗಳ ಜೊತೆ ಅವರು ಮಾನವ ಹಕ್ಕು ಆಯೋಗಕ್ಕೆ ಪತ್ರ ಬರೆದಿದ್ದಾರೆ. ಕುಮಟಾದ ಗುಜರಗಲ್ಲಿಯಲ್ಲಿ ವಾಸವಾಗಿರುವ 64 ವರ್ಷದ ವಿಮಲಾ ಶಿರಾಲಿ ಅವರು ಪೆಟ್ಟು ಮಾಡಿಕೊಂಡು ಆಸ್ಪತ್ರೆ ಸೇರಿದಾಗ ಲಕ್ಷಾಂತರ ರೂ ಬಿಲ್ ಆಗಿತ್ತು. ಈ ವಿಷಯ ಅರಿತ ಅವರ ಸಂಬoಧಿಕರು ಅವರ ಬ್ಯಾಂಕ್ ಖಾತೆಗೆ ಹಣ ಹಾಕಿ ಸಹಾಯ ಮಾಡಿದ್ದರು. ಅವರ ಬ್ಯಾಂಕ್ ಖಾತೆಯಲ್ಲಿ ಹೆಚ್ಚಿನ ಮೊತ್ತ ಜಮಾ ಆದ ಆಧಾರದಲ್ಲಿ ಅಧಿಕಾರಿಗಳು ವಿಮಲಾ ಅವರ ಆದಾಯ ಹೆಚ್ಚಿರುವ ಬಗ್ಗೆ ವರದಿ ಸಲ್ಲಿಸಿದ ಕಾರಣ ಅವರಿಗೆ ಪಿಂಚಣಿ ಯೋಜನೆಯಿಂದ ದೂರ ಮಾಡಿದ್ದರು. ಇಂದಿರಾಗಾoಧಿ ವೃದ್ದಾಪ್ಯ ವೇತನ ಬಾರದ ಕಾರಣ ವಿಮಲಾ ಶಿರಾಳಿ ಅವರು ಅಲೆದಾಡುತ್ತಿದ್ದಾರೆ. ಸರ್ಕಾರದಿಂದ ಪಿಂಚಣಿ ಸಿಗದ ಬಗ್ಗೆ ಅವರು ಮಾನವ ಹಕ್ಕು ಆಯೋಗಕ್ಕೆ ಪತ್ರ ಬರೆದಿದ್ದು, 4 ತಿಂಗಳ ಒಳಗೆ ಈ ಪ್ರಕರಣ ಬಗೆಹರಿಸುವಂತೆ ಮಾನವ ಹಕ್ಕು ಆಯೋಗ ಜಿಲ್ಲಾಡಳಿತಕ್ಕೆ ನಿರ್ದೇಶನ ನೀಡಿದೆ. ಆದರೆ, ಆ ಅವಧಿ ಮುಗಿದರೂ ವಿಮಲಾ ಶಿರಾಲಿ ಅವರಿಗೆ ಸರ್ಕಾರದ ಪಿಂಚಣಿ ಸಿಕ್ಕಿಲ್ಲ. ಮೇ 5ರ ಒಳಗೆ ಬಗೆಹರಿಯಬೇಕಿದ್ದ ಪ್ರಕರಣ ಈವರೆಗೂ ಬಗೆಹರಿದಿಲ್ಲ. ಈ ಹಿನ್ನಲೆ ಕುಮಟಾದ ಜನಸಾಮಾನ್ಯರ ಸಮಾಜ ಕಲ್ಯಾಣ ಕೇಂದ್ರದವರು ಡೀಸಿ ಲಕ್ಷ್ಮೀಪ್ರಿಯಾ ಅವರ ವಿರುದ್ಧ ಮಾನವ ಹಕ್ಕು ಆಯೋಗಕ್ಕೆ ಪತ್ರ ಬರೆದಿದ್ದಾರೆ. ವಿಮಲಾ ಅವರಿಗೆ ನ್ಯಾಯ ಕೊಡಿಸಬೇಕು ಎಂದು ಆಗ್ನೇಲ್ ರೋಡ್ರಿಗಸ್ ಹಾಗೂ ಸುಧಾಕರ ನಾಯ್ಕ ಅವರು ಆಯೋಗದ ಬಳಿ ಮನವಿ ಮಾಡಿದ್ದಾರೆ. - [ಶಾಲೆ ಬಳಿ ಸಿಕ್ಕಿತು ಶವ!](https://mobiletime.in/2025/10/a-body-was-found-near-the-school/): ಜೊಯಿಡಾದ ರಾಮನಗರದ ಶಾಲಾ ಮೈದಾನದಲ್ಲಿ ಶುಕ್ರವಾರ ಶವವೊಂದು ಸಿಕ್ಕಿದೆ. ಬೆಳಗ್ಗೆ ಶವ ನೋಡಿದ ಜನ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಜೋಯಿಡಾ ತಾಲೂಕಿನ ಕುಂಭಾರವಾಡದ ಉಮೇಶ್ ನಾಯಕ (42) ಅವರು ಇಲ್ಲಿ ಸಾವನಪ್ಪಿದ್ದಾರೆ. ಉಮೇಶ ನಾಯಕ ಅವರು ಹಲವು ವರ್ಷಗಳಿಂದ ಚಾಲಕರಾಗಿ ಕೆಲಸ ಮಾಡುತ್ತಿದ್ದರು. ರಾಮನಗರದ ಕಲ್ಲು ಖಾನೆಯಲ್ಲಿನ ವಾಹನಕ್ಕೆ ಅವರು ನೇಮಕವಾಗಿದ್ದರು. ಉಮೇಶ್ ನಾಯಕ್ ಅವರು ಎರಡು ದಿನದಿಂದ ಆಹಾರ ಸೇವಿಸರಲಿಲ್ಲ. ವಿಪರೀತ ಮದ್ಯಪಾನ ಮಾಡಿದ್ದು, ಅದೇ ಸಾವಿಗೆ ಕಾರಣ ಎಂಬ ಮಾಹಿತಿಯಿದೆ. ವಾಕಿಂಗ್ ಹೊರಟ ಸ್ಥಳೀಯರಿಗೆ ಮೊದಲು ಉಮೇಶ ನಾಯಕ ಅವರ ಶವ ಕಾಣಿಸಿದೆ. ಶಾಲೆ ಪಕ್ಕ ಶವ ನೋಡಿದ ಜನ ಪೊಲೀಸರನ್ನು ಕರೆಯಿಸಿದ್ದು, ರಾಮನಗರ ಪೊಲೀಸರು ಸ್ಥಳ ಪರಿಶೀಲನೆ ಮಾಡಿದ್ದಾರೆ. - [ಹಣಕ್ಕಾಗಿ ಹೊಡೆದಾಟ: ಸ್ನೇಹಿತರ ನಡುವೆ ಕಚ್ಚಾಟ!](https://mobiletime.in/2025/10/fight-over-money-quarrel-between-friends/): ಹಣಕಾಸು ವಿಷಯವಾಗಿ ಶಿರಸಿಯ ವರುಣ ಭಟ್ಟ ಹಾಗೂ ಮುಂಡಗೋಡಿನ ರಾಘವೇಂದ್ರ ನಾಯ್ಕ ನಡುವೆ ವೈಮನಸ್ಸು ಮೂಡಿದೆ. ಆಪ್ತ ಸ್ನೇಹಿತರಾಗಿದ್ದ ಅವರಿಬ್ಬರು ಇದೀಗ ಬೇರೆ ಬೇರೆಯಾಗಿದ್ದು, ಪರಸ್ಪರ ದ್ವೇಷ ಸಾಧಿಸುತ್ತಿದ್ದಾರೆ. ಇದೇ ವಿಷಯವಾಗಿ ವರುಣ ಭಟ್ಟ ಅವರು ಮುಂಡಗೋಡಿನಲ್ಲಿರುವ ರಾಘವೇಂದ್ರ ನಾಯ್ಕ ಅವರ ಮನೆಗೆ ನುಗ್ಗಿ ಗಲಾಟೆ ಮಾಡಿದ್ದಾರೆ. ಇದನ್ನು ಸಹಿಸದ ರಾಘವೇಂದ್ರ ನಾಯ್ಕ ಅವರ ತಾಯಿ ಭಾಗೀರಥಿ ನಾಯ್ಕ ಅವರು ವರುಣ ಭಟ್ಟ ಅವರ ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹಿಸಿದ್ದಾರೆ. ಶಿರಸಿ ಬನವಾಸಿ ರಸ್ತೆಯ ಬಳಿ ವರುಣ ಮಧುಕೇಶ್ವರ ಭಟ್ಟ ಅವರು ವಾಸವಾಗಿದ್ದಾರೆ. ಮುಂಡಗೋಡು ನೆಹರು ನಗರದ ತಾಲೂಕು ಕ್ರೀಡಾಂಗಣದ ಬಳಿ ವಾಸವಾಗಿರುವ ರಾಘವೇಂದ್ರ ನಾಯ್ಕ ಅವರು ವರುಣ ಭಟ್ಟ ಅವರ ಬಾಲ್ಯ ಸ್ನೇಹಿತರಾಗಿದ್ದು, ಹಣಕಾಸಿನ ವಿಷಯವೊಂದು ಅವರಿಬ್ಬರ ಸ್ನೇಹವನ್ನು ಹಾಳು ಮಾಡಿದೆ. ಇದೇ ವಿಷಯವಾಗಿ ವರುಣ ಭಟ್ಟ ಅವರು ರಾಘವೇಂದ್ರ ನಾಯ್ಕ ಅವರ ಬಳಿ ಗಲಾಟೆ ಮಾಡಿದ್ದಾರೆ. ಅದರ ಮುಂದುವರೆದ ಭಾಗವಾಗಿ ವರುಣ ಭಟ್ಟ ಅವರು ರಾಘವೇಂದ್ರ ನಾಯ್ಕ ಅವರ ಮನೆಗೆ ನುಗ್ಗಿ ಅವರ ತಾಯಿ ಭಾಗೀರಥಿ ನಾಯ್ಕ ಅವರನ್ನು ನಿಂದಿಸಿದ್ದಾರೆ. ಜೊತೆಗೆ ಅವರನ್ನು ದೂಡಿ ನೆಲಕ್ಕೆ ಬೀಳಿಸಿದ್ದಾರೆ. ಅಕ್ಟೊಬರ್ 21ರ ಮಧ್ಯಾಹ್ನ ವರುಣ ಭಟ್ಟ ಅವರು ಸಿಲ್ವರ್ ಬಣ್ಣದ ಕಾರಿನಲ್ಲಿ ಮುಂಡಗೋಡಿಗೆ ಹೋಗಿದ್ದಾರೆ. ಭಾಗೀರಥಿ ನಾಯ್ಕ ಅವರ ಮನೆಗೆ ನುಗ್ಗಿ `ರಾಘು ಎಲ್ಲಿ?’ ಎಂದು ಪ್ರಶ್ನಿಸಿದ್ದಾರೆ. `ನನಗೆ ಹಣ ಬೇಕು’ ಎಂದು ಬೊಬ್ಬೆ ಹೊಡೆದಿದ್ದಾರೆ. ಆಗ, ಭಾಗೀರಥಿ ನಾಯ್ಕ ಅವರು `ಮಗ ದೀಪಾವಳಿ ಪೂಜೆಗೆ ಹೋಗಿದ್ದಾನೆ’ ಎಂದು ಹೇಳಿದ್ದಾರೆ. ಇದರಿಂದ ಸಿಟ್ಟಾದ ವರುಣ ಭಟ್ಟ ಅವರು `ನೀನಾದರೂ ದುಡ್ಡು ಕೊಡು’ ಎಂದು ಬೇಡಿದ್ದಾರೆ. `ನನ್ನ ಬಳಿ ಹಣ ಇಲ್ಲ’ ಎಂದು ಭಾಗೀರಥಿ ಭಟ್ಟ ಅವರು ಹೇಳಿದಾಗ ಅವರಿಗೆ ಕೆಟ್ಟ ಶಬ್ದಗಳಿಂದ ಬೈದಿದ್ದಾರೆ. `ಹಣ ಕೊಡದೇ ಇದ್ದರೆ ಯಾರನ್ನು ಜೀವಂತವಾಗಿ ಬಿಡುವುದಿಲ್ಲ’ ಎಂದು ವರುಣ ಭಟ್ಟ ಅವರು ಈ ವೇಳೆ ಬೆದರಿಸಿದ್ದಾರೆ. ಭಾಗೀರಥಿ ನಾಯ್ಕ ಅವರನ್ನು ನೆಲಕ್ಕೆ ದೂಡಿ ಅಲ್ಲಿಂದ ಹೊರಟಿದ್ದಾರೆ. ಈ ಎಲ್ಲಾ ವಿಷಯಗಳ ಬಗ್ಗೆ ಭಾಗೀರಥಿ ನಾಯ್ಕ ಅವರು ಮುಂಡಗೋಡು ಪೊಲೀಸ್ ಠಾಣೆಗೆ ತೆರಳಿ ವಿವರಿಸಿದ್ದು, ಮಹಿಳೆಯ ಮನೆಗೆ ನುಗ್ಗಿ ರಂಪಾಟ ನಡೆಸಿದ ವರುಣ ಭಟ್ಟ ಅವರ ವಿರುದ್ಧ ಪೊಲೀಸರು ಕಾನೂನು ಕ್ರಮ ಜರುಗಿಸಿದ್ದಾರೆ.     - [ಬೈಕಿನಿಂದ ಬಿದ್ದವನ ವಿರುದ್ಧ ಕಾರು ಚಾಲಕನ ದೂರು!](https://mobiletime.in/2025/10/car-driver-files-complaint-against-man-who-fell-off-bike/): ಕುಮಟಾದ ಮಹೇಶ ಭಟ್ಟ ಹಾಗೂ ನರೇಂದ್ರ ಆಚಾರಿ ಅವರು ಸಂಚರಿಸುತ್ತಿದ್ದ ಕಾರಿಗೆ ಹೊನ್ನಾವರದ ಗಣೇಶ ಪಟಗಾರ ಅವರು ತಮ್ಮ ಬೈಕ್ ಗುದ್ದಿದ್ದಾರೆ. ಬೈಕಿನಿಂದ ಬಿದ್ದ ಗಣೇಶ ಅವರಿಗೆ ಪೆಟ್ಟಾಗಿದ್ದು, ಅತಿ ವೇಗವಾಗಿ ಬೈಕ್ ಚಲಾಯಿಸಿದ ಕಾರಣ ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಅವರ ವಿರುದ್ಧವೇ ಪ್ರಕರಣ ದಾಖಲಾಗಿದೆ. ಕುಮಟಾದ ವಾಲ್ಗಳ್ಳಿಯ ಗಣಪತಿ ದೇವಾಲಯದ ಹತ್ತಿರದ ಮಹೇಶ ಭಟ್ಟ ವೈದಿಕರಾಗಿದ್ದಾರೆ. ಅದೇ ಊರಿನಲ್ಲಿ ಕಾರ್ಪರೇಂಟರ್ ಆಗಿರುವ ನರೇಂದ್ರ ಆಚಾರಿ ಅವರು ಮಹೇಶ ಭಟ್ಟ ಅವರ ಗೆಳೆಯರಾಗಿದ್ದು, ಈ ಇಬ್ಬರು ಒಟ್ಟಿಗೆ ಇರುತ್ತಾರೆ. ಹೀಗಿರುವಾಗ ಅಕ್ಟೊಬರ್ 22ರಂದು ಮಧ್ಯಾಹ್ನ ನರೇಂದ್ರ ಆಚಾರಿ ಅವರು ತಮ್ಮ ದೊಡ್ಡಪ್ಪನ ಜೊತೆ ಕಾರಿನಲ್ಲಿ ಹೋಗುತ್ತಿದ್ದರು. ಶ್ರೀಪಾದ ಆಚಾರಿ, ಜಾನಕಿ ಆಚಾರಿ, ಆಶಾ ಆಚಾರಿ ಹಾಗೂ ಆಶಾ ಅವರ ಮಗಳು ಗಾನವಿ ಆಚಾರಿ ಅವರ ಜೊತೆ ಮಹೇಶ ಭಟ್ಟ ಅವರು ಕಾರಿನಲ್ಲಿದ್ದರು. ನರೇಂದ್ರ ಆಚಾರಿ ಅವರು ಆ ಕಾರು ಓಡಿಸುತ್ತಿದ್ದರು. ಕಾರಿನಲ್ಲಿದ್ದವರನ್ನು ಹೊನ್ನಾವರಕ್ಕೆ ಬಿಟ್ಟು ನರೇಂದ್ರ ಆಚಾರಿ ಹಾಗೂ ಮಹೇಶ ಭಟ್ಟ ಅವರು ಊರಿಗೆ ಮರಳುವವರಾಗಿದ್ದರು. ಆದರೆ, ಹೊನ್ನಾವರದ ರಾಮತೀರ್ಥ ಕ್ರಾಸಿನ ಬಳಿ ವೇಗವಾಗಿ ಬೈಕ್ ಒಂದು ಬಂದು ಅವರ ಕಾರಿಗೆ ಗುದ್ದಿತು. ಹೊನ್ನಾವರ ನವಿಲುಗೋಣ ಕಲ್ಕಟಕೇರಿಯ ಗಣೇಶ ಪಟಗಾರ ಅವರು ಆ ಬೈಕು ಓಡಿಸುತ್ತಿದ್ದು, ಅದೇ ಬೈಕಿನಲ್ಲಿ ಹೊನ್ನಾವರ ಮುಗ್ವಾದ ಹಳಕೇರಿಯ ವಿಶ್ವನಾಥ ಗೌಡ ಅವರು ಇದ್ದರು. ಮುಂದಿನಿAದ ಕಾರಿಗೆ ಬೈಕ್ ಗುದ್ದಿದ ಪರಿಣಾಮ ಬೈಕಿನಲ್ಲಿದ್ದವರು ನೆಲಕ್ಕೆ ಬಿದ್ದು ಗಾಯಗೊಂಡರು. ಆಗ, ಕಾರಿನಲ್ಲಿದ್ದವರೇ ಅವರನ್ನು ಉಪಚರಿಸಿದರು. ಈ ಅಪಘಾತದಲ್ಲಿ ಕಾರು ಕೊಂಚ ಹಾಳಾಗಿದ್ದು, ಬೈಕ್ ಜಖಂ ಆಯಿತು. ಅತಿವೇಗವಾಗಿ ಬೈಕ್ ಓಡಿಸಿ ಅಪಘಾತ ಮಾಡಿದ ಕಾರಣ ಮಹೇಶ ಭಟ್ಟ ಅವರು ಪೊಲೀಸ್ ದೂರು ನೀಡಿದರು. ಹೊನ್ನಾವರ ಪೊಲೀಸರು ಪ್ರಕರಣ ದಾಖಲಿಸಿದರು. - [ಕದಿಯಲು ಬಂದವರೂ ಖಾಲಿ ಕೈಯಲ್ಲಿ ಹೋದರು!](https://mobiletime.in/2025/10/even-those-who-came-to-steal-left-empty-handed/): ಕಾರವಾರದ ಮನೆಯೊಂದರ ಬೀಗ ಮುರಿದು ಒಳ ನುಗ್ಗಿದ ಕಳ್ಳರು ಅಲ್ಲಿ ಏನೂ ಕದಿಯದೇ ಮರಳಿದ್ದಾರೆ. ಕಳ್ಳರು ಮನೆಗೆ ನುಗ್ಗಿದ ಕಾರಣ ಅರಿವಾಗದಿದ್ದರೂ ದುಷ್ಕೃತ್ಯ ನಡೆಸಿದವರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಕಾರವಾರದ ಸದಾಶಿವಗಡದ ನಾಗಫೋಂಡಾ ಸದಿಚ್ಚಾ ಹಾಲ್ ಬಳಿಯ ಹೆದ್ದಾರಿ ಪಕ್ಕದ `ಮುಕ್ತಾಯಿ’ ಎಂಬ ಮನೆಗೆ ಕಳ್ಳರು ಪ್ರವೇಶಿಸಿದ್ದಾರೆ. ಸುಭಾಶ್ ರಾಣೆ ಅವರ ಮಾಲಕತ್ವದ ಮನೆಗೆ ಅಕ್ಟೊಬರ್ 19ರಿಂದ ಅಕ್ಟೊಬರ್ 22ರವರೆಗಿನ ಅವಧಿಯಲ್ಲಿ ಕಳ್ಳರು ಬಂದಿದ್ದಾರೆ. ಮನೆಯಲ್ಲಿ ಯಾರೂ ಇಲ್ಲದ ವೇಳೆ ಮುಂದಿನ ಬಾಗಿಲಿನ ಬೀಗ ಒಡೆದಿದ್ದಾರೆ. ಇಂಟರ್‌ಲಾಕ್ ಸಹ ಮುರಿದು ಒಳಗೆ ನುಗ್ಗಿದ್ದಾರೆ. ಅದಾದ ನಂತರ ಎಲ್ಲಾ ಬೆಡ್ ರೂಮುಗಳನ್ನು ಶೋಧಿಸಿದ್ದಾರೆ. ಮನೆ ನೆಲಮಹಡಿ ಪ್ರವೇಶಿಸಿ ಅಲ್ಲಿದ್ದ ಕಬ್ಬಿಣದ ಕಪಾಟಿನ ಲಾಕರ್ ಒಡೆದಿದ್ದಾರೆ. ಉಳಿದ ಮೂರು ಕಪಾಟಿನ ಒಳಗಿದ್ದ ಸಾಮಗ್ರಿಗಳನ್ನು ನೋಡಿ ಚಲ್ಲಾಪಿಲ್ಲಿ ಮಾಡಿದ್ದಾರೆ. ಇಷ್ಟೊಂದು ಸಾಹಸ ಮಾಡಿದ ಕಳ್ಳರು ಮನೆಯಿಂದ ಏನನ್ನು ಕದ್ದಿಲ್ಲ. ಅದಾಗಿಯೂ ಭಾವನ ಮನೆಯಲ್ಲಿ ಕಳ್ಳತನ ಪ್ರಯತ್ನ ನಡೆದಿರುವುದನ್ನು ಸಹಿಸದ ಸೂರಜ ಗಾಂವ್ಕರ್ ಅವರು ಚಿತ್ತಾಕುಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. - [ಎಲೆಮಾನವರ ವಿರುದ್ಧ ಸಮರ: ಮೂರು ದಿನದಲ್ಲಿ ನೂರು ಬಾಣ!](https://mobiletime.in/2025/10/war-against-the-leafmen-one-hundred-arrows-in-three-days/): ದೀಪಾವಳಿ ಹಬ್ಬದ ಅಂಗವಾಗಿ ನಡೆಯುವ ಇಸ್ಪಿಟ್ ಅಡ್ಡೆಗಳ ಮೇಲೆ ಪೊಲೀಸರು ದಾಳಿ ನಡೆಸಿದ್ದು ಮೂರು ದಿನದಲ್ಲಿ ನೂರಕ್ಕೂ ಅಧಿಕ ಜನರ ಮೇಲೆ ಪ್ರಕರಣ ದಾಖಲಿಸಿದ್ದಾರೆ. ಶಿರಸಿ, ಯಲ್ಲಾಪುರ, ಹಳಿಯಾಳ, ದಾಂಡೇಲಿ, ಹೊನ್ನಾವರದಲ್ಲಿ ನಿರಂತರ ದಾಳಿ ನಡೆಯುತ್ತಿದೆ. ಅನೇಕ ಕಡೆ ಆರೋಪಿತರು ಸಿಕ್ಕಿಬಿದ್ದಿದ್ದು, ಇನ್ನಿತರ ಕಡೆ ಜೂಜುಕೋರರು ಓಡಿ ಹೋಗಿ ತಪ್ಪಿಸಿಕೊಂಡಿದ್ದಾರೆ. ಓಡಿ ಹೋದವರ ಹೆಸರು ಸೇರಿಸಿ ಪೊಲೀಸರು ಪ್ರಕರಣ ದಾಖಲಿಸುತ್ತಿದ್ದಾರೆ. ಅಕ್ಟೊಬರ್ 23ರಂದು ಹೊನ್ನಾವರದ ಒಂದು ಪ್ರಕರಣದಲ್ಲಿ ಪೊಲೀಸ್ ನಿರೀಕ್ಷಕ ಸಿದ್ದರಾಮೇಶ್ವರ ಎಸ್ ದಾಳಿ ನಡೆಸಿ 10 ಜನರ ವಿರುದ್ಧ ಕಾನೂನು ಕ್ರಮ ಜರುಗಿಸಿದ್ದಾರೆ. ಹಣ, ಮೊಬೈಲ್ ಜೊತೆ ಹಲವು ವಸ್ತುಗಳನ್ನು ಜಪ್ತು ಮಾಡಿದ್ದಾರೆ. ಹಾಡಗೇರಿಯ ಲಕ್ಷಣ ನಾಯ್ಕ, ಈಶ್ವರ ನಾಯ್ಕ, ಅಣ್ಣಪ್ಪ ನಾಯ್ಕ, ಗಣಪತಿ ನಾಯ್ಕ, ರಾಜು ನಾಯ್ಕ, ಶ್ರೀಧರ ನಾಯ್ಕ, ಚಂದ್ರಹಾಸ ನಾಯ್ಕ, ಕೆರೆಮನೆ ಕೆಚ್ಚರೇಕೆಯ ನಾಗರಾಜ ನಾಯ್ಕ, ಕೊಂಡಾಕುಳಿಯ ಗಣಪತಿ ಗೌಡ, ಹುಡಗೋಡದ ರಾಜು ನಾಯ್ಕ ವಿರುದ್ಧ ಪ್ರಕರಣ ದಾಖಲಾಗಿದೆ. ಈಶ್ವರ ನಾಯ್ಕ ಅವರ ಮನೆಯಲ್ಲಿ ಇಸ್ಪಿಟ್ ಆಡುವಾಗ ಅವರೆಲ್ಲರೂ ಸಿಕ್ಕಿಬಿದ್ದಿದ್ದಾರೆ. ಹೊನ್ನಾವರದ ಹೊದ್ಕೆಶಿರೂರು ಹುಲಿಕಲ್ ಹಸ್ಕಿಯ ಅಕೆಶಿಯಾ ಪ್ಲಾಂಟೇಶನ್ ಒಳಗೆ ಅಡಗಿ ಅಂದರ್ ಬಾಹರ್ ಆಡುತ್ತಿದ್ದ ಅದೇ ಊರಿನ ದಿನೇಶ ನಾಯ್ಕ ಹಾಗೂ ಯೋಗೇಶ ಪಟಗಾರ ಅವರ ಮೇಲೆಯೂ ಪಿಎಸ್‌ಐ ಮಂಜುನಾಥ ಅವರು ದಾಳಿ ಮಾಡಿದ್ದಾರೆ. ಸಿದ್ದಾಪುರದ ಕಟ್ಟೆಕೈ ಗ್ರಾಮದ ಸೇತುವೆ ಬಳಿ ಜೂಜಾಡುತ್ತಿದ್ದವರ ಮೇಲೆ ಅಕ್ಟೊಬರ್ 23ರಂದು ಪೊಲೀಸ್ ನಿರೀಕ್ಷಕ ಜೆ ಬಿ ಸೀತಾರಾಮ ಅವರು ದಾಳಿ ಮಾಡಿದ್ದಾರೆ. ಈ ವೇಳೆ ಅಲ್ಲಿಯೂ ಬಿಳಗಿಯ ಅಣ್ಣಪ್ಪ ಗೌಡ, ಹನುಮಂತ ಗೌಡ, ಮರಿಯಾ ಗೌಡ, ಚಂದ್ರಶೇಖರ ಗೌಡ, ಈಶ್ವರ ಗೌಡ ಸಿಕ್ಕಿಬಿದ್ದಿದ್ದಾರೆ. ಹಳಿಯಾಳದ ಹಲವು ಕಡೆ ದೀಪಾವಳಿ ಹಬ್ಬದ ಸಂಭ್ರಮದ ನಡುವೆ ಇಸ್ಪೀಟ್ ಜೂಜಾಟದಲ್ಲಿ ತೊಡಗಿದ್ದವರಿಗೆ ಪೊಲೀಸರು ಬಿಸಿ ಮುಟ್ಟಿಸಿದ್ದಾರೆ. ಒಟ್ಟೂ ಮೂರು ಕಡೆ ದಾಳಿ ನಡೆಸಿ 92,650 ರೂ ಹಣವಶಕ್ಕೆಪಡೆದು 50 ಜನರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಹಳಿಯಾಳ ಪಟ್ಟಣದ ಕಾರ್ಮೆಲ್ ಸ್ಕೂಲ್ ಬಳಿ ಸಾರ್ವಜನಿಕ ಸ್ಥಳದಲ್ಲಿ ಇಸ್ಪೀಟ್ ಜೂಜಾಟದಲ್ಲಿ ತೊಡಗಿದ್ದ ಬಸವರಾಜ, ಧರ್ಮರಾಜ, ವಿನಾಯಕ, ಗಣೇಶ ಮತ್ತು ಅಯೂಬ್ ಬೇಪಾರಿ ಈ ಐವರು ಆರೋಪಿಗಳನ್ನು ಪಿಎಸ್‌ಐ ಬಸವರಾಜ ಎನ್. ಮಬನೂರ ನೇತೃತ್ವದ ತಂಡವು ವಶಕ್ಕೆ ಪಡೆದು ಅವರಿಂದ 28,250 ರೂ ಹಣವಶಕ್ಕೆಪಡೆದಿದೆ. ಹಳಿಯಾಳ ಪಟ್ಟಣದ ಗೋರಿಖಾನ್ ಪೆಟ್ರೋಲ್ ಬಂಕ್ ಸಮೀಪದ ಸಾರ್ವಜನಿಕ ಸ್ಥಳದಲ್ಲಿ ಇಸ್ಪೀಟ್ ಜೂಜಾಟದಲ್ಲಿ ತೊಡಗಿದ್ದ ಶಿವಾನಂದ, ಶ್ಯಾಮ, ದೇವೇಂದ್ರ, ಅರ್ಜುನ, ಮಾನ್ವೆಲ್, ನಾಸೀರ್‌ಸಾಬ್, ತಬರೇಜ್ ಮತ್ತು ಶ್ರೀಕಾಂತ ಈ ಎಂಟು ಮಂದಿ ಆರೋಪಿಗಳನ್ನು ಪಿಎಸ್‌ಐ ಕೃಷ್ಣಗೌಡ ಅರಕೇರಿ ನೇತೃತ್ವದಲ್ಲಿ ಹಳಿಯಾಳ ಪೊಲೀಸರು ವಶಕ್ಕೆ ಪಡೆದು ಅವರಿಂದ 11,030 ರೂ ಹಣ ಜಪ್ತು ಮಾಡಿದ್ದಾರೆ. ಹಳಿಯಾಳ ತಾಲೂಕಿನ ಶಿವಪುರ ಗ್ರಾಮದ ಕ್ರಾಸ್ ಬಳಿ ಸಾರ್ವಜನಿಕ ಸ್ಥಳದಲ್ಲಿ ಹಣ ಪಂಥ ಕಟ್ಟಿ ಅಕ್ರಮವಾಗಿ ಜೂಜಾಟದಲ್ಲಿ ತೊಡಗಿದ್ದ ಬೃಹತ್ ಗುಂಪಿನ ಮೇಲೆ ಪಿಎಸ್‌ಐ ಬಸವರಾಜ ಎನ್ ಮಬನೂರ ನೇತೃತ್ವದಲ್ಲಿ ಪೊಲೀಸರು ದಾಳಿ ನಡೆಸಿದ್ದಾರೆ. ಈ ವೇಳೆ ಹಳಿಯಾಳ ತಾಲೂಕಿನ ಮುರ್ಕವಾಡ ಗ್ರಾಮದವರಾದ ನಾಗರಾಜ, ಶ್ರೀಕಾಂತ, ಭುಜಂಗ, ವಿನಾಯಕ, ಬಸಪ್ಪ, ಸುರೇಶ, ಬಸವರಾಜ, ಶ್ರೀಕಾಂತ, ಪರಶುರಾಮ, ಸಚಿನ, ರಾಘವೇಂದ್ರ, ಬಾಲಕೃಷ್ಣ, ಶಿವಾನಂದ, ಲೋಕಪ್ಪ, ಶ್ರೀನಾಥ, ಶ್ರೀನಿವಾಸ, ಸುಂದರ, ಸತೀಶ, ಅಭೀಶೇಕ, ಸಂದೀಪ, ದೇವೆಚಿದ್ರ, ಪುಂಡ್ಲಿಕ, ದೀಪಕ, ಜ್ಞಾನೇಶ್ವರ, ಶ್ರೀಕಾಂತ ಹಾಗೂ ಶ್ರೀಕಾಂತ ಸೇರಿ ಒಟ್ಟು 27 ಮಂದಿ ಆರೋಪಿಗಳನ್ನು ವಶಕ್ಕೆ ಪಡೆದು ಅವರಿಂದ 53,370 ರೂ. ನಗದು ಜಪ್ತಿ ಮಾಡಿಕೊಂಡು ಪ್ರಕರಣ ದಾಖಲಿಸಿದ್ದಾರೆ. ದಾಂಡೇಲಿ ನಗರದ ಬಸ್ ನಿಲ್ದಾಣದ ಎದುರುಗಿನ ಸಾಹೇಲಿ ಲಾಡ್ಜನ ಹಿಂಬದಿಯ ಖಾಲಿ ಸ್ಥಳದಲ್ಲಿ ಅಂದರ-ಬಾಹರ ಜುಜಾಟದಲ್ಲಿ ತೊಡಗಿಸಿಕೊಂಡಿದ್ದವರ ಮೇಲೆಯೂ ಪೊಲೀಸರು ದಾಳಿ ಮಾಡಿದ್ದಾರೆ. ಜೂಜಾಟಕ್ಕೆ ಬಳಸಿದ್ದ ಇಸ್ಪೀಟ್ ಎಲೆಗಳು ಮತ್ತು 3600 ರೂ. ನಗದು ಹಣವನ್ನು ನಗರ ಠಾಣೆಯ ಪೊಲೀಸರು ವಶಕ್ಕೆಪಡೆದಿದ್ದಾರೆ. ಸುಭಾಷನಗರದ ಅಸ್ಲಾಂ ಕಾಸೀಂಸಾಬ ನಿರಲಗಿ, ಸುಭಾಷನಗರದ ದಾವಲಸಾಬ ಕಾಸಿಂಸಾಬ ನಿರಲಗಿ, ಗಾಂಧಿನಗರದ ಮಂಜುನಾಥ ವೀರಭದ್ರ ಹರಿಜನ, ಗಾಂದಿನಗರದ ರಿಜ್ವಾನ ಅಬ್ದುಲ್ ನದಾಫ, ಬಾಲರಾಜ ನಾಗೇಶ ಗಿರಿಯಾಳ, ಮಹ್ಮದ ರಜಾಕ ಸತ್ತಾರ ತಹಶೀಲ್ದಾರ ಸೇರಿ ಹಲವರು ವಿರುದ್ಧ ದಾಂಡೇಲಿ ನಗರ ಪೊಲೀಸ ಠಾಣೆಯ ಪಿಎಸ್‌ಐ ಅಮೀನ್ ಅತ್ತಾರ ಪ್ರಕರಣ ದಾಖಲಿಸಿದ್ದಾರೆ. ಶಿರಸಿಯ ಬನವಾಸಿ ಬಳಿಯ ದನಗನಹಳ್ಳಿ ನವಗ್ರಾಮದ ಸುರೇಶ ರಾಮಾಪುರ ಅವರ ಮನೆಯಲ್ಲಿ ಅಂದರ್ ಬಾಹರ್ ಆಡುತ್ತಿದ್ದ ಕಾರಣ ಅಲ್ಲಿಯೂ ಪಿಎಸ್‌ಐ ಮಹಾತೇಂಶಪ್ಪ ಕುಂಬಾರ್ ಅವರು ದಾಳಿ ಮಾಡಿದ್ದಾರೆ. ಈ ವೇಳೆ ದಾಸನಕೊಪ್ಪ ದನಗನಹಳ್ಳಿಯ ಬಸವರಾಜ ಕಚವೆ, ರಾಜು ರಾಮಾಪುರ, ಸುರೇಶ ಗೋಯಕರ, ನಾಗರಾಜ ಪಾಟೀಲ. ಮಾಂತೇಶ ಗೋಯಕರ, ಹಜರತ್ ಅಲಿ, ಸಂದೀಪ ರಾಮಾಪುರ, ಸುರೇಶ ರಾಮಾಪುರ ಅವರು ಸಿಕ್ಕಿಬಿದ್ದಿದ್ದಾರೆ. ಯಲ್ಲಾಪುರ ಹೊಸಳ್ಳಿ ಹಾಗೂ ರವೀಂದ್ರನಗರದಲ್ಲಿ ಇಸ್ಪೀಟ್ ಅಡ್ಡೆ ಮೇಲೆ ಪೊಲೀಸರು ದಾಳಿ ನಡೆಸಿ 15 ಜನರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕಿರವತ್ತಿ ಸಮೀಪದ ಹೊಸಳ್ಳಿ ಜನತಾ ಕಾಲೋನಿ ರಸ್ತೆಯ ಪಕ್ಕ ವಿನೋದ ಚೌಹಾಣ, ಶಿವಾಜಿ ಕಾಂಬಳೆ, ಯಲ್ಲಪ್ಪ ಕಾಂಬಳೆ, ಮೌಲಾಲಿ ಮಹಮ್ಮದ್ ಸಾಬ ಸೈಯ್ಯದ್, ಶಿವರಾಜ ಕಿಲಾರಿ, ಬೀರು ಪಟಕಾರೆ ಜೂಜಾಟ ಆಡುತ್ತಿದ್ದರು. ಈ ವೇಳೆ ಪೊಲೀಸರು ದಾಳಿ ನಡೆಸಿದ್ದು, ಇವರಿಂದ 3360 ರೂ ನಗದು ಹಾಗೂ ಜೂಜಾಟದ ಸಲಕರಣೆಗಳನ್ನು ವಶಕ್ಕೆಪಡೆದಿದ್ದಾರೆ. ಯಲ್ಲಾಪುರ ಪಟ್ಟಣದ ರವೀಂದ್ರನಗರದ ಚೌಡೇಶ್ವರಿ ದೇವಸ್ಥಾನದ ಬಳಿ, ಸಂತೋಷ ಬೋವಿವಡ್ಡರ್, ಗಿರೀಶ ಬೋವಿವಡ್ಡರ್, ಲಕ್ಷ್ಮಣ ಮರಾಠಿ, ಗುರುರಾಜ ಬೋವಿವಡ್ಡರ್, ಪರಶುರಾಮ ಬೋವಿವಡ್ಡರ್, ಶಿವಪ್ಪ ಬೋವಿವಡ್ಡರ್, ಸಿದ್ದು ಗೌಳಿ, ಸಾಗರ ನಾಯ್ಕ, ಮುಟಿಗೆಪ್ಪ ಬೋವಿವಡ್ಡರ್ ಜೂಜಾಡುತ್ತಿದ್ದ ವೇಳೆ ಪೊಲೀಸರು ದಾಳಿ ನಡೆಸಿದ್ದಾರೆ. ಇವರಿಂದ 3220 ರೂ ಹಾಗೂ ಜೂಜಾಟದ ಸಲಕರಣೆಗಳನ್ನು ವಶಕ್ಕೆ ಪಡೆದಿದ್ದಾರೆ. - [ನಾಟಿ ವಿದ್ಯೆಯ ವೀರ: ಔಷಧಿಯಿಲ್ಲದೇ ನೋವು ದೂರ!](https://mobiletime.in/2025/10/hero-of-naughty-nanny-get-rid-of-joint-pain-without-medicine/): ಗಂಟು ನೋವು, ಮಂಡಿ ನೋವು, ಬೆನ್ನು ನೋವು, ಕಾಲು ನೋವು ಸೇರಿ ಎಲುಬು ಹಾಗೂ ನರಗಳಿಗೆ ಸಂಬoಧಿಸಿದ ಸಮಸ್ಯೆಗಳಿಗೆ ಶಿರಸಿಯ ಗಣಪಯ್ಯ ಚೆನ್ನಯ್ಯ ಅವರು ಪರಿಹಾರ ಒದಗಿಸುತ್ತಾರೆ. ಯಾವುದೇ ಔಷಧಿ-ಗಿಡಮೂಲಿಕೆಗಳ ಪ್ರಯೋಗವಿಲ್ಲದೇ ಬರೇ ಮಸಾಜ್ ಮೂಲಕ ಅವರು ನೋವುಗಳನ್ನು ದೂರ ಮಾಡುತ್ತಾರೆ. ಶಿರಸಿ-ಹುಬ್ಬಳ್ಳಿ ರಸ್ತೆ ಮಾರ್ಗವಾಗಿ 12ಕಿಮೀ ಸಂಚರಿಸಿದರೆ ಸಿಗುವ ಇಸಳೂರಿನ ಬಳಿ ಮಾವಿನಕೊಪ್ಪ ಎಂಬ ಊರಿದೆ. ಅಲ್ಲಿಂದ 2ಕಿಮೀ ಮಣ್ಣಿನ ರಸ್ತೆಯಲ್ಲಿ ಸಿಕ್ಕರೆ ಗಣಪಯ್ಯ ಚೆನ್ನಯ್ಯ ಅವರ ಮನೆ ಕಾಣುತ್ತದೆ. ಮನೆ ಅಂಗಳದಲ್ಲಿಯೇ ಅವರು ತಮ್ಮ ನಾಟಿ ವಿದ್ಯೆ ಪ್ರಯೋಗಿಸುತ್ತಾರೆ. ಏಕಕಾಲಕ್ಕೆ ಆರು ಜನ ಬಂದರೂ ಅವರು ಅಲ್ಲಿ ಚಿಕಿತ್ಸೆ ನೀಡುತ್ತಾರೆ. ಮಾನವನ ದೇಹ ಹಾಗೂ ನರಗಳ ಬಗ್ಗೆ ಅಧ್ಯಯನ ನಡೆಸಿರುವ ಗಣಪತಿ ಚೆನ್ನಯ್ಯ ಅವರು ದೇಹದಲ್ಲಿ ನೋವಿರುವ ಭಾಗದ ರಕ್ತ ಸಂಚಲನದ ಬಗ್ಗೆ ಅಭ್ಯಯಿಸುತ್ತಾರೆ. ಅದರ ಆಧಾರದಲ್ಲಿ ನರಗಳು ಉಬ್ಬಿರುವ ಭಾಗ ಗುರುತಿಸಿ ಅದನ್ನು ಸರಿ ಮಾಡುತ್ತಾರೆ. ಕಾಲು, ಕೈ ಸೇರಿ ಅಗತ್ಯವಿರುವ ಅಂಗಾoಗಗಳಿಗೆ ಮರದ ಬೆಣೆಗಳನ್ನು ಕಟ್ಟಿ ರಕ್ತ ಸಂಚಲನ ಸರಾಗವಾಗಿ ಸಾಗುವ ರೀತಿ ಮಾಡುತ್ತಾರೆ. ನಂತರ ಇಡೀ ದೇಹವನ್ನು ತಮ್ಮ ಕೈಯಿಂದಪದೇ ಪದೇ ತಿಕ್ಕಿ ನಿಧಾನವಾಗಿ ವ್ಯಾಯಾಮ ಮಾಡಿಸುತ್ತಾರೆ. ಈ ಎಲ್ಲಾ ವಿದ್ಯೆಯನ್ನು ಕೇರಳದಲ್ಲಿ ಕಲಿತಿರುವ ಅವರು 40 ವರ್ಷಗಳಿಂದ ಈ ಕಾಯಕ ಮಾಡುತ್ತ ಬಂದಿದ್ದಾರೆ. ಸುಮಾರು ಒಂದುವರೆ ತಾಸುಗಳ ಕಾಲದ ಈ ಚಿಕಿತ್ಸೆಯಿಂದ ಅನೇಕರು ನೋವಿನಿಂದ ಮುಕ್ತರಾಗಿದ್ದಾರೆ. ಸಾಮಾನ್ಯವಾಗಿ ವಾರಕ್ಕೆ ಒಮ್ಮೆಯಂತೆ ಮೂರು ವಾರಗಳ ಭೇಟಿಯ ಅವಧಿಯಲ್ಲಿ ನೋವು ದೂರವಾಗುತ್ತದೆ. ಚಿಕಿತ್ಸೆಗೆ ಒಳಗಾಗುವವರು ಪ್ರತಿ ಭೇಟಿಯಲ್ಲಿಯೂ 500ರೂ ಹಣದ ಜೊತೆ ಒಂದು ತೆಂಗಿನಕಾಯಿ ಕೊಡಬೇಕಾಗುತ್ತದೆ. ವಾರದ ಏಳೂ ದಿನವೂ ಗಣಪತಿ ಚೆನ್ನಯ್ಯ ಅವರು ಚಿಕಿತ್ಸೆ ನೀಡುತ್ತಾರೆ. ಅದಾಗಿಯೂ ಫೋನ್ ಮಾಡಿ ತೆರಳುವುದು ಉತ್ತಮ. ಗಣಪತಿ ಚೆನ್ನಯ್ಯ ಅವರ ಮೊಬೈಲ್ ನಂ: 9480553112 - [2025 ಅಕ್ಟೊಬರ್ 24ರ ದಿನ ಭವಿಷ್ಯ](https://mobiletime.in/2025/10/prediction-for-october-24-2025/): ಮೇಷ ರಾಶಿ: ಈ ದಿನ ಪೂರ್ತಿ ಉತ್ಸಾಹವಾಗಿರುತ್ತೀರಿ. ಹೊಸ ಕೆಲಸಗಳು ಯಶಸ್ವಿಯಾಗಲಿದೆ. ಆರ್ಥಿಕ ಬೆಳವಣಿಗೆ ಸಂತಸ ಕೊಡಲಿದೆ. ವೃಷಭ ರಾಶಿ: ಮಾನಸಿಕ ಶಾಂತಿ, ಹಣಕಾಸು ಓಡಾಟ, ಕುಟುಂಬದಲ್ಲಿ ಸಂತೋಷ ಒಟ್ಟಿಗೆ ಕಾಣಲಿದೆ. ಪ್ರಯಾಣದ ಲಕ್ಷಣಗಳಿದೆ. ವ್ಯಾಯಾಮ ಆರಾಮದಾಯಕ. ಮಿಥುನ ರಾಶಿ: ಉದ್ಯೋಗದಲ್ಲಿನ ನಿಮ್ಮ ಸಾಧನೆ ಮೆಚ್ಚುಗೆಗೆ ಕಾರಣವಾಗಲಿದೆ. ಹಣಕಾಸು ವಿಚಾರಗಳಲ್ಲಿ ಬುದ್ಧಿವಂತಿಕೆ ಅಗತ್ಯ. ಸಂಜೆ ಸಂತೋಷದ ಕ್ಷಣ ಸಿಗಲಿದೆ. ಕರ್ಕ ರಾಶಿ: ನಿಮ್ಮ ಆತ್ಮವಿಶ್ವಾಸವು ಹೆಚ್ಚಾಗಲಿದೆ. ಹಳೆಯ ಕೆಲಸಗಳು ಪೂರ್ಣಗೊಳ್ಳಲಿದೆ. ಉದ್ಯಮ ಅಥವಾ ವ್ಯವಹಾರದಲ್ಲಿ ಲಾಭದ ಯೋಗವಿದೆ. ಸಿಂಹ ರಾಶಿ: ಅನಿರೀಕ್ಷಿತ ಲಾಭ ಸಿಗಲಿದೆ. ಆರ್ಥಿಕ ನಿರ್ಧಾರಗಳಲ್ಲಿ ಧೈರ್ಯ ಬೇಕು. ಆತುರದ ನಿರ್ಧಾರ ಮಾಡಬೇಡಿ. ಕನ್ಯಾ ರಾಶಿ: ದೀರ್ಘಕಾಲದಿಂದ ಬಾಕಿಯಿರುವ ಕೆಲಸ ಈ ದಿನ ಮುಗಿಯಲಿದೆ. ಕಲೆ ಅಥವಾ ಸಾಹಿತ್ಯ ಕ್ಷೇತ್ರದವರಿಗಿದು ಉತ್ತಮ ದಿನ. ತುಲಾ ರಾಶಿ: ಆಪ್ತರ ಜೊತೆ ಸ್ನೇಹ ಹೆಚ್ಚಾಗಲಿದ್ದು, ಪರಸ್ಪರ ನಂಬಿಕೆ ಮೂಡಲಿದೆ. ಕೆಲಸದ ಒತ್ತಡ ಕಡಿಮೆಯಾಗಲಿದೆ. ಆರೋಗ್ಯದ ಕಡೆ ಗಮನಹರಿಸಿ. ವೃಶ್ಚಿಕ ರಾಶಿ: ನಿಮ್ಮ ಮನಸ್ಸಿನ ಯೋಜನೆಗಳು ಯಶಸ್ವಿಯಾಗಲಿದೆ. ಕೆಲಸದಲ್ಲಿ ಹೊಸ ಚಿಂತನೆ ಅಳವಡಿಸಲು ಸೂಕ್ತ ದಿನ. ಧ್ಯಾನ ಅಥವಾ ಪ್ರಾರ್ಥನೆಗೆ ಸಮಯ ಮೀಸಲಿಡಿ. ಧನು ರಾಶಿ: ಆತ್ಮವಿಶ್ವಾಸದಲ್ಲಿ ಗಣನೀಯ ಏರಿಕೆ ಆಗಲಿದೆ. ಪ್ರಯತ್ನಗಳು ಫಲ ನೀಡುತ್ತವೆ. ಹೂಡಿಕೆ ವಿಚಾರಗಳಲ್ಲಿ ಜಾಗರೂಕರಾಗಿರಿ. ಮಕರ ರಾಶಿ: ಕುಟುಂಬ ಮತ್ತು ವೃತ್ತಿ ನಡುವೆ ಸಮತೋಲನ ಕಾಪಾಡಿ. ಕೆಲಸದಲ್ಲಿ ಯಶಸ್ಸು ಸಿಗಲಿದೆ. ಆರೋಗ್ಯದಲ್ಲಿ ಏರುಪೇರಾಗುವ ಲಕ್ಷಣವಿದೆ. ಕುಂಭ ರಾಶಿ: ಸಹೋದ್ಯೋಗಿಗಳ ಸಹಕಾರದಿಂದ ಕೆಲಸ ಸುಲಭವಾಗಲಿದೆ. ಹೊಸ ಯೋಜನೆಗೆ ಮೊದಲ ಹೆಜ್ಜೆ ಮೂಡಲಿದೆ. ಕುಟುಂಬದಲ್ಲಿ ಸಂತೋಷ ಕಾಣಲಿದೆ. ಮೀನ ರಾಶಿ: ಹಳೆಯ ಸಮಸ್ಯೆಗಳಿಗೆ ಪರಿಹಾರ ಸಿಗುವುದರಿಂದ ಮನಸ್ಸು ಶಾಂತವಾಗಿರುತ್ತದೆ. ಉದ್ಯೋಗ ಅಥವಾ ವ್ಯಾಪಾರದಲ್ಲಿ ಹೊಸ ಅವಕಾಶಳು ಸಿಗಲಿದೆ. ಆಧ್ಯಾತ್ಮಿಕ ಚಿಂತನೆಗೆ ಸೂಕ್ತವಾದ ದಿನ. - [ದನಗಳ ಜಗಳ: ತಪ್ಪಿಸಲು ಹೋದವರ ನಡುವೆ ಹೊಡೆದಾಟ!](https://mobiletime.in/2025/10/cattle-fight-fight-breaks-out-between-those-who-tried-to-avoid-it/): ಕಾರವಾರದ ಅಂಬೀಷ್ ವಾಸವನ್ ಹಾಗೂ ರಾಮಕೃಷ್ಣ ನಾರಾಯಣಪ್ಪ ಅವರ ನಡುವೆ ಹೊಡೆದಾಟ ನಡೆದಿದೆ. ಕಾರವಾರದ ಕದ್ರಾದ ಕೆಪಿಸಿ ಲೇಬರ್ ಕಾಲೋನಿಯಲ್ಲಿ ಅಂಬೀಷ್ ಅವರು ಜರಾಕ್ಸ ಅಂಗಡಿ ನಡೆಸುತ್ತಾರೆ. ಅಲ್ಲಿಯೇ ರಾಮಕೃಷ್ಣ ಅವರು ಕೆಪಿಸಿ ವಾಹನದ ಚಾಲಕರಾಗಿ ದುಡಿಯುತ್ತಿದ್ದಾರೆ. ರಸ್ತೆಯಲ್ಲಿದ್ದ ದನಗಳನ್ನು ಓಡಿಸುವ ವಿಷಯವಾಗಿ ಅವರಿಬ್ಬರ ನಡುವೆ ಜಗಳ ನಡೆದಿದ್ದು, ಅದೇ ತಾರಕಕ್ಕೇರಿದೆ. ಪರಿಣಾಮ ಅವರಿಬ್ಬರು ಮದ್ಯರಾತ್ರಿ ನಡು ರಸ್ತೆಯಲ್ಲಿ ಹೊಡೆದಾಡಿಕೊಂಡಿದ್ದಾರೆ. ಅಕ್ಟೊಬರ್ 22ರ ರಾತ್ರಿ 12ಗಂಟೆಗೆ ಕೆಪಿಸಿ ಕಾಲೋನಿಯ ಶಾಫಿಂಗ್ ಕಾಂಪ್ಲೆಕ್ಸ ಬಳಿ ದನಗಳಿದ್ದವು. ಆ ದನಗಳ ನಡುವೆ ಜಗಳ ನಡೆಯುತ್ತಿರುವುದನ್ನು ಅಂಬೀಷ ಅವರು ನೋಡಿದರು. ಆ ಜಾನುವಾರುಗಳು ತಮ್ಮ ಅಂಗಡಿ ಒಳಗೆ ಪ್ರವೇಶಿಸುವುದನ್ನು ತಡೆಯುವುದಕ್ಕಾಗಿ ಅವರು ಬೆದರಿಸಿದರು. ದನಗಳನ್ನು ಅವರು ಅಲ್ಲಿಂದ ಓಡಿಸಿದ್ದು, ಇದನ್ನು ರಾಮಕೃಷ್ಣ ಅವರು ಸಹಿಸಲಿಲ್ಲ. ಅಂಬೀಷ ಅವರನ್ನು ಅಡ್ಡಗಟ್ಟಿದ ರಾಮಕೃಷ್ಣ ಅವರು ಮುಂದೆ ಹೆಜ್ಜೆಯಿಡಲು ಬಿಡಲಿಲ್ಲ. ಅಂಬೀಷ ಅವರ ಎದೆ ಮೇಲೆ ಕೈಯಿಟ್ಟು ರಾಮಕೃಷ್ಣ ಅವರು ಹೊಡೆದರು. ಅಂಬೀಷ ಅವರನ್ನು ನೆಲಕ್ಕೆ ಬೀಳಿಸಿ ದಬಾಯಿಸಿದರು. ಅದಾದ ನಂತರ `ಕೆಪಿಸಿ ವಾಹನದಿಂದ ನಿನಗೆ ಗುದ್ದುವೆ. ನಿನ್ನ ಕೊಲ್ಲುವೆ’ ಎಂದು ಹೆದರಿಸಿದರು. ಆತಂಕಕ್ಕೆ ಒಳಗಾದ ಅಂಬೀಷ ಅವರು ಕದ್ರಾ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದರು. - [ಮನುಷ್ಯ ಅಸಲಿ-ಪೇಸ್ಬುಕ್ ನಕಲಿ: ನಕಲಿ ಖಾತೆಯವನ ಅಸಲಿ ಮುಖವಾಡ!](https://mobiletime.in/2025/10/the-man-is-real-facebook-is-fake-the-real-mask-of-the-fake-account-holder/): ಫೇಸ್ಬುಕ್ ಸೇರಿ ವಿವಿಧ ಸಾಮಾಜಿಕ ಜಲತಾಣದಲ್ಲಿ ನಕಲಿ ಖಾತೆ ಹೊಂದಿದ್ದ ಮುರ್ಡೇಶ್ವರದ ಪುರಂಧರ ನಾಯ್ಕ ಅವರನ್ನು ಪೊಲೀಸರು ಬಂಧಿಸಿದ್ದಾರೆ. ನಕಲಿ ಖಾತೆಗಳ ಮೂಲಕ ಸಚಿವ ಮಂಕಾಳು ವೈದ್ಯರ ತೇಜೋವಧೆ ಮಾಡಿದ ಆರೋಪದ ಅಡಿ ಮಂಜುನಾಥ ನಾಯ್ಕ ಅವರು ಜೈಲು ಸೇರಿದ್ದಾರೆ. ಭಟ್ಕಳದ ಬೈಲೂರು ದೊಡ್ಡಬಲ್ಸೆಯ ಪುರಂದರ ಮಂಜುನಾಥ ನಾಯ್ಕ (37) ಅವರು ತಮ್ಮ ಹೆಸರಿನ ಜೊತೆ ಬೇರೆ ಬೇರೆ ಹೆಸರಿನಲ್ಲಿ ಫೇಸ್ಬುಕ್ ಖಾತೆ ಹೊಂದಿದ್ದರು. ಆ ಖಾತೆಗಳ ಮೂಲಕ ಅವರು ಅನೇಕರ ತೇಜೋವಧೆ ಮಾಡುತ್ತಿದ್ದರು. ಸಚಿವ ಮಂಕಾಳು ವೈದ್ಯ ಅವರ ಬೆನ್ನುಬಿದ್ದಿದ್ದ ಮಂಜುನಾಥ ನಾಯ್ಕ ಅವರು ಸಚಿವರ ಬಗ್ಗೆ ಅವಹೇಳನವಾಗಿ ಬರೆದಿದ್ದರು. ಜೊತೆಗೆ ವಿಡಿಯೋಗಳನ್ನು ಹರಿಬಿಟ್ಟಿದ್ದರು. 2025ರ ಮೇ 29ರಂದು ಮುರ್ಡೇಶ್ವರ ಠಾಣೆಯಲ್ಲಿ ನಕಲಿ ಫೇಸ್ಬುಕ್ ಖಾತೆ ಕುರಿತಾಗಿ ಪ್ರಕರಣ ದಾಖಲಾಗಿದ್ದು, `ತೇಜು ನಾಯ್ಕ ಹೊನ್ನಾವರ’ ಎಂಬ ಖಾತೆಯಿಂದ ಅಸಬ್ಯ ಬರಹ ಹಾಗೂ ವಿಡಿಯೋ ಪ್ರಸಾರವಾಗಿದನ್ನು ಉಲ್ಲೇಖಿಸಲಾಗಿತ್ತು. ಮುರ್ಡೇಶ್ವರ ಪೊಲೀಸರು ತನಿಖೆ ಶುರು ಮಾಡಿದ್ದರು. 2025ರ ಜೂನ್ 6ರಂದು ನಾಗಪ್ಪ ನಾಯ್ಕ ಅವರು ಮುರ್ಡೇಶ್ವರ ಠಾಣೆಯಲ್ಲಿ ಇನ್ನೊಂದು ದೂರನ್ನು ನಿಡಿ `ತೇಜು ನಾಯ್ಕ ಹೊನ್ನಾವರ’ ಮತ್ತು `ವಂದನಾ ಪೂಜಾರಿ’ ಎಂಬ ಖಾತೆ ಮೂಲಕ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯರ ವಿರುದ್ಧ 1.29 ನಿಮಿಷಗಳ ಸುಳ್ಳು ಹಾಗೂ ಅವಹೇಳನಕಾರಿ ವಿಡಿಯೋ ಹಂಚಿದ ಬಗ್ಗೆ ದೂರು ನೀಡಿದ್ದರು. ಸಚಿವರಿಗೆ ಮುಜುಗರ ಉಂಟಾದ ಬಗ್ಗೆ ದೂರಿನಲ್ಲಿ ಉಲ್ಲೇಖಿಸಿದ್ದು, ಆ ಪ್ರಕರಣವನ್ನು ಪೊಲೀಸರು ತನಿಖೆ ಮಾಡಿದರು. ಕೊನೆಗೆ ಈ ದಿನ ನಕಲಿ ಖಾತೆಯ ರುವಾರಿ ಪುರಂಧರ ನಾಯ್ಕ ಸಿಕ್ಕಿ ಬಿದ್ದಿದ್ದಾರೆ. ಕೃತ್ಯಕ್ಕೆ ಬಳಸಲಾದ ಮೊಬೈಲನ್ನು ಪೊಲೀಸರು ಜಪ್ತು ಮಾಡಿದ್ದಾರೆ. - [ಕಬ್ಬು ಕೊಡುವವರ ಬಾಯಿಗೆ ಕಹಿ: ಪ್ರತಿಭಟನೆ!](https://mobiletime.in/2025/10/bitterness-in-the-mouths-of-those-who-give-sugarcane-protest/): ಹಳಿಯಾಳದಲ್ಲಿ ಸಕ್ಕರೆ ಕಾರ್ಖಾನೆ ಅಧಿಕಾರಿಗಳು ಹಾಗೂ ರೈತರ ನಡುವೆ ವೈಮನಸ್ಸು ಮೂಡಿದ್ದು, ಇದೇ ವಿಷಯವಾಗಿ ರೈತರು ಗುರುವಾರ ಪ್ರತಿಭಟನೆ ಮಾಡಿದ್ದಾರೆ. ರೈತರ ಜೊತೆ ಸಭೆ ನಡೆಸದೇ ಕಾರ್ಖಾನೆ ಶುರು ಮಾಡುವ ನಿರ್ಧಾರ, ದರ ನಿಗದಿ ಬಗ್ಗೆ ಚರ್ಚೆ ನಡೆಯದಿರುವುದು ಆಕ್ರೋಶಕ್ಕೆ ಕಾರಣವಾಗಿದೆ. ಕಬ್ಬು ಸಾಗಾಣಿಕಾ ದರವನ್ನು ಹೆಚ್ಚಿಸಿ ಕಬ್ಬಿನ ದರ ಪ್ರತಿ ಟನ್’ಗೆ 3050ರೂ ಘೋಷಿಸಿರುವುದಕ್ಕೆ ರೈತರು ಅಸಮಧಾನವ್ಯಕ್ತಪಡಿಸಿದ್ದಾರೆ. ಗುರುವಾರದಿಂದ ಹಳಿಯಾಳ ಆಡಳಿತ ಸೌಧದ ಎದುರು ಕಬ್ಬು ಬೆಳೆಗಾರರು ಧರಣಿ ನಡೆಸಿದರು. ಕಳೆದ ಸಾಲಿನ 256 ರೂ ಹೆಚ್ಚುವರಿ ಕಡಿತ ಮೊತ್ತವನ್ನು ತಕ್ಷಣ ರೈತರ ಖಾತೆಗಳಿಗೆ ಜಮಾ ಮಾಡಬೇಕು ಎಂದು ಆಗ್ರಹಿಸಿದರು. ರೈತರ ಮೇಲೆ ದೌರ್ಜನ್ಯ ನಡೆಯುತ್ತಿದೆ ಎಂದು ಪ್ರತಿಭಟನಾಕಾರರು ಬೇಸರಿಸಿದರು. ಸಂಜೆಯವರೆಗೂ ಪ್ರತಿಭಟನೆ ನಡೆದಿದ್ದು, ತಹಶೀಲ್ದಾರರ ಮಧ್ಯಸ್ಥಿಕೆಯಲ್ಲಿ ಕಾರ್ಖಾನೆಯವರು ಮಾತುಕಥೆಗೆ ಬಂದರೂ ರೈತರು ಅದಕ್ಕೆ ಒಪ್ಪಲಿಲ್ಲ. ಜಿಲ್ಲಾಧಿಕಾರಿಗಳು ಜಾಗಕ್ಕೆ ಬಂದು ಸಮಸ್ಯೆ ಬಗೆಹರಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು. - [ಹಳ್ಳ ಹಾರಿದ ಬೈಕು: ಅಲ್ಲಿಗೆ ಮುಗಿಯಿತು ಬದುಕು!](https://mobiletime.in/2025/10/bike-that-jumped-into-a-ditch-life-ended-there/): ರಾತ್ರಿ ವೇಳೆ ಸಂಚರಿಸುತ್ತಿದ್ದ ಬೈಕು ಹಳ್ಳಕ್ಕೆ ಹಾರಿದ್ದು, ಆ ಬೈಕಿನಲ್ಲಿದ್ದ ಭಟ್ಕಳದ ಲೋಕೇಶ ದೇವಾಡಿಗ ಅವರು ಸಾವನಪ್ಪಿದ್ದಾರೆ. ಬೆಳಗಿನ ಅವಧಿಯಲ್ಲಿ ಹಳ್ಳದಲ್ಲಿ ಬೈಕಿನ ಜೊತೆ ಲೋಕೇಶ್ ದೇವಾಡಿಗ ಅವರ ಶವ ಸಿಕ್ಕಿದೆ. ಭಟ್ಕಳದ ಶಿರಾಲಿ ಕೇಸುಮನೆಯ ಲೋಕೇಶ ದೇವಾಡಿಗ (31) ಅವರು ಶಿಲ್ಪಿಯಾಗಿದ್ದರು. ತಮ್ಮ ಕೆಲಸದ ಅಂಗವಾಗಿ ಅವರು ಬೇರೆ ಬೇರೆ ಊರುಗಳಿಗೆ ಸಂಚರಿಸುತ್ತಿದ್ದರು. ಅಕ್ಟೊಬರ್ 21ರ ರಾತ್ರಿ ಅವರು ಕೆಲಸ ಮುಗಿಸಿ ಮನೆಗೆ ಮರಳುತ್ತಿದ್ದರು. ಶಿರಾಲಿ ಕಡೆಯಿಂದ ಅಳ್ವೇಕೊಡಿಗೆ ಹೋಗುವ ರಸ್ತೆ ಮಾರ್ಗವಾಗಿ ಅವರು ಆ ರಾತ್ರಿ ಸಂಚರಿಸಿದ್ದರು. ಅಳ್ವೇಕೊಡಿ ಕ್ರಾಸಿನಿಂದ ಮುಂದೆ ಕೇಸುಮನೆಗೆ ಹೋಗುವಾಗ ಅಲ್ಲಿನ ಸೇತುವೆ ಬಳಿ ಲೋಕೇಶ ದೇವಾಡಿಗ ಅವರ ಬೈಕಿನ ವೇಗ ಹೆಚ್ಚಿತು. ಆ ಬೈಕು ಸೇತುವೆ ಎಡಭಾಗ ಸಂಚರಿಸಿ ಹಳ್ಳಕ್ಕೆ ಬಿದ್ದಿತು. ಬೈಕಿನಿಂದ ಬಿದ್ದ ರಭಸಕ್ಕೆ ಲೋಕೇಶ ದೇವಾಡಿಗ ಅವರ ಉಸಿರು ನಿಂತಿತು. ಅಕ್ಟೊಬರ್ 22ರಂದು ಹಳ್ಳದಲ್ಲಿ ಲೋಕೇಶ ದೇವಾಡಿಗ ಅವರ ಶವ ನೋಡಿದ ಜನ ಕುಟುಂಬಕ್ಕೆ ಮಾಹಿತಿ ನೀಡಿದರು. ಲೋಕೇಶ ಅವರ ತಂದೆ ಮಾದೇವ ದೇವಾಡಿಗ ಅವರು ಭಟ್ಕಳ ಗ್ರಾಮೀಣ ಠಾಣೆಗೆ ಮಾಹಿತಿ ನೀಡಿ, ಪ್ರಕರಣ ದಾಖಲಿಸಿದರು. - [ಆಡಳಿತಾಧಿಕಾರಿ V/S ಆಡಳಿತ ಮಂಡಳಿ: ಗೊಂದಲದ ಗೂಡಾದ ಯಲ್ಲಾಪುರ TMS](https://mobiletime.in/2025/10/administrator-v-s-administration-council-yallapur-tms-a-hotbed-of-confusion/): ಯಲ್ಲಾಪುರದ ಟಿಎಂಎಸ್ ವಿಷಯವಾಗಿ ಎರಡು ಬಣದ ನಡುವೆ ಹಗ್ಗ ಜಗ್ಗಾಟ ಮುಂದುವರೆದಿದ್ದು, ಇಲ್ಲಿನ ವಿಷಯಗಳು ಗೊಂದಲದ ಗೂಡಾಗಿದೆ. ಟಿ ಎಂ ಎಸ್ ಚುನಾವಣೆಯಲ್ಲಿ ಮತದಾನ ಮಾಡಿದ ಸದಸ್ಯರು ಫಲಿತಾಂಶದ ಬಗ್ಗೆ ಕಾಯುತ್ತಿದ್ದು, ಅಂತಿಮ ನಿರ್ಣಯ ಮಾತ್ರ ಈವರೆಗೂ ಹೊರಬಿದ್ದಿಲ್ಲ. ಟಿ ಎಂ ಎಸ್ ಸಂಸ್ಥೆಗೆ ಆಡಳಿತಾಧಿಕಾರಿ ನೇಮಿಸಿ ಸರ್ಕಾರ ಆದೇಶಿಸಿತ್ತು. ಅದಾದ ನಂತರ ಆ ಆದೇಶಕ್ಕೆ ತಡೆಯಾಜ್ಞೆ ಬಂದ ಸುದ್ದಿ ಬಂದಿತ್ತು. ಈ ನಡುವೆ ಮತ್ತೆ ಆಡಳಿತಾಧಿಕಾರಿ ವಿಷಯ ಮುನ್ನೆಲೆಗೆ ಬಂದಿದೆ. ಒಟ್ಟಿನಲ್ಲಿ ಟಿಎಂಎಸ್ ಆಡಳಿತ ಮಂಡಳಿಯ ವಿಷಯ ಮುಂದೆನಾಗುತ್ತದೆ? ಎನ್ನುವುದರ ಬಗ್ಗೆ ಅಲ್ಲಿನ ಸದಸ್ಯರ ಜೊತೆ ಸಾರ್ವಜನಿಕರಲ್ಲಿಯೂ ಕುತೂಹಲ ಮೂಡಿಸಿದೆ. ಎನ್ ಕೆ ಭಟ್ಟ ಅಗ್ಗಾಶಿಕುಂಬ್ರಿ ನೇತೃತ್ವದ ಆಡಳಿತ ಮಂಡಳಿ ಇಲ್ಲಿ ಅಧಿಕಾರದಲ್ಲಿತ್ತು. ಅವರ ಅಧಿಕಾರ ಅವಧಿ ಮುಕ್ತಾಯದ ಹಂತದಲ್ಲಿರುವುದರಿAದ ಸೆಪ್ಟೆಂಬರ್ 28ರಂದು ಟಿಎಂಎಸ್ ಆಡಳಿತ ಮಂಡಳಿಯ ಆಯ್ಕೆಗಾಗಿ ಚುನಾವಣೆ ನಡೆದಿತ್ತು. ಆದರೆ, ಚುನಾವಣೆಯ ವಿಚಾರವಾಗಿ ಉಚ್ಛ ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ಬಾಕಿ ಹಿನ್ನಲೆ ಮತ ಎಣಿಕೆ ನಡೆದಿರಲಿಲ್ಲ. ಹಾಗಾಗಿ ನೂತನ ಆಡಳಿತ ಮಂಡಳಿ ಸಹ ಅಸ್ತಿತ್ವಕ್ಕೆ ಬಂದಿರಲಿಲ್ಲ. ಈ ನಡುವೆ ಅಕ್ಟೋಬರ್ 13ರಂದು ಎನ್ ಕೆ ಭಟ್ಟ ಅಗ್ಗಾಶಿಕುಂಬ್ರಿ ಅವರ ಅವಧಿ ಮುಕ್ತಾಯವಾಗಿದ್ದು, ಅಕ್ಟೊಬರ್ 15ರಂದು ಸಂಸ್ಥೆಗೆ ಆಡಳಿತಾಧಿಕಾರಿ ನೇಮಕ ನಡೆದಿತ್ತು. ಸಂಘದ ಆಡಳಿತಾತ್ಮಕ ದೃಷ್ಟಿಯಿಂದ ಜಿಲ್ಲೆಯ ಸಹಕಾರ ಸಂಘಗಳ ಉಪನಿಬಂಧಕ ಅಜ್ಮತ್ ಉಲ್ಲಾ ಖಾನ್ ಅವರು ಟಿಎಂಎಸ್ ಗೆ ಆಡಳಿತಾಧಿಕಾರಿ ನೇಮಕ ಮಾಡಿ ಆದೇಶ ಹೊರಡಿಸಿದ್ದರು. ಶಿರಸಿ ಉಪವಿಭಾಗದ ಸಹಕಾರ ಸಂಘಗಳ ಸಹಾಯಕ ನಿಬಂಧಕ ಅಜಿತ್ ಶಿರಹಟ್ಟಿ ಅವರು ಅಗಸ್ಟ್ 15ರಂದು ಆಡಳಿತಾಧಿಕಾರಿಯಾಗಿ ಅಧಿಕಾರವನ್ನು ಸ್ವೀಕರಿಸಿದ್ದರು. ಅದಾದ ಮರುದಿನವೇ ಆಡಳಿತಾಧಿಕಾರಿ ನೇಮಿಸಿ ಸಹಕಾರಿ ಇಲಾಖೆ ಹೊರಡಿಸಿದ್ದ ಆದೇಶವನ್ನು ಹೈಕೋರ್ಟ್ ರದ್ದುಗೊಳಿಸಿದ ಮಾಹಿತಿ ಬಂದಿತು. ಅವಧಿ ಮುಗಿಯುವ ಮುನ್ನ ಆಡಳಿತಾಧಿಕಾರಿ ನೇಮಕ ವಿಚಾರವಾಗಿ ಎನ್ ಕೆ ಭಟ್ಟ ಅವರ ತಂಡ ಧಾರವಾಡ ಉಚ್ಛ ನ್ಯಾಯಾಲಯದ ಮೋರೆ ಹೋಗಿದ್ದು, ಆಡಳಿತಾಧಿಕಾರಿ ಅಧಿಕಾರ ಸ್ವೀಕರಿಸದೇ ಇದ್ದರೆ ಆಡಳಿತ ಮಂಡಳಿ ಮುಂದುವರೆಯುವ ಬಗ್ಗೆ ನ್ಯಾಯಾಲಯ ಹೇಳಿತ್ತು. ಹೀಗಾಗಿ ಹಳೆಯ ಆಡಳಿತ ಮಂಡಳಿಗೆ ಜಯ ಸಿಕ್ಕ ಬಗ್ಗೆ ಸುದ್ದಿಯಾಗಿತ್ತು. ಆದರೆ, ನ್ಯಾಯಾಲಯದ ಆದೇಶ ಬರುವ ಮುಂಚಿನ ದಿನಾಂಕದ ಜೊತೆ ತಮ್ಮ ಟಿಎಂಎಸ್ ದಾಖಲೆಗಳಲ್ಲಿ ಆಡಳಿತಾಧಿಕಾರಿಗಳ ಸಹಿ ಬಿದ್ದಿದೆ. ಸದ್ಯ ಲಭ್ಯವಿರುವ ದಾಖಲೆಗಳ ಆಧಾರದಲ್ಲಿ ಟಿಎಂಎಸ್ ಸಂಸ್ಥೆಗೆ ಆಡಳಿತ ಮಂಡಳಿ ಬದಲು ಆಡಳಿತಾಧಿಕಾರಿಗಳ ಪ್ರಭಾವವೇ ಅಧಿಕವಾಗಿದೆ. ಆಡಳಿತ ಮಂಡಳಿ ಹಾಗೂ ಆಡಳಿತ ಅಧಿಕಾರಿಗಳ ಅಧಿಕಾರದ ಬಗ್ಗೆ ಎಪಿಎಂಸಿ ಸುತ್ತಲೂ ಚರ್ಚೆ ನಡೆಯುತ್ತಿದ್ದು, ಮುಂದಿನ ನಡೆಯ ಬಗ್ಗೆ ಕುತೂಹಲ ಹೆಚ್ಚಾಗಿದೆ. - [ತಪಾಸಣಾ ಕೇಂದ್ರಕ್ಕೆ ಗುದ್ದಿದ ಲಾರಿ: ಪ್ರಾಣಾಪಾಯದಿಂದ ಪಾರಾದ ಪೊಲೀಸ್!](https://mobiletime.in/2025/10/a-lorry-hit-the-checkpoint-the-policeman-escaped-with-his-life/): ಕುಮಟಾದ ಹಿರೇಗುತ್ತಿಯಲ್ಲಿನ ಪೊಲೀಸ್ ತಪಾಸಣಾ ಕೇಂದ್ರಕ್ಕೆ ಲಾರಿ ಗುದ್ದಿದ್ದು, ಈ ಅವಧಿಯಲ್ಲಿ ತಪಾಸಣಾ ಕೇಂದ್ರದಲ್ಲಿದ್ದ ಸಿಬ್ಬಂದಿ ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ. ಗುರುವಾರ ಅತ್ಯಂತ ವೇಗವಾಗಿ ಬಂದ ಲಾರಿ ಏಕಾಏಕಿ ಚೆಕ್‌ಪೋಸ್ಟ ಒಳಗೆ ನುಗ್ಗಿದೆ. ಅದಾದ ನಂತರ ಲಾರಿ ಹೆದ್ದಾರಿ ಮೇಲೆಯೇ ತಿರುಗಿ ಬಿದ್ದಿದೆ. ಲಾರಿ ಪಲ್ಟಿಯಾದ ಪರಿಣಾಮ ಅಲ್ಲಿ ಸಂಚಾರ ದಟ್ಟಣೆಯಾಗಿದ್ದು, ಕರ್ತವ್ಯದಲ್ಲಿದ್ದ ಪೊಲೀಸ್ ಸಿಬ್ಬಂದಿ ಸುಧಾರಿಸಿಕೊಂಡು ಪರಿಸ್ಥಿತಿ ನಿಭಾಯಿಸಿದರು. ಈ ಮೊದಲು ಹಿರೆಗುತ್ತಿಯಲ್ಲಿ ಉತ್ತಮ ಸಂಚಾರಿ ಪೊಲೀಸ್ ಠಾಣೆ ಕಾರ್ಯನಿರ್ವಹಿಸುತ್ತಿತ್ತು. ಹೆದ್ದಾರಿ ಅಗಲೀಕರಣ ಕಾರಣದಿಂದ ಆ ಠಾಣೆಯನ್ನು ತೆರವು ಮಾಡಲಾಗಿದ್ದು, ತಾತ್ಕಾಲಿಕ ಶೆಡ್ಡಿನಲ್ಲಿ ಪೊಲೀಸರು ಆಶ್ರಯಪಡೆದಿದ್ದರು. ಚತುಷ್ಪದ ರಸ್ತೆ ಮಧ್ಯಭಾಗದಲ್ಲಿ ಆ ಶೆಡ್ ತಂದಿರಿಸಲಾಗಿತ್ತು. ಆ ಶೆಡ್ಡಿನೊಳಗೆ ಕುಳಿತು ಪೊಲೀಸರು ವಾಹನ ತಪಾಸಣೆ ನಡೆಸುತ್ತಿದ್ದು, ಅದೇ ಶೆಡ್ಡಿಗೆ ಲಾರಿ ಗುದ್ದಿದೆ. ಅಂಕೋಲಾದಿAದ ಕುಮಟಾ ಕಡೆ ಸಂಚರಿಸುತ್ತಿದ್ದ ಲಾರಿ ನಸುಕಿನ 1.30ಕ್ಕೆ ಪೊಲೀಸ್ ಕೇಂದ್ರಕ್ಕೆ ಡಿಕ್ಕಿ ಹೊಡೆದಿದೆ. ಡಿಕ್ಕಿ ಸದ್ದಿಗೆ ಪೊಲೀಸರು ಅಲ್ಲಿಂದ ಪರಾರಿಯಾಗಿ ಜೀವ ಉಳಿಸಿಕೊಂಡಿದ್ದಾರೆ. ಅದಾಗಿಯೂ ಕೆಲವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಗೋಕರ್ಣ ಪಿಐ ಶ್ರೀಧರ್ ಎಸ್ ಆರ್ ಸ್ಥಳದಲ್ಲಿದ್ದಾರೆ. ಹೆದ್ದಾರಿ ಅಗಲೀಕರಣ ಮಾಡುತ್ತಿರುವ ಐ ಆರ್ ಬಿ ಕಂಪನಿಯ ಬೇಜವಬ್ದಾರಿಯಿಂದ ಈ ಅವಘಡ ನಡೆದ ಬಗ್ಗೆ ಜನ ದೂರಿದ್ದಾರೆ. ಅವಘಡ ತಡೆಗೆ ಸಾಕಷ್ಟು ಮನವಿ ನೀಡಿದರೂ ಪ್ರಯೋಜನವಾಗಿಲ್ಲ ಎಂದು ಜನ ಆಕ್ಷೇಪಿಸಿದ್ದಾರೆ. ಇಲ್ಲಿ ಶಾಶ್ವತ ಪೊಲೀಸ್ ಠಾಣೆ ನಿರ್ಮಿಸದೇ ಇದ್ದರೆ ಪ್ರತಿಭಟನೆ ನಡೆಸುವುದಾಗಿಯೂ ಎಚ್ಚರಿಸಿದ್ದಾರೆ. - [ಮೊಬೈಲ್ ಮಳಿಗೆಗೆ ಬೆಂಕಿ!](https://mobiletime.in/2025/10/fire-at-a-mobile-shop/): ಶಿರಸಿಯ ಮೊಬೈಲ್ ಮಳಿಗೆಗೆ ಗುರುವಾರ ಬೆಂಕಿ ಬಿದ್ದಿದೆ. ಪರಿಣಾಮ ಅಂಗಡಿಯೊಳಗಿದ್ದ ಸಾಮಗ್ರಿಗಳೆಲ್ಲವೂ ಭಸ್ಮವಾಗಿದೆ. ಶಿರಸಿಯ ನಟರಾಜ ರಸ್ತೆಯಲ್ಲಿ ಹಾನಗಲ್’ನ ರಶೀದ್ ಖಾನ್ ಮುಲ್ಲಾ ಅವರು ಮೊಬೈಲ್ ಅಂಗಡಿ ನಡೆಸುತ್ತಿದ್ದಾರೆ. ಪುಟ್ಟ ಅಂಗಡಿಯೇ ಅವರ ಬದುಕಿಗೆ ಆಧಾರವಾಗಿದ್ದು, ಅದೇ ಅಂಗಡಿ ಅಗ್ನಿಯ ಜ್ವಾಲೆಗೆ ಹೊತ್ತಿ ಉರಿದಿದೆ. ಗುರುವಾರ ಬೆಳಗ್ಗೆ ಹೊಗೆ ಆಡುವುದನ್ನು ನೋಡಿದ ಕೆಲವರು ಅಂಗಡಿ ಮಾಲಕರಿಗೆ ಫೋನ್ ಮಾಡಿದ್ದಾರೆ. ಅವರು ಬಂದು ನೋಡುವಷ್ಟರಲ್ಲಿ ಅಂಗಡಿ ಹೊತಿ ಉರಿದಿದೆ. ಅಗ್ನಿಶಾಮಕ ಸಿಬ್ಬಂದಿ ಬೆಂಕಿ ಆರಿಸಿದ್ದು, ಮತ್ತೊಂದು ಮಳಿಗೆಗೆ ಜ್ವಾಲೆ ಹರಡುವುದನ್ನು ತಪ್ಪಿಸಿದ್ದಾರೆ. ಅಂಗಡಿಯ ಪೀಠೋಪಕರಣಗಳು ಬೆಂಕಿಗೆ ಆಹುತಿಯಾಗಿದ್ದರಿಂದ ಲಕ್ಷಾಂತರ ರೂ ನಷ್ಟವಾಗಿದೆ. ಅಂಗಡಿಯ ಶಟರ್ಸ ಸಹ ಸುಟ್ಟಿದೆ. ವಿದ್ಯುತ್ ಶಾರ್ಟ ಸರ್ಕೀಟ್ ಅವಘಡಕ್ಕೆ ಕಾರಣ ಎಂಬ ಮಾಹಿತಿಯಿದೆ. - [KDCC: ಅಭ್ಯರ್ಥಿ ಪರ ಅಧಿಕಾರಿಯ ಪ್ರಚಾರ!](https://mobiletime.in/2025/10/kdcc-an-officers-campaign-for-a-candidate/): KDCC ಬ್ಯಾಂಕ್ ಚುನಾವಣೆಗೆ ಎರಡು ದಿನ ಬಾಕಿಯಿದ್ದು, ಕೊನೆ ಕ್ಷಣದಲ್ಲಿ ಅಧಿಕಾರಿಯೊಬ್ಬರು ಅಭ್ಯರ್ಥಿ‌ ಪರ‌ ಪ್ರಚಾರಕ್ಕಿಳಿದ್ದಿದ್ದಾರೆ. ‘ತಾವು ಸೂಚಿಸಿದ ಅಭ್ಯರ್ಥಿಗೆ ಮತ ಹಾಕದೇ ಇದ್ದರೆ ನಿಮ್ಮ ಸಹಕಾರಿ ಸಂಘದ ವಿರುದ್ಧ ತನಿಖೆ ನಡೆಸಿ ಸೊಸೈಟಿ ಬಾಗಿಲು ಮುಚ್ಚಿಸುವೆ‘ ಎಂದು ಆ ಅಧಿಕಾರಿ ಬೆದರಿಕೆ ಒಡ್ಡುತ್ತಿದ್ದಾರೆ. ‘ಗುಡಿಯಲ್ಲಿರುವ ರಾಘವೇಂದ್ರ’ ಸ್ವಾಮಿಯ ಹೆಸರಿನಲ್ಲಿ ಈ ಅಧಿಕಾರಿ‌ ಮತದಾರರಿಗೆ ಬೆದರಿಸುತ್ತಿದ್ದಾರೆ. ಈ ವೇಳೆ ಉಸ್ತುವಾರಿ ಸಚಿವರ ಹೆಸರನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ. ಅಡ್ಡದಾರಿಹಿಡಿದಾದರೂ ಕೆಡಿಸಿಸಿ ನಿರ್ದೇಶಕರಾಗಬೇಕು ಎಂದು ಬಯಸಿದವರಿಗೆ ಅಧಿಕಾರಿಯ ಮತಯಾಚನೆ ಮುಳುವಾಗುವ ಸಾಧ್ಯತೆಗಳಿವೆ. ‘ಅಭ್ಯರ್ಥಿಗಳ ಪರ ಮೊದಲು ಮತ ಯಾಚನೆ ನಡೆಯಿತು. ಅದಾದ ನಂತರ ಆಮೀಷ ಒಡ್ಡಲಾಯಿತು. ಇದೀಗ ಅಧಿಕಾರಿಗಳ ಮೂಲಕ ಬೆದರಿಸುವ ಕೆಲಸ ನಡೆಯುತ್ತಿದೆ’ ಎಂದು ಮತದಾರರೊಬ್ಬರು ಬೇಸರವ್ಯಕ್ತಪಡಿಸಿದರು. ‘ಈ ಹಿಂದೆ ನಡೆದ ಸೊಸೈಟಿ ಚುನಾವಣೆಯಲ್ಲಿಯೂ ಆ ಅಧಿಕಾರಿ ಅನಗತ್ಯವಾಗಿ ಕೈ ಆಡಿಸಿದ್ದರು. ಮತದಾರರಿಗೆ ಬೆದರಿಕೆ ಒಡ್ಡುವುದಕ್ಕಾಗಿ ಆ ಅಧಿಕಾರಿ ಪೋನ್ ಪೇ ಮೂಲಕ ಲಂಚ ಸ್ವೀಕರಿಸಿದ್ದಾರೆ’ ಎಂದು‌ ಮತ್ತೊಬ್ಬರು ವಿವರಿಸಿದರು. ಆ ಅಧಿಕಾರಿ ಆದಾಯಕ್ಕೂ ಮೀರಿ ಆಸ್ತಿ ಮಾಡಿದ್ದು, ಚುನಾವಣೆ ಮುಗಿದ ನಂತರ ಆ ಬಗ್ಗೆ ಲೋಕಾಯುಕ್ತರ ಗಮನಕ್ಕೆ ತರಲು ಕೆಲವರು ನಿರ್ಧರಿಸಿದ್ದಾರೆ. ಆ ಅವಧಿಯಲ್ಲಿ ಪೋನ್ ಪೇ ಮೂಲಕ ಅಕ್ರಮ ಹಣ ವರ್ಗಾವಣೆ ನಡೆದಿರುವುದನ್ನು ಸಾಕ್ಷಿಯಾಗಿ ನೀಡಲು ಸಿದ್ಧತೆ ನಡೆಸಿದ್ದಾರೆ. ಸಿದ್ದಾಪುರ-ಕುಮಟಾ ಗಡಿ ಅಂಚಿನ ಸೊಸೈಟಿಯವರ ಋಣ ತೀರಿಸುವುದಕ್ಕಾಗಿ ಆ ಸಣ್ಣ ಅಧಿಕಾರಿ ಈ ಪ್ರಚಾರ ಕೆಲಸ ಮಾಡುತ್ತಿರುವ ಬಗ್ಗೆ ಅನುಮಾನಗಳಿವೆ. ಆ ಸೊಸೈಟಿ ಅಧ್ಯಕ್ಷರು ಹಾಗೂ ಈ ಅಧಿಕಾರಿ‌ ನಡುವಿನ ವ್ಯವಹಾರಿಕ ಸಂಬಂಧವೂ‌ ಚರ್ಚೆಯ ಮುನ್ನಲೆಗೆ ಬಂದಿದೆ. - [ದೀಪಾವಳಿ ಹಬ್ಬಕ್ಕೆ ಬಿಡುಗಡೆಯಾದ ಹೊಸ ವರ್ಷದ ಕ್ಯಾಲೆಂಡರ್!](https://mobiletime.in/2025/10/new-years-calendar-released-for-diwali-festival/): ಹೊಸ ವರ್ಷಕ್ಕೆ ಎರಡು ತಿಂಗಳು ಬಾಕಿಯಿರುವಾಗಲೇ ಶಿರಸಿಯ ಪ್ರತಿಷ್ಠಿತ ಶ್ರೀ ಭೂತೇಶ್ವರ ಪತ್ತಿನ ಸಹಕಾರಿ ಸಂಘ 2026ರ ಕ್ಯಾಲೆಂಡರ್ ಹಾಗೂ ಡೈರಿ ಬಿಡುಗಡೆ ಮಾಡಿದೆ. ಜಿಲ್ಲಾ ಮಧ್ಯವರ್ತಿ ಬ್ಯಾಂಕಿನಿoದ `ಉತ್ತಮ ಸಹಕಾರಿ ಸಂಘ’ ಎಂಬ ಪ್ರಶಸ್ತಿಪಡೆದಿರುವ ಶ್ರೀ ಭೂತೇಶ್ವರ ಪತ್ತಿನ ಸಹಕಾರಿ ಸಂಘವೂ ಎಲ್ಲರಿಗಿಂತ ಮೊದಲು ಹೊಸ ವರ್ಷದ ಕ್ಯಾಲೆಂಡರ್ ಬಿಡುಗಡೆ ಮಾಡಿದೆ. ವಿವಿಧ ಜಾತ್ರೆ, ಹಬ್ಬ ಹರಿದಿನ, ಸರ್ಕಾರಿ ರಜೆ ಸೇರಿ ಹಲವು ಮಹತ್ವದ ವಿಷಯಗಳ ಬಗ್ಗೆ ಕ್ಯಾಲೆಂಡರಿನಲ್ಲಿ ನಮೂದಿಸಲಾಗಿದೆ. ಪ್ರತಿ ಪುಟದಲ್ಲಿಯೂ ಮಾರಿಕಾಂಬಾ ದೇವಿಯ ಆಕರ್ಷಕ ಚಿತ್ರವನ್ನು ಬಿಂಬಿಸಲಾಗಿದೆ. ಜೊತೆಗೆ ವಿವಾಹ ಮುಹೂರ್ತ, ಗೃಹ ಪ್ರವೇಶದ ಮುಹೂರ್ತಗಳ ಬಗ್ಗೆ ಕ್ಯಾಲೆಂಡರ್ ಮಾಹಿತಿ ಒದಗಿಸುತ್ತಿದೆ. ಸಿಪಿ ಬಝಾರಿನಲ್ಲಿರುವ ಸಂಘದ ಕಚೇರಿಯಲ್ಲಿ ಕ್ಯಾಲೆಂಡರ್ ಹಾಗೂ ಡೈರಿ ಬಿಡುಗಡೆ ನಡೆದಿದ್ದು, ಜೀವಜಲ ಕಾರ್ಯಪಡೆ ಅಧ್ಯಕ್ಷ ಶ್ರೀನಿವಾಸ ಹೆಬ್ಬಾರ್ ಅವರು ಕ್ಯಾಲೆಂಡರ್ ನೋಡಿ ಮೆಚ್ಚುಗೆವ್ಯಕ್ತಪಡಿಸಿದರು. ಸಾಮಾಜಿಕ ಧುರೀಣ ಉಪೇಂದ್ರ ಪೈ, ಹೈಕೋರ್ಟ ನ್ಯಾಯವಾದಿ ಅರುಣಾಚಲ ಹೆಗಡೆ, ಶಿರಸಿ ಕಾರ್ಯನಿಯರ ಪತ್ರಕರ್ತರ ಸಂಘದ ಅಧ್ಯಕ್ಷ ಸಂದೇಶ ಭಟ್ ಬೆಳಖಂಡ, ಸಂಘದ ಆಂತರಿಕ ಸಲಹೆಗಾರ ಪಿ ಡಿ.ಮುದ್ಗುಣಿ ಹಾಗೂ ಸಂಘದ ಅಧ್ಯಕ್ಷ ಶ್ರೀಧರ ಮೊಗೇರ್ ಅವರು ಸಂಘದ ಕೆಲಸಗಳನ್ನು ಗಮನಿಸಿ ಮೆಚ್ಚುಗೆಯ ಮಾತನಾಡಿದರು. `ಶ್ರೀ ಭೂತೇಶ್ವರ ಪತ್ತಿನ ಸಹಕಾರಿ ಸಂಘದಿoದ ಹೊಸ ವರ್ಷಕ್ಕೆ ಎರಡು ತಿಂಗಳ ಮೊದಲೇ ಕ್ಯಾಲೆಂಡರ್ ಬಿಡುಗಡೆ ಮಾಡಿರುವುದರಿಂದ ಅನೇಕರಿಗೆ ಅನುಕೂಲವಾಗಲಿದೆ. ಎಲ್ಲಾ ಮಾಹಿತಿಗಳನ್ನು ಒಳಗೊಂಡ ಕ್ಯಾಲೆಂಡರ್ ಹಾಗೂ ಡೈರಿ ನಿತ್ಯದ ಕೆಲಸ-ಕಾರ್ಯಗಳಿಗೆ ಪೂರಕವಾಗಿದೆ’ ಎಂದು ಗಣ್ಯರು ಬಣ್ಣಿಸಿದರು. `ಶ್ರೀ ಭೂತೇಶ್ವರ ಪತ್ತಿನ ಸಹಕಾರಿ ಸಂಘವೂ 25 ವರ್ಷದ ಹೊಸ್ತಿಲಿನಲ್ಲಿದ್ದು, ಈ ಬಾರಿ ರಜತ ಮಹೋತ್ಸವ ಆಚರಣೆ ನಡೆಸುವ ಬಗ್ಗೆ ಸಂಘದ ಉಪಾಧ್ಯಕ್ಷ ಭಾಸ್ಕರ ಶೆಟ್ಟಿ ಅವರು ಆಗಮಿಸಿದವರಿಗೆ ಮಾಹಿತಿ ನೀಡಿದರು. `ಗ್ರಾಹಕರ ಸಹಕಾರವೇ ಸಂಘದ ಯಶಸ್ಸಿಗೆ ಕಾರಣ’ ಎಂದು ಮುಖ್ಯ ಕಾರ್ಯನಿರ್ವಾಹಕ ವಿನಾಯಕ ಶೆಟ್ಟಿ ವಿವರಿಸಿದರು. `ಗಣ್ಯರಿಗೆ ಹಾಗೂ ಗ್ರಾಹಕರಿಗೆ ಸಂಘದಿoದಲೇ ಕ್ಯಾಲೆಂಡರ್ ಹಾಗೂ ಡೈರಿ ತಲುಪಿಸಲಾಗುತ್ತದೆ’ ಎಂದು ಅವರು ತಿಳಿಸಿದರು. - [KDCC: ನನ್ನ ಮತ ಮಾರಾಟಕ್ಕಿಲ್ಲ!](https://mobiletime.in/2025/10/kdcc-my-vote-is-not-for-sale/): ಕೆಡಿಸಿಸಿ ಚುನಾವಣೆಯ ಪ್ರಚಾರದ ಪ್ರಕ್ರಿಯೆಗಳು ತುರುಸಿನಿಂದ ಕೂಡಿದ್ದು, ಮತದಾರರಿಗೆ ಆಮೀಷ ಒಡ್ಡುವ ಪ್ರಕ್ರಿಯೆ ಜೋರಾಗಿದೆ. ಪ್ರತಿ ಮತ 50 ಸಾವಿರ ರೂಪಾಯಿಯಿಂದ 1 ಲಕ್ಷ ರೂಪಾಯಿವರೆಗೆ ಅವರವರ ಯೋಗ್ಯತೆಗೆ ಅನುಸಾರವಾಗಿ ಮತ ಖರೀದಿ ಪ್ರಕ್ರಿಯೆ ನಡೆಯುತ್ತಿದೆ. ಈ ಹಣ ತಲುಪಿಸುವುದಕ್ಕಾಗಿ ಬಹುತೇಕ ತಾಲೂಕುಗಳಲ್ಲಿ ಮಧ್ಯವರ್ತಿಗಳು ಅಭ್ಯರ್ಥಿಗಳ ಬೆನ್ನು ಬಿದ್ದಿದ್ದಾರೆ. ಅಭ್ಯರ್ಥಿಯೂ ಮತದಾರರಿಗಾಗಿ ಬಿಡುಗಡೆ ಮಾಡಿದ ಹಣ ಮಧ್ಯವರ್ತಿಯ ಜೇಬು ಸೇರುತ್ತಿದೆ. ಈ ನಡುವೆ ಮತದಾರರ ಮನವೊಲೈಕೆಗೆ ಮಧ್ಯವರ್ತಿ ಮನೆಗೆ ಬಂದಾಗ ಅನೇಕರು `ನನ್ನ ಮತ ಮಾರಾಟಕ್ಕಿಲ್ಲ’ ಎಂದಿದ್ದು, ಮಾತುಕಥೆಗೆ ಬಂದವರನ್ನು ಬೈದು-ಉಗಿದು ಹೊರದಬ್ಬುತ್ತಿದ್ದಾರೆ. ಅಕ್ಟೊಬರ್ 25ರ ಶನಿವಾರ ಕೆಡಿಸಿಸಿ ಬ್ಯಾಂಕಿನ ಮತದಾನ ಪ್ರಕ್ರಿಯೆ ನಡೆಯುತ್ತಿದೆ. 30 ಅಭ್ಯರ್ಥಿಗಳು ಕಣದಲ್ಲಿದ್ದು, ಅದರಲ್ಲಿ ಬಹುತೇಕರು ಈ ಚುನಾವಣೆಯನ್ನು ಪ್ರತಿಷ್ಠೆಯ ಕಣವನ್ನಾಗಿಸಿಕೊಂಡಿದ್ದಾರೆ. ಚುನಾವಣೆ ಗೆಲ್ಲುವುದಕ್ಕಾಗಿಯೇ ಕೋಟಿ ಕೋಟಿ ಲೆಕ್ಕಾಚಾರದಲ್ಲಿ ದುಡ್ಡು ಖರ್ಚು ಮಾಡುತ್ತಿದ್ದಾರೆ. `ಇಷ್ಟೊಂದು ಹಣ ಖರ್ಚು ಮಾಡಿ ಬ್ಯಾಂಕ್ ನಿರ್ದೇಶಕರಾದವರಿಗೆ ಏನು ಲಾಭ?’ ಎನ್ನುವ ಚರ್ಚೆಯೂ ಜೋರಾಗಿದೆ. ಜೊತೆಗೆ ಕೆಡಿಸಿಸಿ ಬ್ಯಾಂಕ್ ಮೂಲಕ ಈ ಮೊದಲು ನಡೆದಿದ್ದ ಹಗರಣಗಳು ಮುನ್ನಲೆಗೆ ಬಂದಿದೆ. ಹಿರಿಯ ಸಹಕಾರಿಗಳ ಜೊತೆ ಸಾರ್ವಜನಿಕರು ಸಹ ಖರೀದಿಯೇ ಆಗದ ಕಾರಿಗೆ ಸಾಲ ನೀಡಿದ ಹಗರಣದ ಬಗ್ಗೆ ಬೀದಿ ಬೀದಿಯಲ್ಲಿ ಮಾತನಾಡುತ್ತಿದ್ದಾರೆ. ನಕಲಿ ಬಂಗಾರದ ಮೇಲಿನ ಸಾಲ, ಸಾಲ ಕೊಡುವಾಗ ಸಿಗುವ ಕಮಿಷನ್, ಸಾಲ ಮರುಪಾವತಿ ಆಗದಿರುವಾಗ ನಡೆಯುವ `ಒನ್ ಟೈಂ ಸೆಟ್ಲಮೆಂಟ್’ ವ್ಯವಹಾರದಲ್ಲಿನ ಸೆಟ್ಲಮೆಂಟ್, ಉದ್ಯೋಗ ನೇಮಕಾತಿಯಲ್ಲಿನ ಹಣಕಾಸು ವ್ಯವಹಾರ, ಉದ್ಯೋಗಿಗಳ ವರ್ಗಾವಣೆ ದಂಧೆ ಸೇರಿ ಹಲವು ಭ್ರಷ್ಟಾಚಾರ ಪ್ರಕರಣಗಳ ಬಗ್ಗೆ ಮಾತು ಕೇಳಿ ಬರುತ್ತಿದೆ. `ಕೆಡಿಸಿಸಿ ಸಭೆಯಲ್ಲಿ ಸಿಗುವ ಚಹಾ-ಮತ್ತು ಬಿಸ್ಕೇಟ್ ಆಸೆಗಾಗಿ ಯಾವ ಅಭ್ಯರ್ಥಿಗಳು ಈ ಪ್ರಮಾಣದಲ್ಲಿ ಹಣ ವೆಚ್ಚ ಮಾಡಲು ಸಾಧ್ಯವಿಲ್ಲ’ ಎಂದು ಅರಿತ ಮತದಾರರು ನೇರವಾಗಿಯೇ `ನನ್ನ ಮತ ಮಾರಾಟಕ್ಕಿಲ್ಲ’ ಎಂದಿದ್ದಾರೆ. `ಇಷ್ಟೊಂದು ಹಣ ಹೂಡಿಕೆ ಮಾಡಿ ಕೆಡಿಸಿಸಿ ಬ್ಯಾಂಕಿನ ನಿರ್ದೇಶಕರಾದವರು ಹೂಡಿಕೆ ಮಾಡಿದ ಹಣ ಬಡ್ಡಿ ಜೊತೆ ಹಿಂಪಡೆಯುವುದು ಸಹಜ. ಈ ರೀತಿ ಉದ್ಯಮದ ಮನಸ್ಥಿತಿಯವರಿಗೆ ಮತ ಹಾಕಿದರೆ ಸಹಕಾರಿ ತತ್ವಗಳು ಹಳ್ಳಹಿಡಿಯುವುದು ಖಚಿತ’ ಎಂಬುದು ಹಿರಿಯ ಸಹಕಾರಿಗಳ ಆತಂಕ. ತಮ್ಮ ಸ್ವಾರ್ಥ ಹೊರತುಪಡಿಸಿ ಸಹಕಾರಿ ಸಂಘಗಳಿಗೆ ಸ್ಪಂದಿಸುವವರೇ? ಎಂಬ ಚರ್ಚೆ ನಡೆದಿದೆ. ಹೀಗಾಗಿಯೇ ಅವರು ಸಹ `ಮತ ಮಾರಾಟ ಮಾಡಬೇಡಿ’ ಎಂದು ಮನವಿ ಮಾಡುತ್ತಿದ್ದಾರೆ. `ಸಂಘಟನೆ ಹಾಗೂ ಸಂಸ್ಥೆ ಬೆಳವಣಿಗೆ ದೃಷ್ಠಿಯಂದ ಮತ ಮಾರಾಟ ಯೋಗ್ಯ ಬೆಳವಣಿಗೆಯಲ್ಲ’ ಎಂದು ಹಿರಿಯ ಸಹಕಾರಿಗಳು ಮತದಾರರಿಗೆ ಮನವರಿಕೆ ಮಾಡುತ್ತಿದ್ದಾರೆ. ಇನ್ನೂ ಅಭ್ಯರ್ಥಿಗಳಿಂದ ಹಣಪಡೆದ ಮಧ್ಯವರ್ತಿಗಳು ಎಲ್ಲಾ ಮತದಾರರಿಗೂ ಸರಿಸಮಾನವಾಗಿ ಹಣ ಹಂಚುತ್ತಿಲ್ಲ ಎಂಬ ವಿಷಯ ಅಭ್ಯರ್ಥಿ ಹಾಗೂ ಮತದಾರರ ನಡುವೆ ಆಂತರಿಕ ಕಲಹಕ್ಕೆ ಕಾರಣವಾಗಿದೆ. ತಮ್ಮ ಬೇಳೆ ಬೇಯಿಸಿಕೊಳ್ಳುವುದಕ್ಕಾಗಿ ಮಧ್ಯವರ್ತಿಗಳು ಅಭ್ಯರ್ಥಿ ಹಾಗೂ ಮತದಾರರ ಭೇಟಿಗೆ ಅವಕಾಶ ಮಾಡಿಕೊಡುತ್ತಿಲ್ಲ. ಅವರಿಬ್ಬರು ಒಟ್ಟಿಗೆ ಕೂತು ಮಾತನಾಡಲು ಬಿಡುತ್ತಿಲ್ಲ. ಅದಾಗಿಯೂ ಕೆಲ ಅಭ್ಯರ್ಥಿಗಳು ಪ್ರಚಾರದ ವೇಲೆ ಮತದಾರರಿಗೆ ಸೀರೆ-ಪಂಜೆ, ಮೂರ್ತಿಯ ಉಡುಗರೆ ಕೊಡುತ್ತಿದ್ದಾರೆ. ವಿದೇಶಿ ಪ್ರವಾಸ, ಸಾಲ ಕೊಡಿಸುವ ಭರವಸೆ ಜೊತೆ ಲೇಔಟಿನಲ್ಲಿ ಸೈಟ್ ಒದಗಿಸುವ ಆಮೀಷಗಳು ಮತದಾರರಿಗೆ ಸಿಕ್ಕಿದೆ. ಕೆಲ ಕಡೆ ತಮ್ಮ ಪ್ರಭಾವ-ಆತ್ಮೀಯ ಮಾತುಗಳಿಂದ ಮತಪಡೆಯುವ ಕಸರತ್ತು ನಡೆಸಿದ್ದು ಮಧ್ಯವರ್ತಿಗಳು ಅಲ್ಲಿಯೂ ಅಭ್ಯರ್ಥಿಗಳಿಂದಪಡೆದ ಹಣವನ್ನು ತಮ್ಮ ಜೇಬಿಗಿಳಿಸಿದ್ದಾರೆ. ಈ ಎಲ್ಲದರ ನಡುವೆ ಕಣದಲ್ಲಿರುವ ಬೆರಳಣಿಕೆ ಅಭ್ಯರ್ಥಿಗಳು ಮಾತ್ರ ಕಾಸು ಬಿಚ್ಚದೇ ಚುನಾವಣೆ ಎದುರಿಸುವ ತಯಾರಿಯಲ್ಲಿದ್ದಾರೆ. ಕೆಲವೇ ಕೆಲವು ಅಭ್ಯರ್ಥಿಗಳು `ಸಹಕಾರಿ ತತ್ವವೇ ನನ್ನ ನಿಲುವು’ ಎಂದು ಸಾರಿದ್ದು ಮತ ಬಿಕ್ಷೆ ಬೇಡುತ್ತಿದ್ದಾರೆ. `ನ್ಯಾಯಕ್ಕೆ ಮಾತ್ರ ನಮ್ಮ ಮತ’ ಎಂದು ಸಾರಿರುವ ಮತದಾರರು ಸಹ ಭ್ರಷ್ಟಾಚಾರ ನಡೆಸಿದೇ, ಪ್ರಾಮಾಣಿಕವಾಗಿರುವ ಅಭ್ಯರ್ಥಿಗನ್ನು ಬೆಂಬಲಿಸುವ ಮಾತನಾಡಿದ್ದಾರೆ. ಈ ಎಲ್ಲಾ ಘಟನಾವಳಿಗಳಿಂದ ಈ ಬಾರಿ ಕೆಡಿಸಿಸಿ ಚುನಾವಣೆ ರಂಗೇರಿದ್ದು, ಸಹಕಾರಿ ರಂಗ ಭ್ರಷ್ಟಗೊಳ್ಳುವ ಈ ಸನ್ನಿವೇಶದಲ್ಲಿ ಮತದಾರರ ತೀರ್ಮಾನ ಕಾಯ್ದು ನೋಡುವುದೊಂದೇ ದಾರಿಯಾಗಿದೆ. - [ಹಬ್ಬದ ಆಟ: ಶಿರಸಿ-ಯಲ್ಲಾಪುರದಲ್ಲಿಯೂ ಪೊಲೀಸರ ಕಾಟ!](https://mobiletime.in/2025/10/festive-game-police-menace-in-sirsi-yellapur-too/): ಶಿರಸಿ ಹಾಗೂ ಯಲ್ಲಾಪುರದಲ್ಲಿ ದೀಪಾವಳಿ ಅಂಗವಾಗಿ ಜೂಜಾಟ ನಡೆಸಿದವರ ಮೇಲೆ ಪೊಲೀಸರು ದಾಳಿ ಮಾಡಿದ್ದಾರೆ. ಈ ದಾಳಿಯ ವೇಳೆ ಕೆಲವರು ಸಿಕ್ಕಿಬಿದ್ದಿದ್ದು, ಇನ್ನೂ ಕೆಲವರು ಓಡಿ ಪರಾರಿಯಾಗಿದ್ದಾರೆ. ಅಕ್ಟೊಬರ್ 22ರ ಬೆಳಗ್ಗೆ ಯಲ್ಲಾಪುರದ ಹೊಸಳ್ಳಿ ಜನತಾ ಕಾಲೋನಿಯ ರಸ್ತೆ ಅಂಚಿನಲ್ಲಿ ಜನತಾ ಕಾಲೋನಿಯ ವಿನೋದ ಮಾರುತಿ ಚೌಹಾಣ, ಶಿವಾಜಿ ಸೋಮಣ್ಣ ಕಾಂಬಳೆ, ಮೌಲಾಲಿ ಮಹಮದಸಾಬ್ ಸಯ್ಯದ್, ಶಿವರಾಯ ಬಸಪ್ಪ ಕಿಲಾರಿ ಅವರ ಜೊತೆ ಗೌಳಿವಾಡದ ಬೀರು ಸಾವು ಪಟಗಾರೆ ಅವರು ಜೂಜಾಟದಲ್ಲಿ ತೊಡಗಿದ್ದರು. ಪಿಎಸ್‌ಐ ರಾಜಶೇಖರ ವಂದಲಿ ದಾಳಿ ತಮ್ಮ ತಂಡದೊoದಿಗೆ ಅಲ್ಲಿ ದಾಳಿ ಮಾಡಿದ್ದು, ಆಗ 4 ಜನ ಸಿಕ್ಕಿ ಬಿದ್ದರು. ಸಿಕ್ಕಿಬಿದ್ದವರ ಬಳಿಯಿದ್ದ 3630ರೂ ಹಣ, ಇಸ್ಪಿಟ್ ಎಲೆಗಳನ್ನು ಪೊಲೀಸರು ವಶಕ್ಕೆಪಡೆದರು. ಶಿವರಾಯ ಬಸಪ್ಪ ಕಿಲಾರಿ ಹಾಗೂ ಗೌಳಿವಾಡದ ಬೀರು ಸಾವು ಪಟಗಾರೆ ಓಡಿಹೋದರೂ ಅವರ ಹೆಸರು ಸೇರಿಸಿ ಕಾನೂನು ಕ್ರಮ ಜರುಗಿಸಿದರು. ಯಲ್ಲಾಪುರ ಪಟ್ಟಣದ ರವೀಂದ್ರ ನಗರ ಬಳಿಯ ಚೌಡೇಶ್ವರಿ ದೇವಾಲಯದ ಹತ್ತಿರ ಅಕ್ಟೊಬರ್ 22ರ ನಸುಕಿನಲ್ಲಿ ಜೂಜಾಟ ನಡೆಯುತ್ತಿತ್ತು. ರವೀಂದ್ರ ನಗರದ ಚಾಲಕ ಸಂತೋಷ ಸತ್ಯಪ್ಪ ಬೋವಿವಡ್ಡರ್, ಗೌಂಡಿ ಕೆಲಸ ಮಾಡುವ ಗಿರೀಶ ದುರ್ಗಪ್ಪ ಬೋವಿವಡ್ಡರ್, ಕಾರ್ಪರೆಂಟರ್ ಲಕ್ಷ್ಮಣ ಮಹೇಶ ಮರಾಠಿ, ಗುರುರಾಜ ಹನುಮಂತಪ್ಪ ಬೋವಿವಡ್ಡರ್, ಪರಶುರಾಮ ಶಿವಪ್ಪ ಬೋವಿವಡ್ಡರ್, ಶಿವಪ್ಪ ಬೋವಿವಡ್ಡರ್, ಸಿದ್ದು ಯಮಕರ ಗೌಳಿ, ಸಾಗರ ಮಹೇಶ ನಾಯ್ಕ ಹಾಗೂ ಮುಟಿಗಪ್ಪ ಬೋವಿವಡ್ಡರ್ ಅಲ್ಲಿ ಅಂದರ್ ಬಾಹರ್ ಆಟದಲ್ಲಿ ತಲ್ಲೀನರಾಗಿದ್ದರು. ಪಿಎಸ್‌ಐ ಸಿದ್ದಪ್ಪ ಗುಡಿ ಅವರು ತಮ್ಮ ತಂಡದ ಜೊತೆ ಅಲ್ಲಿ ದಾಳಿ ಮಾಡಿದರು. ಆಗ, ಗುರುರಾಜ ಹನುಮಂತಪ್ಪ ಬೋವಿವಡ್ಡರ್, ಪರಶುರಾಮ ಶಿವಪ್ಪ ಬೋವಿವಡ್ಡರ್, ಶಿವಪ್ಪ ಬೋವಿವಡ್ಡರ್, ಸಿದ್ದು ಯಮಕರ ಗೌಳಿ, ಸಾಗರ ಮಹೇಶ ನಾಯ್ಕ ಹಾಗೂ ಮುಟಿಗಪ್ಪ ಬೋವಿವಡ್ಡರ್ ಓಡಿ ಪರಾರಿಯಾದರು. ಸಂತೋಷ ಸತ್ಯಪ್ಪ ಬೋವಿವಡ್ಡರ್, ಗಿರೀಶ ದುರ್ಗಪ್ಪ ಬೋವಿವಡ್ಡರ್, ಲಕ್ಷö್ಮಣ ಮಹೇಶ ಮರಾಠಿ ಮಾತ್ರ ಸಿಕ್ಕಿಬಿದ್ದರು. ಅವರ ಬಳಿಯಿದ್ದ 1220ರೂ ಹಣದ ಜೊತೆ ಇಸ್ಪಿಟ್ ಎಲೆ ಜೊತೆಯಿದ್ದ 3220ರೂ ಹಣವನ್ನು ಪೊಲೀಸರು ಜಪ್ತು ಮಾಡಿದರು. ಓಡಿ ಹೋದವರ ಹೆಸರನ್ನು ನಮೂದಿಸಿ ಪ್ರಕರಣ ದಾಖಲಿಸಿದರು. ಶಿರಸಿಯ ಮಾರಿಕಾಂಬಾ ಕ್ರೀಡಾಂಗಣ ಎದುರು ಅಕ್ಟೊಬರ್ 21ರ ರಾತ್ರಿ ಅಂದರ್ ಬಾಹರ್ ಆಟ ಜೋರಾಗಿತ್ತು. ಪಿಎಸ್‌ಐ ಬಸವರಾಜ ಕನಶೆಟ್ಟಿ ಅಲ್ಲಿ ತಮ್ಮ ತಂಡದ ಜೊತೆ ಹೋಗಿ ನಾಲ್ವರನ್ನು ವಶಕ್ಕೆಪಡೆದರು. ಕಾನೂನುಬಾಹಿರ ಚಟುವಟಿಕೆಯಲ್ಲಿ ತೊಡಗಿದ್ದ ಇಂದಿರಾನಗರದ ಮಹಮದ್ ಅನ್ವರ್ ಅಬ್ದುಲ್ ಗಫರ್ ಮುನಿಯಾರ್, ಮಹಾಲಕ್ಷಿ ಲೇಔಟಿನ ನೂರಸಾಬ್ ರಾಜಸಾಬ್ ಬೆಲೇರಿ, ವಿವೇಕಾನಂದ ನಗರದ ರಾಮು ಶಿವಪ್ಪ ಮಾನೆನ್ನವರ್ ಜೊತೆ ಶಾಂತಿ ನಗರದ ದಿನೇಶ ಈರಪ್ಪ ಗೌಳಿ ಸಿಕ್ಕಿಬಿದ್ದರು. ಅವರ ಬಳಿಯಿದ್ದ 3600ರೂ ಹಣದ ಜೊತೆ ಇಸ್ಪಿಟ್ ಎಲೆಗಳನ್ನು ಪೊಲೀಸರು ವಶಕ್ಕೆಪಡೆದು ಪ್ರಕರಣ ದಾಖಲಿಸಿದರು. `ಜೂಜಾಟದಿಂದ ಜೀವನ ಹಾಳು’   - [2025 ಅಕ್ಟೊಬರ್ 23ರ ದಿನ ಭವಿಷ್ಯ](https://mobiletime.in/2025/10/prediction-for-october-23-2025/): ಮೇಷ ರಾಶಿ: ಇಡೀ ದಿನ ತಾಳ್ಮೆಯಿಂದ ವ್ಯವಹರಿಸುವುದು ಅಗತ್ಯ. ಆರೋಗ್ಯದ ವಿಷಯದಲ್ಲಿ ನಿಷ್ಕಾಳಜಿ ಮಾಡಬೇಡಿ. ಹೊಸ ಬಗೆಯ ಚಟುವಟಿಕೆಗಳಿಗೆ ಅವಕಾಶ ಕೊಡಿ. ವೃಷಭ ರಾಶಿ: ಶ್ರಮಕ್ಕೆ ತಕ್ಕ ಫಲ ಸಿಗುತ್ತದೆ. ಆರ್ಥಿಕ ವಿಷಯವಾಗಿ ಜಾಗೃತಿ ಅಗತ್ಯ. ವೃತ್ತಿ ಕ್ಷೇತ್ರದಲ್ಲಿ ನವೀನ ಅವಕಾಶ ಸಿಗಲಿದೆ. ಮಿಥುನ ರಾಶಿ: ನಿಮ್ಮ ರಹಸ್ಯಗಳನ್ನು ಬೇರೆಯವರ ಬಳಿ ಹೇಳಬೇಡಿ. ಮಾತನಾಡುವಾಗ ಎಚ್ಚರಿಕೆ ಅಗತ್ಯ. ವಿಜ್ಞಾನ ಚಟುವಟಿಕೆಗಳಲ್ಲಿ ಆಸಕ್ತಿ ಮೂಡಲಿದೆ. ಕರ್ಕ ರಾಶಿ: ಮನಸ್ಸಿನ ಆಳದಲ್ಲಿರುವ ಗೊಂದಲ ಬಗೆಹರಿಸಿಕೊಳ್ಳಲು ಪ್ರಯತ್ನಿಸಿ. ಆಪ್ತರ ಸಹಾಯ ಸಿಗಲಿದೆ. ಜೀವನದಲ್ಲಿನ ಸಣ್ಣ ಬದಲಾವಣೆ ಮನಸ್ಸಿಗೆ ಹಿತ ನೀಡಲಿದೆ. ಸಿಂಹ ರಾಶಿ: ನಿಮ್ಮ ನಾಯಕತ್ವದಲ್ಲಿ ನಡೆಯುವ ಕೆಲಸಗಳು ಸರಾಗವಾಗಿ ಸಾಗಲಿದೆ. ಉದ್ಯೋಗದಲ್ಲಿ ಹೊಸ ವರಮಾನದ ಲಕ್ಷಣಗಳಿವೆ. ಸಮಸ್ಯೆ ಎದುರಾದರೂ ಅವುಗಳನ್ನು ಸಹಜವಾಗಿ ಎದುರಿಸುತ್ತೀರಿ. ಕನ್ಯಾ ರಾಶಿ: ಕಠಿಣ ಪರಿಶ್ರಮಕ್ಕೆ ಯೋಗ್ಯ ಫಲ ಸಿಗುತ್ತದೆ. ಧೈರ್ಯದಿಂದ ಮಾಡಿದ ಕೆಲಸಗಳಲ್ಲಿ ಯಶಸ್ಸು ಸಾಧ್ಯವಿದೆ. ಆರೋಗ್ಯದ ಕಡೆ ಗಮನಹರಿಸಿ. ತುಲಾ ರಾಶಿ: ಕಲಹಗಳು ಬಗೆಹರಿಯುವ ಸಾಧ್ಯತೆಗಳಿವೆ. ಮಿತ್ರದ ಜೊತೆ ಕಾಲ ಕಳೆಯುವಿರಿ. ವ್ಯವಹಾರದಲ್ಲಿ ಜಾಗೃತಿ ಅಗತ್ಯ. ವೃಶ್ಚಿಕ ರಾಶಿ: ವೃತ್ತಿಯಲ್ಲಿ ಹೆಚ್ಚುವರಿ ಜವಾಬ್ದಾರಿಗಳು ಬರಲಿದೆ. ಹಣಕಾಸಿನ ನಿರ್ವಹಣೆಯಲ್ಲಿ ಏರುಪೇರಾಗಲಿದೆ. ಹೊಸ ವ್ಯಕ್ತಿಗಳ ಭೇಟಿ ಭವಿಷ್ಯದಲ್ಲಿ ನೆರವಾಗಲಿದೆ. ಧನು ರಾಶಿ: ನಿಮ್ಮ ಸಮಸ್ಯೆಗಳಿಗೆ ಸ್ಪಷ್ಟ ಪರಿಹಾರ ಸಿಗಲಿದೆ. ಪ್ರವಾಸದ ಲಕ್ಷಣಗಳಿವೆ. ಧಾರ್ಮಿಕ ಹಾಗೂ ವೈಚಾರಿಕ ಕ್ಷೇತ್ರದಲ್ಲಿ ಶ್ರದ್ಧೆ ಅಗತ್ಯ. ಮಕರ ರಾಶಿ: ಹಣಕಾಸು ಲಾಭ ಆಗಲಿದೆ. ಸಾಮಾಜಿಕ ಕ್ಷೇತ್ರದಲ್ಲಿ ಮನ್ನಣೆ ಸಿಗಲಿದೆ. ಸರಿಯಾದ ಯೋಜನೆ ರೂಪಿಸಿದರೆ ಮಾತ್ರ ಜೀವನ ಉತ್ತಮವಾಗಲಿದೆ. ಕುಂಭ ರಾಶಿ: ಪ್ರೇರಣಾದಾಯಕ ಸನ್ನಿವೇಶಗಳು ನಿಮ್ಮ ಉತ್ಸಾಹ ಹೆಚ್ಚಿಸಲಿದೆ. ವೈಚಾರಿಕ ಚಿಂತನೆಗಳು ಕಾರ್ಯಕ್ಷೇತ್ರಕ್ಕೆ ಬೆಂಬಲ ನೀಡಲಿದೆ. ಆರೋಗ್ಯದ ಬಗ್ಗೆ ಗಮನಹರಿಸಿ. ಮೀನ ರಾಶಿ: ನಿಮ್ಮ ಕಲಾತ್ಮಕ ಚಟುವಟಿಕೆಗಳ ಬಗ್ಗೆ ಬೇರೆಯವರ ಮೆಚ್ಚುಗೆ ಸಿಗಲಿದೆ. ಸಾಮಾಜಿಕ ಸಂಪರ್ಕ ಜಾಲ ವಿಸ್ತರಣೆ ಆಗಲಿದೆ. ಸಂತೋಷದ ಸುದ್ದಿ ಬರಲಿದೆ. - [ವಿದ್ಯುತ್ ಆಘಾತ: ಶಿವನ ಪಾದ ಸೇರಿದ ಶಿವಾಜಿ!](https://mobiletime.in/2025/10/electric-shock-shivaji-touched-the-feet-of-shiva/): ಲೈಟ್ ಅಳವಡಿಸುವ ವೇಳೆ ವಿದ್ಯುತ್ ಸ್ಪರ್ಶದಿಂದ ಆಘಾತಕ್ಕೆ ಒಳಗಾಗಿದ್ದ ಹಳಿಯಾಳದ ಶಿವಾಜಿ ಮಿರಾಶಿ ಅವರನ್ನು ಆಸ್ಪತ್ರೆಗೆ ದಾಖಲಾದರೂ ಪ್ರಯೋಜನವಾಗಿಲ್ಲ. 13 ದಿನಗಳ ಚಿಕಿತ್ಸೆಯ ನಂತರವೂ ಅವರು ಚೇತರಿಸಿಕೊಳ್ಳದೇ ಸಾವನಪ್ಪಿದ್ದಾರೆ. ಹಳಿಯಾಳದ ಮುಂಡವಾಡದಲ್ಲಿ ಶಿವಾಜಿ ಮಿರಾಶಿ (50) ಅವರು ವಾಸವಾಗಿದ್ದರು. ರೈತರಾಗಿ ದುಡಿಯತ್ತಿದ್ದ ಅವರು ಸಣ್ಣಪುಟ್ಟ ಮನೆ ಕೆಲಸಗಳನ್ನು ತಾವೇ ನಿಭಾಯಿಸುತ್ತಿದ್ದರು. ಅಕ್ಟೊಬರ್ 8ರಂದು ಅವರು ತಮ್ಮ ಮನೆ ಮೀಟರ್ ಬಳಿ ಲೈಟ್ ಅಳವಡಿಸುವಾಗ ಅವಘಡ ನಡೆಯಿತು. ಕೇಬಲಿನಿಂದ ಬಂದ ವಿದ್ಯುತ್ ಶಿವಾಜಿ ಮಿರಾಶಿ ಅವರ ಕೈಗೆ ತಾಗಿದ್ದು, ಅವರು ಅಲ್ಲಿಯೇ ಕುಸಿದು ಬಿದ್ದರು. ವಿದ್ಯುತ್ ಆಘಾತಕ್ಕೆ ಒಳಗಾಗಿದ್ದ ಶಿವಾಜಿ ಮಿರಾಶಿ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಅವರನ್ನು ಬದುಕಿಸಿಕೊಳ್ಳುವ ಪ್ರಯತ್ನದ ಭಾಗವಾಗಿ ಹುಬ್ಬಳ್ಳಿಗೆ ಕರೆದೊಯ್ಯಲಾಯಿತು. ಅಲ್ಲಿನ ಕಿಮ್ಸ್ ಆಸ್ಪತ್ರೆಯಲ್ಲಿ ಶಿವಾಜಿ ಮಿರಾಶಿ ಅವರಿಗೆ ಚಿಕಿತ್ಸೆ ಮುಂದುವರೆಯಿತು. ಆದರೆ, 13 ದಿನದ ಪ್ರಯತ್ನಿಸಿದರೂ ಅವರು ಚೇತರಿಸಿಕೊಳ್ಳಲಿಲ್ಲ. ಅಕ್ಟೊಬರ್ 20ರ ರಾತ್ರಿ ಹುಬ್ಬಳ್ಳಿ ಕಿಮ್ಸ ಆಸ್ಪತ್ರೆಯಲ್ಲಿಯೇ ಶಿವಾಜಿ ಮಿರಾಶಿ ಅವರು ಸಾವನಪ್ಪಿದರು. ಅವರ ಮಗ ಮಂಜುನಾಥ ಮಿರಾಶಿ ಅವರು ಹಳಿಯಾಳ ಪೊಲೀಸ್ ಠಾಣೆಗೆ ಈ ಮಾಹಿತಿ ನೀಡಿ ಪ್ರಕರಣ ದಾಖಲಿಸಿ, ಶವಪಡೆದರು. - [ತಾಯಿ-ಮಗಳಿಗೆ ನೋವು ಮಾಡಿದ ಬೈಕ್ ಸವಾರ!](https://mobiletime.in/2025/10/biker-who-hurt-mother-and-daughter/): ಶಿರಸಿ-ಹುಬ್ಬಳ್ಳಿ ರಸ್ತೆ ಮಾರ್ಗವಾಗಿ ತಾಯಿ-ಮಗಳು ಸಂಚರಿಸುತ್ತಿದ್ದ ಸ್ಕೂಟಿಗೆ ಬೈಕ್ ಡಿಕ್ಕಿಯಾಗಿದೆ. ಪರಿಣಾಮ 28 ವರ್ಷದ ಮಹಿಳೆ ಜೊತೆ ಅವರ ಐದು ವರ್ಷದ ಮಗುವಿಗೆ ಗಾಯವಾಗಿದೆ. ಅಕ್ಟೊಬರ್ 21ರಂದು ಶಿರಸಿ ಮರಾಠಿಕೊಪ್ಪದ ಸುಮನಾ ಗಂಗೋಳ್ಳಿ (28) ಅವರು ತಮ್ಮ ಮಗಳಾದ ಸಮನ್ವಿ ಗಂಗೊಳ್ಳಿ (5) ಅವರ ಜೊತೆ ಸ್ಕೂಟಿಯಲ್ಲಿ ಹೋಗುತ್ತಿದ್ದರು. ಶಿವಳ್ಳಿಯ ನಾಗರಾಜ ದೇವಾಡಿಗ ಅವರು ಅದೇ ಮಾರ್ಗವಾಗಿ ತಮ್ಮ ಬೈಕು ಓಡಿಸುತ್ತಿದ್ದರು. ಸುಮನಾ ಗಂಗೋಳ್ಳಿ ಅವರು ಚಲಾಯಿಸುತ್ತಿದ್ದ ವಾಹನಕ್ಕೆ ನಾಗರಾಜ ದೇವಾಡಿಗ ಅವರು ಹಿಂದಿನಿAದ ಗುದ್ದಿದರು. ಪರಿಣಾಮ ಮಗುವಿನ ಜೊತೆಯಿದ್ದ ಸುಮನಾ ಗಂಗೊಳ್ಳಿ ಅವರು ನೆಲಕ್ಕೆ ಬಿದ್ದರು. ಸುಮನಾ ಗಂಗೊಳ್ಳಿ ಅವರ ಬಲಭಾಗದ ಕಾಲು, ಪಾದ, ಕೈಗಳಿಗೆ ಗಾಯವಾಯಿತು. ಅವರ ಕೈ-ಕಾಲಿನಿಂದ ರಕ್ತ ಸುರಿಯಿತು. ಅವರ ಮಗಳು ಸಮನ್ವಿ ಗಂಗೊಳ್ಳಿ ಅವರಿಗೂ ಈ ಅಪಘಾತದಿಂದ ಪೆಟ್ಟಾಯಿತು. ಸಮನ್ವಿ ಗಂಗೊಳ್ಳಿ ಅವರ ಹಣೆಗೆ ಪೆಟ್ಟಾಗಿ ರಕ್ತ ಬಂದಿತು. ಅವರು ಓಡಿಸುತ್ತಿದ್ದ ವಾಹನವೂ ಜಖಂ ಆಯಿತು. ಅಪಘಾತದ ವಿಷಯ ತಿಳಿದ ನೆಟ್‌ವರ್ಕ ಇಂಜಿನಿಯರ್ ಆಗಿರುವ ಸುಮನಾ ಗಂಗೊಳ್ಳಿ ಅವರ ಪತಿ ಸಂದೇಶ ಗೊಂಗೊಳ್ಳಿ ಅವರು ಅಲ್ಲಿಗೆ ದೌಡಾಯಿಸಿದರು. ಗಾಯಗೊಂಡ ಪತ್ನಿ ಹಾಗೂ ಮಗಳ ಆರೈಕೆ ಮಾಡಿದರು. ಅದಾದ ನಂತರ ಶಿರಸಿ ಸಂಚಾರ ಪೊಲೀಸ್ ಠಾಣೆಗೆ ತೆರಳಿ ಅಪಘಾತಕ್ಕೆ ಕಾರಣರಾದ ನಾಗರಾಜ ದೇವಾಡಿಗ ವಿರುದ್ಧ ದೂರು ನೀಡಿದರು. - [ನಿವೃತ್ತ ಶಿಕ್ಷಕಿಗೆ ಅನ್ಯಾಯ: ಹಣದ ಜೊತೆ ಆಭರಣವೂ ಮಾಯ!](https://mobiletime.in/2025/10/injustice-to-retired-teacher-jewelry-also-disappeared-along-with-money/): ಬೆಳಗಾವಿಯಿಂದ ಭಟ್ಕಳಕ್ಕೆ ಬಂದಿದ್ದ ನಿವೃತ್ತ ಶಿಕ್ಷಕಿಯೊಬ್ಬರು 1.84 ಲಕ್ಷ ರೂ ಮೌಲ್ಯದ ಚಿನ್ನಾಭರಣ ಕಳೆದುಕೊಂಡಿದ್ದಾರೆ. ಮರಳಿ ಊರಿಗೆ ಹೋದ ನಂತರ ಚಿನ್ನದ ಜೊತೆ ಹಣವೂ ಕಾಣೆಯಾಗಿದ್ದು ಅವರ ಗಮನಕ್ಕೆ ಬಂದಿದೆ. ಬೆಳಗಾವಿಯ ಆಂಜಿನೇಯ ನಗರದ ಆಸ್ಮಾನಾಭಾನು ಶೇಖ್ ಅವರು ಶಿಕ್ಷಕಿಯಾಗಿದ್ದರು. ಕಳೆದ ವರ್ಷ ನಿವೃತ್ತಿ ಆಗಿದ್ದ ಅವರು ತಮ್ಮ ಉಳಿತಾಯದ ಹಣದಲ್ಲಿ ವಿವಿಧ ಚಿನ್ನಾಭರಣ ಮಾಡಿಸಿಕೊಂಡಿದ್ದರು. ಆ ಆಭರಣಧರಿಸಿ ಅವರು ಭಟ್ಕಳಕ್ಕೆ ಬಂದಿದ್ದು, ಅಕ್ಟೊಬರ್ 6ರಂದು ಸಂಜೆ ಇಲ್ಲಿಂದ ಹೊರಟಿದ್ದರು. ಆ ದಿನ ಸಂಜೆ 4.51ಕ್ಕೆ ಭಟ್ಕಳ ಬಸ್ ನಿಲ್ದಾಣದಲ್ಲಿ ಬಸ್ ಹತ್ತಿದ ಅವರು ರಾತ್ರಿ 11.30ಕ್ಕೆ ಬೆಳಗಾವಿ ತಲುಪಿದರು. ಆ ವೇಳೆ ಅವರ ಕೈಯಲ್ಲಿದ್ದ ಆಭರಣಗಳು ಕಾಣಿಸಲಿಲ್ಲ. ಬ್ಯಾಗ್ ನೋಡಿದಾಗ ಅದಲ್ಲಿದ್ದ ಪರ್ಸ ಹಾಗೂ 3500ರೂ ಹಣವೂ ಕಾಣಿಸಲಿಲ್ಲ. ಆ ಆಭರಣ ಹಾಗೂ ಹಣ ಹುಡುಕಿ ಅವರು ಭಟ್ಕಳಕ್ಕೆ ಮರಳಿದರು. ಆದರೂ, ಅವು ಸಿಗಲಿಲ್ಲ. ಹೀಗಾಗಿ ಭಟ್ಕಳ ಶಹರ ಪೊಲೀಸ್ ಠಾಣೆಗೆ ತೆರಳಿದ ಆಸ್ಮಾನಾಭಾನು ಶೇಖ್ ಅವರು ಕಳ್ಳತನ ನಡೆದ ಬಗ್ಗೆ ದೂರು ನೀಡಿದರು. ಪೊಲೀಸರು ಪ್ರಕರಣ ದಾಖಲಿಸಿದ್ದು, ವಿವಿಧ ಆಯಾಮಗಳ ಆಧಾರದಲ್ಲಿ ಕಳ್ಳನ ಹುಡುಕಾಟ ಶುರು ಮಾಡಿದರು. - [ಅಲೆಗಳ ಅಬ್ಬರಕ್ಕೆ ಕಾರ್ಮಿಕ ಬಲಿ](https://mobiletime.in/2025/10/worker-killed-in-crash-of-waves/): ನಿತ್ಯದ ದುಡಿಮೆಗಾಗಿ ಚಿಪ್ಪಿಕಲ್ಲು ಆರಿಸಲು ಸಮುದ್ರಕ್ಕೆ ಹೋಗಿದ್ದ ಅಂಕೋಲಾದ ಆನಂದು ನಾಯ್ಕ ಅವರು ಅಲೆಗಳ ಅಬ್ಬರಕ್ಕೆ ಸಿಲುಕಿದ್ದಾರೆ. ಅಲ್ಲಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗದೇ ಅವರು ಶವವಾಗಿದ್ದಾರೆ. ಅಂಕೋಲಾ ಬಾವಿಕೇರಿ ಕಾನಬೀರವಾಡದಲ್ಲಿ ಆನಂದು ಚೆನ್ನಾ ನಾಯ್ಕ (51) ಅವರು ವಾಸವಾಗಿದ್ದರು. ಅಕ್ಟೊಬರ್ 20ರ ಮಧ್ಯಾಹ್ನ 3 ಗಂಟೆಗೆ ಅವರು ಸಮುದ್ರಕ್ಕೆ ಹೋಗಿದ್ದರು. ಕೈಚೀಲ ಹಾಗೂ ಹಲಗತ್ತಿಹಿಡಿದಿದ್ದ ಅವರು ಬೇಲೇಕೆರೆ ಸಮುದ್ರದ ಬಳಿ ಚಿಪ್ಪೆಕಲ್ಲು ಆರಿಸಿಕೊಂಡು ಬರುವುದಾಗಿ ಮನೆಯಲ್ಲಿ ಹೇಳಿದ್ದರು. ಆದರೆ, ಸಂಜೆಯಾದರೂ ಅವರು ಮನೆಗೆ ಮರಳಲಿಲ್ಲ. ಮರುದಿನವೂ ಅವರ ಸುಳಿವು ಸಿಗಲಿಲ್ಲ. ಹೀಗಾಗಿ ಆನಂದು ನಾಯ್ಕ ಅವರ ಮಗ ವಿನಯ ನಾಯ್ಕ ಅವರು ಅಂಕೋಲಾ ಪೊಲೀಸರ ಮೊರೆ ಹೋದರು. ತಂದೆ ಕಾಣೆಯಾದ ಬಗ್ಗೆ ಅವರು ಪ್ರಕರಣ ದಾಖಲಿಸಿದ್ದು, ಪೊಲೀಸರು ಹುಡುಕಾಟ ಶುರು ಮಾಡಿದರು. ಅಕ್ಟೊಬರ್ 21ರ ಸಂಜೆ ಸಮುದ್ರದಲ್ಲಿ ಶವವೊಂದು ಸಿಕ್ಕಿದ್ದು, ಅದನ್ನು ಸರಿಯಾಗಿ ಗಮನಿಸಿದಾಗ ಅದು ಆನಂದ ನಾಯ್ಕ ಅವರ ದೇಹ ಎಂದು ಗೊತ್ತಾಯಿತು. ಉದಯ ಚನ್ನಾ ನಾಯ್ಕ ಅವರು ಸಹೋದರನ ಶವ ಗುರುತಿಸಿದರು. ಕಾನೂನು ಪ್ರಕ್ರಿಯೆ ನಡೆಸಿ ಕುಟುಂಬದವರು ಶವಪಡೆದರು. - [ಬೈಕ್ ಸವಾರರ ಬೆನ್ನಟ್ಟಿದ ಮರಿ ಚಿರತೆ!](https://mobiletime.in/2025/10/a-baby-leopard-chases-bikers/): ಯಲ್ಲಾಪುರದ ಮಾಗೋಡು ಭಾಗದಲ್ಲಿ ಚಿರತೆ ಓಡಾಟ ಜೋರಾಗಿದೆ. ಮರಿಗಳ ಜೊತೆಯಿರುವ ಚಿರತೆ ಬೈಕ್ ಸವಾರರ ಬೆನ್ನಟ್ಟಿದ್ದು, ಇಬ್ಬರಿಗೆ ಗಾಯಗೊಳಿಸಿದೆ. ಮಾಗೋಡಿನ ಬಕ್ಕಳತಗ್ಗಿನ ಗಣೇಶ ಸಿದ್ದಿ ಹಾಗೂ ದೇಸಾಯಿಮನೆಯ ಧನಂಜಯ ಸಿದ್ದಿ ಎಂಬಾತರು ಮಂಗಳವಾರ ರಾತ್ರಿ ಚಂದ್ಗುಳಿಗೆ ಹೋಗಿದ್ದರು. ಅಲ್ಲಿಂದ ಮರಳುವಾಗ ಮರಿಗಳ ಜೊತೆಯಿರುವ ಚಿರತೆ ಅವರ ಮೇಲೆ ಆಕ್ರಮಣ ನಡೆಸಿತು. ಬೈಕಿನಲ್ಲಿ ಹಿಂದೆ ಕೂತಿದ್ದ ಧನಂಜಯ ಸಿದ್ದಿ ಅವರ ಕಾಲಿಗೆ ಚಿರತೆಯ ಉಗುರಿನ ಸ್ಪರ್ಶವಾಗಿದ್ದು, ಅವರಿಗೆ ಸಣ್ಣ ಪ್ರಮಾಣದಲ್ಲಿ ಗಾಯವಾಗಿದೆ. ಈ ವೇಳೆ ಬೈಕಿನ ವೇಗ ಹೆಚ್ಚಿಸಿದ್ದು ಬೈಕ್ ಉರುಳಿಬಿದ್ದಿದ್ದರಿಂದಲೂ ಅವರಿಬ್ಬರಿಗೆ ಪೆಟ್ಟಾಗಿದೆ. ಬೈಕ್ ಬಿದ್ದ ಸದ್ದಿಗೆ ಚಿರತೆ ಕಾಡು ಸೇರಿದೆ. ದೊಡ್ಡ ಚಿರತೆ ಜೊತೆ ಎರಡು ಮರಿಗಳಿರುವುದನ್ನು ಗಣೇಶ ಸಿದ್ದಿ ಹಾಗೂ ಧನಂಜಯ ಸಿದ್ದಿ ನೋಡಿದ್ದಾರೆ. ಕೆಲ ವರ್ಷಗಳಿಂದ ಇಲ್ಲಿ ಚಿರತೆ ಓಡಾಟದ ಬಗ್ಗೆ ಜನ ಹೇಳುತ್ತಿದ್ದು, ಇದೀಗ ಮಾನವನವ ಮೇಲೆಯೂ ವನ್ಯಜೀವಿ ದಾಳಿ ನಡೆದಿದೆ. ಇದರಿಂದ ಜನ ಇನ್ನಷ್ಟು ಆತಂಕಕ್ಕೆ ಒಳಗಾಗಿದ್ದಾರೆ. - [ಶೋರೂಮಿಗೆ ನುಗ್ಗಿದವರು.. ಸ್ಕೂಟಿ ಕದ್ದರು!](https://mobiletime.in/2025/10/those-who-broke-into-the-showroom-stole-a-scooty/): ಬಸ್ ನಿಲ್ದಾಣ, ದೇವಾಲಯ ಮುಂಭಾಗ, ರಸ್ತೆ ಬದಿ ಸೇರಿ ಸಾರ್ವಜನಿಕ ಸ್ಥಳಗಳಲ್ಲಿ ನಿಲ್ಲಿಸಿದ ಬೈಕ್ ಕದಿಯುತ್ತಿದ್ದ ಕಳ್ಳರು ಇದೀಗ ಶೋರೂಮಿಗೆ ನುಗ್ಗಿ ಅಲ್ಲಿದ್ದ ವಾಹನ ಅಪಹರಿಸಲು ಶುರು ಮಾಡಿದ್ದಾರೆ. ಜೊಯಿಡಾದ ಬೈಕ್ ಶೋರೂಮಿನ ಬಾಗಿಲು ಒಡೆದ ಕಳ್ಳರು ಅಲ್ಲಿದ್ದ ಎರಡು ಸ್ಕೂಟಿ ಕದ್ದಿದ್ದಾರೆ! ಜೊಯಿಡಾದ ರಾಮನಗರದ ಬೆಳಗಾವಿ ರಸ್ತೆಯಲ್ಲಿ ಅಮೀತ ಭಾಸ್ಕರ ದೇಸಾಯಿ ಅವರು ಹೊಂಡಾ ಶೋರೂಮ್ ನಡೆಸುತ್ತಿದ್ದಾರೆ. ಅಲ್ಲಿನ ರಾಜ್ ಪ್ಯಾಲೇಸ್ ಎದುರಿಗಿರುವ ಸಾಯಿ ಸಮರ್ಥ ಹೊಂಡಾ ಶೋರೂಮಿಗೆ ಅವರು ಮಾಲಕರಾಗಿದ್ದಾರೆ. ಸದ್ಯ ಅವರ ಶೋರೂಮಿನಲ್ಲಿದ್ದ ಎರಡು ಸ್ಕೂಟಿ ಕಾಣೆಯಾಗಿದೆ. ಎಲ್ಲಿ ಹುಡುಕಿದರೂ ಆ ಎರಡು ಸ್ಕೂಟಿ ಕಾಣಲಿಲ್ಲ. ಲಕ್ಷಾಂತರ ರೂ ಹೂಡಿಕೆ ಮಾಡಿ ತಂದಿರಿಸಿದ್ದ ಸ್ಕೂಟಿ ಕಾಣೆಯಾಗಿದ್ದರಿಂದ ಶೋರೂಮಿನ ಮಾಲಕ ಅಮಿತ ದೇಸಾಯಿ ಅವರು ಕಂಗಾಲಾಗಿದ್ದಾರೆ. ಅಕ್ಟೊಬರ್ 19ರ ರಾತ್ರಿ ಕಳ್ಳರು ಹೊಂಡಾ ಶೋರೂಮಿಗೆ ನುಗ್ಗಿದ್ದಾರೆ. ಅಲ್ಲಿದ್ದ 77 ಸಾವಿರದ ಹೊಂಡಾ ಆಕ್ಟಿವಾ 110 ಜೊತೆ 87 ಸಾವಿರದ ಹೊಂಡಾ ಆಕ್ಟಿವಾ ಸ್ಪೇಶಲ್ ಎಡಿಶನ್ ಸ್ಕೂಟಿಯನ್ನು ಅವರು ಕದ್ದಿದ್ದಾರೆ. ಅಕ್ಟೊಬರ್ 20ರಂದು ಮಳಿಗೆಯ ಬಾಗಿಲು ತೆರೆದಾಗ ಸ್ಕೂಟಿ ಅಪಹರಣವಾಗಿರುವುದು ಗೊತ್ತಾಗಿದೆ. ಶೋರೂಮಿಗೆ ಹಾಕಿದ ಬೀಗ ಮುರಿದು ಕಳ್ಳರು ಸ್ಕೂಟಿ ಕದ್ದಿದ್ದು, 1.64 ಲಕ್ಷ ರೂ ಮೌಲ್ಯದ ವಾಹನ ಕಾಣೆಯಾದ ಬಗ್ಗೆ ಅಮೀತ ದೇಸಾಯಿ ಅವರು ತಲೆಕೆಡಿಸಿಕೊಂಡಿದ್ದಾರೆ. ಸ್ಕೂಟಿ ಕಳ್ಳರ ಪತ್ತೆಗಾಗಿ ಅಮೀತ ದೇಸಾಯಿ ಅವರು ಸದ್ಯ ಪೊಲೀಸರ ಮೊರೆ ಹೋಗಿದ್ದಾರೆ. ರಾಮನಗರ ಪೊಲೀಸ್ ಠಾಣೆಯಲ್ಲಿ ಅವರು ಕಳ್ಳತನದ ಪ್ರಕರಣ ದಾಖಲಿಸಿದ್ದು, `ಸ್ಕೂಟಿ ಕಳ್ಳರನ್ನು ಹುಡುಕಿ ತಮ್ಮ ವಾಹನ ಮರಳಿಸಿ’ ಎಂದು ಕೇಳಿಕೊಂಡಿದ್ದಾರೆ. ಪೊಲೀಸರು ಸಹ ಸ್ಥಳಕ್ಕೆ ಭೇಟಿ ನೀಡಿದ್ದು, ವಿವಿಧ ಆಯಾಮಗಳ ಆಧಾರದಲ್ಲಿ ಕಳ್ಳರ ಹುಡುಕಾಟ ನಡೆಸಿದ್ದಾರೆ. ಕಳ್ಳತನ ತಪ್ಪಿಸಲು ಗುಣಮಟ್ಟದ ಕ್ಯಾಮರಾ ಅಳವಡಿಸಿ: ನಿಮ್ಮ ಅಗತ್ಯಕ್ಕೆ ಅನುಗುಣವಾದ ಕ್ಯಾಮರಾ ಖರೀದಿಗೆ ಇಲ್ಲಿ ಕ್ಲಿಕ್ಕಿಸಿ: AMAZON - [ಜನರಿಗೆ ನೀರು ಕುಡಿಸಲು 2 ಕೋಟಿ ರೂ ಮೀಸಲು](https://mobiletime.in/2025/10/rs-2-crore-reserved-for-providing-drinking-water-to-people/): ಬರುವ ಬೇಸಿಗೆಯಲ್ಲಿ ಜನರಿಗೆ ನೀರು ಕುಡಿಸುವುದಕ್ಕಾಗಿ ಉತ್ತರ ಕನ್ನಡ ಜಿಲ್ಲಾ ಪಂಚಾಯತವೂ 2 ಕೋಟಿ ರೂ ಹಣ ಮಂಜೂರಿ ಮಾಡಿದೆ. ಈ ಹಣ ಬಳಸಿಕೊಂಡು 118 ಕಾಮಗಾರಿಗಳ ಮೂಲಕ ಜನರ ದಾಹ ತಣಿಸಲು ಯೋಜನೆ ರೂಪಿಸಲಾಗಿದೆ. ಈ ಎಲ್ಲಾ ಕಾಮಗಾರಿಗಳ ಕ್ರಿಯಾ ಯೋಜನೆಯನ್ನು ಮತ್ತೊಮ್ಮೆ ಪರಿಶೀಲಿಸಿ, ಯೋಜನೆಯ ಅಗತ್ಯ ದಾಖಲೆ ಹಾಗೂ ನಿಯಮಾವಳಿಗಳ ಬಗ್ಗೆ ಗಮನಿಸಿ ಕಡತ ಸಲ್ಲಿಸುವಂತೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ದಿಲೀಷ್ ಶಶಿ ಅವರು ಅಧೀನ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ. ಹೀಗಾಗಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಇಂಜಿನಿಯರುಗಳು ಅದೇ ಕೆಲಸದಲ್ಲಿ ತೊಡಗಿದ್ದಾರೆ. ಸದ್ಯ ಕುಡಿಯುವ ನೀರು ಯೋಜನೆಯ ಕ್ರಿಯಾ ಯೋಜನೆಗಳ ದಾಖಲೆ ಪರಿಶೀಲನೆ ನಡೆಯುತ್ತಿದ್ದು, ಮುಂದಿನ ಶನಿವಾರದ ಒಳಗೆ ಆ ಕಡತ ದಿಲೀಷ್ ಶಶಿ ಅವರ ಟೇಟಲ್ ಮೇಲೆ ಬರುವ ಸಾಧ್ಯತೆಗಳಿವೆ. ಜಿಲ್ಲೆಯಲ್ಲಿ ಜಲ ಜೀವನ್ ಮಿಷನ್ ಕಾಮಗಾರಿಗಳನ್ನು 4 ಹಂತದಲ್ಲಿ ಕೈಗೊಳ್ಳಲಾಗಿದೆ. 965 ಕಾಮಗಾರಿಗಳ ಪೈಕಿ 956 ಕಾಮಗಾರಿಯ ಕೆಲಸ ಮುಗಿದಿದ್ದು, ಗ್ರಾಮ ಪಂಚಯತಗಳಿಗೆ ಹಸ್ತಾಂತರ ನಡೆದಿದೆ. ಜಲ ಜೀವನ್ ಮಿಷನ್ ಕಾಮಗಾರಿಗಳಲ್ಲಿ ಜಲಮೂಲದ ಸ್ಥಳ ಬದಲಾವಣೆ, ಹೆಚ್ಚಿನ ಮನೆಗಳಿಗೆ ಸಂಪರ್ಕ ನೀಡಬೇಕಾದ ಸಂದರ್ಭದಲ್ಲಿ ಕಾಮಗಾರಿಗಳ ಪರಿಮಾಣಗಳಲ್ಲಿ ಉಂಟಾಗುವ ವ್ಯತ್ಯಾಸಗಳ ಕುರಿತ ವರದಿಯೂ ಸರ್ಕಾರಕ್ಕೆ ಸಲ್ಲಿಕೆಯಾಗಲಿದೆ. - [ಉತ್ತರ ಕನ್ನಡ: ಮುಂದಿನ ಮೂರು ತಾಸಿನಲ್ಲಿ ಮಳೆ ಸಾಧ್ಯತೆ!](https://mobiletime.in/2025/10/uttara-kannada-rain-likely-in-the-next-three-hours/): ಉತ್ತರ ಕನ್ನಡವನ್ನು ಸೇರಿ ರಾಜ್ಯದ 10 ಜಿಲ್ಲೆಗಳಲ್ಲಿ ಮುಂದಿನ ಮೂರು ತಾಸಿನ ಒಳಗೆ ಮಳೆಯಾಗುವ ಸಾಧ್ಯತೆಯಿದೆ. ಈ ಅವಧಿಯಲ್ಲಿ ವಿದ್ಯುತ್ ವ್ಯತ್ಯಯ, ಸಂಚಾರ ದಟ್ಟಣೆ ಹಾಗೂ ಅಲ್ಲಲ್ಲಿ ಮರದ ಕೊಂಬೆ ಬೀಳುವ ಅಪಾಯಗಳಿರುವ ಬಗ್ಗೆ ಭಾರತ ಸರ್ಕಾರದ ಭೂ ವಿಜ್ಞಾನ ಸಚಿವಾಲಯ ಎಚ್ಚರಿಸಿದೆ. ಭಾರತ ಹವಾಮಾನ ಇಲಾಖೆ ಬೆಂಗಳೂರು ಹವಾಮಾನ ಕೇಂದ್ರ ನೀಡಿದ ಮಾಹಿತಿಗಳ ಪ್ರಕಾರ ಒಂದೆರಡು ಸ್ಥಳಗಳಲ್ಲಿ ಗುಡುಗು, ಮಿಂಚಿನ ಜೊತೆ ಹಗುರ ಮಳೆಯಾಗಲಿದೆ. ಜೊತೆಗೆ 30-40ಕಿಮೀ ವೇಗದಲ್ಲಿ ಗಾಳಿ ಬೀಸಲಿದೆ. `ಮಳೆ ಅವಧಿಯಲ್ಲಿ ಮನೆಯಿಂದ ಹೊರಹೋಗುವುದು ಸುರಕ್ಷಿತವಲ್ಲ. ಮನೆಯ ಕಿಟಕಿ ಬಾಗಿಲುಗಳನ್ನು ಭದ್ರವಾಗಿ ಮುಚ್ಚಿಡುವುದು ಒಳಿತು. ಸಾಧ್ಯವಾದಷ್ಟು ಪ್ರಯಾಣವನ್ನು ತಪ್ಪಿಸಿ. ಸುರಕ್ಷಿತ ಸ್ಥಳದಲ್ಲಿ ಆಶ್ರಯಪಡೆಯಿರಿ’ ಎಂದು ಸರ್ಕಾರ ಸೂಚಿಸಿದೆ. `ವಿದ್ಯುತ್ ಉಪಕರಣಗಳನ್ನು ಬಂದ್ ಮಾಡಿ. ಜಲಮೂಲ ಪ್ರದೇಶಗಳ ಹತ್ತಿರವಿರಬೇಡಿ. ವಿದ್ಯುತ್ ಶಕ್ತಿ ಬಳಕೆಯಿಂದ ನಡೆಯುವ ಎಲ್ಲಾ ಉಪಕರಣಗಳಿಂದ ದೂರವಿರಿ. ಪ್ರಯಾಣದಲ್ಲಿರುವವರು ಅತ್ಯಂತ ಎಚ್ಚರಿಕೆಯಿಂದ ಪ್ರಯಾಣ ಮಾಡಿ’ ಎಂದು ಸೂಚಿಸಲಾಗಿದೆ. ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಬಾಗಲಕೋಟೆ, ಬೆಳಗಾವಿ, ಧಾರವಾಡ, ಗದಗ, ರಾಯಚೂರು, ವಿಜಯಪುರ, ಬಳ್ಳಾರಿ ಹಾಗೂ ದಾವಣಗೆರೆ ಭಾಗದಲ್ಲಿ ಮಳೆ ಲಕ್ಷಣಗಳಿವೆ. ಅಕ್ಟೊಬರ್ 21ರಿಂದ 29ರವರೆಗೂ ರಾಜ್ಯದಲ್ಲಿ ಮಳೆ ಲಕ್ಷಣಗಳಿವೆ. ಮಧ್ಯಮ ಪ್ರಮಾಣದ ಮಳೆ ಬೀಳಲಿದ್ದು, ಅಕ್ಟೊಬರ್ 23 ಹಾಗೂ 24ರಂದು ಕರಾವಳಿ ಹಾಗೂ ಉತ್ತರ ಒಳನಾಡು ಪ್ರದೇಶದಲ್ಲಿ ಹೆಚ್ಚಿನ ಮಳೆಯಾಗುವ ಸಾಧ್ಯತೆಗಳಿವೆ.   - [2025 ಅಕ್ಟೊಬರ್ 22ರ ದಿನ ಭವಿಷ್ಯ](https://mobiletime.in/2025/10/2025-october-22-prediction/): ಮೇಷ ರಾಶಿ: ಉದ್ಯೋಗ ಮತ್ತು ವ್ಯವಹಾರದಲ್ಲಿ ಉತ್ತಮ ಪ್ರಗತಿ ಸಾಧ್ಯವಿದೆ. ಆಪ್ತರ ಜೊತೆ ಒಡೆನಾಟ ಹೆಚ್ಚಲಿದೆ. ಖರ್ಚು-ವೆಚ್ಚಗಳು ಅಧಿಕವಾಗಲಿದೆ. ವೃಷಭ ರಾಶಿ: ಕುಟುಂಬದಲ್ಲಿ ಸಮಾಧಾನ ಹಾಗೂ ನೆಮ್ಮದಿಯ ವಾತಾವರಣ ಕಾಣಲಿದೆ. ಆರೋಗ್ಯದ ಬಗ್ಗೆ ಎಚ್ಚರಿಕೆ ಅಗತ್ಯ. ನಾಟಿ ಔಷಧಿ ನಿಮಗೆ ಪರಿಣಾಮಕಾರಿ. ಮಿಥುನ ರಾಶಿ: ವೃತ್ತಿಜೀವನದಲ್ಲಿ ಯಶಸ್ಸು ಸಿಗಲಿದೆ. ಹೊಸ ಒಪ್ಪಂದಗಳು ಲಾಭದಾಯಕವಾಗಿರಲಿದೆ. ಸಂವಹನ ಕೌಶಲ್ಯ ನಿಮ್ಮನ್ನು ಬೆಳಸುತ್ತದೆ. ಕರ್ಕ ರಾಶಿ: ಎಲ್ಲಾ ಕೆಸಲಗಳನ್ನು ತಾಳ್ಮೆಯಿಂದ ನಿರ್ವಹಿಸಿದರೆ ಉತ್ತಮ. ಹಿರಿಯರ ಸಲಹೆ ಪಡೆದು ಹೊಸ ಕೆಲಸ ಶುರು ಮಾಡಿ. ಹಳೆಯ ಹೂಡಿಕೆಗಳು ಈ ದಿನ ನಿಮಗೆ ಲಾಭ ಕೊಡಲಿದೆ. ಸಿಂಹ ರಾಶಿ: ನಿಮ್ಮ ನಾಯಕತ್ವ ಗುಣ ಉತ್ತಮವಾಗಲಿದೆ. ಸ್ನೇಹತರ ಬೆಂಬಲ ಸಿಗಲಿದೆ. ಶತ್ರುಗಳ ಕಾಟ ಜೋರಾಗಿದ್ದು, ಎಚ್ಚರಿಕೆ ಅಗತ್ಯ. ಕನ್ಯಾ ರಾಶಿ: ಆರೋಗ್ಯ ಮತ್ತು ಹಣಕಾಸಿನ ವಿಷಯವಾಗಿ ಹೆಚ್ಚಿನ ಗಮನಹರಿಸಿ. ಕಾರ್ಯಕ್ಷೇತ್ರದಲ್ಲಿ ಯಶಸ್ಸು ಸಿಗಲಿದೆ. ದೂರ ಪ್ರಯಾಣ ಉತ್ತಮವಲ್ಲ. ತುಲಾ ರಾಶಿ: ಸಾಮಾಜಿಕ ಹಾಗೂ ವ್ಯವಹಾರಿಕ ಸ್ಥಾನಮಾನ ಸುಧಾರಣೆ ಆಗಲಿದೆ. ನಿಮ್ಮ ಆತ್ಮವಿಶ್ವಾಸ ಹೆಚ್ಚಾಗಲಿದೆ. ಯೋಗ-ಧ್ಯಾನ ನಿಮ್ಮ ಆರೋಗ್ಯಕ್ಕೆ ಸಹಕಾರಿ. ವೃಶ್ಚಿಕ ರಾಶಿ: ಬಹುದಿನದ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ. ಕುಟುಂಬದಲ್ಲಿ ಸಂತೋಷ ಹೆಚ್ಚಾಗಲಿದೆ. ಹೊಸ ಅವಕಾಶಗಳು ಅರೆಸಿಬರಲಿದೆ. ಧನು ರಾಶಿ: ವ್ಯವಹಾರದಲ್ಲಿ ಒಳ್ಳೆಯ ಪ್ರಗತಿ ಸಾಧ್ಯವಿದೆ. ಹಣಕಾಸು ನಿರ್ವಹಣೆಯಲ್ಲಿ ಜಾಗರೂಕತೆ ಅಗತ್ಯ. ಅನಗತ್ಯ ವೆಚ್ಚಗಳಿಂದ ದೂರವಿರಿ. ಮಕರ ರಾಶಿ: ಕಾರ್ಯಕ್ಷೇತ್ರದಲ್ಲಿ ಆತ್ಮ ವಿಶ್ವಾಸದಿಂದ ಬದುಕಿ. ಆರ್ಥಿಕ ಲಾಭಗಳು ಆಗಲಿದೆ. ಆಪ್ತರ ಭೇಟಿ ಮನಸ್ಸಿಗೆ ಮದ ನೀಡಲಿದೆ. ಕುಂಭ ರಾಶಿ: ಹಿರಿಯರ ಸಹಾಯದಿಂದ ನಿಮ್ಮ ಸಂಕಷ್ಟ ನಿವಾರಣೆ ಆಗಲಿದೆ. ಮಾಡುವ ಕೆಲಸದಲ್ಲಿ ಯಶಸ್ಸು ಸಿಗಲಿದೆ. ಭಯ ಬೇಡ. ಮೀನ ರಾಶಿ: ನಿಮ್ಮ ಕೆಲಸದಲ್ಲಿ ಸವಾಲುಗಳು ಎದುರಾಗಲಿದೆ. ಸವಾಲುಗಳನ್ನು ಸರಿಯಾಗಿ ನಿಭಾಯಿಸಿದರೆ ಹೊಸ ಆದಾಯದ ಮೂಲಗಳು ಸೃಷ್ಠಿ ಆಗಲಿದೆ. ಆರೋಗ್ಯದ ಬಗ್ಗೆ ಗಮನ ಅಗತ್ಯ. - [ಸ್ನೇಹಿತನ ಕಾಲು ಮುರಿದವ ಕಾರು ಬಿಟ್ಟು ಓಡಿದ!](https://mobiletime.in/2025/10/the-man-who-broke-his-friends-leg-abandoned-the-car-and-ran-away/): ನಡುರಾತ್ರಿ ನಡೆದ ಕಾರು ಅಪಘಾತದಲ್ಲಿ ಸಿದ್ದಾಪುರದ ಜಾನ್ ಡಯಾಸ್ ಅವರ ಕಾಲು ಮುರಿದಿದ್ದು, ಆ ಕಾರು ಓಡಿಸುತ್ತಿದ್ದ ಹಣಜಿಬೈಲಿನ ಗಣೇಶ ಮಡಿವಾಳ ಅವರು ಅಪಘಾತದ ನಂತರ ಜಾನ್ ಡಯಾಸ್ ಅವರನ್ನು ಕಾರಿನಲ್ಲಿಯೆ ಕೂರಿಸಿ ಪರಾರಿಯಾಗಿದ್ದಾರೆ. ಕಾಲು ಮುರಿದ ವ್ಯಕ್ತಿಯನ್ನು ಮದ್ಯರಾತ್ರಿ ಕಾರಿನಲ್ಲಿ ಕೂರಿಸಿ ಓಡಿಹೋದ ಗಣೇಶ ಮಡಿವಾಳ ಅವರ ವಿರುದ್ಧ ಜಾನ್ ಡಯಾಸ್ ಕಾನೂನು ಕ್ರಮಕ್ಕೆ ಆಗ್ರಹಿಸಿದ್ದಾರೆ. ಸಿದ್ದಾಪುರದ ಹಣಜಿಬೈಲಿನ ಗಣೇಶ ವೆಂಕಟೇಶ ಮಡಿವಾಳ ಅವರ ಅಣ್ಣ ಸುರೇಶ ಮಡಿವಾಳ ಅವರು ಅಕ್ಟೊಬರ್ 19ರಂದು ಊರಿಗೆ ಬರುವವರಿದ್ದರು. ಹೀಗಾಗಿ ಅವರನ್ನು ತಾಳಗುಪ್ಪಾ ರೈಲು ನಿಲ್ದಾಣದಿಂದ ಕರೆತರಲು ಗಣೇಶ ಮಡಿವಾಳ ಅವರು ಹೋಗುವವರಿದ್ದರು. ಗಣೇಶ ಮಡಿವಾಳ ಅವರು ಆ ದಿನ ಸಂಜೆ 7ಗಂಟೆಗೆ ತಮ್ಮ ಆಲ್ಟೋ ಕಾರು ಹೊರ ತೆಗೆದಾಗ ಕನಕದಾಸಗಲ್ಲಿಯ ಜಾನ್ ಸಾವರ್ ಡಯಾಸ್ ಅವರು ಎದುರಾದರು. ಜಾನ್ ಡಯಾಸ್ ಅವರು ಆ ಕಾರು ಹತ್ತಿ ಕುಳಿತರು. ಗಣೇಶ ಮಡಿವಾಳ ಅವರ ಜೊತೆ ಜಾನ್ ಡಯಾಸ್ ಅವರು ತಾಳಗುಪ್ಪಕ್ಕೆ ತೆರಳಿದರು. ಅಲ್ಲಿದ್ದ ಸುರೇಶ ಮಡಿವಾಳ ಅವರನ್ನು ಕಾರಿನೊಳಗೆ ಕೂರಿಸಿಕೊಂಡು ಎಲ್ಲರೂ ಮರಳಿ ಮನೆ ಕಡೆ ಹೊರಟಿದ್ದರು. ಆ ಕಾರು ವೇಗವಾಗಿ ಚಲಿಸುತ್ತಿತ್ತು. ಗಣೇಶ ಮಡಿವಾಳ ಅವರೇ ಕಾರು ಚಲಾಯಿಸುತ್ತಿದ್ದರು. ಗೊಳಗೋಡ ಬಸ್ ನಿಲ್ದಾಣದ ಬಳಿ ರಾತ್ರಿ 10.30ಕ್ಕೆ ಕಾರು ತಲುಪಿದ್ದು, ಗಣೇಶ ಮಡಿವಾಳ ಅವರ ನಿಯಂತ್ರಣ ತಪ್ಪಿದ ಕಾರು ಅಲ್ಲಿದ್ದ ಮರಕ್ಕೆ ಡಿಕ್ಕಿ ಹೊಡೆಯಿತು. ಗಣೇಶ ಮಡಿವಾಳ ಹಾಗೂ ಸುರೇಶ ಮಡಿವಾಳ ಈ ಅಪಘಾತದಲ್ಲಿ ಅಲ್ಪ ಪ್ರಮಾಣದಲ್ಲಿ ಗಾಯಗೊಂಡರು. ಆದರೆ, ಜಾನ್ ಡಯಾಸ್ ಅವರ ಎಡಗಾಲಿನ ತೊಡೆಯ ಬಳಿ ಮೂಳೆ ಮುರಿದಿತ್ತು. ಜಾನ್ ಡಯಾಸ್ ಅವರಿಗೆ ಗಂಭೀರ ಪ್ರಮಾಣದಲ್ಲಿ ಪೆಟ್ಟಾಗಿದ್ದರಿಂದ ನಡೆಯಲು ಸಾಧ್ಯವಿರಲಿಲ್ಲ. ಈ ವೇಳೆ ಜನ್ ಡಯಾಸ್ ಅವರನ್ನು ಆಸ್ಪತ್ರೆಗೆ ಸೇರಿಸಬೇಕಿದ್ದ ಗಣೇಶ ಮಡಿವಾಳ ಅವರು ಆ ಕೆಲಸ ಮಾಡಲಿಲ್ಲ. ಕಾರನ್ನು ಅಲ್ಲಿಯೇ ಬಿಟ್ಟು ಗಣೇಶ ಮಡಿವಾಳ ಹಾಗೂ ಸುರೇಶ ಮಡಿವಾಳ ಊರು ಸೇರಿದರು. ಅದಾದ ನಂತರ ಅವರಿವರ ಸಹಾಯಪಡೆದು ಜಾನ್ ಡಯಾಸ್ ಅವರು ಆಸ್ಪತ್ರೆ ಸೇರಿದರು. ಆಸ್ಪತ್ರೆಗೆ ಬಂದ ಪೊಲೀಸರು ಅಪಘಾತದ ವಿವರಪಡೆದಿದ್ದು, ಗಣೇಶ ಮಡಿವಾಳ ಅವರು ಮಾಡಿದ ಕೆಲಸದ ಬಗ್ಗೆ ಜಾನ್ ಡಯಾಸ್ ಅವರು ಆಕ್ರೋಶದಿಂದ ಹೇಳಿದರು. ಕಾಲಿನ ಮೂಳೆ ಮುರಿದರೂ ಆಸ್ಪತ್ರೆಗೆ ಸೇರಿಸಿದೇ ಕಾರಿನೊಳಗೆ ಬಿಟ್ಟು ಪರಾರಿಯಾದದನ್ನು ವಿವರಿಸಿದರು. ಜಾನ್ ಡಯಾಸ್ ಅವರ ನೋವು ಅರ್ಥಮಾಡಿಕೊಂಡ ಸಿದ್ದಾಪುರ ಪೊಲೀಸರು ಅಪಘಾತಕ್ಕೆ ಕಾರಣರಾದ ಗಣೇಶ ಮಡಿವಾಳ ವಿರುದ್ಧ ಪ್ರಕರಣ ದಾಖಲಿಸಿದರು. - [ಹಬ್ಬಕ್ಕೆ ಬಾರದ ಹೆಂಡತಿ: ಪರಲೋಕ ಪ್ರವೇಶಿಸಿದ ಪತಿ!](https://mobiletime.in/2025/10/the-wife-who-didnt-come-to-the-festival-the-husband-who-entered-heaven/): ದೀಪಾವಳಿ ಹಬ್ಬಕ್ಕೂ ಪತ್ನಿ ಮನೆಗೆ ಬಾರದ ಕೊರಗಿನಲ್ಲಿ ಅಂಕೋಲಾದ ಶಿವಾನಂದ ಆಗೇರ್ ಅವರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಪತ್ನಿಯ ಮುನಿಸಿಗೆ ಕಾರಣ ಹುಡುಕಿ ಸಮಾಧಾನ ಮಾಡಲು ಸಾಧ್ಯವಾಗದ ನೋವಿನಲ್ಲಿಯೇ ಅವರು ನೇಣಿಗೆ ಶರಣಾಗಿದ್ದಾರೆ. ಅಂಕೋಲಾ ಭಾವಿಕೇರಿಯಲ್ಲಿ ಶಿವಾನಂದ ಶಂಕರ್ ಆಗೇರ್ (34) ಅವರು ವಾಸವಾಗಿದ್ದರು. ಕೂಲಿ ಕೆಲಸ ಮಾಡಿಕೊಂಡಿದ್ದ ಅವರು ಜೀವನ ನಿರ್ವಹಣೆಗೆ ಅಲ್ಲಲ್ಲಿ ಸಾಲವನ್ನು ಮಾಡಿದ್ದರು. ಈಚೆಗೆ ದಂಪತಿ ನಡುವೆ ಸಣ್ಣ ವೈಮನಸ್ಸು ಬಂದಿದ್ದು, ಶಿವಾನಂದ ಆಗೇರ್ ಅವರ ಪತ್ನಿ ಮುನಿಸಿಕೊಂಡಿದ್ದರು. ಆದರೆ, ದೀಪಾವಳಿ ಹಬ್ಬಕ್ಕೆ ಪತ್ನಿ ಮನೆಗೆ ಬರುವ ಬಗ್ಗೆ ಅವರು ಭರವಸೆ ಹೊಂದಿದ್ದರು. ಆದರೆ, ಶಿವಾನಂದ ಆಗೇರ್ ಅವರ ನಿರೀಕ್ಷೆಯ ಪ್ರಕಾರ ಅವರ ಪತ್ನಿ ಮನೆಗೆ ಬರಲಿಲ್ಲ. ಕಾದು ಕಾದು ಸುಸ್ತಾದ ಅವರು ಬೇಸರಗೊಂಡರು. ಅಕ್ಟೊಬರ್ 21ರಂದು ಬೆಳಗ್ಗೆ 1.45ರ ಆಸುಪಾಸಿಗೆ ಮನೆಯೊಳಗೆ ಪ್ರವೇಶಿಸಿದ ಶಿವಾನಂದ ಆಗೇರ್ ಅವರು ಒಳಗಿನಿಂದ ಚಿಲಕ ಹಾಕಿದರು. ಮನೆಯ ಪಕಾಶಿಗೆ ವೇಲಿನಿಂದ ನೇಣುಬಿಗಿದುಕೊಂಡರು. ತಮ್ಮನ ಶವ ನೋಡಿದ ಅಕ್ಕ ಅಕ್ಕ ಭಾರತಿ ಮಂಜು ಆಗೇರ್ ಅವರು ಬಿಕ್ಕಳಿಸಿ ಅತ್ತರು. ಅದಾದ ನಂತರ ಅಂಕೋಲಾ ಪೊಲೀಸ್ ಠಾಣೆಗೆ ಮಾಹಿತಿ ನೀಡಿ, ಶವವನ್ನು ಶವಾಗಾರಕ್ಕೆ ಕಳುಹಿಸಿದರು. ಪೊಲೀಸರು ಪ್ರಕರಣ ದಾಖಲಿಸಿದರು. `ಆತ್ಮಹತ್ಯೆ ಅಪರಾಧ’ - [ಈಜು ಬಾರದವ ನೀರಿಗೆ ಇಳಿದ: ನೀರು ಕುಡಿದು ಸಾವನಪ್ಪಿದ!](https://mobiletime.in/2025/10/a-man-who-couldnt-swim-went-into-the-water-he-drank-the-water-and-died/): ದಾಂಡೇಲಿಯ ಇರ್ಷಾದ್ ಅವರು ಈಜಲು ಬಾರದಿದ್ದರೂ ನದಿಗೆ ಹಾರಿ ಪ್ರಾಣ ಕಳೆದುಕೊಂಡಿದ್ದಾರೆ. ಜೊಯಿಡಾದ ಪಾಂಡ್ರಿ ನದಿಯಲ್ಲಿ ಅವರ ಶವ ತೇಲಾಡಿದ್ದು, ರಕ್ಷಣಾ ತಂಡದವರು ಶವವನ್ನು ದಡಕ್ಕೆ ತಂದಿದ್ದಾರೆ. ದಾoಡೇಲಿಯ ಗಣೇಶನಗರದ ಇರ್ಷಾದ್ ಅಹ್ಮದ್ ಮುಗುಟಸಾಬ್ ಹುಕ್ಕೇರಿ (33) ಮಂಗಳವಾರ ಇರ್ಷಾದ್ ಅವರು ತಮ್ಮ ಸ್ನೇಹಿತರ ಜೊತೆ ಜೊಯಿಡಾಗೆ ಹೋಗಿದ್ದರು. ಅವರ ಜೊತೆ ಒಟ್ಟು ಎಂಟು ಜನರಿದ್ದರು. ಈ ಎಲ್ಲರೂ ಮಧ್ಯಾಹ್ನ ಊಟದ ನಂತರ ಜೋಯಿಡಾದ ಚಾಂದೇವಾಡಿಗೆ ಹೋಗಿದ್ದರು. ಅಲ್ಲಿರುವ ಪಾಂಡ್ರಿ ನದಿ ನೋಡಲು ಹೋದ ಸ್ನೇಹಿತರು ಈಜುವುದಕ್ಕಾಗಿ ನೀರಿಗೆ ಹಾರಿದರು. ಆದರೆ, ಈಜು ಬಾರದ ಇರ್ಷಾದ್ ಅವರು ನೀರಿಗಿಳಿದಿದ್ದು, ಅಲ್ಲಿನ ರಭಸಕ್ಕೆ ಕೊಚ್ಚಿ ಹೋದರು. ಅದೇ ನೀರಿನಲ್ಲಿ ಮುಳುಗಿದ ಅವರು ಮತ್ತೆ ಜೀವಂತವಾಗಿ ಮೇಲೆ ಬರಲಿಲ್ಲ. ಶವವಾಗಿ ತೇಲುತ್ತಿದ್ದ ಇರ್ಷಾದ್ ಅವರನ್ನು ನಂತರ ದಡಕ್ಕೆ ತರಲಾಗಿದ್ದು, ಪೊಲೀಸರು ಸದ್ಯ ಸ್ಥಳ ಭೇಟಿ ಮಾಡಿದ್ದಾರೆ. - [ಹಬ್ಬದ ಆಟಕ್ಕೂ ಪೊಲೀಸರ ಕಾಟ!](https://mobiletime.in/2025/10/police-threaten-festival-games-too/): ಭಟ್ಕಳದ ಜಾಲಿ ತೆಲಗೇರಿಯ ಕ್ರಿಕೆಟ್ ಮೈದಾನ ಪಕ್ಕ ಕಾನೂನುಬಾಹಿರವಾಗಿ ಹಣಕಟ್ಟಿ ಅಂದರ್ ಬಾಹರ್ ಆಡುತ್ತಿದ್ದವರ ಮೇಲೆ ಪೊಲೀಸರು ದಾಳಿ ಮಾಡಿದ್ದಾರೆ. ಶೇಡಕುಳಿಯಲ್ಲಿ ಮೀನುಗಾರಿಕೆ ಮಾಡಿಕೊಂಡಿದ್ದ ನಾರಾಯಣ ಗೊಂಡ ಅವರು ಸಿಕ್ಕಿಬಿದ್ದಿದ್ದು, ಅವರ ಜೊತೆಯಿದ್ದ ಏಳು ಜನ ಪರಾರಿಯಾಗಿದ್ದಾರೆ. ಭಟ್ಕಳದ ಜಾಲಿ ತೆಲಗೇರಿಯ ಕ್ರಿಕೆಟ್ ಮೈದಾನ ಪಕ್ಕದಲ್ಲಿ ದೊಡ್ಡ ಪ್ರಮಾಣದಲ್ಲಿ ಗಿಡ-ಗಂಟಿಗಳು ಬೆಳೆದಿದ್ದು, ಅಕ್ಟೊಬರ್ 19ರಂದು ಸಂಜೆ ಅಲ್ಲಿ ಮೊಂಬತ್ತಿಯ ಬೆಳಕು ಕಾಣುತ್ತಿತ್ತು. ಆ ಬೆಳಕು ಬಂದ ಕಡೆ ಭಟ್ಕಳ ಶಹರ ಪೊಲೀಸ್ ಉಪನಿರೀಕ್ಷಕ ನವೀನ್ ನಾಯ್ಕ ಅವರು ಹೋಗಿದ್ದರು. ಆ ಬೆಳಕಿನ ಅಡಿ ರದ್ದಿ ಪೇಪರ್ ಹಾಸಿಕೊಂಡು ಏಳು ಜನ ಕುಳಿತಿದ್ದರು. ಅವರೆಲ್ಲರೂ ಇಸ್ಪಿಟ್ ಎಲೆಗಳ ಜೊತೆ ಹಣಹರಡಿಕೊಂಡಿದ್ದರು. ಪೊಲೀಸರು ಬಂದದನ್ನು ನೋಡಿ ತೆಲಗೇರಿಯಲ್ಲಿ ಸೆಂಟ್ರಿoಗ್ ಕೆಲಸ ಮಾಡುವ ಮಾದೇವ ಗೊಂಡ, ಹನುಮಾನ ನಗರದ ಶಂಕರ ನಾಯ್ಕ ಓಡಿ ಪರಾರಿಯಾದರು. ಅವರ ಜೊತೆ ಮತ್ತೆ ಮೂವರು ಓಡಿದ್ದು, ಪೊಲೀಸರ ಬಳಿ ಆ ಮೂವರನ್ನು ಗುರುತಿಸಲು ಸಾಧ್ಯವಾಗಲಿಲ್ಲ. ಆದರೆ, ನಾರಾಯಣ ಗೊಂಡ ಅವರು ಮಾತ್ರ ಪೊಲೀಸರ ಬಳಿ ಸಿಕ್ಕಿಬಿದ್ದರು. `ಹಬ್ಬದ ಆಟ’ ಎಂದರೂ ಪೊಲೀಸರು ಅವರ ಮಾತು ಕೇಳಲಿಲ್ಲ. ಕಾನೂನುಬಾಹಿರ ಕೆಲಸ ಮಾಡಿದಕ್ಕಾಗಿ ಓಡಿದವರ ಜೊತೆ ಸಿಕ್ಕಬಿದ್ದವರ ಹೆಸರನ್ನು ದಾಖಲಿಸಿ ಪ್ರಕರಣ ದಾಖಲಿಸಿದರು. ಅಲ್ಲಿ ಬಿದ್ದಿದ್ದ ಇಸ್ಪಿಟ್ ಎಲೆ, ಮೇಣದ ಬತ್ತಿ ಜೊತೆ 1700ರೂ ಹಣವನ್ನು ವಶಕ್ಕೆಪಡೆದು ನ್ಯಾಯಾಲಯಕ್ಕೆ ಒಪ್ಪಿಸಿದರು. ಸದ್ಯ ಓಡಿಹೋದವರ ಹುಡುಕಾಟ ಮುಂದುವರೆದಿದೆ. ಜೊತೆಗೆ ಹೆಸರು-ವಿಳಾಸ ಗೊತ್ತಿಲ್ಲದ ಮೂವರ ಶೋಧವೂ ನಡೆದಿದೆ. - [ಕೃಷ್ಣನ ಒಡವೆಯೂ ಕಳ್ಳರ ಪಾಲು!](https://mobiletime.in/2025/10/even-krishnas-jewels-are-the-share-of-thieves/): ಕಾರವಾರ ನಗರದಲ್ಲಿರುವ ರಾಧಾಕೃಷ್ಣ ದೇವಸ್ಥಾನದಲ್ಲಿ ಕಳ್ಳತನ ನಡೆದಿದೆ. ಮಂಗಳವಾರ ದೇವಾಲಯಕ್ಕೆ ನುಗ್ಗಿದ ಕಳ್ಳರು ಅಲ್ಲಿದ್ದ ಆಭರಣಗಳನ್ನು ದೋಚಿದ್ದಾರೆ. ದೇವಸ್ಥಾನದ ಮೇಲ್ಚಾವಣಿಯನ್ನು ತೆಗೆದು ಕಳ್ಳರು ಒಳಗೆ ನುಗ್ಗಿದ್ದಾರೆ. ದೇವರ ಅಲಂಕಾರಕ್ಕೆ ಬಳಸುತ್ತಿದ್ದ ಬೆಳ್ಳಿ ಆಭರಣಗಳನ್ನು ಅವರು ತಮ್ಮದಾಗಿಸಿಕೊಂಡಿದ್ದಾರೆ. ಪೂಜೆಗಾಗಿ ದೇವಸ್ಥಾನ ಬಾಗಿಲು ತೆರೆದಾಗ ಮೇಲ್ಚಾವಣಿ ಒಡೆದಿರುವುದು ಕಾಣಿಸಿದೆ. ನಂತರ ಕಳ್ಳತನವೂ ಗಮನಕ್ಕೆ ಬಂದಿದೆ. ದೇವಾಲಯದ ಒಳಭಾಗದಲ್ಲಿನ ವಸ್ತುಗಳು ಚದುರಿ ಬಿದ್ದಿದ್ದು, ಭಕ್ತರು ಹಾಗೂ ದೇವಾಲಯ ಆಡಳಿತ ಮಂಡಳಿಯವರು ಅದರಿಂದ ಆತಂಕಕ್ಕೆ ಒಳಗದರು. ಕಾರವಾರ ನಗರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಸಮೀಪದ ಸಿಸಿ ಟಿವಿ ಕ್ಯಾಮರಾ ಆಧಾರದಲ್ಲಿ ಕಳ್ಳರನ್ನು ಪತ್ತೆ ಮಾಡುವ ಕೆಲಸವೂ ನಡೆಯುತ್ತಿದೆ. - [ಕಡಲಿನಲ್ಲಿ ಕೊಚ್ಚಿದ ಪ್ರವಾಸಿಗರಿಗೆ ಮರುಜೀವ](https://mobiletime.in/2025/10/life-restored-for-tourists-stranded-at-sea/): ಬೆಂಗಳೂರಿನಿoದ ಗೋಕರ್ಣ ಪ್ರವಾಸಕ್ಕೆ ಬಂದಿದ್ದ ಇಬ್ಬರು ಅಲ್ಲಿನ ಅರಬ್ಬಿ ಸಮುದ್ರದಲ್ಲಿ ಕೊಚ್ಚಿ ಹೋಗಿದ್ದು, ಜೀವರಕ್ಷಕ ಸಿಬ್ಬಂದಿ ತಮ್ಮ ಜೀವದ ಹಂಗು ಮರೆತು ಅವರಿಬ್ಬರನ್ನು ರಕ್ಷಿಸಿದ್ದಾರೆ. ಬೆಂಗಳೂರಿನ ನೌಕರರ ಸೊಸೈಟಿಯ 9 ಜನ ಮಂಗಳವಾರ ಗೋಕರ್ಣಕ್ಕೆ ಬಂದಿದ್ದರು. ಎಲ್ಲಾ ಕಡೆ ಸುತ್ತಾಡಿ ಸಂಜೆ ಸಮುದ್ರಕ್ಕೆ ಇಳಿದಿದ್ದರು. ಆಗ, ನಾಗೇಶ ಸುಬ್ರಹ್ಮಣ್ಯ (31) ಹಾಗೂ ಗಣೇಶ ಕೃಷ್ಣಪ್ಪ (32) ಎಂಬಾತರು ನೀರಿನಲ್ಲಿ ಕೊಚ್ಚಿ ಹೋದರು. ಅಲ್ಲಿಯೇ ಇದ್ದ ನಾಗೇಂದ್ರ ಕುರ್ಲೆ ಹಾಗೂ ಮಂಜುನಾಥ ಹರಿಕಾಂತ ಸೇರಿ ಅವರನ್ನು ದಡಕ್ಕೆ ತಂದರು. ಪ್ರವಾಸಿ ಮಿತ್ರ ಶೇಖರ ಹರಿಕಾಂತ ಜೊತೆ ಗೋಕರ್ಣ ಮೈ ಸ್ಟಿಕ್ ಅಡ್ವೆಂರ‍್ಸ ಸಿಬ್ಬಂದಿ ಸಹ ಈ ಕಾರ್ಯಾಚರಣೆಗೆ ಕೈ ಜೋಡಿಸಿದರು. ಸಾಕಷ್ಟು ಪ್ರಮಾಣದಲ್ಲಿ ನೀರು ಕುಡಿದಿದ್ದ ಪ್ರವಾಸಿಗರಿಬ್ಬರೂ ತಮ್ಮ ಜೀವ ಕಾಪಾಡಿದವರಿಗೆ ಕೃತಜ್ಞತೆ ಸಲ್ಲಿಸಿದರು. ಕಡಲತೀರದಲ್ಲಿದ್ದ ಜನರು ಈ ಕಾರ್ಯಾಚರಣೆಗೆ ಸಾಕ್ಷಿಯಾದರು. - [ವ್ಯಾಪಾರಿ ಬಳಿ ಸ್ಕೂಟರ್ ಇಲ್ಲ.. ವಕೀಲರ ಸ್ಕೂಟಿಗೆ ನಂಬರ್ ಪ್ಲೇಟ್ ಇಲ್ಲ!](https://mobiletime.in/2025/10/the-merchant-doesnt-have-a-scooter-the-lawyers-scooter-doesnt-have-a-number-plate/): ಹೊನ್ನಾವರ ಹಾಗೂ ಭಟ್ಕಳ ಭಾಗದದಲ್ಲಿ ಸ್ಕೂಟಿ ಕಳ್ಳರ ಕಾಟ ಹೆಚ್ಚಾಗಿದೆ. ಹೊನ್ನಾವರದ ವ್ಯಾಪಾರಿಯೊಬ್ಬರ ಸ್ಕೂಟಿ ಕಳ್ಳರ ಪಾಲಾಗಿದ್ದು, ಭಟ್ಕಳದ ವಕೀಲರ ಸ್ಕೂಟಿ ಕದಿಯುವ ಪ್ರಯತ್ನ ಮಾಡಿ ವಿಫಲರಾಗಿದ್ದಾರೆ. ಹೊನ್ನಾವರದ ಮಡಿವಾಳ ಹಳ್ಳದ ವ್ಯಾಪಾರಿ ಪ್ರಕಾಶ ನಾಯ್ಕ ಅವರ ಸ್ಕೂಟಿಯನ್ನು ಕಳ್ಳರು ಕದ್ದಿದ್ದಾರೆ. ಅಕ್ಟೊಬರ್ 17ರಂದು ಮನೆ ಮುಂದೆ ನಿಲ್ಲಿಸಿದ 90 ಸಾವಿರದ ಸ್ಕೂಟಿ ಕಾಣೆಯಾಗಿದೆ. ಸುಜಕಿ ಎಕ್ಸಸ್ ಸ್ಕೂಟಿ ಎಲ್ಲಿ ಹುಡುಕಿದರೂ ಸಿಗದ ಕಾರಣ ಪ್ರಕಾಶ ನಾಯ್ಕ ಅವರು ಪೊಲೀಸ್ ದೂರು ನೀಡಿದ್ದಾರೆ. ಹೊನ್ನಾವರ ಪೊಲೀಸರು ಪ್ರಕರಣ ದಾಖಲಿಸಿದ್ದು, ಸ್ಕೂಟಿ ಹುಡುಕಾಟ ನಡೆಸಿದ್ದಾರೆ. ಭಟ್ಕಳ ವಕೀಲ ಮನೋಜ ನಾಯ್ಕ ಅವರ ಬಜಾಜ್ ಚೇತಕ್ ಸ್ಕೂಟರ್ ಕಳ್ಳತನಕ್ಕೆ ಕಳ್ಳರು ಪ್ರಯತ್ನಿಸಿದ್ದಾರೆ. ಸ್ಕೂಟರ್ ಕಳ್ಳತನ ಸಾಧ್ಯವಾಗದೇ ಇದ್ದಾಗ ಅದರ ನಂಬರ್ ಪ್ಲೇಟ್ ಕದ್ದೊಯ್ದಿದ್ದಾರೆ. ಈ ವಕೀಲರು ನಾಗಪ್ಪ ನಾಯ್ಕ ರಸ್ತೆಯ 1ನೇ ಕ್ರಾಸಿನಲ್ಲಿ ಮನೆ ಮಾಡಿಕೊಂಡಿದ್ದು, ಅಕ್ಟೊಬರ್ 19ರ ಸಂಜೆ 7 ಗಂಟೆಗೆ ಸ್ಕೂಟರ್ ಸರಿಯಾಗಿಯೇ ಇತ್ತು. 10.22ಕ್ಕೆ ನೋಡಿದಾಗ ಸ್ಕೂಟರ್ ಕಳ್ಳತನದ ವಿಫಲ ಪ್ರಯತ್ನ ವಕೀಲರ ಗಮನಕ್ಕೆ ಬಂದಿತು. ಸ್ಕೂಟರ್ ಕದಿಯಲು ಸಾಧ್ಯವಾಗದ ಸಿಟ್ಟಿನಲ್ಲಿ ಅದರ ನಂಬರ್ ಪ್ಲೇಟ್’ನ್ನು ಕಿಲಾಡಿ ಕಳ್ಳರು ಕಿತ್ತಿದ್ದಾರೆ. ಕಳ್ಳರ ಕಾಟಕ್ಕೆ ಬೇಸತ್ತ ವಕೀಲ ಮನೋಜ ನಾಯ್ಕ ಅವರು ಭಟ್ಕಳ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿದ ಪೊಲೀಸರು ಆ ಕಳ್ಳರ ಹುಡುಕಾಟ ಶುರು ಮಾಡಿದ್ದಾರೆ. - [ಭದ್ರತಾ ಸಿಬ್ಬಂದಿಯನ್ನು ಬೆದರಿಸಿದ ಕಜ್ಜಿ ನಾಯಿ!](https://mobiletime.in/2025/10/itchy-dog-threatens-security-guard/): ಕಾರವಾರದ ಸಿವಿಲ್ ಆಸ್ಪತ್ರೆಯ ಒಳಗೆ ನಾಯಿ ಓಡಾಡುತ್ತಿದೆ. ಆ ನಾಯಿ ಎಲ್ಲೆಂದರಲ್ಲಿ ಗಲೀಜು ಮಾಡುತ್ತಿದ್ದು, ಇಲ್ಲಿನ ಭದ್ರತಾ ಸಿಬ್ಬಂದಿಯನ್ನು ಸಹ ಬೆದರಿಸುತ್ತಿದೆ! ಜಿಲ್ಲಾಕೇಂದ್ರ ಕಾರವಾರದಲ್ಲಿ ಬೀದಿ ನಾಯಿಗಳ ಕಾಟ ಜೋರಾಗಿದೆ. ಅಶಕ್ತರರ ಮೇಲೆ ನಾಯಿಗಳು ದಾಳಿ ನಡೆಸುತ್ತಿದ್ದು, ದಾಳಿಗೆ ಒಳಗಾದ ಜನ ಅನಗತ್ಯವಾಗಿ ಆಸ್ಪತ್ರೆ ಓಡಾಡುತ್ತಿದ್ದಾರೆ. ಸದ್ಯ ಆಸ್ಪತ್ರೆ ಒಳಗೂ ನಾಯಿಗಳ ಕಾಟ ಹೆಚ್ಚಿದೆ. ರಾತ್ರಿ ಅವಧಿಯಲ್ಲಿ ಹಲವು ನಾಯಿಗಳು ಆಸ್ಪತ್ರೆ ಪ್ರವೇಶಿಸುತ್ತಿದ್ದು ಅಲ್ಲಿನ ಕಟ್ಟಡಗಳಲ್ಲಿ ಆಶ್ರಯಪಡೆಯುತ್ತಿವೆ. ಜಿಲ್ಲಾ ಆಸ್ಪತ್ರೆಯಲ್ಲಿ ರಾತ್ರಿ ಕರ್ತವ್ಯಕ್ಕಿರಬೇಕಾದ ಸಿಬ್ಬಂದಿ ನಿದ್ದೆ ಮಾಡುತ್ತಿದ್ದು, ಅದೇ ಸಮಯದಲ್ಲಿ ಆಸ್ಪತ್ರೆಯ ಒಳಗೆ ನಾಯಿ ನುಗ್ಗುತ್ತಿದೆ. ರೋಗಿಗಳು ಆಶ್ರಯಪಡೆದ ಕೋಣೆಗಳಿಗೂ ತೆರಳಿ ಗಲೀಜು ಮಾಡುತ್ತಿದೆ. ಆಸ್ಪತ್ರೆ ಸ್ವಚ್ಛತೆ ಬಗ್ಗೆ ಅಧಿಕಾರಿಗಳು ಗಮನಹರಿಸದ ಬಗ್ಗೆ ಆಕ್ರೋಶವ್ಯಕ್ತವಾಗಿದೆ. ಮೊನ್ನೆ ರಾತ್ರಿ 3 ಗಂಟೆ ಅವಧಿಗೆ ಜನಶಕ್ತಿ ವೇದಿಕೆ ಅಧ್ಯಕ್ಷ ಮಾಧವ ನಾಯಕ ದಿಡೀರ್ ಆಗಿ ಆಸ್ಪತ್ರೆಗೆ ಹೋಗಿದ್ದು, ಅಲ್ಲಿನ ಅವ್ಯವಸ್ಥೆಗಳ ವಿಡಿಯೋ ಮಾಡಿದ್ದಾರೆ. ಆಸ್ಪತ್ರೆ ಆವರಣದೊಳಗೆ ನಾಯಿ ಬಂದಿರುವುದನ್ನು ಪ್ರಶ್ನಿಸಿದ ನಂತರ ಬೇರೆ ವಿಭಾಗದ ಭದ್ರತಾ ಸಿಬ್ಬಂದಿ ಆ ನಾಯಿ ಓಡಿಸುವ ಕೆಲಸ ಮಾಡಿದ್ದಾರೆ. ಜಿಲ್ಲಾಧಿಕಾರಿ ಹಾಗೂ ಶಾಸಕರಿಗೆ ಆ ವಿಡಿಯೋ ಕಳುಹಿಸಿ ಆಸ್ಪತ್ರೆಗೆ ತಾವು ಹಠಾತ್ ಭೇಟಿ ಮಾಡಿ ಎಂದು ಮನವಿ ಮಾಡಿದ್ದಾರೆ. `ಆಸ್ಪತ್ರೆಯ ಅವ್ಯವಸ್ಥೆಗಳನ್ನು ಸರಿಪಡಿಸಲು ಅಧಿಕಾರದಲ್ಲಿರುವವರು ಆಗಾಗ ಅಲ್ಲಿ ಭೇಟಿ ಕೊಡಬೇಕು. ಅಲ್ಲಿನ ಸಮಸ್ಯೆಗಳನ್ನು ಸರಿಪಡಿಸಬೇಕು’ ಎಂದು ಮಾಧವ ನಾಯಕ ಅವರು ಆಗ್ರಹಿಸಿದ್ದಾರೆ. - [27 ವರ್ಷದ ನಂತರ ಬಂದ ನೋಟಿಸ್ಸು!](https://mobiletime.in/2025/10/a-notice-after-27-years/): 1998ರಲ್ಲಿ ಅರಣ್ಯ ಅತಿಕ್ರಮಿಸಿ ಮನೆ ನಿರ್ಮಿಸಿಕೊಂಡವರಿಗೆ 27 ವರ್ಷದ ನಂತರ ಅರಣ್ಯ ಇಲಾಖೆ ನೋಟಿಸ್ ನೀಡುತ್ತಿದೆ. ಆ ವೇಳೆ ಅರಣ್ಯ ಅಧಿಕಾರಿಗಳು ದಾಖಲಿಸಿದ ಪ್ರಕರಣ ವಿಷಯವಾಗಿ ವಿಚಾರಣೆಗೆ ಬರುವಂತೆ ಅರಣ್ಯ ಅತಿಕ್ರಮಣದಾರರಿಗೆ ಪತ್ರ ಬಂದಿದೆ. ಮುoಡಗೋಡಿನ ಕಾತೂರು ವಲಯದ ಅನೇಕರಿಗೆ ಅಕ್ಟೊಬರ್ 29ರಂದು ವಿಚಾರಣೆಗೆ ಬರುವಂತೆ ಸೂಚಿಸಲಾಗಿದೆ. ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳು ಸಹಿ ಮಾಡಿ ಈ ಸೂಚನಾ ಪತ್ರ ರವಾನಿಸಿದ್ದಾರೆ. `ವಿಚಾರಣೆಗೆ ಹಾಜರಾಗದೇ ಇದ್ದರೆ ನಿಮ್ಮ ಹೇಳಿಕೆ ಏನೂ ಇಲ್ಲ’ ಎಂದು ಪರಿಗಣಿಸುವ ಬಗ್ಗೆಯೂ ನೋಟಿಸ್ ಮೂಲಕ ಎಚ್ಚರಿಕೆ ನೀಡಲಾಗಿದೆ. ಅರಣ್ಯ ಕಾಯ್ದೆ ಉಲ್ಲಂಘನೆ ಮಾಡಿದ ಬಗ್ಗೆ ಲಿಖಿತ ಹೇಳಿಕೆ ಸಲ್ಲಿಸುವಂತೆ ಅಧಿಕಾರಿಗಳು ನೋಟಿಸ್ ಮೂಲಕ ತಿಳಿಸಿದ್ದಾರೆ. ಅದರೊಂದಿಗೆ ಭೂ ಮಂಜೂರಾತಿ ಕೋರಿ ಸಲ್ಲಿಸಿದ ಅರ್ಜಿ, ಮಂಜೂರಾತಿ ಆದೇಶ, ಮೂಲ ಅರ್ಜಿದಾರರಿಂದಹಿಡಿದು ಸದ್ಯ ಹಿಡುವಳಿಹೊಂದಿರುವವರೆಗಿನ ಎಲ್ಲಾ ಕಾಗದಪತ್ರಗಳನ್ನು ಹಾಜರುಪಡಿಸುವಂತೆ ಸೂಚಿಸಿದ್ದಾರೆ. ಈ ಎಲ್ಲ ವಿಷಯಗಳ ಬಗ್ಗೆ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ಮಾಹಿತಿ ನೀಡಿದರು. ವಿಚಾರಣೆಗೆ ಹಾಜರಾಗಲು ಬಂದಿರುವAತಹ ಅರಣ್ಯವಾಸಿಗಳೊಂದಿಗೆ ಅವರು ಸಮಾಲೋನೆ ನಡೆಸಿದ್ದು, ಅವರಿಗೆ ವಿವಿಧ ಸಲಹೆ ನೀಡಿದರು. ಸಂಘಟನೆ ಸಂಚಾಲಕರಾದ ಗಣಪತಿ ಟಿ ನಾಯ್ಕ ಬಾಳೆಕೊಪ್ಪ, ಗಣಪ ಯಂಕ ಗೌಡ ಮುಳಗುಂದ, ಜಯಪ್ಪ ನಾಯ್ಕ ಬೆಕ್ಕೋಡ, ಗಿರಿಯ ಟಿ ನಾಯ್ಕ ಬಟಕ್ಕೋಡ, ಶಿವಾಜಿ ನಾಯ್ಕ ಬೆಡಸಗಾಂವ್, ನೆಹರು ನಾಯ್ಕ, ಗಣಪತಿ ಹೆಗಡೆ ಕೂರ್ಲಿ ಜೊತೆಗಿದ್ದು ವಿವರ ಕೇಳಿದರು. - [ಆಧಾರ್ ಕಾರ್ಡ ಕೊಟ್ಟು ಮೊಬೈಲ್ ಕದ್ದ ಕಳ್ಳ!](https://mobiletime.in/2025/10/thief-who-gave-aadhaar-card-and-stole-mobile-phone/): ಕಾರವಾರ ಬಸ್ ನಿಲ್ದಾಣದ ಬಳಿಯಿರುವ ಬಾಲಾಜಿ ಸ್ಟೋರ್ಸಿನಲ್ಲಿ ಕಳ್ಳತನ ನಡೆದಿದಿದೆ. ಕ್ಷಣಮಾತ್ರದಲ್ಲಿ ಅಂಗಡಿಯವರ ಗಮನ ಬೇರೆಡೆ ಸೆಳೆದ ಕಳ್ಳ ಮೊಬೈಲ್ ಕದ್ದು ಪರಾರಿಯಾದ ದೃಶ್ಯಾವಳಿ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಮಹಾರಾಷ್ಟದ ಕಂದಾರ್ ನಂದೂರಿನ ಆಕಾಶ ಸರೋಡೆ ಎಂಬಾತರು ಕಾರವಾರಕ್ಕೆ ಬಂದಿದ್ದರು. ಬಸ್ ನಿಲ್ದಾಣ ಬಳಿಯಿರುವ ಮೊಬೈಲ್ ಅಂಗಡಿಗೆ ಹೋದ ಅವರು ಅಲ್ಲಿ ತಮ್ಮ ಆಧಾರ್ ಕಾರ್ಡ ನೀಡಿ ಫೋಟೋ ತೆಗೆಸಿಕೊಂಡಿದ್ದರು. ಅದಾದ ನಂತರ ಅಕ್ಟೊಬರ್ 20ರ ಸಂಜೆ ಬಸ್ ನಿಲ್ದಾಣ ಬಳಿಯ ಬಾಲಾಜಿ ಸ್ಟೋರ್ಸಿಗೆ ಹೋಗಿದ್ದ ಆಕಾಶ ಸರೋಡೆ ಆ ಮಳಿಗೆಯಲ್ಲಿದ್ದ ಮೊಬೈಲ್ ಕದ್ದು ಜೇಬಿಗೆ ಇಳಿಸಿದ್ದರು. ತಕ್ಷಣ ಆಕಾಶ ಸರೋಡೆ ಅಲ್ಲಿಂದ ಪರಾರಿಯಾಗಿದ್ದು, ಮೊಬೈಲ್ ಕದ್ದ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಯಿತು. ಜೊತೆಗೆ ಅದು ಭಾರೀ ಪ್ರಮಾಣದಲ್ಲಿ ವೈರಲ್ ಆಯಿತು. ವೈರಲ್ ಆದ ವಿಡಿಯೋ ನೋಡಿದ ಬಸ್ ನಿಲ್ದಾಣದ ಬಳಿಯಿರುವ ಮತ್ತೊಂದು ಅಂಗಡಿಯವರು ಅದೇ ವ್ಯಕ್ತಿ ತಮ್ಮ ಅಂಗಡಿಗೆ ಬಂದಿದ್ದನ್ನು ನೆನಪಿಸಿಕೊಂಡರು. ಆತನ ಮುಖ ಹಾಗೂ ಧರಿಸಿದ ಬಟ್ಟೆ ಗಮನಿಸಿ ತಮ್ಮ ಅಂಗಡಿಗೂ ಕಳ್ಳಬಂದಿದನ್ನು ಖಚಿತಪಡಿಸಿಕೊಂಡರು. ಆತ ನೀಡಿದ ದಾಖಲೆಗಳನ್ನು ನೋಡಿ ಅದರಲ್ಲಿದ್ದ ವಿಳಾಸ ನೋಡಿದರು. ತಮ್ಮ ಬಳಿಯಿದ್ದ ಕಳ್ಳನ ಆಧಾರ್ ಕಾರ್ಡ ಹಾಗೂ ಸ್ಪಷ್ಟ ಫೋಟೋವನ್ನು ವೈರಲ್ ಮಾಡಿದರು. ಹೀಗಾಗಿ ಗ್ರಾಹಕರ ಸೋಗಿನಲ್ಲಿ ಅಂಗಡಿಗೆ ಬಂದು ಮೊಬೈಲ್ ಕದ್ದವನ ಹೆಸರು-ವಿಳಾಸ ಗೊತ್ತಾಗಿದೆ. ಮೊಬೈಲ್ ಕಳೆದುಕೊಂಡವರು ಕಳ್ಳನ ಹುಡುಕಾಟಕ್ಕಾಗಿ ಪೊಲೀಸರ ಮೊರೆ ಹೋಗಿದ್ದು, ಲಭ್ಯ ದಾಖಲೆಗಳ ಆಧಾರದಲ್ಲಿ ಆತನ ಶೋಧ ಶುರುವಾಗಿದೆ. ಮೊಬೈಲ್ ಕಳ್ಳತನದ ವಿಡಿಯೋ ಇಲ್ಲಿ ನೋಡಿ.. - [2025 ಅಕ್ಟೊಬರ್ 21ರ ದಿನ ಭವಿಷ್ಯ](https://mobiletime.in/2025/10/prediction-for-october-21-2025/): ಮೇಷ ರಾಶಿ: ನಿಮ್ಮ ಕಾರ್ಯಕ್ಷೇತ್ರದಲ್ಲಿ ನೂತನ ಪ್ರಯತ್ನಗಳು ಯಶಸ್ವಿಯಾಗಲಿದೆ. ಮನೆಯ ವಾತಾವರಣದಲ್ಲಿ ಗೊಂದಲ ಮಾಡಿಕೊಳ್ಳಬೇಡಿ. ವೃಷಭ ರಾಶಿ: ಈ ದಿನ ನಿಮ್ಮ ನಿರ್ಧಾರಗಳು ಫಲ ನೀಡುತ್ತವೆ. ಕೆಲಸದಲ್ಲಿ ನೂತನ ಅವಕಾಶಗಳು ಅರೆಸಿ ಬರಲಿದೆ. ಕುಟುಂಬದಲ್ಲಿ ಸಂತೃಪ್ತಿಯ ವಾತಾವರಣ ಕಾಣಲಿದೆ. ಆರೋಗ್ಯದಲ್ಲಿ ಸಣ್ಣ ಅಡೆತಡೆಗಳು ಬಂದರೂ ಅದನ್ನು ಗಂಭೀರವಾಗಿ ಪರಿಗಣಿಸಿ. ಮಿಥುನ ರಾಶಿ: ಬದುಕಿನ ಬಗ್ಗೆ ಜೊಸ ಚಿಂತೆಗಳು ಕಾಡಲಿದೆ. ವೃತ್ತಿ ಬದುಕಿನಲ್ಲಿ ಒತ್ತಡದಷ್ಟೇ ಪ್ರಮಾಣದಲ್ಲಿ ಅವಕಾಶಗಳು ಇವೆ. ಹಣಕಾಸು ಪರಿಸ್ಥಿತಿಯನ್ನು ಸರಿಯಾಗಿ ನಿಭಾಯಿಸಿದರೆ ಜಯ ಖಚಿತ. ಕರ್ಕ ರಾಶಿ: ಉದ್ಯೋಗದಲ್ಲಿ ಸ್ಥಿತಿಗತಿಗಳಲ್ಲಿ ಸುಧಾರಣೆ ಆಗಲಿದೆ. ಹಣಕಾಸು ನಿರ್ವಹಣೆಯಲ್ಲಿ ಜಾಗೃತಿ ಅಗತ್ಯ. ಸ್ನೇಹಿತರಿಂದ ಸಹಾಯ ಸಿಗಲಿದ್ದು, ಪ್ರೀತಿ-ಪ್ರೇಮ ವಿಚಾರದಲ್ಲಿ ಪ್ರಗತಿ ಕಾಣಲಿದೆ. ಸಿಂಹ ರಾಶಿ: ಅಧ್ಯಯನ ಅಥವಾ ಕೆಲಸದಲ್ಲಿ ಸ್ನೇಹಿತರಿಂದ ಸಹಕಾರ ಸಿಗುತ್ತದೆ. ಹಿತಕರ ಬದಲಾವಣೆಯಿಂದ ಮನಸ್ಸು ಆರಾಮದಾಯಕವಾಗಿರಲಿದೆ. ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ಇರಲಿ. ಕನ್ಯಾ ರಾಶಿ: ಆತಂಕದ ಸ್ವಭಾವ ಸಹಜವಾಗಿದ್ದು, ಅದರಿಂದ ಹೊರಬನ್ನಿ. ಕೆಲಸದಲ್ಲಿ ಒತ್ತಡಗಳನ್ನು ಸಹಿಸಿಕೊಳ್ಳಿ. ಆರೋಗ್ಯ ಸಂಬAಧಿ ಸಮಸ್ಯೆಗಳಿಗೆ ಔಷಧಿ ಅಗತ್ಯ. ತುಲಾ ರಾಶಿ: ಹೊಸ ಯೋಜನೆಗಳು ಯಶಸ್ಸು ಕಾಣಲಿದೆ. ವೃತ್ತಿ ಜೀವನದಲ್ಲಿ ಪ್ರಗತಿ ಸಾಧ್ಯವಿದೆ. ಶತ್ರುಗಳ ಬಗ್ಗೆ ಎಚ್ಚರಿಕೆ ಅಗತ್ಯ. ವೃಶ್ಚಿಕ ರಾಶಿ: ಕಷ್ಟಗಳನ್ನು ಎದುರಿಸುವ ಶಕ್ತಿ ಹೆಚ್ಚಳವಾಗಲಿದೆ. ಕೆಲಸದಲ್ಲಿ ಬದಲಾವಣೆ ಸಾಧ್ಯವಿದೆ. ಹಣಕಾಸು ಲಾಭ ಬರಲಿದೆ. ಆರೋಗ್ಯದಲ್ಲಿ ಜಾಗೃತಿ ಅಗತ್ಯ. ಧನು ರಾಶಿ: ಹೊಸ ಯೋಜನೆಗಳನ್ನು ಅನುಸರಿಸಲು ಉತ್ತಮ ಒಳ್ಳೆಯ ದಿನ. ಉದ್ಯೋಗದಲ್ಲಿ ಸಹಾಯ ದೊರೆಯುತ್ತದೆ. ಹಣಕಾಸು ಬೆಳವಣಿಗೆಗೆ ಅವಕಾಶಗಳಿವೆ. ಮಕರ ರಾಶಿ: ಕುಟುಂಬದ ವಿಷಯದಲ್ಲಿ ಅನಾನುಕೂಲತೆ ಕಾಡಲಿದೆ. ಆರೋಗ್ಯ ಉತ್ತಮವಾಗಿರಲಿದೆ. ಹೊಸ ಅಧಿಕಾರ ಸಿಗುವ ಸಾಧ್ಯತೆಗಳಿವೆ. ಕುಂಭ ರಾಶಿ: ವಿರೋಧಿಗಳನ್ನು ಸೋಲಿಸುವ ಸಮಯ ಬಂದಿದೆ. ಪ್ರತಿಸ್ಪರ್ಧೆಯಲ್ಲಿ ನಿಮಗೆ ಜಯ ಸಿಗಲಿದೆ. ಉತ್ತಮ ಆರೋಗ್ಯಕ್ಕಾಗಿ ವ್ಯಾಯಾಮ ಮಾಡುವುದನ್ನು ಮರೆಯಬೇಡಿ. ಮೀನು ರಾಶಿ: ಮಾನಸಿಕ ಒತ್ತಡವಿಲ್ಲದೆ ಕೆಲಸ ಮಾಡಲು ಸಾಧ್ಯವಿದೆ. ಹಣಕಾಸಿನಲ್ಲಿ ಏರಿಳಿತ ಸಹಜವಾಗಿರುತ್ತದೆ. ಹೊಸ ಅವಕಾಶಗಳು ಅರೆಸಿ ಬರಲಿದೆ. - [INS ವಿಕ್ರಾಂತನ ಗುಣಗಾನ: ಆಳ ಸಮುದ್ರದಲ್ಲಿ ಮೋಡಿ ಮಾಡಿದ ಮೋದಿ!](https://mobiletime.in/2025/10/praise-for-ins-vikrant-modi-cast-a-spell-in-the-deep-sea/): ಕಾರವಾರ-ಗೋವಾ ಗಡಿಯ ಆಳ ಸಮುದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾರತೀಯ ಸೈನಿಕರ ಜೊತೆ ದೀಪಾವಳಿ ಹಬ್ಬ ಆಚರಿಸಿದ್ದಾರೆ. ಕಳೆದ ಕೆಲ ವರ್ಷಗಳಿಂದ ದೀಪಾವಳಿ ಹಬ್ಬಂದು ಸೈನಿಕರ ಜೊತೆ ಕಾಲ ಕಳೆಯುವ ನರೇಂದ್ರ ಮೋದಿ ಅವರು ಸೋಮವಾರ INS ವಿಕ್ರಾಂತದ ಮೇಲೆ ಸಂಚಾರ ನಡೆಸಿದ್ದಾರೆ. ನರೇಂದ್ರ ಮೋದಿ ಅವರು 2014ರಿಂದ ಸೈನಿಕರ ಜೊತೆ ದೀಪಾವಳಿ ಹಬ್ಬ ಆಚರಿಸುತ್ತಿದ್ದಾರೆ. ಈ ಬಾರಿ ಅವರು ಹೆಲಿಕಾಪ್ಟರ್ ಮೂಲಕ ಅರಬ್ಬಿ ಸಮುದ್ರಕ್ಕೆ ಆಗಮಿಸಿದ್ದು, ಆಳ ಸಮುದ್ರದಲ್ಲಿದ್ದ INS ವಿಕ್ರಾಂತದ ಮೇಲೆ ಕಾಲಿಟ್ಟರು. ನೌಕಾಪಡೆ ಸಿಬ್ಬಂದಿಗೆ ಸಿಹಿ ತಿನಿಸುವ ಮೂಲಕ ಹಬ್ಬದ ಶುಭಾಶಯ ಕೋರಿದರು. ಐಎನ್‌ಎಸ್ ವಿಕ್ರಾಂತ್ ಹಾಗೂ ಬ್ರಹ್ಮೋಸ್ ಕ್ಷಿಪಣಿಯ ಕಾರ್ಯಾಚರಣೆಯನ್ನು ಅವರು ಗಮನಿಸಿದರು. `ಐಎನ್‌ಎಸ್ ವಿಕ್ರಾಂತ್ ಕೇವಲ ಯುದ್ಧನೌಕೆಯಲ್ಲ, ಭಾರತದ ಪ್ರತಿಭೆಗೆ ಸಾಕ್ಷಿ’ ಎಂದು ಬಣ್ಣಿಸಿದರು. `ವಿಕ್ರಾಂತ ಕೇವಲ ಯುದ್ಧನೌಕೆಯಲ್ಲ. ಇದು 21 ನೇ ಶತಮಾನದಲ್ಲಿ ಭಾರತದ ಕಠಿಣ ಪರಿಶ್ರಮ, ಪ್ರತಿಭೆ, ಪ್ರಭಾವ ಮತ್ತು ಬದ್ಧತೆಗೆ ಸಾಕ್ಷಿಯಾಗಿದೆ. ಇದು ಭಾರತದ ಸಶಸ್ತ್ರ ಪಡೆಗಳ ಸಾಮರ್ಥ್ಯವನ್ನು ಪ್ರತಿಬಿಂಬಿಸುತ್ತದೆ. ವಿಕ್ರಾಂತ್ ವಿಶಾಲ, ಅಗಾಧ ಮತ್ತು ಭವ್ಯವಾದದ್ದು’ ಎಂದು ಶ್ಲಾಘಿಸಿದರು. `ಸಾಗರ ನೀರಿನ ಮೇಲೆ ಹೊಳೆಯುವ ಸೂರ್ಯನ ಕಿರಣಗಳು ವೀರ ಸೈನಿಕರು ಬೆಳಗಿದ ದೀಪಾವಳಿ ದೀಪಗಳ ಹಾಗೇ’ ಎಂದು ಪ್ರಧಾನಿ ನರೇಂದ್ರ ಮೋದಿ ಈ ವೇಳೆ ಹೇಳಿದರು. `ನೌಕಾಪಡೆಯ ಎಲ್ಲಾ ವೀರ ಸೈನಿಕರೊಂದಿಗೆ ಪವಿತ್ರ ಹಬ್ಬ ದೀಪಾವಳಿ ಆಚರಿಸುತ್ತಿರುವುದು ನನ್ನ ಅದೃಷ್ಟ’ ಎನ್ನುತ್ತ ಭಾವುಕರಾದರು. `ಭಾರತೀಯ ಸೇನೆಯ ಮೂರು ಪಡೆಗಳ ಅಸಾಧಾರಣ ಸಮನ್ವಯವೇ ಆಪರೇಷನ್ ಸಿಂಧೂರ’ ಎಂದವರು ಹೇಳಿದ್ದು, ಪಾಕಿಸ್ತಾನದ ವಿರುದ್ಧ ಭಾರತವು ಸಂಪೂರ್ಣ ಗೆಲುವಿಗೆ ಕಾರಣರಾದವರನ್ನು ಸ್ಮರಿಸಿದರು. ಕಾರವಾರ-ಗೋವಾ ಗಡಿಯ ಸಮುದ್ರದಲ್ಲಿದ್ದ ಸ್ವದೇಶಿ ನಿರ್ಮಿತ ಐಎನ್‌ಎಸ್ ವಿಕ್ರಾಂತ್ ಯುದ್ಧ ನೌಕೆಯಲ್ಲಿ ಅವರು ಸಂಚಾರ ನಡೆಸಿದರು. `ಕೆಲವೇ ತಿಂಗಳುಗಳ ಹಿಂದೆ, ಐಎನ್‌ಎಸ್ ವಿಕ್ರಾಂತ್ ಪಾಕಿಸ್ತಾನವನ್ನು ನಿದ್ದೆಗೆಡಿಸುವಂತೆ ಮಾಡಿತು ಎಂದು ನಾವೆಲ್ಲ ನೋಡಿದ್ದೇವೆ. ನೌಕಾಪಡೆಯು ಹುಟ್ಟುಹಾಕಿದ ಭಯ, ವಾಯುಪಡೆಯು ಪ್ರದರ್ಶಿಸಿದ ಅಸಾಧಾರಣ ಕೌಶಲ್ಯ ಮತ್ತು ಸೇನೆಯ ಶೌರ್ಯದ ಜೊತೆಗೆ, ಮೂರೂ ಸೇವೆಗಳ ನಡುವಿನ ಅಸಾಧಾರಣ ಸಮನ್ವಯವು ಆಪರೇಷನ್ ಸಿಂಧೂರ್ ಸಮಯದಲ್ಲಿ ಪಾಕಿಸ್ತಾನವನ್ನು ಕೆಲವೇ ದಿನಗಳಲ್ಲಿ ಮಂಡಿಯೂರುವ0ತೆ ಮಾಡಿತು’ ಎಂದವರು ಯುದ್ಧನೌಕೆಯ ಕೆಲಸವನ್ನು ಶ್ಲಾಘಿಸಿದರು. `ಆಪರೇಷನ್ ಸಿಂಧೂರ ಸಮಯದಲ್ಲಿ ಬ್ರಹ್ಮೋಸ್ ಮತ್ತು ಆಕಾಶ್‌ನಂತಹ ಕ್ಷಿಪಣಿಗಳು ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿವೆ. ಈ ಕ್ಷಿಪಣಿಗಳನ್ನು ಖರೀದಿಸಲು ಈಗ ಜಗತ್ತಿನಾದ್ಯಂತ ಹಲವು ದೇಶಗಳು ಆಸಕ್ತಿ ತೋರಿಸುತ್ತಿವೆ’ ಎಂದರು. `ನಮ್ಮ ಸರ್ಕಾರವು ಭಾರತವನ್ನು ಜಗತ್ತಿನ ಅತಿದೊಡ್ಡ ಆಯುಧ ರಫ್ತು ದೇಶವನ್ನಾಗಿಸುವ ಗುರಿಯನ್ನು ಹೊಂದಿದೆ. 2014ರಿಂದ ಇಲ್ಲಿಯವರೆಗೆ 40ಕ್ಕೂ ಹೆಚ್ಚು ಯುದ್ಧ ನೌಕೆಗಳು ಹಾಗೂ ಜಲಾಂತರ್ಗಾಮಿ ನೌಕೆಗಳನ್ನು ದೇಶೀಯವಾಗಿ ನಿರ್ಮಿಸಲಾಗಿದೆ’ ಎಂದು ವಿವರಿಸಿದರು. `ಈ ದೊಡ್ಡ ಹಡಗುಗಳು, ವಿಮಾನಗಳು, ಜಲಾಂತರ್ಗಾಮಿ ನೌಕೆಗಳು ಪ್ರಭಾವಶಾಲಿಯಾಗಿವೆ. ಆದರೆ ಅವುಗಳನ್ನು ನಿಜವಾಗಿಯೂ ಪ್ರಭಾವಶಾಲಿಯಾನ್ನಾಗಿಸಿರುವುದು ಯೋಧರ ಧೈರ್ಯ’ ಎಂದರು. ಸೈನಿಕರ ಜೊತೆ ಮೋದಿ ದೀಪಾವಳಿ ಆಚರಿಸಿದ ವಿಡಿಯೋ ಇಲ್ಲಿ ನೋಡಿ.. - [ಎರಡು ತಿಂಗಳ ನರಳಾಟ: ಕೊನೆಗೂ ಬದುಕದ ಲಕ್ಷ್ಮಕ್ಕ!](https://mobiletime.in/2025/10/two-months-of-suffering-lakshmaka-finally-survives/): ಎರಡು ತಿಂಗಳ ಹಿಂದೆ ಸ್ಕೂಟಿಯಿಂದ ಬಿದ್ದು ಗಂಭೀರ ಗಾಯಗೊಂಡಿದ್ದ ಭಟ್ಕಳದ ಲಕ್ಷ್ಮೀನಾಯ್ಕ ಅವರು ಸೋಮವಾರ ಮಂಗಳೂರಿನ ಆಸ್ಪತ್ರೆಯಲ್ಲಿ ಸಾವನಪ್ಪಿದ್ದಾರೆ. ಭಟ್ಕಳ ಪುರವರ್ಗದ ದಾಸಿಮನೆಯಲ್ಲಿ ಲಕ್ಷ್ಮೀ ನಾಯ್ಕ (67) ಅವರು ವಾಸವಾಗಿದ್ದರು. ಗ್ರಾಮ ಪಂಚಾಯತದಲ್ಲಿ ಕೆಲಸ ಮಾಡುವ ಮಗ ಉಮೇಶ ವೆಂಕಟಯ್ಯ ನಾಯ್ಕ (33) ಅವರ ಜೊತೆ 2025ರ ಅಗಸ್ಟ 8ರಂದು ತ್ರಿಚಕ್ರದ ಸ್ಕೂಟರಿನಲ್ಲಿ ಅವರು ಹೋಗುತ್ತಿದ್ದರು. ಬೆಣ್ಣಂದೂರು ಗ್ರಾಮದ ಬೆಣಂದೂರು ರಸ್ತೆ-ಮಾಸ್ತಿಮನೆ ಎದುರು ಸ್ಕೂಟಿರಿನ ವೇಗ ಜಾಸ್ತಿಯಾಗಿದ್ದು, ಸ್ಕೂಟರ್ ಪಲ್ಟಿಯಾಯಿತು. ಪರಿಣಾಮ ನೆಲಕ್ಕೆ ಬಿದ್ದ ಲಕ್ಷ್ಮೀ ನಾಯ್ಕ ಅವರು ಗಂಭೀರ ಪ್ರಮಾಣದಲ್ಲಿ ಗಾಯಗೊಂಡಿದ್ದರು. ಅವರನ್ನು ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ಕೊಡಿಸಲಾಯಿತು. ಆದರೆ, ಅದು ಪ್ರಯೋಜನಕ್ಕೆ ಬರಲಿಲ್ಲ. ಅಕ್ಟೊಬರ್ 20ರಂದು ಅವರು ಸಾವನಪ್ಪಿದರು. ಯಲ್ವಡಕವೂರಿನ ಸರ್ಪಕಟ್ಟಾ ಬಳಿಯ ಕ್ಯಾಂಟಿನ್ ಕೆಲಸಗಾರ ಗೋಪಾಲ ನಾರಾಯಣ ನಾಯ್ಕ ಅವರು ಈ ವಿಷಯದ ಬಗ್ಗೆ ಭಟ್ಕಳ ಪೊಲೀಸರಿಗೆ ತಿಳಿಸಿದ್ದು, ಪೊಲೀಸರು ಪ್ರಕರಣ ದಾಖಲಿಸಿದರು. - [ಸ್ಕೂಟಿಗೆ ಗುದ್ದಿದ ಟಿಪ್ಪರ್: ಸ್ಥಳದಲ್ಲಿಯೇ ಸಾವನಪ್ಪಿದ ಮಹಿಳೆ!](https://mobiletime.in/2025/10/tipper-hits-a-scooty-woman-dies-on-the-spot/): ಸೋಮವಾರ ಸಂಜೆ ಹಳಿಯಾಳದಲ್ಲಿ ಟಿಪ್ಪರ್ ಹಾಗೂ ಸ್ಕೂಟಿ ನಡುವೆ ಡಿಕ್ಕಿಯಾಗಿದ್ದು, ಮಹಿಳೆಯೊಬ್ಬರು ಸಾವನಪ್ಪಿದ್ದಾರೆ. ಹಳಿಯಾಳದ ಮಲವಡಿ ಗ್ರಾಮದಲ್ಲಿ ಈ ಅವಘಡ ನಡೆದಿದೆ. ದಾಂಡೇಲಿಯ ನವಗ್ರಾಮದ ನಾಗರಾಜ ಶಾಬಣ್ಣ ಕಾಂಬಳೆ ಅವರು ಟಿಪ್ಪರಿನಲ್ಲಿ ಬೂದಿ ಸಾಗಿಸುತ್ತಿದ್ದರು. ಮಲವಡಿಯ ಸುವರ್ಣ ಅಂತ್ರೋಳಕರ (30) ಅವರ ಜೊತೆ ಶೋಭಾ ಮಾರುತಿ ಕಶೀಲಕರ (38) ಮತ್ತು ಅವರಿಬ್ಬರ ಮಕ್ಕಳಾದ ಆರುಶ (5) ಹಾಗೂ ಗೋಕುಳ (3) ಸ್ಕೂಟಿಯಲ್ಲಿ ಸಂಚರಿಸುತ್ತಿದ್ದರು. ಆ ವೇಳೆ ಟಿಪ್ಪರ್ ಸ್ಕೂಟಿಗೆ ಗುದ್ದಿದ್ದು, ಡಿಕ್ಕಿಯ ರಭಸಕ್ಕೆ ಸುವರ್ಣ ಅಂತ್ರೋಳಕರ ತಲೆಗೆ ಹೋಳಾಯಿತು. ಕೈಗೆ ಸಹ ಗಂಭೀರವಾಗಿ ಗಾಯವಾಯಿತು. ಕಣ್ಣು ಮಿಟುಕಿಸುವಷ್ಟರಲ್ಲಿ ಸುವರ್ಣ ಅಂತ್ರೋಳಕರ್ ಅವರು ಅಲ್ಲಿಯೇ ಸಾವನ್ನಪ್ಪಿದರು. ಅಪಘಾತದ ಪರಿಣಾಮ ಶೋಭಾ ಮತ್ತು ಆರುಶ ಸಹ ಗಂಭೀರ ಪ್ರಮಾಣದಲ್ಲಿ ಗಾಯಗೊಂಡರು. ಅಪಘಾತದ ಸ್ಥಳಕ್ಕೆ ಪೊಲೀಸರ ಆಗಮನವಾಗಿದ್ದು, ಗಾಯಗೊಂಡವರನ್ನು ಸದ್ಯ ಹುಬ್ಬಳ್ಳಿಯ ಆಸ್ಪತ್ರೆಗೆ ಸಾಗಿಸಲಾಗಿದೆ. - [ಎರಡೂ ಕಾಲಿನ ಮೇಲೆ ಹತ್ತಿದ ಲಾರಿ ಚಕ್ರ: ಹೆದ್ದಾರಿ ಪೂರ್ತಿ ರಕ್ತ.. ರಕ್ತ!](https://mobiletime.in/2025/10/a-lorry-wheel-that-has-been-mounted-on-both-legs/): ಕಳೆದ ಒಂದು ದಶಕದಿಂದ ಅಂಕೋಲಾದ ಅವರ್ಸಾ ಹಾಗೂ ಸುತ್ತಲಿನ ಭಾಗದಲ್ಲಿ ಓಡಾಡಿಕೊಂಡಿದ್ದ ಪ್ರೇಮಾ ಅವರ ಕಾಲಿನ ಮೇಲೆ ಸೋಮವಾರ ಟ್ಯಾಂಕರ್ ಹತ್ತಿದೆ. ಪರಿಣಾಮ ಅವರ ಎರಡು ಕಾಲು ತುಂಡಾಗಿದೆ. ಪ್ರೇಮಾ ಅವರು ಮಾನಸಿಕ ಅಸ್ವಸ್ಥರಾಗಿದ್ದು, ಅನೇಕ ವರ್ಷಗಳಿಂದ ಅವರ್ಸಾದಲ್ಲಿ ಓಡಾಡಿಕೊಂಡಿದ್ದರು. ಸೋಮವಾರ ಮಧ್ಯಾಹ್ನ ಅವರು ಹೆದ್ದಾರಿಯಲ್ಲಿ ನಡೆದುಕೊಂಡು ಹೋಗುತ್ತಿದ್ದರು. ಕೆನರಾ ಬ್ಯಾಂಕಿನ ಎದುರಿನ ಪಾದಚಾರಿಗಳು ರಸ್ತೆ ದಾಡುವ ಜಾಗದಲ್ಲಿ ಟ್ಯಾಂಕರ್ ಅವರಿಗೆ ಗುದ್ದಿತು. ಪರಿಣಾಮ ಪ್ರೇಮಾ ಅವರು ನೆಲಕ್ಕೆ ಬಿದ್ದರು. ಅದಾಗಿಯೂ, ಅವರ ಕಾಲುಗಳ ಮೇಲೆ ಟ್ಯಾಂಕರ್ ಚಕ್ರ ಹತ್ತಿತು. ಅಲ್ಲಿದ್ದ ಆಂಬುಲೆನ್ಸ ಮೂಲಕ ಪ್ರೇಮಾ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತು. ತಾಲೂಕಾ ಆಸ್ಪತ್ರೆಯಿಂದ ಅವರನ್ನು ಜಿಲ್ಲಾಸ್ಪತ್ರೆಗೆ ಕಳುಹಿಸಲಾಗಿದ್ದು, ಶಿವಾ ನಾಯ್ಕ, ನಾಗರಾಜ ಐಗಳ ಇನ್ನಿತರರು ಪ್ರೇಮಾ ಅವರನ್ನು ಆಸ್ಪತ್ರೆಗೆ ಸಾಗಿಸಲು ಸಹಕರಿಸಿದರು. ಅವೈಜ್ಞಾನಿಕ ಕಾಮಗಾರಿ ಪರಿಣಾಮ ಪದೇ ಪದೇ ಇಲ್ಲಿ ಅಪಘಾತ ನಡೆಯುತ್ತಿದೆ ಎಂದು ಜನ ದೂರಿದರು. - [ಅತಿ ವೇಗ ತಂದ ಅನಾಹುತ: ಕಾರಿಗೆ ಗುದ್ದಿದ ಬೈಕು](https://mobiletime.in/2025/10/speeding-accident-bike-hits-car/): ಯಲ್ಲಾಪುರದ ಗೌತಮ ಕೋಟೆಮನೆ ಅವರ ಕಾರಿಗೆ ಅಂಕೋಲಾ ಹಳವಳ್ಳಿಯ ದೇವೇಂದ್ರ ಸಿದ್ದಿ ಅವರ ಬೈಕ್ ಡಿಕ್ಕಿಯಾಗಿದೆ. ಪರಿಣಾಮ ದೇವೇಂದ್ರ ಸಿದ್ದಿ ಅವರಿಗೆ ಪೆಟ್ಟಾಗಿದ್ದು, ಅವರ ವಿರುದ್ಧವೇ ಪೊಲೀಸ್ ಪ್ರಕರಣವೂ ದಾಖಲಾಗಿದೆ. ಯಲ್ಲಾಪುರದ ದೆಹಳ್ಳಿ ಬಳಿಯ ಕಟ್ಟಿಗೆಯವರಾದ ಗೌತಮ ಚಂದ್ರಶೇಖರ ಕೋಟೆಮನೆ ಅವರು ಬೆಂಗಳೂರಿನಲ್ಲಿರುವ ಆದರ್ಶ ಡೆವಲಪರ್ಸ ಕಂಪನಿಯಲ್ಲಿ ಕೆಲಸ ಮಾಡುತ್ತಾರೆ. ಹಬ್ಬದ ಅವಧಿಯಲ್ಲಿ ಅವರು ಊರಿಗೆ ಬಂದಿದ್ದು, ಭಾನುವಾರ ರಾತ್ರಿ ಅವರು ಅಂಕೋಲಾದಿAದ ಯಲ್ಲಾಪುರ ಕಡೆ ಕಾರು ಓಡಿಸುತ್ತಿದ್ದರು. ಬಳಗಾರ್ ಕ್ರಾಸಿನಿಂದ 2ಕಿಮೀ ಮುಂದೆ ಬಂದಾಗ ಇನ್ನೂ ನೋಂದಣಿ ಇಲ್ಲದ ಹೊಂಡಾ ಶೈನ್ ಬೈಕ್ ಅವರ ಕಾರಿಗೆ ಗುದ್ದಿತು. ರಸ್ತೆ ಎಡಬದಿಯಲ್ಲಿ ಚಲಿಸುತ್ತಿದ್ದ ಹಳ್ಳವಳ್ಳಿಯ ದೇವೇಂದ್ರ ನಾಗೇಶ ಸಿದ್ದಿ ಅವರು ತೀರಾ ಬಲಬದಿಗೆ ಬಂದು ತಮ್ಮ ಬೈಕನ್ನು ಕಾರಿಗೆ ಡಿಕ್ಕಿ ಹೊಡೆದರು. ಈ ಅಪಘಾತದಲ್ಲಿ ದೇವೇಂದ್ರ ಸಿದ್ದಿ ಅವರ ಹಣೆಗೆ ಪೆಟ್ಟಾಯಿತು. ಬೈಕಿನ ಜೊತೆ ಕಾರು ಅಲ್ಲಲ್ಲಿ ಜಖಂ ಆಯಿತು. ಈ ಅಪಘಾತದ ಬಗ್ಗೆ ಗೌತಮ ಕೋಟೆಮನೆ ಅವರು ತಮ್ಮ ತಂದೆ-ತಾಯಿ ಅವರಲ್ಲಿ ಹೇಳಿದ್ದು, ಅವರ ಸಲಹೆ ಪ್ರಕಾರ ಯಲ್ಲಾಪುರ ಪೊಲೀಸ್ ಠಾಣೆಗೆ ಬಂದರು. ನಡೆದ ಘಟನಾವಳಿಗಳ ಬಗ್ಗೆ ವಿವರಿಸಿ ಪ್ರಕರಣ ದಾಖಲಿಸಿದರು. ದೇವೇಂದ್ರ ಸಿದ್ದಿ ಅವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ. ಪೊಲೀಸರು ದೇವೇಂದ್ರ ಸಿದ್ದಿ ಅವರನ್ನು ಮಾತನಾಡಿಸಿದ್ದಾರೆ. - [ಚಲಿಸುವ ಬಸ್ಸಿನ ಚಾಲಕನಿಗೆ ಹೃದಯಘಾತ!](https://mobiletime.in/2025/10/the-driver-of-a-moving-bus-has-a-heart-attack/): ಪ್ರಯಾಣಿಕರನ್ನು ಕರೆದೊಯ್ಯುವ ಭಟ್ಕಳದ APM ಬಸ್ಸಿನ ಚಾಲಕ ಚಂದ್ರಶೇಖರ ಪೂಜಾರಿ ಅವರಿಗೆ ಹೃದಯಘಾತವಾಗಿದ್ದು, ತಕ್ಷಣ ಬಸ್ಸನ್ನು ಬದಿಗೆ ನಿಲ್ಲಿಸಿ ಅವರು ಪ್ರಾಣಬಿಟ್ಟಿದ್ದಾರೆ. ಭಟ್ಕಳದ ಮಣ್ಕುಳಿಯಲ್ಲಿ ವಾಸವಾಗಿರುವ ಚಂದ್ರಶೇಖರ ಸುಬ್ಬಣ್ಣ ಪೂಜಾರಿ ಅವರು ಕಳೆದ ವರ್ಷ ಹೃದಯ ಚಿಕಿತ್ಸೆಗೆ ಒಳಗಾಗಿದ್ದರು. ವಯಸ್ಸು 64 ಆದರೂ ಅವರು ತಮ್ಮ ಚಾಲಕ ಕೆಲಸದಿಂದ ನಿವೃತ್ತಿಪಡೆದಿರಲಿಲ್ಲ. ಹೃದಯ ಚಿಕಿತ್ಸೆ ನಂತರವೂ ಅವರು ಬಸ್ಸು ಚಾಲನೆ ಮಾಡುತ್ತಿದ್ದರು. ಸೋಮವಾರ ಸಹ ಮನೆಯಿಂದ ಹೊರಟ ಅವರು ಎಪಿಎಂ ಎಜನ್ಸಿಯ ಬಸ್ಸನ್ನು ಭಟ್ಕಳದ ಬಸ್ ನಿಲ್ದಾಣದವರೆಗೆ ಓಡಿಸಿಕೊಂಡು ಬಂದರು. ಆರೋಗ್ಯದಲ್ಲಿ ವ್ಯತ್ಯಾಸ ಕಾಣಿಸಿದ್ದರಿಂದ ಅವರು ಸರ್ಕಾರಿ ಬಸ್ ನಿಲ್ದಾಣದ ಎದುರಿನ ಖಾಸಗಿ ಬಸ್ ನಿಲ್ದಾಣದ ಬಳಿ ಬಸ್ ನಿಲ್ಲಿಸಿದರು. ಬಸ್ಸಿನ ಒಳಗೆ ಪ್ರಯಾಣಿಕರನ್ನು ಹತ್ತಿಸಿಕೊಳ್ಳುವಾಗದೇ ತೀವ್ರವಾದ ಹೃದಯಘಾತಕ್ಕೆ ಒಳಗಾದರು. ಅಲ್ಲಿಯೇ ಕುಸಿದು ಬಿದ್ದು ಸಾವನಪ್ಪಿದರು. ಬಸ್ಸಿನೊಳಗೆ ಪ್ರಯಾಣಕರು ತುಂಬಿದ ನಂತರ ಬಸ್ಸು ಚಲನೆಯಲ್ಲಿರುವಾಗ ಚಾಲಕನಿಗೆ ಹೃದಯಘಾತ ಆಗಿದ್ದರೆ ದೊಡ್ಡ ಅನಾಹುತ ನಡೆಯುತ್ತಿದ್ದು, ಚಂದ್ರಶೇಖರ ಪೂಜಾರಿ ಅವರ ಆರೋಗ್ಯದಲ್ಲಿನ ಏರುಪೇರಿನ ಮುನ್ಸೂಚನೆ ಅವಘಡವನ್ನು ತಪ್ಪಿಸಿತು. ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುವ ಯತೀಶ ಪೂಜಾರಿ ಅವರು ತಂದೆ ಸಾವಿನ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದರು. ಭಟ್ಕಳ ಶಹರ ಪೊಲೀಸರು ಪ್ರಕರಣ ದಾಖಲಿಸಿದರು. - [ಮೂರು ತಿಂಗಳಿoದ ಕೆಲಸ ಮಾಡದ ಅಧಿಕಾರಿ: ಹೆಸ್ಕಾಂ ನಿರ್ಲಕ್ಷ್ಯಕ್ಕೆ ಎರಡು ಜೀವ ಬಲಿ!](https://mobiletime.in/2025/10/officer-who-hasnt-worked-for-three-months-two-lives-lost-due-to-hescom-negligence/): ಹೊನ್ನಾವರದ ಸಂತೋಷ ಗೌಡ ಅವರ ಮನೆ ಅಂಗಳದಲ್ಲಿ ಅಪಾಯಕಾರಿ ರೀತಿ ವಿದ್ಯುತ್ ತಂತಿ ಹಾದುಹೋದ ಬಗ್ಗೆ ಮೂರು ತಿಂಗಳ ಹಿಂದೆಯೇ ಅರಿವಿದ್ದರೂ ಹೆಸ್ಕಾಂ ಅಧಿಕಾರಿ ರಾಮಕೃಷ್ಣ ಭಟ್ಟ ಅವರು ಬೇಜವಬ್ದಾರಿಯಿಂದ ವರ್ತಿಸಿದ್ದು, ಪರಿಣಾಮ ಭಾನುವಾರ ರಾತ್ರಿ ಎರಡು ಜೀವ ಬಲಿಯಾಗಿದೆ. ಅಪಾಯ ಆಗುವ ಮುನ್ಸೂಚನೆ ಇದ್ದ ಬಗ್ಗೆ ಹೇಳಿದರೂ ಬಾರದ ಕಾಸರಕೋಡಿನ ಲೈನ್‌ಮೆನ್ ಅಶೋಕ ಹಾಗೂ ಸೆಕ್ಷನ್ ಆಫಿಸರ್ ಪ್ರಸಾದ ಸಹ ಇದೀಗ ಮರುಕವ್ಯಕ್ತಪಡಿಸುತ್ತಿದ್ದಾರೆ. ಸಣ್ಣ-ಪುಟ್ಟ ಕೆಲಸ ಮಾಡಿಕೊಡಲು ಸಾಧ್ಯವಾಗದ ದೊಡ್ಡ ದೊಡ್ಡ ನಾಯಕರು ಸಾವಿನ ನಂತರ ಸ್ಥಳಕ್ಕೆ ಬಂದು ಅನುಕಂಪಗಿಟ್ಟಿಸಿಕೊಳ್ಳುವ ನಿಟ್ಟಿನಲ್ಲಿ ರಾಜಕೀಯ ಮಾಡುತ್ತಿದ್ದಾರೆ! ಹೊನ್ನಾವರ ಕಾಸರಕೋಡ ಬಟ್ಟೆ ವಿನಾಯಕ ಕೇರಿಯಲ್ಲಿ ಸಂತೋಷ ಗೌಡ ಹಾಗೂ ಸೀತು ಗೌಡ ದಂಪತಿ ತಮ್ಮ ಇಬ್ಬರು ಮಕ್ಕಳ ಜೊತೆ ವಾಸವಾಗಿದ್ದರು. ಅವರ ಮನೆ ಮುಂದೆ ಹಾದುಹೋದ ವಿದ್ಯುತ್ ತಂತಿ ಅಪಾಯಕಾರಿ ಸ್ಥಿತಿಯಲ್ಲಿದ್ದ ಬಗ್ಗೆ ಅವರು ಮೂರು ತಿಂಗಳ ಹಿಂದೆ ಮಾಹಿತಿ ನೀಡಿದ್ದರು.ಈ ಬಗ್ಗೆ ಗ್ರಾ ಪಂ ಸದಸ್ಯ ಚಂದ್ರಹಾಸ ಗೌಡ ಅವರಿಗೆ ವಿಷಯ ಮುಟ್ಟಿಸಿದ್ದು, ಚಂದ್ರಹಾಸ ಗೌಡ ಅವರು ಸಮಸ್ಯೆ ಬಗ್ಗೆ ಹೆಸ್ಕಾಂ ಅಭಿಯಂತರ ರಾಮಕೃಷ್ಣ ಭಟ್ಟ ಅವರಿಗೆ ಫೋನ್ ಮಾಡಿದ್ದರು. ಜೊತೆಗೆ ವಿದ್ಯುತ್ ತಂತಿಯ ಅಪಾಯ ತಪ್ಪಿಸುವಂತೆ ಕಾಸರಕೋಡಿನ ಲೈನ್‌ಮೆನ್ ಅಶೋಕ ಹಾಗೂ ಸೆಕ್ಷನ್ ಆಫಿಸರ್ ಪ್ರಸಾದ ಅವರಿಗೂ ಚಂದ್ರಹಾಸ ಗೌಡ ಅವರು ಮನವಿ ಮಾಡಿದ್ದರು. ಆದರೆ, ಸರ್ಕಾರಿ ಸಂಬಳಪಡೆಯುವ ಈ ಸಿಬ್ಬಂದಿ – ಅಧಿಕಾರಿ ಅದರ ಜೊತೆ ಬೇರೆ ನಿರೀಕ್ಷೆಯಲ್ಲಿದ್ದ ಕಾರಣ ಸುರಕ್ಷತಾ ಕ್ರಮ ಅನುಸರಿಸಿರಲಿಲ್ಲ. ಅಪಾಯದ ಬಗ್ಗೆ ಅರಿವಿದ್ದರೂ ಜನರ ಜೀವ ಉಳಿಸುವ ಕೆಸ ಮಾಡಿರಲಿಲ್ಲ. `ಅವರಿಗೆ ಅಷ್ಟು ಅರ್ಜಂಟ್ ಇದ್ದರೆ ಏನಾದರೂ ಕೊಟ್ಟು ಕೆಲಸ ಮಾಡಿಸಿಕೊಳ್ಳುತ್ತಾರೆ’ ಎಂದು ಎಂಜಲು ಕಾಸಿಗೆ ಆಸೆಪಡುತ್ತಿದ್ದರು. ಹೀಗಾಗಿಯೇ ಮೂರು ತಿಂಗಳು ಕಳೆದರೂ ಅಪಾಯಕಾರಿ ಸ್ಥಿತಿಯಲ್ಲಿದ್ದ ತಂತಿ ಬದಲಿಸುವ ಕೆಲಸಕ್ಕೆ ಯಾರೂ ಹೋಗಿರಲಿಲ್ಲ. ತುರ್ತು ದುರಸ್ಥಿಯನ್ನು ಮಾಡಿರಲಿಲ್ಲ. ಸ್ಥಳೀಯ ಜನಪ್ರತಿನಿಧಿಯಾಗಿರುವ ಚಂದ್ರಹಾಸ ಗೌಡ ಅವರು ಸಹ ಪದೇ ಪದೇ ಫೋನ್ ಮಾಡಿ ಒತ್ತಾಯಿಸುವುದನ್ನು ಬಿಟ್ಟಿರಲಿಲ್ಲ. ಆದರೆ, ಅವರ ಮಾತಿಗೆ ಹೆಸ್ಕಾಂ ಅಧಿಕಾರಿಗಳು ಮಾತ್ರ ಬೆಲೆ ಕೊಡಲಿಲ್ಲ. ಭಾನುವಾರ ರಾತ್ರಿ ದಿಢೀರ್ ಆಗಿ ಅಪಾಯಕಾರಿ ರೀತಿಯಲ್ಲಿದ್ದ ವಿದ್ಯುತ್ ತಂತಿ ತುಂಡಾಗಿ ಬಿದ್ದಿತು. ಅದನ್ನು ಗಮನಿಸದೇ ತಂತಿ ಸ್ಪರ್ಶಿಸಿದ ಸಂತೋಷ ಗೌಡ ಹಾಗೂ ಸೀತು ಗೌಡ ಅಲ್ಲಿಯೇ ತಮ್ಮ ಪ್ರಾಣಬಿಟ್ಟರು. ಅವರ ಮಗ ನಾಗರಾಜ ಗೌಡ ಸಹ ವಿದ್ಯುತ್ ಆಘಾತದಿಂದ ಆಸ್ಪತ್ರೆ ಸೇರಿದರು. ಈ ವೇಳೆ ವಿದ್ಯುತ್ ಸರಬರಾಜು ಸ್ಥಗಿತಗೊಳಿಸುವಂತೆ ಅಲ್ಲಿದ್ದ ಗಣಪತಿ ಗೌಡ ಅವರು ಹೆಸ್ಕಾಂ ಗ್ರಿಡ್’ಗೆ ಫೋನ್ ಮಾಡಿದರು. ಆದರೆ, ಅಲ್ಲಿಯೂ ಫೋನ್ ಸ್ವೀಕರಿಸುವವರು ಸಹ ಗತಿಯಿರಲಿಲ್ಲ. ಹೀಗಾಗಿ ಸಂತೋಷ ಗೌಡ ಹಾಗೂ ಸೀತು ಗೌಡ ಸಾವಿನ ನಂತರವೂ ವಿದ್ಯುತ್ ಆಘಾತ ಅನುಭವಿಸಿದರು. ಸಣ್ಣಪುಟ್ಟ ಕೆಲಸಗಳನ್ನು ಮಾಡಿಕೊಡಲು ಸಾಧ್ಯವಾಗದ ದೊಡ್ಡ ದೊಡ್ಡ ನಾಯಕರು ಸೋಮವಾರ ಆಸ್ಪತ್ರೆಗೆ ದೌಡಾಯಿಸಿದರು. ಆಡಳಿತ ಪಕ್ಷದಲ್ಲಿರುವವರು ನೊಂದವರಿಗೆ ಸಾಂತ್ವಾನ ಹೇಳಿದರು. ವಿರೋಧ ಪಕ್ಷದಲ್ಲಿರುವವರು ಸರ್ಕಾರದ ನಡೆಯನ್ನು ಖಂಡಿಸಿದರು. ಆದರೆ, ಎರಡು ಜೀವ ಹೋದರೂ ಅದಕ್ಕೆ ಕಾರಣರಾದವರ ವಿರುದ್ಧ ಕ್ರಮ ಕೈಗೊಳ್ಳುವ ಜವಾಬ್ದಾರಿ ತೆಗೆದುಕೊಳ್ಳುವವರು ಯಾರೂ ಕಾಣಲಿಲ್ಲ. ಅಕ್ಕ-ಬಾವನ ಶವದ ಮುಂದೆ ಮಲ್ಲಾಮಸ್ತಿಕೇರಿಯ ಆಟೋ ಚಾಲಕ ಸುಬ್ರಾಯ ಗೌಡ ಕಣ್ಣೀರು ಸುರಿಸುತ್ತಿದ್ದರು. - [ಶಾಲ್ಮಲಾ ಉಳಿಸಿ | ಶ್ರೀಗಳ ಆಶೀರ್ವಾದ: ದೇವರ ಅನುಗ್ರಹ!](https://mobiletime.in/2025/10/save-shalmala-blessings-of-the-lord-gods-grace/): ಸರ್ಕಾರದ ಅವೈಜ್ಞಾನಿಕ ಯೋಜನೆಗಳಲ್ಲಿ ಒಂದಾದ ಬೇಡ್ತಿ-ವರದಿ ಜೋಡಣೆ ವಿಷಯದ ಹೋರಾಟದ ಕಾವು ಜೋರಾಗಿದೆ. ಭಾನುವಾರದ ಸಮಾವೇಶ ಯಶಸ್ವಿಯಾದ ಬೆನ್ನಲ್ಲೆ ಸೋಮವಾರ ಮತ್ತೆರಡು ಬೆಳವಣಿಗೆ ನಡೆದಿದೆ. `ನದಿ ಹರಿವು ಅರಿವು’ ಎಂಬ ವಿಷಯವಾಗಿ ಜನರಲ್ಲಿ ಜಾಗೃತಿ ಮೂಡಿಸುವುದಕ್ಕಾಗಿ ಸಮಾನ ಮನಸ್ಕರು ಅಕ್ಟೊಬರ್ 25ರಿಂದ ಮೂರು ದಿನದ ಪಾದಯಾತ್ರೆ ಆಯೋಜಿಸಿದ್ದು, ಈ ದಿನ ಸ್ವರ್ಣವಲ್ಲಿ ಶ್ರೀಗಳ ಬಳಿ ಈ ವಿಷಯವಾಗಿ ಚರ್ಚಿಸಿದ್ದಾರೆ. ಅದರೊಂದಿಗೆ ಯಲ್ಲಾಪುರದ ಬೇಡ್ತಿ ನದಿ ಅಂಚಿನಲ್ಲಿರುವ ಹುಲಿಯಪ್ಪನ ಕಟ್ಟೆಯಲ್ಲಿ `ಈ ಹೋರಾಟ ಯಶಸ್ವಿಯಾಗಲಿ’ ಎಂದು ಪ್ರಾರ್ಥಿಸಿ ಸಾವಿರಕ್ಕೂ ಅಧಿಕ ಜನ ಪ್ರಾರ್ಥನೆ ಸಲ್ಲಿಸಿದ್ದಾರೆ. ಶ್ರೀಗಳ ಆಶೀರ್ವಾದ ಹಾಗೂ ದೇವರ ಅನುಗ್ರಹದಲ್ಲಿ ಈ ಹೋರಾಟ ಮುಂದುವರೆದಿದೆ. ಈ ದಿನ ಬೇಡ್ತಿ ಸೇತುವೆಯ ಬಳಿ ಇರುವ ಹೊಳೆ ಹುಲಿಯಪ್ಪ ದೇವರಿಗೆ ಸುತ್ತಮುತ್ತಲಿನ ಸಾವಿರಾರು ಜನರು ಭಕ್ತರು ಆಗಮಿಸಿ ಹಣ್ಣುಕಾಯಿ ಸೇವೆ ಸಲ್ಲಿಸಿದ್ದಾರೆ. ದೀಪಾವಳಿ ಹಬ್ಬದ ಅಂಗವಾಗಿ ಹೊಳೆ ಹುಲಿಯಪ್ಪ ದೇವರಿಗೆ ನೈವೇದ್ಯಕ್ಕೆಂದು ಸಾಲು ಸಾಲು ತೆಂಗಿನ ಕಾಯಿಗಳನ್ನು ಒಡೆದು ದನ-ಕರು ರಕ್ಷಣೆಗಾಗಿ ಪ್ರಾರ್ಥಿಸಿದ್ದಾರೆ. `ಪ್ರಸ್ತಾಪಿತ ಬೇಡ್ತಿ-ವರದಾ ನದಿ ಜೋಡಣೆ ಯೋಜನೆ ಅನುಷ್ಠಾನ ಆಗದ ರೀತಿಯಲ್ಲಿ ಅನುಗ್ರಹ ಮಾಡು’ ಎಂದು ಆ ಭಗವಂತನಲ್ಲಿ ಅರ್ಚಕ ಶಿವರಾಮ ಭಾಗ್ವತ ಮಣ್ಕುಳಿ ಅವರು ಕೇಳಿಕೊಂಡಿದ್ದಾರೆ. ಜೊತೆಗೆ `ಪರಿಸರ ನಾಶವಾಗುವ ಯೋಜನೆಯ ಅನುಷ್ಠಾನ ಬೇಡ. ಅಧಿಕಾರದಲ್ಲಿರುವವರಿಗೆ ಇಂತಹ ಯೋಜನೆ ರದ್ಧು ಮಾಡುವ ಬುದ್ದಿ ಬರಲಿ’ ಎಂದು ನೆರೆದವರು ಬೇಡಿಕೊಂಡರು. ಅದೇ ವೇಳೆ ಹುಲಿಯಪ್ಪ ದೇವರಿಂದ ಪ್ರಸಾದ ಅನುಗ್ರಹವಾಗಿದ್ದು, ಭಕ್ತರು ಹರ್ಷವ್ಯಕ್ತಪಡಿಸಿದರು. ಯೋಜನೆ ಅನುಷ್ಠಾನಗೊಂಡರೆ ಆಗುವ ದುಷ್ಪರಿಣಾಮಗಳು, ಜನರಿಗೆ, ಪ್ರಕೃತಿಗೆ ಆಗುವ ತೊಂದರೆಗಳನ್ನು ಅಲ್ಲಿದ್ದ ಪರಿಸರ ತಜ್ಞರು ಜನರಿಗೆ ವಿವರಿಸಿದರು. - [ಅಂತ್ಯಕ್ರಿಯೆ ಮಾಡುವವನ ಬದುಕು ಅಂತ್ಯ!](https://mobiletime.in/2025/10/the-life-of-the-funeral-director-is-over/): ಶಿರಸಿಯಲ್ಲಿ ಸಾವನಪ್ಪಿದವರ ಶವ ಸ್ಮಶಾನಕ್ಕೆ ಬಂದಾಗ ಅವರ ಅಂತ್ಯಕ್ರಿಯೆಗೆ ಸಹಕರಿಸುತ್ತಿದ್ದ ಗಣಪತಿ ಮಡಿವಾಳ ಅವರ ಬದುಕು ಅಂತ್ಯವಾಗಿದೆ. ಅಲ್ಪಕಾಲದ ಅನಾರೋಗ್ಯದ ಪರಿಣಾಮ 42ನೇ ವಯಸ್ಸಿನಲ್ಲಿಯೇ ಅವರು ಭೂ ಲೋಕದ ಯಾತ್ರೆ ಮುಗಿಸಿದ್ದಾರೆ. ಶಿರಸಿಯ ಮುಖ್ಯ ಪ್ರದೇಶದಲ್ಲಿರುವ ಸ್ಮಶಾನ ಹಾಳು ಬಿದ್ದಿತ್ತು. ಅದನ್ನು ಸಮಾನ ಮನಸ್ಕರ ಸಂಘಟನೆಯವರು ಮತ್ತೆ ಸಿದ್ಧಪಡಿಸಿದ್ದರು. ಅಲ್ಲಿಯೇ `ನೆಮ್ಮದಿ ಕುಟೀರ’ ಎಂಬ ಸಾಹಿತ್ಯ-ಸಂಘಟನೆಯ ದಾಮವನ್ನು ಸ್ಥಾಪಿಸಿದ್ದರು. ಅಲ್ಲಿನ ಸ್ಮಶಾನ ಭೂಮಿಯಲ್ಲಿ ಗಣಪತಿ ಮಡಿವಾಳ ಅವರು ಕಳೆದ 9 ವರ್ಷಗಳಿಂದ ಶ್ರಮಿಸುತ್ತಿದ್ದರು. ಆಪ್ತರು ಸಾವನಪ್ಪಿದ ದುಖಃದಲ್ಲಿರುವವರಿಗೆ ಗಣಪತಿ ಮಡಿವಾಳ ಅವರು ಸಮಾಧಾನ ಮಾಡುತ್ತಿದ್ದರು. ಅವರ ಮನಸ್ಸಿಗೆ ನೋವಾಗದ ರೀತಿಯಲ್ಲಿ ಅಂತ್ಯಕ್ರಿಯೆಗೆ ಸಕಲ ವ್ಯವಸ್ಥೆ ಮಾಡಿಕೊಡುತ್ತಿದ್ದರು. ಗಣಪತಿ ಮಡಿವಾಳ ಅವರು ತಮಗೆ ಒಪ್ಪಿಸಿದ ಕೆಲಸವನ್ನು ಅತ್ಯಂತ ನಿಷ್ಟೆ ಹಾಗೂ ಅಚ್ಚುಕಟ್ಟಾಗಿ ಮಾಡಿ ಮುಗಿಸುತ್ತಿದ್ದರು. ನೆಮ್ಮದಿ ಕುಟೀರ ರಾಜ್ಯಕ್ಕೆ ಮಾದರಿಯಾಗಿ ಗುರುತಿಸಿಕೊಳ್ಳುವಲ್ಲಿ ಗಣಪತಿ ಮಡಿವಾಳ ಅವರ ಶ್ರಮವೂ ಅಪಾರವಾಗಿತ್ತು. ಈ ನಡುವೆ ಗಣಪತಿ ಮಡಿವಾಳ ಅವರು ಅನಾರೋಗ್ಯಕ್ಕೆ ಒಳಗಾದರು. ಕಲಗೋಡ ಊರಿನವರಾಗಿದ್ದ ಅವರು ಮಳಲಗಾಂವಿನಲ್ಲಿರುವ ತಮ್ಮ ಸಹೋದರಿ ಮನೆಯಲ್ಲಿ ಆರೈಕೆಯಲ್ಲಿದ್ದರು. ಸೋಮವಾರ ಅವರು ಅಲ್ಲಿಯೇ ತಮ್ಮ ಕೊನೆಯ ಉಸಿರೆಳೆದರು. ನೆಮ್ಮದಿ ರುದಭೂಮಿಯ ಉಸ್ತುವಾರಿ ವಿ ಪಿ ಹೆಗಡೆ ಮತ್ತು ಜೀವಜಲ ಕಾರ್ಯಪಡೆಯ ಅಧ್ಯಕ್ಷ ಶ್ರೀನಿವಾಸ ಹೆಬ್ಬಾರ್ ಅವರು ಗಣಪತಿ ಮಡಿವಾಳ ಅವರ ಸೇವೆ ಸ್ಮರಿಸಿದರು. - [ತಿರುವಿನಲ್ಲಿ ತಿರುಗಿಬಿದ್ದ ಬಸ್ಸು!](https://mobiletime.in/2025/10/the-bus-overturned-on-a-bend/): ಪ್ರವಾಸಿಗರು ತುಂಬಿದ್ದ ಬಸ್ಸು ಸಿದ್ದಾಪುರದಲ್ಲಿ ಪಲ್ಟಿಯಾಗಿದೆ. ಪರಿಣಾಮ ಬಸ್ಸಿನಲ್ಲಿದ್ದ 21 ಪ್ರಯಾಣಿಕರು ಪೆಟ್ಟು ಮಾಡಿಕೊಂಡಿದ್ದಾರೆ. ಅಕ್ಟೊಬರ್ 19ರಂದು ತುಮಕೂರಿನ ಮನುಪ್ರಸಾದ ಅವರು ಖಾಸಗಿ ಬಸ್ಸು ಓಡಿಸುತ್ತಿದ್ದರು. ಈ ಬಸ್ಸಿನಲ್ಲಿ ಚಿಕ್ಕಬಳ್ಳಾಪುರದ ಜನರಿದ್ದು, ಅವರೆಲ್ಲರೂ ಸಿಗಂದೂರು ಪ್ರವಾಸ ಮಾಡಿದ್ದರು. ದೇವಿ ದರ್ಶನದ ನಂತರ ಅವರೆಲ್ಲರೂ ಜೋಗ ಜಲಪಾತ ವೀಕ್ಷಣೆ ಮಾಡುವವರಿದ್ದರು. ಅದಾದ ನಂತರ ವಡನಬೈಲಿನ ಬಳೆಪದ್ಮಾವತಿ ಅಮ್ಮನವರ ದೇವಾಲಯಕ್ಕೆ ತೆರಳಲು ಉದ್ದೇಶಿಸಿದ್ದರು. ಆದರೆ, ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ತಾಳಗುಪ್ಪ-ಹೊನ್ನಾವರ ರಸ್ತೆಯಲ್ಲಿ ತೆರಳುವಾಗ ಬಸ್ಸಿನ ಬ್ರೆಕ್ ಕೈ ಕೊಟ್ಟಿತು. ತಿರುವುಗಳಿಂದ ಕೂಡಿದ ದಾರಿಯಲ್ಲಿ ಬಸ್ಸು ತಿರುಗಿ ಬಿದ್ದಿತು. ಸಿದ್ದಾಪುರ ತಾಲೂಕಿನ ಜೋಗಿನಮಠ ಬಳಿ ತಿರುವಿನಲ್ಲಿ ಎಡಮಗ್ಗುಲಾಗಿ ಬಸ್ಸು ಪಲ್ಟಿ ಹೊಡೆಯಿತು. ಬಸ್ಸು ಓಡಿಸುತ್ತಿದ್ದ ಮನುಪ್ರಸಾದ ಅವರು ಪೆಟ್ಟು ಮಾಡಿಕೊಂಡರು. ಇದರೊಂದಿಗೆ ಬಸ್ಸಿನ ಒಳಗಿದ್ದ 20 ಪ್ರಯಾಣಿಕರು ಗಾಯಗೊಂಡರು. ಬಸ್ಸು ಚಾಲಕನ ಅತಿವೇಗ ಅಪಘಾತಕ್ಕೆ ಕಾರಣ ಎಂದು ಚಿಕ್ಕಬಳ್ಳಾಪುರದ ಪ್ರಯಾಣಿಕರ ಅಶ್ವತಪ್ಪ ಮನೆಗಾರ ಅವರು ದೂರಿದರು. ಈ ಬಗ್ಗೆ ಅವರು ಸಿದ್ದಾಪುರ ಪೊಲೀಸ್ ಠಾಣೆಗೆ ತೆರಳಿ ಚಾಲಕನ ವಿರುದ್ಧ ಪ್ರಕರಣ ದಾಖಲಿಸಿದರು. - [ಕಿಮ್ಸ್ ನಿರ್ದೇಶಕರಿಗೆ ಅನುಭವ ಕೊರತೆ: ಜನಶಕ್ತಿ ವೇದಿಕೆ ತರಾಟೆ!](https://mobiletime.in/2025/10/kims-director-lacks-experience-janshakti-forum-slams/): ಸಾಕಷ್ಟು ಹೋರಾಟದ ನಂತರ ಕಾರವಾರಕ್ಕೆ ವೈದ್ಯಕೀಯ ವಿಜ್ಞಾನ ಕಾಲೇಜು ಬಂದಿದ್ದು, ಸದ್ಯ ಅಲ್ಲಿ ನಿರ್ದೇಶಕರಾಗಿರುವ ಡಾ ಪೂರ್ಣಿಮಾ ಅವರಿಗೆ ಅನುಭವ ಕೊರತೆ ಕಾಡುತ್ತಿದೆ. ಸಿಬ್ಬಂದಿ ಮೇಲಿನ ನಿಯಂತ್ರಣ ಇಲ್ಲದ ಕಾರಣ ಸಂಸ್ಥೆಯ ಆಡಳಿತ ಅಸ್ತವ್ಯಸ್ತವಾಗಿದೆ ಕಾರವಾರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಪ್ರಭಾರ ನಿರ್ದೇಶಕಿ ಡಾ ಪೂರ್ಣಿಮಾ ಅವರಿಗೆ ಸಂಸ್ಥೆ ಹಾಗೂ ಸಂಸ್ಥೆಯ ಸಿಬ್ಬಂದಿಗಳ ಮೇಲೆ ಹಿಡಿತ ಇಲ್ಲದ ಬಗ್ಗೆ ಜನಶಕ್ತಿ ವೇದಿಕೆಯ ಅಧ್ಯಕ್ಷ ಮಾಧವ ನಾಯಕ ಬೇಸರವ್ಯಕ್ತಪಡಿಸಿದ್ದಾರೆ. `ಕರಾವಳಿಯಲ್ಲಿರುವ ಏಕೈಕ ಸರ್ಕಾರಿ ಮೆಡಿಕಲ್ ಕಾಲೇಜು ಉಳಿಸಿಕೊಳ್ಳಲು ಮತ್ತೆ ಹೋರಾಟ ಅನಿವಾರ್ಯ’ ಎಂಬ ಅರ್ಥದಲ್ಲಿ ಮಾಧವ ನಾಯಕ ಅವರು ಮಾತನಾಡಿದ್ದಾರೆ. `ಕಿಮ್ಸ್’ಗೆ ಬರುವ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗಿದೆ. ವರ್ಷದಿಂದ ವರ್ಷಕ್ಕೆ ಇಲ್ಲಿ ದಾಖಲಾತಿ ಪ್ರಮಾಣ ಇಳಿಕೆಯಾಗುತ್ತಿದೆ’ ಎಂದು ಮಾಧವ ನಾಯಕ ಆತಂಕವ್ಯಕ್ತಪಡಿಸಿದ್ದಾರೆ. `ಇಲ್ಲಿನ ಕೆಲ ತಜ್ಞ ವೈದ್ಯರು ರಾಜೀನಾಮೆ ಕೊಟ್ಟು ಹೋಗಿದ್ದಾರೆ. ಇತ್ತೀಚೆಗೆ ಮೀನಿನ ಮುಳ್ಳು ಹೊಟ್ಟೆಗೆ ತಗುಲಿ ಮೀನುಗಾರ ಯುವಕನೊಬ್ಬ ಸಾವನಪ್ಪಿದ್ದು, ಅದಕ್ಕೆ ಸಹ ಕಿಮ್ಸ್ ಸಿಬ್ಬಂದಿ ಲೋಪ ಕಾರಣ’ ಎಂದವರು ವಿಶ್ಲೇಷಿಸಿದ್ದಾರೆ. `ನಿರ್ದೇಶಕರು ಗೃಹ ವೈದ್ಯರುಗಳ (ಇಂಟರ್ನ್ಸ್ ವೈದ್ಯರು) ಮೇಲೆ ಅವಲಂಬಿತರಾಗಿ ಸಂಸ್ಥೆಯ ಆಸ್ಪತ್ರೆಯನ್ನು ನಡೆಸುತ್ತಿರುವಂತೆ ಭಾಸವಾಗುತ್ತಿದೆ. ಅದೇ ಗೃಹ ವೈದ್ಯರುಗಳಿಗೆ ಪ್ರತಿ ತಿಂಗಳು ಬರುತ್ತಿದ್ದ 30 ಸಾವಿರ ರೂ ಸ್ಟೈಫಂಡ್ ಕಳೆದ ಎರಡೂವರೆ ತಿಂಗಳಿoದ ಬಂದಿಲ್ಲ. ಹೀಗಾಗಿ ಅವರಿಗೆ ದೀಪಾವಳಿ ಹಬ್ಬದ ಸಡಗರವೂ ಇಲ್ಲ’ ಎಂದು ಮಾಧವ ನಾಯಕ ಅವರು ಮಾಹಿತಿ ನೀಡಿದ್ದಾರೆ. `ಈ ಬಗ್ಗೆ ಕೇಳಿದರೆ ಸರ್ಕಾರ ಹಣ ಬಿಡುಗಡೆ ಮಾಡಿಲ್ಲ. ನಮ್ಮ ಕೈನಲ್ಲಿ ಏನು ಇಲ್ಲ ಎನ್ನುತ್ತಾರೆ. ಈ ಬಗ್ಗೆ ವೈದ್ಯಕೀಯ ಶಿಕ್ಷಣ ಸಚಿವರಿಗೂ ತಿಳಿಸಿದ್ದಾಗಿ ಹೇಳಿದಾಗ ಮಾತು ಬದಲಿಸಿ, ‘ಬೇರೆ ಕಡೆಯಿಂದ ನಿಂದ ಪಾವತಿ ಮಾಡುತ್ತೇವೆ ಅಂತ ಸಬೂಬು ಹೇಳುತ್ತಾರೆ. ಇಷ್ಟೇ ಅಲ್ಲದೇ, ಗೃಹ ವೈದ್ಯರುಗಳಿಗೆ ಮೊದಲು ತಿಂಗಳಿಗೆ ಇದ್ದ ಒಂದು ಸಾವಿರ ರೂ. ಹಾಸ್ಟೆಲ್ ಫೀಸ್, ನಿರ್ದೇಶಕರು ಬದಲಾದ ಬಳಿಕ ಎರಡು ಸಾವಿರಕ್ಕೆ ಏರಿದೆ. ಇದನ್ನು ಕೇಳಿದರೂ ಹಾವೇರಿಯಲ್ಲಿ ಹೇಗೆ ಮಾಡಿದ್ದರೋ ಆ ರೀತಿ ಮಾಡಲು ಸರ್ಕಾರ ಹೇಳಿದೆ ಅದರಂತೆ ಮಾಡುತ್ತಿದ್ದೇವೆ ಎನ್ನುತ್ತಾರೆ. ಆದರೆ, ಹಾವೇರಿಯ ಕಾಲೇಜಿನ ನಿರ್ದೇಶಕರಾದ ಡಾ ಪ್ರದೀಪ್ ಅವರನ್ನು ಈ ಬಗ್ಗೆ ಫೋನಾಯಿಸಿ ಕೇಳಿದರೆ, ಅಲ್ಲಿ ಹಾಸ್ಟೆಲ್ ಫೀಸ್ ಪ್ರತಿ ತಿಂಗಳು 1200 ಇದೆ’ ಎಂಬ ಮಾಹಿತಿಯನ್ನು ಮಾಧವ ನಾಯಕ ಅವರು ರಿಯಾಲಿಟ್ ಚೆಕ್ ಮೂಲಕ ಕಂಡುಕೊoಡಿದ್ದಾರೆ. ಹುಬ್ಬಳ್ಳಿ ಕಾಲೇಜಿನ ಡಾ.ಈಶ್ವರ್ ಹೊಸ್ಮನಿ, ಬೆಳಗಾವಿ ಕಾಲೇಜಿನ ಡಾ ಅಶೋಕಕುಮಾರ್ ಶೆಟ್ಟಿ ಅವರಿಗೂ ಮಾಧವ ನಾಯಕ ಅವರು ಫೋನ್ ಮಾಡಿದ್ದು, ಅಲ್ಲಿಯೂ 1,200 ರೂಪಾಯಿಗಳಿಗಿಂತ ಕಡಿಮೆಯಿರುವುದು ಗೊತ್ತಾಗಿದೆ. - [ಸಂಬಳದಲ್ಲಿ ಏರಿಕೆ-ಖರೀದಿಯಲ್ಲಿ ಡಿಸ್ಕೋಂಟ್: ಈ ಸೌಲಭ್ಯ ಸರ್ಕಾರಿ ನೌಕರರಿಗೆ ಮಾತ್ರ!](https://mobiletime.in/2025/10/salary-hike-discount-on-purchases-this-facility-is-only-for-government-employees/): ಸರ್ಕಾರಿ ನೌಕರರ ಕ್ಷೇಮಾಭಿವೃದ್ಧಿಗಾಗಿ ಶ್ರಮಿಸುತ್ತಿರುವ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ರಾಜ್ಯದ ನೌಕರರಿಗೂ ಕೇಂದ್ರ ಸರ್ಕಾರದ ವೇತನ ಶ್ರೇಣಿ ಜಾರಿಗೆ ತರಲು ಶ್ರಮಿಸುತ್ತಿದೆ. `2026-27ರ ಅಂತ್ಯದೊಳಗೆ ಆ ಉದ್ದೇಶ ಈಡೇರಲಿದೆ’ ಎಂದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ ಎಸ್ ಷಡಾಕ್ಷರಿ ಹೇಳಿದ್ದಾರೆ. ಕಾರವಾರಕ್ಕೆ ಭೇಟಿ ನೀಡಿದ್ದ ಅವರು `ಸರ್ಕಾರಿ ನೌಕರರಿಗಾಗಿ ಮಿಲಿಟರಿ ಕ್ಯಾಂಟಿನ್ ಮಾದರಿಯ ಮಳಿಗೆ ನಿರ್ಮಿಸುತ್ತಿದ್ದು, ಅಲ್ಲಿ ಗೃಹಪಯೋಗಿ ವಸ್ತುಗಳು ಸೇರಿದಂತೆ ವಿವಿಧ ವಸ್ತುಗಳ ಖರೀದಿಗೆ ಶೇ 25ರಷ್ಟು ರಿಯಾಯತಿ ನೀಡಲಾಗುತ್ತದೆ. ಎಂಎಸ್‌ಐಎಲ್ ಮುಖಾಂತರ ಕ್ಯಾಂಟಿನ್ ಯೋಜನೆ ರೂಪಿಸಲಾಗುತ್ತಿದ್ದು, ಮೊದಲ ಹಂತದಲ್ಲಿ ಬೆಂಗಳೂರಿನಲ್ಲಿ ಅದು ಜಾರಿಗೆ ಬರಲಿದೆ. ನಂತರ ಎಲ್ಲಾ ಜಿಲ್ಲೆಗಳಲ್ಲಿಯೂ ಕ್ಯಾಂಟಿನ್ ಯೋಜನೆ ವಿಸ್ತರಣೆ ಮಾಡುತ್ತೇವೆ’ ಎಂದು ಘೋಷಿಸಿದ್ದಾರೆ. `ಸರ್ಕಾರಿ ನೌಕರರಿಗೆ ಹಬ್ಬದ ಮುಂಗಡವನ್ನು 25ಸಾವಿರದಿಂದ 50 ಸಾವಿರದವರೆಗೆ ಹೆಚ್ಚಳ, ಎನ್‌ಪಿಎಸ್ ಬದಲಾಗಿ ಒಪಿಎಸ್ ಜಾರಿಗೆ ತರುವ ಬಗ್ಗೆ ಸಂಘ ಸತತವಾಗಿ ಪ್ರಯತ್ನಿಸುತ್ತಿದೆ’ ಎಂದವರು ಹೇಳಿದ್ದಾರೆ. ಜೊತೆಗೆ `ರಾಜ್ಯದ ನೌಕರರು ನೆಮ್ಮದಿಯಂದ ಇರುವಂತೆ ಮಾಡುವುದು ಸಂಘದ ಕರ್ತವ್ಯವಾಗಿದೆ’ ಎಂದು ಪುನರುಚ್ಚರಿಸಿದ್ದಾರೆ. `ಸರ್ಕಾರಿ ನೌಕರರು ಕರ್ತವ್ಯದಲ್ಲಿರುವಾಗ ಮರಣ ಹೊಂದಿದರೆ 1 ಕೋಟಿ ರೂ ವಿಮೆ ದೊರೆಯುವ ಸ್ಯಾಲರಿ ಪ್ಯಾಕೇಜ್ ಜಾರಿಗೆ ತರಲಾಗಿದೆ. ಆರೋಗ್ಯ ಸಂಜೀವಿನಿ ಯೋಜನೆ ಅಕ್ಟೋಬರ್ 1ರಿಂದ ಜಾರಿಗೆ ತರಲಾಗಿದ್ದು, ಮೊದಲ ಹಂತದಲ್ಲಿ ಒಳರೋಗಿಗಳಾಗಿ ಹಾಗೂ ಮುಂದಿನ ದಿನಗಳಲ್ಲಿ ಹೊರ ರೋಗಿ ಸೌಲಭ್ಯ ಪಡೆಯಲು ಕ್ರಮವಹಿಸಲಾಗಿದೆ. ಮಹಿಳಾ ನೌಕರರು ತಮ್ಮ ತಂದೆ ತಾಯಿಗಳನ್ನು ಈ ಯೋಜನೆಗೆ ಸೇರಿಸಲು ಅವಕಾಶ ನೀಡಲಾಗಿದೆ’ ಎಂದವರು ಹೇಳಿದ್ದಾರೆ. `ಮಹಿಳೆಯರಿಗೆ ಋತುಚಕ್ರದ ಸಂದರ್ಭದಲ್ಲಿ ಪ್ರತಿ ತಿಂಗಳು 1 ರಂತೆ ವರ್ಷಕ್ಕೆ 12 ವಿಶೇಷ ಸಾಂದರ್ಭಿಕ ರಜೆಯನ್ನು ನೀಡುವಂತೆ ಕೋರಿದ ಸಂಘದ ಮನವಿಗೆ ಸ್ಪಂದಿಸಿದ ಸರ್ಕಾರವು ಸಚಿವ ಸಂಪುಟದಲ್ಲಿ ಇದಕ್ಕೆ ಅನುಮೋದನೆ ನೀಡಿದೆ. ಇನ್ನು ಕೆಲವೇ ದಿನಗಳಲ್ಲಿ ಅಧಿಕೃತ ಆದೇಶ ಸರ್ಕಾರ ಹೊರಡಿಸಲಿದ್ದು, ಇದರಿಂದ ರಾಜ್ಯದಲ್ಲಿ 2 ಲಕ್ಷ 25 ಸಾವಿರ ಮಹಿಳಾ ನೌಕರರಿಗೆ ಅನುಕೂಲವಾಗಲಿದೆ’ ಎಂದವರು ವಿವರಿಸಿದ್ದಾರೆ. - [ಸಂಭ್ರಮದ ಮನೆಯಲ್ಲಿ ಸೂತಕ: ವಿದ್ಯುತ್ ತಂತಿ ಉರುಳಿ ದಂಪತಿ ಸಾವು!](https://mobiletime.in/2025/10/a-housewarming-party-couple-dies-after-falling-on-electric-wire/): ಹೊನ್ನಾವರದಲ್ಲಿ ಭಾನುವಾರ ರಾತ್ರಿ ವಿದ್ಯುತ್ ತಂತಿ ಹರಿದುಬಿದ್ದು ದಂಪತಿ ಸಾವನಪ್ಪಿದ್ದಾರೆ. ದೀಪಾವಳಿ ಹಬ್ಬದ ಸಡಗರದಲ್ಲಿದ್ದ‌ ಮನೆಯಲ್ಲಿ ಸೂತಕ ಆವರಿಸಿದೆ. ಭಾನುವಾರ ರಾತ್ರಿ ಹೊನ್ನಾವರ ತಾಲೂಕಿನ ಕಾಸರಕೋಡ ಬಟ್ಟೆ ವಿನಾಯಕ ಕೇರಿಯಲ್ಲಿ‌ ಈ ಅವಘಡ ನಡೆದಿದೆ. ಅಲ್ಲಿ‌ ಸಂತೋಷ ಗೌಡ ಹಾಗೂ ಅವರ ಪತ್ನಿ ಸೀತಾ ಗೌಡ ಸ್ಥಳದಲ್ಲಿಯೇ ಕೊನೆ ಉಸಿರೆಳೆದಿದ್ದಾರೆ. ಸದ್ಯ ಅವರ ಶವ ಆಸ್ಪತ್ರೆಯ ಶವಾಗಾರದಲ್ಲಿದೆ. ಈ ಗಂಡ ಹೆಂಡತಿ ಮರಣಕ್ಕೆ ಹೆಸ್ಕಾಂ ನಿರ್ಲಕ್ಷ ಕಾರಣ ಎಂದು ಸ್ಥಳೀಯರು ಆರೋಪಿಸಿದ್ದಾರೆ. ನ್ಯಾಯ ಸಿಗುವವರೆಗೂ ಮೃತದೇಹ ಪಡೆಯುದಿಲ್ಲ ಎಂದು ಕುಟುಂಬದವರು ಪ್ರತಿಭಟನೆ ನಡೆಸುತ್ತಿದ್ದಾರೆ. ಸಾರ್ವಜನಿಕರು ಸಹ ಆಕ್ರೋಶವ್ಯಕ್ತಪಡಿಸಿದ್ದು, ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಾರೆ. ಆಸ್ಪತ್ರೆ ಬಳಿ ನೂರಾರು ಜನ ಜಮಾಯಿಸಿದ್ದು,‌ ಇನ್ನಷ್ಟು ಜನ ಬರುತ್ತಿದ್ದಾರೆ. ಸಂತೋಷ ಗೌಡ ಹಾಗೂ ಸೀತಾ ಗೌಡ ದಂಪತಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ. ಪಾಲಕರ‌ ನಿಧನದಿಂದ ಅವರು ತಬ್ಬಲಿಯಾಗಿದ್ದಾರೆ. ಮೃತರ ಬಂಧು-ಮಿತ್ರರು ಆಸ್ಪತ್ರೆ ಬಳಿ‌ ಜಮಾಯಿಸಿದ್ದು,‌ ಪ್ರತಿಭಟನೆ ಇನ್ನಷ್ಟು ತೀವೃತೆಪಡೆದಿದೆ. - [2025 ಅಕ್ಟೊಬರ್ 20ರ ದಿನ ಭವಿಷ್ಯ](https://mobiletime.in/2025/10/prediction-for-october-20-2025/): ಮೇಷ ರಾಶಿ: ಕಚೇರಿ ಕೆಲಸದಲ್ಲಿ ನೆಮ್ಮದಿಯ ವಾತಾವರಣ ಸಿಗಲಿದೆ. ನಿಮ್ಮ ಶ್ರಮಕ್ಕೆ ಮೆಚ್ಚುಗೆಯ ಮಾತು ಕೇಳಿಬರಲಿದೆ. ಸಾಲಗಳು ದೂರವಾಗಲಿದೆ. ವೃಷಭ ರಾಶಿ: ಕಲಾತ್ಮಕ ಕ್ಷೇತ್ರದಲ್ಲಿರುವವರಿಗೆ ಯಶಸ್ಸು ಸಿಗಲಿದೆ. ಸ್ವಂತ ಉದ್ಯೋಗ ಶುರು ಮಾಡುವವರಿಗೆ ಲಾಭ ಸಾಧ್ಯವಿದೆ. ಅನಿರೀಕ್ಷಿತ ಲಾಭ ಹಾಗೂ ವಾಹನ-ಮನೆ ಖರಿದಿ ಯೋಗವಿದೆ. ಮಿಥುನ ರಾಶಿ: ನಿಮ್ಮೊಳಗಿನ ಆತ್ಮವಿಶ್ವಾಸ ಹೆಚ್ಚಾಗುತ್ತದೆ. ಸವಾಲುಗಳನ್ನು ಧೈರ್ಯವಾಗಿ ಎದುರುಸುತ್ತೀರಿ. ಉದ್ಯೋಗದಲ್ಲಿ ಲಾಭ ಆಗಲಿದ್ದು, ಹೂಡಿಕೆಯಲ್ಲಿಯೂ ಯಶಸ್ಸು ಸಾಧ್ಯವಿದೆ. ಕರ್ಕ ರಾಶಿ: ನಿಮ್ಮ ಮನಸ್ಸು ಶಾಂತಿ ಬಯಸುತ್ತಿದ್ದು, ಧ್ಯಾನ ಮಾಡಿ. ಹೊಸ ಯೋಜನೆಗಳನ್ನು ಜಾರಿಗೆ ತರಲು ಪ್ರಯತ್ನಿಸಿ. ಕುಟುಂಬದವರ ಜೊತೆ ಕಾಲ ಕಳೆಯುವುದು ಮುಖ್ಯ. ಸಿಂಹ ರಾಶಿ: ವೃತ್ತಿ ಜೀವನದಲ್ಲಿ ಪ್ರಗತಿ ಆಗಲಿದೆ. ಹಣಕಾಸು ವಿಷಯದಲ್ಲಿ ಉನ್ನತಿ ಸಾಧ್ಯವಿದೆ. ಪ್ರೀತಿ-ಪ್ರೇಮ ವಿಚಾರವಾಗಿ ಮಾತನಾಡಲು ಸೂಕ್ತ ಸಮಯ. ಕನ್ಯಾ ರಾಶಿ: ಗಂಭೀರ ವಿಷಯಗಳ ಬಗ್ಗೆ ಈ ದಿನ ಚಿಂತಿಸಬೇಡಿ. ಹಾಸ್ಯದಿಂದ ಜೀವನ ನಡೆಸಿ. ಒಳ್ಳೆಯ ಮಾತುಗಳು ನಿಮಗೆ ಪ್ರೇರಣೆ ನೀಡಲಿದೆ. ತುಲಾ ರಾಶಿ: ಹಣಕಾಸು ವ್ಯವಹಾರ ಸರಾಗವಾಗಿರಲಿದೆ. ಕೆಲಸದ ವಿಷಯದಲ್ಲಿ ಜಾಗೃತಿ ಅಗತ್ಯ. ಕೋಪ ಮಾಡಿಕೊಂಡರೆ ನಿಮಗೆ ಹಾನಿ. ವೃಶ್ಚಿಕ: ಹೊಸ ಬಗೆಯ ಯೋಜನೆಗಳಿಗೆ ಇದು ಸಕಾಲ. ಆಂತರಿಕ ಬೆಳವಣಿಗೆಗೆ ಓದು ಸಹಕಾರಿ. ಸಂವಹನದ ವಿಷಯದಲ್ಲಿ ಎಚ್ಚರಿಕೆವಹಿಸಿ. ಧನು ರಾಶಿ: ಈ ದಿನ ನಿಮಗೆ ಸಾಹಸಮಯ ಚಟುವಟಿಕೆಗಳಿಗೆ ಸಹಕಾರಿಯಾಗಿದೆ. ಧೈರ್ಯದಿಂದ ಕೆಲಸ ಮಾಡಿ. ಸ್ನೇಹಿತರ ಜೊತೆ ಕಾಲ ಕಳೆಯಿರಿ. ಮಕರ ರಾಶಿ: ಕಠಿಣ ಶ್ರಮದಿಂದ ಮಾತ್ರ ಉನ್ನತಿ ಸಾಧ್ಯವಿದೆ. ಆದಾಯಕ್ಕೆ ಹೊಸ ಮಾರ್ಗ ಸಿಗಲಿದ್ದರೂ ಆರೋಗ್ಯದ ಬಗ್ಗೆ ಯೋಚಿಸುವುದು ಅಗತ್ಯ. ಹಳೆಯ ಕೆಲಸಗಳನ್ನು ಮೊದಲು ಮುಗಿಸುವುದು ಉತ್ತಮ. ಕುಂಭ ರಾಶಿ: ನಿಮ್ಮ ಬುದ್ಧಿವಂತಿಕೆಯ ಬಗ್ಗೆ ಜನರಲ್ಲಿ ಮೆಚ್ಚುಗೆ ಸಿಗಲಿದೆ. ಹೊಸ ಸ್ನೇಹಿತರ ಪರಿಚಯ ಆಗಲಿದೆ. ಕಲಾ ಚಟುವಟಿಕೆಗಳಲ್ಲಿ ಭಾಗವಹಿಸುತ್ತೀರಿ. ಮೀನ ರಾಶಿ: ನಿಮ್ಮೊಳಗಿನ ಕ್ರಿಯಾತ್ಮಕ ಚಟುವಟಿಕೆಗಳು ಹೊರ ಬರಲಿದೆ. ಕಷ್ಟ ದೂರವಾಗಿ ನೆಮ್ಮದಿ ಸಿಗಲಿದೆ. ಪ್ರೇಮ ವಿಚಾರಗಳಲ್ಲಿ ಯಶಸ್ಸು ಸಾಧ್ಯವಿದೆ. - [ಬಸ್ಸಿನೊಳಗೆ ಮುಗಿಯಿತು ಪ್ರಯಾಣಿಕನ ಬದುಕು](https://mobiletime.in/2025/10/passengers-life-ended-inside-the-bus/): ಮಂಗಳೂರಿನಿoದ ಬೈಲಹೊಂಗಲಕ್ಕೆ ಹೋಗುತ್ತಿದ್ದ ಬಸ್ಸಿನಲ್ಲಿದ್ದ ಪ್ರಯಾಣಿಕರೊಬ್ಬರು ಯಲ್ಲಾಪುರದಲ್ಲಿ ಸಾವನಪ್ಪಿದ್ದಾರೆ. ಚಲಿಸುವ ಬಸ್ಸಿನಲ್ಲಿಯೇ ಅವರು ಶವವಾಗಿದ್ದಾರೆ. ಅಕ್ಟೊಬರ್ 18ರಂದು ಬೆಳಗಾವಿ ಜಿಲ್ಲೆಯ ಬೈಲಹೊಂಗಲದ ವಸಂತ ಬಾಳಪ್ಪ ಬಂಡಿವಡ್ಡರ್ (63) ಅವರು ಮಂಗಳೂರಿನ ಬಸ್ಸು ಹತ್ತಿದ್ದರು. ಆ ಬಸ್ಸು ಯಲ್ಲಾಪುರ ಮಾರ್ಗವಾಗಿ ಬೈಲಹೊಂಗಲಕ್ಕೆ ಹೊರಟಿತ್ತು. ಅಕ್ಟೊಬರ್ 19ರಂದು ಅವರು ಬಸ್ಸಿನೊಳಗೆ ಶವವಾಗಿದ್ದರು. ವಸಂತ ಬಾಳಪ್ಪ ಬಂಡಿವಡ್ಡರ್ ಅವರು ಮದ್ಯಪಾನ ಮಾಡುತ್ತಿದ್ದು, ಪಿಡ್ಸ ರೋಗದಿಂದಲೂ ಬಳಲುತ್ತಿದ್ದರು. ಅದೇ ಅವರ ಸಾವಿಗೆ ಕಾರಣವಾಗಿರುವ ಅನುಮಾನಗಳಿವೆ. ಸದ್ಯ ಅವರ ಶವ ಯಲ್ಲಾಪುರದ ಶವಾಗಾರದಲ್ಲಿದ್ದು, ಅದನ್ನು ಬಿಟ್ಟುಕೊಡುವಂತೆ ಮೃತರ ಪುತ್ರ ಬಾಳಪ್ಪ ಬಂಡಿವಡ್ಡರ್ ಪೊಲೀಸರಿಗೆ ಮನವಿ ಮಾಡಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. - [ಪದೇ ಪದೇ ಪಲ್ಟಿ: ಲಾರಿ ಚಾಲಕರಿಗೆ ಸವಾಲಾದ ಯಲ್ಲಾಪುರ ಹೆದ್ದಾರಿ!](https://mobiletime.in/2025/10/frequent-overturns-yellapur-highway-a-challenge-for-lorry-drivers/): ಯಲ್ಲಾಪುರದಲ್ಲಿ ಹಾದುಹೋದ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತಗಳ ಪ್ರಮಾಣ ಹೆಚ್ಚಾಗಿದೆ. ಒಂದೇ ದಿನ 2-3 ಅವಘಡಗಳು ಇಲ್ಲಿ ನಡೆಯುತ್ತಿದೆ. ಶನಿವಾರ ಆರತಿಬೈಲ್ ಘಟ್ಟದಲ್ಲಿ ಲಾರಿ ಪಲ್ಟಿಯಾಗಿತ್ತು. ಭಾನುವಾರ ಹಳಿಯಾಳ ತಿರುವಿನಲ್ಲಿ ಬಸ್ ಮರಕ್ಕೆ ಗುದ್ದಿತು. ಭಾನುವಾರ ಸಂಜೆ ಬಳಗಾರ ಕ್ರಾಸಿನ ಬಳಿ ಮತ್ತೊಂದು ಲಾರಿ ಉರುಳಿ ಬಿದ್ದಿದೆ. ಮಂಗಳೂರಿನಿAದ ಕೊಪ್ಪಳಕ್ಕೆ ಕಲ್ಲಿದ್ದಲು ಸಾಗಿಸುತ್ತಿದ್ದ ಲಾರಿ ಇಲ್ಲಿಚಾಲಕನ ನಿಯಂತ್ರಣ ತಪ್ಪಿತು. ಪರಿಣಾಮ ರಾಷ್ಟ್ರೀಯ ಹೆದ್ದಾರಿ ಮಧ್ಯದಲ್ಲಿಯೇ ಆ ವಾಹನ ಪಲ್ಟಿಯಾಯಿತು. ಲಾರಿಯಲ್ಲಿದ್ದ ಕಲ್ಲಿದ್ದಲು ಹೆದ್ದಾರಿಯಲ್ಲಿ ರಾಶಿಯಾಗಿ ಬಿದ್ದಿದ್ದು, ಆ ವೇಳೆಗೆ ಜೋರು ಮಳೆ ಸುರಿಯಿತು. ಲಾರಿ ಪಲ್ಟಿ ಆಗಿರುವ ಸುದ್ದಿ ಕೇಳಿ ಅಲ್ಲಿಗೆ ಪೊಲೀಸರು ಹೋದರು. ಹೆದ್ದಾರಿ ಮಧ್ಯದಲ್ಲಿಯೇ ಲಾರಿ ಪಲ್ಟಿಯಾದ ಕಾರಣ ವಾಹನಗಳ ಸಂಚಾರ ಸ್ಥಗಿತಗೊಂಡಿತ್ತು. ಎರಡೂ ಕಡೆಗಳಲ್ಲಿ 2ಕಿಮೀ ದೂರದಲ್ಲಿ ವಾಹನಗಳು ನಿಂತಿದ್ದು, ಪ್ರಯಾಣಿಕರು ತೊಂದರೆ ಅನುಭವಿಸಿದರು. ಪೊಲೀಸರು ಲಾರಿ ಹಾಗೂ ರಸ್ತೆಯ ಮೇಲೆ ಬಿದ್ದಿದ್ದ ಕಲ್ಲಿದ್ದಲು ತೆರವು ಮಾಡಿದರು. ಎರಡು ತಾಸಿನ ಬಳಿಕ ಹೆದ್ದಾರಿ ಸಂಚಾರ ಸುಗಮವಾಯಿತು. ಶನಿವಾರ ಸಹ ಹುಬ್ಬಳ್ಳಿ ಕಡೆಯಿಂದ ಅಂಕೋಲಾ ಕಡೆಗೆ ಹೊರಟಿದ್ದ ಲಾರಿ ಇಲ್ಲಿನ ಅನತಿ ದೂರದ ಆರತಿಬೈಲಿನಲ್ಲಿ ಪಲ್ಟಿಯಾಗಿತ್ತು. ಆಗಲೂ, ತಡೆಗೋಡೆಗೆ ಧಕ್ಕೆ ಉಂಟಾಗಿತ್ತು. - [ಕೆಡಿಸಿಸಿ: ವೈದ್ಯರ ವಿರುದ್ಧ ಹೋರಾಡುವವರೇ ಇಲ್ಲ!](https://mobiletime.in/2025/10/kdcc-no-one-is-fighting-against-doctors/): ಕೆಡಿಸಿಸಿ ಬ್ಯಾಂಕಿನ ಆಡಳಿತ ಮಂಡಳಿ ನಿರ್ದೇಶಕ ಸ್ಥಾನಕ್ಕೆ ಚುನಾವಣಾ ಪ್ರಕ್ರಿಯೆ ಜಾರಿಯಲ್ಲಿದ್ದು, ಉತ್ತರ ಕನ್ನಡ ಜಿಲ್ಲೆಯ ಉಸ್ತುವಾರಿ ಸಚಿವರೂ ಆಗಿರುವ ಮಂಕಾಳು ವೈದ್ಯ ವಿರುದ್ಧ ಈ ಚುನಾವಣೆಯಲ್ಲಿ ಎದುರಾಳಿಗಳಿಲ್ಲ. ಹೀಗಾಗಿ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಮಂಕಾಳು ವೈದ್ಯ ಅವರ ಜೊತೆ ಹೊನ್ನಾವರ ಮತ ಕ್ಷೇತ್ರದ ವಿ ಕೆ ವಿಶಾಲ ಹಾಗೂ ಅಂಕೋಲ ಮತ ಕ್ಷೇತ್ರದಿಂದ ಭೀರಣ್ಣ ಬೊಮ್ಮಯ್ಯ ನಾಯಕ ಅವರು ಸಹ ಅವಿರೋಧವಾಗಿ ಕೆಡಿಸಿಸಿ ಬ್ಯಾಂಕ್ ಪ್ರವೇಶಿಸಿದ್ದಾರೆ. ಕೆಡಿಸಿಸಿ ಬ್ಯಾಂಕಿನ ಆಡಳಿತ ಮಂಡಳಿ ಚುನಾವಣೆಗಾಗಿ ಸ್ವೀಕೃತಗೊಂಡಿದ್ದ 44 ನಾಮಪತ್ರಗಳಲ್ಲಿ 11 ಅಭ್ಯರ್ಥಿಗಳು ನಾಮಪತ್ರ ಹಿಂಪಡೆದಿದ್ದಾರೆ. ಸದ್ಯ 30 ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದಾರೆ. ಶಿರಸಿ ಮತ ಕ್ಷೇತ್ರದಿಂದ ಎಸ್ ಎನ್ ಹೆಗಡೆ, ಯಲ್ಲಾಪುರ ಮತ ಕ್ಷೇತ್ರದಿಂದ ರಾಮಕೃಷ್ಣ ನಾರಾಯಣ ಹೆಗಡೆ ಹಾಗೂ ಕಾರವಾರ ಮತ ಕ್ಷೇತ್ರದಿಂದ ಸುರೇಶ ರಾಮಾ ಪೆಡ್ನೇಕರ್, ಶಿರಸಿ ಮತ ಕ್ಷೇತ್ರದಿಂದ ಗಣಪತಿ ವೆಂಕಟರಮಣ ಜೋಶಿ, ಜೋಯಿಡಾ ಮತ ಕ್ಷೇತ್ರದಿಂದ ಶ್ರೀಕಾಂತ ಬಾವುರಾವ್ ದೇಸಾಯಿ, ಹೊನ್ನಾವರ ಮತಕ್ಷೇತ್ರದಿಂದ ನಾರಾಯಣ ಮಹಾಭಲೇಶ್ವರ ಹೆಗಡೆ, ತಾಲೂಕು ಒಕ್ಕಲುತನ ಹುಟ್ಟುವಳಿ ಮಾರಾಟ ಸಂಘದಿAದ ರಾಮಚಂದ್ರ ಮಹಾಭಲೇಶ್ವರ ಹೆಗಡೆ, ಅಂಕೋಲ ಮತ ಕ್ಷೇತ್ರದಿಂದ ಗೋಪಾಲಕೃಷ್ಣ ರಾಮಚಂದ್ರ ನಾಯ್ಕ, ಶಿರಸಿ ಮತ ಕ್ಷೇತ್ರದಿಂದ ಬಾಲಚಂದ್ರ ಶಾಂತಾರಾಮ್ ಶಾಸ್ರ‍್ತಿ, ಸಹಕಾರಿ ಸಂಘ ಕ್ಷೇತ್ರದಿಂದ ವಿನಾಯಕ ರಾ ಹೆಗಡೆ ಹಾಗು ಹೊನ್ನಾವರ ಮತ ಕ್ಷೇತ್ರದಿಂದ ಶಿವಾನಂದ ರಾಮಚಂದ್ರ ಹೆಗಡೆ ನಾಮಪತ್ರ ಹಿಂಪಡೆದವರಾಗಿದ್ದಾರೆ. ಕೆಡಿಸಿಸಿ ಬ್ಯಾಂಕಿಗೆ ಭಟ್ಕಳ ಮತ ಕ್ಷೇತ್ರದಿಂದ ಅವಿರೋಧವಾಗಿ ಮಂಕಾಳು ವೈದ್ಯ ಆಯ್ಕೆಯಾಗಿದ್ದರಿಂದ ಅವರ ಅಭಿಮಾನಿಗಳು ಪಟಾಕಿ ಸಿಡಿಸಿದರು. ವಿ ಕೆ ವಿಶಾಲ ಇವರು ಚುನಾವಣಾಧಿಕಾರಿಗಳಿಂದ ಪ್ರಮಾಣ ಪತ್ರ ಪಡೆದು ಹೊರ ಬಂದು ಸಂಭ್ರಮ ಹಂಚಿಕೊAಡರು. ಅಂಕೋಲಾ ತಾಲೂಕಿನ ವಿವಿಧೋದ್ದೇಶಗಳ ಪ್ರಾಥಮಿಕ ಪತ್ತಿನ ಕೃಷಿ ಸಹಕಾರಿ ಸಂಘದ ಪ್ರತಿನಿಧಿ ಸ್ಥಾನಕ್ಕೆ ಅವಿರೋಧವಾಗಿ ಆಯ್ಕೆಯಾಗಿರುವ ಬೀರಣ್ಣ ಬೊಮ್ಮಯ್ಯ ನಾಯಕ ಅವರಿಗೆ ಶಾಸಕ ಶಿವರಾಮ ಹೆಬ್ಬಾರ್ ಸನ್ಮಾನಿಸಿದರು. - [ಶಾಲಾ ಬಸ್ಸಿನೊಳಗೆ ಕಂಡೆಕ್ಟರ್ ಶವ!](https://mobiletime.in/2025/10/conductor-found-dead-inside-school-bus/): ಕುಮಟಾದ ಪ್ರಗತಿ ವಿದ್ಯಾಲಯದಲ್ಲಿ ಕೆಲಸ ಮಾಡುತ್ತಿದ್ದ ಹೊನ್ನಾವರದ ಮಹಾಬಲೇಶ್ವರ ಮುಕ್ರಿ ಅವರು ಶಾಲಾ ಆವರಣದಲ್ಲಿಯೇ ಸಾವನಪ್ಪಿದ್ದಾರೆ. ಈ ಬಗ್ಗೆ ಅವರ ತಮ್ಮ ರಾಮಾ ಮುಕ್ರಿ ಅವರು ಪೊಲೀಸ್ ದೂರು ನೀಡಿದ್ದಾರೆ. ಹೊನ್ನಾವರದ ಹೊನ್ನಾವರ ಕಡತೋಕಾ ಹೆಬಳೆಕೊಪ್ಪ ಮಹಾಬಲೇಶ್ವರ ನಾರಾಯಣ ಮುಕ್ರಿ (46) ಅವರು ಕುಮಟಾದ ಮೂರೂರಿನಲ್ಲಿರುವ ಪ್ರಗತಿ ವಿದ್ಯಾಲಯದಲ್ಲಿ ಕೆಲಸಕ್ಕಿದ್ದರು. ಅಲ್ಲಿ ಅವರು ಬಸ್ ಕಂಡೆಕ್ಟರ್ ಆಗಿ ಶ್ರಮಿಸುತ್ತಿದ್ದರು. ಶಾಲೆ ಆವರಣದಲ್ಲಿಯೇ ಬಸ್ ನಿಲ್ಲಿಸಲಾಗುತ್ತಿದ್ದು, ವಿರಾಮದ ವೇಳೆ ಮಹಾಬಲೇಶ್ವರ ಮುಕ್ರಿ ಅವರು ಬಸ್ಸಿನಲ್ಲಿಯೇ ವಿಹರಮಿಸುತ್ತಿದ್ದರು. ಅಕ್ಟೊಬರ್ 18ರಂದು ಸಹ ಮಹಾಬಲೇಶ್ವರ ಮುಕ್ರಿ ಅವರು ಕರ್ತವ್ಯಕ್ಕೆ ಹಾಜರಾಗಿದ್ದರು. ಶಾಲಾ ಆವರಣದಲ್ಲಿ ನಿಲ್ಲಿಸಿದ ಬಸ್ ಒಳಗೆ ಅವರು ಪ್ರವೇಶಿಸಿದ್ದರು. ಬೆಳಗ್ಗೆ 10.30ರ ಸುಮಾರಿಗೆ ಬಸ್ ಒಳಗೆ ಪ್ರವೇಶಿಸಿದ ಅವರು ಮಧ್ಯಾಹ್ನ 1.30 ಆದರೂ ಹೊರ ಬರಲಿಲ್ಲ. ಗಮನಿಸಿದಾಗ ಬಸ್ಸಿನ ಒಳಗೆ ಅವರು ಮಲಗಿದ್ದ ಸ್ಥಿತಿಯಲ್ಲಿದ್ದರು. ಹತ್ತಿರ ಹೋಗಿ ಪರಿಶೀಲಿಸಿದಾ ಮಹಾಬಲೇಶ್ವರ ಮುಕ್ರಿ ಅವರು ಅಲ್ಲಿಯೇ ಸಾವನಪ್ಪಿದ್ದರು. ಅವರ ಸಾವಿಗೆ ನಿಖರ ಕಾರಣ ಗೊತ್ತಾಗಲಿಲ್ಲ. ಅಣ್ಣನ ಸಾವಿನ ಬಗ್ಗೆ ಅರಿತ ರಾಮ ಮುಕ್ರಿ ಅವರು ಅಲ್ಲಿಗೆ ಹೋದರು. ಸಾವನಪ್ಪಿರುವುದನ್ನು ಖಚಿತಪಡಿಸಿಕೊಂಡು ಪೊಲೀಸರಿಗೆ ಮಾಹಿತಿ ನೀಡಿದರು. ಪೊಲೀಸರು ಪ್ರಕರಣ ದಾಖಲಿಸಿದ್ದು, ವಿಚಾರಣೆ ನಡೆಸಿದ್ದಾರೆ. - [ಬೈಕ್ ಓಡಿಸಿದ ಪುತ್ರ: ದಂಡ ಕಟ್ಟಿದ ಅಪ್ಪ!](https://mobiletime.in/2025/10/the-son-who-drove-the-bike-the-father-who-paid-the-fine/): ಹೊನ್ನಾವರದಲ್ಲಿ ಶಾಲಾ ಬಾಲಕನೊಬ್ಬ ಬೈಕ್ ಓಡಿಸಿದ್ದು, ಇದನ್ನು ಸಹಿಸದ ನ್ಯಾಯಾಲಯ ಬಾಲಕನ ತಂದೆಗೆ 25 ಸಾವಿರ ರೂ ದಂಡ ವಿಧಿಸಿದೆ. ಜೊತೆಗೆ ಒಂದು ತಿಂಗಳ ಜೈಲು ಶಿಕ್ಷೆ ಅನುಭವಿಸುವಂತೆ ಆದೇಶಿಸಿದ್ದು, ದಂಡ ಪಾವತಿಸದೇ ಇದ್ದರೆ ಜೈಲು ಶಿಕ್ಷೆ ಪ್ರಮಾಣ ಏರಿಕೆ ಮಾಡುವ ಬಗ್ಗೆಯೂ ನ್ಯಾಯಾಲಯ ಎಚ್ಚರಿಸಿದೆ. 2022ರ ಸೆಪ್ಟಂಬರ್ 9ರಂದು ಹೊನ್ನಾವರ ಪಟ್ಟಣದ ಪ್ರಭಾತನಗರ ರಜತಗಿರಿ ಕ್ರಾಸಿನ ಬಳಿ ಶಾಲಾ ಬಾಲಕನೊಬ್ಬ ಬೈಕ್ ಓಡಿಸಿಕೊಂಡು ಬರುತ್ತಿದ್ದು, ಆತ ಫೋನಿನಲ್ಲಿ ಮಾತನಾಡುತ್ತಲೇ ವೇಗದ ವಾಹನ ಚಾಲನೆ ಮಾಡುತ್ತಿರುವುದನ್ನು ಪೊಲೀಸರು ಗಮನಿಸಿದ್ದರು. ಬೈಕಿಗೆ ಅಡ್ಡಲಾಗಿ ಪೊಲೀಸರು ಕೈ ಮಾಡಿದ್ದರು. ಬೈಕಿನ ದಾಖಲೆ ಹಾಗೂ ಚಾಲಕನ ದಾಖಲೆ ಪರಿಶೀಲಿಸಿದಾಗ ಬೈಕ್ ಸವಾರನ ಜೊತೆ ಸಹ ಸವಾರನ ಬಳಿಯೂ ಲೈಸೆನ್ಸ ಇರಲಿಲ್ಲ. ಅವರಿಬ್ಬರು ಹೆಲ್ಮೆಟ್ ಸಹ ನೀಡಿರಲಿಲ್ಲ. ಬೈಕಿನ ವಿಮಾ ಅವಧಿ ಸಹ ಮುಗಿದಿದ್ದು, ಈ ಎಲ್ಲಾ ಅಂಶಗಳನ್ನು ಸೇರಿಸಿ ಪೊಲೀಸರು ಪ್ರಕರಣ ದಾಖಲಿಸಿದರು. ಈ ಪ್ರಕರಣ ನ್ಯಾಯಾಲಯದಲ್ಲಿ ವಿಚಾರಣೆಗ ಬಂದಿತು. ಬೈಕ್ ಮಾಲಕನನ್ನು ಕೋರ್ಟಿನವರು ಕರೆಯಿಸಿದರು. ಮಹಮ್ಮದ್ ಹುಸೇನ ಹಾಜಿಕಾ ಎಂಬಾತರು ಬಾಲಕನಿಗೆ ಬೈಕ್ ನೀಡಿದನ್ನು ಒಪ್ಪಿಕೊಂಡರು.ಇಲ್ಲಿನ ಪ್ರಧಾನ ಸಿವಿಲ್ ಜಡ್ಜ್ ಮತ್ತು ಜೆಎಂಎಫ್‌ಸಿ ನ್ಯಾಯಾಲಯದ ನ್ಯಾಯಾಧೀಶ ಈರಣ್ಣ ಹುಣಶಿಕಟ್ಟೆ ಅವರು ಈ ಪ್ರಕರಣದ ವಿಚಾರಣೆ ನಡೆಸಿದರು. ಅಪ್ರಾಪ್ತರ ಬೈಕ್ ಚಾಲನೆ ಸಹಿಸದ ನ್ಯಾಯಾಧೀಶರು ತಮ್ಮ ಆದೇಶ ಪ್ರಕಟಿಸಿದರು. ಒಟ್ಟು 1 ತಿಂಗಳ ಜೈಲುವಾಸ ಹಾಗೂ 25 ಸಾವಿರ ರೂ ದಂಡ ಪಾವತಿಸುವಂತೆ ನ್ಯಾಯಾಧೀಶರು ಆದೇಶ ಹೊರಡಿಸಿದರು. ದಂಡ ತಪ್ಪಿಸಿದರೆ ಇನ್ನಷ್ಟು ದಿನ ಜೈಲು ಶಿಕ್ಷೆಯ ಬಗ್ಗೆಯೂ ಆದೇಶದಲ್ಲಿ ಉಲ್ಲೇಖಿಸಿದರು. - [ಕೂಲಿ ಕೆಲಸಗಾರನ ಕಾನೂನುಬಾಹಿರ ಕೆಲಸ: ಕಠಿಣ ಕ್ರಮ!](https://mobiletime.in/2025/10/illegal-work-of-a-wage-worker-strict-action/): ಕೂಲಿ ಕೆಲಸ ಬಿಟ್ಟು ಕಾನೂನುಬಾಹಿರ ಆಟಕ್ಕೆ ತೆರಳಿದ್ದ ಶಿರಸಿ ವಿವೇಕಾನಂದ ನಗರದ ಗಣಪತಿ ನಾಯ್ಕ ಅವರ ವಿರುದ್ಧ ಶಿರಸಿ ಮಾರುಕಟ್ಟೆ ಪೊಲೀಸ್ ಠಾಣೆಯ ಉಪನಿರೀಕ್ಷಕ ಬಸವರಾಜ ಕನಶೆಟ್ಟಿ ಅವರು ಕ್ರಮ ಜರುಗಿಸಿದ್ದಾರೆ. `ಮತ್ತೊಮ್ಮೆ ಇಂಥ ಕೆಲಸ ಮಾಡಿದರೆ ಇನ್ನಷ್ಟು ಕಠಿಣ ಕ್ರಮ ಜರುಗಿಸುವೆ’ ಎಂದು ಪೊಲೀಸರು ಅವರಿಗೆ ಎಚ್ಚರಿಕೆ ನೀಡಿದ್ದಾರೆ. ಅಕ್ಟೊಬರ್ 17ರ ಮಧ್ಯಾಹ್ನ ಗಣಪತಿ ಶಾಂತರಾಮ ನಾಯ್ಕ ಅವರು ಯಲ್ಲಾಪುರ ನಾಕಾ ಬಳಿ ಸುತ್ತಾಡುತ್ತಿದ್ದರು. ಅಲ್ಲಿನ ಮೂರು ನಂಬರ್ ಶಾಲೆಯಿಂದ ವಿದ್ಯಾ ನಗರಕ್ಕೆ ಹೋಗುವ ರಸ್ತೆ ಬಳಿ ನಿಂತು ವಿವಿಧ ಬಗೆಯ ಕೈ ಸನ್ನೆ ಮಾಡುತ್ತಿದ್ದರು. ಕೈ ಸನ್ನೆ ಗಮನಿಸದವರನ್ನು ಕೂಗಿ ಕರೆದ ಅವರು `ಅದೃಷ್ಠದ ಆಟ ಆಡಿ ಹಣ ಗೆಲ್ಲಿ’ ಎಂಬ ಆಮೀಷ ಒಡ್ಡುತ್ತಿದ್ದರು. `1ರೂಪಾಯಿ ಕೊಟ್ಟರೆ 80ರೂಪಾಯಿ ಕೊಡುವೆ’ ಎಂದು ಅಲ್ಲಿ ಹೋಗಿ-ಬರುವ ಜನರನ್ನು ನಂಬಿಸಿ ಹಣ ಸಂಗ್ರಹಿಸುತ್ತಿದ್ದರು. ಶಿರಸಿ ಮಾರುಕಟ್ಟೆ ಪೊಲೀಸ್ ಠಾಣೆಯ ಉಪನಿರೀಕ್ಷಕ ಬಸವರಾಜ ಕನಶೆಟ್ಟಿ ಅವರಿಗೆ ಗಣಪತಿ ನಾಯ್ಕ ಅವರ ವರ್ತನೆ ಸರಿ ಕಾಣಲಿಲ್ಲ. ಹತ್ತಿರ ಹೋಗಿ ನೋಡಿದಾಗ ಗಣಪತಿ ನಾಯ್ಕ ಅವರು ನಿಷೇಧಿತ ಮಟ್ಕಾ ಆಟದಲ್ಲಿ ತಲ್ಲೀನರಾಗಿರುವುದು ಗೊತ್ತಾಯಿತು. ಪಂಚರ ಜೊತೆ ಪೊಲೀಸ್ ಸಿಬ್ಬಂದಿಯನ್ನು ಕರೆಯಿಸಿ ದಾಳಿ ನಡೆಸಿದ ಬಸವರಾಜ ಕನಶೆಟ್ಟಿ ಅವರು ಗಣಪತಿ ನಾಯ್ಕ ಅವರ ಬಳಿಯಿದ್ದ 1060ರೂ ಹಣವನ್ನು ವಶಕ್ಕೆಪಡೆದರು. ಅಂಕಿ-ಸAಖ್ಯೆ ಬರೆದ ಚೀಟಿ ಜೊತೆ ಬರೆಯಲು ಬಳಸಿದ್ದ ಬಾಲ್‌ಪೆನ್ನನ್ನು ಜಪ್ತು ಮಾಡಿದರು. ಮಟ್ಕಾ ಆಡಿಸುತ್ತಿದ್ದ ಗಣಪತಿ ನಾಯ್ಕ ಅವರ ವಿರುದ್ಧ ನ್ಯಾಯಾಲಯಕ್ಕೆ ವರದಿ ಒಪ್ಪಿಸಿ, ಪ್ರಕರಣ ದಾಖಲಿಸಿದರು. - [ಸಾಧಕ ಶಿಕ್ಷನಿಗೆ ದೊರೆತ ಸಂಪೂರ್ಣ ರತ್ನ!](https://mobiletime.in/2025/10/a-complete-gem-found-by-a-successful-student/): 27 ವರ್ಷಗಳಿಂದ ಶಿಕ್ಷಕರಾಗಿ ಮಕ್ಕಳ ವಿದ್ಯಾರ್ಜನೆಗೆ ಸಹಕರಿಸುತ್ತಿರುವ ಕಾರವಾರದ ಜೈರಂಗನಾಥ ಬಿ ಎಸ್ ಅವರಿಗೆ `ಸಂಪೂರ್ಣ ರತ್ನ’ ಪ್ರಶಸ್ತಿ ಸಿಕ್ಕಿದೆ. ಧಾರವಾಡದ ರಂಗಾಯಣ ವೇದಿಕೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸುರಶೆಟ್ಟಿಕೊಪ್ಪದ ಲಡ್ಡು ಮುತ್ಯ ಆಶ್ರಮ ಲಡ್ಡು ಮುತ್ಯ ಶ್ರೀಗಳು ಈ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ. ಉದ್ಯಮಿ ಸಂತೋಷ್ ವರ್ಣೇಕರ್, ಸಮಾಜ ಸೇವಕ ಈಶ್ವರ್ ಗೌಡ ಪಾಟೀಲ್, ಪತ್ರಿಕೋದ್ಯಮಿ ಶಿವಾನಂದ್ ಬಿವಿ ಅವರು ಇದೇ ವೇದಿಕೆಯಲ್ಲಿ 20 ಸಾಧಕರಿಗೆ ಗೌರವಿಸಿದ್ದಾರೆ. ಜೈರಂಗನಾಥ ಬಿ ಎಸ್ ಅವರು ಕಾರವಾರ ತಾಲೂಕಾ ಮಾಧ್ಯಮಿಕ ಶಾಲಾ ನೌಕರರ ಸಂಘದ ಅಧ್ಯಕ್ಷರಾಗಿದ್ದಾರೆ. ವಿವಿಧ ಸಂಘಟನೆಗಳ ಮೂಲಕ ಅವರು ಸಮಾಜಮುಖಿ ಕೆಲಸ ಮಾಡುತ್ತಿದ್ದರೆ. ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ, ವೈಜ್ಞಾನಿಕ ಚಿಂತನೆ ಮೂಡಿಸುವಲ್ಲಿ ಅವರು ಶ್ರಮಿಸುತ್ತಿದ್ದಾರೆ. ಅವರ ಈ ಎಲ್ಲಾ ಸೇವೆ ಗಮನಿಸಿ ಬೆಂಗಳೂರಿನ ಕರುನಾಡು ಹೊಸ ಬೆಳಕು ಸಮಿತಿ ಹಾಗೂ ಸಂಪೂರ್ಣ ವಾರ್ತೆ ಸುದ್ದಿ ವಾಹಿನಿ ಈ ಪ್ರಶಸ್ತಿ ನೀಡಿ ಗೌರವಿಸಿದೆ. - [ಮಲ್ಲಾಪುರ-ಕೆರವಡಿ: ಬಸ್ಸಿನೊಳಗೆ ಅಡಗಿದ್ದ ಯಮದೂತ!](https://mobiletime.in/2025/10/mallapur-keravadi-yamadoot-hiding-inside-the-bus/): ಕಾರವಾರದಿಂದ ಕೆರವಡಿ-ಮಲ್ಲಾಪುರ ಮಾರ್ಗವಾಗಿ ಸಂಚರಿಸುವ ಬಸ್ಸು ಬಾಂಡಿಶೆಟ್ಟಾದ ಬಳಿ ಸ್ಕೂಟರಿಗೆ ಗುದ್ದಿದೆ. ಪರಿಣಾಮ ಮಹಿಳೆಯೊಬ್ಬರು  ಅವಧಿಗೆ ಮುನ್ನವೇ ಪ್ರಾಣಬಿಟ್ಟಿದ್ದಾರೆ. ಭಾನುವಾರ ಮಧ್ಯಾಹ್ನ ಕಾರವಾರ ಬಸ್ ನಿಲ್ದಾಣದಿಂದ ಹೊರಟ ಬಸ್ಸು ಮುಂದಿನ 10 ನಿಮಿಷದ ಅವಧಿಯಲ್ಲಿ ಬಾಂಡಿಶೆಟ್ಟಾ ತಲುಪಿತು. ಅಲ್ಲಿ ಬಸ್ಸಿನ ವೇಗ ಹೆಚ್ಚಾಗಿದ್ದು, ಶಿರವಾಡದಿಂದ ಕಾರವಾರದ ಕಡೆ ಬರುತ್ತಿದ್ದ ಸ್ಕೂಟಿಗೆ ಬಸ್ಸು ಡಿಕ್ಕಿ ಹೊಡೆಯಿತು. ಈ ಅಪಘಾತದಲ್ಲಿ ಮೇತ್ರಿವಾಡದ ಸುಶೀಲಾ ನಾಯ್ಕ (65) ಅವರು ಅಲ್ಲಿಯೇ ಸಾವನಪ್ಪಿದರು. ಅವರ ಸಂಬoಧಿಯೊಬ್ಬರು ಸ್ಕೂಟಿ ಓಡಿಸುತ್ತದ್ದು, ಅವರು ಗಾಯಗೊಂಡರು. ಪತ್ನಿ ಸಾವನಪ್ಪಿದನ್ನು ನೋಡಿ ಕಮಲಾಕರ ನಾಯ್ಕ ಅವರು ರೋದಿಸುತ್ತಿದ್ದರು. ಅಪಘಾತದ ಸುದ್ದಿ ಕೇಳಿ ಆಂಬುಲೆನ್ಸಿನವರು ಸ್ಥಳಕ್ಕೆ ಆಗಮಿಸಿದರು. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. - [ಗೋವಾಗೆ ಬರುತ್ತಿದ್ದ ಬಸ್ ಅಪಘಾತ: 31 ಜನರಿಗೆ ಗಾಯ!](https://mobiletime.in/2025/10/bus-accident-on-its-way-to-goa-31-people-injured/): ಬೆಂಗಳೂರಿನಿoದ ಗೋವಾಗೆ ತೆರಳುತ್ತಿದ್ದ SRS ಬಸ್ಸು ಯಲ್ಲಾಪುರದ ಹಳಿಯಾಳದ ಬಳಿ ಅಪಘಾತಕ್ಕೀಡಾಗಿದೆ. ಈ ಅಪಘಾತದಲ್ಲಿ ಕಾರವಾರದ ಐವರು ಹಾಗೂ ಯಲ್ಲಾಪುರ ಹಾಗೂ ಭಟ್ಕಳದ ಒಬ್ಬರ ಜೊತೆ ಬೇರೆ ಬೇರೆ ಊರಿನ ಒಟ್ಟು 31 ಜನ ಗಾಯಗೊಂಡಿದ್ದಾರೆ. ಅಕ್ಟೊಬರ್ 19ರ ನಸುಕಿನಲ್ಲಿ ಈ ಅಪಘಾತ ನಡೆದಿದೆ. ಬಸ್ಸು ಚಾಲಕನ ಅತಿ ವೇಗವೇ ಅಪಘಾತಕ್ಕೆ ಕಾರಣವಾಗಿದೆ. ಸಿಂದಗಿಯ ಅಶೋಕ ಗೌಂಡಿ ಅವರು ಈ ಬಸ್ಸು ಓಡಿಸುತ್ತಿದ್ದರು. ಕಲಘಟಕಿಯಿಂದಲೂ ಜೋರಾಗಿ ಬಸ್ಸು ಓಡಿಸಿಕೊಂಡು ಬಂದ ಅವರು ಹಳಿಯಾಳ ತಿರುವಿನ ಬಳಿ ಲಾರಿಯೊಂದಕ್ಕೆ ವಾಹನ ಗುದ್ದಿದರು. ಅದಾದ ನಂತರ ರಸ್ತೆಯ ಬಲಬದಿಗೆ ತೆರಳಿ ಅಲ್ಲಿದ್ದ ಕಾಡು ಮರಕ್ಕೆ ಡಿಕ್ಕಿ ಹೊಡೆದರು. ಆ ಡಿಕ್ಕಿ ರಭಸಕ್ಕೆ ಬಸ್ಸಿನ ಒಳಗಿದ್ದ ಕಾರವಾರ ಸದಾಶಿವಗಡದ ಇಂಜಿನಿಯರ್ ಗೌರೀಶ ನಾಯ್ಕ ಅವರ ಕಾಲಿಗೆ ಗಂಭೀರವಾಗಿ ಗಾಯವಾಯಿತು. ಇದರೊಂದಿಗೆ ಕಾರವಾರದ ಕೋಡಿಭಾಗ ತಾಮಸೆವಾಡದ ಇಂಜಿನಿಯರ್ ಪೂಜಾ ಪೆಡ್ನೇಕರ್ ಅವರು ಪೆಟ್ಟು ಮಾಡಿಕೊಂಡರು. ಕಾರವಾರದ ಅಮೂಲ್ಯಾ ಗುಡವೆಕರ್, ಕಾರವಾರ ನಂದನಗದ್ದಾದ ಬ್ಯಾಂಕ್ ನೌಕರ ಲಕ್ಷಿಕಾಂತ ಕಾಪಡಸಕರ, ಕಾರವಾರದ ಮತ್ತೊಬ್ಬ ಗೌರೀಶ ನಾಯ್ಕ ಸಹ ಗಾಯಗೊಂಡರು. ಬಸ್ಸಿನ ಒಳಗಿದ್ದ ಯಲ್ಲಾಪುರ ಇಡಗುಂದಿಯ ರವೀಶ ಭಾಗ್ವತ್ ಹಾಗೂ ಭಟ್ಕಳ ಕರಿಕಲ್ಲಿನ ಅಮಿತಾ ಖಾರ್ವಿ ಅವರಿಗೂ ಈ ಅಪಘಾತದಲ್ಲಿ ನೋವಾಯಿತು. ಇದರೊಂದಿಗೆ ಬೆಂಗಳೂರಿನ ರಜನಿ ರೇವಣಕರ್, ಧಾರವಾಡದ ಸನಾರುಜ್ಜಿನ್ ಗೌಸ್, ಓಡಿಸ್ಸಾದ ಹರಿಶ್ಚಂದ್ರ ಸಾಹು, ಪ್ರಭುರಾಮ ಸಾಹು, ಬೆಂಗಳೂರಿನ ಪತ್ರಕರ್ತ ಸೆಲೆಸ್ಟಿಯಾ ಮಾರ್ಥಲಿನ್, ಬೆಂಗಳೂರಿನ ಶಿಕ್ಷಕಿ ಅಪೂರ್ವಾ ದೇಸಾಯಿ, ಪಣಜಿಯ ವ್ಯಾಪಾರಿ ಸುಮಿತ್ರಾ ಬಿಸ್ವಾಸ್, ಬೆಂಗಳೂರು ಜೆಪಿ ನಗರದ ನಾಜಿಮಾಭಾನು, ವಾಸ್ಕೋದ ವಿದ್ಯಾರ್ಥಿನಿ ಚಿಕಿತಾ ಲೆಮಾನ್ಸ್, ಕೇರಳದ ಇಂಜಿನಿಯರ್ ಸೋಹೇಬ್ ಉಮರ್ ಸಹ ಅಪಘಾತದಲ್ಲಿ ಗಾಯಗೊಂಡರು. ಗೋವಾದ ಇಂಜಿನಿಯರ್ ಅಭಿಜಿತ್ ನಾಯ್ಕ, ಕೇರಳದ ವ್ಯಾಪಾರಿ ಬಿಲಾಲ್ ಸಲಾಂ, ಬಿಜಾಪುರದ ಚಾಲಕ ಶಿವಕುಮಾರ, ಕಲಾಯಿಯ ವಿರಪ್ಪ ಹೊಸಮನಿ, ಕಾಣಕೋಣದ ಯಶ್ ನಾಯ್ಕ, ಓಡಿಸ್ಸಾದ ರಘುರಾಂ ಸಾಹು ಹಾಗೂ ಕಲಘಟಕಿಯ ಮಾಬೂಬ್ ಹಜರತ್ ಸಾಬ್ ಸಹ ಬಸ್ಸಿನಲ್ಲಿದ್ದು ಅಪಘಾತದಿಂದ ಗಾಯಗೊಂಡರು. ಇನ್ನೂ ಹೆಸರು-ವಿಳಾಸ ಗೊತ್ತಾಗದ ಐವರು ಆ ಬಸ್ಸಿನಲ್ಲಿದ್ದರು. ಅವರಿಗೆ ಸಹ ಸಾಕಷ್ಟು ಪ್ರಮಾಣದಲ್ಲಿ ಪೆಟ್ಟಾಗಿದ್ದು, ಗಂಭೀರ ಗಾಯಗೊಂಡವರನ್ನು ಸದ್ಯ ಹುಬ್ಬಳ್ಳಿಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಪಘಾತದ ನಂತರ ಕೆಲವರು ದೊಡ್ಡದಾಗಿ ಕಿರುಚಿದ್ದು, ಸ್ಥಳೀಯರು ಅವರನ್ನು ರಕ್ಷಿಸಿದರು. ಇನ್ನೂ ಕೆಲವರು ಕಿಟಕಿಗಳಿಂದ ದೇಹತೂರಿಸಿ ಹೊರ ಬಿದ್ದರು. ಅಪಘಾತದ ಪರಿಣಾಮ ಬಸ್ಸು ಸಂಪೂರ್ಣವಾಗಿ ಜಖಂ ಆಗಿದೆ. ಪಿಐ ರಮೇಶ ಹಾನಾಪುರ ಅವರ ಜೊತೆ ಪಿಐ ರಾಜಶೇಖರ ವಂದಲಿ ಸ್ಥಳ ಭೇಟಿ ಮಾಡಿದ್ದಾರೆ. ಪಿಎಸ್‌ಐ ಮಹಾವೀರ ಕಾಂಬಳೆ ತನಿಖೆ ನಡೆಸುತ್ತಿದ್ದಾರೆ. - [ಚಿನ್ನವೂ ಸಿಗಲಿಲ್ಲ.. ಮದುಮಗನೂ ಬರಲಿಲ್ಲ!](https://mobiletime.in/2025/10/i-didnt-even-find-the-gold-and-the-groom-didnt-even-come/): ಮನೆಯಲ್ಲಿ ನಡೆಯುವ ಮದುವೆಗಾಗಿ ಚಿನ್ನ ಖರೀದಿಗೆ ಭಟ್ಕಳಕ್ಕೆ ಹೋಗಿದ್ದ ಕುಮಟಾದ ಜಾಕೀರ ಬೇಗ್ ಎಂಬಾತರು ನಿಗೂಢವಾಗಿ ಕಾಣೆಯಾಗಿದ್ದಾರೆ. ಅವರ ಕುಟುಂಬದವರು ಸಾಕಷ್ಟು ಹುಡುಕಾಟ ನಡೆಸಿದರೂ ಜಾಗೀರ ಬೇಗ್ ಸಿಕ್ಕಿಲ್ಲ. ಕುಮಟಾದ ಹಳ್ಳಾರ ಚಿತ್ರಗಿಯ ಮದ್ಗುಣಿಯ ಜಾಕೀರ ಬೇಗ್ (32) ಅವರು ವಿದೇಶದಲ್ಲಿ ಉದ್ಯೋಗದಲ್ಲಿದ್ದರು. ಅವರ ಮದುವೆ ನಿಶ್ಚಯವಾಗಿದ್ದರಿಂದ ಈಚೆಗೆ ಭಾರತಕ್ಕೆ ಮರಳಿದ್ದರು. ಎಲ್ಲರೂ ಮದುವೆ ಸಂಭ್ರಮದಲ್ಲಿರುವಾಗ ಜಾಕೀರ ಬೇಗ್ ಅವರು ಚಿನ್ನ ಖರೀದಿಯ ಯೋಚನೆ ಮಾಡಿದರು. ಭಟ್ಕಳದಲ್ಲಿ ಚಿನ್ನ ಖರೀದಿಸಲು ಉದ್ದೇಶಿಸಿದ ಅವರು ಕಳೆದ ಶುಕ್ರವಾರ ಅತ್ತಿಗೆ ಸಾಹಿನ್ ಹಾಗೂ ಅಣ್ಣನ ಮಗಳು ಮಹಿಕ್ ಜೊತೆ ಭಟ್ಕಳಕ್ಕೆ ಹೋದರು. ಭಟ್ಕಳಕ್ಕೆ ತೆರಳಿದ ನಂತರ ನುಹಾರಿಕ್ ಮಸೀದಿಗೆ ಹೋಗಿ ಶುಕ್ರವಾರದ ವಿಶೇಷ ನಮಾಜ್ ಮಾಡಿ ಬರುವುದಾಗಿ ಅವರು ಹೇಳಿದರು. ಮಧ್ಯಾಹ್ನ 1.15ಕ್ಕೆ ನಮಾಜ್ ಮುಗಿಸಿ ಅಲ್ಲಿಂದ ಹೊರಬಿದ್ದರು. ಆದರೆ, ಭಟ್ಕಳದ ಗುಳ್ಮೆಯಲ್ಲಿರುವ ಮಾವ ಹಸನ್ ಶಬ್ಬಿರ್ ಮನೆಗೆ ಅವರು ಬರಲಿಲ್ಲ. ಕಾದು ಕಾದು ಸುಸ್ತಾದ ಅತ್ತಿಗೆ ಸಾಹಿನ್ ಹಾಗೂ ಮಹಿಕ್ ಮನೆಗೆ ಮರಳಿದರೂ ಜಾಕೀರ್ ಅವರ ಸುಳಿವು ಸಿಗಲಿಲ್ಲ. ಈ ಎಲ್ಲಾ ಜಿನ್ನಲೆ ತಮ್ಮ ಜಾಕೀರ್ ಅವರು ಕಾಣೆಯಾದ ಬಗ್ಗೆ ಅವರ ಅಣ್ಣ ಗಫೂರ್ ಬೇಗ ಅವರು ಭಟ್ಕಳ ಶಹರ ಪೊಲೀಸ್ ಠಾಣೆಗೆ ಮಾಹಿತಿ ನೀಡಿದರು. ಪೊಲೀಸರು ಪ್ರಕರಣ ದಾಖಲಿಸಿದ್ದು, ಜಾಕೀರ್ ಅವರಿಗಾಗಿ ಹುಡುಕಾಟ ಶುರು ಮಾಡಿದರು. - [ನದಿ ಜೋಡಣೆಗೆ ವಿರೋಧ: ಸಂಘಟಿತ ಹೋರಾಟಕ್ಕೆ ಮೊದಲ ಹಂತದ ಜಯ!](https://mobiletime.in/2025/10/opposition-to-river-linking-first-stage-victory-for-organized-struggle/): ಪರಿಸರ ನಾಶ ಮಾಡುವ ಬೇಡ್ತಿ-ವರದಾ ನದಿ ಜೋಡಣೆ ವಿರೋಧಿಸಿ ಸೋಂದಾ ಸ್ವರ್ಣವಲ್ಲಿ ಶ್ರೀಗಳು ಗಿಡ-ಮರಗಳನ್ನು ಪೋಷಿಸುವ ಮೂಲಕ ಪರಿಸರ ಉಳಿಸುವ ಸಂದೇಶ ನೀಡಿದ್ದಾರೆ. ಅವೈಜ್ಞಾನಿಕವಾದ ಬೇಡ್ತಿ-ವರದಾ ನದಿ ಜೋಡಣೆ ವಿರುದ್ಧ ಮಲೆನಾಡಿನಲ್ಲಿ ಭಾರೀ ಪ್ರಮಾಣದ ಪ್ರತಿಭಟನೆ ನಡೆಯುತ್ತಿದೆ. ಭಾನುವಾರ ಸಹ ಬಿಡುವುಪಡೆಯದ ಜನ ಯಲ್ಲಾಪುರದ ತುಂಬೆಬೀಡಿನಲ್ಲಿ ಸಮಾವೇಶ ನಡೆಸಿದ್ದು, ಅವೈಜ್ಞಾನಿಕ ಯೋಜನೆಯನ್ನು ವಿರೋಧಿಸಿದ್ದಾರೆ. ಅದರ ಮುಂದುವರೆದ ಭಾಗವಾಗಿ ಯಲ್ಲಾಪುರದ ತುಂಬೆಬೀಡಿನಲ್ಲಿ ಜನ ಜಾಗೃತಿ ಸಮಾವೇಶ ನಡೆದಿದೆ. ಹತ್ತಾರು ಹಳ್ಳಿಯ ಜನ ಬೈಕ್ ರ‍್ಯಾಲಿ ನಡೆಸಿ ಯೋಜನೆ ವಿರುದ್ಧ ಘೋಷಣೆ ಕೂಗಿದ್ದಾರೆ. ಕಾಡು ಉಳಿಸುವ ನಿಟ್ಟಿನಲ್ಲಿ ಈಗಾಗಲೇ ಹಲವು ರೀತಿಯ ಅಭಿಯಾನ ನಡೆಸಿರುವ ಸೋಂದಾ ಸ್ವರ್ಣವಲ್ಲಿಯ ಗಂಗಾಧರೇoದ್ರ ಸರಸ್ವತಿ ಸ್ವಾಮೀಜಿ ಅವರು ನದಿ ಜೋಡಣೆ ವಿರುದ್ಧವೂ ಸರ್ಕಾರಕ್ಕೆ ಚಾಟಿ ಬೀಸಿದ್ದಾರೆ. ಮರ-ಗಿಡಗಳನ್ನು ನಾಶ ಮಾಡಿ ಅವೈಜ್ಞಾನಿಕ ಯೋಜನೆ ಜಾರಿಗೆ ತರುವುದನ್ನು ವಿರೋಧಿಸುವುದಕ್ಕಾಗಿ ಶ್ರೀಗಳು ವೃಕ್ಷಾರೋಪಣವನ್ನು ಮಾಡಿದ್ದಾರೆ. `ಅವೈಜ್ಞಾನಿಕ ಯೋಜನೆಗಳಿಂದ ವಿರುದ್ಧ ನಿರಂತರ ಹೋರಾಟ ಅಗತ್ಯ. ಯೋಜನೆಯಿಂದ ಆಗುವ ಪರಿಸರ ಹಾನಿಯ ಬಗ್ಗೆ ವೈಜ್ಞಾನಿಕ ದಾಖಲೆಗಳ ಜೊತೆ ಆಂದೋಲನ ನಡೆಯಬೇಕು’ ಎಂದು ಸ್ವರ್ಣವಲ್ಲಿ ಶ್ರೀಗಳು ಹೇಳಿದ್ದಾರೆ. `ಜನಪ್ರತಿನಿಧಿಗಳ ಮೂಲಕ ಒತ್ತಡ ಹೇರುವಿಕೆ, ಜನಾಂದೋಲನದ ಜೊತೆ ಎಲ್ಲರೂ ಸಂಘಟಿತರಾಗಿ ಈ ಹೋರಾಟ ಮುಂದುವರೆಸಬೇಕು. ಆಗ ಮಾತ್ರ ಯಶಸ್ಸು ಸಾಧ್ಯ’ ಎಂದು ನೆರೆದಿದ್ದ ಭಕ್ತರಿಗೆ ಅವರು ಕರೆ ನೀಡಿದ್ದಾರೆ. `ಸಾವಿರಾರು ಕೋಟಿ ವೆಚ್ಚದ ಎತ್ತಿನಹೊಳೆ ಯೋಜನೆ ವಿಫಲವಾಗಿದೆ. ಬೇಡ್ತಿ-ವರದಾ ಜೋಡಣೆ ಜಾರಿಗೆ ಬಂದರೂ ಅದೇ ಸ್ಥಿತಿ ನಿರ್ಮಾಣವಾಗಲಿದೆ. ಬೇಡ್ತಿ-ವರದಾ ಜೊತೆ ಅಘನಾಶಿನಿ-ವೇದಾವತಿ, ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಯನ್ನು ಜನ ವಿರೋಧಿಸಬೇಕು. ಜನಪ್ರತಿನಿಧಿಗಳು ತಮ್ಮ ಪಕ್ಷ ಮರೆತು ಈ ಹೋರಾಟಕ್ಕೆ ಬರಬೇಕು’ ಎಂದವರು ಕಿವಿಮಾತು ಹೇಳಿದ್ದಾರೆ. ಸಮಾವೇಶದ ವೇದಿಕೆಯಲ್ಲಿ ಹಾಜರಿದ್ದ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೂ ಜನ ಯೋಜನೆ ವಿರೋಧಿಸಿ ಮನವಿ ಸಲ್ಲಿಸಿದ್ದಾರೆ. `ಯಾವುದೇ ಯೋಜನೆ ಜಾರಿಯಾಗುವ ಮುನ್ನ ಧಾರಣ ಸಾಮರ್ಥ್ಯ ಅಧ್ಯಯನ ನಡೆಯಬೇಕು. ಪರಿಸರಕ್ಕೆ ಮಾರಕವಾದ ಯೋಜನೆ ಜಿಲ್ಲೆಗೆ ಬೇಡವಾಗಿದ್ದು, ಅದನ್ನು ವಿರೋಧಿಸಲು ಎಲ್ಲರೂ ಒಟ್ಟಾಗಬೇಕು’ ಎಂದು ಈ ವೇಳೆ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದ್ದಾರೆ. ಸ್ವರ್ಣವಲ್ಲೀ ಮಠದ ಅಧ್ಯಕ್ಷ ವಿ ಎನ್ ಹೆಗಡೆ, ವಿಧಾನ ಪರಿಷತ್ ಸದಸ್ಯ ಶಾಂತಾರಾಮ ಸಿದ್ದಿ, ಪರಿಸರ ತಜ್ಞ ಬಾಲಚಂದ್ರ ಸಾಯೀಮನೆ, ರಂಗಕರ್ಮಿ ರಾಮಕೃಷ್ಣ ಭಟ್ಟ ದುಂಡಿ, ಸಂಕಲ್ಪ ಸಂಸ್ಥೆ ಅಧ್ಯಕ್ಷ ಪ್ರಮೋದ ಹೆಗಡೆ, ಬೇಡ್ತಿ ಅಘನಾಶಿನಿ ಕೊಳ್ಳ ಸಂರಕ್ಷಣಾ ಸಮಿತಿ ಅಧ್ಯಕ್ಷ ಅನಂತ ಹೆಗಡೆ ಅಶೀಸರ, ವಿಶ್ವದರ್ಶನ ಶಿಕ್ಷಣ ಸಮೂಹದ ಅಧ್ಯಕ್ಷ ಹರಿಪ್ರಕಾಶ ಕೋಣೆಮನೆ ಈ ಯೋಜನೆ ವಿರೋಧಿಸಿದರು. ಸೀಮಾ ಪರಿಷತ್ ಅಧ್ಯಕ್ಷ ಶ್ರೀಪಾದ ಹೆಗಡೆ, ನರಸಿಂಹ ಸಾತೊಡ್ಡಿ, ಎಂ ಕೆ ಭಟ್ಟ ಯಡಳ್ಳಿ, ಪ್ರಕಾಶ ಭಟ್ಟ ತುಂಬೆಬೀಡು, ವಿಶ್ವನಾಥ ಹೆಗಡೆ ಬಾಮನಕೊಪ್ಪ ಕಾರ್ಯಕ್ರಮದ ಜವಾಬ್ದಾರಿವಹಿಸಿದ್ದರು. - [ಅಧಿಕಾರಿಗಳ ಸೋಗಿನಲ್ಲಿ ವಂಚನೆ-ಬೆದರಿಕೆ-ವಸೂಲಿ!](https://mobiletime.in/2025/10/fraud-intimidation-and-extortion-under-the-guise-of-officials/): ಆರೋಗ್ಯ, ಪೊಲೀಸ್ ಹಾಗೂ ನಗರಸಭೆ ಅಧಿಕಾರಿಗಳ ಸೋಗಿನಲ್ಲಿ ಜನರನ್ನು ಬೆದರಿಸುವ ಹಾಗೂ ಹಣ ವಸೂಲಿ ಮಾಡುವ ಜಾಲ ಉತ್ತರ ಕನ್ನಡ ಜಿಲ್ಲೆಯಲ್ಲಿ ಸಕ್ರಿಯವಾಗಿದೆ. ಅನಾಥ ಆಶ್ರಮ, ವೃದ್ಧಾಶ್ರಮದ ಹೆಸರಿನಲ್ಲಿ ಜನರನ್ನು ಯಾಮಾರಿಸುತ್ತಿದ್ದ ವಂಚಕರು ಇದೀಗ ಸರ್ಕಾರಿ ಸೋಗಿನಲ್ಲಿ ಆಗಮಿಸಿ ಮೋಸ ಮಾಡುತ್ತಿದ್ದಾರೆ. ಕಾರವಾರದ ಚಿತ್ತಾಕುಲದಲ್ಲಿ ಆರೋಗ್ಯ ಸಿಬ್ಬಂದಿ ಹೆಸರಿನಲ್ಲಿ ಮನೆ ಮನೆಗೆ ಭೇಟಿ ನೀಡಿ ಮಹಿಳೆಯರನ್ನು ವಂಚಿಸುವ ಜಾಲ ಕೆಲಸ ಮಾಡಿದೆ. ಅಲ್ಲಿನ ಪ್ರಮೋದ ನಾಯ್ಕ ಎಂಬಾತರ ಕುಟುಂಬಕ್ಕೆ ವಂಚಕರು 40 ಸಾವಿರ ರೂ ಮೋಸ ಮಾಡಿದ್ದಾರೆ. ಆರೋಗ್ಯ ಇಲಾಖೆ ಹೆಸರು ಹೇಳಿ ಉಚಿತ ಚಿಕಿತ್ಸೆ ಎಂದು ಪರಿಚಯಿಸಿಕೊಂಡ ವಂಚಕರು `ಮಕ್ಕಳಾಗದವರಿಗೆ ಔಷಧಿ ಕೊಡುತ್ತೇವೆ’ ಎಂದು ನಂಬಿಸಿ 40 ಸಾವಿರ ರೂ ಪಡೆದು ಪರಾರಿಯಾಗಿದ್ದಾರೆ. ಅಕ್ಟೊಬರ್ 9ರಂದು ಕಾರವಾರದಲ್ಲಿ ಮೋಸ ಮಾಡಿದ ಈ ಜಾಲದವರು ಅಕ್ಟೊಬರ್ 14ರಂದು ಭಟ್ಕಳ ಪ್ರವೇಶಿಸಿದ್ದಾರೆ. ಭಟ್ಕಳದಲ್ಲಿಯೂ ಆಸ್ಪತ್ರೆ ಹೆಸರಿನಲ್ಲಿ ನಕಲಿ ವೈದ್ಯರು ಮೋಸ ಮಾಡುವ ಸಂಗತಿ ಬೆಳಕಿಗೆ ಬಂದಿದೆ. ಇಲ್ಲಿನ ಹೆಬಳೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಅ 14ರಂದು ಬೆಳಿಗ್ಗೆ 8.45ಕ್ಕೆ ಬಿಳಿ ಮಾರುತಿ ಆಲ್ಟೋ ಕಾರಿನಲ್ಲಿ ಬಂದ ಅಪರಿಚಿತರು ಹಲವು ಮನೆಗಳಿಗೆ ತೆರಳಿ ಚಿಕಿತ್ಸೆ ನೀಡುವ ಬಗ್ಗೆ ಮಾತನಾಡಿದ್ದಾರೆ. ಪಾರ್ಶ್ವವಾಯು ಪೀಡಿತರು, ಮಕ್ಕಳಾಗದ ದಂಪತಿಗಳನ್ನು ಭೇಟಿ ಮಾಡಿ ಹಣ ಕೇಳಿದ್ದಾರೆ. ಕಾರನ್ನು ದೂರದಲ್ಲಿ ನಿಲ್ಲಿಸಿ ಒಂಟಿ ಮನೆಗಳಿಗೆ ವಂಚಕರು ಭೇಟಿ ನೀಡುತ್ತಿದ್ದಾರೆ. `ಬೆಂಗಳೂರಿನ ಸಾಯಿಬಾಬಾ ಆಸ್ಪತ್ರೆಯಿಂದ ಪ್ರಚಾರಕ್ಕೆ ಬಂದಿದ್ದೇವೆ. ಉಚಿತ ಔಷಧಿ ಕೊಡುತ್ತೇವೆ’ ಎಂದು ಹೇಳಿದ ವಂಚಕರು ನಂತರ 40 ಸಾವಿರ ರೂ ಬೇಡಿದ್ದಾರೆ. ಸಾಯಿಬಾಬಾ ಆಸ್ಪತ್ರೆ ಹೆಸರಿನಲ್ಲಿ ಒಂದು ಫೋನ್ ನಂ ಸಹ ನೀಡಿ ನಂಬಿಕೆ ಬರುವಂತೆ ಮಾಡಿದ್ದಾರೆ. `ಸಿಸಿ ಕ್ಯಾಮರಾ ಆಧಾರದಲ್ಲಿ ಕಾರಿನ ಬೆನ್ನು ಹತ್ತಿದರೆ ಆ ವಂಚಕರನ್ನು ಸೆರೆಹಿಡಿಯಲು ಸಾಧ್ಯ’ ಎಂಬುದು ಹೆಬಳೆ ಊರಿನವರ ಮಾತು. ಶಿರಸಿ ನಗರಸಭೆ ಹೆಸರು ಹೇಳಿಯೂ ಕೆಲವರು ವಂಚಿಸುತ್ತಿದ್ದಾರೆ. ನಗರಸಭೆ ಅಧಿಕಾರಿಗಳ ನೆಪದಲ್ಲಿ ಮನೆ ಮನೆಗೆ ಭೇಟಿ ನೀಡಿ ಹಣ ವಸೂಲಿ ಮಾಡುತ್ತಿದ್ದಾರೆ. ಈ ಬಗ್ಗೆ ನಗರಸಭೆಯವರೇ ಪ್ರಕಟಣೆ ನೀಡಿ ಜನರಿಗೆ ಮೋಸ ಹೋಗದಂತೆ ಮನವಿ ಮಾಡಿದ್ದಾರೆ. ಅನುಮಾನಾಸ್ಪದ ವ್ಯಕ್ತಿಗಳ ವಿರುದ್ಧ ದೂರು ದಾಖಲಿಸುವಂತೆಯೂ ನಗರಸಭೆ ಅಧಿಕಾರಿಗಳು ಕೋರಿದ್ದಾರೆ. ಇದರೊಂದಿಗೆ ಶಿರಸಿಯ ಪೊಲೀಸ್ ಇನ್ಸಪೆಕ್ಟರ್ ಹೆಸರಿನಲ್ಲಿಯೂ ನಕಲಿ ಫೋನ್ ಕರೆ ಬರುತ್ತಿದೆ. ಪೊಲೀಸ್ ಅಧಿಕಾರಿ ಎಂದು ಪರಿಚಯಿಸಿಕೊಳ್ಳುವ ಅಪರಿಚಿತರು ಎಫ್‌ಐಆರ್ ದಾಖಲಿಸುವುದಾಗಿ ಬೆದರಿಸುತ್ತಿದ್ದಾರೆ. ಪೊಲೀಸ್ ಅಧಿಕಾರಿಗಳ ಹೆಸರಿನಲ್ಲಿ ಫೋನ್ ಮಾಡುವವರ ಮೊಬೈಲ್ ಸಂಖ್ಯೆ ಜೊತೆ ಪೊಲೀಸರಿಗೆ ಮಾಹಿತಿ ನೀಡಿ ಎರಡು ವಾರ ಕಳೆದರೂ ಕ್ರಮವಾಗಿಲ್ಲ. ಒಟ್ಟಾರೆಯಾಗಿ ಆರೋಗ್ಯ ಇಲಾಖೆ, ನಗರಸಭೆ ಹೆಸರಿನಲ್ಲಿ ವಂಚಿಸುವವರು ಹಾಗೂ ಪೊಲೀಸ್ ಹೆಸರಿನಲ್ಲಿ ಬೆದರಿಕೆ ಒಡ್ಡುವವರ ಜಾಲದ ಹಿಂದೆ ದೊಡ್ಡ ದೊಡ್ಡ ವ್ಯಕ್ತಿಗಳು ಶಾಮೀಲಾಗಿರುವ ಶಂಕೆವ್ಯಕ್ತವಾಗಿದೆ.  ಕಾರವಾರದ ಚಿತ್ತಾಕುಲದಲ್ಲಿ 40 ಸಾವಿರ ರೂ ಕಾಣೆಯಾಗಿದ್ದು ಮಾತ್ರ ಪೊಲೀಸ್ ಪ್ರಕರಣವಾಗಿದ್ದು, ಶಿರಸಿ ನಗರಸಭೆ ಹೆಸರಿನಲ್ಲಿ ವಸೂಲಿ ಮಾಡಿದವರ ಫೋಟೋ-ಮಾಹಿತಿ ಇದ್ದರೂ ಕ್ರಮವಾಗಿಲ್ಲ. ಭಟ್ಕಳದಲ್ಲಿ ಆರೋಗ್ಯ ಇಲಾಖೆಯ ಹೆಸರಿನಲ್ಲಿ ವಂಚನೆ ಪ್ರಯತ್ನ ನಡೆದ ಬಗ್ಗೆ ಫೋನ್ ಸಂಖ್ಯೆ ನೀಡಿದರೂ ಅದನ್ನು ಗಂಭೀರವಾಗಿ ಪರಿಗಣಿಸಿಲ್ಲ. ಶಿರಸಿ ಪೊಲೀಸ್ ಇನ್ಸಪೆಕ್ಟರ್ ಹೆಸರಿನಲ್ಲಿ ಬೆದರಿಕೆ ಕರೆಯ ಧ್ವನಿ ಮುದ್ರಣದ ಜೊತೆ ಲಿಖಿತವಾಗಿ ಗಮನಕ್ಕೆ ತಂದರೂ ವಿಚಾರಣೆ ನಡೆದಿಲ್ಲ. ಈ ಎಲ್ಲಾ ಹಿನ್ನಲೆ ಪ್ರಭಾವಿ ವ್ಯಕ್ತಿಗಳೇ ಅಮಾಯಕರನ್ನು ಯಾಮಾರಿಸುವ ಕೆಲಸ ಮಾಡುತ್ತಿರುವ ಅನುಮಾನವ್ಯಕ್ತವಾಗಿದೆ. - [2025 ಅಕ್ಟೊಬರ್ 19ರ ದಿನ ಭವಿಷ್ಯ](https://mobiletime.in/2025/10/prediction-for-october-19-2025/): ಮೇಷ ರಾಶಿ: ದಿನ ನಿತ್ಯದ ಚಟುವಟಿಕೆಗಳಲ್ಲಿ ವಿಶ್ರಾಂತಿ ಅಗತ್ಯ. ಸಮಯ ನಿರ್ವಹಣೆಗೆ ಆದ್ಯತೆ ಕೊಡಿ. ಆತ್ಮಶಕ್ತಿ ಹೆಚ್ಚಿಸಿಕೊಳ್ಳುವದಕ್ಕಾಗಿ ಧ್ಯಾನ ಮಾಡಿ. ವೃಷಭ ರಾಶಿ: ಕುಟುಂಬ ಜೀವನದಲ್ಲಿ ಶಾಂತಿ ಸಿಗುತ್ತದೆ. ನಿಮ್ಮ ವ್ಯಕ್ತಿತ್ವ ಉನ್ನತ ಮಟ್ಟಕ್ಕೆ ಏರಲಿದೆ. ಹೊಸ ವಿಷಯಗಳು ನಿಮ್ಮನ್ನು ಆವರಿಸಲಿದೆ. ಸ್ವಂತ ಕಾರ್ಯದಲ್ಲಿ ಯಶಸ್ಸು ಸಾಧ್ಯವಿದೆ. ಮಿಥುನ ರಾಶಿ: ಶಿಕ್ಷಣ ಮತ್ತು ಕೌಶಲ್ಯಗಳಲ್ಲಿ ಯಶಸ್ಸು ಸಿಗುತ್ತದೆ. ಸ್ನೇಹಿತರ ಜೊತೆ ಹಳೆಯ ಸಂಬAಧಗಳು ಸುಧಾರಿಸುತ್ತದೆ. ಹಣಕಾಸಿನ ನಿರ್ಧಾರಗಳಲ್ಲಿ ಜಾಗ್ರತೆ ಅಗತ್ಯವಿದೆ. ಕರ್ಕ ರಾಶಿ: ವ್ಯಾಪಾರಿಗಳಿಗೆ ಲಾಭ ಸಿಗಲಿದೆ. ಶಾಂತಿ-ನೆಮ್ಮದಿಯ ವಾತಾವರಣ ಕಾಣಲಿದೆ. ಆರೋಗ್ಯದಲ್ಲಿ ಬದಲಾವಣೆ ಆದರೂ ಚಿಂತೆ ಅಗತ್ಯವಿಲ್ಲ. ಯೋಗ ಮಾಡುವುದು ಉತ್ತಮ. ಸಿಂಹ ರಾಶಿ: ವೃತ್ತಿಯಲ್ಲಿ ಮಹತ್ವಪೂರ್ಣ ನಿರ್ಧಾರ ಸಮಯ ಬರಲಿದೆ. ಹೂಡಕೆಯನ್ನು ಮುಂದುವರೆಸಿ. ವ್ಯಾಯಾಮ ಮಾಡುವುದು ಅಗತ್ಯ. ಕನ್ಯಾ ರಾಶಿ: ಹಣ ಖರ್ಚು ಮಾಡುವ ಬದಲು ಉಳಿಸಲು ಪ್ರಯತ್ನಿಸಿ. ಹಿರಿಯರ ಆದರ್ಶಗಳನ್ನು ಪಾಲನೆ ಮಾಡಿದರೆ ನಿಮಗೆ ಯಶಸ್ಸು ಸಿಗಲಿದೆ. ಆರೋಗ್ಯ ಸಮಸ್ಯೆಗಳು ದೂರವಾಗಲಿದೆ. ತುಲಾ ರಾಶಿ: ಹೊಸ ಯೋಜನೆಗಳಿಗೆ ಅನುಕೂಲಕರ ಸಮಯ. ಹಣಕಾಸಿನಲ್ಲಿ ಜಾಗ್ರತೆ ಅಗತ್ಯ. ಮನಸ್ಸು ಶಾಂತವಾಗಿರಲು ಯೋಗ ಮಾಡಿ. ವೃಶ್ಚಿಕ ರಾಶಿ: ಹಣಕಾಸಿನ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಿ. ಉದ್ಯೋಗದಲ್ಲಿ ಕೆಲವು ಕಠಿಣ ಪರಿಸ್ಥಿತಿ ಬರುವ ಲಕ್ಷಣವಿದೆ. ಗೆಳೆಯರ ಜೊತೆ ಸಮಯ ಕಳೆಯಿರಿ. ವ್ಯಾಯಾಮ ಮತ್ತು ಆರೋಗ್ಯದ ಕಡೆ ಗಮನ ನೀಡಿ. ಧನು ರಾಶಿ: ಆರೋಗ್ಯದಲ್ಲಿ ಚೇತರಿಕೆ ಆಗಲಿದೆ. ವಿದ್ಯಾಭ್ಯಾಸಕ್ಕೆ ಹೆಚ್ಚು ಗಮನ ಕೊಡಿ. ಗೆಳೆಯರೊಂದಿಗೆ ಹೊಸ ಅನುಭವಗಳು. ಕುಟುಂಬದವರ ಜೊತೆ ಸರಿಯಾಗಿ ಮಾತನಾಡುವುದು ಅಗತ್ಯ. ಮಕರ ರಾಶಿ: ಕಾರ್ಯಕ್ಷೇತ್ರದಲ್ಲಿ ಸಾಧನೆ ಸಾಧ್ಯವಿದೆ. ಸಮಸ್ಯೆಗಳು ಧೈರ್ಯ ಮತ್ತು ಶಕ್ತಿ ಸಹಾಯದಿಂದ ಬಗೆಹರಿಯಲಿದೆ. ಕೋಪ ಒಳ್ಳೆಯದಲ್ಲ. ಕುಂಭ ರಾಶಿ: ಹಣಕಾಸು ವಿಷಯದಲ್ಲಿ ತಪ್ಪು ನಿರ್ಧಾರ ಮಾಡಬೇಡಿ. ವ್ಯವಹಾರಗಳನ್ನು ವಿಶ್ವಾಸದಿಂದ ವಿಸ್ತರಿಸಿ. ತಪ್ಪು ನಿರ್ಧಾರಗಳನ್ನು ಮಾಡಬೇಡಿ. ಮೀನ ರಾಶಿ: ಕಲಾತ್ಮಕ ಚಟುವಟಿಕೆಗಳು ಯಶಸ್ಸು ಕಾಣಲಿದೆ. ನಿರಂತರ ಶ್ರಮಕ್ಕೆ ಫಲ ಸಿಗಲಿದೆ. ಮದ್ಯ ಸೇವನೆ ನಿಮ್ಮ ಆರೋಗ್ಯಕ್ಕೆ ಒಳ್ಳೆಯದಲ್ಲ. - [ಹದಗೆಟ್ಟ ರಸ್ತೆಗೆ ಇಲ್ಲ ದುರಸ್ಥಿ ಭಾಗ್ಯ: ಕಾರವಾರ ಜನರಿಂದ ಹೊಂಡದ ವಿರುದ್ಧ ಹೋರಾಟ!](https://mobiletime.in/2025/10/no-hope-for-repair-of-the-deteriorated-road-karwar-people-fight-against-potholes/): ಕಾರವಾರ ನಗರದಲ್ಲಿ ಹಾದುಹೋಗಿರುವ ರಸ್ತೆಗಳ ಅವ್ಯವಸ್ಥೆ ಖಂಡಿಸಿ ಜನ ಪ್ರತಿಭಟಿಸಿದ್ದಾರೆ. ನಗರಸಭೆ ಕಾರ್ಯವೈಖರಿಯ ವಿರುದ್ಧ ಸಿಡಿದೆದ್ದಿದ್ದಾರೆ. ಕಾರವಾರ ನಗರದ ಪ್ರಮುಖ ರಸ್ತೆಗಳಲ್ಲಿ ಒಂದಾದ ಹಬ್ಬುವಾಡ-ಕೈಗಾ ರಸ್ತೆ ವಾಹನ ಓಡಾಟಕ್ಕೆ ಯೋಗ್ಯವಾಗಿಲ್ಲ. ಪಾದಚಾರಿಗಳು ಸಹ ಇಲ್ಲಿ ಎಡವಿ ಬೀಳುವಷ್ಟರ ಮಟ್ಟಿಗೆ ಹೊಂಡಗಳು ತುಂಬಿದ್ದು, ಇದೇ ಜನರ ಆಕ್ರೋಶಕ್ಕೆ ಕಾರಣವಾಗಿದೆ. ಅದರಲ್ಲಿಯೂ ನಿತ್ಯ ನೂರಾರು ಬಾರಿ ಈ ರಸ್ತೆಯಲ್ಲಿ ಓಡಾಡುವ ರಿಕ್ಷಾ ಚಾಲಕರು ಸಮಸ್ಯೆ ಅನುಭವಿಸುತ್ತಿದ್ದಾರೆ. ರಿಕ್ಷಾದ ಚಕ್ರಗಳು ಮುಳುಗುವಷ್ಟು ಆಳ-ಅಗಲದ ಗುಂಡಿಗಳು ಇಲ್ಲಿವೆ. `ಗುಂಡಿಗಳಿAದ ಕೂಡಿದ ರಸ್ತೆಯಿಂದ ಆಕ್ರೋಶಗೊಂಡ ಕಾರವಾರದ ಜನ ಪಾದಯಾತ್ರೆ ನಡೆಸಿದ್ದು, ನಗರಸಭೆಗೆ ಆಗಮಿಸಿ ಮುತ್ತಿಗೆ ಹಾಕಿದ್ದಾರೆ. ಕಾರವಾರ-ಹಬ್ಬುವಾಡ-ಕೈಗಾ ಅಣು ಘಟಕಕ್ಕೆ ತೆರಳುವ ಈ ರಸ್ತೆಯಲ್ಲಿ ರೈಲು ನಿಲ್ದಾಣ ಬರುತ್ತದೆ. ವಿವಿಧ ಕಡೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆ ಹದಗೆಟ್ಟಿದ್ದರಿಂದ ಎಲ್ಲರೂ ತೊಂದರೆ ಅನುಭವಿಸುತ್ತಿದ್ದಾರೆ’ ಎಂದು ಪ್ರತಿಭಟನಾಕಾರರು ಆಕ್ರೋಶವ್ಯಕ್ತಪಡಿಸಿದರು. `ತಿಂಗಳ ಹಿಂದೆ ಪ್ರತಿಭಟನೆ ನಡೆಸಿದರೂ ಪ್ರಯೋಜನವಾಗಿಲ್ಲ. ಐದೇ ದಿನದಲ್ಲಿ ರಸ್ತೆ ಸರಿಪಡಿಸಿಕೊಡುವುದಾಗಿ ಹೇಳಿದ ಭರವಸೆಯೂ ಈಡೇರಿಲ್ಲ’ ಎಂದು ಕಿಡಿಕಾರಿದರು. `ಹದಗೆಟ್ಟ ರಸ್ತೆಯಿಂದ ವಿದ್ಯಾರ್ಥಿಗಳು ಸಮಸ್ಯೆ ಅನುಭವಿಸುತ್ತಿದ್ದಾರೆ. ವೃದ್ಧರು ಹಾಗೂ ಅಸಾಯಕರ ಪರಿಸ್ಥಿತಿ ಶೋಚನೀಯವಾಗಿದೆ. ಸುಂಕೇರಿ, ಕೋಡಿಭಾಗ್ ಭಾಗದ ರಿಕ್ಷಾ ಚಾಲಕರು ಈ ರಸ್ತೆಗೆ ಹೋಗಲು ಹೆದರುತ್ತಾರೆ’ ಎಂದು ಜನ ವಿವರಿಸಿದರು. ರಸ್ತೆ ಹಾಳಾಗಿದ್ದರಿಂದ ಪದೇ ಪದೇ ವಾಹನ ಹಾಳಾಗುತ್ತಿರುವ ಬಗ್ಗೆಯೂ ವಿವರಿಸಿದರು. `ಮೂರು ಬಾರಿ ಗುಂಡಿ ತುಂಬುವ ಕೆಲಸ ಮಾಡಿದರೂ ಮಳೆಯಿಂದ ಅದು ಹಾಳಾಗಿದೆ. ಸದ್ಯ 15 ಕೋಟಿ ಅನುದಾನದಲ್ಲಿ ಆಯ್ದ ಸ್ಥಳಗಳಲ್ಲಿ ನೂತನ ರಸ್ತೆ ನಿರ್ಮಿಸಲು ಟೆಂಡರ್ ನೀಡಲಾಗಿದೆ. ರಾಜ್ಯ ಹೆದ್ದಾರಿ ಅಭಿವೃದ್ಧಿ ಇಲಾಖೆಯಿಂದದ ಗುತ್ತಿಗೆ ನೀಡಲಾಗಿದ್ದು, ಜಿ ಕೆ ರಾಮ್ ಕನ್‌ಸ್ಟ್ರಕ್ಶನ್ ಕಂಪನಿ ಅಭಿವೃದ್ಧಿ ಕೆಲಸ ಮಾಡಲಿದೆ’ ಎಂದು ನಗರಸಭೆ ಅಧಿಕಾರಿಗಳು ಸಮಜಾಯಿಶೀ ನೀಡಿದರು. - [ಕುಮಟಾ ಆಸ್ಪತ್ರೆಯಲ್ಲಿ ಜನವೋ ಜನ: ಶಿರಸಿಯಿಂದ ಹೊರಟ ಬಸ್ಸು ಕಂದಕ ಸೇರಿತು!](https://mobiletime.in/2025/10/crowds-at-kumta-hospital-bus-from-sirsi-falls-into-ditch/): ಶಿರಸಿ-ಕುಮಟಾ ಮಾರ್ಗವಾಗಿ ಸಂಚರಿಸುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ಸು ವಡ್ಡಿಘಾಟ್ ತಿರುವಿನಲ್ಲಿ ಮೂರು ಬಾರಿ ಪಲ್ಟಿಯಾಗಿದೆ. ಬಸ್ಸು ಕಂದಕಕ್ಕೆ ಬಿದ್ದಿದ್ದರಿಂದ 49 ಪ್ರಯಾಣಿಕರಿಗೆ ಪೆಟ್ಟಾಗಿದೆ. ಶನಿವಾರ ಸಂಜೆ ಈ ಬಸ್ಸು ಬಳ್ಳಾರಿಯಿಂದ ಶಿರಸಿಗೆ ಆಗಮಿಸಿತ್ತು. ಅದಾದ ನಂತರ ಕುಮಟಾಗೆ ಹೋಗಬೇಕಿದ್ದ ಬಸ್ಸು ವಡ್ಡಿಘಾಟ್ ಮಾರ್ಗವಾಗಿ ತೆರಳಿತು. ಶಿರಸಿ-ಕುಮಟಾ ಹೆದ್ದಾರಿ ಕಾಮಗಾರಿ ನಡೆಯುತ್ತಿರುವ ಕಾರಣ ಬಸ್ಸನ್ನು ಕಾಡು ದಾರಿ ಮೂಲಕ ಸಾಗಿಸಲಾಯಿತು. ಬಸ್ಸಿನ ತುಂಬ ಪ್ರಯಾಣಿಕರಿದ್ದರು. ಅಪಾಯಕಾರಿ ತಿರುವುಗಳಿರುವ ಪ್ರದೇಶದಲ್ಲಿ ಬಸ್ಸು ಚಾಲಕನ ನಿಯಂತ್ರಣ ತಪ್ಪಿತು. ದಟ್ಟ ಕಾಡಿನ ಪ್ರದೇಶದಲ್ಲಿ ಕತ್ತಲು ಆವರಿಸಿದ್ದು, ಬಸ್ಸು ರಸ್ತೆ ಬಿಟ್ಟು ಕಂದಕದ ಕಡೆ ವಾಲಿತು. ಬಸ್ಸಿನ ಜೊತೆ ಅದರ ಒಳಗಿದ್ದ ಪ್ರಯಾಣಿಕರು ಮೂರು ಬಾರಿ ಪಲ್ಟಿಯಾದರು. ಸಂಜೆ 7ಗಂಟೆ ಅವಧಿಗೆ ಬಸ್ಸು ಕಂದಕಕ್ಕೆ ಬೀಳುವಾಗ ಪ್ರಯಾಣಿಕರು ಜೋರಾಗಿ ಕೂಗಿದರು. ಬಸ್ಸಿನ ಚಾಲಕ ಸಹ ಪೆಟ್ಟು ಮಾಡಿಕೊಂಡಿದ್ದರಿoದ ಮತ್ತೆ ಬಸ್ಸನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳಲು ಸಾಧ್ಯವಾಗಲಿಲ್ಲ. ಬಸ್ಸು ಪಲ್ಟಿಯಾದರೂ ಸಹ ಪ್ರಯಾಣಿಕರು ತಮ್ಮ ಜೀವವನ್ನು ಗಟ್ಟಿಯಾಗಿ ಹಿಡಿದುಕೊಂಡರು. ಗಾಯಗೊಂಡ ಪ್ರಯಾಣಿಕರನ್ನು ಸ್ಥಳೀಯರು ಬಸ್ಸಿನಿಂದ ಹೊರತೆಗೆದರು. ಸದ್ಯ ವಿವಿಧ ವಾಹನಗಳ ಮೂಲಕ ಗಾಯಗೊಂಡವರನ್ನು ಅಂಕೋಲಾ ಮತ್ತು ಕುಮಟಾ ಆಸ್ಪತ್ರೆಗೆ ಸಾಗಿಸಲಾಗಿದೆ. ಪೊಲೀಸರ ಜೊತೆ ಸಾರಿಗೆ ಇಲಾಖೆಯವರು ಸ್ಥಳಕ್ಕೆ ತೆರಳಿದ್ದಾರೆ. - [ಆಸ್ಪತ್ರೆಯಿಂದ ಓಡಿದ.. ಬಸ್ಸಿನಿಂದ ಹಾರಿದ: ನಡೆದು ಮನೆ ಸೇರುವ ಮುನ್ನ ರೈಲಿನಡಿಗೆ ಬಿದ್ದು ಸಾವನಪ್ಪಿದ!](https://mobiletime.in/2025/10/he-ran-away-from-the-hospital-jumped-off-the-bus-before-he-could-walk-home-he-fell-under-a-train-and-died/): ವಿಪರೀತ ಸರಾಯಿ ಸೇವನೆಯಿಂದ ಅನಾರೋಗ್ಯಕ್ಕೆ ಒಳಗಾಗಿದ್ದ ಅಂಕೋಲಾದ ಯುವಕನನ್ನು ಕುಟುಂಬದವರು ಕಾರವಾರದ ಆಸ್ಪತ್ರೆಗೆ ಸೇರಿಸಿದ್ದು, ಆಸ್ಪತ್ರೆಯಲ್ಲಿ ಗಲಾಟೆ ಮಾಡಿ ಹೊರಬಿದ್ದ ಅವರು ರೈಲಿಗೆ ಸಿಲುಕಿ ಸಾವನಪ್ಪಿದ್ದಾರೆ. ಅಂಕೋಲಾದ ಅಡಿಗೋಣ ಬಳಿಯ ಹೆಗ್ರೆಯ ನಾಗೇಶ ಪುಕ್ಕಾ ಗೌಡ (27) ಅವರು ಕೂಲಿ ಕೆಲಸ ಮಾಡಿಕೊಂಡಿದ್ದರು. ಅವರು ತಮ್ಮ ದಿನದ ದುಡಿಮೆಯ ಬಹುಪಾಲು ಹಣವನ್ನು ಸರಾಯಿ ಅಂಗಡಿಗೆ ಸುರಿಯುತ್ತಿದ್ದರು. ಹೀಗಾಗಿ ನಾಗೇಶ ಗೌಡ ಅವರಿಗೆ ಅನಾರೋಗ್ಯ ಕಾಡಿತು. ಅಕ್ಟೊಬರ್ 17ರಂದು ಕುಟುಂಬದವರೆಲ್ಲ ಸೇರಿ ನಾಗೇಶ ಗೌಡ ಅವರನ್ನು ಕಾರವಾರದ ಜಿಲ್ಲಾಸ್ಪತ್ರೆಗೆ ದಾಖಲಿಸಿದರು. ಆದರೆ, ಆಸ್ಪತ್ರೆಯಲ್ಲಿ ಜಗಳ ಮಾಡಿದ ನಾಗೇಶ ಗೌಡ ಅವರು ಅಲ್ಲಿರಲು ಒಪ್ಪಲಿಲ್ಲ. ಚಿಕಿತ್ಸೆಗೆ ಸಹ ಸ್ಪಂದಿಸಲಿಲ್ಲ. ಆಸ್ಪತ್ರೆಯೊಳಗೆ ಗಲಾಟೆ ಮಾಡಿದರು. ನಾಗೇಶ ಗೌಡ ಅವರ ರಂಪಾಟವನ್ನು ಅಲ್ಲಿನ ವೈದ್ಯಕೀಯ ಸಿಬ್ಬಂದಿಗೂ ಸಹಿಸಿಕೊಳ್ಳಲು ಆಗಲಿಲ್ಲ. ನಾಗೇಶ ಗೌಡ ಅವರು ಅಲ್ಲಿದ್ದವರಿಗೆಲ್ಲ ಬೈದು ಆಸ್ಪತ್ರೆಯಿಂದ ಹೊರಬಿದ್ದರು. ಸರಾಯಿ ನಶೆ, ಅನಾರೋಗ್ಯದ ನಡುವೆಯೇ ಅವರು ಅಂಕೋಲಾ ಬಸ್ ಹತ್ತಿದರು. ಅಂಕೋಲಾದಿAದ ಗೋಕರ್ಣಕ್ಕೆ ಬರುವ ಬಸ್ಸಿನಲ್ಲಿದ್ದ ಅವರು ತಳ್ಳಿಗದ್ದೆ ಕ್ರಾಸಿನ ಬಳಿ ಬಸ್ಸಿನಿಂದ ಕೆಳಗೆ ಹಾರಿದರು. ಅಲ್ಲಿಂದ ಮುಂದೆ ರೈಲು ಹಳಿಗಳ ಮೇಲೆ ನಡೆಯಲು ಶುರು ಮಾಡಿದರು. ಸಂಜೆ ವೇಳೆ ಸಂಚರಿಸಿದ ರೈಲು ಅವರಿಗೆ ಗುದ್ದಿದ್ದು, ತಲೆಗೆ ಭಾರೀ ಪ್ರಮಾಣದ ಪೆಟ್ಟು ಮಾಡಿಕೊಂಡರು. ರಾತ್ರಿ ರೈಲು ಹಳಿ ಬಳಿ ಅವರ ಶವ ಕಾಣಿಸಿತು. ತಮ್ಮನ ಸಾವಿನ ಬಗ್ಗೆ ನಾಗಪ್ಪ ಗೌಡ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದು, ಅಂಕೋಲಾ ಪೊಲೀಸರು ಪ್ರಕರಣ ದಾಖಲಿಸಿದರು. - [ಕೂಲಿ ಕಾರ್ಮಿಕನ ಜೊತೆ ಚಾಲಕನ ಹೊಡೆದಾಟ!](https://mobiletime.in/2025/10/driver-fights-with-laborer/): ಕುಮಟಾದ ಕೂಲಿ ಕಾರ್ಮಿಕ ರಾಘವೇಂದ್ರ ಗೌಡ ಹಾಗೂ ಚಾಲಕ ರವಿ ಪಟಗಾರ ಅವರ ನಡುವೆ ಹೊಡೆದಾಟ ನಡೆದಿದೆ. ಕಳೆದ ತಿಂಗಳು ನಡೆದ ಈ ಮಾರಾಮಾರಿ ಇದೀಗ ನ್ಯಾಯಾಲಯದ ಅಂಗಳಕ್ಕೆ ಬಂದು ನಿಂತಿದೆ. ಕುಮಟಾದ ಶೋಕನಮಕ್ಕಿಯಲ್ಲಿ ರಾಘವೇಂದ್ರ ಹೊಸಬು ಗೌಡ ಅವರು ಕೂಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದಾರೆ. ಅದೇ ಊರಿನ ರವಿ ಪರಮೇಶ್ವರ ಪಟಗಾರ ಅವರು ಚಾಲಕರಾಗಿದ್ದಾರೆ. ಈ ಇಬ್ಬರ ನಡುವೆ ಮೊದಲಿನಿಂದಲೂ ದ್ವೇಷವಿದ್ದು, ಪರಸ್ಪರ ಒಬ್ಬರನ್ನು ಕಂಡರೆ ಮತ್ತೊಬ್ಬರಿಗೆ ಆಗುತ್ತಿರಲಿಲ್ಲ. ಹಳೆ ವೈಮನಸ್ಸಿನ ಕಾರಣ ಅವರಿಬ್ಬರು ಒಬ್ಬರ ಬಗ್ಗೆ ಇನ್ನೊಬ್ಬರು ಅಸೂಯೆಯನ್ನು ಹೊಂದಿದ್ದರು. 2025ರ ಸೆಪ್ಟೆಂಬರ್ 10ರಂದು ರಾಘವೇಂದ್ರ ಗೌಡ ಅವರು ಕುಮಟಾ ಪಟ್ಟಣದ ಬಸ್ ನಿಲ್ದಾಣದ ಬಳಿ ಕೆಲಸಕ್ಕೆ ಹೋಗಿದ್ದರು. ಕೆಲಸ ಮುಗಿಸಿ ರಾತ್ರಿ 8 ಗಂಟೆಗೆ ಅವರು ಮೀನು ತರಲು ಪೇಟೆಗೆ ಹೊರಟರು. ಅಲ್ಲಿ ಅವರಿಗೆ ರವಿ ಪಟಗಾರ ಅವರು ಎದುರಾದರು. ಒಬ್ಬರನ್ನು ಒಬ್ಬರು ದುರುಗುಟ್ಟಿ ನೋಡಿದರು. ಇದರಿಂದ ಸಿಟ್ಟಾದ ರವಿ ಪಟಗಾರ್ ಅವರು ರಾಘವೇಂದ್ರ ಗೌಡ ಅವರಿಗೆ ಬೈಯಲು ಶುರು ಮಾಡಿದರು. ರಾಘವೇಂದ್ರ ಗೌಡ ಅವರು ಸಹ ಸುಮ್ಮನಿರಲಿಲ್ಲ. ಪರಿಣಾಮ ಅವರಿಬ್ಬರ ನಡುವೆ ಕಾಳಗ ಶುರುವಾಯಿತು. ರವಿ ಪಟಗಾರ ಅವರು ರಾಘವೇಂದ್ರ ಗೌಡ ಅವರನ್ನು ಹಿಡಿದು ಥಳಿಸಿದರು. ನೆಲಕ್ಕೆ ದೂಡಿ ಪೆಟ್ಟು ಮಾಡಿದರು. `ಕೊಚ್ಚಿ ಹೊಳೆಗೆ ಹೂಳುವೆ’ ಎಂದು ಬೆದರಿಕೆ ಹಾಕಿದರು. ಸೆಪ್ಟೆಂಬರ್ 16ರಂದು ರಾಘವೇಂದ್ರ ಗೌಡ ಅವರು ಇದನ್ನು ಪೊಲೀಸರ ಬಳಿ ಹೇಳಿದರು. ಪೊಲೀಸರು ಅವರಿಬ್ಬರ ದ್ವೇಷ ಶಮನ ಮಾಡುವುದಕ್ಕಾಗಿ ರಾಜಿಗೆ ಮುಂದಾದರು. ಆದರೆ, ರಾಘವೇಂದ್ರ ಗೌಡ ಅದಕ್ಕೆ ಒಪ್ಪದೇ ನ್ಯಾಯಾಲಯದ ಮೊರೆ ಹೋಗಿದ್ದು, ನ್ಯಾಯಾಲಯದ ಸೂಚನೆ ಮೇರೆಗೆ ಕುಮಟಾ ಪೊಲೀಸರು ಇದೀಗ ಪ್ರಕರಣ ದಾಖಲಿಸಿದ್ದಾರೆ. - [ಶ್ರಮಜೀವಿಗೆ ಕೋಳಿ ಹಿಕ್ಕಿ ಕಳುಹಿಸಿದ ಸರ್ಕಾರ!](https://mobiletime.in/2025/10/the-government-sent-chicken-to-the-working-class/): ದುಡಿಯುವ ಕೈಗಳಿಗೆ ಕೆಲಸ ನೀಡುವುದಕ್ಕಾಗಿ ಕೇಂದ್ರ ಸರ್ಕಾರ ವಿವಿಧ ತರಬೇತಿ ನೀಡುತ್ತಿದ್ದು, ವಿಶ್ವಕರ್ಮ ಯೋಜನೆ ಅಡಿ ತರಬೇತಿಪಡೆದ ಮಹಿಳೆಯೊಬ್ಬರಿಗೆ ಸರ್ಕಾರದಿಂದ ಕೋಳಿ ಹಿಕ್ಕಿ ತುಂಬಿದ ಬ್ಯಾಗಿನ ಉಡುಗರೆ ಸಿಕ್ಕಿದೆ! ಅಂಕೋಲಾದ ಪೂಜಗೇರಿಯ ಅಶ್ವಿನಿ ಗಾಂವ್ಕರ್ ಅವರು ಆನ್‌ಲೈನ್ ಮೂಲಕ ವಿಶ್ವಕರ್ಮ ಯೋಜನೆಯ ತರಬೇತಿಗಾಗಿ ಅರ್ಜಿ ಹಾಕಿದ್ದರು. ಕಾರವಾರದಲ್ಲಿ ನಡೆದ ತರಬೇತಿಯಲ್ಲಿಯೂ ಅವರು ಭಾಗವಹಿಸಿದ್ದರು. ಆರು ದಿನಗಳ ಕಾಲ ತರಬೇತಿಪಡೆದ ಅವರು ಅಲಂಕಾರಿಕ ವಸ್ತು ಸಿದ್ದಪಡಿಸುವ ಬಗ್ಗೆ ಕೌಶಲ್ಯ ಅಳವಡಿಸಿಕೊಂಡರು. ಅದಾದ ನಂತರ ಅವರಿಗೆ ಸರ್ಕಾರದಿಂದಲೇ ವಿಶೇಷ ಕಿಟ್ ಒದಗಿಸುವ ಭರವಸೆ ಸಿಕ್ಕಿತು. ತರಬೇತಿ ಮುಗಿಸಿ ಮನೆಗೆ ಬಂದ ತರುವಾಯ ಅಶ್ವಿನಿ ಗಾಂವ್ಕರ್ ಅವರಿಗೆ ಅಂಚೆ ಕಚೇರಿಯಿಂದ ಫೋನ್ ಬಂದಿತು. `ತಮ್ಮ ಹೆಸರಿಗೆ ಪಾರ್ಸಲ್ ಬಂದಿದೆ’ ಎಂದು ಅಂಚೆ ಇಲಾಖೆಯವರು ತಿಳಿಸಿದರು. ಅದರಂತೆ ರಿಕ್ಷಾ ಮಾಡಿಕೊಂಡು ಅವರು ಅಂಚೆ ಕಚೇರಿಗೆ ಹೋದರು. ಅಲ್ಲಿದ್ದ ಪಾರ್ಸಲ್’ನ್ನು ಬಿಡಿಸಿಕೊಂಡರು. ಹರಿದ ಬ್ಯಾಗು ತೆರೆದು ನೋಡಿದಾಗ ಅದರಲ್ಲಿ ಬರಪೂರ ಕೋಳಿ ಹಿಕ್ಕಿಗಳಿದ್ದವು. ಅದರ ಜೊತೆಯಿದ್ದ ಬಣ್ಣದ ಕಾಗದ, ಸೂಚಿ, ಕತ್ತರಿ, ಮಣಿ ಹಾಗೂ ರಿಬ್ಬನ್ ಸಹ ತುಂಡು ತುಂಡಾಗಿದ್ದವು! ಸರ್ಕಾರದಿAದ ಬಂದ ಪುಕ್ಕಟ್ಟೆ ಬ್ಯಾಗ್ ತರಲು ಪೂಜಗೇರಿಯಿಂದ ಅಂಚೆ ಕಚೇರಿಯವರೆಗೆ ರಿಕ್ಷಾ ಮಾಡಿ ಹೋಗಿದ್ದು ಅದರಲ್ಲಿದ್ದ ವಸ್ತುಗಳಿಗಿಂತಲೂ ದುಬಾರಿಯಾಗಿದ್ದವು. ಹೀಗಾಗಿ ಪೆಚ್ಚು ಮೋರೆಯೊಂದಿಗೆ ಅಶ್ವಿನಿ ಗಾಂವ್ಕರ್ ಅವರು ಗ್ರಾಮ ಪಂಚಾಯತ ಕಚೇರಿಗೆ ಬಂದು ಆದ ಅವಾಂತರಗಳನ್ನು ವಿವರಿಸಿದರು. ಗ್ರಾಮ ಪಂಚಾಯತದವರೇ ಅಶ್ವಿನಿ ಅವರನ್ನು ಈ ಯೋಜನೆಗೆ ಶಿಫಾರಸ್ಸು ಮಾಡಿದ್ದು, ಅಲ್ಲಿನವರು ಸಹ ಕೋಳಿ ಹಿಕ್ಕಿ ನೋಡಿ ಬೇಸರವ್ಯಕ್ತಪಡಿಸಿದರು. ಸರ್ಕಾರದಿಂದ ಕೋಳಿ ಹಿಕ್ಕಿ ಸ್ವೀಕರಿಸಿದ ಅಶ್ವಿನಿ ಗಾಂವ್ಕರ್ ಹೇಳಿದ್ದೇನು? ಇಲ್ಲಿ ನೋಡಿ.. - [ಖಾಕಿ ಮೊರೆಹೋದ ಕರಿಕೋಟು!](https://mobiletime.in/2025/10/a-black-coat-that-turned-khaki/): ನೀತಿ-ನಿಯಮಗಳನ್ನು ಪಾಲಿಸದೇ ಅರಣ್ಯ ಅತಿಕ್ರಮಣದಾರರನ್ನು ಪದೇ ಪದೇ ಒಕ್ಕಲೆಬ್ಬಿಸಲಾಗುತ್ತಿರುವುದನ್ನು ವಿರೋಧಿಸಿದ ನ್ಯಾಯವಾದಿ ರವೀಂದ್ರ ನಾಯ್ಕ ಅವರು ಈ ದಿನ ಪೊಲೀಸ್ ಅಧೀಕ್ಷಕ ದೀಪಕ ಎಂ ಎನ್ ಅವರನ್ನು ಭೇಟಿ ಮಾಡಿದರು. `ಅರಣ್ಯ ಸಿಬ್ಬಂದಿಗೆ ಬೆಂಬಲ ನೀಡುವ ಬದಲು ಅರಣ್ಯ ಅತಿಕ್ರಮಣದಾರರಿಗೆ ರಕ್ಷಣೆ ಕೊಡಿ’ ಎಂದು ಅವರು ಪೊಲೀಸ್ ಅಧೀಕ್ಷಕರಲ್ಲಿ ಮನವಿ ಮಾಡಿದರು. ವಿವಿಧ ಸಂಘಟನೆ ಮುಖ್ಯಸ್ಥರ ಜೊತೆ ಪೊಲೀಸ್ ಅಧೀಕ್ಷಕ ದೀಪನ್ ಎಂ ಎನ್ ಅವರು ಶಿರಸಿಯಲ್ಲಿ ಸಭೆ ನಡೆಸಿದ್ದು, ಈ ವೇಳೆ ರವೀಂದ್ರ ನಾಯ್ಕ ಅವರು ಅರಣ್ಯ ಅತಿಕ್ರಮಣದಾರರ ಪರವಾಗಿ ಮಾತನಾಡಿದರು `ಕಾನೂನು ವಿಧಿವಿಧಾನ ಅನುಸರಿಸದೇ ಅತಿಕ್ರಮಣದಾರರನ್ನು ಒಕ್ಕಿಲೆಬ್ಬಿಸಲಾಗುತ್ತಿದೆ. ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಇದನ್ನು ಖಂಡಿಸುತ್ತಿದ್ದು, ಪೊಲೀಸರು ತಮ್ಮ ನೆರವಿಗೆ ಬರಬೇಕು’ ಎಂದವರು ಒತ್ತಾಯಿಸಿದರು. `ಅರಣ್ಯವಾಸಿ ಹಾಗೂ ಅರಣ್ಯ ಸಿಬ್ಬಂದಿ ನಡುವೆ ಪದೇ ಪದೇ ಗಲಾಟೆ ನಡೆಯುತ್ತಿದೆ. ಅರಣ್ಯ ಸಿಬ್ಬಂದಿ ಅನಗತ್ಯವಾಗಿ ಅರಣ್ಯವಾಸಿಗಳ ಸಾಗುವಳಿ ಕ್ಷೇತ್ರಕ್ಕೆ ಆತಂಕ ಮಾಡುತ್ತಿದ್ದಾರೆ’ ಎಂದವರು ದೂರಿದರು. `ಮಾನವೀಯ ಮೌಲ್ಯದ ಆಧಾರದಲ್ಲಿ ಭೂಮಿ ಹಕ್ಕಿನ ಕಾನೂನು ಬದ್ಧ ಹೋರಾಟಕ್ಕೆ ಪೊಲೀಸರ ಸಹಕಾರ ಸಿಗುತ್ತದೆ’ ಎಂದು ಪೋಲಿಸ್ ವರಿಷ್ಠ ಅಧಿಕಾರಿ ದೀಪನ ಎಂ ಎನ್ ಅವರು ಪ್ರತಿಕ್ರಿಯಿಸಿದರು. ಹೆಚ್ಚುವರಿ ಜಿಲ್ಲಾ ಪೋಲಿಸ್ ಅಧೀಕ್ಷಕ ಜಗದೀಶ ನಾಯ್ಕ, ಡಿವೈಎಸ್ಪಿ ಗೀತಾ ಪಾಟೀಲ್ ಅವರ ಜೊತೆಗಿದ್ದರು. - [ಸರ್ಕಾರದ ಶವಯಾತ್ರೆಯಲ್ಲಿ ಭಾಗವಹಿಸಿದ ಮಾರುತಿ ಗುರೂಜಿ!](https://mobiletime.in/2025/10/maruti-guruji-participated-in-the-governments-funeral-procession/): ಶರಾವತಿ ಪಂಪ್ ಸ್ಟೋರೆಜ್ ವಿಷಯವಾಗಿ ಉಗ್ರ ಹೋರಾಟಕ್ಕೆ ಕರೆ ನೀಡಿರುವ ಹೊನ್ನಾವರ ಬಂಗಾರಮಕ್ಕಿಯ ಮಾರುತಿ ಗುರೂಜಿ ಅವರು ನೆರೆಜಿಲ್ಲೆ ಸಾಗರ ಪ್ರವಾಸ ಮಾಡಿದ್ದಾರೆ. ಅಲ್ಲಿ 12 ದಿನಗಳಿಂದ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಾರೆ. ಶರಾವತಿ ಪಂಪ್ ಸ್ಟೋರೇಜ್ ಯೋಜನೆ ವಿರೋಧಿಸಿ ರೈತ ಸಂಘದವರು ಪ್ರತಿಭಟನೆ ಮಾಡುತ್ತಿದ್ದು, ಅದಕ್ಕೆ ಮಾರುತಿ ಗುರೂಜಿ ಬೆಂಬಲ ನೀಡಿದ್ದಾರೆ. `ಪರಿಸರಕ್ಕೆ ಮಾರಕವಾದ ಈ ಯೋಜನೆ ಯಾವುದೇ ಕಾರಣಕ್ಕೂ ಅನುಷ್ಠಾನಕ್ಕೆ ಬಿಡಲ್ಲ’ ಎಂದು ಮಾರುತಿ ಗುರೂಜಿ ಗದರಿದ್ದಾರೆ. ಈ ವೇಳೆ ಪ್ರತಿಭಟನಾಕಾರರು ಅಣಕು ಶವಯಾತ್ರೆ ನಡೆಸಿದ್ದು, ಅದರಲ್ಲಿಯೂ ಮಾರುತಿ ಗುರೂಜಿ ಭಾಗವವಹಿಸಿದ್ದಾರೆ. ಆ ಮೂಲಕ ಸರ್ಕಾರದ ವಿರುದ್ಧ ತಮ್ಮ ಆಕ್ರೋಶವ್ಯಕ್ತಪಡಿಸಿದ್ದಾರೆ. ಅಪರೂಪದ ವನ್ಯ ಸಂಪತ್ತುಹೊoದಿರುವ ಹೊನ್ನಾವರ ಭಾಗದಲ್ಲಿ ೧೬ ಸಾವಿರ ಮರಗಳನ್ನು ಕಡಿದು ಶರಾವತಿ ಪಂಪ್ ಸ್ಟೋರೇಜ್ ಯೋಜನೆ ನಿರ್ಮಿಸಲು ರಾಜ್ಯ ಸರ್ಕಾರ ಮುಂದಾಗಿದೆ. ಇದರಿಂದ ಆ ಭಾಗದ ಶಿಂಗಳಿಕ ಸೇರಿ ಹಲವು ಬಗೆಯ ವನ್ಯಜೀವಿಗಳ ಸಂತತಿ ನಾಶವಾಗುವ ಆತಂಕ ಎದುರಾಗಿದೆ. ಈ ಹಿನ್ನಲೆ ಎಲ್ಲಡೆ ಈ ಯೋಜನೆಗೆ ಭಾರೀ ಪ್ರಮಾಣದಲ್ಲಿ ವಿರೋಧವ್ಯಕ್ತವಾಗುತ್ತಿದೆ. ಹೊನ್ನಾವರದ ಮಾರುತಿ ಗುರೂಜಿ ಸಹ ಯೋಜನೆಯನ್ನು ಖಡಾಖಂಡಿತವಾಗಿ ತಿರಸ್ಕರಿಸಿದ್ದಾರೆ. ಆನಂದಪುರದ ಮುರುಗಾಮಠದ ಮಲ್ಲಿಕಾರ್ಜುನ ಸ್ವಾಮೀಜಿ ಸಹ ಈ ಯೋಜನೆಗೆ ವಿರೋಧವ್ಯಕ್ತಪಡಿಸಿದ್ದಾರೆ. ಅವರು ಸಹ ಸಾಗರದಲ್ಲಿ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿ ಪ್ರತಿಭಟನಾಕಾರರ ಜೊತೆ ಹೆಜ್ಜೆ ಹಾಕಿದ್ದಾರೆ. `ಅವೈಜ್ಞಾನಿಕ ಯೋಜನೆಯನ್ನು ಸರ್ಕಾರ ಕೈ ಬಿಡಬೇಕು’ ಎಂದು ಆಗ್ರಹಿಸಿದರು. ಸರ್ಕಾರದ ಅಣಕು ಶವಯಾತ್ರೆ ಮುಗಿದ ನಂತರ ಅಲ್ಲಿನ ಜನ ಶವವನ್ನು ಸುಟ್ಟು ಆಕ್ರೋಶವ್ಯಕ್ತಪಡಿಸಿದರು. - [ಚೆಕ್‌ಬೌನ್ಸ್: ಸುಳ್ಳು ಹೇಳಿದವ ಸಿಕ್ಕಿಬಿದ್ದ!](https://mobiletime.in/2025/10/checkbounce-the-liar-was-caught/): ಹಳಿಯಾಳದ ರಾಕೇಶ ವಾಲೇಕರ ಎಂಬಾತರು ರಾಹುಲ್ ಜೆ ವಾಣಿ ಅವರ ವಿರುದ್ಧ ದಾಖಲಿಸಿದ್ದ ಚೆಕ್ ಬೌನ್ಸ್ ಪ್ರಕರಣ ರಾಕೇಶ ವಾಲೇಕರ ಅವರಿಗೆ ಉಲ್ಟಾ ಹೊಡೆದಿದೆ. ಹಳಿಯಾಳದ ನ್ಯಾಯಾಲಯ ರಾಹುಲ್ ವಾಣಿ ಅವರನ್ನು ನಿರ್ದೋಷಿ ಎಂದು ಘೋಷಿಸಿದೆ. ಹಳಿಯಾಳದಲ್ಲಿ ಅಸ್ತಿತ್ವದಲ್ಲೇ ಇರದ ಹನುಮಾನ ಪೈನಾನ್ಸ ಮೂಲಕ ರಾಹುಲ್ ವಾಣಿ ಎಂಬುವವರು 4.60 ಲಕ್ಷ ರೂ ಹಣಪಡೆದು 6 ಲಕ್ಷ ರೂ ಮೌಲ್ಯದ ಚೆಕ್ ನೀಡಿದ್ದು, ಅದು ಅಮಾನ್ಯವಾದ ಬಗ್ಗೆ ರಾಕೇಶ ವಾಲೇಕರ ಅವರು ಪ್ರಕರಣ ದಾಖಲಿಸಿದ್ದರು. ತಾನು ಪೈನಾನ್ಸ್ ಶಾಖಾಧಿಕಾರಿಯಾಗಿರುವ ಬಗ್ಗೆ ಅವರು ಹೇಳಿಕೊಂಡಿದ್ದರು. 2025ರಲ್ಲಿ ದಾಖಲಾದ ಪ್ರಕರಣವನ್ನು ಹಳಿಯಾಳದ ಜೆಎಂಎಫ್‌ಸಿ ನ್ಯಾಯಾಲಯದ ಹಿರಿಯ ನ್ಯಾಯಾಧೀಶೆ ಸುಜಾತಾ ಪಾಟೀಲ್ ಅವರು ವಿಚಾರಣೆಗೊಳಪಡಿಸಿ ತೀರ್ಪು ಹೊರಡಿಸಿದರು. ಹನುಮಾನ್ ಫೈನಾನ್ಸ್ ಎಂಬ ಸಂಸ್ಥೆಯನ್ನು 2023ರಲ್ಲಿ ಬಂದ್ ಮಾಡಿರುವುದು ವಿಚಾರಣೆ ವೇಳೆ ಗಮನಕ್ಕೆ ಬಂದಿತು. ಅಲ್ಲಿ ರಾಕೇಶ ವಾಲೇಕರ ಕೆಲಸ ಮಾಡುತ್ತಿರಲಿಲ್ಲ ಎಂಬುದು ಅರಿವಾಯಿತು. ಸುಪ್ರೀಂ ಕೋರ್ಟಿನ ಆದೇಶಗಳನ್ನು ಉಲ್ಲೇಖಿಸಿ ನ್ಯಾಯವಾದಿ ಸಿದ್ದಮ್ಮ ಮಂಜುನಾಥ ಸಾಹುಕಾರ ಅವರು ವಾದ ಮಂಡಿಸಿದ್ದು, ಅದೇ ಆಧಾರದಲ್ಲಿ ರಾಹುಲ್ ವಾಣಿ ಅವರು ಪ್ರಕರಣದಿಂದ ಬಿಡುಗಡೆಯಾದರು. - [ಜೀಪಿಗೆ ಗುದ್ದಿದ ಪೊಲೀಸ್ ಜೀಪ್: ಜೀವ ಉಳಿಸಿದ ಏರ್‌ಬ್ಯಾಗ್!](https://mobiletime.in/2025/10/police-jeep-hits-jeep-airbag-saves-life/): ಯಲ್ಲಾಪುರದ ಎಪಿಎಂಸಿ ತಿರುವಿನಲ್ಲಿ ಶನಿವಾರ ಪೊಲೀಸ್ ವಾಹನ ಅಪಘಾತಕ್ಕೀಡಾಗಿದೆ. ಅಪಘಾತದ ರಭಸಕ್ಕೆ ಅಪಘಾತಕ್ಕೀಡಾದ ಎರಡು ವಾಹನದಲ್ಲಿದ್ದ ಏರ್‌ಬ್ಯಾಗ್ ತೆರೆದಿದ್ದು, ವಾಹನದಲ್ಲಿದ್ದವರು ಅದರಿಂದಲೇ ಜೀವ ಉಳಿಸಿಕೊಂಡಿದ್ದಾರೆ. ಶಿರಸಿಯಿoದ ಯಲ್ಲಾಪುರ ಮಾರ್ಗವಾಗಿ ನ್ಯಾಯಾಧೀಶರೊಬ್ಬರು ಕಾರಿನಲ್ಲಿ ಸಂಚರಿಸುತ್ತಿದ್ದರು. ನ್ಯಾಯಾಧೀಶರ ಭದ್ರತೆಗಾಗಿ ಪೊಲೀಸ್ ಜೀಪು ಮುಂದೆ ಸಂಚರಿಸುತ್ತಿತ್ತು. ಯಲ್ಲಾಪುರ ಪಟ್ಟಣದಿಂದ ಶಿರಸಿ ಮಾರ್ಗವಾಗಿ ಬಂದ ಕಾರೊಂದು ಎಪಿಎಂಸಿ ಕಡೆ ತಿರುಗಿದ್ದು, ವೇಗವಾಗಿದ್ದ ಪೊಲೀಸರ ಜೀಪು ಆ ಕಾರಿಗೆ ಡಿಕ್ಕಿ ಹೊಡೆಯಿತು. ತಕ್ಷಣ ಆ ಕಾರು ಹಾಗೂ ಪೊಲೀಸ್ ಜೀಪಿನ ಏರ್‌ಬ್ಯಾಗ್ ತೆರೆದಿದ್ದರಿಂದ ಎರಡು ವಾಹನದಲ್ಲಿದ್ದವರು ಪ್ರಾಣಾಪಾಯದಿಂದ ಪಾರಾದರು. ಅದಾಗಿಯೂ ಆ ವಾಹನದಲ್ಲಿದ್ದವರು ಅಲ್ಲಲ್ಲಿ ಗಾಯವಾಯಿತು. ಎರಡು ವಾಹನ ಜಖಂ ಆಯಿತು. ಅದಾದ ನಂತರ ಗಾಯಗೊಂಡಿದ್ದ ಪೊಲೀಸರಿಗೆ ಸ್ಥಳೀಯರು ಉಪಚರಿಸಿದರು. ಅಲ್ಲಿದ್ದ ಜನರೇ 108 ಹಾಗೂ ಸ್ಥಳೀಯ ಪೊಲೀಸ್ ಠಾಣೆಗೆ ಫೋನ್ ಮಾಡಿದರು. ನ್ಯಾಯಾಧೀಶರು ಸಹ ಕೆಲಕಾಲ ಅಪಘಾತದ ಸ್ಥಳದಲ್ಲಿದ್ದು, ವಾತಾವರಣ ತಿಳಿಯಾದ ನಂತರ ಮುಂದಿನ ಕೆಲಸಕ್ಕೆ ಹೋದರು. ಗಾಯಗೊಂಡವರನ್ನು ಆಸ್ಪತ್ರೆಗೆ ಸಾಗಿಸಲಾಯಿತು. - [ಡಕಾಯಿತರಿಗೆ ದಕ್ಕಲಿಲ್ಲ ದೇವರ ದುಡ್ಡು!](https://mobiletime.in/2025/10/the-bandits-didnt-get-gods-money/): ಶಿರಸಿ ಹುಲೆಕಲ್ ಬಳಿಯ ಚೌಡೇಶ್ವರಿ ದೇವಿ ದೇವಾಲಯಕ್ಕೆ ನುಗ್ಗಿ ದೇವರ ಒಡವೆ ಹಾಗೂ ಕಾಣಿಕೆ ಹುಂಡಿಯಲ್ಲಿದ್ದ ಹಣ ಕದ್ದವರು ಸಿಕ್ಕಿಬಿದ್ದಿದ್ದಾರೆ. ಪರಶುರಾಮ ಶೆಟ್ಟಿ ಅವರ ದೂರಿನ ಮೇರೆಗೆ ಪಿಐ ಶಶಿಕಾಂತ ವರ್ಮ ಅವರ ತಂಡಕ್ಕೆ ತನಿಖೆ ನಡೆಸಿದ್ದು, ಕಳ್ಳತನವನ್ನೇ ಕಾಯಕವನ್ನಾಗಿಸಿಕೊಂಡಿದ್ದ ಆರೋಪಿಗಳಿಬ್ಬರು ಜೈಲು ಸೇರಿದ್ದಾರೆ. ಶಿವಮೊಗ್ಗದ ಭದ್ರಾವತಿ ಅಂತರಗoಗೆಯ ಬಾಲಕುಮಾರ ವಾಸು ಕೆ ಹಾಗೂ ಮಹಮ್ಮದ್ ಅಲಿಕಾಕಾ ಬಾಲ್ಯ ಸ್ನೇಹಿತರಾಗಿದ್ದರು. ದೊಡ್ಡವರಾದ ಮೇಲೆ ಬಾಲಕುಮಾರ ಅವರು ಬೆಂಗಳೂರು ಸೇರಿದ್ದರು. ಮಹಮದ್ ಅಲಿ ಅವರು ಶಿವಮೊಗ್ಗದಲ್ಲಿಯೇ ವಾಸವಾಗಿದ್ದರು. ಕೆಲ ವರ್ಷದ ನಂತರ ಅವರಿಬ್ಬರು ಒಟ್ಟಿಗೆ ಸೇರಿ ಕಳ್ಳತನದ ವೃತ್ತಿ ಶುರು ಮಾಡಿದರು. ರಾಜ್ಯದ ನಾನಾ ಭಾಗಗಳಿಗೆ ಸಂಚರಿಸಿ ಕಳ್ಳತನ ಮಾಡುವುದನ್ನು ಕಾಯಕವನ್ನಾಗಿಸಿಕೊಂಡರು. ಅದರoತೆ 2025ರ ಸೆಪ್ಟೆಂಬರ್ 10ರ ರಾತ್ರಿ ಅವರಿಬ್ಬರು ಶಿರಸಿಗೆ ಬಂದಿದ್ದರು. ಆ ದಿನ ರಾತ್ರಿ 1.15ರ ಆಸುಪಾಸಿನಲ್ಲಿ ಹುಲೇಕಲ್’ಗೆ ಹೋದ ಅವರು ಹಂಚರ್ತ ಬಳಿಯ ಚೌಡೇಶ್ವರಿ ದೇವಾಲಯದ ಬಾಗಿಲು ಬಡಿದಿದ್ದರು. ದೇವಾಲಯದ ಬಳಿ ಯಾರೂ ಇಲ್ಲದಿರುವುದನ್ನು ಗಮನಿಸಿ ಸ್ಟೀಲ್ ಬಾಗಿಲನ್ನು ಒಡೆದಿದ್ದರು. ದೇವರ ಮೂರ್ತಿ ಮೇಲಿದ್ದ ಬಂಗಾರ ಹಾಗೂ ಬೆಳ್ಳಿ ಆಭರಣಕ್ಕೆ ಅವರಿಬ್ಬರು ಕೈ ಹಾಕಿದ್ದರು. 2.31 ಲಕ್ಷ ರೂ ಮೌಲ್ಯದ ಆಭರಣದ ಜೊತೆ ಕಾಣಿಕೆ ಹುಂಡಿಯಲ್ಲಿದ್ದ 80 ಸಾವಿರ ರೂ ಹಣವನ್ನು ದೋಚಿದ್ದರು. ಕಳ್ಳತನದ ನಂತರ ಸಾಕ್ಷಿನಾಶಕ್ಕೂ ಪ್ರಯತ್ನಿಸಿದ್ದರು. ಶಿರಸಿ ಭೂತಪ್ಪನಕಟ್ಟೆ ಬಳಿಯ ವ್ಯಾಪಾರಿ ಪರಶುರಾಮ ಶೆಟ್ಟಿ ಅವರ ಕುಟುಂಬದವರು ಅನಾದಿಕಾಲದಿಂದಲೂ ಚೌಡೇಶ್ವರಿ ದೇವಿಯ ಆರಾಧಕರಾಗಿದ್ದು, ತಮ್ಮ ಕುಟುಂಬದ ದೇವಾಲಯದಲ್ಲಿ ಕಳ್ಳತನ ನಡೆದಿರುವುದನ್ನು ನೋಡಿ ಆಘಾತಕ್ಕೆ ಒಳಗಾದರು. ದೇವರ ದುಡ್ಡು-ಒಡವೆ ಕಳ್ಳತನವಾದ ಬಗ್ಗೆ ಅವರು ಶಿರಸಿ ಗ್ರಾಮೀಣ ಠಾಣೆ ಪೊಲೀಸರಿಗೆ ದೂರು ನೀಡಿದರು. ಪೊಲೀಸ್ ಅಧೀಕ್ಷಕ ದೀಪನ್ ಎಂ ಎನ್ ಹಾಗೂ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಜಿ ಕೃಷ್ಣಮೂರ್ತಿ, ಜಗದೀಶ್ ಎಂ ಅವರು ಪ್ರಕರಣದ ಬಗ್ಗೆ ಡಿವೈಎಸ್ಪಿ ಗೀತಾ ಪಾಟೀಲ ಅವರ ಬಳಿ ವರದಿ ಕೇಳಿದರು. ಕಳ್ಳರ ಪತ್ತೆಗೆ ಕಾರ್ಯತಂತ್ರ ರೂಪಿಸಿ ಬೆಂಗಳೂರು, ಶಿವಮೊಗ್ಗ, ಭದ್ರಾವತಿ ಸೇರಿ ರಾಜ್ಯದ ನಾನಾ ಕಡೆ ಹುಡುಕಾಟ ನಡೆಸಿದರು. ಶಿರಸಿ ಪಿಐ ಶಶಿಕಾಂತ ವರ್ಮ ಅವರ ತನಿಖಾ ತಂಡಕ್ಕೆ ಶಿರಸಿ ಗ್ರಾಮೀಣ ಪೊಲೀಸ್ ಠಾಣೆಯ ಪಿಎಸ್‌ಐ ಸಂತೋಷಕುಮಾರ ಎಮ್, ಅಶೋಕ ಆರ್ ರಾಠೋಡ ಅವರು ಸೇರಿದರು. ಪೊಲೀಸ್ ಸಿಬ್ಬಂದಿ ಪ್ರಕಾಶ ತಳವಾರ, ಮಹಾದೇವ ನಾಯ್ಕ, ವಿಘ್ನೇಶ್ವರ ಹೆಗಡೆ, ಮಹಾಂತೇಶ್, ಅರುಣಕುಮಾರ್, ದಾವುಲ್ಸಾಬ, ಲಕ್ಷ್ಮಣ, ಚೇತನ, ರವಿಕುಮಾರ್, ಗದಿಗೆಪ್ಪ ಅವರು ವಿವಿಧ ಆಯಾಮಗಳಲ್ಲಿ ಕಳ್ಳರ ಹುಡುಕಾಟ ನಡೆಸಿದರು. ತಾಂತ್ರಿಕ ವಿಭಾಗದ ಸಿಬ್ಬಂದಿ ಉದಯ ಗುನಗಾ ಹಾಗೂ ಬಬನ್ ಕದಂ ಅವರು ಡಕಾಯಿತರ ಸಂಚಲನದ ಬಗ್ಗೆ ತಮ್ಮ ಚಾಣಾಕ್ಷತನದಿಂದ ಮಾಹಿತಿ ಸಂಗ್ರಹಿಸಿದರು. ಈ ಎಲ್ಲಾ ಪೊಲೀಸ್ ಅಧಿಕಾರಿ-ಸಿಬ್ಬಂದಿ ಪ್ರಯತ್ನದಿಂದ ದೇವರ ದುಡ್ಡು ಕದ್ದಿದ್ದ ಬಾಲಕುಮಾರ ವಾಸು ಕೆ ಹಾಗೂ ಮಹಮ್ಮದ್ ಅಲಿಕಾಕಾ ಸಿಕ್ಕಿಬಿದ್ದರು. ಪೊಲೀಸರು ಅವರ ಬಳಿಯಿದ್ದ 1.50 ಲಕ್ಷ ರೂ ಮೌಲ್ಯದ ಬೆಳ್ಳಿ ಆಭರಣದ ಜೊತೆ 60 ಸಾವಿರ ರೂ ಹಣವನ್ನು ಜಪ್ತು ಮಾಡಿದರು. ಕಳ್ಳರಿಬ್ಬರನ್ನು ನ್ಯಾಯಾಲಯಕ್ಕೆ ಒಪ್ಪಿಸಿದರು. - [ಹೆಬ್ಬಾರರಿಗೆ ಸನ್ಮಾನಿಸುವುದು ತಪ್ಪಲ್ಲ!](https://mobiletime.in/2025/11/it-is-not-wrong-to-honor-the-hebbars/): ಯಲ್ಲಾಪುರ ವಿಧಾನಸಭಾ ಕ್ಷೇತ್ರ ಶಾಸಕ ಶಿವರಾಮ ಹೆಬ್ಬಾರ್ ಅವರಿಗೆ ಸನ್ಮಾನಿಸಿದ ಕಾರಣ 10 ವರ್ಷ ಕೋರ್ಟು-ಕೇಸು ಎಂದು ಅಲೆದಾಡಿದ್ದ ರಾಘು ನಾಯ್ಕ ಅವರು ಇದೀಗ ನಿರಾಳರಾಗಿದ್ದಾರೆ. `ಶಿವರಾಮ ಹೆಬ್ಬಾರ್ ಅವರನ್ನು ಸನ್ಮಾನಿಸಿದ್ದು ಅಪರಾಧ ಅಲ್ಲ’ ಎಂದು ನ್ಯಾಯಾಲಯ ಹೇಳಿದೆ! ಶಿವರಾಮ ಹೆಬ್ಬಾರ್ ಅವರ ಅಭಿಮಾನಿಯಾಗಿರುವ ಗುಡ್ನಾಪುರ ಗ್ರಾಮದ ರಾಘು ನಾಯ್ಕ ಅವರು ಬನವಾಸಿ ಭಾಗದ ಗ್ರಾಮ ಪಂಚಾಯತ ಸದಸ್ಯರಾಗಿದ್ದರು. 2015ರ ಫೆಬ್ರವರಿ 8ರಂದು ಬನವಾಸಿಯಲ್ಲಿ ನಡೆದ ಕದಂಬ ಉತ್ಸವದಲ್ಲಿ ಶಿವರಾಮ ಹೆಬ್ಬಾರ್ ಅವರನ್ನು ಸನ್ಮಾನಿಸಿದ್ದರು. ವಿವಿಧ ಅಧಿಕಾರಿ ಹಾಗೂ ಜನಪ್ರತಿನಿಧಿಗಳಿದ್ದ ವೇದಿಕೆಯಲ್ಲಿ ತಹಶೀಲ್ದಾರರೇ ಗಣ್ಯರನ್ನು ಸನ್ಮಾನಿಸಲು ಉದ್ದೇಶಿಸಿದ್ದು, ಆ ಅವಕಾಶ ತಪ್ಪಿದ ಹಿನ್ನಲೆ ರಾಘು ನಾಯ್ಕ ವಿರುದ್ಧ ತಹಶೀಲ್ದಾರ್ ಬಸಪ್ಪ ಪೂಜಾರಿ ಅವರು ಗರಂ ಆಗಿದ್ದರು. ಕದಂಬ ಉತ್ಸವ ಕಾರ್ಯಕ್ರಮ ಮುಗಿದ ನಂತರ ಅನುಮತಿ ಇಲ್ಲದೇ ಸರ್ಕಾರಿ ಕಾರ್ಯಕ್ರಮದ ವೇದಿಕೆ ಪ್ರವೇಶಿಸಿ ಶಿವರಾಮ ಹೆಬ್ಬಾರ್ ಅವರನ್ನು ಸನ್ಮಾನಿಸಿದ ನೆಪವಿರಿಸಿ ರಾಘು ನಾಯ್ಕ ಅವರ ವಿರುದ್ಧ ತಹಶೀಲ್ದಾರ್ ಬಸಪ್ಪ ಪೂಜಾರಿ ಪ್ರಕರಣ ದಾಖಲಿಸಿದ್ದರು. ಸರ್ಕಾರಿ ಕಾರ್ಯಕ್ರಮದಲ್ಲಿ ರಾಜಕೀಯ ಭಾಷಣ ಮಾಡಿದ ಬಗ್ಗೆ ಪೊಲೀಸ್ ಪ್ರಕರಣದಲ್ಲಿ ತಹಶೀಲ್ದಾರ್ ಬಸಪ್ಪ ಪೂಜಾರಿ ಅವರು ದೂರಿದ್ದರು. 10 ವರ್ಷಗಳ ಕಾಲ ಈ ಪ್ರಕರಣ ನ್ಯಾಯಾಲಯದಲ್ಲಿ ವಿಚಾರಣೆ ನಡೆದಿದ್ದು, ಶಿವರಾಮ ಹೆಬ್ಬಾರ್ ಅವರನ್ನು ಸನ್ಮಾನಿಸಿದ ಕಾರಣ ರಾಘು ನಾಯ್ಕ ಅವರು ಕೋರ್ಟು-ಕಚೇರಿ ಅಲೆದಾಟ ಮಾಡಿದರು. ರಾಘು ನಾಯ್ಕ ಅವರು ವೇದಿಕೆಯಲ್ಲಿ ಭಾಷಣ ಮಾಡಿದ ವಿಡಿಯೋ, ಸನ್ಮಾನಿಸಿದ ತುಣುಕುಗಳನ್ನು ಅಧಿಕಾರಿಗಳು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಆದರೆ, ಅವರು ತಪ್ಪು ಮಾಡಿದ್ದಾರೆ ಎಂದು ಸಾಭೀತುಪಡಿಸುವಲ್ಲಿ ಅವರು ವಿಫಲರಾದರು. ಈ ಹಿನ್ನಲೆ ಶಿರಸಿ 1ನೇ ಹೆಚ್ಚುವರಿ ನ್ಯಾಯಾಲಯದ ನ್ಯಾಯಾಧೀಶರಾದ ಅಲ್ತಾಫ್ ಹುಸೇನ್ ಸಾಬ ಅವರು ಮಂಗಳವಾರ ರಾಘು ನಾಯ್ಕ ಅವರನ್ನು ನಿರ್ದೋಶಿ ಎಂದು ಘೋಷಿಸಿದರು. ರಾಘು ನಾಯ್ಕ ಅವರ ಪರವಾಗಿ ಹಿರಿಯ ವಕೀಲ ರವೀಂದ್ರ ನಾಯ್ಕ ಮತ್ತು ಉದಯ ನಾಯ್ಕ ವಾದಿಸಿದ್ದರು. ಸುರೇಖಾ ನಾಯ್ಕ, ಹಾಗೂ ದಿವ್ಯಾ ನಾಯ್ಕ ಅವರು ವಿವಿಧ ಸಾಕ್ಷಿ ಸಂಗ್ರಹಿಸಿ ಸಹಕರಿಸಿದ್ದರು. - [ಅಪಘಾತ: ಕಾಂಗ್ರೆಸ್ ಅಧ್ಯಕ್ಷರಿಗೆ ಆಘಾತ!](https://mobiletime.in/2025/11/accident-congress-president-shocked/): ದಾಂಡೇಲಿಯಲ್ಲಿ ನಡೆದ ಅಪಘಾತದಲ್ಲಿ ಅಲ್ಲಿನ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೋಹನ ಹಲವಾಯಿ ಅವರು ಗಾಯಗೊಂಡಿದ್ದು, ಸದ್ಯ ಅವರು ಆಸ್ಪತ್ರೆ ಸೇರಿದ್ದಾರೆ. ಸ್ಕೂಟಿಯಲ್ಲಿ ತೆರಳುತ್ತಿದ್ದ ಮೋಹನ ಹಲವಾಯಿ ಅವರಿಗೆ ಟಾಕ್ಟರ್ ಡಿಕ್ಕಿಯಾಗಿದೆ. ದಾಂಡೇಲಿ ನಗರದ ಬರ್ಚಿ ರಸ್ತೆಯಲ್ಲಿ ಮಂಗಳವಾರ ಮುಂಜಾನೆ ಮೋಹನ ಹಲವಾಯಿ ಅವರು ಸಂಚರಿಸುತ್ತಿದ್ದರು. ಸ್ಕೂಟಿಯಲ್ಲಿ ಹೋಗುತ್ತಿದ್ದ ಅವರಿಗೆ ವೇಗವಾಗಿ ಬಂದ ಟಾಕ್ಟರ್ ಗುದ್ದಿತು. ಅದಾದ ನಂತರ ಆ ಟಾಕ್ಟರ್ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆಯಿತು. ಸ್ಕೂಟಿಯಲ್ಲಿದ್ದ ಮೋಹನ ಹಲವಾಯಿ ಅವರು ನೆಲಕ್ಕೆ ಬಿದ್ದು ಪೆಟ್ಟು ಮಾಡಿಕೊಂಡರು. ಮೋಹನ ಹಲವಾಯಿ ಅವರು ದಾಂಡೇಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿದ್ದು, ನಗರಸಭೆ ಸದಸ್ಯರಾಗಿಯೂ ಕೆಲಸ ಮಾಡುತ್ತಿದ್ದಾರೆ. ಅಪಘಾತದಲ್ಲಿ ಅವರು ಗಂಭೀರ ಪ್ರಮಾಣದಲ್ಲಿ ಗಾಯಗೊಂಡಿದ್ದಾರೆ. ಅಪಘಾತ ನೋಡಿದ ಜನ ಗಾಯಾಳುವನ್ನು ತಕ್ಷಣ ಆಸ್ಪತ್ರೆಗೆ ಸಾಗಿಸಿದ್ದಾರೆ. ಅವರಿಗೆ ಸದ್ಯ ಚಿಕಿತ್ಸೆ ಮುಂದುವರೆದಿದೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದಾರೆ. - [ಪ್ರೀ.. ಪ್ರೀ ಎಂದು ಪೀಡಿಸಿದವರಿಗೆ ಜೈಲು!](https://mobiletime.in/2025/11/prison-for-those-who-tortured-you-with-pree-pree/): ಮುರುಡೇಶ್ವರದ ಆರ್ ಎನ್ ಎಸ್ ಡಿಪ್ಲೋಮಾ ಕಾಲೇಜಿನ ಉದ್ಯೋಗಿ ಅರುಣಕುಮಾರ ಅವರಿಗೆ ಮುತ್ತಿಡಲು ಬಂದು ಅವರ ಕತ್ತಿನಲ್ಲಿದ್ದ ಚಿನ್ನದ ಸರ ಎಗರಿಸಿದ್ದ ಮಂಗಳಮುಖಿಯರನ್ನು ಪೊಲೀಸರು ಬಂಧಿಸಿದ್ದಾರೆ. ಸಿಸಿ ಕ್ಯಾಮರಾ ದೃಶ್ಯಾವಳಿ ಸಹಾಯದಿಂದ ಮಂಗಳಮುಖಿಯರು ಸಿಕ್ಕಿಬಿದ್ದಿದ್ದಾರೆ. ನವೆಂಬರ್ 2ರ ರಾತ್ರಿ ಬೈಕಿನಲ್ಲಿ ಹೋಗುತ್ತಿದ್ದ ಮಾವಳ್ಳಿ-2ರ ಗುಮ್ಮನಕ್ಕಲ್ ಜಡೆಯನಮನೆಯ ಅರುಣಕುಮಾರ ಭಾಸ್ಕರ ನಾಯ್ಕ (32) ಅವರನ್ನು ಮಂಗಳಮುಖಿಯರು ಅಡ್ಡ ಹಾಕಿದ್ದರು. ಮಂಡ್ಯದ ಅದ್ನಾನ್ ಮಹದಿ, ಮೈಸೂರಿನ ಅಜರ್ ಖಾನ್, ಮಹ್ಮದ್ ಉಸ್ನಾನ, ತಮಿಳುನಾಡಿನ ಮದನ ಪಳನಿ ಸೇರಿ ಅವರನ್ನು ಸರಸಕ್ಕೆ ಕರೆದಿದ್ದರು. `ಹಣ ಇಲ್ಲ’ ಎಂದಾಗ `ನಿನಗೆ ಪ್ರೀ’ ಎಂಬ ಆಫರ್ ನೀಡಿದ್ದರು. ಅದಾದ ನಂತರ ಮೈ ಮುಟ್ಟುತ್ತ ಕತ್ತಿನಲ್ಲಿದ್ದ ಚಿನ್ನದ ಸರ ಅಪಹರಿಸಿ ಪರಾರಿಯಾಗಿದ್ದರು. ಆ ನಾಲ್ಕು ಜನ ಮಂಗಳಮುಖಿಯರ ವಿರುದ್ಧ ಅರುಣಕುಮಾರ ನಾಯ್ಕ ಅವರು ಪೊಲೀಸ್ ದೂರು ನೀಡಿದ್ದರು. ಜನ ನೀಡಿದ ಮಾಹಿತಿ ಹಾಗೂ ಸಿಸಿ ಕ್ಯಾಮರಾ ದೃಶ್ಯಾವಳಿ ಗಮನಿಸಿ ಪೊಲೀಸರು ಮಂಗಳಮುಖಿಯರನ್ನು ಹುಡುಕಿದರು. ಅಂದಾಜು 15 ಗ್ರಾಂ ತೂಕದ 1 ಲಕ್ಷ ರೂ ಮೌಲ್ಯದ ಚೈನ್ ಕಳ್ಳತನ ಮಾಡಿದವರನ್ನು ಮುರುಡೇಶ್ವರ ಪೊಲೀಸರು ಜೈಲಿಗೆ ಕಳುಹಿಸಿದರು. - [ಅರಣ್ಯ ಕಾಯ್ದೆಗೆ ತಾಂತ್ರಿಕ ದೋಷ!](https://mobiletime.in/2025/11/technical-error-in-the-forest-act/): `ಅರಣ್ಯ ಹಕ್ಕು ಕಾಯ್ದೆ ಜಾರಿಗೆ ಬಂದು 17 ವರ್ಷ ಕಳೆದರೂ ಆ ಕಾಯ್ದೆ ಪ್ರಗತಿ ಕಂಡಿಲ್ಲ. ತಾಂತ್ರಿಕ ದೋಷವೇ ಇದಕ್ಕೆ ಕಾರಣ’ ಎಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ಅವರು ಹೇಳಿದ್ದಾರೆ. ಹೊನ್ನಾವರದಲ್ಲಿ ಅರಣ್ಯ ಹಕ್ಕು ಕಾರ್ಯಕರ್ತರ ಸಭೆ ನಡೆಸಿದ ಅವರು `ಕಳೆದ ಆರು ವರ್ಷಗಳಿಂದ ಕಾಯ್ದೆಗೆ ತಾಂತ್ರಿಕ ತೊಡಕು ಕಾಡುತ್ತಿದೆ’ ಎಂದು ವಿವರಿಸಿದರು. `ಸಾಮಾಜಿಕ ನ್ಯಾಯ ಮತ್ತು ಆಹಾರ ಧಾನ್ಯ ಉತ್ಪತ್ತಿ ಉದ್ದೇಶದಿಂದ ಕಾನೂನು ಮತ್ತು ನಿಯಮಾವಳಿ ಜಾರಿಗೆ ಬಂದಿತು. ಕಾನೂನಾತ್ಮಕ ಸಮಸ್ಯೆ ಜಾರಿಯಲ್ಲಿ ಪರಿಪೂರ್ಣ ಕಾನೂನು ಕೊರತೆ ಮೂರು ತಲೆಮಾರಿನ ದಾಖಲೆಗಳಿಗೆ ಆಗ್ರಹ ಕಳೆದ ಆರು ವರ್ಷದಿಂದ ಉಪ ವಿಭಾಗ ಮತ್ತು ಜಿಲ್ಲಾ ಅರಣ್ಯ ಹಕ್ಕು ಸಮಿತಿಗಳಿಗೆ ತಾಲೂಕಾ ಪಂಚಾಯತ್ ಮತ್ತು ಜಿಲ್ಲಾ ಪಂಚಾಯತ್ ಸದಸ್ಯರ ಕೊರತೆಯಿಂದ ಕಾಯಿದೆ ಅನುಷ್ಠಾನಕ್ಕೆ ಹಿನ್ನಡೆಯಾಗಿದೆ’ ಎಂದವರು ವಿವರಿಸಿದರು. `ಉತ್ತರಕನ್ನಡ ಜಿಲ್ಲೆಯಲ್ಲಿ ಶೇ 3ರಷ್ಟು ಅರಣ್ಯವಾಸಿಗಳ ಅರ್ಜಿಗಳಿಗೆ ಸಾಗುವಳಿ ಹಕ್ಕು ದೊರತಿದ್ದು, ಶೇ 88ರಷ್ಟು ಅರ್ಜಿಗಳು ಕಾನೂನಾತ್ಮಕ ತಾಂತ್ರಿಕ ದೋಷದಿಂದ ಅರ್ಜಿಗಳು ತಿರಸ್ಕಾರವಾಗಿದೆ. ಸುಪ್ರೀಂ ಕೊರ್ಟನಲ್ಲಿ ಅರಣ್ಯವಾಸಿಗಳು ಒಕ್ಕಲೆಬ್ಬಿಸುವ ಭೀತಿಯನ್ನು ಎದುರಿಸುತ್ತಿದ್ದಾರೆ’ ಎಂದು ಮಾಹಿತಿ ನೀಡಿದರು. ಸಂಘಟನೆ ಸಂಚಾಲಕ ಮಹೇಶ ನಾಯ್ಕ ಕಾನಕ್ಕಿ, ನಗರಾಧ್ಯಕ್ಷ ಸುರೇಶ ನಾಯ್ಕ, ಪ್ರಮುಖರಾದ ರಾಮ ಮರಾಠಿ, ಸುರೇಶ ನಾಯ್ಕ ನಗರಬಸ್ತೀಕೇರಿ, ಶಾಂತಿ ಗೌಡ ಕಡ್ಲೇ, ಜನಾರ್ದನ್ ಚಂದಾವರ, ಜೋನ್ ಓಡ್ತಾ, ಹರೀಶ್ಚಂದ್ರ ಅನಂತವಾಡಿ, ಥೋಮಸ್ ಮಾಗೋಡ್, ರಜಾಕ್, ದಾವೂದ್ ಸಾಬ, ಚಂದ್ರಹಾಸ ನಾಯ್ಕ, ವಿನೋದ ಯಲಕೊಟಗಿ, ಮಾದೇವ ಮರಾಠಿ, ಅನಿತಾ ಲೋಫೀಸ್, ಗಣೇಶ ನಾಯ್ಕ ಹೊದಕೆ ಶಿರೂರು, ಸಂತಾನ್ ಪಿಂಠೋ ಇದ್ದರು. - [5 ಸಾವಿರಕ್ಕೂ ಹೆಚ್ಚು ಫಲ ಹೊತ್ತ ಕಲ್ಪವೃಕ್ಷ!](https://mobiletime.in/2025/11/a-kalpa-tree-bearing-more-than-5000-fruits/): ಅಂಕೋಲಾದ ಸಮೃದ್ಧ ಮಣ್ಣಿನಲ್ಲಿ ಹುಟ್ಟಿದ ತೆಂಗಿನ ಮರವೊಂದರಲ್ಲಿ ಈ ಬಾರಿ 5 ಸಾವಿರಕ್ಕೂ ಅಧಿಕ ಕಾಯಿ ಬಿಟ್ಟಿದೆ. ಈ ಮರ ನೋಡಿದ ಜನ ಅಚ್ಚರಿಗೆ ಒಳಗಾಗಿದ್ದು, ತಳಿ ಸಂಶೋಧನೆ-ಅಭಿವೃದ್ಧಿಗಾಗಿ ಸಸ್ಯ ತಜ್ಞರು ಆಸಕ್ತಿವಹಿಸಿದ್ದಾರೆ. ಬೊಬ್ರುವಾಡ ಬಳಿಯ ಬೇಳಾಬಂದರಿನಲ್ಲಿನ ಅನಿಲ ನಾಯ್ಕ ಅವರ ಒಡೆತನದಲ್ಲಿ ಈ ಕಲ್ಪವೃಕ್ಷವಿದೆ. 27 ವರ್ಷಗಳ ಹಿಂದೆ ಅನಿಲ ನಾಯ್ಕ ಅವರ ತಂದೆ ರಾಮಾ ನಾಯ್ಕ ಅವರು ನೆಟ್ಟ ಗಿಡ ಇದೀಗ ದೊಡ್ಡದಾಗಿದ್ದು, ಬರಪೂರ ಫಸಲು ನೀಡುತ್ತಿದೆ. ಗಿಡ ನೆಟ್ಟ ಐದು ವರ್ಷಕ್ಕೆ ಫಸಲು ಶುರುವಾಗಿದ್ದು, ಮೊದಲ ಬಾರಿ 60 ತೆಂಗಿನ ಕಾಯಿ ಕಾಣಿಸಿಕೊಂಡಿತ್ತು. ಅದಾದ ನಂತರ ವರ್ಷದಿಂದ ವರ್ಷಕ್ಕೆ ಫಸಲಿನ ಪ್ರಮಾಣ ಹೆಚ್ಚಾಗುತ್ತಿದ್ದು, ಈ ವರ್ಷ 5 ಸಾವಿರಕ್ಕೂ ಅಧಿಕ ತೆಂಗಿನ ಕಾಯಿಗಳು ಮೂಡಿ ಬಂದಿದೆ. ಈ ತೆಂಗಿನ ಮರಕ್ಕೆ ಮೊದಲ ಕೆಲ ವರ್ಷ ನೀರು ಎರೆದಿದ್ದು ಬಿಟ್ಟರೆ ಬೇರೆ ಯಾವುದೇ ಆರೈಕೆ ಮಾಡಿಲ್ಲ. ಈವರೆಗೂ ಯಾವುದೇ ಸಾವಯವ ಅಥವಾ ಗೊಬ್ಬರ ನೀಡಿಲ್ಲ. ಪೌಷ್ಠಕಾಂಶಗಳನ್ನು ನೀಡದಿದ್ದರೂ ಸಹ ಪುಟ್ಟ ಗಿಡ ಇದೀಗ ಹೆಮ್ಮರವಾಗಿ ಬೆಳೆದಿದೆ. ಈ ಅಪರೂಪದ ತೆಂಗಿನ ಮರದಲ್ಲಿ ದೊಡ್ಡ ಪ್ರಮಾಣದ 12 ಗೊಂಚಲುಗಳಿವೆ. ಪ್ರತಿಯೊಂದು ಗೊಂಚಲಲ್ಲಿ 600ಕ್ಕೂ ಹೆಚ್ಚು ಕಾಯಿಗಳು ತುಂಬಿಕೊoಡಿದೆ. ಕಾಯಿಯ ಗಾತ್ರ ಚಿಕ್ಕದಾಗಿದ್ದರೂ ಏಳನೀರು ಅತ್ಯಂತ ರುಚಿಯಾಗಿದೆ. ಈ ಮರದ ತೆಂಗಿನ ಕಾಯಿ ಬಳಸಿ ಮಾಡಿದ ಅಡುಗೆ ಸಹ ಅತ್ಯಂತ ಸ್ವಾದದಿಂದ ಕೂಡಿದೆ. ಡಿಸೆಂಬರ್-ಜನವರಿ ಅವಧಿಯಲ್ಲಿ ಈ ಮರದ ಕಾಯಿಗಳ ಕೊಯ್ಲು ನಡೆಯುತ್ತದೆ. ಅಯ್ಯಪ್ಪ ವೃತದಾರಿಗಳು ಹೆಚ್ಚಿನ ಪ್ರಮಾಣದಲ್ಲಿ ಈ ಕಾಯಿ ಖರೀದಿಸಿ ಇರುಮುಡಿ ಕಟ್ಟಲು ಬಳಸುತ್ತಾರೆ. 10 ಮರ ಕೊಡುವ ಆದಾಯವನ್ನು ಇದು ಒಂದೇ ಮರ ಮಾಲಕರಿಗೆ ನೀಡುತ್ತಿದೆ. ಈ ತೆಂಗಿನ ಮರದ ಬಗ್ಗೆ ಜನದನಿ ಸಸ್ಯ ಸಂಶೋಧನಾ ಕೇಂದ್ರದವರು ಅಧ್ಯಯನಕ್ಕೆ ಮುಂದಾಗಿದ್ದಾರೆ. ಜೊತೆಗೆ ಅದರ ತಳಿ ಅಭಿವೃದ್ಧಿಗೂ ಆಸಕ್ತಿವಹಿಸಿದ್ದಾರೆ. ಈ ತಳಿಗೆ `ಎ ಆರ್ ಗಂಜ್ನಿ ತೆಂಗು’ ಎಂದು ನಾಮಕರಣ ಮಾಡಿದ್ದು, ವಿಶಿಷ್ಠ ತಳಿಯ ತೆಂಗಿನ ಬಗ್ಗೆ ಸಂಶೋಧನೆ ನಡೆಯುತ್ತಿದೆ. - [2025 ನವೆಂಬರ್ 4ರ ದಿನ ಭವಿಷ್ಯ](https://mobiletime.in/2025/11/prediction-for-november-4-2025/): ಮೇಷ ರಾಶಿ: ಮನೆಯಲ್ಲಿ ಕೆಲ ಬದಲಾವಣೆಗಳಾಗಲಿದೆ. ದಾಂಪತ್ಯ ಜೀವನದ ಬಗ್ಗೆ ಗಮನವಿರಲಿ. ಆರೋಗ್ಯ ಚೆನ್ನಾಗಿರುತ್ತದೆ. ಕೆಲಸದಲ್ಲಿ ಯಶಸ್ಸು ಸಿಗಲಿದೆ. ವೃಷಭ ರಾಶಿ: ವಾಹನ, ಭೂಮಿಯ ಖರೀದಿ ಯೋಗವಿದೆ. ಹಣಕಾಸು ಸ್ಥಿತಿ ಉತ್ತಮವಾಗಿರಲಿದೆ. ಹೊಸ ಸಾಲ ಮಾಡಬೇಡಿ. ಕೆಲವು ಕಹಿ ಸುದ್ದಿ ಬರಬಹುದು. ಮಿಥುನ ರಾಶಿ: ಆದಾಯ ಹೆಚ್ಚಳದ ಸಮಯ ಬರಲಿದೆ. ಕೆಲಸದಲ್ಲಿ ಹೆಚ್ಚಿನ ಪ್ರಯತ್ನ ಅಗತ್ಯವಿದೆ. ಶ್ರಮದ ಫಲ ನೀಡುವ ದಿನ ಇದಾಗಿದೆ. ಕರ್ಕ ರಾಶಿ: ವೃತ್ತಿ ಮತ್ತು ವ್ಯವಹಾರದಲ್ಲ ಹೊಸ ಯೋಜನೆಗಳು ಫಲಿಸಲಿದೆ. ಕುಟುಂಬದಲ್ಲಿ ಶಾಂತಿ ಕಾಪಾಡುವುದು ಮುಖ್ಯ. ನಿರುದ್ಯೋಗಿಗಳಿಗೆ ಕೆಲಸ ಸಿಗುವ ಲಕ್ಷಣವಿದೆ. ಸಿಂಹ ರಾಶಿ: ಆರೋಗ್ಯ ಸುಧಾರಣೆ ಆಗಲಿದೆ. ಆರ್ಥಿಕ ಕ್ಷೇತ್ರದಲ್ಲಿ ಸದುಪಯೋಗ ದೊರೆಯಲಿದೆ. ಹೊಸ ಅವಕಾಶಗಳು ಎದುರಾಗುತ್ತವೆ. ಕನ್ಯಾ ರಾಶಿ: ಶ್ರದ್ಧೆ ಮತ್ತು ಪರಿಶ್ರಮದಿಂದ ಮಾಡಿದ ಕೆಲಸ ಫಲಿಸುತ್ತದೆ. ಹಣಕಾಸು ಸ್ಥಿರವಾಗಲಿದೆ. ಕೆಲಸದಲ್ಲಿ ಹೊಸ ಸಮಸ್ಯೆಗಳು ಬಂದರೂ ಅದನ್ನು ಎದುರಿಸುವಿರಿ. ತುಲಾ ರಾಶಿ: ಹೊಸ ಪರಿಚಯಗಳು ನಿಮ್ಮ ಜೀವನಕ್ಕೆ ಸಂತೋಷ ತರಲಿದೆ. ಆರ್ಥಿಕವಾಗಿ ಸಂಕಷ್ಟ ತಪ್ಪಲಿದೆ. ಕುಟುಂಬದಲ್ಲಿ ಸಹಕಾರ ದೊರಕುತ್ತದೆ. ವೃಶ್ಚಿಕ ರಾಶಿ: ಸಂಬoಧಗಳಲ್ಲಿ ಆತ್ಮವಿಶ್ವಾಸ ಅಗತ್ಯ. ಹಣಕಾಸು ನಿರ್ವಹಣೆಗೆ ಗಮನ ಕೊಡಿ. ಕಾರ್ಯಕ್ಷೇತ್ರದಲ್ಲಿ ಸಾಧನೆ ಸಂಭವಿಸುತ್ತದೆ. ಸ್ನೇಹಿತರಿಂದ ಸಹಾಯ ಸಿಗಲಿದೆ. ಧನು ರಾಶಿ: ಧೈರ್ಯ ಮತ್ತು ಶಕ್ತಿಯಿಂದ ನಿಮ್ಮ ಕೆಲಸ ನಡೆಸಿ. ಹೊಸ ಯೋಜನೆಗಳನ್ನು ಸರಿಯಾಗಿ ಪಾಲಿಸಿ. ಕುಟುಂಬದಲ್ಲಿ ಸಂತೋಷ ಕಾಣಲಿದೆ. ಮಕರ ರಾಶಿ: ಲಾಭದಾಯಕ ಕಾರ್ಯಗಳು ಜರುಗಲಿದೆ. ಕುಟುಂಬದವರೊAದಿಗೆ ಮಾತುಕತೆ ಉತ್ತಮವಾಗಿದ್ದರೆ ಚಂದ. ಆರೋಗ್ಯದ ಕಡೆ ಗಮನ ಬೇಕು. ಕುಂಭ ರಾಶಿ: ಹೊಸ ಒಪ್ಪಂದಗಳು ಸಾಧ್ಯವಿದೆ. ಹಣಕಾಸು ಚಟುವಟಿಕೆಗಳಲ್ಲಿ ಎಚ್ಚರಿಕೆ ಅಗತ್ಯ. ಸ್ನೇಹಿತರು ನಿಮ್ಮನ್ನು ಬೆಂಬಲಿಸಲಿದ್ದು, ಕಾರ್ಯಕ್ಷೇತ್ರದಲ್ಲಿ ಸಾಧನೆ ಸಿಗಲಿದೆ. ಮೀನ ರಾಶಿ: ನಿರ್ಧಾರಗಳಲ್ಲಿ ಸ್ಪಷ್ಟತೆ ಮತ್ತು ಧೈರ್ಯದಿಂದ ಕಾರ್ಯನಿರ್ವಹಿಸಿ. ಖರ್ಚುಗಳನ್ನು ನಿಯಂತ್ರಿಸಿ. ಹೊಸ ಆದಾಯದ ದಾರಿ ಹುಡುಕುವುದು ಅನಿವಾರ್ಯ. - [ಅವನೇ ಗಾಂಜಾ ಮಾರಾಟಗಾರ!](https://mobiletime.in/2025/11/he-is-a-marijuana-seller/): ಹೊನ್ನಾವರದ ವಿಶಾಲ ಮೇಸ್ತಾ ಅವರು ಗೋಕರ್ಣದ ಮಂಜುನಾಥ ಗೌಡ ಅವರಿಗೆ 2 ಸಾವಿರ ರೂ ಮೌಲ್ಯದ ಗಾಂಜಾ ಸರಬರಾಜು ಮಾಡಿದ್ದಾರೆ. ಆ 60 ಗ್ರಾಂ ಗಾಂಜಾ ಮಾರಾಟ ಮಾಡಿ ಕಾಸು ಸಂಪಾದಿಸುವ ದಾರಿ ಹೇಳಿಕೊಟ್ಟಿದ್ದಾರೆ. ಆದರೆ, ಗಾಂಜಾ ಮಾರಾಟ ಮಾಡುವ ವೇಳೆ ಮಂಜುನಾಥ ಗೌಡ ಅವರು ಪಿಐ ಶ್ರೀಧರ್ ಎಸ್ ಆರ್ ಅವರಿಗೆ ಸಿಕ್ಕಿಬಿದ್ದಿದ್ದಾರೆ! ಗೋಕರ್ಣದ ಶಶಿಹಿತ್ತಲ ಮಂಜುನಾಥ ವೆಂಕಟ ಗೌಡ ಅವರು ಗೌಂಡಿ ಕೆಲಸ ಮಾಡಿಕೊಂಡಿದ್ದರು. ಅವರಿಗೆ ಬಹುಬೇಗ ದುಡ್ಡು ಮಾಡಬೇಕು ಎಂಬ ಯೋಚನೆ ಬಂದಿತು. ಹೀಗಾಗಿ ಅವರು ಅಡ್ಡದಾರಿ ಹಿಡಿಯಲು ನಿರ್ಧರಿಸಿದರು. ಆಗ, ಹೊನ್ನಾವರದ ಕಾಸರಕೋಡಿನ ವಿಶಾಲ ಮೇಸ್ತಾ ಅವರು ಗಾಂಜಾ ವ್ಯಾಪಾರದ ಗುಟ್ಟು ಹೇಳಿದರು. ವಿಶಾಲ ಮೇಸ್ತಾ ಅವರೇ 2 ಸಾವಿರ ರೂ ಹಣಪಡೆದು ಗಾಂಜಾ ತಂದುಕೊಟ್ಟರು. ಗೌoಡಿ ಕೆಲಸ ಮಾಡಿಕೊಂಡಿದ್ದ ಮಂಜುನಾಥ ಗೌಡ ಅವರಿಗೆ ವ್ಯಾಪಾರಿತನದ ಚಾಣಾಕ್ಷತನ ಇರಲಿಲ್ಲ. ಅದಾಗಿಯೂ ಅವರು ನವೆಂಬರ್ 3ರಂದು ಗೋಕರ್ಣ ಬೇಲೆಹಿತ್ಲೆಯಲ್ಲಿರುವ ಹೊಸ ಮೀನು ಮಾರುಕಟ್ಟೆ ಬಳಿ ಗಾಂಜಾ ಮಾರಾಟಕ್ಕೆ ನಿಂತಿದ್ದರು. ಮೀನು ಖರೀದಿಸಲು ಬಂದವರಿಗೆಲ್ಲ ಗಾಂಜಾ ಸೊಪ್ಪಿನ ಮಹತ್ವ ಹೇಳುತ್ತಿದ್ದರು. ಮಾದಕ ವಸ್ತು ಮಾರಾಟ ಕಾನೂನುಬಾಹಿರ ಎಂಬ ಅರಿವಿದ್ದರೂ ದುಡ್ಡಿನ ಆಸೆಗಾಗಿ ಅವರು ಆ ದಾರಿ ಆಯ್ದುಕೊಂಡಿದ್ದರು. ಗೋಕರ್ಣ ಪಿಐ ಶ್ರೀಧರ್ ಎಸ್ ಆರ್ ಅವರು ಬೇಲೆಹಿತ್ತಲಿನ ಕಡಲಿನ ಬಳಿ ಹೋಗಿದ್ದರು. ಆ ವೇಳೆ ಗಾಂಜಾ ಹಿಡಿದು ನಿಂತಿದ್ದ ಮಂಜುನಾಥ ಗೌಡ ಅವರು ಕಾಣಿಸಿದರು. ಅವರನ್ನು ಮಾತನಾಡಿಸಿದಾಗ ಗಾಂಜಾ ವ್ಯಾಪಾರ ದೃಢವಾಯಿತು. ಗಾಂಜಾ ಪೂರೈಸಿದ ವ್ಯಕ್ತಿಯ ಹೆಸರು ಬಹಿರಂಗವಾಯಿತು. ಈ ಹಿನ್ನಲೆ ಹೊನ್ನಾವರದ ವಿಶಾಲ ಮೇಸ್ತಾ ಅವರು ಗೋಕರ್ಣದ ಮಂಜುನಾಥ ಗೌಡ ಅವರಿಬ್ಬರ ಹೆಸರನ್ನು ದಾಖಲಿಸಿ ಪೊಲೀಸರು ಪ್ರಕರಣ ದಾಖಲಿಸಿದರು. - [ರೌಡಿ ಕಿರಣನಿಗೆ ಗಡಿಪಾರು ಶಿಕ್ಷೆ!](https://mobiletime.in/2025/11/rowdy-kiran-sentenced-to-exile/): ವಿವಿಧ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಮುಂಡಗೋಡಿನ ಕಿರಣ ಸೊಳಂಕಿ ಅವರನ್ನು ಉತ್ತರ ಕನ್ನಡ ಜಿಲ್ಲೆಯಿಂದ ಗಡಿಪಾರು ಮಾಡಲಾಗಿದೆ. ಐದು ಕ್ರಿಮಿನಲ್ ಪ್ರಕರಣದಲ್ಲಿ ಭಾಗಿಯಾಗಿರುವ ಕಿರಣ ಸೊಳಂಕಿ ಅವರಿಗೆ ಶಿರಸಿ ಸಹಾಯಕ ಆಯುಕ್ತೆ ಕಾವ್ಯರಾಣಿ ಅವರು ಗಡಿಬಿಟ್ಟು ಹೋಗುವಂತೆ ಸೂಚಿಸಿದ್ದಾರೆ. ಕಿರಣ ಸೊಳಂಕಿ ಅವರು ಮುಂಡಗೋಡಿನ ಆನಂದನಗರದಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದರು. 26ನೇ ವಯಸ್ಸಿನಲ್ಲಿಯೇ ಅವರು ಕೊಲೆ, ಸುಲಿಗೆ, ಬೆದರಿಕೆ ಸೇರಿ ಅನೇಕ ಪ್ರಕರಣಗಳಲ್ಲಿ ಭಾಗಿಯಾಗಿದ್ದರು. ಕಿರಣ ಸೋಳಂಕಿ ಅವರ ಗಡಿಪಾರಿಗೆ ಪೊಲೀಸರು ಶಿಫಾರಸ್ಸು ಮಾಡಿದ್ದು, ಆ ಕಡತ ಜಿಲ್ಲಾಧಿಕಾರಿ ಕಚೇರಿ ಸೇರಿತ್ತು. ಉಪವಿಭಾಗಾಧಿಕಾರಿ ಕಾವ್ಯರಾಣಿ ಅವರು ಅದನ್ನು ವಿಚಾರಣೆಗೆ ಒಳಪಡಿಸಿದರು. ಕಿರಣ ಸೋಳಂಕಿ ಅವರಿಗೆ ತಮ್ಮ ಅಹವಾಲು ಹೇಳಿಕೆಗೆ ಕಾವ್ಯರಾಣಿ ಅವರು ಸಾಕಷ್ಟು ಸಮಯ ಕೊಟ್ಟರು. ಕಿರಣ ಸೋಳಂಕಿ ಅವರಿಗೆ ಪ್ರಕರಣವೊಂದರಲ್ಲಿ 10 ವರ್ಷ ಜೈಲು ಶಿಕ್ಷೆ ಆಗಿರುವುದನ್ನು ಕಾವ್ಯರಾಣಿ ಅವರು ಗಮನಿಸಿದರು. ನ್ಯಾಯಾಲದಿಂದ ಜಾಮೀನುಪಡೆದು ಊರಿಗೆ ಮರಳಿದ ಕಿರಣ ಸೋಳಂಕಿ ಅದಾದ ನಂತರವೂ ಹಲವು ಅಪರಾಧ ಪ್ರಕರಣದಲ್ಲಿ ಭಾಗಿಯಾಗಿದ್ದು, ಅವರನ್ನು ಉತ್ತರ ಕನ್ನಡ ಜಿಲ್ಲೆಯಿಂದ ಗಡಿಪಾರು ಮಾಡಲು ನಿರ್ಧರಿಸಿದರು. ಸದ್ಯ 3 ತಿಂಗಳ ಅವಧಿಗೆ ಕಿರಣ ಸೋಳಂಕಿ ಅವರನ್ನು ಗಡಿಪಾರು ಮಾಡಲಾಗಿದೆ. ಪೊಲೀಸರು ಕಿರಣ ಸೋಳಂಕಿ ಅವರನ್ನು ಯಾದಗಿರಿಗೆ ಕರೆದೊಯ್ದು ಬಿಟ್ಟಿದ್ದಾರೆ. - [ಗ್ರಾಸೀಂ ಇಂಡಸ್ಟ್ರಿ: ಇಲ್ಲಿನ ನೌಕರರಿಗೆ ನಿವೃತ್ತಿ ನಂತರವೇ ಸಮಸ್ಯೆ ಶುರು!](https://mobiletime.in/2025/11/grasim-industries-the-problems-for-employees-here-started-only-after-retirement/): ಕಾರವಾರದ ಬಿಣಗಾದಲ್ಲಿರುವ ಗ್ರಾಸೀಂ ಇಂಡಸ್ಟ್ರಿ’ನಲ್ಲಿ ದುಡಿದು ನಿವೃತ್ತರಾದ ನೌಕರರಿಗೆ ನಿಯಮಾನುಸಾರ ಸೌಲಭ್ಯ ಒದಗಿಸುತ್ತಿಲ್ಲ. ಹೀಗಾಗಿ ಅನ್ಯಾಯಕ್ಕೆ ಒಳಗಾದ ನಿವೃತ್ತ ನೌಕರರು ಮಾಧ್ಯಮದ ಮುಂದೆ ಅಳಲು ತೋಡಿಕೊಂಡಿದ್ದಾರೆ. `ಕoಪನಿಯೂ ಎರಡು ವರ್ಷಗಳಿಂದ ಹಿಂಬಾಕಿ ವೇತನ ನೀಡಿಲ್ಲ. ನ್ಯಾಯಾಲಯದ ಆದೇಶವಿದ್ದರೂ ಅದನ್ನು ಪಾಲಿಸುತ್ತಿಲ್ಲ’ ಎಂದು ಗ್ರಾಸೀಂ ನಿವೃತ್ತ ನೌಕರ ಯುಗಂಧರ ಆಲೂರು ದೂರಿದರು. `ನ್ಯಾಯಾಲಯವು ನೌಕರರ ನಿವೃತ್ತಿ ವಯಸ್ಸನ್ನು 58ರಿಂದ 60ಕ್ಕೆ ಏರಿಸಿ ಆದೇಶ ನೀಡಿತ್ತು. ಅದರ ಪ್ರಕಾರ 2018ರಿಂದ 2023 ರ ಅವಧಿಯಲ್ಲಿ ನಿವೃತ್ತರಾದ ನೌಕರರಿಗೆ ಕಂಪನಿಯು ಎರಡು ವರ್ಷಗಳ ಹಿಂಬಾಕಿ ವೇತನವನ್ನು ನೀಡಬೇಕು ಎಂದು ನ್ಯಾಯಾಲಯ ಆದೇಶಿಸಿತ್ತು’ ಎಂದವರು ವಿವರಿಸಿದರು. `ಆದರೆ, ಕಂಪನಿಯ ಅಧಿಕಾರಿಗಳು ನ್ಯಾಯಾಲಯದ ಆದೇಶವನ್ನು ಗಾಳಿಗೆ ತೂರಿದ್ದಾರೆ. ಬಾಕಿ ವೇತನ ಪಾವತಿಗೆ ನಿರಾಕರಿಸುತ್ತಿದ್ದಾರೆ. ಹಿಂಬಾಕಿ ನೀಡಲು ಕಂಪನಿ ಕಾನೂನುಬಾಹಿರ ಷರತ್ತು ವಿಧಿಸುತ್ತಿದೆ’ ಎಂದು ದೂರಿದರು. `ಫೈನಲ್ ಸೆಟಲ್ಮೆಂಟ್ ಎಂದು ಬಾಂಡ್ ಮೇಲೆ ಸಹಿ ಮಾಡಿದ ನಂತರ ವೇತನ ನೀಡುವುದಾಗಿ ಕಂಪನಿ ಹೇಳಿದೆ. ಆದರೆ ಈ ಷರತ್ತು ಸಂಪೂರ್ಣವಾಗಿ ಕಾನೂನುಬಾಹಿರವಾಗಿದೆ’ ಎಂದರು. `ಅ 30ರಂದು ಕಂಪನಿಯ ಮಾನವ ಸಂಪನ್ಮೂಲ ವಿಭಾಗಕ್ಕೆ ಮನವಿ ನೀಡಲು ತೆರಳಿದಾಗ ಅದನ್ನು ಸ್ವೀಕರಿಸಿಲ್ಲ. ಜೊತೆಗೆ ಘಟಕದ ಮುಖ್ಯಸ್ಥರನ್ನು ಭೇಟಿ ಮಾಡಲೂ ಅವಕಾಶ ನೀಡಲಿಲ್ಲ’ ಎಂದು ಅಸಮಧಾನವ್ಯಕ್ತಪಡಿಸಿದರು. `ಕಾರ್ಮಿಕ ಇಲಾಖೆ ಹಾಗೂ ಉಪ ಕಾರ್ಮಿಕ ಆಯುಕ್ತರು ಕೂಡಲೇ ಮಧ್ಯಸ್ಥಿಕೆ ವಹಿಸಬೇಕು. ಕಂಪನಿಯು ನ್ಯಾಯಾಲಯದ ತೀರ್ಪನ್ನು ಗೌರವಿಸಿ, ಯಾವುದೇ ಷರತ್ತುಗಳಿಲ್ಲದೆ ಹಿಂಬಾಕಿ ವೇತನವನ್ನು ತಕ್ಷಣ ಬಿಡುಗಡೆ ಮಾಡಬೇಕು’ ಎಂದು ವನದೇವ ಹರಿಕಂತ್ರ, ಗೋಪಾಲಕೃಷ್ಣ ನಾಯ್ಕ, ಲಕ್ಷೀಕಾಂತ ದುರ್ಗೇಕರ, ಕಿರಣ ಗಾಂವ್ಕರ ಆಗ್ರಹಿಸಿದರು. - [ಲಾರಿ ಕದ್ದವ ಸ್ಕೂಟರ್ ಕೊಟ್ಟು ಹೋದ!](https://mobiletime.in/2025/11/lorry-gave-away-a-stolen-scooter/): ಶಿರಸಿ-ಹುಬ್ಬಳ್ಳಿ ರಸ್ತೆ ಅಂಚಿನಲ್ಲಿದ್ದ ಲಾರಿಯೊಂದು ಕಳ್ಳತನವಾಗಿದೆ. ಲಾರಿ ಕದ್ದ ಕಳ್ಳ ಅದೇ ಜಾಗದಲ್ಲಿ ಸ್ಕೂಟರ್ ಬಿಟ್ಟು ಹೋಗಿದ್ದಾರೆ! ಶಿರಸಿಯ ಚಿಪಗಿ ಮಹಾಲಕ್ಷ್ಮಿ ಸಾಮಿಲ್ ಬಳಿಯ ಕಾರ್ತಿಕ ಗುಡೇದ ಅವರು ಲಾರಿಯೊಂದನ್ನು ಖರೀದಿಸಿದ್ದರು. ಆ ಲಾರಿಗೆ ಅವರೇ ಮಾಲಕರಾಗಿದ್ದು, ಚಾಲಕರಾಗಿಯೂ ಕೆಲಸ ಮಾಡುತ್ತಿದ್ದರು. ನವೆಂಬರ್ 2ರಂದು ಅವರು ಶಿರಸಿ-ಹುಬ್ಬಳ್ಳಿ ರಸ್ತೆ ಅಂಚಿನಲ್ಲಿ ತಮ್ಮ ಲಾರಿ ನಿಲ್ಲಿಸಿದ್ದರು. ಅಲ್ಲಿರುವ ಮನೆಯೊಳಗೆ ಅವರು ಮಲಗಿದ್ದರು. ನವೆಂಬರ್ 3ರ ಬೆಳಗ್ಗೆ ಎದ್ದು ನೋಡಿದಾಗ ಅಲ್ಲಿ ಅವರ ಲಾರಿ ಕಾಣಲಿಲ್ಲ. ಅಶೋಕ ಲೈಲಾಂಡ್ ದೋಸ್ತ್ ಮಾದರಿ ಲಾರಿಯನ್ನು ಅವರು ಎಲ್ಲಾ ಕಡೆ ಹುಡುಕಿದರು. ಆದರೂ, ಆ ಲಾರಿ ಸಿಗಲಿಲ್ಲ. ಲಾರಿ ನಿಲ್ಲಿಸಿದ ಜಾಗದಲ್ಲಿ ನೋಂದಣಿ ಸಂಖ್ಯೆಯೇ ಇಲ್ಲದ ಸ್ಕೂಟರ್ ನಿಂತಿರುವುದು ಅವರಿಗೆ ಕಾಣಿಸಿತು. ಲಾರಿ ಕದ್ದ ಕಳ್ಳನೇ ಈ ಸ್ಕೂಟರ್ ನಿಲ್ಲಿಸಿರುವ ಬಗ್ಗೆ ಅವರಿಗೆ ದೃಢವಾಯಿತು. ಈ ಎಲ್ಲಾ ಹಿನ್ನಲೆ ಅವರು ಶಿರಸಿ ಗ್ರಾಮೀಣ ಠಾಣೆ ಪೊಲೀಸರನ್ನು ಭೇಟಿ ಮಾಡಿದರು. ಲಾರಿ ಕಳ್ಳತನ ಹಾಗೂ ಸ್ಕೂಟರ್ ಕಥೆ ಹೇಳಿದರು. ಪೊಲೀಸರು ಪ್ರಕರಣ ದಾಖಲಿಸಿದ್ದು, ತನಿಖೆ ಶುರು ಮಾಡಿದ್ದಾರೆ. - [ಎಲ್ಲಾ ಕಡೆ ಕಳ್ಳರ ಕಾಟ!](https://mobiletime.in/2025/11/thieves-are-everywhere/): ಯಲ್ಲಾಪುರದ ಕಣ್ಣಿಗೇರಿ ಹಾಗೂ ಕಾಳಮ್ಮನಗರದಲ್ಲಿ ಕಳ್ಳತನ ನಡೆದಿದೆ. ಕಾಳಮ್ಮ ನಗರದಲ್ಲಿ ಕಳ್ಳರು ಸ್ಕೂಟಿ ಕದ್ದಿದ್ದಾರೆ. ಕಣ್ಣಿಗೇರಿಯಲ್ಲಿ ಮನೆಯೊಳಗೆ ನುಗ್ಗಿ ಆಭರಣ ದೋಚಿದ್ದಾರೆ. ಯಲ್ಲಾಪುರದ ಕಾಳಮ್ಮ ನಗರದ ಅಡಿಕೆ ವ್ಯಾಪಾರಿ ರಾಘವೇಂದ್ರ ಭಟ್ಟ ಅವರು ತಮ್ಮ ಸ್ಕೂಟರ್ ಕಳೆದುಕೊಂಡಿದ್ದಾರೆ. ಅಕ್ಟೊಬರ್ 15ರಂದು ಅವರ ಮನೆ ಮುಂದೆ ನಿಲ್ಲಿಸಿದ ಸ್ಕೂಟರ್ ಕಳ್ಳತನವಾಗಿದ್ದು, ಎಲ್ಲಾ ಕಡೆ ಹುಡುಕಿದರೂ ಸಿಗದ ಕಾರಣ ಈ ದಿನ ಅವರು ಪೊಲೀಸ್ ದೂರು ನೀಡಿದ್ದಾರೆ. `ಟಿವಿಎಸ್ ಜುಪಿಟರ್ ಮಾದರಿಯ ಸ್ಕೂಟರ್ ಹುಡುಕಿ ಕೊಡಿ’ ಎಂದವರು ಮನವಿ ಮಾಡಿದ್ದಾರೆ. ಕಣ್ಣಿಗೇರಿಯ ಸಾರಬೈಲಿನ ಮಿಲಾಗ್ರಿ ವಾಜ್ ಅವರ ಮನೆಯಲ್ಲಿ ನವೆಂಬರ್ 1ರಂದು ಕಳ್ಳತನ ನಡೆದಿದೆ. ನವೆಂಬರ್ 2ರ ಮಧ್ಯಾಹ್ನ ಮನೆಯೊಳಗೆ ಪ್ರವೇಶಿಸಿದಾಗ ಕಳ್ಳತನ ನಡೆದಿರುವುದು ಗೊತ್ತಾಗಿದೆ. ಮನೆಯ ಹಂಚು ತೆಗೆದ ಕಳ್ಳರು ಕಪಾಟಿನ ಪಕ್ಕದಲ್ಲಿದ್ದ ಚಾವಿ ಬಳಸಿ ಕಪಾಡು ತೆರೆದಿದ್ದಾರೆ. ಅದಾದ ನಂತರ ಅಲ್ಲಿದ್ದ ಕಿವಿಯೊಲೆ, ಕರಿಮಣಿ ಸರ, ಕಾಲ್ಗೆಜ್ಜೆ ಸೇರಿ 1.13 ಲಕ್ಷ ರೂ ಮೌಲ್ಯದ ಆಭರಣ ಅಪಹರಿಸಿದ್ದಾರೆ. ಅವರು ಸಹ ಯಲ್ಲಾಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಕಳ್ಳರ ಪತ್ತೆಗೆ ಒತ್ತಾಯಿಸಿದ್ದಾರೆ. - [ಗಾಯತ್ರಿ ಸಾವಿಗೆ ಆ ವಿಡಿಯೋ ಕಾರಣ!](https://mobiletime.in/2025/11/that-video-is-the-reason-for-gayatris-death/): ಹೊನ್ನಾವರದ ಗುಂಡಿಬೈಲಿನ ಗಾಯತ್ರಿ ಗೌಡ ಅವರ ಸಾವಿನ ಕಾರಣ ಗೊತ್ತಾಗಿದೆ. ಪ್ರಿಯಕರ ರಮೇಶ ಗೌಡ ಬ್ಲಾಕ್‌ಮೇಲ್ ಮಾಡಿದ್ದರಿಂದ ಗಾಯತ್ರಿ ಗೌಡ ಅವರು ಆತ್ಮಹತ್ಯೆ ನಿರ್ಧಾರ ಮಾಡಿದ್ದಾರೆ. ಗಾಯತ್ರಿ ಗೌಡ ಅವರು ಏಳು ವರ್ಷಗಳಿಂದ ರಮೇಶ ಗೌಡ ಅವರನ್ನು ಪ್ರೀತಿಸುತ್ತಿದ್ದರು. ಆದರೆ, ರಮೇಶ ಗೌಡ ಅವರು ಗಾಯತ್ರಿ ಗೌಡರ ಜೊತೆಗೆ ಮತ್ತೊಬ್ಬ ಯುವತಿಯನ್ನು ದೈಹಿಕವಾಗಿ ಬಳಸಿಕೊಂಡಿದ್ದರು. ಮತ್ತೊಬ್ಬ ಯುವತಿ ಜೊತೆ ರಮೇಶ ಗೌಡ ರೂಮಿನಲ್ಲಿದ್ದ ಖಾಸಗಿ ವಿಡಿಯೋವನ್ನು ಗಾಯತ್ರಿ ಗೌಡ ಅವರು ನೋಡಿದ್ದರು. ಇದನ್ನು ಪ್ರಶ್ನಿಸಿದಾಗ ರಮೇಶ ಗೌಡ ಅವರು ಗಾಯತ್ರಿ ಗೌಡ ಅವರ ವಿಡಿಯೋ ಕಾಣಿಸಿ ಬ್ಲಾಕ್‌ಮೇಲ್ ಮಾಡಿದ್ದರು. ಇದರಿಂದ ಮಾನಸಿಕವಾಗಿ ಕುಗ್ಗಿದ ಗಾಯತ್ರಿ ಗೌಡ ಅವರು ಬಾವಿಗೆ ಹಾರಿ ಪ್ರಾಣ ಬಿಟ್ಟರು. ತನಿಖೆ ನಡೆಸಿದಾಗ ಈ ಎಲ್ಲಾ ವಿಷಯ ಹೊರಬಂದಿದ್ದು, ಗಾಯತ್ರಿ ಗೌಡ ಅವರ ತಾಯಿ ಗಿರಿಜಾ ಗೌಡ ಅವರು ನೀಡಿದ ದೂರಿನ ಮೇರೆಗೆ ಕಾಸರಕೋಡ ಮಲ್ಲಮಾಸ್ತಿಕೇರಿಯ ರಮೇಶ ಗಣಪಯ್ಯ ಗೌಡ ಅವರ ಬಂಧನವಾಗಿದೆ. ರಮೇಶ ಗೌಡ ಅವರು ಗಾಯತ್ರಿ ಗೌಡ ಅವರಿಗಿಂತ 12 ವರ್ಷ ದೊಡ್ಡವರಾಗಿದ್ದರು. ಆದರೂ, ರಮೇಶ ಗೌಡ ಅವರನ್ನು ಮದುವೆ ಆಗುವುದಾಗಿ ಗಾಯತ್ರಿ ಗೌಡ ಮನೆಯಲ್ಲಿ ಹೇಳಿದ್ದರು. ಅವರ ಪ್ರೀತಿಗೆ ಕುಟುಂಬದವರು ಸಹ ಒಪ್ಪಿದ್ದರು. ಅದಾಗಿಯೂ ರಮೇಶ ಗೌಡ ಅವರು ಪ್ರೀತಿ ಹೆಸರಿನಲ್ಲಿ ನಾಟಕವಾಡಿದ್ದು, ಮತ್ತೊಮ್ಮ ಮಹಿಳೆ ಜೊತೆ ಸಂಬoಧ ಹೊಂದಿದ್ದರು. ಇದನ್ನು ಪ್ರಶ್ನಿಸಿದ ಒಂದೇ ಒಂದು ಕಾರಣದಿಂದ ಗಾಯತ್ರಿ ಗೌಡ ಅವರ ಖಾಸಗಿ ವಿಡಿಯೋ ಮಾಡಿ ಬೆದರಿಕೆ ಒಡ್ಡುತ್ತಿದ್ದರು. ಈ ಎಲ್ಲಾ ವಿಷಯವನ್ನು ಗಾಯತ್ರಿ ಗೌಡ ಅವರು ಬರೆದಿಟ್ಟಿದ್ದಾರೆ. ಪ್ರೀತಿ ವಿಷಯದಲ್ಲಿ ತಮಗೆ ಆದ ಮೋಸ, ವಂಚನೆಯ ಬಗ್ಗೆ ಅವರು ವಿಸ್ತಾರವಾಗಿ ವಿವರಿಸಿದ್ದಾರೆ. `ಬೇರೆ ಹುಡುಗಿ ಜೊತೆ ದೇಹ ಹಂಚಿಕೊAಡ ಆತನನ್ನು ನಾನು ಮದುವೆ ಆಗುವುದಿಲ್ಲ’ ಎಂದು ಸಹ ಗಾಯತ್ರಿ ಗೌಡ ಅವರು ಬರೆದಿದ್ದು, ಪ್ರೀತಿ ನಿರಾಕರಿಸಿದಾಗ ಜಗಳವಾಡಿದನ್ನು ಬಹಿರಂಗಪಡಿಸಿದ್ದಾರೆ. ತನಗೆ ಗೊತ್ತಿಲ್ಲದೇ ತನ್ನ ಖಾಸಗಿ ವಿಡಿಯೋ ಮಾಡಿರುವುದನ್ನು ಸಹ ಅವರು ವಿವರಿಸಿದ್ದು, ಹುಟ್ಟಿದ ದಿನವೇ ಸಾವನಪ್ಪಲು ನಿರ್ಧರಿಸಿ ಆತ್ಮಹತ್ಯೆ ನಿರ್ಧಾರ ಮಾಡಿದ ಬಗ್ಗೆ ಬರಹದ ಮೂಲಕ ಹೇಳಿದ್ದಾರೆ. - [ಗೋಕರ್ಣ: ಗಗನಕ್ಕೆ ಹಾರಿದ ಕೂರ್ಸೆಮನೆಯ ಕೂಸು!](https://mobiletime.in/2025/11/gokarna-the-baby-of-the-kursemane-family-flew-into-the-sky/): ಗೋಕರ್ಣದ ಕೂರ್ಸೆ ಮನೆತನದ ಕಾವ್ಯಶ್ರೀ ಕೂರ್ಸೆ ಅವರು 21ನೇ ವಯಸ್ಸಿನಲ್ಲಿಯೇ ವಿಮಾನದ ಪೈಲೆಟ್ ಆಗಿದ್ದಾರೆ. ನಿತ್ಯವೂ ಬಾನಂಗಳದಲ್ಲಿ ಹಾರಾಡುವ ಬಗ್ಗೆ ಬಾಲ್ಯದಲ್ಲಿಯೇ ಕಂಡಿದ್ದ ಕನಸನ್ನು ಅವರು ಈಡೇರಿಸಿಕೊಂಡಿದ್ದಾರೆ. ಕಾವ್ಯಶ್ರೀ ಕೂರ್ಸೆ ಅವರ ತಂದೆ ಲಕ್ಸ್ಮಿನಾರಾಯಣ ಕೂರ್ಸೆ ಅವರು ಗೋವಾದಲ್ಲಿ ವೈದಿಕರಾಗಿದ್ದಾರೆ. ತಾಯಿ ಶ್ಯಾಮಲಾ ಕೂರ್ಸೆ ಅವರ ನಿರಂತರ ಪ್ರೋತ್ಸಾಹದಿಂದಾಗಿ ಕಾವ್ಯಶ್ರೀ ಕೂರ್ಸೆ ಅವರು ಈಗಾಗಲೇ 200 ತಾಸಿನ ವಿಮಾನ ಹಾರಾಟ ನಡೆಸಿದ್ದಾರೆ. ಆ ಮೂಲಕ ಕಮರ್ಷಿಯಲ್ ಪೈಲೆಟ್ ಲೈಸನ್ಸ್ ಸ್ವೀಕರಿಸಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಮೊದಲ ಮಹಿಳಾ ಪೈಲೆಟ್ ಆಗಿ ಕಾವ್ಯಶ್ರೀ ಕೂರ್ಸೆ ಹೆಸರು ಮಾಡಿದ್ದಾರೆ. ಗೋವಾದಲ್ಲಿಯೇ ಬಾಲ್ಯ ಕಳೆದ ಕಾವ್ಯಶ್ರೀ ಕೂರ್ಸೆ ಅವರು ತಮ್ಮ ಮನೆ ಮೇಲೆ ನಿತ್ಯ ವಿಮಾನ ಹಾರಾಟ ನೋಡುತ್ತಿದ್ದರು. `ತಾನೂ ಇಂಥ ವಿಮಾನ ಹಾರಿಸಬೇಕು’ ಎಂದವರು ಕನಸು ಕಂಡಿದ್ದರು. ಗೋವಾದಲ್ಲಿಯೇ ಶಿಕ್ಷಣ ಮುಗಿಸಿದ ಅವರು ಮಹಾರಾಷ್ಟದ ಬಾರಾಮತಿ ವಿಮಾನ ತರಬೇತಿ ಕೇಂದ್ರದಲ್ಲಿ ಅಭ್ಯಾಸ ಮಾಡಿದರು. ನಿರಂತರ ಪ್ರಯತ್ನದ ಫಲವಾಗಿ ಅವರು ವಿಮಾನ ಹಾರಾಟದ ಪರವಾನಿಗೆಪಡೆದರು. - [ಹೋರಾಟಗಾರನ ಮೇಲೆ ಹೆಜ್ಜೇನು ದಾಳಿ!](https://mobiletime.in/2025/11/a-bee-attack-on-a-fighter/): ಕುಮಟಾ ಆಡಳಿತ ಸೌಧದ ಅವ್ಯವಸ್ಥೆಗಳ ವಿರುದ್ಧ ಹೋರಾಡುತ್ತಿರುವ ಜನಸಾಮಾನ್ಯರ ಸಮಾಜ ಕಲ್ಯಾಣ ಕೇಂದ್ರದ ಆಗ್ನೇಲ್ ರೋಡ್ರಿಗಸ್ ಅವರ ಮೇಲೆ ಹೆಜ್ಜೇನು ದಾಳಿ ನಡೆಸಿದೆ. ಆಡಳಿತ ಸೌಧದ ಕಟ್ಟಡಕ್ಕಿರುವ ಹುಳುಗಳು ಅವರನ್ನು ಓಡಿಸಿಕೊಂಡು ಬಂದಿದ್ದು, ನೋವು ತಿಂದ ಅವರು ಹೆಜ್ಜೇನು ಸ್ಥಳಾಂತರಕ್ಕೆ ಆಗ್ರಹಿಸಿದ್ದಾರೆ. ಕುಮಟಾ ಆಡಳಿತದ ಬಗ್ಗೆ ಆಗ್ನೇಲ್ ರೋಡ್ರಿಗಸ್ ಅವರು ಮೊದಲಿನಿಂದಲೂ ಅಸಮಧಾನವ್ಯಕ್ತಪಡಿಸುತ್ತಿದ್ದಾರೆ. ವಿವಿಧ ವಿಷಯಗಳಿಗೆ ಅವರು ಆಡಳಿತ ಸೌಧದ ಕಚೇರಿಯಲ್ಲಿ ಅರ್ಜಿ ನೀಡುತ್ತಿದ್ದಾರೆ. ನವೆಂಬರ್ 3ರಂದು ಅರ್ಜಿ ನೀಡುವುದಕ್ಕಾಗಿ ಅವರು ಆಡಳಿತ ಸೌಧದ ಕಚೇರಿಗೆ ಹೋದಾಗ ಅಲ್ಲಿ ಗೂಡು ಕಟ್ಟಿದ್ದ ಹೆಜ್ಜೇನು ದಾಳಿ ಮಾಡಿದೆ. `ಶಾಸಕರ ಕಚೇರಿ, ತಹಶೀಲ್ದಾರ್ ಕಚೇರಿ ಜೊತೆ ಅನೇಕ ಇಲಾಖೆ ಕಚೇರಿಗಳು ಈ ಕಟ್ಟಡದಲ್ಲಿವೆ. ಹೀಗಾಗಿ ಇಲ್ಲಿ ನಿತ್ಯ ನೂರಾರು ಜನ ಭೇಟಿ ನೀಡುತ್ತಾರೆ. ವೃದ್ಧರು-ಮಹಿಳೆಯರ ಜೊತೆ ಮಕ್ಕಳು ಸಹ ಬರುತ್ತಿದ್ದು, ಅವರ ಮೇಲೆ ಹೆಜ್ಜೇನು ದಾಳಿ ನಡೆಸಿದರೆ ಅಪಾಯ ಖಚಿತ. ಆಡಳಿತ ಸೌಧದ ಕಟ್ಟಡದ ಮೇಲೆ ನಾಲ್ಕು ಜೇನು ಗೂಡುಗಳಿದ್ದು, ಅನಾಹುತ ಆಗುವ ಮುನ್ನ ಅವುಗಳನ್ನು ಸ್ಥಳಾಂತರಿಸಬೇಕು’ ಎಂದು ಆಗ್ನೇಲ್ ರೋಡ್ರಿಗಸ್ ಆಗ್ರಹಿಸಿದ್ದಾರೆ. - [ಅಪ್ಪ ಸರಾಯಿ ಮಾರಿದ: ಮಗ ಶಿಕ್ಷೆ ಅನುಭವಿಸಿದ!](https://mobiletime.in/2025/11/father-sold-the-tavern-son-served-his-sentence/): ಕುಮಟಾ ಬರ್ಗಿಯ ಗೋಪಾಲ ನಾಯ್ಕ ಅವರು ತಮ್ಮ ಅಂಗಡಿಯಲ್ಲಿ ಅಕ್ರಮವಾಗಿ ಸರಾಯಿ ಮಾರಾಟ ಮಾಡುತ್ತಿದ್ದು, ಅಪ್ಪ ಮಾಡಿದ ತಪ್ಪಿಗೆ ಅವರ ಮಗ ಸಚಿನ್ ನಾಯ್ಕ ಶಿಕ್ಷೆ ಅನುಭವಿಸುವ ಹಾಗಾಗಿದೆ! ಕುಮಟಾದ ಬರ್ಗಿಯಲ್ಲಿ ಗೋಪಾಲ ನಾಯ್ಕ ಅವರು ಮೊದಲಿನಿಂದಲು ಮಳಿಗೆಯೊಂದನ್ನು ಹೊಂದಿದ್ದಾರೆ. ಅಲ್ಲಿ ವಿವಿಧ ಬಗೆಯ ತರಕಾರಿ, ಕಿರಾಣಿ ಹಾಗೂ ಅಕ್ರಮ ಸರಾಯಿ ಮಾರಾಟ ಮಾಡುತ್ತಿದ್ದರು. ಇದನ್ನು ಖರೀದಿಸಲು ಅವರಿಗೆ ಅವರದ್ದೇ ಆದ ಗಿರಾಕಿಗಳಿದ್ದು, `ಸರಾಯಿ ಮಾರಾಟ ಮಾಡಬೇಡಿ’ ಎಂದು ಹೇಳಿದರೂ ಗೋಪಾಲ ನಾಯ್ಕ ಅವರು ಅದನ್ನು ಕೇಳುವ ಸ್ಥಿತಿಯಲ್ಲಿರಲಿಲ್ಲ. ಅತ್ಯಂತ ದುಬಾರಿ ಬೆಲೆಯ ಸರಾಯಿಗಳನ್ನು ಸಹ ಗೋಪಾಲ ನಾಯ್ಕ ಅವರು ತಮ್ಮ ಮಳಿಗೆಯಲ್ಲಿ ದಾಸ್ತಾನು ಮಾಡುತ್ತಿದ್ದರು. ಮಾರುಕಟ್ಟೆ ದರಕ್ಕಿಂತಲೂ 10ರೂ ಕಡಿಮೆ ಬೆಲೆಯಲ್ಲಿಯೂ ಅವರು ಮಾರುತ್ತಿದ್ದು, ಅದರ ರಹಸ್ಯ ಯಾರಿಗೂ ಗೊತ್ತಾಗುತ್ತಿರಲಿಲ್ಲ. ಆದರೆ, ಸರಾಯಿ ಮಾರಾಟಕ್ಕೆ ಯಾವುದೇ ಅನುಮತಿ ಗೋಪಾಲ ನಾಯ್ಕ ಅವರ ಬಳಿಯಿರಲಿಲ್ಲ. ಸರ್ಕಾರದ ನಿಯಮಗಳನ್ನು ಅವರು ಪಾಲನೆ ಮಾಡುತ್ತಿರಲಿಲ್ಲ. ತಮ್ಮ ಬಳಿಯಿರುವ ಸರಾಯಿ ಬಾಟಲಿಗಳನ್ನು ಗೋಪಾಲ ನಾಯ್ಕ ಅವರು ಬರ್ಗಿ ಗ್ರಾಮದ ಬಸ್ ನಿಲ್ದಾಣದ ಬಳಿಯಿರುವ ಪಾಳು ಬಿದ್ದ ಮನೆಯಲ್ಲಿ ದಾಸ್ತಾನು ಮಾಡುತ್ತಿದ್ದರು. ಅಲ್ಲಿಯೇ ಮಾರಾಟ ವ್ಯವಸ್ಥೆಯನ್ನು ಅವರು ಹೊಂದಿದ್ದರು. ಆ ಮನೆಗೆ ಆಗಮಿಸಿದವರಿಗೆ ಅತಿಥಿ ಸತ್ಕಾರ ನಡೆಸಿ ಸರಾಯಿ ಸೇವನೆಗೆ ಅವಕಾಶ ಮಾಡಿಕೊಡುತ್ತಿದ್ದರು. ಹೀಗಿರುವಾಗ ನವೆಂಬರ್ 2ರ ರಾತ್ರಿ ಗೋಕರ್ಣ ಪಿಎಸ್‌ಐ ಖಾದರ್ ಭಾಷಾ ಅವರು ಆ ಮನೆ ಪ್ರವೇಶಿಸಿದರು. ಗಾಜಿನ ಬಾಟಲಿಯಲ್ಲಿ ತುಂಬಿದ್ದ ರಾಯಲ್ ಚಾಲೆಂಜ್, ಯುಬಿ ಎಕ್ಸಪೋರ್ಟ ಸ್ಟಾçಂಗ್ ಮೊದಲಾದ ಬಾಟಲಿಗಳನ್ನು ಅವರು ನೋಡಿದರು. ಈ ವೇಳೆ ಗೋಪಾಲ ನಾಯ್ಕ ಅವರು ಮೂತ್ರ ವಿಸರ್ಜನೆಗೆ ಹೊರಗೆ ಹೋಗಿದ್ದು, ಅವರ ಮಗ ಸಚಿನ್ ನಾಯ್ಕ ಪೊಲೀಸರ ಬಳಿ ಸಿಕ್ಕಿಬಿದ್ದರು. ಪೊಲೀಸರು ಸಚಿನ್ ನಾಯ್ಕ ಅವರನ್ನು ವಿಚಾರಣೆಗೆ ಒಳಪಡಿಸಿ, ಅಕ್ರಮ ಸರಾಯಿ ಮಾರಾಟದ ವೇಳೆ ಸಿಕ್ಕಿಬಿದ್ದ ಕಾರಣ ಅವರ ವಿರುದ್ಧ ಪ್ರಕರಣ ದಾಖಲಿಸಿದರು. - [ಮುತ್ತಿಡಲು ಬಂದವಳು ಚಿನ್ನ ಕದ್ದಳು!](https://mobiletime.in/2025/11/the-one-who-came-to-kiss-stole-the-gold/): ಮುರುಡೇಶ್ವರದ ಆರ್ ಎನ್ ಎಸ್ ಡಿಪ್ಲೋಮಾ ಕಾಲೇಜಿನ ಉದ್ಯೋಗಿ ಅರುಣಕುಮಾರ ಅವರು ಮಂಗಳಮುಖಿಯರ ಸಹವಾಸಕ್ಕೆ ಬಿದ್ದು ಚಿನ್ನದ ಸರ ಕಳೆದುಕೊಂಡಿದ್ದಾರೆ. ದುಡ್ಡಿಲ್ಲದೇ ಸೇವೆಪಡೆದ ಕಾರಣ ಮಂಗಳಮುಖಿಯೊಬ್ಬರು ಅವರ ಕತ್ತಿನಲ್ಲಿದ್ದ ಚಿನ್ನದ ಸರ ಎಗರಿಸಿದ್ದಾರೆ! ಮಾವಳ್ಳಿ-2ರ ಗುಮ್ಮನಕ್ಕಲ್ ಜಡೆಯನಮನೆಯ ಅರುಣಕುಮಾರ ಭಾಸ್ಕರ ನಾಯ್ಕ (32) ಅವರು ಆರ್ ಎನ್ ಎಸ್ ಡಿಪ್ಲೋಮಾ ಕಾಲೇಜಿನಲ್ಲಿ ಲ್ಯಾಬ್ ಇನ್ ಚಾರ್ಜ ಆಗಿ ಕೆಲಸ ಮಾಡುತ್ತಾರೆ. ನವೆಂಬರ್ 2ರ ರಾತ್ರಿ 10.30ಕ್ಕೆ ಅವರು ಸ್ಕೂಟಿಯಲ್ಲಿ ಅಡ್ಡಾಡುತ್ತಿದ್ದರು. ಸ್ಕೂಟಿ ಪೆಟ್ರೋಲ್ ಹಾಕಿಸಿ ಮುರುಡೇಶ್ವರ ರೈಲು ನಿಲ್ದಾಣದ ಸರ್ವೀಸ್ ರಸ್ತೆ ಮೇಲೆ ಅಡ್ಡಾಡುತ್ತಿದ್ದ ಅವರ ಸ್ಕೂಟಿಗೆ ಮಂಗಳಮುಖಿಯರಿಬ್ಬರು ಕೈ ಮಾಡಿದರು. ಅವರು ಮಂಗಳಮುಖಿಯರು ಎಂಬ ಅರಿವಿದ್ದರೂ ಅರುಣಕುಮಾರ ನಾಯ್ಕ ಅವರು ಸ್ಕೂಟಿ ನಿಲ್ಲಿಸಿ ಸರಸ-ಸಲ್ಲಾಪದ ಮಾತು ಆಲಿಸಿದರು. ಅಲ್ಲಿದ್ದ ಮಂಗಳಮುಖಿಯೊಬ್ಬರು ಅರುಣಕುಮಾರ ಅವರ ಬಳಿ `ಬರುತ್ತಿಯಾ?’ ಎಂದು ಪ್ರಶ್ನೆ ಮಾಡಿದರು. ಆಗ, ಇನ್ನಿಬ್ಬರು ಮಂಗಳಮುಖಿಯರು ರೈಲು ನಿಲ್ದಾಣದ ಕಡೆಯಿಂದ ಅಲ್ಲಿಗೆ ಬಂದರು. ಅವರೆಲ್ಲರೂ ಸೇರಿ ಅರುಣಕುಮಾರ ಅವರಿಗೆ ಮುತ್ತಿಕ್ಕಿದರು. ಮೈಮೇಲೆ ಕೈ ಹಾಕಿ ಅಂಗಾಗ ಸ್ಪರ್ಶಿಸಿದರು. ಈ ವೇಳೆ ಮಂಗಳಮುಖಿಯೊಬ್ಬರು `ನಿನ್ನಲ್ಲಿ ಎಷ್ಟು ದುಡ್ಡಿದೆ?’ ಎಂದು ಪ್ರಶ್ನಿಸಿದರು. ಆಗ, ಅರುಣಕುಮಾರ ಅವರು `ನನ್ನಲ್ಲಿ ದುಡ್ಡಿಲ್ಲ’ ಎಂದರು. `ಈ ರೀತಿ ಮಾಡಬೇಡಿ’ ಎಂದು ಅರುಣಕುಮಾರ ಅವರು ಮನವಿ ಮಾಡಿದರು. ಆದರೆ, `ನಿನಗೆ ಪ್ರೀ’ ಎಂದು ಮಂಗಳಮುಖಿಯರೆಲ್ಲರೂ ಸೇರಿ ಆಫರ್ ನೀಡಿದರು. ನಾಲ್ಕು ಜನ ಕೈ ಕೈ ಹಿಡಿದು `ಬಾ ಬಾ’ ಎನ್ನುತ್ತ ಕರೆಯುತ್ತ ಮೈ ಮುಟ್ಟಲು ಶುರು ಮಾಡಿದರು. ಆಗ, ಒಬ್ಬ ಮಂಗಳಮುಖಿ ಅರುಣಕುಮಾರ ಅವರ ಕತ್ತಿನ ಕಡೆ ಕೈ ಹಾಕಿದರು. ಅಲ್ಲಿಂದ ಬಂಗಾರದ ಸರ ತುಂಡರಿಸಿದರು. ಆ ಮಂಗಳಮುಖಿ ಮಂಕಿಕಡೆ ಹೊರಟಿದ್ದು, ಸುಮಾರು ಅರ್ದ ತಾಸಿನ ನಂತರ ಅರುಣಕುಮಾರ ಅವರಿಗೆ ಕತ್ತಿನಲ್ಲಿದ್ದ ಸರ ಕಾಣೆಯಾದ ವಿಷಯ ಅರಿವಿಗೆ ಬಂದಿತು. ಆಗ, ಅರುಣಕುಮಾರ ಅವರು ದೊಡ್ಡದಾಗಿ ಬೊಬ್ಬೆ ಹೊಡೆದರು. ಅಲ್ಲಿದ್ದ ಜನ `ಏನಾಯಿತು?’ ಎಂದು ಪ್ರಶ್ನಿಸಿದರು. ಆಗ, ಅವರು ಮಂಗಳಮುಖಿಯರು ಸೇರಿ ಬಂಗಾರ ಕದ್ದ ವಿಷಯ ಹೇಳಿದರು. ಅಂದಾಜು 15 ಗ್ರಾಂ ತೂಕದ 1 ಲಕ್ಷ ರೂ ಮೌಲ್ಯದ ಚೈನ್ ಕಳ್ಳತನದ ಬಗ್ಗೆ ಅವರು ಮುರುಡೇಶ್ವರ ಪೊಲೀಸರಿಗೆ ದೂರು ನೀಡಿದರು. ನಾಲ್ವರು ಮಂಗಳಮುಖಿಯರು ಸೇರಿ ಚೈನ್ ಕದ್ದ ಬಗ್ಗೆ ಅವರು ವಿವರಿಸಿದ್ದು, ಪೊಲೀಸರು ಪ್ರಕರಣ ದಾಖಲಿಸಿದರು. - [ಕೈಗಾದಿಂದ ಹೊರಟ ಟೆಂಪೋ ಪಲ್ಟಿ: 16 ಜನರಿಗೆ ಗಾಯ](https://mobiletime.in/2025/11/tempo-overturns-in-kaiga-16-people-injured/): ಕೈಗಾ ಅಣು ವಿದ್ಯುತ್ ಘಟಕದಲ್ಲಿ ಕೆಲಸ ಮಾಡುವ ಕಾರ್ಮಿಕರು ಸಂಚಸಿರುತ್ತಿದ್ದ ಟೆಂಪೋ ಸೋಮವಾರ ಪಲ್ಟಿಯಾಗಿದೆ. ಪರಿಣಾಮ ಟೆಂಪೊದಲ್ಲಿದ್ದ 16 ಕಾರ್ಮಿಕರು ಗಾಯಗೊಂಡಿದ್ದಾರೆ. ಕೈಗಾ ಅಣು ವಿದ್ಯುತ್ ಘಟಕದಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರು ಭಾನುವಾರ ರಾತ್ರಿ ಪಾಳಿಯಲ್ಲಿದ್ದರು. ಸೋಮವಾರ ಬೆಳಗ್ಗೆ ಅವರನ್ನು ಮಲ್ಲಾಪುರ ಟೌನ್‌ಶಿಪ್ ಕಡೆ ಕರೆದೊಯ್ಯುವ ಕಾರ್ಯ ನಡೆಯಿತು. ಈ ಅವಧಿಯಲ್ಲಿ ಚಾಲಕನ ನಿಯಂತ್ರಣ ತಪ್ಪಿ ಟೆಂಪೋ ಪಲ್ಟಿಯಾಯಿತು. ಗಾಯಗೊಂಡವರನ್ನು ಸದ್ಯ ಕಾರವಾರದ ಕಿಮ್ಸ್’ಗೆ ದಾಖಲಿಸಲಾಗಿದೆ. ಯಾರಿಗೂ ದೊಡ್ಡ ಪ್ರಮಾಣದ ಗಾಯವಾಗಿಲ್ಲ ಎಂದು ವೈದ್ಯರು ಹೇಳಿದ್ದಾರೆ. ಮಲ್ಲಾಪುರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು, ಕ್ರೇನ್ ಸಹಾಯದಿಂದ ಟೆಂಪೋ ಮೇಲೆತ್ತಲಾಗಿದೆ. - [ಕೂಡಿಬಾರದ ಕಂಕಣ ಭಾಗ್ಯ: ಆತ್ಮಹತ್ಯೆಗೆ ಯತ್ನಿಸಿದವ ಆಸ್ಪತ್ರೆಗೆ!](https://mobiletime.in/2025/11/unbreakable-bracelet-man-hospitalized-after-attempting-suicide/): 45 ವರ್ಷ ಕಳೆದರೂ ಮದುವೆ ಆಗದ ನೋವಿನಲ್ಲಿದ್ದ ಕಾರವಾರದ ಪ್ರಜ್ಞೇಶ ಶೇಟ ಅವರು ಅದೇ ನೋವಿನಲ್ಲಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದಾರೆ. ಚಾಕು ಚುಚ್ಚಿಕೊಂಡು ನರಳಾಡುತ್ತಿದ್ದ ಅವರನ್ನು ನೋಡಿದ ಜನ ಆಸ್ಪತ್ರೆಗೆ ಸೇರಿಸಿದ್ದಾರೆ. ಕಾರವಾರ ನಗರದ ಮಾರುತಿ ಗಲ್ಲಿಯಲ್ಲಿ ಪ್ರಜ್ಞೇಶ್ ಪ್ರಕಾಶ ಶೇಟ ಅವರು ವಾಸವಾಗಿದ್ದರು. ಎಲ್ಲಿ ಹುಡುಕಿದರೂ ಅವರಿಗೆ ಯೋಗ್ಯ ಕನ್ಯೆ ಸಿಕ್ಕಿರಲಿಲ್ಲ. ಹೀಗಾಗಿ ಕಂಕಣ ಭಾಗ್ಯ ಕೂಡಿ ಬಂದಿರಲಿಲ್ಲ. ಇನ್ನೂ ಮದುವೆ ಆಗದ ಕಾರಣ ಅನೇಕರು ಪ್ರಜ್ಞೇಶ್ ಶೇಟ್ ಅವರನ್ನು ಹಿಯಾಳಿಸುತ್ತಿದ್ದರು. ಇದರಿಂದ ಅವರು ಮಾನಸಿಕ ಖಿನ್ನತೆಗೆ ಒಳಗಾಗಿದ್ದರು. ಮದುವೆ ಆಗದ ಬಗ್ಗೆ ಅವರು ಅನೇಕರಲ್ಲಿ ಹೇಳಿಕೊಂಡಿದ್ದರು. ತಮ್ಮ ಮನದಾಳದ ಸಮಸ್ಯೆಯನ್ನು ಬಿಚ್ಚಿಟ್ಟಿದ್ದರು. ಅದೇ ಕೊರಗಿನಲ್ಲಿಯೇ ಪ್ರಜ್ಞೇಶ್ ಶೇಟ್ ಅವರು ಚಾಕುವಿನಿಂದ ಕೊಯ್ದುಕೊಂಡರು. ರಕ್ತದ ಮಡುವಿನಲ್ಲಿ ಬಿದ್ದಿದ್ದ ಅವರನ್ನು ತಕ್ಷಣ ಕಾರವಾರ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿಲಾಯಿತು. ಸದ್ಯ ಅವರು ಪ್ರಾಣಾಪಾಯದಿಂದ ಪಾರಾದ ಬಗ್ಗೆ ಮಾಹಿತಿ ಸಿಕ್ಕಿದೆ. - [ನೆಮ್ಮದಿ ಕಳೆದುಕೊಂಡ ರವಿದರ್ಶನ: ಹಿರಿಯ ಹೋರಾಟಗಾರನ ಬದುಕು ಅಂತ್ಯ](https://mobiletime.in/2025/11/ravidarshan-who-lost-his-peace-of-mind-the-life-of-a-veteran-fighter-is-over/): ಜನಲೋಕಪಾಲ ಮಸೂದೆಗೆ ಆಗ್ರಹಿಸಿ ಹೋರಾಟ ನಡೆಸಿದ್ದ ಶಿರಸಿಯ ಕಾಶಿನಾಥ್ ಮೂಡಿ ಅವರು ಸೋಮವಾರ ಭೂ ಲೋಕದ ಯಾತ್ರೆ ಮುಗಿಸಿದ್ದಾರೆ. ಕಾಶಿನಾಥ ಮೂಡಿ ಅವರು ಶಿರಸಿಯ ವಿದ್ಯಾನಗರ ರುದ್ರಭೂಮಿಯ ಅಧ್ಯಕ್ಷರಾಗಿದ್ದರು. ನೆಮ್ಮದಿ ಕುಟೀರದ ಟ್ರಸ್ಟಿಯಾಗಿದ್ದರು. ಸ್ಮಶಾನ ಭೂಮಿಯಲ್ಲಿಯೂ ನಿಸ್ವಾರ್ಥ ಸಮಾಜ ಸೇವೆ ಮಾಡಿ ಅವರು ಮಾದರಿ ರುದ್ರಭೂಮಿ ನಿರ್ಮಿಸಿದ್ದರು. ವಿದ್ಯಾನಗರದದ ರುದ್ರಭೂಮಿಯನ್ನು ಶಿಸ್ತು, ಸ್ವಚ್ಛತೆ ಮತ್ತು ಮಾನವೀಯ ಸೇವೆಯ ಕೇಂದ್ರವಾಗಿ ಬದಲಾಯಿಸಿದ್ದರು. ರಾಷ್ಟ್ರೀಯ ಸ್ವಯಂಸೇವಕ ಸಂಘದ ಗುರೂಜಿ ಗೊಳವಲ್ಕರ್‌ರವರು ಶಿರಸಿಗೆ ಚಿಕಿತ್ಸೆಗಾಗಿ ಆಗಮಿಸಿದಾಗ ಮೂಡಿಯವರ ಹೊಸಪೇಟೆ ರಸ್ತೆಯ `ರವಿದರ್ಶನ’ ಮನೆಯಲ್ಲಿ ವಾಸ್ತವ್ಯ ಹೂಡಿದ್ದರು. ಕಾಶಿನಾಥ್ ಮೂಡಿ ಅವರ ದೂರದೃಷ್ಠಿಯ ಪರಿಣಾಮವಾಗಿ ಅವರು ನಿರ್ಮಿಸಿದ ಸಂಸ್ಥೆಗಳು ಅನೇಕರಿಗೆ ಮಾರ್ಗದರ್ಶನ ನೀಡುತ್ತಿವೆ. ಅವರ ಜೀವನ ಪ್ರಯಾಣವು ನಿಸ್ವಾರ್ಥ ಸೇವೆ, ಸಮರ್ಪಣೆ ಮತ್ತು ಸಾಮಾಜಿಕ ಜವಾಬ್ದಾರಿಗೆ ಮಾದರಿ ಎನ್ನುವ ಹಾಗಿದೆ. - [ಯಲ್ಲಾಪುರಕ್ಕೆ ಬರಲಿದೆ ಶ್ರೀರಾಮನ ರಥ!](https://mobiletime.in/2025/11/lord-ramas-chariot-is-coming-to-yellapur/): ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠ ಸ್ಥಾಪನೆಯಾಗಿ 550 ವರ್ಷ ಪೂರೈಸಿದ ಹಿನ್ನಲೆ ಪರ್ತಗಾಳಿಯಲ್ಲಿ 77 ಅಡಿ ಎತ್ತರದ ಶ್ರೀರಾಮನ ಕಂಚಿನ ಪ್ರತಿಮೆ ಅನಾವರಣಗೊಳ್ಳುತ್ತಿದೆ. ಈ ಹಿನ್ನಲೆ ನಾಡಿನ ಅನೇಕ ಕಡೆ ಕ್ಷೇತ್ರದ ರಥ ಸಂಚಾರ ನಡೆದಿದೆ. ಅಕ್ಟೊಬರ್ 19ರಂದು ಬದ್ರಿಕಾಶ್ರಮದಿಂದ ಹೊರಟ ಈ ರಥ ಈಗಾಗಲೇ ಹಲವು ರಾಜ್ಯಗಳನ್ನು ಸಂಚರಿಸಿದೆ. ಜಗದ್ಗುರು ಶ್ರೀ ವಿದ್ಯಾಧೀಶತೀರ್ಥ ಸ್ವಾಮೀಜಿ ಅವರು ಈ ರಥಯಾತ್ರೆಗೆ ಚಾಲನೆ ನೀಡಿದ್ದು, ಆರು ರಾಜ್ಯಗಳನ್ನು ಸುತ್ತಿ ಕರ್ನಾಟಕಕ್ಕೆ ಪ್ರವೇಶಿಸುತ್ತಿದೆ. ಈ ರಥವೂ ನವೆಂಬರ್ 4ರಂದು ದಾಂಡೇಲಿ ಪ್ರವೇಶಿಸಲಿದ್ದು, ಅಲ್ಲಿಂದ ಮುಂದೆ ಯಲ್ಲಾಪುರಕ್ಕೆ ಬರಲಿದೆ. ಸಂಜೆ 4.30ಕ್ಕೆ ಇಲ್ಲಿನ ಗಣ್ಯರು ರಥವನ್ನು ಅದ್ಧೂರಿಯಾಗಿ ಸ್ವಾಗತಿಸಲಿದ್ದಾರೆ. ಅದಾದ ನಂತರ ರಥವೂ ದೇವಿ ದೇವಸ್ಥಾನ ತಲುಪಲಿದ್ದು, ಅಲ್ಲಿಂದ ವೆಂಕಟರಮಣ ಮಠದವರೆಗೆ ರಾಮ, ಲಕ್ಷ್ಮಣ, ಸೀತೆ, ಹನುಮಂತ ದೇವರ ಭವ್ಯ ಮೆರವಣಿಗೆ ನಡೆಯಲಿದೆ. ಸಂಜೆ 5ರಿಂದ 6ಗಂಟೆಯವರೆಗೆ ಮೆರವಣಿಗೆ ಮೂಲಕ ಧಾರ್ಮಿಕ ಪ್ರಚಾರ ಕಾರ್ಯ ನಡೆಯಲಿದೆ. ನವೆಂಬರ್ 4ರ ರಾತ್ರಿ ವೆಂಕಟ್ರಮಣ ಮಠದ ಆವರದಲ್ಲಿಯೇ ರಥ ತಂಗಲಿದೆ. ಮರುದಿನ ಮುಂಜಾನೆ ರಥವೂ ಮುಂಡಗೋಡು ಭಾಗದಲ್ಲಿ ಸಂಚರಿಸಲಿದೆ. ನವೆಂಬರ್ 26ರಂದು ಈ ರಥ ಪರ್ತಗಾಳಿ ತಲುಪಲಿದೆ. ರಥ ಸಂಚರಿಸುವ ಕಡೆ ಎಲ್ಲವೂ ದೀಪೋತ್ಸವ, ಚಂಡೆ-ಗಾಯನ, ಪುಠಾಣಿಗಳಿಂದ ರಾಮನ ವೇಷ ಗಮನಸೆಳೆಯುತ್ತಿದೆ. ಭಕ್ತರಿಗೆ ಹೊರಕಾಣಿಕೆ ಸಲ್ಲಿಸಲು ಅವಕಾಶವಿದೆ. ಈ ಬಗ್ಗೆ ಲಕ್ಷ್ಮೀನರಸಿಂಹ ವೆಂಕಟ್ರಮಣ ಮಠದ ಅಧ್ಯಕ್ಷ ವಿನಾಯಕ ನೀಲಕಂಠ ಪೈ ಅವರು ಮಾಧ್ಯಮಕ್ಕೆ ಮಾಹಿತಿ ನೀಡಿದ್ದಾರೆ. - [2025ರ ನವೆಂಬರ್ 03ರ ದಿನ ಭವಿಷ್ಯ](https://mobiletime.in/2025/11/prediction-for-november-3-2025/): ಮೇಷ ರಾಶಿ: ಈ ದಿನ ನಡೆಯುವ ಕೆಲ ಸಂಗತಿಗಳು ಕಲಹಕ್ಕೆ ಕಾರಣವಾಗಲಿದೆ. ಸಹನೆಯಿಂದ ಕೆಲಸ ಮಾಡುವುದು ಮುಖ್ಯ. ಆರ್ಥಿಕ ಸಮಸ್ಯೆ ಪರಿಹಾರಕ್ಕೆ ಯೋಜನೆ ರೂಪಿಸುವುದು ಅಗತ್ಯ. ವೃಷಭ ರಾಶಿ: ಸಾಲದ ಬಿಕ್ಕಟ್ಟು ದೂರವಾಗಲಿದೆ. ಆರೋಗ್ಯದಲ್ಲಿ ಲಘು ಸಮಸ್ಯೆಗಳು ಕಾಣಲಿದೆ. ಬಿಸಿಲು ಪ್ರದೇಶದಲ್ಲಿ ತಿರುಗಾಟಕ್ಕೆ ಹೋಗಬೇಡಿ. ಮಿಥುನ ರಾಶಿ: ಹಣಕಾಸು ವ್ಯವಹಾರಗಳು ಈ ದಿನ ಬೇಡ. ಕೆಲಸ ಕಾರ್ಯಗಳು ಸರಾಗವಾಗಿ ಸಾಗಲಿದೆ. ವ್ಯಕ್ತಿಕತ ವಿಷಯಗಳ ಕಡೆ ಗಮನಹರಿಸಿ. ಕರ್ಕ ರಾಶಿ: ಕೆಲಸದಲ್ಲಿ ಅಧಿಕ ಒತ್ತಡ ಎದುರಾಗಲಿದೆ. ಆ ಒತ್ತಡ ಸರಿಯಾಗಿ ಎದುರಿಸಿದರೆ ಸಮಸ್ಯೆಗಳಿಲ್ಲ. ಆರ್ಥಿಕವಾಗಿ ಯಶಸ್ಸು ಸಿಗಲಿದೆ. ಸಿಂಹ ರಾಶಿ: ಜೀವನದಲ್ಲಿ ಮುನ್ನಡೆ ಸಾಧಿಸಲು ತಾಳ್ಮೆ ಅಗತ್ಯ. ನಿಯಮಿತ ವ್ಯಾಯಾಮದಿಂದ ಆರೋಗ್ಯ ಕಾಪಾಡಿಕೊಳ್ಳಲು ಸಾಧ್ಯ. ನಿಮ್ಮ ವ್ಯಕ್ತಿತ್ವವನ್ನು ಅನಾವರಣಗೊಳಿಸಲು ಸಕಾಲ. ಕನ್ಯಾ ರಾಶಿ: ನಿಮ್ಮ ಶ್ರಮಕ್ಕೆ ಸಾರ್ಥಕತೆ ದೊರೆಯಲಿದೆ. ಯಾವುದೇ ಹಣಕಾಸಿನ ನಿರ್ಧಾರದಲ್ಲಿ ಜಾಗ್ರತೆ ಅಗತ್ಯ. ಕುಟುಂಬ ಸಂಬAಧಗಳಲ್ಲಿ ಸೌಹಾರ್ಧ ಹೆಚ್ಚಿಸಲು ಪ್ರಯತ್ನಿಸಿ. ತುಲಾ ರಾಶಿ: ಹಣಕಾಸು ವಿಷಯದಲ್ಲಿ ಧೈರ್ಯದ ಜೊತೆ ತಾಳ್ಮೆಯೂ ಬೇಕು. ಆರೋಗ್ಯದ ಕಡೆ ಗಮನಹರಿಸಿ. ಅನಗತ್ಯ ಮಾತು ಬೇಡ. ವೃಶ್ಚಿಕ ರಾಶಿ: ವೃತ್ತಿ ಜೀವನದಲ್ಲಿ ಉನ್ನತಿ ಸಾಧ್ಯವಿದೆ. ವ್ಯವಹಾರದಲ್ಲಿ ನೂತನ ಅವಕಾಶಗಳು ಸಿಗುತ್ತದೆ. ಆರೋಗ್ಯದಲ್ಲಿ ವ್ಯತ್ಯಾಸವಾದರೆ ವೈದ್ಯರನ್ನು ಭೇಟಿ ಮಾಡಿ. ಧನು ರಾಶಿ: ಉದ್ಯೋಗ ಹುಡುಕಾಟದಲ್ಲಿರುವುವರಿಗೆ ಶುಭ ಸುದ್ದಿಯ ಸಾಧ್ಯತೆಗಳಿವೆ. ಹೊಸ ಉದ್ಯೋಗದ ನಿರೀಕ್ಷೆಯಲ್ಲಿರಿ. ಮನಸ್ಸಿಗೆ ಶಾಂತಿ ಸಿಗಲಿದೆ. ಮಕರ ರಾಶಿ: ನಿಮ್ಮ ಶ್ರಮಕ್ಕೆ ತಕ್ಕ ಪ್ರತಿ ಫಲ ಸಿಗಲಿದೆ. ಹೊಸ ಯೋಜನೆಗಳ ಅನುಷ್ಠಾನ ಆಗಲಿದೆ. ಹಣಕಾಸು ವಿಷಯದಲ್ಲಿ ಎಚ್ಚರಿಕೆ ಅಗತ್ಯ. ಕುಂಭ ರಾಶಿ: ಮಾತುಗಾರಿಕೆಯಿಂದ ಯಶಸ್ಸು ಸಾಧ್ಯವಿದೆ. ಸ್ನೇಹಿತರ ನೆರವು ಧೈರ್ಯ ಕೊಡಲಿದೆ. ಶ್ರದ್ಧೆಯಿಂದ ಮಾಡಿದ ಕೆಲಸ ಸರಿಯಾಗಿ ಸಾಗಲಿದೆ. ಮೀನ ರಾಶಿ: ಆರೋಗ್ಯವನ್ನು ಸರಿಯಾಗಿರಿಸಿಕೊಂಡರೆ ಆನಂದದಿAದ ಜೀವನ ನಡೆಸಲು ಸಾಧ್ಯ. ಸೋಮಾರಿತನದಿಂದ ದೂರವಿದ್ದು, ಲವಲವಿಕೆಯಿಂದ ಇರಲು ಪ್ರಯತ್ನಿಸಿ. - [ಆಹಾರ ಅರೆಸಿ ಊರಿಗೆ ಬಂದ ಆನೆಗೆ ವಿದ್ಯುತ್ ಆಘಾತ!](https://mobiletime.in/2025/11/an-elephant-that-came-to-town-looking-for-food-was-electrocuted/): ಜೊಯಿಡಾದ ರಾಮನಗರ ಹಾಗೂ ಬೆಳಗಾವಿಯ ಖಾನಾಪುರದ ನಡುವಿನ ಪ್ರದೇಶದಲ್ಲಿ ಎರಡು ಆನೆ ಸಾವನಪ್ಪಿದೆ. ವಿದ್ಯುತ್ ಸ್ಪರ್ಶದಿಂದ ಆನೆ ಸಾವನಪ್ಪಿರುವ ಬಗ್ಗೆ ಅಂದಾಜಿಸಲಾಗಿದೆ. ಭಾನುವಾರ ಬೆಳಗ್ಗೆ ಇಲ್ಲಿನ ಭತ್ತದ ಗದ್ದೆಯಲ್ಲಿ ಎರಡು ಆನೆ ಸಾವನಪ್ಪಿರುವುದು ಗೊತ್ತಾಗಿದೆ. ಸುಲೇಗಾಳಿ ಗ್ರಾಮದ ರೈತ ಗಣಪತಿ ಗುರವ ಅವರ ಹೊಲದಲ್ಲಿ ಆನೆ ಶವ ಕಾಣಿಸಿದೆ. ಕಾಡು ಪ್ರಾಣಿಗಳ ಹಾವಳಿ ನಿಯಂತ್ರಣಕ್ಕೆ ಹಾಕಿದ್ದ ಬೇಲಿಯಲ್ಲಿ ವಿದ್ಯುತ್ ಪ್ರವಹಿಸಿ ಆನೆ ಸಾವನಪ್ಪಿರುವ ಬಗ್ಗೆ ಹೇಳಲಾಗಿದೆ. ಆಹಾರ ಅರೆಸಿ ಊರಿಗೆ ಬಂದ ಆನೆಗಳೆರಡು ವಿದ್ಯುತ್ ತಂತಿ ಸ್ಪರ್ಶಿಸಿ ಅಲ್ಲಿ ಕುಸಿದು ಬಿದ್ದಿವೆ ಎಂದು ಸ್ಥಳೀಯರು ಹೇಳಿದ್ದಾರೆ. ಆನೆ ಸತ್ತ ಸುದ್ದಿ ಕೇಳಿ ನೂರಾರು ಜನ ಸ್ಥಳಕ್ಕೆ ದೌಡಾಯಿಸಿದ್ದಾರೆ. ಸದ್ಯ ಖಾನಾಪುರದ ಅರಣ್ಯಾಧಿಕಾರಿಗಳು ಸ್ಥಳ ಪರಿಶೀಲನೆ ಮಾಡಿದ್ದಾರೆ. `ವಿದ್ಯುತ್ ತಂತಿ ಮುರಿದು ಬೇಲಿ ಮೇಲೆ ಬಿದ್ದಿದ್ದರಿಂದ ಆನೆ ಸಾವನಪ್ಪಿಲ್ಲ’ ಎಂದು ಹೆಸ್ಕಾಂ ಅಧಿಕಾರಿಗಳು ಹೇಳುತ್ತಿದ್ದಾರೆ. ರೈತನ ಗುಡಿಸಿಲಿನಿಂದ ವಿದ್ಯುತ್ ಹೋಗಿರುವ ಸಾಧ್ಯತೆಯಿರುವ ಬಗ್ಗೆ ಅವರು ಅಂದಾಜಿಸಿದ್ದಾರೆ. - [ಕಾಲು ಕಟ್: ನೆಮ್ಮದಿ ಕೇಂದ್ರದ ಸಿಬ್ಬಂದಿಗೆ ನೆಮ್ಮದಿ ಇಲ್ಲ!](https://mobiletime.in/2025/11/leg-cut-the-staff-at-the-welfare-center-are-not-happy/): ಮುಂಡಗೋಡು ತಹಶೀಲ್ದಾರ್ ಕಚೇರಿಯ ನೆಮ್ಮದಿ ಕೇಂದ್ರದಲ್ಲಿ ಕೆಲಸ ಮಾಡುವ ತುಕಾರಾಮ ಪಾಟೀಲ ಅವರ ಕಾಲು ತುಂಡಾಗಿದೆ. ಭಾನುವಾರ ರಜಾ ಇದ್ದ ಕಾರಣ ಅವರು ಟಾಕ್ಟರ್ ಹಿಡಿದು ಉಳುಮೆಗೆ ಹೋಗಿದ್ದು, ಆ ವೇಳೆ ನಡೆದ ಅವಾಂತರದಿAದ ಅವರು ಕಾಲು ಕಳೆದುಕೊಂಡಿದ್ದಾರೆ. ತುಕಾರಾಮ ಪಾಟೀಲ (38) ಹುನಗುಂದ ಗ್ರಾಮ ಪಂಚಾಯತ್ ವ್ಯಾಪ್ತಿಯ ಅತ್ತಿವೇರಿ ಗ್ರಾಮದಲ್ಲಿರುವ ತಮ್ಮ ಹೊಲಕ್ಕೆ ಹೋಗಿದ್ದರು. ಅಲ್ಲಿ ಟಾಕ್ಟರ್ ಹಿಡಿದು ರೂಟರ್ ಹೊಡೆಯುತ್ತಿದ್ದರು. ಆ ವೇಳೆ ಅವರ ಕಾಲು ಯಂತ್ರದ ನಡುವಿನ ಬ್ಲೇಡುಗಳಿಗೆ ಸಿಲುಕಿತು. ತಪ್ಪಿಸಿಕೊಳ್ಳುವ ಪ್ರಯತ್ನ ನಡೆಸಿದರೂ ಪ್ರಯೋಜನವಾಗಲಿಲ್ಲ. ಕಾಲು ಸಂಪೂರ್ಣ ನುಜ್ಜು ನೂರಾಗಿದ್ದು, ಬಲಭಾಗ ತುಂಡಾಯಿತು. ಇದನ್ನು ನೋಡಿದ ಜನ ತುಕಾರಾಮ ಪಾಟೀಲ ಅವರನ್ನು ತಾಲೂಕು ಆಸ್ಪತ್ರೆಗೆ ಸಾಗಿಸಿದರು. ಅಲ್ಲಿನ ವೈದ್ಯರು ರಕ್ತ ಸೋರುವುದನ್ನು ತಡೆಯುವ ಪ್ರಯತ್ನ ಮಾಡಿದರು. ಪ್ರಥಮ ಚಿಕಿತ್ಸೆ ನೀಡಿದ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ತುಕಾರಾಮ ಪಾಟೀಲ್ ಅವರನ್ನು ಕಳುಹಿಸಿಕೊಟ್ಟರು. ಸದ್ಯ ಅವರಿಗೆ ಚಿಕಿತ್ಸೆ ಮುಂದುವರೆದಿದೆ. ಅವರ ಆರೋಗ್ಯ ಸುಧಾರಿಸಿಕೊಳ್ಳಲು ಕನಿಷ್ಟ ವರ್ಷಗಳ ಕಾಲ ಸಮಯ ಬೇಕಾಗಬಹುದು ಎಂದು ವೈದ್ಯರು ಅಂದಾಜಿಸಿದ್ದಾರೆ. `ಕೃಷಿ ಕೆಲಸ ಮಾಡುವಾಗ ಜೋಪಾನ’ - [ಸರ್ಕಾರಿ ಕೆಲಸ ಮಾರಾಟಕ್ಕಿಲ್ಲ!](https://mobiletime.in/2025/11/government-jobs-are-not-for-sale/): ಅರ್ಹತೆ ಆಧಾರದ ಮೇಲೆ ಕೆಲಸಪಡೆಯಬೇಕಿದ್ದ ಯಲ್ಲಾಪುರದ ಏಳು ಜನ ಲಂಚ ಕೊಟ್ಟು ಕೆಲಸ ಗಿಟ್ಟಿಸಿಕೊಳ್ಳುವ ಪ್ರಯತ್ನ ಮಾಡಿದ್ದು, ಅವರಿಗೆ ಇದೀಗ ಅನ್ಯಾಯವಾಗಿದೆ. ಸರ್ಕಾರಿ ಕೆಲಸಪಡೆಯುವ ತರಾತುರಿಯಲ್ಲಿ ಲಕ್ಷಾಂತರ ರೂ ಖರ್ಚು ಮಾಡಿದವರಿಗೆ ಕೆಲಸವೂ ಸಿಕ್ಕಿಲ್ಲ. ಕಾಸು ಮರಳಿ ಬಂದಿಲ್ಲ! ಮೋಸ ಹೋದ ಎಲ್ಲರೂ 30 ವರ್ಷ ಒಳಗಿನವರಾಗಿದ್ದಾರೆ. ಆರು ಜನ ನಿರುದ್ಯೋಗಿ ಯುವಕರ ಜೊತೆ ಈಗಾಗಲೇ ಒಳ್ಳೆಯ ಉದ್ಯೋಗದಲ್ಲಿದ್ದ ಯುವತಿಯೊಬ್ಬರು ಈ ಮೋಸದ ಜಾಲಕ್ಕೆ ಸಿಲುಕಿದ್ದಾರೆ. ಸಾಕಷ್ಟು ಓದಿಕೊಂಡಿದ್ದ ವಿದ್ಯಾವಂತರೇ ಮೋಸ ಹೋಗಿರುವುದನ್ನು ನೋಡಿ ಜನರು ಪಶ್ಚಾತಾಪಪಡುತ್ತಿದ್ದಾರೆ. ಯಲ್ಲಾಪುರದ ಕಳಚೆಯ ಶ್ರೀನಾಥ ಶ್ರೀಕಾಂತ ಕಳಸ ಅವರು ಮೋಸದ ಬಲೆಗೆ ಬಿದ್ದಿದ್ದಾರೆ. ಅವರ ಜೊತೆ ಮಾವಿನಮನೆ ಗೋಗದ್ದೆಯ ಗೌರೀಶ ಮೋಹನ ಮರಾಠಾ, ಕಳಚೆಯ ರವಿ ತಮ್ಮಣ್ಣ ಗೌಡ, ಅರಬೈಲ್ ಹೆಗ್ಗಾರಗದ್ದೆಯ ಗಜಾನನ ಈಶ್ವರ ಪಟಗಾರ, ಕಳಚೆಯ ಪ್ರಭಾಕರ ವಿಶ್ವೇಶ್ವರ ಗೌಡ, ವಜ್ರಳ್ಳಿಯ ರಾಮಚಂದ್ರ ರಾಧಾಕೃಷ್ಣ ಕೋಡಕಣಿಕರ್ ಸಹ ಸರ್ಕಾರಿ ಕೆಲಸಕ್ಕಾಗಿ ಕಾಸು ಕೊಟ್ಟು ಕೆಟ್ಟಿದ್ದಾರೆ. ಈಗಾಗಲೇ ಖಾಸಗಿ ಉದ್ಯೋಗಿಯಾಗಿರುವ ಕಳಚೆ ಬಳಿಯ ತಳಕೆಬೈಲಿನ ಶ್ವೇತಾ ಸುಭಾಶ ಮರಾಠಿ ಅವರು ಸಹ ಸರ್ಕಾರಿ ಕೆಲಸದ ಆಸೆಗೆ ಬಿದ್ದು ವಂಚನೆಗೆ ಒಳಗಾಗಿದ್ದಾರೆ. ರಾಯಚೂರಿನ ಕೆಂಚಪ್ಪ ಹಂಚಿನಾಳ ಎಂಬಾತರು ಜಲ ಸಂಪನ್ಮೂಲ ಇಲಾಖೆಯಲ್ಲಿ ನೌಕರಿ ಕೊಡಿಸುವುದಾಗಿ ಹೇಳಿ ಈ ಎಲ್ಲರನ್ನು ಯಾಮಾರಿಸಿದ್ದಾರೆ. 2024ರ ಮಾರ್ಚ ತಿಂಗಳಿನಿoದ 2025ರ ಮಾರ್ಚ 28ರವರೆಗೆ ಈ ಎಲ್ಲರಿಂದಲೂ ಹಣಪಡೆದ ಕೆಂಚಪ್ಪ ಹಂಚಿನಾಳ ಇದೀಗ ಕೆಲಸ ಕೊಡಿಸದೇ ಕೈ ಎತ್ತಿದ್ದಾರೆ. ಕೆಂಚಪ್ಪ ಹಂಚಿನಾಳ ಅವರು ಪ್ರಕರಣದ ಸಾಕ್ಷಿದಾರ ಗೌರೀಶ ಅವರಿಂದ 3.85 ಲಕ್ಷ ರೂ ಹಾಗೂ ಉಳಿದವರಿಂದ 4.85 ಲಕ್ಷ ರೂ ಹಣಪಡೆದು ಮೋಸ ಮಾಡಿದ್ದಾರೆ. ಮೋಸ ಹೋದವರೆಲ್ಲರೂ ಸೇರಿ ಅವರ ಪಾಲಕರ ಬಳಿ ವಿಷಯದ ಬಗ್ಗೆ ಚರ್ಚಿಸಿದ್ದಾರೆ. ಕೊನೆಗೆ ಬೇರೆ ದಾರಿ ಇಲ್ಲದೇ ಪೊಲೀಸರ ಮೊರೆ ಹೋಗಿದ್ದಾರೆ. ಯಲ್ಲಾಪುರ ಪೊಲೀಸರು ವಿವರ ಕೇಳಿದ್ದು, `ಸರ್ಕಾರಿ ಕೆಲಸ ಮಾರಾಟಕ್ಕೆ ಇಲ್ಲ’ ಎಂದು ಅವರಿಗೆಲ್ಲರಿಗೂ ಮನವರಿಕೆ ಮಾಡಿದ್ದಾರೆ. ಅದಾದ ನಂತರ ರಾಯಚೂರಿನ ಕೆಂಚಪ್ಪ ಹಂಚಿನಾಳ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಸದ್ಯ ಎಎಸ್‌ಐ ರೇಣುಕಾ ಬೆಳಗಟ್ಟಿ ಅವರು ಈ ಪ್ರಕರಣದ ತನಿಖೆ ನಡೆಸುತ್ತಿದ್ದಾರೆ. - [ಅಪಘಾತ: ಎರಡು ಬೈಕಿನವರಿಗೆ ಗಾಯ!](https://mobiletime.in/2025/11/accident-two-bikers-injured/): ದಾಂಡೇಲಿಯ ಜಿ ಎನ್ ರಸ್ತೆ ಸಮೀಪದ ಮೋರ್ ಬಳಿ ನಡೆದ ಅಪಘಾತದಲ್ಲಿ ಬೈಕ್ ಸವಾರನ ಮೂಳೆ ಮುರಿದಿದೆ. ಗಾಯಗೊಂಡ ವ್ಯಕ್ತಿಯನ್ನು ಅಲ್ಲಿನ ಜನ ಆಸ್ಪತ್ರೆಗೆ ಸೇರಿಸಿದ್ದಾರೆ. ಸೋಮಾನಿ ವೃತ್ತದ ಮಾರ್ಗವಾಗಿ ಬರುತ್ತಿದ್ದ ಬೈಕಿಗೆ ಎದುರಿನಿಂದ ಬಂದ ಬೈಕು ಡಿಕ್ಕಿ ಹೊಡೆದಿದೆ. ಎದುರಿನಿಂದ ಬರುತ್ತಿದ್ದ ವ್ಯಕ್ತಿ ಬೈಕಿಗೆ ಗುದ್ದಿ ಅಲ್ಲಿಂದ ಮುಂದೆ ಹೋಗಿದ್ದಾರೆ. ಪರಿಣಾಮ ವಿದ್ಯುತ್ ಚಾಲಿತ ವಾಹನ ಜಖಂ ಆಗಿದ್ದು, ಅದರಲ್ಲಿದ್ದ ಸವಾರರಿಗೆ ಪೆಟ್ಟಾಗಿದೆ. ಅದಾದ ನಂತರ ಮುಂದೆ ಹೋಗಿದ್ದ ಬೈಕ್ ಸವಾರರು ಮಾರುತಿ ದೇವಸ್ಥಾನದ ಹತ್ತಿರ ತಮ್ಮ ವಾಹನ ನಿಲ್ಲಿಸಿದ್ದಾರೆ. ನಂತರ ಅಪಘಾತ ಸ್ಥಳಕ್ಕೆ ಬಂದಿದ್ದು ಆ ವೇಳೆ ಅವರ ಕಾಲಿನ ಮೂಳೆ ಮುರಿದಿರುವುದು ಗೊತ್ತಾಗಿದೆ. ಹೀಗಾಗಿ ಅವರು ಸಹ ಅಲ್ಲಿಯೇ ಕುಸಿದು ಬಿದ್ದಿದ್ದಾರೆ. ಸ್ಥಳೀಯರು ಆಂಬುಲೆನ್ಸಿಗೆ ಫೋನ್ ಮಾಡಿ, ಗಾಯಗೊಂಡವರನ್ನು ಆಸ್ಪತ್ರೆಗೆ ಕಳುಹಿಸಿದ್ದಾರೆ. ದಾಂಡೇಲಿಯಲ್ಲಿ ಪ್ರಥಮ ಚಿಕಿತ್ಸೆ ನೀಡಿದ ನಂತರ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಧಾರವಾಡಕ್ಕೆ ರವಾನಿಸಲಾಗಿದೆ. - [ಸಾಧಕರಿಗೆ ಸನ್ಮಾನಿಸಿದ ಕಾನಸೂರು ಬಳಗ](https://mobiletime.in/2025/11/kansur-group-felicitates-achievers/): ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದವರಿಗೆ ಸಿದ್ದಾಪುರದ ಕಾನಸೂರಿನ ಗೆಳೆಯರ ಬಳಗದವರು ಸನ್ಮಾನಿಸಿದ್ದಾರೆ. ಸಾವಿರಾರು ಜನರಿಗೆ ನ್ಯಾಯ ಕೊಡಿಸಿದ ಸರ್ಕಾರಿ ಅಭಿಯೋಜಕ ರಾಜೇಶ ಮಳಗೀಕರ, ಸಹಕಾರಿ ಕ್ಷೇತ್ರದ ಮೂಲಕ ಜನರಿಗೆ ಆರ್ಥಿಕ ಸಹಕಾರ ನೀಡುತ್ತಿರುವ ವಿನಾಯಕ ಶೆಟ್ಟಿ ಹಾಗೂ ಧಾರವಾಡ ಹಾಲು ಒಕ್ಕೂಟದ ಪ್ರಭಾರಿ ಅಧ್ಯಕ್ಷ ಸುರೇಶ್ಚಂದ್ರ ಹೆಗಡೆ ಕೆಶಿನ್ಮನೆ ಪ್ರೀತಿಯಿಂದ ಈ ಸನ್ಮಾನ ಸ್ವೀಕರಿಸಿದ್ದಾರೆ. ಕಾನಸೂರಿನ ಸರ್ಕಾರಿ ಶಾಲೆಯಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಸಾಧಕರಿಗೆ ಸನ್ಮಾನಿಸಲಾಗಿದೆ. ಉದ್ಯಮಿ ಆರ್ ಜಿ ಶೇಟ್ ಅವರು ಸನ್ಮಾನಿಸಿ ಸಾಧಕರನ್ನು ಅಭಿನಂದಿಸಿದ್ದಾರೆ. ಅನಂತಮೂರ್ತಿ ಹೆಗಡೆ ಚ್ಯಾರಿಟೇಬಲ್ ಅಧ್ಯಕ್ಷ ಅನಂತಮೂರ್ತಿ ಹೆಗಡೆ ಅವರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದು, ಸಂಘಟಕರ ಬಗ್ಗೆ ಅವರು ಮೆಚ್ಚುಗೆಯ ಮಾತನಾಡಿದರು. `ನ್ಯಾಯವಾಗಿದ್ದವರೆ ಕಾನೂನು ಸದಾ ಬೆಂಬಲಿಸುತ್ತದೆ. ನ್ಯಾಯಪರವಾಗಿದ್ದವರಿಗೆ ಅನ್ಯಾಯವಾಗದಂತೆ ಸರ್ಕಾರಿ ಅಭಿಯೋಜಕ ರಾಜೇಶ ಮಳಗೀಕರ ಅವರು ನಿರಂತರವಾಗಿ ಶ್ರಮಿಸುತ್ತಿದ್ದಾರೆ’ ಎಂದು ಗಣ್ಯರು ಹೇಳಿದರು. `ಕೆಡಿಸಿಸಿ ಬ್ಯಾಂಕಿನ ಅಧಿಕಾರಿಯಾಗಿದ್ದ ವಸಂತ ಶೆಟ್ಟಿ ಅವರು ಬಡ ಜನರ ಆರ್ಥಿಕ ಸಮಸ್ಯೆಗೆ ಪರಿಹಾರ ಒದಗಿಸಲು ಸಾಕಷ್ಟು ಶ್ರಮಿಸಿದ್ದರು. ಅವರ ಪ್ರಯತ್ನದ ಫಲವಾಗಿ ಶ್ರೀ ಭೂತೇಶ್ವರ ಪತ್ತಿನ ಸಹಕಾರಿ ಸಂಘ ಮುನ್ನಡೆಯುತ್ತಿದೆ’ ಎಂದ ಗಣ್ಯರು ಸಂಘದ ಮುಖ್ಯ ಕಾರ್ಯನಿರ್ವಾಹಕ ವಿನಾಯಕ ಶೇಟ್ ಅವರ ಕೆಲಸವನ್ನು ಶ್ಲಾಘಿಸಿದರು. `ನಾವು ನಂಬಿದ ಗೋ ಮಾತೆ ಎಂದಿಗೂ ನಮ್ಮನ್ನು ಕೈ ಬಿಡುವುದಿಲ್ಲ. ಕೆಲಸದಲ್ಲಿನ ಶೃದ್ಧೆಯ ಪರಿಣಾಮ ಸುರೇಶ್ಚಂದ್ರ ಹೆಗಡೆ ಕೆಶಿನ್ಮನೆ ಅವರು ಧಾರವಾಡ ಹಾಲು ಒಕ್ಕೂಟ ಪ್ರವೇಶಿಸಿದ್ದು, ಎಲ್ಲರಿಗೂ ಹೆಮ್ಮೆಯ ವಿಚಾರ’ ಎಂದು ಅಲ್ಲಿ ಭಾಗವಹಿಸಿದವರು ಹೇಳಿದರು. ಕಾನಸೂರು ಗ್ರಾಪಂ ಅಧ್ಯಕ್ಷೆ ಅನಿತಾ ನಾಯ್ಕ, ಉಪಾಧ್ಯಕ್ಷೆ ಸವಿತಾ ಕಾನಡೆ, ಸದಸ್ಯರಾದ ಶಶಿಕಾಂತ ನಾಮಧಾರಿ, ಮನೋಜ ಶಾನಭಾಗ, ಶಶಿಪ್ರಭಾ ಹೆಗಡೆ, ಎಸ್‌ಡಿಎಂಸಿ ಅಧ್ಯಕ್ಷೆ ಭಾರತಿ ನಾಯ್ಕ, ಸಂಘಟಕ ರಾಜು ಕಾನಸೂರು, ಶಿಕ್ಷಕ ಗುರುರಾಜ ನಾಯ್ಕ, ದಯಾನಂದ ಇತರರು ವಿವಿಧ ಜವಾಬ್ದಾರಿ ನಿಭಾಯಿಸಿದರು. ಸಭಾ ಕಾರ್ಯಕ್ರಮದ ಬಳಿಕ ಶಿರಸಿ ಆರ್ಕೆಸ್ಟ್ರಾದ ದಿವ್ಯಾ ಹೆಗಡೆ ತಂಡವದವರಿAದ ನಡೆದ ರಸಮಂಜರಿ ಹಾಗೂ ವಿದ್ಯಾರ್ಥಿಗಳು ನಡೆಸಿದ ಕಾರ್ಯಕ್ರಮ ಗಮನಸೆಳೆಯಿತು. - [ಮಹಿಳಾ ಕಾರ್ಯಕರ್ತರ ದಿಢೀರ್ ಮರಣ: ಕಾಂಗ್ರೆಸ್ಸಿಗೆ ಆಘಾತ-ಬಿಜೆಪಿಗೆ ಮರ್ಮಘಾತ!](https://mobiletime.in/2025/11/sudden-death-of-women-activists-shock-for-congress-heartbreak-for-bjp/): ಜನಪ್ರತಿನಿಧಿಗಳಾಗಿ ಜನಮನ್ನಣೆಗಳಿದ್ದ ಮಹಿಳೆಯರಿಬ್ಬರು ಭಾನುವಾರ ದಿಢೀರ್ ಆಗಿ ಸಾವನಪ್ಪಿದ್ದಾರೆ. ಶಿರಸಿಯ ಗೀತಾ ಬೋವಿ ಹಾಗೂ ಅಂಕೋಲಾದ ಸುಮಿತ್ರಾ ಬಂಟ್ ಅವರು ಈ ದಿನ ಹೃದಯಘಾತಕ್ಕೆ ಒಳಗಾಗಿದ್ದಾರೆ. ಗೀತಾ ಬೋವಿ ಅವರು ಶಿರಸಿಯ ಇಟಗುಳಿ ಗ್ರಾಮ ಪಂಚಾಯತದ ಮಾಜಿ ಅಧ್ಯಕ್ಷರಾಗಿದ್ದರು. ಸದ್ಯ ಅವರು ಅದೇ ಪಂಚಾಯತ ವ್ಯಾಪ್ತಿಯಲ್ಲಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದರು. ಜನಪರ ಕೆಲಸಗಳಿಂದ ಗುರುತಿಸಿಕೊಂಡಿದ್ದ ಅವರು ಕಾಂಗ್ರೆಸ್ ಕಾರ್ಯಕರ್ತರಾಗಿಯೂ ಸಕ್ರೀಯವಾಗಿದ್ದರು. ತಮ್ಮ ಜೀವಿತಾವಧಿಯ ಕೊನೆಕ್ಷಣದವರೆಗೂ ಅವರು ಲವಲವಿಕೆಯಿಂದಲೇ ಇದ್ದರು. ಭಾನುವಾರ ಬೆಳಗ್ಗೆ ಏಕಾಏಕಿ ಅವರು ಕುಸಿದು ಬಿದ್ದು ಸಾವನಪ್ಪಿದರು. ಕಾಂಗ್ರೆಸ್ ಪಕ್ಷಕ್ಕಾಗಿ ಹಗಲಿರುಳು ದುಡಿದು ಸಂಘಟಿಸಿದ ಗೀತಾ ಬೋವಿ ಅವರ ಅವರ ನಿಧನದಿಂದ ಶಾಸಕ ಭೀಮಣ್ಣ ನಾಯ್ಕ ಅವರು ಆಘಾತಕ್ಕೆ ಒಳಗಾಗಿದ್ದಾರೆ. ಹೀಗಾಗಿ ಅವರು ಈ ದಿನದ ತಮ್ಮ ಎಲ್ಲಾ ಪೂರ್ವನಿಗದಿತ ಕಾರ್ಯಕ್ರಮವನ್ನು ರದ್ದುಪಡಿಸಿದ್ದಾರೆ. ಸುಮಿತ್ರಾ ಬಂಟ್ ಅವರು ಅಂಕೋಲಾದ ಬಾವಿಕೇರಿ ಗ್ರಾಮ ಪಂಚಾಯತ ಸದಸ್ಯರಾಗಿದ್ದರು. ಪಕ್ಷೇತರವಾಗಿ ಆಯ್ಕೆಯಾದ ಅವರು ಕೇಣಿ ಭಾಗವನ್ನು ಪ್ರತಿನಿಧಿಸಿದ್ದರು. ಅದಾದ ನಂತರ ಬಿಜೆಪಿಗೆ ಅವರು ತಮ್ಮ ಬೆಂಬಲ ಸೂಚಿಸಿದ್ದರು. ತಮ್ಮ 70ನೇ ವಯಸ್ಸಿನಲ್ಲಿಯೂ ಅವರು ಉತ್ಸಾಹದಿಂದ ಇರುತ್ತಿದ್ದರು. ಎಲ್ಲರಿಗಿಂತ ಹಿರಿಯ ಸದಸ್ಯರಾಗಿದ್ದ ಅವರು ಜನಪರ ಕೆಲಸದ ಮೂಲಕ ಮೆಚ್ಚುಗೆಗಳಿಸಿದ್ದರು. ಕಾರ್ಯಕ್ರಮಗಳ ಸಂಘಟನೆಗಳಲ್ಲಿ ಸದಾ ಮುಂಚೂಣಿಯಲ್ಲಿರುತ್ತಿದ್ದರು. ಅವರ ಬಳಿ ಸ್ವಂತ ವಾಹನ ಇಲ್ಲದಿದ್ದರೂ ಸರ್ಕಾರಿ ಕಾರ್ಯಕ್ರಮಗಳಿಗೆ ಎಲ್ಲರಿಗಿಂತ ಮೊದಲು ಬರುತ್ತಿದ್ದರು. `ಇನ್ನು ಎರಡು ತಿಂಗಳಿನಲ್ಲಿ ಅಧಿಕಾರದ ಅವಧಿ ಮುಗಿಯಲಿದ್ದು, ಎಲ್ಲಾ ಸದಸ್ಯರು ಪ್ರವಾಸಕ್ಕೆ ಹೋಗೋಣ’ ಎಂದು ಅವರು ಹುರಿದುಂಬಿಸಿದ್ದರು. ಆದರೆ, ಅಷ್ಟರೊಳಗೆ ಅವರು ಈ ಲೋಕದ ಯಾತ್ರೆ ಮುಗಿಸಿದರು. - [ಭಾನುವಾರ ವಸೂಲಿಗೆ ಬಂದ ಶಿರಸಿ RTO!](https://mobiletime.in/2025/11/sirsi-rto-came-for-collection-on-sunday/): ಶಿರಸಿ-ಕುಮಟಾ ಹೆದ್ದಾರಿ ಬಂದ್ ಆದ ಪರಿಣಾಮ ಭಾರೀ ಗಾತ್ರದ ಟಿಪ್ಪರ್ ಹಾಗೂ ಲಾರಿಗಳು ಹುಬ್ಬಳ್ಳಿ-ಅಂಕೋಲಾ ಮಾರ್ಗವಾಗಿ ಸಂಚರಿಸುತ್ತಿದೆ. ಹೀಗಾಗಿ ವಾರದ ಏಳು ದಿನ ಶಿರಸಿ RTO ಮಲ್ಲಿಕಾರ್ಜುನ ಕೊಪ್ಪದ ಅವರು ಯಲ್ಲಾಪುರಕ್ಕೆ ಬಂದಿದ್ದು, ಹೆದ್ದಾರಿಯಲ್ಲಿ ದೊಡ್ಡ ದೊಡ್ಡ ವಾಹನ ನಿಲ್ಲಿಸಿ ವಸೂಲಿ ನಡೆಸುತ್ತಿದ್ದಾರೆ. ಎಲ್ಲಾ ದಾಖಲೆ ಸರಿಯಿದ್ದರೂ ಹಣ ವಸೂಲಿ ಮಾಡಿದ ಕಾರಣ ಲಾರಿ ಚಾಲಕ ಹಾಗೂ ಮಾಲಕರು ಗಲಾಟೆ ಮಾಡಿದ್ದಾರೆ! ಕಳೆದ ಎರಡು ತಿಂಗಳಿನಿOದ ಶಿರಸಿ RTO  ಮಲ್ಲಿಕಾರ್ಜುನ ಕೊಪ್ಪದ ಅವರು ತಮ್ಮ ಮೂವರು ಸಿಬ್ಬಂದಿ ಜೊತೆ ಯಲ್ಲಾಪುರಕ್ಕೆ ಬರುತ್ತಿದ್ದಾರೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುವ ಲಾರಿಗಳಿಗೆ ಅಡ್ಡಲಾಗಿ ಕೈ ಮಾಡುವ ಅವರು ತಪಾಸಣೆ ನೆಪದಲ್ಲಿ ಅವರನ್ನು ಕಾಡಿಸುತ್ತಿದ್ದಾರೆ. ನಿಲ್ಲಿಸಿದ ಎಲ್ಲಾ ಗಾಡಿಯವರಿಂದಲೂ ಕಡ್ಡಾಯವಾಗಿ 500 ರೂ ವಸೂಲಿ ಮಾಡುತ್ತಿದ್ದಾರೆ. ಹಣ ಕೊಡದಿದ್ದರೆ ಅನಗತ್ಯ ಕೇಸು ದಾಖಲಿಸಿ ಕೋರ್ಟು-ಕಚೇರಿ ಅಲೆದಾಡಿಸುತ್ತಿದ್ದಾರೆ. ಈ ವಿಷಯದ ಬಗ್ಗೆ ಉತ್ತರ ಕನ್ನಡ ಲಾರಿ ಮಾಲಕರ ಸಂಘದವರು ದೂರಿದ್ದು, ಭಾನುವಾರ RTO ನಡೆ ವಿರೋಧಿಸಿ ಮಲ್ಲಿಕಾರ್ಜುನ ಕೊಪ್ಪದ ಅವರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದ್ದಾರೆ. ಯಲ್ಲಾಪುರದ ಮಾಗೋಡು ಕ್ರಾಸಿನ ಬಳಿ ಭಾನುವಾರ 2ಕಿಮೀ ಉದ್ದಕ್ಕೆ ವಾಹನಗಳು ನಿಂತಿದ್ದವು. ಪೊಲೀಸರು ವಾಹನ ಸಂಚಾರ ಸರಿಪಡಿಸಲು ಹರಸಾಹಸ ಮಾಡಿದರು. ಆದರೆ, ಅಲ್ಲಿದ್ದ RTO ಅಧಿಕಾರಿಗಳು ವಾಹನ ಸಂಚಾರವನ್ನು ಇನ್ನಷ್ಟು ನಿಧಾನಗೊಳಿಸುತ್ತಿದ್ದರು. ಅತಿ ಬಾರ ಇಲ್ಲದ ಲಾರಿಗಳನ್ನು ಹಿಡಿದು ಅದಕ್ಕೆ ದಂಡ ವಸೂಲಿ ಮಾಡುವ ಬಗ್ಗೆ ಹೆದರಿಸುತ್ತಿದ್ದರು. ತೆರಿಗೆ ಪಾವತಿ ಸರಿಯಾಗಿದ್ದ ಲಾರಿ ಚಾಲಕರೊಬ್ಬರು ದಾಖಲೆ ನೀಡಿದರೂ ತೆರಿಗೆ ಪಾವತಿ ಆಗಿಲ್ಲ ಎಂಬ ಕಾರಣ ನೀಡಿ ದಂಡ ವಸೂಲಿ ಮಾಡಿದ್ದರು. RTO ಅಧಿಕಾರಿಗಳ ಉಪಟಳ ಸಹಿಸದ ಉತ್ತರ ಕನ್ನಡ ಲಾರಿ ಮಾಲಕರ ಸಂಘದವರು ಅವರ ಮಲ್ಲಿಕಾರ್ಜುನ ಕೊಪ್ಪದ ಅವರ ವಾಹನಕ್ಕೆ ಮುತ್ತಿಗೆ ಹಾಕಿದರು. ಸರ್ಕಾರಿ ಅಧಿಕಾರಿ ಬಳಿ ಕಾನೂನಾತ್ಮಕ ರೀತಿ ಪ್ರಶ್ನೆ ಕೇಳಿದರು. `ಸರ್ಕಾರಿ ಅಧಿಕಾರಿಗಳು ಕಚೇರಿಯಿಂದ ಹೊರಗಡೆ ಕರ್ತವ್ಯಕ್ಕೆ ಹೋಗುವ ಮುನ್ನ ರಿಜಿಸ್ಟರ್ ಪುಸ್ತಕದಲ್ಲಿ ಮಾಹಿತಿ ನಮೂದಿಸಬೇಕಿದ್ದು, ಕಚೇರಿಯೇ ತೆರೆಯದ ಭಾನುವಾರ ಇಲ್ಲಿ ಹೇಗೆ ಬಂದಿರಿ?’ ಎಂದು ಕೇಳಿದರು. ಈ ಪ್ರಶ್ನೆಗೆ ಉತ್ತರಿಸಲಾಗದೇ ಅಧಿಕಾರಿಗಳು ದಬ್ಬಿಬ್ಬಾದರು. ಆರ್ ಟಿ ಓ ಕಚೇರಿ ವಾಹನ ಚಾಲಕ ಈ ಎಲ್ಲಾ ವಿದ್ಯಮಾನಗಳ ವಿಡಿಯೋ ಮಾಡಿದ್ದು, ಲಾರಿ ಮಾಲಕ ಸಂಘದವರು ಸಹ ಘಟನಾವಳಿಗಳ ವಿಡಿಯೋ ಮಾಡಿದರು. ಅನಗತ್ಯವಾಗಿ ಆರ್ ಟಿ ಓ ಕಾಡಿಸಿದ ಬಗ್ಗೆ ಹೊರ ಜಿಲ್ಲೆಯ ಲಾರಿ ಚಾಲಕರು ದೂರಿದರು. ಲಾರಿ ಮಾಲಕರ ಸಂಘದ ರಾಜ್ಯ ಉಪಾಧ್ಯಕ್ಷ ಗಿರೀಶ ಮಲ್ನಾಡ್ ಅವರಿಗೆ ಉತ್ತರ ಕನ್ನಡ ಜಿಲ್ಲೆಯ ಲಾರಿ ಮಾಲಕರ ಸಂಘದ ಉಪಾಧ್ಯಕ್ಷ ಸುಜಯ ಮರಾಠಿ ಫೋನ್ ಮಾಡಿದರು. ಆರ್ ಟಿ ಓ ದಬ್ಬಾಳಿಕೆ ವಿರುದ್ಧ ಕಾನೂನು ಹೋರಾಟ ನಡೆಸುವ ಬಗ್ಗೆ ಲಾರಿ ಮಾಲಕರ ಸಂಘದವರು ಘೋಷಿಸಿದರು. ಹೊನ್ನಾವರದ ಲಾರಿ ಮಾಲೀಕರ ಸಂಘದ ಅಧ್ಯಕ್ಷ ಸಿದ್ದಾರ್ಥ ಕಾಮತ್, ಸಂಘಟನೆ ಸದಸ್ಯರಾದ ಮಹೇಶ್ ನಾಯ್ಕ, ಖಾಜಾ ಅತ್ತಾರ, ಮುರಳಿ ರಾವಲ್, ವರುಣ್ ನಾಯಕ, ಮುಜೀಮ್ ತೊಲಗಿ, ಆದಮ ಶೇಖ ಹಜಿಮ್ ಇತರರು ಆರ್ ಟಿ ಓ ನಡೆ ಖಂಡಿಸಿದರು. ವಸೂಲಿಗೆ ಬಂದ ಆರ್ ಟಿ ಓಗೆ ಛೀಮಾರಿ ಹಾಕಿದ ವಿಡಿಯೋ ಇಲ್ಲಿ ನೋಡಿ.. - [ಆಂಬುಲೆನ್ಸ ಪಲ್ಟಿ: ಭಟ್ಕಳದ ದಂಪತಿ ಕೊನೆಯುಸಿರು!](https://mobiletime.in/2025/11/ambulance-overturns-bhatkal-couple-dies/): ಬೆಂಗಳೂರಿನ ಟ್ರಾಫಿಕ್ ಸಿಗ್ನಲ್ ಬಳಿ ನಿಂತಿದ್ದ ಭಟ್ಕಳದ ದಂಪತಿಗೆ ಆಂಬುಲೆನ್ಸ ಗುದ್ದಿದ್ದು, ಆ ದಂಪತಿ ಅಲ್ಲಿಯೇ ಸಾವನಪ್ಪಿದ್ದಾರೆ. ಅಪಘಾತದ ರಭಸಕ್ಕೆ ಆಂಬುಲೆನ್ಸ ಪಲ್ಟಿಯಾಗಿದೆ. ಶನಿವಾರ ರಾತ್ರಿ 11 ಗಂಟೆ ವೇಳೆಗೆ ಈ ಅವಘಡ ನಡೆದಿದೆ. ಶಾಂತಿನಗರ ಬಸ್ ನಿಲ್ದಾಣದ ಬಳಿ ಆಂಬುಲೆನ್ಸ ಚಾಲಕನ ನಿಯಂತ್ರಣ ತಪ್ಪಿದೆ. ಅಲ್ಲಿದ್ದ ಬೈಕುಗಳಿಗೆ ಆಂಬುಲೆನ್ಸ ಗುದ್ದಿ ಅದಾದ ನಂತರ ಪಲ್ಟಿಯಾಗಿದೆ. ಈ ವೇಳೆ ಸಿಗ್ನಲ್ ಬಳಿ ಇದ್ದ ಭಟ್ಕಳದ ದಂಪತಿ ಸಾವನಪ್ಪಿದ್ದಾರೆ. ಭಟ್ಕಳದ ಬಂದರ್ ರೋಡಿನ ದಂಪತಿ ಅಪಘಾತದಲ್ಲಿ ಸಾವನಪ್ಪಿದವರಾಗಿದ್ದಾರೆ. ಈ ಅಪಘಾತದಲ್ಲಿ ಹಲವು ಬೈಕುಗಳಿಗೆ ಆಂಬುಲೆನ್ಸ ಡಿಕ್ಕಿ ಹೊಡೆದಿದೆ. ಅದಾದ ಬಳಿಕ ಪೊಲೀಸ್ ತಪಾಸಣಾ ಕೇಂದ್ರಕ್ಕೆ ಗುದ್ದಿ, ಅಲ್ಲಿ ತಿರುಗಿ ಬಿದ್ದಿದೆ. ಅಪಘಾತದ ನಂತರ ಆಂಬುಲೆನ್ಸ ಚಾಲಕ ಅಶೋಕರ್ ಪರಾರಿಯಾಗಿದ್ದು, ಭಾನುವಾರ ಬೆಳಗ್ಗೆ ಪೊಲೀಸರು ಚಾಲಕನನ್ನು ಪತ್ತೆ ಮಾಡಿದ್ದಾರೆ. ಅಪಘಾತ ಸ್ಥಳಕ್ಕೆ ವಿಲ್ಸನ್ ಗಾರ್ಡನ್ ಟ್ರಾಫಿಕ್ ಪೊಲೀಸರು ಭೇಟಿ ನೀಡಿದ್ದಾರೆ. ಪೊಲೀಸರು ಕಾನೂನು ಪ್ರಕ್ರಿಯೆ ಮುಂದುವರೆಸಿದ್ದಾರೆ. - [ಲಾರಿ ಬಿಟ್ಟು ನೆಲಕ್ಕೆ ಹಾರಿದ ಚಾಲಕ: ಸಾವು!](https://mobiletime.in/2025/11/driver-dies-after-jumping-off-lorry-and-falling-to-the-ground/): ಯಲ್ಲಾಪುರದ ಶಿರಲೆ ಕ್ರಾಸಿನ ಬಳಿ ಲಾರಿಯೊಂದು ಪಲ್ಟಿಯಾಗಿದ್ದು, ಲಾರಿಯಿಂದ ಹಾರಿದ ಚಾಲಕನ ಪ್ರಾಣ ಹಾರಿಹೋಗಿದೆ. ಬಿಹಾರದ ಮುಖೇಶಕುಮಾರ ತಿಕೇದ ನಾರಾಯಣ ದೇವ (27) ಅವರು ಲಾರಿ ಓಡಿಸಿಕೊಂಡು ಬಂದಿದ್ದು, ಯಲ್ಲಾಪುರ ಕಡೆಯಿಂದ ಅಂಕೋಲಾ ಕಡೆಗೆ ಹೋಗುವಾಗ ಲಾರಿ ಗಟಾರಕ್ಕೀಳಿದಿದೆ. ಶಿರಲೆ ಕ್ರಾಸಿನಿಂದ 500ಮೀ ಮುಂದೆ ಈ ಅವಘಡ ನಡೆದಿದೆ. ಲಾರಿ ಪಲ್ಟಿಯಾಗುವ ಪೂರ್ವದಲ್ಲಿ ಚಾಲಕ ಜೀವ ಉಳಿಸಿಕೊಳ್ಳುವುದಕ್ಕಾಗಿ ಲಾರಿಯಿಂದ ಹಾರಿದ್ದಾರೆ. ಆದರೆ, ಲಾರಿಯಿಂದ ಬಿದ್ದ ಪರಿಣಾಮ ಚಾಲಕನ ಚಾಲಕ ತಲೆ ಹಾಗೂ ಕೈಗೆ ಗಂಭೀರ ಗಾಯಗಳಾಗಿದೆ. ಆ ನೋವಿನಲ್ಲಿಯೇ ಮುಖೇಶಕುಮಾರ ಕೊನೆಯುಸಿರೆಳೆದಿದ್ದಾರೆ. ಲಾರಿಯೂ ಜಖಂ ಆಗಿದೆ. ಈ ಅಪಘಾತ ನೋಡಿದ ಯಲ್ಲಾಪುರದ ರವೀಂದ್ರ ನಗರದ ಸುಜಯ ಮರಾಠಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪಿಐ ರಮೇಶ ಹಾನಾಪುರ ಹಾಗೂ ಪಿಎಸ್‌ಐ ಸಿದ್ದಪ್ಪ ಗುಡಿ ಸ್ಥಳಕ್ಕೆ ಭೇಟಿ ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. - [ಅಡಿಕೆ ಸಿಪ್ಪೆಯಿಂದ ಅಂದದ ಅಲಂಕಾರ!](https://mobiletime.in/2025/11/beautiful-decoration-made-from-walnut-shells/): ಶಿರಸಿ TSS ಸಂಸ್ಥೆಯಲ್ಲಿ ಉನ್ನತ ಹುದ್ದೆಯಲ್ಲಿದ್ದ ವಿನಾಯಕ ಹೆಗಡೆ ಅವರು ಆ ಸಂಸ್ಥೆ ತೊರೆದ ನಂತರ ಧಾರವಾಡದಲ್ಲಿ ವಿಶೇಷ ತರಬೇತಿಪಡೆದಿದ್ದು, ಇದೀಗ ಊರಿನಲ್ಲಿಯೇ ಸ್ವ ಉದ್ಯೋಗ ಮಾಡುತ್ತಿದ್ದಾರೆ. ಅಡಿಕೆ ಸಿಪ್ಪೆ, ಅಡಿಕೆ ದಬ್ಬೆ, ಅಡಿಕೆ ಹಾಳೆಗಳನ್ನು ಪುಡಿ ಮಾಡಿ ಅವರು ಅಲಂಕಾರಿಕ ವಸ್ತುಗಳನ್ನು ಸಿದ್ಧಪಡಿಸುತ್ತಿದ್ದಾರೆ. ಅಡಿಕೆ ಮೌಲ್ಯ ವರ್ಧನೆಯ ಬಗ್ಗೆ ಬಹುತೇಕರು ಮಾತನಾಡುತ್ತಾರೆ. ಕಚ್ಚಾ ವಸ್ತುಗಳಿಂದ ಸಿದ್ಧ ವಸ್ತುಗಳನ್ನು ಸಿದ್ಧಪಡಿಸುವ ಬಗ್ಗೆ ನೂರಾರು ಯೋಜನೆಗಳನ್ನು ಹೇಳುತ್ತಾರೆ. ಅಂಥವರಿಗೆ ಧಾರವಾಡ ಕೃಷಿ ವಿಶ್ವ ವಿದ್ಯಾಲಯದಲ್ಲಿ ನವ ಉದ್ಯಮಗಳಿಗೆ ಪ್ರೋತ್ಸಾಹಿಸುವ ಕೃಷಿಕ್  ವಿಭಾಗ ಆಹ್ವಾನ ನೀಡುತ್ತಿದ್ದು, ಹೆಗಡೆಕಟ್ಟಾದ ವಿನಾಯಕ ಹೆಗಡೆ ಅವರು ಅಲ್ಲಿಗೆ ಹೋಗಿ ತಮ್ಮ ಆಸಕ್ತಿಯನ್ನು ಪ್ರಸ್ತುತಪಡಿಸಿದ್ದಾರೆ. ಅದರ ಪರಿಣಾಮವಾಗಿ ಕೃಷಿ ನಿರುಪಯೋಗಿ ವಸ್ತುಗಳಿಂದ ಉಪಯುಕ್ತ ವಸ್ತುಗಳನ್ನು ಸಿದ್ಧಪಡಿಸುವ ಘಟಕ ತಯಾರಿಸಿದ್ದಾರೆ. ವಿನಾಯಕ ಹೆಗಡೆ ಅವರ ಈ ಸಾಹಸಕ್ಕೆ ಅವರ ಪತ್ನಿ ಜಯಶ್ರೀ ಹೆಗಡೆ ಅವರು ಕೈ ಜೋಡಿಸಿದ್ದಾರೆ. ಈ ದಂಪತಿಯ ನಿರಂತರ ಪ್ರಯತ್ನದಿಂದ ನೂರಾರು ಬಗೆಯ ಕಲಾಕೃತಿಗಳು ಜನ್ಮ ತಾಳಿದ್ದು, ಅವು ಜನರ ಮನ ಗೆದ್ದಿವೆ. ಬರೇ ನಾಲ್ಕು ತಿಂಗಳಿನಲ್ಲಿ ಇಲ್ಲಿನ ಕಲಾಕೃತಿಗಳು ಜಿಲ್ಲೆ ದಾಟಿ ಸಾಗರ ಸೇರಿವೆ. ವಿನಾಯಕ ಹೆಗಡೆ ಅವರಿಗೆ 4 ಎಕರೆ ಅಡಿಕೆ ತೋಟವಿದೆ. ತೋಟದಲ್ಲಿ ಸಾವನಪ್ಪಿದ ಅಡಿಕೆ ಮರ, ಅಡಿಕೆ ಸಿಪ್ಪೆ, ಅಡಿಕೆ ಒಡಕುಗಳನ್ನು ಅವರು ಆರಿಸುತ್ತಾರೆ. ಕಡಿಮೆ ಬಿದ್ದರೆ ಬೇರೆ ಬೇರೆ ಭಾಗದಿಂದ ಕಚ್ಚಾ ವಸ್ತುಗಳನ್ನು ತರಿಸಿ ಅದಕ್ಕೆ ಅಂದದ ರೂಪ ಕೊಡುತ್ತಾರೆ. ಅಡಿಕೆ ಮರದ ಉತ್ಪನ್ನಗಳನ್ನು ಪುಡಿ ಮಾಡಿ ಅದಕ್ಕೆ ಅಗತ್ಯವಿರುವ ಇನ್ನಷ್ಟು ವಸ್ತುಗಳನ್ನು ಸೇರಿಸಿ ಅಲಂಕಾರಿಕ ವಸ್ತುಗಳನ್ನು ತಯಾರಿಸುತ್ತಾರೆ. ಮದುವೆ-ಮುಂಜಿಗಳಿಗೆ ಉಡುಗರೆ ನೀಡುವುದರ ಜೊತೆ ಮನೆ ಅಲಂಕಾರಕ್ಕೆ ಈ ವಸ್ತುಗಳು ಶೋಭೆ ತಂದು ಕೊಡುತ್ತಿವೆ. ಸದ್ಯ ಅವರ ಬಳಿ ಎಂಟು ಜನ ನುರಿತ ಕೆಲಸಗಾರರಿದ್ದು, ಯಾರಿಗೆ ಯಾವುದೇ ರೀತಿಯಾದ ಕಲಾಕೃತಿ ಬೇಕಾದರೂ ವಿನಾಯಕ ಹೆಗಡೆ ದಂಪತಿ ಸಿದ್ಧಪಡಿಸಿಕೊಡುತ್ತಾರೆ. ಆನ್‌ಲೈನ್ ಮಾರುಕಟ್ಟೆಯಲ್ಲಿ ಸಹ ಈ ದಂಪತಿ ರಚಿಸಿದ ಕಲಾಕೃತಿಗಳು ಸಿಗುತ್ತದೆ. 14*10ರ ಇಂಚ್ ಗಾತ್ರದ ಕಲಾಕೃತಿಗಳಿಗೆ 480ರೂ ಹಾಗೂ 8 ಇಂಚಿನ ವೃತ್ತಾಕಾರದ ಕಲಾಕೃತಿಗೆ 160ರೂ ದರದಲ್ಲಿ ಅವರು ಮಾರಾಟ ಮಾಡುತ್ತಾರೆ. ಸರಿಸುಮಾರು 1 ಕೆಜಿ ತೂಕವಿರುವ ಇವು ಮರದಿಂದ ಮಾಡಿದ ಕಲಾಕೃತಿಯ ಅನುಭವ ನೀಡುತ್ತದೆ. ಭವಿಷ್ಯದಲ್ಲಿ ವಿವಿಧ ಹೋಟೆಲ್-ಹೋಂ ಸ್ಟೇ ಬರುವ ಪ್ರವಾಸಿಗರಿಗೂ ಈ ಕಲಾಕೃತಿಗಳನ್ನು ತಲುಪಿಸುವ ಯೋಜನೆ ಅವರಿಗಿದೆ. ವಿನಾಯಕ ಹೆಗಡೆ ಅವರ ಜೊತೆ ಮಾತನಾಡಲು ಇಲ್ಲಿ ಫೋನ್ ಮಾಡಿ: 9986285763 - [2025 ನವೆಂಬರ್ 2ರ ದಿನ ಭವಿಷ್ಯ](https://mobiletime.in/2025/11/prediction-for-november-2-2025/): ಮೇಷ ರಾಶಿ: ನಿಮ್ಮ ಆಂತರಿಕ ಶಕ್ತಿ ಹೆಚ್ಚಳವಾಗಲಿದೆ. ಸ್ನೇಹಿತರ ಸಹಾಯ ಸಿಗಲಿದೆ. ಆರ್ಥಿಕ ಸ್ಥಿತಿ ಉತ್ತಮವಾಗಿರಲಿದೆ. ವೃಷಭ ರಾಶಿ: ಕುಟುಂಬದ ಸಂತೋಷ ಹೆಚ್ಚಾಗಲಿದೆ. ಹೊಸ ಯೋಜನೆಗಳ ವಿಚಾರಕ್ಕೆ ಸೂಕ್ತ ಸಮಯ. ಆಸ್ತಿ ವಿಷಯವಾಗಿ ಚಿಂತೆ ಮಾಡಬೇಡಿ. ಮಿಥುನ ರಾಶಿ: ಕಷ್ಟದಲ್ಲಿ ನೆರವಾಗುವವರೇ ನಿಜವಾದ ಸ್ನೇಹಿತರು ಎಂಬುದು ನೆನಪಿಡಿ. ಸವಾಲುಗಳನ್ನು ಧೈರ್ಯದಿಂದ ಎದುರಿಸಿ. ಆರೋಗ್ಯದ ಕಡೆ ಗಮನಹರಿಸಿ. ಕರ್ಕ ರಾಶಿ: ಕುಟುಂಬದಲ್ಲಿ ಸಂತೋಷ ಕಾಣಲಿದೆ. ಸಮಸ್ಯೆಗಳನ್ನು ವಿಶ್ಲೇಷಿಸಿದರೆ ಪರಿಹಾರ ಸಿಗುತ್ತದೆ. ಹೊಸ ಪರಿಚಯಗಳು ಲಾಭವಾಗಲಿದೆ. ಸಿಂಹ ರಾಶಿ: ಧೈರ್ಯದಿಂದ ನಡೆದುಕೊಮಡರೆ ಸಮಸ್ಯೆಗಳು ದೂರವಾಗಲಿದೆ. ಉದ್ದಿಮೆಯಲ್ಲಿ ಯಶಸ್ಸು ಸಿಗಲಿದೆ. ಆರೋಗ್ಯದ ಕಡೆ ಗಮನಹರಿಸಿ. ಕನ್ಯಾ ರಾಶಿ: ಈ ದಿನ ಕೆಲಸದಲ್ಲಿ ನಿಷ್ಠೆ ತುಂಬಾ ಮುಖ್ಯ. ಹೊಸ ಗುರಿಗಳನ್ನು ಸಾಧಿಸುವಿರಿ. ಕುಟುಂಬದೊoದಿಗೆ ಸಮಯ ಕಳೆಯಿರಿ. ತುಲಾ ರಾಶಿ: ಸೌಹಾರ್ದತೆಯ ಜೀವನ ಮುಖ್ಯ. ಹೊಸ ಬಗೆಯ ಬೇರೆಯ ದಾರಿಗಳನ್ನು ಅನ್ವೇಷಿಸಿ. ಹಣಕಾಸಿನ ದೃಷ್ಟಿಯಿಂದ ಧೈರ್ಯ ಅಗತ್ಯ. ವೃಶ್ಚಿಕ ರಾಶಿ: ಹೊಸ ಅವಕಾಶಗಳು ಎದುರಾಗುತ್ತವೆ. ಧೈರ್ಯದಿಂದ ಮುಂದುವರಿಯಿರಿ. ಸ್ನೇಹಿತರಿಂದ ಸಹಾಯ ದೊರೆಯುತ್ತದೆ. ಆರ್ಥಿಕ ಸ್ಥಿತಿ ಸುಧಾರಣೆ ಆಗಲಿದೆ. ಧನು ರಾಶಿ: ಹೊಸ ಬಗೆಯ ಯೋಜನೆ ಅನುಷ್ಠಾನಕ್ಕೆ ಸೂಕ್ತ ಸಮಯ. ಧನ ಲಾಭ ಆಗಲಿದೆ. ಆರೋಗ್ಯದ ಬಗ್ಗೆ ಕಾಳಜಿ ಅಗತ್ಯ. ಮಕರ ರಾಶಿ: ನಿರಂತರ ಪ್ರಯತ್ನದಿಂದ ಫಲ ಸಿಗಲಿದೆ. ಕುಟುಂಬದಲ್ಲಿ ಸಂತೋಷ ಸಿಗಲಿದೆ. ದೂರ ಪ್ರಯಾಣ ಈ ದಿನ ಬೇಡ. ಕುಂಭ ರಾಶಿ: ನಿಮಗೆ ಹೊಸ ಅವಕಾಶಗಳು ಎದುರಾಗುತ್ತವೆ. ಶ್ರದ್ಧೆ ಮತ್ತು ಧೈರ್ಯದಿಂದ ಕೆಲಸ ಮಾಡಿ. ಸ್ನೇಹಿತರ ಸಹಕಾರ ಸಿಗಲಿದೆ. ಮೀನ ರಾಶಿ: ಆರ್ಥಿಕ ದೃಷ್ಟಿಯಿಂದ ಸಾಧನೆ ಸಾಧ್ಯವಿದೆ. ಕಾರ್ಯಕ್ಷೇತ್ರದಲ್ಲಿ ನಿರಂತರ ಪ್ರಗತಿ ಆಗಲಿದೆ. ಹೊಸ ಅನುಭವಗಳು ಸಿಗಲಿದೆ.   - [ಕಾರು ಡಿಕ್ಕಿ: ಕಂದಕಕ್ಕೆ ಉರುಳಿದ ಬಸ್ಸು!](https://mobiletime.in/2025/11/car-collision-bus-falls-into-ditch/): 30ಕ್ಕೂ ಅಧಿಕ ಜನರನ್ನು ಕರೆದೊಯ್ಯುತ್ತಿದ್ದ ಸರ್ಕಾರಿ ಬಸ್ಸು ಹೊನ್ನಾವರದ ಬಳಿ ಅಪಘಾತಕ್ಕೀಡಾಗಿದೆ. ಗೇರುಸೊಪ್ಪ ಸೂಳೆಮೂರ್ಕಿ ಕ್ರಾಸ್ ಬಳಿ ಬಸ್ಸು ಹಾಗೂ ಕಾರಿನ ನಡುವೆ ಡಿಕ್ಕಿ ನಡೆದಿದ್ದು, ಬಸ್ಸು ಕಂದಕಕ್ಕೆ ಬಿದ್ದಿದೆ. ಈ ಅಪಘಾತದಲ್ಲಿ ಬಸ್ಸಿನಲ್ಲಿದ್ದ 10ಕ್ಕೂ ಅಧಿಕ ಜನ ಗಾಯಗೊಂಡಿದ್ದಾರೆ. ಕಾರಿನಲ್ಲಿದ್ದವರಿಗೆ ಸಹ ಪೆಟ್ಟಾಗಿದೆ. ಈ ಬಸ್ಸು ಬೆಂಗಳೂರಿನಿAದ ಭಟ್ಕಳಕ್ಕೆ ಬರುತ್ತಿರುವಾಗ ಅವಘಡ ನಡೆದಿದೆ. 5ಕ್ಕೂ ಅಧಿಕ ಆಂಬುಲೆನ್ಸ ಮೂಲಕ ಗಾಯಾಳುಗಳನ್ನು ಆಸ್ಪತ್ರೆಗೆ ತರುವ ಕೆಲಸ ನಡೆಯುತ್ತಿದೆ. ಗಂಭೀರವಾಗಿ ಪೆಟ್ಟಾದವರಿಗೆ ಮುತುವರ್ಜಿವಹಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಬಸ್ ಪಲ್ಟಿಯಾಗಿದ್ದರಿಂದ ಆ ಭಾಗದ ಸಂಚಾರ ಅಸ್ತವ್ಯಸ್ಥವಾಗಿದ್ದು, ಅದನ್ನು ಸರಿಪಡಿಸುವ ಕೆಲಸ ನಡೆದಿದೆ. ಬಸ್ಸಿನಲ್ಲಿ ಸಿಲುಕಿರುವ ಪ್ರಯಾಣಿಕರನ್ನು ಹೊರತೆಗೆಯಲು ಅಗ್ನಿಶಾಮಕ ಸಿಬ್ಬಂದಿ ಸಾಹಸ ಮಾಡುತ್ತಿದ್ದಾರೆ. ಅಪಘಾತ ಸ್ಥಳದಲ್ಲಿ ಮೊಬೈಲ್ ನೆಟ್‌ವರ್ಕ ಸಹ ಸಿಗದ ಕಾರಣ ತುರ್ತು ಮಾಹಿತಿ ರವಾನೆಯಾಗುತ್ತಿಲ್ಲ. - [ಸಾಲ ತೀರಿಸಲಾಗದೇ ಸಾವನಪ್ಪಿದ ಬಟ್ಟೆ ವ್ಯಾಪಾರಿ!](https://mobiletime.in/2025/11/a-cloth-merchant-died-because-he-could-not-repay-his-debt/): ಮುಂಡಗೋಡದಲ್ಲಿ ಬಟ್ಟೆ ವ್ಯಾಪಾರ ಮಾಡಿಕೊಂಡಿದ್ದ ಹನುಮಂತ ಬಂಗಾಳೆ ಅವರು ವ್ಯಾಪಾರದಲ್ಲಿನ ನಷ್ಟ ಸಹಿಸಲಾಗದೇ ವಿಷ ಕುಡಿದಿದ್ದಾರೆ. ಅವರನ್ನು ಬದುಕಿಸುವುದಕ್ಕಾಗಿ ಕುಟುಂಬದವರು ಮತ್ತೆ ಸಾಲ ಮಾಡಿ ಆಸ್ಪತ್ರೆ ಓಡಾಟ ನಡೆಸಿದರೂ ಪ್ರಯೋಜನವಾಗಿಲ್ಲ. ಮುಂಡಗೋಡಿನ ಇಂದೂರಿನ ಹನುಮಂತ ಬಂಗಾಳೆ ಅವರು ತಮ್ಮ ವ್ಯಾಪಾರ ವೃದ್ಧಿಗಾಗಿ ಸಾಲ ಮಾಡಿದ್ದರು. ಬೇರೆ ಬೇರೆ ಊರುಗಳಿಂದ ಅವರು ಬಗೆ ಬಗೆಯ ಬಟ್ಟೆಗಳನ್ನು ತರಿಸಿದ್ದರು. ಸ್ಪರ್ಧಾತ್ಮಕ ಬೆಲೆಯಲ್ಲಿ ಅವರು ಬಟ್ಟೆ ವ್ಯಾಪಾರ ನಡೆಸುತ್ತಿದ್ದರು. ಆದರೆ, ಪ್ರಚಾರ ಕೊರತೆಯಿಂದಾಗಿ ಅವರ ಮಳಿಗೆಗೆ ಗ್ರಾಹಕರು ಮಾತ್ರ ಬರುತ್ತಿರಲಿಲ್ಲ. ಇದರಿಂದ ಅವರ ಸಾಲ ಇನ್ನಷ್ಟು ಹೆಚ್ಚಾಯಿತು. ಆರ್ಥಿಕ ಸಂಕಷ್ಟದಿoದ ಅವರಿಗೆ ಬದುಕು ಬೇಸರವಾಯಿತು. ಅಕ್ಟೊಬರ್ 30ರಂದು ಟೇಲರ್ ಕೆಲಸ ಮಾಡುವ ಅವರ ತಮ್ಮ ಖಂಡೋಬಾ ಬೊಂಗಾಳೆ ಅವರು ಹಿತ್ತಲಿಗೆ ಹೊಡೆಯಲು ಕ್ರಿಮಿನಾಶಕ ತಂದಿದ್ದರು. ಜೀವನದಲ್ಲಿ ಬೇಸರಗೊಂಡಿದ್ದ ಹನುಮಂತ ಬಂಗಾಳೆ ಅವರು ಆ ಕ್ರಿಮಿನಾಶಕ ಕುಡಿದು ಒದ್ದಾಡಲು ಶುರು ಮಾಡಿದರು. ತಕ್ಷಣ ಕುಟುಂಬದವರು ಅವರನ್ನು ಮುಂಡಗೋಡು ಆಸ್ಪತ್ರೆಗೆ ದಾಖಲು ಮಾಡಿದರು. ಅದಾದ ನಂತರ ಹುಬ್ಬಳ್ಳಿ ಕಿಮ್ಸ್’ಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದರು. ಎರಡು ದಿನಗಳ ಕಾಲ ನಿರಂತರ ಚಿಕಿತ್ಸೆ ಕೊಟ್ಟರೂ ಹನುಮಂತ ಬಂಗಾಳೆ ಅವರು ಬದುಕಲಿಲ್ಲ. ನವೆಂಬರ್ 1ರಂದು ಸಾವನಪ್ಪಿದರು. ಖಂಡೋಬಾ ಬೊಂಗಾಳೆ ಅವರು ಪೊಲೀಸರಿಗೆ ಮಾಹಿತಿ ನೀಡಿ, ಶವಪಡೆದರು. - [ಹಣ ಕೊಡದ ಕಾರಣ ಚಾಕು ಚುಚ್ಚಿದ ಡಕಾಯಿತ!](https://mobiletime.in/2025/11/a-bandit-stabbed-me-with-a-knife-because-i-didnt-pay/): ಭಟ್ಕಳ ಸಂಶುದ್ದೀನ್ ಸರ್ಕಲಿನಲ್ಲಿ ಮಾದಕ ವಸ್ತು ಸೇವಿಸಿದ ವ್ಯಕ್ತಿಯೊಬ್ಬ ಮತ್ತೊಬ್ಬ ವ್ಯಕ್ತಿ ಮೇಲೆ ಚಾಕುವಿನ ದಾಳಿ ನಡೆಸಿದ್ದು, ವೆಲ್ಡಿಂಗ್ ಕೆಲಸ ಮಾಡುವ ಮಂಜುನಾಥ ನಾಯ್ಕ ಎಂಬಾತರು ಗಾಯಗೊಂಡಿದ್ದಾರೆ. ಡಿ ಪಿ ಕಾಲೋನಿಯ ನಗೀನಕುಮಾರ ಶೆಟ್ಟಿ ದಾಳಿ ನಡೆಸಿದವರಾಗಿದ್ದು, ಪೊಲೀಸ್ ತನಿಖೆ ನಡೆಯುತ್ತಿದೆ. ಭಟ್ಕಳ ಪೊಲೀಸ್ ಕ್ವಾಟರ್ಸ ಹತ್ತಿರದ ಡಿ ಪಿ ಕಾಲೋನಿಯ ನಗೀನಕುಮಾರ ಶೆಟ್ಟಿ ಹಾಗೂ ಮಂಜುನಾಥ ಮಾಸ್ತಪ್ಪ ನಾಯ್ಕ ನಡುವಿನ ಹಳೆಯ ದ್ವೇಷ ಈ ದುರಂತಕ್ಕೆ ಕಾರಣ ಎನ್ನುವ ಮಾಹಿತಿಯಿದೆ. ಅಕ್ಟೊಬರ್ 31ರ ಮಧ್ಯಾಹ್ನ ತಲಗೇರಿಯ ವ್ಯಾಪಾರಿ ಗಣೇಶ ನಾಯ್ಕ ಹಾಗೂ ಪುರವರ್ಗದ ಮಂಜುನಾಥ ನಾಯ್ಕ ಅವರು ಛಾಯಾ ಲಾಡ್ಜ ಹೊಟೇಲ್ ಹತ್ತಿರ ಊಟಕ್ಕೆ ಹೋಗಿದ್ದರು. ಅಲ್ಲಿಂದ ಮರಳುವಾಗ ಅವರಿಬ್ಬರಿಗೂ ನಗೀನಕುಮಾರ ಶೆಟ್ಟಿ ಅವರು ಎದುರಾದರು. ನಶೆಯಲ್ಲಿದ್ದ ನಗೀನಕುಮಾರ ಶೆಟ್ಟಿ ಅವರು `ನಿನ್ನೆ ಹಣ ಕೇಳಿದ್ರೆ ಬೈಯ್ದು ಕಳಿಸಿದ್ದಿಯಾ. ಇವತ್ತು ನಿನ್ನನ್ನ ಬಿಡೋದಿಲ್ಲ’ ಎಂದು ಅಬ್ಬರಿಸಿದರು. ಅದಾದ ನಂತರ ಮಂಜುನಾಥ ನಾಯ್ಕ ಅವರ ಮೇಲೆ ಚಾಕು ಚುಚ್ಚಿದರು. ಮಂಜುನಾಥ ನಾಯ್ಕ ಅವರ ಕಂಕಳ, ಕುತ್ತಿಗೆ, ಹೊಟ್ಟೆ, ಕಿವಿಯ ಹತ್ತಿರ ಹಾಗೂ ತಲೆಯ ಭಾಗಕ್ಕೆ ಚಾಕು ಇರಿದಿದ್ದರಿಂದ ಅವರು ಗಾಯಗೊಂಡಿದ್ದಾರೆ. ಘಟನೆಯ ಮಾಹಿತಿ ತಿಳಿದ ಕೂಡಲೇ ಪಿಐ ದಿವಾಕರ ಪಿ ಎಂ ಮತ್ತು ಪಿಎಸ್‌ಐ ನವೀನ್ ನಾಯ್ಕ ನೇತೃತ್ವದ ಪೊಲೀಸರು ಸ್ಥಳಕ್ಕೆ ಧಾವಿಸಿ ಆರೋಪಿಯನ್ನು ಬಂಧಿಸಿದ್ದಾರೆ. ಗಾಯಗೊಂಡ ಮಂಜುನಾಥನನ್ನು ಮೊದಲು ಭಟ್ಕಳ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ, ನಂತರ ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿಗೆ ಸ್ಥಳಾಂತರಿಸಲಾಗಿದೆ. - [ಜಯ ಕರ್ನಾಟಕ | ಜನಪರ ವೇದಿಕೆಯಿಂದ ರಾಜ್ಯೋತ್ಸವ](https://mobiletime.in/2025/11/jaya-karnataka-rajyotsava-from-janapara-vedike/): ಕಾರವಾರದ ಜಯ ಕರ್ನಾಟಕ ಜನಪರ ವೇದಿಕೆ ರಚನೆಯಾಗಿ ಐದು ವರ್ಷವಾಗಿದ್ದು, ಈ ಹಿನ್ನಲೆ ನಗರದಲ್ಲಿ ಅದ್ಧೂರಿ ಕನ್ನಡ ರಾಜ್ಯೋತ್ಸವ ಆಚರಿಸಿದೆ. 70ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಬಸ್ ನಿಲ್ದಾಣದ ಎದುರುಗಡೆ ನಡೆಯಿತು. ಕಾರವಾರ ಬಿಜೆಪಿ ಗ್ರಾಮೀಣ ಮಂಡಲದ ಅಧ್ಯಕ್ಷ ಸುಭಾಷ್ ಗುನಗಿ ಧ್ವಜಹೊರಣ ನೆರವೇರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು `ಜಯ ಕರ್ನಾಟಕ ಜನಪರ ವೇದಿಕೆ ಜಿಲ್ಲೆಯ ಸಮಸ್ಯೆಗಳ ಧ್ವನಿಯಾಗಿದೆ. ಈ ಹಿಂದಿನಿAದ ಜಿಲ್ಲೆಯಲ್ಲಿ ಕನ್ನಡ ಉಳಿವಿಗಾಗಿ, ಜಿಲ್ಲೆಯ ಜನರ ಸಮಸ್ಯೆಗಳ ಪರ ಧ್ವನಿ ಎತ್ತುತ್ತಿದೆ’ ಎಂದರು. ಸAಘಟನೆಯ ಜಿಲ್ಲಾಧ್ಯಕ್ಷ ದಿಲೀಪ್ ಅರ್ಗೇಕರ್ ಮಾತನಾಡಿ `ಸಂಘಟನೆಯ ಸಂಸ್ಥಾಪಕ ಅಧ್ಯಕ್ಷರಾದ ಗುಣರಂಜನ್ ಶೆಟ್ಟಿ ಅವರ ಮುಖ್ಯ ಉದ್ದೇಶ ನಾಡು, ನುಡಿ, ನೆಲ ಹಾಗೂ ಜಲ. ಇದರೊಟ್ಟಿಗೆ ಪರಿಸರ ಸಂರಕ್ಷಣೆ, ಗಿಡ ಬೆಳೆಸುವುದಾಗಿದೆ. ಈ ಹಿನ್ನಲೆ ಸಂಘಟನೆ ಕನ್ನಡ ಶಾಲೆಗಳ ಉಳಿವಿಗಾಗಿ ಹೋರಾಟ ಮಾಡುತ್ತಾ ಬಂದಿದೆ’ ಎಂದು ವಿವರಿಸಿದರು. ಈ ವೇಳೆ ಸಂಘಟನೆ ಜಿಲ್ಲಾ ಕಾರ್ಯಧ್ಯಕ್ಷ ರೋಷನ್ ಹರಿಕಂತ್ರ, ಜಿಲ್ಲಾ ಯುವ ಘಟಕದ ಅಧ್ಯಕ್ಷ ಸುದೇಶ್ ನಾಯ್ಕ್. ಜಿಲ್ಲಾ ಯುವ ಘಟಕದ ಕಾರ್ಯಧ್ಯಕ್ಷ ರಾಹುಲ್ ತಾಂಡೇಲ್, ಜಿಲ್ಲಾ ಉಪಾಧ್ಯಕ್ಷ ಸುನಿಲ್ ತಾಂಡೇಲ್, ಜಿಲ್ಲಾ ಕಾರ್ಯದರ್ಶಿ ರಾಜು ತಾಂಡೇಲ್, ಕಾರವಾರ ತಾಲೂಕ ಅಧ್ಯಕ್ಷ ಮೋಹನ್ ಉಳ್ಳೇಕರ್, ದಿಲೀಪ್ ನಾಗೇಕರ್. ಸಂದೇಶ ಆಚಾರಿ, ವಿನಾಯಕ್ ಹರಿಕಂತ್ರ, ದೀಪಕ್ ತಾಂಡೇಲ್, ವಿನಯ್ ನಾಯ್ಕ್, ದಿಲೀಪ್ ಉಳೇಕರ್, ಸಂಘಟನೆ ಪ್ರಮುಖರು ಹಾಗೂ ಬಸ್ ಚಾಲಕರು ಉಪಸ್ಥಿತರಿದ್ದರು. - [ಪ್ರಜಾಪತಿ ಮಾಡಿದ ಕಿತಾಪತಿ: ವೆಂಕಟೇಶನಿಗೆ ಮೂರು ನಾಮ!](https://mobiletime.in/2025/11/prajapatis-book-three-names-for-venkateswara/): 80 ಲಕ್ಷ ರೂ ಮೌಲ್ಯದ ಚಿನ್ನ 50 ಲಕ್ಷ ರೂಪಾಯಿಗೆ ಖರೀದಿಸುವ ಆಸೆಗೆ ಬಿದ್ದ ಹೊನ್ನಾವರದ ವೆಂಕಟೇಶ ಮಹಾಲೆ ಅವರಿಗೆ ಮೂರು ನಾಮ ಬಿದ್ದಿದೆ. ಪ್ರಜಾಪತಿ ಎಂಬಾತ ಮಾಡಿದ ಕಿತಾಪತಿಗೆ ಕಿರಾಣಿ ವ್ಯಾಪಾರಿ ಹೊಂಡಕ್ಕೆ ಬಿದ್ದಿದ್ದಾರೆ. ಹೊನ್ನಾವರ ಗುಣವಂತೆಯ ಹಡುಕನಕೇರಿಯಲ್ಲಿ ವೆಂಕಟೇಶ ಗಣಪಯ್ಯ ಮಹಾಲೆ ಅವರು ವಾಸವಾಗಿದ್ದಾರೆ. ಗುಣವಂತೆಯಲ್ಲಿ ಅವರು ತಮ್ಮದೇ ಆದ ಶ್ರೀ ಮಹಾಲಸಾ ನಾರಾಯಣಿ ಪ್ರಾವಿಜನ್ ಸ್ಟೋರ್ಸ ಎಂಬ ಕಿರಾಣಿ ಅಂಗಡಿ ನಡೆಸುತ್ತಾರೆ. ವ್ಯವಹಾರಸ್ಥರಾಗಿರುವ ವೆಂಕಟೇಶ ಮಹಾಲೆ ಅವರು ಕಡಿಮೆ ಬೆಲೆಗೆ ಏನು ಸಿಕ್ಕರೂ ಬಿಡುವವರಲ್ಲ. ಇಂಥಹುದೇ ದುರಾಸೆಯಿಂದ ಅವರು ಇದೀಗ ಮೋಸ ಹೋಗಿದ್ದಾರೆ. 2025ರ ಮೇ ಮಾಸದಲ್ಲಿ ರಾಜಸ್ಥಾನದ ರಾಜು ಪ್ರಜಾಪತಿ ಎಂಬಾತರು ವೆಂಕಟೇಶ ಮಹಾಲೆ ಅವರ ಅಂಗಡಿಗೆ ಬಂದಿದ್ದರು. ಅನೇಕ ವಸ್ತುಗಳನ್ನು ಖರೀದಿಸಿ ಪ್ರಾಮಾಣಿಕ ವ್ಯವಹಾರ ನಡೆಸಿದ್ದರು. ಅದಾದ ನಂತರ ನಿತ್ಯವೂ ಆಗಮಿಸಿ ವಿವಿಧ ವಸ್ತು ಖರೀದಿಸುತ್ತಿದ್ದರು. ರಾಜು ಪ್ರಜಾಪತಿ ಅವರನ್ನು ಕಂಡರೆ ವೆಂಕಟೇಶ ಮಹಾಲೆ ಅವರಿಗೆ ಎಲ್ಲಿಲ್ಲದ ವಿಶ್ವಾಸಬೆಳೆಯಿತು. ಅವರು ಹೇಳಿದನ್ನೆಲ್ಲ ಕೇಳಲು ಶುರು ಮಾಡಿದರು. ಹೀಗಿರುವಾಗ 20 ದಿನದ ಹಿಂದೆ ಕಿರಾಣಿ ಅಂಗಡಿಗೆ ಬಂದಿದ್ದ ರಾಜು ಪ್ರಜಾಪತಿ ಅವರು ವೆಂಕಟೇಶ ಮಹಾಲೆ ಅವರ ಕಿವಿಯಲ್ಲಿ ಸಣ್ಣದಾಗಿ ಊದಿದ್ದರು. `ತನ್ನ ಬಳಿ 750 ಗ್ರಾಂ ಬಂಗಾರ ಇದೆ. ತುಂಬಾ ಹಳೆಯ ಬಂಗಾರ ಅದಾಗಿದ್ದು, 80 ಲಕ್ಷ ರೂಪಾಯಿವರೆಗೆ ಬೆಲೆಯಿದೆ’ ಎಂದು ಪ್ರಜಾಪತಿ ಹೇಳಿದರು. ದಿನದಿಂದ ದಿನಕ್ಕೆ ಬಂಗಾರದ ಬೆಲೆ ಏರಿಕೆ ಆಗುತ್ತಿರುವುದನ್ನು ವೆಂಕಟೇಶ ಮಹಾಲೆ ಅವರು ಗಮನಿಸಿದ್ದರು. ಆ ಎಲ್ಲಾ ಬಂಗಾರವನ್ನು ತಾವೇ ಖರೀದಿಸುವ ಯೋಜನೆಗೆ ಬಿದ್ದರು. ರಾಜು ಪ್ರಜಾಪತಿ ಹಾಗೂ ವೆಂಕಟೇಶ ಮಹಾಲೆ ಅವರ ನಡುವಿನ ಮಾತುಕಥೆಯಲ್ಲಿ 50 ಲಕ್ಷ ರೂಪಾಯಿಗೆ ಹೊಂದಾಣಿಕೆಯಾಯಿತು. ಅಲ್ಲಿ-ಇಲ್ಲಿ ಕೂಡಿಟ್ಟ ಎಲ್ಲಾ ಹಣವನ್ನು ವೆಂಕಟೇಶ ಮಹಾಲೆ ಅವರು ಒಟ್ಟಾಗಿ ಸೇರಿಸಿದರು. ಅಕ್ಟೊಬರ್ 30ರಂದು ಹಣಕ್ಕೆ ಸಿದ್ಧತೆ ಮಾಡಿಕೊಂಡು ಪ್ರಜಾಪತಿ ಅವರಿಗೆ ಫೋನ್ ಮಾಡಿದರು. ಅಕ್ಟೊಬರ್ 31ರಂದು ಬಂಗಾರ ತರುವಂತೆ ಸೂಚನೆ ಕೊಟ್ಟರು. ಅದರ ಪ್ರಕಾರ, ರಾಜು ಪ್ರಜಾಪತಿ ಅವರು ನಿಗದಿತ ಸಮಯಕ್ಕೆ ಮತ್ತೊಬ್ಬ ವ್ಯಕ್ತಿ ಜೊತೆ ಬಂದರು. ಹಳೆಯ ಬಂಗಾರ ಕೊಟ್ಟು 50 ಲಕ್ಷ ರೂ ಹಣಪಡೆದರು. ಅದಾದ ನಂತರ ವೆಂಕಟೇಶ ಮಹಾಲೆ ಅವರು ಖುಷಿಯಾಗಿ ಅಕ್ಕಸಾಲಿಗನ ಬಳಿ ಓಡಿದರು. ಬಂಗಾರ ತಪಾಸಣೆ ನಡೆಸಿದಾಗ ಅದು ನಕಲಿ ಎಂದು ಗೊತ್ತಾಯಿತು. ತಕ್ಷಣ ರಾಜು ಪ್ರಜಾಪತಿ ಅವರಿಗೆ ಫೋನ್ ಮಾಡಿದರು. ಆದರೆ, ಪ್ರಜಾಪತಿ ಫೋನ್ ಸ್ವಿಚ್ ಆಫ್ ಬರುತ್ತಿತ್ತು! ತಮಗಾದ ಮೋಸ, ಅನ್ಯಾಯದ ಬಗ್ಗೆ ವೆಂಕಟೇಶ ಮಹಾಲೆ ಅವರು ಮಂಕಿ ಪೊಲೀಸ್ ಠಾಣೆಗೆ ಹೋಗಿ ವಿವರಿಸಿದರು. ಪೊಲೀಸರು ಪ್ರಕರಣ ದಾಖಲಿಸಿದ್ದು, ಮೋಸ ಮಾಡಿದವರಿಗಾಗಿ ಹುಡುಕಾಟ ನಡೆಸಿದ್ದಾರೆ. `ಅತಿ ಆಸೆ ಗತಿಗೇಡು’ - [ಸುಧಾ-ಸರೋಜರ ನಡುವೆ ಜಡೆ ಜಗಳ!](https://mobiletime.in/2025/11/a-heated-argument-between-sudha-and-saroj/): ಸೊಪ್ಪಿನ ಬೆಟ್ಟದ ವಿಷಯಕ್ಕಾಗಿ ಸಿದ್ದಾಪುರದ ಸೋವಿನಕೊಪ್ಪದ ಸುಧಾ ಹೆಗಡೆ ಹಾಗೂ ಸರೋಜಾ ಹೆಗಡೆ ಹೊಡೆದಾಡಿಕೊಂಡಿದ್ದಾರೆ. ಈ ಹೊಡೆದಾಟಕ್ಕೆ ನಾರಾಯಣ ಹೆಗಡೆ ಅವರು ಕೈ ಜೋಡಿಸಿದ್ದಾರೆ. ಸಿದ್ದಾಪುರದ ಸೋವಿನಕೊಪ್ಪದ ಸುಧಾ ವಿಶ್ವನಾಥ ಹೆಗಡೆ ಅವರಿಗೆ ಅದೇ ಊರಿನ ಸರೋಜಾ ನಾರಾಯಣ ಹೆಗಡೆ ಅವರು ಸಣ್ಣದಾದ ಕೋಲಿನಿಂದ ಹೊಡೆದಿದ್ದಾರೆ. ಕೋಲಿನಿಂದ ಹೊಡೆದ ಉರಿ ತಡೆಯಲಾರದೇ ಸುಧಾ ಹೆಗಡೆ ಅವರು ನ್ಯಾಯಾಲಯದ ಮೊರೆ ಹೋಗಿದ್ದು, ನಾರಾಯಣ ಹೆಗಡೆ ಹಾಗೂ ಸರೋಜಾ ಹೆಗಡೆ ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹಿಸಿದ್ದಾರೆ. ಅಕ್ಟೊಬರ್ 31ರಂದು ರಾತ್ರಿ 8ಗಂಟೆಗೆ ಸುಧಾ ಹೆಗಡೆ ಹಾಗೂ ಸರೋಜಾ ಹೆಗಡೆ ಅವರ ನಡುವೆ ಈ ಗಲಾಟೆ ನಡೆದಿದೆ. ಸೋವಿನಕೊಪ್ಪ ಸರ್ವೇ ನಂ 6ರಲ್ಲಿನ ಭೂಮಿ ವಿಷಯದಲ್ಲಿನ ತಕರಾರು ಈ ಹೊಡೆದಾಟಕ್ಕೆ ಮೂಲ ಕಾರಣ. ಹೊಡೆದಾಟ ನಡೆಸಿದವರೆಲ್ಲರೂ ದಾಯಾದಿಗಳೇ ಆಗಿದ್ದು, ಕುಟುಂಬದ ವಿಷಯ ನ್ಯಾಯಾಲಯದ ಮೆಟ್ಟಿಲೇರಿದೆ. ಶುಕ್ರವಾರ ವಿವಾದಿತ ಭೂಮಿಯಲ್ಲಿ ಸರೋಜಾ ಹೆಗಡೆ ಅವರು ದನಕರ ಮೇಯಿಸುತ್ತಿದ್ದರು. ಇದನ್ನು ಸುಧಾ ಹೆಗಡೆ ಅವರು ಸಹಿಸಲಿಲ್ಲ. ದನಕರು ಬಿಟ್ಟಿರುವ ಬಗ್ಗೆ ಪ್ರಶ್ನಿಸಿದ ಕಾರಣ ಸರೋಜಾ ಹೆಗಡೆ ಅವರು ಸುಧಾ ಹೆಗಡೆ ಅವರಿಗೆ ಸಣ್ಣ ಕೋಲಿನಿಂದ ಹೊಡೆದರು. ನಾರಾಯಣ ಹೆಗಡೆ ಅವರು ಈ ವೇಳೆ ಸುಧಾ ಹೆಗಡೆ ಅವರಿಗೆ ಬೈದರು. `ಈ ಜಾಗ ನಮ್ಮದು’ ಎಂದು ನಾರಾಯಣ ಹೆಗಡೆ ಅಬ್ಬರಿಸಿದರು. ಹೀಗಾಗಿ ಸುಧಾ ಹೆಗಡೆ ಅವರು ಪೊಲೀಸ್ ದೂರು ನೀಡಿದರು. - [ಕಾಂತಾರ ಸಿನಿಮಾ.. ಬಾಲ್ಕನಿ ಟಿಕೆಟು: ಆ ಎಂಟು ಜನರಿಗಾಗಿ ಶೋಧ!](https://mobiletime.in/2025/11/kantara-cinema-balcony-ticket-the-search-for-those-eight-people/): ಕಾಂತಾರಾ ಸಿನಿಮಾ ನೋಡಲು ಹೊನ್ನಾವರಕ್ಕೆ ಬಂದಿದ್ದ ಎಂಟು ಜನ ಟಾಕೀಸಿನ ಶೌಚಾಲಯದ ಬಳಿ ಗುಪ್ತ ಸಭೆ ನಡೆಸಿದ್ದು, ಇದನ್ನು ಪ್ರಶ್ನಿಸಿದ ಕಾರಣ ಅಲ್ಲಿನ ಕ್ಯಾಂಟಿನ್ ಸಿಬ್ಬಂದಿ ಪೆಟ್ಟು ತಿಂದಿದ್ದಾರೆ. ಆ ಎಂಟು ಜನ ಸೇರಿ ರಾಜು ಸಾವಂತ ಅವರ ಮೇಲೆ ಕೈ ಮಾಡಿದ್ದರಿಂದ ಪೊಲೀಸರು ಇದೀಗ ಆ ಅಪರಿಚಿತರ ಶೋಧ ಶುರು ಮಾಡಿದ್ದಾರೆ. ಗೋಕರ್ಣ ಬಂಕಿಕೊಡ್ಲದ ರಾಜು ಉಲ್ಲಾಸ ಸಾವಂತ (40) ಅವರು ಹೊನ್ನಾವರದ ಪದ್ಮಾಂಜಲಿ ಟಾಕೀಸಿನಲ್ಲಿ ವಾಸವಿರುತ್ತಾರೆ. ಅವರು ಅಲ್ಲಿ ಕ್ಯಾಂಟಿನ್ ಕೆಲಸ ನಿರ್ವಹಿಸುತ್ತಿದ್ದಾರೆ. ಅಕ್ಟೊಬರ್ ಅವಧಿಯಲ್ಲಿ ಪದ್ಮಾಂಜಲಿ ಟಾಕೀಸಿನಲ್ಲಿ ಕಾಂತಾರಾ ಸಿನಿಮಾ ಪ್ರದರ್ಶನ ನಡೆಯುತ್ತಿದ್ದು, ಆ ತಿಂಗಳ 21ರ ರಾತ್ರಿ ಶೋ ನೋಡಲು 8 ಜನ ಬಂದಿದ್ದರು. ಅವರೆಲ್ಲರೂ ಬಾಲ್ಕನಿ ಟಿಕೆಟ್‌ಪಡೆದು ಟಾಕೀಸಿನ ಒಳ ಹೊಕ್ಕಿದ್ದರು. ಆದರೆ, ಟಾಕೀಸಿನಲ್ಲಿ ಸಿನಿಮಾ ನೋಡುವ ಬದಲು ಅವರೆಲ್ಲರೂ ಶೌಚಾಲಯ ಸೇರಿದ್ದರು. ಶೌಚಾಲಯದ ಬಾಗಿಲು ಹಾಕಿಕೊಂಡು ಅವರೆಲ್ಲರೂ ಏನೋ ಮಾಡುತ್ತಿದ್ದರು. ರಾತ್ರಿ 10.30ರ ಅವಧಿಗೆ ಸಿನಿಮಾಗೆ ಮಧ್ಯಂತರ ವಿರಾಮ ನೀಡಲಾಯಿತು. ಆಗ, ರಾಜು ಸಾವಂತ ಅವರು ಜನರ ಅನುಕೂಲಕ್ಕಾಗಿ ಶೌಚಾಲಯದ ಬಾಗಿಲು ತೆರೆಯಲು ಪ್ರಯತ್ನಿಸಿದರು. ಆದರೆ, ಅಲ್ಲಿದ್ದ 8 ಜನ ಇದಕ್ಕೆ ಅವಕಾಶ ಕೊಡಲಿಲ್ಲ. `ಯಾಕೆ ಬಾಗಿಲು ತೆರೆಯುವೆ?’ ಎಂದು ಅಲ್ಲಿದ್ದವರು ಪ್ರಶ್ನಿಸಿದರು. ರಾಜು ಸಾವಂತ ಅವರು ಸಮಜಾಯಿಶಿ ನೋಡುವುದರೊಳಗೆ ಅಲ್ಲಿದ್ದ ಜನ ದಾಳಿ ಮಾಡಿದರು. ಶೌಚಾಲಯದ ಗಾಜು ಒಡೆದು ಹಾನಿ ಮಾಡಿದರು. ಅವರೆಲ್ಲರೂ ನಶೆಯಲ್ಲಿದ್ದ ಅನುಮಾನವಿದ್ದು, ಪೆಟ್ಟು ತಿಂದ ರಾಜು ಸಾವಂತ ಅವರು ಪೊಲೀಸ್ ಠಾಣೆಗೆ ತೆರಳಿ ಎಲ್ಲಾ ವಿದ್ಯಮಾನ ವಿವರಿಸಿದರು. ಅದಾದ ನಂತರ ನ್ಯಾಯಾಲಕ್ಕೆ ಹೋಗಿ ನ್ಯಾಯಾಧೀಶರಿಗೂ ವಿಷಯ ಮನದಟ್ಟು ಮಾಡಿದರು. ನ್ಯಾಯಾಧೀಶರ ಸೂಚನೆ ಮೇರಗೆ ಪೊಲೀಸರು ಪ್ರಕರಣ ದಾಖಲಿಸಿದರು. ಆ ಎಂಟು ಜನರ ಬಗ್ಗೆ ಈವರೆಗೂ ಸುಳಿವು ಸಿಕ್ಕಿಲ್ಲ. ಆದರೆ, `ಅವರನ್ನು ಮತ್ತೆ ನೋಡಿದರೆ ಖಂಡಿತ ಗುರುತಿಸುವೆ’ ಎಂದು ರಾಜು ಸಾವಂತ ಅವರು ಪೊಲೀಸರಿಗೆ ಹೇಳಿಕೆ ನೀಡಿದ್ದಾರೆ. ಈ ಹಿನ್ನಲೆ ಆ ದಿನ ಸಿನಿಮಾ ನೋಡಲು ಹೋದವರ ಬಗ್ಗೆ ಪೊಲೀಸರು ಮಾಹಿತಿ ಕಲೆಹಾಕುತ್ತಿದ್ದಾರೆ. - [ಕನ್ನಡ ಪದ್ಯಕ್ಕೆ ಭೀಮಣ್ಣ ತಕಾ ಥೈ!](https://mobiletime.in/2025/11/bheemanna-taka-thai-for-kannada-verse/): ಶಿರಸಿಯಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ರಾಜಕುಮಾರ ಅಭಿನಯದ `ಹುಟ್ಟಿದರೆ ಕನ್ನಡ ನಾಡಿನಲ್ಲಿ ಹುಟ್ಟಬೇಕು’ ಎಂಬ ಹಾಡು ಮೊಳಗಿದ್ದು, ಕ್ಷೇತ್ರದ ಶಾಸಕ ಭೀಮಣ್ಣ ನಾಯ್ಕ ಅವರು ಹಾಡಿನ ಜೊತೆ ಕುಣಿದು ಕುಪ್ಪಳಿಸಿದರು. ಶಿರಸಿಯ ಮಾರಿಕಾಂಬಾ ಶಾಲೆಯಲ್ಲಿ ರಾಜ್ಯೋತ್ಸವ ಸಂಭ್ರಮ ಮನೆ ಮಾಡಿದ್ದು, ಸಾವಿರಾರು ವಿದ್ಯಾರ್ಥಿಗಳು ಕನ್ನಡ ಕಲರವ ಮೊಳಗಿಸಿದರು. `ಕನ್ನಡದಲ್ಲಿಯೇ ಮಾತನಾಡಿ.. ಕನ್ನಡದಲ್ಲಿಯೇ ವ್ಯವಹರಿಸಿ’ ಎಂದು ಶಾಸಕ ಭೀಮಣ್ಣ ನಾಯ್ಕ ಕರೆ ನೀಡಿದರು. ಸಭಾ ಕಾರ್ಯಕ್ರಮಕ್ಕೂ ಮುನ್ನ `ಹುಟ್ಟಿದರೆ ಕನ್ನಡ ನಾಡಿನಲ್ಲಿ ಹುಟ್ಟಬೇಕು’ ಎಂಬ ಹಾಡಿಗೆ ಅವರು ಹೆಜ್ಜೆ ಹಾಕಿ ಸಂಭ್ರಮಿಸಿದರು. `ರಾಜ್ಯ ಸರ್ಕಾರ ಕನ್ನಡಕ್ಕೆ ಹೆಚ್ಚು ಪ್ರೋತ್ಸಾಹ ನೀಡುತ್ತಿದೆ. ಎಲ್ಲರಿಗೂ ಉಚಿತ ಶಿಕ್ಷಣ ನೀಡುತ್ತಿದೆ. ಕನ್ನಡ ಭಾಷೆ ಎಂದೆoದಿಗೂ ಅಮರವಾಗಿರಬೇಕು’ ಎಂದು ಭೀಮಣ್ಣ ನಾಯ್ಕ ಅವರು ಹೇಳಿದರು. ಧ್ವಜಾರೋಹಣ ನೆರವೇರಿಸಿದ ಸಹಾಯಕ ಆಯುಕ್ತೆ ಕೆವಿ ಕಾವ್ಯಾರಾಣಿ ಅವರು `ಕದಂಬರ ನಾಡಿನಲ್ಲಿ ಉಪವಿಭಾಗಾಧಿಕಾರಿಯಾಗಿ ಧ್ವಜಾರೋಹಣ ಮಾಡುತ್ತಿರುವುದು ಅತ್ಯಂತ ಹೆಮ್ಮೆ ತಂದಿದೆ’ ಎಂದರು. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಗೈದ ಗಣಪತಿ ಭಟ್ಟ, ಜಿ ಎಂ.ಬೊಮ್ನಳ್ಳಿ, ಕದಂಬ ರತ್ನಾಕರ, ಅನುರಾಧಾ ಹೆಗಡೆ, ಮಧುಕೇಶ್ವರ ನಾಯ್ಕ ಅವರನ್ನು ಗೌರವಿಸಲಾಯಿತು. - [ಮರಳು ದೊರೆಗೆ ಮಣ್ಣು ಮುಕ್ಕಿಸಿದ PSI](https://mobiletime.in/2025/11/psi-throws-mud-at-sand-king/): ಹೊನ್ನಾವರದ ನಾಗರಾಜ ನಾಯ್ಕ ಅವರು ಅಕ್ರಮ ಮರಳು ದಂಧೆಯಲ್ಲಿ ತೊಡಗಿದನ್ನು ಭಟ್ಕಳ ಪೊಲೀಸರು ಪತ್ತೆ ಮಾಡಿದ್ದಾರೆ. ಪರಿಸರಕ್ಕೆ ಹಾನಿ ಆಗುವ ರೀತಿ ಮರಳು ತೆಗೆದು ಕದ್ದು ಸಾಗಿಸುತ್ತಿದ್ದ ಅವರನ್ನು ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಯ ಪೊಲೀಸ್ ಉಪನಿರೀಕ್ಷಕ ಭರಮಪ್ಪ ಬೆಳಗಲಿ ಅವರು ಹಿಡಿದಿದ್ದಾರೆ. ಹೊನ್ನಾವರ ಮಂಕಿಯ ಕಾಜಿಮನೆಯ ನಾಗರಾಜ ನಾಯ್ಕ ಅವರು ಲಾರಿ ಚಾಲಕರಾಗಿದ್ದಾರೆ. ಅವರು ತಮ್ಮ ಟಿಪ್ಪರಿನಲ್ಲಿ ನಿರಂತರವಾಗಿ ಮರಳು ಸಾಗಾಟ ಮಾಡುತ್ತಿದ್ದು, ಸರ್ಕಾರಿ ಬೊಕ್ಕಸಕ್ಕೆ ಹಾನಿ ಮಾಡುತ್ತಿದ್ದಾರೆ. ಜೊತೆಗೆ ಮರಳು ತೆಗೆಯಲು ಹಾಗೂ ಸಾಗಾಟಕ್ಕೆ ಅವರು ಪರವಾನಿಗೆ ಸಹ ಪಡೆದಿಲ್ಲ. ತಮ್ಮ ಲಾಭಕ್ಕಾಗಿ ಅವರು ಪರಿಸರಕ್ಕೆ ಹಾನಿ ಮಾಡಿ ಮರಳುಗಾರಿಕೆ ನಡೆಸುತ್ತಿದ್ದಾರೆ. ಹೀಗಿರುವಾಗ ಅಕ್ಟೊಬರ್ 31ರಂದು ಹಗಲಿನಲ್ಲಿಯೇ ಅವರು ಮರಳು ಸಾಗಾಟ ಮಾಡುತ್ತಿದ್ದರು. ಶಿರಾಲಿ ಜಂಕ್ಷನ್ ಬಳಿ ಪಿಎಸ್‌ಐ ಭರಮಪ್ಪ ಬೆಳಗಲಿ ಅವರು ಟಿಪ್ಪರಿಗೆ ಅಡ್ಡಲಾಗಿ ಕೈ ಮಾಡಿದರು. ಅಕ್ರಮ ಮರಳು ಸಾಗಾಟ ನೋಡಿದ ಪೊಲೀಸರು ಲಾರಿಯಲ್ಲಿದ್ದ ಮರಳನ್ನು ವಶಕ್ಕೆಪಡೆದರು. ದಾಖಲೆ ಇಲ್ಲದ ಕಾರಣ ಪ್ರಕರಣ ದಾಖಲಿಸಿದರು. - [ಕಾಸಿನ ಕೊರತೆ: ಕಾರವಾರ ಕೇಂದ್ರ ಕಚೇರಿಯ ಕರೆಂಟ್ ಕಟ್!](https://mobiletime.in/2025/11/shortage-of-money-karwar-central-office-power-cut/): ವಿದ್ಯುತ್ ಬಿಲ್ ಬಾಕಿ ಹಿನ್ನಲೆ ಕಾರವಾರದ ಹಲವು ಸರ್ಕಾರಿ ಕಚೇರಿಯ ವಿದ್ಯುತ್ ಸಂಪರ್ಕ ಕಡಿತವಾಗಿದೆ. ಬಿಲ್ ಪಾವತಿ ಮಾಡುವವರೆಗೂ ವಿದ್ಯುತ್ ಸಂಪರ್ಕ ಮರುಜೋಡಣೆ ಮಾಡದಿರಲು ಹೆಸ್ಕಾಂ ನಿರ್ಧರಿಸಿದೆ. ಸಾಕಷ್ಟು ಬಾರಿ ತಿಳುವಳಿಕೆ ನೀಡಿದರೂ ಸರ್ಕಾರಿ ಕಚೇರಿಗಳು ವಿದ್ಯುತ್ ಬಿಲ್ ಪಾವತಿ ಮಾಡುತ್ತಿಲ್ಲ. ಈ ಹಿನ್ನಲೆ ಹೆಸ್ಕಾಂ ಅಧಿಕಾರಿಗಳು ಕಠಿಣ ಕ್ರಮಕ್ಕೆ ಮುಂದಾಗಿದ್ದಾರೆ. ವಿದ್ಯುತ್ ಬಿಲ್ ಕಟ್ಟದ ಕಾರವಾರದ ಸರ್ಕಾರಿ ಕಚೇರಿಗಳ 15 ಕ್ಕೂ ಹೆಚ್ಚು ಮೀಟರ್‌ಗಳ ವಿದ್ಯುತ್ ಸಂಪರ್ಕ ಕಡಿತವಾಗಿದೆ. ಇದರಿಂದ ಸರ್ಕಾರಿ ಕಚೇರಿಯಲ್ಲಿ ಬೆಳಕಿನ ವ್ಯವಸ್ಥೆ ಇಲ್ಲದೇ ಜನ ಸಮಸ್ಯೆ ಅನುಭವಿಸಿದ್ದಾರೆ. ವಿದ್ಯುತ್ ಇಲ್ಲದ ಕಾರಣ ಸರ್ಕಾರಿ ಕೆಲಸಕ್ಕೆ ಸಹ ಅಡಚಣೆಯಾಗಿದೆ. ಕಾರವಾರ ಉಪವಿಭಾಗಾಧಿಕಾರಿ ಕಚೇರಿ, ತಹಶೀಲ್ದಾರ್ ಕಚೇರಿ, ಶಾಸಕರ ಕಚೇರಿ ಹಾಗೂ ಜಿಲ್ಲಾ ನೋಂದಾಣಾಕಾರಿ ಕಚೇರಿಯ 6 ಲಕ್ಷಕ್ಕೂ ಹೆಚ್ಚು ಮೌಲ್ಯದ ಬಿಲ್ ಬಾಕಿಯಿದೆ. 9 ತಿಂಗಳಿನಿAದ ಸರ್ಕಾರಿ ಕಚೇರಿಯವರು ಬಿಲ್ ಪಾವತಿ ಮಾಡದ ಕಾರಣ ಹೆಸ್ಕಾಂ ಕಾನೂನು ಕ್ರಮ ಜರುಗಿಸಿದೆ. ಕೆಲ ಕಚೇರಿಯಲ್ಲಿ ಬ್ಯಾಟರಿ ಇದ್ದು, ಕೆಲ ಕಾಲ ಆ ಆಧಾರದಲ್ಲಿ ಕೆಲಸ ನಡೆದಿದೆ. ಅದಾದ ನಂತರ ಕಚೇರಿ ಕೆಲಸಗಳು ಸ್ಥಬ್ದವಾಗಿದೆ. ಸರ್ಕಾರಿ ಕೆಲಸಕ್ಕೆ ಬಂದ ಜನ ಅವ್ಯವಸ್ಥೆ ವಿರುದ್ಧ ಕಿಡಿಕಾರಿದ್ದಾರೆ. - [ಸರ್ಕಾರದಿಂದಲೇ ಸಿದ್ಧವಾಗಲಿದೆ ಸುಸಜ್ಜಿತ ಆಸ್ಪತ್ರೆ!](https://mobiletime.in/2025/11/a-well-equipped-hospital-will-be-ready-by-the-government-itself/): ಹೆಸರನಲ್ಲಿಯೇ `ಕನ್ನಡ’ ಪದಹೊಂದಿದ `ಉತ್ತರ ಕನ್ನಡ’ ಜಿಲ್ಲೆಯಲ್ಲಿ ಕನ್ನಡ ರಾಜ್ಯೋತ್ಸವ ಅದ್ಧೂರಿಯಾಗಿ ನಡೆದಿದೆ. ಕಲೆ, ಸಂಸ್ಕೃತಿಯ ಪ್ರತಿರೂಪ ಆಹ್ವಾದಿಸಿದ ಜನಪ್ರತಿನಿಧಿಗಳು ಭವಿಷ್ಯದ ಅಭಿವೃದ್ಧಿಯ ಕನಸುಗಳನ್ನು ಬಿಚ್ಚಿಟ್ಟಿದ್ದಾರೆ. `ಕನ್ನಡ ಭಾಷೆಗೆ ಶಾಸ್ತಿಯ ಭಾಷಾ ಸ್ಥಾನಮಾನ ಸಿಕ್ಕಿರುವುದು ಹೆಮ್ಮೆಯ ವಿಷಯ’ ಎಂದು ಸಚಿವ ಮಂಕಾಳು ವೈದ್ಯ ಅವರು ಕಾರವಾರದಲ್ಲಿ ಸಂತಸವ್ಯಕ್ತಪಡಿಸಿದ್ದಾರೆ. `ಕನ್ನಡ ಭಾಷೆಯು 2000 ವರ್ಷಗಳ ಇತಿಹಾಸ ಹೊಂದಿದ್ದು, ಅಂದಿನಿoದಲೂ ಉಳಿದು ಅತ್ಯಂತ ಎತ್ತರಕ್ಕೆ ಬೆಳೆದಿದೆ. ಕನ್ನಡ ಭಾಷೆಗೆ ಇದುವರೆಗೆ 8 ಬಾರಿ ಜ್ಞಾನಪೀಠ ಪ್ರಶಸ್ತಿ ಲಭಿಸಿದ್ದು, ಕನ್ನಡ ಭಾಷೆಯು ನಿರಂತರವಾಗಿ ಬೆಳೆಯಲಿದೆ’ ಎಂದವರು ಹೇಳಿದರು. `ಕಾರವಾರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ 450 ಹಾಸಿಗೆ ಹೊಸ ಆಸ್ಪತ್ರೆಯ ಕಟ್ಟಡ ಕಾಮಗಾರಿ ಮುಕ್ತಾಯಗೊಂಡಿದ್ದು, ಜಿಲ್ಲೆಯ ಜನರ ಬೇಡಿಕೆಯಂತೆ ಮುಂಬರುವ ಬಜೆಟ್‌ನಲ್ಲಿ ಮಲ್ಟಿ ಸ್ಪೆಷಲಿಟಿ ಆಸ್ಪತ್ರೆಯು ಘೋಷಣೆಯಾಗುತ್ತದೆ. ಜಿಲ್ಲೆಯಲ್ಲಿ ಮಲ್ಪಿ ಸ್ಪೆಷಾಲಿಟಿ ಆಸ್ಪತ್ರೆ ಆರಂಭವಾಗಲಿದೆ’ ಎಂದು ಸಚಿವ ಮಂಕಾಳು ವೈದ್ಯ ಸ್ಪಷ್ಟಪಡಿಸಿದರು. `ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ಶಿರಸಿ ಮತ್ತು ಭಟ್ಕಳದಲ್ಲಿ ಹಾಸ್ಟೇಲ್ ನಿರ್ಮಿಸಲಾಗುತ್ತಿದೆ. ಕಾರ್ಮಿಕ ಇಲಾಖೆಯಿಂದ ವಿಶೇಷವಾಗಿ ಕಾರ್ಮಿಕ ಮಕ್ಕಳಿಗೆ ವಿದ್ಯಾಭ್ಯಾಸಕ್ಕೆ ಅನುಕೂಲವಾಗುವ ನಿಟ್ಟಿನಲ್ಲಿ 55 ಕೋಟಿ ರೂ ವೆಚ್ಚದಲ್ಲಿ ವಸತಿ ಶಾಲೆಯನ್ನು ಭಟ್ಕಳದಲ್ಲಿ ನಿರ್ಮಿಸಲಾಗುತ್ತಿದೆ. ರಾಜ್ಯದ ಕರಾವಳಿ ಪ್ರದೇಶವನ್ನು ಅಭಿವೃದ್ಧಿಪಡಿಸಲು ನೀಲನಕ್ಷೆಯನ್ನು ತಯಾರಿಸಿ, 23 ಸಾವಿರ ಕೋಟಿ ವೆಚ್ಚದಲ್ಲಿ 126 ಪ್ರಾಜೇಕ್ಟ್ಗಳು ಕೈಗೆತ್ತಿಕೊಳ್ಳಲಾಗಿದೆ. ಈ ಯೋಜನೆಗÀಳಿಂದ ಪ್ರವಾಸೋದ್ಯಮ, ವಾಣಿಜ್ಯ ಬಂದರು, ಮೀನುಗಾರಿಕೆ ಬಂದರು ಮತ್ತು ಮೀನುಗಾರಿಕೆಗೆ ಅಭಿವೃದ್ಧಿಯ ಜೊತೆಯಲ್ಲಿ ನಿರುದ್ಯೋಗ ಸಮಸ್ಯೆ, ಕಡಲ ಕೊರೆತ ಸಮಸ್ಯೆಗಳನ್ನು ನಿವಾರಿಸಲು ಸಹಕಾರಿಯಾಗಲಿದೆ’ ಎಂದರು. ಜಿಲ್ಲಾಧಿಕಾರಿ ಕಚೇರಿಯ ಆವರಣದಲ್ಲಿ ಭುವನೇಶ್ವರಿ ದೇವಿಯ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದ ಜಿಲ್ಲಾಧಿಕಾರಿ ಕೆ ಲಕ್ಷ್ಮೀಪ್ರಿಯಾ ಸ್ತಬ್ಧ ಚಿತ್ರ ಮೆರವಣಿಗೆಗೆ ಚಾಲನೆ ನೀಡಿದರು. ವಿಧಾನ ಪರಿಷತ್ ಸದಸ್ಯ ಗಣಪತಿ ಉಳ್ವೇಕರ್, ನಗರಸಭೆ ಅಧ್ಯಕ್ಷ ರವಿರಾಜ ಅಂಕೋಲೆಕರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ ಎನ್, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ದಿಲೀಷ್ ಶಸಿ, ಅಪರ ಜಿಲ್ಲಾ ಅಧಿಕಾರಿ ಸಾಜಿದ್ ಮುಲ್ಲಾ, ತರಬೇತಿ ನಿರತ ಐಎಎಸ್ ಅಧಿಕಾರಿ ಝೂಪೀಶನ್ ಹಕ್ ಮತ್ತಿತರರು ಉಪಸ್ಥಿತರಿದ್ದರು. ಸಾಧಕರಿಗೆ ಸನ್ಮಾನ, ಅಗತ್ಯವಿದ್ದವರಿಗೆ ಪೌಷ್ಠಿಕ ಆಹಾರ ನೀಡಲಾಯಿತು. ಪೊಲೀಸ್, ಅರಣ್ಯ, ಗೃಹ ರಕ್ಷಕ ದಳ, ಎನ್.ಸಿ.ಸಿ, ಸ್ಕೌಟ್ಸ್ ಅಂಡ್ ಗೈಡ್ಸ್, ಸೇವಾದಳ ತಂಡಗಳಿoದ ಆಕರ್ಷಕ ಪಥ ಸಂಚಲನ ನಡೆಯಿತು. ಹಾಗೂ ಶಾಲಾ ವಿದ್ಯಾರ್ಥಿಗಳಿಂದ ನಾಡಿನ ಕಲೆ ಸಾಹಿತ್ಯ ಸಂಸ್ಕೃತಿ ಬಿಂಬಿಸುವ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. - [ಮಾತಿನಲ್ಲಿಯೇ ಮರಳು ಮಾಡಿದ ಮೀನಾಕ್ಷಿ: 2 ಕೋಟಿ ರೂ ಸಂಪತ್ತು ನಾಶ!](https://mobiletime.in/2025/11/meenakshi-who-made-sand-in-her-words-rs-2-crore-worth-of-wealth-destroyed/): ಶಿರಸಿಯ ಸಂಪತಕುಮಾರ ರಾವ್ ಅವರಿಗೆ ಫೇಸ್ಬುಕ್ ಮೂಲಕ ಪರಿಚಯವಾದ ಮೀನಾಕ್ಷಿ ಎಂಬಾತರು ಮಾತಿನಲ್ಲಿಯೇ ಮರಳು ಮಾಡಿ ಕೋಟ್ಯಂತರ ರೂ ಯಾಮಾರಿಸಿದ್ದಾರೆ. ಅವರ ಮಾತಿನ ಮೋಡಿಗೆ ಒಳಗಾದ ಸಂಪತಕುಮಾರ ಅವರು ತಮ್ಮ ಸಂಪತ್ತು ಕಳೆದುಕೊಂಡಿದ್ದಾರೆ! ಶಿರಸಿಯ ನಿಲೇಕಣಿ ಬಳಿಯ ಸ್ಕಂದ ಶಿರಸಿಕರ್ ಎಕ್ಸಟೆಂಶನ್ ಬಳಿ ಸಂಪತಕುಮಾರ ಮುಕುಂದ ರಾವ್ (54) ಅವರು ವಾಸವಾಗಿದ್ದಾರೆ. 2025ರ ಸೆಪ್ಟೆಂಬರ್ 29ರಂದು ಅವರು ಫೇಸ್ಬುಕ್ ನೋಡುವಾಗ ಅಲ್ಲಿ ನಕಲಿ ಜಾಹೀರಾತೊದು ಅವರ ಗಮನಸೆಳೆದಿದೆ. `ವೆಲ್ತ ಗ್ರೌಥ್’ ಎಂಬ ಜಾಹೀರಾತು ನೋಡಿದ ಅವರು `ಟ್ರೇಡಿಂಗ್ ಮೂಲಕ ಹೆಚ್ಚಿನ ಹಣಗಳಿಸಲು ಸಾಧ್ಯ’ ಎಂದು ನಂಬಿದ್ದಾರೆ. ಆ ಜಾಹೀರಾತು ನಂಬಿ ಅವರು ವಾಟ್ಸಪ್ ಗುಂಪಿಗೆ ಪ್ರವೇಶಪಡೆದಿದ್ದು, ಅಲ್ಲಿ ಅವರಿಗೆ ಮೀನಾಕ್ಷಿ ಅವರ ಪರಿಚಯವಾಗಿದೆ. ವಾಟ್ಸಪ್ ಕಾಲ್ ಮಾಡುವ ಮೀನಾಕ್ಷಿ ಅವರು ಸಂಪತಕುಮಾರ ಅವರನ್ನು ಬುಟ್ಟಿಗೆ ಹಾಕಿಕೊಂಡಿದ್ದಾರೆ. ತೀರಾ ಆಪ್ತರಂತೆ ಮಾತನಾಡಿ ಟ್ರೇಡಿಂಗ್ ಕುರಿತು ಮಾಹಿತಿ ನೀಡಿದ್ದಾರೆ. ಅದಾದ ನಂತರ ಸಂಪತಕುಮಾರ ಅವರಿಗೆ ಮೊಬೈಲ್ ಅಪ್ಲಿಕೇಶನ್ ಒಂದನ್ನು ತೆರೆಯಲು ಸೂಚನೆ ನೀಡಿದ್ದಾರೆ. ಆ ಅಪ್ಲಿಕೇಶನ್ ಮೂಲಕವೇ ಹೂಡಿಕೆ ಮಾಡುವಂತೆ ಮನವೊಲೈಸಿದ್ದಾರೆ. ಮೀನಾಕ್ಷಿ ಅವರ ಮಾತು ನಂಬಿದ ಸಂಪತಕುಮಾರ ಅವರು ವಿವಿಧ ಬ್ಯಾಂಕ್ ಖಾತೆಗೆ ಹಣ ವರ್ಗಾಯಿಸಿದ್ದಾರೆ. ಮೀನಾಕ್ಷಿ ಅವರು ಹೇಳಿದ ಕಡೆ ಹೂಡಿಕೆ ಮಾಡಿದ್ದಾರೆ. ಸೆಪ್ಟೆಂಬರ್ 29ರಿಂದ ಅಕ್ಟೊಬರ್ 30ರವರೆಗೆ ಒಟ್ಟು 22905376ರೂ ಹಣ ಹೂಡಿಕೆ ಮಾಡಿದ್ದು, ಇದಕ್ಕೆ 107180310ರೂ ಲಾಭ ಬಂದಿರುವುದಾಗಿ ಮೀನಾಕ್ಷಿ ಅವರು ನಂಬಿಸಿದ್ದಾರೆ. ಆ ಲಾಭವನ್ನು ಹಿಂಪಡೆಯಲು ಪ್ರಯತ್ನಿಸಿದಾಗ ಮಾತ್ರ ಅದು ಸಾಧ್ಯವಾಗಿಲ್ಲ! ಮತ್ತೆ ಫೋನ್ ಮಾಡಿ ವಿಚಾರಿಸಿದಾಗ ಇನ್ನಷ್ಟು ಹಣ ಹೂಡಿಕೆ ಮಾಡುವಂತೆ ಮೀನಾಕ್ಷಿ ಅವರು ಸಂಪತಕುಮಾರ ಅವರಿಗೆ ಸೂಚನೆ ನೀಡಿದ್ದಾರೆ. ಆಗ, ಸಂಪತಕುಮಾರ ಅವರಿಗೆ ಅನುಮಾನ ಶುರುವಾಗಿದೆ. ಅದಾದ ನಂತರ ಇನ್ನಷ್ಟು ಆಳಕ್ಕೆ ವಿಚಾರ ಮಾಡಿದಾಗ ತಾವು ಮೋಸ ಹೋಗಿರುವುದು ಗೊತ್ತಾಗಿದೆ. ಹೀಗಾಗಿ ಕಾರವಾರಕ್ಕೆ ಓಡಿದ ಅವರು ಅಲ್ಲಿನ ಸೈಬರ್ ಠಾಣೆ ಪೊಲೀಸರನ್ನು ಭೇಟಿ ಮಾಡಿದ್ದಾರೆ. ತಮಗಾದ ಕೆಟ್ಟ ಅನುಭವದ ಬಗ್ಗೆ ಅವರು ದೂರು ನೀಡಿದ್ದು, ಮೋಸ ಮಾಡಿ ದುಡ್ಡು ಹೊಡೆದವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.   - [2025 ನವೆಂಬರ್ 1ರ ದಿನ ಭವಿಷ್ಯ](https://mobiletime.in/2025/10/prediction-for-november-1-2025/): ಮೇಷ ರಾಶಿ: ಪಾಲುದಾರಿಕೆ ಉದ್ದಿಮೆಗಳಲ್ಲಿ ಯಶಸ್ಸು ಸಿಗುತ್ತದೆ. ಆರೋಗ್ಯ ಚೆನ್ನಾಗಿರುತ್ತದೆ. ಹಣ ಕೇಂದ್ರೀಕೃತ ವಿಷಯವಾಗುತ್ತದೆ. ಸಂಬoಧಗಳಲ್ಲಿ ಸಂತೋಷ ಸಿಗಲಿದೆ. ವೃಷಭ ರಾಶಿ: ಉದ್ಯೋಗದಲ್ಲಿ ಒಳ್ಳೆಯ ಅವಕಾಶ ಎದುರಾಗಲಿದೆ. ಹಳೆಯ ಸ್ನೇಹಿತರಿಂದ ಸಹಾಯ ಸಿಗಲಿದೆ. ಆರ್ಥಿಕ ಸ್ಥಿತಿ ಸುಧಾರಿಸುತ್ತದೆ. ಕುಟುಂಬದಲ್ಲಿ ಸಂಭ್ರಮ ಕಾಣಲಿದೆ. ಮಿಥುನ ರಾಶಿ: ಕೆಲಸದಲ್ಲಿ ಹುಮ್ಮಸ್ಸು ಬರಲಿದೆ. ಹೊಸ ಸಂಪರ್ಕಗಳು ಸಿಗಲಿದೆ. ನಿರ್ಧಾರ ಪ್ರಕಟಿಸುವಾಗ ಜಾಗರೂಕರಾಗಿರಿ. ಕರ್ಕ ರಾಶಿ: ಒತ್ತಡ ಕಡಿಮೆ ಆಗಲಿದೆ. ಕುಟುಂಬದಲ್ಲಿ ನೆಮ್ಮದಿ ಸಾಧ್ಯವಿದೆ. ಹಣಕಾಸಿನಲ್ಲಿ ಸುಧಾರಣೆಯ ಸೂಚನೆ ಸಿಗಲಿದೆ. ನಿರಾಳತೆ ಇರಲಿ. ಸಿಂಹ ರಾಶಿ: ಸಭೆ-ಸಮಾರಂಭಗಳಲ್ಲಿ ಭಾಗವಹಿಸುತ್ತೀರಿ. ಮಾತು ಸರಿಯಾದ ದಿಕ್ಕಿನಲ್ಲಿ ಸಾಗಲಿ. ಗೊಂದಲಗಳು ದೂರವಾಗಲಿದೆ. ಕನ್ಯಾ ರಾಶಿ: ಹೊಸ ಯೋಜನೆಗಳು ಒತ್ತಡದಿಂದ ಕೂಡಿರುತ್ತದೆ. ಆರ್ಥಿಕ ಸ್ಥಿತಿ ಚೆನ್ನಾಗಿರುತ್ತದೆ. ನಿಮ್ಮ ಶ್ರಮ ಫಲಿಸುತ್ತದೆ. ತುಲಾ ರಾಶಿ: ಕುಟುಂಬದವರ ಜೊತೆ ಸಾಮರಸ್ಯದಿಂದ ದಿನ ಕಳೆಯಿರಿ. ಹಣಕಾಸು ವ್ಯವಹಾರ ಸರಾಗವಾಗಿ ಸಾಗಲಿದೆ. ಆರೋಗ್ಯದಲ್ಲಿ ಸುಧಾರಣೆ ಆಗಲಿದೆ. ವೃಶ್ಚಿಕ ರಾಶಿ: ವೃತ್ತಿ ಬದುಕು ಸರಾಗವಾಗಿ ಸಾಗಲಿದೆ. ನಿಮ್ಮ ಮನಸ್ಸು ಆಹ್ಲಾದಕರವಾಗಿರುತ್ತದೆ. ಪ್ರಯಾಣ ಸುಖಕರವಾಗಿರಲಿದೆ. ನಿರ್ಧಾರ ಪ್ರಕಟಿಸುವಾಗ ಎಚ್ಚರಿಕೆವಹಿಸಿ. ಧನು ರಾಶಿ: ಧಾರ್ಮಿಕ ಕಾರ್ಯಗಳಲ್ಲಿ ಭಾಗವಹಿಸುತ್ತೀರಿ. ಆರೋಗ್ಯದ ಕಡೆ ಗಮನಹರಿಸಿ. ಧೈರ್ಯದಿಂದ ನಿಮ್ಮ ಕೆಲಸ ಯಶಸ್ವಿಯಾಗಲಿದೆ. ಮಕರ ರಾಶಿ: ಖರೀದಿ ವಿಷಯಗಳಿಗೆ ಈ ದಿನ ಉತ್ತಮವಾಗಿದೆ. ಹೂಡಿಕೆಯ ಹಣ ಫಲ ಕೊಡಲಿದೆ. ಪ್ರಗತಿಯಿಂದ ಸಂತೋಷ ಸಾಧ್ಯವಿದೆ. ಕುಂಭ ರಾಶಿ: ಹಣಕಾಸಿನಲ್ಲಿ ಲಾಭ ಸಿಗಲಿದೆ. ಉದ್ಯೋಗದಲ್ಲಿ ಉತ್ತಮ ವಾತಾವರಣವಿರಲಿದೆ. ಮಾತುಗಾರಿಕೆಯ ಕಲೆ ಬೆಳೆಯಲಿದೆ. ಮೀನ ರಾಶಿ: ವೃತ್ತಿ ಜೀವನದಲ್ಲಿ ಮುನ್ನಡೆ ಸಾಧ್ಯವಿದೆ. ಹಣಕಾಸು ವಿಷಯದಲ್ಲಿ ಸ್ಥಿರತೆ ಬರಲಿದೆ. ಒಳ್ಳೆಯ ವಿಷಯಗಳ ಬಗ್ಗೆ ಆಸಕ್ತಿವಹಿಸಿ. - [ಶ್ರೀಗಳ ಸಾರಥ್ಯದಲ್ಲಿ ಸಂಕಲ್ಪ ಉತ್ಸವ](https://mobiletime.in/2025/10/sankalpa-utsav-under-the-leadership-of-the-sri/): ಯಲ್ಲಾಪುರದಲ್ಲಿ 39ನೇ ವರ್ಷದ ಸಂಕಲ್ಪ ಉತ್ಸವಕ್ಕೆ ಚಾಲನೆ ಸಿಕ್ಕಿದ್ದು, ಸಾಂಸ್ಕೃತಿಕ ಸುಗ್ಗಿ ಶುರುವಾಗಿದೆ. ಸೋಂದಾ ಸ್ವರ್ಣವಲ್ಲಿಯ ಗಂಗಾಧರೇAದ್ರ ಸರಸ್ವತಿ ಸ್ವಾಮೀಜಿ ಹಾಗೂ ಎಡನೀರು ಮಠದ ಸಚ್ಚಿದಾನಂದ ಭಾರತೀ ಶ್ರೀಗಳು ಮೊದಲ ದಿನದ ಉತ್ಸವದಲ್ಲಿ ಭಾಗವಹಿಸಿದ್ದಾರೆ. ಪಟ್ಟಣದ ಗಾಂಧಿ ಕುಟೀರದಲ್ಲಿ ಶುಕ್ರವಾರ ಸಂಕಲ್ಪ ಉತ್ಸವ ಉದ್ಘಾಟಿಸಿದ ಸ್ವರ್ಣವಲ್ಲಿ ಶ್ರೀಗಳು `ಉತ್ತರ ಕನ್ನಡ ಜಿಲ್ಲೆಯ ರೈತರ ಭೂಮಿಗಳು ವಿದೇಶಿ ವ್ಯಕ್ತಿಗಳ ಪಾಲಾಗುತ್ತಿದೆ. ಹೀಗೆ ಮುಂದುವರೆದರೆ ಅಪಾಯ ಖಚಿತ’ ಎಂದು ಆತಂಕವ್ಯಕ್ತಪಡಿಸಿದರು. `ನಮ್ಮ ಸಂಸ್ಕೃತಿ ಮತ್ತು ಶ್ರೇಷ್ಠ ಪರಂಪರೆಯನ್ನು ಮಕ್ಕಳಿಗೆ ಹಸ್ತಾಂತರಿಸುವಲ್ಲಿ ಪಾಲಕರು ಹಿಂದೆ ಬೀಳುತ್ತಿದ್ದಾರೆ. ಇದು ವೈವಾಹಿಕ ಮತ್ತು ಕೃಷಿಯಲ್ಲಿ ತೊಂದರೆ ಉಂಟಾಗಲು ಕಾರಣವಾಗಿದೆ’ ಎಂದವರು ಹೇಳಿದರು. `ಸ್ವರ್ಣವಲ್ಲೀ ಮಠ ಯಕ್ಷಗಾನದ ಉತ್ತರಧ್ರುವ. ಎಡನೀರು ಮಠ ದಕ್ಷಿಣಧ್ರುವ ಈ ಎರಡೂ ಮಠಗಳು ಕೂಡಿದರೆ ಯಕ್ಷಗಾನಕ್ಕೆ ದೊಡ್ಡ ಶಕ್ತಿ ಲಭಿಸಲಿದೆ’ ಎಂದು ಬಣ್ಣಿಸಿದರು. ಎಡನೀರು ಮಠಾಧೀಶ ಸಚ್ಚಿದಾನಂದ ಭಾರತೀ ಶ್ರೀಗಳು ಆಶೀವ9ಚನ ನೀಡಿ `ಯಕ್ಷಗಾನ, ವೇದಗಳು ನಮಗೆ ಸಂಸ್ಕೃತಿಯನ್ನು ಪರಿಚಯಿಸಿವೆ. ಕಲೆಗಳಿದ್ದಲ್ಲಿ ಸ್ವಾಸ್ತವಾದ ಜೀವನ ಸಾಧ್ಯ’ ಎಂದರು. `ನಮ್ಮ ಧರ್ಮ, ಸಂಸ್ಕೃತಿಯ ಕುರಿತಾದ ವಿಷಯ ಪುಸ್ತಕದಲ್ಲಿ ಇಲ್ಲ. ಭಗವದ್ಗೀತೆಯ ಸಂದೇಶಗಳನ್ನು ಪಠ್ಯದಲ್ಲಿ ಸೇರಿಸಲು ಅನೇಕರು ವಿರೋಧಿಸುತ್ತಿದ್ದು, ಅದು ಸರಿಯಲ್ಲ’ ಎಂದರು. ಉದ್ಯಮಿ ರಾಮನಾಥ ಭಟ್ ಅವರನ್ನು ಸನ್ಮಾನಿಸಲಾಯಿತು. ಪ್ರಮುಖರಾದ ವನರಾಗ ಶರ್ಮಾ, ಎಂ ಆರ್ ಹೆಗಡೆ, ಬೀರಣ್ಣ ನಾಯಕ ಮೊಗಟಾ, ವೆಂಕಟೇಶ ಹೆಗಡೆ ಹೊಸಬಾಳೆ, ಮುರಳಿ ಹೆಗಡೆ, ಶಂಕರ ಭಟ್ ಇದ್ದರು. ಪದ್ಮಾ ಪ್ರಮೋದ ಹೆಗಡೆ, ಪ್ರಸಾದ ಹೆಗಡೆ, ಸಿ ಜಿ ಹೆಗಡೆ, ಚಂದ್ರಕಲಾ ಭಟ್ಟ ವಿವಿಧ ಜವಾಬ್ದಾರಿ ನಿಭಾಯಿಸಿದರು. - [ಉತ್ತರ ಕನ್ನಡ ಉಳಿಸಿ: ಕಚ್ಚಾಟ ಬಿಟ್ಟು ಒಗ್ಗಟ್ಟು ಪ್ರದರ್ಶಿಸಿದ ನಾಯಕರು!](https://mobiletime.in/2025/10/save-uttara-kannada-leaders-who-showed-unity-by-abandoning-squabbles/): ರಾಜಕೀಯ ಕಾರಣದಿಂದ ಕಚ್ಚಾಟದಲ್ಲಿ ತೊಡಗಿರುವ ನಾಯಕರು ಈ ದಿನ `ಉತ್ತರ ಕನ್ನಡ ಉಳಿಸಿ’ ಅಭಿಯಾನದ ಅಂಗವಾಗಿ ಒಂದಾಗಿದ್ದಾರೆ. ಜಿಲ್ಲೆಯ ಮಾರಕ ಯೋಜನೆಗಳ ವಿರುದ್ಧ ಶಾಸಕ-ಸಂಸದರು ಸೇರಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ್ದಾರೆ. `ಉತ್ತರ ಕನ್ನಡ ಜಿಲ್ಲೆಯಲ್ಲಿ ಪರಿಸರಕ್ಕೆ ಮಾರಕವಾದ ಯೋಜನೆಗಳನ್ನು ಜಾರಿಗೆ ತರಬಾರದು’ ಎಂದು ಅವರೆಲ್ಲರೂ ಮನವಿ ಮಾಡಿದ್ದಾರೆ. ಶಿರಸಿ ಶಾಸಕ ಭೀಮಣ್ಣ ನಾಯ್ಕ ಅವರ ಜೊತೆ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಕೈ ಜೋಡಿಸಿದ್ದು, ಶಾಸಕರಾದ ಶಿವರಾಮ್ ಹೆಬ್ಬಾರ್, ಶಾಂತರಾಮ್ ಸಿದ್ಧಿ ಸಹ ವಿವಿಧ ಯೋಜನೆಗಳಿಗೆ ವಿರೋಧವ್ಯಕ್ತಪಡಿಸಿದರು. ಅಘನಾಶಿನಿ ಕೊಳ್ಳ ಸಮಿತಿಯ ಅಧ್ಯಕ್ಷ ಅನಂತ ಹೆಗಡೆ ಅಶಿಸರ, ಸ್ವರ್ಣವಲ್ಲಿ ಮಠದ ಅಧ್ಯಕ್ಷ ವಿ ಎನ್ ಹೆಗಡೆ ಅವರು ವಿವಿಧ ಯೋಜನೆಗಳಿಂದ ಆಗುವ ಹಾನಿ ವಿವರಿಸಿದರು. ಈ ಎಲ್ಲರೂ ಸೇರಿ ಪರಿಸರ ಮತ್ತು ಜನಜೀವನಕ್ಕೆ ತೀವ್ರ ಆತಂಕವನ್ನು ಸೃಷ್ಟಿಸಿರುವ ಬೇಡ್ತಿ-ವರದಾ, ಅಘನಾಶಿನಿ-ವೇದಾವತಿ ನದಿ ತಿರುವು ಯೋಜನೆ ವಿರೋಧಿಸಿದರು. ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ನಿಲ್ಲಿಸುವಂತೆ ಒತ್ತಾಯಿಸಿದರು. `ಈ ಯೋಜನೆಗಳ ಕುರಿತು ವಿಜ್ಞಾನಿಗಳ ಸಭೆ ನಡೆಸಬೇಕು. ಜಿಲ್ಲೆಯ ಧಾರಣಾ ಸಾಮರ್ಥ್ಯದ ಅಧ್ಯಯನವನ್ನು ನಡೆಸಬೇಕು’ ಎಂದು ಆಗ್ರಹಿಸಿದರು. `ಉತ್ತರ ಕನ್ನಡ ಜಿಲ್ಲೆಯಲ್ಲಿ ಅತಿವೃಷ್ಟಿ ಮತ್ತು ಪ್ರವಾಹದಿಂದಾಗಿ ರೈತರು ಬೆಳೆದ ಬೆಳೆಗಳು ಸಂಪೂರ್ಣವಾಗಿ ನಾಶವಾಗಿವೆ. ಇದರಿಂದ ರೈತ ಸಮುದಾಯ ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದು, ಅವರ ನೆರವಿಗಾಗಿ ಬೆಳೆ ನಷ್ಟ ಪರಿಹಾರದ ಹಣವನ್ನು ತಕ್ಷಣವೇ ಬಿಡುಗಡೆಗೊಳಿಸಬೇಕು’ ಎಂದು ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಒತ್ತಾಯಿಸಿದರು. `ಹವಾಮಾನ ಆಧಾರಿತ ಬೆಳೆ ವಿಮೆಯು ಸಕಾಲದಲ್ಲಿ ದೊರಕುವಂತೆ ಕ್ರಮ ಕೈಗೊಳ್ಳಬೇಕು. ಹವಾಮಾನ ಮಾಪನ ಯಂತ್ರಗಳನ್ನು ತುರ್ತಾಗಿ ದುರಸ್ತಿಗೊಳಿಸಿ, ವಿಮಾ ಪರಿಹಾರ ಸಕಾಲದಲ್ಲಿ ದೊರಕಲು ಅಗತ್ಯ ಕ್ರಮ ಜರುಗಿಸಬೇಕು’ ಎಂದು ಆಗ್ರಹಿಸಿದರು. `ಜಿಲ್ಲೆಯಲ್ಲಿ ರಸ್ತೆಗಳ ಪರಿಸ್ಥಿತಿ ತೀರಾ ಹದಗೆಟ್ಟಿದ್ದು, ಸಾರ್ವಜನಿಕ ಸಂಚಾರಕ್ಕೆ ತೀವ್ರ ತೊಂದರೆಯಾಗಿದೆ. ಜನರ ಹಿತದೃಷ್ಟಿಯಿಂದ, ಈ ಹಾನಿಗೊಳಗಾದ ರಸ್ತೆಗಳ ದುರಸ್ತಿಗಾಗಿ ತಕ್ಷಣವೇ ಅಗತ್ಯ ಹಣವನ್ನು ಬಿಡುಗಡೆಗೊಳಿಸಿ’ ಎಂದು ಒತ್ತಾಯಿಸಿದರು. - [ಜನಪರ ಅಧಿಕಾರಿಯ ವರ್ಗಾವಣೆ-ಬೀಳ್ಕೊಡುಗೆ](https://mobiletime.in/2025/10/transfer-resignation-of-a-public-official/): ಕಳೆದ 10 ವರ್ಷಗಳಿಂದ ಶಿರಸಿಯಲ್ಲಿ ಕೃಷಿ ಇಲಾಖೆ ಉಪನಿರ್ದೇಶಕರಾಗಿದ್ದ ನಟರಾಜ ಅವರು ಇಲ್ಲಿಂದ ವರ್ಗವಾಗಿದ್ದಾರೆ. ಈ ಹಿನ್ನಲೆ ಸ್ಕೊಡ್‌ವೆಸ್ ಸಂಸ್ಥೆಯವರು ಆ ಅಧಿಕಾರಿಯನ್ನು ಗೌರವಿಸಿ ಬೀಳ್ಕೊಟ್ಟರು. ನಟರಾಜ ಅವರು ಜನಪರ ಕೆಲಸ ಮಾಡಿದ್ದರು. ಕೃಷಿ ಕಾಯಕದ ಬಗ್ಗೆ ಅವರು ಅಪಾರ ಆಸಕ್ತಿಹೊಂದಿದ್ದರು. ರೈತರಿಗೆ ವಿವಿಧ ಯೋಜನೆಗಳ ಬಗ್ಗೆ ವಿಸ್ತಾರವಾಗಿ ಮಾಹಿತಿ ಕೊಡುತ್ತಿದ್ದರು. ಫಲಾನುಭವಿಗಳಿಗೆ ಸಮಯಕ್ಕೆ ಸರಿಯಾಗಿ ಯೋಜನೆಗಳನ್ನು ವಿತರಿಸುತ್ತಿದ್ದರು. ಸ್ಕೋಡ್‌ವೆಸ್ ಸಂಸ್ಥೆ ಸಿಬ್ಬಂದಿ ಜೊತೆಯೂ ಅವರು ಆತ್ಮೀಯ ಸಂಬoಧ ಹೊಂದಿದ್ದು, ಎಲ್ಲರನ್ನು ಸರಿದೂಗಿಸಿಕೊಂಡು ಹೋಗುತ್ತಿದ್ದರು. ಈ ಎಲ್ಲಾ ಹಿನ್ನಲೆ ನಟರಾಜ್ ರವರನ್ನು ಸ್ಕೊಡ್‌ವೆಸ್ ಸಂಸ್ಥೆಯವರು ಸನ್ಮಾನಿಸಿದರು. ಸ್ಕೋಡ್‌ವೆಸ್ ಸಂಸ್ಥೆಯ ಕಾರ್ಯದ ಬಗ್ಗೆಯೂ ನಟರಾಜ ಅವರು ಮೆಚ್ಚುಗೆಯ ಮಾತನಾಡಿದರು. ಸಂಸ್ಥೆಯ ಕಾರ್ಯಕ್ರಮಾಧಿಕಾರಿ ನಾರಾಯಣ ಹೆಗಡೆ ಹಾಗೂ ಸಿಬ್ಬಂದಿ ಈ ವೇಳೆ ಹಾಜರಿದ್ದರು. - [ಊಟ ಸ್ವೀಕರಿಸಿದ ಕಾರಣ ಬೆದರಿಕೆ!](https://mobiletime.in/2025/10/threatened-for-accepting-food/): ಊಟ ಸ್ವೀಕರಿಸಿದ ಕಾರಣ ಬೆದರಿಕೆ ಒಡ್ಡಿದ ವಿಚಿತ್ರ ಪ್ರಕರಣ ಶಿರಸಿಯಲ್ಲಿ ನಡೆದಿದೆ. ಕಸ್ತೂರಿಬಾನಗರದಲ್ಲಿ ಮದರಸಾ ನಡೆಸುವ ನೂರ್ ಅಹ್ಮದ್ ಮಕ್ಬೂಲ್ ಅಹ್ಮದ್ ಕನಕನಳ್ಳಿ ಅವರು ಬೆದರಿಕೆ ಎದುರಿಸುತ್ತಿದ್ದು, ನ್ಯಾಯಕ್ಕಾಗಿ ನ್ಯಾಯಾಲಯದ ಮೊರೆ ಹೋಗಿದ್ದಾರೆ. ನೂರ್ ಅಹ್ಮದ್ ಮಕ್ಬೂಲ್ ಅಹ್ಮದ್ ಕನಕನಳ್ಳಿ ಅವರು ವ್ಯಾಪಾರಿಯಾಗಿದ್ದು, ದುರಾಲ ಉದಮ ಮದಿನ್ ತುನಬ್ಬಿ ಚಾರಿಟೇಬಲ್ ಟ್ರಸ್ಟ್ ಅಡಿ ಮದರಸಾವೊಂದನ್ನು ನಡೆಸುತ್ತಿದ್ದಾರೆ. ಅಕ್ಟೊಬರ್ 23ರಂದು ರಾತ್ರಿ ಶಿರಸಿ ಕಸ್ತೂರಿಬಾನಗರದಲ್ಲಿ ವಾಸವಾಗಿರುವ ಅನೀಶ ತಹಶೀಲ್ದಾರ್, ಇಮ್ರಾನ್ ಮೆಹಬುಲಿ, ರಿಯಾಜ ಹಿರೆಹಳ್ಳಿ ಹಾಗೂ ಮಹಮದ್ ಜಾಪರ್ ಅವರ ಮದರಸಾ ಬಳಿ ಬಂದಿದ್ದರು. ಅವರು ಡಬ್ಬಿಯೊಂದರಲ್ಲಿ ಊಟ ತಂದಿದ್ದು, ಅದನ್ನು ಮದರಸಾ ಬಾಗಿಲ ಬಳಿಯಿರಿಸಿದರು. ಆದರೆ, ಅಹ್ಮದ್ ಮಕ್ಬೂಲ್ ಅಹ್ಮದ್ ಕನಕನಳ್ಳಿ ಅವರು ಅದನ್ನು ಸ್ವೀಕರಿಸಲಿಲ್ಲ. ಊಟ ಸ್ವೀಕರಿಸಿದ ಕಾರಣ ಅವರೆಲ್ಲರೂ ಬೆದರಿಕೆ ಒಡ್ಡಿದರು. ಊಟ ಸ್ವೀಕರಿಸದೇ ಇದ್ದರೆ ಮದರಸಾವನ್ನು ಬಂದ್ ಮಾಡುವುದಾಗಿ ಎಚ್ಚರಿಸಿದರು. ಹೀಗಾಗಿ ಅಹ್ಮದ್ ಮಕ್ಬೂಲ್ ಅಹ್ಮದ್ ಕನಕನಳ್ಳಿ ಅವರು ನ್ಯಾಯಾಲಯದ ಮೊರೆ ಹೋಗಿದ್ದು, ನ್ಯಾಯಾಲಯದ ಸೂಚನೆ ಮೇರೆಗೆ ಪೊಲೀಸರು ಬೆದರಿಕೆ ಒಡ್ಡಿದವರ ವಿರುದ್ಧ ಪ್ರರಕಣ ದಾಖಲಿಸಿದ್ದಾರೆ. - [ನಕಲಿ ದಾಖಲೆ ನೋಡಿ 21 ಲಕ್ಷ ನೀಡಿದ ವ್ಯಾಪಾರಿ!](https://mobiletime.in/2025/10/a-businessman-who-gave-rs-21-lakh-after-seeing-a-fake-document/): ಭಟ್ಕಳದ ವ್ಯಾಪಾರಿ ಮಹಮದ್ ಶಬೀ ಅವರಿಗೆ ಅದೇ ಊರಿನ ಆಸಿಪ್ ಇಕ್ಬಾಲ್ ಅವರು ಮೋಸ ಮಾಡಿದ್ದಾರೆ. ನಕಲಿ ದಾಖಲಾತಿ ತೋರಿಸಿ 21 ಲಕ್ಷ ರೂ ಯಾಮಾರಿಸಿದ್ದಾರೆ. ಭಟ್ಕಳದ ಸುಲ್ತಾನ್ ಸ್ಟೀಟಿನಲ್ಲಿ ಮಹಮದ್ ಶಬೀ ಅವರು ವಾಸವಾಗಿದ್ದರು. ವ್ಯಾಪಾರ-ವ್ಯವಹಾರದಲ್ಲಿ ತೊಡಗಿರುವ ಅವರಿಗೆ ಬಂದರು ರಸ್ತೆ ಆಸಿಪ್ ಇಕ್ಬಾಲ್ ಅವರು ಪರಿಚಯರಾದರು. ಮೆಟ್ರೋ ಇನ್ಪೋಟೆಕ್ ಪ್ರೆöÊ ಲಿ ಕಂಪನಿಯ ಟೆಂಡರ್ ತಮ್ಮ ಹೆಸರಿಗೆ ಆದ ಬಗ್ಗೆ ಅವರು ತಿಳಿಸಿದರು. ಇದಕ್ಕಾಗಿ ಕೆಲ ದಾಖಲೆಗಳನ್ನು ತೋರಿಸಿದರು. `ಕೆಲ ದಿನದಲ್ಲಿ ಪ್ರೊಜೆಕ್ಟ ಶುರು ಆಗುತ್ತದೆ. ಆ ವೇಳೆ ಮೂರು ಪಟ್ಟು ಹೆಚ್ಚಿನ ಲಾಭ ಸಿಗುತ್ತದೆ’ ಎಂದು ಮಹಮದ್ ಶಬೀ ಅವರನ್ನು ಆಸಿಪ್ ಇಕ್ಬಾಲ್ ಅವರು ನಂಬಿಸಿದರು. ತುರ್ತಾಗಿ 25 ಲಕ್ಷ ರೂಪಡೆಯಬೇಕು ಎಂದು ನಂಬಿಸಿ ಆ ಅವಧಿಯಲ್ಲಿ 5 ಲಕ್ಷ ರೂ ಹಣಪಡೆದರು. ಅದಾದ ನಂತರ ಮತ್ತೆ ರೈಲು ನಿಲ್ದಾಣಕ್ಕೆ ಬರುವಂತೆ ಕೋರಿ ಅಲ್ಲಿ 13 ಲಕ್ಷ ರೂ ಹಣಪಡೆದರು. ಅದಾದ ನಂತರ ಮೊಬೈಲ್ ಮೂಲಕ ಇನ್ನಷ್ಟು ಹಣ ವರ್ಗಾಯಿಸಿಕೊಂಡರು. ಕೊನೆಗೆ ಆ ಹಣವನ್ನು ಹಿಂತಿರುಗಿಸದೇ ಮೋಸ ಮಾಡಿದರು. ಇದರಿಂದ ಸಿಟ್ಟಾದ ಮಹಮದ್ ಶಬೀ ಅವರು ಇದೀಗ ಪೊಲೀಸ್ ದೂರು ನೀಡಿದ್ದಾರೆ. ಭಟ್ಕಳ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.   - [ಕಾರವಾರ: ನವೆಂಬರ್ 5ರಿಂದ ಉತ್ಸವ](https://mobiletime.in/2025/10/karwar-festival-from-november-5th/): 18 ಗ್ರಾಮದ ಅಧಿದೇವರಾಗಿರುವ ಕಾರವಾರ ಬಾಡದ ಶ್ರೀ ಮಹಾದೇವ ವಿನಾಯಕ ದೇವಸ್ಥಾನದಲ್ಲಿ ನವಂಬರ್ 5 ಹಾಗೂ 6 ರಂದು ದೇವರ ಜಾತ್ರಾ ಮಹೋತ್ಸವ ನಡೆಯಲಿದೆ. ಇದರ ಅಂಗವಾಗಿ ಎರಡು ದಿನ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ನವಂಬರ್ 5 ರಂದು ಬೆಳಗ್ಗೆ ಅರ್ಚಕರಿಂದ ಅಭಿಷೇಕ, ಅದಾದ ನಂತರ ತುಲಾಭಾರ, 12.30ಕ್ಕೆ ಪೂಜೆ ನಡೆಯಲಿದೆ. ಮಧ್ಯಾಹ್ನ 1ಗಂಟೆಗೆ ದೇವರ ಪಲ್ಲಕ್ಕಿಯೂ ಹಬ್ಬುವಾಡ ಗಣಪತಿ ದೇವಸ್ಥಾನದ ವನಭೋಜನಕ್ಕೆ ತೆರಳಲಿದೆ. ದೇವರ ಸಾನಿಧ್ಯದಲ್ಲಿ ಪೂಜಾ ಕಾರ್ಯ ಮುಗಿದ ನಂತರ ಸಂಜೆ 6 ಕ್ಕೆ ವನಭೋಜನ ಶುರುವಾಗಲಿದೆ. ಅದಾದ ಪರಂಪರೆಯAತೆ ಶ್ರೀ ದೇವರ ಪಲ್ಲಕ್ಕಿಯು ಐದು ದೇವರ ಕಟ್ಟೆ ತಿರುಗುವುದು. ಆ ನಂತರ ಮಹಾಪೂಜೆ ನಡೆಯಲಿದೆ. ಆ ದಿನ ರಾತ್ರಿ 9 ಗಂಟೆಗೆ ಗಣಪತಿ ದೇವಸ್ಥಾನದಿಂದ ಕಾರವಾರ ಮಾರ್ಗವಾಗಿ ಭಕ್ತರ ಆರತಿ ಸ್ವೀಕರಿಸುತ್ತ ಮಹಾದೇವಸ್ಥಾನಕ್ಕೆ ಮೆರವಣಿಗೆ ಬರಲಿದ್ದು, ಅಲ್ಲಿ ದೇವರ ಪಾರಂಪರಿಕ ಪೂಜಾ ವಿಧಾನ ದೇವರು ತೊಟ್ಟಿಲಿನಲ್ಲಿ ವಿರಾಜಿಸುವ ಕಾರ್ಯಕ್ರಮ ಜರುಗಲಿದೆ. ನವೆಂಬರ್ 6 ರ ಗುರುವಾರ ಮಧ್ಯಾಹ್ನ 3 ಗಂಟೆಯಿAದ ಕೋಡಿಭಾಗದ ಭಕ್ತವೃಂದದಿAದ ಕೋಲಾಟ, ದೆವಳಿ ಸಮುದಾಯದವರಿಂದ ನರ್ತನವನ್ನು ಆಯೋಜಿಸಲಾಗಿದೆ. ಅದಾದ ನಂತರ ದಹಿಕಾಲ ಉತ್ಸವ ನಡೆಯಲಿದೆ. ದೇವರು ಅವಬೃತಸ್ನಾನಕ್ಕೆ ಕೋಡಿಭಾಗದ ಕಾಳಿ ನದಿ ಸನ್ನಿಧಿಗೆ ತೆರಳಿ ನಂತರ ರಾತ್ರಿ ದೇವಾಲಯಕ್ಕೆ ಹಿಂತಿರುಗಿ ಅಷ್ಟಾವಧಾನ ಪೂಜಾ ವಿಧಾನ ನೆರವೇರಿಸಲು ಉದ್ದೇಶಿಸಲಾಗಿದೆ. ಅದಾದ ನಂತರ ಸವಾಲು, ಸವಾಲು ಮುಗಿದ ಮೇಲೆ ಬಾಡದ ಮಹಾದೇವ ನಾಟ್ಯ ಮಂಡಳಿಯವತಿಯುAದ ರಾತ್ರಿ 10.30 ಗಂಟೆಗೆ `ಮಗ ತಂದ ಮಾಂಗಲ್ಯ’ ಎಂಬ ನಾಟಕ ನಡೆಯಲಿದೆ. ಈ ಎಲ್ಲಾ ಕಾರ್ಯಕ್ರಮಗಳಲ್ಲಿ ಭಕ್ತರು ಭಾಗವಹಿಸಬೇಕು ಎಂದು ಅಧ್ಯಕ್ಷರು ಅರವಿಂದ ಗುನಗಿ ಶ್ರೀ ಮಹಾದೇವ ವಿನಾಯಕ ವ್ಯವಸ್ಥಾಪನಾ ಸಮಿತಿ ಬಾಡ ಕಾರವಾರ ಇವರು ಪ್ರಕಟಣೆಯ ಮೂಲಕ ತಿಳಿಸಿದ್ದಾರೆ. - [`ಸರ್ಕಾರಿ ಶಾಲೆ ಉಳಿಸಿ'](https://mobiletime.in/2025/10/save-government-schools/): ಕುಮಟಾದ ಹೊಲನಗದ್ದೆ ಗ್ರಾಮ ಪಂಚಾಯತ ವ್ಯಾಪ್ತಿಯ ಮದ್ಗುಣಿ ಸರ್ಕಾರಿ ಅಂಗನವಾಡಿಗೆ ಜನಸಾಮಾನ್ಯರ ಸಮಾಜ ಕಲ್ಯಾಣ ಕೇಂದ್ರದವರು ಕಲಿಕಾ ಸಾಮಗ್ರಿ ವಿತರಿಸಿದ್ದಾರೆ. ರಾಷ್ಟ್ರೀಯ ಏಕತಾ ದಿನದ ಅಂಗವಾಗಿ ಜನ ಸಮಾನ್ಯರ ಸಮಾಜ ಕಲ್ಯಾಣ ಕೇಂದ್ರದವರು ಅಂಗನವಾಡಿಗೆ ಭೇಟಿ ನೀಡಿದರು. ಈ ವೇಳೆ ಕೇಂದ್ರದ ಅಧ್ಯಕ್ಷ ಆಗ್ನೇಲ್ ರೋಡ್ರಿಗಸ್ ಹಾಗೂ ಸುಧಾಕರ್ ನಾಯ್ಕ ಮಕ್ಕಳಿಗೆ ಅಗತ್ಯ ಸಾಮಗ್ರಿ ವಿತರಿಸಿದರು. `ಈಚೆಗೆ ಮಕ್ಕಳು ಆಂಗ್ಲ ಮಾಧ್ಯಮ ಶಾಲೆಗೆ ಮಕ್ಕಳನ್ನು ಕಳುಹಿಸುತ್ತಿದ್ದಾರೆ. ಮುಂದಿನ ವರ್ಷದಿಂದ ಸರ್ಕಾರವೇ ಎಲ್‌ಕೆಜಿ ಹಾಗೂ ಯುಕೆಜಿ ಹಂತದಲ್ಲಿ ಆಂಗ್ಲ ಶಿಕ್ಷಣ ನೀಡುತ್ತಿದ್ದು, ಪಾಲಕರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಕಳುಹಿಸಬೇಕು’ ಎಂದು ಮನವಿ ಮಾಡಿದರು. `ಸರಕಾರದ ಸರಕಾರಿ ಶಾಲೆಗಳು ಮಕ್ಕಳ ಸಂಖ್ಯೆ ಕಡಿಮೆ ಆಗುತ್ತಿದ್ದು, ಅದನ್ನು ಉಳಿಸಿ ಬೆಳೆಸುವ ಹೊಣೆ ನಮ್ಮೆಲ್ಲರ ಮೇಲಿದೆ’ ಎಂದರು. ಈ ಸಂದರ್ಭದಲ್ಲಿ ಶಿಕ್ಷಕಿ ಶಶಿಕಲಾ ಪಟಗಾರ ಹಾಗೂ ಸಹಾಯಕಿ ತೇಜಾ ಪಟಗಾರ ಇದ್ದರು. - [ರೆಡ್ ಅಲರ್ಟ | ಧಾರಾಕಾರ ಮಳೆಯಲ್ಲಿಯೂ ಕೂಲಿ ಕಾಸು ಲೂಟಿ!](https://mobiletime.in/2025/10/red-alert-pdo-caught-red-handed-making-money-in-the-name-of-workers/): ಉತ್ತರ ಕನ್ನಡ ಜಿಲ್ಲೆಯಲ್ಲಿ ಜೂನ್ ಮೊದಲ ವಾರ ಶುರುವಾದ ಮಳೆ ಇನ್ನೂ ನಿಂತಿಲ್ಲ. ಹೀಗಿರುವಾಗ ಈ ಮಳೆಗಾಲದ ರೆಡ್ ಅಲರ್ಟ ಅವಧಿಯಲ್ಲಿ ಯಲ್ಲಾಪುರದಲ್ಲಿ ಕೆರೆ ನಿರ್ಮಾಣ, ಕಾಲುವೆ ಸುಧಾರಣೆ, ಕೃಷಿ ಹೊಂಡ ಅಭಿವೃದ್ಧಿ ನಡೆದ ಬಗ್ಗೆ ಅಧಿಕೃತ ದಾಖಲೆ ಸೃಷ್ಠಿ ನಡೆದಿದೆ. ಈ ಎಲ್ಲಾ ಕೆಲಸಗಳಿಗಾಗಿ ಲಕ್ಷಾಂತರ ರೂ ಹಣ ವೆಚ್ಚ ಮಾಡಲಾಗಿದ್ದು, ಧಾರಾಕಾರ ಮಳೆಯಲ್ಲಿಯೂ ಕೆರೆ ಹೂಳೆತ್ತುವ ಕಾಮಗಾರಿ ನಡೆದ ದಾಖಲೆ ನೋಡಿದವರಿಗೆ ತಲೆಬಿಸಿ ಶುರುವಾಗಿದೆ! ಸಾಮಾನ್ಯವಾಗಿ ಮಳೆಗಾಲದ ಅವಧಿಯಲ್ಲಿ ಉದ್ಯೋಗ ಖಾತ್ರಿ ಯೋಜನೆಗಳು ನಡೆಯುವುದಿಲ್ಲ. ಆ ಅವಧಿಯಲ್ಲಿ ನರೆಗಾ ಕೆಲಸ ಮಾಡದಂತೆ ಸರ್ಕಾರವೇ ಸುತ್ತೋಲೆ ಹೊರಡಿಸಿದ ಉದಾಹರಣೆಗಳಿವೆ. ಆ ಅವಧಿಯಲ್ಲಿ ಕೂಲಿ ಕಾರ್ಮಿಕರು ಸಹ ಬೇಡಿಕೆ ಸಲ್ಲಿಸುವುದಿಲ್ಲ. ಆದರೆ, ದಾಖಲೆಗಳ ಪ್ರಕಾರ ಯಲ್ಲಾಪುರದ ಕಣ್ಣಿಗೇರಿ, ಹಾಸಣಗಿ, ಕುಂದರಗಿ, ಮಂಚಿಕೇರಿ (ಕಂಪ್ಲಿ) ಭಾಗದಲ್ಲಿ ಮಳೆಗಾಲದ ಅವಧಿಯಲ್ಲಿಯೇ ಅತಿ ಹೆಚ್ಚು ಕೆಲಸ ನಡೆದಿದೆ. ಕೆರೆ ನಿರ್ಮಾಣ, ಕಾಲುವೆ ನಿರ್ಮಾಣ, ಕೃಷಿ ಹೊಂಡ ನಿರ್ಮಾಣವನ್ನು ವೈಯಕ್ತಿಕ ಕಾಮಗಾರಿ ಪಟ್ಟಿಗೆ ಸೇರಿಸಿ ಲಕ್ಷಾಂತರ ರೂ ಬಿಲ್ ಮಾಡಲಾಗಿದೆ. ಮಳೆಗಾಲದ ಅವಧಿಯಲ್ಲಿ ಯಲ್ಲಾಪುರದ ಕಣ್ಣಿಗೇರಿ ಗ್ರಾಮ ಪಂಚಾಯತದಲ್ಲಿನ ಹುಲಿಪಾಲ ನಾರಾಯಣ ಭಟ್ಟ ತೋಟದ ಕೆರೆ ನಿರ್ಮಾಣ 317460ರೂ ಖರ್ಚು ಮಾಡಲಾಗಿದೆ. ಲಾಲಗುಳಿ ಗಣಪತಿ ಹೆಗಡೆ ತೋಟ ಹತ್ತಿರ ಕೆರೆ ಹೂಳೆತ್ತಲು 133200 ರೂ ಖರ್ಚಾಗಿದೆ. ಗೋಪಿಗಾಳಿಯಲ್ಲಿ ಕೃಷಿ ಹೊಂಡಕ್ಕೆ 59570 ರೂ, ವೀಣಾ ಭಂಡಾರಿ ಹೊಲದ ಹತ್ತಿರ ಕಾಲುವೆ ನಿರ್ಮಾಣಕ್ಕೆ 51800ರೂ ಖರ್ಚಾದ ಬಗ್ಗೆ ದಾಖಲೆ ಹೇಳುತ್ತದೆ. ಹಾಸಣಗಿ ಗ್ರಾ ಪಂ ಬೊಮ್ಮನಳ್ಳಿ ನಾಗೇಂದ್ರ ಮರಾಠಿ ಜಮೀನ ಪಕ್ಕ ಕಾಲುವೆ ನಿರ್ಮಾಣಕ್ಕೆ 1.32 ಲಕ್ಷ ರೂ, ಹೊಟಗೇರಿ ಚಂದ್ರ ಶೇರುಗಾರ ಜಮೀನ ಪಕ್ಕ ಕಾಲುವೆಗೆ 99 ಸಾವಿರ ರೂ, ಕುಂದರಗಿ ಗ್ರಾಪಂ ನ ಭರತನಳ್ಳಿ ಕಾಲುವೆಗೆ 1.42 ಲಕ್ಷ ರೂ, ಕುಂದರಗಿ ಸನಂ 88ರಲ್ಲಿ ಕಾಲುವೆಗೆ 1.48 ಲಕ್ಷ ರೂ ಖರ್ಚಾಗಿದೆ. ಮಂಚಿಕೇರಿ (ಕಂಪ್ಲಿ) ಗ್ರಾಮ ಪಂಚಾಯತದ ಸೋಮನಳ್ಳಿ ವನಿತಾ ಕುಣಬಿ ಜಮೀನ ಹತ್ತಿರ ಕೆರೆ ಹೂಳೆತ್ತಲು 1.31 ಲಕ್ಷ ರೂ, ಬಾಮಣಕೊಪ್ಪ ವಿಶ್ವನಾಥ ಹೆಗಡೆ ತೋಟದ ಮೇಲೆ ಕೆರೆ ನಿರ್ಮಾಣಕ್ಕೆ 77330ರೂ, ಬಾಮಣಕೊಪ್ಪ ಮಜಿರೆಯಲ್ಲಿ ಕೆರೆ ಹೂಳೆತ್ತಲು 85100 ರೂ, ಕಂಪ್ಲಿ ಸೂರಮನೆಯಲ್ಲಿ ಕೆರೆ ನಿರ್ಮಾಣ ಸೇರಿ ಎಲ್ಲಾ ಕಾಮಗಾರಿಗಳನ್ನು ಜೂನ್ ಎರಡನೇ ವಾರದಿಂದ ಅಗಸ್ಟ್ ಅವಧಿಯಲ್ಲಿ ಮಾಡಿದ ಬಗ್ಗೆ ದಾಖಲೆಗಳಿವೆ. ಇದಲ್ಲದೇ ಇನ್ನಿತರ ಅನೇಕ ಕಡೆ ಸುರಿಯುತ್ತಿರುವ ಮಳೆಯನ್ನು ಲೆಕ್ಕಿಸದೇ ಜನ ಕೆಲಸ ಮಾಡಿದ ಬಗ್ಗೆ ದಾಖಲೆಗಳಿವೆ! ಸುರಿಯುತ್ತಿರುವ ಧಾರಾಕಾರ ಮಳೆಯಲ್ಲಿ ಕೆರೆ ಹೂಳು ತೆಗೆಯಲು ಸಾಧ್ಯವಿಲ್ಲ ಎಂಬುದು ಎಲ್ಲಿರಗೂ ಗೊತ್ತಿರುವ ವಿಷಯ. ಕೃಷಿ ಹೊಂಡಗಳ ನಿರ್ಮಾಣ ಸಹ ಈ ಅವಧಿಯಲ್ಲಿ ಅಸಾಧ್ಯ. ಇನ್ನೂ ರಭಸವಾಗಿ ನೀರು ಹರಿಯುವಾಗ ಕಾಲುವೆ ಹೇಗೆ ನಿರ್ಮಿಸಿದರು? ಎಂಬುದು ಯಾರಿಗೂ ಗೊತ್ತಿಲ್ಲ. ಅದಾಗಿಯೂ ಈ ಎಲ್ಲಾ ಕೆಲಸಗಳಿಗೆ ಹಣ ಪಾವತಿ ಆಗಿದೆ. ಹವಾಮಾನ ಇಲಾಖೆ ಅಂಕಿ ಸಂಖ್ಯೆಗಳ ಪ್ರಕಾರ ಜೂನ್ ತಿಂಗಳಿoದ ಸಪ್ಟೆಂಬರ ಅವಧಿಯಲ್ಲಿ ಯಲ್ಲಾಪುರದಲ್ಲಿ ಸುಮಾರು 1723 ಮಿಮೀ ಮಳೆಯಾಗಿದೆ. ಈ ಅವಧಿಯಲ್ಲಿ ಕಷ್ಟಪಟ್ಟು ಕೆಲಸ ಮಾಡಿದ ಅಧಿಕಾರಿಗಳಿಗೆ ಸರ್ಕಾರದಿಂದ ಪ್ರಶಸ್ತಿಬರುವ ಸಾಧ್ಯತೆಗಳು ಹೆಚ್ಚಿವೆ! - [2025ರ ಅಕ್ಟೊಬರ್ 31ರ ದಿನ ಭವಿಷ್ಯ](https://mobiletime.in/2025/10/prediction-for-october-31-2025/): ಮೇಷ ರಾಶಿ: ಯೋಜನೆಗಳಿಗೆ ಹೆಚ್ಚಿನ ಪರಿಶ್ರಮ ಅಗತ್ಯ. ಉದ್ಯೋಗದಲ್ಲಿ ಏರುಪೇರಾಗಲಿದೆ. ಹೊಸ ಬಗೆಯ ಅವಕಾಶ ಬಂದರೆ ಒಪ್ಪಿಕೊಳ್ಳಿ. ವೃಷಭ ರಾಶಿ: ಸಂತೋಷಕರ ಸಮಯ ಸಿಗಲಿದೆ. ದುಡಿಮೆಗೆ ತಕ್ಕ ಗೌರವ ದೊರೆಯಲಿದೆ. ಹಣಕಾಸು ವ್ಯವಹಾರಗಳು ಲಾಭ ಕೊಡಲಿದೆ. ಮಿಥುನ ರಾಶಿ: ಯೋಜಿತ ಕಾರ್ಯಗಳು ಯಶಸ್ವಿಯಾಗಲಿದೆ. ಹೊಸ ಕಲಿಕೆಯ ಅವಕಾಶ ಸಿಗಲಿದೆ. ತೊಡಕುಗಳು ದೂರವಾಗಲಿದೆ. ಕರ್ಕ ರಾಶಿ: ಮನಸ್ಸಿನಲ್ಲಿರುವ ಆತಂಕ ದೂರವಾಗಲಿದೆ. ಕೆಲಸದಲ್ಲಿನ ಗೊಂದಲ ಬಗೆಹರಿಸಿಕೊಳ್ಳಿ. ಆರೋಗ್ಯದಲ್ಲಿ ತೊಂದರೆಯಾಗುವ ಲಕ್ಷಣವಿದೆ. ಸಿಂಹ ರಾಶಿ: ಹಣದ ಅಭಿವೃದ್ಧಿ ಆಗಲಿದೆ. ಸ್ನೇಹಿತರ ಜೊತೆ ಶಾಂತಿಯಿoದ ವರ್ತಿಸಿ. ಯಶಸ್ಸು ಸಿಗಲಿದೆ. ಕನ್ಯಾ ರಾಶಿ: ಕೃಷಿಯಲ್ಲಿ ಸಕಾರಾತ್ಮಕ ಫಲಿತಾಂಶ ಸಿಗಲಿದೆ. ನಿಮ್ಮ ಅದೃಷ್ಟ ಬದಲಾವಣೆಯ ಸಮಯ ಇದಾಗಿದೆ. ಹೊಸ ಜನರ ಪರಿಚಯ ಆಗಲಿದೆ. ತುಲಾ ರಾಶಿ: ವೃತ್ತಿಯಲ್ಲಿನ ಸವಾಲುಗಳನ್ನು ಎದುರಿಸಿ. ನಿರ್ಧಾರಗಳು ಸರಿಯಾದ ದಿಕ್ಕಿನಲ್ಲಿ ಸಾಗಲಿದೆ. ನಿಮ್ಮ ಪ್ರಯತ್ನಗಳು ಫಲ ಕೊಡಲಿದೆ. ವೃಶ್ಚಿಕ ರಾಶಿ: ತೊಡಕುಗಳ ನಿವಾರಣೆ ಆಗಲಿದೆ. ಆರೋಗ್ಯದಲ್ಲಿ ಸಮಸ್ಯೆ ಎದುರಾಗಲಿದೆ. ಹಣಕಾಸು ಲಾಭ ಆಗಲಿದೆ. ವಿವಾದಗಳಿಂದ ದೂರವಿರಿ. ಧನು ರಾಶಿ: ಕುತೂಹಲದಿಂದ ದಿನ ಕಳೆಯಲಿದೆ. ಹೊಸ ಕಲಿಕೆ ಹಾಗೂ ಯೋಜನೆಗೆ ಯಶಸ್ಸು ಸಿಗಲಿದೆ. ಸಾಧನೆಗೆ ಅವಕಾಶ ಸಿಗಲಿದೆ. ಮಕರ ರಾಶಿ: ನಿಮ್ಮೊಳಗಿನ ನಿರ್ಧಾರ ಸರಿಯಾದ ದಿಕ್ಕಿನಲ್ಲಿ ಸಾಗಲಿದೆ. ಉತ್ಸಾಹ ಹೆಚ್ಚಾಗಲಿದೆ. ಸವಾಲುಗಳು ಎದುರಾಗಲಿದ್ದು, ಅದನ್ನು ಎದುರಿಸುವಿರಿ. ಕುಂಭ ರಾಶಿ: ಹೊಸ ವಿಚಾರ ಹಾಗೂ ಸಂವಾದಗಳಿಗೆ ಅವಕಾಶವಿದೆ. ಉದ್ಯೋಗದಲ್ಲಿ ಮುನ್ನಡೆ ಸಾಧ್ಯವಿದೆ. ಸಂಘಟನಾ ಕೆಲಸಗಳಲ್ಲಿ ಸಹಕಾರ ಸಿಗಲಿದೆ. ಮೀನ ರಾಶಿ: ಆದ್ಯಾತ್ಮಿಕ ಚಿಂತನೆಗಳು ನಡೆಯಲಿದೆ. ಹಣ ಬಳಕೆಯಲ್ಲಿ ನಿಯಂತ್ರಣ ಅಗತ್ಯ. ಆರೋಗ್ಯದಲ್ಲಿ ಸುಧಾರಣೆ ಆಗಲಿದೆ. - [ಯಕ್ಷಶ್ರೀ: ಪ್ರಾಚಾರ್ಯರಿಗೆ ಸಿಕ್ಕಿತು ರಾಜ್ಯೋತ್ಸವದ ಗರಿ!](https://mobiletime.in/2025/10/yakshashri-the-principal-got-the-rajyotsava-feather/): ಯಕ್ಷ ರಂಗಕ್ಕೆ ನೂರಾರು ಶಿಷ್ಯರನ್ನು ಕೊಡುಗೆಯಾಗಿ ನೀಡಿದ ಕೆ ಪಿ ಹೆಗಡೆ ಅವರಿಗೆ ರಾಜ್ಯ ಸರ್ಕಾರ ರಾಜ್ಯೋತ್ಸವ ಪ್ರಶಸ್ತಿ ಘೋಷಿಸಿದೆ. ಐದು ದಶಕಗಳಿಂದ ಯಕ್ಷಗಾನ ಕ್ಷೇತ್ರದಲ್ಲಿರುವ ಕೃಷ್ಣ ಪರಮೇಶ್ವರ ಹೆಗಡೆ ಅವರ ಸೇವೆಯನ್ನು ಕರ್ನಾಟಕ ಸರ್ಕಾರ ಗುರುತಿಸಿದೆ. `ಕೆಪಿ ಹೆಗಡೆ ಅವರು ಅತ್ಯಂತ ಮುಗ್ದರು. ಅಷ್ಟೇ ನಾಚಿಕೆ ಸ್ವಭಾವದವರು. ಯಾರನ್ನು ದ್ವೇಷಿಸದ ಯಾರನ್ನೂ ಹೆಚ್ಚಾಗಿ ಹಚ್ಚಿಕೊಳ್ಳದ ಅವರು ಯಾರೇ ಮಾತಿಗೆ ಸಿಕ್ಕರೂ `ಆರಾಮು’ ಎಂದಷ್ಟೇ ಹೇಳಿ ಸುಮ್ಮನಾಗುತ್ತಿದ್ದರು. ಯಾರನ್ನು ಅವರು ತಾವಾಗಿಯೇ ಮುಂದೆ ಬಂದು ಮಾತನಾಡಿಸುವುದಿಲ್ಲ. ಯಾರಾದರೂ ಕರೆದು ಮಾತನಾಡಿಸಿದರೂ ನಗು ಬಿಟ್ಟು ಬೇರೆ ಕೇಳುವುದಿಲ್ಲ. ಈಗಲೂ ಅವರು ಹಾಗೇ ಇದ್ದಾರೆ! 1959ರಲ್ಲಿ ಸಿದ್ದಾಪುರ ತಾಲೂಕಿನ ಗೊಳಗೋಡಿನಲ್ಲಿ ಜನಿಸಿದ ಕೆಪಿ ಹೆಗಡೆ ಅವರು ಶಾಲೆಗೆ ಹೋಗುವಾಗಲೇ ಮನೆಯಿಂದ ಮೂರು ಮೈಲಿ ದೂರದಲ್ಲಿ ಹೊಸ್ತೋಟ ಮಂಜುನಾಥ ಭಟ್ಟರು ನಡೆಸುವ ತರಬೇತಿಯಲ್ಲಿ ಅವರು ಕಲಿಯುತ್ತಿದ್ದರು. ತಮ್ಮ 17ನೇ ವಯಸ್ಸಿನಲ್ಲಿ ಹಂಗಾರಕಟ್ಟೆ ಯಕ್ಷಗಾನ ಕಲಿಕಾ ಕೇಂದ್ರಕ್ಕೆ ಸೇರಿದರು. ಚಿಟ್ಟಾಣಿ ರಾಮಚಂದ್ರ ಹೆಗಡೆ ಅವರಿಂದ ಬೈಸಿಕೊಂಡು ನಂತರ ಚೇತರಿಸಿಕೊಂಡ ಅವರು ನಾಡಿನ ಹೆಮ್ಮೆಯ ಕಲಾವಿದರಾಗಿ ಗುರುತಿಸಿಕೊಂಡರು. ಯಕ್ಷಗಾನದ ವಿಷಯದಲ್ಲಿ ಮಾತ್ರ ಹೆಗಡೆ ಅವರು ಪರಿಪೂರ್ಣ ವ್ಯಕ್ತಿ. ಯಾವ ಸಮಯದಲ್ಲಿ ಯಾವ ಆಖ್ಯಾನವನ್ನು ಮುಗಿಸಬೇಕು ಎನ್ನುವ ಸಮಯ ಪ್ರಜ್ಞೆಯಿಂದಲೇ ಅವರು ಪ್ರಸಿದ್ಧಿಪಡೆದವರು. ಈ ಕಾರಣದಿಂದಲೇ ಐದು ದಶಕಗಳ ಕಾಲ ಯಾವ ಕಪ್ಪು ಚುಕ್ಕೆ ಇಲ್ಲದೆ ರಂಗವನ್ನು ಆಳಿದ್ದು, ಆ ಸೇವೆಯನ್ನು ಸರ್ಕಾರ ಗುರುತಿಸಿದೆ. - [ಕಾಮುಕನ ಹುಡುಕುತ್ತ ಕಾಲೇಜಿಗೆ ಬಂದ ನಿರ್ದೇಶಕ!](https://mobiletime.in/2025/10/the-director-came-to-college-looking-for-a-lover/): ಅಂಕೋಲಾದ ಪೂಜಗೇರಿ ಕಾಲೇಜಿನ ಉಪನ್ಯಾಸಕ ರಾಮಚಂದ್ರ ಅಂಕೋಲೆಕರ ಅವರ ಕಾಮ ಪುರಾಣದ ಕಥೆ ಕೇಳುವುದಕ್ಕಾಗಿ ಕಾಲೇಜು ಶಿಕ್ಷಣ ಇಲಾಖೆ ಆಸಕ್ತಿವಹಿಸಿದೆ. ಉಪನ್ಯಾಸಕನ ಕಿತಾಪತಿಯ ಬಗ್ಗೆ ಅಧ್ಯಯನ ನಡೆಸಲು ಕಾಲೇಜು ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕಿ ಕರಿಮುನ್ನಿಸಾ ಸೈಯದ ಮತ್ತು ನಿರ್ದೇಶಕ ಲಕ್ಷ್ಮೀಪತಿ ಅವರು ಗುರುವಾರ ಕಾಲೇಜಿಗೆ ಭೇಟಿ ನೀಡಿದ್ದಾರೆ. ಈ ವೇಳೆ ಅವರಿಬ್ಬರು ಆಡಳಿತ ಮಂಡಳಿ, ದೂರುದಾರ ವಿದ್ಯಾರ್ಥಿನಿ, ಪಾಲಕರು, ಪತ್ರಕರ್ತರು, ಉಪನ್ಯಾಸಕರು, ವಿದ್ಯಾರ್ಥಿಗಳ ಹೇಳಿಕೆಪಡೆದರು. ಸಾರ್ವಜನಿಕರ ಜೊತೆ ಚರ್ಚಿಸಿ ಘಟನಾವಳಿಗಳ ಬಗ್ಗೆ ಅವಲೋಕಿಸಿದರು. `ದೂರಿನ ಆಧಾರದಲ್ಲಿ ಭೇಟಿ ನೀಡಿದ್ದು, ಇಂತ ತಪ್ಪು ಸಹಿಸುವುದಿಲ್ಲ. ನಿಯಮಾನುಸಾರ ಸೂಕ್ತ ಕ್ರಮ ಖಚಿತ’ ಎಂದವರು ಭರವಸೆ ನೀಡಿದರು. `ತಹಶೀಲ್ದಾರರಿಂದ ಕರ್ನಾಟಕ ವಿಶ್ವವಿದ್ಯಾಲಯದ ಉಪಕುಲಪತಿಗಳವರೆಗೆ ಪ್ರತಿಯೊಬ್ಬರಿಂದಲೂ ಈ ಬಗ್ಗೆ ಮಾಹಿತಿ ಸಿಕ್ಕಿದೆ. ಪ್ರಥಮ ಮಾಹಿತಿಯನ್ನು ಕಲೆಹಾಕಿ ಅದರ ವರದಿಯನ್ನು ಮೇಲಧಿಕಾರಿಗಳಿಗೆ ಕಳುಹಿಸಲಾಗುತ್ತದೆ’ ಎಂದು ಜಂಟಿ ನಿರ್ದೇಶಕರಾದ ಕರಿಮುನ್ನಿಸಾ ಸೈಯದ ವಿವರಿಸಿದರು. `ಶಾಸಕ ಸತೀಶ್ ಸೈಲ್ ಅವರ ನಿರ್ದೇಶನದಂತೆ ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕು ಎಂದು ಆಗ್ರಹಿಸಲಾಗಿದೆ. ಇಲ್ಲಿ ವಿದ್ಯಾರ್ಥಿಗಳ ಭವಿಷ್ಯ ಮತ್ತು ಶಿಕ್ಷಣ ಮುಖ್ಯವಾಗಿದ್ದು, ಸಾರ್ವಜನಿಕರ ವಿನಂತಿಯAತೆ ಉಪನ್ಯಾಸಕರನ್ನು ಅಮಾನತ್ತು ಮಾಡಬೇಕು. ಪ್ರಾಚಾರ್ಯರನ್ನು ವÀರ್ಗಾಯಿಸಬೇಕು’ ಎಂದು ಕಾಲೇಜು ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ಮಂಜೇಶ್ವರ ನಾಯಕ ಆಗ್ರಹಿಸಿದರು. ಕಾಲೇಜು ಅಭಿವೃದ್ಧಿ ಸಮಿತಿಯ ಸದಸ್ಯರಾದ ಮಹಾಬಲೇಶ್ವರ ನಾಯ್ಕ, ಮದುಕೇಶ್ವರ ದೇವರಬಾವಿ, ಪ್ರಮುಖರಾದ ವಿಠಲ ಶೆಟ್ಟಿ, ಪ್ರಮೋದ ಬಾನಾವಳಿಕರ, ಜಗದೀಶ ಖಾರ್ವಿ, ಸುಂದರ ಖಾರ್ವಿ, ಸಚಿನ ಅನ್ನೋಟಿಕರ, ಗುರುದಾಸ ಬಾನಾವಳಿಕರ, ದ್ರುವ, ಸೂರಜ, ಜೈರಾಮ ಇದ್ದರು. - [ಮುತಾಲಿಕ್ ನೀಡಿದ ಮಾಹಿತಿ: ಯೂಟೂಬರ್ ಮುಕಳೆಪ್ಪನ ಬೆಂಬಲಕ್ಕೆ ಸಚಿವ ಜಮೀರ್ ಅಹ್ಮದ್!](https://mobiletime.in/2025/10/information-provided-by-muthalik-minister-zameer-ahmed-supports-youtuber-mukaleppa/): `ನಕಲಿ ದಾಖಲೆ ನೀಡಿ ಹಿಂದು ಯುವತಿ ವಿವಾಹವಾದ ಯೂಟೂಬರ್ ಮುಕಳೆಪ್ಪ ಅವರಿಗೆ ಸಚಿವ ಜಮೀರ್ ಅಹ್ಮದ್ ಬೆನ್ನೆಲುಬಾಗಿದ್ದಾರೆ’ ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ. `ತಾಯಿ ದೂರು ನೀಡಿದರೂ ಕ್ರಮವಾಗದ ಹಿಂದೆ ಪೊಲೀಸರಿಗೆ ಬಂದ ಒತ್ತಡವೇ ಕಾರಣ’ ಎಂದವರು ವಿವರಿಸಿದ್ದಾರೆ. ಶಿರಸಿಯಲ್ಲಿ ಮಾತನಾಡಿದ ಅವರು `ಮುಕಳೆಪ್ಪಾ ಅವರಿಗೆ ಸಚಿವ ಜಮೀರ್ ಅಹ್ಮದ್ ರಕ್ಷಣೆಯಿದೆ. ಹೀಗಾಗಿಯೇ ಹಿಂದು ಸಮುದಾಯದವರ ಪ್ರತಿಭಟನೆಗೆ ಯಾರೂ ಬೆಲೆ ಕೊಡುತ್ತಿಲ್ಲ. `ಯೂಟೂಬರ್ ಕ್ವಾಜಾ ಎನ್ನುವ ವ್ಯಕ್ತಿ ಸುಳ್ಳು ಅಪಡಾವಿಟ್ ಸಲ್ಲಿಸಿದ್ದಾರೆ. ದಾಖಲೆಗಳು ನಕಲಿಯಾಗಿದೆ’ ಎಂದವರು ವಿವರಿಸಿದ್ದಾರೆ. `ಕ್ವಾಜಾ ಕಲ್ಯಾಣ ಮಂಟಪದಲ್ಲಿ ಮದುವೆ ಆಗಿರುವುದಾಗಿಯೂ ದಾಖಲೆ ನೀಡಿದ್ದು, ಅಲ್ಲಿ ಹೋಗಿ ವಿಚಾರಿಸಿದಾಗ `ಆ ದಿನಾಂಕದAದು ಯಾವುದೇ ಮದುವೆ ನಡೆದಿಲ್ಲ’ ಎಂದು ಮಂಟಪದವರು ಪತ್ರ ಕೊಟ್ಟಿದ್ದಾರೆ. `ಆತ ನೀಡಿದ ವಿಳಾಸ ಸರಕಾರಿ ಕೊಳಗೇರಿ ಮನೆ ಆಗಿದ್ದು, ಅದನ್ನು ಬಾಡಿಗೆ ನೀಡಲು ಬರುವುದಿಲ್ಲ. ಅದನ್ನು ಮಾರಾಟ ಮಾಡುವ ಹಾಗಿಲ್ಲ. ಹೀಗಾಗಿ ನಕಲಿ ದಾಖಲೆಗಳು ಸ್ಪಷ್ಠವಾಗಿದೆ’ ಎಂದವರು ತಿಳಿಸಿದರು. `ಆತನ ನಕಲಿ ದಾಖಲೆ ಬಗ್ಗೆ ಸಾಕಷ್ಟು ಪುರಾವೆ ಇದ್ದರೂ ಪೊಲೀಸ್ ಇಲಾಖೆ ಏನೂ ಮಾಡಿಲ್ಲ. ಮುಂಡಗೋಡ ನೊಂದಣಿ ಕಚೇರಿಯಲ್ಲಿ ಭ್ರಷ್ಟರೇ ತುಂಬಿದ್ದಾರೆ’ ಎಂದು ದೂರಿದರು. `ಮುಂಡಗೋಡದಲ್ಲಿ ಅಧಿಕಾರಿಯೊಬ್ಬ 3 ಕೋಟಿ ರೂ ಮನೆ ಕಟ್ಟಿದ್ದು, ಆ ಹಣದ ಬಗ್ಗೆ ತನಿಖೆ ನಡೆಯಬೇಕು. ಆ ಅಧಿಕಾರಿ ಒಬ್ಬ ವ್ಯಕ್ತಿ ಮೃತನಾಗಿದ್ದಾಗ ಆ ಶವವನ್ನು ಸ್ಮಶಾನಕ್ಕೆ ಕರೆದುಕೊಂಡು ಹೋದ ಸಂದರ್ಭದಲ್ಲಿ ಮೃತನ ಹೆಬ್ಬೆರಳಿನ ಸಹಿ ಪಡೆದು ಅವನ ದಾಖಲೆಗಳನ್ನು ನಿರ್ಮಾಣ ಮಾಡಿದ ಉದಾಹರಣೆಗಳಿವೆ’ ಎಂದು ವಿವರಿಸಿದರು. - [ಅಡಿಕೆಗೆ ಬಂದ ಆತಂಕ: ಕಾನೂನು ಸಮರಕ್ಕೆ ನಿರ್ಧಾರ](https://mobiletime.in/2025/10/concerns-over-areca-palm-oil-decision-to-start-legal-battle/): ಅಡಿಕೆ ಬೆಳೆಯನ್ನು ಮಾದಕ ಉತ್ಪನ್ನ ಪಟ್ಟಿಗೆ ಸೇರಿಸಿರುವ ವಿಚಾರವಾಗಿ ಅಂಕೋಲಾದ ಅಗಸೂರಿನಲ್ಲಿ ಅಡಿಕೆ ಬೆಳೆಗಾರರ ಸಭೆ ನಡೆದಿದ್ದು, ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾಧ್ಯಕ್ಷ ಶಾಂತಾರಾಮ ನಾಯಕ ಅವರು ಈ ಬಗ್ಗೆ ಕಾನೂನು ಸಮರ ನಡೆಸಲು ಒತ್ತಾಯಿಸಿದರು. ಕಾನೂನು ಸಮರಕ್ಕೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ತರುವ ಬಗ್ಗೆ ಸಭೆಯಲ್ಲಿ ನಿರ್ಣಯಿಸಲಾಯಿತು. `ವಿಶ್ವ ಆರೋಗ್ಯ ಸಂಸ್ಥೆಯೂ ಅಡಿಕೆಯನ್ನು ತಂಬಾಕು, ನಿಕೋಟಿನ್ ಉತ್ಪನ್ನ ಪಟ್ಟಿಗೆ ಸೇರಿಸಿದೆ. ಶ್ರೀಲಂಕಾದಲ್ಲಿ ನಡೆದ ದಕ್ಷಿಣ ಏಷ್ಯಾ ದೇಶಗಳ ವಿಶ್ವ ಆರೋಗ್ಯ ಸಂಸ್ಥೆಯ ಸಭೆಯಲ್ಲಿಯೂ ಅಡಿಕೆ ಹಾನಿಕಾರಕ ಎಂದು ಬಿಂಬಿಸಲಾಗಿದೆ. ಅಡಿಕೆ ಉತ್ಪಾದನೆ, ಮಾರಾಟ, ಜಾಹಿರಾತು, ಪ್ರಚಾರ ಮತ್ತು ಪ್ರಾಯೋಜಕತ್ವದ ಸಂಪೂರ್ಣವಾಗಿ ನಿಷೇಧಿಸಿರುವುದು ಅಡಿಕೆ ಬೆಳೆಗಾರರ ಭವಿಷ್ಯಕ್ಕೆ ಮಾರಕವಾಗಿದೆ’ ಎಂದು ಈ ಸಭೆ ಅಭಿಪ್ರಾಯಪಟ್ಟಿತು. `ಕೇಂದ್ರ ಸರಕಾರವು 16 ಸಂಶೋಧನಾ ಸಂಸ್ಥೆಗಳಿಗೆ ಅನುದಾನ ನೀಡಿ ಅಡಿಕೆಯು ಹಾನಿಕಾರಕವಲ್ಲ ಎಂದು ಸಾಭೀತುಪಡಿಸಲು ಮುಂದಾಗಿದೆ. ಈ ಸಂಸ್ಥೆಗಳಿAದ ಅಂತಿಮ ಸಂಶೋಧನಾ ವರದಿತರಿಸಿ ಸೂಕ್ತ ಕಾನೂನು ಹೋರಾಟ ನಡೆಸಬೇಕು’ ಎಂದು ರೈತರು ಒತ್ತಾಯಿಸಿದರು. `ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಕೂಡಲೇ ಕೇಂದ್ರ ಸರಕಾರದ ಮೇಲೆ ಒತ್ತಡ ತಂದು ಬೆಳೆಗಾರರ ಪರವಾಗಿ ನ್ಯಾಯ ಸಿಗುವಂತೆ ನೋಡಿಕೊಳ್ಳಬೇಕು’ ಎಂದು ಈ ವೇಳೆ ಶಾಂತರಾಮ ನಾಯಕ ಅವರು ಹೇಳಿದರು. ಎಲ್ಲರೂ ಇದಕ್ಕೆ ಒಮ್ಮತ ಸೂಚಿಸಿದರು. ಪ್ರಮುಖರಾದ ಗೌರೀಶ ನಾಯಕ, ರಾಮಚಂದ್ರ ನಾಯ್ಕ, ಶೋಭಾ ಗೌಡ, ಚಂದ್ರು ನಾಯ್ಕ ಕೊಡ್ಲಗದ್ದೆ, ಸಂತೋಷ ನಾಯ್ಕ, ನಾರಾಯಣ ನಾಯಕ, ರಮಾನಂದ ನಾಯಕ ಅಚವೆ, ಮಾದೇವ ನಾಯಕ ಮಾಬಗಿ, ಕೇಶವ ನಾಯಕ ಶಿರಗುಂಜಿ, ಅನಂತ ಗೌಡ ಅಗಸೂರು, ಚಂದ್ರು ಗೌಡ ಶಿರಗುಂಜಿ, ಶಿವರಾಮ ಪಟಗಾರ ಬ್ರಹ್ಮೂರ, ಮಾಣಿ ಭಟ್, ವೆಂಕಟರಮಣ ಹೆಗಡೆ ಸುಂಕಸಾಳ, ರಾಮದಾಸ ನಾಯಕ, ರಮೇಶ್ ನಾಯಕ, ಗೋವಿಂದ ಸುಬ್ರಾಯ ಮುಕ್ರಿ, ಸವಿತಾ ನಾಯಕ, ಬೆಳ್ಳಾ ರಮಣಿ ಕುಣಬಿ, ಮಾದೇವ ಕುಸ್ಲು ಗೌಡ ಇತರರು ಸಭೆಯಲ್ಲಿದ್ದರು. - [70 ಸಾವಿರ ಇಲ್ಲದವ 23 ವರ್ಷ ಅಡಗಿದ!](https://mobiletime.in/2025/10/the-man-who-didnt-have-70-thousand-hid-for-23-years/): ಸಾಲಗಾರರೊಬ್ಬರಿಗೆ 70 ಸಾವಿರದ ಚೆಕ್ ನೀಡಿ ಓಡಿ ಓಡಿ ಹೋಗಿದ್ದ ಶಿರಸಿಯ ರವೀಂದ್ರ ಹೆಗಡೆ ಗುರುವಾರ ಸಿಕ್ಕಿಬಿದ್ದಿದ್ದಾರೆ. ಚೆಕ್ ಬೌನ್ಸ ಕೇಸ್ ಆಗಿದ್ದರೂ ಕೋರ್ಟಿಗೆ ಹಾಜರಾಗದ ಅವರನ್ನು ಪೊಲೀಸರು ಹಿಡಿದಿದ್ದಾರೆ. ಶಿರಸಿಯ ರವೀಂದ್ರ ಗಣಪತಿ ಹೆಗಡೆ ಅವರು ಊರತುಂಬ ಸಾಲ ಮಾಡಿಕೊಂಡಿದ್ದರು. 2002ರಲ್ಲಿ ಸಾಲಗಾರರು ಕಾಡಿಸಿದಾಗ ವ್ಯಕ್ತಿಯೊಬ್ಬರಿಗೆ 70 ಸಾವಿರದ ಚೆಕ್ ನೀಡಿದ್ದರು. ಅದಾದ ನಂತರ ರವೀಂದ್ರ ಹೆಗಡೆ ಅವರು ಶಿರಸಿ ಬಿಟ್ಟು ಪರಾರಿಯಾಗಿದ್ದರು. ಮಂಗಳೂರಿಗೆ ಹೋಗಿದ್ದ ಅವರು ಅಲ್ಲಿ ಬೇರೆ ಬೇರೆ ಹೆಸರಿನಲ್ಲಿ ಬದುಕು ಕಟ್ಟಿಕೊಂಡಿದ್ದರು. ಚೆಕ್‌ಪಡೆದ ವ್ಯಕ್ತಿ ಅದನ್ನು ಬ್ಯಾಂಕಿಗೆ ಹಾಕಿದಾಗ ಬ್ಯಾಂಕ್ ಖಾತೆಯಲ್ಲಿ ಹಣವಿಲ್ಲದಿರುವುದು ಗೊತ್ತಾಯಿತು. ಆದರೆ, ಚೆಕ್ ಕೊಟ್ಟಿದ್ದ ರವೀಂದ್ರ ಹೆಗಡೆ ಸಂಪರ್ಕಕ್ಕೆ ಸಿಗಲಿಲ್ಲ. ಸ್ಥಳೀಯವಾಗಿಯೂ ಅವರು ಯಾರ ಕಣ್ಣಿಗೂ ಕಾಣಿಸಿಕೊಳ್ಳಲಿಲ್ಲ. ಅದಾಗಿಯೂ ಚೆಕ್ ಅಮಾನ್ಯವಾದ ಬಗ್ಗೆ ಹಣ ಕಳೆದುಕೊಂಡವರು ನ್ಯಾಯಾಲಯದ ಮೊರೆ ಹೋಗಿದ್ದರು. ನ್ಯಾಯಾಲಯದಿಂದ ವಾರೆಂಟ್ ಆದರೂ ರವೀಂದ್ರ ಹೆಗಡೆ ಅವರು ಕೋರ್ಟಿಗೆ ಹಾಜರಾಗಿರಲಿಲ್ಲ. ಊರು ಬಿಟ್ಟು ಹೋಗಿದ್ದ ರವೀಂದ್ರ ಹೆಗಡೆ ಅವರು ಶಿರಸಿ ಕಡೆ ತಲೆ ಹಾಕುತ್ತಿರಲಿಲ್ಲ. ಅವರು ಎಲ್ಲಿದ್ದರು? ಎಂಬುದು ಬಹುತೇಕರಿಗೆ ಅರಿವಿರಲಿಲ್ಲ. ಹೀಗಿರುವಾಗ ಪೊಲೀಸರು ಉಪಾಯವಾಗಿ ಅವರ ಹುಡುಕಾಟ ನಡೆಸಿದರು. ರವೀಂದ್ರ ಹೆಗಡೆ ಅವರೇ ಶಿರಸಿಗೆ ಬರುವ ಹಾಗೇ ಮಾಡಿದರು. ಶಿರಸಿ ಪ್ರವೇಶಿಸಿದ ಕೂಡಲೇ ರವೀಂದ್ರ ಹೆಗಡೆ ಅವರನ್ನು ಹಿಡಿದು ನ್ಯಾಯಾಲಯಕ್ಕೆ ಒಪ್ಪಿಸಿದರು. ಶಿರಸಿ ಡಿವೈಎಸ್ಪಿ ಗೀತಾ ಪಾಟೀಲ್ ಹಾಗು ಸಿಪಿಐ ಶಶಿಕಾಂತ್ ವರ್ಮಾ ಜೊತೆ ಮಾರುಕಟ್ಟೆ ಠಾಣೆಯ ಪಿಎಸ್‌ಐ ಬಸವರಾಜ್ ಕನಶೆಟ್ಟಿ ಕಾರ್ಯಾಚರಣೆ ನಡೆಸಿದರು. ಪೊಲೀಸ್ ಸಿಬ್ಬಂದಿ ವಿಶ್ವನಾಥ್ ಭಂಡಾರಿ, ಪ್ರದೀಪ್ ನಾಯಕ್, ಅಶೋಕ್ ಹರಿಕಂತ್ರ, ರಮೇಶ್ ಮುಚ್ಚಂಡಿ ಸೇರಿ ಆರೋಪಿಯನ್ನು ಹಿಡಿದರು. - [ರಸ್ತೆ ಬದಿ ಜಾನುವಾರು ಸಾವು: ಹಲವು ಅನುಮಾನ!](https://mobiletime.in/2025/10/cattle-death-on-the-roadside-many-doubts/): ಹೊನ್ನಾವರ – ಚಂದಾವರ ರಸ್ತೆಯಲ್ಲಿ ಎರಡು ಜಾನುವಾರುಗಳು ಅನುಮಾನಾಸ್ಪದ ರೀತಿಯಲ್ಲಿ ಸಾವನಪ್ಪಿದೆ. ಸಾವನಪ್ಪಿದ ಜಾನುವಾರುಗಳ ಬಾಯಿಂದ ನೊರೆ, ಹಿಂಬದಿ ರಕ್ತ ಹಾಗೂ ಹೊಟ್ಟೆ ಉಬ್ಬಿರುವುದನ್ನು ಸ್ಥಳೀಯರು ನೋಡಿದ್ದಾರೆ. ಅಕ್ಟೊಬರ್ 30ರಂದು ಕೆಕ್ಕಾರ ಕ್ರಾಸಿನ ಬಳಿ ಜಾನುವಾರುಗಳು ಸಾವನಪ್ಪಿದ ಸ್ಥಿತಿಯಲ್ಲಿದ್ದವು. ಮೊದಲು ಅಕ್ರಮ ಜಾನುವಾರು ಸಾಗಾಟಗಾರರು ಹಿಂಸಾತ್ಮಕ ರೀತಿ ಈ ಪ್ರಾಣಿಗಳನ್ನು ಸಾಗಿಸುವಾಗ ಅವು ಸಾವನಪ್ಪಿರುವ ಶಂಕೆವ್ಯಕ್ತವಾಯಿತು. ಅದಾದ ನಂತರ ಜಾನುವಾರುಗಳು ಅಪರಿಚಿತ ವಾಹನಕ್ಕೆ ಡಿಕ್ಕಿಯಾಗಿ ಸಾವನಪ್ಪಿರುವ ಬಗ್ಗೆ ಅಂದಾಜಿಸಲಾಗಿತ್ತು. ಆದರೆ, ಜಾನುವಾರುಗಳ ಬಾಯಿಂದ ನೊರೆ ಬಂದಿರುವುದು ಹಾಗೂ ಹೊಟ್ಟೆ ಉಬ್ಬಿರುವುದನ್ನು ನೋಡಿ ವಿಷ ಪ್ರಾಶನದ ಅನುಮಾನಗಳು ಹುಟ್ಟಿದವು. ಆದರೆ, ಇದ್ಯಾವುದು ಖಚಿತವಾಗಲಿಲ್ಲ. ಎತ್ತು ಹಾಗೂ ಎಮ್ಮೆ ಕರು ಸಾವನಪ್ಪಿದ ವಿಷಯ ಕೇಳಿ ಕಡತೋಕಾದ ಗಿರೀಶ ಸುಬ್ರಾಯ ಹೆಗಡೆ, ಕೆಕ್ಕಾರಿನ ಕೃಷ್ಣ ನಾರಾಯಣ ಗೌಡ ಅವರು ಅಲ್ಲಿಗೆ ಬಂದರು. ಹೊದ್ಕೆಶೀರೂರಿನ ಅರಣ್ಯ ಇಲಾಖೆ ಸಿಬ್ಬಂದಿ ವಾಮನ ನಾಯ್ಕ ಅವರು ಸ್ಥಳಕ್ಕೆ ಆಗಮಿಸಿದರು. ಎಲ್ಲರೂ ಸೇರಿ ಚರ್ಚಿಸಿದರೂ ಸಹ ಸಾವನಪ್ಪಿದ ಎರಡು ಜಾನುವಾರುಗಳ ಮಾಲಕ ಯಾರು? ಎಂಬುದು ಗೊತ್ತಾಗಲಿಲ್ಲ. ಕಿಡಿಗೇಡಿಗಳ ಕೃತ್ಯದಿಂದಲೇ ಜಾನುವಾರು ಸಾವನಪ್ಪಿರುವುದು ಮೇಲ್ನೋಟಕ್ಕೆ ಕಾಣುವ ಹಾಗಿತ್ತು. ಈ ಎಲ್ಲಾ ಹಿನ್ನಲೆ ಅರಣ್ಯ ಸಿಬ್ಬಂದಿ ವಾಮನ ನಾಯ್ಕ ಅವರು ಪೊಲೀಸ್ ದೂರು ನೀಡಿದರು. ಜಾನುವಾರು ಹತ್ಯೆಗೆ ಕಾರಣರಾದವರನ್ನು ಹುಡುಕಿ ಕಠಿಣ ಕ್ರಮಕ್ಕಾಗಿ ಅವರು ಪ್ರಕರಣ ದಾಖಲಿಸಿದರು. - [ದುಡಿದ ಹಣ ಕೊಡದ ನಗರಸಭೆ: ಕೋಟಿ ಲೆಕ್ಕಾಚಾರದ ಕಾಸು ಬಾಕಿ!](https://mobiletime.in/2025/10/municipal-council-that-did-not-pay-the-money-it-earned-crores-of-money-are-owed/): ಕಾರವಾರ ನಗರಸಭೆಯ ಕೆಲಸ ಮಾಡಿಯೂ ಹಣ ಪಾವತಿ ಆಗದ ಹಿನ್ನಲೆ ಗುತ್ತಿಗೆದಾರರು ಸಂಕಷ್ಟ ಅನುಭವಿಸುತ್ತಿದ್ದು, ಗುರುವಾರವೂ ಗುತ್ತಿಗೆದಾರರು ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರನ್ನು ಭೇಟಿ ಮಾಡಿ ತಮ್ಮ ಸಮಸ್ಯೆ ಹೇಳಿದ್ದಾರೆ. 2021-22ನೇ ಸಾಲಿನಿಂದ ಈವರೆಗೂ ಕೆಲಸ ಮಾಡಿದ ಹಣ ಪಾವತಿ ಆಗದ ಬಗ್ಗೆ ವಿವರಿಸಿದ್ದಾರೆ. `ಅನೇಕ ಗುತ್ತಿಗೆದಾರರು ಸಾಲ ಮಾಡಿ ಸರ್ಕಾರಿ ಕೆಲಸ ನಿರ್ವಹಿಸಿದ್ದಾರೆ. ನಗರಸಭೆಯಿಂದ ಬಿಲ್ ಪಾವತಿ ಆಗದ ಕಾರಣ ಗುತ್ತಿಗೆದಾರರು ಆರ್ಥಿಕವಾಗಿ ಕುಗ್ಗಿದ್ದಾರೆ. ಸಾಲ ನೀಡಿದ ಬ್ಯಾಂಕುಗಳು ಬಡ್ಡಿ ಪಾವತಿಸುವಂತೆ ಒತ್ತಾಯಿಸುತ್ತಿದ್ದು, ಗುತ್ತಿಗೆದಾರರ ಬಳಿ ಬಡ್ಡಿ ಪಾವತಿಗೂ ಹಣವಿಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ’ ಎಂದು ಕಾರವಾರ ತಾಲೂಕಾ ಗುತ್ತಿಗೆದಾರರ ಸಂಘದ ಅಧ್ಯಕ್ಷ ವಿಜಯ ಬಿಲಿಯೇ ವಿವರಿಸಿದರು. `ಈ ಸಮಸ್ಯೆ ಬಗ್ಗೆ ಶಾಸಕ, ಜಿಲ್ಲಾಧಿಕಾರಿ, ನಗರಸಭೆ ಆಯುಕ್ತರ ಜೊತೆ ಸಭೆ ನಡೆಸಲಾಗಿದೆ. ಸಮಸ್ಯೆ ಬಗ್ಗೆ ವಿವರವಾಗಿ ಚರ್ಚಿಸಲಾಗಿದೆ. ಹಳೆ ಬಾಕಿ ಪಾವತಿ ನಂತರವೇ ಹೊಸ ಕಾಮಗಾರಿ ನೀಡಬೇಕು ಎಂದು ಒತ್ತಾಯಿಸಲಾಗಿದೆ. ಅದಾದ ನಂತರ ನಗರಸಭೆ ತುರ್ತು ಕಾಮಗಾರಿ ನಡೆಸಿದರೂ ಗುತ್ತಿಗೆದಾರರು ಆಕ್ಷೇಪವ್ಯಕ್ತಪಡಿಸಿಲ್ಲ. ಅದಾಗಿಯೂ ಗುತ್ತಿಗೆದಾರರಿಗೆ ಬಿಲ್ ಮೊತ್ತ ಪಾವತಿಸದೇ ಇರುವುದು ಸರಿಯಲ್ಲ’ ಎಂದು ಅವರು ಹೇಳಿದರು. `ಸದ್ಯ ನಗರಸಭೆಯಿಂದ ಮತ್ತೆ ಕೋಟ್ಯಂತರ ರೂಪಾಯಿಯ ಕಾಮಗಾರಿ ನಡೆಸಲಾಗುತ್ತಿದೆ. ಈ ಬಗ್ಗೆ ಟೆಂಡರ್ ಕರೆಯಲಾಗಿದ್ದು, ಹಳೆಯ ಬಾಕಿ ಪಾವತಿ ನಂತರವೇ ಹೊಸ ಕಾಮಗಾರಿ ಶುರು ಮಾಡಬೇಕು’ ಎಂದು ಆಗ್ರಹಿಸಿದರು. ತಕ್ಷಣ ತಮ್ಮ ಫೋನ್ ತೆಗೆದುಕೊಂಡ ನಗರಸಭೆ ಯೋಜನಾ ನಿರ್ದೇಶಕ ಜಾಹಿರ ಅಬ್ಬಾಸ್ ಅವರು ನಗರಸಭೆ ಲೆಕ್ಕಾಧಿಕಾರಿಗಳ ಜೊತೆ ಮಾತನಾಡಿದರು. ಬಿಲ್ ಬಾಕಿಯ ಎಲ್ಲಾ ಕಡತಗಳನ್ನು ಹಿಡಿದು ನವೆಂಬರ್ 3ರಂದು ಕಚೇರಿಗೆ ಬರುವಂತೆ ಸೂಚಿಸಿದರು. `ಸಂಘಟನೆ ಪ್ರಮುಖರಾದ ಛತ್ರಪತಿ ಮಾಳಸೇಕರ್, ಸತೀಶ ವಿ ನಾಯ್ಕ, ಡಿ ಕೆ ನಾಯ್ಕ, ಸಿದ್ಧಾರ್ಥ ನಾಯ್ಕ, ಮನೋಜಕುಮಾರ ನಾಯ್ಕ, ರೋಹಿದಾಸ ಕೋಠಾರಕg, ರವೀಂದ್ರ ತಳ್ಳೇಕರ್ ಇತರರು ತಮ್ಮ ಸಮಸ್ಯೆ ವಿವರಿಸಿದರು. ನವೆಂಬರ್ 3ರಂದು ಸಭೆ ನಡೆಸಿ ಆ ನಂತರ ಸಮಸ್ಯೆಗೆ ಸ್ಪಂದಿಸುವೆ’ ಎಂದು ನಗರಸಭೆ ಯೋಜನಾ ನಿರ್ದೇಶಕ ಜಾಹಿರ ಅಬ್ಬಾಸ್ ಅವರು ಪ್ರತಿಕ್ರಿಯಿಸಿದರು. - [ಸ್ಟೇರಿಂಗ್ ತುಂಡಾಗಿ ಗಟಾರಕ್ಕೆ ಇಳಿದ ಬಸ್ಸು!](https://mobiletime.in/2025/10/the-steering-wheel-broke-off-and-the-bus-fell-into-the-gutter/): ಶಿರಸಿಯಿಂದ ಹುಬ್ಬಳ್ಳಿಗೆ ತೆರಳುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ಸು ಮುಂಡಗೋಡದಲ್ಲಿ ದಾರಿ ತಪ್ಪಿದೆ. ಬಸ್ಸಿನ ಸ್ಟೇರಿಂಗ್ ತುಂಡಾದ ಪರಿಣಾಮ ಮಳಗಿ ಬಳಿ ಬಸ್ಸು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದೆ. ಅದಾದ ನಂತರ ಬಸ್ಸು ಗಟಾರಕ್ಕೆ ಬಿದ್ದಿದೆ. ಈ ಬಸ್ಸಿನಲ್ಲಿ ಸುಮಾರು 70 ಪ್ರಯಾಣಿಕರಿದ್ದರು. ಬಸ್ಸು ನಿಧಾನವಾಗಿ ಸಂಚರಿಸುತ್ತಿದ್ದ ಕಾರಣ ಅವರೆಲ್ಲರೂ ಪ್ರಾಣಾಪಾಯದಿಂದ ಪಾರಾದರು. ಬಸ್ ಗಟಾರದಲ್ಲಿ ನಿಂತ ತಕ್ಷಣ ಪ್ರಯಾಣಿಕರೆಲ್ಲರೂ ಬಸ್ಸಿನಿಂದ ಕೆಳಗೆ ಹಾರಿದರು. ಅಪಘಾತದಿಂದ ಪಾರಾಗಿ ಜೀವ ಉಳಿಸಿಕೊಂಡಿದ್ದರಿAದ ಎಲ್ಲರೂ ನೆಮ್ಮದಿಯ ನಿಟ್ಟುಸಿರು ಬಿಟ್ಟರು. ಈ ಅಪಘಾತದಲ್ಲಿ ಕೆಲವರಿಗೆ ಮಾತ್ರ ಅಲ್ಲಲ್ಲಿ ಪೆಟ್ಟಾಗಿದೆ. ಅವರನ್ನು ಸ್ಥಳೀಯ ಆಸ್ಪತ್ರೆಗೆ ಸಾಗಿಸಲಾಗಿದೆ. ಸ್ಥಳೀಯರು ಹಾಗೂ ಪೊಲೀಸರು ತಕ್ಷಣ ಸ್ಥಳಕ್ಕಾಗಮಿಸಿ ರಕ್ಷಣಾ ಕಾರ್ಯಾಚರಣೆ ಶುರು ಮಾಡಿದರು.   - [ಧಾರಾಕಾರ ಮಳೆಯಲ್ಲಿಯೂ ಕೂಲಿ ಕಾಸು ಲೂಟಿ!](https://mobiletime.in/2025/10/laborers-loot-money-even-in-torrential-rain/): ಉತ್ತರ ಕನ್ನಡ ಜಿಲ್ಲೆಯಲ್ಲಿ ಜೂನ್ ಮೊದಲ ವಾರ ಶುರುವಾದ ಮಳೆ ಇನ್ನೂ ನಿಂತಿಲ್ಲ. ಹೀಗಿರುವಾಗ ಈ ಮಳೆಗಾಲದ ಅವಧಿಯಲ್ಲಿ ಯಲ್ಲಾಪುರದಲ್ಲಿ ಕೆರೆ ನಿರ್ಮಾಣ, ಕಾಲುವೆ ಸುಧಾರಣೆ, ಕೃಷಿ ಹೊಂಡ ಅಭಿವೃದ್ಧಿ ನಡೆದ ಬಗ್ಗೆ ಅಧಿಕೃತ ದಾಖಲೆ ಸೃಷ್ಠಿ ನಡೆದಿದೆ. ಈ ಎಲ್ಲಾ ಕೆಲಸಗಳಿಗಾಗಿ ಲಕ್ಷಾಂತರ ರೂ ಹಣ ವೆಚ್ಚ ಮಾಡಲಾಗಿದ್ದು, ಧಾರಾಕಾರ ಮಳೆಯಲ್ಲಿಯೂ ಕೆರೆ ಹೂಳೆತ್ತುವ ಕಾಮಗಾರಿ ನಡೆದ ದಾಖಲೆ ನೋಡಿದವರಿಗೆ ತಲೆಬಿಸಿ ಶುರುವಾಗಿದೆ! ಸಾಮಾನ್ಯವಾಗಿ ಮಳೆಗಾಲದ ಅವಧಿಯಲ್ಲಿ ಉದ್ಯೋಗ ಖಾತ್ರಿ ಯೋಜನೆಗಳು ನಡೆಯುವುದಿಲ್ಲ. ಆ ಅವಧಿಯಲ್ಲಿ ನರೆಗಾ ಕೆಲಸ ಮಾಡದಂತೆ ಸರ್ಕಾರವೇ ಸುತ್ತೋಲೆ ಹೊರಡಿಸಿದ ಉದಾಹರಣೆಗಳಿವೆ. ಆ ಅವಧಿಯಲ್ಲಿ ಕೂಲಿ ಕಾರ್ಮಿಕರು ಸಹ ಬೇಡಿಕೆ ಸಲ್ಲಿಸುವುದಿಲ್ಲ. ಆದರೆ, ದಾಖಲೆಗಳ ಪ್ರಕಾರ ಯಲ್ಲಾಪುರದ ಕಣ್ಣಿಗೇರಿ, ಹಾಸಣಗಿ, ಕುಂದರಗಿ, ಮಂಚಿಕೇರಿ (ಕಂಪ್ಲಿ) ಭಾಗದಲ್ಲಿ ಮಳೆಗಾಲದ ಅವಧಿಯಲ್ಲಿಯೇ ಅತಿ ಹೆಚ್ಚು ಕೆಲಸ ನಡೆದಿದೆ. ಕೆರೆ ನಿರ್ಮಾಣ, ಕಾಲುವೆ ನಿರ್ಮಾಣ, ಕೃಷಿ ಹೊಂಡ ನಿರ್ಮಾಣವನ್ನು ವೈಯಕ್ತಿಕ ಕಾಮಗಾರಿ ಪಟ್ಟಿಗೆ ಸೇರಿಸಿ ಲಕ್ಷಾಂತರ ರೂ ಬಿಲ್ ಮಾಡಲಾಗಿದೆ. ಮಳೆಗಾಲದ ಅವಧಿಯಲ್ಲಿ ಯಲ್ಲಾಪುರದ ಕಣ್ಣಿಗೇರಿ ಗ್ರಾಮ ಪಂಚಾಯತದಲ್ಲಿನ ಹುಲಿಪಾಲ ನಾರಾಯಣ ಭಟ್ಟ ತೋಟದ ಕೆರೆ ನಿರ್ಮಾಣ 317460ರೂ ಖರ್ಚು ಮಾಡಲಾಗಿದೆ. ಲಾಲಗುಳಿ ಗಣಪತಿ ಹೆಗಡೆ ತೋಟ ಹತ್ತಿರ ಕೆರೆ ಹೂಳೆತ್ತಲು 133200 ರೂ ಖರ್ಚಾಗಿದೆ. ಗೋಪಿಗಾಳಿಯಲ್ಲಿ ಕೃಷಿ ಹೊಂಡಕ್ಕೆ 59570 ರೂ, ವೀಣಾ ಭಂಡಾರಿ ಹೊಲದ ಹತ್ತಿರ ಕಾಲುವೆ ನಿರ್ಮಾಣಕ್ಕೆ 51800ರೂ ಖರ್ಚಾದ ಬಗ್ಗೆ ದಾಖಲೆ ಹೇಳುತ್ತದೆ. ಹಾಸಣಗಿ ಗ್ರಾ ಪಂ ಬೊಮ್ಮನಳ್ಳಿ ನಾಗೇಂದ್ರ ಮರಾಠಿ ಜಮೀನ ಪಕ್ಕ ಕಾಲುವೆ ನಿರ್ಮಾಣಕ್ಕೆ 1.32 ಲಕ್ಷ ರೂ, ಹೊಟಗೇರಿ ಚಂದ್ರ ಶೇರುಗಾರ ಜಮೀನ ಪಕ್ಕ ಕಾಲುವೆಗೆ 99 ಸಾವಿರ ರೂ, ಕುಂದರಗಿ ಗ್ರಾಪಂ ನ ಭರತನಳ್ಳಿ ಕಾಲುವೆಗೆ 1.42 ಲಕ್ಷ ರೂ, ಕುಂದರಗಿ ಸನಂ 88ರಲ್ಲಿ ಕಾಲುವೆಗೆ 1.48 ಲಕ್ಷ ರೂ ಖರ್ಚಾಗಿದೆ. ಮಂಚಿಕೇರಿ (ಕಂಪ್ಲಿ) ಗ್ರಾಮ ಪಂಚಾಯತದ ಸೋಮನಳ್ಳಿ ವನಿತಾ ಕುಣಬಿ ಜಮೀನ ಹತ್ತಿರ ಕೆರೆ ಹೂಳೆತ್ತಲು 1.31 ಲಕ್ಷ ರೂ, ಬಾಮಣಕೊಪ್ಪ ವಿಶ್ವನಾಥ ಹೆಗಡೆ ತೋಟದ ಮೇಲೆ ಕೆರೆ ನಿರ್ಮಾಣಕ್ಕೆ 77330ರೂ, ಬಾಮಣಕೊಪ್ಪ ಮಜಿರೆಯಲ್ಲಿ ಕೆರೆ ಹೂಳೆತ್ತಲು 85100 ರೂ, ಕಂಪ್ಲಿ ಸೂರಮನೆಯಲ್ಲಿ ಕೆರೆ ನಿರ್ಮಾಣ ಸೇರಿ ಎಲ್ಲಾ ಕಾಮಗಾರಿಗಳನ್ನು ಜೂನ್ ಎರಡನೇ ವಾರದಿಂದ ಅಗಸ್ಟ್ ಅವಧಿಯಲ್ಲಿ ಮಾಡಿದ ಬಗ್ಗೆ ದಾಖಲೆಗಳಿವೆ. ಇದಲ್ಲದೇ ಇನ್ನಿತರ ಅನೇಕ ಕಡೆ ಸುರಿಯುತ್ತಿರುವ ಮಳೆಯನ್ನು ಲೆಕ್ಕಿಸದೇ ಜನ ಕೆಲಸ ಮಾಡಿದ ಬಗ್ಗೆ ದಾಖಲೆಗಳಿವೆ! ಸುರಿಯುತ್ತಿರುವ ಧಾರಾಕಾರ ಮಳೆಯಲ್ಲಿ ಕೆರೆ ಹೂಳು ತೆಗೆಯಲು ಸಾಧ್ಯವಿಲ್ಲ ಎಂಬುದು ಎಲ್ಲಿರಗೂ ಗೊತ್ತಿರುವ ವಿಷಯ. ಕೃಷಿ ಹೊಂಡಗಳ ನಿರ್ಮಾಣ ಸಹ ಈ ಅವಧಿಯಲ್ಲಿ ಅಸಾಧ್ಯ. ಇನ್ನೂ ರಭಸವಾಗಿ ನೀರು ಹರಿಯುವಾಗ ಕಾಲುವೆ ಹೇಗೆ ನಿರ್ಮಿಸಿದರು? ಎಂಬುದು ಯಾರಿಗೂ ಗೊತ್ತಿಲ್ಲ. ಅದಾಗಿಯೂ ಈ ಎಲ್ಲಾ ಕೆಲಸಗಳಿಗೆ ಹಣ ಪಾವತಿ ಆಗಿದೆ. ಹವಾಮಾನ ಇಲಾಖೆ ಅಂಕಿ ಸಂಖ್ಯೆಗಳ ಪ್ರಕಾರ ಜೂನ್ ತಿಂಗಳಿoದ ಸಪ್ಟೆಂಬರ ಅವಧಿಯಲ್ಲಿ ಯಲ್ಲಾಪುರದಲ್ಲಿ ಸುಮಾರು 1723 ಮಿಮೀ ಮಳೆಯಾಗಿದೆ. ಈ ಅವಧಿಯಲ್ಲಿ ಕಷ್ಟಪಟ್ಟು ಕೆಲಸ ಮಾಡಿದ ಅಧಿಕಾರಿಗಳಿಗೆ ಸರ್ಕಾರದಿಂದ ಪ್ರಶಸ್ತಿಬರುವ ಸಾಧ್ಯತೆಗಳು ಹೆಚ್ಚಿವೆ! - [2025 ಅಕ್ಟೊಬರ್ 30ರ ದಿನ ಭವಿಷ್ಯ](https://mobiletime.in/2025/10/prediction-for-october-30-2025/): ಮೇಷ ರಾಶಿ: ಮಿತವಾಗಿ ಮಾತನಾಡುವುದು ಉತ್ತಮ. ಖರ್ಚು-ವೆಚ್ಚಗಳು ನಿಯಂತ್ರಣದಲ್ಲಿರಲಿ. ಗುರು-ಹಿರಿಯರ ಬೋಧನೆ ಪಾಲಿಸಿದರೆ ಒಳ್ಳೆಯದಾಗಲಿದೆ. ವೃಷಭ ರಾಶಿ: ಆರೋಗ್ಯದಲ್ಲಿ ಹೊಸ ಬದಲಾವಣೆ ಸಾಧ್ಯವಿದೆ. ನಿಮ್ಮ ಕನಸಿನ ಯೋಜನೆಗಳ ಜಾರಿಗೆ ಸಕಾಲ. ದೈನಂದಿನ ಕಾರ್ಯಗಳಲ್ಲಿ ತೊಡಗಬೇಕಾಗುತ್ತದೆ. ಹಣದ ನಿರ್ವಹಣೆ ಅಗತ್ಯ. ಮಿಥುನ ರಾಶಿ: ಸ್ಪರ್ಧಾತ್ಮಕ ವಾತಾವರಣಗಳಲ್ಲಿ ಯಶಸ್ಸು ಸಿಗುವ ಲಕ್ಷಣವಿದೆ. ಆಶಾದಾಯಕ ಬೆಳವಣಿಗೆಗಳು ನಡೆಯಲಿದೆ. ಸಮಸ್ಯೆಗಳು ದೂರವಾಗಲಿದೆ. ಸಿಂಹ ರಾಶಿ: ಕೆಲಸ ಕಾರ್ಯಗಳು ನಿಧಾನವಾಗಲಿದೆ. ನಿರೀಕ್ಷಿತ ವಿಷಯ ಸರಿಯಾಗಿ ಸಾಗಲಿದೆ. ಸ್ನೇಹಿತರ ಸಹಾಯಪಡೆದು ಕೆಲಸ ಮಾಡಿ. ಕನ್ಯಾ ರಾಶಿ: ನಿಮ್ಮ ಮಾತು ನಿಮಗೆ ಸಮಸ್ಯೆ ತರುವ ಲಕ್ಷಣವಿದೆ. ಚಟುವಟಿಕೆಗಳಿಂದ ದಿನ ಕಳೆಯಿರಿ. ಪರೀಕ್ಷೆಯ ಫಲಿತಾಂಶಗಳು ಸರಿಯಾಗಿರಲಿದೆ. ತುಲಾ ರಾಶಿ: ಸಾಧನೆಗೆ ಸೂಕ್ತ ಸಮಯ. ಹೊಸ ಪರಿಚಯಗಳಿಂದ ಆದಾಯ ವೃದ್ಧಿ ಆಗಲಿದೆ. ಕುಟುಂಬದಲ್ಲಿ ಭಿನ್ನಾಭಿಪ್ರಾಯ ಬರುವ ಸಾಧ್ಯತೆಗಳಿವೆ. ವೃಶ್ಚಿಕ ರಾಶಿ: ಆರೋಗ್ಯದ ಕಡೆಗಮನಹರಿಸಿ. ಅವಕಾಶಗಳನ್ನು ಸರಿಯಾಗಿ ಬಳಸಿ. ಸಾಮಾಜಿಕ ಕಾರ್ಯಗಳಲ್ಲಿ ಕೈ ಜೋಡಿಸಿ. ಧನು ರಾಶಿ: ನಿಮ್ಮ ಕೆಲಸದ ವರದಿ ಪ್ರಭಾವ ಬೀರುತ್ತದೆ. ಮುಂದಿರುವ ಗುರಿ ತಲುಪಲು ಸಹಾಯ ಸಿಗುತ್ತದೆ. ಚಿಂತೆ ದೂರವಾಗುತ್ತದೆ. ಮಕರ ರಾಶಿ: ನಿಮ್ಮ ಕ್ಷೇತ್ರದಲ್ಲಿ ಸ್ಪರ್ಧೆ ಹೆಚ್ಚಲಿದೆ. ಮೇಲಧಿಕಾರಿಗಳಿಂದ ಶುಭ ಸುದ್ದಿ ಬರಲಿದೆ. ಖರ್ಚು-ವೆಚ್ಚಗಳನ್ನು ತಗ್ಗಿಸುವುದು ಅಗತ್ಯ. ಕುಂಭ ರಾಶಿ: ಬೇರೆಯವರ ಬಗ್ಗೆ ಹಗುರವಾಗಿ ಮಾತನಾಡಬೇಡಿ. ಸಾಹಿತ್ಯ-ಕಲೆಗಳಲ್ಲಿ ಆಸಕ್ತಿವಹಿಸಿ. ಮಿತ್ರರ ಜೊತೆ ಕಾಲ ಕಳೆಯಿರಿ. ಮೀನ ರಾಶಿ: ಮನಸ್ಸಿಗೆ ನೆಮ್ಮದಿ ಸಿಗಲಿದೆ. ಸೃಜನಶೀಲ ಕೆಲಸಗಳು ಸರಾಗವಾಗಿ ಸಾಗಲಿದೆ. ಧ್ಯಾನ ಮಾಡುವುದನ್ನು ಮರೆಯಬೇಡಿ. - [ಕಾಲೇಜು ಕನ್ಯೆಗೆ ಕಾಟ ಕೊಟ್ಟವ ಊರು ಬಿಟ್ಟು ಓಡಿದ!](https://mobiletime.in/2025/10/the-man-who-attacked-the-college-girl-ran-away/): ಅಂಕೋಲಾ ಪೂಜಗೇರಿಯ ಕಾಲೇಜು ಕನ್ಯೆಗೆ ಕಾಟ ಕೊಟ್ಟ ಉಪನ್ಯಾಸಕ ರಾಮಚಂದ್ರ ಅಂಕೋಲೇಕರ್ ಅವರು ಊರು ತೊರೆದಿದ್ದಾರೆ. ಅವರನ್ನು ಹುಡುಕಿ ಪೊಲೀಸರು ಮನೆಯವರೆಗೂ ತೆರಳಿದ್ದು, ಅಲ್ಲಿ ರಾಮಚಂದ್ರ ಅಂಕೋಲೇಕರ್ ಸಿಗಲಿಲ್ಲ. ಹೀಗಾಗಿ ಪೊಲೀಸರು ಆರೋಪಿಗೆ ಆಶ್ರಯ ನೀಡಿದ ಇಬ್ಬರನ್ನು ವಶಕ್ಕೆಪಡೆದಿದ್ದಾರೆ. ಅಂಕೋಲಾ ಪೂಜಗೇರಿ ಕಾಲೇಜು ಉಪನ್ಯಾಸಕ ರಾಮಚಂದ್ರ ಅಂಕೋಲೆಕರ್ ಅವರು ವಿದ್ಯಾರ್ಥಿನಿಯೊಬ್ಬರಿಗೆ ಕಾಮ ಪಾಠ ಮಾಡಿದ ಹಿನ್ನಲೆ ಪಾಲಕರು ಆಕ್ರೋಶವ್ಯಕ್ತಪಡಿಸಿದ್ದರು. ವಿದ್ಯಾರ್ಥಿನಿ ಸಹ ಪೊಲೀಸ್ ದೂರು ದಾಖಲಿಸಿದ್ದು, ಮಂಗಳವಾರ ನೂರಾರು ಜನ ಪ್ರತಿಭಟಿಸಿದ ಹಿನ್ನಲೆ ಪೊಲೀಸರ ಮೇಲೆ ಒತ್ತಡ ಬಂದಿತು. ಪೊಲೀಸರು ಬಂಧಿಸುವ ಸಾಧ್ಯತೆ ಅರಿತ ರಾಮಚಂದ್ರ ಅಂಕೋಲೇಕರ್ ಊರು ಬಿಟ್ಟರು. ಅವರು ಸದ್ಯ ಗೋವಾ ಕಡೆ ಪ್ರವಾಸದಲ್ಲಿರುವ ಬಗ್ಗೆ ಮಾಹಿತಿಯಿದ್ದು, ಅಲ್ಲಿಯೂ ಶೋಧ ನಡೆಯುತ್ತಿದೆ. ಉಪನ್ಯಾಸಕ ರಾಮಚಂದ್ರ ಅಂಕೋಲೇಕರ್ ಅವರಿಗೆ ಆಶ್ರಯನೀಡಿದ್ದ ಗೋಕರ್ಣ ಬಳಿಯ ನಾಗರಾಜ್ ಗೌಡ ಮತ್ತು ವಾಸು ಎಂಬಾತರನ್ನು ಸದ್ಯ ಪೊಲೀಸರು ವಶಕ್ಕೆಪಡೆದಿದ್ದಾರೆ. ಉಪನ್ಯಾಸಕರನ್ನು ಗೋವಾ ಗಡಿಯವರೆಗೂ ಬಿಟ್ಟು ಬಂದ ಆರೋಪ ಅವರ ಮೇಲಿದೆ. ಈ ಬಗ್ಗೆ ವಿಚಾರಣೆ ನಡೆಯುತ್ತಿದೆ. - [ಲಾಪ್‌ಟಾಪ್ ವ್ಯಾಪಾರ: ದುಡ್ಡು ಕೊಟ್ಟವನಿಗೆ ದೊಡ್ಡ ಮೋಸ!](https://mobiletime.in/2025/10/laptop-business-congress-office-is-a-center-of-fraud-2/): ಅoಕೋಲಾದ ಬೆಳಂಬಾರದ ಜಗದೀಶ ಖಾರ್ವಿ ಅವರಿಗೆ ಮೋಸವಾಗಿದೆ. ಜಗದೀಶ ಖಾರ್ವಿ ಅವರ ಬ್ಯಾಂಕ್ ಖಾತೆಯಲ್ಲಿದ್ದ 3.75 ಲಕ್ಷ ರೂ ಹಣವನ್ನು ಅಲ್ಲಿದ್ದ ಸುಹಾಸ ಬಿ ಎಸ್ ಎಂಬಾತರು ತಮ್ಮ ಖಾತೆಗೆ ವರ್ಗಾಯಿಸಿಕೊಂಡು ವಂಚಿಸಿದ್ದಾರೆ! ಅoಕೋಲಾ ಬೆಳಂಬಾರದ ಮಧ್ಯಖಾರ್ವಿವಾಡದಲ್ಲಿ ಜಗದೀಶ ಯಶ್ವಂತ ಖಾರ್ವಿ ಅವರು ವಾಸವಾಗಿದ್ದಾರೆ. ವ್ಯವಹಾರಸ್ಥರಾಗಿರುವ ಅವರು ಅಕ್ಟೊಬರ್ 10ರಂದು ತಮ್ಮ ಕೆಲಸವೊಂದಕ್ಕಾಗಿ ಕಚೇರಿಯೊಂದಕ್ಕೆ ಹೋಗಿದ್ದರು. ಅಲ್ಲಿಗೆ ಬಂದ ಅಪರಿಚಿತ ವ್ಯಕ್ತಿಯೊಬ್ಬರು ತಮ್ಮನ್ನು ಸುಹಾಸ್ ಬಿ ಎಸ್ ಎಂದು ಪರಿಚಯಿಸಿಕೊಂಡರು. `ತಾನು ಬೆಂಗಳೂರಿನಲ್ಲಿ ಎನ್ ಜಿ ಓ ನಡೆಸುತ್ತಿದ್ದು, ಅದರ ಮೂಲಕ ಕಡಿಮೆ ಬೆಲೆಗೆ ಒಳ್ಳೆಯ ಲಾಪ್‌ಟಾಪ್ ಕೊಡುವೆ’ ಎಂದು ವಿವರಿಸಿದರು. ಕಡಿಮೆ ಬೆಲೆಗೆ ಒಳ್ಳೆಯ ಲಾಪ್‌ಟಾಪ್ ಸಿಗುವ ಬಗ್ಗೆ ಅರಿತ ಜಗದೀಶ ಖಾರ್ವಿ ಅವರು `ತಮಗೂ 15 ಲಾಪ್‌ಟಾಪ್ ಬೇಕು’ ಎಂದು ತಿಳಿಸಿದರು. ಸ್ವಂತ ಕೆಲಸಕ್ಕಾಗಿ ಎಚ್ ಪಿ ಕಂಪನಿಯ ಲ್ಯಾಪಟಾಪ್ ಪೂರೈಸುವಂತೆ ಕೋರಿದರು. ಇದಕ್ಕಾಗಿ ಮುಂಗಡ ಹಣ ಎಂದು 3.75 ಲಕ್ಷ ರೂ ಪಾವತಿಸಿದರು. ಆದರೆ, ಆ ದಿನ ಸುಹಾಸ ಬಿ ಎಸ್ ಎಂದು ಪರಿಚಯಿಸಿಕೊಂಡಿದ್ದ ವ್ಯಕ್ತಿ ಮತ್ತೆ ಭೇಟಿ ಆಗಲಿಲ್ಲ. ಸಂಪರ್ಕಕ್ಕೂ ಸಿಗಲಿಲ್ಲ. ಕಡಿಮೆ ಬೆಲೆಗೆ ಲಾಪ್‌ಟಾಪ್ ಸಿಗುತ್ತದೆ ಎಂದು ನಂಬ ಕಾಸು ಕೊಟ್ಟಿದ್ದ ಜಗದೀಶ ಖಾರ್ವಿ ಅವರು ಮೋಸವಾಗಿರುವುದನ್ನು ಅರಿತರು. ಮೋಸ ಮಾಡಿದ ವ್ಯಕ್ತಿ ವಿರುದ್ಧ ಪೊಲೀಸ್ ದೂರು ನೀಡಿದರು. ಅಂಕೋಲಾ ಪೊಲೀಸರು ಪ್ರಕರಣ ದಾಖಲಿಸಿದ್ದು, ಆರೋಪಿಯ ಶೋಧ ಶುರು ಮಾಡಿದ್ದಾರೆ. - [ಅಂದರ್ ಬಾಹರ್ ಆಟಕ್ಕೆ ಅಡಿಕೆ ದುಡ್ಡು!](https://mobiletime.in/2025/10/ander-bahar-is-a-nut-for-the-game/): ಅಡಿಕೆ ವ್ಯಾಪಾರದ ದುಡ್ಡನ್ನು ಅಂದರ್ ಬಾಹರ್ ಆಟಕ್ಕೆ ವಿನಿಯೋಗಿಸಿದ್ದ ಶಿರಸಿಯ ನಾಲ್ವರು ಅಡಿಕೆ ವ್ಯಾಪಾರಿಗಳು ಪೊಲೀಸರ ಬಲೆಗೆ ಬಿದ್ದಿದ್ದಾರೆ. ಘಟಾನುಘಟಿ ಅಡಿಕೆ ವ್ಯಾಪಾರಿಗಳು ಜೂಜಾಟಕ್ಕೆ ಬಳಸಿದ್ದ 13 ಸಾವಿರ ರೂ ಹಣವನ್ನು ಪೊಲೀಸರು ಜಪ್ತು ಮಾಡಿದ್ದಾರೆ. ಶಿರಸಿ ಹುಲೆಕಲ್ಲಿನ ಅಡಿಕೆ ವ್ಯಾಪಾರಿ ದಾವುದ್‌ಖಾನ್ ಅಮೀದಖಾನ್ ಅವರು ತಮ್ಮ ಸಹಚರ ಅಡಿಕೆ ವ್ಯಾಪಾರಿಗಳನ್ನು ಜೂಜಾಟಕ್ಕೆ ಆಮಂತ್ರಿಸಿದ್ದರು. ಅದರ ಪ್ರಕಾರ ಹುಲೆಕಲ್’ನ ಮುಕ್ತಮಖಾನ್ ಹಮೀದಖಾನ್, ಹುಸೇನಸಾಬ್ ಹಮೀದಖಾನ್, ಜಾಕೀರ ಅಬ್ಬಾಸಮುಲ್ಲಾ ಅವರು ಈ ಆಮಂತ್ರಣ ಒಪ್ಪಿ ಇಸ್ಪಿಟ್ ಆಡಲು ಆಗಮಿಸಿದ್ದರು. ಅಕ್ಟೊಬರ್ 26ರಂದು ಶಿರಸಿಯ ಅಗಸಾಲ ಬಳಿಯ ದೇವರಹೊಳೆ ಬಳಿ ಅವರೆಲ್ಲರೂ ಸೇರಿದ್ದರು. ಸಂಜೆ 6.45ಕ್ಕೆ ಶಿರಸಿ ಗ್ರಾಮೀಣ ಪೊಲೀಸ್ ಠಾಣೆಯ ಪಿಎಸ್‌ಐ ಸಂತೋಷಕುಮಾರ ಎಂ ಅವರು ಈ ವಿಷಯ ಅರಿತು ಅಲ್ಲಿಗೆ ಹೋದರು. 52 ಇಸ್ಪಿಟ್ ಎಲೆ, 13100ರೂ ಹಣ, ಚಾರ್ಜಿಂಗ್ ಬ್ಯಾಟರಿ ಜೊತೆ ಅಲ್ಲಿದ್ದ ಚೀಲವನ್ನು ಪೊಲೀಸರು ವಶಕ್ಕೆಪಡೆದರು. ಆ ನಾಲ್ವರ ವಿರುದ್ಧವೂ ಪೊಲೀಸ್ ಪ್ರಕರಣ ದಾಖಲಿಸಿ, ನ್ಯಾಯಾಲಯಕ್ಕೆ ವರದಿ ಸಲ್ಲಿಸಿದರು. `ಜೂಜಾಟದಿಂದ ಜೀವನ ಹಾಳು’ - [ಬಿಸಿ ನೀರಿಗೆ ಬಿದ್ದ ಮೂರು ವರ್ಷದ ಮಗು: ಚಿಕಿತ್ಸೆ ನೀಡಿದ ಆಸ್ಪತ್ರೆ ವಿರುದ್ಧ ಅಪಪ್ರಚಾರ!](https://mobiletime.in/2025/10/three-year-old-child-falls-into-hot-water-slander-against-the-hospital-that-treated-him/): ಭಟ್ಕಳದಲ್ಲಿ ಮೂರು ವರ್ಷದ ಮಗು ಬಿಸಿ ನೀರಿನ ಬಕೇಟಿಗೆ ಬಿದ್ದಿದೆ. ಆ ಮಗುವನ್ನು ಲೈಫ್‌ಕೇರ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅಲ್ಲಿ ಸರಿಯಾದ ಚಿಕಿತ್ಸೆ ಸಿಕ್ಕಿಲ್ಲ ಎಂದು ಪಾಲಕರು ದೂರಿದ್ದಾರೆ. ಈ ಆರೋಪ ಮಾಡಿದ ಪಾಲಕರ ವಿರುದ್ಧ ಆಸ್ಪತ್ರೆಯವರು ಪೊಲೀಸ್ ದೂರು ನೀಡಿದ್ದಾರೆ! ಅಕ್ಟೊಬರ್ 20ರಂದು ಜಾಲಿ ರಸ್ತೆಯಲ್ಲಿರುವ ಲೈಫ್ ಕೇರ್ ಆಸ್ಪತ್ರೆಯ ತುರ್ತು ಘಟಕಕ್ಕೆ ಕೆಲವರು ಮಗುವೊಂದನ್ನು ಕರೆತಂದಿದ್ದರು. ಹನಿಪಾಬಾದಿನ ಆರ್ಸಿಲಿನ್ ಆಸಿಪ್ ಶೇಖ್ ಎಂಬ ಮಗು ಬಿಸಿ ನೀರಿನ ಬಕೇಟಿಗೆ ಬಿದ್ದು ಗಾಯಗೊಂಡಿತ್ತು. ಸುಟ್ಟ ಗಾಯ ನೋಡಿದ ಆಸ್ಪತ್ರೆಯವರು ತಕ್ಷಣ ಆ ಮಗುವನ್ನು ದಾಖಲು ಮಾಡಿಕೊಂಡು ಚಿಕಿತ್ಸೆ ನೀಡಿದ್ದರು. ಎರಡು ದಿನಗಳ ಕಾಲ ಮಗುವಿನ ಆರೈಕೆ ಮಾಡಿದ್ದರು. ಆದರೆ, ಆಸ್ಪತ್ರೆಯವರು ಆರೈಕೆ ಮಾಡಿದ ವಿಧಾನ ಮಗುವಿನ ಪೋಷಕರಿಗೆ ಹಿಡಿಸಲಿಲ್ಲ. ಹೀಗಾಗಿ ಆ ಮಗುವಿನ ಅಜ್ಜ ಭಟ್ಕಳದ ಭಾಷಾ ಶೇಖ್ ಅವರು ಆಸ್ಪತ್ರೆ ವೈದ್ಯರ ವಿರುದ್ಧ ಕೂಗಾಡಿದರು. ಅಲ್ಲಿನ ಸಿಬ್ಬಂದಿ ಹಾಗೂ ವೈದ್ಯರನ್ನು ನಿಂದಿಸಿ ಬೆದರಿಕೆ ಒಡ್ಡಿದ್ದರು. ಅದಾದ ನಂತರ ಅಕ್ಟೊಬರ್ 26ರಂದು ಭಟ್ಕಳಿಗರ ಕ್ರಿಕೆಟ್ ಗ್ರೂಪ್ ಎಂಬ ವಾಟ್ಸಪ್ ಗುಂಪಿನಲ್ಲಿ ಆಸ್ಪತ್ರೆಯ ಬಗ್ಗೆ ಕೆಟ್ಟ ವಿಡಿಯೋ ಹರಿದಾಡಿದವು. ಆ ವಿಡಿಯೋದಲ್ಲಿLife care Hospital is the wrost in our Bhatkal Town ಎಂಬ ಬರಹಗಳಿದ್ದವು. ಆ ವಿಡಿಯೋ ನೋಡಿದ ಲೈಫ್‌ಕೇರ್ ಆಸ್ಪತ್ರೆಯ ಮ್ಯಾನೇಜಿಂಗ್ ಡೈರೆಕ್ಟರ್ ಸಲ್ಮಾನ್ ಅಹ್ಮದ್ ಅವರು ಕಾನೂನು ಕ್ರಮಕ್ಕೆ ಮುಂದಾದರು. ಆಸ್ಪತ್ರೆ ಹೆಸರು ಕೆಡಿಸಿದ ಭಾಷಾ ಶೇಖ್ ಅವರ ವಿರುದ್ಧ ಪೊಲೀಸ್ ದೂರು ನೀಡಿದರು. ಪೊಲೀಸರು ಪ್ರಕರಣ ವಿಚಾರಣೆ ನಡೆಸಿ ಹಿಂಬರಹ ನೀಡಿದ್ದು, ಅದಕ್ಕೆ ಸಮಾಧಾನವಾಗದ ಸಲ್ಮಾನ್ ಅಹ್ಮದ್ ಅವರು ನ್ಯಾಯಾಲಯದ ಮೆಟ್ಟಿಲೇರಿದರು. ಭಾಷಾ ಶೇಖ್ ಅವರ ವಿರುದ್ಧ ಭಟ್ಕಳ ನಗರ ಠಾಣೆಯಲ್ಲಿ ಪೊಲೀಸ್ ಪ್ರಕರಣವನ್ನು ದಾಖಲಿಸಿದರು.   - [ನಾರಿಮಣಿಯರ ಏಟಿಗೆ ಆಸ್ಪತ್ರೆ ಸೇರಿದ ಅತಿಕ್ರಮಣದಾರ!](https://mobiletime.in/2025/10/a-trespasser-was-hospitalized-after-being-beaten-up-by-narimani/): ಮಹಿಳೆಯರಿಬ್ಬರು ಸೇರಿ ಹೊಡೆದ ಪರಿಣಾಮ ಸಿದ್ದಾಪುರದ ಗಣಪತಿ ನಾಯ್ಕ ಅವರು ಆಸ್ಪತ್ರೆ ಸೇರಿದ್ದಾರೆ. ಅರಣ್ಯ ಅತಿಕ್ರಮಣ ಪ್ರದೇಶಕ್ಕೆ ಪ್ರವೇಶಿಸಿದನ್ನು ಸಹಿಸದ ಆಶಾ ಹಾಗೂ ಕಲ್ಪನಾ ಎಂಬಾತರು ಗಣಪತಿ ನಾಯ್ಕ ಅವರಿಗೆ ಥಳಿಸಿದ್ದು, ರಾಘವೇಂದ್ರ ಭಂಡಾರಿ ಅವರು ಈ ಹೊಡೆದಾಟಕ್ಕೆ ಸಹಕಾರ ನೀಡಿದ್ದಾರೆ! ಸಿದ್ದಾಪುರದ ಕಾನೂಸರು ಮಾರುತಿ ನಗರದ ಗಣಪತಿ ಬಂಗಾರ್ಯ ನಾಯ್ಕ ಅವರ ಕುಟುಂಬದವರು ಅನಾಧಿಕಾಲದಿಂದಲೂ ಅರಣ್ಯ ಅತಿಕ್ರಮಿಸಿಕೊಂಡಿದ್ದರು. ಪೂರ್ವಜರು ಮಾಡಿಟ್ಟ ಅತಿಕ್ರಮಣ ಪ್ರದೇಶವಾದ ಕಾನಸೂರಿನ ಸರ್ವೇ ನಂ 16/3ರಲ್ಲಿ ಗಣಪತಿ ನಾಯ್ಕ ಅವರು ಕೆಲಸ ಮಾಡುತ್ತಿದ್ದರು. ಆ ಪ್ರದೇಶದ ಪಕ್ಕದಲ್ಲಿ ರಾಘವೇಂದ್ರ ಗೋಪಾಲ ಭಂಡಾರಿ ಅವರ ಮನೆಯೂ ಇತ್ತು. ಹೀಗಾಗಿ ಗಣಪತಿ ನಾಯ್ಕ ಅವರು ಅತಿಕ್ರಮಣ ಪ್ರದೇಶದಲ್ಲಿ ಅಭಿವೃದ್ಧಿ ಕೆಲಸ ಮಾಡುವುದನ್ನು ರಾಘವೇಂದ್ರ ಭಂಡಾರಿ ಅವರು ಸಹಿಸುತ್ತಿರಲಿಲ್ಲ. `ಈ ಭೂಮಿ ನಿನಗೆ ಸೇರಿದಲ್ಲ. ಇಲ್ಲಿ ಬರಬೇಡ’ ಎಂದು ಸಾಕಷ್ಟು ಬಾರಿ ರಾಘವೇಂದ್ರ ಭಂಡಾರಿ ಅವರು ಸೂಚಿಸಿದ್ದರು. ಅದಾಗಿಯೂ ಗಣಪತಿ ನಾಯ್ಕ ಅವರು ಆ ಭೂಮಿಯಲ್ಲಿ ಅಭಿವೃದ್ಧಿ ಕೆಲಸ ಮುಂದುವರೆಸಿದ್ದರು. ಇದೇ ಕಾರಣದಿಂದ ಗಣಪತಿ ನಾಯ್ಕ ಹಾಗೂ ರಾಘವೇಂದ್ರ ಭಂಡಾರಿ ಅವರ ನಡುವೆ ದ್ವೇಷ ಮೂಡಿತ್ತು. ಹೀಗಾಗಿ ಗಣಪತಿ ನಾಯ್ಕ ಅವರು ಅಲ್ಲಿ ಕೆಲಸ ಮಾಡುವಾಗ ರಾಘವೇಂದ್ರ ಭಂಡಾರಿ ಅವರು ತಕರಾರು ಮಾಡುವುದು ಸಾಮಾನ್ಯವಾಗಿತ್ತು. ಅಕ್ಟೊಬರ್ 28ರಂದು ಗಣಪತಿ ನಾಯ್ಕ ಅವರು ಆ ಅತಿಕ್ರಮಣ ಭೂಮಿಗೆ ತೆರಳಿ ಕೆಲಸ ಮಾಡುತ್ತಿದ್ದರು. ಅಲ್ಲಿಗೆ ಬಡಿಗೆಹಿಡಿದು ಬಂದ ರಾಘವೇಂದ್ರ ಭಂಡಾರಿ ಅವರು ಗಣಪತಿ ನಾಯ್ಕ ಅವರಿಗೆ ಬಾರಿಸಿದರು. ಇದಕ್ಕೆ ಕಾಯುತ್ತಿದ್ದ ಆಶಾ ಹಾಗೂ ಕಲ್ಪನಾ ಅವರು ಗಣಪತಿ ನಾಯ್ಕ ಅವರನ್ನು ಹಿಡಿದು ಥಳಿಸಿದರು. ಈ ಮೂವರು ಸೇರಿ ಗಣಪತಿ ನಾಯ್ಕ ಅವರನ್ನು ನೆಲಕ್ಕೆ ಬೀಳಿಸಿ ಕಾಲಿನಿಂದ ಒದ್ದು ನೋವು ಮಾಡಿದರು. ಗಣಪತಿ ನಾಯ್ಕ ಅವರು ಸಿದ್ದಾಪುರ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆಪಡೆದಿದ್ದು, ಈ ಎಲ್ಲಾ ವಿದ್ಯಮಾನಗಳ ಬಗ್ಗೆ ಪೊಲೀಸರಿಗೆ ದೂರಿದರು. - [ಇಲ್ಲಿ ಸುಸಜ್ಜಿತ ಆಸ್ಪತ್ರೆಯಿಲ್ಲ.. ಅಲ್ಲಿ ಆಸ್ಪತ್ರೆಯಿದ್ದರೂ ಚಿಕಿತ್ಸೆ ಕೊಡಲಿಲ್ಲ!](https://mobiletime.in/2025/10/there-is-no-well-equipped-hospital-here-even-though-there-was-a-hospital-there-they-did-not-provide-treatment/): ಅಪಘಾತದಲ್ಲಿ ಪೆಟ್ಟು ಮಾಡಿಕೊಂಡಿದ್ದ ವ್ಯಕ್ತಿಯನ್ನು ಮಂಗಳೂರಿನ ಆಸ್ಪತ್ರೆಗೆ ಸಾಗಿಸಿದರೆ ಆ ಆಸ್ಪತ್ರೆಯವರು ಅಲ್ಲಿ ದಾಖಲು ಮಾಡಿಕೊಂಡಿಲ್ಲ. ಅದರ ಪರಿಣಾಮ ಗಾಯಾಳು ಸರಿಯಾದ ಚಿಕಿತ್ಸೆ ಸಿಗದೇ ಸಾವನಪ್ಪಿದ್ದಾರೆ! ವೈದ್ಯಕೀಯ ಸೇವೆಯಲ್ಲಿರುವ ಕಾವ್ಯ ಆಗೇರ್ ಅವರಿಗೆ ಮೂರು ಆಸ್ಪತ್ರೆಗೆ ಕರೆದೊಯ್ದರೂ ಸಮಯಕ್ಕೆ ಸರಿಯಾಗಿ ಸರಿಯಾದ ಚಿಕಿತ್ಸೆ ದೊರೆಯದ ಕಾರಣ ತಮ್ಮ ತಂದೆಯನ್ನು ಉಳಿಸಿಕೊಳ್ಳಲು ಸಾಧ್ಯವಾಗಿಲ್ಲ. ಹೀಗಿರುವಾಗ ಅಪಘಾತದಲ್ಲಿ ಗಾಯಗೊಂಡ ಜನಸಾಮಾನ್ಯರ ಸ್ಥಿತಿ ಏನು? ಎಂಬ ಪ್ರಶ್ನೆ ಉದ್ಬವಿಸಿದ್ದು ಅದಕ್ಕೂ ಉತ್ತರವಿಲ್ಲ. ಉತ್ತರ ಕನ್ನಡ ಜಿಲ್ಲೆಯಲ್ಲಿ ಸುಸಜ್ಜಿತ ಆಸ್ಪತ್ರೆ ಇಲ್ಲ. ಸುಸಜ್ಜಿತ ಆಸ್ಪತ್ರೆಗಳಿರುವ ಮಂಗಳೂರಿಗೆ ಕರೆದೊಯ್ದರೂ ಅಲ್ಲಿನ ಆಸ್ಪತ್ರೆಯವರು ಹಾಸಿಗೆ ಇಲ್ಲದ ಕಾರಣ ಗಾಯಾಳುವನ್ನು ದಾಖಲಿಸಿಕೊಳ್ಳಲಿಲ್ಲ! ಅಂಕೋಲಾ ಬೋಳೆಯ ಚಂದ್ರಹಾಸ ಆಗೇರ್ (50) ಅವರು ಅಕ್ಟೊಬರ್ 27ರ ಮಧ್ಯಾಹ್ನ ಶೆಟಗೇರಿ ಕ್ರಾಸಿನ ಶೆಟ್ಟಿ ಲಂಚ್ ಹೋಮ್ ಬಳಿ ನಡೆದು ಹೋಗುತ್ತಿದ್ದರು. ಕುಮಟಾದಿಂದ ಅಂಕೋಲಾ ಕಡೆಯಿಂದ ವೇಗವಾಗಿ ಬಂದ ಕೆಂಪು ಕಾರು ಹೊಟೇಲ್ ಎದುರು ಹಿಮ್ಮುಖವಾಗಿ ಚಲಿಸಿತು. ನಡೆದು ಬರುತ್ತಿದ್ದ ಚಂದ್ರಹಾಸ ಆಗೇರ್ ಅವರಿಗೆ ಆ ಕಾರು ಡಿಕ್ಕಿ ಹೊಡೆಯಿತು. ಪರಿಣಾಮ ಚಂದ್ರಹಾಸ ಆಗೇರ್ ಅವರು ನೆಲಕ್ಕೆ ಬಿದ್ದು ಪೆಟ್ಟು ಮಾಡಿಕೊಂಡರು. ಕೆಂಪು ಕಾರಿನವರು ತಕ್ಷಣ ಅಲ್ಲಿಂದ ಕಾರುಸಹಿತ ಪರಾರಿಯಾದರು. ಅಪಘಾತದಿಂದಾಗಿ ತಲೆ ಹಾಗೂ ಕಾಲಿಗೆ ಪೆಟ್ಟಾಗಿದ್ದ ಅವರನ್ನು ಮೊದಲು ಅಂಕೋಲಾ ಆಸ್ಪತ್ರೆಗೆ ಕರೆದೊಯ್ಯಲಾಯಿತು. ನಂತರ ಹೆಚ್ಚಿನ ಚಿಕಿತ್ಸೆಗೆ ಕಾರವಾರ ಜಿಲ್ಲಾಸ್ಪತ್ರೆಗೆ ತರಲಾಯಿತು. ಅದಾದ ನಂತರ ಇನ್ನೂ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿಗೆ ಕರೆದೊಯ್ಯಲಾಯಿತು. ಕಾರವಾರದಿಂದ ಮಂಗಳೂರಿಗೆ ರೋಗಿ ಕರೆದೊಯ್ದರೂ ಮಂಗಳೂರಿನ ವೆನ್‌ಲಾಕ್ ಆಸ್ಪತ್ರೆಯವರು ಚಂದ್ರಹಾಸ ಆಗೇರ್ ಅವರನ್ನು ದಾಖಲಿಸಿಕೊಳ್ಳಲಿಲ್ಲ. `ಆಸ್ಪತ್ರೆಯಲ್ಲಿ ಎಲ್ಲಾ ಹಾಸಿಗೆ ಭರ್ತಿಯಾಗಿದ್ದು, ಚಿಕಿತ್ಸೆ ನೀಡಲು ಸ್ಥಳಾವಕಾಶವಿಲ್ಲ’ ಎಂಬ ಕಾರಣ ನೀಡಿ ಚಂದ್ರಹಾಸ ಆಗೇರ್ ಅವರನ್ನು ಕಾರವಾರಕ್ಕೆ ಮರಳಿ ಕಳುಹಿಸಿದರು. ಆದರೆ, ಈಗಾಗಲೇ ಮೂರು ಆಸ್ಪತ್ರೆ ಸುತ್ತಿದ್ದ ಚಂದ್ರಹಾಸ ಆಗೇರ್ ಅವರನ್ನು ನರ್ಸ ಆಗಿರುವ ಅವರ ಪುತ್ರಿ ಕಾವ್ಯ ಆಗೇರ್ ಅವರು ಮರಳಿ ಕಾರವಾರಕ್ಕೆ ಕರೆತರುವ ಪ್ರಯತ್ನ ಮಾಡಿದರು. ಆದರೆ, ಚಂದ್ರಹಾಸ ಆಗೇರ್ ಅವರನ್ನು ಬದುಕಿಸಿಕೊಳ್ಳಲು ಆಗಲಿಲ್ಲ. ಕಾರವಾರ ಜಿಲ್ಲಾಸ್ಪತ್ರೆಯ ಶವಾಗಾರದಲ್ಲಿ ಚಂದ್ರಹಾಸ ಆಗೇರ್ ಅವರ ಶವವಿರಿಸಲಾಗಿದ್ದು, ಅಪರಿಚಿತ ಕಾರು ಹಾಗೂ ಚಾಲಕನ ವಿರುದ್ಧ ಅಂಕೋಲಾ ಪೊಲೀಸ್ ಠಾಣೆಯಲ್ಲಿ ಕಾವ್ಯ ಆಗೇರ್ ಅವರು ಪ್ರಕರಣ ದಾಖಲಿಸಿದರು. ಅದಾದ ನಂತರ ಶವಪಡೆದು ಅಂತ್ಯ ಸಂಸ್ಕಾರದ ಕಾರ್ಯ ನಡೆಸಿದರು. - [ಧರ್ಮಸ್ಥಳ: ಧರ್ಮದ್ರೋಹಿಗಳ ವಿರುದ್ಧ ರಾಷ್ಟ್ರಪತಿಗೆ ಪತ್ರ](https://mobiletime.in/2025/10/dharmasthala-letter-to-the-president-against-heretics/): ಧರ್ಮಸ್ಥಳದ ವಿರುದ್ಧ ಸಂಚು ರೂಪಿಸಿದವರನ್ನು ಯಲ್ಲಾಪುರದ ಸಮಾನ ಮನಸ್ಕರ ತಂಡ ಧರ್ಮ ವಿರೋಧಿ ಎಂದು ಕರೆದಿದೆ. ಆ ಧರ್ಮ ವಿರೋಧಿಗಳ ವಿರುದ್ಧ ಕಠಿಣ ಕ್ರಮಕ್ಕಾಗಿ 501 ಜನ ಸಹಿ ಹಾಕಿ ರಾಷ್ಟçಪತಿಗಳಿಗೆ ಪತ್ರ ಬರೆದಿದ್ದಾರೆ. `ಕರ್ನಾಟಕ ರಾಜ್ಯ ಸರ್ಕಾರ ಧರ್ಮದ್ರೋಹಿಗಳ ಮಾತು ಕೇಳಿ ಧರ್ಮಸ್ಥಳದ ವಿರುದ್ಧ ತನಿಖೆ ನಡೆಸಿತು. ಆದರೆ, ಆ ತನಿಖೆಯಲ್ಲಿ ಏನೂ ಸಿಗಲಿಲ್ಲ. ಹೀಗಾಗಿ ಇದು ಧರ್ಮಸ್ಥಳದ ವಿರುದ್ಧ ನಡೆದ ಷಂಡ್ಯAತ್ರ ಎಂಬುದು ಬಯಲಾಯಿತು. ಆದರೆ, ಈ ತನಿಖೆ ಇಲ್ಲಿಗೆ ಮುಗಿಸದೇ ದೂರು ಕೊಟ್ಟವರ ವಿರುದ್ಧವೂ ತನಿಖೆ ನಡೆಯಬೇಕು’ ಎಂದು ಸಮಾನ ಮನಸ್ಕರು ಆಗ್ರಹಿಸಿದ್ದಾರೆ. `ನೂರಾರು ಶವ ಹೂತಿರುವುದಾಗಿ ಸುಳ್ಳು ಹೇಳಿದ್ದ ಚನ್ನಯ್ಯ, ತಮ್ಮ ಮಗಳ ಸಾವಿನ ಕಥೆ ಕಟ್ಟಿದ್ದ ಸುಜಾತಾ ಭಟ್ಟ, ಅವರ ಬೆನ್ನೆಲುಬಾಗಿರುವ ಮಹೇಶ ತಿಮ್ಮರೋಡಿ, ಜಂತ ಟಿ, ಗಿರೀಶ ಮಟ್ಟಣ್ಣ ಮಹಮದ್ ಸಮೀರ್ ಹಾಗೂ ದೆಹಲಿಯಿಂದ ಆಟವಾಡಿಸುವ ಹಿಂದು ವಿರೋಧಿ ತಂಡದ ವಿರುದ್ಧ ಕ್ರಮ ಜರುಗಿಸಬೇಕು’ ಎಂದು ಅವರು ಆಗ್ರಹಿಸಿದ್ದಾರೆ. ಎನ್ ಐ ಎ ವತಿಯಿಂದಲೇ ಈ ಎಲ್ಲಾ ತನಿಖೆ ನಡೆಯಬೇಕು ಎಂದು ತಹಶೀಲ್ದಾರರ ಮೂಲಕ ಜನ ಮನವಿ ಸಲ್ಲಿಸಿದ್ದಾರೆ. - [MBBS ವಿದ್ಯಾರ್ಥಿ ಸಾವಿಗೆ ಎಮ್ಮೆ ಕಾರಣ!](https://mobiletime.in/2025/10/buffalo-responsible-for-mbbs-students-death/): ಕಾರವಾರ ವೈದ್ಯಕೀಯ ವಿಜ್ಞಾನ ಕಾಲೇಜಿನ ವಿದ್ಯಾರ್ಥಿ ಆದರ್ಶ ಪೂಜಾರಿ ಅವರು ಅಪಘಾತದಲ್ಲಿ ಸಾವನಪ್ಪಿದ್ದಾರೆ. ಕಾರವಾರದಿಂದ ಗೋವಾ ಹೋಗಿದ್ದ ಅವರು ಅಲ್ಲಿಂದ ಮರಳುವಾಗ ಬೈಕಿನಿಂದ ಬಿದ್ದು ಪ್ರಾಣ ಬಿಟ್ಟಿದ್ದಾರೆ. ಕಿಮ್ಸ್ ವಿದ್ಯಾರ್ಥಿಯಾಗಿದ್ದ ಆದರ್ಶ ಪೂಜಾರಿ ಅವರು ಎಂಬಿಬಿಎಸ್ ಮೂರನೇ ವರ್ಷದಲ್ಲಿ ಓದುತ್ತಿದ್ದರು. ಮಂಗಳವಾರ ರಾತ್ರಿ ಆದರ್ಶ ಪೂಜಾರಿ ಅವರು ತಮ್ಮ ಸ್ನೇಹಿತ ರೌನಕ್ ಚಾವ್ಲಾ ಅವರ ಜೊತೆ ಗೋವಾಗೆ ಹೋಗಿದ್ದರು. ಅಲ್ಲಿ ಊಟ ಮುಗಿಸಿದ ಅವರು ಕಾರವಾರಕ್ಕೆ ಮರಳುತ್ತಿದ್ದರು. ಆಗ, ಗೋವಾದ ಮಾಷೆಂ ಬಳಿ ಅವರ ಬೈಕಿಗೆ ಅಡ್ಡಲಾಗಿ ಎಮ್ಮೆ ಬಂದಿದ್ದು, ಬೈಕು ಆ ಎಮ್ಮೆಗೆ ಗುದ್ದಿತು. ಪರಿಣಾಮ ಆ ಎಮ್ಮೆ ಅಲ್ಲಿಯೇ ಸಾವನಪ್ಪಿತು. ಅದರೊಂದಿಗೆ ಬೈಕು ನಿಯಂತ್ರಣ ತಪ್ಪಿತು. ಬೈಕಿನಲ್ಲಿದ್ದ ಇಬ್ಬರು ನೆಲಕ್ಕೆ ಅಪ್ಪಳಿಸಿದರು. ಗಾಯಗೊಂಡ ಅವರಿಬ್ಬರನ್ನು ಅಲ್ಲಿನ ಜನ ಆಸ್ಪತ್ರೆಗೆ ಸಾಗಿಸಿದರು. ಕಾಣಕೋಣ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಅವರಿಗೆ ಚಿಕಿತ್ಸೆ ಕೊಡುವ ಪ್ರಯತ್ನ ನಡೆಯಿತು. ಆದರೆ, ಅಷ್ಟರೊಳಗೆ ಆದರ್ಶ ಪೂಜಾರಿ ಸಾವನಪ್ಪಿದ್ದರು. ಗಂಭೀರ ಗಾಯಗೊಂಡ ರೌನಕ್ ಚಾವ್ಲಾ ಅವರನ್ನು ಕಾರವಾರ ಕ್ರಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. `ನಿಧಾನವಾಗಿ ವಾಹನ ಓಡಿಸಿ’ - [ತೀರ್ಥ ಸೇವಕರ ಅಡ್ಡೆಯಾದ ರಾಮತೀರ್ಥ!](https://mobiletime.in/2025/10/rama-tirtha-the-place-of-pilgrimage-for-devotees/): ಹೊನ್ನಾವರದ ಪುಣ್ಯ ಹಾಗೂ ಪ್ರವಾಸಿ ತಾಣವಾಗಿರುವ ರಾಮತೀರ್ಥ ಗೆಬ್ಬೆದ್ದಿದೆ. ಕನಿಷ್ಟ ಮೂಲಭೂತ ಸೌಕರ್ಯವೂ ಇಲ್ಲದೇ ಈ ತಾಣ ಹಾಳು ಬಿದ್ದಿದೆ. ಪುರಾಣ ಪ್ರಸಿದ್ಧ ರಾಮತೀರ್ಥ ಸದ್ಯ `ತೀರ್ಥ ಸೇವಕ’ರ ಪ್ರದೇಶವಾಗಿ ಬದಲಾಗಿದೆ. ರಾಮತೀರ್ಥ ಕ್ಷೇತ್ರದಲ್ಲಿ ಪ್ರವಾಸಿಗರಿಗಾಗಿ ಶೌಚಾಲಯ ನಿರ್ಮಿಸಲಾಗಿದೆ. ಆದರೆ, ಆ ಶೌಚಾಲಯಕ್ಕೆ ನೀರು ಸರಬರಾಜು ವ್ಯವಸ್ಥೆ ಇಲ್ಲ. ಅಲ್ಲಿರುವ ಬೇಸಿನ್ ಒಡೆದಿದೆ. ಸ್ನಾನಗೃಹಕ್ಕೆ ಕಿಟಕಿ-ಬಾಗಿಲುಗಳಿಲ್ಲ. ಕಟ್ಟಡವೂ ಸಂಪೂರ್ಣ ಶಿಥಿಲಾವ್ಯವಸ್ಥೆ ತಲುಪಿದೆ. ಕಟ್ಟಡದ ಸುತ್ತ ಕಾಡು ಬೆಳೆದಿದ್ದು, ಅಲ್ಲಿಂದ ಹಾವು-ಚೇಳುಗಳು ಒಳಗೆ ನುಗ್ಗುತ್ತಿದೆ. ಅಲ್ಲೆಲ್ಲವೂ ಪ್ಲಾಸ್ಟಿಕ್ ಬಾಟಲಿಗಳು ಬಿದ್ದಿದೆ. ಎಲ್ಲಾ ಕಡೆ ತ್ಯಾಜ್ಯ ಕಾಣುತ್ತಿದೆ. ಮಾದಕ ವ್ಯಸನಿಗಳು ಈ ಭಾಗ ಪ್ರವೇಶಿಸಿ ಗಲೀಜು ಮಾಡುತ್ತಿದ್ದಾರೆ. ಇಲ್ಲಿನ ಕಟ್ಟಡದ ಮೇಲೆ ಕಿಡಿಗೇಡಿಗಳು ಅಸಹ್ಯ ಬರಹಗಳನ್ನು ಬರೆದಿದ್ದಾರೆ. ಅಲ್ಲಿನ ಪರಿಸರವೂ ಹಾಳಾಗಿದ್ದು, ಜನ ಮೂಗು ಮುಚ್ಚಿಕೊಂಡು ಓಡಾಡುವ ಪರಿಸ್ಥಿತಿಯಿದೆ. ರಾಮನ ಕುರುಹುಗಳಿಂದ ಪ್ರಸಿದ್ಧವಾಗಿರುವ ರಾಮತೀರ್ಥದ ಅಭಿವೃದ್ಧಿಗೆ ಯಾರೂ ಮನಸ್ಸು ಮಾಡಿಲ್ಲ. ತಮಗೆ ಇದು ಸಂಬoಧವೇ ಇಲ್ಲ ಎಂಬAತೆ ಸ್ಥಳೀಯ ಆಡಳಿತ ವರ್ತಿಸುತ್ತಿದೆ. ಜನಸಾಮಾನ್ಯರ ಸಮಾಜ ಕಲ್ಯಾಣ ಕೇಂದ್ರದ ಆಗ್ನೇಲ್ ರೋಡ್ರಿಗಸ್ ಅವರು ಈ ದಿನ ರಾಮತೀರ್ಥಕ್ಕೆ ಭೇಟಿ ನೀಡಿದ್ದು, ಅಲ್ಲಿನ ಅವ್ಯವಸ್ಥೆಗಳನ್ನು ಮಾಧ್ಯಮದ ಮೂಲಕ ಗಮನಕ್ಕೆ ತಂದಿದ್ದಾರೆ. ಅವ್ಯವಸ್ಥೆ ನೋಡಿದ ಪ್ರವಾಸಿಗರು ದೂರದಿಂದಲೇ ಹಿಂತಿರುಗುತ್ತಿದ್ದು, ಪ್ರವಾಸೋದ್ಯಮ ಬೆಳವಣಿಗೆ ಇದು ಮಾರಕವಾಗಿರುವ ಬಗ್ಗೆ ಅವರು ಪ್ರತಿಕ್ರಿಯಿಸಿದ್ದಾರೆ. ಈ ಬಗ್ಗೆ ಪ್ರವಾಸೋದ್ಯಮ ಸಚಿವರಿಗೆ ಸಹ ಪತ್ರ ಬರೆಯುವುದಾಗಿ ಅವರು ಹೇಳಿದ್ದಾರೆ. ಅಲ್ಲಿನ ಅವ್ಯವಸ್ಥೆಯ ಬಗ್ಗೆ ಸ್ಥಳೀಯರಾದ ಪ್ರಭಾಕರ ಅವರು ಅಸಮಧಾನವ್ಯಕ್ತಪಡಿಸಿದರು. - [ಅರಣ್ಯ ರೋಧನ: ನಿತ್ಯವೂ ಕಾಡಿಸುವ ಬದಲು ಒಮ್ಮೆಗೆ ಸಾಯಿಸಿಬಿಡಿ!](https://mobiletime.in/2025/10/forest-cry-instead-of-harassing-them-all-the-time-kill-them-once/): ಎರಡುವರೆ ದಶಕದ ಹಿಂದಿನ ಅರಣ್ಯ ಅಪರಾಧ ಪ್ರಕರಣಗಳನ್ನು ಅರಣ್ಯ ಅಧಿಕಾರಿಗಳು ಇದೀಗ ವಿಚಾರಣೆ ನಡೆಸುತ್ತಿದ್ದು, ವಿಚಾರಣೆ ನೆಪದಲ್ಲಿ ಅರಣ್ಯ ಅತಿಕ್ರಮಣದಾರರ ಮೇಲೆ ದಬ್ಬಾಳಿಕೆ ನಡೆಸುತ್ತಿದ್ದಾರೆ. ಈ ನಡೆಯನ್ನು ವಿರೋಧಿಸಿ ಮುಂಡಗೋಡಿನ ಮಂದಿ ಸಿಡಿದೆದ್ದಿದ್ದಾರೆ. 1998ರಲ್ಲಿ ಜೀವನಾಧಾರಕ್ಕಾಗಿ ಅನೇಕರು ಅರಣ್ಯ ಅತಿಕ್ರಮಣ ನಡೆಸಿದ್ದು, ಅವರು ಆ ದಿನದಿಂದ ಅಲ್ಲಿಯೇ ವಾಸವಾಗಿದ್ದಾರೆ. ಆ ಅವಧಿಯಲ್ಲಿ ಅತಿಕ್ರಮಣದಾರರ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಿದರೂ ಅದನ್ನು ಅವರು ಎದುರಿಸುತ್ತಿದ್ದಾರೆ. ಈ ನಡುವೆ ಅರಣ್ಯ ಹಕ್ಕು ಕಾಯಿದೆ ಅಡಿ ಅವರೆಲ್ಲರೂ ಅರ್ಜಿ ಸಲ್ಲಿಸಿದ್ದರೂ ಅರಣ್ಯ ಅಧಿಕಾರಿ-ಸಿಬ್ಬಂದಿ ಅವರ ಮೇಲೆ ದಬ್ಬಾಳಿಕೆ ನಡೆಸುತ್ತಿದ್ದಾರೆ. ಅರಣ್ಯ ಅತಿಕ್ರಮಣದಾರರನ್ನು ನಿಯಮಬಾಹಿರವಾಗಿ ಒಕ್ಕಲೆಬ್ಬಿಸುವ ಪ್ರಕ್ರಿಯೆ ನಡೆದಿದನ್ನು ಮುಂಡಗೋಡಿನ ಜನ ವಿರೋಧಿಸಿದ್ದಾರೆ. ಅರಣ್ಯ ಅಧಿಕಾರಿಗಳ ಕಾನೂನು ವಿರೋಧಿ ಕೃತ್ಯ ವಿರೋಧಿಸಿ ಬುಧವಾರ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯವರು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಿದರು. ನ್ಯಾಯವಾದಿ ರವೀಂದ್ರ ನಾಯ್ಕ ಅವರು ಅರಣ್ಯ ಅಧಿಕಾರಿಗಳ ನಡೆಯನ್ನು ತೀವ್ರ ಖಂಡಿಸಿದರು. ಅರಣ್ಯ ಅಧಿಕಾರಿ ಹಾಗೂ ಪ್ರತಿಭಟನಾಕಾರರ ನಡುವೆ ಮಾತಿಗೆ ಮಾತು ಬೆಳೆದಿದ್ದು, ಅನೇಕ ಬಗೆಯ ಗೊಂದಲಗಳು ಹುಟ್ಟಿದವು. ಸಾವಿರಾರು ಸಂಖ್ಯೆಯ ಜನ ಒಮ್ಮೆಗೆ ಬಂದಿದ್ದನ್ನು ನೋಡಿ ಇಲಾಖೆಯವರು ತಬ್ಬಿಬ್ಬಾದರು. ಅದಾದ ನಂತರ ಅರಣ್ಯಾಧಿಕಾರಿ ರವಿ ಹುಳಕೊಟಿ ಅವರು ಅತಿಕ್ರಮಣದಾರರೊಂದಿಗೆ ಸಮಾಲೋಚನಾ ಸಭೆ ನಡೆಸಿದರು. `27 ವರ್ಷಗಳ ಹಿಂದೆ ನಡೆದ ಅಪರಾಧ ಪ್ರಕರಣಕ್ಕೆ ಇದೀಗ ಹಿಂಸೆ ನೀಡುವುದು ಸರಿಯಲ್ಲ. ಒಂದು ದಿನ ಬೇಲಿ ಕೀಳುವುದು, ಮತ್ತೊಮ್ಮೆ ಸಾಗುವಳಿಗೆ ಆತಂಕ ಮಾಡುವುದು, ಇನ್ನೊಮ್ಮೆ ನೋಟಿಸ್ ನೀಡುವುದು ಸೇರಿ ಪದೇ ಪದೇ ಕಿರುಕುಳ ನೀಡುವ ಬದಲು ಒಂದೇ ಸಲ ಎಲ್ಲರನ್ನು ಸಾಯಿಸಿಬಿಡಿ’ ಎಂದು ಪ್ರತಿಭಟನಾಕಾರರು ಆಕ್ರೋಶದಿಂದ ಹೇಳಿದರು. ಈ ವೇಳೆ ವಲಯ ಅರಣ್ಯಾಧಿಕಾರಿ ಅಪ್ಪಾರಾವ್ ಕಲಶೆಟ್ಟಿ ಹಾಗೂ ವೀರೇಶ ಪ್ರತಿಭಟನಾಕಾರರನ್ನು ಸಮಾಧಾನ ಮಾಡುವ ಪ್ರಯತ್ನ ನಡೆಸಿದರು. ಪಿಎಸ್‌ಐ ಯಲ್ಲಲಿಂಗ ಕನ್ನೂರ್ ಅವರು ಅವಘಡ ನಡೆಯದಂತೆ ಮುನ್ನಚ್ಚರಿಕೆವಹಿಸಿದರು. ಸಂಘಟನೆ ಪ್ರಮುಖರಾದ ಶಿವಾನಂದ ಜೋಗಿ, ಗಣಪತಿ ನಾಯ್ಕ ಬೆಡಸಗಾಂವ್, ಮಂಜುನಾಥ ನಾಯ್ಕ, ಸ್ವಾಮಿ ಹಿರೇಮಠ, ನೀಲಕಂಠ ಜಿಲ್ನೂರು, ಮಲ್ಲಿಕಾರ್ಜುನ್ ಓಣಿಕೇರಿ, ಮುನೇಶ್ವರ ಹನುಮಾಪುರ, ಶಂಬು ಕಾತೂರು, ವೀರಭದ್ರ, ನಾಗಪ್ಪ ಬಾಚಣಿಕೆ, ಜಗದೀಶ್ ಕೊಡಂಬಿ, ಶೇಖಯ್ಯ ಹಿರೇಮಠ ಗುಂಜಾವತಿ, ನಾನಾಸಾಬ, ಪ್ರಶಾಂತ್ ಜೈನ್ ಬೆಡಸಗಾಂವ್, ಶಿವಾಜಿ, ದೇವೇಂದ್ರ, ಪರಮೇಶ್ವರ ಗೌಡ ಸಾನವಳ್ಳಿ, ಚಿದಬಂರ ನಾಯ್ಕ ಮೊದಲಾದವರು ಅರಣ್ಯ ಅಧಿಕಾರಿಗಳ ದಬ್ಬಾಳಿಕೆ ವಿರುದ್ಧ ಕಿಡಿಕಾರಿದರು. - [ಹೋರಾಟದಿಂದ ಹೊರಗುಳಿದ ಸಾಮಾಜಿಕ ಹೋರಾಟಗಾರ!](https://mobiletime.in/2025/10/a-social-activist-who-has-dropped-out-of-the-fight/): ಜನರ ಬೇಡಿಕೆಯಂತೆ ಜಿಲ್ಲೆಯಲ್ಲಿ ಸುಸಜ್ಜಿತ ಆಸ್ಪತ್ರೆ ನಿರ್ಮಾಣವಾಗಿಲ್ಲ. ಶಿರಸಿ ಹೈಟೆಕ್ ಆಸ್ಪತ್ರೆ ಉದ್ಘಾಟನೆ ನಡೆದಿಲ್ಲ. ಡಕೋಟಾ ಬಸ್ಸುಗಳ ಓಡಾಟ ನಿಂತಿಲ್ಲ. ರಸ್ತೆ ಗುಂಡಿ ಮುಚ್ಚುವ ಕೆಲಸ ನಡೆದಿಲ್ಲ. ಜಿಲ್ಲೆ ವಿಭಜನೆ ವಿಷಯ ಮುನ್ನಲೆಗೆ ಬಂದಿಲ್ಲ. ಭ್ರಷ್ಟಾಚಾರ ಕಡಿಮೆ ಆಗಿಲ್ಲ. ಪ್ರವಾಹಪೀಡಿತ ಪ್ರದೇಶದವರ ಸಮಸ್ಯೆ ಬಗೆಹರಿದಿಲ್ಲ. ಕಳಪೆ ಕಾಮಗಾರಿಗಳು ನಿಂತಿಲ್ಲ. ಊರು ಅಭಿವೃದ್ಧಿ ಆಗಿಲ್ಲ. ಅದಾಗಿಯೂ, ಈ ಎಲ್ಲಾ ವಿಷಯಗಳ ಬಗ್ಗೆ ಧ್ವನಿಯಾಗುತ್ತಿದ್ದ ಸಾಮಾಜಿಕ ಹೋರಾಟಗಾರ ಅನಂತಮೂರ್ತಿ ಹೆಗಡೆ ಎರಡು ತಿಂಗಳಿನಿoದ ಹೋರಾಟವನ್ನೇ ನಡೆಸಿಲ್ಲ! ಸುಸಜ್ಜಿತ ಆಸ್ಪತ್ರೆ ಬೇಡಿಕೆ ಮುಂದಿಟ್ಟು ಅನಂತಮೂರ್ತಿ ಹೆಗಡೆ ಅವರು ಪಾದಯಾತ್ರೆ ನಡೆಸಿದ್ದರು. ಪ್ರತ್ಯೇಕ ಜಿಲ್ಲೆ ಬೇಡಿಕೆಗಾಗಿ ಪ್ರತಿ ತಾಲೂಕಿನಲ್ಲಿ ಸಭೆ ಮಾಡಿದ್ದರು. ಡಕೋಟಾ ಬಸ್ಸುಗಳ ಓಡಾಟದ ಬಗ್ಗೆ ದಾಖಲೆಗಳ ಜೊತೆ ಪ್ರಶ್ನಿಸಿದ್ದರು. ಶಿರಸಿ ಹೈಟೆಕ್ ಆಸ್ಪತ್ರೆಯ ಲೋಪಗಳನ್ನು ಜನರ ಮುಂದೆ ತೆರೆದಿಟ್ಟಿದ್ದರು. ರಸ್ತೆಯಲ್ಲಿ ಗುಂಡಿ ಬಿದ್ದ ವಿಷಯವಾಗಿ ನಿರ್ವಹಣೆ ನಡೆಸುವ ಕಂಪನಿಯನ್ನು ತರಾಠೆಗೆ ತೆಗೆದುಕೊಂಡಿದ್ದರು. ಪ್ರವಾಹ ಪೀಡಿತ ಊರಿನ ಜನರಿಗಾಗಿ ಜಿಲ್ಲಾಡಳಿತಕ್ಕೆ ಮೊರೆ ಹೋಗಿದ್ದರು. ಕಳಪೆ ಕಾಮಗಾರಿ, ಭ್ರಷ್ಟಾಚಾರ ವಿಷಯವಾಗಿಯೂ ಅನಂತಮೂರ್ತಿ ಹೆಗಡೆ ಅವರು ಕಿಡಿಕಾರಿದ್ದರು. ಸದಾ ಒಂದಿಲ್ಲೊಂದು ಹೋರಾಟಗಳ ಮೂಲಕ ಅನಂತಮೂರ್ತಿ ಹೆಗಡೆ ಅವರು ಜನರ ಸಮಸ್ಯೆಯನ್ನು ಸರ್ಕಾರಕ್ಕೆ ಮುಟ್ಟಿಸುತ್ತಿದ್ದರು. ಆದರೆ, ಕಳೆದ ಎರಡು ತಿಂಗಳಿನಿಂದ ಅನಂತಮೂರ್ತಿ ಹೆಗಡೆ ಹೋರಾಟಗಳಿಂದ ದೂರ ಉಳಿದ್ದಿದ್ದಾರೆ! ಬಿಜೆಪಿ ಪಕ್ಷದ ಪ್ರಮುಖ ಹುದ್ದೆಯಲ್ಲಿರುವ ಅನಂತಮೂರ್ತಿ ಹೆಗಡೆ ಅವರು ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ವೈದ್ಯ ಅವರ ವಿರುದ್ಧ ಸಾಕಷ್ಟು ಬಾರಿ ಮಾತನಾಡಿದ್ದರು. ಹಳಿಯಾಳದ ಹಿರಿಯ ಶಾಸಕ ಆರ್ ವಿ ದೇಶಪಾಂಡೆ ಅವರ ವಿರುದ್ಧವೂ ಕಿಡಿಕಾರಿದ್ದರು. ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಶಿವರಾಮ ಹೆಬ್ಬಾರ್ ಅವರ ವಿರುದ್ಧವೂ ಒಮ್ಮೆ ಪ್ರತಿಭಟಿಸಿದ್ದರು. ಜಿಲ್ಲಾ ವಿಭಜನೆ ವಿಷಯವಾಗಿ ಅವರು ಆಡಿದ ಮಾತು ಕನ್ನಡ ಸಂಘಟನೆಯ ಭಾಸ್ಕರ ಪಟಗಾರ ಅವರನ್ನು ಕೆರಳಿಸಿದ್ದು, `ರಕ್ತಕ್ರಾಂತಿ’ಯ ವಿಷಯ ಪೊಲೀಸ್ ಠಾಣೆಯ ಮೆಟ್ಟಿಲೇರಿತ್ತು. ಅದಾದ ನಂತರ ಶಿರಸಿ-ಸಿದ್ದಾಪುರ ಕ್ಷೇತ್ರಕ್ಕೆ ಮಾತ್ರ ಸೀಮಿತವಾಗಿ ಅವರು ಕೆಲ ಹೋರಾಟ ಶುರು ಮಾಡಿದ್ದರು. ಮುಖ್ಯವಾಗಿ ಶಿರಸಿ ಕ್ಷೇತ್ರ ಶಾಸಕ ಭೀಮಣ್ಣ ನಾಯ್ಕ ಅವರ ಲೋಪಗಳನ್ನು ಜನರ ಮುಂದೆ ತೆರೆದಿಡುವ ಕೆಲಸ ಮಾಡುತ್ತಿದ್ದರು. ಆರ್‌ಟಿಐ ಮೂಲಕ ವಿವಿಧ ದಾಖಲೆಗಳನ್ನುಪಡೆದು ಕಾನೂನುಮಾನ್ಯತೆಯಿರುವ ಅಂಶವನ್ನು ಜನರ ಮುಂದೆ ಬಿಚ್ಚಿಡುತ್ತಿದ್ದರು. ಆದರೆ, ಸಾಮಾಜಿಕ ಹೋರಾಟಗಾರರಾಗಿರುವ ಅನಂತಮೂರ್ತಿ ಹೆಗಡೆ ಅವರು ಸದ್ಯ ತಮ್ಮ ಸಾಮಾಜಿಕ ಜೀವನದಿಂದ ದೂರ ಉಳಿದಿದ್ದಾರೆ! ಯಾವುದೇ ಹೋರಾಟ ನಡೆಸುವ ಮುನ್ನ ಅನಂತಮೂರ್ತಿ ಹೆಗಡೆ ಅವರು ಸುದ್ದಿಗೋಷ್ಠಿಗಳ ಮೂಲಕ ಎಚ್ಚರಿಕೆ ನೀಡುತ್ತಿದ್ದರು. ಸಂಬoಧಿಸಿದ ಇಲಾಖೆ ಅಧಿಕಾರಿಗಳ ಜೊತೆ ಸೌಮ್ಯವಾಗಿಯೇ ಮಾತನಾಡುತ್ತಿದ್ದರು. ತಮ್ಮ ಬೇಡಿಕೆ ಈಡೇರಿಕೆಗೆ ನಿಗದಿತ ಗಡುವು ನೀಡುತ್ತಿದ್ದರು. ನೀಡಿದ ಸಮಯ ಮುಗಿದ ಮರುದಿನವೇ ಹೋರಾಟ ಶುರು ಮಾಡುತ್ತಿದ್ದರು. ತಮ್ಮ ಹೋರಾಟವನ್ನು ಸಹ ಅವರು ಅಚ್ಚುಕಟ್ಟಾಗಿ ಸಂಘಟಿಸುವುದರ ಜೊತೆ ಜನ ಬೆಂಬಲಪಡೆದು ಮುನ್ನುಗ್ಗುತ್ತಿದ್ದರು. ತಮ್ಮ ಪ್ರತಿ ಹೋರಾಟದಲ್ಲಿಯೂ ಅನಂತಮೂರ್ತಿ ಹೆಗಡೆ ಅವರು `ಬೇಡಿಕೆ ಈಡೇರುವವರೆಗೂ ಹೋರಾಟ ನಿಲ್ಲಿಸುವುದಿಲ್ಲ’ ಎಂಬ ಭರವಸೆ ನೀಡುತ್ತಿದ್ದರು. ಆದರೆ, ಶಿರಸಿ ಹೈಟೆಕ್ ಆಸ್ಪತ್ರೆ ವಿಚಾರವಾಗಿ ಸೆಪ್ಟೆಂಬರ್ 22ರಂದು ಅವರು ಹೋರಾಟದ ಎಚ್ಚರಿಕೆ ನೀಡಿದ್ದು ಬಿಟ್ಟರೆ ಅದಾಗಿ ಒಂದು ತಿಂಗಳ ನಂತರ ಹೋರಾಟ ಶುರು ಮಾಡಲಿಲ್ಲ. ಶಿರಸಿಯಲ್ಲಿ ಸಾಮಾಜಿಕ ಜೀವನಕ್ಕೆ ಕಾಲಿರಿಸಿದ ಮೂರು ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಅನಂತಮೂರ್ತಿ ಹೆಗಡೆ ಅವರು ಹೋರಾಟದಿಂದ ಹಿಂದುಳಿದು ಸುದೀರ್ಘ ವಿರಾಮಪಡೆದಿದ್ದಾರೆ! ಅನಂತಮೂರ್ತಿ ಹೆಗಡೆ ಅವರು ತಮ್ಮದೇ ವಿಶ್ವಂಭರ ಎಂಬ ವಾರ ಪತ್ರಿಕೆ ನಡೆಸುತ್ತಾರೆ. ರಿಯಲ್ ಎಸ್ಟೇಟ್ ಉದ್ದಿಮೆಯಲ್ಲಿದ್ದಾರೆ. ದೇವಸಸ್ಯ ಎಂಬ ಸಿನಿಮಾ ನಿರ್ಮಾಣಕ್ಕೂ ಅವರು ಕೈ ಹಾಕಿದ್ದಾರೆ. ಈ ಎಲ್ಲಾ ಕ್ಷೇತ್ರದಿಂದ ಬಂದ ಆದಾಯದಲ್ಲಿ ಅಲ್ಪಭಾಗವನ್ನು ಅವರು ಸಮಾಜ ಸೇವೆಗೆ ಮೀಸಲಿರಿಸಿದ್ದು, ನೊಂದವರಿಗೆ ನೆರವಾಗುತ್ತಿದ್ದಾರೆ. ನಿರಂತರ ಹೋರಾಟ, ಸಮಸ್ಯೆಗೆ ಸಿಲುಕಿದವರಿಗೆ ಸಹಾಯ, ಸಂಪರ್ಕಿಸಿದ ಪ್ರತಿಯೊಬ್ಬರಿಗೂ ಸ್ಪಂದನೆ ನೀಡುವ ಮೂಲಕ ಅನಂತಮೂರ್ತಿ ಹೆಗಡೆ ಅವರು ಹಂತ ಹಂತವಾಗಿ ಜನರಿಗೆ ಹತ್ತಿರವಾಗುತ್ತಿದ್ದರು. ಆದರೆ, ಸದ್ಯ ಅವರು ಪ್ರಚಲಿತ ವಿದ್ಯಮಾನಗಳಿಂದ ದೂರವಿರುವುವ ಬಗ್ಗೆ ಅನೇಕರು ಅನುಮಾನವ್ಯಕ್ತಪಡಿಸಿದ್ದಾರೆ. `ತಮ್ಮ ಉದ್ದಿಮೆ, ಸಿನಿಮಾ ಹಾಗೂ ಪತ್ರಿಕೆಯ ಕೆಲಸಗಳಿಂದ ಹೋರಾಟಕ್ಕೆ ಪುರಸೋತ್ತಾಗಿಲ್ಲ. ಶೀಘ್ರದಲ್ಲಿಯೇ ಎಲ್ಲಾ ಸಮಸ್ಯೆಗಳ ವಿರುದ್ಧ ಮತ್ತೆ ಹೋರಾಟ ಶುರು ಮಾಡುವೆ’ ಎಂದವರು ಮೊಬೈಲ್ ಮಿಡಿಯಾ ನೆಟ್‌ವರ್ಕ’ಗೆ ಪ್ರತಿಕ್ರಿಯಿಸಿದ್ದಾರೆ. - [2025 ಅಕ್ಟೊಬರ್ 29ರ ದಿನ ಭವಿಷ್ಯ](https://mobiletime.in/2025/10/prediction-for-october-29-2025/): ಮೇಷ ರಾಶಿ: ಜೀವನದಲ್ಲಿ ಹೊಸ ಅವಕಾಶಗಳು ಸಿಕ್ಕರೆ ಅದನ್ನು ಬಳಸಿಕೊಳ್ಳಿ. ಹಣಕಾಸಿನಲ್ಲಿ ಬೆಳವಣಿಗೆ ಸಾಧ್ಯವಿದೆ. ಪ್ರಯಾಣದ ಲಕ್ಷಣಗಳಿವೆ. ವೃಷಭ ರಾಶಿ: ಹಣಕಾಸು ವಿಷಯಗಳಲ್ಲಿ ಸಮಾಧಾನ ಅಗತ್ಯ. ಆರೋಗ್ಯದ ಕಡೆ ಕಾಳಜಿವಹಿಸಿ. ಕೆಲಸದ ಸ್ಥಳದಲ್ಲಿ ದುಡುಕಿನ ನಿರ್ಧಾರ ಬೇಡ. ಮಿಥುನ ರಾಶಿ: ರಾಜಕೀಯ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ ಮುನ್ನಡೆ ಸಾಧ್ಯವಿದೆ. ಕಾರ್ಮಿಕರಿಗೆ ಈ ದಿನ ಲಾಭ ಆಗಲಿದೆ. ವೈಯಕ್ತಿಕ ಜಗಳದಿಂದ ಊರವಿರುದುವು ಉತ್ತಮ. ಕರ್ಕ ರಾಶಿ: ನಿಮ್ಮ ಆಯಾಸ ದೂರವಾಗಲಿದೆ. ಹಣಕಾಸು ನಷ್ಟ ಸಾಧ್ಯತೆ ಹೆಚ್ಚಿದೆ. ಕೆಲಸದಲ್ಲಿ ಒತ್ತಡ ಬರಲಿದೆ. ಸಿಂಹ ರಾಶಿ: ಸ್ನೇಹಿತರ ಜೊತೆ ಸಮಯ ಕಳೆಯಲು ಸಾಧ್ಯ. ಹಣಕಾಸಿನ ಸುಧಾರಣೆ ಆಗಲಿದೆ. ಧೈರ್ಯದಿಂದ ಈ ದಿನ ಕಳೆಯಿರಿ. ಕನ್ಯಾ ರಾಶಿ: ನಿಮ್ಮೊಳಗಿನ ಆತ್ಮವಿಶ್ವಾಸ ಹೆಚ್ಚಾಗಲಿದೆ. ಕುಟುಂಬದಲ್ಲಿ ಶಾಂತಿ-ನೆಮ್ಮದಿ ಸಾಧ್ಯವಿದೆ. ಹಣಕಾಸು ಸಹಾಯ ಸಿಗಲಿದೆ. ತುಲಾ ರಾಶಿ: ಹೊಸ ಪರಿಚಯಗಳು ಸಹಾಯವಾಗಲಿದೆ. ಕೆಲಸದಲ್ಲಿ ಗುಣಾತ್ಮಕ ಅಭಿವೃದ್ಧಿ ಗಲಿದೆ. ತಾಳ್ಮೆಯಿಂದ ವ್ಯವಹರಿಸಿ. ವೃಶ್ಚಿಕ ರಾಶಿ: ಹೊಸ ಬಗೆಯ ವಿಚಾರಗಳು ಮೂಡಿಬರಲಿದೆ. ಹೊಸ ಬಗೆಯ ಕೆಲಸಕ್ಕೆ ಧೈರ್ಯ ಮಾಡಿದರೆ ಯಶಸ್ಸು ಸಿಗಲಿದೆ. ಗುಪ್ತ ಸಮಸ್ಯೆಗಳು ಬಗೆಹರಿಯಲಿದೆ. ಧನು ರಾಶಿ: ಹಣಕಾಸು ವಿಷಯದಲ್ಲಿ ಬೆಳವಣಿಗೆ ಸಾಧ್ಯವಿದೆ. ಆರೋಗ್ಯ ಪರಿಸ್ಥಿತಿ ಸುಧಾರಿಸಲಿದೆ. ಮನಸ್ಸಿಗೆ ತೃಪ್ತಿ ಸಿಗಲಿದೆ. ಮಕರ ರಾಶಿ: ಆತ್ಮ ವಿಶ್ವಾಸದಿಂದ ಕೆಲಸ ಮಾಡಿ. ಉದ್ಯೋಗದಲ್ಲಿ ಪ್ರಗತಿ ಕಾಣಲಿದೆ. ಆರೋಗ್ಯದ ಕಡೆ ಗಮನಹರಿಸುವುದು ಮುಖ್ಯ. ಕುಂಭ ರಾಶಿ: ಉದ್ಯೋಗದಲ್ಲಿ ಉತ್ತಮ ಬೆಳವಣಿಗೆ ಆಗಲಿದೆ. ಹಣಕಾಸಿನಲ್ಲಿ ಲಾಭ ಸಿಗಲಿದೆ. ಆರೋಗ್ಯ ಸುಧಾರಣೆಗೆ ಕ್ರಮ ತೆಗೆದುಕೊಳ್ಳಿ. ಕುಟುಂಬ ಬೆಂಬಲ ದೊರೆಯಲಿದೆ. ಮೀನ ರಾಶಿ: ನಿಮ್ಮ ಪರಿಶ್ರಮಕ್ಕೆ ಬೆಲೆ ಸಿಗಲಿದೆ. ಹೊಸ ಕಲಿಕೆಗೆ ಅವಕಾಶವಿದೆ. ಉದ್ಯೋಗದಲ್ಲಿ ಉತ್ತಮ ಅವಕಾಶಗಳಿವೆ. - [ಶಿರಸಿ: ಸಹಸ್ರ ಹೊಂಡ ಸರಿಪಡಿಸಲು ಸಾವಿರ ಸಮಸ್ಯೆ!](https://mobiletime.in/2025/10/sirsi-a-thousand-problems-to-fix-a-thousand-potholes/): ಅಭಿವೃದ್ಧಿ ವಿಷಯದಲ್ಲಿ ಶಿರಸಿ ಕ್ಷೇತ್ರ ದೊಡ್ಡ ಪ್ರಮಾಣದಲ್ಲಿ ಬೆಳೆಯುತ್ತಿದೆ. ಆದರೆ, ಇಲ್ಲಿನ ರಸ್ತೆಯಲ್ಲಿರುವ ಸಹಸ್ರ ಹೊಂಡಕ್ಕೆ ಮಾತ್ರ ಈವರೆಗೂ ಮುಕ್ತಿ ಸಿಕ್ಕಿಲ್ಲ! ಶಿರಸಿಯ ಯಾವ ದಿಕ್ಕಿಗೆ ಸಂಚರಿಸಿದರೂ ವಾಹನಗಳು ರಸ್ತೆ ಗುಂಡಿಗೆ ಬೀಳುತ್ತಿವೆ. ಇದರೊಂದಿಗೆ ಅಪಾರ ಪ್ರಮಾಣದ ಧೂಳು ಸಹ ಜನರ ಆರೋಗ್ಯವನ್ನು ಹಾಳು ಮಾಡುತ್ತಿದೆ. ಅಕ್ಟೊಬರ್ ಅಂತ್ಯದ ಅವಧಿಯಲ್ಲಿಯೂ ಶಿರಸಿಯಲ್ಲಿ ಮಳೆಯಗುತ್ತಿದ್ದು, ರಸ್ತೆ ಗುಂಡಿಗಳಲ್ಲಿ ನೀರು ತುಂಬಿದೆ. ಪರಿಣಾಮ ಗುಂಡಿAiÀ ಆಳ-ಅಗಲ ಗೊತ್ತಾಗದೇ ವಾಹನಗಳು ಹೊಂಡಕ್ಕೆ ಹಾರುತ್ತಿವೆ. ಯಾವ ಜನಪ್ರತಿನಿಧಿಗಳು ಶಿರಸಿ ರಸ್ತೆಯ ಹೊಂಡ ಮುಚ್ಚುವ ಸಾಹಸಕ್ಕೆ ಕೈ ಹಾಕಿಲ್ಲ. ಶಿರಸಿಯ ನಿಲೇಕಣಿ ಭಾಗದ ರಸ್ತೆ ಅಭಿವೃದ್ಧಿ ಗುತ್ತಿಗೆಪಡೆದ ಆರ್‌ಎನ್‌ಎಸ್ ಕಂಪನಿಯವರು ಸಹ ಗುಂಡಿ ಬಿದ್ದ ರಸ್ತೆ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ಹೀಗಾಗಿ ನಾಯಕರು ಜನರಿಂದ ಬೈಸಿಕೊಳ್ಳುವ ಕೆಲಸ ಕೊನೆಯಾಗಿಲ್ಲ. ಶಿರಸಿ ಕುಮಟಾ ರಸ್ತೆಯ ನೀಲೇಕಣಿ ಬಳಿ ಸಹಸ್ರ ಹೊಂಡಗಳಿದ್ದು, ಅವರು ಇದೀಗ ಸಾವಿರ ಕೆರೆಗಳಂತೆ ಭಾಸವಾಗುತ್ತಿದೆ. ಒಮ್ಮೆ ಹೊಂಡ ಮುಚ್ಚುವ ಕೆಲಸ ನಡೆದಿದ್ದರು, ಆಗ ತೇಪೆ ಹಚ್ಚಲು ಹಾಕಿದ ಸಿಮೆಂಟು ಮತ್ತೆ ಕೊಚ್ಚಿ ಹೋಗಿದೆ. ರಸ್ತೆ ಒಂದು ಭಾಗದಲ್ಲಿ ಸಿಮೆಂಟ್ ತುಂಬಿದ್ದರೂ ಆ ಭಾಗದಲ್ಲಿ ಜನರ ಓಡಾಟಕ್ಕೆ ಅವಕಾಶವಿಲ್ಲ. ಇನ್ನೊಂದು ಭಾಗ ಇಕ್ಕಟ್ಟಾಗಿದ್ದು, ಅಲ್ಲಿನ ಗುಂಡಿ ತಪ್ಪಿಸಿ ಸಾಗಲು ವಾಹನ ಸವಾರರಿಂದ ಸಾಧ್ಯವಾಗುತ್ತಿಲ್ಲ. ದೊಡ್ಡ ದೊಡ್ಡ ವಾಹನಗಳ ಜೊತೆ ಬೈಕ್ ಸವಾರರು ಸಹ ಈ ಮಾರ್ಗದಲ್ಲಿ ಓಡಾಡಲು ಹೆದರುತ್ತಿದ್ದಾರೆ.   - [ಹೆದ್ದಾರಿ ಹೊಂಡ ತುಂಬಿದ ಕಾಶ್ಮೀರಿ ಸೇಬು!](https://mobiletime.in/2025/10/kashmiri-apple-filled-with-highway-potholes/): ಕಾಶ್ಮೀರದಿಂದ ಮಂಗಳೂರಿಗೆ ಹೋಗುತ್ತಿದ್ದ ಕಾಶ್ಮೀರಿ ಸೇಬು ತುಂಬಿದ ಲಾರಿ ಅಂಕೋಲಾದ ಬಾಳೆಗುಳಿ ತಿರುವಿನಲ್ಲಿ ಪಲ್ಟಿಯಾಗಿದೆ. ಹೀಗಾಗಿ ಸೋಮವಾರ ಸಂಜೆ ರಸ್ತೆ‌ ತುಂಬ ಸೇಬು ಬಿದ್ದಿದ್ದು, ಮಂಗಳವಾರ ಬೆಳಗ್ಗೆ ಅದನ್ನು ತೆರವು ಮಾಡಲಾಗಿದೆ. ಈ ಭಾಗದ ರಾಷ್ಟ್ರೀಯ ಹೆದ್ದಾರಿ ತುಂಬ ಹೊಂಡಗಳು ತುಂಬಿವೆ. ಎಲ್ಲಾ ಕಡೆ ಹೊಂಡ ತಪ್ಪಿಸಿಕೊಂಡು ಬಂದ ಸೇಬು ಲಾರಿ ಚಾಲಕನಿಗೆ ಬಾಳೆಗುಳಿ ತಿರುವಿನಲ್ಲಿ ಅಪಘಾತ ತಪ್ಪಿಸಲು ಸಾಧ್ಯವಾಗಲಿಲ್ಲ. ಇಲ್ಲಿ ಲಾರಿ ಪಲ್ಟಿಯಾಗಿದ್ದರಿಂದ ಸೇಬು ಹಣ್ಣಿನ ಬಾಕ್ಸುಗಳು ರಸ್ತೆಯಲ್ಲಿ ಚೆಲ್ಲಾಪಿಲ್ಲಿಯಾದವು. ಹೆದ್ದಾರಿಯಲ್ಲಿದ್ದ ಹೊಂಡಗಳು ಸೇಬು ಹಣ್ಣಿನಿಂದ ತುಂಬಿದವು. ಕೆಲ ವಾಹನಗಳು ಸೇಬು ಹಣ್ಣಿನ ಮೇಲೆಯೇ ಹತ್ತಿ ಮುಂದೆ ಸಾಗಿದವು. ಇನ್ನೂ ಕೆಲ ವಾಹನದವರು ಸೇಬು ಹಣ್ಣಿನ ಗಾಡಿ ಪಲ್ಟಿಯಾಗಿದನ್ನು ನೋಡಿ ಮರುಕವ್ಯಕ್ತಪಡಿಸಿದರು. ಅನೇಕರು ಹೆದ್ದಾರಿ‌ ತುಂಬಿದ ಹಣ್ಣಿನ ಪೋಟೋ ಕ್ಲಿಕ್ಕಿಸಿದರು ಲಾರಿ ಪಲ್ಟಿಯಾದ ಪರಿಣಾಮ ರಸ್ತೆ ಸಂಚಾರ ಅಸ್ತವ್ಯಸ್ತವಾಗಿತ್ತು. ಪೊಲೀಸರು ಸ್ಥಳಕ್ಕೆ ಬಂದ್ದಿದ್ದು ಕ್ರೇನ್ ಸಹಾಯದಿಂದ ಲಾರಿ ಮೇಲೆತ್ತಿದರು. - [ಕಾಲೇಜು ಕನ್ಯೆಗೆ ಕಾಮ ಪಾಠ ಮಾಡಿದ ಉಪನ್ಯಾಸಕ!](https://mobiletime.in/2025/10/a-lecturer-who-taught-lust-to-a-college-girl/): ಅಂಕೋಲಾ ಪೂಜಗೇರಿ ಕಾಲೇಜು ಉಪನ್ಯಾಸಕ ರಾಮಚಂದ್ರ ಅಂಕೋಲೆಕರ್ ಅವರು ವಿದ್ಯಾರ್ಥಿನಿಯೊಬ್ಬರಿಗೆ ಕಾಮ ಪಾಠ ಮಾಡಿದ್ದಾರೆ. ಇದನ್ನು ವಿರೋಧಿಸಿ ನೂರಾರು ಜನ ಕಾಲೇಜಿನ ಮುಂದೆ ಪ್ರತಿಭಟಿಸಿದ್ದಾರೆ. ರಾಮಚಂದ್ರ ಅಂಕೋಲೇಕರ ಅವರಿಗೆ ಮೊದಲಿನಿಂದಲೂ ವಿದ್ಯಾರ್ಥಿಗಳಿಗಿಂತಲೂ ವಿದ್ಯಾರ್ಥಿನಿಗಳೆಂದರೆ ಅಚ್ಚುಮೆಚ್ಚು. ಕಂಪ್ಯುಟರ್ ಸೈನ್ಸ್  ಪಾಠ ಮಾಡುವ ಅವಧಿಯಲ್ಲಿಯೂ ಅವರು ಕಾಲೇಜು ಕನ್ಯೆಯರ ಸುತ್ತಲೇ ಸುತ್ತುತ್ತಾರೆ ಎಂಬುದು ಅಲ್ಲಿನವರ ಆರೋಪ. ಇದಕ್ಕೆ ಪುಷ್ಟಿ ಎನ್ನುವಂತೆ ಇದೀಗ ಅದೇ ಕಾಲೇಜಿನ ವಿದ್ಯಾರ್ಥಿನಿಯೊಬ್ಬರು ಲೈಂಗಿಕ ಕಿರುಕುಳದ ಆರೋಪ ಮಾಡಿದ್ದಾರೆ. ಪದೇ ಪದೇ ಅಸಭ್ಯವಾಗಿ ವರ್ತಿಸುವ ಉಪನ್ಯಾಸಕನ ವಿರುದ್ಧ ಊರ‌ ಜನ ತಿರುಗಿ ಬಿದ್ದಿದ್ದು, ಮಂಗಳವಾರ ದಿಢೀರ್ ಪ್ರತಿಭಟನೆ ನಡೆಸಿದರು. ಉಪನ್ಯಾಸಕನ ಕೀಟಲೆಯ ಬಗ್ಗೆ ಮೊದಲೇ ವಿದ್ಯಾರ್ಥಿನಿಯರು ಈ ವಿಷಯವನ್ನು ಪೊಲೀಸರ ಗಮನಕ್ಕೆ ತಂದಿದ್ದರು. ಆದರೂ,‌ ಕ್ರಮವಾಗಿಲ್ಲ ಎಂದು ಪ್ರತಿಭಟನಾಕಾರರು ಆಕ್ರೋಶವ್ಯಕ್ತಪಡಿಸಿದರು. ಕಾಲೇಜು ಆವರಣದಲ್ಲಿ ವಿದ್ಯಾರ್ಥಿನಿಯರು ಪಾಲಕರ ಜೊತೆ ಆಗಮಿಸಿ ಪ್ರತಿಭಟಿಸಿದರು. ಆಡಳಿತ ಮಂಡಳಿಯವರು ಸ್ಥಳಕ್ಕೆ ಬರಬೇಕು ಎಂದು ಪ್ರತಿಭಟನಾಕಾರರು ಪಟ್ಟುಹಿಡಿದರು. ಪೊಲೀಸರು ಪ್ರತಿಭಟನಾಕಾರರನ್ನು ಸಮಾಧಾನ ಮಾಡಿದ್ದು, ತನಿಖೆಯ ಭರವಸೆ ನೀಡಿದರು. ಆರೋಪಿ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯಿಸಿದರು. - [ಕೋಟಿ ರೂಪಾಯಿಗೆ ಇಲ್ಲ ವಾರಸುದಾರ!](https://mobiletime.in/2025/10/no-heir-for-crores-of-rupees/): ಗೋವಾದಿಂದ ಬೆಂಗಳೂರು ಹೊರಟಿದ್ದ ಬಸ್ಸು ಹಿಡಿದ ಕಾರವಾರ ಪೊಲೀಸರಿಗೆ ಕೋಟಿ ರೂಪಾಯಿ ಸಿಕ್ಕಿದೆ. ಕೋಟಿ ರೂಪಾಯಿಯ ಒಡೆಯರ ಬಗ್ಗೆ ಪೊಲೀಸರು ಹುಡುಕುತ್ತಿದ್ದಾರೆ. ಸೋಮವಾರ ರಾತ್ರಿ ಗೋವಾದಿಂದ ಖಾಸಗಿ ಬಸ್ಸು ಕಾರವಾರ ಕಡೆ ಹೊರಟಿತು. ಬೆಂಗಳೂರು ಹೋಗಬೇಕಿದ್ದ ಆ ಬಸ್ಸಿನಲ್ಲಿ ಕಲ್ಮೇಶ ಕುಮಾರ ಹಾಗೂ ಬೊಂಬ್ರು ರಾವ್ ಎಂಬಾತರು ಹತ್ತಿದ್ದರು. ಅವರ ಕೈಯಲ್ಲಿದ್ದ ಬ್ಯಾಗಿನಲ್ಲಿ ಒಂದು ಕೋಟಿ ರೂಪಾಯಿ ಹಣವಿದ್ದು, ಈ ವಿಷಯ ಕಾರವಾರ ಡಿವೈಎಸ್ಪಿ ಗಿರೀಶ ಅವರಿಗೆ ಈ ವಿಷಯ ಗೊತ್ತಾಯಿತು. ಮಾಜಾಳಿ ಗಡಿಗೆ ತಮ್ಮ ತಂಡ ಕಳುಹಿಸಿದ ಅವರು ಆ ಬಸ್ಸನ್ನು ಅಲ್ಲಿಯೇ‌ ನಿಲ್ಲಿಸಿದರು. ಬಸ್ಸಿನ ಒಳಗೆ ಹುಡುಕಿದಾಗ ಅಲ್ಲಿ ಕಂದು ಬಣ್ಣದ ಬ್ಯಾಗ್ ಒಂದು ಕಾಣಿಸಿತು. ಆ ಬ್ಯಾಗಿನ ಒಳಗೆ ಕೋಟಿ ರೂಪಾಯಿ ಕಾಣಿಸಿತು. ಆ ಬ್ಯಾಗು ತಪಾಸಣೆ ಮಾಡಿದಾಗ ನಿರೀಕ್ಷೆಯಂತೆ ಕೋಟಿ ರೂಪಾಯಿ ಕಾಣಿಸಿತು. ಕಲ್ಮೇಶ ಕುಮಾರ ಹಾಗೂ ಬೊಂಬ್ರು ರಾವ್ ಅವರ ಬಳಿ ಪ್ರಶ್ನಿಸಿದಾಗ ಆ ಹಣದ ಬಗ್ಗೆ ಬಾಯ್ಬಿಡಲಿಲ್ಲ. ಆದರೂ ಪೊಲೀಸರು ಆ ಹಣದ‌ ಮೂಲ ಶೋಧ ನಡೆಸಿದರು. mxon ಎಂಬ ಎಲೆಕ್ಟಿಕ್ ಕಂಪನಿಗೆ ಸೇರಿದ ಹಣ ಇದಾಗಿರುವ ಬಗ್ಗೆ ಶಂಕಿಸಲಾಯಿತು. ತೆರಿಗೆ ತಪ್ಪಿಸಲು ಈ ಹಣವನ್ನು ವಾಮಮಾರ್ಗದಲ್ಲಿ ಸಾಗಿಸುತ್ತಿರುವ ಬಗ್ಗೆ ಅಂದಾಜಿಸಲಾಯಿತು. ಸಿಕ್ಕ ಹಣವನ್ನು ಪೋಲೀಸರು ಆದಾಯ ತೆರಿಗೆ ಇಲಾಖೆಯವರ ಗಮನಕ್ಕೆ ತಂದರು. ಅಲ್ಲಿನ ಅಧಿಕಾರಿಗಳು ಇನ್ನಷ್ಟು ಆಳಕ್ಕೆ ಇಳಿದು ತನಿಖೆ ಶುರು ಮಾಡಿದರು. - [2025 ಅಕ್ಟೊಬರ್ 28ರ ದಿನ ಭವಿಷ್ಯ](https://mobiletime.in/2025/10/prediction-for-october-28-2025/): ಮೇಷ ರಾಶಿ: ನಿಮ್ಮ ಕೆಲಸದಲ್ಲಿ ಉತ್ತಮ ಫಲಿತಾಂಶ ಸಿಗಲಿದೆ. ಆರೋಗ್ಯದಲ್ಲಿ ಎಚ್ಚರಿಕೆ ಅಗತ್ಯ. ಕುಟುಂಬದಲ್ಲಿ ಸೌಹಾರ್ದತೆ ಹಾಗೂ ಹಣಕಾಸಿನಲ್ಲಿ ಸ್ಥಿರತೆ ಕಾಣಲಿದೆ. ವೃಷಭ ರಾಶಿ: ಕೆಲಸದಲ್ಲಿ ಹೊಸ ಅವಕಾಶಗಳು ಬರುತ್ತವೆ. ಆರೋಗ್ಯದಲ್ಲಿ ಚೇತರಿಕೆ ಕಾಣಲಿದೆ. ಕುಟುಂಬದ ಸದಸ್ಯರೊಂದಿಗೆ ಒಳ್ಳೆಯ ಸಮಯ. ಹಣದ ವ್ಯಯ ಎಚ್ಚರಿಕೆಯಿಂದ ಮಾಡಿ. ಮಿಥುನ ರಾಶಿ: ಆತ್ಮವಿಶ್ವಾಸದಿಂದ ಕೆಲಸ ಮಾಡಿ. ಕೆಲಸದಲ್ಲಿ ಹೊಸ ಆಯ್ಕೆ ಸಿಕ್ಕರೆ ಒಪ್ಪಿಕೊಳ್ಳಿ. ಆರೋಗ್ಯದಲ್ಲಿ ಸಣ್ಣ ಸಮಸ್ಯೆ ಬರುವ ಲಕ್ಷಣವಿದೆ. ಕರ್ಕ ರಾಶಿ: ಕೆಲಸದಲ್ಲಿ ಯಶಸ್ಸು ಸಿಗಲಿದೆ. ನಿಮ್ಮ ಆರೋಗ್ಯ ಉತ್ತಮವಾಗಿರಲಿದೆ. ಸಂತೋಷದ ವಾತಾವರಣ ಕಾಣಲು ಸಾಧ್ಯ. ಸಿಂಹ ರಾಶಿ: ನಿಮ್ಮ ಮನೋಬಲ ಹೆಚ್ಚಲಿದೆ. ಉದ್ಯೋಗದ ಅವಕಾಶ ಸಿಗಲಿದೆ. ಆರೋಗ್ಯದಲ್ಲಿ ಬದಲಾವಣೆ ಆಗುವ ಸಾಧ್ಯತೆಯಿದೆ. ಕನ್ಯಾ ರಾಶಿ: ಕೆಲಸಗಳಲ್ಲಿ ಚುರುಕು ಮೂಡಲಿದೆ. ಆರೋಗ್ಯ ಸಮತೋಲನ ಕಾಯ್ದುಕೊಳ್ಳುವುದು ಮುಖ್ಯ. ಸ್ನೇಹಿತರೊಂದಿಗೆ ಹೊಸ ಯೋಜನೆಗೆ ಅವಕಾಶವಿದೆ. ಖರ್ಚು ಅಥವಾ ಹೂಡಿಕೆ ವಿಚಾರದಲ್ಲಿ ಚಿಂತನೆ ಅಗತ್ಯ. ತುಲಾ ರಾಶಿ: ಉದ್ಯೋಗದಲ್ಲಿ ಹೊಸ ಗುರಿ ಸಾಧನೆ ಸಾಧ್ಯವಿದೆ. ಆರೋಗ್ಯ ದೃಷ್ಠಿಯಲ್ಲಿ ಸುಧಾರಣೆ ಆಗಲಿದೆ. ಕುಟುಂಬದಲ್ಲಿ ಸಂಭ್ರಮ .ಹಾಗೂ ಸ್ನೇಹಿತರಿಂದ ಸಹಾಯ ನಿರೀಕ್ಷಿಸಬಹುದು. ವೃಶ್ಚಿಕ ರಾಶಿ: ಕೆಲಸದ ವಿಷಯದಲ್ಲಿ ಗಂಭೀರತೆ ಅಗತ್ಯ. ಆರೋಗ್ಯ ಉತ್ತಮವಾಗಿರಲಿದೆ. ಹಣದ ಲಾಭ ಸಾಧ್ಯವಿದೆ. ನಿರಂತರ ಪ್ರಯತ್ನಗಳಿಂದ ಯಶಸ್ಸು ಖಚಿತ. ಧನು ರಾಶಿ: ಹೊಸ ಚಿಂತನೆ ಆವರಿಸಲಿದೆ. ಆರೋಗ್ಯದ ಬಗ್ಗೆ ಎಚ್ಚರಿಕೆ ಬೇಕು. ಹಣಕಾಸಿನ ಪರಿಸ್ಥಿತಿಯಲ್ಲಿ ಸುಧಾರಣೆ ಆಗಲಿದೆ. ಮಕರ ರಾಶಿ: ಕೆಲಸದಲ್ಲಿ ಉತ್ತಮ ಫಲಿತಾಂಶ ಸಿಗಲಿದೆ. ಕುಟುಂಬದಲ್ಲಿ ನೆಮ್ಮದಿಯ ವಾತಾವರಣ ಮೂಡಿ ಬರಲಿದೆ. ಹೊಸ ಅವಕಾಶಗಳನ್ನು ಬಳಸಿಕೊಳ್ಳಿ. ಕುಂಭ ರಾಶಿ: ನಿಮ್ಮ ಯೋಜನೆಗಳು ಯಶಸ್ವಿಯಾಗಲಿದೆ. ಕುಟುಂಬದಲ್ಲಿ ಸರಿಯಾದ ಮಾತುಕಥೆ ನಡೆಯಲಿದೆ. ಸ್ನೇಹಿತರಿಂದ ಸಹಾಯ ಸಿಗಲಿದೆ. ಮೀನ ರಾಶಿ: ಕೆಲಸಗಳಲ್ಲಿ ಪ್ರಗತಿ ಸಾಧ್ಯವಿದೆ. ಆರೋಗ್ಯ ಸುಧಾರಣೆ ಸಾಧ್ಯವಿದೆ. ಒಳ್ಳೆಯ ಸಂಗತಿಗಳು ನಡೆಯುತ್ತವೆ. - [ಚರ್ಚಿಗೆ ಬಂದವರಿಗೆ ಮಾತ್ರ ಸರ್ಕಾರಿ ಸೌಲತ್ತು!](https://mobiletime.in/2025/10/government-welfare-only-for-those-who-come-to-church/): ಪ್ರತಿ ಭಾನುವಾರ ಚರ್ಚಿಗೆ ಬಂದರೆ ಮಾತ್ರ ಗ್ರಾಮ ಪಂಚಾಯತದ ಸೌಲಭ್ಯ ಕೊಡಿಸುವುದಾಗಿ ಜನಪ್ರತಿನಿಧಿಯೊಬ್ಬರು ಶಿರಸಿಯ ಬನವಾಸಿ ಬಳಿಯ ಮಹಿಳೆಗೆ ಆಮೀಷ ಒಡ್ಡಿದ್ದಾರೆ. ಇದಕ್ಕೆ ಒಪ್ಪದೇ ಇದ್ದಾಗ ಗುಂಪಿನಲ್ಲಿ ಬಂದು ಮಹಿಳೆ ಕುಟುಂಬದವರ ಮೇಲೆ ಹಲ್ಲೆ ನಡೆಸಿದ್ದಾರೆ! ಶಿರಸಿ ತಾಲೂಕಿನ ವಡಗೇರಿಯಲ್ಲಿ ವಾಸವಾಗಿರುವ ಪರಿಶಿಷ್ಟ ಸಮುದಾಯದ ಸುಜಾತಾ ಲಮಾಣಿ ಅವರು ಕೃಶ್ಚಿಯನ್ ಸಮುದಾಯದ ರಾಜೇಶ್ ಲೂದ್ರಿಂಗ್ ಅವರನ್ನು ವರಿಸಿದ್ದರು. ಸುಜಾತಾ ಅವರ ಇಬ್ಬರು ಮಕ್ಕಳು ಹಾಗೂ ರಾಜೇಶ ಅವರ ಜೊತೆ ಅವರ ತಾಯಿ ರೋಜಿ ಒಟ್ಟಿಗೆ ವಾಸವಿದ್ದರು. ಬೇರೆ ಧರ್ಮದವರನ್ನು ಮದುವೆ ಆದರೂ ಸುಜಾತಾ ಲಮಾಣಿ ಅವರು ಆಚರಣೆ ಬಿಟ್ಟಿರಲಿಲ್ಲ. ಈ ಬಗ್ಗೆ ರಾಜೇಶ ಕುಟುಂಬದವರು ಸಹ ಆಕ್ಷೇಪಣೆ ಸಲ್ಲಿಸಿರಲಿಲ್ಲ. ಗಂಡ-ಹೆoಡತಿಯ ಧರ್ಮ ಬೇರೆ ಆದರೂ ಅವರ ಸಂಸಾರದಲ್ಲಿ ಯಾವ ಸಮಸ್ಯೆ ಬಂದಿರಲಿಲ್ಲ. ಹೀಗಿರುವಾಗ, ಎಕ್ಕಂಬಿ ಗ್ರಾಮದ ಗ್ರಾ ಪಂ ಸದಸ್ಯರೂ ಆಗಿರುವ ಪ್ರಾನ್ಸಿಸ್ ಫರ್ನಾಂಡಿಸ್ ಅವರು ಸುಜಾತಾ ಅವರ ಕುಟುಂಬಕ್ಕೆ ಕಾಡಲು ಶುರು ಮಾಡಿದರು. ಸುಜಾತಾ ಲಮಾಣಿ ಅವರಿಗೂ ಪದೇ ಪದೇ ಧರ್ಮ ಬದಲಿಸುವಂತೆ ಅವರು ಒತ್ತಡ ಹಾಕಿದರು. ಪ್ರತಿ ಭಾನುವಾರ ಚರ್ಚಿಗೆ ಬರುವಂತೆ ಒತ್ತಾಯಿಸಿದರು. ಆದರೆ, ಸುಜಾತಾ ಲಮಾಣಿ ಅವರು ಇದಕ್ಕೆ ಒಪ್ಪಲಿಲ್ಲ. ಹೀಗಾಗಿ ಪ್ರಾನ್ಸಿಸ್ ಫರ್ನಾಂಡಿಸ್ ರಾಜಕೀಯ ಪ್ರಭಾವ ಬೀರಿ ಅವರ ಕುಟುಂಬಕ್ಕೆ ತೊಂದರೆ ಕೊಡಲು ಶುರು ಮಾಡಿದರು. ಅಕ್ಟೊಬರ್ 18ರಂದು ವಡಗೇರಿಯ ನರ್ಮಲಾ ಕರಂಜಿ ಕ್ರಸ್ತಧರ್ಮದ ಪ್ರಾರ್ಥನೆ ನಡೆಯುತ್ತಿತ್ತು. ಸುಜಾತಾ ಲಮಾಣಿ ಅವರಿಗೂ ಪ್ರಾರ್ಥನೆಗೆ ಬರುವಂತೆ ಆಮಂತ್ರಣ ಬಂದಿತು. ಆದರೆ, ಅವರು ಅಲ್ಲಿಗೆ ಹೋಗಲಿಲ್ಲ. ಇದರಿಂದ ಸಿಟ್ಟಾದ ಪ್ರಾನ್ಸಿಸ್ ಫರ್ನಾಂಡಿಸ್ ಅವರು ಸುಜಾತಾ ಅವರ ಮನೆಗೆ ನುಗ್ಗಿದರು. ಅವರ ಜೊತೆಯಿದ್ದ ಇನಾಸ್ ಫರ್ನಾಂಡೀಸ್, ಪ್ರಾನ್ಸಿಸ್ ಲುದ್ರಿಂಗ್, ಆಗ್ನೆಲ್ ಡಿಸೋಜಾ, ಪ್ರೇಮಾ ಪ್ರಾನ್ಸಿಸ್ ಲುದ್ರಿಂಗ್ ಹಾಗೂ ನರ್ಮಲಾ ಕರಂಜಿ ಸೇರಿ ಸುಜಾತಾ ಅವರ ಕುಟುಂಬದವರ ಮೇಲೆ ದಬ್ಬಾಳಿಕೆ ನಡೆಸಿದರು. ಈ ವೇಳೆ ಅವರೆಲ್ಲರೂ ಸೇರಿ ಸುಜಾತಾ ಹಾಗೂ ಅವರ ಅತ್ತೆ ರೋಜಿ ಅವರ ಮೇಲೆ ಹಲ್ಲೆ ಮಾಡಿದರು. ಸುಜಾತಾ ಅವರ ಕೂದಲು ಹಿಡಿದು ಎಳೆದರು. ರೋಜಿ ಅವರನ್ನು ಗೋಡೆಗೆ ದೂಡಿ ನೋವು ಮಾಡಿದರು. ಉಳಿದವರು ವಿವಿಧ ವಸ್ತುಗಳಿಂದ ಹೊಡೆದರು. ಈ ವೇಳೆ ಪ್ರೇಮಾ ಅವರು ಸುಜಾತಾ ಅವರಿಗೆ ಚಪ್ಪಲಿಯಿಂದ ಥಳಿಸಿದರು. ನಿರ್ಮಲ ಕರಂಜಿ ಅವರು ರೋಜಿ ಅವರಿಗೆ ದೊಣ್ಣೆಯಿಂದ ಹೊಡೆದರು. ಕೊನೆಗೆ `ನಿಮಗೆ ಗ್ರಾಮ ಪಂಚಾಯತದ ಸೌಲಭ್ಯ ಬೇಕು ಎಂದರೆ ಚರ್ಚಿಗೆ ಬರಬೇಕು’ ಎಂದು ಗ್ರಾ ಪಂ ಸದಸ್ಯ ಪ್ರಾನ್ಸಿಸ್ ಫರ್ನಾಂಡಿಸ್ ಎಚ್ಚರಿಕೆ ನೀಡಿದರು. `ಚರ್ಚಿಗೆ ಬರದೇ ಇದ್ದರೆ ಮಣ್ಣಿನಲ್ಲಿ ಹೂತು ಹಾಕುವೆ’ ಎಂದು ಬೆದರಿಸಿದರು. ಈ ಎಲ್ಲಾ ಘಟನಾವಳಿಗಳ ಬಗ್ಗೆ ಸುಜಾತಾ ಲಮಾಣಿ ಅವರು ಬನವಾಸಿ ಪೊಲೀಸ್ ಠಾಣೆಗೆ ತೆರಳಿ ದೂರಿದ್ದು, ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. - [ಕೆಡಿಸಿಸಿ ಕದನ ಕುತೂಹಲ: ಶಾಸಕರ ಗೆಲುವಿಗೆ ಎದುರಾಳಿಗಳ ಸಹಕಾರ!](https://mobiletime.in/2025/10/kdcc-battle-opponents-cooperation-for-mlas-victory/): ಯಲ್ಲಾಪುರ ಮತಕ್ಷೇತ್ರದಲ್ಲಿ ಬಿಜೆಪಿ ಬೆಂಬಲಿತ ಸಹಕಾರಿ ಭಾರತಿಯ ಸೊಸೈಟಿಗಳು ಹೆಚ್ಚಿದ್ದರೂ ಕೆಡಿಸಿಸಿ ಬ್ಯಾಂಕಿನ ಚುನಾವಣೆಯಲ್ಲಿ ಸಹಕಾರಿ ಭಾರತಿಯ ಅಧಿಕೃತ ಅಭ್ಯರ್ಥಿಗೆ 2ಕ್ಕಿಂತ ಹೆಚ್ಚು ಮತ ಬೀಳಲಿಲ್ಲ. ಸಹಕಾರಿ ಭಾರತಿ ಅಡಿ ಗೆಲುವು ಸಾಧಿಸಿದ್ದ ಸೊಸೈಟಿ ಪ್ರತಿನಿಧಿಗಳು ಬಿಜೆಪಿಯ ಎದುರಾಳಿ ಅಭ್ಯರ್ಥಿ ಜೊತೆ ಕೈ ಕುಲುಕಿದ ಕಾರಣ ಸಹಕಾರಿ ಭಾರತಿಯ ಗೋಪಾಲಕೃಷ್ಣ ಗಾಂವ್ಕರ್ ಸೋಲು ಅನುಭವಿಸಿದರು. ಸಹಕಾರಿ ಭಾರತಿಯವರ ಸಹಕಾರದಿಂದಲೇ ಕೆಡಿಸಿಸಿ ಬ್ಯಾಂಕಿನ ಅಧ್ಯಕ್ಷರೂ ಆಗಿದ್ದ ಶಿವರಾಮ ಹೆಬ್ಬಾರ್ ಅವರು ಸರಳವಾಗಿ ಗೆಲುವು ಸಾಧಿಸಿದರು! ಗೋಪಾಲಕೃಷ್ಣ ಗಾಂವ್ಕರ್ ಅವರು ಯಲ್ಲಾಪುರ ಮತಕ್ಷೇತ್ರದಿಂದ ಕೆಡಿಸಿಸಿ ಬ್ಯಾಂಕಿನ ನಿರ್ದೇಶಕ ಸ್ಥಾನಕ್ಕೆ ಆಯ್ಕೆ ಬಯಸಿದ್ದರು. ಕೆಡಿಸಿಸಿ ಬ್ಯಾಂಕಿನ ಅಧ್ಯಕ್ಷರು ಆಗಿ, ಕ್ಷೇತ್ರದ ಶಾಸಕರು ಆಗಿರುವ ಶಿವರಾಮ ಹೆಬ್ಬಾರ್ ಅವರ ವಿರುದ್ಧ ಅವರು ಸ್ಪರ್ಧೆ ಒಡ್ಡಿದ್ದರು. ಯಲ್ಲಾಪುರದ ಆನಗೋಡು ಸೊಸೈಟಿಯ ಮೂಲಕ ಗೋಪಾಲಕೃಷ್ಣ ಗಾಂವ್ಕರ್ ಅವರು ಪ್ರತಿನಿಧಿಸಿದ್ದರು. ಗೋಪಾಲಕೃಷ್ಣ ಗಾಂವ್ಕರ್ ಅವರಿಗೆ ಎದುರಾಳಿಯಾಗಿರುವ ಶಿವರಾಮ ಹೆಬ್ಬಾರ್ ಅವರು ಇಡಗುಂದಿ ಸೊಸೈಟಿ ಮೂಲಕ ಅಖಾಡಕ್ಕೆ ಇಳಿದಿದ್ದರು. `ಸಹಕಾರಿ ಭಾರತಿ ಅಡಿಯಲ್ಲಿ ಯಲ್ಲಾಪುರದ 9 ಸೊಸೈಟಿಗಳಿದ್ದು, ಆ ಎಲ್ಲಾ ಸೊಸೈಟಿವರು ತಮ್ಮನ್ನು ಬೆಂಬಲಿಸುತ್ತಾರೆ’ ಎಂದು ಗೋಪಾಲಕೃಷ್ಣ ಗಾಂವ್ಕರ್ ಅವರು ಭಾವಿಸಿದ್ದರು. ಆದರೆ, ಅನೇಕ ಘಟಾನುಘಟಿ ನಾಯಕರು ಸಹಕಾರಿ ಭಾರತಿಯಿಂದ ಸ್ಪರ್ಧಿಸಿದ್ದ ಗೋಪಾಲಕೃಷ್ಣ ನಾಯಕರಿಗೆ ಕೈ ಕೊಟ್ಟು ಎದುರಾಳಿ ಶಿವರಾಮ ಹೆಬ್ಬಾರ್ ಅವರ ಕೈ ಹಿಡಿದರು! ಸಹಕಾರಿ ಭಾರತಿ ಅಡಿಯಲ್ಲಿರುವ ಸೊಸೈಟಿಗಳು ಗೋಪಾಲಕೃಷ್ಣ ಗಾಂವ್ಕರ್ ಅವರಿಗೆ ಬೆಂಬಲ ನೀಡಿದ್ದರೆ ಕನಿಷ್ಟ ಅವರಿಗೆ 9 ಮತಗಳು ಬೀಳಬೇಕಿತ್ತು. ಆದರೆ, ಗೋಪಾಲಕೃಷ್ಣ ಗಾಂವ್ಕರ್ ಅವರಿಗೆ ಬರೇ ಎರಡು ಮತಗಳು ಮಾತ್ರ ಸಿಕ್ಕವು. ಅದರಲ್ಲಿ ಒಂದು ಮತ ಅವರದ್ದೇ ಆಗಿದ್ದು, ಮದನೂರು ಸೊಸೈಟಿಯವರು ಗೋಪಾಲಕೃಷ್ಣ ಗಾಂವ್ಕರ್ ಅವರನ್ನು ಬೆಂಬಲಿಸಿದರು. ಗೋಪಾಲಕೃಷ್ಣ ಗಾಂವ್ಕರ್ ಅವರಿಗೆ ಬೀಳಬಹುದಾದ ಇನ್ನೊಂದು ಮತ ನ್ಯಾಯಾಲಯದ ಆವರಣ ಪ್ರವೇಶಿಸಿತು. ಕಣ್ಣಿಗೇರಿ, ನಂದೂಳ್ಳಿ ಭಾಗದ ಮತಗಳು ಕೋರ್ಟು-ಕಚೇರಿ ಅಲೆದಾಟದ ಕಾರಣದಿಂದ ಚಲಾವಣೆ ಆಗಲಿಲ್ಲ. ಹೀಗಾಗಿ ಯಲ್ಲಾಪುರ ಮತಕ್ಷೇತ್ರದಲ್ಲಿ 16 ಸೊಸೈಟಿಯ ಮತಗಳಿದ್ದರೂ ಅದರಲ್ಲಿ 13 ಮಾತ್ರ ಚಲಾವಣೆ ನಡೆಯಿತು. ಕಳಚೆ, ದೆಹಳ್ಳಿ, ಮಲವಳ್ಳಿ ಮತಗಳ ನಿರೀಕ್ಷೆಯಲ್ಲಿದ್ದು, ಗೆಲುವು ಸುಲಭ ಎಂದುಕೊoಡಿದ್ದ ಸಹಕಾರಿ ಭಾರತಿಯ ಲೆಕ್ಕಾಚಾರ ತಲೆಕೆಳಗಾಯಿತು! ಸಹಕಾರಿ ಭಾರತಿಯವರ ಸಹಕಾರದಿಂದಲೇ ಶಿವರಾಮ ಹೆಬ್ಬಾರ್ ಅವರು ಮತ್ತೊಮ್ಮೆ ಕೆಡಿಸಿಸಿ ಬ್ಯಾಂಕ್ ನಿರ್ದೇಶಕರಾದರು. ಮಂಕಾಳು ವೈದ್ಯ ಬಣದ ಮೂವರು ಮಾತ್ರ ಕೆಡಿಸಿಸಿ ಬ್ಯಾಂಕ್ ನಿರ್ದೇಶಕರಾಗಿದ್ದು, ಶಿವರಾಮ ಹೆಬ್ಬಾರ್ ಬಣದವರೇ ಹೆಚ್ಚಿದ್ದ ಕಾರಣ ಈ ಬಾರಿಯೂ ಶಿವರಾಮ ಹೆಬ್ಬಾರ್ ಅವರೇ ಕೆಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗುವ ಸಾಧ್ಯತೆ ಹೆಚ್ಚಿದೆ. - [`ಕೆಲಸ ಮಾಡದ ಅಧಿಕಾರಿ-ಸಿಬ್ಬಂದಿ ವರ್ಗಾವಣೆಗೆ ಆಗ್ರಹ'](https://mobiletime.in/2025/10/demand-for-transfer-of-officers-and-staff-who-have-worked/): `ಕುಮಟಾ ತಹಶೀಲ್ದಾರ್ ಕಚೇರಿಯಲ್ಲಿ ಅನೇಕ ವರ್ಷಗಳಿಂದ ಬೀಡುಬಿಟ್ಟುರುವ ಅಧಿಕಾರಿ-ಸಿಬ್ಬಂದಿಯನ್ನು ಬೇರೆ ಕಡೆ ವರ್ಗಾಯಿಸಬೇಕು’ ಎಂದು ಹೊಲನಗದ್ದೆಯ ಗಣಪತಿ ಪಟಗಾರ ಅವರ ಮುಂದಾಳತ್ವದಲ್ಲಿ ಆ ಭಾಗದ ಜನ ಸಹಿ ಸಂಗ್ರಹ ಮಾಡಿದ್ದಾರೆ. ಅದಾದ ನಂತರ ಆ ಪತ್ರವನ್ನು ಕಂದಾಯ ಸಚಿವರಿಗೆ ಹಾಗೂ ಜಿಲ್ಲಾಧಿಕಾರಿಗಳಿಗೆ ಕಳುಹಿಸಿದ್ದಾರೆ. ಕುಮಟಾದ ಹಣ್ಣೇಮಠದ ಗಣಪತಿ ಪಾಂಡು ಪಟಗಾರ ಅವರ ತಂದೆ ಹೆಸರಿನಲ್ಲಿ 3 ಗುಂಟೆ ಭೂಮಿಯಿದ್ದು, ಆ ಭೂಮಿಯ ಹಕ್ಕುದಾರರಿಗೆ ಹಂಚುವುದಕ್ಕಾಗಿ ಗಣಪತಿ ಪಟಗಾರ ಅವರು ಓಡಾಡುತ್ತಿದ್ದಾರೆ. ಇದಕ್ಕಾಗಿ ಅವರು ಗ್ರಾಮ ಲೆಕ್ಕಾಧಿಕಾರಿಗಳಿಗೆ ಅರ್ಜಿ ಕೊಟ್ಟಿದ್ದು, ಆ ಕಡತ ತಹಶೀಲ್ದಾರ್ ಕಚೇರಿ ಸೇರಿದೆ. ಆದರೆ, ಅಲ್ಲಿಂದ ಮುಂದಿನ ಕೆಲಸ ಆಗುತ್ತಿಲ್ಲ ಎಂಬುದು ಗಣಪತಿ ಪಟಗಾರ ಅವರ ಆರೋಪ. `ನಿಯಮಗಳ ಪ್ರಕಾರ 45 ದಿನದಲ್ಲಿ ಮುಗಿಯಬೇಕಾದ ಕೆಲಸ 5 ತಿಂಗಳು ಕಳೆದರೂ ಆಗುತ್ತಿಲ್ಲ. ತಹಶೀಲ್ದಾರರು ನಮ್ಮ ಅರ್ಜಿ ಮೂಲೆಗೆ ತಳ್ಳಿದ್ದು, ತಹಶೀಲ್ದಾರರನ್ನು ಸೇರಿ ಅನೇಕ ವರ್ಷಗಳಿಂದ ಅಲ್ಲಿ ಬೀಡುಬಿಟ್ಟಿರುವ ಅಧಿಕಾರಿ-ಸಿಬ್ಬಂದಿಯನ್ನು ವರ್ಗಾಯಿಸಬೇಕು’ ಎಂದವರು ಆಗ್ರಹಿಸಿದ್ದಾರೆ. `ಕಾಗದಪತ್ರ ಸರಿಯಾಗಿ ಆಗದ ಕಾರಣ ಜಮೀನಿನ ಮೇಲೆ ಸಾಲ ತೆಗೆಯಲು ಆಗುತ್ತಿಲ್ಲ. ಇದರಿಂದ ಮಕ್ಕಳ ಮದುವೆ-ಉನ್ನತ ಶಿಕ್ಷಣಕ್ಕೆ ಅಡ್ಡಿಯಾಗಿದೆ’ ಎಂದವರು ವಿವರಿಸಿದ್ದಾರೆ. `ಕುಮಟಾ ಕಚೇರಿಯಲ್ಲಿ 22 ವರ್ಷಗಳಿಂದ ವರ್ಗಾವಣೆ ಆಗದ ನೌಕರರಿದ್ದಾರೆ. 3 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರನ್ನು ಬೇರೆ ಕಡೆ ವರ್ಗಾಯಿಸಬೇಕು’ ಎಂದು ನಿವೃತ್ತ ಅಧಿಕಾರಿ ನಾಗೇಶ ಅವರು ಹೇಳಿದ್ದಾರೆ. ಆ ಭಾಗದ ತಿಮ್ಮಣ್ಣ, ಸುನಿಲ, ರಮೇಶ್, ವೆಂಕಟ ರಮಣ ಇತರರು ಪತ್ರಕ್ಕೆ ಸಹಿ ಹಾಕಿದ್ದಾರೆ. - [ಕೆಡಿಸಿಸಿ ಕದನ ಕುತೂಹಲ: ತನ್ನ ಮತವನ್ನು ಬೇರೆಯವರಿಗೆ ಚಲಾಯಿಸಿದ ಶಾಸಕ!](https://mobiletime.in/2025/10/kdcc-mla-who-cast-his-vote-for-someone-else/): ಕೆಡಿಸಿಸಿ ಬ್ಯಾಂಕಿನ ನಿರ್ದೇಶಕ ಸ್ಥಾನಬಯಸಿ ಸ್ಪರ್ಧೆ ಒಡ್ಡಿದ್ದ ಕಾರವಾರ-ಅಂಕೋಲಾ ವಿಧಾನಸಭಾ ಕ್ಷೇತ್ರ ಶಾಸಕ ಸತೀಶ್ ಸೈಲ್ ಅವರು ತಮ್ಮ ಮತವನ್ನು ಬೇರೆಯವರಿಗೆ ಹಾಕಿದ್ದಾರೆ. (ಈ ವರದಿ ಜೊತೆ ಪ್ರಕಟವಾಗಿದ್ದು AI ತಂತ್ರಜ್ಞಾನ ರಚಿಸಿದ ಮತದಾನದ ಸಾಂದರ್ಭಿಕ ಚಿತ್ರ) ಹೀಗಾಗಿ ಚುನಾವಣಾ ಕಣದಲ್ಲಿದ್ದ ಸತೀಶ್ ಸೈಲ್ ಅವರಿಗೆ ಒಂದು ಮತ ಸಹ ಬಿದ್ದಿಲ್ಲ. ಐದು ವರ್ಷಗಳ ಹಿಂದೆಯೇ ಸತೀಶ್ ಸೈಲ್ ಅವರು ಕೆಡಿಸಿಸಿ ಬ್ಯಾಂಕ್ ನಿರ್ದೇಶಕ ಸ್ಥಾನದ ಆಕಾಂಕ್ಷಿಯಾಗಿದ್ದರು. ಆದರೆ, ಆ ಅವಧಿಯಲ್ಲಿ ಸತೀಶ್ ಸೈಲ್ ಅವರಿಗೆ ಸೂಚಕರು ಸಹ ಇರಲಿಲ್ಲ. ಆ ಅವಧಿಯಲ್ಲಿ ಕಾರವಾರ ಮತಕ್ಷೇತ್ರದಿಂದ ಪ್ರಕಾಶ ಗುನಗಿ ಅವರು ಕೆಡಿಸಿಸಿ ಬ್ಯಾಂಕ್ ನಿರ್ದೇಶಕರಾದರು. ಈ ಬಾರಿ ಪ್ರಕಾಶ ಗುನಗಿ ಅವರಿಗೆ ಸೆಡ್ಡುಹೊಡೆಯುವುದಕ್ಕಾಗಿ ಮತ್ತೆ ಸತೀಶ್ ಸೈಲ್ ಅವರು ಪ್ರಯತ್ನಿಸಿದರು. ಕಳೆದ ಚುನಾವಣೆಯಲ್ಲಿ ಪ್ರಕಾಶ ಗುನಗಿ ಅವರ ಪರವಾಗಿದ್ದವರನ್ನು ಈ ಬಾರಿ ತಮ್ಮಕಡೆ ಸೆಳೆಯುವಲ್ಲಿ ಯಶಸ್ವಿಯಾದರು. ಅವರೇ ಸತೀಶ್ ಸೈಲ್ ಅವರಿಗೆ ನಾಮಪತ್ರ ಸಲ್ಲಿಕೆ ವೇಳೆ ಸೂಚಕರಾದರು. ಆದರೆ, ಆ ದಿನ ಸೂಚಕರಾದವರು ಮೊನ್ನೆ ನಡೆದ ಮತದಾನದ ಅವಧಿಯಲ್ಲಿ ಸತೀಶ್ ಸೈಲ್ ಅವರಿಗೆ ಮತ ಕೊಡಲಿಲ್ಲ. ಸತೀಶ್ ಸೈಲ್ ಅವರು ತಮ್ಮ ಮತವನ್ನು ತಮಗೆ ಹಾಕಲಿಲ್ಲ. ಹೀಗಾಗಿ ಕೆಡಿಸಿಸಿ ನಿರ್ದೇಶಕ ಸ್ಥಾನದ ಸ್ಪರ್ಧಿಯಾಗಿದ್ದು, ಸ್ವರ್ತ ಮತದಾರರೂ ಆಗಿದ್ದ ಸತೀಶ್ ಸೈಲ್ ಅವರಿಗೆ ಒಂದೇ ಒಂದು ಮತವೂ ಬೀಳಲಿಲ್ಲ! ಈ ಬಾರಿಯ ಕೆಡಿಸಿಸಿ ಚುನಾವಣೆಯಲ್ಲಾದರೂ ಪ್ರಕಾಶ ಗುನಗಿ ಅವರನ್ನು ಮಣಿಸಬೇಕು ಎಂದು ಸತೀಶ್ ಸೈಲ್ ಅವರು ನಿರ್ಧರಿಸಿದ್ದರು. ಹೀಗಾಗಿ ತಮ್ಮ ನಾಮಪತ್ರ ಹಿಂಪಡೆದು ಬೇರೆ ಅಭ್ಯರ್ಥಿಗೆ ಬೆಂಬಲ ನೀಡಲು ಅವರು ಮನಸ್ಸು ಮಾಡಲಿಲ್ಲ. ಕೊನೆಕ್ಷಣದವರೆಗೂ ಕಾದುನೋಡುವ ತಂತ್ರ ಅನುಸರಿಸಿದ ಸತೀಶ್ ಸೈಲ್ ಅವರು ನಾಮಪತ್ರವನ್ನು ಹಿಂಪಡೆಯಲಿಲ್ಲ. ಪ್ರಕಾಶ ಗುನಗಿ ಅವರನ್ನು ಸೋಲಿಸುವುದಕ್ಕಾಗಿ ಪಟ್ಟುಹಿಡಿದ ಸತೀಶ್ ಸೈಲ್ ಅವರು ಕೊನೆಗೆ ತಮ್ಮ ಎದುರಾಳಿ ರೂಪಾಲಿ ನಾಯ್ಕ ಅವರ ಆಪ್ತರ ಮೊರೆಹೋದರು. ತಮ್ಮ ಮತವನ್ನು ಸಹ ಅವರು ನಂದಕಿಶೋರ್ ಅವರಿಗೆ ಹಾಕಿದರು. ರೂಪಾಲಿ ನಾಯ್ಕ ಅವರ ಆಪ್ತರಾಗಿರುವ ನಂದಕಿಶೋರ್ ಅವರು ವಿರೋಧಿ ಬಣದವರೂ ತಮಗೆ ಹಾಕಿದ ಮತವನ್ನು ತಿರಸ್ಕರಿಸಲಿಲ್ಲ. ರೂಪಾಲಿ ನಾಯ್ಕ ಅವರು ಸತೀಶ್ ಸೈಲ್ ತಮ್ಮ ಬೆಂಬಲಿಗರನ್ನು ಬೆಂಬಲಿಸಿದನ್ನು ವಿರೋಧಿಸಲಿಲ್ಲ. ಸದ್ಯದ ಮಾಹಿತಿ ಪ್ರಕಾರ ನಂದಕಿಶೋರ ಅವರಿಗೆ 3 ಹಾಗೂ ಪ್ರಕಾಶ ಗುನಗಿ ಅವರಿಗೆ 6 ಮತ ಬಿದ್ದಿದೆ. ಸತೀಶ್ ಸೈಲ್ ಅವರಿಗೆ ಒಂದೇ ಒಂದು ಮತವೂ ಬಿದ್ದಿಲ್ಲ. ಇನ್ನೂ ನಾಲ್ಕು ಮತ ನ್ಯಾಯಾಲಯದ ಮೆಟ್ಟಿಲೇರಿದೆ. ಆ ನಾಲ್ಕು ಮತಗಳ ಪೈಕಿ ಎರಡು ಮತಗಳು ಪ್ರಕಾಶ ಗುನಗಿ ಅವರಿಗೆ ಚಲಾವಣೆಯಾಗಿರುವ ಸಾಧ್ಯತೆ ಹೆಚ್ಚಿದ್ದು, ಈ ಬಾರಿಯೂ ಕಾರವಾರ ಮತಕ್ಷೇತ್ರದಿಂದ ಪ್ರಕಾಶ ಗುನಗಿ ಅವರೇ ಕೆಡಿಸಿಸಿ ನಿರ್ದೇಶಕರಾಗಿ ಮುಂದುವರೆಯುವ ಸಾಧ್ಯತೆಗಳು ಹೆಚ್ಚಿದೆ. - [ಗಡಿ ಜಗಳ: ಪರಿಶೀಲನೆಗೆ ಹೋದವರ ಮೇಲೆ ಕಲ್ಲು ತೂರಾಟ!](https://mobiletime.in/2025/10/border-dispute-stones-thrown-at-those-who-went-to-inspect/): ಕಾರವಾರದ ಸದಾಶಿವಗಡದಲ್ಲಿ ಭೂಮಿ ಹಾಗೂ ರಸ್ತೆ ವಿಷಯವಾಗಿ ಗಡಿ ಜಗಳ ನಡೆಯುತ್ತಿದೆ. ಈ ಸಮಸ್ಯೆ ಪರಿಶೀಲನೆಗೆ ಜನಪ್ರತಿನಿಧಿ-ಅಧಿಕಾರಿಗಳು ತೆರಳಿದಾಗ ಕಲ್ಲು ತೂರಾಟ ನಡೆದಿದ್ದು, ಸಾರ್ವಜನಿಕೊರೊಬ್ಬರ ತಲೆಗೆ ಪೆಟ್ಟಾಗಿದೆ. ಸಾರ್ವಜನಿಕ ರಸ್ತೆಗೆ ಅಡ್ಡಲಾಗಿ ಕಲ್ಲುಗಳನ್ನಿರಿಸಿ ಸಮಸ್ಯೆ ಮಾಡಿದ ಕುಟುಂಬವೊoದರ ವಿರುದ್ಧ ಚಿತ್ತಾಕುಲ ಪಿಡಿಓ ರಾಮದಾಸ ನಾಯ್ಕ ಪೊಲೀಸ್ ದೂರು ನೀಡಿದ್ದಾರೆ. ಅದೇ ಕುಟುಂಬದವರ ವಿರುದ್ಧ ಕಲ್ಲು ತಾಗಿ ಗಾಯಗೊಂಡ ಸದಾಶಿವಗಡ ಬಿಡ್ತುಲಭಾಗದ ಗೂಡ್ಸ ಆಟೋ ಚಾಲಕ ವಸಂತ ಸಾಳಸ್ಕರ್ ಸಹ ದೂರು ನೀಡಿದ್ದಾರೆ. ಈ ಎರಡು ಪ್ರಕರಣ ದಾಖಲಿಸಿಕೊಂಡ ಚಿತ್ತಾಕುಲ ಪೊಲೀಸರು ಸದಾಶಿವಗಡ ದೇಸಾಯಿವಾಡದ ದೀಪಕಕುಮಾರ ನಾಯ್ಕ, ಅವರ ಪತ್ನಿ ರಾಜಶ್ರೀ ನಾಯ್ಕ, ಮಕ್ಕಳಾದ ವಿಶಾಲ ನಾಯ್ಕ ಹಾಗೂ ಪ್ರಾಚಿ ನಾಯ್ಕ ವಿರುದ್ಧ ತನಿಖೆ ಶುರು ಮಾಡಿದ್ದಾರೆ. ದೇಸಾಯಿವಾಡದಲ್ಲಿ ವಾಸವಾಗಿರುವ ಉರ್ಮಿಳಾ ವಿಶ್ವನಾಥ ನಾಯ್ಕ ಅವರು ತಾವು ಓಡಾಡುವ ರಸ್ತೆಗೆ ಅಡ್ಡಲಾಗಿ ದೀಪಕಕುಮಾರ ನಾಯ್ಕ ಕುಟುಂಬದವರು ಕಲ್ಲುಗಳನ್ನಿಡುವ ಬಗ್ಗೆ ಗ್ರಾಮ ಪಂಚಾಯತಗೆ ದೂರಿದ್ದರು. ಸಂಚಾರಕ್ಕೆ ತಡೆ ಒಡ್ಡುವ ಬಗ್ಗೆ ಅವರು ತಕರಾರು ಸಲ್ಲಿಸಿದ್ದರು. ಅದರ ಪ್ರಕಾರ ಅಕ್ಟೊಬರ್ 24ರಂದು ಗ್ರಾಮ ಪಂಚಾಯತ ಪಿಡಿಓ ಜೊತೆ ಅಧ್ಯಕ್ಷ-ಉಪಾಧ್ಯಕ್ಷರು ಸ್ಥಳ ಪರಿಶೀಲನೆಗೆ ಹೋಗಿದ್ದರು. ಈ ವೇಳೆ `ಆ ಮಣ್ಣಿನ ರಸ್ತೆ ನಮಗೆ ಸೇರಿದ್ದು’ ಎಂದು ದೀಪಕಕುಮಾರ ಕುಟುಂಬದವರು ಗಲಾಟೆ ಮಾಡಿದರು. ಉರ್ಮಿಳಾ ನಾಯ್ಕ ಅವರ ಜೊತೆ ಅವರ ಮಕ್ಕಳಾದ ಪ್ರಕಾಶ, ರಥಿ ಸೇರಿ ಕಲ್ಲು ತೆಗೆಯುವ ಪ್ರಯತ್ನ ಮಾಡಿದಾಗ ಕಲ್ಲು ತೂರಾಟ ನಡೆಸಿದರು. ಈ ಕಲ್ಲು ಉರ್ಮಿಳಾ ನಾಯ್ಕ ಅವರ ಅಣ್ಣ ವಸಂತ ಸಾಳಸ್ಕರ್ ಅವರಿಗೆ ತಾಗಿತು. ಗಾಯಗೊಂಡ ಅವರು ಆಸ್ಪತ್ರೆ ಸೇರಿ ಚಿಕಿತ್ಸೆಪಡೆದರು. ಪಿಡಿಓ ರಾಮದಾಸ ನಾಯ್ಕ ಹಾಗೂ ವಸಂತ ಸಾಳಸ್ಕರ್ ಅವರು ನೀಡಿದ ದೂರು ಸ್ವೀಕರಿಸಿದ ಪೊಲೀಸರು ದೀಪಕಕುಮಾರ ನಾಯ್ಕ ಅವರ ಕುಟುಂಬದ ಮೇಲೆ ಪ್ರಕರಣ ದಾಖಲಿಸಿದ್ದಾರೆ. - [ದೇಶದಲ್ಲಿಯೇ ದುಬಾರಿ ಈ ಬ್ಯೂಟಿ ಪಾರ್ಲರ್: ಇಲ್ಲಿ ಮಾತನಾಡಿದರೂ ಲಕ್ಷ ಲಕ್ಷ ಪೀಕುತ್ತಾರೆ!](https://mobiletime.in/2025/10/this-is-the-most-expensive-beauty-parlor-in-the-country-even-talking-here-costs-millions/): ಮೇಕಪ್ ಮಾಡಿಕೊಳ್ಳುವುದಕ್ಕಾಗಿ ಶಿರಸಿಯ ಬ್ಯೂಟಿ ಪಾರ್ಲರ್’ಗೆ ಭೇಟಿ ನೀಡಿದ್ದ ಶಾಂತಲಾ ಹೆಗಡೆ ಅವರಿಗೆ ಲಕ್ಷ ಲಕ್ಷ ರೂ ಮೋಸವಾಗಿದೆ. ಮಾತಿನ ಮೋಡಿ ಮಾಡಿದ ಶ್ರೇಯಾ ವರ್ಣೇಕರ್ ಅವರು ಪಾತಿಮಾ ಎಂಬಾತರ ನೆರವಿನಿಂದ 3 ಲಕ್ಷ ರೂಪಡೆದು ಯಾಮಾರಿಸಿದ್ದಾರೆ! ಶಿರಸಿ ಕುಳವೆಯ ಶಾಂತಲಾ ಅನಿರುದ್ಧ ಹೆಗಡೆ ಅವರು ಸದ್ಯ ಬೆಂಗಳೂರು ನಿವಾಸಿ. 2023ರ ಸೆಪ್ಟೆಂಬರ್ ಮೊದಲ ವಾರ ಅವರು ಬಸ್ತಿಗಲ್ಲಿಯಲ್ಲಿರುವ ಬ್ಯೂಟಿ ಪಾರ್ಲರಿಗೆ ಭೇಟಿ ಕೊಟ್ಟಿದ್ದರು. ಶ್ರೇಯಾ ಬ್ಯೂಟಿ ಪಾರ್ಲರ್ ಮಾಲಕಿ ಶ್ರೇಯಾ ಸಂತೋಷ ವರ್ಣೇಕರ್ ಅವರು ಮಾತಿನ ನಡುವೆ ಸರ್ಕಾರಿ ಉದ್ಯೋಗದ ಬಗ್ಗೆ ಪ್ರಸ್ತಾಪಿಸಿದರು. `ನನಗೆ ಪರಿಚಯವಿರುವ ಧಾರವಾಡದ ಪಾತಿಮಾ ಜಾಸ್ಮಿನ್ ಶೇಖ್ ಅವರು ಹಣ ಕೊಟ್ಟರೆ ಸರ್ಕಾರಿ ಕೆಲಸ ಕೊಡಿಸುತ್ತಾರೆ’ ಎಂದು ಶ್ರೇಯಾ ವರ್ಣೇಕರ್ ಅವರು ನಂಬಿಸಿದರು. ಅದಾದ ನಂತರ `ಅರಣ್ಯ ಇಲಾಖೆಯಲ್ಲಿ ಕ್ಲರ್ಕ ಹುದ್ದೆ ಖಾಲಿಯಿದ್ದು, ಹಣ ಕೊಟ್ಟರೆ ಅದನ್ನು ಕೊಡಿಸುವೆ’ ಎಂದು ಶ್ರೇಯಾ ವರ್ಣೇಕರ್ ಅವರು ಭರವಸೆ ನೀಡಿದರು. ಧಾರವಾಡದ ಪಾತಿಮಾ ಜಾಸ್ಮಿನ್ ಶೇಖ್ ಅವರು ಅರಣ್ಯ ಇಲಾಖೆಯಲ್ಲಿ ಪಿಲ್ಡ್ ಆಫಿಸರ್ ಆಗಿದ್ದು, ಅವರೇ ಎಲ್ಲಾ ಕೆಲಸ ಮಾಡಿಕೊಡುತ್ತಾರೆ ಎಂದು ಪುಸಲಾಯಿಸಿದರು. ಸರ್ಕಾರಿ ಕೆಲಸದ ಆಸೆಗಾಗಿ 2023ರ ಮಾರ್ಚ 28ರಂದು ಶಾಂತಲಾ ಹೆಗಡೆ ಅವರು ಫೋನ್ ಪೇ ಮೂಲಕ 50 ಸಾವಿರ ರೂ ವರ್ಗಾಯಿಸಿದರು. ಪಾತಿಮಾ ಅವರ ಖಾತೆಗೆ ಈ ಹಣ ಜಮಾ ಆಗಿದ್ದು, 2023ರ ನವೆಂಬರ್ 29ರಂದು ಮತ್ತೆ 25 ಸಾವಿರ ರೂ ಕಳುಹಿಸಿದರು. ಕಾಸು ಕೊಟ್ಟರೆ ಸರ್ಕಾರಿ ಕೆಲಸ ಸಿಗುವ ಬಗ್ಗೆ ಶಾಂತಲಾ ಹೆಗಡೆ ಅವರ ತಂಗಿ ಶೀತಲ್ ಭಟ್ಟ ಅವರ ಮೂಲಕ ಅವರ ಸ್ನೇಹಿತೆ ಕೀರ್ತಿ ಅವರಿಗೆ ಗೊತ್ತಾಯಿತು. ಕೀರ್ತಿ ಅವರು ಸಹ ಸರ್ಕಾರಿ ಉದ್ಯೋಗಕ್ಕೆ ಪ್ರಯತ್ನಿಸಿದ್ದು, ಶೀತಲ್ ಭಟ್ಟ ಅವರ ಫೋನ್ ಪೇ ಮೂಲಕ ಕೀರ್ತಿ ಅವರ ಪರವಾಗಿ 50 ಸಾವಿರ ರೂಪಾಯಿ ವರ್ಗಾಯಿಸಿದರು. ಇದಾದ ಮೇಲೆ ಶಾಂತಲಾ ಹೆಗಡೆ ಅವರು ಸಹ 30 ನವೆಂಬರ್ 2023ರಂದು ಮತ್ತೆ 50 ಸಾವಿರ ರೂಪಾಯಿಗಳನ್ನು ಪಾತಿಮಾ ಅವರ ಖಾತೆಗೆ ಕಳುಹಿಸಿದ್ದು, ಆ ವೇಳೆ ಪಾತಿಮಾ ಅವರೇ 25 ಸಾವಿರ ರೂ ಹಣಮರಳಿಸಿ ಇನ್ನಷ್ಟು ನಂಬಿಕೆಗಿಟ್ಟಿಸಿಕೊoಡರು. ಕೀರ್ತಿ ಅವರು ಮತ್ತೆ ತಮ್ಮ ಪರವಾಗಿ ಶೀತಲ್ ಭಟ್ಟ ಅವರ ಫೋನಿನಿಂದ 50 ಸಾವಿರ ರೂ ಹಣವನ್ನು ಪಾತಿಮಾ ಅವರಿಗೆ ವರ್ಗಾಯಿಸಿದರು. 2023ರ ಡಿಸೆಂಬರ್ 3ರಂದು ಮತ್ತೆ ಶೀತಲ್ ಭಟ್ಟ ಅವರ ಪರವಾಗಿ ಶಾಂತಲಾ ಹೆಗಡೆ ಅವರು ಇನ್ನೊಮ್ಮೆ 1 ಲಕ್ಷ ರೂ ಹಣ ವರ್ಗಾಯಿಸಿದರು. ಆದರೆ, ಎರಡು ವರ್ಷ ಕಾದರೂ ಅವರಿಗೆ ಸರ್ಕಾರಿ ನೌಕರಿ ಸಿಗಲಿಲ್ಲ. ಅರಣ್ಯ ಇಲಾಖೆಯಿಂದ ಪತ್ರವೂ ಬರಲಿಲ್ಲ. ಕಾಸುಪಡೆದು ಮೋಸ ಮಾಡಿದ ಬಗ್ಗೆ ಶಾಂತಲಾ ಹೆಗಡೆ ಅವರು ವಿಚಾರಿಸಿದಾಗ ಅಲ್ಲಿನ ಯಶೋಧಾ ರಾಘವೇಂದ್ರ ರಾಯ್ಕರ್ ಅವರು 50 ಸಾವಿರ ರೂ ಹಣಕೊಟ್ಟು ಮೋಸ ಹೋದ ವಿಷಯ ಅರಿವಿಗೆ ಬಂದಿತು. ಬ್ಯೂಟಿ ಪಾರ್ಲರಿನ ಶ್ರೇಯಾ ವರ್ಣೇಕರ್ ಹಾಗೂ ಪಾತಿಮಾ ಜಾಸ್ಮಿನ್ ಶೇಖ್ ಸೇರಿ ಜನರನ್ನು ಮೋಸ ಮಾಡುತ್ತಿರುವ ಬಗ್ಗೆ ಶಾಂತಲಾ ಹೆಗಡೆ ಅವರು ಪೊಲೀಸರಿಗೆ ದೂರಿದರು. ತಮಗಾದ ಅನ್ಯಾಯದ ಬಗ್ಗೆ ವಿವರಿಸಿ ಅವರು ಶಿರಸಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದರು. - [`ರೈತಪರ ಚಿಂತಕನಿಗೆ ಗೌರವ ಡಾಕ್ಟರೇಟ್'](https://mobiletime.in/2025/10/honorary-doctorate-for-pro-farmer-thinker/): ಯಲ್ಲಾಪುರ ಹಾಗೂ ಅಣ್ಣಿಗೇರಿಯಲ್ಲಿ ಕೃಷಿ ಉಪಕರಣಗಳ ವಿತರಣಾ ಕೇಂದ್ರ ಹೊಂದಿರುವ ಸುರಕ್ಷಾ ಅಗ್ರೊಟೆಕ್ ಮಾಲಕ ಮಂಜುನಾಥ್ ಹೊನ್ನಣ್ಣನವರ್ ಅವರಿಗೆ ಅಮೆರಿಕ ವಿಡವಮ್ ಪೀಸ್ ಯುನಿವರ್ಸಿಟಿಯು ಗೌರವ ಡಾಕ್ಟರೇಟ್ ಪ್ರಶಸ್ತಿ ಪ್ರದಾನ ಮಾಡಿದೆ. ಮಂಜುನಾಥ್ ಹೊನ್ನಣ್ಣನವರ್ ಅವರು 15 ವರ್ಷಗಳ ಹಿಂದೆ `ಸುರಕ್ಷಾ ಅಗ್ರೋ ಟೆಕ್’ ಎಂಬ ಕಂಪನಿ ಕಟ್ಟಿ ಕೃಷಿಕರು ಹಾಗೂ ಕಾರ್ಮಿಕರಿಗೆ ನೆರವಾಗಿದ್ದಾರೆ. ರಾಜ್ಯದ ಅನೇಕ ಕಡೆ ತಮ್ಮ ಕಂಪನಿಯ ಮೂಲಕ ಯುವಕರಿಗೆ ಉದ್ಯೋಗ ನೀಡಿದ್ದಾರೆ. ಸರ್ಕಾರದ ಸಬ್ಸಿಡಿ ಜೊತೆ ಟ್ರ‍್ಯಾಕ್ಟರ್, ಟೇಲರ್, ಕಳೆ ತೆಗೆಯುವ ಯಂತ್ರ, ಬಿತ್ತುವ ಕೂರ್ಗಿ ಜೊತೆ ಅಗತ್ಯವಿರುವ ಸಲಕರಣೆಗಳನ್ನು ಸುರಕ್ಷಾ ಅಗ್ರೋ ಟೆಕ್ ಮೂಲಕ ವಿತರಿಸುತ್ತಿದ್ದಾರೆ. ಯಂತ್ರಗಳ ಸುರಕ್ಷಿತ ಬಳಕೆ, ಅವುಗಳ ನಿರ್ವಹಣೆ ಹಾಗೂ ಆಧುನಿಕ ಕೃಷಿ ಪದ್ಧತಿ ಮೂಲಕ ಕಡಿಮೆ ಬೆಲೆಯಲ್ಲಿ ಅತ್ಯಧಿಕ ಆದಾಯಪಡೆಯುವ ವಿಧಾನಗಳ ಬಗ್ಗೆ ರೈತರಿಗೆ ಅವರು ಕಂಪನಿ ಮೂಲಕ ಮಾಹಿತಿ ನೀಡುತ್ತಿದ್ದಾರೆ. ಸುರಕ್ಷಾ ಅಗ್ರೋ ಟೆಕ್ ಸ್ವತಃ ಯಂತ್ರೋಪಕರಣಗಳನ್ನು ಉತ್ಪಾದಿಸುವ ಘಟಕವನ್ನು ಹೊಂದಿದ್ದು, ಯಂತ್ರೋಪಕರಣಗಳ ಮಾರಾಟದ ಜೊತೆ ಅದರ ದುರಸ್ಥಿ ಸೇವೆಯನ್ನು ಒದಗಿಸುತ್ತಿದೆ. ಪತ್ರಕರ್ತರಾಗಿಯೂ ಕೆಲಸ ಮಾಡುವ ಮಂಜುನಾಥ್ ಹೊನ್ನಣ್ಣನವರ್ ಅವರ ಈ ಎಲ್ಲಾ ಸಾಧನೆ ಗಮನಿಸಿ ತಮಿಳು ನಾಡಿನ ಹೊಸೂರ್ ಪಟ್ಟಣದಲ್ಲಿರುವ ಹೋಟೆಲ್ ಐಟಿಸಿ ಗ್ರೂಪ್‌ನಲ್ಲಿ ಮಾಜಿ ಶಾಸಕ ಎಸ್ ಪಿ ಜೆ. ಕಮಲ ಕಣ್ಣನ್ ಅವರು ಪ್ರಶಸ್ತಿ ಪ್ರದಾನ ಮಾಡಿದ್ದಾರೆ. ಹಿರಿಯ ವಿಜ್ಞಾನಿ ಕೆ ಎಸ್ ಸುಬ್ರಹ್ಮಣ್ಯಂ, ಉದ್ಯಮಿ ಎ ಶ್ರೀಧರ್, ಹಿರಿಯ ಪತ್ರಕರ್ತ ಗುಣ ಶೇಖರನ್, ಚನೈ ಪ್ರೆಸ್ ಮಿಡಿಯಾ ರಿಪೋರ್ಟ ಯೂನಿನಯ್ ಅಧ್ಯಕ್ಷ ಶಿವಥಮಿಲನ್ ಅವರು ಈ ಸನ್ನಿವೇಶಕ್ಕೆ ಸಾಕ್ಷಿಯಾದರು. - [2025 ಅಕ್ಟೊಬರ್ 27ರ ದಿನ ಭವಿಷ್ಯ](https://mobiletime.in/2025/10/prediction-for-october-27-2025-2/): ಮೇಷ ರಾಶಿ: ಹೊಸ ಕೆಲಸ ಶುರು ಮಾಡಲು ಯೋಗ್ಯ ದಿನ. ಕುಟುಂಬದಲ್ಲಿ ಸಂತೋಷದ ವಾತಾವರಣ ಸಿಗಲಿದೆ. ಹಣಕಾಸಿನ ವಿಷಯದಲ್ಲಿಯೂ ನೆಮ್ಮದಿಯ ದಿನವಾಗಿರಲಿದೆ. ವೃಷಭ ರಾಶಿ: ನಿಮ್ಮ ಕೆಲಸಗಳಲ್ಲಿ ಸಾಧನೆ ಸಾಧ್ಯವಿದೆ. ಮನಸ್ಸಿಗೆ ಶಾಂತಿ ಸಿಗಲಿದೆ. ಆರೋಗ್ಯದ ವಿಷಯದಲ್ಲಿ ಎಚ್ಚರಿಕೆ ಅಗತ್ಯ. ಮಿಥುನ ರಾಶಿ: ಹಳೆಯ ಕೆಲಸಗಳು ಈ ದಿನ ಮುಗಿಯಲಿದೆ. ಭಾವನಾತ್ಮಕ ವಿಷಯವಾಗಿ ನಿಮಗೆ ತೊಂದರೆ ಕಾಡುವ ಸಾಧ್ಯತೆಗಳಿವೆ. ಕುಟುಂಬದಲ್ಲಿ ಸಂಭಾಷಣೆ ಅಗತ್ಯ. ಕರ್ಕ ರಾಶಿ: ಕೆಲಸದ ವಿಷಯದಲ್ಲಿ ಒತ್ತಡ ಕಡಿಮೆಯಾಗಲಿದೆ. ಆರೋಗ್ಯದಲ್ಲಿ ಸುಧಾರಣೆ ಸಾಧ್ಯವಿದೆ. ವಿವಾಧಗಳು ದೂರವಾಗಲಿದೆ. ಸಿಂಹ ರಾಶಿ: ನಿಮ್ಮ ಗುರಿ ಸಾಧನೆಗೆ ಉತ್ತಮ ಸಮಯ ಬಂದಿದೆ. ವ್ಯವಹಾರದಲ್ಲಿ ಲಾಭ ಆಗಲಿದೆ. ಶಿಕ್ಷಣ ಕ್ಷೇತ್ರದಲ್ಲಿ ಸಾಧನೆ ಸಾಧ್ಯವಿದೆ. ಕನ್ಯಾ ರಾಶಿ: ಹೊಸ ಅವಕಾಶಗಳು ಸಿಗಲಿದೆ. ಕುಟುಂಬದ ಒಳಿತಿಗೆ ದೃಢ ನಿರ್ಧಾರ ಮಾಡಲಿದ್ದೀರಿ. ವ್ಯಕ್ತಿತ್ವ ಬೆಳವಣಿಗೆ ಪೂರಕವಾಗಿ ಚಿಂತಿಸಿ. ತುಲಾ ರಾಶಿ: ಉದ್ಯೋಗದಲ್ಲಿ ಸುಧಾರಣೆ ಸಾಧ್ಯವಿದೆ. ಆರೋಗ್ಯ ಏರುಪೇರಾದರೆ ಆಸ್ಪತ್ರೆಗೆ ಭೇಟಿ ನೀಡುವುದು ಅಗತ್ಯ. ಸ್ನೇಹಿತರ ಜೊತೆ ಬೆರೆಯಿರಿ. ವೃಶ್ಚಿಕ ರಾಶಿ: ಧ್ಯಾನದಲ್ಲಿ ಆಸಕ್ತಿ ಬೆಳೆಯಲಿದೆ. ದೇವರ ಭಜನೆ ಮಾಡುವುದು ಅಷ್ಟೇ ಮುಖ್ಯ. ಕುಟುಂಬದಲ್ಲಿ ಹರ್ಷ ಮೂಡಲಿದೆ. ವಿದ್ಯಾರ್ಥಿಗಳಿಗೆ ಉತ್ತಮ ದಿನ. ಧನು ರಾಶಿ: ನಿಮ್ಮೊಳಗಿನ ಒತ್ತಡ ಕಡಿಮೆ ಆಗುತ್ತದೆ. ಹೊಸ ಕಾರ್ಯ ಮನ್ನಣೆ ಸಿಗಲಿದೆ. ಸಮಯ ಪಾಲನೆ ಮಾಡುವುದು ಮುಖ್ಯ. ಮಕರ ರಾಶಿ: ವ್ಯವಹಾರದಲ್ಲಿ ಲಾಭ ಸಿಗಲಿದೆ. ಸ್ನೇಹಿತರ ಸಹಕಾರ ಸಾಧ್ಯವಿದೆ. ಶಾಂತಿಯಿAದ ದಿನ ಕಳೆಯುವಿರಿ. ಕುಂಭ ರಾಶಿ: ಕುಟುಂಬದ ಜೊತೆ ಚನ್ನಾಗಿ ಬರೆಯುವಿರಿ. ವ್ಯಾಪಾರದಲ್ಲಿ ಬೆಳವಣಿಗೆ ಸಾಧ್ಯವಿದೆ. ವಿದ್ಯಾರ್ಥಿಗಳಿಗೆ ಉತ್ತಮ ಫಲಿತಾಂಶ ಸಿಗಲಿದೆ. ಯಾತ್ರೆಯ ಯೋಜನೆ ರೂಪಿಸಲು ಸಕಾಲ. ಮೀನ ರಾಶಿ: ಆರ್ಥಿಕ ಸ್ಥಿತಿ ಸಾಮಾನ್ಯವಾಗಿರಲಿದೆ. ಹೊಸ ಕಾರ್ಯ ಆರಂಭಕ್ಕೆ ಯೋಗ್ಯ ಸಮಯ. ಒಳ್ಳೆಯ ಕೆಲಸಗಲಿಗೆ ಉತ್ತಮ ದಿನ. - [ರಸ್ತೆ ಮೇಲೆ ನಿಂತ ಕಾರು: ಬುದ್ದಿ ಹೇಳಿ ಪೆಟ್ಟು ತಿಂದ ಹಿರಿಯ ನಾಗರಿಕ!](https://mobiletime.in/2025/10/car-stopped-on-the-road-senior-citizen-gets-hit-by-a-car-after-being-told-off/): ಕಾರವಾರದ ನಿವೃತ್ತ ನೌಕರ ವಿಠ್ಠಲ ನಾಯ್ಕ ಅವರ ಮೇಲೆ ಹಲ್ಲೆ ನಡೆದಿದೆ. ರಸ್ತೆ ಮೇಲೆ ನಿಂತ ಕಾರನ್ನು ಬೇರೆಡೆ ನಿಲ್ಲಿಸುವಂತೆ ಸೂಚಿಸಿದ ಕಾರಣ ಅರುಣ ನಾಯ್ಕ ಅವರು ವಿಠ್ಠಲ ನಾಯ್ಕ ಅವರಿಗೆ ಹೊಡೆದಿದ್ದಾರೆ. ಕಾರವಾರದ ಸಂಕ್ರಿವಾಡ ವಿಠ್ಠಲ ಸೀತಾರಾಮ ನಾಯ್ಕ (64) ಅವರು ವಾಸವಾಗಿದ್ದಾರೆ. ಅಕ್ಟೊಬರ್ 24ರಂದು ರಾತ್ರಿ ಅವರು ಸಂಕ್ರಿವಾಡ ರಸ್ತೆ ಮೇಲೆ ಬರುತ್ತಿದ್ದಾಗ ರಸ್ತೆ ಮೇಲೆ ಕಾರು ನಿಂತಿರುವುದನ್ನು ನೋಡಿದರು. ಅಲ್ಲಿದ್ದ ಅರುಣ ಬಾಬುರಾಯ ನಾಯ್ಕ ಅವರಿಗೆ ಕಾರನ್ನು ಬೇರೆ ಕಡೆ ನಿಲ್ಲಿಸುವಂತೆ ಸೂಚಿಸಿದರು. ಆಗ, ಅರುಣ ನಾಯ್ಕ ಅವರು ಸುರೇಶ ಬಾಬುರಾಯ ನಾಯ್ಕ ಅವರ ಬಳಿ ಈ ವಿಷಯ ತಿಳಿಸುವಂತೆ ಹೇಳಿದರು. ವಿಠ್ಠಲ ನಾಯ್ಕ ಅವರು `ರಸ್ತೆ ಮೇಲಿರುವ ಕಾರು ತೆಗೆಯಿರಿ’ ಎಂದು ಸುರೇಶ ನಾಯ್ಕ ಅವರಿಗೆ ಹೇಳಿದರು. ಆಗ, ಸುರೇಶ ನಾಯ್ಕ ಅವರು `ನನಗೆ ಅದಕ್ಕೆ ಸಂಬAಧವಿಲ್ಲ’ ಎಂದು ಹೇಳಿದರು. ಇದರಿಂದ ಸಿಟ್ಟಾದ ವಿಠ್ಠಲ ನಾಯ್ಕ ಅವರು `ಇಲ್ಲಿ ಏನಾದರೂ ಆದರೆ ನೀವೇ ಹೊಣೆ’ ಎಂದು ಕೂಗಿದರು. ಆಗ, ಏಕಾಏಕಿ ಅರುಣ ನಾಯ್ಕ ಅವರು ರೊಚ್ಚಿಗೆದ್ದು ವಿಠ್ಠಲ ನಾಯ್ಕ ಅವರ ಮುಖಕ್ಕೆ ಗುದ್ದಿದರು. ಇದರಿಂದ ವಿಠ್ಠಲ ನಾಯ್ಕ ಅವರ ಕಣ್ಣಿಗೆ ಗಾಯವಾಯಿತು. ಅದಾಗಿಯೂ ಬಿಡದ ಅರುಣ ನಾಯ್ಕ ಅವರು ವಿಠ್ಠಲ ನಾಯ್ಕ ಅವರನ್ನು ನೆಲಕ್ಕೆ ದೂಡಿ ನೋವು ಮಾಡಿದರು. ಕಾರವಾರ ಆಸ್ಪತ್ರೆ ಸೇರಿದ ವಿಠ್ಠಲ ನಾಯ್ಕ ಅವರು ಅಲ್ಲಿ ಚಿಕಿತ್ಸೆಪಡೆದಿದ್ದು, ತಮಗಾದ ಅನ್ಯಾಯದ ವಿರುದ್ಧ ಪೊಲೀಸ್ ದೂರು ನೀಡಿದರು. ಕಾರವಾರ ಶಹರ ಠಾಣೆ ಪೊಲೀಸರು ಅರುಣ ನಾಯ್ಕ ಹಾಗೂ ವಿಠ್ಠಲ ನಾಯ್ಕ ಅವರ ವಿರುದ್ಧ ಪ್ರಕರಣ ದಾಖಲಿಸಿದರು. - [ಪತ್ನಿ ಸಿಗದ ಕೊರಗಿನಲ್ಲಿ ಬಾವಿಗೆ ಹಾರಿದ ಪತಿ!](https://mobiletime.in/2025/10/husband-jumps-into-well-in-despair-over-not-finding-wife/): ಕಾಣೆಯಾದ ಪತ್ನಿ ಸಿಗದ ಕೊರಗಿನಲ್ಲಿ ಶಿರಸಿಯ ಹನಮಂತಪ್ಪ ಬೋವಿವಡ್ಡರ್ ಅವರು ಬಾವಿಗೆ ಹಾರಿದ್ದಾರೆ. ನೀರಿನಲ್ಲಿ ಉಸಿರುಗಟ್ಟಿ ಅವರುಬಾವಿಯೊಳಗೆ ಶವವಾಗಿದ್ದಾರೆ. ಸೊರಬಾದ ಬಲರಾಮ ಹನಮಂತಪ್ಪ ಬೋವಿವಡ್ಡರ್ (47) ಅವರು ಶಿರಸಿಯ ಬೈರುಂಬೆ ಬಳಿ ವಾಸವಾಗಿದ್ದರು. ಬೆಳಲೆಯ ಬಳಿ ಅವರು ಕುಟುಂಬಸಹಿತ ಕೂಲಿ ಕೆಲಸ ಮಾಡುತ್ತಿದ್ದರು. ಅವರ ಪತ್ನಿ ಮಂಜುಳಾ ಅವರು ಕಾಣೆಯಾಗಿದ್ದು, ಎಲ್ಲಿ ಹುಡುಕಿದರೂ ಸಿಕ್ಕಿರಲಿಲ್ಲ. ಈಚೆಗೆ ಬಲರಾಮ ಬೋವಿವಡ್ಡರ್ ಅವರು ಅನಾರೋಗ್ಯ ಸಹ ಒಳಗಾಗಿದ್ದರು. ಅನಾರೋಗ್ಯದ ಅವಧಿಯಲ್ಲಿಯೂ ಪತ್ನಿ ಜೊತೆಗಿರದ ಕಾರಣ ಅವರು ಸಾಕಷ್ಟು ನೊಂದಿದ್ದರು. ಹೀಗಿರುವಾಗ ಅಕ್ಟೊಬರ್ 24ರಂದು ಹನಮಂತಪ್ಪ ಬೋವಿವಡ್ಡರ್ ಅವರು ಬೆಳಲೆಯ ಅಲ್ಪಿಡ್ ರೋಡಿಗ್ರಸ್ ಅವರ ಹಂದಿ ಸಾಕಾಣಿಕಾ ಕೇಂದ್ರದ ಬಳಿ ಹೋಗಿದ್ದರು. ಮಾನಸಿಕ ನೋವಿನಲ್ಲಿದ್ದ ಅವರು ಅಲ್ಲಿರುವ ನೆಲಬಾವಿಯಲ್ಲಿ ಅವರು ಹಾರಿ ಪ್ರಾಣ ಬಿಟ್ಟರು. ಅದೇ ಹಂದಿ ಸಾಕಾಣಿಕಾ ಕೇಂದ್ರದಲ್ಲಿ ಕೆಲಸ ಮಾಡುವ ಹನಮಂತಪ್ಪ ಬೋವಿವಡ್ಡರ್ ಅವರ ಮಗ ಗಣೇಶ ಬೋವಿವಡ್ಡರ್ ತಂದೆಯ ಸಾವಿನ ಬಗ್ಗೆ ಪೊಲೀಸರಿಗೆ ಹೇಳಿದರು. ಶಿರಸಿ ಗ್ರಾಮೀಣ ಠಾಣೆ ಪೊಲೀಸರು ಪ್ರಕರಣ ದಾಖಲಿಸಿದರು. - [ಬೈಕಿನಿಂದ ಬಿದ್ದ ಮಹಿಳೆ: ಮುಕ್ತಿಮಠದ ಮುಂದೆಯೇ ಸಿಕ್ಕಿತು ಮುಕ್ತಿ!](https://mobiletime.in/2025/10/woman-who-fell-off-bike-she-found-salvation-right-in-front-of-mukti-math/): ಶಿರಸಿ-ಮುಂಡಗೋಡು ರಸ್ತೆಯಲ್ಲಿ ಶಿರಸಿಯ ನಯನಕುಮಾರ ಅವರು ಜೋರಾಗಿ ಬೈಕ್ ಓಡಿಸಿದ್ದು, ಆ ಬೈಕಿನ ಹಿಂದೆ ಕೂತಿದ್ದ ಮುಂಡಗೋಡಿನ ಪದ್ಮಾ ತಳವಾರ ಅವರು ನೆಲಕ್ಕೆ ಬಿದ್ದು ಸಾವಪ್ಪಿದ್ದಾರೆ. ಅಕ್ಟೊಬರ್ 21ರ ಸಂಜೆ ಶಿರಸಿಯ ನಯನಕುಮಾರ ಮಾರುತಿ ಬಂಗೇರ ಅವರು ಮುಂಡಗೋಡಿನ ಕಡೆ ಹೊರಟಿದ್ದರು. ಅವರ ಬೈಕಿನಲ್ಲಿ ಮುಂಡಗೋಡು ಮಳಗಿಯ ಪದ್ಮಾ ವೆಂಕಟೇಶ ತಳವಾರ (52) ಅವರು ಕೂತಿದ್ದರು. ರಾಮಾಪುರದಿಂದ ಮಳಗಿ ಕಡೆ ಆ ಬೈಕು ಚಲಿಸುತ್ತಿದ್ದು, ಗೊಡಗೋಡಿಕೊಪ್ಪದ ಮುಕ್ತಿಮಠದ ಹತ್ತಿರ ಬೈಕಿನ ವೇಗ ಹೆಚ್ಚಿತು. ಪರಿಣಾಮ ಪದ್ಮಾ ತಳವಾರ ಅವರು ಆಯತಪ್ಪಿ ಬೈಕಿನಿಂದ ಕೆಳಗೆ ಬಿದ್ದರು. ಅವರ ತಲೆ ಹಿಂಬಾಗ ಭಾರೀ ಪ್ರಮಾಣದಲ್ಲಿ ನೋವಾಯಿತು. ಅಲ್ಲಿಯೇ ಅವರು ತಮ್ಮ ಪ್ರಾಣಬಿಟ್ಟರು. ಮಳಗಿಯ ರವಿ ಅಟ್ಟಣಗಿ ಅವರು ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದು, ಮುಂಡಗೋಡು ಪೊಲೀಸರು ವೇಗವಾಗಿ ಬೈಕ್ ಓಡಿಸಿದ ನಯನಕುಮಾರ ಮಾರುತಿ ಬಂಗೇರ ಅವರ ವಿರುದ್ಧ ಪ್ರಕರಣ ದಾಖಲಿಸಿದರು. - [ನಿದ್ರೆಯಲ್ಲಿದ್ದವನನ್ನು ಎಬ್ಬಿಸಿ ಕೆನ್ನೆಗೆ ಬಾರಿಸಿದ ಜನ!](https://mobiletime.in/2025/10/people-woke-up-a-sleeping-man-and-slapped-him-on-the-cheek/): ರಾತ್ರಿ 2.30ಕ್ಕೆ ಭಟ್ಕಳದ ಉದಯ ಕೋಟಾರಿ ಅವರ ಪತ್ನಿ ಮನೆಗೆ ನುಗ್ಗಿದ ಐದು ಜನ ಅಲ್ಲಿದ್ದ ಉದಯ ಕೋಟಾರಿ ಅವರನ್ನು ಎಬ್ಬಿಸಿ ಗಲಾಟೆ ಮಾಡಿದ್ದಾರೆ. ಈ ಗಲಾಟೆ ಅವಧಿಯಲ್ಲಿ ಭಾಸ್ಕರ ಮೊಗೇರ ಅವರು ಉದಯ ಕೋಟಾರಿ ಅವರ ಕೆನ್ನೆಗೆ ಬಾರಿಸಿದ್ದಾರೆ. ಭಟ್ಕಳ ಬೆಳಕೆಯ ಕಟಗೇರಿ ಉದಯ ಕೋಟಾರಿ ಅವರು ವಾಸವಾಗಿದ್ದಾರೆ. ಅವರ ಮೇಲೆ ಇದೀಗ 2.50 ಲಕ್ಷ ರೂ ಹಣ ಎಗರಿಸಿದ ಆರೋಪ ಬಂದಿದೆ. ಇದೇ ವಿಷಯವಾಗಿ ಮಾತನಾಡುವುದಕ್ಕಾಗಿ ಕಟಗೇರಿಯ ರಾಘು ಮೊಗೇರ, ಸೋಡಿಗದ್ದೆಯ ಭಾಸ್ಕರ ಮೊಗೇರ, ಬೆಳಕೆಯ ಕೇಶವ ಮೊಗೇರ ಜೊತೆ ಮತ್ತಿಬ್ಬರು ಉದಯ ಕೋಟಾರಿ ಅವರಲ್ಲಿ ತೆರಳಿದ್ದು ಈ ವೇಳೆ ಆಕ್ರಮಣ ನಡೆಸಿದ್ದಾರೆ. ಅಕ್ಟೊಬರ್ 21ರ ಉದಯ ಕೋಟಾರಿ ಅವರು ತಮ್ಮ ಪತ್ನಿ ಮನೆಯಲ್ಲಿದ್ದರು. ಆ ದಿನ ರಾತ್ರಿ 2.30ಕ್ಕೆ ಈ ಐದು ಜನ ಅಲ್ಲಿಗೆ ಬಂದರು. ನಿದ್ರೆಯಲ್ಲಿದ್ದ ಉದಯ ಕೋಟಾರಿ ಅವರನ್ನು ಎಬ್ಬಿಸಿ ಗಲಾಟೆ ಶುರು ಮಾಡಿದರು. 2.50 ಲಕ್ಷ ರೂ ಹಣ ತೆಗೆದುಕೊಂಡ ಬಗ್ಗೆ ಪ್ರಶ್ನಿಸಿದರು. `ನಾನು ಹಣಪಡೆದಿಲ್ಲ’ ಎಂದರೂ ಅವರು ಕೇಳಲಿಲ್ಲ. ಆ ರಾತ್ರಿ ಜಗಳ ಮಾಡಿದ ಜನ ಬೈಯಲು ಶುರು ಮಾಡಿದರು. ಆ ಅವಧಿಯಲ್ಲಿ ಉದಯ ಕೋಟಾರ ಅವರ ಮೇಲೆ ಭಾಸ್ಕರ ಮೊಗೇರ್ ಅವರು ಕೈ ಮಾಡಿದರು. ಉದಯ ಕೋಟಾರ ಅವರ ಕೆನ್ನೆಗೆ ಬಾರಿಸಿದರು. ರಾತ್ರಿ ಮನೆ ಬಳಿ ಬಂದು ಗಲಾಟೆ ಮಾಡಿದವರ ವಿರುದ್ಧ ಉದಯ ಕೊಟಾರ್ ಅವರು ಪೊಲೀಸ್ ದೂರು ನೀಡಿದ್ದು, ಭಟ್ಕಳ ಗ್ರಾಮೀಣ ಠಾಣೆಯ ಎಎಸ್‌ಐ ಸುನೀಲ ಕುಡ್ತರಕರ ಸಮಾಧಾನ ಮಾಡಿ ಕಳುಹಿಸಿದ್ದರು. ಆದರೆ, ಉದಯ ಕೋಟಾರ ಅವರು ನ್ಯಾಯಾಲಯದ ಮೊರೆ ಹೋಗಿ ಆ ಐದು ಜನರ ವಿರುದ್ಧ ಪ್ರಕರಣ ದಾಖಲಿಸಿದರು.   - [28 ವರ್ಷದ ನಂತರ ನೆನಪಾದ ಸಹೋದರ: ಅವ ಬರದಿದ್ದರೆ ಇವರಿಗೂ ಆಸ್ತಿ ಸಿಗಲ್ಲ!](https://mobiletime.in/2025/10/brother-remembered-after-28-years-if-he-doesnt-come-they-wont-get-the-property-either/): ಕುಮಟಾದ ಉದ್ದಂಡ ನಾಯಕ ಅವರು ಕಾಣೆಯಾಗಿ 28 ವರ್ಷ ಕಳೆದರೂ ತಲೆಕೆಡಿಸಿಕೊಳ್ಳದ ಅವರ ಅಣ್ಣ ನಿತ್ಯಾನಂದ ನಾಯಕ ಅವರು ಇದೀಗ ಪಿತ್ರಾರ್ಜಿತ ಆಸ್ತಿಯನ್ನು ವಾಟಣಿ ಮಾಡಿಸುವುದಕ್ಕಾಗಿ ತಮ್ಮನ ಹುಡುಕಾಟ ಶುರು ಮಾಡಿದ್ದಾರೆ. `ಆಸ್ತಿ ಭಾಗ ಮಾಡಲು ಹಕ್ಕುದಾರನಾದ ಆತನ ಅವಶ್ಯಕತೆಯಿದ್ದು, ಹೀಗಾಗಿ ತಮ್ಮನನ್ನು ಹುಡುಕಿಕೊಡಿ’ ಎಂದು ಅವರು ಎರಡುವರೆ ದಶಕದ ನಂತರ ಪೊಲೀಸರ ಮೊರೆ ಹೋಗಿದ್ದಾರೆ! ಕುಮಟಾ ಹಿರೆಗುತ್ತಿಯ ಉದ್ದಂಡ ಪರಮೇಶ್ವರ ನಾಯಕ (58) ಅವರು ಲಾರಿ ಕ್ಲೀನರ್ ಆಗಿದ್ದರು. 1997ರಲ್ಲಿ ಅವರು ಕೆಲಸಕ್ಕೆ ಹೊರಟವರು ಈವರೆಗೂ ಮನೆಗೆ ಮರಳಿ ಬರಲಿಲ್ಲ. ಆ ಅವಧಿಯಲ್ಲಿ ಅಲ್ಲಿ-ಇಲ್ಲಿ ಅವರನ್ನು ಕುಟುಂಬದವರು ಹುಡುಕಿದರು. ಅದಾದ ನಂತರ ಉದ್ದಂಡ ನಾಯಕ ಅವರ ಹುಡುಕಾಟವನ್ನು ಎಲ್ಲರೂ ಮರೆತರು. ಅದಾದ ನಂತರ ಉದ್ದಂಡ ನಾಯಕ ಅವರು ಮನೆಗೆ ಮರಳಲಿಲ್ಲ. ಯಾರೂ ಆ ಬಗ್ಗೆ ತಲೆಕೆಡಿಸಿಕೊಳ್ಳಲಿಲ್ಲ. ಸದ್ಯ ಉದ್ದಂಡ ನಾಯಕ ಹಾಗೂ ನಿತ್ಯಾನಂದ ನಾಯಕ ಅವರ ತಂದೆ ಪರಮೇಶ್ವರ ನಾಯಕ ಅವರ ಒಡೆತನದಲ್ಲಿರುವ ಭೂಮಿಯನ್ನು ಮಕ್ಕಳಿಗೆ ಹಂಚಿಕೆ ಮಾಡುವ ವಿಷಯ ಮುನ್ನಲೆಗೆ ಬಂದಿತು. ಪಿತ್ರಾರ್ಜಿತ ಆಸ್ತಿಯನ್ನು ವಾಟಣಿ ಮಾಡುವ ಸಮಯದಲ್ಲಿ ಉದ್ದಂಡ ನಾಯಕ ಅವರು ಇದಕ್ಕೆ ಸಮಾನ ಹಕ್ಕುದಾರರು ಎಂಬ ಸಂಗತಿ ಹೊರಬಿದ್ದಿತು. 28 ವರ್ಷಗಳ ಹಿಂದೆ ಕಾಣೆಯಾದ ವ್ಯಕ್ತಿಯ ಬಗ್ಗೆ ಗಂಭೀರ ಹುಡುಕಾಟ ನಡೆಸಿದ ಕಾರಣ ಇದೀಗ ಸಮಸ್ಯೆ ಶುರುವಾಯಿತು. ಹೀಗಾಗಿ ನಿತ್ಯಾನಂದ ನಾಯಕ ಅವರು ಪೊಲೀಸರ ಮೊರೆ ಹೋದರು. ಪಿತ್ರಾರ್ಜಿತ ಆಸ್ತಿಯಲ್ಲಿ ಸಾಮಾಯಿಕ ಹಕ್ಕುದಾರನಾಗಿರುವ ಉದ್ದಂಡ ನಾಯಕ ಅವರ ಅವಶ್ಯಕತೆಯ ಬಗ್ಗೆ ಪೊಲೀಸರಲ್ಲಿ ವಿವರಿಸಿದರು. 28 ವರ್ಷದ ಹಿಂದೆ ಕಾಣೆಯಾದ ವ್ಯಕ್ತಿಯನ್ನು ಹುಡುಕಿಕೊಡಿ ಎಂದು ದೂರು ದಾಖಲಿಸಿದರು. ನಿತ್ಯಾನಂದ ನಾಯಕ ಅವರ ಸಂಕಟ ಅರಿತ ಗೋಕರ್ಣ ಪೊಲೀಸರು ಪ್ರಕರಣ ದಾಖಲಿಸಿ, ಅದರ ಪ್ರತಿಯನ್ನು ದೂರುದಾರರಿಗೆ ಒದಗಿಸಿದರು. - [ಮನೆಯವರ ಮಾತು ಕೇಳಲಿಲ್ಲ.. ಡಾಕ್ಟರ್ ಸೂಚನೆ ಪಾಲಿಸಲಿಲ್ಲ!](https://mobiletime.in/2025/10/didnt-listen-to-the-family-didnt-follow-the-doctors-instructions/): ಚಿಕ್ಕ ವಯಸ್ಸಿನಲ್ಲಿಯೇ ದುಶ್ಚಟಕ್ಕೆ ದಾಸರಾಗಿದ್ದ ಶಿರಸಿಯ ರಾಘವೇಂದ್ರ ಬಸರಕೋಡ್ ಅವರು ವೈದ್ಯರು ನೀಡಿದ ಸೂಚನೆ ಪಾಲಿಸದ ಕಾರಣ ಸಾವನಪ್ಪಿದ್ದಾರೆ. ಚಂದದ ಹೆಂಡತಿ, ಸುಂದರ ಸಂಸಾರದ ಜೊತೆ ಬಂಧು-ಬಳಗವನ್ನು ಬಿಟ್ಟು ಅವರು ದೂರ ಹೋಗಿದ್ದಾರೆ. ಶಿರಸಿಯ ನ್ಯೂ ಕೆಎಚ್‌ಬಿ ಕಾಲೋನಿಯ ಚಂದನ ಬಾಲಮಂದಿರ ಬಳಿ ರಾಘವೇಂದ್ರ ಬಸರಕೋಡ್ (33) ಅವರು ವಾಸವಾಗಿದ್ದರು. ಮೆಕಾನಿಕ್ ಆಗಿದ್ದ ಅವರು ಮಧ್ಯಪಾನಕ್ಕೆ ಅಂಟಿಕೊAಡಿದ್ದರು. ಅವರ ಆ ದುಶ್ಚಟ ಮಿತಿಮೀರಿದ ಕಾರಣ ಲಿವರ್ ಹಾಳಾಗಿತ್ತು. ಪಿತ್ತಕೋಶದ ಸಮಸ್ಯೆ ಸಹ ಶುರುವಾಗಿತ್ತು. ಇದೇ ಕಾರಣದಿಂದ ಅವರು ಹೊಟ್ಟೆನೋವಿನಿಂದ ಬಳಲುತ್ತಿದ್ದರು. ರಾಘವೇಂದ್ರ ಬಸರಕೋಡ್ ಅವರು ಅನಾರೋಗ್ಯದ ಕಾರಣದಿಂದ ನೊಂದಿದ್ದರು. ಅವರನ್ನು ತಪಾಸಣೆಗೆ ಒಳಪಡಿಸಿದ ವೈದ್ಯರು ಮಧ್ಯಪಾನ ಬಿಡುವಂತೆ ಸಲಹೆ ನೀಡಿದ್ದರು. ಕುಟುಂಬದವರು ಸಹ ದುಶ್ಚಟದಿಂದ ದೂರವಿರುವಂತೆ ಮನವಿ ಮಾಡಿದ್ದರು. ಆದರೆ, ಮಧ್ಯಪಾನ ಮಾಡುವದನ್ನು ಬಿಟ್ಟು ಬೇರೆನೂ ಮಾಡಲು ಅವರಿಂದ ಸಾಧ್ಯವಾಗುತ್ತಿರಲಿಲ್ಲ. ಅನಾರೋಗ್ಯದ ಕಾರಣ ಮಾನಸಿಕವಾಗಿ ಕುಗ್ಗಿದ್ದ ರಾಘವೇಂದ್ರ ಬಸರಕೋಡ್ ಅವರು ಆತ್ಮಹತ್ಯೆಯ ಮಾಡಿಕೊಳ್ಳುವ ಬಗ್ಗೆ ಮಾತನಾಡಿದ್ದರು. `ಸಾಯುವುದೇ ಮೇಲು’ ಎಂದು ಅವರು ಹೇಳಿಕೊಳ್ಳುತ್ತಿದ್ದರು. ಆಗ, ಅವರ ಕುಟುಂಬದವರೆಲ್ಲ ಸೇರಿ ಅವರನ್ನು ಸಮಾಧಾನ ಮಾಡುತ್ತಿದ್ದರು. ಅಕ್ಟೊಬರ್ 23ರ ರಾತ್ರಿ ರಾಘವೇಂದ್ರ ಬಸರಕೋಡ್ ಅವರು ಮನೆಯಿಂದ ಹೊರ ಹೋದವರು ಮರಳಿ ಬರಲಿಲ್ಲ. ಹುಡುಕಾಟ ನಡೆಸಿದಾಗ ಮನೆ ಪಕ್ಕದ ಖಾಲಿ ಸೈಟಿನಲ್ಲಿ ಅವರು ಬಿದ್ದಿದ್ದರು. ಅರೆಪ್ರಜ್ಞಾವಸ್ಥೆಯಲ್ಲಿದ್ದ ರಾಘವೇಂದ್ರ ಬಸರಕೋಡ್ ಅವರನ್ನು ಶಿರಸಿ ಸರ್ಕಾರಿ ಆಸ್ಪತ್ರೆಗೆ ಕರೆತರಲಾಯಿತು. ಪರೀಕ್ಷಿಸಿದ ವೈದ್ಯರು ರಾಘವೇಂದ್ರ ಬಸರಕೋಡ್ ಅವರು ಇನ್ನಿಲ್ಲ ಎಂದರು. ಈ ಎಲ್ಲಾ ಘಟನಾವಳಿಗಳ ಬಗ್ಗೆ ರಾಘವೇಂದ್ರ ಬಸರಕೋಡ್ ಅವರ ಪತ್ನಿ ಕೃತಿಕಾ ಪೊಲೀಸರಲ್ಲಿ ವಿವರಿಸಿದರು. ಶಿರಸಿ ಹೊಸ ಮಾರುಕಟ್ಟೆ ಪೊಲೀಸ್ ಠಾಣೆಯವರು ಪ್ರಕರಣ ದಾಖಲಿಸಿ, ಶವ ಬಿಟ್ಟುಕೊಟ್ಟರು.   - [ಪ್ರಪಂಚದಲ್ಲಿಯೇ ದೊಡ್ಡದು ಈ ಪಾತರಗಿತ್ತಿ!](https://mobiletime.in/2025/10/this-midwife-is-the-biggest-in-the-world/): ಪ್ರಪಂಚದಲ್ಲಿಯೇ ಅತಿ ದೊಡ್ಡದು ಎನಿಸಿದ ಪಾತರಗಿತ್ತಿ ಕಾರವಾರದಲ್ಲಿ ಕಾಣಿಸಿದೆ. ಹವ್ಯಾಸಿ ಛಾಯಾಗ್ರಾಹಕ ರವಿ ಗೌಡ ಅವರು ಗುಡ್ಡಳ್ಳಿಯಲ್ಲಿ ಚಿಟ್ಟೆಯ ಚಲನ-ವಲನ ಸೆರೆಹಿಡಿದಿದ್ದಾರೆ. `ಅಟ್ಲಾಸ್ ಮೋತ್’ ಎಂದು ಕರೆಯಲ್ಪಟುವ ಈ ಪತಂಗ 24 ಸೆಂಟಿಮೀಟರ್’ವರೆಗೂ ಬೆಳೆಯುತ್ತದೆ. ಕಾರವಾರದಲ್ಲಿ ಕಾಣಿಸಿದ ಈ ಚಿಟ್ಟೆಯೂ ಅದೇ ಪ್ರಮಾಣದಲ್ಲಿ ಬೆಳವಣಿಗೆ ಹೊಂದಿದ್ದು, ದೈತ್ಯ ಪತಂಗವಾಗಿ ಕಾಣಿಸಿದೆ. ಮಳೆಗಾಲದಲ್ಲಿ ಕರಾವಳಿ ವ್ಯಾಪ್ತಿಯ ಕಾಡುಗಳಲ್ಲಿ ಈ ಪತಂಗ ಕಾಣಿಸಿಕೊಳ್ಳುತ್ತದೆ. ಆದರೆ, ಈ ಕೀಟದ ಬಗ್ಗೆ ಆಸಕ್ತಿಯಿಂದ ಅಧ್ಯಯನ ಮಾಡಿದವರ ಸಂಖ್ಯೆ ವಿರಳ. ಈ ಪ್ರಬೇಧದ ಪಾತರಗಿತ್ತಿಯನ್ನು `ಪ್ರಪಂಚದಲ್ಲಿಯೇ ಬೃಹತ್ ಆಕಾರದ ಪತಂಗ’ ಎಂದು ಗುರುತಿಸಲಾಗಿದೆ. `ಈ ಪತಂಗದ ವೈಜ್ಞಾನಿಕ ಹೆಸರು ಂಣಣಚಿಛಿus ಚಿಣಟಚಿs ಎಂದಿದ್ದು, ಅವು ಮರಗಳ ಎಲೆಗಳ ಮೇಲೆ ಮೊಟ್ಟೆಯಿಟ್ಟು ಮರಿಗಳನ್ನು ಪೋಷಿಸುತ್ತದೆ. ಮೊಟ್ಟೆಯಿಂದ ಹೊರಬಂದ ಹುಳು (ಲಾರ್ವಾ) ಆ ಮರದ ಎಲೆಗಳನ್ನು ತಿಂದು ಶಕ್ತಿಯನ್ನು ಸಂಗ್ರಹಿಸಿ ಕೋಶವನ್ನು (ಕೋಕೂನ್) ರಚಿಸುತ್ತದೆ. ಈ ಪತಂಗಕ್ಕೆ ಬಾಯಿ ಅಥವಾ ಜೀರ್ಣಾಂಗ ವ್ಯವಸ್ಥೆ ಇರುವುದಿಲ್ಲ. ಹಾಗಾಗಿ, ಅದು ಕೋಶದಿಂದ ಹೊರಬಂದು ಪೂರ್ಣಾವಸ್ಥೆಯ ಪತಂಗವಾದ ನಂತರ ಯಾವುದೇ ಆಹಾರವನ್ನು ತಿನ್ನುವುದಿಲ್ಲ. ಹುಳು ಆಗಿರುವಾಗಲೇ ಸಾಕಷ್ಟು ಎಲೆಗಳನ್ನು ತಿಂದು ತನಗೆ ಬೇಕಾದ ಎಲ್ಲ ಶಕ್ತಿಯನ್ನು ಸಂಗ್ರಹಿಸಿಟ್ಟುಕೊAಡಿರುತ್ತದೆ. ಹೀಗಾಗಿ ಈ ಕೀಟದ ಜೀವಿತಾವಧಿ 2 ವಾರ ಮಾತ್ರ. ತನ್ನಲ್ಲಿ ಉಳಿದಿರುವ ಶಕ್ತಿಯನ್ನು ಉಳಿಸಿಕೊಳ್ಳಲು ಈ ಜೀವಿ ತುಂಬಾ ಕಡಿಮೆ ಹಾರಾಟ ಮಾಡುತ್ತದೆ. ಜೊತೆಗೆ ಹೆಚ್ಚಿನ ಸಮಯ ಎಲೆಗಳ ಮೇಲೆ ವಿಶ್ರಾಂತಿಯಲ್ಲಿರುತ್ತದೆ. ದಿನಗಳು ಕಳೆದಂತೆ ತುಂಬಾ ಬಲಹೀನವಾಗುವ ಈ ಪತಂಗವು ಹಕ್ಕಿಗಳು, ಓತಿ ಮತ್ತು ಇರುವೆಗಳಿಗೆ ಆಹಾರವಾಗುವ ಸಾಧ್ಯತೆಗಳೇ ಹೆಚ್ಚಿದೆ ಎಂದು ಕೀಟ ತಜ್ಞರು ಮಾಹಿತಿ ನೀಡಿದ್ದಾರೆ. - [ಬಾವಿಗೆ ಬಿದ್ದ ಚಲುವೆ ಬದುಕಲೇ ಇಲ್ಲ!](https://mobiletime.in/2025/10/the-frog-that-fell-into-the-well-never-survived/): ಹೊನ್ನಾವರದ ಗಾಯತ್ರಿ ಗೌಡ ಅವರು ದಿಢೀರ್ ಆಗಿ ದುಡುಕು ನಿರ್ಧಾರ ಮಾಡಿದ್ದಾರೆ. 25ನೇ ವಯಸ್ಸಿನಲ್ಲಿಯೇ ಅವರು ತಮ್ಮ ಬದುಕನ್ನು ಕೊನೆಗಾಣಿಸಿದ್ದಾರೆ. ಹೊನ್ನಾವರದ ಗುಂಡಿಬೈಲ್ ಗ್ರಾಮದಲ್ಲಿ ಗಾಯತ್ರಿ ಕೇಶವ ಗೌಡ ಅವರು ವಾಸವಾಗಿದ್ದರು. ಮಂಕಿಯ ಖಾಸಗಿ ಆಸ್ಪತ್ರೆಯಲ್ಲಿ ಗಾಯತ್ರಿ ಗೌಡ ಅವರು ಕೆಲಸಕ್ಕೀದ್ದರು. ಕೆಲಸ ಮುಗಿಸಿ ಶನಿವಾರ ಮನೆಗೆ ಬಂದಿದ್ದ ಅವರು ಎಲ್ಲರ ಜೊತೆ ಚನ್ನಾಗಿಯೇ ಇದ್ದರು. ಚಂಚಲ ಮನಸ್ಸಿನ ಗಾಯತ್ರಿ ಗೌಡ ಅವರು ರಾತ್ರಿ 9ಗಂಟೆಗೆ ಪಕ್ಕದಲ್ಲಿಯೇ ಇರುವ ಸಂಬoಧಿಕರ ಮನೆಗೆ ಹೋಗಿ ಬರುವುದಾಗಿ ಹೊರಟಿದ್ದರು. ಆದರೆ, ತಾಸು ಕಳೆದರೂ ಗಾಯತ್ರಿ ಗೌಡ ಅವರು ಮನೆಗೆ ಮರಳಲಿಲ್ಲ. ಮನೆಯವರು ಹುಡುಕಾಡಿದಾಗ ತೋಟದ ಬಾವಿಯಲ್ಲಿ ಗಾಯತ್ರಿ ಗೌಡ ಅವರ ಶವ ಕಾಣಿಸಿದೆ. ಎಲ್ಲರ ಜೊತೆ ಚನ್ನಾಗಿಯೇ ಇದ್ದ ಗಾಯತ್ರಿ ಗೌಡ ಅವರು ಏಕಾಏಕಿ ಆತ್ಮಹತ್ಯೆಗೆ ಶರಣಾದರು. ಅವರ ದುಡುಕುತನಕ್ಕೆ ಕಾರಣ ಏನು? ಎಂಬುದು ಯಾರಿಗೂ ಗೊತ್ತಾಗಲಿಲ್ಲ. ಇನ್ನೊಂದು ಮಾಹಿತಿ ಪ್ರಕಾರ, ಶನಿವಾರ ರಾತ್ರಿ ಕೆಲಕಾಲ ಫೋನಿನಲ್ಲಿ ಮಾತನಾಡಿದ ಗಾಯತ್ರಿ ಗೌಡ ಅವರು ಕೆಲಕಾಲ ಮಂಕಾಗಿದ್ದರು. ಮನಸ್ಸಿನಲ್ಲಿರುವ ದುಗುಡದ ಬಗ್ಗೆ ಅವರು ಯಾರಲ್ಲಿಯೂ ಹೇಳಿಕೊಳ್ಳಲಿಲ್ಲ. ಅದಾದ ನಂತರ ಜೀವನದಲ್ಲಿಯೇ ಜಿಗುಪ್ಸೆಹೊಂದಿ ಅವರು ಬಾವಿಗೆ ಹಾರಿದರು. ಬಾವಿಯಿಂದ ಮೇಲೆ ಬರುವಷ್ಟರಲ್ಲಿ ಗಾಯತ್ರಿ ಗೌಡ ಅವರು ಶವವಾಗಿದ್ದರು. ಗಾಯತ್ರಿ ಗೌಡ ಅವರ ಸಾವಿಗೆ ಸ್ಪಷ್ಟ ಕಾರಣ ಗೊತ್ತಾಗಿಲ್ಲ. ಕೊನೆಯದಾಗಿ ಆಕೆಗೆ ಫೋನ್ ಮಾಡಿದವರು ಯಾರು? ಎಂಬುದು ಹೊರಬಿದ್ದಿಲ್ಲ. ಸದ್ಯ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದಾರೆ. ಗಾಯತ್ರಿ ಗೌಡ ಅವರ ಆಪ್ತರನ್ನು ಮಾತನಾಡಿಸಿದ್ದಾರೆ. ಗಾಯತ್ರಿ ಅವರ ತಾಯಿ ನೀಡಿದ ದೂರಿನ ಆಧಾರದಲ್ಲಿ ಪೊಲೀಸರು ಆತ್ಮಹತ್ಯೆಯ ಕಾರಣ ಹುಡುಕುವುದಕ್ಕಾಗಿ ತನಿಖೆಯನ್ನು ಶುರು ಮಾಡಿದ್ದಾರೆ.   `ಆತ್ಮಹತ್ಯೆ ಅಪರಾಧ’ - [ಮಳೆಯಲ್ಲಿ ನೆನೆದ ಚುಕ್ಕಿ ಚಿರತೆ!](https://mobiletime.in/2025/10/a-spotted-leopard-soaked-in-the-rain/): ಕಾಳಿ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಶನಿವಾರ ರಾತ್ರಿ ಜೋರು ಮಳೆ ಸುರಿದಿದ್ದು, ಮಳೆಯಲ್ಲಿ ನೆನೆದ ಚಿರತೆ ರಸ್ತೆ ದಾಟಿದ ವಿಡಿಯೋ ಕ್ಯಾಮರಾ ಕಣ್ಣಿನಲ್ಲಿ ಸೆರೆಯಾಗಿದೆ. ಜೊಯಿಡಾದ ಪೋಟೋಲಿ-ಗುಂದ-ಉಳುವಿ ರಸ್ತೆಯಲ್ಲಿ ಪತ್ರಕರ್ತ ತಿಲಕರಾಜ್ ಅವರು ಚಿರತೆ ನೋಡಿದ್ದಾರೆ. ಅದಾದ ನಂತರ ಅವರು ತಮ್ಮ ಮೊಬೈಲಿನಲ್ಲಿ ಚಿರತೆ ಓಡಾಟದ ದೃಶ್ಯವನ್ನು ಚಿತ್ರಿಕರಿಸಿದ್ದಾರೆ. ರಸ್ತೆ ಅಂಚಿನ ಪೊದೆ ಪ್ರದೇಶದಲ್ಲಿದ್ದ ಚಿರತೆ ಕಾರಿನ ದೀಪದ ಬೆಳಕಿನಲ್ಲಿ ರಸ್ತೆ ದಾಟಿದೆ. ಚಿರತೆ ಕಾಣುವ ಕೆಲ ಸಮಯದ ಮೊದಲು ಆ ಪ್ರದೇಶದಲ್ಲಿ ಜೋರು ಮಳೆಯಾಗಿದೆ. ಚಿರತೆ ರಸ್ತೆ ದಾಡುವ ಅವಧಿಯಲ್ಲಿ ಮೈ ತೊಯ್ದಿರುವುದು ಕಾಣುತ್ತಿದೆ. ಕಾರಿನಲ್ಲಿ ಕೂತಿದ್ದ ತಿಲಕರಾಜ್ ಅವರು ಮೋಡದ ವಾತಾವರಣವನ್ನು ಗಮನಿಸಿದ್ದಾರೆ. ಅಂದಾಜು 5 ವರ್ಷದ ಚಿರತೆ ಒಂಟಿಯಾಗಿ ಸಂಚರಿಸುತ್ತಿರುವುದನ್ನು ಅವರು ನೋಡಿದ್ದು, ಚಿರತೆ ರಸ್ತೆ ದಾಟಿದ ನಂತರ ನಿಧಾನವಾಗಿ ಮನೆ ಸೇರಿದ್ದಾರೆ. ಕ್ಯಾಮರಾ ಕಣ್ಣಿಗೆ ಸಿಕ್ಕ ಚಿರತೆಯ ವಿಡಿಯೋ ಇಲ್ಲಿ ನೋಡಿ.. - [ಬೇಲಿ ಹಾರಿದ ಮೊಸಳೆ!](https://mobiletime.in/2025/10/a-crocodile-jumped-the-fence/): ಕಾಳಿ ನದಿಯಲ್ಲಿನ ಮೊಸಳೆಯೊಂದು ದಾಂಡೇಲಿಯಲ್ಲಿ ಬೇಲಿ ಹಾರಿದೆ. ರಕ್ಷಣಾ ಬೇಲಿ ದಾಟಿ ದಟಕ್ಕೆ ಬಂದ ಮೊಸಳೆಗೆ ಮರಳಿ ನದಿಗೆ ಹೋಗಲು ಸಾಧ್ಯವಾಗಿಲ್ಲ. ಹಳೆ ದಾಂಡೇಲಿಯ ಕಾಳಿ ನದಿಗೆ ಅಡ್ಡಲಾಗಿ ರಕ್ಷಣಾ ಬೇಲಿ ನಿರ್ಮಿಸಲಾಗಿದೆ. ಮೊಸಳೆಗಳು ದಡಕ್ಕೆ ಬರುವುದನ್ನು ತಡೆಯಲು ಇಲ್ಲಿ ಬೇಲಿ ನಿರ್ಮಿಸಲಾಗಿದೆ. ಆದರೆ, ಅದನ್ನು ಮೀರಿ ಮೊಸಳೆಯೊಂದು ದಡಕ್ಕೆ ಬಂದಿದ್ದು, ನಂತರ ಆ ಮೊಸಳೆಗೆ ಮತ್ತೆ ನದಿ ಸೇರಲು ಸಾಧ್ಯವಾಗಿಲ್ಲ. ನದಿ ಸೇರಲು ಸಾಹಸ ನಡೆಸಿದ ಮೊಸಳೆಯನ್ನು ವ್ಯಕ್ತಿಯೊಬ್ಬರು ಮೊಬೈಲಿನಲ್ಲಿ ಸೆರೆಹಿಡಿದಿದ್ದಾರೆ. ಕಾಳಿ ನದಿ ತಟದಲ್ಲಿ ಜನ ಬಟ್ಟೆ ಒಗೆಯುವ ಪ್ರದೇಶಕ್ಕೆ ಮೊಸಳೆ ಬಂದಿದೆ. ಕೆಲ ಕಾಲ ಅಲ್ಲಿಯೇ ಅದು ವಿಶ್ರಾಂತಿಪಡೆದಿದೆ. ಅದಾದ ನಂತರ ಮರಳಿ ನದಿಗೆ ತೆರಳುವ ಪ್ರಯತ್ನ ಮಾಡಿದ್ದು, ಗಂಟೆಗಳ ಕಾಲ ಹರಸಾಹಸ ಮಾಡಿದರೂ ನದಿಗೆ ತೆರಳಲು ಆಗಲಿಲ್ಲ. ಈ ವೇಳೆ ಅಲ್ಲಿದ್ದ ವ್ಯಕ್ತಿಯೊಬ್ಬರು ಮೊಸಳೆಯ ವಿಡಿಯೋ ಮಾಡಿದ್ದಾರೆ. ಆ ವಿಡಿಯೋ ಇದೀಗ ವೈರಲ್ ಆಗಿದೆ. ಮಾನವ ಪ್ರವೇಶಿಸುವ ಸ್ಥಳದಲ್ಲಿ ಪದೇ ಪದೇ ಮೊಸಳೆಗಳು ಬರುತ್ತಿರುವುದರಿಂದ ಆ ಭಾಗದ ಜನರ ಆತಂಕ ಹೆಚ್ಚಿದೆ. ಅರಣ್ಯ ಇಲಾಖೆ ಮತ್ತು ನಗರಾಡಳಿತದವರು ನಿರ್ಮಿಸಿದ ಬೇಲಿಯನ್ನು ಮೊಸಳೆ ಹೇಗೆ ದಾಡಿತು? ಎಂಬ ಪ್ರಶ್ನೆಗೂ ಉತ್ತರ ಸಿಕ್ಕಿಲ್ಲ. ಈ ಬೇಲಿಯನ್ನು ಇನ್ನಷ್ಟು ಸುರಕ್ಷಿತವಾಗಿರಿಸಬೇಕು ಎಂದು ಅಲ್ಲಿನವರು ಆಗ್ರಹಿಸಿದ್ದಾರೆ. ಎರಡು ತಾಸಿನ ನಂತರ ವಿಡಿಯೋ ಮಾಡಿದ ವ್ಯಕ್ತಿ ಮತ್ತೆ ಅಲ್ಲಿ ಬಂದು ನೋಡಿದಾಗ ಮೊಸಳೆ ಕಾಣಲಿಲ್ಲ. ಇನ್ಯಾವುದೋ ದ್ವಾರದ ಮೂಲಕ ಅದು ನದಿ ಸೇರಿದ ಬಗ್ಗೆ ಊಹಿಸಲಾಗಿದೆ. ಬೇಲಿ ದಾಟಿ ದಡಕ್ಕೆ ಬಂದ ಮೊಸಳೆಯ ವಿಡಿಯೋ ಇಲ್ಲಿ ನೋಡಿ.. - [ಇಲಿ ಕಾಟಕ್ಕೆ ಬೆದರಿದ ಯಲ್ಲಾಪುರ!](https://mobiletime.in/2025/10/yellapur-threatened-by-rat-menace/): ಉತ್ತರ ಕನ್ನಡ ಜಿಲ್ಲೆಯಲ್ಲಿ ಒಮ್ಮೆ ನಿಯಂತ್ರಣಕ್ಕೆ ಬಂದಿದ್ದ `ಇಲಿ ಜ್ವರ’ ಇದೀಗ ಮತ್ತೆ ಜನರನ್ನು ಕಾಡಿಸುತ್ತಿದೆ. ಯಲ್ಲಾಪುರದ ಕಿರವತ್ತಿ ಬಳಿಯ ಜೋಗಿಕೊಪ್ಪದಲ್ಲಿ ವ್ಯಕ್ತಿಯೊಬ್ಬರಿಗೆ ಈ ಜ್ವರ ಕಾಣಿಸಿದೆ. ಈ ವರ್ಷವೇ ಯಲ್ಲಾಪುರದಲ್ಲಿ ಒಟ್ಟು ಏಳು ಇಲಿ ಜ್ವರ ಪ್ರಕರಣಗಳು ವರದಿಯಾಗಿದೆ. ಇಲಿಯ ಮೂತ್ರದಿಂದ ಈ ಜ್ವರ ಹರಡುತ್ತದೆ. ಈ ರೋಗಕ್ಕೆ ಒಳಗಾದವರು ಜ್ವರ, ತಲೆ ನೋವು, ಆಯಾಸ, ಮೈ-ಕೈ ನೋವಿನಿಂದ ಬಳಲುತ್ತಾರೆ. `ಸಕಾಲದಲ್ಲಿ ರೊಗಕ್ಕೆ ಚಿಕಿತ್ಸೆಪಡೆದರೆ ಯಾವುದೇ ಸಮಸ್ಯೆ ಇಲ್ಲ. ರೋಗ ಉಲ್ಬಣಿಸಿದರೆ ಅಪಾಯ ಖಚಿತ’ ಎನ್ನುತ್ತಾರೆ ವೈದ್ಯಾಧಿಕಾರಿ ಡಾ ನರೇಂದ್ರ ಪವಾರ್. `ಇಲಿ ಜ್ವರ ಮನುಷ್ಯರ ಜೊತೆ ಜಾನುವಾರುಗಳಿಗೆ ಸಹ ಬಾಧಿಸುತ್ತದೆ. `ಲೆಪ್ಟೊಸ್ಪೈರಾ ಎಂಬ ಬ್ಯಾಕ್ಟೀರಿಯಾ ರೋಹ ಹರಡುವಿಕೆಗೆ ಮುಖ್ಯ ಕಾರಣ. ರೋಗ ಲಕ್ಷಣ ಕಾಣಿಸಿದ ತಕ್ಷಣ ವೈದ್ಯರನ್ನು ಭೇಟಿ ಮಾಡುವುದು ಎಲ್ಲಾ ರೀತಿಯಲ್ಲಿಯೂ ಉತ್ತಮ ವಿಧಾನ’ ಎಂದು ಆರೋಗ್ಯ ಇಲಾಖೆಯ ಡಾ ಗಿರೀಶಗೌಡರ ತಿಮ್ಮನಗೌಡರ ಅರಿವು ಮೂಡಿಸಿದ್ದಾರೆ. `ಕಲುಷಿತ ನೀರಿನ ಮೂಲಕವು ಈ ರೋಗ ಬರುತ್ತದೆ. ಪ್ರವಾಹ ಪೀಡಿತ ಪ್ರದೇಶಗಳಲ್ಲಿ ರೋಗ ಹರಡುವ ಸಾಧ್ಯತೆ ಹೆಚ್ಚಿದೆ. ನೀರು ನಿಲ್ಲುವ ಸ್ಥಳಗಳ ಬಗ್ಗೆಯೂ ಎಚ್ಚರಿಕೆವಹಿಸುವುದು ಅಗತ್ಯ. ಕಲುಷಿತ ನೀರು ಹಾಗೂ ಮಣ್ಣಿನೊಂದಿಗೆ ಕೆಲಸ ಮಾಡುವಾಗ ಕೈಗವಸು ಹಾಗೂ ಕಾಲಿಗೆ ಬೂಟು ಧರಿಸುವುದು ಉತ್ತಮ ಬೆಳವಣಿಗೆ’ ಎಂದು ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಜೊಸೆಫ್ ಯು ವಿವರಿಸಿದ್ದಾರೆ. `ಮನೆಯಿಂದ ಹೊರಹೋಗಿ ಬಂದ ನಂತರ ಕೈ-ಕಾಲುಗಳನ್ನು ತೊಳೆಯುವುದು ಒಳ್ಳೆಯ ಪದ್ಧತಿ. ಕುಡಿಯುವ ನೀರು ಹಾಗೂ ಆಹಾರ ಸೇವನೆ ವಿಷಯದಲ್ಲಿ ಶುದ್ಧತೆ ಅತೀ ಅಗತ್ಯ. ಇಲಿ ಬಾರದ ರೀತಿ ಮನೆಯನ್ನು ಸ್ವಚ್ಚವಾಗಿರಿಸಿಕೊಂಡರೆ ರೋಗದಿಂದ ದೂರವಿರಲು ಸಾಧ್ಯ. ಸಾಕು ಪ್ರಾಣಿಗಳು ವಾಸಿಸುವ ಪ್ರದೇಶಗಳು ಸ್ವಚ್ಛವಾಗಿರಬೇಕು’ ಎಂದು ಆರೋಗ್ಯ ಇಲಾಖೆಯ ಮಹೇಶ ತಾಳಿಕೋಟಿ ಮಾಹಿತಿ ನೀಡಿದರು. ರೋಗ ಲಕ್ಷಣಗಳಿರುವ ಕಡೆ ಸಮುದಾಯ ಆರೋಗ್ಯ ಅಧಿಕಾರಿ ಶಿವನಗೌಡ ಪಾಟೀಲ ಹಾಗೂ ಆಶಾ ಮತು ಅಂಗನವಾಡಿ ಕಾರ್ಯಕರ್ತರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. `ಇಲಿ ಜ್ವರ ತಡೆಗೆ ಸಾರ್ವಜನಿಕರು ಸಹಕರಿಸಬೇಕು’ ಎಂದು ಆರೋಗ್ಯಾಧಿಕಾರಿ ಡಾ ನರೇಂದ್ರ ಪವಾರ ಅವರು ಮನವಿ ಮಾಡಿದರು. - [ಕೇಣಿ: ಬಂದರು ವಿರುದ್ಧ ಉಗ್ರ ಹೋರಾಟ!](https://mobiletime.in/2025/11/keni-fierce-fight-against-the-port/): ಜನ ವಿರೋಧದ ನಡುವೆಯೂ ಅಂಕೋಲಾದ ಕೇಣಿಯಲ್ಲಿ ವಾಣಿಜ್ಯ ಬಂದರು ನಿರ್ಮಾಣದ ಸಿದ್ಧತೆ ನಡೆದಿದ್ದು, ಇದನ್ನು ವಿರೋಧಿಸಿ ಸಾವಿರಾರು ಜನ ಧರಣಿ ಶುರು ಮಾಡಿದ್ದಾರೆ. `ಯೋಜನೆ ರದ್ಧಾಗುವವರೆಗೂ ಧರಣಿ ಹಿಂಪಡೆಯುವುದಿಲ್ಲ’ ಎಂದು ಪ್ರತಿಭಟನಾಕಾರರು ಘೋಷಿಸಿದ್ದಾರೆ. ಬುಧವಾರ ನಡೆದ ಧರಣಿಯಲ್ಲಿ `ಉತ್ತರ ಕನ್ನಡ ಉಳಿಸಿ’ ಎಂಬ ಘೋಷಣೆಗಳು ಮೊಳಗಿದವು. ಅಂಕೋಲಾ ತಹಶೀಲ್ದಾರ್ ಕಚೇರಿಯ ಎದುರು ಜನ ಜಮಾಯಿಸಿ ತಮ್ಮ ಆಕ್ರೋಶವ್ಯಕ್ತಪಡಿಸಿದರು. ಅದರಲ್ಲಿಯೂ ಮುಖ್ಯವಾಗಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಪ್ರತಿಭಟನೆಯಲ್ಲಿ ಕಾಣಿಸಿಕೊಂಡರು. `ಕೇಣಿ ವಾಣಿಜ್ಯ ಬಂದರು ಯೋಜನೆ ಸಂಪೂರ್ಣವಾಗಿ ಕೈಬಿಡಬೇಕು’ ಎಂದು ಜನ ತಮ್ಮ ಅಹವಾಲು ಸಲ್ಲಿಸಿದರು. `ಉತ್ತರ ಕನ್ನಡ ಜಿಲ್ಲೆಯಲ್ಲಿ ಈಗಾಗಲೇ ಅನೇಕ ಯೋಜನೆಗಳು ಬಂದಿವೆ. ಅದರಿಂದ ಯಾವ ಅಭಿವೃದ್ಧಿಯೂ ನಡೆದಿಲ್ಲ. ಜನ ಪದೇ ಪದೇ ನಿರಾಶ್ರಿತರಾಗಿದ್ದು, ಬದುಕಿಗೆ ಮಾರಕವಾಗ ಕೇಣಿ ಬಂದರು ಯೋಜನೆಯೂ ನಮಗೆ ಬೇಡ’ ಎಂದು ಪ್ರತಿಭಟನಾಕಾರರು ವಿವರಿಸಿದರು. `ಕೇಣಿ ಬಂದರು ಯೋಜನೆಯಿಂದ ಪರಿಸರ ನಾಶವಾಗಲಿದೆ’ ಎಂದು ಒತ್ತಿ ಹೇಳಿದರು. `ಬಡ ಮೀನುಗಾರರ ಬದುಕು ನಾಶ ಮಾಡುವ ಅಭಿವೃದ್ಧಿ ಯಾರಿಗೂ ಬೇಡ. ಸಾರ್ವಜನಿಕ ಆಲಿಕೆ ಸಭೆಯಲ್ಲಿಯೂ ಬಂದರು ವಿರುದ್ಧ ಅಹವಾಲು ಸಲ್ಲಿಕೆಯಾಗಿದೆ. ಆದರೂ, ಸರ್ಕಾರ ಅದನ್ನು ಗಂಭೀರವಾಗಿ ಪರಿಗಣಿಸಿಲ್ಲ’ ಎಂದು ಆಕ್ಷೇಪಿಸಿದರು. `ತಮ್ಮ ಈ ಹೋರಾಟಕ್ಕೆ ನ್ಯಾಯ ಸಿಗದೇ ಇದ್ದರೆ ಇನ್ನಷ್ಟು ಉಗ್ರ ಹೋರಾಟ ನಡೆಸುತ್ತೇವೆ’ ಎಂದು ಎಚ್ಚರಿಸಿದರು. ಮುಖ್ಯಮಂತ್ರಿ, ಉಸ್ತುವಾರಿ ಸಚಿವ, ಸರ್ಕಾರದ ಮುಖ್ಯ ಕಾರ್ಯದರ್ಶಿ ಸೇರಿ ಅನೇಕರಿಗೆ ಪ್ರತಿಭಟನಾಕಾರರು ತಮ್ಮ ಮನವಿ ರವಾನಿಸಿದರು. - [2025ರ ನವೆಂಬರ್ 13ರ ದಿನ ಭವಿಷ್ಯ](https://mobiletime.in/2025/11/prediction-for-november-13-2025/): ಮೇಷ ರಾಶಿ: ಈ ದಿನ ನಿಮಗೆ ಮಂಗಳಕರ. ಹಣದ ಸಂಚಾರ ಆಗಲಿದೆ. ಉದ್ಯೋಗದಲ್ಲಿ ಅನುಕೂಲಗಳು ಹೆಚ್ಚಾಗುತ್ತವೆ. ಧೈರ್ಯದಿಂದ ಮುಂದೆ ಸಾಗಿರಿ. ವೃಷಭ ರಾಶಿ: ಹಣದ ಸಮಸ್ಯೆ ಉದ್ಬವಿಸುವ ಲಕ್ಷಣವಿದೆ. ಸಾಲ ಪಾವತಿ ಕಷ್ಟವಾಗಲಿದೆ. ಕುಟುಂಬದಲ್ಲಿ ಜಗಳ ಸಾಧ್ಯತೆಯಿದೆ. ಶಾಂತ ಮನಸ್ಸು ನಿಮಗೆ ಸಹಾಯ ಮಾಡುತ್ತದೆ. ಮಿಥುನ ರಾಶಿ: ವೃತ್ತಿಯಲ್ಲಿ ಯಶಸ್ಸಿಗೆ ಅವಕಾಶ ಇದೆ. ಮನೆಯ ಕೆಲಸಗಳಲ್ಲಿ ಒತ್ತಡವಾಗಬಹುದು. ಸ್ನೇಹಿತರಿಂದ ಸಹಕಾರ ಸಿಗಲಿದ್ದು, ಆರ್ಥಿಕ ಲಾಭ ಆಗಲಿದೆ. ಕರ್ಕ ರಾಶಿ: ಆರ್ಥಿಕ ದೃಷ್ಟಿಯಿಂದ ಬೆಳವಣಿಗೆ ಸಾಧ್ಯವಿದೆ. ಹೊಸ ಬಂಡವಾಳಕ್ಕಾಗಿ ಸಮಯ ಕೂಡಿ ಬಂದಿದೆ. ಆರೋಗ್ಯದ ಬಗ್ಗೆ ಎಚ್ಚರಿಕೆ ಅಗತ್ಯ. ಯೋಗ ಮತ್ತು ಧ್ಯಾನ ಮಾಡಿ. ಸಿಂಹ ರಾಶಿ: ಕೆಲಸದ ಒತ್ತಡ ಹೆಚ್ಚಾಗಲಿದೆ. ಹಣಕಾಸಿನಲ್ಲಿ ಜಾಗೃತಿ ಅಗತ್ಯ. ಪ್ರೀತಿ-ಸಂಬAಧಗಳಲ್ಲಿ ಸಾರ್ಥಕತೆ ಮುಖ್ಯ. ಕನ್ಯಾ ರಾಶಿ: ವೃತ್ತಿಯಲ್ಲಿ ನವೀನತೆಗಳು ಬರಲಿದೆ. ಹಣಕಾಸಿನ ಸಮತೋಲನ ಕಾಪಾಡಿ. ನಿಮ್ಮ ಯೋಜನೆ ಸ್ಪಷ್ಠವಾಗಿರಲಿ. ಧಾರ್ಮಿಕ ಅಂಗೀಕಾರದಿAದ ನೆಮ್ಮದಿ ಸಿಗಲಿದೆ. ತುಲಾ ರಾಶಿ: ವ್ಯವಹಾರದಲ್ಲಿ ಉತ್ತಮ ಬೆಳವಣಿಗೆ ಆಗಲಿದೆ. ಸಹೋದ್ಯೋಗಿಗಳಿಂದ ಸಹಕಾರ ಸಿಗಲಿದೆ. ಹಣಕಾಸಿನಲ್ಲಿ ಲಾಭ ಆಗಲಿದ್ದು, ಮನೆಯಲ್ಲಿ ಸಂತೋಷ ಸಾಧ್ಯ. ವೃಶ್ಚಿಕ ರಾಶಿ: ನಿಮ್ಮ ಆತ್ಮ ಬಲ ಹೆಚ್ಚಾಗುತ್ತದೆ. ಅನಿರೀಕ್ಷಿತ ಆದಾಯ ಬರಲಿದೆ. ಆರೋಗ್ಯದಲ್ಲಿ ಎಚ್ಚರಿಕೆ ಅಗತ್ಯ. ವ್ಯವಹಾರದ ಯಶಸ್ಸು ಸಿಗಲಿದೆ. ಯೋಗದಿಂದ ನೆಮ್ಮದಿ ಕಾಣುವಿರಿ. ಧನು ರಾಶಿ: ಹಣಕಾಸಿನ ಅಡೆತಡೆಗಳು ನಿವಾರಣೆ ಆಗಲಿದೆ. ಶತ್ರುಗಳ ದಾಳಿಯಿಂದ ಎಚ್ಚರಿಕೆ ಅಗತ್ಯ. ಆರ್ಥಿಕ ನಿರ್ವಹಣೆ ಜಾಗೃತಿ ಬೇಕು. ಹೊಸ ಹೂಡಿಕೆಗೆ ಸೂಕತ ಸಮಯವಲ್ಲ. ಮಕರ ರಾಶಿ: ಕೆಲಸದಲ್ಲಿ ಒತ್ತಡ ಹೆಚ್ಚಾಗಲಿದೆ. ಹಣಕಾಸು ನಿರ್ವಹಣೆ ಬಗ್ಗೆ ಗಮನಿಸಿ. ಸಹಕಾರದಿಂದ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ. ಕುಂಭ ರಾಶಿ: ಹೊಸ ಸ್ನೇಹಿತರು ಸಿಗಲಿದ್ದಾರೆ. ಹೊಸ ಅವಕಾಶವೂ ತೆರೆಯಲಿದೆ. ಹಣಕಾಸು ಸುಧಾರಣೆ ಸಾಧ್ಯವಿದೆ. ಧಾರ್ಮಿಕ ಕಾರ್ಯದಲ್ಲಿ ತೊಡಗುವಿಕೆ ಮುಖ್ಯ. ಮೀನ ರಾಶಿ: ಆತ್ಮವಿಶ್ವಾಸ ಹೆಚ್ಚಾಗುತ್ತದೆ. ಹಣಕಾಸಿನಲ್ಲಿ ಸಾಧನೆ ಸಾಧ್ಯವಿದೆ. ಮನೆಯಲ್ಲಿ ಸಂತೋಷ ಕಾಣುವಿರಿ. ಹೊಸ ಯೋಜನೆ ಪ್ರಾರಂಭಿಸಲು ಸೂಕ್ತ ದಿನ. - [ಮಕ್ಕಳ ಮಹಾಸಭೆ: ಪಾಲಕರ ಹಾಜರಿ ಕಡ್ಡಾಯ!](https://mobiletime.in/2025/11/childrens-general-assembly-parental-attendance-is-mandatory/): ಮಕ್ಕಳ ದಿನಾಚರಣೆ ಅಂಗವಾಗಿ ನವೆಂಬರ್ 14ರಂದು ಎಲ್ಲಾ ಶಾಲೆ-ಕಾಲೇಜುಗಳಲ್ಲಿಯೂ ಉತ್ತರ ಕನ್ನಡ ಜಿಲ್ಲಾ ಪಂಚಾಯತ ಮಕ್ಕಳ ಮಹಾಸಭೆ ಆಯೋಜಿಸಿದೆ. ಜಿಲ್ಲೆಯಲ್ಲಿ 1,04,222 ವಿದ್ಯಾರ್ಥಿಗಳು ಈ ಸಭೆಯಲ್ಲಿ ಭಾಗವಹಿಸಲಿದ್ದಾರೆ. ಸರ್ಕಾರಿ ಪ್ರಾಥಮಿಕ, ಪ್ರೌಢ ಹಾಗೂ ಪದವಿ ಪೂರ್ವ ಕಾಲೇಜುಗಳಲ್ಲಿ ಏಕಕಾಲಕ್ಕೆ ಈ ಸಭೆ ನಡೆಸಲಾಗುತ್ತದೆ. ಶಿಕ್ಷಕರ ಜೊತೆ ಪೋಷಕರು ಈ ಸಭೆಯಲ್ಲಿ ಭಾಗವಹಿಸಬೇಕಿದ್ದು, ಎಲ್ಲರಿಗೂ ಮನವರಿಕೆ ಮಾಡಿ ಸಭೆಗೆ ಆಮಂತ್ರಿಸುವAತೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ದಿಲೀಷ್ ಶಶಿ ನಿರ್ದೇಶನ ನೀಡಿದ್ದಾರೆ. ವಿದ್ಯಾರ್ಥಿಗಳ ಗುಣಮಟ್ಟದ ಶಿಕ್ಷಣಕ್ಕೆ ಪೂರಕವಾಗಿ ಸರ್ಕಾರದಿಂದ ಅನುಷ್ಠ್ಠಾನಿಸಲಾಗಿರುವ ಉಪಕ್ರಮಗಳ ಬಗ್ಗೆ ಸಭೆಯಲ್ಲಿ ಚರ್ಚಿಸಲಾಗುತ್ತದೆ. ಸಭೆಯಲ್ಲಿ ಎಲ್ಲಾ ಸರ್ಕಾರಿ ಪ್ರಾಥಮಿಕ, ಪ್ರೌಢ ಹಾಗೂ ಪದವಿ ಪೂರ್ವ ಕಾಲೇಜುಗಳಲ್ಲಿ ಸಂವಿಧಾನ ಪೀಠಿಕೆಯ ಓದು ಹಾಗೂ ಸಭೆಯ ಉದ್ದೇಶಗಳ ಮಂಡನೆ, ಮಕ್ಕಳ ಕಲಿಕಾ ಪ್ರಗತಿ, ಹಾಜರಾತಿ ಮಾಹಿತಿ ಹಂಚಿಕೆ, ಪ್ರಗತಿ ಪತ್ರ ವಿತರಣೆ, ಶಾಲೆ ಅಭಿವೃದ್ಧಿಯಲ್ಲಿ ಪೋಷಕರ ಪಾತ್ರದ ಬಗ್ಗೆ ಅರಿವು ಮೂಡಿಸಲಾಗುತ್ತದೆ. ಸಾಧಕ ವಿದ್ಯಾರ್ಥಿಗಳಿಗೆ ಅಂಭಿನAದನೆ, ಬಾಲ್ಯ ವಿವಾಹ ಹಾಗೂ ಬಾಲ ಕಾರ್ಮಿಕ ನಿಷೇಧ ಜಾಗೃತಿ ಮೂಡಿಸಲಾಗುತ್ತದೆ. ಈ ಮಹಾಸಭೆಯಲ್ಲಿ ಶಿರಸಿ ಶೈಕ್ಷಣಿಕ ಜಿಲ್ಲೆಯ 1089 ಪ್ರಾಥಮಿಕ ಶಾಲಾ ವಿಭಾಗದ 41,224 ಮತ್ತು 76 ಪ್ರೌಢಶಾಲೆಗಳ 7259 ವಿದ್ಯಾರ್ಥಿಗಳು ಮತ್ತು ಕಾರವಾರ ಶೈಕ್ಷಣಿಕ ಜಿಲ್ಲೆಯ 913 ಪ್ರಾಥಮಿಕ ಶಾಲಾ ವಿಭಾಗದ 36,689 ಮತ್ತು 49 ಪ್ರೌಢಶಾಲೆಗಳ 6562 ವಿದ್ಯಾರ್ಥಿಗಳು ಹಾಗೂ ಜಿಲ್ಲೆಯ ಪದವಿ ಪೂರ್ವ ವಿಭಾಗದ 37 ಕಾಲೇಜುಗಳ 12,488 ವಿದ್ಯಾರ್ಥಿಗಳು ಭಾಗವಹಿಸುವ ನಿರೀಕ್ಷೆಯಿದೆ. - [ಪವರ್‌ಮ್ಯಾನ್ ಸಾವು: ಹೆಸ್ಕಾಂ ಸಿಬ್ಬಂದಿ ಕುಟುಂಬಕ್ಕೆ ಕತ್ತಲು!](https://mobiletime.in/2025/11/powermans-death-darkness-falls-on-the-family-of-hescom-staff/): ದಿಢೀರ್ ಆಗಿ ಕಣ್ಮರೆಯಾಗಿದ್ದ ಜೊಯಿಡಾದ ಹೆಸ್ಕಾಂ ಪವರ್‌ಮ್ಯಾನ್ ಭುಜಂಗ ಗುಂಜಿಕರ್ ಅವರು ಎರಡು ದಿನದ ನಂತರ ಆತ್ಮಹತ್ಯೆಗೆ ಶರಣಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಎಲ್ಲರ ಜೊತೆ ಚನ್ನಾಗಿಯೇ ಇದ್ದ ಅವರ ಈ ದುಡುಕು ನಿರ್ಧಾರಕ್ಕೆ ಕಾರಣ ಗೊತ್ತಾಗಿಲ್ಲ. ಜೊಯಿಡಾದ ಕ್ಯಾಸಲರಾಕ್ ಬಳಿಯ ಲಕ್ಷಿö್ಮÃವಾಡದಲ್ಲಿ ಭುಜಂಗ ಗುಂಜಿಕರ್ (46) ಅವರು ಕುಟುಂಬದ ಜೊತೆ ವಾಸವಾಗಿದ್ದರು. ಹೆಸ್ಕಾಂ ಪವರ್ ಮ್ಯಾನ್ ಆಗಿದ್ದ ಅವರು ಆನಮೋಡದಲ್ಲಿ ಕರ್ತವ್ಯ ನಿಭಾಯಿಸುತ್ತಿದ್ದರು. ನವೆಂಬರ್ 10ರಂದು ಕ್ಯಾಸಲರಾಕಿನಿಂದ ಆನಮೋಡಿಗೆ ಹೋಗುವಾಗ ಪತ್ನಿ ಮಂಗಲ ಗುಂಜಿಕರ್ ಅವರನ್ನು ಕರೆದೊಯ್ದಿದ್ದರು. ಮಂಗಲ ಗುಂಜಿಕರ್ ಅವರನ್ನು ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದ್ದರು. ಮಧ್ಯಾಹ್ನ ಅವರಿಬ್ಬರು ಮನೆಗೆ ಮರಳಿದ್ದರು. ಈ ವೇಳೆ ರಾಮನಗರದಿಂದ ಭುಜಂಗ ಗುಂಜಿಕರ್ ಅವರ ತಾಯಿ ಬಸ್ಸಿಗೆ ಕ್ಯಾಸಲರಾಕ್’ಗೆ ಬಂದಿಳಿದಿದ್ದು ತಾಯಿಯನ್ನು ಮನೆಗೆ ತಂದು ಬಿಟ್ಟಿದ್ದರು. ಎಲ್ಲರೂ ಸೇರಿ ಒಟ್ಟಿಗೆ ಊಟವನ್ನು ಮಾಡಿದ್ದರು. ಅದಾದ ಮೇಲೆ `ರಾಮನಗರದಲ್ಲಿರುವ ತಂಗಿಯನ್ನು ಭೇಟಿಯಾಗಿ ಬರೋಣ’ ಎಂದು ಮನೆಯಲ್ಲಿ ಹೇಳಿದ್ದರು. `ಇಲ್ಲೆ ಹೋಗಿ ಬರುವೆ’ ಎಂದು ಹೊರಟ ಭುಜಂಗ ಗುಂಜಿಕರ್ ಸಂಜೆಯಾದರೂ ಮನೆಗೆ ಮರಳಿರಲಿಲ್ಲ. ಮಂಗಲಾ ಗುಂಜಿಕರ್ ಅವರು ಸಾಕಷ್ಟು ಬಾರಿ ಭುಜಂಗ ಗುಂಜಿಕರ್ ಅವರಿಗೆ ಫೋನ್ ಮಾಡಿದ್ದರು. ಆದರೆ, ಫೋನ್ ರಿಂಗ್ ಆದರೂ ಅವರು ಅದನ್ನು ಸ್ವೀಕರಿಸಿರಲಿಲ್ಲ. ಹುಡುಕಾಟ ನಡೆಸಿದರೂ ಸಿಗದ ಕಾರಣ ಮಂಗಲಾ ಗುಂಜಿಕರ್ ಅವರು ರಾಮನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಪೊಲೀಸರು ಶೋಧ ನಡೆಸಿದಾಗ ಭುಜಂಗ ಗುಂಜಿಕರ್ ಅವರು ಈ ದಿನ ಶವವಾಗಿರುವುದು ಗೊತ್ತಾಗಿದೆ. ಕಾಳಿ ಹುಲಿ ಸಂರಕ್ಷಿತ ಅರಣ್ಯ ಪ್ರದೇಶದ ಕುಣಗಿನ ಕ್ಯಾಸಲರಾಕ್ ಬಳಿಯ ಕಾಡಿನಲ್ಲಿ ಮರಕ್ಕೆ ನೇಣು ಹಾಕಿಕೊಂಡ ಸ್ಥಿತಿಯಲ್ಲಿ ಭುಜಂಗ ಗುಂಜಿಕರ್ ಪತ್ತೆಯಾಗಿದ್ದಾರೆ. - [ಕಬ್ಬಿಣದ ರಾಡಿಗೆ ಕೆಲಸ ಕೊಟ್ಟ ಕಾಸಿನ ಜಗಳ!](https://mobiletime.in/2025/11/a-fight-over-a-penny-that-gave-work-to-an-iron-rod/): ಹಣಕಾಸು ವಿಷಯವಾಗಿ ಕಾರವಾರದ ಗಿರಿಧರ ತಾಂಡೇಲ್ ಹಾಗೂ ಸುರೇಶ್ ದುರ್ಗೇಕರ್ ಅವರ ನಡುವೆ ವೈಮನಸ್ಸು ಮೂಡಿದ್ದು, ಸುರೇಶ ದುರ್ಗೇಕರ್ ಅವರು ಕಬ್ಬಿಣದ ರಾಡಿನಿಂದ ಗಿರಿಧರ ತಾಂಡೇಲ್ ಅವರ ತಲೆಗೆ ಹೊಡೆದದ್ದಾರೆ. ಸದ್ಯ ಗಿರಿಧರ ತಾಂಡೇಲ್ ಅವರು ಆಸ್ಪತ್ರೆ ಸೇರಿ ಚಿಕಿತ್ಸೆಪಡೆಯುತ್ತಿದ್ದಾರೆ. ಕಾರವಾರದ ಗಿರಿಧರ ಈರಾ ತಾಂಡೇಲ್ ಅವರು ಮೀನುಗಾರಿಕೆ ಮಾಡಿಕೊಂಡು ಬದುಕು ಕಟ್ಟಿಕೊಂಡಿದ್ದರು. ಮುದುಗಾ ಸೀಬರ್ಡ ಕಾಲೋನಿಯಲ್ಲಿ ವಾಸಿಸುವ ಸುರೇಶ ದೇವು ದುರ್ಗೇಕರ್ ಅವರು ಗಿರಿಧರ ತಾಂಡೇಲ್ ಅವರ ಸ್ನೇಹಿತರಾಗಿದ್ದರು. ಹೀಗಿರುವಾಗ ತುರ್ತಾಗಿ ಗಿರಿಧರ ತಾಂಡೇಲ್ ಅವರಿಗೆ 50 ಸಾವಿರ ರೂ ಅಗತ್ಯವಿದ್ದು, ಸ್ನೇಹಿತನ ಬಳಿ ಅವರು ನೆರವು ಯಾಚಿಸಿದ್ದರು. ಆಗ, ಸುರೇಶ ದುರ್ಗೇಕರ್ ಅವರು 50 ಸಾವಿರ ರೂ ಸಹಾಯ ಮಾಡಿದ್ದರು. ಆದರೆ, ಗಿರಿಧರ ತಾಂಡೇಲ್ ಅವರು ಆ ಹಣವನ್ನು ಸಕಾಲಕ್ಕೆ ಮರಳಿಸಿರಲಿಲ್ಲ. ಸುರೇಶ ದುರ್ಗೇಕರ್ ಅವರು ಸಾಕಷ್ಟು ಬಾರಿ ಕೇಳಿದರೂ ಗಿರಿಧರ್ ತಾಂಡೇಲ್ ಅವರು ಹಣ ಕೊಟ್ಟಿರಲಿಲ್ಲ. ಹಣ ಮರಳಿಸಬೇಕು ಎಂಬ ಮನಸ್ಸಿದ್ದರು ಗಿರಿಧರ ತಾಂಡೇಲ್ ಅವರ ಬಳಿ ಕಾಸು ನಿಲ್ಲುತ್ತಿರಲಿಲ್ಲ. ಮೀನುಗಾರಿಕೆ ಮಾಡಿಕೊಂಡು ಜೀವಿಸುತ್ತಿದ್ದ ಗಿರಿಧರ ತಾಂಡೇಲ್ ಅವರು `ನಿಧಾನವಾಗಿ ಕಾಸು ಕೊಡುವೆ ಎಂದರೂ ಅದಕ್ಕೆ ಸುರೇಶ್ ದುರ್ಗೇಕರ್ ಅವರು ಒಪ್ಪಿರಲಿಲ್ಲ. ಹೀಗಿರುವಾಗ ನವೆಂಬರ್ 11ರಂದು ಗಿರಿಧರ ತಾಂಡೇಲ್ ಅವರು ಮುದುಗಾ ಬಂದರಿನಿoದ ಪರ್ಶಿಯನ್ ಬೋಟ್ ಮೇಲೆ ಮೀನುಗಾರಿಕೆಗೆ ತೆರಳಿ ಮರಳಿದ್ದರು. ಅಲ್ಲಿಂದ ಮುಂದೆ ಅವರು ಸ್ಕೂಟಿ ಮೇಲೆ ಮನೆ ಕಡೆ ಹೋಗುವಾಗ ಅಲ್ಲಿಗೆ ಬಂದ ಸುರೇಶ ದುರ್ಗೇಕರ್ ಸ್ಕೂಟಿ ಅಡ್ಡಗಟ್ಟಿ ಜಗಳ ಶುರು ಮಾಡಿದರು. ಕಾಸು ಕೊಡದ ಕಾರಣ ಸುರೇಶ ದುರ್ಗೇಕರ್ ಅವರು ತಮ್ಮ ಕೈಯಲ್ಲಿದ್ದ ಕಬ್ಬಿಣದ ರಾಡಿನಿಂದ ಗಿರಿಧರ ತಾಂಡೇಲ್ ಅವರ ತಲೆಗೆ ಬಾರಿಸಿದರು. ಗಾಯಗೊಂಡ ಗಿರಿಧರ ತಾಂಡೇಲ್ ಅವರು ಆಸ್ಪತ್ರೆ ಸೇರಿದರು. ಈ ಎಲ್ಲಾ ವಿಷಯಗಳ ಬಗ್ಗೆ ಗಿರಿಧರ ತಾಂಡೇಲ್ ಅವರು ಕಾರವಾರ ಗ್ರಾಮೀಣ ಠಾಣೆ ಪೊಲೀಸರಿಗೆ ತಿಳಿಸಿದ್ದು, ಪೊಲೀಸರು ಪ್ರಕರಣ ದಾಖಲಿಸಿದರು. `ಸಾಲ ಕೊಟ್ಟು ಸ್ನೇಹ ಕಳೆದುಕೊಳ್ಳಬೇಡಿ’ - [ರಾಜಕೀಯ ಕಚ್ಚಾಟಕ್ಕೆ ರಾಷ್ಟ್ರಗೀತೆ ನೆಪ!](https://mobiletime.in/2025/11/national-anthem-is-a-pretext-for-political-squabbles/): ಶಾಸಕ-ಸಂಸದರ ರಾಜಕೀಯ ಹೇಳಿಕೆಯೊಂದು ಇದೀಗ ಅವರ ವೈಯಕ್ತಿಕ ವರ್ಚಸ್ಸು ಕುಂದಿಸುವುದರ ಮಟ್ಟಿಗೆ ಚರ್ಚೆಯಾಗುತ್ತಿದೆ. ಶಾಸಕ-ಸಂಸದರು ಮೌನವಾಗಿದ್ದರೂ ಸಹ ಅವರ ಬೆಂಬಲಿಗರು ವಿಷಯವನ್ನು ಇನ್ನಷ್ಟು ಎತ್ತರಕ್ಕೆ ಬೆಳೆಸುತ್ತಿದ್ದಾರೆ. ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಶಿವರಾಮ ಹೆಬ್ಬಾರ್ ಹಾಗೂ ಉತ್ತರ ಕನ್ನಡ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ತಮ್ಮ ವೈಯಕ್ತಿಕ ಜೀವನದಲ್ಲಿ ಚನ್ನಾಗಿಯೇ ಇದ್ದಾರೆ. ಸದ್ಯ ರಾಜಕೀಯವಾಗಿ ಅವರು ಬೇರೆ ಬೇರೆ ನಿಲುವು ಹೊಂದಿದ್ದರಿoದ ಆ ವಿಷಯವಾಗಿ ಕ್ರಿಯೆ-ಪ್ರತಿಕ್ರಿಯೆ ನೀಡಿ ಸುಮ್ಮನಾಗಿದ್ದಾರೆ. ಆದರೆ, ಅವರ ಹಿಂಬಾಲಕರು ಇದೇ ವಿಷಯವನ್ನು ತಿರುಚಿ-ಮುರುಚಿ ಮತ್ತೆ ಮತ್ತೆ ಹೇಳುತ್ತಿದ್ದು, ಆ ಹೇಳಿಕೆಗಳು ಶಾಸಕ-ಸಂಸದರ ವೈಯಕ್ತಿಕ ಜೀವನಕ್ಕೆ ಘಾಸಿಗೊಳಿಸುತ್ತಿವೆ. ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ರಾಷ್ಟ್ರಗೀತೆ ವಿಷಯವಾಗಿ ಹೊನ್ನಾವರದಲ್ಲಿ ಮಾತನಾಡಿದ್ದರು. `ಜನಗಣಮನ ಎಂಬುದು ಬ್ರೀಟೀಷರನ್ನು ಸ್ವಾಗತಿಸಿದ ಗೀತೆ’ ಎಂದು ಹೇಳಿಕೆ ನೀಡಿದ್ದರು. ಈ ಹೇಳಿಕೆಯನ್ನು ಯಲ್ಲಾಪುರ ವಿಧಾನಸಭಾ ಕ್ಷೇತ್ರ ಶಾಸಕ ಶಿವರಾಮ ಹೆಬ್ಬಾರ್ ಅವರು ವಿರೋಧಿಸಿದ್ದರು. ಶಿವರಾಮ ಹೆಬ್ಬಾರ್ ಅವರ ಜೊತೆ ಅನೇಕ ಕಾಂಗ್ರೆಸ್ ನಾಯಕರು ಈ ಹೇಳಿಕೆ ವಿರೋಧಿಸಿದ್ದರು. ಶಿವರಾಮ ಹೆಬ್ಬಾರ್ ಅವರ ಹೇಳಿಕೆಯನ್ನು ಬಿಜೆಪಿ ಜಿಲ್ಲಾಧ್ಯಕ್ಷ ಎನ್ ಎಸ್ ಹೆಗಡೆ ವಿರೋಧಿಸಿದ್ದರು. ಈ ವೇಳೆ ಎನ್ ಎಸ್ ಹೆಗಡೆ ಅವರು `ಶಿವರಾಮ ಹೆಬ್ಬಾರ್ ಅವರು ಬಣ್ಣ ಬದಲಿಸುವ ವ್ಯಕ್ತಿ’ ಎಂದಿದ್ದು, ಹೆಬ್ಬಾರ್ ಅಭಿಮಾನಿಗಳಿಂದ ಸಹಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಎನ್ ಎಸ್ ಹೆಗಡೆ ಅವರ ಹೇಳಿಕೆಗೆ ಸಂಬoಧಿಸಿ ಈ ದಿನ ಉತ್ತರ ಕನ್ನಡ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರವಿ ಭಟ್ಟ ಬರಗದ್ದೆ ತಿರುಗೇಟು ನೀಡಿದ್ದಾರೆ. `ಶಿವರಾಮ ಹೆಬ್ಬಾರ್ ಅವರು 2018ರಲ್ಲಿ ತಮ್ಮ ನಿಲುವು ಬದಲಿಸದೇ ಇದ್ದಿದ್ದರೆ ಬಿಜೆಪಿ ಅಧಿಕಾರಕ್ಕೆ ಬರುತ್ತಿರಲಿಲ್ಲ. ಕಾಗೇರಿ ಅವರು ಸ್ಪೀಕರ್ ಆಗುತ್ತಿರಲಿಲ್ಲ’ ಎಂದು ರವಿ ಭಟ್ಟ ಬರಗದ್ದೆ ಹೇಳಿದ್ದಾರೆ. - [ಶಿರಸಿ: ಚಿರತೆಯ ಚಿಂತೆ ದೂರಮಾಡಿದ ಶಾಸಕರ ಮನೆ ಶ್ವಾನ](https://mobiletime.in/2025/11/sirsi-mlas-pet-dog-takes-away-leopard-worries/): ಶಿರಸಿ ಶಾಸಕ ಭೀಮಣ್ಣ ನಾಯ್ಕ ಅವರು ಸಾಕಿದ್ದ ಶ್ವಾನ ವ್ಯಾಘ್ರನ ಪಾಲಾಗಿದೆ. ಶಾಸಕರ ಮನೆಗೆ ನುಗ್ಗಿದ ಚಿರತೆ ನಾಯಿಯನ್ನು ಕೊಂದಿದೆ. ಭೀಮಣ್ಣ ನಾಯ್ಕ ಅವರು ಮಳಲಗಾವಿನಲ್ಲಿ ತೋಟ ಹೊಂದಿದ್ದಾರೆ. ಅಲ್ಲಿ ಅವರು ತೋಟದ ರಕ್ಷಣೆಗಾಗಿ ನಾಯಿಗಳನ್ನು ಸಾಕಿದ್ದಾರೆ. ಮಂಗಳವಾರ ನಸುಕಿನಲ್ಲಿ ತೋಟದ ಮನೆಗೆ ಚಿರತೆ ನುಗ್ಗಿದ್ದು, ಅಲ್ಲಿದ್ದ ನಾಯಿಗಳಿಗೆ ಹೊಂಚು ಹಾಕಿದೆ. ಐದು ನಾಯಿಗಳನ್ನು ಚಿರತೆ ಬೆನ್ನತ್ತಿ ಬಂದಿರುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಹೊಂಚು ಹಾಕಿ ಕುಳಿತಿದ್ದ ಚಿರತೆ ಕೊನೆಗೆ ಮರಿ ನಾಯಿಯ ಕತ್ತು ಹಿಡಿದು ಕೊಂದಿದೆ. ಅದೇ ನಾಯಿಯನ್ನು ಹಿಡಿದು ಕಾಡಿನ ಕಡೆ ಚಲಿಸಿದೆ. ಮನೆ ಹೊರಭಾಗದಲ್ಲಿ ಆಟವಾಡುತ್ತಿದ್ದ ನಾಯಿ ಚಿರತೆ ಪಾಲಾಗಿರುವುದನ್ನು ಇನ್ನಿತರ ನಾಯಿಗಳು ಗಮನಿಸಿದ್ದು, ಇನ್ನಿತರ ನಾಯಿಗಳು ಬೊಗಳಿ ಅಲ್ಲಿಂದ ಓಡಿವೆ. ಬೆಳಗ್ಗೆ ತೋಟದ ಮನೆ ಸಿಬ್ಬಂದಿ ಸಿಸಿ ಕ್ಯಾಮರಾ ಪರಿಶೀಲನೆ ನಡೆಸಿದಾಗ ಚಿರತೆ ಆಗಮನದ ಬಗ್ಗೆ ಅರಿವಾಗಿದೆ. ಚಿರತೆ ನಾಯಿ ಹಿಡಿದು ಕಾಡಿಗೆ ಹೋಗಿರುವುದು ಕ್ಯಾಮರಾದಲ್ಲಿ ಸೆರೆಯಾಗಿದೆ. ಅರಣ್ಯ ಇಲಾಖೆಯವರು ಸುದ್ದಿ ಕೇಳಿ ಶಾಸಕರ ಮನೆಗೆ ಭೇಟಿ ನೀಡಿದ್ದಾರೆ. ಚಿರತೆ ಆಗಮನ ಕುರುಹುಗಳನ್ನು ಅಧಿಕಾರಿಗಳು ಸಂಗ್ರಹಿಸಿದ್ದಾರೆ. - [ಬ್ಯಾಂಕಿಗೆ ಬೆಂಕಿ ಹಚ್ಚಿದ ದುರುಳರು!](https://mobiletime.in/2025/11/the-miscreants-set-fire-to-the-bank/): ಯಲ್ಲಾಪುರದ ಉಮ್ಮಚ್ಗಿಯಲ್ಲಿ ದುರುಳರು ಬ್ಯಾಂಕಿಗೆ ಬೆಂಕಿ ಹಚ್ಚಿದ್ದಾರೆ. ಬ್ಯಾಂಕ್ ಒಳಗಿದ್ದ ಕಂಪ್ಯುಟರ್ ಹಾಗೂ ವಿವಿಧ ದಾಖಲೆಗಳು ಸುಟ್ಟು ಕರಕಲಾಗಿದೆ. ಇಲ್ಲಿನ ಕರ್ನಾಟಕ ಗ್ರಾಮೀಣ ವಿಕಾಸ್ ಬ್ಯಾಂಕಿನ ಒಳಭಾಗದಲ್ಲಿ ಬೆಂಕಿ ಉರಿದಿದ್ದು, ವಿಷಯ ತಿಳಿದ ಸ್ಥಳೀಯರು ಸ್ಥಳಕ್ಕೆ ದೌಡಾಯಿಸಿದ್ದಾರೆ. ಬುಧವಾರ ನಸುಕಿನಲ್ಲಿ ದರೋಡೆಕೋರರು ಬ್ಯಾಂಕ್ ಆವರಣ ಪ್ರವೇಶಿಸಿದ್ದಾರೆ. ಕಿಟಕಿ ಮುರಿದು ಬ್ಯಾಂಕ್ ಒಳಗೆ ನುಗ್ಗಿದ್ದಾರೆ. ಸೇಫ್ ಲಾಕರ್ ಒಡೆಯುವ ಪ್ರಯತ್ನ ನಡೆಸಿದಾಗ ಬ್ಯಾಂಕಿನ ಸೈರನ್ ಸದ್ದು ಮಾಡಿದೆ. ಆಗ, ದುಷ್ಕರ್ಮಿಗಳು ಬ್ಯಾಂಕಿಗೆ ಬೆಂಕಿ ಹಚ್ಚಿ ಪರಾರಿಯಾಗಿದ್ದಾರೆ. ಬ್ಯಾಂಕ್ ಕಟ್ಟಡದಿಂದ ಹೊಗೆಯಾಡುವುದನ್ನು ನೋಡಿದ ಜನ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಅಗ್ನಿಶಾಮಕ ಸಿಬ್ಬಂದಿ ಜೊತೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಬೆಂಕಿ ಆರಿಸುವ ಕೆಲಸ ಮಾಡಿದ್ದಾರೆ. ಈ ವೇಳೆ ಕಿಟಕಿ ತುಂಡಾಗಿರುವುದು ಗೊತ್ತಾಗಿದ್ದು, ಅಲ್ಲಿಂದ ಕಳ್ಳರು ಬ್ಯಾಂಕ್ ಒಳಗೆ ಪ್ರವೇಶಿಸಿ ದುಷ್ಕೃತ್ಯ ನಡೆಸಿದ್ದು ಬಹಿರಂಗವಾಗಿದೆ. ಶಿರಸಿ ಡಿವೈಎಸ್ಪಿ ಗೀತಾ ಪಾಟೀಲ್ ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದಾರೆ. ಯಲ್ಲಾಪುರ ಪಿಐ ರಮೇಶ ಹಾನಾಪುರ ಅವರು ತಂಡ ಕಟ್ಟಿಕೊಂಡು ದುಷ್ಟರ ಶೋಧ ಶುರು ಮಾಡಿದ್ದಾರೆ. ವಿವಿಧ ಆಯಾಮಗಳಲ್ಲಿ ತನಿಖೆ ನಡೆಯುತ್ತಿದ್ದು, ಬೆಂಕಿ ಹಚ್ಚಿದವರು ಸಿಕ್ಕಿಬೀಳುವ ಸಾಧ್ಯತೆ ಹೆಚ್ಚಿದೆ. - [2025 ನವೆಂಬರ್ 12ರ ದಿನ ಭವಿಷ್ಯ](https://mobiletime.in/2025/11/prediction-for-november-12-2025/): ಮೇಷ ರಾಶಿ: ಹೊಸ ಕಾರ್ಯಗಳಲ್ಲಿ ಉತ್ಸಾಹ ಹೆಚ್ಚಿರುತ್ತದೆ. ಕುಟುಂಬದಲ್ಲಿ ಸಂತೋಷದ ವಾತಾವರಣವಿರಲಿದೆ. ವೃತ್ತಿಯಲ್ಲಿ ಬೆಳವಣಿಗೆ ಸಾಧ್ಯವಿದೆ. ಆರೋಗ್ಯ ಸುಧಾರಣೆ ಆಗಲಿದೆ. ವೃಷಭ ರಾಶಿ: ಆರ್ಥಿಕ ಸ್ಥಿತಿಯಲ್ಲಿ ಸುಧಾರಣೆ ಸಾಧ್ಯವಿದೆ. ಮನಸ್ಸು ಶಾಂತವಾಗಿರುತ್ತದೆ. ಶುಭ ಸುದ್ದಿಗಳು ಬರಲಿದೆ. ದೂರದ ಹಿತೈಶಿಗಳಿಂದ ಸಹಾಯ ಸಿಗಲಿದೆ. ಮಿಥುನ ರಾಶಿ: ಬದಲಾಗುತ್ತಿರುವ ಪರಿಸ್ಥಿತಿಗೆ ಒಗ್ಗುವುದು ಅನಿವಾರ್ಯ. ಉದ್ಯೋಗದಲ್ಲಿ ಹೊಸ ಅವಕಾಶ ಸಿಗಲಿದೆ. ಹಣದ ಖರ್ಚು ಹೆಚ್ಚಳವಾಗುವ ಸಾಧ್ಯತೆಯಿದೆ. ಆರೋಗ್ಯದ ಕಡೆ ಗಮನ ಅಗತ್ಯ. ಕರ್ಕ ರಾಶಿ: ಮಂದಗತಿಯ ಕಾರ್ಯಪ್ರವೃತ್ತಿ ಮುಂದುವರೆಯಲಿದೆ. ಹಿರಿಯರಿಂದ ಸಲಹೆ ಪಡೆಯಿರಿ. ಖರ್ಚು ಹೆಚ್ಚಳವಾಗಲಿದೆ. ಆಧ್ಯಾತ್ಮಿಕ ಭಾವನೆ ಬೆಳೆಯಲಿದೆ. ಸಿಂಹ ರಾಶಿ: ಸ್ನೇಹಿತರ ಜೊತೆ ಸಮಾವೇಶದಲ್ಲಿ ಭಾಗವಹಿಸುವ ಅವಕಾಶವಿದೆ. ಕೆಲಸದಲ್ಲಿ ಅಭಿವೃದ್ಧಿ ಸಾಧ್ಯವಿದೆ. ನಾಯಕತ್ವದ ಗುಣ ಫಲ ನೀಡಲಿದೆ. ಕನ್ಯಾ ರಾಶಿ: ವ್ಯಾಪಾರದಲ್ಲಿ ಲಾಭ ಆಗಲಿದೆ. ಸ್ನೇಹಿತರಿಂದ ಉತ್ತಮ ಸ್ಪಂದನೆ ಸಿಗಲಿದೆ. ಆರೋಗ್ಯದಲ್ಲಿ ಸುಧಾರಣೆ ಸಾಧ್ಯವಿದೆ. ಚಿಂತೆ ಕಡಿಮೆ ಮಾಡಿ. ತುಲಾ ರಾಶಿ: ದೂರದ ಪ್ರಯಾಣ ಸಾಧ್ಯವಿದೆ. ಆಧ್ಯಾತ್ಮದಲ್ಲಿ ಆಸಕ್ತಿ ಬೆಳೆಯಲಿದೆ. ಉತ್ತಮ ಸುದ್ದಿ ಬರಬಹುದು. ಹಣದ ಗುಣಾತ್ಮಕ ಸುಧಾರಣೆ ಸಾಧ್ಯವಿದೆ. ವೃಶ್ಚಿಕ ರಾಶಿ: ಕುಟುಂಬದಲ್ಲಿ ವಿವಾದ ಆಗದಂತೆ ಎಚ್ಚರಿಕೆವಹಿಸಿ. ಹಣಲಾಭದ ಅವಕಾಶಗಳಿವೆ. ಆರೋಗ್ಯದ ಮೇಲೆ ಹೆಚ್ಚಿನ ಗಮನಕೊಡಿ. ಸಂದೇಹಗಳು ದೂರವಾಗಲಿದೆ. ಧನು ರಾಶಿ: ಹೊಸ ವ್ಯವಹಾರ ಶುರು ಮಾಡಲು ಉತ್ತಮ ಸಮಯ. ಆದಾಯ ಸಿಗುವ ಸಾಧ್ಯತೆ ಹೆಚ್ಚಿದೆ. ಆರೋಗ್ಯ ಉತ್ತಮವಾಗಿರಲಿದೆ. ಮಕರ ರಾಶಿ: ಪದವಿ ಜೀವನದಲ್ಲಿ ಯಶಸ್ಸು ಸಿಗಲಿದೆ. ಹಣಕಾಸು ಲಾಭ ಆಗಲಿದೆ. ಬಂಧುಗಳೊAದಿಗೆ ಸಂತಸದ ಕ್ಷಣ ಬರಲಿದೆ. ಆರೋಗ್ಯ ಪ್ರಶ್ನೆಗಳಿಗೆ ಪರಿಹಾರ ದೊರೆಯಲಿದೆ. ಕುಂಭ ರಾಶಿ: ಕೌಟುಂಬಿಕ ವಿಷಯದಲ್ಲಿ ಸ್ಪಷ್ಟತೆ ಸಿಗಲಿದೆ. ವ್ಯವಹಾರದಲ್ಲಿ ಸಾಧನೆ ಸಾಧ್ಯವಿದೆ. ಚಿಕಿತ್ಸೆ ಪರಿಣಾಮಕಾರಿ ಆಗಲಿದೆ. ಧೈರ್ಯದಿಂದ ಜೀವಿಸುವುದು ಮುಖ್ಯ. ಮೀನ ರಾಶಿ: ಚಿಂತೆ ದೂರವಾಗಲಿದೆ. ಆರೋಗ್ಯ ಸುಧಾರಣೆ ಸಾಧ್ಯವಿದೆ. ವೃತ್ತಿಯಲ್ಲಿ ಬದಲಾವಣೆಯ ಲಕ್ಷಣವಿದೆ. - [ರಸ್ತೆ ಹಾಳಾಗಲು ಗ್ಯಾರಂಟಿ ಕಾರಣ!](https://mobiletime.in/2025/11/guaranteed-cause-of-road-damage/): `ಗ್ಯಾರಂಟಿ ಯೋಜನೆಯ ಪರಿಣಾಮ ರಾಜ್ಯ ಸರ್ಕಾರದಿಂದ ರಸ್ತೆ ಗುಂಡಿ ಮುಚ್ಚಲು ಸಾಧ್ಯವಾಗುತ್ತಿಲ್ಲ’ ಎಂದು ಉತ್ತರ ಕನ್ನಡ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಹೇಳಿದ್ದಾರೆ. ರಾಜ್ಯದ ಎಲ್ಲಡೆ ರಸ್ತೆಗಳಲ್ಲಿ ಗುಂಡಿ ಬಿದ್ದಿದ್ದು, ಅಭಿವೃದ್ದಿಗೆ ಸಹ ಸರ್ಕಾರದ ಬಳಿ ಹಣ ಇಲ್ಲ’ ಎಂದವರು ಟೀಕಿಸಿದ್ದಾರೆ. ಮುಂಡಗೋಡದಲ್ಲಿ ಪತ್ರಕರ್ತರ ಜೊತೆ ಮಾತನಾಡಿದ ಅವರು `ರಾಜ್ಯದಲ್ಲಿ ಆಡಳಿತವೇ ಇಲ್ಲದ ಸರ್ಕಾರ ಅಧಿಕಾರದಲ್ಲಿದೆ. ಸರ್ಕಾರದ ಬಳಿ ಅಭಿವೃದ್ದಿಗೆ ಹಣವಿಲ್ಲ. ಅದಾಗಿಯೂ, ಅಲ್ಪಸಂಖ್ಯಾತರ ಒಲೈಕೆ ತಪ್ಪಿಲ್ಲ’ ಎಂದು ಕಿಡಿಕಾರಿದರು. `ರಾಜ್ಯದಲ್ಲಿರುವ ಜೈಲುಗಳು ರೆಸಾರ್ಟ್ ಆಗಿ ಪರಿವರ್ತನೆಯಾಗಿದೆ. ಸಮಾಜದ್ರೋಹಿ ಚಟುವಟಿಕೆ ನಡೆಸುವವರಿಗೆ ಜೈಲಿನಲ್ಲಿ ಮೊಬೈಲ್ ಸಿಗುತ್ತಿದೆ. ಅಧಿಕಾರದ ಹಂಚಿಕೆ ಕಚ್ಚಾಟದಲ್ಲಿ ರಾಜ್ಯವೇ ತಲೆ ತಗ್ಗಿಸುವ ಪರಿಸ್ಥಿತಿಯಿದೆ’ ಎಂದು ಕಿಡಿಕಾರಿದರು. `ಈ ಎಲ್ಲಾ ವಿಷಯಗಳ ಬಗ್ಗೆ ಬಿಜೆಪಿ ಹೋರಾಟ ನಡೆಸಲಿದೆ’ ಎಂದರು.   - [ಸುಗಮ ಬಸ್ಸಿನಲ್ಲಿ ಚಿನ್ನ ಕಳ್ಳತನ!](https://mobiletime.in/2025/11/gold-theft-on-a-sugama-bus/): ಬೆಂಗಳೂರಿನಿoದ ಹೊನ್ನಾವರಕ್ಕೆ ಬರುವ ಸುಗಮ ಬಸ್ಸಿನಲ್ಲಿ ಕಳ್ಳರ ಕಾಟ ಜೋರಾಗಿದೆ. ಈ ಬಸ್ಸಿನಲ್ಲಿ ಸಂಚರಿಸುತ್ತಿದ್ದ ಚಿನ್ನದ ವ್ಯಾಪಾರಿ ನಾಗರಾಜ ಪಾಲೇಕರ್ ಅವರು 6.40 ಲಕ್ಷ ರೂ ಮೌಲ್ಯದ ಆಭರಣ ಕಳೆದುಕೊಂಡಿದ್ದಾರೆ. ಹೊನ್ನಾವರದ ಕಾಸರಕೋಡು ಟೊಂಕಾದ ನಾಗರಾಜ ಶಿವಾನಂದ ಪಾಲೇಕರ್ ಅವರು ಸದ್ಯ ಬೆಂಗಳೂರು ನಿವಾಸಿ. ಬಂಗಾರದ ಅಂಗಡಿಯಲ್ಲಿ ಕೆಲಸ ಮಾಡುವ ಅವರು ನವೆಂಬರ್ 8ರಂದು ಹೊನ್ನಾವರಕ್ಕೆ ಬರಲು ನಿರ್ಧರಿಸಿದ್ದರು. ಇದಕ್ಕಾಗಿ ಸುಗಮ ಬಸ್ಸಿನಲ್ಲಿ ಅವರು ಸಂಚಾರ ಶುರು ಮಾಡಿದ್ದರು. ಆ ದಿನ ರಾತ್ರಿ ಅವರ ಬಳಿಯಿದ್ದ ಚಿನ್ನದ ಆಭರಣಗಳನ್ನು ಬಸ್ಸಿನಲ್ಲಿಯೇ ಕಳ್ಳರು ಅಪಹರಿಸಿದರು. ನಾಗರಾಜ ಪಾಲೇಕರ್ ಅವರು ತಮ್ಮ ಪ್ರಯಾಣದ ಜೊತೆ ಚಿಕ್ಕ ಪರ್ಸ ಇರಿಸಿಕೊಂಡಿದ್ದರು. ಅದರಲ್ಲಿ ಹಳೆಯ ಬಂಗಾರದ ಆಭರಣಗಳಿದ್ದವು. ಕರಿಮಣಿ ಸರ ಹಾರ, ಬಳೆ, ಕಿವಿಯೋಲೆ, ಉಂಗುರಗಳನ್ನು ನೋಡಿದ್ದ ಕಳ್ಳರು ಆ ಪರ್ಸನ್ನು ಎಗರಿಸಿದರು. ಇದರಿಂದ ನಾಗರಾಜ ಪಾಲೇಕರ್ ಅವರು 6.40 ಲಕ್ಷ ರೂ ನಷ್ಟ ಅನುಭವಿಸಿದರು. ಕಳ್ಳತನದ ಬಗ್ಗೆ ಅವರು ಹೊನ್ನಾವರ ಪೊಲೀಸರಿಗೆ ದೂರಿದ್ದು, ಅವರು ತನಿಖೆ ಶುರು ಮಾಡಿದ್ದಾರೆ. - [ಕಾಡು ಗ್ರಾಮದಲ್ಲಿ ಪೊಲೀಸ್ ಗ್ರಾಮ ವಾಸ್ತವ್ಯ](https://mobiletime.in/2025/11/police-village-stay-in-a-forest-village/): ಯಲ್ಲಾಪುರ ಪಿಐ ರಮೇಶ ಹಾನಾಪುರ ಅವರು ತಮ್ಮ ಸಂಗಡಿಗರ ಜೊತೆ ಕುಂದರಗಿಯಲ್ಲಿ ಗ್ರಾಮ ವಾಸ್ತವ್ಯ ಮಾಡಿದ್ದಾರೆ. ಪಿಎಸ್‌ಐ ರಾಜಶೇಖರ ವಂದಲಿ ಅವರು ತಮ್ಮ ಸಹಚರರ ಜೊತೆ ಬೈಲಂದೂರಿನಲ್ಲಿ ರಾತ್ರಿ ಕಳೆದಿದ್ದಾರೆ. ಉತ್ತರ ಕನ್ನಡ ಜಿಲ್ಲಾ ಪೊಲೀಸ್ ಘಟಕ `ಮನೆ ಮನೆಗೂ ಪೊಲೀಸ್’ ಎಂಬ ಅಭಿಯಾನ ನಡೆಸುತ್ತಿದೆ. ಅದರ ಮುಂದುವರೆದ ಭಾಗವಾಗಿ ಪೊಲೀಸರು ಇದೀಗ ಕುಗ್ರಾಮಗಳಲ್ಲಿ ರಾತ್ರಿ ಕಳೆಯುತ್ತಿದ್ದಾರೆ. ಆ ಮೂಲಕ ಜನರ ವಿಶ್ವಾಸಗಳಿಸಿ ಅವರಿಂದ ವಿವಿಧ ಬಗೆಯ ಮಾಹಿತಿ ಸಂಗ್ರಹಿಸುವ ಕಾರ್ಯ ಶುರು ಮಾಡಿದ್ದಾರೆ. ಜಿಲ್ಲೆಯಲ್ಲಿಯೇ ಮೊದಲ ಬಾರಿಗೆ ಸೋಮವಾರ ಯಲ್ಲಾಪುರ ಪೊಲೀಸರು ಗ್ರಾಮ ವಾಸ್ತವ್ಯ ಮಾಡಿದ್ದಾರೆ. ಮಂಗಳವಾರ ಬೆಳಗ್ಗೆಯವರೆಗೂ ಕಾಡಿನ ಪ್ರದೇಶದ ಕೊಠಡಿಯಲ್ಲಿ ಉಳಿದು ಜನರ ಸಮಸ್ಯೆ ಆಲಿಸಿದ್ದಾರೆ. ಯಲ್ಲಾಪುರ ಪಿಐ ರಮೇಶ ಹಾನಾಪುರ ಅವರು ಸೋಮವಾರ ಸಂಜೆ ಕುಂದರಗಿಯ ಪ್ರಗತಿ ವಿದ್ಯಾಲಯಕ್ಕೆ ಹೋಗಿದ್ದರು. ಅಲ್ಲಿನ ಜನರನ್ನು ಮಾತನಾಡಿಸಿ ಅವರ ಸಮಸ್ಯೆ ಬಗ್ಗೆ ಚರ್ಚಿಸಿದರು. `ಯಾವುದೇ ಸಮಸ್ಯೆ ಆದರೂ ಪೊಲೀಸರ ನೆರವುಪಡೆಯಿರಿ’ ಎಂದು ಧೈರ್ಯ ಹೇಳಿದರು. ಅಪಘಾತ ನಿಯಂತ್ರಣದ ಮುನ್ನಚ್ಚರಿಕೆ, ಸೈಬರ್ ಅಪರಾಧ ಕುರಿತು ಅಲ್ಲಿನವರಿಗೆ ಅರಿವು ಮೂಡಿಸಿದರು. ಆ ಭಾಗದ ಬೀಟ್ ಪೊಲೀಸ್ ಸುರೇಶ ಕಾಂಟ್ರೆಕ್ಟ್ ಹಾಗೂ ಪೊಲೀಸ್ ಜೀಪ್ ಚಾಲಕ ಕೃಷ್ಣ ಮಾತೋಜಿ ಅವರು ಇಡೀ ರಾತ್ರಿ ಜನರ ಜೊತೆಗಿದ್ದು ಅಲ್ಲಿನವರ ಆಗು-ಹೋಗುಗಳಿಗೆ ಸ್ಪಂದಿಸಿದರು. ತುರ್ತು ಸನ್ನಿವೇಶದಲ್ಲಿ 112ಗೆ ಫೋನ್ ಮಾಡುವಂತೆ ಮನವಿ ಮಾಡಿದರು. ಇನ್ನೂ ಬೈಲಂದೂರಿನಲ್ಲಿ ಪಿಎಸ್‌ಐ ರಾಜಶೇಖರ ವಂದಲಿ ಅವರು ಸೋಮವಾರ ರಾತ್ರಿ ಕಳೆದರು. ಪೊಲೀಸ್ ಸಿಬ್ಬಂದಿ ಮಾರುತಿ ಎಚ್ ಅವರ ಜೊತೆ ಸೇರಿ ಅಕ್ರಮ ಚಟುವಟಿಕೆಗಳ ಬಗ್ಗೆ ಅವರು ಮಾಹಿತಿಪಡೆದರು. ಅಕ್ರಮ ಚಟುವಟಿಕೆ ನಡೆಸಿದವರಿಗೆ ಕಾನೂನು ಪ್ರಕಾರ ಕ್ರಮ ಜರುಗಿಸುವುದಾಗಿ ಎಚ್ಚರಿಸಿದರು. `ಕುಂದರಗಿ ಭಾಗದಲ್ಲಿ ಸ್ವಾಮೀಜಿ ಅವರ ವೇಷ ಧರಿಸಿ ಬರುವ ಅಪರಿಚಿತರ ಸಂಖ್ಯೆ ಹೆಚ್ಚಾಗಿದೆ. ಗುರುತು-ಪರಿಚಯ ಇಲ್ಲದವರು ಧಾರ್ಮಿಕ ನಾಯಕರ ವೇಷಧರಿಸಿ ಬಂದು ಹಣ ಕೇಳುತ್ತಾರೆ’ ಎಂದು ಜನ ದೂರಿದರು. `ಕೆಲವರು ರಾತ್ರಿ ವೇಳೆ ಕುಡಿದು ಗಲಾಟೆ ಮಾಡುತ್ತಾರೆ. ಅವರಿಂದ ಊರಿನ ವಾತಾವರಣ ಹಾಳಾಗುತ್ತಿದೆ’ ಎಂದು ವಿವರಿಸಿದರು. `ರಸ್ತೆ ಕೆಲಸ ನಡೆಯುತ್ತಿರುವುದರಿಂದ ಅಪಘಾತ ಪ್ರಮಾಣ ಹೆಚ್ಚಾಗಿದ್ದು, ಅದನ್ನು ನಿಯಂತ್ರಿಸಿ’ ಎಂದು ಊರಿನವರು ಕೇಳಿಕೊಂಡರು. ಈ ಎಲ್ಲಾ ಸಮಸ್ಯೆಗೆ ತ್ವರಿತ ಪರಿಹಾರ ಒದಗಿಸುವುದಾಗಿ ಪೊಲೀಸರು ಭರವಸೆ ನೀಡಿದರು. `ಪೊಲೀಸ್ ಅಧೀಕ್ಷಕ ದೀಪನ್ ಎಂ ಎನ್ ಅವರ ಮುಂದಾಳತ್ವದಲ್ಲಿ ಮನೆ ಮನೆ ಪೊಲೀಸ್ ಕಾರ್ಯಕ್ರಮ ನಡೆಯುತ್ತಿದೆ. ಅದರ ಭಾಗವಾಗಿ ಪೊಲೀಸರು ಗ್ರಾಮ ವಾಸ್ತವ್ಯ ಮಾಡುತ್ತಿದ್ದು, ಅಲ್ಲಿನ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸ ಮಾಡುತ್ತಿದ್ದಾರೆ. ರಾತ್ರಿ ವೇಳೆ ಊರಿನವರು ಸಿಗುವುದರಿಂದ ಮುಕ್ತ ಮಾತುಕಥೆ ಸಾಧ್ಯವಿದೆ. ಜನರನ್ನು ವಿಶ್ವಾಸಕ್ಕೆಪಡೆದು ಕಾನೂನು ಸುವ್ಯವಸ್ಥೆ ಕಾಪಾಡುವ ಕೆಲಸ ನಡೆದಿದೆ’ ಎಂದು ಪಿಐ ರಮೇಶ ಹಾನಾಪುರ ಅವರು ಪ್ರತಿಕ್ರಿಯಿಸಿದರು. - [ಕಾಸು ಕೊಡದೇ ಚಲಿಸದ ಕಿಮ್ಸ್ ಆಂಬುಲೆನ್ಸ!](https://mobiletime.in/2025/11/kims-ambulance-wont-run-without-payment/): ತುರ್ತು ಸನ್ನಿವೇಶದಲ್ಲಿ ಜನರ ನೆರವಿಗೆ ಬರಬೇಕಿದ್ದ ಕಾರವಾರದ ಕಿಮ್ಸ್ ಆಂಬುಲೆನ್ಸ್ ಕಾಸು ಕೊಡದೇ ಚಲಿಸುವುದಿಲ್ಲ. ನಿನ್ನೆಯೂ 4 ಸಾವಿರ ರೂ ಕರೆನ್ಸಿ ಕಂಡ ನಂತರವೇ ಆ ಆಂಬುಲೆನ್ಸ್ ಚಲಿಸಿದ್ದು, ಕಾಸು ಕೊಡುವವರೆಗೂ ಅಪಘಾತಕ್ಕೀಡಾದ ಗಾಯಾಳು ಸಾವು-ಬದುಕಿನ ನಡುವೆ ಹೋರಾಟ ನಡೆಸಿದ್ದಾರೆ! ಸೋಮವಾರ ಕಾರವಾರದ ಕದ್ರಾ ಬಳಿ ಬಸ್ಸೊಂದು ಬೈಕಿಗೆ ಡಿಕ್ಕಿಯಾಯಿತು. ಅಣು ವಿದ್ಯುತ್ ಘಟಕದ ಸಿಬ್ಬಂದಿ ಸಾಗಿಸುವ ಬಸ್ಸು ಗುದ್ದಿದ ಪರಿಣಾಮ ರಮೇಶ ಸುಬ್ರಾಯ ಬಾಂದೇಕರ ಅವರು ಗಾಯಗೊಂಡರು. ತಕ್ಷಣ ಗಾಯಾಳುವನ್ನು ಕಾರವಾರದ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಗೆ ಕರೆದೊಯ್ಯುವ ಪ್ರಯತ್ನ ನಡೆಯಿತು. ಆದರೆ, ಕಿಮ್ಸ್ ಆವರಣದಲ್ಲಿದ್ದ ಆಂಬುಲೆನ್ಸ ಕಾಸು ಕೊಡದೇ ಮುಂದೆ ಚಲಿಸಲಿಲ್ಲ. ರೋಗಿ ಸಂಬAಧಿಕರ ಬಳಿ ತುರ್ತಾಗಿ ಕೊಡಲು ಕಾಸು ಇರಲಿಲ್ಲ. ಹೀಗಾಗಿ ಗಾಯಾಳು ಸಮಸ್ಯೆ ಅನುಭವಿಸಿದರು. ಕೊನೆಗೆ ಸಮಸ್ಯೆ ಅರಿತ ವ್ಯಕ್ತಿಯೊಬ್ಬರು ಖಾಸಗಿ ಖಾತೆಗೆ 4 ಸಾವಿರ ರೂ ಹಣ ಜಮಾ ಮಾಡಿದರು. ಅದಾದ ನಂತರ ಆ ಆಂಬುಲೆನ್ಸ ಮುಂದೆ ಸಾಗಿತು. ಮಲ್ಲಾಪುರದ ಸಾಮಾಜಿಕ ಕಾರ್ಯಕರ್ತ ವಿಕೇಶ ಬಾಂದೇಕರ ಈ ವಿಷಯವಾಗಿ ತೀವ್ರ ಅಸಮಾಧಾನವ್ಯಕ್ತಪಡಿಸಿದರು. `ಹಣ ಇದ್ದ ಕಾರಣ ಅದನ್ನು ಪಾವತಿಸಲಾಯಿತು. ಹಣ ಇಲ್ಲದವರು ಅಪಘಾತಕ್ಕೀಡಾದರೆ ಗತಿ ಏನು?’ ಎಂದವರು ಪ್ರಶ್ನಿಸಿದರು. - [ರಾಮತೀರ್ಥ: ಪುಣ್ಯ ಸ್ನಾನದ ವೇಳೆಯೇ ಶಿವನ ಪಾದ ಸೇರಿದ ಭಕ್ತ!](https://mobiletime.in/2025/11/ramatirtha-a-devotee-who-touched-the-feet-of-lord-shiva-during-a-holy-bath/): ಗೋಕರ್ಣದ ರಾಮತೀರ್ಥದ ಬಳಿ ಪುಣ್ಯ ಸ್ನಾನ ಮಾಡುತ್ತಿದ್ದ ಬೊಮ್ಮಯ್ಯ ಆಗೇರ್ ಅವರು ಅಲ್ಲಿಯೇ ಕುಸಿದು ಬಿದ್ದು ಕೊನೆಯುಸಿರೆಳೆದಿದ್ದಾರೆ. ಗೋಕರ್ಣ ಬಳಿಯ ಬಂಕಿಕೊಡ್ಲ ಸಮೀಪದ ಬಂಗ್ಲೆಗುಡ್ಡದವರಾಗಿದ್ದ ಬೊಮ್ಮಯ್ಯ ಸೋಮು ಆಗೇರ (47) ಅವರು ಸದಾ ಕಡಲು-ಕಿನಾರೆ ಬಳಿ ಸುತ್ತಾಡುತ್ತಿದ್ದರು. ಜನ ಹೇಳಿದ ಎಲ್ಲಾ ಕೆಲಸವನ್ನು ಅವರು ಮಾಡುತ್ತಿದ್ದರು. ಒಮ್ಮೊಮ್ಮೆ ಕುಣಿಯುವುದು, ದಿಡೀರ್ ಆಗಿ ಕೆಲಸ ಮಾಡುವುದು, ಏಕಾಏಕಿ ನಗುವುದು ಹಾಗೂ ಮನಸ್ಸು ಬಂದಾಗಲೆಲ್ಲ ಅಳುವ ಮನಸ್ಥಿತಿಯನ್ನು ಅವರು ಹೊಂದಿದ್ದರು. ಅನೇಕರು ಅನೇಕ ರೀತಿಯ ಕೆಲಸಗಳಿಗೆ ಬೊಮ್ಮಯ್ಯ ಆಗೇರ್ ಅವರನ್ನು ಬಳಸಿಕೊಳ್ಳುತ್ತಿದ್ದರು. ಯಾರೂ ಏನೇ ಕೆಲಸ ಹೇಳಿದರೂ ಬೊಮ್ಮಯ್ಯ ಆಗೇರ್ ಅವರು ಅದನ್ನು ಮಾಡುತ್ತಿದ್ದರು. ಕಡಲಿನಲ್ಲಿ ಅಲೆದಾಡುವ ಅವರು ರಾಮ ಮಂದಿರ ಬಳಿಯ ರಾಮತೀರ್ಥದಲ್ಲಿ ಸ್ನಾನ ಮಾಡುವ ಪರಿಪಾಠ ಹೊಂದಿದ್ದರು. ಸ್ನಾನದ ನಂತರ ದೇಗುಲ ಪ್ರದಕ್ಷಿಣೆ ಹಾಕಿ ತಮ್ಮ ಭಕ್ತಿಯಿಂದ ಅವರು ನಮಿಸುತ್ತಿದ್ದರು. ಮಂಗಳವಾರ ರಾಮತೀರ್ಥದ ಝರಿ ನೀರು ಬೀಳುವ ಸ್ಥಳಕ್ಕೆ ತೆರಳಿದ ಅವರು ಅಲ್ಲಿ ಪುಣ್ಯ ಸ್ನಾನದಲ್ಲಿ ನಿರತರಾಗಿದ್ದರು. ದಿಢೀರ್ ಆಗಿ ಅವರು ಅಲ್ಲಿಯೇ ಕುಸಿದು ಬಿದ್ದರು. ಬೊಮ್ಯಯ್ಯ ಆಗೇರ್ ಅವರನ್ನು ಅಲ್ಲಿನವರು ಆಸ್ಪತ್ರೆಗೆ ಕರೆತಂದರು. ಆ ವೇಳೆಗೆ ಅವರು ಸಾವನಪ್ಪಿರುವ ಸಂಗತಿ ಗೊತ್ತಾಯಿತು. - [ಹೊಟೇಲ್ ಮಾಣಿಗೆ ಆಮೀಷ: 59 ಲಕ್ಷ ರೂ ಮೋಸ](https://mobiletime.in/2025/11/hotel-waiter-lured-rs-59-lakhs-cheated/): ಆನ್‌ಲೈನ್ ಟ್ರೇಡಿಂಗ್ ಮೂಲಕ ಹೆಚ್ಚು ಹಣಗಳಿಸಲು ಸಾಧ್ಯ ಎಂಬ ಸಂದೇಶ ನಂಬಿದ ಕಾರವಾರದ ಪಂಕಜ್ ನಾಯ್ಕ ಅವರು 59 ಲಕ್ಷ ರೂ ಹಣ ಕಳೆದುಕೊಂಡಿದ್ದಾರೆ. `ಅಪರಿಚಿತರನ್ನು ನಂಬಬೇಡಿ. ಆನ್‌ಲೈನ್ ವಂಚನೆಗೆ ಬಲಿಯಾಗಬೇಡಿ’ ಎಂದು ಪೊಲೀಸರು ಸಾವಿರ ಸಲ ಹೇಳಿದರೂ ಮೋಸ ಹೋಗುವವರ ಸಂಖ್ಯೆ ಕಡಿಮೆ ಆಗಿಲ್ಲ! ಕಾರವಾರದ ಸದಾಶಿವಗಡದಲ್ಲಿ ಪಂಕಜ್ ರೋಹಿದಾಸ ನಾಯ್ಕ ಅವರು ಹೊಟೇಲ್ ಕೆಲಸ ಮಾಡಿಕೊಂಡಿದ್ದರು. ಸೆಪ್ಟೆಂಬರ್ 21ರಂದು ಅವರು ಇನಸ್ಟಾಗ್ರಾಮಿನಲ್ಲಿ ಟ್ರೆಡಿಂಗ್ ಕಂಪನಿಯ ಸಂದೇಶ ನೋಡಿದರು. ಅದರ ಮೂಲಕ ವಾಟ್ಸಪ್ ಗುಂಪು ಸೇರಿದರು. ಗ್ರೂಪ್ ಅಡ್ಮಿನ್ ಆರೋಹಿ ನಂಬೋದರಿ ಅವರು ಹೇಳಿದ ಮಾತು ಆಲಿಸಿದರು. ಅವರು ಹೇಳಿದಂತೆ ಮತ್ತೊಂದು ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿಕೊಂಡು ಅಲ್ಲಿ ಹಣ ಹೂಡಿಕೆ ಶುರು ಮಾಡಿದರು. ಸೆಪ್ಟೆಂಬರ್ 26ರಿಂದ ಡಿಸೆಂಬರ್ 6ರವರೆಗೂ ಹಂತಹoತವಾಗಿ 59.50 ಲಕ್ಷ ರೂ ಹೂಡಿಕೆ ಮಾಡಿದರು. ಇದಕ್ಕೆ ಪ್ರತಿಯಾಗಿ 3 ಕೋಟಿ ರೂ ಲಾಭಗಳಿಸಿರುವುದಾಗಿ ಪಂಕಜ ನಾಯ್ಕ ಅವರಿಗೆ ಮಾಹಿತಿ ಬಂದಿತು. ಆದರೆ, ಆ ಲಾಭದ ಹಣ ಹಿಂಪಡೆಯಲು ಮಾತ್ರ ಸಾಧ್ಯವಾಗಲಿಲ್ಲ. ಆಗ, ಆ ಮಹಿಳೆಗೆ ಪಂಕಜ ನಾಯ್ಕ ಅವರು ಫೋನ್ ಮಾಡಿದರು. ಇನ್ನಷ್ಟು `ಹಣ ಹೂಡಿಕೆ ಮಾಡಿದರೆ ಮಾತ್ರ ಲಾಭದ ಹಣ ಸಿಗಲಿದೆ’ ಎಂದು ಮಹಿಳೆ ಹೇಳಿದ್ದು, ಮೋಸ ಹೋಗಿರುವುದನ್ನು ಅರಿತ ಪಂಕಜ ನಾಯ್ಕ ಅವರು ಪೊಲೀಸ್ ದೂರು ನೀಡಿದರು. ಸೈಬರ್ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. - [ಹಾಲು ವ್ಯಾಪಾರಿಗೆ ನಷ್ಟ ಮಾಡಿದ ಮೀನು ಸಾಗಾಟದ ಲಾರಿ!](https://mobiletime.in/2025/11/a-fish-transport-truck-caused-losses-to-a-milk-merchant/): ಹೆದ್ದಾರಿ ಅಂಚಿನಲ್ಲಿ ಮೇಯುತ್ತಿದ್ದ ಎಮ್ಮೆಗಳಿಗೆ ಮೀನಿನ ಲಾರಿ ಡಿಕ್ಕಿ ಹೊಡೆದಿದೆ. ಹೀಗಾಗಿ ಅಂಕೋಲಾದ ಎರಡು ದಷ್ಟಪುಷ್ಟ ಎಮ್ಮೆಗಳು ಸಾವನಪ್ಪಿದೆ. ಅಂಕೋಲಾದ ಅವರ್ಸಾ ಗ್ರಾಮದ ವಿಕಾಸ ತಳೇಕರ ಅವರು ಜಾನುವಾರುಗಳನ್ನು ಅಪಾರವಾಗಿ ಪ್ರೀತಿಸುತ್ತಿದ್ದರು. ಜೊತೆಗೆ ಅವರು ಹೈನುಗಾರಿಕೆ ಮಾಡಿ ಜೀವನ ನಡೆಸುತ್ತಿದ್ದರು. ದಷ್ಟಪುಷ್ಟವಾದ ಎಮ್ಮೆಗಳನ್ನು ಸಾಕಿದ್ದ ವಿಕಾಸ ತಳೇಕರ್ ಅವರು ನಿತ್ಯ ಅವುಗಳ ಹಾಲು ಮಾರಾಟ ಮಾಡಿ ಬದುಕು ಕಟ್ಟಿಕೊಂಡಿದ್ದರು. ಹೀಗಿರುವಾಗ ಸೋಮವಾರ ಅವರು ತಮ್ಮ ಎಮ್ಮೆಗಳನ್ನು ಮೇವಿಗೆ ಬಿಟ್ಟಿದ್ದರು. ಆ ಎಮ್ಮೆಗಳು ಹೆದ್ದಾರಿ ಅಂಚಿನಲ್ಲಿ ಬೆಳೆದ ಹುಲ್ಲುಗಳನ್ನು ತಿಂದು ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದವು. ಆಗ, ಕಾರವಾರದಿಂದ ಅಂಕೋಲಾ ಕಡೆ ವೇಗವಾಗಿ ಬಂದ ಮೀನಿನ ಲಾರಿಯೊಂದು ಆ ಎಮ್ಮೆಗಳಿಗೆ ಡಿಕ್ಕಿ ಹೊಡೆಯಿತು. ಉಡುಪಿಯ ಅಬ್ದುಲ್ ರೇಹಮಾನ್ ಅವರು ಕಾರವಾರ ಕಡೆಯಿಂದ ಅಂಕೋಲಾ ಕಡೆಗೆ ಮೀನು ಲಾರಿ ಓಡಿಸುತ್ತಿದ್ದು ಅವರ ಅತಿಯಾದ ವೇಗ ಎಮ್ಮೆಗಳ ಸಾವಿಗೆ ಕಾರಣವಾಯಿತು. ಈ ಅವಘಡದಲ್ಲಿ ಕೋಣಕ್ಕೂ ಗಾಯವಾಗಿದ್ದು, ಈ ಎಲ್ಲಾ ಜಾನುವಾರುಗಳ ಮಾಲಕ ವಿಕಾಸ ತಳೇಕರ ನಷ್ಟ ಅನುಭವಿಸಿದರು. ಮೀನು ಲಾರಿಯೂ ಅಪಘಾತದಲ್ಲಿ ಜಖಂ ಆಯಿತು. ಹೀಗಾಗಿ ಎಮ್ಮೆ ಸಾವನಪ್ಪಿದ ನಷ್ಟ ಭರಿಸಲು ಲಾರಿ ಚಾಲಕ ಅಬ್ದುಲ್ ರೇಹಮಾನ್ ಒಪ್ಪಲಿಲ್ಲ. ಪ್ರೀತಿಯಿಂದ ಸಾಕಿದ್ದ ಎಮ್ಮೆಗಳ ಸಾವು ಹಾಗೂ ಗಾಯಗೊಂಡ ಕೋಣದ ಆರೈಕೆ ಬಗ್ಗೆ ತಲೆಕೆಡಿಸಿಕೊಂಡ ವಿಕಾಸ ತಳ್ಳೇಕರ್ ಅವರು ಈ ಬಗ್ಗೆ ಪೊಲೀಸ್ ಠಾಣೆಯ ಮೆಟ್ಟಿಲೇರಿದರು. ವೇಗವಾಗಿ ಲಾರಿ ಓಡಿಸಿದಲ್ಲದೇ, ಎಮ್ಮೆಗಳನ್ನು ಕೊಂದ ಅಬ್ದುಲ್ ರೇಹಮಾನ್ ವಿರುದ್ಧ ದೂರು ನೀಡಿದರು. ಅಂಕೋಲಾ ಪೊಲೀಸರು ಪ್ರಕರಣ ದಾಖಲಿಸಿದ್ದು, ತನಿಖೆ ನಡೆಸುತ್ತಿದ್ದಾರೆ. - [ಮಹಿಳೆ ಮೈ ಮುಟ್ಟಿದವನಿಗೆ ಛೀಮಾರಿ: ದಂಡದ ಬಿಸಿ!](https://mobiletime.in/2025/11/man-who-touched-womans-body-reprimanded-fines-looming/): ತೋಟದ ಮನೆಗೆ ತೆರಳಿದ್ದ ಮಹಿಳೆಯ ಮೈ ಮುಟ್ಟಿದ ರಾಮಾ ದೇಸಾಯಿ ಅವರಿಗೆ ನ್ಯಾಯಾಲಯ ಶಿಕ್ಷೆ ವಿಧಿಸಿದೆ. ಸಂತ್ರಸ್ತ ಮಹಿಳೆಗೂ ಪರಿಹಾರ ಒದಗಿಸುವಂತೆ ಆದೇಶಿಸಿದೆ. 2013ರ ಅಕ್ಟೊಬರ್ 13ರಂದು ಜೊಯಿಡಾದ ಪಟೋಳಿ ಗ್ರಾಮದ ಸಾಂಗವೆ ಬಳಿ ಗಾಯತ್ರಿ (ಹೆಸರು ಬದಲಿಸಿದೆ) ಅವರು ತೋಟದ ಮನೆಗೆ ಹೋಗಿದ್ದರು. ಅಲ್ಲಿ ಅವರು ಪಂಪ್ ಸೆಟ್ ಚಾಲು ಮಾಡುವಾಗ ರಾಮಾ ಗೋಪಾಲ ದೇಸಾಯಿ ಪಂಪಿನ ಮನೆಯೊಳಗೆ ನುಗ್ಗಿದ್ದರು. ರಾಮಾ ದೇಸಾಯಿ ಅವರು ಗಾಯತ್ರಿ ಅವರನ್ನು ಈ ವೇಳೆ ಗಟ್ಟಿಯಾಗಿ ಹಿಡಿದುಕೊಂಡಿದ್ದು, ಇದಕ್ಕೆ ಗಾಯತ್ರಿ ಅವರು ವಿರೋಧವ್ಯಕ್ತಪಡಿಸಿದರು. ಅದಾಗಿಯೂ ರಾಮಾ ದೇಸಾಯಿ ಅವರು ಗಾಯತ್ರಿ ಅವರನ್ನು ಬಿಡಲಿಲ್ಲ. ರಾಮಾ ದೇಸಾಯಿ ಅವರು ಅಸಭ್ಯವಾಗಿ ವರ್ತಿಸಿದಾಗ ಗಾಯತ್ರಿ ಅವರು ಜೋರಾಗಿ ಬೊಬ್ಬೆ ಹೊಡೆದರು. ಆಗ, ರಾಮಾ ದೇಸಾಯಿ ಅವರು ಗಾಯತ್ರಿ ಅವರ ಎರಡು ಕಾಲುಗನ್ನು ಗಟ್ಟಿಯಾಗಿ ಹಿಡಿದು ನೆಲಕ್ಕೆ ಬೀಳಿಸಿದರು. ಮಹಿಳೆಯ ಕೈ, ಕುತ್ತಿಗೆ ಹಾಗೂ ಬಾಯಿಗೆ ಗಾಯಪಡಿಸಿದರು. ಅದಾದ ನಂತರ `ಈ ವಿಷಯ ಯಾರಿಗಾದರೂ ಹೇಳಿದರೆ ಕೊಲೆ ಮಾಡುವೆ’ ಎಂದು ಬೆದರಿಸಿ ಅಲ್ಲಿಂದ ಪರಾರಿಯಾದರು. ಅದಾಗಿಯೂ ಗಾಯತ್ರಿ ಅವರು ತಮಗಾದ ಅನ್ಯಾಯದ ವಿರುದ್ಧ ನ್ಯಾಯಾಲಯದ ಮೆಟ್ಟಿಲೇರಿದ್ದರು. ಆದರೆ, ಸಾಕ್ಷಿ ಆಧಾರದ ಕೊರತೆಯಿಂದ 2024ರ ಅಗಸ್ಟ 30ರಂದು ದಾಂಡೇಲಿ ನ್ಯಾಯಾಲಯದಲ್ಲಿ ಆ ಪ್ರಕರಣ ಬಿದ್ದು ಹೋಯಿತು. ಆದರೆ, ಅನ್ಯಾಯ ಅನುಭವಿಸಿದ್ದ ಗಾಯತ್ರಿ ಅವರು ಸುಮ್ಮನಿರಲಿಲ್ಲ. ಸರ್ಕಾರಿ ವಕೀಲರ ನೆರವಿನಿಂದಲೇ ಮೇಲ್ಮನವಿ ಸಲ್ಲಿಸಿದರು. ಶಿರಸಿ ನ್ಯಾಯಾಲಯದ ಸರ್ಕಾರಿ ನ್ಯಾಯವಾದಿ ರಾಜೇಶ ಎಂ ಮಳಗಿಕರ್ ಅವರು ಮಹಿಳೆಗೆ ಆದ ಅನ್ಯಾಯದ ಬಗ್ಗೆ ಸಂಪೂರ್ಣ ಮಾಹಿತಿಪಡೆದರು. ವಿವಿಧ ದಾಖಲೆ ಹಾಗೂ ಸಾಕ್ಷಿಗಳನ್ನು ಅವರು ಗಮನಿಸಿದರು. `ಅನ್ಯಾಯಕ್ಕೆ ಒಳಗಾದವರಿಗೆ ನ್ಯಾಯ ಕೊಡಿಸಲೇ ಬೇಕು’ ಎಂದು ಅವರು ಸಂತ್ರಸ್ತೆ ಪರವಾಗಿ ಹೋರಾಟ ನಡೆಸಿದರು. ಶಿರಸಿ ನಗರದ 1ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಈ ಪ್ರಕರಣದ ವಿಚಾರಣೆ ಶುರುವಾಯಿತು. ಕಾರವಾರ ನ್ಯಾಯಾಲಯದ ಪೀಠಾಸೀನ ಕಿರಣ ಕಿಣಿ ಅವರು ಶಿರಸಿ ನ್ಯಾಯಾಲಯದಲ್ಲಿ ವಿಚಾರಣೆ ನಡೆಸುವಾಗ ನ್ಯಾಯವಾದಿ ರಾಜೇಶ ಎಂ ಮಳಗಿಕರ್ ಅವರು ಮಹಿಳೆ ಅನುಭವಿಸಿದ ಸಮಸ್ಯೆಗಳ ಬಗ್ಗೆ ವಿವರಿಸಿದರು. ಕೆಳ ನ್ಯಾಯಾಲಯದಲ್ಲಿ ಆದ ಆದೇಶದಲ್ಲಿನ ಲೋಪಗಳ ಬಗ್ಗೆ ಅವರು ವಿವರವಾದ ಮಾಹಿತಿ ನೀಡಿದರು. ಮಹಿಳೆಯರ ಮೈಮುಟ್ಟುವವರಿಗೆ ಶಿಕ್ಷೆ ವಿಧಿಸಬೇಕು ಎಂದು ಮನವಿ ಮಾಡಿದರು. ಈ ಎಲ್ಲಾ ವಾದ ಆಲಿಸಿದ ನ್ಯಾಯಾಧೀಶ ಕಿರಣ ಕಿಣಿ ಅವರು ದಾಂಡೇಲಿ ನ್ಯಾಯಾಲಯ ನೀಡಿದ ಆದೇಶವನ್ನು ತಿರಸ್ಕರಿಸಿದರು. ಆರೋಪಿಯನ್ನು ಬಿಡುಗಡೆಗೊಳಿಸಿ ಕೆಳ ನ್ಯಾಯಾಲಯ ನೀಡಿದ ತೀರ್ಫನ್ನು ಬದಿಗೊತ್ತಿ ರಾಮಾ ಗೋಪಾಲ ದೇಸಾಯಿ ಅವರು ತಪ್ಪಿತಸ್ಥ ಎಂದು ಘೋಷಿಸಿದರು. ರಾಮಾ ಗೋಪಾಲ ದೇಸಾಯಿ ಅವರಿಗೆ 8 ಸಾವಿರ ರೂ ದಂಡ ವಿಧಿಸಿದ ನ್ಯಾಯಾಧೀಶರು ಸಂತ್ರಸ್ತ ಮಹಿಳೆಗೆ 2 ಸಾವಿರ ರೂ ಪರಿಹಾರ ನೀಡುವಂತೆ ಆದೇಶಿಸಿದರು. - [ಬೃಹತ್ ಸಮಾವೇಶ: ಅರಣ್ಯಾಧಿಕಾರಿಗಳ ವಿರುದ್ಧ ಆಕ್ರೋಶ!](https://mobiletime.in/2025/11/massive-rally-outrage-against-forest-officials/): ಅರಣ್ಯ ಅತಿಕ್ರಮಣದಾರರ ಮೇಲೆ ಪದೇ ಪದೇ ದಬ್ಬಾಳಿಕೆ ನಡೆಯುವುದನ್ನ ಖಂಡಿಸಿ ಅರಣ್ಯವಾಸಿಗಳು ಶಿರಸಿಯಲ್ಲಿ ಮಂಗಳವಾರ ಭಾರೀ ಪ್ರಮಾಣದ ಪ್ರತಿಭಟನೆ ನಡೆಸಿದ್ದಾರೆ. ಬಿಗಿ ಪೊಲೀಸ್ ಬಂದೋಬಸ್ತಿನಲ್ಲಿ ಪ್ರತಿಭಟನಾಕಾರರ ಮೆರವಣಿಗೆ ನಡೆದಿದ್ದು, ಈ ಪ್ರತಿಭಟನೆಯಲ್ಲಿ ಸಾವಿರಾರು ಜನ `ನಮ್ಮ ಭೂಮಿ ನಮ್ಮ ಹಕ್ಕು’ ಎಂಬ ಘೋಷಣೆ ಕೂಗಿದ್ದಾರೆ. `ಅರಣ್ಯವಾಸಿಗಳ ಒಕ್ಕಲೆಬ್ಬಿಸುವ ಪ್ರಕ್ರಿಯೆ ಸ್ಥಗಿತಗೊಳಿಸಿ’ ಎಂದು ಪ್ರತಿಭಟನಾಕಾರರು ಆಗ್ರಹಿಸಿದರು. ಮೂರು ತಾಸುಗಳ ಕಾಲ ಧರಣಿ ನಡೆಸಿ ಕೊನೆಗೆ ಜಯಘೋಷದ ಜೊತೆ ಪ್ರತಿಭಟನೆ ಹಿಂಪಡೆದರು. ಅರಣ್ಯ ಭೂಮಿ ಹಕ್ಕು ಹೊರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ಅವರು ಪ್ರತಿಭಟನೆ ಮುಂದಾಳತ್ವವಹಿಸಿದ್ದು, ಸಿಸಿಎಫ್ ಕಾರ್ಯಾಲಯದ ಬಳಿ ಜನ ಜಮಾಯಿಸಿದರು. ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ ಎನ್, ಶಿರಸಿ ಉಪವಿಭಾಗ ಅಧಿಕಾರಿ ಕಾವ್ಯಾರಾಣಿ, ಉಪಅರಣ್ಯ ಸಂರಕ್ಷಣಾಧಿಕಾರಿ ಸಂದೀಪ್ ಸೂರ್ಯವಂಶಿ ಅವರು ಜನರ ಅಹವಾಲು ಆಲಿಸಿದರು. ಆದರೆ, ಇದರಿಂದ ಪ್ರತಿಭಟನಾಕಾರರು ಮಣಿಯಲಿಲ್ಲ. ಅರಣ್ಯ ಇಲಾಖೆ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಬರಬೇಕು ಎಂದು ಪಟ್ಟುಹಿಡಿದರು. `ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ ಅರ್ಜಿ ಸಲ್ಲಿಸಿದ ಅರಣ್ಯ ಅತಿಕ್ರಮಣದಾರರ ಒಕ್ಕಲೆಬ್ಬಿಸುವ ಪ್ರಕ್ರಿಯೆ ಕೂಡಲೇ ಸ್ಥಗಿತಗೊಳಿಸಬೇಕು’ ಎಂದು ಜನ ಒತ್ತಾಯಿಸಿದರು. `ಅರಣ್ಯವಾಸಿಗಳ ಒಕ್ಕಲೆಬ್ಬಿಸುವ ಪ್ರಕ್ರಿಯೆ ತುರ್ತು ಸ್ಥಗಿತಗೊಳಿಸಿ, ಒಕ್ಕಲೆಬ್ಬಿಸುವ ಸಮಸ್ಯೆಗಳ ಕುರಿತು ಸರ್ಕಾರದ ಗಮನಕ್ಕೆ ತರಲಾಗುತ್ತದೆ’ ಎಂದು ಸಿಸಿಎಫ್ ಟಿ ಹೀರಾಲಾಲ್ ಅವರು ಸಮಾಲೋಚನಾ ಸಭೆಯಲ್ಲಿ ಹೇಳಿದರು. `ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ ಅರ್ಜಿ ಸಲ್ಲಿಸಿದ ಅರಣ್ಯವಾಸಿಗಳ ಮೇಲೆ ದೌಜನ್ಯ ಜರುಗಿಸದಂತೆ ಸೂಚನೆ ನೀಡುವೆ’ ಎಂದವರು ಭರವಸೆ ನೀಡಿದರು. `ಜೊಯಿಡಾದಲ್ಲಿ ಅತಿಕ್ರಮಣದಾರರ ಮೇಲೆ ಜರುಗುತ್ತಿರುವ ದೌಜನ್ಯದ ಕುರಿತು ಮುಂದಿನ 15 ದಿನಗಳ ಒಳಗೆ ಜೋಯಿಡಾದಲ್ಲಿ ವಿಶೇಷವಾದ ಸಭೆ ಸಂಘಟಿಸಲಾಗುತ್ತದೆ’ ಎಂದು ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಟಿ ಹೀರಾಲಾಲ ಅವರು ಪ್ರತಿಭಟನಾಕಾರರಲ್ಲಿ ಹೇಳಿದರು. ಈ ಮಾತಿನಿಂದ ಸಂತಸಗೊAಡ ಅರಣ್ಯ ಅತಿಕ್ರಮಣದಾರರು ಹೋರಾಟಗಾರ ರವೀಂದ್ರ ನಾಯ್ಕ ಅವರನ್ನು ಹೆಗಲ ಮೇಲೆ ಹೊತ್ತು ಮೆರವಣಿಗೆ ಮಾಡಿಸಿದರು. ಹೋರಾಟಗಾರರ ಪ್ರಮುಖರಾದ ಇಬ್ರಾಹೀಂ ಗೌಡಳ್ಳಿ, ರಾಜು ನರೇಬೈಲ್, ಮಂಜುನಾಥ ಮರಾಠಿ, ಶಿವನಾಂದ ಜೋಗಿ, ಮಾಬ್ಲೇಶ್ವರ ನಾಯ್ಕ ಬೇಡ್ಕಣಿ, ರಾಮ ಮರಾಠಿ ಯಲಕೊಟಗಿ, ಸುರೇಶ ಮೇಸ್ತ ಹೊನ್ನಾವರ, ರಾಜೇಶ್ ಮಿತ್ರ ನಾಯ್ಕ ಅಂಕೋಲ, ಅಣ್ಣಪ್ಪ ನಾಯ್ಕ ಅಣ್ಣೀಗೇರಿ, ಚಂದ್ರ ಪೂಜಾರಿ ಮಂಚಿಕೇರಿ, ಗಣಪತಿ ನಾಯ್ಕ ಬೆಡಸಗಾಂವ, ಹರಿಹರ ನಾಯ್ಕ, ದೇವರಾಜ ಗೊಂಡ ಭಟ್ಕಳ, ಮಹೇಶ್ ಸಾಲ್ಕೋಡ, ನೆಹರು ನಾಯ್ಕ, ಎಮ್ ಆರ್ ನಾಯ್ಕ, ರಾಘು ಕವಂಚೂರು, ರಫೀಕ್, ಸುಭಾಷ್ ಗಾವಡಾ, ಅನಿತಾ ಲೋಫಿಸ್, ಮಲ್ಲೇಶಿ, ಸ್ವಾತಿ ಜೈನ್ ಮುಂತಾದವರು ಉಪಸ್ಥಿತರಿದ್ದರು. - [ಕಾನ್ಸರ್ ಎಂದರೆ ಭಯ ಬೇಡ!](https://mobiletime.in/2025/11/cancer-means-no-fear/): ಆರೋಗ್ಯ ರಕ್ಷಣೆಯ ಬಗ್ಗೆ ನಿರಂತರ ಅರಿವು ಮೂಡಿಸುತ್ತಿರುವ ಶಿರಸಿಯ ಅಸ್ಮಿತೆ ಪೌಂಡೇಶನ್ ಉಂಚಳ್ಳಿಯಲ್ಲಿ ಕಾನ್ಸರ್ ಭಯ ಹೋಗಲಾಡಿಸುವ ನಿಟ್ಟಿನಲ್ಲಿ ಜನ ಜಾಗೃತಿ ಕಾರ್ಯಕ್ರಮ ನಡೆಸಿದೆ. ಬೆಂಗಳೂರಿನ ಇಂಡಿಯನ್ ಕ್ಯಾನ್ಸರ್ ಸೊಸೈಟಿ ಸಹಯೋಗದಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿವಿಧ ವೈದ್ಯಾಧಿಕಾರಿಗಳು ಭಾಗವಹಿಸಿ ಕಾನ್ಸರ್ ಆಗು-ಹೋಗು ವಿಚಾರವಾಗಿ ಅರಿವು ಮೂಡಿಸಿದ್ದಾರೆ. ಶಿರಸಿಯ ಅಸ್ಮಿತೆ ಫೌಂಡೇಶನ್ ಆರೋಗ್ಯ ರಕ್ಷಣೆ ವಿಚಾರವಾಗಿ ಕಳೆದ ಒಂದು ವರ್ಷದಿಂದ ಶ್ರಮಿಸುತ್ತಿದೆ. ಅದರಲ್ಲಿಯೂ ಮುಖ್ಯವಾಗಿ ಮಾಹಾಮಾರಿ ಕಾನ್ಸರ್ ವಿರುದ್ಧ ಈ ಸಂಸ್ಥೆ ಹೋರಾಡುತ್ತಿದೆ. ಗ್ರಾಮೀಣ ಭಾಗದ ಜನರಿಗೆ ಕಾನ್ಸರ್ ಕುರಿತು ಅರಿವು ಮೂಡಿಸುವುದಕ್ಕಾಗಿ ನಾನಾ ಬಗೆಯ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ. ಅದರ ಭಾಗವಾಗಿ ಸದ್ಯ ಆರೋಗ್ಯ ಇಲಾಖೆ ಸಹಯೋಗದಲ್ಲಿ ಉಂಚಳ್ಳಿ ಗ್ರಾಮ ಪಂಚಾಯತದಲ್ಲಿ ಉಚಿತ ಆರೋಗ್ಯ ತಪಾಸಣೆ ಹಾಗೂ ಜಾಗೃತಿ ಶಿಬಿರ ನಡೆಸಿದೆ. `ಜನರಲ್ಲಿ ಕಾನ್ಸರ್ ಕುರಿತು ಅನೇಕ ತಪ್ಪು ತಿಳುವಳಿಕೆಗಳಿವೆ. ರೋಗದ ಬಗ್ಗೆ ಭಯಪಡುವ ಬದಲು ಸೂಕ್ತ ತಪಾಸಣೆ ನಡೆಸಿದರೆ ಆರೋಗ್ಯವಂತ ಜೀವನ ನಡೆಸಲು ಸಾಧ್ಯ’ ಎಂದು ಈ ಶಿಬಿರದಲ್ಲಿ ಭಾಗವಹಿಸಿದ ಅಸ್ಮಿತೆ ಫೌಂಡೇಶನ್ ಕಾರ್ಯನಿರ್ವಾಹಕ ನಿರ್ದೇಶಕ ಡಾ ರಿಯಾಜ್ ಸಾಗರ್ ಅವರು ಹೇಳಿದ್ದಾರೆ. `ಅಗತ್ಯ ತಪಾಸಣೆ, ನಿರಂತರ ಚಿಕಿತ್ಸೆ ಹಾಗೂ ಔಷಧೋಪಚಾರಗಳಿಂದ ರೋಗದ ವಿರುದ್ಧ ಹೋರಾಟ ಸಾಧ್ಯ’ ಎಂದವರು ಧೈರ್ಯ ತುಂಬಿದ್ದಾರೆ. ಈ ದಿನ ನಡೆದ ಉಚಿತ ಆರೋಗ್ಯ ತಪಾಸಣೆ ಶಿಬಿರದಲ್ಲಿ ನುರಿತ ವೈದ್ಯರು ಬಾಯಿ ಆರೋಗ್ಯ, ಸ್ತನ ಕ್ಯಾನ್ಸರ್ ತಪಾಸಣೆ ಹಾಗೂ ಗರ್ಭಕಂಠ ಕ್ಯಾನ್ಸರ್ ಕುರಿತು ರೋಗಿಗಳಿಗೆ ಮಾಹಿತಿ ನೀಡಿದರು. ಗ್ರಾ ಪಂ ಅಭಿವೃದ್ಧಿ ಅಧಿಕಾರಿ ಹರ್ಷ ರಾಥೋಡ್, ಕಾರ್ಯದರ್ಶಿ ಅಶೋಕ್ ನಾಯ್ಕ, ವೈದ್ಯರಾದ ಡಾ ಮಮತಾ ಹೆಗಡೆ, ಡಾ ಸೌಭಾಗ್ಯ, ಡಾ ಅರವಿಂದ ಇನ್ನಿತರರು ರೋಗಿಗಳ ಆರೈಕೆ ಮಾಡಿದರು. - [ದೇಗುಲದ ಮೇಲೆ ಕಳ್ಳರ ಕಣ್ಣು: ಪಂಚಲೋಹದ ಮೂರ್ತಿ ಕಾಣೆ!](https://mobiletime.in/2025/11/thieves-eyes-on-the-temple-panchaloha-idol-is-missing/): ಮುರುಡೇಶ್ವರ ಬಳಿ ಎರಡು ದೇವಾಲಯದಲ್ಲಿ ಕಳ್ಳತನ ನಡೆದಿದೆ. ಬೈಲೂರು ಗ್ರಾಮದ ತೆಂಗಾರ ಊರಿನಲ್ಲಿರುವ ಲಕ್ಷ್ಮೀನಾರಾಯಣ ದೇವಾಲಯ ಹಾಗೂ ಸಮೀಪದಲ್ಲಿರುವ ಉಡುಪಿ ಗೋಪಾಲಕೃಷ್ಣ ದೇಗುಲಕ್ಕೆ ಕಳ್ಳರು ನುಗ್ಗಿದ್ದಾರೆ. ನವೆಂಬರ್ 9ರ ರಾತ್ರಿ ಈ ಕಳ್ಳತನ ನಡೆದಿದ್ದು, ಮರುದಿನ ಬೆಳಗ್ಗೆ ಗೊತ್ತಾಗಿದೆ. ದೇವಾಲಯದಲ್ಲಿದ್ದ ಒಡವೆ, ಪಾತ್ರೆ, ಕಾಣಿಕೆ ಡಬ್ಬಿಯ ಹಣವನ್ನು ಕಳ್ಳರು ದೋಚಿದ್ದಾರೆ. ದೇವಾಲಯದ ಗೋಡೆ ಹಾರಿ ಆವಾರ ಪ್ರವೇಶಿಸಿದ ಕಳ್ಳರು ಬಾಗಿಲು ಮುರಿದು ಒಳಗೆ ಪ್ರವೇಶಿಸಿದ್ದಾರೆ. ಲಕ್ಷ್ಮೀನಾರಾಯಣ ದೇವಾಲಯದ ಪಂಚಲೋಹ ಮೂರ್ತಿಯನ್ನು ಅಪಹರಿಸಿದ್ದಾರೆ. ಅದಾದ ನಂತರ ಅಲ್ಲಿದ್ದ ಬೆಳ್ಳಿ-ಬಂಗಾರ ದೋಚಿದ ಕಳ್ಳರು ಕಾಣಿಕೆ ಡಬ್ಬಿ ಒಡೆದಿದ್ದಾರೆ. ಡಬ್ಬಿಯಲ್ಲಿದ್ದ ಅಂದಾಜು 27 ಸಾವಿರ ರೂ ಹಣವನ್ನು ಎಗರಿಸಿದ್ದಾರೆ. ಅದಾದ ನಂತರ ಸಮೀಪದ ಉಡುಪಿ ಗೋಪಾಲಕೃಷ್ಣ ದೇಗುಲವನ್ನು ಪ್ರವೇಶಿಸಿ ಅಲ್ಲಿನ ದೇವರಿಗೆ ಇದ್ದ ಬೆಳ್ಳಿಯ ಕಣ್ಣುಗಳು ತೆಗೆದಿದ್ದಾರೆ. ಅಲ್ಲಿಯೂ ಪೂಜಾ ಸಾಮಗ್ರಿ ಹಾಗೂ ಬಂಗಾರದ ಆಭರಣವನ್ನು ಅಪಹರಿಸಿದ್ದಾರೆ. ಅದಾದ ನಂತರ ಅಲ್ಲಿನ ಕಾಣಿಕೆ ಡಬ್ಬಿಯ ಹಣವನ್ನು ಬಿಡದೇ ಒಯ್ದಿದ್ದಾರೆ. ಕಳ್ಳತನದ ದೂರು ದಾಖಲಿಸಿಕೊಂಡ ಮುರುಡೇಶ್ವರ ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆ ಶುರು ಮಾಡಿದ್ದಾರೆ. - [ಜೊಯಿಡಾ: ಸಮಗ್ರ ಅಭಿವೃದ್ಧಿಗಾಗಿ ರೈತ ಸಂಘದ ಹೋರಾಟ](https://mobiletime.in/2025/11/zoida-farmers-associations-struggle-for-comprehensive-development/): ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ಪ್ರಾಂತ ರೈತ ಸಂಘದವರು ಜೊಯಿಡಾದಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. 11ಕಿಮೀ ಪಾದೆಯಾತ್ರೆ ನಡೆಸಿದ ಪ್ರತಿಭಟನಾಕಾರರು ತಮ್ಮ ಬೇಡಿಕೆಗಳ ಪಟ್ಟಿಯನ್ನು ಸರ್ಕಾರಕ್ಕೆ ಸಲ್ಲಿಸಿದ್ದಾರೆ. ಜೋಯಿಡಾ ತಾಲೂಕಿಗೆ ಮೂಲಭೂತ ಸೌಕರ್ಯ ಒದಗಿಸಬೇಕು ಎಂದು ಪ್ರತಿಭಟನಾಕಾರರು ಪಟ್ಟು ಹಿಡಿದರು. ಈ ಹಿಂದೆ ಹೋರಾಟ ನಡೆಸಿದಾಗ ಸರ್ಕಾರ ನೀಡಿದ ಭರವಸೆ ಈಡೇರಿಲ್ಲ ಎಂದು ಆಕ್ಷೇಪವ್ಯಕ್ತಪಡಿಸಿದರು. `ಜೊಯಿಡಾ ಹಿಂದುಳಿದ ತಾಲೂಕು ಎಂದು ಸರ್ಕಾರವೇ ನಿರ್ಧರಿಸಿದೆ. ಆದರೆ, ಮೂಲಭೂತ ಸೌಕರ್ಯ ಒದಗಿಸುತ್ತಿಲ್ಲ’ ಎಂದು ಅಸಮಧಾನವ್ಯಕ್ತಪಡಿಸಿದರು. ರಸ್ತೆ, ವಿದ್ಯುತ್, ಬಸ್ ಸಂಪರ್ಕ ಸೇರಿ ಅನೇಕ ಬಗೆಯ ಸೌಕರ್ಯ ಸಿಗದ ಬಗ್ಗೆ ಆಕ್ರೋಶವ್ಯಕ್ತಪಡಿಸಿದರು. `ಕಿರವತ್ತಿ, ಕಾರಟೋಳಿ, ಡಿಗ್ಗಿ, ಗೋವಾ ಗಡಿ ರಾಜ್ಯ ಹೆದ್ದಾರಿ ರಸ್ತೆ ಸುಧಾರಣೆಯಾಗಬೇಕು. ಡಿಗ್ಗಿ ಮುಖ್ಯ ರಸ್ತೆಯಿಂದ ವಾಗೇಲಿ ರಸ್ತೆ ಮರು ಡಾಂಬರೀಕರಣವಾಗಬೇಕು. ಕಿರವತ್ತಿ, ತೆರಾಳಿ, ಸಿಸೈ, ದೂಧಮಳಾ ರಸ್ತೆ ಡಾಂಬರಿಕರಣ ಮತ್ತು ಸೇತುವೆ ನಿರ್ಮಾಣವಾಗಬೇಕು. ಡಿಗ್ಗಿ ಮುಖ್ಯ ರಸ್ತೆ ಯಿಂದ ಕಸಂಬಾ, ಅಂತರೆ, ತಳೆ, ನಮ್ಶಿ, ಬುಳಬುಳೆ, ಧಾಮಣಕುಣಂಗ, ಮಾರ್ಲಿ, ಫಾತರಶೇತ ಮತ್ತು ಗೋಟ್ಕಾರ ರಸ್ತೆ ಸುಧಾರಣೆಯಾಗಬೇಕು’ ಎಂದು ಪ್ರತಿಭಟನಾಕಾರರು ಆಗ್ರಹಿಸಿದರು. `ಜೋಯಿಡಾದಿಂದ ಕಾರ್ಟೋಳಿ ವಸತಿ ಬಸ್ ಪ್ರಾರಂಭವಾಗಬೇಕು. ಜೋಯಿಡಾದಿಂದ ಕುಂಡಲ ವಸತಿ ಬಸ್ ಶುರುವಾಗಬೇಕು. ಕಾರವಾರದಿಂದ ಕದ್ರಾ ಮಾರ್ಗವಾಗಿ ಸುಳಗೇರಿಗೆ ರಾತ್ರಿ ಬಸ್ ಪುನಃ ಪ್ರಾರಂಭಿಸಬೇಕು. ಗ್ರಾಮಿಣ ಭಾಗದಲ್ಲಿ ಮೊಬೈಲ್ ಟವರ್ ನಿರ್ಮಾಣಕ್ಕೆ ಅನುಮತಿ ನೀಡಬೇಕು. ಕಾರ್ಟೋಳಿಯಲ್ಲಿ ನ್ಯಾಯಬೆಲೆ ಅಂಗಡಿ ಪ್ರಾರಂಭವಾಗಬೇಕು. ವನ್ಯಜೀವಿ ವಿಭಾಗದಿಂದ ಅಭಿವೃದ್ಧಿ ಕಾಮಗಾರಿಗೆ ತೊಂದರೆ ನೀಡುವುದಕ್ಕೆ ಕಿಡಿಕಾರಿದರು. ಜೊಯಿಡಾ ತಾಲೂಕಿನ ಸಮಗ್ರ ಅಭಿವೃದ್ಧಿಗಾಗಿ ವಿಶೇಷ ಪ್ಯಾಕೆಜ್ ಘೋಷಣೆ ಮಾಡಬೇಕು ಎಂದು ಮನವಿ ಸಲ್ಲಿಸಿದರು. ಕುಣಬಿ ಜನಾಂಗವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕು ಎಂದು ಈ ವೇಳೆ ಆಗ್ರಹಿಸಿದರು. - [ಭುವನೇಶ್ವರಿ ದೇವಿಯ ಆಸ್ಥಾನ: ಕನ್ನಡಗಲ್ ಗ್ರಾಮದಲ್ಲಿ ಸಿಕ್ಕಿತು ಕನ್ನಡ ಶಾಸನ](https://mobiletime.in/2025/11/the-court-of-goddess-bhuvaneshwari-kannada-inscription-found-in-kannadagala-village/): ಯಲ್ಲಾಪುರದ ಕನ್ನಡಗಲ್ ಹಾಗೂ ಸುತ್ತಲಿನ ಪ್ರದೇಶದಲ್ಲಿ ಹಳೆಗನ್ನಡ ಭಾಷೆಯ ಶಾಸನಗಳು ಸಿಕ್ಕಿವೆ. ಕನ್ನಡಗಲ್, ಚಿಕ್ಕಮಾವಳ್ಳಿ ಹಾಗೂ ಮಾವಳ್ಳಿ ಪ್ರದೇಶದಲ್ಲಿನ ಶಾಸನಗಳ ಅಧ್ಯಯನಕ್ಕೆ ತಜ್ಞರು ಆಸಕ್ತಿವಹಿಸಿದ್ದಾರೆ. `ತ್ರಿಭುವನ ಮಲ್ಲ’ ಎಂಬ ಬಿರುದು ಹೊಂದಿದ್ದ 5ನೇ ವಿಕ್ರಮಾದಿತ್ಯನ ಕಾಲದ ಯುದ್ಧದ ಸನ್ನಿವೇಶದ ವೀರಗಲ್ಲುಗಳು, ಶಾಸನ ಇಲ್ಲಿರುವುದು ದೃಢವಾಗಿದೆ. ಬೊಮ್ಮಣ್ಣ ನಾಯ್ಕ, ಬಲ್ಲಾಳದೇವ, ತಮ್ಮಣ್ಣ ನಾಯ್ಕ, ಮದ್ವಿಜ ನಾಯಕ ಎಂಬ ಹೆಸರಿನವರ ಹೋರಾಟದ ಕಥೆಗಳನ್ನು ಈ ಶಾಸನ ಹೇಳುತ್ತಿದೆ. ಪುರಾತನ ಕಾಲದ ಶಿಲ್ಪಕಲೆ, ಶಾಸನಗಳು, ದೇವಾಲಯದ ಕುರುಹುಗಳು ಇಲ್ಲಿದ್ದು, ಮೋಡಿ ಲಿಪಿ ತಜ್ಞ ಸಂಗಮೇಶ ಕಲ್ಯಾಣಿ ಅವರ ನೇತೃತ್ವದಲ್ಲಿ ಸಂಶೋಧನೆ ಶುರುವಾಗಿದೆ. `ಗೆದ್ದರೆ ಜಯ, ಸೋತರೆ ವೀರಮರಣ’ ಎಂಬ ಧ್ಯೇಯ ವ್ಯಾಕ್ಯ ಬರೆದ ವೀರಗಲ್ಲುಗಳು ಇಲ್ಲಿ ಕಾಣಿಸುತ್ತಿವೆ. ಆ ವೀರಗಲ್ಲುಗಳಲ್ಲಿ ಯುದ್ಧದಲ್ಲಿ ಮಡಿದವರ ವಿವರಗಳಿವೆ. ವೀರ ಮರಣಕ್ಕೀಡಾದವರನ್ನು ವಾದ್ಯ, ಹಾಡು, ನರ್ತನದ ಮೂಲಕ ಮೆರವಣಿಗೆಯಲ್ಲಿ ಸ್ವರ್ಗಕ್ಕೆ ಕಳುಹಿಸುತ್ತಿರುವ ಬಗೆಯ ಚಿತ್ರಣಗಳು ಕಾಣಿಸುತ್ತಿವೆ. ಇದರೊಂದಿಗೆ ನಂದಿ, ಈಶ್ವರ ಲಿಂಗಗಳ ಕೆತ್ತನೆ ನಡೆದಿದ್ದು, ಅವುಗಳಿಗೆ ಪೂಜೆ ಸಲ್ಲಿಸುವುದು ಹಾಗೂ ತಪಸ್ಸಿಗೆ ಕುಳಿತ ಜೈನಮುನಿಗಳ ಚಿತ್ರಗಳ ಕೆತ್ತನೆ ಗಮನಸೆಳೆಯುತ್ತಿದೆ. ಅನತಿ ದೂರದಲ್ಲಿ ಭುವನೇಶ್ವರಿ ದೇವಸ್ಥಾನದ ಕುರುಹು, ಕರ್ಣಮುಚ್ಚುಗೆ, ಕಲ್ಯಾಣಿ, ನಂದಿ ವಿಗ್ರಹಗಳು ವಿರೂಪವಾಗಿ ಗೋಚರಿಸಿದೆ. ಅಗಸ್ತ್ಯ ಮುನಿ ಹಾಗೂ ಅವರ ಶಿಷ್ಯ ವಾಲಖಿಲ್ಯ ಮುನಿಗಳಿಂದ ಈ ಭಾಗದಲ್ಲಿ ಭುವನೇಶ್ವರಿಯ ದೇವಸ್ಥಾನ ಸ್ಥಾಪನೆ, ಆರಾಧನೆ ನಡೆದಿರುವ ಬಗ್ಗೆ ಅಂದಾಜಿಸಲಾಗಿದೆ. ಈ ಎಲ್ಲಾ ಹಿನ್ನಲೆ ಪಾಳುಬಿದ್ದಿರುವ ಕನ್ನಡಗಲ್ಲಿನ ಕನ್ನಡದ ಶಾಸನಗಳ ಉತ್ಖನನ, ಸಂಶೋಧನೆ ಹಾಗೂ ಅಧ್ಯಯನಕ್ಕೆ ಒತ್ತು ನೀಡಬೇಕು ಎಂದು ಅಲ್ಲಿನವರು ಆಗ್ರಹಿಸಿದ್ದಾರೆ. `ಕಳೆದ ಕೆಲವು ತಿಂಗಳಿನಿoದ ಈ ಭಾಗದ ಶಾಸನಗಳ ಬಗ್ಗೆ ಅಧ್ಯಯನ ನಡೆಸುತ್ತಿಸ್ದು, ಜೈನ, ಶೈವ ಶಾಸನಗಳು ಹೇರಳವಾಗಿವೆ. ತ್ರಿಭುವನ ಮಲ್ಲ ಬಿರುದಾಂಕಿಯ ವಿಕ್ರಮಾದಿತ್ಯನ ಶಾಸನಗಳಾಗಿದ್ದು, ಅರಣ್ಯ ಪ್ರದೇಶದಲ್ಲಿ ಅನಾಥವಾಗಿ ಬಿದ್ದಿವೆ. ಇವುಗಳ ಅಧ್ಯಯನ, ಸಂರಕ್ಷಣೆಗೆ ಸರ್ಕಾರ ಮುಂದಾಗಬೇಕು. ಈ ಭಾಗದಲ್ಲಿ ಭುವನೇಶ್ವರಿಯ ಕ್ಷೇತ್ರ ಪ್ರತೀತಿ ಹೊಂದುವ ರೀತಿಯಲ್ಲಿ ಪುನರ್ ಸ್ಥಾಪನೆ ಆಗಬೇಕು’ ಎಂದು ಸಂಶೋಧನೆ ನಡೆಸಿದ ಸಂಗಮೇಶ ಕಲ್ಯಾಣಿ ಅವರು ಆಗ್ರಹಿಸಿದ್ದಾರೆ. `ಅಕಾಲಿಕ ಮರಣ, ಅಂಗವಿಕಲರ ಜನನ ಮೊದಲಾದ ಅಶುಭ ಸಂಕೇತದ ಹಿನ್ನಲೆ ತಜ್ಞರಲ್ಲಿ ವಿಚಾರಿಸಿದಾಗ ಶಾಸನ ಹಾಗೂ ದೇವಾಲಯ ಕುರುಹುಗಳ ಬಗ್ಗೆ ಮಾಹಿತಿ ಸಿಕ್ಕಿತು. ಈಗಾಗಲೇ ತಾತ್ಕಾಲಿಕವಾಗಿ ಭುವನೇಶ್ವರಿ ದೇವಿಯ ಪ್ರತಿಷ್ಠೆಯನ್ನು ಮಾವಳ್ಳಿ ಗ್ರಾಮದೇವಿ ದೇವಸ್ಥಾನದ ಆವಾರದಲ್ಲಿ ಮಾಡಲಾಗಿದ್ದು, ಪ್ರತ್ಯೇಕ ದೇವಸ್ಥಾನ ನಿರ್ಮಿಸುವ ಆಲೋಚನೆಯಿದೆ’ ಎಂದು ಮಾವಳ್ಳಿ ಗ್ರಾಮದೇವಿ ದೇವಸ್ಥಾನದ ಟ್ರಸ್ಟಿ ಗುರುಪಾದಯ್ಯ ನಂದೊಳ್ಳಿಮಠ ಅವರು ತಿಳಿಸಿದರು. ಮೈಸೂರಿನ ಪಿರ್ಯಾಪಟ್ಟಣದ ಆಶಾ ಅಮ್ಮ ಅವರು ಕ್ಷೇತ್ರಕ್ಕೆ ಭೇಟಿ ನೀಡಿ ಪ್ರಶ್ನೆ ನೋಡಿದ್ದರು. ಅದರ ಆಧಾರದಲ್ಲಿ ಸಂಶೋಧನೆ ಶುರುವಾಗಿದ್ದು, ಅಧ್ಯಯನಕಾರರು ತಮ್ಮ ಕಾರ್ಯ ಶುರು ಮಾಡಿದ್ದಾರೆ. ಭಿಕ್ಕು ಗುಡಿಗಾರ ಕಲಾ ಕೇಂದ್ರದ ಸಂತೋಷ ಗುಡಿಗಾರ, ಸ್ಥಳೀಯರಾದ ಶೇಷಗಿರಿ ಹೆಗಡೆ, ನಾಗರಾಜ ಹೆಗಡೆ, ಎಂ.ಎಸ್ ಹೆಗಡೆ, ಗಣಪತಿ ಹೆಗಡೆ, ಸಿದ್ದಾರ್ಥ ನಂದೊಳ್ಳಿಮಠ, ಗಣಪತಿ ಮರಾಠಿ, ದೀಪಕ ನಾಯ್ಕ, ಅಕ್ಷಯ ಮರಾಠಿ, ನಾಗರಾಜ ನಾಯ್ಕ, ಸಂತೋಷ ಗುಡಿಗಾರ, ನಂದೀಶ ಮರಾಠಿ, ವಿಘ್ನೇಶ್ವರ ಹೆಗಡೆ ಇತರರು ಸಂಶೋಧನೆ ವೇಳೆ ಜೊತೆಗಿದ್ದರು. - [2025 ನವೆಂಬರ್ 11ರ ದಿನ ಭವಿಷ್ಯ](https://mobiletime.in/2025/11/prediction-for-november-11-2025/): ಮೇಷ ರಾಶಿ: ನಿಮ್ಮ ಕಾರ್ಯಗಳು ನಿಧಾನವಾಗಲಿದೆ. ಧೈರ್ಯದಿಂದ ಪ್ರಯತ್ನಿಸಿದರೆ ಸಮಸ್ಯೆ ದೂರವಾಗಲಿದೆ. ಕುಟುಂಬದ ಜೊತೆ ಕಾಲ ಕಳೆಯುವಿರಿ. ಆರ್ಥಿ ಅಭಿವೃದ್ಧಿ ಆಗಲಿದೆ. ವೃಷಭ ರಾಶಿ: ವೃತ್ತಿಯಲ್ಲಿ ಪ್ರಗತಿ ಸಾಧ್ಯವಿದೆ. ಯೋಜನೆಗಳ ಶುರು ಮಾಡಲು ಯೋಗ್ಯ ಸಮಯ. ಹಣಕಾಸು ವಿಷಯದಲ್ಲಿ ಬದಲಾವಣೆ ಆಗಲಿದೆ. ಆರೋಗ್ಯ ವಿಷಯದಲ್ಲಿ ಜಾಗೃತಿ ಬೇಕು. ಮಿಥುನ ರಾಶಿ: ಸಂದರ್ಶನ ಅಥವಾ ಹೊಸ ಕೆಲಸದ ಅವಕಾಶಗಳು ಎದುರಾಗಲಿದೆ. ಹಣಕಾಸು ವಹಿವಾಟುಗಳು ಚನ್ನಾಗಿರಲಿದೆ. ಆಧ್ಯಾತ್ಮಿಕ ಚಟುವಟಿಕೆಗಳು ಮನಸ್ಸಿಗೆ ನೆಮ್ಮದಿ ನೀಡುತ್ತವೆ. ಕರ್ಕ ರಾಶಿ: ತಾಳ್ಮೆಯಿಂದ ಜೀವಿಸುವುದು ಮುಖ್ಯ. ಕುಟುಂಬದಿAದ ಒಳ್ಳೆಯ ಬೆಂಬಲ ದೊರೆಯುತ್ತದೆ. ಹಣಕಾಸಿನಲ್ಲಿ ನಿಧಾನವಾಗಲಿದೆ. ಸ್ನೇಹಿತರಿಂದ ಸಹಾಯ ಸಿಗಲಿದೆ. ಸಿಂಹ ರಾಶಿ: ಆದಾಯದ ಹೊಸ ಮೂಲ ಸೃಷ್ಠಿಯಾಗಲಿದೆ. ಆರ್ಥಿಕ ಹೂಡಿಕೆ ಬಗ್ಗೆ ಜಾಗೃತಿ ಆಗಿರಿ. ಆರೋಗ್ಯ ವಿಷಯವಾಗಿ ನೋವು ಕಾಡಬಹುದು. ಕನ್ಯಾ ರಾಶಿ: ಹಣಕಾಸು ವಿಷಯ ಏರಿಳಿತ ಆಗಲಿದೆ. ಕೆಲಸದಲ್ಲಿ ಸಾಧನೆ ಸಾಧ್ಯವಿದೆ. ನಿರಂತರ ಪ್ರಯತ್ನ ಫಲ ಕೊಡಲಿದೆ. ಆರೋಗ್ಯದಲ್ಲಿ ಎಚ್ಚರಿಕೆ ಅಗತ್ಯ. ತುಲಾ ರಾಶಿ: ವ್ಯವಹಾರ ಅಥವಾ ಕೆಲಸದಲ್ಲಿ ನಿರಂತರ ಪ್ರಯತ್ನ ಅಗತ್ಯ. ಪ್ರಶಸ್ತಿಗಳು ಅರೆಸಿ ಬರಲಿದೆ. ನಿಮ್ಮ ಕೆಲಸಕ್ಕೆ ಮಾನ್ಯತೆ ಸಿಗಲಿದೆ. ವೃಶ್ಚಿಕ ರಾಶಿ: ವಿವಿಧ ಬಗೆಯ ಸವಾಲುಗಳು ಎದುರಾಗಲಿದೆ. ಆತ್ಮವಿಶ್ವಾಸದಿಂದ ಉತ್ತಮ ನಿರ್ಧಾರ ಕೈಗೊಳ್ಳಿ. ಕುಟುಂಬದಲ್ಲಿ ಒಗ್ಗಟ್ಟು ಮುಖ್ಯ. ಮನಸ್ಸಿಗೆ ಶಾಂತಿ ದೊರಕುತ್ತದೆ. ಧನು ರಾಶಿ: ಗುರುಗಳ ಆಶೀರ್ವಾದದಿಂದ ಮಾಡುವ ಕೆಲಸದಲ್ಲಿ ಒಳಿತಾಗಲಿದೆ. ಹಣಕಾಸು ಲಾಭ ಆಗಲಿದೆ. ಪ್ರಯಾಣದ ಲಕ್ಷಣಗಳವೆ. ಚೈತನ್ಯದಿಂದ ದಿನ ಕಳೆಯಿರಿ. ಮಕರ ರಾಶಿ: ಹಣಕಾಸಿನ ವ್ಯವಹಾರಗಳು ಪ್ರಗತಿಯಾಗಲಿದೆ. ಹೊಸ ಸಂಕಲ್ಪಗಳು ಫಲಕಾರಿ ಆಗಲಿದೆ. ಕುಟುಂಬ ಸೌಹಾರ್ದ ಹೆಚ್ಚಲಿದೆ. ಕುಂಭ ರಾಶಿ: ಚಿಂತನೆಗಳಿoದ ಒತ್ತಡ ಹೆಚ್ಚಾಗಲಿದೆ. ಕಾರ್ಯದಕ್ಷತೆ ಹೆಚ್ಚಿಸಿ ಕೆಲಸ ಮಾಡುವುದು ಅನಿವಾರ್ಯ. ಸಾಮಾಜಿಕ ಸಂಪರ್ಕಗಳು ಮುಂದುವರೆಯುತ್ತದೆ. ಧೂಳಿನಿಂದ ಆರೋಗ್ಯ ಸಮಸ್ಯೆ ಬರಬಹುದು. ಮೀನ ರಾಶಿ: ಉದ್ಯೋಗದಲ್ಲಿ ಹೊಸ ಅವಕಾಶಗಳು ಸಿಗುತ್ತದೆ. ಆರೋಗ್ಯ ವಿಷಯವಾಗಿ ಕಾಳಜಿ ಅಗತ್ಯ. ದೇವರ ಧ್ಯಾನ ಮಾಡುವುದು ಸೂಕ್ತ. ಹಣ ನಷ್ಟ ಆಗದಂತೆ ಎಚ್ಚರಿಕೆವಹಿಸಿ. - [ಸೇನಾ ರಹಸ್ಯ ಸೋರಿಕೆ: ಜೈಲು ಶಿಕ್ಷೆ](https://mobiletime.in/2025/11/leaking-military-secrets-prison-sentence/): ಕಾರವಾರ ನೌಕಾನೆಲೆಯ ರಹಸ್ಯ ಸಂಗತಿಗಳನ್ನು ಪಾಕಿಸ್ತಾನಕ್ಕೆ ರವಾನಿಸಿದವರಿಗೆ ನ್ಯಾಯಾಲಯ ಜೈಲು ಶಿಕ್ಷೆ ವಿಧಿಸಿದೆ. ಕಾರವಾರ ನೌಕಾನೆಲೆಯ ರಹಸ್ಯ ಸೋರಿಕೆ ಪ್ರಕರಣದಲ್ಲಿ ಈವರೆಗೆ ಒಟ್ಟು 6 ಆರೋಪಿಗಳನ್ನು ತಪ್ಪಿತಸ್ಥರೆಂದು ಘೋಷಿಸಿ ಶಿಕ್ಷೆ ವಿಧಿಸಲಾಗಿದೆ. ಕಾರವಾರದ ಆಯಕಟ್ಟಿನ ನೌಕಾನೆಲೆ ಸೇರಿದಂತೆ ಭಾರತೀಯ ನೌಕಾಪಡೆಗಳಲ್ಲಿ ವಿದೇಶಿ ಗೂಢಚಾರರು ದೇಶದ ಏಕತೆ, ಸಮಗ್ರತೆ, ಭದ್ರತೆ ಮತ್ತು ಸಾರ್ವಭೌಮತ್ವಕ್ಕೆ ಧಕ್ಕೆ ತರುವ ಉದ್ದೇಶದಿಂದ ಬೇಹುಗಾರಿಕೆ ನಡೆಸಿದ್ದ ತನಿಖೆಯಲ್ಲಿ ಈ ಆರೋಪ ಸಾಭೀತಾಗಿದೆ. ಸದ್ಯ ಆಂದ್ರ ಪ್ರದೇಶದ ವಿಶಾಖ ಪಟ್ಟಣಂನಲ್ಲಿರುವ ಎನ್‌ಐಎ ವಿಶೇಷ ನ್ಯಾಯಾಲಯವು ವಿಶಾಖಪಟ್ಟಣಂ ಜಿಲ್ಲೆಯ ಕಲವಲಪಲ್ಲಿಯ ಕೊಂಡ ಬಾಬು ಮತ್ತು ಹಿಮಾಚಲ ಪ್ರದೇಶದ ಕಾಂಗ್ರಾ ಜಿಲ್ಲೆಯ ಅವಿಯಾನ್ಸ್ ಸೋಮಲ್ ಅವರಿಗೆ 5 ವರ್ಷ ಜೈಲು ಶಿಕ್ಷೆ ಹಾಗೂ 5 ಸಾವಿರ ರೂ ದಂಡ ವಿಧಿಸಿದೆ. ದಂಡ ಪಾವತಿ ಮಾಡದಿದ್ದರೆ ಹೆಚ್ಚುವರಿ 1 ವರ್ಷ ಜೈಲು ಶಿಕ್ಷೆಯನ್ನು ಘೋಷಿಸಿದೆ. ಈಗ ಶಿಕ್ಷೆಗೊಳಗಾದ ಇಬ್ಬರು ಆರೋಪಿಗಳನ್ನು 2019ರ ಡಿಸೆಂಬರ್‌ನಲ್ಲಿ ಮುಂಬೈ ಹಾಗೂ ಕಾರವಾರದಲ್ಲಿ ಬಂಧಿಸಲಾಗಿತ್ತು. ಬಂಧಿತರು ವಾಟ್ಸಪ್ ಮೂಲಕ ವಿದೇಶಿ ಗುಪ್ತಚರ ಸಂಸ್ಥೆಗಳೊAದಿಗೆ ಸಂಪರ್ಕದಲ್ಲಿರುವುದು ಸಾಭೀತಾಗಿತ್ತು. - [ಕರಾವಳಿ ಭಾಗದಲ್ಲಿ ಈ ದಿನ ಕರೆಂಟ್ ಇರಲ್ಲ!](https://mobiletime.in/2025/11/there-will-be-no-current-on-the-coast-today/): ಉತ್ತರ ಕನ್ನಡ ಜಿಲ್ಲೆಯ ಕರಾವಳಿ ಭಾಗದ ಹಲವು ಕಡೆ ನವೆಂಬರ್ 12ರಂದು ವಿದ್ಯುತ್ ಸರಬರಾಜು ಸ್ಥಗಿತವಾಗಲಿದೆ. ಕಾರವಾರ, ಕುಮಟಾ, ಹೊನ್ನಾವರ ಹಾಗೂ ಭಟ್ಕಳದಲ್ಲಿ ದುರಸ್ಥಿ ಕಾರಣ ಈ ದಿನ ವಿದ್ಯುತ್ ಕಡಿತ ಅನಿವಾರ್ಯವಾಗಿದೆ. ಕಾರವಾರ ಉಪವಿಭಾಗದ ವ್ಯಾಪ್ತಿಯಲ್ಲಿ ವಾಹಕ ಬದಲಾವಣೆ ಕಾಮಗಾರಿ ಹಿನ್ನಲೆ ಬೈತಕೋಲ್ ಫೀಡರಿನ ವಿವಿಧ ಪ್ರದೇಶಗಳಲ್ಲಿ ನ 12ರಂದು ಬೆಳಗ್ಗೆ 9.30ಕ್ಕೆ ವಿದ್ಯುತ್ ಸರಬರಾಜು ಸ್ಥಗಿತ ಮಾಡಲಾಗುತ್ತದೆ. ಆ ದಿನ ಸಂಜೆ 6 ಗಂಟೆಯವರೆಗೂ ವಿದ್ಯುತ್ ಪೂರೈಕೆ ಇರುವುದಿಲ್ಲ. ಹೊನ್ನಾವರ ಉಪವಿಭಾಗದ ವ್ಯಾಪ್ತಿಯಲ್ಲಿನ ಕುಮಟಾ, ಹೊನ್ನಾವರ ಮತ್ತು ಮುರ್ಡೆಶ್ವರ ಉಪಕೇಂದ್ರಲ್ಲಿ 110 ಕೆವಿ ಬಸ್‌ಬಾರ್ ನಿರ್ವಹಣಾ ಕೆಲಸವಿರುವುದರಿಂದ ನ 12ರಿಂದು ಬೆಳಗ್ಗೆ 10 ಗಂಟೆಗೆ ವಿದ್ಯುತ್ ಕಡಿತವಾಗಲಿದೆ. ಸಂಜೆ 4 ಗಂಟೆಗೆ ವಿದ್ಯುತ್ ಸಂಪರ್ಕ ಮರುಜೋಡಣೆ ಕಾರ್ಯ ನಡೆಯಲಿದೆ. ಹೀಗಾಗಿ ಕುಮಟಾ, ಹೊನ್ನಾವರ ಹಾಗೂ ಭಟ್ಕಳ ತಾಲೂಕು ವ್ಯಾಪ್ತಿಯಲ್ಲಿ ವಿದ್ಯುತ್ ಗ್ರಾಹಕರು ಸಮಸ್ಯೆ ಅನುಭವಿಸುವ ಸಾಧ್ಯತೆಗಳಿದೆ. ಇದರೊಂದಿಗೆ ಕುಮಟಾ ಕೆಪಿಟಿಸಿಎಲ್ 110 ಕೆವಿ ಉಪಕೇಂದ್ರದಲ್ಲಿ 110 ಕೆವಿ ಬಸ್‌ಬಾರ್ ನಿರ್ವಹಣಾ ಕಾಮಗಾರಿ ಹಿನ್ನಲೆ ಕುಮಟಾದ ಮೂರುರ 11ಕೆವಿ ಮಾರ್ಗದ ಕೇಬಲ್ ಬಿಚ್ಚಿ ಮತ್ತೆ ಅಳವಡಿಸಲಾಗುತ್ತಿದೆ. ಹೀಗಾಗಿ ಕುಮಟಾ ನಗರ ಶಾಖೆಯ 11ಕೆವಿ ಇಂಡಸ್ಟಿçÃಯಲ್ ಮತ್ತು 11ಕೆವಿ ವಾಲ್ಗಳ್ಳಿ ಮಾರ್ಗದಲ್ಲಿ ಹಾಗೂ 11ಕೆವಿ ಹೊಸ ಮಾರ್ಗದ ರಚನೆಯ ಕಾಮಗಾರಿ ಹಿನ್ನಲೆ ಮಿರ್ಜಾನ್ ಮಾರ್ಗ ಮತ್ತು ಕತಗಾಲ ಮಾರ್ಗದಲ್ಲಿಯೂ ಆ ದಿನ ವಿದ್ಯುತ್ ಕಡಿತವಾಗಲಿದೆ. ಬೆಳಗ್ಗೆ 10 ಗಂಟೆಯಿAದ ಸಂಜೆ 5 ಗಂಟೆಯವರೆಗೆ ಜನ ಸಹಕಾರ ನೀಡಬೇಕು ಎಂದು ಹೆಸ್ಕಾಂ ಅಧಿಕಾರಿಗಳು ಮನವಿ ಮಾಡಿದ್ದಾರೆ. - [NCC ಅಭ್ಯರ್ಥಿಗಳಿಗೆ ಅಕ್ಕ ಪಡೆಯ ಕರೆಯೋಲೆ!](https://mobiletime.in/2025/11/a-call-to-action-for-ncc-candidates/): ಅಪಾಯ ಹಾಗೂ ಸಂಕಷ್ಟದಲ್ಲಿರುವ ಮಹಿಳೆ ಮತ್ತು ಮಕ್ಕಳ ರಕ್ಷಣೆಗಾಗಿ ಸರ್ಕಾರ `ಅಕ್ಕ ಪಡೆ’ ಸ್ಥಾಪಿಸಿದ್ದು, ವಿದ್ಯಾರ್ಥಿ ಜೀವನದಲ್ಲಿ NCC ಆಯ್ಕೆ ಮಾಡಿಕೊಂಡ ಧೈರ್ಯಶಾಲಿ ಮಹಿಳೆಯರಿಗೆ ಈ ಪಡೆಯ ಸದಸ್ಯರಾಗುವ ಅವಕಾಶ ಸಿಕ್ಕಿದೆ. ದುರ್ಬಲ ಮಹಿಳೆ ಮತ್ತು ಮಕ್ಕಳಿಗೆ ರಕ್ಷಣೆ ನೀಡುವ ಉದ್ದೇಶದಿಂದ ಉತ್ತರ ಕನ್ನಡ ಜಿಲ್ಲೆಯಲ್ಲಿಯೂ ಅಕ್ಕಪಡೆ ಕಾರ್ಯನಿರ್ವಹಿಸಲಿದೆ. ಎನ್‌ಸಿಸಿ ಪ್ರಮಾಣ ಪತ್ರಹೊಂದಿರುವ ಮಹಿಳಾ ಅಭ್ಯರ್ಥಿಗಳು ಈ ತಂಡ ಸೇರಲು ಅರ್ಜಿ ಆಹ್ವಾನಿಸಲಾಗಿದೆ. ಈ ತಂಡಕ್ಕೆ ಎನ್‌ಸಿಸಿ `C’ ಪ್ರಮಾಣ ಪತ್ರ ಹೊಂದಿರುವ 5 ಮಹಿಳಾ ಅಭ್ಯರ್ಥಿಗಳನ್ನು ಸೇವಾ ಗುತ್ತಿಗೆ ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ. 21ರಿಂದ 35 ವರ್ಷದೊಳಗಿನ ಅಭ್ಯರ್ಥಿಗಳು ಇದಕ್ಕೆ ಅರ್ಜಿ ಸಲ್ಲಿಸಲು ಅರ್ಹರು. ಉತ್ತರ ಕನ್ನಡ ಜಿಲ್ಲೆಯ ಅಕ್ಕಪಡೆಗೆ ಇಲ್ಲಿನವರು ಮಾತ್ರ ಅರ್ಜಿ ಸಲ್ಲಿಸಬಹುದಾಗಿದ್ದು, ದೈಹಿಕವಾಗಿ ಸದೃಢರಾಗಿರಬೇಕು ಎಂಬ ನಿಯಮವಿದೆ. ಉತ್ತಮ ನಡವಳಿಕೆ, ಸಂವಹನ ಕಲೆ, ಕಾರ್ಯದಕ್ಷತೆ ಹೊಂದಿರುವವರಿಗೆ ಮೊದಲ ಆದ್ಯತೆ ನೀಡಲಾಗುತ್ತದೆ. ಅಕ್ಕಪಡೆಯ ರಕ್ಷಣಾ ತಂಡಕ್ಕೆ ಆಯ್ಕೆ ಆದವರಿಗೆ ಬೆಳಗ್ಗೆ 7ರಿಂದ ಮಧ್ಯಾಹ್ನ 2ಗಂಟೆಯವರೆಗೆ ಹಾಗೂ ಮಧ್ಯಾಹ್ನ 2 ಗಂಟೆಯಿAದ ರಾತ್ರಿ 8 ಗಂಟೆಯವರೆಗೆ ಎರಡು ಶಿಪ್ಟ್ ಕೆಲಸವಿರುತ್ತದೆ. ಅಭ್ಯರ್ಥಿಗಳು ಈ ಎರಡರಲ್ಲಿ ಯಾವುದೇ ಶಿಪ್ಟ್ ಸಿಕ್ಕರೂ ಕೆಲಸ ನಿರ್ವಹಿಸಲು ಸಿದ್ಧವಿರಬೇಕು. ಅರ್ಜಿ ಸಲ್ಲಿಕೆಗೆ ನವೆಂಬರ್ 15 ಕೊನೆ ದಿನ. ಅರ್ಜಿ ಸಲ್ಲಿಸಬೇಕಾದ ವಿಳಾಸ ಉಪನಿರ್ದೇಶಕರ ಕಚೇರಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ BSNL ಕಚೇರಿ ಎದುರುಗಡೆ, ಕಾರವಾರ ಇನ್ನಷ್ಟು ಮಾಹಿತಿಗೆ ಇಲ್ಲಿ ಫೋನ್ ಮಾಡಿ: 7090275875 - [RSS ವಿರೋಧಿಗೆ ಜೈಲು!](https://mobiletime.in/2025/11/jail-for-rss-opponent/): RSS ವಿರುದ್ಧ ವಾಟ್ಸಪ್ ಸ್ಟೇಟಸ್ ಹಾಕಿದ್ದ ಮಜಾಫರ್ ಕಾಸಿಂ ರಾಜೆಹುಲಿ ಅವರನ್ನು ಬನವಾಸಿ ಪೊಲೀಸರು ಬಂಧಿಸಿದ್ದಾರೆ. ದ್ವೇಷ ಭಾವನೆ ಹರಡುತ್ತಿದ್ದ ಕಾರಣ ಮುನ್ನಚ್ಚರಿಕಾ ಕ್ರಮವಾಗಿ ಆರೋಪಿ ವಿರುದ್ಧ ಪೊಲೀಸರು ಕಠಿಣ ಕ್ರಮ ಜರುಗಿಸಿದ್ದಾರೆ. ಬನವಾಸಿಯ ಹೆಬ್ಬುತ್ತಿಯ ಮಜಾಫರ್ ಕಾಸಿಂ ರಾಜೆಹುಲಿ ಅವರು ಜನರಲ್ಲಿ ದ್ವೇಷ ಭಾವನೆ ಮೂಡಿಸುವ ಕೆಲಸ ಮಾಡುತ್ತಿದ್ದರು. ಧರ್ಮ ಧರ್ಮಗಳ ನಡುವೆ ಅಶಾಂತಿ ಸೃಷ್ಠಿಸುವುದಕ್ಕಾಗಿ ಅವರು ವಾಟ್ಸಪ್ ದುರುಪಯೋಗಪಡಿಸಿಕೊಂಡಿದ್ದರು. ಹಿಂದು ಧರ್ಮ ಹಾಗೂ ಆರ್ ಎಸ್ ಎಸ್ ವಿರುದ್ಧ ಅವರು ವಾಟ್ಸಪ್ ಸ್ಟೇಟಸ್ ಹಾಕಿದ್ದರು. ಜನರನ್ನು ಭಾವನಾತ್ಮಕವಾಗಿ ಕೆರಳಿಸುವ ಹಾಗೂ ಸಂಘದ ಬಗ್ಗೆ ಕೆಟ್ಟದಾಗಿ ನಿಂದಿಸುವ ಬರಹ ನೋಡಿದವರು ಪೊಲೀಸರ ಗಮನಕ್ಕೆ ತಂದರು. ಕಾನೂನಿನ ಪ್ರಕಾರ ಕಠಿಣ ಕ್ರಮಕ್ಕೆ ಮುಂದಾದ ಬನವಾಸಿ ಪೊಲೀಸರು ಮಜಾಫರ್ ಕಾಸಿಂ ರಾಜೆಹುಲಿ ಅವರ ವಿರುದ್ಧ ಪ್ರಕರಣ ದಾಖಲಿಸಿದರು. ನಂತರ ಅವರನ್ನು ವಶಕ್ಕೆಪಡೆದು ನ್ಯಾಯಾಲಯಕ್ಕೆ ಒಪ್ಪಿಸಿದರು. ಸದ್ಯದ ಪರಿಸ್ಥಿತಿಯಲ್ಲಿ ಮಜಾಫರ್ ಕಾಸಿಂ ರಾಜೆಹುಲಿ ಅವರು ವಾಟ್ಸಪ್ ಸ್ಟೇಟಸ್ ಹಾಕಿದ ವಿಷಯವನ್ನು ನ್ಯಾಯಾಲಯ ಗಂಭೀರವಾಗಿ ಪರಿಗಣಿಸಿತು. ಜನರ ನಡುವೆ ವೈಮನಸ್ಸು ಮೂಡಿಸುವ ಪ್ರಯತ್ನ ಮಾಡಿದ ಕಾರಣ ಮಜಾಫರ್ ಕಾಸಿಂ ರಾಜೆಹುಲಿ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿತು. `ಸತ್ಯವನ್ನು ಮಾತ್ರ ಶೇರ್ ಮಾಡಿ. ನಿಂದನಾರ್ಹ ಸಂದೇಶದ ಬಗ್ಗೆ ದೂರು ಕೊಡಿ’ - [ಮುತೈದೆಗೆ ಮರಳಿದ ಮಾಂಗಲ್ಯ!](https://mobiletime.in/2025/11/mangalya-returns-to-muthaide/): ಮಹಾರಾಷ್ಟ್ರದ ಮಹಿಳೆಯೊಬ್ಬರು ಕಳೆದುಕೊಂಡಿದ್ದ ಮಾಂಗಲ್ಯದ ಸರವನ್ನು ಗೋಕರ್ಣ ಪೊಲೀಸರು ಅವರಿಗೆ ಮರಳಿಸಿದ್ದಾರೆ. ಮಾಂಗಲ್ಯಪಡೆದ ಮಹಿಳೆ ಪೊಲೀಸರ ಪ್ರಾಮಾಣಿಕ ನಡತೆಯನ್ನು ಶ್ಲಾಘಿಸಿದ್ದಾರೆ ಮಹಾರಾಷ್ಟ್ರ ಕೊಲ್ಲಾಪುರದ ಸ್ವರ ಶುಭಂ ಕಾಪಸೆ ಅವರು ಕುಟುಂಬದ ಜೊತೆ ಗೋಕರ್ಣಕ್ಕೆ ಬಂದಿದ್ದರು. ಮುಖ್ಯ ಕಡಲ ತೀರಕ್ಕೆ ತೆರಳುವಾಗ ಅವರ ಮಾಂಗಲ್ಯದ ಸರ ಕಾಣೆಯಾಯಿತು. ದಾರಿಯಲ್ಲಿ ಬಿದ್ದಿದ್ದ ಮಾಂಗಲ್ಯ ಸರವನ್ನು ಅವರು ಸಾಕಷ್ಟು ಹುಡುಕಿದರು. ಆದರೆ, ಅದು ಪತ್ತೆ ಆಗಿರಲಿಲ್ಲ. ಮಾಹಾಬಲೇಶ್ವರ ಮಂದಿರದ ಅಮೃತಾನ್ನ ಪ್ರಸಾದ ಭೋಜನದ ಬಳಿ ಬಿಜ್ಜೂರಿನ ಜಟ್ಟು ಗೌಡ ಅವರಿಗೆ ಈ ಸರ ಸಿಕ್ಕಿತು. ಅದನ್ನು ನೋಡಿದ ಅವರು ಪೊಲೀಸ್ ಹೊರಠಾಣೆಗೆ ಒಪ್ಪಿಸಿದರು. ಪೊಲೀಸರು ಸರ ಕಳೆದುಕೊಂಡವರ ಹುಡುಕಾಟ ನಡೆಸಿದಾಗ ಸ್ವರ ಶುಭಂ ಕಾಪಸೆ ಅವರು ಎದುರಾದರು. ಅವರದ್ದೇ ಸರ ಎಂದು ಖಚಿತಪಡಿಸಿಕೊಂಡು ಪೊಲೀಸರು ಅದನ್ನು ಹಸ್ತಾಂತರಿಸಿದರು. `14 ಗ್ರಾಂ ಚಿನ್ನದ ಸರ ಕಾಣೆಯಾದಗ ಆತಂಕ ಎದುರಾಯಿತು. ಪ್ರಾಮಾಣಿಕ ಜನ ಹಾಗೂ ದಕ್ಷ ಪೊಲೀಸ್ ನೆರವಿನಿಂದ ಆ ಸರ ಮರಳಿ ಸಿಕ್ಕಿದೆ’ ಎಂದು ಸ್ವರ ಶುಭಂ ಕಾಪಸೆ ಅವರು ಹೇಳಿದರು. `ಪ್ರತಿಯೊಬ್ಬರು ಅವರ ಬೆಲೆಬಾಳುವ ವಸ್ತುಗಳನ್ನು ಜೋಪಾನವಾಗಿರಿಸಿಕೊಳ್ಳಬೇಕು’ ಎಂದು ಪಿಎಸ್‌ಐ ಶಶಿಧರ ಹಾಗೂ ಪೊಲೀಸ್ ಸಿಬ್ಬಂದಿ ಜಟ್ಟಪ್ಪ ನಾಯ್ಕ, ರವಿ ಅವರು ಈ ವೇಳೆ ಅರಿವು ಮೂಡಿಸಿದರು. - [ಕ್ರೀಮ್ ಬಿಸ್ಕತ್ ತಿನ್ನುವ ಮುನ್ನ...](https://mobiletime.in/2025/11/before-eating-cream-biscuits/): ಯುಕೆಜಿ ವಿದ್ಯಾರ್ಥಿಯೊಬ್ಬರು ತಿನ್ನುತ್ತಿದ್ದ ಕ್ರೀಂ ಬಿಸ್ಕೆತ್ ಒಳಗೆ ಉದ್ದನೆಯ ಹುಳ ಕಾಣಿಸಿದೆ. ಓರಿಯೋ ಕಂಪನಿಯ ಕ್ರೀಂ ಬಿಸ್ಕತ್ ಅದಾಗಿದ್ದು, ದಾಂಡೇಲಿ ಶಿಕ್ಷಕರ ಸಮಯ ಪ್ರಜ್ಞೆಯಿಂದ ಮಗು ಆ ಆಹಾರ ಸೇವಿಸದೇ ಬಚಾವಾಗಿದೆ. ದಾಂಡೇಲಿಯ ಖಾಸಗಿ ಶಾಲೆಯೊಂದರಲ್ಲಿ ಎರಡು ತರಗತಿ ಮುಗಿದ ನಂತರ ಮಕ್ಕಳಿಗೆ ಎಂದಿನoತೆ ಬಿಡುವು ನೀಡಲಾಗಿತ್ತು. ಈ ವೇಳೆ ಮಗುವೊಂದು ತನ್ನ ಡಬ್ಬಿ ಒಡೆದಿದ್ದು, ಅದರಲ್ಲಿದ್ದ ಬಿಸ್ಕತ್’ನ್ನು ಹಂಚಿ ತಿನ್ನಲು ಮುರಿಯಿತು. ಆದರೆ, ಕ್ರೀಂ ಬಿಸ್ಕತ್ ಒಳಗೆ ಹುಳಗಳಿರುವುದನ್ನು ಅಲ್ಲಿನ ಶಿಕ್ಷಕರು ಗಮನಿಸಿದರು. ತಕ್ಷಣ, ಶಿಕ್ಷಕರು ಆ ಬಿಸ್ಕತನ್ನು ಕಸಿದಿದ್ದು, ಪಾಲಕರಿಗೆ ಫೋನ್ ಮಾಡಿದರು. ಮನೆಯಲ್ಲಿ ಆಹಾರ ಸಿದ್ಧಪಡಿಸಿ ನೀಡಲು ಸಮಯವಿಲ್ಲದ ಕಾರಣ ಮಗುವಿಗೆ ಪಾಲಕರು ಲಘು ಆಹಾರಕ್ಕಾಗಿ ಕ್ರೀಂ ಬಿಸ್ಕತ್ ಕೊಟ್ಟು ಕಳುಹಿಸಿದ್ದರು. ಆ ಮಗು ನಿತ್ಯ ತನ್ನ ಆಹಾರವನ್ನು ಬೇರೆ ಮಕ್ಕಳ ಜೊತೆ ಹಂಚಿ ತಿನ್ನುವ ಸಂಪ್ರದಾಯ ರೂಢಿಸಿಕೊಂಡಿದ್ದು, ಬಿಸ್ಕತ್ ತೆರೆದಾಗ ಅದರೊಳಗೆ ಹುಳ ಓಡಾಡುತ್ತಿರುವುದನ್ನು ನೋಡಿ ಇನ್ನಿತರ ಮಕ್ಕಳು ಗಾಬರಿಗೊಂಡರು. ಅಶುಚಿತ್ವ ಆಹಾರ ಸೇವಿಸದಂತೆ ಆ ವೇಳೆ ಶಿಕ್ಷಕರು ಮಕ್ಕಳಿಗೆ ವಿಶೇಷ ಪಾಠ ಮಾಡಿದರು. `ಮಕ್ಕಳಿಗೆ ಆಹಾರ ಕೊಟ್ಟು ಕಳುಹಿಸುವ ಪಾಲಕರು ಮನೆಯಲ್ಲಿಯೇ ಸಿದ್ಧಪಡಿಸಿದ ಆಹಾರ ಕೊಡಿ. ಹೊರಗಿನಿ ತಿಂಡಿ ಪದಾರ್ಥಗಳನ್ನು ಕಡಿಮೆ ಮಾಡಿ’ ಎಂದು ಶಿಕ್ಷಕರು ಪಾಲಕರಿಗೂ ಮನವಿ ಮಾಡಿದರು. `ಬೇಳೆ-ಕಾಳುಗಳ ಆಹಾರ ನೀಡಿದರೆ ಉತ್ತಮ ಪೌಷ್ಠಿಕಾಂಶವೂ ಸಿಗುತ್ತದೆ. ಇದರಿಂದ ಮಗುವಿನ ಆರೋಗ್ಯಕರ ಬೆಳವಣಿಗೆಯೂ ಸಾಧ್ಯ’ ಎಂದು ಅವರು ವಿವರಿಸಿದರು. ಬಿಸ್ಕತ್ ಒಳಗೆ ಸಂಚರಿಸಿದ ಹುಳದ ವಿಡಿಯೋ ಇಲ್ಲಿ ನೋಡಿ.. - [ಆಸ್ತಿ ಆಸೆಗೆ ಅಪ್ಪನನ್ನು ಕೊಂದವ ಅರೆಸ್ಟ್!](https://mobiletime.in/2025/11/arrested-for-killing-father-over-property/): ಆಸ್ತಿ ಆಸೆಗಾಗಿ ಅಪ್ಪನನ್ನು ಕೊಂದು ಅರಣ್ಯದ ಕಡೆ ಓಡಿದ್ದ ಯಲ್ಲಾಪುರದ ಹರೀಶ ಮರಾಠಿ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಅರಣ್ಯದಲ್ಲಿ ಅವಿತಿದ್ದ ಹರೀಶ ಮರಾಠಿ ಅವರನ್ನು ಒಂದು ತಂಡದವರು ಬೆನ್ನತ್ತಿದ್ದು, ಮತ್ತೊಂದು ತಂಡದವರು ಅಡ್ಡಗಟ್ಟಿ ಹಿಡಿದಿದ್ದಾರೆ. ಭಾನುವಾರ ಯಲ್ಲಾಪುರದ ಬೆಳ್ಳುಂಬಿ ಬಳಿಯ ಮಾವಿನಕಟ್ಟಾದಲ್ಲಿ ವಾಸಿಸುತ್ತಿದ್ದ ನಾರಾಯಣ ಪರಶು ಮರಾಠಿ (51) ಅವರನ್ನು ಅವರ ಮಗ ಹರೀಶ ಮರಾಠಿ (29) ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿದ್ದರು. ಜೊತೆಗೆ ಹರೀಶ ಮರಾಠಿ ಅವರು ತಮ್ಮ ಸಹೋದರಿ ತಾರಾ ಮರಾಠಿ ಅವರ ಮೇಲೆಯೂ ಕೈ ಮಾಡಿದ್ದರು. ಕುಟುಂಬದಲ್ಲಿನ ಕಲಹ ಹಾಗೂ ಆಸ್ತಿ ಮೇಲಿನ ಆಸೆ ಈ ಕೊಲೆ ಹಾಗೂ ಹಲ್ಲೆಗೆ ಪ್ರಮುಖ ಕಾರಣಗಳಾಗಿದ್ದವು. ತಂದೆಗೆ ಕೊಡಲಿಯಿಂದ ಹೊಡೆದು ಹರೀಶ ಮರಾಠಿ ಅವರು ಪರಾರಿಯಾಗಿದ್ದರು. ರಕ್ತದ ಮೊಡವಿನಲ್ಲಿ ಬಿದ್ದಿದ್ದ ತಂದೆಯನ್ನು ತಾರಾ ಮರಾಠಿ ಅವರು ಆಸ್ಪತ್ರೆಗೆ ಸೇರಿಸಿದಾಗ ಅವರು ಸಾವನಪ್ಪಿರುವ ವಿಷಯ ಗೊತ್ತಾಯಿತು. ಸಹೋದರನ ಕ್ರೌರ್ಯದ ಬಗ್ಗೆ ತಾರಾ ಮರಾಠಿ ಅವರು ಪೊಲೀಸ್ ದೂರು ನೀಡಿದ್ದರು. ತಕ್ಷಣ ಕಾರ್ಯಾಚರಣೆ ನಡೆಸಿದ ಪೊಲೀಸರು ಹರೀಶ ಮರಾಠಿ ಅವರಿಗಾಗಿ ಹುಡುಕಾಟ ನಡೆಸಿದರು. ಯಲ್ಲಾಪುರ ಪಿಐ ರಮೇಶ ಹಾನಾಪುರ ಅವರ ಸೂಚನೆ ಮೇರೆಗೆ ಪಿಎಸ್‌ಐ ರಾಜಶೇಖರ ವಂದಲಿ, ಸಿದ್ದಪ್ಪ ಗುಡಿ ಹಾಗೂ ಪೊಲೀಸ್ ಸಿಬ್ಬಂದಿ ಬಸವರಾಜ ಹಗೇರಿ, ಸುರೇಶ್ ಕಾಂಟ್ರೆಕ್ಟ್ ಹಾಗೂ ಗಿರೀಶ ಲಮಾಣಿ ಕಾಡಿನಲ್ಲಿ ಶೋಧ ನಡೆಸಿದರು. ಹೆಮ್ಮಾಡಿ ಬಸ್ ನಿಲ್ದಾಣ ಬಳಿಯ ಅರಣ್ಯ ಪ್ರದೇಶದಲ್ಲಿ ಹರೀಶ ಮರಾಠಿ ಅಡಗಿರುವುದು ಅರಿವಿಗೆ ಬಂದಿತು. ಈ ಎಲ್ಲಾ ಪೊಲೀಸರು ಆರೋಪಿಯನ್ನು ಅಡ್ಡಗಟ್ಟಿ ಅಲ್ಲಿಯೇ ವಶಕ್ಕೆಪಡೆದರು. ಅದಾದ ನಂತರ ಪೊಲೀಸರು ಕಾನೂನಾತ್ಮಕ ಪ್ರಕ್ರಿಯೆಗಳನ್ನು ಮುಗಿಸಿ ಹರೀಶ ಮರಾಠಿ ಅವರನ್ನು ನ್ಯಾಯಾಲಯಕ್ಕೆ ಒಪ್ಪಿಸಿದರು. ಕೊಲೆಗೆ ಬಳಸಿದ ಆಯುಧವನ್ನು ವಶಕ್ಕೆಪಡೆದರು. - [2025ರ ನವೆಂಬರ್ 10ರ ದಿನ ಭವಿಷ್ಯ](https://mobiletime.in/2025/11/prediction-for-november-10-2025/): ಮೇಷ ರಾಶಿ: ಈ ದಿನ ಕೆಲಸಗಳಲ್ಲಿ ಅಭಿವೃದ್ಧಿ ಸಾಧ್ಯವಿದೆ. ಆರ್ಥಿಕ ಲಾಭ ದೊರೆಯುವ ಲಕ್ಷಣವಿದೆ. ಜೀವನದಲ್ಲಿ ಹೊಸ ಅವಕಾಶಗಳು ಎದುರಾಗುತ್ತದೆ. ಮನಸ್ಸು ಶಾಂತವಾಗಿರಿಸಿಕೊಳ್ಳಿ. ವೃಷಭ ರಾಶಿ: ಹಣಕಾಸು ನಿರ್ವಹಣೆ ಉತ್ತಮವಾಗಲಿದೆ. ಕುಟುಂಬದಲ್ಲಿ ಸಮಾಧಾನ ಸಿಗುತ್ತದೆ. ಉದ್ಯೋಗದಲ್ಲಿ ಯಶಸ್ಸು ಸಾಧ್ಯವಿದೆ. ಸುದೀರ್ಘ ಪ್ರಯಾಣಕ್ಕೆ ಮುನ್ನುಡಿ ಉಂಟಾಗಬಹುದು. ಮಿಥುನ ರಾಶಿ: ಕಾಲಮಾನಕ್ಕೆ ತಕ್ಕ ಹಾಗೇ ನಿಮ್ಮ ಆರ್ಥಿಕ ಅಭಿವೃದ್ಧಿ ಅಗತ್ಯವಿದ್ದು, ಅದಕ್ಕಾಗಿ ಪ್ರಯತ್ನ ಬೇಕು. ಆರೋಗ್ಯ ವಿಚಾರದಲ್ಲಿಯೂ ಎಚ್ಚರಿಕೆಯಿಂದಿರಿ. ವಿದ್ಯಾರ್ಥಿಗಳು ಉತ್ತಮ ಅನುಭವಪಡೆಯಲಿದ್ದಾರೆ. ಕರ್ಕ ರಾಶಿ: ಆರ್ಥಿಕವಾಗಿ ಸಂತೃಪ್ತಿ ಸಾಧ್ಯವಿದೆ. ದಾಂಪತ್ಯ ಸಂಬoಧಗಳಲ್ಲಿ ಸಮಾಧಾನ ಸಿಗಲಿದೆ. ಉದ್ಯೋಗದಲ್ಲಿ ಪ್ರಗತಿಗಾಗಿ ಶ್ರಮಿಸುವುದು ಅನಿವಾರ್ಯ. ಮನಸಿನಲ್ಲಿ ಚಿಂತೆ ಬಾರದಂತೆ ತಡೆಯಿರಿ. ಸಿಂಹ ರಾಶಿ: ಕೆಲಸದಲ್ಲಿ ಸೃಜನಾತ್ಮಕ ಸುಧಾರಣೆ ಆಗಲಿದೆ. ಹಣಕಾಸಿನಲ್ಲಿ ಸುಧಾರಣೆ ಕಾಣಬಹುದು. ಸ್ನೇಹಿತರ ಒತ್ತಡಕ್ಕೆ ಸಿಲುಕಿ ದುಶ್ಚಟ ಮಾಡಬೇಡಿ. ಆರೋಗ್ಯ ಸ್ಥಿತಿಗೆ ಜಾಗರೂಕರಾಗಿರಿ. ಕನ್ಯಾ ರಾಶಿ: ಉದ್ಯೋಗದಲ್ಲಿ ಹೆಚ್ಚುವರಿ ಹೊಣೆಗಾರಿಕೆ ಸಿಗಲಿದೆ. ಒಳ್ಳೆಯ ಬದಲಾವಣೆಗಳು ಸಾಧ್ಯವಿದೆ. ಕುಟುಂಬದಲ್ಲಿ ಸಾಂತ್ವಾನ ಸಿಗಲಿದೆ. ದೈಹಿಕ ಶಕ್ತಿ ವೃದ್ಧಿಗೆ ನೀರು ಸೇವನೆ ಅನಿವಾರ್ಯ. ತುಲಾ ರಾಶಿ: ಹಣಕಾಸಿನ ಸಾಲ ಮುಗಿಯುವ ಸಾಧ್ಯತೆ ಹೆಚ್ಚಿದೆ, ಕುಟುಂಬದಲ್ಲಿ ಉತ್ತಮ ಮಾತುಕಥೆ ನಡೆಯಲಿದೆ. ಆರೋಗ್ಯ ವೃದ್ಧಿಗೆ ಧ್ಯಾನ ಸಹಾಯಕ. ಕಾರ್ಯಕ್ಷೇತ್ರದಲ್ಲಿ ಯಶಸ್ಸು ಸಿಗುತ್ತದೆ. ವೃಶ್ಚಿಕ ರಾಶಿ: ಆರ್ಥಿಕವಾಗಿ ಲಾಭ ಸಿಗಲಿದೆ. ಮನಸ್ಸು ಶಾಂತಿಯುತವಾಗಿರಲಿದೆ.. ಉದ್ಯೋಗದಲ್ಲಿ ನೂತನ ಯೋಜನೆ ಶುರುವಾಗಲಿದೆ. ಧನು ರಾಶಿ: ಹೊಸ ಉದ್ಯಮ ಆರಂಭಕ್ಕೆ ಸೂಕ್ತ ಸಮಯ. ಆರ್ಥಿಕ ಲಾಭ ಆಗಲಿದೆ, ಕುಟುಂಬದಲ್ಲಿ ಸಂತೋಷ-ನೆಮ್ಮದಿ ಕಾಣಲಿದೆ. ಹೊಸ ಕಾರ್ಯಗಳಲ್ಲಿ ಯಶಸ್ಸು ಸಿಗಲಿದೆ. ಮಕರ ರಾಶಿ: ಆರ್ಥಿಕವಾಗಿ ಸ್ಥಿರತೆ ಕಾಪಾಡುವುದು ಅನಿವಾರ್ಯ. ಉದ್ಯೋಗದಲ್ಲಿ ಪೈಪೋಟಿ ಹೆಚ್ಚಲಿದೆ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧವಾಗುತ್ತಿರುವರಿಗೆ ಯಶಸ್ಸು ಸಿಗಲಿದೆ. ಕುಂಬ ರಾಶಿ: ಉದ್ಯಮ ಅಥವಾ ವ್ಯವಹಾರದಲ್ಲಿ ಸುಧಾರಣೆ ಆಗಲಿದೆ. ಅಂದುಕೊAಡ ಪ್ರಯಾಣಕ್ಕೆ ಅವಕಾಶ ಸಿಗಲಿದೆ. ಬುದ್ಧಿವಂತಿಕೆ ಬಳಸಿ ಕಾರ್ಯ ನಿರ್ವಹಿಸಿ. ಆರೋಗ್ಯದ ಬಗ್ಗೆ ಜಾಗೃತಿಯಿರಲಿ. ಮೀನ ರಾಶಿ: ಹೊಸ ಭಾವನೆಗಳ ಬೆಳವಣಿಗೆ ಆಗಲಿದೆ. ವ್ಯವಹಾರದ ಲಾಭ ಸಿಗಲಿದೆ. ಕುಟುಂಬ ಮತ್ತು ಸ್ನೇಹಿತರಿಂದ ಬೆಂಬಲ ಸಿಗಲಿದೆ. ಹೊಸ ಅವಕಾಶಗಳ ಆರಂಭ ಸಾಧ್ಯವಿದೆ. - [ಕೈಗಾದಲ್ಲಿ ಕಬ್ಬಿಣ ಕುಸಿತ: ಕರ್ತವ್ಯದಲ್ಲಿದ್ದ ಭದ್ರತಾ ಯೋಧನ ಮರಣ](https://mobiletime.in/2025/11/iron-collapse-in-kaiga-security-guard-on-duty-dies/): ಕಾರವಾರದ ಕೈಗಾ ಅಣು ವಿದ್ಯುತ್ ಸ್ಥಾವರದ ಒಳ ಆವರಣದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಕೇಂದ್ರ ಕೈಗಾರಿಕೆ ಭದ್ರತಾ ಪಡೆಯ ಯೋಧರೊಬ್ಬರ ಮೇಲೆ ಕಬ್ಬಿಣದ ಗೇಟ್ ತುಂಡಾಗಿ ಬಿದ್ದಿದೆ. ಪರಿಣಾಮ ಅವರು ಅಲ್ಲಿಯೇ ಸಾವನಪ್ಪಿದ್ದಾರೆ ಮಹಾರಾಷ್ಟ್ರದ ಮಹಿಮಾನಗಡ್ ಮೂಲದ ಶೇಖರ ಭೀಮರಾವ್ ಜಗದಾಲೆ (48) ಮೃತಪಟ್ಟ ಸಿಐಎಸ್‌ಎಫ್ ಸಿಬ್ಬಂದಿ. ಶನಿವಾರ ರಾತ್ರಿ ಅವರು ಅಣು ತ್ಯಾಜ್ಯ ವಿಲೇವಾರಿ ಘಟಕದ ಬಳಿ ಕಾವಲು ಕಾಯುತ್ತಿದ್ದರು. ಆ ವೇಳೆ ಭಾರವಾದ ಗೇಟ್ ಆಕಸ್ಮಿಕವಾಗಿ ಕುಸಿದು ಬಿದ್ದಿತು. ಅದು ಶೇಖರ ಅವರ ತಲೆಗೆ ಬಲವಾಗಿ ಬಡಿದ ಪರಿಣಾಮ ಅವರು ಅಲ್ಲಿಯೇ ಕುಸಿದು ಬಿದ್ದರು. ಶೇಖರ ಅವರನ್ನು ಸಹೋದ್ಯೋಗಿಗಳು ತಕ್ಷಣ ಸ್ಥಳೀಯ ಪ್ರಾಥಮಿಕ ಚಿಕಿತ್ಸಾ ಕೇಂದ್ರಕ್ಕೆ ಕರೆದೊಯ್ದರು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಕೈಗಾದ ಕೆಜಿಎಸ್ ಆಸ್ಪತ್ರೆಗೆ‌ ದಾಖಲಿಸಿದರು. ಆದರೆ, ಅಷ್ಟರೊಳಗೆ ಅವರು ಸಾವನಪ್ಪಿದರು. ಕಬ್ಬಿಣದ ಗೇಟ್ ಕುಸಿತದ ನಿಖರ ಕಾರಣ ಗೊತ್ತಾಗಿಲ್ಲ. ಈ ಬಗ್ಗೆ ತನಿಖೆ ನಡೆಯುತ್ತಿದೆ. - [ಆಸ್ತಿಗಾಗಿ ಅಪ್ಪನನ್ನೇ ಕೊಂದ ಪುತ್ರ!](https://mobiletime.in/2025/11/son-kills-father-for-property/): ಆಸ್ತಿಯಲ್ಲಿ ಭಾಗ ಕೊಡದ ಕಾರಣ ಯಲ್ಲಾಪುರದ ಹರೀಶ ಮರಾಠಿ ಅವರು ತಮ್ಮ ತಂದೆಯನ್ನು ಕೊಡಲಿಯಿಂದ ಕೊಚ್ಚಿ ಸಾಯಿಸಿದ್ದಾರೆ. ಮಗನ ಆಕ್ರೋಶ ಹಾಗೂ ಹಣದ ಹಪಾಹಪಿತನಕ್ಕೆ ನಾರಾಯ ಮರಾಠಿ ಅವರು ಶವವಾಗಿದ್ದಾರೆ. ಯಲ್ಲಾಪುರದ ಬೆಳ್ಳುಂಬಿ ಬಳಿಯ ಮಾವಿನಕಟ್ಟಾದಲ್ಲಿ ನಾರಾಯಣ ಪರಶು ಮರಾಠಿ (51) ಅವರು ವಾಸವಾಗಿದ್ದರು. ಅವರಿಗೆ ಹರೀಶ ಮರಾಠಿ (29) ಹಾಗೂ ತಾರಾ ಮರಾಠಿ (26) ಎಂಬ ಮಕ್ಕಳಿದ್ದರು. ಹರೀಶ ಮರಾಠಿ ತೋಟದ ಕೆಲಸ ನೋಡಿಕೊಂಡಿದ್ದು, ತಾರಾ ಮರಾಠಿ ಅವರು ಅಂಗನವಾಡಿ ಕಾರ್ಯಕರ್ತೆಯಾಗಿ ಕೆಲಸ ಮಾಡುತ್ತಿದ್ದರು. ಹರೀಶ ಮರಾಠಿ ಅವರಿಗೆ ವಿವಾಹವಾಗಿದ್ದು, ಅವರ ಜೊತೆ ಸವೀತಾ ಹಾಗೂ ಮಗಳು ಸುರಕ್ಷಾ ಒಂದೇ ಮನೆಯಲ್ಲಿ ಪ್ರತ್ಯೇಕವಾಗಿ ವಾಸವಾಗಿದ್ದರು. ಹೀಗಿರುವಾಗ ಸವಿತಾ ಮರಾಠಿ ಹಾಗೂ ತಾರಾ ಮರಾಠಿ ಅವರ ನಡುವೆ ವೈಮನಸ್ಸು ಮೂಡಿತ್ತು. ಒಬ್ಬರನ್ನು ಕಂಡರೆ ಮತ್ತೊಬ್ಬರಿಗೆ ಆಗುತ್ತಿರಲಿಲ್ಲ. ಪತ್ನಿ ಮಾತಿಗೆ ಮರಳಾಗುತ್ತಿದ್ದ ಹರೀಶ ಮರಾಠಿ ಅವರು ಆಗಾಗ ತಾರಾ ಮರಾಠಿ ಅವರಿಗೆ ಹೊಡೆಯುತ್ತಿದ್ದರು. ಹೊಡೆದಾಟ ವಿಕೋಪಕ್ಕೆ ತೆರಳಿದಾಗ ತಾರಾ ಅವರೇ ಸುಮ್ಮನಾಗುತ್ತಿದ್ದರು. ನವೆಂಬರ್ 8ರಂದು ಸಹ ಆ‌ ಮನೆಯಲ್ಲಿ ಗಲಾಟೆ ನಡೆಯಿತು. ಆ ದಿನದ ಗಲಾಟೆ ಅಲ್ಲಿಯೇ‌ ಮುಗಿಯಿತು. ಆದರೆ, ನವೆಂಬರ್ 9ರಂದು ಹಿಂದಿನ ದಿನದ ಗಲಾಟೆ ಮರುಕಳಿಸಿತು. ಸವಿತಾ ಮರಾಠಿ ಅವರು ಮನೆ ಸ್ವಚ್ಚ ಮಾಡಿವಾಗ ತಾರಾ ಅವರು ಅಲ್ಲಿಗೆ ಬಂದಿದ್ದು ಗಲಾಟೆಗೆ ಕಾರಣವಾಯಿತು. ಈ ವಿಷಯವಾಗಿ ಸವಿತಾ ಮರಾಠಿ ಅವರು ತಮ್ಮ‌ ಪತಿ ಹರೀಶ ಮರಾಠಿ ಅವರ ಕಿವಿ ಚುಚ್ಚಿದರು. ಪತ್ನಿ ಜೊತೆ ಜಗಳ ಮಾಡಿದ ತಂಗಿ ವಿರುದ್ಧ ಸಿಟ್ಟಾದ ಹರೀಶ ಮರಾಠಿ ಅವರು ದೊಡ್ಡದಾಗಿ ಕೂಗಿ ತಾರಾ ಮರಾಠಿ ಅವರನ್ನು ಥಳಿಸಿದರು. ಹರೀಶ ಮರಾಠಿ ಅವರು ತಾರಾ ಮರಾಠಿ ಅವರ ಕೆನ್ನೆಗೆ ಬಾರಿಸಿದ ಪರಿಣಾಮ ತಾರಾ ಮರಾಠಿ ಅವರ ಮೂಗಿನಿಂದ‌ ರಕ್ತ ಸುರಿಯಿತು. ತಾರಾ ಮರಾಠಿ ಅವರ ತಂದೆ ನಾರಾಯಣ ಮರಾಠಿ ಮಧ್ಯಾಹ್ನ ತೋಟದಿಂದ ಮನೆಗೆ ಬಂದರು. ಆಗ, ತಾರಾ ಮರಾಠಿ ಅವರು ಅಣ್ಣನಿಂದ ಆದ ಅನ್ಯಾಯದ ಬಗ್ಗೆ ವರದಿ ಒಪ್ಪಿಸಿದರು. ಮಗಳ ಮೇಲೆ ಕೈ ಮಾಡಿದ ಕಾರಣ ನಾರಾಯಣ ಮರಾಠಿ ಅವರು ಹರೀಶ ಮರಾಠಿ ಅವರಿಗೆ ಬೈದರು.‌ ‘ನಿನ್ನ ವಿರುದ್ಧ ಕಂಪ್ಲೇಟ್ ಕೊಟ್ಟು ಬರುವೆ’ ಎಂದು ನಾರಾಯಣ ಮರಾಠಿ ಅವರು ಗದರಿಸಿದರು. ಇದರಿಂದ ಸಿಟ್ಟಾದ ಹರೀಶ ಮರಾಠಿ ‘ಈಗಲೇ ಈ ಮನೆ ಬಿಟ್ಟು ಹೋಗು’ ಎಂದು ತಂದೆಗೆ ಗದರಿಸಿದರು. ಅದಾಗಿಯೂ ಅಲ್ಲಿಯೇ‌ ನಿಂತಿದ್ದ ತಂದೆ ನಾರಾಯಣ ಮರಾಠಿ ಅವರ ತಲೆಗೆ ಕೊಡಲಿ ಬೀಸಿದರು. ‘ಮನೆ ಸಾಲ ನಾನೇ ತೀರಿಸಿದ್ದು. ಮದುವೆ ಸಾಲವನ್ನು ನಾನೇ ತೀರಿಸಿದ್ದು. ಆದರೂ ನನಗೆ ಆಸ್ತಿ ಕೊಡಲಿಲ್ಲ’ ಎಂದು ಅಬ್ಬರಿಸಿದ ಹರೀಶ ಮರಾಠಿ ಅವರು ನಾರಾಯಣ ಮರಾಠಿ ಅವರ ಕಡೆ ಮತ್ತೊಮ್ಮೆ ಕೊಡಲಿ ಬೀಸಿದರು. ಎಡ ಕಿವಿಯ ಬಳಿ‌ ಕೊಡಲಿ ತಾಗಿದ ಪರಿಣಾಮ ನಾರಾಯಣ ಮರಾಠಿ ಅವರು ಅಲ್ಲಿಯೇ‌ ಕುಸಿದು ಬಿದ್ದರು. ಅವರ ಮೈಮೇಲಿದ್ದ ಬಟ್ಟೆ ನೆಲಕ್ಕೆ ಬಿದ್ದು ರಕ್ತ ಚೆಲ್ಲಿತು. ಇದನ್ನು ನೋಡಿದ ಹರೀಶ ಮರಾಠಿ ಕೊಡಲಿಸಹಿತ ಓಡಿ ಪರಾರಿಯಾದರು. ತಾರಾ ಮರಾಠಿ ಅವರು ನಾರಾಯಣ ಮರಾಠಿ ಅವರನ್ನು ಯಲ್ಲಾಪುರ ಆಸ್ಪತ್ರೆಗೆ ಕರೆತಂದರು. ಆದರೆ,‌ ಅಷ್ಟರೊಳಗೆ ನಾರಾಯಣ ಮರಾಠಿ ಅವರು ಸಾವನಪ್ಪಿದ್ದರು. ಪಿಎಸ್ಐ ರಾಜಶೇಖರ ವಂದಲಿ ಅವರು ಪ್ರಕರಣ ದಾಖಲಿಸಿದ್ದು, ತನಿಖೆ ನಡೆಸುತ್ತಿದ್ದಾರೆ. ಹರೀಶ ಮರಾಠಿ ಅವರ ಶೋಧ ಕಾರ್ಯಾಚರಣೆಯೂ ನಡೆದಿದೆ.   - [ಪ್ರೀತಿ-ಪ್ರೇಮ-ಪ್ರಣಯ: ಅಪ್ರಾಪ್ತರೇ ಅಪರಾಧಿಗಳು!](https://mobiletime.in/2025/11/love-love-romance-minors-are-the-criminals/): ಅಪ್ರಾಪ್ತರ ಅಪರಾಧ ಪ್ರಕರಣಗಳು ಉತ್ತರ ಕನ್ನಡ ಜಿಲ್ಲೆಯಲ್ಲಿ ಹೆಚ್ಚಾಗಿದೆ. ಪ್ರೀತಿ-ಪ್ರೇಮ-ಪ್ರಣಯ ಎಂದು ಸುತ್ತಾಡುವ ಹೆಣ್ಣು ಮಕ್ಕಳು ಗರ್ಭಧರಿಸುತ್ತಿದ್ದು, ಅದಕ್ಕೆ ಕಾರಣರಾದವರು ಜೈಲು ಸೇರುತ್ತಿದ್ದಾರೆ. ಅಂಕಿ-ಅoಶಗಳ ಪ್ರಕಾರ ಕಳೆದ ವರ್ಷ 18 ವರ್ಷದೊಳಗಿಗೆ 58 ಬಾಲಕರು ಶಿಕ್ಷೆ ಅನುಭವಿಸಿದ್ದಾರೆ! ಉತ್ತರ ಕನ್ನಡ ಜಿಲ್ಲೆಯಲ್ಲಿ ದಾಖಲಾದ ಪೋಕ್ಸೋ ಕಾಯ್ದೆಯ ಅಂಕಿ-ಅoಶಗಳಲ್ಲಿ 18 ವರ್ಷದೊಳಗಿನ ಆರೋಪಿಗಳು ಶೇ 40ರಷ್ಟಿದ್ದಾರೆ. 25 ವರ್ಷದೊಳಗಿನ ಯುವಕರು ಶೇ 49ರ ಪ್ರಮಾಣದಲ್ಲಿದ್ದಾರೆ. 2023ರಲ್ಲಿ 68 ಪ್ರಕರಣ, 2024ರಲ್ಲಿ 81 ಪ್ರಕರಣಗಳು, 2025ರಲ್ಲಿ ಈವರೆಗೆ 63 ಪೋಕ್ಸೋ ಪ್ರಕರಣಗಳು ದಾಖಲಾಗಿದೆ. ಮಕ್ಕಳ ಸ್ನೇಹಿ ವಿಶೇಷ ನ್ಯಾಯಾಲಯದಲ್ಲಿ 150ಕ್ಕೂ ಹೆಚ್ಚು ಇಂಥ ಪ್ರಕರಣಗಳ ವಿಚಾರಣೆ ನಡೆಯುತ್ತಿದೆ. ಕಾರವಾರದ ಕಾರಾಗೃಹದಲ್ಲಿ 58 ಜನ ಪೋಕ್ಸೋ ಕಾಯ್ದೆಯಡಿ ಸಿಲುಕಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದಾರೆ. ವಿವಿಧ ಪಾರ್ಕು-ಪಬ್ಬುಗಳಲ್ಲಿ ವಿದ್ಯಾರ್ಥಿಗಳೇ ಹೆಚ್ಚಿಗೆ ಕಾಣಿಸುತ್ತಿದ್ದಾರೆ. ಕಾಲೇಜು ವಿದ್ಯಾರ್ಥಿಗಳ ಜೊತೆ ಹೈಸ್ಕೂಲ್ ಹುಡುಗಿಯರು ಜೋಡಿ ಹಕ್ಕಿಗಳಾಗಿ ಕಾಲ ಕಳೆಯುತ್ತಿದ್ದಾರೆ. ಶಿಕ್ಷಣ ಕಲಿಯಬೇಕಾದ ಈ ವಯಸ್ಸಿನಲ್ಲಿ ಅಲ್ಲಿ-ಇಲ್ಲಿ ಸುತ್ತಾಡುವವರ ಸಂಖ್ಯೆ ಹೆಚ್ಚಾಗಿದ್ದು, ಮಕ್ಕಳ ಮೇಲೆ ನಿಗಾವಹಿಸುವಲ್ಲಿ ಪಾಲಕರು ಎಡವುತ್ತಿದ್ದಾರೆ. ಅದರ ಪರಿಣಾಮವಾಗಿ ಮಕ್ಕಳ ಪ್ರೀತಿ-ಪ್ರೇಮ-ಪ್ರಣಯದ ಪ್ರಕರಣಗಳು ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಹಳಿಯಾಳ, ಜೋಯಿಡಾ, ದಾಂಡೇಲಿ, ಶಿರಸಿ ಭಾಗದಲ್ಲಿ ಹೆಚ್ಚಿನ ಪೋಕ್ಸೋ ಪ್ರಕರಣಗಳು ದಾಖಲಾಗುತ್ತಿದೆ. ಉತ್ತರ ಕನ್ನಡ ಜಿಲ್ಲೆಯ ಗ್ರಾಮೀಣ ಭಾಗದಲ್ಲೇ ಹೆಚ್ಚು ಅಪರಾಧ ಪ್ರಕರಣಗಳು ನಡೆಯುತ್ತಿವೆ. ಹದಿಹರೆಯದವರ ಹುಚ್ಚಾಟದಿಂದ ಸಣ್ಣ ಮಕ್ಕಳ ಜೀವನ ನರಕವಾಗುತ್ತಿದೆ. ಅದರಲ್ಲಿಯೂ ಅತ್ಯಾಚಾರ ಪ್ರಕರಣಗಳಲ್ಲಿ ಬಾಲಕ-ಬಾಲಕಿಯರು ಹೆಚ್ಚಿನ ಪ್ರಮಾಣದಲ್ಲಿ ಬಲಿಯಾಗುತ್ತಿದ್ದಾರೆ. ಪೋಕ್ಸೋ ಪ್ರಕರಣಗಳಲ್ಲಿಯೂ ಅಪ್ರಾಪ್ತರ ಸಂಖ್ಯೆ ಹೆಚ್ಚಾಗಿದೆ. ಪೊಲೀಸ್ ದಾಖಲೆಗಳಲ್ಲಿನ ಈ ಅಂಕಿ-ಅoಶಗಳು ಜನರ ಆತಂಕಕ್ಕೆ ಕಾರಣವಾಗಿದೆ. ಮಕ್ಕಳ ಮೇಲಿನ ದೌರ್ಜನ್ಯ ಕಂಡರೆ ಇಲ್ಲಿ ಫೋನ್ ಮಾಡಿ: 1908 - [2025 ನವೆಂಬರ್ 9ರ ದಿನ ಭವಿಷ್ಯ](https://mobiletime.in/2025/11/prediction-for-november-9-2025/): ಮೇಷ ರಾಶಿ: ನಿಮಗೆ ಸಿಗುವ ಅವಕಾಶಗಳನ್ನು ಸರಿಯಾಗಿ ಬಳಸಿಕೊಂಡು ಧೈರ್ಯದಿಂದ ಕೆಲಸ ಮಾಡಿ. ಆರೋಗ್ಯದ ವಿಷಯದಲ್ಲಿ ಕಾಳಜಿ ಅಗತ್ಯ. ವೇಗವಾಗಿ ವಾಹನ ಓಡಿಸಬೇಡಿ. ವೃಷಭ ರಾಶಿ: ಹಣಕಾಸು ವಿಷಯದಲ್ಲಿ ಬೆಳವಣಿಗೆ ಆಗಲಿದೆ. ಕುಟುಂಬದ ಬೆಂಬಲ ನಿಮಗೆ ಶಕ್ತಿ ಕೊಡುತ್ತದೆ. ಆರೋಗ್ಯ ವಿಚಾರದಲ್ಲಿ ಜಾಗರೂಕತೆ ಬೇಕು. ಮಿಥುನ ರಾಶಿ: ಸಂಪರ್ಕ ಹಾಗೂ ಸಂವಹನದಲ್ಲಿ ಯಶಸ್ಸು ಸಾಧ್ಯವಿದೆ. ಹೊಸ ಸ್ನೇಹಿತರ ಭೇಟಿ ಆಗಲಿದೆ. ವ್ಯವಹಾರ ಬೆಳವಣಿಗೆ ಸಾಧ್ಯವಿದೆ. ಕರ್ಕ ರಾಶಿ: ಪರಿಶ್ರಮ ಹೆಚ್ಚಾಗಲಿದ್ದು ಅದರ ಫಲ ಮಿಶ್ರವಾಗಿರಲಿದೆ. ಆತ್ಮವಿಶ್ವಾಸ ಹೆಚ್ಚಿಸುವ ಕೆಲಸ ಮಾಡುವುದು ಮುಖ್ಯ. ಕುಟುಂಬದ ವಿಷಯದಲ್ಲಿ ಶಾಂತಿ ಕಾಪಾಡಿ. ಸಿಂಹ: ನಾಯಕತ್ವ ಗುಣ ಬೆಳವಣಿಗೆ ಆಗಲಿದೆ. ಭಾವನಾತ್ಮಕ ಸ್ಥಿರತೆ ಕಳೆದುಕೊಳ್ಳಬೇಡಿ. ವಿವಿಧ ವೇದಿಕೆಗಳಲ್ಲಿ ಅವಕಾಶ ಸಿಗಲಿದೆ. ಕನ್ಯಾ ರಾಶಿ: ಮನಸ್ಸಿನ ಗೊಂದಲ ನಿವಾರಣೆಗೆ ಧ್ಯಾನ ಮಾಡುವುದು ಅತಿ ಮುಖ್ಯ. ದೂರದ ತಿರುಗಾಟಗಳು ಬೇಡ. ಸ್ಪಷ್ಠ ನಿಲುವುಗಳ ಜೊತೆ ಕಾರ್ಯ ಸಾಧಿಸಿ. ತುಲಾ ರಾಶಿ: ನಿಮ್ಮ ನಿರ್ಧಾರಗಳು ಬೇರೆಯವರಿಗೆ ಹೊರೆ ಆಗದಿರಲಿ. ಹೂಡಿಕೆಗೆ ಯೋಗ್ಯ ಸಮಯ ಬರಲಿದೆ. ಮನೆಯಲ್ಲಿ ಸಂತೋಷದ ವಾತಾವರಣ ಕಾಣಲಿದೆ. ವೃಶ್ಚಿಕ ರಾಶಿ: ನೀವು ಮಾಡಿದ ಕೆಲಸಗಳನ್ನು ವಿಶ್ಲೇಷಣೆ ಮಾಡಿ. ಹೊಸ ದಾರಿಗಳನ್ನು ಹುಡುಕಿ. ಪ್ರೀತಿ ಪಾತ್ರರ ಜೊತೆ ಮುಕ್ತವಾಗಿ ಮಾತನಾಡಿ. ಧನು ರಾಶಿ: ಪ್ರಯಾಣದಿಂದ ಆಯಾಸವಾಗಲಿದೆ. ಶಿಕ್ಷಣದ ವಿಷಯದಲ್ಲಿ ಮುನ್ನಡೆ ಸಿಗಲಿದೆ. ಹಣಕಾಸು ಸುರಕ್ಷತೆ ಕಡೆ ಗಮನಹರಿಸಿ. ಮಕರ ರಾಶಿ: ನೀವು ಮಾಡುವ ವೃತ್ತಿಯಲ್ಲಿ ಸ್ಥಿತಿಜ್ಞತೆ ಮುಖ್ಯ. ಭೂಮಿ ವಿಷಯದಲ್ಲಿ ಎಚ್ಚರಿಕೆ ಅಗತ್ಯ. ನಿಮ್ಮೊಳಗಿನ ನೈಜ ಶಕ್ತಿಯನ್ನು ಬಳಸಿ ಕೆಲಸ ಮಾಡಿ. ಕುಂಭ ರಾಶಿ: ಸಾಮಾಜಿಕ ಸಂಪರ್ಕ ವಿಷಯದಲ್ಲಿ ಮುನ್ನಡೆ ಆಗಲಿದೆ. ಸಹಾಯಕರ ಜೊತೆ ನಡೆಯುವ ಒಪ್ಪಂದಗಳು ಸುರಳಿತವಾಗಿರಲಿದೆ. ವ್ಯಾಯಾಮ ಮಾಡುವುದನ್ನು ಬಿಡಬೇಡಿ. ಮೀನ ರಾಶಿ: ನಿಮ್ಮ ಸೃಜನಶೀಲತೆ ಹೆಚ್ಚುತ್ತದೆ. ಹೊಸ ಯೋಜನೆಗಳನ್ನು ಆರಂಭಿಸಲು ಉತ್ತಮ ದಿನ. ಆತ್ಮವಿಶ್ವಾಸದಿಂದ ಕೆಲಸ ಮಾಡಿ. - [ಶಿರಸಿ: ರಸ್ತೆ ಅಭಿವೃದ್ದಿಗಾಗಿ ಕೋರ್ಟು-ಕೇಸು!](https://mobiletime.in/2025/11/sirsi-court-case-for-road-development/): ಶಿರಸಿಯ ಸಾಮಾಜಿಕ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತುವ ನ್ಯಾಯವಾದಿ ಶ್ರೀನಿವಾಸ ನಾಯ್ಕ ಅವರು ಹದಗೆಟ್ಟ ರಸ್ತೆಗಳ ವಿರುದ್ಧ ನ್ಯಾಯಾಲಯದ ಮೊರೆ ಹೋಗಿದ್ದಾರೆ. ನ್ಯಾಯವಾದಿ ಚೇತನ ಬೋವಿ ಅವರ ಜೊತೆ ಸೇರಿ ಸರ್ಕಾರದ ವಿರುದ್ಧವೇ ಅವರು ಕೇಸು ಹಾಕಿದ್ದಾರೆ! ಶ್ರೀನಿವಾಸ ನಾಯ್ಕ ಅವರು ಶಿರಸಿಯ ವಿದ್ಯಾನಗರದಲ್ಲಿ `ಸೀತಾ ಲಾ ಕನ್ಸಟೆನ್ಸಿ’ ನಡೆಸುತ್ತಾರೆ. ಸಾರ್ವಜನಿಕ ಸಮಸ್ಯೆಗಳ ಬಗ್ಗೆ ಅವರು ವಿವಿಧ ಪ್ರಕರಣಗಳನ್ನು ನಡೆಸಿದ್ದಾರೆ. ಈ ಹಿಂದೆ ನಗರಸಭೆಯ ಅಶುಚಿತ್ವದ ಬಗ್ಗೆ ಅವರು ಕಿಡಿಕಾರಿದ್ದು, ಡೆಂಗ್ಯು ಜ್ವರ ಹೆಚ್ಚಳಕ್ಕೆ ನಗರಸಭೆಯ ನಿರ್ಲಕ್ಷ್ಯ ಕಾರಣವಾದ ಬಗ್ಗೆ ನ್ಯಾಯಾಲಯಕ್ಕೆ ಮನವರಿಕೆ ಮಾಡಿದ್ದರು. ಜನರ ಜೀವಿಸುವ ಹಕ್ಕಿಗೆ ತೊಂದರೆ ಆಗದಂತೆ ತಡೆಯುವುದಕ್ಕಾಗಿ ಅವರು ಕಾನೂನಾತ್ಮಕ ಹೋರಾಟ ನಡೆಸಿದ್ದರು. ಅದರ ಬೆನ್ನಲ್ಲೆ ಇದೀಗ ಶಿರಸಿಯ ರಸ್ತೆಗಳಲ್ಲಿನ ಗುಂಡಿ ಹಾಗೂ ಧೂಳಿನಿಂದ ಆಗುವ ಆರೋಗ್ಯ ಸಮಸ್ಯೆಗಳ ಬಗ್ಗೆ ಕಾನೂನಾತ್ಮಕ ರೀತಿಯಲ್ಲಿ ಧ್ವನಿ ಎತ್ತಿದ್ದಾರೆ. ಶ್ರೀನಿವಾಸ ನಾಯ್ಕ ಅವರು ನಿತ್ಯ ಓಡಾಡುವ ರಸ್ತೆಯಲ್ಲಿ ಭಾರೀ ಪ್ರಮಾಣದ ಗುಂಡಿಗಳಿದ್ದು, ಅಲ್ಲಿನ ಧೂಳು ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿತ್ತು. ಸಾಕಷ್ಟು ಜನ ನಗರಸಭೆಗೆ ಮನವಿ ಮಾಡಿದರೂ ಅದರಿಂದ ಯಾವ ಪ್ರಯೋಜನವೂ ಆಗಿರಲಿಲ್ಲ. ಪ್ರತಿಭಟನೆ-ಎಚ್ಚರಿಕೆ ನೀಡಿದರೂ ನಗರಸಭೆ ಅಧಿಕಾರಿಗಳು ತಲೆಕೆಡಿಸಿಕೊಂಡಿರಲಿಲ್ಲ. ವಿದ್ಯಾನಗರ ಮಾತ್ರವಲ್ಲದೇ ಶಿರಸಿ ತುಂಬೆಲ್ಲ ಇದೇ ಸಮಸ್ಯೆ ಆಗಿರುವುದನ್ನು ಶ್ರೀನಿವಾಸ ನಾಯ್ಕ ಅವರು ಮನಗೊಂಡರು. ತಮ್ಮ ಸಹಾಯಕ ವಕೀಲರಾದ ಚೇತನ ಬೋವಿ ಅವರ ಜೊತೆ ಚರ್ಚಿಸಿ ವಿವಿಧ ಕಾಗದಪತ್ರಗಳನ್ನು ಸಿದ್ಧಪಡಿಸಿದರು. ಜನರಿಗೆ ಆದ ಸಮಸ್ಯೆಗಳ ಬಗ್ಗೆ ಸಮಗ್ರವಾಗಿ ಅಭ್ಯಯಿಸಿ ಕಾನೂನಿನ ಮೊರೆ ಹೋದರು. ಸದ್ಯ ಜನರ ಜೀವಿಸುವ ಹಕ್ಕಿಗೆ ತೊಂದರೆಯಾಗುತ್ತಿರುವ ಶಿರಸಿಯಲ್ಲಿನ ರಸ್ತೆ ಗುಂಡಿ ಹಾಗೂ ಧೂಳಿನ ಸಮಸ್ಯೆಯ ಬಗ್ಗೆ ನೀಡಿದ ದೂರನ್ನು ನ್ಯಾಯಾಲಯ ಪರಿಗಣಿಸಿದೆ. ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ, ಉತ್ತರ ಕನ್ನಡ ಜಿಲ್ಲಾಧಿಕಾರಿ, ಶಿರಸಿ ಉಪವಿಭಾಗಾಧಿಕಾರಿ ಹಾಗೂ ಶಿರಸಿ ನಗರಸಭೆ ಪೌರಾಯುಕ್ತರ ವಿರುದ್ಧ ನೀಡಿದ ದೂರನ್ನು ನ್ಯಾಯಾಲಯವೂ ಗಂಭೀರವಾಗಿ ಪರಿಗಣಿಸಿದೆ. ನವೆಂಬರ್ 24ರಂದು ಪ್ರಕರಣದ ವಿಚಾರಣೆ ನಿಗದಿಪಡಿಸಿದ್ದು, ಆ ದಿನ ರಸ್ತೆ ಗುಂಡಿ ಹಾಗೂ ಧೂಳಿನ ಸಮಸ್ಯೆ ಅನುಭವಿಸಿದ ಪ್ರತಿಯೊಬ್ಬರು ನ್ಯಾಯಾಧೀಶರ ಮುಂದೆ ತಮ್ಮ ಅಳಲು ಹೇಳಿಕೊಳ್ಳಲು ಸಮಯ ನೀಡಲಾಗಿದೆ. `ರಸ್ತೆಯಲ್ಲಿನ ಗುಂಡಿ ಹಾಗೂ ಧೂಳಿನಿಂದ ಸಣ್ಣ ಸಣ್ಣ ಮಕ್ಕಳು ಅನಾರೋಗ್ಯಕ್ಕೆ ಒಳಗಾಗುತ್ತಿದ್ದಾರೆ. ಮನೆಗೆ ಬರುವ ಮಕ್ಕಳು ಸಂಜೆ ವೇಳೆ ಕೆಮ್ಮಿನಿಂದ ನರಳುತ್ತಿದ್ದು, ಜನರ ಮೂಲಭೂತ ಹಕ್ಕಿಗೆ ಸಮಸ್ಯೆಯಾಗಿದೆ. ನಾವು ಕಟ್ಟುವ ತೆರಿಗೆ ಹಣವನ್ನು ಸರಿಯಾಗಿ ಬಳಸಿ ರಸ್ತೆ ನಿರ್ಮಿಸುವುದು ಸರ್ಕಾರದ ಜವಾಬ್ದಾರಿಯಾಗಿದ್ದು, ಅದನ್ನು ನಿರ್ವಹಿಸದ ಕಾರಣ ನ್ಯಾಯಾಲಯದ ಮೊರೆ ಹೋಗುವುದು ಅನಿವಾರ್ಯವಾಯಿತು’ ಎಂದು ನ್ಯಾಯವಾದಿ ಶ್ರೀನಿವಾಸ ನಾಯ್ಕ ಅವರು ಮೊಬೈಲ್ ಮಿಡಿಯಾ ನೆಟ್‌ವರ್ಕಗೆ ಪ್ರತಿಕ್ರಿಯಿಸಿದರು. `ಹಿಂದೊಮ್ಮೆ ಗಟಾರ ಸಮಸ್ಯೆಯ ಬಗ್ಗೆ ಪ್ರಧಾನಿ ಕಚೇರಿಗೆ ಪತ್ರ ಬರೆದಾಗ ಅಧಿಕಾರಿಗಳಿಗೆ ಬಿಸಿ ಮುಟ್ಟಿತು. ಆ ಅವಧಿಯಲ್ಲಿ ನಗರಸಭೆಯವರು ಸಮಸ್ಯೆಯನ್ನು ಬಗೆಹರಿಸಿದ್ದರು’ ಎಂಬುದನ್ನು ಅವರು ಸ್ಮರಿಸಿದರು. `ಯಾವುದೇ ಹೋರಾಟವಾದರೂ ಕಾನೂನಾತ್ಮಕ ರೀತಿ ನಡೆದರೆ ಅದಕ್ಕೆ ಜಯ ನಿಶ್ವಿತ’ ಎಂದು ಅನಿಸಿಕೆಹಂಚಿಕೊAಡರು. ಇನ್ನೂ, ಶಿರಸಿ ರಸ್ತೆಯಲ್ಲಿ ಗುಂಡಿ ಹಾಗೂ ಧೂಳಿನ ಸಮಸ್ಯೆಯಿಂದ ತೊಂದರೆ ಅನುಭವಿಸಿದ ಪ್ರತಿಯೊಬ್ಬರು ನ್ಯಾಯಾಧೀಶರ ಮುಂದೆ ತಮ್ಮ ಅಭಿಪ್ರಾಯ ಮಂಡಿಸಲು ಈ ಪ್ರಕರಣದಲ್ಲಿ ಅವಕಾಶವಿದೆ. ಅದಕ್ಕೆ ಎಲ್ಲಾ ಬಗೆಯ ಸಿದ್ಧತೆ-ಕಾಗದ ಪತ್ರಗಳ ತಯಾರಿಯನ್ನು ಶ್ರೀನಿವಾಸ ನಾಯ್ಕ ಹಾಗೂ ಚೇತನ ಬೋವಿ ಅವರು ತಮ್ಮದೇ ಖರ್ಚಿನಲ್ಲಿ ಮಾಡಿಕೊಡುತ್ತಾರೆ. ರಸ್ತೆ ಹಾಳಾಗಿದ್ದರಿಂದ ನಿಮಗಾದ ತೊಂದರೆಗಳ ಬಗ್ಗೆ ನ್ಯಾಯಾಧೀಶರ ಬಳಿ ಮಾತನಾಡಿ. ಈ ಹೋರಾಟಕ್ಕೆ ಕೈ ಜೋಡಿಸಲು ಇಲ್ಲಿ ಫೋನ್ ಮಾಡಿ: 9480210956   - [ಶಿರಸಿ: ಸ್ಕೋಡ್‌ವೆಸ್ ಸಂಸ್ಥೆಗೆ ಪರಿಸರ ಪ್ರಶಸ್ತಿ!](https://mobiletime.in/2025/11/sirsi-environmental-award-for-skodves/): ಭೂಸಾರ ಸಂರಕ್ಷಣೆ, ಕೃಷಿ ಅರಣ್ಯ ರಕ್ಷಣೆ, ದೇವರ ಕಡು ಅಧ್ಯಯನ ಹಾಗೂ ಔಷಧಿ ಸಸ್ಯಗಳ ಕುರಿತಾದ ಜ್ಞಾನಕ್ಕಾಗಿ ಶಿರಸಿಯ ಸ್ಕೊಡ್‌ವೆಸ್ ಸಂಸ್ಥೆಗೆ ಪರಿಸರ ಪ್ರಶಸ್ತಿ ಸಿಕ್ಕಿದೆ. ಪರಿಸರ ಮತ್ತು ಜೀವವೈವಿದ್ಯ ಕ್ಷೇತ್ರದ ಸಾಧಕ ಸಂಸ್ಥೆಗಳಿಗೆ ನೀಡುವ `ಚೇಂಜ್ ಮೇಕರ್’ ಪ್ರಶಸ್ತಿಗೆ ಶಿರಸಿಯ ಸ್ಕೊಡ್‌ವೆಸ್ ಸಂಸ್ಥೆ ಪಾತ್ರವಾಗಿದೆ. ಹೈದರಾಬಾದಿನನ ಸಿಎಸ್‌ಆರ್‌ನೌ ವೇದಿಕೆಯೂ ಈ ಪ್ರಶಸ್ತಿ ಘೋಷಿಸಿದೆ. ಜಲಾನಯನ, ಭೂಸಾರ ಸಂರಕ್ಷಣೆ, ಕೃಷಿ ಅರಣ್ಯ, ದೇವರ ಕಾಡು, ಔಷಧಿ ಸಸ್ಯಗಳ ಸಂರಕ್ಷಣೆ, ಪರಿಸರ ಸಂರಕ್ಷಣೆಯಲ್ಲಿ ಸ್ಕೋಡ್‌ವೆಸ್ ಸಂಸ್ಥೆ ಮಾಡಿದ ಸಾಧನೆ ಗಮನಿಸಿ ಈ ಪ್ರಶಸ್ತಿ ನೀಡಲಾಗುತ್ತಿದೆ. ನವೆಂಬರ್ 10ರಂದು ಹೈದರಾಬಾದಿನ ಶಿಲ್ಪ ಕಲಾ ವೇದಿಕೆಯಲ್ಲಿ ಪ್ರಶಸ್ತಿ ವಿತರಣೆ ನಡೆಯಲಿದೆ. ದಕ್ಷಿಣ ಭಾರತದ ಅತಿ ದೊಡ್ಡ ಸಿಎಸ್‌ಆರ್ ಶೃಂಗ ಸಭೆಯಲ್ಲಿ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ವೆಂಕಟೇಶ ನಾಯ್ಕ ಅವರು ಭಾಗವಹಿಸಲಿದ್ದು, ಅದೇ ವೇದಿಕೆಯಲ್ಲಿ ಪ್ರಶಸ್ತಿ ಸ್ವೀಕರಿಸಲಿದ್ದಾರೆ. ಈ ವಿಷಯದ ಬಗ್ಗೆ ಇದೀಗ ಸಂಸ್ಥೆಯ ಕಾರ್ಯಕ್ರಮ ಅಧಿಕಾರಿ ನಾರಾಯಣ ಹೆಗಡೆ ಅವರು ಮಾಹಿತಿ ನೀಡಿದರು. - [ಕಾರವಾರ: ಕೈಗಾ ರಸ್ತೆ ತುಂಬ ಹೊಂಡ ಹೊಂಡ!](https://mobiletime.in/2025/11/karwar-kaiga-road-full-of-potholes/): ಕಾರವಾರ-ಕಡವಾಡ ರಸ್ತೆ ಬಳಿ ಹೊಂಡ ತುಂಬಿದ್ದು, ವಾಹನ ಸವಾರರು ಸಮಸ್ಯೆ ಅನುಭವಿಸುತ್ತಿದ್ದಾರೆ. ಇಲ್ಲಿನ ರಸ್ತೆ ಅಕ್ಕ-ಪಕ್ಕ ಗಿಡಗಂಟಿಗಳು ಬೆಳೆದಿರುವುದರಿಂದ ಸಮಸ್ಯೆ ಇನ್ನಷ್ಟು ಹೆಚ್ಚಾಗಿದೆ. ಕಡವಾಡದ ಮೂಡದೇವ ದೇವಸ್ಥಾನದಿಂದ ವೈಲವಾಡದವರೆಗೂ ರಸ್ತೆ ಸಂಪೂರ್ಣವಾಗಿ ಹದಗೆಟ್ಟಿದೆ. ಈ ಮಾರ್ಗವಾಗಿ ಭಾರೀ ಗಾತ್ರದ ಸರಕು ಸಾಗಾಟ ವಾಹನ ಸಂಚರಿಸುತ್ತಿದ್ದು, ಎದುರಿನಿಂದ ಬರುವ ಸಣ್ಣ-ಪುಟ್ಟ ವಾಹನಗಳ ಓಡಾಟಕ್ಕೆ ಸ್ಥಳಾವಕಾಶವೇ ಸಿಗುತ್ತಿಲ್ಲ. ಅದರಲ್ಲಿಯೂ ರಸ್ತೆಯುದ್ದಕ್ಕೂ ಬಿದ್ದಿರುವ ಹೊಂಡಗಳು ಜನರ ಜೀವಕ್ಕೆ ಮಾರಕವಾಗಿದೆ. ಕೈಗಾ ಅಣು ವಿದ್ಯುತ್ ಘಟಕಕ್ಕೆ ತೆರಳುವ ವಾಹನಗಳು ಇದೇ ಮಾರ್ಗವಾಗಿ ಸಂಚರಿಸುತ್ತದೆ. ಅದರ ತೂಕ ಹೆಚ್ಚಿರುವ ಪರಿಣಾಮ ಸಣ್ಣ-ಪುಟ್ಟ ಸೇತುವೆಗಳ ಮೇಲೆಯೂ ಗುಂಡಿ ಬಿದ್ದಿದೆ. ಇದರಿಂದ ಶಾಲೆ-ಕಾಲೇಜು ವಿದ್ಯಾರ್ಥಿಗಳು ತೊಂದರೆಗೆ ಸಿಲುಕಿದ್ದಾರೆ. ನಿತ್ಯ ಓಡಾಡುವ ಮಹಿಳೆಯರು ತಮ್ಮ ನೋವು ತೋಡಿಕೊಂಡಿದ್ದಾರೆ. ಈ ಎಲ್ಲಾ ಸಮಸ್ಯೆ ಅರಿತ ತಾಲೂಕು ಪಂಚಾಯತ ಮಾಜಿ ಸದಸ್ಯ ಪ್ರಶಾಂತ ಗೋವೇಕರ್ ಅವರು ರಸ್ತೆ ದುರಸ್ಥಿಗಾಗಿ ಧ್ವನಿ ಎತ್ತಿದ್ದಾರೆ. `ಜಿಲ್ಲಾಡಳಿತ ಈ ರಸ್ತೆ ಅವ್ಯವಸ್ಥೆ ಬಗ್ಗೆ ಗಮನಹರಿಸಬೇಕು. ರಸ್ತೆ ಸರಿಪಡಿಸಲು ಲೋಕೋಪಯೋಗಿ ಇಲಾಖೆಗೆ ಸೂಚನೆ ನೀಡಬೇಕು’ ಎಂದು ಅವರು ಆಗ್ರಹಿಸಿದ್ದಾರೆ. - [ಅಮಾಯಕನ ಅಂಗಿ ಹರಿದವನಿಗೆ 2 ಸಾವಿರ ರೂ ದಂಡ!](https://mobiletime.in/2025/11/rs-2000-fine-for-tearing-an-innocent-mans-shirt/): ಯಲ್ಲಾಪುರದ ಕಿರವತ್ತಿ ಬಳಿ ರಸ್ತೆ ಪಕ್ಕ ನಿಂತಿದ್ದ ಬಾಬು ಶಿಂಧೆ ಅವರ ಮೇಲೆ ಅನಗತ್ಯವಾಗಿ ಕೈ ಮಾಡಿದ ದೊಂಡು ಪಟಗಾರೆ ಅವರಿಗೆ ನ್ಯಾಯಾಲಯ 2 ಸಾವಿರ ರೂ ದಂಡ ವಿಧಿಸಿದೆ. 2020ರ ಮಾರ್ಚ 10ರಂದು ಈ ಗಲಾಟೆ ನಡೆದಿತ್ತು. ಯಲ್ಲಾಪುರ ಕಿರವತ್ತಿ ಬಳಿಯ ಡೌಗಿನಾಳ ಕಿರವತ್ತಿ ರಸ್ತೆ ಬಂಡಿಕೊಪ್ಪದ ಬಳಿ ಆ ದಿನ ಬಾಬು ಶಿಂದೆ ಅವರು ನಿಂತಿದ್ದರು. ಸಂಜೆ ಅವರು ಬೈಕ್ ಪರಿಶೀಲನೆ ಮಾಡುತ್ತಿದ್ದಾಗ ಅಲ್ಲಿಗೆ ಆಗಮಿಸಿದ ದೊಂಡು ಬಾಬು ಪಟಗಾರೆ ಅವರು ಕೆಟ್ಟದಾಗಿ ನಿಂದಿಸಿದ್ದರು. ಈ ನಡುವೆ ಮಾತಿಗೆ ಮಾತು ಬೆಳೆದು ಹೊಡೆದಾಟ ಶುರುವಾಗಿತ್ತು. ದೊಂಡು ಪಟಗಾರೆ ಅವರು ಬಾಬು ಶಿಂಧೆ ಅವರಿಗೆ ಗುದ್ದಿದ್ದರು. ಬಾಬು ಶಿಂಧೆ ಅವರ ಅಂಗಿ ಹರಿದು ಅವಮಾನ ಮಾಡಿದ್ದರು. ತಮ್ಮ ಬೆಲ್ಟಿನಿಂದ ಬಾಬು ಶಿಂಧೆ ಅವರಿಗೆ ಬಾರಿಸಿದ್ದರು. ಈ ಎಲ್ಲಾ ವಿಷಯಗಳ ಬಗ್ಗೆ ಬಾಬು ಶಿಂಧೆ ಅವರು ಪೊಲೀಸರಿಗೆ ದೂರಿದ್ದರು. ಆ ವೇಳೆ ಪೊಲೀಸ್ ಉಪನಿರೀಕ್ಷಕರಾಗಿದ್ದ ಮಂಜುನಾಥ ಎಸ್ ಗೌಡರ್ ಅವರು ಪ್ರಕರಣದ ತನಿಖೆ ನಡೆಸಿದ್ದರು. ನ್ಯಾಯಾಲಯ ಈ ಪ್ರಕರಣದ ವಿಚಾರಣೆ ನಡೆಸಿದ್ದು, ಜಿಲ್ಲಾ ನ್ಯಾಯಾಧೀಶ ಕಿರಣ ಕಿಣಿ ಅವರು ಎಲ್ಲಾ ಸಾಕ್ಷಿಗಳನ್ನು ಗಮನಿಸಿದರು. ಸರ್ಕಾರಿ ಅಭಿಯೋಜಕ ರಾಜೇಶ ಎಂ ಮಳಗಿಕರ್ ಅವರು ಆರೋಪಿ ದೊಂಡು ಪಟಗಾರೆ ಅವರ ಹೊಡೆದಾಟದ ಸ್ವರೂಪವನ್ನು ನ್ಯಾಯಾಲಯಕ್ಕೆ ವಿವರಿಸಿದರು. ದಾಖಲೆಗಳ ಆಧಾರದಲ್ಲಿ ದೊಂಡು ಪಟಗಾರೆ ಅವರನ್ನು ನ್ಯಾಯಾಲಯ ತಪ್ಪಿತಸ್ಥ ಎಂದು ಘೋಷಿಸಿದ್ದು, 2 ಸಾವಿರ ರೂ ದಂಡ ಪಾವತಿಸಲು ಆದೇಶಿಸಿತು. - [ಅಡಿಕೆ ಕಳ್ಳರ ಮೇಲೆ ದೇಗುಲ ದರೋಡೆಯ ಅನುಮಾನ!](https://mobiletime.in/2025/11/areca-nut-thieves-suspected-of-temple-robbery/): ಯಲ್ಲಾಪುರದ ವಿಶ್ವೇಶ್ವರ ಹೆಬ್ಬಾರ್ ಅವರ ತೋಟಕ್ಕೆ ನುಗ್ಗಿ ಅಡಿಕೆ ಕಳ್ಳತನ ಮಾಡಿದ್ದ ಶಿರಸಿಯ ಭಾಸ್ಕರ ಬೋವಿವಡ್ಡರ್ ಹಾಗೂ ಯಲ್ಲಾಪುರದ ಹರುಷ ಬೋವಿವಡ್ಡರ್ ಅವರು ದೇವಾಲಯವನ್ನು ದರೋಡೆ ಮಾಡಿದ ಆರೋಪ ಎದುರಿಸುತ್ತಿದ್ದಾರೆ. ಅವರಿಬ್ಬರು ಸೇರಿ ಹಾಸಣಗಿ ಬಳಿಯ ಬೆಂಡಿಗೇರಿ ಗ್ರಾಮದ ದ್ಯಾಮವ್ವ ದೇವಾಲಯ ಕಾಣಿಕೆ ಹುಂಡಿ ಒಡೆದ ಅನುಮಾನವ್ಯಕ್ತವಾಗಿದೆ. ಯಲ್ಲಾಪುರ ಮಂಚಿಕೇರಿ ಬಳಿಯ ಬೆಂಡಿಗೇರಿ ಹರುಷ ಈರಪ್ಪ ಬೋವಿವಡ್ಡರ್ (24) ಹಾಗೂ ಶಿರಸಿ ಗೌಡಳ್ಳಿ ಬಳಿಯ ಕೋಗುಲಕೋಳಿಯ ಭಾಸ್ಕರ ಕೃಷ್ಣ ಭೋವಿವಡ್ಡರ್ (19) ಸೇರಿ ನವೆಂಬರ್ 5ರಂದು ಯಲ್ಲಾಪುರದ ಇಡಗುಂದಿ ಬಳಿಯ ದೋಣಗಾರದಲ್ಲಿ ವಾಸವಾಗಿರುವ ವಿಶ್ವೇಶ್ವರ ವೆಂಕಟ್ರಮಣ ಹೆಬ್ಬಾರ್ ಅವರ ಅಡಿಕೆ ತೋಟಕ್ಕೆ ನುಗ್ಗಿದ್ದರು. ಅವರ ಅಡಿಕೆ ತೋಟದಲ್ಲಿ ಕಳ್ಳತನ ಮಾಡಿ ಅವರು ಪರಾರಿಯಾಗಿದ್ದು, ವಿಶ್ವೇಶ್ವರ ಹೆಬ್ಬಾರ್ ಅವರು ನೀಡಿದ ದೂರಿನ ಮೇರೆಗೆ ಪೊಲೀಸರು ತನಿಖೆ ನಡೆಸಿದಾಗ ಕಳ್ಳರಿಬ್ಬರು ಸಿಕ್ಕಿಬಿದ್ದಿದ್ದರು. ಪೊಲೀಸರನ್ನು ಕಂಡ ಕೂಡಲೇ ಅವರಿಬ್ಬರು ತಮ್ಮ ತಪ್ಪು ಒಪ್ಪಿಕೊಂಡಿದ್ದರು. ಪೊಲೀಸರು ಆ ಕಳ್ಳರಿಂದ 50 ಸಾವಿರ ಮೌಲ್ಯದ 4.54 ಕ್ವಿಂಟಲ್ ಅಡಿಕೆಯನ್ನು ವಶಕ್ಕೆಪಡೆದಿದ್ದರು. ಈ ನಡುವೆ ಹಾಸಣಗಿಯ ಶಿರನಾಳ ಬಳಿಯಿರುವ ಬೆಂಡಿಗೇರಿಯ ದ್ಯಾಮವ್ವ ದೇವಸ್ಥಾನದಲ್ಲಿ ಕಳ್ಳತನ ನಡೆದಿರುವುದು ಗಮನಕ್ಕೆ ಬಂದಿತು. ದೇವಾಲಯದ ಬಾಗಿಲು ಒಡೆದ ಕಳ್ಳರು ಕಾಣಿಕೆ ಹುಂಡಿಯಲ್ಲಿದ್ದ 14 ಸಾವಿರ ರೂ ಹಣ ಎಗರಿಸಿದ್ದರು. ಅಕ್ಟೊಬರ್ 31ರಿಂದ ನವೆಂಬರ್ 1ರ ಅವಧಿಯಲ್ಲಿ ಈ ಕಳ್ಳತನ ನಡೆದಿದ್ದು, ಅದೇ ಊರಿನ ವಿನೋದ ಸುರೇಶ ತಳ್ಳೇಕರ್ ಅವರು ಹರುಷ ಈರಪ್ಪ ಬೋವಿವಡ್ಡರ್ (24) ಹಾಗೂ ಭಾಸ್ಕರ ಕೃಷ್ಣ ಭೋವಿವಡ್ಡರ್ ಅವರ ಮೇಲೆ ಅನುಮಾನವ್ಯಕ್ತಪಡಿಸಿದ್ದರು. ಸದ್ಯ ಅಡಿಕೆ ಕಳ್ಳತನ ಪ್ರಕರಣದಲ್ಲಿ ಪೊಲೀಸರು ಅವರಿಬ್ಬರನ್ನು ಬಂಧಿಸಿದ ವಿಷಯ ಅರಿತ ವಿನೋದ ಸುರೇಶ ತಳ್ಳೇಕರ್ ಅವರು ದೇವಾಲಯ ಕಳ್ಳತನದ ಬಗ್ಗೆಯೂ ಪೊಲೀಸ್ ದೂರು ನೀಡಿದರು. ಹರುಷ ಈರಪ್ಪ ಬೋವಿವಡ್ಡರ್ (24) ಹಾಗೂ ಭಾಸ್ಕರ ಕೃಷ್ಣ ಭೋವಿವಡ್ಡರ್ ಮೇಲೆ ಅನುಮಾನವಿದ್ದು, ಅವರನ್ನು ಈ ವಿಷಯವಾಗಿಯೂ ವಿಚಾರಣೆಗೆ ಒಳಪಡಿಸಬೇಕು ಎಂದು ಅವರು ಆಗ್ರಹಿಸಿದರು. ಈ ಹಿನ್ನಲೆ ಪೊಲೀಸರು ಮತ್ತೊಂದು ಪ್ರಕರಣ ದಾಕಲಿಸಿ ವಿಚಾರಣೆ ನಡೆಸುತ್ತಿದ್ದಾರೆ. - [`ಅರಣ್ಯಾಧಿಕಾರಿ ತಪ್ಪಿನಿಂದ ಅರಣ್ಯವಾಸಿಗೆ ಅನ್ಯಾಯ'](https://mobiletime.in/2025/11/forest-dwellers-suffer-injustice-due-to-forest-officers-mistake/): ಅರಣ್ಯಾಧಿಕಾರಿಗಳ ತಪ್ಪು ನೀತಿಯಿಂದ ಅರಣ್ಯವಾಸಿಗಳಿಗೆ ಅನ್ಯಾಯವಾಗುತ್ತಿದ್ದು, ಇದನ್ನು ವಿರೋಧಿಸಿ ಶಿರಸಿಯಲ್ಲಿ ನವೆಂಬರ್ 11ರಂದು ಸಮಾಲೋಚನೆ ಸಭೆ ನಡೆಸುವ ಬಗ್ಗೆ ನ್ಯಾಯವಾದಿ ರವೀಂದ್ರ ನಾಯ್ಕ ಅವರು ತಿಳಿಸಿದ್ದಾರೆ. ಕಾರವಾರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು `ಕಾನೂನು ಮತ್ತು ಸರ್ಕಾರದ ಆದೇಶ ಉಲ್ಲಂಘಿಸಿ ರಾಜ್ಯದಲ್ಲಿ ಅರಣ್ಯವಾಸಿಗಳನ್ನು ಒಕ್ಕಲೆಬ್ಬಿಸುವ ಪ್ರಕ್ರಿಯೆ ನಡೆದಿದೆ. ಅರಣ್ಯಾಧಿಕಾರಿಗಳ ತಪ್ಪು ನೀತಿಯಿಂದ ಅತಿಕ್ರಮಣದಾರರು ಹಿಂಸೆಗೆ ಒಳಗಾಗುತ್ತಿದ್ದಾರೆ. ಈ ಹಿನ್ನಲೆಯಲ್ಲಿ ಶಿರಸಿಯಲ್ಲಿ ನವೆಂಬರ್ 11 ರಂದು ಸಮಾಲೋಚನೆ ಸಭೆ ಜರುಗಿಸಲಾಗಿದೆ’ ಎಂದು ರಾಜ್ಯ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷರೂ ಆಗಿರುವ ರವಿಂದ್ರ ನಾಯ್ಕ ಅವರು ಘೋಷಿಸಿದರು. `ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ ಅರ್ಜಿ ಸಲ್ಲಿಸಿದಂತ ಅರಣ್ಯವಾಸಿಗಳಿಗೆ ಒಕ್ಕಲೆಬ್ಬಿಸುವ ಕಾನೂನು ಪ್ರಕ್ರಿಯೆ ಚಟುವಟಿಕೆ ಮತ್ತು ಸಾಗುವಳಿಗೆ ಆತಂಕಗೊಳಿಸಬಾರದು ಎಂಬ ನಿರ್ದೇಶನವಿದೆ. ಅರ್ಜಿ ಪರಿಶೀಲನಾ ಪ್ರಕ್ರಿಯೆ ಪೂರ್ಣ ಆಗುವವರೆಗೆ ಅದೀಬೋಗದಲ್ಲಿರುವ ಅರಣ್ಯ ಜಮೀನಿನಿಂದ ಒಕ್ಕಲೆಬ್ಬಿಸತಕ್ಕದ್ದಲ್ಲ ಎಂಬ ಸೂಚನೆಯಿದೆ. ಅದಾಗಿಯೂ ಅರಣ್ಯಾಧಿಕಾರಿಗಳು ರಾಜ್ಯಾದ್ಯಂತ ಸರ್ಕಾರದ ಆದೇಶ ಉಲ್ಲಂಘಿಸುತ್ತಿದ್ದಾರೆ’ ಎಂದು ದೂರಿದರು. ಸಂಘಟನೆ ಜಿಲ್ಲಾ ಸಂಚಾಲಯಕ ಇಬ್ರಾಹೀಂ ಗೌಡಳ್ಳೀ, ಕುಮಟಾ ಅಧ್ಯಕ್ಷ ಮಂಜುನಾಥ ಮರಾಠಿ ನಾಗನೂರು, ರಾಜೇಶ್ ಮಿತ್ರ ನಾಯ್ಕ ಸಂಚಾಲಕ, ಅಮೋಜ್, ಕಾಂಚನ ದೇಸಾಯಿ, ಕೆಂಚಲಯ್ಯ, ಮಾಬ್ಲೇಶ್ವÀವರ ಹೊನ್ನಳಕರ್ ಉಳವಿ, ಪ್ರಕಾಶ್ ಕೃಷ್ಣ ಆಚಾರಿ ಮತ್ತು ಪುಷ್ಪಾ ಆಚಾರಿ ಹಾಜರಿದ್ದರು. - [ಶಿಕ್ಷಕಿಗೆ ಶಿಕ್ಷೆ ವಿಧಿಸಿದ ನ್ಯಾಯಾಲಯ!](https://mobiletime.in/2025/11/the-court-sentenced-the-teacher/): ಸಾಲ ಮರುಪಾವತಿಗೆ ನೀಡಿದ ಚೆಕ್ ಅಮಾನ್ಯವಾದ ಕಾರಣ ಅಂಕೋಲಾದ ನಿವೃತ್ತ ಶಿಕ್ಷಕಿಯೊಬ್ಬರಿಗೆ ನ್ಯಾಯಾಲಯ 6 ತಿಂಗಳ ಜೈಲು ಶಿಕ್ಷೆ ವಿಧಿಸಿದೆ. ಅಂಕೋಲಾದ ಆದರ್ಶ ವಿವಿದ್ದೋದ್ದೇಶ ಸಹಕಾರಿ ನಿಯಮಿತದಿಂದ 2020ರಲ್ಲಿ ಶಿಕ್ಷಕಿ ನಾಗಮ್ಮ ಟಿ ಆಗೇರ ಅವರು ಸಾಲ ಪಡೆದಿದ್ದರು. ಈ ಸಾಲಕ್ಕೆ ಅನುರಾಧಾ ಗೊಂಡಕರ ಅವರು ಜಾಮೀನು ನೀಡಿದ್ದರು. ನಾಗಮ್ಮ ಅವರು ಸಮಯಕ್ಕೆ ಸರಿಯಾಗಿ ಸಾಲ ಮರು ಪಾವತಿಸದ ಕಾರಣ ಅನುರಾಧಾ ಜಗನ್ನಾಥ ಗೊಂಡಕರ ಅವರು ಸಾಲ ಮರುಪಾವತಿಗೆ ಚೆಕ್ ನೀಡಿದ್ದರು. ಆ ಬ್ಯಾಂಕ್ ಖಾತೆಯಲ್ಲಿ ಹಣವಿಲ್ಲದೇ ಚೆಕ್ ಅಮಾನ್ಯವಾಗಿತ್ತು. ಸಾಲದ ಮರು ಪಾವತಿಗಾಗಿ ಅನುರಾಧಾ ಅವರು ಸಹಕಾರಿಗೆ ನೀಡಿದ ಚೆಕ್ ಅಮಾನ್ಯವಾದ ಪ್ರಕರಣ ನ್ಯಾಯಾಲಯದ ಮೆಟ್ಟಿಲೇರಿತ್ತು. ನ್ಯಾಯಾಧೀಶೆ ಅರ್ಪಿತಾ ಬೆಲ್ಲದ ಅವರು ಪ್ರಕರಣದ ವಿಚಾರಣೆ ನಡೆಸಿದರು. ಖಾತೆಯಲ್ಲಿ ಹಣ ಇಲ್ಲದಿದ್ದರೂ ಚೆಕ್ ನೀಡಿದ ಕಾರಣ ಅನುರಾಧಾ ಗೊಂಡಕರ ಅವರಿಗೆ 6 ತಿಂಗಳ ಜೈಲು ಶಿಕ್ಷೆ ವಿಧಿಸಿದರು. ಸಹಕಾರಿ ಸಂಸ್ಥೆಗೆ ಅನ್ಯಾಯವಾದ ಬಗ್ಗೆ ನ್ಯಾಯವಾದಿ ದೀಕ್ಷಿತ್ ನಾಯಕ ವಾದ ಮಂಡಿಸಿದ್ದರು. - [ಆರು ವರ್ಷ ನಂತರದ ಭೇಟಿ: ಮುಂಡಗೋಡಿಗೆ ಬರುತ್ತಿದ್ದಾರೆ ಟಿಬೇಟಿಯನ್ ಧರ್ಮ ಗುರು](https://mobiletime.in/2025/11/visit-after-six-years-tibetan-religious-leader-coming-to-mundagodi/): ಧಾರ್ಮಿಕ ನಾಯಕ, ಟಿಬೇಟಿಯನ್ ಧರ್ಮ ಗುರುಗಳಾದ 14ನೇ ದಲೈಲಾಮಾ ಅವರು ಆರು ವರ್ಷದ ನಂತರ ಮುಂಡಗೋಡಿಗೆ ಬರುತ್ತಿದ್ದಾರೆ. ಡಿಸೆಂಬರ್ 12ರಂದು ಅವರ ಆಗಮನದ ಸಾಧ್ಯತೆಗಳಿವೆ. 2019ರ ಡಿಸೆಂಬರ್ 12ರಂದು ಮುಂಡಗೋಡಿನ ಟಿಬೆಟಿಯನ್ ಕಾಲೋನಿಗೆ ದಲೈಲಾಮಾ ಅವರು ಆಗಮಿಸಿದ್ದರು. ಆಗ, ಇಲ್ಲಿ 12 ದಿನಗಳ ಕಾಲ ವಿವಿಧ ಕಾರ್ಯಕ್ರಮಗಳನ್ನು ನಡೆಸಿದ್ದರು. ಬೌದ್ಧ ಮಂದಿರಗಳಲ್ಲಿ ನಡೆದಿದ್ದ ಕಾರ್ಯಕ್ರಮಗಳಲ್ಲಿ ಬಿಕ್ಕುಗಳಿಗೆ ಪದವಿ ಪ್ರದಾನ, ಡಿಬೇಟ್ ಮೊದಲಾದ ವಿದ್ಯಮಾನಗಳಲ್ಲಿ ಅವರು ಭಾಗವಹಿಸಿದ್ದರು. ಟಿಬೆಟಿಯನ್ ಕಾಲೋನಿಯ ಲಾಮಾ ಕ್ಯಾಂಪ್ ನಂ 2ರ ಡ್ರೆಪುಂಗ್ ಗೋಮಾಂಗ್ ಬೌದ್ಧ ಮಂದಿರದಲ್ಲಿ ದಲೈಲಾಮಾ ಅವರು ಈ ಸಲ ವಾಸವಿರಲಿದ್ದಾರೆ. ಕಾಲಚಕ್ರ ಪೂಜೆ ಅವಧಿಯಲ್ಲಿ 20 ದಿನಗಳ ಕಾಲ ಅವರು ಇಲ್ಲಿ ವಾಸವಾಗಿದ್ದು, ಇದೇ ಮೊದಲ ಬಾರಿಗೆ ಸುದೀರ್ಘ 45 ದಿನಗಳ ಕಾಲ ಅವರು ಮುಂಡಗೋಡದಲ್ಲಿ ಕಾಲ ಕಳೆಯಲಿದ್ದಾರೆ. ಮುಂಡಗೋಡಿನ ಬೌದ್ಧ ಮಂದಿರಗಳಲ್ಲಿ ದಲೈಲಾಮಾ ಸ್ವಾಗತಕ್ಕೆ ಈಗಿಂದಲೇ ಸಿದ್ಧತಾ ಕಾರ್ಯಗಳು ನಡೆದಿದೆ. ಅವರನ್ನು ಅದ್ಧೂರಿಯಾಗಿ ಸ್ವಾಗತಿಸುವ ಸಿದ್ಧತೆ ನಡೆದಿದೆ ಎಂದು ಟಿಬೆಟಿಯನ್ ಬೌದ್ಧ ಮುಖಂಡ ಜಂಪಾ ಲೊಬ್ಸಾಂಗ್ ಹೇಳಿದ್ದಾರೆ. - [`ಕನಕದಾಸರ ಆದರ್ಶ ಅನುಕರಣೀಯ'](https://mobiletime.in/2025/11/kanakadasas-ideal-is-exemplary/): `ಕನಕದಾಸರು ಸಾರಿದ ಸಮಾನತೆಯ ಬದುಕು ಎಲ್ಲಾ ಧರ್ಮಗಳಿಗೂ ಅನ್ವಯ’ ಎಂದು ಕಾರವಾರ ಧರ್ಮ ಪ್ರಾಂತೀಯ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಬಿಶೆಪ್ ಡುಮ್ಮಿಂಗ ಡಯಾಸ ಅವರು ಹೇಳಿದ್ದಾರೆ. `ಕನಕದಾಸರ ಆದರ್ಶ ಹಾಗೂ ಭಕ್ತಿ ಮಾರ್ಗ ನಮಗೆಲ್ಲರಿಗೂ ಪ್ರೇರಣೆ’ ಎಂದವರು ವಿದ್ಯಾರ್ಥಿಗಳಿಗೆ ಕರೆ ನೀಡಿದ್ದಾರೆ. ಶನಿವಾರ ಯಲ್ಲಾಪುರದ ಹೋಲಿ ರೋಜರಿ ಪ್ರೌಢಶಾಲೆಯಲ್ಲಿ ಕನಕದಾಸರ ಜಯಂತಿ ಕಾರ್ಯಕ್ರಮ ಉದ್ಘಾಟಿಸಿದ ಅವರು `ದಾಸ ಶ್ರೇಷ್ಠರಾದ ಕನಕದಾಸರ ಜಯಂತಿಯನ್ನು ನಾಡಿನ ಎಲ್ಲಡೆ ಶ್ರದ್ಧೆಯಿಂದ ಆಚರಿಸಲಾಗುತ್ತದೆ. ದಾಸ ಶ್ರೇಷ್ಠರು ನೀಡಿದ ಸಮಾನತೆಯ ಬದುಕು ಎಲ್ಲಾ ಧರ್ಮಗಳಲ್ಲಿಯೂ ಒಳಿತು ಮಾಡುವ ಸಾರಾಂಶಹೊAದಿದೆ. ಅದನ್ನು ನಾವೆಲ್ಲರೂ ಪಾಲಿಸಬೇಕು’ ಎಂದವರು ಕರೆ ನೀಡಿದರು. `ಪ್ರತಿಯೊಬ್ಬರಲ್ಲಿಯೂ ಒಳ್ಳೆಯದನ್ನು ಕಾಣುವ ಮನಸ್ಸು ಹಾಗೂ ಭಕ್ತಿಯನ್ನು ನಾವು ಕನಕದಾಸರ ಚಿಂತನೆಯಲ್ಲಿ ನೋಡುತ್ತೇವೆ. ಅವರ ಆದರ್ಶಗಳು ನಮಗೆ ಹಾಗೂ ನಮ್ಮ ಸಮಾಜಕ್ಕೆ ಸದಾ ಅನನುಕರಣೀಯ’ ಎಂದವರು ಸ್ಮರಿಸಿದರು. ಕನಕದಾಸರ ಕುರಿತಾದ ಚಿಂತನೆ ಹಾಗೂ ಕೀರ್ತನೆಗಳನ್ನು ಅವರು ಈ ವೇಳೆ ಪ್ರಸ್ತಾಪಿಸಿದರು. ಕನಕದಾಸರ ಕೀರ್ತನೆ ಹಾಗೂ ಜೀವನ ಚರಿತ್ರೆ ಪ್ರಸ್ತುತಪಡಿಸುವ ಮಕ್ಕಳ ಭಾಷಣ ಗಮನ ಸೆಳೆದವು. ಸಂಸ್ಥೆಯ ಮುಖ್ಯಾಧ್ಯಾಪಕ ರೇಮಂಡ್ ಫರ್ನಾಂಡಿಸ್ ಅಧ್ಯಕ್ಷತೆವಹಿಸಿದ್ದರು. ಸಂಸ್ಥೆಯ ಪ್ರಾಥಮಿಕ ಶಾಲೆಯ ಮುಖ್ಯೋಧ್ಯಾಪಕ ಆಗ್ನೇಲ್ ಫರ್ನಾಂಡಿಸ್, ಸಹ ಶಿಕ್ಷಕರ ಸಂಘದ ತಾಲೂಕಾಧ್ಯಕ್ಷ ಚಂದ್ರಶೇಖರ್, ಶಿಕ್ಷಕ ವೆಂಕಟ್ರಮಣ ಭಟ್ಟ ಹಾಗೂ ಎ0 ರಾಜಶೇಖರ್ ಅವರು ವಿವಿಧ ಜವಾಬ್ದಾರಿ ನಿಭಾಯಿಸಿದರು. - [10ನೇ ತರಗತಿ: ಕೆರೆ ಕಡೆ ಹೋದವನ ಬದುಕು ಕೊನೆ!](https://mobiletime.in/2025/11/class-10-the-life-of-the-one-who-went-to-the-lake-is-over/): ಕೆರೆಯಲ್ಲಿದ್ದ ಮೀನು ಹಿಡಿಯಲು ಹೋಗಿದ್ದ ಭಟ್ಕಳದ ಶಶಿಧರ್ ಮೊಗೇರ್ ಅದೇ ಕೆರೆಯಲ್ಲಿ ಮುಳುಗಿ ಕೊನೆಯುಸಿರೆಳೆದಿದ್ದಾರೆ. ಭಟ್ಕಳ ವೆಂಕಟಾಪುರ ಹೆಬ್ಬಳೆಯ ಶಶಿಧರ್ ಯೋಗೇಶ್ ಮೊಗೇರ್ (15) ಅವರು ಭಟ್ಕಳದ ನ್ಯೂ ಇಂಗ್ಲೀಷ್ ಸ್ಕೂಲ್‌ನ ವಿದ್ಯಾರ್ಥಿಯಾಗಿದ್ದರು. ಶನಿವಾರ ಅವರು ಆರಸಿಕೆರೆಯ ಪ್ರಜ್ವಲ ನಾರಾಯಣ ನಾಯ್ಕ, ಕಡಸಲಗದ್ದೆಯ ತೇಜು ದೇವೇಂದ್ರ ದೇವಾಡಿಗ, ಮುಂಡಳ್ಳಿಯ ಪ್ರೀತಮ ಭಾಸ್ಕರ ಮೊಗೇರ್, ಡಿಪಿ ಕಾಲೋನಿಯ ಕರ್ಣ ಸತೀಶ ಮಡಿವಾಳ ಹಾಗೂ ಮೊಗೇರ ಕೇರಿಯ ಶ್ರೀಮಾನ್ ದತ್ತಾ ಮೊಗೇರ ಅವರ ಜೊತೆ ಕೆರೆ ಕಡೆ ಹೋಗಿದ್ದರು. ಮಧ್ಯಾಹ್ನ ಊಟ ಮುಗಿಸಿ ಅವರೆಲ್ಲರೂ ಮೀನು ಹಿಡಿಯುತ್ತಿದ್ದು, ಆಗ ಶಶಿಧರ ಮೊಗೇರ್ ಅವರು ಕಾಲು ಜಾರಿ ನೀರಿಗೆ ಬಿದ್ದರು. ಶಶಿಧರ ಮೊಗೇರ್ ಅವರಿಗೆ ಸರಿಯಾಗಿ ಈಜು ಬರುತ್ತಿರಲಿಲ್ಲ. ನೀರಿನ ಆಳಕ್ಕೆ ಹೋದ ಅವರಿಗೆ ಕೈ-ಕಾಲು ಬೀಸಿದರೂ ಮೇಲೆ ಬರಲು ಸಾಧ್ಯವಾಗಲಿಲ್ಲ. ನೀರಿನಲ್ಲಿ ಮುಳುಗುತ್ತಿದ್ದ ಅವರನ್ನು ಸ್ನೇಹಿತರು ಮೇಲೆತ್ತಲು ಪ್ರಯತ್ನಿಸಿದರು. ಆದರೆ, ಅದು ಸಾಧ್ಯವಾಗಲಿಲ್ಲ. ಸ್ಥಳೀಯರು ಬಂದು ಶಶಿಧರ ಮೊಗೇರ್ ಅವರನ್ನು ಬದುಕಿಸುವ ಪ್ರಯತ್ನ ಮಾಡಿದರೂ ಅದು ಪ್ರಯೋಜನಕ್ಕೆ ಬರಲಿಲ್ಲ. ನೀರಿನ ಆಳದಲ್ಲಿಯೇ ಶಶಿಧರ ಮೊಗೇರ್ ಅವರು ತಮ್ಮ ಜೀವ ಬಿಟ್ಟರು. ಭಟ್ಕಳ ಡಿವೈಎಸ್ಪಿ ಮಹೇಶ್ ಕೆ ಅವರು ಸದ್ಯ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಭಟ್ಕಳ ಪೊಲೀಸರು ಪರಿಶೀಲನೆ ನಡೆಸಿದ್ದು, ಪ್ರಕರಣದ ತನಿಖೆ ನಡೆಸುತ್ತಿದ್ದಾರೆ. - [ಹೆದ್ದಾರಿ ಮೇಲೆ ಹೊತ್ತಿ ಉರಿದ ಹಾಲಿನ ವಾಹನ!](https://mobiletime.in/2025/11/a-milk-truck-caught-fire-on-the-highway/): ಕಾರವಾರ ನಗರದ ಫ್ಲೈಓವರ್ ಅಡಿ ನಿಲ್ಲಿಸಿದ್ದ ಹಾಲಿನ ವಾಹನ ಏಕಾಏಕಿ ಅಗ್ನಿಗೆ ಆಹುತಿಯಾಗಿದೆ. ಅಗ್ನಿಶಾಮಕ ಸಿಬ್ಬಂದಿ ಸಮಯ ಪ್ರಜ್ಞೆಯಿಂದ ದೊಡ್ಡ ಅನಾಹುತ ತಪ್ಪಿದೆ. ಕಾರವಾರ ತಾಮ್ಸೇವಾಡದ ಸಂತೋಶಿ ಸತೀಶ್ ಚೀಪ್ಕರ್ ಅವರು ಶನಿವಾರ ಬೆಳಗ್ಗೆ ಹೆದ್ದಾರಿ ಮೇಲ್ಸೆತುವೆ ಅಡಿ ಭಾಗದ ಟಾಟಾ 407 ವಾಹನ ನಿಲ್ಲಿಸಿದ್ದರು. ಆ ವಾಹನದ ಇಂಜಿನ್ ದೋಷ ಕಾಣಿಸಿಕೊಂಡಿದ್ದು, ಚಿಕ್ಕದಾಗಿ ಬೆಂಕಿ ಬಂದಿತು. ಅದೇ ಜ್ವಾಲೆ ಕ್ರಮೇಣ ದೊಡ್ಡದಾಗಿದ್ದು, ಕ್ಷಣಮಾತ್ರದಲ್ಲಿ ಇಡೀ ವಾಹನವನ್ನು ಆವರಿಸಿತು. ಹೆದ್ದಾರಿ ಅಂಚಿನಲ್ಲಿ ಹಾಲಿನ ವಾಹನ ಹೊತ್ತಿ ಉರಿಯುತ್ತಿರುವ ಸುದ್ದಿ ಕೇಳಿ ಅಗ್ನಿಶಾಮಕ ಸಿಬ್ಬಂದಿ ಅಲ್ಲಿಗೆ ಧಾವಿಸಿದರು. ತಮ್ಮ ರಕ್ಷಣಾ ತಂತ್ರಗಳ ಮೂಲಕ ವಾಹನದ ಬೆಂಕಿ ಆರಿಸಿದರು. ಈ ವೇಳೆ ಆ ವಾಹನದಲ್ಲಿ ಯಾರೂ ಇಲ್ಲದ ಕಾರಣ ಜೀವ ಹಾನಿ ಸಂಭವಿಸಲಿಲ್ಲ. ಟ್ರಾಫಿಕ್ ಪೊಲೀಸ್ ಠಾಣೆಯ ಪಿಎಸ್‌ಐ ಶ್ರೀಕಾಂತ ರಾಥೋಡ್ ಅವರು ಸ್ಥಳಕ್ಕೆ ದೌಡಾಯಿಸಿ ಬಂದರು. ಸಂಚಾರ ದಟ್ಟಣೆ ಹೆಚ್ಚಾಗುತ್ತಿರುವುದನ್ನು ನೋಡಿ ಅದನ್ನು ಪೊಲೀಸರು ನಿಯಂತ್ರಿಸಿದರು. - [ನೇಪಾಳದಲ್ಲಿ ನಡೆದ ಸ್ಪರ್ಧೆ: ಧನಗರ ಗೌಳಿ ಮಕ್ಕಳ ಸಾಧನೆ](https://mobiletime.in/2025/11/competition-held-in-nepal-achievements-of-dhangarh-gowli-children/): ನೇಪಾಳದ ಪೊಖರಾ ನಗರದಲ್ಲಿ ನಡೆದ `ಇಂಡೋ-ನೇಪಾಳ್ ಇಂಟರನ್ಯಾಶನಲ್ ಸರಣಿ-2025’ರಲ್ಲಿ ಧನಗರ ಗೌಳಿ ಸಮುದಾಯದ ಮೋತಿರಾಮ್ ಗಂಗಾರಾಮ ಗುರ್ಖೆ ಹಾಗೂ ಕೃಷ್ಣ ಗಂಗಾರಾಮ ಗುರ್ಖೆ ಅವರು ಗಮನಾರ್ಹ ಸಾಧನೆ ಮಾಡಿದ್ದಾರೆ. ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿದ ಅವರು ಪ್ರತಿಷ್ಠಿತ ಪ್ರಮಾಣ ಪತ್ರವನ್ನು ತಮ್ಮದಾಗಿಸಿಕೊಂಡಿದ್ದಾರೆ. ಮೋತಿರಾಮ್ ಗಂಗಾರಾಮ ಗುರ್ಖೆ ಹಾಗೂ ಕೃಷ್ಣ ಗಂಗಾರಾಮ ಗುರ್ಖೆ ಅವರು ಬೆಳಗಾವಿ ಜಿಲ್ಲೆಯ ಖಾನಾಪುರದ ಬಾಳಗುಂದ ಗ್ರಾಮದವರಾಗಿದ್ದಾರೆ. ಹಿಂದುಳಿದ ವರ್ಗದವರಾಗಿದ್ದರೂ ಉನ್ನತ ಮಟ್ಟದ ಸಾಧನೆ ಮಾಡಿದಕ್ಕಾಗಿ ಯಲ್ಲಾಪುರದ ಮದನೂರು ಗ್ರಾಮ ಪಂಚಾಯತ ಸದಸ್ಯ ಲಕ್ಷ್ಮಣ ಥೋರತ್ ಅವರು ಆ ಸಾಧಕರನ್ನು ಅಭಿನಂದಿಸಿದ್ದಾರೆ. `ಅತ್ಯಂತ ಹಿಂದುಳಿದ ಪ್ರದೇಶದವರಾದ ಅವರಿಬ್ಬರು ವನವಾಸಿಗಳಾಗಿದ್ದು, ತಮ್ಮ ಪ್ರತಿಭೆ ಮೂಲಕ ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ’ ಎಂದು ಅವರು ಸಂತಸವ್ಯಕ್ತಪಡಿಸಿದ್ದಾರೆ.. `ಇಂಥ ಪ್ರತಿಭೆಗಳು ಇನ್ನಷ್ಟು ಹೆಚ್ಚಿನ ಪ್ರಮಾಣದಲ್ಲಿ ಹೊರಹೊಮ್ಮಬೇಕು’ ಎಂದು ಅವರು ಆಶಿಸಿದ್ದಾರೆ. ಮೋತಿರಾಮ್ ಗಂಗಾರಾಮ ಗುರ್ಖೆ ಮತ್ತು ಕೃಷ್ಣ ಗಂಗಾರಾಮ ಗುರ್ಖೆ ಅವರು ಈ ಹಿಂದೆ ಹರಿಯಾಣದಲ್ಲಿ ನಡೆದ 3ನೇ ರಾಷ್ಟ್ರೀಯ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸಿ ಚಿನ್ನದ ಪದಕ ಗೆದ್ದಿದ್ದರು. ಅದೇ ಆಧಾರದಲ್ಲಿ ಅವರು ನೇಪಾಳದಲ್ಲಿ ನಡೆದ ಸ್ಪರ್ಧೆಯಲ್ಲಿ ಭಾಗವಹಿಸಿದ್ದು, ಅಲ್ಲಿಯೂ ಗಮನಾರ್ಹ ಸಾಧನೆ ಮಾಡಿದ್ದಾರೆ. - [ಉದ್ಯೋಗ ಅವಕಾಶ: ಮೂರು ಹುದ್ದೆಗಳ ನೇಮಕಾತಿ ಪ್ರಕಟಣೆ](https://mobiletime.in/2025/11/job-opportunity-recruitment-announcement-for-four-posts/): ಕಟ್ಟಡ ನಿರ್ಮಾಣ, ವಿನ್ಯಾಸ ಹಾಗೂ ನೀಲ ನಕ್ಷೆ ರಚನೆ ವಿಷಯದಲ್ಲಿ ಶ್ರಮಿಸುತ್ತಿರುವ ಯಲ್ಲಾಪುರದ NMP Construction and Interior ಹಲವು ಉದ್ಯೋಗ ಅವಕಾಶಗಳಿಗೆ ಅರ್ಜಿ ಕರೆದಿದೆ. 2010ರಲ್ಲಿ ಶುರುವಾದ ಈ ಕಂಪನಿ ಈವರೆಗೆ ನೂರಾರು ಕಟ್ಟಡಗಳ ನಿರ್ಮಾಣದಲ್ಲಿ ಪ್ರಮುಖ ಪಾತ್ರವಹಿಸಿದ್ದು, ಈ ಕಂಪನಿ ಜೊತೆ ಕೈ ಜೋಡಿಸಿ ದುಡಿಯುವವ ಅರ್ಹ ಅಭ್ಯರ್ಥಿಗಳಿಗಾಗಿ ಹುಡುಕಾಟ ನಡೆದಿದೆ. ಸದ್ಯ ಇಲ್ಲಿ ಪ್ರಮುಖ ಮೂರು ಹುದ್ದೆಗಳಿಗೆ ಅಭ್ಯರ್ಥಿಗಳು ಬೇಕಾಗಿದ್ದಾರೆ. ಬಿಇ/ಡಿಪ್ಲೊಮಾ ಪೂರೈಸಿದ ಪುರುಷ ಅಭ್ಯರ್ಥಿಯನ್ನು ಇಲ್ಲಿ ಸಿವಿಲ್ ಸೈಟ್ ಎಂಜಿನಿಯರ್ ಆಗಿ ನೇಮಿಸಿಕೊಳ್ಳಲಾಗುತ್ತದೆ. ಕ್ಷೇತ್ರ ಭೇಟಿ, ಅಧ್ಯಯನ ವಿಷಯವಾಗಿ ಆಸಕ್ತಿಯಿದ್ದವರು ಈ ಹುದ್ದೆಗೆ ಅರ್ಹರು. ಬಿಇ/ಡಿಪ್ಲೊಮಾ ಪೂರೈಸಿದ ಮಹಿಳಾ ಅಭ್ಯರ್ಥಿಯನ್ನು ಸಿವಿಲ್ ಪ್ಲ್ಯಾನಿಂಗ್ ಎಂಜಿನಿಯರ್ ಹುದ್ದೆಗೆ ನೇಮಿಸಿಕೊಳ್ಳಲಾಗುತ್ತದೆ. ಸಿವಿಲ್ ಪ್ಲ್ಯಾನಿಂಗ್ ಎಂಜಿನಿಯರ್ ಹುದ್ದೆಗೆ ಆಯ್ಕೆಯಾದವರಿಗೆ ಕಚೇರಿಯಲ್ಲಿಯೇ ಕೆಲಸವಿರುತ್ತದೆ. ಸಿವಿಲ್ ಪ್ಲ್ಯಾನಿಂಗ್ ಎಂಜಿನಿಯರ್ ಹುದ್ದೆ ಬಯಸುವವರಿಗೆ CAD ಮತ್ತು ಎಕ್ಸೆಲ್‌ ಅನುಭವ ಕಡ್ಡಾಯ. CAD, SketchUp / 3ds Max (3D ಡಿಸೈನಿಂಗ್)  ಅನುಭವವಿರುವ ಪುರುಷ ಅಥವಾ ಮಹಿಳಾ ಅಭ್ಯರ್ಥಿಗೆ ಕಚೇರಿ ಕೆಲಸದ ಸಿವಿಲ್ ಪ್ಲ್ಯಾನಿಂಗ್ ಎಂಜಿನಿಯರ್ ಹುದ್ದೆಗಾಗಿ ನೇಮಕಾತಿ ಮಾಡಿಕೊಳ್ಳಲಾಗುತ್ತದೆ. ಇನ್ನಷ್ಟು ಮಾಹಿತಿಗೆ ಇಲ್ಲಿ ಫೋನ್ ಮಾಡಿ: 8762072547  ಅಥವಾ  9113651977   ಅಥವಾ ಇಲ್ಲಿ ಭೇಟಿ ಕೊಡಿ: ಹಂಸ ಕಾಂಪ್ಲೆಕ್ಸ್, ಕೆಇಬಿ ರಸ್ತೆ ಯಲ್ಲಾಪುರ, ಉತ್ತರ ಕನ್ನಡ   #Sponsored - [ಜನಗಣತಿ: ಪ್ರಾಯೋಗಿಕ ಪರೀಕ್ಷೆಗೆ ಜೊಯಿಡಾ ಆಯ್ಕೆ](https://mobiletime.in/2025/11/census-zoida-selection-for-practical-test/): ಕರ್ನಾಟಕದ ಮೂರು ತಾಲೂಕುಗಳನ್ನು ಪ್ರಾಯೋಗಿಕ ಜನ ಗಣತಿಗೆ ಆಯ್ಕೆ ಮಾಡಲಾಗಿದ್ದು, ಅದರಲ್ಲಿ ಉತ್ತರ ಕನ್ನಡ ಜಿಲ್ಲೆಯ ಜೊಯಿಡಾವೂ ಸೇರಿದೆ. 2027ರ ಜನಗಣತಿ ಪ್ರಾಯೋಗಿಕ ಪೂರ್ವ ಪರೀಕ್ಷೆ ಅಂಗವಾಗಿ ನ 10ರಿಂದ 30ರವರೆಗೆ ಪೂರ್ವ ಪರೀಕ್ಷೆ ಮನೆ ಪಟ್ಟಿ ಕಾರ್ಯ ನಡೆಸಲಾಗುತ್ತಿದೆ. ಜೊಯಿಡಾದ 46 ಗ್ರಾಮಗಳ 68 ಬ್ಲಾಕ್‌ಗಳಲ್ಲಿ ಈ ಕೆಲಸ ನಡೆಯಲಿದೆ. ಇದಕ್ಕಾಗಿ ಒಟ್ಟು 71 ಗಣತಿದಾರರು, 13 ಮೇಲ್ವಿಚಾರಕರಿಗೆ ತರಬೇತಿ ನೀಡಲಾಗಿದೆ. ಈ ಪ್ರಯೋಗ ಭಾರತದಲ್ಲಿ ಮೊದಲ ಡಿಜಿಟಲ್ ಜನಗಣತಿ ನಡೆಸುವಲ್ಲಿ ಮಹತ್ವದ ಹೆಜ್ಜೆ ಎಂದು ಪರಿಗಣಿಸಲಾಗಿದೆ. ಮೊಬೈಲ್ ಆ್ಯಪ್ ಮೂಲಕ ಮಾಹಿತಿ ಸಂಗ್ರಹಿಸುವ ವ್ಯವಸ್ಥೆ ಇದಾಗಿದ್ದು, ಸೀಮಿತ ನೆಟ್ವರ್ಕ್ ಇರುವ ಸ್ಥಳಗಳಲ್ಲಿ ಡಿಜಿಟಲ್ ಆ್ಯಪ್ ಕಾರ್ಯ ನಿರ್ವಹಣೆ, ದಕ್ಷತೆ ಅರಿಯುವುದು ಈ ಪ್ರಾಯೋಗಿಕ ಪರೀಕ್ಷೆಯ ಉದ್ದೇಶವಾಗಿದೆ. `ಈ ಪೂರ್ವ ಪರೀಕ್ಷೆ ವೇಳೆ ಸಂಗ್ರಹಿಸಲಾದ ಮಾಹಿತಿಯು ಸಂಪೂರ್ಣ ವ್ಯವಸ್ಥೆಯ ಮೌಲ್ಯಮಾಪನ ಉದ್ದೇಶಕ್ಕಷ್ಟೇ ಇರುತ್ತದೆ. ಅಧಿಕೃತ ಜನಗಣತಿ ಮಾಹಿತಿ ಸಂಗ್ರಹ ಭಾಗವಾಗಿರುವುದಿಲ್ಲ. ಸಾರ್ವಜನಿಕ ಭಾಗವಹಿಸುವಿಕೆ ಉತ್ತೇಜಿಸಲು ಈ ಕ್ರಮ ಆಗಲಿದೆ’ ಎಂದು ಜೊಯಿಡಾ ಮಂಜುನಾಥ್ ಮುನ್ನೊಳ್ಳಿ ಅವರು ಹೇಳಿದ್ದಾರೆ. - [2025 ನವೆಂಬರ್ 8ರ ದಿನ ಭವಿಷ್ಯ](https://mobiletime.in/2025/11/prediction-for-november-8-2025/): ಮೇಷ ರಾಶಿ: ಹೊಸ ಅವಕಾಶಗಳು ನಿಮ್ಮನ್ನು ಅರೆಸಿ ಬರಲಿದೆ. ಧೈರ್ಯದಿಂದ ಕಾರ್ಯ ನಿರ್ವಹಿಸಿದರೆ ಸಕಾರಾತ್ಮಕ ಫಲ ಸಿಗಲಿದೆ. ಆರೋಗ್ಯ ಮತ್ತು ಹಣಕಾಸು ಸುಧಾರಣೆ ಆಗಲಿದೆ. ವೃಷಭ ರಾಶಿ: ಜೀವನದಲ್ಲಿ ಒಳ್ಳೆಯ ಬೆಳವಣಿಗೆ ಸಾಧ್ಯವಿದೆ. ಸ್ನೇಹಿತರ ಸಹಕಾರ ನಿಮ್ಮನ್ನು ಮುನ್ನಡೆಸುತ್ತದೆ. ವ್ಯಾಪಾರದಲ್ಲಿ ಲಾಭ ಸಿಗಲಿದೆ. ಮಿಥುನ ರಾಶಿ: ಹೊಸ ವಿಚಾರಗಳಲ್ಲಿ ವಿಜಯ ಸಿಗಲಿದೆ. ದೊಡ್ಡ ನಿರ್ಧಾರಗಳು ಈಡೇರಲಿದೆ. ನಿಮ್ಮ ಅನುಭವ ಕಠಿಣ ಕೆಲಸದಲ್ಲಿ ಯಶಸ್ಸಿಗೆ ಕಾರಣವಾಗಲಿದೆ. ಕರ್ಕ ರಾಶಿ: ದೈಹಿಕ ಚಟುವಟಿಕೆಗಳಲ್ಲಿ ತೊಡಗುವಿರಿ. ಕುಟುಂಬ ಸಮಸ್ಯೆಗಳು ಬಗೆಹರಿಯುತ್ತದೆ. ಆರೋಗ್ಯ ಉತ್ತಮವಾಗಿರುತ್ತದೆ. ಸಿಂಹ ರಾಶಿ: ತಾಳ್ಮೆ ಹಾಗೂ ಧೈರ್ಯದಿಂದ ಮುನ್ನಡೆಯಿರಿ. ಕುಟುಂಬದವರ ಜೊತೆ ಸಮಯ ಕಳೆಯಿರಿ. ನೀವು ಮಾಡುವ ಕೆಲಸದಿಂದ ಪ್ರಸಿದ್ಧಿಗೆ ಬರುವಿರಿ. ಕನ್ಯಾ ರಾಶಿ: ನಿಮ್ಮ ಶ್ರಮಕ್ಕೆ ಫಲ ಸಿಗುತ್ತದೆ. ಮನಸ್ಸಿಗೆ ಶಾಂತಿ ಮತ್ತು ಆನಂದ ದೊರೆಯಲಿದೆ. ಸಂವಹನ ವಿಷಯದಲ್ಲಿ ಸ್ಪಷ್ಟತೆ ಮುಖ್ಯ. ತುಲಾ: ಸ್ನೇಹ ಮತ್ತು ಸಂಬoಧಗಳಲ್ಲಿ ಸುಧಾರಣೆ ಆಗಲಿದೆ. ಕಾರ್ಯಕ್ಷೇತ್ರದಲ್ಲಿ ಹೊಸ ಅವಕಾಶ ಸಿಗಲಿದೆ. ಧನ ಸಂಪಾದನೆ ಸಾಧ್ಯವಿದೆ. ಕುಟುಂಬದಲ್ಲಿ ಸಂತೋಷ ಕಾಣಲು ಸಾಧ್ಯ. ವೃಶ್ಚಿಕ ರಾಶಿ: ಶಕ್ತಿ ಮತ್ತು ಆತ್ಮವಿಶ್ವಾಸ ಹೆಚ್ಚಳವಾಗಲಿದೆ. ಉದ್ಯೋಗದಲ್ಲಿ ಉತ್ತೇಜನ ಸಿಗಲಿದೆ. ಆರೋಗ್ಯದ ಬಗ್ಗೆ ಜಾಗೃತಿಯಿರಲಿ. ಹೊಸ ಗೆಳೆಯರನ್ನು ಭೇಟಿ ಮಾಡುವ ಸಾಧ್ಯತೆಯಿದೆ. ಧನು ರಾಶಿ: ವ್ಯಾಪಾರದಲ್ಲಿ ಲಾಭ ಸಿಗಲಿದೆ. ನಿಮ್ಮ ಯೋಜನೆಗಳು ಯಶಸ್ವಿಯಾಗುತ್ತವೆ. ಮನಸ್ಸಿನ ಒತ್ತಡ ಕಡಿಮೆ ಮಾಡುವುದು ಮುಖ್ಯ. ಶಿಕ್ಷಣ ಕ್ಷೇತ್ರದಲ್ಲಿ ಯಶಸ್ಸು ಸಿಗಲಿದೆ. ಮಕರ ರಾಶಿ: ಕಾರ್ಯ ಮಟ್ಟದಲ್ಲಿ ಯಶಸ್ಸು ಸಾಧ್ಯವಿದೆ. ಹಣಕಾಸಿನ ಲಾಭ ಆಗಲಿದೆ. ನಿಮ್ಮ ಮನಸ್ಸು ನೆಮ್ಮದಿಯನ್ನು ಅರೆಸಲಿದೆ. ಕುಂಭ ರಾಶಿ: ಸೃಜನಶೀಲತೆ ಹಾಗೂ ಹೊಸ ಆಲೋಚನೆಗಳಿಗೆ ಅವಕಾಶ ಕೂಡಿಬರಲಿದೆ. ಆರೋಗ್ಯದ ಬಗ್ಗೆ ಎಚ್ಚರಿಕೆ ಅಗತ್ಯ. ಮನಸ್ಸಿಗೆ ನೆಮ್ಮದಿ ಸಿಗುವ ಕೆಲಸ ಮಾಡಿ. ಮೀನ ರಾಶಿ: ಭಾವನಾತ್ಮಕವಾಗಿ ಗಟ್ಟಿ ನಿರ್ಧಾರ ಮಾಡಿ. ಮಾನಸಿಕ ಒತ್ತಡಗಳನ್ನು ದೂರ ಮಾಡಲು ಪ್ರಯತ್ನಿಸಿ. ಸ್ನೇಹಿತರಿಂದ ಸಹಾಯ ಸಿಗಲಿದೆ. ಹೊಸ ಚಟುವಟಿಕೆಗಳು ತೆರೆದುಕೊಳ್ಳಲಿದೆ. - [ಕುಳಿತ ಸ್ಥಳದಲ್ಲಿಯೇ ಕೊನೆಯುಸಿರೆಳೆದ ಲಾರಿ ಚಾಲಕ](https://mobiletime.in/2025/11/lorry-driver-dies-while-sitting-on-the-road/): ದಾಂಡೇಲಿಯ ಕೆಸಿ ವೃತ್ತದ ಬಳಿ ಶುಕ್ರವಾರ ಮಧ್ಯಾಹ್ನ ತಮಿಳುನಾಡಿನ ಲಾರಿ ಚಾಲಕ ಮುರ್ಗನ್ ಪಚ್ಚಪ್ಪನ್ ಅವರು ಸಾವನಪ್ಪಿದ್ದಾರೆ. ಮುರ್ಗನ್ ಪಚ್ಚಪ್ಪನ್ ಅವರು ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯವರಾಗಿದ್ದರು. ಅವರು ಲಾರಿಯಲ್ಲಿ ಕಾಗದ ಕಾರ್ಖಾನೆಗೆ ಕಚ್ಚಾ ವಸ್ತುಗಳನ್ನು ಹೊತ್ತು ತಂದಿದ್ದರು. ಮಧ್ಯಾಹ್ನ ಅಂಗಡಿ ಮಳಿಗೆಯ ಮೆಟ್ಟಿಲಿನ ಮೇಲೆ ಕುಳಿತುಕೊಂಡಿದ್ದರು. ಕುಳಿತ ಸ್ಥಳದಲ್ಲಿಯೇ ಅವರು ಹೃದಯಘಾತವಾಗಿ ಸಾವನಪ್ಪಿದ್ದಾರೆ. ಇದನ್ನು ನೋಡಿದ ಜನ ಪೊಲೀಸರಿಗೆ ಮಾಹಿತಿ ನೀಡಿದರು. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. - [ಸೈಲ್'ಗೆ ಶುರುವಾದ ಸಂಕಷ್ಟ!](https://mobiletime.in/2025/11/sails-troubles-have-begun/): ಕಾರವಾರ ವಿಧಾನಸಭಾ ಕ್ಷೇತ್ರದ ಶಾಸಕ ಸತೀಶ್ ಸೈಲ್ ಅವರಿಗೆ ಜನಪ್ರತಿನಿಧಿಗಳ ನ್ಯಾಯಾಲಯ ನೀಡಿದ್ದ ಜಾಮೀನು ರದ್ಧಾಗಿದೆ. ಹೀಗಾಗಿ ಸತೀಶ್ ಸೈಲ್ ಮತ್ತೆ ಸಂಕಷ್ಟದ ಸುಳಿಗೆ ಸಿಲುಕಿದ್ದಾರೆ. ಬೆಲೇಕೇರಿ ಅದಿರು ನಾಪತ್ತೆ ಪ್ರಕರಣದ ಅಂಗವಾಗಿ ಸತೀಶ್ ಸೈಲ್ ಜೈಲು ವಾಸ ಅನುಭವಿಸಿದ್ದರು. ಸದ್ಯ ಅವರು ಮಧ್ಯಂತರ ಜಾಮೀನುಪಡೆದು ಹೊರ ಬಂದಿದ್ದರು. ಈ ನಡುವೆ ಸತೀಶ್ ಸೈಲ್ ಅವರ ಮನೆ ಮೇಲೆ ವಿವಿಧ ತನಿಖಾ ತಂಡದವರು ದಾಳಿ ನಡೆಸಿದ್ದರು. ಆಗ, ಲಕ್ಷಾಂತರ ರೂ ಮೌಲ್ಯದ ಚಿನ್ನಾಭರಣ ಮತ್ತು ನಗದು ಪತ್ತೆಯಾಗಿತ್ತು. ಆರೋಗ್ಯ ಸಮಸ್ಯೆ ಕಾರಣದಿಂದ ಸತೀಶ್ ಸೈಲ್ ಜಾಮೀನುಪಡೆದಿದ್ದರು. ಅಕ್ಟೋಬರ್ 25ರವರೆಗೆ ಅವರಿಗೆ ಮಧ್ಯಂತರ ಜಾಮೀನು ಸಿಕ್ಕಿದ್ದು, ನಂತರ, ಜಾಮೀನು ಅವಧಿ ವಿಸ್ತರಣೆಗಾಗಿ ಸಲ್ಲಿಸಿದ ಮನವಿಯನ್ನು ಜನಪ್ರತಿನಿಧಿಗಳ ನ್ಯಾಯಾಲಯ ನವೆಂಬರ್ 7ರವರೆಗೆ ಮಾನ್ಯ ಮಾಡಿತ್ತು. ಇದೀಗ ಆ ಮಧ್ಯಂತರ ಜಾಮೀನು ರದ್ದಾಗಿದೆ. - [ಮೂವರನ್ನು ಕೊಂದ ಮಂಗನ ಕಾಯಿಲೆ!](https://mobiletime.in/2025/11/monkey-disease-kills-three-people/): ಪ್ರತಿ ವರ್ಷದಂತೆ ಈ ವರ್ಷವೂ ಉತ್ತರ ಕನ್ನಡ ಜಿಲ್ಲೆಗೆ ಮಂಗನ ಕಾಯಿಲೆ ವಕ್ಕರಿಸಿದೆ.  ಈವರೆಗೆ 9 ಮಂಗನ ಕಾಯಿಲೆ ಪ್ರಕರಣಗಳು ವರದಿಯಾಗಿದೆ. ಆ ಪೈಕಿ ಮೂವರು ಈ ರೋಗದಿಂದ ಸಾವನಪ್ಪಿದ್ದಾರೆ. `ಮಂಗನ ಕಾಯಿಲೆ ನಿಯಂತ್ರಣಕ್ಕೆ ಎಲ್ಲಾ ರೀತಿಯಲ್ಲಿಯೂ ಕ್ರಮ ಜರುಗಿಸಬೇಕು’ ಎಂದು ಡೀಸಿ ಕೆ ಲಕ್ಷ್ಮೀಪ್ರಿಯಾ ಅವರು ಆರೋಗ್ಯ ಇಲಾಖೆಗೆ ಸೂಚನೆ ನೀಡಿದ್ದಾರೆ. `ಕಾಯಿಲೆಯಿಂದ ರಕ್ಷಿಸಿಕೊಳ್ಳುವ ವಿಧಾನದ ಬಗ್ಗೆ ಜನರಲ್ಲಿ ಅರಿವು ಮೂಡಿಸಬೇಕು. ಅಗತ್ಯವಿರುವುಷ್ಟು ಪ್ರಮಾಣದಲ್ಲಿ ಡೇಪಾ ತೈಲ ದಾಸ್ತಾನು ಮಾಡಿಕೊಳ್ಳಬೇಕು’ ಎಂದವರು ನಿರ್ದೇಶನ ನೀಡಿದ್ದಾರೆ. ಶುಕ್ರವಾರ ಆರೋಗ್ಯ ಇಲಾಖೆಯ ವಿವಿಧ ಸಮಿತಿಗಳ ಸಭೆ ನಡೆಸಿದ ಅವರು ಗರ್ಭಿಣಿಯರ ಆರೈಕೆಯ ಬಗ್ಗೆ ವಿಚಾರಿಸಿದರು. `ಪ್ರಸವ ಪೂರ್ವದಲ್ಲಿ ಗರ್ಭಿಣಿಯರ ಆರೈಕೆ ಕುರಿತಂತೆ ಆಶಾ ಕಾರ್ಯಕರ್ತೆಯರ ಮೂಲಕ ಹೆಚ್ಚಿನ ಅರಿವು ಮೂಡಿಸಬೇಕು. ತಾಯಿ ಕಾರ್ಡಿನ ಪ್ರಯೋಜನ ಮತ್ತು ಆರೋಗ್ಯ ಇಲಾಖೆಯಿಂದ ದೊರೆಯುವ ಸೌಲಭ್ಯಗಳ ಬಗ್ಗೆ ಗರ್ಭಿಣಿಯರಿಗೆ ವಿವರಿಸಬೇಕು. ನವಜಾತು ಶಿಶು ಮರಣ ತಪ್ಪಿಸಲು ಪ್ರಸವದ ನಂತರ ಶಿಶುವಿನ ಆರೈಕೆ ವಿಧಾನಗಳ ಕುರಿತು ಅರಿವು ಮೂಡಿಸಬೇಕು’ ಎಂದು ಸೂಚಿಸಿದರು. `ನವೆಂಬರ್ 11ರಿಂದ ಡಿಸೆಂಬರ್ 9ರವರೆಗೆ ಕುಷ್ಠರೋಗ ಪ್ರಕರಣ ಪತ್ತೆ ಹಚ್ಚುವ ಅಭಿಯಾನದ ಸರ್ವೆ ಕಾರ್ಯವನ್ನು ನಡೆಸಬೇಕು’ ಎಂದು ಸೂಚಿಸಿದರು. - [ತಂಬಾಕು ತ್ಯಜಿಸಿ.. ವಿದ್ಯಾರ್ಥಿಗಳನ್ನು ರಕ್ಷಿಸಿ](https://mobiletime.in/2025/11/search-for-students-who-use-tobacco/): `ತಂಬಾಕು ಸೇವಿಸುವ ವಿದ್ಯಾರ್ಥಿಗಳನ್ನು ಕಂಡು ಬಂದಲ್ಲಿ ಅವರು ದುಶ್ಚಟದಿಂದ ಹೊರಬರುವ ಹಾಗೇ ಮಾಡಬೇಕು’ ಎಂದು ಜಿಲ್ಲಾಧಿಕಾರಿ ಕೆ ಲಕ್ಷ್ಮೀಪ್ರಿಯಾ ಅವರು ಅಧೀನ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಆರೋಗ್ಯ, ಶಿಕ್ಷಣ, ಸ್ಥಳೀಯ ಸಂಸ್ಥೆ ಹಾಗೂ ಪೊಲೀಸರು ಜಂಟಿಯಾಗಿ ಶಾಲೆ ಹಾಗೂ ಕಾಲೇಜು ಸಮೀಪ ತಂಬಾಕು ಉತ್ಪನ್ನಗಳ ಮಾರಾಟ ಮಾಡುವವರ ವಿರುದ್ಧ ಕಠಿಣ ಕ್ರಮ ಜರುಗಿಸುವಂತೆ ಅವರು ನಿರ್ದೇಶನ ನೀಡಿದ್ದಾರೆ. ಸರ್ಕಾರಿ ಕಚೇರಿಯಲ್ಲಿಯೂ ತಂಬಾಕು ಸೇವನೆ ವಿಷಯವಾಗಿ ಮಾತನಾಡಿದ ಅವರು `ಕಚೇರಿಯ ಮುಖ್ಯಸ್ಥರು ತಂಬಾಕು ನಿಯಂತ್ರಿಸುವ ಬಗ್ಗೆ ಕ್ರಮ ಜರುಗಿಸಬೇಕು’ ಎಂದು ಸೂಚಿಸಿದ್ದಾರೆ. `ಶಾಲಾ ಕಾಲೇಜು ವ್ಯಾಪ್ತಿಯಲ್ಲಿ ತಂಬಾಕು ಪದಾರ್ಥಗಳ ಮಾರಾಟವನ್ನು ಕಟ್ಟುನಿಟ್ಟಾಗಿ ನಿಯಂತ್ರಿಸಬೇಕು. ನಿರಂತರವಾಗಿ ಪರಿಶೀಲನೆ ನಡೆಸುವ ಮೂಲಕ ವಿದ್ಯಾರ್ಥಿಗಳು ಈ ದುಶ್ಟಟಕ್ಕೆ ಬಲಿಯಾಗದಂತೆ ಎಚ್ಚರವಹಿಸಬೇಕು. ತಂಬಾಕು ಉತ್ಪನ್ನಗಳ ಬಳಕೆಯ ದುಷ್ಪರಿಣಾಮಗಳ ಕುರಿತಂತೆ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಅರಿವು ಮೂಡಿಸಬೇಕು’ ಎಂದವರು ಸೂಚಿಸಿದರು. `ಪ್ರಸಕ್ತ ಸಾಲಿನ ಅಕ್ಟೋಬರ್ ಜಿಲ್ಲೆಯಲ್ಲಿ ಕೋಟ್ಪಾ ಅಡಿಯಲ್ಲಿ 675 ಪ್ರಕರಣ ದಾಖಲಿಸಿ ರೂ 88,900 ದಂಡ ಸಂಗ್ರಹಿಸಲಾಗಿದೆ’ ಎಂದು ಅಧಿಕಾರಿಗಳು ಮಾಹಿತಿ ನೀಡಿದರು. `ಎಲ್ಲಾ ತಾಲೂಕುಗಳಲ್ಲಿ ತಂಬಾಕು ಉತ್ಪನ್ನಗಳ ಮಾರಾಟಕ್ಕೆ ಕಡ್ಡಾಯವಾಗಿ ಪ್ರತ್ಯೇಕ ವ್ಯಾಪಾರ ಪರವಾನಗೆಪಡೆಯುವುದು ಅಗತ್ಯ. ಷರತ್ತುಗಳನ್ನು ಪಾಲಿಸಿರುವ ಕುರಿತು ಕಟ್ಟುನಿಟ್ಟಿನ ಪರಿಶೀಲನೆ ನಡೆಸಿ, ಉಲ್ಲಂಘನೆ ಕಂಡು ಬಂದಲ್ಲಿ ಪರವಾನಿಗೆ ರದ್ದುಪಡಿಸಬೇಕು’ ಎಂದು ಡೀಸಿ ಸೂಚಿಸಿದರು. - [ಸ್ಥಳೀಯ ಸಂಸ್ಥೆ: ಜನಪ್ರತಿನಿಧಿಗಳ ಅಧಿಕಾರಕ್ಕೆ ಸರ್ಕಾರದ ತಡೆ!](https://mobiletime.in/2025/11/local-body-governments-obstruction-of-the-power-of-peoples-representatives/): ಉತ್ತರ ಕನ್ನಡ ಜಿಲ್ಲೆಯ ಆರು ಸ್ಥಳೀಯ ಸಂಸ್ಥೆಗಳಿಗೆ ಆಡಳಿತಾಧಿಕಾರಿ ನೇಮಿಸಿ ಸರ್ಕಾರ ರಾಜ್ಯಪತ್ರ ಪ್ರಕಟಿಸಿದೆ. ಶಿರಸಿ ಹಾಗೂ ಕಾರವಾರ ನಗರಸಭೆಗೆ ಜಿಲ್ಲಾಧಿಕಾರಿ ಕೆ ಲಕ್ಷ್ಮೀಪ್ರಿಯಾ ಅವರು ಆಡಳಿತಾಧಿಕಾರಿಯಾಗಿ ನೇಮಕವಾಗಿದ್ದಾರೆ. ಇದರೊಂದಿಗೆ ಅಂಕೋಲಾ ಪುರಸಭೆಗೆ ಕುಮಟಾ ಉಪವಿಭಾಗಾಧಿಕಾರಿಗಳನ್ನು ಆಡಳಿತಾಧಿಕಾರಿಯಾಗಿ ಸರ್ಕಾರ ನೇಮಿಸಿದೆ. ಕುಮಟಾ ಪುರಸಭೆಗೆ ಸಹ ಕುಮಟಾದ ಉಪವಿಭಾಗಾಧಿಕಾರಿಗಳು ಆಡಳಿತಾಧಿಕಾರಿಗಳಾಗಿರಲಿದ್ದಾರೆ. ಭಟ್ಕಳ ಪುರಸಭೆಗೆ ಭಟ್ಕಳ ಉಪವಿಭಾಗಾಧಿಕಾರಿ ಹಾಗೂ ಹಳಿಯಾಳ ಪುರಸಭೆಗೆ ಕಾರವಾರ ಉಪವಿಭಾಗಾಧಿಕಾರಿಗಳನ್ನು ಆಡಳಿತಾಧಿಕಾರಿಯನ್ನಾಗಿ ನೇಮಕ ಮಾಡಲಾಗಿದೆ. ಈ ಸ್ಥಳೀಯ ಸಂಸ್ಥೆಗಳಲ್ಲಿದ್ದ ಜನಪ್ರತಿನಿಧಿಗಳ ಅಧಿಕಾರ ಅವಧಿ ಮುಕ್ತಾಯದ ಹಿನ್ನಲೆ ಸಕಾರ ವಿಶೇಷ ರಾಜ್ಯ ಪತ್ರ ಪ್ರಕಟಿಸಿದೆ. ಅದರಲ್ಲಿ ಆಡಳಿತ ಹಿತದೃಷ್ಠಿ ಹಾಗೂ ಕಚೇರಿಯ ದಿನನಿತ್ಯದ ಕಾರ್ಯ ನಿರ್ವಹಣೆಗಾಗಿ ಆಡಳಿತಾಧಿಕಾರಿಗಳನ್ನು ನೇಮಕ ಮಾಡಿರುವ ಬಗ್ಗೆ ಉಲ್ಲೇಖಿಸಿದೆ. - [ಯಾತ್ರಿ ನಿವಾಸದ ಲಿಪ್ಟ್ ಕುಸಿತ: ಇಬ್ಬರ ದುರ್ಮರಣ!](https://mobiletime.in/2025/11/two-killed-in-lift-collapse-at-yatri-residence/): ಮುರುಡೇಶ್ವರ ಕಾಮತ್ ಯಾತ್ರಿ ನಿವಾಸದ ಮಾಲಕ ವೆಂಕಟದಾಸ್ ಕಾಮತ್ ಅವರ ಮಾಲಕತ್ವದ ಕಟ್ಟಡದಲ್ಲಿ ಲಿಪ್ಟ್ ಹಾಳಾದ ಪರಿಣಾಮ ಅದರ ಅಡಿ ಸಿಲುಕಿ ಇಬ್ಬರು ಸಾವನಪ್ಪಿದ್ದಾರೆ. ಲಿಪ್ಟ್ ದುರಸ್ಥಿಗೆ ಬಂದಿದ್ದ ಪ್ರಭಾಕರ ಶೆಟ್ಟಿ ಹಾಗೂ ಅವರ ಸಹಾಯಕ ಬಾಬು ಪೂಜಾರಿ ಅದೇ ಲಿಪ್ಟಿನ ಅಡಿಗೆ ಬಿದ್ದು ಕೊನೆಯುಸಿರೆಳೆದಿದ್ದಾರೆ. ಮುರುಡೇಶ್ವರ ಕಾಮತ್ ಯಾತ್ರಿ ನಿವಾಸದ ಮಾಲಕ ವೆಂಕಟದಾಸ್ ಕಾಮತ್ ಅವರು ತಮ್ಮ ಒಡೆತನದಲ್ಲಿರುವ ಭೂಮಿಯಲ್ಲಿ ಇನ್ನೊಂದು ಕಟ್ಟಡ ನಿರ್ಮಿಸುತ್ತಿದ್ದರು. ಆ ಕಟ್ಟಡದ ಲಿಪ್ಟ್ ಮೋಟಾರ್ ಹಾಳಾಗಿದ್ದ ಕಾರಣ ಅದನ್ನು ಸರಿಪಡಿಸಲು ಎಲೆಕ್ಟಿಶಿಯನ್ ಕರೆದಿದ್ದರು. ಅದರ ಪ್ರಕಾರ ಅಕ್ಟೊಬರ್ 6ರಂದು ಭಟ್ಕಳ ಕಾಯ್ಕಿಣಿಯ ಬೆಕ್ಕಿನಕೆರೆ ದೇವಿಕಾನ್ ಬಳಿಯ ಪ್ರಭಾಕರ ಮುತ್ತಯ್ಯ ಶೆಟ್ಟಿ ಅವರು ಅಲ್ಲಿಗೆ ಹೋಗಿದ್ದರು. ದುರಸ್ಥಿ ಕೆಲಸದ ಸಹಾಯಕ್ಕಾಗಿ ಅವರು ಕುಂದಾಪುರದ ಬಾಬು ಮಡೂರ ಪೂಜಾರಿ ಅವರನ್ನು ಕರೆದೊಯ್ದಿದ್ದರು. ಪ್ರಭಾಕರ ಶೆಟ್ಟಿ ಹಾಗೂ ಬಾಬು ಪೂಜಾರಿ ಸೇರಿ Construction Mini Lift ಮೋಟಾರ್ ಸರಿಪಡಿಸಿದರು. ಆದರೆ, ಆ ಲಿಪ್ಟಿನ ಸೇಪ್ಟಿ ಲಾಕರ್ ಸಹ ಹಾಳಾಗಿದ್ದು, ಆ ವಿಷಯವನ್ನು ಕಟ್ಟಡ ಮಾಲಕ ವೆಂಕಟದಾಸ್ ಕಾಮತ್ ಅವರು ಯಾರಲ್ಲಿಯೂ ಹೇಳಿರಲಿಲ್ಲ. ಹೀಗಾಗಿ ಲಿಪ್ಟ್ ಮೋಟಾರ್ ಸರಿಪಡಿಸಿದ ಪ್ರಭಾಕರ ಶೆಟ್ಟಿ ಅವರು ಬಾಬು ಪೂಜಾರಿ ಅವರ ಜೊತೆ ಅದೇ ಲಿಪ್ಟಿನಲ್ಲಿ ಮೇಲ್ಮಹಡಿಯಿಂದ ಕೆಳಮಹಡಿಗೆ ಬರುತ್ತಿದ್ದರು. ಆಗ, ಆ ಲಿಪ್ಟ್ ತಿರುಚಿ ಬಿದ್ದಿದ್ದು ಆ ರಭಸಕ್ಕೆ ಅವರಿಬ್ಬರು ನೆಲಕ್ಕೆ ಅಪ್ಪಳಿಸಿದರು. ಲಿಪ್ಟ್ ಸಹ ಕಳಚಿ ಬಿದ್ದಿತು. ಈ ಅವಘಡದಲ್ಲಿ ಪ್ರಭಾಕರ ಶೆಟ್ಟಿ ಹಾಗೂ ಬಾಬು ಪೂಜಾರಿ ಅವರು ಗಂಭೀರ ಪ್ರಮಾಣದಲ್ಲಿ ಗಾಯಗೊಂಡರು. ಅವರನ್ನು ಮಣಿಪಾಲ ಕಸ್ತೂರಿಬಾ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ, ಅದರಿಂದ ಯಾವುದೇ ಪ್ರಯೋಜನ ಆಗಲಿಲ್ಲ. Construction Mini Lift ಕಂಪನಿಯ ದೋಷಯುಕ್ತ ಲಿಪ್ಟ್ ಹಾಗೂ ವೆಂಕಟದಾಸ್ ಕಾಮತ್ ಅವರು ಸುರಕ್ಷಿತ ಉಪಕರಣ ಒದಗಿಸಿದೇ ಕೆಲಸ ಮಾಡಿಸಿದ ಪರಿಣಾಮ ಅವರಿಬ್ಬರ ಜೀವ ಹೋಯಿತು. ಈ ಎಲ್ಲಾ ವಿಷಯಗಳ ಬಗ್ಗೆ ಪ್ರಭಾಕರ ಶೆಟ್ಟಿ ಅವರ ಪುತ್ರ ಶ್ರವಣ ಶೆಟ್ಟಿ ಅವರು ಮುರುಡೇಶ್ವರ ಪೊಲೀಸ್ ಠಾಣೆಯಲ್ಲಿ ವಿವರಿಸಿದರು. ಪೊಲೀಸರು Construction Mini Lift ಕಂಪನಿ ಹಾಗೂ ವೆಂಕಟದಾಸ್ ಕಾಮತ್ ಅವರ ವಿರುದ್ಧ ಪ್ರಕರಣ ದಾಖಲಿಸಿದರು. `ಅವಘಡ ತಪ್ಪಿಸಲು ಸುರಕ್ಷತೆಗೆ ಒತ್ತು ಕೊಡಿ’ - [ಕ್ಷಮೆ ಕೇಳದಿದ್ದರೆ ಹೋರಾಟ!](https://mobiletime.in/2025/11/if-you-dont-apologize-fight/): ಯಲ್ಲಾಪುರದ ಮಹಿಳೆಯೊಬ್ಬರು ಕನ್ನಡ ಬಾವುಟ ಅಳವಡಿಸಲು ತಕರಾರು ಸಲ್ಲಿಸಿದ ವಿಡಿಯೋ ನೋಡಿದ ಕರ್ನಾಟಕ ರಕ್ಷಣ ವೇದಿಕೆ (ಘಜಸೇನೆ) ಜಿಲ್ಲಾ ಅಧ್ಯಕ್ಷ ರಾಜೇಶ ನಾಯ್ಕ ಅವರು ಕಾರವಾರದಿಂದ ಯಲ್ಲಾಪುರಕ್ಕೆ ಆಗಮಿಸಿ ತಮ್ಮ ವಿರೋಧವ್ಯಕ್ತಪಡಿಸಿದ್ದಾರೆ. `ಆ ಮಹಿಳೆ ಕ್ಷಮೆ ಕೋರದಿದ್ದರೆ ಉಗ್ರ ಹೋರಾಟ ನಡೆಸುವುದು ಅನಿವಾರ್ಯ’ ಎಂದವರು ಎಚ್ಚರಿಸಿದ್ದಾರೆ. ಈ ವೇಳೆ ಕನ್ನಡ ಹೋರಾಟಗಾರರಿಗೆ `ಅದು ಒಂದು ವರ್ಷದ ಹಳೆಯ ವಿಡಿಯೋ’ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. `ಹಳೆಯ ವಿಡಿಯೋ ಆಗಿದ್ದರೂ ಕನ್ನಡ ಧ್ವಜಕ್ಕೆ ಅವಮಾನ ಮಾಡಿದ್ದು ಸರಿಯಲ್ಲ. ಅಂಥವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು’ ಎಂದು ಕನ್ನಡ ಹೋರಾಟಗಾರರು ಆಗ್ರಹಿಸಿದ್ದಾರೆ. `ಕನ್ನಡ ಕಾರ್ಯಕರ್ತರಿಗೆ ಸಹ ಈ ವಿದ್ಯಮಾನದಿಂದ ಅವಮಾನವಾಗಿದೆ. ಸಾರ್ವಜನಿಕವಾಗಿ ಮಹಿಳೆ ಕ್ಷಮೆ ಕೋರದೇ ಇದ್ದರೆ ಪೊಲೀಸ್ ದೂರು ದಾಖಲಿಸಲಾಗುತ್ತದೆ’ ಎಂದು ರಾಜೇಶ ನಾಯ್ಕ ಅವರು ಎಚ್ಚರಿಸಿದ್ದಾರೆ. ವೇದಿಕೆ ಉಪಾಧ್ಯಕ್ಷ ಸಂತೋಷ್ ನಾಟೆಕರ್ ಮತ್ತು ತಾಲೂಕು ಅಧ್ಯಕ್ಷ ಶಮಶುದ್ದಿನ್ ಮಾರ್ಕರ್ ಈ ವೇಳೆ ಇದ್ದರು. - [ವರ್ಗಾವಣೆಯಾದ ಶಿಕ್ಷಕಿಗೆ ಸನ್ಮಾನ-ಬೀಳ್ಗೊಡುಗೆ](https://mobiletime.in/2025/11/honorary-visit-to-transferred-teacher/): ಯಲ್ಲಾಪುರದ ಮಾದೇವಕೊಪ್ಪ ಶಾಲೆಯಲ್ಲಿ ಶಿಕ್ಷಕರಾಗಿದ್ದ ರೇಖಾ ಮಾಂಚ್ರೆಕರ್ ಅವರು ಅಲ್ಲಿಂದ ವರ್ಗವಾಗಿದ್ದಾರೆ. ಈ ಹಿನ್ನಲೆ ಊರಿನ ಜನ ಅವರನ್ನು ಸನ್ಮಾನಿಸಿ ಬೀಳ್ಕೊಟ್ಟಿದ್ದಾರೆ. 23 ವರ್ಷ ಶಿಕ್ಷಕ ಅನುಭವವಿರುವ ರೇಖಾ ಮಾಂಚ್ರೆಕರ್ ಅವರು ಕಳೆದ 18 ವರ್ಷಗಳಿಂದ ಮಾದೇವಕೊಪ್ಪ ಶಾಲೆಯ ಸೇವೆಯಲ್ಲಿದ್ದರು. ನೂರಾರು ವಿದ್ಯಾರ್ಥಿಗಳನ್ನು ತಿದ್ದಿ ಅವರ ಜೀವನ ರೂಪಿಸಿದ್ದರು. 2008ರಲ್ಲಿ ಮಾದೇವಕೊಪ್ಪ ಶಾಲೆಗೆ ಬಂದ ಅವರು ಮಕ್ಕಳಿಗೆ ಅಕ್ಷರ ಜ್ಞಾನ ಕಲಿಸುವುದರ ಜೊತೆ ಊರಿನ ಅಭಿವೃದ್ಧಿಗೂ ಶ್ರಮಿಸಿದ್ದರು. ಈ ಎಲ್ಲಾ ಹಿನ್ನಲೆ ಎಸ್‌ಡಿಎಂಸಿ ಅಧ್ಯಕ್ಷ ಸಾವು ಪಾಂಡ್ರಮಿಸೆ, ಗ್ರಾ ಪಂ ಸದಸ್ಯ ಲಕ್ಕು ದೋರತ್, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಬಮ್ಮು ಬಿಚುಕ್ಲೆ, ಶಾಲಾ ಮುಖ್ಯಾಧ್ಯಾಪಕಿ ಮಮತಾ ನಾಯಕ ಹಾಗೂ ಊರ ನಾಗರಿಕರು ಸೇರಿ ಅವರನ್ನು ಗೌರವಿಸಿದರು. ಊರಿನರು ಹಾಗೂ ಶಾಲೆಯ ಮಾಜಿ ವಿದ್ಯಾರ್ಥಿಗಳು ಅನಿಸಿಕೆ ಹಂಚಿಕೊoಡರು. - [ಅಡಿಕೆ ಕದ್ದ ಕಳ್ಳ ಎರಡೇ ದಿನದಲ್ಲಿ ಸಿಕ್ಕಿಬಿದ್ದ!](https://mobiletime.in/2025/11/the-thief-who-stole-the-nut-was-caught/): ಶಿರಸಿಯ ಭಾಸ್ಕರ ಬೋವಿವಡ್ಡರ್ ಹಾಗೂ ಯಲ್ಲಾಪುರದ ಹರುಷ ಬೋವಿವಡ್ಡರ್ ಸೇರಿ ಯಲ್ಲಾಪುರದ ವಿಶ್ವೇಶ್ವರ ಹೆಬ್ಬಾರ್ ಅವರ ತೋಟಕ್ಕೆ ನುಗ್ಗಿದ್ದು, ಅಲ್ಲಿದ್ದ ಅಡಿಕೆ ಕದ್ದಿದ್ದಾರೆ. ವಿಶ್ವೇಶ್ವರ ಹೆಬ್ಬಾರ್ ಅವರ ದೂರಿಗೆ ಸ್ಪಂದಿಸಿದ ಪೊಲೀಸರು ಆ ಇಬ್ಬರು ಕಳ್ಳರನ್ನು ಹಿಡಿದು ಜೈಲಿಗೆ ಹಾಕಿದ್ದಾರೆ. ನವೆಂಬರ್ 5ರಂದು ಯಲ್ಲಾಪುರದ ಇಡಗುಂದಿ ಬಳಿಯ ದೋಣಗಾರದಲ್ಲಿ ವಿಶ್ವೇಶ್ವರ ವೆಂಕಟ್ರಮಣ ಹೆಬ್ಬಾರ್ ಅವರ ಅಡಿಕೆ ತೋಟಕ್ಕೆ ಕಳ್ಳರು ನುಗ್ಗಿದ್ದರು. ಅಡಿಕೆ ಮರ ಏರಿದ ದುಷ್ಟರು ಅಲ್ಲಿದ್ದ 10 ಕ್ವಿಂಟಾಲ್ ಹಸಿ ಅಡಿಕೆ ದೋಚಿ ಪರಾರಿ ಆಗಿದ್ದರು. ಅಡಿಕೆ ಕಳ್ಳತನದಿಂದ ತಲೆಬಿಸಿಗೆ ಒಳಗಾದ ವಿಶ್ವೇಶ್ವರ ಹೆಬ್ಬಾರ್ ಅವರು ಪೊಲೀಸ್ ದೂರು ನೀಡಿದ್ದರು. `ಸುಮಾರು 40 ಮರ ಬೋಳಿಸಿದ ಕಳ್ಳರನ್ನು ಹುಡುಕಿ ತಮ್ಮ ಅಡಿಕೆ ತಮಗೆ ಮರಳಿಸಿ’ ಎಂದವರು ಪಿಐ ರಮೇಶ ಹಾನಾಪುರ ಅವರ ಬಳಿ ಮನವಿ ಮಾಡಿದ್ದರು. ವಿಶ್ವೇಶ್ವರ ಹೆಬ್ಬಾರ್ ಅವರಿಂದ ಎಲ್ಲಾ ಮಾಹಿತಿಪಡೆದ ಪಿಎಸ್‌ಐ ರಾಜಶೇಖರ ವಂದಲಿ, ಸಿದ್ದಪ್ಪ ಗುಡಿ ಹಾಗೂ ಮಹಾವೀರ ಕಾಂಬಳೆ ಜಂಟಿಯಾಗಿ ತನಿಖೆ ಶುರು ಮಾಡಿದರು. ಪೊಲೀಸ್ ಸಿಬ್ಬಂದಿ ಬಸವರಾಜ ಹಗರಿ, ಉಮೇಶ ತುಂಬರಗಿ, ಸುರೇಶ ವಡ್ಡರ, ದೀಪಕ ನಾಯ್ಕ ಹಾಗೂ ಪರಮೇಶ ಕೆ ಅವರು ವಿವಿಧ ಆಯಾಮಗಳಲ್ಲಿ ಹುಡುಕಾಟ ನಡೆಸಿದರು. ಆಗ, ಯಲ್ಲಾಪುರ ಮಂಚಿಕೇರಿ ಬಳಿಯ ಬೆಂಡಿಗೇರಿ ಹರುಷ ಈರಪ್ಪ ಬೋವಿವಡ್ಡರ್ (24) ಅವರ ಮೇಲೆ ಪೊಲೀಸರಿಗೆ ಅನುಮಾನ ಮೂಡಿತು. ಹರುಷ ಬೋವಿವಡ್ಡರ್ ಅವರನ್ನು ವಿಚಾರಣೆಗೆ ಒಳಪಡಿಸಿದಾಗ ಶಿರಸಿ ಗೌಡಳ್ಳಿ ಬಳಿಯ ಕೋಗುಲಕೋಳಿಯ ಭಾಸ್ಕರ ಕೃಷ್ಣ ಭೋವಿವಡ್ಡರ್ (19) ಅವರ ಜೊತೆ ಸೇರಿ ಅಡಿಕೆ ಕಳ್ಳತನ ಮಾಡಿರುವುದು ಬಹಿರಂಗವಾಯಿತು. ಪೊಲೀಸರನ್ನು ಕಂಡ ಕೂಡಲೇ ಅವರಿಬ್ಬರು ತಮ್ಮ ತಪ್ಪು ಒಪ್ಪಿಕೊಂಡರು. 1 ಲಕ್ಷ ರೂ ಮೌಲ್ಯದ 10 ಕ್ವಿಂಟಾಲ್ ಅಡಿಕೆ ಕಳ್ಳತನ ನಡೆದಿದ್ದರೂ ಅವರ ಬಳಿ 50 ಸಾವಿರ ಮೌಲ್ಯದ 4.54 ಕ್ವಿಂಟಲ್ ಅಡಿಕೆ ಮಾತ್ರ ಸಿಕ್ಕಿತು. ಅಡಿಕೆ ಕಳ್ಳ ಸಿಕ್ಕಿಬಿದ್ದಿರುವ ವಿಷಯವನ್ನು ಪಿಐ ರಮೇಶ ಹಾನಾಪುರ ಅವರು ಶಿರಸಿ ಡಿವೈಎಸ್ಪಿ ಗೀತಾ ಪಾಟೀಲ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಜಿ ಕೃಷ್ಣಮೂರ್ತಿ, ಜಗದೀಶ ಎಂ ಹಾಗೂ ಪೊಲೀಸ್ ಅಧೀಕ್ಷಕ ದೀಪನ್ ಎಂ ಎನ್ ಅವರಿಗೆ ತಿಳಿಸಿದರು. ಪ್ರಕರಣ ದಾಖಲಾದ ಒಂದೇ ದಿನದಲ್ಲಿ ಕಳ್ಳರನ್ನು ಹುಡುಕಿದ ಪೊಲೀಸರ ಕಾರ್ಯಕ್ಕೆ ಮೇಲಧಿಕಾರಿಗಳು ಮೆಚ್ಚುಗೆ ಸೂಚಿಸಿದರು. - [ಮನರಂಜಿಸಿದ ನಾಟಕ: ಜನಮನ ಗೆದ್ದ ಸನ್ಮಾನ!](https://mobiletime.in/2025/11/entertaining-drama-the-honor-of-winning-peoples-attention/): ಶಿರಸಿಯ ಮರಾಠಿಕೊಪ್ಪದ ಪುಟ್ಟನಮನೆ ಬಳಿ ನಾಗಾಶ್ವತ್ಥ ಕಟ್ಟೆ ಸೇವಾ ಸಮಿತಿಯವರು ಅದ್ಧೂರಿಯಾಗಿ ಕಾರ್ತಿಕೋತ್ಸವ ಆಚರಿಸಿದ್ದಾರೆ. ಸಮಿತಿಯವರು ನಡೆಸುತ್ತಿರುವ 39ನೇ ವರ್ಷದ ಕಾರ್ತಿಕ ಉತ್ಸವ ಇದಾಗಿದ್ದು, ಉತ್ಸವದ ಅಂಗವಾಗಿ ವಿವಿಧ ಕಾರ್ಯಕ್ರಮಗಳು ನಡೆದಿವೆ. ಕಾರ್ತಿಕ ಉತ್ಸವದ ಭಾಗವಾಗಿ ನವಗ್ರಹಪೂರ್ವಕ ನಾಗಮೂಲ ಮಂತ್ರ ಹವನ ನಡೆದಿದ್ದು, ಅನೇಕ ಭಕ್ತರು ಈ ಕಾರ್ಯದಲ್ಲಿ ಭಾಗಿಯಾದರು. ಪುರುಷ ಸೂಕ್ತ ಹವನ, ಮಂಗಳಾರತಿ, ತೀರ್ಥ ಪ್ರಸಾದ ವಿತರಣೆ ಹಾಗೂ ಮಹಾ ಅನ್ನಸಂತರ್ಪಣೆ ಅಚ್ಚುಕಟ್ಟಾಗಿ ನೆರವೇರಿತು. ಸಂಜೆ ಅವಧಿಯಲ್ಲಿ ನಡೆದ ದುರ್ಗಾದೀಪ ನಮಸ್ಕಾರ ಹಾಗೂ ಕಾರ್ತಿಕ ದೀಪೋತ್ಸವ ನೆರೆದಿದ್ದವರನ್ನು ನ್ನು ಆಕರ್ಷಿಸಿತು. ಕಾರ್ತಿಕೋತ್ಸವದ ಪ್ರಯುಕ್ತ `ಮೂರು ಮುತ್ತು’ ನಾಟಕ ಪ್ರದರ್ಶನ ನಡೆದಿದ್ದು. ಇದೇ ವೇದಿಕೆಯಲ್ಲಿ ಭೂತೇಶ್ವರ ಪತ್ತಿನ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಾಹಕ ವಿನಾಯಕ ಶೆಟ್ಟಿ ಅವರನ್ನು ಸಂಘಟಕರು ಸನ್ಮಾನಿಸಿದರು. ಕಟ್ಟೆ ಸೇವಾ ಸಮಿತಿಯ ಅಧ್ಯಕ್ಷ ಸಂತೋಷ ಮೊಗೇರ, ಉಪಾಧ್ಯಕ್ಷ ಸೂರಜ್ ಕೆವಿ, ಕಾರ್ಯದರ್ಶಿ ನಾಗೇಂದ್ರ ಶೆಟ್ಟಿಗಾರ, ಖಜಾಂಚಿ ಕಿರಣ್ ಹೊನ್ನಿ ಅವರು ಈ ಸನ್ಮಾನ ಕಾರ್ಯಕ್ರಮ ನಡೆಸಿಕೊಟ್ಟರು. ಸ್ಥಳೀಯ ಯುವಕ ಮಂಡಳಿಯ ಅಧ್ಯಕ್ಷ ಉಪೇಂದ್ರ ಮೇಸ್ತ, ಗೌರವಾಧ್ಯಕ್ಷ ನಾಗರಾಜ ಶೆಟ್ಟಿ, ಮಹಿಳಾ ಮಂಡಳಿ ಅಧ್ಯಕ್ಷ ಅಧ್ಯಕ್ಷ ಕಲ್ಪನಾ ಶೆಟ್ಟಿ, ಚಂದ್ರಶೇಖರ ಮಾದನಗೇರಿ ಇತರರು ಕಾರ್ಯಕ್ರಮ ಸಂಘಟನೆಗೆ ಸಹಕರಿಸಿದರು. - [ಯಲ್ಲಾಪುರ: ಅಂಬೇಡ್ಕರ ನಗರದಲ್ಲಿ ಶುರುವಾದ ಭುವನೇಶ್ವರಿ ದೇಗುಲ ಕಾರ್ಯ](https://mobiletime.in/2025/11/yellapur-bhuvaneshwari-temple-work-begins-at-ambedkar-bhavan/): ಯಲ್ಲಾಪುರದ ಅಂಬೇಡ್ಕರ್ ನಗರದಲ್ಲಿ 30 ಲಕ್ಷ ರೂ ವೆಚ್ಚದಲ್ಲಿ ಭುವನೇಶ್ವರಿ ದೇವಾಲಯ ನಿರ್ಮಿಸಲು ಉದ್ದೇಶಿಸಲಾಗಿದೆ. ದೇವಾಲಯಗಳ ಜೀರ್ಣೋದ್ಧಾರಕ್ಕಾಗಿ ಶ್ರಮಿಸುತ್ತಿರುವ ಮೈಸೂರಿನ ಮಾತಶ್ರೀ ಆಶಾ ಅಮ್ಮನವರು ಭೂಮಿ ಪೂಜೆ ನೆರವೇರಿಸಿದ್ದಾರೆ. ಅಂಬೇಡ್ಕರ ನಗರದ ಕೋಟೆಕರಿಯಮ್ಮ ದೇವಾಲಯ ಸನ್ನಿಧಿಯಲ್ಲಿ ಭುವನೇಶ್ವರಿ ದೇವಿಯ ದೇಗುಲ ನಿರ್ಮಾಣಕ್ಕಾಗಿ ಅಂಬೇಡ್ಕರ ನಗರದ ಜನ ಎಲ್ಲಾ ಬಗೆಯ ಸಿದ್ಧತೆ ಮಾಡಿಕೊಂಡಿದ್ದಾರೆ. ದಾನಿಗಳ ನೆರವಿನಿಂದ ಉತ್ತಮ ದೇಗುಲ ನಿರ್ಮಾಣ ಕೆಲಸ ಶುರುವಾಗಿದೆ. `ಯಲ್ಲಾಪುರದ ಜನರಿಗೆ ತಾಯಿ ಭುವನೇಶ್ವರಿ ದೇವಿಯ ಸೇವೆ ಮಾಡುವ ಅವಕಾಶ ಸಿಕ್ಕಿದ್ದು, ಸಮಸ್ತ ಜನ ಈ ಪುಣ್ಯ ಕಾರ್ಯದಲ್ಲಿ ಭಾಗಿಯಾಗಬೇಕು’ ಎಂದು ಆಶಾ ಅಮ್ಮನವರು ಈ ವೇಳೆ ಕರೆ ನೀಡಿದ್ದಾರೆ. ಕಟ್ಟಡ ನಿರ್ಮಾಣಕ್ಕೆ ನೆರವು ನೀಡಲು ಸರ್ವರಿಗೂ ಸಮಾನ ಅವಕಾಶವಿದ್ದು, ಭುವನೇಶ್ವರಿ ದೇವಸ್ಥಾನ ನಿರ್ಮಾಣ ಕಾಣಿಕೆ 5001ರೂಪಾಯಿಗಳಾಗಿದೆ. ಕರ್ಣ ಮುಚ್ಚಿಗೆ ಹಾಗೂ ತಾಮ್ರ ಗೋಪುರ ದೇಣಿಗೆ 10001ರೂ, 0.5 ಚದರ ಅಡಿ ಕಟ್ಟಡ ನಿರ್ಮಾಣಕ್ಕೆ 12500ರೂ ಹಾಗೂ 1 ಚದರ ಅಡಿ ನಿರ್ಮಾಣಕ್ಕೆ 25 ಸಾವಿರ ರೂ ದೇಣಿಗೆಯನ್ನು ಆಡಳಿತ ಮಂಡಳಿ ನಿಗದಿ ಮಾಡಿದೆ. ಭಕ್ತರು ತನು-ಮನ-ಧನ ಸಹಾಯ ಮಾಡಿ ಭುವನೇಶ್ವರಿ ದೇವಿಯ ಸೇವೆ ಮಾಡಲು ಬರಬೇಕು ಎಂದು ಶ್ರೀ ಭುವನೇಶ್ವರಿ ದೇವಿ ದೇವಸ್ಥಾನ ಆಡಳಿತ ಮಂಡಳಿಯವರು ಮನವಿ ಮಾಡಿದ್ದಾರೆ. - [2025ರ ನವೆಂಬರ್ 7ರ ದಿನ ಭವಿಷ್ಯ](https://mobiletime.in/2025/11/prediction-for-november-7-2025/): ಮೇಷ ರಾಶಿ: ನಿಮ್ಮ ಕನಸಿನ ಯೋಜನೆಗಳು ಪೂರ್ಣಗೊಳ್ಳುತ್ತವೆ. ಯಶಸ್ಸು ನಿಮ್ಮ ಸಮೀಪದಲ್ಲಿದೆ. ಶ್ರಮ ಫಲ ಕೊಡಲಿದೆ. ವೃಷಭ ರಾಶಿ: ನಿಮ್ಮೊಳಗಿನ ಆತ್ಮವಿಶ್ವಾಸ ಹೆಚ್ಚಿಸಿಕೊಂಡರೆ ಕೆಲಸ ಸುರಳಿತವಾಗಲಿದೆ. ಕುಟುಂಬದಲ್ಲಿ ಸುಖ-ಶಾಂತಿ ನೆಲೆಸಲಿದೆ. ಹಣಕಾಸಿನ ಸ್ಥಿತಿಯಲ್ಲಿ ಅನುಕೂಲ ಆಗಲಿದೆ. ಮಿಥುನ ರಾಶಿ: ಒತ್ತಡ ಪೂರ್ಣ ದಿನವಾಗಿರಲಿದೆ. ಲಾಭದ ಅವಕಾಶಗಳು ಹೆಚ್ಚಿವೆ. ಹೊಸ ಸ್ನೇಹಿತರ ಪರಿಚಯ ಆಗಲಿದೆ. ಆರೋಗ್ಯದ ಕಡೆ ಜೋಪಾನ. ಕರ್ಕ ರಾಶಿ: ಹಣಕಾಸಿನ ಒತ್ತಡ ಕಡಿಮೆಯಾಗಲಿದೆ. ಆರ್ಥಿಕ ವಿಚಾರದಲ್ಲಿ ಜಾಗೃತರಾಗಿರಿ. ಆರೋಗ್ಯದ ಬಗ್ಗೆ ಕಾಳಜಿ ಅಗತ್ಯ. ಕೈಗೊಂಡ ಕೆಲಸ ಪೂರ್ಣವಾಗಲಿದೆ. ಸಿಂಹ ರಾಶಿ: ಕೆಲಸದಲ್ಲಿ ಚಿಕ್ಕ ಚಿಕ್ಕ ಬದಲಾವಣೆ ಆಗಲಿದೆ. ಹಣಕಾಸು ವಿಷಯದಲ್ಲಿ ಸಮತೋಲನ ಅಗತ್ಯ. ಕುಟುಂಬದವರ ಜೊತೆ ಕಾಲ ಕಳೆಯುವಿರಿ. ಕನ್ಯಾ ರಾಶಿ: ಆರೋಗ್ಯದಲ್ಲಿ ಚೇತರಿಕೆ ಆಗಲಿದೆ. ಕೆಲಸದಲ್ಲಿ ಉತ್ತಮ ಅವಕಾಶ ಸಿಗಲಿದೆ. ಪಾಠ-ಪ್ರವಚನದಲ್ಲಿ ಯಶಸ್ಸು ಸಾಧ್ಯವಿದೆ. ತುಲಾ ರಾಶಿ: ಉದ್ಯೋಗದ ಒತ್ತಡ ಕಡಿಮೆ ಆಗಲಿದೆ. ಆರೋಗ್ಯ ಉತ್ತಮವಾಗಿರಲಿದೆ. ಕುಟುಂಬಕ್ಕಾಗಿ ಸಮಯ ಮೀಸಲಿಡಿ. ವೃಶ್ಚಿಕ ರಾಶಿ: ನಿಮಗೆ ಸಿಗುವ ಅವಕಾಶಗಳನ್ನು ಸರಿಯಾಗಿ ಬಳಸಿಕೊಳ್ಳಿ. ಧೈರ್ಯದಿಂದ ಕೆಲಸ ನಿರ್ವಹಿಸಿ. ಕುಟುಂಬದಲ್ಲಿ ಸಾಮರಸ್ಯ ಕಾಪಾಡಲು ಪ್ರಯತ್ನಿಸಿ. ಹಣಕಾಸು ವೃದ್ಧಿ ಆಗಲಿದೆ. ಧನು ರಾಶಿ: ನಿಮ್ಮ ಪ್ರಯತ್ನಕ್ಕೆ ತಕ್ಕ ಲಾಭ ಸಿಗಲಿದೆ. ಆರೋಗ್ಯ ಸಹಜವಾಗಿರಲಿದೆ. ಹಣಕಾಸು ವಿಷಯದಲ್ಲಿ ಏರಿಕೆ ಸಾಧ್ಯವಿದೆ. ಯಾತ್ರೆಗಳು ಸಫಲವಾಗಲಿದೆ. ಮಕರ ರಾಶಿ: ಹೊಸ ಬಗೆಯ ಬದಲಾವಣೆ ಸಾಧ್ಯವಿದೆ. ಆರೋಗ್ಯ ಸುಧಾರಣೆ ಆಗಲಿದೆ. ಉದ್ಯೋಗದಲ್ಲಿ ವೃದ್ಧಿ ಆಗಲಿದೆ. ಕುಂಭ ರಾಶಿ: ಆರೋಗ್ಯದಲ್ಲಿ ವ್ಯತ್ಯಾಸ ಆಗಲಿದೆ. ಸ್ನೇಹಿತರ ಜೊತೆ ಸಮಯ ಕಳೆಯುವಿರಿ. ಆತುರದ ನಿರ್ಧಾರ ಮಾಡಬೇಡಿ. ಆಸೆಗಳು ಈಡೇರಲಿದೆ. ಮೀನ ರಾಶಿ: ಸ್ನೇಹಿತರ ಸಹಾಯ ಸಿಗಲಿದೆ. ಆರ್ಥಿಕ ಸುಧಾರಣೆ ಸಾಧ್ಯವಿದೆ. ಕುಟುಂಬದಲ್ಲಿ ಒಳ್ಳೆಯ ಸುದ್ದಿ ಬರಲಿದೆ. - [ಬಿಸಿಯೂಟ: ಅನ್ನ ಬಡಿಸುವ ಮುನ್ನ ಜೀವ ತ್ಯಜಿಸಿದ ತಾಯಿ!](https://mobiletime.in/2025/11/mother-dies-before-serving-food/): ದಾಂಡೇಲಿ ನಗರದ ಜನತಾ ವಿದ್ಯಾಲಯದಲ್ಲಿ ಬಿಸಿಯೂಟ ಸಿದ್ಧಪಡಿಸುತ್ತಿದ್ದ ಮಹಾದೇವಿ ಅವರು ಏಕಾಏಕಿ ಕುಸಿದು ಬಿದ್ದು ಸಾವಪ್ಪಿದ್ದಾರೆ. ದಾಂಡೇಲಿಯ ಬಾಂಬೆಚಾಳದಮಹಾದೇವಿ ಶಿವಾಜಿ ನೆರವಡೆ (50) ಅವರು ಜನತಾ ವಿದ್ಯಾಲಯದ ಪ್ರೌಢಶಾಲೆಯಲ್ಲಿ ಬಿಸಿಯೂಟ ಸಿದ್ದಪಡಿಸುವ ಕಾಯಕದಲ್ಲಿದ್ದರು. ಗುರುವಾರ ಕರ್ತವ್ಯಕ್ಕೆ ಹಾಜರಾಗಿದ್ದ ಅವರು ಮಕ್ಕಳಿಗಾಗಿ ಅಡುಗೆ ಮಾಡುತ್ತಿದ್ದರು. ಕರ್ತವ್ಯ ನಿರ್ವಹಿಸುತ್ತಿದ್ದ ಸಮಯದಲ್ಲಿಯೇ ಅವರು ಕುಸಿದುಬಿದ್ದರು. ತಕ್ಷಣವೇ ಶಾಲೆಯ ಶಿಕ್ಷಕರು ನಗರದ ಸಾರ್ವಜನಿಕ ಆಸ್ಪತ್ರೆಗೆ ಕರೆದೊಯ್ದರು. ಆದರೆ, ಅಷ್ಟರೊಳಗೆ ಅವರು ಕೊನೆಯುಸಿರೆಳೆದಿದ್ದರು. ಕಳೆದ 20 ವರ್ಷಗಳಿಂದ ಅವರು ಅಲ್ಲಿ ಬಿಸಿಯೂಟ ಸಿಬ್ಬಂದಿ ಆಗಿದ್ದರು. ಐದು ವರ್ಷಗಳಿಂದ ಪ್ರೌಢಶಾಲಾ ವಿಭಾಗಕ್ಕೂ ಅಡುಗೆ ಕೆಲಸ ಮಾಡುತ್ತಿದ್ದರು. ಕಳೆದ ವರ್ಷ ಅವರ ಪತಿ ಸಾವನಪ್ಪಿದ್ದರು. ಅದಾದ ನಂತರ ಅವರ ಮಗ ಸಹ ಅಕಾಲಿಕ ಮರಣಕ್ಕೆ ಒಳಗಾಗಿದ್ದರು. - [ಕಾಸು ಕೊಡದ ಗಂಡ ಕಲ್ಲಿನಿಂದ ಹೊಡೆದ!](https://mobiletime.in/2025/11/husband-hit-with-a-stone-for-not-giving-money/): ಭಟ್ಕಳದ ಶಕಿಲಾ ಶಾಯಿನ್ ಹಾಗೂ ಸಯ್ಯದ್ ಜಮಾಲುದ್ಧಿನ್ ದಾಂಪತ್ಯದಲ್ಲಿ ಬಿರುಕು ಮೂಡಿದೆ. ಹೀಗಾಗಿ `ತಾನು ನೀಡಿದ ಹಣ ಕೊಡು’ ಎಂದು ಶಕಿಲಾ ಶಾಯಿನ್ ಅವರು ಪತಿಗೆ ಕೇಳಿಕೊಂಡಿದ್ದು, ಹಣ ಮರಳಿಸಬೇಕಾದ ಸಯ್ಯದ್ ಜಮಾಲುದ್ಧಿನ್ ಪತ್ನಿ ಮೇಲೆ ಕೈ ಮಾಡಿದ್ದಾರೆ. ಭಟ್ಕಳದ ಶಕಿಲಾ ಶಾಯಿನ್ ಹಾಗೂ ಅದೇ ಊರಿನ ಸಯ್ಯದ್ ಜಮಾಲುದ್ಧಿನ್ 2022ರಲ್ಲಿ ಪರಿಚಿತರಾದರು. ಅದಾದ ನಂತರ ಅವರಿಬ್ಬರು ಪರಸ್ಪರ ಒಪ್ಪಿ ವಿವಾಹವಾದರು. ಸಂಪ್ರದಾಯದ ಪ್ರಕಾರ ಅದ್ಧೂರಿಯಾಗಿ ಅವರ ಮದುವೆ ನಡೆಯಿತು. ಆದರೆ, ಕಾಲಕ್ರಮೇಣ ಅವರಿಬ್ಬರ ನಡುವೆ ಬಿನ್ನಾಭಿಪ್ರಾಯ ಮೂಡಿತು. ಹೀಗಾಗಿ ಅವರ ಸಂಬoಧ ಮುರಿದು ಬಿದ್ದಿತು. ಸದ್ಯ ಅವರಿಬ್ಬರ ನಡುವೆ ವಿಚ್ಚೇಧನದ ಮಾತುಕಥೆ ನಡೆಯುತ್ತಿದೆ. ಬಿನ್ನಾಭಿಪ್ರಾಯದ ನಂತರ ಶಕಿಲಾ ಶಾಯಿನ್ ಅವರು ತಮ್ಮ ತವರು ಮನೆಯಲ್ಲಿ ಉಳಿದಿದ್ದರು. ಮದುವೆ ಆದ ಹೊಸತಿನಲ್ಲಿ ಶಕಿಲಾ ಶಾಯಿನ್ ಅವರು ಪತಿ ಸಯ್ಯದ್ ಜಮಾಲುದ್ಧಿನ್ ಅವರಿಗೆ 1.10 ಲಕ್ಷ ರೂ ಹಣ ಕೊಟ್ಟಿದ್ದರು. ಮದುವೆ ಮುರಿದ ಕಾರಣ ಆ ಹಣ ಮರಳಿಸುವಂತೆ ಶಕಿಲಾ ಶಾಯಿನ್ ಪತಿಗೆ ಗಂಟು ಬಿದ್ದಿದ್ದರು. ಆದರೆ, ಸಯ್ಯದ್ ಜಮಾಲುದ್ಧಿನ್ ಮಾತ್ರ ಆ ಹಣ ಕೊಡಲು ಒಪ್ಪಿರಲಿಲ್ಲ. ಶಕಿಲಾ ಶಾಯಿನ್ ಅವರು ಹಣ ಕೇಳುವುದನ್ನು ಬಿಟ್ಟಿರಲಿಲ್ಲ. ನವೆಂಬರ್ 5ರಂದು ಶಕಿಲಾ ಶಾಯಿನ್ ಅವರು ಪತಿ ಸಯ್ಯದ್ ಜಮಾಲುದ್ಧಿನ್ ಅವರ ಮನೆಗೆ ಹೋಗಿ ಗಲಾಟೆ ಮಾಡಿದರು. `ನನ್ನ ಹಣ ನನಗೆ ಮರಳಿಸು’ ಎಂದು ದೊಡ್ಡದಾಗಿ ಕೂಗಿದರು. ಇದರಿಂದ ಸಿಟ್ಟಾದ ಸಯ್ಯದ್ ಜಮಾಲುದ್ಧಿನ್ ಶಕಿಲಾ ಶಾಯಿನ್ ಅವರಿಗೆ ಮೊದಲು ಕೈಯಿಂದ ಹೊಡೆದರು. ನಂತರ ಅವರನ್ನು ನೆಲಕ್ಕೆ ಬೀಳಿಸಿ ಕಾಲಿನಿಂದ ಒದ್ದರು. ಅಲ್ಲಿ ಬಿದ್ದಿದ್ದ ಕಲ್ಲಿನಿಂದ ಶಕಿಲಾ ಶಾಯಿನ್ ಅವರ ತಲೆಗೆ ಹೊಡೆದು ಗಾಯಗೊಳಿಸಿದರು. - [ತೋಟಕ್ಕೆ ಬಂದ ಕಳ್ಳರು.. ಅಡಿಕೆ ಕದ್ದರು!](https://mobiletime.in/2025/11/thieves-came-to-the-garden-and-stole-the-nuts/): ಯಲ್ಲಾಪುರದ ವಿಶ್ವೇಶ್ವರ ಹೆಬ್ಬಾರ್ ಅವರ ತೋಟಕ್ಕೆ ನುಗ್ಗಿದ ಕಳ್ಳರು ಅಲ್ಲಿದ್ದ ಅಡಿಕೆ ಕದ್ದು ಪರಾರಿಯಾಗಿದ್ದಾರೆ. ವಿಶ್ವೇಶ್ವರ ಹೆಬ್ಬಾರ್ ಅವರು ಆ ಕಳ್ಳರ ಹುಡುಕಾಟ ನಡೆಸಿದ್ದಾರೆ. ಯಲ್ಲಾಪುರದ ಇಡಗುಂದಿ ಬಳಿಯ ದೋಣಗಾರದಲ್ಲಿ ವಿಶ್ವೇಶ್ವರ ವೆಂಕಟ್ರಮಣ ಹೆಬ್ಬಾರ್ ಅವರು ವಾಸವಾಗಿದ್ದಾರೆ. ತಮ್ಮ ಭೂಮಿಯಲ್ಲಿ ಅವರು ಅಡಿಕೆ ಬೆಳೆದಿದ್ದಾರೆ. ಮೊದಲಿಗೆ ಹೋಲಿಸಿದರೆ ಈ ಬಾರಿ ಕಡಿಮೆ ಫಸಲಿರುವ ಕಾರಣ ಅವರು ತಲೆಬಿಸಿಯಲ್ಲಿದ್ದು, ಸದ್ಯ ಕಳ್ಳರ ಕಾಟದಿಂದ ಅವರು ಸುಸ್ತಾಗಿದ್ದಾರೆ. ನವೆಂಬರ್ 5ರಂದು ಅವರ ತೋಟಕ್ಕೆ ಕಳ್ಳರು ನುಗ್ಗಿದ್ದಾರೆ. ಅಡಿಕೆ ಮರ ಹತ್ತಿ ಫಸಲು ಕೊಯ್ದಿದ್ದಾರೆ. ಬೆಳಗ್ಗೆ 9ಗಂಟೆಯಿAದ ಸಂಜೆ 6 ಗಂಟೆ ಅವಧಿಯಲ್ಲಿ ತೋಟದ ಫಸಲು ಕೊಯ್ದರೂ ವಿಶ್ವೇಶ್ವರ ಹೆಬ್ಬಾರ್ ಅವರಿಗೆ ಕಳ್ಳರ ಆಗಮನದ ಸುಳಿವು ಸಿಕ್ಕಿಲ್ಲ. ಸುಮಾರು 40 ಮರಗಳನ್ನು ಬೋಳಿಸಿದ ಕಳ್ಳರು ಅಂದಾಜು 10 ಕ್ವಿಂಟಲ್ ಹಸಿ ಅಡಿಕೆ ಅಪಹರಿಸಿದ್ದಾರೆ. ಕಳ್ಳರು ಎಲ್ಲಾ ಅಡಿಕೆಯನ್ನು ಅಲ್ಲಿಂದ ಸಾಗಿಸಿದ ನಂತರ ವಿಶ್ವೇಶ್ವರ ಹೆಬ್ಬಾರ್ ಅವರಿಗೆ ಕಳ್ಳತನ ನಡೆದಿರುವುದು ಗೊತ್ತಾಗಿದೆ. ಆದರೆ, ಆ ಕಳ್ಳರು ಯಾರು ಎಂದು ಅವರಿಗೆ ತಿಳಿಯಲಿಲ್ಲ. ಹೀಗಾಗಿ ಅವರು ಇದೀಗ ಪೊಲೀಸರ ಸಹಾಯಪಡೆದು ಕಳ್ಳರ ಹುಡುಕಾಟ ನಡೆಸಿದ್ದಾರೆ. `ಕಳ್ಳರ ಕಾಟದಿಂದ 1 ಲಕ್ಷ ರೂ ನಷ್ಟವಾಗಿದ್ದು, ಅವರನ್ನು ಪತ್ತೆ ಮಾಡಿಕೊಡಿ’ ಎಂದು ಪ್ರಕರಣ ದಾಖಲಿಸಿದ್ದಾರೆ. - [ಸಿದ್ದಾಪುರ: ಮೊಬೈಲ್ ಚಾರ್ಜ ಆಗದ ಕಾರಣ ಕಂಡೇಕ್ಟರ್ ಮೇಲೆ ಹಲ್ಲೆ!](https://mobiletime.in/2025/11/siddapur-conductor-attacked-because-his-mobile-phone-was-not-charged/): ಸರ್ಕಾರಿ ಬಸ್ಸಿನಲ್ಲಿ ಮೊಬೈಲ್ ಚಾರ್ಜ ಹಾಕಿದ್ದ ಪ್ರಯಾಣಿಕರೊಬ್ಬರು ಮೊಬೈಲ್ ಚಾರ್ಜ ಆಗದ ಕಾರಣ ಬಸ್ ಕಂಡೆಕ್ಟರ್’ರನ್ನು ಥಳಿಸಿದ್ದಾರೆ. ಜೊತೆಗೆ ಬಸ್ಸಿನಲ್ಲಿದ್ದ ಚಾರ್ಜಿಂಗ್ ಬೋರ್ಡ ಕಿತ್ತು ಬಿಸಾಕಿದ್ದಾರೆ! ಯಲ್ಲಾಪುರ ಬಸ್ ಡಿಪೋದ ವೀರಭದ್ರಯ್ಯ ಮಠದ್ ಅವರು ಯಲ್ಲಾಪುರ-ಹುಬ್ಬಳ್ಳಿ-ಮಂಗಳೂರು ಬಸ್ ಚಾಲಕರಾಗಿದ್ದರು. ಆ ಬಸ್ಸಿನ ನಿರ್ವಾಹಕರು ಅವರೇ ಆಗಿದ್ದರು. ಕುಂದಾಪುರದಲ್ಲಿ ಸವದತ್ತಿಯ ಚಂದ್ರಶೇಖರ ಕಿತ್ತಲಿ ಅವರು ಆ ಬಸ್ಸು ಹತ್ತಿದರು. ಹುಬ್ಬಳ್ಳಿಗೆ ಹೋಗಲು ಅವರು ಟಿಕೆಟ್‌ಪಡೆದರು. ಈ ವೇಳೆ ಚಂದ್ರಶೇಖರ ಕಿತ್ತಲಿ ಅವರ ಮೊಬೈಲ್ ಚಾರ್ಜ ಖಾಲಿಯಾಗಿತ್ತು. ಹೀಗಾಗಿ ಅವರು ಟಿಕೆಟ್ ತೆಗೆಯುವ ಇಟಿಎಂ ಮಿಶನ್ ಚಾರ್ಜ ಮಾಡುವ ಬಾಕ್ಸಿನೊಳಗೆ ಮೊಬೈಲ್ ಮಡಗಿ ಬಟನ್ ಒತ್ತಿದ್ದರು. ತಾಸು ಕಳೆದರೂ ಚಂದ್ರಶೇಖರ ಕಿತ್ತಲಿ ಅವರ ಮೊಬೈಲ್ ಚಾರ್ಜ ಆಗಿರಲಿಲ್ಲ. ಹೀಗಾಗಿ ಬಸ್ಸಿನ ಅವ್ಯವಸ್ಥೆಯ ಬಗ್ಗೆ ಅವರು ಜೋರಾದರು. ಕಂಡೆಕ್ಟರ್ ಜೊತೆ ಜಗಳವಾಡಿದರು. ಆ ಬಸ್ಸು ಸಿದ್ದಾಪುರಕ್ಕೆ ಬಂದಾಗ ವೀರಭದ್ರಯ್ಯ ಮಠದ್ ಅವರ ಬಳಿಯಿದ್ದ ಇಟಿಎಂ ಮಿಶನ್ ಚಾರ್ಜ ಆಗುವುದನ್ನು ಚಂದ್ರಶೇಖರ ಕಿತ್ತಲಿ ಅವರು ನೋಡಿದರು. `ನನ್ನ ಮೊಬೈಲ್ ಚಾರ್ಜ ಆಗಿಲ್ಲ. ನಿಮ್ಮ ಮಿಶನ್ ಹೇಗೆ ಚಾರ್ಜ ಆಗುತ್ತಿದೆ?’ ಎಂದು ಪ್ರಶ್ನಿಸಿ ದಬಾಯಿಸಿದರು. ಬಸ್ಸು ಸಿದ್ದಾಪುರದ ಭಗತ್ ಸಿಂಗ್ ಸರ್ಕಲ್ ಬಳಿ ತಲುಪಿದಾಗ ವೀರಭದ್ರಯ್ಯ ಮಠದ್ ಅವರ ಮೇಲೆ ಚಂದ್ರಶೇಖರ ಕಿತ್ತಲಿ ಅವರು ಹಲ್ಲೆ ಮಾಡಿದರು. ಬಸ್ಸಿನಲ್ಲಿದ್ದ ಚಾರ್ಜಿಂಗ್ ಬೋರ್ಡ ಕಿತ್ತು ಬಿಸಾಡಿದರು. ಈ ಎಲ್ಲಾ ವಿದ್ಯಮಾನದ ಬಗ್ಗೆ ವೀರಭದ್ರಯ್ಯ ಮಠದ್ ಅವರು ಸಿದ್ದಾಪುರದಲ್ಲಿ ಪೊಲೀಸ್ ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿದರು. ಪೊಲೀಸ್ ಸಿಬ್ಬಂದಿ ಸುರೇಶ ಕೋರವರ್ ಅವರು ತನಿಖೆ ಶುರು ಮಾಡಿದ್ದಾರೆ. - [ಮನೆಗೆ ಬರ್ತಾರೆ.. ಗುಳುಗೆ ಕೊಡ್ತಾರೆ.. ಮೋಸ ಮಾಡ್ತಾರೆ!](https://mobiletime.in/2025/11/they-come-home-they-cheat-they-cheat/): ಮಕ್ಕಳಾಗದವರ ಮನೆಗೆ ಬಂದು ಔಷಧಿ ಕೊಡುವ ನೆಪದಲ್ಲಿ ಹಣ ದೋಚಿ ಪರಾರಿಯಾಗುವ ಜಾಲ ಉತ್ತರ ಕನ್ನಡ ಜಿಲ್ಲೆಯಲ್ಲಿ ಸಕ್ರಿಯವಾಗಿದೆ. ಅವರು ಕೊಟ್ಟ ಗುಳುಗೆ ತಿಂದವರು ದರೋಡೆಗೆ ಒಳಗಾಗುತ್ತಿದ್ದಾರೆ. ಕಾರವಾರದ ಚಿತ್ತಾಕುಲದಲ್ಲಿ ತಿಂಗಳ ಹಿಂದೆ ಆರೋಗ್ಯ ಸಿಬ್ಬಂದಿ ಹೆಸರಿನಲ್ಲಿ ಮನೆ ಮನೆಗೆ ಭೇಟಿ ನೀಡಿದ ಅಪರಿಚಿತರು ಮಕ್ಕಳಾಗದ ಮಹಿಳೆಯೊಬ್ಬರಿಗೆ ಗುಳುಗೆ ಕೊಟ್ಟು 40 ಸಾವಿರ ರೂ ಎಗರಿಸಿದ್ದಾರೆ. ಭಟ್ಕಳದ ವಿವಿಧ ಗ್ರಾಮಗಳಲ್ಲಿಯೂ ಅಂಥವರು ಸಂಚರಿಸಿದ್ದಾರೆ. ಸದ್ಯ ಅಂಕೋಲಾದ ಹಳ್ಳಿ ಹಳ್ಳಿಗಳಿಗೂ ಅಪರಿಚಿತ ಔಷಧ ತಂಡದವರು ತಿರುಗಾಡುತ್ತಿದ್ದು, ಅವರು ಕೊಟ್ಟ ಗುಳುಗೆ ತಿಂದವರು ಮೂರ್ಚೆ ಹೋಗುತ್ತಿದ್ದಾರೆ. ಕಾರವಾರದ ಪ್ರಮೋದ ನಾಯ್ಕ ಎಂಬಾತರ ಕುಟುಂಬಕ್ಕೆ ಈ ತಂಡದಿAದ ಮೋಸವಾದ ಬಗ್ಗೆ ಚಿತ್ತಾಕುಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಗ್ಯ ಇಲಾಖೆ ಹೆಸರು ಹೇಳಿ ಉಚಿತ ಚಿಕಿತ್ಸೆ ಎಂದು ಪರಿಚಯಿಸಿಕೊಂಡ ವಂಚಕರು `ಮಕ್ಕಳಾಗದವರಿಗೆ ಔಷಧಿ ಕೊಡುತ್ತೇವೆ’ ಎಂದು ನಂಬಿಸಿ 40 ಸಾವಿರ ರೂ ವಂಚಿಸಿದ ಬಗ್ಗೆ ಪ್ರಮೋದ ನಾಯ್ಕ ಅವರೇ ದೂರಿದ್ದಾರೆ. ಅಕ್ಟೊಬರ್ 9ರಂದು ಕಾರವಾರದಲ್ಲಿ ಮೋಸ ಮಾಡಿದ ಈ ಜಾಲದವರು ಅಕ್ಟೊಬರ್ 14ರಂದು ಭಟ್ಕಳ ಪ್ರವೇಶಿಸಿದ್ದಾರೆ. ನವೆಂಬರ್ 5ರಂದು ಅಂಕೋಲಾದ ವಿವಿಧ ಹಳ್ಳಿಗಳಿಗೆ ಸುತ್ತಾಟ ಮಾಡಿದ್ದಾರೆ. ಬಿಳಿ ಬಣ್ಣದ ಕಾರಿನಲ್ಲಿ ಬಂದಿದ್ದ ವಂಚಕರು ಚಿಕಿತ್ಸೆ ನೀಡುವ ಬಗ್ಗೆ ಹೇಳಿಕೊಳ್ಳುತ್ತಾರೆ. ಪಾರ್ಶ್ವವಾಯು ಪೀಡಿತರು, ಮಕ್ಕಳಾಗದ ದಂಪತಿಗಳು ಸೇರಿ ಅನೇಕರಿಗೆ ಒಂದೇ ಬಗೆಯ ಗುಳುಗೆ ಕೊಡುತ್ತಾರೆ. ಕೆಲವಡೆ `ಬೆಂಗಳೂರಿನ ಸಾಯಿಬಾಬಾ ಆಸ್ಪತ್ರೆಯಿಂದ ಪ್ರಚಾರಕ್ಕೆ ಬಂದಿದ್ದೇವೆ. ಉಚಿತ ಔಷಧಿ ಕೊಡುತ್ತೇವೆ’ ಎಂದು ಸಹ ಹೇಳಿಕೊಳ್ಳುತ್ತಿದ್ದು, ಕ್ಷಣಮಾತ್ರದಲ್ಲಿಯೇ ಮೋಸ ಮಾಡಿ ಪರಾರಿಯಾಗುತ್ತಿದ್ದಾರೆ. - [RTI ಅಸ್ತ್ರ ಬಳಸಿದ ಅಪ್ಪ-ಮಗ ಅರೆಸ್ಟ್!](https://mobiletime.in/2025/11/father-son-arrested-for-using-rti-weapon/): RTI ಅಸ್ತ್ರ ಬಳಸಿ ವಸೂಲಿಗೆ ತೆರಳಿದ್ದ ಮುಂಡಗೋಡಿನ ಮಹದೇಶ್ವರ ಲಿಂಗದಾಳ ಹಾಗೂ ಅವರ ಮಗ ವೀರೇಶ್‌ಕುಮಾರ ಲಿಂಗದಾಳ ಜೊತೆ ಮತ್ತೆ ಮೂವರನ್ನು ಹುಬ್ಬಳ್ಳಿ ಪೊಲೀಸರು ಬಂಧಿಸಿದ್ದಾರೆ. ಬ್ಯಾಂಕ್ ಅಧಿಕಾರಿಯೊಬ್ಬರ ಬಳಿ 1 ಕೋಟಿ ರೂ ಬೇಡಿದ ಪರಿಣಾಮ ನಾಲ್ವರು ಜೈಲು ಸೇರಿದ್ದಾರೆ. ಮುಂಡಗೋಡದ ಕರಗಿನಕೊಪ್ಪದ ಮಹದೇಶ್ವರ ಲಿಂಗದಾಳ ಅವರು ಮೊದಲಿನಿಂದಲೂ ಇಂಥ ವಂಚನೆ ಜಾಲದಲ್ಲಿದ್ದರು. ಸಮೃದ್ಧ ಜೀವನ, ಆರ್‌ಎಂಪಿ ಹೇಳಿ ಬಗೆ ಬಗೆಯ ಸರಪಳಿ ಯೋಜನೆ ತಂದು ಜನರಿಗೆ ವಂಚಿಸಿದ್ದರು. ಸದ್ಯ ಮಹದೇಶ್ವರ ಲಿಂಗದಾಳ ಅವರ ಜೊತೆ ಅವರ ಮಗವೀರೇಶ್‌ಕುಮಾರ ಲಿಂಗದಾಳ ಸಹ ಸೇರಿಕೊಂಡು ವಸೂಲಿ ದಂಧೆ ಶುರು ಮಾಡಿದ್ದರು. ಈ ಅಪ್ಪ ಮಕ್ಕಳ ಜೊತೆ ಗದಗ ಮೂಲದ ಮಂಜುನಾಥ ಹದ್ದಣ್ಣನವರ, ಮಹಾಬಲೇಶ್ವರ ಶಿರೂರ, ಶಿವಪ್ಪ ಬೊಮ್ಮನಳ್ಳಿ ಸೇರಿ ಸರ್ಕಾರಿ ಅಧಿಕಾರಿಗಳನ್ನು ಬೆದರಿಸುವುದನ್ನೇ ಕಾಯಕವನ್ನಾಗಿಸಿಕೊಂಡಿದ್ದರು. ಸದ್ಯ ಬ್ಯಾಂಕ್ ಅಧಿಕಾರಿಯೊಬ್ಬರಿಗೆ ಮಹಿಳೆ ಜೊತೆ ಸಂಬAಧದ ಕಥೆ ಕಟ್ಟಿ ವಸೂಲಿಗೆ ಪ್ರಯತ್ನಿಸಿದ್ದರು. 1.5 ಕೋಟಿ ರೂ ಹಣ ನೀಡುವಂತೆ ಈ ಐವರು ಬ್ಯಾಂಕ್ ಅಧಿಕಾರಿಗೆ ಬೆದರಿಸುತ್ತಿದ್ದರು. ಗೋಕುಲ ರೋಡ್‌ನಲ್ಲಿರುವ ಸಮೃದ್ಧಿ ಕ್ರೆಡಿಟ್ ಕೋ ಆಪ್ ಸೊಸೈಟಿ ಅಧಿಕಾರಿಗೆ ಆರೋಪಿತರು ಬೆದರಿಕೆ ಒಡ್ಡಿರುವುದನ್ನು ತಿಳಿದು ಪೊಲೀಸರು ಕಾರ್ಯಾಚರಣೆಗಿಳಿದರು. ಆ ಎಲ್ಲಾ ಆರೋಪಿತರನ್ನು ಬಂಧಿಸಿ ಅವರ ಬಳಿಯಿದ್ದ 1.70 ಲಕ್ಷ ರೂ ಹಣವನ್ನು ಜಪ್ತು ಮಾಡಿದರು. - [ಭಯ ಬೇಡ.. ಎಚ್ಚರವಿರಲಿ!](https://mobiletime.in/2025/11/dont-be-afraid-be-alert/): ಗಣೇಶ ಗುಡಿ ಭಾಗದಲ್ಲಿ ಅಪರೂಪದ ಪ್ರಾಣಿಯ ಬಗ್ಗೆ ಅರಣ್ಯಾಧಿಕಾರಿಗಳು ಮಾತನಾಡಿದ್ದಾರೆ. ಗಣೇಶಗುಡಿಯ ಬಳಿ ಹೈನಾ (ಕತ್ತೆ ಕಿರುಬ) ಓಡಾಡಿರುವುದನ್ನು ಅರಣ್ಯಾಧಿಕಾರಿಗಳು ದೃಢಪಡಿಸಿದ್ದು `ವನ್ಯಜೀವಿ ಆಕ್ರಮಣದ ಆತಂಕ ಬೇಡ’ ಎಂದು ಧೈರ್ಯ ಹೇಳಿದ್ದಾರೆ. `ಕುಳಗಿ ಹಾಗೂ ಗಣೇಶಗುಡಿ ಭಾಗದಲ್ಲಿ ಅಪರೂಪದ ಪ್ರಾಣಿಯಾದ ಕತ್ತೆಕಿರುಬ ಕಾಣಿಸಿಕೊಂಡಿದೆ. ವನ್ಯಜೀವಿ ಇಲಾಖೆ ಈ ಪ್ರಾಣಿಯನ್ನು ತಂದು ಬಿಟ್ಟಿರುವುದಲ್ಲ’ ಎಂದು ಕಾಳಿ ಹುಲಿ ಸಂರಕ್ಷಿತ ಪ್ರದೇಶದ ನಿರ್ದೇಶಕ ನಿಲೇಶ ಶಿಂದೆ ಅವರು ಹೇಳಿದ್ದಾರೆ. `ದಾಂಡೇಲಿ ತಾಲೂಕಿನ ಕುಳಗಿ ಮತ್ತು ಜೋಯಿಡಾ ತಾಲೂಕಿನ ಗಣೇಶಗುಡಿ ಪ್ರದೇಶದಲ್ಲಿ ಇತ್ತೀಚಿನ ದಿನಗಳಲ್ಲಿ ಕತ್ತೆ ಕಿರುಬ ಪ್ರಾಣಿ ಕಾಣಿಸಿಕೊಳ್ಳುತ್ತಿದೆ. ಈ ಜೀವಿಯನ್ನು ವನ್ಯಜೀವಿ ಇಲಾಖೆಯವರೇ ತಂದು ಬಿಟ್ಟಿದ್ದಾರೆ ಎಂಬ ಮಾತು ಸಾರ್ವಜನಿಕ ವಲಯದಲ್ಲಿ ಚರ್ಚೆಯಲ್ಲಿದೆ. ಆದರೆ, ಅದು ಸತ್ಯವಲ್ಲ’ ಎಂದವರು ಸ್ಪಷ್ಟಪಡಿಸಿದರು. `ಈ ಪ್ರಾಣಿ ಮಾನವನ ಮೇಲೆ ದಾಳಿ ಮಾಡುವುದಿಲ್ಲ. ಪರಿಸರ ಸಮತೋಲನವನ್ನು ಕಾಪಾಡುವಲ್ಲಿ ಕತ್ತೆ ಕಿರುಬದ ಪಾತ್ರ ದೊಡ್ಡದಾಗಿದ್ದು, ನೆರೆ ಜಿಲ್ಲೆಯ ಕಾಡಿನಿಂದ ಇಲ್ಲಿಗೆ ಬಂದಿರುವುದು ದೃಢವಾಗಿದೆ. ಆ ಜೀವಿಯ ಬಗ್ಗೆ ನಿಗಾವಹಿಸಲಾಗಿದೆ. ಮತ್ತೆ ಎಲ್ಲಾದರೂ ಈ ಜೀವಿ ಕಾಣಿಸಿದರೆ ಅರಣ್ಯ ಇಲಾಖೆಗೆ ಮಾಹಿತಿ ಕೊಡಿ’ ಎಂದವರು ಮನವಿ ಮಾಡಿದ್ದಾರೆ. `ಈ ಪ್ರಾಣಿಯ ಜೀವಕ್ಕೆ ಯಾರೂ ಕೂಡ ತೊಂದರೆ ಕೊಡಬೇಡಿ. ವನ್ಯಜೀವಿ ರಕ್ಷಣೆಗೆ ಕೈ ಜೋಡಿಸಿ’ ಎಂದವರು ಕರೆ ನೀಡಿದ್ದಾರೆ. - [ಮರಕ್ಕೆ ಬೈಕ್ ಗುದ್ದಿದವನ ಮರಣ](https://mobiletime.in/2025/11/the-death-of-a-person-who-punched-a-bike-into-a-tree/): ಹೊಟೇಲ್ ಕೆಲಸ ಮಾಡಿ ಬದುಕು ಕಟ್ಟಿಕೊಂಡಿದ್ದ ಪೆದ್ರು ಸಿದ್ದಿ ಅವರು ತಮ್ಮ 24ನೇ ವಯಸ್ಸಿನಲ್ಲಿಯೇ ಅಪಘಾತದಲ್ಲಿ ಸಾವನಪ್ಪಿದ್ದಾರೆ. ಮುಂಡಗೋಡಿನ ಪೆದ್ರು ಸಿದ್ದಿ ಅವರು ಯಲ್ಲಾಪುರದಲ್ಲಿ ನಡೆದ ಅವಘಡದಲ್ಲಿ ಪ್ರಾಣ ಬಿಟ್ಟಿದ್ದಾರೆ. ಮುಂಡಗೋಡಿನ ಉಗ್ಗಿನಕೇರಿಯಲ್ಲಿ ಪೆದ್ರು ಸೆಬೆಸ್ಟಾನ್ ಕಾಮೇಲ್ ಸಿದ್ದಿ ಅವರು ವಾಸವಾಗಿದ್ದರು. ಹೊಟೇಲ್ ಕಾರ್ಮಿಕರಾಗಿ ಅವರು ಕುಟುಂಬ ನಡೆಸುತ್ತಿದ್ದರು. ನವೆಂಬರ್ 5ರ ಸಂಜೆ ಅವರು ಯಲ್ಲಾಪುರದ ಕಿರವತ್ತಿ-ಹುಲಗೋಡು ರಸ್ತೆಯಲ್ಲಿ ವೇಗವಾಗಿ ಬೈಕ್ ಓಡಿಸಿಕೊಂಡು ಹೊರಟಿದ್ದರು. ಹುಲಗೋಡಿನ ಬಳಿ ಅವರ ಬೈಕು ನಿಯಂತ್ರಣ ತಪ್ಪಿ ಮರಕ್ಕೆ ಗುದ್ದಿತು. ಈ ಅಪಘಾತದಲ್ಲಿ ಪೆದ್ರು ಸಿದ್ದಿ ಅವರು ಗಂಭೀರ ಪ್ರಮಾಣದಲ್ಲಿ ಗಾಯಗೊಂಡಿದ್ದರು. ರಾತ್ರಿ ಅವಧಿಯಲ್ಲಿ ಅವರು ಆಸ್ಪತ್ರೆಗೆ ತೆರಳಲಾಗದೇ ಮರದ ಅಡಿಯಲ್ಲಿಯೇ ಸಾವನಪ್ಪಿದರು. ನವೆಂಬರ್ 5ರ ಸಂಜೆ 7.30ರಿಂದ 11.45ಕ್ಕೆ ಅವರು ಸಾವನಪ್ಪಿದ್ದು, ಬಸ್ತಾಂವ್ಯ ಬೆಂಜಿತ್ ಸಿದ್ದಿ ಅವರು ಈ ಬಗ್ಗೆ ಪೊಲೀಸರಿಗೆ ವಿಷಯ ಮುಟ್ಟಿಸಿದರು. ನವೆಂಬರ್ 6ರ ನಸುಕಿನಲ್ಲಿ ಯಲ್ಲಾಪುರ ಪಿಐ ಪಿಐ ರಮೇಶ ಹಾನಾಪುರ ಹಾಗೂ ಪಿಎಸ್‌ಐ ಸಿದ್ದಪ್ಪ ಗುಡಿ ಸ್ಥಳ ಭೇಟಿ ಮಾಡಿದರು. ಬಸ್ತಾಂವ್ಯ ಬೆಂಜಿತ್ ಸಿದ್ದಿ ಅವರು ನೀಡಿದ ಮಾಹಿತಿ ಅನ್ವಯ ಪೊಲೀಸರು ಪ್ರಕರಣ ದಾಖಲಿಸಿದರು. `ಹೆಲ್ಮೇಟ್ ಬಳಸಿ-ನಿಧಾನವಾಗಿ ಚಲಿಸಿ’ - [ಕಾಗೇರಿ V/S ಕ್ವಾಂಟ್ರವರ್ಸಿ!](https://mobiletime.in/2025/11/kageri-v-s-quantraversi/): ಸರಳ, ಸಜ್ಜನ, ಶುದ್ಧಹಸ್ತದ ರಾಜಕಾರಣಿ ಎಂದು ಬಿಂಬಿತವಾಗಿದ್ದ ಉತ್ತರ ಕನ್ನಡ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಇದೀಗ ವಿವಾದದ ಕೇಂದ್ರವಾಗಿದ್ದಾರೆ. ರಾಷ್ಟ್ರಗೀತೆ ಹಾಗೂ ಭ್ರಷ್ಟಾಚಾರ ವಿಷಯವಾಗಿ ಅವರ ಹೆಸರು ಮುನ್ನೆಲೆಗೆ ಬಂದಿದೆ. ಇದೇ ಮೊದಲ ಬಾರಿಗೆ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ವಿರುದ್ಧ ಭ್ರಷ್ಟಾಚಾರದ ಆರೋಪ ಕೇಳಿ ಬಂದಿದೆ. ಅದರೊಂದಿಗೆ `ವಂದೇ ಮಾತರಂ’ ಕುರಿತು ಕಾಗೇರಿ ಅವರು ಮಾಡಿದ ಭಾಷಣವೊಂದು ವೈರಲ್ ಆಗಿದ್ದು, ಅದನ್ನು ವಿವಾದ ಎಂದು ಬಿಂಬಿಸಲಾಗಿದೆ. ಈ ಎರಡೂ ಕಾರಣದಿಂದ ಉತ್ತರ ಕನ್ನಡ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಚರ್ಚೆಯ ವಿಷಯವಾಗಿದ್ದಾರೆ. ಕಾಗೇರಿ ವಿರೋಧಿಸುವವರಿಗೆ ಈ ವಿವಾದಿತ ವಿಷಯ ಆಹಾರವಾಗಿದೆ. ವಿಧಾನಸಭೆಯ ಸಭಾಧ್ಯಕ್ಷರ ಕಚೇರಿಯಲ್ಲಿ ಆಡಳಿತಾತ್ಮಕ ಸುಧಾರಣೆಯ ಹೆಸರಿನಲ್ಲಿ ಕೋಟ್ಯಂತರ ರೂ ದುಂದುವೆಚ್ಚ ನಡೆದ ಬಗ್ಗೆ `ದ ಫೈಲ್’ ತನಿಖಾ ವರದಿ ಪ್ರಕಟಿಸಿತ್ತು. ಆ ವರದಿ ಉಲ್ಲೇಖಿಸಿ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ತನಿಖೆಗೆ ಆಗ್ರಹಿಸಿದ್ದರು. ಅದರೊಂದಿಗೆ `ಯುಟಿ ಖಾದರ್ ಅವರು ಈ ಹಗರಣದಿಂದ ಹೊರಬರಲಿ. ಪಾರದರ್ಶಕವಾಗಿ ಸತ್ಯ ಹೊರಬರಲು ಹಾಲಿ ನ್ಯಾಯಾಧೀಶರ ನೇತ್ರತ್ವದಲ್ಲಿ ತನಿಖೆಯಾಗಲಿ’ ಎಂದು ಈ ಮೊದಲು ವಿಧಾನಸಭೆ ಸಭಾಧ್ಯಕ್ಷರೂ ಆಗಿದ್ದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಒತ್ತಾಯಿಸಿದ್ದರು. ವಿಧಾನಸೌಧಕ್ಕೆ ವಿದ್ಯುತ್ ಅಲಂಕಾರ, ಶಾಸಕರ ಭವನಕ್ಕೆ ಹಾಸಿಗೆ-ದಿಂಬುಗಳ ಖರೀದಿ, ದುಂದುವೆಚ್ಚದ ವಿದೇಶ ಅಧ್ಯಯನ ಪ್ರವಾಸ, ಮತ್ತು ವಿಧಾನಸೌಧದ ಮೊಗಸಾಲೆಯಲ್ಲಿ ಮಸಾಜ್ ಪಾರ್ಲರ್ ಮಾಡಿದ ಅಪಕೀರ್ತಿ ಹಾಗೂ ಉಚಿತ ಊಟ ತಿಂಡಿ ಸರಬರಾಜು ನೆಪದಲ್ಲಿ ಅಕ್ರಮ ನಡೆಸಿದ ಅನುಮಾನದ ಬಗ್ಗೆ ಕಾಗೇರಿ ಅವರು ಮಾತನಾಡಿದ್ದರು. ಕೋಟಿ ವೆಚ್ಚದಲ್ಲಿ ಬಾಗಿಲು ನಿರ್ಮಾಣ, ಅನಗತ್ಯ ನೆಲಹಾಸು, ಪುಸ್ತಕ ಮೇಳ ಹೆಸರಿನಲ್ಲಿ ದುಂದುವೆಚ್ಚ, ಎಐ ಕ್ಯಾಮರಾ ಹಾಗೂ ಟಿವಿ ಅಳವಡಿಕೆಯಲ್ಲಿ ಪಾರದರ್ಶಕತೆ ಇಲ್ಲದಿರುವುದನ್ನು ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಪ್ರಸ್ತಾಪಿಸಿದ್ದರು. ಶಾಸಕರ ಭವನಕ್ಕೆ ಸ್ಮಾರ್ಟ್ ಡೋರ್ ಲಾಕ್, ಸ್ಮಾರ್ಟ್ ಸೇಫ್ ಲಾಕರ್ಸ್, ಸ್ಮಾರ್ಟ್ ಎನರ್ಜಿ ಸಲ್ಯೂಷನ್ಸ್, ಸ್ಟೇನ್‌ಲೆಸ್ ಸ್ಟೀಲ್ ವಾಟರ್ ಪ್ಯೂರಿಫೈಯರ್‌ಗಳ ಖರೀದಿಯಲ್ಲಿನ ದರಪಟ್ಟಿ ಲೋಪಗಳ ಬಗ್ಗೆ ವಿವರಿಸಿದ್ದರು. ಹಣಕಾಸು ಇಲಾಖೆ ಅನುಮತಿ ಇಲ್ಲದೇ ಈ ಎಲ್ಲಾ ಕೆಲಸ ನಿರ್ವಹಿಸಿದ ಬಗ್ಗೆ ಆಕ್ಷೇಪಿಸಿದ್ದು, ರಾಜ್ಯ ಸರ್ಕಾರಕ್ಕೆ ತಲೆನೋವಿನ ವಿಷಯವಾಯಿತು. ಹೀಗಾಗಿ ಕಾಗೇರಿ ಅವರು ವಿಧಾನಸಭಾ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ನಡೆದ ಹಗರಣಗಳನ್ನು ರಾಜ್ಯ ಸರ್ಕಾರವೇ ಹೊರತೆಗೆಯುವ ಪ್ರಯತ್ನ ನಡೆಸಿತು. ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ವಿಧಾನಸಭೆ ಅಧ್ಯಕ್ಷರಾಗಿರುವಾಗ ಸಾಕಷ್ಟು ಅವ್ಯವಹಾರ ನಡೆದಿದೆ ಎಂದು ರಾಜ್ಯ ಸರ್ಕಾರದ ರಾಜಕಾರಣಿಗಳು ದೂರಿದರು. ಇಷ್ಟು ದಿನ ಮೌನವಾಗಿದ್ದವರು ಇದೀಗ ಗುಡುಗುತ್ತಿರುವುದೇತಕೆ? ಎಂಬ ಪ್ರಶ್ನೆ ಉದ್ಬವಿಸಿದಾಗ ಆ ಗುಡುಗು ಕಡಿಮೆಯಾಯಿತು. ಅದಾಗಿಯೂ, ಕೆಲಸ ಆಗುವ ಮುನ್ನವೇ ಖಾಸಗಿ ಕಂಪನಿಗೆ 5 ಕೋಟಿ ರೂ ವೆಚ್ಚದಲ್ಲಿ ವೈಫೈ ನೆಟ್‌ವರ್ಕ ಅಳವಡಿಸಲು ಹಣ ಪಾವತಿ, ಶಾಸಕರ ಓಟಾಟಕ್ಕೆ ಕಾರು ಖರೀದಿಗೂ ಬಿಜೆಪಿ ಪ್ರಭಾವಿಗಳ ಒಡೆತನದ ಶೋರೂಮಿಗೆ ಟೆಂಡರ್ ನೀಡಿರುವುದು ಹಾಗೂ ಅಧಿವೇಶನಗಳ ನೇರ ಪ್ರಸಾರಕ್ಕೆ ಉಚಿತ ಅವಕಾಶವಿದ್ದರೂ 3 ಕೋಟಿ ರೂ ವೆಚ್ಚದಲ್ಲಿ ಟೆಂಡರ್ ನೀಡಿರುವ ಆರೋಪಗಳು ವಿಶ್ವೇಶ್ವರ ಹೆಗಡೆ ಕಾಗೇರಿ ಅವರನ್ನು ಸುತ್ತುವರೆದಿದೆ. `ವಿಧಾನಸೌಧದಲ್ಲಿ ಈಗಲೂ ಸರಿಯಾಗಿ ವೈಫೈ ಸಿಗುತ್ತಿಲ್ಲ. ಟಯೋಟಾ ಕಂಪನಿಗೆ ಕೊಡುತ್ತಿದ್ದ ಕಾರಿನ ಟೆಂಡರ್ ಶೋರೂಂ ಪಾಲಾಗಿದ್ದು, ಅದರಲ್ಲಿ ಅಕ್ರಮ ನಡೆದಿದೆ. ಜೊತೆಗೆ ಉಚಿತ ಪ್ರಸಾರಕ್ಕೂ ಅನಗತ್ಯ ಹಣ ವೆಚ್ಚ ಮಾಡಲಾಗಿದೆ’ ಎಂದು ಸದ್ಯದ ಸಭಾಧ್ಯಕ್ಷ ಯುಟಿ ಖಾದರ್ ಅವರು ಕಾಗೇರಿ ಅವರ ಆರೋಪಕ್ಕೆ ಪ್ರತಿಯಾಗಿ ತಮ್ಮ ಆರೋಪ ಮಾಡಿದ್ದಾರೆ. ಇದರೊಂದಿಗೆ ರಾಷ್ಟ್ರಗೀತೆ  ವಿಷಯವಾಗಿ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಆಡಿದ ಮಾತು ಅನೇಕರನ್ನು ಕೆರಳಿಸಿದೆ. ಇದಕ್ಕೆ ಪ್ರತಿಯಾಗಿ ಅನೇಕ ರಾಜಕಾರಣಿಗಳು ಕಾಗೇರಿ ಅವರ ಮಾತನ್ನು ಖಂಡಿಸುತ್ತಿದ್ದಾರೆ. `ಜನಗಣಮನ ಎಂಬುದು ಬ್ರಿಟಿಷರನ್ನು ಸ್ವಾಗತಿಸಲು ರಚಿಸಿದ ಗೀತೆ’ ಎಂದು ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಹೇಳಿದನ್ನು ಅನೇಕರು ಖಂಡಿಸಿದ್ದಾರೆ. ಜೊತೆಗೆ ಅನೇಕರು `ವಂದೇ ಮಾತರಂ ಗೀತೆ ದೇಶದ ರಾಷ್ಟçಗೀತೆ ಆಗಬೇಕಿತ್ತು’ ಎಂದು ಕಾಗೇರಿ ಹೇಳಿದನ್ನು ಸ್ವಾಗತಿಸಿದ್ದಾರೆ. ಎರಡು ವಿಷಯದ ಚರ್ಚೆಯನ್ನು ಮೌನವಾಗಿ ಆಲಿಸಯತ್ತಿರುವ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಸದ್ಯದ ಸ್ಥಿತಿಯಲ್ಲಿ `ತಾನೇನೂ ತಪ್ಪು ಮಾತನಾಡಿಲ್ಲ’ ಎಂದು ಸುಮ್ಮನಿದ್ದಾರೆ. - [2025 ನವೆಂಬರ್ 6ರ ದಿನ ಭವಿಷ್ಯ](https://mobiletime.in/2025/11/prediction-for-november-6-2025/): ಮೇಷ ರಾಶಿ: ನಿಮ್ಮ ಉತ್ಸಾಹ ಮತ್ತು ಶಕ್ತಿಯು ಹೊಸ ಅವಕಾಶಗಳನ್ನು ತರುತ್ತದೆ. ಹಣಕಾಸು ಸತತವಾಗಿ ಸುಧಾರಣೆಯಾಗುತ್ತದೆ. ಕುಟುಂಬದಲ್ಲಿ ಶಾಂತಿ ಮೂಡಲಿದೆ. ವೃಷಭ ರಾಶಿ: ಕೆಲಸದಲ್ಲಿ ಶಾಶ್ವತ ಸಾಧನೆಗಳಿಗೆ ಅವಕಾಶ ಸಿಗಲಿದೆ. ಹಳೆಯ ಸಮಸ್ಯೆಗಳು ದೂರವಾಗಲಿದೆ. ಹಣಕಾಸಿನ ಲಾಭ ಸಾಧ್ಯವಿದೆ. ಪ್ರೀತಿಯಲ್ಲಿ ನಿಷ್ಠೆ ಮತ್ತು ಸಮಾಧಾನದ ಮಾತು ಸಿಗಲಿದೆ. ಮಿಥುನ ರಾಶಿ: ನಿಮ್ಮ ಸಂವಹನ ಶಕ್ತಿ ಪ್ರಯೋಜನಕ್ಕೆ ಬರಲಿದೆ. ಪ್ರಮುಖ ನಿರ್ಣಯಗಳನ್ನು ಗಮನಕೊಟ್ಟು ಆಲಿಸಿ. ಉದ್ಯೋಗದಲ್ಲಿ ಯಶಸ್ಸು ಸಿಗಲಿದೆ. ಆತ್ಮವಿಶ್ವಾಸದಿಂದ ಕೆಲಸ ಮಾಡಿ. ಕರ್ಕ ರಾಶಿ: ಕುಟುಂಬ ಜೀವನದಲ್ಲಿ ಸಮ್ಮಿಲನ ಸಾಧ್ಯವಿದೆ. ಸಮಸ್ಯೆಗಳು ದೂರವಾಗಲಿದೆ. ಭವಿಷ್ಯದ ಯೋಜನೆಗಳಿಗೆ ಆಧ್ಯತೆ ಕೊಡಿ. ಸಿಂಹ ರಾಶಿ: ದೊಡ್ಡ ದೊಡ್ಡ ಅವಕಾಶಗಳು ಎದುರಾಗಲಿದೆ. ಸ್ನೇಹಿತರ ಸಹಾಯ ಸಿಗಲಿದೆ. ಸಂಘರ್ಷಗಳ ವಿರುದ್ಧ ಹೋರಾಟಕ್ಕೆ ಸಿದ್ಧವಾಗುವುದು ಮುಖ್ಯ. ಕನ್ಯಾ ರಾಶಿ: ಆರ್ಥಿಕ ಲಾಭ ಸಿಗಲಿದೆ. ನಿಮ್ಮ ಗುರಿಗಳನ್ನು ಸರಿಯಾಗಿ ನಿಭಾಯಿಸುತ್ತೀರಿ. ಪ್ರೀತಿಯಲ್ಲಿ ನಿಷ್ಠೆ ಹಾಗೂ ಪ್ರಾಮಾಣಿಕತೆ ಅಗತ್ಯ. ಕುಟುಂಬದ ಸಹಾಯ ಸಿಗಲಿದೆ. ತುಲಾ ರಾಶಿ: ಪ್ರೀತಿ-ಪ್ರೇಮ ವಿಷಯಗಳು ಆಳವಾಗಲಿದೆ. ಧೈರ್ಯ ಮತ್ತು ಶ್ರಮದಿಂದ ಕಾರ್ಯ ನಿರ್ವಹಿಸಿ. ಉತ್ತಮ ಆರೋಗ್ಯಕ್ಕಾಗಿ ವ್ಯಾಯಾಮ ಅಗತ್ಯ. ವೃಶ್ಚಿಕ ರಾಶಿ: ಧ್ಯಾನ-ಭಜನೆ ನಿಮಗೆ ಉತ್ಸಾಹ ನೀಡಲಿದೆ. ಹಣಕಾಸು ವಿಷಯ ಚೇತರಿಕೆ ಆಗಲಿದೆ. ಉದ್ಯೋಗದಲ್ಲಿನ ಸವಾಲುಗಳು ದೂರವಾಗಲಿದೆ. ಧನು ರಾಶಿ: ನೂತನ ಯೋಜನೆಗಳಿಗೆ ಅವಕಾಶ ಹೆಚ್ಚಲಿದೆ. ಉದ್ಯೋಗದಲ್ಲಿ ಪ್ರಗತಿ ಆಗಲಿದೆ. ಕುಟುಂಬದಲ್ಲಿ ಕನಿಕರ ಸಿಗಲಿದೆ. ಮಕರ ರಾಶಿ: ಹಣಕಾಸು ಸುಧಾರಣೆ ಆಗಲಿದ್ದು, ವೃತ್ತಿಯಲ್ಲಿ ಹೊಸ ಅವಕಾಶಗಳು ಬರಲಿದೆ. ಉದ್ಯೋಗದಲ್ಲಿ ಹೆಚ್ಚಿನ ಸಮಯ ಕೊಡುವುದು ಮುಖ್ಯ. ಪ್ರೀತಿಯಲ್ಲಿ ಸಹನುಭೂತಿ ಸಿಗಲಿದೆ. ಕುಂಭ ರಾಶಿ: ಹೊಸ ಕಲಿಕೆ ಮತ್ತು ಜ್ಞಾನದ ಲಾಭ ಸಿಗಲಿದೆ. ಆರೋಗ್ಯ ಸಮಸ್ಯೆಗಳು ದೂರವಾಗಲಿದೆ. ಪ್ರೀತಿಸಿದವರನ್ನು ಕಳೆದುಕೊಳ್ಳಬೇಡಿ. ಮೀನ ರಾಶಿ: ಆಧ್ಯಾತ್ಮಿಕ ಬೆಳವಣಿಗೆ ಆಗಲಿದೆ. ಹಣಕಾಸು ಸ್ಥಿತಿಗೆ ಬಲ ಬರಲಿದೆ. ಉದ್ಯೋಗದಲ್ಲಿ ಸೃಜನಶೀಲತೆ ಹೆಚ್ಚಲಿದೆ. ಕುಟುಂಬದಲ್ಲಿ ಸಹಕಾರ ಮೂಡಲಿದ್ದು, ಪ್ರೀತಿಯಲ್ಲಿ ವಿಶ್ವಾಸದ ವೃದ್ಧಿ ಸಾಧ್ಯವಿದೆ. - [ಬಾವಿಗೆ ಬಿದ್ದ ಮಹಿಳೆ: ಇನ್ನಿಲ್ಲ!](https://mobiletime.in/2025/11/woman-who-fell-into-a-well-no-more/): ಸಿದ್ದಾಪುರದ ದುರ್ಗಿ ನಾಯ್ಕ ಅವರು ಬಾವಿಗೆ ಬಿದ್ದು ಸಾವನಪ್ಪಿದ್ದಾರೆ. ನೀರು ತರಲು ಹೋದಾಗ ಈ ಅವಘಡ ನಡೆದಿದೆ. ಸಿದ್ದಾಪುರದ ದೇವಿಸರ ಬಳಿಯ ಗವಿನಸರದಲ್ಲಿ ದುರ್ಗಿ ನಾಯ್ಕ ಅವರು ವಾಸವಾಗಿದ್ದರು. ಅವರು ಆಗಾಗ ಮೂರ್ಚೆ ಹೋಗುತ್ತಿದ್ದರು. ಇದಕ್ಕಾಗಿ ಅವರ ಮಗ ರಮೇಶ ನಾಯ್ಕ ಅವರು ಸಿದ್ದಾಪುರ ಆಸ್ಪತ್ರೆಗೆ ತೋರಿಸಿದ್ದರು. ಆ ವೇಳೆ ದುರ್ಗಿ ನಾಯ್ಕ ಅವರಿಗೆ ಪಿಡ್ಸ ರೋಗವಿರುವುದು ಗೊತ್ತಾಗಿತ್ತು. ಕಳೆದ ಮೂರು ತಿಂಗಳ ಅವಧಿಯಲ್ಲಿ ದುರ್ಗಿ ನಾಯ್ಕ ಅವರು ಸಾಕಷ್ಟು ಬಾರಿ ಮೂರ್ಚೆ ಹೋಗಿದ್ದರು. ಅದಾಗಿಯೂ ಅವರು ವಿಶ್ರಾಂತಿಪಡೆಯುತ್ತಿರಲಿಲ್ಲ. ನವೆಂಬರ್ 4ರ ಸಂಜೆ ಮನೆ ಬಳಿಯ ಬಾವಿ ಹತ್ತಿರ ಹೋಗಿದ್ದರು. ಅಲ್ಲಿಂದ ನೀರು ತರಲು ಹೋದ ಅವರು ಎಷ್ಟು ಹೊತ್ತಾದರೂ ಬರಲಿಲ್ಲ. ಹುಡುಕಾಟ ನಡೆಸಿದಾಗ ಅವರು ಬಾವಿಯಲ್ಲಿ ಶವವಾಗಿದ್ದರು. ನೀರು ತರಲು ಹೋದಾಗ ಮೂರ್ಚೆ ಬಂದು ಅವರು ಬಾವಿಗೆ ಬಿದ್ದು ಸಾವನಪ್ಪಿರುವ ಬಗ್ಗೆ ರಮೇಶ ನಾಯ್ಕ ಅವರು ಪೊಲೀಸರಿಗೆ ತಿಳಿಸಿದರು. ಪೊಲೀಸರು ಅದೇ ರೀತಿ ಪ್ರಕರಣ ದಾಖಲಿಸಿದರು. - [ಮೀನು ಹಿಡಿಯಲು ಹೋದವ ನೀರುಪಾಲು](https://mobiletime.in/2025/11/the-one-who-went-fishing-is-a-water-buffalo/): ಹೊನ್ನಾವರದ ಶರಾವತಿ ನದಿಯಲ್ಲಿ ಮೀನು ಹಿಡಿಯುತ್ತಿದ್ದ ಗಜಾನನ ಅಂಬಿಗ ಅವರು ನೀರುಪಾಲಾಗಿದ್ದಾರೆ. ಸಾಕಷ್ಟು ಹುಡುಕಾಟದ ನಂತರ ಅವರ ಶವ ಸಿಕ್ಕಿದೆ. ಹೊನ್ನಾವರದ ಮಂಕಿ ಬಳಿಯ ಅನಿಲಗೋಡ ಮಕ್ಕಿಗದ್ದೆಯಲ್ಲಿ ಗಜಾನನ ರಾಮಾ ಅಂಬಿಗ (58) ಅವರು ವಾಸವಾಗಿದ್ದರು. ಮೀನುಗಾರಿಕೆ ನಡೆಸಿ ಅವರು ಜೀವನ ನಡೆಸುತ್ತಿದ್ದರು. ನವೆಂಬರ್ 4ರಂದು ಅನಿಲಗೋಡದಿಂದ ಹಾದುಹೋದ ಶರಾವತಿ ನದಿಯಲ್ಲಿ ಅವರು ದೋಣಿ ಸಂಚಾರ ಮಾಡಿದ್ದರು. ಮೀನು ಹಿಡಿಯುವ ವೇಳೆ ಅವರು ನೀರಿನಲ್ಲಿ ಬಿದ್ದು ಮುಳುಗಡೆಯಾಗಿದ್ದು, ಸಾಕಷ್ಟು ಹುಡುಕಾಟ ನಡೆಯಿತು. ಆದರೆ, ಆ ದಿನ ಅವರು ಸಿಗಲಿಲ್ಲ. ನವೆಂಬರ್ 5ರಂದು ಅಗ್ನಿಶಾಮಕ ಸಿಬ್ಬಂದಿ ಹುಡುಕಾಟ ನಡೆಸಿದರು. ಆಗ ಗಜಾನನ ಅಂಬಿಗ ಅವರು ಶವವಾಗಿ ಸಿಕ್ಕಿದರು. ಗಜಾನನ ಅಂಬಿಗ ಅವರ ಮಗ ಸುಬ್ರಹ್ಮಣ್ಯ ಅಂಬಿಗ ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದು, ಮಂಕಿ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿದರು. - [ಲಾರಿಗಳ ನಡುವೆ ಘರ್ಷಣೆ: ಚಾಲಕ ಸಾವು!](https://mobiletime.in/2025/11/collision-between-trucks-driver-dies/): ಹಳಿಯಾಳದಲ್ಲಿ ನಿಂತಿದ್ದ ಲಾರಿಗೆ ಮತ್ತೊಂದು ಲಾರಿ ಹಿಮ್ಮುಖವಾಗಿ ಚಲಿಸಿ ಡಿಕ್ಕಿ ಹೊಡೆದಿದ್ದು, ಆ ಡಿಕ್ಕಿಯ ರಭಸಕ್ಕೆ ಮಂಜುನಾಥ ಮೆಣಸಿನಕಾಯಿ ಎಂಬಾತರು ಸಾವನಪ್ಪಿದ್ದಾರೆ. ಹಳಿಯಾಳದ ಈಐಡಿ ಸಕ್ಕರೆ ಕಾರ್ಖಾನೆ ಎದುರಿನ ಸೇತುವೆ ಬಳಿ ಬುಧವಾರ ಈ ಅವಘಡ ನಡೆದಿದೆ. ಕಲಘಟಕಿ ದಾಸ್ತಿಕೊಪ್ಪದ ಮಂಜುನಾಥ ಮೆಣಸಿನಕಾಯಿ (24) ಅವರು ಬುಧವಾರ ತಮ್ಮ ಲಾರಿ ಮುಂದೆ ನಿಂತು ಬಂಪರ್ ಒರೆಸುತ್ತಿದ್ದರು. ಆ ಲಾರಿಯ ಮುಂದೆ ಇನ್ನೊಂದು ಲಾರಿ ನಿಂತಿದ್ದು, ಇನ್ನೊಂದು ಲಾರಿಯ ಚಾಲಕ ಶಿವಲಿಂಗಪ್ಪ ಎಮ್ಮಟ್ಟಿ ಅವರು ತಮ್ಮ ಲಾರಿಯನ್ನು ಹಿಮ್ಮುಖವಾಗಿ ಓಡಿಸಿದರು. ಆಗ, ಹಿಮ್ಮುಖವಾಗಿ ಚಲಿಸಿದ ಲಾರಿ ಮಂಜುನಾಥ ಮೆಣಸಿನಕಾಯಿ ಅವರಿಗೆ ಡಿಕ್ಕಿಯಾಯಿತು. ಪರಿಣಾಮ ಮಂಜುನಾಥ ಮೆಣಸಿನಕಾಯಿ ಅವರು ಗಂಭೀರ ಪ್ರಮಾಣದಲ್ಲಿ ಗಾಯಗೊಂಡರು. ಅವರನ್ನು ಚಿಕಿತ್ಸೆಗಾಗಿ ಹಳಿಯಾಳ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆಗ ವೈದ್ಯರು ಮಂಜುನಾಥ ಮೆಣಸಿನಕಾಯಿ ಅವರು ಸಾವನಪ್ಪಿದ ವಿಷಯ ತಿಳಿಸಿದರು. ಯಡೋಗಾದ ವಿಠ್ಠಲ ತೇರಗಾಂವ್ಕರ್ ಅವರು ಈ ಎಲ್ಲಾ ವಿಷಯದ ಬಗ್ಗೆ ಪೊಲೀಸರಿಗೆ ತಿಳಿಸಿದ್ದು, ಹಿರೆಹೊನ್ನಾಳಿಯ ಶಿವಲಿಂಗಪ್ಪ ಎಮ್ಮೆಟ್ಟಿ ವಿರುದ್ಧ ಹಳಿಯಾಳ ಪೊಲೀಸರು ಪ್ರಕರಣ ದಾಖಲಿಸಿದರು. - [ಹೊಗೆ ಮಾನವರಿಗೆ ಪೊಲೀಸ್ ಆತಿಥ್ಯ!](https://mobiletime.in/2025/11/police-hospitality-for-smoke-filled-humans/): ಗಾಂಜಾ ವ್ಯಸನಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವ ಶಿರಸಿ ಪೊಲೀಸರು ಬುಧವಾರ ಒಂದೇ ದಿನ ನಾಲ್ವರನ್ನು ಬಂಧಿಸಿದ್ದಾರೆ. ನಿಷೇಧಿತ ಗಾಂಜಾ ಸೇವಿಸಿದ ಕಾರಣ ಅವರ ವಿರುದ್ಧ ಪ್ರಕರಣ ದಾಖಲಿಸಿ ಕಠಿಣ ಕ್ರಮ ಜರುಗಿಸಿದ್ದಾರೆ. ಶಿರಸಿಯ ಕೋರ್ಟ ರಸ್ತೆಯ ಕಿಶನ್ ನಾರಾಯಣ ಹರಿಜನ (23) ಹಾಗೂ ಶಿರಸಿ ಬಾಪೂಜಿನಗರದ ಮುತ್ತಣ್ಣ ಭೀಮಪ್ಪ ಭೋವಿ (27) ಅವರು ಶಹರದ ಕ್ಯಾಪ್ಟನ್ ಕ್ಯಾಂಪಸ್ ರಸ್ತೆಯಲ್ಲಿ ಹೊಗೆ ಬಿಡುವಾಗ ಪೊಲೀಸರು ಹಿಡಿದಿದ್ದಾರೆ. ಶಿರಸಿ ನೆಹರುನಗರದ ಮನೋಜ್ ರಾಮಾ ಮೇತ್ರಿ (22) ಹಾಗೂ ಶಿರಸಿ ಐದು ರಸ್ತೆ ಬಳಿಯ ಸಮೀರ್ ಅಮೀನುದ್ದಿನ ಫಿರ್ಜದೆ (19) ಅವರು ಆನೆಹೊಂಡದ ಹತ್ತಿರ ಅಮಲಿನಲ್ಲಿರುವಾಗ ಸಿಕ್ಕಿ ಬಿದ್ದಿದ್ದಾರೆ. ಅವರೆಲ್ಲರನ್ನು ವಶಕ್ಕೆಪಡೆದ ಪೊಲೀಸರು ಪಂಡಿತ ಸಾರ್ವಜನಿಕ ಆಸ್ಪತ್ರೆಯಲ್ಲಿ ವೈದ್ಯಕೀಯ ತಪಾಸಣೆಗೆ ಒಳಪಡಿಸಿದರು. ಆಗ, ಗಾಂಜಾ ಸೇವನೆ ದೃಢವಾಗಿದ್ದರಿಂದ ಪೊಲೀಸ್ ಪ್ರಕರಣ ದಾಖಲಿಸಿದ್ದಾರೆ. ಡಿವೈಎಸ್ಪಿ ಗೀತಾ ಪಾಟೀಲ್, ಪಿಐ ಶಶಿಕಾಂತ ವರ್ಮಾ ಅವರ ಜೊತೆ ಪಿಎಸ್‌ಐ ನಾಗಪ್ಪ ಬಿ ಅವರ ಗಾಂಜಾದಿAದ ದೂರವಿರುವಂತೆ ಜನರಿಗೆ ಕರೆ ನೀಡಿದ್ದಾರೆ. ಪಿಎಸ್‌ಐ ನಾರಾಯಣ ರಾಠೋಡ್ ಅವರ ನೇತೃತ್ವದಲ್ಲಿ ಎಎಸ್‌ಐ ನೆಲ್ಸನ್ ಮೆಂಥರೋ, ಪೊಲೀಸ್ ಸಿಬ್ಬಂದಿ ಹನುಮಂತ್ ಮಾಕಾಪುರ, ರಾಮಯ್ಯ ಪೂಜಾರಿ, ಸದ್ದಾಂ ಹುಸೇನ್, ಚನ್ನಬಸಪ್ಪ ಕ್ಯಾರಕಟ್ಟಿ, ರಾಜಶೇಖರ್ ಅಂಗಡಿ, ಸುನಿಲ್ ಅವರು ಈ ದಿನದ ಕಾರ್ಯಾಚರಣೆಯಲ್ಲಿದ್ದರು. - [ಫೋನಿಗೆ ಸಿಗದ ಪೊಲೀಸರಿಗೆ ಪತ್ರ ಬರೆದ ಜನಸಾಮಾನ್ಯ!](https://mobiletime.in/2025/11/an-ordinary-person-wrote-a-letter-to-the-police-who-couldnt-reach-them-by-phone/): ಪೊಲೀಸ್ ಅಧಿಕಾರಿಗಳಿಗೆ ಫೋನ್ ಮಾಡಿದಾಗ ಅವರು ಮಾತಿಗೆ ಸಿಗದ ಕಾರಣ ಸಮಸ್ಯೆ ವಿವರಿಸಿ ಕುಮಟಾದ ಜನಸಾಮಾನ್ಯರ ಸಮಾಜ ಕಲ್ಯಾಣ ಕೇಂದ್ರದವರು ಪತ್ರ ಬರೆದಿದ್ದಾರೆ. ಜೊತೆಗೆ `ಫೋನಿನಲ್ಲಿ ಮಾತನಾಡಲು ಸಮಯ ನಿಗದಿಪಡಿಸಿ’ ಎಂದು ಸಹ ಅವರು ಮನವಿ ಮಾಡಿದ್ದಾರೆ. ಕೆಲವು ಸಲ 112 ಸಹಾಯವಾಣಿಗೆ ಫೋನ್ ಮಾಡಿದಾಗ ಸ್ಪಂದನೆ ಸಿಗದ ಬಗ್ಗೆ ಕೇಂದ್ರದ ಅಧ್ಯಕ್ಷ ಆಗ್ನೇಲ್ ರೋಡಿಗ್ರಿಸ್ ವಿವರಿಸಿದ್ದಾರೆ. ಇದರೊಂದಿಗೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲು ತೆರಳಿದಾಗ ದೂರು ಸ್ವೀಕರಿಸಿದ ಬಗ್ಗೆ ಅವರು ದೂರಿದ್ದಾರೆ. `ಇಂಥ ವಿಷಯಗಳ ಬಗ್ಗೆ ಮೇಲಧಿಕಾರಿಗಳಿಗೆ ತಿಳಿಸಲು ಸರ್ಕಾರಿ ಸಂಖ್ಯೆಗೆ ಫೋನ್ ಮಾಡಿದರೂ ಕರೆ ಸ್ವೀಕರಿಸುತ್ತಿಲ್ಲ’ ಎಂದವರು ಹೇಳಿದ್ದಾರೆ. ಜಿಲ್ಲಾ ಪೊಲೀಸ್ ವರಿಷ್ಠಧಿಕಾರಿಯವರಿಗೆ ಪತ್ರ ಬರೆದ ಜನಸಾಮಾನ್ಯರ ಸಮಾಜ ಕಲ್ಯಾಣ ಕೇಂದ್ರದವರು `ಸಾರ್ವಜನಿಕರು ಯಾವ ಸಮಯದಲ್ಲಿ ಫೋನ್ ಮಾಡಬೇಕು?’ ಎಂದು ಪ್ರಕಟಣೆ ನೀಡುವ ಬಗ್ಗೆ ಮನವಿ ಮಾಡಿದ್ದಾರೆ. `ಯಾವಾಗ ಫೋನ್ ಮಾಡಿದರೂ ಅಧಿಕಾರಿಗಳು ಸಭೆಯಲ್ಲಿರುವುದಾಗಿ ಹೇಳುತ್ತಾರೆ. ಹೀಗಾಗಿ ಸಾರ್ವಜನಿಕರ ಜೊತೆ ಫೋನಿನಲ್ಲಿ ಮಾತನಾಡಲು ಸಮಯ ಕೊಡಬೇಕು’ ಎಂದವರು ಅರ್ಜಿಯಲ್ಲಿ ಬರೆದಿದ್ದಾರೆ. ಕುಮಟಾ ಪೊಲೀಸ್ ಠಾಣೆಗೆ ತೆರಳಿ ಈ ಪತ್ರ ನೀಡಿದ್ದಾರೆ. - [ಹಳೆ ದ್ವೇಷ: ಹೊಸ ಹೊಡೆದಾಟ!](https://mobiletime.in/2025/11/old-hatred-new-fight/): ಗೋಕರ್ಣದ ಈಶ್ವರ ಜಾದವ್ ಅವರ ಮೇಲೆ ಸಂತೋಷ ಜೋಡನಕರ್ ಹಾಗೂ ರಾಜು ಜೋಡನಕರ್ ಎಂಬ ಸಹೋದರರು ದಾಳಿ ಮಾಡಿದ್ದಾರೆ. ಅವರಿಬ್ಬರ ದಾಳಿಗೆ ಈಶ್ವರ ಜಾದವ್ ಅವರು ತತ್ತರಿಸಿದ್ದಾರೆ. ನವೆಂಬರ್ 3ರ ರಾತ್ರಿ ಈಶ್ವರ ವಿಠೋಬಾ ಚಾದವ್ ಅವರು ತಮ್ಮ ಮನೆ ಮುಂದೆ ನಿಂತಿದ್ದರು. ಸಂಬAಧಿ ಸಂತೋಷ ತುಕಾರಾಮ ಜೋಡನಕರ್ ಅವರ ಜೊತೆ ಅವರು ಮಾತನಾಡುತ್ತಿದ್ದರು. ಆಗ ಅಲ್ಲಿ ಸಂತೋಷ ತುಕಾರಾಮ ಜೋಡನಕರ್ ಹಾಗೂ ರಾಜು ತುಕಾರಾಮ ಜೋಡನಕರ್ ದೊಣ್ಣೆ ಹಿಡಿದು ಬಂದರು. ವಿಶ್ವನಾಥ ಜೋಡನಕರ್ ಅವರ ಬಳಿ ಮಾತನಾಡುತ್ತಿರುವಾಗಲೇ ಅವರಿಬ್ಬರು ಈಶ್ವರ ಜಾದವ್ ಅವರ ಮೇಲೆ ಆಕ್ರಮಣ ನಡೆಸಿದರು. ಕಟ್ಟಿಗೆ ಹಿಡಿದು ಬಡಿದ ಪರಿಣಾಮ ಈಶ್ವರ ಜಾದವ್ ಅವರ ಕೈ, ಕಾಲು, ಮಂಡಿ ಹಾಗೂ ತಲೆಗೆ ಪೆಟ್ಟಾಯಿತು. ಈ ಹೊಡೆದಾಟಕ್ಕೆ ಕಾರಣ ಗೊತ್ತಾಗಲಿಲ್ಲ. ನೋವು ತಿಂದ ಈಶ್ವರ ಜಾದವ್ ಅವರು ಗೋಕರ್ಣ ಪೊಲೀಸರ ಬಳಿ ತಮ್ಮ ಸಮಸ್ಯೆ ಹೇಳಿದರು. ದಾಳಿ ನಡೆಸಿದ ಸಹೋದರರ ವಿರುದ್ಧ ದೂರು ನೀಡಿ, ಪ್ರಕರಣ ದಾಖಲಿಸಿದರು. - [ಅಪಘಾತದ ನೋವಿಗೆ ನೇಣಿಗೆ ಶರಣಾದ!](https://mobiletime.in/2025/11/he-committed-suicide-due-to-the-pain-of-the-accident/): ಮೂರು ವರ್ಷದ ಹಿಂದೆ ನಡೆದ ರಸ್ತೆ ಅಪಘಾತದಿಂದ ನೋವು ಅನುಭವಿಸುತ್ತಿದ್ದ ಕುಮಟಾದ ಮಂಜುನಾಥ ಗೌಡ ಅವರು ಮಾನಸಿಕವಾಗಿ ಕುಗ್ಗಿದ್ದು, ಅದೇ ನೋವಿನಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಕುಮಟಾ ಹೊಳೆಗದ್ದೆ ಅಂಬ್ಲಿಕೇರಿಯಲ್ಲಿ ಮಂಜುನಾಥ ಬೀರಾ ಗೌಡ (44) ಅವರು ವಾಸವಾಗಿದ್ದರು. 3 ವರ್ಷದ ಹಿಂದೆ ಅವರಿಗೆ ಅಪಘಾತವಾಗಿದ್ದು, ಅದಾದ ನಂತರ ಚೇತರಿಸಿಕೊಂಡಿದ್ದರು. ಆದರೆ, ಅಪಘಾತದ ತರುವಾಯ ಅವರು ಮಾನಸಿಕ ಅಸ್ವಸ್ಥರಂತೆ ವರ್ತಿಸಲು ಶುರು ಮಾಡಿದ್ದರು. ಸೆಂಟ್ ಇಗ್ನೇಶಿಯನ್ಸ್ ಆಸ್ಪತ್ರೆಯಲ್ಲಿ ಮಂಜುನಾಥ ಗೌಡ ಅವರಿಗೆ ಚಿಕಿತ್ಸೆ ನಡೆಯುತ್ತಿತ್ತು. ಹೀಗಿರುವಾಗ ನವೆಂಬರ್ 3ರಂದು ಮನೆ ಹಿಂದಿನ ಕಾಡಿಗೆ ಹೋದ ಅವರು ಅಲ್ಲಿದ್ದ ಕಾಡು ಜಾತಿಯ ಗಿಡಕ್ಕೆ ಸೀರೆ ಬಿಗಿದರು. ಅದಕ್ಕೆ ನೇಣು ಹಾಕಿಕೊಂಡು ಸಾವನಪ್ಪಿದರು. ಪತಿ ಸಾವಿನ ಬಗ್ಗೆ ಕುಟ್ನಿ ಗೌಡ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕುಮಟಾ ಪೊಲೀಸರು ಸ್ಥಳ ಪರಿಶೀಲನೆ ಮಾಡಿದ್ದು, ಪ್ರಕರಣ ದಾಖಲಿಸಿದ್ದಾರೆ. - [ವೃದ್ಧನ ಜೀವ ತೆಗೆದ ಸ್ಕೂಟಿ](https://mobiletime.in/2025/11/scooty-that-took-the-life-of-an-elderly-man/): ಮುಂಡಗೋಡ ಕರಗಿಕೊಪ್ಪದ ಪ್ರವೀಣ ಲಮಾಣಿ ಅವರು ಅಡ್ಡಾದಿಡ್ಡಿ ಸ್ಕೂಟಿ ಓಡಿಸಿದ್ದು, ಅವರ ಬೈಕ್ ಗುದ್ದಿದ ಪರಿಣಾಮ ನೆಹರು ನಗರದ ವಿಠ್ಠಲರಾವ್ ರಾಂಪುರೆ ಅವರು ಸಾವನಪ್ಪಿದ್ದಾರೆ. ಗಂಭೀರ ಗಾಯಗೊಂಡಿದ್ದ ವಿಠ್ಠಲರಾವ್ ರಾಂಪುರೆ ಅವರನ್ನು ಕಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿದರೂ ಅವರು ಬದುಕಲಿಲ್ಲ. ಅಕ್ಟೊಬರ್ 23ರಂದು ರಾತ್ರಿ ಮುಂಡಗೋಡಿನ ಬಂಡಿಗೇರಿ ಪೆಟ್ರೋಲ್ ಬಂಕಿನ ಬಳಿ ಮುಂಡಗೋಡು ಬಸ್ ನಿಲ್ದಾಣದ ಕಡೆ ವಿಠ್ಠಲರಾವ್ ರಾಂಪುರೆ (79) ಅವರು ನಡೆದು ಹೋಗುತ್ತಿದ್ದರು. ಪ್ರವೀಣ ಲಮಾಣಿ ಅವರು ವೇಗವಾಗಿ ಸ್ಕೂಟಿ ಓಡಿಸಿಕೊಂಡು ಬಂದವರು ವಿಠ್ಠಲರಾವ್ ಅವರಿಗೆ ಡಿಕ್ಕಿ ಹೊಡೆದರು. ಪರಿಣಾಮ ವಿಠ್ಠಲರಾವ್ ಅವರು ನೆಲಕ್ಕೆ ಬಿದ್ದು ಪೆಟ್ಟು ಮಾಡಿಕೊಂಡರು. ವಿಠ್ಠಲರಾವ್ ಅವರ ತಲೆಗೆ ಗಂಭೀರ ಪ್ರಮಾಣದಲ್ಲಿ ಪೆಟ್ಟಾಯಿತು. ಕೈ-ಕಾಲುಗಳಿಗೆ ಸಹ ನೋವಾಯಿತು. ಅವರನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಯಿತು. ಮಾವನಿಗೆ ಸ್ಕೂಟಿ ಗುದ್ದಿದ ಬಗ್ಗೆ ನೆಹರು ನಗರದ ನರ್ಸ ಪೂಜಾ ರಾಂಪುರೆ ಅವರು ಪೊಲೀಸ್ ದೂರು ನೀಡಿದ್ದರು. ಕಿಮ್ಸ್ ಆಸ್ಪತ್ರೆಯಲ್ಲಿ ಉಪಚಾರದಲ್ಲಿದ್ದ ವಿಠ್ಠಲರಾವ್ ಅವರು ನವೆಂಬರ್ 4ರಂದು ಕೊನೆಯುಸಿರೆಳೆದರು. `ನಿಧಾನವಾಗಿ ವಾಹನ ಓಡಿಸಿ. ಸಂಚಾರಿ ನಿಯಮ ಪಾಲಿಸಿ’   - [ಹೊಂಡ ಹಾರಿದ ಟಿಪ್ಪರಿನ ಟಯರ್ ಬ್ಲಾಸ್ಟ್!](https://mobiletime.in/2025/11/tippers-tire-explodes-after-hitting-a-pothole/): ಶಿರಸಿ ರಸ್ತೆಯಲ್ಲಿನ ಹೊಂಡಕ್ಕೆ ಸಿಲುಕಿ ಲಾರಿಯ ಟೈಯರ್ ಬ್ಲಾಸ್ಟ್ ಆಗಿದೆ. ಪರಿಣಾಮ ಹೊಂಡದಲ್ಲಿದ್ದ ಕಲ್ಲುಗಳು ರಿಕ್ಷಾವೊಂದರ ಗಾಜು ಒಡೆದಿದ್ದು,  ವ್ಯಕ್ತಿಯೊಬ್ಬರಿಗೆ ಗಾಯವಾಗಿದೆ ಶಿರಸಿಯ ಎಲ್ಲೆಂದರಲ್ಲಿ ರಸ್ತೆ ಮೇಲೆ ಹೊಂಡ ಬಿದ್ದಿದೆ. ಕೋಟೆಕರೆ ರಸ್ತೆಯಲ್ಲಿಯೂ ಭಾರೀ ಪ್ರಮಾಣದ ಹೊಂಡ ಬಿದ್ದಿದೆ. ಬುಧವಾರ ಟಿಪ್ಪರ್ ವಾಹನವೊಂದು ಆ ರಸ್ತೆ ಮಾರ್ಗವಾಗಿ ಸಂಚರಿಸಿದ್ದು, ಮಾರಿಗುಡಿ ಸರ್ಕಲ್ ಹೋಗುವ ಬದಿಯಲ್ಲಿ ಆ ಟಿಪ್ಪರಿನ ಹೊಂಡಕ್ಕೆ ಬಿದ್ದು ಪಂಚರ್ ಆಗಿದೆ. ಪಂಚರ್ ಆದ ರಭಸಕ್ಕೆ ಹೊಂಡದಲ್ಲಿದ್ದ ಕಲ್ಲುಗಳು ಚಲ್ಲಾಪಿಲ್ಲಿಯಾಗಿ ಹಾರಿವೆ. ಆ ಕಲ್ಲುಗಳು ಸಮೀಪದ ರಿಕ್ಷಾವೊಂದಕ್ಕೆ ತಾಗಿದ್ದು, ರಿಕ್ಷಾದ ಮುಂದಿನ ಎರಡು ಲೈಟುಗಳು ಒಡೆದಿವೆ. ಇನ್ನೊಂದು ಕಲ್ಲು ವ್ಯಕ್ತಿಯೊಬ್ಬರ ಬೆನ್ನಿಗೆ ತಾಗಿ ಅವರಿಗೆ ಗಾಯವಾಗಿದೆ. ಟೈಯರ್ ಸ್ಪೋಟದ ಗಾಳಿಗೆ ರಸ್ತೆ ಮೇಲಿದ್ದ ಜಲ್ಲಿ ಕಲ್ಲುಗಳು ಸಹ ಎಲ್ಲೆಂದರಲ್ಲಿ ಹಾರಿದ್ದು, ಆ ವೇಳೆ ಜನ ಸಂಚಾರ ಇದ್ದರೂ ದೊಡ್ಡ ಅಪಾಯ ಸಂಭವಿಸಿಲ್ಲ. ರಸ್ತೆ ಅವ್ಯವಸ್ಥೆ ಖಂಡಿಸಿ ಜನ ಆಕ್ರೋಶವ್ಯಕ್ತಪಡಿಸಿದ್ದಾರೆ. ಅಧಿಕಾರಿಗಳನ್ನು ಸಹ ತರಾಟೆಗೆ ತೆಗೆದುಕೊಂಡಿದ್ದಾರೆ. - [ವಂದೇ ಮಾತರಂ: ಇದೇ ನಮ್ಮ ನಿಜವಾದ ರಾಷ್ಟ್ರಗೀತೆ](https://mobiletime.in/2025/11/vande-mataram-this-is-our-true-national-anthem/): `ವಂದೇ ಮಾತರಂ ಗೀತೆಯೇ ನಮ್ಮ ರಾಷ್ಟ್ರಗೀತೆ’ ಎಂದು ಉತ್ತರ ಕನ್ನಡ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದ್ದಾರೆ. `ಜನಗಣಮನ ಎಂಬುದು ಬ್ರಿಟಿಷರನ್ನು ಸ್ವಾಗತಿಸಲು ರಚಿಸಿದ ಗೀತೆ’ ಎಂದವರು ಹೇಳಿದ್ದಾರೆ. ಹೊನ್ನಾವರದಲ್ಲಿ ನಡೆದ ರಾಷ್ಟ್ರೀಯ ಏಕತಾ ನಡಿಗೆ ಕಾರ್ಯಕ್ರಮದಲ್ಲಿ ಮಾತನಾಡಿದ ಮಾತನಾಡಿದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು `ನಾವು ಹಾಡುವ ಜನಗಣಮನ ಮೂಲದಲ್ಲಿ ಬ್ರಿಟಿಷರ ಸ್ವಾಗತ ಗೀತೆಯಾಗಿ ಬರೆಯಲ್ಪಟ್ಟಿತ್ತು. ಈ ವಿಷಯ ಅನೇಕರಿಗೆ ಅರಿವಿದೆ’ ಎಂದಿದ್ದಾರೆ. `ವಂದೇ ಮಾತರಂ ಗೀತೆ ದೇಶದ ಸ್ವಾತಂತ್ರ‍್ಯ ಹೋರಾಟದಲ್ಲಿ ಪ್ರಮುಖ ಪಾತ್ರ ವಹಿಸಿದೆ. `R S S ಶತಮಾನೋತ್ಸವದ ಪ್ರಯುಕ್ತ ವಂದೇ ಭಾರತ ಭಾವನೆ ಮತ್ತೆ ಎಲ್ಲೆಡೆ ಪಸರಿಸಬೇಕು’ ಎಂದವರು ಕರೆ ನೀಡಿದರು. `ಈ ಹಿಂದೆ ಜನಗಣಮನ ಹಾಗೂ ವಂದೇ ಮಾತರಂ ಎರಡೂ ರಾಷ್ಟ್ರಗೀತೆಯಿರಲಿ ಹಿರಿಯರು ಹೇಳಿದರು. ಹೀಗಾಗಿ ಎರಡೂ ಚಾಲ್ತಿಯಲ್ಲಿದೆ. ಈಗ ಮತ್ತೆ ಇತಿಹಾಸ ಕೆದಕುವ ಉದ್ದೇಶವಿಲ್ಲ’ ಎಂದು ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದ್ದಾರೆ. ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ಈ ಮಾತು ಸದ್ಯ ರಾಜಕೀಯ ವಲಯದ ಚರ್ಚೆಗೆ ಕಾರಣವಾಗಿದೆ. ಅವರ ವಿಡಿಯೋ ಎಲ್ಲಡೆ ಹರಿದಾಡುತ್ತಿದ್ದು, ಪರ-ವಿರೋಧವಾಗಿ ಜನ ಮಾತು ಶುರು ಮಾಡಿದ್ದಾರೆ. - [ಡಿಸ್ಕೌಂಟ್ ಸೇಲ್: ಕಾಸು ಕೊಟ್ಟವರಿಗೆ ಮಕ್ಮಲ್ ಟೋಪಿ!](https://mobiletime.in/2025/11/discoteque-sale-a-fancy-hat-for-those-who-pay/): ಗೃಹ ಉಪಯೋಗಿ ವಸ್ತುಗಳನ್ನು ಅರ್ದ ಬೆಲೆಯಲ್ಲಿ ನೀಡುವುದಾಗಿ ಘೋಷಿಸಿದ್ದ ಭಟ್ಕಳದ `ಗ್ಲೋಬಲ್ ಇಂಟರ್ನ್ಯಾಷನಲ್’ ಮಳಿಗೆ ಬಾಗಿಲು ಮುಚ್ಚಿದೆ. ವಿಶೇಷ ಆಫರ್ ಎಂದು ಜನರನ್ನು ನಂಬಿಸಿ ಮುಂಗಡ ಹಣಪಡೆದವ ಪರಾರಿಯಾಗಿದ್ದು, ಕಾಸು ಕೊಟ್ಟವರು ಅಂಗಡಿ ಮುಂದೆ ಜಮಾಯಿಸಿದ್ದಾರೆ. ಭಟ್ಕಳ ಪಟ್ಟಣದ ರಥಬೀದಿಯ ಯೂನಿಯನ್ ಬ್ಯಾಂಕ್ ಎದುರಿನ ಕಾಂಪ್ಲೆಕ್ಸಿನಲ್ಲಿ ಈಚೆಗೆ ‘ಗ್ಲೋಬಲ್ ಇಂಟರ್ನ್ಯಾಷನಲ್’ ಎಂಬ ಮಳಿಗೆ ಶುರುವಾಗಿತ್ತು. ತಮಿಳುನಾಡು ಮೂಲದ ಉದಯಕುಮಾರ್ ರೇಂಗರಾಜು ಎಂಬಾತರು ಇಲ್ಲಿ ಮಳಿಗೆ ತೆರೆದಿದ್ದು, ಆರು ಜನರನ್ನು ಕೆಲಸಕ್ಕೆ ನೇಮಿಸಿಕೊಂಡಿದ್ದರು. ಗೃಹ ಉಪಯೋಗಿ ವಸ್ತು ಪೂರೈಕೆಗಾಗಿ ಅನೇಕರಿಂದ ಮುಂಗಡ ಹಣ ಸ್ವೀಕರಿಸಿದ್ದರು. 25 ದಿನಗಳ ಅವಧಿಯಲ್ಲಿ ಅವರು ಲಕ್ಷಾಂತರ ರೂ ರಸೀದಿ ಹರಿದಿದ್ದರು. ಮಾರುಕಟ್ಟೆ ದರಕ್ಕಿಂತ ಕಡಿಮೆ ಬೆಲೆಗೆ ವಿವಿಧ ವಸ್ತು ಕೊಡುವುದಾಗಿ ಅವರು ನಂಬಿಸಿದ್ದರು. ಸಾಕಷ್ಟು ಜನ ಇಲ್ಲಿ ಆಗಮಿಸಿ ಮುಂಗಡ ಹಣ ನೀಡಿದ್ದರು. ಮೊದಲ ವಾರ ಟಿವಿ, ಪ್ರಿಜ್, ಎಸಿ ಸೇರಿ ಅನೇಕ ವಸ್ತುಗಳನ್ನು ಮಳಿಗೆಯವರು ಕಾಸು ಕೊಟ್ಟವರ ಮನೆಗೆ ತಲುಪಿಸಿದ್ದರು. ಇದರಿಂದ ಇನ್ನಷ್ಟು ಗ್ರಾಹಕರು ಬಂದು ಹಣ ಪಾವತಿ ಮಾಡಿದ್ದರು. ತಮಗೆ ಇಷ್ಟವಾದ ಸಾಮಗ್ರಿ ಬುಕ್ ಮಾಡಿ ಹೋಗಿದ್ದರು. ಕೆಲವರು 1 ಲಕ್ಷ ರೂಪಾಯಿಗೂ ಅಧಿಕ ಮೊತ್ತದ ಹಣ ಪಾವತಿಸಿದ್ದರು. ಈ ಎಲ್ಲಾ ಹಣ ಸಂಗ್ರಹಿಸಿದ ಉದಯಕುಮಾರ್ ರೇಂಗರಾಜು ಊರು ಬಿಟ್ಟು ಪರಾರಿಯಾದರು. ಬುಧವಾರ ಬೆಳಿಗ್ಗೆ ಅಂಗಡಿ ಬಾಗಿಲು ಮುಚ್ಚಿರುವುದನ್ನು ಕಂಡು ಗ್ರಾಹಕರು ಬೆಚ್ಚಿ ಬಿದ್ದರು. ತಾವು ಕೊಟ್ಟ ಹಣ ಮರಳಿಸಬೇಕು ಎಂದು ಪಟ್ಟುಹಿಡಿದರು. ಜನರೇ ಮಳಿಗೆಯ ಒಳಗೆ ನುಗ್ಗಿ ಬಾಗಿಲು ಒಡೆಯಲು ಪ್ರಯತ್ನಿಸಿದ್ದು, ಪೊಲೀಸರು ಇದನ್ನು ತಡೆದರು. ಹಣ ಕಳೆದುಕೊಂಡವರು ದೂರು ನೀಡಿದರೆ ಕ್ರಮ ಜರುಗಿಸುವುದಾಗಿ ಪೊಲೀಸರು ಹೇಳಿದರು. - [ನಿಧಿ ಆಸೆಗೆ ಕೋಟೆ ಕೊರೆದರು!](https://mobiletime.in/2025/11/they-dug-a-fort-for-the-sake-of-treasure/): ನಿಧಿ ಆಸೆಗಾಗಿ ದುರುಳರು ಶಿರಸಿಯ ಐತಿಹಾಸಿಕ ಸೋಂದಾ ಕೋಟೆ ಕೊರೆದಿದ್ದಾರೆ. ಕೋಟೆಯ ಆಳಕ್ಕೆ 5 ಅಡಿ ಕೊರೆಯಲಾಗಿದ್ದು, ನಿಧಿ ಸಿಗದೇ ದುಷ್ಟರು ಮರಳಿದ್ದಾರೆ! ಶಿರಸಿಯಿಂದ 17ಕಿಮೀ ದೂರದಲ್ಲಿ ಸೋಂದಾ ಕೋಟೆಯಿದೆ. ಪುರಾತತ್ವ ಇಲಾಖೆ ಅಧೀನದಲ್ಲಿ ಈ ಕೋಟೆ ಬರುತ್ತದೆ. 24 ಎಕರೆ ಪ್ರದೇಶದಲ್ಲಿರುವ ಈ ಕೋಟೆಯನ್ನು 1542ರಲ್ಲಿ ನಿರ್ಮಿಸಿದ ಬಗ್ಗೆ ದಾಖಲೆಗಳಿವೆ. ನಿರ್ವಹಣೆ ಕೊರತೆಯಿಂದ ಕೋಟೆ ಅಸ್ತವಸ್ಥವಾಗಿದ್ದು, ಇಲ್ಲಿ ನಿಧಿ ಇದೆ ಎಂಬ ವದಂತಿ ಮೊದಲಿನಿಂದಲೂ ಕೇಳಿ ಬರುತ್ತಿದೆ. 2023ರಲ್ಲಿ ಸಹ ಒಮ್ಮೆ ದುರುಳರು ನಿಧಿ ಆಸೆಗಾಗಿ ಕೋಟೆಗೆ ಭಗ್ನ ತಂದಿದ್ದರು. ಕೋಟೆಯ ಅನೇಕ ಕಡೆ ಅಗೆದು ಶೋಧ ನಡೆಸಿದ್ದರು. ಅದಾದ ನಂತರ ಪುರಾತತ್ವ ಇಲಾಖೆ ಕೋಟೆ ಕಾವಲಿಗೆ ಅಧಿಕಾರಿ ನೇಮಿಸಿದ್ದು, ಅದರ ನಡುವೆಯೂ ಸದ್ಯ ಕಳ್ಳರು ಮತ್ತೊಮ್ಮೆ ಕೊಟೆಯ ಬುಡಕ್ಕೆ ಕೈ ಹಾಕಿದ್ದಾರೆ. ವಾರದ ಹಿಂದೆ ಕೋಟೆ ಅಗೆದ ಅನುಮಾನಗಳಿವೆ. ಕೋಟೆಯಲ್ಲಿರುವ ಕಲ್ಲಿನ ಮಂಚದ ಅಡಿ ಅಗೆಯಲಾಗಿದ್ದು, ಅಲ್ಲಿಯೇ ಮಣ್ಣಿನ ರಾಶಿ ಬಿದ್ದಿದೆ. ಪುರಾತತ್ವ ಇಲಾಖೆಯವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. - [ಉತ್ತರ ಕನ್ನಡ: ಎಂಟು ಕಡೆ ಲೋಕಾಯುಕ್ತ ದಾಳಿ!](https://mobiletime.in/2025/11/uttara-kannada-lokayukta-attacks-from-eight-directions/): ಉತ್ತರ ಕನ್ನಡ ಜಿಲ್ಲೆಯ ಎಂಟು ನೋಂದಣಾಧಿಕಾರಿ ಕಚೇರಿ ಮೇಲೆ ಬುಧವಾರ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಈ ಎಲ್ಲಾ ಕಚೇರಿಗಳ ಮೇಲೆ ಏಕಕಾಲಕ್ಕೆ ದಾಳಿ ನಡೆದಿದ್ದು, ದಾಖಲೆಗಳ ಶೋಧ ನಡೆಸಿದ್ದಾರೆ. ಧಾರವಾಡದ ಯೂಟೂಬರ್ ಮುಕಳೆಪ್ಪ ಅವರು ನಕಲಿ ದಾಖಲೆ ನೀಡಿ ಮುಂಡಗೋಡಿನ ನೋಂದಣಾಧಿಕಾರಿ ಕಚೇರಿಯಲ್ಲಿ ವಿವಾಹ ನೋಂದಣಿ ಆಗಿದ್ದರು. ಹಿಂದು ಯುವತಿ ಗಾಯತ್ರಿ ಅವರನ್ನು ಫುಸಲಾಯಿಸಿ ಮದುವೆ ಆದ ಕಾರಣ ಗಾಯತ್ರಿ ಅವರ ತಾಯಿ ಶಿವಕ್ಕ ಅವರು ಕಿಡಿಕಾರಿದ್ದರು. ಇದೇ ವಿಷಯವಾಗಿ ವಿವಿಧ ಕಡೆ ಪ್ರತಿಭಟನೆಗಳು ನಡೆದಿದ್ದು, ನಕಲಿ ದಾಖಲೆ ಕೊಟ್ಟರೂ ವಿವಾಹ ಮಾಡಿಸಿದ ಅಧಿಕಾರಿಗಳ ವಿರುದ್ಧ ಆಕ್ರೋಶವ್ಯಕ್ತವಾಗಿತ್ತು. ಮುಂಡಗೋಡು ನೋಂದಣಾಧಿಕಾರಿ ಕಚೇರಿ ಅಧಿಕಾರಿ-ಸಿಬ್ಬಂದಿ ವಿರುದ್ಧ ಪೊಲೀಸ್ ಪ್ರಕರಣ ಸಹ ದಾಖಲಾಗಿತ್ತು. ಅದರ ಮುಂದುವರೆದ ಭಾಗವಾಗಿ ನೋಂದಣಾಧಿಕಾರಿ ಕಚೇರಿಯಲ್ಲಿ ನಕಲಿ ದಾಖಲೆ ನೀಡಿ ವಿವಾಹವಾದ ಅನೇಕ ಪ್ರಕರಣಗಳಿರುವ ಬಗ್ಗೆ ಜನ ದೂರಿದ್ದರು. ಈ ಹಿನ್ನಲೆ ಲೋಕಾಯುಕ್ತ ಪೊಲೀಸರು ಬುಧವಾರ ಮುಂಡಗೋಡು ಸೇರಿ ಜಿಲ್ಲೆಯ ವಿವಿಧ ನೋಂದಣಾಧಿಕಾರಿ ಕಚೇರಿ ಮೇಲೆ ದಾಳಿ ನಡೆಸಿದರು. ಕಾರವಾರ, ಕುಮಟಾ, ಶಿರಸಿ, ಸಿದ್ದಾಪುರ, ಹಳಿಯಾಳ, ಜೋಯಿಡಾ, ಯಲ್ಲಾಪುರದಲ್ಲಿಯೂ ಲೋಕಾಯುಕ್ತ ಅಧಿಕಾರಿಗಳು ದಾಖಲೆಗಳ ಶೋಧ ನಡೆಸಿದ್ದಾರೆ. - [ನಾಯಿಯ ಆಕಾರ-ಬೆಕ್ಕಿನ ಸ್ವಭಾವ: ದಾಂಡೇಲಿಯಲ್ಲಿ ಕಾಣಿಸಿತು ವಿಚಿತ್ರ ಪ್ರಾಣಿ!](https://mobiletime.in/2025/11/dogs-shape-cats-nature-a-strange-animal-was-spotted-in-dandeli/): ಅಪಾರ ಪ್ರಮಾಣದಲ್ಲಿ ವನ್ಯ ಸಂಪತ್ತು ಹೊಂದಿದ ಉತ್ತರ ಕನ್ನಡ ಜಿಲ್ಲೆಯಲ್ಲಿ ಅಷ್ಟೇ ಪ್ರಮಾಣದ ಜೀವ ಪ್ರಪಂಚವಿದೆ. ಸದ್ಯ ದಾಂಡೇಲಿ ಗಣೇಶಗುಡಿಯ ಬಳಿ ವಿಚಿತ್ರ ಪ್ರಾಣಿಯೊಂದು ಕಾಣಿಸಿದೆ. ಬೆಕ್ಕಿನ ಸ್ವಭಾವ, ನಾಯಿಗಳ ಹೋಲಿಕೆಯಿರುವ ಅಪರೂಪದ `ಹೈನಾ’ ಎಂಬ ಪ್ರಾಣಿ ಉತ್ತರ ಕನ್ನಡ ಜಿಲ್ಲೆಯಲ್ಲಿಯೂ ಕಾಣಿಸಿದೆ. ಗಣೇಶಗುಡಿಯಲ್ಲಿ ಮಂಗಳವಾರ ರಾತ್ರಿ ಅಪರೂಪದ ಹೈನಾ ಓಡಾಡುತ್ತಿರುವುದನ್ನು ಜನ ನೋಡಿದ್ದಾರೆ. ಗಣೇಶಗುಡಿ ಸೇತುವೆ ಬಳಿ ಸಂಚರಿಸುವವರು ಆ ಪ್ರಾಣಿಯನ್ನು ಮೊಬೈಲ್ ಕ್ಯಾಮರಾ ಮೂಲಕ ಚಿತ್ರಿಕರಿಸಿದ್ದಾರೆ. ಹೈನಾ ಬಗೆಯ ಪ್ರಾಣಿಗಳು ಈ ಪ್ರದೇಶದಲ್ಲಿ ಕಾಣುವುದು ತೀರಾ ಅಪರೂಪ. ಮಾಂಸಹಾರಿ ಸ್ಥನಿ ಪ್ರಾಣಿಯಾದ ಹೈನಾ ಆಫ್ರಿಕಾ ಹಾಗೂ ಏಷ್ಯಾದ ಮಹಾ ದ್ವೀಪ ಪ್ರದೇಶದಲ್ಲಿ ಸಾಕಷ್ಟು ಪ್ರಮಾಣದಲ್ಲಿವೆ. ನಾಲ್ಕು ಪ್ರಬೇದದ ಹೈನಾಗಳನ್ನು ಈವರೆಗೆ ಗುರುತಿಸಲಾಗಿದೆ. ಹೈನಾಗಳ ಶರೀರ ನಾಯಿಗಳಿಗೆ ಹೋಲುವ ರೀತಿಯಿದ್ದರೂ ಅವುಗಳ ನಡವಳಿಕೆ ಬೆಕ್ಕಿಗೆ ಹತ್ತಿರವಾಗಿರುತ್ತದೆ. ವಿಶಿಷ್ಟ ಪ್ರಮಾಣದ ನಗುವಿನಿಂದ ಹೈನಾ ಗುರುತಿಸಿಕೊಂಡಿದೆ. ಗುಂಪಿನಲ್ಲಿ ವಾಸಿಸುವ ಈ ಜೀವಿ ಸದ್ಯ ದಾಂಡೇಲಿಯಲ್ಲಿ ಒಂಟಿಯಾಗಿ ಕಾಣಿಸಿಕೊಂಡಿದೆ. ಭಾರತದ ಹಲವು ಕಡೆ ಹೈನಾ ಜೀವಿಸುತ್ತಿದ್ದು, ದಾಂಡೇಲಿ ಭಾಗದಲ್ಲಿ ಕಾಣಿಸಿಕೊಂಡಿದ್ದು ಅಪರೂಪ. ಅದರಲ್ಲಿಯೂ ಸ್ಥಳೀಯರ ಕ್ಯಾಮರಾ ಕಣ್ಣಿಗೆ ಸೆರೆಯಾಗಿದ್ದು ಇದೇ ಮೊದಲು. ಆಹಾರ ಅರೆಸಿ ಬಂದ ಹೈನಾ ಪ್ರಾಣಿಯೂ ರಸ್ತೆಯ ಮೇಲೆ ಓಡಾಡಿದ್ದು, ಅದರ ವಿಡಿಯೋ ಹರಿದಾಡುತ್ತಿದೆ. ಹೈನಾ ಸಂಚರಿಸಿದ ವಿಡಿಯೋ ಇಲ್ಲಿ ನೋಡಿ.. - [ಮರಾಠಿ ಪ್ರೇಮ: ಕನ್ನಡಕ್ಕೆ ಅವಮಾನ!](https://mobiletime.in/2025/11/marathi-love-an-insult-to-kannada/) - [VRL ಬಸ್ಸು: ಲಕ್ಷ ಲಕ್ಷ ಕಾಸು!](https://mobiletime.in/2025/11/vrl-bus-lakhs-and-lakhs-of-rupees/): ಮುಂಬೈಯಿOದ ಭಟ್ಕಳಕ್ಕೆ ಬಂದ VRL ಬಸ್ಸಿನಲ್ಲಿ ಲಕ್ಷಾಂತರ ರೂ ಹಣ ಹಾಗೂ ಚಿನ್ನದ ಒಡವೆ ಸಿಕ್ಕಿದೆ. ಈ ಹಣ ಹಾಗೂ ಒಡವೆಗೆ ಸೂಕ್ತ ದಾಖಲೆ ಇಲ್ಲದ ಕಾರಣ ಪೊಲೀಸರು ಅದನ್ನು ಜಪ್ತು ಮಾಡಿದ್ದಾರೆ. ಬಸ್ಸಿನಲ್ಲಿ ಇರ್ಪಾನ್ ಎಂಬ ಹೆಸರಿನಲ್ಲಿ ಪಾರ್ಸಲ್ ಇತ್ತು. ಆ ನೀಲಿ ಬಣ್ಣದ ಬ್ಯಾಗಿನಲ್ಲಿ 50 ಲಕ್ಷ ರೂ ಹಣ ಕಾಣಿಸಿತು. ಜೊತೆಗೆ 401 ಗ್ರಾಂ ಚಿನ್ನದ ಬಳೆಗಳು ಅದರಲ್ಲಿದ್ದವು. ಆದರೆ, ಅದಕ್ಕೆ ಸಂಬAಧಿಸಿ ಯಾವ ದಾಖಲೆಗಳು ಸಹ ಇರಲಿಲ್ಲ. ಈ ಹಿನ್ನಲೆ ಪೊಲೀಸರು ಆ 50 ಲಕ್ಷ ರೂ ಹಣ ಹಾಗೂ ಚಿನ್ನವನ್ನು ವಶಕ್ಕೆಪಡೆದರು. ಪಿಐ ದಿವಾಕರ ಹಾಗೂ ಪಿಎಸ್‌ಐ ನವೀನ್ ಈ ಕಾರ್ಯಾಚರಣೆ ನಡೆಸಿದರು. ವಾರಸುದಾರರು ದಾಖಲೆ ಒದಗಿಸಿ ಹಣ ಹಾಗೂ ಚಿನ್ನಪಡೆಯಲು ಈಗಲೂ ಅವಕಾಶವಿದೆ. ಹೀಗಾಗಿ ಪೊಲೀಸರು ವಾರಸುದಾರರ ಹುಡುಕಾಟ ನಡೆಸಿದ್ದಾರೆ.   - [2025 ನವೆಂಬರ್ 5ರ ದಿನ ಭವಿಷ್ಯ](https://mobiletime.in/2025/11/prediction-for-november-5-2025/): ಮೇಷ ರಾಶಿ: ನಿಮ್ಮ ಉತ್ಸಾಹ ಹೆಚ್ಚಾಗಲಿದೆ. ಕಾರ್ಯಕ್ಷೇತ್ರದಲ್ಲಿ ಪಾಲ್ಗೊಳ್ಳುವ ಅವಕಾಶಗಳು ಸಿಗುತ್ತವೆ. ಹಣಕಾಸಿನಲ್ಲಿ ಅನಿವಾರ್ಯ ವೆಚ್ಚಗಳು ಮುಂದೆ ಬರುತ್ತವೆ. ವೃಷಭ ರಾಶಿ: ನಿಮ್ಮ ಯೋಜನೆಗಳು ಯಶಸ್ಸು ತರುವ ಸಾಧ್ಯತೆ ಇದೆ. ಅನಿರೀಕ್ಷಿತ ವೆಚ್ಚಗಳು ಎದುರಾಗಬಹುದು. ಕುಟುಂಬ ಸದಸ್ಯರೊಂದಿಗೆ ಹಣಕಾಸು ಬಗ್ಗೆ ಚರ್ಚಿಸಿ. ಉದ್ಯೋಗದಲ್ಲಿ ಒಳ್ಳೆಯ ಹೆಸರು ಸಿಗಲಿದೆ. ಪ್ರಯಾಣದ ಸಾಧ್ಯತೆ ಇದೆ. ಮಿಥುನ ರಾಶಿ: ನಿಮಗೆ ಸಿಕ್ಕ ಅವಕಾಶ ಬಳಸಿಕೊಳ್ಳಿ. ಚಂಚಲ ಮನಸ್ಸಿನಿಂದ ಹಾನಿಯೇ ಹೆಚ್ಚಲಿದೆ. ಹಣಕಾಸಿನಲ್ಲಿ ಜಾಗರೂಕತೆ ಅಗತ್ಯ. ಸ್ನೇಹಿತರ ಸಲಹೆಗಳನ್ನು ಗೌರವಿಸಿ. ಕರ್ಕ ರಾಶಿ: ಉದ್ಯೋಗದಲ್ಲಿ ದೊಡ್ಡ ಬದಲಾವಣೆಗಳಿರುವುದಿಲ್ಲ. ಕ್ರಮಬದ್ಧ ಕಾರ್ಯಗಳಿಗೆ ಬೆಲೆ ಸಿಗಲಿದೆ. ಹಣಕಾಸಿನಲ್ಲಿ ಸ್ಥಿರತೆ ಸಾಧ್ಯವಿದೆ. ಆರೋಗ್ಯದಲ್ಲಿ ಏರುಪೇರಾಗುವ ಸಾಧ್ಯತೆಗಳಿವೆ. ಸಿಂಹ ರಾಶಿ: ಮಹತ್ವದ ನಿರ್ಧಾರ ತೆಗೆದುಕೊಳ್ಳುವ ದಿನ ಇದಾಗಿದೆ. ಮನಸ್ಸು ಖುಷಿಯಾಗಿರುತ್ತದೆ. ಕೆಲಸಗಾರರಿಗೆ ತೊಂದರೆ ಇಲ್ಲ. ಹಣ ಲಾಭ ಆಗಲಿದೆ. ಕನ್ಯಾ ರಾಶಿ: ನಿಮ್ಮ ಕೆಲಸದ ನಿರ್ಧಾರದ ಮೇಲೆ ಯಶಸ್ಸು ನಿಂತಿದೆ. ಪರಿಶ್ರಮದಿಂದ ಮಾಡಿದ ಕೆಲಸ ಸರಿಯಾಗಿ ಸಾಗಲಿದೆ. ಹಿರಿಯರ ಸಲಹೆಯಿಂದ ದಾರಿ ಸುಗಮವಾಗಲಿದೆ. ತುಲಾ ರಾಶಿ: ಉದ್ಯೋಗದಲ್ಲಿ ಹೊಸ ಹೊಣೆಗಾರಿಕೆ ಲಭ್ಯ. ಹಣಕಾಸಿನಲ್ಲಿ ಏರಳಿತ ಆಗಲಿದೆ. ಮಕ್ಕಳಿಗೆ ಕೆಲ ಸಮಸ್ಯೆ ಎದುರಾಗಬಹುದು. ಸ್ನೇಹಿತರ ಪ್ರೋತ್ಸಾಹ ಸಿಗಲಿದೆ. ವೃಶ್ಚಿಕ ರಾಶಿ: ಈ ದಿನ ಉದ್ಯೋಗದಲ್ಲಿ ಯಶಸ್ಸು ಸಿಗಲಿದೆ. ಕುಟುಂಬದ ಸದಸ್ಯರಿಂದ ಬೆಂಬಲ ಸಾಧ್ಯವಿದೆ. ಆರೋಗ್ಯದಲ್ಲಿ ಜಾಗರೂಕತೆ ಅಗತ್ಯ. ಪ್ರಯಾಣದ ಸಾಧ್ಯತೆ ಇದೆ. ಧನು ರಾಶಿ: ಉದ್ಯೋಗಸ್ಥರಿಗೆ ಅಲ್ಪ ಒತ್ತಡ ಸಹಜ. ಹಣಕಾಸಿನಲ್ಲಿ ಸಮತೋಲನ ಅಗತ್ಯ. ಕೆಲಸದಲ್ಲಿ ಪ್ರತಿಫಲ ಸಿಗಬಹುದು. ಕುಟುಂಬದಲ್ಲಿ ಸಂತೋಷ ಮನೆಮಾಡುತ್ತದೆ. ಮಕರ ರಾಶಿ: ಉದ್ಯೋಗದಲ್ಲಿ ಉತ್ತಮ ಸ್ಥಾನಮಾನ ಸಿಗಲಿದೆ. ಹಣಕಾಸಿನಲ್ಲಿ ನಿರೀಕ್ಷಿತ ಲಾಭ ಆಗಲಿದೆ. ಪ್ರಯಾಣ ಹೆಚ್ಚಾಗಲಿದೆ. ವ್ಯವಹಾರದಲ್ಲಿ ಮುನ್ನಡೆ ಸಾಧ್ಯವಿದೆ. ಕುಂಭ ರಾಶಿ: ನಿಮ್ಮ ಯೋಜನೆಗಳು ಯಶಸ್ವಿಯಾಗಲಿದೆ. ಹಣಕಾಸಿನಲ್ಲಿ ಮುನ್ನಡೆ ಸಾಧ್ಯವಿದೆ. ಕುಟುಂಬದಲ್ಲಿ ಸೌಹಾರ್ದತೆ ಬೆಳೆಸಿಕೊಳ್ಳಿ. ಮೀನ ರಾಶಿ: ಉತ್ಸಾಹದಿಂದ ಕೆಲಸ ಪ್ರಾರಂಭಿಸಿ. ಹಣಕಾಸಿಗೆ ಪೂರಕ ದಿನವಾಗಿರಲಿದೆ. ಹೊಸ ಸಂಪರ್ಕಗಳು ಸಮಸ್ಯೆ ದೂರ ಮಾಡಲಿದೆ. ಪ್ರಯಾಣದ ಲಕ್ಷಣವಿದೆ. - [3 ಜನರಿಂದ 600 ಲೀಟರ್ ಸರಾಯಿ ವಶ!](https://mobiletime.in/2025/11/600-liters-of-liquor-seized-from-3-people/): ಕಾಡು ಮಾರ್ಗವಾಗಿ ಊರಿಗೆ ಬರುತ್ತಿದ್ದ 600 ಲೀಟರ್ ಸರಾಯಿ ಕಾರವಾರ ಪೊಲೀಸರಿಗೆ ಸಿಕ್ಕಿದೆ. ಅದನ್ನು ವಶಕ್ಕೆಪಡೆದ ಪೊಲೀಸರು ಮೂರು ಜನರನ್ನು ಬಂಧಿಸಿದ್ದಾರೆ. ನೆರೆ ರಾಜ್ಯ ಗೋವಾದಿಂದ ಕಾರವಾರಕ್ಕೆ ಮೈಂಗಿಣಿ ಕಾಡಿನ ಮೂಲಕ ಸರಾಯಿ ಸಾಗಾಟ ನಡೆದಿತ್ತು. ಮಂಗಳವಾರ ಚಿತ್ತಾಕುಲ ಪೊಲೀಸರು ಅದನ್ನು ಹಿಡಿದರು. ತಲೆ ಮೇಲೆ ಮೂಟೆ ಮೂಟೆ ಹೊತ್ತು ಬರುತ್ತಿದ್ದ ಗೋಟೆಗಾಳಿ ಮೂಲದ ರಾಜನ್, ದಿಲೀಪ ಹಾಗೂ ಗಣಪತಿ ಎಂಬಾತರು ಸಿಕ್ಕಿ ಬಿದ್ದರು. ಆ ಮೂಟೆಗಳನ್ನು ಪೊಲೀಸರೇ ಕೆಳಗಿಳಿಸಿ ಆರೋಪಿತರನ್ನು ಬಂಧಿಸಿದರು. ಮೂಟೆಗಳನ್ನು ಒಡೆದು ನೋಡಿದಾಗ ಅಲ್ಲಿ ಬಗೆ ಬಗೆಯ ಮದ್ಯಗಳಿದ್ದವು. ಅಲ್ಲಿದ್ದ ಫೆನ್ನಿ ಹಾಗೂ ವಿಸ್ಕಿಯನ್ನು ಲೆಕ್ಕ ಹಾಕಿದರು. 1.34 ಲಕ್ಷ ರೂ ಮೌಲ್ಯದ ಸರಾಯಿ ಅಲ್ಲಿದ್ದು ಅದನ್ನು ಪೊಲೀಸರು ಸರ್ಕಾರಕ್ಕೆ ಒಪ್ಪಿಸಿದರು. ಕರ್ನಾಟಕ ತೆರಿಗೆ ತಪ್ಪಿಸಿ ಸರ್ಕಾರದ ಬೊಕ್ಕಸಕ್ಕೆ ವಂಚಿಸುತ್ತಿದ್ದವರ ವಿರುದ್ಧ ಪೊಲೀಸರು ಕಾನೂನು ಕ್ರಮ ಜರುಗಿಸಿದರು.   - [ಜೊಯಿಡಾ ಅಭಿವೃದ್ಧಿಗಾಗಿ ಪಾದಯಾತ್ರೆ](https://mobiletime.in/2025/11/walk-for-the-development-of-zoidha/): ಜೊಯಿಡಾದ ಸಮಗ್ರ ಅಭಿವೃದ್ಧಿಗೆ ಆಗ್ರಹಿಸಿ ಕರ್ನಾಟಕ ಪ್ರಾಂತ ರೈತ ಸಂಘ ಹೋರಾಟಕ್ಕೆ ನಿರ್ಧರಿಸಿದೆ. ನವೆಂಬರ್ 10ರಂದು ಕಿರವತ್ತಿಯಿಂದ ಜೊಯಿಡಾದವರೆಗೆ ಪಾದಯಾತ್ರೆ ನಡೆಸಿ ಹಗಲು-ರಾತ್ರಿ ಧರಣಿ ನಡೆಸಲು ಉದ್ದೇಶಿಸಲಾಗಿದೆ. `ರಾಜ್ಯದಲ್ಲಿ ಅತಿ ಹಿಂದುಳಿದ ತಾಲೂಕು ಎಂದು ಜೊಯಿಡಾ ಗುರುತಿಸಿಕೊಂಡಿದೆ. ತಾಲೂಕು ಅಭಿವೃದ್ಧಿಗೆ 25 ವರ್ಷದಿಂದ ಹೋರಾಡಿದರೂ ಪ್ರಯೋಜನವಾಗಿಲ್ಲ. ಹೀಗಾಗಿ ನಿರಂತರ ಸತ್ಯಾಗ್ರಹ ಅನಿವಾರ್ಯ’ ಎಂದು ಸಂಘಟಕರು ಹೇಳಿದ್ದಾರೆ. `ಕಿರವತ್ತಿ, ಕಾರಬೋಳಿ, ಡಿಗ್ಗಿ ಗೋವಾ ಗಡಿ ರಾಜ್ಯ ಹೆದ್ದಾರಿ ರಸ್ತೆ ಮತ್ತು ಸೇತುವೆ ಸುಧಾರಣೆ, ಡಿಗ್ಗಿ ಮುಖ್ಯ ರಸ್ತೆಯಿಂದ ವಾಗೇಲಿ ರಸ್ತೆ ಮರು ಡಾಂಬರೀಕರಣ, ಕಿರವತ್ತಿ, ತೆರಾಳಿ, ಶಿಸೈ, ದುಧಮಳಾ ರಸ್ತೆ ಡಾಂಬರಿಕರಣ ಮತ್ತು ಸೇತುವೆ ನಿರ್ಮಾಣ, ಡಿಗ್ಗಿ ಮುಖ್ಯ ರಸ್ತೆ ಯಿಂದ ಕಸಂಬಾ ರಸ್ತೆ ನಿರ್ಮಾಣ, ಜೊಯಿಡಾ ಕಾರಟೋಳಿ ವಸತಿ ಬಸ್, ಜೊಯಿಡಾ ಕುಂಡಲ ವಸತಿ ಬಸ್, ಕಾರಟೋಳಿ ಹೊಸ ನ್ಯಾಯ ಬೇಲೆ ಅಂಗಡಿ, ಗಾಂಗೋಡಾ ರಸ್ತೆ ಡಾಂಬರೀಕರಣ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಹೋರಾಟಗಾರರು ಆಗ್ರಹಿಸಿದ್ದಾರೆ. `ವನ್ಯಜೀವಿ ವಿಭಾಗದಿಂದ ಅಭಿವೃದ್ಧಿ ಕೆಲಸಕ್ಕೆ ತೊಂದರೆ ನೀಡಬಾರದು. ಜೊಯಿಡಾ ಸಮಗ್ರ ಅಭಿವೃದ್ಧಿಗಾಗಿ ವಿಶೇಷ ಪ್ಯಾಕೇಜ್ ಕೊಡಬೇಕು. ವಿದ್ಯುತ್ ಇಲ್ಲದ ಮನೆಗಳಿಗೆ ವಿದ್ಯುತ್ ನೀಡಬೇಕು. ಕುಣಬಿ ಜನಾಂಗ ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕು’ ಎಂದು ಅಲ್ಲಿನ ಪ್ರೇಮಾನಂದ ವೇಳಿಪ ಹಾಗೂ ರಾಜೇಶ್ ಗಾವಡಾ ಆಗ್ರಹಿಸಿ ತಹಶೀಲ್ದಾರ್ ಕಚೇರಿಗೆ ಪತ್ರ ನೀಡಿದ್ದಾರೆ. - [ಪ್ರಾಕೃತಿಕ ವಿಕೋಪ: ಉತ್ತರ ಕನ್ನಡಕ್ಕೆ 2ನೇ ಸ್ಥಾನ!](https://mobiletime.in/2025/11/natural-disaster-2nd-place-for-uttara-kannada/): ಪ್ರಾಕೃತಿಕ ವಿಕೋಪಗಳಿಗೆ ಒಳಗಾಗುವ ಪ್ರದೇಶಗಳ ಪಟ್ಟಿಯಲ್ಲಿ ಉತ್ತರ ಕನ್ನಡ ಜಿಲ್ಲೆಯು 2ನೇ ಪಟ್ಟಿಯಲ್ಲಿದೆ. `ಇಲ್ಲಿ ಕೈಗಾ ಅಣು ಸ್ಥಾವರ, ರಾಸಾಯನಿಕ ಕಾರ್ಖಾನೆ, ಅಣೆಕಟ್ಟುಗಳು, ನೌಕಾನೆಲೆಯಂತಹ ಪ್ರದೇಶಗಳಿರುವುದರಿಂದ ವಿಪತ್ತುಗಳು ಸಂಭವಿಸಿದ ತಕ್ಷಣ ರಕ್ಷಣಾ ಕಾರ್ಯಚರಣೆ ಕೈಗೊಳ್ಳಲು ಎಲ್ಲಾ ಮುನ್ನೆಚ್ಚರಿಕೆ ಸಿದ್ದತೆಗಳನ್ನು ಕೈಗೊಳ್ಳಬೇಕು’ ಎಂದು ಜಿಲ್ಲಾಧಿಕಾರಿ ಕೆ ಲಕ್ಷ್ಮೀಪ್ರಿಯಾ ಅವರು ಹೇಳಿದ್ದಾರೆ. `ವಿವಿಧ ಬಗೆಯ ವಿಪತ್ತು ಸಂಭವಿಸಿದ ತುರ್ತು ಸನ್ನಿವೇಶಗಳಲ್ಲಿ ಸಮಯ ಪಾಲನೆ ಹಾಗೂ ಸಮಯ ಪ್ರಜ್ಞೆಯಿಂದ ಅನೇಕರ ಜೀವ ಉಳಿಸಲು ಸಾಧ್ಯ. ಜನರ ಜೀವ ಉಳಿಸಲು ಅಗತ್ಯವಿರುವ ವಾಹನ, ವೈದ್ಯಕೀಯ ವ್ಯವಸ್ಥೆಗೆ ಒತ್ತು ನೀಡಬೇಕು’ ಎಂದವರು ನಿರ್ದೇಶನ ನೀಡಿದ್ದಾರೆ. ಕೈಗಾ ಅಣು ವಿದ್ಯುತ್ ಘಟಕದಲ್ಲಿ ಮಂಗಳವಾರ ವಿಪತ್ತು ನಿರ್ವಹಣೆ- ವೈದ್ಯಕೀಯ ಸಿದ್ಧತೆ -ಸಿಬಿಅರ್‌ಎನ್ – ಲಾಜಿಸ್ಟಿಕ್- ಇಂಟರ್ ಗ್ರೇಷನ್ ಆಯೋಜನೆಯ `ಸಮಯ್ ರೇಖಾ 2025’ರ ಸಮ್ಮೇಳನದಲ್ಲಿ ಅವರು ಮಾತನಾಡಿದ್ದಾರೆ. `ಪ್ರಾಕೃತಿಕ ವಿಪತ್ತು, ರಾಸಾಯನಿಕ ವಿಪತ್ತು, ಅಪಘಾತ ಸೇರಿದಂತೆ ಯಾವುದೇ ರೀತಿಯ ಅವಘಡ ನಡೆದಾಗ ತಕ್ಷಣ ಸ್ಪಂದಿಸಿದಾಗ ಜೀವ ಹಾನಿ ತಪ್ಪಿಸಲು ಸಾಧ್ಯ. ಇದಕ್ಕಾಗಿ ಎಲ್ಲಾ ಬಗೆಯ ಅಗತ್ಯ ಸಿದ್ಧತೆಗಳಿರಬೇಕು’ ಎಂದವರು ಹೇಳಿದ್ದಾರೆ. `ಜಿಲ್ಲೆಯಲ್ಲಿ ವಿಪತ್ತುಗಳನ್ನು ಎದುರಿಸುವ ಕುರಿತಂತೆ ಎಲ್ಲಾ ರೀತಿಯ ಅಣಕು ಕಾರ್ಯಚಾರಣೆಗಳನ್ನು ಆಗಾಗ ಕೈಗೊಳ್ಳುತ್ತಿದ್ದು, ಅಣುಕು ಕಾರ್ಯಚರಣೆ ಸಂದರ್ಭದಲ್ಲಿ ಕಂಡು ಬರುವ ನ್ಯೂನತೆಗಳ ಕುರಿತು ಅಗತ್ಯ ಪರಿಹಾರ ಕ್ರಮಗಳನ್ನು ಕೈಗೊಳ್ಳಬೇಕು. ಆಗ ಅದು ನೈಜ ಸಂದರ್ಭದಲ್ಲಿ ಸಮರ್ಪಕವಾಗಿ ಮತ್ತು ತ್ವರಿತವಾಗಿ ಕಾರ್ಯನಿರ್ವಹಿಸಲು ನೆರವಾಗಲಿದೆ’ ಎಂದವರು ಹೇಳಿದರು. `ವಿಪತ್ತು ಸಂದರ್ಭದಲ್ಲಿ ತ್ವರಿತವಾಗಿ ಸ್ಪಂದಿಸಲು ಅಗತ್ಯವಿರುವ ಉಪಕರಣಗಳು, ವೈದ್ಯಕೀಯ ಸಾಮಗ್ರಿಗಳು, ವಾಹನಗಳು, ಮಾನವ ಸಂಪನ್ಮೂಲದ ಕುರಿತು ಸಮಗ್ರ ವಿವರಗಳನ್ನು ಪಟ್ಟಿ ಮಾಡಬೇಕು’ ಎಂದವರು ಸೂಚಿಸಿದರು. ಕ್ರಿಸ್ತು ಜಯಂತಿ ಡೀಮ್ಡ್ ವಿಶ್ವವಿದ್ಯಾಲಯದ ಉಪಕುಲಪತಿ ಲಿಜೋ ಪಿ ಥಾಮಸ್ ಮಾತನಾಡಿ `ವಿಪತ್ತು ನಿರ್ವಹಣೆ ಕುರಿತಂತೆ ಮಕ್ಕಳಿಗೆ ಬಾಲ್ಯದಿಂದಲೇ ತರಬೇತಿ ನೀಡುವ ಕಾರ್ಯ ನಡೆಯಬೇಕು. ಶಾಲೆಗಳಿಲ್ಲಿ ವಿದ್ಯಾರ್ಥಿಗಳ ಮೂಲಕ ಅಣಕು ಕಾರ್ಯಚರಣೆ ನಡೆಸಬೇಕು’ ಎಂದರು. ಪೋಲೀಸ್ ವರಿಷ್ಠಾಧಿಕಾರಿ ದೀಪನ್ ಎಂ ಎನ್ ಮಾತನಾಡಿ `ಪ್ರತಿ ಇಲಾಖೆಗಳಲ್ಲಿ ತಮ್ಮ ದೈನಂದಿನ ಕರ್ತವ್ಯಗಳ ಜೊತೆಗೆ ವಿಪತ್ತು ಸಂದರ್ಭದಲ್ಲಿ ಯಾವ ರೀತಿ ಕಾರ್ಯನಿರ್ವಹಿಸಬೇಕು’ ಎಂದು ತಿಳಿಸಿದರು. ವಿವಿಧ ಹಿರಿಯ ಅಧಿಕಾರಿಗಳು ಹಾಜರಿದ್ದರು. - [ಭ್ರಷ್ಟರ ವಿರುದ್ಧ ಗುಡುಗಿದ ಕೈಗಾ ಅಧಿಕಾರಿ](https://mobiletime.in/2025/11/kaiga-officer-thunders-against-corrupt-people/): `ದೇಶದ ಅನೇಕ ಅಧಿಕಾರಿಗಳು ಹಾಗೂ ರಾಜಕಾರಣಿಗಳು ಭ್ರಷ್ಟಾಚಾರದಲ್ಲಿ ತೊಡಗಿದ್ದು, ಅದನ್ನು ನಿಲ್ಲಿಸಲು ಪ್ರತಿಯೊಬ್ಬರು ಪಣತೊಡಬೇಕು’ ಎಂದು ಕೈಗಾ ಅಣು ವಿದ್ಯುತ್ ಘಟಕದ ಅಧಿಕಾರಿ ವೇಣುಗೋಪಾಲ ಅವರು ಕರೆ ನೀಡಿದ್ದಾರೆ. ನಿತ್ಯದ ಬದುಕಿನಲ್ಲಿ ಕಾಣುವ ಲಂಚಾವತಾರ ತಡೆಯ ನಿಯಂತ್ರಣದ ಬಗ್ಗೆ ಅವರು ಅಸ್ನೋಟಿ ಮಕ್ಕಳಿಗೆ ಪಾಠ ಮಾಡಿದ್ದಾರೆ. ಕಾರವಾರದ ಕೈಗಾ ಅಣು ವಿದ್ಯುತ್ ಉತ್ಪಾದನಾ ಕೇಂದ್ರದಿAದ ಅಸ್ನೋಟಿಯ ಶಿವಾಜಿ ವಿದ್ಯಾ ಮಂದಿರದಲ್ಲಿ ವಿಚಕ್ಷಣ ಜಾಗೃತಿ ಸಪ್ತಾಹ ನಡೆದಿದ್ದು, ವೇಣುಗೋಪಾಲ ಅವರು ದೇಶದಲ್ಲಿನ ಭ್ರಷ್ಟಾಚಾರದ ವಿರುದ್ಧ ಮಾತನಾಡಿದರು. ಅಧಿಕಾರಿಗಳು ಹಾಗೂ ರಾಜಕಾರಣಿಗಳು ಯಾವ ಯಾವ ಹಂತದಲ್ಲಿ ಭ್ರಷ್ಟಾಚಾರ ನಡೆಸುತ್ತಿದ್ದಾರೆ? ಅದನ್ನು ತಡೆಗಟ್ಟುವ ವಿಧಾನಗಳು ಯಾವವು? ಎನ್ನುವುದರ ಬಗ್ಗೆ ಮಕ್ಕಳಿಗೆ ಮಾಹಿತಿ ನೀಡಿದರು. ಭ್ರಷ್ಟಾಚಾರ ವಿರೋಧಿ ಕಾನೂನಿನ ಬಗ್ಗೆ ಅರಿವು ಮೂಡಿಸಿದ ಅವರು ಭ್ರಷ್ಟಾಚಾರ ನಿಗ್ರಹ ಪ್ರತಿಜ್ಞೆ ಮಾಡಿಸಿದರು. ಕೈಗಾದ ಮತ್ತೊಬ್ಬ ಅಧಿಕಾರಿ ಲೊಲಿಟಾ ಅವರು ಮಕ್ಕಳ ಜೊತೆ ಬೆರೆತರು. ಶಾಲಾ ಮುಖ್ಯಾಧ್ಯಾಪಕ ಗಣೇಶ ಬೀಷ್ಟಣ್ಣನವರ್ ಅವರು ವಿಚಕ್ಷಣ ಜಾಗೃತಿ ಸಪ್ತಾಹದ ಮೂಲಕ ಮಕ್ಕಳಲ್ಲಿ ಅರಿವು ಮೂಡಿಸಿದ ಕಾರ್ಯವನ್ನು ಶ್ಲಾಘಿಸಿದರು. ಶಿಕ್ಷಕರಾದ ವಿಜಯಕುಮಾರ್ ನಾಯ್ಕ, ಸಂತೋಷ ಕಾಂಬ್ಲೆ, ರೂಪಾಲಿ ಸಾವಂತ, ವಿಜಯ ಸುಧೀರ್, ಜೆ ಬಿ ತಿಪ್ಪೇಸ್ವಾಮಿ ವೇದಿಕೆಯಲ್ಲಿದ್ದರು. - [ದೇವಸ್ಥಾನದ ಬಾವಿಯಲ್ಲಿ ಸಿಕ್ಕಿತು ಗೌಡರ ಶವ!](https://mobiletime.in/2025/11/gowdas-body-found-in-a-temple-well/): ರಾತ್ರಿ ಸಂಚಾರಕ್ಕೆ ಮನೆಯಿಂದ ಹೊರ ಹೋಗಿದ್ದ ಕುಮಟಾದ ಗಿರೀಶ ಗೌಡ ಅವರು ಬಾವಿಗೆ ಬಿದ್ದು ಪ್ರಾಣ ಬಿಟ್ಟಿದ್ದಾರೆ. ತಮ್ಮನ ಶವ ನೋಡಿದ ಲೋಕೇಶ ಗೌಡ ಅವರು ಗೋಕರ್ಣ ಪೊಲೀಸರಿಗೆ ಮಾಹಿತಿ ಮುಟ್ಟಿಸಿದ್ದಾರೆ. ಕುಮಟಾದ ದೇವಣ ತೊರ್ಕೆಯ ಬಳಿ ಗಿರೀಶ ಗೌಡ (29) ಅವರು ವಾಸವಾಗಿದ್ದರು. ನವೆಂಬರ್ 3ರ ರಾತ್ರಿ ಅವರು ಊರಿನ ಅಂಗಡಿ ಬಳಿ ಹೋಗುವುದಾಗಿ ಹೊರಟಿದ್ದರು. ಅಂಗಡಿ ಬಳಿ ತಿರುಗಾಟ ನಡೆಸಿ ಮನೆಗೆ ಮರಳುವಾಗ ದೇವಣ ಗ್ರಾಮದ ಬೀಟೆ ಬೀರಾ ದೇವಸ್ಥಾನ ಹತ್ತಿರದ ಬಾವಿಗೆ ಬಿದ್ದರು. ಕಾಲು ಚಾರಿ ಬಾವಿಗೆ ಬಿದ್ದ ಗಿರೀಶ ಗೌಡ ಅವರಿಗೆ ಮೇಲೆ ಏಳಲು ಸಾಧ್ಯವಾಗಲಿಲ್ಲ. ಬಾವಿಯ ನೀರು ಕುಡಿದು ಅವರು ಅಲ್ಲಿಯೇ ಮುಳುಗಿದರು. ಕೊನೆಗೆ ನೀರಿನೊಳಗೆ ಉಸಿರುಗಟ್ಟಿ ಸಾವನಪ್ಪಿದರು. ಗೋಕರ್ಣ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು, ಪ್ರಕರಣ ದಾಖಲಿಸಿದರು. `ರಾತ್ರಿ ಸಂಚಾರದ ವೇಳೆ ಎಚ್ಚರ’ - [ಪತ್ನಿ ಜೊತೆ ಮುನಿಸು: ಇಲ್ಲಿಗೆ ಮುಗಿಯಿತು ಬದುಕು!](https://mobiletime.in/2025/11/sigh-with-wife-life-ends-here/): ಯಲ್ಲಾಪುರದ ಕಾಮಾಕ್ಷಿ ಪೆಟ್ರೋಲ್ ಪಂಪಿನಲ್ಲಿ ಕೆಲಸ ಮಾಡುತ್ತಿದ್ದ ಹೇಮಂತ ಕಾಪ್ಸೆ ಅವರು ಸಾವಿಗೆ ಶರಣಾಗಿದ್ದಾರೆ. ಕೌಟುಂಬಿಕ ಕಲಹ-ಮನಸ್ತಾಪ ಅವರ ಸಾವಿಗೆ ಮುಖ್ಯ ಕಾರಣವಾಗಿದೆ. ಹೇಮಂತ ಕಾಪ್ಸೆ ಹಾಗೂ ಅವರ ಪತ್ನಿ ಸವಿತಾ ಕಾಪ್ಸೆ ಅವರು ಪುತ್ರ ಕಿಶನ್ ಕಾಪ್ಸೆ ಅವರ ಜೊತೆ ಯಲ್ಲಾಪುರದ ಮಂಜುನಾಥ ನಗರದಲ್ಲಿ ವಾಸವಾಗಿದ್ದರು. ಕಾಮಾಕ್ಷಿ ಪೆಟ್ರೋಲ್ ಪಂಪಿನಲ್ಲಿ ಕೂಲಿ ಕೆಲಸ ಮಾಡಿ ಹೇಮಂತ ಕಾಪ್ಸೆ ಅವರು ಕುಟುಂಬ ನಡೆಸುತ್ತಿದ್ದರು. ಎರಡು ವರ್ಷದ ಹಿಂದೆ ಹೇಮಂತ ಕಾಪ್ಸೆ ಹಾಗೂ ಸವಿತಾ ಕಾಪ್ಸೆ ಅವರ ನಡುವೆ ವೈಮನಸ್ಸು ಮೂಡಿತು. ಈ ಮನಸ್ತಾಪ ದೊಡ್ಡದಾಗಿದ್ದರಿಂದ ಸವಿತಾ ಕಾಪ್ಸೆ ಅವರು ಮನೆ ಬಿಟ್ಟು ಹೋದರು. ಎರಡು ವರ್ಷ ಕಳೆದರೂ ಸವಿತಾ ಕಾಪ್ಸೆ ಅವರು ಮನೆಗೆ ಮರಳಲಿಲ್ಲ. ಹೇಮಂತ ಕಾಪ್ಸೆ ಅವರು ಇದೇ ನೋವಿನಲ್ಲಿ ಸೊರಗಿದ್ದರು. ಪತ್ನಿ ಮನೆಬಿಟ್ಟು ಹೋದ ಆಘಾತದಿಂದ ಅವರು ಕೊರಗುತ್ತಿದ್ದರು. ನವೆಂಬರ್ 4ರಂದು ಹೇಮಂತ ಕಾಪ್ಸೆ ಅವರು ದುಡುಕು ನಿರ್ಧಾರ ಮಾಡಿದರು. ತಮ್ಮ ಮನೆಯೊಳಗೆ ಅವರು ನೇಣಿಗೆ ಶರಣಾದರು. ಮಧ್ಯಾಹ್ನ 1.30ರ ಅವಧಿಗೆ ಮನೆಗೆ ಬಂದ ಕಿಶನ್ ಕಾಪ್ಸೆ ಅವರು ತಂದೆಯ ಸಾವು ನೋಡಿ ಅಕ್ಕ-ಪಕ್ಕದವರಿಗೆ ವಿಷಯ ತಿಳಿಸಿದರು. ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲಿಸಿದರು. ಕಿಶನ್ ಕಾಪ್ಸೆ ಅವರು ನೀಡಿದ ಮಾಹಿತಿ ಪ್ರಕಾರ ಪೊಲೀಸರು ಪ್ರಕರಣ ದಾಖಲಿಸಿದರು. `ಆತ್ಮಹತ್ಯೆ ಅಪರಾಧ’ - [ಕೈಗೆ ಸಿಗದ ಫಸಲು: ಬೆಳೆ ಸಾಲ ತೀರಿಸಲಾಗದೇ ಸಾವನಪ್ಪಿದ ಕೃಷಿಕ!](https://mobiletime.in/2025/11/unsuccessful-harvest-farmer-dies-after-failing-to-repay-crop-loan/): 3 ಲಕ್ಷ ರೂ ಬೆಳೆ ಸಾಲ ಮಾಡಿದ್ದ ಮುಂಡಗೋಡಿನ ಶಂಕ್ರಪ್ಪ ಗುಡಗೇರಿ ಅವರು ಫಸಲು ಕೈಕೊಟ್ಟ ಕಾರಣ ಆತ್ಮಹತ್ಯೆಯ ನಿರ್ಧಾರ ಮಾಡಿದ್ದಾರೆ. ನೇಣು ಹಾಕಿಕೊಂಡಿದ್ದ ಅವರನ್ನು ಬಿಡಿಸಿ ಆಸ್ಪತ್ರೆಗೆ ಕರೆದೊಯ್ದರೂ ಅವರ ಪ್ರಾಣ ಉಳಿಯಲಿಲ್ಲ. ಮುಂಡಗೋಡದ ಬಾಚಣಕಿ ಗ್ರಾಮದ ಶಂಕ್ರಪ್ಪ ಶಿವಪ್ಪ ಗುಡಗೇರಿ (50) ಅವರು ಮುಂಡಗೋಡ ಪ್ರಾಥಮಿಕ ಸಹಕಾರಿ ಸಂಘದಲ್ಲಿ 299900ರೂ ಬೆಳೆ ಸಾಲಪಡೆದಿದ್ದರು. ಆ ಸಾಲವನ್ನು ವಿನಿಯೋಗಿಸಿ ಫಸಲು ಬೆಳೆದಿದ್ದರು. ಆದರೆ, ವಿಪರೀತ ಮಳೆ ಕಾರಣದಿಂದ ಫಸಲು ಕೈಗೆ ಬಂದಿರಲಿಲ್ಲ. ಬೆಳೆ ಸಾಲ ತುಂಬಲು ಸಾಧ್ಯವಾಗುವುದಿಲ್ಲ ಎಂಬ ಆತಂಕದಿoದಲೇ ಅವರು ಆತ್ಮಹತ್ಯೆಯ ಹಾದಿ ತುಳಿದರು. ಮಂಗಳವಾರ ಮನೆ ಅಂಚಿನ ದನದ ಕೊಟ್ಟಿಗೆಗೆ ಹೋಗಿದ್ದ ಶಂಕ್ರಪ್ಪ ಅವರು ಅಲ್ಲಿಯೇ ಆತ್ಮಹತ್ಯೆಯ ನಿಧಾರ ಮಾಡಿದರು. ಅಲ್ಲಿಂದ ಹಗ್ಗದಿಂದ ಅವರು ನೇಣು ಹಾಕಿಕೊಂಡಿದ್ದನ್ನು ನೋಡಿ ಕುಟುಂಬದವರು ಬಿಡಿಸಿದರು. ಇನ್ನೂ ಜೀವವಿರಬಹುದು ಎಂದು ಅಂದಾಜಿಸಿ ಕೈ-ಕಾಲು ತಿಕ್ಕಿದರು. ಆದರೆ, ಅಷ್ಟರೊಳಗೆ ಶಂಕ್ರಪ್ಪ ಅವರು ಉಸಿರಾಟ ನಿಲ್ಲಿಸಿದ್ದರು. ಶಂಕ್ರಪ್ಪ ಅವರ ಸಿದ್ಧರೂಡಾ ಗುಡಗೇರಿ ಅವರು ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿ, ಪ್ರಕರಣ ದಾಖಲಿಸಿದರು. - [ಕಾಯ್ದೆ ಮಾತನಾಡಿ ಪೆಟ್ಟು ತಿಂದ ಜೆಸಿಬಿ ಮಾಲಕ!](https://mobiletime.in/2025/11/jcb-owner-gets-hit-for-talking-about-the-law/): ಜೆಸಿಬಿ ಖರೀದಿಗೆ ಸಾಲ ಮಾಡಿದ್ದ ಭಟ್ಕಳದ ಸಿದ್ದಪ್ಪ ಸೇಗುವಾಸಿ ಅವರು ಸಾಲದ ಕಂತು ಸರಿಯಾಗಿ ಪಾವತಿಸದ ಕಾರಣ ಪೆಟ್ಟು ತಿಂದಿದ್ದಾರೆ. ಜೆಸಿಬಿ ಜಪ್ತು ಮಾಡಲು ಬಂದಿದ್ದ ಫೈನಾನ್ಸ ಕಂಪನಿಯವರ ಜೊತೆ ಕಾಯ್ದೆ-ಕಾನೂನು ಮಾತನಾಡಿದ ಕಾರಣ ನಾಲ್ವರು ಸೇರಿ ಅವರಿಗೆ ಥಳಿಸಿದ್ದಾರೆ. ಭಟ್ಕಳದ ಸಾಗರ ರಸ್ತೆ ಬಳಿಯಿರುವ ಡಿಪಿ ಕಾಲೋನಿಯಲ್ಲಿ ಸಿದ್ದಪ್ಪ ಸೇಗುವಾಸಿ ಅವರು ವಾಸವಾಗಿದ್ದರು. ಅವರು ಚೋಳ ಇನ್ವೆಸ್ಟಮೆಂಟ್ ಫೈನಾನ್ಸಿನ ಮೂಲಕ ಸಾಲ ಮಾಡಿ ಜೆಸಿಬಿ ಯಂತ್ರ ಖರೀದಿಸಿದ್ದರು. ಆದರೆ, ಸಮಯಕ್ಕೆ ಸರಿಯಾಗಿ ಸಾಲ ಮರು ಪಾವತಿ ಸಾಧ್ಯವಾಗಿರಲಿಲ್ಲ. ಹೀಗಾಗಿ ಫೈನಾನ್ಸ ಕಂಪನಿಯ ಮ್ಯಾನೇಜರ್ ಜಮಖಂಡಿಯ ಪ್ರಭಾಕರ ವಠಾರ್ ಹಾಗೂ ಬಾಗಲಕೋಟೆಯ ರಮೇಶ ವಾಲಿಕರ್ ಅವರು ಭಟ್ಕಳಕ್ಕೆ ಬಂದಿದ್ದರು. ಮಾರ್ಚ 29ರಂದು ತೆಂಗಿನಗುAಡಿ ಕ್ರಾಸಿನ ಬಳಿ ನಿಲ್ಲಿಸಿದ್ದ ಜೆಸಿಬಿ ನೋಡಿದ ಪ್ರಭಾಕರ ವಠಾರ್ ಹಾಗೂ ರಮೇಶ್ ವಾಲಿಕರ್ ಇನ್ನಿಬ್ಬರ ಜೊತೆ ಸೇರಿ ಜೆಸಿಬಿ ಚಾಲು ಮಾಡಿದ್ದರು. ಜೆಸಿಬಿ ಯಂತ್ರವನ್ನು ಜಪ್ತು ಮಾಡಿ ಕೊಂಡೊಯ್ಯುತ್ತಿದ್ದರು. ಆಗ, ಸಿದ್ದಪ್ಪ ಸೇಗುವಾಸಿ ಅವರು ಅದಕ್ಕೆ ತಕರಾರು ಮಾಡಿದರು. `ನೋಟಿಸ್ ನೀಡದೇ ಜಪ್ತು ಮಾಡುವ ಹಾಗಿಲ್ಲ’ ಎಂದು ಕಾಯ್ದೆ ಮಾತನಾಡಿದರು. ಕೆಟ್ಟದಾಗಿ ನಿಂದಿಸಿದ ಆ ನಾಲ್ವರು ಸಿದ್ದಪ್ಪ ಸೇಗುವಾಸಿ ಅವರಿಗೆ ಎರಡು ಏಟು ಬಿಟ್ಟರು. ಸದ್ಯ ಜೆಸಿಬಿ ಕಳ್ಳತನವಾಗಿದೆ ಎಂದು ಸಿದ್ದಪ್ಪ ಸೇಗುವಾಸಿ ಪೊಲೀಸ್ ದೂರು ನೀಡಿದ್ದಾರೆ. ತಮ್ಮ ಮೇಲೆ ದಾಳಿ ಮಾಡಿದ ನಾಲ್ವರ ವಿರುದ್ಧವೂ ಕ್ರಮಕ್ಕೆ ಆಗ್ರಹಿಸಿದ್ದಾರೆ. ಭಟ್ಕಳ ನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. - [ಸರಾಯಿ ಅಂಗಡಿಗೆ ಬಂದವ ವಿಷ ಕುಡಿದ!](https://mobiletime.in/2025/11/the-person-who-came-to-the-tavern-drank-poison/): ಸರಾಯಿ ಅಂಗಡಿಗೆ ಬಂದಿದ್ದ ಬನವಾಸಿಯ ಪರಶುರಾಮ ವಡ್ಡರ್ ಅಲ್ಲಿಯೇ ವಿಷ ಕುಡಿದಿದ್ದಾರೆ. ಅದಾದ ನಂತರ ಅವರಿಗೆ ಬದುಕುವ ಆಸೆಯಾಗಿದ್ದು, ಅವರಿವರ ಸಹಾಯಪಡೆದು ಆಸ್ಪತ್ರೆಗೆ ಹೋಗಿದ್ದಾರೆ. ಆದರೆ, ಮೂರು ಆಸ್ಪತ್ರೆ ತಿರುಗಾಡಿದರೂ ಅವರ ಬದುಕುವ ಆಸೆ ಈಡೇರಲಿಲ್ಲ. ಶಿರಸಿ ಬನವಾಸಿಯ ಸೊರಬಾ ರಸ್ತೆಯ ಯುನಿವರ್ಸಲ್ ಶಾಲೆ ಬಳಿಯ ಪರಶುರಾಮ ವಡ್ಡರ್ ವಾಸವಾಗಿದ್ದರು. ಕೂಲಿ ಕೆಲಸ ಮಾಡುವ ಅವರು ನಿತ್ಯ ಸರಾಯಿ ಸೇವನೆ ಮಾಡುತ್ತಿದ್ದರು. ಅಕ್ಟೊಬರ್ 28ರಂದು ಅವರು ಬನವಾಸಿಯಲ್ಲಿರುವ ರಾಘವೇಂದ್ರ ವೈನ್‌ಶಾಫ್’ಗೆ ಹೋಗಿದ್ದರು. ಸರಾಯಿ ಅಂಗಡಿ ಹಿಂದೆ ಹೋಗಿ ಅವರು ವಿಷ ಕುಡಿದರು. ವಿಷ ಕುಡಿದ ನಂತರ ಪರಶುರಾಮ ವಡ್ಡರ್ ಅವರಿಗೆ ಬದುಕುವ ಆಸೆಯಾಯಿತು. ಹೀಗಾಗಿ ತಾನು ವಿಷ ಕುಡಿದ ಬಗ್ಗೆ ಅಲ್ಲಿದ್ದ ಜನರಿಗೆ ಹೇಳಿದರು. ತನ್ನನ್ನು ಆಸ್ಪತ್ರೆಗೆ ಕರೆದೊಯ್ಯುವಂತೆ ಅಂಗಲಾಚಿದರು. ಪರಶುರಾಮ ವಡ್ಡರ್ ಅವರ ತಮ್ಮ ದೇವರಾಜ ವಡ್ಡರ್ ಅವರು ಆಗಮಿಸಿ ಅಣ್ಣನನ್ನು ಮೊದಲು ಬನವಾಸಿ ಆಸ್ಪತ್ರೆಗೆ ದಾಖಲು ಮಾಡಿದರು. ಅದಾದ ನಂತರ ಶಿರಸಿ ಆಸ್ಪತ್ರೆಗೆ ಕರೆತಂದರು. ವಿಷ ವ್ಯಾಪಕ ಪ್ರಮಾಣದಲ್ಲಿ ಹೊಟ್ಟೆ ಸೇರಿದ್ದರಿಂದ ಹುಬ್ಬಳ್ಳಿ ಕಿಮ್ಸ’ಗೆ ಕರೆದೊಯ್ಯಲಾಯಿತು. ಅಲ್ಲಿ ಆರು ದಿನ ಚಿಕಿತ್ಸೆ ನೀಡಿದರೂ ಪ್ರಯೋಜನವಾಗಲಿಲ್ಲ. ನವೆಂಬರ್ 3ರಂದು ಪರಶುರಾಮ ವಡ್ಡರ್ ಅವರು ಸಾವನಪ್ಪಿದರು. ವಿಷಯ ತಿಳಿದು ಬನವಾಸಿ ಪೊಲೀಸರು ಪ್ರಕರಣ ದಾಖಲಿಸಿದರು. - [ಶುಗರ್ ಹೆಚ್ಚಳವೂ ಸಾವಿಗೆ ಕಾರಣ!](https://mobiletime.in/2025/11/increased-sugar-levels-are-also-a-cause-of-death/): ಶುಗರ್ ಹೆಚ್ಚಳದಿಂದ ಸಮಸ್ಯೆ ಅನುಭವಿಸುತ್ತಿದ್ದ ಕುಮಟಾದ ಕಮಲಾ ಗೌಡ ಅವರು ಉಸಿರಾಟ ಸಮಸ್ಯೆಯಿಂದ ಸಾವನಪ್ಪಿದ್ದಾರೆ. ಆರೋಗ್ಯದಲ್ಲಿ ದಿಢೀರ್ ಏರುಪೇರಾದ ಹಿನ್ನಲೆ ಅವರನ್ನು ಆಸ್ಪತ್ರೆಗೆ ಕರೆದೊಯ್ಯುವ ಪ್ರಯತ್ನ ನಡೆದರೂ ಪ್ರಯೋಜನವಾಗಲಿಲ್ಲ. ಕುಮಟಾ ತೊರ್ಕೆ ಮೂಲೆಕೇರಿಯಲ್ಲಿ ಕಮಲಾ ಗೌಡ (56) ಅವರು ವಾಸವಾಗಿದ್ದರು. ಕೆಲ ವರ್ಷಗಳಿಂದ ಅವರಿಗೆ ಶುಗರ್ ಕಾಡುತ್ತಿದ್ದು, ಅದನ್ನು ನಿಯಂತ್ರಿಸುವ ಪ್ರಯತ್ನ ಸರಿಯಾಗಿ ಆಗಿರಲಿಲ್ಲ. ಹೀಗಿರುವಾಗ ನವೆಂಬರ್ 3ರಂದು ಅವರ ಆರೋಗ್ಯದಲ್ಲಿ ದಿಢೀರ್ ಏರುಪೇರಾಯಿತು. ತಾಯಿ ಆರೋಗ್ಯದಲ್ಲಿ ವ್ಯತ್ಯಾಸವಾಗಿರುವುದನ್ನು ಗಮನಿಸಿದ ನಾಗರಾಜ ಗೌಡ ಅವರು ತಮ್ಮ ಮೊಬೈಲ್ ಮಳಿಗೆಗೆ ರಜೆ ಮಾಡಿ, ಆಸ್ಪತ್ರೆಗೆ ಹೋಗುವ ಕೆಲಸ ಮಾಡಿದರು. ಕಮಲಾ ಗೌಡ ಅವರನ್ನು ಕುಮಟಾ ಆಸ್ಪತ್ರೆಗೆ ದಾಖಲಿಸುವ ಪ್ರಯತ್ನ ನಡೆಸಿದರು. ಆದರೆ, ಆರ್ಮುಡೆ ಸಮೀಪ ತೆರಳುವಾಗ ಅವರ ಉಸಿರಾಟದಲ್ಲಿ ಇನ್ನಷ್ಟು ಸಮಸ್ಯೆಯಾಯಿತು. ಆಸ್ಪತ್ರೆಗೆ ತೆರಳುವ ಮುನ್ನವೇ ಅವರು ಸಾವನಪ್ಪಿದರು. ತಾಯಿ ಕಳೆದುಕೊಂಡ ದುಖ:ದ ಬಗ್ಗೆ ನಾಗರಾಜ ಗೌಡ ಅವರು ಗೋಕರ್ಣ ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿದರು. `ಆರೋಗ್ಯದ ಕಡೆ ಗಮನಹರಿಸಿ. ಬಿಪಿ, ಶುಗರ್ ನಿಯಂತ್ರಿಸಿ’ - [ಕೋಳಿ ಪಾರಂ ಕಾಣಿಸಿತು ಕೊಳೆತ ಶವ!](https://mobiletime.in/2025/11/a-rotting-corpse-was-found-in-the-chicken-coop/): ಕಾರವಾರದ ಸಿದ್ಧರದಲ್ಲಿರುವ ಕೋಳಿ ಪಾರಂ’ನಲ್ಲಿ ಕೆಲಸ ಮಾಡುತ್ತಿದ್ದ ಕಿನ್ನರದ ನರಸಿಂಹ ನಾಯ್ಕ ಅವರು ಕೋಳಿ ಪಾರಂ ಕೋಣೆಯೊಳಗೆ ಶವವಾಗಿದ್ದಾರೆ. ಗಬ್ಬು ವಾಸನೆ ಬರುವುದನ್ನು ನೋಡಿ ಅಲ್ಲಿಗೆ ಹೋದ ಚಂದ್ರಕಾAತ ನಾಯ್ಕ ಅವರಿಗೆ ಅಣ್ಣ ಸಾವನಪ್ಪಿರುವುದು ಗೊತ್ತಾಗಿದೆ. ಕಾರವಾರದ ಸಿದ್ದರದ ಮುದುಗಾದಲ್ಲಿ ಉಲ್ಲಾಸ ನಾಯ್ಕ ಅವರು ಕೋಳಿ ಪಾರಂ ನಿರ್ಮಿಸಿದ್ದಾರೆ. ಅಲ್ಲಿ ಕಿನ್ನರ ದಿಗಾಳಿಯ ನರಸಿಂಹ ನಾಯ್ಕ ಅವರು ಕೆಲಸ ಮಾಡಿಕೊಂಡಿದ್ದು, ಕೋಳಿ ಪಾರಂ’ನಲ್ಲಿರುವ ಸಣ್ಣ ಕೋಣೆಯಲ್ಲಿ ವಸತಿ ಇದ್ದರು. ಆಗಾಗ ಮನೆಗೆ ಹೋಗಿ ಬರುವುದನ್ನು ಅವರು ರೂಢಿಸಿಕೊಂಡಿದ್ದರು. ನಿತ್ಯ ಸರಾಯಿ ಸೇವನೆ ಮಾಡಿ ಅವರು ಕೋಳಿ ಪಾರಂ ಕೆಲಸ ಮಾಡುತ್ತಿದ್ದರು. ಅಕ್ಟೊಬರ್ 29ರಂದು ಕೋಳಿ ಪಾರಂ ಮಾಲಕ ಉಲ್ಲಾಸ ನಾಯ್ಕ ಅವರನ್ನು ಕೊನೆಯದಾಗಿ ಭೇಟಿ ಆಗಿದ್ದರು. ಅದೇ ದಿನ ಸಂಜೆ ಮತ್ತೆ ಕೋಳಿ ಪಾರಂ ಕರ್ತವ್ಯಕ್ಕೆ ಹೋಗಿದ್ದರು. ನವೆಂಬರ್ 2ರಂದು ಕೋಳಿ ಪಾರಂ ಒಳಗೆ ಕೆಟ್ಟ ವಾಸನೆ ಬಂದಿದ್ದು, ಚಂದ್ರಕಾoತ ನಾಯ್ಕ ಅವರು ವಾಸನೆ ಬಂದ ಕಡೆ ಹೊರಟರು. ಆಗ, ಅಲ್ಲಿದ್ದ ಚಿಕ್ಕ ಕೋಣೆಯೊಳಗೆ ನರಸಿಂಹ ನಾಯ್ಕ ಅವರು ಸಾವನಪ್ಪಿರುವುದನ್ನು ನೋಡಿದರು. ತಮ್ಮನ ಸಾವಿನ ಬಗ್ಗೆ ಚಂದ್ರಕಾoತ ನಾಯ್ಕ ಅವರು ಪೊಲೀಸರಿಗೆ ಮಾಹಿತಿ ನೀಡಿದರು. ಪೊಲೀಸರು ಪ್ರಕರಣ ದಾಖಲಿಸಿದರು. - [ಈ ಊರಲ್ಲಿ ದೋಸೆ ತಿನ್ನುವುದೇ ಒಂದು ಹಬ್ಬ!](https://mobiletime.in/2025/11/eating-dosa-in-this-town-is-a-festival/): ದಕ್ಷಿಣ ಭಾರತದಲ್ಲಿನ ಪ್ರಸಿದ್ಧ ತಿನಿಸುವಗಳಲ್ಲಿ ದೋಸೆಗೆ ಮುಖ್ಯ ಸ್ಥಾನ. ಅದರಲ್ಲಿಯೂ ಉತ್ತರ ಕನ್ನಡ ಜಿಲ್ಲೆಯ ಅನೇಕ ಹವ್ಯಕರ ಮನೆಗಳಲ್ಲಿ ನಸುಕಿನ ವೇಳೆಯಲ್ಲಿಯೇ ದೋಸೆಯ ಕಂಪು ಬಾರದಿದ್ದರೆ ಅನೇಕರಿಗೆ ಬೆಳಗಾಗುವುದೇ ಇಲ್ಲ! ಅಂಥಹುದರಲ್ಲಿ ಗೋಕರ್ಣದಲ್ಲಿ ದೋಸೆ ತಿನ್ನುವುದಕ್ಕಾಗಿಯೇ ಒಂದು ಹಬ್ಬ ನಡೆಯುತ್ತದೆ. ಅನೇಕ ವರ್ಷಗಳಿಂದ ಇಲ್ಲಿ `ದೋಸೆ ಕಂಬಳ’ವನ್ನು ಅತ್ಯಂತ ಶ್ರದ್ಧಾ-ಭಕ್ತಿಯಿಂದ ನಡೆಸಿಕೊಂಡು ಬರಲಾಗುತ್ತಿದೆ. ಹಬ್ಬಕ್ಕೆ ಬಂದ ಎಲ್ಲಾ ಭಕ್ತರಿಗೂ ಅಲ್ಲಿನ ಬ್ರಾಹ್ಮಣ ಕುಟುಂಬದವರು ಅಷ್ಟೇ ಭಕ್ತಿಯಿಂದ ದೋಸೆ ಉಣಬಡಿಸುತ್ತಾರೆ. ಭಕ್ತರು ಎಷ್ಟೇ ದೋಸೆ ತಿಂದರೂ ಅದಕ್ಕೆ ದುಡ್ಡು ಕೊಡಬೇಕಾಗಿಲ್ಲ! ಬಿಸಿ, ಬಿಸಿ ದೋಸೆ ಜೊತೆ ಚಟ್ನಿ ,ಬಾಜಿ, ಬೆಲ್ಲ ಸವಿ ಸವಿಯಲು ನೂರಾರು ಜನ ಭಟ್ಟರ ಮನೆಗೆ ಬರುತ್ತಾರೆ. ಬಂಧು-ಮಿತ್ರರೆಲ್ಲರೂ ಸೇರಿ ಖುಷಿಯಿಂದ ಹಬ್ಬ ಆಚರಿಸುತ್ತಾರೆ. ರಥಬೀದಿಯಲ್ಲಿರುವ ಬಾಲಕೃಷ್ಣ ಜಂಬೆ ಅವರ ಮನೆಯಲ್ಲಿ ಮೊನ್ನೆ ರಾತ್ರಿ ನಡೆದ ದೋಸೆ ಹಬ್ಬ ಅನೇಕರ ಸಮ್ಮಿಲನಕ್ಕೆ ಸಾಕ್ಷಿಯಾಗಿದ್ದು, ಹೊಟ್ಟೆ ತುಂಬ ದೋಸೆ ತಿಂದ ಜನ ಹಬ್ಬಕ್ಕೆ ಕಾರಣಿಕರ್ತರಾದ ಕುಟುಂಬದವರನ್ನು ಮನಸಾರೆ ಹಾರೈಸಿದರು. ಪ್ರತಿ ವರ್ಷವೂ ಗೋಕರ್ಣದಲ್ಲಿ ದೋಸೆ ಕಂಬಳ ನಡೆಯುತ್ತದೆ. ಪ್ರತಿ ವರ್ಷ ಕಾರ್ತಿಕ ಮಾಸದ ಅಮಾವಾಸ್ಯೆಯಂದು ಮಹಾಬಲೇಶ್ವರ ಮಂದಿರದ ನಂದಿ ಮಂಟಪದಲ್ಲಿ ಕಾರ್ಯನಿರ್ವಹಿಸುವ ಉಪಾಧಿವಂತ ವೈದಿಕರ ಮನೆಯಲ್ಲಿ ಈ ಹಬ್ಬ ಆಚರಿಸಲಾಗುತ್ತದೆ. ದೇವಾಲಯದಲ್ಲಿ ರಂಗಪೂಜೆ – ಎಡೆ ನೇವೇದ್ಯ ಬಳಿಕ ಆತ್ಮಲಿಂಗಕ್ಕೆ ಸಮರ್ಪಿಸಿದ ನವಧಾನ್ಯಗಳನ್ನ ಸಂಗ್ರಹಿಸಿ ಅದನ್ನು ಅಕ್ಕಿಯ ಜೊತೆ ಬೆರೆಸಿ ದೋಸೆ ಸಿದ್ಧಪಡಿಸಲಾಗುತ್ತದೆ. ಆ ಭಾಗದ ಎಲ್ಲಾ ಸಮಾಜದ ಜನರ ಜೊತೆ ಬೇರೆ ಬೇರೆ ಪ್ರದೇಶದ ಜನರು ಪ್ರಸಾದ ರೂಪದಲ್ಲಿ ಸಿಗುವ ದೋಸೆ ಸ್ವೀಕರಿಸುತ್ತಾರೆ. ದೋಸೆ ಕಂಬಳದ ಬಗ್ಗೆ ಅರಿತ ಅನೇಕರು ಇದಕ್ಕಾಗಿಯೇ ಬಿಡುವು ಮಾಡಿಕೊಂಡು ಬೇರೆ ಬೇರೆ ಊರುಗಳಿಂದ ಬರುತ್ತಾರೆ. ಊರಿನ ಜನರ ಜೊತೆ ಬೆರೆತು ಕುಶಲೋಪರಿ ವಿಚಾರಿಸುವ ಈ ಹಬ್ಬ ಬಾಂದವ್ಯ ವೃದ್ಧಿಗೂ ಸಹಕಾರ ನೀಡುತ್ತಿದೆ. - [2025ರ ನವೆಂಬರ್ 22ರ ದಿನ ಭವಿಷ್ಯ](https://mobiletime.in/2025/11/prediction-for-november-22-2025/): ಮೇಷ ರಾಶಿ: ಹೊಸ ಕೆಲಸ ಶುರು ಮಾಡಲು ಪ್ರೇರಣೆ ಸಿಗಲಿದೆ. ಆರ್ಥಿಕ ಸ್ಥಿತಿ ಸುಧಾರಣೆ ಕಾಣಲಿದೆ. ನಿರ್ಣಯಗಳನ್ನು ಮಾಡುವಾಗ ದುಡುಕುತನ ಬೇಡ. ಆರೋಗ್ಯ ಚನ್ನಾಗಿರಲಿದೆ. ವೃಷಭ ರಾಶಿ: ಉದ್ಯೋಗ ಕ್ಷೇತ್ರದಲ್ಲಿ ಹೊಸ ಅವಕಾಶ ದೊರಯಲಿದ್ದು, ನಿಮ್ಮ ಸಂಪರ್ಕವೇ ದೊಡ್ಡ ಸಾಧನ ಆಗಲಿದೆ. ದಿನದ ಶುರುವಿನಲ್ಲಿ ಸಮಸ್ಯೆ ಕಾಣಿಸಿದರೂ ನಂತರ ಬಗೆಹರೆಯಲಿದೆ. ಆರ್ಥಿಕ ಖರ್ಚುಗಳಲ್ಲಿ ನಿಯಂತ್ರಣ ಬೇಕು. ದುಶ್ಚಟಗಳು ನಿಮಗೆ ಒಳ್ಳೆಯದಲ್ಲ. ಮಿಥುನ ರಾಶಿ: ಸ್ನೇಹಿತರ ಸಹಾಯ ಅನಿವಾರ್ಯ ಸೃಷ್ಠಿಸಲಿದೆ. ಸಂಜೆ ವೇಳೆ ಶುಭ ಸುದ್ದಿ ಸಿಗಲಿದೆ. ಆರೋಗ್ಯದ ಬಗ್ಗೆ ಕಾಳಜಿ ಬೇಕು. ಮಾನಸಿಕ ಶಾಂತಿಗೆ ಧ್ಯಾನ ಮಾಡಿ. ಕುಂಭ ರಾಶಿ: ಕೆಲಸ ಸ್ಥಳದಲ್ಲಿ ನಿಮ್ಮ ಪ್ರತಿಭೆ ಹೊರಹೊಮ್ಮಲು ಅವಕಾಶ ಬರುವುದು. ಪರಿವಾರದವರ ಸಲಹೆ ಪ್ರಾರಂಭಿಕವಾಗಿ ಸಹಾಯಕ ಆಗಲಿದೆ. ಅವಸರದ ನಿರ್ಧಾರ ತಪ್ಪಿಸುವುದು ಉತ್ತಮ. ಆರೋಗ್ಯ ಉತ್ತಮ ಸ್ಥಿತಿಯಲ್ಲಿ ಇರುತ್ತದೆ. ಕರ್ಕ ರಾಶಿ: ಅಲ್ಲಲ್ಲಿ ನೂತನ ಅವಕಾಶ ಪಡೆಯುವ ಸಾಧ್ಯತೆಗಳಿವೆ. ಕುಟುಂಬದಲ್ಲಿ ಹಾಸ್ಯ ಹೆಚ್ಚಾಗುವುದು ಬೇಡ. ಉನ್ನತ ಶಿಕ್ಷಣ ನಿಮಗೆ ನೆರವು ನೀಡಲಿದೆ. ಶ್ರಮ ಅಗತ್ಯ. ಸಿಂಹ ರಾಶಿ: ಹೊಸ ನಿರ್ಧಾರಗಳು ಶುಭ ಕೊಡಲಿದೆ. ಆರ್ಥಿಕವಾಗಿ ಸ್ವಲ್ಪ ಒತ್ತಡ ಸಂಭವಿಸಬಹುದು. ದುಡಿಮೆಯ ಫಲ ಸ್ವಲ್ಪ ವಿಳಂಬ ಆಗಲಿದೆ. ಆರೋಗ್ಯದಲ್ಲಿ ಸುಧಾರಣೆ ಆಗಲಿದೆ. ಕನ್ಯಾ ರಾಶಿ: ಉದ್ಯೋಗದಲ್ಲಿ ಕೆಲಸದ ಒತ್ತಡ ಹೆಚ್ಚಾಗಲಿದ್ದು, ಪರಿಣಾಮಕಾರಿ ನಿರ್ಧಾರಾನ್ನು ತೆಗೆದುಕೊಳ್ಳಿ. ಕುಟುಂಬದಲ್ಲಿ ಶಾಂತಿ-ನೆಮ್ಮದಿ ಸಿಗಲಿದೆ. ಸ್ನೇಹಿತರಿಂದ ಬೆಂಬಲ ದೊರೆಯಲಿದೆ. ನಿಮ್ಮ ಕೆಲಸದ ಬಗ್ಗೆ ನೀವೇ ವಿಶ್ಲೇಷಣೆ ಮಾಡುವುದು ಉತ್ತಮ. ತುಲಾ ರಾಶಿ: ವ್ಯಾಪಾರದ ಒತ್ತಡ ಕಡಿಮೆ ಆಗಲಿದೆ. ಹೊಸ ಕಲ್ಪನೆಗಳು ಹುಟ್ಟುತ್ತವೆ. ಆರ್ಥಿಕವಾಗಿ ಲಾಭ ಆಗಲಿದೆ. ಆರೋಗ್ಯವೂ ಚನ್ನಾಗಿರಲಿದೆ. ಚಿಕ್ಕ ಚಿಕ್ಕ ಕೆಲಸಗಳು ನೆಮ್ಮದಿ ಕೊಡುತ್ತವೆ. ವೃಶ್ಚಿಕ ರಾಶಿ: ಈ ದಿನ ಅಲ್ಪ ಪ್ರಮಾಣದಲ್ಲಾದರೂ ವಿರಾಮ ಅಗತ್ಯ. ಉದ್ಯೋಗದಲ್ಲಿ ಸಾಧನೆ ಸಾಧ್ಯವಿದೆ. ಹೃದಯಕ್ಕೆ ಒತ್ತಡ ಬೀಳದಂತೆ ಎಚ್ಚರಿಕೆವಹಿಸಿ. ನಿತ್ಯದ ಚಟುವಟಿಕೆಗಳು ತುರುಸುಗೊಳ್ಳಲಿದೆ. ಧನು ರಾಶಿ: ಯಾತ್ರೆಗಳು ಸರಿಯಾಗಿ ಸಾಗಲಿದೆ. ಸಮಯವನ್ನು ಸರಿಯಾಗಿ ಬಳಸಿಕೊಳ್ಳಬೇಕು. ದೇಹಕ್ಕೆ ಆಯಾಸವಾದರೂ ಆರೋಗ್ಯ ಚನ್ನಾಗಿರಲಿದೆ. ಮಕರ ರಾಶಿ: ಈ ದಿನ ಕೆಲ ಬದಲಾವಣೆ ಆಗಲಿದೆ. ಹೃದಯದ ವಿಷಯದಲ್ಲಿ ಎಚ್ಚರಿಕೆ ಅಗತ್ಯ. ಸ್ನೇಹಿತರ ಜೊತೆ ಸಮಯ ಕಳೆಯಿರಿ. ಆರೋಗ್ಯದಲ್ಲಿ ಏರುಪೇರಾದರೆ ತಕ್ಷಣ ವೈದ್ಯರನ್ನು ಭೇಟಿ ಮಾಡಿ. ಮೀನ ರಾಶಿ: ಜೀವನದಲ್ಲಿನ ಲವಲವಿಕೆಗಾಗಿ ಪುಸ್ತಕ ಪರಿಣಾಮಕಾರಿ. ಕೆಲಸದಲ್ಲಿ ಪ್ರಗತಿ ಸಾಧ್ಯವಿದೆ. ಆರೋಗ್ಯದ ಬಗ್ಗೆ ಅತಿಯಾದ ನಿರ್ಧಾರ ಬೇಡ. ಸ್ನೇಹಿತರ ಮಾತು ಆಲಿಸಿ, ಮನಸ್ಸಿನ ಆತಂಕ ದೂರಮಾಡಿಕೊಳ್ಳಿ. - [ಕೃಷಿಕನ ಮೇಲೆ ಕರಡಿ ದಾಳಿ](https://mobiletime.in/2025/11/bear-attack-on-farmer/): ಹಳಿಯಾಳದ ಗುಳೇದಕೊಪ್ಪ ಗಸ್ತಿ ಬಳಿ ಕುಮಾರ ವಡ್ಡರ್ ಅವರ ಮೇಲೆ ಕರಡಿ ದಾಳಿ ನಡೆದಿದೆ. ಸದ್ಯ ಅವರು ಆಸ್ಪತ್ರೆಯವರ ಆರೈಕೆಯಲ್ಲಿದ್ದಾರೆ. ಕುಮಾರ ನಾಗಪ್ಪ ವಡ್ಡರ್ (31) ಅವರು ಕೃಷಿ ಜೊತೆ ಹೈನುಗಾರಿಕೆ ಮಾಡಿಕೊಂಡಿದ್ದರು. ಜಾನುವಾರು ಮೇಯಿಸುತ್ತಿರುವಾಗ ಅವರ ಮೇಲೆ ಕರಡಿ ಆಕ್ರಮಣ ನಡೆದಿದ್ದು, ಮೈ-ಕೈ ಪರಚಿದೆ. ಕರಡಿಯು ತನ್ನ ಉಗುರುಗಳಿಂದ ಕುಮಾರ ನಾಗಪ್ಪ ವಡ್ಡರ ಅವರ ಕಾಲುಗಳಿಗೆ ಗಾಯ ಮಾಡಿದೆ. ಕೆನ್ನೆಗೆ ಸಹ ಕಚ್ಚಿದೆ. ದಾಳಿಯಿಂದ ಗಾಯಗೊಂಡ ಅವರು ಪ್ರಸ್ತುತ ಹಳಿಯಾಳ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಘಟನೆ ಕುರಿತು ಮಾಹಿತಿ ನೀಡಿದ ಅರಣ್ಯ ಇಲಾಖೆಯ ಹಳಿಯಾಳ ವಲಯ ಅರಣ್ಯಾಧಿಕಾರಿ ಬಸವರಾಜ್ ಅವರು ಮಾಹಿತಿ ನೀಡಿದ್ದು, `ದಾಳಿಯಿಂದ ತೀವ್ರತರವಾದ ಗಾಯಗಳಾಗಿಲ್ಲ. ಗಾಯಾಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ’ ಎಂದು ಹೇಳಿದ್ದಾರೆ. - [ಯಲ್ಲಾಪುರ: ಎಲ್ಲಡೆ ಕಳ್ಳರ ಕಾಟ!](https://mobiletime.in/2025/11/yellapur-thieves-are-everywhere/): ಯಲ್ಲಾಪುರ ಪಟ್ಟಣದಲ್ಲಿ ಹೊಸದಾಗಿ ಶುರುವಾದ ಔಷಧಿ ಅಂಗಡಿಯಲ್ಲಿ ಕಳ್ಳತನ ನಡೆದಿದೆ. ಜೊತೆಗೆ ಸಿಹಿ ತಿನಿಸು ಮಾರಾಟ ಮಳಿಗೆಯಲ್ಲಿಯೂ ಕಳ್ಳರು ಕಾಸು ದೋಚಿದ್ದಾರೆ. ಯಲ್ಲಾಪುರ ತಾಲೂಕಾ ಪಂಚಾಯತ ಸಮೀಪದ ಅಂಗಡಿಗಳಲ್ಲಿ ಗುರುವಾರ ರಾತ್ರಿ ಕಳ್ಳತನ ನಡೆದಿದೆ. ಸೀತಾಲಕ್ಷ್ಮೀ ಮೆಡಿಕಲ್ಸ್ ಹಾಗೂ ಅದರ ಎದುರಿಗಿರುವ ಶಂಕರ್ ಸ್ವೀಟ್ಸ್ ಮಳಿಗೆಯಲ್ಲಿ ಕಳ್ಳರು ತಮ್ಮ ಕೈ ಚಳಕ ಪ್ರದರ್ಶಿಸಿದ್ದಾರೆ. ಈ ಎರಡು ಕಡೆ ಕಳ್ಳರು ಬೀಗ ಮುರಿದು ಒಳನುಗ್ಗಿದ್ದಾರೆ. ಔಷಧಿ ಅಂಗಡಿಯಲ್ಲಿ ಒಳ್ಳೆಯ ವ್ಯಾಪಾರ ನಡೆಯುತ್ತಿರುವುದನ್ನು ಅರಿತು ಅಲ್ಲಿದ್ದ 40 ಸಾವಿರ ರೂ ಹಣ ಎಗರಿಸಿದ್ದಾರೆ. ಬೇಕರಿಯಲ್ಲಿ ದೊಡ್ಡ ಪ್ರಮಾಣದಲ್ಲಿ ಕಾಸು ಸಿಗದ ಕಾರಣ ಕೆಲ ಸಾಮಗ್ರಿ ಅಪಹರಿಸಿದ್ದಾರೆ. ಶುಕ್ರವಾರ ಬೆಳಗ್ಗೆ ಅಂಗಡಿ ಬಳಿ ಬಂದ ಗ್ರಾಹಕರು ಮಾಲಕರಿಗೆ ಫೋನ್ ಮಾಡಿದ್ದಾರೆ. ಮಾಲಕರು ಬಂದು ಬಾಗಿಲು ತೆರೆಯುವ ಪ್ರಯತ್ನ ಮಾಡಿದಾಗ ಕಳ್ಳತನ ನಡೆದಿರುವುದು ಗೊತ್ತಾಗಿದೆ. - [ಸರ್ಕಾರಿ ಬಸ್ಸಿಗೆ ಹೊಗೆ!](https://mobiletime.in/2025/11/smoke-in-a-government-bus/): ಸಿದ್ದಾಪುರ-ಕುಮಟಾ ಮಾರ್ಗವಾಗಿ ಸಂಚರಿಸುತ್ತಿದ್ದ ಸರ್ಕಾರಿ ಬಸ್ಸಿನಲ್ಲಿ ಶುಕ್ರವಾರ ಏಕಾಏಕಿ ಹೊಗೆ ಕಾಣಿಸಿಕೊಂಡಿದೆ. ಬಸ್ಸಿನಲ್ಲಿದ್ದ ಪ್ರಯಾಣಿಕರು ಆತಂಕದಿoದ ಹೌಹಾರಿದ್ದಾರೆ. ಈ ವೇಳೆ ಬಸ್ಸಿನಲ್ಲಿದ್ದ ಅಗ್ನಿಶಮನ ಸಾಮಗ್ರಿಯೂ ಹಾಳಾಗಿದ್ದು, ಜನರ ಅರಿವಿಗೆ ಬಂದಿದೆ. ಕುಮಟಾ ಡಿಪೋದ ಬಸ್ಸು ಸಿದ್ದಾಪುರ – ಕುಮಟಾ ರಾಜ್ಯ ಹೆದ್ದಾರಿಯಲ್ಲಿ ಸಂಚರಿಸುತ್ತಿತ್ತು. ಆ ಬಸ್ಸು ಕಾರವಾರಕ್ಕೆ ಹೊರಟಿದ್ದು, ಬಡಾಳ ಘಟ್ಟದಲ್ಲಿ ಬಸ್ಸಿನಿಂದ ದೊಡ್ಡ ಪ್ರಮಾಣದಲ್ಲಿ ಹೊಗೆ ಹೊರಬಂದಿತು. ಸಣ್ಣ ಹೊಗೆ ಬಂದಾಗ ಜನ ಅದಕ್ಕೆ ತಲೆಕೆಡಿಸಿಕೊಳ್ಳಲಿಲ್ಲ. ಹೊಗೆ ದೊಡ್ಡದಾದಾಗ ಬೊಬ್ಬೆ ಹೊಡೆದು ಬಸ್ಸಿನಿಂದ ಹಾರಲು ಶುರು ಮಾಡಿದರು. ಪ್ರಯಾಣಿಕರು ಗಾಬರಿಗೊಂಡಿದ್ದರಿoದ ಪರಿಸ್ಥಿತಿ ಕೈ ಮೀರುತ್ತಿರುವುದನ್ನು ಅರಿತ ಬಸ್ಸಿನ ಚಾಲಕ ಹಾಗೂ ನಿರ್ವಾಹಕರು ತಕ್ಷಣವೇ ಬಸ್ಸು ನಿಲ್ಲಿಸಿದರು. ಎಲ್ಲಾ ಪ್ರಯಾಣಿಕರನ್ನು ಬಸ್ಸಿನಿಂದ ಕೆಳಗಿಳಿಸಿದರು. ಅರ್ಧ ಗಂಟೆ ಕಾಲ ಪ್ರಯಾಣಿಕರು ರಸ್ತೆಯ ಪಕ್ಕದಲ್ಲಿ ಕಾದಿದ್ದು, ಆ ಮಾರ್ಗವಾಗಿ ಬಂದ ಇನ್ನೊಂದು ಬಸ್ಸಿನ ಮೂಲಕ ಪ್ರಯಾಣಿಕರನ್ನು ತಲುಪಬೇಕಾದ ಸ್ಥಳಕ್ಕೆ ಕಳುಹಿಸಲಾಯಿತು. ಅಗ್ನಿಶಮನ ಸಲಕರಣೆಯೇ ಇಲ್ಲ! ಸಿದ್ದಾಪುರ-ಕಾರವಾರ ಬಸ್ ನಲ್ಲಿ ಬಸ್ಸಿನ ಟೈರ್ ಜ್ಯಾಮ್ ಆಗಿ ಹೊಗೆ ಬರುತ್ತಿದೆ ಎಂದು ಪ್ರಯಾಣಿಕರೊಬ್ಬರು ಹೇಳಿದರು. ಬಸ್ಸಿನಲ್ಲಿ ಅಗ್ನಿಶಾಮನ ಸಾಧನ ಇಲ್ಲದ ಕಾರಣ ಕುಡಿಯಲು ತಂದಿದ್ದ ಬಾಟಲಿ ನೀರನ್ನು ಪ್ರಯಾಣಿಕರು ಹೊಗೆ ಬಂದ ಕಡೆ ಚೆಲ್ಲಿದರು. ಎಲ್ಲಾ ಸಾರಿಗೆ ಬಸ್‌ಗಳಲ್ಲಿ ಬೆಂಕಿ ಅವಘಡ ತಡೆಯಲು ಅಗ್ನಿಶಮನ ಸಾಧನ ಅಳವಡಿಸುವುದು ಅಗತ್ಯ ಎಂದು ಪ್ರಯಾಣಿಕರು ಹೇಳಿದರು. - [ನಾನು ಕಳ್ಳನಲ್ಲ.. ಬಂಧನವೂ ಆಗಿಲ್ಲ!](https://mobiletime.in/2025/11/im-not-a-thief-i-havent-even-been-arrested/): ಮರಗಳ ಮಾರಣಹೋಮ ನಡೆಸಿದಕ್ಕಾಗಿ ಶಿರಸಿಯ ಜೆಡಿಎಸ್ ಮುಖಂಡ ಉಪೇಂದ್ರ ಪೈ ಅವರ ಬಂಧನವಾದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸುದ್ದಿ ಹರಿದಾಡುತ್ತಿದೆ. `ಮೊಬೈಲ್ ಮಿಡಿಯಾ ನೆಟ್‌ವರ್ಕ ಜೊತೆ ಮಾತನಾಡಿದ ಅವರು `ಬಂಧನವೂ ಆಗಿಲ್ಲ. ಬಿಡುಗಡೆಯೂ ಆಗಿಲ್ಲ’ ಎಂದು ಸ್ಪಷ್ಟಪಡಿಸಿದ್ದಾರೆ. ಶಿರಸಿಯ ಇಟಗುಳಿಯಲ್ಲಿ ಉಪೇಂದ್ರ ಪೈ ಅವರು ಭೂಮಿ ಹೊಂದಿದ್ದಾರೆ. ಅವರ ಭೂಮಿಯಲ್ಲಿ ಅಕೆಶಿಯಾ ಮರ ಬೆಳೆದಿದ್ದು, ಗಾಳಿ-ಮಳೆಗೆ ಸಿಲುಕಿ ಅವು ವಿದ್ಯುತ್ ತಂತಿ ಮೇಲೆ ಮುರಿದು ಬೀಳುತ್ತಿವೆ. ಹೀಗಾಗಿ ನಾಲ್ಕು ವರ್ಷದ ಹಿಂದೆಯೇ ಉಪೇಂದ್ರ ಪೈ ಅವರು ಆ ಮರಗಳ ಕಟಾವಿಗೆ ಅರಣ್ಯ ಇಲಾಖೆಗೆ ಅರ್ಜಿ ಸಲ್ಲಿಸಿದ್ದಾರೆ. ಮರ ಕಟಾವಿಗೆ ಅರಣ್ಯ ಇಲಾಖೆ ಮಾರ್ಕಿಂಗ್ ಮಾಡಿದ್ದು ಕಟಾವು ಪ್ರಕ್ರಿಯೆ ಮಾತ್ರ ನಡೆದಿರಲಿಲ್ಲ. ಹೀಗಿರುವಾಗ ಅಲ್ಲಿದ್ದ ಕೊಟ್ಟಿಗೆ ಹಾಗೂ ವಿದ್ಯುತ್ ತಂತಿಗಳ ಸುರಕ್ಷತೆ ದೃಷ್ಠಿಯಿಂದ ಅಪಾಯಕಾರಿ ರೀತಿಯಲ್ಲಿದ್ದ ಮರಗಳನ್ನು ಉಪೇಂದ್ರ ಪೈ ಅವರು ಕಟಾವು ಮಾಡಿದ್ದಾರೆ. ಕಟಾವು ಮಾಡಿದ ಮರಗಳು ಜಾಗದಲ್ಲಿಯೇ ಬಿದ್ದಿದ್ದು, ಸಾರ್ವಜನಿಕರೊಬ್ಬರ ದೂರಿನ ಮೇರೆಗೆ ಅರಣ್ಯಾಧಿಕಾರಿಗಳು ಅದನ್ನು ಪರಿಶೀಲಿಸಿದ್ದಾರೆ. ಅನುಮತಿ ಇಲ್ಲದೇ ಮರ ಕಟಾವು ಮಾಡಿದ ಕಾರಣ ಅಲ್ಲಿ ಕೆಲಸ ಮಾಡುವ ಕಾರ್ಮಿಕನ ಮೇಲೆ ಪ್ರಕರಣ ದಾಖಲಿಸುವುದಾಗಿಯೂ ಹೇಳಿದ್ದಾರೆ. ಆಗ, ಉಪೇಂದ್ ಪೈ ಅವರು ಅಪಾಯಕಾರಿ ಮರಗಳಿಂದ ಆಗಬಹುದಾದ ಅನಾಹುತಗಳ ಬಗ್ಗೆ ಅರಣ್ಯಾಧಿಕಾರಿಗಳಿಗೆ ವಿವರಿಸಿದ್ದಾರೆ. ಈ ಹಿಂದೆ ನೀಡಿದ ಅರ್ಜಿ, ಮಾರ್ಕಿಂಗ್ ನಡೆದ ದಾಖಲೆಗಳನ್ನು ಕಾಣಿಸಿದ್ದಾರೆ. ಅದಾಗಿಯೂ ಅನುಮತಿ ಇಲ್ಲದೇ ಮರ ಕಟಾವು ಮಾಡಿದ ಕಾರಣ 20 ಸಾವಿರ ರೂ ದಂಡ ಪಾವತಿಸುವಂತೆ ಅರಣ್ಯಾಧಿಕಾರಿಗಳು ಹೇಳಿದ್ದಾರೆ. ಇದಕ್ಕೆ ಉಪೇಂದ್ರ ಪೈ ಅವರು ಸಹ ಒಪ್ಪಿಗೆ ನೀಡಿದ್ದು, ಕಾನೂನು ಪ್ರಕ್ರಿಯೆಗಳನ್ನು ಮುಗಿಸಿದ್ದಾರೆ. `ಕಾರ್ಮಿಕನ ಮೇಲೆ ಪ್ರಕರಣ ದಾಖಲಿಸುವ ಬದಲು ಜಾಗದ ಮೇಲಿನ ಮಾಲಕನಾದ ನನ್ನ ಮೇಲೆ ಕೇಸ್ ದಾಖಲಿಸಿ’ ಎಂದು ಅವರು ಹೇಳಿದ್ದಾರೆ. `ಹಣ ಪಾವತಿ ನಂತರ ಸ್ಥಳದಲ್ಲಿದ್ದ ಎಲ್ಲಾ ಅಪಾಯಕಾರಿ ಮರಗಳನ್ನು ನಿಯಮಾನುಸಾರ ಕಟಾವು ಮಾಡಬೇಕು. ಜೊತೆಗೆ ಅದನ್ನು ಅಲ್ಲಿಂದ ಸ್ಥಳಾಂತರಿಸಬೇಕು’ ಎಂದು ತಾಕೀತು ಮಾಡಿದ್ದಾರೆ. ಅದಾದ ನಂತರ ಉಪೇಂದ್ರ ಪೈ ಅವರು ಜೆಡಿಎಸ್ ಪಕ್ಷದ ಕಾರ್ಯಕ್ರಮಕ್ಕಾಗಿ ಬೆಂಗಳೂರಿಗೆ ಹೋಗಿದ್ದು, `ಉಪೇಂದ್ರ ಪೈ ಅವರ ಬಂಧನ-ಬಿಡುಗಡೆ’ ಸುದ್ದಿ ಹರಿದಾಡಿದೆ. ಇದಕ್ಕೆ ಅವರು ಜಾಲತಾಣದ ಮೂಲಕ ಸ್ಪಷ್ಠನೆ ನೀಡಿದ್ದು, ನಡೆದ ಘಟನಾವಳಿಗಳ ಬಗ್ಗೆ ಮೊಬೈಲ್ ಮಿಡಿಯಾ ನೆಟ್‌ವರ್ಕಗೂ ವಿವರಿಸಿದ್ದಾರೆ. - [ನವೆಂಬರ್ 25: ಈ ದಿನ ಅಂಕೋಲಾದಲ್ಲಿ ಏನೂ ಸಿಗಲ್ಲ!](https://mobiletime.in/2025/11/november-25-nothing-is-available-in-ankola-on-this-day/): ಜನ ವಿರೋಧದ ನಡುವೆಯೂ ಅಂಕೋಲಾದ ಕೇಣಿಯಲ್ಲಿ ವಾಣಿಜ್ಯ ಬಂದರು ನಿರ್ಮಾಣದ ಸಿದ್ಧತೆ ನಡೆದಿದೆ. ಈ ಹಿನ್ನಲೆ ಜನಾಕ್ರೋಶ ಹೆಚ್ಚಾಗಿದ್ದು, ನವೆಂಬರ್ 25ಕ್ಕೆ ಅಂಕೋಲಾ ಬಂದ್’ಗೆ ಕರೆ ನೀಡಲಾಗಿದೆ. ವಾಣಿಜ್ಯ ಬಂದರಿಗೆ ವಿರೋಧವ್ಯಕ್ತಪಡಿಸಿ ಅಂಕೋಲಾದಲ್ಲಿ ಕಳೆದ 9 ದಿನಗಳಿಂದ ಧರಣಿ ನಡೆಯುತ್ತಿದೆ. ಈ ಹಿಂದೆ ಸಹ ಸಾಕಷ್ಟು ಪ್ರತಿಭಟನೆ, ಹೋರಾಟಗಳು ನಡೆದಿವೆ. ಅದಾಗಿಯೂ ಜನರ ಸಮಸ್ಯೆ ಜನಪ್ರತಿನಿಧಿಗಳಿಗೆ ಅರ್ಥವಾಗಿಲ್ಲ. ಈ ಹಿನ್ನಲೆ ಬಂದರು ವಿರೋಧಿಸಿ `ಅಂಕೋಲಾ ಬಂದ್’ ಮಾಡಿ ಬಿಸಿ ಮುಟ್ಟಿಸಲು ನಿರ್ಧರಿಸಿದ್ದಾರೆ. ಕೇಣಿಯಲ್ಲಿ ಪ್ರಸ್ತಾವಿತ ವಾಣಿಜ್ಯ ಬಂದರು ನಿರ್ಮಾಣವನ್ನು ವಿರೋಧಿಸಿ ಒಂದು ವರ್ಷದಿಂದ ಅಲ್ಲಿನವರು ಹೋರಾಟ ನಡೆಸುತ್ತಿದ್ದಾರೆ. ಮುಖ್ಯವಾಗಿ ಮೀನುಗಾರ ಸಮುದಾಯದವರು `ತಮಗೆ ಬದುಕಲು ಬಿಡಿ’ ಎಂದು ಒತ್ತಾಯಿಸುತ್ತಿದ್ದಾರೆ. ಈ ಹಿಂದೆ ಮೀನು ಮಾರುಕಟ್ಟೆ ಬಂದ್ ಮಾಡಿ ಪ್ರತಿಭಟನೆ ನಡೆಸಿದರೂ ಅದರಿಂದ ಪ್ರಯೋಜನವಾಗದ ಹಿನ್ನಲೆ ಅಂಕೋಲಾ ಪೇಟೆಯನ್ನು ಬಂದ್ ಮಾಡುವ ನಿರ್ಣಯಕ್ಕೆ ಬಂದಿದ್ದಾರೆ. ನವೆAಬರ್ 12ರಿಂದ ಅಂಕೋಲಾದಲ್ಲಿ ಕೇಣಿ ಬಂದರು ವಿರೋಧಿಸಿ ಅನಿರ್ದಿಷ್ಟ ಅವಧಿ ಧರಣಿ ಸತ್ಯಾಗ್ರಹ ಶುರುವಾಗಿದೆ. ನವೆಂಬರ್ 25ರಂದು ವಿವಿಧ ಸಂಘಟನೆಯವರು ಪೇಟೆಯನ್ನು ಬಂದ್ ಮಾಡುವಂತೆ ಅಂಗಡಿ ಮಾಲಕರಿಗೆ ಮನವಿ ಮಾಡಿದ್ದಾರೆ. `ಅಂಕೋಲಾ ಉಳಿಸಿ’ ಆಂದೋಲನದ ಅಂಗವಾಗಿ ಅನೇಕ ಅಂಗಡಿಕಾರರು ಈ ಬಂದ್ ಕರೆಗೆ ಸ್ಪಂದಿಸಿದ್ದಾರೆ. ಬಂದ್ ಯಶಸ್ವಿಯಾದ ನಂತರ ಈ ಹೋರಾಟ ಇನ್ನಷ್ಟು ತಿರುವುಪಡೆಯುವ ಸಾಧ್ಯತೆಗಳು ಹೆಚ್ಚಿದೆ. - [ಅಗ್ನಿ ಅವಘಡ: ಸುಟ್ಟು ಕರಕಲಾದ ಮನೆ](https://mobiletime.in/2025/11/fire-accident-burnt-out-house/): ಕಾರವಾರದಲ್ಲಿನ ಮನೆಯೊಂದಕ್ಕೆ ಬೆಂಕಿ ಬಿದ್ದಿದ್ದು, ಲಕ್ಷಾಂತರ ರೂ ಮೌಲ್ಯದ ಸಾಮಗ್ರಿಗಳು ನಾಶವಾಗಿದೆ. ವಿದ್ಯುತ್ ಶಾರ್ಟ ಸರ್ಕೀಟ್ ಅವಘಡಕ್ಕೆ ಕಾರಣ ಎಂಬ ಮಾಹಿತಿ ಸಿಕ್ಕಿದೆ. ಕಾರವಾರ ನಗರ ಬಾಡದ ಗುರುಮಠದ ಸಮೀಪದ ಹಂಚಿನ ಮನೆಯಲ್ಲಿ ಶುಕ್ರವಾರ ಬೆಳಿಗ್ಗೆ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡಿದೆ. ಪ್ರವೀಣ ಜಾವೇಕರ ಅವರಿಗೆ ಸೇರಿದ ಮನೆ ಇದಾಗಿದ್ದು, ಕುಟುಂಬದ ಸದಸ್ಯರೆಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆದರೆ, ಬೆಂಕಿಯ ಜ್ವಾಲೆ ಉಲ್ಬಣವಾಗಿದ್ದರಿಂದ ಗೃಹೋಪಯೋಗಿ ವಸ್ತುಗಳು ಸುಟ್ಟು ಕರಕಲಾಗಿದೆ. ಅಗ್ನಿಶಾಮಕ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಸಿಬ್ಬಂದಿ ಬೆಂಕಿ ಆರಿಸುವ ಪ್ರಯತ್ನ ಮಾಡಿದ್ದಾರೆ. ಪರಿಣಾಮ ಇನ್ನಷ್ಟು ದೊಡ್ಡ ಪ್ರಮಾಣದಲ್ಲಿ ಬೆಂಕಿ ಹೊತ್ತಿ ಉರಿಯುವುದು ತಪ್ಪಿದೆ. ಅಗ್ನಿಶಾಮಕ ಠಾಣಾಧಿಕಾರಿ ಮಹಾಬಲೇಶ್ವರ ಗೌಡ, ಪ್ರಮುಖ ಅಗ್ನಿಶಾಮಕ ಸಿಬ್ಬಂದಿ ಸಪ್ನಿಲ್ ಪೇಡ್ನೆಕರ, ಟೋನಿ, ಕುಮಾರ ಕೆ ಎನ್, ಪ್ರವೀಣ ಕೆ ಬೆಮಕಿಯ ಜ್ವಾಲೆ ಆರಿಸಿದ್ದಾರೆ. - [ವಿದ್ಯುತ್ ಸ್ಪರ್ಶಿಸಿ ಸಾಯಿಸಿದರು.. ಸಾಕ್ಷಿ ನಾಶಕ್ಕಾಗಿ ಶವ ಎಸೆದರು!](https://mobiletime.in/2025/11/they-electrocuted-him-to-death-they-threw-the-body-away-to-destroy-the-evidence/): ಕಾಡು ಪ್ರಾಣಿ ಹಾವಳಿ ತಡೆಗೆ ಗದ್ದೆಗೆ ಅಳವಡಿಸಿದ್ದ ಅನಧಿಕೃತ ವಿದ್ಯುತ್ ಸಿದ್ದಾಪುರದ ವ್ಯಕ್ತಿಯೊಬ್ಬರನ್ನು ಕೊಂದಿದೆ. ಆಕಸ್ಮಿಕ ಅವಘಡವನ್ನು ಅರಗಿಸಿಕೊಳ್ಳಲಾಗದ ಆರೋಪತರು ಆ ಶವವನ್ನು ಹೊಳೆಗೆ ಎಸೆದು ಪರಾರಿಯಾಗಿದ್ದು, ಎರಡು ವಾರದ ನಂತರ ಸಿಕ್ಕಿ ಬಿದ್ದಿದ್ದಾರೆ. ಸಿದ್ದಾಪುರದ ಶೀಗೆಹಳ್ಳಿಯಲ್ಲಿ ಬಂಗಾರ್ಯ ನಾರಾಯಣ ಆಚಾರಿ (63) ಅವರು ವಾಸವಾಗಿದ್ದರು. ನವೆಂಬರ್ 3ರಂದು ಶಿಗೇಹಳ್ಳಿಯ ರಾಮಚಂದ್ರ ನಾಯ್ಕ ಅವರಿಗೆ ಕೈಗಡ ಹಣ ಕೊಡಲು ಅವರು ಮನೆಯಿಂದ ಹೊರ ಬಿದ್ದಿದ್ದರು. ಸಂಜೆ 6 ಗಂಟೆ ವೇಳೆಗೆ ದಾರಿ ನಡುವಿನ ಗದ್ದೆಯಲ್ಲಿ ಅವರು ಹಾದು ಹೋಗುತ್ತಿದ್ದು, ಅಲ್ಲಿ ಅಳವಡಿಸಲಾದ ವಿದ್ಯುತ್ ಬೇಲಿ ಸ್ಪರ್ಶದಿಂದ ಸಾವನಪ್ಪಿದರು. ನಾಗರಾಜ ನಾರಾಯಣ ನಾಯ್ಕ, ವಸಂತ ಮಂಜಾ ನಾಯ್ಕ, ದಯಾ ಕಾಳಾ ನಾಯ್ಕ, ಮಹೇಶ ದರ್ಗಾ ನಾಯ್ಕ ಸೇರಿ ಅಲ್ಲಿನ ಗದ್ದೆಗೆ ಅಕ್ರಮವಾಗಿ ವಿದ್ಯುತ್ ಅಳವಡಿಸಿದ್ದರು. ಗದ್ದೆ ಪಕ್ಕ ಹಾದು ಹೋಗಿದ್ದ ವಿದ್ಯುತ್ ತಂತಿಗೆ ಕೊಕ್ಕೆ ಹಾಕಿ ಬೇಲಿಗೆ ಸಂಪರ್ಕ ಜೋಡಿಸಿದ್ದರು. ಅದೇ ವಿದ್ಯುತ್ ಸ್ಪರ್ಶದಿಂದ ಬಂಗಾರ್ಯ ಆಚಾರಿ ಅವರು ಕೊನೆಯುಸಿರೆಳೆದಿದ್ದರು. ಬಂಗಾರ್ಯ ಆಚಾರಿ ಅವರು ಸಾವನಪ್ಪಿದನ್ನು ನೋಡಿದ ನಾಗರಾಜ ನಾರಾಯಣ ನಾಯ್ಕ, ವಸಂತ ಮಂಜಾ ನಾಯ್ಕ, ದಯಾ ಕಾಳಾ ನಾಯ್ಕ, ಮಹೇಶ ದರ್ಗಾ ನಾಯ್ಕ ಅವರು ಇಷ್ಟು ದಿನಗಳ ಕಾಲ ಶವವನ್ನು ಅಡಗಿಸಿಟ್ಟಿದ್ದರು. 18 ದಿನದ ನಂತರ ಆ ಶವವನ್ನು ಶೀಗೆಹಳ್ಳಿ ಗ್ರಾಮದ ಮುಂಡಿಗೆಮನೆ ಬೆಟ್ಟದ ಅಡಿ ಹರಿಯುವ ಹೊಳೆಯಲ್ಲಿ ಬಿಸಾಡಿದರು. ಶವ ಕೊಳೆತ ವಾಸನೆ ಬೆನ್ನತ್ತಿ ಹೊರಟ ಜನರಿಗೆ ಅಲ್ಲಿ ಬಂಗಾರ್ಯ ಆಚಾರಿ ಅವರು ಕಾಣಿಸಿದರು. ನವೆಂಬರ್ 4ರಂದು ಬೆಳಗ್ಗೆ 6ಗಂಟೆಗೆ ರಾಮಚಂದ್ರ ನಾಯ್ಕ ಅವರನ್ನು ಹುಡುಕಿ ಅವರ ಮಗ ವಿಷ್ಣು ಆಚಾರಿ ಅವರು ಅದೇ ಮಾರ್ಗವಾಗಿ ಹೋಗಿದ್ದು, ಆಗ ಅಲ್ಲಿನ ಗದ್ದೆ ಬಳಿ ಕರೆಂಟ್ ಲೈನಿಗೆ ಕೊಕ್ಕೆ ನೋಡಿದ್ದರು. ಜೊತೆಗೆ ಊರಿನ ವಿದ್ಯುತ್ ಸಂಪರ್ಕದಲ್ಲಿ ವ್ಯತ್ಯವಾಗಿದ್ದು, ಲೈಟ್ ಡಿಮ್ ಆಗಿ ಉರಿಯುತ್ತಿರುವುದನ್ನು ಗಮನಿಸಿದ್ದರು. ಬೆಳಗ್ಗೆ 10 ಗಂಟೆ ವೇಳೆಗೆ ಕರೆಂಟ್ ಲೈನಿನ ಕೊಕ್ಕೆ ತೆಗೆದಿರುವುದನ್ನು ಅವರು ಕಂಡಿದ್ದರು. ಈ ಎಲ್ಲಾ ಹಿನ್ನಲೆ ಅಕ್ರಮ ವಿದ್ಯುತ್ ಸಂಪರ್ಕದಿAದ ಆಗುವ ಅನಾಹುತ ಅರಿವಿದ್ದರೂ ಅದನ್ನು ಅಳವಡಿಸಿ ಬಂಗಾರ್ಯ ಆಚಾರಿ ಅವರ ಸಾವಿಗೆ ಕಾರಣರಾದವರ ವಿರುದ್ಧ ಅವರು ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದರು. ಸಾಕ್ಷಿ ನಾಶಕ್ಕಾಗಿ ಶವವನ್ನು ಹೊಳೆಗೆ ಎಸೆದ ಬಗ್ಗೆಯೂ ಪೊಲೀಸರಲ್ಲಿ ವಿವರಿಸಿದರು. `ಅಕ್ರಮ ವಿದ್ಯುತ್ ಸಂಪರ್ಕ ಜೀವಕ್ಕೆ ಅಪಾಯ’ - [ಗೃಹಲಕ್ಷ್ಮಿ: ಸಹಕಾರಿ ಚುನಾವಣೆಗೆ ನಾಮಪತ್ರ ಸಲ್ಲಿಕೆ](https://mobiletime.in/2025/11/grihalakshmi-nomination-submission-for-cooperative-elections/): ರಾಜ್ಯ ಸರ್ಕಾರದ ಮಹತ್ವದ ಯೋಜನೆಗಳಲ್ಲಿ ಒಂದಾದ `ಗೃಹಲಕ್ಷ್ಮೀ’ಗೆ ಪೂರಕವಾಗಿ ಸಹಕಾರಿ ಸಂಘ ಸ್ಥಾಪನೆ ನಡೆಯುತ್ತಿದ್ದು, ಯಲ್ಲಾಪುರದ ಮಹಿಳೆಯರಿಬ್ಬರು ಈ ಸಹಕಾರಿ ಸಂಸ್ಥೆಯ ನಿರ್ದೇಶಕ ಸ್ಥಾನಕ್ಕಾಗಿ ನಾಮಪತ್ರ ಸಲ್ಲಿಸಿದ್ದಾರೆ. ಗೃಹಲಕ್ಷ್ಮೀ ವಿವಿಧೋದ್ದೇಶ ಸಹಕಾರಿ ಸಂಘದ ರಾಜ್ಯ ಪದಾಧಿಕಾರಿ ಸ್ಥಾನಕ್ಕೆ ಯಲ್ಲಾಪುರದ ರೂಪಾ ಜನಾರ್ಧನ ಪಾಟಣಕರ್ ಮತ್ತು ಮುಷರತ್ ಶೇಖ್ ಅವರು ಉಮೇದುದಾರಿಕೆ ಸಲ್ಲಿಸಿದ್ದಾರೆ. ರೂಪಾ ಪಾಠಣಕರ್ ಅವರು ಭಾರತ ಕೋ ಆಪರೇಟಿವ್ ಕ್ರೆಡಿಟ್ ಸೊಸೈಟಿಯ ನಿರ್ದೇಶಕರಾಗಿದ್ದಾರೆ. ಅಂಬೇಡ್ಕರ್ ಸೇವಾ ಸಮತಿ ಹಾಗೂ ತೊಗಲು ಹರಳ್ಳಯ್ಯ ಟ್ರಸ್ಟ್ ಮೂಲಕವೂ ವಿವಿಧ ಸಾಮಾಜಿಕ ಕಾರ್ಯದಲ್ಲಿ ತೊಡಗಿದ್ದಾರೆ. ಮುಷರತ್ ಶೇಖ್ ಅವರು ಪಂಚ ಗ್ಯಾರಂಟಿ ಯೋಜನೆಯ ಅನುಷ್ಠಾನಕ್ಕಾಗಿ ಮಾಡಲಾದ ಗ್ಯಾರಂಟಿ ಸಮಿತಿಯ ಸದಸ್ಯರಾಗಿದ್ದಾರೆ. ಅವರಿಬ್ಬರು ಕಾಂಗ್ರೆಸ್ ಕಾರ್ಯಕರ್ತರಾಗಿದ್ದು, ಕೆಪಿಸಿಸಿ ಸದಸ್ಯ ವಿವೇಕ್ ಹೆಬ್ಬಾರ್ ಅವರ ಮಾತಿನಂತೆ ಈ ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ. ಶುಕ್ರವಾರ ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದ್ದು, ಬೆಂಗಳೂರಿನಲ್ಲಿ ಈ ದಿನ ಅವರಿಬ್ಬರು ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. - [ಕಲಹಕ್ಕೆ ಕಾರಣವಾದ ಟಿಪ್ಪು ಬ್ಯಾನರ್!](https://mobiletime.in/2025/11/tipu-banner-that-caused-conflict/): ಹಳಿಯಾಳದಲ್ಲಿ ಅನುಮತಿ ಇಲ್ಲದೇ ಟಿಪ್ಪು ಸುಲ್ತಾನ್ ಬ್ಯಾನರ್ ಅಳವಡಿಸಿರುವುದು ವಿವಾದಕ್ಕೆ ಕಾರಣವಾಗಿದೆ. ಟಿಪ್ಪು ಸುಲ್ತಾನ್ `ದಿ ಕಿಂಗ್ ಆಪ್ ಟೈಗರ್’ ಎಂದು ನಮೂದಿಸಿದ ಭಾವಚಿತ್ರಕ್ಕೆ ಆಕ್ಷೇಪವ್ಯಕ್ತವಾಗಿದ್ದು, `ಅನುಮತಿಪಡೆದು ಭಾವಚಿತ್ರ ಅಂಟಿಸಿ’ ಎಂದು ಪುರಸಭೆಯವರು ಸೂಚಿಸಿದ್ದಾರೆ. ಈ ಸೂಚನೆಗೆ ಸಹ ಅಲ್ಲಿನ ಯುವಕರು ಆಕ್ಷೇಪವ್ಯಕ್ತಪಡಿಸಿದ್ದು, ಸಿಬ್ಬಂದಿಯನ್ನು ಬೆದರಿಸಿದ್ದಾರೆ. ಈ ಪ್ರದೇಶದಲ್ಲಿ ಟಿಪ್ಪು ಸುಲ್ತಾನ್ ಬ್ಯಾನರ್ ಅಳವಡಿಸಲು ಪರವಾನಿಗೆ ಪಡೆದಿಲ್ಲ. ಹೀಗಾಗಿ ಅದನ್ನು ತೆರವುಗೊಳಿಸಬೇಕು ಎಂದು ಕೆಲವರು ಪುರಸಭೆಗೆ ಆಗ್ರಹಿಸಿದ್ದಾರೆ. ಈ ಹಿನ್ನಲೆ ಪುರಸಭೆಯವರು ಮೇದಾರಗಲ್ಲಿ, ಕುಂಬಾರಗಲ್ಲಿ ಮತ್ತು ಗಣಪತಿ ಗಲ್ಲಿಯ ಕೂಡುವ ತಾಲೀಮ್ ಕೂಟ್‌ನಲ್ಲಿ ಅಳವಡಿಸಲಾಗಿದ್ದ ಟಿಪ್ಪು ಸುಲ್ತಾನ್ ಭಾವಚಿತ್ರವಿರುವ ದೊಡ್ಡ ಗಾತ್ರದ ಕಟೌಟ್ ತೆರವುಗೊಳಿಸುವಂತೆ ಸಂಘಟಕರಿಗೆ ಸೂಚಿಸಿದ್ದಾರೆ. ಇದೇ ವಿಷಯ ಇದೀಗ ದೊಡ್ಡದಾಗಿದ್ದು, ಕಲಹಕ್ಕೆ ಕಾರಣವಾಗಿದೆ. ಈ ಹಿನ್ನೆಲೆ ಪುರಸಭೆ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಬ್ಯಾನರ್ ತೆರವುಗೊಳಿಸುವಂತೆ ತಿಳಿಸಿದಾಗ ಯುವಕರು ಅದನ್ನು ಅಲ್ಲಿದ್ದ ಮನೆ ಎದುರು ಅಳವಡಿಸಲು ಮುಂದಾದರು. `ಅದಕ್ಕೆ ಸಹ ಪರವಾನಿಗೆ ಅಗತ್ಯ’ ಎಂದು ಪುರಸಭೆ ಸಿಬ್ಬಂದಿ ಹೇಳಿದರು. ಇದರಿಂದ ಕೆರಳಿದ ಯುವಕರು `ಟಿಪ್ಪು ಸುಲ್ತಾನ್ ಒಬ್ಬ ಹೋರಾಟಗಾರ, ಅವರ ಬ್ಯಾನರ್ ಅಳವಡಿಸುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದವರ ವಿವರ ನೀಡಿ’ ಎಂದು ಆಗ್ರಹಿಸಿದರು. ಮೇಲಧಿಕಾರಿಗಳನ್ನು ಸ್ಥಳಕ್ಕೆ ಕರೆಯಿಸುವಂತೆ ಪಟ್ಟುಹಿಡಿದರು. ಪೊಲೀಸರು ಸ್ಥಳಕ್ಕೆ ಆಗಮಿಸಿ ಕಾನೂನು ಪಾಠ ಮಾಡಿದರು. ಪುರಸಭೆ ಅಧಿಕಾರಿಗಳು ಆಗಮಿಸಿ ವಿಷಯದ ಗಂಭೀರತೆಯ ಬಗ್ಗೆ ವಿವರಿಸಿದರು. ಆದರೆ, ಬ್ಯಾನರ್ ಅಳವಡಿಸುವವರು ಇದಕ್ಕೆ ಬಗ್ಗಲಿಲ್ಲ. ಬ್ಯಾನರ್ ಅಳವಡಿಸಿದ್ದ ಯುವಕರು ಹಾಗೂ ಹಿಂದು ಸಂಘಟನೆ ಕಾರ್ಯಕರ್ತರ ನಡುವೆ ಈ ವೇಳೆ ಮಾತಿನ ಚಕಮಕಿ ನಡೆಯಿತು. ಈ ವೇಳೆ ಯುವಕರು ಗುಂಪು 1ನಾರೆ ತಕ್ದೀರ್ ಅಲ್ಲಾಹು ಅಕ್ಬರ್’ ಎಂಬ ಘೋಷಣೆ ಕೂಗಿದ್ದು, ಇದಕ್ಕೆ ಪ್ರತಿಯಾಗಿ ಹಿಂದು ಪರ ಸಂಘಟನೆಗಳವರು ಹಿಂದುಪರ ಘೋಷಣೆ ಮೊಳಗಿಸಿದರು. ಕೂಡಲೇ ಪರಿಸ್ಥಿತಿಯನ್ನು ಹತೋಟಿಗೆ ತರಲು ಪೊಲೀಸರು ಜನರನ್ನು ಚದುರಿಸಿದರು. - [ಚರಸ್‌ಹೊಂದಿದ್ದ ಇಂಜಿನಿಯರ್ ಅಂದರ್!](https://mobiletime.in/2025/11/ander-an-engineer-who-had-charas/): ಮಾದಕ ವ್ಯಸನಗಳಲ್ಲಿ ಒಂದಾದ ಚರಸ್ ಮಾರಾಟದಲ್ಲಿ ತೊಡಗಿದ್ದ ಮುಂಡಗೋಡಿನ ಇಂಜಿನಿಯರ್ ಒಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತನ ಬಳಿ 8 ಲಕ್ಷ ರೂ ಮೌಲ್ಯದ 781 ಗ್ರಾಂ ಚರಸ್ ಸಿಕ್ಕಿದೆ. ಸುಭಾಷ್ ನಗರದ ಸಚಿನ್ ಟೆಕ್ ಬಹದ್ದೂರ್ ಗೂರ್ಖಾ ಅವರು ಬೆಂಗಳೂರಿನಲ್ಲಿ ಉದ್ಯೋಗದಲ್ಲಿದ್ದರು. ಸಾಕಷ್ಟು ಓದಿಕೊಂಡಿದ್ದ ಅವರಿಗೆ ಇಂಜಿನಿಯರ್ ಹುದ್ದೆ ಸಿಕ್ಕಿತ್ತು. ಜೊತೆಗೆ ಕೈ ತುಂಬ ಸಂಬಳವೂ ಇತ್ತು. ಅದಾಗಿಯೂ ಅವರು ಅಡ್ಡದಾರಿ ಹಿಡಿದು ಮಾದಕ ವ್ಯಸನ ಮಾರಾಟಕ್ಕೆ ಮುಂದಾಗಿದ್ದರು. ಶುಕ್ರವಾರ ಶಿರಸಿ-ಹುಬ್ಬಳ್ಳಿ ಮಾರ್ಗದ ಮುಂಡಗೊಡು ಕೆಎಸ್‌ಆರ್‌ಟಿಸಿ ಬಸ್ ಡಿಪೋ ಹತ್ತಿರ ಬೈಕಿನಲ್ಲಿ ಹೋಗುತ್ತಿದ್ದ ಸಚಿನ್ ಅವರನ್ನು ಪೊಲೀಸರು ನಿಲ್ಲಿಸಿದರು. ತಪಾಸಣೆ ನಡೆಸಿದಾಗ ಮಾದಕ ವಸ್ತು ಸಿಕ್ಕಿತು. ಚೆರಸ್ ವಶಕ್ಕೆಪಡೆದ ಪೊಲೀಸರು ಆತನನ್ನು ಬಂಧಿಸಿದರು. ಮುಂಡಗೋಡ ಪಿಐ ರಂಗನಾಥ ನೀಲಮ್ಮನವರ, ಪಿಎಸ್ ಐ ಯಲ್ಲಾಲಿಂಗ ಕುನ್ನೂರ, ಸಿಬ್ಬಂದಿ ಕೋಟೇಶ್ವರ ನಾಗರವಳ್ಳಿ, ಮಹಾಂತೇಶ ಮುಧೋಳ, ಅಣ್ಣಪ್ಪ ಬುಡಿಗೇರ, ಶಿವಾನಂದ ದಾನಣ್ಣವರ, ಅನ್ವರ ಬಮ್ಮಿಗಟ್ಟಿ, ಚಾಲಕ ಗುರುರಾಜ ಈ ಕಾರ್ಯಾಚರಣೆಯಲ್ಲಿದ್ದರು. `ಮಾದಕ ವ್ಯಸನ ಜೀವನಕ್ಕೆ ಮಾರಕ’   - [ರೈತನನ್ನು ಕೊಂದ ಸಾಲದ ಹೊರೆ!](https://mobiletime.in/2025/11/the-burden-of-debt-killed-the-farmer/): ಸೊಸೈಟಿಯಲ್ಲಿನ ಬೆಳೆ ಸಾಲ ಹಾಗೂ ಇನ್ನಿತರ ಕಡೆಗಳಲ್ಲಿನ ಸಾಲದ ಹೊರೆ ಹೋರಲಾಗದ ಮುಂಡಗೋಡಿನ ಖೇಮಣ್ಣ ಲಮಾಣಿ ಅವರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಅವರ ಆತ್ಮಹತ್ಯೆ ನಂತರ ಆ ಸಾಲ ತೀರಿಸುವ ಜವಾಬ್ದಾರಿ ಕುಟುಂಬದವರಿಗೆ ಬಂದಿದ್ದು, ತಂದೆ ಸಾವಿನ ನೋವಿನಲ್ಲಿರುವ ಆನಂದ ಲಮಾಣಿ ಅವರು ಇನ್ನಷ್ಟು ಹೈರಣಾಗಿದ್ದಾರೆ. ಮುಂಡಗೋಡದ ಲಮಾಣಿತಾಂಡಾದಲ್ಲಿ ಖೇಮಣ್ಣ ಠಾಕರಪ್ಪ ಲಮಾಣಿ (55) ಅವರು ವಾಸವಾಗಿದ್ದರು. ಗದ್ದೆಯಲ್ಲಿ ಉಳುಮೆ ಮಾಡುವುದಕ್ಕಾಗಿ ಅವರು ಮುಂಡಗೋಡು ದೊಡ್ಡ ಪ್ರಮಾಣದ ವ್ಯವಸಾಯ ಸೇವಾ ಸಹಕಾರಿ ಸಂಘದಲ್ಲಿ ಬೆಳೆ ಸಾಲ ಮಾಡಿದ್ದರು. ಅದರ ಜೊತೆ ಇನ್ನಿತರ ಸಂಘ-ಸAಸ್ಥೆಗಳಲ್ಲಿ ಸಾಲ ಮಾಡಿದ್ದು, ಅದನ್ನು ತೀರಿಸಲಾಗದೇ ಸಮಸ್ಯೆಯಲ್ಲಿದ್ದರು. ಬೆಳೆ ಬೆಳೆಯುವುದಕ್ಕಾಗಿ ಅವರು ಸಾಕಷ್ಟು ಶ್ರಮಿಸಿದ್ದರು. ಆದರೆ, ಸರಿಯಾದ ಫಸಲು ಮಾತ್ರ ಸಿಕ್ಕಿರಲಿಲ್ಲ. ಹೀಗಾಗಿ ಅವರಿಗೆ ಮಾಡಿದ ಸಾಲ ತೀರಿಸಲು ಸಾಧ್ಯವಾಗಿರಲಿಲ್ಲ. ಸಾಲದ ಹೊರೆಯ ತಲೆಬಿಸಿಯಲ್ಲಿ ಅವರು ಮಾನಸಿಕವಾಗಿ ಕುಗ್ಗಿದ್ದರು. ಸಾಲ ತೀರಿಸಲಾಗದ ಬೇಸರದಲ್ಲಿಯೇ ಅವರು ನವೆಂಬರ್ 19ರಂದು ನೇಣು ಹಾಕಿಕೊಂಡರು. ಮನೆಯೊಳಗೆ ನೇತಾಡುತ್ತಿದ್ದ ತಂದೆಯನ್ನು ನೋಡಿದ ಆನಂದ ಲಮಾಣಿ ಅವರು ತಕ್ಷಣ ಕೆಳಗಿಳಿಸಿ ಅವರ ಕೈ-ಕಾಲು ತಿಕ್ಕಿದರು. ಆದರೆ, ಅಷ್ಟರೊಳಗೆ ಖೇಮಣ್ಣ ಲಮಾಣಿ ಅವರು ಕೊನೆಯುಸಿರೆಳೆದಿದ್ದರು. `ಆತ್ಮಹತ್ಯೆ ಅಪರಾಧ’   - [ಕಾಗೇರಿಗೆ ಕೃತಜ್ಞತೆ ಸಲ್ಲಿಸಿದ ಬಿಜೆಪಿ ಅಧ್ಯಕ್ಷ](https://mobiletime.in/2025/11/bjp-president-thanks-kageri/): ಹೊಂಡಗಳಿ0ದ ಕೂಡಿದ ರಾಷ್ಟಿಯ ಹೆದ್ದಾರಿ ಸರಿಪಡಿಸಲು ಕ್ರಮ ಜರುಗಿಸಿದ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ಯಲ್ಲಾಪುರ ಬಿಜೆಪಿ ಮಂಡಳ ಅಧ್ಯಕ್ಷ ಪ್ರಸಾದ ಹೆಗಡೆ ಕೃತಜ್ಞತೆ ಸಲ್ಲಿಸಿದ್ದಾರೆ. ಹುಬ್ಬಳ್ಳಿ-ಅಂಕೋಲಾ ಹೆದ್ದಾರಿ ಸಾಕಷ್ಟು ಹೊಂಡಗಳಿoದ ಕೂಡಿದ್ದು, ಪ್ರಯಾಣಿಕರು ಪರದಾಡುತ್ತಿದ್ದರು. ಈ ಮಾರ್ಗದ ಸಂಚಾರ ಅಸ್ತವ್ಯಸ್ಥವಾಗಿದ್ದರಿಂದ ಜನ ತೊಂದರೆ ಅನುಭವಿಸುತ್ತಿದ್ದರು. ಯಲ್ಲಾಪುರ ಬಿಜೆಪಿ ಘಟಕದವರು ಹೊಂಡಗಳ ಬಗ್ಗೆ ಮಾಹಿತಿ ಸಂಗ್ರಹಿಸಿ ಸಂಸದರಿಗೆ ರವಾನಿಸಿದ್ದು, ಇಲ್ಲಿ ಆದ ಅಪಘಾತಗಳ ಪ್ರಮಾಣದ ಅಂಕಿ-ಸoಖ್ಯೆಗಳನ್ನು ಒದಗಿಸಿದ್ದರು. ಅದರ ಅನ್ವಯ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ಬಳಿ ಮಾತನಾಡಿ ತುರ್ತು ಕ್ರಮಕ್ಕೆ ಒತ್ತಡ ತಂದಿದ್ದರು. ಯಲ್ಲಾಪುರದಿAದ ಕಲಘಟಕಿವರೆಗಿನ ಎಲ್ಲಾ ಹೊಂಡಗಳನ್ನು ಕೂಡಲೇ ಮುಚ್ಚುವಂತೆ ಸಂಸದರು ತಾಕೀತು ಮಾಡಿದ ಪರಿಣಾಮ ಇದೀಗ ಹೆದ್ದಾರಿ ಹೊಂಡ ಮುಚ್ಚುವ ಕೆಲಸ ಶುರುವಾಗಿದೆ. ಯಲ್ಲಾಪುರದಿಂದ ಗುಳ್ಳಾಪುರ ಮಾರ್ಗವಾಗಿರುವ ಹೆದ್ದಾರಿ ಹೊಂಡವನ್ನು ಸಹ ಮುಚ್ಚುವ ಭರವಸೆ ಸಿಕ್ಕಿದೆ. ತಾವು ಹೇಳಿದ ಕೆಲಸ ಮಾಡಿದಕ್ಕಾಗಿ ಕಾಗೇರಿ ಅವರಿಗೆ ಪ್ರಸಾದ ಹೆಗಡೆ ಫೋನ್ ಮಾಡಿ ಕೃತಜ್ಞತೆ ಹೇಳಿದ್ದಾರೆ. - [ಮಗುವಿನ ಜೀವಹಿಂಡಿದ ರೆಸಾರ್ಟ ಪ್ರವಾಸ!](https://mobiletime.in/2025/11/the-resort-trip-that-took-the-life-of-a-child/): ಭಟ್ಕಳದ ವಂಡರಲ್ಯಾoಡ್ ರೆಸಾರ್ಟಿನ ಈಜುಕೊಳದಲ್ಲಿ ಬಿದ್ದು 4 ವರ್ಷದ ಮಗು ಸಾವನಪ್ಪಿದೆ. ನೀರಿನಲ್ಲಿ ಮುಳುಗಿದ ಮಗುವನ್ನು ಲೈಫ್ ಕೇರ್ ಆಸ್ಪತ್ರೆಗೆ ಕರೆತಂದರೂ ಬದುಕಿಸಿಕೊಳ್ಳಲು ಆಗಲಿಲ್ಲ. ನವೆಂಬರ್ 20ರಂದು ಭಟ್ಕಳ ಜಾಲಿಯ ಗುಳ್ಮೀಯ ಅಬುಜಾ ಮದರಸಾ ಮಕ್ಕಳು ಪ್ರವಾಸಕ್ಕಾಗಿ ರೆಸಾರ್ಟಿಗೆ ಹೋಗಿದ್ದರು. ಮಕ್ಕಳ ಪಾಲಕರ ಜೊತೆ ಶಿಕ್ಷಕರು ಸಹ ಈ ಪ್ರವಾಸದಲ್ಲಿದ್ದರು. ಬೆಳಗ್ಗೆಯಿಂದ ಸಂಜೆಯವರೆಗೂ ಮಕ್ಕಳು ಅಲ್ಲಿ ಖುಷಿ ಅನುಭವಿಸಿದ್ದರು. ಜಾಲಿಯ ಆಜಾದ ನಗರದ ಮಹಮದ್ ಶಾಹಿದುಲ್ಲಾ ಅವರ ಪುತ್ರ ಮಸ್ತಕೀಮ್ (4) ಸಹ ತಮ್ಮ ತಾಯಿ ಜೊತೆ ರೆಸಾರ್ಟಿನಲ್ಲಿ ಕಾಲ ಕಳೆದಿದ್ದರು. ಸಂಜೆ 5 ಗಂಟೆ ಸುಮಾರಿಗೆ ಮಕ್ಕಳೆಲ್ಲರೂ ರೆಸಾರ್ಟಿನ ಈಜುಕೊಳ ಪ್ರವೇಶಿಸಿದರು. ಅಲ್ಲಿಯೂ ಎಲ್ಲಾ ಮಕ್ಕಳು ಉತ್ಸಾಹದಿಂದ ಆಟವಾಡುತ್ತಿದ್ದರು. ಹೀಗಿರುವಾಗ ಮಸ್ತಕೀಮ್ ಅವರು ನೀರಿನೊಳಗೆ ಒಮ್ಮೆಗೆ ಕಾಲು ಜಾರಿ ಬಿದ್ದರು. ಅವರನ್ನು ಅಲ್ಲಿಂದ ತಕ್ಷಣ ಮೇಲೆತ್ತಲು ಸಾಧ್ಯವಾಗಲಿಲ್ಲ. ಈಜುಕೊಳದಲ್ಲಿ ತಲೆ ಕೆಳಗಾಗಿ ಬಿದ್ದ ಅವರು ಅಲ್ಲಿದ್ದ ನೀರು ಕುಡಿದರು. ಅದರಿಂದ ಅಸ್ವಸ್ಥರಾದ ಮಸ್ತಕೀಮ್ ಅವರನ್ನು ವಂಡರಲ್ಯಾoಡ್ ರೆಸಾರ್ಟಿನಿಂದ ಭಟ್ಕಳದ ಲೈಫ್ ಕೇರ್ ಆಸ್ಪತ್ರೆಗೆ ಕರೆತರಲಾಯಿತು. ಮಸ್ತಕೀಮ್ ಅವರನ್ನು ಪರೀಕ್ಷಿಸಿದ ಲೈಫ್ ಕೇರ್ ಆಸ್ಪತ್ರೆ ವೈದ್ಯರು `ಆತ ಇನ್ನಿಲ್ಲ’ ಎಂಬ ಸಂಗತಿ ಬಿಚ್ಚಿಟ್ಟರು. ಜೊತೆಗಿದ್ದ ಬಾಲಕನ ತಾಯಿ ಕಣ್ಣೀರಾದರು. ಶಿಕ್ಷಕರು ಸಹ ಆಘಾತಕ್ಕೆ ಒಳಗಾದರು. ಮಗನ ಸಾವಿನ ಬಗ್ಗೆ ಮಹಮದ್ ಶಾಹಿದುಲ್ಲಾ ಅವರು ಪೊಲೀಸರಿಗೆ ವರದಿ ಒಪ್ಪಿಸಿದ್ದು, ಪೊಲೀಸರು ಕಾನೂನು ಕ್ರಮ ಜರುಗಿಸಿದರು. `ಅಪಾಯಕಾರಿ ಸ್ಥಳಗಳ ಕಡೆ ಮಕ್ಕಳನ್ನು ಕರೆದೊಯ್ಯಬೇಡಿ. ಸುರಕ್ಷತೆಗೆ ಒತ್ತು ಕೊಡಿ’ - [ಕೊಲೆಗೆಡುಕರಿಗೆ ಜೀವಾವಧಿ ಶಿಕ್ಷೆ!](https://mobiletime.in/2025/11/life-imprisonment-for-the-murderers/): ಹಳಿಯಾಳದ ಪರಶುರಾಮ ತೋರಸ್ಕರ್ ಹಾಗೂ ಮಾಯಶ್ರೀ ತೋರಸ್ಕರ್ ದಂಪತಿ ಖರೀದಿಸಿದ ಭೂಮಿಗೆ ಕಾಲಿಡಲು ಬಿಡದೇ ಭೂ ಮಾಲಕ ಪರಶುರಾಮ ತೋರಸ್ಕರ್ ಅವರನ್ನು ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿದ ಮೂವರಿಗೆ ಶಿರಸಿ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ. ಹಳಿಯಾಳ ತಾಲೂಕಿನ ಕರ್ಲಗಟ್ಟಾ ಗ್ರಾಮದ ಯಡುಗಾದಲ್ಲಿ ಯಮೂನಾ ಸುಂಟಗಾರ್ ಅವರು 3 ಎಕರೆ ಭೂಮಿ ಹೊಂದಿದ್ದರು. ಆರ್ಥಿಕ ಸ್ಥಿತಿ ಸರಿಯಿಲ್ಲದ ಕಾರಣ ಅವರು ಆ ಭೂಮಿಯನ್ನು ಮಾಯಶ್ರೀ ತೋರಸ್ಕರ್ ಹಾಗೂ ಪರಶುರಾಮ ತೋರಸ್ಕರ್ ದಂಪತಿಗೆ ಮಾರಾಟ ಮಾಡಿದ್ದರು. ಆದರೆ, ಆ ಭೂಮಿಯಲ್ಲಿ ಕೃಷಿ ಮಾಡಿಕೊಂಡಿದ್ದ ಸಹದೇವ ತಡ್ಡಿಕರ್ ಅವರಿಗೆ ಈ ವ್ಯವಹಾರ ಇಷ್ಟವಾಗಿರಲಿಲ್ಲ. `ತಾನು ದುಡಿದ ಭೂಮಿಯನ್ನು ಯಾರಿಗೂ ಬಿಟ್ಟುಕೊಡುವುದಿಲ್ಲ’ ಎಂದು ಸಹದೇವ ತಡ್ಡಿಕರ್ ಗಲಾಟೆ ಮಾಡಿದ್ದರು. ಪರಶುರಾಮ ತೋರಸ್ಕರ್ ಹಾಗೂ ಮಾಯಶ್ರೀ ತೋರಸ್ಕರ್ ಅವರು ಕಾನೂನಿನ ಪ್ರಕಾರ ಭೂಮಿ ಖರೀದಿಸಿದ ನಂತರವೂ ಆ ದಂಪತಿಗೆ ಸಹದೇವ ತಡ್ಡಿಕರ್ ಅವರು ಪದೇ ಪದೇ ತೊಂದರೆ ಕೊಡುತ್ತಿದ್ದರು. ಆಗ, ಭೂಮಿ ಮಾರಾಟ ಮಾಡಿದ್ದ ಯಮುನಾ ಸುಂಟಗಾರ ಅವರ ಜೊತೆ ಅಲ್ಲಿದ್ದ ಸುಭಾಷ ಪಾಟೀಲ ಹಾಗೂ ಪರಶುರಾಮ ತೋರಸ್ಕರ್ ಸೇರಿ `ಈ ರೀತಿ ತೊಂದರೆ ಮಾಡಬೇಡ’ ಎಂದು ಸಹದೇವ ತಡ್ಡಿಕರ್ ಅವರಿಗೆ ಬುದ್ಧಿ ಹೇಳಿದ್ದರು. ಆದರೂ, ಸಹದೇವ ತಡ್ಡಿಕರ್ ಅವರು ಸಮಾಧಾನವಾಗದೇ ದ್ವೇಷ ಸಾಧಿಸುತ್ತಿದ್ದರು. `ಹೊಲಕ್ಕೆ ಕಾಲಿಟ್ಟರೆ ಕೊಲೆ ಮಾಡುವೆ’ ಎಂದು ಸಹದೇವ ತಡ್ಡಿಕರ್ ದಂಪತಿಗೆ ಬೆದರಿಕೆ ಒಡ್ಡಿದ್ದರು. ಪರಶುರಾಮ ತೋರಸ್ಕರ್ ಹಾಗೂ ಮಾಯಶ್ರೀ ತೋರಸ್ಕರ್ ದಂಪತಿಗೆ ಫಸಲು ಕೊಯ್ಯಲು ಸಹ ಬಿಡದೇ ಕಾಡಿಸುತ್ತಿದ್ದರು. ಈ ಬಗ್ಗೆ ಮಾಯಶ್ರೀ ತೋರಸ್ಕರ್ ಅವರು ಹಳಿಯಾಳ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಆದರೂ ಸಹದೇವ ತಡ್ಡಿಕರ್ ಅವರ ಕಾಟ ಕಡಿಮೆ ಆಗಿರಲಿಲ್ಲ. ಈ ನಡುವೆ ಭೂಮಿ ಅಭಿವೃದ್ಧಿಗಾಗಿ ಪರಶುರಾಮ ತೋರಸ್ಕರ್ ಮುಂದಾದರು. ಆ ಭೂಮಿಯಲ್ಲಿದ್ದ ಸಹದೇವ ತಡ್ಡಿಕರ್ ಅವರ ತಂದೆಯ ಸ್ಮಾರಕ ಕಟ್ಟೆಯನ್ನು ತೆರವು ಮಾಡಿದರು. ತಂದೆಯ ಸ್ಮಾರಕ ಕಟ್ಟೆ ತೆರವು ಆಗಿದನ್ನು ಅರಿತು ಸಹದೇವ್ ತಡ್ಡಿಕರ್ ಅವರು ಸಿಡಿಮಿಡಿಕೊಂಡಿದ್ದು, ಪರಶುರಾಮ ತೋರಸ್ಕರ್ ಅವರನ್ನು ಕೊಲ್ಲುವುದಕ್ಕಾಗಿ ತಂತ್ರ ರೂಪಿಸಿದರು. ಕೊಲೆ ಮಾಡುವ ಕಾರ್ಯಾಚರಣೆಗಾಗಿ ಸಹದೇವ ತಡ್ಡಿಕರ್ ಅವರು ಸದಾನಂದ ಪಾಟೀಲ ಹಾಗೂ ರಾಮಾ ಹುಬ್ಬಳ್ಳಿಕರ್ ಅವರ ನೆರವುಪಡೆದರು. 2023 ಮೇ 11ರಂದು ಪರಶುರಾಮ ತೋರಸ್ಕರ್ ಅವರು ಕೊರ್ಲಕಟ್ಟಾ ಗ್ರಾಮಕ್ಕೆ ಸ್ಕೂಟಿ ಮೇಲೆ ಹೋಗುತ್ತಿದ್ದರು. ಅಲ್ಲಿದ್ದ ಮಾವಿನ ಮರದ ಕೆಳಗೆ ಅಡಗಿ ಕುಳಿತಿದ್ದ ಆ ಮೂವರು ಒಬ್ಬರೇ ಇದ್ದ ಪರಶುರಾಮ ತೋರಸ್ಕರ್ ಅವರನ್ನು ಅಡ್ಡಗಟ್ಟಿದ್ದರು. ಅನಗತ್ಯವಾಗಿ ಜಗಳ ಶುರು ಮಾಡಿದರು. ಈ ವೇಳೆ ಪರಶುರಾಮ ತೋರಸ್ಕರ್ ಅವರು ತಮಗೆ ಅಪಾಯ ಎದುರಾದ ಬಗ್ಗೆ ವಕೀಲ ರಮೇಶ ಬಿಂಗಿ ಅವರಿಗೆ ಫೋನ್ ಮಾಡಿದರು. ಆ ಫೋನ್ ಕರೆ ಕಟ್ ಆಗುವಷ್ಟರಲ್ಲಿಯೇ ಸದಾನಂದ ಪಾಟೀಲ ಹಾಗೂ ರಾಮಾ ಹುಬ್ಬಳ್ಳಿಕರ್ ಸೇರಿ ಪರಶುರಾಮ ತೋರಸ್ಕರ್ ಅವರ ಕೈ ಕಾಲುಗಳನ್ನು ಗಟ್ಟಿಯಾಗಿ ಹಿಡಿದುಕೊಂಡರು. ಸಿಟ್ಟಿನಲ್ಲಿದ್ದ ಸಹದೇವ ತಡ್ಡಿಕರ್ ಅವರು ಕಬ್ಬಿಣದ ಕೊಡಲಿಯಿಂದ ಪರಶುರಾಮ ತೋರಸ್ಕರ್ ಅವರ ಕಾಲು ತುಂಡರಿಸಿದರು. `ಆತ ಇಲ್ಲಿಯೇ ಸಾಯಲಿ’ ಎಂದು ಕೂಗಿ ಹೇಳಿದ ಆ ಮೂವರು ಪರಶುರಾಮ ತೋರಸ್ಕರ್ ಅವರ ಮೊಬೈಲನ್ನು 11 ತುಂಡುಗಳನ್ನಾಗಿಸಿದರು. ಅದಾದ ನಂತರ ಆ ಮೂವರು ಅಲ್ಲಿಂದ ಪರಾರಿಯಾದರು. ಸಾಕಷ್ಟು ನರಳಾಟ ನಡೆಸಿದ ಪರಶುರಾಮ ತೋರಸ್ಕರ್ ರಕ್ತಸ್ರಾವದಿಂದಾಗಿ ಅಲ್ಲಿಯೇ ಕೊನೆಯುಸಿರೆಳೆದರು. ಆಗಿನ ಹಳಿಯಾಳ ಪೊಲೀಸ್ ಉಪನಿರೀಕ್ಷಕ ವಿನೋದ ಎಸ್ ಕೆ ಅವರು ಪ್ರಕರಣ ದಾಖಲಿಸಿದ್ದು, ಸಹದೇವ ತಡ್ಡಿಕರ್ ಬಂಧಿಸಿದರು. ವೃತ್ತ ನಿರೀಕ್ಷಕ ಸುರೇಶ ಪಿ ಶಿಂಗಿ ವಿಚಾರಣೆ ನಡೆಸಿದರು. ಈಗಿನ ಪೊಲೀಸ್ ಉಪನಿರೀಕ್ಷಕ ಬಸವರಾಜ ಮಬನೂರು ಸಾಕ್ಷಿಗಳನ್ನು ಸಂಗ್ರಹಿಸಿ ನ್ಯಾಯಾಲಯಕ್ಕೆ ಒಪ್ಪಿಸಿದರು. ಪೊಲೀಸ್ ಸಿಬ್ಬಂದಿ ಹನುಮಂತ ಬಾರ್ಕಿ ಅವರು ಸಕಾಲಕ್ಕೆ ಸಾಕ್ಷಿದಾರರನ್ನು ನ್ಯಾಯಾಲಯಕ್ಕೆ ಕರೆತಂದು ಸಹಕಾರ ನೀಡಿದರು. ಸರ್ಕಾರಿ ನ್ಯಾಯವಾದಿ ರಾಜೇಶ ಎಂ ಮಳಗಿಕರ್ ವಾದ ಮಂಡಿಸಿ `ಕೊಲೆಗೆಟುಕರಿಗೆ ಕಠಿಣ ಶಿಕ್ಷೆ ವಿಧಿಸಬೇಕು’ ಎಂದು ನ್ಯಾಯಾಲಯಕ್ಕೆ ಮನವಿ ಮಾಡಿದರು `ಇಂಥ ತಪ್ಪು ಮಾಡಲು ಜನ ಭಯಪಡಬೇಕು. ಸಮಾಜದಲ್ಲಿನ ಅಪರಾಧ ಪ್ರಮಾಣ ಕಡಿಮೆ ಆಗಲು ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ನೀಡಬೇಕು’ ಎಂದು ವಾದಿಸಿದರು. ಶಿರಸಿ ನಗರದ ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶ ಕಿರಣ ಕಿಣಿ ಅವರು ಪ್ರಕರಣದ ಸಮಗ್ರ ಅಧ್ಯಯನ ನಡೆಸಿದರು. ಖರೀದಿಸಿದ ಆಸ್ತಿಯಲ್ಲಿ ಹಕ್ಕು ಸಾಧಿಸಲು ತೊಂದರೆ ನೀಡಿದಲ್ಲದೇ, ಖರೀದಿದಾರರ ಕೊಲೆ ಮಾಡಿದ ಕಾರಣ ಸಹದೇವ ಹನುಮಂತ ತಡ್ಡೀಕರ್, ಸದಾನಂದ ಅನಂತ ಪಟೇಲ್ ಹಾಗೂ ರಾಮಾ ಮಾರುತಿ ಹುಬ್ಬಳ್ಳಿಕರ್ ಅವರಿಗೆ ಜೀವಾವಧಿ ಶಿಕ್ಷೆ ಪ್ರಕಟಿಸಿದರು. ಜೊತೆಗೆ ಪ್ರತಿಯೊಬ್ಬರಿಗೂ 25 ಸಾವಿರ ರೂ ದಂಡವಿಧಿಸಿದ್ದು, ಆ ದಂಡದ ಮೊತ್ತವನ್ನು ಪರಶುರಾಮ ತೋರಸ್ಕರ್ ಅವರ ಪತ್ನಿ ಮಾಯಶ್ರೀ ತೋರಸ್ಕರ್ ಹಾಗೂ ಅವರ ಮಕ್ಕಳಾದ ಪ್ರಮೋದ ತೋರಸ್ಕರ್ ಮತ್ತು ವಿನಾಯಕ ತೋರಸ್ಕರ್ ಅವರಿಗೆ ಪರಿಹಾರ ನೀಡುವಂತೆ ಆದೇಶ ಪ್ರಕಟಿಸಿದರು. - [ಮನೆಯಲ್ಲಿಯೇ ಕುಳಿತು ಮೂರು ಸಾವಿರಗಳಿಸಿ!](https://mobiletime.in/2025/11/earn-three-thousand-sitting-at-home/): `ಮನೆಯಲ್ಲೇ ಕುಳಿತು ಮೂರು ಸಾವಿರ ರೂ ಗಳಿಸಿ’ ಎಂಬ ಮೋಸದ ಜಾಹೀರಾತಿಗೆ ಬಲಿಯಾದ ಮಹಿಳೆಯೊಬ್ಬರು 10ಲಕ್ಷಕ್ಕೂ ಅಧಿಕ ಹಣ ಕಳೆದುಕೊಂಡಿದ್ದಾರೆ. ಈಗಾಗಲೇ ಉತ್ತಮ ಉದ್ಯೋಗಿವಿದ್ದರೂ ಬಿಡುವಿನ ವೇಳೆ ಇನ್ನಷ್ಟು ಹಣಗಳಿಸುವ ಆಸೆಗೆ ಬಿದ್ದ ಮಹಿಳೆ ತಮ್ಮ ಸಂಪಾದನೆಯ ಹಣವನ್ನು ವಂಚಕರಿಗೆ ವರ್ಗಾಯಿಸಿದ್ದಾರೆ. ಕಾರವಾರದ ಸ್ವಪ್ನಾ ಸುರೇಶ ಮಹೇಕರ (32) ಅವರು ಟೆಲಿಗ್ರಾಂ ಖಾತೆ ಪರಿಶೀಲಿಸಿದಾಗ ಅಲ್ಲಿ ಅವರಿಗೆ `ಆನ್‌ಲೈನ್ ಜಾಬ್ ಮಾಡಿ. ದಿನಕ್ಕೆ 3 ಸಾವಿರ ರೂ ಹಣಗಳಿಸಿ’ ಎಂಬ ಜಾಹೀರಾತು ಕಾಣಿಸಿದೆ. ಆ ಜಾಹೀರಾತು ಮೋಡಿಗೆ ಒಳಗಾದ ಅವರು ವಂಚಕರನ್ನು ಸಂಪರ್ಕಿಸಿದ್ದಾರೆ. ಅದಾದ ನಂತರ ಸ್ವಪ್ನಾ ಮಹೇಕರ ಅವರಿಗೆ ವಾಟ್ಸಪ್ ಮೂಲಕ ಮೆಸೆಜ್ ಬಂದಿದೆ. `ರೆಂಟ್’ ಎಂಬ ವೆಬ್‌ಸೈಟ್ ತೆರೆದುಕೊಂಡಿದ್ದು, ಅಲ್ಲಿ ಸ್ವಪ್ನಾ ಮಹೇಕರ ಅವರು ತಮ್ಮ ವೈಯಕ್ತಿಕ ವಿವರ ದಾಖಲಿಸಿದ್ದಾರೆ. ನಂತರ ಆ ವೆಬ್‌ಸೈಟಿನ ಒಳಗೆ ಲಾಗಿನ್ ಆಗಿದ್ದಾರೆ. ಅದಾದ ನಂತರ ಆ ವೆಬ್‌ಸೈಟಿನಲ್ಲಿ ವಿವಿಧ ಉತ್ಪನ್ನಗಳಿದ್ದು, ಅದಕ್ಕೆ ಸ್ಟಾರ್ ರೇಟಿಂಗ್ ಕೊಡುವಂತೆ ಸ್ವಪ್ನಾ ಮಹೇಕರ ಅವರಿಗೆ ಸೂಚನೆ ಬಂದಿದೆ. ಅದರ ಪ್ರಕಾರ ಅವರು ಸ್ಟಾರ್ ರೇಟಿಂಗ್ ಕೊಟ್ಟಿದ್ದಾರೆ. ಉತ್ಪನ್ನಗಳ ಬಗ್ಗೆ ಒಳ್ಳೆಯ ಅಭಿಪ್ರಾಯ ಬರೆದಿದ್ದಾರೆ. ನಂತರ 10 ಸಾವಿರ ರೂ ಹೂಡಿಕೆ ಮಾಡುವಂತೆ ಸ್ವಪ್ನಾ ಅವರಿಗೆ ಸೂಚನೆ ಬಂದಿದೆ. ಅವರು 10 ಸಾವಿರ ರೂ ಹೂಡಿಕೆ ಮಾಡಿದ್ದರಿಂದ ಅವರಿಗೆ 15268ರೂ ಮರಳಿ ಸಿಕ್ಕಿದೆ. ಇದರಿಂದ ಸ್ವಪ್ನಾ ಮಹೇಕರ ಅವರಿಗೆ `ಮನೆಯಲ್ಲಿ ಕುಳಿತು ಮೂರು ಸಾವಿರ ರೂ ಗಳಿಸಿ’ ಎಂಬ ಜಾಹೀರಾತಿನ ಮೇಲೆ ನಂಬಿಕೆ ಬಂದಿದೆ. ಅದಾದ ನಂತರ ಸ್ವಪ್ನಾ ಮಹೇಕರ ಅವರಿಗೆ `ಇನ್ನೂ ಹೆಚ್ಚಿನ ಹಣ ಹೂಡಿಕೆ ಮಾಡಿ, ಇನ್ನಷ್ಟು ಲಾಭಗಳಿಸಿ’ ಎಂದು ವಂಚಕರು ಹೇಳಿದ್ದಾರೆ. ಆದರೆ, ಹಣ ಇಲ್ಲದ ಕಾರಣ ಸ್ವಪ್ನಾ ಅವರು ಅಂಕೋಲಾ ಅವರ್ಸಾದ ರೋಹನ್ ತಾಂಡೇಲ್ ಹಾಗೂ ಕಾರವಾರದ ತೇಜಸ್ ಅವರ ನೆರವುಪಡೆದು ಹಣ ಹೂಡಿಕೆ ಮಾಡಿದ್ದಾರೆ. ರೋಹನ್ ತಾಂಡೇಲ್ ಹಾಗೂ ತೇಜಸ್ ಸಹ ಹೆಚ್ಚಿನ ಪ್ರಮಾಣದಲ್ಲಿ ಹಣ ಹೂಡಿಕೆ ಮಾಡುವಂತೆ ಪ್ರೇರೇಪಿಸಿದ್ದು, 1098113ರೂ ಹಣವನ್ನು ಸ್ವಪ್ನಾ ಮಹೇಕರ ಅವರು ವಂಚಕರ ಖಾತೆಗೆ ಹಾಕಿದ್ದಾರೆ. ಆದರೆ, ಈವರೆಗೂ ಅವರು ಹೂಡಿಕೆ ಮಾಡಿದ ಹಣ ಮರಳಿ ಬಂದಿಲ್ಲ. ಮನೆಯಲ್ಲಿ ಕುಳಿತಿದ್ದರೂ ಮೂರು ಸಾವಿರ ರೂ ಆದಾಯ ಸಿಕ್ಕಿಲ್ಲ. ಹಣ ಹೂಡಿಕೆ ಮಾಡುವಂತೆ ಪ್ರಚೋದಿಸಿದ್ದ ರೋಹನ್ ತಾಂಡೇಲ್ ಹಾಗೂ ತೇಜಸ್ ಸಹ ಆ ಬಗ್ಗೆ ಮಾತನಾಡುತ್ತಿಲ್ಲ. ಹೀಗಾಗಿ ಸ್ವಪ್ನಾ ಮಹೇಕರ್ ಅವರಿಗೆ ತಾವು ಮೋಸ ಹೋಗಿದ್ದು ಅರಿವಾಗಿದೆ. `ನಮ್ಮಂತೆ ನೀವು ಮೋಸಹೋಗಬೇಡಿ’ ಎಂದು ಅವರು ಜನರಲ್ಲಿ ಅರಿವು ಮೂಡಿಸಿದ್ದಾರೆ. ಜೊತೆಗೆ ಕಾರವಾರ ಸೈಬರ್ ಅಪರಾಧ ಪೊಲೀಸ್ ಠಾಣೆಗೆ ತೆರಳಿ ತಮಗಾದ ಅನ್ಯಾಯ ವಿವರಿಸಿ ವಂಚಕರ ವಿರುದ್ಧ ದೂರು ನೀಡಿದ್ದಾರೆ. `ಆಮೀಷಗಳಿಗೆ ಬಲಿಯಾಗಬೇಡಿ. ವಂಚಕರ ಜಾಲಕ್ಕೆ ಸಿಲುಕಬೇಡಿ’ - [ಸ್ವಂತ ಊರಿನಲ್ಲಿಯೇ ಸ್ವ ಉದ್ಯೋಗ: ಕೃಷಿ ಸೇವೆಗೆ `ಭರತ್ ಟೂಲ್ಸ್’ ಹೆಸರುವಾಸಿ!](https://mobiletime.in/2025/11/self-employment-in-your-own-hometown-bharat-tools-is-famous-for-its-agricultural-services-2/): ಚಿಕ್ಕದೊಂದು ಬ್ರೆಶ್ ಕಟರ್ ರಿಪೇರಿಗೆ ಹುಬ್ಬಳ್ಳಿ-ಧಾರವಾಡ ಸುತ್ತಾಡಿಕೊಂಡು ಬಂದ ಯಲ್ಲಾಪುರದ ಪ್ರಶಾಂತ ನಾಯ್ಕ ಕೊನೆಗೆ ಶಿರಸಿಯ `ಭರತ್ ಟೂಲ್ಸ್’ ಮುಂದೆ ನಿಂತಿದ್ದರು. ಎಲ್ಲಿಯೂ ರಿಪೇರಿ ಆಗದ ಮೋಟಾರ್ ಅರ್ದ ದಿನದ ಒಳಗೆ ಅಂಕಿತ ಹೆಗಡೆ ದುರಸ್ತಿ ಮಾಡಿಕೊಟ್ಟಿದ್ದರು. ಇದಕ್ಕಾಗಿ ಅವರು ಪಡೆದ ಶುಲ್ಕ 350ರೂ! ಶಿರಸಿ ಸಾಲಕಣಿಯ ಗಣಪತಿ ಸಹ ಪೇಟೆ ಕಡೆ ಬಂದಾಗ `ಭರತ್ ಟೂಲ್ಸ್’ ಕಡೆ ಬಾರದೇ ಮನೆಗೆ ಮರಳುವುದಿಲ್ಲ. ಆ ದಿನ ಯಾವುದೇ ವ್ಯವಹಾರ ಇಲ್ಲದಿದ್ದರೂ ಒಮ್ಮೆ ಮಳಿಗೆಗೆ ಬಂದು ಅಂಕಿತ ಹೆಗಡೆಯರನ್ನು ಮಾತನಾಡಿಸುವುದು ಅವರ ರೂಢಿ. ಸಣ್ಣಪುಟ್ಟ ರಿಪೇರಿಗಳಿಂದ ಹಿಡಿದು ದೊಡ್ಡ ದೊಡ್ಡ ಸಾಮಗ್ರಿ ಖರೀದಿಯವರೆಗೂ ಗಣಪತಿಯವರು ಅನೇಕರನ್ನು ಇವರಲ್ಲಿ ಕಳುಹಿಸುತ್ತಾರೆ. ಹೀಗೆ ಉತ್ತಮ ಸೇವೆ ಗಮನಿಸಿ ಅಂಕಿತ್ ಹೆಗಡೆ ಅವರಿಗೆ ಬೆಂಬಲಿಸುತ್ತಿರುವವವರು ಹಲವರಿದ್ದಾರೆ. ಸಾಲ್ಕಣಿ ಬಳಿಯಿರುವ ಕಳಲೆಮಕ್ಕಿಯ ಅಂಕಿತ್ ಹೆಗಡೆ ಐಟಿಐ ಓದಿದ್ದಾರೆ. ಕಾಲೇಜು ಮುಗಿಸಿದ ನಂತರ ಪ್ರತಿಷ್ಟಿತ ಕಂಪನಿಗಳಲ್ಲಿ ದೊಡ್ಡ ಸಂಬಳದ ಉದ್ಯೋಗ ಸಿಕ್ಕರೂ ಆ ಅವಕಾಶವನ್ನು ನಿರಾಕರಿಸಿದ ಅಂಕಿತ್ ಹೆಗಡೆ ಯಲ್ಲಾಪುರ ರಸ್ತೆಯ ಶೆಟ್ಟಿ ಕಾಂಪ್ಲೇಕ್ಸಿನಲ್ಲಿ ಪುಟ್ಟದೊಂದು ಮಳಿಗೆ ನಡೆಸುತ್ತಿದ್ದಾರೆ. ಪವನ್ ಬಜಾಜ್ ಆಟೋ ಶೋ ರೂಂ ಎದುರು ಕಾಣುವ `ಭರತ್ ಟೂಲ್ಸ್’ನಲ್ಲಿ ಅವರು ಇಡೀ ದಿನ ಕಳೆಯುತ್ತಾರೆ. `ಭರತ್’ ಹೆಸರಿನಲ್ಲಿಯೇ ಮೋಟಾರು ತಯಾರಿಕೆಯ ಬ್ರಾಂಡ್ ಮಾಡುವ ವಿಚಾರವನ್ನೂ ಅವರು ಹೊಂದಿದ್ದಾರೆ. ಕಾಲೇಜು ನಂತರ ಮೆಕಾನಿಕ್ ಅಂಗಡಿಯೊoದರಲ್ಲಿ ತರಬೇತಿಪಡೆದ ಅಂಕಿತ್ ಹೆಗಡೆ ನಂತರ 10 ಲಕ್ಷ ರೂ ಹೂಡಿಕೆ ಮಾಡಿ ಸ್ವಂತ ಮಳಿಗೆ ಶುರು ಮಾಡಿದರು. ಗ್ರಾಮೀಣ ಭಾಗದಲ್ಲಿ ಕೃಷಿಕರು ಅನುಭವಿಸುತ್ತಿರುವ ಕಷ್ಟ ನೋಡಿದ ಅವರು ಕೃಷಿಗೆ ಅಗತ್ಯವಿರುವ ಸಲಕರಣೆಗಳ ಸೇವೆಗೆ ಮುಂದಾದರು. ಪ್ರಸ್ತುತ ಕೃಷಿ ಚಟುವಟಿಕೆಗಳಿಗೆ ಬೆನ್ನೆಲುಬಾಗಿರುವ ಅವರು ಕೃಷಿಗೆ ಸಂಬoಧಿಸಿದ ಎಲ್ಲಾ ಉಪಕರಣಗಳ ದುರಸ್ತಿ ಮಾಡುತ್ತಾರೆ. ಜೊತೆಗೆ ಅಗತ್ಯ ಸಾಮಗ್ರಿಗಳ ಮಾರಾಟದಲ್ಲಿಯೂ ಮುಂದಿದ್ದಾರೆ. ಜನರೇಟರ್ ಸೇರಿದಂತೆ ವಿವಿಧ ಪರಿಕ್ಕರಗಳು ಅವರಲ್ಲಿ ಬಾಡಿಗೆ ಆಧಾರದಲ್ಲಿಯೂ ಸಿಗುತ್ತದೆ. ಸಣ್ಣ ಮಿಕ್ಸರಿನಿಂದ ಹಿಡಿದು ದೊಡ್ಡ ದೊಡ್ಡ ಯಂತ್ರಗಳವರೆಗೆ ಎಲ್ಲವನ್ನು ದುರಸ್ತಿ ಮಾಡಿಕೊಡುವಲ್ಲಿ ಅಂಕಿತ್ ಹೆಗಡೆ ಮುಂದಿದ್ದಾರೆ. ಪ್ರಸ್ತುತ ಹಾಸನದ ಬಾಲಸುಬ್ರಹ್ಮಣ್ಯ ಅವರೊಂದಿಗೆ ಮಾತುಕತೆ ನಡೆಸಿರುವ ಅಂಕಿತ್ ಹೆಗಡೆ ಅಗತ್ಯವಿದ್ದವರಿಗೆ ಅತ್ಯಂತ ಸ್ಪರ್ಧಾತ್ಮಕ ದರದಲ್ಲಿ `ಹೈಟೆಕ್ ದೋಟಿ’ಯನ್ನು ವಿತರಿಸುತ್ತಿದ್ದಾರೆ. ಇತರೆ ಮಳಿಗೆಗಳಲ್ಲಿ 7 ಸಾವಿರ ರೂ ಬೆಲೆಗೆ ಸಿಗುವ ಕೆಲ ಯಂತ್ರೋಪಕರಣಗಳು `ಭರತ್ ಟೂಲ್ಸ್’ನವರಲ್ಲಿ 3500ರೂಪಾಯಿಗೆ ಸಿಗುತ್ತದೆ. ಇಲ್ಲಿನ ವಸ್ತುಗಳು ದರದಲ್ಲಿ ಕಡಿಮೆ ಇದೆಯೇ ವಿನ: ಗುಣಮಟ್ಟದಲ್ಲಿ ಕಡಿಮೆ ಇಲ್ಲ. `ಭರತ್ ಟೂಲ್ಸ್’ನ ವಿಳಾಸ: ಅಂಕಿತ್ ಹೆಗಡೆ ಶೆಟ್ಟಿ ಕಾಂಪ್ಲೇಕ್ಸ್, ಯಲ್ಲಾಪುರ ರಸ್ತೆ ಶಿರಸಿ – 581402 ಫೋನ್ ನಂ: 8310501788 ಅಥವಾ 9900244823 #Sponsored - [2025 ನವೆಂಬರ್ 21ರ ದಿನ ಭವಿಷ್ಯ](https://mobiletime.in/2025/11/prediction-for-november-21-2025/): ಮೇಷ ರಾಶಿ: ನಿಮಗೆ ದೊರೆತ ಅವಕಾಶಗಳನ್ನು ಸರಿಯಾಗಿ ಬಳಸಿಕೊಳ್ಳಿ. ಸ್ನೇಹಿತರ ನೆರವು ದೊರೆಯಲಿದ್ದು, ಆರ್ಥಿಕ ಪರಿಸ್ಥಿತಿ ಸದೃಢವಾಗಲಿದೆ. ಕುಟುಂಬದಲ್ಲಿ ಸಂತೋಷದ ವಾತಾವರಣ ಕಾಣಲಿದೆ. ವೃಷಭ ರಾಶಿ: ದುಡಿಮೆಗೆ ಯೋಗ್ಯ ಫಲ ದೊರೆಯಲಿದೆ. ಹೊಸ ಯೋಜನೆಗಳ ಆರಂಭಕ್ಕೆ ಸೂಕ್ತ ದಿನ. ಪಾರಿತೋಷಕ ಸಿಗುವ ಲಕ್ಷಣವಿದೆ. ಮಿತ್ರರ ಸಹಾಯ ಸದುಪಯೋಗಕ್ಕೆ ಬರಲಿದೆ. ಹಣ ಲಾಭ ಆಗಲಿದೆ. ಮಿಥುನ ರಾಶಿ: ನಿಮ್ಮ ಕೆಲಸದ ವಿಷಯದಲ್ಲಿ ಮೆಚ್ಚುಗೆ ಗಳಿಸುವಿರಿ. ವೃತ್ತಿಯಲ್ಲಿ ಒತ್ತಡ ಕಡಿಮೆ ಆಗಲಿದೆ. ಹಳೆಯ ಸ್ನೇಹಿತರಿಂದ ಸಮಾಗಮ ಸಾಧ್ಯತೆಯಿದೆ. ಆರೋಗ್ಯ ಉತ್ತಮವಾಗಿರುತ್ತದೆ. ಕರ್ಕ ರಾಶಿ: ಅಪರಿಚಿತರಿಂದ ಸಹಾಯ ಸಿಗಲಿದೆ. ವ್ಯಾಪಾರದಲ್ಲಿ ಲಾಭ ಆಗಲಿದೆ. ಮನಸ್ಸು ಶಾಂತಿ ಬಯಸಲಿದೆ. ಆರೋಗ್ಯ ಎಂದಿನAತೆ ಇರಲಿದೆ. ಸಿಂಹ ರಾಶಿ: ನೀಡಿರುವ ಎಲ್ಲ ಕೆಲಸಗಳಲ್ಲಿ ಯಶಸ್ಸು ಸಿಗಲಿದೆ. ಹಳೆಯ ಸಮಸ್ಯೆಗಳು ಪರಿಹಾರ ಆಗಲಿದೆ. ಕುಟುಂಬದ ಜೊತೆ ಸಮಯ ಕಳೆಯುವುದು ಅತಿ ಮುಖ್ಯ. ಹಣದ ಹರಿವು ಉತ್ತಮವಾಗಿರುತ್ತದೆ. ಸೃಜನಶೀಲತೆಗೆ ಬೆಲೆ ಸಿಗಲಿದೆ. ಕನ್ಯಾ ರಾಶಿ: ಸಾಧನೆಗೆ ಅವಕಾಶಗಳಿವೆ. ಮಿತ್ರರೊಂದಿಗೆ ಚರ್ಚೆ ಫಲ ಕೊಡುತ್ತದೆ. ಉದ್ಯೋಗದಲ್ಲಿ ಯಶಸ್ಸು ಹಾಗೂ ವ್ಯವಹಾರ ಲಾಭ ಆಗಲಿದೆ. ಆರೋಗ್ಯದ ಬಗ್ಗೆ ಕಾಳಜಿಯಿರಲಿ. ತುಲಾ ರಾಶಿ: ಭಾವನಾತ್ಮಕ ಸ್ಥಿತಿಯಲ್ಲಿ ಸುಧಾರಣೆ ಆಗಲಿದೆ. ಹೊಸ ಸಂಪರ್ಕ ಸಹಾಯಕ್ಕೆ ಬರಲಿದೆ. ಆರ್ಥಿಕವಾಗಿ ಚಿಂತನೆ ಉತ್ತಮವಾಗಲಿದೆ. ಮನೆ ಪರಿಸರದಲ್ಲಿ ಸಂತೋಷ ಸಿಗಲಿದೆ. ವೃಶ್ಚಿಕ ರಾಶಿ: ನಿಮ್ಮ ಹಳೆಯ ಚಿಂತೆ ನಿವಾರಣೆ ಆಗಲಿದೆ. ಬದಲಾವಣೆಗೆ ಯೋಗ್ಯ ಸಮಯ ಸಮೀಪದಲ್ಲಿದೆ. ವ್ಯವಹಾರದಲ್ಲಿ ಸಾಧನೆ ಸಾಧ್ಯವಿದೆ. ಭವಿಷ್ಯಕ್ಕಾಗಿ ಯೋಜನೆ ಮಾಡಲು ಸಕಾಲ. ಪೌಷ್ಟಿಕ ಆಹಾರ ಸೇವನೆ ಅಗತ್ಯ. ಧನು ರಾಶಿ: ಹೊಸ ಆಯ್ಕೆಗಳು ಉದಯಿಸುತ್ತವೆ. ಪರೀಕ್ಷೆಯಲ್ಲಿ ಯಶಸ್ಸು ಸಿಗುತ್ತದೆ. ನೂತನ ಒಪ್ಪಂದ ಲಾಭ ತರಲಿದೆ. ಮನಸ್ಸಿಗೆ ಧೈರ್ಯ ಮುಖ್ಯ. ಮಕರ ರಾಶಿ: ಉದ್ಯೋಗದಲ್ಲಿ ಹೊಗಳಿಗೆ ಸಿಗಲಿದೆ. ನಿಮ್ಮ ಜನಪ್ರಿಯತೆ ಹೆಚ್ಚಾಗಲಿದೆ. ಅಪೇಕ್ಷಿತ ಫಲ ಸಿಗಬಹುದು. ಆರೋಗ್ಯದ ಬಗ್ಗೆ ಅಸಡ್ಡೆ ಒಳ್ಳೆಯದಲ್ಲ. ಕುಂಭ ರಾಶಿ: ಮನಸ್ಸಿನಲ್ಲಿರುವ ಆತಂಕ ದೂರ ಮಾಡಿ. ಆರೋಗ್ಯಕ್ಕಾಗಿ ವ್ಯಾಯಾಮ ಮಾಡಿ. ಆರ್ಥಿಕ ವ್ಯವಹಾರದಲ್ಲಿ ಜಾಗ್ರತೆವಹಿಸಿ. ಕೌಟುಂಬಿಕ ಹರ್ಷ ಮೂಡಲಿದೆ. ದೂರದ ಪ್ರಯಾಣ ಸಾಧ್ಯವಿದೆ. ಮೀನ ರಾಶಿ: ನಿಮ್ಮ ಹಳೆಯ ಕೆಲಸ ಪೂರ್ಣಗೊಳ್ಳಲಿದೆ. ಮಿತ್ರರಿಂದ ಸಹಾಯ ಸಿಗಲಿದೆ. ಹೊಸ ಯೋಜನೆಗಳು ಶುಭಕರ ವಾಗಿರಲಿದೆ. ಆರ್ಥಿಕ ಸ್ಥಿತಿ ಉತ್ತಮವಾಗಲಿದೆ. ಆರೋಗ್ಯ ಕೂಡ ಉತ್ತಮವಾಗಿರುತ್ತದೆ. - [ಹಸೆಮಣೆ ಏರದ ಹುಡುಗಿ: ಮಸಣ ಸೇರಿದ ಹುಡುಗ](https://mobiletime.in/2025/11/the-girl-who-didnt-climb-the-ladder-the-boy-who-joined-the-masana/): ಮನಸಾರೆ ಪ್ರೀತಿಸಿದ ಹುಡುಗಿ ಮದುವೆಗೆ ಒಪ್ಪದ ಕಾರಣ ಸಿದ್ದಾಪುರದ ಜನಾರ್ಧನ ಗೊಂಡ ಅವರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಜನಾರ್ಧನ ಕಲ್ಲಾ ಗೊಂಡ (27) ಅವರು ಸಿದ್ದಾಪುರ ಕಾನಗೋಡಿನ ಹಳ್ಳಿಬೈಲಿನಲ್ಲಿ ವಾಸವಾಗಿದ್ದರು. ಸೆಂಟ್ರಿoಗ್ ಕೆಲಸ ಮಾಡಿಕೊಂಡು ಅವರು ಬದುಕುತ್ತಿದ್ದರು. ಅನೇಕ ವರ್ಷಗಳಿಂದ ಅವರು ಯುವತಿಯೊಬ್ಬರನ್ನು ಪ್ರೀತಿಸುತ್ತಿದ್ದು, ಅವರನ್ನೇ ಮದುವೆ ಆಗಲು ನಿರ್ಧರಿಸಿದ್ದರು. ಆದರೆ, ಆ ಯುವತಿ ಮದುವೆಗೆ ಒಪ್ಪಿರಲಿಲ್ಲ. ಪ್ರೀತಿಸಿದ ಹುಡುಗಿ ಮದುವೆಗೆ ಸಿಗದ ಕಾರಣ ಜನಾರ್ಧನ ಗೊಂಡ ಅವರು ಬೇಸರದಲ್ಲಿದ್ದರು. ಅದೇ ಬೇಸರದಲ್ಲಿ ಅವರು ನವೆಂಬರ್ 11ರಂದು ಗದ್ದೆಗೆ ಹೋಗಿ ಕ್ರಿಮಿನಾಶಕ ಸೇವಿಸಿದರು. ಅಲ್ಲಿ ಒದ್ದಾಡುತ್ತಿದ್ದ ಜನಾರ್ಧನ ಗೊಂಡ ಅವರನ್ನು ಕುಟುಂಬದವರು ಸಿದ್ದಾಪುರ ಆಸ್ಪತ್ರೆಗೆ ದಾಖಲಿಸಿದರು. ನಂತರ ನವೆಂಬರ್ 17ಕ್ಕೆ ಶಿವಮೊಗ್ಗ ಆಸ್ಪತ್ರೆ ಸಾಗಿಸಿ ಚಿಕಿತ್ಸೆ ಕೊಡಿಸಿದರು. ಜನಾರ್ಧನ ಗೊಂಡ ಅವರ ಆರೋಗ್ಯದಲ್ಲಿ ಚೇತರಿಕೆ ಕಾಣದ ಕಾರಣ ಅವರನ್ನು ಮಂಗಳೂರಿಗೆ ಕರೆದೊಯ್ದರು. ಮಂಗಳೂರಿನ ಕೆ ಎಸ್ ಹೆಗಡೆ ಆಸ್ಪತ್ರೆಯಲ್ಲಿ ಚಿಕಿತ್ಸೆಪಡೆಯುತ್ತಿದ್ದ ಅವರು ನವೆಂಬರ್ 19ರಂದು ಸಾವನಪ್ಪಿದರು. ಈ ಎಲ್ಲಾ ವಿಷಯದ ಬಗ್ಗೆ ಕುಮಟಾ ಬಡಾಳದ ಬೀರಾ ಗೋವಿಂದ ಗೌಡ ಅವರು ಪೊಲೀಸರಿಗೆ ಮಾಹಿತಿ ನೀಡಿದರು. `ಆತ್ಮಹತ್ಯೆ ಅಪರಾಧ’ - [ಈ ಅಧಿಕಾರಿ ವಿರುದ್ಧ ಆ ದಿನ ನಡೆದಿದ್ದು ಕುತಂತ್ರ!](https://mobiletime.in/2025/11/what-happened-that-day-against-this-officer-was-a-ruse/): ಪ್ರವಾಸೋದ್ಯಮ ಇಲಾಖೆಯ ಪ್ರಭಾರಿ ಉಪನಿರ್ದೇಶಕರಾಗಿದ್ದ ಜಯಂತ ಅವರ ಅಮಾನತಿಗೆ ಕಾರಣವಾಗಿದ್ದ `ಮಂಚದ ರಹಸ್ಯ’ ಬಯಲಾಗಿದೆ. `ಆ ಮಂಚಕ್ಕೆ ಹಾಗೂ ಅಧಿಕಾರಿ ಜಯಂತ ಅವರಿಗೆ ಯಾವುದೇ ಸಂಬoಧ ಇಲ್ಲ’ ಎಂಬುದು ಮಾಹಿತಿ ಹಕ್ಕು ಕಾಯ್ದೆ ಅಡಿ ದೊರೆತ ದಾಖಲೆಗಳಿಂದ ದೃಢವಾಗಿದೆ. ಪ್ರವಾಸೋದ್ಯಮ ಇಲಾಖೆಯ ಪ್ರಭಾರಿ ಉಪನಿರ್ದೇಶಕರಾಗಿದ್ದ ಜಯಂತ ಅವರು ಅಸಮಧಾನವ್ಯಕ್ತಪಡಿಸಿ ಬರೆದ ಪತ್ರವೂ ದಾಖಲೆಗಳಲ್ಲಿ ಸಿಕ್ಕಿದೆ. ತಮ್ಮ ವಿರುದ್ಧ ಕೇಳಿಬಂದ ಆರೋಪಕ್ಕೆ ಸ್ಪಷ್ಟನೆ ನೀಡಲು ಅವಕಾಶ ಕೊಡದ ಬಗ್ಗೆ ಜಯಂತ ಅವರು ಪತ್ರದ ಮೂಲಕ ಅಧಿಕೃತವಾಗಿಯೇ ಅಸಮಧಾನವ್ಯಕ್ತಪಡಿಸಿದ್ದಾರೆ. `ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸುವಂತೆ ಕೋರಿದರೂ ಕ್ರಮ ಜರುಗಿಸಿಲ್ಲ’ ಜಯಂತ ಅವರು ಸರ್ಕಾರಿ ಪತ್ರದಲ್ಲಿ ಬರೆದಿದ್ದು, ಅದು ಕಡತ ಸೇರಿದೆ. ಕಾರವಾರದ ಕೈಗಾರಿಕಾ ಇಲಾಖೆಯ ಜಂಟಿ ನಿರ್ದೇಶಕರ ಕಚೇರಿಯಲ್ಲಿ ಜಯಂತ ಅವರು ಜಂಟಿ ನಿರ್ದೇಶಕರಾಗಿದ್ದರು. ಅಲ್ಲಿಯೂ ಪ್ರಭಾರಿ ಹೊಣೆಯಲ್ಲಿದ್ದ ಜಯಂತ ಅರ‍್ನು ಪ್ರವಾಸೋದ್ಯಮ ಇಲಾಖೆಗೂ ಪ್ರಭಾರಿ ಉಪನಿರ್ದೇಶಕರಾಗಿ ನೇಮಿಸಲಾಗಿತ್ತು. 2025ರ ಫೆಬ್ರವರಿ ಅವಧಿಯಲ್ಲಿ ಜಯಂತ ಅವರನ್ನು ರಾಜ್ಯ ಸರ್ಕಾರದ ಕಾರ್ಯಕ್ರಮವೊಂದಕ್ಕೆ ಸಂಪರ್ಕಾಧಿಕಾರಿಯಾಗಿ ನಿಯೋಜಿಸಲಾಗಿತ್ತು. ಆ ವೇಳೆ, ಕಾರವಾರ ಸಹಾಯಕ ಆಯುಕ್ತರು ಪ್ರವಾಸೋದ್ಯಮ ಇಲಾಖೆಯ ಪ್ರಭಾರಿ ಹೊಣೆ ಹೊತ್ತಿದ್ದರು. ಆಗ, ಸಹಾಯಕ ಆಯುಕ್ತರಿಗೆ ಸರ್ಕಾರಿ ಕಚೇರಿಯಲ್ಲಿ ಮಂಚ ಕಾಣಿಸಿದ್ದು, ಕಿಡಿಕಾರಿದ್ದರು. ಮಂಚ ಸಿಕ್ಕ ವಿಡಿಯೋ ವೈರಲ್ ಆಗಿ, ಮಾಧ್ಯಮಗಳಲ್ಲಿಯೂ ವರದಿ ಪ್ರಸಾರವಾಗಿತ್ತು. ಬೆಂಗಳೂರಿಗೆ ಹೋಗಿದ್ದ ಜಯಂತ್ ಅವರು ದಿಢೀರ್ ಆಗಿ ಕಾರವಾರಕ್ಕೆ ಮರಳಿ ಕಡತಗಳ ಪರಿಶೀಲನೆ ಮಾಡಿದ್ದರು. ಆಗ, 2018ರ ಅವಧಿಯಲ್ಲಿ ಹುಬ್ಬಳ್ಳಿಯ ಸಾಯಿ ಇನಸ್ಟçಕ್ಷನ್ ಅವರಿಗೆ ಜೊಯಿಡಾದ ರಾಮನಗರದಲ್ಲಿ ಗುತ್ತಿಗೆ ಆಧಾರದಲ್ಲಿ ನೀಡಲಾಗಿದ್ದ ಕಟ್ಟಡದಲ್ಲಿ ಅಧಿಕಾರಿಗಳು ದಾಳಿ ನಡೆಸಿದ್ದು, ಆ ಅವಧಿಯಲ್ಲಿ ಸಿಕ್ಕ ಪೀಠೋಪಕರಣಗಳ ಜೊತೆ ಮಂಚವನ್ನು ಪ್ರವಾಸೋಧ್ಯಮ ಇಲಾಖೆ ಕಚೇರಿಯಲ್ಲಿರಿಸಿರುವುದು ಗೊತ್ತಾಗಿತ್ತು. ಆ ಬಗ್ಗೆ ಅವರು ಪತ್ರಿಕಾಗೋಷ್ಠಿ ನಡೆಸಿ ಮಾಹಿತಿ ನೀಡಲು ಅನುಮತಿ ಕೋರಿದ್ದರು. ಆದರೆ, ಅವರಿಗೆ ಪತ್ರಿಕಾಗೋಷ್ಠಿ ನಡೆಸಲು ಅನುಮತಿ ಸಿಕ್ಕಿರಲಿಲ್ಲ. `ದಾಳಿಯ ವೇಳೆ ಮಂಚದ ಜೊತೆ ಸಿಕ್ಕ ಪ್ರಿಡ್ಜ್, ಫ್ಯಾನ್ ಸೇರಿ ಅನೇಕ ವಸ್ತುಗಳನ್ನು ಪ್ರವಾಸೋದ್ಯಮ ಕಚೇರಿಯಲ್ಲಿರಿಸಲಾಗಿದೆ. ಆದರೆ, ಅದೆಲ್ಲವನ್ನು ಬಿಟ್ಟು ಮಂಚದ ವಿಡಿಯೋ ಮಾತ್ರ ಹರಿಬಿಟ್ಟು ಹೆಸರು ಕೆಡಿಸುವ ಕಾರ್ಯ ನಡೆದಿದೆ. ತಮಗೆ ನ್ಯಾಯ ಒದಗಿಸಬೇಕು’ ಎಂದು ಜಯಂತ ಅವರು ಮನವಿ ಮಾಡಿದ್ದರು. ಆದರೆ, ಅವರು ನೀಡಿದ ಆ ಪತ್ರಕ್ಕೆ ಯಾವುದೇ ಕ್ರಮ ಆಗಿಲ್ಲ. ಈ ಬಗ್ಗೆಯೂ ಜಯಂತ ಅವರು ಅಸಮಧಾನವ್ಯಕ್ತಪಡಿಸಿ ಪತ್ರ ಬರೆದಿದ್ದು, `ಆ ಪ್ರಭಾರಿ ಹುದ್ದೆಯಿಂದ ತಮ್ಮನ್ನು ಬಿಡುಗಡೆ ಮಾಡಿ’ ಎಂದು ಮನವಿ ಮಾಡಿರುವುದು ಉಲ್ಲೇಖವಾಗಿದೆ. `ಪ್ರವಾಸೋದ್ಯಮ ಹೆಸರಿನಲ್ಲಿ ನಡೆಯುತ್ತಿದ್ದ ಕೆಲ ಅಕ್ರಮ ದಂಧೆಗಳಿಗೆ ಜಯಂತ ಅವರು ಕಡಿವಾಣ ಹಾಕಿದ್ದರು. ಈ ಕಾರಣದಿಂದ ಅಸಮಧಾನಗೊಂಡ ಗುಂಪು ಅವರ ವಿರುದ್ಧ ಕುತಂತ್ರ ರೂಪಿಸಿ ಮಂಚದ ವಿಡಿಯೋ ವೈರಲ್ ಮಾಡಿತ್ತು. ಇದರಿಂದ ಮಾನಸಿಕ ಕಿರುಕುಳಕ್ಕೆ ಒಳಗಾದ ಅವರು ಆ ಇಲಾಖೆಯ ಹುದ್ದೆಯಿಂದ ತಮ್ಮನ್ನು ಬಿಡುಗಡೆ ಮಾಡುವಂತೆ ಕೋರಿದ್ದರು. ವಿವಾದ ಮುಗಿದ ನಂತರ ಪ್ರವಾಸೋದ್ಯಮ ಇಲಾಖೆಯನ್ನು ಮತ್ತೆ ಹಳೆ ಜಾಗಕ್ಕೆ ಸ್ಥಳಾಂತರಿಸಲಾಗಿದೆ. ಅನಗತ್ಯವಾಗಿ ಅಧಿಕಾರಿಗಳ ವಿರುದ್ಧ ಆರೋಪ ಮಾಡುವವರಿಗೂ ಶಿಕ್ಷೆಯಾಗಬೇಕಿದೆ’ ಮಾಹಿತಿ ಹಕ್ಕು ಕಾರ್ಯಕರ್ತ ಸಂತೋಷ ವಿ ನಾಯ್ಕ ಹೇಳಿದ್ದಾರೆ. - [ಬದುಕುವುದು ಕಷ್ಟ ಎಂದ ಡಾಕ್ಟರು!](https://mobiletime.in/2025/11/doctors-say-it-will-be-difficult-to-survive/): ಬೈಕಿನಿಂದ ಬಿದ್ದು ಗಂಭೀರ ಗಾಯಗೊಂಡಿದ್ದ ಕುಮಟಾದ ವ್ಯಕ್ತಿಯನ್ನು ಕುಟುಂಬದವರು ಆಂಬುಲೆನ್ಸ ಮೂಲಕ ಮಣಿಪಾಲಿಗೆ ಕರೆದೊಯ್ದಿದ್ದು, ಅಲ್ಲಿದ್ದ ಕಸ್ತೂರಿ ಬಾ ಆಸ್ಪತ್ರೆಯ ವೈದ್ಯರು `ಚಿಕಿತ್ಸೆ ನೀಡಿದರೂ ಆತ ಬದುಕುವುದು ಕಷ್ಟ’ ಎಂದಿದ್ದಾರೆ. ಆಂಬುಲೆನ್ಸ ಮೂಲಕ ಮರಳಿ ತರುವಾಗ ಹಂದಿಗೋಣದ ಬಳಿ ಗಾಯಾಳು ಸಾವನಪ್ಪಿದ್ದಾರೆ. ಕುಮಟಾದ ಹೆಗಡೆ ಪಡುಗೇರಿಯ ರಾಮನಾಥ ವಿಠೋಬಾ ನಾಯಕ ಅವರು ಹೊಟೇಲ್ ಒಂದರಲ್ಲಿ ಸಪ್ಲಾಯರ್ ಕೆಲಸ ಮಾಡಿಕೊಂಡಿದ್ದರು. ನವೆಂಬರ್ 18ರಂದು ಅವರು ಎಂದಿನAತೆ ಹೊಟೇಲ್ ಕೆಲಸ ಮುಗಿಸಿದ್ದರು. ಸಂಜೆ 6ಗಂಟೆಗೆ ಬೈಕಿನಲ್ಲಿ ಮನೆಗೆ ಮರಳುವಾಗ ಆಕಳೊಂದು ಅಡ್ಡ ಬಂದಿತು. ಅಲ್ಲಿನ ಕೆಡಿಸಿಸಿ ಬ್ಯಾಂಕ್ ಎದುರು ಆ ಆಕಳಿಗೆ ಬೈಕ್ ಗುದ್ದುವುದನ್ನು ತಪ್ಪಿಸುವ ಬರದಲ್ಲಿ ರಾಮನಾಥ ನಾಯಕ ಅವರು ನೆಲಕ್ಕೆ ಬಿದ್ದು ಪೆಟ್ಟು ಮಾಡಿಕೊಂಡರು. ರಾಮನಾಥ ನಾಯಕ ಅವರನ್ನು ಕುಮಟಾದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಯಿತು. ಅಲ್ಲಿನ ವೈದ್ಯರ ಶಿಫಾರಸ್ಸಿನ ಮೇರೆಗೆ ತುರ್ತಾಗಿ ಮಣಿಪಾಲದ ಕಸ್ತೂರಿ ಬಾ ಆಸ್ಪತ್ರೆಗೆ ಕರೆದೊಯ್ಯಲಾಯಿತು. ರಾಮನಾಥ ನಾಯಕ ಅವರನ್ನು ನೋಡಿದ ಆಸ್ಪತ್ರೆಯ ವೈದ್ಯರು `ತಲೆಗೆ ಗಂಭೀರ ಗಾಯವಾಗಿದೆ’ ಎಂದರು. `ತೀವ್ರ ಪ್ರಮಾಣದಲ್ಲಿ ರಕ್ತಸ್ರಾವ ಆಗಿದ್ದರಿಂದ ಚಿಕಿತ್ಸೆ ನೀಡಿದರೂ ಬದುಕುವುದು ಕಷ್ಟ’ ಎಂದು ವಿವರಿಸಿದರು. ಹೀಗಾಗಿ ರಾಮನಾಥ ನಾಯಕ ಅವರ ಮಗ ವಿಘ್ನೇಶ್ ನಾಯಕ ಅವರು ತಂದೆಯನ್ನು ಆಂಬುಲೆನ್ಸ ಮೂಲಕವೇ ಕರೆ ತರುವ ಕೆಲಸ ಮಾಡಿದರು. ನವೆಂಬರ್ 19ರಂದು ಹಂದಿಕೋಣದ ಬಳಿ ಬರುವಾಗ ರಾಮನಾಥ ನಾಯಕ ಅವರು ಕೊನೆಯುಸಿರೆಳೆದರು. `ಹೆಲ್ಮೆಟ್ ಧರಿಸಿ.. ಬೈಕ್ ಓಡಿಸಿ’ - [ಕರ್ನಾಟಕ ಪ್ರವೇಶಿಸಿದ ಗೋವಾ ಮದ್ಯ: ಮಾರಾಟಕ್ಕೆ ತಡೆ!](https://mobiletime.in/2025/11/goan-liquor-enters-karnataka-sale-banned/): ಕಾಡು ದಾರಿಯಲ್ಲಿ ಕಳ್ಳ ಸಾಗಾಣಿಕೆ ಮೂಲಕ ಕರ್ನಾಟಕಕ್ಕೆ ಬರುತ್ತಿದ್ದ ಗೋವಾ ಮದ್ಯ ಮಾರಾಟಕ್ಕೆ ಅಬಕಾರಿ ಸಿಬ್ಬಂದಿ ತಡೆ ಒಡ್ಡಿದ್ದಾರೆ. ಕಾರವಾರದ ಗಾಂವಗೇರಿ ಹಾಗೂ ಮುಡಗೇರಿ ಡ್ಯಾಮ್ ಬಳಿ ನಡೆದ ಕಾರ್ಯಾಚರಣೆಯಲ್ಲಿ ಭಾರೀ ಪ್ರಮಾಣದ ಮದ್ಯದ ಬಾಟಲಿಗಳು ಸಿಕ್ಕಿವೆ. ಗಾವಂಗೇರಿಯಲ್ಲಿ ಟಾಟಾ ಇಂಡಿಕಾ ಕಾರು ಅಡ್ಡ ಹಾಕಿದ ಅಬಕಾರಿ ಅಧಿಕಾರಿಗಳು ಅದರಲ್ಲಿ ಸಾಗಿಸುತ್ತಿದ್ದ 6.14 ಲಕ್ಷ ರೂ ಮೌಲ್ಯದ 133.560 ಲೀಟರ್ ಮದ್ಯವನ್ನು ವಶಕ್ಕೆಪಡೆದಿದ್ದಾರೆ. ಜೊತೆಗೆ ಕಾರನ್ನು ಜಪ್ತು ಮಾಡಿದ್ದಾರೆ. ಮುಡಗೇರಿಯಲ್ಲಿ ಐದು ಬೈಕುಗಳನ್ನು ಅಡ್ಡಗಟ್ಟಿದ ಅಬಕಾರಿ ಸಿಬ್ಬಂದಿ ಗೋವಾ ಪೆನ್ನಿ, ಗೋವಾ ಮದ್ಯ, ಬಿಯರ್ ಸೇರಿ 3,62,350ರೂ ಮೌಲ್ಯದ 649.610 ಲೀ ಮದ್ಯ ಹಿಡಿದಿದ್ದಾರೆ. ಇಲ್ಲಿಯೂ ಆ ಐದು ಬೈಕುಗಳನ್ನು ಜಪ್ತು ಮಾಡಿದ್ದಾರೆ. ಬುಧವಾರ ರಾತ್ರಿ ಹಾಗೂ ಗುರುವಾರ ಬೆಳಗಿನ ಅವಧಿಯಲ್ಲಿ ಈ ಕಾರ್ಯಾಚರಣೆ ನಡೆದಿದೆ. ದಾಳಿ ವೇಳೆ ಆರೋಪಿತರು ಓಡಿ ಹೋಗಿದ್ದಾರೆ. ಮದ್ಯ ಹಾಗೂ ವಾಹನ ವಶಕ್ಕೆಪಡೆಯುವದರಲ್ಲಿ ತಲ್ಲೀನರಾಗಿದ್ದ ಅಬಕಾರಿ ಸಿಬ್ಬಂದಿ ಬಳಿ ಆರೋಪಿತರನ್ನು ಬೆನ್ನಟ್ಟಿ ಹಿಡಿಯಲು ಸಾಧ್ಯವಾಗಲಿಲ್ಲ.   - [ನಾಯಿ ಕಾಟಕ್ಕೆ ಮುಕ್ತಿ ನೀಡಲು ಸರ್ಕಾರದ ನಿರ್ಧಾರ!](https://mobiletime.in/2025/11/governments-decision-to-get-rid-of-dog-menace/): ಬೀದಿ ನಾಯಿ ಹಾವಳಿ ಬಗ್ಗೆ ಸಾಕಷ್ಟು ದೂರು ಸಲ್ಲಿಕೆ ಆಗುತ್ತಿರುವ ಹಿನ್ನಲೆ ಸರ್ಕಾರ ಅದನ್ನು ಗಂಭೀರವಾಗಿ ಪರಿಗಣಿಸಿದೆ. `ಬೀದಿ ನಾಯಿಗಳ ಹಾವಳಿ ತಡೆಗಟ್ಟುವ ನಿಟ್ಟಿನಲ್ಲಿ ಸುಪ್ರೀಂ ಕೋರ್ಟ್ ನೀಡಿರುವ ಆದೇಶಗಳು ಮತ್ತು ಎಲ್ಲಾ ಮಾರ್ಗಸೂಚಿಗಳನ್ನು ಅತ್ಯಂತ ಕಟ್ಟುನಿಟ್ಟಾಗಿ ಪಾಲಿಸಿ’ ಎಂದು ಜಿಲ್ಲಾಧಿಕಾರಿ ಕೆ ಲಕ್ಷ್ಮೀಪ್ರಿಯಾ ಅವರು ಅಧೀನ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಗುರುವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ, ಬೀದಿ ನಾಯಿಗಳ ಹಾವಳಿ ತಡೆಗಟ್ಟುವ ನಿಟ್ಟಿನಲ್ಲಿ ಅವರು ಸಭೆ ನಡೆಸಿದ್ದು `ಎಲ್ಲಾ ಸರಕಾರಿ ಮತ್ತು ಖಾಸಗಿ ಶಿಕ್ಷಣ ಸಂಸ್ಥೆಗಳು, ಆಸ್ಪತ್ರೆಗಳು, ಪ್ರಾಥಮಿಕ ಆರೋಗ್ಯ ಕೇಂದ್ರಗಳು, ವೈದ್ಯಕೀಯ ಕಾಲೇಜು ಸೇರಿದಂತೆ ಸಾರ್ವಜನಿಕ ಕ್ರೀಡಾಂಗಣಗಳು, ಬಸ್ ನಿಲ್ದಾಣಗಳು, ಬಸ್ ಡಿಪೋಗಳು, ರೈಲು ನಿಲ್ದಾಣಗಳಲ್ಲಿರುವ ಬೀದಿ ನಾಯಿಗಳ ಸಂಖ್ಯೆಯನ್ನು ಸರ್ಕಾರಕ್ಕೆ ಮಾಹಿತಿ ನೀಡಬೇಕು. ಗುರುತಿಸಲಾಗುವ ಬೀದಿ ನಾಯಿಗಳನ್ನು ಹಿಡಿದು ಅವುಗಳನ್ನು ನಿಗಧಿತ ಸ್ಥಳದಲ್ಲಿ ಬೇಲಿ ಹಾಕಿ ಅಥವಾ ಕೇಜುಗಳಲ್ಲಿ ಸೂಕ್ತ ರೀತಿಯಲ್ಲಿ ನಿರ್ವಹಣೆ ಮಾಡುವ ಕುರಿತು ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳು ಆದ್ಯತೆಯಲ್ಲಿ ಕ್ರಮ ಕೈಗೊಳ್ಳಬೇಕು. ಈ ಕಾರ್ಯದಲ್ಲಿ ಸಮೀಪದ ಗ್ರಾಮ ಪಂಚಾಯತ್‌ಗಳ ಸಹಕಾರವನ್ನು ಪಡೆಯಬೇಕು’ ಎಂದು ಸೂಚಿಸಿದರು. ಈ ನಾಯಿಗಳಿಗೆ ಸಂತಾನಹರಣ ಶಸ್ತçಚಿಕಿತ್ಸೆಯನ್ನು ನಡೆಸುವಂತೆ ತಿಳಿಸಿದರು. `ಬಸ್ ನಿಲ್ದಾಣ ಮತ್ತು ರೈಲ್ವೆ ನಿಲ್ದಾಣಗಳಲ್ಲಿ ಬೀದಿ ನಾಯಿಗಳ ಹಾವಳಿಯನ್ನು ನಿಯಂತ್ರಿಸಲು ಈ ಸ್ಥಳಗಳಲ್ಲಿ ಆಹಾರ ಪದಾರ್ಥಗಳನ್ನು ಚೆಲ್ಲುವುದು ಮತ್ತು ತ್ಯಾಜ್ಯ ನಿರ್ಮಾಣವಾಗದಂತೆ ಸಂಬoಧಪಟ್ಟ ಇಲಾಖೆಯ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು’ ಎಂದರು. ರಾಷ್ಟಿಯ ಮತ್ತು ರಾಜ್ಯ ಹೆದ್ದಾರಿಗಳಲ್ಲಿ ಬೀದಿ ನಾಯಿಗಳನ್ನು ನಿಯಂತ್ರಿಸುವoತೆ ರಾಷ್ಟಿಯ ಹೆದ್ದಾರಿ ಮತ್ತು ಲೋಕೋಪಯೋಗಿ ಇಲಾಖೆಗಳ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಬೀದಿ ನಾಯಿಗಳ ನಿಯಂತ್ರಣ ವಿಧಾನಗಳು ಮತ್ತು ನಾಯಿ ಕಡಿತದ ಸಂದರ್ಭದಲ್ಲಿ ಕೈಗೊಳ್ಳಬೇಕಾದ ಪ್ರಥಮ ಚಿಕಿತ್ಸೆಯ ಕುರಿತಂತೆ ಎಲ್ಲಾ ಶಾಲೆಗಳಲ್ಲಿ ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಗೆ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಅಯೋಜಿಸುವಂತೆ ಮತ್ತು ಜಿಲ್ಲೆಯಲ್ಲಿ ರೇಬಿಸ್ ಚುಚ್ಚುಮದ್ದುಗಳ ಕೊರತೆಯಾಗದಂತೆ ಮುನ್ನೆಚ್ಚರಿಕೆ ವಹಿಸುವಂತೆ ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು. ಬೀದಿ ನಾಯಿಗಳ ನಿಯಂತ್ರಣ ಕುರಿತಂತೆ ರಾಜ್ಯದಿಂದ ಸರ್ವೋಚ್ಛ ನ್ಯಾಯಾಲಯಕ್ಕೆ ವರದಿ ಸಲ್ಲಿಸಬೇಕಿರುವುದರಿಂದ ಸಂಬAಧಪಟ್ಟ ಎಲ್ಲಾ ಇಲಾಖೆಗಳ ಅಧಿಕಾರಿಗಳು ತಮ್ಮ ಜವಾಬ್ದಾರಿಯನ್ನು ಅರಿತು, ನಿಗಧಿತ ಅವಧಿಯೊಳಗೆ ಈ ಎಲ್ಲಾ ಕಾರ್ಯಗಳನ್ನು ಕಾರ್ಯನಿರ್ವಹಿಸುವಂತೆ ಹಾಗೂ ಈ ಕುರಿತಂತೆ ಅಗತ್ಯ ದಾಖಲೆಗಳೊಂದಿಗೆ ವರದಿ ಸಲ್ಲಿಸುವಂತೆ ಸೂಚಿಸಿದರು. ಈ ಸಭೆಯಲ್ಲಿ ಜಿ ಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ದಿಲೀಷ್ ಶಶಿ, ಅಪರ ಜಿಲ್ಲಾಧಿಕಾರಿ ಸಾಜೀದ್ ಮುಲ್ಲಾ, ನಗರಾಭಿವೃದ್ದಿ ಕೋಶದ ಯೋಜನಾ ನಿರ್ದೇಶಕ ಜಹೀರ್ ಅಬ್ಬಾಸ್, ಪಶುಪಾಲನಾ ಇಲಾಖೆ ಉಪನಿರ್ದೇಶಕ ಡಾ.ಮೋಹನ್ ಕುಮಾರ್ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಜರಿದ್ದರು. - [ಜೈ ಶ್ರೀರಾಮ: ಕುಮಟಾ ತಲುಪಿದ ದಿಗ್ವಿಜಯ ಯಾತ್ರೆ](https://mobiletime.in/2025/11/jai-shri-ram-digvijaya-yatra-reaches-kumta/): ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠದ 550ನೇ ವರ್ಷಾಚರಣೆಯ ಅಂಗವಾಗಿ ದೇಶದ ಎಲ್ಲಡೆ ಶ್ರೀರಾಮ ದಿಗ್ವಿಜಯ ರಥಯಾತ್ರೆ ಸಂಚರಿಸುತ್ತಿದ್ದು, ಬುಧವಾರ ಈ ರಥ ಕುಮಟಾ ಪ್ರವೇಶಿಸಿದೆ. ಜಿಎಸ್‌ಬಿ ಸಮುದಾಯದವರು ರಥವನ್ನು ಅದ್ಧೂರಿಯಾಗಿ ಸ್ವಾಗತಿಸಿದ್ದಾರೆ. ಅಕ್ಟೋಬರ್ 18ರಂದು ಬದ್ರಿನಾಥದಿಂದ ಆರಂಭಗೊAಡ ಶ್ರೀರಾಮ ದಿಗ್ವಿಜಯ ರಥಯಾತ್ರೆ ಈ ದಿನ ಕುಮಟಾ ತಾಲೂಕಿನ ವಿವಿಧ ಕಡೆ ಸಂಚರಿಸಿದೆ. ಪಟ್ಟಣದ ಹೆರವಟ್ಟಾ ಶ್ರೀ ವರದ ವಿಠ್ಠಲ ದೇವಾಲಯ, ದೇವಕೀಕೃಷ್ಣ, ವೆಂಕಟ್ರಮಣ, ಮೂಡಗಣಪತಿ, ರಾಯೇಶ್ವರ ಕಾವೂರು ಕಾಮಾಕ್ಷಿ, ಮಹಾಲಸಾ ನಾರಾಯಣಿ, ಸಾತೇರಿ ಕಾಮಾಕ್ಷಿ ದೇವಾಲಯಗಳಿಗೆ ಸಂಚರಿಸಿ ಭಕ್ತರನ್ನು ಆಶೀರ್ವದಿಸಿದೆ. ಅಲ್ಲಿ ನಡೆದ ವಿವಿಧ ಧಾರ್ಮಿಕ ವಿಧಿವಿಧಾನಗಳಲ್ಲಿ ಭಕ್ತರು ಭಾಗವಹಿಸಿದ್ದರು. ರಾಮ ಭಕ್ತರ ಜೊತೆ ಗೌಡ ಸಾರಸ್ವತ ಬ್ರಾಹ್ಮಣ ಸಮಾಜದ ಸಾವಿರಾರು ಜನ ಭಜನೆ, ರಾಮತಾರಕ ಮಂತ್ರ ಪಠಿಸಿದರು. ಕುಮಟಾ ರಥಬೀದಿಯಿಂದ ಸ್ಥಬ್ಧಚಿತ್ರಗಳೊಂದಿಗೆ ಎಲ್ಲಡೆ ಮೆರವಣಿಗೆ ನಡೆಸಿದರು. ಈ ರಥವು ಹೆಗಡೆ ಶ್ರೀ ಶಾಂತಿಕಾAಬಾ ದೇವಾಲಯ, ಉಪ್ಪಿನಪಟ್ಟಣ ಶ್ರೀ ವೆಂಕಟ್ರಮಣ ದೇವಾಲಯ, ಕೋಡ್ಕಣಿ ವೀರವಿಠ್ಠಲ ಮಠ, ಹಿಗೆಗುತ್ತಿಯ ಶ್ರೀ ಮಹಾಲಕ್ಷ್ಮೀ ರವಳನಾಥ ದೇವಾಲಯಗಳಿಗೆ ಭೇಟಿ ನೀಡಿ ಗೋಕರ್ಣದ ಶ್ರೀ ಜೀವೋತ್ತಮ ಮಠಕ್ಕೆ ತೆರಳಿತು. - [ಪೆಟ್ರೋಲ್ ಬಂಕಿನಲ್ಲಿ ಮಾರಾಮಾರಿ!](https://mobiletime.in/2025/11/fight-at-the-petrol-station/): ಮುಂಡಗೋಡಿನ ಮಾರಿಕಾಂಬಾ ಪೆಟ್ರೋಲ್ ಬಂಕಿನಲ್ಲಿ ಮಾರಾಮಾರಿ ನಡೆದಿದೆ. ಅಲ್ಲಿ ಕೆಲಸ ಮಾಡುವ ಹೇಮಂತ ಭೋವಿ ಅವರ ಮೇಲೆ ಏಳು ಜನ ಒಟ್ಟಿಗೆ ಆಕ್ರಮಣ ಮಾಡಿದ್ದಾರೆ. ಮುಂಡಗೋಡದ ಭಾರತ ನಗರದಲ್ಲಿ ಹೇಮಂತ ಭೋವಿ ಅವರು ವಾಸವಾಗಿದ್ದಾರೆ. ಶಿರಸಿ ರಸ್ತೆಯಲ್ಲಿರುವ ಮಾರಿಕಾಂಬಾ ಪೆಟ್ರೋಲ್ ಬಂಕ್ ಸಿಬ್ಬಂದಿಯಾಗಿ ಅವರು ಜೀವನ ನಡೆಸುತ್ತಿದ್ದಾರೆ. ನವೆಂಬರ್ 18ರಂದು ಚವಡಳ್ಳಿಯ ಏಳು ಜನ ಅವರ ಮೇಲೆ ಆಕ್ರಮಣ ನಡೆಸಿದ್ದಾರೆ. ಹೇಮಂತ ಭೋವಿ ಅವರ ಮೇಲೆ ಹಲ್ಲೆ ನಡೆಸಿದ ಅವರು ಜಾತಿ ನಿಂದನೆ ಮಾಡಿ ಬೆದರಿಕೆ ಒಡ್ಡಿದ್ದಾರೆ. ಪೆಟ್ರೋಲ್ ಬಂಕಿಗೆ ಬಂದ ಅರ್ಜುನ ಜೊತೆಪ್ಪನವರ್ ಅವರು ಮಧ್ಯಾಹ್ನ ಹೇಮಂತ ಭೋವಿ ಅವರ ಜೊತೆ ಮೊದಲು ಜಗಳು ಶುರು ಮಾಡಿದ್ದಾರೆ. ನಂತರ ಅರ್ಜುನ ಜೊತೆಪ್ಪನವರ್ ಅವರು `ನಿನ್ನ ನಂತರ ನೋಡಿಕೊಳ್ಳುವೆ’ ಎಂದು ಹೆದರಿಸಿ ಅಲ್ಲಿಂದ ಹೋಗಿದ್ದಾರೆ. ಅದಾದ ನಂತರ ರಾತ್ರಿ ಮತ್ತೆ ಅರ್ಜುನ ಜೊತೆಪ್ಪನವರ್ ಅವರು ಪೆಟ್ರೋಲ್ ಬಂಕಿಗೆ ಬಂದು ಗಲಾಟೆ ಮಾಡಿದ್ದಾರೆ. ಈ ವೇಳೆ ಅರ್ಜುನ ಅವರ ಜೊತೆ ಚವಡಳ್ಳಿ ಗ್ರಾಮದ ಪ್ರಜ್ವಲ್, ದರ್ಶನ್, ರಾಹುಲ್, ಲಕ್ಷ್ಮಣ, ಸತೀಶ್ ಹಾಗೂ ರಾಮ ಎಂಬಾತರು ಬಂದಿದ್ದು, ಅವರೆಲ್ಲರೂ ಸೇರಿ ಹೇಮಂತ ಭೋವಿ ಅವರನ್ನು ಥಳಿಸಿದ್ದಾರೆ. ಪೆಟ್ರೋಲ್ ಹಾಕುತ್ತಿದ್ದ ಹೇಮಂತ್ ಭೋವಿ ಅವರನ್ನು ಆ ಏಳು ಜನ ಅಡ್ಡಗಟ್ಟಿ ಕಾಲಿನಿಂದ ತುಳಿದಿದ್ದಾರೆ. ನಂತರ ಕೈಯಿಂದ ಹೊಡೆದಿದ್ದಾರೆ. `ನಮ್ಮ ಅರ್ಜುನನ ಬಳಿಯೇ ಜಗಳ ಮಾಡುತ್ತೀಯಾ?’ ಎಂದು ಪ್ರಶ್ನಿಸಿ ಇನ್ನಷ್ಟು ಥಳಿಸಿದ್ದಾರೆ. ಜಾತಿ ವಿಷಯವಾಗಿಯೂ ನಿಂದಿಸಿ ಬೈದಿದ್ದಾರೆ. ಜೊತೆಗೆ ಎಲ್ಲರೂ ಸೇರಿ ಕೊಲೆ ಬೆದರಿಕೆ ಒಡ್ಡಿದ್ದಾರೆ. ಈ ಎಲ್ಲಾ ವಿಷಯವನ್ನು ಹೇಮಂತ ಭೋವಿ ಅವರು ಪೊಲೀಸರಿಗೆ ಹೇಳಿದ್ದು, ಪೊಲೀಸರು ಪ್ರಕರಣದ ವಿಚಾರಣೆ ಶುರು ಮಾಡಿದ್ದಾರೆ. - [ಅಧಿವೇಶನದಲ್ಲಿ ಅರಣ್ಯವಾಸಿಗಳ ಅಳಲು ಪ್ರಸ್ತಾಪಿಸಲು ಆಗ್ರಹ](https://mobiletime.in/2025/11/demand-to-raise-the-issue-of-forest-dwellers-in-the-session/): ಬೆಳಗಾವಿಯಲ್ಲಿ ನಡೆಯುವ ಅಧಿವೇಶನದಲ್ಲಿ ಅರಣ್ಯವಾಸಿಗಳ ಅಳಲಿನ ಬಗ್ಗೆ ಪ್ರಸ್ತಾಪಿಸಿಸಬೇಕು ಎಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವಿಂದ್ರ ನಾಯ್ಕ ಅವರು ಆಗ್ರಹಿಸಿದ್ದಾರೆ. ಈ ಬಗ್ಗೆ ಕಾನೂನು, ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಸಚಿವರಾದ ಎಚ್ ಕೆ ಪಾಟೀಲ್ ಅವರನ್ನು ಭೇಟಿಯಾಗಿ ಒತ್ತಾಯಿಸಿದ್ದಾರೆ. ಪಂಚಾಯತ್ ರಾಜ್ ವಿಕೇಂದ್ರೀಕರಣ ಯೋಜನೆ ಮತ್ತು ಅಭಿವೃದ್ದಿ ಸಮಿತಿಯ ಉಪಾಧ್ಯಕ್ಷ ಡಿ ಆರ್ ಪಾಟೀಲ್ ಅವರ ಜೊತೆಗೂಡಿ ರವೀಂದ್ರ ನಾಯ್ಕ ಅವರು ಎಚ್ ಕೆ ಪಾಟೀಲ ಅವರನ್ನು ಭೇಟಿ ಮಾಡಿದರು. `ಬೆಳಗಾವಿ ನಡೆಯಲಿರುವ ಚಳಿಗಾಲದ ಅಧಿವೇಶನದಲ್ಲಿ ಅರಣ್ಯವಾಸಿಗಳ ಪರ ನಿಲುವು ಪಡೆಯುವ ಉದ್ದೇಶದಿಂದ ವಿಶೇಷ ಕಲಾಪದ ಅವಧಿಯನ್ನ ನಿಗಧಿಗೊಳಿಸಬೇಕು’ ಎಂದವರು ಆಗ್ರಹಿಸಿದರು. ವಿವಿಧ ಅಂಕಿ-ಸoಖ್ಯೆಗಳ ಮೂಲಕ ಜಿಲ್ಲೆಯ ಜನ ತಮ್ಮ ಹಕ್ಕಿನಿ ನಿರೀಕ್ಷೆಯಲ್ಲಿರುವ ವಿಷಯ ಪ್ರಸ್ತಾಪಿಸಿದರು. ಕಾನೂನಿನಲ್ಲಿರುವ ಗೊಂದಲಗಳ ಬಗ್ಗೆಯೂ ವಿವರಿಸಿದರು. `ಅರಣ್ಯ ಹಕ್ಕು ಕಾಯಿದೆ ಅನುಮೊದನೆಗೊಂಡು 20 ವರ್ಷ ಕಳೆದಿವೆ. ಕಾನೂನು ಅನುಷ್ಠಾನದಲ್ಲಿ ಗೊಂದಲ, ಸ್ಪಷ್ಟತೆ ಇಲ್ಲದ ಮಂಜೂರಿ ಪ್ರಕ್ರಿಯೆ, ಅರಣ್ಯವಾಸಿಗಳಿಗೆ ಪೂರ್ಣ ಪ್ರಮಾಣದ ಕಾನೂನು ಕೊರತೆ, ಆಡಳಿತಾತ್ಮಕ ವ್ಯವಸ್ಥೆಗೆ ಇಚ್ಚಾಶಕ್ತಿ ಇಲ್ಲದಿರುವ ಕಾರಣ ಅರ್ಜಿ ತಿರಸ್ಕಾರವಾಗುತ್ತಿದೆ. ಈವರೆಗೆ ಶೇ 5.2ರಷ್ಟು ಅರ್ಜಿಗಳಿಗೆ ಮಾತ್ರ ಮಾನ್ಯತೆ ದೊರೆತಿದೆ. ಈ ಎಲ್ಲಾ ಅಂಶಗಳು ಅಧಿವೇಶನದಲ್ಲಿ ಚರ್ಚೆಗೆ ಬರಬೇಕು’ ಎಂದು ಒತ್ತಾಯಿಸಿದರು. - [ಅತಿ ವೇಗ ತಂದ ಅನಾಹುತ: ಅಪಘಾತ!](https://mobiletime.in/2025/11/a-disaster-brought-about-by-excessive-speed-an-accident/): ವೇಗವಾಗಿ ಚಲಿಸುತ್ತಿದ್ದ ಕಾರನ್ನು ಓವರ್ ಟೆಕ್ ಮಾಡುಲು ಹೋದ ಬೈಕ್ ದಾಂಡೇಲಿಯಲ್ಲಿ ಅಪಘಾತಕ್ಕೀಡಾಗಿದೆ. ಆ ಅಪಘಾತದಲ್ಲಿ ಇಬ್ಬರು ಗಾಯಗೊಂಡಿದ್ದಾರೆ. ದಾoಡೇಲಿ ಬಳಿಯ ಬೈಯಲುಪಾರ ಜನತಾ ಕಾಲೋನಿ ಹತ್ತಿರ ಈ ಅಪಘಾತ ನಡೆದಿದೆ. ಅತಿ ವೇಗ ಅಪಘಾತಕ್ಕೆ ಕಾರಣವಾಗಿದ್ದು, ಗಾಯಗೊಂಡ ಇಬ್ಬರು ಧಾರವಾಡ ಮೂಲದವರಾಗಿದ್ದಾರೆ. ಅಪಘಾತ ನೋಡಿದ ಇರ್ಷಾದ್ ಖಾನ್ ಹಾಗೂ ಆರಿಷ್ ಅವರು ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಿದರು. ಬೈಕ್ ಓಡಿಸುತ್ತಿದ್ದ ವ್ಯಕ್ತಿಯ ಕಾಲಿಗೆ ಭಾರೀ ಪ್ರಮಾಣದ ಪೆಟ್ಟು ಬಿದ್ದಿರುವುದು ಗಮನಕ್ಕೆ ಬಂದಿತು. ಹಿಂಬದಿ ಸವಾರರಿಗೂ ಅಲ್ಲಲ್ಲಿ ಗಾಯವಾಗಿದ್ದು, ಆ ಇಬ್ಬರನ್ನು ಧಾರವಾಡದ ಆಸ್ಪತ್ರೆಗೆ ರವಾನಿಸಲಾಗಿದೆ. ಪೊಲೀಸರು ಸ್ಥಳ ಭೇಟಿ ಮಾಡಿ ಪರಿಶೀಲನೆ ಮಾಡಿದ್ದಾರೆ. - [ಸರ್ಕಾರದ ಸೆಟ್‌ಲೈಟ್ ಫೋನ್: ಶೋಕಿಗೆ ಮಾತ್ರ ಸೀಮಿತ!](https://mobiletime.in/2025/11/government-satellite-phone-limited-to-mourning-only/): ತುರ್ತು ಸನ್ನಿವೇಶಗಳನ್ನು ಸಮರ್ಥವಾಗಿ ಎದುರಿಸುವುದಕ್ಕಾಗಿ ಸರ್ಕಾರ ಉತ್ತರ ಕನ್ನಡ ಜಿಲ್ಲಾಡಳಿತಕ್ಕೆ ಸೆಟ್‌ಲೈಟ್ ಫೋನ್ ಕೊಟ್ಟಿದೆ. ಆದರೆ ಗುಡ್ಡ ಕುಸಿತ, ನೆರೆ ಪ್ರವಾಹದ ಸನ್ನಿವೇಶದಲ್ಲಿ ಸೆಟ್‌ಲೈಟ್ ಫೋನ್ ಪ್ರಯೋಜನಕ್ಕೆ ಬಂದಿಲ್ಲ. ಆ ಫೋನ್ ನಿರ್ವಹಣೆಗೆ ಮೀಸಲಿರುವ ಅನುದಾನವೂ ಸಾಲುತ್ತಿಲ್ಲ! ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರವೂ ನ್ಯಾಶನಲ್ ಡಿಸಾಸ್ಟರ್ ಮ್ಯಾನೆಜಮೆಂಟ್ ಸರ್ವೀಸ್ (ಎನ್‌ಡಿಎಂಎಸ್) ಪೈಲೆಟ್ ಪ್ರೊಜೆಕ್ಟ್ ಯೋಜನೆ ಅಡಿ ಈ ಸಾಧನೆ ನೀಡಿದೆ. ಇಡೀ ರಾಜ್ಯದಲ್ಲಿ ದಕ್ಷಿಣ ಕನ್ನಡ ಹಾಗೂ ಉತ್ತರ ಕನ್ನಡ ಜಿಲ್ಲಾಡಳಿತಕ್ಕೆ ಮಾತ್ರ ಈ ಸೆಟ್‌ಲೈಟ್ ಫೋನ್ ಕೊಡಲಾಗಿದೆ. ಬಿಎಸ್‌ಎನ್‌ಎಲ್ ಸಹಯೋಗದಲ್ಲಿ ಈ ಫೋನ್ ಹಸ್ತಾಂತರಿಸಲಾಗಿದೆ. ನೈಸರ್ಗಿಕ ವಿಕೋಪ ಹಾಗೂ ಇನ್ನಿತರ ಅವಘಡದ ವೇಳೆ ಸೈಟ್‌ಲೈಟ್ ಫೋನ್ ಬಳಕೆ ಮಾಡುವಂತೆ ಸೂಚಿಸಲಾಗಿದ್ದು, ಅದರ ಬಳಕೆ ಮಾತ್ರ ಆ ಪ್ರಮಾಣದಲ್ಲಿ ನಡೆದಿಲ್ಲ. ಪ್ರವಾಹ, ಗುಡ್ಡ ಕುಸಿತ, ನೆರೆ ಪ್ರವಾಹ, ಭೂ ಕಂಪನ ಮೊದಲಾದ ಸನ್ನಿವೇಶದಲ್ಲಿಯೂ ಈ ಸೆಟ್‌ಲೈಟ್ ಫೋನಿನಿಂದ ಯಾವ ಪ್ರಯೋಜನವೂ ಆಗಿಲ್ಲ. ಫೋನಿಗಿಂತಲೂ ಸಂಬಳ ದುಬಾರಿ! 25 ಸಾವಿರ ರೂ ಮೌಲ್ಯದ ಫೋನ್ ಜೊತೆ ಕಂಪ್ಯುಟರ್, ಲಾನ್ ಕೇಬಲ್ ಸೇರಿ 60 ಸಾವಿರ ರೂ ಮೌಲ್ಯದ ಸಾಮಗ್ರಿಗಳು 2017ರಲ್ಲಿ ಜಿಲ್ಲಾಡಳಿತಕ್ಕೆ ಹಸ್ತಾಂತರವಾಗಿದೆ. ಈ ಫೋನ್ ನಿರ್ವಹಣೆಗಾಗಿ ಮೊದಲ ವರ್ಷ ಸರ್ಕಾರ 4 ಲಕ್ಷ ರೂ ಅನುದಾನವನ್ನು ಸಹ ನೀಡಿದೆ. ಅದರೊಂದಿಗೆ ಫೋನ್ ನಿರ್ವಹಣೆಗಾಗಿ ಪಿಲ್ಡ್ ಇಂಜಿನಿಯರ್ ಹುದ್ದೆಗೆ ಕರ್ನಾಟಕ ರಾಜ್ಯ ವಿದ್ಯುನ್ಮಾನ ಅಭಿವೃದ್ಧಿ ನಿಗಮದ ಮೂಲಕ ಎಜನ್ಸಿಯೊಂದನ್ನು ಬಳಸಿಕೊಂಡು ಮೊದಲ ವರ್ಷ ಹೊರಗುತ್ತಿಗೆ ಆಧಾರದಲ್ಲಿ 10 ತಿಂಗಳ ಅವಧಿಗೆ ಸಿಬ್ಬಂದಿಯೊಬ್ಬರನ್ನು ನೇಮಿಸಿಸಲಾಗಿದ್ದು, ಅವರ ಸೇವೆ ಈಗಲೂ ಮುಂದುವರೆದಿದೆ. ಹಳೆ ಆದೇಶದ ಪ್ರಕಾರ ಪಿಲ್ಡ್ ಇಂಜಿನಿಯರ್’ಗೆ ಮಾಸಿಕ 25 ಸಾವಿರ ರೂ ವೇತನ ನಿಗದಿಪಡಿಸಲಾಗಿದೆ. ಜೊತೆಗೆ ಫೋನ್ ರೀಚಾರ್ಜ ಮಾಡಲು ಒಮ್ಮೆ ಖಾಸಗಿ ಕಂಪನಿಯೊ0ದಕ್ಕೆ 12981 ರೂ ಪಾವತಿಸಲಾಗಿದೆ. ಬಿಲ್ ಪಾವತಿಗೂ ದುಡ್ಡಿಲ್ಲ! 2025ರ ಏಪ್ರಿಲ್ ಅವಧಿಯಲ್ಲಿ ಪರಿಶೀಲಿಸಿದಾಗ ಸೆಟ್‌ಲೈಟ್ ಫೋನ್ ನಿರ್ವಹಣೆಗಾಗಿ ಸರ್ಕಾರ ನೀಡಿದ ಎಲ್ಲಾ ಹಣವೂ ಖಾಲಿಯಾಗಿದೆ. ಈ ಎಲ್ಲದರ ನಡುವೆ ಕಳೆದ ಮೂರು ವರ್ಷಗಳಿಂದ ಸೆಟ್‌ಲೈಟ್ ಫೋನಿನ ಬಿಲ್ ಪಾವತಿ ಆಗದಿರುವುದು ಗಮನಕ್ಕೆ ಬಂದಿದೆ. ಬಿಲ್ ಪಾವತಿಸಲೂ ಜಿಲ್ಲಾಧಿಕಾರಿಗಳ ಪಿಡಿ ಖಾತೆಯಲ್ಲಿ ಹಣದ ಕೊರತೆ ಕಾಣುತ್ತಿದ್ದು, ಸೆಟ್‌ಲೈಟ್ ಫೋನ್ ನಿರ್ವಹಣೆಯೂ ದುಬಾರಿಯಾಗಿದೆ. ಕಳೆದ ಮೂರು ವರ್ಷಗಳಿಂದ ಸೆಟ್‌ಲೈಟ್ ಫೋನ್ ಬಿಲ್ ಪಾವತಿ ಆಗದ ಬಗ್ಗೆ ಜಿಲ್ಲಾಧಿಕಾರಿಗಳು ವಿಚಾರಣೆ ನಡೆಸಿದ್ದು, ಈ ಅವಧಿಯಲ್ಲಿ ಬಿಎಸ್‌ಎನ್‌ಎಲ್ ಬಿಲ್ ಸಲ್ಲಿಕೆ ಮಾಡದಿರುವುದು ಗೊತ್ತಾಗಿದೆ. ಹಣ ಖಾಲಿ ಆದ ನಂತರ 3 ವರ್ಷದಿಂದ ಬಿಲ್ ಬಾಕಿಯಿರುವುದು ಬಿಎಸ್‌ಎನ್‌ಎಲ್’ಗೆ ನೆನಪಿಗೆ ಬಂದಿದ್ದು, ಸೆಟ್‌ಲೈಟ್ ಫೋನ್ ಮುಂದಿನ ನಿರ್ವಹಣೆಗೆ ಹಣ ಅಗತ್ಯವಿರುವ ಬಗ್ಗೆ ಜಿಲ್ಲಾಧಿಕಾರಿ ಕೆ ಲಕ್ಷ್ಮೀಪ್ರಿಯಾ ಅವರು 2025ರ ಏಪ್ರಿಲ್ 16ರಂದು ವಿಪತ್ತು ನಿರ್ವಹಣೆ ವಿಭಾಗದ ಪ್ರಧಾನ ಕಾರ್ಯದರ್ಶಿಗಳಿಗೆ ಪತ್ರ ಬರೆದಿದ್ದಾರೆ. ಹಣ ಕೊರತೆ ಇದೇ ಮೊದಲಲ್ಲ! 2020ರಲ್ಲಿಯೂ ಒಮ್ಮೆ ಸೆಟ್‌ಲೈಟ್ ಫೋನ್ ಬಿಲ್ ಬಾಕಿಗೆ ಹಣವಿರಲಿಲ್ಲ. ಆಗ, 148937ರೂ ಬಿಲ್ ಬಾಕಿ ಪಾವತಿಸುವಂತೆ ಬಿಎಸ್‌ಎನ್‌ಎಲ್ ಪತ್ರ ಬರೆದಿದ್ದು, ಈ ಹಣ ಪಾವತಿಗೆ ಹಣವಿಲ್ಲದ ಕಾರಣ ಸಿಬ್ಬಂದಿ ವೇತನ ಬಳಕೆ ಮಾಡಲಾಗಿತ್ತು. ಜಿಲ್ಲಾಧಿಕಾರಿಗಳ ಪಿಡಿ ಖಾತೆಯಲ್ಲಿರುವ ಎಲ್ಲಾ ಹಣ ಬಳಸಿದ ನಂತರವೂ 4055ರೂ ಹಣ ಕಡಿಮೆ ಬಿದ್ದಿದ್ದರಿಂದ ಸೆಟ್‌ಲೈಟ್ ಫೋನ್ ನಿರ್ವಹಣೆಯ ಪಿಲ್ಡ್ ಇಂಜಿನಿಯರ್ ವೇತನಕ್ಕೆ ಬಿಡುಗಡೆಯಾದ ಹಣದಿಂದ ಈ ಬಿಲ್ ಪಾವತಿಸಲು ಸರ್ಕಾರ ಸೂಚಿಸಿತ್ತು. 2020ರಲ್ಲಿ ಸಿಬ್ಬಂದಿ ವೇತನದ ಹಣದಿಂದ ಸೆಟ್‌ಲೈಟ್ ಫೋನ್ ಬಿಲ್ ಪಾವತಿಸಲು ಆದೇಶವಾಗಿತ್ತು. ಈ ಎಲ್ಲದರ ನಡುವೆ ಇದೀಗ ಮತ್ತೆ ಸೆಟ್‌ಲೈಟ್ ಫೋನ್ ನಿರ್ವಹಣೆಗೆ ಹಣವಿಲ್ಲದ ಹಾಗಾಗಿದ್ದು, ಮುಂದಿನ ನಿರ್ವಹಣೆಗಾಗಿ ಅನುದಾನ ಕೋರಿ ಸರ್ಕಾರಕ್ಕೆ ಪತ್ರ ರವಾನೆಯಾಗಿದೆ. ಆ ಪತ್ರದ ಅನ್ವಯ ಸರ್ಕಾರ ಅನುದಾನ ನೀಡಿದ್ದು, ಬಿಲ್ ಪಾವತಿ ನಡೆದಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಮಾಹಿತಿ ಹಕ್ಕು ಕಾಯ್ದೆ ಅಡಿಪಡೆದ ದಾಖಲೆಗಳಿಂದ ಈ ಎಲ್ಲಾ ಅಂಶಗಳು ಗೊತ್ತಾಗಿದೆ. - [2025ರ ನವೆಂಬರ್ 20ರ ದಿನ ಭವಿಷ್ಯ](https://mobiletime.in/2025/11/prediction-for-november-20-2025/): ಮೇಷ ರಾಶಿ: ಮುಖ್ಯ ಅವಕಾಶಗಳು ಸಿಗಲಿದ್ದು, ನಿರ್ಧಾರಗಳಲ್ಲಿ ಎಚ್ಚರಿಕೆ ಅಗತ್ಯ. ಕುಟುಂಬದ ಹೊಂದಾಣಿಕೆ ಉತ್ತಮವಾಗಿರಲಿದೆ. ಹಣಕಾಸಿನಲ್ಲಿ ಸುಧಾರಣೆ ಸಾಧ್ಯವಿದೆ. ಆರೋಗ್ಯ ಜಾಗರೂಕತೆ ಮುಖ್ಯ. ಸ್ನೇಹಿತರಿಂದ ಸಹಾಯ ಸ್ಮರಿಸಿ. ವೃಷಭ ರಾಶಿ: ಹಳೆಯ ಸಾಲ ತೀರಿಸುವ ಸಾಧ್ಯತೆಗಳಿವೆ. ಉತ್ತಮ ಸಂಭಾವನೆ ಬರುತ್ತದೆ. ಆರ್ಥಿಕ ಸ್ಥಿತಿ ಸುಧಾರಿಸುತ್ತದೆ. ಕೆಲಸಗಳಲ್ಲಿ ಸಂಪೂರ್ಣತೆ ಸಿಗಲಿದೆ. ಕುಟುಂಬ ಜೊತೆ ಸಂತೋಷ ಸಮಯ ಕಳೆಯುವಿರಿ. ಮಿಥುನ ರಾಶಿ: ಉದ್ಯೋಗದಲ್ಲಿನ ಸ್ಥಿತಿಗತಿಗಳ ಬದಲಾವಣೆ ಆಗಲಿದೆ. ಪ್ರಯಾಣದಲ್ಲಿ ಜಾಗ್ರತೆ ಅಗತ್ಯವಿದೆ. ಹಣ ನಿರ್ವಹಣೆಯ ಒತ್ತಡ ಸಹಿಸಿಕೊಳ್ಳಬೇಕು. ಹೊಸ ವಿಷಯ ಕಲಿಕೆಗೆ ಆಸಕ್ತಿ ಬೇಕು. ಕರ್ಕ ರಾಶಿ: ಕೆಲಸಗಳಲ್ಲಿ ಏರುಪೇರು ಸಾಮಾನ್ಯ. ಕುಟುಂಬದೊAದಿಗೆ ಸಮಯ ಕಳೆಯಿರಿ. ಆರ್ಥಿಕ ಅಭಿವೃದ್ದಿಗೆ ಅವಕಾಶವಿದೆ. ಆರೋಗ್ಯದ ಮೇಲೆ ಗಮನ ಕೊಡಿ. ಸಿಂಹ ರಾಶಿ: ಸಂಬoಧಗಳ ಸುಧಾರಣೆ ಆಗಲಿದೆ. ಉದ್ಯೋಗದಲ್ಲಿ ಪ್ರಗತಿ ಸಾಧ್ಯ. ದುಡಿತದ ಫಲ ಪಡೆಯುತ್ತೀರಿ. ಪ್ರಯಾಣ ಪ್ರಯೋಜನಕಾರಿ ಆಗಲಿದೆ. ಕನ್ಯಾ ರಾಶಿ: ಉದ್ಯೋಗ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ. ಹಣಕಾಸು ವಿಷಯ ಸುಧಾರಣೆ ಆಗಲಿದೆ. ಕುಟುಂಬದಲ್ಲಿ ಶುಭ ಸಂಕೇತಗಳಿವೆ. ಆರೋಗ್ಯದ ಬಗ್ಗೆ ಜಾಗೃತಿ ಅಗತ್ಯ. ತುಲಾ ರಾಶಿ: ಕೆಲಸದ ವಿಷಯದಲ್ಲಿ ಪ್ರಗತಿ ಆಗಲಿದೆ. ನಿರುದ್ಯೋಗಿಗಳಿಗೆ ನಿರಂತರ ಪ್ರಯತ್ನ ಅಗತ್ಯ. ಹೊಸ ಸಂಪರ್ಕಗಳು ಸಿಗಲಿದೆ. ನಿಮ್ಮ ವ್ಯಕ್ತಿತ್ವ ಬೆಳವಣಿಗೆ ಆಗಲಿದೆ. ವೃಶ್ಚಿಕ ರಾಶಿ: ನಿಮ್ಮ ಅದೃಷ್ಠ ಬದಲಾಗಲಿದೆ. ಬಯಸಿದ ಕಾರ್ಯಗಳಲ್ಲಿ ಯಶಸ್ಸು ಸಿಗಲಿದೆ. ಹಣಕಾಸು ಸುಧಾರಣೆ ಸಾಧ್ಯ ಆಗಲಿದೆ. ಕುಟುಂಬದಲ್ಲಿ ನೆಮ್ಮದಿ ಸಿಗಲಿದೆ. ಧನು ರಾಶಿ: ದುಪ್ಪಟ್ಟು ಹಣ ಲಾಭ ಆಗಲಿದೆ. ಉದ್ಯೋಗದಲ್ಲಿ ಶುಭ ಫಲ ಸಿಗಲಿದೆ. ಬಂಧುಗಳು ಸಹಾಯ ಮಾಡಲಿದ್ದಾರೆ. ಹೋಟೆಲ್, ರೆಸ್ಟೋರೆಂಟ್ ವ್ಯಾಪಾರಕ್ಕೆ ಶುಭ ಆಗಲಿದೆ. ಮಕರ ರಾಶಿ: ಹೊಸ ಯೋಜನೆಗಳಿಗೆ ಅನುಮೋದನೆ ಸಿಗಲಿದೆ. ಆರ್ಥಿಕ ಅಭಿವೃದ್ಧಿ ಆಗಲಿದೆ. ಕುಟುಂಬದಲ್ಲಿ ಒಳ್ಳೆಯ ಕಾರ್ಯಕ್ರಮ. ಕುಂಭ ರಾಶಿ: ಉದ್ಯೋಗ ಸ್ಥಳದಲ್ಲಿ ಸಹಕಾರ ಸಾಧ್ಯತೆಯಿದೆ. ನಿಮ್ಮ ಯೋಜನೆಗಳ ಬಗ್ಗೆ ಮೆಚ್ಚುಗೆ ಸಿಗಲಿದೆ. ಹಣಕಾಸು ಸಮಸ್ಯೆ ಎದುರಿಸಿ ಮುನ್ನಡೆ ಸಾಧಿಸುವಿರಿ. ಅನಗತ್ಯ ಸಮಸ್ಯೆಗಳು ಎದುರಾದರೂ ಅದರಿಂದ ದೂರವಿರಿ. ಮೀನ ರಾಶಿ: ಈ ದಿನ ಮಿಶ್ರ ಫಲಿತಾಂಶಗಳ ದಿನವಾಗಿದ್ದು, ಆರ್ಥಿಕ ಜಾಗ್ರತೆ ಅಗತ್ಯ. ಪ್ರೀತಿ ಸಂಬoಧ ಉತ್ತಮವಾಗಿರಲಿದೆ. ಮನಸ್ಸಿನ ನೆಮ್ಮದಿ ಕಾಪಾಡಿಕೊಳ್ಳುವುದು ಮುಖ್ಯ. - [ಸಾಲ ತೀರಿಸದವನ ಮಗಳ ಜೊತೆ ಸರಸ: ಕಾಮುಕನಿಗಾಗಿ ಶೋಧ!](https://mobiletime.in/2025/11/sarasa-with-the-daughter-of-a-man-who-has-not-paid-off-his-debt-search-for-a-lover/): ಸ್ನೇಹಿತರೊಬ್ಬರಿಗೆ ಸಾಲ ಕೊಟ್ಟಿದ್ದ ಶಿರಸಿಯ ಮತೀನ್ ಅಬ್ದುಲ್ ಗಫಾರ್ ಅವರು ಸಾಲ ಮರಳಿಸದ ಕಾರಣ ಸ್ನೇಹಿತನ ಮಗಳನ್ನು ದೈಹಿಕವಾಗಿ ಬಳಸಿಕೊಂಡಿದ್ದಾರೆ. 10 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿದ ಕಾರಣ ಮತೀನ್ ಅಬ್ದುಲ್ ಗಫಾರ ವಿರುದ್ಧ ಶಿರಸಿ ಗ್ರಾಮೀಣ ಪೊಲೀಸ್ ಠಾಣೆ ಅಧಿಕಾರಿಗಳು ಕಾನೂನು ಕ್ರಮ ಜರುಗಿಸಿದ್ದಾರೆ. ಶಿರಸಿಯ ಮತೀನ್ ಅಬ್ದುಲ್ ಗಫಾರ ಎಂಬಾತರು ವ್ಯಕ್ತಿಯೊಬ್ಬರಿಗೆ ಸಾಲ ಕೊಟ್ಟಿದ್ದರು. ಸಾಲಪಡೆದ ವ್ಯಕ್ತಿ ಅದನ್ನು ಸಕಾಲದಲ್ಲಿ ತೀರಿಸಿರಲಿಲ್ಲ. ಸಾಲ ಹಿಂಪಡೆಯುವ ನೆಪದಲ್ಲಿ ಆ ವ್ಯಕ್ತಿಯ ಮನೆಗೆ ಭೇಟಿ ನೀಡುತ್ತಿದ್ದ ಮತೀನ್ ಅಬ್ದುಲ್ ಗಫಾರ ಅಲ್ಲಿದ್ದ 10 ವರ್ಷದ ಬಾಲಕಿಯನ್ನು ಪುಸಲಾಯಿಸುವ ಪ್ರಯತ್ನ ಮಾಡಿದ್ದರು. ಮಂಗಳವಾರ ಸಂಜೆಯೂ ಸಾಲ ಹಿಂಪಡೆಯಲು ಆ ವ್ಯಕ್ತಿ ಮನೆಗೆ ಹೋಗಿದ್ದ ಮತೀನ್ ಅಬ್ದುಲ್ ಗಫಾರ ಅಲ್ಲಿ ಬಾಲಕಿ ಬಿಟ್ಟು ಬೇರೆ ಯಾರೂ ಇಲ್ಲದಿರುವುದನ್ನು ಗಮನಿಸಿದರು. ಆ ಬಾಲಕಿಯನ್ನು ತನ್ನ ವಶಕ್ಕೆಪಡೆದ ಮತೀನ್ ಅಬ್ದುಲ್ ಗಫಾರ ಹೀನಾಯ ಕೃತ್ಯವೆಸಗಿದರು. ಅದಾದ ನಂತರ ಕುಟುಂಬದವರು ಮನೆಗೆ ಮರಳಿದ್ದು, ಬಾಲಕಿ ನಡೆದ ವಿಷಯ ವಿವರಿಸಿದರು. ಬಾಲಕಿ ಮೇಲೆ ನಡೆದ ದೌರ್ಜನ್ಯದ ಬಗ್ಗೆ ಅವರ ತಾಯಿ ಪೊಲೀಸ್ ದೂರು ನೀಡಿದರು. ಮತೀನ್ ಅಬ್ದುಲ್ ಗಫಾರ ತಲೆಮರೆಸಿಕೊಂಡಿದ್ದು, ಪೊಲೀಸರು ಅತ್ಯಾಚಾರಿ ಮತೀನ್ ಅಬ್ದುಲ್ ಗಫಾರ ಅವರ ಹುಡುಕಾಟ ನಡೆಸಿದ್ದಾರೆ. - [ಸ್ಕೂಟಿ ಕದಿಯಲು ಬಂದವರು ಓಡಿ ಹೋದರು!](https://mobiletime.in/2025/11/those-who-came-to-steal-the-scooter-ran-away/): ಕಾರವಾರ ಬಸ್ ನಿಲ್ದಾಣದ ಬಳಿ ನಿಂತಿದ್ದ ಸ್ಕೂಟಿ ಕದಿಯಲು ಬಂದಿದ್ದ ಕಳ್ಳರು ಸ್ಕೂಟಿ ಮಾಲಕನನ್ನು ನೋಡಿ ಓಡಿದ್ದಾರೆ. ಸ್ಕೂಟಿ ಮಾಲಕ ಅವರನ್ನು ಹಿಡಿಯುವ ಪ್ರಯತ್ನ ಮಾಡಿದರೂ ಸಾಧ್ಯವಾಗಿಲ್ಲ. ಕಾರವಾರದ ಕೋಣೆವಾಡ ಕೋಡಿಬೀರ ದೇವಸ್ಥಾನ ಬಳಿಯ ಸಂತೋಷ ಉಳ್ವೇಕರ್ ಅವರು ನವೆಂಬರ್ 17ರಂದು ತಮ್ಮ ಹೊಂಡಾ ಆಕ್ಟಿವಾ ಸ್ಕೂಟರ್ ನಿಲ್ಲಿಸಿದ್ದರು. ಆ ಸ್ಕೂಟಿಯ ಹ್ಯಾಂಡ್ ಲಾಕ್’ನ್ನು ಮಾಡಿದ್ದರು. ಆ ದಿನ ಸಂಜೆ ಅಪರಿಚಿತರಿಬ್ಬರು ಅವರ ಸ್ಕೂಟಿ ಹಿಡಿದು ಅಲ್ಲಾಡಿಸುತ್ತಿದ್ದರು. ಹ್ಯಾಂಡ್ ಲಾಕ್ ಮುರಿದು ಸ್ಕೂಟಿ ಕದ್ದೊಯ್ಯುವ ಪ್ರಯತ್ನ ಮಾಡಿದ್ದರು. ಅದೇ ಸಮಯಕ್ಕೆ ಸಂತೋಷ ಉಳ್ವೇಕರ್ ಅವರು ಅಲ್ಲಿಗೆ ಬಂದರು. `ಯಾರು ನೀವು? ಏನು ಮಾಡುತ್ತಿದ್ದೀರಿ?’ ಎಂದು ಪ್ರಶ್ನಿಸಿದರು. ಸಂತೋಷ ಉಳ್ವೇಕರ್ ಅವರನ್ನು ನೋಡಿದ ಅವರಿಬ್ಬರು ಅಲ್ಲಿಂದ ಓಡಿ ಪರಾರಿಯಾದರು. ಅವರಿಬ್ಬರ ಬಗ್ಗೆ ಅಕ್ಕಪಕ್ಕದ ಅಂಗಡಿಗಳಲ್ಲಿ ಸಂತೋಷ ಉಳ್ವೇಕರ್ ಅವರು ವಿಚಾರಿಸಿದರು. ಆದರೆ, ಯಾರಿಗೂ ಅವರ ಪರಿಚಯವಿರಲಿಲ್ಲ. ಹೀಗಾಗಿ ಅವರಿವರಲ್ಲಿ ಚರ್ಚಿಸಿ ಸ್ಕೂಟಿ ಕದಿಯಲು ಬಂದವರ ಬಗ್ಗೆ ಪೊಲೀಸರಿಗೆ ತಿಳಿಸಿದರು. ಕಾರವಾರ ಶಹರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿದ್ದು, ಅಪರಿಚಿತರಿಬ್ಬರ ಶೋಧ ಶುರು ಮಾಡಿದ್ದಾರೆ. - [ಆಧಾರ್ ಅಪ್ಡೇಟ್ ಇದೀಗ ಉಚಿತ!](https://mobiletime.in/2025/11/aadhaar-update-is-now-free/): ಆಧಾರ್ ಕಾರ್ಡಿನಲ್ಲಿರುವ ವಿಳಾಸ ಬದಲಾವಣೆ ಮಾಡಲು ಬಯಸುವವರಿಗೆ ಸರ್ಕಾರ ಉಚಿತವಾಗಿ ತಿದ್ದುಪಡಿಗೆ ಅವಕಾಶ ಕಲ್ಪಿಸಿದೆ. 2026ರ ಜೂನ್ 14ರವರೆಗೆ ಉಚಿತ ಆಧಾರ್ ಅಪ್ಡೇಟ್ ಸೇವೆ ಚಾಲ್ತಿಯಲ್ಲಿರಲಿದೆ. `10 ವರ್ಷಗಳ ಹಿಂದೆ ಆಧಾರ್ ಕಾರ್ಡ ಮಾಡಿಸಿ, ಸದ್ಯ ವಾಸಸ್ಥಳ ಬದಲಾವಣೆ ಆದವರು ಉಚಿತವಾಗಿ ಸಿಗುವ ಈ ಅವಕಾಶ ಬಳಸಿಕೊಳ್ಳಬೇಕು’ ಎಂದು ಜಿಲ್ಲಾಧಿಕಾರಿ ಕೆ ಲಕ್ಷ್ಮೀಪ್ರಿಯಾ ಅವರು ಕರೆ ನೀಡಿದ್ದಾರೆ. ಬುಧವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಆಧಾರ ಪ್ರಗತಿ ಪರಿಶೀಲನೆ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು `ಈಗಾಗಲೇ ಆಧಾರ್ ಕಾರ್ಡ್ ಪಡೆದಿರುವ 5 ವರ್ಷ ಮತ್ತು 15 ವರ್ಷ ಪೂರ್ಣಗೊಂಡಿರುವ ಮಕ್ಕಳ ಆಧಾರ್ ಅಪ್ಡೇಟ್‌ನ್ನು ಎಲ್ಲಾ ಆಧಾರ್ ಕೇಂದ್ರಗಳಲ್ಲಿ ಉಚಿತವಾಗಿ ಮಾಡಲಾಗುತ್ತದೆ’ ಎಂದು ತಿಳಿಸಿದರು. `ಎಲ್ಲಾ ಅಂಚೆ ಕಚೇರಿಗಳಲ್ಲಿ ಮತ್ತು ಬ್ಯಾಂಕುಗಳಲ್ಲಿರುವ ಆಧಾರ್ ಸೇವಾ ಕೇಂದ್ರಗಳು ಸಮರ್ಪಕವಾಗಿ ಕಾರ್ಯನಿರ್ವಹಿಸಬೇಕು’ ಎಂದು ಸೂಚಿಸಿದರು. `ಯಾವುದೇ ರೀತಿಯ ತಾಂತ್ರಿಕ ತೊಂದರೆಗಳಿದ್ದಲ್ಲಿ ಜಿಲ್ಲಾ ಆಧಾರ್ ಸಮಾಲೋಚಕರನ್ನು ಸಂಪರ್ಕಿಸಬೇಕು. ಅವರ ನೆರವು ಪಡೆಯುವುದರ ಮೂಲಕ ಜಿಲ್ಲೆ ಸಾರ್ವಜನಿಕರಿಗೆ ಆಧಾರ್ ನೋಂದಣಿ, ತಿದ್ದುಪಡಿ ಸಂಬoಧಿತ ಯಾವುದೇ ಸಮಸ್ಯೆಗಳಾಗದಂತೆ ಅಧಿಕಾರಿಗಳು ನೋಡಿಕೊಳ್ಳಬೇಕು’ ಎಂದು ಸೂಚಿಸಿದರು. ಎಲ್ಲಾ ಶಾಲಾ ಮಕ್ಕಳ ಆಧಾರ್ ಅಪ್ ಡೇಟ್ ಮಾಡುವ ಕುರಿತು ಕ್ಲಸ್ಟರ್ ಮಟ್ಟದಲ್ಲಿ ಶಿಬಿರ ಆಯೋಜಿಸುವಂತೆ ಶಿಕ್ಷಣಾಧಿಕಾರಿಗಳಿಗೆ ಸೂಚಿಸಿದರು. `ಎಂಡೋ ಸಲ್ಫಾನ್ ಪೀಡಿತರಿಗೆ ಮತ್ತು ಹಾಸಿಗೆ ಪೀಡಿತರಿಗೆ ಮನೆಗಳಿಗೆ ತೆರಳಿ ಆಧಾರ್ ಸೌಲಭ್ಯ ಒದಗಿಸಬೇಕು. ಜಿಲ್ಲೆಯಲ್ಲಿ 16,65,285 ಆಧಾರ್ ಕಾರ್ಡ್ಗಳಿದ್ದು, ಇವುಗಳಲ್ಲಿ 15,68,157 ಕಾರ್ಡ್ಗಳು ಮೊಬೈಲ್ ಸೀಡ್ ಆಗಿದ್ದು ಬಾಕಿ ಇರುವ 97,128 ಆಧಾರ್ ಕಾರ್ಡ್ ಗಳ ಸೀಡಿಂಗ್ ಮಾಡುವ ಕುರಿತಂತೆ ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು’ ಎಂದು ಸೂಚಿಸಿದರು. ಯಾವುದೇ ಅನಧಿಕೃತ ಆಧಾರ್ ಕೇಂದ್ರಗಳು ಮತ್ತು ಆಧಾರ್ ತಿದ್ದುಪಡಿ ಮಾಡುವ ಕೇಂದ್ರಗಳು ಕಾರ್ಯನಿರ್ವಹಿಸದಂತೆ ಪೊಲೀಸ್ ಇಲಾಖೆ ವತಿಯಿಂದ ಹೆಚ್ಚಿನ ನಿಗಾ ವಹಿಸುವಂತೆ ತಿಳಿಸಿದರು. ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಸಾಜೀದ್ ಮುಲ್ಲಾ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕೃಷ್ಣಮೂರ್ತಿ, ಜಿ ಪಂ ಉಪಕಾರ್ಯದರ್ಶಿ ಪ್ರಕಾಶ್ ಹಾಲಮ್ಮನವರ್, ಬೆಂಗಳೂರಿನ ಆಧಾರ್ ಪ್ರಾದೇಶಿಕ ಕೇಂದ್ರದ ಮೆನೇಜರ್ ಮೊಹಮದ್ ಮುಸಾಬ್, ಜಿಲ್ಲಾ ಆಧಾರ್ ಸಮಾಲೋಚಕ ಮಹಾಬಲೇಶ್ವರ ದೇಸಾಯಿ ಹಾಗೂ ಲೀಡ್ ಬ್ಯಾಂಕ್ ಮತ್ತು ಅಂಚೆ ಕಚೇರಿಯ ಅಧಿಕಾರಿಗಳು ಹಾಜರಿದ್ದರು. ಆಧಾರ್ ತಿದ್ದುಪಡಿಗಾಗಿ ಇಲ್ಲಿ ಕ್ಲಿಕ್ಕಿಸಿ: myAadhaar.uidai.gov.in - [ಮೊಬೈಲ್ ವ್ಯಾಮೋಹಕ್ಕೆ ಸಿಲುಕಿದ ಹೈಸ್ಕೂಲ್ ವಿದ್ಯಾರ್ಥಿ: ಸಾವು!](https://mobiletime.in/2025/11/high-school-student-dies-after-falling-into-mobile-phone-addiction/): ವಿಪರೀತ ಮೊಬೈಲ್ ವ್ಯಾಮೋಹಕ್ಕೆ ಒಳಗಾಗಿದ್ದ ಹಳಿಯಾಳದ ವಿದ್ಯಾರ್ಥಿಯೊಬ್ಬರು ಮೊಬೈಲ್ ಸಿಗದ ಕಾರಣ ಆತ್ಮಹತ್ಯೆಗೆ ಶರಣಾಗಿದ್ದಾರೆ. ಎಷ್ಟೇ ಕೇಳಿದರೂ ಪಾಲಕರು ಮೊಬೈಲ್ ಕೊಡಿಸಲಿಲ್ಲ ಎಂಬ ಸಿಟ್ಟಿನಲ್ಲಿ ಪ್ರೀತಂ ಮಾಳ್ವಿ ನೇಣು ಹಾಕಿಕೊಂಡಿದ್ದಾರೆ. ಹಳಿಯಾಳದ ಕೆಕೆ ಹಳ್ಳಿಯಲ್ಲಿ ಪ್ರೀತಂ ನಾಗರಾಜ ಮಾಳ್ವಿ (15) ವಾಸವಾಗಿದ್ದರು. ವಿಪರೀತ ಮೊಬೈಲ್ ನೋಡುತ್ತಿದ್ದ ಕಾರಣ ಪಾಲಕರು ಅವರಿಗೆ ಬೈದಿದ್ದರು. `ತನಗೂ ಹೊಸ ಮೊಬೈಲ್ ಬೇಕು’ ಎಂದು ಪ್ರೀತಂ ಪಟ್ಟು ಹಿಡಿದಿದ್ದರು. ಆದರೆ, ಪಾಲಕರು ಮೊಬೈಲ್ ಕೊಡಿಸಿರಲಿಲ್ಲ. ಮೊಬೈಲಿನಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ಪ್ರೀತಂ ಅವರಿಗೆ ಮನವರಿಕೆ ಮಾಡುವ ಪ್ರಯತ್ನ ನಡೆದಿತ್ತು. ಆದರೆ, ಹಠ ಸ್ವಭಾವದ ಪ್ರೀತಂ ಅದನ್ನು ತಲೆಗೆ ಹಾಕಿಕೊಂಡಿರಲಿಲ್ಲ. ಮೊಬೈಲ್ ಬೇಕು ಎಂದು ಹಿಡಿದ ಪಟ್ಟನ್ನು ಸಡಿಲ ಮಾಡಿರಲಿಲ್ಲ. ಪಾಲಕರು ಸಹ ಮೊಬೈಲ್ ಮೋಹದಿಂದ ಹೊರಬರುವಂತೆ ಮಾಡಲು ಕಟ್ಟುನಿಟ್ಟಿನ ಕ್ರಮ ಜರುಗಿಸಿದ್ದರು. ಮೊಬೈಲ್ ಸಿಗದ ಬೇಸರದಲ್ಲಿದ್ದ ಪ್ರೀತಂ ಮಾಳ್ವಿ ಅವರು ನವೆಂಬರ್ 18ರ ಸಂಜೆ ಅಡುಗೆ ಮನೆ ಪ್ರವೇಶಿಸಿದರು. ಅಲ್ಲಿ ಎಲ್ಲಾ ಕಡೆ ಮೊಬೈಲಿಗಾಗಿ ಹುಡುಕಾಟ ಮಾಡಿದರು. ಮೊಬೈಲ್ ಸಿಗದ ಬೇಸರಕ್ಕೆ ಒಳಗಾಗಿ ಅಲ್ಲಿಯೇ ನೇಣು ಹಾಕಿಕೊಂಡರು. ಸಾವನಪ್ಪಿದ ಪ್ರೀತಂ ಮಾಳ್ವಿ ಅವರನ್ನು ನೋಡಿ ಕುಟುಂಬದವರು ಆಘಾತಕ್ಕೆ ಒಳಗಾದರು. `ಆತ್ಮಹತ್ಯೆ ಅಪರಾಧ’ - [ಶಿಕ್ಷಕನ ವಿರುದ್ಧ ಅಡಿಕೆ ಕದ್ದ ಆರೋಪ!](https://mobiletime.in/2025/11/accused-of-stealing-nuts-against-the-teacher/): ಯಲ್ಲಾಪುರದ ಉಮ್ಮಚ್ಗಿಯಲ್ಲಿ ವಾಸವಾಗಿರುವ ಶಿಕ್ಷಕ ನಾಗಭೂಷಣ ಹೆಗಡೆ ಅವರು ಅಡಿಕೆ ಕದ್ದ ಆರೋಪ ಎದುರಿಸುತ್ತಿದ್ದಾರೆ. ನಾಗಭೂಷಣ ಹೆಗಡೆ ಅವರಿಂದ ಜೀವ ಬೆದರಿಕೆಯಿರುವ ಬಗ್ಗೆ ಅವರ ಸಹೋದರರೇ ದೂರಿದ್ದಾರೆ! ಯಲ್ಲಾಪುರದ ಕಾನಗೋಡಿನ ಬಾಳೆಹದ್ದದಲ್ಲಿ ವಾಸವಾಗಿರುವ ನಾರಾಯಣ ಗಣಪತಿ ಹೆಗಡೆ ಅವರು ಈ ಆರೋಪ ಮಾಡಿದ್ದಾರೆ. ಉಮ್ಮಚ್ಗಿಯಲ್ಲಿರುವ ನಾಗಭೂಷಣ ಗಣಪತಿ ಹೆಗಡೆ ಹಾಗೂ ಮಂಜುನಾಥ ಗಣಪತಿ ಹೆಗಡೆ ಸೇರಿ ತಮ್ಮ ತೋಟದಲ್ಲಿರುವ ಅಡಿಕೆ ಅಪಹರಿಸಿರುವ ಬಗ್ಗೆ ಅವರು ದೂರಿದ್ದಾರೆ. ಇದನ್ನು ಪ್ರಶ್ನಿಸಿದ ಕಾರಣ `ತಮ್ಮ ಪ್ರಕಾಶ ಹಾಗೂ ತಮ್ಮ ಮೇಲೆ ದಾಳಿ ನಡೆಸಿದ್ದು, ಜೀವ ತೆಗೆಯುವುದಾಗಿ ಹೆದರಿಸಿದ್ದಾರೆ’ ಎಂದವರು ಹೇಳಿದ್ದಾರೆ. ನವೆಂಬರ್ 16ರಂದು ನಾಗಭೂಷಣ ಗಣಪತಿ ಹೆಗಡೆ ಹಾಗೂ ಮಂಜುನಾಥ ಗಣಪತಿ ಹೆಗಡೆ ಸೇರಿ ಬಾಳೆಹದ್ದ ಕಾನಗೋಡು ಗ್ರಾಮದ ಸರ್ವೇ ನಂ 56/1ಕ್ಕೆ ಪ್ರವೇಶಿಸಿದ್ದರು. ಆ ಭೂಮಿ ನಾರಾಯಣ ಗಣಪತಿ ಹೆಗಡೆ ಅವರ ಹೆಸರಿನಲ್ಲಿದ್ದರೂ ನಾಗಭೂಷಣ ಹೆಗಡೆ ಹಾಗೂ ಮಂಜುನಾಥ ಹೆಗಡೆ ಸೇರಿ ಅಲ್ಲಿದ್ದ ಅಡಿಕೆ ಫಸಲು ಕೊಯ್ದಿದ್ದರು. ಕೊನೆ ಕೊಯ್ಲಿನವರೆಗೂ ಸುಮ್ಮನಿದ್ದ ನಾರಾಯಣ ಹೆಗಡೆ ಅವರು ಅದನ್ನು ಸಾಗಿಸುವಾಗ ಅಡ್ಡಗಟ್ಟಿದರು. ಟಾಟಾ ಎಸ್ ವಾಹನಕ್ಕೆ ಅಡ್ಡನಿಂತ ನಾರಾಯಣ ಹೆಗಡೆ ಹಾಗೂ ಅವರ ತಮ್ಮ ಪ್ರಕಾಶ ಅವರು `ನಮ್ಮ ತೋಟದ ಫಸಲು ಕೊಯ್ದಿದ್ದು ಏಕೆ?’ ಎಂದು ಪ್ರಶ್ನಿಸಿದರು. ಈ ವೇಳೆ ಅವರ ನಡುವೆ ಜಗಳ ಶುರುವಾಗಿದ್ದು, ನಾಗಭೂಷಣ ಹೆಗಡೆ ಹಾಗೂ ಮಂಜುನಾಥ ಹೆಗಡೆ ಸೇರಿ ನಾರಾಯಣ ಹೆಗಡೆ ಹಾಗೂ ಪ್ರಕಾಶ ಅವರ ಮೇಲೆ ಕೈ ಮಾಡಿದರು. ಈ ಬಗ್ಗೆ ನಾಗಭೂಷಣ ಹೆಗಡೆ ಅವರು ಊರಿನ ಹಿರಿಯರಿಗೆ ಹೇಳಿದ್ದು, ಅವರ ಸಲಹೆ ಮೇರೆಗೆ ಪೊಲೀಸ್ ದೂರು ನೀಡಿದರು. ನಾಗಭೂಷಣ ಹೆಗಡೆ ಹಾಗೂ ಮಂಜುನಾಥ ಹೆಗಡೆ ಅವರಿಂದ ಜೀವ ಬೆದರಿಕೆಯಿರುವ ಬಗ್ಗೆಯೂ ಅವರು ಪ್ರಕರಣ ದಾಖಲಿಸಿದರು. - [ಕಾಲೇಜು ಮಕ್ಕಳ ಬಳಿ ಗಾಂಜಾ ಘಾಟು!](https://mobiletime.in/2025/11/college-kids-caught-with-marijuana/): ಶಿರಸಿಯಲ್ಲಿ ಮಾದಕ ವ್ಯಸನ ಸೇವಿಸುವವರ ಸಂಖ್ಯೆ ಹೆಚ್ಚಾಗಿದ್ದು, ನಶೆಯ ಗುಂಗಿನಲ್ಲಿದ್ದ ಮೂವರು ಕಾಲೇಜು ವಿದ್ಯಾರ್ಥಿಗಳು ಸಿಕ್ಕಿಬಿದ್ದಿದ್ದಾರೆ. ಜೊತೆಗೆ ಗಾಂಜಾ ಗುಂಗಿನಲ್ಲಿದ್ದ ಆಟೋ ಚಾಲಕ-ಕೂಲಿ ಕಾರ್ಮಿಕನ ವಿರುದ್ಧವೂ ಪೊಲೀಸರು ಕಾನೂನು ಕ್ರಮ ಜರುಗಿಸಿದ್ದಾರೆ. ನವೆಂಬರ್ 18ರಂದು ಕಸ್ತೂರಿಬಾ ನಗರದ ಲಿಡಕರ್ ಕಾಂಪ್ಲೆಕ್ಸ ಬಳಿಯ ಪ್ರಜ್ವಲ್ ಗಣಪತಿ ಅಂಬೇಕರ್ (20) ಅವರು ಕುಳವೆ ಕ್ರಾಸಿನ ಬಳಿ ಅಮಲಿನಲ್ಲಿದ್ದರು. ನಶೆಯ ಗುಂಗಿನಲ್ಲಿ ಅಲೆದಾಡುತ್ತಿದ್ದ ಅವರನ್ನು ಪೊಲೀಸರು ಪ್ರಶ್ನಿಸಿದರು. ಪ್ರಜ್ವಲ್ ಅಂಬೇಕರ್ ಅವರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದಾಗ ಅವರು ಗಾಂಜಾ ಸೇವಿಸಿದ್ದು ಗೊತ್ತಾಯಿತು. ನೆಹರೂನಗರದ ರೇಹಮಾನಿಯಾ ಮಸೀದಿ ಬಳಿಯ ಸುಲ್ತಾನ್ ಹಜರತ್ ಹೈದರಲಿ ಭಾಷಾ (21) ಹಾಗೂ ಹೆಗಡೆಕಟ್ಟಾ ಹಕ್ಕಿಗದ್ದೆಯ ಗಣಪತಿ ಶೇಷಾ ಮರಾಠಿ (20) ಅವರು ಬನವಾಸಿ ರಸ್ತೆಯ ಇಂಡಸ್ಟಿಯಲ್ ಏರಿಯಾ ಬಳಿ ಅಲೆದಾಡುತ್ತಿದ್ದರು. ಅವರ ವರ್ತನೆ ಗಮನಿಸಿದ ಶಿರಸಿ ಗ್ರಾಮೀಣ ಠಾಣಾ ಉಪನಿರೀಕ್ಷಕ ಸಂತೋಷಕುಮಾರ ಎಂ ಅವರು ಇಬ್ಬರನ್ನು ವಿಚಾರಣೆಗೆ ಒಳಪಡಿಸಿದರು. ಅವರ ವೈದ್ಯಕೀಯ ವರದಿ ಸಹ ಪಾಸಿಟಿವ್ ಬಂದಿದ್ದು, ಮಾದಕ ವ್ಯಸನ ಸೇವನೆ ದೃಢವಾಯಿತು. ಶಿರಸಿ ವಿದ್ಯಾನಗರ 2ನೇ ಕ್ರಾಸಿನ ಆಟೋ ಚಾಲಕ ರಾಘವೇಂದ್ರ ವೆಂಕಟೇಶ ಅಂಬಿಗ (41) ಅವರು ಎಸೆಳೆ ಕರೆ ಹತ್ತಿರ ಅಮಲಿನಲ್ಲಿ ಅಲೆದಾಡುತ್ತಿದ್ದರು. ಶಿರಸಿ ಗ್ರಾಮೀಣ ಠಾಣೆಯ ಉಪನಿರೀಕ್ಷಕ ಅಶೋಕ ರಾಥೋಡ್ ಅವರು ಆಟೋ ಚಾಲಕರನ್ನು ಮಾತನಾಡಿಸಿದರು. ಆದರೆ, ರಾಘವೇಂದ್ರ ಅಂಬಿಗ ಅವರು ಮಾತನಾಡುವ ಸ್ಥಿತಿಯಲ್ಲಿರಲಿಲ್ಲ. ಅವರನ್ನು ಪೊಲೀಸರು ವೈದ್ಯಕೀಯ ತಪಾಸಣೆಗೆ ಒಳಪಡಿಸಿದರು. ಅವರು ಸಹ ಗಾಂಜಾ ಸೇವನೆ ಮಾಡಿರುವುದು ಗೊತ್ತಾಯಿತು. ಶಿರಸಿ ಚಲವಾದಿ ಗಲ್ಲಿಯ ಕೂಲಿ ಕಾರ್ಮಿಕ ನಿತ್ಯಾನಂದ ಕೆರಿಯಾ ಚಲವಾದಿ (32) ಅವರು ಬನವಾಸಿ ರಸ್ತೆಯ ಕೆರೆಕೈ ಕ್ರಾಸಿನ ಬಳಿ ಗಾಂಜಾ ಸೇವಿಸಿದ್ದರು. ಪೊಲೀಸರು ಅದನ್ನು ಪತ್ತೆ ಮಾಡಿ ಕಾನೂನು ಕ್ರಮ ಜರುಗಿಸಿದರು. ಗಾಂಜಾ ಸೇವನೆಯ ದುಷ್ಪರಿಣಾಮದ ಬಗ್ಗೆ ಪೊಲೀಸರು ಆ ಎಲ್ಲರಿಗೂ ಅರಿವು ಮೂಡಿಸಿದರು. ಮತ್ತೆ ಗಾಂಜಾ ಸೇವನೆ ಮಾಡದಂತೆ ಬುದ್ಧಿಮಾತು ಹೇಳಿದರು. ಕಾಲೇಜು ವಿದ್ಯಾರ್ಥಿಗಳಿಗೆ `ಜೀವನ ಹಾಳು ಮಾಡಿಕೊಳ್ಳಬೇಡಿ’ ಎಂದು ಸೂಚಿಸಿದರು. ಅದಾದ ನಂತರ ಎಲ್ಲರ ವಿರುದ್ಧವೂ ಪ್ರಕರಣ ದಾಖಲಿಸಿ, ನ್ಯಾಯಾಲಯಕ್ಕೆ ವರದಿ ಒಪ್ಪಿಸಿದರು. - [ಕೋರ್ಟ ಸಿಬ್ಬಂದಿ ಮನೆಗೆ ಬಂದ ಕಳ್ಳ!](https://mobiletime.in/2025/11/a-thief-came-to-the-court-staffs-house/): ಕುಮಟಾ ಕೋರ್ಟ ಸಿಬ್ಬಂದಿ ಸವಿತಾ ಭಟ್ಟ ಅವರ ಮನೆಗೆ ಕಳ್ಳರು ನುಗ್ಗಿದ್ದಾರೆ. ಮನೆಯಲ್ಲಿದ್ದ ಕಪಾಟು ಶೋಧಿಸಿದ ಅವರು ಅಲ್ಲಿದ್ದ ಚಿನ್ನಾಭರಣ ಹಾಗೂ ಹಣ ದೋಚಿದ್ದಾರೆ. ಸವಿತಾ ನಾರಾಯಣ ಭಟ್ಟ ಅವರು ಕುಮಟಾದ ಕೋಡ್ಕಣಿಯಲ್ಲಿ ವಾಸವಾಗಿದ್ದಾರೆ. ನ್ಯಾಯಾಂಗ ಇಲಾಖೆಯಲ್ಲಿ ಅವರು ಶೀಘ್ರ ಲಿಫಿ ಬರಹಗಾರರಾಗಿದ್ದಾರೆ. ತಮ್ಮ ಉಳಿತಾಯದ ಹಣದಿಂದ ಅವರು ಚಿನ್ನಾಭರಣ ಮಾಡಿಸಿದ್ದು, ಆ ಆಭರಣಗಳು ಇದೀಗ ಕಳ್ಳರ ಪಾಲಾಗಿದೆ. ಮನೆ ಬಾಗಿಲು ಮುರಿದು ಒಳಗೆ ನುಗ್ಗಿದ ಕಳ್ಳರು ಬೆಡ್ ರೂಂ ಪ್ರವೇಶಿಸಿದ್ದಾರೆ. ಅಲ್ಲಿದ್ದ 5 ಸಾವಿರ ರೂ ಹಣವನ್ನು ಜೇಬಿಗಿಳಿಸಿದ್ದಾರೆ. ಅದಾದ ನಂತರ 1.33 ಲಕ್ಷ ರೂ ಮೌಲ್ಯದ ಚಿನ್ನದ ನೆಕ್ಲೇಸ್ ಕದ್ದಿದ್ದಾರೆ. 9 ಸಾವಿರ ರೂ ಮೌಲ್ಯದ ಉಂಗುರ, 1.30 ಲಕ್ಷ ರೂ ಮೌಲ್ಯದ ಬಳೆ, 25 ಸಾವಿರ ರೂ ಮೌಲ್ಯದ ಕಿವಿಯೋಲೆ, 5 ಸಾವಿರ ರೂ ಮೌಲ್ಯದ ಬೆಳ್ಳಿ ಆಭರಣಗಳನ್ನು ಅಪಹರಿಸಿದ್ದಾರೆ. ನವೆಂಬರ್ 17ರ ರಾತ್ರಿ ಈ ಕಳ್ಳತನ ನಡೆದಿದೆ. ನವೆಂಬರ್ 18ರಂದು ಕಳ್ಳತನ ನಡೆದಿರುವುದು ಕುಟುಂಬದವರಿಗೆ ಗೊತ್ತಾಗಿದೆ. ಅದಾದ ನಂತರ ಸವಿತಾ ಭಟ್ಟ ಅವರು ಕುಮಟಾ ಪೊಲೀಸ್ ಠಾಣೆಗೆ ತೆರಳಿ ಕಳ್ಳತನದ ವಿಷಯ ಹೇಳಿದ್ದಾರೆ. ಪಿಎಸ್‌ಐ ಸಾವಿತ್ರಿ ನಾಯಕ ಅವರು ಪ್ರಕರಣ ದಾಖಲಿಸಿದ್ದು, ಕಳ್ಳರ ಹುಡುಕಾಟ ಶುರು ಮಾಡಿದ್ದಾರೆ. `ಮನೆ ಬಿಟ್ಟು ಹೋಗುವ ಮುನ್ನ ಪೊಲೀಸರಿಗೆ ತಿಳಿಸಿ’   - [ಕಾರವಾರ ಕಾರಾಗೃಹ: ಕೈದಿಗಳ ಕೈಯಲ್ಲಿ ಮೊಬೈಲ್-ಬೀಡಿ-ಸೊಪ್ಪಿನಪುಡಿ!](https://mobiletime.in/2025/11/karwar-prison-mobile-phones-beedi-and-vegetable-powder-in-the-hands-of-prisoners/): ಕಾರವಾರ ಜೈಲಿನಲ್ಲಿರುವ ಮೊಹಮದ್ ನೌಫಲ್ ಅಬ್ದುಲ್ ಲತೀಫ್ ಅವರು ಕಾರಾಗೃಹದ ಒಳಗೆ ರಾಜಾರೋಷವಾಗಿ ಮೊಬೈಲ್ ಬಳಕೆ ಮಾಡಿದ್ದಾರೆ. ಅವರ ಪಕ್ಕದ ವಾರ್ಡಿನಲ್ಲಿರುವ ಕೈದಿಗಳು ಸಹ ಬೀಡಿ-ಸೊಪ್ಪಿನಪುಡಿ ಬಳಸಿದ್ದಾರೆ. ಹೊತ್ತಿಗೆ ಸರಿಯಾಗಿ ಊಟ, ನೆಮ್ಮದಿಯ ನಿದ್ದೆ, ಅಗತ್ಯವಿದ್ದಾಗ ಆಸ್ಪತ್ರೆ ನೆಪದಲ್ಲಿ ಪ್ರವಾಸ ಜೊತೆಗೆ ಮೊಬೈಲು-ಹೊಗೆ ಸೊಪ್ಪು ಎನ್ನುತ್ತ ಇಲ್ಲಿನ ಕೈದಿಗಳು ಐಷಾರಾಮಿ ಜೀವನ ನಡೆಸಿದ್ದಾರೆ. ಹೀಗಾಗಿ ಸುಧಾರಣಾ ತಾಣವಾಗಬೇಕಿದ್ದ ಕಾರವಾರ ಜೈಲು ಮನರಂಜನಾ ಕೇಂದ್ರವಾಗಿ ಬದಲಾದ ಅನುಮಾನ ಕಾಡುತ್ತಿದೆ. ಕಾರಾಗೃಹದ ಒಳಗೆ ಮೊಬೈಲ್ ಬಳಕೆ ನಿಷೇಧಿಸಿದೆ. ಅದರೊಂದಿಗೆ ಬೀಡಿ, ಸಿಗರೇಟು, ಗಾಂಜಾ ಮೊದಲಾದ ವಸ್ತುಗಳನ್ನು ಜೈಲಿನ ಒಳಗೆ ಬಿಡುವ ಹಾಗಿಲ್ಲ. ಅದಕ್ಕಾಗಿಯೇ ಜೈಲಿನ ಪ್ರವೇಶ ದ್ವಾರದಲ್ಲಿ ಭದ್ರತಾ ಸಿಬ್ಬಂದಿ ಪ್ರತಿಯೊಬ್ಬರನ್ನು ತಪಾಸಣೆಗೆ ಒಳಪಡಿಸುತ್ತಾರೆ. ಮೊಬೈಲುಗಳನ್ನು ಅಲ್ಲಿ ವಶಕ್ಕೆಪಡೆದು, ನಂತರ ಮರಳಿಸುತ್ತಾರೆ. ಕೈದಿಗಳನ್ನು ಭೇಟಿ ಮಾಡಲು ಬರುವವರಿಗೂ ಇದೇ ನಿಯಮ ಅನ್ವಯ. ಅದಾಗಿಯೂ ಕಾರವಾರ ಜೈಲಿನಲ್ಲಿ ನಿಷೇಧಿತ ಮೊಬೈಲ್, ಬೆಂಕಿ ಪೊಟ್ಟಣ, ಒಣಗಿದ ಸೊಪ್ಪಿನ ಪುಡಿಗಳು ಕಾಣಿಸಿವೆ. ಬಿಗಿ ಭದ್ರತೆಯ ನಡುವೆಯೂ ನಿಷೇಧಿತ ಸಾಮಗ್ರಿಗಳು ಜೈಲಿನ ಒಳಗೆ ಹೇಗೆ ಹೋದವು? ಎಂಬುದು ಪ್ರಶ್ನೆಯಾಗಿಯೇ ಉಳಿದಿದೆ. ಈಚೆಗೆ ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲಿನ ಕೈದಿಗಳು ಮೊಬೈಲ್ ಫೋನ್ ಬಳಸುತ್ತಿದ್ದ ವಿಡಿಯೋ ವೈರಲ್ ಆಗಿತ್ತು. ಅದಾದ ನಂತರ ಮೈಸೂರಿನ ಜೈಲಿನಲ್ಲಿಯೂ ಕೈದಿಗಳು ವಿಶೇಷ ಸೌಲಭ್ಯಗಳನ್ನು ಸ್ವೀಕರಿಸುತ್ತಿರುವುದು ಬೆಳಕಿಗೆ ಬಂದಿತ್ತು. ಇದೀಗ ಕಾರವಾರ ಕಾರಾಗೃಹದಲ್ಲಿರುವ ಕೆಲ ಕೈದಿಗಳು ಸಹ ಐಷಾರಾಮಿ ಹಾಗೂ ಮಾದಕ ವಸ್ತು ಬಳಕೆ ಮಾಡುತ್ತಿರುವುದು ಗೊತ್ತಾಗಿದೆ. ಕಾರಾಗೃಹದ ಒಳಗೆ ಮೊಬೈಲ್ ಫೋನ್ ತಂದವರು ಯಾರು? ಬೀಡಿ, ಬೆಂಕಿ ಪೊಟ್ಟಣ ಹಾಗೂ ಸೊಪ್ಪಿನ ಪುಡಿಗಳು ಜೈಲಿನೊಳಗೆ ಹೇಗೆ ಬಂದವು? ಅವುಗಳನ್ನು ಕೈದಿಗಳಿಗೆ ಕೊಟ್ಟವರು ಯಾರು? ಎನ್ನುವುದು ಬಹಿರಂಗವಾಗಿಲ್ಲ. ನವೆoಬರ್ 18ರ ನಸುಕಿನಲ್ಲಿ ಕಾರವಾರದ ಟ್ರಾಫಿಕ್ ಪಿಎಸ್‌ಐ ಶ್ರೀಕಾಂತ ರಾಥೋಡ್ ಅವರು ದಿಢೀರ್ ಆಗಿ ಕಾರವಾರ ಕಾರಾಗೃಹಕ್ಕೆ ಭೇಟಿ ನೀಡಿದ್ದಾರೆ. ಅವರು ಅಲ್ಲಿನ 8ನೇ ಸೆಲ್ ಶೋಧ ಮಾಡಿದ್ದಾರೆ. ಆಗ, ಬಂಧಿಖಾನೆಯಲ್ಲಿರುವ ಮಂಗಳೂರಿನ ಮೊಹಮದ್ ನೌಫಲ್ ಅಬ್ದುಲ್ ಲತೀಫ್ ಅವರ ಬಳಿ ಕೀಪ್ಯಾಡ್ ಮೊಬೈಲ್ ಕಾಣಿಸಿದೆ. 9ನೇ ಸೆಲ್ ಪ್ರವೇಶಿಸಿದಾಗ ಅಲ್ಲಿ ಒಂದು ಪ್ಲಾಸ್ಟಿಕ್ ಕ್ಯಾರಿ ಬ್ಯಾಗ್ ಸಿಕ್ಕಿದೆ. ಅದರೊಳಗೆ ಬೀಡಿ ಪ್ಯಾಕ್, ಬೆಂಕಿ ಪೊಟ್ಟಣ, ಹಳದಿ ಬಣ್ಣದ ಲೈಟರ್ ಹಾಗೂ ಒಣಗಿದ ಸೊಪ್ಪಿನ ಪುಡಿಗಳನ್ನು ಸಣ್ಣ ಸಣ್ಣ ಕಾಗದದ ಪೊಟ್ಟಣದಲ್ಲಿ ಕಟ್ಟಿರುವುದು ಗೋಚರಿಸಿದೆ. ಪೊಲೀಸ್ ಅಧೀಕ್ಷಕ ದೀಪನ್ ಎಂ ಎನ್ ಹಾಗೂ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕೃಷ್ಣಮೂತಿ, ಜಗದೀಶ ಎಂ ಅವರ ಸೂಚನೆ ಮೇರೆಗೆ ಶ್ರೀಕಾಂತ ರಾಥೋಡ್ ಅವರು ಕಾರಾಗೃಹದಲ್ಲಿ ಶೋಧ ನಡೆಸಿದ್ದು, ಅಲ್ಲಿನ ವಿದ್ಯಮಾನಗಳ ಬಗ್ಗೆ ಡಿವೈಎಸ್ಪಿ ಎಸ್ ವಿ ಗಿರೀಶ ಅವರಿಗೆ ವರದಿ ಒಪ್ಪಿಸಿದ್ದಾರೆ. ಆ ವರದಿ ವಾಚಿಸಿದ ಪೊಲೀಸ್ ಉಪಾಧ್ಯಕ್ಷ ಎಸ್ ವಿ ಗಿರೀಶ್ ಅವರು ಕೆಂಡಾಮoಡಲರಾಗಿದ್ದಾರೆ. ಕಾರಾಗೃಹದ ಒಳಗೆ ನಿಷೇಧಿತ ವಸ್ತು ಬಳಕೆ ಮಾಡಿದ ಕೈದಿಗಳ ವಿರುದ್ಧ ಅವರು ಕಾರವಾರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಈ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಅವರು ದೂರಿನಲ್ಲಿ ವಿವರಿಸಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಶುರು ಮಾಡಿದ್ದಾರೆ. - [2025 ನವೆಂಬರ್ 19ರ ದಿನ ಭವಿಷ್ಯ](https://mobiletime.in/2025/11/prediction-for-november-19-2025/): ಮೇಷ ರಾಶಿ: ನಿಮ್ಮ ಕೆಲಸಕ್ಕೆ ಯೋಗ್ಯ ಪ್ರೋತ್ಸಾಹ ದೊರೆಯಲಿದೆ. ಕಾರ್ಯನಿರ್ವಹಣೆಯಲ್ಲಿ ಸ್ಪಷ್ಟತೆ ಇರಲಿದೆ. ಆರ್ಥಿಕವಾಗಿ ಸ್ವಲ್ಪ ಲಾಭ ಸಾಧ್ಯ. ಆರೋಗ್ಯದ ಮೇಲೆ ಗಮನ ನೀಡಿರಿ. ಸವಾಲು ಎದುರಿಸಲು ಸಿದ್ಧರಾಗಿರಿ. ವೃಷಭ ರಾಶಿ: ದೈನಂದಿನ ಕೆಲಸಗಳಲ್ಲ ಉತ್ತಮ ಫಲ ಸಿಗಲಿದೆ. ಸಹೋದ್ಯೋಗಿಗಳಿಂದ ಬೆಂಬಲ ಸಿಗಬಹುದು. ಹಣಕಾಸಿನಲ್ಲಿ ಎಚ್ಚರಿಕೆ ಅಗತ್ಯ. ಹೊಸ ಯೋಜನೆ ಆರಂಭಿಸಲು ಸಕಾಲ. ಮನಸ್ಸು ಶಾಂತವಾಗಿರಬೇಕು. ಮಿಥುನ ರಾಶಿ: ಪ್ರೀತಿ-ಪ್ರೇಮ ವಿಷಯದಲ್ಲಿ ಮಧುರ ಮಾತು ಬರಲಿದೆ. ಕೆಲಸದಲ್ಲಿ ಉತ್ತೇಜನದ ಸಮಯವಾಗಿದೆ. ಆರ್ಥಿಕ ಯೋಜನೆಗಳು ಪರಿಣಾಮಕಾರಿಯಾಗಲಿದೆ. ಪ್ರಯಾಣದಲ್ಲಿ ಸೌಭಾಗ್ಯ ಕೂಡಿ ಬರಲಿದೆ. ಕರ್ಕ ರಾಶಿ: ನಿಮ್ಮೊಳಗಿನ ಪ್ರತಿಭೆಯನ್ನು ತಿರಸ್ಕರಿಸಬೇಡಿ. ಸಹಕಾರಿಗಳು ಹಾಗೂ ಕುಟುಂಬದಿAದ ಸಹಾಯ ಸಿಗಲಿದೆ. ಆರೋಗ್ಯ ಇದ್ದಕ್ಕಿದ್ದಂತೆ ಏರುಪೇರಾಗಬಹುದು. ಜೀವನದಲ್ಲಿ ಒಳ್ಳೆಯ ಬದಲಾವಣೆ ಸಾಧ್ಯವಿದೆ. ಸಿಂಹ ರಾಶಿ: ಧೈರ್ಯದಿಂದ ಮಾಡುವ ಕೆಲಸದಲ್ಲಿ ಯಶಸ್ಸು ಸಿಗಲಿದೆ. ಹೊಸ ಅವಕಾಶಗಳ ನಿರೀಕ್ಷೆಯಲ್ಲಿರಿ. ಹಣಕಾಸಿನಲ್ಲಿ ಬದಲಾವಣೆ ಆಗಲಿದೆ. ಆರೋಗ್ಯ ಸಮಸ್ಯೆಗಳ ಬಗ್ಗೆ ಎಚ್ಚರಿಕೆ ಬೇಕು. ಕನ್ಯಾ ರಾಶಿ: ಶ್ರಮಕ್ಕೆ ತಕ್ಕ ಲಾಭ ಸಿಗದಿದ್ದರೆ ಬೇಸರ ಬೇಡ. ಆರ್ಥಿಕ ಸ್ಥಿರತೆ ಮುಖ್ಯ. ಯೋಗ-ಧ್ಯಾನ ಪರಿಣಾಮಕಾರಿಯಾಗಿ ಕೆಲಸ ಮಾಡಲಿದೆ. ಆರೋಗ್ಯದ ವಿಷಯದಲ್ಲಿ ಜೋಪಾನ. ತುಲಾ ರಾಶಿ ಸಹೋದರ ಸ್ನೇಹಿತರಿಂದ ಸಹಕಾರ ಸಿಗಲಿದೆ. ಉದ್ಯೋಗದಲ್ಲಿ ಪ್ರಮುಖ ಬೆಳವಣಿಗೆ ಆಗಲಿದೆ. ಹಣಕಾಸು ಏರಿಳಿತದ ಬಗ್ಗೆ ಗಮನ ಅಗತ್ಯ. ನಿಮ್ಮ ಪ್ರಯಾಣ ಆರೋಗ್ಯಕರವಾಗಿರಲಿದೆ. ವೃಶ್ಚಿಕ: ನಿಮ್ಮ ಕೆಲಸಕಾರ್ಯದಲ್ಲಿ ನಿಖರತೆ ಬೇಕು. ಹಣಕಾಸು ವ್ಯವಹಾರ ಮುನ್ನಡೆಯಲಿದೆ. ಹಾವು-ಕೀಟಗಳ ಬಗ್ಗೆ ಎಚ್ಚರಿಕೆಯಿಂದಿರಿ. ಆಧ್ಯಾತ್ಮಿಕ ವಿಷಯದಲ್ಲಿ ಗಮನಕೊಡಿ. ಧನು ರಾಶಿ: ಹಣಕಾಸು ಸುಧಾರಣೆ ಆಗಲಿದೆ. ಉದ್ಯೋಗದಲ್ಲಿ ಯಶಸ್ವಿ ಆಗುವಿರಿ. ಮನಸ್ಸಿನ ಒತ್ತಡ ಕಡಿಮೆ ಆಗಲಿದೆ. ಆರೋಗ್ಯದ ಬಗ್ಗೆ ಗಮನಹರಿಸಿ. ಮಕರ ರಾಶಿ: ಹಣಕಾಸು ವಿಷಯದಲ್ಲಿ ಗುರಿಯ ಕಡೆ ಗಮನವಿರಲಿ. ಹೊಸ ಕಲಿಕೆಗೆ ಅವಕಾಶವಿದೆ. ಕುಟುಂಬದ ಬೆಂಬಲ ಸಿಗಲಿದೆ. ಆರೋಗ್ಯ ಉತ್ತಮವಾಗಿರಲಿದೆ. ಕುಂಭ ರಾಶಿ: ಸೃಜನಶೀಲ ಕೆಲಸ ಹಣ ತಂದು ಕೊಡಲಿದೆ. ಅಧ್ಯಯನದ ಬಗ್ಗೆ ಆಸಕ್ತಿ ಬೇಕು. ಸಮನ್ವಯ ಸಾಧಿಸಿ ಜೀವನದಲ್ಲಿ ಮುನ್ನಡೆಯಿರಿ. ಸಮಯ ಪಾಲನೆಗೆ ಒತ್ತು ಕೊಡಿ. ಮೀನ ರಾಶಿ: ಕುಟುಂಬದಲ್ಲಿ ಸಂತೋಷ ಕಾಣಲಿದೆ. ಉದ್ಯೋಗದಲ್ಲಿ ಪ್ರಗತಿ ಆಗಲಿದೆ. ಹಣಕಾಸಿನಲ್ಲಿ ಸಾಧನೆ ಸಾಧ್ಯವಿದೆ. ಆತ್ಮವಿಶ್ವಾಸ ನಿಮಗೆ ಯಶಸ್ಸು ಕೊಡಲಿದೆ. - [ಪೊಲೀಸ್ ಪಾತ್ರದಾರಿ: ಪೆಟ್ರೋಲ್ ಬಂಕಿನಲ್ಲಿ ಕಾಣಿಸಿದ ಯಮರಾಜ!](https://mobiletime.in/2025/11/police-role-yamaraja-seen-at-a-petrol-station/): ಸಂಚಾರಿ ನಿಯಮ ಉಲ್ಲಂಘಿಸುವವರಿಗೆ ಗೋಕರ್ಣ ಪೊಲೀಸ್ ಸಿಬ್ಬಂದಿ ವಸಂತ ಕಲ್ಪಾಡಿ ಅವರು ಯಮನ ವೇಷಧರಿಸಿ ಹೆದರಿಸಿದರು. ಸಂಚಾರಿ ನಿಯಮ ಪಾಲಿಸುವವರಿಗೆ ಯಮ ಕಿಂಕರನ ವೇಷ ಧರಿಸಿದ್ದ ಅನುರಾಜ ನಾಯ್ಕ ಹಾಗೂ ಪರಮೇಶ್ವರ ಅವರು ಹೂವು ನೀಡಿ ಗೌರವಿಸಿದರು! ಕಡ್ಡಾಯ ಹೆಲ್ಮೆಟ್ ಬಗ್ಗೆ ಕುಮಟಾ ಪೊಲೀಸರು ಸಾಕಷ್ಟು ಅರಿವು ಮೂಡಿಸುತ್ತಿದ್ದು, ಅದರ ಭಾಗವಾಗಿ ಗೋಕರ್ಣ ಪೊಲೀಸರು ಮಂಗಳವಾರ ಪೆಟ್ರೋಲ್ ಬಂಕಿನಲ್ಲಿ ಬೀಡು ಬಿಟ್ಟಿದ್ದರು. ಚೌಡಗೇರಿ ಪೆಟ್ರೋಲ್ ಬಂಕಿಗೆ ಬರುವವರನ್ನು ಯಮ ವೇಷಧರಿಸಿ ಪರಿಶೀಲಿಸಿದ ಪೊಲೀಸರು ಸಂಚಾರಿ ನಿಯಮ ಉಲ್ಲಂಗಿಸುವವರಿಗೆ ಪೆಟ್ರೋಲ್ ಕೊಡಲು ನಿರಾಕರಿಸಿದರು. ಸ್ಥಳೀಯ ನಿವಾಸಿ ಸುರೇಶ ಆಗೇರ್ ಅವರು ಚಿತ್ರಗುಪ್ತನ ಪಾತ್ರವಹಿಸಿ ಸಂಚಾರಿ ನಿಯಮ ಪಾಲನೆ ಮಾಡದವರನ್ನು ಬೆದರಿಸಿದರು! ಹೆಲ್ಮೆಟ್ ಧರಿಸದೇ ಬಂದವರನ್ನು ಪಿಐ ಶ್ರೀಧರ ಎಸ್ ಆರ್ ಅವರು ಮರಳಿ ಮನೆಗೆ ಕಳುಹಿಸದರು. ಅವರೇ ಹೆಲ್ಮೆಟ್ ಧರಿಸಿ ಬಂದಾಗ ಹೂವು ನೀಡಿ ಸ್ವಾಗತಿಸಿದರು. ಅದಾದ ನಂತರ ಪೆಟ್ರೋಲ್ ನೀಡಲಾಗಿದ್ದು, ಪೊಲೀಸರ ವಿಭಿನ್ನ ಪ್ರಯತ್ನ ಜನರ ಮನ ಮುಟ್ಟಿತು. ಒಂದು ದಿನ ಜನರಿಗೆ ಅರಿವು ಮೂಡಿಸಿ, ಅದಾದ ನಂತರ ದಂಡದ ಪ್ರಯೋಗ ನಡೆಸುವುದಾಗಿ ಪೊಲೀಸರು ತಿಳಿಸಿದರು. - [ವಾದದಿಂದ ಶುರುವಾದ ವಾಗ್ವಾದ!](https://mobiletime.in/2025/11/an-argument-that-started-with-an-argument/): ಶಿರಸಿಯಲ್ಲಿ ನ್ಯಾಯ ಕೊಡಿಸಬೇಕಾದ ನ್ಯಾಯವಾದಿಗಳಿಗೆ ಅನ್ಯಾಯವಾದ ಬಗ್ಗೆ ಚರ್ಚೆ ನಡೆದಿದೆ. ಸಂಘಟನೆಯಲ್ಲಿದ್ದವರ ಅಧಿಕಾರ ಅವಧಿ ಮುಗಿದರೂ ಆಗದ ಹೊಸ ನೇಮಕಾತಿ, ಸದಸ್ಯತ್ವ ರದ್ಧತಿಯ ಬಗ್ಗೆ ಪ್ರಶ್ನೆ ಸೇರಿ ವಿವಿಧ ಕಾರಣಗಳಿಂದ ವಿವಾದ ಶುರುವಾಗಿದೆ. ಅದರ ಮುಂದುವರೆದ ಭಾಗವಾಗಿ ಕೆಲವರ ನಡುವೆ ಹೊಡೆದಾಟವಾಗಿದ್ದು, ಎಲ್ಲವೂ ಗಪ್-ಚುಪ್ ಆಗಿದೆ. ಸಭೆಯೊಂದರಲ್ಲಿ ನಡೆದ ವಾದ ವಿವಾದದ ಸ್ವರೂಪಪಡೆದಿದ್ದು, ಈ ಬಗ್ಗೆ ಸಭೆಯಲ್ಲಿದ್ದವರನ್ನು ಹೊರತುಪಡಿಸಿ ಯಾರಿಗೂ ಸ್ಪಷ್ಟ ಚಿತ್ರಣವಿಲ್ಲ. ಅದಾಗಿಯೂ ಲಭ್ಯ ಮಾಹಿತಿಗಳ ಪ್ರಕಾರ, ನವೆಂಬರ್ 15ರಂದು ಈ ಗಲಾಟೆ ನಡೆದಿದೆ. ಸಭೆ ನಡುವೆ ಮಾತಿಗೆ ಮಾತು ಬೆಳೆದಿದೆ. ಅದು ವಿಕೋಪಕ್ಕೆ ತಿರುಗಿದ್ದು ಹೊಡೆದಾಟದ ಸ್ವರೂಪಪಡೆದಿದೆ. ಈ ವಿಷಯವಾಗಿ ನೊಂದವರು ದೂರು ನೀಡಿದ್ದು, ಪೊಲೀಸರು ಪ್ರಕರಣದಲ್ಲಿ ಪ್ರವೇಶಿಸಿದ್ದಾರೆ. ಈ ಘಟನಾವಳಿಗಳು ಕೆಲವರ ನಡುವಿನ ಆಂತರಿಕ ವಿಷಯ, ಸಂಘಟನೆಯ ಒಳ ವಿಚಾರದ ಬಗ್ಗೆ ಸುತ್ತುವರೆದಿದೆ. ಅವಧಿ ಮುಗಿದರೂ ಹುದ್ದೆಯಲ್ಲಿದ್ದವರ ಬದಲಾವಣೆ ಆಗದಿರುವುದು, ಆ ಹುದ್ದೆಗೆ ಬೇರೆ ಬೇರೆ ಆಕಾಂಕ್ಷಿಗಳಿರುವುದು ಹಾಗೂ ಸಂಘದಲ್ಲಿ ಕೆಲವರ ಸದಸ್ಯತ್ವ ರದ್ಧಾಗಿರುವುದು ಸೇರಿ ಅನೇಕ ಕಾರಣಗಳಿಂದ ಈ ಕಲಹ ಸೃಷ್ಠಿಯಾಗಿದೆ. ಜಾತಿ ನಿಂದನೆ, ಹಲ್ಲೆ ಹಾಗೂ ಮಹಿಳೆಯ ಮೈ ಮುಟ್ಟಿದ ಬಗ್ಗೆ ದೂರುಗಳಿವೆ. ಎಲ್ಲರನ್ನು ಕೂತು ಮಾತನಾಡಿಸಿದರೆ ಭವಿಷ್ಯದಲ್ಲಿ ಬಗೆಹರಿಸುವ ಸಾಧ್ಯತೆಗಳು ಇವೆ. ಹೀಗಾಗಿ ಈ ವಿಷಯದ ಬಗ್ಗೆ ಅರಿವಿದ್ದವರು ಸಹ `ಊರ ಉಸಾಬರಿ ನಮಗೇತಕೆ?’ ಎಂದು ಮೌನವಾಗಿದ್ದಾರೆ. `ಎಲ್ಲವರೂ ತಮ್ಮವೇ ಆಗಿರುವಾಗ ತಪ್ಪು ಯಾರದ್ದು? ಎಂದು ಹೇಳುವುದು ಕಷ್ಟ’ ಎಂಬ ನಿಲುವನ್ನು ಹಿರಿಯರು ಹೊಂದಿದ್ದಾರೆ. `ಅದು ಹಾಗಂತೆ.. ಇದು ಹೀಗಂತೆ’ ಎಂಬ ಊಹಾಪೋಹಗಳು ಅಂದಿನಿ0ದಲೂ ಹಬ್ಬುತ್ತಲೇ ಇದ್ದು, ನಿವಾಗಿಯೂ ನಡೆದಿದ್ದು ಏನು? ಎನ್ನುವುದನ್ನು ಸಂಬoಧಿಸಿದವರೇ ಬಹಿರಂಗಪಡಿಸಿಬೇಕಿದೆ. ಸಾಮಾನ್ಯ ಜನರಿಗೆ ಸತ್ಯದ ಅರಿವಾಗದ ಕಾರಣ ಜಾಲತಾಣದ ಜೊತೆ ಊರು-ಕೇರಿಯಲ್ಲಿಯೂ ಒಂದಷ್ಟು ರೆಕ್ಕೆ-ಪುಕ್ಕದ ಜೊತೆ ಈ ವಿಷಯ ಹರಿದಾಡುತ್ತಿದೆ. - [ಬ್ಯಾಂಕಿಗೆ ಬೆಂಕಿ: ಗುಜುರಿ ವ್ಯಾಪಾರಿಯೇ ಮಾಸ್ಟರ್ ಮೈಂಡ್!](https://mobiletime.in/2025/11/bank-fire-gujuri-merchant-is-the-mastermind/): ಯಲ್ಲಾಪುರದ ಉಮ್ಮಚ್ಗಿಯಲ್ಲಿರುವ ಕರ್ನಾಟಕ ಗ್ರಾಮೀಣ ವಿಕಾಸ ಬ್ಯಾಂಕ್ ದರೋಡೆಗೆ ಪ್ರಯತ್ನಿಸಿದ ಮತ್ತಿಬ್ಬರ ಬಂಧನವಾಗಿದೆ. ಚಾಲಕ ಹಾಗೂ ಗುಜುರಿ ವ್ಯಾಪಾರಿ ಸಹ ಈ ಪ್ರಕರಣದ ಮಾಸ್ಟರ್ ಮೈಡ್ ಆಗಿದ್ದಾರೆ. ದರೋಡೆಗೆ ಬಂದ ಡಕಾಯಿತರು ಏನು ಸಿಗದ ಕಾರಣ ಬೆಂಕಿ ಹಚ್ಚಿ ಪರಾರಿ ಆಗಿದನ್ನು ಒಪ್ಪಿಕೊಂಡಿದ್ದಾರೆ. ನವೆಂಬರ್ 12ರಂದು ಉಮ್ಮಚ್ಗಿಯಲ್ಲಿ ಬ್ಯಾಂಕ್ ದರೋಡೆ ಪ್ರಯತ್ನ ನಡೆದಿತ್ತು. ಉದ್ಯಮನಗರದ ರಾಘವೇಂದ್ರ ಗಣಪತಿ ನಾಯಕ ಅವರು ಡಕಾಯಿತರ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದರು. ಕಂಪ್ಯುಟರ್, ಪ್ರಿಂಟರ್, ವಿಲ್ಲಿಂಗ್ ಚೇರಿ ಸೇರಿ ಅನೇಕ ವಸ್ತುಗಳು ಬೆಂಕಿಗೆ ಆಹುತಿಯಾದ ಬಗ್ಗೆ ಅವರು ವಿವರಿಸಿದ್ದರು. ಕಾರವಾರ ಪೊಲೀಸ್ ಅಧೀಕ್ಷಕ ದೀಪನ್ ಎಂ ಎನ್ ಅವರು ನಾಲ್ಕು ತಂಡ ರಚಿಸಿ ಡಕಾಯತರ ಶೋಧಕ್ಕೆ ತಂತ್ರ ರೂಪಿಸಿದ್ದರು. ಕಾರವಾರ ಟೆಕ್ನಿಕಲ್ ವಿಭಾಗದ ಉದಯ ಗುನಗಾ ವಿವಿಧ ತಾಂತ್ರಿಕ ಮಾಹಿತಿ ನೀಡಿದರು. ಸಿಸಿ ಕ್ಯಾಮರಾ ದಾಖಲೆ ಪರಿಶೀಲಿಸಿದಾಗ ಶಿಪ್ಟ್ ಕಾರೊಂದರ ಮೇಲೆ ಅನುಮಾನ ಮೂಡಿತು. ಆ ಕಾರನ್ನು ಬೆನ್ನತ್ತಿದ ಪೊಲೀಸರು ಬೆಳಗಾವಿಗೆ ಹೋದರು. ಅಲ್ಲಿನ ಬಾರ್ ಒಂದರ ಮುಂದೆ ಮಂಗಳೂರಿನ ಬಂಟ್ವಾಳದ ಮಹಮ್ಮದ ರಫೀಕ ಎದುರಾದರು. ಪೊಲೀಸರನ್ನು ಕಂಡ ಮಹಮದ್ ರಫೀಕ್ ಅವರ ಮೇಲೆ ಚಾಕುವಿನ ದಾಳಿ ನಡೆಸಿದ್ದು, ಪೊಲೀಸರು ತಪ್ಪಿಸಿಕೊಂಡಾಗ ತಮಗೆ ತಾವೇ ಚುಚ್ಚಿಕೊಂಡು ಆತ್ಮಹತ್ಯೆಗೆ ಪ್ರಯತ್ನಿಸಿದರು. ಆತ್ಮಹತ್ಯೆಗೆ ಪ್ರಯತ್ನಿಸಿದ ಮಹಮದ್ ರಫಿಕ್ ಅವರನ್ನು ಪೊಲೀಸರು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದರು. ಅದಾದ ನಂತರ ಬೆಳಗಾವಿಯ ಚಾಲಕ ಗುಲ್ಜಾರ ಅಬು ್ದಲ್ ರೆಹಮಾನ ಮಕಾಂದಾರ, ಗುಜುರಿ ವ್ಯಾಪಾರ ಮಾಡುವ ಇಮ್ರಾನ ಕುತಬುದ್ದೀನ್ ತಿಗಡಿ ಅವರನ್ನು ಪೊಲೀಸರು ವಶಕ್ಕೆಪಡೆದರು. ಅವರಿಬ್ಬರು ತಮ್ಮ ತಪ್ಪನ್ನು ಒಪ್ಪಿಕೊಂಡರು. ಆಪಾದಿತರಿಂದ ಕೃತ್ಯಕ್ಕೆ ಬಳಸಿದ ಕಾರನ್ನು ಪೊಲೀಸರು ಜಪ್ತು ಮಾಡಿದ್ದಾರೆ. ಮಹಮದ್ ರಫಿಕ್ ವಿರುದ್ಧ ರಾಜ್ಯದಲ್ಲಿ 50ಕ್ಕೂ ಅಧಿಕ ದರೋಡೆ ಪ್ರಕರಣಗಳಿವೆ. ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕೃಷ್ಣಮೂರ್ತಿ, ಜಗದೀಶ ಎಮ್, ಶಿರಸಿ ಡಿವೈಎಸ್ಪಿ ಗೀತಾ ಪಾಟೀಲ, ಯಲ್ಲಾಪುರ ಪಿಐ ರಮೇಶ ಹಾನಾಪುರ, ಪಿಎಸ್‌ಐ ರಾಜೇಶ ವಂದಲಿ, ಸಿದ್ದಪ್ಪ ಗುಡಿ, ಮಹಾವೀರ ಕಾಂಬಳೆ, ಪೊಲೀಸ್ ಸಿಬ್ಬಂದಿ ದೀಪಕ ನಾಯ್ಕ. ಮಹಮ್ಮದ್ ಶಫಿ ಶೇಖ್, ಬಸವರಾಜ ಹಗರಿ, ಶೋಭಾ ನಾಯ್ಕ, ಗಿರೀಶ ಲಮಾಣಿ, ಸಂತೋಷ ಬಾಳೇರ, ಮಹಾವೀರ ಡಿ ಎಸ್, ಪರಮೇಶ್ವರ ಎಸ್ ಕೆ. ಪರಶುರಾಮ ದೊಡ್ಮನಿ ಕಾರ್ಯಾಚರಣೆಯಲ್ಲಿ ಪ್ರಮುಖ ಪಾತ್ರ ನಿಭಾಯಿಸಿದ್ದಾರೆ. - [ತೆನೆ ಹೊತ್ತ ಮಹಿಳೆಗೆ ಅನ್ಯಾಯ!](https://mobiletime.in/2025/11/injustice-to-the-woman-carrying-the-grain/): ಮುಂಡಗೋಡಿನ ಮೂವರು ಮಹಿಳೆಯರು ಸೇರಿ ಭತ್ತದ ಗದ್ದೆಗೆ ನುಗ್ಗಿದ್ದು, ಅಲ್ಲಿದ್ದ ಫಸಲು ಕದ್ದಿದ್ದಾರೆ. ಇದನ್ನು ಅರಿತ ಗದ್ದೆಯ ಮಾಲಕಿ ಪೊಲೀಸರ ಬಳಿ ಅಳಲು ತೋಡಿಕೊಂಡಿದ್ದಾರೆ. ಗದಗದ ಚನ್ನಮ್ಮ ಮಡಿವಾಳ ಅವರು ಮುಂಡಗೋಡಿನಲ್ಲಿ ಭೂಮಿ ಹೊಂದಿದ್ದರು. ಮುಂಡಗೋಡಿನ ಸಾಲಗಾಂವಿನಲ್ಲಿ ಅವರು ಕೃಷಿ ಮಾಡಿದ್ದರು. ಅಲ್ಲಿನ 4 ಎಕರೆ ಕ್ಷೇತ್ರದಲ್ಲಿ ಚನ್ನಮ್ಮ ಅವರು ಸಮೃದ್ಧವಾಗಿ ಭತ್ತ ಬೆಳೆದಿದ್ದರು.ಕ್ಷೇತ್ರದ ಅಭಿವೃದ್ಧಿಗೆ ಅವರು ಸಾಕಷ್ಟು ಶ್ರಮಿಸಿದ್ದರು. ಅಲ್ಲಿ ಉತ್ತಮ ಫಸಲು ಬಂದಿದ್ದು, ಇದನ್ನು ಸಹಿಸದ ಮೂವರು ಆ ಫಸಲು ಕೊಯ್ದರು. ಮುಂಡಗೋಡ ಸಾಲಗಾಂವಿನ ನೀಲವ್ವ ಪಕ್ಕೀರಸ್ವಾಮಿ ಹರಿಜನ ಅವರ ಜೊತೆ ಕುಸುಮಾ ಫಕ್ಕೀರಸ್ವಾಮಿ ಹರಿಜನ, ರೇಣುಕಾ ನಾಗಪ್ಪ ಹರಿಜನ ಅವರು ಆ ಭತ್ತ ಕಟಾವು ಮಾಡಿದರು. ಅದಾದ ನಂತರ ಮಾಲತೇಶ ತೊಂಡೂರು ಅವರ ಟಾಕ್ಟರ್ ಮೇಲೆ ಅದನ್ನು ಸಾಗಾಟ ಮಾಡಿದರು. 120 ಚೀಲ ಭತ್ತದ ಜೊತೆ 160 ಪೆಂಡಿ ಹುಲ್ಲುಗಳನ್ನು ಕದ್ದ ಬಗ್ಗೆ ಚನ್ನಮ್ಮ ಮಡಿವಾಳ ಅವರು ಪೊಲೀಸ್ ದೂರು ನೀಡಿದರು. ಪೊಲೀಸರು ಪ್ರಕರಣದ ವಿಚಾರಣೆ ನಡೆಸಿದರು. - [ಬೀಡಿ ಸೇದಿ ಸಿಕ್ಕಿಬಿದ್ದ ಐಟಿ ಉದ್ಯೋಗಿ!](https://mobiletime.in/2025/11/it-employee-caught-smoking-beedi/): ಗೋಕರ್ಣ ಪ್ರವಾಸಕ್ಕೆ ಬಂದಿದ್ದ ಐಟಿ ಉದ್ಯೋಗಿ ಮಹಮ್ಮದ್ ಇಮ್ರಾನ್ ಸಮುದ್ರಕ್ಕೆ ಬಿದ್ದು ಶವವಾಗಿದ್ದು, ಅವರ ಮೂವರು ಸ್ನೇಹಿತರು ಗಾಂಜಾ ಗುಂಗಿನಲ್ಲಿರುವುದು ಪೊಲೀಸ್ ತನಿಖೆಯಲ್ಲಿ ಗೊತ್ತಾಗಿದೆ. ಬೆಂಗಳೂರಿನ ಐಟಿ ಕಂಪನಿಯಲ್ಲಿ ಕೆಲಸ ಮಾಡುವ ಆರು ಜನ ಸೋಮವಾರ ಗೋಕರ್ಣಕ್ಕೆ ಬಂದಿದ್ದರು. ಗೋಕರ್ಣಕ್ಕೆ ಬರುವ ಮುನ್ನ ಅವರೆಲ್ಲರೂ ಗೋವಾ ಪ್ರವೇಶಿಸಿದ್ದು, ಅಲ್ಲಿ ಮೋಜು-ಮಸ್ತಿ ಮಾಡಿದ್ದರು. ಆರು ಜನರಲ್ಲಿ ಮೂವರು ಗಾಂಜಾ ಸೇವಿಸಿದ್ದರು. ಮೋಟು ಬೀಡಿಯಲ್ಲಿ ಗಾಂಜಾ ಪುಡಿ ಹಾಕಿ ಅವರೆಲ್ಲರೂ ಗಾಳಿ ಹೊಡೆದಿದ್ದರು. ಅದಾದ ನಂತರ ಗೋವಾದಿಂದ ಗೋಕರ್ಣ ಪ್ರವಾಸ ಮಾಡಿದ್ದರು. ಸೋಮವಾರ ಸಂಜೆ ಅರಬ್ಬಿ ಸಮುದ್ರಕ್ಕೆ ಇಳಿದು ಆಟವಾಡುವಾಗ ಆಂದ್ರಪ್ರದೇಶದ ಮಹಮ್ಮದ್ ಇಮ್ರಾನ್ ಅಲೆಗಳ ಅಬ್ಬರಕ್ಕೆ ಸಿಲುಕಿದರು. ನೀರಿನ ಆಳಕ್ಕೆ ಹೋಗಿ ಅವರು ಅಲ್ಲಿಯೇ ಸಾವನಪ್ಪಿದರು. ಅವರ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ತರಲಾಗಿದ್ದು, ಆ ಅವಧಿಯಲ್ಲಿ ಗಾಂಜಾ ನಶೆಯಲ್ಲಿದ್ದ ಅವರ ಮೂವರು ಸ್ನೇಹಿತರು ಸಿಕ್ಕಿ ಬಿದ್ದರು. ಆಂದ್ರ ಪ್ರದೇಶದ ಭಾನು ಕಿರಣ (24), ಬೆಂಗಳೂರಿನ ಧನುಷ್ ಕೆ (25) ಹಾಗೂ ವಿಜಯಪುರದ ಸೋಮೇಶ ಜೋಗೂರ್ (26) ಅವರನ್ನು ಪೊಲೀಸರು ಅಲ್ಲಿಯೇ ವೈದ್ಯಕೀಯ ತಪಾಸಣೆಗೆ ಒಳಪಡಿಸಿದರು. ಆಗ ಆ ಮೂವರು ಗಾಂಜಾ ಸೇವಿಸಿರುವುದು ಗೊತ್ತಾಯಿತು. ಗೋವಾದಲ್ಲಿ ಗಾಂಜಾ ಖರೀದಿಸಿ ಅದನ್ನು ಸೇವಿಸಿರುವ ಬಗ್ಗೆ ಅವರೆಲ್ಲರೂ ಒಪ್ಪಿಕೊಂಡರು. ಸಾವನಪ್ಪಿದ ಮಹಮ್ಮದ್ ಇಮ್ರಾನ್ ನಶೆಯಲ್ಲಿರಲಿಲ್ಲ. ಜೊತೆಗೆ ಇನ್ನಿಬ್ಬರು ಸ್ನೇಹಿತರು ದುಶ್ಚಟದಿಂದ ದೂರವಿದ್ದು, ಅವರನ್ನು ಪೊಲೀಸರು ಬಿಟ್ಟು ಕಳುಹಿಸಿದರು. ಗಾಂಜಾ ಸೇವಿಸಿದ ಮೂವರ ವಿರುದ್ಧ ಕಾನೂನು ಕ್ರಮ ಜರುಗಿಸಿದರು. - [ಕಲರ್ ಬಾಲ್ ಆಡುವುದು ಅಪರಾಧ!](https://mobiletime.in/2025/11/playing-color-ball-is-a-crime/): ಕಾರವಾರದಲ್ಲಿ ಕಲರ್ ಬಾಲ್ ಆಡುತ್ತಿದ್ದ ಮೂವರ ಮೇಲೆ ಪೊಲೀಸರು ಕಾನೂನು ಕ್ರಮ ಜರುಗಿಸಿದ್ದಾರೆ. ಆ ಮೂಲಕ ಕಲರ್ ಬಾಲ್ ಆಡುವುದು ಅಪರಾಧ ಎಂದು ಜನರಲ್ಲಿ ಅರಿವು ಮೂಡಿಸುವ ಪ್ರಯತ್ನ ಮಾಡಿದ್ದಾರೆ. ನವೆಂಬರ್ 16ರ ರಾತ್ರಿ ಕಾರವಾರದ ನೀತಿಸಾವರ ಬಳಿ ಜೂಜಾಟ ನಡೆಯುತ್ತಿತ್ತು. ನಾರಾಯಣ ದೇವಾಲಯದ ಹಿಂದೆ ಮೂವರು ಕಲರ್ ಬಾಲ್ ಆಡಿಸುತ್ತಿದ್ದರು. ಮಲ್ಲಾಪುರ ಪೊಲೀಸ್ ಠಾಣೆಯ ಸಿಬ್ಬಂದಿ ಅದನ್ನು ನೋಡಿದರು. ಪಿಎಸ್‌ಐ ಮಲ್ಲಿಕಾರ್ಜುನ ಕೊರಾಣಿ ಅವರಿಗೆ ವಿಷಯ ಮುಟ್ಟಿಸಿದರು. ಪಿಎಸ್‌ಐ ಮಲ್ಲಿಕಾರ್ಜುನ ಕೊರಾಣಿ ಅವರು ದೇಗುಲದ ಬಳಿ ಬಂದರು. ವೈಲವಾಡದ ಉಲ್ಲಾಸ ಲಕ್ಷಣ ಮಾಳಸೆಕರ್, ದಿಗಾಳಿ ಕಿನ್ನರದ ಸಂದೀಪ ರಾಮದಾಸ ನಾಯ್ಕ ಹಾಗೂ ಕಿನ್ನರದ ಕಲ್ಪೇಶ ಕೃಷ್ಣಾನಂದ ತಳ್ಳೇಕರ್ ಅವರು ಕಲರ್ ಬಾಲ್ ಆಟದಲ್ಲಿ ನಿರತರಾಗಿದನ್ನು ದೃಢಪಡಿಸಿದರು. ಅವರ ಮೇಲೆ ದಾಳಿ ನಡೆಸಿ 2700ರೂ ಹಣವನ್ನು ವಶಕ್ಕೆಪಡೆದರು. ಈ ದಾಳಿಯಲ್ಲಿ ಹಣದ ಜೊತೆ ಜೂಜಾಟಕ್ಕೆ ಬಳಸಿದ ಆರು ಬಣ್ಣದ ಮನೆಗಳ ಬಾಕ್ಸು, 30 ಪ್ಲಾಸ್ಟಿಕ್ ಕಾಯಿನ್, ಹಳೆಯ ಪತ್ರಿಕೆ ಹಾಗೂ ಇನ್ನಿತರ ಸಲಕರಣೆಗಳು ಸಿಕ್ಕವು. ಅವೆಲ್ಲವನ್ನು ಜಪ್ತು ಮಾಡಿ ಮೂವರ ವಿರುದ್ಧವೂ ಪ್ರಕರಣ ದಾಖಲಿಸಿದರು. - [ತೆಂಗಿನ ಮರದಿಂದ ಬಿದ್ದ ಕೃಷಿಕ: ಸಾವು](https://mobiletime.in/2025/11/farmer-dies-after-falling-from-coconut-tree/): ತೆಂಗಿನ ಕಾಯಿ ಕೀಳಲು ಏಣಿ ಹಾಕಿಕೊಂಡಿದ್ದ ಕುಮಟಾದ ಈರು ಮರಾಠಿ ಅವರು ಏಣಿಯಿಂದ ಕೆಳಗೆ ಬಿದ್ದಿದ್ದಾರೆ. ಮರ ಹತ್ತುವ ವಿಷಯದಲ್ಲಿ ಸಾಕಷ್ಟು ಪರಿಣಿತಿಯಿದ್ದರೂ ಏಣಿಯಿಂದ ಬಿದ್ದು ಅವರು ಕೊನೆಯುಸಿರೆಳೆದಿದ್ದಾರೆ. ಕುಮಟಾದ ಸೊಪ್ಪಿನಹೊಸಳ್ಳಿಯ ಬಂಗಿಣಿ ಬಳಿಯ ಬೆಳಗಲಗದ್ದೆ ಕೇರಿಯ ಈರು ಆಲು ಮರಾಠಿ (47) ಅವರು ಕೃಷಿ ಕೆಲಸ ಮಾಡಿಕೊಂಡಿದ್ದರು. ನವೆಂಬರ್ 17ರಂದು ಅವರು ತೆಂಗಿನ ಕಾಯಿ ಕೀಳುವ ಕೆಲಸಕ್ಕೆ ಕೈ ಹಾಕಿದರು. ಮರಕ್ಕೆ ಏಣಿ ಹಾಕಿ ಅವರು ಮೇಲೆರಿದರು. ಆದರೆ, ಆಯತಪ್ಪಿ ನೆಲಕ್ಕೆ ಬಿದ್ದು ಗಾಯ ಮಾಡಿಕೊಂಡರು. ತಕ್ಷಣ ಅವರನ್ನು ಆಸ್ಪತ್ರೆಗೆ ಕರೆದೊಯ್ಯುವ ಕೆಲಸ ನಡೆಯಿತು. ಆದರೆ, ಬಂಗಣಿಯ ಕನ್ನಡ ಶಾಲೆ ಬಳಿ ತೆರಳುವಾಗಲೇ ಕೊನೆಯುಸಿರೆಳೆದರು. - [ಶಿರಸಿ ನಗರಸಭೆಗೆ ದನ ಕಾಯುವ ಕೆಲಸ!](https://mobiletime.in/2025/11/cattle-herding-work-for-the-sirsi-municipality/): ಶಿರಸಿಯಲ್ಲಿ ಬೇಕಾಬಿಟ್ಟಿಯಾಗಿ ಓಡಾಡಿಕೊಂಡಿರುವ ಬೀಡಾಡಿ ದನಗಳ ನಿಯಂತ್ರಣಕ್ಕಾಗಿ ಶಾಸಕ ಭೀಮಣ್ಣ ನಾಯ್ಕ ಹಾಗೂ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಜಂಟಿ ಸಭೆ ನಡೆಸಿದ್ದಾರೆ. ಜೀವಜಲ ಕಾರ್ಯಪಡೆ ಅಧ್ಯಕ್ಷ ಶ್ರೀನಿವಾಸ ಹೆಬ್ಬಾರ್, ಬಿಜೆಪಿ ಮುಖಂಡ ಅನಂತಮೂರ್ತಿ ಹೆಗಡೆ, ಹೋರಾಟಗಾರ ಉಪೇಂದ್ರ ಪೈ, ಭಜರಂಗದಳದ ಅಮಿತ್ ಶೇಟ್ ಅವರು ಈ ಸಭೆಯಲ್ಲಿ ಭಾಗಿಯಾಗಿ ಚರ್ಚೆ ನಡೆಸಿದ್ದಾರೆ. ಪ್ರತಿ ದಿನ ರಾತ್ರಿ ಬೀಡಾಡಿ ದನಗಳು ರಸ್ತೆ ಮದ್ಯೆ ಮಲಗುತ್ತಿದ್ದು, ಇದರಿಂದ ವಾಹನ ಸವಾರರು ಸಮಸ್ಯೆ ಅನುಭವಿಸುತ್ತಿದ್ದಾರೆ. ಪ್ರಯಾಣಿಕರ ವಾಹನದ ಜೊತೆ ಸರಕು-ಸಾಗಾಟ ವಾಹನ ಸವಾರರು ಸಹ ಬೀಡಾಡಿ ದನಗಳ ಕಾಟದಿಂದ ಬೇಸತ್ತಿದ್ದಾರೆ. ಹಾರ್ನ ಹಾಕಿದರೂ ದನ ರಸ್ತೆ ಬಿಟ್ಟು ಕದಲದ ಕಾರಣ ಚಾಲಕರೇ ವಾಹನ ನಿಲ್ಲಿಸಿ ಅವುಗಳನ್ನು ಓಡಿಸಿ ಮುಂದೆ ಸಾಗುತ್ತಿದ್ದಾರೆ. ಐದು ನಿಮಿಷ ವಾಹನ ಚಲಿಸಿದ ನಂತರ ಮತ್ತೆ ಇನ್ನಷ್ಟು ದನಗಳು ರಸ್ತೆ ಮೇಲೆ ಕಾಣುತ್ತಿವೆ. ಅನೇಕ ಬಾರಿ ದನಗಳಿಗೆ ವಾಹನ ಗುದ್ದಿದ ಉದಾಹರಣೆಗಳು ಇವೆ. ಹೀಗಾಗಿ ರಾತ್ರಿ ವೇಳೆ ಶಿರಸಿ ಮಾರ್ಗವಾಗಿ ಸಂಚರಿಸುವವರಿಗೆ ಬೀಡಾಡಿ ದನದ ಸಮಸ್ಯೆ ದೊಡ್ಡ ತಲೆನೋವಾಗಿದೆ. ಮೊದಲು ಬೀಡಾಡಿ ದನಗಳ ಕೊಂಬಿಗೆ ರೇಡಿಯಂ ಅಂಟಿಸುವ ಕೆಲಸ ನಡೆದಿದ್ದು, ಅದರಿಂದ ಸಮಸ್ಯೆ ದೂರವಾಗಿಲ್ಲ. ರಸ್ತೆ ಮೇಲೆ ದನ ಮಲಗುವುದನ್ನು ತಪ್ಪಿಸಲು ಸಾಧ್ಯವಾಗಲಿಲ್ಲ. ರಸ್ತೆ ಮೇಲೆ ಅಡ್ಡಾಡುವ ಗೂಳಿಗಳು ಹಗಲಿನಲ್ಲಿ ಸಾರ್ವಜನಿಕರಿಗೂ ಭಯಪಡಿಸುತ್ತಿವೆ. ಬೀಡಾಡಿ ದನಗಳ ಮಾಲಕರ ಹುಟುಕಾಟಕ್ಕೆ ನಗರಸಭೆ ಅನೇಕ ಪ್ರಕಟಣೆ ನೀಡಿದೆ. ಆದರೆ, ಯಾರೊಬ್ಬರು `ಆ ದನ ನಮ್ಮದು’ ಎನ್ನುತ್ತಿಲ್ಲ. ಹಸು ಕರು ಹಾಕಿದಾಗ ಹಾಲು ಹಿಂಡಲು ಬರುವ ಜನ ಅದನ್ನು ಕೊಟ್ಟಿಗೆಗೆ ಒಯ್ದು ಸಾಕುತ್ತಿಲ್ಲ. ರಸ್ತೆ ಬದಿಯಲ್ಲಿನ ಪ್ಲಾಸ್ಟಿಕ್, ಬಿಸಾಕಿದ ತ್ಯಾಜ್ಯ, ಹೊಟೇಲ್ ಆಹಾರ ತಿಂದು ಬೆಳೆಯುತ್ತಿರುವ ಜಾನುವಾರುಗಳ ಬಗ್ಗೆ ಕಾಳಜಿವಹಿಸುವವರೂ ಇಲ್ಲ. ಹಸು ಕಳ್ಳತನ ನಡೆದಾಗ ಮಾತ್ರ ಇದೆಲ್ಲ ವಿಷಯ ಜೋರು ಸದ್ದು ಮಾಡುತ್ತಿದ್ದು, ನಂತರ ಬೀಡಾಡಿ ದನಗಳ ಸುದ್ದಿಗೆ ಬರುವವರಿಲ್ಲ. ಈ ಎಲ್ಲಾ ಸಮಸ್ಯೆ ಬಗೆಹರಿಸಲು ಇದೀಗ ಜನಪ್ರತಿನಿಧಿ ಹಾಗೂ ಅಧಿಕಾರಿಗಳು ಸಭೆ ನಡೆಸಿದ್ದಾರೆ. ಮಂಗಳವಾರ ಬಿಡಾಡಿ ದನಗಳಿಂದ ಆಗುವ ಸಾವು-ನೋವು ನಿಯಂತ್ರಣಕ್ಕೆ ಸಭೆ ನಡೆದಿದೆ. ದನಗಳ ಮಾಲಕರನ್ನು ಪತ್ತೆ ಮಾಡಿ ಅವರ ವಿರುದ್ಧ ಕಠಿಣ ಕ್ರಮ ಜರುಗಿಸಲು ನಿರ್ಧರಿಸಲಾಗಿದೆ. ನಗರಸಭೆ, ಪಶು ಇಲಾಖೆ, ತಹಶೀಲ್ದಾರ್, ಯೋಜನಾ ಪ್ರಾಧಿಕಾರದವರು ಈ ಸಭೆಯಲ್ಲಿದ್ದು ಸಾರ್ವಜನಿಕರು ಸಹ ಸಮಸ್ಯೆ ಹೇಳಿಕೊಂಡಿದ್ದಾರೆ. ತಹಶಿಲ್ದಾರ ಪಟ್ಟರಾಜ ಗೌಡಾ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಜಗದೀಶ ಗೌಡ್ರು, ಡಿವಾಎಸ್ಪಿ ಗೀತಾ ಪಾಟಿಲ್, ನಗರಸಭೆ ಪೌರಾಯುಕ್ತ ಪ್ರಕಾಶ ಚನ್ನಪ್ಪನವರ್, ತಾ ಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಚನ್ನಬಸವ ಅವರು ಸಮಸ್ಯೆ ಆಲಿಸಿದ್ದಾರೆ. ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿದ ಶಿರಸಿ ನಗರಸಭೆ ಬೀಡಾಡಿ ದನಗಳ ಮಾಲಕರನ್ನು ಪತ್ತೆ ಮಾಡಲು ನಗರಸಭೆ ನಿರ್ಧರಿಸಿದೆ. ಇದಕ್ಕಾಗಿ ವಿಶೇಷ ಕಾರ್ಯಾಚರಣೆ ನಡೆಸಲು ಯೋಜನೆ ಸಿದ್ಧಪಡಿಸಿದೆ. ಐದು ವರ್ಷದ ಹಿಂದೆ ಬೀಡಾಡಿ ದನಗಳ ನಿಯಂತ್ರಣಕ್ಕಾಗಿ ನಿರ್ಮಿಸಿದ ಕೊಂಡವಾಡೆ ಇದೀಗ ಪ್ರಯೋಜನಕ್ಕೆ ಬರುವ ಆಶಾಭಾವನೆವ್ಯಕ್ತವಾಗಿದೆ. - [ಬುಡಕಟ್ಟು ನಾಯಕನ ಸಾಧನೆ: ಸ್ಮರಣೆ](https://mobiletime.in/2025/11/achievement-of-a-tribal-leader-memory/): ಬ್ರಿಟಿಷರ ಬಂದೂಕಿನ ಎದುರು ಬಿಲ್ಲು-ಬಾಣ ಪ್ರಯೋಗಿಸಿ ನಿರ್ದಿಷ್ಟ ಪ್ರದೇಶಗಳ ಹಕ್ಕಿಗಾಗಿ ಹೋರಾಡಿದ ಬುಡಕಟ್ಟು ಸಮುದಾಯದ ಬಿರ್ಸಾ ಮುಂಡಾ ಅವರ ಸಾಧನೆಯನ್ನು ಶಿರಸಿಯ ಜನ ಸ್ಮರಿಸಿದ್ದಾರೆ. ಬಿರ್ಸಾಮುಂಡಾ ಜಯಂತಿ ಅಂಗವಾಗಿ ಶಿರಸಿಯ ಓಣಿಕೇರಿ ಸುಗಾವಿಯ ನೆಹರು ಪ್ರೌಢಶಾಲೆ ಆವರಣದಲ್ಲಿ ಮೂರು ದಿನಗಳ ಕಾಲ ಹಲವು ಬಗೆಯ ಕಾರ್ಯಕ್ರಮಗಳು ನಡೆದಿವೆ. ಕಾಡಿನಂಚಿನಲ್ಲಿ ಉಳಿದು ಕಾಡಿನ ಪ್ರಾಣಿಗಳು ಮತ್ತು ನಿಸರ್ಗದೊಂದಿಗೆ ಬದುಕಿದ ಬಿರ್ಸಾ ಮುಂಡಾ ಅವರು ತಮ್ಮ ಹಕ್ಕುಗಳಿಗಾಗಿ ಬ್ರಿಟಿಷರ ವಿರುದ್ಧ ಸಮರ ಸಾರಿದ್ದರು. ಬುಡಕಟ್ಟು ಸಮುದಾಯದ ನಾಯಕರಾಗಿದ್ದ ಅವರು ಒಂದು ಸಮುದಾಯಕ್ಕೆ ಮಾತ್ರ ಸೀಮಿತವಾಗಿರದೇ ಸರ್ವ ಜನರ ಅಭಿವೃದ್ಧಿಗೆ ಹೋರಾಟ ನಡೆಸಿದ್ದರು. ಅತಂತ್ಯ ಕಡು ಬಡತನದಲ್ಲಿ ಆದಿವಾಸಿ ಕುಟುಂಬದಲ್ಲಿ ಜನಿಸಿದ ಹುಟ್ಟಿದ ಬಿರ್ಸಾ ಮುಂಡಾ ಅವರು ಕೊಳಲು ನುಡಿಸುತ್ತಾ ಜನರನ್ನು ತಮ್ಮಡೆ ಆಕರ್ಷಿಸುತ್ತಿದ್ದರು. ದೂರದೃಷ್ಠಿ ಉಳ್ಳವರಾಗಿದ್ದ ಅವರು ಬುಡಕಟ್ಟು ಜನಾಂಗದ ಕಲೆ, ಸಂಸ್ಕೃತಿ, ಅಚಾರ ವಿಚಾರಗಳು ನಶಿಸುವುದನ್ನು ತಡೆಯುವುದಕ್ಕಾಗಿ ಶ್ರಮಿಸಿದ್ದರು. ಬ್ರಿಟಿಷರ ದಬ್ಬಾಳಿಕೆ ವಿರೋಧಿಸಿ ಆದಿವಾಸಿ ಸಮುದಾಯದಲ್ಲಿ ಸಾಮಾಜಿಕ ನ್ಯಾಯ, ಸಾಂಸ್ಕೃತಿಕ ಪುನರುಜ್ಜೀವನ ಮತ್ತು ಧಾರ್ಮಿಕ ಬದಲಾವಣೆಗಳನ್ನು ತರಲು ಯತ್ನಿಸಿದರು. ಈ ಎಲ್ಲಾ ಹಿನ್ನಲೆ ಬಿರ್ಸಾ ಮುಂಡಾ ಅವರ ಹೆಸರಿನಲ್ಲಿ ರಾಂಚಿಯಲ್ಲಿ ವಿಮಾನ ನಿಲ್ದಾಣ, ಕೃಷಿ ಕಾಲೇಜು, ಆಟದ ಮೈದಾನಗಳಿವೆ. ಅವರ ಜನ್ಮದಿನವನ್ನು ಜಾಖಂರ್ಡನ ಸಂಸ್ಥಾಪನ ದಿನ ಎಂದು ಸಹ ಕರೆಯುತ್ತಾರೆ. ಈ ಎಲ್ಲಾ ವಿಷಯವನ್ನು ನೆಹರೂ ಪ್ರೌಢಶಾಲೆ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸ್ಮರಿಸಲಾಯಿತು. ಉನ್ನತಿ ಸಂಗಡಿಗರ ಪ್ರಾರ್ಥನೆಯೊಂದಿಗೆ ಶುರುವಾದ ಈ ಕಾರ್ಯಕ್ರಮದಲ್ಲಿ ಸುಗ್ಗಾವಿ ಗ್ರಾಮ ಪಂಚಾಯತ ಸದಸ್ಯರಾಗಿ ಎರಡು ಬಾರಿ ಆಯ್ಕೆಯಾಗಿರುವ ಬುಡಕಟ್ಟು ಸಮುದಾಯದ ಮಹಿಳೆ ಮಮತಾ ರಾಜಪ್ಪ ಬಿ, ಸುಗ್ಗಾವಿ ಬಳಿಯ ಶ್ರೀ ಮಹಾಗಣಪತಿ ಸಹಕಾರಿ ಸಂಘದ ಹಿರಿಯ ಸಹಕಾರಿ ಶ್ರೀಪಾದ ರಾಯ್ಸದ, ಶಿರಸಿಯ ಸುಭದ್ರಾ ಫೌಂಡೇಶನ್ ಅಧ್ಯಕ್ಷೆ ದೀಪಾ ತಳವಾರ್ ಮತ್ತು ನಟನೆ ನಿರ್ದೇಶನ ಮಾಡುತ್ತಿರುವ ಸುಗ್ಗಾವಿ ರಾಘವೇಂದ್ರ ಭಟ್ಟ ಅವರನ್ನು ಗೌರವಿಸಲಾಯಿತು. ಜಾನಪದ ನೃತ್ಯ, ಬಿರ್ಸಾಮುಂಡಾ ಅವರ ಬಗ್ಗೆ ನಾಟಕ, ಗೊಂಬೆಯಾಟ, ಡೊಳ್ಳು ಕುಣಿತ, ಭರತನಾಟ್ಯ, ಸಂಗೀತ ಪ್ರದರ್ಶನ, ಚಿತ್ರಕಲೆ, ಪುಸ್ತಕ ಪ್ರದರ್ಶನ ಹಾಗೂ ಪ್ರಬಂಧ ಸ್ಪರ್ಧೆಗಳು ನಡೆದವು. ವಿಜೇತರಿಗೆ ಶ್ರೀಯಲ್ಲಮ್ಮ ಕಲ್ಚರಲ್ ಅಸೊಶಿಯೇಶನ್’ನ ವಸಂತ ನಾಯ್ಕ ಅವರು ಬಹುಮಾನ ವಿತರಿಸಿದರು. ಶಾಲೆಯ ಮುಖ್ಯ ಶಿಕ್ಷಕರಾದ ರಾಜಪ್ಪ ಬಿ ಅವರು ಇದ್ದರು. - [ಅಕ್ರಮ ಸಂಬoಧದ ಅನುಮಾನ: ರಾಜಧಾನಿಯಲ್ಲಿ ಸಿಕ್ಕಿತು ಒಂಟಿ ಮಹಿಳೆಯ ಹೆಣ!](https://mobiletime.in/2025/11/suspicion-of-illicit-relationship-body-of-single-woman-found-in-rajdani/): ಬೆಂಗಳೂರಿನಲ್ಲಿ ವಾಸವಾಗಿದ್ದ ಶಿರಸಿಯ ಪ್ರಮೋದಾ ನಾಯ್ಕ ಅವರು ಕೊಲೆಯಾಗಿದ್ದಾರೆ. ಅಲ್ಲಿನ ಪೊಲೀಸರು ಕೊಲೆಗಾರರ ಹುಡುಕಾಟ ನಡೆಸಿದ್ದಾರೆ. ಬೆಂಗಳೂರಿನ ಬೊಮ್ಮನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಹೊಂಗಸAದ್ರದಲ್ಲಿ ಪ್ರಮೋದಾ ನಾಯ್ಕ (37) ಅವರು ವಾಸವಾಗಿದ್ದರು. ಸಿದ್ದಾಪುರ ಮೂಲದ ಸುರೇಶ ಎಂಬಾತರನ್ನು ಅವರು ಮದುವೆ ಆಗಿದ್ದರು. ದಾಂಪತ್ಯದಲ್ಲಿ ಬಿರುಕು ಮೂಡಿದ ಕಾರಣ ಪತಿಯಿಂದ ಪ್ರತ್ಯೇಕವಾಗಿ ಅವರು ವಾಸವಾಗಿದ್ದರು. ಗಾರ್ಮೆಂಟ್ಸ ಒಂದರಲ್ಲಿ ಪ್ರಮೋದಾ ನಾಯ್ಕ ಅವರು ಕೆಲಸ ಮಾಡಿಕೊಂಡಿದ್ದರು. ಸೋಮವಾರ ರಾತ್ರಿ ಅವರ ಕೊಲೆ ನಡೆದಿರುವುದು ಗೊತ್ತಾಗಿದೆ. ಅನೈತಿಕ ಸಂಬAಧದ ಸಂಶಯವೇ ಈ ಕೊಲೆಗೆ ಕಾರಣ ಎಂದು ಶಂಕಿಸಲಾಗಿದೆ. ಪ್ರಮೋದಾ ನಾಯ್ಕ ಅವರಿಗೆ ಇಬ್ಬರು ಮಕ್ಕಳಿದ್ದಾರೆ. ದುಷ್ಕರ್ಮಿಗಳು ಪ್ರಮೋದಾ ನಾಯ್ಕ ಅವರ ಮನೆಗೆ ನುಗ್ಗಿ ಮಾರಕ ಆಯುಧಗಳಿಂದ ಹಲ್ಲೆ ನಡೆಸಿದ್ದಾರೆ. ಆ ನೋವಿಗೆ ಅವರು ಅಲ್ಲಿಯೇ ಸಾವನಪ್ಪಿದ್ದಾರೆ. ರಾತ್ರಿಯೇ ದುಷ್ಕರ್ಮಿಗಳು ಪರಾರಿಯಾಗಿದ್ದು, ತನಿಖೆ ಮುಂದುವರೆದಿದೆ. - [ಮಕ್ಕಳ ಉದ್ಯಾನವನ: ಪುಂಡಪೋಕರಿ ಹಾವಳಿಗೆ ಕಡಿವಾಣ!](https://mobiletime.in/2025/11/childrens-park-curbing-the-menace-of-poaching/): ಹೊನ್ನಾವರದ ಮಕ್ಕಳ ಉದ್ಯಾನವನದಲ್ಲಿ ನಡೆಯುವ ಅಕ್ರಮ ಚಟುವಟಿಕೆಗಳ ಬಗ್ಗೆ ಅರಿಯಲು ಪೊಲೀಸರು ಆಸಕ್ತಿವಹಿಸಿದ್ದಾರೆ. ಮಂಗಳವಾರ ಪೊಲೀಸರು ಭೇಟಿ ನೀಡಿದ್ದು, ಅಲ್ಲಿನ ವಾತಾವರಣ ಪರಿಶೀಲಿಸಿದ್ದಾರೆ. ಹೆದ್ದಾರಿ ಅಂಚಿನಲ್ಲಿರುವ ಮಕ್ಕಳ ಉದ್ಯಾನವನದಲ್ಲಿ ಪುಂಡ-ಪೋಕರಿಗಳ ಹಾವಳಿ ಹೆಚ್ಚಾಗಿದ್ದು, ಎಲ್ಲೆಂದರಲ್ಲಿ ಸರಾಯಿ ಬಾಟಲಿಗಳು ಬಿದ್ದಿದ್ದವು. ಅರ್ದ ಸೇದಿದ ಸಿಗರೇಟುಗಳು ಅಲ್ಲಿ ಸಾಕಷ್ಟು ಪ್ರಮಾಣದಲ್ಲಿದ್ದವು. ಶೌಚಾಲಯ ಸರಿಯಾಗಿರಲಿಲ್ಲ. ಮಕ್ಕಳ ಆಟಿಕೆಗಳು ಮುರಿದಿದ್ದವು. ೨೦೨೩ರಲ್ಲಿ ಸ್ಥಾಪಿಸಲಾದ ಈ ಉದ್ಯಾನವನ ಎರಡೇ ವರ್ಷದಲ್ಲಿ ಹಾಳಾಗಿದ್ದವು. ಒಟ್ಟಿನಲ್ಲಿ ಮಕ್ಕಳಿಗಾಗಿ ನಿರ್ಮಿಸಿದ ಉದ್ಯಾನವನಕ್ಕೆ ಮಕ್ಕಳು ಪ್ರವೇಶಿಸುವ ಹಾಗಿರಲಿಲ್ಲ. ಜನಸಾಮಾನ್ಯರ ಸಮಾಜ ಕಲ್ಯಾಣ ಕೇಂದ್ರದ ಅಧ್ಯಕ್ಷ ಆಗ್ನೇಲ್ ರೋಡಿಗ್ರಸ್ ಅವರು ಈ ಬಗ್ಗೆ ದೂರು ಸಲ್ಲಿಸಿದ್ದರು. ಅಲ್ಲಿನ ಅಕ್ರಮ ಚಟುವಟಿಕೆ ತಡೆಯುವಂತೆ ಆಗ್ರಹಿಸಿದ್ದರು. ಆ ದೂರಿನ ಹಿನ್ನಲೆ ಪಿಎಸ್‌ಐ ಮಂಜುನಾಥ ಅವರು ಮಂಗಳವಾರ ಉದ್ಯಾನವನಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. `ಪೊಲೀಸ್ ಬೀಟ್ ವ್ಯವಸ್ಥೆ ಮೂಲಕ ಉದ್ಯಾನವನದಲ್ಲಿನ ಅಕ್ರಮ ಚಟುವಟಿಕೆ ತಡೆಯಬೇಕು’ ಎಂದು ಸುಧಾಕರ ನಾಯ್ಕ ಹಾಗೂ ಹನುಮಂತ ಗೌಡ ಅವರು ಆಗ್ರಹಿಸಿದ್ದಾರೆ. ಪೊಲೀಸರು ಕ್ರಮ ಜರುಗಿಸುವ ಭರವಸೆ ನೀಡಿದ್ದಾರೆ. - [ಗ್ಯಾಸ್ ಸೋರಿಕೆ: ಹೆದ್ದಾರಿ ಸಂಚಾರ ನಿಷೇಧಿಸಿ ಡೀಸಿ ಆದೇಶ!](https://mobiletime.in/2025/11/gas-leak-dci-orders-ban-on-highway-traffic/): ಹುಬ್ಬಳ್ಳಿ-ಅಂಕೋಲಾ ರಾಷ್ಟಿಯ ಹೆದ್ದಾರಿ ಮೇಲೆ ಸಂಚರಿಸುತ್ತಿದ್ದ ಗ್ಯಾಸ್ ಟ್ಯಾಂಕರ್ ಅಂಕೋಲಾದ ಬೊಗ್ರಿಬೈಲ್ ನವಗದ್ದೆ ಬಳಿ ಪಲ್ಟಿಯಾಗಿದೆ. ಪರಿಣಾಮ ಟ್ಯಾಂಕರ್ ಒಳಗಿದ್ದ ಮಿಥೇನ್ ಗ್ಯಾಸ್ ಸೋರಿಕೆಯಾಗುತ್ತಿದೆ. ಈ ಹಿನ್ನಲೆ ಉತ್ತರ ಕನ್ನಡ ಜಿಲ್ಲಾಧಿಕಾರಿ ಕೆ ಲಕ್ಷ್ಮೀಪ್ರಿಯಾ ಅವರು ತುರ್ತು ಆದೇಶ ಹೊರಡಿಸಿದ್ದಾರೆ. ಸಾರ್ವಜನಿಕ ಸುರಕ್ಷತೆ ಹಿನ್ನಲೆ ಗ್ಯಾಸ್ ಸೋರಿಕೆ ಸ್ಥಳದಿಂದ ಸುತ್ತಲಿನ 1 ಕಿಮೀ ಪ್ರದೇಶದಲ್ಲಿ ಅವರು ಓಡಾಟ ನಿಷೇಧಿಸಿ ಆದೇಶಿಸಿದ್ದಾರೆ. ಗ್ಯಾಸ್ ಸೋರಿಕೆ ಕಾರ್ಯಾಚರಣೆ ಮುಕ್ತಾಯದವರೆಗೆ ಹಾಗೂ ಮುಂದಿನ ಆದೇಶದವರೆಗೆ ಈ ಮಾರ್ಗದ ಸಂಚಾರ ನಿಷೇಧಿಸಲಾಗಿದೆ. ರಕ್ಷಣಾ ಸಿಬ್ಬಂದಿಹೊರತುಪಡಿಸಿ ಉಳಿದವರು ಇಲ್ಲಿ ಓಡಾಟ ನಡೆಸುವ ಹಾಗಿಲ್ಲ. ವಾಹನಗಳನ್ನು ಸಹ ತಡೆಹಿಡಿಯಲಾಗಿದ್ದು, ಬೊಗ್ರಿಬೈಲ್ ಹಾಗೂ ಸುತ್ತಲಿನ ಪ್ರದೇಶದಲ್ಲಿ ಓಡಾಟ ನಡೆಸುವುದನ್ನು ನಿಷೇಧಿಸಲಾಗಿದೆ. ಸದ್ಯ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದ್ದು, ಕಿಂಚಿತ್ತು ಅವಘಡ ನಡೆಯದಂತೆ ಮುನ್ನಚ್ಚರಿಕೆವಹಿಸಲಾಗಿದೆ. - [ಅವನೇ ಇವ: ಬ್ಯಾಂಕಿಗೆ ಬೆಂಕಿ ಹಚ್ಚಿದವ!](https://mobiletime.in/2025/11/this-is-him-the-one-who-set-the-bank-on-fire/): ಯಲ್ಲಾಪುರದ ಉಮ್ಮಚ್ಗಿಯಲ್ಲಿನ ಕರ್ನಾಟಕ ಕರ್ನಾಟಕ ಗ್ರಾಮೀಣ ವಿಕಾಸ್ ಬ್ಯಾಂಕಿಗೆ ಬೆಂಕಿ ಹಚ್ಚಿದವರನ್ನು ಪೊಲೀಸರು ಪತ್ತೆ ಮಾಡಿದ್ದಾರೆ. ದರೋಡೆಕೋರರು ಬ್ಯಾಂಕಿನಲ್ಲಿದ್ದ ಹಣ-ಒಡವೆ ದೋಚಲು ಬಂದಿದ್ದು, ಅದು ಸಾಧ್ಯವಾಗದೇ ಇದ್ದಾಗ ಸಿಟ್ಟಿನಲ್ಲಿ ಬೆಂಕಿ ಹಚ್ಚಿ ಪರಾರಿಯಾಗಿದ್ದು ತನಿಖೆಯಿಂದ ಗೊತ್ತಾಗಿದೆ. ನವೆಂಬರ್ 12ರಂದು ಉಮ್ಮಚ್ಗಿಯ ಕರ್ನಾಟಕ ಕರ್ನಾಟಕ ಗ್ರಾಮೀಣ ವಿಕಾಸ್ ಬ್ಯಾಂಕಿನಲ್ಲಿ ಹೊಗೆ ಬರುತ್ತಿತ್ತು. ಇದನ್ನು ನೋಡಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಆ ದಿನ ನಸುಕಿನಲ್ಲಿ ದರೋಡೆಕೋರರು ಬ್ಯಾಂಕ್ ಆವರಣ ಪ್ರವೇಶಿಸಿದ್ದು, ಕಿಟಕಿ ಮುರಿದು ಬ್ಯಾಂಕ್ ಒಳಗೆ ನುಗ್ಗಿದ್ದರು. ಸೇಫ್ ಲಾಕರ್ ಒಡೆಯುವ ಪ್ರಯತ್ನ ನಡೆಸಿದಾಗ ಬ್ಯಾಂಕಿನ ಸೈರನ್ ಸದ್ದು ಮಾಡಿದ್ದರಿಂದ ಬ್ಯಾಂಕಿಗೆ ಬೆಂಕಿ ಹಚ್ಚಿ ಪರಾರಿಯಾಗಿದ್ದರು. ಶಿರಸಿ ಡಿವೈಎಸ್ಪಿ ಗೀತಾ ಪಾಟೀಲ್ ಸ್ಥಳಕ್ಕೆ ಆಗಮಿಸಿ ಸಾಕ್ಷಿ ಸಂಗ್ರಹಿಸಿದ್ದರು. ಯಲ್ಲಾಪುರ ಪಿಐ ರಮೇಶ ಹಾನಾಪುರ ಅವರು ತಂಡ ಕಟ್ಟಿಕೊಂಡು ದುಷ್ಟರ ಶೋಧ ಶುರು ಮಾಡಿದ್ದರು. ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಿದಾಗ ಮಂಗಳೂರಿನ ಮಹ್ಮದರಫಿಕ್ ಮೇಲೆ ಅನುಮಾನ ಮೂಡಿತು. ತನಿಖೆ ಮುಂದುವರೆಸಿದಾಗ ಮಹ್ಮದರಫಿಕ್ ತನ್ನ ಸಹಚರರ ಜೊತೆ ಸೇರಿ ಬ್ಯಾಂಕ್ ಒಳಗೆ ನುಗ್ಗಿದ್ದು ಖಚಿತವಾಯಿತು. ಪೊಲೀಸರ ಮೇಲೆ ಹಲ್ಲೆ: ಆತ್ಮಹತ್ಯೆ ಪ್ರಯತ್ನ! ಈ ಹಿನ್ನಲೆ ಯಲ್ಲಾಪುರ ಪಿಎಸ್‌ಐ ರಾಜಶೇಖರ ವಂದಲಿ, ಸಿದ್ದಪ್ಪ ಗುಡಿ ಹಾಗೂ ಪೊಲೀಸ್ ಸಿಬ್ಬಂದಿ ಶಫಿ ಶೇಖ್ ಸೇರಿ ಮಹ್ಮದರಫಿಕ್ ಅವರ ಬೆನ್ನು ಬಿದ್ದರು. ನವೆಂಬರ್ 17ರಂದು ಮಹ್ಮದರಫಿಕ್ ಬೆಳಗಾವಿಯಲ್ಲಿರುವುದು ಗೊತ್ತಾಯಿತು. ಖಾಸಾಭಾಗದ ವಾಲಿ ಚೌಕ್ ಬಳಿಯ ವೋಡ್ಕಾ ಬಾರ್ ಮುಂದೆ ಮಹ್ಮದರಫಿಕ್ ಅಲೆದಾಡುತ್ತಿದ್ದರು. ಪೊಲೀಸರು ಅಲ್ಲಿಗೆ ತೆರಳಿ ಆರೋಪಿಯನ್ನು ಬಂಧಿಸುವ ಪ್ರಯತ್ನ ನಡೆಸಿದರು. ಪೊಲೀಸರನ್ನು ಕಂಡ ಮಹ್ಮದರಫಿಕ್ ಅವರ ಮೇಲೆ ಚಾಕುವಿನ ದಾಳಿ ನಡೆಸಿದರು. ಸಿದ್ದಪ್ಪ ಗುಡಿ ಹಾಗೂ ರಾಜಶೇಖರ ವಂದಲಿ ದಾಳಿಯಿಂದ ತಪ್ಪಿಸಿಕೊಂಡರು. ಅದಾಗಿಯೂ ಸಿದ್ದಪ್ಪ ಗುಡಿ ಅವರ ಕಾಲಿಗೆ ಪೆಟ್ಟಾಯಿತು. ಶಫಿ ಶೇಖ್ ಅವರು ನೋವುಂಡರು. ಪೊಲೀಸರ ಬಳಿ ಸಿಕ್ಕಿ ಬೀಳಲು ಮಹ್ಮದರಫಿಕ್ ಸಿದ್ಧವಿರಲಿಲ್ಲ. ಹೀಗಾಗಿ ಅದೇ ಚಾಕುವಿನಿಂದ ಮಹ್ಮದರಫಿಕ್ ತಮ್ಮ ಹೊಟ್ಟೆಗೆ ನಾಲ್ಕು ಬಾರಿ ಚುಚ್ಚಿಕೊಂಡರು. ಆತ್ಮಹತ್ಯೆ ಪ್ರಯತ್ನಿಸಿದ ಬ್ಯಾಂಕ್ ದರೋಡೆಕೋರನನ್ನು ಪೊಲೀಸರೇ ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದರು. ಆರೋಪಿ ತಪ್ಪಿಸಿಕೊಳ್ಳದ ಹಾಗೇ ಪೊಲೀಸರು ಭದ್ರತೆ ನೀಡಿದ್ದು, ರಾಜಶೇಖರ ವಂದಲಿ ಅವರು ಬೆಳಗಾವಿ ಪೊಲೀಸ್ ಠಾಣೆಗೆ ಮಾಹಿತಿ ನೀಡಿದರು. ನಡೆದ ವಿದ್ಯಮಾನಗಳ ಬಗ್ಗೆ ವಿವರಿಸಿ ದಡಾಯಿತರ ವಿರುದ್ಧ ಮತ್ತೊಂದು ದೂರು ದಾಖಲಿಸಿದರು. ಬ್ಯಾಂಕ್ ದರೋಡೆ ಪ್ರಕರಣದಲ್ಲಿ ಮಹ್ಮದರಫಿಕ್ ಪ್ರಮುಖ ಆರೋಪಿ. ಇನ್ನೂ ಮೂವರು ಈ ಪ್ರಕರಣದಲ್ಲಿ ಭಾಗಿಯಾದ ಅನುಮಾನವಿದ್ದು, ಪೊಲೀಸರು ಅವರನ್ನು ಬಂಧಿಸುವ ಸಾಧ್ಯತೆ ಹೆಚ್ಚಿದೆ. - [2025 ನವೆಂಬರ್ 18ರ ದಿನ ಭವಿಷ್ಯ](https://mobiletime.in/2025/11/prediction-for-november-18-2025/): ಮೇಷ ರಾಶಿ: ಈ ದಿನ ನಿಮಗೆ ಕಾರ್ಯಕ್ಷೇತ್ರದಲ್ಲಿ ಸಾಧನೆ ಸಾಧ್ಯವಿದೆ. ಆರ್ಥಿಕ ಲಾಭದ ಸೂಚನೆ ಸಿಗಲಿದೆ. ಕುಟುಂಬದ ಜೊತೆ ಒಳ್ಳೆಯ ಮಾತುಕಥೆ ನಡೆಯಲಿದೆ. ವೃಷಭ ರಾಶಿ: ಹಣಕಾಸಿನಲ್ಲಿ ಸುಧಾರಣೆ ಕಾಣಬಹುದು. ಕೆಲಸದ ಒತ್ತಡ ಕಡಿಮೆಯಾಗುತ್ತದೆ. ಸಂಗಾತಿಯೊoದಿಗೆ ಸಮಯ ಹಂಚಿಕೊಳ್ಳಿ. ಹೊಸ ಯೋಜನೆಗಳು ಆರಂಭಿಸಲು ಅನುಕೂಲ. ಮಿಥುನ ರಾಶಿ: ಭಾವನಾತ್ಮಕ ಸಂಬoಧಗಳ ಬೆಲೆ ಗೊತ್ತಾಗಲಿದೆ. ಉದ್ಯೋಗದಲ್ಲಿ ಬೆಳವಣಿಗೆ ಆಗಲಿದೆ. ಆರೋಗ್ಯದಲ್ಲಿ ಚಿಂತೆ ತಪ್ಪಿಸಿ. ಹೊಸ ಮಿತ್ರರ ಸಂಪರ್ಕ ಸಾಧ್ಯವಿದೆ. ಕರ್ಕ ರಾಶಿ: ನಿಮ್ಮ ಮನೋಬಲ ಹೆಚ್ಚಾಗುತ್ತದೆ. ಸಮಸ್ಯೆಗಳ ಪರಿಹಾರ ಸಿಗುವ ಸಾಧ್ಯತೆಯಿದೆ. ಕುಟುಂಬದಲ್ಲಿ ಶುಭ ಸುದ್ದಿ ಕೇಳಲಿದ್ದೀರಿ. ನಿಯಮಿತ ವ್ಯಾಯಾಮ ಅನುಸರಿಸಿ. ಧರ್ಮ ಕಾರ್ಯಗಳಲ್ಲಿ ಭಾಗವಹಿಸಿ. ಸಿಂಹ ರಾಶಿ: ಉದ್ಯೋಗದಲ್ಲಿ ಪ್ರಗತಿ ಸ್ಪಷ್ಟವಾಗಿ ಕಾಣುತ್ತದೆ. ಅಧಿಕಾರ ವರ್ಗದವರಿಂದ ನೆರವು ಸಿಗಲಿದೆ. ಸ್ವಂತ ವಿಚಾರಗಳಿಗೆ ಆದ್ಯತೆ ಕೊಡಿ. ಆರೋಗ್ಯದ ಬಗ್ಗೆ ಎಚ್ಚರಿಕೆ ಅಗತ್ಯ. ಕನ್ಯಾ ರಾಶಿ: ಒತ್ತಡ ಕಡಿಮೆಯಾಗುತ್ತವೆ. ಉದ್ಯೋಗದಲ್ಲಿ ಸಕಾರಾತ್ಮಕ ಬದಲಾವಣೆ ಆಗಲಿದೆ. ಹೊಸ ಕಲಿಕೆ ಆರಂಭಕ್ಕೆ ಒಳ್ಳೆಯ ದಿನ. ವಿಶ್ರಾಂತಿಗೆ ಸಮಯ ಮೀಸಲಿಡಿ. ತುಲಾ ರಾಶಿ: ವೈಯಕ್ತಿಕ ಸಂಬoಧಗಳಲ್ಲಿ ಉತ್ಸಾಹ ಅಗತ್ಯ. ಶ್ರದ್ಧೆಯಿಂದ ಕೆಲಸ ಮಾಡಿದರೆ ಮಾತ್ರ ಯಶಸ್ಸು ಸಿಗಲಿದೆ. ಆರೋಗ್ಯ ವೃದ್ಧಿ ಆಗಲಿದೆ. ವೃಶ್ಚಿಕ ರಾಶಿ: ಸಂಕಟ ಪರಿಹಾರ ಆಗಲಿದೆ. ಅಧಿಕಾರಿಗಳಿಂದ ನೆರವು ಸಿಗಲಿದೆ. ಉದ್ಯೋಗದಲ್ಲಿ ಸಕಾರಾತ್ಮಕ ಪರಿವರ್ತನೆ ಆಗಲಿದೆ. ಆರೋಗ್ಯದಲ್ಲಿ ಎಚ್ಚರಿಕೆ ಅಗತ್ಯ. ಧನು ರಾಶಿ: ಧೈರ್ಯದಿಂದ ಮುನ್ನಡೆಯಿರಿ. ಹೊಸ ಯೋಜನೆಗಳ ಯಶಸ್ಸು ಸಿಗಲಿದೆ. ಸಂಬAಧಗಳಲ್ಲಿ ಸಮಾಧಾನವಿರಲಿದೆ. ಆರೋಗ್ಯ ಉತ್ತಮವಾಗಿರಲಿದೆ. ಮಕರ ರಾಶಿ: ಶ್ರಮ ಅಧಿಕವಾಗಲಿದ್ದು ಫಲದ ನಿರೀಕ್ಷೆಯಲ್ಲಿರಿ. ಹಣ ಸಂಪಾದನೆ ಸಾಧ್ಯವಿದೆ. ಕುಟುಂಬದಲ್ಲಿ ಜಗಳ ಬೇಡ. ಕುಂಭ: ಹೊಸ ಕಲಿಕೆ ಆರಂಭಕ್ಕೆ ಯೋಗ್ಯ ದಿನ. ಉದ್ಯೋಗದಲ್ಲಿ ಅವಕಾಶ ಬರಲಿದೆ. ಧ್ಯಾನ ಹಾಗೂ ವಿಶ್ರಾಂತಿ ಅಗತ್ಯ. ಮೀನ ರಾಶಿ: ಆರ್ಥಿಕ ಸಹಾಯ ಸಿಗುತ್ತದೆ. ಕೆಲಸದಲ್ಲಿ ಪ್ರಗತಿ ಆಗಲಿದೆ. ಹಿತೈಷಿಗಳ ಮಾತು ಆಲಿಸಿ. - [ರಸ್ತೆ ಬಿಟ್ಟು ಕಂದಕ ಸೇರಿದ ಧರ್ಮಸ್ಥಳ ಬಸ್ಸು!](https://mobiletime.in/2025/11/dharmasthala-bus-left-the-road-and-fell-into-a-ditch/): ಬಾದಾಮಿಯಿಂದ ಧರ್ಮಸ್ಥಳಕ್ಕೆ ತೆರಳುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ಸು ಹೊನ್ನಾವರದಲ್ಲಿ ಅಪಘಾತಕ್ಕೀಡಾಗಿದೆ. ಸೂಳೆಮೂರ್ಕಿ ತಿರುವಿನಲ್ಲಿ ಬಸ್ಸು ಬಿದ್ದ ಪರಿಣಾಮ ಪ್ರಯಾಣಿಕರೊಬ್ಬರು ಸಾವನಪ್ಪಿದ್ದಾರೆ. ಪಲ್ಟಿಯಾದ ಬಸ್ಸಿನಲ್ಲಿದ್ದ 29 ಜನ ಪೆಟ್ಟು ಮಾಡಿಕೊಂಡಿದ್ದಾರೆ. ಅವರನ್ನು ಹೊನ್ನಾವರ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅಲ್ಲಿ ಚಿಕಿತ್ಸೆ ಕೊಡಲಾಗಿದೆ. ಅನೇಕರಿಗೆ ಸಣ್ಣಪುಟ್ಟ ಗಾಯವಾಗಿದ್ದು ಅವರು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ದ್ಯಾಮಣ್ಣ ಫಕೀರಪ್ಪ ಮಂಗಳಗುಡ್ಡ ಅವರಿಗೆ ಪ್ರಮಾಣದಲ್ಲಿ ಪೆಟ್ಟಾದ ಕಾರಣ ಅವರನ್ನು ಕಾರವಾರ ಜಿಲ್ಲಾಸ್ಪತ್ರೆಗೆ ತರಲಾಯಿತು. ಆದರೆ, ಅವರು ನೋವು ಸಹಿಸಲಾಗದೇ ಸಾವನಪ್ಪಿದರು. ಹೊನ್ನಾವರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅತಿ ವೇಗ ಅಪಘಾತಕ್ಕೆ ಕಾರಣವಾಗಿದ್ದು, ಬಸ್ ಚಾಲಕನ ವಿರುದ್ಧ ತನಿಖೆ ನಡೆಯುತ್ತಿದೆ.   - [ಈ ಕಳ್ಳರು ಕಾರಿನಲ್ಲಿಯೇ ಬರ್ತಾರೆ!](https://mobiletime.in/2025/11/these-thieves-come-in-cars/): ಕಾರಿನಲ್ಲಿ ಬಂದು ಜಾನುವಾರು ಕದಿಯುವ ಕಳ್ಳರ ಗುಂಪು ಸಕ್ರೀಯವಾಗಿದ್ದು, ಸಿಸಿ ಕ್ಯಾಮರಾ ದೃಶ್ಯಾವಳಿ ಆಧರಿಸಿ ಭಟ್ಕಳ ಪೊಲೀಸರು ಅನುಮಾನಾಸ್ಪದ ವ್ಯಕ್ತಿಗಳ ವಿಚಾರಣೆ ಶುರು ಮಾಡಿದ್ದಾರೆ. ಭಟ್ಕಳ ನಗರ ಪ್ರದೇಶ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಅವ್ಯಾಹತವಾಗಿ ಗೋವುಗಳ ಕಳ್ಳತನ ನಡೆಯುತ್ತಿದೆ. ಐಷಾರಾಮಿ ಕಾರಿನಲ್ಲಿ ಬರುವವರು ಗೋವುಗಳನ್ನು ಕದ್ದು ಸಾಗಿಸುತ್ತಿದ್ದಾರೆ. ನಗರದ ಶ್ರೀ ಚೆನ್ನಪಟ್ಟಣ ಹನುಮಂತ ದೇವಸ್ಥಾನದ ಆವರಣದಲ್ಲಿದ್ದ ಆಕಳುಗಳನ್ನು ಕಾರಿನಲ್ಲಿ ಕದ್ದೊಯ್ದ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ನಸುಕಿನ ಜಾವ ಈ ಕಳ್ಳತನ ನಡೆದಿದ್ದು, ವಿಡಿಯೋ ನೋಡಿದ ಪೊಲೀಸರು ಭಟ್ಕಳ ಪುರವರ್ಗದ ರೆಹಾನ್ ಹಾಗೂ ಫೈಜಾನ್ ಎಂಬಾತರನ್ನು ವಶಕ್ಕೆಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಅಕ್ಟೊಬರ್ 15ರಂದು ಚೆನ್ನಪಟ್ಟಣ ಹನುಮಂತ ದೇವಸ್ಥಾನದ ಆವರಣದಲ್ಲಿ ಮಲಗಿದ್ದ ಗೋವುಗಳನ್ನು ಕದ್ದ ವಿಡಿಯೋ ಇದೀಗ ವೈರಲ್ ಆಗಿದೆ. 3-4 ಜನ ಸೇರಿ ಗೋವನ್ನು ಅಡ್ಡಗಟ್ಟಿ ಕಾರಿನ ಡಿಕ್ಕಿಯೊಳಗೆ ತುಂಬಿದ್ದಾರೆ. ಆ ಗೋವು ತಪ್ಪಿಸಿಕೊಳ್ಳಲು ಹರಸಾಹಸ ನಡೆಸಿದ್ದು, ಅದಾಗಿಯೂ ಕ್ರೂರಿಗಳು ಬಿಟ್ಟಿಲ್ಲ. ಕೃಷಿಕರ ಜೀವನಾಧಾರವಾಗಿರುವ ಗೋವುಗಳನ್ನು ಈ ರೀತಿಯಾಗಿ ಕಳ್ಳತನ ಮಾಡಿಕೊಂಡು ಹೋಗುತ್ತಿರುವುದು ಇದೇ ಮೊದಲೇನಲ್ಲ. ಈ ಹಿಂದೆಯೂ ಅನೇಕ ಗೋವು ಕಳ್ಳತನ ನಡೆದಿದ್ದು, ಗೋ ಕಳ್ಳರ ಮೇಲೆ ಶೂಟೌಟ್ ಸಹ ನಡೆದಿತ್ತು. ಅದಾಗಿಯೂ ಕಳ್ಳರು ಬಗ್ಗೆದೇ ತಮ್ಮ ಹಳೆಯ ಚಾಳಿ ಮುಂದುವರೆಸಿದ್ದಾರೆ. - [ಸಮುದ್ರಕ್ಕೆ ಹೋದವ ಶವವಾದ!](https://mobiletime.in/2025/11/the-one-who-went-into-the-sea-became-a-corpse/): ಗೋಕರ್ಣಕ್ಕೆ ಬಂದಿದ್ದ ಪ್ರವಾಸಿಗರೊಬ್ಬರು ಸೋಮವಾರ ಸಂಜೆ ಅರಬ್ಬಿ ಸಮುದ್ರಕ್ಕೆ ಇಳಿದಿದ್ದು, ಅಲೆಗಳ ಅಬ್ಬರಕ್ಕೆ ಸಿಲುಕಿ ಶವವಾಗಿದ್ದಾರೆ. ಆಂಧ್ರ ಪ್ರದೇಶದ ಕರ್ನೂರನ ಮಹಮ್ಮದ್ ಇಮ್ರಾನ್ ಅವರು ಸ್ನೇಹಿತರ ಜೊತೆ ಗೋಕರ್ಣಕ್ಕೆ ಬಂದಿದ್ದರು. ಸೋಮವಾರ ಸಂಜೆ ಅವರು ಕಡಲಿಗೆ ಇಳಿದಿದ್ದು, ಮೋಜು-ಮಸ್ತಿಯಲ್ಲಿ ತೊಡಗಿದ್ದರು. ಆಳ ಸಮುದ್ರಕ್ಕೆ ಈಜುತ್ತ ಹೋದ ಅವರು ಮರಳಿ ಬರಲಿಲ್ಲ. ಅಲೆಗಳ ಅಬ್ಬರಕ್ಕೆ ಸಿಲುಕಿದ ಅವರು ಕರಿಯಪ್ಪನ ಕಟ್ಟೆ ಬಳಿ ಕೊಚ್ಚಿ ಹೋದರು. ಅವರ ಶವ ಸಮುದ್ರ ದಂಡೆಗೆ ಬಂದಿದ್ದು, ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಯಿತು. ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಶವ ಪರೀಕ್ಷೆ ನಡೆಯುತ್ತಿದೆ. ಪೊಲೀಸರು ಸ್ಥಳ ಭೇಟಿ ಮಾಡಿದ್ದಾರೆ. - [ಬಂದರು ಅಧ್ಯಯನಕ್ಕೆ ಸಚಿವರ ಒಲವು!](https://mobiletime.in/2025/11/ministers-interest-in-port-studies/): `ಅಂಕೋಲಾದ ಕೇಣಿಯಲ್ಲಿ ಬಂದರು ಆಗಬೇಕು ಎನ್ನುವುದು ಬಹುತೇಕರ ಆಸೆ’ ಎಂದು ಉತ್ತರ ಕನ್ನಡ ಉಸ್ತುವಾರಿ ಸಚಿವ ಮಂಕಾಳು ವೈದ್ಯ ಅವರು ಹೇಳಿದ್ದಾರೆ. `ಸ್ಥಳೀಯರು ಯೋಜನೆಗೆ ವಿರೋಧವ್ಯಕ್ತಪಡಿಸುತ್ತಿರುವ ಕಾರಣ ಅನುಕೂಲ-ಅನಾನುಕೂಲದ ಬಗ್ಗೆ ಸಂಶೋಧನೆ ನಡೆಯುತ್ತಿದೆ’ ಎಂದವರು ವಿವರಿಸಿದ್ದಾರೆ. `ಕೇಣಿ ಬಂದರು ಯೋಜನೆ ಕುರಿತು ಜನರ ಅಹವಾಲು ಆಲಿಸಲು ಮುಖ್ಯಮಂತ್ರಿ ಸ್ಥಳಕ್ಕೆ ಬರಬೇಕು ಎಂಬ ಬೇಡಿಕೆ ನನ್ನ ಗಮನಕ್ಕೆ ಬಂದಿಲ್ಲ. ಆ ಬಗ್ಗೆ ಬೇಡಿಕೆ ಇದ್ದರೆ ಅದನ್ನು ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗುತ್ತದೆ’ ಎಂದು ಮಂಕಾಳು ವೈದ್ಯ ಅವರು ಹೇಳಿದ್ದಾರೆ. `ಅಗತ್ಯವಿದ್ದರೆ ಸೀಎಂ ಅವರನ್ನು ಕರೆಯಿಸಿ ಸಮಸ್ಯೆ ಬಗೆಹರಿಸಬೇಕು. ಆದರೆ, ಇಲ್ಲಿ ಯೋಜನೆ ಬರುವುದೇ ಸ್ಥಳೀಯರ ಸಮಸ್ಯೆಯಾಗಿದೆ’ ಎಂದವರು ಹೇಳಿದರು. `ಕೇಣಿ ಬಂದರು ಯೋಜನೆ ಆಗಬೇಕು ಎನ್ನುವುದು ಬಹುತೇಕರ ಆಸೆ. ಆದರೆ ಸ್ಥಳೀಯರು ಯೋಜನೆಗೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಹೀಗಾಗಿ ಸಾಧಕ-ಬಾದಕ ಸಂಶೋಧನೆ ನಡೆಯುತ್ತಿದೆ. ಸಾರ್ವಜನಿಕರ ಅಭಿಪ್ರಾಯ ಸಂಗ್ರಹಿಸಿ ಅಂತಿಮ ನಿರ್ಧಾರ ಕೈಗೊಳ್ಳಲಾಗುತ್ತದೆ’ ಎಂದವರು ಹೇಳಿದರು. `ಸ್ಥಳೀಯರಿಗೆ, ಮೀನುಗಾರರಿಗೆ ಅಥವಾ ಜಿಲ್ಲೆಗೆ ತೊಂದರೆ ಉಂಟಾದರೆ ಅಂಥ ಯೋಜನೆ ಕೈ ಬಿಡಲು ಸರ್ಕಾರ ಹಿಂಜರಿಯುವುದಿಲ್ಲ’ ಎಂದವರು ಸ್ಪಷ್ಟಪಡಿಸಿದರು. `ಕರಾವಳಿಯಲ್ಲಿ 13 ಬಂದರು ಇದೆ. ಮಲ್ಪೆಯಲ್ಲಿ ಔಟರ್ ಹಾರ್ಬರ್ ಮಾಡಲು 1800 ಕೋಟಿ ರೂ ವೆಚ್ಚದ ಯೋಜನೆಯ ಪ್ರಸ್ತಾವನೆಯನ್ನು ಕೇಂದ್ರಕ್ಕೆ ಕಳಿಸಲಾಗಿದೆ. ಮುದಗಾ ಮಂದರಿನಲ್ಲಿ ಹೂಳು ತುಂಬಿದ ಹಿನ್ನೆಲೆ ಹೂಳು ತೆಗೆಯಲು ಯೋಜನೆ ರೂಪಿಸುತ್ತೇವೆ’ ಎಂದರು. - [ಅಸ್ಮಿತೆ ಪೌಂಡೇಶನ್: ಕಾರ್ಯ-ಕ್ಷೇತ್ರ ಇನ್ನಷ್ಟು ವಿಸ್ತಾರ!](https://mobiletime.in/2025/11/asmite-foundation-scope-of-work-expands-even-further/): ಆರೋಗ್ಯ ಶಿಕ್ಷಣದ ಮೂಲಕ ಗುರುತಿಸಿಕೊಂಡಿರುವ ಶಿರಸಿಯ ಅಸ್ಮಿತೆ ಫೌಂಡೇಶನ್ ಅಧಿಕೃತ ಜಾಲತಾಣ ಬಿಡುಗಡೆಯಾಗಿದೆ. ಬೆಂಗಳೂರು ನಗರ ವಿಶ್ವವಿದ್ಯಾಲಯದ ಕುಲಪತಿ ಪ್ರೋ ರಮೇಶ ಬಿ ಅವರು ಅದನ್ನು ಲೋಕಾರ್ಪಣೆ ಮಾಡಿದ್ದಾರೆ. `ಸಮಾಜಮುಖಿ ಕೆಲಸದಲ್ಲಿ ತೊಡಗಿರುವ ಅಸ್ಮಿತೆ ಪೌಂಡೇಶನ್ ಕಾರ್ಯ ಇತರೆ ಸಂಘಟನೆಗಳಿಗೆ ಮಾದರಿಯಾಗಿದೆ. ಪಾರದರ್ಶಕ ಕೆಲಸವನ್ನು ಜನರಿಗೆ ತಲುಪಿಸಲು ಸಂಸ್ಥೆಯ ಜಾಲತಾಣ ಸಿದ್ಧವಾಗಿದ್ದು, ಈ ಸಂಸ್ಥೆ ರಾಷ್ಟ್ರಮಟ್ಟದಲ್ಲಿ ಬೆಳಗಲಿ’ ಎಂದು ಪ್ರೋ ರಮೇಶ ಬಿ ಅವರು ಹಾರೈಸಿದರು. `ಡಾ ರಿಯಾಜ್ ಸಾಗರ್ ಮತ್ತು ಅವರ ತಂಡದವರು ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ. ಅವರ ಕೆಲಸ ಇನ್ನಷ್ಟು ಜನರಿಗೆ ಪ್ರೇರಣೆಯಾಗಲಿ’ ಎಂದು ಅವರು ಹೇಳಿದರು. ಅಸ್ಮಿತೆ ಫೌಂಡೇಷನ್ ಕಾರ್ಯನಿರ್ವಾಹಕ ನಿರ್ದೇಶಕ ಡಾ ರಿಯಾಜ್ ಸಾಗರ್ ಅವರು ಮಾತನಾಡಿ `ವೆಬ್‌ಸೈಟ್ ಮೂಲಕ ಸಂಸ್ಥೆಯ ಕಾರ್ಯ ಇನ್ನಷ್ಟು ವಿಸ್ತರಣೆ ಆಗಲಿದೆ. ಸಮಾಜಮುಖಿ ಚಟುವಟಿಕೆಗಳ ವ್ಯಾಪ್ತಿಯೂ ದೊಡ್ಡದಾಗಲಿದೆ’ ಎಂದು ವಿವರಿಸಿದರು. ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯ ಯುಟಿ ಫರ್ಝಾನಾ ಅಶ್ರಫ್, ಅಸ್ಮಿತೆ ಫೌಂಡೇಷನ್ ನಿರ್ದೇಶಕ ಡಾ ಸಚ್ಚಿನ್ ಬಿ ಎಸ್, ಸಲಹಾ ಸಮಿತಿ ನಿರ್ದೇಶಕ ಡಾ ಕುಮಾರಸ್ವಾಮಿ ಸಿ, ಮತ್ತು ಉಪನ್ಯಾಸಕ ಡಾ ರಾಜಶೇಖರ್ ಅವರು ವೆಬ್‌ಸೈಟ್ ಗಮನಿಸಿದರು. ಭವಿಷ್ಯದ ಗುರಿ ಹಾಗೂ ಸಾಧನೆ ಬಗ್ಗೆ ಸಂಸ್ಥೆಯ ಪ್ರಮುಖರು ಮಾಹಿತಿ ಹಂಚಿಕೊAಡರು. ಈ ವೆಬ್‌ಸೈಟ್ ಮೂಲಕ ಸಂಸ್ಥೆಯ ಯೋಜನೆಗಳು, ಸಂಶೋಧನಾ ಕಾರ್ಯಗಳು, ತರಬೇತಿ ಕಾರ್ಯಕ್ರಮಗಳ ಪ್ರಚಾರ ನಡೆಯಲಿದೆ. ವಿವಿಧ ಕ್ಷೇತ್ರದಲ್ಲಿನ ಚಟುವಟಿಕೆಗಳ ಮಾಹಿತಿಯೂ ಜಾಲತಾಣದಲ್ಲಿ ಸಿಗಲಿದೆ. ಅಸ್ಮಿತೆ ಪೌಂಡೇಶನ್ ವೆಬ್‌ಸೈಟ್ ನೋಡಲು ಇಲ್ಲಿ ಕ್ಲಿಕ್ಕಿಸಿ: https://asmitefoundation.com/ - [ಸಚಿವ ಸ್ಥಾನ: ಸರ್ಕಾರದ ಬಳಿ ಖಾಲಿ ಖುರ್ಚಿ ಇಲ್ಲ!](https://mobiletime.in/2025/11/ministerial-post-the-government-has-no-vacant-seats/): `ರಾಜ್ಯ ಸಚಿವ ಸಂಪುಟದಲ್ಲಿ ಯಾವ ಮಂತ್ರಿ ಸ್ಥಾನವೂ ಖಾಲಿ ಇಲ್ಲ’ ಎಂದು ಮೀನುಗಾರಿಕೆ ಸಚಿವ ಮಂಕಾಳ ವೈದ್ಯ ಹೇಳಿದ್ದಾರೆ. ಕಾರವಾರದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು `ಸಚಿವ ಸ್ಥಾನದ ಆಕಾಂಕ್ಷಿಗಳು ಹಲವರಿದ್ದಾರೆ. ಆದರೆ, ಅವರಿಗೆ ಪದವಿ ಕೊಡಲು ಹುದ್ದೆ ಖಾಲಿ ಇಲ್ಲ’ ಎಂದು ಹೇಳಿದ್ದಾರೆ. `ನಮ್ಮ ಪಕ್ಷದಲ್ಲಿ ಹೈಕಮಾಂಡ್ ಇದೆ. ಅವರ ನಿರ್ಧಾರಕ್ಕೆ ನಾವೆಲ್ಲರೂ ತಲೆಬಾಗುತ್ತೇವೆ. ಎರಡು ಸ್ಥಾನ ಖಾಲಿ ಇದ್ದರೂ ಅದನ್ನು ವರಿಷ್ಠರೂ ನೋಡಿಕೊಳ್ಳುತ್ತಾರೆ’ ಎಂದವರು ಪ್ರತಿಕ್ರಿಯಿಸಿದ್ದಾರೆ. `ಸ್ಥಳೀಯ ಸಂಸ್ಥೆ ಚುನಾವಣೆಗಳು ಪಕ್ಷಾತೀತವಾಗಿ ನಡೆಯಲಿದೆ. ಫೆಬ್ರವರಿಯಲ್ಲಿ ಗ್ರಾಮ ಪಂಚಾಯಿತಿ ಚುನಾವಣೆ ಆಗುವ ಸಾಧ್ಯತೆಯಿದ್ದು, ಅದಾದ ನಂತರ ತಾಲೂಕು ಮತ್ತು ಜಿಲ್ಲಾ ಪಂಚಾಯಿತಿ ಚುನಾವಣೆ ನಡೆಯಲಿದೆ’ ಎಂದವರು ತಿಳಿಸಿದರು. `ಜಿಲ್ಲೆಗೆ ತೊಂದರೆ ಆಗುವ ಯಾವ ಯೋಜನೆಯನ್ನು ತರುವುದಿಲ್ಲ. ಸಮಗ್ರ ಅಭಿವೃದ್ಧಿ ನಮ್ಮ ಗುರಿಯಾಗಿದ್ದು, ಜಿಲ್ಲೆಯ ಸಮಗ್ರ ಅಭಿವೃದ್ಧಿಗಾಗಿ ಯೋಜನಾ ಸಮಿತಿ ಮಾಡುತ್ತೇವೆ. ಹೀಗಾಗಿ ಪೂರ್ವಭಾವಿ ಸಭೆ ನಡೆಸಿದ್ದೇವೆ. ಹೆಚ್ಚಿನ ಅನುಧಾನ ಪಡೆಯಲು ನಿರ್ಧರಿಸಲಾಗಿದೆ. ಸಾಮಾನ್ಯ ಜನರ ಅಭಿವೃದ್ಧಿಗೆ ಶ್ರಮಿಸುತ್ತೇವೆ. ನಾವೇ ಯೋಜನೆ ರೂಪಿಸುತ್ತೇವೆ. ಅದರೊಂದಿಗೆ ಸರಕಾರದ ಯೋಜನೆಗಳು ಬರುತ್ತವೆ’ ಎಂದವರು ಹೇಳಿದರು. - [ಆಡಳಿತ ಸೌಧ ಬಿಡದ ಜೇನುಗೂಡು!](https://mobiletime.in/2025/11/the-administrative-building-is-a-beehive-that-never-leaves/): ಕುಮಟಾ ಆಡಳಿತ ಸೌಧದಕ್ಕೆ ನಾಲ್ಕು ಜೇನುಗೂಡು ಕಟ್ಟಿದ್ದು, ಇಲ್ಲಿನ ದುಂಬಿಗಳು ಅನೇಕರಿಗೆ ಕಚ್ಚಿವೆ. ಅದಾಗಿಯೂ ಜೇನುಗೂಡು ಸ್ಥಳಾಂತರಿಸುವ ಕೆಲಸ ನಡೆದಿಲ್ಲ. ಜೇನುಗೂಡಿನ ಅಪಾಯದ ಬಗ್ಗೆ ಜನಸಾಮಾನ್ಯರ ಸಮಾಜ ಕಲ್ಯಾಣ ಕೇಂದ್ರದವರು ಗಮನಕ್ಕೆ ತಂದಿದ್ದರು. ಜೇನುಗೂಡು ತೆರವಿಗೆ ಕ್ರಮ ಜರುಗಿಸುವಂತೆ ಅವರು ಸಹಾಯಕ ಆಯುಕ್ತ ಶ್ರವಣಕುಮಾರ ಅವರಿಗೆ ಮನವಿ ಮಾಡಿದ್ದರು. ಆದರೆ, ಅಪಾಯದ ಬಗ್ಗೆ ಅಧಿಕೃತ ಪತ್ರ ನೀಡಿ 12 ದಿನ ಕಳೆದರೂ ಕ್ರಮವಾಗಿಲ್ಲ. `ಆಧಾರ್ ತಿದ್ದುಪಡಿ, ಪಹಣಿ ಪತ್ರಿಕೆ ಪಡೆಯುವಿಕೆ, ಕೋರ್ಟು-ಕಚೇರಿ ಕೆಲಸಕ್ಕಾಗಿ ನಿತ್ಯ ನೂರಾರು ಜನ ಆಡಳಿತ ಸೌಧಕ್ಕೆ ಆಗಮಿಸುತ್ತಾರೆ. ಹೀಗೆ ಬರುವ ಮಕ್ಕಳು, ಮಹಿಳೆಯರಿಗೆ ಸಹ ಜೇನು ಹುಳುಗಳ ದಾಳಿ ನಡೆದಿದೆ. ಈ ಬಗ್ಗೆ ಮಾಹಿತಿ ನೀಡಿದರೂ ಜೇನುಗೂಡು ತೆರವು ನಡೆದಿಲ್ಲ’ ಎಂದು ಆಗ್ನೇಲ್ ರೋಡಿಗ್ರಸ್ ಅಸಮಧಾನವ್ಯಕ್ತಪಡಿಸಿದರು. `ಶಾಸಕರ ಕಚೇರಿ, ತಹಶೀಲ್ದಾರ್ ಕಚೇರಿ, ಸಹಾಯಕ ಆಯುಕ್ತರ ಕಚೇರಿ ಸೇರಿ ಹಲವು ಕಚೇರಿಗಳು ಈ ಕಟ್ಟಡದಲ್ಲಿವೆ. ಅಲ್ಲಿ ಬರುವವರಿಗೆ ಜೇನು ಕಚ್ಚಿ ಅಪಾಯ ಆದರೆ ಯಾರು ಹೊಣೆ?’ ಎಂದವರು ಪ್ರಶ್ನಿಸಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರು ನಡೆಸುವ ಜನತಾ ದರ್ಶನ ಕಾರ್ಯಕ್ರಮದಲ್ಲಿ ಈ ವಿಷಯದ ಬಗ್ಗೆ ಗಮನಸೆಳೆಯುವುದಾಗಿ ಅವರು ಹೇಳಿದ್ದಾರೆ. - [ಸರಾಯಿ ಸೇವಕ ಸಿಬ್ಬಂದಿಯಿoದ ಕ್ಯಾಂಟೀನ್ ಸೇವೆ!](https://mobiletime.in/2025/11/indira-canteen-service-from-the-sarai-sevak-staff/): ಶಿರಸಿಯ ಇಂದಿರಾ ಕ್ಯಾಂಟೀನ್ ಸಿಬ್ಬಂದಿ ಸರಾಯಿ ಸೇವಿಸಿ ಸೇವೆ ಸಲ್ಲಿಸುವಾಗ ಶಾಸಕರ ಬಳಿ ಸಿಕ್ಕಿ ಬಿದ್ದಿದ್ದಾರೆ. ಅಲ್ಲಿನ ಅವ್ಯವಸ್ಥೆ ನೋಡಿದ ಭೀಮಣ್ಣ ನಾಯ್ಕ ಅವರು ತಾತ್ಕಾಲಿಕವಾಗಿ ಕ್ಯಾಂಟೀನ್ ಬಾಗಿಲು ಹಾಕಿಸಿದ್ದಾರೆ. ಶಿರಸಿಯ ಇಂದಿರಾ ಕ್ಯಾಂಟೀನ್ ಮೊದಲಿನಿಂದಲೂ ಅವ್ಯವಸ್ಥೆಯಿಂದ ಕೂಡಿದ್ದು, ಅದನ್ನು ಸರಿಪಡಿಸಲು ಅಧಿಕಾರಿಗಳಿಂದಲೂ ಸಾಧ್ಯವಾಗಿಲ್ಲ. ಕ್ಯಾಂಟೀನಿನಲ್ಲಿ ಕಳಪೆ ಗುಣಮಟ್ಟದ ಆಹಾರ ಕೊಡಲಾಗುತ್ತಿದೆ ಎಂಬ ದೂರಿದ್ದರೂ ಅದನ್ನು ಯಾರೂ ಗಂಭೀರವಾಗಿ ಪರಿಗಣಿಸಿಲ್ಲ. ಜೊತೆಗೆ ಸರ್ಕಾರ ಸೂಚಿಸಿದ ಪ್ರಕಾರ ಅಲ್ಲಿ ಊಟ-ತಿಂಡಿ ಕೊಡಲಾಗುತ್ತಿಲ್ಲ. ಅಗತ್ಯ ಸಾಮಗ್ರಿಗಳು ಸಹ ಸರಬರಾಜು ಆಗುತ್ತಿಲ್ಲ. ಈ ನಡುವೆ ಸಾರ್ವಜನಿಕರೊಬ್ಬರು ಇಂದಿರಾ ಕ್ಯಾಂಟೀನ್ ಅವ್ಯವಸ್ಥೆಯ ಬಗ್ಗೆ ಶಾಸಕರ ಗಮನಕ್ಕೆ ತಂದಿದ್ದು, ಭಾನುವಾರ ಭೀಮಣ್ಣ ನಾಯ್ಕ ಅವರು ಅಲ್ಲಿ ದಿಢೀರ್ ಭೇಟಿ ನೀಡಿದರು. ಅಲ್ಲಿ ತಿಂಡಿ ವಿತರಿಸುವ ವ್ಯಕ್ತಿ ಮದ್ಯ ಸೇವನೆ ಮಾಡಿರುವುದನ್ನು ಅವರು ಪತ್ತೆ ಮಾಡಿದರು. ಆ ಸಿಬ್ಬಂದಿ ಜೊತೆ ಅಲ್ಲಿದ್ದ ಇನ್ನಿತರರನ್ನು ಶಾಸಕರು ತರಾಠೆಗೆ ತೆಗೆದುಕೊಂಡರು. ಬಳಿಕ ಪೊಲೀಸರನ್ನು ಕರೆಯಿಸಿ, ಆ ಸಿಬ್ಬಂದಿಯ ವೈದ್ಯಕೀಯ ತಪಾಸಣೆಗೆ ಸೂಚಿಸಿದರು. ಗುತ್ತಿಗೆದಾರರಿಗೆ ಸಹ ಫೋನ್ ಮಾಡಿ ಝಾಡಿಸಿದರು. ಅಲ್ಲಿದ್ದ ಜನರು ಶಾಸಕರ ಬಳಿ ಸಾಕಷ್ಟು ಸಮಸ್ಯೆ ಹೇಳಿದರು. `ಇಡ್ಲಿ ಮಾಡದೇ ಎಷ್ಟು ದಿನ ಆಗಿದೆ?’ ಎಂದು ಭೀಮಣ್ಣ ನಾಯ್ಕ ಅವರು ಪ್ರಶ್ನಿಸಿದ್ದು, ಅದಕ್ಕೆ ಉತ್ತರಿಸಲು ಅಡುಗೆ ಸಿಬ್ಬಂದಿ ತಡವರಿಸಿದರು. `ಹಸಿದ ಹೊಟ್ಟೆಗೆ ಕಡಿಮೆ ದರದಲ್ಲಿ ಗುಣಮಟ್ಟದ ಊಟ ಸಿಗಲಿ ಎಂದು ಸರ್ಕಾರ ಇಂದಿರಾ ಕ್ಯಾಂಟೀನ್ ಶುರು ಮಾಡಿದೆ. ಆದರೆ, ಇಲ್ಲಿ ಆ ಸೇವೆ ಸರಿಯಾಗಿಲ್ಲ’ ಎಂದು ಭೀಮಣ್ಣ ನಾಯ್ಕ ಅಸಮಧಾನವ್ಯಕ್ತಪಡಿಸಿದರು. `2 ತಿಂಗಳ ಹಿಂದೆ ಸರಿಯಾಗಿತ್ತು. ಆದರೆ, ಇದೀಗ ಎಲ್ಲವೂ ಅವ್ಯವಸ್ಥೆಯಿಂದ ಕೂಡಿದೆ’ ಎಂದು ಜನ ದೂರಿದರು. `ನಗರಸಭೆ ಸದಸ್ಯರಿಗೂ ಕ್ಯಾಂಟೀನ್ ಸಿಬ್ಬಂದಿ ಗೌರವ ಕೊಡುವುದಿಲ್ಲ. ಅಧಿಕಾರಿಗಳ ಮಾತು ಆಲಿಸುವುದಿಲ್ಲ’ ಎಂದು ನಗರಸಭೆ ಪ್ರತಿನಿಧಿಗಳು ದೂರಿದರು. `ಸದ್ಯ ಕ್ಯಾಂಟೀನ್ ಬಂದ್ ಮಾಡಿ. ಎಲ್ಲವನ್ನು ಸರಿಪಡಿಸಿದ ನಂತರವೇ ಶುರು ಮಾಡಿ’ ಎಂದು ಭೀಮಣ್ಣ ನಾಯ್ಕ ಅವರು ತಾಕೀತು ಮಾಡಿದರು. - [ಕೈಗಾ: ಅಣು ಘಟಕದಿಂದಲೇ ಆ ರಸ್ತೆ ರಿಪೇರಿ ನಡೆಯಲಿ!](https://mobiletime.in/2025/11/kaiga-let-the-nuclear-power-plant-repair-that-road/): `ಕಾರವಾರದಿಂದ ಕೈಗಾವರೆಗಿನ ರಸ್ತೆ ಸಂಪೂರ್ಣವಾಗಿ ಹದಗೆಟ್ಟಿದ್ದು, ಈ ರಸ್ತೆ ಕಾಮಗಾರಿಯನ್ನು ಕೈಗಾ ಅಣು ವಿದ್ಯುತ್ ಘಟಕಕ್ಕೆವಹಿಸಬೇಕು’ ಎಂದು ಜನಶಕ್ತಿ ವೇದಿಕೆ ಅಧ್ಯಕ್ಷ ಮಾಧವ ನಾಯಕ ಅವರು ಆಗ್ರಹಿಸಿದ್ದಾರೆ. ಈ ಬಗ್ಗೆ ಅವರು ಜಿಲ್ಲಾಧಿಕಾರಿ, ಶಾಸಕ-ಸಚಿವರನ್ನು ಸೇರಿ ಅನೇಕರಿಗೆ ಪತ್ರ ಬರೆದಿದ್ದಾರೆ. `ಕಾರವಾರ-ಕೈಗಾ-ಇಳಕಲ್ ರಸ್ತೆಯನ್ನು ಲೋಕೋಪಯೋಗಿ ಇಲಾಖೆ ನಿರ್ವಹಣೆ ಮಾಡುತ್ತಿದೆ. ಈ ರಸ್ತೆಯಲ್ಲಿ ಭಾರೀ ಪ್ರಮಾಣದ ವಾಹನಗಳ ಓಡಾಟ ಹೆಚ್ಚಾಗಿದೆ. ಅದರಲ್ಲಿಯೂ ಹೆಚ್ಚಿನ ವಾಹನಗಳು ಕೈಗಾಗೆ ಸಂಚರಿಸುತ್ತಿದ್ದು, ಅಧಿಕ ಬಾರದ ವಾಹನಗಳ ಓಡಾಟದಿಂದಾಗಿ ರಸ್ತೆ-ಸೇತುವೆಗಳು ಧಾರಣಾ ಶಕ್ತಿ ಕಳೆದುಕೊಂಡಿದೆ’ ಎಂದು ಮಾಧವ ನಾಯಕ ಅವರು ವಿವರಿಸಿದ್ದಾರೆ. `ಸದ್ಯ ಕೈಗಾ ಅಣು ವಿದ್ಯುತ್ ಘಟಕದಲ್ಲಿ 5 & 6ನೇ ಅಣು ವಿದ್ಯುತ್ ಘಟಕದ ಕೆಲಸ ಶುರುವಾಗಿದೆ. 30 ಸಾವಿರ ಕೋಟಿ ರೂ ವೆಚ್ಚದಲ್ಲಿ ವಿವಿಧ ಕಂಪನಿಗೆ ಟೆಂಡರ್ ಆಗಿದ್ದು ಜೆಲ್ಲಿಕಲ್ಲು, ಸಿಮೆಂಟ್, ಉಸುಕು, ಕಬ್ಬಿಣ ಹಾಗೂ ಯಂತ್ರೋಪಕರಣಗಳ ವಾಹನ ಓಡಾಟ ಹೆಚ್ಚಿದೆ. 200ಟನ್ ಮಿಕ್ಕಿದ ವಾಹನಗಳು ಈ ಮಾರ್ಗದಲ್ಲಿ ಓಡಾಡುತ್ತಿದ್ದು, ಕಾರವಾರದಿಂದ ಕೈಗಾವರೆಗಿನ ರಸ್ತೆ ಅಗಲೀಕರಣ ಅನಿವಾರ್ಯ. ಈ ಕೆಲಸವನ್ನು ಕೈಗಾ ಅಣು ವಿದ್ಯುತ್ ಘಟಕದವರಿಂದ ಮಾಡಿಸಬೇಕು’ ಎಂದವರು ಆಗ್ರಹಿಸಿದ್ದಾರೆ. ಈ ಬಗ್ಗೆ ಮಾಧವ ನಾಯಕ ಅವರು ಧಾರವಾಡದ ಲೋಪಯೋಗಿ ಇಲಾಖೆಯ ಸಹಾಯಕ ಕಾರ್ಯ ನಿರ್ವಾಹಕ ಅಭಿಯಂತರರ ಜೊತೆ ಫೋನಿನಲ್ಲಿ ಮಾತನಾಡಿದ್ದಾರೆ. `ಕೈಗಾ ಅಣು ಘಟಕದವರೇ ಈ ಕಾಮಗಾರಿ ನಡೆಸಿದರೆ ನಮ್ಮ ಅಭ್ಯಂತರವಿಲ್ಲ’ ಎಂದು ಅಧಿಕಾರಿಗಳು ಹೇಳಿದ್ದಾರೆ. `ಈ ಹಿನ್ನಲೆ ಜಿಲ್ಲಾಧಿಕಾರಿಗಳು ಎಲ್ಲಾ ಅಧಿಕಾರಿಗಳ ಜೊತೆ ಸಭೆ ನಡೆಸಿ ಈ ಬಗ್ಗೆ ನಿರ್ಣಯಿಸಬೇಕು. ಶಾಸಕ ಸತೀಶ್ ಸೈಲ್, ಉಸ್ತುವಾರಿ ಸಚಿವ ಮಂಕಾಳು ವೈದ್ಯ ಅವರು ಈ ಬಗ್ಗೆ ಗಮನಿಸಬೇಕು’ ಎಂದು ಮಾಧವ ನಾಯಕ ಅವರು ಮನವಿ ಮಾಡಿದ್ದಾರೆ. - [ಆತನ ಬಳಿ ಇದ್ದಿದ್ದೇ 50 ರೂಪಾಯಿ!](https://mobiletime.in/2025/11/he-only-had-50-rupees/): ಶಿರಸಿಯ ರೋಹಿತಾಶ್ವ ನೇತ್ರೇಕರ್ ಅವರು ನಿಗೂಢವಾಗಿ ಕಣ್ಮರೆಯಾಗಿದ್ದಾರೆ. ಎಲ್ಲಿ ಹುಡುಕಿದರೂ ಅವರು ಸಿಗದ ಕಾರಣ ಕುಟುಂಬದವರು ಪೊಲೀಸರ ಮೊರೆ ಹೋಗಿದ್ದಾರೆ. ಶಿರಸಿಯ ಹುಲೇಕಲ್ ಬಳಿಯ ರೋಹಿತಾಶ್ವ ಶಿವಾನಂದ ನೇತ್ರೇಕರ (31) ಅವರು ಬಿಡ್ಕಿಬೈಲ್ ಬಳಿಯಿರುವ ಅಂಗಡಿಯೊAದರಲ್ಲಿ ಕೆಲಸ ಮಾಡುತ್ತಿದ್ದರು. ನವೆಂಬರ್ 8ರಂದು ಅವರು ಅಂಗಡಿ ಮಾಲಕರಿಂದ 50 ರೂಪಾಯಿ ಬೇಡಿದ್ದು, ಆ ಹಣಪಡೆದು ಅವರು ಕಾಣೆಯಾಗಿದ್ದಾರೆ. ರೋಹಿತಾಶ್ವ ಅವರು ಮನೆಗೆ ಬಾರದ ಕಾರಣ ಅವರ ತಾಯಿ ಕಂಗಾಲಾಗಿದ್ದಾರೆ. ಕೆಲಸ ಮಾಡುವ ಅಂಗಡಿ, ಊರು-ಕೇರಿ, ಸಂಬAಧಿಕರ ಮನೆ ಜೊತೆ ವಿವಿಧ ಸ್ಥಳಗಳಲ್ಲಿ ರೋಹಿತಾಶ್ವ ನೇತ್ರಕರ್ ಅವರಿಗಾಗಿ ಹುಡುಕಾಟ ನಡೆದಿದೆ. ಆದರೆ, ಅವರು ಎಲ್ಲಿಯೂ ಸಿಗಲಿಲ್ಲ. ರೋಹಿತಾಶ್ವ ನೇತ್ರಕರ್ ಅವರ ಬಗ್ಗೆ ಸುಳಿವು ಗೊತ್ತಾಗಲಿಲ್ಲ. ಹೀಗಾಗಿ ಕುಟುಂಬದವರು ಪೊಲೀಸರ ಮೊರೆ ಹೋಗಿದ್ದು, ಪೊಲೀಸರು ಸಹ ಹುಡುಕಾಟ ಶುರು ಮಾಡಿದ್ದಾರೆ. - [ಅರಬ್ಬಿ ಅಲೆಗೆ ಕೊಚ್ಚಿ ಹೋದ ವಿದೇಶಿ ಮಹಿಳೆ: ರಕ್ಷಣೆ](https://mobiletime.in/2025/11/foreign-woman-swept-away-by-arabian-sea-wave-rescued/): ಅರಬ್ಬಿ ಸಮುದ್ರದ ಅಲೆಗೆ ಕೊಚ್ಚಿ ಹೋಗುತ್ತಿದ್ದ ವಿದೇಶಿ ಮಹಿಳೆಯನ್ನು ಗೋಕರ್ಣದ ಜೀವ ರಕ್ಷಕ ಸಿಬ್ಬಂದಿ ರಕ್ಷಿಸಿದ್ದಾರೆ. ಅಪಾಯದಿಂದ ಪಾರಾದ ಮಹಿಳೆ ಜೀವ ರಕ್ಷಕರ ಕಾರ್ಯವನ್ನು ಶ್ಲಾಘಿಸಿದ್ದಾರೆ. ಕಜಕಿಸ್ತಾನ ಐದಾಲಿ (25) ಅವರು ತಮ್ಮ ಪತಿ ಜೊತೆ ಗೋಕರ್ಣಕ್ಕೆ ಬಂದಿದ್ದರು. ಸೋಮವಾರ ಅವರು ಕುಡ್ಲೆ ಕಡಲತೀರಕ್ಕೆ ಹೋಗಿದ್ದರು. ದಂಪತಿ ಅಲ್ಲಿನ ನೀರಿಗೆ ಇಳಿದು ಆಡವಾಡುವಾಗ ಐದಾಲಿ ಅವರು ಅಲೆಗಳ ಅಬ್ಬರಕ್ಕೆ ಸಿಲುಕಿದರು. ಪತ್ನಿ ಅಪಾಯಕ್ಕೆ ಸಿಲುಕಿರುವುದನ್ನು ನೋಡಿ ಅವರ ಪತಿ ಬೊಬ್ಬೆ ಹೊಡೆದರು. ಮಹಿಳೆ ಅಪಾಯದಲ್ಲಿರುವುದನ್ನು ಅರಿತ ಜೀವ ರಕ್ಷಕ ಸಿಬ್ಬಂದಿ ಮಂಜುನಾಥ್ ಹರಿಕಂತ್ರ ,ಗಿರೀಶ್ ಗೌಡ, ನಾಗೇಂದ್ರ ಕುರ್ಲೆ ತಕ್ಷಣ ಸಮುದ್ರಕ್ಕೆ ಹಾರಿದರು. ಮೈಸ್ಟಿಕ್ ಗೋಕರ್ಣ ಅಡ್ವೆಂಚರ್ ಸಿಬ್ಬಂದಿ ಲಕ್ಷ್ಮಿಕಾಂತ್ ಹರಿಕಂತ್ರ ಅವರು ಜಸ್ಕಿ ಮೂಲಕ ತೆರಳಿ ಅವರನ್ನು ನೀರಿನಿಂದ ಮೇಲೆತ್ತಿದರು. ಪ್ರವಾಸಿ ಮಿತ್ರ ಶೇಖರ್ ಹರಿಕಂತ ಅವರು ಪ್ರಾಥಮಿಕ ಚಿಕಿತ್ಸೆ ನೀಡಿದರು. - [ಬ್ರೆಕ್ ಪೇಲ್: ಟಿಪ್ಪರಿಗೆ ಗುದ್ದಿದ ಟೆಂಪೋ!](https://mobiletime.in/2025/11/break-pale-tempo-that-punched-tipper/): ಅoಕೋಲಾದಿoದ ಕಾರವಾರ ಕಡೆ ತೆರಳುತ್ತಿದ್ದ ಟೆಂಪೋ ಟಿಪ್ಪರಿಗೆ ಡಿಕ್ಕಿಯಾಗಿದೆ. ಪರಿಣಾಮ ಟೆಂಪೋದಲ್ಲಿದ್ದ 12 ಜನ ಗಾಯಗೊಂಡಿದ್ದಾರೆ. ಸೋಮವಾರ ಅಂಕೋಲಾದಿoದ ಪ್ರಯಾಣಿಕರನ್ನು ಕರೆದೊಯ್ಯುತ್ತಿರುವ ಟೆಂಪೋ ಕಾರವಾರ ಕಡೆ ಚಲಿಸುತ್ತಿತ್ತು. ಮುದುಗಾ ಬಳಿ ಟೆಂಪೋ ಮುಂದೆ ಟಿಪ್ಪರ್ ಚಲಿಸುತ್ತಿದ್ದು, ವೇಗವಾಗಿ ಚಲಿಸಿದ ಟೆಂಪೋ ಆ ಟಿಪ್ಪರಿಗೆ ಡಿಕ್ಕಿಯಾಯಿತು. ಮುದುಗಾ ಬಳಿಯ ಹಂಪಿನಲ್ಲಿ ಟಿಪ್ಪರ್ ಏಕಾಏಕಿ ನಿಧಾನವಾಗಿದನ್ನು ಗಮನಿಸದ ಟೆಂಪೋ ಚಾಲಕ ತಮ್ಮ ವಾಹನವನ್ನು ಗುದ್ದಿದರು. ಈ ವೇಳೆ ಟೆಂಪೋ ಬ್ರೆಕ್ ಸಹ ಕೆಲಸ ಮಾಡಲಿಲ್ಲ. ಹೀಗಾಗಿ ಟೆಂಪೋ ಮುಂಬಾಗ ಜಖಂ ಆಯಿತು. ಈ ಅಪಘಾತದ ರಭಸಕ್ಕೆ ಟೆಂಪೊದಲ್ಲಿದ್ದ ಪ್ರಯಾಣಿಕರು ಪೆಟ್ಟು ಮಾಡಿಕೊಂಡರು. ಎಲ್ಲರೂ ಟೆಂಪೋದ ಒಳಗೆ ಬಿದ್ದು ಗಾಯಗೊಂಡರು. ಈ ಅವಘಡದಲ್ಲಿ 12 ಪ್ರಯಾಣಿಕರಿಗೆ ನೋವಾಗಿದ್ದು, ರೇಷ್ಮಾ ಎಂಬಾತರು ಗಂಭೀರ ಪ್ರಮಾಣದಲ್ಲಿ ಗಾಯಗೊಂಡಿದ್ದಾರೆ. ಎಲ್ಲರನ್ನು ಕಾರವಾರ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಾರವಾರ ಗ್ರಾಮೀಣ ಠಾಣಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಗಾಯಾಳುಗಳ ಆರೋಗ್ಯ ವಿಚಾರಿಸಿದ ಪೊಲೀಸರು ಚಾಲಕರ ಹೇಳಿಕೆಯನ್ನುಪಡೆದಿದ್ದಾರೆ. - [ಅಡಿಕೆ ಅಟ್ಟದ ಅಡಿಗೆ ಬಿದ್ದವನ ತಲೆ ಹೋಳು!](https://mobiletime.in/2025/11/the-head-of-the-man-who-fell-from-a-betel-nut-tree-into-the-kitchen-was-cut-off/): ಶಿರಸಿ ಕೆರೆಶಿಂಗನಳ್ಳಿಯಲ್ಲಿಯ ಕೇಶವ ಹೆಗಡೆ ಅವರ ಮನೆ ಮುಂದಿನ ಅಟ್ಟದಿಂದ ನೆಲಕ್ಕೆ ಬಿದ್ದ ಗದ್ದೆಶಿಂಗನಳ್ಳಿಯ ರಾಮಾ ನಾಯ್ಕ ಅವರು  ಅಲ್ಲಿದ್ದ ತುಳಸಿ ಪೀಠಕ್ಕೆ ತಲೆ ಬಡಿದು ಸಾವನಪ್ಪಿದ್ದಾರೆ. ಆಸ್ಪತ್ರೆಗೆ ದಾಖಲಿಸುವ ಮುನ್ನವೇ ಅವರು ಕೊನೆಯುಸಿರೆಳೆದಿದ್ದಾರೆ. ಶಿರಸಿಯ ಕೋಳಿಗಾರ ಬಳಿಯ ಗದ್ದೆಶಿಂಗನಳ್ಳಿಯಲ್ಲಿ ರಾಮಾ ಅಣ್ಣಪ್ಪ ನಾಯ್ಕ (63) ಅವರು ವಾಸವಾಗಿದ್ದರು. ಕೂಲಿ ಕೆಲಸ ಮಾಡಿಕೊಂಡಿದ್ದ ಅವರು ಊರಿನ ವಿವಿಧ ಕಡೆ ಕೆಲಸಕ್ಕೆ ಹೋಗುತ್ತಿದ್ದರು. ನವೆಂಬರ್ 16ರಂದು ಅವರು ಕೆರೆಶಿಂಗನಳ್ಳಿಯಲ್ಲಿರುವ ಕೇಶವ ವೆಂಕಟ್ರಮಣ ಹೆಗಡೆ ಅವರ ಮನೆ ಕೆಲಸಕ್ಕೆ ಹೋಗಿದ್ದರು. ಕೇಶವ ಹೆಗಡೆ ಅವರು ರಾಮಾ ನಾಯ್ಕ ಅವರನ್ನು ಅಟ್ಟದ ಕೆಲಸಕ್ಕಾಗಿ ನೇಮಿಸಿದ್ದರು. ಕೇಶವ ಹೆಗಡೆ ಅವರ ಮನೆ ಮುಂದಿನ ಅಟ್ಟಕ್ಕೆ ಅಡಿಕೆ ದಬ್ಬೆಗಳನ್ನು ಹಾಕಲಾಗಿತ್ತು. ಅದರ ಮೇಲೆ ತಗಡಿನ ಶೀಟುಗಳನ್ನು ಅಳವಡಿಸಲಾಗಿದ್ದು, ಆ ತಗಡುಗಳನ್ನು ರಾಮಾ ನಾಯ್ಕ ಅವರು ತೆಗೆಯುತ್ತಿದ್ದರು. ಹೀಗಿರುವಾಗ ಅಟ್ಟದ ಮೇಲೆ ಕಾಲು ಜಾರಿತು. ರಾಮಾ ನಾಯ್ಕ ಅವರು ಅಂಗಳಕ್ಕೆ ಬಿದ್ದರು. ಆ ವೇಳೆ ಅಂಗಳದಲ್ಲಿದ್ದ ತುಳಸಿ ಕಟ್ಟೆಗೆ ರಾಮಾ ನಾಯ್ಕ ಅವರ ತಲೆ ಬಡಿಯಿತು. ಪರಿಣಾಮ ತಲೆ ಹಿಂದೆ ಭಾರೀ ಪ್ರಮಾಣದ ಗಾಯವಾಯಿತು. ತಲೆಯಿಂದ ರಕ್ತ ಸುರಿಯುತ್ತಿತ್ತು. ಇದನ್ನು ನೋಡಿದ ಅಲ್ಲಿದ್ದ ಇನ್ನಿತರರು ರಾಮಾ ನಾಯ್ಕ ಅವರನ್ನು ಶಿರಸಿಯ ಪಂಡಿತ್ ಆಸ್ಪತ್ರೆಗೆ ತರುವ ಪ್ರಯತ್ನ ಮಾಡಿದರು. ಆದರೆ, ಹುತ್ಗಾರ ಬಳಿ ಬರುವಾಗಲೇ ರಾಮಾ ನಾಯ್ಕ ಅವರು ಕೊನೆಯುಸಿರೆಳೆದರು. ಈ ಎಲ್ಲಾ ವಿಷಯದ ಬಗ್ಗೆ ರಾಮಾ ನಾಯ್ಕ ಅವರ ಪುತ್ರ ವಿನಾಯಕ ನಾಯ್ಕ ಅವರು ಶಿರಸಿ ಗ್ರಾಮೀಣ ಪೊಲೀಸರಿಗೆ ತಿಳಿಸಿದ್ದು, ಪೊಲೀಸರು ಪ್ರಕರಣ ದಾಖಲಿಸಿದರು. `ಕೃಷಿ ಕೆಲಸ ಮಾಡುವಾಗ ಜಾಗೃತರಾಗಿರಿ’ - [2025 ನವೆಂಬರ್ 17ರ ದಿನ ಭವಿಷ್ಯ](https://mobiletime.in/2025/11/prediction-for-november-17-2025/): ಮೇಷ ರಾಶಿ: ಹೊಸ ಕಾರ್ಯ ಸಾಧನೆಗೆ ಸಾಕಷ್ಟು ಅವಕಾಶಗಳಿವೆ. ಧನದ ಪ್ರವಾಹ ಸುಧಾರಿಸುತ್ತದೆ. ನಿಮ್ಮ ಆತ್ಮವಿಶ್ವಾಸ ಹೆಚ್ಚಾಗುತ್ತದೆ. ಕುಟುಂಬದಲ್ಲಿ ಸಾಮರಸ್ಯ ಬೆಳೆಯುತ್ತದೆ. ಆರೋಗ್ಯ ಉತ್ತಮವಾಗಿರುತ್ತದೆ. ಧ್ಯಾನ ಮತ್ತು ಯೋಗ ನಿಮ್ಮ ಆರೋಗ್ಯಕ್ಕೆ ಹಿತ ಕೊಡಲಿದೆ. ವೃಷಭ ರಾಶಿ: ಬದುಕಿನ ಎರಡು ಕ್ಷೇತ್ರದಲ್ಲಿ ಪ್ರಗತಿ ಸಿಗುತ್ತದೆ. ಹಣಕಾಸು ವಿಚಾರದಲ್ಲಿ ಜಾಗರೂಕತೆ ಅಗತ್ಯ. ವೃತ್ತಿಯಲ್ಲಿ ಉತ್ತಮ ಅವಕಾಶಗಳಿವೆ. ಆಸ್ತಿಕರ ಪ್ರಶ್ನೆಗಳಿಗೆ ಪರಿಹಾರ ಸಿಗಲಿದೆ. ಬಹುದಿನದ ಆಸೆ ಈಡೇರುವ ಕಾಲ ಬಂದಿದೆ. ಮಿಥುನ ರಾಶಿ: ಉದ್ಯೋಗದಲ್ಲಿ ಸಹೋದ್ಯೋಗಿಗಳ ಬೆಂಬಲ ಸಿಗುತ್ತದೆ. ಆರೋಗ್ಯದಲ್ಲಿ ಏರುಪೇರು ಆಗುವ ಲಕ್ಷಣವಿದೆ. ಹೊಸ ಕೆಲಸ ಸಿಗಬಹುದು. ವಿದ್ಯಾರ್ಥಿಗಳಿಗೆ ಉತ್ತಮ ಸಮಯವಾಗಿದ್ದು, ಅದನ್ನು ಬಳಸಿಕೊಳ್ಳುವುದು ಅಗತ್ಯ. ಪ್ರಯಾಣದ ಸಾಧ್ಯತೆಗಳಿವೆ. ಕರ್ಕ ರಾಶಿ: ಆಧ್ಯಾತ್ಮದಲ್ಲಿ ಹೆಚ್ಚು ಆಸಕ್ತಿ ಮೂಡಲಿದೆ. ಪ್ರಭಾವಶಾಲಿ ವ್ಯಕ್ತಿತ್ವ ಬೆಳೆಯುತ್ತದೆ. ಅದೃಷ್ಟ ದಾರಿ ತೆರೆದಿರುತ್ತದೆ. ವಾಣಿಜ್ಯದಲ್ಲಿ ಲಾಭ ಆಗಲಿದೆ. ಪ್ರವಾಸ ಅವಕಾಶ ಒದಗಿ ಬರಲಿದೆ. ಸಿಂಹ ರಾಶಿ: ಕೌಟುಂಬಿಕ ಜೀವನ ಸುಧಾರಣೆ ಆಗಲಿದೆ. ಹೊಸ ಸ್ನೇಹಗಳು ಸಾಧ್ಯವಿದೆ. ಆರೋಗ್ಯ ಚೆನ್ನಾಗಿರುತ್ತದೆ. ಉದ್ಯೋಗದಲ್ಲಿ ಬೆಂಬಲ ಸಿಗುತ್ತದೆ. ಸ್ನೇಹಿತರೊಂದಿಗೆ ಸಮಯ ಕಳೆಯಿರಿ. ಕನ್ಯಾ ರಾಶಿ: ಹಳೆಯ ಹೂಡಿಕೆದರಿಂದ ಲಾಭ ಬರಲಿದೆ. ಶೈಕ್ಷಣಿಕ ಯಶಸ್ಸು ಸಿಗಲಿದೆ. ಹೊಸ ಜನರ ಪರಿಚಯ ಆಗಲಿದೆ. ಸಮಯ ಹಾಳು ಮಾಡದೇ ಇದ್ದರೆ ಭವಿಷ್ಯ ಚನ್ನಾಗಿರಲಿದೆ. ತುಲಾ ರಾಶಿ: ಸಾಮಾಜಿಕ ಚಟುವಟಿಕೆಗಳಿಂದ ಜಯ ಸಿಗಲಿದೆ. ಶಕ್ತಿಯ ಬೆಳವಣಿಗೆ ಸಾಧ್ಯವಿದೆ. ಆರೋಗ್ಯದ ವಿಷಯದ ಬಗ್ಗೆ ಕಾಳಜಿ ಅಗತ್ಯ. ವೃತ್ತಿಯಲ್ಲಿ ಯಶಸ್ಸು ಸಿಗುತ್ತದೆ. ವೃಶ್ಚಿಕ ರಾಶಿ: ಆರ್ಥಿಕ ಲಾಭಕ್ಕೆ ಅವಕಾಶಗಳಿವೆ. ವೃತ್ತಿ ಅಭಿವೃದ್ಧಿ ಸಾದ್ಯವಿದೆ. ಯೋಗ-ಧ್ಯಾನ ಸಾಧನೆ ಆಗಲಿದೆ. ಆರೋಗ್ಯದ ಬಗ್ಗೆ ಕಾಳಜಿ ಅಗತ್ಯ. ಧನು ರಾಶಿ: ದುಡಿಮೆಗೆ ತಕ್ಕ ಫಲ ಸಿಗಲಿದೆ. ವಿಶ್ವಾಸದಿಂದ ಜೀವನ ನಡೆಸುವುದು ಮುಖ್ಯ. ಅನಗತ್ಯ ಅನುಮಾನಗಳು ನಿಮ್ಮ ಬದುಕು ಹಾಳು ಮಾಡುತ್ತದೆ. ಆರೋಗ್ಯ ಸುಧಾರಣೆ ಅಗಲಿದೆ. ಮಕರ ರಾಶಿ: ಸಾಮಾಜಿಕ ಗೌರವ ಸಿಗಲಿದೆ. ಧಾರ್ಮಿಕ ಕಾರ್ಯಕ್ರಮ ಪ್ರವೇಶ ಆಗಲಿದೆ. ಭೂಮಿ-ವಾಹನ ಖರೀದಿ ಯೋಗ ಸಮೀಪಿಸಿದೆ. ಆತ್ಮವಿಶ್ವಾಸ ಹೆಚ್ಚಾಗುತ್ತದೆ. ಕುಂಭ ರಾಶಿ: ಕುಟುಂಬ ಸಂತೋಷದ ವಾತಾವರಣ ಸಿಗಲಿದೆ. ಪ್ರಯಾಣದ ಅವಕಾಶ ಕೂಡಿ ಬರಲಿದೆ. ಆರೋಗ್ಯ ಉತ್ತಮವಾಗಿದ್ದು, ಕೆಲಸದ ವಿಷಯದಲ್ಲಿ ಸಹೋದ್ಯೋಗಿಗಳ ಸಹಕಾರ ಸಿಗಲಿದೆ. ಮೀನ ರಾಶಿ: ಮಿಶ್ರ ಫಲಿತಾಂಶಗಳು ನಿಮ್ಮನ್ನು ಆವರಿಸಲಿದೆ. ಹಣಕಾಸಿನಲ್ಲಿ ಜಾಗ್ರತೆ ಅಗತ್ಯ. ಸಂಗಾತಿಯ ಒಡನಾಟ ಹೆಚ್ಚುತ್ತದೆ. ಸಾಮಾಜಿಕ ಒಡನಾಟಗಳು ಫಲ ಕೊಡುತ್ತದೆ. - [ಕಾರವಾರದ ಕೋಣ ಕಿರವತ್ತಿಗೆ ಸಾಗಾಟ: ಸುಳ್ಳು ಹೇಳಿದ ಕಳ್ಳರನ್ನು ಹಿಡಿದ ಸಿದ್ದರದ ಜನ!](https://mobiletime.in/2025/11/transport-to-karwars-kona-kiravatti-unprepared-people-caught-the-thieves-who-lied/): ಕಾರವಾರದ ಸಿದ್ದರದಿಂದ ಯಲ್ಲಾಪುರದ ಕಿರವತ್ತಿಗೆ ಕಳ್ಳ ಸಾಗಾಟವಾಗುತ್ತಿದ್ದ ಕೋಣವೊಂದನ್ನು ಪೊಲೀಸರು ಹಿಡಿದಿದ್ದಾರೆ. ಸಿಕ್ಕಿಬಿದ್ದ ಕಳ್ಳ ಕೋಣ ಸಾಗಾಟಗಾರರು ಅನಾರೋಗ್ಯದ ನೆಪ ಹೇಳಿ ತಪ್ಪಿಸಿಕೊಳ್ಳುವ ಪ್ರಯತ್ನ ಮಾಡಿದ್ದು, ಅವರ ನಾಟಕವನ್ನು ಪೊಲೀಸರು ಬಯಲಿಗೆಳೆದಿದ್ದಾರೆ. ಕಾರವಾರದ ಸಿದ್ದರದಲ್ಲಿದ್ದ ಕೋಣವನ್ನು ಯಲ್ಲಾಪುರದ ಕಿರವತ್ತಿಯ ಅಣ್ಣಪ್ಪ ಗೌಡಪ್ಪ ನಾಯ್ಕ (35), ಶಿವಾನಂದ ಬಸವಣ್ಣೆಪ್ಪ ರೋಟಗೋಡ ಅವರು ಅಪಹರಿಸಿದ್ದರು. ಕಾರವಾರದ ಖಾರ್ಗೆಜೂಗದ ಶೈಲೇಶ್ ಮಹಾಭಲೇಶ್ವರ ನಾಯ್ಕ ಹಾಗೂ ಪರಶುರಾಮ ಮನೋಹರ ಮಾಂಜೇಕರ ಅವರು ಆ ಕಳ್ಳರ ಜೊತೆ ಕೈ ಜೋಡಿಸಿದ್ದರು. ಅವರೆಲ್ಲರೂ ಸೇರಿ ಟಾಟಾ ಇಂಟ್ರಾ ವಾಹನದಲ್ಲಿ ಕೋಣವನ್ನು ತುಂಬಿದ್ದರು. ಅನುಮಾನಾಸ್ಪದ ವಾಹನದ ಓಡಾಟದ ಬಗ್ಗೆ ಜನ ಪೊಲೀಸರಿಗೆ ಮಾಹಿತಿ ನೀಡಿದರು. ಶನಿವಾರ ರಾತ್ರಿ ಕೋಣ ಕದ್ದು ಸಾಗಾಟ ಮಾಡುವಾಗ ಕಾರವಾರ ಗ್ರಾಮೀಣ ಠಾಣೆ ಪೊಲೀಸರು ಐಟಿಐ ಕಾಲೇಜಿನ ಬಳಿ ಆ ವಾಹನಕ್ಕೆ ಅಡ್ಡಲಾಗಿ ಕೈ ಮಾಡಿದರು. ವಾಹನ ತಪಾಸಣೆ ನಡೆಸಿದಾಗ ಕೋಣ ಸಾಗಾಟಕ್ಕೆ ಅನುಮತಿ ಪತ್ರ ಇರಲಿಲ್ಲ. ಆ ಕೋಣಕ್ಕೆ ಆಹಾರ ನೀರು ಕೊಡದೇ ಸಾಗಿಸುತ್ತಿರುವುದು ಕಾಣಿಸಿತು. ಪೊಲೀಸರು ಆ ಎಲ್ಲರನ್ನು ವಶಕ್ಕೆಪಡೆದರು. ಈ ವೇಳೆ ಆರೋಪಿತರು  ಅನಾರೋಗ್ಯದ ನೆಪ ಮಾಡಿದರು. `ಆಸ್ಪತ್ರೆಗೆ ಹೋಗಬೇಕು’ ಎಂದು ಸುಳ್ಳು ಹೇಳಿದರು. ಆದರೆ, ಅದು ಸತ್ಯವಲ್ಲ ಎಂಬುದು ಸ್ಥಳೀಯರಿಗೆ ಅರಿವಾಯಿತು. ಕೋಣವನ್ನು ವಶಕ್ಕೆಪಡೆದ ಪೊಲೀಸರು ಆರೋಪಿಗಳ ವಿರುದ್ಧ ಕ್ರಮ ಜರುಗಿಸಿದರು. - [ಕಗ್ಗ ಭತ್ತಕ್ಕೆ ಕೃಷಿಕರ ಆಸಕ್ತಿ: ನೂರು ಎಕರೆ ಪ್ರದೇಶದಲ್ಲಿ ಭತ್ತದ ಕೃಷಿ!](https://mobiletime.in/2025/11/farmers-interest-in-kagga-paddy-paddy-cultivation-in-a-hundred-acres-of-land/): ಕುಮಟಾದ ಮಾಣಿಕಟ್ಟದಲ್ಲಿ ಅಪರೂಪದಲ್ಲಿಯೇ ಅಪರೂಪವಾದ ಕಗ್ಗ ಭತ್ತವನ್ನು ಸಂರಕ್ಷಿಸಲಾಗುತ್ತಿದೆ. ಇಲ್ಲಿನ ರೈತರೆಲ್ಲರೂ ಒಗ್ಗಟ್ಟಿನಿಂದ ನೂರಾರು ಎಕರೆ ಪ್ರದೇಶದಲ್ಲಿ ಈ ಭತ್ತ ಬೆಳೆಯುತ್ತಿದ್ದಾರೆ. ಸದ್ಯ ಕಗ್ಗ ಭತ್ತಕ್ಕೆ ಜಿ ಐ ಟ್ಯಾಗ್ ಕೊಡಿಸುವ ಪ್ರಯತ್ನ ನಡೆದಿದೆ. ಕೃಷಿ ಇಲಾಖೆ ಅಧಿಕಾರಿಗಳ ಜೊತೆ ವಿಜ್ಞಾನಿಗಳು ಭತ್ತದ ಗದ್ದೆಗೆ ಹೋಗಿ ಪರಿಶೀಲನೆ ಮಾಡಿದ್ದಾರೆ. ಜೊತೆಗೆ ವಿವಿಧ ಸಲಹೆ ಸೂಚನೆಗಳನ್ನು ನೀಡಿದ್ದಾರೆ. ಈ ಸಾಮೂಹಿಕ ಬೇಸಾಯ ಪದ್ದತಿ ಇಡೀ ಉತ್ತರಕನ್ನಡ ಜಿಲ್ಲೆಯಲ್ಲಿ ಕುಮಟಾದ ಮಾಣಿಕಟ್ಟಾದಲ್ಲಿ ಮಾತ್ರ ಕಾಣಸಿಗಲಿದೆ. ಈ ಸಾಮೂಹಿಕ ಬೇಸಾಯ ಪದ್ದತಿಯ ಮೂಲಕವೇ ಅಪರೂಪದ ಕಗ್ಗ ಭತ್ತವನ್ನು ಬೆಳೆಯುತ್ತಿರುವ ರೈತರಿಗೆ ಅಂತ್ರರಾಷ್ಟಿಯ ಮಟ್ಟದಲ್ಲಿ ಮಾನ್ಯತೆ ನೀಡಲು ಕಗ್ಗ ಭತ್ತದ ತಳಿಗೆ ಜಿ ಐ ಟ್ಯಾಗ್ ನೀಡುವ ಸಂಬoಧ ಕೆಲ ಪ್ರಗತಿಪರ ರೈತರು ಪ್ರಯತ್ನ ನಡೆಸಿದ್ದಾರೆ. ಅದರ ಭಾಗವಾಗಿಯೇ ಕೃಷಿ ಇಲಾಖೆಯ ಅಧಿಕಾರಿಗಳು ಮತ್ತು ಕೃಷಿ ವಿಜ್ಞಾನಿಗಳು ಮಾಣಿಕಟ್ಟಾಕ್ಕೆ ಭೇಟಿ ನೀಡಿ ಕಗ್ಗ ಭತ್ತ ತಳಿಯನ್ನು ಪರಿಶೀಲಿಸಿದ್ದಾರೆ. ಜೊತೆಗೆ ಅಲ್ಲಿನ ರೈತರೊಂದಿಗೆ ಚರ್ಚೆ ನಡೆಸಿದ್ದಾರೆ. ಕೃಷಿ ಇಲಾಖೆ ಜಂಟಿ ನಿರ್ದೇಶಕರಾದ ನಾಗರಾಜ ನಾಯಕ, ಶಿರಸಿ ಕೃಷಿ ಇಲಾಖೆಯ ಜಂಟಿ ನಿರ್ದೇಶಕರಾದ ಶಿವಪ್ರಸಾದ, ಬೆಂಗಳೂರು ರಾಮಯ್ಯ ಇಂಟೆಲೆಕ್ಚ್ಯೂವಲ್ ಸೆಂಟರ್ ಫಾರ್ ಪ್ರಾಪರ್ಟಿ ರೈಟ್ಸ್ನ ಸಂಯೋಜಕರಾದ ಸಂಗೀತಾ ಮುರಳಿ, ಕೃಷಿ ವಿಜ್ಞಾನ ಕೇಂದ್ರ ಶಿರಸಿಯ ಮುಖ್ಯಸ್ಥೆ ರೂಪಾ ಪಾಟೀಲ್, ಶಿರಸಿಯ ಕೃಷಿಉಪ ನಿರ್ದೇಶಕ ಪಾಂಡು ಕೆ ಎಚ್, ಕುಮಟಾದ ಸಹಾಯಕ ಕೃಷಿ ನಿರ್ದೇಶಕರಾದ ವಿ ವೆಂಕಟೇಶಮೂರ್ತಿ ಅವರು ರೈತರ ಜೊತೆ ಸಂವಾದ ನಡೆಸಿದರು. `ನೋಂದಣಿ ಹೊಂದಿದ ರೈತರ ಸಮಿತಿಯನ್ನು ರಚಿಸಬೇಕು ಎಂಬ ಅಧಿಕಾರಿಗಳ ಸಲಹೆಯಂತೆ ಸದ್ಯ 19 ಸದಸ್ಯರನ್ನೊಳಗೊಂಡ ಮಾಣಿಕಟ್ಟ ಕಗ್ಗ ಭತ್ತ ರೈತರ ಉತ್ಪಾದಕ ಒಕ್ಕೂಟವನ್ನು ರಚಿಸಿಕೊಂಡು ಪದಾಧಿಕಾರಿಗಳನ್ನು ಆಯ್ಕೆ ಮಾಡಿಕೊಳ್ಳಬೇಕು’ ಎಂದವರು ತಿಳಿಸಿದರು. ಮಾಣಿಕಟ್ಟ ರೈತರ ಪ್ರಮುಖರಾದ ಮಂಜುನಾಥ ಜಿ ಪಟಗಾರ ಅವರು ಈ ವಿಷಯದ ಬಗ್ಗೆ ಮಾಹಿತಿ ನೀಡಿದ್ದು, ಕಗ್ಗ ಭತ್ತ ರೈತರ ಉತ್ಪಾದಕ ಒಕ್ಕೂಟದ ಗೌರವಾಧ್ಯಕ್ಷ ಶ್ರೀಧರ ಎಂ ಪೈ, ಅಧ್ಯಕ್ಷರಾದ ಜಗನ್ನಾಥ ನಾಯ್ಕ, ಕಾರ್ಯದರ್ಶಿ ಮಂಜುನಾಥ ಜಿ ಪಟಗಾರ, ಉಪಾಧ್ಯಕ್ಷ ವಿನಾಯಕ ಗೌಡ, ಖಜಾಂಚಿ ವಾಸು ಪಟಗಾರ ಇದ್ದರು. - [ಸರ್ಕಾರಿ ಅನುದಾನ-ಗುತ್ತಿಗೆದಾರನ ಅದ್ವಾನ!](https://mobiletime.in/2025/11/government-grant-contractors-campaign/): ಬಡವರಿಗೆ ಶಾಶ್ವತ ಸೂರು ಕಲ್ಪಿಸುವುದಕ್ಕಾಗಿ ಶಿರಸಿ ಅಡಗಿ ರಸ್ತೆಯಲ್ಲಿ 3.60 ಕೋಟಿ ರೂ ವೆಚ್ಚದಲ್ಲಿ ಮನೆ ಕಟ್ಟಲಾಗುತ್ತಿದೆ. ಆದರೆ, ಈ ಕಟ್ಟಡ ಕಳಪೆ ಎಂಬ ಅನುಮಾನ ಅಲ್ಲಿನವರನ್ನು ಕಾಡುತ್ತಿದೆ. ಅಡಗಿ ರಸ್ತೆಯ ಲೀಡಕರ್ ಕಾಲೋನಿಯಲ್ಲಿ ಸರ್ಕಾರದಿಂದ ಮನೆ ನಿರ್ಮಿಸುವ ಕೆಲಸ ನಡೆದಿದೆ. ಕಳೆದ ನಾಲ್ಕು ವರ್ಷಗಳಿಂದ ಅಪಾರ್ಟಮೆಂಟ್ ಮಾದರಿಯಲ್ಲಿ ಇಲ್ಲಿ ಮನೆ ನಿರ್ಮಾಣ ನಡೆಯುತ್ತಿದೆ. ಆದರೆ, ಕಳೆದ ಒಂದು ವರ್ಷದಿಂದ ಇಲ್ಲಿ ಯಾವುದೇ ಕೆಲಸಗಾರರು ಬಂದಿಲ್ಲ. ಹೀಗಾಗಿ ಮನೆಯ ಕಿಟಕಿ, ಬಾಗಿಲು ಕೂರಿಸುವ ಕಾರ್ಯ ನಡೆದಿಲ್ಲ. ಜೊತೆಗೆ ಬಣ್ಣ ಬಡಿಯಲು ಸಹ ಗುತ್ತಿಗೆದಾರ ಆಸಕ್ತಿವಹಿಸಿಲ್ಲ. ಚರ್ಮಗಾರಿಕೆ ಮಾಡುವ ಜನರಿಗಾಗಿ 3.60 ಕೋಟಿ ರೂ ವೆಚ್ಚದಲ್ಲಿ 60 ಮನೆಗಳ ನಿರ್ಮಾಣ ಕಾರ್ಯ ನಡೆದಿದ್ದು, ಸರ್ಕಾರ ಪ್ರತಿ ಮನೆ ನಿರ್ಮಾಣಕ್ಕೆ 6 ಲಕ್ಷ ರೂ ಅನುದಾನ ನೀಡುತ್ತಿದೆ. ಆ ಹಣ ಬಳಸಿ ಮೊದಲು ಎಲ್ಲವೂ ವೇಗವಾಗಿ ನಡೆಯಿತು. ಕ್ರಮೇಣ ಕೆಲಸ ನಿಧಾನವಾಗಿದ್ದು, ಸದ್ಯ ಕಾಮಗಾರಿ ಗುಣಮಟ್ಟದ ಬಗ್ಗೆಯೂ ಅಲ್ಲಿನವರು ಅನುಮಾನವ್ಯಕ್ತಪಡಿಸಿದ್ದಾರೆ. ಐದು ಅಪಾರ್ಟಮೆಂಟ್ ಮಾದರಿಯಲ್ಲಿ ಇಲ್ಲಿ ಕಟ್ಟಡ ನಿರ್ಮಾಣ ನಡೆದಿದೆ. ಚರ್ಮಗಾರಿಕೆ ಮಾಡುವವರಿಗೆ ಮನೆ ಜೊತೆ ಅಲ್ಲಿಯೇ ವರ್ಕಶಾಪ್ ಅನುಕೂಲಕರ ವಾತಾವರಣವನ್ನು ನಿರ್ಮಿಸಲಾಗಿದೆ. ಈ ಮನೆಪಡೆಯಲು ಫಲಾನುಭವಿ 95 ಸಾವಿರ ರೂ ಪಾವತಿಸಬೇಕಿದ್ದು, ಅದನ್ನು ಕಂತಿನ ರೂಪದಲ್ಲಿ ಪಾವತಿಸಲು ಅವಕಾಶವಿಲ್ಲದಿರುವುದು ಆಕ್ಷೇಪಕ್ಕೆ ಕಾರಣವಾಗಿದೆ. `ಅತ್ಯಂತ ಇಕ್ಕಟಾದ ಪ್ರದೇಶದಲ್ಲಿ ಮನೆ ನಿರ್ಮಾಣ ನಡೆದಿದೆ. ಸಿಮೆಂಟ್ ರಸ್ತೆ ಸಹ ಕಳಪೆಯಾಗಿದ್ದು, ಎಲ್ಲಾ ಕಾಮಗಾರಿಯ ಗುಣಮಟ್ಟ ಪರಿಶೀಲನೆ ನಂತರವೇ ಅದನ್ನು ಹಂಚಿಕೆ ಮಾಡಬೇಕು. ಹಲವು ದಶಕದಿಂದ ಇಲ್ಲಿ 24 ಮನೆ ಇಲ್ಲಿದ್ದು, ಅವರ ಹೆಸರಿಗೆ ಭೂಮಿ ದಾಖಲೆ ಆಗಬೇಕು’ ಎಂದು ಅಲ್ಲಿನ ಮುಕೇಶ ಅವರು ಆಗ್ರಹಿಸಿದರು. - [ಚೀನಾ ಬ್ಯಾಂಕಿನೊಳಗೆ ಅವಿತಿದ್ದ ಸತೀಶ್ ಸೈಲ್ ದುಡ್ಡು!](https://mobiletime.in/2025/11/satish-sails-money-was-hidden-inside-the-chinese-bank/): ಕಾರವಾರ ವಿಧಾನಸಭಾ ಕ್ಷೇತ್ರದ ಶಾಸಕ ಸತೀಶ್ ಸೈಲ್ ಚೀನಾದಲ್ಲಿ ಸಹ ಬ್ಯಾಂಕ್ ಖಾತೆ ಹೊಂದಿದ್ದಾರೆ. ಆ ಖಾತೆ ಮೂಲಕವೂ ಅವರು ಕೋಟಿ ಕೋಟಿ ರೂ ವ್ಯವಹಾರ ನಡೆಸಿರುವುದು ಜಾರಿ ನಿರ್ದೇಶನಾಲಯದ ತನಿಖೆಯಲ್ಲಿ ಗೊತ್ತಾಗಿದೆ! ಬಳ್ಳಾರಿಯ ಅದಿರನ್ನು ಸತೀಶ್ ಸೈಲ್ ಅವರು ತಮ್ಮ ಒಡೆತನದ ಮಲ್ಲಿಕಾರ್ಜುನ ಶಿಪ್ಪಿಂಗ್ ಕಂಪನಿ ಮೂಲಕ ವಿದೇಶಕ್ಕೆ ರವಾನಿಸಿದ್ದಾರೆ. ತಮ್ಮ ಕಂಪನಿಗೆ 27 ಕೋಟಿ ರೂಪಾಯಿ ಲಾಭ ಮಾಡುವುದಕ್ಕಾಗಿ ಸತೀಶ್ ಸೈಲ್ ಅವರು ಸರ್ಕಾರಿ ಬೊಕ್ಕಸಕ್ಕೆ 44.9 ಕೋಟಿ ರೂ ನಷ್ಟ ಮಾಡಿದ್ದಾರೆ. ನೈಜ ಖರೀದಿದಾರರಿಗೆ ಅದಿರು ರಪ್ತು ಮಾಡದೇ ಅವರು ವಿವಿಧ ವಿದೇಶಿ ಕಂಪನಿಗಳ ಮೂಲಕ ಅದಿರನ್ನು ಮಾರಾಟ ಮಾಡಿದ್ದಾರೆ. ಈ ವ್ಯವಹಾರಕ್ಕೆ ಅನುಕೂಲವಾಗುವಂತೆ ಸತೀಶ್ ಸೈಲ್ ಅವರು ಚೀನಾದ ಹಾಂಕಾoಗ್ ಸ್ಟಾಂಡರ್ಡ್ ಚಾರ್ಟರ್ಡ್ ಬ್ಯಾಂಕ್, ಐಸಿಬಿಸಿ ಬ್ಯಾಂಕ್ ಹಾಂಕಾoಗ್’ದಲ್ಲಿ ಖಾತೆ ಹೊಂದಿದ್ದಾರೆ! ಇನ್ನೂ ಮುಖ್ಯವಾದ ಸಂಗತಿ ಎಂದರೆ ಸತೀಶ್ ಸೈಲ್ ಅವರು ಚೀನಾದಲ್ಲಿ ಸಹ ತಮ್ಮದೇ ಕಂಪನಿಗೆ ತಾವು ರವಾನಿಸಿದ ಅದಿರು ಮಾರಾಟ ಮಾಡಿದ್ದಾರೆ. ಬಳ್ಳಾರಿಯಿಂದ ಹೊರಟ ಅದಿರು ಸತೀಶ್ ಸೈಲ್ ಅವರ ಮಲ್ಲಿಕಾರ್ಜುನ ಶಿಪ್ಪಿಂಗ್ ಕಂಪನಿಯಿoದ ಮಾರಾಟವಾಗಿದ್ದು, ಚೀನಾದಲ್ಲಿ ಸತೀಶ್ ಸೈಲ್ ಅವರ ಒಡೆತನದಲ್ಲಿರುವ ಜಿಐ ಐರನ್ & ಸ್ಟೀಲ್ ಇನ್ವೆಸ್ಟಮೆಂಟ್ ಕಂಪನಿ ಅದನ್ನು ಖರೀದಿಸಿದೆ. ಅದಾದ ನಂತರ ಇನ್ನಿತರ ಕಂಪನಿಗಳಿಗೆ ಆ ಅದಿರು ಮಾರಾಟವಾಗಿದೆ. ಜಾರಿ ನಿರ್ದೇಶನಾಲಯವೂ ಈ ಎಲ್ಲಾ ವಿಷಯವನ್ನು ದೋಷಾರೋಪಣ ಪಟ್ಟಿ ಮೂಲಕ ನ್ಯಾಯಾಲಯಕ್ಕೆ ತಿಳಿಸಿದೆ. - [ಮದ್ವೆ ಮಾಡ್ಕಳೆ.. ಮದ್ವೆ ಮಾಡ್ಕಳೆ.. ಹವ್ಯಕ ಮಾಣಿಗೆ ಕೂಸಿಲ್ಲೆ!](https://mobiletime.in/2025/11/the-bride-is-a-bride-the-bride-is-a-bride-the-bride-is-a-bride/): ಎಐ ತಂತ್ರಜ್ಞಾನ ಬಳಸಿ ರಚಿಸಲಾದ `ಮದ್ವೆ ಮಾಡ್ಕಳೆ’ ಎಂಬ ಹಾಡು ಜಾಲತಾಣದಲ್ಲಿ ಸದ್ದು ಮಾಡುತ್ತಿದೆ. ಹವ್ಯಕ ಮಾಣಿಗೆ ಕೂಸಿಲ್ಲದ ಕಾಲಘಟ್ಟದಲ್ಲಿ ಈ ಹಾಡು ಸಾಕಷ್ಟು ವೈರಲ್ ಆಗಿದೆ. ಸಿದ್ದಾಪುರದ ವಿನಯ ದಂಡ್ಕಲ್ ಈ ಹಾಡು ರಚಿಸಿದ್ದಾರೆ. ಶಿರಸಿ-ಸಿದ್ದಾಪುರ-ಯಲ್ಲಾಪುರ ಸೀಮೆಯ ಹವ್ಯಕ ಯುವಕರು ಅನುಭವಿಸುತ್ತಿರುವ ಮದುವೆ ಸಮಸ್ಯೆಯನ್ನು ಈ ಹಾಡು ತೆರೆದಿಡುತ್ತಿದೆ. ಹಾಸ್ಯಮಯ ಮನೋಭಾವದ ಶೈಲಿಯಲ್ಲಿ ಹಾಡು ರಚಿತವಾಗಿದೆ. ಸ್ಥಳೀಯ ನುಡಿಗಟ್ಟಿನ ಜೊತೆ ಟಪ್ಪಾಂಗುಚ್ಚಿ ಲಯವನ್ನು ಹಾಡಿಗೆ ಎಐ ತಂತ್ರಜ್ಞಾನದ ಮೂಲಕ ಅಳವಡಿಸಲಾಗಿದೆ. ಆಧುನಿಕ ಧ್ವನಿ ತಂತ್ರಜ್ಞಾನ ಬಳಸಿ ಈ ಹಾಡು ಹಾಡಲಾಗಿದ್ದು, ಹವ್ಯಕ ಆಲ್ಬಮ್ ಸಾಂಗ್ ಸರಣಿಯ ಇನ್ನಷ್ಟು ಗೀತೆಗಳು ಬಿಡುಗಡೆ ಆಗಲಿದೆ. ಮಲೆನಾಡಿನ ನೈಸರ್ಗಿಕ ಸೊಬಗು, ಹವ್ಯಕ ಪರಂಪರೆ ಹಾಗೂ ಹಳ್ಳಿಯ ಜೀವನದ ಹಾಸ್ಯಮಯ ಅಂಶಗಳನ್ನು ಇದರಲ್ಲಿ ಅಳವಡಿಸಲಾಗಿದೆ. ಮದ್ವೆ ಮಾಡ್ಕಳೆ ಹಾಡು ಇಲ್ಲಿ ನೋಡಿ.. - [2025ರ ನವೆಂಬರ್ 16ರ ದಿನ ಭವಿಷ್ಯ](https://mobiletime.in/2025/11/prediction-for-november-16-2025/): ಮೇಷ ರಾಶಿ: ನಿಮ್ಮ ಆರೋಗ್ಯ ಮತ್ತು ಕಾರ್ಯಕ್ಷೇತ್ರದಲ್ಲಿ ಸಣ್ಣ ಅಡೆತಡೆ ಆಗುವ ಲಕ್ಷಣವಿದೆ. ಆತ್ಮವಿಶ್ವಾಸ ಹೆಚ್ಚಿಸಿಕೊಂಡು ಕೆಲಸ ಮಾಡಿ. ಮುಂಬರುವ ಕೆಲಸಗಳು ನಿಮ್ಮ ಶ್ರದ್ಧೆಯ ಮೇಲೆ ನಿಂತಿದೆ. ಪ್ರೀತಿಯಲ್ಲಿ ಹೊಸ ಸಂಬoಧಗಳಿಗೆ ಅವಕಾಶ ಸಿಗಲಿದೆ. ವೃಷಭ ರಾಶಿ: ಸಂಗೀತ, ಕಲೆ ಮತ್ತು ಸೃಜನಶೀಲತೆಯಲ್ಲಿ ಪ್ರಗತಿ ಸಾಧಿಸಿದ ದಿನ. ಕುಟುಂಬ ಸಂಬoಧಗಳಲ್ಲಿ ಕಾಳಜಿವಹಿಸಿ. ಕೆಲಸದಲ್ಲಿ ತೊಡಕು ಕಂಡು ಬರಲಿದ್ದು, ಧೈರ್ಯವಾಗಿರಿ. ಹಣಕಾಸಿನಲ್ಲಿ ಸಮತೋಲನ ಕಾಪಾಡಲು ಪ್ರಯತ್ನಿಸಿ. ಮಿಥುನ ರಾಶಿ: ವ್ಯವಸ್ಥೆಯಲ್ಲಿ ಬದಲಾವಣೆಗಳನ್ನು ಒಪ್ಪಿಕೊಳ್ಳಿ. ಅತಿರೇಕದ ಒತ್ತಡದಿಂದ ದೂರವಿರಿ. ಸಂವಹನ ವಿಷಯದಲ್ಲಿ ಸಹನೆ ಮುಖ್ಯ. ಪ್ರೀತಿಯ ಜೀವನದಲ್ಲಿ ಬದಲಾವಣೆ ಬರುವ ಲಕ್ಷಣವಿದೆ. ಕನ್ಯಾ ರಾಶಿ: ನಿಮ್ಮ ವ್ಯಕ್ತಿತ್ವದಲ್ಲಿ ಉತ್ತಮ ಪ್ರೇರಣೆ ಹೆಚ್ಚಾಗುತ್ತದೆ. ಹೊಸ ಆರಂಭಗಳಿಗೆ ಸಾಕಷ್ಟು ಅವಕಾಶಗಳಿವೆ. ಒತ್ತಡಗಳಿಂದ ಮುಕ್ತವಾಗಿರಿ. ಸಂಯಮದಿAದ ನಡೆದುಕೊಳ್ಳಿ. ಧಾರ್ಮಿಕ ಹಾಗೂ ಸಾಮಾಜಿಕ ಚಟುವಟಿಕೆಗಳಲ್ಲಿ ಭಾಗವಹಿಸಲು ಉತ್ತಮ ಅವಕಾಶ ಸಿಗಲಿದೆ. ತುಲಾ ರಾಶಿ: ಖರ್ಚು-ವೆಚ್ಚಗಳ ಬಗ್ಗೆ ಎಚ್ಚರಿಕೆ ಅಗತ್ಯ. ವ್ಯವಹಾರದಲ್ಲಿ ಹೊಸ ಗುರಿಗಳ ಸಾಧನೆ ಅನಿವಾರ್ಯ. ಕೆಲಸದ ವಿಷಯದಲ್ಲಿ ಸಾಧನೆ ಸಾಧ್ಯವಿದೆ. ಕುಟುಂಬದ ಜೊತೆ ಕಾಲ ಕಳೆಯಿರಿ. ವೃಶ್ಚಿಕ ರಾಶಿ: ವೃತ್ತಿಯಲ್ಲಿ ನಿಮ್ಮ ಪ್ರತಿಷ್ಟೆ ಮತ್ತು ಕಾರ್ಯಕ್ಷಮತೆ ಹೆಚ್ಚಾಗಲಿದೆ. ಆತ್ಮವಿಶ್ವಾಸದಿಂದ ಕೆಲಸಗಳನ್ನು ಈಡೇರಿಸಲು ಪ್ರಯತ್ನಿಸಿರಿ. ವಾಗ್ವಾದಗಳನ್ನು ತಪ್ಪಿಸಿ. ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿವಹಿಸಿ. ಧನು ರಾಶಿ: ಪ್ರಯಾಣ ಮತ್ತು ವ್ಯಾಸಂಗದಲ್ಲಿ ಪ್ರಗತಿ ಸಾಧಿಸುವ ಅವಕಾಶ ಸಿಗಲಿದೆ. ಉತ್ತಮ ಕೆಲಸದಿಂದ ಯೋಗ್ಯ ಫಲ ದೊರೆಯಲಿದೆ. ಹಣಕಾಸಿನ ಸಂಪನ್ಮೂಲಗಳನ್ನು ಸರಿಯಾಗಿ ನಿಭಾಯಿಸಿ. ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿ ಹೆಚ್ಚಾಗಲಿದೆ. ಮಕರ ರಾಶಿ: ಪರಿಸರದ ಒತ್ತಡಗಳು ನಿಮ್ಮ ಮೇಲೆ ಪ್ರಭಾವ ಬೀರುವ ಸಾಧ್ಯತೆ ಹೆಚ್ಚಿರುವುದರಿಂದ ಆರೋಗ್ಯದ ಕಡೆ ಗಮನಹರಿಸಿ ಸಹೋದ್ಯೋಗಿಗಳಿಂದ ಬೆಂಬಲಪಡೆದು ಕೆಲಸ ಮಾಡಿ. ಹಣಕಾಸಿನ ನಿರ್ವಹಣೆಯಲ್ಲಿ ಎಚ್ಚರಿಕೆ ಬೇಕು. ಈ ದಿನ ಯಾರಿಗೂ ಸಾಲ ಕೊಡಬೇಡಿ. ಕುಂಭ ರಾಶಿ: ಖರ್ಚುಗಳು ಹೆಚ್ಚಾದರೂ ಅದನ್ನು ಮತ್ತೆ ಗಳಿಸಲು ಸಾಧ್ಯ. ಮಾನಸಿಕ ನೋವುಗಳಿಂದ ಹೊರಬನ್ನಿ. ಕಾರ್ಯಕ್ಷೇತ್ರದಲ್ಲಿ ಗಮನಹರಿಸಿ ಕೆಲಸ ಮಾಡಿ. ಪ್ರೀತಿಪಾತ್ರರಿಗೆ ಅನ್ಯಾಯ ಮಾಡಬೇಡಿ. ಮೀನ ರಾಶಿ: ದಿನನಿತ್ಯದ ಜೀವನದ ಕೆಲಸಗಳಲ್ಲಿ ಕೆಲ ಬೆಳವಣಿಗೆಗಳಾಗಲಿವೆ. ಆರೋಗ್ಯದಲ್ಲಿ ಸಣ್ಣ ಪ್ರಮಾಣದ ತೊಂದರೆ ಸಹಜ. ಸಾಮಾಜಿಕವಾಗಿ ಪ್ರಭಾವ ಬೀರುವ ಸಮಯ ನಿಮ್ಮದಾಗಲಿದ್ದು, ಧೈರ್ಯದಿಂದ ಕೆಲಸ ಮಾಡಿ. - [ದುಡಿಯುವ ವರ್ಗಕ್ಕೆ ದುಡ್ಡು ಸಿಕ್ಕಿಲ್ಲ!](https://mobiletime.in/2025/11/the-working-class-has-not-received-any-money/): ಭಟ್ಕಳದ ಸರ್ಕಾರಿ ಆಸ್ಪತ್ರೆಯಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುವ ನೌಕರರಿಗೆ ಮೂರು ತಿಂಗಳಿನಿoದ ಸಂಬಳವಾಗಿಲ್ಲ. ಹೀಗಾಗಿ ನಿತ್ಯವೂ ರೋಗಿಗಳ ಆರೈಕೆ ಮಾಡುವ ಅಲ್ಲಿನ ಸಿಬ್ಬಂದಿ ಕುಟುಂಬದ ಆರೈಕೆ ಮಾಡಲಾಗದೇ ಹೈರಣಾಗಿದ್ದಾರೆ. ಸಂಬಳ ಆಗದ ಬಗ್ಗೆ ನೌಕರರು ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ಆದರೆ, ಅದರಿಂದ ಪ್ರಯೋಜನವಾಗಿಲ್ಲ. `ನೀಡುವ ವೇತನ ಸಹ ಕಡಿಮೆ. ಅದರಲ್ಲಿಯೂ 2-3 ತಿಂಗಳಿಗೆ ಒಮ್ಮೆ ಸಂಬಳ ಕೊಡುತ್ತಿದ್ದು, ನಮ್ಮ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗುತ್ತಿಲ್ಲ’ ಎಂದು ಅಲ್ಲಿನವರು ನೋವು ತೋಡಿಕೊಂಡಿದ್ದಾರೆ. ಭಟ್ಕಳ ಸರ್ಕಾರಿ ಆಸ್ಪತ್ರೆಯಲ್ಲಿ ಒಟ್ಟು 25 ಹೊರಗುತ್ತಿಗೆ ಸಿಬ್ಬಂದಿ ಇದ್ದಾರೆ. ಅದರಲ್ಲಿ ನಾನ್ ಕ್ಲಾರಿಕಲ್ 10 ಜನ ಇದ್ದರೆ, ಗ್ರೂಪ್ ಡಿ ಹುದ್ದೆಯಲ್ಲಿ 15 ಜನರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಅವರೆಲ್ಲರೂ ಸಮಸ್ಯೆ ಅನುಭವಿಸುತ್ತಿದ್ದಾರೆ. `ಸಮಯಕ್ಕೆ ಸರಿಯಾಗಿ ಸಂಬಳ ಸಿಗದ ಕಾರಣ ಕಿರಾಣಿ ಅಂಗಡಿ, ವಿದ್ಯತ್ ಬಿಲ್, ಸಾಲದ ಹಣ ಮರುಪಾವತಿ, ಶಾಲಾ ಮಕ್ಕಳ ಶುಲ್ಕ, ಹಾಲು, ತರಕಾರಿ ಎಲ್ಲರಲ್ಲಿಯೂ ಸಾಲ ಸಾಮಾನ್ಯವಾಗಿದೆ. ಹಣ ಹೊಂದಿಸುವುದೇ ಕಷ್ಟವಾಗಿದ್ದು, ಸಿಗುವ ಸಂಬಳ ಸಾಲದ ಬಡ್ಡಿಗೆ ಸಮನಾಗಿರುತ್ತದೆ’ ಎಂದವರು ಕಣ್ಣೀರು ಹಾಕಿದರು. - [ಮಕ್ಕಳ ದಿನಾಚರಣೆ: ಸರ್ಕಾರಿ ಶಾಲೆಯಲ್ಲಿ ಸಂಭ್ರಮಾಚರಣೆ](https://mobiletime.in/2025/11/childrens-day-celebrations-at-government-school/): ಅoಕೋಲಾದ ಹಟ್ಟಿಕೇರಿ ಶಾಲೆಗೆ ಭೇಟಿ ನೀಡಿದ ಜನಶಕ್ತಿ ವೇದಿಕೆ ಅಧ್ಯಕ್ಷ ಮಾಧವ ನಾಯಕ ಅವರು ಮಕ್ಕಳ ಜೊತೆ ಜನ್ಮದಿನ ಆಚರಿಸಿದರು. ಈ ವೇಳೆ ಮಕ್ಕಳ ಶಿಕ್ಷಣಕ್ಕೆ ಅಗತ್ಯವಿರುವ ಕಲಿಕಾ ಸಾಮಗ್ರಿಗಳನ್ನು ವಿತರಿಸಿದರು. ಜನಶಕ್ತಿ ವೇದಿಕೆಯ ಸಂಘಟನಾ ಕಾರ್ಯದರ್ಶಿ ನಿತ್ಯಾನಂದ ನಾಯಕ ಹಾಗೂ ವಿಠಲ್ ನಾಯ್ಕ್ ಅವರು ಈ ಕಾರ್ಯಕ್ರಮದ ರೂಪುರೇಷೆ ಸಿದ್ಧಪಡಿಸಿದ್ದರು. ಮಕ್ಕಳಿಗೆ ಪಟ್ಟಿ, ಪೆನ್ನು, ಪೆನ್ಸಿಲ್ ಸೇರಿ ವಿವಿಧ ವಸ್ತುಗಳು ಅಗತ್ಯವಿರುವ ಬಗ್ಗೆ ಅರಿತು ಅವರು ಅದನ್ನು ಪೂರೈಸಿದರು. ಮಾಧವ ನಾಯಕ ಅವರು ಅಕ್ಟೊಬರ್ 10ರಂದು ಶಾಲೆಯಲ್ಲಿ ಜನ್ಮದಿನ ಆಚರಿಸಲು ನಿರ್ಧರಿಸಿದ್ದರು. ಆದರೆ, ಶೈಕ್ಷಣಿಕ ಸಮೀಕ್ಷೆ ಹಿನ್ನಲೆ ಆ ಅವಧಿಯಲ್ಲಿ ರಜೆ ಘೋಷಿಸಲಾಗಿದ್ದು, ಮಕ್ಕಳ ದಿನಾಚರಣೆಯ ದಿನ ಅವರು ಮಕ್ಕಳ ಜೊತೆ ಸಂಭ್ರಮಾಚರಣೆ ನಡೆಸಿದರು. `ವಿದ್ಯಾರ್ಥಿಗಳು ಗುರಿ ಇಟ್ಟುಕೊಂಡು ಮುಂದೆ ಸಾಗಬೇಕು. ಭವಿಷ್ಯದಲ್ಲಿ ಉತ್ತಮ ಸಾಧನೆ ತೋರಲು ಶಿಕ್ಷಣ ಮುಖ್ಯ. ಯಾವುದೇ ಸಮಸ್ಯೆಗಳು ಎದುರಾದರೂ ಕಲಿಕೆ ಮಾತ್ರ ಬಿಡಬಾರದು’ ಎಂದು ಮಾಧವ ನಾಯಕ ಅವರು ಈ ವೇಳೆ ಕರೆ ನೀಡಿದರು. ಕೇಕ್ ಕತ್ತರಿಸಿ, ಸಿಹಿ ಹಂಚುವ ಮೂಲಕ ಮಕ್ಕಳಿಗೆ ಮಾಧವ ನಾಯಕ ಅವರು ಮಕ್ಕಳ ದಿನಾಚರಣೆಯ ಶುಭಾಶಯ ತಿಳಿಸಿದರು. ಈ ಸಂದರ್ಭದಲ್ಲಿ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ದಿಲೀಪ್ ನಾಯ್ಕ, ಉರಗ ಪ್ರೇಮಿ ಮಹೇಶ್ ನಾಯಕ, ಪ್ರಮುಖರಾದ ನಿತ್ಯಾನಂದ ನಾಯ್ಕ, ಸುರೇಶ್ ನಾಯ್ಕ್, ಷಣ್ಮುಖ ನಾಯ್ಕ, ದಿಗಂಬರ ನಾಯ್ಕ, ವಿಕ್ರಮ ನಾಯ್ಕ, ರಾಮದಾಸ ನಾಯ್ಕ, ಮಹೇಶ ನಾಯ್ಕ, ಗುರು ನಾಯ್ಕ, ಸಾಯಿನಾಥ ನಾಯ್ಕ, ಚಂದ್ರಹಾಸ ನಾಯ್ಕ, ಸುಭಾಕರ ನಾಯ್ಕ, ಕೃಷ್ಣಮೂರ್ತಿ ನಾಯ್ಕ, ಮಧುಕರ ನಾಯ್ಕ ಮುಂತಾದವರಿದ್ದರು. - [ಸಾವು-ನೋವು: ಸುಂದರ ಸಂಸಾರ ಹಾಳು ಮಾಡಿದ ಸರಾಯಿ!](https://mobiletime.in/2025/11/death-and-pain-sarai-ruined-a-beautiful-family/): ವಿಪರೀತ ಸರಾಯಿ ಕುಡಿಯುತ್ತಿದ್ದ ಬನವಾಸಿಯ ಗಣೇಶ ಹೂವಿನಕೊಪ್ಪಲಕೇರಿ ಅವರ ಜೊತೆ ಸಂಸಾರ ಮಾಡಲಾಗದೇ ಅವರ ಪತ್ನಿ ರಂಜಿತಾ ಅವರು ದೂರವಾಗಿದ್ದು, ಇದೇ ನೋವಿನಲ್ಲಿ ಗಣೇಶ ಅವರು ವಿಷ ಕುಡಿದಿದ್ದಾರೆ. ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿ ನಾಲ್ಕು ದಿನ ಚಿಕಿತ್ಸೆ ಕೊಡಿಸಿದರೂ ಗಣೇಶ ಅವರು ಬದುಕಲಿಲ್ಲ. ಶಿರಸಿ ತಾಲೂಕಿನ ಬನವಾಸಿಯ ಹೂವಿನಕೊಪ್ಪಲಕೇರಿಯಲ್ಲಿ ಗಣೇಶ ಅವರು ವಾಸವಾಗಿದ್ದರು. ಸಾಗರದ ಪೆಟ್ರೋಲ್ ಬಂಕಿನಲ್ಲಿ ಕೆಲಸ ಮಾಡುತ್ತಿದ್ದ ಅವರು ತಮ್ಮ ದುಡಿಮೆಯ ಬಹುಪಾಲು ಹಣವನ್ನು ಸರಾಯಿ ಅಂಗಡಿಯವರಿಗೆ ಕೊಡುತ್ತಿದ್ದರು. ಇದನ್ನು ಸಹಿಸದ ಗಣೇಶ ಅವರ ಪತ್ನಿ ರಂಜಿತಾ ಪತಿ ಬಿಟ್ಟು ದೂರವಾಗಿದ್ದರು. ಪತ್ನಿ ದೂರವಾದ ಹಿನ್ನಲೆ ಗಣೇಶ ಅವರು ಬೇಸರಿಸಿಕೊಂಡಿದ್ದರು. ಆದರೆ, ಮದ್ಯ ಸೇವನೆಯ ಚಟವನ್ನು ಮಾತ್ರ ಅವರು ಬಿಟ್ಟಿರಲಿಲ್ಲ. ಹೀಗಿರುವಾಗ ನವೆಂಬರ್ 10ರಂದು ಗಣೇಶ ಅವರು ಬನವಾಸಿಯಲ್ಲಿರುವ ಅಕ್ಕ ವಾಸಂತಿ ಅವರ ಮನೆಗೆ ಬಂದರು. `ಮನೆಯಲ್ಲಿದ್ದ ಕೆಲ ಕಾಗದಪತ್ರಗಳನ್ನು ಒಯ್ಯಲು ಬಂದಿರುವೆ’ ಎಂದು ವಾಸಂತಿ ಅವರ ಬಳಿ ತಿಳಿಸಿದರು. ಮಧ್ಯಾಹ್ನ ಅಕ್ಕನ ಮನೆಯಲ್ಲಿ ಊಟ ಮಾಡಿದರು. ಸಂಜೆ ಮನೆಯಿಂದ ಹೊರ ಹೋಗಿದ್ದ ಗಣೇಶ ಅವರು ರಾತ್ರಿ 8 ಗಂಟೆಗೆ ಮತ್ತೆ ಮನೆ ಸೇರಿದ್ದರು. ಆ ವೇಳೆ ವಾಸಂತಿ ಅವರು ಮನೆಗೆ ಬಂದರು. ಗಣೇಶ ಅವರು ಮನೆಯ ಕೋಣೆಯಲ್ಲಿ ವಾಂತಿ ಮಾಡುತ್ತಿರುವುದನ್ನು ನೋಡಿದರು. ಹತ್ತಿರ ಹೋಗಿ ನೋಡಿದಾಗ ಪಕ್ಕದಲ್ಲಿ ವಿಷದ ಬಾಟಲಿ ಬಿದ್ದಿತ್ತು. ಕೂಡಲೇ ತಮ್ಮನನ್ನು ಪ್ರಶ್ನಿಸಿದರು. ಆದರೆ, ಗಣೇಶ ಅವರು ಮಾತನಾಡಲಿಲ್ಲ. ಹೀಗಾಗಿ ಗಣೇಶ ಅವರನ್ನು ವಾಸಂತಿ ಅವರು ಬನವಾಸಿ ಆಸ್ಪತ್ರೆಗೆ ಕರೆದೊಯ್ದರು. ಅಲ್ಲಿನ ವೈದ್ಯರ ಬಳಿ ಗಣೇಶ ಅವರು ವಿಷ ಸೇವಿಸಿದ ವಿಷಯ ಹೇಳಿದರು. ಅದಾದ ನಂತರ ವೈದ್ಯರು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ಕರೆದೊಯ್ಯುವಂತೆ ಸೂಚಿಸಿದರು. ಅಲ್ಲಿ ನಾಲ್ಕು ದಿನಗಳ ಚಿಕಿತ್ಸೆ ನಡೆಯಿತು. ಆದರೆ, ನವೆಂಬರ್ 14ರಂದು ಗಣೇಶ ಅವರು ಕೊನೆಯುಸಿರೆಳೆದರು. `ಆತ್ಮಹತ್ಯೆ ಅಪರಾಧ’ - [ಫೋಟೋ ತೆಗೀರಿ.. ವಾಟ್ಸಪ್ ಮಾಡಿ!](https://mobiletime.in/2025/11/take-a-photo-whatsapp-it/): ರಸ್ತೆ ಅಪಘಾತದಿಂದ ಆಗುವ ಸಾವು-ನೋವಿನ ಪ್ರಮಾಣ ತಗ್ಗಿಸುವುದಕ್ಕಾಗಿ ಕುಮಟಾ ಪೊಲೀಸರು ವಿನೂತನ ತಂತ್ರ ಅನುಸರಿಸುತ್ತಿದ್ದಾರೆ. ಸಂಚಾರಿ ನಿಯಮ ಉಲ್ಲಂಘಿಸುವವರ ಫೋಟೋ ತೆಗೆದು ತಮಗೆ ರವಾನಿಸುವಂತೆ ಪ್ರಕಟಣೆ ಹೊರಡಿಸಿದ್ದಾರೆ! ಕುಮಟಾ ವಿಭಾಗಾಧಿಕಾರಿ ಶ್ರವಣಕುಮಾರ ಅವರು ಸಂಚಾರಿ ನಿಯಮ ಕಟ್ಟುನಿಟ್ಟಿನ ಪಾಲನೆಗಾಗಿ ಸಭೆ ನಡೆಸಿದ್ದು, ಈ ಸಭೆಯಲ್ಲಿ ಸಾರ್ವಜನಿಕರ ಸಹಕಾರದಲ್ಲಿ ಸಂಚಾರಿ ನಿಯಮ ಪಾಲನೆ ಮಾಡುವವರನ್ನು ಶಿಕ್ಷಿಸುವ ಬಗ್ಗೆ ನಿರ್ಣಯ ಕೈಗೊಳ್ಳಲಾಗಿದೆ. ಅದರ ಭಾಗವಾಗಿ ಹೆಲ್ಮೆಟ್ ಧರಿಸದೇ ಬರುವ ಬೈಕ್ ಸವಾರರಿಗೆ ಪೆಟ್ರೋಲ್ ನೀಡದಂತೆ ಬಂಕ್ ಮಾಲಕರಿಗೆ ಸೂಚಿಸಲಾಗಿದೆ. ಸೀಟ್ ಬೆಲ್ಟ ಧರಿಸದೇ ಕಾರು ಓಡಿಸುವವರಿಗೂ ಇದೇ ನಿಯಮ ಅನ್ವಯ ಆಗಲಿದೆ. ಅದರ ಮುಂದುವರೆದ ಭಾಗವಾಗಿ ಹೆಲ್ಮೆಟ್ ಧರಿಸದೇ ವಾಹನ ಓಡಿಸುವವರ ಫೋಟೋಗಳನ್ನು ರವಾನಿಸುವಂತೆ ಪೊಲೀಸರು ಮನವಿ ಮಾಡಿದ್ದಾರೆ. ದ್ವಿಚಕ್ರವಾಹನದಲ್ಲಿ ಸಂಚರಿಸುವ ಪ್ರತಿಯೊಬ್ಬರು ಹೆಲ್ಮೆಟ್ ಧರಿಸುವುದು ಕಡ್ಡಾಯವಾಗಿದ್ದು, `ಹಿಂಬದಿ ಸವಾರರು ಸಹ ಹೆಲ್ಮೆಟ್ ಧರಿಸಬೇಕು’ ಎಂದು ಪೊಲೀಸರು ಸೂಚನೆ ರವಾನಿಸಿದ್ದಾರೆ. `ಕಾರಿನಲ್ಲಿ ಸಂಚರಿಸುವವರು ಸೀಟ್ ಬೆಲ್ಟ್ ಧರಿಸಬೇಕು. ಸಂಚಾರಿ ನಿಯಮ ಉಲ್ಲಂಘನೆ ಮಾಡಿದವರು ಕಂಡ ಜನ ಅವರ ವಾಹನದ ಜೊತೆ ಅವರ ಫೋಟೋ ತೆಗೆದು ತಮಗೆ ಕಳುಹಿಸಬೇಕು’ ಎಂದು ಪ್ರಕಟಣೆ ನೀಡಿದ್ದಾರೆ. ಸಂಚಾರಿ ನಿಯಮ ಉಲ್ಲಂಘಿಸುವವರ ಫೋಟೋ ಇಲ್ಲಿ ಕಳುಹಿಸಿ: 9480805234, 9480805272, 8277988244 ಅಥವಾ 8277988236 - [ಶಾಸಕ ಭೀಮಣ್ಣರಿಗೆ ಸೋಲು!](https://mobiletime.in/2025/11/defeat-for-mla-bhimanna/): ಶಿರಸಿ ಶಾಸಕ ಭೀಮಣ್ಣ ನಾಯ್ಕ ಹಾಗೂ ಶಿರಸಿ ಸಹಾಯಕ ಆಯುಕ್ತೆ ಕಾವ್ಯರಾಣಿ ಅವರು ಶನಿವಾರ ಚೆಸ್ ಆಡಿದ್ದಾರೆ. ಈ ಆಟದಲ್ಲಿ ಭೀಮಣ್ಣ ನಾಯ್ಕ ಅವರು ತಾತ್ವಿಕ ಸೋಲು ಕಂಡಿದ್ದಾರೆ. ಶಾಸಕರು ಸೋಲುವುದನ್ನು ಸಹಿಸದ ಸಹಾಯಕ ಆಯುಕ್ತರು ಚೆಸ್ ಆಟವನ್ನು ಅರ್ದಕ್ಕೆ ಮೊಟಕುಗೊಳಿಸಿದ್ದಾರೆ! ಶಿರಸಿಯ ಇಳಸೂರಿನ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಶನಿವಾರ ಚೆಸ್ ಪಾರ್ಕ ಉದ್ಘಾಟನೆ ನಡೆಯಿತು. ಕ್ಷೇತ್ರದ ಶಾಸಕ ಭೀಮಣ್ಣ ನಾಯ್ಕ ಅವರು ಈ ಉದ್ಯಾನವನ್ನು ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿದ್ದ ಕಾವ್ಯರಾಣಿ ಅವರು ಚೆಸ್ ಆಡಲು ಶುರು ಮಾಡಿದ್ದು, ಶಾಸಕ ಭೀಮಣ್ಣ ನಾಯ್ಕ ಅವರು ಕಾವ್ಯರಾಣಿ ಅವರಿಗೆ ಪ್ರತಿಸ್ಪರ್ಧಿ ಆಗಿದ್ದರು. ಅವರಿಬ್ಬರ ತುರುಸಿನ ಸ್ಪರ್ಧೆ ನೋಡಲು ಹಲವರು ಜಮಾಯಿಸಿದ್ದು, ಕೊನೆಗೆ ಇಬ್ಬರು ಅರ್ದಕ್ಕೆ ಆಟ ನಿಲ್ಲಿಸಿದ್ದರಿಂದ ಅಲ್ಲಿದ್ದವರು ನಿರಾಶೆಗೆ ಒಳಗಾದರು. ಕಾವ್ಯರಾಣಿ ಅವರು ಹಂತ ಹಂತವಾಗಿ ಕಾಯಿ ಚಲಿಸಲು ಶುರು ಮಾಡಿದರು. ಎದುರಿಗಿದ್ದ ಭೀಮಣ್ಣ ನಾಯ್ಕ ಅವರು ಕಾಯಿ ಚಲಿಸಿದರು. ಅವರಿಬ್ಬರು ಆಟದಲ್ಲಿ ಎಡವುತ್ತಿರುವುದನ್ನು ನೋಡಿ ಅಲ್ಲಿದ್ದವರು `ಹೀಗಲ್ಲ.. ಹಾಗೇ’ ಎಂದು ಹೇಳಿಕೊಟ್ಟರು. ಕಾವ್ಯರಾಣಿ ಅವರು ಮೊದಲ ಹಂತದಲ್ಲಿ ಉತ್ತಮವಾಗಿ ಕಾಯಿ ಚಲಾಯಿಸಿದರು. ಭೀಮಣ್ಣ ನಾಯ್ಕ ಅವರಿಗೆ ಅಲ್ಲಿದ್ದವರು ತಿಳಿಸಿದರೂ ಒಮ್ಮೆ ತಪ್ಪಾಗಿ ಕಾಯಿ ಮುಂದೆ ಚಲಿಸಿದರು. ಕೊನೆಗೆ ಶಾಸಕರು ಆಟವನ್ನು ಅಲ್ಲಿಗೆ ಮೊಟಕುಗೊಳಿಸಿದರು. ಸಹಾಯಕ ಆಯುಕ್ತರು ಆಟದಿಂದ ಹಿಂದೆ ಸರಿದರು. ಅದಾಗಿಯೂ ಚೆಸ್ ಪಾರ್ಕ ಉದ್ಘಾಟನೆ ಆಗಿರುವುದಕ್ಕೆ ಅಲ್ಲಿದ್ದ ಜನ ಚಪ್ಪಾಳೆ ತಟ್ಟಿದರು. ಅದಾದ ನಂತರ ಮಕ್ಕಳು ಸಹ ಚೆಸ್ ಆಡಿ ಖುಷಿ ಹಂಚಿಕೊoಡರು. ಉದ್ಘಾಟನೆ ಅಂಗವಾಗಿ ಸ್ಪರ್ಧಾಗಳನ್ನು ಉತ್ತೇಜಿಸಲು ಅಧಿಕಾರಿ-ಜನಪ್ರತಿನಿಧಿ ನಡುವೆ ಈ ಚೆಸ್ ಸ್ಪರ್ಧೆ ನಡೆದಿದ್ದು, `ಸ್ಪರ್ಧೆಯಲ್ಲಿ ಸೋಲು ಗೆಲುವಿಗಿಂತಲೂ ಭಾಗವಹಿಸುವುದು ಮುಖ್ಯ’ ಎಂದು ಅಲ್ಲಿದ್ದವರು ಹೇಳಿದರು. - [ಸೊಸೈಟಿ ಅಕ್ರಮದಲ್ಲಿ ಅಧಿಕಾರಿಗಳು ಭಾಗಿ!](https://mobiletime.in/2025/11/officials-involved-in-societys-illegal-activities/): ಸೊಸೈಟಿಯಲ್ಲಿ ನಡೆದ ಅಕ್ರಮಗಳನ್ನು ಪತ್ತೆ ಹಚ್ಚಲು ವಿಫಲರಾದ ಕಾರಣ ಸರ್ಕಾರಿ ಅಧಿಕಾರಿಯೊಬ್ಬರ ವಿರುದ್ಧ ಪೊಲೀಸ್ ಪ್ರಕರಣ ದಾಖಲಾಗಿದೆ. ಕಾರವಾರದ ಚಿತ್ತಾಕುಲದಲ್ಲಿರುವ ಆಶ್ರಯ ಕೋ-ಆಪರೇಟಿವ್ ಕ್ರೆಡಿಟ್ ಸೊಸೈಟಿಯ ಹಣಕಾಸು ಅವ್ಯವಹಾರ ವಿಷಯವಾಗಿ ಮುಂಬೈ ನಿವಾಸಿ ತನುಶ್ರೀ ಗಾಂವಕರ್ ಅವರು ಕಾರವಾರದ ಸಹಕಾರಿ ನಿಬಂಧಕರ ವಿರುದ್ಧ ಚಿತ್ತಾಕುಲ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ತನುಶ್ರೀ ಗಾಂವಕರ್ ಅವರ ತಂದೆ ಪುರುಷೋತ್ತಮ ಗಾಂವಕಾರ್ ಹಾಗೂ ತಾಯಿ ಉಮಾ ಗಾಂವಕಾರ ಅವರು ಸದಾಶಿವಗಡದಲ್ಲಿರುವ ಆಶ್ರಯ ಕೋ-ಆಪರೇಟಿವ್ ಕ್ರೆಡಿಟ್ ಸೊಸೈಟಿಯಲ್ಲಿ ಹೂಡಿಕೆ ಮಾಡಿದ್ದರು. 2023ರ ಜನವರಿಯಲ್ಲಿ 1 ವರ್ಷದ ಠೇವಣಿಯನ್ನಿರಿಸಿದ್ದರು. 2024ರಲ್ಲಿ ಅವರ ಠೇವಣಿ ಹಣವನ್ನು ಸೊಸೈಟಿಯವರು ಮರಳಿಸಿರಲಿಲ್ಲ. ಒಟ್ಟು 1,20,71,987 ರೂ ಮರಳಿಸಲು ವಿಫಲರಾದ ಆಡಳಿತ ಮಂಡಳಿ ವಿರುದ್ಧ ಕುಟುಂಬದವರು ಕಿಡಿಕಾರಿದ್ದಾರೆ. `ಆಶ್ರಯ ಕೋ-ಆಪರೇಟಿವ್ ಕ್ರೆಡಿಟ್ ಸೊಸೈಟಿಯ ಮಾಜಿ ವ್ಯವಸ್ಥಾಪಕ ನೀಲೇಶ ನಾಯ್ಕ ಅವರು ಆಡಳಿತ ಮಂಡಳಿಯ ಅನುಮತಿಯಿಲ್ಲದೇ 30 ಕೋಟಿ ರೂ ಅಕ್ರಮ ಸಾಲ ನೀಡಿದ್ದಾರೆ. ಹೀಗಾಗಿಯೇ ಸೊಸೈಟಿ ನಷ್ಟ ಅನುಭವಿಸಿದೆ’ ಎಂದು ತನುಶ್ರೀ ಗಾಂವಕರ್ ಅವರು ದೂರಿದ್ದಾರೆ. `ಇಂಥ ಅಕ್ರಮ ಅವ್ಯವಹಾರ ನಡೆದರೂ ಅಧಿಕಾರಿಗಳು ಕಾಲಕ್ಕೆ ಸರಿಯಾಗಿ ಲೆಕ್ಕ ಪರಿಶೋಧನೆ ನಡೆಸದೇ ಕರ್ತವ್ಯ ಲೋಪ ಎಸಗಿದ್ದಾರೆ’ ಎಂದವರು ಅಸಮಧಾನವ್ಯಕ್ತಪಡಿಸಿದ್ದು, ಸಹಕಾರಿ ಸಂಘಗಳ ಉಪನಿಬಂಧಕರ ವಿರುದ್ಧವೂ ತನಿಖೆಗೆ ಆಗ್ರಹಿಸಿದ್ದಾರೆ. `ತಮಗೆ ಆದ ಅನ್ಯಾಯಕ್ಕೆ ಆಶ್ರಯ ಕೋ-ಆಪರೇಟಿವ್ ಕ್ರೆಡಿಟ್ ಸೊಸೈಟಿಯ ಅಧ್ಯಕ್ಷ ಬಾಬುರಾವ ರಾಣೆ, ಮಾಜಿ ವ್ಯವಸ್ಥಾಪಕ ನೀಲೇಶ ನಾಯ್ಕ, ಉಪಾಧ್ಯಕ್ಷ ಆನಂದು ಗಾಂವಕಾರ, ನಿರ್ದೇಶಕರಾದ ದೇವಿದಾಸ ದೇಸಾಯಿ, ಗೋಪಿನಾಥ ನಾಯ್ಕ, ಕೃಷ್ಣ ನಾಯ್ಕ, ಮಂಜುನಾಥ ನಾಯ್ಕ, ರಾಮಕೇಶ ಶೇಡಗುಲ್ಕರ್, ರತ್ನಾಕರ ನಾಯ್ಕ, ರೂಪಾಲಿ ದೇಸಾಯಿ, ರೇಷ್ಮಾ ನಾಯ್ಕ, ಹಾಗೂ ಸೊಸೈಟಿ ಪ್ರತಿನಿಧಿ ಸಂಧ್ಯಾ ಗಾಂವಕರ ಕಾರಣ’ ಎಂದು ಅವರು ದೂರಿದ್ದಾರೆ. ಎಲ್ಲಾ ಆರೋಪಿತರ ವಿರುದ್ಧ ಸಮಗ್ರ ತನಿಖೆಗೆ ಒತ್ತಾಯಿಸಿದ್ದಾರೆ. - [ಅಗ್ನಿ ಅನಾಹುತ: ಸುಟ್ಟು ಕರಕಲಾದ ಅಜ್ಜಿಯ ದಹನ!](https://mobiletime.in/2025/11/fire-disaster-grandmothers-cremation/): ಮುಂಡಗೋಡದ ಹನಮಾಪುರದಲ್ಲಿನ ಮನೆಯೊಂದಕ್ಕೆ ಬೆಂಕಿ ಬಿದ್ದಿದೆ. ಪರಿಣಾಮ ಮನೆಯೊಳಗೆ ವಾಸವಾಗಿದ್ದ ಪಕೀರವ್ವ ಆಲೂರು ಅವರು ಸುಟ್ಟು ಕರಕಲಾಗಿದ್ದಾರೆ. ಶುಕ್ರವಾರ ರಾತ್ರಿ ದಿಢೀರ್ ಆಗಿ ಮನೆಗೆ ಬೆಂಕಿ ತಗುಲಿದೆ. ಮನೆಯೊಳಗಿದ್ದ 70 ವರ್ಷದ ವೃದ್ಧೆ ಪಕೀರವ್ವ ಆಲೂರು ಹೊರಬರುವುದರೊಳಗೆ ಬೆಂಕಿ ಇಡೀ ಮನೆಗೆ ವ್ಯಾಪಿಸಿದೆ. ಬೆಂಕಿಯ ಜ್ವಾಲೆಯಲ್ಲಿ ಬೆಂದು ಪಕೀರವ್ವ ಅವರು ಕೊನೆಯುಸಿರೆಳೆದಿದ್ದಾರೆ. ಪಕೀರವ್ವ ಆಲೂರು ಅವರು ಒಂಟಿ ಮನೆಯಲ್ಲಿ ಏಕಾಂಗಿಯಾಗಿ ವಾಸವಾಗಿದ್ದರು. ಅವರ ಮನೆಗೆ ಹೇಗೆ ಬಂಕಿ ತಗುಲಿತು? ಎಂದು ಗೊತ್ತಾಗಿಲ್ಲ. ಸುಟ್ಟ ಗಾಯದ ನೋವಿನಿಂದ ನರಳುತ್ತಿದ್ದ ಅವರನ್ನು ಆಸ್ಪತ್ರೆಗೆ ಸಾಗಿಸುವ ಪ್ರಯತ್ನ ನಡೆಯಿತು. 108 ಆಂಬುಲೆನ್ಸ ಸಿಬ್ಬಂದಿ ಮೊದಲು ಅವರನ್ನು ಮುಂಡಗೋಡು ಆಸ್ಪತ್ರೆಗೆ ಸಾಗಿಸಿದರು. ನಂತರ ಹುಬ್ಬಳ್ಳಿಗೆ ಕರೆದೊಯ್ಯುವ ಪ್ರಯತ್ನ ನಡೆದರೂ ಅದು ಫಲ ಕೊಡಲಿಲ್ಲ. ಮನೆಗೆ ಬಿದ್ದ ಬೆಂಕಿ ನಂದಿಸಲು ಅಗ್ನಿಶಾಮಕ ಸಿಬ್ಬಂದಿ ಹರಸಾಹಸ ನಡೆಸಿದರು. ಆದರೆ, ಅಷ್ಟರೊಳಗೆ ಮನೆ ಆಹುತಿಯಾಗಿತ್ತು. ಸದ್ಯ ಅವಘಡಕ್ಕೆ ಕಾರಣ ಏನು? ಎನ್ನುವುದರ ಬಗ್ಗೆ ಚರ್ಚೆ ನಡೆದಿದೆ. - [ದಾಂಡೇಲಿ: ನಗರ ನಿವಾಸಿಗಳಿಗೆ ಬೌ ಬೌ ಕಾಟ!](https://mobiletime.in/2025/11/dandeli-a-real-threat-to-city-residents/): ದಾಂಡೇಲಿಯ ಸೈಂಟ್ ಮೈಕಲ್ ಶಾಲೆಯ ಹತ್ತಿರ ಬೀದಿ ನಾಯಿಗಳ ಅಟ್ಟಹಾಸ ಜೋರಾಗಿದೆ. ಇಲ್ಲಿ ಸಂಚರಿಸುತ್ತಿದ್ದ ಐವರ ಮೇಲೆ ನಾಯಿಗಳ ಗುಂಪು ದಾಳಿ ನಡೆಸಿದೆ. ಶುಕ್ರವಾರ ಸಂಜೆ ವೈಷ್ಣವಿ ಮಾಲ್ವಿ ಅವರ ಮೇಲೆ ಏಕಾಏಕಿ ನಾಯಿಯೊಂದು ದಾಳಿ ಮಾಡಿತು. ನಾಯಿ ಕಚ್ಚಿದ ಪರಿಣಾಮ ವೈಷ್ಣವಿ ಅವರ ಕೈಯಿಂದ ರಕ್ತ ಸುರಿಯಲು ಶುರುವಾಯಿತು. ಅದರ ಬೆನ್ನಲ್ಲೆ ಸುಭಾಷ್ ನಗರದ ಐದು ವರ್ಷದ ಪುಟ್ಟ ಮಗುವಿನ ಮೇಲೆ ನಾಯಿಯ ಆಕ್ರಮಣ ನಡೆಯಿತು. ನಿರ್ಮಲ್ ನಗರದ ವೃದ್ಧೆ ರೋಜಿ ಡಯಾಸ್ ಅವರನ್ನು ನಾಯಿಯೊಂದು ಬೆನ್ನಟ್ಟಿ ಬಂದು ಕಚ್ಚಿತು. ಮತ್ತಿಬ್ಬರಿಗೂ ನಗರದಲ್ಲಿ ನಾಯಿ ದಾಳಿ ನಡೆದಿದ್ದು, ಎಲ್ಲರೂ ಚಿಕಿತ್ಸೆಗೆ ಒಳಗಾಗಿದ್ದಾರೆ. ಕಳೆದ ಒಂದು ವರ್ಷದಿಂದ ದಾಂಡೇಲಿ ನಗರದಲ್ಲಿ ಬೀದಿ ನಾಯಿಗಳ ಸಂಖ್ಯೆ ಹೆಚ್ಚಾಗಿದೆ. ಪದೇ ಪದೇ ಬೀಡಾಡಿ ನಾಯಿಗಳ ಆಕ್ರಮಣ ಸುದ್ದಿಯಾಗುತ್ತಿದೆ. ಆದರೂ, ನಗರಸಭೆ ಇದನ್ನು ಗಂಭೀರವಾಗಿ ಪರಿಗಣಿಸಿಲ್ಲ. ಈ ಹಿನ್ನಲೆ ಜನ ಆಕ್ರೋಶವ್ಯಕ್ತಪಡಿಸಿದ್ದು, ಸ್ಥಳೀಯ ಆಡಳಿತವನ್ನು ಟೀಕಿಸಿದ್ದಾರೆ. ಸಂತಾನಹರಣ ಚಿಕಿತ್ಸೆ ನೆಪದಲ್ಲಿ ಹಣ ವೆಚ್ಚವಾದರೂ ನಾಯಿಗಳ ನಿಯಂತ್ರಣ ಆಗದ ಬಗ್ಗೆ ಪ್ರಶ್ನಿಸಿದ್ದಾರೆ. ಆಸ್ಪತ್ರೆ ಮುಂದೆ ಜಮಾಯಿಸಿದ ಜನ ಆಕ್ರೋಶವ್ಯಕ್ತಪಡಿಸಿದ್ದಾರೆ. - [ಪಹರೆಗೆ ಪ್ರಶಸ್ತಿ: ಜನಶಕ್ತಿ ವೇದಿಕೆ ಪ್ರಶಂಸೆ](https://mobiletime.in/2025/11/award-for-the-guard-janshakti-forum-praises/): ಸ್ವಚ್ಚತೆಯ ಬಗ್ಗೆ ಜನರಲ್ಲಿ ನಿರಂತರ ಅರಿವು ಮೂಡಿಸುತ್ತಿರುವ ಕಾರವಾರದ `ಪಹರೆ ವೇದಿಕೆ’ಗೆ ಇಂದಿರಾ ಪ್ರಿಯದರ್ಶಿನಿ ಪ್ರಶಸ್ತಿ ಸಿಕ್ಕಿದೆ. ಈ ಹಿನ್ನಲೆ ಪಹರೆ ಕಾರ್ಯಕರ್ತರನ್ನು ಜನಶಕ್ತಿ ವೇದಿಕೆ ಅಭಿನಂದಿಸಿದೆ. ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯಿoದ ಪುರಸ್ಕಾರಪಡೆದ ಕಾರಣ ಪಹರೆ ವೇದಿಕೆ ಅಧ್ಯಕ್ಷ ನಾಗರಾಜ ನಾಯಕ ಹಾಗೂ ಗೌರವ ಅಧ್ಯಕ್ಷ ಜಾರ್ಜ್ ಫರ್ನಾಂಡಿಸ್ ಅವರಿಗೆ ಜನಶಕ್ತಿ ವೇದಿಕೆಯ ಅಧ್ಯಕ್ಷ ಮಾಧವ ನಾಯಕ ಅವರು ಸನ್ಮಾನಿಸಿದ್ದಾರೆ. ಕಳೆದ 10 ವರ್ಷಗಳಿಂದ ಪಹರೆ ವೇದಿಕೆಯು ನಿರಂತರವಾಗಿ ಸ್ವಚ್ಛತಾ ಕಾರ್ಯ ಮಾಡಿಕೊಂಡು ಬಂದಿದ್ದು, ಜನರಲ್ಲಿ ಸ್ವಚ್ಛತೆಯ ಜಾಗೃತಿ ಮೂಡಿಸುತ್ತಿದೆ. ಈ ಕಾರಣದಿಂದ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಸುವರ್ಣ ಮಹೋತ್ಸವದ ಹಿನ್ನಲೆ ಪಹರೆ ವೇದಿಕೆಗೆ ಇಂದಿರಾ ಪ್ರಿಯದರ್ಶಿನಿ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಪಹರೆ ವೇದಿಕೆಗೆ ಪ್ರಶಸ್ತಿ ಸಿಕ್ಕಿರುವುದು ನಮ್ಮೆಲ್ಲರಿಗೂ ಹೆಮ್ಮೆ’ ಎಂದು ಜನಶಕ್ತಿ ವೇದಿಕೆಯವರು ಹೇಳಿದ್ದಾರೆ. `ಪಹರೆ ವೇದಿಕೆ 2003 ರಲ್ಲೇ ಪ್ರಾರಂಭಗೊoಡಿತ್ತು. ಆ ಸಂದರ್ಭದಲ್ಲಿ ನಾಗರಾಜ ನಾಯಕ ಅವರ ಜೊತೆ ಸಮಾನ ಮನಸ್ಕರು ಸೇರಿ ಭ್ರಷ್ಟಾಚಾರ ಮುಕ್ತ, ಅನ್ಯಾಯದ ವಿರುದ್ಧ ಹಳ್ಳಿ ಹಳ್ಳಿಗಳಲ್ಲಿ ಜಾಗೃತಿ ಮೂಡಿಸುವ ಕಾರ್ಯ ಮಾಡಿದ್ದೆವು’ ಎಂದು ಈ ವೇಳೆ ಮಾಧವ ನಾಯಕ ಅವರು ಸ್ಮರಿಸಿದರು. `2013ರಲ್ಲಿ ಅಂದಿನ ಜಿಲ್ಲಾಧಿಕಾರಿ ಉಜ್ವಲ್ ಕುಮಾರ್ ಘೋಷ್ ಅವರಿಂದ ಸ್ವಚ್ಚತಾ ಆಂದೋಲನ ಶುರು ಮಾಡಿದ ಪಹರೆ ವೇದಿಕೆ ನಿರಂತರವಾಗಿ ಸ್ವಚ್ಛತಾ ಕಾರ್ಯ ಮಾಡಿಕೊಂಡು ಬರುತ್ತಿದೆ. ಜನರನ್ನೆಲ್ಲ ಒಗ್ಗೂಡಿಸಿ ಸಾಮಾಜಿಕ ಕಾರ್ಯ ಮಾಡುವುದೆಂದರೆ ಸುಲಭದ ಕೆಲಸವಲ್ಲ. ನಾಗರಾಜ ನಾಯಕ ಅವರು ವಕೀಲರಾಗಿಯೂ ಕಾರ್ಯದ ಒತ್ತಡಗಳ ನಡುವೆಯೂ ಪಹರೆ ವೇದಿಕೆಯನ್ನು ಇಷ್ಟು ದೊಡ್ಡ ಹೆಮ್ಮರವಾಗಿ ಕಟ್ಟಿ ಬೆಳೆಸಿದ್ದು ಶ್ಲಾಘನೀಯ’ ಎಂದು ಮಾಧವ ನಾಯಕ ಅವರು ಹೇಳಿದರು. ಪಹರೆ ವೇದಿಕೆ ಗೌರವ ಅಧ್ಯಕ್ಷರಾದ ಜಾರ್ಜ್ ಫರ್ನಾಂಡಿಸ್ ಅವರಿಗೆ `ಯಶಸ್ವಿ ಉದ್ಯಮಿ’ ಪ್ರಶಸ್ತಿಯೂ ಲಭಿಸಿದ್ದಕ್ಕೆ ಈ ವೇಳೆ ಅವರು ಶುಭಕೋರಿದರು. ಕರಾವಳಿ ಮುಂಜಾವು ಪ್ರಧಾನ ಸಂಪಾದಕರಾದ ಗಂಗಾಧರ ಹಿರೇಗುತ್ತಿ, ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಟಿ ಬಿ ಹರಿಕಾಂತ, ಪ್ರಮುಖರಾದ ರಾಮ ನಾಯ್ಕ, ಬಾಬು ಶೇಖ್, ಸೂರಜ್ ಕುರೂಮಕರ್, ಸುರೇಶ್ ನಾಯ್ಕ, ಶಿವಾನಂದ ನಾಯ್ಕ, ಖೈರನುಸಾ ಶೇಖ್, ಕಾಶೀನಾಥ್ ನಾಯ್ಕ ಇತರರು ಸಾಧಕರಿಗೆ ಶುಭಕೋರಿದರು. - [ಅರಬೈಲ್ ಘಟ್ಟ: ದೇಗುಲದ ಎದುರು ಸ್ಪಿರಿಟ್ ಹವನ!](https://mobiletime.in/2025/11/arabail-ghat-spirit-havan-in-front-of-the-temple/): ಯಲ್ಲಾಪುರದ ಅರಬೈಲ್ ಘಟ್ಟ ಪ್ರದೇಶದಲ್ಲಿ ಶನಿವಾರ ಸಂಚರಿಸುತ್ತಿದ್ದ ಟ್ಯಾಂಕರೊoದು ಹೊತ್ತಿ ಉರಿದಿದೆ. ಬೆಂಕಿ ಕಂಡ ತಕ್ಷಣ ಚಾಲಕ ಟ್ಯಾಂಕರಿನಿoದ ಹಾರಿ ಪ್ರಾಣ ಉಳಿಸಿಕೊಂಡಿದ್ದಾರೆ. ಆoದ್ರಪ್ರದೇಶದ ಕರನೂಲಿನ ಶ್ರೀನಿವಾಸ ರೆಡ್ಡಿ ಅವರು ಸ್ಪಿರಿಟ್ ತುಂಬಿದ ಟ್ಯಾಂಕರ್ ಓಡಿಸುತ್ತಿದ್ದರು. ಹುಬ್ಬಳ್ಳಿ-ಅಂಕೋಲಾ ಮಾರ್ಗವಾಗಿ ಅವರು ಟ್ಯಾಂಕರ್ ಓಡಿಸಿಕೊಂಡು ಬಂದಿದ್ದರು. ಯಲ್ಲಾಪುರ ಪಟ್ಟಣದಲ್ಲಿ ನಿಧಾನವಾಗಿ ಚಲಿಸಿದ ಟ್ಯಾಂಕರ್ ಅರಬೈಲು ಪ್ರವೇಶಿಸುತ್ತಲೇ ವೇಗಪಡೆಯಿತು. ಪರಿಣಾಮ ಅರಬೈಲ್ ಇಳಿಜಾರಿನ ಮಾರುತಿ ದೇವಸ್ಥಾನದ ಎದುರು ಆ ಟ್ಯಾಂಕರ್ ಚಾಲಕನ ನಿಯಂತ್ರಣ ತಪ್ಪಿತು. ಟ್ಯಾಂಕರ್ ನೇರವಾಗಿ ಹೆದ್ದಾರಿ ಅಂಚಿನ ಮರಕ್ಕೆ ಡಿಕ್ಕಿ ಹೊಡೆಯಿತು. ಆ ವೇಳೆ ನಡೆದ ಘರ್ಷಣೆಗೆ ಸಣ್ಣ ಬೆಂಕಿ ಕಿಡಿಯೊಂದು ಉದ್ಬವಿಸಿದ್ದು, ಅದೇ ಕಿಡಿ ದೊಡ್ಡ ಜ್ವಾಲೆಯಾಯಿತು. ಕ್ಷಣಮಾತ್ರದಲ್ಲಿ ಇಡೀ ಟ್ಯಾಂಕರ್ ಹೊತ್ತಿ ಉರಿಯಿತು. ಟ್ಯಾಂಕರ್ ಒಳಗಿದ್ದ ಸ್ಪಿರಿಟ್ ಸಹ ಜ್ವಾಲೆಯ ಪ್ರಮಾಣವನ್ನು ಹೆಚ್ಚಿಸಿದ್ದು, ಬೆಂಕಿ ಕಂಡ ತಕ್ಷಣ ಚಾಲಕ ಶ್ರೀನಿವಾಸ ರೆಡ್ಡಿ ಟ್ಯಾಂಕರಿನಿoದ ಕೆಳಗೆ ಹಾರಿದರು. ಟ್ಯಾಂಕರಿಗೆ ಬೆಂಕಿ ಬಿದ್ದ ವಿಷಯ ಅರಿತು ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿದರು. ಯಲ್ಲಾಪುರ ಪೊಲೀಸರು ವೇಗವಾಗಿ ಅಲ್ಲಿಗೆ ತೆರಳಿದರು. ಬೆಂಕಿ ಆರಿಸುವ ಪ್ರಯತ್ನ ಮಾಡಿದರೂ ಸ್ಪಿರಿಟ್ ಇದ್ದ ಕಾರಣ ಲಾರಿ ಹೊತ್ತಿ ಉರಿಯಿತು. ಸ್ಪಿರಿಟ್ ಸಂಪೂರ್ಣವಾಗಿ ನಾಶವಾದ ನಂತರ ಬೆಂಕಿ ನಿಯಂತ್ರಣಕ್ಕೆ ಬಂದಿತು. - [2025ರ ನವೆಂಬರ್ 15ರ ದಿನ ಭವಿಷ್ಯ](https://mobiletime.in/2025/11/prediction-for-november-15-2025/): ಮೇಷ ರಾಶಿ: ಹಳೆ ಕೆಲಸಗಳು ಪೂರ್ಣವಾಗಲಿದೆ. ಸ್ನೇಹಿತರಿಂದ ಸಹಾಯ ಸಿಗಲಿದೆ. ಆರ್ಥಿಕ ವಿಷಯದಲಿ ಅಭಿವೃದ್ಧಿ ಸಾಧ್ಯವಿದೆ. ಆರೋಗ್ಯದಲ್ಲಿ ಸುಧಾರಣೆ ಆಗಲಿದೆ. ವೃಷಭ ರಾಶಿ: ಬುದ್ದಿವಂತರ ಬಳಿ ಮಾತನಾಡಿದರೆ ವಿಚಾರ ಬೆಳೆದೀತು. ಸಾವಧಾನದಿಂದ ಕೆಲಸ ಮಾಡುವುದು ಮುಖ್ಯ. ಬೇರೆಯವರ ಸಲಹೆಪಡೆದರೂ ಸಹ ನಿಮ್ಮ ಬದುಕಿನ ನಿರ್ಧಾರ ನೀವೇ ತೆಗೆದುಕೊಳ್ಳಿ. ಮಿಥುನ ರಾಶಿ: ಶ್ರಮದಿಂದ ಕೆಲಸ ಮಾಡುವುದು ಅಗತ್ಯ. ಮನೆಯಲ್ಲಿ ನೆಮ್ಮದಿ, ಆರ್ಥಿಕ ಸುಧಾರಣೆ ಕಾಣಲಿದೆ. ಮೇಲಧಿಕಾರಿಗಳ ಜೊತೆ ಜಗಳ ಬೇಡ. ಹಿರಿಯರ ಮಾತು ಗೌರವಿಸಿ. ಕರ್ಕ ರಾಶಿ: ಪರೀಕ್ಷೆಯಲ್ಲಿ ಗೆಲುವು ಸಾಧ್ಯವಿದೆ. ಸ್ನೇಹಿತರಿಂದ ಸಿಹಿ ಸುದ್ದಿ ಬರಲಿದೆ. ಹಿತಕರ ವಾತಾವರಣದಲ್ಲಿ ಜೀವಿಸುವಿರಿ. ಆರೋಗ್ಯ ಸುಧಾರಣೆಯಾಗುತ್ತದೆ. ಸಿಂಹ ರಾಶಿ: ನಿಮ್ಮೊಳಗಿನ ಆತ್ಮವಿಶ್ವಾಸ ಹೆಚ್ಚಿಸುತ್ತದೆ. ಹೊಸ ಪರಿಚಯಗಳು ಸಿಗಲಿದೆ. ಒಳ್ಳೆಯ ಸುದ್ದಿ ಸಿಗಲಿದೆ. ನೌಕರಿಯಲ್ಲಿ ಸುಧಾರಣೆ ಆಗಲಿದೆ. ಕನ್ಯಾ ರಾಶಿ: ಹಳೆ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ. ಹೊಂದಾಣಿಕೆಯಿAದ ಸಾಧನೆ ಸಾಧ್ಯವಿದೆ. ಆರ್ಥಿಕವಾಗಿ ಲಾಭ ಸಿಗಲಿದೆ. ಯೋಜನೆಗಳು ಯಶಸ್ವಿಯಾಗಲಿದೆ. ತುಲಾ ರಾಶಿ: ಹಳೆಯ ಪ್ರಸ್ತಾಪಗಳು ಮುನ್ನೆಲೆಗೆ ಬರಲಿದೆ. ಮೈತ್ರಿ ಸಂಬAಧಗಳು ಗಟ್ಟಿಗೊಳ್ಳುತ್ತವೆ. ಸಮಾಧಾನ ಅಗತ್ಯವಿದೆ. ಕುಟುಂಬದ ಕನಸು ಈಡೇರಲಿದೆ. ವೃಶ್ಚಿಕ ರಾಶಿ: ಆರ್ಥಿಕ ಲಾಭ ಸಾಧ್ಯವಿದೆ. ಹೊಸ ಸ್ನೇಹಿತರ ಪರಿಚಯವಾಗಲಿದೆ. ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದೀರಿ. ಮಾನಸಿಕ ನೆಮ್ಮದಿ ಸಿಗುತ್ತದೆ. ಧನು ರಾಶಿ: ಹೊಸ ಅವಕಾಶ ಬರಲಿದೆ. ಮಹತ್ವದ ನಿರ್ಧಾರಗಳನ್ನು ಮಾಡಬೇಡಿ. ಗುರಿ ತಲುಪಲು ಪ್ರಯತ್ನ ಮಾಡಿ. ವ್ಯಾಪಾರದಲ್ಲಿ ತೃಪ್ತಿ ಆಗಲಿದೆ. ಮಕರ ರಾಶಿ: ಕುಟುಂಬದಲ್ಲಿ ಒಗ್ಗಟ್ಟಿನ ಬಲ ಸಿಗಲಿದೆ. ಪರೀಕ್ಷೆಯಲ್ಲಿ ಒಳ್ಳೆಯದಾಗಲಿದೆ. ಹೊಸ ಯೋಜನೆ ಯಶಸ್ವಿಯಾಗಲಿದೆ. ದೂರ ಪ್ರಯಾಣ ಸಾಧ್ಯವಿದೆ. ಕುಂಭ ರಾಶಿ: ವ್ಯವಹಾರದಲ್ಲಿ ಮುನ್ನಡೆ ಆಗಲಿದೆ. ಪ್ರೀತಿಯ ಮಾತುಗಳು ಕಿವಿಗೆ ಬರುತ್ತದೆ. ಆರೋಗ್ಯದ ವಿಷಯದಲ್ಲಿ ಎಚ್ಚರಿಕೆ ಅಗತ್ಯ. ಪ್ರಯತ್ನಗಳು ಫಲ ನೀಡಲಿದೆ. ಮೀನ ರಾಶಿ: ಅನಾರೋಗ್ಯದಿಂದ ದೂರವಾಗಲಿದೆ. ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ. ಚಿಂತೆ ಕಡಿಮೆ ಆಗಲಿದೆ. - [ಉದ್ಯೋಗ ಮಾಹಿತಿ: ವಿಕಲಚೇತನರಿಗೆ ವಿಶೇಷ ಆದ್ಯತೆ!](https://mobiletime.in/2025/11/job-information-special-preference-for-the-disabled/): ಉತ್ತರ ಕನ್ನಡ ಜಿಲ್ಲೆಯ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಅಡಿ ಕಾರ್ಯ ನಿರ್ವಹಿಸಲು ಯೋಗ್ಯ ಅಭ್ಯರ್ಥಿಗಳ ಹುಡುಕಾಟ ನಡೆದಿದೆ. ಗ್ರಾಮೀಣ ಹಾಗೂ ನಗರ ಪುನರ್ವಸತಿ ಕಾರ್ಯಕರ್ತರ ಖಾಲಿ ಹುದ್ದೆ ಭರ್ತಿ ಮಾಡುವುದಕ್ಕಾಗಿ ಸದ್ಯ ಅರ್ಜಿ ಆಹ್ವಾನಿಸಲಾಗಿದೆ. ಕಾರವಾರ ತಾಲೂಕಿನ ಕೆರವಡಿ, ಕಾರವಾರ ನಗರಸಭೆ, ಹೊನ್ನಾವರ ತಾಲೂಕಿನ ಹೊಸಕುಳಿ, ಭಟ್ಕಳ ತಾಲೂಕಿನ ಬೆಳಕೆ, ಶಿರಸಿ ತಾಲೂಕಿನ ಇಟಗುಳಿ ಮತ್ತು ಹುತ್ಗಾರದಲ್ಲಿ ಉದ್ಯೋಗ ಅವಕಾಶಗಳಿವೆ. ಸಿದ್ದಾಪುರ ತಾಲೂಕಿನ ಬಿಳಗಿ ಮತ್ತು ಹೆಗ್ಗರಣೆ, ಹಳಿಯಾಳ ಪುರಸಭೆ, ಜೋಯಿಡಾ ತಾಲೂಕಿನ ಅಖೇತಿ ಹಾಗೂ ಆವೇಡಾ ಗ್ರಾಮೀಣ ಪುನರ್ವಸತಿ ಕಾರ್ಯಕರ್ತರ ಹುದ್ದೆಗೆ ಹುಡುಕಾಟ ನಡೆದಿದೆ. ಶೇ 40ರಷ್ಟು ವಿಕಲಚೇತನರಾಗಿರುವವರಿಗೆ ಈ ಉದ್ಯೋಗದಲ್ಲಿ ಮೊದಲ ಆದ್ಯತೆ ಕೊಡಲಾಗುತ್ತದೆ. ಭಾಗಶಃ ಅಂಧರು ಹಾಗೂ ಶ್ರವಣದೋಷ ಇದ್ದವರ ಜೊತೆ ದೈಹಿಕ ಅಂಗವಿಕಲರಿಗೆ ಸಹ ಉದ್ಯೋಗದಲ್ಲಿ ಮೀಸಲಾಯಿ ಇದೆ. ಅರ್ಜಿ ಸಲ್ಲಿಸುವವರು ಸ್ಥಳೀಯರಾದರೆ ಇನ್ನಷ್ಟು ಅನುಕೂಲ. 18-45 ವರ್ಷದ ವಯೋಮಿತಿ ಹೊಂದಿರುವ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಪಾಸಾಗಿರುವವರು ಅರ್ಜಿ ಸಲ್ಲಿಸಲು ಅರ್ಹರು. ಎಲ್ಲಾ ತಾಲೂಕಿನಲ್ಲಿರುವ ಶಿಶು ಅಭಿವೃದ್ಧಿ ಯೋಜೆ ಕಚೇರಿಯಲ್ಲಿನ ಹಾಗೂ ತಾಲೂಕು ಪಂಚಾಯತದ ವಿವಿದ್ದೊದ್ದೇಶ ಪುನರ್ವಸತಿ ಕಾರ್ಯಕರ್ತರು ಈ ಉದ್ಯೋಗದ ಅರ್ಜಿ ತುಂಬಲು ನೆರವಾಗುತ್ತಾರೆ. ಆಸಕ್ತರು ಅರ್ಹತೆಯ ಅನುಗುಣವಾಗಿ ಅರ್ಜಿಗಳನ್ನು ಭರ್ತಿ ಮಾಡಿ ಡಿಸೆಂಬರ್ 1ರ ಒಳಗೆ ಕಾರವಾರದ ವಿಕಲಚೇತನರ ಕಚೇರಿಗೆ ಕಳುಹಿಸಬೇಕಿದೆ. ಅರ್ಜಿ ಕಳುಹಿಸಬೇಕಾದ ವಿಳಾಸ: ರಾಘವೇಂದ್ರ ಜಿ ಭಟ್ಟ, ಹಿರಿಯ ನಾಗರಿಕರ ಸಬಲೀಕರಣಾಧಿಕಾರಿ ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಕಾರವಾರ (ಉ.ಕ) - [ಸಾವಿರ ಜನ ಸೇರಿದರೂ ಶಾಂತಿಯುತ ಹೋರಾಟ](https://mobiletime.in/2025/11/peaceful-protest-even-with-thousands-of-people-present/): `ಸಂಘಟಿತ ಹೋರಾಟದ ಫಲವಾಗಿ ಶಿರಸಿಯಲ್ಲಿ ಅರಣ್ಯ ಅತಿಕ್ರಮಣದಾರರು ಶಾಂತಿಯುತ ಪ್ರತಿಭಟನೆ ನಡೆಸಿದ್ದು, ಅರಣ್ಯವಾಸಿಗಳಿಗೆ ನ್ಯಾಯ ಸಿಗಲು ಇನ್ನಷ್ಟು ಗಟ್ಟಿ ಹೋರಾಟ ಅಗತ್ಯ’ ಎಂದು ನ್ಯಾಯವಾದಿ ರವೀಂದ್ರ ನಾಯ್ಕ ಅವರು ಹೇಳಿದ್ದಾರೆ. ಶಿರಸಿಯಲ್ಲಿ ಕಾರ್ಯಕರ್ತರ ಸಭೆ ನಡೆಸಿದ ಅವರು ಭೂಮಿ ಹಕ್ಕಿಗಾಗಿ ಕಳೆದ 34 ವರ್ಷದಿಂದ ನಡೆದ ಹೋರಾಟದ ಹಾದಿಯನ್ನು ಸ್ಮರಿಸಿದ್ದಾರೆ. `ಅರಣ್ಯ ಜಿಲ್ಲೆಯಾಗಿರುವ ಉತ್ತರ ಕನ್ನಡದಲ್ಲಿ ಅರಣ್ಯವಾಸಿಗಳು ಜಿಲ್ಲೆಯ ಅವಿಭಾಜ್ಯ ಅಂಗ. ಅರಣ್ಯಾವಾಸಿಗಳ ಬದುಕು ಇಲ್ಲದೇ ಅರಣ್ಯವಿಲ್ಲ. ಅರಣ್ಯವಿಲ್ಲದೇ, ಅರಣ್ಯವಾಸಿಗಳು ಬದುಕಲು ಸಾದ್ಯವಿಲ್ಲ’ ಎಂದವರು ಹೇಳಿದ್ದಾರೆ. `ಅರಣ್ಯ ಅತಿಕ್ರಮಣದಾರರ ಹೋರಾಟವು ಉದ್ವೇಗ, ಗಲಾಟೆ, ದೊಂಬಿ, ಹಿಂಸಾಚಾರ, ಕಾನೂನುಬಾಹಿರ ಪ್ರತಿಭಟನೆರಹಿತವಾಗಿದೆ. ಸಾವಿರಾರು ಜನ ಸೇರಿದರೂ ಸಂಘರ್ಷಕ್ಕೆ ಅವಕಾಶವಿಲ್ಲದೇ ಹೋರಾಟ ನಡೆಯುತ್ತಿದೆ. ಕಾರ್ಯಕರ್ತರಿಗೆ ನೀಡಿದ ಕಾನೂನು ಜ್ಞಾನ ತರಬೇತಿ ಹೋರಾಟದ ಪ್ರಬುದ್ದತೆ ಹೆಚ್ಚಿಸಲು ಕಾರಣವಾಗಿದೆ’ ಎಂದವರು ಅನಿಸಿಕೆವ್ಯಕ್ತಪಡಿಸಿದ್ದಾರೆ. `ಕಾನೂನುಬಾಹಿರವಾಗಿ ಅರಣ್ಯ ಭೂಮಿಯಲ್ಲಿ ಪರವಾನಿಗೆ ಇಲ್ಲದೇ ವಾಸ್ತವ್ಯ ಮತ್ತು ಸಾಗುವಳಿಗೆ ಇತ್ತೀಚಿನ ಕಾನೂನುನಲ್ಲಿ ಅವಕಾಶವಿಲ್ಲ. ಇರುವಂತ ಕಾನೂನಿನಲ್ಲಿ ಭೂಮಿ ಹಕ್ಕಿಗೆ ಪರಿಹಾರ ದೊರಕಿಲ್ಲ. ಶಾಶ್ವತ ಅರಣ್ಯ ಭೂಮಿ ಹಕ್ಕು ಪಡೆಯಲು ಅರಣ್ಯವಾಸಿಗಳಿಗೆ ಕಾನೂನು ಮರಿಚಿಕೆಯಾಗಿದೆ. ಅರಣ್ಯ ಭೂಮಿಯ ಮಂಜೂರಿಗೆ ರಾಜಕೀಯ ಇಚ್ಚಾಶಕ್ತಿಯ ಕೊರತೆ ಕಾಣುತ್ತಿದೆ’ ಎಂದವರು ಹೇಳಿದ್ದಾರೆ. - [ಸೈಕಲ್ ಸವಾರನಿಗೂ ಹೆಲ್ಮೆಟ್ ಕಡ್ಡಾಯ!](https://mobiletime.in/2025/11/helmets-are-mandatory-for-cyclists-too/): ಬೈಕ್ ಸವಾರರಿಗೆ ಹೆಲ್ಮೆಟ್ ಕಡ್ಡಾಯದ ಬಗ್ಗೆ ಪೊಲೀಸರು ಜಾಗೃತಿ ಮೂಡಿಸಿದ್ದು, ಅದರಿಂದ ಪ್ರೇರೇಪಿತರಾದ ಗೋಕರ್ಣದ ಶ್ರೀಧರ ಶೆಟ್ಟಿ ಅವರು ಸೈಕಲ್ ಸವಾರಿ ನಡೆಸುವಾಗಲೂ ಹೆಲ್ಮೆಟ್ ಧರಿಸುತ್ತಿದ್ದಾರೆ! ಗೋಕರ್ಣದ ಗಂಜಿಗದ್ದೆ ಬಳಿಯ ಚಕ್ರಮನೆ ಓಣಿಯ ಶ್ರೀಧರ ಶೆಟ್ಟಿ ಅವರು ರಥಬೀದಿಯಲ್ಲಿ ಸದ್ಗುರು ಹೊಟೇಲ್ ನಡೆಸುತ್ತಾರೆ. ಮೊದಲಿನಿಂದಲೂ ಸೈಕಲ್ ಸವಾರಿ ಎಂದರೆ ಅವರಿಗೆ ಅಚ್ಚುಮೆಚ್ಚು. ತುರ್ತು ಕಾರ್ಯದ ಓಡಾಟಕ್ಕೆ ಮಾತ್ರ ಬೈಕ್ ಬಳಸುವ ಅವರು ನಿತ್ಯದ ಓಡಾಟಕ್ಕೆ ಸೈಕಲ್ ಓಡಿಸುವುದೇ ಹೆಚ್ಚು. ಬೈಕ್ ಓಡಿಸುವಾಗ ಬೇಕು ಎಂದು ಖರೀದಿಸಿದ ಹೆಲ್ಮೆಟ್’ನ್ನು ಅವರು ಇದೀಗ ಸೈಕಲ್ ಓಡಿಸುವಾಗಲೂ ಬಳಸುತ್ತಿದ್ದಾರೆ. ಸೈಕಲ್ ಓಡಿಸುವಾಗ ಹೆಲ್ಮೆಟ್ ಧರಿಸಿದ ವ್ಯಕ್ತಿಯನ್ನು ಗೋಕರ್ಣಕ್ಕೆ ಬರುವ ಜನ ಅಚ್ಚರಿಯಿಂದ ನೋಡುತ್ತಿದ್ದಾರೆ! ಪರಿಸರ ಸ್ನೇಹಿ ಸೈಕಲ್ ಬಳಸುವಂತೆ ಜನರಲ್ಲಿ ಅರಿವು ಮೂಡಿಸುವುದರ ಜೊತೆ `ಜೀವ ರಕ್ಷಣೆಗೆ ಹೆಲ್ಮೆಟ್ ಅಗತ್ಯ’ ಎಂಬುದನ್ನು ಸಾರುವುದಕ್ಕಾಗಿ ಶ್ರೀಧರ ಶೇಟ್ ಅವರು ಈ ಕೆಲಸ ಮಾಡುತ್ತಿದ್ದಾರೆ. ಶ್ರೀಧರ ಶೇಟ್ ಅವರು ಹೆಲ್ಮೆಟ್ ಬಳಸಿ ಸೈಕಲ್ ಓಡಿಸುವ ವಿಡಿಯೋ ವಾಟ್ಸಪ್ ಗುಂಪುಗಳಲ್ಲಿಯೂ ಪ್ರಸಿದ್ಧಿಪಡೆದಿದೆ.`ಹೊಂಡ ಬಿದ್ದ ರಸ್ತೆಯಲ್ಲಿ ಸಂಚರಿಸುವಾಗ ರಕ್ಷಣೆಗಾಗಿ ಸೈಕಲ್ ಸವಾರರು ಹೆಲ್ಮೆಟ್ ಧರಿಸುವುದು ಅನಿವಾರ್ಯ’ ಎಂದು ಅನೇಕರು ಪ್ರತಿಕ್ರಿಯಿಸಿದ್ದಾರೆ. ಒಟ್ಟಿನಲ್ಲಿ ಸೈಕಲ್ ಶೆಟ್ಟಿ ಅವರ ಈ ಸಾಹಸ ಜನರ ಚಚೆಯ ವಿಷಯವಾಗಿದೆ. - [ಇದು ಸುಳ್ಳು ಸುದ್ದಿ!](https://mobiletime.in/2025/11/this-is-fake-news/): ಸಾಲು ಮರದ ತಿಮ್ಮಕ್ಕ ಅವರ ನಿಧನದ ಹಿನ್ನಲೆ ರಾಜ್ಯದ ಎಲ್ಲಾ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಿದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸರ್ಕಾರದ ಆದೇಶ ಹರಿದಾಡುತ್ತಿದೆ. ಆದರೆ, ಇದು ಸರ್ಕಾರದ ಅಧಿಸೂಚನೆಯೇ ಅಲ್ಲ! ನವೆಂಬರ್ 14ರಂದು ಪದ್ಮಶ್ರೀ ಪುರಸ್ಕೃತ ಸಾಲು ಮರದ ತಿಮ್ಮಕ್ಕ ಅವರು ನಿಧನರಾಗಿದ್ದಾರೆ. 114 ವರ್ಷಗಳ ಕಾಲ ಜೀವಿಸಿದ ಅವರು ಸಾವಿರಾರು ಮರಗಳನ್ನು ನೆಟ್ಟು ಪೋಷಿಸಿದ್ದು, ಅವರ ಸೇವೆಯ ಸ್ಮರಣಾರ್ಥ ಸರ್ಕಾರ ಸಂತಾಪ ವ್ಯಕ್ತಪಡಿಸಿದೆ. ಜೊತೆಗೆ ಈ ಬಗ್ಗೆ ಸರ್ಕಾರದ ಅಧೀನ ಕಾರ್ಯದರ್ಶಿ ಬಾಣದರಂಗಯ್ಯ ಎನ್ ಆರ್ ಅವರು ಅಧಿಸೂಚನೆ ಹೊರಡಿಸಿದ್ದು, ಸಕಲ ಸರ್ಕಾರಿ ಗೌರವದೊಂದಿಗೆ ಅಂತ್ಯಕ್ರಿಯೆ ನೆರವೇರಿಸಲು ಆದೇಶಿಸಿದ್ದಾರೆ. ಆದರೆ, ಈ ನಡುವೆ ಸರ್ಕಾರದ ಉಪಕಾರ್ಯದರ್ಶಿ ಹೆಸರಿನಲ್ಲಿ ಇನ್ನೊಂದು ಅಧಿಸೂಚನೆ ಜಾಲತಾಣದಲ್ಲಿ ಹರಿದಾಡುತ್ತಿದೆ. ಆ ಅಧಿಸೂಚನೆಯಲ್ಲಿ ರಾಜ್ಯದ ಎಲ್ಲಡೆ ಸರ್ಕಾರಿ ಕಚೇರಿ ಹಾಗೂ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಿದ ಬಗ್ಗೆ ನಮೂದಿಸಲಾಗಿದೆ. ಆದರೆ, `ಈ ಅಧಿಸೂಚನೆಯನ್ನು ಸರ್ಕಾರ ಹೊರಡಿಸಿಲ್ಲ’ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ರಜೆ ಘೋಷಿಸಿ ಕಿಡಿಗೇಡಿಗಳು ಹೊರಡಿಸಿದ ಅಧಿಸೂಚನೆ ಹರಿದಾಡುತ್ತಿದ್ದು, ಶನಿವಾರ ಶಾಲಾ-ಕಾಲೇಜಿಗೆ ರಜೆ ಇಲ್ಲ. ಈ ಬಗ್ಗೆ ಕಾರವಾರ ಶೈಕ್ಷಣಿಕ ಜಿಲ್ಲೆಯ ಉಪನಿರ್ದೇಶಕಿ ಲತಾ ನಾಯಕ ಅವರು ಸಹ ಸ್ಪಷ್ಟಪಡಿಸಿದ್ದಾರೆ. `ಶಾಲಾ ಕಾಲೇಜಿಗೆ ರಜೆ ಎನ್ನವ ಬಗ್ಗೆ ಸರ್ಕಾರದ ಹೆಸರಿನಲ್ಲಿ ಪತ್ರ ಹರಿದಾಡುತ್ತಿದ್ದು, ಅದರಲ್ಲಿ ಸತ್ಯಾಂಶವಿಲ್ಲ. ಶನಿವಾರ ಶಾಲಾ-ಕಾಲೇಜುಗಳು ಎಂದಿನoತೆ ನಡೆಯಲಿದೆ’ ಎಂದು ಲತಾ ನಾಯಕ ಅವರು ಹೇಳಿದ್ದಾರೆ. ನಕಲಿ ಅಧೀಸೂಚನೆಯಲ್ಲಿ ಬಳಸಲಾದ ಅಕ್ಷರಗಳ ಪಾಂಟ್ ಅಧಿಕೃತ ಅಧಿಸೂಚನೆಗಿಂತ ಬಿನ್ನವಾಗಿದೆ. ಜೊತೆಗೆ ಅಧಿಸೂಚನೆಯಲ್ಲಿ ಹಾಕಿದ ಪ್ರತಿಗಳು ಸಹ ಸಂಬoಧವಿಲ್ಲದವರಿಗೆ ರವಾನಿಸಿದ ರೀತಿಯಿದ್ದು, ಸರ್ಕಾರಿ ಅಧಿಸೂಚನೆಯನ್ನು ಕಿಡಿಗೇಟಿಗಳು ಎಡಿಟ್ ಮಾಡಿ ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ. `ಸುಳ್ಳು ಸುದ್ದಿ ಡಿಲಿಟ್ ಮಾಡಿ. ಸತ್ಯವನ್ನು ಶೇರ್ ಮಾಡಿ’     - [ಅಣು ವಿದ್ಯುತ್ ಘಟಕದಿಂದ ಅಣಕು ಕಾರ್ಯಾಚರಣೆ](https://mobiletime.in/2025/11/mock-operation-from-nuclear-power-plant/): `ಡಿಸೆಂಬರ್ 11ರಂದು ಕೈಗಾ ಅಣು ವಿದ್ಯುತ್ ಘಟಕದಲ್ಲಿ ತುರ್ತು ಸನ್ನಿವೇಶದ ಅಣಕು ಕಾರ್ಯಾಚರಣೆ ನಡೆಯಲಿದ್ದು, ಎಲ್ಲಾ ಇಲಾಖೆಯವರು ಪರಸ್ಪರ ಸಮನ್ವಯದಿಂದ ಕಾರ್ಯನಿರ್ವಹಿಸಬೇಕು’ ಎಂದು ಡೀಸಿ ಕೆ ಲಕ್ಷ್ಮೀಪ್ರಿಯಾ ಸೂಚಿಸಿದ್ದಾರೆ. ಶುಕ್ರವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಭೆ ನಡೆಸಿದ ಅವರು `ದೈನಂದಿನ ಸಾರ್ವಜನಿಕ ವ್ಯವಸ್ಥೆಗೆ ಯಾವುದೇ ಅಡಚಣೆಯಾಗದಂತೆ ಅಣಕು ಕಾರ್ಯಾಚರಣೆ ನಡೆಸಬೇಕು’ ಎಂದು ಹೇಳಿದ್ದಾರೆ. `ಆರೋಗ್ಯ ಇಲಾಖೆ ,ಕಂದಾಯ ಇಲಾಖೆ, ಅಗ್ನಿಶಾಮಕ ಮತ್ತು ಪಂಚಾಯತ್ ರಾಜ್ ಇಲಾಖೆಯ ಅಧಿಕಾರಿಗಳು ತಮಗೆವಹಿಸಲಾದ ಜವಾಬ್ದಾರಿಗಳನ್ನು ಸರಿಯಾಗಿ ನಿಭಾಯಿಸಬೇಕು. ಕಾರ್ಯಚರಣೆಗೆ ಅಗತ್ಯವಿರುವ ವಾಹನಗಳ ವ್ಯವಸ್ಥೆಯನ್ನು ಸಾರಿಗೆ ಇಲಾಖೆಯವರು ಮಾಡಬೇಕು. ಪೊಲೀಸ್ ಇಲಾಖೆವತಿಯಿಂದ ಕಾಯಾಚರಣೆ ನಡೆಯುವ ವ್ಯಾಪ್ತಿಯ ಪ್ರದೇಶಗಳಲ್ಲಿ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು. ಅಣಕು ಕಾರ್ಯಚರಣೆಯಾದರೂ ಅಂತಿಮದಲ್ಲಿ ಕಾರ್ಯಚರಣೆಯ ಎಲ್ಲಾ ಹಂತದ ಕುರಿತು ಪರಾಮರ್ಶೆ ನಡೆಯಲಿದ್ದು, ಯಾವುದೇ ಹಂತದಲ್ಲಿ ಲೋಪಗಳು ಸಂಭವಿಸದAತೆ ಎಚ್ಚರವಹಿಸಬೇಕು’ ಎಂದು ಸೂಚಿಸಿದರು. `ವಿಪತ್ತು ಸಂಭವಿಸಿದಾಗ ನೈಜ ಸಂದರ್ಭದಲ್ಲಿ ಕಾರ್ಯನಿರ್ವಹಿಸುವ ರೀತಿಯಲ್ಲಿ ಎಲ್ಲಾ ಇಲಾಖೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ತ್ವರಿತವಾಗಿ ನಿಗಧಿತ ಸಮಯದಲ್ಲಿ ತಮ್ಮ ಜವಾಬ್ದಾರಿಗಳನ್ನು ನಿರ್ವಹಿಸಬೇಕು’ ಎಂದು ನಿರ್ದೇಶನ ನೀಡಿದರು. ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ದಿಲೀಷ್ ಶಶಿ, ಉಪವಿಭಾಗಾಧಿಕಾರಿ ಶ್ರವಣ ಕುಮಾರ್, ಡಿಎಫ್‌ಓ. ರವಿಶಂಕರ್, ಅಪರ ಜಿಲ್ಲಾಧಿಕಾರಿ ಸಾಜಿದ್ ಮುಲ್ಲಾ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕೃಷ್ಣಮೂರ್ತಿ, ಕೈಗಾದ ಹಿರಿಯ ಅಧಿಕಾರಿಗಳಾದ ಅಮೋಲ್ ಶುಕ್ಲಾ, ಚಿತ್ತರಂಜನ್ ಇತರರಿದ್ದರು. - [ಸರ್ಕಾರಿ ಬಸ್ಸು: ಪ್ರಯಾಣಿಕನ ತಲೆ ಒಡೆದ ಕೊನೆಯ ಸೀಟು!](https://mobiletime.in/2025/11/government-bus-passengers-head-smashed-in-last-seat/): ಹುಬ್ಬಳ್ಳಿ – ಅಂಕೋಲಾ ಮಾರ್ಗವಾಗಿ ಸಂಚರಿಸುವ ಸರ್ಕಾರಿ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಅಂಕೋಲಾ ಕಮ್ಮಾಣಿಯ ನಾಗಪ್ಪ ಸಿದ್ದಿ ಅವರು ಬಸ್ಸಿನ ವೇಗಕ್ಕೆ ತಲೆಗೆ ಪೆಟ್ಟು ಮಾಡಿಕೊಂಡಿದ್ದಾರೆ. ಕೊಡ್ಲಗದ್ದೆ ತಿರುವಿನಲ್ಲಿ ಅವರ ತಲೆ ಬಸ್ಸಿನ ತಲೆಭಾಗಕ್ಕೆ ಬಡಿದಿದೆ. ಶುಕ್ರವಾರ ಮಧ್ಯಾಹ್ನ 1.30ರ ವೇಳೆಗೆ ಗದಗ ಘಟಕದ ಗದಗ-ಹುಬ್ಬಳ್ಳಿ-ಕಾರವಾರ ಬಸ್ಸು ಯಲ್ಲಾಪುರ ಬಸ್ ನಿಲ್ದಾಣ ಪ್ರವೇಶಿಸಿತು. ಮನೆಗೆ ಹೋಗುವ ಆತುರದಲ್ಲಿದ್ದ ನಾಗಪ್ಪ ಸಿದ್ದಿ ಅವರು ಆ ಬಸ್ಸು ಹತ್ತಿದರು. ಯಲ್ಲಾಪುರದಿಂದ ರಾಮನಗುಳಿಗೆ ತೆರಳಲು ಅವರು ಟಿಕೆಟ್‌ಪಡೆದರು. ಆ ಬಸ್ಸಿನ ತುಂಬ ಪ್ರಯಾಣಿಕರಿದ್ದರು. ಬಸ್ಸಿನ ಕೊನೆಯ ಆಸನಗಳು ಖಾಲಿಯಿದ್ದು ಅಲ್ಲಿ ನಾಗಪ್ಪ ಸಿದ್ದಿ ಅವರು ಅವರು ಆರಾಮಾಗಿ ಕುಳಿತಿದ್ದರು. ಪಟ್ಟಣದಲ್ಲಿ ನಿಧಾನವಾಗಿಯೇ ಚಲಿಸಿದ ಬಸ್ಸು ಮಾಗೋಡು ಕ್ರಾಸ್ ಮುಕ್ತಾಯದ ನಂತರ ವೇಗ ಹೆಚ್ಚಾಯಿತು. ಅರಬೈಲಿನ ಇಳಿಜಾರು ಪ್ರದೇಶದಲ್ಲಿಯೂ ಬಸ್ಸಿನ ವೇಗ ಕಡಿಮೆ ಆಗಲಿಲ್ಲ. ಅದೇ ವೇಗದಲ್ಲಿ ಮುಂದೆ ಸಾಗಿದ ಎಕ್ಸಪ್ರೆಸ್ ಬಸ್ಸು ಕೊಡ್ಲಗದ್ದೆ ಬಳಿಯ ಹಂಪು ಹಾರಿತು. ಕೊನೆಯ ಸಾಲಿನಲ್ಲಿ ಕೂತಿದ್ದ ನಾಗಪ್ಪ ಸಿದ್ದಿ ಅವರು ಬಸ್ಸಿನೊಳಗೆ ಹಾರಿ ಬಿದ್ದರು. ನಾಗಪ್ಪ ಸಿದ್ದಿ ಅವರ ತಲೆ ಬಸ್ಸಿನ ಮೇಲ್ಬಾಗಕ್ಕೆ ಬಡಿದು ಅವರು ಕೆಳಗೆ ಬಿದ್ದರು. ತಲೆಯಿಂದ ರಕ್ತ ಸುರಿಯಲು ಶುರುವಾಯಿತು. ಕೆಳಗೆ ಬಿದ್ದ ರಭಸಕ್ಕೆ ಮೂಗಿಗೂ ಪೆಟ್ಟಾಗಿತ್ತು. ಅವಘಡದ ಬಗ್ಗೆ ಅರಿತ ಬಸ್ ಚಾಲಕ-ನಿರ್ವಾಹಕರು ಆಂಬುಲೆನ್ಸಿಗೆ ಫೋನ್ ಮಾಡಿದರು. ಕಮ್ಮಾಣಿಗೆ ಹೋಗಬೇಕಿದ್ದ ನಾಗಪ್ಪ ಸಿದ್ದಿ ಅವರು ಆಂಬುಲೆನ್ಸ ಹತ್ತಿದರು. ಅವರಿಗೆ ರಾಮನಗಳಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಲಾಯಿತು. ರಕ್ತದ ಮಡುವಿನಲ್ಲಿದ್ದ ಅವರನ್ನು ಆಂಬುಲೆನ್ಸ ಮೂಲಕ ಅಂಕೋಲಾಗೆ ಸಾಗಿಸಲಾಗಿದ್ದು, ಅಲ್ಲಿ ಸೂಕ್ತ ಚಿಕಿತ್ಸೆ ದೊರೆಯಿತು. ಮಧ್ಯಾಹ್ನ ನೇರವಾಗಿ ಮನೆಗೆ ಮರಳಬೇಕಿದ್ದ ನಾಗಪ್ಪ ಸಿದ್ದಿ ಅವರು ಸಾಕಷ್ಟು ಪ್ರಮಾಣದಲ್ಲಿ ನೋವುಂಡರು. ವೇಗದ ಬಸ್ಸು ಚಾಲನೆ ಪರಿಣಾಮ ನೇರವಾಗಿ ಮನೆಗೆ ಹೋಗುವ ಬದಲು ಅವರು ಅಂಕೋಲಾ ಸುತ್ತಾಟ ನಡೆಸಿ, ಇದೀಗ ಅಂಕೋಲಾದಿAದ ರಾಮನಗುಳಿಗೆ ಮತ್ತೆ ಸರ್ಕಾರಿ ಬಸ್ಸು ಹತ್ತಿ ಟಿಕೆಟ್ ತೆಗೆದರು. `ಬಸ್ಸಿನಲ್ಲಿ ಮನೆಗೆ ಹೋಗುತ್ತಿದ್ದೇನೆ. ಸಂಜೆ ಆಗೋಯ್ತು. ಬಸ್ಸು ಜಂಪು ಹಾರಿದ ಕಾರಣ ಬಾನಗೇಡಿ ಆಗೋಯ್ತು’ ಎಂದು ಮೊಬೈಲ್ ಮಿಡಿಯಾ ನೆಟ್‌ವರ್ಕಗೆ ನಾಗಪ್ಪ ಸಿದ್ದಿ ಅವರು ಫೋನ್ ಮೂಲಕ ಪ್ರತಿಕ್ರಿಯಿಸಿದರು. `ಅತಿವೇಗ ಅಪಘಾತಕ್ಕೆ ಕಾರಣ’ - [ಹೆಲ್ಮೇಟ್ ಇಲ್ಲದವರಿಗೆ ಪೆಟ್ರೋಲ್ ಇಲ್ಲ!](https://mobiletime.in/2025/11/no-petrol-for-those-without-helmets/): ರಸ್ತೆ ಅಪಘಾತದಲ್ಲಿನ ಸಾವು-ನೋವು ಪ್ರಮಾಣ ಕಡಿಮೆ ಮಾಡುವ ನಿಟ್ಟಿನಲ್ಲಿ ಕುಮಟಾ ಸಹಾಯಕ ಆಯುಕ್ತ ಪಿ ಶ್ರವಣಕುಮಾರ ಅವರು ಹಲವು ದಿಟ್ಟ ಕ್ರಮಗಳನ್ನು ಅನುಸರಿಸಿದ್ದು, `ಹೆಲ್ಮೇಟ್ ಧರಿಸದೇ ಓಡಾಡುವವರಿಗೆ ಪೆಟ್ರೋಲ್ ಕೊಡಬೇಡಿ’ ಎಂದು ಪೆಟ್ರೋಲ್ ಬಂಕ್ ಮಾಲಕರಿಗೆ ಸೂಚಿಸಿದ್ದಾರೆ. ಹೆಲ್ಮೇಟ್ ಧರಿಸದೇ ಬೈಕ್ ಓಡಿಸುವವರ ವಿರುದ್ಧ ಕಠಿಣ ಕ್ರಮ ಜರುಗಿಸುವಂತೆ ಪೊಲೀಸರಿಗೂ ನಿರ್ದೇಶನ ನೀಡಿದ್ದಾರೆ. `ಈಚೆಗೆ ಕುಮಟಾ ಹಾಗೂ ಸುತ್ತಲಿನ ಪ್ರದೇಶದಲ್ಲಿ ಸಾಕಷ್ಟು ಅಪಘಾತಗಳು ನಡೆಯುತ್ತಿದೆ. ಸಂಚಾರಿ ನಿಯಮ ಪಾಲನೆಯಲ್ಲಿನ ಲೋಪವೇ ಅಪಘಾತಕ್ಕೆ ಪ್ರಮುಖ ಕಾರಣ’ ಎಂದು ಶ್ರವಣಕುಮಾರ ಅವರು ವಿಶ್ಲೇಷಿಸಿದರು. `ಸಂಚಾರಿ ನಿಯಮ ಪಾಲನೆ ಸರಿಯಾಗಿ ಆಗದೇ ಇದ್ದರೆ ಅಮಾಯಕರ ಜೀವ ಹೋಗುವುದು ಹೆಚ್ಚಾಗಲಿದೆ. ಹೀಗಾಗಿ ಅದನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು’ ಎಂದವರು ಹೇಳಿದರು. `ಬೈಕಿನಲ್ಲಿ ಸಂಚರಿಸುವವರು ಕಡ್ಡಾಯವಾಗಿ ಹೆಲ್ಮೇಟ್ ಧರಿಸಬೇಕು. 4 ವರ್ಷ ಮೇಲ್ಪಟ್ಟ ಹಿಂಬದಿ ಸವಾರರಿಗೂ ಹೆಲ್ಮೇಟ್ ಕಡ್ಡಾಯವಾಗಿದ್ದು, ಕುಮಟಾ ತಾಲೂಕಿನ ಎಲ್ಲಡೆ ಈ ಆದೇಶ ಪಾಲನೆಯಾಗಬೇಕು. ಈ ನಿಯಮ ಉಲ್ಲಂಘಿಸುವವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು’ ಎಂದು ಪೊಲೀಸರಿಗೆ ಸೂಚಿಸಿದರು. `ಈಗಾಗಲೇ ಕಡ್ಡಾಯವಾಗಿ ಹೆಲ್ಮೇಟ್ ಧರಿಸುವ ಬಗ್ಗೆ ಜನರಲ್ಲಿ ಅರಿವು ಮೂಡಿಸಲಾಗಿದೆ. ನಿಯಮ ಉಲ್ಲಂಘಿಸುವವರಿಗೆ ದಂಡ ವಿಧಿಸುವ ಬಗ್ಗೆ ಸಿದ್ಧತೆ ನಡೆದಿದೆ’ ಎಂದು ಪೊಲೀಸ್ ಅಧಿಕಾರಿಗಳು ಸಭೆಗೆ ತಿಳಿಸಿದರು. `ಅಪಘಾತವಾದಾಗ ತಲೆಗೆ ಬೀಳುವ ಏಟಿನಿಂದ ಹೆಚ್ಚಿನವರು ಪ್ರಾಣ ಕಳೆದುಕೊಂಡಿದ್ದಾರೆ. ಹೀಗಾಗಿ ಕುಮಟಾ ವ್ಯಾಪ್ತಿಯ ಪೆಟ್ರೋಲ್ ಬಂಕಿನಲ್ಲಿ ಹೆಲ್ಮೇಟ್ ಧರಿಸದೇ ಬರುವ ಬೈಕ್ ಸವಾರರಿಗೆ ಪೆಟ್ರೋಲ್ ಕೊಡಬಾರದು’ ಎಂದು ಸಹಾಯಕ ಆಯುಕ್ತರು ಪೆಟ್ರೋಲ್ ಬಂಕ್ ಮಾಲಕರಿಗೆ ಸೂಚಿಸಿದರು. `ಪೆಟ್ರೋಲ್ ನೀಡಲು ನಿರಾಕರಿಸಿದರೆ ಬಂಕಿನ ಸಿಬ್ಬಂದಿ ಜೊತೆ ಸಾರ್ವಜನಿಕರ ಸಂಘರ್ಷವಾಗುವ ಸಾಧ್ಯತೆಯಿದೆ. ಈ ಹಿನ್ನಲೆ ನೌಕರರಿಗೆ ಸೂಕ್ತ ರಕ್ಷಣೆ ಒದಗಿಸಬೇಕು’ ಎಂದು ಪೆಟ್ರೋಲ್ ಬಂಕ್ ಮಾಲಕರು ಈ ವೇಳೆ ಮನವಿ ಮಾಡಿದರು. `ಅಗತ್ಯ ಭದ್ರತೆ ನೀಡಲು ಬದ್ಧ’ ಎಂದು ಪೊಲೀಸರು ತಿಳಿಸಿದರು. `ಎಲ್ಲಾ ಪೆಟ್ರೋಲ್ ಬಂಕ್ ಮಾಲೀಕರು ತಮ್ಮ ಬಂಕುಗಳಲ್ಲಿ ಈ ಬಗ್ಗೆ ಬ್ಯಾನರ್ ಅಳವಡಿಸಬೇಕು. ಹೆಲ್ಮೇಟ್ ಧರಿಸದೇ ಬರುವವರಿಗೆ ಪೆಟ್ರೋಲ್ ಸಿಗುವುದಿಲ್ಲ. ಎಂಬ ಬರಹವನ್ನು ಸ್ಪಷ್ಠವಾಗಿ ಬರೆಯಬೇಕು. ಜೊತೆಗೆ `ಕಾರಿನಲ್ಲಿ ಬರುವವರು ಸಹ ಸೀಟ್ ಬೆಲ್ಟ ಧರಿಸುವುದು ಕಡ್ಡಾಯ’ ಎಂದು ಪ್ರಚಾರ ಮಾಡಬೇಕು ಶ್ರವಣಕುಮಾರ ಅವರು ಬಂಕ್ ಮಾಲಕರಿಗೆ ಸೂಚಿಸಿದರು. ಪೊಲೀಸ್ ಇಲಾಖೆ ಜೊತೆ ಆಹಾರ ನಿರೀಕ್ಷಕರು ಈ ಬಗ್ಗೆ ಪೆಟ್ರೊಲ್ ಬಂಕ್’ಗೆ ತೆರಳಿ ತಪಾಸಣೆ ನಡೆಸಬೇಕು ಎಂದು ನಿರ್ದೇಶಿಸಿದರು. ಕಾಲೇಜು ಯುವಕ-ಯುವತಿಯರು ಲೈಸನ್ಸಪಡೆಯದೇ ಬೈಕು-ಕಾರು ಓಡಿಸುವುದರ ಬಗ್ಗೆ ಶ್ರವಣಕುಮಾರ ಅವರು ಗಮನಸೆಳೆದರು. 18 ವರ್ಷದೊಳಗಿನ ಮಕ್ಕಳ ವಾಹನ ಚಾಲನೆ ಬಗ್ಗೆ ಅವರು ಕಳವಳವ್ಯಕ್ತಪಡಿಸಿದರು. ಒಂದೇ ಬೈಕಿನಲ್ಲಿ ಮೂವರು ಚಲಿಸುವುದು ಹಾಗೂ ಅತಿಯಾದ ವೇಗದಲ್ಲಿ ಓಡಾಡುವುದರ ಬಗ್ಗೆ ಗಮನಿಸಲು ಸೂಚಿಸಿದರು. `ಪರವಾನಿಗೆ ಪಡೆಯದೇ ಬೈಕ್ ಓಡಿಸುವ ಮಕ್ಕಳನ್ನು ಗುರುತಿಸಿ ಅವರ ಪಾಲಕರನ್ನು ಕಾಲೇಜಿಗೆ ಕರೆಯಿಸಬೇಕು. ಅಂಥ ವಾಹನ ಮಾಲಕರ ವಿರುದ್ಧ ಕ್ರಮಕ್ಕೆ ಪೊಲೀಸರಿಗೆ ಮಾಹಿತಿ ನೀಡಬೇಕು’ ಎಂದು ವಿವಿಧ ಶಾಲಾ-ಕಾಲೇಜಿನವರಿಗೆ ಸಹಾಯಕ ಆಯುಕ್ತ ಶ್ರವಣಕುಮಾರ ಅವರು ಸೂಚನೆ ನೀಡಿದರು. ಕೆಲವಡೆ ಸರ್ಕಾರಿ ನೌಕರರು ಸಹ ಸಂಚಾರಿ ನಿಯಮ ಪಾಲಿಸದಿರುವುದು ಗಮನಕ್ಕೆ ಬಂದಿದ್ದು, ಅಂಥವರ ವಿರುದ್ಧವೂ ಕ್ರಮ ಜರುಗಿಸುವುದಾಗಿ ಎಚ್ಚರಿಸಿದರು. - [ಅಂಗವಿಕಲನ ಅಂತರಾಳ: ಫೋನ್ ಕರೆಗೆ ಸ್ಪಂದಿಸಿದ ಆರೋಗ್ಯ ಅಧಿಕಾರಿ!](https://mobiletime.in/2025/11/disabled-persons-inner-voice-health-officer-responds-to-phone-call/): ಪಾರ್ಶವಾಯು ಪೀಡಿತ ವ್ಯಕ್ತಿಯೊಬ್ಬರ ಬಗ್ಗೆ ಅರಿತ ಜಿಲ್ಲಾ ಆರೋಗ್ಯಾಧಿಕಾರಿ ಡಾ ನೀರಜ್ ಅವರು ರೋಗಿ ಮನೆಗೆ ಸರ್ಕಾರಿ ಸಿಬ್ಬಂದಿ ಕಳುಹಿಸಿ ಪ್ರಮಾಣ ಪತ್ರ ದೊರಕಿಸುವ ಪ್ರಯತ್ನ ಮಾಡಿದ್ದಾರೆ. ಕುಮಟಾದ ಚಿತ್ರಿಗಿಯಲ್ಲಿ ರಮೇಶ ನಾಯ್ಕ ಅವರು ವಾಸವಾಗಿದ್ದು, ಅವರು ಎರಡು ವರ್ಷದ ಹಿಂದೆ ಪಾರ್ಶವಾಯುವಿಗೆ ತುತ್ತಾಗಿದ್ದರು. ಪರಿಣಾಮ ರಮೇಶ ನಾಯ್ಕ ಅವರಿಗೆ ದೇಹದ ಒಂದು ಭಾಗ ಚಲನೆಯಲ್ಲಿರಲಿಲ್ಲ. ಅಂಗವೈಕಲ್ಯದಿAದ ಬಳಲುತ್ತಿದ್ದರೂ ರಮೇಶ ನಾಯ್ಕ ಅವರಿಗೆ ಅಂಗವಿಕಲ ಪ್ರಮಾಣ ಪತ್ರ ಸಿಕ್ಕಿರಲಿಲ್ಲ. ರಮೇಶ ನಾಯ್ಕ ಅವರ ಪತ್ನಿ ನೂತನ ನಾಯ್ಕ ಅವರು ಈ ಬಗ್ಗೆ ಜನಸಾಮಾನ್ಯರ ಸಮಾಜ ಕಲ್ಯಾಣ ಕೇಂದ್ರಕ್ಕೆ ಮಾಹಿತಿ ನೀಡಿದ್ದು, ಆಗ್ನೇಲ್ ರೋಡ್ರಿಗಸ್ ಅವರು ಜಿಲ್ಲಾ ಆರೋಗ್ಯಾಧಿಕಾರಿ ಡಾ ನೀರಜ್ ಅವರಿಗೆ ಫೋನ್ ಮಾಡಿದರು. ಸಮಸ್ಯೆ ಅರಿತ ಡಾ ನೀರಜ್ ಅವರು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಕಚೇರಿಯ ಅಂಗವಿಕಲರ ಅಧಿಕಾರಿ ರಕ್ಷತ್ ಅವರನ್ನು ಸ್ಥಳಕ್ಕೆ ಕಳುಹಿಸಿದರು. ಸ್ಥಳ ಪರಿಶೀಲನೆ ನಡೆಸಿದ ರಕ್ಷಿತ್ ಅವರು ವಿವಿಧ ದಾಖಲೆ ಸಂಗ್ರಹಿಸಿ ಸಂತ್ರಸ್ತರಿಗೆ ಅಂಗವಿಕಲ ಪ್ರಮಾಣ ಪತ್ರ ಕೊಡುವ ಬಗ್ಗೆ ಶಿಫಾರಸ್ಸು ಮಾಡಿದ್ದಾರೆ. `ರಮೇಶ ನಾಯ್ಕ ಅವರು ಎರಡು ವರ್ಷದಿಂದ ಅಂಗವಿಕಲರಾಗಿ ಸಮಸ್ಯೆ ಅನುಭವಿಸುತ್ತಿದ್ದರೂ ಯಾರೂ ಗಮನಿಸಿರಲಿಲ್ಲ. ಆರೋಗ್ಯ ಅಧಿಕಾರಿಗಳು ಆಸ್ಪತ್ರೆಗೆ ಬರಲು ತ್ರಾಣವಿಲ್ಲದ ವ್ಯಕ್ತಿಯ ಮನೆಗೆ ಸರ್ಕಾರಿ ಸಿಬ್ಬಂದಿ ಕಳುಹಿಸಿ ಅವರ ಸಮಸ್ಯೆ ಆಲಿಸಿದ್ದಾರೆ. ಶೀಘ್ರದಲ್ಲಿಯೇ ಅಂಗವಿಕಲ ಪ್ರಮಾಣ ಪತ್ರ ಸಿಗಲಿದ್ದು, ಅವರಿಗೆ ಅದು ನೆರವಾಗಲಿದೆ’ ಎಂದು ಸಾಮಾಜಿಕ ಕಾರ್ಯಕರ್ತ ಸುಧಾಕರ ನಾಯ್ಕ ಹಾಗೂ ರಾಜೇಶ ನಾಯ್ಕ ಅವರು ಪ್ರತಿಕ್ರಿಯಿಸಿದರು. - [ಮರಳು ದಂಧೆ: ಅಡ್ಡಗಟ್ಟಿದವರನ್ನು ಅಲೆದಾಡಿಸಿದ ಮಹಿಳಾ ಅಧಿಕಾರಿ!](https://mobiletime.in/2025/11/sand-scam-female-officer-waves-away-those-who-blocked-the-road/): ಉತ್ತರ ಕನ್ನಡ ಜಿಲ್ಲೆಯಲ್ಲಿ ರಾಜಾರೋಷವಾಗಿ ಅಕ್ರಮ ಮರಳುಗಾರಿಕೆ ನಡೆಯುತ್ತಿದ್ದು, ಕುಮಟಾ-ಹೊನ್ನಾವರ ಭಾಗದ ಮರಳು ರಾತ್ರಿ ವೇಳೆ ಶಿರಸಿ-ಸಿದ್ದಾಪುರಕ್ಕೆ ಸಾಗಾಟವಾಗುತ್ತಿದೆ. ಅಕ್ರಮ ಮರಳುಗಾರಿಕೆ ತಡೆಯಲು ರಾತ್ರಿ ಕಾರ್ಯಾಚರಣೆಗಿಳಿದ ಭೂ ವಿಜ್ಞಾನಿ ಆಶಾ ಎಂ ಎಸ್ ಅವರೊಂದಿಗೆ ದಂಧೆಕೋರರು ಅನುಚಿತವಾಗಿ ವರ್ತಿಸಿದ್ದಾರೆ. ತಮ್ಮನ್ನು ಅಡ್ಡಗಟ್ಟಿದವರನ್ನು ಸಮರ್ಥವಾಗಿ ಎದುರುಸಿದ ಆಶಾ ಅವರು ಆರೋಪಿತರೆಲ್ಲರೂ ಕೋರ್ಟು-ಕಚೇರಿ ಅಲೆದಾಡುವ ಹಾಗೇ ಮಾಡಿದ್ದಾರೆ! ಆಶಾ ಎಂ ಎಸ್ ಅವರು ಕಳೆದ 3 ವರ್ಷದಿಂದ ಕಾರವಾರದ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಲ್ಲಿ ಹಿರಿಯ ಭೂ ವಿಜ್ಞಾನಿಯಾಗಿದ್ದಾರೆ. ಖಡಕ್ ಅಧಿಕಾರಿಯಾಗಿ ಹೆಸರು ಮಾಡಿದ ಅವರು ಅಕ್ರಮ ದಂಧೆಕೋರರ ವಾಹನಗಳನ್ನು ವಶಕ್ಕೆಪಡೆದು ದಂಡ ವಿಧಿಸುತ್ತಿದ್ದಾರೆ. ಅಕ್ರಮ ಮರಳುಗಾರಿಕೆ ದೂರಿನ ಹಿನ್ನಲೆ ಆಶಾ ಅವರು ತಮ್ಮ ಸಿಬ್ಬಂದಿ ಜೊತೆ ವಿವಿಧ ಕಡೆ ದಿಢೀರ್ ದಾಳಿ ಮಾಡುತ್ತಿದ್ದಾರೆ. ಸರ್ಕಾರಕ್ಕೆ ವಂಚಿಸಿ, ಪರಿಸರಕ್ಕೂ ಹಾನಿ ಮಾಡುವವರ ಹೆಡೆಮುಡಿ ಕಟ್ಟುವ ಕೆಲಸದಲ್ಲಿ ಅವರು ನಿರತರಾಗಿದ್ದಾರೆ. ಹೀಗಾಗಿ ಮರಳುಗಾರಿಕೆ ನಡೆಸುವವರು ಈ ಮಹಿಳಾ ಅಧಿಕಾರಿಗೆ ಹೆದರುತ್ತಿದ್ದು, ಅವರ ಕಣ್ತಪ್ಪಿಸಿ ದಂಧೆ ನಡೆಸಲು ಹರಸಾಹಸ ಮಾಡುತ್ತಿದ್ದಾರೆ. ನವೆಂಬರ್ 12ರಂದು ಅಕ್ರಮ ಮರಳುಗಾರಿಕೆ ನಡೆಸುವವರನ್ನು ಪತ್ತೆ ಮಾಡುವುದಕ್ಕಾಗಿ ಆಶಾ ಅವರು ರಾತ್ರಿ ಕಾರ್ಯಾಚರಣೆಗಿಳಿದಿದ್ದರು. ಆ ದಿನ ರಾತ್ರಿ 8 ಗಂಟೆಗೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಭೂ ವಿಜ್ಞಾನಿ ಹರೀಶ ಕೆ, ಮಂಜುನಾಥ ದೇವಾಡಿಗ, ಕಚೇರಿ ಸಿಬ್ಬಂದಿ ಸಂತೋಷ ನಾಯ್ಕ, ವಾಹನ ಚಾಲಕ ಸಂಜಯ ನಾಯ್ಕ ಅವರ ಜೊತೆ ಅಂಕೋಲಾ-ಕುಮಟಾ ಮಾರ್ಗವಾಗಿ ಸರ್ಕಾರಿ ಜೀಪಿನಲ್ಲಿ ಹೊರಟಿದ್ದರು. ನಾಲ್ಕು ಲಾರಿಗಳಲ್ಲಿ ಅಕ್ರಮವಾಗಿ ಮರಳು ಸಾಗಾಟ ನಡೆಯುತ್ತಿದ್ದ ಮಾಹಿತಿ ಆಧರಿಸಿ ಅವರು ಆ ಲಾರಿಗಳ ಬೆನ್ನತ್ತಿದ್ದರು. ಭೂ ವಿಜ್ಞಾನಿ ಹಾಗೂ ಅಧಿಕಾರಿಗಳ ತಂಡದವರು ಹೊನ್ನಾವರ ತಾಲೂಕಿನ ಚಂದಾವರದ ಬಳಿ ನ 13ರ ನಸುಕಿನ 3 ಗಂಟೆಗೆ ಲಾರಿಗೆ ಅಡ್ಡಲಾಗಿ ಕೈ ಮಾಡುವ ಪ್ರಯತ್ನದಲ್ಲಿದ್ದು, ಆ ವೇಳೆ ಮೂರು ಕಾರಿನಲ್ಲಿ ಬಂದ ಐದು ಜನ ಸರ್ಕಾರಿ ವಾಹನವನ್ನು ಬಂದು ಅಡ್ಡಗಟ್ಟಿದರು. ಆ ಕಾರಿನಲ್ಲಿದ್ದ ಜನ ಗಣಿ ಇಲಾಖೆಯ ಸರ್ಕಾರಿ ಜೀಪನ್ನು ಹಿಂಬಾಲಿಸುವುದು, ಅಧಿಕಾರಿಗಳು ಹೋಗುವ ಮಾರ್ಗದ ಬಗ್ಗೆ ಅಕ್ರಮ ಮರಳು ಸಾಗಾಟಗಾರರಿಗೆ ಮಾಹಿತಿ ಕೊಡುವುದು ಹಾಗೂ ಮರಳು ಸಾಗಾಣಿಕಾ ವಾಹನ ಬೇರೆ ಮಾರ್ಗದ ಮೂಲಕ ಸಂಚರಿಸುವ ಸೂಚನೆ ನೀಡುವ ಕೆಲಸ ಮಾಡುತ್ತಿದ್ದರು. ಸರ್ಕಾರಿ ಜೀಪಿನಲ್ಲಿದ್ದ ಅಧಿಕಾರಿ ಮಹಿಳೆ ಎಂಬುದನ್ನು ಸಹ ಗಮನಿಸದೇ ದಂಧೆಕೋರರು ಅನುಚಿತವಾಗಿ ವರ್ತಿಸಲು ಶುರು ಮಾಡಿದ್ದರು. ಇದರಿಂದ ಸಿಟ್ಟಾದ ಹಿರಿಯ ಭೂ ವಿಜ್ಞಾನಿ ಆಶಾ ಅವರು ತಮ್ಮ ವಾಹನದಿಂದ ಇಳಿದು ವ್ಯಕ್ತಿಯೊಬ್ಬರನ್ನು ತರಾಟೆಗೆ ತೆಗೆದುಕೊಂಡರು. ಆ ವೇಳೆ ಕಾರಿನಲ್ಲಿ ಹಿಂಬಾಲಿಸುತ್ತಿದ್ದವ ಕೈ ಮುಗಿದು ಕ್ಷಮೆ ಕೇಳಿದರಾದರೂ ಹಿಂಬಾಲಿಸುವುದನ್ನು ಮಾತ್ರ ಬಿಡಲಿಲ್ಲ. ಆ ಮೂರು ಕಾರಿನಲ್ಲಿದ್ದವರು ಚಂದಾವರದಿoದ ಸಾಂತಗಲ್, ಬಡಾಳ, ಸಂತೆಗುಳಿ, ಕುಮಟಾ, ಅಂಕೋಲಾದವರೆಗೂ ಸರ್ಕಾರಿ ವಾಹನ ಹಿಂಬಾಲಿಸಿ ಸರ್ಕಾರಿ ಅಧಿಕಾರಿಗಳಿಗೆ ಸಮಸ್ಯೆ ಮಾಡಿದರು. ಅಕ್ರಮ ಮರಳು ಸಾಗಾಟಗಾರರು ಅಲ್ಲಿಂದ ತಪ್ಪಿಸಿಕೊಳ್ಳುವ ಹಾಗೇ ಸಹಾಯ ಮಾಡಿದರು. ಬೆಳಗ್ಗೆ 8 ಗಂಟೆಯವರೆಗೂ ಮಹಿಳಾ ಅಧಿಕಾರಿ ಹಾಗೂ ಅವರ ವಾಹನವನ್ನು ದಂಧೆಕೋರರು ಸುತ್ತುವರೆದು ಹಿಂಬಾಲಿಸುತ್ತಲೇ ಇದ್ದರು. ಸರ್ಕಾರಿ ವಾಹನ ಅಂಕೋಲಾಗೆ ಬರುವ ವೇಳೆಗೆ ಅವರೆಲ್ಲರೂ ನಾಪತ್ತೆಯಾದರು. ಈ ಎಲ್ಲಾ ವಿದ್ಯಮಾನಗಳ ಬಗ್ಗೆ ಹಿರಿಯ ಭೂ ವಿಜ್ಞಾನಿ ಆಶಾ ಅವರು ವಿಡಿಯೋ ಮಾಡಿಕೊಂಡಿದ್ದು, ಅದೇ ಆಧಾರದ ಮೇಲೆ ಪೊಲೀಸರ ಮೊರೆ ಹೋದರು. ಸರ್ಕಾರಿ ಕರ್ತವ್ಯ ನಿರ್ವಹಣೆಯಲ್ಲಿ ತಮಗಾದ ಸಮಸ್ಯೆ ಬಗ್ಗೆ ಪೊಲೀಸರಲ್ಲಿ ವಿವರಿಸಿದರು. ಸಮಸ್ಯೆ ಮಾಡಿದ ಐವರ ಕಾರಿನ ವಿವರ ಹಾಗೂ ಪರಿಚಯವಿದ್ದ ಅಕ್ರಮ ದಂಧೆಕೋರ ವಿನಾಯಕ ಮಾಣಿ ಎಂಬಾತರ ಹೆಸರನ್ನು ನಮೂದಿಸಿ ದೂರು ನೀಡಿದರು. ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಶುರು ಮಾಡಿದ್ದಾರೆ. ತುರ್ತು ಸನ್ನಿವೇಶದಲ್ಲಿ ರಕ್ಷಣೆಗಾಗಿ ಪೊಲೀಸರ ಸಹಾಯಪಡೆಯುವ ಅವಕಾಶವಿದ್ದರೂ ಗಣಿ ಇಲಾಖೆಯವರು ಆ ಕೆಲಸ ಮಾಡಿಲ್ಲ. 112ಗೆ ಫೋನ್ ಮಾಡಿದ ಕ್ಷಣಮಾತ್ರದಲ್ಲಿ ಪೊಲೀಸರು ಸ್ಥಳಕ್ಕೆ ಬರುವ ವ್ಯವಸ್ಥೆ ಇದ್ದರೂ ಅದನ್ನು ಬಳಸಿಕೊಂಡಿಲ್ಲ. `ತುರ್ತು ಸನ್ನಿವೇಶಗಳನ್ನು ಸಮರ್ಥವಾಗಿ ಎದುರಿಸಲು 112ಗೆ ಫೋನ್ ಮಾಡಿ’   - [2025 ನವೆಂಬರ್ 14ರ ದಿನ ಭವಿಷ್ಯ](https://mobiletime.in/2025/11/prediction-for-november-14-2025/): ಮೇಷ ರಾಶಿ: ಹೊಸ ಕೆಲಸಗಳ ಶುರು ಮಾಡಲು ಸೂಕ್ತ ದಿನ. ಕೆಲಸದ ಒತ್ತಡ ಕಡಿಮೆಯಾಗಲಿದ್ದು, ಗಮನವಿಟ್ಟು ಯೋಜನೆ ರೂಪಿಸಿ. ಕುಟುಂಬದಲ್ಲಿ ಸ್ನೇಹಮಯ ವಾತಾವರಣ ಕಾಣಲಿದೆ. ವೃಷಭ ರಾಶಿ: ಮನಸ್ಸು ಶಾಂತವಾಗಿರಲು ಯೋಗಾಭ್ಯಾಸ ಮಾಡಿ. ವ್ಯವಹಾರದಲ್ಲಿ ಏರಿಳಿತ ಸಹಜವಾಗಿರಲಿದೆ. ಹಣಕಾಸು ವಿಷಯದಲ್ಲಿ ನಿಗಾವಹಿಸುವುದು ಉತ್ತಮ. ಮಿಥುನ ರಾಶಿ: ನಿರೀಕ್ಷಿತ ಫಲ ಸಿಗಲಿದೆ. ಸಮಯ ಹಾಳು ಮಾಡಬೇಡಿ. ಹೊಸ ಯೋಜನೆಗಳು ಯಶಸ್ಸು ಕೊಡಲಿದೆ. ಕರ್ಕ ರಾಶಿ: ಆರೋಗ್ಯ ಹಾಗೂ ಮನೋಬಲ ಹೆಚ್ಚಿಸಲು ಗಮನಹರಿಸಿ. ಉದ್ಯಮಗಳಲ್ಲಿ ಬೆಳವಣಿಗೆ ಆತ್ಮವೃದ್ದಿ ಅಗತ್ಯ. ಧೈರ್ಯದಿಂದ ಸಮಸ್ಯೆಗಳನ್ನು ಎದುರಿಸಿ. ಸಿಂಹ ರಾಶಿ: ನಿತ್ಯದ ಕಾರ್ಯಗಳಲ್ಲಿ ಯಶಸ್ಸು ಸಿಗಲಿದೆ. ವ್ಯವಹಾರದಲ್ಲಿ ನೂತನ ಅವಕಾಶಗಳು ಬರಲಿದೆ. ಶರೀರದಲ್ಲಿ ಏರುಪೇರಾಗುವ ಸಾಧ್ಯತೆಯಿದ್ದು, ಜಾಗೃತಿ ಇರಲಿ. ಕನ್ಯಾ ರಾಶಿ: ಕೆಲಸದಲ್ಲಿ ಹೆಚ್ಚು ಶ್ರಮ ಅಗತ್ಯವಿದೆ. ಹೊಸ ಗುರಿಗಳ ಕಡೆ ಗಮನ ಕೊಡಿ. ಜೀವನದಲ್ಲಿ ಶ್ರದ್ಧೆ ಅನಿವಾರ್ಯ. ಶುಭ ಕಾರ್ಯಗಳು ನಡೆಯಲಿದೆ. ತುಲಾ ರಾಶಿ: ನಿರಂತರ ಪ್ರಯತ್ನ ಫಲಕಾರಿಯಾಗಲಿದೆ. ಹಣಕಾಸು ವೆಚ್ಚ ಹೆಚ್ಚಲಿದೆ. ಮನಸ್ಸಿಗೆ ನೆಮ್ಮದಿ ಸಿಗುವ ಕೆಲಸ ಮಾಡಿ. ಕುಟುಂಬದ ಜೊತೆಗೆ ಸಮಯ ಮೀಸಲಿಡಿ. ವೃಶ್ಚಿಕ ರಾಶಿ: ನಿರ್ಧಾರಗಳಲ್ಲಿ ಸ್ಪಷ್ಟತೆ ಮುಖ್ಯ. ಹಣಕಾಸು ವಿಚಾರದ ಬಗ್ಗೆ ಚಿಂತಿಸಿ. ಉದ್ಯೋಗದಲ್ಲಿ ಮುನ್ನಡೆ ಸಾಧಿಸಲಿದೆ. ಆಧ್ಯಾತ್ಮಿಕ ಚಿಂತನಕ್ಕೆ ಸೂಕ್ತ ದಿನ. ಧನು ರಾಶಿ: ಕೆಲಸದ ವಿಷಯದಲ್ಲಿ ಚುರುಕುತನ ಬೇಕು. ಸಾಲ ಮಾಡಲು ಹೋಗಬೇಡಿ. ಸ್ನೇಹಿತರಿಂದ ದೊರೆತ ನೆರವು ಸ್ವೀಕರಿಸಿ. ಹೊಸ ವಿಷಯವನ್ನು ಒಪ್ಪಿಕೊಳ್ಳಿ. ಮಕರ ರಾಶಿ: ವೃತ್ತಿ ಜೀವನದಲ್ಲಿ ಶಾಂತಿ ಮುಖ್ಯ. ಯೋಜನೆಗಳನ್ನು ಕಾರ್ಯರೂಪಕ್ಕೆ ತನ್ನಿ. ಹಣಕಾಸು ವಿಚಾರದಲ್ಲಿ ಎಚ್ಚರಿಕೆ ಅಗತ್ಯ. ಕೆಲಸದ ವಿಷಯದಲ್ಲಿ ಒಗ್ಗಟ್ಟು ಪ್ರದರ್ಶಿಸಿದರೆ ಜಯ ಸಿಗಲಿದೆ. ಕುಂಭ ರಾಶಿ: ಹೊಸ ಸೃಜನಾತ್ಮಕ ಕಾರ್ಯಗಳು ಯಶಸ್ವಿಯಾಗಲಿದೆ. ಉದ್ಯೋಗದಲ್ಲಿ ಪ್ರಸಿದ್ಧಿ ಹೆಚ್ಚಲಿದೆ. ಆಯಾಸದ ಕೆಲಸಗಳನ್ನು ಮಾಡಬೇಡಿ. ಆರೋಗ್ಯದ ವಿಷಯವಾಗಿ ಕಾಳಜಿವಹಿಸಿ. ಮೀನ ರಾಶಿ: ಔಷಧ ಸೇವನೆಯಿಂದ ಅಡ್ಡಪರಿಣಾಮ ಎದುರಾಗದಂತೆ ನೋಡಿಕೊಳ್ಳಿ. ನಿಮ್ಮ ಮನೋಬಲ ಹೆಚ್ಚಳಕ್ಕೆ ಯೋಗ ಸಹಾಯಕಾರಿ. ಅವಕಾಶಗಳನ್ನು ಸಮರ್ಥವಾಗಿ ಬಳಸಿಕೊಳ್ಳಿ. - [ಕಾರವಾರದಲ್ಲಿ ಅಪಘಾತ: ಯಲ್ಲಾಪುರದ ಯುವಕ ಸಾವು!](https://mobiletime.in/2025/11/accident-in-karwar-a-young-man-from-yellapur-dies/): ಕಾರವಾರದ ಆರ್ ಟಿ ಓ ಕಚೇರಿ ಬಳಿ ಗುರುವಾರ ರಾತ್ರಿ ನಡೆದ ಅಪಘಾತದಲ್ಲಿ ಯಲ್ಲಾಪುರದ ವ್ಯಕ್ತಿಯೊಬ್ಬರು ಸಾವನಪ್ಪಿದ್ದಾರೆ. ಸ್ಕೂಟಿ ಹಾಗೂ ಬೈಕ್ ನಡುವೆ ಈ ಅಪಘಾತ ನಡೆದಿದೆ. ಮಾಹಿತಿಗಳ ಪ್ರಕಾರ, ಯಲ್ಲಾಪುರದ ಇಡಗುಂದಿಯ ಚಿರಂಜೀವ್ ಬೃಹ್ಮಾನಂದ ಕುಂಜಿ ಹಾಗೂ ಅವರ ತಾಯಿ ಮಾಜಾಳಿಯ ಬಾಡಿಗೆ ಮನೆಯಲ್ಲಿ ವಾಸವಿದ್ದರು. ಅಲ್ಲಿಂದ ಅವರು ಕಾರವಾರಕ್ಕೆ ಬರುವಾಗ ಅವಘಡ ನಡೆದಿದೆ. ಚಿರಂಜೀವ್ ಬೃಹ್ಮಾನಂದ ಕುಂಜಿ (15) ಅವರು ತಮ್ಮ ತಾಯಿ ಜೊತೆ ಸ್ಕೂಟಿಯಲ್ಲಿ ಸಂಚರಿಸುತ್ತಿದ್ದರು. ಮಾಜಾಳಿಯಿಂದ ಕಾರವಾರದ ಕಡೆ ಬರುವಾಗ ಆರ್‌ಟಿಓ ಕಚೇರಿ ಬಳಿ ಅವರ ಸ್ಕೂಟಿಗೆ ಬೈಕ್ ಡಿಕ್ಕಿಯಾಗಿತು. ಮೆಡಿಕಲ್ ಕಾಲೇಜು ವಿದ್ಯಾರ್ಥಿಯೊಬ್ಬರ ಬುಲೆಟ್ ಬೈಕ್ ಗುದ್ದಿದ ರಭಸಕ್ಕೆ ಚಿರಂಜೀವ್ ಅವರು ಸ್ಥಳದಲ್ಲಿಯೇ ಕೊನೆಯುಸಿರೆಳೆದರು. ಈ ಅಪಘಾತ ನೋಡಿದ ಜನ ಪೊಲೀಸರಿಗೆ ಮಾಹಿತಿ ನೀಡಿದರು. ಅಪಘಾತದಲ್ಲಿ ಚಿರಂಜೀವ್ ಅವರ ತಾಯಿ ಗಾಯಗೊಂಡಿದ್ದು, ಆಂಬುಲೆನ್ಸ ಮೂಲಕ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಶವವನ್ನು ಶವಾಗಾರಕ್ಕೆ ಕಳುಹಿಸಲಾಯಿತು. ಮೆಡಿಕಲ್ ಕಾಲೇಜು ವಿದ್ಯಾರ್ಥಿಗೂ ಅಪಘಾತದಲ್ಲಿ ಪೆಟ್ಟಾಗಿದೆ. ಅವರನ್ನು ಗೋವಾದ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ಕೊಡಲಾಗುತ್ತಿದೆ. `ಸುರಕ್ಷಿತವಾಗಿ ವಾಹನ ಓಡಿಸಿ. ಸಂಚಾರಿ ನಿಯಮ ಪಾಲಿಸಿ’ - [ದೊಡ್ಡಣ್ಣ: ಶಿರಸಿಗೆ ಬರ್ತಾರೆ.. ಯಕ್ಷಗಾನ ನೋಡ್ತಾರೆ.. ಸೆಲ್ಪಿಗೆ ಸಿಕ್ತಾರೆ!](https://mobiletime.in/2025/11/they-come-to-sirsi-they-watch-yakshagana-they-get-to-take-selfies/): ಶಿರಸಿಯ ಬೆಟ್ಟಕೊಪ್ಪದಲ್ಲಿ ನಡೆಯುವ `ನಮ್ಮನೆ ಹಬ್ಬ’ಕ್ಕೆ ಈ ಬಾರಿ ಚಿತ್ರನಟ ದೊಡ್ಡಣ್ಣ ಬರಲಿದ್ದಾರೆ. ಡಿಸೆಂಬರ್ 6ರಂದು ಅವರು ಅಲ್ಲಿ ಯಕ್ಷಗಾನ ನೋಡಲಿದ್ದಾರೆ. ಅಭಿಮಾನಿಗಳ ಸೆಲ್ಪಿಗೂ ಸಿಗಲಿದ್ದಾರೆ! ರಾಜ್ಯದಲ್ಲೇ ಗಮನ ಸೆಳೆದ ಅತಿ ವಿಶಿಷ್ಟ ಕಲ್ಪನೆಯ `ನಮ್ಮನೆ ಹಬ್ಬ’ ಈ ಬಾರಿ ಡಿಸೆಂಬರ್ 6ರ ಶನಿವಾರ ಸಂಜೆ 5ಗಂಟೆಗೆ ನಿಗದಿಯಾಗಿದೆ. ವಿಶ್ವಶಾಂತಿ ಸೇವಾ ಟ್ರಸ್ಟ್ ಆಯೋಜಿತ ಹಬ್ಬದಲ್ಲಿ ಪ್ರಸಿದ್ದ ಕಲಾವಿದರಿಂದ ಭಜನಾಮೃತ, ಯಕ್ಷ ರೂಪಕ, ಪ್ರಶಸ್ತಿ ಪ್ರದಾನ ನಡೆಯಲಿದೆ. ಈ ಕಾರ್ಯಕ್ರಮಕ್ಕೆ ಚಾಲನೆ ನೀಡಲು ಪ್ರಸಿದ್ಧ ಚಿತ್ರ ನಟ ದೊಡ್ಡಣ್ಣ ಅವರು ಆಗಮಿಸಲಿದ್ದಾರೆ. ಆ ದಿನ ಸಂಜೆ 5ಕ್ಕೆ ಶ್ರೀಧರರ ಭಜನಾಮೃತ ಗಾಯನ ನಡೆಯಲಿದ್ದು ಪ್ರಸಿದ್ಧ ಗಾಯಕ ವಿಶ್ವೇಶ್ವರ ಖರ್ವಾ ಹಾಡಲಿದ್ದಾರೆ. ಗುರುರಾಜ ಆಡುಕಳ ತಬಲಾ ಹಾಗೂ ಅಜಯ್ ವರ್ಗಾಸರ ಹಾರ್ಮೋನಿಯಂ ಗಾಯನಕ್ಕೆ ಸಹಕಾರ ನೀಡಲಿದೆ. ನೂತನ ರೂಪಕ ಲೋಕಾರ್ಪಣೆ: ಸಂಜೆ 6.05ಕ್ಕೆ ಗೋವಿನ ಮಹತ್ವ ಸಾರುವ ವಿಶಿಷ್ಟ ಕಥಾಭಾಗ ಒಳಗೊಂಡ ವಿಶ್ವ ಶಾಂತಿ ಸರಣಿಯ 11ನೇ ನೂತನ ಯಕ್ಷ ನೃತ್ಯ ರೂಪಕ `ವಂದೇ ಗೋವಿಂದಮ್’ ಪ್ರಥಮ ಪ್ರದರ್ಶನದ ಮೂಲಕ ಲೋಕಾರ್ಪಣೆ ಆಗಲಿದೆ. ಪಾರ್ತಿಸುಬ್ಬ ಪ್ರಶಸ್ತಿ ಪುರಸ್ಕೃತ ಕಬ್ಬಿನಾಲೆ ವಸಂತ ಭಾರಧ್ವಾಜ ಅವರು ರಚಿಸಿದ ಈ ರೂಪಕವನ್ನು ಹಲವು ದಾಖಲೆಗೈದ ಯಕ್ಷಗಾನ ಯುವ ಕಲಾವಿದೆ ತುಳಸಿ ಹೆಗಡೆ ಅವರು ಪ್ರಸ್ತುತಗೊಳಿಸಲಿದ್ದಾರೆ. ಚಿಂತಕ ರಮೇಶ ಹೆಗಡೆ ಹಳೆಕಾನಗೋಡರ ಮೂಲ ಕಲ್ಪನೆಯ ರೂಪಕಕ್ಕೆ ನೃತ್ಯ ನಿರ್ದೇಶನವನ್ನು ಹಿರಿಯ ಕಲಾವಿದ ವಿನಾಯಕ ಹೆಗಡೆ ಕಲಗದ್ದೆ ನೀಡಿದ್ದಾರೆ. ಗದ್ಯ ಸಾಹಿತ್ಯವನ್ನು ವಿದ್ಯಾವಾಚಸ್ಪತಿ ಉಮಾಕಾಂತ ಭಟ್ಟ ಕೆರೇಕೈ ಒದಗಿಸಿದ್ದಾರೆ. ಹಿನ್ನೆಲೆ ಧ್ವನಿಯನ್ನು ಶ್ರೀಪಾದ ಭಟ್ ನೀಡಿದ್ದಾರೆ. ತಾಳಾಭ್ಯಾಸ ನೆರವು ಜಿ ಎಸ್ ಭಟ್, ಧ್ವನಿ ಗ್ರಹಣವನ್ನು ಉದಯ ಪೂಜಾರಿ ನೀಡಿದ್ದಾರೆ. ರಂಗದಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಲೃತ ಕೊಳಗಿ ಕೇಶವ ಹೆಗಡೆ ಭಾಗವತರಾಗಿ ಧ್ವನಿಯಾಗಲಿದ್ದಾರೆ. ಮದ್ದಲೆಯಲ್ಲಿ ಶಂಕರ ಭಾಗವತ ಯಲ್ಲಾಪುರ, ಚಂಡೆಯಲ್ಲಿ ವಿಘ್ನೇಶ್ವರ ಗೌಡ ಕೆಸರಕೊಪ್ಪ, ಪ್ರಸಾಧನದಲ್ಲಿ ವೆಂಕಟೇಶ ಬೊಗ್ರಿಮಕ್ಕಿ ಸಹಕಾರ ನೀಡಲಿದ್ದಾರೆ. ಪ್ರಶಸ್ತಿ ಪ್ರದಾನ: ಸಂಜೆ 7.25 ನಮ್ಮನೆ ಹಬ್ಬದ ಉದ್ಘಾಟನೆ, ಪ್ರಶಸ್ತಿ ಪ್ರದಾನ, ದಿನದರ್ಶಿಕೆ ಬಿಡುಗಡೆ ನಡೆಯಲಿದೆ. ರಂಗಭೂಮಿಯ ಹಿರಿಯ ಕಲಾವಿದೆ ಬಿ ಜಯಶ್ರೀ, ವೈದ್ಯಕೀಯ ರಾಸಾಯನಿಕ ಕ್ಷೇತ್ರದಲ್ಲಿ ಅನುಪಮ ಕೊಡುಗೆ ನೀಡಿದ ರಾಮನಂದನ ಹೆಗಡೆ ಅವರಿಗೆ `ನಮ್ಮನೆ ಪ್ರಶಸ್ತಿ’ ಪ್ರದಾನ ಮಾಡಲಾಗುತ್ತಿದೆ. ನಮ್ಮನೆ ಕಿಶೋರ ಪುರಸ್ಕಾರಕ್ಕೆ ತೇಜಸ್ವಿ ಗಾಂವಕರ ಅವರು ಭಾಜನರಾಗಲಿದ್ದಾರೆ. ಈ ಎಲ್ಲಾ ಕಾರ್ಯಕ್ರಮಗಳಲ್ಲಿ ಪ್ರಜಾವಾಣಿ ಕಾರ್ಯನಿರ್ವಾಹಕ ಸಂಪಾದಕ ರವೀಂದ್ರ ಭಟ್ಟ ಅವರು ಭಾಗಿಯಾಗಲಿದ್ದಾರೆ ಎಂದು ಟ್ರಸ್ಟಿನ ಕಾರ್ಯದರ್ಶಿ ಗಾಯತ್ರೀ ರಾಘವೇಂದ್ರ ಅವರು ತಿಳಿಸಿದರು. - [KSRTC: ಸಣ್ಣ ಕೆಲಸಕ್ಕೂ ಸಚಿವರೇ ಬೇಕಾಯ್ತು!](https://mobiletime.in/2025/11/ksrtc-a-minister-was-needed-even-for-a-small-task/): ಹೊನ್ನಾವರದ ಗುಂಡುಬಾಳದಲ್ಲಿ ಸರ್ಕಾರಿ ಬಸ್ಸು ಮೂರು ದಿನದಿಂದ ರಸ್ತೆ ನಡುವೆ ಕೆಟ್ಟು ನಿಂತಿದ್ದು, ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ಅವರು ಕುಮಟಾ ಡಿಪೋ ಮ್ಯಾನೇಜರ್’ಗೆ ಫೋನ್ ಮಾಡಿದ್ದಾರೆ. ಅದಾದ ನಂತರ ಬಸ್ಸು ಅಲ್ಲಿಂದ ಡಿಪೋಗೆ ಚಲಿಸಿದೆ! ಕುಮಟಾ ಬಸ್ ಡಿಪೋದ ಬಸ್ಸು ಹೊನ್ನಾವರ ಭಾಗದಲ್ಲಿ ಸಂಚರಿಸುತ್ತದೆ. ಹೊನ್ನಾವರದಲ್ಲಿ ವಸತಿಹೂಡಿ ಮರುದಿನ ಗುಂಡುಬಾಳ-ಹಿರೇಬೈಲ್ ಮಾರ್ಗದ ಮೂಲಕ ಕುಮಟಾಗೆ ಬರುತ್ತದೆ. ಹೀಗೆ ಶನಿವಾರ ಹೊನ್ನಾವರದಿಂದ ಮರಳಬೇಕಿದ್ದ ಬಸ್ಸು ರಸ್ತೆ ನಡುವೆ ಹಾಳಾಗಿದ್ದು, ಅದರ ಬಗ್ಗೆ ಯಾವ ಅಧಿಕಾರಿಯೂ ಕಾಳಜಿವಹಿಸಲಿಲ್ಲ. ಹೀಗಾಗಿ ಆ ಬಸ್ಸು ಮೂರು ದಿನ ಕಳೆದರೂ ಡಿಪೋ ಕಡೆ ಹೋಗಲಿಲ್ಲ. ಸಾರ್ವಜನಿಕರು ಓಡಾಡುವ ರಸ್ತೆ ಮೇಲೆ ಬಸ್ಸು ರಸ್ತೆ ಮೇಲೆ ನಿಂತ ಪರಿಣಾಮ ಇತರೆ ವಾಹನಗಳ ಓಡಾಟ ಸಾಧ್ಯವಾಗುತ್ತಿರಲಿಲ್ಲ. ಇದರಿಂದ ಜನ ಸಮಸ್ಯೆ ಅನುಭವಿಸಿದರು. ಕಾಲೇಜು ವಿದ್ಯಾರ್ಥಿಗಳ ಬೈಕ್ ಓಡಾಟಕ್ಕೂ ಬಸ್ಸು ಅಡ್ಡಿಯಾಯಿತು. ರಿಕ್ಷಾ-ಕಾರು ಸಂಚಾರ ಅಸ್ತವ್ಯಸ್ಥವಾಯಿತು. ಮೂರು ದಿನ ಕಳೆದರೂ ಬಸ್ಸು ಅಲ್ಲಿಯೇ ನಿಂತ ಬಗ್ಗೆ ಸ್ಥಳೀಯರು ಕುಮಟಾ ಡಿಪೋ ಮ್ಯಾನೇಜರ್ ವಿನಾಯಕ ಅವರಿಗೆ ಫೋನ್ ಮಾಡಿದರು. ಮೊದಲು ಕರೆ ಸ್ವೀಕರಿಸಿದ ಡಿಪೋ ಮ್ಯಾನೇಜರ್ ನಂತರ `ಮಿಟಿಂಗ್‌ಲಿದ್ದೇನೆ’ ಎಂದು ಹೇಳಿದರು. ಡಿಪೋ ಮ್ಯಾನೇಜರ್ ಉತ್ತರಕ್ಕೆ ತೃಪ್ತರಾಗದ ಜನ ನೇರವಾಗಿ ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ಅವರಿಗೆ ಫೋನ್ ಮಾಡಿದರು. `ಕೂಡಲೇ ಕ್ರಮ ಜರುಗಿಸುವೆ’ ಎಂದು ಸಚಿವರು ಉತ್ತರಿಸಿದರು. `ಕ್ರಮ ಜರುಗಿಸುವ ಮೊದಲು ಬಸ್ಸನ್ನು ಅಲ್ಲಿಂದ ಕದಲಿಸಿ’ ಎಂದು ಫೋನ್ ಮಾಡಿದವರು ಮನವಿ ಮಾಡಿದರು. ಅದಾದ ನಂತರ ಡಿಪೋ ಮ್ಯಾನೇಜರಿಂದಲೇ ಫೋನ್ ಬಂದಿದ್ದು, `ಕ್ರೇನ್ ಇಲ್ಲದ ಕಾರಣ ಬಸ್ಸು ಅಲ್ಲಿಯೇ ಇದೆ’ ಎಂಬ ಉತ್ತರ ಬಂದಿತು. ಸಚಿವರಿಂದ ಫೋನ್ ಬಂದ ಕೆಲ ಗಂಟೆಗಳಲ್ಲಿ ಕ್ರೇನ್ ಬಂದು ಆ ಬಸ್ಸನ್ನು ಕುಮಟಾ ಡಿಪೋದ ಒಳಗಿರುವ ಗ್ಯಾರೇಜಿಗೆ ಕರೆದೊಯ್ಯತು. `ನಿನ್ನೆ ಸಂಜೆಯೇ ಬಸ್ಸನ್ನು ಡಿಪೋಗೆ ತರಲಾಗಿದೆ. ಬಸ್ಸಿನ ಸಮಸ್ಯೆ ಬಗೆಹರಿದಿದೆ’ ಎಂದು ಕುಮಟಾ ಡಿಪೋ ಮ್ಯಾನೇಜರ್ ವಿನಾಯಕ ಅವರು ಮೊಬೈಲ್ ಮಿಡಿಯಾ ನೆಟ್‌ವರ್ಕಗೆ ಪ್ರತಿಕ್ರಿಯಿಸಿದರು. - [ಶರಾವತಿ ಉಳಿವಿಗಾಗಿ ರಕ್ತ ಪತ್ರ!](https://mobiletime.in/2025/11/blood-donation-for-the-survival-of-sharavati/): ಉತ್ತರ ಕನ್ನಡ ಜಿಲ್ಲೆಯಲ್ಲಿ ಅಗತ್ಯವಿಲ್ಲದ ಯೋಜನೆಗಳನ್ನು ಅನುಷ್ಠಾನಕ್ಕೆ ಕಿಡಿಕಾರಿರುವ ಸಮಾನ ಮನಸ್ಕರು `ಜನರ ಬೇಡಿಕೆಯಂತೆ ಸುಸಜ್ಜಿತ ಆಸ್ಪತ್ರೆ ನಿರ್ಮಿಸಿ’ ಎಂದು ರಕ್ತದ ಮೂಲಕ ಮುಖ್ಯಮಂತ್ರಿಗೆ ಪತ್ರ ಬರೆದಿದ್ದಾರೆ. `ಮುಂದಿನ ಬಜೆಟ್‌ನಲ್ಲಿ ಸುಸಜ್ಜಿತ ಆಸ್ಪತ್ರೆ ಘೋಷಣೆ ನಡೆಯಬೇಕು. ಕೂಡಲೇ ಶರಾವತಿ ಪಂಪ್ ಸ್ಟೋರೇಜ್ ಯೋಜನೆ ಕೈಬಿಡಬೇಕು’ ಎಂದು ಹೊನ್ನಾವರದ ಯುವಕರು ಪತ್ರ ಚಳುವಳಿ ಮಾಡಿದ್ದಾರೆ. ಬೇರೆ ಬೇರೆ ತಾಲೂಕಿನವರು ಸಹ ಈ ಅಭಿಯಾನಕ್ಕೆ ಕೈ ಜೋಡಿಸಿದ್ದಾರೆ. ಹೊನ್ನಾವರದಲ್ಲಿ ನಿರ್ಮಿಸಲು ಉದ್ದೇಶಿಸಲಾದ ಶರಾವತಿ ಪಂಪ್ ಸ್ಟೋರೇಜ್ ಅನಾಹುತಗಳ ಬಗ್ಗೆ ಅವರು ಮುಖ್ಯಮಂತ್ರಿಗಳಿಗೆ ವಿವರಿಸಿದ್ದಾರೆ. ತಮ್ಮ ಮನವಿಗೆ ಸರ್ಕಾರ ಸ್ಪಂದಿಸದೇ ಇದ್ದರೆ ದಯಾ ಮರಣ ಕೋರಿ ಪತ್ರ ಬರೆಯುವುದಾಗಿಯೂ ಎಚ್ಚರಿಸಿದ್ದಾರೆ. 7 ಲಕ್ಷ ಪತ್ರಗಳು ಅಂಚೆ ಇಲಾಖೆ ಮೂಲಕ ಮುಖ್ಯಮಂತ್ರಿ ಕಚೇರಿಗೆ ತೆರಳಲು ಸಿದ್ದವಾಗಿದೆ. ರಾಜಕಾರಣಿಗಳು ನೀಡಿದ ಭರವಸೆಗಳು ಈಡೇರಿಲ್ಲ ಎಂಬ ಅಂಶವನ್ನು ಈ ಪತ್ರಗಳ ಮೂಲಕ ವಿವರಿಸಲಾಗಿದೆ. `ಶರಾವತಿ ಪಂಪ್ ಸ್ಟೋರೇಜ್ ಯೋಜನೆಗೆ ಕೃಷಿ ಭೂಮಿ ಹೋಗಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ. ಆದರೆ, ಈಗಾಗಲೇ ರೈತರಿಗೆ ನೋಟಿಸ್ ನೀಡಲಾಗಿದೆ’ ಎಂದು ಪತ್ರದಲ್ಲಿ ಬರೆಯಲಾಗಿದೆ. ಸ್ಪೋಟಕ ಬಳಕೆ ವಿಷಯದಲ್ಲಿಯೂ ತಪ್ಪು ಮಾಹಿತಿ ನೀಡಿದ ಬಗ್ಗೆ ದೂರಲಾಗಿದೆ. - [ಆಧಾರ್ ಕಾರ್ಡ ಮಾಡಿಸಲು ಅಲೆದಾಟ: ದೂರು](https://mobiletime.in/2025/11/complaint-about-wandering-around-to-get-an-aadhaar-card/): ಆಧಾರ್ ಕಾರ್ಡ ಮಾಡಿಸಿಕೊಳ್ಳುವುದಕ್ಕಾಗಿ ಅಗತ್ಯ ದಾಖಲೆಗಾಗಿ ಅರ್ಜಿ ಸಲ್ಲಿಸಿದರೂ ಅದನ್ನು ಪೂರೈಸದ ಕಾರಣ ಕುಮಟಾದ ಹೊಲನಗದ್ದೆ ಗ್ರಾ ಪಂ ಅಭಿವೃದ್ಧಿ ಅಧಿಕಾರಿ ಪ್ರಜ್ಞಾ ನಾಯ್ಕ ಅವರ ವಿರುದ್ಧ ಅಸಮಧಾನವ್ಯಕ್ತವಾಗಿದೆ. ಪಿಡಿಓ ವಿರುದ್ಧ ಜಿಲ್ಲಾ ಪಂಚಾಯತಗೆ ದೂರು ನೀಡಿರುವುದಾಗಿ ಜನಸಾಮಾನ್ಯರ ಸಮಾಜ ಕಲ್ಯಾಣ ಕೇಂದ್ರವರು ಹೇಳಿದ್ದಾರೆ. ಕುಮಟಾದ ಸೈದಾನಿ ಮಾಲನ್ ಬಿ ಅವರು ತಮ್ಮ ಪತಿ ಜೊತೆ ಗೋವಾದಲ್ಲಿ ವಾಸವಾಗಿದ್ದರು. ಪತಿ ನಿಧನದ ನಂತರ ಅವರು ತವರು ಮನೆಗೆ ಮರಳಿದ್ದು, ಅವರ ಬಳಿ ಯಾವುದೇ ಸರ್ಕಾರಿ ದಾಖಲೆಗಳಿರಲಿಲ್ಲ. ಹೀಗಾಗಿ ಅವರಿಗೆ ಆಧಾರ್ ಕಾರ್ಡ ಮಾಡಿಸಿಕೊಳ್ಳಲು ವಾಸವ್ಯ ದೃಢೀಕರಣ ನೀಡುವಂತೆ ಅವರು ಹೊಲನಗದ್ದೆ ಗ್ರಾಮ ಪಂಚಾಯತಗೆ ಅರ್ಜಿ ಸಲ್ಲಿಸಿದ್ದರು. ಆದರೆ, ಗ್ರಾ ಪಂ ಅಧಿಕಾರಿಗಳು ಕಂದಾಯ ಇಲಾಖೆಯವರನ್ನು ಭೇಟಿ ಮಾಡುವಂತೆ ಹಿಂಬರಹ ನೀಡಿದ ಬಗ್ಗೆ ಅವರು ಆಕ್ಷೇಪಿಸಿದ್ದಾರೆ. `ಶಾಲಾ ದಾಖಲಾತಿ, ಸಂತ್ರಸ್ತೆಯ ತಾಯಿ ಮರಣ ಪ್ರಮಾಣ ಪತ್ರ, ಪತಿಯ ಮರಣ ಪತ್ರ, ಮನೆ ಕರ ರಸೀದಿ ನೀಡಿದರೂ ಪಿಡಿಓ ಸರಿಯಾಗಿ ಸ್ಪಂದಿಸಿಲ್ಲ. ಕಂದಾಯ ಇಲಾಖೆ ಸಂಪರ್ಕಿಸುವAತೆ ಹಿಂಬರಹ ನೀಡಿ ಸತಾಯಿಸಲಾಗುತ್ತಿದೆ. ಈ ಹಿಂದೆಯೂ ಇಂಥಹುದೇ ಪ್ರಕರಣ ನಡೆದಿದ್ದು, ಇದು ಸರ್ಕಾರದ ನಿಯಮಾವಳಿಗಳಿಗೆ ವಿರುದ್ಧ’ ಎಂದು ಜನಸಾಮಾನ್ಯರ ಸಮಾಜ ಕಲ್ಯಾಣ ಕೇಂದ್ರ ಅಧ್ಯಕ್ಷ ಆಗ್ನೆಲ್ ರೋಡಿಗ್ರಸ್ ಹೇಳಿದ್ದಾರೆ. - [ಕಳ್ಳ.. ಮಳ್ಳ.. ಸುಳ್ಳ: ಕೋಟಿ ರೂ ಕೊಳ್ಳೆಹೊಡೆದವರು ಕಂಬಿ ಎಣಿಸಿದರು!](https://mobiletime.in/2025/11/thief-liar-liar-those-who-looted-crores-of-rupees-counted-the-coins/): ಅರ್ದ ಬೆಲೆಗೆ ಗೃಹ ಉಪಯೋಗಿ ವಸ್ತು ನೀಡುವುದಾಗಿ ಜನರಿಂದ ಹಣಪಡೆದು ಪರಾರಿಯಾಗಿದ್ದ ಮೂವರನ್ನು ಭಟ್ಕಳ ಪೊಲೀಸರು ಬಂಧಿಸಿದ್ದಾರೆ. `ಗ್ಲೋಬಲ್ ಎಂಟರ್‌ಪ್ರೈಸಸ್’ ಹೆಸರಿನಲ್ಲಿ ಕೋಟ್ಯಂತರ ರೂ ಮೋಸ ಮಾಡಿದವರು ಜೈಲಿನ ಕಂಬಿ ಎಣಿಸುತ್ತಿದ್ದಾರೆ. ಭಟ್ಕಳದಲ್ಲಿ ಗ್ಲೋಬಲ್ ಎಂಟರ್‌ಪ್ರೈಸಸ್ ಎಂಬ ಮಳಿಗೆಯೊಂದು ಈಚೆಗೆ ಶುರುವಾಗಿತ್ತು. ಶೇ 40ರಷ್ಟು ರಿಯಾಯತಿ ದರದಲ್ಲಿ ವಸ್ತುಗಳನ್ನು ನೀಡುವುದಾಗಿ ಈ ಕಂಪನಿ ನಂಬಿಸಿತ್ತು. ಅದರ ಪ್ರಕಾರ ಸಾವಿರಾರು ಜನರಿಂದ ಮುಂಗಡ ಹಣಪಡೆದು ಕೆಲವರಿಗೆ ವಸ್ತುಗಳನ್ನು ಸಹ ಪೂರೈಸಿತ್ತು. ಅದಾದ ನಂತರ ಇನ್ನಷ್ಟು ಜನರಿಂದ ಹಣಪಡೆದ ವಂಚಕರು ಊರು ಬಿಟ್ಟು ಓಡಿ ಹೋಗಿದ್ದರು. ದಿಢೀರ್ ಆಗಿ ಮಳಿಗೆಗೆ ಬಾಗಿಲು ಹಾಕಿರುವುದನ್ನು ನೋಡಿ ಜನ ಕಂಗಾಲಾಗಿದ್ದರು. ಅಂಗಡಿಯ ಮುಂದೆ ಪ್ರತಿಭಟನೆಯನ್ನು ಸಹ ನಡೆಸಿದ್ದರು. ಈ ಪ್ರಕರಣದ ಬೆನ್ನುಬಿದ್ದ ಪೊಲೀಸರು ಕೇರಳ ಮತ್ತು ತಮಿಳುನಾಡು ಮೂಲದ ಎಂ ಗಣೇಶನ್, ತ್ಯಾಗರಾಜನ್, ಮತ್ತು ಮೈಯನಾದನ್ ಎಂಬಾತರನ್ನು ಬಂಧಿಸಿದ್ದಾರೆ. ಅಂಗಡಿ ಬಾಗಿಲು ಮುಚ್ಚಿ ಪರಾರಿಯಾಗಿದ್ದ ಮೂವರು ವಂಚಕರು ಇದೀಗ ಸಿಕ್ಕಿ ಬಿದ್ದಿದ್ದಾರೆ. - [ಕಲ್ಲಿನ ನೆಲ: ಜಾರಿ ಬಿದ್ದ ವೃದ್ಧ ಇನ್ನಿಲ್ಲ!](https://mobiletime.in/2025/11/stone-floor-the-old-man-who-slipped-is-no-more/): ಮನೆಗೆ ಅಳವಡಿಸಿದ್ದ ಕಪ್ಪು ಕಲ್ಲಿನ ಮೇಲೆ ನಡೆಯುತ್ತಿದ್ದ ವೃದ್ಧರೊಬ್ಬರು ಕಾಲು ಜಾರಿ ಬಿದ್ದು ಕೊನೆಯುಸಿರೆಳೆದಿದ್ದಾರೆ. ಮುಂಡಗೋಡಿನ ಮಳಗಿಯ ಧರ್ಮಾ ಕಾಲೋನಿಯ ವೀರಾಪುರದಲ್ಲಿ ರಾಮರಾಯ ಗಣಪತಿ ದೈವಜ್ಞ (78) ಅವರು ವಾಸವಾಗಿದ್ದರು. ಅವರ ಮನೆಯ ವರಂಡಾಗೆ ಕಪ್ಪು ಕಲ್ಲು ಅಳವಡಿಸಿದ್ದು, ಅಲ್ಲಿ ನಡೆದಾಡುವವರು ಕಾಲು ಜಾರಿ ಬೀಳುತ್ತಿದ್ದರು. ಆದರೆ, ಬಿದ್ದವರಿಗೆ ದೊಡ್ಡ ಪ್ರಮಾಣದಲ್ಲಿ ಪೆಟ್ಟಾಗದ ಕಾರಣ ಯಾರೂ ತಲೆಕೆಡಿಸಿಕೊಂಡಿರಲಿಲ್ಲ. ರಾಮರಾಯ ದೈವಜ್ಞ ಅವರು ಆಗಾಗ ಅಲ್ಲಿ ಬಿದ್ದಿದ್ದರು. ಅದಾಗಿಯೂ, ಸುಧಾರಿಸಿಕೊಳ್ಳುತ್ತಿದ್ದ ಅವರು ಮೊನ್ನೆ ಕೊನೆಯದಾಗಿ ಅಲ್ಲಿ ಜಾರಿ ಬಿದ್ದರು. ನವೆಂಬರ್ 27ರಂದು ಬೆಳಗ್ಗೆ ರಾಮರಾಯ ದೈವಜ್ಞ ಅವರು ಮನೆ ಹೊರಗೆ ಚಹಾ ತಿಂಡಿ ಸೇವಿಸಿ ಅಲ್ಲಿಯೇ ಕುಳಿತಿದ್ದರು. ಅಲ್ಲಿಂದ ಎದ್ದು ಮನೆಯೊಳಗೆ ಬರುವಾಗ ಕಲ್ಲಿನ ಮೇಲೆ ಕಾಲು ಜಾರಿ ಬಿದ್ದರು. ಈ ವೇಳೆ ಅವರ ತಲೆಗೆ ಗಂಭೀರ ಪ್ರಮಾಣದಲ್ಲಿ ಪೆಟ್ಟಾಯಿತು. ರಾಮರಾಯ ದೈವಜ್ಞ ಅವರನ್ನು ಹುಬ್ಬಳ್ಳಿಯ ಕಿಮ್ಸ ಆಸ್ಪತ್ರೆಗೆ ಸೇರಿಸಲಾಯಿತು. ಎರಡು ದಿನದ ಚಿಕಿತ್ಸೆ ನೀಡಿದರೂ ಅವರು ಬದುಕಲಿಲ್ಲ. ತಂದೆಯ ಸಾವಿನ ಬಗ್ಗೆ ಕುರ್ಲಿ ಬಳಿಯ ಹೊಸಕೊಪ್ಪದ ಭಾರತಿ ನಾಗರಾಜ ಪೈ ಅವರು ಪೊಲೀಸರಿಗೆ ಮಾಹಿತಿ ನೀಡಿ, ಪ್ರಕರಣ ದಾಖಲಿಸಿದರು. - [ಇಂಗ್ಲಿಷ್ ಟೀಚರ್ ಫೋಟೋ ವೈರಲ್!](https://mobiletime.in/2025/11/english-teacher-photo-goes-viral/): ದೈಹಿಕ ಶಿಕ್ಷಕನ ಪ್ರೀತಿ ನಿರಾಕರಿಸಿದ ಇಂಗ್ಲಿಷ್ ಶಿಕ್ಷಕಿಯೊಬ್ಬರ ಖಾಸಗಿ ಫೋಟೋಗಳು ಜಾಲತಾಣದಲ್ಲಿ ವೈರಲ್ ಆಗಿದೆ. ಶಾಲೆಯ ಮಾಜಿ ವಿದ್ಯಾರ್ಥಿನಿ ಹಾಗೂ ಅವರ ಅಣ್ಣನ ಸಹಾಯಪಡೆದು ದೈಹಿಕ ಶಿಕ್ಷಕನೇ ಆ ಫೋಟೋವನ್ನು ವೈರಲ್ ಮಾಡಿದ ಬಗ್ಗೆ ಗೊತ್ತಾಗಿದೆ. ಶಿರಸಿಯ ಹೈಸ್ಕೂಲ್ ಒಂದರಲ್ಲಿ ವೈಶಾಲಿ ವಾಜ್ (ಹೆಸರು ಬದಲಿಸಿದೆ) ಅವರು ಇಂಗ್ಲೀಷ್ ಶಿಕ್ಷಕಿಯಾಗಿದ್ದಾರೆ. ಅದೇ ಹೈಸ್ಕೂಲಿನಲ್ಲಿ ಕೋಟೆಕರೆಯ ಜಾಯಲ್ ಜೂಜೆ ಪಿಂಟೋ ಅವರು ದೈಹಿಕ ಶಿಕ್ಷಕರಾಗಿದ್ದಾರೆ. ಜಾಯಲ್ ಪಿಂಟೋ ಅವರು ವೈಶಾಲಿ ವಾಜ್ ಅವರಲ್ಲಿ ಪ್ರೇಮದ ಪ್ರಸ್ತಾಪ ಮಾಡಿದ್ದು, ಅದನ್ನು ವೈಶಾಲಿ ವಾಜ್ ಅವರು ನಿರಾಕರಿಸಿದ್ದಾರೆ. ಪ್ರೀತಿ ನಿರಾಕರಿಸಿದ ಸಿಟ್ಟಿಗೆ ವೈಶಾಲಿ ವಾಜ್ ಅವರ ಖಾಸಗಿ ಫೋಟೋಗಳನ್ನು ಜಾಯಿಲ್ ಪಿಂಟೋ ಅವರು ಅಶ್ಲೀಲವಾಗಿ ಎಡಿಟ್ ಮಾಡಿ ಹರಿಬಿಟ್ಟಿದ್ದಾರೆ. ಈ ಕೆಟ್ಟ ಕೆಲಸ ಮಾಡುವುದಕ್ಕಾಗಿ ಜಾಯಿಲ್ ಪಿಂಟೋ ಅವರು ಅದೇ ಹೈಸ್ಕೂಲಿನ ಮಾಜಿ ವಿದ್ಯಾರ್ಥಿನಿ, ಮರಾಠಿಕೊಪ್ಪದ ಸಿಖತಾ ರೆಬಲೋ (ಹೆಸರು ಬದಲಿಸಿದೆ) ಹಾಗೂ ಅವರ ಅಣ್ಣ ಸಲಮನ್ ರೆಬೊಲೊ ಅವರ ಸಹಾಯಪಡೆದಿದ್ದಾರೆ. ಈ ಹಿಂದೆ ವೈಶಾಲಿ ವಾಜ್ ಅವರು ಹೊಸದಾಗಿ ಐಫೋನ್ ಖರೀದಿಸಿದ್ದು, ಅದನ್ನು ಬಳಕೆ ಮಾಡಲು ಗೊತ್ತಾಗದೇ ಜಾಯಿಲ್ ಪಿಂಟೋ ಅವರ ನೆರವು ಯಾಚಿಸಿದ್ದರು. ಈ ಸನ್ನಿವೇಶವನ್ನು ದುರ್ಬಳಕೆ ಮಾಡಿಕೊಂಡ ಜಾಯಿಲ್ ಪಿಂಟೋ ಅವರು ಆ ಮೊಬೈಲಿನಲ್ಲಿ ಇಲ್ಲಸಲ್ಲದ ಅಪ್ಲಿಕೇಶನ್ ಡೌನ್ಲೋಡ್ ಮಾಡಿಕೊಟ್ಟಿದ್ದರು. ಜೊತೆಗೆ ವೈಶಾಲಿ ವಾಜ್ ಅವರ ಆಪಲ್ ಐಡಿ ಐಡಿ ಹಾಗೂ ಪಾಸ್‌ವರ್ಡನ್ನುಪಡೆದಿದ್ದರು. ಅದಾದ ನಂತರ ವೈಶಾಲಿ ವಾಜ್ ಅವರಿಗೆ `ಪ್ರೀತಿ ಮಾಡು, ಪ್ರೀತಿ ಮಾಡು’ ಎಂದು ಜಾಯಿಲ್ ಪಿಂಟೋ ಬೆನ್ನತ್ತಿದ್ದರು. ಆದರೆ, ಇದಕ್ಕೆ ವೈಶಾಲಿ ವಾಜ್ ಅವರು ಒಪ್ಪಿರಲಿಲ್ಲ. ವೈಶಾಲಿ ವಾಜ್ ಅವರ ಆಪಲ್ ಐಡಿ ಹಾಗೂ ಪಾಸ್‌ವರ್ಡ ಅರಿತಿದ್ದ ಜಾಯಿಲ್ ಪಿಂಟೋ ಅವರು ಅದನ್ನು ದುರ್ಬಳಕೆ ಮಾಡಿಕೊಂಡರು. ಮಾಜಿ ವಿದ್ಯಾರ್ಥಿನಿ ಸಿಖತಾ ರೆಬಲೋ ಹಾಗೂ ಆಕೆಯ ಸಹೋದರ ಸಲಮನ್ ರೆಬೊಲೊ ಅವರ ಸಹಾಯಪಡೆದು ವೈಶಾಲಿ ವಾಜ್ ಅವರ ಫೋಟೋಗಳನ್ನು ಅಶ್ಲೀಲವಾಗಿ ಎಡಿಟ್ ಮಾಡಿದರು. ಅದನ್ನು ವೈಶಾಲಿ ವಾಜ್ ಅವರಿಗೆ ಕಳುಹಿಸಿ `ನಿನ್ನ ಫೋಟೋಗಳನ್ನು ಸಿಖತಾ ರೆಬಲೋ ನನಗೆ ಕಳುಹಿಸಿದ್ದಾರೆ’ ಎಂದು ಕಾಣಿಸಿದರು. ಅದಾಗಿಯೂ ವೈಶಾಲಿ ವಾಜ್ ಅವರು ಪ್ರೀತಿ ಮಾಡಲು ಒಪ್ಪದ ಕಾರಣ ಸಿಖತಾ ರೆಬಲೋ ಹಾಗೂ ಆಕೆಯ ಸಹೋದರ ಸಲಮನ್ ರೆಬೊಲೊ ಜೊತೆ ಸೇರಿ ದೈಹಿಕ ಶಿಕ್ಷಕ ಜಾಯಿಲ್ ಜೂಜೆ ಪಿಂಟೋ ಅವರು ಅದನ್ನು ವೈರಲ್ ಮಾಡಿದರು. ವಾಟ್ಸಪ್, ಫೇಸ್ಬುಕ್, ಇನಸ್ಟಾ ಗ್ರಾಮ್ ಹಾಗೂ ಸ್ನಾಪ್‌ಚಾಟ್‌ಗಳಲ್ಲಿ ಎರಡು ವಾರದ ಹಿಂದೆಯೇ ಫೋಟೋ ವೈರಲ್ ಆಗಿದ್ದು, ಈ ವಿಷಯದ ಬಗ್ಗೆ ವೈಶಾಲಿ ವಾಜ್ ಅವರು ದೂರಿದರು. ತಮಗಾದ ಅನ್ಯಾಯದ ಬಗ್ಗೆ ಆ ವೇಳೆಯಲ್ಲಿಯೇ ಅವರು ಪೊಲೀಸರಿಗೆ ದೂರು ನೀಡಿದ್ದು, ಪೊಲೀಸರು ಆ ಮೂವರ ವಿರುದ್ಧ ಪ್ರಕರಣ ದಾಖಲಿಸಿ ಕಾನೂನು ಕ್ರಮ ಜರುಗಿಸಿದರು. `ನಿಮ್ಮ ಮೊಬೈಲ್ ಬೇರೆಯವರಿಗೆ ಕೊಡುವ ಮುನ್ನ ಎಚ್ಚರ’ - [ಬಸ್ ಪಲ್ಟಿ: ಆ ವಿದ್ಯಾರ್ಥಿಗೆ ಇದೇ ಕೊನೆ ಪ್ರವಾಸ!](https://mobiletime.in/2025/11/bus-overturns-this-is-the-last-trip-for-that-student/): ಶಾಲಾ ಮಕ್ಕಳನ್ನು ಪ್ರವಾಸಕ್ಕೆ ಕರೆದೊಯ್ದಿದ್ದ ಬಸ್ಸು ಅಪಘಾತಕ್ಕೀಡಾಗಿದೆ. ಆ ಬಸ್ಸಿನಲ್ಲಿದ್ದ 10ನೇ ತರಗತಿ ವಿದ್ಯಾರ್ಥಿಯೊಬ್ಬರು ಸಾವನಪ್ಪಿದ್ದಾರೆ. ಮೈಸೂರಿನ ಟಿ ಕೆ ಲೇಔಟ್ ಬಳಿಯ ತರಳಬಾಳು ಶಿಕ್ಷಣ ಸಂಸ್ಥೆಯವರು ಮುರುಡೇಶ್ವರ ಪ್ರವಾಸಕ್ಕೆ ಯೋಜನೆ ರೂಪಿಸಿದ್ದರು. ಅದರ ಪ್ರಕಾರ ಬಸ್ಸಿನ ಮೂಲಕ ಮಕ್ಕಳು ಮುರುಡೇಶ್ವರಕ್ಕೆ ಬರುತ್ತಿದ್ದರು. ಆ ಬಸ್ಸು ಭಾನುವಾರ ಹೊನ್ನಾವರದ ಬಳಿ ಪಲ್ಟಿಯಾಯಿತು. ಗೇರುಸೊಪ್ಪ – ಸುಳೆಮುರ್ಕಿ ತಿರುವಿನಲ್ಲಿ ಈ ಅವಘಡ ನಡೆದಿದ್ದು, ಬಸ್ಸಿನಲ್ಲಿದ್ದ ಮಕ್ಕಳು ಗಾಯಗೊಂಡರು. ತರಳಬಾಳು ಶಿಕ್ಷಣ ಸಂಸ್ಥೆಯಲ್ಲಿ 10ನೇ ತರಗತಿ ಓದುತ್ತಿದ್ದ ವಿದ್ಯಾರ್ ಪವನ್ ಅವರು ಬಸ್ಸಿನಲ್ಲಿಯೇ ಕೊನೆಯುಸಿರೆಳೆದರು. ಉಳಿದ ಮಕ್ಕಳ ರಕ್ಷಣಾ ಕಾರ್ಯ ನಡೆದಿದ್ದು, ಗಾಯಗೊಂಡವರನ್ನು ಆಸ್ಪತ್ರೆಗೆ ಸಾಗಿಸಲಾಗುತ್ತಿದೆ. ಸದ್ಯ ವಿವಿಧ ಆಂಬುಲೆನ್ಸ ಸ್ಥಳಕ್ಕೆ ದೌಡಾಯಿಸಿದೆ. ಪೊಲೀಸರು ಸ್ಥಳದಲ್ಲಿದ್ದಾರೆ. ಅತಿ ವೇಗವೇ ಅಪಘಾತಕ್ಕೆ ಕಾರಣ ಎಂಬ ಮಾಹಿತಿಯಿದೆ. ಈಚೆಗೆ ಹೊನ್ನಾವರದ ಸುಳೆಮುರ್ಕಿ ಕ್ರಾಸಿನಲ್ಲಿ ಪದೇ ಪದೇ ಅವಘಡ ನಡೆಯುತ್ತಿದೆ. ಹೆದ್ದಾರಿ ಇಲಾಖೆಯ ಬೇಜವಬ್ದಾರಿಯೂ ಅಪಘಾತಕ್ಕೆ ಕಾರಣ ಎಂದು ಅಲ್ಲಿನವರು ದೂರಿದ್ದಾರೆ. - [ಗಡಿ ಜಗಳ: ಯೋಧನ ಕುಟುಂಬಕ್ಕೆ ಇಲ್ಲ ರಕ್ಷಣೆ!](https://mobiletime.in/2025/11/border-dispute-no-protection-for-soldiers-family/): ದೇಶದ ಗಡಿ ಕಾಯಲು ಹೋದ ಯೋಧ ಮನೋಜಕುಮಾರ ಅವರ ಮನೆಯಲ್ಲಿಯೇ ಗಡಿ ಜಗಳ ಶುರುವಾಗಿದೆ. ಅವರ ಭೂಮಿಗೆ ಅದೇ ಊರಿನ ಕೆಲವರ ಆಕ್ರಮಣ ನಡೆದಿದ್ದು, ಮನೋಜಕುಮಾರ ಅವರ ತಾಯಿ ಕಂಗಾಲಾಗಿದ್ದಾರೆ. ಸಿದ್ದಾಪುರದ ಹಾರ್ಸಿಕಟ್ಟಾದ ಮನೋಜಕುಮಾರ ಅವರು ಆರ್ಮಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. 22 ವರ್ಷಗಳಿಂದ ಅವರು ದೇಶ ಸೇವೆಯಲ್ಲಿದ್ದಾರೆ.  ಶಿಸ್ತು, ಸಂಯಮ, ಪ್ರಾಮಾಣಿಕ ಸೇವೆ ಸಲ್ಲಿಸುತ್ತಿರುವ ಅವರ ಕುಟುಂಬಕ್ಕೆ ಇದೀಗ ಆತಂಕ ಶುರುವಾಗಿದೆ. ಮನೋಜಕುಮಾರ ಅವರ ತಾಯಿ ಲಕ್ಷ್ಮೀ ನಾಯ್ಕ ಅವರಿಗೆ 70 ವರ್ಷ ವಯಸ್ಸಾಗಿದ್ದು, ಆರು ಜನ ಕಿಡಿಗೇಡಿಗಳು ಆ ವೃದ್ಧೆಯನ್ನು ಕಾಡಿಸುತ್ತಿದ್ದಾರೆ. ಇದರಿಂದ ಆಘಾತಕ್ಕೆ ಒಳಗಾದ ಲಕ್ಷ್ಮೀ ನಾಯ್ಕ ಅವರು ಆಸ್ಪತ್ರೆ ಸೇರಿದ್ದಾರೆ. ಹಾರ್ಸಿಕಟ್ಟಾದ ಸಂತೋಷ ಕರಿಯಾ ನಾಯ್ಕ, ಸಂಜಯ ಕರಿಯಾ ನಾಯ, ಕರಿಯಾ ನಾರಾಯಣ ನಾಯ್ಕ, ಶ್ರೀಕಾಂತ ಬಳ್ಳಾರಿ ಹಾಗೂ ಮತ್ತೊಬ್ಬ ಅಪರಿಚಿತರಿಂದ ಈ ಯೋಧರ ಕುಟುಂಬಕ್ಕೆ ಸಮಸ್ಯೆಯಾಗಿದೆ. ಅನಾಧಿಕಾಲದಿಂದಲೂ ಲಕ್ಷ್ಮೀ ನಾಯ್ಕ ಅವರು ಅತಿಕ್ರಮಿಸಿಕೊಂಡು ಬಂದಿದ್ದ ಭೂಮಿಗೆ ನವೆಂಬರ್ 25ರಂದು ಆ ಆರು ಜನ ನುಗ್ಗಿದ್ದಾರೆ. ಅಲ್ಲಿದ್ದ ಬೇಲಿ ತೆಗೆದು ರಂಪಾಟ ಮಾಡಿದ್ದಾರೆ. ಪ್ರಶ್ನಿಸಿದ ಕಾರಣ ಯೋಧನ ತಾಯಿ ಲಕ್ಷ್ಮೀ ನಾಯ್ಕ ಅವರಿಗೆ ಕೆಟ್ಟದಾಗಿ ಬೈದಿದ್ದಾರೆ. ಲಕ್ಷ್ಮೀ ನಾಯ್ಕ ಅವರ ಬಟ್ಟೆಯನ್ನು ಹರಿದು ಅವಮಾನ ಮಾಡಿದ್ದಾರೆ. ಜೊತೆಗೆ ಸಂತೋಷ ನಾಯ್ಕ ಅವರು ಲಕ್ಷ್ಮೀ ನಾಯ್ಕ ಅವರನ್ನು ಗಟಾರಕ್ಕೆ ದೂಡಿ ಕೊಲೆ ಬೆದರಿಕೆಯನ್ನೂ ಹಾಕಿದ್ದಾರೆ. ಈ ವೇಳೆ ಲಕ್ಷ್ಮೀ ನಾಯ್ಕ ಅವರು ಪ್ರಾಣ ಉಳಿಸಿಕೊಳ್ಳಲು ಮನೆ ಅಂಗಳಕ್ಕೆ ಹೋಗಿದ್ದು, ಅಲ್ಲಿಯೂ ಬಂದ ಡಕಾಯಿತರು ಕೂದಲು ಹಿಡಿದು ಕಾಲಿನಿಂದ ಒದ್ದಿದ್ದಾರೆ. ಲಕ್ಷ್ಮೀ ನಾಯ್ಕ ಅವರ ಸೊಸೆ, ಮೊಮ್ಮಗನಿಗೂ ಬೆದರಿಕೆ ಒಡ್ಡಿದ್ದಾರೆ. ಆಸ್ಪತ್ರೆ ಸೇರಿದ ಲಕ್ಷ್ಮೀ ನಾಯ್ಕ ಅವರು ಈ ಎಲ್ಲಾ ವಿಷಯದ ಬಗ್ಗೆ ಪೊಲೀಸರಿಗೆ ತಿಳಿಸಿ ಪ್ರಕರಣ ದಾಖಲಿಸಿದ್ದಾರೆ. ಬೆಂಗಳೂರಿನಲ್ಲಿ ಉದ್ಯೋಗದಲ್ಲಿರುವ ಕರಿಯಾ ನಾಯ್ಕ ಅವರ ಪುತ್ರ ಸಂತೋಷ ನಾಯ್ಕ ಅದಾದ ನಂತರ ಯೋಧನ ಕುಟುಂಬದ ವಿರುದ್ಧ ಪ್ರತಿ ದೂರು ನೀಡಿದ್ದಾರೆ. `ದಾರಿಯನ್ನು ಬಂದ್ ಮಾಡಿದ್ದರಿಂದ ಅದನ್ನು ತಾನು ತೆರವು ಮಾಡಿದ್ದೇನೆ. ಬೇಲಿ ತೆರವು ಮಾಡಲು ಹೋದಾಗ ಅಶೋಕ ನಾಯ್ಕ, ನಾರಾಯಣ ನಾಯ್ಕ ಜೊತೆ ಲಕ್ಷ್ಮೀ ನಾಯ್ಕ ಅವರು ಸೇರಿ ತಮ್ಮ ತಂದೆ ಕರಿಯಾ ನಾಯ್ಕ ಅವರ ಮೇಲೆ ಹಲ್ಲೆ ಪ್ರಯತ್ನ ಮಾಡಿದ್ದಾರೆ’ ಎಂದು ಸಂತೋಷ ನಾಯ್ಕ ಅವರು ದೂರಿದ್ದಾರೆ. - [ವಿವಾಹ ವಿಚ್ಚೇದನ: ಅರ್ಜಿ ಸಲ್ಲಿಕೆಗೆ ಸಕಾರಣವೇ ಇಲ್ಲ!](https://mobiletime.in/2025/11/divorce-there-is-no-reason-to-file-a-petition/): ಪರಸ್ಪರ ಪ್ರೀತಿಸಿ ಮದುವೆ ಆದ ಅನೇಕ ದಂಪತಿ ಸಣ್ಣಪುಟ್ಟ ಕಾರಣಗಳಿಗೂ ಮುನಿಸಿಕೊಂಡು ವಿವಾಹ ವಿಚ್ಚೇದನಕ್ಕಾಗಿ ಅರ್ಜಿ ಹಾಕುತ್ತಿದ್ದಾರೆ. ಉತ್ತರ ಕನ್ನಡ ಜಿಲ್ಲೆಯಲ್ಲಿಯೂ ವಿವಾಹ ವಿಚ್ಚೇದನ ಪ್ರಕರಣ ಹೆಚ್ಚಾಗಿದ್ದು, ಆತಂಕಕ್ಕೆ ಕಾರಣವಾಗಿದೆ. ಅತಿಯಾದ ನಿರೀಕ್ಷೆ, ದಾಂಪತ್ಯದಲ್ಲಿನ ಕಲಹ, ಮಕ್ಕಳಾಗದಿರುವ ಕೊರಗು ಹಾಗೂ ಅಕ್ರಮ ಸಂಬoಧದ ಕಾರಣದಿಂದ ಅನೇಕರ ದಾಂಪತ್ಯದಲ್ಲಿ ಬಿರುಕು ಮೂಡುತ್ತಿದೆ. ಅದು ವಿವಾಹ ವಿಚ್ಚೇದನ ಕೋರಿ ಕೋರ್ಟಿನ ಮೆಟ್ಟಿಲೇರುತ್ತಿದ್ದು, ಅನೇಕ ಸನ್ನಿವೇಶಗಳಲ್ಲಿ ನ್ಯಾಯಾಧೀಶರೇ ದಂಪತಿಯನ್ನು ಒಂದು ಮಾಡುತ್ತಿದ್ದಾರೆ. ಆಪ್ತ ಸಮಾಲೋಚನೆ ಮೂಲಕ ಸಮಸ್ಯೆ ಬಗೆಹರಿಸುವ ಪ್ರಯತ್ನದ ನಡುವೆಯೂ ಅಂಕೋಲಾದಲ್ಲಿ ವಿಚ್ಚೇದಿತರ ಸಂಖ್ಯೆ ಅಧಿಕವಾಗುತ್ತಿದೆ. ಮದುವೆಯ ಸಂಭ್ರಮಕ್ಕಾಗಿ ಕೈಗೆ ಹಚ್ಚಿದ ಮೆಹೆಂದಿಯ ಬಣ್ಣ ಮಾಸುವ ಮುನ್ನವೆ ವಿಚ್ಚೇದನ ಕೋರಿ ಅರ್ಜಿ ಸಲ್ಲಿಸಿದ ಪ್ರಕರಣಗಳು ವರದಿಯಾಗುತ್ತಿದೆ. ಇಂಥ ಪ್ರಕರಣ ತೀವ್ರವಾಗಿ ಹೆಚ್ಚುತ್ತಿರುವ ವಿದ್ಯಮಾನ ಕಳವಳ ಹೆಚ್ಚಿಸಿದೆ. ಸುಂದರ ಕನಸುಗಳನ್ನು ಹೊತ್ತು ದಾಂಪತ್ಯ ಜೀವನಕ್ಕೆ ಕಾಲಿಟ್ಟ ಜೋಡಿಗಳು ಯಾವುದೇ ಸಕಾರಣವಿಲ್ಲದೇ ಕೌಟುಂಬಿಕ ನ್ಯಾಯಾಲಯದಲ್ಲಿ `ನಮ್ಮ ದಾಂಪತ್ಯಕ್ಕೆ ಕಾನೂನಾತ್ಮಕವಾಗಿ ಮುಕ್ತಿ ಕೊಡಿ’ ಎಂದು ಮನವಿ ಮಾಡುತ್ತಿದ್ದಾರೆ. ಇದನ್ನು ನ್ಯಾಯ ನೀಡಬೇಕಾದ ಸ್ಥಾನದಲ್ಲಿರುವವರೇ ಆಘಾತಕ್ಕೆ ಒಳಗಾಗಿದ್ದಾರೆ. ಕೌಟುಂಬಿಕ ನ್ಯಾಯಾಲಯದಲ್ಲಿ ಪ್ರತಿ ವರ್ಷ ನೂರಾರು ವಿವಾಹ ವಿಚ್ಚೇಧನ ಅರ್ಜಿಗಳು ದಾಖಲಾಗುತ್ತಿವೆ. ವಿಚಾರಣೆ ವೇಳೆ ದುರ್ಬಲಗೊಳ್ಳುತ್ತಿರುವ ಮದುವೆ ವ್ಯವಸ್ಥೆ, ಬದಲಾಗುತ್ತಿರುವ ಸಾಮಾಜಿಕ ಪರಿಸ್ಥಿತಿ. ಆರ್ಥಿಕ ಭದ್ರತೆ, ವೇಗದ ಆಧುನಿಕ ಜೀವನ ಶೈಲಿ. ಕಾನೂನಿನ ದುರ್ಬಳಕೆ, ಸಾಮಾಜಿಕ ಜಾಲತಾಣಗಳ ಹಾವಳಿ, ಅನೈತಿಕ ಸಂಬoಧಗಳ ಕಾರಣಗಳು ಹೊರ ಬಿದ್ದಿವೆ. ಪತಿ ಮಾಜಿ ಪ್ರೀಯತಮೆಯ ಜೊತೆ ಸಂಬAಧ, ಗಂಡ ದುಡಿದಿದ್ದು ಎಲ್ಲ ತನ್ನದಾಗಬೇಕು ಎಂಬ ಮನಸ್ಥಿತಿ, ಗಂಡನ ಮನೆಯವರಿಂದ ಬೇರ್ಪಟ್ಟು ಬೇರೆ ಮನೆ ಮಾಡಿಕೊಂಡು ಗಂಡನೊAದಿಗೆ ಸ್ವತಂತ್ರವಾಗಿರಬೇಕು ಎಂಬ ಬಯಕೆಗೆ ಒಪ್ಪದ ಪತಿ. ನಿತ್ಯ ಇಬ್ಬರ ನಡುವೆ ಮನಸ್ತಾಪ, ಜಗಳ, ಅಂತಿಮವಾಗಿ ಹೊಂದಾಣಿಕೆ ಆಗುತ್ತಿಲ್ಲ ಎಂಬ ಕಾರಣ ನೀಡಿ ವಿವಾಹ ವಿಚ್ಛೇದನಕ್ಕಾಗಿ ನ್ಯಾಯಾಲಯದ ಬಾಗಿಲು ತಟ್ಟುತ್ತಿರುವ ಪ್ರಕರಣ ಹೆಚ್ಚಾಗಿದೆ. ಅನೈತಿಕ ಸಂಬoಧ, ತೀರದ ಹಣದ ದಾಹ, ಮದುವೆಯಾಗಿ ಕೆಲ ತಿಂಗಳು ಮಾತ್ರ ಜೀವನ, ಕಾನೂನು ದುರುಪಯೋಗ ಪಡಿಸಿಕೊಂಡು ಪತಿಯ ವಿರುದ್ಧ ಪ್ರಕರಣ ದಾಖಲು, ನಂತರ ವಿವಾಹ ವಿಚ್ಚೇದನ, ಜೀವನಾಂಶ ಬೇಡಿಕೆ, ಮರುಮದುವೆ ಪುನಃ ಅದೇ ರೀತಿಯ ಮನಸ್ಥಿತಿ, ವಿವಾಹ ವಿಚ್ಚೇದನ, ಮತ್ತೆ ಜೀವನಾಂಶಕ್ಕೆ ಬೇಡಿಕೆ ಹೀಗೆ ಸಕಾರಣವಿಲ್ಲದೇ ಪ್ರಕರಣ ದಾಖಲಾಗುತ್ತಿರುವುದು ಸಹ ಗಮನಕ್ಕೆ ಬಂದಿದೆ. ವಿವಾಹ ವಿಚ್ಚೇದನಕ್ಕೆ ಅರ್ಜಿ ಸಲ್ಲಿಸುವವರಿಗೆ ಮಕ್ಕಳಿದ್ದರೆ ಅವರ ಭವಿಷ್ಯದ ಬಗ್ಗೆ ಕೂಡ ಚಿಂತನೆ ಮಾಡುವಂಥ ಮನಸ್ಥಿತಿ ಇಲ್ಲದಿರುವವರೂ ಸಹ ಇದ್ದಾರೆ. ಸೇಡು, ಸ್ವತಂತ್ರದ ಬದುಕಿಗಾಗಿ ಹಾತೊರೆದು ವಿವಾಹ ಬಂಧನದ ಮುಕ್ತಿಗೆ ಹಾತೊರೆಯುವಂತಾಗಿದೆ ವಿವಾಹ ವಿಚ್ಚೇದನ ಕೋರಿ ಅರ್ಜಿ ಸಲ್ಲಿಸುವವರು ಬಹುತೇಕ ಸುಶಿಕ್ಷಿತರೇ ಹೆಚ್ಚಾಗಿದ್ದಾರೆ. ಇದಕ್ಕೆ ಅವರಲ್ಲಿರುವ ಸ್ವಚ್ಛಂದ ಹಾಗೂ ಆಧುನಿಕ ಸ್ವತಂತ್ರ ಜೀವನದ ಮನೋಭಾವ ಕಾರಣ. ಜೊತೆಗೆ ಒಬ್ಬರಿಗೊಬ್ಬರಲ್ಲಿನ ಆರ್ಥಿಕ ಭದ್ರತೆ ಹಾಗೂ ಕಾನೂನಿನ ದುರ್ಬಳಕೆ. ಇವುಗಳಿಂದಾಗಿ ವಿಚ್ಚೇದನಕ್ಕೆ ನ್ಯಾಯಾಲಯಕ್ಕೆ ಎಡತಾಕುವಂತಾಗಿದೆ. ವಿಚ್ಚೇದನಕ್ಕಾಗಿ ಪತ್ನಿ ಪ್ರಕರಣ ದಾಖಲಿಸಿದರೆ ಪತಿ ಏಳೆಂಟು ವರ್ಷಗಳಿಂದ ನಾಪತ್ತೆಯಾಗಿ ನ್ಯಾಯಾಲಯಕ್ಕೆ ಹಾಜರಾಗದೇ ಇರುವ ಪ್ರಕರಣಗಳು ಸಹ ಇವೆ. ಸ್ಥಳೀಯ ನ್ಯಾಯಾಲಯದಲ್ಲಿ ವಿವಾಹ ವಿಚ್ಚೇದನಕ್ಕೆ ಅರ್ಜಿ ದಾಖಲಿಸಿದಲ್ಲಿ ಮಜುಗರ ಎದುರಿಸಬೇಕಾದೀತು ಎಂಬ ಆತಂಕದಿAದ ಬೇರೆ ಬೇರೆ ತಾಲೂಕಿನ ಕೌಟುಂಬಿಕ ನ್ಯಾಯಾಲಯದಲ್ಲಿಯೂ ಕೆಲವರು ಪ್ರಕರಣ ದಾಖಲಿಸಿರುವುದು ಬೆಳಕಿಗೆ ಬಂದಿದೆ. - [2025ರ ನವೆಂಬರ್ 30ರ ದಿನ ಭವಿಷ್ಯ](https://mobiletime.in/2025/11/prediction-for-november-30-2025/): ಮೇಷ ರಾಶಿ: ಕೆಲಸದಲ್ಲಿ ಹೊಸ ಅವಕಾಶಗಳು ಸಿಗುವ ಸಮಯ ಸಮೀಪದಲ್ಲಿದೆ. ಮೇಲಧಿಕಾರಿಗಳ ಮೆಚ್ಚುಗೆ ಸಿಗಲಿದೆ. ಹಣಕಾಸಿನಲ್ಲಿ ಜಾಗ್ರತೆಯಿಂದ ನಡೆಯುವುದು ಒಳಿತು. ಕುಟುಂಬದಲ್ಲಿ ನಿಮ್ಮ ಮಾತಿಗೆ ಒಪ್ಪಿಗೆ ದೊರೆಯಲಿದೆ. ಆರೋಗ್ಯದಲ್ಲಿ ಏರುಪೇರಾಗಬಹುದು. ಭವಿಷ್ಯ ಯೋಜನೆ ರೂಪಿಸಲು ಈ ದಿನ ಸೂಕ್ತ ಸಮಯ. ವೃಷಭ ರಾಶಿ: ಕಾರ್ಯಕ್ಷೇತ್ರದಲ್ಲಿ ಪೂರ್ಣ ಗಮನ ಕೊಡುವ ಅಗತ್ಯವಿದೆ. ಹಳೆಯ ಬಾಕಿ ಕೆಲಸಗಳು ಒತ್ತಡ ತಂದರೂ ನಿಧಾನವಾಗಿ ಸರಿಯಾಗುತ್ತವೆ. ಅನಗತ್ಯ ಖರ್ಚು ತಪ್ಪಿಸಿ. ಕುಟುಂಬದಲ್ಲಿ ಕಲಹ ಬೇಡ. ಧಾರ್ಮಿಕ ಚಿಂತನೆಗಳ ಕಡೆ ಗಮನಕೊಡಿ. ಮಿಥುನ ರಾಶಿ: ನಿಮಗೆ ಈ ದಿನ ನಿಮ್ಮ ಮಾತು-ಸಂವಹನವೇ ದೊಡ್ಡ ಶಕ್ತಿ. ಸಭೆಗಳು, ಒಪ್ಪಂದಗಳಲ್ಲಿ ನಿಮ್ಮ ನಿಲುವು ನಡೆಯುತ್ತದೆ. ಸ್ನೇಹಿತರಿಂದಲೂ ಸಹಕಾರ ದೊರಕಲಿದೆ. ವಾಹನ ಚಲಾಯಿಸುವಾಗ ಎಚ್ಚರಿಕೆ ಅಗತ್ಯ. ಕರ್ಕ ರಾಶಿ: ಮನೆಯ ಕಾರ್ಯಗಳಿಗೆ ಹೆಚ್ಚು ಸಮಯ ಕಳೆಯಲಿದೆ. ಕುಟುಂಬ ಸದಸ್ಯರ ಆತ್ಮೀಯ ಮಾತು ಹುಮ್ಮಸ್ಸಿಗೆ ಕಾರಣವಾಗಲಿದೆ. ಜಮೀನು-ಮನೆ ವಿಷಯದಲ್ಲಿ ಒಳ್ಳೆಯ ಸುದ್ದಿ ಬರಲಿದೆ. ಕಚೇರಿಯಲ್ಲಿ ನಿಮ್ಮ ಪರಿಶ್ರಮ ಗುರುತಿಗೆ ಬರುತ್ತದೆ. ಮನಸ್ಸಿನಲ್ಲಿದ್ದ ಒಂದು ಚಿಂತೆಗೆ ಪರಿಹಾರ ಸಿಗಲಿದೆ. ಸಿಂಹ ರಾಶಿ: ಧೈರ್ಯ-ಆತ್ಮವಿಶ್ವಾಸ ಹೆಚ್ಚಳವಾಗಲಿದೆ. ಹೊಸ ಯೋಜನೆ ಆರಂಭಿಸಲು ಶುಭ ಕಾಲ. ಕಿರು ಪ್ರಯಾಣದಿಂದ ಲಾಭದ ಸೂಚನೆ ಇದೆ. ಬರವಣಿಗೆ, ಜಾಲತಾಣದ, ಮಾಧ್ಯಮ ಕ್ಷೇತ್ರದಲ್ಲಿರುವವರಿಗೆ ಒಳ್ಳೆಯ ದಿನ. ಆತುರದ ನಿರ್ಧಾರಗಳನ್ನು ಮಾತ್ರ ತಪ್ಪಿಸುವುದು ಒಳಿತು. ಕನ್ಯಾ ರಾಶಿ: ಹಣಕಾಸು ವಿಷಯಗಳಲ್ಲಿ ಹೆಚ್ಚು ಚಿಂತೆಯ ದಿನವಾಗಿದೆ. ಆದಾಯ ನಿಧಾನವಾಗಿ ಏರಿಕೆ ಆಗಲಿದೆ. ಕುಟುಂಬದ ಅವಶ್ಯಕತೆಗಳನ್ನು ನೀವು ಸಮತೋಲನದಿಂದ ನೋಡಿಕೊಳ್ಳುವಿರಿ. ಸಣ್ಣ ಖರೀದಿಗಳು, ಗೃಹೋಪಕರಣಗಳಿಗೆ ಹಣ ಖರ್ಚಾಗಲಿದೆ. ಸ್ವಾಭಿಮಾನಕ್ಕೆ ಧಕ್ಕೆ ಬಾರದಂತೆ ವರ್ತಿಸಿ. ತುಲಾ ರಾಶಿ: ನಿಮ್ಮ ವ್ಯಕ್ತಿತ್ವ ಹಾಗೂ ನಿರ್ಧಾರ ಶಕ್ತಿ ಹೊರಹೊಮ್ಮಲಿದೆ. ಹೊಸ ಕಾರ್ಯದ ಹೊಣೆಗಾರಿಕೆ ನಿಮ್ಮನ್ನು ಅರೆಸಿಬರಲಿದೆ. ವೃತ್ತಿಯಲ್ಲಿ ಸ್ಥಾನಮಾನ ಹೆಚ್ಚುವ ಸಾಧ್ಯತೆ ಇದೆ. ದಾಂಪತ್ಯ ಜೀವನದಲ್ಲಿ ಸೌಹಾರ್ದ ಹೆಚ್ಚುತ್ತದೆ. ಸ್ವಲ್ಪ ಮಾನಸಿಕ ಒತ್ತಡ ಇದ್ದರೂ ಕೆಲಸಗಳು ಪೂರ್ಣಗೊಳ್ಳುತ್ತವೆ. ವೃಶ್ಚಿಕ ರಾಶಿ: ಒಳಮನಸ್ಸಿನಲ್ಲಿ ಚಿಂತೆ ಕಾಡಲಿದೆ. ಆವೇಶ ಹೆಚ್ಚಾಗುವ ಸಾಧ್ಯತೆಗಳಿದೆ. ಹಳೆಯ ವಿಷಯಗಳು ನೆನಪಾಗಿ ಮನಸ್ಸು ಗಾಬರಿಯಾಗುವ ಲಕ್ಷಣವಿದೆ. ಕೆಲಸದಲ್ಲಿ ಹಿಂದೆ ಮಾಡಿದ ತಪ್ಪುಗಳನ್ನು ಸರಿಪಡಿಸುವ ಅವಕಾಶ ಸಿಗಲಿದೆ. ರಹಸ್ಯ ವಿಷಯವೊಂದು ಬಹಿರಂಗವಾಗಲಿದೆ. ಅಗತ್ಯವಿಲ್ಲದ ವಾಗ್ವಾದಗಳಿಂದ ದೂರ ಇರುವುದೇ ಉತ್ತಮ. ಧನು ರಾಶಿ: ಸ್ನೇಹಿತರ ವಲಯದಲ್ಲಿ ನೀವು ಚುರುಕು ಕಾಣಿಸಿಕೊಳ್ಳುವಿರಿ. ನಾಯಕತ್ವ ಗುಣದಲ್ಲಿ ಕೆಲಸ ಸರಿಯಾಗಿ ಸಾಗಲಿದೆ. ಭವಿಷ್ಯದ ದೊಡ್ಡ ಕನಸುಗಳಿಗೆ ಯೋಜನೆ ರೂಪಿಸಲು ಒಳ್ಳೆಯ ದಿನ. ಹಿರಿಯರ ಸಲಹೆ ಕೇಳಿದರೆ ಮಾರ್ಗ ಸ್ಪಷ್ಟವಾಗುತ್ತದೆ. ಮಕರ ರಾಶಿ: ವೃತ್ತಿ ಜೀವನದ ಮುಖ್ಯ ದಾರಿ ಕಾಣಲಿದೆ. ಮೇಲಧಿಕಾರಿಗಳ ಮುಂದೆ ನಿಮ್ಮ ಸಾಮರ್ಥ್ಯ ತೋರಿಸುವ ಅವಕಾಶ ಸಿಗಲಿದೆ. ಉನ್ನತಿಕರಣದ ಎಲ್ಲಾ ಅವಕಾಶಗಳು ತೆರೆಯಲಿದೆ. ದೀರ್ಘಾವಧಿ ಗುರಿಗಳ ಬಗ್ಗೆ ಗಂಭೀರ ಯೋಚನೆ ಮಾಡಲು ಸೂಕ್ತ ದಿನ. ಕುಂಭ ರಾಶಿ: ಅಧ್ಯಯನ, ಸಂಶೋಧನೆ, ಹೊಸ ವಿಷಯ ಕಲಿಕೆಗೆ ಸೂಕ್ತ ದಿನ. ಆಧ್ಯಾತ್ಮಿಕ ಸ್ಥಳಕ್ಕೆ ಹೋಗುವ ಯೋಚನೆ ಮನದಲ್ಲಿ ಮೂಡಲಿದೆ. ಅನಗತ್ಯ ಚರ್ಚೆಗಳಲ್ಲಿ ತೊಡಗದೇ ನಿಮ್ಮ ಮಾರ್ಗದಲ್ಲಿ ಮುಂದೆ ಸಾಗುವುದು ಒಳಿತು. ಮೀನ ರಾಶಿ: ಭಾವನಾತ್ಮಕ ಏರುಪೇರು ಅನುಭವಿಸಿದರೂ ದಿನ ಕ್ರಮೇಣ ಸುಧಾರಿಸುತ್ತದೆ. ಸಾಲ, ಬ್ಯಾಂಕ್, ಹೂಡಿಕೆ ವಿಷಯಗಳಲ್ಲಿ ನಿರ್ಧಾರ ತೆಗೆದುಕೊಳ್ಳುವ ದಿನ. ಪಾಲುದಾರಿಕೆ ಉದ್ದಿಮೆಗಳ ಬಗ್ಗೆ ಸ್ಪಷ್ಟತೆ ಬೇಕು. ಶತ್ರುಗಳ ಬಗ್ಗೆ ಎಚ್ಚರಿಕೆ ಅಗತ್ಯ. - [ಕಾಲೇಜು ಕಟ್ಟಡಕ್ಕೆ ಅಗ್ನಿಸ್ಪರ್ಶ](https://mobiletime.in/2025/11/college-building-set-on-fire/): ಕಲಾ ಮತ್ತು ವಿಜ್ಞಾನ ಪದವಿ ಕಾಲೇಜಿನ ಕಟ್ಟಡಕ್ಕೆ ಅಗ್ನಿಸ್ಪರ್ಶವಾಗಿದ್ದು, ಅಗ್ನಿಶಾಮಕ ಸಿಬ್ಬಂದಿ ಸಮಯ ಪ್ರಜ್ಞೆಯಿಂದ ಅನಾಹುತ ತಪ್ಪಿದೆ. ಅಗ್ನಿ ಅನಾಹುತ ನೋಡಿ ಆತಂಕದಲ್ಲಿದ್ದ ಜನರನ್ನು ಅಗ್ನಿಶಾಮಕ ಸಿಬ್ಬಂದಿ ಸಮಾಧಾನ ಮಾಡಿದ್ದಾರೆ. ಕಾರವಾರದ ಕಲಾ ಮತ್ತು ವಿಜ್ಞಾನ ಕಾಲೇಜು ಕಟ್ಟಡದ ಬಳಿ ಮರದ ರೆಂಬೆಗಳನ್ನು ಕತ್ತರಿಸಿ ರಾಶಿ ಹಾಕಲಾಗಿತ್ತು. ಅಲ್ಲಿದ್ದ ಎಲೆಗಳ ಜೊತೆ ರೆಂಬೆ-ಕೊAಬೆಗಳು ಒಣಗಿದ್ದವು. ಶನಿವಾರ ಸಂಜೆ 7 ಗಂಟೆ ವೇಳೆಗೆ ಮುರಿದ ಮರಕ್ಕೆ ಬೆಂಕಿ ಬಿದ್ದಿದ್ದು, ಅದರ ಜ್ವಾಲೆ ಕಾಲೇಜು ಕಟ್ಟಡದವರೆಗೂ ವ್ಯಾಪಿಸಿತು. ಅಲ್ಲಿದ್ದ ಕಾವಲು ಸಿಬ್ಬಂದಿ ಬೆಂಕಿ ನಿಯಂತ್ರಿಸುವ ಸಾಹಸ ಮಾಡಿದರು. ಆದರೆ, ಜ್ವಾಲೆ ನಿಯಂತ್ರಣಕ್ಕೆ ಬಂದಿಲ್ಲ. ಕಟ್ಟಡದ ಮಟ್ಟದವರೆಗೆ ಬೆಂಕಿ ಹೋಗಿದ್ದು, ಹಳೆಯ ಕಟ್ಟಡಕ್ಕೂ ಬಿಸಿ ಮುಟ್ಟಿತು. ಮಾಹಿತಿ ಪಡೆದ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದರು. ನಿರಂತರ ಪ್ರಯತ್ನದಿಂದ ಆ ಬೆಂಕಿಯನ್ನು ಆರಿಸಿದರು. ಬೆಂಕಿ ಆರಿದ ಮೇಲೆ ಜನ ನೆಮ್ಮದಿಯ ನಿಟ್ಟುಸಿರು ಬಿಟ್ಟರು. - [ದೇವಾಲಯದ ಮುಂದೆ ಭಿಕ್ಷೆ: ಕಾಸು ಕೇಳಿದವನ ಕೈ ಮುರಿದ ಅಪರಿಚಿತ!](https://mobiletime.in/2025/11/begging-in-front-of-the-temple-stranger-breaks-the-hand-of-the-person-who-asked-for-money/): ಕೆಲಸ ಇಲ್ಲದ ವೇಳೆ ಕಂಡಕoಡವರಲ್ಲಿ ಕಾಸು ಬೇಡುವ ಕಾರವಾರದ ಪ್ರಮೋದ ಲಮಾಣಿ ಅವರಿಗೆ ಅಪರಿಚಿತರೊಬ್ಬರು ಕೋಲಿನಿಂದ ಬಾರಿಸಿದ್ದಾರೆ. ಕಾರವಾರದ ಹರಿದೇವನಗರದ ಪ್ರಮೋದ ಮಹಾದೇವ ಲಮಾಣಿ (35) ಸದ್ಯ ಸರ್ವೋದಯನಗರದಲ್ಲಿ ವಾಸವಾಗಿದ್ದಾರೆ. ಅವರು ವೆಲ್ಡಿಂಗ್ ಕೆಲಸ ಮಾಡಿಕೊಂಡಿದ್ದಾರೆ. ಕೆಲಸ ಇಲ್ಲದ ಅವಧಿಯಲ್ಲಿ ಅವರು ಸಿಕ್ಕ ಸಿಕ್ಕವರಲ್ಲಿ ಕಾಸು ಕೇಳುತ್ತಾರೆ. ಗುರುತು-ಪರಿಚಯ ಇಲ್ಲದವರ ಬಳಿ ತೆರಳಿಯೂ ಅವರು `2 ಸಾವಿರ ರೂ ಕೊಡಿ’ ಎಂದು ಬೇಡುತ್ತಾರೆ. ನವೆಂಬರ್ 28ರ ರಾತ್ರಿ 11 ಗಂಟೆ ಸುಮಾರಿಗೆ ಪ್ರಮೋದ ಲಮಾಣಿ ಅವರು ಸರ್ವೋದಯನಗರದ ಗಣಪತಿ ದೇವಾಲಯದ ಬಳಿ ಹೋಗಿದ್ದರು. ಅಲ್ಲಿನ ಕಟ್ಟೆ ಮೇಲೆ ಅಪರಿಚಿತರೊಬ್ಬರು ಕೂತಿದ್ದರು. ಪ್ರಮೋದ ಲಮಾಣಿ ಅವರನ್ನು ಮಾತನಾಡಿಸಿದರು. ಕೊನೆಗೆ ತಮ್ಮ ಎಂದಿನ ಚಾಳಿಯಂತೆ `2 ಸಾವಿರ ರೂ ಸಹಾಯ ಮಾಡಿ’ ಎಂದು ಕೈ ವೊಡ್ಡಿದರು. ಇದರಿಂದ ಆ ಅಪರಿಚಿತನ ಸಿಟ್ಟು ನೆತ್ತಿಗೇರಿತು. ಪ್ರಮೋದ ಲಮಾಣಿ ಅವರನ್ನು ಉದ್ದೇಶಿಸಿ ಅವರು ಬೈಗುಳ ಶುರು ಮಾಡಿದರು. ಪ್ರಮೋದ ಲಮಾಣಿ ಅವರು ತಾವು ಯಾರಿಗೂ ಕಡಿಮೆ ಇಲ್ಲ ಎಂದು ಜಗಳಕ್ಕೆ ನಿಂತರು. ಈ ವೇಳೆ ಆ ಅಪರಿಚಿತರು ಅಲ್ಲಿಯೇ ಇದ್ದ ಕಟ್ಟಿಗೆಯಿಂದ ಪ್ರಮೋದ ಲಮಾಣಿ ಅವರಿಗೆ ಬಾರಿಸಿದರು. ಇದರಿಂದ ಪ್ರಮೋದ ಲಮಾಣಿ ಅವರ ಕೈಗೆ ನೋವಾಗಿದ್ದು, ಅವರು ಆಸ್ಪತ್ರೆ ಸೇರಿದರು. ಆಸ್ಪತ್ರೆಗೆ ಬಂದ ಪೊಲೀಸರಿಗೆ ಪ್ರಮೋದ ಲಮಾಣಿ ಆದ ವಿಷಯ ವಿವರಿಸಿದರು. ಆ ಅಪರಿಚಿತನಿಗೆ ಶಿಕ್ಷೆ ವಿಧಿಸಬೇಕು ಎಂದು ಒತ್ತಾಯಿಸಿದರು. ಸರ್ವೋದಯ ನಗರದಲ್ಲಿಯೇ ಅಡ್ಡಾಡುವ ಅಪರಿಚಿತನ ವಿರುದ್ಧ ದೂರು ನೀಡಿ, ಪ್ರಕರಣ ದಾಖಲಿಸಿದರು. - [ಶೌಚಾಲಯದಲ್ಲಿ ಜಾರಿಬಿದ್ದ ಸೈನಿಕ: ಸಾವು!](https://mobiletime.in/2025/11/soldier-dies-after-slipping-in-toilet/): ಭಾರತೀಯ ನೌಕಾನೆಲೆಯಲ್ಲಿ ಸೈನಿಕರಾಗಿದ್ದ ಮಹೇಂದ್ರ ಗಾಯಕವಾಡ ಅವರು ಶೌಚಾಲಯದಲ್ಲಿ ಜಾರಿ ಬಿದ್ದು ಸಾವನಪ್ಪಿದ್ದಾರೆ. ಮಹಾರಾಷ್ಟದ ಸಾಂಗ್ಲಿಯ ಮಹೇಂದ್ರ ವಿಠ್ಠಲ ಗಾಯವಾಡ (45) ಅವರು ಕಾರವಾರದಲ್ಲಿ ವಾಸವಾಗಿದ್ದರು. ಡಿಪೆನ್ಸ ಸಿವಿಲಿಯನ್ ವಿಭಾಗದಲ್ಲಿ ಕರ್ತವ್ಯದಲ್ಲಿದ್ದ ಅವರು ನವೆಂಬರ್ 29ರ ಬೆಳಗ್ಗೆ ಶೌಚಾಲಯದಲ್ಲಿ ಕುಸಿದು ಬಿದ್ದರು. ಅಸ್ವಸ್ಥಗೊಂಡಿದ್ದ ಅವರನ್ನು ಅಕ್ಕಪಕ್ಕದ ಜನ ನೋಡಿ ಆಸ್ಪತ್ರೆಗೆ ರವಾನಿಸಿದರು. ಅರಗಾದ ನೇವಲ್ ಬೇಸಿನ ಪತಂಜಲಿ ಆಸ್ಪತ್ರೆಗೆ ಮಹೇಂದ್ರ ಗಾಯಕವಾಡ ಅವರನ್ನು ಕರೆತರಲಾಯಿತು. ಆದರೆ, ತಪಾಸಣೆ ನಡೆಸಿದ ವೈದ್ಯರು ಈಗಾಗಲೇ ಮಹೇಂದ್ರ ಗಾಯಕವಾಡ ಅವರು ಸಾವನಪ್ಪಿದ ವಿಷಯ ಘೋಷಿಸಿದರು. ಪತಿಯ ಸಾವಿನ ಬಗ್ಗೆ ವೈಶಾಲಿ ಗಾಯಕವಾಡ ಅವರು ವರದಿ ಒಪ್ಪಿಸಿದ್ದು, ಕಾರವಾರ ಗ್ರಾಮೀಣ ಪೊಲೀಸ್ ಠಾಣೆಯವರು ಪ್ರಕರಣ ದಾಖಲಿಸಿದರು. - [ಕೊಳಕು ಊಟ ವಿತರಣೆ: ಮುಖ್ಯ ಶಿಕ್ಷಕರಿಗೆ ನೋಟಿಸು!](https://mobiletime.in/2025/11/dirty-meal-distribution-notice-to-the-head-teacher/): ಮುಂಡಗೋಡಿನ ಶಾಸಕರ ಮಾದರಿ ಶಾಲೆಯಲ್ಲಿ ಬಿಸಿಯೂಟ ಮಾಡಿ ಅಸ್ವಸ್ಥಗೊಂಡಿದ್ದ ಮಕ್ಕಳ ಆರೋಗ್ಯದಲ್ಲಿ ಚೇತರಿಕೆ ಕಾಣಿಸಿದೆ. ಅಸ್ವಸ್ಥಗೊಂಡಿದ್ದ 44 ಮಕ್ಕಳ ಪೈಕಿ 17 ಜನ ಗುಣಮುಖರಾಗಿ ಮನೆಗೆ ಮರಳಿದ್ದಾರೆ. ಶುಕ್ರವಾರ ಮಧ್ಯಾಹ್ನ ಶಾಸಕರ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ 452 ವಿದ್ಯಾರ್ಥಿ ಹಾಗೂ ಮೌಲಾನಾ ಆಜಾದ್ ಮಾದರಿ ಶಾಲೆಯ 235 ವಿದ್ಯಾರ್ಥಿಗಳು ಬಿಸಿಯೂಟ ಸೇವಿಸಿದ್ದರು. ಮೌಲಾನಾ ಆಜಾದ್ ಮಾದರಿ ಶಾಲೆಗೆ ಶಾಸಕರ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಿಂದಲೇ ಬಿಸಿಯೂಟ ಸರಬರಾಜು ಮಾಡಲಾಗುತ್ತಿದ್ದು, ಮೌಲಾನಾ ಆಜಾದ್ ಮಾದರಿ ಶಾಲೆಯ ಮಕ್ಕಳಿಗೆ ಯಾವುದೇ ಸಮಸ್ಯೆ ಆಗಿರಲಿಲ್ಲ. ಆದರೆ, ಶಾಸಕರ ಮಾದರಿ ಶಾಲೆಯಲ್ಲಿ ಬಿಸಿಯೂಟ ಸೇವಿಸಿದ ತಕ್ಷಣ 24 ಮಕ್ಕಳು ಹೊಟ್ಟೆನೋವಿನಿಂದ ಬಳಲಿದ್ದರು. ಅವರೆಲ್ಲರೂ ವಾಂತಿ ಮಾಡಿಕೊಂಡಿದ್ದು, ಅದಾದ ನಂತರ ಮತ್ತೆ 20 ವಿದ್ಯಾರ್ಥಿಗಳು ಅಸ್ವಸ್ಥರಾಗಿದ್ದರು. ಊಟದ ಪರಿಶೀಲನೆ ಮಾಡಿದಾಗ ಸಾಂಬಾರಿನಲ್ಲಿ ಇಲಿ ಹಿಕ್ಕಿ ಕಾಣಿಸಿತ್ತು. ಆ ಎಲ್ಲಾ ಮಕ್ಕಳನ್ನು ತಕ್ಷಣ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ವೈದ್ಯಾಧಿಕಾರಿ ಡಾ ನರೇಂದ್ರ ಪವಾರ್ ಅವರ ತಂಡ ಸ್ಥಳದಲ್ಲಿಯೇ ಬೀಡು ಬಿಟ್ಟಿದ್ದು, ಮಕ್ಕಳ ಆರೋಗ್ಯದ ಮೇಲೆ ವಿಶೇಷ ಗಮನ ನೀಡಿತು. ಪರಿಣಾಮ 17 ವಿದ್ಯಾರ್ಥಿಗಳು ಅದೇ ದಿನ ಚೇತರಿಸಿಕೊಂಡು ಮನೆ ಮುಟ್ಟಿದರು. ಅಧಿಕಾರಿಗಳು ಮಕ್ಕಳು ಸೇವಿಸಿದ ಬಿಸಿಯೂಟವನ್ನು ಶಾಲೆಯಿಂದ ಸಂಗ್ರಹಿಸಿ ಪರೀಕ್ಷೆಗಾಗಿ ಕಳುಹಿಸಿದ್ದು, ವರದಿ ಬರುವುದು ಬಾಕಿಯಿದೆ. ಈ ನಡುವೆ ಅಧಿಕಾರಿಗಳು ಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಡುಗೆ ಕೊಠಡಿ, ದಾಸ್ತಾನು ಕೊಠಡಿ, ಶೌಚಾಲಯ, ಕುಡಿಯುವ ನೀರಿನ ವ್ಯವಸ್ಥೆಯನ್ನು ಪರಿಶೀಲಿಸಿದ್ದಾರೆ. ಅವಘಡಕ್ಕೆ ಕಾರಣ ಕೇಳಿ ಶಾಲೆಯ ಮುಖ್ಯ ಶಿಕ್ಷಕರಿಗೆ ನೋಟಿಸ್ ಸಹ ನೀಡಲಾಗಿದೆ. - [ದೇವರ ಕೋಣೆಯಲ್ಲಿ ನೇತಾಡಿದ ಶವ!](https://mobiletime.in/2025/11/a-corpse-hanging-in-the-gods-room/): ಮನೆಯಲ್ಲಿದ್ದ ಮಗಳನ್ನು ಹೊರಗೆ ಕಳುಹಿಸಿದ ಆನಂದ ರಾವುತ್ ಅವರು ದೇವರ ಮನೆಗೆ ಹೋಗಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಶಾಲೆಗೆ ಹೋಗಿದ್ದ ಮತ್ತೊಬ್ಬ ಮಗಳು ಮನೆಗೆ ಬಂದಾಗ ತಂದೆಯ ಶವ ಕಾಣಿಸಿದ್ದು, ಅವರು ಅಲ್ಲಿಯೇ ಕುಸಿದು ಬಿದ್ದಿದ್ದಾರೆ. ಜೊಯಿಡಾದ ಜಗಲಪೇಟೆ ಜನತಾಪ್ಲಾಟಿನ ಆನಂದ ರಾವುತ್ (40) ಅವರು ವಾಸವಾಗಿದ್ದರು. ಅವರು ಅಪರ್ಣ ರಾವುತ್ ಅವರನ್ನು ವರಿಸಿದ್ದರು. ಮದುವೆ ಆಗುವ ಮುಂಚಿನಿoದಲೂ ಆನಂದ ರಾವುತ್ ಅವರಿಗೆ ಕೈ-ಕಾಲು ನಡುಗುವ ಕಾಯಿಲೆಯಿತ್ತು. ಅದಾಗಿಯೂ ಅವರು ಗೌಂಡಿ ಕೆಲಸ ಮಾಡಿ ಸಂಸಾರ ನಡೆಸುತ್ತಿದ್ದರು. ಕಟ್ಟಡ ಕೆಲಸಕ್ಕಾಗಿ ಅವರು ಕಳೆದ ವರ್ಷ ವಿದೇಶಕ್ಕೆ ಸಹ ಹೋಗಿದ್ದರು. ಆದರೆ, ದುಬೈನಲ್ಲಿ ಆರೋಗ್ಯ ಸಮಸ್ಯೆ ಹೆಚ್ಚಾದ ಕಾರಣ ಒಂದೇ ವರ್ಷದಲ್ಲಿ ಆನಂದ ರಾವುತ್ ಅವರು ಮನೆಗೆ ಮರಳಿದ್ದರು. ಇಲ್ಲಿ ಒಂದು ದಿನ ಕೆಲಸಕ್ಕೆ ಹೋದರೆ ಎರಡು ದಿನ ವಿಶ್ರಾಂತಿಪಡೆದು ಜೀವನ ನಡೆಸುತ್ತಿದ್ದರು. ಈಚೆಗೆ ಖಾನಾಪುರಕ್ಕೆ ಹೋಗಿದ್ದ ಅವರು ಅಲ್ಲಿನ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಒಳಗಾಗಿದ್ದರು. ಕೆಲ ದಿನಗಳ ಕಾಲ ತಮ್ಮ ಊರಾದ ಶಿರೊಳ್ಳಿಯಲ್ಲಿಯೇ ವಾಸವಾಗಿದ್ದರು. ಕಳೆದ 4 ದಿನದ ಹಿಂದೆ ಜೊಯಿಡಾದ ಜಗಲಪೇಟೆಗೆ ಆನಂದ ರಾವುತ್ ಅವರು ಮರಳಿ ಬಂದಿದ್ದರು. ನವೆಂಬರ್ 28ರಂದು ಪತ್ನಿ ಅಪರ್ಣ ರಾವುತ್ ಅವರು ಮಗಳನ್ನು ಶಾಲೆಗೆ ಬಿಡಲು ಹೋಗಿದ್ದರು. ಚಿಕ್ಕ ಮಗಳು ಮನೆಯಲ್ಲಿಯೇ ಇದ್ದು, ಆನಂದ ರಾವುತ್ ಅವರು ಆಕೆಯನ್ನು ಮನೆಯಿಂದ ಹೊರ ಕಳುಹಿಸಿದರು. ಅದಾದ ನಂತರ ದೇವರ ಕೋಣೆಗೆ ಹೋಗಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದರು. ಮನೆಗೆ ಮರಳಿದ ಅಪರ್ಣ ರಾವುತ್ ಹಾಗೂ ಮಕ್ಕಳು ಶವ ನೋಡಿ ಆಘಾತಕ್ಕೆ ಒಳಗಾದರು. - [ವಿಷ ಇದ್ದಿದ್ದು ಹಾವಿನಲ್ಲಲ್ಲ.. ಆತನ ತಲೆಯಲ್ಲಿ!](https://mobiletime.in/2025/11/the-poison-wasnt-in-the-snake-it-was-in-his-head/): ತೋಟದಲ್ಲಿ ಕೆಲಸ ಮಾಡುತ್ತಿದ್ದ ರಮೇಶ ಪಟಗಾರ ಅವರಿಗೆ ವಿಷಕಾರಿ ಅಲ್ಲದ ಹಾವು ಕಚ್ಚಿದ್ದು, ಹಾವು ಕಚ್ಚಿದ ಆತಂಕದಲ್ಲಿಯೇ ಅವರು ಆಸ್ಪತ್ರೆ ಸೇರಿದ್ದಾರೆ. ಆಸ್ಪತ್ರೆಯವರು 7 ಲಕ್ಷ ರೂ ಬಿಲ್ ಮಾಡಿದ್ದಾರೆ! ಕುಮಟಾದ ಕಾರಹಿತ್ಲಿನ ರಮೇಶ್ ಶಿವಯ್ಯ ಪಟಗಾರ ಅವರು ಹಣ್ಣೇಮಠದಲ್ಲಿ ವಾಸವಾಗಿದ್ದಾರೆ. 43 ವರ್ಷದ ಅವರು ಸಿದ್ದಾಪುರದಲ್ಲಿ ಕೆಲಸ ಮಾಡುವಾಗ ಧೂಳ್ ಬುಕ್ರಿ ಪ್ರಬೇದದ ಹಾವು ಕಚ್ಚಿದೆ. `ಆ ಹಾವು ವಿಷಕಾರಿ ಅಲ್ಲ’ ಎಂದರೂ ಅದು ರಮೇಶ ಪಟಗಾರ ಅವರ ತಲೆಗೆ ಹೋಗಿಲ್ಲ. ಹಾವು ಕಚ್ಚಿದ ಆತಂಕದಲ್ಲಿಯೇ ರಮೇಶ ಪಟಗಾರ ಅವರ ರಕ್ತದೊತ್ತಡ ಹೆಚ್ಚಾಗಿದೆ. ಭಯದಲ್ಲಿಯೇ ಅವರು ಪ್ರಜ್ಞೆ ತಪ್ಪಿ ಬಿದ್ದಿದ್ದಾರೆ. ಅದಾದ ನಂತರ ಕುಟುಂಬದವರು ರಮೇಶ ಪಟಗಾರ ಅವರನ್ನು ಕುಮಟಾ ಆಸ್ಪತ್ರೆಗೆ ತಂದಿದ್ದು, ನಂತರ ಅವರ ತಾಯಿ ಲಲಿತ ಪಟಗಾರ ಹಾಗೂ ಚಿಕ್ಕಪ್ಪ ಗಣಪತಿ ಪಟಗಾರ ಸೇರಿ ನೆರೆಜಿಲ್ಲೆಯ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಉಡುಪಿಯ ಕಸ್ತೂರಿ ಬಾ ಆಸ್ಪತ್ರೆಯಲ್ಲಿ ರಮೇಶ ಪಟಗಾರ ಅವರ ಸಂಬAಧಿಕರು ಮೊದಲು 40 ಸಾವಿರ ರೂ ಹಣ ಪಾವತಿಸಿದ್ದಾರೆ. ಅಲ್ಲಿ ಚಿಕಿತ್ಸೆ ನೀಡಿದ ವೈದ್ಯರು ಬೇರೆ ಆಸ್ಪತ್ರೆಗೆ ಶಿಫಾರಸ್ಸು ಮಾಡಿದ್ದಾರೆ. ಹೀಗಾಗಿ ಕುಟುಂಬದವರು ರಮೇಶ ಪಟಗಾರ ಅವರನ್ನು ಮಂಗಳೂರಿನ ಆಸ್ಪತ್ರೆಗೆ ಕಳುಹಿಸಿದ್ದಾರೆ. ಮಂಗಳೂರಿನ ಕೆ ಎಸ್ ಹೆಗಡೆ ಆಸ್ಪತ್ರೆಯವರು `ಹಾವು ಕಚ್ಚಿದ್ದರಿಂದ ಸಮಸ್ಯೆ ಆಗಿಲ್ಲ. ಹಾವು ಕಚ್ಚಿದಾಗ ಅವರು ಹೆದರಿದ್ದು ರಕ್ತದೊತ್ತಡ 280ಕ್ಕೆ ಏರಿಕೆಯಾಗಿದ್ದು, ಮೆದುಳಿನಲ್ಲಿ ರಕ್ತ ಸಂಚಾರ ತೀವೃವಾಗಿದೆ. ಹೀಗಾಗಿ ಸರ್ಜರಿ ಮಾಡಬೇಕು’ ಎಂದು ಹೇಳಿದ್ದಾರೆ. ಸರ್ಜರಿ ಮಾಡುವುದಕ್ಕಾಗಿ ರಮೇಶ ಪಟಗಾರ ಅವರನ್ನು ಕುಟುಂಬದವರು ಮಂಗಳೂರಿನ ಎ ಜೆ ಆಸ್ಪತ್ರೆಗೆ ಸಾಗಿಸಿದ್ದಾರೆ. ಅಲ್ಲಿ ಆಯುಷ್ಮಾನ್ ಕಾರ್ಡ, ಆರೋಗ್ಯ ಕಾರ್ಡ, ಬಿಪಿಎಲ್ ಕಾರ್ಡನ್ನು ರಮೇಶ ಪಟಗಾರ ಕುಟುಂಬದವರು ಕಾಣಿಸಿದ್ದು ಅದ್ಯಾವುದು ಅಲ್ಲಿ ಕೆಲಸಕ್ಕೆ ಬಂದಿಲ್ಲ. ತಾಳಿ ಉಂಗುರ ಅಡವಿಟ್ಟ ರಮೇಶ ಪಟಗಾರ ಅವರ ಕುಟುಂಬದವರು 3 ಲಕ್ಷ ರೂ ಹಣ ಕೂಡಿಸಿದ್ದಾರೆ. ಅದಾದ ನಂತರ ಚಿಕಿತ್ಸೆಗೆ ಮತ್ತೆ 4 ಲಕ್ಷ ರೂ ಹಣ ಅಗತ್ಯವಿರುವ ಬಗ್ಗೆ ವೈದ್ಯರು ಪತ್ರ ಕೊಟ್ಟಿದ್ದಾರೆ. ಮಂಗಳೂರಿನ ಬೇರೆ ಯಾವ ಆಸ್ಪತ್ರೆಯಲ್ಲಿಯೂ ಈ ಚಿಕಿತ್ಸೆ ನಡೆಸದ ಕಾರಣ ರಮೇಶ ಪಟಗಾರ ಕುಟುಂಬದವರು ಹಣ ಹೊಂದಿಸಲಾಗದೇ ಪರದಾಡುತ್ತಿದ್ದಾರೆ. ಈ ಎಲ್ಲಾ ವಿಷಯ ಅರಿತ ಜನಸಾಮಾನ್ಯರ ಸಮಾಜ ಕಲ್ಯಾಣ ಕೇಂದ್ರದ ಆಗ್ನೇಲ್ ರೋಡ್ರಿಗಸ್ ಅವರು ನೆರವು ಕೋರಿ ಆರೋಗ್ಯ ಸಚಿವರಿಗೆ ಪತ್ರ ಬರೆದಿದ್ದಾರೆ. ರಮೇಶ ಪಟಗಾರ ಅವರ ಪತ್ನಿಯೂ ಆಸ್ಪತ್ರೆಗೆ ದಾಖಲಾಗಿರುವ ವಿಷಯವನ್ನು ಅವರು ವಿವರಿಸಿದ್ದಾರೆ. ಸಾಮಾಜಿಕ ಕಾರ್ಯಕರ್ತ ಸುಧಾಕರ ನಾಯ್ಕ ಹಾಗೂ ನಿವೃತ್ತ ಅಧಿಕಾರಿ ನಾಗೇಶ ಅವರು ಸಹಾಯ ಕೋರಿ ಸಚಿವರಿಗೆ ಮನವಿ ಮಾಡಿದ್ದಾರೆ. - [ಆರೋಪದ ಹಿಂದೆ ಕುತಂತ್ರ!](https://mobiletime.in/2025/11/there-is-a-cunning-behind-the-accusation/): ದುಷ್ಟರ ಪಾಲಿಗೆ ದುಸ್ವಪ್ನವಾಗಿರುವ ಅಂಕೋಲಾ ಪಿಐ ಚಂದ್ರಶೇಖರ ಮಠಪತಿ ಅವರ ವಿರುದ್ಧ ಪುರಸಭೆ ಮಾಜಿ ಸದಸ್ಯ ಸಂದೀಪ ಬಂಟ್ ಅವರು ಹಪ್ತಾ ವಸೂಲಿ ಆರೋಪ ಮಾಡಿದ್ದಾರೆ. ಆದರೆ, ಈ ಆರೋಪಕ್ಕೆ ಪೂರಕವಾದ ದಾಖಲೆ ಒದಗಿಸದ ಕಾರಣ ಆರೋಪದ ಹಿಂದೆ ಕಾಣದ ಕೈಗಳು ಕೆಲಸ ಮಾಡಿದ ಅನುಮಾನವ್ಯಕ್ತವಾಗುತ್ತಿದೆ. ಒಂದುವರೆ ವರ್ಷದ ಹಿಂದೆ ಅಂಕೋಲಾ ಪೊಲೀಸ್ ಠಾಣೆಗೆ ಬಂದ ಚಂದ್ರಶೇಖರ ಮಠಪತಿ ಅವರು ಅನೇಕ ಅಪರಾಧ ಪ್ರಕರಣಗಳನ್ನು ಬೇದಿಸಿದ್ದಾರೆ. ಹಲವು ಅಕ್ರಮಗಳಿಗೆ ಅವರು ಕಡಿವಾಣ ಹಾಕಿದ್ದಾರೆ. ಕಾನೂನುಬಾಹಿರವಾಗಿ ನಡೆಯುವ ಕೆಲಸಗಳ ಮೇಲೆ ಅವರು ಕಣ್ಣಿಟ್ಟಿದ್ದು, ಬೀಟ್ ಪೊಲೀಸ್ ವ್ಯವಸ್ಥೆಯನ್ನು ಬಲಗೊಳಿಸಿದ್ದಾರೆ. ಸಣ್ಣ ಸುಳಿವು ಆಧರಿಸಿ ದೊಡ್ಡ ದೊಡ್ಡ ಪ್ರಕರಣಗಳನ್ನು ಬೇದಿಸಿದಕ್ಕಾಗಿ ಅನೇಕ ಸನ್ಮಾನ-ಬಿರುದುಗಳು ಸಹ ಅವರಿಗೆ ದೊರೆತಿದೆ. ಕಳೆದ ಒಂದುವರೆ ವರ್ಷದಲ್ಲಿ ಚಂದ್ರಶೇಖರ ಮಠಪತಿ ಅವರು 42ಕ್ಕೂ ಅಧಿಕ ಮಟ್ಕಾ ದಾಳಿ ನಡೆಸಿದ್ದಾರೆ. ಗೂಡಗಂಡಿಕಾರರಿ0ದಹಿಡಿದು ಮಟ್ಕಾಬುಕ್ಕಿಯವರೆಗೆ ಮುಲಾಜಿಲ್ಲದೇ ಪ್ರಕರಣ ದಾಖಲಿಸಿದ್ದಾರೆ. ಪ್ರಭಾವಿಗಳ ಒತ್ತಡಕ್ಕೂ ಮಣಿಯದೇ ಆರೋಪಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಿದ್ದಾರೆ. ಸಾಮಾನ್ಯವಾಗಿ ಪೊಲೀಸರು ಮಟ್ಕಾ ದಾಳಿ ನಡೆಸಿದಾಗ ಒಂದು ಬಾಲ್ ಪೆನ್ನಿನ ಜೊತೆ 500ರಿಂದ 600ರೂ ಹಣ ಮಾತ್ರ ಸಿಗುತ್ತದೆ. ಆದರೆ, ನವೆಂಬರ್ 26ರಂದು ಚಂದ್ರಶೇಖರ ಮಠಪತಿ ಅವರು ಕೇಣಿಯಲ್ಲಿನ ಅಂಗಡಿ ಮೇಲೆ ದಾಳಿ ನಡೆಸಿದಾಗ 17 ಸಾವಿರ ರೂ ಮಟ್ಕಾ ಹಣ ಸಿಕ್ಕಿದ್ದು, ಸಿಕ್ಕಿಬಿದ್ದ  ಶ್ಯಾಮ ಬಂಟ್ ಅವರು `ಮಟ್ಕಾ ಬುಕ್ಕಿ ಸಂದೀಪ ಬಂಟ್ ಅವರ ಸೂಚನೆ ಮೇರೆಗೆ ಈ ಆಟ ಆಡಿಸುತ್ತಿದ್ದೇನೆ’ ಎಂದು ಬಾಯ್ಬಿಟ್ಟಿದ್ದಾರೆ. ಈ ಹಿನ್ನಲೆ ಸಂದೀಪ ಬಂಟ್ ಅವರನ್ನು ಮಟ್ಕಾ ಬುಕ್ಕಿ ಎಂದು ಗುರುತಿಸಿ ಪಿಐ ಚಂದ್ರಶೇಖರ ಮಠಪತಿ ಅವರು ಪ್ರಕರಣ ದಾಖಲಿಸಿದ್ದಾರೆ. ಮಟ್ಕಾ ಪ್ರಕರಣದಲ್ಲಿ ಸಂದೀಪ ಬಂಟ್ ಅವರು ಆರೋಪಿ ಸ್ಥಾನಕ್ಕೇರಿರುವುದು ಇದೇ ಮೊದಲಲ್ಲ. ಚಂದ್ರಶೇಖರ ಮಠಪತಿ ಅವರು ಅಂಕೋಲಾ ಪೊಲೀಸ್ ಠಾಣೆಗೆ ಬರುವ ಮುನ್ನವೇ ಪೊಲೀಸ್ ದಾಖಲೆಗಳ ಪ್ರಕಾರ ಮಟ್ಕಾ ಬುಕ್ಕಿಯಾಗಿ ಗುರುತಿಸಿಕೊಂಡಿದ್ದ ಸಂದೀಪ ಬಂಟ್ ಅವರು ಇದೀಗ ಚಂದ್ರಶೇಖರ ಮಠಪತಿ ಅವರು ತಮ್ಮ ವಿರುದ್ಧ ಮತ್ತೊಮ್ಮೆ ಪ್ರಕರಣ ದಾಖಲಿಸಿದ ಕಾರಣ ಅವರ ವಿರುದ್ಧ ಆರೋಪ ಮಾಡಿದ್ದಾರೆ ಎಂಬುದು ಪೊಲೀಸ್ ವಲಯದಲ್ಲಿ ಕೇಳಿಸಿದ ಮಾತು. ಸಂದೀಪ ಬಂಟ್ ಅವರ ವಿರುದ್ಧ ಈ ಹಿಂದೆ ದಾಖಲಾಗಿದ್ದ ಪ್ರಕರಣಗಳಲ್ಲಿ `ಬಿ ರಿಪೋರ್ಟ’ ಸಲ್ಲಿಕೆಯಾಗಿದ್ದು, ಈ ಪ್ರಕರಣದಲ್ಲಿ `ಬಿ ರಿಪೋರ್ಟ’ ಸಲ್ಲಿಕೆ ಸಾಧ್ಯತೆಗಳಿಲ್ಲದ ಕಾರಣ ಪೊಲೀಸರ ವಿರುದ್ಧ ಆರೋಪ ಮಾಡಿದ ಬಗ್ಗೆ ಮಾತುಗಳಿವೆ. ಹೀಗಾಗಿ ಮಾಧ್ಯಮದವರು ಸಹ `ಆರೋಪಕ್ಕೆ ತಕ್ಕ ದಾಖಲೆ ಒದಗಿಸಿ’ ಎಂದು ಕೇಳಿದ್ದು, ಸಂದೀಪ ಬಂಟ್ ಅವರು ದಾಖಲೆ ನೀಡಿಲ್ಲ. `ಪೊಲೀಸರು ನನ್ನಲ್ಲಿಯೂ ಹಪ್ತಾ ಕೇಳಿದ್ದಾರೆ’ ಎಂದು ಸಂದೀಪ ಬಂಟ್ ಅವರು ಹೇಳಿದ್ದು, ಜನಪ್ರತಿನಿಧಿಯಾಗಿ ಅನುಭವಹೊಂದಿರುವ ಅವರು ಆ ಅವಧಿಯಲ್ಲಿಯೇ ಕಾನೂನಿನ ಪ್ರಕಾರ ದಾಖಲೆಗಳ ಜೊತೆ ಮೇಲಧಿಕಾರಿಗಳಾದ ಪೊಲೀಸ್ ಅಧೀಕ್ಷಕರಿಗೆ ಏಕೆ ದೂರು ಏಕೆ ದಾಖಲಿಸಲಿಲ್ಲ? ಎಂಬ ಪ್ರಶ್ನೆಗೂ ಉತ್ತರವಿಲ್ಲ. - [ಅರಣ್ಯ ಹಕ್ಕು ಅನುಷ್ಠಾನದಲ್ಲಿ ಸರ್ಕಾರದ ವೈಫಲ್ಯ](https://mobiletime.in/2025/11/governments-failure-in-implementing-forest-rights/): ಅರಣ್ಯ ಹಕ್ಕು ಮಾನ್ಯತೆ ಕಾಯ್ದೆಯ ಅನುಷ್ಠಾನದಲ್ಲಿ ರಾಜ್ಯದ ವೈಫಲ್ಯದ ಬಗ್ಗೆ ಅರಣ್ಯವಾಸಿಗಳ ರಾಜ್ಯ ಒಕ್ಕೂಟ ಕಳವಳವ್ಯಕ್ತಪಡಿಸಿದೆ. ಯಲ್ಲಾಪುರದ ಟೀಡ್ ಟ್ರಸ್ಟಿನ ಸಭಾಂಗಣದಲ್ಲಿ ಸಭೆ ನಡೆಸಿದ ಅರಣ್ಯ ಹಕ್ಕು ಹೋರಾಟ ಸಮಿತಿಗಳ ರಾಜ್ಯ ಒಕ್ಕೂಟದ ಕಾರ್ಯಕಾರಿ ಸಮಿತಿಯು ರಾಜ್ಯ ಸಂಚಾಲಕ ಚಂದ್ರಕಾAತ ಕೊಚರೇಕರ ಅವರು ಅರಣ್ಯ ಹಕ್ಕು ಮಾನ್ಯತೆ ಕಾಯ್ದೆಯ ಅನುಷ್ಠಾನದಲ್ಲಿನ ರಾಜ್ಯದ ವೈಫಲ್ಯದ ಬಗ್ಗೆ ಮಾತನಾಡಿದ್ದಾರೆ. `ಪಶ್ಚಿಮಘಟ್ಟ ಮತ್ತು ಅದರ ಅಂಚಿನಲ್ಲಿರುವ ಬಹುತೇಕ ಎಲ್ಲ ಸಮುದಾಯಗಳ ಜನರೂ ಸಹ ಸ್ವಾತಂತ್ರ ಪೂರ್ವದಿಂದ ತಮ್ಮ ಆಹಾರ ಮತ್ತು ಜೀವನೋಪಾಯಕ್ಕೆ ಅರಣ್ಯ ಉತ್ಪನ್ನಗಳನ್ನು ಹಾಗೂ ಅರಣ್ಯ ಭೂಮಿಯನ್ನು ಅವಲಂಬಿಸಿದ್ದರು. ಅಕ್ಕಿಯ ಬದಲಿಗೆ ಅರಣ್ಯದಲ್ಲಿ ಬೆಳೆಯುವ ಅನೇಕ ಗಡ್ಡೆಗೆಣಸು, ತಾಳೆಹಿಟ್ಟು, ಬಿದಿರುಭತ್ತ ಈ ಪ್ರದೇಶದ ಜನರ ಆಹಾರವಾಗಿತ್ತು. ರಾಣಿ ಚೆನ್ನಭೈರಾದೇವಿಯ ಕಾಲದಿಂದಲೂ ಉತ್ತರ ಕನ್ನಡ ಮತ್ತು ಶಿವಮೊಗ್ಗ ಜಿಲ್ಲೆಯ ಬಹುತೇಕ ಜನರು ಜೀವನೋಪಾಯಕ್ಕೆ ಕಾಳುಮೆಣಸು, ಜುಮ್ಮನಕಾಯಿ ಮತ್ತು ಅಮೃತಬಳ್ಳಿಸಹಿತ ವಿವಿಧ ಔಷಧಿ ಸಸ್ಯಗಳನ್ನು ಬಳಸುತ್ತಿದ್ದರು. ಈ ಬಗ್ಗೆ ಜಿಲ್ಲೆಯ ಗೆಜೆಟಿಯರಿನಲ್ಲಿ ಸಹ ಉಲ್ಲೇಖವಿದೆ’ ಎಂದವರು ಗಮನಸೆಳೆದಿದ್ದಾರೆ. ಹೀಗಿರುವಾಗ `ಅರಣ್ಯ ಹಕ್ಕುಕಾಯ್ದೆಯು ಅರಣ್ಯವಾಸಿಗಳ ಪರವಾಗಿದ್ದರೂ ಸಹ ಅರಣ್ಯವಾಸಿಗಳಿಗೆ ಭೂಮಿಯ ಹಕ್ಕು ನೀಡಲು ನಮ್ಮ ರಾಜ್ಯದಲಿ ್ಲಮೀನಮೇಷ ಮಾಡುತ್ತಿರುವುದು ಏಕೆ?’ ಎಂದವರು ಪ್ರಶ್ನಿಸಿದ್ದಾರೆ `ವಸತಿ ಮತ್ತು ಜೀವನೋಪಾಯಕ್ಕೆ ಅರಣ್ಯ ಭೂಮಿಯನ್ನು ಅವಲಂಬಿಸಿರುವ ರಾಜ್ಯದ ಜನರಿಗೆ ಅರಣ್ಯ ಹಕ್ಕು ಕಾಯ್ದೆಯಡಿ ಭೂಮಿಯ ಹಕ್ಕು ಸಹಿತ ಗರಿಷ್ಠ ಸೌಲಭ್ಯ ದೊರಕಿಸಿಕೊಡುವಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರ ಅಗತ್ಯ ಚಿಂತನೆ ಮಾಡಬೇಕು. ಅಗತ್ಯವಿದ್ದರೆ ಅರಣ್ಯ ಹಕ್ಕು ಕಾಯ್ದೆಯ ಇತರ ಪಾರಂಪರಿಕ ಅರಣ್ಯವಾಸಿ ವ್ಯಾಖ್ಯೆಯ ಮೂರು ತಲೆಮಾರಿನ ವಿವರಣೆಗೆ ಅಗತ್ಯ ತಿದ್ದುಪಡಿ ತರಬೇಕು’ ಎಂದವರು ಆಗ್ರಹಿಸಿದ್ದಾರೆ. `ಅರಣ್ಯ ಹಕ್ಕುಕಾಯ್ದೆಯ ಅನುಷ್ಠಾನದಲ್ಲಿ ಕರ್ನಾಟಕ ರಾಜ್ಯವು ದೇಶದಲ್ಲಿ ಕೊನೆಯ ಸ್ಥಾನದಲ್ಲಿದೆ’ ಎಂಬ ವಿಷಯವನ್ನು ಅವರು ತೆರೆದಿಟ್ಟಿದ್ದಾರೆ. ಒಕ್ಕೂಟದ ಕಾರ್ಯಕಾರಿ ಸದಸ್ಯರಾದ ದಾವಣಗೆರೆಯ ಕೆ ವಿ ರೂಪಾ ನಾಯ್ಕ, ಶ್ರೀಧರ ಮಲೆಕುಡಿಯ, ಟೀಡ್ ಟ್ರಸ್ಟಿನ ಮೋಹಿನಿ ಎಸ್ ಪೂಜಾರಿ, ರಾಮನಾಥ ಸಿದ್ಧಿ, ಲೋಕೇಶ ಗೌಡ, ಉಡುಪಿಯ ಅಶೋಕ ಶೆಟ್ಟಿ, ಮಂಜುನಾಥ ಸಿ.ಶಾಸ್ತ್ರಿ, ಗುತ್ತೇವ್ವಾ ಮಣ್ಣೂರು, ಕಾಮಕ್ಷಿ ರಾಯ್ಕರ ಇನ್ನಿತರರು ಈ ಚರ್ಚೆಯಲ್ಲಿ ಭಾಗವಹಿಸಿ, ನಿರ್ಣಯ ಮಂಡಿಸಿದ್ದಾರೆ. - [ವಿವಾಹಿತೆ ಬಾಳಿಗೆ ವಿಷವಾದ ಕಳೆನಾಶಕ!](https://mobiletime.in/2025/11/a-married-woman-is-a-poisonous-weed-killer/): ಮನಸ್ಸಿಗೆ ಬೇಸರವಾದ ಕಾರಣ ನಾಗರತ್ನ ನಾಯ್ಕ ಅವರು ಕಳೆನಾಶಕ ಕುಡಿದಿದ್ದಾರೆ. ಮಣಿಪಾಲ್ ಕಸ್ತೂರಿ ಬಾ ಆಸ್ಪತ್ರೆಯಲ್ಲಿ ಅವರು ಕೊನೆಯುಸಿರೆಳೆದಿದ್ದಾರೆ. ಕುಮಟಾದ ನಾಗರತ್ನ ನಾಯ್ಕ (28) ಅವರು ಗೌರಸ್ಕಿ ಬಳಿಯ ನಾಗೂರಿನ ಲೋಹಿತ ನಾಯ್ಕ ಅವರನ್ನು ಮದುವೆ ಆಗಿದ್ದರು. 2018ರಿಂದ 2025ರವರೆಗೂ ಅವರು ಸುಂದರ ಸಂಸಾರ ನಡೆಸಿದ್ದರು. ಈ ನಡುವೆ ನಾಗರತ್ನ ನಾಯ್ಕ ಅವರು ಮಾನಸಿಕವಾಗಿ ಕುಗ್ಗಿದ್ದರು. ಅವರ ಬೇಸರಕ್ಕೆ ಕಾರಣ ಏನು? ಎಂದು ಯಾರಿಗೂ ಹೇಳಿರಲಿಲ್ಲ. ನವೆಂಬರ್ 26ರಂದು ಸಹ ಬೇಸರದಲ್ಲಿದ್ದ ಅವರು ಕಳೆನಾಶಕ ಸೇವಿಸಿದರು. ಇದನ್ನು ಗಮನಿಸಿದ ಕುಟುಂಬದವರು ನಾಗರತ್ನ ನಾಯ್ಕ ಅವರನ್ನು ಕುಮಟಾ ಸರ್ಕಾರಿ ಆಸ್ಪತ್ರೆಗೆ ಸೇರಿಸಿದರು. ಅಲ್ಲಿನ ವೈದ್ಯರು ಉನ್ನತ ಮಟ್ಟದ ಚಿಕಿತ್ಸೆಗೆ ಶಿಫಾರಸ್ಸು ಮಾಡಿದ ಕಾರಣ ಮಣಿಪಾಲ್ ಕಸ್ತೂರಿಬಾ ಆಸ್ಪತ್ರೆಗೆ ದಾಖಲಿಸಿದರು. ನವೆಂಬರ್ 26ರಿಂದ ಕಸ್ತೂರಿಬಾ ಆಸ್ಪತ್ರೆಯಲ್ಲಿ ಆರೈಕೆಯಲ್ಲಿದ್ದ ನಾಗರತ್ನ ನಾಯ್ಕ ಅವರು ಚಿಕಿತ್ಸೆಗೆ ಸರಿಯಾಗಿ ಸ್ಪಂದಿಸಲಿಲ್ಲ. ನವೆಂಬರ್ 28ರಂದು ಅವರು ಕೊನೆಯುಸಿರೆಳೆದರು. ಈ ಸಾವಿನ ಬಗ್ಗೆ ಮಿರ್ಜಾನಿನ ನಾರಾಯಣ ನಾಯ್ಕ ಅವರು ಪೊಲೀಸರಿಗೆ ತಿಳಿಸಿದ್ದು, ಕುಮಟಾ ಪೊಲೀಸರು ಪ್ರಕರಣ ದಾಖಲಿಸಿದರು. - [ಕಣ್ಮುಂದೆ ಕಾಣುವ ಶಾಲೆಯೂ 2ಕಿಮೀ ದೂರ!](https://mobiletime.in/2025/11/the-school-in-sight-is-2-km-away/): ಕಳೆದ ಎಂಟು ವರ್ಷಗಳಿಂದ ಕರಾವಳಿ ಭಾಗದಲ್ಲಿ ನಡೆಯುತ್ತಿರುವ ಹೆದ್ದಾರಿ ಅಗಲೀಕರಣ ಕಾಮಗಾರಿ ಜನರಿಗೆ ಅನುಕೂಲ ಮಾಡಿಕೊಡುವುದಕ್ಕಿಂತಲೂ ಹೆಚ್ಚಿನ ಅನಾನುಕೂಲ ಮಾಡುತ್ತಿದೆ. ಅರೆಬರೆ ಹೆದ್ದಾರಿ ಕಾಮಗಾರಿ ಪರಿಣಾಮ ಹೊನ್ನಾವರದಲ್ಲಿ ಹೆದ್ದಾರಿ ಅಂಚಿನಲ್ಲಿರುವ ಶಾಲೆಗೆ ತೆರಳಬೇಕು ಎಂದರೂ ಮಕ್ಕಳು 2 ಕಿಮೀ ನಡೆಯುವುದು ಅನಿವಾರ್ಯವಾಗಿದೆ. ರಾಷ್ಟಿಯ ಹೆದ್ದಾರಿ ಅಗಲೀಕರಣ ಜವಾಬ್ದಾರಿವಹಿಸಿಕೊಂಡಿರುವ ಐ ಆರ್ ಬಿ ಕಂಪನಿ ಕೆಲಸವನ್ನು ಸರಿಯಾಗಿ ಮಾಡುತ್ತಿಲ್ಲ. ಹೊನ್ನಾವರ ನಗರದಲ್ಲಿ ಸರ್ವೀಸ್ ರಸ್ತೆ ಬಿಡಲಿಲ್ಲ. ನಗರದೊಳಗೆ ಹೋಗುವ ಉಪರಸ್ತೆಯನ್ನು ಸರಿಪಡಿಸಿಲ್ಲ. ಶರಾವತಿ ಸರ್ಕಲ್ ಬಳಿ ಕೆಳಗಿನ ಪಾಳ್ಯ ಕೇರಿಗೆ ಹೋಗಲು ಪಟ್ಟಣ ಪಂಚಾಯತ್ ಮೆಟ್ಟಿಲುಗಳನ್ನು ನಿರ್ಮಿಸಿದ್ದು, ಆ ಮೆಟ್ಟಿಲುಗಳನ್ನು ಐ ಆರ್ ಬಿ ಕಂಪನಿ ಮುಚ್ಚಿ ಹಾಕಿದೆ! ಅಲ್ಲಿನ ಇಳಿಜಾರಿನಲ್ಲಿರುವ 20 ಮನೆಯವರು ಇದರಿಂದ ಸಮಸ್ಯೆ ಅನುಭವಿಸುತ್ತಿದ್ದಾರೆ. ವಯೋವೃದ್ಧರು ಹಾಗೂ ಮಕ್ಕಳು ಸಾಕಷ್ಟು ಸಮಸ್ಯೆಗೆ ಸಿಲುಕಿದ್ದಾರೆ. ಇದೇ ಸ್ಥಳದಲ್ಲಿ ಬುದ್ದಿಮಾಂದ್ಯ ಮಕ್ಕಳ ಶಾಲೆಯೂ ಇದ್ದು, ಹೊನ್ನಾವರ-ಕುಮಟಾಗಳಿಂದ 25 ಮಕ್ಕಳು ಅಲ್ಲಿಗೆ ಬರುತ್ತಾರೆ. ಹೆದ್ದಾರಿ ಪಕ್ಕವೇ ಶಾಲೆಯಿದ್ದರೂ ಹೆದ್ದಾರಿ ಮೇಲ್ದರ್ಜೆಗೆ ಹೋಗಿದ್ದರಿಂದ ಶಾಲೆ-ಮನೆಗಳು 50 ಅಡಿ ಆಳಕ್ಕೆ ತಲುಪಿದೆ. ಇಳಿಯುವ ಮೆಟ್ಟಿಲಿನ ಜೊತೆ ರೇಲಿಂಗ್‌ನ್ನು ಐ ಆರ್ ಬಿ ಕಂಪನಿ ಮುಚ್ಚಿ ಹಾಕಿದೆ. ಹೀಗಾಗಿ ಮಕ್ಕಳು 2ಕಿಮೀ ಸುತ್ತುವರೆದು ಶಾಲೆಗೆ ಬರುವ ಪರಿಸ್ಥಿತಿ ಬಂದಿದೆ. - [2025 ನವೆಂಬರ್ 29ರ ದಿನ ಭವಿಷ್ಯ](https://mobiletime.in/2025/11/prediction-for-november-29-2025/): ಮೇಷ ರಾಶಿ: ನಿತ್ಯದ ಕೆಲಸದಲ್ಲಿ ತೊಂದರೆ ಆಗುವ ಸಾಧ್ಯತೆಗಳಿವೆ. ನಿರೀಕ್ಷಿತ ಲಾಭ ಸಿಗುವುದಿಲ್ಲ. ಶತ್ರುಗಳ ಕಾಟ ಜೋರಾಗಲಿದೆ. ಶನಿದೇವನ ಪೂಜೆಯಿಂದ ಉತ್ತಮ ಫಲಗಳು ದೊರೆಯುತ್ತವೆ. ಆರ್ಥಿಕ ವಿಷಯಗಳಲ್ಲಿ ಜಾಗ್ರತೆ ಅಗತ್ಯ. ವೃಷಭ ರಾಶಿ: ನಿಮ್ಮ ಆರ್ಥಿಕ ಸ್ಥಿತಿ ಬಲಗೊಳ್ಳುತ್ತದೆ. ಹೊಸ ಆದಾಯದ ಅವಕಾಶಗಳು ಸಿಗುತ್ತದೆ. ಕುಟುಂಬ ಸದಸ್ಯರೊಂದಿಗೆ ಸಂತೋಷದ ದಿನ ಕಳೆಯುವಿರಿ. ವೃತ್ತಿಯಲ್ಲಿ ಸವಾಲು ಎದುರಾದರೂ ಯಶಸ್ಸು ಸಿಗಲಿದೆ. ಮಿಥುನ ರಾಶಿ: ವೃತ್ತಿಪರ ಜೀವನದಲ್ಲಿ ಪ್ರಗತಿ ಕಂಡುಬರುತ್ತದೆ. ಆರ್ಥಿಕ ಲಾಭಕ್ಕೆ ಸಹಕಾರ ಸಿಗಲಿದೆ. ಕುಟುಂಬದಲ್ಲಿ ಒಗ್ಗಟ್ಟು ಮೂಡಲಿದೆ. ಪ್ರಯಾಣಗಳು ಶುಭ ಫಲ ನೀಡುತ್ತವೆ. ಕರ್ಕ ರಾಶಿ: ಭಾವನಾತ್ಮಕ ಸಮತೋಲನ ಮುಖ್ಯ. ಉದ್ಯೋಗದಲ್ಲಿ ಕಷ್ಟಪಟ್ಟರೆ ಮಾತ್ರ ಫಲ ಸಿಗುತ್ತದೆ. ತಾಯಿಯ ಆರೋಗ್ಯದ ಬಗ್ಗೆ ಗಮನಹರಿಸಿ. ವಿದ್ಯಾರ್ಥಿಗಳು ಚಿಂತೆಯಿAದ ಮುಕ್ತರಾಗುತ್ತಾರೆ. ಸಿಂಹ ರಾಶಿ: ಅನೀರಿಕ್ಷಿತ ಹಣಕಾಸು ನಷ್ಟ ಆಗಲಿದೆ. ಸಾಲ ಕೊಡಬೇಡಿ. ಸರ್ಕಾರಿ ಕೆಲಸಗಳಲ್ಲಿ ಪ್ರಗತಿ ಕಂಡುಬರುತ್ತದೆ. ಪ್ರಭಾವಶಾಲಿ ವ್ಯಕ್ತಿಗಳ ಸಂಪರ್ಕ ಸಹಾಯಕವಾಗಲಿದೆ. ದುರಭ್ಯಾಸಗಳಿಂದ ದೂರವಿರದಿದ್ದರೆ ದಾಂಪತ್ಯ ಜೀವನದಲ್ಲಿ ಒಳ ಜಗಳ ಆಗಲಿದೆ. ಕನ್ಯಾ ರಾಶಿ: ಕೆಲಸದಲ್ಲಿ ಅಡೆತಡೆ ಎದುರಾಗಲಿದೆ. ಅದಾಗಿಯೂ, ಬಾಕಿ ಕಾರ್ಯಗಳು ಪೂರ್ಣಗೊಳ್ಳುತ್ತವೆ. ಅತಿಥಿಗಳ ಆಗಮನದಿಂದ ಸಂತೋಷ ಸಿಗಲಿದೆ. ಬುದ್ಧಿವಂತಿಕೆ ಬಳಸಿದರೆ ಸಮಸ್ಯೆ ಬಗೆಹರಿಯಲಿದೆ. ತುಲಾ ರಾಶಿ: ಉದ್ಯೋಗ ಅವಕಾಶಗಳು ಇನ್ನಷ್ಟು ವಿಳಂಬವಾಗಲಿದೆ. ಆರ್ಥಿಕ ಬಿಕ್ಕಟ್ಟು ಎದುರಾಗದಂತೆ ಜಾಗ್ರತೆವಹಿಸಿ. ಶನಿ ಪೂಜೆಯಿಂದ ಫಲಗಳು ಸಿಗುತ್ತವೆ. ಬೇರೆಯವರಿಗೆ ಸಹಾಯ ಮಾಡಲು ಪ್ರಯತ್ನಿಸಿ ವೃಶ್ಚಿಕ ರಾಶಿ: ಆರ್ಥಿಕ ಲಾಭ ಹೆಚ್ಚಾಗಲಿದೆ. ಕಚೇರಿ ಕೆಲಸದಲ್ಲಿ ಮೆಚ್ಚುಗೆ ಸಿಗಲಿದೆ. ಕುಟುಂಬದ ಬೆಂಬಲ ಪಡೆದು ಕೆಲಸ ಮಾಡಿ. ಪ್ರೀತಿಪಾತ್ರರೊಂದಿಗೆ ಸಮಯ ಕಳೆಯಿರಿ. ಸಮಾಜದಲ್ಲಿ ಗೌರವ ಸಿಗಲಿದೆ. ಧನು ರಾಶಿ: ವೃತ್ತಿಯಲ್ಲಿನ ದೃಢತೆಯಿಂದ ಯಶಸ್ಸು ಖಚಿತ. ಹಣಕಾಸಿನಲ್ಲಿ ಜಾಗರೂಕತೆ ಅಗತ್ಯ. ಉದ್ಯೋಗದಲ್ಲಿ ಉತ್ತಮ ಫಲಿತಾಂಶ ಸಿಗಲಿದೆ. ಕುಟುಂಬದಲ್ಲಿ ಶುಭ ಕಾರ್ಯಗಳು ನಡೆಯಲಿದೆ. ಆರೋಗ್ಯ ಚನ್ನಾಗಿರಲಿದೆ. ಮಕರ ರಾಶಿ: ಸರ್ಕಾರಿ ಕೆಲಸಗಳು ವಿಳಂಬವಾಗಲಿದೆ. ವಿರೋಧಿಗಳು ಹೆಚ್ಚಾಗಲಿದ್ದಾರೆ. ವಾಹನ ಖರೀದಿಗೆ ಒಳ್ಳೆ ದಿನ ಅಲ್ಲ. ಶನಿಸ್ತೋತ್ರ ಪಠಣ ನಿಮಗೆ ಉಪಯುಕ್ತ. ಆರೋಗ್ಯದ ಕಡೆಯೂ ಗಮನಹರಿಸಿ. ಕುಂಭ ರಾಶಿ: ಆರೋಗ್ಯ ಸಮಸ್ಯೆ ನಿಮ್ಮನ್ನು ಕಾಡಲಿದೆ. ಕೃಷಿ ಕೆಲಸದಲ್ಲಿ ಲಾಭ ಸಿಗಲಿದೆ. ಹಿರಿಯರ ಮಾತು ಗೌರವಿಸಿ. ಗೌರವ ಸಿಗಲಿದೆ. ಕಣ್ಣಿನ ಸಮಸ್ಯೆಗಳ ಬಗ್ಗೆ ಎಚ್ಚರಿಕೆ ಅಗತ್ಯ. ಮೀನ ರಾಶಿ: ಖರ್ಚು-ವೆಚ್ಚ ಹೆಚ್ಚಳದಿಂದ ಶುಭ ಕಾರ್ಯಗಳಿಗೆ ಸಮಸ್ಯೆಯಾಗಬಹುದು. ಶತ್ರುಗಳ ಕಾಟ ಹೆಚ್ಚಾಗಲಿದ್ದು, ವಾದ ಮಾಡದಿರುವುದು ಒಳಿತು. ಉದ್ಯೋಗದಲ್ಲಿ ಕಿರಿಕಿರಿ ದೂರ ಮಾಡಲು ದೇವರ ಧ್ಯಾನ ಮಾಡಿ. ಶನಿ ದೇವರ ಆರಾಧನೆ ಪ್ರಯೋಜನಕಾರಿ. - [ಅತಿಕ್ರಮಣದಾರರ ಬಗ್ಗೆ ಅಧಿವೇಶನದಲ್ಲಿ ಚರ್ಚಿಸಿ](https://mobiletime.in/2025/11/discuss-the-encroachments-in-session/): `ಅರಣ್ಯವಾಸಿಗಳ ಸಮಸ್ಯೆಗಳ ಬಗ್ಗೆ ಚಳಿಗಾಲದ ಅಧಿವೇಶನದಲ್ಲಿ ಪ್ರಸ್ತಾಪಿಸುವಂತೆ ಆಗ್ರಹಿಸಿ ಡಿ 6ರಂದು ಹೋರಾಟ ನಡೆಯಲಿದೆ’ ಎಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ಅವರು ಹೇಳಿದ್ದಾರೆ. ಕಾರವಾರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು `ಮೂರು ತಲೆಮಾರಿನ ದಾಖಲೆ ಷರತ್ತು ಕಾನೂನುಬಾಹಿರ. ಸಾಂದರ್ಭಿಕ ದಾಖಲೆ ಅಡಿಯಲ್ಲಿ ಅರಣ್ಯ ಭೂಮಿ ಹಕ್ಕು ನೀಡುವುದೇ ಮುಖ್ಯ. ಈಗಿರುವ ಕಾನೂನು ಅಡಿಯಲ್ಲಿ ಈ ಹಿಂದೆ ಎಚ್ ಕೆ ಪಾಟೀಲ್ ಮತ್ತು ಆರ್ ವಿ ದೇಶಪಾಂಡೆಯವರು ಹಕ್ಕು ಪತ್ರ ನೀಡಿದ ಮಾನದಂಡದ ಅಡಿಯಲ್ಲಿ ಇನ್ನಿತರ ಅರಣ್ಯವಾಸಿಗಳಿಗೂ ಹಕ್ಕು ಪತ್ರ ನೀಡಬೇಕು’ ಎಂದು ಆಗ್ರಹಿಸಿದರು. `ಅರಣ್ಯವಾಸಿಗಳ ಸಮಸ್ಯೆಗಳ ಕುರಿತು ಚಳಿಗಾಲ ಅಧಿವೇಶನದಲ್ಲಿ ಚರ್ಚಿಸಿ ನಿರ್ಣಯ ತೆಗೆದುಕೊಳ್ಳಬೇಕು. ಅರಣ್ಯ ಭೂಮಿ ಹಕ್ಕು ಹೋರಾಟಗಾರರೊಂದಿಗೆ ಉನ್ನತ ಮಟ್ಟದ ಸಭೆ ನಡೆಸಬೇಕು’ ಎಂದು ಆಗ್ರಹಿಸಿದರು. `ಉತ್ತರ ಕನ್ನಡ ಜಿಲ್ಲೆಯಲ್ಲಿ 88000 ಕುಟುಂಬವು ಅರಣ್ಯ ಪ್ರದೇಶವನ್ನು ವಾಸ್ತವ್ಯ ಮತ್ತು ಸಾಗುವಳಿಗೆ ಅವಲಂಬಿತವಾಗಿದೆ. ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ ಸಲ್ಲಿಸಿದಂತ ಅರ್ಜಿಗಳಲ್ಲಿ 73000 ಕುಟುಂಬಗಳ ಅರ್ಜಿ ತಿರಸ್ಕರಿಸಲ್ಪಟ್ಟಿದೆ. ಜಿಲ್ಲೆಯಲ್ಲಿ ಕೇವಲ 2,856 ಅರ್ಜಿಗಳಿಗೆ ಮಾತ್ರ ಮಾನ್ಯತೆ ದೊರಕಿದೆ’ ಎಂಬ ಮಾಹಿತಿ ನೀಡಿದರು. - [ಪಾಸ್ಟಪುಡ್ ಅಂಗಡಿಯಲ್ಲಿಯೂ ಸಿಗುತ್ತೆ ಗೋವಾ ಸರಾಯಿ!](https://mobiletime.in/2025/11/goa-sarai-is-also-available-at-pastafood-stores/): ಅನೇಕ ಪಾಸ್ಟಪುಡ್ ಅಂಗಡಿಗಳಲ್ಲಿ ಗೋವಾ ಸರಾಯಿ ಮಾರಾಟ ನಡೆದಿದ್ದು, ಅಬಕಾರಿ ಅಧಿಕಾರಿಗಳು ಅಂಥ ಅಂಗಡಿಗಳ ಮೇಲೆ ಕಣ್ಣಿಟ್ಟಿದ್ದಾರೆ. ಹೊನ್ನಾವರದಲ್ಲಿನ ಪಾಸ್ಟಪುಡ್ ಅಂಗಡಿ ಮೇಲೆ ದಾಳಿ ನಡೆಸಿದ ಅಬಕಾರಿ ಸಿಬ್ಬಂದಿ ಸರಾಯಿ ಮಾರಾಟ ಪತ್ತೆ ಮಾಡಿದ್ದಾರೆ. ನವೆಂಬರ್ 27ರ ಸಂಜೆ ಹೊನ್ನಾವರ ಅಬಕಾರಿ ಅಧಿಕಾರಿ-ಸಿಬ್ಬಂದಿ ತಂಡದವರು ಗಸ್ತು ಕಾರ್ಯಾಚರಣೆಯಲ್ಲಿದ್ದರು. ಅವರಿಗೆ ಹೇರಂಗಡಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಚರ್ಚ್ ಕ್ರಾಸ್ ಬಳಿಯಲ್ಲಿರುವ ಪಾಸ್ಟಪುಡ್ ಮಳಿಗೆಯಲ್ಲಿ ಅಕ್ರಮ ಮದ್ಯ ಮಾರಾಟದ ವಾಸನೆ ಬಡಿಯಿತು. ಅಂಗಡಿ ಮಾಲಕ ನಾರಾಯಣ ಅಂಕುಶ್ ಗೌಡ ಅವರನ್ನು ಹೊರಗೆಳೆದು ಅಧಿಕಾರಿಗಳು ವಿಚಾರಣೆ ನಡೆಸಿದರು. `ಏನೂ ಇಲ್ಲ’ ಎಂದರೂ ಕೇಳದೇ ಅಂಗಡಿ ತಪಾಸಣೆ ಮಾಡಿದರು. ಆಗ, ಅಲ್ಲಿ ಅಪಾರ ಪ್ರಮಾಣದ ಅಕ್ರಮ ಮದ್ಯ ಸಿಕ್ಕಿತು. ಓಲ್ಡ್ ಮಂಕ್ ರಮ್‌ನ 90ಮಿಲಿ ಲೀಟರ್‌ನ 48 ಬಾಟಲಿಗಳು ಹಾಗೂ ಡಿಎಸ್‌ಪಿ ಬ್ಲಾಕ್ ವಿಸ್ಕಿಯ 180ಮಿಲಿ ಲೀಟರ್‌ನ 7 ಬಾಟಲಿಗಳನ್ನು ಅಧಿಕಾರಿಗಳು ಜಪ್ತು ಮಾಡಿದರು. ನಾರಾಯಣ ಅಂಕುಶ್ ಗೌಡರ ವಿರುದ್ಧ ಪ್ರಕರಣ ದಾಖಲಿಸಿದರು. - [ಕಾರವಾರದ ಕಾರಿಗೆ ಬೆಂಕಿ!](https://mobiletime.in/2025/11/car-catches-fire-in-karwar/): ಕಾರವಾರದಲ್ಲಿ ಸಂಚರಿಸುತ್ತಿದ್ದ ಕಾರಿಗೆ ದಿಢೀರ್ ಆಗಿ ಬೆಂಕಿ ತಗುಲಿದೆ. ಸರ್ವೀಸ್ ಮಾಡಿಸಲು ತೆರಳುತ್ತಿದ್ದ ವೇಳೆಯಲ್ಲಿಯೇ ಕಾರು ಸುಟ್ಟಿದೆ. ಶುಕ್ರವಾರ ಸಂಜೆ ಸವಿತಾ ಸರ್ಕಲ್ ಬಳಿ ಕಾರಿಗೆ ಬೆಂಕಿ ಹತ್ತಿರುವುದು ಕಾಣಿಸಿತು. ಶಾರ್ಟ ಸರ್ಕೀಟ್ ಕಾರಣ ಕಾರಿಗೆ ಬೆಂಕಿ ತಗುಲಿತು. ಅಲ್ಲಿದ್ದ ಜನ ನೀರು ಹಾಯಿಸಿ ಬೆಂಕಿ ಆರಿಸುವ ಪ್ರಯತ್ನ ಮಾಡಿದರು. ಅಗ್ನಿಶಾಮಕ ಸಿಬ್ಬಂದಿ ಆಗಮಿಸಿ ಕಾರು ಪೂರ್ತಿಯಾಗಿ ಬೆಂಕಿಯಲ್ಲಿ ಕರಗದಂತೆ ತಡೆದರು. ಈ ಕಾರಿನ ಮಾಲೀಕ ಮಹಮ್ಮದ್ ಗೌಸ್ ಮುಂಬೈನಲ್ಲಿದ್ದಾರೆ. ಕಾರವಾರದಲ್ಲಿ ಅವರ ಮನೆಯಿದ್ದು, ಅಲ್ಲಿದ್ದ ಕಾರನ್ನು ಸರ್ವೀಸ್ ಮಾಡಿಸಲು ಪರಿಚಯಸ್ಥರಿಗೆ ತಿಳಿಸಿದ್ದರು. ಸರ್ವೀಸ್ ಮುನ್ನವೇ ಈ ಅವಘಡ ನಡೆದಿದೆ. ಕಾರಿನ ಮುಂಭಾಗದ ಗಾಜು ಹಾಗೂ ಒಳಗಿನ ಆಸನ ಸುಟ್ಟು ಕರಕಲಾಗಿದೆ. ಅಗ್ನಿಶಾಮಕ ಠಾಣಾಧಿಕಾರಿ ಮಹಾಭಲೇಶ್ವರ ಗೌಡ, ರಾಜೇಶ ರಾಣೆ, ಟೋನಿ ಬಾರ್ಬೋಸಾ, ಕುಮಾರ ಎಸ್ ಕೆ, ಪ್ರವೀಣ ನಾಯ್ಕ, ಶ್ರೀಕಾಂತ ದೊಡ್ಮನಿ ಬೆಂಕಿ ಆರಿಸಿದ್ದಾರೆ. - [ಕಾಸು ಕೊಡದಿದ್ದರೆ ಕೇಸು: ಪೊಲೀಸರ ವಿರುದ್ಧ ತಿರುಗಿಬಿದ್ದ ಮಟ್ಕಾ ಬುಕ್ಕಿ!](https://mobiletime.in/2025/11/if-you-dont-pay-youll-be-charged-matka-bookie-turns-against-the-police/): ಅಂಕೋಲಾ ಕೇಣಿಯ ಶ್ಯಾಮ ಬಂಟ ಅವರು ಮಟ್ಕಾ ಆಡಿಸುವಾಗ ಸಿಕ್ಕಿ ಬಿದ್ದಿದ್ದು, ಪುರಸಭೆ ಮಾಜಿ ಸದಸ್ಯ ಸಂದೀಪ ಬಂಟ್ ಅವರು ಮಟ್ಕಾ ಬುಕ್ಕಿಯಾಗಿರುವ ಬಗ್ಗೆ ಬಾಯ್ಬಿಟ್ಟಿದ್ದಾರೆ. ಹೀಗಾಗಿ ಅಲ್ಲಿನ ಪೊಲೀಸರು ಶ್ಯಾಮ ಬಂಟ ಅವರ ಜೊತೆ ಸಂದೀಪ ಬಂಟ ಅವರ ಹೆಸರನ್ನು ಸೇರಿಸಿ ಕಾನೂನು ಕ್ರಮ ಜರುಗಿಸಿದ್ದಾರೆ. ಇದರಿಂದ ಸಂದೀಪ ಬಂಟ್ ಕೆಂಡಾಮoಡಲರಾಗಿದ್ದು, ಪೊಲೀಸರ ವಿರುದ್ಧವೇ ಅನೇಕ ಆರೋಪ ಮಾಡಿದ್ದಾರೆ! ನವೆಂಬರ್ 26ರಂದು ಕೇಣಿಯ ಗೂಡಂಗಡಿಕಾರ ಶ್ಯಾಮ ಗೋಪಿನಾಥ ಬಂಟ್ ಅವರು ಗಾಬೀತಕೇಣಿ ಕ್ರಾಸಿನ ಬಳಿ ಮಟ್ಕಾ ಆಡಿಸುತ್ತಿದ್ದರು. ಪಿಐ ಚಂದ್ರಶೇಖರ ಮಠಪತಿ ಅವರು ದಾಳಿ ನಡೆಸಿ ಮಟ್ಕಾ ಪರಿಕ್ಕರಗಳನ್ನು ವಶಕ್ಕೆಪಡೆದರು. ಈಚೆಗೆ ನಡೆದ ದಾಳಿಯಲ್ಲಿಯೇ ಅತಿ ದೊಡ್ಡ ಮೊತ್ತ ಎನ್ನುವಂತೆ ಪೊಲೀಸರಿಗೆ ಈ ವೇಳೆ 17910ರೂ ಸಿಕ್ಕಿತು. `ಈ ಹಣ ಯಾರಿಗೆ ಕೊಡುವೆ?’ ಎಂದು ಪ್ರಶ್ನಿಸಿದಾಗ ಶ್ಯಾಮ ಬಂಟ್ ಅವರು ಕೇಣಿಯ ಸಂದೀಪ ಬಂಟ್ ಅವರ ಹೆಸರು ಹೇಳಿದರು. ಈ ಹಿನ್ನಲೆ ಪೊಲೀಸರು ಮಟ್ಕಾ ಆಡಿಸುತ್ತಿದ್ದ ಶ್ಯಾಮ ಬಂಟ್ ಅವರ ಜೊತೆ ಪುರಸಭೆ ಮಾಜಿ ಸದಸ್ಯ ಸಂದೀಪ ಬಂಟ್ ಅವರ ಹೆಸರನ್ನು ದಾಖಲಿಸಿ ಪ್ರಕರಣ ದಾಖಲಿಸಿದರು. ಈ ವಿಷಯ ಅರಿತ ಸಂದೀಪ ಬಂಟ್ ಕಾರವಾರಕ್ಕೆ ಆಗಮಿಸಿದರು. ಪೊಲೀಸರ ಅಪರಾತಪರದ ಬಗ್ಗೆ ಮಾಧ್ಯಮಗಳ ಮುಂದೆ ಮಾಹಿತಿ ನೀಡಿದರು. `ಅಂಕೋಲಾ ಪಿಐ ಚಂದ್ರಶೇಖರ ಮಠಪತಿ ಅವರು ಓಸಿ-ಮಟ್ಕಾ ನಡೆಸುವವರಿಂದ ಹಣ ಪಡೆದು ಅದಕ್ಕೆ ಬೆಂಬಲ ನೀಡುತ್ತಿದ್ದಾರೆ’ ಎಂದು ದೂರಿದರು. `ತನಗೂ ದುಡ್ಡು ಕೊಡುವಂತೆ ಪೀಡಿಸಿದ್ದು, ಹಣ ಕೊಡದ ಕಾರಣ ತನ್ನ ವಿರುದ್ಧ ಪ್ರಕರಣ ದಾಖಲಿಸುತ್ತಿದ್ದಾರೆ. ಎಲ್ಲಿಯೇ ಮಟ್ಕಾ ದಾಳಿ ನಡೆದರೂ ನನ್ನ ವಿರುದ್ಧ ಪ್ರಕರಣ ದಾಖಲಿಸುತ್ತಿದ್ದಾರೆ’ ಎಂದು ಆರೋಪಿಸಿದರು. - [ಕೇಣಿ ಬಂದರು: ವಿಜ್ಞಾನಿಗಳ ಪ್ರಶ್ನೆಗೆ ಉತ್ತರಿಸಿ!](https://mobiletime.in/2025/11/keni-port-answer-the-scientists-question/): ಅಂಕೋಲಾದ ಕೇಣಿಯಲ್ಲಿ ವಾಣಿಜ್ಯ ಬಂದರು ನಿರ್ಮಾಣದಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ವೃಕ್ಷಲಕ್ಷ ಆಂದೋಲನದವರು ವೈಜ್ಞಾನಿಕ ಕಾರಣಗಳನ್ನು ತೆರೆದಿಟ್ಟಿದ್ದಾರೆ. `ತಮ್ಮ ವೈಜ್ಞಾನಿಕ ಪ್ರಶ್ನೆಗಳಿಗೆ ಉತ್ತರ ಕೊಡಿ’ ಎಂದು ಅವರು ಮುಖ್ಯಮಂತ್ರಿ ಸೇರಿ ಅನೇಕರಿಗೆ ಪತ್ರ ಬರೆದಿದ್ದಾರೆ. `ಕೇಣಿಯಲ್ಲಿ ಬಂದರು ನಿರ್ಮಾಣ ಮಾಡುವುದಕ್ಕೆ ಸರ್ಕಾರ ಖಾಸಗಿ ಕಂಪನಿಗೆ ಒಪ್ಪಿಗೆ ಕೊಟ್ಟಿದೆ. ಈ ಸಮುದ್ರದಲ್ಲಿ ಭಾರೀ ಪ್ರಮಾಣದ ಬಂದರು ಮಾಡುವುದರಿಂದ 10 ಸಾವಿರಕ್ಕೂ ಅಧಿಕ ಮೀನುಗಾರರ ಬದುಕಿಗೆ ಸಂಚಕಾರ ಬರಲಿದೆ. ಈ ಹಿನ್ನಲೆ ಕಳೆದ ಒಂದು ವರ್ಷದಿಂದ ಮೀನುಗಾರರು ಜನಾಂದೋಲನ ನಡೆಸುತ್ತಿದ್ದಾರೆ. ಸಾರ್ವಜನಿಕ ಅಹವಾಲು ಸಭೆ, ಧರಣಿ, ಮೆರವಣಿಗಳಲ್ಲಿ ಸಾವಿರ ಸಾವಿರ ಸಂಖ್ಯೆಯ ಜನ ಈ ಯೋಜನೆಯನ್ನು ವಿರೋಧಿಸಿದ್ದಾರೆ. ಪ್ರಜಾಪ್ರಭುತ್ವ, ಸಂವಿಧಾನ, ಕಾನೂನುಗಳ ಭಾರೀ ಉಲ್ಲಂಘನೆ ಮಾಡಿ ಸರ್ಕಾರ ಬಂದರು ಯೋಜನೆ ಜಾರಿ ಮಾಡಿ ಏನು ಪ್ರಯೋಜನ?’ ಎಂದು ಅವರು ಪ್ರಶ್ನಿಸಿದ್ದಾರೆ. `ಕೇಣಿ ಸಮುದ್ರ ತೀರದಲ್ಲಿ ಕರಾವಳಿ ಪರಿಸರ ನಿಯಂತ್ರಣ (ಸಿ ಆರ್ ಜಡ್) ಕಾಯಿದೆ ತೀವ್ರ ಭಂಗ ಆಗುವದನ್ನು ಜಿಲ್ಲಾ ಮತ್ತು ರಾಜ್ಯ ಸಿ ಆರ್ ಜಡ್ ಅಥಾರಿಟಿ ಎತ್ತಿ ಹೇಳುತ್ತಿಲ್ಲ. ಈ ಅಥಾರಿಟಿ ಮುಖ್ಯಸ್ಥರು ಕೇಣಿಗೆ ಬಂದು ಸ್ಥಳದಲ್ಲಿ ಪರಿಸರ ತಜ್ಞರ ಜೊತೆ ಪರಿಶೀಲನೆ ನಡೆಸುವ ಧೈರ್ಯ ತೋರಿಸುತ್ತಿಲ್ಲ. ಕೇಣಿ ಹಾಗೂ ಸುತ್ತಲಿನ ಹಳ್ಳಿಗಳ ಗ್ರಾಮ ಪಂಚಾಯತಗಳು ಕೈಗೊಂಡ ಗ್ರಾಮ ಸಭೆಗಳ ನಿರ್ಣಯಗಳನ್ನು ಮಾನ್ಯ ಮಾಡಬೇಕಾದ ಜಿಲ್ಲಾ ಪಂಚಾಯತರಾಜ್ ಇಲಾಖೆ, ಜಿಲ್ಲಾಡಳಿತ, ರಾಜ್ಯ ಪಂಚಾಯತ ರಾಜ್ ಇಲಾಖೆ ಮುಖ್ಯಸ್ಥರಿಗೆ ಮುಖ್ಯ ಕಾರ್ಯದರ್ಶಿಗಳಿಗೆ ಈ ಜನಾಭಿಪ್ರಾಯ ತಿಳಿಸುವ ಕರ್ತವ್ಯ ನಿರ್ವಹಿಸಿದ ಹಾಗಿಲ್ಲ’ ಎಂದು ಸಂಘಟನೆಯವರು ಅಸಮಧಾನವ್ಯಕ್ತಪಡಿಸಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಶಾಸಕರು ಸಂಸದರು ವಿಧಾನಸಭೆ ಹಾಗೂ ಲೋಕ ಸಭೆಯಲ್ಲಿ ಅಂಕೋಲಾ ಮೀನುಗಾರರ ಪರವಾಗಿ ವಕಾಲತ್ತು ಮಾಡಬೇಕು. ರಾಜ್ಯಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷರು ಹಾಗೂ ಸದಸ್ಯ ಕಾರ್ಯದರ್ಶಿಗಳು ಅಂಕೋಲಾ ಸಮುದ್ರ, ಸಮುದ್ರ ತೀರವನ್ನು ಮಾಲಿನ್ಯ ಮಾಡುವ ಬಂದರು ಯೋಜನಾ ಪ್ರದೇಶದಲ್ಲಿ ಸಭೆ ಮಾಡಲು ಬಿಡದಿರುವುದು ಏತಕೆ?’ ಎಂದು ಪ್ರಶ್ನಿಸಿದ್ದಾರೆ. `ನೌಕಾನೆಲೆ ಪಕ್ಕ ಖಾಸಗಿ ಬಂದರು ಕಂಪನಿ ಕಾಮಗಾರಿ ನಡೆಸಲು ರಕ್ಷಣ ಇಲಾಖೆ ಅನುಮತಿ ಇದೆಯೆ? ಈ ಬಗ್ಗೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಗಮನ ನೀಡಿದ್ದಾರೆಯೆ? ಎಂದು ಅವರು ಪ್ರಶ್ನಿಸಿದ್ದಾರೆ. `ಅಂಕೋಲಾ ಕೇಣಿಯ ಮೀನುಗಾರರು ಮುಗ್ಧ ಜನತೆಯ ಒಗ್ಗಟ್ಟು, ಸಂಘಟನೆ, ನಿರಂತರ ಹೋರಾಟಕ್ಕೆ ಇಡೀ ಜಿಲ್ಲೆ ಜನತೆ ಬೆಲೆ ಕೊಡುತ್ತಿದ್ದಾರೆ. ಆದರೆ, ಜನಪ್ರತಿನಿಧಿಗಳು ಗಟ್ಟಿ ಧ್ವನಿ ಎತ್ತುತ್ತಿಲ್ಲ’ ಎಂದು ವೃಕ್ಷಲಕ್ಷ ಆಂದೋಲನದವರು ಅಸಮಧಾನವ್ಯಕ್ತಪಡಿಸಿದ್ದಾರೆ. `ಅಂಕೋಲಾ ಕರಾವಳಿಯ ಹಳ್ಳ, ಹೊಳೆ,ಗುಡ್ಡ, ಅಳಿವೆ ರಕ್ಷಣೆಗೆ ರಾಜ್ಯ ಜಾಗುಪ್ರದೇಶ ರಕ್ಷಣಾ ಪ್ರಾಧಿಕಾರ ಏಕೆ ಮುಂದಾಗಿಲ್ಲ. ರಾಜ್ಯ ಜೀವ ವೈವಿದ್ಯ ಮಂಡಳಿಯವರು ಕೇಣಿ ಬಂದರು ಪ್ರದೇಶಕ್ಕೆ ಏಕೆ ಬೇಟಿ ನೀಡಿಲ್ಲ?’ ಎಂದು ಪ್ರಶ್ನಿಸಿದ್ದಾರೆ. ಮಂಗಳೂರಿನ ಫಿಶರೀಸ್ ಕಾಲೇಜು, ಧಾರವಾಡ ಕೃಷಿ ವಿಶ್ವವಿಧ್ಯಾಲಯ, ಬಾಗಲ್ಕೋಟೆ ತೋಟಗಾರಿಕಾ ವಿಶ್ವವಿದ್ಯಾಲಯ, ಕರ್ನಾಟಕ ವಿಶ್ವವಿಧ್ಯಾಲಯ ಧಾರವಾಡದವರೆಲ್ಲರೂ ಸಮುದ್ರ ತೀರ ಅಧ್ಯಯನಕ್ಕೆ ಬರಬೇಕು. ಕೇಂದ್ರ ಹಾಗೂ ರಾಜ್ಯ ಮಾನವ ಹಕ್ಕು ಆಯೋಗಗಳು ಅಂಕೋಲಾ ಕೇಣಿಗೆ ಬಂದು ಬಡ ಮೀನುಗಾರರ ಬದುಕುವ ಹಕ್ಕು ರಕ್ಷಣೆಗೆ ಬೆಂಬಲ ನೀಡಬೇಕು. ರಾಜ್ಯ ಕಾನೂನು ಸೇವಾ ಪ್ರಾಧಿಕಾರ ಸ್ವ ಪ್ರೇರಣೆಯಿಂದ ವಿಶೇಷ ತಂಡವನ್ನು ಕೇಣಿಗೆ ಕಳಿಸಿ ಮೀನುಗಾರರಿಗೆ ಕಾನೂನು ನೆರವು ನೀಡಬೇಕು’ ಎಂದು ಆಗ್ರಹಿಸಿದ್ದಾರೆ. ಜೀವವೈವಿಧ್ಯ ಮಂಡಳಿ ಮಾಜಿ ಅಧ್ಯಕ್ಷ ಅನಂತಹೆಗಡೆ ಆಶೀಸರ, ಪರಿಸರ ವಿಜ್ಞಾನಿಗಳಾದ ಟಿ ವಿ ರಾಮಚಂದ್ರ, ಸುಭಾಸ್ ಚಂದ್ರನ್, ಬಿ.ಎಂ ಕುಮಾರ ಸ್ವಾಮಿ ಬಾಲಚಂದ್ರ ಸಾಯಿಮನೆ, ವಿ ಎನ್ ನಾಯ್ಕ, ಮುಂತಾದವರು ಈ ವಿಷಯದ ಬಗ್ಗೆ ಗಮನ ಚೆಲ್ಲಿದ್ದಾರೆ. - [`ಮುದ್ದು ಮಕ್ಕಳನ್ನು ಹುಡುಕಿಕೊಡಿ'](https://mobiletime.in/2025/11/find-the-cute-children/): ಮಕ್ಕಳ ಜೊತೆ ಆಸ್ಪತ್ರೆಗೆ ಹೊರಟಿದ್ದ ಮಹಿಳೆಯೊಬ್ಬರು ಮೂರು ದಿನ ಕಳೆದರೂ ಮನೆಗೆ ಮರಳಿಲ್ಲ. ಪತ್ನಿ ಜೊತೆ ಮಕ್ಕಳು ಕಾಣದ ಕಾರಣ ಯಲ್ಲಾಪುರದ ಮುಬಾರಕ ಅವರು ಕಂಗಾಲಾಗಿದ್ದಾರೆ. ಮುಬಾರಕ್ ಸೌದಸಾಗರ (30) ಅವರು ಯಲ್ಲಾಪುರ ಕಿರವತ್ತಿ ಮೂಲದವರು. ಅವರು ಯಲ್ಲಾಪುರದಲ್ಲಿ ಸೆಂಟ್ರಿAಗ್ ಕೆಲಸ ಮಾಡಿಕೊಂಡಿದ್ದಾರೆ. ಮುಬಾರಕ್ ಅವರ ಪತ್ನಿ ಸಾನಾ (27) ಹಾಗೂ ಆರು ವರ್ಷದ ಮಗಳು ಸಾಮಿಯಾ ಜೊತೆ ಮೂರು ವರ್ಷದ ಸಾಫಿಯಾ ಅವರು ಕಾಣೆಯಾಗಿದ್ದಾರೆ. ನವೆಂಬರ್ 25ರಂದು ಸಾನಾ ಅವರು ತಮ್ಮ ಮನೆಯಿಂದ ಸರ್ಕಾರಿ ಆಸ್ಪತ್ರೆಗೆ ಹೊರಟಿದ್ದರು. ಅವರ ಇಬ್ಬರು ಮಕ್ಕಳು ಜೊತೆಯಲ್ಲಿದ್ದರು. ಮನೆಯಲ್ಲಿ ಸಹ `ಆಸ್ಪತ್ರೆಗೆ ಹೋಗಿ ಬರುವೆ’ ಎಂದಿದ್ದರು. ಆದರೆ, ಅವರು ಎಲ್ಲಿ ಹೋದರು? ಏನಾದರು? ಎನ್ನುವ ಬಗ್ಗೆ ಯಾರಿಗೂ ಮಾಹಿತಿ ಸಿಕ್ಕಿಲ್ಲ. ಸಂಬAಧಿಕರ ಮನೆಗೆ ಫೋನ್ ಮಾಡಿ ವಿಚಾರಿಸಿದರೂ ಆ ಮೂವರ ಸುಳಿವು ದೊರೆತಿಲ್ಲ. ಈ ಎಲ್ಲಾ ಹಿನ್ನಲೆ ಸಾನಾ ಅವರ ಪತಿ ಮುಬಾರಕ್ ಸೌದಸಾಗರ ಅವರು ಪತ್ನಿ-ಮಕ್ಕಳಿಗಾಗಿ ಹುಡುಕಾಟ ಶುರು ಮಾಡಿದ್ದಾರೆ. ಯಲ್ಲಾಪುರ ಪೊಲೀಸ್ ಠಾಣೆಗೂ ಆಗಮಿಸಿದ ಅವರು ಕಾಣೆಯಾದವರ ಪತ್ತೆಗೆ ಮನವಿ ಮಾಡಿದ್ದಾರೆ. - [ಮಾನವ ಹಕ್ಕು ಹೆಸರಿನಲ್ಲಿ ವಸೂಲಿ: ಸಂಘಟನೆಗಳ ನೋಂದಣಿ ರದ್ಧತಿಗೆ ಶಿಫಾರಸ್ಸು!](https://mobiletime.in/2025/11/extortion-in-the-name-of-human-rights-recommendation-to-deregister-organizations/): `ಮಾನವ ಹಕ್ಕು’ ಎಂಬ ಹೆಸರು ಹೋಲುವ ರೀತಿ ಕೆಲವರು ವಿವಿಧ ಸಂಘ-ಸoಸ್ಥೆ ರಚಿಸಿಕೊಂಡಿದನ್ನು ಮಾನವ ಹಕ್ಕು ಆಯೋಗ ಗಂಭೀರವಾಗಿ ಪರಿಗಣಿಸಿದೆ. `ಮಾನವ ಹಕ್ಕುಗಳ ಆಯೋಗ’, `ಪರಿಷತ್ತು’, `ಹೋರಾಟ ಸಮಿತಿ’ ಎಂಬ ಹೆಸರನ್ನು ದುರ್ಬಳಕೆ ಮಾಡಿಕೊಳ್ಳುವವರನ್ನು ರಾಜ್ಯ ಮಾನವ ಹಕ್ಕು ಆಯೋಗ ಗುರುತಿಸಲು ಮುಂದಾಗಿದೆ. ಮಾನವ ಹಕ್ಕು ಆಯೋಗ ಎಂಬ ಹೆಸರಿಗೆ ಸಮೀಪವಿರುವ ಹೆಸರಿನ ಸಂಘಟನೆಯವರು ವಿವಿಧ ಕಡೆ ತೆರಳಿ ವಸೂಲಿ ನಡೆಸುತ್ತಿರುವ ಆತಂಕದ ವಿಚಾರವನ್ನು ಮಾನವ ಹಕ್ಕು ಆಯೋಗದ ಸದಸ್ಯ ಎಸ್ ಕೆ ವಂಟಿಗೋಡಿ ಅವರೇ ಬಹಿರಂಗಪಡಿಸಿದ್ದಾರೆ. `ಮಾನವ ಹಕ್ಕು ಆಯೋಗ ಅಥವಾ ಅದೇ ಅರ್ಥ ಕೊಡುವ ಇನ್ಯಾವುದೇ ಹೆಸರಿನ ಸಂಸ್ಥೆಯವರು ವಸೂಲಿಗೆ ಬಂದರೆ ನಮಗೆ ದೂರು ಕೊಡಿ. ಅಂಥವರನ್ನು ವಿಚಾರಣೆಗೆ ಒಳಪಡಿಸಿ ಆ ಸಂಸ್ಥೆಯ ನೋಂದಣಿಯನ್ನು ರದ್ಧು ಮಾಡಲು ಶಿಫಾರಸ್ಸು ಮಾಡುತ್ತೇವೆ’ ಎಂದು ಎಸ್ ಕೆ ವಂಟಿಗೋಡಿ ಅವರು ಜನರಲ್ಲಿ ಮನವಿ ಮಾಡಿದ್ದಾರೆ. ಶುಕ್ರವಾರ ಶಿರಸಿಗೆ ಬಂದಿದ್ದ ಅವರು ವಿವಿಧ ಇಲಾಖೆ ಅಧಿಕಾರಿಗಳ ಸಭೆ ನಡೆಸಿದ್ದು, ಮುಖ್ಯವಾಗಿ `ಮಾನವ ಹಕ್ಕು’ ಪದದ ದುರ್ಬಳಕೆಯ ವಿಚಾರ ಮಾತನಾಡಿದರು. `ರಾಜ್ಯ ಮಾನವ ಹಕ್ಕುಗಳ ಆಯೋಗದ ಹೆಸರನ್ನು ಹೋಲುವ ಸಂಘ ಸಂಸ್ಥೆಗಳ ನೋಂದಣಿಯನ್ನು ರದ್ದುಪಡಿಸಲು ಸರ್ಕಾರಕ್ಕೆ ಶಿಫಾರಸ್ಸು ಮಾಡಲಾಗುತ್ತದೆ. ಇನ್ನು ಮುಂದೆ ಅಂತಹ ಯಾವುದೇ ಸಂಸ್ಥೆಗಳಿಗೆ ನೋಂದಣಿ ನೀಡದಂತೆ ತಿಳಿಸಲಾಗಿದ್ದು, ಮಾನವ ಹಕ್ಕು ಹೆಸರಿನ ಬೆದರಿಕೆಗಳಿಗೆ ಕಡಿವಾಣ ಹಾಕುವುದೇ ನಮ್ಮ ಗುರಿ’ ಎಂದವರು ವಿವರಿಸಿದರು. `ಸಂಘಟನೆಗಳು ಮಾನವ ಹಕ್ಕುಗಳ ಹೆಸರಿನೊಂದಿಗೆ ಇತರೆ ಹೆಸರುಗಳನ್ನು ಸೇರಿಸಿ ನೋಂದಣಿ ಮಾಡಿಸಿಕೊಳ್ಳುವುದು ಮತ್ತು ವಿಸಿಟಿಂಗ್ ಕಾರ್ಡ್ಗಳನ್ನು ಬಳಸಿ ಅಧಿಕಾರಿಗಳ ಮೇಲೆ ಪ್ರಭಾವ ಬೀರುವುದು ಸರಿಯಲ್ಲ. ಯಾವುದೇ ವ್ಯಕ್ತಿ ಆಯೋಗದ ಹೆಸರಿನಲ್ಲಿ ಸಂಘ, ಸಂಸ್ಥೆ ಅಥವಾ ಪರಿಷತ್‌ಗಳನ್ನು ಸ್ಥಾಪಿಸುವಂತಿಲ್ಲ. ತಮ್ಮ ಹಕ್ಕು ಉಲ್ಲಂಘನೆಯಾದಲ್ಲಿ ನೇರವಾಗಿ ಆಯೋಗಕ್ಕೆ ದೂರು ನೀಡಬಹುದೇ ಹೊರತು, ಹೆಸರನ್ನು ದುರ್ಬಳಕೆ ಮಾಡುವುದು ಸರಿಯಲ್ಲ’ ಎಂದವರು ಸಭೆಯಲ್ಲಿ ಹೇಳಿದರು. `ವಿವಿಧ ಇಲಾಖೆ ಅಧಿಕಾರಿಗಳು ಮಾನವ ಹಕ್ಕುಗಳು ಉಲ್ಲಂಘನೆಯಾಗದoತೆ ಕಾರ್ಯನಿರ್ವಹಿಸಬೇಕು. ಸಾರ್ವಜನಿಕರು ಕಚೇರಿಗಳಿಗೆ ಬಂದಾಗ ಅವರ ಅಹವಾಲುಗಳನ್ನು ಸೌಜನ್ಯದಿಂದ ಸ್ವೀಕರಿಸಿ, ಅವರ ನೋವು-ನಲಿವುಗಳಿಗೆ ಸ್ಪಂದಿಸಬೇಕು. ಅರ್ಹತೆ ಇದ್ದರೂ ಸೌಲಭ್ಯಗಳನ್ನು ನೀಡದಿದ್ದರೆ ಅದು ಸಹ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತದೆ’ ಎಂದು ವಿವರಿಸಿದರು. `ಮೂಲಭೂತ ಹಕ್ಕುಗಳನ್ನು ಕಸಿದುಕೊಳ್ಳಲು ಯಾರಿಗೂ ಸಾಧ್ಯವಿಲ್ಲ’ ಎಂದರು. ಡಿವೈಎಸ್ಪಿ ಗೀತಾ ಪಾಟೀಲ, ತಹಶೀಲ್ದಾರ ಪಟ್ಟರಾಜ ಗೌಡ, ಎಂ ಆರ್ ಕುಲಕರ್ಣಿ, ತಾಲ್ಲೂಕು ಪಂಚಾಯಿತಿ ಇಒ ಚನ್ನಬಸಪ್ಪ ಹಾವಣಗಿ, ಪೌರಾಯುಕ್ತ ಪ್ರಕಾಶ ಚನ್ನಪ್ಪನವರ್ ಸಭೆಯಲ್ಲಿದ್ದರು. - [ದುಡ್ಡು ಕೊಡದೇ ಕಾರು ಖರೀದಿ!](https://mobiletime.in/2025/11/buy-a-car-without-paying/): ಐಷಾರಾಮಿ ಕಾರು ಖರೀದಿ ನೆಪದಲ್ಲಿ ಕಾರು ಮಾರಾಟ ಮಳಿಗೆಗೆ ಬಂದ ಇಬ್ಬರು `ಟೆಸ್ಟ್ ಡ್ರೈವ್’ ಹೆಸರಿನಲ್ಲಿ ಎರಡು ಕಾರು ಎಗರಿಸಿ ಪರಾರಿಯಾಗಿದ್ದಾರೆ. Toyata Corolla ಹಾಗೂ BMW X1 ಕಾರು ಕಳೆದುಕೊಂಡ ಮಾರಾಟಗಾರ ಇದೀಗ ಆ ಕಳ್ಳರ ಹುಡುಕಾಟ ಶುರು ಮಾಡಿದ್ದಾರೆ. ಭಟ್ಕಳ ಬಂದರ್ ರೋಡಿನ ಮೊಹಮ್ಮದ್ ಜಿಲಾನ್ ಅಲಿ ಅವರು ಕಾರು ಮಾರಾಟ ಮಾಡಿ ಬದುಕು ಸಾಗಿಸುತ್ತಿದ್ದಾರೆ. ಅವರನ್ನು ಭೇಟಿಯಾದ ಬೆಂಗಳೂರಿನ ಅಷ್ಟಕ್ ಖಾನ್ ಅಲಿ (48), ತಲ್ಲಾ ಖಾನ್ (24) ಹಾಗೂ ಪ್ರದೀಪ ಗಾಂಧೀ ಕಾರು ಖರೀದಿಯ ಮಾತುಕಥೆ ನಡೆಸಿದ್ದಾರೆ. ಭಟ್ಕಳಕ್ಕೆ ಬಂದು ಕಾರು ನೋಡಿದ ಅವರು ಅದನ್ನು ಟೆಸ್ಟ್ ಡ್ರೈವ್’ಗೆ ಕೇಳಿದ್ದಾರೆ. ಅದಾದ ನಂತರ ಎರಡು ದಿನಗಳ ಕಾಲ ಕಾರು ಬಳಸಿ ನೋಡುವುದಾಗಿ ಹೇಳಿದ್ದಾರೆ. ಕಾರಿನ ವ್ಯಾಪಾರಿ ಮೊಹಮ್ಮದ್ ಜಿಲಾನ್ ಅಲಿ ಅವರು ಎರಡು ದಿನದ ಮಟ್ಟಿಗೆ ಕಾರನ್ನು ಕೊಟ್ಟಿದ್ದಾರೆ. ಆ ಕಾರುಪಡೆದು ಊರುರು ಅಲೆದಾಡಿದ ಮೂವರು ಕಾರನ್ನು ಮರಳಿ ಕೊಟ್ಟಿಲ್ಲ. 2025ರ ಅಗಸ್ಟ 8ರಂದು ಈ ವಿದ್ಯಮಾನ ನಡೆದಿದ್ದು, ಈವರೆಗೂ ಕಾರು ಬಾರದ ಕಾರಣ ಮೊಹಮ್ಮದ್ ಜಿಲಾನ್ ಅಲಿ ಅವರು ಪೊಲೀಸರ ಮೊರೆ ಹೋಗಿದ್ದಾರೆ. `ತಮ್ಮ ಕಾರುಪಡೆದ ಮೂವರು ಅದನ್ನು ಕಾನೂನುಬಾಹಿರ ಕೆಲಸಕ್ಕೆ ಬಳಸುವ ಸಾಧ್ಯತೆ ಹೆಚ್ಚಿದೆ. ಹೀಗಾಗಿ ಅವರನ್ನು ಹುಡುಕಿ ಕಾರನ್ನು ಮರಳಿಸಿ’ ಎಂದವರು ಅಳಲು ತೋಡಿಕೊಂಡಿದ್ದಾರೆ. ಪೊಲೀಸರು ಕಾರು ಕಳ್ಳರ ಶೋಧ ನಡೆಸಿದ್ದಾರೆ. - [SSLC: ಪ್ರತಿಭಾನ್ವಿತ ಮಕ್ಕಳಿಗೆ ಪ್ರವೇಶವಕಾಶ](https://mobiletime.in/2025/11/sslc-admission-opportunities-for-talented-children/): SSLC ಪರೀಕ್ಷೆಯಲ್ಲಿ ಶೇ 90ಕ್ಕೂ ಅಧಿಕ ಫಲಿತಾಂಶಪಡೆದ ವಿದ್ಯಾರ್ಥಿಗಳಿಗೆ ಕುಮಟಾದ ಮಿರ್ಜಾನಿನಲ್ಲಿರುವ ಆದಿಚುಂಚನಗಿರಿ ಇಂಡಿಪೆOಡೆ0ಟ್ ಪಿಯು ಕಾಲೇಜು ವಿಶೇಷ ಕೊಡುಗೆಗಳ ಜೊತೆ ಸ್ವಾಗತಿಸುತ್ತಿದೆ. ಈ ಕಾಲೇಜಿನಲ್ಲಿ ಜೆಇಇ, ನೀಟ್, ಸಿಇಟಿ ಸೇರಿ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗೆ ವಿಶೇಷ ತರಬೇತಿ ನೀಡಲಾಗುತ್ತದೆ. ಸದ್ಯ 2026-27ನೇ ಸಾಲಿನ ಪ್ರಥಮ ಪಿಯುಸಿ ಪ್ರವೇಶ ಪರೀಕ್ಷೆಗೆ ನವೆಂಬರ್ 30ರ ದಿನಾಂಕ ನಿಗದಿಯಾಗಿದೆ. ಪಿಯುಸಿ ಪ್ರವೇಶ ಪರೀಕ್ಷೆಗೆ ಬರುವವರಿಗೆ ಅಂಕೋಲಾ ಹಾಗೂ ಕುಮಟಾದಿಂದ ಶಿಕ್ಷಣ ಸಂಸ್ಥೆಯವರೇ ಬಸ್ ವ್ಯವಸ್ಥೆ ಮಾಡಿದ್ದಾರೆ. ನವೆಂಬರ್ 30ರ ಬೆಳಗ್ಗೆ 9 ಗಂಟೆಗೆ ಕಾಲೇಜು ಆವರಣದಲ್ಲಿ ನೋಂದಣಿ ಪ್ರಕ್ರಿಯೆ ನಡೆಯಲಿದೆ. ಬೆಳಗ್ಗೆ 10ರಿಂದ 11ಗಂಟೆಯವರೆಗೆ ಪರೀಕ್ಷೆ ನಡೆಯಲಿದೆ. ಇದಕ್ಕೆ ಅನುಕೂಲವಾಗುವಂತೆ ಅಂಕೋಲಾ ಮತ್ತು ಕುಮಟಾದಿಂದ ಬೆಳಿಗ್ಗೆ 8ಗಂಟೆಗೆ ಬಸ್ ಹೊರಡಲಿದೆ. 8.10ಕ್ಕೆ ಆ ಬಸ್ಸು ಅಂಕೋಲಾ ಬಸ್ ನಿಲ್ದಾಣ, 8.30ಕ್ಕೆ ಮಾದನಗೇರಿ ತಲುಪಲಿದೆ. ಇನ್ನೊಂದು ಬಸ್ಸು ಬೆಳಗ್ಗೆ 8.30ಕ್ಕೆ ಕುಮಟಾ ಬಸ್ ನಿಲ್ದಾಣದಿಂದ ಹೊರಡಲಿದೆ. ಪ್ರವೇಶ ಪರೀಕ್ಷೆಗೆ ಹಾಜರಾಗುವವರು ಇನ್ಯಾವುದೇ ಮಾಹಿತಿ ಬೇಕಿದ್ದರೂ ಕಾಲೇಜು ಮುಖ್ಯಸ್ಥರ ಜೊತೆ ಮಾತನಾಡಿ. ಯಾವುದೇ ಸಮಸ್ಯೆ ಎದುರಾದರೆ ಇಲ್ಲಿ ಫೋನ್ ಮಾಡಿ. 9900339912, 9731045184, 9901168720, 9739317643 ಅಥವಾ 9591884429 ಇಮೇಲ್:  aipuc2024@gmail.com ವೆಬ್‌ಸೈಟ್: www.aipukumta.in   - [ಅನ್ನದ ಬಟ್ಟಲಿನಲ್ಲಿ ಬಿದ್ದ ಗಲೀಜು: ಊಟ ಮಾಡಿ ಆಸ್ಪತ್ರೆ ಸೇರಿದ ಮಕ್ಕಳು!](https://mobiletime.in/2025/11/a-mess-in-a-rice-bowl-children-hospitalized-after-eating/): ಇನ್ನಿತರ ಶಾಲೆಗಳಿಗೆ ಮಾದರಿ ಆಗಬೇಕಿದ್ದ ಶಾಸಕರ ಮಾದರಿ ಶಾಲೆಯಲ್ಲಿನ ಮಕ್ಕಳಿಗೆ ಗುಣಮಟ್ಟದ ಊಟ ಸಿಗುತ್ತಿಲ್ಲ. ಶುಕ್ರವಾರ ಮಧ್ಯಾಹ್ನ ಈ ಶಾಲೆಯಲ್ಲಿ ಊಟ ಮಾಡಿದ ಮಕ್ಕಳು ಅಸ್ವಸ್ಥರಾಗಿ ಆಸ್ಪತ್ರೆ ಸೇರಿದ್ದಾರೆ. ಮುಂಡಗೋಡಿನ ಶಾಸಕರ ಮಾದರಿ ಶಾಲೆಯಲ್ಲಿ ಊಟ ಮಾಡಿದ ಮಕ್ಕಳಿಗೆ ಅನ್ನದ ಬಟ್ಟಲಿನಲ್ಲಿ ಇಲಿ ಹಿಕ್ಕಿ ಸಿಕ್ಕಿದೆ. ಅರಿವಿಲ್ಲದೇ ಅನ್ನದ ಜೊತೆ ಅದನ್ನು ಸೇವಿಸಿದ ಚಿಣ್ಣರು ಅಸ್ವಸ್ಥರಾಗಿದ್ದಾರೆ. ಕೆಲ ವಿದ್ಯಾರ್ಥಿನಿಯರು ವಾಂತಿ ಮಾಡಿಕೊಂಡಿದ್ದು, ಮುಖ್ಯ ಶಿಕ್ಷಕ ವಿನೋದ ನಾಯ್ಕ ಅವರು ಮಕ್ಕಳನ್ನು ತಕ್ಷಣ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಈ ಶಾಲೆಯಲ್ಲಿ 400ರಷ್ಟು ಮಕ್ಕಳು ಓದುತ್ತಿದ್ದು, ಎಂದಿನAತೆ ಎಲ್ಲರೂ ಮಧ್ಯಾಹ್ನ ಬಿಸಿಯೂಟ ಸೇವಿಸಿದ್ದಾರೆ. ಕೆಲವರಿಗೆ ಆ ಊಟ ಅಜೀರ್ಣವಾಗಿದೆ. ಅದಾದ ನಂತರ ಕೆಲವರು ಹೊಟ್ಟೆನೋವಿನಿಂದ ಬಳಲಿದ್ದಾರೆ. ಕೆಲವರು ವಾಂತಿ ಮಾಡಿಕೊಂಡು ಅಸ್ವಸ್ಥರಾಗಿದ್ದಾರೆ. ಮಕ್ಕಳು ಮಾಡಿದ ಊಟ ಪರಿಶೀಲನೆ ಮಾಡಿದಾಗ ಸಾಂಬಾರಿನೊಳಗೆ ಇಲಿ ಹಿಕ್ಕಿ ತೇಲುತ್ತಿರುವುದು ಗೊತ್ತಾಗಿದೆ. ಆಹಾರದಲ್ಲಿನ ಅಶುಚಿತ್ವ ಮಕ್ಕಳ ಅನಾರೋಗ್ಯಕ್ಕೆ ಕಾರಣವಾಗಿದೆ. ಸದ್ಯ 27 ಮಕ್ಕಳಿಗೆ ಚಿಕಿತ್ಸೆ ಕೊಡಲಾಗಿದೆ. ಮಕ್ಕಳೆಲ್ಲರೂ ಅಪಾಯದಿಂದ ಪಾರಾಗಿದ್ದಾರೆ. ಬಿಸಿಯೂಟ ಸಿಬ್ಬಂದಿಯ ವಿಚಾರಣೆ ನಡೆಯುತ್ತಿದೆ. ವೈದ್ಯಾಧಿಕಾರಿ ಡಾ ನರೇಂದ್ರ ಪವಾರ್, ತಹಶೀಲ್ದಾರ್ ಶಂಕರ ಗೌಡಿ, ತಾ ಪಂ ಮುಖ್ಯಾಧಿಕಾರಿ ಟಿ ವೈ ದಾಸನಕೊಪ್ಪ, ಸಿಪಿಐ ರಂಗನಾಥ ನೀಲಮ್ಮನವರ್, ಪ ಪಂ ಮುಖ್ಯಾಧಿಕಾರಿ ಸಂತೋಷಕುಮಾರ ಎಚ್ ಮೊದಲಾದವರು ಸ್ಥಳಕ್ಕೆ ದೌಡಾಯಿಸಿದ್ದಾರೆ. - [ಬೌ ಬೌ ಕಾಟ: ಬಿರಿಯಾನಿಗೂ ಕಡ್ಡಿ ಹಾಕಿದ ಬೀದಿ ನಾಯಿ!](https://mobiletime.in/2025/11/bou-bou-kata-a-stray-dog-even-put-a-stick-in-the-biryani/): ಶಿರಸಿಯಲ್ಲಿ ಬೀದಿ ನಾಯಿಗಳ ಕಾಟ ಜೋರಾಗಿದ್ದು, ಬಿರಿಯಾನಿ ಹೊಟೇಲಿಗೆ ಹೋಗಬೇಕಿದ್ದ ಎರಡು ಕುರಿಗಳ ಮೇಲೆ ಅವು ದಾಳಿ ನಡೆಸಿದೆ. ಬೀದಿ ನಾಯಿ ಕಾಟಕ್ಕೆ ಎರಡು ಕುರಿ ಸಾವನಪ್ಪಿದ್ದು, ಇಷ್ಟು ದಿನಗಳ ಕಾಲ ಅವನ್ನು ಸಾಕಿದ್ದ ಹೈನುಗಾರನಿಗೂ ನಷ್ಟವಾಗಿದೆ. ಶಿರಸಿಯ ಎಲ್ಲಡೆ ಬೀದಿ ನಾಯಿಗಳ ಹಾವಳಿ ಕಾಣಿಸುತ್ತಿದೆ. ಅದರಲ್ಲಿಯೂ ಕಸ್ತೂರಿಬಾ ನಗರ ಹಾಗೂ ಸುತ್ತಲಿನ ಪ್ರದೇಶದಲ್ಲಿ ನಾಯಿ ಕಾಟಕ್ಕೆ ಕಡಿವಾಣ ಬಿದ್ದಿಲ್ಲ. ಸಾಕಷ್ಟು ಜನರಿಗೆ ಕಚ್ಚಿ ಗಾಯಗೊಳಿಸಿದ ಬೀದಿ ನಾಯಿ ಇದೀಗ ಸಾಕು ಪ್ರಾಣಿಗಳ ಮೇಲೆಯೂ ಆಕ್ರಮಣ ನಡೆಸುತ್ತಿದೆ. ಗುಂಪಿನಲ್ಲಿ ಬಂದ ಬೀದಿ ನಾಯಿಗಳು ಕುರಿಗಳ ಮೇಲೆ ದಾಳಿ ನಡೆಸಿದ ಪರಿಣಾಮ ಕಸ್ತೂರಿಬಾ ನಗರದಲ್ಲಿನ ಎರಡು ಕುರಿ ಮರಿಗಳು ಅಲ್ಲಿಯೇ ಸಾವನಪ್ಪಿದೆ. ಬೀಡಾಡಿ ಜಾನುವಾರುಗಳ ಜೊತೆ ಬೀದಿ ನಾಯಿಗಳ ನಿಯಂತ್ರಣಕ್ಕೆ ನಗರಸಭೆ ಸಾಕಷ್ಟು ಪ್ರಯತ್ನ ನಡೆಸಿದೆ. ಇದಕ್ಕಾಗಿ ಹಣವನ್ನು ಸಹ ವೆಚ್ಚ ಮಾಡುತ್ತಿದೆ. ಆದರೆ, ಇದರಿಂದ ಯಾವ ಪ್ರಯೋಜನವೂ ಆಗುತ್ತಿಲ್ಲ. ಬೀದಿ ನಾಯಿಗಳ ಸಂತಾನ ಹರಣ ನೆಪದಲ್ಲಿ ಲಕ್ಷಾಂತರ ರೂ ಕಾಸು ವೆಚ್ಚವಾಗುತ್ತಿರುವುದು ಬಿಟ್ಟರೆ ನಾಯಿಗಳ ನಿಯಂತ್ರಣಕ್ಕೆ ಕೊನೆ ಇಲ್ಲ. ಬೀಡಾಡಿ ಜಾನುವಾರುಗಳ ನಿಯಂತ್ರಣಕ್ಕಾಗಿ ಶಾಸಕ-ಸಂಸದರ ಮುಂದಾಳತ್ವದಲ್ಲಿ ಸಭೆ ನಡೆದಿದೆ. ಬೀದಿ ಬೀದಿಯಲ್ಲಿರುವ ಜಾನುವಾರುಗಳ ಅಪಾಯದ ಬಗ್ಗೆ ಸಭೆಯಲ್ಲಿ ಸಾಕಷ್ಟು ಚರ್ಚೆಯೂ ನಡೆದಿದೆ. ಬೀಡಾಡಿ ಜಾನುವಾರು ನಿಯಂತ್ರಣಕ್ಕೆ ಕಠಿಣ ಕ್ರಮ ಜರುಗಿಸುವುದಾಗಿಯೂ ನಗರಸಭೆ ಅಧಿಕಾರಿಗಳು ಹೇಳಿದ್ದಾರೆ. ಆದರೆ, ಆ ಕೆಲಸ ಮಾತ್ರ ಸರಿಯಾಗಿ ನಡೆದಿಲ್ಲ. ಈಗಾಲೇ ಅನೇಕರು ಬೀದಿ ನಾಯಿಗಳ ಆಕ್ರಮಣದಿಂದ ಸಂಕಷ್ಟ ಅನುಭವಿಸಿದ್ದು, ನಿಯಮಾನುಸಾರ ಅವರಿಗೆ ಪರಿಹಾರವೂ ಸಿಕ್ಕಿಲ್ಲ. - [ಬೆಂಕಿಗೆ ಕರಗಿದ ಬಂಗಾರ!](https://mobiletime.in/2025/11/gold-melted-by-fire/): ಹoಚಿನ ಮನೆಯೊಂದಕ್ಕೆ ಬೆಂಕಿ ಬಿದ್ದ ಪರಿಣಾಮ ಮನೆ ಸುಟ್ಟು ಕರಕಲಾಗಿದ್ದು, ಮನೆಯೊಳಗೆ ಜೋಪಾನವಾಗಿರಿಸಿದ್ದ ಬಂಗಾರವು ಅಗ್ನಿಗೆ ಆಹುತಿಯಾಗಿದೆ. ವಾಸದ ಮನೆ ಜೊತೆ ಸಂಪಾದಿಸಿದ್ದ ಆಭರಣವನ್ನು ಕಳೆದುಕೊಂಡ ಕುಟುಂಬದವರು ಕಣ್ಣೀರು ಹಾಕುತ್ತಿದ್ದಾರೆ. ಕಾರವಾರದ ಅಲಿಗದ್ದಾ ಬಳಿಯ ಗಾವಡವಾಡದಲ್ಲಿ ಶುಕ್ರವಾರ ಅಗ್ನಿ ಅವಘಡ ನಡೆದಿದೆ. ಈ ದುರಂತದಲ್ಲಿ ಮನೆಗೆ ಬೆಂಕಿ ಬಿದ್ದಿದ್ದು, ಮನೆಯೊಳಗಿದ್ದ ಸಾಮಗ್ರಿಗಳೆಲ್ಲವೂ ಕರಕಲಾಗಿದೆ. ಬಡವ ಭೀಮ ಗೌಡ ಅವರು ವಾಸಿಸುತ್ತಿದ್ದ ಮನೆಗೆ ದಿಡೀರ್ ಆಗಿ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿ ಬಿದ್ದ ವೇಳೆ ಮನೆಗೆ ಬೀಗ ಹಾಕಲಾಗಿದ್ದು, ಒಳಗೆ ಯಾರೂ ಇಲ್ಲದ ಕಾರಣ ಎಲ್ಲರೂ ಬದುಕುಳಿದಿದ್ದಾರೆ. ಬೆಂಕಿ ಕಿಡಿ ಸಣ್ಣದಾಗಿದ್ದಾಗ ಯಾರ ಗಮನಕ್ಕೂ ಬಂದಿರಲಿಲ್ಲ. ದೊಡ್ಡ ಹೊಗೆ ಕಾಣಿಸಿಕೊಂಡಾಗ ಸ್ಥಳೀಯರು ಇದನ್ನು ಗಮನಿಸಿದರು. ಬೀಗ ಒಡೆದು ಬೆಂಕಿ ಆರಿಸುವ ಪ್ರಯತ್ನ ನಡೆಸಿದರಾದರೂ ಅದು ಪ್ರಯೋಜನಕ್ಕೆ ಬರಲಿಲ್ಲ. ಪೈಪ್ ಮೂಲಕ ನೀರು ಹಾಯಿಸಿದರೂ ಬೆಂಕಿಯ ಜ್ವಾಲೆ ಕಡಿಮೆ ಆಗಲಿಲ್ಲ. ಅಷ್ಟೊತ್ತಿಗೆ ಅಗ್ನಿಶಾಮಕ ಸಿಬ್ಬಂದಿಗೆ ಸುದ್ದಿ ಗೊತ್ತಾಯಿತು. ಅವರು ಬಂದು ಬೆಂಕಿ ಆರಿಸುವ ಕೆಲಸ ಶುರು ಮಾಡಿದರು. ಆದರೆ, ಅಷ್ಟರೊಳಗೆ ಮನೆ ಸುಟ್ಟು ಕರಕಲಾಗಿತ್ತು. ಅಡುಗೆ ಪಾತ್ರೆ, ವಿದ್ಯುತ್ ಉಪಕರಣಗಳ ಜೊತೆ ಕೂಡಿಟ್ಟ ಚಿನ್ನಾಭರಣವೂ ಕರಗಿತ್ತು. ವಿದ್ಯುತ್ ಶಾರ್ಟ ಸರ್ಕೀಟ್ ಅವಘಡಕ್ಕೆ ಕಾರಣ ಎಂಬ ಮಾಹಿತಿಯಿದೆ. - [ಕೊಡುಗೈ ದಾನಿಗೆ ಸೇವಾ ಪ್ರಶಸ್ತಿ](https://mobiletime.in/2025/11/service-award-for-a-generous-donor/): ಸಾಮಾಜಿಕ ಹಾಗೂ ಶೈಕ್ಷಣಿಕ ಕ್ಷೇತ್ರಕ್ಕೆ ತಮ್ಮದೇ ಆದ ಕೊಡುಗೆ ನೀಡುತ್ತಿರುವ ಶಿವಾನಂದ ಶೆಟ್ಟಿ ಅವರು `ಶಿಕ್ಷಣ ಸೇವಾ ರತ್ನ’ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಇಂಜಿನಿಯರ್ ಆಗಿರುವ ಶಿವಾನಂದ ಶೆಟ್ಟಿ ಅವರು ಸ್ವಿಟ್ ಹೊಮ್ ಕನ್ಸಟ್ರಕ್ಸನ್ ಎಂಬ ಸಂಸ್ಥೆ ಹೊಂದಿದ್ದಾರೆ. ಅದರ ಮೂಲಕ ಅನೇಕ ಕಟ್ಟಡಗಳನ್ನು ನಿರ್ಮಿಸಿದ್ದಾರೆ. ಮನೆಗಳನ್ನು ನಿರ್ಮಿಸುವ ಗುತ್ತಿಗೆದಾರರಾಗಿಯೂ ಶಿವಾನಂದ ಶೆಟ್ಟಿ ಅವರು ಜವಾಬ್ದಾರಿ ನಿಭಾಯಿಸುತ್ತಿದ್ದಾರೆ. ತಮಗೆ ಸಿಗುವ ಲಾಭದಲ್ಲಿ ಅವರು ಸಾಮಾಜಿಕ ಹಾಗೂ ಶೈಕ್ಷಣಿಕ ಸೇವೆ ಮಾಡುತ್ತಿದ್ದಾರೆ. ಲಯನ್ಸ ಕ್ಲಬ್ ಸದಸ್ಯರಾಗಿಯೂ ಶಿವಾನಂದ ಶೆಟ್ಟಿ ಅವರು ಸಮಾಜಕ್ಕೆ ಸಾಕಷ್ಟು ಕೊಡುಗೆ ನೀಡಿದ್ದಾರೆ. ಜೊತೆಗೆ ವಿವಿಧ ಸಂಘ-ಸAಸ್ಥೆಗಳಲ್ಲಿ ಅವರು ಸಕ್ರೀಯವಾಗಿದ್ದಾರೆ. ಅವರ ಈ ಸೇವೆಯನ್ನು ಸ್ಮೀತಾ ಆರ್ ಪ್ರಭು ಫೌಂಡೇಶನ್ ಗುರುತಿಸಿದೆ. ಈ ಪೌಂಡೇಶನ್ ಸಹ ಕಳೆದ ಅನೇಕ ವರ್ಷಗಳಿಂದ ಶೈಕ್ಷಣಿಕ ಸೇವಾ ಮನೋಭಾವನೆ ಹೊಂದಿದವರನ್ನು ಪ್ರೋತ್ಸಾಹಿಸುತ್ತಿದ್ದು, ಈ ವರ್ಷ ಶಿವಾನಂದ ಶೆಟ್ಟಿ ಅವರಿಗೆ `ಶಿಕ್ಷಣ ಸೇವಾ ರತ್ನ’ ಪ್ರಶಸ್ತಿ ನೀಡಲು ನಿರ್ಧರಿಸಿದೆ. `ಬಡವರ ಮಕ್ಕಳಿಗೆ ಶಿಕ್ಷಣ, ವಿದವೆಯರು, ದುರ್ಬಲರಿಗೆ ನೆರವು ನೀಡುತ್ತಿರುವ ಸ್ಮೀತಾ ಆರ್ ಪ್ರಭು ಫೌಂಡೇಶನ್ ಅಸ್ನೋಟಿಯ ಶಿವಾಜಿ ವಿದ್ಯಾಮಂದರದ ಮೂಲಕ ಈ ಪ್ರಶಸ್ತಿ ನೀಡುತ್ತಿದೆ. ಗ್ರಾಮೀಣ ಭಾಗದ ಶಾಲೆಗಳ ಅಭಿವೃದ್ಧಿಗೆ ಶ್ರಮಿಸುವವರಿಗೆ ಉತ್ತೇಜನ ನೀಡುವುದು ಸಂಸ್ಥೆಯ ಮುಖ್ಯ ಉದ್ದೇಶ’ ಎಂದು ಆಯ್ಕೆ ಸಮಿತಿಯ ಸಂಚಾಲಕರಾದ ಆರ್ ಜಿ ಪ್ರಭು ಅವರು ತಿಳಿಸಿದರು. - [ಬಿಪಿಎಲ್ ಕಾರ್ಡುದಾರರಿಗೆ ಮನೆ ಸಾಲ!](https://mobiletime.in/2025/11/home-loan-for-bpl-cardholders/): BPL ಕಾರ್ಡದಾರರಿಗೆ ಸಾಲ ಕೊಡಲು ಹಿಂದೇಟು ಹಾಕುವ ಬ್ಯಾಂಕ್ ಅಧಿಕಾರಿಗಳ ವಿರುದ್ಧ ಹಳಿಯಾಳ ಶಾಸಕ ಆರ್ ವಿ ದೇಶಪಾಂಡೆ ಗರಂ ಆಗಿದ್ದಾರೆ. `ಬಡವರಿಗೆ ಸಹಾಯ ಮಾಡಿ’ ಎಂದು ಅವರು ತಾಕೀತು ಮಾಡಿದ್ದಾರೆ. ಜಿ+2 ವಸತಿ ಯೋಜನೆ ಫಲಾನುಭವಿಗಳಿಗೆ ಬ್ಯಾಂಕ್ ಸಾಲ ನೀಡಲು ನಿರಾಕರಿಸಿದ ವಿಷಯವಾಗಿ ಅವರು ದಾಂಡೇಲಿಯಲ್ಲಿ ಬ್ಯಾಂಕ್ ಅಧಿಕಾರಿಗಳ ಸಭೆ ನಡೆಸಿದ್ದು, ಬ್ಯಾಂಕಿನವರ ಕಾರ್ಯದ ಬಗ್ಗೆ ಅಸಮಧಾನವ್ಯಕ್ತಪಡಿಸಿದರು. `ನೀವು ಬೇರೆ ಊರಿನಿಂದ ವರ್ಗಾವಣೆಗೊಂಡು ಇಲ್ಲಿಗೆ ಬಂದಿರುತ್ತೀರಿ. ಪುನಃ ವರ್ಗಾವಣೆಗೊಂಡು ಇಲ್ಲಿಂದ ಹೋಗುತ್ತೀರಿ. ಆದರೆ, ಇಲ್ಲಿಯ ಜನ ಇಲ್ಲಿಯೇ ಇರುವವರು. ಅವರು ನಿಮ್ಮನ್ನು ಸ್ಮರಿಸುವಂತ ಕೆಲಸ ಮಾಡಬೇಕು’ ಎಂದು ಬ್ಯಾಂಕ್ ಅಧಿಕಾರಿಗಳಿಗೆ ಸೂಚಿಸಿದರು. `ಆಶ್ರಯ ಯೋಜನೆ ಫಲಾನುಭವಿಗಳಿಗೆ ಬ್ಯಾಂಕ್ ಸಾಲ ನೀಡಬೇಕು ಎನ್ನುವ ಆದೇಶವೊದೆ. ಅದಾಗಿಯೂ ಬ್ಯಾಂಕಿನವರು ಸಾಲ ಕೊಡುತ್ತಿಲ್ಲ. ಬಿಪಿಎಲ್ ಪಡಿತರ ಚೀಟಿ ಹೊಂದಿರುವ ಜನರಿಗೆ ಸಾಲ ಕೊಡಬಾರದು ಎನ್ನುವ ನಿಯಮ ಇದ್ದರೆ ತೋರಿಸಿ’ ಎಂದು ಸವಾಲು ಹಾಕಿದರು. ದೇಶಪಾಂಡೆ ಅವರ ಪ್ರಶ್ನೆಗೆ ಅಧಿಕಾರಿಗಳ ಬಳಿ ಉತ್ತರವಿರಲಿಲ್ಲ. `ಕಾನೂನುಬಾಹಿರವಾಗಿ ಸಾಲ ನೀಡಿ ಎಂದು ನಾನು ಹೇಳುವುದಿಲ್ಲ. ಫಲಾನುಭವಿಗಳ ಸಾಲದ ಪತ್ರ ಗಮನಿಸಿ ನಿಯಮದ ಅಡಿಯಲ್ಲಿ ಸಾಲ ವಿತರಣೆಗೆ ಕ್ರಮ ಜರುಗಿಸಿ’ ಎಂದು ಸೂಚಿಸಿದರು. - [2025 ನವೆಂಬರ್ 28ರ ದಿನ ಭವಿಷ್ಯ](https://mobiletime.in/2025/11/prediction-for-november-28-2025/): ಮೇಷ ರಾಶಿ: ಉದ್ಯೋಗದಲ್ಲಿ ಹೊಸ ಅವಕಾಶಗಳು ಬರಲಿದೆ. ಹಣಕೊರತೆ ದೂರವಾಗುತ್ತದೆ. ಮನೆಯ ಪರಿಸರ ಸಂತೋಷಕರವಾಗಿರುತ್ತದೆ. ಆರೋಗ್ಯದ ಕಡೆ ಗಮನ ಕೊಡಿ. ಪ್ರೀತಿಯಲ್ಲಿ ಸಮಾಧಾನ ಸಿಗಲಿದೆ. ವೃಷಭ ರಾಶಿ: ಯೋಗದಿಂದ ದಿನ ಶುರು ಮಾಡಿ. ಬಯಸಿದ ಹುದ್ದೆಗೆ ಅವಕಾಶ ಸಿಗಲಿದೆ. ಹೊಸ ವಹಿವಾಟಿನಲ್ಲಿ ಯಶಸ್ಸು ಸಿಗಲಿದೆ. ಮಿಥುನ ರಾಶಿ: ಕೆಲಸದ ವಿಚಾರಗಳಲ್ಲಿ ಸಂಕಷ್ಟಗಳಿಲ್ಲ. ಹೊಸ ಯೋಜನೆಗೆ ಸಮಯ ಸಿಗಲಿದೆ. ಆರೋಗ್ಯ ಚೆನ್ನಾಗಿರುತ್ತದೆ. ಕುಟುಂಬದಲ್ಲಿ ಸೌಹಾರ್ದ ಅಭಿವೃದ್ಧಿ ಸಾಧ್ಯವಿದೆ. ಕರ್ಕ ರಾಶಿ: ವಾಹನ, ಆಸ್ತಿ ಖರೀದಿ ವಿಶೇಷ ಸಮಯ ಕೂಡಿ ಬರಲಿದೆ. ಸಹೋದ್ಯೋಗಿಗಳ ಸಹಕಾರ ಸಿಗಲಿದೆ. ಗಣ್ಯರ ಭೇಟಿಯಿಂದ ಲಾಭ ಸಿಗಲಿದೆ. ಮನಸ್ಸು ನೆಮ್ಮದಿಯಾಗಿರುವಂತೆ ನೋಡಿಕೊಳ್ಳಿ. ಸಿಂಹ ರಾಶಿ: ಹೊಸ ಯೋಜನೆಗಳು ನೆರವಿಗೆ ಬರಲಿದೆ. ವ್ಯವಹಾರದಲ್ಲಿ ಬಲವರ್ಧನೆ ಸಾಧ್ಯವಿದೆ. ಬಂಧುಗಳೊAದಿಗೆ ಸಮಯ ಕಳೆಯಿರಿ. ಆರೋಗ್ಯದ ಕಡೆ ಗಮನ ಕೊಡಿ. ಕನ್ಯಾ ರಾಶಿ: ನಿಮ್ಮ ವ್ಯಕ್ತಿತ್ವಕ್ಕೆ ಗೌರವ ಸಿಗಲಿದೆ. ಉದ್ಯೋಗದಲ್ಲಿ ಬದಲಾಗುವ ಅವಕಾಶ ಬರಲಿದೆ. ಮನೆಯಲ್ಲಿ ಸಂತೋಷವಿರುತ್ತದೆ. ಹೊಸ ಆದಾಯದ ಮೂಲಗಳು ಬೆಳೆಯುತ್ತವೆ. ತುಲಾ ರಾಶಿ: ಕುಟುಂಬದೊoದಿಗೆ ಒಳ್ಳೆಯ ಸಂವಾದ ಸಾಧ್ಯವಿದೆ. ಸಹೋದ್ಯೋಗಿಗಳ ಸಹಕಾರ ಸಿಗಲಿದೆ. ಹಣದ ವ್ಯವಹಾರವನ್ನು ಎಚ್ಚರಿಕೆಯಿಂದ ಮಾಡಿ. ಜೀವನ ಸಂಗಾತಿಯ ಜೊತೆ ಸಮಯ ಕಳೆಯಿರಿ. ವೃಶ್ಚಿಕ ರಾಶಿ: ಹೊಸ ಯೋಜನೆಗಳು ಅನುಕೂಲಕರವಾಗಿರಲಿದೆ. ಸ್ನೇಹಿತರಿಂದ ಸಹಾಯ ಸಿಗಲಿದೆ. ವೃತ್ತಿಯಲ್ಲಿ ಯಶಸ್ಸು ಸಿಗಲಿದೆ. ಪ್ರೀತಿ ಜೀವನದಲ್ಲಿ ನವೀನತೆ ಕಾಣಲಿದ್ದೀರಿ. ಧನು ರಾಶಿ: ನಿಮ್ಮ ಕಾರ್ಯಕ್ಷಮತೆಯಲ್ಲಿ ಯಶಸ್ಸಿನ ಸಮಯ ಇದಾಗಿದ್ದು, ಕುಟುಂಬದಲ್ಲಿಯೂ ಸಂತೋಷ ಹೆಚ್ಚಲಿದೆ. ಹೆಚ್ಚು ಶ್ರಮವಿಲ್ಲದೆ ಫಲ ಸಿಗಲಿದೆ. ಮನೋವೈಕಲ್ಯ ನಿಯಂತ್ರಣ ಅಗತ್ಯವಿದೆ. ಮಕರ ರಾಶಿ: ನರಸಿಂಹ ದೇವರ ಪ್ರಾರ್ಥನೆ ಮಾಡುವುದರಿಂದ ಸಾಧನೆ ಸಾಧ್ಯವಿದೆ. ಹೊಸ ಸಂಪರ್ಕಗಳು ಲಾಭದಾಯಕವಾಗಿರಲಿದೆ. ಆರೋಗ್ಯದ ಕಡೆ ಗಮನಕೊಡಿ. ಕುಂಭ ರಾಶಿ: ಕೆಲಸದಲ್ಲಿ ಸತತ ಪ್ರಯತ್ನ ಫಲ ಕೊಡಲಿದೆ. ಮನೆಯಲ್ಲಿನ ಸೌಹಾರ್ದ ಮಾತುಕಥೆ ನಡೆಯಲಿದೆ. ಆರೋಗ್ಯ ಚೇತರಿಕೆ ಆಗಲಿದೆ. ಸಹೋದ್ಯೋಗಿಗಳ ಸಂತೋಷದ ಮಾತು ನೆಮ್ಮದಿ ಕೊಡಲಿದೆ. ಮೀನ ರಾಶಿ: ಯಶಸ್ಸು ನಿಧಾನಗತಿಯಲ್ಲಿದ್ದರೂ ಆತಂಕ ಮಾಡುವ ಅಗತ್ಯವಿಲ್ಲ. ಕಷ್ಟಗಳು ದೂರವಾಗುತ್ತದೆ. ಸ್ನೇಹಿತರ ಸಲಹೆ ಸ್ವೀಕರಿಸಿ. ಮನಸ್ಸು ಆಹ್ಲಾದಕರವಾಗಿರಲಿ. - [ಆತನಿಗೆ ಬೀಡಿ ಸೇದಲು ಬೇರೆ ಜಾಗವೇ ಇರಲಿಲ್ಲ!](https://mobiletime.in/2025/11/he-had-no-other-place-to-smoke-a-bidi/): ಬಾವಿ ಕಟ್ಟೆಯ ಮೇಲೆ ಕುಳಿತು ಬೀಡಿ ಸೇದುತ್ತಿದ್ದ ಗೌಂಡಿಯೊಬ್ಬರು ಅದೇ ಬಾವಿಗೆ ಬಿದ್ದು ಸಾವನಪ್ಪಿದ್ದಾರೆ. ಕುಮಟಾದ ಹೊನ್ಮಾವ್ ಬ್ರಿಜ್ ಬಳಿ ಬಾಲಚಂದ್ರ ತಿಮ್ಮಪ್ಪ ಗಾವಡಿ (49) ಅವರು ವಾಸವಾಗಿದ್ದರು. ಕಟ್ಟಡ ಕಾರ್ಮಿಕರಾಗಿದ್ದ ಅವರು ಗೌಂಡಿ ಕೆಲಸ ಮಾಡುವಲ್ಲಿ ಪರಿಣಿತಿಪಡೆದಿದ್ದರು. ತಮ್ಮ ಮನೆಯಿಂದ 200 ಮೀ ದೂರದಲ್ಲಿರುವ ಬಾವಿ ಕಟ್ಟೆ ಮೇಲೆ ಕೂತು ಬೀಡಿ ಸೇದುವುದನ್ನು ಅವರು ರೂಢಿಸಿಕೊಂಡಿದ್ದರು. ನವೆoಬರ್ 26ರಂದು ರಾತ್ರಿ ಮನೆಯಿಂದ ಹೊರ ಹೋದ ಅವರು ಎಂದಿನoತೆ ಪೋರ್ಸ ಮೋಟಾರ್ಸ ಗ್ಯಾರೇಜ್ ಬಳಿ ತೆರಳಿದ್ದರು. ಅಲ್ಲಿದ್ದ ಬಾವಿ ಕಟ್ಟೆ ಮೇಲೆ ಕುಳಿತು ಬೀಡಿಗೆ ಬೆಂಕಿ ಅಂಟಿಸಿದ್ದರು. ಬಾಲಚಂದ್ರ ಗಾವಡಿ ಅವರು ರಾತ್ರಿ ಮನೆಗೆ ಬಂದಿರಲಿಲ್ಲ. ಹೀಗಾಗಿ ಅವರ ಅಣ್ಣ ದಾಮೋದರ್ ಗಾವಡಿ ನವೆಂಬರ್ 27ರ ಬೆಳಗ್ಗೆ ಹುಡುಕಾಟ ಶುರು ಮಾಡಿದರು. ಆಯತಪ್ಪಿ ಬಾವಿಗೆ ಬಿದ್ದಿದ್ದ ಬಾಲಚಂದ್ರ ಗಾವಡಿ ಅವರ ಬಳಿ ಮೇಲೆ ಬರಲು ಸಾಧ್ಯವಾಗಿರಲಿಲ್ಲ. ಬಾವಿಯಲ್ಲಿದ್ದ ನೀರು ಕುಡಿದು ಅವರು ಕೊನೆಯುಸಿರೆಳೆದಿದ್ದರು. ಬೆಳಗ್ಗೆ 11 ಗಂಟೆ ಅವಧಿಗೆ ಪೊಲೀಸರು ಬಂದು ಅವರ ಶವವನ್ನು ಮೇಲೆತ್ತಿದರು. - [ಹಾರ್ಫಿಕ್ ಕುಡಿದ ಮಹಿಳಾ ಆರೋಪಿ!](https://mobiletime.in/2025/11/female-accused-of-drinking-alcohol/): ಅಪರಾಧ ಪ್ರಕರಣದೊಂದರ ವಿಚಾರಣೆಗಾಗಿ ಪೊಲೀಸ್ ಠಾಣೆಗೆ ಬಂದಿದ್ದ ಮಹಿಳೆಯೊಬ್ಬರು ಶೌಚಾಲಯಕ್ಕೆ ತೆರಳಿ ಹಾರ್ಫಿಕ್ ಕುಡಿದಿದ್ದಾರೆ. ಅಸ್ವಸ್ಥಗೊಂಡಿದ್ದ ಅವರನ್ನು ಪೊಲೀಸರೇ ಆಸ್ಪತ್ರೆಗೆ ಸಾಗಿಸಿ ಪ್ರಾಣ ಕಾಪಾಡಿದ್ದಾರೆ. ಭಟ್ಕಳದ ಪಾತಿಮಾ ಬಿ ಅವರು ಅಪರಾಧ ಪ್ರಕರಣವೊಂದರಲ್ಲಿ ಆರೋಪಿಯಾಗಿದ್ದರು. ಹೀಗಾಗಿ ಭಟ್ಕಳ ನಗರ ಠಾಣೆ ಪೊಲೀಸರು ಅವರನ್ನು ವಿಚಾರಣೆಗೆ ಕರೆದಿದ್ದರು. ವಿಚಾರಣೆ ನಡುವೆ ಶೌಚಾಲಯಕ್ಕೆ ಹೋಗುವುದಾಗಿ ಹೇಳಿದ ಪಾತಿಮಾ ಬಿ ಅಲ್ಲಿದ್ದ ಹಾರ್ಫಿಕ್ ಕುಡಿದರು. ಅಲ್ಲಿಯೇ ಕುಸಿದು ಬಿದ್ದ ಅವರನ್ನು ಪೊಲೀಸರು ನೋಡಿದ್ದು, ತಕ್ಷಣ ಆಸ್ಪತ್ರೆಗೆ ಸಾಗಿಸಿದರು. ಈ ಪ್ರಕರಣದಲ್ಲಿ ನಡೆದ ವಿಚಾರಣೆ ವೇಲೆ ದೂರುದಾರರು ಸಹ ಪೊಲೀಸ್ ಠಾಣೆಯಲ್ಲಿದ್ದರು. ದೂರುದಾರರು ಹಾಗೂ ಆರೋಪಿ ಮಹಿಳೆ ನಡುವೆ ಆಪ್ತ ಸಂಬAಧವಿದ್ದು, ದೂರುದಾರರನ್ನು ನೋಡಿದ ತಕ್ಷಣ ಮಹಿಳೆ ಕಂಗಾಲಾದರು. ವಿಚಲಿತರಾಗಿದ್ದ ಸನ್ನಿವೇಶ ಎದುರಿಸಲಾಗದೇ ಆತಂಕದಲ್ಲಿ ಪಾತಿಮಾ ಬಿ ಅವರು ಹಾರ್ಫಿಕ್ ಕುಡಿದರು. ಪೊಲೀಸರ ಸಮಯಪ್ರಜ್ಞೆ ಹಾಗೂ ವೈದ್ಯರ ನಿರಂತರ ಪ್ರಯತ್ನದಿಂದ ಹಾರ್ಫಿಕ್ ಕುಡಿದ ಮಹಿಳೆ ಆರೋಗ್ಯ ಚೇತರಿಸಿಕೊಂಡಿದೆ. ಪೊಲೀಸರು ಆ ಮಹಿಳೆ ಹೇಳಿಕೆಪಡೆದಿದ್ದು, ಕಾನೂನು ಕ್ರಮ ಜರುಗಿಸಿದ್ದಾರೆ. - [ಮಕ್ಕಳಿಗೆ ಮೆಸೆಜ್ ಮಾಡುವುದೇ ಈ ಟೀಚರ್ ಕೆಲಸ!](https://mobiletime.in/2025/11/this-teachers-job-is-to-send-messages-to-the-children/): ಹೈಸ್ಕೂಲ್ ವಿದ್ಯಾರ್ಥಿನಿಯರನ್ನು ಪುಸಲಾಯಿಸಿ ಅವರ ಮೊಬೈಲ್ ಸಂಖ್ಯೆಪಡೆಯುತ್ತಿದ್ದ ಶಿಕ್ಷಕ ಕಿರಣ ಟೊಪೊಜಿ ಅವರಿಗೆ ಅಶ್ಲೀಲ ಮೆಸೆಜ್ ಮಾಡುತ್ತಿದ್ದ ಸಂಗತಿ ಹೊರಬಿದ್ದಿದೆ. ಮುಂಡಗೋಡಿನ ಖಾಸಗಿ ಶಿಕ್ಷಣ ಸಂಸ್ಥೆಯಲ್ಲಿ ಮುಡಸಾಲಿ ಗ್ರಾಮದ ಕಿರಣ ನಿಂಗಪ್ಪ ಟೊಪೊಜಿ ದೈಹಿಕ ಶಿಕ್ಷಕರಾಗಿದ್ದು, ಅಲ್ಲಿ ಅಪರಾತಪರಾ ನಡೆಸಿದ ಕಾರಣ ಸಂಸ್ಥೆಯವರು ಹೊರದಬ್ಬಿದ್ದರು. ಅದಾದ ನಂತರ ಕಿರಣ ಟಪೋಜಿ ಕರಗಿನಕೊಪ್ಪದ ಖಾಸಗಿ ಸಂಸ್ಥೆ ಬಾಗಿಲು ಬಡೆದಿದ್ದು ಆ ಶಿಕ್ಷಣ ಸಂಸ್ಥೆಯಲ್ಲಿಯೂ ತಮ್ಮ ಹಳೆ ಚಾಳಿ ಮುಂದುವರೆಸಿದ್ದರು. ಈಚೆಗೆ ವಿದ್ಯಾರ್ಥಿನಿಯೊಬ್ಬರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಕಾರಣ ಪೊಲೀಸರು ಕಿರಣ ಟಪೋಜಿ ಅವರನ್ನು ಬಂಧಿಸಿದ್ದರು. ಅದಾದ ನಂತರ ಇನ್ನಷ್ಟು ಮಾಹಿತಿ ಬಹಿರಂಗವಾಗಿದೆ. ಅನೇಕ ಬಾಲಕಿಯರಿಗೆ ಕಿರಣ ಟಪೋಜಿ ಅಶ್ಲೀಲ ಮೆಸೆಜ್ ಮಾಡಿದ ಆರೋಪವ್ಯಕ್ತವಾಗಿದೆ. ಕೆಲ ವಿದ್ಯಾರ್ಥಿನಿಯರಿಗೆ ಪದೇ ಪದೇ ಫೋನ್ ಮಾಡಿಯೂ ಆ ಶಿಕ್ಷಕ ಕಾಡಿಸುತ್ತಿದ್ದ ವಿಚಾರ ಹೊರ ಬಿದ್ದಿದೆ. ಶಿಕ್ಷಕರೇ ವಿದ್ಯಾರ್ಥಿಗಳನ್ನು ತಪ್ಪು ದಾರಿಗೆಳೆದ ವಿಚಾರ ಪಾಲಕರ ಆತಂಕಕ್ಕೆ ಕಾರಣವಾಗಿದೆ. - [ಅಬಕಾರಿ ಅಧಿಕಾರಿಗೆ ಸಿಕ್ಕಿತು ಅಕ್ರಮ ಮದ್ಯ](https://mobiletime.in/2025/11/excise-officer-found-illegal-liquor/): ಅಂಕೋಲಾದಲ್ಲಿ ಅಕ್ರಮ ಮದ್ಯ ಸಾಗಾಟ ನಡೆದಿರುವುದನ್ನು ಅಬಕಾರಿ ಅಧಿಕಾರಿಗಳು ಪತ್ತೆ ಮಾಡಿದ್ದಾರೆ. ಹಟ್ಟಿಕೇರಿ ಟೋಲ್‌ಗೇಟ್ ಬಳಿ ಗೋವಾ ಸರಾಯಿ ಸಾಗಿಸುತ್ತಿದ್ದವರನ್ನು ಅಬಕಾರಿ ಸಿಬ್ಬಂದಿ ಹಿಡಿದಿದ್ದಾರೆ. ಸಿಲ್ವರ್ ಬಣ್ಣದ ಮಾರುತಿ ಸೆಲೆರಿಯೋ ಕಾರಿನಲ್ಲಿ ಅಕ್ರಮ ಮದ್ಯ ಸಾಗಾಟ ನಡೆದಿತ್ತು. ಸರ್ಕಾರಿ ಸಿಬ್ಬಂದಿ ಅದಕ್ಕೆ ಅಡ್ಡಲಾಗಿ ಕೈ ಮಾಡಿದರು. ಕರ್ನಾಟಕದಲ್ಲಿ ಮಾರಾಟಕ್ಕೆ ಅನುಮತಿ ಇಲ್ಲದ ಮದ್ಯದ ಬಾಟಲಿಗಳು ಆ ಕಾರಿನಲ್ಲಿದ್ದವು. ಹೀಗಾಗಿ ಅದೆಲ್ಲವನ್ನು ಅವರು ವಶಕ್ಕೆಪಡೆದರು. ಹಾಸನ ಜಿಲ್ಲೆಯ ವೈ ಬಿ ನಟರಾಜ್ ಆ ಕಾರು ಓಡಿಸುತ್ತಿದ್ದು, ಅವರನ್ನು ಸಹ ಅಬಕಾರಿ ಅಧಿಕಾರಿಗಳು ಬಂಧಿಸಿದರು. 5 ಲಕ್ಷ ರೂ ಮೌಲ್ಯದ ಕಾರಿನ ಜೊತೆ 24ಲೀಟರ್ ಮದ್ಯವನ್ನು ಜಪ್ತು ಮಾಡಿದರು. ಗೋವಾ ಮದ್ಯ ಸಾಗಾಟ ಹಾಗೂ ಮಾರಾಟ ಕಾನೂನುಬಾಹಿರ ಎಂದು ಅಬಕಾರಿ ಇಲಾಖೆಯವರು ಎಚ್ಚರಿಸಿದರು. - [ಅಗ್ನಿ ಅವಘಡಕ್ಕೆ ಹೊಟೇಲ್ ನಾಶ](https://mobiletime.in/2025/11/hotel-destroyed-in-fire-accident/): ಜೊಯಿಡಾದ ರಾಮನಗರದಲ್ಲಿರುವ ಹೊಟೇಲಿಗೆ ಬೆಂಕಿ ತಗುಲಿದ್ದು, ಸಮೀರ ಗೌಡ ಅವರ ಮಾಲಕತ್ವದಲ್ಲಿದ್ದ ಸಾಮಗ್ರಿಗಳು ಸುಟ್ಟು ಕರಕಲಾಗಿದೆ. ವಿದ್ಯುತ್ ಶಾರ್ಟ ಸರ್ಕೀಟ್ ಅನಾಹುತಕ್ಕೆ ಕಾರಣ ಎಂಬ ಮಾಹಿತಿ ಸಿಕ್ಕಿದೆ. ರಾಮನಗರ-ಕಾರವಾರ ರಸ್ತೆಯಲ್ಲಿ ಸಮೀರ ಗೌಡ ಅವರು ಹೊಟೇಲ್ ನಡೆಸುತ್ತಿದ್ದರು. ಬುಧವಾರ ರಾತ್ರಿ ಈ ಹೊಟೇಲ್ ಹೊತ್ತಿ ಉರಿಯಿತು. ಹೊಟೇಲಿನ ಒಳಗೆ ಬೆಂಕಿ ಕಾಣಿಸಿಕೊಂಡಿದನ್ನು ನೋಡಿದ ಜನ ಸಮೀರ ಗೌಡ ಅವರಿಗೆ ಫೋನ್ ಮಾಡಿದರು. ಅವರು ಅಲ್ಲಿ ಬರುವುದರೊಳಗೆ ಹೊಟೇಲ್ ಸುಟ್ಟು ಕರಕಲಾಗಿತ್ತು. ಈ ಅಗ್ನಿ ಅವಘಡದಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳು ನಾಶವಾಗಿದೆ. ಸ್ಥಳೀಯರು ಬೆಂಕಿ ನಂದಿಸುವ ಪ್ರಯತ್ನ ಮಾಡಿದರೂ ಅದು ಸಾಧ್ಯವಾಗಿಲ್ಲ. ತಮಗಾದ ನಷ್ಟಕ್ಕೆ ಯೋಗ್ಯ ಪರಿಹಾರ ಸಿಗಬೇಕು ಎಂದು ಸಮೀರ ಗೌಡ ಅವರು ಆಗ್ರಹಿಸಿದರು. - [ಮೂರು ವರ್ಷ ಕಳೆದರೂ ಬಾರದ ಅಡಿಕೆ ದುಡ್ಡು!](https://mobiletime.in/2025/11/the-areca-nut-money-that-hasnt-arrived-even-after-three-years/): ಬಿಹಾರಕ್ಕೆ ಅಡಿಕೆ ಕಳುಹಿಸಿದ ವ್ಯಾಪಾರಿಯೊಬ್ಬರಿಗೆ ಬಾರೀ ಪ್ರಮಾಣದಲ್ಲಿ ಮೋಸವಾಗಿದೆ. ಅಡಿಕೆ ಜೊತೆ ಕಾಳು ಮೆಣಸನ್ನು ತರಿಸಿಕೊಂಡವ ಅದರ ಕಾಸು ಕೊಡದೇ ಅನ್ಯಾಯ ಮಾಡಿದ್ದಾರೆ. ಶಿರಸಿಯ ಅಬ್ದುಲ್ ರೆಹಮಾನ್ ಮಜೀಬ್ ಅವರು ಅಡಿಕೆ, ಕಾಳು ಮೆಣಸು ವ್ಯಾಪಾರ ಮಾಡಿಕೊಂಡಿದ್ದಾರೆ. ಗ್ರಾಹಕರ ಬೇಡಿಕೆಗೆ ತಕ್ಕ ಹಾಗೇ ಅವರು ವಿಳ್ಯದೆಲೆ, ಏಲಕ್ಕಿಯನ್ನು ಪೂರೈಸುತ್ತಾರೆ. 2022ರಲ್ಲಿ ಬಿಹಾರದ ರಾಜು ಸುಲ್ತಾನಿಯಾ ಅವರು `ತಮಗೆ ಅಡಿಕೆ-ಕಾಳು ಮೆಣಸು ಬೇಕು’ ಎಂದು ಆರ್ಡರ್ ಮಾಡಿದ್ದರು. ಅದರ ಪ್ರಕಾರ ಅಬ್ದುಲ್ ಅವರು ಅದನ್ನು ಕಳುಹಿಸಿದ್ದರು. 2022ರ ಫೆಬ್ರವರಿಯಲ್ಲಿ ಪ್ರತಿ ಕ್ವಿಂಟಲ್ ಅಡಿಕೆಗೆ 30 ಸಾವಿರ ರೂ ದರದಲ್ಲಿ 13 ಕ್ವಿಂಟಲ್ ಅಡಿಕೆಯನ್ನು ಅಬ್ದುಲ್ ಅವರು ಬಿಹಾರಕ್ಕೆ ಕಳುಹಿಸಿದ್ದರು. ಅದಾದ ನಂತರ ಏಪ್ರಿಲ್ ತಿಂಗಳಿನಲ್ಲಿ 31500ರೂ ದರದಲ್ಲಿ 9 ಕ್ವಿಂಟಲ್ ರವಾನಿಸಿದ್ದರು. ಜೊತೆಗೆ 50 ಸಾವಿರ ರೂ ಮೌಲ್ಯದ 1.50 ಕೆಜಿ ಮೆಣಸನ್ನು ಕಳುಹಿಸಿದ್ದರು. ಜೂನ್ ಅವಧಿಯಲ್ಲಿ ಮತ್ತೆ 11 ಕ್ವಿಂಟಲ್ ಅಡಿಕೆಯನ್ನು ಎಂ ಎಲ್ ಪಿ ಎಲ್ ಟ್ರಾನ್ಸಪೋರ್ಟ ಮೂಲಕ ಕಳುಹಿಸಿದ್ದರು. ಪ್ರತಿ ಬಾರಿ ಸರಕು ಕಳುಹಿಸಿದಾಗಲೂ ರಾಜು ಸುಲ್ತಾನಿಯಾ ಅವರು `ಮುಂದಿನ ಬಾರಿ ಹಣ ಕೊಡುವೆ’ ಎನ್ನುತ್ತಿದ್ದರು. ಆದರೆ, ಆ ಹಣ ಮಾತ್ರ ಬರುತ್ತಿರಲಿಲ್ಲ. ಹೀಗಾಗಿ ಜೋರಾಗಿ ಮಾತನಾಡಿದಾಗ ಒಮ್ಮೆ 5.75 ಲಕ್ಷ ರೂ ಪಾವತಿ ಮಾಡಿದ್ದು, ಉಳಿದ 10 ಲಕ್ಷ ರೂಪಾಯಿಯನ್ನು ಈವರೆಗೂ ಕೊಡಲಿಲ್ಲ. - [ಕಾಳಸಂತೆಯಲ್ಲಿ ಸಿಕ್ಕಿದ ಸರ್ಕಾರಿ ಅಕ್ಕಿ!](https://mobiletime.in/2025/11/government-rice-found-in-kalasante/): ಸರ್ಕಾರದಿಂದ ಬಡವರಿಗೆ ವಿತರಣೆಯಾಗಬೇಕಿದ್ದ ಅಕ್ಕಿಯನ್ನು ಆಟೋದಲ್ಲಿ ಕದ್ದು ಸಾಗಿಸಲಾಗುತ್ತಿದ್ದು, ಆಹಾರ ಶಿರಸ್ತೇದಾರರಾದ ದೀಪಕ ನಾಯ್ಕ ಅವರು ಅದನ್ನು ತಡೆದಿದ್ದಾರೆ. ಕಾರವಾರದ ಒಕ್ಕಲಕೇರಿ-ಬಿಣಗಾ ಹತ್ತಿರ ಅನುಮಾನಾಸ್ಪದ ರೀತಿಯಲ್ಲಿ ಆಟೋ ಸಂಚರಿಸುತ್ತಿತ್ತು. ಕಾರವಾರ ತಹಶೀಲ್ದಾರ್ ಕಚೇರಿಯ ಆಹಾರ ಶಿರಸ್ತೇದಾರರಾದ ದೀಪಕ ನಾಯ್ಕ ಅವರು ಆ ಆಟೋಗೆ ಅಡ್ಡಲಾಗಿ ಕೈ ಮಾಡಿದರು. ಅಧಿಕಾರಿಗಳನ್ನು ನೋಡಿದ ಆಟೋ ಚಾಲಕ ರಿಕ್ಷಾ ಅಲ್ಲಿಯೇ ಬಿಟ್ಟು ಓಡಿ ಹೋದರು. ಆ ಆಟೋ ಪರಿಶೀಲನೆ ಮಾಡಿದಾಗ ಅದರಲ್ಲಿ ಅಕ್ಕಿ ಮೂಟೆಗಳು ಸಿಕ್ಕಿದವು. ಆಹಾರ ಶಿರಸ್ತೇದಾರರಾದ ದೀಪಕ ಗಣಪತಿ ನಾಯ್ಕ ಅವರು ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದರು. ಅಂಕೋಲಾ ಬಾವಿಕೇರಿಯ ದಿನೇಶ ನಾರಾಯಣ ನಾಯ್ಕ ಅವರು 5 ಕ್ವಿಂಟಲ್ ಅಕ್ಕಿಯನ್ನು ಅನಧಿಕೃತವಾಗಿ ಸಾಗಿಸಿದ ಬಗ್ಗೆ ಅವರು ದೂರಿದರು. 18 ಸಾವಿರ ರೂ ಮೌಲ್ಯದ ಅಕ್ಕಿಯನ್ನು ಅವರು ವಶಕ್ಕೆಪಡೆದರು. ಆರೋಪಿಗಾಗಿ ಪೊಲೀಸರು ಶೋಧ ನಡೆಸಿದರು. - [ಕಬ್ಬಿಣ ವ್ಯಾಪಾರ: ಬಾರ್ಗಿನ್ ಮಾಡಿದ ಗ್ರಾಹಕನಿಗೆ ಕಪಾಳಮೋಕ್ಷ!](https://mobiletime.in/2025/11/iron-trade-a-slap-in-the-face-to-a-customer-who-bargained/): ಕಬ್ಬಿಣ ಸಾಮಗ್ರಿ ವ್ಯಾಪಾರ ಮಳಿಗೆಗೆ ಹೋಗಿದ್ದ ಇಫರಾನ್ ಶೇಖ್ ಅವರು `ಕೆಜಿ ಕಬ್ಬಿಣದ ಮೇಲೆ 2 ರೂ ಕಡಿಮೆ ಮಾಡಿ’ ಎಂದಿದ್ದಾರೆ. ಇದರಿಂದ ಸಿಟ್ಟಾದ ಮಳಿಗೆ ಮಾಲಕ ಯಾಸಿನ್ ಬಿಳಗಿ ಅವರು ಗ್ರಾಹಕನ ಕೆನ್ನೆಗೆ ಬಾರಿಸಿದ್ದಾರೆ! ಶಿರಸಿಯ ರಾಮನಬೈಲಿನಲ್ಲಿ ಇಪರಾನ್ ಶೇಖ ಅವರು ವಾಸವಾಗಿದ್ದಾರೆ. ಅವರು ಸಹ ವ್ಯಾಪಾರಿಯಾಗಿದ್ದು, ಅಗತ್ಯ ಕಬ್ಬಿಣ ಖರೀದಿಗೆ ಅಲೆದಾಡುತ್ತಿದ್ದಾರೆ. ಹೀಗಿರುವಾಗ ನವೆಂಬರ್ 14ರಂದು ಅವರು ಕೆರೆಗುಂಡಿಯಲ್ಲಿರುವ ಯಾಸಿನ್ ಸ್ಟೀಲ್ ಅಂಗಡಿಗೆ ಹೋಗಿದ್ದರು. ಅಲ್ಲಿದ್ದ ಯಾಸಿನ್ ಬಿಳಗಿ ಅವರಲ್ಲಿ ಕಬ್ಬಿಣದ ರೇಟ್ ವಿಚಾರಿಸಿದ್ದರು. ಯಾಸಿನ್ ಬಿಳಗಿ ಅವರು `ಪ್ರತಿ ಕೆಜಿ ಕಬ್ಬಿಣಕ್ಕೆ 79ರೂ’ ಎಂದು ಹೇಳಿದ್ದಾರೆ. ಆಗ, ಇಪರಾನ್ ಶೇಖ ಅವರು `77ರೂ ಮಾಡಿ ಕೊಡಿ’ ಎಂದು ಮನವಿ ಮಾಡಿದ್ದಾರೆ. ಇದರಿಂದ ಸಿಟ್ಟಾದ ಯಾಸಿನ್ ಬಿಳಿಗಿ ಏಕಾಏಕಿ ಕೂಗಾಟ ನಡೆಸಿದ್ದಾರೆ. ಜೊತೆಗೆ ಇಫರಾನ್ ಶೇಖ್ ಅವರ ಕೆನ್ನೆಗೆ ಬಾರಿಸಿದ್ದಾರೆ. ಈ ಅವಮಾನ ಸಹಿಸದ ಇಪರಾನ್ ಶೇಖ ಅವರು ಅದೇ ದಿನ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ತಮಗಾದ ಹಿಂಸೆಯ ಬಗ್ಗೆ ಶಿರಸಿ ಹೊಸ ಮಾರುಕಟ್ಟೆ ಠಾಣೆಯ ಪೊಲೀಸರಿಗೆ ವಿವರಿಸಿದ್ದಾರೆ. ಅದಾದ ನಂತರ ನ್ಯಾಯಾಲಯಕ್ಕೆ ಹೋಗಿ ಅನ್ಯಾಯದ ಬಗ್ಗೆ ತಿಳಿಸಿದ್ದು, ನ್ಯಾಯಾಲಯದ ಸೂಚನೆ ತಂದು ಪೊಲೀಸ್ ಪ್ರಕರಣ ದಾಖಲಿಸಿದ್ದಾರೆ. - [RFO ವಿರುದ್ಧ ಆರೋಪ: ಪತ್ರ ಬರೆದ ದಂಪತಿ ಕಣ್ಮರೆ](https://mobiletime.in/2025/11/allegations-of-harassment-by-forest-officials-couple-who-wrote-letter-disappears/): ಮೇಲಾಧಿಕಾರಿಗಳ ಕಿರುಕುಳಕ್ಕೆ ಬೇಸತ್ತ ಸರ್ಕಾರಿ ವಾಹನ ಚಾಲಕರೊಬ್ಬರು ಪತ್ನಿ ಜೊತೆ ಪರಾರಿಯಾಗಿದ್ದಾರೆ. ಹೊರಡುವ ಮುನ್ನ ಅವರು ತಮಗಾದ ಅನ್ಯಾಯ ವಿವರಿಸಿ ಆತ್ಮಹತ್ಯೆಯ ಪತ್ರ ಬರೆದಿದ್ದಾರೆ. ಹೊನ್ನಾವರ ವಲಯ ಅರಣ್ಯಾಧಿಕಾರಿ ಕಚೇರಿಯಲ್ಲಿ ಮಂಜುನಾಥ ನಾಯ್ಕ ಅವರು ವಾಹನ ಚಾಲಕರಾಗಿದ್ದರು. ಅರಣ್ಯ ಅಧಿಕಾರಿಗಳ ಕಿರುಕುಳ ಸಹಿಸದೇ ಅವರು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಪತ್ರ ಬರೆದರು. ಆ ಪತ್ರಕ್ಕೆ ಅವರ ಪತ್ನಿ ವೀಣಾ ಪೂಜಾರಿ ಅವರು ಸಹಿ ಹಾಕಿದ್ದು, ಸದ್ಯ ಆ ದಂಪತಿ ಕಾಣುತ್ತಿಲ್ಲ. ಕೆರೆಕೋಣದ ಮಂಜುನಾಥ ಗಣಪತಿ ನಾಯ್ಕ ಅವರು ಕಳೆದ 30 ವರ್ಷಗಳಿಂದ ಗೇರುಸೊಪ್ಪ ವಲಯ ಅರಣ್ಯ ಇಲಾಖೆಯಲ್ಲಿ ದಿನಗೂಲಿ ನೌಕರರಾಗಿದ್ದಾರೆ. ಕಳೆದ ಒಂದೂವರೆ ವರ್ಷಗಳಿಂದ ಗೇರಸೊಪ್ಪಕ್ಕೆ ಕಾರ್ತಿಕ ಕಾಂಬ್ಳೆ ಅವರು ವಲಯ ಅರಣ್ಯಾಧಿಕಾರಿಯಾಗಿದ್ದು, ಅವರ ವಿರುದ್ಧ ವಾಹನ ಚಾಲಕ ಮಂಜುನಾಥ ನಾಯ್ಕ ಅವರು ಆರೋಪ ಮಾಡಿದ್ದಾರೆ. `ಚಾಲಕರಾಗಿರುವ ತಮಗೆ ಅಡುಗೆ ಕೆಲಸ ಮಾಡುವಂತೆ ಒತ್ತಡ ತರಲಾಗಿದೆ. ಅಡುಗೆ ಮಾಡಲು ಬರುವುದಿಲ್ಲ ಎಂದು ಹೇಳಿದರೂ ಬಿಡುತ್ತಿಲ್ಲ’ ಎಂಬುದು ಪತ್ರದ ಸಾರಾಂಶ. `ಡಿಎಫ್‌ಓ ಯೋಗೀಶ ಅವರ ಬಳಿ ಹೇಳಿದರೂ ಸಮಸ್ಯೆ ಬಗೆಹರಿದಿಲ್ಲ’ ಎಂದು ಪತ್ರದಲ್ಲಿ ಉಲ್ಲೇಖಿಸಿರುವ ಅವರು `ಪಿಸೈ ಆಗಿರುವ ಪತ್ನಿ ಮೂಲಕ ಸುಳ್ಳು ಪ್ರಕರಣ ದಾಖಲಿಸುವೆ’ ಎಂದು ಆರ್‌ಎಫ್‌ಓ ಕಾರ್ತಿಕ ಕಾಂಬ್ಳೆ ಬೆದರಿಸಿದ ಬಗ್ಗೆ ಉಲ್ಲೇಖಿಸಿದ್ದಾರೆ. `ಈ ಪತ್ರ ತಮಗೆ ತಲುಪುವಷ್ಟರಲ್ಲಿ ನಾವು ಜೀವಂತವಾಗಿರುವುದಿಲ್ಲ’ ಎಂದು ಅವರು ಬರೆದಿದ್ದು, ದಂಪತಿಗಾಗಿ ಹುಡುಕಾಟ ನಡೆದಿದೆ. - [ಅಲ್ಲಿ ಮನೆ ಕಟ್ಟಿದವರೆಲ್ಲರೂ ಈತನಿಗೆ ದುಡ್ಡು ಕೊಡಬೇಕು!](https://mobiletime.in/2025/11/everyone-who-built-a-house-there-should-give-him-money/): `ಅತಿಕ್ರಮಣದಲ್ಲಿ ಮನೆ ಕಟ್ಟಿದವರು ತಮಗೆ 1 ಲಕ್ಷ ರೂ ಕೊಡಬೇಕು’ ಎಂದು ಯಲ್ಲಾಪುರದ ಅಮಿತ ಗಬ್ಬೂರ್ ಬಯಸುತ್ತಾರೆ. ಹೀಗಾಗಿ `ಹಣ ಕೊಡದೇ ಇದ್ದರೆ ಅರಣ್ಯ ಅಧಿಕಾರಿಗಳಿಗೆ ಅರ್ಜಿ ಕೊಡುವೆ’ ಎಂದು ಅವರು ಬೆದರಿಸುತ್ತಾರೆ! ಯಲ್ಲಾಪುರದ ಮಂಚಿಕೇರಿ ಬಳಿಯ ಜನತಾ ಕಾಲೋನಿಯಲ್ಲಿ ಅಮಿತ ಆಂಜಿನೇಯ ಗಬ್ಬೂರು (36) ಅವರು ವಾಸವಾಗಿದ್ದಾರೆ. ಅತಿಕ್ರಮಣದಲ್ಲಿ ಮನೆ ಮಾಡಿದ ಕಂಪ್ಲಿ ಸೂರ್ಯಮನೆಯ ಮಂಜುನಾಥ ನಾರಾಯಣ ಹೆಗಡೆ ಅವರಿಗೆ ಹಣ ಕೊಡುವಂತೆ ಅಮಿತ ಗಬ್ಬೂರು ಅವರು ಕಾಡಿಸುತ್ತಿದ್ದಾರೆ. `ಹಣ ಕೊಡದೇ ಇದ್ದರೆ ಕೊಲೆ ಮಾಡುವೆ’ ಎಂದೂ ಅವರು ಬೆದರಿಸಿದ್ದಾರೆ! ಮಂಜುನಾಥ ಹೆಗಡೆ ಅವರು ಹಾಸಣಗಿ ಸೊಸೈಟಿಯಲ್ಲಿ ಸ್ವಿಪರ್ ಆಗಿ ಕೆಲಸ ಮಾಡಿಕೊಂಡಿದ್ದಾರೆ. ಅಲ್ಲಿ-ಇಲ್ಲಿ ಸಾಲ ಮಾಡಿ ಅವರು ತಮ್ಮ 54ನೇ ವಯಸ್ಸಿನಲ್ಲಿ ಒಂದು ಮನೆ ಕಟ್ಟಿಕೊಂಡಿದ್ದಾರೆ. ಆದರೆ, ಆ ಮನೆಯ ಮೇಲೆ ಕಣ್ಣಿಟ್ಟಿರುವ ಅಮಿತ ಗಬ್ಬೂರ್ ಅವರು `ಅರಣ್ಯ ಅಧಿಕಾರಿಗಳಿಗೆ ಅರ್ಜಿ ಹಾಕಿ ನಿಮ್ಮ ಮನೆ ಖುಲ್ಲಾ ಮಾಡಿಸುವೆ’ ಎಂದು ಹೆದರಿಸುತ್ತಿದ್ದಾರೆ. ನವೆಂಬರ್ 13ರಂದು ಸೊಸೈಟಿಗೆ ಬಂದ ಅಮಿತ ಗಬ್ಬೂರ್ ಅವರು `1 ಲಕ್ಷ ರೂ ಕೊಡಬೇಕು’ ಎಂದು ತಾಕೀತು ಮಾಡಿದ್ದಾರೆ. ನವೆಂಬರ್ 14ರಂದು ಸಹ ಸೊಸೈಟಿಗೆ ಬಂದು ಹಣದ ವಿಷಯ ಮಾತನಾಡಿದ್ದಾರೆ. `ಹಣ ಕೊಡುವುದಿಲ್ಲ’ ಎಂದು ಮಂಜುನಾಥ ಹೆಗಡೆ ಅವರು ಹೇಳಿದ್ದರಿಂದ ಇನ್ನಷ್ಟು ಬೆದರಿಕೆ ಒಡ್ಡಿದ್ದಾರೆ. `ನನ್ನ ಬಳಿ ಬಹಳ ಜನರಿದ್ದಾರೆ. ನಾನು ಹೇಳಿದ ಹಣ ಕೊಡದೇ ಇದ್ದರೆ ನಿನ್ನ ಎತ್ತಿ ಬಿಡುವೆ’ ಎಂದು ಹೆದರಿಸಿದ್ದಾರೆ. ಅಮಿತ ಗಬ್ಬೂರು ಅವರು ಮಂಜುನಾಥ ಹೆಗಡೆ ಅವರ ಜೊತೆ ಇನ್ನೂ ಅನೇಕರಿಗೆ ಬೆದರಿಸಿದ್ದಾರೆ. ಹಣಕ್ಕಾಗಿ ಪೀಡಿಸಿದ್ದಾರೆ. ಆದರೆ, ಅವರೆಲ್ಲರೂ ಕೇಳಿದಷ್ಟು ಹಣಕೊಟ್ಟು ಸುಮ್ಮನಾಗಿದ್ದಾರೆ. ಆದರೆ, ಹಣ ಕೊಡಲು ಒಪ್ಪದ ಮಂಜುನಾಥ ಹೆಗಡೆ ಧೈರ್ಯದಿಂದ ಪೊಲೀಸ್ ಮೊರೆ ಹೋಗಿದ್ದಾರೆ. ತಮಗಿರುವ ಬೆದರಿಕೆಯ ಬಗ್ಗೆ ವಿವರವಾದ ಮಾಹಿತಿ ನೀಡಿ ಅಮಿತ ಗಬ್ಬೂರು ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಪಿಸೈ ರಾಜಶೇಖರ ವಂದಲಿ ಅವರು ಕಾನೂನು ಕ್ರಮ ಜರುಗಿಸಿದ್ದಾರೆ. `ಹಪ್ತಾ ವಸೂಲಿದಾರರನ್ನು ಹಿಮ್ಮೆಟ್ಟಿಸಿ’   - [ರಸ್ತೆ ಸರಿಯಾಗದಿದ್ದರೆ ಜಾತ್ರೆಯೂ ಇಲ್ಲ!](https://mobiletime.in/2025/11/if-the-road-is-not-in-good-condition-there-will-be-no-fair/): ರಾಜ್ಯದ ಪ್ರಸಿದ್ಧ ಉಳವಿ ಜಾತ್ರೆಗೆ ಬರುವ ಜನರಿಗೆ ಸಂಪರ್ಕ ರಸ್ತೆ ಹದಗೆಟ್ಟಿರುವುದೇ ದೊಡ್ಡ ಸಮಸ್ಯೆಯಾಗಿದೆ. ಹೀಗಾಗಿ `ರಸ್ತೆ ಸರಿ ಆಗದೇ ಇದ್ದರೆ ಜಾತ್ರೆಗೆ ಬರುವುದಿಲ್ಲ’ ಎಂದು ಉತ್ತರ ಕರ್ನಾಟಕ ಭಾಗದ ಭಕ್ತರು ಅಧಿಕಾರಿಗಳಿಗೆ ಎಚ್ಚರಿಸಿದ್ದಾರೆ. ಸಭೆ ಸಹಾಯಕ ಕಮಿಷನರ್ ಶ್ರವಣಕುಮಾರ್ ಅಧ್ಯಕ್ಷತೆಯಲ್ಲಿ ಉಳವಿಯಲ್ಲಿ ಜಾತ್ರೆಯ ಪೂರ್ವಭಾವಿ ಸಭೆ ನಡೆದಿದ್ದು, ರಸ್ತೆ ಅವ್ಯವಸ್ಥೆಗಳ ಬಗ್ಗೆ ಭಕ್ತರು ಅಸಮಧಾನವ್ಯಕ್ತಪಡಿಸಿದ್ದಾರೆ. ಪೂರ್ವಭಾವಿ ಸಭೆಯಲ್ಲಿ ಈ ವಿಷಯ ಪ್ರಸ್ತಾಪಿಸುವುದಕ್ಕಾಗಿಯೇ ಉತ್ತರ ಕರ್ನಾಟಕ ಭಾಗದಿಂದ ಬಂದಿದ್ದ ಭಕ್ತರು ತಮ್ಮ ಆಕ್ರೋಶವ್ಯಕ್ತಪಡಿಸಿದ್ದು, ಇಡೀ ಸಭೆ ಗದ್ದಲದಿಂದ ಕೂಡಿತ್ತು. `ಫೋಟೋಲಿ-ಗುಂದ-ಉಳವಿ ರಸ್ತೆ, ಜೋಯಿಡಾ-ಕುಂಬಾರವಾಡಾ-ಉಳವಿ ರಸ್ತೆ, ದಾಂಡೇಲಿ-ಹಳಿಯಾಳ ರಸ್ತೆ ಸೇರಿದಂತೆ ಹಲವು ರಸ್ತೆಗಳು ಹೊಂಡಮಯವಾಗಿದೆ. ಇಲ್ಲಿ ಚಕ್ಕಡಿ ಗಾಡಿಯೂ ಓಡುವುದಿಲ್ಲ. ಟ್ರ‍್ಯಾಕ್ಟರ್ ಸಹ ಸಂಚರಿಸುವುದಿಲ್ಲ’ ಎಂದು ತಮ್ಮ ಆಕ್ರೋಶಹೊರಹಾಕಿದರು. `ರಸ್ತೆ ಸರಿಪಡಿಸದಿದ್ದರೆ ಈ ಬಾರಿ ಜಾತ್ರೆಗೆ ಬರುವುದಿಲ್ಲ’ ಎಂದು ಎಚ್ಚರಿಸಿದರು. ಈ ವೇಳೆ ಲೋಕೋಪಯೋಗಿ ಇಲಾಖೆಯ ಸಹಾಯಕ ಇಂಜಿನಿಯರ್ ಬಸವರಾಜ ಎಸ್ ಅವರು `ಡಿಸೆಂಬರ್ 15ರೊಳಗೆ ರಸ್ತೆ ಸರಿಪಡಿಸುವೆ’ ಎಂಬ ಭರವಸೆ ನೀಡಿದರು. ಉಳವಿ ಗ್ರಾಮ ಪಂಚಾಯತ್ ಅಧ್ಯಕ್ಷ ಮಂಜುನಾಥ ಮೋಕಾಶಿ ಅವರು ಭಕ್ತರಿಗೆ ಉತ್ತಮ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸುವ ಭರವಸೆ ನೀಡಿದರು. ಸ್ವಚ್ಛತೆಗಾಗಿ ಹೆಚ್ಚಿನ ಜನರನ್ನು ನೇಮಿಸಿಕೊಳ್ಳುವಂತೆ ಸಭೆಯಲ್ಲಿ ಸೂಚನೆ ಬಂದಿತು. ಡಿವೈಎಸ್ಪಿ ಶಿವಾನಂದ ಎಂ ಅವರು ಸಂಚಾರಿ ನಿಯಮಗಳ ಬಗ್ಗೆ ಮಾಹಿತಿ ನೀಡಿದರು. `ಅಪಘಾತ ತಪ್ಪಿಸಲು ವಾಹನಗಳು ಮತ್ತು ಚಕ್ಕಡಿಗಳಿಗೆ ರಿಫ್ಲೆಕ್ಟರ್ ಸ್ಟಿಕ್ಕರ್‌ಗಳನ್ನು ಹಾಕಬೇಕು’ ಎಂದವರು ಸೂಚಿಸಿದರು. ವಿಪ ಸದಸ್ಯ ಗಣಪತಿ ಉಳ್ವೇಕರ್, ತಹಶೀಲ್ದಾರ್ ಮಂಜುನಾಥ ಮೊನ್ನೋಳಿ ಇನ್ನಿತರರು ಸಭೆಯಲ್ಲಿದ್ದರು. - [ಏಳು ವರ್ಷದ ಪ್ರೀತಿಗೆ ಲಕ್ಷ ರೂಪಾಯಿ!](https://mobiletime.in/2025/11/one-lakh-rupees-for-seven-years-of-love/): ಶಿರಸಿಯ ಮುಂಸಜೆ ಭಟ್ಟ ಹಾಗೂ ಅಂಕೋಲಾದ ಸ್ವದೇಶಿ ಗಾಂವ್ಕರ್ (ಹೆಸರು ಬದಲಿಸಿದೆ) ಅವರು ಏಳು ವರ್ಷಗಳಿಂದ ಪ್ರೀತಿಸುತ್ತಿದ್ದು, ಮೂರನೇ ವ್ಯಕ್ತಿಯ ಮದ್ಯಸ್ಥಿಕೆಯಿಂದ ಆ ಪ್ರೀತಿ ಮೂರು ವರ್ಷದ ಹಿಂದೆ ಮುರಿದು ಬಿದ್ದಿದೆ. ಆ ವೇಳೆ ನಡೆದ ಹಣಕಾಸು ಮಾತುಕಥೆ ಈವರೆಗೂ ಈಡೇರದ ಕಾರಣ ಮುಸ್ಸಂಜೆ ಭಟ್ಟ ಅವರು ಸ್ವದೇಶಿ ಗಾಂವ್ಕರ್ ವಿರುದ್ಧ ಬೈದು-ಬೆದರಿಕೆ ಒಡ್ಡಿದ ಆರೋಪದ ಅಡಿ ದೂರು ದಾಖಲಿಸಿದ್ದಾರೆ. ಮುಸ್ಸಂಜೆ ಭಟ್ಟ ಹಾಗೂ ಸ್ವದೇಶಿ ಗಾಂವ್ಕರ್ ಪರಸ್ಪರ ಪ್ರೀತಿಸುತ್ತಿದ್ದರು. ಆ ಅವಧಿಯಲ್ಲಿ `ನೀನೇ ನನ್ನ ಜೀವ.. ನೀನೇ ನನ್ನ ಪ್ರಾಣ’ ಎನ್ನುವಷ್ಟರ ಮಟ್ಟಿಗೆ ಅವರಿಬ್ಬರು ಅಂಟಿಕೊoಡಿದ್ದರು. ಇದಕ್ಕೆ ಸಾಕ್ಷಿಯಾಗಿ ಸಾವಿರಾರು ಸಂಖ್ಯೆಯ ವಾಟ್ಸಪ್ ಮೆಸೆಜ್ ವಿನಿಮಯವಾಗಿತ್ತು. ಊರು-ಕೇರಿ-ಜಾತ್ರೆ ಎಂದು ಎಲ್ಲಾ ಕಡೆ ಅವರಿಬ್ಬರು ಸುತ್ತಾಟ ನಡೆಸಿದ್ದರು. ಕಾಲೇಜು ಮುಗಿದ ನಂತರ ಮುಸ್ಸಂಜೆ ಭಟ್ಟ ಅವರಿಗೆ ಅವರ ಬಾವನ ಕಂಪನಿಯಲ್ಲಿಯೇ `ಅಡಿಕೆ’ ಲೆಕ್ಕ ಮಾಡುವ ಉದ್ಯೋಗ ಸಿಕ್ಕಿತು. ಈ ವೇಳೆ ನಾದಿನಿಯ ಪ್ರೀತಿ ವಿಷಯ ಅರಿತ ಬಾವ ರಾವಣ ಹೆಗಡೆ (ಹೆಸರು ಬದಲಿಸಿದೆ) ಸ್ವದೇಶಿ ಗಾಂವ್ಕರ್ ಅವರಿಗೆ ಮೆಸೆಜ್ ಮಾಡಿದರು. ಅವರಿಬ್ಬರ ಪ್ರೀತಿಗೆ ರಾವಣ ಬಾವ ಬೆಲೆ ಕಟ್ಟಿದ್ದರು. ಆ ಅವಧಿಯಲ್ಲಿ ಪ್ರೀತಿಸಿದ ಹುಡುಗಿಗಾಗಿ ಏನು ಬೇಕಾದರೂ ಮಾಡಲು ಸಿದ್ಧವಿದ್ದ ಸ್ವದೇಶಿ ಗಾಂವ್ಕರ್ ಅವರು ಅನಗತ್ಯವಾಗಿ ಮೂರನೇ ವ್ಯಕ್ತಿಗಾಗಿ ಖರ್ಚು ಮಾಡಲು ಸಿದ್ಧವಿರಲಿಲ್ಲ. ಅದಾಗಿಯೂ, ಒಂದಷ್ಟು ಹಣ ಕೊಟ್ಟು ಪ್ರಕರಣ ಮುಗಿಸಲು ಸ್ವದೇಶಿ ಗಾಂವ್ಕರ್ ಅವರು ಒಪ್ಪಿದ್ದರು. ಹಣ ಕೊಡಲು ಸಮಯವನ್ನು ಬೇಡಿದ್ದರು. ಆದರೆ, ಆ ಹಣ ಕೊಟ್ಟರೂ ಆ ರಾವಣ ಬಾವ ನಾಟಕನ ನಾಟಕ ಅಲ್ಲಿಗೆ ಮುಗಿಯುವ ಸಾಧ್ಯತೆಗಳಿರಲಿಲ್ಲ. ಹೀಗಾಗಿ ಸ್ವದೇಶಿ ಗಾಂವ್ಕರ್ ಅವರು ಹಣ ಕೊಡಲು ನಿಧಾನ ಮಾಡಿದರು. ಇದರಿಂದ ಸಿಟ್ಟಾದ ಆ ರಾವಣ ಬಾವ ತಮ್ಮ ಪ್ರಭಾವ ಬಳಸಿ ಮುಸ್ಸಂಜೆ ಭಟ್ಟ ಅವರಿಂದಲೇ ಹಣಕ್ಕೆ ಬೇಡಿಕೆಯಿಟ್ಟರು. ಬಾವನ ಕುಮ್ಮಕ್ಕಿನಿಂದ ದೊಡ್ಡ ಪ್ರಮಾಣದ ಹಣ ಬೇಡುತ್ತಿರುವುದನ್ನು ಅರಿತ ಸ್ವದೇಶಿ ಗಾಂವ್ಕರ್ ಅವರು ಆ ವೇಳೆ ಕಾಸು ಕೊಡಲಿಲ್ಲ. `ನೀನು ಕೇಳಿದರೂ ಆತ ಹಣ ಕೊಡಲಿಲ್ಲ’ ಎಂಬುದನ್ನೇ ರಾವಣ ಬಾವ ಮುಸ್ಸಂಜೆ ಭಟ್ಟ ಅವರ ತಲೆಗೆ ತುಂಬಿದರು. ಇದನ್ನೆ ನೆಪವನ್ನಾಗಿಸಿಕೊಂಡು ಅವರಿಬ್ಬರ ನಡುವೆ ಬಿರುಕು ಮೂಡಿಸಿದರು. ಮುಸ್ಸಂಜೆ ಭಟ್ಟ ಅವರ ತಲೆತಿರುಗಿಸಿ ಅವರಿಬ್ಬರ ಸಂಪರ್ಕ ಕಡಿತಗೊಳಿಸಿದರು. ಹೀಗಾಗಿ ಮೂರು ವರ್ಷಗಳಿಂದ ಸ್ವದೇಶಿ ಗಾಂವ್ಕರ್ ಹಾಗೂ ಮುಸ್ಸಂಜೆ ಭಟ್ಟ ಅವರ ನಡುವೆ ಮಾತುಕಥೆ ಇರಲಿಲ್ಲ. ಪರಸ್ಪರ ಭೇಟಿಯೂ ಆಗಿರಲಿಲ್ಲ. ಅದಾಗಿಯೂ, ಹಳೆಯ ಹಣ ಕೊಡುವಂತೆ ರಾವಣ ಬಾವ ದುಂಬಾಲು ಬಿದ್ದು ಸ್ವದೇಶಿ ಗಾಂವ್ಕರ್ ಅವರಿಗೆ ಪದೇ ಪದೇ ವಾಟ್ಸಪ್ ಮೆಸೆಜ್ ಮಾಡುತ್ತಿದ್ದರು. ಹಣ ಕೊಡದ ಕಾರಣ ಸ್ವದೇಶಿ ಗಾಂವ್ಕರ್ ಅವರ ಮನೆಗೆ ಹೋಗಿ ಅವರ ತಂದೆಗೂ ಬೆದರಿಕೆ ಒಡ್ಡಿದ್ದರು. ಆ ವೇಳೆ ನಡೆದ ಗಲಾಟೆ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದರೂ ರಾಜಿ ಸಂದಾನದ ಮೂಲಕ ಕೊನೆಯಾಗಿತ್ತು. ಈ ಮೂರು ವರ್ಷದ ಅವಧಿಯಲ್ಲಿ ಸ್ವದೇಶಿ ಗಾಂವ್ಕರ್  ಅವರು ಮುಸ್ಸಂಜೆ ಭಟ್ಟ ಸಂಪರ್ಕದಲ್ಲಿರಲಿಲ್ಲ. ಆದರೆ, ಹಳೆಯ ಬಾಕಿ ಬರುವುದನ್ನು ರಾವಣ ಬಾವ ಮರೆತಿರಲಿಲ್ಲ. ಅದಾಗಿ ಮೂರು ವರ್ಷದ ನಂತರ ರಾವಣ ಬಾವನಿಗೆ ಹಳೆಯದೆಲ್ಲವೂ ನೆನಪಾಯಿತು. ಮತ್ತೆ ಮುಸ್ಸಂಜೆ ಭಟ್ಟ ಅವರನ್ನು ಮುಂದೆ ಮಾಡಿ, ತಮ್ಮ ಅಡಿಕೆ ಅಂಗಡಿಯ ಮುಂದೆ ಗಲಾಟೆ ನಡೆದ ಕಾಲ್ಪನಿಕ ಕಥೆ ಕಟ್ಟಿದರು. ಸ್ವದೇಶಿ ಗಾಂವ್ಕರ್ ಅವರ ಪ್ರಕಾರ, ಅವರು ಕಳೆದ 8 ತಿಂಗಳಿನಿoದ ಶಿರಸಿಗೆ ಬಂದಿರಲಿಲ್ಲ. ಆದರೆ, ದಾಖಲಾದ ಪ್ರಕರಣದಲ್ಲಿ ಸೆಪ್ಟೆಂಬರ್ 13ರಂದು ಸ್ವದೇಶಿ ಗಾಂವ್ಕರ್ ಅವರು ಶಿರಸಿಗೆ ಬಂದು ಮುಸ್ಸಂಜೆ ಭಟ್ಟ ಅವರಿಗೆ ಬೆದರಿಕೆ ಒಡ್ಡಿದ ಬಗ್ಗೆ ದೂರಲಾಗಿತ್ತು. ಈ ಎಲ್ಲಾ ವಿಷಯಗಳ ಬಗ್ಗೆ ಮೊಬೈಲ್ ಮಿಡಿಯಾ ನೆಟ್‌ವರ್ಕಗೆ ಸ್ವದೇಶಿ ಗಾಂವ್ಕರ್ ವಿವರಿಸಿದ್ದು, ಮುರಿದು ಬಿದ್ದ ಪ್ರೀತಿ-ಪ್ರೇಮದ ಸಾಕ್ಷಿಯ ಸಂದೇಶ ಕಾಣಿಸಿದರು. ರಾವಣ ಬಾವನ ಹಣ ಬೇಡಿಕೆಯ ವಾಟ್ಸಪ್ ಮೆಸೆಜನ್ನು ಬಹಿರಂಗಪಡಿಸಿದರು. - [ಜನಮೆಚ್ಚಿದ ಶಿಕ್ಷಕ ಇದೀಗ ಕನ್ನಡದ ಕಣ್ಮಣಿ!](https://mobiletime.in/2025/11/the-beloved-teacher-is-now-the-darling-kannada/): ರಾಜ್ಯಮಟ್ಟದ ಸಂಪನ್ಮೂಲ ವ್ಯಕ್ತಿಯಾಗಿರುವ ಶಿಕ್ಷಕ ಗುಡ್ಡಪ್ಪ ಎಮ್ ಎಚ್ ಅವರಿಗೆ `ಕನ್ನಡ ಕಣ್ಮಣಿ’ ಪ್ರಶಸ್ತಿ ಸಿಕ್ಕಿದೆ. ಗುಡ್ಡಪ್ಪ ಎಮ್ ಎಚ್ ಅವರು ಭಟ್ಕಳ ತೆರ್ನಮಕ್ಕಿಯ ಕರ್ನಾಟಕ ಪಬ್ಲಿಕ್ ಸ್ಕೂಲಿನಲ್ಲಿ ಶಿಕ್ಷಕರಾಗಿದ್ದಾರೆ. ಮಕ್ಕಳ ಮನಸ್ಸು ಅರ್ಥ ಮಾಡಿಕೊಂಡು ಪಾಠ ಮಾಡುವ ಪ್ರವೃತ್ತಿಯಿಂದ ಅವರು ಪ್ರಸಿದ್ಧಿಪಡೆದಿದ್ದಾರೆ. ಕನ್ನಡ ನಾಡು-ನುಡಿಯ ಬಗ್ಗೆ ಅವರಿಗೆ ಅಪಾರ ಕಾಳಜಿಯಿದ್ದು, ಇದನ್ನು ಬೆಂಗಳೂರಿನ ನವಭಾರತ ಉದಯ ಪ್ರತಿಷ್ಠಾನದವರು ಗುರುತಿಸಿದ್ದಾರೆ. ಈ ಹಿನ್ನಲೆ ಗುಡ್ಡಪ್ಪ ಎಮ್ ಎಚ್ ಅವರಿಗೆ `ಕನ್ನಡ ಕಣ್ಮಣಿ’ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ. ಬೆಂಗಳೂರಿನ ಮೂಡಲಪಾಳ್ಯದಲ್ಲಿರುವ ಜ್ಞಾನ ಸೌಧದಲ್ಲಿ ನವಭಾರತ ಉದಯ ಪ್ರತಿಷ್ಠಾನದವರು ಆಯೋಜಿಸಿದ ಭವ್ಯ ಸಮಾರಂಭದಲ್ಲಿ `ಕನ್ನಡ ಕಣ್ಮಣಿ’ ಪ್ರಶಸ್ತಿ ವಿತರಣೆ ನಡೆದಿದೆ. ಪ್ರಶಸ್ತಿ ವಿತರಿಸಿ ಮಾತನಾಡಿದ ಸಾಹಿತಿ ಡಿ ಎ ಲಕ್ಮೀನಾಥ ಅವರು `ಕನ್ನಡ ನಾಡು-ನುಡಿ ಭಾಷೆ ರಕ್ಷಿಸಿ ಅದನ್ನು ಕಟ್ಟಿ ಬೆಳೆಸಿದವರಲ್ಲಿ ಶಿಕ್ಷಕರ ಕೊಡುಗೆ ಅಪಾರ. ಅದರಲ್ಲಿಯೂ ಗುಡ್ಡಪ್ಪ ಅವರ ಸೇವೆ ನಾಡಿಗೆ ಹೆಮ್ಮೆ’ ಎಂದು ಹೇಳಿದರು. ಪ್ರಮುಖರಾದ ಪಿ ಶ್ರೀಧರ, ವಾದಿರಾಜ ,ಗೋವಿಂದ ರಾಜ್, ಜೋಗಿಲ್ ಸಿದ್ದರಾಜ, ಹರಿಶಕುಮಾರ್, ಪ್ರೀಯಾ ಶಿವಕುಮಾರ್ ವೇದಿಕೆಯಲ್ಲಿದ್ದರು. ಉತ್ತರ ಕನ್ನಡ ಜಿಲ್ಲಾ ಕನ್ನಡ ಶಿಕ್ಷಕರ ಬಳಗದವರು ಗುಡ್ಡಪ್ಪ ಅವರಿಗೆ ಶುಭ ಕೋರಿದರು. - [2025 ನವೆಂಬರ್ 27ರ ದಿನ ಭವಿಷ್ಯ](https://mobiletime.in/2025/11/prediction-for-november-27-2025/): ಮೇಷ ರಾಶಿ: ನಿಮ್ಮ ಕೆಲಸ ಸರಾಗವಾಗಿ ಸಾಗಲಿದೆ. ಹೊಸ ಅವಕಾಶಗಳು ಸಿಗಲಿದ್ದು, ಅದನ್ನು ಸರಿಯಾಗಿ ಬಳಸಿಕೊಳ್ಳಿ. ಆರ್ಥಿಕ ಲಾಭ ಸಿಗಲಿದೆ. ವೃಷಭ ರಾಶಿ: ನಿಮ್ಮ ಮನಸ್ಸನ್ನು ಹಗುರವಾಗಿರಿಸಿಕೊಳ್ಳಿ. ಕಾರ್ಯಕ್ಷೇತ್ರದಲ್ಲಿನ ಸಮಸ್ಯೆಗಳನ್ನು ಚಿಂತನೆ ಮೂಲಕ ಪರಿಹಾರ ಕಂಡುಕೊಳ್ಳಿ. ಕುಟುಂಬದ ಬೆಂಬಲದಿoದ ಯಶಸ್ಸು ಸಿಗಲಿದೆ. ಮಿಥುನ ರಾಶಿ: ಹೊಸ ವಿಚಾರಗಳಿಗೆ ಮನಸ್ಸು ತೆರೆದುಕೊಳ್ಳಿ. ಓದು ಮತ್ತು ಸಂಶೋಧನೆ ಫಲಕಾರಿಯಾಗುತ್ತದೆ. ಆರ್ಥಿಕ ಆಸಕ್ತಿಗಳ ಬಗ್ಗೆ ಜಾಗೃತಿ ಇರಲಿ. ಹೂಡಿಕೆಗೆ ಒಳ್ಳೆಯ ದಿನ ಅಲ್ಲ. ಕರ್ಕ ರಾಶಿ: ಪರಸ್ಪರ ಸಹಕಾರ ತುಂಬಾ ಮುಖ್ಯವಾಗಲಿದೆ. ದೀರ್ಘಾವಧಿ ಯೋಜನೆಗಳಿಗೆ ಆರಂಭದ ದಿನ. ಆರೋಗ್ಯದಲ್ಲಿ ಚಿಕ್ಕ ಮಟ್ಟದ ಜಾಗೃತಿ ಸಿಗಲಿದೆ. ಸಿಂಹ ರಾಶಿ: ಕೌಟುಂಬಿಕ ಸಭೆಗಳಿಂದ ನಿಮ್ಮ ಸ್ಥಾನ ಎತ್ತರಕ್ಕೆ ಏರಲಿದೆ. ಉದ್ಯೋಗದಲ್ಲಿ ಹೊಸ ಬಿರುದು ಸಿಗುವ ಲಕ್ಷಣವಿದೆ. ನಿಮ್ಮ ನೆರವಿಗೆ ಸದಾ ಸ್ನೇಹಿತರು ಸಿಗಲಿದ್ದಾರೆ. ಕನ್ಯಾ ರಾಶಿ: ನಿಮ್ಮ ಧೈರ್ಯ, ಶ್ರಮ ನಿರೀಕ್ಷಿತ ಫಲ ತರುತ್ತದೆ. ಹಣಕಾಸು ನಿರ್ವಹಣೆ ಸೂತ್ರಬದ್ಧವಾಗಿರಲಿ. ವ್ಯವಹಾರಗಳಲ್ಲಿ ನವೀನತೆಯ ಹಾದಿ ತೆರೆಯಿರಿ. ಆರೋಗ್ಯದ ಕಡೆ ಹೆಚ್ಚು ಗಮನಕೊಡಿ. ತುಲಾ ರಾಶಿ: ಇಂದಿನ ದಿನ ನಿಮಗೆ ಸಂತೋಷ ತಂದೊಡುತ್ತದೆ. ಆಪ್ತರ ಸಲಹೆ ಅನುಸರಿಸಿ ಕೆಲಸದಲ್ಲಿ ಅಭಿವೃದ್ಧಿ ಸಾಧ್ಯವಿದೆ. ನಿಮ್ಮ ಮನಸ್ಸು ಸ್ಥಿರವಾಗಿರಲಿ. ವೃಶ್ಚಿಕ ರಾಶಿ: ನಿಮ್ಮ ಆತ್ಮವಿಶ್ವಾಸ ಹೆಚ್ಚಾಗುತ್ತದೆ. ಜ್ಞಾನಾಭಿವೃದ್ಧಿಗೆ ಅವಕಾಶ ಸಿಗುತ್ತದೆ. ಪ್ರೀತಿ ಮತ್ತು ಸ್ನೇಹದಲ್ಲಿ ನವಚೈತನ್ಯ ಸಾಧ್ಯವಿದೆ. ಆರ್ಥಿಕ ತಿರುವುಗಳ ಮೂಲಕ ಲಾಭ ಬರಲಿದೆ. ಧನು ರಾಶಿ: ಪ್ರಯಾಣ ಮತ್ತು ಹೊಸ ಯೋಜನೆಗಳಿಗೆ ಉತ್ತಮ ಸಮಯ. ಮನಸ್ಸಿನ ನಿಶ್ಚಲತೆ ನಿಮಗೆ ಶಕ್ತಿ ನೀಡುತ್ತದೆ. ಸಂವಹನ ಕಲೆಯಲ್ಲೂ ಮುಂದುವರಿಕೆ ಸಾಧ್ಯವಿದೆ. ಅಧಿಕಾರಿಗಳ ಸಹಕಾರ ದೊರೆಯುತ್ತದೆ. ಮಕರ ರಾಶಿ: ಹೊಸ ಮಾರುಕಟ್ಟೆ ಕೆಲಸಗಳು ನಿಮಗೆ ಪ್ರಯೋಜನಕಾರಿ. ಯೋಜನೆಗಳನ್ನು ವಿಸ್ತರಿಸಲು ಸಾಧ್ಯವಿದೆ. ಆದಾಯದಲ್ಲಿ ಸತತ ಪ್ರಗತಿ ಸಿಗಲಿದೆ. ಸಹೋದ್ಯೋಗಿಗಳಲ್ಲಿ ಸಹಕಾರ ಹೆಚ್ಚಾಗಲಿದೆ. ಕುಂಭ ರಾಶಿ: ಸೃಜನಾತ್ಮಕ ಕಲೆಗೆ ಬೆಲೆ ಸಿಗಲಿದೆ. ಹೊಸ ಕಲಿಕೆಗಳಿಗೆ ಅವಕಾಶ ಸಿಗಲಿದೆ. ಸಂಬoಧಗಳಲ್ಲಿ ಸಮಾಧಾನವಿರಲಿದೆ. ಆರೋಗ್ಯದಿಂದ ಒತ್ತಡ ತಪ್ಪಿಸಿ. ಮೀನ ರಾಶಿ: ಆಧ್ಯಾತ್ಮಿಕ ಚಿಂತನೆ ಮತ್ತು ಧ್ಯಾನ ನಿಮಗೆ ಶಾಂತಿ ನೀಡುತ್ತದೆ. ಕಾರ್ಯಕ್ಷೇತ್ರದಲ್ಲಿ ಹೊಸ ಪ್ರೇರಣೆ ಆಗಲಿದೆ. ಹಣಕಾಸಿನ ವಿಷಯದ ಬಗ್ಗೆ ಜಾಸ್ತಿ ಚಿಂತೆ ಮಾಡಬೇಡಿ. ಮನಸ್ಸು ಆಹ್ಲಾದಕರವಾಗಿರುವ ಕೆಲಸ ಮಾಡಿ. - [ಕಬ್ಬು ಸಾಗಿಸುತ್ತಿದ್ದ ಟಾಕ್ಟರ್ ಪಲ್ಟಿ](https://mobiletime.in/2025/11/tractor-carrying-sugarcane-overturns/): ಹಳಿಯಾಳ ಪಟ್ಟಣದಲ್ಲಿ ಕಬ್ಬು ತುಂಬಿದ ಟಾಕ್ಟರ್ ಪಲ್ಟಿಯಾಗಿದ್ದರಿಂದ ಇನ್ನಿತರ ವಾಹನಗಳ ಸಂಚಾರಕ್ಕೆ ತೊಂದರೆಯಾಗಿದೆ. ಟಾಕ್ಟರ್ ಟ್ರಾಲಿ ಮೀರಿ ಕಬ್ಬು ತುಂಬಿರುವುದು ಈ ಅವಘಡಕ್ಕೆ ಕಾರಣವಾಗಿದೆ. ಹಳಿಯಾಳ ಪಟ್ಟಣದ ಶಿವಾಜಿ ವೃತ್ತದಿಂದ ಸಕ್ಕರೆ ಕಾರ್ಖಾನೆಗೆ ತೆರಳುವ ಮಾರ್ಗದಲ್ಲಿ ಈ ಅವಘಡ ನಡೆದಿದೆ. ಕಬ್ಬಿನ ವಾಹನಗಳ ದಟ್ಟಣೆಯಿಂದಾಗಿ ಇಲ್ಲಿ ಟ್ರಾಫಿಕ್ ಸಮಸ್ಯೆ ಹೆಚ್ಚಾಗಿದೆ. ರಾತ್ರಿ ವೇಳೆ ಅವಘಡ ನಡೆದ ಪರಿಣಾಮ ಸಾವು-ನೋವು ಸಂಭವಿಸಿಲ್ಲ. ಅದಾಗಿಯೂ ವಾಹನ ಸಂಚಾರಕ್ಕೆ ಸಾಧ್ಯವಾಗದೇ ಜನ ಸಮಸ್ಯೆ ಅನುಭವಿಸಿದ್ದಾರೆ. `ಸಕ್ಕರೆ ಕಾರ್ಖಾನೆಯವರ ಕುಮ್ಮಕ್ಕಿನಿಂದಲೇ ಟ್ರಾಫಿಕ್ ಜಾಮ್ ಸಮಸ್ಯೆಯು ತಲೆ ಎತ್ತಿದೆ. ಕಾರ್ಖಾನೆ ಹೊರಗೆ ತೂಕದ ಯಂತ್ರ ಸ್ಥಾಪನೆಗೆ ಒತ್ತಾಯಿಸದ ಕಾರಣ ಕಾರ್ಖಾನೆಯವರು ತಮ್ಮ ಹುಳುಕು ಮುಚ್ಚಿಕೊಳ್ಳಲು ಕೃತಕ ಟ್ರಾಫಿಕ್ ಜಾಮ್ ಹುನ್ನಾರ ನಡೆಸಿದ್ದಾರೆ. ಕಾರ್ಖಾನೆ ನೀಲನಕ್ಷೆ ಪ್ರಕಾರ ವಾಹನ ನಿಲುಗಡೆಗೆ ಸ್ಥಳ ಕೊಡಬೇಕು’ ಎಂದು ಕಬ್ಬು ಬೆಳೆಗಾರರ ಹಿತಸಂರಕ್ಷಣಾ ಸಮಿತಿ ಅಧ್ಯಕ್ಷ ನಾಗೇಂದ್ರ ಜಿವೋಜಿ ಆಗ್ರಹಿಸಿದ್ದಾರೆ.   - [ಕಳ್ಳನ ಹುಡುಕಿದ ಪೊಲೀಸರಿಗೆ ಸಿಕ್ಕಿದ್ದು ಗಾಂಜಾ ವ್ಯಾಪಾರಿ!](https://mobiletime.in/2025/11/police-searching-for-thief-find-marijuana-dealer/): ರಾಜಸ್ಥಾನದ ರತನ್ ಶರ್ಮಾ ಯಲ್ಲಾಪುರದ ಹಾಸಣಗಿಯಲ್ಲಿ ವಾಸವಾಗಿದ್ದು, ಗಾಂಜಾ ಸರಬರಾಜು ಮಾಡುವುದನ್ನೇ ಕಾಯಕವನ್ನಾಗಿಸಿಕೊಂಡಿದ್ದಾರೆ. ಮಾದಕ ವ್ಯಸನ ಮಾರಾಟ ಮಾಡಿ ಈ ಹಿಂದೆ ಎರಡು ಬಾರಿ ಸಿಕ್ಕಿಬಿದ್ದಿದ್ದ ರತನ್ ಶರ್ಮಾ ಬುಧವಾರ ಮತ್ತೆ ಸಿಕ್ಕಿಬಿದ್ದಿದ್ದಾರೆ. ಯಲ್ಲಾಪುರದ ಮಂಚಿಕೇರಿ-ಉಮ್ಮಚ್ಗಿ ಭಾಗದಲ್ಲಿ ವ್ಯಾಪಕ ಪ್ರಮಾಣದಲ್ಲಿ ಕಳ್ಳತನ ಪ್ರಕರಣಗಳು ನಡೆಯುತ್ತಿದೆ. ಆ ಕಳ್ಳರ ಪತ್ತೆಗಾಗಿ ಪೊಲೀಸರು ತಲೆಕೆಡಿಸಿಕೊಂಡಿದ್ದು,ಬುಧವಾರ ಯಲ್ಲಾಪುರ ಪಿಸೈ ರಾಜಶೇಖರ ವಂದಲಿ ಅವರು ವಿವಿಧ ವಾಹನಗಳ ತಪಾಸಣೆ ನಡೆಸುತ್ತಿದ್ದರು. ಯಲ್ಲಾಪುರ ಎಪಿಎಂಸಿ ಬಳಿ ಅವರು ವಾಹನ ತಪಾಸಣೆ ನಡೆಸುತ್ತಿರುವಾಗ ರತನ್ ಶರ್ಮಾ ಬೈಕ್ ಮೇಲೆ ಅಲ್ಲಿಗೆ ಬಂದರು. ಪೊಲೀಸರನ್ನು ಕಂಡ ಕೂಡಲೇ ಬೈಕ್ ತಿರುಗಿಸಿ ಪರಾರಿಯಾಗುವ ಪ್ರಯತ್ನ ಮಾಡಿದರು. ಪಿಸೈ ರಾಜಶೇಖರ ವಂದಲಿ ಅವರ ಜೊತೆಗಿದ್ದ ಮಂಚಿಕೇರಿ ಹೊರಠಾಣೆ ಹವಲ್ದಾರ್ ದೀಪಕ ನಾಯ್ಕ ಸಾಹಸದಿಂದ ರತನ್ ಶರ್ಮಾ ಅವರನ್ನು ಅಡ್ಡಗಟ್ಟಿದರು. ಅವರನ್ನು ತಪಾಸಣೆಗೆ ಒಳಪಡಿಸಿದಾಗ ಏನೂ ಸಿಗಲಿಲ್ಲ. ಆದರೆ, ಬೈಕಿನ ಟ್ಯಾಂಕರ್ ಬಳಿ ಗಮನಿಸಿದಾಗ ಅಲ್ಲಿದ್ದ ಚೀಲದಲ್ಲಿ ಗಾಂಜಾ ತುಂಬಿದ ಚೀಟಿಗಳು ಕಾಣಿಸಿದವು. ಪೊಲೀಸ್ ಸಿಬ್ಬಂದಿ ಪರಶುರಾಮ ದೊಡ್ಮನಿ, ಮಂಜಪ್ಪ ಪೂಜಾರ್ ಅವರು ಕೂಡಲೇ ರತನ್ ಶರ್ಮ ಅವರನ್ನು ಬಂಧಿಸಿದರು. ಆ ಬೈಕಿನಲ್ಲಿ 5 ಸಾವಿರ ರೂ ಮೌಲ್ಯದ 187 ಗ್ರಾಂ ಗಾಂಜಾ ಸಿಕ್ಕಿದ್ದು, ಅದನ್ನು ವಶಕ್ಕೆಪಡೆದ ಪೊಲೀಸರು ನ್ಯಾಯಾಲಯಕ್ಕೆ ವರದಿ ಒಪ್ಪಿಸಿದರು. `ಮಾದಕ ವ್ಯಸನ ಜೀವನಕ್ಕೆ ಮಾರಕ’ - [ಮೃತ ಮೀನುಗಾರನ ಕುಟುಂಬಕ್ಕೆ ಸಿಕ್ಕಿತು ಸಾಂತ್ವಾನ!](https://mobiletime.in/2025/11/the-family-of-the-deceased-fisherman-found-solace/): ಅರಬ್ಬಿ ಸಮುದ್ರಕ್ಕೆ ತೆರಳಿದಾಗ ಕೊಂತಿ ಮೀನು ಚುಚ್ಚಿ ಸಾವನಪ್ಪಿದ್ದ ಕಾರವಾರದ ಮೀನುಗಾರನ ಕುಟುಂಬಕ್ಕೆ ಸರ್ಕಾರ ಸ್ಪಂದಿಸಿದೆ. ಈ ದಿನ ಸಂತ್ರಸ್ತರಿಗೆ ಸರ್ಕಾರ 10 ಲಕ್ಷ ರೂ ಪರಿಹಾರದ ಚೆಕ್ ವಿತರಿಸಿ ಸಾಂತ್ವಾನ ಹೇಳಿದೆ. ಕೆಲ ಸಮಯದ ಮೊದಲು ಮೊಬೈಲ್ ಮಿಡಿಯಾ ನೆಟ್‌ವರ್ಕ ಮೀನುಗಾರನ ಕುಟುಂಬಕ್ಕೆ ಸರ್ಕಾರದಿಂದ ಪರಿಹಾರ ಸಿಗದ ಬಗ್ಗೆ ವರದಿ ಪ್ರಕಟಿಸಿತ್ತು. ಅದರ ಬೆನ್ನಲ್ಲೆ ಸರ್ಕಾರದಿಂದ ಮೀನುಗಾರನ ಕುಟುಂಬಕ್ಕೆ ಬುಧವಾರ ಪರಿಹಾರದ ಚೆಕ್ ವಿತರಿಸಿದ ಬಗ್ಗೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಕಾರವಾರ ತಾಲೂಕಿನ ಮಾಜಾಳಿ ಗ್ರಾಮದ ಮೀನುಗಾರ ಅಕ್ಷಯ್ ಮಾಜಾಳಿಕರ್ ಅವರ ಕುಟುಂಬಕ್ಕೆ ಶಾಸಕ ಸತೀಶ್ ಸೈಲ್ ಅವರು ಸಾಂತ್ವಾನ ಹೇಳಿದ್ದಾರೆ. ಮೀನುಗಾರರ ಮನೆಗೆ ಭೇಟಿ ನೀಡಿದ ಅವರು ವೈಯಕ್ತಿಕವಾಗಿಯೂ ನೆರವು ನೀಡಿದ್ದಾರೆ. ಜೊತೆಗೆ ಮೀನುಗಾರಿಕಾ ಇಲಾಖೆಯವರು ಈ ದಿನ ಅವರ ಮನೆಗೆ ಭೇಟಿ ನೀಡಿ 10 ಲಕ್ಷ ರೂ ಮೌಲ್ಯದ ಚೆಕ್ ವಿತರಿಸಿದ್ದಾರೆ. - [ನಡುರಸ್ತೆಯಲ್ಲಿ ಮದುವೆ ಮಾತುಕಥೆ: ಸಂಬoಧ ಒಪ್ಪದ ಕನ್ಯೆಗೆ ಹಲವರ ಬೆದರಿಕೆ!](https://mobiletime.in/2025/11/marriage-talk-in-the-middle-of-the-road-many-threaten-a-girl-who-refuses-to-have-sex/): ಶಿರಸಿಯ ಮುಸ್ಸಂಜೆ ಭಟ್ಟಅವರಿಗೆ ಸ್ವದೇಶಿ ಗಾಂವ್ಕರ್ (ಇಬ್ಬರ ಹೆಸರು ಬದಲಿಸಿದೆ) ಅವರು ಮದುವೆ ಆಗುವಂತೆ ಬೆನ್ನು ಬಿದ್ದಿದ್ದಾರೆ. `ಬೇರೆಯವರನ್ನು ಮದುವೆ ಆದರೆ ನಿನ್ನ ಫೋಟೋ ವೈರಲ್ ಮಾಡುವೆ’ ಎಂದು ಹೆದರಿಸಿದ್ದಾರೆ! ಶಿರಸಿಯಲ್ಲಿ ಮುಸ್ಸಂಜೆ ಭಟ್ಟ ಅವರು ವಾಸವಾಗಿದ್ದಾರೆ. ಖಾಸಗಿ ಕಂಪನಿಯಲ್ಲಿ ಅವರು ಕೆಲಸ ಮಾಡುತ್ತಿದ್ದಾರೆ.  ಸ್ವದೇಶಿ ಗಾಂವ್ಕರ್ ಅವರು ಮುಸ್ಸಂಜೆ ಭಟ್ಟ ಅವರನ್ನು ಮದುವೆ ಆಗುವಂತೆ ಕಾಡಿಸುತ್ತಿದ್ದಾರೆ. `ಮದುವೆ ಆಗಲು ಇಷ್ಟವಿಲ್ಲ’ ಎಂದರೂ ಗಿರಿಶ ಗಾಂವ್ಕರ್ ಅವರು ಮುಸ್ಸಂಜೆ ಭಟ್ಟ ಅವರನ್ನು ಬಿಡುತ್ತಿಲ್ಲ. ಸ್ವದೇಶಿ ಗಾಂವ್ಕರ್ ಅವರು ಮುಸ್ಸಂಜೆ ಭಟ್ಟ ಅವರನ್ನು ಭೇಟಿಯಾಗಲು ಪದೇ ಪದೇ ಬರುತ್ತಿದ್ದು, ಅವರು ಕೆಲಸ ಮಾಡುವ ಜಾಗಕ್ಕೂ ದಾಳಿಯಿಡುತ್ತಿದ್ದಾರೆ. ಅಲ್ಲಿಯೂ ಬಂದು ಅನಗತ್ಯ ಕಿರುಕುಳ ನೀಡುತ್ತಿದ್ದಾರೆ. ಈ ಎಲ್ಲದರ ನಡುವೆ ಸೆಪ್ಟೆಂಬರ್ 13ರ ಮಧ್ಯಾಹ್ನ ಮುಸ್ಸಂಜೆ ಭಟ್ಟ ಅವರು ಶಿರಸಿ ಎಪಿಎಂಸಿ ಬಳಿಯ ಭಾಗೀರಥಿ ಟ್ರೇಡಿಂಗ್ ಕಂಪನಿ ಬಳಿ ಹೋಗುತ್ತಿದ್ದಾಗ ಸ್ವದೇಶಿ ಗಾಂವ್ಕರ್ ಅವರು ಅಡ್ಡಗಟ್ಟಿದರು. `ನನ್ನನ್ನು ನೀ ಮದುವೆ ಆಗಬೇಕು’ ಎಂದು ದಬಾಯಿಸಿದರು. ಅದನ್ನು ಮುಸ್ಸಂಜೆ ಭಟ್ಟ ಅವರು ನಿರಾಕರಿಸಿದ್ದು, `ನೀ ಬೇರೆಯವರನ್ನು ಮದುವೆ ಆದರೆ ನಿನ್ನ ಫೋಟೋವನ್ನು ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಮಾಡುವೆ’ ಎಂದು ಬೆದರಿಸಿದರು. `ನೀನು ತಲೆ ಎತ್ತಿ ಓಡಾಡದ ಹಾಗೇ ಮಾಡುವೆ. ನಿನ್ನನ್ನು ಜೀವಸಹಿತ ಉಳಿಯಲು ಬಿಡುವುದಿಲ್ಲ’ ಎಂದು ದಮ್ಕಿ ಹಾಕಿದರು. ಈ ಎಲ್ಲಾ ವಿಷಯಗಳ ಬಗ್ಗೆ ಮುಸ್ಸಂಜೆ ಭಟ್ಟ ಅವರು ಅಕ್ಟೊಬರ್ 30ರಂದು ಪೊಲೀಸರ ಮೊರೆಹೋದರು. ಪೊಲೀಸರು ಈ ಪ್ರಕರಣ ವಿಚಾರಣೆ ನಡೆಸಿದ್ದು, ಅದಕ್ಕೆ ತೃಪ್ತರಾಗದ ಮುಸ್ಸಂಜೆ ಭಟ್ಟ ಅವರು ನ್ಯಾಯಾಲಯದ ಮೊರೆ ಹೋದರು. ನ್ಯಾಯಾಲಯದ ಸೂಚನೆ ಮೇರೆಗೆ ಶಿರಸಿ ಮಾರುಕಟ್ಟೆ ಠಾಣೆ ಪೊಲೀಸರು ಮದುವೆ ಆಗುವಂತೆ ಬೆದರಿಕೆ ಒಡ್ಡಿದ ಎಲ್ಲರ ವಿರುದ್ಧ ವಾರದ ಹಿಂದೆ ಪ್ರಕರಣ ದಾಖಲಿಸಿ, ಕಾನೂನು ಕ್ರಮ ಜರುಗಿಸಿದರು. - [ಮೀನಿನಿಂದ ಸಾವನಪ್ಪಿದ ಮೀನುಗಾರ: ಪರಿಹಾರ ಕೊಡದೇ ಸುಮ್ಮನಿರುವ ಸರಕಾರ!](https://mobiletime.in/2025/11/fisherman-dies-after-being-bitten-by-a-fish-government-remains-silent-without-providing-compensation/): ಅರಬ್ಬಿ ಸಮುದ್ರದಲ್ಲಿ ಮೀನುಗಾರಿಕೆ ನಡೆಸುತ್ತಿರುವಾಗ ಮೀನು ಚುಚ್ಚಿ ಸಾವನಪ್ಪಿದ ಅನಿಲ ಮಾಜಾಳಿಕರ್ ಅವರ ಕುಟುಂಬಕ್ಕೆ ಈವರೆಗೂ ಸರ್ಕಾರದಿಂದ ಸಹಾಯ ಸಿಕ್ಕಿಲ್ಲ. ದುಡಿಯುವ ಯುವಕ ದುರ್ಘಟನೆಯಲ್ಲಿ ಕೊನೆಯಾದವನ ಕುಟುಂಬದವರ ಕಣ್ಣೀರು ಒರೆಸುವವರಿಲ್ಲ. ಕಾರವಾರದ ಮಾಜಾಳಿ ದಾಂಡೇಭಾಗದ ಅಕ್ಷಯ ಅನಿಲ ಮಾಜಾಳಿಕರ್ (24) ಎಂಬಾತರು ಅಕ್ಟೋಬರ್ 14ರಂದು ಮೀನುಗಾರಿಕೆಗೆ ತೆರಳಿದಾಗ ಸಾವನಪ್ಪಿದ್ದರು. ಅವರ ಹೊಟ್ಟೆಗೆ ಮೊನಚಾದ ಕಾಂಡಿ ಮೀನು ಚುಚ್ಚಿದ್ದರಿಂದ ಆಸ್ಪತ್ರೆಗೆ ಸಾಗಿಸಿದರೂ ಪ್ರಯೋಜನವಾಗಿರಲಿಲ್ಲ. ಮನೆಯ ಜವಾಬ್ದಾರಿ ಹೊತ್ತಿದ್ದ ಮಗನನ್ನು ಕಳೆದುಕೊಂಡ ತಂದೆ ಹಾಗೂ ಕುಟುಂಬಸ್ಥರು ಸದ್ಯ ತೀವ್ರ ಸಂಕಷ್ಟದಲ್ಲಿದ್ದು, ಸರ್ಕಾರದಿಂದಲೂ ಅವರಿಗೆ ಪರಿಹಾರ ಸಿಕ್ಕಿಲ್ಲ. `ಮೀನುಗಾರಿಕಾ ಸಚಿವರು ನಮ್ಮದೇ ಜಿಲ್ಲೆಯವರಾಗಿದ್ದರೂ ಮೃತ ಮೀನುಗಾರನ ಕುಟುಂಬಕ್ಕೆ ಪರಿಹಾರ ಒದಗಿಸುವಲ್ಲಿ ವಿಳಂಬ ಧೋರಣೆ ಅನುಸರಿಸುತ್ತಿರುವುದು ದುರಾದೃಷ್ಟಕರ ಸಂಗತಿ’ ಎಂದು ಮೀನುಗಾರರು ಅಳಲು ತೋಡಿಕೊಂಡರು. `ವಾರದ ಹಿಂದಷ್ಟೇ ಸಚಿವರು ಕಾರವಾರಕ್ಕೆ ಬಂದು ಹೋಗಿದ್ದರೂ ಸಂತ್ರಸ್ತ ಕುಟುಂಬಕ್ಕೆ ಪರಿಹಾರದ ಚೆಕ್ ವಿತರಿಸಿಲ್ಲ. ಗಲಭೆ ಅಥವಾ ಇತರೆ ಅಹಿತಕರ ಘಟನೆಗಳು ನಡೆದಾಗ ವಾರದೊಳಗೆ ಪರಿಹಾರ ಘೋಷಿಸುವ ಸರ್ಕಾರ ಅಮಾಯಕ ಮೀನುಗಾರನ ದುರ್ಮರಣದ ವಿಷಯದಲ್ಲಿ ಕಾಳಜಿವಹಿಸಿಲ್ಲ’ ಎಂದು ಅಸಮಧಾನವ್ಯಕ್ತಪಡಿಸಿದರು. - [`ಸತ್ಯಾಗ್ರಹ ಭವನಕ್ಕೆ ನ್ಯಾಯ ಕೊಡಿಸಿ'](https://mobiletime.in/2025/11/give-justice-to-satyagraha-bhavan/): ಅಂಕೋಲಾ ಸತ್ಯಾಗ್ರಹ ಭವನದಲ್ಲಿ ಸಭೆ ನಡೆಸಿರುವ ಜಿಲ್ಲಾಧಿಕಾರಿ ಕೆ ಲಕ್ಷ್ಮೀಪ್ರಿಯಾ ಅಲ್ಲಿನ ಅವ್ಯವಸ್ಥೆಗಳನ್ನು ಗಮನಿಸಿದ್ದು, ಸತ್ಯಾಗ್ರಹ ಸ್ಮಾರಕ ಭವನಕ್ಕೆ ಅಗತ್ಯ ಮೂಲಭೂತ ಸೌಕರ್ಯ ಒದಗಿಸುವಂತೆ ಅಧೀನ ಅಧಿಕಾರಿಗಳಿಗೆ ತಾಕೀತು ಮಾಡಿದ್ದಾರೆ. `ಸ್ಮಾರಕ ಭವನಕ್ಕೆ ಸಂಬoಧಿಸಿದ ವಿವಿಧ ಖಾತೆಗಳಲ್ಲಿ 25 ಲಕ್ಷಕ್ಕೂ ಅಧಇಕ ಹಣವಿದ್ದು, ಅದನ್ನು ಸರಿಯಾಗಿ ಬಳಸಿಕೊಳ್ಳಿ’ ಎಂದವರು ಸೂಚನೆ ನೀಡಿದ್ದಾರೆ. ಭಾರತದ ಸ್ವತಂತ್ರ ಸಂಗ್ರಾಮದಲ್ಲಿ ಐತಿಹಾಸಿಕ ಮಹತ್ವ ಹೊಂದಿರುವ ಅಂಕೋಲಾದಲ್ಲಿರುವ ಈ ಸತ್ಯಾಗ್ರಹ ಸ್ಮಾರಕ ಭವನವನ್ನು, ಉಪ್ಪಿನ ಸತ್ಯಾಗ್ರಹ ಹಾಗೂ ಕರ ನಿರಾಕರಣೆ ಚಳುವಳಿ ಘಟನೆಯ 50 ವರ್ಷದ ಸಮಾರಂಭದಲ್ಲಿ ನಿರ್ಮಿಸಲಾಗಿದೆ. ಆದರೆ, ಸತ್ಯಾಗ್ರಹ ಸ್ಮಾರಕ ಭವನದಲ್ಲಿ ಧ್ವನಿ ಹಾಗೂ ಬೆಳಗಿನ ವ್ಯವಸ್ಥೆ ಸರಿಯಾಗಿಲ್ಲ. ಶೌಚಾಲಯ ಪಾಳು ಬಿದ್ದಿದ್ದು, ಅದನ್ನು ನೋಡುವವರಿಲ್ಲ. ಲೈಟ್ ಉರಿಯುವುದಿಲ್ಲ. ಫ್ಯಾನ್ ತಿರುಗುವುದಿಲ್ಲ. ಗ್ರಂಥಾಲಯ ದುರಸ್ತಿ ಕೆಲಸ ನಡೆದಿಲ್ಲ. ಕಟ್ಟಡಕ್ಕೆ ಬಣ್ಣ ಬಡಿದಿಲ್ಲ. ಹೀಗಾಗಿ ಈ ಎಲ್ಲಾ ಕೆಲಸವನ್ನು ಸರಿಯಾಗಿ ಮಾಡಿ ಎಂದು ಕೆ ಲಕ್ಷ್ಮೀಪ್ರಿಯಾ ಅವರು ಸೂಚನೆ ನೀಡಿದ್ದಾರೆ. `ಲಭ್ಯವಿರುವ ಅನುದಾನ ಬಳಸಿಕೊಂಡು ಮಾಡಬಹುದಾದ ಕೆಲಸದ ಬಗ್ಗೆ ಲೋಕೋಪಯೋಗಿ ಇಲಾಖೆ ಅಂದಾಜು ಪಟ್ಟಿ ಸಲ್ಲಿಸಬೇಕು. ಅಂದಾಜು ಮೊತ್ತಕ್ಕಿಂತ ಅಧಿಕ ಮೊತ್ತವಾದರೆ ಇತರೆ ಇಲಾಖೆಗಳ ಮೂಲಕ ನೆರವು ಒದಗಿಸಲು ಕ್ರಮ ಜರುಗಿಸಲಾಗುತ್ತದೆ’ ಎಂದವರು ಹೇಳಿದರು. `ಸತ್ಯಾಗ್ರಹ ಸ್ಮಾರಕ ಭವನದ ಆವರಣದಲ್ಲಿರುವ ಗ್ರಂಥಾಲಯ ಮತ್ತು ಉದ್ಯಾನವನವನ್ನು ತಾಲೂಕು ಆಡಳಿತ ಮತ್ತು ಪುರಸಭೆಯು ಪರಸ್ಪರ ಎಂಓಯು ಮಾಡಿಕೊಳ್ಳುವ ಮೂಲಕ ಪುರಸಭೆಯಿಂದ ನಿರ್ವಹಣೆ ಮಾಡಬೇಕು. ಉದ್ಯಾನವನದಲ್ಲಿನ ಸ್ವಚ್ಚತೆ, ದೀಪಗಳ ದುರಸ್ಥಿ ಕಾರ್ಯ ನಡೆಸಬೇಕು’ ಎಂದು ಸೂಚಿಸಿದರು. `ಸತ್ಯಾಗ್ರಹ ಸ್ಮಾರಕ ಭವನವನ್ನು ಇನ್ನಷ್ಟು ಅಭಿವೃದ್ಧಿಗೊಳಿಸುವ ನಿಟ್ಟಿನಲ್ಲಿ ಮಾಸ್ಟರ್ ಪ್ಲಾನ್ ತಯಾರಿಸಬೇಕು. ಹೆಚ್ಚಿನ ಹಣ ಸಿಕ್ಕರೆ ಅದರ ಪ್ರಕಾರ ಯೋಜನೆ ಸಿದ್ಧಪಡಿಸಬೇಕು’ ಎಂದರು. `ಈ ಭವನವನ್ನು ಅಭಿವೃದ್ಧಿಗೊಳಿಸಲು ಆರ್ಥಿಕ ನೆರವು ನೀಡಲು ಬಯಸುವ ಉದ್ದಿಮೆಗಳು ಮತ್ತು ಉದ್ದಿಮೆದಾರರು ಸಿ.ಎಸ್.ಆರ್. ದೇಣಿಗೆ ನೀಡಲು ಅಂಕೋಲಾ ತಹಸೀಲ್ದಾರ್ ಅವರನ್ನು ಸಂಪರ್ಕಿಸಿ’ ಎಂದು ಕರೆ ನೀಡಿದರು. `ಸತ್ಯಾಗ್ರಹ ಸ್ಮಾರಕ ಭವನವನ್ನು ರಾಷ್ಟಿಯ ಸ್ಮಾರಕದ ಮಾದರಿಯಲ್ಲಿ ಅಭಿವೃದ್ಧಿಪಡಿಸಬೇಕು, ಇಲ್ಲಿನ ಎಲ್ಲಾ ಕಟ್ಟಡಗಳು ಅರ್ಥಪೂರ್ಣವಾಗಿ ಅಭಿವೃದ್ಧಿಪಡಿಸಬೇಕು, ಜಿಲ್ಲೆಯ ಎಲ್ಲಾ ಸ್ವತಂತ್ರ ಹೋರಾಟಗಾರರ ಹೆಸರುಗಳನ್ನು ಇಲ್ಲಿನ ಆವರಣದಲ್ಲಿ ಅಳವಡಿಸಬೇಕು, ಮಹಾತ್ಮ ಗಾಂಧೀಜಿ ಅವರ ಕಂಚಿನ ಪುತ್ಥಳಿ ಸ್ಥಾಪಿಸಬೇಕು. ಸ್ವಚ್ಛತೆ ಕಾಪಾಡಬೇಕು, ಖಾಯಂ ಸಿಬ್ಬಂದಿಗಳನ್ನು ನೇಮಿಸಬೇಕು’ ಎಂದು ಸಭೆಯಲ್ಲಿ ಭಾಗವಹಿಸಿದ್ದ ಕಾಳಪ್ಪ ನಾಯಕ್, ಶಾಂತಾರಾಮ ನಾಯಕ್, ರಘುನಂದನ ನಾಯಕ್, ಉಮೇಶ್ ನಾಯಕ್, ರಮೇಶ್ ಮತ್ತಿತರರು ಮನವಿ ಮಾಡಿದರು. ಸಭೆಯಲ್ಲಿ ತಹಸೀಲ್ದಾರ್ ಚಿಕ್ಕಪ್ಪ ನಾಯಕ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಮಂಗಲಾ ನಾಯ್ಕ ಇದ್ದರು. - [`ಹೆಂಡತಿಯನ್ನು ಹುಡುಕಿಕೊಡಿ'](https://mobiletime.in/2025/11/find-a-wife/): 21 ವರ್ಷದ ಸಂಜನಾ ಅವರು ನವೆಂಬರ್ 24ರಂದು ಕಾಣೆಯಾಗಿದ್ದಾರೆ. `ತನ್ನ ಹೆಂಡತಿಯನ್ನು ಹುಡುಕಿಕೊಡಿ’ ಎಂದು ಅವರ ಪತಿ ಗುರುನಾಥ ಅವರು ಪೊಲೀಸರ ಮೊರೆ ಹೋಗಿದ್ದಾರೆ. ಹಳಿಯಾಳ ದೊಡ್ಡಕೊಪ್ಪ ಗ್ರಾಮದಲ್ಲಿ ಗುರುನಾಥ ವಾಸುದೇವ್ ಸುಳಗೇಕರ್ ಅವರು ಪತ್ನಿ ಸಂಜನಾ ಸುಳಗೇಕರ್ ಅವರ ಜೊತೆ ವಾಸವಾಗಿದ್ದರು. ಗುರುನಾಥ ಸುಳಗೇಕರ್ ಅವರು ಅಲ್ಲಿನ ಸಕ್ಕರೆ ಕಾರ್ಖಾನೆಯಲ್ಲಿ ಕೆಲಸ ಮಾಡಿಕೊಂಡಿದ್ದು, ಅವರ ಪತ್ನಿ ಸಂಜನಾ ಸುಳಗೇಕರ್ ಅವರು ಮನೆ ಕೆಲಸ ನೋಡಿಕೊಳ್ಳುತ್ತಿದ್ದರು. ಹೀಗಿರುವಾಗ ನವೆಂಬರ್ 24ರ ಮಧ್ಯಾಹ್ನ ಮನೆಯಿಂದ ಹೊರಹೋದ ಸಂಜನಾ ಅವರು ಮರಳಿ ಬಂದಿಲ್ಲ. ಸAಜೆ 6 ಗಂಟೆ ಅವಧಿಯಲ್ಲಿ ಗುರುನಾಥ ಸುಳಗೇಕರ್ ಅವರು ಮನೆಗೆ ಬಂದಾಗ ಸಂಜನಾ ಅವರು ಕಾಣಲಿಲ್ಲ. ಎಲ್ಲಾ ಕಡೆ ಹುಡುಕಾಟ ನಡೆಸಿದರೂ ಅವರು ಸಿಗಲಿಲ್ಲ. ಹೀಗಾಗಿ ಗುರುನಾಥ ಸುಳಗೇಕರ್ ಅವರು ಹಳಿಯಾಳ ಪೊಲೀಸರ ಮೊರೆ ಹೋಗಿದ್ದು, ಪೊಲೀಸರು ಸಹ ಸಂಜನಾ ಅವರ ಶೋಧ ನಡೆಸಿದ್ದಾರೆ. - [ಮಹಿಳೆ ಮನವಿಗೆ ಮುಖ್ಯಮಂತ್ರಿ ಸ್ಪಂದನೆ](https://mobiletime.in/2025/11/chief-minister-responds-to-womans-plea/): ವೃದ್ದಾಪ್ಯ ವೇತನಕ್ಕಾಗಿ ಅಲೆದಾಟ ನಡೆಸಿ ಸುಸ್ತಾದ ರಾಧಾ ಆಚಾರಿ ಅವರು ತಮಗಾದ ಸಮಸ್ಯೆ ಬಗ್ಗೆ ಮುಖ್ಯಮಂತ್ರಿ ಕಚೇರಿಗೆ ಪತ್ರ ಬರೆದಿದ್ದು, ಅಲ್ಲಿಂದ ಸ್ಪಂದನೆ ಸಿಕ್ಕಿದೆ. ಮಹಿಳೆಗಾದ ಸಮಸ್ಯೆ ಆಲಿಸಿ ನಿಯಮಾನುಸಾರ ಬಗೆಹರಿಸುವಂತೆ ಮುಖ್ಯಮಂತ್ರಿಯವರ ವಿಶೇಷ ಕರ್ತವ್ಯಾಧಿಕಾರಿ ಎಂ ಶಾಂತಪ್ಪ ಅವರು ಜಿಲ್ಲಾಧಿಕಾರಿ ಕೆ ಲಕ್ಷ್ಮೀಪ್ರಿಯಾ ಅವರಿಗೆ ಸೂಚಿಸಿದ್ದಾರೆ. ಕುಮಟಾ ಉಪ್ಪಾರಕೇರಿಯ ರಾಧಾ ಕೃಷ್ಣ ಆಚಾರಿ ಅವರಿಗೆ 75 ವರ್ಷವಾಗಿದ್ದು, ಅವರಿಂದ ದುಡಿಮೆ ಸಾಧ್ಯವಿಲ್ಲ. ಹೀಗಾಗಿ ಅವರು ಕುಮಟಾ ತಹಶೀಲ್ದಾರ್ ಕಚೇರಿಗೆ ಅರ್ಜಿ ನೀಡಿ ವೃದ್ಧಾಪ್ಯ ವೇತನಕ್ಕೆ ಮನವಿ ಮಾಡಿದ್ದರು. ಆದರೆ, ರಾಧಾ ಅವರು ಕೆಲಸ ಮಾಡುವ ಸಾಮರ್ಥ್ಯಹೊಂದಿದ ಕಾರಣ ನೀಡಿ ಅಲ್ಲಿನವರು ಪಿಂಚಣಿ ಯೋಜನೆ ತಡೆ ಹಿಡಿದಿದ್ದರು. ಸರ್ಕಾರದಿಂದ ಬರುವ 1200ರೂ ಪಿಂಚಣಿ ಕೈ ತಪ್ಪಿದ ಬಗ್ಗೆ ರಾಧಾ ಆಚಾರಿ ಅವರು ಜನಸಾಮಾನ್ಯರ ಸಮಾಜ ಕಲ್ಯಾಣ ಕೇಂದ್ರದವರಿಗೆ ದೂರಿದ್ದರು. ಆಗ್ನೇಲ್ ರೋಡಿಗ್ರಸ್ ಅವರ ನೆರವುಪಡೆದು ಮುಖ್ಯಮಂತ್ರಿ ಕಚೇರಿಗೆ ಪತ್ರ ಬರೆದಿದ್ದರು. `ಬಿಪಿ, ಶುಗರ್ ಕಾರಣ ಕೈ ನಡುಗುತ್ತಿದೆ. ಕೆಲಸ ಮಾಡಲು ಆಗುತ್ತಿಲ್ಲ. ಅನ್ಯಾಯ ಮಾಡಿದ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಬೇಕು’ ಎಂದು ಅವರು ಮನವಿ ಮಾಡಿದ್ದರು. ಆ ಮನವಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಚೇರಿ ಅಧಿಕಾರಿಗಳು ಸ್ಪಂದಿಸಿದ್ದಾರೆ. ಒಂದೇ ತಿಂಗಳ ಅವಧಿಯಲ್ಲಿ ಸ್ಪಂದನೆ ಸಿಕ್ಕಿರುವುದಕ್ಕೆ ಜನಸಾಮಾನ್ಯ ಕೇಂದ್ರದವರು ಸಂತಸವ್ಯಕ್ತಪಡಿಸಿದ್ದಾರೆ. - [ಟಿಪ್ಪರ್ ಪಲ್ಟಿಯಾದರೂ ಬದುಕುಳಿದ ಚಾಲಕ!](https://mobiletime.in/2025/11/driver-survives-tipper-overturning/): ಕಾರ್ತಿಕ ದೇವಾಡಿಗ ಹಾಗೂ ಶರಣಬಸಪ್ಪ ಹಿರೇಮಠ ಅವರಿದ್ದ ಟಿಪ್ಪರ್ ಪಲ್ಟಿಯಾಗಿದೆ. ಅದಾಗಿಯೂ ಅವರಿಬ್ಬರು ಪ್ರಾಣ ಉಳಿಸಿಕೊಂಡಿದ್ದಾರೆ. ಹಾವೇರಿಯ ಶರಣಬಸಪ್ಪ ಹಿರೇಮಠ ಅವರು ಶಿರಸಿಯಲ್ಲಿ ಟಿಪ್ಪರ್ ಓಡಿಸುತ್ತಿದ್ದರು. ಶಿರಸಿಯ ತಾರಗೋಡು ಬಳಿಯ ಮಾತನಳ್ಳಿಯ ಕಾರ್ತಿಕ ಶ್ರೀನಿವಾಸ ದೇವಾಡಿಗ ಅವರು ಆ ಟಿಪ್ಪರಿನಲ್ಲಿ ಸಂಚರಿಸುತ್ತಿದ್ದರು. ನವೆಂಬರ್ 25ರಂದು ಆ ಟಿಪ್ಪರ್ ಖಾನನಗರದಿಂದ ಬಳಗಾರ ಕಡೆ ಸಂಚರಿಸುತ್ತಿತ್ತು. ಜೋರಾಗಿ ಹೊರಟ ಟಿಪ್ಪರ್ ಕುಗಳಕುಳಿ ಬಳಿ ಚಾಲಕನ ನಿಯಂತ್ರಣ ತಪ್ಪಿತು. ಅಲ್ಲಿಯೇ ಆ ಟಿಪ್ಪರ್ ಪಲ್ಟಿಯಾಯಿತು. ಈ ಅವಘಡದಲ್ಲಿ ಕಾರ್ತಿಕ ಶ್ರೀನಿವಾಸ ದೇವಾಡಿಗ ಅವರ ಕೈಗೆ ಪೆಟ್ಟಾಯಿತು. ಕಾಲಿಗೆ ಸಹ ನೋವಾಯಿತು. ಚಾಲಕ ಶರಣಬಸಪ್ಪ ಹಿರೇಮಠ ಅವರು ಅಲ್ಲಲ್ಲಿ ಪೆಟ್ಟು ಮಾಡಿಕೊಂಡರು. ಕೊನೆಗೆ ಅವರಿಬ್ಬರು ಶಿರಸಿಯ ಪಂಡಿತ್ ಸಾರ್ವಜನಿಕ ಆಸ್ಪತ್ರೆಗೆ ದಾಖಲಾದರು. ಹಣೆ, ಕೈ, ಬುಜಕ್ಕೆ ಗಾಯ ಮಾಡಿಕೊಂಡವರಿಗೆ ವೈದ್ಯರು ಚಿಕಿತ್ಸೆ ಮಾಡಿದರು. - [ಪುಣ್ಯದ ಕೆರೆಯಲ್ಲಿ ಮೊಸಳೆ ಪ್ರತ್ಯಕ್ಷ!](https://mobiletime.in/2025/11/crocodile-spotted-in-punya-lake/): ಯಲ್ಲಾಪುರದ ಜೋಡಕೆರೆಯಲ್ಲಿ ದಿಢೀರ್ ಆಗಿ ಮೊಸಳೆ ಪ್ರತ್ಯಕ್ಷವಾಗಿದೆ. ನದಿಗೆ ಜೋಡಣೆಯೇ ಇಲ್ಲದ ಈ ಕೆರೆಯಲ್ಲಿ ಮೊಸಳೆ ಕಂಡು ಜನ ಹೌಹಾರಿದ್ದಾರೆ! ಹುಬ್ಬಳ್ಳಿ-ಅಂಕೋಲಾ ರಸ್ತೆಯ ಯಲ್ಲಾಪುರ ಸ್ವಾಗತ ಪ್ರದೇಶದಲ್ಲಿ ಜೋಡಕೆರೆಯಿದೆ. ಎರಡು ಕರೆ ಇಲ್ಲಿ ಒಟ್ಟಿಗಿದ್ದು, ಅದರಲ್ಲಿ ಒಂದು ಕರೆಯನ್ನು ಸ್ಥಳೀಯರು ಸ್ವಾಗತ ಕೆರೆ ಹಾಗೂ ಮತ್ತೊಂದು ಕೆರೆಯನ್ನು ದೇವಿಕೆರೆ ಎಂದು ಕರೆಯುತ್ತಾರೆ. ಸಮೀಪದಲ್ಲಿ ಮೀನುಗಾರಿಕಾ ಇಲಾಖೆ ಕಚೇರಿಯಿದ್ದು, ಅಲ್ಲಿನವರು ಆಗಾಗ ಈ ಕೆರೆಗೆ ಮೀನು ಬಿಟ್ಟ ಉದಾಹರಣೆಯಿದೆ. ಆದರೆ, ಮೊಸಳೆ ನೋಡಿದ್ದು ಇದೇ ಮೊದಲು! ಈ ಕೆರೆ ಸಮೀಪ ಪುರಾತನ ಕಾಲದ ಮಾರುತಿ ಮಂದಿರ ಹಾಗೂ ಅಲ್ಲಿಯೇ ಸಮೀಪದಲ್ಲಿ ಅಯ್ಯಪ್ಪ ಸ್ವಾಮಿ ಸನ್ನಿಧಿಯಿದೆ. ಈ ಕೆರೆಗೆ ಅಲ್ಲಿಯೇ ಹುಟ್ಟುವ ವರ್ತೆ ನೀರು ಆಧಾರವಾಗಿದ್ದು, ಯಾವ ನದಿಯೂ ಜೋಡಣೆ ಆಗಿಲ್ಲ. ಹೀಗಿದ್ದರೂ ದಿಢೀರ್ ಆಗಿ ಆ ಕೆರೆಯೊಳಗೆ ಮೊಸಳೆ ಕಾಣಿಸಿದೆ. ಅಯ್ಯಪ್ಪ ಸ್ವಾಮಿ ಸನ್ನಿಧಿ, ಮಾರುತಿ ದೇವಾಲಯದ ಭಕ್ತರು ಆ ಕೆರೆಗೆ ಭಕ್ತಿಯಿಂದ ನಡೆದುಕೊಳ್ಳುತ್ತಾರೆ. ದೇವರ ಪಾತ್ರೆ ಶುದ್ಧೀಕರಣ, ಪುಣ್ಯ ಕಾರ್ಯ ಜೊತೆಗೆ ಗಣೇಶ ವಿಸರ್ಜನೆಗೆ ಸಹ ಈ ಕೆರೆ ಬಳಸುತ್ತಿದ್ದಾರೆ. ಹೀಗಿರುವಾದ ಇದೀಗ ಮೊಸಳೆ ಪ್ರತ್ಯಕ್ಷವಾಗಿರುವುದು ಜನರ ಆತಂಕಕ್ಕೆ ಕಾರಣವಾಗಿದೆ. ಅನೇಕ ತಿಂಗಳ ಹಿಂದೆಯೇ ಮರಿ ಮೊಸಳೆಯನ್ನು ವ್ಯಕ್ತಿಯೊಬ್ಬರು ಇಲ್ಲಿ ತಂದು ಬಿಟ್ಟ ಅನುಮಾನಗಳಿವೆ. ಅದೇ ಮೊಸಳೆ ದೊಡ್ಡದಾಗಿ ಇದೀಗ ದಡದಲ್ಲಿ ಕಾಣಿಸಿಕೊಂಡ ಬಗ್ಗೆ ಶಂಕಿಸಲಾಗಿದೆ. ಜೋಡುಕೆರೆಯಲ್ಲಿ ಮೊಸಳೆ ಕಾಣಿಸಿದನ್ನು ಅರಣ್ಯಾಧಿಕಾರಿ ನರೇಶ ಜಿ ವಿ ಅವರು ಮೊಬೈಲ್ ಮಿಡಿಯಾ ನೆಟ್‌ವರ್ಕಗೆ ದೃಢಪಡಿಸಿದ್ದಾರೆ. ದಾಂಡೇಲಿಯಿAದ ತಜ್ಞರ ತಂಡ ಕರೆಯಿಸಿ ಆ ಮೊಸಳೆಯನ್ನು ಸ್ಥಳಾಂತಿರಿಸುವ ಪ್ರಯತ್ನ ನಡೆದಿದೆ. ಸುರಕ್ಷತೆ ದೃಷ್ಠಿಯಿಂದ ಮೊಸಳೆ ಸ್ಥಳಾಂತರದವರೆಗೂ ಕೆರೆ ಹತ್ತಿರ ಹೋಗದಿರುವುದು ಒಳಿತು. - [ಸರ್ಕಾರ ಮಾಡದ ಕೆಲಸ ಸಹಕಾರದಿಂದ ಸಾಗಿತು!](https://mobiletime.in/2025/11/the-work-that-the-government-did-not-do-was-done-through-cooperation/): ರಸ್ತೆ ದುರಸ್ಥಿ ಮಾಡಿಕೊಡುವಂತೆ ಆ ಗ್ರಾಮದ ಜನ ಸಾಕಷ್ಟು ಬಾರಿ ಸರ್ಕಾರಕ್ಕೆ ಮನವಿ ಮಾಡಿದ್ದರು. ಆದರೆ, ಸರ್ಕಾರ ಗ್ರಾಮದ ಜನರ ಮನವಿ ಆಲಿಸದ ಕಾರಣ ಪರಸ್ಪರ ಸಹಕಾರದಿಂದ ಆ ಊರಿನವರೇ ರಸ್ತೆ ಮಾಡಿದರು! ಸಿದ್ದಾಪುರ ತಾಲೂಕಿನ ಹಸರಗೋಡ ಪಂಚಾಯತಿ ವ್ಯಾಪ್ತಿಯ ದಂಟಕಲ್-ಹೊಸ್ಮನೆ ಗ್ರಾಮಕ್ಕೆ ಇದೀಗ ಹೊಸ ರಸ್ತೆ ನಿರ್ಮಾಣವಾಗಿದೆ. ಊರಿನ ಜನರೆಲ್ಲ ಸೇರಿ ತಮ್ಮದೇ ಖರ್ಚಿನಲ್ಲಿ ರಸ್ತೆ ನಿರ್ಮಿಸಿದ್ದಾರೆ. ಕಾನೂಸೂರು ಗ್ರಾಮ ಪಂಚಾಯತಿಯ ಅಡ್ಕಳ್ಳಿ-ದಂಟಕಲ್-ಹೊಸ್ಮನೆ-ಕುಚಗುAಡಿ-ಕೋಡ್ಸರ ಕೂಡು ರಸ್ತೆ ಅನೇಕರ ಓಡಾಟಕ್ಕೆ ಅಗತ್ಯವಿದೆ. ಈ ರಸ್ತೆಯಲ್ಲಿ ಅಡ್ಕಳ್ಳಿಯಿಂದ ದಂಟಕಲ್ ತನಕ ಡಾಂಬರು ರಸ್ತೆಯಿದೆ. ಅದೇ ರೀತಿ ಕೋಡ್ಸರದಿಂದ ಕುಚಗುಂಡಿ ತನಕ ಡಾಂಬರ್ ಹಾಕಲಾಗಿದೆ. ಅದರ ನಡುವಿನ ರಸ್ತೆ ಕಚ್ಚಾ ರಸ್ತೆಯಾಗಿದ್ದು ತೀರಾ ಹಾಳಾಗಿದೆ. ಕಳೆದ ಮಳೆಗಾಲದ ಸಂದರ್ಭದಲ್ಲಿ ರಸ್ತೆಯಲ್ಲಿ ಭಾರೀ ಗಾತ್ರದ ಹೊಂಡ ಬಿದ್ದಿದ್ದರಿಂದ ಜನ ಸಮಸ್ಯೆ ಅನುಭವಿಸಿದ್ದರು. ನಿತ್ಯ ನೂರಾರು ಜನ ಓಡಾಡುವ ಈ ರಸ್ತೆಯಲ್ಲಿ ಆಗಾಗ ಅಪಘಾತಗಳಾಗುತ್ತಿದ್ದವು. ಹೀಗಾಗಿ ರಸ್ತೆ ಸರಿಪಡಿಸಿ ಎಂದು ಜನ ಅಧಿಕಾರಿಗಳಿಗೆ ಮನವಿ ಮಾಡಿದ್ದರು. ಆದರೆ, ಅದರಿಂದ ಪ್ರಯೋಜನ ಆಗಿರಲಿಲ್ಲ. ಹೀಗಾಗಿ ದಂಟಕಲ್-ಹೊಸ್ಮನೆ ಗ್ರಾಮದ 9 ಮನೆಯವರು ಸೇರಿ ರಸ್ತೆ ನಿರ್ಮಾಣಕ್ಕೆ ನಿರ್ಧರಿಸಿದರು. ಈ ಎಲ್ಲರೂ ಸೇರಿ ಯಂತ್ರೋಪಕರಣ ತರಿಸಿದರು. ತಾವೇ ಮುಂದೆ ನಿಂತು ರಸ್ತೆ ಮಾಡಿಸಿದರು. - [ಸುಟ್ಟು ಬೂದಿಯಾದ ಕಾರ್ಮಿಕ ಸಂಹಿತೆ!](https://mobiletime.in/2025/11/the-labor-code-has-been-burned-to-ashes/): ಕಾರ್ಮಿಕರಿಗೆ ರಕ್ಷಣೆ ನೀಡುವ ಕಾನೂನು ತಿದ್ದುಪಡಿ ಮಾಡಿ ಬಂಡವಾಳಶಾಹಿಗಳಿಗೆ ಅನುಕೂಲ ಮಾಡಿಕೊಟ್ಟಿರುವ ಆರೋಪದ ಅಡಿ ಕರ್ನಾಟಕ ಪ್ರಾಂತ ರೈತ ಸಂಘದವರು ಗೆಜೆಟ್ ಪ್ರತಿ ಸುಟ್ಟು ತಮ್ಮ ಆಕ್ರೋಶಹೊರಹಾಕಿದ್ದಾರೆ. ಅಂಕೋಲಾದಲ್ಲಿ ಪ್ರತಿಭಟನೆ ನಡೆದಿದ್ದು, `ಕಾರ್ಮಿಕರಿಗೆ ರಕ್ಷಣೆ ನೀಡುವ 29 ಕಾನೂನು ರದ್ದು ಮಾಡಲಾಗಿದೆ. ಬಂಡವಾಳಶಾಹಿ ಪರವಾದ 4 ಕಾರ್ಮಿಕ ಸಂಹಿತೆಗಳನ್ನು ಕೇಂದ್ರ ಸರ್ಕಾರ ಏಕಪಕ್ಷೀಯವಾಗಿ ಜಾರಿಗೊಳಿಸಿದೆ’ ಎಂದು ಹೋರಾಟಗಾರ ಶಾಂತರಾಮ ನಾಯಕ ದೂರಿದ್ದಾರೆ. `79 ವರ್ಷಗಳಿಂದ ಕಾರ್ಮಿಕರ ರಕ್ಷಣೆಗಿದ್ದ ಕಾನೂನಿಗೆ ಇದೀಗ ಬೆಲೆ ಇಲ್ಲ. ಒಂದೇ ರಾತ್ರಿ ಅದನ್ನು ರದ್ಧು ಮಾಡಲಾಗಿದ್ದು ಅಸಂವಿಧಾನಾತ್ಮಕ ರೀತಿ ಕಾರ್ಮಿಕ ಸಂಹಿತೆ ರಚಿಸಲಾಗಿದೆ’ ಎಂದವರು ದೂರಿದ್ದಾರೆ. `ಸರ್ಕಾರ ಇದನ್ನು ಸುಧಾರಣಾ ನೀತಿ ಎನ್ನುತ್ತಿದೆ. ಆದರೆ, ಇದು ಸುಧಾರಣಾ ನೀತಿ ಅಲ್ಲ. ದುಡಿಯುವ ವರ್ಗದ ಮೇಲೆ ಬಂಡವಾಳಶಾಹಿಗಳ ಸವಾರಿ ಮಾಡಲು ಅವಕಾಶ ನೀಡಿದ ಸಂಹಿತೆ ಹೊರಬಿದ್ದಿದೆ’ ಎಂದವರು ಕಿಡಿಕಾರಿದ್ದಾರೆ. ಅಂಕೋಲಾ ಸಿಐಟಿಯು ತಾಲೂಕು ಸಂಚಾಲಕ ಎಚ್ ಬಿ ನಾಯಕ, ರೈತ ಸಂಘದ ತಾಲೂಕು ಅಧ್ಯಕ್ಷ ಗೌರೀಶ ನಾಯಕ, ಕಾರ್ಯದರ್ಶಿ ಸಂತೋಷ ನಾಯ್ಕ , ಪದಾಧಿಕಾರಿಗಳಾದ ಮಾದೇವ ಗೌಡ, ವೆಂಕಟರಮಣ ಗೌಡ, ಉದಯ ನಾಯ್ಕ, ರಾಜಗೋಪಾಲ್ ಶೇಟ್ ಸಂಹಿತೆಯನ್ನು ಸುಟ್ಟು ರಾಷ್ಟ್ರಪತಿಗಳಿಗೆ ಮನವಿ ರವಾನಿಸಿದ್ದಾರೆ. - [ಚಿಕಿತ್ಸೆಗೆ ಸ್ಪಂದಿಸದ ಮಗುವಿನ ಹೃದಯ!](https://mobiletime.in/2025/11/a-childs-heart-that-doesnt-respond-to-treatment/): ಎಲ್ಲರ ಜೊತೆ ಬಾಳಿ ಬದುಕಬೇಕಿದ್ದ ಮೂರು ವರ್ಷದ ಬಾಲಕರೊಬ್ಬರಿಗೆ ಹೃದಯ ಬಡಿದುಕೊಳ್ಳುವುದನ್ನು ನಿಲ್ಲಿಸಿದೆ. ಪಾಲಕರು ನೋಡುತ್ತಿದ್ದಂತಯೇ ಮಗು ಸಾವನಪ್ಪಿದೆ. ಅಂಕೋಲಾದ ಅವರ್ಸಾ ಬಳಿಯ ಹಟ್ಟಿಕೇರಿಯಲ್ಲಿ ಉದಯ ನಾಯ್ಕ ಹಾಗೂ ವಂದನಾ ನಾಯ್ಕ ದಂಪತಿ ವಾಸವಾಗಿದ್ದರು. ಅವರ ದಾಂಪತ್ಯಕ್ಕೆ ಸಾಕ್ಷಿಯಾಗಿ ತನ್ವಯ್ ನಾಯ್ಕ ಜನಿಸಿದ್ದರು. ಬಾಲ್ಯದಲ್ಲಿಯೇ ಅವರಿಗೆ ಅನಾರೋಗ್ಯ ಕಾಡಿದ್ದು, ಪಾಲಕರು ಆತಂಕದಿAದ ವೈದ್ಯರನ್ನು ಭೇಟಿ ಮಾಡಿದ್ದರು. ಆ ವೇಳೆಯಲ್ಲಿಯೇ ವೈದ್ಯರು ಹೃದಯ ಸಂಬoಧಿ ಚಿಕಿತ್ಸೆಗೆ ಸೂಚಿಸಿದ್ದರು. ವಿವಿಧ ದೇವರಲ್ಲಿ ಬೇಡಿಕೊಂಡು ಹರಕೆ ಕಟ್ಟಿದ ಪಾಲಕರು ದೊಡ್ಡ ದೊಡ್ಡ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ್ದರು. `ಮಗು ಬದುಕಿದ್ದೇ ಪವಾಡ’ ಎಂದು ವೈದ್ಯರು ಹೇಳಿದ್ದರು. ಆರೋಗ್ಯದಲ್ಲಿ ಚೇತರಿಕೆ ಕಂಡ ತನ್ವಯ ನಾಯ್ಕ ಅವರು ಎಲ್ಲರ ಜೊತೆ ಬೆರೆಯುತ್ತಿದ್ದರು. ಅನಾರೋಗ್ಯ ಸಮಸ್ಯೆಯನ್ನು ಮರೆತು ಅವರು ಬದುಕಿದ್ದರು. ಹೀಗಿರುವಾಗ ಸೋಮವಾರ ರಾತ್ರಿ ತನ್ವಯ ನಾಯ್ಕ ಅವರ ಆರೋಗ್ಯದಲ್ಲಿ ದಿಢೀರ್ ಏರುಪೇರಾಯಿತು. ವಾಂತಿ ಮಾಡಿಕೊಂಡ ಅವರು ಅಲ್ಲಿಯೇ ಕೊನೆಯುಸಿರೆಳೆದರು. ಹೃದಯ ಸಮಸ್ಯೆಯ ಕಾರಣ ಅವರು ಕೊನೆಯುಸಿರೆಳೆದರು. - [ಸಪ್ತ ಸಾಗರದ ಆಚೆ ಸಪ್ತಪತಿ ಸಡಗರ!](https://mobiletime.in/2025/11/beyond-the-seven-oceans-the-seven-lords-are-in-a-frenzy/): ಅಲ್ಲಿ-ಇಲ್ಲಿ ಸುತ್ತಾಡುತ್ತಲೇ 7 ಸಾವಿರ ಮೈಲು ಸಂಚರಿಸಿದ ನಾರ್ವೇಯ ಸ್ಯಾಮ್ ಹಾಗೂ ಆರ್ಟಿನ್ ಭಾರತ ತಲುಪಿದ್ದು, ಇಲ್ಲಿ ಹಿಂದು ಸಂಪ್ರದಾಯದ ಪ್ರಕಾರ ಸತಿ-ಪತಿಗಳಾಗಿದ್ದಾರೆ. ಶ್ರೀ ಕ್ಷೇತ್ರ ಗೋಕರ್ಣದಲ್ಲಿ ಸಪ್ತಪದಿ ತುಳಿದ ಅವರು ಜೀವನದ ಉದ್ದಕ್ಕೂ ಒಟ್ಟಿಗೆ ಬದುಕುವ ಶಪಥ ಮಾಡಿದ್ದಾರೆ. ನಾರ್ವೇಯ ಸ್ಯಾಮ್ ಅವರು ವೃತ್ತಿಯಲ್ಲಿ ಅಡುಗೆ ತಯಾರಕರು. ಅವರು ಅನೇಕ ವರ್ಷಗಳಿಂದ ಭಾರತಕ್ಕೆ ಭೇಟಿ ನೀಡುತ್ತಿದ್ದು, ಅದರಲ್ಲಿಯೂ ಗೋಕರ್ಣ ಎಂದರೆ ಅವರಿಗೆ ಅಚ್ಚುಮೆಚ್ಚು. ಆರ್ಟಿನ್ ಅವರು ಖಾಸಗಿ ಕಂಪನಿಯೊAದರ ಉದ್ಯೋಗಿ. ಆರ್ಟಿನ್ ಅವರಿಗೆ ಭಾರತ ಪರಿಚಯವಿದ್ದದಲ್ಲ. ಆದರೆ, ಸ್ಯಾಮ್ ಅವರ ಪ್ರೇಮದ ಪಾಶಕ್ಕೆ ಆರ್ಟಿನ್ ಅವರು ಬಿದ್ದಾಗ ಭಾರತದ ಬಗ್ಗೆ ಅವರಿಗೂ ಪ್ರೀತಿ ಮೂಡಿತು. ಅದರ ಪರಿಣಾಮ ಅವರಿಬ್ಬರು ಸೇರಿ ಸಾಗರ ದಾಟಿ ಈ ಪುಣ್ಯ ಭೂಮಿಗೆ ಬಂದಿದ್ದು ಮಂಗಳವಾರ ಗುರು-ಹಿರಿಯರ ಸಮ್ಮುಖದಲ್ಲಿ ತಮ್ಮ ಜೀವನದ ಪ್ರಮುಖ ನಿರ್ಧಾರವೊಂದನ್ನು ಕೈಗೊಂಡಿದ್ದಾರೆ. ತಾವು ಉಳಿದಿದ್ದ ರೆಸಾರ್ಟಿಗೆ ವೈದಿಕರನ್ನು ಕರೆಯಿಸಿ ಅದ್ಧೂರಿಯಾಗಿ ಮದುವೆ ಆಗಿದ್ದಾರೆ. ಗೋಕರ್ಣದ ಕುಡ್ಲೆ ಬೀಚ್‌ನ ಕೆಫೆ ಪ್ಯಾರಡೈಸ ರೆಸಾರ್ಟನ ಆವಾರದಲ್ಲಿ ಅವರಿಬ್ಬರ ವಿವಾಹ ಮಹೋತ್ಸವ ನಡೆದಿದ್ದು, ವಿದೇಶಿ ಜೋಡಿಗೆ ಭಾರತಿಯ ವೈದಿಕರು ಮಂತ್ರಘೋಷ ಪಠಿಸಿ ಹಾರೈಸಿದ್ದಾರೆ. ಕೆಫೆಯ ಮಾಲಿಕರಾದ ಮುರಳಿ ಕಾಮತ್ ಹಾಗೂ ಪ್ರಮುಖರಾದ ನಿತ್ಯಾನಂದ ಶೆಟ್ಟಿ ಅವರು ದಂಪತಿಗೆ ಅಕ್ಷತೆ ಹಾಕಿ ಹಾರೈಸಿದರು. ವೈದಿಕರಾದ ಪ್ರಸನ್ನ ಜೋಗಭಟ್, ಮಹೇಶ ಅಡಿ, ಕೃಷ್ಣ ಸೂರಿ, ವಿನಾಯಕ ಉಪಾಧ್ಯ ವಿವಾಹ ಕೈಂಕರ್ಯ ನೆರವೇರಿಸಿದರು. - [ವಜ್ರಳ್ಳಿ: ಬಾವಿಯೊಳಗೆ `ಬಿಲ್ ವಿದ್ಯೆ' ಪ್ರಯೋಗ!](https://mobiletime.in/2025/11/vajralli-experimenting-with-bill-technology-inside-a-well/): ಆರು ವರ್ಷದ ಹಿಂದೆ ಕೃಷಿ ಇಲಾಖೆಯವರು ಕೃಷಿ ಹೊಂಡ ನಿರ್ಮಿಸಿದ್ದು, ಅದೇ ಹೊಂಡ ತೋರಿಸಿದ ಗ್ರಾಮ ಪಂಚಾಯತದವರು 1.49 ಲಕ್ಷ ರೂ ಹಣ ಹೊಡೆದಿದ್ದಾರೆ! ಯಲ್ಲಾಪುರ ತಾಲೂಕಿನ ವಜ್ರಳ್ಳಿ ಗ್ರಾಮ ಪಂಚಾಯತದಲ್ಲಿ `ಬಿಲ್ ವಿದ್ಯೆ’ ಪ್ರಯೋಗ ನಡೆದಿದೆ. `ನಿಮಗೆ ಹೊಸದಾಗಿ ಬಾವಿ ಹೊಡೆದು ಕೊಡುತ್ತೇವೆ’ ಎಂದು ನಂಬಿಸಿದ ಗ್ರಾಮ ಪಂಚಾಯತದವರು ರೈತರ ಹೊಲದಲ್ಲಿ ಈಗಾಗಲೆ ಇದ್ದ ಕೃಷಿ ಹೊಂಡದ ಫೋಟೋ ತೆಗೆದಿದ್ದು, ಅದನ್ನೇ ಸರ್ಕಾರಿ ಕಡಕ್ಕೆ ಸೇರಿಸಿ ಬಿಲ್ ಮಾಡಿದ್ದಾರೆ. ರೈತರಿಗೂ ಅರಿವಿಗೆ ಬಾರದಂತೆ ರೈತನ ಹೆಸರಿನಲ್ಲಿ ಗ್ರಾಮ ಪಂಚಾಯತದವರು ಹಣ ಖರ್ಚು ಮಾಡಿದ್ದು, ತಮ್ಮ ಅರಿವಿಗೆ ಬರದೇ ತಮ್ಮ ಕ್ಷೇತ್ರದಲ್ಲಿ ಬಾವಿ ತೋಡಿದ ದಾಖಲೆ ಸೃಷ್ಠಿಸಿದನ್ನು ಅರಿತು ರೈತರು ಕಂಗಾಲಾಗಿದ್ದಾರೆ! ಯಲ್ಲಾಪುರದ ವಜ್ರಳ್ಳಿ ಗ್ರಾಮ ಪಂಚಾಯತದ ಚಿಮ್ನಳ್ಳಿ ಬಳಿಯ ತೆಲಂಗಾರಿನಲ್ಲಿ 2017-18ರಲ್ಲಿ ಕೃಷಿ ಇಲಾಖೆಯವರು ಕೃಷಿ ಹೊಂಡ ನಿರ್ಮಿಸಿದ್ದರು. ರೈತ ಗಣೇಶ ಗಾಂವ್ಕರ್ ಅವರ ಮನವಿ ಮೇರೆಗೆ ಅಲ್ಲಿ ಕೃಷಿ ಹೊಂಡ ನಿರ್ಮಿಸಿದ್ದು, ಅದಕ್ಕೆ ಕೃಷಿ ಇಲಾಖೆಯವರು ಖರ್ಚು ಹಾಕಿದ್ದರು. ಆರು ವರ್ಷದ ನಂತರ ಅದೇ ಕೃಷಿ ಹೊಂಡ ತೋರಿಸಿದ ವಜ್ರಳ್ಳಿ ಗ್ರಾಮ ಪಂಚಾಯತದವರು `ಅದನ್ನು ನಾವು ಮಾಡಿದ್ದು’ ಎಂದು ಹೇಳಿಕೊಂಡಿದ್ದಾರೆ. ಜೊತೆಗೆ ಆ ಹೊಂಡಕ್ಕೆ 1.49 ಲಕ್ಷ ರೂ ಖರ್ಚು ಹಾಕಿದ್ದಾರೆ. ಹೀಗಾಗಿ ಸರ್ಕಾರಿ ದಾಖಲೆಗಳ ಪ್ರಕಾರ ಒಂದೇ ಹೊಂಡಕ್ಕೆ ಎರಡು ಬಾರಿ ಖರ್ಚು ಬಿದ್ದಿದೆ! ಸದ್ಯ ಕೃಷಿ ಸಹಾಯ ನಿರ್ದೇಶಕರು ಆ ಕೆರೆ ನಾವು ನಿರ್ಮಿಸಿದ್ದು ಎನ್ನುತ್ತಾರೆ. ಗ್ರಾಮ ಪಂಚಾಯತದವರು `ಅದು ಕೆರೆ ಅಲ್ಲ ಬಾವಿ. ಅದನ್ನು ತೋಡಿದ್ದು ನಾವು’ ಎನ್ನುತ್ತಾರೆ. ಆದರೆ ಸತ್ಯ ಅರಿತಿದ್ದ ಸ್ಥಳೀಯ ರೈತ ಗಣೇಶ ಗಾಂವ್ಕರ್ ಅವರು ಇದಕ್ಕೆ ತಕರಾರು ಸಲ್ಲಿಸಿದ್ದಾರೆ. ಆ ಅವಧಿಯಲ್ಲಿ `ನಿಮಗೆ ಬೇರೆ ಬಾವಿ ಮಾಡಿಕೊಡುತ್ತೇವೆ’ ಎಂದು ಗ್ರಾಮ ಪಂಚಾಯತದವರು ಮೊದಲು ಸಮಾಧಾನ ಮಾಡಿದ್ದು, ಈವರೆಗೂ ಬೇರೆ ಬಾವಿ ನಿರ್ಮಾಣ ನಡೆದಿಲ್ಲ. ಅದಾದ ನಂತರ ಗಣೇಶ ಗಾಂವ್ಕರ್ ಅವರೇ 66 ಸಾವಿರ ರೂ ಹಣಪಡೆದ ಬಗ್ಗೆ ಪೊರ್ಜರಿ ದಾಖಲೆ ಸೃಷ್ಠಿಸಿದ್ದಾರೆ. ಆ ಮೂಲಕ ಏನೂ ಅರಿಯದ ರೈತ ಈ ಪ್ರಕರಣದಲ್ಲಿ ತಪ್ಪಿತಸ್ಥ ಎಂದು ಬಿಂಬಿಸುವ ಪ್ರಯತ್ನ ನಡೆದಿದ್ದು, `ದೂರು ಕೊಟ್ಟರೇ ನೀನೇ ಸಿಕ್ಕಿ ಬೀಳುವೆ’ ಎಂದು ಬೆದರಿಸುವ ತಂತ್ರವನ್ನು ನಡೆಸಿದ್ದಾರೆ! ಕೃಷಿ ಇಲಾಖೆಯವರು ಕೃಷಿ ಹೊಂಡ ನಿರ್ಮಿಸಲು 41841ರೂ ವೆಚ್ಚ ಮಾಡಿದ್ದು, ಅದೇ ಹೊಂಡಕ್ಕೆ ಗ್ರಾಮ ಪಂಚಾಯತದವರು 1.49 ಲಕ್ಷ ರೂ ಬಿಲ್ ಮಾಡಿದ್ದು ದಾಖಲೆಗಳಿಂದ ಸಾಭೀತಾಗಿದೆ. ಗ್ರಾಮ ಪಂಚಾಯತ ಅಧ್ಯಕ್ಷ ಭಗೀರಥ ನಾಯ್ಕ ಅವರ ಜೊತೆ ಸೇರಿ ಪಿಡಿಓ ಆಗಿದ್ದ ಸಂತೋಷಿ ಬಂಟ್, ತಾಂತ್ರಿಕ ಸಹಾಯಕಿ ಅನುಸೂಯಾ ಸಿದ್ದಿ, ವಜ್ರಳ್ಳಿ ಡಾಟಾ ಎಂಟ್ರಿ ಆಪರೇಟರ್ ಲಕ್ಷö್ಮಣ ಮರಾಠಿ ಅವರು ಈ ಅವ್ಯವಹಾರ ನಡೆಸಿರುವುದಾಗಿ ತನಿಖಾ ವರದಿ ವಿವರಿಸಿದೆ. ಹೀಗಾಗಿ ಗ್ರಾಮ ಪಂಚಾಯತ ಅಧ್ಯಕ್ಷ ಭಗೀರಥ ನಾಯ್ಕ, ಪಿಡಿಓ ಸಂತೋಷಿ ಬಂಟ್ ಜೊತೆ ಅನುಸೂಯಾ ಸಿದ್ದಿ ಅವರಿಗೆ ತಲಾ 43869ರೂ ಹಾಗೂ 14623ರೂ ಹಣ ಪಾವತಿಸುವಂತೆ ತನಿಖಾಧಿಕಾರಿಗಳು ಆದೇಶಿಸಿದ್ದಾರೆ. ಮಾಹಿತಿ ಹಕ್ಕು ಕಾಯ್ದೆ ಅಡಿ ಮೊಬೈಲ್ ಮಿಡಿಯಾ ನೆಟ್‌ವರ್ಕ ನೀಡಿದ ಅರ್ಜಿಗೆ ಈ ದಾಖಲೆಗಳು ಸಿಕ್ಕಿವೆ. - [2025 ನವೆಂಬರ್ 26ರ ದಿನ ಭವಿಷ್ಯ](https://mobiletime.in/2025/11/prediction-for-november-26-2025/): ಮೇಷ ರಾಶಿ: ಉದ್ಯೋಗದಲ್ಲಿನ ಯಶಸ್ಸು ಸಂತೋಷ ಕೊಡಲಿದೆ. ಹಣಕಾಸು ಸ್ಥಿತಿ ಸುಧಾರಣೆಗೊಳ್ಳುವ ಸಾಧ್ಯತೆ ಇದೆ. ಆರೋಗ್ಯದ ಬಗ್ಗೆ ಜಾಗರೂಕತೆಯಿಂದಿರಬೇಕು. ಕುಟುಂಬದಲ್ಲಿ ಸಂವಾದ ಹೆಚ್ಚುತ್ತದೆ. ವಿವಿಧ ಯೋಜನೆಗಳನ್ನು ಪ್ರಾರಂಭಿಸಲು ಅನುಕೂಲವಾಗುತ್ತದೆ. ವೃಷಭ ರಾಶಿ: ಮನದಾಳದ ಆಶಯಗಳು ಪೂರೆಯಾಗಲಿವೆ. ಹಣ ಕಾಪಾಡುವ ವಿಷಯದಲ್ಲಿ ಜಾಗೃತೆ ಅಗತ್ಯ. ಸಹೋದ್ಯೋಗಿಗಳಿಂದ ಸಹಕಾರ ಸಿಗುತ್ತದೆ. ಆರೋಗ್ಯ ಜಾಗೃತಿಯಿಂದ ಉತ್ತಮವಾಗುತ್ತದೆ. ಮನಸ್ಥಿತಿ ಶಾಂತವಾಗಿರುತ್ತದೆ. ಮಿಥುನ ರಾಶಿ: ವಾಗ್ವಾದಗಳಿಂದ ದೂರವಿರಿ. ಹೊಸ ಕಲಿಕೆಗೆ ಮನಸ್ಸು ಮಾಡಬಹುದು. ಹಣಕಾಸಿನಲ್ಲಿ ಜಾಗ್ರತೆ ತೋರಬೇಕು. ಅಸಮಧಾನಗಳನ್ನು ವ್ಯಕ್ತಪಡಿಸಲು ಸೂಕ್ತ ಸಮಯವಲ್ಲ. ಕರ್ಕ ರಾಶಿ: ಉದ್ಯೋಗದಲ್ಲಿ ಸಾಂತ್ವನ ಹಾಗೂ ಶಾಂತಿಯಾಯಕ ದಿನ. ಹಣದ ಸಮಸ್ಯೆಗಳು ನಡೆಯುತ್ತವೆ. ಕುಟುಂಬದಲ್ಲಿ ಏಕರೂಪತೆ ಬೆಳೆಸಿಕೊಳ್ಳಿ. ಕೆಲಸದ ವಿಷಯದಲ್ಲಿ ಆಸಕ್ತಿ ಮುಖ್ಯ. ಸಿಂಹ ರಾಶಿ: ಕನಸುಗಳನ್ನು ಯಶಸ್ವಿಯಾಗಿ ಕಾರ್ಯರೂಪಕ್ಕೆ ತರುತ್ತೀರಿ. ಬಂಧುಮಿತ್ರರಿAದ ನೆರವು ಸಿಗುತ್ತದೆ. ಆರೋಗ್ಯದ ಕಡೆ ಗಮನ ನೀಡಿ. ಮಾನಸಿಕ ಸಮತೋಲನ ಅಗತ್ಯ. ಹೊಸ ಪರಿಚಯಗಳು ಅನುಕೂಲಕರ. ಕನ್ಯಾ ರಾಶಿ: ಅಧ್ಯಯನ ಮತ್ತು ಕಾರ್ಯಕ್ಷೇತ್ರದಲ್ಲಿ ಯಶಸ್ಸಿನ ದಿನ. ಶಾರೀರಿಕ ಆರೋಗ್ಯ ಉತ್ತಮವಾಗಿರುವುದು. ಮನೆಯೊಂದರಲ್ಲಿ ಸಂತೋಷ ಕಾಣಲಿದೆ. ಸ್ನೇಹಿತರಿಂದ ಪ್ರೋತ್ಸಾಹ ಸಿಗಲಿದೆ. ತುಲಾ ರಾಶಿ: ವ್ಯವಹಾರಗಳಲ್ಲಿ ಮುನ್ನಡೆ ಕಾಣುತ್ತದೆ. ಹಣಕಾಸು ಸಂಬAಧಿತ ನಿರೀಕ್ಷೆಗಳು ಪೂರೆಯಾಗುತ್ತವೆ. ಆರೋಗ್ಯದಲ್ಲಿ ಸತತ ಜಾಗೃತಿಯಿಂದ ಲಾಭ ಆಗಲಿದೆ. ವೃಶ್ಚಿಕ ರಾಶಿ: ಯೋಜನೆಗಳು ಯಥಾವತ್ತಾಗಿ ಮುಂದುವರೆಯಲಿದ್ದು, ಆರೋಗ್ಯದಲ್ಲಿ ಬದಲಾವಣೆ ಆಗಬಹುದು. ಕುಟುಂಬದವರ ಉತ್ತಮ ಸಹಕಾರ ಸಿಗಲಿದೆ. ಹೊಸ ವಿಷಯಗಳ ಕಲಿಕೆ ಸಾಧ್ಯವಿದೆ. ಧನು ರಾಶಿ: ವ್ಯವಹಾರಗಳಲ್ಲಿ ಉತ್ತಮ ಬೆಳವಣಿಗೆ ಆಗಲಿದೆ. ಆರೋಗ್ಯಕ್ಕಾಗಿ ವ್ಯಾಯಾಮ ಅಗತ್ಯ. ಹೊಸ ಜನರ ಭೇಟಿಗೆ ಅವಕಾಶ ಸಿಗಲಿದೆ. ಮನಸ್ಸು ಸರಿಯಾದ ದಿಕ್ಕಿನಲ್ಲಿ ಸಾಗುತ್ತದೆ. ಮಕರ ರಾಶಿ: ಉದ್ಯೋಗದಲ್ಲಿ ಬದಲಾವಣೆಗಳಾಗಬಹುದು. ಆರೋಗ್ಯದ ಕಡೆ ಗಮನ ಕೊÀ. ಕುಟುಂಬದಲ್ಲಿ ಸಹಕಾರ. ಹೊಸ ಆಸ್ಥಿ ಖರೀದಿ ಉಪಯುಕ್ತ. ಧಾರ್ಮಿಕ ಕಾರ್ಯಗಳಲ್ಲಿ ತೊಡಗುವಿಕೆ ಮುಖ್ಯ ಕುಂಭ ರಾಶಿ: ಸೃಜನಶೀಲ ಕೆಲಸಗಳು ಅನುಕೂಲಕರ. ಸ್ನೇಹಿತರೊಂದಿಗೆ ಸಂಪರ್ಕ ಹೆಚ್ಚಾಗಲಿದೆ. ಮನಶಾಂತಿಯಿAದ ಸಾಧನೆ ಸಾಧ್ಯವಿದೆ. ಹೊಸ ಕಲಿಕೆ ಆರಂಭಕ್ಕೆ ಶುಭ ದಿನ. ಮೀನ ರಾಶಿ: ಸಹಾನುಭೂತಿಯ ಬೆಳವಣಿಗೆಗಳು ನಡೆಯಲಿದೆ. ಈ ದಿನ ಸಾಲ ಕೊಡುವುದು ಸೂಕ್ತವಲ್ಲ. ಆರೋಗ್ಯದಲ್ಲಿ ನಿಯಮಿತ ವ್ಯಾಯಾಮ ಅಗತ್ಯ. ಆಧ್ಯಾತ್ಮಿಕ ಚಟುವಟಿಕೆಗಳು ಫಲ ಕೊಡಲಿದೆ. - [ಕಚ್ಚಿದ ಹಾವನ್ನು ಕೈಯಲ್ಲಿಡಿದು ಆಸ್ಪತ್ರೆಗೆ ಬಂದ!](https://mobiletime.in/2025/11/he-came-to-the-hospital-with-a-snake-bite-in-his-hand/): ಕೂಲಿ ಕೆಲಸಕ್ಕೆ ತೆರಳಿದ್ದ ದೇವು ಗೌಡ ಅವರಿಗೆ ಹಾವು ಕಚ್ಚಿದ್ದು, ಅದೇ ಹಾವನ್ನು ಹಿಡಿದು ಅವರು ಆಸ್ಪತ್ರೆಗೆ ಬಂದಿದ್ದಾರೆ. ವೈದ್ಯರು ಚಿಕಿತ್ಸೆ ನೀಡಿ ದೇವು ಗೌಡ ಅವರ ಆತಂಕ ದೂರ ಮಾಡಿದ್ದಾರೆ. ಗೋಕರ್ಣ ಬಳಿಯ ಬಿಜ್ಜೂರಿನ ದೇವು ಗೌಡ (38) ಅವರು ಮಂಗಳವಾರ ಅಂಕೋಲಾದ ತಿಂಗಳಬೈಲ್ ಬಳಿ ಕೂಲಿ ಕೆಲಸಕ್ಕೆ ಹೋಗಿದ್ದರು. ಸಂಜೆ ವೇಳೆ ಅಲ್ಲಿ ಅವರಿಗೆ ಹಾವೊಂದು ಕಚ್ಚಿತು. ನಂತರ ಆ ಹಾವು ಪೊದೆ ಹಿಂದೆ ಹೋಯಿತು. ಆದರೆ, ಕಚ್ಚಿದ ಹಾವು ಯಾವುದು? ಎಂದು ಅವರಿಗೆ ಗೊತ್ತಾಗಲಿಲ್ಲ. ಆಸ್ಪತ್ರೆಗೆ ಹೋದರೂ `ಯಾವ ಹಾವು ಕಚ್ಚಿತು?’ ಎಂದು ಪ್ರಶ್ನಿಸಬಹುದು ಎಂದು ಊಹಿಸಿದ ಅವರು ಪೊದೊಯೊಳಗೆ ಹೋಗಿದ್ದ ಹಾವು ಹುಡುಕಿ ಹೊರ ತೆಗೆದರು. ಆ ಹಾವನ್ನು ಅಲ್ಲಿಂದ ಹೊರ ತೆಗೆದು ಪ್ಲಾಸ್ಟಿಕ್ ಕೊಟ್ಟೆಯೊಳಗೆ ಹಾಕಿ ಆಸ್ಪತ್ರೆ ಕಡೆ ಹೊರಟರು. ಹಿಲ್ಲೂರಿನ ಆಸ್ಪತ್ರೆಗೆ ಬಂದಿದ್ದ ದೇವು ಗೌಡ ಅವರಿಗೆ ಅಲ್ಲಿನವರು ಚಿಕಿತ್ಸೆ ಕೊಟ್ಟರು. ಈ ವೇಳೆಗಾಗಲೇ ದೇವು ಗೌಡ ಅವರು ಅಸ್ವಸ್ಥಗೊಂಡಿದ್ದು, ಅಲ್ಲಿನ ವೈದ್ಯರು ಅವರನ್ನು ಅಂಕೋಲಾ ತಾಲೂಕು ಆಸ್ಪತ್ರೆಗೆ ಕಳುಹಿಸಿದರು. 108 ಸಿಬ್ಬಂದಿ ದೇವು ಗೌಡರನ್ನು ಆಸ್ಪತ್ರೆಗೆ ಕರೆತಂದರು. ಅಂಕೋಲಾ ಆಸ್ಪತ್ರೆಯವರು ವಿವಿಧ ಬಗೆಯ ಚಿಕಿತ್ಸೆ ನೀಡಿ ಅವರನ್ನು ಕಾರವಾರ ಆಸ್ಪತ್ರೆಗೆ ಕಳುಹಿಸಿದರು. - [ಶವಯಾತ್ರೆಗೆ ಸಾಕ್ಷಿಯಾದ 5 ಸಾವಿರ ಜನ!](https://mobiletime.in/2025/11/5-thousand-people-witnessed-the-funeral-procession/): ಅಭಿವೃದ್ಧಿ ಹೆಸರಿನಲ್ಲಿ ಜನರ ಜೀವನದ ಜೊತೆ ಆಟವಾಡುತ್ತಿರುವ ಬಂದರು ಯೋಜನೆ ವಿರೋಧಿಸಿ ಅಂಕೋಲಾದಲ್ಲಿ ಮಂಗಳವಾರ ಅಣಕು ಶವಯಾತ್ರೆ ನಡೆದಿದೆ. 5 ಸಾವಿರಕ್ಕೂ ಅಧಿಕ ಜನ ಈ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಾರೆ. `ಕಳೆದ ಒಂದು ವರ್ಷದಿಂದ ಪ್ರತಿಭಟನೆ ನಡೆಸುತ್ತಿದ್ದರೂ ಹೂಡಿಕೆ ಕಂಪನಿ JSW ಯೋಜನೆಯಿಂದ ಹಿಂದೆ ಸರಿದಿಲ್ಲ. ಹೀಗಾಗಿ ಕರಾಳ ದಿನ ಆಚರಿಸುತ್ತಿದ್ದೇವೆ’ ಎಂದು ಪ್ರತಿಭಟನೆಯಲ್ಲಿದ್ದವರು ಹೇಳಿದರು. ಅಂಕೋಲಾ ಪಟ್ಟಣದ ಎಲ್ಲಾ ವ್ಯಾಪಾರಸ್ಥರು ತಮ್ಮ ಅಂಗಡಿಗಳನ್ನು ಬಂದ್ ಮಾಡಿ ಕೇಣಿ ಬಂದರು ಯೋಜನೆಯನ್ನು ವಿರೋಧಿಸಿದರು. ಕೇಣಿ ಬಂದರು ಯೋಜನೆ ವಿರೋಧಿಸದ ಜನಪ್ರತಿನಿಧಿಗಳ ವಿರುದ್ಧ ಪ್ರತಿಭಟನಾಕಾರರು ಘೋಷಣೆ ಕೂಗಿದರು. `ಸಾವಿರಾರು ಜನರ ಕೂಗಿಗೆ ಸರಕಾರ ಸ್ಪಂದಿಸುವ ಕೆಲಸ ಮಾಡಡಿಲ್ಲ’ ಎಂದು ಪ್ರತಿಭಟನೆ ಪ್ರಮುಖ ಸಂಜೀವ ಬಲೇಗಾರ ಆಕ್ರೋಶವ್ಯಕ್ತಪಡಿಸಿದರು. `ಬಂದರು ನಿರ್ಮಾಣ ಕಾರ್ಯ ಮುಂದುವರೆಸಿದರೆ ಸಾಮೂಹಿಕ ಆತ್ಮಹತ್ಯೆ ಮಾಡಿಕೊಳ್ಳಲು ಹಿಂದೆ ಸರಿಯುವುದಿಲ್ಲ’ ಎಂದು ಎಚ್ಚರಿಸಿದರು. `ಉಸ್ತುವಾರಿ ಸಚಿವ ಮಂಕಾಳ ವೈದ್ಯ ಅವರು ಮೀನುಗಾರಿಕೆ ಮಂತ್ರಿ ಆದರು ಮೀನುಗಾರರ ಅಳಲನ್ನು ಒಮ್ಮೆಯು ಕೇಳಲಿಲ್ಲ’ ಎಂದು ಅಸಮಧಾನವ್ಯಕ್ತಪಡಿಸಿದರು. ಕೇಣಿ ವಾಣಿಜ್ಯ ಬಂದರು ವಿರೋಧಿಸಿ 14 ದಿನಗಳಿಂದ ಧರಣಿ ನಡೆಯುತ್ತಿದೆ. ಈ ದಿನ ಕರೆ ನೀಡಿದ ಅಂಕೋಲಾ ಬಂದಿಗೆ ವಕೀಲರ ಸಂಘ, ಕಿಸಾಸ ರೈತ ಸಂಘ ಸೇರಿ ವಿವಿಧ ಸಂಘಟನೆಗಳು ಬೆಂಬಲ ನೀಡಿದ್ದಾರೆ. ಪ್ರತಿಭಟನೆಯ ಕಾವು ಹೆಚ್ಚಿದ್ದರಿಂದ ಮಧ್ಯಾಹ್ನ ಜಿಲ್ಲಾಧಿಕಾರಿ ಕೆ ಲಕ್ಷ್ಮೀಪ್ರಿಯಾ ಅವರು ಸ್ಥಳಕ್ಕೆ ದಾವಿಸಿ ಅಳಲು ಆಲಿಸಿದರು. `ಅಹವಾಲು ಸಭೆಯ ವರದಿಯನ್ನು ಪಾರದರ್ಶಕವಾಗಿ ಸರ್ಕಾರಕ್ಕೆ ಕಳುಹಿಸಲಾಗಿದೆ. ಈ ದಿನದ ಪ್ರತಿಭಟನೆಯ ವಿಷಯವನ್ನು ಮುಖ್ಯಮಂತ್ರಿಗೆ ತಿಳಿಸುವೆ’ ಎಂದವರು ಹೇಳಿದರು.   - [ಸಮುದ್ರಕ್ಕೆ ಹಾರಿ ಸಾವನಪ್ಪಿದ ಸ್ವಾವಲಂಬಿ ಅಜ್ಜಿ!](https://mobiletime.in/2025/11/a-self-sufficient-grandmother-who-jumped-into-the-sea-and-died/): `ಬೇರೆಯವರಿಗೆ ಎಂದಿಗೂ ತೊಂದರೆ ಕೊಡಬಾರದು’ ಎಂಬ ಮನಸ್ಥಿತಿ ಹೊಂದಿದ್ದ ಗೌರಿ ನಾಯ್ಕ ಅವರು `ತಮ್ಮ ಸಾವಿನ ನಂತರವೂ ಯಾರಿಗೂ ಸಮಸ್ಯೆ ಆಗಬಾರದು’ ಎಂದು ಯೋಚಿಸಿದ್ದಾರೆ `ಅನಾರೋಗ್ಯಕ್ಕೂ ಮುನ್ನ ಸಾವನಪ್ಪಬೇಕು’ ಎಂದು ಯೋಚಿಸಿ ಗಟ್ಟಿಮುಟ್ಟಾಗಿರುವಾಗಲೇ ಅವರು ಸಮುದ್ರಕ್ಕೆ ಹಾರಿ ಸಾವನಪ್ಪಿದ್ದಾರೆ! ಭಟ್ಕಳದ ಮುರುಡೇಶ್ವರದ ಬಳಿ ಗೌರಿ ನಾಗಪ್ಪ ನಾಯ್ಕ ಅವರು ವಾಸವಾಗಿದ್ದರು. 74 ವರ್ಷವಾದರೂ ಅವರು ಗಟ್ಟಿಮುಟ್ಟಾಗಿದ್ದರು. ಹೀಗಾಗಿ ಮನೆಯ ಎಲ್ಲಾ ಕೆಲಸವನ್ನು ಅವರು ನಿಭಾಯಿಸುತ್ತಿದ್ದರು. ಸ್ವಾಭಿಮಾನಿ ಸ್ವಭಾವದವಾರಿದ್ದ ಅವರು `ತಾನು ಯಾರಿಗೂ ಬಾರ ಆಗಬಾರದು. ತಮ್ಮಿಂದ ಯಾರಿಗೂ ತೊಂದರೆ ಆಗಬಾರದು’ ಎಂದು ಹೇಳುತ್ತಿದ್ದರು. ಈಚೆಗೆ ಅವರಿಗೆ ವಯೋ ಸಹಜ ರೋಗ ಕಾಣಿಸಿಕೊಂಡಿದ್ದು ಈ ಬಗ್ಗೆ ಅವರು ಯೋಚಿಸಿದ್ದರು. ತನ್ನ ಆರೈಕೆ ಮಾಡುವವರಿಗೆ ಸಮಸ್ಯೆ ಬಾರದಂತೆ ತಡೆಯುವುದಕ್ಕಾಗಿ ಅವರು ಸಾವಿನ ನಿರ್ಧಾರ ಮಾಡಿದರು. ಅದರ ಪ್ರಕಾರ, ಮುರುಡೇಶ್ವರದಲ್ಲಿನ ಅರಬ್ಬಿ ಸಮುದ್ರಕ್ಕೆ ಹೋದ ಅವರು ದೇವಾಲಯ ಬಲಭಾಗಕ್ಕೆ ತೆರಳಿದರು. ಅಲೆಗಳ ಅಬ್ಬರದ ನಡುವೆಯೂ ಆಳ ಸಮುದ್ರಕ್ಕೆ ಹೋಗುವ ಪ್ರಯತ್ನ ಮಾಡಿದರು. ನವೆಂಬರ್ 24ರ ನಸುಕಿನಲ್ಲಿ ಅವರು ಅಲೆಗಳಿಗೆ ಸಿಲುಕಿ ಕೊನೆಯುಸಿರೆಳೆದರು. ಕಡಲ ತೀರದಲ್ಲಿ ಬಿದ್ದಿದ್ದ ತಾಯಿ ಶವ ನೋಡಿ ಅಣ್ಣಪ್ಪ ನಾಯ್ಕ ಅವರು ಅಳುತ್ತಿದ್ದರು. - [ಕಾನ್ಸರ್ ರೋಗಿಗೆ ನೆರವಿನ ಭರವಸೆ](https://mobiletime.in/2025/11/cancer-former-mla-says-she-will-help-patient/): ರಕ್ತ ಕಾನ್ಸರಿನಿಂದ ಬಳಲುತ್ತಿರುವ ಕುಮಟಾದ ಜನಾರ್ಧನ ಮುಕ್ರಿ ಅವರಿಗೆ ಕುಮಟಾದ ಮಾಜಿ ಶಾಸಕಿ ಶಾರದಾ ಶೆಟ್ಟಿ ಅವರು ಹಣ ಸಹಾಯ ಮಾಡುವ ಭರವಸೆ ನೀಡಿದ್ದಾರೆ. ಜನಸಾಮಾನ್ಯರ ಸಮಾಜ ಕಲ್ಯಾಣ ಕೇಂದ್ರದವರು ಹಳಕಾರದ ಜನಾರ್ಧನ ಮುಕ್ರಿ ಅವರ ಪರಿಸ್ಥಿತಿಯ ಬಗ್ಗೆ ಶಾರದಾ ಶೆಟ್ಟಿ ಅವರಲ್ಲಿ ವಿವರಿಸಿದ್ದರು. 2 ಲಕ್ಷ ರೂಪಾಯಿಯಷ್ಟು ಆಸ್ಪತ್ರೆಯ ಬಿಲ್ ಆಗಿದ್ದು, ಅದನ್ನು ಪಾವತಿಸಲು ಸಹಾಯ ಮಾಡುವಂತೆ ಮನವಿ ಮಾಡಿದ್ದರು. ನಾರಾಯಣ ಹೃದಯಾಲಯದಲ್ಲಿರುವ ಜನಾರ್ಧನ ಮುಕ್ರಿ ಅವರ ತಾಯಿ ಪರಮೇಶ್ವರಿ ಮುಕ್ರಿ ಅವರಿಗೆ ಶಾರದಾ ಶೆಟ್ಟಿ ಅವರು ಫೋನ್ ಮಾಡಿ, ಮಗನ ಆರೋಗ್ಯ ವಿಚಾರಿಸಿದರು. ಈ ವೇಳೆ ಹಣ ಸಹಾಯ ಮಾಡುವ ಭರವಸೆ ನೀಡಿದರು. ಈ ಮೊದಲು ಸಹ ಶಾರದಾ ಶೆಟ್ಟಿ ಅವರು ಕುಟುಂಬಕ್ಕೆ ನೆರವಾಗಿದ್ದರು. ಈ ಹಿನ್ನಲೆ ಜನಸಾಮಾನ್ಯರ ಸಮಾಜ ಕಲ್ಯಾಣ ಕೇಂದ್ರದ ಅಧ್ಯಕ್ಷ ಆಗ್ನೇಲ್ ರೋಡ್ರಿಗಸ್ ಅವರು ಶಾರದಾ ಶೆಟ್ಟಿ ಅವರಿಗೆ ಕೃತಜ್ಞತೆ ಸಲ್ಲಿಸಿದರು. ಪ್ರಮುಖರಾದ ವನಿತಾ ಮುಕ್ರಿ, ಸಂತೋಷ ಮುಕ್ರಿ, ನಾಗೇಶ ಅವರು ಇದ್ದರು. - [ಪ್ರಪಾತಕ್ಕೆ ಬಿದ್ದ ಬಸ್ಸು!](https://mobiletime.in/2025/11/bus-falls-into-abyss/): ಹುಬ್ಬಳ್ಳಿ-ಅಂಕೋಲಾ ರಸ್ತೆಯಲ್ಲಿ ಅತ್ಯಂತ ವೇಗವಾಗಿ ಚಲಿಸುತ್ತಿದ್ದ ಸರ್ಕಾರಿ ಬಸ್ಸು ಪ್ರಪಾತಕ್ಕೆ ಬಿದ್ದಿದೆ. ಈ ಅವಘಡದಲ್ಲಿ 20ಕ್ಕೂ ಅಧಿಕ ಜನ ಗಾಯಗೊಂಡಿದ್ದಾರೆ. ಕಾರವಾರ-ರಾಯಚೂರು ಮಾರ್ಗದ ಬಸ್ಸು ಇದಾಗಿತ್ತು. ಯಲ್ಲಾಪುರ-ಅಂಕೋಲಾ ನಡುವಿನ ವಜ್ರಳ್ಳಿ ಬಳಿ ಬಸ್ಸು ಪಲ್ಟಿಯಾಯಿತು. ಪರಿಣಾಮ ಬಸ್ಸು ಕಂದಕಕ್ಕೆ ಬಿದ್ದಿದ್ದು, ಅನೇಕರು ಪೆಟ್ಟು ಮಾಡಿಕೊಂಡರು. ಆ ಪೈಕಿ ಇಬ್ಬರ ಸ್ಥಿತಿ ಗಂಭೀರವಾಗಿದೆ. ಮಹಿಳೆಯರು, ಮಕ್ಕಳು ಸೇರಿ ಅನೇಕರು ಈ ಬಸ್ಸಿನಲ್ಲಿದ್ದು ಅಪಘಾತದಿಂದ ಗಾಯಗೊಂಡಿದ್ದಾರೆ. ಅತಿ ವೇಗವೇ ಈ ಅಪಘಾತಕ್ಕೆ ಕಾರಣ ಎಂಬ ಮಾಹಿತಿ ಸಿಕ್ಕಿದೆ. ಗಾಯಗೊಂಡವರನ್ನು ತುರ್ತಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಂಕೋಲಾ ಹಾಗೂ ಯಲ್ಲಾಪುರ ಪೊಲೀಸರು ಸ್ಥಳಕ್ಕೆ ತೆರಳಿದ್ದಾರೆ. ರಕ್ಷಣಾ ತಂಡಗಳು ಧಾವಿಸಿ ಕಾರ್ಯಾಚರಣೆ ನಡೆಸುತ್ತಿವೆ. ಗಾಯಾಳುಗಳಿಗೆ ತುರ್ತು ಚಿಕಿತ್ಸೆ ಮುಂದುವರೆದಿದೆ. - [ಪಾಠ ಮಾಡದ ಈ ಮೇಷ್ಟ್ರು ಕಾಟ ಕೊಟ್ಟಿದ್ದೇ ಜಾಸ್ತಿ!](https://mobiletime.in/2025/11/this-master-who-does-not-teach-has-given-too-much/): ದೊಡ್ಡ ಶಾಲೆ ಎಂದು ಗುರುತಿಸಿಕೊಂಡ ಸಂಸ್ಥೆಯಲ್ಲಿ ದೈಹಿಕ ಶಿಕ್ಷಕನಾಗಿ ಕೆಲಸ ಮಾಡುತ್ತಿದ್ದ ಕಿರಣ ಟಪೋಜಿ ಅವರು ಪಾಠ ಮಾಡಿದಕ್ಕಿಂತಲೂ ಹೆಚ್ಚಾಗಿ ಅಲ್ಲಿದ್ದ ವಿದ್ಯಾರ್ಥಿನಿಯರಿಗೆ ಕಾಟ ಕೊಟ್ಟಿರುವುದೇ ಹೆಚ್ಚು. ವಿದ್ಯಾರ್ಥಿನಿಯೊಬ್ಬರನ್ನು ದೈಹಿಕವಾಗಿ ಬಳಸಿಕೊಂಡ ಆರೋಪ ಈತನ ಮೇಲಿದ್ದು, ಪಾಲಕರು ಪೊಲೀಸರ ಮೊರೆ ಹೋಗಿದ್ದಾರೆ. ಮುಂಡಗೋಡದ ಪ್ರತಿಷ್ಠಿತ ಪ್ರೌಢಶಾಲೆಯಲ್ಲಿ ಕಿರಣ ಟಪೋಜಿ ದೈಹಿಕ ಶಿಕ್ಷಕರಾಗಿದ್ದರು. ಪಾಠ ಮಾಡುವ ನೆಪದಲ್ಲಿ ವಿದ್ಯಾರ್ಥಿನಿಯರ ಮೈ-ಕೈ ಮುಟ್ಟುವುದು ಸಾಮಾನ್ಯವಾಗಿದ್ದು, ಇದನ್ನು ವಿರೋಧಿಸುವ ವಿದ್ಯಾರ್ಥಿನಿಯರಿಗೆ ಇನ್ನಷ್ಟು ಕಾಟ ಕೊಡುತ್ತಿದ್ದರು. ವಿದ್ಯಾರ್ಥಿನಿಯರು ಒಬ್ಬರೇ ಇರುವುದನ್ನು ಅರಿತು ಅವರ ಮನೆಗೆ ಹೋಗುವುದನ್ನು ಸಹ ಕಿರಣ ಟಪೋಜಿ ರೂಢಿಸಿಕೊಂಡಿದ್ದರು. ಹೀಗೆ ಮಕ್ಕಳ ಮನೆಯೊಂದಕ್ಕೆ ಹೋದ ಅವರು ಅಲ್ಲಿದ್ದ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿದರು. ಒತ್ತಾಯಪೂರ್ವಕವಾಗಿ ತನ್ನನ್ನು ಬಳಸಿಕೊಂಡಿದ್ದನ್ನು ಬಾಲಕಿ ಸಹಿಸಿಕೊಂಡಿರಲಿಲ್ಲ. ಆದರೆ, `ಈ ವಿಷಯ ಎಲ್ಲಾದರೂ ಹೇಳಿದರೆ ಜೀವ ತೆಗೆಯುವೆ’ ಎಂಬ ಬೆದರಿಕೆ ಒಡ್ಡುವುದನ್ನು ಕಿರಣ ಟಪೋಜಿ ಮರೆತಿರಲಿಲ್ಲ. ಹೀಗಾಗಿ ಹಿಂಸೆಯನ್ನು ಆ ಬಾಲಕಿ ಅನಿವಾರ್ಯವಾಗಿ ಸಹಿಸಿಕೊಂಡಿದ್ದು, ಅದಾಗಿಯೂ ಆ ದೈಹಿಕ ಶಿಕ್ಷಕನ ದೈಹಿಕ ದುರ್ಬಳಕೆಯ ಆಟ ಹಾಗೇ ಮುಂದುವರೆದಿತ್ತು. ಈ ನಡುವೆ ವಿದ್ಯಾರ್ಥಿಗಳ ಮೇಲೆ ಹಲ್ಲೆ, ದುರ್ವರ್ತನೆಯ ಆರೋಪದ ಹಿನ್ನಲೆ ಆ ಶಾಲೆಯವರು ಕಿರಣ ಟಪೋಜಿಯನ್ನು ಕೈ ಬಿಟ್ಟಿದ್ದರು. ಕೆಲಸದಿಂದ ವಜಾ ಆಗಿದ್ದರೂ ಆತನ ಕಾಮದಾಟಗಳು ನಿಂತಿರಲಿಲ್ಲ. ಹೀಗಾಗಿ ಇನ್ನೊಂದು ಶಾಲೆಗೆ ಸೇರಿದ ಕಿರಣ ಟಪೋಜಿ ಅಲ್ಲಿಯೂ ತಮ್ಮ ಹಳೆ ಚಾಳಿ ಮುಂದುವರೆಸಿದ್ದರು. ಇದನ್ನು ಸಹಿಸದ ವಿದ್ಯಾರ್ಥಿನಿಯೊಬ್ಬರು ಪಾಲಕರಿಗೆ ದೂರು ನೀಡಿದ್ದು, ಪಾಲಕರು ನ್ಯಾಯಕ್ಕಾಗಿ ಪೊಲೀಸರ ಮೊರೆ ಹೋಗಿದ್ದಾರೆ. - [ಅರಣ್ಯ ಹಕ್ಕು: 30 ಸಾವಿರ ಅರ್ಜಿ ಸಲ್ಲಿಕೆಗೆ ಸಿದ್ಧತೆ](https://mobiletime.in/2025/11/forest-rights-preparations-to-submit-30000-applications/): ಅರಣ್ಯವಾಸಿಗಳ ಕಾನೂನು ಜಾಗೃತ ಜಾಥದ ಅಂಗವಾಗಿ ಕಾರವಾರದಲ್ಲಿ ಜರುಗಲಿರುವ ಅರಣ್ಯವಾಸಿಗಳ ಸಮಾವೇಶದಲ್ಲಿ ಜಿಲ್ಲಾಧಿಕಾರಿಗಳಿಗೆ ಅರಣ್ಯವಾಸಿಗಳಿಂದ 30 ಸಾವಿರಕ್ಕೂ ಅಧಿಕ ಆಕ್ಷೇಪಣಾ ಅರ್ಜಿ ಸಲ್ಲಿಕೆಯ ಸಾಧ್ಯತೆಗಳಿವೆ. ಭಟ್ಕಳ ತಾಲೂಕಿನ ಬೆಳಕೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಭಂಟಗೊAಡ ಮಹಾಸತಿ ದೇವಸ್ಥಾನದ ಆªರÀಣದಲ್ಲಿ ಈ ದಿನ ನಡೆದ ಅರಣ್ಯವಾಸಿಗಳ ಕಾನೂನು ಜಾಗೃತ ಜಾಥದಲ್ಲಿ ನ್ಯಾಯವಾದಿ ರವೀಂದ್ರ ನಾಯ್ಕ ಅವರು ಈ ವಿಷಯ ಪ್ರಕಟಿಸಿದ್ದಾರೆ. `ಅರಣ್ಯ ಹಕ್ಕು ಕಾಯಿದೆ ಅನುಷ್ಠಾನದ ವೈಪಲ್ಯದಿಂದ ನೈಜ ಅರಣ್ಯವಾಸಿಗಳು ಭೂಮಿ ಹಕ್ಕಿನಿಂದ ವಂಚಿತರಾಗಿದ್ದಾರೆ. ಅರಣ್ಯವಾಸಿಗಳಿಗೆ ಕಾನೂನು ಜ್ಞಾನ ವೃದ್ದಿಸುವ ಉದ್ದೇಶದಿಂದ ಕಾನೂನು ಜಾಗೃತ ಅಭಿಯಾನವನ್ನ ಸಂಘಟಿಸಲಾಗಿದೆ’ ಎಂದವರು ಹೇಳಿದ್ದಾರೆ. `ಸುಪ್ರೀಂ ಕೊರ್ಟ ನಿರ್ದೇಶನ ನೀರ್ಲಕ್ಷಿಸಿ ಅರಣ್ಯ ಹಕ್ಕು ಸಮಿತಿಯು ಅರಣ್ಯ ವಾಸಿಗಳ ಅರ್ಜಿ ತಿರಸ್ಕರಿಸುತ್ತಿರುವುದು ವಿಷಾಧಕರ. ಅರಣ್ಯ ಹಕ್ಕು ಕಾಯಿದೆಯ ಅರ್ಜಿ ಪುನರ್ ಪರಿಶೀಲಿಸುವ ಪೂರ್ವದಲ್ಲಿ ಅರಣ್ಯ ಇಲಾಖೆಯು ಅರಣ್ಯವಾಸಿಗಳ ಅರ್ಜಿ ಒಕ್ಕಲೆಬ್ಬಿಸುವ ಪ್ರಕ್ರಿಯೆ ಪ್ರಾರಂಭಿಸಿರುವುದು ಖಂಡನಾರ್ಹ’ ಎಂದು ಅವರು ಹೇಳಿದ್ದಾರೆ. ಈ ದಿನ ಭಟ್ಕಳ ತಾಲೂಕಿನ ಯಲ್ವೋಡಿಕವೂರು, ಮುಟ್ಟಳ್ಳಿ, ಕೋಣಾರ, ಹಾಡುವಳ್ಳಿ ಮತ್ತು ಮಾರುಕೇರಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕಾನೂನು ಜಾಗೃತ ಜಾಥ ಕಾರ್ಯಕ್ರಮ ನಡೆದಿದೆ. - [ಭೂ ಲೋಕದ ಯಾತ್ರೆ ಮುಗಿಸಿದ ಸಂಸದರ ಸಾರಥಿ](https://mobiletime.in/2025/11/the-charioteer-of-the-mp-who-has-completed-his-earthly-journey/): ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ಕಾರು ಚಾಲಕ ನಾಗರಾಜ ಹೆಗಡೆ ಅವರು ಮಂಗಳವಾರ ಸಾವನಪ್ಪಿದ್ದಾರೆ. ಅನಾರೋಗ್ಯಕ್ಕೆ ಒಳಗಾಗಿದ್ದ ಅವರು ಚಿಕಿತ್ಸೆಪಡೆದರೂ ಚೇತರಿಸಿಕೊಳ್ಳದೇ ಕೊನೆಯುಸಿರೆಳೆದಿದ್ದಾರೆ. ನಾಗರಾಜ ಹೆಗಡೆ ಅವರು ಶಿರಸಿಯ ನೇಗಾರ್ ಗ್ರಾಮದವರಾಗಿದ್ದರು. ಮೊದಲಿನಿಂದಲೂ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ಆಪ್ತರಾಗಿದ್ದ ಅವರು ಕಳೆದ ಐದು ವರ್ಷಗಳಿಂದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ವಾಹನ ಚಾಲಕರಾಗಿದ್ದರು. ಸಾದ್ಯವಾದಷ್ಟರ ಮಟ್ಟಿಗೆ ಸಂಸದರನ್ನು ಸಕಾಲದಲ್ಲಿ ಸರಿಯಾದ ಸ್ಥಳಕ್ಕೆ ತಲುಪಿಸುವಲ್ಲಿ ಅವರು ಕಾರಣರಾಗಿದ್ದು, ಅಪಘಾತರಹಿತ ಚಾಲನೆಯಿಂದ ಮೆಚ್ಚುಗೆಗಳಿಸಿದ್ದರು. ಕಳೆದ ಎರಡು ತಿಂಗಳ ಹಿಂದೆ ನಾಗರಾಜ ಹೆಗಡೆ ಅವರಿಗೆ ಅನಾರೋಗ್ಯ ಕಾಡಿತು. ಜಾಂಡಿಸ್ ರೋಗಕ್ಕೆ ಒಳಗಾದ ಅವರು ದೀರ್ಘಕಾಲದ ರಜೆಪಡೆದಿದ್ದರು. ಜೊತೆಗೆ ರೋಗಕ್ಕೆ ಚಿಕಿತ್ಸೆಯನ್ನುಪಡೆಯುತ್ತಿದ್ದರು. ಸೋಮವಾರ ರಾತ್ರಿಯವರೆಗೂ ಅವರು ಕುಟುಂಬದವರ ಜೊತೆ ಕಾಲ ಕಳೆದಿದ್ದರು. ಮಂಗಳವಾರ ನಸುಕಿನಲ್ಲಿ `ನಾಗರಾಜ ಹೆಗಡೆ ಇನ್ನಿಲ್ಲ’ ಎಂಬ ಆಘಾತದ ಸುದ್ದಿ ಕೇಳಿಸಿತು. ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ನಾಗರಾಜ ಹೆಗಡೆ ಅವರ ಮನೆಗೆ ಭೇಟಿ ನೀಡಿ ನಾಗರಾಜ ಹೆಗಡೆ ಅಂತಿಮ ದರ್ಶನಪಡೆದರು. ಜೊತೆಗೆ ಕುಟುಂಬದವರಿಗೆ ಸಾಂತ್ವಾನ ಹೇಳಿದರು. `ವೃತ್ತಿಪರ ಚಾಲಕನ ಜೊತೆ ಉತ್ತಮ ವ್ಯಕ್ತಿಯಾಗಿಯೂ ಜೊತೆಗಿದ್ದ ನಾಗರಾಜ ಹೆಗಡೆ ಅವರ ಸಾವು ನೋವು ತಂದಿದೆ. ಅವರ ಸೇವೆ, ಸೌಜನ್ಯ ಹಾಗೂ ಕರ್ತವ್ಯ ನಿಷ್ಠೆ ಸದಾ ಸ್ಮರಣೀಯ’ ಎಂದು ಹೇಳುತ್ತ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಭಾವುಕರಾದರು. - [ಸಾಧನೆ ತೋರಿದ ನಿಮಗೆಲ್ಲ ಸಾವಿರ ಸಾವಿರ ಚಪ್ಪಾಳೆ!](https://mobiletime.in/2025/11/a-thousand-applause-to-all-of-you-for-your-achievements/): ಬೆಂಗಳೂರಿನ ಎಂ ಎಸ್ ರಾಮಯ್ಯ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ರಾಜ್ಯಮಟ್ಟದ ಪದವಿ ಪೂರ್ವ ವಿದ್ಯಾರ್ಥಿಗಳ ಕ್ರೀಡಾಕೂಟದಲ್ಲಿ ಭೂಮಿಕಾ ಹೆಗಡೆ ಅವರು ಭಾಗವಹಿಸಿದ್ದು, ಚೆಸ್ ವಿಭಾಗದಲ್ಲಿ ಅವರು ರಾಷ್ಟ್ರ ಮಟ್ಟಕ್ಕೆ ಆಯ್ಕೆ ಆಗಿದ್ದಾರೆ. ಭೂಮಿಕಾ ಹೆಗಡೆ ಅವರು ಕುಮಟಾದ ಹೆಗಡೆಯ ನಾಗರಾಜ ಹೆಗಡೆ ಹಾಗೂ ರೇಣುಕಾ ಹೆಗಡೆ ದಂಪತಿಯ ಪುತ್ರಿ. ಕೆನರಾ ಎಕ್ಸಲೆನ್ಸ ಕಾಲೇಜು ಗೋರೆಯ ವಿದ್ಯಾರ್ಥಿನಿ. ಅವರು ಅಲ್ಲಿ ಪ್ರಥಮ ಪಿಯುಸಿ ವಿಜ್ಞಾನ ವಿಭಾಗದಲ್ಲಿ ಓದುತ್ತಿದ್ದಾರೆ. ಪಠ್ಯದ ಜೊತೆ ಪಠ್ಯೇತರ ಚಟುವಟಿಕೆಗಳಲ್ಲಿಯೂ ಉತ್ಸಾಹದಿಂದ ಭಾಗವಹಿಸುವ ಭೂಮಿಕಾ ಹೆಗಡೆ ಅವರು ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗುವ ಮೂಲಕ ಕಾಲೇಜಿನ ಕೀರ್ತಿಯನ್ನು ಉತ್ತುಂಗಕ್ಕೆ ಕರೆದೊಯ್ದಿದ್ದಾರೆ. ಭೂಮಿಕಾ ಹೆಗಡೆ ಅವರ ಸಾಧನೆಯ ಬಗ್ಗೆ ಕೆನರಾ ಎಕ್ಸಲೆನ್ಸ ಕಾಲೇಜು ಗೋರೆಯ ಸಂಸ್ಥಾಪಕ ಅಧ್ಯಕ್ಷ ಡಾ ಜಿ.ಜಿ ಹೆಗಡೆ ಅವರು ಸಂತಸವ್ಯಕ್ತಪಡಿಸಿದರು. ಆಡಳಿತ ಮಂಡಳಿಯ ವಿಶ್ವಸ್ಥರಾದ ಡಿ ಎನ್ ಭಟ್ಟ, ಪ್ರಾಚಾರ್ಯ ನಾಗರಾಜ್ ಹೆಗಡೆ, ಆಡಳಿತಾಧಿಕಾರಿಗಳಾದ ಶಶಾಂಕ ಶಾಸ್ತ್ರಿ, ಕ್ರೀಡಾ ಸಂಚಾಲಕರಾದ ಗಣಪತಿ ಭಟ್ಟ ಹಾಗೂ ಬೋಧಕ-ಬೋಧಕೇತರ ಸಿಬ್ಬಂದಿ ಭೂಮಿಕಾ ಹೆಗಡೆ ಅವರನ್ನು ಅಭಿನಂದಿಸಿದರು. `ರಾಷ್ಟ್ರ ಮಟ್ಟದ ಸ್ಪರ್ಧೆಯಲ್ಲಿಯೂ ಅವರು ಗೆದ್ದು ಬರಲಿ’ ಎಂದು ಎಲ್ಲರೂ ಹಾರೈಸಿದರು. - [2025ರ ನವೆಂಬರ್ 25ರ ದಿನ ಭವಿಷ್ಯ](https://mobiletime.in/2025/11/prediction-for-november-25-2025/): ಮೇಷ ರಾಶಿ: ಉದ್ಯೋಗದಲ್ಲಿ ಪ್ರಗತಿ ಕಾಣಲಿದೆ. ಆರ್ಥಿಕ ಸ್ಥಿತಿಯಲ್ಲಿ ಸುಧಾರಣೆ ಆಗಲಿದೆ. ಕುಟುಂಬ ಬದ್ಧತೆಗೆ ಸಮಯಕೊಡಿ. ಆರೋಗ್ಯ ಬಗ್ಗೆ ಗಮನ ಕೊಡಿ. ಧೈರ್ಯ ಮತ್ತು ಆತ್ಮವಿಶ್ವಾಸ ನಿಮ್ಮ ಗೆಲುವಿನ ದಾರಿಯಾಗಲಿದೆ. ವೃಷಭ ರಾಶಿ: ಅತಿಯಾಗಿ ಮಾತನಾಡುವುದು ಒಳ್ಳೆಯದಲ್ಲ. ಹಣಕಾಸಿನ ಬಗ್ಗೆ ಜಾಗರೂಕತೆ ಅಗತ್ಯ. ಹೊಸ ಯೋಜನೆಗಳಿಗೆ ಸಮಯ ಕೊಡಿ. ಕೆಲಸದಲ್ಲಿ ಸಹಕರಿಸುವವರ ನೆರವು ದೊರೆಯಬಹುದು. ಆರೋಗ್ಯ ತೊಂದರೆ ಕಾಡುವ ಲಕ್ಷಣವಿದೆ. ಮಿಥುನ ರಾಶಿ: ಸಹೋದ್ಯೋಗಿಗಳಿಂದ ಸಹಕಾರ ದೊರೆಯುವದು. ವೈಯಕ್ತಿಕ ಜೀವನದಲ್ಲಿ ಸಂತೋಷ ಹೆಚ್ಚಾಗಬಹುದು. ಹಣಕಾಸು ನಿಯಂತ್ರಣದಲ್ಲಿ ಕಾಳಜಿ ಬೇಕು. ಬೋಧನೆಯಂತಹ ಕೌಶಲ್ಯಗಳಲ್ಲಿ ನಿಮ್ಮ ಗಮನ ಇರಲಿ. ಕರ್ಕ ರಾಶಿ: ಕೆಲಸಗಳಲ್ಲಿ ಯಶಸ್ಸು ಸಿಗಲಿದೆ. ಆರೋಗ್ಯದ ಕಾಳಜಿ ಹೆಚ್ಚಲಿದೆ. ಕುಟುಂಬ ಸದಸ್ಯರೊಂದಿಗೆ ಹೊಂದಾಣಿಕೆ ಸಾಧ್ಯವಿದೆ. ವ್ಯಾಜ್ಯಗಳಲ್ಲಿ ಗೆಲುವು ಸಿಗಲಿದೆ. ಸಿಂಹ ರಾಶಿ: ವೈಯಕ್ತಿಕ ಗುರಿಗಳತ್ತ ಗಮನ ಹರಿಸಿ. ನಿಮ್ಮ ಸೃಜನಶೀಲತೆಯನ್ನು ಬಳಸಿ. ಕಾರ್ಯದಲ್ಲಿ ಮುಂದುವರಿಯಿರಿ. ಪರಿಶ್ರಮ ಫಲಿಸಲಿದೆ. ಆದಾಯಕ್ಕಿಂತ ಹೆಚ್ಚು ಖರ್ಚು ಮಾಡಬೇಡಿ. ಕನ್ಯಾ ರಾಶಿ: ತೀರ್ಮಾನಗಳಲ್ಲಿ ಜಾಗರೂಕತೆ ಅಗತ್ಯ. ಹೊಸ ಜ್ಞಾನ ಮತ್ತು ತರಗತಿಗಳಿಗೆ ಅವಕಾಶ. ಹಣಕಾಸು ಲಾಭ ಕಾಣಬಹುದು. ಕೆಲಸದಲ್ಲಿ ಒತ್ತಡ ತಗ್ಗಿಕೊಳ್ಳುತ್ತದೆ. ಆರೋಗ್ಯಕ್ಕೆ ಉತ್ತಮ ನಿಯಮಿತ ವ್ಯಾಯಾಮ ಬೇಕು. ತುಲಾ ರಾಶಿ: ವ್ಯವಸ್ಥಿತ ಕಾರ್ಯಸೂಚಿ ಅನುಸರಿಸಿ. ಹೊಸ ಮಿತ್ರರೊಂದಿಗೆ ಸಂಬAಧ ಬಲವಾಗಬಹುದು. ಹಣಕಾಸಿನಲ್ಲಿ ಸುಧಾರಣೆ ಕಾಣಲಿದೆ. ಮಾನಸಿಕ ಶಾಂತಿಗೆ ಸಮಯ ಕೊಡಿ. ಕುಟುಂಬ ಮತ್ತು ಸ್ನೇಹಿತರಿಗೆ ಸಮಯ ನೀಡಿ. ವೃಶ್ಚಿಕ ರಾಶಿ: ಕಾರ್ಯಕ್ಷೇತ್ರದಲ್ಲಿ ಹೊಸ ಅವಕಾಶಗಳು ಸಿಗಲಿದೆ. ಹಣಕಾಸು ನಿರ್ವಹಣೆಯಲ್ಲಿ ಜಾಗರೂಕರಾಗಿರಿ. ಆಪ್ತರಿಗೆ ಸಹಾಯ ಮಾಡಲು ಹೆದರಬೇಡಿ. ಆರೋಗ್ಯದಲ್ಲಿ ಶಕ್ತಿ ಹೆಚ್ಚಾಗುತ್ತದೆ. ಧ್ಯಾನ ಮತ್ತು ಹೆಚ್ಚುವರಿ ವಿಶ್ರಾಂತಿ ಅಗತ್ಯ. ಧನು ರಾಶಿ: ಸಾಹಸ ಮತ್ತು ಪ್ರಯಾಣ ಪ್ರಬಲವಾಗಲಿದೆ. ಹೊಸತನ್ನು ಕಲಿಯಲಾಗುತ್ತದೆ. ಬಂಡವಾಳ ಹೂಡಿಕೆಗೆ ಸೂಕ್ತ ಸಮಯ. ವ್ಯಾಯಾಮಕ್ಕೆ ಹೆಚ್ಚು ಸಮಯ ಕೊಡಿ. ಪ್ರಗತಿಗಾಗಿ ಧೈರ್ಯ ಮತ್ತು ಶ್ರಮ ಅಗತ್ಯ. ಮಕರ ರಾಶಿ: ಕಠಿಣ ಪರಿಶ್ರಮ ಫಲಿಸುತ್ತದೆ. ಅಧಿಕಾರಿಗಳು ಮತ್ತು ಹಿರಿಯರಿಂದ ಬೆಂಬಲ ಸಿಗಲಿದೆ. ಹಣಕಾಸಿನ ಲಾಭ ಆಗಲಿದೆ. ಹೊಸ ಯೋಜನೆಗಳು ನೆರವೇರಲಿದೆ. ಕುಂಭ ರಾಶಿ: ವೈಚಾರಿಕ ಶಕ್ತಿಯಲ್ಲಿ ವೃದ್ಧಿ ಆಗಲಿದೆ. ಸೃಜನಾತ್ಮಕ ಕೆಲಸಗಳಲ್ಲಿ ಯಶಸ್ಸು ಸಿಗಲಿದೆ. ಹಣಕಾಸು ಸ್ಥಿತಿಗೆ ಸಮರ್ಪಕ ವ್ಯವಸ್ಥೆ ಬೇಕು ತಾಂತ್ರಿಕ ವಿಷಯಗಳಲ್ಲಿ ಹೆಚ್ಚು ಗಮನ ಹರಿಸಿ. ಮೀನ ರಾಶಿ: ಭಾವನಾತ್ಮಕ ಸಮತೋಲನ ಅಗತ್ಯವಿದೆ. ಹಣಕಾಸಿನ ಬಗ್ಗೆ ಜಾಗರೂಕರಾಗಿರಿ. ಹೊಸ ಜ್ಞಾನಗಳಲ್ಲಿ ಆಸಕ್ತಿ ಹೆಚ್ಚಾಗಬಹುದು. ವಿಶ್ರಾಂತಿಗಾಗಿ ಧ್ಯಾನ ಮಾಡುವುದನ್ನು ಮರೆಯಬೇಡಿ. - [ಸರಣಿ ಅಪಘಾತ: ಆಸ್ಪತ್ರೆ ಸೇರಿದ ಅಡುಗೆ ಕಾರ್ಮಿಕ](https://mobiletime.in/2025/11/serial-accident-hospitalized-kitchen-worker/): ವೇಗವಾಗಿ ಬಂದ ಟೆಂಪೋ ಟ್ರಾವೆಲರ್ ಒಂದು ಬೈಕು ಹಾಗೂ ಕಾರಿಗೆ ಗುದ್ದಿದ ಪರಿಣಾಮ ಬೈಕಿನಲ್ಲಿ ಹೋಗುತ್ತಿದ್ದ ರಾಮಕೃಷ್ಣ ಹೆಗಡೆ ಅವರಿಗೆ ಗಂಭೀರ ಪ್ರಮಾಣದಲ್ಲಿ ಪೆಟ್ಟಾಗಿದೆ. ಅಂಕೋಲಾದ ಹಿಲ್ಲೂರಿನ ಹಿಲ್ಲೂರಬೈಲಿನಲ್ಲಿ ರಾಮಕೃಷ್ಣ ಗಣಪತಿ ಹೆಗಡೆ (24)ಅವರು ಕ್ಯಾಟರಿಂಗ್ ಮಾಡಿಕೊಂಡು ಬದುಕು ಕಟ್ಟಿಕೊಂಡಿದ್ದಾರೆ. ನವೆಂಬರ್ 23ರ ಸಂಜೆ ಅವರು ಹೊಸಕಂಬಿಯಿoದ ಮಾದನಗೇರಿ ಮಾರ್ಗವಾಗಿ ಬೈಕಿನಲ್ಲಿ ಹೋಗುತ್ತಿದ್ದರು. ಆಗ, ಹುಬ್ಬಳ್ಳಿಯ ಪ್ರಜ್ವಲಕುಮಾರ ದೇಸಾಯಿ ಅವರು ಅಂಕೋಲಾ ಹಿಲ್ಲೂರು ಮಾರ್ಗವಾಗಿ ಟೆಂಪೋ ಟ್ರಾವಲರ್ ಓಡಿಸಿಕೊಂಡು ಬಂದರು. ಬೈಕಿಗೆ ಗುದ್ದಿದ ಆ ಟೆಂಪೋ ಟ್ರಾವೆಲ್ಲರ್ ನಂತರ ಕಾರಿಗೆ ಗುದ್ದಿತು. ಬೈಕ್ ಓಡಿಸುತ್ತಿದ್ದ ರಾಮಕೃಷ್ಣ ಹೆಗಡೆ ಅವರಿಗೆ ಪೆಟ್ಟಾಯಿತು. ತಮ್ಮನಿಗೆ ಅಪಘಾತವಾದ ಸುದ್ದಿ ಕೇಳಿದ ಯಲ್ಲಾಪುರ ಆನಗೋಡಿನ ಯಲ್ಲಾರಗದ್ದೆ ಭಾಗ್ಯಲಕ್ಷ್ಮೀ ಮಹೇಶ ಹೆಗಡೆ ಅವರು ಆಸ್ಪತ್ರೆಗೆ ದೌಡಾಯಿಸಿದರು. ಸದ್ಯ ಕುಮಟಾದ ಹೈಟೆಕ್ ಆಸ್ಪತ್ರೆಯಲ್ಲಿ ರಾಮಕೃಷ್ಣ ಹೆಗಡೆ ಅವರು ಚಿಕಿತ್ಸೆಪಡೆಯುತ್ತಿದ್ದು, ಅಂಕೋಲಾ ಪೊಲೀಸ್ ಠಾಣೆಯಲ್ಲಿ ಭಾಗ್ಯಲಕ್ಷ್ಮೀ ಹೆಗಡೆ ಅವರು ಪ್ರಕರಣ ದಾಖಲಿಸಿದರು. - [ವಾಟ್ಸಪ್ ಮೂಲಕ ನಿಂದನೆ: ಪ್ರಕರಣ ದಾಖಲಿಸಲು ನ್ಯಾಯಾಲಯದ ಸೂಚನೆ](https://mobiletime.in/2025/11/abuse-via-whatsapp-court-orders-registration-of-case/): ವಾಟ್ಸಪ್ ಮೂಲಕ ನಿಂದಿಸಿದ ವ್ಯಕ್ತಿ ವಿರುದ್ಧ ಪೊಲೀಸ್ ಪ್ರಕರಣ ದಾಖಲಿಸುವಂತೆ ನ್ಯಾಯಾಲಯ ಸೂಚಿಸಿದೆ. ಈ ಹಿನ್ನಲೆ ಜಯಂತ ಮೊಗೇರ ಅವರಿಗೆ ನಿಂದಿಸಿದ ವೆಂಕಟ್ರಮಣ ಮೊಗೇರ್ ಅವರ ವಿರುದ್ಧ ಕಾನೂನು ಕ್ರಮವಾಗಿದೆ. ಮುರುಡೇಶ್ವರದ ಬೈಲೂರು ತೊದ್ದಳ್ಳಿಯ ಜಯಂತ ಮೊಗೇರ್ ಅವರು `ಶ್ರೀ ವೀರಮಾಸ್ತಿ ಯುವಕ ಸಂಘ ತೊದಳ್ಳಿ’ ಎಂಬ ವಾಟ್ಸಪ್ ಗುಂಪಿನಲ್ಲಿ ಸಾಮಾಜಿಕ ಸಮಸ್ಯೆಯೊಂದರ ಬಗ್ಗೆ ಧ್ವನಿ ಎತ್ತಿದ್ದರು. ದೋಣಿಗಳ ಹಿಂದೆ ಕುಳಿತು ಅನೈತಿಕ ಚಟುವಟಿಕೆ ನಡೆಸುವವರ ಬಗ್ಗೆ ಮಾತನಾಡಿದ ಜಯಂತ ನಾಗಪ್ಪ ಮೊಗೇರ ಅವರನ್ನು ವೆಂಕಟ್ರಮಣ ಮಂಜುನಾಥ ಮೊಗೇರ್ ಅವರು ಅದೇ ಗುಂಪಿನಲ್ಲಿ ನಿಂದಿಸಿದ್ದರು. ಇದೇ ವಿಷಯ ತಾರಕ್ಕೇರಿ ಪೊಲೀಸ್ ಠಾಣೆಯ ಮೆಟ್ಟಿಲೇರಿತ್ತು. `ಕಡಲತೀರದಲ್ಲಿ ಬಳಕೆಯಾಗದಿರುವ ದೋಣಿ ಹಾಗೂ ಬೇರೆ ಊರಿನ ದೋಣಿಗಳಲ್ಲಿ ಸರಾಯಿ ಬಾಟಲಿಗಳಿವೆ. ದೋಣಿಗಳ ಮರೆಯಲ್ಲಿ ಕುಳಿತು ಪ್ರವಾಸಿಗರು ಮದ್ಯ ವ್ಯಸನದಲ್ಲಿ ತೊಡಗುತ್ತಿದ್ದು, ಹಾಳು ಬಿಟ್ಟಿರುವ ದೋಣಿ ಹಾಗೂ ಪರ ಊರಿನ ದೋಣಿ ಖುಲ್ಲಾ ಪಡಿಸಿದರೆ ಒಳಿತು’ ಎಂದು ಜಯಂತ ಮೊಗೇರ್ ಅವರು ಹೇಳಿದನ್ನು ತೊದಳ್ಳಿ ಕಲ್ಯಾಣಿಮನೆಯ ವೆಂಕಟ್ರಮಣ ಮೊಗೇರ್ ಅವರು ಸಹಿಸಿರಲಿಲ್ಲ. ತಮ್ಮನ್ನು ನಿಂದಿಸಿದವರ ವಿರುದ್ಧ ಕ್ರಮಕ್ಕಾಗಿ ಜಯಂತ ಮೊಗೇರ್ ಅವರು ನ್ಯಾಯಾಲಯದ ಮೊರೆ ಹೋಗಿದ್ದರು. ಪ್ರಕರಣ ಗಮನಿಸಿದ ನ್ಯಾಯಾಲಯ ವೆಂಕಟ್ರಮಣ ಮಂಜುನಾಥ ಮೊಗೇರ್ ವಿರುದ್ಧ ಕ್ರಮಕ್ಕೆ ಸೂಚಿಸಿದ್ದು, ಮುರುಡೇಶ್ವರ ಪೊಲೀಸರು ಪ್ರಕರಣ ದಾಖಲಿಸಿದರು. - [ಈ ಹೋರಾಟ ರೋಗದ ವಿರುದ್ಧವೇ ಹೊರತು ರೋಗಿ ವಿರುದ್ಧವಲ್ಲ!](https://mobiletime.in/2025/11/this-fight-is-against-the-disease-not-against-the-patient/): ಮೂರು ತಿಂಗಳ ಅವಧಿಯಲ್ಲಿ ಉತ್ತರ ಕನ್ನಡ ಜಿಲ್ಲೆಯ ವೈದ್ಯರು ಮನೆ ಮನೆಗೆ ಭೇಟಿ ನೀಡಿ 4,09,448 ಆರೋಗ್ಯ ತಪಾಸಣೆ ನಡೆದಿದ್ದಾರೆ. ಈ ವೇಳೆ 1303 ಜನರಲ್ಲಿ ಹೊಸದಾಗಿ ವಿವಿಧ ರೋಗಗಳು ಕಾಣಿಸಿಕೊಂಡಿದೆ. ಜೊತೆಗೆ 8558 ಜನರಲ್ಲಿ ವಿವಿಧ ರೋಗವಿರುವ ಅನುಮಾನವಿದ್ದು, ಆ ಬಗ್ಗೆ ತಪಾಸಣೆ ಮುಂದುವರೆದಿದೆ. ಗೃಹ ಆರೋಗ್ಯ ಯೋಜನೆಯಡಿ ಉತ್ತರ ಕನ್ನಡ ಜಿಲ್ಲೆಯಲ್ಲಿ 2025ರ ಅಗಸ್ಟದಿಂದ ಅಕ್ಟೊಬರಿನವರೆಗೆ ಆರೋಗ್ಯ ತಪಾಸಣೆ ನಡೆದಿದ್ದು, ಅದರ ವರದಿ ಬಹಿರಂಗವಾಗಿದೆ. ಇದರಲ್ಲಿ 1,05,365 ಜನ ರಕ್ತದೊತ್ತಡ, 78084 ಮಧುಮೇಹ ಪರೀಕ್ಷೆಗೆ ಒಳಗಾಗಿದ್ದಾರೆ. ಅದರೊಂದಿಗೆ 3800 ಜನ ಮಾನಸಿಕ ಆರೋಗ್ಯ ಸಮಸ್ಯೆ, 7106 ಜನ ಅನಿಮಿಯಾ, 78042 ಜನ ಬಾಯಿ ಕ್ಯಾನ್ಸರ್, 29848 ಜನ ಸ್ತನ ಕ್ಯಾನ್ಸರ್, 8759 ಜನ ಗರ್ಭಕಂಠದ ಕ್ಯಾನ್ಸರ್, 21498 ಮಧುಮೇಹ ಕಾಲು, 19279 ಡಯಾಬೇಟಿಕ್ ರೆಟಿನೋಪತಿ ಪರೀಕ್ಷೆಗೆ ಒಳಗಾಗಿದ್ದಾರೆ. 16822 ಮಂದಿಗೆ ಉಚಿತವಾಗಿ ಸರ್ಕಾರದಿಂದ ಔಷಧವನ್ನು ವಿತರಿಸಲಾಗಿದೆ. ಸಾರ್ವಜನಿಕರ ಮನೆ ಬಾಗಿಲಿಗೆ ತೆರಳಿ ಸಾಂಕ್ರಾಮಿಕವಲ್ಲದ ರೋಗಗಳ ಕುರಿತಂತೆ ಉಚಿತವಾಗಿ ಆರೋಗ್ಯ ಪರೀಕ್ಷೆಗಳನ್ನು ನಡೆಸುವ ಈ ಯೋಜನೆಯಡಿ ಆರೋಗ್ಯ ಕಾರ್ಯಕರ್ತರ ಒಂದು ತಂಡ ದಿನಕ್ಕೆ 15 ಮನೆಗಳ ತಪಾಸಣೆ ನಡೆಸಲಿದೆ. ಪ್ರತಿ ಮಂಗಳವಾರ, ಬುಧವಾರ, ಶುಕ್ರವಾರ ಮತ್ತು ಶನಿವಾರ ಕಡ್ಡಾಯವಾಗಿ ಈ ತಂಡ ಮನೆ ಮನೆ ಭೇಟಿ ನೀಡುತ್ತಿದೆ. ರಕ್ತದೊತ್ತಡ ಸಮಸ್ಯೆ, ಮಧುಮೇಹ, ಬಾಯಿ, ಗರ್ಭಕಂಠ ಮತ್ತು ಸ್ತನ ಕ್ಯಾನ್ಸರ್, ನಿದ್ದೆಯಲ್ಲಿ ಉಸಿರುಗಟ್ಟುವಿಕೆ, ಮಾನಸಿಕ ಆರೋಗ್ಯದ ತಪಾಸಣೆ ನಡೆಸಲಿದ್ದು, ದೃಢಪಟ್ಟ ಪ್ರಕರಣಗಳಿಗೆ ಅಗತ್ಯ ಔಷÀಧ ವಿತರಣೆ, ಕೆಲವರಿಗೆ ಜೀವನ ಶೈಲಿ ಮಾರ್ಪಾಡಿಗೆ ಸಲಹೆ ನೀqಲಾಗುತ್ತಿದೆ. ಆರೈಕೆಯಲ್ಲಿರುವ ರೋಗಿಗಳಿಗೆ, ಅಂಗವಿಕಲರಿಗೆ ಹಾಗೂ ಹಿರಿಯ ನಾಗರಿಕರಿಗೆ ಔಷÀಧೋಪಚಾರ ಮತ್ತು ಉಚಿತವಾಗಿ ಮಾತ್ರೆಗಳ ವಿತರಣೆ ನಡೆದಿದೆ. ಆಶಾ ಕಾರ್ಯಕರ್ತೆಯರು ಸಹ ತಮ್ಮ ವ್ಯಾಪ್ತಿಯ ಮನೆಗೆ ತೆರಳಿ ಗೃಹ ಆರೋಗ್ಯ ಅಡಿಯಲ್ಲಿ ಬರುವ ವಿವಿಧ ಬಗೆಯ 14 ಕಾಯಿಲೆಗಳ ಬಗ್ಗೆ ಮಾಹಿತಿಯನ್ನು ನೀಡುತ್ತಿದ್ದಾರೆ. ಅವರು ಸಂಶಯಾಸ್ಪದ ಪ್ರಕರಣಗಳಿದ್ದಲ್ಲಿ ಹತ್ತಿರದ ಆಯುಷ್ಮಾನ್ ಆರೋಗ್ಯ ಕೇಂದ್ರಗಳಿಗೆ ತಪಾಸಣೆಗಾಗಿ ಕಳುಹಿಸುತ್ತಾರೆ. ಆಯುಷ್ಮಾನ್À ಆರೋಗ್ಯ ಕೇಂದ್ರದಲ್ಲಿ ಎಲ್ಲಾ 14 ಕಾಯಿಲೆಗಳ ತಪಾಸಣೆಯನ್ನು ಸಮುದಾಯ ಆರೋಗ್ಯಾಧಿಕಾರಿ ಹಾಗೂ ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿಗಳು ಮಾಡಿ ಹೆಚ್ಚಿನ ಚಿಕಿತ್ಸೆಯ ಅವಶ್ಯಕತೆ ಇದ್ದಲ್ಲಿ ಮೇಲ್ದರ್ಜೆಯ ಆಸ್ಪತ್ರೆಗಳಿಗೆ ನಿರ್ದೇಶನ ಮಾಡುತ್ತಾರೆ. `ರೋಗ ಬಂದ ಮೇಲೆ ಚಿಕಿತ್ಸೆ ಪಡೆಯುವುದಕ್ಕಿಂತ ರೋಗ ರೋಗ ಬಾರದಂತೆ ಮುನ್ನಚ್ಚರಿಕೆವಹಿಸುವುದು ಮುಖ್ಯ. ಗೃಹ ಆರೋಗ್ಯ ಯೋಜನೆಯ ಮೂಲಕ ರೋಗಗಳನ್ನು ಸಾಕಷ್ಟು ಮೊದಲೇ ಪತ್ತೆ ಹಚ್ಚಲು ಸಾಧ್ಯವಿದ್ದು, ಆರೋಗ್ಯ ಸಮಸ್ಯೆ ಜೊತೆ ಅಕಾಲಿಕ ಮರಣವನ್ನು ತಡೆಗೆ ಇದು ಸಹಕಾರಿ’ ಎಂದು ಜಿಲ್ಲಾ ರಾಷ್ಟಿಯ ಕಾರ್ಯಕ್ರಮ ಅಧಿಕಾರಿ ಡಾ ಶಂಕರ್ ರಾವ್ ಅವರು ಹೇಳಿದ್ದಾರೆ. - [ದೂರ ದೃಷ್ಠಿ ಚಿಕಿತ್ಸೆಗೆ ಒಳಗಾದ ವಿಪ ಸದಸ್ಯ!](https://mobiletime.in/2025/11/a-member-of-the-vipa-family-who-underwent-farsightedness-treatment/): ದೂರ ದೃಷ್ಠಿಯ ವಿಚಾರಧಾರೆಗಳನ್ನು ಹೊಂದಿರುವ ವಿಧಾನ ಪರಿಷತ್ ಸದಸ್ಯ ಶಾಂತರಾಮ ಸಿದ್ದಿ ಅವರು ಸೋಮವಾರ ತಮ್ಮ `ದೂರದ ದೃಷ್ಠಿ’ ತಪಾಸಣೆಗೆ ಒಳಗಾಗಿದ್ದಾರೆ. ಕಣ್ಣು ಆರೋಗ್ಯದ ಬಗ್ಗೆ ವೈದ್ಯರು ಶಾಸಕರಿಗೆ ಮಾಹಿತಿ ನೀಡಿದ್ದಾರೆ. ಗುಡ್ಡಗಾಡು ಜನರಿಗೆ ಸೇವೆ ಒದಗಿಸುವುದಕ್ಕಾಗಿ ಶಿರಸಿಯ ಸ್ಕೋಡ್‌ವೆಸ್ ಸಂಸ್ಥೆ `ನೇತ್ರ ರಥ’ ಎಂಬ ಸಂಚಾರಿ ಆರೋಗ್ಯ ಸೇವೆ ಶುರು ಮಾಡಿದೆ. ಉತ್ತರ ಕನ್ನಡ ಜಿಲ್ಲೆಯ ಪ್ರಥಮ ಸಂಚಾರಿ ಕಣ್ಣಿನ ಆಸ್ಪತ್ರೆ ಇದಾಗಿದ್ದು, ಸೌರಶಕ್ತಿ ಬೆಂಬಲಿತ ಸೇವೆಗಳ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿದೆ. ಅತ್ಯಾಧುನಿಕ ಯಂತ್ರೋಪಕರಣಗಳಿAದ ಕೂಡಿದ ಹವಾ ನಿಯಂತ್ರಿತ ವಾಹನದಲ್ಲಿ ಕಣ್ಣಿನ ತಪಾಸಣೆ ನಡೆಸಿ, ಉಚಿತ ಕನ್ನಡಕ ಹಾಗೂ ಔಷಧಗಳ ವಿತರಣೆ ಮಾಡಲಾಗುತ್ತದೆ. ನುರಿತ ತಜ್ಞರಿಂದ ಚಿಕಿತ್ಸೆ ಕೊಡಲಾಗುತ್ತದೆ. ಈ ದಿನ ಶಿರಸಿಯ ಹುಲೆಕಲ್ ಭಾಗದಲ್ಲಿ ರಥ ಸಂಚಾರ ನಡೆದಿದ್ದು, ನೇತ್ರರಥ ವೀಕ್ಷಿಸಿದ ಶಾಂತರಾಮ ಸಿದ್ದಿ ಅವರು ಸ್ವತಃ ಪರೀಕ್ಷೆಗೆ ಒಳಗಾದರು. ಅದಾದ ನಂತರ ಮಾತನಾಡಿದ ಅವರು `ಜನರ ಅಂಧತ್ವ ನಿವಾರಣೆ ಮಾಡುವಲ್ಲಿ ನೇತ್ರರಥ ಪ್ರಮುಖ ಪಾತ್ರವಹಿಸಲಿದೆ. ದಟ್ಟ ಅರಣ್ಯ ಮತ್ತು ಗುಡ್ಡಗಾಡು ಪ್ರದೇಶದ ಜನರು ದೃಷ್ಟಿ ಸಂಬoಧಿತ ಸಮಸ್ಯೆಗಾಗಿ ಸಾವಿರಾರು ರೂಪಾಯಿ ಖರ್ಚು ಮಾಡಿಕೊಂಡು 30-40ಕಿಮೀ ಕ್ರಮಿಸಬೇಕಿದ್ದು, ಈ ರಥ ಜನರ ಸಮಸ್ಯೆ ದೂರ ಮಾಡಲಿದೆ’ ಎಂದರು. `ಪಂಚಾಯಿತಿ ವ್ಯಾಪ್ತಿಗೆ ತೆರಳಿ ಉತ್ತಮವಾಗಿ ಸೇವೆ ನೀಡುವ ಈ ಸೇವೆ ಗ್ರಾಮೀಣ ಪ್ರದೇಶದ ಜನರಿಗೆ ಅತ್ಯಂತ ಉಪಯುಕ್ತವಾಗುತ್ತದೆ’ ಎಂದರು. ಗುಜರಾತಿನ ದೇಸಾಯಿ ಫೌಂಡೇಶನ್ ಟ್ರಸ್ಟ್, ಬೆಂಗಳೂರಿನ ಆಧ್ಯನ್ ಚಾರಿಟೇಬಲ್ ಟ್ರಸ್ಟ್ ಮತ್ತು ಸ್ಕೊಡ್‌ವೆಸ್ ಸಂಸ್ಥೆಯ ಸಹಯೋಗದಲ್ಲಿ ವಿನೂತನವಾಗಿ ಸಂಚಾರಿ ಕಣ್ಣಿನ ಆಸ್ಪತ್ರೆ ಉದ್ಘಾಟಿಸಲಾಯಿತು. ಹುಲೇಕಲ್ ಗ್ರಾಮ ಪಂಚಾಯಿತಿ ಅಧ್ಯಕ್ಷ ಖಾಸೀಂ ಸಾಬ್, ದೇಸಾಯಿ ಫೌಂಡೇಶನ್ ಟ್ರಸ್ಟ್ ಅಭಿವೃದ್ಧಿ ವಿಭಾಗದ ನಿರ್ದೇಶಕ ಮನೋಜ ಪಾಂಡಾ, ಯೋಜನಾ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಜಗದೀಶ ಗೌಡ, ಆಧ್ಯನ್ ಚಾರಿಟೇಬಲ್ ಟ್ರಸ್ಟ್ನ ಮುಖ್ಯಸ್ಥರಾದ ಅಂಜನಾ ಕಾವೂರು ಮತ್ತು ನಯನ ಜ್ಯೋತಿ ಟ್ರಸ್ಟ್ನ ಸಂಸ್ಥಾಪಕ ಟ್ರಸ್ಟಿ ಜಯರಾಮನ್ ಅವರು ಕಾರ್ಯಕ್ರಮದಲ್ಲಿದ್ದರು. ಸ್ಕೊಡ್‌ವೆಸ್ ಸಂಸ್ಥೆಯ ಆಡಳಿತ ಮಂಡಳಿಯ ಉಪಾಧ್ಯಕ್ಷರಾದ ಕುಮಾರ ವಿ ಕೂರ್ಸೆ, ಕಾರ್ಯದರ್ಶಿ ಮತ್ತು ಮುಖ್ಯ ಹಣಕಾಸು ಮತ್ತು ಆಡಳಿತಾಧಿಕಾರಿ ಸರಸ್ವತಿ ಎನ್ ರವಿ, ಸಹ-ಕಾರ್ಯದರ್ಶಿ ಕೆ ಎನ್ ಹೊಸಮನಿ, ಕಾರ್ಯಕಾರಿ ಸದಸ್ಯರಾದ ದಯಾನಂದ ಅಗಾಸೆ, ಪ್ರತಿಭಾ ಭಟ್ ಹಾಗೂ ಹುಲೇಕಲ್ ಗ್ರಾಮ ಪಂಚಾಯಿತಿಯ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಯೋಗಿತಾ ಹೆಗಡೆ ಅವರು ಯೋಜನೆಯ ಮಹತ್ವದ ಬಗ್ಗೆ ಮಾತನಾಡಿದರು. ಸ್ಕೊಡ್‌ವೆಸ್ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ವೆಂಕಟೇಶ ನಾಯ್ಕ, ಕಾರ್ಯಕ್ರಮ ಅಧಿಕಾರಿ ನಾರಾಯಣ ಹೆಗಡೆ ಸಂಘಟಿಸಿದ್ದರು. - [ಭೂ ವ್ಯಾಜ್ಯ: ಕಬ್ಬಿಣದ ರಾಡಿನಿಂದ ಹಲ್ಲೆ](https://mobiletime.in/2025/11/land-dispute-attack-with-iron-rod/): ಭೂ ವ್ಯಾಜ್ಯದ ವಿಷಯವಾಗಿ ಐದು ಜನರ ಗುಂಪೊoದು ವ್ಯಕ್ತಿಯೊಬ್ಬರ ಮೇಲೆ ದಾಳಿ ನಡೆಸಿದೆ. ಈ ಗಲಾಟೆಯಲ್ಲಿ ವ್ಯಕ್ತಿಯೊಬ್ಬರಿಗೆ ಕಬ್ಬಿಣದ ರಾಡಿನಿಂದ ಹಲ್ಲೆ ನಡೆದಿದೆ. ಭಟ್ಕಳ ಭದ್ರಿಯಾ ಕಾಲೋನಿಯ ಚಾಲಕ ಇರ್ಫಾನ್ ಅಹ್ಮದ್ ಮೆಹಬೂಬ್ ಸಾಬ ಸಯ್ಯದ್ ಅವರ ಮೇಲೆ ಐವರು ಆಕ್ರಮಣ ನಡೆಸಿದ್ದಾರೆ. ನವೆಂಬರ್ 23ರ ಸಂಜೆ ಈ ಗಲಾಟೆ ನಡೆದಿದೆ. ಇರ್ಫಾನ್ ಅವರು ತಮ್ಮದೇ ಊರಿನ ತಿಮ್ಮಪ್ಪ ಕರಿಯಾ ಅವರ ಜೊತೆಗೂಡಿ ಕೆಲಸ ಮಾಡುವಾಗ ಅಲ್ಲಿಗೆ ಬಂದ ಐವರು ಗಲಾಟೆ ಶುರು ಮಾಡಿದ್ದಾರೆ. ಆ ಗಲಾಟೆ ಅತಿರೇಖಕ್ಕೆ ಹೋಗಿ, ಹೊಡೆದಾಟದ ಸ್ವರೂಪಪಡೆದಿದೆ. ಆಜಾದ್ ನಗರದ ಅಬ್ದುಲ್ ಬದಿ ಹುಸೇನ್ ಖತಿಬ್ ಆಗಮಿಸಿ `ಈ ಜಾಗ ನನ್ನದು’ ಎಂದು ಮೊದಲು ಹೇಳಿದ್ದಾರೆ. ಅದನ್ನು ಅಲ್ಲಗಳೆದಾಗ `ದಾಖಲೆ ತೋರಿಸಿ’ ಎಂದಿದ್ದಾರೆ. ತಿಮ್ಮಪ್ಪ ಕರಿಯಾ ಅವರು ದಾಖಲೆ ತೋರಿಸಿದಾಗ ಆಜಾದ್ ನಗರದ ಅರ್ಫಾದ್ ಅವರು ಆ `ದಾಖಲೆ ಯಾವುದು ಸರಿಯಿಲ್ಲ’ ಎಂದು ಹೇಳಿದ್ದಾರೆ. ಈ ವೇಳೆ ಇರ್ಫಾನ್ ಅವರು ಮದ್ಯ ಪ್ರವೇಶಿಸಿ `ತಿಮ್ಮಪ್ಪನಿಗೆ ಆರೋಗ್ಯ ಸರಿಯಿಲ್ಲ. ಗಲಾಟೆ ಮಾಡಬೇಡಿ’ ಎಂದಾಗ ಹೊಡೆದಾಟ ಶುರುವಾಗಿದೆ. ಅಬ್ದುಲ್ ಬದಿ ಹುಸೇನ್ ಖತಿಬ್ ಅವರು ಇರ್ಫಾನ್ ಅವರಿಗೆ ಕಬ್ಬಿಣದ ರಾಡಿನಲ್ಲಿ ಹೊಡೆದಿದ್ದಾರೆ. ಜೊತೆಗೆ ಕೆ ಎಚ್ ಬಿ ಕಾಲೋನಿಯ ಇರ್ಷಾದ್ ಮಯುದ್ದೀನ್ ಸಿದ್ದಿಕ್ ಜೊತೆ ಮತ್ತೆ ಮೂವರು ಹಿಡಿದು ಥಳಿಸಿದ್ದಾರೆ. ಅಲ್ಲಿದ್ದ ಸದ್ದಾಂ ಇನ್ನಿತರರು ಈ ದಾಳಿ ತಪ್ಪಿಸುವ ಪ್ರಯತ್ನ ಮಾಡಿದ್ದು, ನೊಂದ ಇರ್ಫಾನ್ ಭಟ್ಕಳ ಪೊಲೀಸರಿಗೆ ದೂರಿದ್ದಾರೆ. - [ದಂತ ವೈದ್ಯನಿಗೆ ಮಾನಸಿಕ ಖಿನ್ನತೆ: ಆತ್ಮಹತ್ಯೆ!](https://mobiletime.in/2025/11/mental-depression-for-dentist-suicide/): ದಂತವೈದ್ಯರಾಗಿ ಅನೇಕರ ಹಲ್ಲಿನ ಸಮಸ್ಯೆ ದೂರ ಮಾಡಿದ್ದ ರವಿ ಉಪಾಧ್ಯ ಅವರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಕುಮಟಾದ ಹೊಸಹೆರವಟ್ಟಾದ ವರದ ವಿಠ್ಠಲ ದೇವಸ್ಥಾನದ ಬಳಿ ರವಿ ವಿಜಯ ಉಪಾಧ್ಯ (46) ಅವರು ವಾಸವಾಗಿದ್ದರು. ಎಲ್ಲರ ಜೊತೆ ಚನ್ನಾಗಿಯೇ ಇದ್ದ ಅವರು ಕಳೆದ 10 ತಿಂಗಳಿನಿoದ ಮಂಕಾಗಿದ್ದರು. ಮಾನಸಿಕ ಖಿನ್ನತೆಗೆ ಒಳಗಾಗಿ ಶಿವಮೊಗ್ಗದ ಶ್ರೀಧರ ನರ್ಸಿಂಗ್ ಹೋಮಿನಲ್ಲಿ ಚಿಕಿತ್ಸೆಯನ್ನುಪಡೆದಿದ್ದರು. ಹಂತ ಹಂತವಾಗಿ ಚೇತರಿಸಿಕೊಳ್ಳುತ್ತಿದ್ದ ಅವರು ನವೆಂಬರ್ 23ರಂದು ದಿಢೀರ್ ಆಗಿ ದುಡುಕು ನಿರ್ಧಾರ ಮಾಡಿದರು. ಹೊಸಹೆರವಟ್ಟಾದ ವರದ ವಿಠ್ಠಲ ದೇವಾಲಯ ಬಳಿಯಿರುವ ತಮ್ಮ ಮನೆಯಲ್ಲಿ ಅವರು ಇಸ್ತ್ರಿ ಪೆಟ್ಟಿಗೆಯ ವೈಯರನ್ನು ಕುತ್ತಿಗೆಗೆ ಸುತ್ತಿಕೊಂಡು ನೇಣಿಗೆ ಶರಣಾದರು. ಮಲಗುವ ಕೋಣೆಯಲ್ಲಿ ಶವ ನೋಡಿದ ಕುಟುಂಬದವರು ಆಘಾತಕ್ಕೆ ಒಳಗಾದರು. ಎ ವಿ ಬಾಳಿಗಾ ಕಾಲೇಜಿನಲ್ಲಿ ಉಪನ್ಯಾಸಕಾರಿಗಿರುವ ಪ್ರಕಾಶ ರಾಮಕೃಷ್ಣ ಪಂಡಿತ ಅವರು ಭಾವನ ನಿಧನದ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದರು. ಪಿಸೈ ಮಂಜುನಾಥ ಗೌಡರ್ ಅವರು ಪ್ರಕರಣ ದಾಖಲಿಸಿದ್ದು, ತನಿಖೆ ಶುರು ಮಾಡಿದರು. - [ಮಹಿಳೆ ಮನೆಗೆ ಕನ್ನ!](https://mobiletime.in/2025/11/woman-steals-house/): ಪದ್ಮಾ ನಾಯ್ಕ ಅವರ ಮನೆ ಬೀಗ ಒಡೆದ ಕಳ್ಳರು ಅಲ್ಲಿದ್ದ ಬಂಗಾರದ ಒಡವೆ ಕದ್ದಿದ್ದಾರೆ. ಮನೆಯಲ್ಲಿದ್ದ ಹಣವನ್ನು ಅಪಹರಿಸಿದ್ದಾರೆ. ಭಟ್ಕಳದ ಜಾಲಿಯ ದೇವಿ ನಗರದಲ್ಲಿಣ ಸೀತಾರಾಮನ ಮನೆಯಲ್ಲಿ ಪದ್ಮಾ ಮಾದೇವ ನಾಯ್ಕ ಅವರು ವಾಸವಾಗಿದ್ದರು. ಕೂಲಿ ಕೆಲಸ ಮಾಡಿಕೊಂಡಿದ್ದ ಅವರು ಒಂದಷ್ಟು ಕಾಸು ಕೂಡಿಟ್ಟು ಅದರಲ್ಲಿ ಚಿನ್ನಾಭರಣ ಮಾಡಿಸಿಕೊಂಡಿದ್ದರು. ನವೆಂಬರ್ 22ರಂದು ಅವರು ಮನೆಯಲ್ಲಿರಲಿಲ್ಲ. ಮನೆಗೆ ಬೀಗ ಹಾಕಿದನ್ನು ನೋಡಿದ ಕಳ್ಳರು ಆ ಬೀಗ ಒಡೆದರು. ಮನೆಯ ಕಪಾಟು ಶೋಧಿಸಿದ ಕಳ್ಳರು ಅಲ್ಲಿದ್ದ ವಸ್ತುಗಗಳನ್ನು ಚಲ್ಲಾಪಿಲ್ಲಿ ಮಾಡಿದರು. ಅದಾದ ನಂತರ ಕಪಾಟಿನ ಒಳಗೆ ಕೈ ಹಾಕಿ 86 ಗ್ರಾಂ ಆಭರಣ, 14 ಗ್ರಾಂ ಬೆಳ್ಳಿ ಹಾಗೂ 10 ಸಾವಿರ ರೂ ಹಣ ಎಗರಿಸಿದರು. ಸರಿಸುಮಾರು 8.80 ಲಕ್ಷ ರೂ ನಷ್ಟ ಅನುಭವಿಸಿದ ಪದ್ಮಾ ನಾಯ್ಕ ಅವರು ಈ ಬಗ್ಗೆ ಪೊಲೀಸ್ ದೂರು ನೀಡಿದರು. ಪೊಲೀಸರು ಕಳ್ಳರ ಹುಡುಕಾಟ ಶುರು ಮಾಡಿದ್ದಾರೆ. ಶ್ವಾನದಳ ಹಾಗೂ ಬೆರಳಚ್ಚು ತಜ್ಞರು ಸ್ಥಳ ಭೇಟಿ ಮಾಡಿದ್ದಾರೆ. - [ಸರಾಯಿ ಮಾರಾಟಕ್ಕೂ ತಡೆವೊಡ್ಡಿದ ಕೇಣಿ ಬಂದರು!](https://mobiletime.in/2025/11/keni-port-also-blocked-the-sale-of-sarai/): ಜನ ವಿರೋಧದ ನಡುವೆಯೂ ಅಂಕೋಲಾದ ಕೇಣಿಯಲ್ಲಿ ವಾಣಿಜ್ಯ ಬಂದರು ನಿರ್ಮಾಣಕ್ಕೆ ಸಿದ್ಧತೆ ನಡೆಯುವುದನ್ನು ವಿರೋಧಿಸಿ ಹೋರಾಟಗಾರರು ನವೆಂಬರ್ 25ಕ್ಕೆ `ಅಂಕೋಲಾ ಬಂದ್’ ಕರೆ ನೀಡಿದ್ದಾರೆ. ಆ ದಿನ ವಿವಿಧ ವಾಣಿಜ್ಯ ಮಳಿಗೆಯವರು ಸ್ವಯಂ ಪ್ರೇರಿತವಾಗಿ ತಮ್ಮ ಮಳಿಗೆ ಬಂದ್ ಮಾಡುವ ಬಗ್ಗೆ ನಿರ್ಧರಿಸಿದ್ದು, ಸರಾಯಿ ಅಂಗಡಿಯನ್ನು ಮುಚ್ಚುವಂತೆ ಜಿಲ್ಲಾಧಿಕಾರಿ ಕೆ ಲಕ್ಷ್ಮೀಪ್ರಿಯಾ ಅವರು ಆದೇಶ ಹೊರಡಿಸಿದ್ದಾರೆ. ಕೇಣಿಯಲ್ಲಿ ನಿರ್ಮಿಸಲು ಉದ್ದೇಶಿಸಿರುವ ವಾಣಿಜ್ಯ ಬಂದರು ವಿರುದ್ಧ ಎಲ್ಲಡೆ ವ್ಯಾಪಕ ಆಕ್ರೋಶವ್ಯಕ್ತವಾಗುತ್ತಿದೆ. ಸಾಕಷ್ಟು ಶಾಂತಿಯುತ ಪ್ರತಿಭಟನೆಗಳು ಇಲ್ಲಿ ನಡೆದಿದೆ. ಅದರೊಂದಿಗೆ ಅಲ್ಲಿನ ಜನ ಕಳೆದ 10 ದಿನಗಳಿಂದ ಧರಣಿ ನಡೆಸುತ್ತಿದ್ದಾರೆ. ಅದರ ಮುಂದುವರೆದ ಭಾಗವಾಗಿ ನವೆಂಬರ್ 25ರಂದು `ಅಂಕೋಲಾ ಬಂದ್’ಗೆ ಕರೆ ನೀಡಲಾಗಿದೆ. ಈ ವೇಳೆ ಶಾಂತಿ-ಸುವ್ಯವಸ್ಥೆ ಕಾಪಾಡುವುದಕ್ಕಾಗಿ ಸರಾಯಿ ಅಂಗಡಿಗಳನ್ನು ಮುಚ್ಚುವಂತೆ ಜಿಲ್ಲಾಡಳಿತ ಆದೇಶ ಹೊರಡಿಸಿದೆ. ಕೇಣಿ ವಾಣಿಜ್ಯ ಬಂದರುವಿನಿAದ ಆಗುವ ಅನಾಹುತಗಳ ಬಗ್ಗೆ ಜನ ಸಿಡಿದೆದ್ದಿದ್ದಾರೆ. ಅಹವಾಲು ಸಭೆಯಲ್ಲಿ ಸಹ ಅನೇಕರು ಬಂದರು ವಿರೋಧಿಸಿದ್ದಾರೆ. ಅದಾಗಿಯೂ ಬಂದರು ನಿರ್ಮಾಣಕ್ಕೆ ಈವರೆಗೆ ತಡೆ ಬಿದ್ದಿಲ್ಲ. `ಯೋಜನೆ ರದ್ಧಾಗುವವರೆಗೂ ಹೋರಾಟ ನಿಲ್ಲಿಸುವುದಿಲ್ಲ’ ಎಂದು ಪ್ರತಿಭಟನಾಕಾರರು ಹೇಳುತ್ತಿದ್ದಾರೆ. `ಉತ್ತರ ಕನ್ನಡ ಉಳಿಸಿ’ ಎಂಬ ನಿಟ್ಟಿನಲ್ಲಿ ಆಂದೋಲನ ನಡೆಯುತ್ತಿದೆ. ಕೇಣಿ ಬಂದರು ವಿಷಯವಾಗಿ ಮೀನುಗಾರರು ನಿರಂತರ ಧರಣಿ ನಡೆಸುತ್ತಿದ್ದು, ಮುಖ್ಯವಾಗಿ ಮಹಿಳೆಯರು ತಮ್ಮ ಎಲ್ಲಾ ಕೆಲಸ ಬದಿಗೊತ್ತಿ ಈ ಯೋಜನೆಯನ್ನು ಪ್ರತಿಭಟಿಸುತ್ತಿದ್ದಾರೆ. ಕೇಣಿ ಬಂದರು ಯೋಜನೆಯಿಂದ ಆಗುವ ಪರಿಸರ ದುಷ್ಪರಿಣಾಮ, ಜೀವ ಸಂಕುಲ ನಾಶದ ಬಗ್ಗೆ ತಜ್ಞರು ಅರಿವು ಮೂಡಿಸಿದರೂ ಹೂಡಿಕೆ ಕಂಪನಿ ಆ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ಜನರಿಗೆ ಆಸೆ-ಆಮೀಷವೊಡ್ಡುವವರ ಸಂಖ್ಯೆ ಕಡಿಮೆ ಆಗಿಲ್ಲ. ಅದಾಗಿಯೂ ಅಂಕೋಲಾದ ಹೋರಾಟಗಾರರು ಇದಕ್ಕೆ ಬಗ್ಗಿಲ್ಲ. `ಉತ್ತರ ಕನ್ನಡ ಜಿಲ್ಲೆಯಲ್ಲಿ ಈಗಾಗಲೇ ಅನೇಕ ಯೋಜನೆಗಳು ಬಂದಿವೆ. ಅದರಿಂದ ಯಾವ ಅಭಿವೃದ್ಧಿಯೂ ನಡೆದಿಲ್ಲ. ಜನ ಪದೇ ಪದೇ ನಿರಾಶ್ರಿತರಾಗಿದ್ದು, ಬದುಕಿಗೆ ಮಾರಕವಾಗ ಕೇಣಿ ಬಂದರು ಯೋಜನೆಯೂ ನಮಗೆ ಬೇಡ’ ಎಂದು ಪ್ರತಿಭಟನಾಕಾರರು ಪಟ್ಟು ಹಿಡಿದಿದ್ದಾರೆ. ಇಷ್ಟು ದಿನ ಶಾಂತಿಯುತವಾಗಿ ನಡೆಯುತ್ತಿದ್ದ ಹೋರಾಟ ಇದೀಗ `ಬಂದ್ ಕರೆ’ಗೆ ಬಂದು ನಿಂತಿದೆ. `ತಮ್ಮ ಜೀವ ಹೋದರೂ ಬಂದರು ನಿರ್ಮಾಣಕ್ಕೆ ಬಿಡುವುದಿಲ್ಲ’ ಎನ್ನುವ ಮೀನುಗಾರರ ಸಂಖ್ಯೆಯೂ ಹೆಚ್ಚಾಗಿದೆ. ಹೀಗಾಗಿ ನವೆಂಬರ್ 25ರಂದು ಅಂಕೋಲಾದ ವಿವಿಧ ವಾಣಿಜ್ಯ ಮಳಿಗೆಯವರು ಸ್ವಯಂ ಪ್ರೇರಿತ ಬಂದ್ ಮಾಡಲು ನಿರ್ಧರಿಸಿದ್ದು, ಮದ್ಯದ ಅಂಗಡಿಗಳನ್ನು ಸರ್ಕಾರವೇ ಬಾಗಿಲು ಮುಚ್ಚಿಸುತ್ತಿದೆ. ಈ ದಿನ ಬೆಳಗ್ಗೆ 6 ಗಂಟೆಯಿAದ ಸಂಜೆ 4ಗಂಟೆಯವರೆಗೆ ಅಂಕೋಲಾ ಪಟ್ಟಣದಲ್ಲಿ ಮದ್ಯ ಮಾರಾಟ ಹಾಗೂ ಸಾಗಾಟಕ್ಕೆ ಜಿಲ್ಲಾಡಳಿತ ತಡೆ ಒಡ್ಡಿದೆ. - [ಮಾನವನಿಗೆ ನೋವು ಕೊಟ್ಟ ಮಾವಿನ ಮರ!](https://mobiletime.in/2025/11/the-mango-tree-that-caused-pain-to-humans/): ಸರ್ಕಾರಿ ಕಚೇರಿ ಬಳಿಯಿದ್ದ ಮಾವಿನ ಮರ ಕಟಾವು ವೇಳೆ ಸುರಕ್ಷತೆ ಬಗ್ಗೆ ಗಮನಹರಿಸಿದ ಶ್ರೀಧರ ಪಾಲೇಕರ್ ಅವರು ಗಂಭೀರ ಪ್ರಮಾಣದಲ್ಲಿ ಪೆಟ್ಟು ಮಾಡಿಕೊಂಡಿದ್ದಾರೆ. ಅವರ ಜೊತೆಯಿದ್ದ ಗಣಪತಿ ಸಿದ್ದಿ ಅವರಿಗೂ ಗಾಯವಾಗಿದೆ. ಯಲ್ಲಾಪುರ ಪಟ್ಟಣ ಪಂಚಾಯತ ಬಳಿ ಭಾರೀ ಗಾತ್ರದ ಮಾವಿನ ಮರವಿತ್ತು. ಆ ಮರವನ್ನು ಕಟಾವು ಮಾಡಲು ಅಲ್ಲಿನ ಅರಣ್ಯ ಇಲಾಖೆ ಸಿಬ್ಬಂದಿ ಯಲ್ಲಪ್ಪಾ ರಾಮಾ ಶಾಪುರಕರ್ ಅವರು ರವೀಂದ್ರ ನಗರದ ಶ್ರೀಧರ ಪ್ರಭಾಕರ ಪಾಲೇಕರ್ ಅವರಲ್ಲಿ ಹೇಳಿದ್ದರು. ಸದ್ಯ ಅಂಬೇಡ್ಕರ ನಗರದಲ್ಲಿ ವಾಸವಾಗಿರುವ ಶ್ರೀಧರ ಪಾಲೇಕರ್ ಅವರು ನವೆಂಬರ್ 23ರಂದು ಬಚನಳ್ಳಿಯ ಅಭಿಷೇಕ ಗಣಪತಿ ಸಿದ್ದಿ ಅವರ ಜೊತೆ ಸ್ಥಳಕ್ಕೆ ಹೋಗಿದ್ದರು. ಮರ ಕಟಾವು ಮಾಡಲು ಅವರಲ್ಲಿ ಸುರಕ್ಷತಾ ಸಾಮಗ್ರಿಗಳಿರಲಿಲ್ಲ. ಸರ್ಕಾರಿ ಸಿಬ್ಬಂದಿಯೂ ಅದನ್ನು ಪೂರೈಸಲಿಲ್ಲ. ಹೀಗಾಗಿ ಇದ್ದ ಸಾಮಗ್ರಿಗಳನ್ನು ಬಳಸಿಯೇ ಅವರಿಬ್ಬರು ಕೆಲಸ ಶುರು ಮಾಡಿದರು. ಮರ ಕಟಾವು ವೇಳೆ ಅವಘಡವೊಂದು ನಡೆದಿದ್ದು, ಅದರಲ್ಲಿ ಶ್ರೀಧರ ಪಾಲೇಕರ್ ಅವರ ಕಾಲಿಗೆ ಗಂಭೀರ ಪ್ರಮಾಣದಲ್ಲಿ ಪೆಟ್ಟಾಯಿತು. ಗಣಪತಿ ಸಿದ್ದಿ ಅವರ ಕಾಲಿಗೂ ಗಾಯವಾಯಿತು. ಶ್ರೀಧರ ಪಾಲೇಕರ್ ಅವರ ಪುತ್ರ ಕೃಷ್ಣ ಪಾಲೇಕರ್ ಅವರು ತಂದೆಯನ್ನು ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದರು. ಗಾಯ ನೋಡಿದ ವೈದ್ಯರು ಕಾರವಾರ ಜಿಲ್ಲಾಸ್ಪತ್ರೆಗೆ ಶಿಫಾರಸ್ಸು ಮಾಡಿದರು. ಅಲ್ಲಿಯೂ ನೋವು ಕಡಿಮೆ ಆಗದ ಕಾರಣ ಕುಟುಂಬದವರು ಶ್ರೀಧರ ಪಾಲೇಕರ್ ಅವರನ್ನು ಶಿರಸಿಯ ಶಿವಂ ಆಸ್ಪತ್ರೆಗೆ ದಾಖಲಿಸದರು. ಗಾಯಕ್ಕೆ ಚಿಕಿತ್ಸೆ ಕೊಡಿಸಲು ಕೃಷ್ಣ ಪಾಲೇಕರ್ ಅವರ ಬಳಿ ಹಣವಿರಲಿಲ್ಲ. ಕೆಲಸಕ್ಕೆ ನೇಮಿಸಿದವರು ಸಹ ದೊಡ್ಡ ಸಹಾಯ ಮಾಡಲಿಲ್ಲ. ಅದಾಗಿಯೂ, ಕೃಷ್ಣ ಪಾಲೇಕರ್ ಅವರು ತಂದೆಯನ್ನು ಆಸ್ಪತ್ರೆಗೆ ಸಾಗಿಸಿದ್ದು, ಚಿಕಿತ್ಸೆ ಕೊಡಿಸುತ್ತಿದ್ದಾರೆ. - [ಬೆದರಿಸಲು ವಿಷ ಕುಡಿದ: ಕೊನೆಯುಸಿರೆಳೆದ!](https://mobiletime.in/2025/11/the-subject-was-drunk-to-intimidate-he-died/): ಸರಾಯಿ ಕುಡಿಯಲು ಹಣ ಕೊಡದ ಕುಟುಂಬದವರನ್ನು ಹೆದರಿಸುವುದಕ್ಕಾಗಿ ಸತೀಶ ನಾಯ್ಕ ಅವರು ವಿಷ ಕುಡಿದಿದ್ದಾರೆ. ಹೆಂಡತಿ-ಮಕ್ಕಳನ್ನು ಬೆದರಿಸಲು ಕುಡಿದ ಕ್ರಿಮಿನಾಶಕ ಅವರ ಜೀವ ತೆಗೆದಿದೆ. ಸಿದ್ದಾಪುರದ ಸತೀಶ ರಾಮಾ ನಾಯ್ಕ ಅವರು ಕಳೆದ 15 ವರ್ಷಗಳಿಂದ ಸರಾಯಿ ಕುಡಿಯುತ್ತಿದ್ದರು. ಮೊದಲು ದುಡಿಮೆಗೆ ಹೋಗುತ್ತಿದ್ದ ಅವರು ದುಡಿತದ ಹಣವನ್ನು ಮದ್ಯ ವ್ಯಸನಕ್ಕೆ ಮೀಸಲಿಟ್ಟಿದ್ದರು. ಕೆಲಸ ಮಾಡಿದಾಗ ಸಿಕ್ಕಿದ ಹಣವನ್ನು ಅವರು ಮನೆಯವರಿಗೆ ಕೊಡುತ್ತಿರಲಿಲ್ಲ. ಅದಾದ ನಂತರ ತಮ್ಮ ವ್ಯಸನಕ್ಕಾಗಿ ಕುಟುಂಬದವರಲ್ಲಿಯೂ ಹಣ ಬೇಡಲು ಶುರು ಮಾಡಿದ್ದರು. ಮನೆಯಲ್ಲಿ ಕಾಸು ಕೊಡದೇ ಇದ್ದಾಗ ವಿಷ ಕುಡಿಯುವುದಾಗಿ ಸತೀಶ ನಾಯ್ಕ ಅವರು ಬೆದರಿಸುತ್ತಿದ್ದರು. ನವೆಂಬರ್ 22ರಂದು ಸತೀಶ್ ನಾಯ್ಕ ಅವರು ಸರಾಯಿ ಕುಡಿದು ಸಿಟ್ಟಿನಲ್ಲಿದ್ದರು. ಅದಾಗಿಯೂ ಹಣ ಕೊಡುವಂತೆ ಮನೆಯಲ್ಲಿ ಕೇಳಿದ್ದರು. ಹಣ ಕೊಡದ ಕಾರಣ ಅವರು ಗದ್ದೆಗೆ ಬರುವ ಹುಳಕ್ಕೆ ಹೊಡೆಯುವ ಔಷಧಿ ಸೇವಿಸಿದರು. ಅದಾದ ನಂತರ ಪತ್ನಿಯನ್ನು ಹೆದರಿಸಲು ಗಂಗೆ ನಾಯ್ಕ ಅವರ ಕಡೆ ಆ ವಿಷದ ಬಾಟಲಿಯನ್ನು ಅವರ ಕಡೆ ಎಸೆದರು. ತಂದೆ ವಿಷ ಕುಡಿದಿರುವುದನ್ನು ಅರಿತ ಅಶೋಕ ನಾಯ್ಕ ಅವರು ಆಂಬುಲೆನ್ಸ ಮೂಲಕ ಅವರನ್ನು ಆಸ್ಪತ್ರೆಗೆ ದಾಖಲಿಸಿದರು. ಆದರೆ, ನವೆಂಬರ್ 23ರಂದು ಅವರು ಸಾವನಪ್ಪಿದರು. - [ಬೈಕುಗಳ ನಡುವೆ ಡಿಕ್ಕಿ: ಸವಾರ ಸಾವು](https://mobiletime.in/2025/11/collision-between-bikes-rider-dies/): ಎರಡು ಬೈಕುಗಳ ನಡುವೆ ನಡೆದ ಮುಖಾಮುಖಿ ಡಿಕ್ಕಿಯಲ್ಲಿ ವಿನಾಯಕ ಗೌಡ ಎಂಬಾತರು ಸಾವನಪ್ಪಿದ್ದಾರೆ. ಮತ್ತೆ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಸಿದ್ದಾಪುರ ಮುಖ್ಯರಸ್ತೆಯ ಚೌಡಿಆಣೆ ಕ್ರಾಸ್ ಬಳಿ ಸೋಮವಾರ ಈ ಅಪಘಾತ ನಡೆದಿದೆ. ಅಪಘಾತಕ್ಕೆ ಒಳಗಾದ ಎರಡು ಬೈಕ್‌ಗಳು ಜಖಂ ಆಗಿದೆ. ಗಾಯಗೊಂಡ ಬೈಕ್ ಸವಾರರನ್ನು ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ಕೊಡಲಾಗುತ್ತಿದೆ. ಕೊಡಿಗದ್ದೆಯ ವಿನಾಯಕ ಗೌಡ ಅವರು ಮತ್ತೊಬ್ಬರ ಜೊತೆ ಬೈಕಿನಲ್ಲಿ ಸಂಚರಿಸುತ್ತಿದ್ದರು. ಆಗ ಎದುರಿನಿಂದ ಬಂದ ಬೈಕು ಡಿಕ್ಕಿ ಹೊಡೆದಿದೆ. ಆ ಅಪಘಾತದ ರಭಸಕ್ಕೆ ವಿನಾಯಕ ಗೌಡ ಅವರು ಅಲ್ಲಿಯೇ ಸಾವನಪ್ಪಿದ್ದಾರೆ. ಸುದ್ದಿ ತಿಳಿದು ಸಿದ್ದಾಪುರ ಪೊಲೀಸ್ ಠಾಣೆಯ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ತನಿಖೆ ಮುಂದುವರೆದಿದೆ. - [ಜಲ ಜೀವನ: ಫಲಾನುಭವಿಗಳಿಂದ ವಸೂಲಿ ಆರೋಪ](https://mobiletime.in/2025/11/water-life-accusations-of-extortion-from-beneficiaries/): ಜಲ ಜೀವನ ಯೋಜನೆ ಫಲಾನುಭವಿಗಳಿಂದ ಅಪರಿಚಿತರು ಶುಲ್ಕ ವಸೂಲಿ ಮಾಡುತ್ತಿರುವ ಆರೋಪ ಕೇಳಿ ಬಂದಿದೆ. ಇದರೊಂದಿಗೆ ಅಪರಿಚಿತರು ಆಧಾರ್ ಕಾರ್ಡನ್ನು ಸಹ ಒಟ್ಟುಗೂಡಿಸುತ್ತಿದ್ದಾರೆ. ಈ ಬಗ್ಗೆ ಜಿಲ್ಲಾ ಪಂಚಾಯತಗೆ ದೂರು ನೀಡುವುದಾಗಿ ಕುಮಟಾದ ಜನಸಾಮಾನ್ಯರ ಸಮಾಜ ಕಲ್ಯಾಣ ಕೇಂದ್ರವರು ಹೇಳಿದ್ದಾರೆ. `ಜಲ ಜೀವನ ಯೋಜನೆ ಪಲಾನುಭವಿಗಳನ್ನು ಭೇಟಿ ಮಾಡಿದ ಕೆಲವರು ಅವರ ಆಧಾರ್ ಕಾರ್ಡಪಡೆಯುತ್ತಿದ್ದಾರೆ. ಜೊತೆಗೆ ಹಣಕ್ಕೆ ಬೇಡಿಕೆಯಿಡುತ್ತಿದ್ದಾರೆ’ ಎಂದು ಕೇಂದ್ರದ ಅಧ್ಯಕ್ಷ ಆಗ್ನೇಲ್ ರೋಡಿಗ್ರಸ್ ದೂರಿದ್ದಾರೆ. `ಆಂದ್ರ ಪ್ರದೇಶದ ಕಾರ್ಮಿಕರು ಜಲ ಜೀವನ ಕೆಲಸದಲ್ಲಿ ತೊಡಗಿದ್ದು, ಅವರೇ ಆಧಾರ್ ಕಾರ್ಡ ಕೇಳುತ್ತಿದ್ದಾರೆ. ಜೊತೆಗೆ ಪ್ರತಿ ಫಲಾನುಭವಿಗಳಿಂದ ಹಣಕ್ಕೆ ಬೇಡಿಕೆಯಿಡುತ್ತಿದ್ದಾರೆ. ಈ ಬಗ್ಗೆ ಸಾಕಷ್ಟು ದೂರು ಬಂದಿದೆ’ ಎಂದವರು ವಿವರಿಸಿದರು. `ಆಧಾರ್ ಕಾರ್ಡಪಡೆಯುವುದು ನಿಯಮಬಾಹಿರ. ಆ ಆಧಾರ್ ಕಾರ್ಡ ದುರುಪಯೋಗವಾಗುವ ಸಾಧ್ಯತೆಗಳು ಹೆಚ್ಚಿವೆ’ ಎಂದು ಹೇಳಿದರು. `ಅಧಿಕಾರಿಗಳನ್ನು ಪ್ರಶ್ನಿಸಿದರೆ ಹಣವೂ ಕೊಡಬೇಕಾಗಿಲ್ಲ. ಆಧಾರ್ ಕಾರ್ಡ ಸಹ ನೀಡುವ ಹಾಗಿಲ್ಲ ಎನ್ನುತ್ತಾರೆ. ಹೀಗಿದ್ದರೂ ಆಧಾರ್ ಕಾರ್ಡಪಡೆಯುವುದ ಏಕೆ? ಎಂದವರು ಪ್ರಶ್ನಿಸಿದರು. `ಈ ಬಗ್ಗೆ ವಿವರವಾದ ತನಿಖೆ ನಡೆಯಬೇಕು’ ಎಂದು ಸಾಮಾಜಿಕ ಕಾರ್ಯಕರ್ತ ಸುಧಾಕರ್ ನಾಯ್ಕ, ತ್ಯಾಗರಾಜ್ ಮುಕ್ರಿ, ಮುನ್ನ ಸಾಬ್ ಆಗ್ರಹಿಸಿದರು. - [2025ರ ನವೆಂಬರ್ 24ರ ದಿನ ಭವಿಷ್ಯ](https://mobiletime.in/2025/11/prediction-for-november-24-2025/): ಮೇಷ ರಾಶಿ: ಬೆಳಗಿನ ವೇಳೆಯಲ್ಲಿ ನಿಮ್ಮ ಉತ್ಸಾಹ ಹಾಗೂ ಆತ್ಮವಿಶ್ವಾಸ ಹೆಚ್ಚಾಗಲಿದೆ. ಹೊಸ ಕೆಲಸಗಳಿಗೆ ಶಕ್ತಿ ಸಿಗುವ ಸೂಚನೆ ಸಿಗಲಿದೆ. ಕಚೇರಿ ಅಥವಾ ವ್ಯವಹಾರದಲ್ಲಿ ನಾಯಕತ್ವ ತೋರಿಸುವಿರಿ. ಹಣಕಾಸಿನಲ್ಲಿ ಚಿಕ್ಕ ನಿರ್ಧಾರವೂ ಮುಂದಿನ ದಿನಗಳಲ್ಲಿ ಪ್ರಭಾವ ಬೀರುವುದರಿಂದ ಜಾಗ್ರತೆ ಅಗತ್ಯ.ಆತುರದಲ್ಲಿ ತೆಗೆದುಕೊಂಡ ಮಾತು ಕಲಹಕ್ಕೆ ಕಾರಣವಾಗುವ ಸಾಧ್ಯತೆಯಿದೆ. ತಲೆ ಹಾಗೂ ಕಣ್ಣಿಗೆ ವಿಶ್ರಾಂತಿ ಕೊಡುವುದು ಮುಖ್ಯ. ವೃಷಭ ರಾಶಿ: ನಿಮ್ಮ ಕೆಲಸ ನಿಧಾನವಾದರೂ ಸ್ಥಿರ ಪ್ರಗತಿ ಕಾಣುವ ದಿನ. ತಾಳ್ಮೆ ನಿಮ್ಮ ಬಲವಾಗಲಿದೆ. ಆಸ್ತಿ, ಮನೆಯಲ್ಲಿ ಬದಲಾವಣೆ ಸಾಧ್ಯತೆಯಿದೆ. ರಿಪೇರಿ ವಿಷಯಗಳಲ್ಲಿ ಉಪಯುಕ್ತ ಮಾಹಿತಿ ಸಿಗುವ ಸಾಧ್ಯತೆ. ವ್ಯವಹಾರದಲ್ಲಿ ಹಳೆಯ ಗ್ರಾಹಕರಿಂದಲೇ ಹೊಸ ಅವಕಾಶಗಳು ಬರುತ್ತವೆ. ಖರ್ಚು ಮಾಡುವಾಗ ಆಕಸ್ಮಿಕ ಖರೀದಿ ತಪ್ಪಿಸುವ ಪ್ರಯತ್ನ ಮಾಡಿದರೆ ಮುಂದಿನ ಒತ್ತಡ ಕಡಿಮೆಯಾಗುತ್ತದೆ. ಸಾಂತ್ವನ ಕೊಡುವ ಸಂಗೀತ, ಧ್ಯಾನದಿಂದ ಮನಸ್ಸಿಗೆ ನೆಮ್ಮದಿ ಸಿಗಲಿದೆ. ಮಿಥುನ ರಾಶಿ: ಸಂವಹನ ನಿಮ್ಮ ಶಕ್ತಿಯಿಂದ ದ್ವಿಗುಣ ಲಾಭ ಸಿಗಲಿದೆ. ಓದು, ಪರೀಕ್ಷಾ ತಯಾರಿ, ಕೌಶಲಾಭಿವೃದ್ಧಿಗೆ ಈ ದಿನ ಮಾಡಿದ ಅಭ್ಯಾಸ ಮುಂದಿನ ತಿಂಗಳು ಫಲ ತರುತ್ತದೆ. ಒಮ್ಮೆ ಒಪ್ಪಿಕೊಂಡ ಕೆಲಸವನ್ನು ಮಧ್ಯದಲ್ಲಿ ಬಿಟ್ಟು ಬೇಸರಿಸದೇ ಪೂರ್ಣಗೊಳಿಸಲು ಯತ್ನಿಸಬೇಕು. ಚುಟುಕು ಪ್ರಯಾಣ ಅಥವಾ ಮನೆ ಬಳಿಯ ನಡಿಗೆ ದೇಹ-ಮನಸ್ಸಿಗೆ ತಾಜಾತನ ನೀಡಲಿದೆ. ಕರ್ಕ ರಾಶಿ: ಕುಟುಂಬಕ್ಕೆ ಸಂಬoಧಿಸಿದ ಕೆಲಸಗಳಲ್ಲಿ ನಿಮ್ಮ ಕೌಶಲ್ಯ ಹೆಚ್ಚಾಗಲಿದೆ. ವಿದ್ಯುತ್ ಬಿಲ್, ಆಹಾರ ಸಾಮಗ್ರಿ ಖರೀದಿ ಇವುಗಳಲ್ಲಿ ಸಮತೋಲನ ಕಾಪಾಡುವುದು ಮುಖ್ಯ. ಕಛೇರಿಯಲ್ಲಿ ಭಾವನಾತ್ಮಕ ನಿರ್ಧಾರ ತಗೊಳ್ಳದೆ. ಹಳೆಯ ಸ್ನೇಹಿತರಿಂದ ಅನಿರೀಕ್ಷಿತ ಸಂದೇಶ ಅಥವಾ ಕರೆ ಬಂದು ಮನಸ್ಸು ಹಗುರವಾಗಲಿದೆ. ಆರೋಗ್ಯದ ದೃಷ್ಟಿಯಿಂದ ಜೀರ್ಣಕ್ರಿಯೆಗೆ ಹಿತವಾದ ಆಹಾರ ಆಯ್ಕೆ ಮಾಡಿ. ಸಿಂಹ ರಾಶಿ: ಆತ್ಮವಿಶ್ವಾಸ ಮತ್ತು ವೇದಿಕೆ ಭಯ ಇಲ್ಲದ ಗುಣದಿಂದ ನೀವು ನಾಯಕರಾಗುವಿರಿ. ಸಭೆ-ಸಮಾರಂಭದಲ್ಲಿ ನಿಮ್ಮ ವ್ಯಕ್ತಿತ್ವ ಗಮನಸೆಳೆಯಲಿದೆ. ಹಣಕಾಸಿನಲ್ಲಿ ಸ್ವಲ್ಪ ಸಾಹಸ ಮಾಡ್ಬೇಕೆನ್ನುವ ಮನೋಭಾವ ಬರುತ್ತದೆ. ಆದರೆ ನಿಯಂತ್ರಣ ಅಗತ್ಯ. ಅಹಂಕಾರ ತೋರಿಸುವ ಮಾತು ತಪ್ಪಿಸಿದರೆ ಸಹೋದ್ಯೋಗಿಗಳ ಸಹಕಾ ಸಿಗುತ್ತದೆ. ಶರೀರಕ್ಕೆ ತಾಪಮಾನ ಹೆಚ್ಚಾಗದಂತೆ ನೀರಿನ ಸೇವನೆ ಮತ್ತು ವಿಶ್ರಾಂತಿ ಕಾಪಾಡಿ. ಕನ್ಯಾ ರಾಶಿ: ಈ ದಿನ ನಿಮ್ಮ ಯೋಜನೆ, ಲೆಕ್ಕಾಚಾರಗಳಿಗೆ ಅನುಕೂಲಕರ ದಿನವಾಗಿದೆ. ವಿಳಂಬವಾಗಿದ್ದ ಕಾನೂನು ಕೆಲಸಗಳು ವೇಗ ಪಡೆಯಲಿದೆ. ಕಠಿಣ ಪರಿಶ್ರಮಕ್ಕೆ ತಕ್ಷಣ ಪ್ರಶಂಸೆ ಸಿಗದಿದ್ದರೂ, ಮುಂದೆಯಾದರೂ ಗುರುತಿನ ರೂಪದಲ್ಲಿ ಬರುತ್ತದೆ. ಆರೋಗ್ಯದ ವಿಷಯದಲ್ಲಿ ಹೊಟ್ಟೆ, ಚರ್ಮದ ಸಮಸ್ಯೆಗಳಿಗೆ ವೈದ್ಯರನ್ನು ಭೇಟಿ ಮಾಡಿಕೂಡ ನಿರ್ಲಕ್ಷ್ಯ ಬೇಡ. ತುಲಾ ರಾಶಿ: ಆರೋಗ್ಯ ಸಮತೋಲನ ಕಾಯ್ದುಕೊಳ್ಳುವುದಕ್ಕೆ ಪ್ರಯತ್ನಿಸಬೇಕು. ವ್ಯವಹಾರ ಪಾಲುದಾರ, ಕೈಜೋಡಿಸಿದ ವ್ಯಕ್ತಿಯ ಜೊತೆ ನೇರವಾಗಿ ಮಾತನಾಡಿ ಅನುಮಾನ ದೂರ ಮಾಡಿಕೊಳ್ಳಿ. ಹೊಸ ಹೂಡಿಕೆಗೆ ಮುಂಚೆ ಸಲಹೆಪಡೆಯುವುದು ಸೂಕ್ತ. ಕಾನೂನು, ಒಪ್ಪಂದ, ವ್ಯವಹಾರಿಕ ದಾಖಲೆಗಳನ್ನು ಸರಿಯಾಗಿ ಗಮನಿಸಬೇಕು. ಯೋಗ, ಲಘು ವ್ಯಾಯಾಮ, ಹಸಿರು ಪರಿಸರದಲ್ಲಿ ಸ್ವಲ್ಪ ಸಮಯ ಕಳೆಯುವುದು ಆರಾಮದಾಯಕ. ವೃಶ್ಚಿಕ ರಾಶಿ: ಈ ದಿನ ನಿಮ್ಮ ಅಭಿಪ್ರಾಯಗಳು ಬಲವಾಗಿರುತ್ತದೆ. ರಹಸ್ಯ ಯೋಜನೆಗಳು, ಹೊಸ ಪ್ರಾಜೆಕ್ಟ್ಗಳ ಬಗ್ಗೆ ಎಲ್ಲರಲ್ಲಿಯೂ ಹೇಳಬೇಡಿ. ಹಣಕ್ಕೆ ಸಂಬoಧಿಸಿದ ಒಬ್ಬರ ಮೇಲೆ ಸಂಪೂರ್ಣ ಅವಲಂಬನೆ ಕಡಿಮೆ ಮಾಡಿ. ಕೋಪ, ಅಸಹ್ಯ ಭಾವ ಬಂದಾಗ ತಕ್ಷಣ ಪ್ರತಿಕ್ರಿಯೆ ಕೊಡುವುದಕ್ಕಿಂತ ಸಮಯ ತೆಗೆದುಕೊಳ್ಳಿ. ಆರೋಗ್ಯದ ದೃಷ್ಟಿಯಿಂದ ನೀರಿನ ಸೇವನೆ, ಸೌಮ್ಯ ಆಹಾರ, ನಿದ್ರೆಗೆ ಆದ್ಯತೆ ಕೊಡಿ. ಪುಸ್ತಕ ಓದುವುದು ಪ್ರಯೋಜನಕಾರಿ. ಧನು ರಾಶಿ: ದೂರದ ಯೋಜನೆಗಳ ಬಗ್ಗೆ ಸ್ಪಷ್ಟ ಚಿತ್ರಣ ಸಿಗಲಿದೆ. ವಿದೇಶ, ಉನ್ನತ ಶಿಕ್ಷಣ, ಆನ್‌ಲೈನ್ ಕೋರ್ಸ್ ಮೊದಲಾದ ವಿಚಾರದಲ್ಲಿ ಒಳ್ಳೆಯ ಸುದ್ದಿ ಕೇಳುವಿರಿ. ನಿಮ್ಮ ಉದ್ಯೋಗದಲ್ಲಿನ ಸಾಧನೆ ಗಮನಸೆಳೆಯಲಿದೆ. ಜ್ಞಾನ ಹಂಚಿಕೊಳ್ಳುವ ಸಂಭಾಷಣೆ ಉತ್ಸಾಹ ತುಂಬುತ್ತದೆ. ಮಕರ ರಾಶಿ: ನಿಮ್ಮ ಜವಾಬ್ದಾರಿ ಹೆಚ್ಚಾಗಲಿದೆ. ಕೆಲಸದಲ್ಲೂ ನಿಮ್ಮ ಮೇಲೆ ಭರವಸೆ ಮೂಡಲಿದೆ. ಆಸ್ತಿ, ಕರಾರು, ಬ್ಯಾಂಕ್, ಸಾಲ ಕೆಲಸದಲ್ಲಿ ಸ್ಪಷ್ಟತೆ ಸಿಗಲಿದೆ. ಮೇಲಧಿಕಾರಿಗಳಿಗೆ ಕೆಲಸದ ಪ್ರಗತಿ ವರದಿ ಕೊಟ್ಟು ವಿಶ್ವಾಸಗಳಿಸುವಿರಿ. ಹವ್ಯಾಸದಿಂದ ನಿಮ್ಮ ಒತ್ತಡ ದೂರವಾಗಲಿದೆ. ಕುಂಭ ರಾಶಿ: ಹೊಸ ಆಲೋಚನೆ, ತಂತ್ರಜ್ಞಾನ, ಆನ್‌ಲೈನ್ ಕೆಲಸಗಳ ಬಗ್ಗೆ ಉತ್ಸಾಹ ಹೆಚ್ಚಾಗಲಿದೆ. ಡಿಜಿಟಲ್ ಪ್ಲಾಟ್‌ಫಾರ್ಮ್, ಸೋಷಿಯಲ್ ಮೀಡಿಯಾ, ವೆಬ್‌ಸೈಟ್ ಕೆಲಸದಲ್ಲಿ ನಿಮ್ಮ ಐಡಿಯಾ ಕೆಲಸಕ್ಕೆ ಬರಲಿದೆ. ಹೊಸ ಪರಿಚಯಗಳು ನೆರವಿಗೆ ಕಾರಣವಾಗಲಿದೆ. ನಿಮ್ಮ ಭಾವನೆ ಸ್ಪಷ್ಟವಾಗಿ ಹೇಳದಿದ್ದರೆ ತಪ್ಪು ಅರ್ಥ ಬರುವ ಅವಕಾಶಗಳಿದ್ದು, ಸರಳ ಮಾತು ಬಳಸುವುದು ಒಳಿತು. ಮೀನ ರಾಶಿ: ನಿದ್ರಾ ಕ್ರಮ, ಆಹಾರ ಪದ್ಧತಿ ಸರಿಯಾಗಿರಲಿ. ಕಲಾತ್ಮಕ ಕೆಲಸಕ್ಕೆ ಇದು ಒಳ್ಳೆಯ ಪ್ರೇರಣೆ ಸಿಗಲಿದೆ. ಕಚೇರಿಯಲ್ಲಿನ ನಿಮ್ಮ ಕೆಲಸಕ್ಕೆ ಪರೋಕ್ಷ ಮೆಚ್ಚುಗೆ ಸಿಗಲಿದೆ. ಪ್ರೀತಿಯ ವಿಷಯದಲ್ಲಿ ಜಗಳ ತಪ್ಪಿಸುವುದು ಒಳಿತು. ಧ್ಯಾನ, ಪ್ರಾರ್ಥನೆ, ಮೌನದಲ್ಲಿ ದಿನ ಕಳೆಯುವುದು ಸೂಕ್ತ. - [ರಜಾ ದಿನವೇ ಬ್ಯಾಂಕ್ ಖಾತೆ ದರೋಡೆ!](https://mobiletime.in/2025/11/bank-account-robbery-on-a-holiday/): ಬ್ಯಾಂಕ್ ಆಫ್ ಬರೋಡಾದಲ್ಲಿ ಉಳಿತಾಯ ಖಾತೆ ಹೊಂದಿದ್ದ ಪರಶುರಾಮ ನಾಯ್ಕ ಅವರ 1 ಲಕ್ಷ ರೂ ಕಾಣೆಯಾಗಿದೆ. ಬ್ಯಾಂಕ್ ಖಾತೆಯನ್ನು ಹ್ಯಾಕ್ ಮಾಡಿದ ವಂಚಕರು ಅಲ್ಲಿದ್ದ ಹಣ ಲಪಟಾಯಿಸಿದ್ದಾರೆ. ಸಿದ್ದಾಪುರದ ನೀಡಗೋಡಿನ ಪರಶುರಾಮ ಈರಾ ನಾಯ್ಕ ಅವರು ಪಾಸ್ಟ ಪುಡ್ ಅಂಗಡಿ ನಡೆಸುತ್ತಾರೆ. ತಮ್ಮ ಉಳಿತಾಯದ ಹಣವನ್ನು ಅವರು ಸಿದ್ದಾಪುರದ ಜೋಗ ರಸ್ತೆಯ ಹೊಸೂರಿನಲ್ಲಿರುವ ಕೊಡಚಾದ್ರಿ ಚೀಟ್ ಫಂಡ್ ನಲ್ಲಿ ಹೂಡಿಕೆ ಮಾಡಿದ್ದಾರೆ. ಹೀಗಿರುವಾಗ ಚೀಟ್ ಫಂಡ್ ಕಂಪನಿಯವರು ಅವರ ಹೂಡಿಕೆ ಮೊತ್ತವನ್ನು ಹಿಂತಿರುಗಿಸಿದ್ದು, ಅವರ ಬ್ಯಾಂಕ್ ಆಫರ್ ಬರೋಡಾದಲ್ಲಿ ಉಳಿತಾಯ ಖಾತೆಯಲ್ಲಿ 2.80 ಲಕ್ಷ ರೂ ಜಮಾ ಆಗಿತ್ತು. ಆ ಪೈಕಿ ಅಲ್ಪ ಪ್ರಮಾಣದ ಹಣವನ್ನು ಪರಶುರಾಮ ನಾಯ್ಕ ಅವರು ಬಳಸಿಕೊಂಡಿದ್ದರು. ಉಳಿದ 2.37 ಲಕ್ಷ ರೂ ಖಾತೆಯಲ್ಲಿ ಹಾಗೇ ಇತ್ತು. ನವೆಂಬರ್ 8ರಂದು ಸಂಜೆ ಪರಶುರಾಮ ನಾಯ್ಕ ಅವರು ಅಂಗಡಿಯಲ್ಲಿದ್ದಾಗ ಅವರ ಖಾತೆಯಿಂದ 50 ಸಾವಿರ ರೂ ಕಡಿತವಾದ ಬಗ್ಗೆ ಮೆಸೆಜ್ ಬಂದಿತು. ಅದಾದ ಒಂದು ತಾಸಿನ ನಂತರ ಮತ್ತೆ 50 ಸಾವಿರ ರೂ ಕಡಿತವಾದ ಮೆಸೆಜ್ ಬಂದಿತು. ಇದರಿಂದ ಗಾಬರಿಗೆ ಒಳಗಾದ ಪರಶುರಾಮ ನಾಯ್ಕ ಅವರು ಸ್ನೇಹಿತರಿಗೆ ಫೋನ್ ಮಾಡಿದರು. ಸ್ನೇಹಿತರು ಬ್ಯಾಂಕ್ ಖಾತೆ ಹ್ಯಾಕ್ ಆಗಿರುವ ವಿಷಯ ತಿಳಿಸಿದರು. ಬ್ಯಾಂಕಿಗೆ ಹೋಗಿ ಹೇಳೋಣ ಎಂದರೆ ಆ ದಿನ ಶನಿವಾರವಾಗಿದ್ದು, ಆಗಲೇ ಸಂಜೆ ಆಗಿತ್ತು. ಮರುದಿನ ಭಾನುವಾರ ಆಗಿದ್ದರಿಂದ ಬ್ಯಾಂಕಿಗೂ ರಜೆ ಇತ್ತು. ಹೀಗಾಗಿ ಪರಶುರಾಮ ನಾಯ್ಕ ಅವರು 1 ಲಕ್ಷ ರೂ ವಂಚನೆಯಾದ ಬಗ್ಗೆ 1930ಗೆ ಫೋನ್ ಮಾಡಿ ದೂರಿದರು. ಸೋಮವಾರ ಬ್ಯಾಂಕಿಗೆ ಹೋಗಿ ತಮ್ಮ ಸಮಸ್ಯೆ ವಿವರಿಸಿದರು. ಬ್ಯಾಂಕಿನವರು ನೀಡಿದ ಮಾಹಿತಿ ಮೇರೆಗೆ ಸಿದ್ದಾಪುರ ಪೊಲೀಸ್ ಠಾಣೆಗೆ ದೂರು ನೀಡಿದರು. `ಮಾಹಿತಿ ತಂತ್ರಜ್ಞಾನ ದುರುಪಯೋಗ ನಡೆದಿದ್ದು, ತಮ್ಮ ಹಣ ತಮಗೆ ಮರಳಿಸಿ’ ಎಂದವರು ಮನವಿ ಮಾಡಿದರು. - [ರೈಲ್ವೆ ನೇಮಕಾತಿ: ನಕಲಿ ಹುದ್ದೆಯೂ ಆರುವರೆ ಲಕ್ಷಕ್ಕೆ ಮಾರಾಟ!](https://mobiletime.in/2025/11/railway-recruitment-fake-posts-are-also-being-sold-for-six-and-a-half-lakhs/): ಕೊಂಕಣ ರೈಲ್ವೆಯಲ್ಲಿ ಉದ್ಯೋಗ ಕೊಡಿಸುವುದಾಗಿ ನಂಬಿಸಿದ ಅಮಯ ಆಮ್ರೇ ಅವರು ಸಂತೋಷ ಶೇಟ್ ಅವರಿಂದ ಆರುವರೆ ಲಕ್ಷ ರೂ ಹಣಪಡೆದಿದ್ದಾರೆ. ಆದರೆ, ಉದ್ಯೋಗವನ್ನು ಮಾತ್ರ ಕೊಡಿಸಿಲ್ಲ. ಕುಮಟಾದ ಬಗ್ಗೋಣದಲ್ಲಿ ಸಂತೋಷ ಪ್ರಭಾಕರ ಶೇಟ್ ಅವರು ವಾಸವಾಗಿದ್ದಾರೆ. 32 ವರ್ಷದ ಅವರು ಇಂಜಿನಿಯರ್ ಆಗಿದ್ದು, ಇನ್ನಷ್ಟು ಒಳ್ಳೆಯ ಉದ್ಯೋಗಕ್ಕಾಗಿ ಹುಡುಕಾಡುತ್ತಿದ್ದಾರೆ. ಹೀಗಿರುವಾಗ ಮುಂಬೈಯ ಅಮಯ ಆಮ್ರೇ ಅವರು ಸಂತೋಷ ಶೇಟ್ ಅವರಿಗೆ ಪರಿಚಯವಾದರು. ತಮ್ಮನ್ನು ಅವರು `ಕೊಂಕಣ ರೈಲ್ವೆಯ ಟ್ರಾಕ್ ಇನ್ಸಪೆಕ್ಟರ್’ ಎಂದು ಹೇಳಿಕೊಂಡರು. `ತಾನು ಕೊಂಕಣ ರೈಲ್ವೆ ಯುನಿಯನ್ ಸದಸ್ಯನಾಗಿದ್ದು, ಯಾರಿಗೆ ಬೇಕಾದರೂ ಉದ್ಯೋಗ ಕೊಡಿಸಬಲ್ಲೆ’ ಎಂದು ನಂಬಿಸಿದರು. ಇದನ್ನು ನಂಬಿದ ಸಂತೋಷ ಶೇಟ್ ಅವರು ಅಮಯ ಆಮ್ರೇ ಅವರ ಕೈಗೆ 6.5 ಲಕ್ಷ ರೂ ಕೊಟ್ಟರು. ಜ್ಯೂನಿಯರ್ ಮೆಕಾನಿನಕಲ್ ಇಂಜಿನಿಯರ್ ಜಾಬ್ ಕೊಡಿಸುವುದಾಗಿ ಹೇಳಿದ್ದ ಅಮಯ ಆಮ್ರೇ ಕಾಸುಪಡೆದ ನಂತರ ಕೊಂಕಣ ರೈಲ್ವೆಯ ನೇಮಕಾತಿ ಪ್ರಕಟಣೆ ಪತ್ರ ರವಾನಿಸಿದರು. ಪರೀಕ್ಷಾ ಪತ್ರವನ್ನು ಕಳುಹಿಸಿದರು. ನೇಮಕಾತಿ ಆದೇಶ ಮಾದರಿಯ ಪತ್ರವನ್ನು ನೀಡಿದರು. ಆದರೆ, ಅದೆಲ್ಲವೂ ನಕಲಿ ಎಂದು ಸಂತೋಷ ಶೇಟ್ ಅವರಿಗೆ ನಂತರ ಗೊತ್ತಾಯಿತು. ಹೀಗಾಗಿ ಕುಮಟಾ ಪೊಲೀಸ್ ಠಾಣೆಯಲ್ಲಿ ವಂಚಕ ಅಮಯ ಆಮ್ರೇ ವಿರುದ್ಧ ಅವರು ದೂರು ನೀಡಿದರು. - [ಕಾಣದಂತೆ ಮಾಯವಾದನು.. ಕಾಡಿನಲ್ಲಿ ಶವವಾದನು!](https://mobiletime.in/2025/11/he-disappeared-from-sight-he-died-in-the-forest/): ಕಳೆದ 30 ವರ್ಷಗಳಿಂದ ಮದ್ಯ ವ್ಯಸನಕ್ಕೆ ಒಳಗಾಗಿದ್ದ 48 ವರ್ಷದ ಮಾರುತಿ ಮಿರಾಶಿ ಅವರು ನಿಗೂಡವಾಗಿ ಕಾಣೆಯಾಗಿದ್ದು, ಅವರ ಶವ ಕಾಡಿನಲ್ಲಿ ಸಿಕ್ಕಿದೆ. ಯಲ್ಲಾಪುರದ ಬೈಲಂದೂರಿನಲ್ಲಿ ಮಾರುತಿ ದೇಮಣ್ಣ ಮಿರಾಶಿ ಅವರು ವಾಸವಾಗಿದ್ದರು. ಯುವಕನಾಗಿರುವಾಗಲೇ ಅವರು ದುಶ್ಚಟಕ್ಕೆ ದಾಸರಾಗಿದ್ದರು. ರೈತರಾಗಿದ್ದ ಅವರು ತಮ್ಮ ಆದಾಯದ ಬಹುಪಾಲು ಹಣವನ್ನು ಮದ್ಯದ ಅಂಗಡಿಗೆ ಕೊಡುತ್ತಿದ್ದರು. ಕುಡಿತದ ಪ್ರಭಾವದಿಂದಾಗಿ ಅವರು ಮಾನಸಿಕವಾಗಿಯೂ ಕುಗ್ಗಿದ್ದರು. ನವೆಂಬರ್ 19ರಂದು ಮಾರುತಿ ಮಿರಾಶಿ ಅವರು ಜಮೀನಿಗೆ ಹೋಗುವುದಾಗಿ ಹೇಳಿ ಮನೆಯಿಂದ ಹೊರಟಿದ್ದರು. ಆದರೆ, ಎರಡು ದಿನ ಕಳೆದರೂ ಅವರು ಮನೆಗೆ ಬಂದಿರಲಿಲ್ಲ. ಹೀಗಾಗಿ ನವೆಂಬರ್ 21ರಂದು ಅವರ ತಮ್ಮ ವಿಠ್ಠಲ ಮಿರಾಶಿ ಅವರು ತಂದೆಯ ಹುಡುಕಾಟಕ್ಕೆ ಪೊಲೀಸರ ನೆರವು ಯಾಚಿಸಿದ್ದರು. ನವೆಂಬರ್ 22ರಂದು ಬೈಲಂದೂರು ಗ್ರಾಮದ ಅರಣ್ಯ ಪ್ರದೇಶದಲ್ಲಿ ಮಾರುತಿ ಮಿರಾಶಿ ಅವರ ಶವ ಸಿಕ್ಕಿತು. ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಅವರ ದೇಹ ಮರಕ್ಕೆ ನೇತಾಡುತ್ತಿತ್ತು. ಶವದ ಸುತ್ತಲು ದುರ್ವಾಸನೆ ಬರುತ್ತಿದ್ದು, ಕೆಲ ದಿನಗಳ ಹಿಂದೆಯೇ ಮಾರುತಿ ಮಿರಾಶಿ ಅವರು ಸಾವನಪ್ಪಿರುವ ಶಂಕೆವ್ಯಕ್ತವಾಯಿತು. - [ಸರ್ಕಾರಿ ನೌಕರಿ ಮಾರಾಟಗಾರರ ಸೆರೆ!](https://mobiletime.in/2025/11/government-job-sellers-arrested/): ಸರ್ಕಾರಿ ನೌಕರಿ ಕೊಡಿಸುವುದಾಗಿ ನಂಬಿಸಿ 15 ಲಕ್ಷ ರೂಪಡೆದು ಯಾಮಾರಿಸಿದ್ದ ವಂಚಕರಿಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಹೊನ್ನಾವರ ಕಾಸರಕೋಡಿನ ಪ್ರತೋಷ ಹೊಸಪಟ್ಟಣ ಅವರು ಅಕ್ಕನ ಮಗನಿಗೆ ಸರ್ಕಾರಿ ನೌಕರಿ ಕೊಡಿಸುವುದಕ್ಕಾಗಿ 15 ಲಕ್ಷ ರೂ ವೆಚ್ಚ ಮಾಡಿದ್ದರು. ಅವರು 2019ರಲ್ಲಿ ಬೆಂಗಳೂರಿಗೆ ಹೋದಾಗ ಪರಿಚಯವಾದ ಕಾರ್ಕಳದ ವಿಜಯಕುಮಾರ ಮಡಿವಾಳ ಅವರಿಗೆ ಹಣ ನೀಡಿದ್ದರು. `ತನಗೆ ಸರ್ಕಾರಿ ಅಧಿಕಾರಿಗಳ ಪರಿಚಯವಿದ್ದು, ಸರ್ಕಾರಿ ಕೆಲಸ ಕೊಡಿಸುವೆ’ ಎಂದು ನಂಬಿಸಿ ವಿಜಯಕುಮಾರ ಮಡಿವಾಳ ಅವರು ಹಂತ ಹಂತವಾಗಿ ಈ ಹಣಪಡೆದಿದ್ದರು. ಆದರೆ, ಸರ್ಕಾರಿ ನೌಕರಿ ಕೊಡಿಸದೇ ಮೋಸ ಮಾಡಿದ ಬಗ್ಗೆ ಹಾಗೂ ಹಣ ಮರಳಿಸುವಂತೆ ಕೇಳಿದಾಗ ಬೆದರಿಕೆ ಒಡ್ಡಿದ ಬಗ್ಗೆ ಪ್ರತೋಷ ಹೊಸಪಟ್ಟಣ ಅವರು ಹೊನ್ನಾವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ತನಿಖೆ ನಡೆಸಿದ ಪೊಲೀಸರು ಕ್ಯಾಂಟಿನ್ ನಡೆಸುವ ವಿಜಯಕುಮಾರ ಮಡಿವಾಳ ಹಾಗೂ ಪುಡ್ ಡಿಲೆವರಿ ಕೆಲಸ ಮಾಡುವ ಬೆಂಗಳೂರಿನ ವಿಜಯ ಚಲುವರಂಗಯ್ಯ ಅವರನ್ನು ಬಂಧಿಸಿದ್ದಾರೆ. ಬಂಧಿತರು ತಾವು ಮಾಡಿದ ತಪ್ಪನ್ನು ಒಪ್ಪಿಕೊಂಡಿದ್ದು, ಪೊಲೀಸರು ಅವರನ್ನು ಜೈಲಿಗೆ ಕಳುಹಿಸಿದ್ದಾರೆ. - [ಉತ್ತರ ಕನ್ನಡ ಅಳಿವು-ಉಳಿವು: ಕರೆದರೂ ಕಾರ್ಯಕ್ರಮಕ್ಕೆ ಬಾರದ ಶಾಸಕ-ಸಂಸದರು!](https://mobiletime.in/2025/11/uttara-kannada-extinction-survival-mlas-and-mps-who-dont-come-to-the-program-even-when-invited/): ಉತ್ತರ ಕನ್ನಡ ಜಿಲ್ಲೆಯ ಅಳಿವು-ಉಳಿವಿನ ಬಗ್ಗೆ ಶಿರಸಿಯ TSS ಭವನದಲ್ಲಿ ಭಾನುವಾರ ವಿಚಾರಘೋಷ್ಠಿ ನಡೆದಿದ್ದು, ಯೋಜನೆಯ ಆಳ-ಅಗಲ ಅರಿಯಬೇಕಾಗಿದ್ದ ಜನಪ್ರತಿನಿಧಿಗಳೊಬ್ಬರೂ ಸಭೆಯಲ್ಲಿ ಕಾಣಲಿಲ್ಲ. ವಿವಿಧ ಯೋಜನೆಯಿಂದ ಆಗುವ ದುಷ್ಪರಿಣಾಮದ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ನಡೆದ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯಲ್ಲಿ ಹೆಸರು ನಮೂದಿಸಿ ಅಧಿಕೃತ ಆಮಂತ್ರಣ ನೀಡಿದರೂ ಜನಪ್ರತಿನಿಧಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಲಿಲ್ಲ. ಸಂಸದ ವಿಶ್ವೇಶ್ವರ ಹೆಗಡೆ, ಶಿರಸಿ ಕ್ಷೇತ್ರದ ಶಾಸಕ ಭೀಮಣ್ಣ ನಾಯ್ಕ, ಯಲ್ಲಾಪುರ ಕ್ಷೇತ್ರದ ಶಾಸಕ ಶಿವರಾಮ ಹೆಬ್ಬಾರ್, ವಿಧಾನ ಪರಿಷತ್ ಸದಸ್ಯ ಶಾಂತರಾಮ ಸಿದ್ದಿ ಅವರ ಹೆಸರು ಆಮಂತ್ರಣ ಪತ್ರಿಕೆಯಲ್ಲಿತ್ತು. ಕಾರ್ಯಕ್ರಮಕ್ಕೆ ಆಗಮಿಸುವಂತೆ ಕೋರಿ ಅವರಿಗೆಲ್ಲರಿಗೂ ಆಮಂತ್ರಣ ನೀಡಲಾಗಿತ್ತು. ಆದರೆ, ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ದೆಹಲಿಯಲ್ಲಿರುವುದಾಗಿ ಹೇಳಿದರು. ಶಿವರಾಮ ಹೆಬ್ಬಾರ್ ಅವರು ಶುಭ ಸಂದೇಶ ಕಳುಹಿಸಿ ಸುಮ್ಮನಾದರು. ಶಾಂತರಾಮ ಸಿದ್ದಿ ಅವರು ಧಾರವಾಡಕ್ಕೆ ಹೋಗಿದ್ದು, ಇಲ್ಲಿನ ಕಾರ್ಯಕ್ರಮದಿಂದ ದೂರವುಳಿದರು. ಭೀಮಣ್ಣ ನಾಯ್ಕ ಅವರು ಎಪಿಎಂಸಿ ಆವರಣದಲ್ಲಿರುವ TMS ಸಭಾ ಭವನಕ್ಕೆ ಆಗಮಿಸಿದಾದರೂ TSS ಭವನಕ್ಕೆ ಕಾಲಿಡಲಿಲ್ಲ. ಸೋಂದಾದ ಬೇಡ್ತಿ-ಅಘನಾಶಿನಿ ಕೊಳ್ಳ ಸಂರಕ್ಷಣಾ ಸಮಿತಿಯವರು ಪಶ್ಚಿಮಘಟ್ಟ ‘ನದಿ ಕಣಿವೆ ಸಂರಕ್ಷಣೆ ಹಾಗೂ ಬೃಹತ್ ಯೋಜನೆ ದುಷ್ಪರಿಣಾಮ’ ಎಂಬ  ವಿಷಯದ ಕುರಿತು ವಿಚಾರಘೋಷ್ಠಿ ಆಯೋಜಿಸಿದ್ದರು. ಉತ್ತರ‌ ಕನ್ನಡ ಜಿಲ್ಲೆಯಲ್ಲಿ ಧಾರಣಾ ಸಾಮರ್ಥ್ಯವನ್ನು ಮೀರಿ ವಿವಿಧ ಯೋಜನೆ ಅನುಷ್ಠಾನದಿಂದ ಆಗುವ ಅನಾಹುತಗಳ ಬಗ್ಗೆ ತಜ್ಞರು ಮಾತನಾಡಿದರು. ಬೇಡ್ತಿ-ವರದಾ ನದಿ ಜೋಡಣೆ,‌ ಕೇಣಿ ವಾಣಿಜ್ಯ ಬಂದರು ನಿರ್ಮಾಣ, ಶರಾವತಿ ಭೂಗತ ವಿದ್ಯುತ್ ಯೋಜನೆ, ಅಘನಾಶಿನಿ-ವೇದಾವತಿ ನದಿ ತಿರುವು ಸೇರಿ ಹಲವು ಯೋಜನೆಗಳ ಬಗ್ಗೆ ತಜ್ಞರು ವಿವರಿಸಿದರು. ಆಮಂತ್ರಣ ಪತ್ರಿಕೆಯಲ್ಲಿ ಹೆಸರಿಸಲಾದ ಜನಪ್ರತಿನಿಧಿಗಳನ್ನುಹೊರತುಪಡಿಸಿ ಉಳಿದವರೆಲ್ಲರೂ ಸಭೆಯಲ್ಲಿದ್ದರು. ಯೋಜನೆ ನಿಲ್ಲಿಸುವಲ್ಲಿ ಪ್ರಮುಖ ಪಾತ್ರ ನಿಭಾಯಿಸಬೇಕಿದ್ದ ಶಾಸಕ-ಸಂಸದರು ಕಾರ್ಯಕ್ರಮದ ಶುಭ ಹಾರೈಕೆಯ ಪತ್ರ ಬರೆಯಲು‌ ಮಾತ್ರ ಸೀಮಿತರಾದರು! ಪರಿಸರ ತಜ್ಞರಾದ ಶಿವಾನಂದ ಕಳವೆ, ಪ್ರಕಾಶ ಮೇಸ್ತ, ವಿ ಎನ್ ನಾಯಕ, ಬಾಲಚಂದ್ರ ಸಾಯಿಮನೆ, ನರಸಿಂಹ ಹೆಗಡೆ ವಾನಳ್ಳಿ, ವಿಕಾಸ ತಾಂಡೇಲ ಅವರ ಜೊತೆ ದೂರ ದೂರದ ಊರಿನಿಂದ ಬಂದಿದ್ದ ಕಿಶೋರ ಕುಮಾರ ಹೊಂಗಡಹೊಳ್ಳ, ಗಿರಿಧರ‌ ಕುಲಕರ್ಣಿ, ಡಾ ಅಮಿತ ಹೆಗಡೆ, ಗಿರೀಶ ಜನ್ನೆ, ಟಿಬಿ ರಾಮಚಂದ್ರ ಮೊದಲಾದವರು ತಮ್ಮ ಅಭಿಪ್ರಾಯ ಮಂಡಿಸಲು ಆಸಕ್ತರಾಗಿದ್ದರು. ಆದರೆ, ಆ ಅಭಿಪ್ರಾಯಗಳನ್ನು ಆಲಿಸಿ-ಸಂಗ್ರಹಿಸಿ ಸರ್ಕಾರದ ಮೇಲೆ ಒತ್ತಡ ತರಬೇಕಾದ ಶಾಸಕ-ಸಂಸದರು‌ ಈ ಬಗ್ಗೆ ತಲೆ ಕೆಡಿಸಿಕೊಳ್ಳಲಿಲ್ಲ. ‘ನದಿಗಳು ಭೂಮಿಯ ನರನಾಡಿಗಳಾಗಿದ್ದು, ನದಿ ಹರಿವು ಬದಲಾದರೆ ಅಪಾಯ ನಿಶ್ಚಿತ. ನದಿ ಸಹಜವಾಗಿದ್ದರೆ ಪರಿಸರ‌ ಸಮತೋಲನ ಸಾಧ್ಯ’ ಎಂದು ಈ ಸಭೆಗೆ ಚಾಲನೆ ನೀಡಿದ ಸೋಂದಾ ಸ್ವರ್ಣವಲ್ಲಿ ಮಠದ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ ಹೇಳಿದರು. ‘ಸರ್ಕಾರ ಐದು ವರ್ಷ ಬಂದು ಹೋಗುತ್ತವೆ. ಆ ಐದು ವರ್ಷದಲ್ಲಿ 50 ವರ್ಷದ ಸಂಪಾದನೆ ಮಾಡುತ್ತವೆ. ಆದರೆ, ನಾವು ಇಲ್ಲಿಯೇ‌ ಬದುಕಬೇಕು. ಅದಕ್ಕಾಗಿ ಪರಿಸರ‌ ಉಳಿವಿಗಾಗಿ ಹೋರಾಟ ಮಾಡಬೇಕು’ ಎಂದು ಕರೆ ನೀಡಿದ ಶ್ರೀಗಳು ಸರ್ಕಾರ ಹಾಗೂ ರಾಜಕಾರಣಿಗಳ ಮನಸ್ಥಿತಿಯ ಬಗ್ಗೆ ತೀಕ್ಷ್ಣವಾಗಿ ತಿಳಿಸಿದರು. ನದಿ ತಿರುವು ಯೋಜನೆಗಳ ಅಪಾಯ ವಿವರಿಸಿದ ಅವರು ಎತ್ತಿನಹೊಳೆ ಯೋಜನೆ ವಿಫಲವಾದ ಉದಾಹರಣೆಯನ್ನು ವಿವರಿಸಿದರು. ‘ಗುತ್ತಿಗೆದಾರರ ಒತ್ತಡದಿಂದ ಸರ್ಕಾರ ಇಂಥ ಅವೈಜ್ಞಾನಿಕ ಯೋಜನೆ ರೂಪಿಸಲು ಮುಂದಾಗಿದೆ. ಯಾವ ಸರ್ಕಾರ ಬಂದರೂ ಇಂಥ ಯೋಜನೆ ನಿಲ್ಲಿಸುತ್ತಿಲ್ಲ. 25 ಸಾವಿರ ಕೋಟಿ ರೂಪಾಯಿಯ ಯೋಜನೆಗಳು ಲಕ್ಷ ಕೋಟಿ ರೂ ದಾಡುತ್ತಿವೆ. ಇಂಥ ಯೋಜನೆಗಳ ಹಿಂದಿರುವ ಕಾಣದ ಕೈ ಗುತ್ತಿಗೆ ಮಾಫಿಯಾ’ ಎಂದು ವಾಲ್ಮಿ ನೀರಾವರಿ ಸಂಸ್ಥೆಯ ನಿವೃತ್ತ‌ ನಿರ್ದೇಶಕ ರಾಜೇಂದ್ರ ಪೊದ್ದಾರ್ ಅವರು ವಿವರಿಸಿದರು. ಭೂಗರ್ಭ ಶಾಸ್ತ್ರಜ್ಞ ಶ್ರೀನಿವಾಸ ರೆಡ್ಡಿ ಅವರು ‘ಮುಂದಿನ ದಿನದಲ್ಲಿ ಇಲ್ಲಿಯೇ‌ ನೀರು ಕಡಿಮೆ ಆಗುವ ಸಾಧ್ಯತೆಗಳಿವೆ. ಹೀಗಿರುವಾಗ ಇಲ್ಲಿನ ನೀರನ್ನು ಬೇರೆ ಕಡೆ ಒಯ್ಯುವ ಯೋಜನೆ ಸರಿಯಲ್ಲ’ ಎಂದು ವಿವರಿಸಿದರು. ಪಶ್ಚಿಮಘಟ್ಟ ಪ್ರದೇಶದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಭೂ‌ ಕಂಪನ, ಭೂ ಕುಸಿತ ಹಾಗೂ ಸಿಡಿಲಿನ ಪ್ರಭಾವದ ಬಗ್ಗೆ ಅವರು ವೈಜ್ಞಾನಿಕ ಕಾರಣ ತೆರೆದಿಟ್ಟರು. - [70 ಅಡಿ ಆಳಕ್ಕೆ ಬಿದ್ದ ಬೈಕು: ಅಲ್ಲಿಯೇ ಅಂತ್ಯವಾದ ಸವಾರನ‌ ಬದುಕು](https://mobiletime.in/2025/11/bike-falls-70-feet-deep-riders-life-ends-there/): ಧರೆ ಕುಸಿತ ಪ್ರದೇಶದಲ್ಲಿ ಬೈಕ್ ಓಡಿಸಿದ ವ್ಯಕ್ತಿಯೊಬ್ಬರು ಕಂದಕಕ್ಕೆ ಬಿದ್ದು ಸಾವನಪ್ಪಿದ್ದಾರೆ. ಸಿದ್ದಾಪುರದ ಕಾನಸೂರು ಬಾಳೇಸರ ರಸ್ತೆಯ ಕೋಡ್ಸರ ಸಮೀಪ ಧರೆ ಕುಸಿತ ಪ್ರದೇಶದಲ್ಲಿ ಶವ ಸಿಕ್ಕಿದೆ. 70ಅಡಿ ಆಳಕ್ಕೆ ಬಿದ್ದ‌ ಸ್ಥಿತಿಯಲ್ಲಿ ಬೈಕ್ ಜೊತೆ ಸವಾರನ ಶವ ಕಾಣಿಸಿದೆ. ಶುಕ್ರವಾರ ರಾತ್ರಿ ಅಥವಾ ಶನಿವಾರ ಬೆಳಗ್ಗೆ ಈ ಅವಘಡ ನಡೆದ ಬಗ್ಗೆ ಅಂದಾಜಿಸಲಾಗಿದೆ. ಸ್ಥಳೀಯರೊಬ್ಬರ ಮನೆಯ ಕೆಲಸದ ಕಾರ್ಮಖರು ಶನಿವಾರ ಸಂಜೆ ಸುಮಾರು 5 ಗಂಟೆ ಹೊತ್ತಿಗೆ ತೋಟದಲ್ಲಿ ಅಡಿಕೆ ಆರಿಸುತ್ತಿರುವಾಗ‌ ಗಿಡಗಳ ನಡುವೆ ಬೈಕ್ ನೋಡಿದ್ದಾರೆ. ಸಮೀಪ ಹೋದಾಗ ಅಲ್ಲಿ ಶವವೂ ಕಾಣಿಸಿದೆ. ಪೊಲೀಸರು ಘಟನಾ ಸ್ಥಳಕ್ಕೆ ಆಗಮಿಸಿದ್ದಾರೆ. ಪೂರ್ಣ ಮಾಹಿತಿ ಕಲೆ ಹಾಕುತ್ತಿದ್ದು, ಇನ್ನಷ್ಟು ವಿವರಕ್ಕಾಗಿ ನಿರೀಕ್ಷಿಸಲಾಗಿದೆ. - [ಅನೇಕರಿಗೆ ಗೊತ್ತಿಲ್ಲ ಈ ವಿಷಯ: ನಾಯಿ ಕಚ್ಚಿದರೂ ಸಿಗುತ್ತೆ ಪರಿಹಾರ!](https://mobiletime.in/2025/11/many-people-dont-know-this-even-if-you-get-bitten-by-a-dog-you-can-get-relief/): ಬೀದಿ ನಾಯಿ ದಾಳಿಯಿಂದ ಸಂತ್ರಸ್ತರಾದವರಿಗೆ ಸರ್ಕಾರ 5 ಸಾವಿರ ರೂಪಾಯಿಯಿಂದ 5 ಲಕ್ಷ ರೂಪಾಯಿವರೆಗೆ ಪರಿಹಾರ ವಿತರಿಸುತ್ತದೆ. ಆದರೆ, ಮಾಹಿತಿ ಕೊರತೆಯಿಂದಾಗಿ ಇದಕ್ಕೆ ಅರ್ಜಿ ಹಾಕುವವರೇ ಇಲ್ಲ! ಉತ್ತರ ಕನ್ನಡ ಜಿಲ್ಲೆಯ ಎಲ್ಲಾ ಸ್ಥಳೀಯ ಸಂಸ್ಥೆಗಳಲ್ಲಿಯೂ ಬೀದಿ ನಾಯಿ ಹಾವಳಿ ಹೆಚ್ಚಾಗಿದೆ. ಬೀದಿ ನಾಯಿ ನಿಯಂತ್ರಣಕ್ಕೆ ಸಂತಾನ ಹರಣ ಚಿಕಿತ್ಸೆ ನೆಪದಲ್ಲಿ ಆಡಳಿತದಲ್ಲಿರುವವರು ಲಕ್ಷಾಂತರ ರೂ ವೆಚ್ಚ ಮಾಡುತ್ತಿದ್ದಾರೆ. ಅದಾಗಿಯೂ ವರ್ಷದಿಂದ ವರ್ಷಕ್ಕೆ ಬೀಡಾಡಿ ನಾಯಿಗಳ ಸಂಖ್ಯೆ ಹೆಚ್ಚಾಗುತ್ತಿದೆಯೇ ವಿನ: ಸಮಸ್ಯೆ ಮಾತ್ರ ತಪ್ಪುತ್ತಿಲ್ಲ. ಅದರಲ್ಲಿಯೂ ಅನೇಕ ಬಗೆಯ ಆಕ್ರಮಣಕಾರಿ ಬೀದಿ ನಾಯಿಗಳು ಜಿಲ್ಲೆಯಲ್ಲಿವೆ. ಚಿಕ್ಕ ಮಕ್ಕಳನ್ನು ಗುರಿಯಾಗಿರಿಸಿಕೊಂಡು ದಾಳಿ ನಡೆಸುವ ನಾಯಿಗಳ ವಿರುದ್ಧ ಜನಸಾಮಾನ್ಯರು ಪ್ರತಿಭಟಿಸಿದರೂ ಅವುಗಳ ವಿರುದ್ಧ ಕಠಿಣ ಕ್ರಮವಾಗಿಲ್ಲ. ಈ ಎಲ್ಲದರ ನಡುವೆ ಬೀದಿ ನಾಯಿ ಆಕ್ರಮಣಕ್ಕೆ ಒಳಗಾದವರಿಗೆ ಸರ್ಕಾರ ಸೂಕ್ತ ಪರಿಹಾರ ಒದಗಿಸುವಂತೆ ಸ್ಥಳೀಯ ಆಡಳಿತಕ್ಕೆ ಸೂಚನೆ ನೀಡಿದೆ. ಆದರೆ, ಆ ಆದೇಶ ಪಾಲನೆಯೂ ಆಗುತ್ತಿಲ್ಲ. ಆಕ್ರಮಕ್ಕೆ ಒಳಗಾದವರು ಪರಿಹಾರಕ್ಕಾಗಿ ಅರ್ಜಿಯನ್ನು ಸಲ್ಲಿಸುತ್ತಿಲ್ಲ. ಭಾರತ ಸರ್ಕಾರದ ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೂನುಗಾರಿಕೆ ಮಂತ್ರಾಲಯವೂ 2023ರಲ್ಲಿ ಪ್ರಾಣಿ ಸಂತಾನ ನಿಯಂತ್ರಣ ನಿಯಮವನ್ನು ಜಾರಿಗೆ ತಂದಿದೆ. ರಾಜ್ಯಮಟ್ಟದಲ್ಲಿಯೂ ಪ್ರಾಣಿ ಸಂತಾನ ನಿಯಂತ್ರಣ ಮೇಲ್ವಿಚಾರಣೆ ಹಾಗೂ ಅನುಷ್ಠಾನ ಸಮಿತಿ ಕಾರ್ಯ ನಿರ್ವಹಿಸುತ್ತಿದೆ. ಧಾರವಾಡ ಉಚ್ಛ ನ್ಯಾಯಾಲಯದಲ್ಲಿ ಸಲ್ಲಿಕೆಯಾದ ರಿಟ್ ಪಿಟಿಶನ್ ಅನ್ವಯ ಬೀದಿ ನಾಯಿಗಳ ಹಾವಳಿಯಿಂದ ಸಂತ್ರಸ್ತರಾದವರಿಗೆ ಸರ್ಕಾರ ಪರಿಹಾರ ವಿತರಿಸಲು ಆಸಕ್ತಿವಹಿಸಿದೆ. ಅದರ ಪ್ರಕಾರ ನಾಯಿ ದಾಳಿಗೆ ಒಳಗಾದವರ ಚಿಕಿತ್ಸಾ ವೆಚ್ಚ ಭರಿಸುವುದು ಸ್ಥಳೀಯ ಆಡಳಿತದ ಹೊಣೆಯಾಗಿದೆ. ಆದರೆ, ಜನ ಜಾಗೃತಿ ಕೊರತೆಯಿಂದ ಬೀದಿ ನಾಯಿ ಆಕ್ರಮಣಕ್ಕೆ ಒಳಗಾದವರು ಸ್ಥಳೀಯ ಆಡಳಿತಕ್ಕೆ ಮಾಹಿತಿ ನೀಡುತ್ತಿಲ್ಲ. ನಾಯಿ ದಾಳಿಗೆ ಒಳಗಾಗಿ ಸರ್ಕಾರಿ ಆಸ್ಪತ್ರೆಗೆ ದಾಖಲಾದವರ ಮಾಹಿತಿಯೂ ಸಮನ್ವಯ ಕೊರತೆಯಿಂದ ನಗರ ಸಂಸ್ಥೆಗಳಿಗೆ ತಲುಪುತ್ತಿಲ್ಲ. ನಾಯಿ ಆಕ್ರಮಣಕ್ಕೆ ಒಳಗಾಗಿ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆಪಡೆಯುವವರ ವಿವರ ಸರ್ಕಾರಕ್ಕೆ ಸಿಗುತ್ತಿಲ್ಲ. ಈ ಎಲ್ಲಾ ಹಿನ್ನಲೆ ಸಂತ್ರಸ್ತರಿಗೆ ಬೀದಿ ನಾಯಿಗಳ ಆಕ್ರಮಣಕ್ಕೆ ಒಳಗಾದವರಿದ್ದರೂ ಅವರಿಗೆ ಸಿಗಬೇಕಾದ ಸೌಲಭ್ಯ ಸಿಗುತ್ತಿಲ್ಲ. ಬೀದಿ ನಾಯಿ ಕಚ್ಚಿ ಗಾಯಗೊಂಡ ಪ್ರತಿಯೊಬ್ಬರಿಗೂ 5 ಸಾವಿರ ರೂ ಕನಿಷ್ಟ ನೆರವು ನೀಡುವಂತೆ ಸರ್ಕಾರ ಸೂಚಿಸಿದೆ. ನಾಯಿ ಆಕ್ರಮಣದಿಂದ ಸಾವನಪ್ಪಿದವರ ಕುಟುಂಬಕ್ಕೆ 5 ಲಕ್ಷ ರೂ ಪರಿಹಾರ ಒದಗಿಸಲು ನಿರ್ದೇಶನವಿದೆ. ಇದಕ್ಕಾಗಿ ಸ್ಥಳೀಯ ಸಂಸ್ಥೆ ಮುಖ್ಯಸ್ಥರು, ತಾಲೂಕು ಆರೋಗ್ಯ ಅಧಿಕಾರಿಗಳು, ಪಶು ಸಂಗೋಪನಾ ಇಲಾಖೆಯ ಸಹಾಯಕ ನಿರ್ದೇಶಕರು ಹಾಗೂ ಸ್ಥಳೀಯ ಸಂಸ್ಥೆ ಆರೋಗ್ಯ ಅಧಿಕಾರಿ ಮಟ್ಟದಲ್ಲಿ ಸಮಿತಿಯನ್ನು ರಚಿಸಲಾಗಿದೆ. ಬೀದಿ ನಾಯಿ ದಾಳಿ ನಡೆದ ನಂತರ ದೂರು ಬರೆದೇ ಇದ್ದರೂ ಆಸ್ಪತ್ರೆಯಲ್ಲಿ ದಾಖಲಾಗುವ ರೋಗಿ ಆಧಾರದ ಮೇಲೆ ವಿವರಪಡೆದು ಮುಂದಿನ ಕ್ರಮ ಜರುಗಿಸಲು ಸರ್ಕಾರದ ನಿರ್ದೇಶನವಿದೆ. ದಾಳಿಗೆ ಒಳಗಾದವರಿಗೆ ಯೋಗ್ಯ ಚಿಕಿತ್ಸೆ ಒದಗಿಸುವುದು, ಮಹಜರು ನಡೆಸುವುದು, ಪರಿಹಾರ ವಿತರಣೆವರೆಗಿನ ಎಲ್ಲಾ ಜವಾಬ್ದಾರಿಗಳನ್ನು ಸಮಿತಿಗೆವಹಿಸಲಾಗಿದೆ. ಆದರೆ, ಇಲಾಖೆಗಳ ನಡುವಿನ ಸಮನ್ವಯ ಕೊರತೆ ಹಾಗೂ ಜನ ಜಾಗೃತಿ ಸಮಸ್ಯೆಯಿಂದ ಬೀದಿ ನಾಯಿ ದಾಳಿಗೆ ಒಳಗಾದವರಿಗೆ ಪರಿಹಾರ ಸಿಗುತ್ತಿಲ್ಲ. - [2025 ನವೆಂಬರ್ 23ರ ದಿನ ಭವಿಷ್ಯ](https://mobiletime.in/2025/11/prediction-for-november-23-2025/): ಮೇಷ ರಾಶಿ: ಈ ದಿನ ನೀವು ಮಾಡಿದ ಕಾರ್ಯಗಳು ಲಾಭವನ್ನು ನೀಡುತ್ತವೆ. ಕುಟುಂಬದೊoದಿಗೆ ಕಾಲ ಕಳೆಯುವಿರಿ. ಪ್ರವಾಸದ ಲಕ್ಷಣಗಳಿವೆ. ಮಾರ್ಕೆಂಟಿoಗ್, ಬ್ಯಾಂಕಿoಗ್ ವಿಭಾಗದಲ್ಲಿರುವವರಿಗೆ ಉತ್ತಮ ದಿನ. ವೃಷಭ ರಾಶಿ: ದುಪ್ಪಟ್ಟು ಲಾಭ ಸಿಗುವ ದಿನವಾಗಿದ್ದು, ಆರ್ಥಿಕ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ. ಉದ್ಯೋಗದ ಅವಕಾಶಗಳು ಬರಲಿದೆ. ಮದುವೆ ಮಾತುಕಥೆಗಳಿಗೆ ಸಕಾಲ. ರಾಜಕೀಯ, ಸಮಾಜ ಸೇವೆಯಲ್ಲಿರುವವರಿಗೆ ಯಶಸ್ಸು ಸಿಗಲಿದೆ. ಮಿಥುನ ರಾಶಿ: ಧೈರ್ಯ ಹಾಗೂ ಆತ್ಮವಿಶ್ವಾಸ ಹೆಚ್ಚಾಗುತ್ತದೆ. ಹೂಡಿಕೆಯಿಂದ ಲಾಭ ಸಿಗಲಿದೆ. ರೈತರಿಗೆ ಉತ್ತಮ ಸಮಯ. ಉದ್ಯೋಗ ಹುಡುಕಾಟದಲ್ಲಿರುವವರಿಗೆ ಶುಭಗಳಿಗೆ. ಹಣಕಾಸಿನ ಸಮಸ್ಯೆಗಳು ದೂರವಾಗುತ್ತದೆ. ಕರ್ಕ ರಾಶಿ: ಉದ್ಯೋಗ, ವ್ಯಾಪಾರದಲ್ಲಿ ಸಹಕಾರದಿಂದ ಯಶಸ್ಸು ಸಿಗಲಿದೆ. ಪರಶಿವನ ಅನುಗ್ರಹದಿಂದ ಉನ್ನತ ಸ್ಥಾನ ದೊರೆಯಲಿದೆ. ನಿಮ್ಮ ಪರಿಶ್ರಮ ಫಲಕಾರಿಯಾಗುತ್ತದೆ. ಸಿಂಹ: ನಿಮ್ಮ ಪ್ರಯತ್ನಗಳು ಸರಿಯಾದ ಮಾರ್ಗದಲ್ಲಿದ್ದರೆ ಜಯ ಸಿಗುತ್ತದೆ. ವೈಯಕ್ತಿಕ ವಿಷಯಗಳಲ್ಲಿ ಸಂವಹನ ಮುಖ್ಯವಾಗಿದೆ. ಧೈರ್ಯದಿಂದ ಕೆಲಸ ಮಾಡಿ. ಕನ್ಯಾ ರಾಶಿ: ಕೆಲಸದಲ್ಲಿ ಎಚ್ಚರಿಕೆ ಅಗತ್ಯ. ವಿವಾದದಿಂದ ದೂರವಿದ್ದಷ್ಟು ಒಳಿತು. ವ್ಯಾಪಾರದಲ್ಲಿ ಲಾಭ ಸಾಧ್ಯ. ಸೂರ್ಯನ ಅನುಗ್ರಹದಿಂದ ಯಶಸ್ಸು ಸಿಗಲಿದೆ. ತುಲಾ ರಾಶಿ: ವ್ಯಾಪಾರದಲ್ಲಿ ಲಾಭ ಸಿಗಲಿದೆ. ಮನಸ್ಸಿನ ಬಯಕೆಗಳು ಈಡೇರಲಿದೆ. ದೂರ ಪ್ರಯಾಣಕ್ಕೆ ಈ ದಿನ ಸೂಕ್ತವಲ್ಲ. ವೃಶ್ಚಿಕ: ಹೊಸ ಯೋಜನೆಗಳು ಲಾಭದಾಯಕವಾಗಿರಲಿದೆ. ಕುಟುಂಬ ಶಾಂತಿ-ನೆಮ್ಮದಿ ಸಿಗಲಿದೆ. ದೀರ್ಘಕಾಲದ ಹಣಕಾಸಿನ ಸಮಸ್ಯೆಗಳು ದೂರವಾಗಲಿದೆ. ಉದ್ಯೋಗ ಅವಕಾಶಗಳು ಅರೆಸಿ ಬರಲಿದೆ. ಧನು ರಾಶಿ: ಪ್ರಯಾಣ ಮತ್ತು ಶಿಕ್ಷಣಕ್ಕೆ ಉತ್ತಮ ಸಮಯ. ನೀವು ಎದುರಿಸುವ ಸಮಸ್ಯೆಗಳು ದೂರವಾಗಲಿದೆ. ಪರಿಸ್ಥಿತಿಗೆ ಹೊಂದಿಕೊAಡು ಹೋಗುವುದು ಜಾಣತನ ಮಕರ ರಾಶಿ: ಮನೆಯ ಬಗ್ಗೆ ಕಾಳಜಿವಹಿಸಿ. ಕುಟುಂಬದವರ ಆಗು-ಹೋಗುಗಳಿಗೆ ಸ್ಪಂದಿಸಿ. ಶ್ರಮಕ್ಕೆ ತಕ್ಕ ಫಲ ಸಿಗಲಿದೆ. ಆರೋಗ್ಯದ ಬಗ್ಗೆ ಕಾಳಜಿ ಅಗತ್ಯ. ಕುಂಭ ರಾಶಿ: ಹಣಕಾಸು ಯೋಗ ಕೂಡಿ ಬರಲಿದೆ. ಹೂಡಿಕೆಯಲ್ಲಿ ಲಾಭ ಸಿಗಲಿದೆ. ಮಾಡುವ ಕೆಲಸದಲ್ಲಿ ಶ್ರದ್ದೆ ಅಗತ್ಯ. ಸಂಪತ್ತು ಅಧಿಕವಾಗಲಿದೆ. ಮೀನ ರಾಶಿ: ಕೆಲಸದಲ್ಲಿ ಬುದ್ಧಿವಂತಿಕೆ ಬೇಕು. ಜೀವನದಲ್ಲಿ ಯಶಸ್ಸು ಸಾಧಿಸಲು ಶ್ರಮ ಅಗತ್ಯ. ವ್ಯಾಪಾರ-ವಹಿವಾಟು ತಕ್ಕಮಟ್ಟಿಗೆ ಆಗಲಿದೆ. ಒತ್ತಡ ನಿವಾರಣೆ ಆಗಲಿದ್ದು, ಕುಟುಂಬದಲ್ಲಿ ನೆಮ್ಮದಿ ಕಾಣುವಿರಿ. - [ಪತ್ನಿಯಿಂದಲೇ ಹನಿಟ್ರಾಪ್: ಮದುವೆಯಾಗಿ ಮೋಸ ಹೋದ ಡಾಕ್ಟರು!](https://mobiletime.in/2025/11/honeytrapped-by-his-wife-doctors-cheated-on-by-marriage/): ಮದುವೆ ಆದ ಗಂಡನ ವಿರುದ್ಧವೇ ಅತ್ಯಾಚಾರ ಆರೋಪ ಮಾಡಿದ ಮಹಿಳೆಯೊಬ್ಬರು 15 ಲಕ್ಷ ರೂ ಬೇಡಿಕೆಯಿಟ್ಟ ವಿಚಿತ್ರ ವಿದ್ಯಮಾನ ಭಟ್ಕಳದಲ್ಲಿ ಬೆಳಕಿಗೆ ಬಂದಿದೆ. ಹಣಕೊಡದ ಕಾರಣ ಮಹಿಳೆ ಅತ್ಯಾಚಾರದ ದೂರು ನೀಡಿದ್ದು, ನಿಸಾರ್ ಸಾಹೇಬ್ ಅವರು 28 ದಿನದ ಜೈಲು ವಾಸ ಮುಗಿಸಿ ಮನೆಗೆ ಮರಳಿದ್ದಾರೆ! ಭಟ್ಕಳದ ಆಜಾದ್ ನಗರದಲ್ಲಿ ನಿಸಾರ್ ಸಾಹೇಬ್ ಅವರು ವಂಶಪಾರoಪರಿಕವಾಗಿ ಹೋಮಿಯೋಪತಿ ಔಷಧಿ ನೀಡುತ್ತ ಬಂದಿದ್ದಾರೆ. ಕುರಾನ್ ಶಿಕ್ಷಕರಾಗಿಯೂ ಅವರು ಕೆಲಸ ಮಾಡುತ್ತಿದ್ದಾರೆ. ಅಕ್ಟೊಬರ್ 29ರಂದು ಅವರು ಮುಸ್ಲಿಂ ಸಮುದಾಯದ ಸಂಪ್ರದಾಯದ ಪ್ರಕಾರ ಹೆಬಳೆ ಗಾಂಧೀನಗರದ ಪ್ರಥಿಮಾ (ಹೆಸರು ಬದಲಿಸಿದೆ) ಎಂಬಾತರನ್ನು ಎರಡನೇ ಪತ್ನಿಯನ್ನಾಗಿ ಸ್ವೀಕರಿಸಿದ್ದಾರೆ. ಅದಾದ ನಂತರ ಪ್ರಥಿಮಾ ಅವರನ್ನು ಬೆಂಗಳೂರಿಗೆ ಕರೆದೊಯ್ದಿದ್ದಾರೆ. ಆದರೆ, ಪ್ರಥಿಮಾ ಅವರು ಬೆಂಗಳೂರಿಗೆ ಹೋದ ತಕ್ಷಣ `ಸಂಬoಧಿಕರಿಗೆ ಅನಾರೋಗ್ಯ’ ಎಂದು ಹೇಳಿ ಭಟ್ಕಳ ಬಸ್ಸು ಹತ್ತಿದ್ದಾರೆ. ಭಟ್ಕಳಕ್ಕೆ ಬಂದ ಪ್ರಥಿಮಾ ಅವರು ಹೆಬಳೆಯಲ್ಲಿರುವ ನಿಸಾರ್ ಸಾಹೇಬ್ ಅಕ್ಕನ ಮನೆಯಲ್ಲಿ ವಾಸವಾಗಿದ್ದು, ಅಕ್ಟೊಬರ್ 11ರಂದು ನಿಸಾರ್ ಸಾಹೇಬ್ ಅವರು ಪತ್ನಿ ನೋಡಲು ಊರಿಗೆ ಮರಳಿದರು. ಆ ದಿನ ರಾತ್ರಿ ಪತ್ನಿ ಕರೆದುಕೊಂಡು ಅವರು ಆಲ್ ಮುನಾಲ್ ಲಾಡ್ಜಿಗೆ ಹೋದರು. ಆಗ ಅಲ್ಲಿ ಅನೇಕ ಜನ ಜಮಾಯಿಸಿದ್ದು, `ನಿನ್ನ ಜೊತೆ ಇದ್ದವರು ಯಾರು?’ ಎಂದು ನಿಸಾರ್ ಸಾಹೇಬ್ ಅವರನ್ನು ಪ್ರಶ್ನಿಸಿದರು. ಆಗ, ನಿಸಾರ್ ಸಾಹೇಬ್ ಅವರು `ಆಕೆ ನನ್ನ ಪತ್ನಿ’ ಎಂದರು. ಆದರೆ, ಪ್ರಥಿಮಾ ಅವರು `ನನ್ನನ್ನು ಬಲವಂತವಾಗಿ ಇಲ್ಲಿ ಕರೆದುಕೊಂಡು ಬಂದಿದ್ದಾರೆ. ಈ ಮೊದಲು ಬೇರೆ ಬೇರೆ ಕರೆದೊಯ್ದು ರೇಪ್ ಮಾಡಿದ್ದಾರೆ’ ಎಂದು ಕೂಗಾಡಿದರು! ತಕ್ಷಣ ಪ್ರಥಿಮಾ ಅವರು ನಿಸಾರ್ ಸಾಹೇಬ್ ಅವರ ಮೊಬೈಲ್ ಕಸಿದರು. `15 ಲಕ್ಷ ರೂ ಕೊಟ್ಟು ಸೆಟ್ಲಮೆಂಟ್ ಮಾಡಿಕೋ. ಇಲ್ಲವಾದರೆ ನಿನ್ನ ವಿರುದ್ಧ ರೇಪ್ ಕೇಸ್ ಹಾಕುವೆ’ ಎಂದು ಬೆದರಿಸಿದರು. ಇದಕ್ಕಾಗಿ 15 ದಿನ ಕಾಲಾವಕಾಶ ಕೊಟ್ಟಿದ್ದು, ಸೆಪ್ಟಂಬರ್ 14ರಂದು ಭಟ್ಕಳ ಗ್ರಾಮೀಣ ಠಾಣೆಗೆ ಹೋಗಿ ನಿಸಾರ್ ಸಾಬ್ ವಿರುದ್ಧ ಪ್ರಥಿಮಾ ಅವರು ಅತ್ಯಾಚಾರದ ದೂರು ದಾಖಲಿಸಿದರು. ಪರಿಣಾಮ ನಿಸಾರ್ ಸಾಹೇಬ್ ಅವರು 28 ದಿನಗಳ ಕಾಲ ಜೈಲು ಅನುಭವಿಸಿದರು. ಜಾಮೀನಿನ ಮೇಲೆ ಹೊರಬಂದ ನಿಸಾರ್ ಸಾಹೇಬ್ ಅವರು ತಮಗಾದ ಹನಿಟ್ರಾಪ್ ಅನುಭವವನ್ನು ಬಿಚ್ಚಿಟ್ಟರು. ಅನ್ಯಾಯದ ಬಗ್ಗೆ ಪೊಲೀಸ್ ದೂರು ದಾಖಲಿಸಿ, ವಿಷಯ ವಿವರಿಸಿದರು - [ಮೊಬೈಲ್ ಬಳಸಿ.. ಕೀಟ ಓಡಿಸಿ!](https://mobiletime.in/2025/11/use-the-mobile-app-drive-away-insects/): ಕೇಂದ್ರ ಸರ್ಕಾರ ರೈತರ ಕಲ್ಯಾಣಕ್ಕಾಗಿ ರಾಷ್ಟ್ರೀಯ ಕೀಟ ಕಣ್ಗಾವಲು ವ್ಯವಸ್ಥೆ ಜಾರಿಗೆ ತಂದಿದ್ದು, ಕೀಟಗಳ ಬಗ್ಗೆ ಮಾಹಿತಿ ಹಾಗೂ ಅವುಗಳಿಂದ ಬರುವ ರೋಗ ನಿಯಂತ್ರಣಕ್ಕಾಗಿ ಮೊಬೈಲ್ ಅಪ್ಲಿಕೇಶನ್ ಹೊರ ತಂದಿದೆ. National Pest Surveillance System- NPSS ಎಂಬ ಅಪ್ಲಿನೇಶನ್’ನ್ನು ಮೊಬೈಲಿಗೆ ಅಳವಡಿಸಿದ ರೈತರು ಉಚಿತವಾಗಿ ಕೀಟಿ ನಿಯಂತ್ರಣ ಮಾಹಿತಿಪಡೆಯಲು ಅವಕಾಶ ನೀಡಲಾಗಿದೆ. ಪ್ಲೇ ಸ್ಟೋರಿನಲ್ಲಿ ಈ ಅಪ್ಲಿಕೇಶನ್ ಲಭ್ಯವಿದ್ದು, ವಿವಿಧ ಬೆಳೆಗಳಲ್ಲಿ ಕಾಣಬರುವ ಕೀಟ ಹಾಗೂ ರೋಗಗಳ ನಿಯಂತ್ರಣದ ಬಗ್ಗೆ ಅಲ್ಲಿ ಮಾಹಿತಿ ನೀಡಲಾಗುತ್ತದೆ. ಕನ್ನಡ ಸೇರಿ ಅನೇಕ ಭಾಷೆಗಳಲ್ಲಿ ಮಾಹಿತಿ ಲಭ್ಯವಿದೆ. ಬಳಕೆದಾರ ಮಾಹಿತಿ ಪಡೆಯುವ ಮುನ್ನ ಬೆಳೆ, ಕೀಟ, ಊರಿನ ಮಾಹಿತಿಯನ್ನು ಆಯ್ಕೆ ಮಾಡಬೇಕಿದ್ದು, ಕನ್ನಡ ಅಕ್ಷರಗಳು ಅಲ್ಲಿ ಸರಿಯಾಗಿ ಪ್ರದರ್ಶನವಾಗುತ್ತಿಲ್ಲ. ಜೊತೆಗೆ ಮುಖ್ಯವಾಗಿ ಆಹಾರ ಬೆಳೆಗಳ ಕೀಟಬಾಧೆಗೆ ಮಾತ್ರ ಅಲ್ಲಿ ಪರಿಹಾರ ಒದಗಿಸುವ ಮಾಹಿತಿ ಸಿಗುತ್ತಿದೆ. ಅಕ್ಷರದ ಜೊತೆ ಧ್ವನಿ ಮುದ್ರಣದ ರೂಪದಲ್ಲಿಯೂ ಕೀಟನಾಶಕ ಬಳಕೆ ಬಗ್ಗೆ ಅಪ್ಲಿಕೇಶನ್ ಮೂಲಕ ಮಾಹಿತಿ ನೀಡಲಾಗುತ್ತಿದೆ. ಅದಾಗಿಯೂ, ರೈತರು ಈ ಮೊಬೈಲ್ ಅಪ್ಲಿಕೇಶನ್ ಬಳಸಿ ಕೀಟ ನಿಯಂತ್ರಣದ ಬಗ್ಗೆ ಮಾಹಿತಿಪಡೆಯಲು ತೋಟಗಾರಿಕಾ ಇಲಾಖೆಯ ಜಂಟಿ ನಿರ್ದೇಶಕರು ಕೋರಿದ್ದಾರೆ. - [ಸಂಚಾರಿ ರಥಕ್ಕೆ ಸ್ಕೋಡ್‌ವೆಸ್ ಚಾಲಕ: ದೃಷ್ಠಿದೋಷ ದೂರಕ್ಕೆ ಈ ಆಸ್ಪತ್ರೆ ಸಹಾಯಕ](https://mobiletime.in/2025/11/scodves-driver-for-a-mobile-chariot-this-hospital-helps-in-curing-visual-impairment/): ಗುಡ್ಡಗಾಡು ಜನರಿಗೆ ಆರೋಗ್ಯ ಸೇವೆ ನೀಡಿ ಅನುಭವವಿರುವ ಸ್ಕೋಡ್‌ವೆಸ್ ಸಂಸ್ಥೆ ಸದ್ಯ ಗ್ರಾಮೀಣ ಭಾಗದ ಜನ ಅನುಭವಿಸುವ ಕಣ್ಣಿನ ಸಮಸ್ಯೆ ಬಗೆಹರಿಸುವುದಕ್ಕಾಗಿ `ನೇತ್ರರಥ’ ಎಂಬ ಸಂಚಾರಿ ಕಣ್ಣಿನ ಆಸ್ಪತ್ರೆಯನ್ನು ರೂಪಿಸಿದೆ. ಆ ಮೂಲಕ ಉತ್ತರ ಕನ್ನಡ ಜಿಲ್ಲೆಯ ಹಳ್ಳಿ ಹಳ್ಳಿಗೂ ಈ ವಾಹನದ ಮೂಲಕ ನುರಿತ ವೈದ್ಯರನ್ನು ಕಳುಹಿಸಿ ಜನರ ದೃಷ್ಠಿದೋಷ ದೂರ ಮಾಡುವ ಪ್ರಯತ್ನಕ್ಕೆ ಸ್ಕೋಡ್‌ವೆಸ್ ಮುಂದಾಗಿದೆ. ಗುಜರಾತ್‌ನ ದೇಸಾಯಿ ಫೌಂಡೇಶನ್, ಕೇರಳದ ಆಧ್ಯನ್ ಫೌಂಡೇಶನ್ ಹಾಗೂ ಜಿಲ್ಲಾ ಅಂಧತ್ವ ನಿವಾರಣಾ ಸಂಸ್ಥೆಯ ಸಹಯೋಗದಲ್ಲಿ ಈ ರಥ ಸಂಚರಿಸಲಿದ್ದು, ನವೆಂಬರ್ 24ರ ಬೆಳಗ್ಗೆ 11.30ಕ್ಕೆ ಶಿರಸಿಯ ಹುಲೇಕಲ್ ಪಂಚಾಯಿತಿಯ ಆವಾರದಲ್ಲಿ ಲೋಕಸಭಾ ಸದಸ್ಯ ವಿಶ್ವೇಶ್ವರ ಹೆಗಡೆ ಕಾಗೇರಿ ಇದನ್ನು ಉದ್ಘಾಟನೆ ಮಾಡಲಿದ್ದಾರೆ. ಅದಾದ ನಂತರ ಕಣ್ಣಿನ ಆರೋಗ್ಯ ರಕ್ಷಣೆಗಾಗಿ ಸಿದ್ಧವಾದ ಸ್ಕೊಡ್‌ವೆಸ್ ಸಂಸ್ಥೆಯ ನೇತ್ರರಥ ವಾಹನ ಎಲ್ಲಡೆ ಸಂಚರಿಸಿ ದೃಷ್ಠಿದೋಷ ನಿವಾರಣೆಗೆ ಶ್ರಮಿಸಲಿದೆ. ಸದ್ಯದ ವೇಳಾಪಟ್ಟಿಯಂತೆ ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯತ ಮಟ್ಟದಲ್ಲಿ ನೇತ್ರರಥದ ಸಂಚಾರ ನಡೆಯಲಿದೆ. ಈ ರಥದಲ್ಲಿ ವಿನೂತನ ಯಂತ್ರೋಪಕರಣಗಳನ್ನು ಸಜ್ಜುಗೊಳಿಸಲಾಗಿದೆ. ನವೆಂಬರ್ 24ರ ಉದ್ಘಾಟನಾ ಕಾರ್ಯಕ್ರಮದಲ್ಲಿ ಶಿರಸಿ-ಸಿದ್ದಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಭೀಮಣ್ಣ ನಾಯ್ಕ ಯೋಜನೆಗೆ ಚಾಲನೆ ನೀಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ವಿಧಾನಪರಿಷತ್ ಸದಸ್ಯ ಶಾಂತಾರಾಮ ಸಿದ್ದಿ, ಶಿರಸಿ ನಗರದ ಸಹಾಯಕ ಆಯುಕ್ತೆ ಕಾವ್ಯಾರಾಣಿ, ಶಿರಸಿ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷರಾದ ಜಗದೀಶ ಗೌಡ ಭಗವಹಿಸಲಿದ್ದಾರೆ. ವಿಶೇಷ ಆಹ್ವಾನಿತರಗಾಗಿ ಗುಜರಾತ್‌ನ ದೇಸಾಯಿ ಫೌಂಡೇಶನ್‌ನ ಅಭಿವೃದ್ಧಿ ವಿಭಾಗದ ನಿರ್ದೇಶಕ ಮನೋಜ ಪಾಂಡಾ, ಕೇರಳದ ಆಧ್ಯನ್ ಫೌಂಡೇಶನ್‌ನ ಮುಖ್ಯಸ್ಥರಾದ ಅಂಜನಾ ಕಾವೂರು, ಬೆಂಗಳೂರಿನ ನಯನ ಜ್ಯೋತಿ ಟ್ರಸ್ಟ್ನ ಸಂಸ್ಥಾಪಕ ಟ್ರಸ್ಟಿ ಜಯರಾಮನ್, ಸ್ಕೊಡ್‌ವೆಸ್ ಸಂಸ್ಥೆಯ ಆಡಳಿತ ಮಂಡಳಿಯ ಉಪಾಧ್ಯಕ್ಷರಾದ ಕುಮಾರ ವಿ ಕೂರ್ಸೆ, ಕಾರ್ಯದರ್ಶಿ ಮತ್ತು ಮುಖ್ಯ ಹಣಕಾಸು ಮತ್ತು ಆಡಳಿತಾಧಿಕಾರಿ ಸರಸ್ವತಿ ಎನ್ ರವಿ, ಸಹ-ಕಾರ್ಯದರ್ಶಿ ಕೆ ಎನ್ ಹೊಸಮನಿ, ಕಾರ್ಯಕಾರಿ ಸದಸ್ಯರಾದ ದಯಾನಂದ ಅಗಾಸೆ, ಪ್ರತಿಭಾ ಭಟ್ ಹಾಗೂ ಹುಲೇಕಲ್ ಗ್ರಾಮ ಪಂಚಾಯಿತಿಯ ಜನಪ್ರತಿನಿಧಿಗಳು ಜೊತೆಗಿರಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹುಲೇಕಲ್ ಗ್ರಾಮ ಪಂಚಾಯಿತಿ ಅಧ್ಯಕ್ಷ ಖಾಸೀಂ ಸಾಬ್‌ವಹಿಸಲಿದ್ದು, ಆ ದಿನ ಯೋಜನೆಯ ಉಪಯೋಗವನ್ನು ಹುಲೇಕಲ್ ಗ್ರಾಮ ಪಂಚಾಯತ್‌ನ ವ್ಯಾಪ್ತಿಯ ಸಾರ್ವಜನಿಕರು ಬಳಸಿಕೊಳ್ಳುವಂತೆ ಸ್ಕೊಡ್‌ವೆಸ್ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ವೆಂಕಟೇಶ ನಾಯ್ಕ ಮನವಿ ಮಾಡಿದ್ದಾರೆ. - [ಸಿನಿಮಾ ಪ್ರಪಂಚ: ನಿರೀಕ್ಷೆ ಹೆಚ್ಚಿಸಿದ ರುದ್ರ ಅವತಾರ!](https://mobiletime.in/2025/11/rudra-is-the-incarnation-of-a-simple-man/): ದಾಂಡೇಲಿಯ ಸಮಾಜ ಸೇವಕರು, ಉದ್ಯಮಿಗಳು, ಪ್ರೇಮ್ ವುಡ್ ಡೆಕೋರ್ಸ್ ಮಾಲಕರು ಹಾಗೂ ಪ್ರೇಮ್ ಜಿ ಪ್ರೊಡಕ್ಷನ್ ಮುಖ್ಯಸ್ಥರು ಆಗಿರುವ ಪ್ರೇಮಾನಂದ ಗವಸ ಅವರ ನಿರ್ಮಾಣದ ‘ರುದ್ರ ಅವತಾರ’ ಚಲನಚಿತ್ರದ ಮೋಷನ್ ಪೋಸ್ಟರ್ ಬಿಡುಗಡೆ ಸಮಾರಂಭವು ಬೆಂಗಳೂರಿನ ಜಿಟಿ ಮಾಲ್ ಇಲ್ಲಿಯ ಉತ್ಸವ್ ಲೆಗಸಿ ಸಭಾ ಭವನದಲ್ಲಿ ವರ್ಣರಂಜಿತವಾಗಿ ಜರುಗಿತು. ಮೋಷನ್ ಪೋಸ್ಟರನ್ನು ಕನ್ನಡ ಚಿತ್ರರಂಗದ ಸುಪ್ರೀಂ ಹೀರೋ ಹಾಗೂ ‘ರುದ್ರ ಅವತಾರ’ ಚಲನಚಿತ್ರದ ಮುಖ್ಯ ಪಾತ್ರದಲ್ಲಿರುವ ಶಶಿಕುಮಾರ್ ಅವರು ಬಿಡುಗಡೆಗೊಳಿಸಿದರು. ನಂತರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಿರ್ಮಾಪಕ ಪ್ರೇಮಾನಂದ ಗವಸ ಅವರು ನಾನೊಬ್ಬ ಬ್ಯುಸಿನೆಸ್ ಮ್ಯಾನ್. ಸಮಾಜ ಸೇವೆ ನನ್ನ ಆಸಕ್ತಿ. ಸೇವೆಯಲ್ಲಿ ಸಂತೃಪ್ತಿ ಇದೆ. ಆದರೆ ಚಲನಚಿತ್ರದಲ್ಲಿ ನಟನೆ ಮಾಡಬೇಕೆಂದು ಕನಸು ಕಂಡಿದ್ದೆ. ಆದರೆ ಭಗವಂತ ನನ್ನಿಂದಲೆ ಚಲನಚಿತ್ರ ನಿರ್ಮಾಣ ಮಾಡುವುದರ ಜೊತೆಗೆ ನಟನೆ ಮಾಡಲು ಸಹ ಅನುಗ್ರಹಿಸಿದ್ದಾನೆ. ಇದರಿಂದ ಅಪಾರವಾದ ಸಂತಸವಾಗಿದೆ. ಕೋಟ್ಯಂತರ ಜನರ ಮನಸ್ಸು ಗೆದ್ದ ನಟರಾದ ಶಶಿಕುಮಾರ್ ಮತ್ತು ತಾರಾ ಅವರ ಜೊತೆ ವೇದಿಕೆ ಹಂಚಿಕೊಳ್ಳುವಂತಹ ಅಪರೂಪದ ಅಪೂರ್ವ ಅವಕಾಶ ನನಗೆ ಒದಗಿ ಬಂದಿರುವುದು ನನ್ನ ಪೂರ್ವ ಜನ್ಮದ ಪುಣ್ಯದ ಫಲ ಎಂದರು. ನಾನು ಹಣ ಮಾಡುವ ಉದ್ದೇಶದಿಂದ ಈ ಚಲನಚಿತ್ರ ನಿರ್ಮಾಣಕ್ಕೆ ಇಳಿದಿಲ್ಲ. ಸಮಾಜಕ್ಕೆ ಒಂದು ಉಪಯುಕ್ತ ಸಂದೇಶವನ್ನು ನೀಡಬೇಕು. ಆ ಮೂಲಕವಾಗಿ ಸಮಾಜ ನಿರ್ಮಾಣದ ಆಶಯವನ್ನು ಹೊಂದಿ ಚಲನಚಿತ್ರ ನಿರ್ಮಾಣಕ್ಕೆ ಮುಂದಡಿಯಿಟ್ಟಿದ್ದೇನೆ. ಇದು ಆರಂಭ ಮಾತ್ರ. ಕರುನಾಡಿನ ಜನತೆ ಪ್ರೀತಿಸಿ ಬೆಳೆಸಿ ಪ್ರೋತ್ಸಾಹಿಸಿ, ಆಶೀರ್ವದಿಸಿದ್ದಲ್ಲಿ ಮತ್ತಷ್ಟು ಚಲನಚಿತ್ರ ನಿರ್ಮಾಣ ಮಾಡುವ ಗುರಿಯನ್ನು ಹೊಂದಿದ್ದೇನೆ ಎಂದ ಅವರು ನಿರ್ದೇಶಕ ಸವಾದ್ ಮಂಗಳೂರು ಅವರು ನನ್ನನ್ನು ಭೇಟಿಯಾಗಿ ಕಥೆಯನ್ನು ವಿವರಿಸುತ್ತಾ ಹೋದಾಗ, ಇದೊಂದು ಸಮಾಜಕ್ಕೆ ಉಪಯುಕ್ತವಾದ ಸಂದೇಶವನ್ನು ಸಾರುವ ಕಥೆಯ ಹಂದರವನ್ನು ಹೊಂದಿದೆ ಎನ್ನುವುದನ್ನು ಅರಿತು, ‘ರುದ್ರ ಅವತಾರ’ ಚಲನಚಿತ್ರ ನಿರ್ಮಾಣಕ್ಕೆ ಇಳಿದಿದ್ದೇನೆ. ಈ ಚಲನಚಿತ್ರದಲ್ಲಿ ನನಗೂ ನನ್ನ ಇಷ್ಟದಂತೆ ಹಾಗೂ ಆಸಕ್ತಿಯಂತೆ ಅತ್ಯುತ್ತಮವಾದ ಪಾತ್ರವನ್ನು ನೀಡಲಾಗಿದ್ದು, ಆ ಪಾತ್ರವನ್ನು ಸಮರ್ಪಕವಾಗಿ ನಿಭಾಯಿಸುವ ವಿಶ್ವಾಸ ನನಗಿದೆ ಎಂದರು. ದೂರದ ದಾಂಡೇಲಿಯವನಾದ ನನ್ನ ನಿರ್ಮಾಣದ ಈ ಚಲನಚಿತ್ರವನ್ನು ಈ ನಾಡಿನ ಜನ ಮೆಚ್ಚಿ ಆಶೀರ್ವದಿಸಬೇಕೆಂದು ವಿನಂತಿಸಿದರು. ನಿರ್ದೇಶಕ ಸವಾದ್ ಮಂಗಳೂರು ಮಾತನಾಡುತ್ತ, ‘ರುದ್ರ ಅವತಾರ ಶಿವನ ಮತ್ತೊಂದು ರೂಪ. ಮಧ್ಯಮ ವರ್ಗದ ಜನತೆ ತಮ್ಮ ಮಕ್ಕಳ ರಕ್ಷಣೆಗೋಸ್ಕರ ಯಾವ ರೀತಿ ಹೋರಾಡುತ್ತಾರೆ, ಹೇಗೆ ರುದ್ರ ಅವತಾರ ತಾಳುತ್ತಾರೆ ಎಂಬುದನ್ನು ಈ ಚಿತ್ರ ಸಾದರಪಡಿಸುತ್ತದೆ. ಮಕ್ಕಳ ಕನಸುಗಳನ್ನು ಈಡೇರಿಸುವ ಸಲುವಾಗಿ, ಪೋಷಕರು ತಮ್ಮ ಕನಸು, ಆಸೆಗಳನ್ನು ಕಟ್ಟಿಟ್ಟು ಜೀವನ ನಡೆಸುತ್ತಾರೆ, ಅದೇ ತಮ್ಮ ಮಕ್ಕಳಿಗೆ ತೊಂದರೆ ಎದುರಾದಾಗ, ತಮ್ಮ ಪ್ರಾಣವನ್ನೂ ಲೆಕ್ಕಿಸದೆ ಯಾವ ರೀತಿ ಹೋರಾಡುತ್ತಾರೆ. ಹೇಗೆ ರುದ್ರ ಅವತಾರ ತಾಳುತ್ತಾರೆ ಎನ್ನುವುದೇ ಈ ಚಿತ್ರದ ಕಥಾಹಂದರ. ಈ ಕಥೆಗೆ ಮೂಲ ಪ್ರೇರಣೆಯೇ ದಾಂಡೇಲಿಯ ಡ್ಯಾನ್ಸ್ ಮಾಸ್ಟರ್ ಅಭಿಷೇಕ್ ಪಾಟೀಲ್.10,000ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ನೃತ್ಯ ತರಬೇತಿಯನ್ನು ನೀಡುವ ಮೂಲಕ ಗಮನ ಸೆಳೆದಿರುವ ಅಭಿಷೇಕ್ ಪಾಟೀಲ್ ಅವರಿಂದಲೇ ನಿರ್ಮಾಪಕರ ಪರಿಚಯವಾಗಿ ನನ್ನ ಕನಸು ನನಸಾಗುವ ರೀತಿಯಲ್ಲಿ ಸಾಗುತ್ತಿದೆ ಎಂದರು. ಪ್ರಮುಖವಾಗಿ ಈ ಕಥೆಯಲ್ಲಿ ಮೂರು ಪಾತ್ರಗಳನ್ನು ಶಿವನ ರುದ್ರ ಅವತಾರದಲ್ಲಿ ನೋಡಬಹುದು, ಅವರಲ್ಲಿ ಮುಖ್ಯವಾಗಿ ಬರುವವರೇ ಶಶಿಕುಮಾರ್. ನವೆಂಬರ್ 24ರಿಂದ ಚಿತ್ರೀಕರಣ ಆರಂಭವಾಗಲಿದೆ ಎಂದರು. ಸವಾದ್ ಮಂಗಳೂರು ಅವರು ಅಭಿಷೇಕ್ ಪಾಟೀಲ್ ಅವರ ಹೆಸರನ್ನು ಹೇಳುತ್ತಿದ್ದಂತೆಯೇ ನಟ ಶಶಿಕುಮಾರ್ ಅವರು ಅಭಿಷೇಕ್ ಪಾಟೀಲ್ ಅವರನ್ನು ವೇದಿಕೆಗೆ ಕರೆಯುವಂತೆ ಸೂಚಿಸಿದರು. ಆನಂತರ ಅಭಿಷೇಕ್ ಪಾಟೀಲ್ ಅವರನ್ನು ವೇದಿಕೆಗೆ ಗೌರವದಿಂದ ಬರಮಾಡಿಕೊಳ್ಳಲಾಯಿತು. ಸುಪ್ರೀಂ ಹಿರೋ ಶಶಿಕುಮಾ‌ರ್ ಮಾತನಾಡುತ್ತ, ‘ಇದೊಂದು ಅತ್ಯುತ್ತಮವಾದ ಚಿತ್ರವಾಗಿದೆ. ಹೀರೋ, ಹೀರೋಯಿನ್ ಕಥೆಯಲ್ಲ, ಇಲ್ಲಿ ಕಂಟೆಂಟೇ ಹೀರೋ. ಈ ಚಿತ್ರದಲ್ಲಿ ನಾನೊಬ್ಬ ಆಟೋ ಡ್ರೈವರ್, ಹೆಣ್ಣುಮಗಳ ತಂದೆಯಾಗಿ ನಟಿಸುತ್ತಿದ್ದೇನೆ, ಸಂಗೀತಾ ನನ್ನ ಪತ್ನಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ, ಮಗಳಿಗಾಗಿ ಹೋರಾಡೋ ತಂದೆಯ ಪಾತ್ರ ನನ್ನದು. ಚಿತ್ರದಲ್ಲಿ ಹಾರ್ಟ್ ಟಚಿಂಗ್ ಸೀಕ್ವೆನ್ಸ್ ತುಂಬಾನೇ ಇದೆ, ಈ ಚಿತ್ರದ ಪ್ರಥಮಾರ್ಧ ಕಥೆ ಕೇಳಿದಾಗಲೇ ನನಗೆ ರೋಮಾಂಚನವಾಯಿತು’ ಎಂದು ಹೇಳಿದರು. ಹಿರಿಯನಟಿ ತಾರಾ ಅನುರಾಧ ಅವರು ಮಾತನಾಡುತ್ತ, ‘ಈ ಚಿತ್ರದ ಯಾವುದೇ ಪಾತ್ರವಾಗಲೀ ಸುಮ್ಮನೆ ಬಂದು ಹೋಗುವುದಲ್ಲ. ಎಲ್ಲ ಕ್ಯಾರೆಕ್ಟರ್ ಕಥೆಯ ಭಾಗವಾಗಿವೆ. ತುಂಬಾ ವರ್ಷಗಳ ನಂತರ ಶಶಿಕುಮಾ‌ರ್, ಸಂಗೀತಾ ಜತೆ ಕೆಲಸ ಮಾಡುತ್ತಿದ್ದೇನೆ’ ಎಂದು ಹೇಳಿದರು. ಇದೇ ಸಂದರ್ಭದಲ್ಲಿ ಸಂಗೀತಾ, ಯಶ್ ಶೆಟ್ಟಿ, ವರ್ಧನ್ ತೀರ್ಥಳ್ಳಿ, ಅಂಕಿತಾ ಜಯರಾಮ್, ಸಾಧನಾ ಇವರೆಲ್ಲಾ ಈ ಚಿತ್ರದ ಕಥೆಯ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು. ಶಶಿಕುಮಾ‌ರ್ ಪುತ್ರ ಆದಿತ್ಯ ಕೂಡ ಹಾಜರಿದ್ದು ಶುಭ ಹಾರೈಸಿದರು. ಅಲನ್ ಭರತ್ ಅವರ ಛಾಯಾಗ್ರಹಣ, ಪಾಲ್ ಅಲೆಕ್ಸ್ ಅವರ ಸಂಗೀತ ಸಂಯೋಜನೆ, ಶ್ರೀಕಾಂತ್ ಅವರ ಸಂಕಲನ, ಸತೀಶ್ ಬ್ರಹ್ಮಾವ‌ರ್ ಅವರ ನಿರ್ಮಾಣ ನಿರ್ವಹಣೆ, ಸಂಕಲನಕಾರರಾಗಿ ಶ್ರೀಕಾಂತ್, ನೃತ್ಯ ನಿರ್ದೇಶಕರಾಗಿ ಬಾಲು ಮಾಸ್ಟರ್, ಅರ್ಜುನ್ ರಾಜ್ ಅವರ ಸಾಹಸ ನಿರ್ದೇಶನ, ಬಿ.ಆರ್.ನವೀನ್ ಕುಮಾರ್ ಅವರಿಂದ ಶಬ್ದ ವಿನ್ಯಾಸ, ಗುರುಪ್ರಸಾದ್ ಬೆಳ್ತಂಗಡಿ ಈ ಎಫ್ ಎಕ್ಷ್, ಕಲಾ ನಿರ್ದೇಶಕರಾಗಿ ಗಣೇಶ್ ಎಸ್, ವಸ್ತ್ರ ವಿನ್ಯಾಸ ವಿನೋದ್, ಮೇಕಪ್ ಪಸಪುಲೆಟಿ ನಾಗರಾಜ್, ಮಾರ್ಕೆಟಿಂಗ್ ಲಿಖಿತ್ ರೈ, ರೋಡ್ ಸೈಡ್ ವಿಲೇಜ್ ಪ್ರವೀಣ್, ವಿವಾನ್ ವಶಿಷ್ಠ ಇನ್ಫೀಗೋ ಪ್ರೊಡಕ್ಷನ್ ಮತ್ತು ಪಿ ಆರ್ ಓ ಆಗಿ ನಾಗೇಂದ್ರ ಅವರು ಕಾರ್ಯನಿರ್ವಹಿಸಲಿದ್ದಾರೆ. ಈ ಚಲನಚಿತ್ರದಲ್ಲಿ ಸುಪ್ರೀಂ ಹೀರೋ ಶಶಿಕುಮಾರ್, ಡಾ. ತಾರಾ ಅನುರಾಧ, ಶೋಭಾರಾಜ್, ಪ್ರೇಮಾನಂದ ಗವಸ ಅಭಿ ದಾಸ್, ಸಂಗೀತ ಅನಿಲ್, ಯಸ್ ಶೆಟ್ಟಿ, ರಘು ಪಾಂಡೇಶ್ವರ್, ವರ್ಧನ್, ಬಾಲ ರಾಜವಾಡಿ, ರೇಣು ಶಿಕಾರಿ, ಕುಮಾರಿ ಸಾಧನ, ಕುಮಾರಿ ಪ್ರಜ್ಞಾ ಅವರು ನಟಿಸಲಿದ್ದಾರೆ. ದಾಂಡೇಲಿಯ ಸಂದೇಶ್ ಎಸ್.ಜೈನ್, ಅಭಿಷೇಕ ಪಾಟೀಲ್, ಜಾನ್ಸನ್ ರೋಡ್ರಿಗಸ್, ರೇಷ್ಮಾ ಪ್ರದೀಪ ಶೆಟ್ಟಿ, ರುಕ್ಸನಾ ಕಲೇಗಾರ, ಪ್ರಗತಿ ಗವಸ, ದಾತ್ರಿ ಮೊದಲಾದವರು ಮೊಟ್ಟ ಮೊದಲ ಬಾರಿಗೆ ಚಲನಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಒಟ್ಟಿನಲ್ಲಿ ಬಹುನಿರೀಕ್ಷಿತ ಈ ಚಲನಚಿತ್ರದ ಶೂಟಿಂಗ್ ಇದೇ ನವಂಬರ್ 24ರಂದು ಆರಂಭವಾಗಲಿದೆ. ಬಹುತೇಕ ಮೇ ಅಂತ್ಯದೊಳಗೆ ಇಲ್ಲವೇ ಜೂನ್ ಮೊದಲ ವಾರದಲ್ಲಿ ಈ ಚಲನಚಿತ್ರ ಬಿಡುಗಡೆಯಾಗುವ ಸಾಧ್ಯತೆಯಿದೆ. - [ಆಕೆಯ ಗರ್ಭದಲ್ಲಿತ್ತು 5 ಕೆಜಿಯ ಗಡ್ಡೆ!](https://mobiletime.in/2025/11/there-was-a-5-kg-tumor-in-her-uterus/): ಗರ್ಭಕೋಶದ ಒಳಗೆ ಬೆಳೆದಿದ್ದ ದೊಡ್ಡ ಗಾತ್ರದ ಗಡ್ಡೆಯನ್ನು ಶಿರಸಿ ಸರ್ಕಾರಿ ಆಸ್ಪತ್ರೆಯ ವೈದ್ಯಾಧಿಕಾರಿ ಡಾ ನೇತ್ರಾವತಿ ಶಿರಸಿಕರ್ ಅವರು ಹೊರತೆಗೆದಿದ್ದಾರೆ. ಡಾ ಮಹೇಶ ಹೆಗಡೆ, ಡಾ ಪದ್ಮಿನಿ ಪೈ, ಡಾ ವಿನಾಯಕ ತಂಬದಮನೆ ಸೇರಿ ಕೆಜಿ ಗಾತ್ರದ ಗಡ್ಡೆಯನ್ನು ಗರ್ಭದೊಳಗಿರಿಸಿಕೊಂಡು ನಿತ್ಯವೂ ನರಳುತ್ತಿದ್ದ ಬಡ ಮಹಿಳೆಯ ಪ್ರಾಣ ಕಾಪಾಡಿದ್ದಾರೆ. ಶಿರಸಿಯ ಗ್ರಾಮೀಣ ಭಾಗದ ಮಹಿಳೆಯೊಬ್ಬರಿಗೆ ಹೊಟ್ಟೆ ನೋವು ಕಾಣಿಸುತ್ತಿತ್ತು. ತಪಾಸಣೆ ನಡೆಸಿದಾಗ ಗರ್ಭದಲ್ಲಿ ಗಡ್ಡೆ ಬೆಳೆದಿರುವುದು ಗೊತ್ತಾಗಿತ್ತು. ಆರ್ಥಿಕ ಪರಿಸ್ಥಿತಿ ಸರಿಯಿಲ್ಲದ ಕಾರಣ ಆ ಮಹಿಳೆ ದೊಡ್ಡ ಆಸ್ಪತ್ರೆಯ ಕಡೆ ಹೋಗಿರಲಿಲ್ಲ. ಗಡ್ಡೆ ಬೆಳವಣಿಗೆ ಆದಂತೆ ಮಹಿಳೆಯ ಸಮಸ್ಯೆಯೂ ದೊಡ್ಡದಾಯಿತು. ಹೀಗಾಗಿ ಅವರು ಅನಿವಾರ್ಯವಾಗಿ ಶಿರಸಿಯ ಸರ್ಕಾರಿ ಆಸ್ಪತ್ರೆಗೆ ಬಂದರು. ದೊಡ್ಡ ಗಡ್ಡೆ ನೋಡಿದ ವೈದ್ಯರು ದೊಡ್ಡ ಆಸ್ಪತ್ರೆಗೆ ಹೋಗುವಂತೆ ಸೂಚಿಸಿದರು. ಆಗ, ಆ ಮಹಿಳೆ ತಮ್ಮ ಸಮಸ್ಯೆಯನ್ನು ಹೇಳಿದರು. ಜೊತೆಗೆ ಕೈಯಲ್ಲಿ ಕಾಸಿಲ್ಲದ ವಿಷಯವನ್ನು ಪ್ರಸ್ತಾಪಿಸಿದರು. ಮಹಿಳೆಯ ಸಂಕಷ್ಟ ಅರಿತ ಸರ್ಕಾರಿ ಆಸ್ಪತ್ರೆಯ ವೈದ್ಯಕೀಯ ಸಿಬ್ಬಂದಿ ಸಾಹಸಕ್ಕೆ ಮುಂದಾದರು. ಆ ಮಹಿಳೆಯ ಮೇಲೆ ಡಾ ಪದ್ಮಿನಿ ಪೈ ಅವರು ಅನಸ್ತೇಶಿಯಾ ಪ್ರಯೋಗ ಮಾಡಿದರು. ಡಾ ನೇತ್ರಾವತಿ ಶಿರಸಿಕರ್ ಅವರು ಒಂದು ತಾಸುಗಳ ಕಾಲ ನಿರಂತರ ಶಸ್ತç ಚಿಕಿತ್ಸೆ ನಡೆಸಿದರು. ಡಾ ಮಹೇಶ ಹೆಗಡೆ, ಡಾ ವಿನಾಯಕ ತಂಬದಮನೆ ಜೊತೆ ಅಲ್ಲಿನ ಸಿಬ್ಬಂದಿಯೂ ಚಿಕಿತ್ಸೆಗೆ ಸಹಕರಿಸಿದ್ದು, ಎಲ್ಲರೂ ಸೇರಿ ಗರ್ಭದೊಳಗೆ ಅಡಗಿದ್ದ ಗಡ್ಡೆಯನ್ನು ಹೊರತೆಗೆದರು. ಆ ಗಡ್ಡೆ 5.6 ಕೆಜಿಯಷ್ಟು ದೊಡ್ಡದಾಗಿತ್ತು. ಶಿರಸಿ ಸರ್ಕಾರಿ ಆಸ್ಪತ್ರೆಯಲ್ಲಿಯೇ ಮೊದಲ ಬಾರಿಗೆ ಇಷ್ಟು ದೊಡ್ಡದ ಗಡ್ಡೆ ಗರ್ಭದಿಂದ ಹೊರ ಬಂದಿತ್ತು. ಸದ್ಯ ಆ ಮಹಿಳೆ ಚೇತರಿಸಿಕೊಳ್ಳುತ್ತಿದ್ದು, ಅವರ ಆರೋಗ್ಯ ಸ್ಥಿರವಾಗಿದೆ. ತಮ್ಮ ಹೊಟ್ಟೆಯೊಳಗಿನ ನೋವು ದೂರ ಮಾಡಿದ ವೈದ್ಯರಿಗೆ ಮಹಿಳೆ ಕೃತಜ್ಞತೆ ಹೇಳಿದ್ದಾರೆ. - [ಈ ಸಹಾಯವಾಣಿ ಸ್ತ್ರೀಯರಿಗೆ ಮಾತ್ರ!](https://mobiletime.in/2025/11/this-helpline-is-for-women-only/): ಮಹಿಳೆಯರ ಮೇಲಿನ ದೌರ್ಜನ್ಯ ತಡೆಗೆ ಸರ್ಕಾರ ತುರ್ತು ಸಹಾಯವಾಣಿ ಕಲ್ಪಿಸಿದೆ. ತಮಗಾಗುವ ಅನ್ಯಾಯ, ದೌರ್ಜನ್ಯ ಸೇರಿ ಯಾವುದೇ ಬಗೆಯ ಸಹಾಯಕ್ಕಾಗಿ ಮಹಿಳೆಯರು 181ಗೆ ಫೋನ್ ಮಾಡಿ ಸಮಸ್ಯೆ ಹೇಳಬಹುದಾಗಿದ್ದು, ತುರ್ತು ಸನ್ನಿವೇಶದಲ್ಲಿ ಅಧಿಕಾರಿಗಳ ತಂಡ ನೆರವಿಗೆ ಬರಲಿದೆ. `ಉತ್ತರ ಕನ್ನಡ ಜಿಲ್ಲೆಯ ಎಲ್ಲಾ ಮಹಿಳೆಯರು ತಮ್ಮ ಸಮಸ್ಯೆಗಳ ಬಗ್ಗೆ ಸಹಾಯವಾಣಿಗೆ ಫೋನ್ ಮಾಡಬಹುದಾಗಿದ್ದು, ಈ ಕರೆ ಸಂಪೂರ್ಣ ಉಚಿತ’ ಎಂದು ಡೀಸಿ ಕೆ ಲಕ್ಷ್ಮೀಪ್ರಿಯ ಅವರು ಅರಿವು ಮೂಡಿಸಿದ್ದಾರೆ. `ಮಹಿಳೆಯರು ತಮ್ಮ ಮೇಲೆ ನಡೆಯುವ ಕೌಟುಂಬಿಕ ದೌರ್ಜನ್ಯ, ಲೈಂಗಿಕ ಹಿಂಸೆ ಸೇರಿದಂತೆ ಯಾವುದೇ ರೀತಿಯ ಸಮಸ್ಯೆಗಳಿಗೆ ಇಲ್ಲಿ ಫೋನ್ ಮಾಡಬಹುದಾಗಿದೆ. ನೊಂದ ಮಹಿಳೆಯರಿಗೆ ಕಾನೂನು ನೆರವು, ವೈದ್ಯಕೀಯ ನೆರವು, ಪೊಲೀಸ್ ನೆರವು ಹಾಗೂ ಸಮಾಲೋಚನೆಗೆ ಸರ್ಕಾರ ಬದ್ಧವಿದೆ’ ಎಂದವರು ಹೇಳಿದ್ದಾರೆ. `ಉತ್ತರ ಕನ್ನಡ ಜಿಲ್ಲೆಯಲ್ಲಿ ಸಖಿ ಒನ್ ಸ್ಟಾಪ್ ಸೆಂಟರ್ ಮೂಲಕ ಪ್ರಸಕ್ತ ಸಾಲಿನಲ್ಲಿ ಸೆಪ್ಟಂಬರಿನವರೆಗೆ 74 ಪ್ರಕರಣಗಳು ದಾಖಲಾಗಿದೆ. ಸಾಂತ್ವನ ಯೋಜನೆಯ ಮೂಲಕ ನೊಂದ ಮಹಿಳೆಯರಿಗೆ ಸ್ವಯಂ ಸೇವಾ ಸಂಸ್ಥೆಗಳ ಮೂಲಕ ಅಗತ್ಯ ನೆರವು ನೀಡಲಾಗುತ್ತಿದೆ’ ಎಂದು ಜಿಲ್ಲಾಧಿಕಾರಿ ಕೆ ಲಕ್ಷ್ಮೀಪ್ರಿಯಾ ಅವರು ಮಾಹಿತಿ ನೀಡಿದ್ದಾರೆ. `ಸಹಾಯವಾಣಿ ಹಾಗೂ ಸಾಂತ್ವಾನ ಕೇಂದ್ರದ 24*7 ಮಹಿಳೆಯರಿಗೆ ನೆರವಿಗೆ ಸ್ಪಂದಿಸಬೇಕು’ ಎಂದು ಅವರು ಸೂಚಿಸಿದ್ದಾರೆ. `ಪ್ರಸಕ್ತ ಸಾಲಿನಲ್ಲಿ ಈ ಕೇಂದ್ರಗಳ ಮೂಲಕ 395 ದೂರುಗಳನ್ನು ಸ್ವೀಕರಿಸಿ, ಎಲ್ಲಾ ದೂರುಗಳನ್ನು ಇತ್ಯರ್ಥಪಡಿಸಲಾಗಿದೆ. ಸಾಂತ್ವನ ಕೇಂದ್ರದ ಸಿಬ್ಬಂದಿಗಳು ಮಹಿಳೆಯರು ನೀಡುವ ದೂರುಗಳ ಕುರಿತು ಇನ್ನಷ್ಟು ಪರಿಣಾಮಕಾರಿಯಾಗಿ ಸ್ಪಂದಿಸುವ ಮೂಲಕ ತಪ್ಪು ಮಾಡಿದವರ ವಿರುದ್ಧ ಸೂಕ್ತ ಕಾನೂನು ಕ್ರಮ ಆಗುವಂತೆ ನೋಡಿಕೊಳ್ಳಬೇಕು’ ಎಂದವರು ಹೇಳಿದ್ದಾರೆ. `ಮಹಿಳೆಯರು ಮತ್ತು ಮಕ್ಕಳ ಅನೈತಿಕ ಸಾಗಾಣಿಕೆ ತಡೆ ಕುರಿತಂತೆ ರಚಿಸಲಾಗಿರುವ ಗ್ರಾಮ ಮಟ್ಟದಿಂದ ರಚಿಸಲಾಗಿರುವ ಎಲ್ಲಾ ಸಮಿತಿಗಳು ತಮ್ಮ ಜವಾಬ್ದಾರಿ ಅರಿತು ಕಾರ್ಯನಿರ್ವಹಿಸಬೇಕು, ಜಿಲ್ಲೆಯಲ್ಲಿ ಬಾಲ್ಯ ವಿವಾಹ ಮತ್ತು ಪೋಕ್ಸೋ ಪ್ರಕರಣಗಳು ನಡೆಯದಂತೆ ಈ ಬಗ್ಗೆ ಸಾರ್ವಜನಿಕವಾಗಿ ಹೆಚ್ಚಿನ ಜಾಗೃತಿ ಕಾರ್ಯಕ್ರಮಗಳನ್ನು ನಗರ ಮತ್ತು ಗ್ರಾಮೀಣ ಮಟ್ಟದಲ್ಲಿ ಆಯೋಜಿಸಬೇಕು. ಗ್ರಾಮ ಸಭೆಗಳಲ್ಲಿ ಈ ಬಗ್ಗೆ ಅರಿವು ಮೂಡಿಸಬೇಕು. ಪ್ರಸಕ್ತ ಸಾಲಿನಲ್ಲಿ 17 ಪೋಕ್ಸೋ ಪ್ರಕರಣಗಳು ವರದಿಯಾಗಿದ್ದು, ಶಿಶು ಅಭಿವೃಧ್ದಿ ಯೋಜನಾಧಿಕಾರಿಗಳು ತಮ್ಮ ವ್ಯಾಪ್ತಿಯಲ್ಲಿ ಹೆಚ್ಚಿನ ಅರಿವು ಕಾರ್ಯಕ್ರಮಗಳನ್ನು ಆಯೋಜಿಸಬೇಕು’ ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದರು. `ಅಂಗನವಾಡಿ ಮತ್ತು ಶಾಲಾ ಮಕ್ಕಳ ಆರೋಗ್ಯ ತಪಾಸಣೆಯಲ್ಲಿ ಶೇ 100ರಷ್ಟು ಸಾಧನೆ ಆಗಬೇಕು. ತೀವ್ರ ಅಪೌಷ್ಠಿಕತೆಯಿಂದ ಬಳಸುತ್ತಿರುವ ಮಕ್ಕಳ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ, ಅವರಿಗೆ ಸೂಕ್ತ ಚಿಕಿತ್ಸೆ ಒದಗಿಸಬೇಕು. ಅಂಗನವಾಡಿಯಲ್ಲಿ ಮಕ್ಕಳಿಗೆ ನಿಗಧಿಯಂತೆ ಪೌಷ್ಠಿಕ ಆಹಾರ ನೀಡುವುದರ ಜೊತೆಗೆ ಮಕ್ಕಳನ್ನು ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸಿ ಅವರ ಸರ್ವತೋಮುಖ ಬೆಳವಣಿಗೆಗೆ ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಳ್ಳಬೇಕು. ಈ ಬಗ್ಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಅಧಿಕಾರಿಗಳು ಅಂಗನವಾಡಿಗಳಿಗೆ ದಿಡೀರ್ ಭೇಟಿ ನೀಡಿ ಪರಿಶೀಲನೆ ನಡೆಸಬೇಕು’ ಎಂದು ಸೂಚಿಸಿದರು. - [ಕಟ್ಟಡ ಕಾರ್ಮಿಕನಿಗೆ ಕದಿಯುವ ಚಟ!](https://mobiletime.in/2025/11/construction-worker-has-a-habit-of-stealing/): ಅನಾರೋಗ್ಯಕ್ಕೆ ಒಳಗಾದ ಆಪ್ತರನ್ನು ಮಾತನಾಡಿಸುವುದಕ್ಕಾಗಿ ಆಸ್ಪತ್ರೆಗೆ ಬಂದಿದ್ದ ರವಿಕಲಾ ಗುರವ್ ಅವರ ಸ್ಕೂಟಿಯಲ್ಲಿದ್ದ ಚಿನ್ನಾಭರಣ ದೋಚಿದ ರಫೀಕ್ ಖಾನ್ ಸಿಕ್ಕಿಬಿದ್ದಿದ್ದಾರೆ. ಜೊತೆಗೆ ಅವರು ದೋಚಿದ್ದ ಚಿನ್ನಾಭರಣವೂ ಸಿಕ್ಕಿದೆ. ಅಂಕೋಲಾ ವಂದಿಗೆಯ ರವಿಕಲಾ ಹರಿಶ್ಚಂದ್ರ ಗುರವ್ ಅವರು ನವೆಂಬರ್ 18ರಂದು ಕಾರವಾರದ ಕೆರವಡಿಯಲ್ಲಿರುವ ದುರ್ಗಾಮಾತೆಯ ಜಾತ್ರೆಗೆ ಹೋಗಿದ್ದರು. ಜಾತ್ರೆ ಅಂಗವಾಗಿ ಅವರು ಮೈಮೇಲೆ ಚಿನ್ನಾಭರಣ ಧರಿಸಿದ್ದು, ಜಾತ್ರೆ ಮುಗಿದ ನಂತರ ಅದನ್ನು ಡಬ್ಬಿಯಲ್ಲಿ ತುಂಬಿ ಬಟ್ಟೆಯಲ್ಲಿ ಸುತ್ತಿದ್ದರು. ನವೆಂಬರ್ 20ರಂದು ಅವರು ಮಾವನ ಜೊತೆ ಕಾರವಾರದ ಜಿಲ್ಲಾ ಆಸ್ಪತ್ರೆಗೆ ಹೋಗಿದ್ದರು. ಆಸ್ಪತ್ರೆ ಆವರಣದಲ್ಲಿ ಸ್ಕೂಟಿ ನಿಲ್ಲಿಸಿದ್ದು, ಸ್ಕೂಟಿ ಮೇಲೆ ಬ್ಯಾಗ್ ಇರಿಸಿದ್ದರು. ಆಸ್ಪತ್ರೆಯಿಂದ ಹೊರಬರುವಷ್ಟರಲ್ಲಿ ಅವರ ಆ ಬ್ಯಾಗಿನಲ್ಲಿದ್ದ ಆಭರಣಗಳು ಕಾಣೆಯಾಗಿದ್ದವು. 4.80 ಲಕ್ಷ ರೂ ಮೌಲ್ಯದ ಚಿನ್ನಾಭರಣ ಹಾಗೂ 5 ಸಾವಿರ ರೂ ಹಣವನ್ನು ಕಳ್ಳರು ಅಪಹರಿಸಿದ್ದರು. ಮಧ್ಯಾಹ್ನ 3ರಿಂದ 3.30ರ ಅವಧಿಯಲ್ಲಿ ಕಳ್ಳತನ ನಡೆದಿರುವ ಬಗ್ಗೆ ರವಿಕಲಾ ಗುರವ್ ಪೊಲೀಸರಲ್ಲಿ ಹೇಳಿದ್ದರು. ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಶುರು ಮಾಡಿದ್ದರು. ಉತ್ತರಕನ್ನಡ ಜಿಲ್ಲಾ ಪೊಲೀಸ್ ಅಧೀಕ್ಷಕ ದೀಪನ್ ಎಂ ಎನ್, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕೃಷ್ಣಮೂರ್ತಿ ಹಾಗೂ ಜಗದೀಶ ಎಂ ಹಾಗೂ ಕಾರವಾರ ಉಪವಿಭಾಗದ ಡಿಎಸ್ಪಿ ಎಸ್ ವಿ ಗಿರೀಶ ಸೇರಿ ತನಿಖಾ ತಂಡ ರಚಿಸಿದ್ದು, ದೂರು ಬಂದ 24 ತಾಸಿನೊಳಗೆ ಪೊಲೀಸರು ತಮ್ಮ ಚಾಣಾಕ್ಷತನ ಉಪಯೋಗಿಸಿ ಕಳ್ಳನನ್ನು ಹುಡುಕಿದರು. ಕಾರವಾರ ನಗರ ಪೊಲೀಸ್ ಠಾಣೆಯ ಪಿಐ ಜಯಶ್ರೀ ಎಸ್ ಎಂ ಜೊತೆ ಪಿಎಸ್‌ಐ ಬಾಬು ಆಗೇರ, ಹಾಗೂ ಸುಧಾ ಅಘನಾಶಿನಿ ಅವರು ಮೊದಲು ಸಿಸಿ ಕ್ಯಾಮರಾ ದಾಖಲೆ ಪರಿಶೀಲಿಸಿದರು. ಚಿತ್ತಾಕುಲದಲ್ಲಿ ಗೌಂಡಿ ಕೆಲಸ ಮಾಡಿಕೊಂಡಿದ್ದ ರಫೀಕ್ ಖಾನ್ (62) ಕಳ್ಳತನ ನಡೆಸಿರುವುದು ಗೊತ್ತಾಯಿತು. ಪೊಲೀಸ್ ಸಿಬ್ಬಂದಿ ಸುಧಾ ನಾಯ್ಕ, ರುದ್ರೇಶ ಮೈತ್ರಾಣಿ, ಶಿವರಾಮ ದೇಸಾಯಿ, ಮಹಮ್ಮದ್ ಇಸ್ಮಾಯಿಲ್ ಕೋಣನಕೇರಿ, ಸಚಿನ್ ನಾಯ್ಕ, ಅರ್ಜುನ ದೇಸಾಯಿ, ಪ್ರತಾಪಕುಮಾರ್ ಎಂ, ನಾಗೇಂದ್ರ ನಾಯ್ಕ, ಗಣೇಶ್ ನಾಯ್ಕ, ಮಾದೇವ ಸಂಗಾಪೂರ, ಪ್ರಕಾಶ ದಂಡಪ್ಪನವರ್ ಸೇರಿ ಆರೋಪಿಯನ್ನು ಬಂಧಿಸಿದರು. ಚಿನ್ನಾಭರಣದ ಜೊತೆ ಆರೋಪಿಯ ಬಳಿಯಿದ್ದ ಸ್ಕೂಟಿಯನ್ನು ಜಪ್ತು ಮಾಡಿದರು. - [ಸಾಹಿತ್ಯಕ್ಕೆ ಕಡ್ಡಿ: ಸಮ್ಮೇಳನಕ್ಕೆ ಹಲವು ಅಡ್ಡಿ!](https://mobiletime.in/2025/12/a-stumbling-block-for-literature-many-obstacles-to-the-conference/): ಡಿಸೆಂಬರ್ 13ರಿಂದ ದಾಂಡೇಲಿಯಲ್ಲಿ ಆಯೋಜಿಸಲು ಉದ್ದೇಶಿಸಲಾಗಿರುವ ಜಿಲ್ಲಾ ಮಟ್ಟದ 25ನೇ ಸಾಹಿತ್ಯ ಸಮ್ಮೇಳನಕ್ಕೆ ಹಲವು ಬಗೆಯ ಅಡ್ಡಿ-ಆತಂಕಗಳು ಎದುರಾಗಿದೆ. ಅಲ್ಲಿನ ಗುಂಪುಗಾರಿಕೆ ಪರಿಣಾಮದಿಂದ ಸಮ್ಮೇಳನದ ವಿಷಯ ಕೋರ್ಟು-ಕಚೇರಿಯ ಮೆಟ್ಟಿಲೇರಿದೆ. `ರಾಜ್ಯ ಪರಿಷತ್ ಅನುಮತಿಪಡೆದು ಸಮ್ಮೇಳನ ನಡೆಸಿ’ ಎಂದು ನ್ಯಾಯಾಲಯ ಸೂಚಿಸಿದ್ದು, `ಶೀಘ್ರದಲ್ಲಿಯೇ ಅನುಮತಿ ಸಿಗಲಿದೆ’ ಎಂದು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಬಿ ಎನ್ ವಾಸರೆ ಅವರು ಹೇಳಿದ್ದಾರೆ. ಸಾಹಿತ್ಯ ಪರಿಷತ್ ಅಜೀವ ಸದಸ್ಯರಾದ ಅಕ್ರಮ್ ಖಾನ್ ಸಂದೀಪ ಭಂಡಾರಿ ಮತ್ತು ಪ್ರವೀಣ್ ಕೊಠಾರಿ ಅವರು ಸಮ್ಮೇಳನದ ನ್ಯೂನ್ಯತೆಗಳ ಬಗ್ಗೆ ಕೋರ್ಟಿನ ಮೋರೆ ಹೋಗಿದ್ದಾರೆ. `ಸಮ್ಮೇಳನದ ಆಯೋಜಕರು ರಾಜ್ಯ ಅಧ್ಯಕ್ಷರ ಅನುಮತಿ ಪಡೆಯದೇ ಕಾರ್ಯಕ್ರಮ ಪ್ರಚಾರ ಮಾಡುತ್ತಿದ್ದಾರೆ. ಅಪಾಯಕಾರಿ ಫ್ಲೇಕ್ಸು-ಬ್ಯಾನರ್ ಅಳವಡಿಸಿದ್ದಾರೆ. ಜೊತೆಗೆ ಪ್ರಚಾರಕ್ಕಾಗಿ ಅನೇಕರಿಂದ ಅನಧಿಕೃತವಾಗಿ ಹಣ ಸಂಗ್ರಹಿಸಿದ್ದಾರೆ’ ಎಂಬುದು ಅವರ ಆರೋಪ. ಈ ಹಿನ್ನಲೆ ನ್ಯಾಯಾಲಯ ಗುರುವಾರ ಕೆಲ ಫ್ಲೆಕ್ಸು-ಬ್ಯಾನರ್ ತೆರವಿಗೆ ಆದೇಶಿಸಿದ್ದು, ಶುಕ್ರವಾರ ರಾಜ್ಯ ಸಮಿತಿ ಅನುಮತಿಪಡೆದು ಸಮ್ಮೇಳನ ಆಯೋಜಿಸುವಂತೆ ಸೂಚಿಸಿದೆ. ದೂರುದಾರರ ಪರ ವಾದ ಮಾಡಿದ ವಕೀಲ ರಾಘವೇಂದ್ರ ಗಡೆಪ್ಪನವರ ಅವರು `ಕಸಾಪ ನಿಯಮಾವಳಿ ಸಮ್ಮೇಳನ ನಡೆಸಲು ಅಧ್ಯಕ್ಷರ ಅಥವಾ ಆಡಳಿತಾಧಿಕಾರಿಯ ಸ್ಪಷ್ಟ ಅನುಮತಿ ಅಗತ್ಯ’ ಎಂದು ನ್ಯಾಯಾಲಯಕ್ಕೆ ವಿವರಿಸಿದ್ದಾರೆ. . ಸಮ್ಮೇಳನದ ಪರವಾಗಿ ವಾದ ಮಂಡಿಸಿದ ನ್ಯಾಯವಾದಿ ಕೆ ಎಚ್ ಪಾಟೀಲ್ ಅವರು ಸಮ್ಮೇಳನಕ್ಕೆ ಎರಡು ತಿಂಗಳಿನಿAದ ನಿರಂತರ ಪ್ರಯತ್ನ ನಡೆದಿರುವುದನ್ನು ನ್ಯಾಯಾಲಯದ ಗಮನಕ್ಕೆ ತಂದಿದ್ದಾರೆ. ಸದ್ಯ ಕಸಾಪಕ್ಕೆ ಸರ್ಕಾರ ಆಡಳಿತಾಧಿಕಾರಿ ನೇಮಿಸಿದ್ದು, `ಈ ಹಿನ್ನಲೆ ನ್ಯಾಯಾಲಯ ಅನುಮತಿ ತಂದು ಒಪ್ಪಿಸಿ’ ಎಂದು ಸೂಚಿಸಿದೆ. `ಸಮ್ಮೇಳನ ನಡೆಸುವ ಬಗ್ಗೆ ಅನೇಕ ಸಭೆ ನಡೆದಿದೆ. ಶಾಸಕರು ಸೇರಿ ಅನೇಕರ ಸಮ್ಮುಖದಲ್ಲಿ ಸಭೆ ನಡೆಸಲಾಗಿದೆ. ಕಳೆದ ಎರಡು ದಿನಗಳಿಂದ ಸಮ್ಮೇಳನದ ಬಗ್ಗೆ ಅಪಪ್ರಚಾರ ನಡೆಯುತ್ತಿದ್ದು, ಸಮ್ಮೇಳನದ ಮೂಲಕವೇ ಅದಕ್ಕೆ ಉತ್ತರ ಕೊಡಲಿದ್ದೇವೆ’ ಎಂದು ಬಿ ಎನ್ ವಾಸರೆ ಅವರು ಹೇಳಿದ್ದಾರೆ. `ಸಮ್ಮೇಳನಕ್ಕೆ ತಡೆಯಾಜ್ಞೆ ತರಲು ಅಕ್ರಂ ಖಾನ್ ಪ್ರಯತ್ನಿಸುತ್ತಿದ್ದು, ಇದಕ್ಕಾಗಿ ನ್ಯಾಯಾಲಯದ ಮೊರೆ ಹೋಗಿದ್ದಾರೆ. ನ್ಯಾಯಾಲಯದಲ್ಲಿ ನಡೆದ ಕೆಲ ಸಂಗತಿಗಳನ್ನು ತಿರುಚಿ ಪ್ರಚಾರ ಮಾಡಲಾಗಿದೆ. ಅಲ್ಲಿ ನಡೆಯದೇ ಇರುವ ವಿಚಾರಗಳನ್ನು ಪ್ರಚಾರ ಮಾಡಲಾಗಿದೆ. ವಕೀಲರಾದ ಕೆ ಎಚ್ ಪಾಟೀಲ ಅವರು ಸುಧೀರ್ಘ ವಾದ ಮಂಡಿಸಿ ಸಮ್ಮೇಳನಕ್ಕೆ ಅಡ್ಡಿ ಆಗದ ಹಾಗೇ ಮಾಡಿದ್ದಾರೆ. ನ್ಯಾಯಾಲಯ ಸೂಚಿಸಿದ ಅನುಮತಿಯನ್ನು ಸಹ ಒಪ್ಪಿಸಲು ಬದ್ಧ’ ಎಂದು ಬಿ ಎನ್ ವಾಸರೆ ಅವರು ಮಾಧ್ಯಮದವರ ಬಳಿ ಹೇಳಿದ್ದಾರೆ. `ಸಮ್ಮೇಳನಕ್ಕೆ ಯಾವುದೇ ಸಮಸ್ಯೆ ಇಲ್ಲ. ಸಮ್ಮೇಳನ ಸಹಜವಾಗಿ ನಡೆಯಲಿದ್ದು, ಎಲ್ಲರೂ ಬನ್ನಿ’ ಎಂದು ಅವರು ಕರೆ ನೀಡಿದ್ದಾರೆ. `ಕನ್ನಡದ ಕೆಲಸಗಳಿಗೆ ಎಲ್ಲರೂ ಒಂದಾಗಿದ್ದಾರೆ. ನಾಡದೇವಿಯ ಕೆಲಸಕ್ಕೆ ಯಾವುದೇ ಅಡ್ಡಿ ಬರುವುದಿಲ್ಲ. ನ್ಯಾಯಾಲಯ ಎರಡು ಕಡೆಯವರ ವಾದ ಆಲಿಸಿ ದಾಖಲೆಗಳನ್ನು ಪರಿಶೀಲಿಸಿದೆ. ಸೂಕ್ತ ಇಲಾಖೆಯಿಂದ ಅನುಮತಿಪಡೆದು ಸಮ್ಮೇಳನ ನಡೆಸುವಂತೆ ನ್ಯಾಯಾಲಯ ಸೂಚಿಸಿದೆ. ಅದರ ಪ್ರಕಾರ, ಅನುಮತಿಗಳನ್ನು ನ್ಯಾಯಾಲಯಕ್ಕೆ ಒದಗಿಸಿ ಸಮ್ಮೇಳನ ನಡೆಸಲು ಬದ್ಧ’ ಎಂದು ವಕೀಲರಾದ ಕೆ ಎಚ್ ಪಾಟೀಲ್ ಅವರು ಮಾಧ್ಯಮಗಳಿಗೆ ವಿವರಿಸಿದರು. `ಈಗಾಗಲೇ ಕೆಲ ದಾಖಲೆಗಳನ್ನು ನ್ಯಾಯಾಲಯಕ್ಕೆ ನೀಡಲಾಗಿದೆ. ಅನುಮತಿಪಡೆದ ದೃಢೀಕೃತ ಪ್ರತಿಗಳ ಜೊತೆ ಅಧ್ಯಕ್ಷರ ಪ್ರಮಾಣ ಪತ್ರವನ್ನು ನ್ಯಾಯಾಲಯಕ್ಕೆ ಒದಗಿಸುತ್ತೇವೆ’ ಎಂದು ವಿವರಿಸಿದರು. `ಸಮ್ಮೇಳನಕ್ಕೆ ಯಾವುದೇ ಸಮಸ್ಯೆ ಇಲ್ಲ’ ಎಂದು ಸ್ಪಷ್ಠಪಡಿಸಿದರು. - [ಚಾಲಕನ ನಿಯಂತ್ರಣ ತಪ್ಪಿದ ಚಾಲುಕ್ಯ ಬಸ್](https://mobiletime.in/2025/12/driver-loses-control-of-chalukya-bus/): ಹೆದ್ದಾರಿಯಲ್ಲಿ ಚಲಿಸುತ್ತಿದ್ದ ಚಾಲುಕ್ಯ ಬಸ್ಸು ಚಾಲಕನ ನಿಯಂತ್ರಣ ತಪ್ಪಿದೆ. ಪರಿಣಾಮ ಆ ಬಸ್ಸು ಮುಂದೆ ಸಾಗುತ್ತಿದ್ದ ಟ್ಯಾಂಕರಿಗೆ ಡಿಕ್ಕಿ ಹೊಡೆದಿದೆ. ಯಲ್ಲಾಪುರ ತಾಲೂಕಿನ ಗುಳ್ಳಾಪುರದಲ್ಲಿ ಈ ಅವಘಡ ನಡೆದಿದೆ. ಅಪಘಾತದ ರಭಸಕ್ಕೆ ಬಸ್ಸಿನ ಮುಂದಿನ ಭಾಗ ಜಖಂ ಆಗಿದೆ. ಗಾಜುಗಳು ಒಡೆದಿವೆ. ಅಪಘಾತದಲ್ಲಿ ಟ್ಯಾಂಕರ್ ಹಿಂದಿನ ಭಾಗಕ್ಕೂ ಹಾನಿಯಾಗಿದೆ. ಈ ಬಸ್ಸು ಶುಕ್ರವಾರ ಹುಬ್ಬಳ್ಳಿ – ಅಂಕೋಲಾ ಮಾರ್ಗವಾಗಿ ಸಂಚರಿಸುತ್ತಿತ್ತು. ಬಸ್ಸಿನ ಮುಂದೆ ಟ್ಯಾಂಕರ್ ನಿಧಾನವಾಗಿ ಸಂಚರಿಸುತ್ತಿತ್ತು. ಬಸ್ಸಿನ ವೇಗ ಏಕಾಏಕಿ ಹೆಚ್ಚಾಗಿದ್ದರಿಂದ ಬಸ್ಸು ಟ್ಯಾಂಕರಿಗೆ ಗುದ್ದಿತು. ಬಸ್ಸಿನ ಒಳಗಿದ್ದ ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯವಾಗಿದೆ. ಗಾಯಗೊಂಡವರನ್ನು ಯಲ್ಲಾಪುರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಪೊಲೀಸರು ಸ್ಥಳ ಭೇಟಿ ನಡೆಸಿ ಪರಿಶೀಲನೆ ಮಾಡಿದ್ದಾರೆ. - [ಕರಾವಳಿ ಉತ್ಸವ: ರೀಲ್ಸ್ ಮಾಡಿ.. ಹಣ ಗೆಲ್ಲಿ!](https://mobiletime.in/2025/12/coastal-festival-make-reels-win-money/): ಡಿಸೆಂಬರ್ 22ರಿಂದ 28ರವರೆಗೆ ಅದ್ಧೂರಿ ಕರಾವಳಿ ಉತ್ಸವ ಆಯೋಜಿಸಲು ಜಿಲ್ಲಾಡಳಿತ ನಿರ್ಧರಿಸಿದ್ದು, ಉತ್ಸವದ ಅಂಗವಾಗಿ `ರೀಲ್ಸ್ ಮಾಡುವ ಸ್ಪರ್ಧೆ’ಯೂ ನಡೆಯಲಿದೆ. ಉತ್ತರ ಕನ್ನಡ ಜಿಲ್ಲೆಯ ಸೊಬಗನ್ನು ಚಿತ್ರಿಸುವವರಿಂದ ಸರ್ಕಾರವೇ ರೀಲ್ಸ್ ಮಾಡಿ ಕೊಡುವಂತೆ ಕೇಳಿಕೊಂಡಿದೆ. ಈ ಸ್ಪರ್ಧೆಗೆ ಮೂರು ಬಹುಮಾನಗಳಿವೆ. ಕಾರವಾರದ ರವೀಂದ್ರನಾಥ ಟ್ಯಾಗೋರ ಕಡಲತೀರದಲ್ಲಿ `ಕರಾವಳಿ ಉತ್ಸವ-2025′ ನಡೆಯಲಿದೆ. ಉತ್ಸವಕ್ಕೆ ವ್ಯಾಪಕ ಪ್ರಚಾರ ನೀಡಿ ಪ್ರವಾಸಿಗರನ್ನು ಆಕರ್ಷಿಸಲು ಜಿಲ್ಲಾಡಳಿತ ಆಸಕ್ತಿವಹಿಸಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ನೂರಾರು ಪ್ರವಾಸಿ ತಾಣಗಳಿದ್ದು, ಕರಾವಳಿ ಉತ್ಸವದ ಅಂಗವಾಗಿ ಇಲ್ಲಿನ ಜಲಪಾತ, ಕಡಲತೀರ, ಪಾರಂಪರಿಕ ತಾಣ ಹಾಗೂ ಸಾಂಸ್ಕೃತಿಕ ಕಲೆಗಳನ್ನು ರೀಲ್ಸ್ ಮೂಲಕ ಪ್ರಪಂಚಕ್ಕೆ ಸಾರಲು ಜಿಲ್ಲಾಡಳಿತ ನಿರ್ಧರಿಸಿದೆ. ಈ ಹಿನ್ನಲೆ ಉತ್ತರ ಕನ್ನಡ ಜಿಲ್ಲೆಯ ಜನರಿಗಾಗಿ ರೀಲ್ಸ್ ಸ್ಪರ್ಧೆಯನ್ನು ಆಯೋಜಿಸಿದೆ. ಆ ಮೂಲಕ ಉತ್ತರ ಕನ್ನಡದ ಸೊಬಗು ಪರಿಚಯಿಸುವ ರೀಲ್ಸ್ಗಳನ್ನು ಆಯ್ಕೆಮಾಡಿಕೊಳ್ಳುವವವರಿಗೆ ಸರ್ಕಾರವೇ ಸುವರ್ಣ ಅವಕಾಶ ಕಲ್ಪಿಸಿದೆ. ರೀಲ್ಸ್ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನಪಡೆದವರಿಗೆ 10 ಸಾವಿರ ರೂ, ಎರಡನೇ ಬಹುಮಾನಪಡೆದವರಿಗೆ 7 ಸಾವಿರ ರೂ ಹಾಗೂ 3ನೇ ಬಹುಮಾನಪಡೆದವರಿಗೆ 5 ಸಾವಿರ ರೂ ಸಿಗಲಿದೆ. `ಈ ಸ್ಪರ್ಧೆಯಲ್ಲಿ ಭಾಗವಹಿಸುವವರು ಉತ್ತರ ಕನ್ನಡ ಜಿಲ್ಲೆಯವರಾಗಿರಬೇಕು’ ಎಂಬ ಕಟ್ಟುನಿಟ್ಟಿನ ನಿಯಮವಿದೆ. ಯಾವುದೇ ವಯಸ್ಸಿನವರು ಸಹ ರೀಲ್ಸ್ ಸ್ಪರ್ಧೆಯಲ್ಲಿ ಭಾಗವಹಿಸಬಹುದಾಗಿದ್ದು, ಗುಣಮಟ್ಟದ ವಿಡಿಯೋಗಳನ್ನು ಮಾತ್ರ ಗಮನಿಸಲಾಗುತ್ತದೆ. ಅರ್ಹ ರೀಲ್ಸ್’ಗಳನ್ನು ಸರ್ಕಾರವೇ ಪ್ರಚಾರ ಮಾಡಲಿದೆ. ರೀಲ್ಸ್ ಜೊತೆ ಆಧಾರ್ ಕಾರ್ಡ ಪ್ರತಿ, ಮೊಬೈಲ್ ನಂ ಹಾಗೂ ಬ್ಯಾಂಕ್ ಖಾತೆ ವಿವರ ಸಲ್ಲಿಸುವುದು ಕಡ್ಡಾಯ. ರೀಲ್ಸ್ ಸ್ವಂತದ್ದಾಗಿದ್ದು, ಕಾಫಿರೈಟ್ ನಿಯಮ ಉಲ್ಲಂಘನೆ ಆಗದಂತೆ ಎಚ್ಚರವಹಿಸುವುದು ಮುಖ್ಯ. ಚನ್ನಾಗಿರುವ ರೀಲ್ಸ್’ಗಳನ್ನು ಕರಾವಳಿ ಉತ್ಸವದಲ್ಲಿಯೂ ಪ್ರದರ್ಶನ ಮಾಡಲಾಗುತ್ತದೆ. ಒಂದು ನಿಮಿಷದ ಒಳಗೆ ಹಾಗೂ ಮೂರು ನಿಮಿಷದ ಒಳಗಿನ ರೀಲ್ಸ್ ಕಳುಹಿಸುವವರಿಗೆ ಮೊದಲ ಆದ್ಯತೆ ಕೊಡಲಾಗುತ್ತದೆ. ಅಂದ ಹಾಗೇ, ರೀಲ್ಸ್ ರವಾನಿಸಲು ಡಿಸೆಂಬರ್ 19 ಕೊನೆ ದಿನ. ರೀಲ್ಸ್ ಕಳುಹಿಸಲು ಇಲ್ಲಿ ಕ್ಲಿಕ್ಕಿಸಿ `ಕರಾವಳಿ ಉತ್ಸವ: ರೀಲ್ಸ್ ಸ್ಪರ್ಧೆ’ ಅಥವಾ ಇಲ್ಲಿಯೂ ಕ್ಲಿಕ್ ಮಾಡಿ ಕಳುಹಿಸಿ: “ಉತ್ತರ ಕನ್ನಡ ರೀಲ್ಸ್’ ಅನುಮಾನಗಳಿದ್ದರೆ ಇಮೇಲ್ ಮಾಡಿ: ddtourismkarwar@gmail.com ನಿಮ್ಮ ರೀಲ್ಸುಗಳನ್ನು ಇಲ್ಲಿಯೂ ಕಳುಹಿಸಿ: ಉಪನಿರ್ದೇಶಕರು ಹಾಗೂ ಸದಸ್ಯ ಕಾರ್ಯದರ್ಶಿ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿ ಪ್ರವಾಸೋದ್ಯಮ ಇಲಾಖೆ, ಕಾರವಾರ ಇನ್ನೂ ಹೆಚ್ಚಿನ ಮಾಹಿತಿ ಬೇಕಾದರೆ ಇಲ್ಲಿ ಫೋನ್ ಮಾಡಿ: 08382-221172     - [ಕಾಲೇಜು ಕನ್ಯೆಗೆ ಹೃದಯಘಾತ!](https://mobiletime.in/2025/12/heartbreak-for-a-college-girl/): ತೀವೃ ಪ್ರಮಾಣದ ಹೃದಯಘಾತಕ್ಕೆ ತುತ್ತಾಗಿ 21 ವರ್ಷದ ಯುವತಿಯೊಬ್ಬರು ಸಾವನಪ್ಪಿದ್ದಾರೆ. ಭಟ್ಕಳದ ಶಿರಾಲಿಯಲ್ಲಿ ಸುವರ್ಣ ಸೂರ್ಯನಾರಾಯಣ ಕಡ್ಲೆ ಅವರು ವಾಸವಾಗಿದ್ದರು. ಗುರುಸುಧೀಂದ್ರ ಕಾಲೇಜಿನಲ್ಲಿ ಅವರು ಬಿಸಿಎ ಅಂತಿಮ ವರ್ಷದ ವಿದ್ಯಾರ್ಥಿನಿಯಾಗಿದ್ದರು. ಪ್ರತಿಭಾನ್ವಿತರಾಗಿದ್ದ ಅವರು ದಿಢೀರ್ ಅನಾರೋಗ್ಯದಿಂದ ಬದುಕಿನ ಪಯಣ ಮುಗಿಸಿದರು. ರಾತ್ರಿ ವೇಳೆ ಏಕಾಏಕಿ ಪಿಡ್ಸ ಕಾಣಿಸಿಕೊಂಡ ಹಿನ್ನಲೆ ಸುವರ್ಣ ಕಡ್ಲೆ ಅವರನ್ನು ಶಿರಾಲಿ ಆರೋಗ್ಯ ಕೇಂದ್ರಕ್ಕೆ ಕರೆತರಲಾಯಿತು. ಅಷ್ಟರಲ್ಲಿ ಅವರು ಮೂರ್ಚೆ ಹೋಗಿದ್ದು, ಚಿಕಿತ್ಸೆ ವೇಳೆಯಲ್ಲಿಯೇ ಹೃದಯಘಾತವಾಯಿತು. ಸುವರ್ಣ ಅವರು ಇನ್ನಿಲ್ಲ ಎಂದು ವೈದ್ಯರು ಘೋಷಿಸಿದರು. ಈ ಬಗ್ಗೆ ಸುವರ್ಣ ಅವರ ತಾಯಿ ಅನ್ನಪೂರ್ಣ ಕಡ್ಲೆ ಅವರು ಭಟ್ಕಳ ಗ್ರಾಮೀಣ ಠಾಣೆಗೆ ಮಾಹಿತಿ ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿದರು. - [ಪೌರುಷ ಪ್ರದರ್ಶನ: ಪಿಸ್ತೂಲು ತೋರಿಸಿದ ಭೂಪ ಆ ಸಂದೀಪ!](https://mobiletime.in/2025/12/manliness-show-bhupa-a-sandeepa-pointed-a-pistol/): ಕಾಲೇಜಿನಿoದ ಮನೆಗೆ ಮರಳುತ್ತಿದ್ದ ದರ್ಶನ್ ತಾಂಡೇಲ್ ಅವರಿಗೆ ಸಂದೀಪ ನಾಯ್ಕ ಅವರು ಪಿಸ್ತೂಲು ತೋರಿಸಿ ಬೆದರಿಸಿದ್ದಾರೆ. ಕಾರವಾರದ ಸದಾಶಿವಗಡ ಬಳಿಯ ದೇವಭಾಗದ ದರ್ಶನ್ ಪುರಂದರ ತಾಂಡೇಲ್ ಅವರು ನಂದನಗದ್ದಾ ಟೋಲ್ ನಾಕಾದ ಪ್ರಿಮಿಯರ್ ಕಾಲೇಜಿನ ವಿದ್ಯಾರ್ಥಿಯಾಗಿದ್ದಾರೆ. ಕಾಲೇಜು ಮುಗಿಸಿ ಸ್ನೇಹಿತರ ಜೊತೆ ಮನೆಗೆ ಮರಳುವಾಗ ಬಿಣಗಾದ ಸಂದೀಪ ಕೆ ನಾಯ್ಕ ಅವರು ಪಿಸ್ತೂಲು ತೋರಿಸಿದ್ದಾರೆ. ಡಿಸೆಂಬರ್ 12ರ ಸಂಜೆ ದರ್ಶನ್ ತಾಂಡೇಲ್ ಅವರು ಸ್ನೇಹಿತರ ಜೊತೆ ನಡೆದು ಬರುತ್ತಿದ್ದರು. ಸ್ನೇಹಿತರು ಮಾಡಿದ ಹಾಸ್ಯಕ್ಕೆ ದರ್ಶನ್ ತಾಂಡೇಲ್ ನಕ್ಕಿದ್ದರು. ಈ ವೇಳೆ ಮಹಾರಾಷ್ಟ ನೋಂದಣಿಯ ಕಾರಿನಲ್ಲಿ ಬಂದ ಸಂದೀಪ ನಾಯ್ಕ ಅವರು ದರ್ಶನ್ ತಾಂಡೇಲ್ ಅವರ ಜೊತೆ ಸ್ನೇಹಿತರನ್ನು ಅಡ್ಡಗಟ್ಟಿದರು. `ಯಾಕೆ ನಗುತ್ತಿದ್ದೀರಿ?’ ಎಂದು ಸಂದೀಪ ನಾಯ್ಕ ಅವರು ಪ್ರಶ್ನಿಸಿದರು. `ನಮ್ಮ ಪಾಡಿಗೆ ನಾವು ನಡೆದು ಬರುತ್ತಿದ್ದೇವೆ’ ಎಂದು ದರ್ಶನ್ ತಾಂಡೇಲ್ ಉತ್ತರಿಸಿದರು. ಇದರಿಂದ ಸಂದೀಪ ನಾಯ್ಕ ಅವರು ಸಮಾಧಾನರಾಗಲಿಲ್ಲ. ಇನ್ನೊಮ್ಮೆ ಪ್ರಶ್ನಿಸಿದಾಗಲೂ ಆ ಎಲ್ಲಾ ವಿದ್ಯಾರ್ಥಿಗಳು ಅದೇ ಬಗೆಯ ಉತ್ತರ ನೀಡಿದರು. ಆಗ, ಸಿಟ್ಟಾದ ಸಂದೀಪ ನಾಯ್ಕ ಅವರು ಪಿಸ್ತೂಲು ತೆರೆದರು. ಆ ವಿದ್ಯಾರ್ಥಿಗಳ ಕಡೆ ಗುರಿ ಕಾಣಿಸಿ `Be aware of me, I will shoot u all’ ಎಂದು ಕೂಗಾಡಿದರು. ಇದರಿಂದ ಬೆದರಿದ ವಿದ್ಯಾರ್ಥಿಗಳು ಅಲ್ಲಿಂದ ತಪ್ಪಿಸಿಕೊಂಡು ಮನೆಗೆ ಮರಳಿದ್ದು, ಕುಟುಂಬದವರ ಬಳಿ ಈ ವಿಷಯ ಚರ್ಚಿಸಿದರು. ಕೊನೆಗೆ ಬೆದರಿಕೆ ವಿರುದ್ಧ ಕಾರವಾರ ನಗರ ಠಾಣಾ ಪೊಲೀಸರಿಗೆ ದೂರಿದರು. - [ಅಧಿವೇಶನದಲ್ಲಿ ಮೊಳಗಿದ ಅರಣ್ಯ ಹಕ್ಕು!](https://mobiletime.in/2025/12/forest-rights-were-raised-in-the-session/): `ಅರಣ್ಯ ಹಕ್ಕಿನ ಸಮಸ್ಯೆ ಬಗ್ಗೆ ಅಧಿವೇಶನದಲ್ಲಿ ಚರ್ಚೆ ನಡೆಯಬೇಕು’ ಎಂಬ ನಿಟ್ಟಿನಲ್ಲಿ ನಡೆದ ಹೋರಾಟಕ್ಕೆ ಸ್ಪಂದನೆ ಸಿಕ್ಕಿದೆ. ಯಲ್ಲಾಪುರ ಶಾಸಕ ಶಿವರಾಮ ಹೆಬ್ಬಾರ್ ಅವರು ಅರಣ್ಯವಾಸಿಗಳ ವಿಷಯವನ್ನು ಸದನದಲ್ಲಿ ಪ್ರಸ್ತಾಪಿಸಿದ್ದಾರೆ. ರಾಜ್ಯ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ಅವರು `ಅಧಿವೇಶನದಲ್ಲಿ ಈ ಬಗ್ಗೆ ಚರ್ಚೆ ನಡೆಯಬೇಕು’ ಎಂದು ಹೋರಾಟ ನಡೆಸಿದ್ದರು. ಶಾಸಕ ಶಿವರಾಮ ಹೆಬ್ಬಾರ್ ಅವರು ಅತಿಕ್ರಮಣದಾರರ ಸಮಸ್ಯೆ ಬಗ್ಗೆ ಅಧಿವೇಶನದಲ್ಲಿ ಪ್ರಶ್ನಿಸಿದರು. ಅರಣ್ಯ ಸಚಿವ ಈಶ್ವರ ಖಂಡ್ರೇ ಅವರು ಇದಕ್ಕೆ ಲಿಖಿತ ಉತ್ತರವನ್ನು ನೀಡಿದರು. ಆದರೆ, ಆ ಉತ್ತರಕ್ಕೆ ಶಿವರಾಮ ಹೆಬ್ಬಾರ್ ಅವರು ಸಂತ್ರಪ್ತರಾಗಲಿಲ್ಲ. ಹೀಗಾಗಿ ಅಧಿವೇಶನದಲ್ಲಿ ಎದ್ದು ನಿಂತು ಅವರು ಈ ಬಗ್ಗೆ ಪುನರುಚ್ಚರಿಸಿದ್ದು, `ನೀಡಿದ ಉತ್ತರ ಹಾಗೂ ನೈಜ ಸನ್ನಿವೇಶ ವಿಭಿನ್ನವಾಗಿದೆ’ ಎಂದು ಗಮನಸೆಳೆದರು. `2006ರಿಂದ ಈವರೆಗೆ ಲಕ್ಷಾಂತರ ಜನ ಭೂಮಿ ಹಕ್ಕಿಗಾಗಿ ಕಾಯುತ್ತಿದ್ದಾರೆ. ಅಧಿಕಾರಿಗಳು ನೀಡಿದ ಉತ್ತರ ಹಾಗೂ ನಡೆದ ರೀತಿಗೂ ವ್ಯತ್ಯಾಸವಿದೆ’ ಎಂದು ಶಿವರಾಮ ಹೆಬ್ಬಾರ್ ಅವರು ವಿವರಿಸಿದ್ದು, ಅಂಕಿ-ಸoಖ್ಯೆಗಳ ಮಾಹಿತಿ ನೀಡಿದರು. `ಅರಣ್ಯ ಹಕ್ಕಿಗೆ ಸಾಂಪ್ರದಾಯಿಕ ಪದ್ಧತಿ ಸಂಪ್ರದಾಯ, ರಚನೆ, ಪವಿತ್ರ ಸ್ಥಳ ಮತ್ತು ಭೌತಿಕ ಗುಣಲಕ್ಷಣ ಪ್ರಮುಖ ಸಾಕ್ಷಿ ಅವಶ್ಯ’ ಎಂದು ಅರಣ್ಯ ಸಚಿವರು ಲಿಖಿತವಾಗಿ ತಿಳಿಸಿದರು. `ಜಿಲ್ಲಾ ಪಂಚಾಯತಗೆ ಜನಪ್ರತಿನಿಧಿಗಳಿಲ್ಲದ ಸನ್ನಿವೇಶದಲ್ಲಿ ಕಾನೂನುಬಾಹಿರವಾಗಿ ಅಧಿಕಾರಿಗಳು ಅರ್ಜಿ ತಿರಸ್ಕರಿಸಿದ್ದಾರೆ’ ಎಂದು ಶಿವರಾಮ ಹೆಬ್ಬಾರ್ ಅವರು ವಿವರಿಸಿದರು. `ಉನ್ನತ ಮಟ್ಟದ ಸಭೆ ನಡೆಸಿ ಸೂಕ್ತ ನಿರ್ಣಯ ಕೈಗೊಳ್ಳಿ’ ಎಂದು ಶಿವರಾಮ ಹೆಬ್ಬಾರ್ ಅವರು ಮನವಿ ಮಾಡಿದರು. `ಗ್ರಾಮ ಸಭೆಯಿಂದ ರಚಿಸಲ್ಪಟ್ಟ ಅರಣ್ಯ ಕ್ಲೇಮುಗಳನ್ನು ಕ್ಷೇತ್ರಕ್ಕೆ ಭೇಟಿ ನೀಡಿ ಕ್ಲೇಮುಗಳ ಸ್ವರೂಪ, ವ್ಯಾಪ್ತಿ ಮತ್ತು ಪುರಾವೆಗಳನ್ನು ಭೌತಿಕವಾಗಿ ಪರಿಶೀಲಿಸಿ ಗ್ರಾಮ ಸಭೆಯ ನಿರ್ಣಯವನ್ನು ಅಂಗೀಕರಿಸತಕ್ಕದ್ದು ಎಂಬ ಅಂಶವನ್ನು ಉತ್ತರದಲ್ಲಿ ಪ್ರಸ್ಥಾಪಿಸಿ ಸಾಗುವಳಿ ಕ್ಷೇತ್ರದ ಹಕ್ಕಿಗೆ ಭೌತಿಕ ಆಧಾರವು ಮಹತ್ವ ಎಂಬುದನ್ನು ಉತ್ತರದಲ್ಲಿ ಉಲ್ಲೇಖಿಸಲ್ಪಟ್ಟಿದೆ. ಜನ ವಸತಿ ಪುರಾವೆಗೆ ಸಂಭAಧಿಸಿದ ಪುರಾತನ ಕಾಲದ ಬಾವಿಗಳು, ಸಮಾದಿ ಸ್ಥಳಗಳು, ಪವಿತ್ರ ಸ್ಥಳಗಳಂತಹ ಪ್ರಾಚೀನತೆಯನ್ನು ಸ್ಥಾಪಿಸುವ ಸಾಂಪ್ರದಾಯಿಕ ರಚನೆಗಳು, ಮನೆ, ಗುಡಿಸಲುಗಳು ಮತ್ತು ಭೂಮಿಗೆ ಮಾಡಿದ ಶಾಶ್ವತ ಸುಧಾರಣೆಗಳು ಸೇರಿದಂತೆ ನೆಲಸಮಗೊಳಿಸುವಿಕೆ, ಕಟ್ಟೆಗಳು ಚೆಕ್ ಡ್ಯಾಮ್‌ಗಳು ಮತ್ತು ಮುಂತಾದವುಗಳAತಹ ಭೌತಿಕ ಗುಣಲಕ್ಷಣಗಳನ್ನು ಅರಣ್ಯವಾಸಿಗಳ ಸಾಗುವಳಿ ಕ್ಷೇತ್ರಕ್ಕೆ ಸಾಕ್ಷಗಳನ್ನಾಗಿ ಪರಿಗಣಿಸಬೇಕು’ ಎಂದಿರುವದನ್ನು ಪ್ರಸ್ತಾಪಿಸಲಾಗಿದೆ. ಶಿವರಾಮ ಹೆಬ್ಬಾರ್ ಸದನದಲ್ಲಿ ಮಾತನಾಡಿದ್ದೇನು? ವಿಡಿಯೋ ಇಲ್ಲಿ ನೋಡಿ.. - [ಕಾಯ್ದಿಟ್ಟ ಕಾಡಿನಲ್ಲಿ ಕುಚುಕು ಕುಚುಕು: ವಿಕೃತ ಕಾಮಿಗೆ ಕಾರಾಗೃಹ ಖಚಿತ!](https://mobiletime.in/2025/12/a-little-bit-of-fun-in-a-protected-forest-prison-is-certain-for-the-perverted-sex-worker/): ಕಾಡಿನಲ್ಲಿ ಹಸು ಮೇಯಿಸುತ್ತಿದ್ದ ಮಹಿಳೆ ಮೇಲೆ ವಿಕೃತಿ ಮೆರೆದ ಕಾಮುಕನಿಗೆ ನ್ಯಾಯಾಲಯ ಕಾರಾಗೃಹ ಶಿಕ್ಷೆ ವಿಧಿಸಿದೆ. ಪಿಐ ರಮೇಶ ಹೂಗಾರ್, ಸರ್ಕಾರಿ ಅಭಿಯೋಜಕ ರಾಜೇಶ ಮಳಗಿಕರ್ ಅವರ ಪ್ರಯತ್ನದಿಂದಾಗಿ ತಪ್ಪು ಮಾಡಿದವನಿಗೆ ಕಂಬಿ ಎಣಿಸುವ ಶಿಕ್ಷೆ ದೊರೆತಿದೆ. ಪ್ರಕರಣದ ಗಂಭೀರತೆ ಅರಿತ ನ್ಯಾಯಾಧೀಶ ಕಿರಣ ಕಿಣಿ ಅವರು ತಪ್ಪಿತಸ್ಥನಿಗೆ 10 ವರ್ಷ ಜೈಲು ಶಿಕ್ಷೆ ವಿಧಿಸಿದ್ದಾರೆ. ಜೊಯಿಡಾದ ಅಣಶಿ ಗ್ರಾಮದ ಕೈಲವಾಡದ ಕಾಳಿ ಹುಲಿ ಸಂರಕ್ಷಿತ ಪ್ರದೇಶ ವ್ಯಾಪ್ತಿಯ ಅಂಚಿನ ಊರಿನಲ್ಲಿ ಸಂತ್ರಸ್ತೆ ವಾಸವಾಗಿದ್ದರು. ಅಣಶಿ ವನ್ಯಜೀವಿ ವಲಯದ ಬಳಿ ಅವರು ಹೈನುಗಾರಿಕೆ ನಡೆಸಿಕೊಂಡಿದ್ದು, ಸಮೀಪದ ಅರಣ್ಯಕ್ಕೆ ಜಾನುವಾರುಗಳನ್ನು ಮೇವಿಗೆ ಬಿಡುತ್ತಿದ್ದರು. 2018ರ ಡಿಸೆಂಬರ್ 1ರಂದು ಆ ಮಹಿಳೆ ಎಂದಿನoತೆ ಹಸುಗಳ ಜೊತೆ ಕಾಡಿಗೆ ಹೋಗಿದ್ದರು. ದಿನವಿಡೀ ಮೇವುಣಿಸಿ ಸಂಜೆ ಮನೆಗೆ ಮರಳುವಾಗ ಅದೇ ಭಾಗದ ಉಲ್ಲಾಸ ಸಡಕೋ ಗಾವಡಾ ಎದುರಾದರು. ಹುಲ್ಲು ಮೇಯಿಸುತ್ತಿದ್ದ ಮಹಿಳೆ ಒಂಟಿಯಾಗಿರುವುದನ್ನು ಉಲ್ಲಾಸ ಗಾವಡಾ ಗಮನಿಸಿದರು. ಆಕೆಯನ್ನು ಹಿಂದಿನಿoದ ಗಟ್ಟಿಯಾಗಿ ತಬ್ಬಿಕೊಂಡರು. ಮಹಿಳೆ ಇದನ್ನು ವಿರೋಧಿಸಿದಾಗ ಆಕೆ ಕೈ ಹಾಗೂ ಕುತ್ತಿಗೆಗೆ ಉಗುರಿನಿಂದ ಪರಿಚಿದರು. ಮಹಿಳೆಯ ಕೂದಲು ಹಿಡಿದು ಎಳೆದಾಡಿದರು. ಮಹಿಳೆ ನೆಲಕ್ಕೆ ಬಿದ್ದಾಗ ಆಕೆಯ ಸೀರೆ ಹರಿದು ಮಾನ ಕಳೆದರು. ಮಹಿಳೆ ಕೂಗಿ ಪ್ರತಿಭಟಿಸಿದರೂ ಆ ಕಾಡಿನಲ್ಲಿ ಆಕೆಯ ರಕ್ಷಣೆಗೆ ಯಾರೂ ಇರಲಿಲ್ಲ. ಈ ಸನ್ನಿವೇಶ ದುರುಪಯೋಗಪಡಿಸಿಕೊಂಡ ಉಲ್ಲಾಸ ಗಾವಡಾ ಅವರು ಮಹಿಳೆಯ ಇಚ್ಚೆಗೆ ವಿರುದ್ಧವಾದ ಕೆಲಸ ಮಾಡಿದರು. ಅದಾದ ನಂತರ ಸಂತ್ರಸ್ತ ಮಹಿಳೆಗೆ ಉಲ್ಲಾಸ ಗಾವಡಾ ಅವರು ಬೆದರಿಕೆ ಒಡ್ಡಿದರು. `ಈ ವಿಷಯ ಎಲ್ಲಾದರೂ ಬಾಯ್ಬಿಟ್ಟರೆ ಜೀವ ತೆಗೆಯುವೆ’ ಎಂದು ಹೆದರಿಸಿದರು. ಉಲ್ಲಾಸ ಗಾವಡಾ ಅವರು ಸಾಕ್ಷಿನಾಶಕ್ಕಾಗಿ ತಾವು ಧರಿಸಿದ್ದ ಬಟ್ಟೆಯನ್ನು ತೊಳೆದು ಒಣಗಿಸಿದ್ದರು. ಈ ಎಲ್ಲಾ ವಿಷಯ ಅರಿತ ಆಗಿನ ಜೊಯಿಡಾ ಪಿಐ ರಮೇಶ ಹೂಗಾರ್ ಅವರು ಪ್ರಕರಣ ದಾಖಲಿಸಿ, ತನಿಖೆ ನಡೆಸಿದರು. ವಿವಿಧ ಸಾಕ್ಷಿಗಳನ್ನು ಪೊಲೀಸರು ಸಂಗ್ರಹಿಸಿದ್ದರು. ಶಿರಸಿ ನ್ಯಾಯಾಲಯಕ್ಕೆ ಈ ಪ್ರಕರಣ ಬಂದಿದ್ದು, ಸರ್ಕಾರಿ ಅಭಿಯೋಜಕ ರಾಜೇಶ ಎಂ ಮಳಗಿಕರ್ ಅವರು ಪ್ರಕರಣದ ಹಿನ್ನಲೆ ಗಮನಿಸಿದರು. ಸಂತ್ರಸ್ತೆಗೆ ಆದ ಅನ್ಯಾಯದ ಬಗ್ಗೆ ವಕೀಲರು ನ್ಯಾಯಾಲಯಕ್ಕೆ ವಿವರಿಸಿದರು. ಪೊಲೀಸ್ ಸಿಬ್ಬಂದಿ ಲಿಯಾಕತ್ ಅಲಿ ಹಾಗೂ ಖಲೀಲ್ ಮುಲ್ಲಾ ಅವರು ನ್ಯಾಯಾಲಯಕ್ಕೆ ಸಾಕ್ಷಿಗಳನ್ನು ಕರೆತಂದರು. ಉಲ್ಲಾಸ ಗಾವಡಾ ಅವರ ಮಾತನ್ನು ಆಲಿಸಿದ ನ್ಯಾಯಾಧೀಶ ಕಿರಣ ಕಿಣಿ ಅವರು ಆರೋಪ ಸಾಭೀತಾಗಿರುವುದನ್ನು ಖಚಿತಪಡಿಸಿಕೊಂಡರು. ಕೊನೆಗೆ ವಿಕೃತ ಕಾಮಿಗೆ 10 ವರ್ಷ ಜೈಲು ಶಿಕ್ಷೆ ಜೊತೆ 15 ಸಾವಿರ ರೂ ದಂಡ ಪಾವತಿಗೆ ಆದೇಶಿಸಿದರು. ಸಂತ್ರಸ್ತೆಗೆ 10 ಸಾವಿರ ರೂ ಪರಿಹಾರ ಒದಗಿಸುವಂತೆಯೂ ಸೂಚಿಸಿದರು. `ಮಹಿಳೆಯರ ಮೇಲಿನ ದೌರ್ಜನ್ಯ ತಡೆಗೆ ಸರ್ಕಾರ ಸಹಾಯವಾಣಿ ಸ್ಥಾಪಿಸಿದೆ. ಸಹಾಯಕ್ಕಾಗಿ 181ಗೆ ಫೋನ್ ಮಾಡಿ. - [ಕೈಗಾ: ಇಮೇಲ್ ಮೂಲಕ ವಿಕಿರಣ ಸೋರಿಕೆ!](https://mobiletime.in/2025/12/kaiga-radiation-leak-via-email/): ಕೈಗಾ ಅಣು ವಿದ್ಯುತ್ ಘಟಕದಲ್ಲಿ ವಿಕಿರಣ ಸೋರಿಕೆಯಾದ ಬಗ್ಗೆ ಜಿಲ್ಲಾಡಳಿತಕ್ಕೆ ಇಮೇಲ್ ಹಾಗೂ ಫಾಕ್ಸ್ ಮೂಲಕ ಸಂದೇಶ ಬಂದಿದೆ. ತರಾತುರಿಯಲ್ಲಿ ಜಿಲ್ಲಾಡಳಿತ ರಕ್ಷಣಾ ಕಾರ್ಯಾಚರಣೆ ನಡೆಸಿದ್ದು, `ಅಣು ವಿಕಿರಣ ಸೋರಿಕೆಯಾದಲ್ಲಿ ಕೈಗೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಕುರಿತಂತೆ ಆಯೋಜಿಸಿದ್ದ ಅಣಕು ಕಾರ್ಯಾಚರಣೆ ಯಶಸ್ವಿಯಾಗಿದೆ’ ಎಂದು ಸಂಜೆ ವೇಳೆಗೆ ಜಿಲ್ಲಾಧಿಕಾರಿ ಕೆ ಲಕ್ಷ್ಮೀಪ್ರಿಯಾ ಅವರು ತಿಳಿಸಿದ್ದಾರೆ. ಅಣು ವಿಕಿರಣ ಸೋರಿಕೆ ಆದಲ್ಲಿ ಕೈಗೊಳ್ಳಬೇಕಾದ ಮುನ್ನಚ್ಚರಿಕೆ ಬಗ್ಗೆ ಪ್ರತಿ ವರ್ಷವೂ ಜನರಲ್ಲಿ ಅರಿವು ಮೂಡಿಸಲು ಅಣಕು ಕಾರ್ಯಾಚರಣೆ ನಡೆಸಲಾಗುತ್ತಿದೆ. ಅದರ ಪ್ರಕಾರ, ಕೈಗಾ ಅಣು ವಿದ್ಯುತ್ ಘಟಕದಲ್ಲಿ ವಿಕಿರಣ ಸೋರಿಕೆ ನಡೆದಾಗ ಅನುಸರಿಸಬೇಕಾದ ವಿಧಾನಗಳ ಬಗ್ಗೆ ಗುರುವಾರ ತಾಲೀಮು ನಡೆಸಲಾಗಿದೆ. ಪೂರ್ವ ಸೂಚನೆಯ ಪ್ರಕಾರ ಕೈಗಾ ಸೈಟ್ ಡೈರೆಕ್ಟರ್ ಬೆಳಗ್ಗೆ 6.30ಕ್ಕೆ ಫ್ಯಾಕ್ಸ್ ಹಾಗೂ ಇಮೇಲ್ ಸಂದೇಶದ ಮೂಲಕ ಜಿಲ್ಲಾಡಳಿತಕ್ಕೆ ಅಣು ವಿಕಿರಣದ ಸೋರಿಕೆ ಬಗ್ಗೆ ಮಾಹಿತಿ ನೀಡಿದ್ದಾರೆ. ವಿಕಿರಣ ಸೋರಿಕೆ ವಲಯಗಳಾದ ಹರ್ಟುಗಾ, ಗೂಳೆ ಮತ್ತು ನಗೆಕೋವೆ, ಕುಚೆಗಾರ, ಶಿರ್ವೆ, ಕೆರವಡಿ, ದೇವಳಮಕ್ಕಿ ಗ್ರಾಮಗಳನ್ನು ಪ್ರಭಾವಿತ ಗ್ರಾಮಗಳೆಂದು ಗುರುತಿಸಿ ಅಲ್ಲಿ ಕಾರ್ಯಾಚರಣೆಯನ್ನು ನಡೆಸಲಾಗಿದೆ. ವಿಕಿರಣ ಸೋರಿಕೆ ಬಗ್ಗೆ ಕೈಗಾ ಸ್ಥಳ ನಿರ್ದೇಶಕರಿಂದ ಮಾಹಿತಿ ಸ್ವೀಕೃತಿಯಾದ ಕೂಡಲೇ ಜಿಲ್ಲಾಧಿಕಾರಿಗಳು ಸಭೆ ನಡೆಸಿದ್ದು, ಎಲ್ಲಾ ಅಧಿಕಾರಿಗಳಿಗೆ ತುರ್ತು ಅಗತ್ಯ ಕಾರ್ಯಾಚರಣೆ ಕೈಗೊಳ್ಳುವಂತೆ ಸೂಚನೆ ನೀಡಿದರು. ವಿಕಿರಣದಿಂದ ಪ್ರಭಾವಕ್ಕೆ ಒಳಗಾದ ಗ್ರಾಮಗಳಿಗೆ ವಾಹನ ಸಂಚಾರ ನಿಷೇಧಿಸಿದರು. ಅಣು ವಿಕಿರಣವು ವಾತಾವರಣದಲ್ಲಿ ಗಾಳಿಯ ಮೂಲಕ ಹರಡುತ್ತಿದ್ದ ಕಾರಣ ಜನರಿಗೆ ಅರಿವು ಮೂಡಿಸಲಾಯಿತು. `ಅಣು ವಿದ್ಯುತ್ ಸ್ಥಾವರದಲ್ಲಿ ಸೋರಿಕೆಯಾದ ಅಣು ವಿಕಿರಣದ ಪ್ರಮಾಣವು ಅತ್ಯಂತ ಕಡಿಮೆ ಇದ್ದು, ಇದು ಸಾರ್ವಜನಿಕರಿಗೆ ಹೆಚ್ಚಿನ ಅಪಾಯ ಒಡ್ಡುವುದಿಲ್ಲ. ಈ ಸೋರಿಕೆಯನ್ನು ನಿಯಂತ್ರಿಸಲು ತಂತ್ರಜ್ಞರು ಎಲ್ಲಾ ರೀತಿಯ ಗರಿಷ್ಠ್ಠ ಪ್ರಯತ್ನಗಳನ್ನು ಕೈಗೊಳ್ಳುತ್ತಿದ್ದು, ಜಿಲ್ಲಾಡಳಿತದೊಂದಿಗೆ ಕೈಗಾ ಅಧಿಕಾರಿಗಳು ನಿರಂತರ ಸಂಪರ್ಕದಲ್ಲಿದ್ದಾರೆ’ ಎಂದು ಡೀಸಿ ಜನರಿಗೆ ಭರವಸೆ ನೀಡಿದರು. `ಸೋಷಿಯಲ್ ಮೀಡಿಯಾಗಳಲ್ಲಿ ಬರುವ ಯಾವುದೇ ಊಹಾಪೋಹಗಳಿಗೆ ಕಿವಿಗೊಡದೇ ಜಿಲ್ಲಾಡಳಿತವು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ನೀಡುವ ಪ್ರಕಟಣೆಗಳನ್ನು ಮಾತ್ರ ಗಮನಿಸಬೇಕು’ ಎಂದು ಮನವಿ ಮಾಡಿದರು. ಅಣು ವಿಕಿರಣವು ಹರಡುತ್ತಿದ್ದ ಪ್ರದೇಶಗಳಲ್ಲಿನ ಸಾರ್ವಜನಿಕರಿಗೆ ಆರೋಗ್ಯ ಇಲಾಖೆ ವತಿಯಿಂದ ವಿಕಿರಣದ ಅಪಾಯವಾಗದಂತೆ ಮುನ್ನೆಚ್ಚರಿಕೆ ಕ್ರಮವಾಗಿ ವಿಕಿರಣ ತಡೆ ನಿಯಂತ್ರಣ ಮಾತ್ರೆಗಳನ್ನು ವಿತರಿಸಲಾಯಿತು. ಈ ಪ್ರದೇಶಗಳ ಅಂಗನವಾಡಿ, ಪ್ರಾಥಮಿಕ ಹಾಗೂ ಪ್ರೌಢಶಾಲೆ ಮತ್ತು ಕಾಲೇಜುಗಳಿಗೆ ಮುಂದಿನ ಆದೇಶದವರೆಗೆ ರಜೆಯನ್ನು ಘೋಷಿಸಲಾಯಿತು. ಸಾರ್ವಜನಿಕರಿಗೆ ಸ್ಥಳೀಯವಾಗಿ ಸಿದ್ದಪಡಿಸಿದ ಆಹಾರ ಮತ್ತು ನೀರು ಸೇವನೆ ಮಾಡದಂತೆ ಸೂಚನೆ ಸಿಕ್ಕಿತು. ಜಿಲ್ಲಾಡಳಿತದ ವತಿಯಿಂದ ಪ್ರಭಾವಿತ ವಲಯದ ಹೊರಗಿನಿಂದ ಸಿದ್ದಪಡಿಸಿದ ಆಹಾರದ ಪ್ಯಾಕೇಟ್‌ಗಳನ್ನು ಮತ್ತು ಕುಡಿಯುವ ನೀರಿನ ಬಾಟೆಲ್‌ಗಳನ್ನು ಸರಬರಾಜು ಮಾಡಲಾಯಿತು. ವಿಕಿರಣ ಹರಡಿದ್ದ ಹರ್ಟುಗಾ ಗ್ರಾಮದ ನಿವಾಸಿಗಳನ್ನು ಪ್ರಭಾವಿತ ವಲಯದ ಹೊರಗಿನ ಜೋಯಿಡಾ ತಾಲ್ಲೂಕಿನ ಕುಂಬಾರವಾಡದ ಸಮುದಾಯ ಭವನಕ್ಕೆ ಮತ್ತು ಜಾನುವಾರುಗಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಯಿತು. ವಿಕಿರಣ ಪ್ರಸಾರಗೊಂಡಿದ್ದ ಇತರೇ ಗ್ರಾಮಗಳಲ್ಲಿನ ಸಾರ್ವಜನಿಕರಿಗೆ ಆರೋಗ್ಯ ಇಲಾಖೆಯ ಮೂಲಕ ತಪಾಸಣೆ ನಡೆಯಿತು. ಸಂಜೆ ವೇಳೆ ಅಣಕು ಕಾರ್ಯಾಚರಣೆ ಯಶಸ್ವಿಯಾದ ಬಗ್ಗೆ ಡೀಸಿ ಘೋಷಿಸಿದರು. - [ಊರಿಗೆ ಬಂದ ಮೊಸಳೆಗೆ ಮೂಗುದಾರ!](https://mobiletime.in/2025/12/the-crocodile-that-came-to-town-got-a-nosebleed/): ನದಿಯಲ್ಲಿರುವುದನ್ನು ಬಿಟ್ಟು ನಾಡಿಗೆ ಬಂದಿದ್ದ ಮೊಸಳೆ ಮೂಗಿಗೆ ದಾರ ಕಟ್ಟಿದ ಜನ ಅದನ್ನು ಎಳೆದು ನೀರಿಗೆ ಬಿಟ್ಟಿದ್ದಾರೆ. ದಾಂಡೇಲಿ ನಗರದ ಹಳಿಯಾಳ ರಸ್ತೆಯ ಗೇಟ್ ನಂ 3ರ ಬಳಿ ಗುರುವಾರ ಮೊಸಳೆ ಕಾಣಿಸಿದೆ. ಕಾಳಿ ನದಿಯಲ್ಲಿರಬೇಕಾದ ಮೊಸಳೆ ನದಿ ದಡ ದಾಟಿ ಊರಿನ ಬಳಿ ಬಂದಿದೆ. ಅಲೈಡ್ ಏರಿಯಾದ ಚರಂಡಿ ಮೂಲಕ ಮೊಸಳೆ ಎಲ್ಲಾ ಕಡೆ ಸುತ್ತಾಡಿದೆ. ಅನತಿ ದೂರದಲ್ಲಿಯೇ ಕಾಳಿ ನದಿ ಹರಿಯುತ್ತಿದ್ದು, ಅಲ್ಲಿ ಹೇರಳ ಪ್ರಮಾಣದ ಮೊಸಳೆಗಳಿವೆ. ಆಗಾಗ ಆ ಮೊಸಳೆಗಳು ಊರಿನ ಕಡೆ ಬರುವುದು ಸಾಮಾನ್ಯವಾಗಿದೆ. ಕೆಲವೊಮ್ಮೆ ಮೊಸಳೆ ತಾನಾಗಿಯೇ ನದಿ ಸೇರುತ್ತದೆ. ಅನೇಕ ಬಾರಿ ಅರಣ್ಯ ಸಿಬ್ಬಂದಿ ಅದನ್ನು ಹಿಡಿದು ನದಿಗೆ ಬಿಡುತ್ತಾರೆ. ಈ ದಿನ ಜನ ವಸತಿ ಪ್ರದೇಶದ ಬಳಿ ಮೊಸಳೆ ಕಾಣಿಸಿಕೊಂಡಿದ್ದರಿoದ ಜನ ಆತಂಕಕ್ಕೆ ಒಳಗಾಗಿದ್ದು, ಅರಣ್ಯಾಧಿಕಾರಿಗಳಿಗೆ ಫೋನ್ ಮಾಡಿದ್ದಾರೆ. ಆದರೆ, ಎಷ್ಟು ಹೊತ್ತಾದರೂ ಅರಣ್ಯ ಸಿಬ್ಬಂದಿ ಸ್ಥಳಕ್ಕೆ ಬಂದಿಲ್ಲ. ಮೊಸಳೆಯನ್ನು ಹಿಡಿಯುವ ಕೆಲಸವನ್ನು ಶುರು ಮಾಡಿಲ್ಲ. ಹೀಗಾಗಿ ಜನರೇ ಉಪಾಯವಾಗಿ ಮೊಸಳೆಗೆ ಬಲೆ ಬೀಸಿದ್ದಾರೆ. ಮೊಸಳೆ ತಲೆಯ ಮೇಲೆ ಗೋಣಿ ಚೀಲ ಹಾಕಿದ ಜನ ನಂತರ ನಿಧಾನವಾಗಿ ಅದಕ್ಕೆ ಹಗ್ಗ ಕಟ್ಟಿದ್ದಾರೆ. ಒಬ್ಬರು ಮೊಸಳೆಯ ಬಾಲ ಹಿಡಿದುಕೊಂಡಿದ್ದು, ಮತ್ತೆ ಐದು ಜನ ಸೇರಿ ಆ ಹಗ್ಗ ಎಳೆದಿದ್ದಾರೆ. ನದಿಯವರೆಗೂ ಮೊಸಳೆಯನ್ನು ಎಳೆದೊಯ್ದು ಬಿಟ್ಟಿದ್ದಾರೆ. ಕಾಳಿ ನದಿ ಕಾಣಿಸಿದ ತಕ್ಷಣ ಮೊಸಳೆ ನೀರಿಗೆ ಬಿದ್ದಿದ್ದು, ಅದಾದ ನಂತರ ಅಲ್ಲಿನ ಜನರೇ ಹಗ್ಗ ಬಿಡಿಸಿದ್ದಾರೆ. - [ಪದೇ ಪದೇ ಆಪತ್ತು: ಕಾನೂನು ಪ್ರಾಧಿಕಾರದ ಸೂಚನೆಗೂ ಇಲ್ಲ ಕಿಮ್ಮತ್ತು!](https://mobiletime.in/2025/12/repeated-danger-even-the-notice-of-the-legal-authority-is-of-no-use/): ಶಾಲೆ ಹಾಗೂ ಅಂಗನವಾಡಿಯಿರುವ ಪ್ರದೇಶದಲ್ಲಿ ಪದೇ ಪದೇ ರಸ್ತೆ ಅಪಘಾತ ನಡೆಯುತ್ತಿದ್ದು, ಇದನ್ನು ತಪ್ಪಿಸುವುದಕ್ಕಾಗಿ ಸೂಚನಾ ಫಲಕ ಅಳವಡಿಸುವಂತೆ ಲೋಕೋಪಯೋಗಿ ಇಲಾಖೆಗೆ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಸೂಚನೆ ನೀಡಿದೆ. ಆದರೆ, ಸೂಚನೆ ತಲುಪಿ ಐದು ತಿಂಗಳಾದರೂ ಅಧಿಕಾರಿಗಳು ಅದನ್ನು ಪಾಲಿಸಿಲ್ಲ. ಕುಮಟಾದ ಜನತಾ ಫ್ಲೋಟ್ ಮಾಸೂರ್ ಕ್ರಾಸ್ ರಸ್ತೆಯ ಪಕ್ಕದಲ್ಲಿ ಶಾಲೆ-ಅಂಗನವಾಡಿಯಿದೆ. ಅಲ್ಲಿ ಪದೇ ಪದೇ ಅಪಘಾತ ಸಂಭವಿಸುತ್ತಿದ್ದು, ಶಿಕ್ಷಕರೊಬ್ಬರು ಸಾವನಪ್ಪಿದ್ದಾರೆ. ನಿತ್ಯ ನಡೆಯುವ ಅಪಘಾತದಿಂದ ಜನ ಆತಂಕದಲ್ಲಿದ್ದಾರೆ. ಈ ಭಾಗದಲ್ಲಿ ಹಂಪ್ ಅಳವಡಿಸುವುದರ ಜೊತೆ ಸೂಚನಾ ಫಲಕ ನೆಡಬೇಕು ಎಂದು ಜನಸಾಮಾನ್ಯರ ಸಮಾಜ ಕಲ್ಯಾಣ ಕೇಂದ್ರದವರು ಹೋರಾಡುತ್ತಿದ್ದಾರೆ. ಶಾಸಕ ಸಚಿವರಿಂದ ಹಿಡಿದು ಮುಖ್ಯಮಂತ್ರಿ ಕಚೇರಿಯವರೆಗೂ ಈ ಬಗ್ಗೆ ಮನವಿ ಸಲ್ಲಿಸಲಾಗಿದ್ದು, ಕೊನೆಗೆ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರವೂ ಸೂಚನಾ ಫಲಕ ಅಳವಡಿಸುವಂತೆ ಅಧಿಕಾರಿಗಳಿಗೆ ಸೂಚಿಸಿದೆ. ಆದರೆ, ಈ ಸೂಚನೆ ಸಿಕ್ಕಿ ಐದು ತಿಂಗಳಾದರೂ ಅಧಿಕಾರಿಗಳು ಕ್ರಮ ಜರುಗಿಸಿಲ್ಲ. ಈ ಹಿನ್ನಲೆ ಜನಸಾಮಾನ್ಯರ ಸಮಾಜ ಕಲ್ಯಾಣ ಕೇಂದ್ರದ ಅಧ್ಯಕ್ಷ ಆಗ್ನೇಲ್ ರೋಡ್ರಿಗಸ್ ಅವರು ಸಾಮಾಜಿಕ ಕಾರ್ಯಕರ್ತ ಸುಧಾಕರ್ ನಾಯ್ಕ್, ನಿವೃತ್ತ ಅಧಿಕಾರಿ ನಾಗೇಶ್, ಹಿರಿಯ ನಾಗರಿಕರಾದ ಗಣಪತಿ ಪಟಗಾರ, ರತ್ನಾಕರ ಭಟ್, ಅರುಣ್ ಶೇಟ್ ಅವರ ಜೊತೆ ಸೇರಿ ಮತ್ತೆ ಕಾನೂನು ಸೇವಾ ಪ್ರಾಧಿಕಾರಕ್ಕೆ ದೂರು ಸಲ್ಲಿಸಿದ್ದರೆ. - [ಸಿಲೆಂಡರ್ ಸ್ಪೋಟ: ಚೀರೆಕಲ್ಲಿನ ಮನೆ ಛಿದ್ರ.. ಛಿದ್ರ!](https://mobiletime.in/2025/12/cylinder-explosion-chirekallai-house-ruptured-ruptured/): ಸಿಲೆಂಡರ್ ಸ್ಪೋಟಿಸಿದ ಪರಿಣಾಮ 11 ಲಕ್ಷ ರೂ ಮೌಲ್ಯದ ಮನೆ ಮುರಿದು ಬಿದ್ದಿದೆ. ಸ್ಪೋಟದ ವೇಳೆ ಭಾರೀ ಪ್ರಮಾಣದ ಸದ್ದು ಕೇಳಿ ಜನ ಹೌಹಾರಿದ್ದಾರೆ. ಗುರುವಾರ ಬೆಳಗ್ಗೆ ಗೋಕರ್ಣ ಬಳಿಯ ಬಂಗ್ಲೆಗುಡ್ಡದಲ್ಲಿ ಸಿಲೆಂಡರ್ ಸ್ಪೋಟಿಸಿದೆ. ಸ್ಪೋಟದ ತೀವೃತೆಗೆ ಮುರಳಿಧರ್ ಕಾಮತ್ ಅವರ ವಾಸದ ಮನೆ ಮುರಿದು ಬಿದ್ದಿದೆ. ನಂತರ ಹೊತ್ತಿ ಉರಿದ ಜ್ವಾಲೆ ಪಕ್ಕದ ಕಾಡಿಗೂ ವ್ಯಾಪಿಸಿದ್ದು, ಅಗ್ನಿಶಾಮಕ ಸಿಬ್ಬಂದಿ ಬೆಂಕಿ ಆರಿಸುವ ಸಾಹಸ ಮಾಡಿದ್ದಾರೆ. ಸಿಲೆಂಡರ್ ಸ್ಪೋಟದ ಅವಧಿಯಲ್ಲಿ ಮನೆಯಲ್ಲಿ ಯಾರೂ ಇರಲಿಲ್ಲ. ಹೀಗಾಗಿ ಕುಟುಂಬದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸ್ಪೋಟದ ಸದ್ದು ಕೇಳಿದ ಜನ ಆತಂಕದಲ್ಲಿ ಎಲ್ಲಾ ಕಡೆ ಓಡಾಡಿದ್ದು, ಮನೆ ಹೊತ್ತಿ ಉರಿಯುವುದನ್ನು ನೋಡಿ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಪೊಲೀಸ್ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಮಾಡಿದ್ದಾರೆ. ಛಿದ್ರಗೊಂಡ ಮನೆಯ ಅಕ್ಕ ಪಕ್ಕ ಇನ್ನಷ್ಟು ಜನವಸತಿ ಪ್ರದೇಶಗಳಿದ್ದವು. ಪ್ರವಾಸಿಗರು ತಂಗುವ ಹೊಟೇಲ್ ಸಹ ಆ ಭಾಗದಲ್ಲಿದ್ದು, ಬೆಂಕಿ ಆರಿಸಿದ ಪರಿಣಾಮ ಅಪಾಯ ತಪ್ಪಿದೆ. - [ಸರಾಯಿ ಬದಲು ಕ್ರಿಮಿನಾಶಕ ಸೇವನೆ: ಸಾವು!](https://mobiletime.in/2025/12/consuming-disinfectant-instead-of-drinking-water-death/): ಕದ್ದು ಮುಚ್ಚಿ ಸರಾಯಿ ಕುಡಿಯುತ್ತಿದ್ದ ರಮೇಶ ಮಿರಾಶಿ ಅವರು ರಾತ್ರಿ ವೇಳೆ ಸರಾಯಿ ಎಂದು ತಿಳಿದು ವಿಷ ಕುಡಿದಿದ್ದಾರೆ. ಅಸ್ವಸ್ಥಗೊಂಡ ಅವರನ್ನು ಆಸ್ಪತ್ರೆಗೆ ದಾಖಲಿಸಿದರೂ ಪ್ರಯೋಜನವಾಗಿಲ್ಲ. ಜೊಯಿಡಾದ ರಾಮನಗರದ ಬಾಳೆಕೃಷ್ಣಗಲ್ಲಿಯಲ್ಲಿ ರಮೇಶ ನಾರಾಯಣ ಮಿರಾಶಿ (37) ಅವರು ವಾಸವಾಗಿದ್ದರು. ಪೆಂಟಿAಗ್ ಕೆಲಸ ಮಾಡಿ ಅವರು ಜೀವನ ನಡೆಸುತ್ತಿದ್ದರು. ಮನೆಯಲ್ಲಿ ಯಾರಿಗೂ ಗೊತ್ತಾಗದ ಹಾಗೇ ಅವರು ವ್ಯಸನದ ಹಾದಿ ಹಿಡಿದಿದ್ದರು. ಆಗಾಗ ಸರಾಯಿ ಅಂಗಡಿಗೆ ಹೋಗಿ ಅವರು ಕುಡಿದು ಬರುತ್ತಿದ್ದರು. ರಾತ್ರಿ ಮನೆಗೆ ಬರುವ ಮುನ್ನ ಸರಾಯಿ ಸೇವಿಸುತ್ತಿದ್ದು, ಅದಾದ ನಂತರ ಯಾರ ಜೊತೆಯೂ ಮಾತನಾಡದೇ ಮಲಗುತ್ತಿದ್ದರು. ಡಿಸೆಂಬರ್ 7ರಂದು ರಾತ್ರಿ ಅವರು ಮನೆಯಿಂದ ಹೊರ ಹೋಗಿ ಸರಾಯಿ ಕುಡಿದಿದ್ದರು. ಈ ದಿನ ಅವರು ಸರಾಯಿ ಬಾಟಲಿಯನ್ನು ಪಾರ್ಸಲ್ ಮಾಡಿಕೊಂಡು ಮನೆಗೆ ತಂದಿದ್ದರು. ಯಾರಿಗೂ ಗೊತ್ತಾಗಬಾರದು ಎಂಬ ಉದ್ದೇಶಕ್ಕೆ ಮನೆಯ ಕತ್ತಲೆ ಕೋಣೆಯಲ್ಲಿ ಅದನ್ನು ಅಡಗಿಸಿಟ್ಟಿದ್ದರು. ರಾತ್ರಿ 12.15ರ ವೇಳೆಗೆ ರಮೇಶ ಮಿರಾಶಿ ಅವರಿಗೆ ಮತ್ತೆ ಸರಾಯಿ ಕುಡಿಯುವ ಬಯಕೆಯಾಯಿತು. ಎಲ್ಲರೂ ಮಲಗಿರುವ ಸಮಯ ನೋಡಿ ಅವರು ಕತ್ತಲೆ ಕೋಣೆ ಪ್ರವೇಶಿಸಿದರು. ಅವರು ಸರಾಯಿ ಇರಿಸಿದ್ದ ಜಾಗದಲ್ಲಿ ಕ್ರಿಮಿನಾಶಕದ ಬಾಟಲಿಯೂ ಇದ್ದು, ಅವಸರದಲ್ಲಿದ್ದ ರಮೇಶ ಮಿರಾಶಿ ಅವರು ಸರಾಯಿ ಎಂದು ತಿಳಿದು ಕ್ರಿಮಿನಾಶಕ ಕುಡಿದರು. ಅಸ್ವಸ್ಥಗೊಂಡು ಬಿದ್ದ ಅವರನ್ನು ಕುಟುಂಬದವರು ಬೆಳಗಾವಿಗೆ ಕರೆದೊಯ್ದರು. ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದರೂ ಪ್ರಯೋಜನ ಆಗಲಿಲ್ಲ. ಹೊಲಕ್ಕೆ ಹೊಡೆಯಲು ತಂದಿದ್ದ ಕ್ರಿಮಿನಾಶಕ ದೇಹ ಸೇರಿದ ಪರಿಣಾಮ ರಮೇಶ ಮಿರಾಶಿ ಅವರು ಕೊನೆಯುಸಿರೆಳೆದರು. ರಮೇಶ ಅವರ ಪತ್ನಿ ಸುಮನ ಮಿರಾಶಿ ಅವರು ಈ ಬಗ್ಗೆ ರಾಮನಗರ ಪೊಲೀಸರಿಗೆ ವಿವರಿಸಿದರು. `ಕುಡಿತ ಒಳ್ಳೆಯದಲ್ಲ’ - [ಪ್ರಮೋಶನ್ ಬೇಕಾದರೆ ಮಂಚ ಏರುವುದು ಕಡ್ಡಾಯ!](https://mobiletime.in/2025/12/if-you-want-a-promotion-getting-on-the-couch-is-mandatory/): ಕಾಲೇಜು ಆಡಳಿತ ಮಂಡಳಿ ಸದಸ್ಯರೊಬ್ಬರು ಪ್ರಾಚಾರ್ಯಯನ್ನು ಮಂಚಕ್ಕೆ ಕರೆದಿದ್ದು, ತಮ್ಮ ಬಯಕೆ ಈಡೇರಿಸಿದರೆ ಉನ್ನತ ಸ್ಥಾನಮಾನ ನೀಡುವ ಆಮೀಷ ಒಡ್ಡಿದ್ದಾರೆ. ಇದಕ್ಕೆ ಆ ಪ್ರಾಚಾರ್ಯೆ ಒಪ್ಪದ ಕಾರಣ ಪ್ರಾಚಾರ್ಯೆಯ ವಿರುದ್ಧ ಅಕ್ರಮ ಸಂಬoಧದ ವದಂತಿ ಹಬ್ಬಿಸಿದ್ದಾರೆ! ಭಟ್ಕಳದ ಅಂಜುಮಾನ್ ಕಾಲೇಜಿನ ಬಿಎಡ್ ವಿಭಾಗದ ಪ್ರಾಚಾರ್ಯೆ ಜಿಕ್ರಿಯಾ ಸುಲ್ತಾನ್ ಹಜಾರಿ ಅವರು ಆಡಳಿತ ಮಂಡಳಿಯ ಮೂವರು ಸದಸ್ಯರಿಂದ ಸಮಸ್ಯೆಗೆ ಸಿಲುಕಿದ್ದಾರೆ. ಮಧೀನಾ ಕಾಲೋನಿಯಲ್ಲಿ ವಾಸವಾಗಿರುವ ಜಿಕ್ರಿಯಾ ಸುಲ್ತಾನ್ ಹಜಾರಿ ಅವರು ವಿಚ್ಚೇದಿತರಾಗಿದ್ದು, 2003ರಿಂದ ಅಂಜುಮಾನ್ ಹಮಿ-ಎ-ಮುಸ್ಲಿಮಿನ್ ಟ್ರಸ್ಟಿದಲ್ಲಿ ಸಹಾಯಕ ವಿಜ್ಞಾನ ಶಿಕ್ಷಕಿ ಹಾಗೂ ಸಹಾಯಕ ವಿಜ್ಞಾನ ಪ್ರಾಧ್ಯಾಪಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. 2016ರಲ್ಲಿ ಅವರು ಬಿಎಡ್ ವಿಭಾಗದ ಪ್ರಾಚಾರ್ಯರಾಗಿದ್ದಾರೆ. ಅಂಜುಮಾನ್ ಹಮಿ-ಎ-ಮುಸ್ಲೀಂ ಟ್ರಸ್ಟಿನ ಸದಸ್ಯರಾಗಿರುವ ಅಹಿದ್ ಮೊಹ್ತೆಶಾಮ್ ಅವರು ಜಿಕ್ರಿಯಾ ಸುಲ್ತಾನ್ ಹಜಾರಿ ಅವರಿಗೆ ಕಾಡಿಸುತ್ತಿದ್ದಾರೆ. 2024ರಲ್ಲಿ ಅಹಿದ್ ಮೊಹ್ತೆಶಾಮ್ ಅವರು ಬಿಎಡ್ ಕಾಲೇಜಿನ ಕಾರ್ಯದರ್ಶಿಯಾಗಿ ಅಧಿಕಾರವಹಿಸಿಕೊಂಡಿದ್ದು, ಆ ದಿನದಿಂದಲೇ ಜಿಕ್ರಿಯಾ ಸುಲ್ತಾನ್ ಹಜಾರಿ ಅವರಿಗೆ ಸಮಸ್ಯೆ ಶುರುವಾಗಿದೆ. ಅಹಿದ್ ಮೊಹ್ತೆಶಾಮ್ ಅವರು ಕಾಲೇಜು ಕೊಠಡಿಗೆ ಬಂದು ಲೈಂಗಿಕ ಕಿರುಕುಳ ನೀಡುತ್ತಿದ್ದಾರೆ. ಇದನ್ನು ಸಹಿಸದ ಜಿಕ್ರಿಯಾ ಸುಲ್ತಾನ್ ಹಜಾರಿ ಅವರ ವೈಯಕ್ತಿಕ ಜೀವನದ ಬಗ್ಗೆಯೂ ನಿಂದಿಸುತ್ತಿದ್ದಾರೆ. ಬೇರೆ ಪುರುಷರ ಜೊತೆ ಅಕ್ರಮ ಸಂಬoಧದ ವದಂತಿ ಹಬ್ಬಿಸಿ ಜಿಕ್ರಿಯಾ ಸುಲ್ತಾನ್ ಹಜಾರಿ ಅವರ ಮಾನ ಹರಾಜು ಮಾಡುವ ಪ್ರಯತ್ನವನ್ನು ಮಾಡಿದ್ದಾರೆ. ಸಹಕಾರ ನೀಡಿದರೆ ಉದ್ಯೋಗದಲ್ಲಿ ಆದ್ಯತೆಯ ಭರವಸೆ ನೀಡಿದ ಅಹಿದ್ ಮೊಹ್ತೆಶಾಮ್ ಅವರು ತಮ್ಮ ಕುಕೃತ್ಯಕ್ಕೆ ಕಮಿಟಿ ಸದಸ್ಯರಾದ ಸಜ್ಜದ್ ಕೋಲಾ ಹಾಗೂ ಇಸಾಕ್ ಶಬಂದ್ರಿ ಖಾಜಾ ಮಹ್ಮದ್ ಗೌಸ್ ಅವರ ಸಹಕಾರಪಡೆದಿದ್ದಾರೆ. ಈ ಮೂವರು ಸೇರಿ ಹಿಂಸೆ ನೀಡುತ್ತಿರುವ ಬಗ್ಗೆ ಜಿಕ್ರಿಯಾ ಸುಲ್ತಾನ್ ಹಜಾರಿ ಅವರು ನ್ಯಾಯಾಲಯದ ಮೊರೆ ಹೋಗಿದ್ದಾರೆ. ಮಾರ್ಚ 9ರಂದು ಕಾಲೇಜಿಗೆ ಬಂದು ಕೈ ಹಿಡಿದು ಎಳೆದಾಡಿದ ಬಗ್ಗೆ ಅವರು ದೂರಿದ್ದಾರೆ. ನ್ಯಾಯಾಲಯದ ಸೂಚನೆ ಮೇರೆಗೆ ಭಟ್ಕಳ ನಗರಠಾಣೆ ಪೊಲೀಸರು ಪ್ರಕರಣ ದಾಖಲಿಸಿದ್ದು, ತನಿಖೆ ಶುರು ಮಾಡಿದ್ದಾರೆ. - [ಅವ ಅಪ್ಪ ಅಲ್ಲ.. ರಾಕ್ಷಸ!](https://mobiletime.in/2025/12/hes-not-a-father-a-demon/): ಮದುವೆ ನಂತರ ಪರ ಸ್ತ್ರೀ ಸಹವಾಸಕ್ಕೆ ಬಿದ್ದ ವಿಜಯ ನಾಯ್ಕ ಅವರು ಪತ್ನಿಯಿಂದ ದೂರವಾಗಿದ್ದು, ಸ್ವಂತ ಮಗುವಿನ ಮೇಲೆ ಕ್ರೌರ್ಯ ಮೆರೆದಿದ್ದಾರೆ. 6 ವರ್ಷದ ಬಾಲಕನ ಕಣ್ಣಿಗೆ ಖಾರದಪುಡಿ ಎರಚಿ ಬಾತ್ ರೂಮಿನಲ್ಲಿ ಕೂಡಿ ಹಾಕುವ ಮೂಲಕ ವಿಕೃತಿ ತೋರಿದ್ದಾರೆ! ಕುಮಟಾದ ಹೆಗಡೆಯಲ್ಲಿನ ಬಾಡಿಗೆ ಮನೆಯಲ್ಲಿ ವಿಜಯ ನಾಯ್ಕ ವಾಸವಾಗಿದ್ದರು. ವಿಜಯ ನಾಯ್ಕ ಅವರು 13 ವರ್ಷದ ಹಿಂದೆ ಕುಮಟಾ ಗುಂದದ ಚೈತ್ರಾ ನಾಯ್ಕ ಅವರನ್ನು ವಿವಾಹವಾಗಿದ್ದು, ಅವರ ದಾಂಪತ್ಯಕ್ಕೆ ಸಾಕ್ಷಿಯಾಗಿ ತ**ಷ ನಾಯ್ಕ ಹಾಗೂ ಹ**ಷಾ ನಾಯ್ಕ ಜನಿಸಿದ್ದರು. ಈ ನಡುವೆ ವಿಜಯ ನಾಯ್ಕ ತಾವು ವಾಸವಿದ್ದ ಮನೆಗೆ ಮತ್ತೊಬ್ಬ ದೀಪಾ ನಾಯ್ಕ ಎಂಬಾತರನ್ನು ಕರೆತಂದರು. ಇದನ್ನು ಚೈತ್ರಾ ನಾಯ್ಕ ಅವರು ವಿರೋಧಿಸಿದರು. ಆ ವಿರೋಧ ಅವರಿಬ್ಬರ ನಡುವೆ ಬಿರುಕು ಮೂಡಲು ಕಾರಣವಾಯಿತು. ಕೋರ್ಟಿನ ಕಟಕಟೆ ಏರಿ ವಿಜಯ ನಾಯ್ಕ ಹಾಗೂ ಚೈತ್ರ ನಾಯ್ಕ ಅವರು ವಿಚ್ಚೇದನಪಡೆದರು. ತಂದೆ-ತಾಯಿ ಬೇರೆಯಾಗಿದ್ದರಿಂದ 6 ವರ್ಷದ ತ**ಷ ನಾಯ್ಕ ತಬ್ಬಲಿಯಾದರು. ಆ ಆರು ವರ್ಷದ ಬಾಲಕನ ಜೊತೆ 10 ವರ್ಷದ ಬಾಲಕಿಯನ್ನು ನೋಡಿಕೊಳ್ಳುವುದಾಗಿ ವಿಜಯ ನಾಯ್ಕ ಅವರು ನ್ಯಾಯಾಲಯಕ್ಕೆ ಹೇಳಿದ್ದರಿಂದ ನ್ಯಾಯಾಲಯ ತಂದೆಯ ಬಳಿ ಮಕ್ಕಳು ಬೆಳೆಯಲು ಬಿಟ್ಟಿತು. ಆದರೆ, ತ**ಷ ನಾಯ್ಕ ಅವರು ತಾಯಿ ಬೇಕು ಎಂದು ಹಠ ಶುರು ಮಾಡಿದರು. ಈ ಹಠ ಸಹಿಸದ ವಿಜಯ ನಾಯ್ಕ ಆ ಮಗುವಿನ ಮೇಲೆ ತಮ್ಮ ಕೋಪ ತೋರಿಸಿದರು. ಪ್ರೇಯಸಿ ದೀಪಾ ನಾಯ್ಕ ಅವರ ಜೊತೆ ಹೆಗಡೆಯಲ್ಲಿ ವಾಸವಾಗಿದ್ದ ವಿಜಯ ನಾಯ್ಕ ಅವರು ಮಕ್ಕಳನ್ನು ಹೆಗಡೆಯ ವಿವೇಕನಗರದ ಶಾಲೆಗೆ ದಾಖಲಿಸಿದ್ದರು. ಆ ಶಾಲೆ ಬಳಿ ಹೋಗಿ ಮಕ್ಕಳನ್ನು ನೋಡುವ ಅವಕಾಶದಿಂದಲೂ ಚೈತ್ರಾ ನಾಯ್ಕ ಅವರು ದೂರವಾದರು. ಹೀಗಿರುವಾಗ ಕಳೆದ ಒಂದು ತಿಂಗಳಿನಿAದ ಮಗು ಶಾಲೆಗೆ ಬಾರದ ವಿಷಯ ಚೈತ್ರಾ ನಾಯ್ಕ ಅವರ ಗಮನಕ್ಕೆ ಬಂದಿತು. ಶಾಲೆಯವರ ಮೂಲಕವೇ ವಿಚಾರಿಸಿದಾಗ `ಮಗುವಿಗೆ ಆರೋಗ್ಯ ಸರಿ ಇಲ್ಲ’ ಎಂದು ವಿಜಯ ನಾಯ್ಕ ಉತ್ತರಿಸಿದ್ದರು. ಆದರೆ, ತಮ್ಮನನ್ನು ಶೌಚಾಲಯದಲ್ಲಿ ಕೂಡಿ ಹಾಕಿ ಹಿಂಸೆ ನೀಡುತ್ತಿರುವ ಬಗ್ಗೆ ಬಾಲಕನ ಅಕ್ಕ ಹ**ಷಾ ನಾಯ್ಕ ಮಾಹಿತಿ ನೀಡಿದ್ದರು. ತಾಯಿ ಚೈತ್ರಾ ನಾಯ್ಕ ಅವರಿಗೆ ಫೋನ್ ಮಾಡಿದ ಬಾಲಕಿ ಈ ವಿಷಯ ಹೇಳಿದ್ದರು. ಪೊಲೀಸರ ಸಹಾಯಪಡೆದು ಹೆಗಡೆ ಮನೆ ಶೋಧ ನಡೆಸಿದಾಗ ಬಾತ್ ರೂಮಿನೊಳಗೆ ಬಾಲಕನನ್ನು ಕೂಡಿ ಹಾಕಿರುವುದು ಗೊತ್ತಾಯಿತು. ಆ ಬಾಲಕನನ್ನು ಬೆಂಕಿಯಿAದ ಮೈ ಸುಟ್ಟಿರುವುದು, ಬಾರಕೋಲಿನಿಂದ ಬಾರಿಸಿರುವುದು, ಕಣ್ಣಿಗೆ ಕಾರದಪುಡಿ ಎರಚಿ ನೋವು ಮಾಡಿರುವುದು ಕಾಣಿಸಿತು. ಕುಮಟಾ ಆಸ್ಪತ್ರೆ ವೈದ್ಯರು ಬಾಲಕನಿಗೆ ಚಿಕಿತ್ಸೆ ನೀಡಿದ್ದು, ಒಂದು ಹೊತ್ತಿನ ಊಟ, ಬಟ್ಟೆಯನ್ನು ಕೊಡದೇ ಚಿತ್ರಹಿಂಸೆ ನೀಡಿದನ್ನು ಅಧಿಕಾರಿಗಳು ಖಚಿತಪಡಿಸಿಕೊಂಡರು. ಚಿತ್ರಹಿoಸೆ ಅನುಭವಿಸದ ಬಾಲಕ ಹೇಳಿದ್ದೇನು? ಆತನ ತಾಯಿ ಮಾತು ಏನು? ವಿಡಿಯೋ ಇಲ್ಲಿ ನೋಡಿ.. - [ಸುಳ್ಳು ಹೇಳಿ ಸಿಕ್ಕಿಬಿದ್ದ ಸಚಿವ!](https://mobiletime.in/2025/12/the-minister-was-caught-lying/): ಶರಾವತಿ ನದಿಗೆ ಅಡ್ಡಲಾಗಿ ಪಂಪ್ ಸ್ಟೋರೇಜ್ ನಿರ್ಮಾಣ ಮಾಡುವುದರಿಂದ 16 ಸಾವಿರ ಮರಗಳ ಕಡಿತವಾಗಲಿದೆ’ ಎಂದು ವಿದ್ಯುತ್ ನಿಗಮದ ಅಧಿಕಾರಿಗಳೇ ಅಧಿಕೃತ ಮಾಹಿತಿ ನೀಡಿದ್ದಾರೆ. ಅನೇಕ ವಿಜ್ಞಾನಿಗಳು ಸಹ `ಈ ಯೋಜನೆ ಅವೈಜ್ಞಾನಿಕ ಎಂದು ಪ್ರತಿಪಾದಿಸಿದ್ದಾರೆ. ಆದರೆ, ಇಂಧನ ಸಚಿವ ಕೆ ಜೆ ಜಾರ್ಜ ಅವರು ಮಾತ್ರ `ಶರಾವತಿ ಪಂಪ್ಡ್ ಸ್ಟೋರೇಜ್ ಜಲ ವಿದ್ಯುತ್ ಯೋಜನೆಯಿಂದ ಪರಿಸರಕ್ಕೆ ಯಾವುದೇ ಹಾನಿ ಉಂಟಾಗುವುದಿಲ್ಲ’ ಎಂದು ಈ ದಿನ ಅಧಿವೇಶನದಲ್ಲಿ ಸುಳ್ಳು ಹೇಳಿದ್ದಾರೆ! `ನದಿ ಕಣಿವೆ ಪ್ರದೇಶದಲ್ಲಿ ಭೂ ಕುಸಿತದ ಅಪಾಯವಿದೆ. ಸಿಂಗಳಿಕ ಅಭಯಾರಣ್ಯ ವ್ಯಾಪ್ತಿಯಲ್ಲಿ ಅವೈಜ್ಞಾನಿಕ ಯೋಜನೆಗೆ ಅವಕಾಶ ಕೊಡುವುದು ಸರಿಯಲ್ಲ. ಪರಿಸರದ ಜೊತೆ ಆ ಭಾಗದ ರೈತರ ಜೀವನೋಪಾಯಕ್ಕೆ ಸಹ ಈ ಯೋಜನೆ ಅಪಾಯಕಾರಿ’ ಎಂದು ಅನೇಕರು ವೈಜ್ಞಾನಿಕ ಕಾರಣಗಳ ಜೊತೆ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾರೆ. `ಶರಾವತಿ ಕಣಿವೆಯು ಈಗಾಗಲೇ ಸರಣಿ ಜಲಾಶಯ ಮತ್ತು ಜಲ ವಿದ್ಯುತ ಯೋಜನೆಗಳಿಂದ ಅಪಾಯಕ್ಕೆ ಸಿಲುಕಿದೆ. ಬೇಸಿಗೆ ಅವಧಿಯಲ್ಲಿ ನದಿ ನೀರಿನ ಹರಿವು ಕಡಿಮೆ ಆಗುತ್ತದೆ. ಸಮುದ್ರದ ಉಪ್ಪು ನೀರು 18ಕಿಮೀ ಹಿಮ್ಮುಖವಾಗಿ ಶರಾವತಿ ನದಿಗೆ ಸೇರುತ್ತಿದೆ. ಮಳೆಗಾಲದಲ್ಲಿ ಪ್ರವಾಹ ಉಂಟಾಗುತ್ತಿದ್ದು, ಜನ ಆರ್ಥಿಕ ನಷ್ಟವನ್ನು ಅನುಭವಿಸುತ್ತಿದ್ದಾರೆ. ಇಂಥ ಸ್ಥಿತಿಯಲ್ಲಿ ಗೇರುಸೊಪ್ಪೆ ಮತ್ತು ತಲಕಳಲೆ ಜಲಾಶಯಗಳ ನಡುವಿನ ಪರಿಸರ ಸೂಕ್ಷ್ಮ ಪ್ರದೇಶದಲ್ಲಿ ಸ್ಪೋಟಕ ಬಳಸುವುದು ಅಪಾಯಕಾರಿ’ ಎಂದು ತಜ್ಞರು ಹೇಳುತ್ತಿದ್ದಾರೆ. ಈ ವೈಜ್ಞಾನಿಕ ಯೋಜನೆಯ ಅನುಷ್ಠಾನದಿಂದ ಪರಿಸರ, ಜೀವಿವೈವಿಧ್ಯತೆ ಮತ್ತು ಜನಜೀವನದ ಮೇಲೆ ಆಘಾತಕಾರಿ ಪರಿಣಾಮ ಉಂಟಾಗಲಿದೆ’ ಎಂದು ವಿಜ್ಞಾನಿಗಳಾದ ಟಿ ವಿ ರಾಮಚಂದ್ರ ಮತ್ತು ಸುಭಾಷ ಚಂದ್ರನ್ ಸಹ ಹೇಳಿದ್ದಾರೆ. ಅದಾಗಿಯೂ, ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನ ಮಂಡಲ ಅಧಿವೇಶನದಲ್ಲಿ ಬುಧವಾರ ನಡೆದ ಚರ್ಚೆಯಲ್ಲಿ ಇಂಧನ ಸಚಿವ ಕೆ ಜೆ ಜಾರ್ಜ್ ಅವರು ಯೋಜನೆಯನ್ನು ಸಮರ್ಥಿಸಿಕೊಂಡಿದ್ದಾರೆ. ವಿಧಾನಸಭೆಯಲ್ಲಿ ಕುಮಟಾ ಶಾಸಕ ದಿನಕರ್ ಶೆಟ್ಟಿ ಶರಾವತಿ ಪಂಪ್ ಸ್ಟೋರೇಜ್ ಬಗ್ಗೆ ಪ್ರಶ್ನಿಸಿದ್ದು, `ಉತ್ತರ ಕನ್ನಡ ಜಿಲ್ಲೆಯ ಶರಾವತಿ ಪಂಪ್ಡ್ ಸ್ಟೋರೇಜ್ ಜಲ ವಿದ್ಯುತ್ ಯೋಜನೆಯಿಂದ 2000 ಮೆ.ವ್ಯಾ. ವಿದ್ಯುತ್ ಉತ್ಪಾದಿಸಲು ಉದ್ದೇಶಿಸಲಾಗಿದೆ. ಈ ಯೋಜನೆಯಿಂದ ಪರಿಸರಕ್ಕೆ ಯಾವುದೇ ಹಾನಿ ಉಂಟಾಗುವುದಿಲ್ಲ. ಶರಾವತಿ ಪಂಪ್ಡ್ ಸ್ಟೋರೇಜ್ ಜಲ ವಿದ್ಯುತ್ ಯೋಜನೆಯಿಂದ ಪರಿಸರಕ್ಕೆ ಹಾನಿಯಾಗುತ್ತದೆ ಎಂದು ಆರೋಪಿಸುವವರಿಗೆ ಮಾಹಿತಿಯ ಕೊರತೆ ಇದೆ. ಜನಪ್ರತಿನಿಧಿಗಳು, ಪರಿಸರವಾದಿಗಳ ತಕಾರರು ಬಂದಾಗ ಇದನ್ನು ಗಂಭೀರವಾಗಿ ಪರಿಗಣಿಸಿ, ಸಂಬAಧಿಸಿದ ತಜ್ಞರು, ಅಧಿಕಾರಿಗಳಿಂದ ಪರಿಶೀಲಿಸಿ, ಅವರಿಂದ ವರದಿ ಪಡೆದುಕೊಂಡಿದ್ದೇನೆ. ಈಗಲೂ ಶಾಸಕರಿಗೆ ಪರಿಸರ ಹಾನಿ ಕುರಿತಂತೆ ಯಾವುದೇ ಸಂಶಯಗಳಿದ್ದಲ್ಲಿ ಅವುಗಳನ್ನು ಪರಿಹರಿಸುವ ಕಾರ್ಯ ಮಾಡಲಾಗುತ್ತದೆ’ ಎಂದು ಹೇಳಿದ್ದಾರೆ. `ಈ ಯೋಜನೆಯಲ್ಲಿ ಸುರಂಗ ಮಾರ್ಗವನ್ನು ಮಾಡಲಾಗುವುದಿಲ್ಲ, ಬದಲಿಗೆ ಪೈಪ್ ಲೈನ್ ಅಳವಡಿಸಿ, ಆ ಪ್ರದೇಶವನ್ನು ಪುನಃ ಮೊದಲಿನ ಸ್ಥಿತಿಗೇ ತಂದು ಅರಣ್ಯಿಕರಣ ಮಾಡಲಾಗುತ್ತದೆ. ಇದಕ್ಕಾಗಿ ಕೇವಲ 25 ಎಕರೆ ಭೂಮಿ ಮಾತ್ರ ಅಗತ್ಯವಿದ್ದು, ಹೀಗಾಗಿ ಪರಿಸರದ ಮೇಲೆ ಯಾವುದೇ ಹಾನಿಯಾಗುವ ಕೆಲಸ ಮಾಡುವುದಿಲ್ಲ’ ಎಂದಿದ್ದಾರೆ. `1964 ರಲ್ಲಿ ಶರಾವತಿ ಜಲಾಶಯದ ಯೋಜನೆ ಮಾಡಿದಾಗ 1 ಲಕ್ಷ ಹೆ. ಪ್ರದೇಶ ಮುಳುಗಡೆಯಾಗಿತ್ತು, ಈಗ ವರಾಹಿಯೂ ಸೇರಿದಂತೆ 1400 ಮೆವ್ಯಾ ವಿದ್ಯುತ್ ಉತ್ಪಾದನೆ ಆಗುತ್ತಿದೆ. ಇದೀಗ ಉಪಯೋಗಿಸಿದ ನೀರನ್ನೇ ಪುನಃ ಪಂಪ್ ಮಾಡಿ, ಪುನಃ ವಿದ್ಯುತ್ ಉತ್ಪಾದನೆ ಮಾಡುವ ಯೋಜನೆಗೆ ಬಳಸಲು ಯೋಜನೆ ರೂಪಿಸಲಾಗಿದೆ. ಸೌರಶಕ್ತಿ, ಪವನಶಕ್ತಿ ಸೇರಿದಂತೆ ನವೀಕರಿಸಿದ ಇಂಧನ ಬಳಸುವ ಯೋಜನೆಗಳಲ್ಲಿ ನಮ್ಮ ರಾಜ್ಯ ದೇಶದಲ್ಲಿಯೇ 3ನೇ ಸ್ಥಾನದಲ್ಲಿದೆ, ಶೀಘ್ರವೇ ಮೊದಲನೆ ಸ್ಥಾನಕ್ಕೆ ಬರುವ ವಿಶ್ವಾಸವಿದೆ. ವರ್ಷದಿಂದ ವರ್ಷಕ್ಕೆ ವಿದ್ಯುತ್ ಬೇಡಿಕೆ ಹೆಚ್ಚಾಗುತ್ತಿದ್ದು, ನಮಗೆ ಹೆಚ್ಚಿನ ವಿದ್ಯುತ್ ಅಗತ್ಯವಿದೆ, ಕಳೆದ ವರ್ಷಕ್ಕಿಂತ ಈ ವರ್ಷ ಒಂದು ಸಾವಿರ ಮೆವ್ಯಾ.ಹೆಚ್ಚಿನ ವಿದ್ಯುತ್ ಬೇಡಿಕೆ ಇದೆ. ಪವರ್ ಕಟ್ ಮಾಡದೆ ಕೃಷಿ ಪಂಪ್ ಸೆಟ್ಟುಗಳಿಗೆ ವಿದ್ಯುತ್ ನೀಡುತ್ತಿದ್ದೇವೆ’ ಎಂದು ಸಚಿವ ಕೆ ಜೆ ಜಾರ್ಜ್ ಹೇಳಿದ್ದಾರೆ. - [ಶಾಲೆಗೆ ಹೋಗಿದ್ದ ಬಾಲಕಿ ಅಪಹರಣ!](https://mobiletime.in/2025/12/a-girl-who-was-going-to-school-was-kidnapped/): ಅಂಕೋಲಾದಲ್ಲಿ 9ನೇ ತರಗತಿ ಓದುತ್ತಿದ್ದ ಬಾಲಕಿಯ ಅಪಹರಣ ನಡೆದಿದೆ. ಶಾಲೆಗೆ ಹೋಗಬೇಕಿದ್ದ ಬಾಲಕಿ ಶಾಲೆಗೂ ಹೋಗಿಲ್ಲ. ಸಂಜೆ ಮನೆಗೂ ಮರಳಿಲ್ಲ. ಅಂಕೋಲಾದ ಹಾರವಾಡ ನಿಧಿ ನಾಯ್ಕ ಅವರು ಸೀಬರ್ಡ ಉದ್ಯೋಗಿಯಾಗಿದ್ದಾರೆ. ಅವರು ತಮ್ಮ ಪುತ್ರಿಯ ಹುಡುಕಾಟ ಶುರು ಮಾಡಿದ್ದಾರೆ. ಡಿಸೆಂಬರ್ 08ರಂದು ನಿಧಿ ಅವರ ಪುತ್ರಿ ಎಂದಿನoತೆ ಶಾಲೆಗೆ ಹೋಗುವುದಾಗಿ ಹೇಳಿ ಹೊರಟಿದ್ದರು. ಬೆಳಗ್ಗೆ 8.30ಕ್ಕೆ ಮನೆಯಿಂದ ಹೊರಟ ಅವರು ನಂತರ ಎಲ್ಲಿ ಹೋದರು? ಎಂದು ಗೊತ್ತಾಗಲಿಲ್ಲ. ಸಂಜೆಯಾದರೂ ಅವರು ಮನೆಗೆ ಬಾರದ ಕಾರಣ ಪಾಲಕರು ಹುಡುಕಾಟ ಶುರು ಮಾಡಿದರು. ಶಾಲೆಯ ಕಡೆಯೂ ಹುಡುಕಾಟ ನಡೆಸಿದರು. ಆದರೆ, ಬಾಲಕಿ ಅವರು ಶಾಲೆಗೂ ಬಂದಿಲ್ಲ ಎಂಬ ವಿಷಯ ಅರಿವಿಗೆ ಬಂದಿತು. ಸಂಬoಧಿಕರ ಮನೆಗೆ ಫೋನ್ ಮಾಡಿದರೂ ಬಾಲಕಿ ಸುಳಿವು ಸಿಗಲಿಲ್ಲ. ಅಪರಿಚಿತರು ಬಾಲಕಿಯನ್ನುಪುಸಲಾಯಿಸಿ ಅಪಹರಿಸಿರುವ ಅನುಮಾನ ಕಾಡಿತು. ಈ ಹಿನ್ನಲೆ ನಿಧಿ ನಾಯ್ಕ ಅವರು ಅಂಕೋಲಾ ಪೊಲೀಸ್ ಠಾಣೆಗೆ ಹೋದರು. ಅಪರಿಚಿತರು ಮಗಳನ್ನು ಅಪಹರಿಸಿದ ಬಗ್ಗೆ ದೂರು ನೀಡಿದರು. ಪೊಲೀಸರು ಸಹ ಬಾಲಕಿಗಾಗಿ ಅವರಿಗಾಗಿ ಶೋಧ ಶುರು ಮಾಡಿದರು. ಇದೀಗ ಬಂದ ಸುದ್ದಿ: ತಾಸಿನ ಒಳಗೆ ಹುಡುಕಾಟ! ಬಾಲಕಿ ಕಾಣೆಯಾಗಿರುವ ಪ್ರಕರಣ ದಾಖಲಿಸಿದ ಪೊಲೀಸರು ತಕ್ಷಣ ಹುಡುಕಾಟ ಶುರು ಮಾಡಿದ್ದು, ಕಾಣೆಯಾದ ರಾತ್ರಿಯೇ ಬಾಲಕಿಯನ್ನು ಪತ್ತೆ ಮಾಡಿದ್ದಾರೆ. ಸದ್ಯ ಬಾಲಕಿ ಪಾಲಕರ ಜೊತೆ ಮನೆಗೆ ಮುಟ್ಟಿದ್ದಾರೆ. ಬಾಲಕಿ ಸದ್ಯ ಸುರಕ್ಷಿತವಾಗಿದ್ದು, ಪಾಲಕರು ನಿಶ್ಚಿಂತೆಯಿoದ ಇದ್ದಾರೆ. “ಅಪರಿಚಿತರರಿಂದ ದೂರವಿರುವಂತೆ ಮಕ್ಕಳಿಗೆ ಅರಿವು ಮೂಡಿಸಿ’ - [ಕ್ರಿಪ್ಟೋ ಕರೆನ್ಸಿ: ಧರ್ಮ ಗುರುವಿನಿಂದಲೇ ಮೋಸ!](https://mobiletime.in/2025/12/cryptocurrency-fraud-from-the-religious-guru-himself/): ಮುಸ್ಲಿಂ ಧರ್ಮ ಗುರು ಎಂದು ಪರಿಚಯಿಸಿಕೊಂಡ ಮಹ್ಮದ್ ರಿಜ್ವಾನ್ ಅವರು ಕ್ರಿಪ್ಟೋ ಕರೆನ್ಸಿಯಲ್ಲಿ ಹಣ ಹೂಡಿಕೆ ಮಾಡಿ ಲಾಭಕೊಡಿಸುವುದಾಗಿ ಹೇಳಿ ಅತೀಖ ಗಬ್ಬಾರ್ ಅವರಿಂದ 5.70 ಲಕ್ಷ ರೂ ವಸೂಲಿ ಮಾಡಿದ್ದಾರೆ. ಶಿರಸಿಯ ಅತೀಖ ಅಹ್ಮದ ಅಬ್ದುಲ ಗಪಾರ ಅವರು ವಿವಿಧ ವ್ಯವಹಾರ ಮಾಡಿಕೊಂಡಿದ್ದು, ತಮ್ಮ ವ್ಯಾಪಾರದ ಉದ್ದೇಶಕ್ಕಾಗಿ ಅವರು ಒಮ್ಮೆ ಉತ್ತರ ಪ್ರದೇಶಕ್ಕೆ ಹೋಗಿದ್ದರು. ಅಲ್ಲಿನ ಕಾನಾಪುರದಲ್ಲಿ ಅವರಿಗೆ ಮಹ್ಮದ್ ರಿಜ್ವಾನ್ ಅವರು ಪರಿಚಿತರಾದರು. ಮಹ್ಮದ್ ರಿಜ್ಚಾನ್ ಅವರು ತಮ್ಮನ್ನು ಮುಸ್ಲಿಂ ಧರ್ಮ ಗುರು ಎಂದು ಪರಿಚಯಿಸಿಕೊಂಡರು. ಜೊತೆಗೆ ಗಿಡ ಮೂಲಿಕೆ ಔಷಧಿ ಹಾಗೂ ಸುಗಂಧ ದೃವ್ಯ ವ್ಯಾಪಾರವನ್ನು ಮಾಡುವುದಾಗಿ ಹೇಳಿಕೊಂಡರು. ಈ ವೇಳೆ ಅವರಿಬ್ಬರ ನಡುವೆ ಮೊಬೈಲ್ ಸಂಖ್ಯೆಯ ವಿನಿಮಯ ನಡೆಯಿತು. ಅದಾದ ನಂತರ ಅತೀಖ ಅಹ್ಮದ್ ಅವರು ಶಿರಸಿಗೆ ಮರಳಿದ್ದು, 2025ರ ಜನವರಿಯಲ್ಲಿ ಮಹ್ಮದ್ ರಿಜ್ವಾನ್ ಅವರಿಂದ ಫೋನ್ ಬಂದಿತು. `ಕ್ರಿಪ್ಟೋ ಕರೆನ್ಸಿಯಲ್ಲಿ ಹೂಡಿಕೆ ಮಾಡಿದರೆ ಲಾಭ ಸಿಗಲಿದೆ. 6 ಲಕ್ಷ ರೂ ಹೂಡಿಕೆ ಮಾಡಿ’ ಎಂದು ಮಹ್ಮದ್ ರಿಜ್ವಾನ್ ಅವರು ಹೇಳಿದರು. `ತನ್ನಲ್ಲಿ ಹಣ ಇಲ್ಲ’ ಎಂದು ಅತೀಖ ಗಪಾರ್ ಅವರು ತಿಳಿಸಿದಾಗ `ಹಂತ ಹಂತವಾಗಿ ಹೂಡಿಕೆ ಮಾಡಿ’ ಎಂಬ ಸಲಹೆ ಕೊಟ್ಟರು. `ತಾನು ಎಲ್ಲಾ ಮಾಹಿತಿ ತಿಳಿಸುವೆ’ ಎಂಬ ಭರವಸೆ ನೀಡಿದರು. ಧರ್ಮ ಗುರು ಹೇಳಿದ ಮಾತಿಗೆ ಅತೀಖ ಗಪಾರ್ ಅವರು ಇಲ್ಲ ಹೇಳಲಿಲ್ಲ. ಮಹ್ಮದ್ ರಿಜ್ವಾನ್ ಅವರು ಸೂಚಿಸಿದ ಪ್ರಕಾರ ಶಹನವಾಜ್ ಹುಸೇನ್ ಎಂಬಾತರ ಬ್ಯಾಂಕ್ ಖಾತೆಗೆ ಹಣ ವರ್ಗಾಯಿಸಿದರು. ಹಂತ ಹಂತವಾಗಿ 5.70 ಲಕ್ಷ ರೂ ಹಣ ಕೊಟ್ಟರು. ಆದರೆ, ಅತೀಖ ಅಹ್ಮದ್ ಅವರಿಗೆ ಕ್ರಿಪ್ಟೋ ಕರೆನ್ಸಿ ಮಾತ್ರ ಸಿಗಲಿಲ್ಲ. ಪ್ರಶ್ನಿಸಿದಾಗ `ಗಲ್ಪ ರಾಷ್ಟçದಲ್ಲಿ ಯುದ್ಧದ ಸನ್ನಿವೇಶವಿದೆ. ಹೀಗಾಗಿ 3-4 ತಿಂಗಳು ಕಾಯಬೇಕು’ ಎಂದು ಮಹ್ಮದ್ ರಿಜ್ಚಾನ್ ಹೇಳಿದರು. ನಾಲ್ಕು ತಿಂಗಳ ನಂತರ ಫೋನ್ ಮಾಡಿದಾಗ `ತಾನೂ ಊರಿನಲ್ಲಿಲ್ಲ’ ಎಂದರು. ಸೆಪ್ಟೆಂಬರ್ ಅವಧಿಯಲ್ಲಿ ಮತ್ತೆ ಫೋನ್ ಮಾಡಿ ಹಣ ಕೇಳಿದಾಗ `ಇಲ್ಲಿಂದ ಜನರನ್ನು ಕಳುಹಿಸಿ ನಿನ್ನ ಕಥೆ ಮುಗಿಸುವೆ’ ಎಂದು ಬೆದರಿಕೆ ಒಡ್ಡಿದರು. ಹಣಣ ಪಡೆದಿದ್ದ ಖಾತೆಯವನಿಗೆ ಫೋನ್ ಮಾಡಿದರೂ ಪ್ರಯೋಜನ ಆಗಲಿಲ್ಲ. - [ತ್ರಿಬಲ್ ರೈಡಿಂಗ್: ಕಾರಿಗೆ ಬೈಕು ಗುದ್ದಿ ಸಹಸವಾರ ಸಾವು!](https://mobiletime.in/2025/12/triple-riding-biker-dies-after-being-hit-by-car/): ಕಾರು ಹಾಗೂ ಬೈಕಿನ ನಡುವೆ ನಡೆದ ಅಪಘಾತದಲ್ಲಿ ಐವರಿಗೆ ಪೆಟ್ಟಾಗಿದ್ದು, ಆ ಪೈಕಿ ಒಬ್ಬರು ಸಾವನಪ್ಪಿದ್ದಾರೆ. ಯಲ್ಲಾಪುರದ ಮಲವಳ್ಳಿಯ ಮಹಾಬಲೇಶ್ವರ ತಿಮ್ಮಯ್ಯ ಕುಣಬಿ ಅವರ ದುಡುಕುತನ ಈ ಅಪಘಾತಕ್ಕೆ ಕಾರಣ. ತಿಮ್ಮಯ್ಯ ಕುಣಬಿ ಅವರು ಬೈಕಿನಲ್ಲಿ ಮತ್ತಿಬ್ಬರನ್ನು ಕೂರಿಸಿಕೊಂಡು ಯಲ್ಲಾಪುರದಿಂದ ಅಂಕೋಲಾ ಕಡೆ ಚಲಿಸುವಾಗ ಈ ಅಪಘಾತ ನಡೆದಿದೆ. ಅಗಸೂರು ಬಳಿ ಆ ಬೈಕು ಕಾರಿಗೆ ಗುದ್ದಿದ ಪರಿಣಾಮ ಬೈಕಿನ ಹಿಂದೆ ಕೂತಿದ್ದ ಯಲ್ಲಾಪುರದ ಶೇಡಕುಳಿಯ ಬೆಳ್ಳಾ ತಮ್ಮಯ್ಯ ಕುಣಬಿ (50) ಅವರು ಸಾವನಪ್ಪಿದ್ದಾರೆ. ಡಿಸೆಂಬರ್ 9ರಂದು ಮಹಾಬಲೇಶ್ವರ ಕುಣಬಿ ಅವರು ಬೆಳ್ಳಾ ತಮ್ಮಯ್ಯ ಕುಣಬಿ ಹಾಗೂ ಮರ್ತಿ ಬೆಳ್ಳಾ ಕುಣಬಿ ಅವರನ್ನು ಒಂದೇ ಬೈಕಿನಲ್ಲಿ ಕೂರಿಸಿಕೊಂಡು ಹೊರಟಿದ್ದರು. ರಸ್ತೆ ಎಡಬದಿಯಲ್ಲಿ ಸಂಚರಿಸುವ ಬದಲು ಅವರು ಬಲಭಾಗದಿಂದ ಬೈಕ್ ಓಡಿಸುತ್ತಿದ್ದರು. ಬೈಕಿನ ವೇಗವೂ ಹೆಚ್ಚಾಗಿದ್ದು, ಅಂಕೋಲಾದಿAದ ಬಂದ ಕಾರಿಗೆ ಅಗಸೂರಿನ ಬಳಿ ಮಹಾಬಲೇಶ್ವರ ಕುಣಬಿ ಅವರು ಬೈಕ್ ಗುದ್ದಿದರು. ಪರಿಣಾಮ ಬೈಕಿನಲ್ಲಿದ್ದ ಬೆಳ್ಳಾ ಕುಣಬಿ, ಮರ್ತಿ ಬೆಳ್ಳಾ ಕುಣಬಿ ಅವರ ಜೊತೆ ಮಹಾಬಲೇಶ್ವರ ಕುಣಬಿ ಅವರು ನೆಲಕ್ಕೆ ಬಿದ್ದು ಗಾಯಗೊಂಡರು. ಕಾರಿನಲ್ಲಿ ಸಂಚರಿಸುತ್ತಿದ್ದ ಅಂಕೋಲಾ ಪುರ್ಲಬೇಣದ ನಿಖಿಲ್ ಕೃಷ್ಣಾನಂದ ನಾಯ್ಕ ಹಾಗೂ ಕೃಷ್ಣಾನಂದ ಪಾಂಡುರAಗ ನಾಯ್ಕ ಅವರಿಗೂ ಈ ಅಪಘಾತದಲ್ಲಿ ಪೆಟ್ಟಾಯಿತು. ಗಂಭೀರ ಪ್ರಮಾಣದಲ್ಲಿ ಗಾಯಗೊಂಡ ಬೆಳ್ಳಾ ಕುಣಬಿ ಅವರನ್ನು ಅಂಕೋಲಾ ಆಸ್ಪತ್ರೆಗೆ ಸಾಗಿಸಲಾಯಿತು. ಹೆಚ್ಚಿನ ಚಿಕಿತ್ಸೆಗೆ ಅವರನ್ನು ಕಾರವಾರ ಜಿಲ್ಲಾಸ್ಪತ್ರೆಗೆ ಕಳುಹಿಸಲಾಯಿತು. ಆದರೆ, ಅದರಿಂದ ಯಾವ ಪ್ರಯೋಜನವೂ ಆಗಲಿಲ್ಲ. ಬೆಳ್ಳಾ ಕುಣಬಿ ಅವರು ಕೊನೆಯುಸಿರೆಳೆದರು. ಈ ಎಲ್ಲಾ ವಿಷಯದ ಬಗ್ಗೆ ಹೆಬ್ಬುಳದ ಸಂತೋಷ ತಳ್ಳೇಕರ್ ಅವರು ಪೊಲೀಸರಿಗೆ ಮಾಹಿತಿ ನೀಡಿದರು. ಅಂಕೋಲಾ ಪೊಲೀಸರು ಮಲವಳ್ಳಿಯ ಮಹಾಬಲೇಶ್ವರ ತಿಮ್ಮಯ್ಯ ಕುಣಬಿ ಅವರ ವಿರುದ್ಧ ಪ್ರಕರಣ ದಾಖಲಿಸಿದ್ದು,. `ಸಂಚಾರಿ ನಿಯಮ ಪಾಲಿಸಿ’ ಎಂದು ಸಾರ್ವಜನಿಕರಿಗೂ ಸೂಚಿಸಿದರು. `ಹೆಲ್ಮೆಟ್‌ಧರಿಸಿ.. ಬೈಕ್ ಓಡಿಸಿ’ - [ಸುಪ್ರೀಂ ಕೋರ್ಟಿನ ಸತ್ಯ: ಅಂದರ್ ಬಾಹರ್ ಅಪರಾಧವಲ್ಲ!](https://mobiletime.in/2025/12/supreme-court-truth-ander-bahar-is-not-a-crime/): ರೆಸಾರ್ಟವೊಂದರಲ್ಲಿ ಅಂದರ್ ಬಾಹರ್ ಆಡುವಾಗ ಪೊಲೀಸರು ದಾಳಿ ನಡೆಸಿದ್ದು, ಈ ಪ್ರಕರಣವನ್ನು ಸರ್ಕಾರ ಸುಪ್ರೀಂ ಕೋರ್ಟವರೆಗೆ ಕೊಂಡೊಯ್ದಿದೆ. ವಾದ ಆಲಿಸಿದ ಸುಪ್ರೀಂ ಕೋರ್ಟ `ಅಂದರ್ ಬಾಹರ್ ಆಡುವುದು ಅಪರಾಧ ಅಲ್ಲ’ ಎಂದು ಆದೇಶಿಸಿದೆ! ಶಿರಸಿಯ ಭೈರುಂಬೆ ಬಳಿ ಹಾವೇರಿಯ ವೈದ್ಯ ಡಾ ಬಸವರಾಜ ವೀರಪುರು ಅವರು ವಿಆರ್‌ಆರ್ ಎಂಬ ರೆಸಾರ್ಟ ಹೊಂದಿದ್ದರು. ಆ ರೆಸಾರ್ಟಿನಲ್ಲಿ ಅಂದರ್ ಬಾಹರ್ ಆಡುವಾಗ 20 ಜನ ಸಿಕ್ಕಿ ಬಿದ್ದಿದ್ದರು. 49 ಲಕ್ಷ ರೂ ಹಣವನ್ನು ಪೊಲೀಸರು ಜಪ್ತು ಮಾಡಿದ್ದರು. ನಂತರ ವೈದ್ಯರನ್ನು ಸೇರಿಸಿ ಸಿಕ್ಕಿಬಿದ್ದ ಎಲ್ಲರ ವಿರುದ್ಧ ಪ್ರಕರಣ ದಾಖಲಿಸಿದ್ದರು. ಸಿಕ್ಕಿ ಬಿದ್ದವರೆಲ್ಲರೂ ಕಾನೂನು ಹೋರಾಟ ನಡೆಸಿದ್ದು, ತಮ್ಮ ಮೇಲೆ ದಾಖಲಾದ ಪ್ರಕರಣದ ಬಗ್ಗೆ ಹೈಕೋರ್ಟಿನ ಮೊರೆ ಹೋಗಿದ್ದರು. ಶಿರಸಿ ಮೂಲದ ವಕೀಲ ಸೌರಭ ಹೆಗಡೆ ಹೂಡ್ಲಮನೆ ಅವರು ಈ ಪ್ರಕರಣವನ್ನು ಧಾರವಾಡದ ಹೈಕೋರ್ಟಿನಲ್ಲಿ ಪ್ರಶ್ನಿಸಿದ್ದರು. ಆ ವೇಳೆ ಹೈಕೋರ್ಟ `ಅಂದರ್ ಬಾಹರ್ ಕೌಶಲ್ಯದ ಆಟ’ ಎಂದು ಹೇಳಿತ್ತು. ಅನೇಕ ಪ್ರಕರಣಗಳಲ್ಲಿ ಹೈಕೋರ್ಟ ಅದೇ ಮಾತನ್ನು ಪುನರುಚ್ಚರಿಸಿತ್ತು. ಅದಾಗಿಯೂ, ಸರ್ಕಾರ ಈ ಪ್ರಕರಣದ ಬಗ್ಗೆ ಸುಪ್ರೀಂ ಕೋರ್ಟಗೆ ಮೇಲ್ಮನವಿ ಸಲ್ಲಿಸಿತ್ತು. ಸದ್ಯ ಸುಪ್ರೀಂ ಕೋರ್ಟ ಸಹ ಹೈಕೋರ್ಟಿನ ಆದೇಶವನ್ನು ಎತ್ತಿಹಿಡಿದಿದೆ. `ರಮ್ಮಿ, ಅಂದರ್ ಬಾಹರ್ ಆಟಗಳು ಜೂಜಾಟದ ವ್ಯಾಪ್ತಿಗೆ ಬರುವುದಿಲ್ಲ. ಕೌಶಲ್ಯಪೂರಿತ ಚಟುವಟಿಕೆಗಳ ಪಟ್ಟಿಗೆ ಅವು ಬರಲಿದೆ’ ಎಂದು ಸೌರಭ ಹೆಗಡೆ ಅವರು ಹೈಕೋರ್ಟಿನಲ್ಲಿ ವಾದಿಸಿದ್ದರು. ಸುಪ್ರೀಂ ಕೋರ್ಟ ಸಹ ಇದೀಗ ಅದೇ ವಾದವನ್ನು ಎತ್ತಿಹಿಡಿದಿದೆ. ಹೀಗಾಗಿ ಅಂದರ್ ಬಾಹರ್ ವಿಷಯದಲ್ಲಿ ಸರ್ಕಾರಕ್ಕೆ ಹಿನ್ನಡೆಯಾಗಿದೆ. `ಜೂಜಾಟದಿಂದ ಜೀವನ ಹಾಳು’ - [ಶಾಲಾ-ಕಾಲೇಜುಗಳಲ್ಲಿ ಫೋನ್ ನಂ ಮಾರಾಟ ದಂಧೆ!](https://mobiletime.in/2025/12/phone-number-selling-scam-in-schools-and-colleges/): ಪ್ರವೇಶ ಪ್ರಕ್ರಿಯೆ ವೇಳೆ ವಿದ್ಯಾರ್ಥಿಗಳಿಂದ ಕಾಸುಪಡೆಯುವ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳು ಅದಾದ ನಂತರವೂ ಮಕ್ಕಳ ಜೊತೆ ಅವರ ಪಾಲಕರ ವೈಯಕ್ತಿಕ ವಿವರವನ್ನು ಮಾರಾಟ ಮಾಡುತ್ತಿವೆ. ಖಾಸಗಿ ಶಿಕ್ಷಣ ಸಂಸ್ಥೆಗಳ ಜೊತೆ ಸರ್ಕಾರಿ ಶಿಕ್ಷಣ ಸಂಸ್ಥೆಯ ಸಿಬ್ಬಂದಿ ಸಹ ಇಂಥ ಅಡ್ಡದಾರಿ ಹಿಡಿದಿದ್ದಾರೆ! ಶಾಲಾ-ಕಾಲೇಜುಗಳಿಗೆ ಮಕ್ಕಳನ್ನು ದಾಖಲಿಸುವಾಗ ಆ ಸಂಸ್ಥೆಯವರು ಮಕ್ಕಳ ವಿವರದ ಜೊತೆ ಪಾಲಕರ ಹೆಸರು, ವಿಳಾಸ ಹಾಗೂ ಫೋನ್ ಸಂಖ್ಯೆ ಪಡೆಯುತ್ತಾರೆ. ನಂತರ ಆ ಸಂಗ್ರಹ ಮಾಹಿತಿಯನ್ನು ವಿವಿಧ ಮಾರ್ಕೇಂಟಿoಗ್ ತಂಡಕ್ಕೆ ಮಾರಾಟ ಮಾಡುತ್ತಾರೆ. ಇಂಥ ಕಳ್ಳಾಟ ಪ್ರಕರಣದ ಬೆನ್ನತ್ತಿದ ಶಿರಸಿಯ ವೈದ್ಯ ಡಾ ರವಿಕಿರಣ ಪಟವರ್ಧನ್ ಅವರು ಸರ್ಕಾರಕ್ಕೆ ದೂರು ಸಲ್ಲಿಸಿದ್ದಾರೆ. ನಿಯಮಗಳ ಪ್ರಕಾರ ಯಾವ ವ್ಯಕ್ತಿಯೂ ತಮ್ಮ ವೈಯಕ್ತಿಕ ವಿವರಗಳನ್ನು ಬೇರೆಯವರಿಗೆ ಕೊಡುವುದು ಕಡ್ಡಾಯ ಅಲ್ಲ. ಹೀಗಾಗಿ ಫೋನ್ ನಂ ಹಾಗೂ ಮೇಲ್ ಐಡಿ ಜೊತೆ ವಿಳಾಸ ಸಹ ಕೊಡಬೇಕಾಗಿಲ್ಲ. ಅದಾಗಿಯೂ, ವಿವಿಧ ಶಿಕ್ಷಣ ಸಂಸ್ಥೆಯವರು ಅರ್ಜಿ ನಮೂನೆಯಲ್ಲಿಯೇ ಕಡ್ಡಾಯ ಎನ್ನುವ ರೀತಿ ಕಾಲಂ ಬಿಡುತ್ತಿದ್ದು, ಆ ಮಾಹಿತಿ ಸೋರಿಕೆಯಾಗುತ್ತಿದೆ. ವಿವಿಧ ಶಾಲಾ-ಕಾಲೇಜುಗಳಿಗೆ ಪ್ರವೇಶಪಡೆದ ವಿದ್ಯಾರ್ಥಿಗಳು ಹಾಗೂ ಪಾಲಕರಿಗೆ ಇನ್ನಿತರ ಉನ್ನತ ಶಿಕ್ಷಣದ ಕಾಲೇಜು, ಕೋಚಿಂಗ್ ಕೇಂದ್ರ, ಆನ್‌ಲೈನ್ ಟ್ಯೂಶನ್ ಸೇರಿ ಬೇರೆ ಬೇರೆ ಕಡೆಯಿಂದ ಫೋನ್ ಬರುತ್ತಿದೆ. ವಿದ್ಯಾರ್ಥಿಯ ಕಾಲೇಜು ಮುಗಿದ ನಂತರ ಅದೇ ಮಾಹಿತಿ ಮತ್ತೆ ಸೋರಿಕೆ ಆಗುತ್ತಿದ್ದು, ಉದ್ಯೋಗವಕಾಶಗಳ ಹೆಸರಿನಲ್ಲಿಯೂ ಕೆಲವರು ಫೋನ್ ಮಾಡಿ ವಂಚಿಸುತ್ತಿದ್ದಾರೆ. ಇಂಥ ಫೋನ್ ಕರೆಗಳು ಮಕ್ಕಳ ವಿದ್ಯಾಭ್ಯಾಸ ಹಾಳು ಮಾಡುವುದರ ಜೊತೆ ಪಾಲಕರ ನಿದ್ದೆಯನ್ನು ಕೆಡಿಸುತ್ತಿದೆ. 2023ರ ಡಿಜಿಟಲ್ ವೈಯಕ್ತಿಕ ಡೇಟಾ ಸಂರಕ್ಷಣಾ ಕಾಯ್ದೆ ಹಾಗೂ ಟ್ರಾಯ್ ಅನಿಚ್ಛಿತ ವಾಣಿಜ್ಯ ಸಂವಹನ ನಿಯಮಗಳ ಪ್ರಕಾರ ಡಾಡಾ ಸೋರಿಕೆ ಅಪರಾಧ. ಒಬ್ಬರ ವೈಯಕ್ತಿಕ ವಿವರವನ್ನು ಮತ್ತೊಬ್ಬರಿಗೆ ಹಂಚುವುದು ಕಾನೂನುಬಾಹಿರ. ಅದಾಗಿಯೂ, ಮೊದಲಿನಿಂದಲೂ ಮಾರುಕಟ್ಟೆ ವ್ಯವಸ್ಥೆಯಲ್ಲಿ ಅನೇಕ ಫೋನ್ ಸಂಖ್ಯೆಗಳು ವಿನಿಮಯವಾಗುತ್ತಿದೆ. ಯಾವುದೇ ಮಳಿಗೆಗಳಲ್ಲಿ ಆಫರ್ ಹೆಸರಿನಲ್ಲಿ ಗ್ರಾಹಕರಿಂದ ಫೋನ್ ಸಂಖ್ಯೆ ಪಡೆಯುತ್ತಿದ್ದು, ಅಂಥ ಮಳಿಗೆಯವರು ಸಹ ಗ್ರಾಹಕರ ಫೋನ್ ಸಂಖ್ಯೆ ಮಾರಾಟ ಮಾಡುತ್ತಾರೆ. ಬ್ಯಾಂಕುಗಳಿಗೆ ನೀಡಿದ ಫೋನ್ ನಂ ಸಹ ಮಾರಾಟ ವ್ಯವಸ್ಥೆಯಿಂದ ಹೊರತಾಗಿಲ್ಲ. ಹೀಗಾಗಿಯೇ ಕ್ರೆಡಿಟ್ ಕಾರ್ಡ, ಸಾಲ ಕೊಡುತ್ತೇವೆ ಎನ್ನುವ ಫೋನುಗಳು ಜನರ ನೆಮ್ಮದಿ ಹಾಳು ಮಾಡುತ್ತಿವೆ. ಸದ್ಯ ಶಿಕ್ಷಣ ವ್ಯವಸ್ಥೆಯಲ್ಲಿಯೂ ಮಾರ್ಕೇಂಟಿoಗ್ ಹಾವಳಿ ಮಿತಿ ಮೀರಿದೆ. ಪ್ರವೇಶ ಪ್ರಕ್ರಿಯೆ, ಬೋರ್ಡ್ ನೋಂದಣಿ, ಅಥವಾ ಅಕಾಡೆಮಿಕ್ ದಾಖಲೆ ಸಂಗ್ರಹದ ಹೆಸರಿನಲ್ಲಿಪಡೆದ ವೈಯಕ್ತಿಕ ಮಾಹಿತಿಯನ್ನು ಆ ಸಂಸ್ಥೆಯವರೇ ಅನಗತ್ಯ ಜಾಹೀರಾತು, ಪ್ರಚಾರ ಸಂದೇಶಕ್ಕೆ ಬಳಸುತ್ತಿದ್ದಾರೆ. ಇದರಿಂದ ವಿದ್ಯಾರ್ಥಿ ಮತ್ತು ಅವರ ಕುಟುಂಬಗಳ ಗೌಪ್ಯತೆ, ಸುರಕ್ಷತೆ ಮತ್ತು ನೈತಿಕ ಹಕ್ಕುಗಳಿಗೆ ದೊಡ್ಡ ಪ್ರಮಾಣದಲ್ಲಿ ಧಕ್ಕೆಯಾಗುತ್ತಿದೆ. `ವಿದ್ಯಾರ್ಥಿ ಮತ್ತು ಪೋಷಕರ ಸಂಪರ್ಕ ವಿವರಗಳನ್ನು ಜಾಹೀರಾತು ಅಥವಾ ವ್ಯಾಪಾರಿಕ ಉದ್ದೇಶಗಳಿಗೆ ಬಳಕೆ ಮಾಡುವುದನ್ನು ತಕ್ಷಣ ನಿಷೇಧಿಸಬೇಕು. ಎಲ್ಲ ಶಿಕ್ಷಣ ಸಂಸ್ಥೆಗಳು ಮತ್ತು ಬೋರ್ಡ್ಗಳಿಗೆ ಕಠಿಣ ಡೇಟಾ ರಕ್ಷಣೆ ಮಾರ್ಗಸೂಚಿಗಳನ್ನು ಜಾರಿ ಮಾಡಬೇಕು. ಈ ಸಮಸ್ಯೆಯಿಂದ ಬಾಧಿತರಾದ ಪೋಷಕರು ಹಾಗೂ ವಿದ್ಯಾರ್ಥಿಗಳಿಗೆ ವ್ಯವಸ್ಥಿತ ದೂರು ಪರಿಹಾರ ವ್ಯವಸ್ಥೆಯನ್ನು ರೂಪಿಸಬೇಕು’ ಎಂದು ಆಗ್ರಹಿಸಿ ಡಾ ರವಿಕಿರಣ ಪಟವರ್ಧನ್ ಅವರು ಸರ್ಕಾರಕ್ಕೆ ಬರೆದ ಪತ್ರದಲ್ಲಿ ಆಗ್ರಹಿಸಿದ್ದಾರೆ. `ಯಾವುದೇ ಕಾಲೇಜು ಅಥವಾ ವ್ಯಕ್ತಿ ವಿದ್ಯಾರ್ಥಿ ಅಥವಾ ಪೋಷಕರ ಮಾಹಿತಿಯನ್ನು ದುರುಪಯೋಗಪಡಿಸಿರುವ ಮಾಹಿತಿ ಒದಗಿಸಿದಲ್ಲಿ ಕ್ರಮ ಕೈಗೊಳ್ಳಲಾಗುತ್ತದೆ’ ಎಂದು ಸರ್ಕಾರ ಹಿಂಬರಹವನ್ನು ಕೊಟ್ಟಿದೆ. - [ಹೆರಿಗೆ ನೋವಿಗೆ ಹೆದರಿ ಹಾರ್ಟ ಅಟಾಕ್: ಹೊಟ್ಟೆಯಲ್ಲಿದ್ದ ಹಸುಗೂಸಿನ ಜೊತೆ ಗರ್ಭಿಣಿಯೂ ಸಾವು!](https://mobiletime.in/2025/12/heart-attack-due-to-fear-of-labor-pain-pregnant-woman-dies-along-with-baby-in-womb/): ಹೆರಿಗೆ ನೋವಿಗೆ ಹೆದರಿದ ಗರ್ಭಿಣಿಯೊಬ್ಬರಿಗೆ ಹೃದಯಘಾತವಾಗಿದೆ. ತೀವೃ ಪ್ರಮಾಣದ ಹೃದಯಘಾತದಿಂದ ರೋಹಿಣಿ ಹಣಬರ್ ಅವರು ಸಾವನಪ್ಪಿದ್ದಾರೆ. ರೋಹಿಣಿ ಅವರ ಹೊಟ್ಟೆಯೊಳಗಿದ್ದ ಹಸುಗೂಸನ್ನು ಸಹ ಬದುಕಿಸಿಕೊಳ್ಳಲು ಸಾಧ್ಯವಾಗಿಲ್ಲ. ಜೊಯಿಡಾದ ಜಗಲಪೇಟೆಯಲ್ಲಿ ಮನೋಜ ಹಣಬರ್ ಅವರು ಹೆಸ್ಕಾಂ ಬಿಲ್ ಕಲೆಕ್ಟರ್ ಆಗಿದ್ದಾರೆ. ಅವರ ಪತ್ನಿ ರೋಹಿಣಿ ಹಣಬರ್ (29) ಅವರು ಗರ್ಭಧರಿಸಿದ್ದು, ಕೊನೆಕ್ಷಣದಲ್ಲಿ ಹೆರಿಗೆಗಾಗಿ ಆಸ್ಪತ್ರೆಗೆ ದಾಖಲಾಗುವ ವೇಳೆ ಹೃದಯಘಾತದಿಂದ ಸಾವನಪ್ಪಿದ್ದಾರೆ. ರೋಹಿಣಿ ಹಣಬರ್ ಅವರು ತಮ್ಮ ಹುಟ್ಟು ಹಬ್ಬದ ದಿನದಂದೇ ಮಗುವಿಗೆ ಜನ್ಮ ಕೊಡಲು ಸಿದ್ಧರಾಗಿದ್ದು, ಹುಟ್ಟಿದ ದಿನವೇ ಅವರ ಬದುಕು ಕೊನೆಯಾಗಿದೆ. ರೋಹಿಣಿ ಹಣಬರ್ ಅವರನ್ನು ಉಳಿಸಿಕೊಳ್ಳಲು ಕುಟುಂಬದವರ ಜೊತೆ ವೈದ್ಯರು ಸಾಕಷ್ಟು ಪ್ರಯತ್ನ ನಡೆಸಿದರೂ ಅದು ಪ್ರಯೋಜನಕ್ಕೆ ಬರಲಿಲ್ಲ. ಡಿಸೆಂಬರ್ 9ರ ನಸುಕಿನ 4 ಗಂಟೆಗೆ ರೋಹಿಣಿ ಹಣಬರ್ ಅವರಿಗೆ ಹೆರಿಗೆ ನೋವು ಕಾಣಿಸಿತು. ತಕ್ಷಣ ಮನೋಜ ಹಣಬರ್ ಅವರು ಪತ್ನಿಯನ್ನು ದಾಂಡೇಲಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದರು. ಅಲ್ಲಿನ ವೈದ್ಯರ ಶಿಫಾರಸ್ಸಿನ ಮೇರೆಗೆ ರೋಹಿಣಿ ಹಣಬರ್ ಅವರನ್ನು ಧಾರವಾಡದ ಆಸ್ಪತ್ರೆಗೆ ಕರೆದೊಯ್ಯುವ ಪ್ರಯತ್ನ ನಡೆಯಿತು. ಡಾ. ಕೀರ್ತಿ ಅವರು ರೋಹಿಣಿ ಹಣಬರ್ ಅವರ ಜೊತೆಗಿದ್ದರು. ದಾಂಡೇಲಿಯಿAದ ಧಾರವಾಡಕ್ಕೆ ಹೋಗುತ್ತಿರುವಾಗ ರೋಹಿಣಿ ಹಣಬರ್ ಅವರ ಪ್ರಜ್ಞೆ ತಪ್ಪಿತು. ಅವರನ್ನು ಮಾತನಾಡಿಸುವ ಪ್ರಯತ್ನ ಮಾಡಿದರೂ ಮಾತನಾಡಲಿಲ್ಲ. ತಕ್ಷಣ ಕುಟುಂಬದವರು ರೋಹಿಣಿ ಹಣಬರ್ ಅವರನ್ನು ಸಮೀಪದ ಹಳಿಯಾಳ ಆಸ್ಪತ್ರೆಗೆ ಕರೆದೊಯ್ದರು. ತುರ್ತು ನಿಗಾ ಘಟಕದಲ್ಲಿ ಅವರನ್ನು ದಾಖಲಿಸಿದರು. ವೈದ್ಯರು ರೋಹಿಣಿ ಹಣಬರ್ ಅವರಿಗೆ ನಿರಂತರ ಚಿಕಿತ್ಸೆ ನೀಡಿದರು. ಆದರೆ, 11 ಗಂಟೆ ವೇಳೆಗೆ ರೋಹಿಣಿ ಅವರು ಕೊನೆಯುಸಿರೆಳೆದರು. ಪ್ರತಿಭಟನೆ: ರೋಹಿಣಿ ಹಣಬರ್ ಅವರ ಸಾವಿಗೆ ವೈದ್ಯರ ನಿರ್ಲಕ್ಷ ಕಾರನ ಎಂದು ಅವರ ಸಂಬoಧಿಕರು ದೂರಿದ್ದಾರೆ. ಕಾರವಾರ ಜಿಲ್ಲಾಸ್ಪತ್ರೆಯಲ್ಲಿ ಶವ ಪರೀಕ್ಷೆ ನಂತರ ರೋಹಿಣಿ ಹಣಬರ ಅವರ ಶವವನ್ನು ಕುಟುಂಬದವರಿಗೆ ಹಸ್ತಾಂತರಿಸಲಾಗಿದ್ದು, ಬುಧವಾರ ರೋಹಿಣಿ ಹಣಬರ್ ಅವರ ಅಂತ್ಯಕ್ರಿಯೆ ನಡೆದಿದೆ. `ವೈದ್ಯರು ಸಕಾಲಕ್ಕೆ ಬಂದಿಲ್ಲ. ಗರ್ಭಿಣಿಯನ್ನು ನಸುಕಿನಲ್ಲಿ ಆಸ್ಪತ್ರೆಗೆ ಕರೆತಂದರೂ ವೈದ್ಯರು 8.30ರವರೆಗೆ ಬರಲಿಲ್ಲ. ವೈದ್ಯರ ನಿರ್ಲಕ್ಷದಿಂದ ರೋಹಿಣಿ ಹಣಬರ್ ಅವರು ಸಾವನಪ್ಪಿದ್ದಾರೆ’ ಎಂದು ಜನ ಪ್ರತಿಭಟನೆ ನಡೆಸಿದ್ದಾರೆ.   - [ಕಾರವಾರ: ಕಾರಾಗೃಹದಲ್ಲಿರುವ ಕೈದಿಗಳ ಕೂಗಾಟ-ಹೊಡೆದಾಟ!](https://mobiletime.in/2025/12/karwar-inmates-shouting-and-fighting-in-the-prison/): ಕಾರವಾರದ ಕಾರಾಗೃಹದಲ್ಲಿ ಮತ್ತೆ ಕೈದಿಗಳ ಕೂಗಾಟ-ಹೊಡೆದಾಟ ನಡೆದಿದೆ. ಮಾದಕ ವ್ಯಸನ ಕೊಡದ ಕಾರಣ ಜೈಲಿನಲ್ಲಿದ್ದ ಟಿವಿ, ಬಾಗಿಲಿನ ಗಾಜುಗಳನ್ನು ಕೈದಿಗಳು ಪುಡಿ ಪುಡಿ ಮಾಡಿದ್ದಾರೆ. ಕಾರಾಗೃಹ ಸಿಬ್ಬಂದಿ ಮೇಲೆಯೂ ಆಕ್ರಮಣ ನಡೆಸಿದ್ದು, ಸಮವಸ್ತ್ರದಲ್ಲಿದ್ದ ಸಿಬ್ಬಂದಿಯನ್ನು ಕಾಲಿನಿಂದ ತುಳಿದು ನೋವು ಮಾಡಿದ್ದಾರೆ. ಜೊತೆಗೆ ಜೈಲು ಉಸ್ತುವಾರಿವಹಿಸಿರುವ ಸರ್ಕಾರಿ ಸಿಬ್ಬಂದಿ ವಿರುದ್ಧವೇ ನ್ಯಾಯಾಧೀಶರಿಗೆ ದೂರು ನೀಡುವುದಾಗಿ ಕೈದಿಗಳು ಬೆದರಿಸಿದ್ದಾರೆ! ಕಳೆದ ವಾರ ಕಾರಾಗೃಹದ ಒಳಗೆ ಪೊಲೀಸರು ದಿಢೀರ್ ದಾಳಿ ನಡೆಸಿ ತಪಾಸಣೆ ನಡೆಸಿದ್ದರು. ಆಗ, ಅಲ್ಲಿ ಮಾದಕ ವಸ್ತುಗಳು ಪತ್ತೆಯಾಗಿದ್ದವು. ಅದರ ಜೊತೆ ನಿಷೇಧಿತ ಮೊಬೈಲ್ ಸಹ ಸಿಕ್ಕಿತ್ತು. ಈ ಹಿನ್ನಲೆ ಜೈಲಿನ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಲು ಶುರು ಮಾಡಿದ್ದು, ಕೈದಿಗಳಿಗೆ ಅದನ್ನು ಸಹಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಈ ಹಿನ್ನಲೆ ಮೂರು ದಿನಗಳ ಹಿಂದೆ ಬಂಧಿತ ಕೈದಿಗಳಿಬ್ಬರು ಗಲಾಟೆ ಮಾಡಿದ್ದರು. ಮಾದಕ ವ್ಯಸನ ಸಿಗದ ಕಾರಣ ಕಾರಾಗೃಹ ಸಿಬ್ಬಂದಿ ಮೇಲೆ ಕೈ ಮಾಡಿದ್ದರು. ಅದಾದ ನಂತರ ಇದೀಗ ಮತ್ತೆ ಕಾರಾಗೃಹದ ಸಿಬ್ಬಂದಿ ಮೇಲೆ ಆರು ಕೈದಿಗಳು ದಾಳಿ ಮಾಡಿದ್ದಾರೆ. ಜೈಲಿನಲ್ಲಿದ್ದ ಟಿವಿಯನ್ನು ಒಡೆದು ಹಾಕಿದ್ದಾರೆ. ಬಾಗಿಲಿಗೆ ಅಳವಡಿಸಿದ್ದ ಗಾಜನ್ನು ಪುಡಿ ಪುಡಿ ಮಾಡಿದ್ದಾರೆ. ಅಲ್ಲಿದ್ದ ಸಿಬ್ಬಂದಿಯ ಮೇಲೆ ಹಲ್ಲೆ ನಡೆಸಿದ್ದಾರೆ. ಪೊಲೀಸರು ಜೈಲಿನಲ್ಲಿದ್ದ ಕೈದಿಗಳನ್ನು ನಿಯಂತ್ರಿಸುವ ಪ್ರಯತ್ನ ಮಾಡಿದರೂ ಸಮಾಧಾನವಾಗಿಲ್ಲ. ಈ ವೇಳೆ ರಕ್ಷಣೆಗಾಗಿ ಸರ್ಕಾರಿ ಸಿಬ್ಬಂದಿ ಕೈದಿಗಳ ಕಡೆ ಲಾಠಿ ಬೀಸಿದ್ದಾರೆ. ಅದಾಗಿಯೂ ಅವರು ಸುಮ್ಮನಾಗಿಲ್ಲ. ಮಂಗಳೂರಿನ ಜೈಲಿನಲ್ಲಿದ್ದ ಕೆಲ ಕೈದಿಗಳನ್ನು ಕಾರವಾರಕ್ಕೆ ಸ್ಥಳಾಂತರಿಸಲಾಗಿದ್ದು, ಅವರಿಂದಲೇ ರಂಪಾಟ ಜೋರಾಗಿದೆ. ಮಂಗಳೂರಿನಲ್ಲಿ ಸ್ಥಳಾವಕಾಶ ಕೊರತೆ ಹಿನ್ನಲೆ ವಿವಿಧ ಅಪರಾಧ ಪ್ರಕರಣದಲ್ಲಿ ಭಾಗಿಯಾದವರನ್ನು ಕಾರವಾರ ಜೈಲಿಗೆ ವರ್ಗಾಯಿಸಲಾಗಿದೆ. - [ಅಲ್ಲೂ ಇಲ್ಲ.. ಇಲ್ಲಿಯೂ ಇಲ್ಲ.. ಎಲ್ಲಿ ಹೋದಳು ಎಂದೇ ಗೊತ್ತಿಲ್ಲ!](https://mobiletime.in/2025/12/not-there-not-here-either-i-dont-know-where-she-went/): ಕೂಲಿ ಕಾರ್ಮಿಕರಿಗೆ ಚಹ ಕೊಡಲು ತೋಟಕ್ಕೆ ಹೋಗಿದ್ದ ನಂದಿನಿ ಸಿದ್ದಿ ಅವರು ಏಕಾಏಕಿ ಕಾಣೆಯಾಗಿದ್ದಾರೆ. ದುಷ್ಕರ್ಮಿಗಳು ಅವರನ್ನು ಅಪಹರಿಸಿದ ಅನುಮಾನ ಕುಟುಂಬದವರನ್ನು ಕಾಡುತ್ತಿದೆ. ಯಲ್ಲಾಪುರದ ಮಂಚಿಕೇರಿಯ ಕೆರೆಹೊಸಳ್ಳಿ ಬಳಿ ಶರಾವತಿ ಪುಟ್ಟಾ ಸಿದ್ದಿ ಅವರು ವಾಸವಾಗಿದ್ದಾರೆ. ಶರಾವತಿ ಸಿದ್ದಿ ಅವರು ಅವರಿವರ ಮನೆಯಲ್ಲಿ ಕೂಲಿ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದಾರೆ. ಶರಾವತಿ ಸಿದ್ದಿ ಅವರ ಜೊತೆ ಅವರ 16 ವರ್ಷದ ಮಗಳು ನಂದಿನಿ ಸಿದ್ದಿ ಅವರು ಆಗಾಗ ಕೆಲಸದ ಸ್ಥಳಕ್ಕೆ ಭೇಟಿ ನೀಡುತ್ತಿದ್ದು, ಹೀಗೆ ತೋಟಕ್ಕೆ ಹೋದ ಅವಧಿಯಲ್ಲಿಯೇ ನಂದಿನಿ ಸಿದ್ದಿ ಕಾಣೆಯಾಗಿದ್ದಾರೆ. 2025ರ ಅಗಸ್ಟ 7ರಂದು ಶರಾವತಿ ಸಿದ್ದಿ ಅವರು ಸಂತೋಷ ಶೆಟ್ಟಿ ಅವರ ಮನೆ ಬಳಿ ಕೂಲಿ ಕೆಲಸಕ್ಕೆ ಹೋಗಿದ್ದರು. ಈ ಅವಧಿಯಲ್ಲಿ ನಂದಿನಿ ಸಿದ್ದಿ ಅವರು ಸಹ ಅಲ್ಲಿದ್ದರು. ಆ ದಿನ ಬೆಳಗ್ಗೆ 11 ಗಂಟೆ ವೇಳೆಗೆ ಸಂತೋಷ ಶೆಟ್ಟಿ ಅವರ ಮನೆಯಿಂದ ಚಹಾ ತಂದ ನಂದಿನಿ ಸಿದ್ದಿ ಅವರು ಆ ಚಹಾವನ್ನು ಶರಾವತಿ ಸಿದ್ದಿ ಅವರಿಗೆ ಕೊಟ್ಟಿದ್ದರು. ಅದಾದ ನಂತರ `ಇನ್ನೂ ಅನೇಕರಿಗೆ ಚಹಾ ಕೊಡುವುದಿದೆ’ ಎಂದ ನಂದಿನಿ ಸಿದ್ದಿ ಅವರು ಬೇರೆ ಕಡೆ ಹೊರಟರು. ಆದರೆ, ಆ ದಿನ ಕೆಲಸ ಮಾಡುತ್ತಿದ್ದ ಕಾರ್ಮಿಕರಿಗೆ ಚಹಾ ಕೊಡಲು ಹೋಗಿದ್ದ ನಂದಿನಿ ಸಿದ್ದಿ ಅವರು ಮತ್ತೆ ಮನೆಗೆ ಮರಳಲಿಲ್ಲ. ಸಂಬAಧಿಕರ ಮನೆಗೆ ಸಹ ಹೋಗಲಿಲ್ಲ. ಇದರಿಂದ ಶರಾವತಿ ಸಿದ್ದಿ ಅವರು ಎಲ್ಲಾ ಕಡೆ ಹುಡುಕಾಟ ನಡೆಸಿದರು. ನಾಲ್ಕು ತಿಂಗಳು ಕಳೆದರೂ ನಂದಿನಿ ಸಿದ್ದಿ ಅವರ ಸುಳಿವು ಸಿಗಲಿಲ್ಲ. ಆಕೆಯ ಬೆನ್ನು ಬಿದ್ದಿದ್ದ ವ್ಯಕ್ತಿಯೊಬ್ಬರು ಅಪಹರಿಸಿರುವ ಅನುಮಾನ ಕಾಡುತ್ತಿದ್ದು, ಅದೇ ಅನುಮಾನದ ಮೇರೆಗೆ ಶರಾವತಿ ಸಿದ್ದಿ ಅವರು ಪೊಲೀಸ್ ಠಾಣೆಯ ಮೆಟ್ಟಿಲೇರಿದರು. `ಇಷ್ಟು ದಿನ ಕಾದರೂ ತಮ್ಮ ಮಗಳು ಮನೆಗೆ ಬರಲಿಲ್ಲ. ಹೀಗಾಗಿ ಕಾಣೆಯಾದ ಮಗಳನ್ನು ಹುಡುಕಿಕೊಡಿ’ ಎಂದು ಶರಾವತಿ ಸಿದ್ದಿ ಅವರು ಪೊಲೀಸರಿಗೆ ಮನವಿ ಮಾಡಿದರು. ಯಲ್ಲಾಪುರ ಪಿಸೈ ಸಿದ್ದಪ್ಪ ಗುಡಿ ಅವರು ಪ್ರಕರಣ ದಾಖಲಿಸಿಕೊಂಡಿದ್ದು, ಕಾಣೆಯಾದ ಯುವತಿಯ ಶೋಧ ಶುರು ಮಾಡಿದ್ದಾರೆ. ಈ ಮಾಹಿತಿಯನ್ನು ನಿಮ್ಮ ಬಳಗದಲ್ಲಿ ಶೇರ್ ಮಾಡಿ. ನಂದಿನಿ ಸಿದ್ದಿ ಅವರನ್ನು ಕಂಡರೆ ಇಲ್ಲಿ ಫೋನ್ ಮಾಡಿ: 9480805257 ಅಥವಾ 9480805273 - [ಕತ್ತಿ ಬೀಸಿದ ರಭಸಕ್ಕೆ ಕಾಲು ಕಟ್!](https://mobiletime.in/2025/12/cut-the-leg-with-the-swing-of-the-sword/): ಮೀನುಗಾರ ಮುಖಂಡರೊಬ್ಬರನ್ನು ಸುತ್ತುವರೆದ ಮೂವರು ಏಕಾಏಕಿ ಕತ್ತಿ ಬೀಸಿದ್ದಾರೆ. ಮೂವರು ಸೇರಿ ಈಶ್ವರ ತಾಂಡೇಲ್ ಅವರ ಕೊಲೆಗೆ ಪ್ರಯತ್ನಿಸಿದ್ದಾರೆ. ಕತ್ತಿ ಏಟಿನಿಂದ ಈಶ್ವರ ತಾಂಡೇಲ್ ಅವರು ತಪ್ಪಿಸಿಕೊಂಡರಾದರೂ ಅವರಿಗೆ ಗಂಭೀರ ಪ್ರಮಾಣದಲ್ಲಿ ಪೆಟ್ಟಾಗಿದೆ. ಈಶ್ವರ ಜಾನೂ ತಾಂಡೇಲ್ ಅವರು ಕುಮಟಾದ ಗಂಗೆಕೊಳ್ಳ ಮೀನುಗಾರಿಕಾ ಸಹಕಾರಿ ಸಂಘದ ಉಪಾಧ್ಯಕ್ಷರಾಗಿದ್ದಾರೆ. ಅರುಣ ಅಶೋಕ್ ತಾಂಡೇಲ ಅವರು ಈಶ್ವರ ತಾಂಡೇಲ್ ಅವರ ವಿರುದ್ಧ ದ್ವೇಷ ಸಾಧಿಸಿದ್ದು, ಆ ದ್ವೇಷವೇ ಕೊಲೆ ಪ್ರಯತ್ನಕ್ಕೆ ಕಾರಣವಾಗಿದೆ. ಅರುಣ ತಾಂಡೇಲ್ ಅವರ ಜೊತೆ ಮಾರುತಿ ಅಶೋಕ ತಾಂಡೇಲ್ ಹಾಗೂ ಮಾರುತಿ ತಾಂಡೇಲ್ ಅವರ ಅಕ್ಕ ಮಂಜುಳಾ ಅವರ ಪತಿ ನಾಗರಾಜ ಅವರು ಸೇರಿ ದಾಳಿ ಮಾಡಿದ್ದಾರೆ. ಡಿಸೆಂಬರ್ 8ರ ರಾತ್ರಿ ಈಶ್ವರ ತಾಂಡೇಲ್ ಅವರ ಮೇಲೆ ಆಕ್ರಮಣ ನಡೆದಿದೆ. ರಾತ್ರಿ ವೇಳೆ ಈಶ್ವರ ತಾಂಡೇಲ್ ಅವರು ಮೀನುಗಾರಿಕಾ ಸಹಕಾರಿ ಸಂಘದ ಪೆಟ್ರೋಲ್ ಬಂಕಿಗೆ ಬಂದಿದ್ದು, ಅಲ್ಲಿ ಕಾದು ಕುಳಿತಿದ್ದ ದುಷ್ಕರ್ಮಿಗಳು ಏಕಾಏಕಿ ಜಗಳ ಶುರು ಮಾಡಿದ್ದಾರೆ. ನಂತರ ಆಯುಧಗಳಿಂದ ದಾಳಿ ಮಾಡಿದ್ದಾರೆ. ಪೆಟ್ರೋಲ್ ಬಂಕಿಗೆ ಬಂದಿದ್ದ ಡಿಸೇಲ್ ವಾಹನದಿಂದ ಇಂಧನವನ್ನು ಬಂಕಿಗೆ ಭರ್ತಿ ಮಾಡಿಸಿ, ನಂತರ ಈಶ್ವರ ತಾಂಡೇಲ್ ಅವರು ಮನೆಗೆ ಮರಳುವ ತಯಾರಿಯಲ್ಲಿದ್ದಾಗ ಗಲಾಟೆ ಶುರುವಾಗಿದೆ. ಈಶ್ವರ ತಾಂಡೇಲ್ ಅವರ ತಲೆ, ಕೈ-ಕಾಲುಗಳಿಗೆ ಆ ಮೂವರು ಕತ್ತಿಯಿಂದ ಹೊಡೆದಿದ್ದಾರೆ. ಕಾಲಿಗೆ ಗಂಭೀರ ಪ್ರಮಾಣದಲ್ಲಿ ಗಾಯವಾದ ಕಾರಣ ಈಶ್ವರ ತಾಂಡೇಲ್ ಅವರನ್ನು ಮಣಿಪಾಲದ ಆಸ್ಪತ್ರೆಗೆ ಕಳುಹಿಸಲಾಗಿದೆ. ನಾಡುಮಾಸ್ಕೇರಿ ಗ್ರಾಮದ ಗಂಗೆಕೊಳ್ಳದಲ್ಲಿರುವ ಭೂಮಿಯೊಂದರ ವಿಷಯವಾಗಿ ಈಶ್ವರ ತಾಂಡೇಲ್ ಹಾಗೂ ಅರುಣ ತಾಂಡೇಲ್ ಅವರ ನಡುವೆ ವೈಮನಸ್ಸು ಹುಟ್ಟಿದ್ದು, ಜಾಗದ ವಿಷಯವಾಗಿ ನಡೆಯುತ್ತಿದ್ದ ತಕರಾರು ಈ ಗಲಾಟೆಗೆ ಕಾರಣವಾಗಿದೆ. - [ಅರ್ದ ಆಯಸ್ಸಿಗೆ ಆತ್ಮಹತ್ಯೆ: RNS ಹೊಟೇಲ್ ಅನ್ನದಾತ ಇನ್ನಿಲ್ಲ!](https://mobiletime.in/2025/12/suicide-at-the-age-of-half-a-year-rnss-hotel-caterer-is-no-more/): ಮುರುಡೇಶ್ವರದ R N S ಹೊಟೇಲಿನಲ್ಲಿ ಅಡುಗೆ ಕೆಲಸ ಮಾಡಿಕೊಂಡಿದ್ದ ಶಂಕರ ನಾಯ್ಕ ಅವರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಸ್ನಾನಕ್ಕೆ ಹೋಗಿದ್ದ ಅವರು ಅಲ್ಲಿದ್ದ ಶವರಿಗೆ ಹಗ್ಗ ಕಟ್ಟಿ ನೇಣು ಹಾಕಿಕೊಂಡಿದ್ದಾರೆ. ಭಟ್ಕಳದ ಕಾಯ್ಕಿಣಿ ಬಳಿಯ ಮಠದಹಿತ್ಲ ಮೋಳೆಮನೆಯಲ್ಲಿ ಶಂಕರ ಜಟ್ಟಾ ನಾಯ್ಕ (50) ಅವರು ವಾಸವಾಗಿದ್ದರು. ಮುರುಡೇಶ್ವರದ ಆರ್ ಎನ್ ಎಸ್ ಹೊಟೇಲಿನಲ್ಲಿ ಅವರು ಅಡುಗೆ ಕೆಲಸ ಮಾಡಿಕೊಂಡಿದ್ದರು. ಪ್ಯಾರಾಲೀಸಿಸ್ ಹಾಗೂ ಸಕ್ಕರೆ ಕಾಯಿಲೆಯಿಂದ ಬಳಲುತ್ತಿದ್ದ ಅವರಿಗೆ ದೊಡ್ಡ ದೊಡ್ಡ ಕೆಲಸ ಮಾಡಲು ಸಾಧ್ಯವಾಗುತ್ತಿರಲಿಲ್ಲ. ಕೆಲಸ ಮಾಡಲು ಆಗದ ನೋವಿನಲ್ಲಿ ಅವರು ಮಾನಸಿಕವಾಗಿ ಕುಗ್ಗಿದ್ದರು. ಡಿಸೆಂಬರ್ 8ರ ಮಧ್ಯಾಹ್ನ ಸ್ನಾನಕ್ಕೆ ಹೋಗಿದ್ದ ಅವರು ಅಲ್ಲಿ ಶವರ್ ನೋಡಿದರು. ಆ ಶವರಿಗೆ ಹಗ್ಗ ಕಟ್ಟಿ ಕೊರಳಿಗೆ ಸಿಕ್ಕಿಸಿಕೊಂಡು ನೇತಾಡಿದರು. ಅಣ್ಣನ ಸಾವಿನ ಬಗ್ಗೆ ಆಟೋ ಚಾಲಕ ವೆಂಕಟ್ರಮಣ ನಾಯ್ಕ ಅವರು ಪೊಲೀಸರಿಗೆ ಮಾಹಿತಿ ನೀಡಿದರು. ಮುರುಡೇಶ್ವರ ಪೊಲೀಸರು ಪ್ರಕರಣ ದಾಖಲಿಸಿದರು. - [ಶಿರಸಿ-ಕುಮಟಾ: ಅವ್ಯವಸ್ಥೆ ವಿರುದ್ಧ ಆಕ್ರೋಶ!](https://mobiletime.in/2025/12/sirsi-kumata-outrage-against-chaos/): ಶಿರಸಿ-ಕುಮಟಾ ರಸ್ತೆ ಅವ್ಯವಸ್ಥೆಯ ಬಗ್ಗೆ ಜನ ಆಕ್ರೋಶವ್ಯಕ್ತಪಡಿಸಿದ್ದು, ಹೋರಾಟ ನಡೆಸಿದ್ದಾರೆ. ವಿವಿಧ ಹೋರಾಟಗಳಲ್ಲಿ `ರಕ್ತ ಕ್ರಾಂತಿ’ಯ ಹೇಳಿಕೆ ನೀಡುತ್ತಿದ್ದ ಕರಾವಳಿ ಕನ್ನಡ ಸಂಘದ ಭಾಸ್ಕರ ಪಟಗಾರ ಅವರು ಈ ಬಾರಿ ಬಹುತೇಕ ಶಾಂತಿಯುತವಾಗಿಯೇ ಪ್ರತಿಭಟನೆ ನಡೆಸಿದ್ದಾರೆ. ಮಂಗಳವಾರ ಕುಮಟಾದ ಕತಗಾಲದಲ್ಲಿ ನಡೆದ ಪ್ರತಿಭಟನೆಯಲ್ಲಿ ರಸ್ತೆ ಅಭಿವೃದ್ಧಿಯ ಗುತ್ತಿಗೆಪಡೆದ ಆರ್ ಎನ್ ಎಸ್ ಕಂಪನಿ ವಿರುದ್ಧ ಜನ ಆಕ್ರೋಶವ್ಯಕ್ತಪಡಿಸಿದ್ದಾರೆ. ಜಿಲ್ಲಾಡಳಿತ ಹಾಗೂ ಹೆದ್ದಾರಿ ಪ್ರಾಧಿಕಾರದ ವಿರುದ್ಧವೂ ಪ್ರತಿಭಟನಾಕಾರರು ಧಿಕ್ಕಾರ ಕೂಗಿದ್ದಾರೆ. `ಶಿರಸಿ – ಕುಮಟಾ ರಸ್ತೆ ಕಾಮಗಾರಿ ಬೇಗ ಮುಗಿಸಬೇಕು’ ಎಂದು ಅಲ್ಲಿದ್ದವರು ಆಗ್ರಹಿಸಿದ್ದಾರೆ. `ಅಧಿಕೃತ ಆದೇಶವಿಲ್ಲದೇ ಗುತ್ತಿಗೆ ಕಂಪನಿ ಹೆದ್ದಾರಿ ಬಂದ್ ಮಾಡಿದೆ’ ಎಂದು ದೂರಿದ್ದಾರೆ. `ಹೆದ್ದಾರಿ ಬಂದ್ ಮಾಡಿದವರ ವಿರುದ್ಧ ಕ್ರಮವಾಗಬೇಕು’ ಎಂದು ಆಗ್ರಹಿಸಿ ಪ್ರತಿಭಟನಾಕಾರರು ಐದು ನಿಮಿಷಗಳ ಕಾಲ ರಸ್ತೆ ತಡೆ ನಡೆಸಿದ್ದಾರೆ. ಈ ವೇಳೆ `ಭೂಸ್ವಾಧೀನ ಪ್ರಕ್ರಿಯೆ, ಮರ ಕಟಾವಿಗೆ ಅನುಮತಿ ಹಾಗೂ ಇನ್ನಿತರ ಕಾರಣದಿಂದ ಕೆಲಸ ನಿಧಾನವಾಗಿದೆ. ಶೀಘ್ರದಲ್ಲಿಯೇ ಕೆಲಸ ಮುಗಿಯಲಿದೆ’ ಎಂದು ಆರ್ ಎನ್ ಎಸ್ ನ ಜನರಲ್ ಮ್ಯಾನೇಜರ್ ನಿತೀಶ ಶೆಟ್ಟಿ ಅವರು ಪ್ರತಿಭಟನಾಕಾರರು ಸಮಾಧಾನ ಮಾಡಿದ್ದಾರೆ. `ಖಾಸಗಿ ಬಸ್ಸು, ಟ್ಯಾಂಕರ್, ಲಾರಿ ಓಡಾಟ ಜೋರಾಗಿದೆ. ಆದರೆ, ಬಡವರು ಸಂಚರಿಸುವ ಸರ್ಕಾರಿ ಬಸ್ಸು ಓಡಾಟಕ್ಕೆ ಅವಕಾಶ ನೀಡುತ್ತಿಲ್ಲ’ ಎಂದು ಪ್ರತಿಭಟನಾಕಾರರು ಕಿಡಿಕಾರಿದ್ದಾರೆ. `ಡಿಸೆಂಬರ್ 20ರ ಒಳಗೆ ದೇವಿಮನೆ ಘಟ್ಟ ಪ್ರದೇಶದಲ್ಲಿನ ಬಾಕಿ ಕೆಲಸ ಮುಗಿಸಿ ಬಸ್ ಓಡಾಟಕ್ಕೆ ಅನುವು ಮಾಡಿಕೊಡುತ್ತೇವೆ’ ಎಂದು ಕಂಪನಿಯವರು ಸಮಜಾಯಿಶೀ ನೀಡಿದ್ದಾರೆ. ಸ್ಥಳಕ್ಕೆ ಕುಮಟಾ ತಹಶೀಲ್ದಾರ್ ಶ್ರೀಕೃಷ್ಣ ಕಾಮಕರ್ ಆಗಮಿಸಿದ್ದು, `ಸ್ಥಳೀಯ ಬಸ್ ಸಂಚಾರಕ್ಕೆ ಅವಕಾಶ ಕೊಡಬೇಕು’ ಎಂದು ಜನ ಆಗ್ರಹಿಸಿದ್ದಾರೆ. ಈ ಹೋರಾಟದಲ್ಲಿ ಭಾಸ್ಕರ್ ಪಟಗಾರ ಅವರಿಗೆ ಬಾಲಕೃಷ್ಣ ನಾಯ್ಕ, ಮಹೇಂದ್ರ ನಾಯ್ಕ, ವಿಕ್ರಮ್ ನಾಯ್ಕ ಹೊನ್ನಾವರ, ಜಿ ಎನ್ ಗೌಡ ಹೊನ್ನಾವರ, ರಾಜು ಮಾಸ್ತಿಹಳ್ಳ, ದೀಪಕ ನಾಯ್ಕ, ಕೃಷ್ಣ ಗೌಡ, ಶಿವರಾಮ ಹರಿಕಂತ್ರ, ಬಲೀಂದ್ರ ಗೌಡ, ಗಜು ನಾಯ್ಕ ಅಳ್ವೆಕೊಡಿ, ಮಂಜುನಾಥ ನಾಯ್ಕ, ಜಿ ಜಿ ಹೆಗಡೆ ಅಂತ್ರವಳ್ಳಿ, ತಿಮ್ಮಪ್ಪ ಮುಕ್ರಿ ಸೇರಿ ನೂರಾರು ಜನ ಬೆಂಬಲ ನೀಡಿದ್ದಾರೆ. - [ಬಾರ್ ಮುಂದೆ ಬೀದಿ ಜಗಳ!](https://mobiletime.in/2025/12/street-fight-in-front-of-the-bar/): ಅಂಕೋಲಾದ ಚಂದ್ರಹಾಸ ನಾಯಕ ಅವರ ಮೇಲೆ ರಮೇಶ ನಾಯಕ ಹಾಗೂ ರಾಜು ನಾಯಕ ಅವರು ಕೈ ಮಾಡಿದ್ದಾರೆ. ಅವರಿಬ್ಬರು ಸೇರಿ ಚಂದ್ರಹಾಸ ನಾಯಕ ಅವರನ್ನು ನೆಲಕ್ಕೆ ದೂಡಿ ನೋವು ಮಾಡಿದ್ದಾರೆ. ಅಂಕೋಲಾ ಬೇಲಿಕೇರೆಯ ಚಂದ್ರಹಾಸ ಕೃಷ್ಣ ನಾಯಕ ಅವರು ತಮ್ಮ ಒಡೆತನದಲ್ಲಿರುವ ಕಟ್ಟಡದ ಬಗ್ಗೆ ರಮೇಶ ಕೃಷ್ಣ ನಾಯಕ ಅವರ ಬಳಿ ಪ್ರಶ್ನಿಸಿ ಪೆಟ್ಟು ತಿಂದಿದ್ದಾರೆ. ನಿವೃತ್ತ ಶಿಕ್ಷಕರಾಗಿರುವ ನೀಲಂಪುರದ ರಾಜು ಕೃಷ್ಣ ನಾಯಕ ಅವರು ಈ ಹೊಡೆದಾಟಕ್ಕೆ ಕೈ ಜೋಡಿಸಿದ್ದಾರೆ. ನವೆಂಬರ್ 22ರಂದು ಬೇಲಿಕೇರಿಯ ನಾಯಕ ಬಾರ್ ಎದುರು ಈ ಹೊಡೆದಾಟ ನಡೆದಿದ್ದು, ತಮಗಾದ ಅನ್ಯಾಯದ ವಿರುದ್ಧ ಚಂದ್ರಹಾಸ ನಾಯಕ ಅವರು ನ್ಯಾಯಾಲಯದ ಮೊರೆ ಹೋಗಿದ್ದಾರೆ. `ತನ್ನ ಒಡೆತನದಲ್ಲಿರುವ ಕಟ್ಟಡವನ್ನು ರಮೇಶ ನಾಯಕ ಅವರು ಅನಧಿಕೃತವಾಗಿ ಬಳಕೆ ಮಾಡುತ್ತಿದ್ದಾರೆ. ಈ ಬಗ್ಗೆ ಪ್ರಶ್ನಿಸಿದ ಕಾರಣ ಈ ಆಕ್ರಮಣ ನಡೆದಿದೆ’ ಎಂದು ಚಂದ್ರಹಾಸ ನಾಯಕ ಅವರು ದೂರಿದ್ದಾರೆ. ಹೊಡೆದಾಟ ನಡೆದ ದಿನವೇ ಚಂದ್ರಹಾಸ ನಾಯಕ ಅವರು ಅಂಕೋಲಾ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾರೆ. ಅಲ್ಲಿ ಸಮಾಧಾನ ಸಿಗದ ಕಾರಣ ಕೋರ್ಟಿಗೆ ಹೋಗಿದ್ದ ಚಂದ್ರಹಾಸ ನಾಯಕ ಅವರು ತಮ್ಮ ಮೇಲಾದ ದಾಳಿ ಬಗ್ಗೆ ವಿವರಿಸಿದ್ದಾರೆ. `ಅವರಿಬ್ಬರು ಸೇರಿ ನನ್ನನ್ನು ದೂಡಿ ಹಾಕಿದ್ದಾರೆ’ ಎಂದವರು ದೂರಿದ್ದು, ಚಂದ್ರಹಾಸ ನಾಯಕ ಅವರ ದೂರು ಆಲಿಸಿದ ನ್ಯಾಯಾಧೀಶರು ಈ ಬಗ್ಗೆ ಪ್ರಕರಣ ದಾಖಲಿಸುವಂತೆ ಪೊಲೀಸರಿಗೆ ಸೂಚಿಸಿದ್ದಾರೆ. ಅದರನ್ವಯ ಪೊಲೀಸರು ಪ್ರಕರಣ ದಾಖಲಿಸಿ, ವಿಚಾರಣೆ ಶುರು ಮಾಡಿದ್ದಾರೆ. - [ಪುಣ್ಯ ಕ್ಷೇತ್ರ ರಕ್ಷಿಸಿ.. ದೇವರಕಾಡು ಸ್ವಚ್ಛಗೊಳಿಸಿ](https://mobiletime.in/2025/12/protect-the-holy-land-clean-the-forest-of-gods/): ಯಲ್ಲಾಪುರ-ಮುಂಡಗೋಡು ರಸ್ತೆಗೆ ಹೊಂದಿಕೊoಡು ಅರಣ್ಯ ಇಲಾಖೆಯವರು `ದೇವರ ಕಾಡು’ ನಿರ್ಮಿಸಿದ್ದು, ದೇವಿ ಆಲಯವನ್ನು ಹೊಂದಿರುವ ಈ ಅರಣ್ಯ ಗಬ್ಬೆದ್ದಿದೆ. ಹೀಗಾಗಿ ಆ ಪ್ರದೇಶವನ್ನು ಸ್ವಚ್ಛ ಹಾಗೂ ಸುಂದರವನ್ನಾಗಿಸುವoತೆ ಸಮಾನ ಮನಸ್ಕರು ಮನವಿ ಸಲ್ಲಿಸಿದ್ದಾರೆ. ಯಲ್ಲಾಪುರದಿಂದ 3ಕಿಮೀ ದೂರದಲ್ಲಿ ದೇವರ ಕಾಡು ಪ್ರದೇಶವಿದೆ. ಅಲ್ಲಿ ಪುರಾತನ ಕಾಲದಿಂದಲೂ ಸಾತೇರಿ ದೇವಿಯ ಗುಡಿಯಿದೆ. ಅನೇಕ ಭಕ್ತರು ದೇವಿಗೆ ನಡೆದುಕೊಳ್ಳುತ್ತಾರೆ. ಎರಡು ವರ್ಷದ ಹಿಂದೆ ಅರಣ್ಯ ಇಲಾಖೆಯವರು ಇಲ್ಲಿ ಉದ್ಯಾನವನ ನಿರ್ಮಿಸಿದ್ದಾರೆ. ಗುಹೆ ಆಕಾರದ ಪ್ರವೇಶ ದ್ವಾರ ಜನರ ಗಮನಸೆಳೆಯುತ್ತಿದೆ. ಆದರೆ, ಇಲ್ಲಿ ಪ್ರವೇಶಿಸುವ ಪ್ರವಾಸಿಗರು ಎಲ್ಲೆಂದರಲ್ಲಿ ಮದ್ಯದ ಬಾಟಲಿ ಎಸೆಯುತ್ತಿದ್ದಾರೆ. ಕಂಡ ಕಂಡಲ್ಲಿ ಗುಟ್ಕಾ ಉಗಿದು ಗಲೀಜು ಮಾಡಿದ್ದಾರೆ. ಇದರಿಂದ ದೇವರ ಕಾಡಿನ ಜೊತೆ ಅಲ್ಲಿ ನೆಲೆಸಿರುವ ದೇವಿಗೂ ಅಪಚಾರವಾಗುತ್ತಿದೆ. ಇದನ್ನು ಸಹಿಸದ ರವೀಂದ್ರ ನಗರದ ಸೋಮೇಶ್ವರ ನಾಯ್ಕ ಅವರು ತಮ್ಮ ಸ್ನೇಹಿತರ ಜೊತೆ ಸೇರಿ ಸ್ವಚ್ಚತೆ ಕಾಪಾಡುವಂತೆ ಅರಣ್ಯ ಇಲಾಖೆಯವರಿಗೆ ಮನವಿ ಮಾಡಿದ್ದಾರೆ. `ದೇವರ ಕಾಡಿನಲ್ಲಿ ನಿರ್ಮಿಸಿದ ಆಸನಗಳನ್ನು ಸರಿಯಾಗಿರಿಸಬೇಕು. ಅಲ್ಲಿನ ಮಾಲಿನ್ಯವನ್ನು ಸರಿಪಡಿಸಿ ಪ್ರವಾಸಿಗರಿಗೆ ಮುಜುಗರವಾಗುವುದನ್ನು ತಪ್ಪಿಸಬೇಕು’ ಎಂದು ಸುಜಯ ಮರಾಠಿ, ಸಾಜು ಜೋರೇ, ತೇಜೇಶ್ ಭೋವಿ ಹಾಗೂ ಮನು ಪೊಳ್ ಅವರು ಮನವಿ ಮಾಡಿದ್ದಾರೆ. ಈ ಬಗ್ಗೆ ಉಪಅರಣ್ಯ ಸಂರಕ್ಷಣಾಧಿಕಾರಿ ಹರ್ಷಭಾನು ಅವರಿಗೂ ಮಂಗಳವಾರ ಮನವಿ ಸಲ್ಲಿಸಿದ್ದು, ಫೆಬ್ರವರಿಯಲ್ಲಿ ನಡೆಯುವ ಯಲ್ಲಾಪುರ ಜಾತ್ರೆಯ ಬಗ್ಗೆಯೂ ಉಲ್ಲೇಖಿಸಿದ್ದಾರೆ. `ಯಲ್ಲಾಪುರ ಜಾತ್ರೆಯ ಮುನ್ನ ಸಂಪ್ರದಾಯದAತೆ ಹೊರ ಮಂಗಳವಾರ ಆಚರಣೆ ನಡೆಯುತ್ತದೆ. ಆ ಅವಧಿಯಲ್ಲಿ ಯಲ್ಲಾಪುರ ಪಟ್ಟಣದ ಜನ ನಗರ ಬಿಟ್ಟು ಹೊರ ಪ್ರದೇಶಕ್ಕೆ ಬರಲಿದ್ದು, ಅನೇಕರು ದೇವರ ಕಾಡಿಗೆ ಬಂದು ಕಾಲ ಕಳೆಯುತ್ತಾರೆ. ಅವರಿಗೆ ಅನುಕೂಲವಾಗುವ ರೀತಿ ಇಲ್ಲಿ ವಾತಾವರಣ ನಿರ್ಮಿಸಬೇಕು. ತ್ಯಾಜ್ಯಗಳನ್ನು ತೆಗೆದು ಸ್ವಚ್ಛತೆ ಕಾಪಾಡಿದರೆ ಎಲ್ಲರಿಗೂ ಅನುಕೂಲ’ ಎಂದು ಆನಂದ್ ಭೋವಿ, ರಿಜ್ವಾನ್ ಶೈಖ್, ಷಣ್ಮುಖ ನಾಯ್ಕ, ನಂದನ್ ಮರಾಠಿ, ಮೋಹನ್ ಪಾಲೇಕಾರ್, ರೋಹಿತ್ ಸಾಲುಂಕೆ, ಗಿರೀಶ್ ಭೋವಿವಡ್ಡರ್, ಕುಮಾರ್ ವಾಲ್ಮೀಕಿ ಹಾಗೂ ರಾಜು ನಾಯ್ಕ ಅವರು ಹೇಳಿದ್ದಾರೆ. - [`ಕಾಂಡ್ಲಾ ಕಾಡು ಕಾಪಾಡಿ'](https://mobiletime.in/2025/12/save-kandla-forest/): ಶಿರಸಿಯ ಸ್ಕೋಡ್‌ವೆಸ್ ಸಂಸ್ಥೆಯೂ ಕರ್ನಾಟಕದ ಕರಾವಳಿ ಭಾಗದಲ್ಲಿ ಕಾಂಡ್ಲಾ ಕಾಡು ಕಾಪಾಡುವ ಅಭಿಯಾನ ಶುರು ಮಾಡಿದೆ. ಕುಮಟಾದ ಕಿಮಾನಿ ಅಘನಾಶಿನಿ ನದಿ ತೀರಲ್ಲಿ ಈ ಅಭಿಯಾನಕ್ಕೆ ಚಾಲನೆ ಸಿಕ್ಕಿದೆ. ಆಸ್ಟರ್ ಡಿ ಎಮ್ ಫೌಂಡೇಶನ್‌ನ ಆಸ್ಟರ್ ವಾಲೆಂಟರ‍್ಸ್, ಸ್ಕೊಡ್‌ವೆಸ್ ಸಂಸ್ಥೆ ಹಾಗೂ ಅರಣ್ಯ ಇಲಾಖೆಯ ಸಹಯೋಗದಲ್ಲಿ ಈ ಅಭಿಯಾನ ನಡೆಯುತ್ತಿದೆ. ಅಭಿಯಾನಕ್ಕೆ ಚಾಲನೆ ನೀಡಿದ ಕುಮಟಾ ಉಪವಿಭಾಗೀಯ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಕೃಷ್ಣೇಗೌಡ ಅವರು `ಕಾಂಡ್ಲಾ ವನಗಳು ಅತೀ ಹೆಚ್ಚು ಆಮ್ಲಜನಕ ಉತ್ಪಾದಿಸುವ ಸಸ್ಯ ಪ್ರಬೇಧಗಳಾಗಿವೆ. ಈ ಪ್ರದೇಶದಲ್ಲಿ ವಿಶಿಷ್ಟ ರೀತಿಯ ಜೀವ ವೈವಿಧ್ಯ ಸರಪಳಿಗಳು ಸಹಜವಾಗಿಯೇ ರೂಪುಗೊಳ್ಳುತ್ತವೆ. ಅಲ್ಲದೇ ಪ್ರಕೃತಿ ವಿಕೋಪ ಸಂದರ್ಭದಲ್ಲಿ ಸುಮಾರು ಶೇ 65 ಕ್ಕಿಂತ ಹೆಚ್ಚಿನ ಪ್ರಮಾಣದ ಅನಾಹುತಗಳನ್ನು ತಡೆಯುವುದರಿಂದ ಕಾಂಡ್ಲಾ ಸಂರಕ್ಷಣೆಯ ಜವಾಬ್ದಾರಿ ಸಾರ್ವತ್ರಿಕಗೊಳ್ಳಬೇಕು’ ಎಂದು ಕರೆ ನೀಡಿದ್ದಾರೆ. ಆಸ್ಟರ್ ಡಿ ಎಮ್ ಫೌಂಡೇಶನ್‌ನ ಸಿಎಸ್‌ಆರ್ ವಿಭಾಗದ ಮುಖ್ಯಸ್ಥ ರೋಹನ್ ಪ್ರಾಂಕೋ ಮಾತನಾಡಿ `ಭಾರತದ ಪಶ್ಚಿಮ ಸಾಗರ ತೀರ ಪ್ರದೇಶಗಳ ಸಂರಕ್ಷಣೆಯಲ್ಲಿ ಕಾಂಡ್ಲಾ ನೆಡುತೋಪುಗಳು ಪ್ರಮುಖ ಪಾತ್ರವಹಿಸುತ್ತಿರುವುದರಿಂದ ಅವುಗಳನ್ನು ಸಂರಕ್ಷಿಸುವ ಅವಶ್ಯಕತೆಯಿದೆ. ಹೀಗಾಗಿ ಕರ್ನಾಟಕದ ಕರಾವಳಿ ತೀರಗಳಲ್ಲಿ ಪ್ರತಿಷ್ಠಿತ ಸ್ಕೊಡ್‌ವೆಸ್ ಸಂಸ್ಥೆಯ ಸಹಯೋಗದಲ್ಲಿ ಕಾಂಡ್ಲಾ ಸಂರಕ್ಷಣಾ ಅಭಿಯಾನ ನಡೆಸುತ್ತಿದ್ದೇವೆ’ ಎಂದು ಹೇಳಿದ್ದಾರೆ. ಸ್ಕೊಡ್‌ವೆಸ್ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ವೆಂಕಟೇಶ ನಾಯ್ಕ ಮಾತನಾಡಿ `ಕಾಂಡ್ಲಾ ಸಂರಕ್ಷಣಾ ಅಭಿಯಾನದಲ್ಲಿ 05 ಸಾವಿರಕ್ಕೂ ಹೆಚ್ಚು ಸಸಿಗಳನ್ನು ನೆಡುವ ಉದ್ದೇಶ ಹೊಂದಲಾಗಿದೆ. ಈಗಾಗಲೇ ನೆಡುತೋಪು ಕಾರ್ಯ ಆರಂಭಗೊAಡಿದೆ’ ಎಂದಿದ್ದಾರೆ. ಸ್ಕೊಡ್‌ವೆಸ್‌ನ ಕೃಷಿ ವಿಭಾಗದ ಮುಖ್ಯಸ್ಥ ಪ್ರಶಾಂತ ನಾಯಕ, ಸಂಯೋಜಕ ಗಂಗಾಧರ ನಾಯ್ಕ, ವಲಯ ಅರಣ್ಯಾಧಿಕಾರಿ ರಾಜು ನಾಯ್ಕ, ಆಸ್ಟರ್ ಡಿ ಎಮ್ ಫೌಂಡೇಶನ್‌ನ ಸ್ವಯಂ ಸೇವಕರು ಹಾಗೂ ಸ್ಕೊಡ್‌ವೆಸ್ ಸಂಸ್ಥೆಯ ಸಿಬ್ಬಂದಿ ಈ ಕಾರ್ಯಕ್ರಮದಲ್ಲಿದ್ದರು. - [ಬಾವಿಗೆ ಬಿದ್ದ ಕಾರ್ಮಿಕ: ಕೊನೆಯುಸಿರು!](https://mobiletime.in/2025/12/worker-who-fell-into-a-well-last-breath/): ಅಶೋಕ ಭಟ್ಟರ ತೋಟದಲ್ಲಿದ್ದ ಬಾವಿಗೆ ಬಿದ್ದು ಜಟ್ಟಿ ಮುಕ್ರಿ ಅವರು ಸಾವನಪ್ಪಿದ್ದಾರೆ. ರಾತ್ರಿ ವೇಳೆ ಸಂಚರಿಸುತ್ತಿದ್ದ ಜಟ್ಟಿ ಮುಕ್ರಿ ಅವರು ಕಾಲು ಜಾರಿ ಬಾವಿಗೆ ಬಿದ್ದಿರುವ ಅನುಮಾನಗಳಿವೆ. ಕುಮಟಾದ ಕತಗಾಲ ಬಳಿಯಿರುವ ಉಪ್ಪಿನಪೊಟ್ಟಣದಲ್ಲಿ ಜಟ್ಟಿ ನಾಗು ಮುಕ್ರಿ (56) ಅವರು ವಾಸವಾಗಿದ್ದರು. ಅವರಿವರ ಮನೆಯಲ್ಲಿ ಕೂಲಿ ಕೆಲಸ ಮಾಡಿ ಅವರು ಸಂಸಾರ ನಡೆಸುತ್ತಿದ್ದರು. ಕಳೆದ ಒಂದು ವರ್ಷದ ಹಿಂದೆ ಜಟ್ಟಿ ಮುಕ್ರಿ ಅವರಿಗೆ ಅನಾರೋಗ್ಯ ಕಾಡಿತು. ಹೊಟ್ಟೆ ನೋವಿನಿಂದ ಬಳಲುತ್ತಿದ್ದ ಅವರು ಅನೇಕ ಬಗೆಯ ಔಷಧಿಗಳನ್ನು ಮಾಡಿದ್ದರು. ಆದರೆ, ಯಾವ ಔಷಧಿಯೂ ಅವರ ದೇಹಕ್ಕೆ ಪರಿಣಾಮ ಬೀರಲಿಲ್ಲ. ಹೀಗಾಗಿ ಹೊಟ್ಟೆ ನೋವು ಸಹಿಸಲಾಗದೇ ಅವರು ಸಮಸ್ಯೆಗೆ ಸಿಲುಕಿದ್ದರು. ರಾತ್ರಿ ಸರಿಯಾಗಿ ನಿದ್ದೆಯನ್ನು ಮಾಡದ ಜಟ್ಟಿ ಮುಕ್ರಿ ಅವರು ತಮಗಿದ್ದ ಬೇಸರದಲ್ಲಿಯೇ ಮನೆಯಿಂದ ಹೊರ ಹೋಗುತ್ತಿದ್ದರು. ಅದರಂತೆ, ಡಿಸೆಂಬರ್ 5ರ ರಾತ್ರಿ 11 ಗಂಟೆ ಸುಮಾರಿಗೆ ಜಟ್ಟಿ ಮುಕ್ರಿ ಅವರು ಮನೆಯಿಂದ ಹೊರ ಹೋಗಿದ್ದರು. ಎರಡು ದಿನ ಕಳೆದರೂ ಅವರು ಮನೆಗೆ ಮರಳಿರಲಿಲ್ಲ. ಸಾಕಷ್ಟು ಹುಡುಕಾಟ ನಡೆಸಿದಾಗ ಕತಗಾಲ ಬಳಿಯ ಉಪ್ಪಿನಮೂಟೆಯಲ್ಲಿಯೇ ವಾಸವಾಗಿರುವ ಅಶೋಕ ಭಟ್ಟ ಅವರ ತೋಟದ ಬಾವಿಯಲ್ಲಿ ಜಟ್ಟಿ ಮುಕ್ರಿ ಅವರ ಶವ ಕಾಣಿಸಿತು. ರಾತ್ರಿ ವೇಳೆ ಓಡಾಡುತ್ತಿದ್ದ ಜಟ್ಟಿ ಮುಕ್ರಿ ಅವರು ಅಶೋಕ ಭಟ್ಟ ಅವರ ತೋಟ ಪ್ರವೇಶಿಸಿದ್ದರು. ನೆಲಕ್ಕೆ ಸಮನಾಂತರವಾಗಿದ್ದ ಬಾವಿಯ ಬಳಿ ಅವರ ಕಾಲು ಜಾರಿದ್ದು, ಬಾವಿಯೊಳಗೆ ಬಿದ್ದ ಅವರು ಮೇಲೆ ಬರಲಾಗದೇ ಕೊನೆಯುಸಿರೆಳೆದರು. ಈ ವಿಷಯದ ಬಗ್ಗೆ ಜಟ್ಟಿ ಮುಕ್ರಿ ಅವರ ಪತ್ನಿ ದುರ್ಗಿ ಮುಕ್ರಿ ಅವರು ಮಾಹಿತಿ ನೀಡಿದರು. ಕುಮಟಾ ಪೊಲೀಸ್ ಠಾಣೆಯ ಪಿಎಸೈ ಮಂಜುನಾಥ ಗೌಡರ್ ಅವರು ಪ್ರಕರಣ ದಾಖಲಿಸಿದರು. `ಬಾವಿ ಸುತ್ತ ಕಪೌಂಡ್ ನಿರ್ಮಿಸಿ. ನೆಲ ಬಾವಿಯ ಅಪಾಯ ತಪ್ಪಿಸಿ’ - [ಅನಂತನ ಹೋರಾಟ: ಬಿಜೆಪಿ ನಾಯಕನಿಗೆ ಕಾಂಗ್ರೆಸ್ ಮುಖಂಡನ ದೋಸ್ತಿ!](https://mobiletime.in/2025/12/anants-struggle-bjp-leaders-friendship-with-congress-leader/): ಎರಡುವರೆ ತಿಂಗಳ ವಿರಾಮದ ನಂತರ ಅನಂತಮೂರ್ತಿ ಹೆಗಡೆ ತಮ್ಮ ಹೋರಾಟ ಮತ್ತೆ ಶುರು ಮಾಡಿದ್ದಾರೆ. `ಯಲ್ಲಾಪುರದಲ್ಲಿ ಟೆಕ್ ಪಾರ್ಕ ನಿರ್ಮಿಸಬೇಕು’ ಎಂದು ಅವರು ಶುರು ಮಾಡಿದ್ದ ಹೋರಾಟ ಎಂಟು ತಿಂಗಳಿನಿoದ ಅರ್ದಕ್ಕೆ ನಿಂತಿದ್ದು, ಅದೇ ವಿಷಯ ಮಾತನಾಡುವುದಕ್ಕಾಗಿ ಅವರು ಬೆಳಗಾವಿಗೆ ಹೋಗಿದ್ದಾರೆ. ಕಳೆದ ವರ್ಷ ನಡೆದ ಚಳಿಗಾಲದ ಅಧಿವೇಶನದ ಅವಧಿಯಲ್ಲಿ ಹೊಸ ಜಿಲ್ಲೆ ಸ್ಥಾಪನೆ ಬಗ್ಗೆ ಅನಂತಮೂರ್ತಿ ಹೆಗಡೆ ಅವರು ಹೋರಾಟ ನಡೆಸಿದ್ದರು. ಬೆಳಗಾವಿಯಲ್ಲಿ ಅವರು ಪ್ರತಿಭಟನೆ ನಡೆಸಿ ಆಡಳಿತ ಕಾರಣಕ್ಕಾಗಿ ಉತ್ತರ ಕನ್ನಡ ಜಿಲ್ಲೆಯನ್ನು ಎರಡು ಭಾಗ ಮಾಡಬೇಕು ಎಂದು ಒತ್ತಾಯಿಸಿದ್ದರು. `ಶಿರಸಿ ಕೇಂದ್ರವನ್ನಾಗಿಸಿಕೊoಡು ಪ್ರತ್ಯೇಕ ಜಿಲ್ಲೆ ಮಾಡಬೇಕು’ ಎಂಬ ನಿಟ್ಟಿನಲ್ಲಿ ಪ್ರಯತ್ನ ಮಾಡಿದ್ದರು. ಈ ವೇಳೆ ಅನೇಕ ರಾಜಕಾರಣಿಗಳು ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ, ವಿವಿಧ ಆಶ್ವಾಸನೆ ನೀಡಿದ್ದರು. ಈ ಬಾರಿ ಅನಂತಮೂರ್ತಿ ಹೆಗಡೆ ಅವರು ಅದೇ ಸ್ಥಳದಲ್ಲಿ ನಡೆಯುವ ಅಧಿವೇಶನಕ್ಕೆ ಹೋಗಿ ಮತ್ತೊಂದು ಬೇಡಿಕೆ ಮುಂದಿಟ್ಟಿದ್ದಾರೆ. ಬಿಜೆಪಿ ಮುಖಂಡರಾಗಿರುವ ಅನಂತಮೂರ್ತಿ ಹೆಗಡೆ ಅವರು ಈ ಬಾರಿ ಸದ್ಯ ಕಾಂಗ್ರೆಸ್ ನಾಯಕರಾಗಿರುವ ವಿ ಎಸ್ ಪಾಟೀಲ ಅವರ ಜೊತೆ ಕೈ ಜೋಡಿಸಿದ್ದಾರೆ. ಸೆಪ್ಟೆಂಬರ್ 22ರಂದು ಶಿರಸಿ ಹೈಟೆಕ್ ಆಸ್ಪತ್ರೆ ವಿಷಯವಾಗಿ ಮಾತನಾಡಿ, ನಂತರ ಹೋರಾಟಗಳಿಂದ ದೂರವೇ ಉಳಿದಿದ್ದ ಅನಂತಮೂರ್ತಿ ಹೆಗಡೆ ಅವರು ಈ ದಿನ ಯಲ್ಲಾಪುರ ಕ್ಷೇತ್ರದ ಮಾಜಿ ಶಾಸಕರೂ ಆಗಿರುವ ವಿ ಎಸ್ ಪಾಟೀಲ ಅವರ ಜೊತೆ ಅವರು ಬೆಳಗಾವಿಯ ಸುವರ್ಣ ಸೌಧ ಪ್ರವೇಶಿಸಿದ್ದಾರೆ. ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಮ್ ಬಿ ಪಾಟೀಲ್ ಅವರನ್ನು ಭೇಟಿಯಾಗಿ ಯಲ್ಲಾಪುರದ ಮಾಗೋಡು ಕಾಲೋನಿಯನ್ನು `ವಿಶೇಷ ಕೈಗಾರಿಕಾ ಪ್ರದೇಶ’ ಎಂದು ಘೋಷಿಸುವಂತೆ ಮನವಿ ಸಲ್ಲಿಸಿದ್ದಾರೆ. `ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಮಾಗೋಡಿನಲ್ಲಿ 300 ಎಕರೆಗೂ ಹೆಚ್ಚಿನ ಭೂಮಿಯು ಲಭ್ಯವಿದೆ. ಮೂಲತಃ ಬೇಡ್ತಿ ಯೋಜನೆಗಾಗಿ ಕೆಪಿಸಿಗೆ ಕಾಲನಿ ನಿರ್ಮಾಣ ಮಾಡಲು ರೂಪಿಸಿದ್ದಾಗಿದ್ದು, ಆಗ ನಿರ್ಮಿಸಿದ್ದ ಮನೆಗಳು ಸಂಪೂರ್ಣ ಹಾಳಾಗಿವೆ. ಆ ಜಾಗವನ್ನು ಅರಣ್ಯ ಇಲಾಖೆಯಿಂದ ಮರಳಿಪಡೆದು ಕರ್ನಾಟಕ ಕೈಗಾರಿಕಾ ಪ್ರದೇಶಗಳ ಅಭಿವೃದ್ಧಿ ಮಂಡಳಿ ಮೂಲಕ ಟೆಕ್ ಪಾರ್ಕ ನಿರ್ಮಿಸಬೇಕು’ ಎಂದವರು ಆಗ್ರಹಿಸಿದ್ದಾರೆ. `ಹೀಗೆ ಮಾಡುವುದರಿಂದ ಇಲ್ಲಿನ ಯುವಕರು ಬೇರೆ ಕಡೆ ವಲಸೆ ಹೋಗುವುದನ್ನು ತಡೆಯಲು ಸಾಧ್ಯ’ ಎಂದವರು ಹೇಳಿದ್ದಾರೆ. ಪ್ರಮುಖರಾದ ಗಣೇಶ ಹೆಗಡೆ, ರಮೇಶ ನಾಯ್ಕ್ ಕುಪ್ಪಳ್ಳಿ, ಶ್ರೀಪತಿ ಮುದ್ದೆಪಾಲ್, ರಾಘವೇಂದ್ರ ನಾಯ್ಕ, ಅಂಕಿತ್ ಹೆಗಡೆ, ರಾಮಕೃಷ್ಣ ಗಾಂವ್ಕರ್, ನಾರಾಯಣ ಖಂಡೇಕರ್, ಕೆ. ಟಿ ಹೆಗಡೆ ಸಹ `ಮಾಗೋಡಿನಲ್ಲಿ ಹೊಸ ಕ್ರಾಂತಿ ಶುರು ಮಾಡಬೇಕು’ ಎಂದಿದ್ದಾರೆ. - [ಮದ್ಯರಾತ್ರಿ.. ಒಂಟಿ ಯುವತಿ.. ಬಾಗಿಲು ಬಡಿದ ಸದ್ದು!](https://mobiletime.in/2025/12/midnight-a-lonely-young-woman-a-knock-on-the-door/): ಯುವತಿಯೊಬ್ಬರು ಮನೆಯಲ್ಲಿ ಒಂಟಿಯಾಗಿರುವುದನ್ನು ಅರಿತ ಆರು ಜನ ರಾತ್ರಿ 2 ಗಂಟೆಗೆ ಆ ಮನೆ ಬಾಗಿಲು ಬಡಿದಿದ್ದಾರೆ. ಬಾಗಿಲು ತೆರೆದ ಯುವತಿಯ ಕೈ ಹಿಡಿದು ಎಳೆದಾಡಿದ ಕಿಡಿಕೇಡಿಗಳು ಅವರ ಕೆನ್ನೆಗೆ ಬಾರಿಸಿ ಪರಾರಿಯಾಗಿದ್ದಾರೆ. ಶಿರಸಿ ಗಣೇಶ ನಗರದದಲ್ಲಿ ರಾಬಿಯಾ ಶೇಖ್ ಅವರು ವಾಸವಾಗಿದ್ದಾರೆ. 19 ವರ್ಷದ ಅವರು ಖಾಸಗಿ ಕಂಪನಿಯೊoದರಲ್ಲಿ ಕೆಲಸ ಮಾಡಿಕೊಂಡಿದ್ದಾರೆ. ಡಿಸೆಂಬರ್ 3ರಂದು ಅವರ ತಂದೆ ಹಾಗೂ ತಾಯಿ ಕಾರವಾರಕ್ಕೆ ಹೋಗಿದ್ದು, ಮರುದಿನವೂ ಮನೆಗೆ ಮರಳಿರಲಿಲ್ಲ. ಹೀಗಿರುವಾಗ, ಡಿಸೆಂಬರ್ 4ರ ರಾತ್ರಿ 2 ಗಂಟೆಗೆ ಅವರ ಮನೆ ಬಾಗಿಲು ಬಡಿದ ಸದ್ದಾಗಿದೆ. ರಾಬಿಯಾ ಶೇಖ್ ಅವರು `ಯಾರು?’ ಎಂದು ಪ್ರಶ್ನಿಸಿದ್ದಾರೆ. ಯಾವುದೇ ಉತ್ತರ ಬಾರದ ಕಾರಣ `ಕಾರವಾರಕ್ಕೆ ಹೋಗಿದ್ದ ತಂದೆ-ತಾಯಿ ಮರಳಿರಬಹುದು’ ಎಂದು ಅಂದಾಜಿಸಿ ಬಾಗಿಲು ತೆರೆದಿದ್ದಾರೆ. ಆದರೆ, ಆ ರಾತ್ರಿ ನೆಹರು ನಗರದ ಅಲ್ತಾಪ ಸಯ್ಯದ್, ಸಲ್ಮಾನ್ ತಹಶೀಲ್ದಾರ್, ಅನಿಸುತ್ಕರ್ ಕೋಟಿ, ಕುತೇಬಾಜಿ ತಹಶಿಲ್ದಾರ್, ಶೈನಾಬ್ ತಹಶೀಲ್ದಾರ್, ಅಶ್ಬಾಕ್ ತಹಶೀಲ್ದಾರ್ ಅಲ್ಲಿ ಕಾಣಿಸಿಕೊಂಡಿದ್ದಾರೆ. ಈ ಹಿಂದೆಯೂ ಅವರೆಲ್ಲರೂ ಸೇರಿ ಮನೆ ಬಳಿ ಗಲಾಟೆ ಮಾಡಿದ್ದರಿಂದ ರಾಬಿಯಾ ಶೇಖ್ ಅವರು ಭಯಪಟ್ಟಿದ್ದಾರೆ. ಆ ವೇಳೆ ಎದುರುದಾರರು `ಕಂಪ್ಲೆಟ್ ಕೊಡಬೇಡ ಎಂದರೂ ಕಂಪ್ಲೆಟ್ ಕೊಡುತ್ತಿಯಾ?’ ಎಂದು ಪ್ರಶ್ನೆ ಮಾಡಿದ್ದಾರೆ. ಈ ವೇಳೆ ಸಲ್ಮಾನ್, ಅಲ್ತಾಪ್, ಅನೀಸ್ ಅವರು ಕೈ ಹಿಡಿದು ಎಳೆದಾಡಿದ್ದಾರೆ. ಅದಾದ ನಂತರ ಕುತೇಜಾಬಿ ಅವರು ರಾಬಿಯಾ ಶೇಖ್ ಅವರ ಕೆನ್ನೆಗೆ ಬಾರಿಸಿದ್ದಾರೆ. `ಶಿರಸಿಯಲ್ಲಿ ನೀ ಹೇಗೆ ತಿರುಗಾಡುತ್ತೀಯ? ಎಂದು ನೋಡುವೆ’ ಎಂದು ಬೆದರಿಕೆ ಹಾಕಿ ಅವರೆಲ್ಲರೂ ಅಲ್ಲಿಂದ ಪರಾರಿಯಾಗಿದ್ದಾರೆ. ಇದರಿಂದ ಆತಂಕಕ್ಕೆ ಒಳಗಾದ ರಾಬಿಯಾ ಶೇಖ್ ಅವರು ರಕ್ಷಣೆಗಾಗಿ ಪೊಲೀಸರ ಮೊರೆ ಹೋಗಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿದ್ದು, ತನಿಖೆ ನಡೆಸಿದ್ದಾರೆ. `ಅಪರಿಚಿತರು ಬಾಗಿಲು ಬಡಿದರೆ ತೆರೆಯದಿರಿ. ತುರ್ತು ಸಹಾಯಕ್ಕೆ 112ಗೆ ಫೋನ್ ಮಾಡಿ’ - [ಆ ಮಹಿಳೆಯರಿಬ್ಬರೂ ಹೊಗೆ ಮಾನವರು!](https://mobiletime.in/2025/12/both-of-those-women-are-smoke-humans/): ಮೋಜು ಮಸ್ತಿಗಾಗಿ ಗೋಕರ್ಣಕ್ಕೆ ಬಂದು ನಶೆಯ ಗುಂಗಿನಲ್ಲಿ ಮೈ ಮರೆತಿದ್ದ ಪ್ರತಿಷ್ಠಿತ ಕುಟುಂಬದ ಮಹಿಳೆಯರಿಬ್ಬರ ವಿರುದ್ಧ ಪೊಲೀಸರು ಕಾನೂನು ಕ್ರಮ ಜರುಗಿಸಿದ್ದಾರೆ. ಮೋಟು ಬೀಡಿಯೊಳಗೆ ಗಾಂಜಾ ಪುಡಿ ಹಾಕಿ ಹೊಗೆ ಬಿಡುತ್ತಿದ್ದ ಮಹಿಳೆಯರು ಪಿಐ ಶ್ರೀಧರ ಎಸ್ ಆರ್ ಅವರ ಬಳಿ ಸಿಕ್ಕಿ ಬಿದ್ದಿದ್ದಾರೆ. ಅಂಕೀತಾ ಭಟ್ಟಾಚಾರ್ಯ ಅವರು ಉತ್ತರ ಪ್ರದೇಶದ ಖ್ಯಾತ ಕಲಾವಿದೆ. ಚಿತ್ರ ಬಿಡಿಸುವಿಕೆ, ಮಾಡೇಲ್ ಕ್ಷೇತ್ರ ಅವರ ಆಸಕ್ತಿ. ಮೂರು ದಿನದ ಹಿಂದೆ ಗೋಕರ್ಣಕ್ಕೆ ಬಂದಿದ್ದ ಅಂಕೀತಾ ಭಟ್ಟಾಚಾರ್ಯ ಅವರು ಬಂಗ್ಲೆಗುಡ್ಡದ ಬಳಿ ಹೋಗಿದ್ದರು. ಅಲ್ಲಿ ಅವರು ಮೋಜು-ಮಸ್ತಿಯಲ್ಲಿ ತೊಡಗಿದ್ದು, ಅಮಲಿನಲ್ಲಿ ಕುಣಿದಾಡುತ್ತಿದ್ದರು. ಅಂಕೀತಾ ಭಟ್ಟಾಚಾರ್ಯ ಅವರ ನಡೆಯ ಬಗ್ಗೆ ಅನುಮಾನವ್ಯಕ್ತಪಡಿಸಿದ ಪೊಲೀಸರು ಅವರನ್ನು ವೈದ್ಯಕೀಯ ಪರೀಕ್ಷೆಗೆ ಕಳುಹಿಸಿದರು. ಮರುದಿನ ಪೊಲೀಸರು ರುದ್ರಪಾದದ ಬಳಿಯ ಶಿವಮೂನ್ ಗೆಸ್ಟಹೌಸ್ ಬಳಿ ಹೋಗಿದ್ದರು. ಖಾಸಗಿ ಕಂಪನಿ ಉದ್ಯೋಗಿಯಾಗಿರುವ ಬೆಂಗಳೂರಿನ ಶ್ರೀದೇವಿ ಎನ್ ಡಿ ಅವರು ನಶೆಯಲ್ಲಿದ್ದರು. ಅದನ್ನು ಗುರುತಿಸಿದ ಪೊಲೀಸರು ಅವರನ್ನು ಸಹ ವೈದ್ಯಕೀಯ ತಪಾಸಣೆಗೆ ಕಳುಹಿಸಿದರು. ಅವರಿಬ್ಬರನ್ನು ತಪಾಸಣೆಗೆ ಒಳಪಡಿಸಿದ ವೈದ್ಯರು ಗಾಂಜಾ ಸೇವನೆಯನ್ನು ದೃಢಪಡಿಸಿದರು. ನಿಷೇಧಿತ ಗಾಂಜಾ ಬಳಕೆ ಮಾಡಿದ ಕಾರಣ ಆ ಇಬ್ಬರು ಮಹಿಳೆಯರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದರು. - [ನ್ಯಾಯವಾದಿಗೆ ಸನ್ಮಾನ](https://mobiletime.in/2025/12/honor-to-the-lawyer/): ಜನಸಾಮಾನ್ಯರ ಸಮಸ್ಯೆಗೆ ಧ್ವನಿಯಾಗಿರುವ ನ್ಯಾಯವಾದಿ ಗಂಗಾಧರ ನಾಯ್ಕ ಅವರ ಸೇವೆಯನ್ನು ಜನಸಾಮಾನ್ಯರ ಸಮಾಜ ಕಲ್ಯಾಣ ಕೇಂದ್ರದವರು ಗುರುತಿಸಿದ್ದಾರೆ. 72ನೇ ವಯಸ್ಸಿನಲ್ಲಿಯೂ ಬಡವರ ಸೇವೆಗೆ ಸಮಯ ಮೀಸಲಿಡುವ ಗಂಗಾಧರ ನಾಯ್ಕ ಅವರನ್ನು ಈ ದಿನ ಸನ್ಮಾನಿಸಲಾಗಿದೆ. ಹೊನ್ನಾವರದ ಹಳದಿಪುರದ ಗಂಗಾಧರ ಚೆನ್ನಪ್ಪ ನಾಯ್ಕ ಅವರು ನ್ಯಾಯವಾದಿ. 1983ರಲ್ಲಿ ಶಿರಸಿಯಲ್ಲಿ ಕಾನೂನು ಪದವಿ ಪೂರೈಸಿದ ಅವರು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಲ್ಲಿ ಕಾನೂನು ಸಲಹೆಗಾರರಾಗಿದ್ದರು. ನಂತರ ಕುಮಟಾ ಕೋರ್ಟಿನಲ್ಲಿ ವಕೀಲರಾಗಿ ಕೆಲಸ ಶುರು ಮಾಡಿದರು. ಈ ಅವಧಿಯಲ್ಲಿ ಅವರು ಬಡವರಿಂದ ಯಾವುದೇ ಶುಲ್ಕಪಡೆಯದೇ ವಾದ ಮಾಡುತ್ತಿದ್ದರು. ಅನೇಕರಿಗೆ ಉಚಿತ ಕಾನೂನು ಸಲಹೆ ನೀಡಿ ಅವರಿಗೆ ನ್ಯಾಯ ಒದಗಿಸಿದ್ದರು. ಈ ಎಲ್ಲಾ ಹಿನ್ನಲೆ ವಕೀಲರ ದಿನಾಚರಣೆ ಅಂಗವಾಗಿ ಜನಸಾಮಾನ್ಯರ ಸಮಾಜ ಕಲ್ಯಾಣ ಕೇಂದ್ರದ ಅಧ್ಯಕ್ಷ ಆಗ್ನೇಲ್ ರೋಡಿಗ್ರಸ್ ಅವರು ಗಂಗಾಧರ ನಾಯ್ಕ ಅವರನ್ನು ಗೌರವಿಸಿದರು. ಸಾಮಾಜಿಕ ಕಾರ್ಯಕರ್ತ ಸುಧಾಕರ ನಾಯ್ಕ, ನಿವೃತ್ತ ಅಧಿಕಾರಿ ನಾಗೇಶ, ಪ್ರಮುಖರಾದ ಶ್ರೀಧರ ಪಟಗಾರ, ನಾಗೇಶ ನಾಯ್ಕ ಚಿತ್ರಿಗಿ, ಮುನ್ನ ಸಾಬ್ ಅಮೀನ್ ಇದ್ದರು. - [`ಭೂ ಕುಸಿತ ವಲಯದಲ್ಲಿ ಅವೈಜ್ಞಾನಿಕ ಯೋಜನೆ'](https://mobiletime.in/2025/12/unscientific-project-in-landslide-zone/): ಭೂ ಕುಸಿತ ವಲಯವಾದ ಶರಾವತಿ ನದಿ ಕಣಿವೆ ಪ್ರದೇಶದಲ್ಲಿ ಸರ್ಕಾರ ಪಂಪ್ ಸ್ಟೋರೇಜ್ ಭೂಗತ ಜಲ ವಿದ್ಯುತ್ ಯೋಜನೆ ಮುಂದಾಗಿದ್ದು, ಈ ಯೋಜನೆಯ ಅನಾಹುತಗಳ ಬಗ್ಗೆ ಕುದ್ರಿಗಿ ಗ್ರಾಮ ಪಂಚಾಯಿತಿಯ ಅಧ್ಯಕ್ಷ ಮಹ್ಮದ ಫೈಸಲ್ ಬಾವಾಫಕ್ಕಿ ಅವರು ಗಮನಸೆಳೆದಿದ್ದಾರೆ. ಈ ಕುರಿತು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಗೂ ಪತ್ರ ಬರೆದಿರುವ ಅವರು ಯೋಜನೆಯನ್ನು ಕೈ ಬಿಡುವಂತೆ ಆಗ್ರಹಿಸಿದ್ದಾರೆ. ಕುದ್ರಿಗಿ ಗ್ರಾಮ ಪಂಚಾಯಿತವೂ ಯೋಜನೆಯನ್ನು ವಿರೋಧಿಸಿದ ಬಗ್ಗೆ ಅವರು ನಿರ್ಣಯ ಮಂಡಿಸಿ, ಅದರ ಪ್ರತಿಯನ್ನು ಸರ್ಕಾರಕ್ಕೆ ಕಳುಹಿಸಿದ್ದಾರೆ. `ಶರಾವತಿ ನದಿ ಕಣಿವೆ ಪ್ರದೇಶದಲ್ಲಿ ಭೂ ಕುಸಿತದ ಅಪಾಯವಿದೆ. ಸಿಂಗಳಿಕ ಅಭಯಾರಣ್ಯ ವ್ಯಾಪ್ತಿಯಲ್ಲಿ ಅವೈಜ್ಞಾನಿಕ ಯೋಜನೆಗೆ ಅವಕಾಶ ಕೊಡುವುದು ಸರಿಯಲ್ಲ. ಪರಿಸರದ ಜೊತೆ ಆ ಭಾಗದ ರೈತರ ಜೀವನೋಪಾಯಕ್ಕೆ ಸಹ ಈ ಯೋಜನೆ ಅಪಾಯಕಾರಿ’ ಎಂದವರು ವೈಜ್ಞಾನಿಕ ಕಾರಣಗಳ ಜೊತೆ ವಿವರಿಸಿದ್ದಾರೆ. `ಶರಾವತಿ ಕಣಿವೆಯು ಈಗಾಗಲೇ ಸರಣಿ ಜಲಾಶಯ ಮತ್ತು ಜಲ ವಿದ್ಯುತ ಯೋಜನೆಗಳಿಂದ ಅಪಾಯಕ್ಕೆ ಸಿಲುಕಿದೆ. ಬೇಸಿಗೆ ಅವಧಿಯಲ್ಲಿ ನದಿ ನೀರಿನ ಹರಿವು ಕಡಿಮೆ ಆಗುತ್ತದೆ. ಸಮುದ್ರದ ಉಪ್ಪು ನೀರು 18ಕಿಮೀ ಹಿಮ್ಮುಖವಾಗಿ ಶರಾವತಿ ನದಿಗೆ ಸೇರುತ್ತಿದೆ. ಮಳೆಗಾಲದಲ್ಲಿ ಪ್ರವಾಹ ಉಂಟಾಗುತ್ತಿದ್ದು, ಜನ ಆರ್ಥಿಕ ನಷ್ಟವನ್ನು ಅನುಭವಿಸುತ್ತಿದ್ದಾರೆ. ಇಂಥ ಸ್ಥಿತಿಯಲ್ಲಿ ಗೇರುಸೊಪ್ಪೆ ಮತ್ತು ತಲಕಳಲೆ ಜಲಾಶಯಗಳ ನಡುವಿನ ಪರಿಸರ ಸೂಕ್ಷ್ಮ ಪ್ರದೇಶದಲ್ಲಿ ಸ್ಪೋಟಕ ಬಳಸುವುದು ಅಪಾಯಕಾರಿ’ ಎಂದವರು ಮನವರಕೆ ಮಾಡುವ ಪ್ರಯತ್ನ ಮಾಡಿದ್ದಾರೆ. ಈ ವೈಜ್ಞಾನಿಕ ಯೋಜನೆಯ ಅನುಷ್ಠಾನದಿಂದ ಪರಿಸರ, ಜೀವಿವೈವಿಧ್ಯತೆ ಮತ್ತು ಜನಜೀವನದ ಮೇಲೆ ಆಘಾತಕಾರಿ ಪರಿಣಾಮ ಉಂಟಾಗಲಿದೆ’ ಎಂಬ ಆತಂಕವ್ಯಕ್ತಪಡಿಸಿದ್ದಾರೆ. `ಯೋಜನೆಯ ಅನುಷ್ಠಾನಕ್ಕೆ ಗುರುತಿಸಲಾದ ತಾಣವೂ ಪಶ್ಚಿಮಘಟ್ಚಗಳ ದಟ್ಟವಾದ ನಿತ್ಯ ಹರಿದ್ವರ್ಣದ ಮಳೆಕಾಡುಗಳ ನಡುವೆ ಇದೆ. ಆ ಘಟ್ಟ ಪ್ರದೇಶವು ಅಧಿಕ ಮಳೆ ಮತ್ತು ಕಡಿದಾದ ಕಣಿವೆಗಳಿಂದ ಉಂಟಾಗುವ ಭಾರಿ ಭೂಕುಸಿತಗಳಿಂದಾಗಿ ಅಪಾಯಕಾರಿ ಭೂಕುಸಿತ ವಲಯವೆಂದು ಗುರುತಿಸಲ್ಪಟ್ಟಿದೆ. ಇಲ್ಲಿ ಯೋಜನೆ ಮಾಡುವುದರಿಂದ ಅನೇಕ ಅನಾಹುತಗಳು ನಡೆಯುವ ಸಾಧ್ಯತೆಗಳಿವೆ. ಈ ಬಗ್ಗೆ ಟಿ ವಿ ರಾಮಚಂದ್ರ ಮತ್ತು ಸುಭಾಷ ಚಂದ್ರನ್ ಸೇರಿ ಅನೇಕ ವಿಜ್ಞಾನಿಗಳು ಜನರಿಗೆ ಮಾಹಿತಿ ನೀಡಿದ್ದಾರೆ. ಹೀಗಾಗಿ ಉದ್ದೇಶಿತ ಶರಾವತಿ ಪಂಪ್ಡ್ ಸ್ಟೋರೇಜ ವಿದ್ಯುತ್ ಯೋಜನೆ ಕೈ ಬಿಡಬೇಕು’ ಎಂದು ಆಗ್ರಹಿಸಿದ್ದಾರೆ. - [ಕೂಲಿ ಕೆಲಸದಲ್ಲಿಯೂ ಆತ ಪೇಮಸ್ಸು: ಕದಿಯೋದೇ ಅವನ ಬ್ಯುಸಿನೆಸ್ಸು!](https://mobiletime.in/2025/12/he-is-also-passionate-about-wage-labor-stealing-is-his-business/): ಸೂರಜ ಪಾಟೀಲ ಅವರ ಪುತ್ರ ಸಮೀರ ದೇಸಾಯಿ ಅವರು ಆರ್ಯ ಎಂಬ ಹೆಸರಿನಿಂದಲೂ ಗುರುತಿಸಿಕೊಂಡಿದ್ದು, ಕಳ್ಳತನವನ್ನೇ ಅವರು ಮುಖ್ಯ ವೃತ್ತಿಯನ್ನಾಗಿಸಿಕೊಂಡಿದ್ದಾರೆ. 21ನೇ ವಯಸ್ಸಿನಲ್ಲಿಯೇ ಬೆಳಗಾವಿಯ ಹಲವು ಕಡೆ ಕಳ್ಳತನ ನಡೆಸಿರುವ ಅವರು ಸದ್ಯ ಯಲ್ಲಾಪುರದಲ್ಲಿ ಎರಡು ಕಡೆ ತಮ್ಮ ಕೈ ಚಳಕ ಪ್ರದರ್ಶಿಸಿ ಸಿಕ್ಕಿ ಬಿದ್ದಿದ್ದಾರೆ. ಜೊಯಿಡಾ ಅಣಶಿಯ ಕೊಣಮಣ ನುಜ್ಜಿಯ ಸಮೀರ ದೇಸಾಯಿ ಅವರು ಮೊದಲು ಕೂಲಿ ಕಾರ್ಮಿಕರಾಗಿದ್ದರು. ಯಾರು ಏನೇ ಕೆಲಸ ಹೇಳಿದರೂ ಅದನ್ನು ಮಾಡುತ್ತಿದ್ದರು. ಕೂಲಿ ಕೆಲಸದಿಂದ ಅವರು ಖ್ಯಾತಿ ಗಳಿಸಿದರೂ ಸದ್ಯ ಕಳ್ಳತನ ಪ್ರಕರಣಗಳಿಂದ ಅವರು ಕುಖ್ಯಾತಿಪಡೆದಿದ್ದಾರೆ. ಸದ್ಯ ಕೂಲಿ ಕೆಲಸ ಬಿಟ್ಟಿರುವ ಅವರು ಕಳ್ಳತನ ಮಾಡುವುದನ್ನೇ ತಮ್ಮ ಮುಖ್ಯ ವೃತ್ತಿಯನ್ನಾಗಿಸಿಕೊಂಡಿದ್ದಾರೆ. 12 ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿರುವ ಸಮೀರ ದೇಸಾಯಿ ಅವರನ್ನು ಯಲ್ಲಾಪುರ ಪೊಲೀಸರು ಬಂಧಿಸಿ, ಜೈಲಿಗೆ ಕಳುಹಿಸಿದ್ದಾರೆ. ನವೆಂಬರ್ 1ರಂದು ಯಲ್ಲಾಪುರದ ಕಣ್ಣಿಗೇರಿಯ ಸಾರಬೈಲ್ ಬಳಿಯ ಮಿಲಾಗ್ರಿ ಸುನೀಲ ವಾಜ್ ಅವರ ಮನೆಯಲ್ಲಿ ಕಳ್ಳತನ ನಡೆದಿತ್ತು. ಆ ಮನೆಯೊಳಗಿದ್ದ 17 ಗ್ರಾಂ ಬಂಗಾರದ ಜೊತೆ ಬೆಳ್ಳಿ ಆಭರಣಗಳು ಕಾಣೆಯಾಗಿದ್ದವು. 1.13 ಲಕ್ಷ ರೂ ಮೌಲ್ಯದ ಆಭರಣ ಕಳ್ಳತನ ನಡೆದಿರುವುದು ಮರುದಿನ ಗೊತ್ತಾಗಿದ್ದು, ಮಿಲಾಗ್ರಿ ಅವರು ಪೊಲೀಸ್ ದೂರು ನೀಡಿದ್ದರು. ಅದಾದ ನಂತರ ನವೆಂಬರ್ 21ರಂದು ಮಲವಳ್ಳಿ ಸಂಕೇತ ಭಟ್ಟ ಅವರ ಒಡೆತನದ ಮಳಿಗೆಯಲ್ಲಿಯೂ ಕಳ್ಳತನ ನಡೆದಿತ್ತು. ಯಲ್ಲಾಪುರ ಹೃದಯಭಾಗದಲ್ಲಿರುವ ಸೀತಾಲಕ್ಷಿ ಮೆಡಿಕಲ್ ಶಾಪಿನ ಬಾಗಿಲು ಒಡೆದ ಕಳ್ಳರು 45 ಸಾವಿರ ರೂ ಹಣ ದೋಚಿದ್ದರು. ಈ ಬಗ್ಗೆ ಸಂಕೇತ ಭಟ್ಟ ಅವರು ಪೊಲೀಸ್ ದೂರು ನೀಡಿದ್ದರು. ಈ ಎರಡು ಪ್ರಕರಣ ಬೆನ್ನತ್ತಿದ ಪೊಲೀಸರಿಗೆ ಕೂಲಿ ಕೆಲಸ ಮಾಡುವುದಾಗಿ ಹೇಳಿಕೊಂಡಿದ್ದ ಸಮೀರ ದೇಸಾಯಿ ಎದುರಾದರು. ಕೂಲಿ ಕೆಲಸ ಮಾಡುವ ವ್ಯಕ್ತಿ ಆ ಪ್ರಮಾಣದಲ್ಲಿ ಐಷಾರಾಮಿ ಬದುಕು ಸಾಗಿಸುವುದನ್ನು ನೋಡಿ ಪೊಲೀಸರು ಅನುಮಾನಪಟ್ಟರು. ಪಿಐ ರಮೇಶ ಹಾನಾಪುರ ಜೊತೆ ಎಸೈ ರಾಜಶೇಖರ ವಂದಲಿ, ಸಿದ್ದಪ್ಪ ಗುಡಿ, ಮಹಾವೀರ ಕಾಂಬಳೆ, ಶೇಡಜಿ ಚೌಹಾಣ್ ಸೇರಿ ವಿಚಾರಣೆ ನಡೆಸಿದರು. ಆಗ, ಆ ಸಮೀರ್ ದೇಸಾಯಿ ಅವರು ಯಲ್ಲಾಪುರದ ಎರಡು ಕಡೆ ಕಳ್ಳತನ ಮಾಡಿದ್ದನ್ನು ಒಪ್ಪಿಕೊಂಡರು. ಪೊಲೀಸ್ ಸಿಬ್ಬಂದಿ ಮಹಮದ್ ಶಫೀ ಶೇಖ್, ಶೋಭಾ ನಾಯ್ಕ, ಗಿರೀಶ ಲಮಾಣಿ, ಪರಮೇಶ್ವರ ಕೆ, ನಾಗರಾಜ ನಾಯ್ಕ, ನೀಲಪ್ಪ ಸಿಟಿ ಜೊತೆ ಟೆಕ್ನಿಕಲ್ ವಿಭಾಗದ ಉದಯ ಗುನಗಾ ಅವರ ಸಹಕಾರದಿಂದ ಸಮೀರ ದೇಸಾಯಿ ಅವರು ಜೈಲು ಸೇರಿದರು. - [ನೇತ್ರಾಣಿ: ಪ್ರವಾಸೋದ್ಯಮದ ಮೇಲೆಯೂ ಸೈಬರ್ ಕ್ರಿಮಿಯ ಕರಿ ನೆರಳು!](https://mobiletime.in/2025/12/netrani-the-dark-shadow-of-cybercrime-also-looms-over-tourism/): ಉತ್ತರ ಕನ್ನಡ ಕನ್ನಡ ಜಿಲ್ಲೆಯ ಪ್ರವಾಸೋದ್ಯಮ ಚಟುವಟಿಕೆಗಳ ಮೇಲೆ ದುಷ್ಟರ ಕಣ್ಣು ಬಿದ್ದಿದೆ. ಮುರುಡೇಶ್ವರದ ಪ್ರಸಿದ್ಧ ಸ್ಕೂಬಾ ಡೈವಿಂಗ್ ಸಂಸ್ಥೆಯಾದ ನೇತ್ರಾಣಿ ಅಡ್ವೆಂಚರ್ಸ’ನ ಗೂಗಲ್ ಖಾತೆಯನ್ನು ಸೈಬರ್ ಕ್ರೈಂ ಕಳ್ಳರು ಹ್ಯಾಕ್ ಮಾಡಿದ್ದಾರೆ! ನೇತ್ರಾಣಿ ಅಡ್ವೆಂಚರ್ಸ್ ಸಂಸ್ಥೆಯೂ ಮುರುಡೇಶ್ವರದಲ್ಲಿ ಅತ್ಯುತ್ತಮ ಸೇವೆ ನೀಡುತ್ತಿದೆ. ಅಲ್ಲಿಗೆ ಬರುವ ಪ್ರವಾಸಿಗರನ್ನು ಆತ್ಮೀಯವಾಗಿ ಬರಮಾಡಿಕೊಳ್ಳುವ ಸಂಸ್ಥೆ ಸಿಬ್ಬಂದಿ ಅವರಿಗೆ ಊಟ-ವಸತಿ ಕಲ್ಪಿಸಿ ಜಲ ಸಾಹಸ ಚಟುವಟಿಕೆಗೆ ಕರೆದೊಯ್ಯುತ್ತಿದ್ದಾರೆ. ಸ್ಕೂಬಾ ಡೈವಿಂಗ್ ಮಾಡಲು ಬಯಸುವವರಿಗೆ 3500ರೂ ದರದಲ್ಲಿ ಈ ಸಂಸ್ಥೆಯವರು ಆಳ ಸಮುದ್ರಕ್ಕೆ ಕರೆದೊಯ್ದು ಜಲಚರಗಳ ಪರಿಚಯ ಮಾಡಿಸುತ್ತ ಬಂದಿದ್ದಾರೆ. ಹೀಗಿರುವಾಗ ಸೈಬರ್ ಕ್ರೈಂ ಖದೀಮರು ಇದೀಗ ನೇತ್ರಾಣಿ ಅಡ್ವೆಂಚರ್ಸ’ನ ಗೂಗಲ್ ಖಾತೆ ದುರುಪಯೋಗಪಡಿಸಿಕೊಂಡು ಜನರನ್ನು ವಂಚಿಸಲು ಶುರು ಮಾಡಿದ್ದಾರೆ. ಸ್ಕೂಬಾ ಡೈವಿಂಗ್ ಪ್ರಕ್ರಿಯೆಯಲ್ಲಿ ಅನುಭವಿ ಸಿಬ್ಬಂದಿ ಹೊಂದಿರುವ ನೇತ್ರಾಣಿ ಅಡ್ವೆಂಚರ್ಸ್ ನ ಅಧಿಕೃತ ಗೂಗಲ್ ವ್ಯವಹಾರಿಕ ಖಾತೆಯ ವಿವರವನ್ನು ಅಪರಿಚಿತರು ತಿದ್ದಿದ್ದಾರೆ. ಅಲ್ಲಿ ನಕಲಿ ಸಂಪರ್ಕ ಸಂಖ್ಯೆ ಸೇರಿಸಿ ಗ್ರಾಹಕರಿಂದ ಹಣ ವಸೂಲಿಗೆ ಮುಂದಾಗಿದ್ದಾರೆ. ಈ ಬಗ್ಗೆ ನೇತ್ರಾಣಿ ಅಡ್ವೆಂಚರ್ಸ್ ಮಾಲಕ ಗಣೇಶ ಹರಿಕಂತ್ರ ಅವರ ಗಮನಕ್ಕೆ ಬಂದ ತಕ್ಷಣ ಅವರು ಸಹಾಯ ಕೋರಿ ಸೈಬರ್ ತಜ್ಞರ ಮೊರೆ ಹೋಗಿದ್ದಾರೆ. ಸರ್ಕಾರದ ಅಧಿಕೃತ ಪೋರ್ಟಲ್ ಮೂಲಕ ತಮಗಾದ ಸಮಸ್ಯೆ ಬಗ್ಗೆ ವರದಿ ಮಾಡಿದ್ದಾರೆ. `ಮುರುಡೇಶ್ವರಕ್ಕೆ ಬರುವ ಪ್ರವಾಸಿಗರು ಸೈಬರ್ ಅಪರಾಧದ ಬಗ್ಗೆ ಅರಿವು ಹೊಂದುವುದು ಮುಖ್ಯವಾಗಿದ್ದು, ಅಕ್ರಮ ಜಾಲಕ್ಕೆ ಸಿಲುಕದೇ ಎಚ್ಚರವಾಗಿರಬೇಕು. ಪ್ರವಾಸದ ಅವಧಿಯಲ್ಲಿ ಊಟ, ವಸತಿ, ಜಲ ಸಾಹಸ ಚಟುವಟಿಕೆ ಸೇರಿ ಯಾವುದೇ ವಿಷಯವಾಗಿ ನೇತ್ರಾಣಿ ಅಡ್ವೆಂಚರ್ಸ್ ನೆರವಿಗಾಗಿ 9900431111ಗೆ ಮಾತ್ರ ಫೋನ್ ಮಾಡಬೇಕು’ ಎಂದು ಗಣೇಶ ಹರಿಕಂತ್ರ ಅವರು ಮನವಿ ಮಾಡಿದ್ದಾರೆ. ಸಂಶಯಾಸ್ಪದ ವ್ಯವಹಾರಗಳ ಬಗ್ಗೆ ಪೊಲೀಸ್ ದೂರು ನೀಡುವಂತೆಯೂ ಅವರು ಜಾಗೃತಿ ಮೂಡಿಸಿದ್ದಾರೆ. - [ಬಾಲ್ಯ ವಿವಾಹ ಇನ್ನೂ ಜೀವಂತ!](https://mobiletime.in/2025/12/child-marriage-is-still-alive/): ಶಿರಸಿ ಸಭಾ ಭವನವೊಂದರಲ್ಲಿ ಬಾಲ್ಯ ವಿವಾಹ ನಡೆದಿದೆ. ತಾಯಿಯೇ ಮಗಳನ್ನು ಫುಸಲಾಯಿಸಿ ಮದುವೆ ಮಾಡಿದ್ದಾರೆ. ಸರ್ಕಾರದ ನಿಯಮಾವಳಿಗಳ ಪ್ರಕಾರ 18 ವರ್ಷ ಪೂರೈಸದ ಕನ್ಯೆಯರ ವಿವಾಹ ಮಾಡುವ ಹಾಗಿಲ್ಲ. ಮದುವೆ ಆಗಬಯಸುವ ಪುರುಷರಿಗೆ ಸಹ 21 ಆಗಿರುವುದು ಕಡ್ಡಾಯ. ಈ ಬಗ್ಗೆ ಅರಿತಿದ್ದರೂ ಆ ಕಾನೂನು ಉಲ್ಲಂಘಿಸಿ ಕೆಲವರು ಬಾಲಕಿಯೊಬ್ಬರಿಗೆ ಮದುವೆ ಮಾಡಿ ಮುಗಿಸಿದ್ದಾರೆ. ಅಕ್ಟೊಬರ್ 7ರಂದು ಶಿರಸಿಯ ದುಂಡಸಿ ನಗರದ ಮಡಿವಾಳ ಮಾಚಿದೇವ ಸಭಾಭವನದಲ್ಲಿ ಈ ಮದುವೆ ನಡೆದಿದೆ. ಶಿರಸಿ ಕೊಣ್ಣೂರಿನ ಚಂದ್ರಬಾಯಿ ನಾರಾಯಣ ಭಗವೆ, ಸಂತೋಷ ನಾರಾಯಣ ಬಗವೆ ಹಾಗೂ ಹರಿಹರದ ಸಾವಿತ್ರಿ ನಾರಾಯಣ ಗುಡಕರ್ ಸೇರಿ ಅಪ್ರಾಪ್ತೆಯ ಮದುವೆ ಮಾಡಿಸಿದ್ದಾರೆ. ಸಾವಿತ್ರಿ ಗುಡಕರ್ ಅವರು ತಮ್ಮ ಚಿಕ್ಕ ವಯಸ್ಸಿನ ಮಗಳ ಮದುವೆ ಮಾಡಿ ತಮ್ಮ ಹೊರೆ ಕಡಿಮೆ ಮಾಡಿಕೊಳ್ಳುವ ಪ್ರಯತ್ನ ನಡೆಸಿದ್ದಾರೆ. ಆದರೆ, ಈ ಬಾಲ್ಯ ವಿವಾಹದ ಬಗ್ಗೆ ಜಿಲ್ಲಾ ಮಕ್ಕಳ ಘಟಕಕ್ಕೆ ಮಾಹಿತಿ ಸಿಕ್ಕಿದೆ. ಆ ಮಾಹಿತಿ ಆಧರಿಸಿ ಶಿರಸಿ ಶಿಶು ಅಭಿವೃದ್ಧಿ ಯೋಜನಾಧಿಕಾರಿ ನಂದಕುಮಾರ ಎಂ ಆರ್ ವಿಚಾರಣೆ ನಡೆಸಿದ್ದಾರೆ. ಆ ವಿಚಾರಣೆಯಲ್ಲಿ ಬಾಲ್ಯ ವಿವಾಹ ದೃಢವಾಗಿದ್ದು, ಬಾಲಕಿಗೆ ಮದುವೆ ವಯಸ್ಸು ಭರ್ತಿಯಾಗುವ ಮುನ್ನವೇ ಮದುವೆ ಮಾಡಿದನ್ನು ಅವರು ಖಚಿತಪಡಿಸಿದ್ದಾರೆ. ಅದಾದ ನಂತರ ಅಪ್ರಾಪ್ತೆಯನ್ನು ಫುಸಲಾಯಿಸಿ ಮದುವೆ ಮಾಡಿದ ಬಗ್ಗೆ ನಂದಕುಮಾರ ಎಂ ಆರ್ ಅವರು ಬಾಲಕಿ ತಾಯಿ ಸಾವಿತ್ರಿ ನಾರಾಯಣ ಗುಡಕರ್ ವಿರುದ್ಧ ಶಿರಸಿ ಮಾರುಕಟ್ಟೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಜೊತೆಗೆ ಮದುವೆಯಲ್ಲಿ ಮುಖ್ಯ ಜವಾಬ್ದಾರಿ ನಿಭಾಯಿಸಿದ ಚಂದ್ರಬಾಯಿ ನಾರಾಯಣ ಭಗವೆ, ಸಂತೋಷ ನಾರಾಯಣ ಬಗವೆ ಅವರ ವಿರುದ್ಧವೂ ಪ್ರಕರಣ ದಾಖಲಿಸಿದ್ದಾರೆ. `ಬಾಲ್ಯ ವಿವಾಹ ಶಿಕ್ಷಾರ್ಹ ಅಪರಾಧ’   - [ಕುಡಿದು ಬೈಕ್ ಚಾಲನೆ: ಕಾಲು ಮುರಿತ!](https://mobiletime.in/2025/12/drunk-bike-riding-broken-leg/): ಕಂಠಪೂರ್ತಿ ಕುಡಿದು ಬೈಕ್ ಓಡಿಸಿದ ನಿರಂಜನ ನಾಯ್ಕ ಅವರು ನರಸಿಂಹ ಹರಿಕಂತ್ರ ಅವರಿಗೆ ತಮ್ಮ ವಾಹನ ಗುದ್ದಿದ್ದಾರೆ. ಪರಿಣಾಮ ನರಸಿಂಹ ಹರಿಕಂತ್ರ ಅವರ ಕಾಲಿನ ಮೂಳೆ ಮುರಿದು ಅವರು ಆಸ್ಪತ್ರೆ ಸೇರಿದ್ದಾರೆ. ಕುಮಟಾ ಹೊಲನಗದ್ದೆಯ ನರಸಿಂಹ ಹರಿಕಂತ್ರ ಅವರು ಡಿಸೆಂಬರ್ 6ರಂದು ಸೈಕಲ್ ಮೂಲಕ ಹೋಗುತ್ತಿದ್ದರು. ಕಡ್ಲೆ ಆಟದ ಮೈದಾನದ ಬಳಿ ತಮ್ಮ ಪಾಡಿಗೆ ತಾವು ತೆರಳುತ್ತಿದ್ದಾಗ ವೇಗವಾಗಿ ಬಂದ ಬೈಕ್ ಅವರಿಗೆ ಡಿಕ್ಕಿಯಾಯಿತು. ಕುಮಟಾದಿಂದ ಬಾಡದ ಕಡೆ ಹೋಗುತ್ತಿದ್ದ ನಿರಂಜನ ನಾಯ್ಕ ಅವರು ವೇಗವಾಗಿ ಬೈಕ್ ಓಡಿಸಿಕೊಂಡು ಬಂದು ಸೈಕಲಿಗೆ ಗುದ್ದಿದ್ದರು. ಸೈಕಲಿನಿಂದ ನರಸಿಂಹ ಹರಿಕಂತ್ರ ಅವರು ಪೆಟ್ಟು ಮಾಡಿಕೊಂಡರು. ಅಲ್ಲಿದ್ದ ಜನ ಅವರನ್ನು ಆಸ್ಪತ್ರೆಗೆ ದಾಖಲಿಸಿದರು. ಆ ವೇಳೆ ನರಸಿಂಹ ಹರಿಕಂತ್ರ ಅವರ ಕಾಲಿನ ಮೂಳೆ ಮುರಿದಿರುವುದು ಗಮನಕ್ಕೆ ಬಂದಿತು. ಪೆoಟಿoಗ್ ಕೆಲಸ ಮಾಡಿಕೊಂಡಿದ್ದ ಜಯೇಶ ಹರಿಕಂತ್ರ ಅವರು ತಂದೆಗೆ ಅಪಘಾತವಾದ ವಿಷಯ ಕೇಳಿ ಆಸ್ಪತ್ರೆಗೆ ಓಡಿ ಬಂದರು. ಆಗ, ಅಪಘಾತಕ್ಕೆ ಕಾರಣರಾದ ಬಾಡದ ನಿರಂಜನ ನಾಯ್ಕ ಅವರು ಮದ್ಯದ ಅಮಲಿನಲ್ಲಿರುವುದು ಗೊತ್ತಾಯಿತು. ಕುಡಿದು ಬೈಕ್ ಓಡಿಸಿದಲ್ಲದೇ, ತಮ್ಮ ತಂದೆಗೆ ನೋವು ಮಾಡಿದ ನಿರಂಜನ ನಾಯ್ಕ ಅವರ ವಿರುದ್ಧ ಜಯಶೇಶ ಹರಿಕಂತ್ರ ಅವರು ಕಾನೂನು ಕ್ರಮಕ್ಕೆ ಮುಂದಾದರು. ನಿರಂಜನ ನಾಯ್ಕ ಅವರ ವಿರುದ್ಧ ಕುಮಟಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದರು. `ಮದ್ಯಪಾನ ಮಾಡಿ ವಾಹನ ಓಡಿಸಬೇಡಿ’ - [ಶಾರ್ಟ ಸರ್ಕೀಟ್: ಯಂತ್ರೋಪಕರಣದ ಜೊತೆ ಫರ್ನಿಚರ್ ಭಸ್ಮ](https://mobiletime.in/2025/12/short-circuit-furniture-burns-along-with-machinery/): ವಿದ್ಯುತ್ ಶಾರ್ಟ ಸರ್ಕೀಟ್ ಪರಿಣಾಮ ಮರದ ಉಪಕರಣ ತಯಾರಿಕಾ ಮಳಿಗೆಗೆ ಬೆಂಕಿ ಬಿದ್ದಿದೆ. ಪರಿಣಾಮ ಮಳಿಗೆ ಮಾಲಕರಿಗೆ 50 ಲಕ್ಷ ರೂ ನಷ್ಟವಾಗಿದೆ. ಮುಂಡಗೋಡಿನ ಕಿಲ್ಲೆ ಓಣಿಯ ಖಾದರಲಿಂಗ್ ಬಳಿಯ ಯೂನುಸ್ ಹೊಸಕೊಪ್ಪ ಅವರ ಕಟ್ಟಿಗೆ ಅಡ್ಡೆಯಲ್ಲಿ ರವಿವಾರ ಬೆಂಕಿ ತಗುಲಿದೆ. ಬೆಂಕಿಯ ಜ್ವಾಲೆಗೆ ಸಾಗುವಾನಿ ಫರ್ನಿಚರ್ ಸುಟ್ಟು ಬೂದಿಯಾಗಿದೆ. ಜೊತೆಗೆ ವಿವಿಧ ಮರದ ಸಾಮಗ್ರಿ ಹಾಗೂ ಯಂತ್ರಗಳು ಸುಟ್ಟು ಕರಕಲಾಗಿದೆ. ಅಲ್ಲಿ ನಿಲ್ಲಿಸಿದ್ದ ಕಾರಿಗೂ ಬೆಂಕಿ ತಗುಲಿದೆ. ಈ ಅಡ್ಡೆಯ ಪಕ್ಕದಲ್ಲಿದ್ದ ಅಯಾನ್ ಹಾನಗಲ್ ಅವರ ಹಾರ್ಡ್ವೇರ್ ಗೋಡೌನ್‌ಗೂ ಬೆಂಕಿ ವ್ಯಾಪಿಸಿದೆ. ಅಲ್ಲಿಯೂ ಅಪಾರ ಮೌಲ್ಯದ ವಸ್ತುಗಳು ನಾಶವಾಗಿದೆ. ಅಗ್ನಿಶಾಮಕ ಸಿಬ್ಬಂದಿ ತೀವ್ರ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ಹತೋಟಿಗೆ ತಂದಿದ್ದಾರೆ. ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದಾರೆ. - [ಭರ್ಜರಿ ಬೇಟೆ: ಜಿಂಕೆ ಚರ್ಮ.. ಹಂದಿ ಮಾಂಸ!](https://mobiletime.in/2025/12/great-hunt-deer-skin-pork/): ಹಿರೋ ಹೊಂಡಾ ಬೈಕಿನಲ್ಲಿ ಸಾಗಾಟವಾಗುತ್ತಿದ್ದ ಜಿಂಕೆ ಚರ್ಮ.. ಹಂದಿ ಮಾಂಸಕ್ಕೆ ಅರಣ್ಯಾಧಿಕಾರಿಗಳು ತಡೆ ಒಡ್ಡಿದ್ದಾರೆ. ಚರ್ಮ ಹಾಗೂ ಮಾಂಸದ ಜೊತೆ ಐವರನ್ನು ವಶಕ್ಕೆಪಡೆದಿದ್ದಾರೆ. ಮುಂಡಗೋಡಿನ ಅರಣ್ಯಾಧಿಕಾರಿಗಳು ಈ ಕಾರ್ಯಾಚರಣೆ ನಡೆಸಿದ್ದಾರೆ. ಬಾಳೆಕೊಪ್ಪ ಬಳಿಯ ಕರ್ಕಲ ಜಡ್ಡಿಯಲ್ಲಿ ಬೈಕ್ ತಪಾಸಣೆ ನಡೆಸಿದ ಅಧಿಕಾರಿಗಳಿಗೆ ಕಾಂಡು ಹಂದಿ ಮಾಂಸ ಸಿಕ್ಕಿದೆ. ಆರೋಪಿತರನ್ನು ವಿಚಾರಣೆಗೆ ಒಳಪಡಿಸಿದಾಗ ಜಿಂಕೆ ಚರ್ಮ ಅಡಗಿಸಿರುವುದು ಬೆಳಕಿಗೆ ಬಂದಿದೆ. ಬಾಳೆಕೊಪ್ಪದ ಕನಕಪ್ಪ ದುರ್ಗಪ್ಪ ಮಾದರ್, ಪರಶುರಾಮ್ ಕನಕಪ್ಪ ಮಾದರ್, ಸೊರಬದ ಸುರೇಶ ದೇವಪ್ಪ ಕೋಡಿಕೊಪ್ಪ, ಶಿವಪುತ್ರಪ್ಪ ಹನುಮಂತಪ್ಪ ಕೋಡಿಕೊಪ್ಪ ತಾಲೂಕ ಸೊರಬ, ಉಮೇಶ್ ಗುಡ್ಡಪ್ಪ ಕೋಡಿಕೊಪ್ಪ ಅವರನ್ನು ಅರಣ್ಯಾಧಿಕಾರಿಗಳು ಬಂಧಿಸಿದ್ದಾರೆ. ಅವರು ಬಳಸಿದ್ದ ಬೈಕು, ಜಿಂಕೆ ಚರ್ಮ ಹಾಗೂ 3.9 ಕೆಜಿ ಕಾಡು ಹಂದಿ ಮಾಂಸವನ್ನು ಜಪ್ತು ಮಾಡಿದ್ದಾರೆ. - [ಲಾಟರಿ ನಿಷೇಧ: ಲಕ್ಕಿ ಡ್ರಾ ತಡೆಯಲು ಡೀಸಿಗೂ ಅಧಿಕಾರವಿಲ್ಲ!](https://mobiletime.in/2025/12/lottery-ban-even-dc-has-no-power-to-stop-lucky-draws/): ರಾಜ್ಯದಲ್ಲಿ ಲಾಟರಿ ಮಾರಾಟ ನಿಷೇಧವಾಗಿದ್ದರೂ `ಲಕ್ಕಿ ಡ್ರಾ ಕೂಪನ್’ ಮಾರಾಟಕ್ಕೆ ಕಡಿವಾಣ ಬಿದ್ದಿಲ್ಲ. ಗಣೇಶ ಉತ್ಸವದ ಅವಧಿಯಲ್ಲಿ `ಡ್ರಾ’ ನಡೆಸುವ ಉತ್ಸವ ಸಮಿತಿ ವಿರುದ್ಧ ಕಾನೂನು ಕ್ರಮವಾಗುತ್ತಿದೆಯೇ ವಿನ: `ಲಕ್ಕಿ ಡ್ರಾ’ ಹೆಸರಿನಲ್ಲಿ ನಿತ್ಯವೂ ನಡೆಯುವ ವಂಚನೆಯ ಜಾಲದ ವಿರುದ್ಧ ಕ್ರಮ ಜರುಗಿಸಲು ಯಾರಿಗೂ ಅಧಿಕಾರವಿಲ್ಲ! ಜನರಿಗೆ ಆಮೀಷ ಒಡ್ಡುವ ದಂಧೆ ನಿಯಂತ್ರಣಕ್ಕೆ ಉತ್ತರ ಕನ್ನಡ ಜಿಲ್ಲೆಯಲ್ಲಿಯೂ ಪ್ಲೆಯಿಂಗ್ ಸ್ಕಾಡ್ ರಚನೆಯಾಗಿದೆ. ಮಟ್ಕಾ, ಲಾಟರಿ, ಬೆಟ್ಟಿಂಗ್ ಸೇರಿ ವಿವಿಧ ಆಮೀಷಗಳನ್ನು ಒಡ್ಡುವವರ ಮೇಲೆ ಪ್ಲೆಯಿಂಗ್ ಸ್ಕಾಡ್ ಅಧಿಕಾರಿಗಳು ದಾಳಿ ನಡೆಸುವ ಅಧಿಕಾರ ಹೊಂದಿದ್ದಾರೆ. ಆದರೆ, ಲಾಟರಿ ಮಾದರಿಯಲ್ಲಿಯೇ ಕಾರ್ಯ ನಿರ್ವಹಿಸುವ `ಲಕ್ಕಿ ಡ್ರಾ ಕೂಪನ್’ ಮಾರಾಟದ ವಿರುದ್ಧ ಕ್ರಮ ಜರುಗಿಸಲು ಯಾರಿಂದಲೂ ಸಾಧ್ಯವಿಲ್ಲ. ಕಾನೂನಿನಲ್ಲಿರುವ ನ್ಯೂನ್ಯತೆಯನ್ನು ಬಳಸಿಕೊಂಡು `ಲಕ್ಕಿ ಡ್ರಾ’ ಎಂಬ ಮಾರಾಟ ಜಾಲ ಹೆಮ್ಮರವಾಗಿ ಬೆಳೆದಿದೆ. ಸಣ್ಣ ಸಣ್ಣ ಅಂಗಡಿಗಳಲ್ಲಿಯೂ ಸಹ `ಲಕ್ಕಿ ಡ್ರಾ ಕೂಪನ್’ ಮಾರಾಟದ ಹೆಸರಿನಲ್ಲಿ ವಂಚನೆ ಜೋರಾಗಿದೆ. ಕರ್ನಾಟಕ ರಾಜ್ಯ ಲಾಟರಿ ರೆಗ್ಯೂಲೇಶನ್ ಆಕ್ಟ್ 1998ರ ಪ್ರಕಾರ ಸರ್ಕಾರ ಎಲ್ಲಾ ಜಿಲ್ಲೆಗಳಲ್ಲಿಯೂ ಪ್ಲೆಯಿಂಗ್ ಸ್ಕಾಡ್ ರಚಿಸಿದೆ. ಜಿಲ್ಲಾಧಿಕಾರಿಗಳು ಈ ಸಮಿತಿ ಅಧ್ಯಕ್ಷರಾಗಿದ್ದು, ಪೋಲೀಸ್ ವರಿಷ್ಠಾಧಿಕಾರಿಗಳು, ವಾಣಿಜ್ಯ ತೆರಿಗೆ ಸಹಾಯಕ ಆಯುಕ್ತರು (ಜಾರಿ) ಶಿರಸಿ ಮತ್ತು ಸಹಾಯಕ ನಿರ್ದೇಶಕರು, ಪಿಂಚಣಿ ಸಣ್ಣ ಉಳಿತಾಯ ಮತ್ತು ಆಸ್ತಿ-ಋಣ ನಿರ್ವಹಣೆ ಅಧಿಕಾರಿಗಳು ಸಮಿತಿಯಲ್ಲಿದ್ದಾರೆ. ಬಹುಮಾನ ಯೋಜನೆ, ಅಭಿವೃದ್ಧಿ ನೆಪ, ಹಬ್ಬ-ಉತ್ಸವಗಳ ಹೆಸರಿನಲ್ಲಿ ಲಾಟರಿ ಟಿಕೆಟ್ ಮಾರಾಟದ ಮೇಲೆ ಕಣ್ಣಿಡುವುದು ಈ ಸಮಿತಿಯ ಮುಖ್ಯ ಉದ್ದೇಶ. ಸಾರ್ವಜನಿಕರ ಸಹಕಾರದಲ್ಲಿಯೇ ಲಾಟರಿ ನಿಷೇಧಕ್ಕೆ ಸಮಿತಿಯವರು ಪ್ರಯತ್ನಿಸುತ್ತಿದ್ದು, ಇದರ ಅಂಗವಾಗಿ ಆಮೀಷ ಒಡ್ಡುವ ದಂಧೆಕೋರರ ವಿರುದ್ಧ ಪೊಲೀಸರು ನಿರಂತರ ಪ್ರಕರಣ ದಾಖಲಿಸುತ್ತಿದ್ದಾರೆ. ಆದರೆ, ಬಹುಮಾನ ಯೋಜನೆಗಳ ಹೆಸರಿನಲ್ಲಿ ನಡೆಯುವ `ಲಕ್ಕಿ ಡ್ರಾ ಕೂಪನ್’ ಮಾರಾಟದ ವಿರುದ್ಧ ಕ್ರಮ ಕೈಗೊಳ್ಳಲು ಅಧಿಕಾರಿಗಳಿಂದಲೂ ಸಾಧ್ಯವಾಗಿಲ್ಲ. ಕಾರಣ, ಪೊಲೀಸರಿಗೂ ಅದನ್ನು ತಡೆಯುವ ಅಧಿಕಾರವಿಲ್ಲ. ಸದ್ಯದ ಕಾನೂನಿನ ಪ್ರಕಾರ ಲಾಟರಿ ಟಿಕೆಟ್ ಮಾರಾಟ ಮಾತ್ರ ಅಪರಾಧವೇ ವಿನ: `ಲಕ್ಕಿ ಡ್ರಾ ಕೂಪನ್’ ಮಾರಾಟ ಮಾಡುವುದು ಅಪರಾಧವಲ್ಲ. `ಲಕ್ಕಿ ಡ್ರಾ ಕೂಪನ್’ ಮಾರಾಟಕ್ಕೆ ಯಾರ ಅನುಮತಿಯೂ ಬೇಕಿಲ್ಲ. ಅದು ಪಾರದರ್ಶಕವಾಗಿರಬೇಕು ಎಂಬ ಕಟ್ಟುಪಾಡುಗಳು ಸಹ ಇಲ್ಲ. ಲಾಟರಿ ನಿಷೇಧದ ಅವಧಿಯಲ್ಲಿಯೇ `ಲಕ್ಕಿ ಡ್ರಾ’ ಗೊಂದಲ ಹುಟ್ಟಿಕೊಂಡಿತು. `ಲಕ್ಕಿ ಡ್ರಾ’ ನಿಷೇಧ ಕುರಿತ ಚರ್ಚೆ ಜೋರಾಗಿಯೇ ನಡೆಯಿತು. ಕಾನೂನು ಇಲಾಖೆ ಸಹ ಈ ಬಗ್ಗೆ ಸ್ಪಷ್ಠನೆ ನೀಡಿದ್ದು, ಅದೇ ಆಧಾರದಲ್ಲಿ ಜಿಲ್ಲಾಡಳಿತ ಸಹ ನಡೆದುಕೊಳ್ಳುತ್ತಿದೆ. ಉತ್ತರ ಕನ್ನಡ ಜಿಲ್ಲಾಡಳಿತದ ಪತ್ರಕ್ಕೆ ಪಿಂಚಣಿ, ಸಣ್ಣ ಉಳಿತಾಯ ಮತ್ತು ಆಸ್ತಿ-ಋಣ ನಿರ್ವಹಣೆಯ ನಿರ್ದೇಶಕರು ಉತ್ತರಿಸಿದ್ದು `ಲಕ್ಕಿ ಡ್ರಾ ಅಪರಾಧ ಅಲ್ಲ’ ಎಂದು ಹೇಳಿದ್ದಾರೆ. ಹೀಗಾಗಿ ಸರ್ಕಾರ ಲಾಟರಿ, ಮಟ್ಕಾ, ಹಬ್ಬ-ಹರಿದಿನಗಳಲ್ಲಿ ನಡೆಯುವ ಲಾಟರಿ ವಿರುದ್ಧ ಕ್ರಮ ಜರುಗಿಸುತ್ತಿದೆಯೇ ವಿನಃ ಲಕ್ಕಿ ಡ್ರಾ ವಿರುದ್ಧ ಕ್ರಮ ಜರುಗಿಸಲು ಸಾಧ್ಯವಾಗುತ್ತಿಲ್ಲ. - [ಕರಾವಳಿ ಉತ್ಸವ: ಈಗಲೇ ಅರ್ಜಿ ಸಲ್ಲಿಸಿ.. ನಿಮ್ಮ ಪ್ರತಿಭೆಯನ್ನು ಇಲ್ಲಿ ಬೆಳಗಿಸಿ!](https://mobiletime.in/2025/12/coastal-festival-apply-now-shine-your-talent-here/): ಈ ಬಾರಿಯೂ ಕರಾವಳಿ ಉತ್ಸವದಲ್ಲಿಯೂ ಉತ್ತರ ಕನ್ನಡ ಜಿಲ್ಲೆಯ ಪ್ರತಿಭೆಗಳಿಗೆ ಹೆಚ್ಚಿನ ಅವಕಾಶ ನೀಡಲು ಜಿಲ್ಲಾಡಳಿತ ನಿರ್ಧರಿಸಿದೆ. ಹೀಗಾಗಿ ಈ ನೆಲದ ಕಲಾವಿದರು ಸಹ ಕಾರ್ಯಕ್ರಮ ಕೋರಿ ಅರ್ಜಿ ಸಲ್ಲಿಸಲು ಅರ್ಹರಾಗಿದ್ದಾರೆ. ಈ ಸಲ ಏಳು ದಿನಗಳ ಕಾಲ ಅದ್ಧೂರಿ ಉತ್ಸವ ನಡೆಸಲು ನಿರ್ಧರಿಸಲಾಗಿದೆ. ಡಿಸೆಂಬರ್ 22ರಿಂದ 28ರವರೆಗೆ ಕರಾವಳಿ ಉತ್ಸವ ನಡೆಯಲಿದೆ. ಕಾರವಾರ ಕಡಲತೀರದಲ್ಲಿ ದೊಡ್ಡ ಮಟ್ಟದ ವೇದಿಕೆ ನಿರ್ಮಿಸಿ ಉತ್ಸವ ನಡೆಸಲು ನಿರ್ಧರಿಸಲಾಗಿದೆ. ರಾಷ್ಟಮಟ್ಟದ ಕಲಾವಿದರು ಈ ಉತ್ಸವದಲ್ಲಿ ಭಾಗವಹಿಸಲಿದ್ದು, ಅದೇ ವೇದಿಕೆಯಲ್ಲಿ ಉತ್ತರ ಕನ್ನಡ ಜಿಲ್ಲೆಯ ಕಲಾವಿದರು ಸಹ ತಮ್ಮ ಪ್ರತಿಭೆ ಪ್ರದರ್ಶಿಸಲಿದ್ದಾರೆ. ಕರಾವಳಿ ಉತ್ಸವದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸಲು ಇಚ್ಛಿಸುವ ಆಸಕ್ತ ಕಲಾವಿದರು ಡಿಸೆಂಬರ್ 11ರ ಒಳಗೆ ಅರ್ಜಿ ಸಲ್ಲಿಸಬೇಕಿದೆ. ಕಲಾವಿದರು ತಮ್ಮ ಪರಿಚಯ, ಈ ಹಿಂದೆ ಕಾರ್ಯಕ್ರಮ ನೀಡಿದ ದಾಖಲೆಗಳ ಜೊತೆ ಅರ್ಜಿ ಕೊಡಬೇಕಿದೆ. ಡಿಸೆಂಬರ್ 13ರಂದು ಬೆಳಗ್ಗೆ 10ಗಂಟೆಯಿoದ ಸಂಜೆ 4 ಗಂಟೆಯವರೆಗೆ ಆಯ್ಕೆ ಸಮಿತಿಯವರು ಆಡಿಶನ್ ನಡೆಸಿದ್ದಾರೆ. ಕಾರವಾರ ಕೋಡಿಭಾಗದ ಸಾಮಾಜಿಕ ಅರಣ್ಯ ವಿಭಾಗದ ಸಭಾಂಗಣದಲ್ಲಿ ಆಡಿಶನ್ ನಡೆಯಲಿದ್ದು, ಕಲಾವಿದರ ಆಯ್ಕೆ ನಡೆಯಲಿದೆ. ಅರ್ಜಿ ಸಲ್ಲಿಸುವ ವಿಳಾಸ: ಸಹಾಯಕ ನಿರ್ದೇಶಕರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉತ್ತರ ಕನ್ನಡ ಜಿಲ್ಲೆ, ಕಾರವಾರ ಇಮೇಲ್ ಮೂಲಕ ಅರ್ಜಿ ಸಲ್ಲಿಸುವಗಾಗಿ:  dkc.karwar@gmali.com - [ನಮ್ಮನೆ ಹಬ್ಬದಲ್ಲಿ ನೆಮ್ಮದಿ ಕಂಡ ದೊಡ್ಡಣ್ಣ!](https://mobiletime.in/2025/12/big-brother-who-found-peace-at-our-festival/): ಶಿರಸಿಗೆ ಬಂದಿದ್ದ ಹಿರಿಯ ಚಿತ್ರನಟ ಎಸ್ ದೊಡ್ಡಣ್ಣ ಅವರು ಬೆಟ್ಟಕೊಪ್ಪ ಊರು ನೋಡಿದ್ದಾರೆ. ನಮ್ಮನೆ ಹಬ್ಬದಲ್ಲಿ ಭಾಗವಹಿಸಿದ ಅವರು ಇಲ್ಲಿನ ಆಚಾರ-ವಿಚಾರವನ್ನು ಆಹ್ವಾದಿಸಿದ್ದಾರೆ. `ಶುದ್ಧ ಪರಿಸರ ಹೊಂದಿರುವ ಹಳ್ಳಿಗಳು, ಇಲ್ಲಿ ನಡೆಯುವ ಸಾಂಸ್ಕೃತಿಕ ಹಬ್ಬಗಳು ಸ್ವರ್ಗಕ್ಕೆ ಸಮಾನವಾದ ವಾತಾವರಣ ಸೃಷ್ಟಿಸುತ್ತವೆ’ ಎಂದವರು ಹೇಳಿದ್ದಾರೆ. `ಬೆಂಗಳೂರಿನoತಹ ಮಹಾನಗರಗಳು ಸಂಚಾರ ದಟ್ಟಣೆ, ವಾಯಮಾಲಿನ್ಯದ ಕಾರಣಗಳಿಂದ ನರಕವಾಗುತ್ತಿವೆ. ಆ ನರಕದಿಂದ ಹೊರಬರಲು ಹಳ್ಳಿಗೆ ಬರಬೇಕು. ಹಳ್ಳಿಯ ವಾತಾವರಣದಲ್ಲೇ ನೆಮ್ಮದಿ ಲಭ್ಯ’ ಎಂದು ಅವರು ಹಳ್ಳಿ ಜೀವನದ ಬಗ್ಗೆ ಸಂತಸವ್ಯಕ್ತಪಡಿಸಿದ್ದಾರೆ. ಬೆಟ್ಟಕೊಪ್ಪದ ನಮ್ಮನೆ ವೇದಿಕೆಯಲ್ಲಿ ವಿಶ್ವಶಾಂತಿ ಸೇವಾ ಟ್ರಸ್ಟ್ ಕರ್ನಾಟಕ ಆಯೋಜಿಸಿದ್ದ ವಿಶ್ವಶಾಂತಿ ಸರಣಿಯ 11ನೇ ಯಕ್ಷನೃತ್ಯ ರೂಪಕ ವಂದೇ ಗೋವಿಂದಮ್ ಲೋಕಾರ್ಪಣೆ, ನಮ್ಮನೆ ಪ್ರಶಸ್ತಿ, ಪುರಸ್ಕಾರ ಪ್ರದಾನ ಕಾರ್ಯಕ್ರಮ ಒಳಗೊಂಡ 14ನೇ ವರ್ಷದ ನಮ್ಮನೆ ಹಬ್ಬವನ್ನು ಅವರು ಉದ್ಘಾಟಿಸಿ ತಮ್ಮ ಮನದಾಳದ ಮಾತುಗಳನ್ನು ಹಂಚಿಕೊAಡರು. `ಜಗತ್ತಿನ ಮೂರೇ ಮೂರು ಸರ್ವಶ್ರೇಷ್ಠ ಭಾಷೆಗಳಲ್ಲಿ ಕನ್ನಡವೂ ಒಂದು. ಮಾತನಾಡಿದಂತೆ ಬರೆಯುವ ಲಿಪಿಯುಳ್ಳ, ಬರೆದಿದ್ದನ್ನು ಯಥಾವತ್ತಾಗಿ ಮಾತನಾಡುವ ಶಕ್ತಿಯುಳ್ಳ, ಸಂಧಿ, ಸಮಾಸ, ವ್ಯಾಕರಣ, ಅಲ್ಪಪ್ರಾಣ, ಮಹಾಪ್ರಾಣ ಇರುವ ಶ್ರೀಮಂತ ಭಾಷೆ ಅದುವೇ ಕನ್ನಡ. ಹೀಗಿರುವಾಗ ಇಂಗ್ಲಿಷ ಹಾವಳಿಯಲ್ಲಿ ನಮ್ಮ ಮಾತಿನಲ್ಲಿ ಕನ್ನಡ ಶಬ್ದಗಳನ್ನು ಹುಡುಕಾಡುವ ಸಂದರ್ಭ ಬರಬಾರದು’ ಎಂದವರು ಹೇಳಿದರು. ಪ್ರಸಿದ್ಧ ರಂಗಭೂಮಿ ಕಲಾವಿದೆ, ಗಾಯಕಿ ಬಿ ಜಯಶ್ರೀ ಮಾತನಾಡಿ `ಹಳ್ಳಿಗರಿಗೆ ಟಿವಿನೇ ಬೇಕು ಅಂತಿಲ್ಲ. ಇಂತಹ ಸಂಸ್ಕೃತಿಯುಕ್ತ ಕಾರ್ಯಕ್ರಮ ಸಂಘಟಿಸಿದರೆ ಮನಃಸ್ಪೂರ್ತಿಯಾಗಿ ಪಾಲ್ಗೊಳ್ಳುತ್ತಾರೆ. ಇದಕ್ಕೆ ಬೆಟ್ಟಕೊಪ್ಪದಲ್ಲಿ ಆಯೋಜಿಸಿರುವ ನಮ್ಮನೆ ಹಬ್ಬವೇ ಉದಾಹರಣೆ. ಹಳ್ಳಿಗರನ್ನೆಲ್ಲ ಒಂದೆಡೆ ಸೇರುವಂತಹ ಇಂಥ ನಮ್ಮನೆ ಹಬ್ಬವನ್ನು ನಮ್ಮೂರಿನಲ್ಲೂ ಮಾಡಬೇಕು ಅನಿಸಿದೆ’ ಎಂದರು. `ತುಳಸಿ ಹೆಗಡೆ ಪ್ರದರ್ಶಿಸಿದ ಯಕ್ಷನೃತ್ಯ ರೂಪಕದಲ್ಲಿ ಮದ್ದಲೆ, ಚಂಡೆ, ಹಾಡುಗಾರಿಕೆ ಜತೆಯಲ್ಲಿ ಅದಕ್ಕಿಂತ ಹೆಚ್ಚಾಗಿ ಸೊಗಸಾದ ಅಭಿನಯ, ಹೆಜ್ಜೆ ಮನಸ್ಸನ್ನು ಹಿಡಿದುಕೊಂಡಿತು’ ಎಂದು ಶ್ಲಾಘಿಸಿದರು. ನಂದು ಕೆಮಿಕಲ್ಸ್ ಸಂಸ್ಥಾಪಕ ರಾಮನಂದನ ಹೆಗಡೆ, ಪ್ರಜಾವಾಣಿ ಕಾರ್ಯನಿರ್ವಾಹಕ ಸಂಪಾದಕ ರವೀಂದ್ರ ಭಟ್ಟ ಹಾಗೂ ಕಿಶೋರ ಪುರಸ್ಕಾರ ಪಡೆದ ತೇಜಸ್ವಿ ಗಾಂವಕರ್ ಮಾತನಾಡಿದರು. ರಾಘವೇಂದ್ರ ಬೆಟ್ಟಕೊಪ್ಪ, ತುಳಸಿ ಹೆಗಡೆ, ರಮೇಶ ಹೆಗಡೆ ಹಳೆಕಾನಗೋಡ, ನಾಗರಾಜ ಜೋಶಿ ಸೋಂದಾ, ಚಿನ್ಮಯ ಕೆರೆಗದ್ದೆ, ಗಾಯತ್ರಿ ರಾಘವೇಂದ್ರ ಹಾಗೂ ನಾರಾಯಣ ಭಾಗ್ವತ ಕಾರ್ಯಕ್ರಮದ ವಿವಿಧ ಜವಾಬ್ದಾರಿ ನಿಭಾಯಿಸಿದರು. ವೇದಿಕೆಯಲ್ಲಿ ಒಂದೂವರೆ ತಾಸು ಕಾಲ ನಿರಂತರವಾಗಿ ಯಕ್ಷನೃತ್ಯರೂಪಕ ಪ್ರದರ್ಶಿಸಿದವಳು ಯುವ ವಯಸ್ಸಿನಲ್ಲಿಯೇ ಉನ್ನತ ಸಾಧನೆ ಮಾಡಿದ ಪ್ರತಿಭಾವಂತ ಕಲಾವಿದೆ ತುಳಸಿ ಹೆಗಡೆ. ಗೋವಿನ ಮಹತ್ವ ಸಾರುವ ವಂದೇ ಗೋವಿಂದಮ್ ನೃತ್ಯ ರೂಪಕದ ಮೂಲಕ ನೃತ್ಯ ಅಭಿನಯವನ್ನು ಪ್ರಬುದ್ಧವಾಗಿ ತೋರ್ಪಡಿಸಿ ಮನಗೆದ್ದಳು. ಹಿಮ್ಮೇಳದಲ್ಲಿ ಕೇಶವ ಹೆಗಡೆ ಕೊಳಗಿ, ಶಂಕರ ಭಾಗವತ ಯಲ್ಲಾಪುರ, ವಿಘ್ನೇಶ್ವರ ಗೌಡ ಕೆಸರಕೊಪ್ಪ, ಪ್ರಸಾಧನದಲ್ಲಿ ವೆಂಕಟೇಶ ಬೊಗ್ರಿಮಕ್ಕಿ ಸಹಕರಿಸಿದರು. ಡಾ. ಕಬ್ಬಿನಾಲೆ ವಸಂತ ಭಾರದ್ವಾಜರ ಸಾಹಿತ್ಯದಲ್ಲಿ ರೂಪಕ ಮೂಡಿಬಂತು. ರಮೇಶ ಹೆಗಡೆ ಹಳೆಕಾನಗೋಡರ ಮೂಲ ಕಲ್ಪನೆ, ವಿನಾಯಕ ಹೆಗಡೆ ಕಲಗದ್ದೆ ನೃತ್ಯ ನಿರ್ದೇಶನ, ವಿ. ಉಮಾಕಾಂತ ಭಟ್ಟ ಕೆರೇಕೈ ಗದ್ಯ ಸಾಹಿತ್ಯ, ಡಾ. ಶ್ರೀಪಾದ ಭಟ್ ಹಿನ್ನೆಲೆ ಧ್ವನಿ, ಜಿ.ಎಸ್.ಭಟ್ ತಾಳಾಭ್ಯಾಸ, ಉದಯ ಪೂಜಾರಿ ಧ್ವನಿಗ್ರಹಣ ಒಳಗೊಂಡ ರೂಪಕ ಆಪ್ತವಾಗಿ ಮೂಡಿಬಂತು.ಡಾ.ಕಬ್ಬಿನಾಲೆ ವಸಂತ ಭಾರಧ್ವಾಜ ಆಶಯದ ನುಡಿಗಳನ್ನಾಡಿದರು. ಶ್ರೀಧರರ ಕುರಿತು ನಡೆದ ಭಕ್ತಿಸಂಗೀತದಲ್ಲಿ ವಿಶ್ವೇಶ್ವರ ಭಟ್ಟ ಖರ್ವಾ ಗಾಯನ ಭಕ್ತಿಭಾವ ಮೂಡಿಸಿತು. ಗುರುರಾಜ ಆಡುಕಳ ತಬಲಾ, ಅಜಯ ವರ್ಗಾಸರ ಹಾರ್ಮೊನಿಯಂ, ಅನಂತಮೂರ್ತಿ ಹೆಗಡೆ ತಾಳದ ಸಾಥ್ ನೀಡಿದರು. - [ಅಪಘಾತ: ಆರು ದಿನದ ನಂತರ ಸಾವು!](https://mobiletime.in/2025/12/accident-death-after-six-days/): ವೇಗವಾಗಿ ಬಂದ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಗಾಯಗೊಂಡಿದ್ದ ನಾರಾಯಣ ಗೌಡ ಅವರು ಆರು ದಿನದ ನಂತರ ಸಾವನಪ್ಪಿದ್ದಾರೆ. ಕಾರವಾರದ ಕಿಮ್ಸ ಆಸ್ಪತ್ರೆಯಲ್ಲಿ ಹೊನ್ನಾವರದ ನಾರಾಯಣ ಗೌಡ ಅವರು ಕೊನೆಯುಸಿರೆಳೆದಿದ್ದಾರೆ. ಹೊನ್ನಾವರ ಕರ್ಕಿ ಮಠದಕೇರಿಯಲ್ಲಿ ನಾರಾಯಣ ತಿಮ್ಮ ಗೌಡ ಅವರು ವಾಸವಾಗಿದ್ದರು. ನವೆಂಬರ್ 30ರ ರಾತ್ರಿ ಅವರು ಹೊನ್ನಾವರದ ಬಾಂದೇಹಳ್ಳ ರಸ್ತೆಕಡೆಯಿಂದ ಮಠದಕೇರಿ ಕಡೆ ನಡೆದು ಹೋಗುತ್ತಿದ್ದರು. ಕುಮಟಾ-ಹೊನ್ನಾವರ ಕಡೆ ಬೈಕ್ ಓಡಿಸಿಕೊಂಡು ಬಂದ ಅಪರಿಚಿತ ವ್ಯಕ್ತಿಯೊಬ್ಬರು ಕರ್ಕಿನಾಕಾದಲ್ಲಿ ನಾರಾಯಣ ಗೌಡ ಅವರಿಗೆ ತಮ್ಮ ವಾಹನ ಗುದ್ದಿದರು. ಪರಿಣಾಮ ನಾರಾಯಣ ಗೌಡ ಅವರ ತಲೆ, ಮೂಗು, ಕೆನ್ನೆ, ಕಾಲಿಗೆ ಗಾಯವಾಯಿತು. ಡಿಕ್ಕಿ ಹೊಡೆದ ಬೈಕ್ ಅಲ್ಲಿಂದ ಪರಾರಿಯಾಯಿತು. ಬೈಕ್ ಚಾಲಕ ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸುವ ಕೆಲಸವನ್ನು ಮಾಡಲಿಲ್ಲ. ಅಪಘಾತದ ಬಗ್ಗೆ ಪೊಲೀಸರಿಗೆ ಸಹ ಹೇಳಲಿಲ್ಲ. ಹೀಗಾಗಿ ನಾರಾಯಣ ಗೌಡ ಅವರು ಅಲ್ಲಿಯೇ ಬಿದ್ದಿದ್ದು, ನಂತರ ಅವರನ್ನು ಹೊನ್ನಾವರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಯಿತು. ಹೆಚ್ಚಿನ ಚಿಕಿತ್ಸೆಗೆ ಕಾರವಾರದ ಕಿಮ್ಸಗೆ ಕರೆದೊಯ್ದು ಚಿಕಿತ್ಸೆ ಕೊಡಿಸಲಾಯಿತು. ಆದರೆ, ಅದರಿಂದ ಪ್ರಯೋಜನವಾಗಲಿಲ್ಲ. ಡಿಸೆಂಬರ್ 6ರಂದು ನಾರಾಯಣ ಗೌಡ ಅವರು ಕೊನೆಯುಸಿರೆಳೆದರು. ಕರ್ಕಿ ಮಠದಕೇರಿಯ ಎಲೆಕ್ಟಿಶಿಯನ್ ಮಂಜುನಾಥ ಮಾಸ್ತಿ ಗೌಡ ಅವರು ಈ ಬಗ್ಗೆ ಪೊಲೀಸರಿಗೆ ವಿವರಿಸಿದರು. ಪ್ರಕರಣ ದಾಖಲಿಸಿದ ಪೊಲೀಸರು ಬೈಕ್ ಮಾಲಕರ ಶೋಧ ನಡೆಸಿದರು. ನಾರಾಯಣ ಗೌಡ ಅವರಿಗೆ ಗುದ್ದಿದ ಬೈಕಿನ ನೊಂದಣಿ ಸಂಖ್ಯೆ ಗೊತ್ತಾಗಿದ್ದು, ಪೊಲೀಸರು ಕೆಎ 31 ಇಎ 5625 ವಾಹನದ ಮಾಲಕರ ಹುಡುಕಾಟ ಶುರು ಮಾಡಿದ್ದಾರೆ. - [ದೇವರ ದುಡ್ಡು ದೋಚಿದ ದುಷ್ಟಕೂಟ!](https://mobiletime.in/2025/12/an-evil-group-that-stole-gods-money/): ಹೊನ್ನಾವರದ ಶ್ರೀ ಮುದ್ರಿ ಶಿವಮ್ಮ ದೇವಿ ದೇವಸ್ಥಾನಕ್ಕೆ ನುಗ್ಗಿದ 10 ಜನ ಅಲ್ಲಿ ದಾಂಧಲೆ ನಡೆಸಿದ್ದಾರೆ. ದೇವಾಲಯದ ಕಾಣಿಕೆ ದುಡ್ಡು ಕದ್ದ ಅವರು ಅಲ್ಲಿದ್ದ ಕಪಾಟನ್ನು ಧ್ವಂಸ ಮಾಡಿದ್ದಾರೆ. ದೇವರಿಗೆ ಅಪಚಾರ ಎಸಗಿದವರ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಮಾವಿನಕೂರ್ವಾ ಕುಲ್ಕೋಡ್ ದೇವರಕಟ್ಟೆ ಪ್ರವೀಣ ವಾಸುದೇವ ಮೇಸ್ತಾ ಅವರು ನ್ಯಾಯಾಲಯದ ಮೊರೆ ಹೋಗಿದ್ದಾರೆ. ಮುದ್ರಿ ಶಿವಮ್ಮ ದೇವಿ ದೇವಸ್ಥಾನದ ಟ್ರಸ್ಟಿಯೂ ಆಗಿರುವ ಅವರು ದೇವಾಲಯಕ್ಕೆ ನುಗ್ಗಿ ಗಲಾಟೆ ಮಾಡಿದವರ ಹೆಸರನ್ನು ಬಹಿರಂಗಪಡಿಸಿದ್ದಾರೆ. `ದೇಗುಲದ ಆಡಳಿತ ನಿರ್ವಹಣೆಗಾಗಿ ಶ್ರೀ ಮುದ್ರಿ ಶಿವಮ್ಮ ದೇವಿ ದೇವಸ್ಥಾನ ಟ್ರಸ್ಟ್ ರಚಿಸಲಾಗಿದೆ. ದೇವರ ಚಿನ್ನ ಹಾಗೂ ಬೆಳ್ಳಿ ಆಭರಣವನ್ನು ಕೆನರಾ ಬ್ಯಾಂಕಿನ ಲಾಕರಿನಲ್ಲಿರಿಸಲಾಗಿದ್ದು, ಅದರ ಕೀ ಕೊಡಲು ಹೊನ್ನಾವರ ಪ್ರಭಾತನಗರದ ಸುರೇಶ ಲಿಂಗಾ ಮೇಸ್ತಾ ಅವರು ಒಪ್ಪುತ್ತಿಲ್ಲ. ಕೀ ಕೊಡುವಂತೆ ದುಂಬಾಲು ಬಿದ್ದ ಕಾರಣ ಸುರೇಶ ಮೇಸ್ತಾ ಅವರ ಜೊತೆ ಮೂರುಕಟ್ಟೆಯ ವೆಂಕಟೇಶ ದಾಮು ಮೇಸ್ತ, ಮಾವಿನಕೂರ್ವಾ ಕುಲ್ಕೋಡದ ಉದಯ ಲಿಂಗಾ ಮೇಸ್ತಾ, ಅದೇ ಊರಿನ ದಾಮೋದರ ಹೊನ್ನಪ್ಪ ಮೇಸ್ತ, ಆಕಾಶ ವಾಮನ ಮೇಸ್ತಾ, ರಾಧಾಕೃಷ್ಣ ದಾಮೋದರ ಮೇಸ್ತಾ, ಪುರುಷೋತ್ತಮ ನಾಗೇಶ ಮೇಸ್ತಾ, ವಿನಾಯಕ ಸುಬ್ರಾಯ ಮೇಸ್ತಾ, ವೆಂಕಟೇಶ ಉಪೇಂದ್ರ ಮೇಸ್ತಾ, ವಿಷ್ಣು ವಾಮನ ಮೇಸ್ತಾ ಸೇರಿ ದೇಗುಲಕ್ಕೆ ನುಗ್ಗಿ ಅಲ್ಲಿದ್ದ ವಸ್ತುಗಳನ್ನು ಧ್ವಂಸ ಮಾಡಿದ್ದಾರೆ’ ಎಂದು ಅವರು ದೂರಿದ್ದಾರೆ. `ನವೆಂಬರ್ 13ರಂದು ಈ ಎಲ್ಲರೂ ಸೇರಿ ದೇವಾಲಯಕ್ಕೆ ನುಗ್ಗಿ ಕಪಾಟು ಒಡೆದಿದ್ದಾರೆ. ಅಲ್ಲಿದ್ದ ರಸೀದಿ ಪುಸ್ತಕ. 5 ಸಾವಿರ ರೂ ಹಣ ಕದ್ದಿದ್ದಾರೆ. ಲೆಟರ್ ಪ್ಯಾಡ್, ಕಪಾಟಿನ ಕೀ ನಾಪತ್ತೆ ಮಾಡಿದ್ದಾರೆ. ದೇಗುಲದ ಹುಂಡಿ ದೋಚಿ ಪರಾರಿಯಾಗಿದ್ದಾರೆ’ ಎಂದು ಪ್ರವೀಣ ಮೇಸ್ತಾ ಅವರು ಆರೋಪಿಸಿದ್ದಾರೆ. ಈ ಬಗ್ಗೆ ನ್ಯಾಯಾಲಯದ ಮೊರೆ ಹೋಗಿರುವ ಪ್ರವೀಣ ಮೇಸ್ತಾ ಅವರು ಅಲ್ಲಿಂದ ಸೂಚನೆ ತಂದು ಪೊಲೀಸ್ ಪ್ರಕರಣ ದಾಖಲಿಸಿದ್ದಾರೆ. - [ಗೊಬ್ಬರ ವ್ಯಾಪಾರ: ಸರ್ಕಾರಕ್ಕೆ ಮೋಸ!](https://mobiletime.in/2025/12/fertilizer-trade-cheating-the-government/): ಸಬ್ಸಿಡಿ ದರದಲ್ಲಿ ರೈತರಿಗೆ ಗೊಬ್ಬರ ಹಾಗೂ ಇನ್ನಿತರ ಪರಿಕ್ಕರ ಒದಗಿಸಬೇಕಾದ ಕಂಪನಿ ಸರ್ಕಾರಕ್ಕೆ ಮೋಸ ಮಾಡಿದೆ. ಜೊತೆಗೆ ಕೃಷಿ ಇಲಾಖೆ ವಿರುದ್ಧವೇ ಕೋರ್ಟಿನಲ್ಲಿ ಕೇಸು ದಾಖಲಿಸಿದೆ! ನ್ಯಾಯಾಲಯದಿಂದ ನೋಟಿಸ್ ಬಂದ ನಂತರವೇ ಕೃಷಿ ಇಲಾಖೆ ಅಧಿಕಾರಿಗಳಿಗೆ ಸರ್ಕಾರಕ್ಕೆ ಮೋಸವಾಗಿರುವುದು ಅರಿವಿಗೆ ಬಂದಿದೆ. ಹೀಗಾಗಿ ಖಾಸಗಿ ಕಂಪನಿಯಿAದ ಆದ ಮೋಸದ ಬಗ್ಗೆ ಕೃಷಿ ಇಲಾಖೆ ಅಧಿಕಾರಿಗಳು ಸಹ ಪೊಲೀಸ್ ದೂರು ನೀಡಿ, ಕಂಪನಿಯ ಅವ್ಯವಹಾರ ಬಯಲಿಗೆಳೆದಿದ್ದಾರೆ. 2017-18ನೇ ಸಾಲಿನಲ್ಲಿ ಕೃಷಿ ಇಲಾಖೆ ಅಗತ್ಯವಿರುವ ಜೈವಿಕ ಗೊಬ್ಬರ, ಹಸಿರೆಲೆ ಗೊಬ್ಬರ ಬೀಜ, ವಿವಿಧ ಲಘು ಪೋಷಕಾಂಶ, ಸುಣ್ಣ, ಎರೆಹುಳು ಗೊಬ್ಬರ, ಸಿಟಿ ಕಂಪೌಸ್ಟ್ ಪೂರೈಕೆಗಾಗಿ ದರಪಟ್ಟಿ ನಿಗದಿ ಮಾಡಲಾಗಿತ್ತು. ಈ ಸಾಮಗ್ರಿಗಳ ಪೂರೈಕೆಗಾಗಿ ಹೈದರಾಬಾದಿನ ಮುಕುಂದ ಮಹೇಶ್ವರಿ ಕಿಯಾ ಬಯೋಟಿಕ್ ಕಂಪನಿಯನ್ನು ಅಧಿಕೃತ ಸರಬರಾಜುದಾರರಾಗಿ ನೇಮಕ ಮಾಡಲಾಗಿತ್ತು. ರೈತರ ವಂತಿಗೆ ಸ್ವೀಕರಿಸಿದ ಈ ಕಂಪನಿ ಸರ್ಕಾರದಿಂದಲೂ ಸಹಾಯಧನಪಡೆದಿತ್ತು. ಆದರೆ, ಅಗತ್ಯ ಸಾಮಗ್ರಿಗಳನ್ನು ಮಾತ್ರ ಪೂರೈಕೆ ಮಾಡಿರಲಿಲ್ಲ. ಸಬ್ಸಿಡಿ ದರದಲ್ಲಿ ಸಾಮಗ್ರಿ ಬರಬೇಕಾಗಿದನ್ನು ಜನರು ಮರೆತಿದ್ದರು. ಇಲಾಖೆಯವರು ಸಹ ಆ ಬಗ್ಗೆ ಹೆಚ್ಚು ತಲೆಕೆಡಿಸಿಕೊಂಡಿರಲಿಲ್ಲ. ಇದನ್ನು ಅರಿತಿದ್ದ ಕಂಪನಿ ಸಿದ್ದಾಪುರ ಕೃಷಿ ಇಲಾಖೆಗೆ ವಿವಿಧ ಸಾಮಗ್ರಿ ಪೂರೈಕೆ ಮಾಡಿದ ಬಗ್ಗೆ ನಕಲಿ ದಾಖಲೆ ಸೃಷ್ಠಿಸಿಕೊಂಡಿತ್ತು. ಅಲ್ಲಿಗೆ ಸುಮ್ಮನಾಗದ ಕಂಪನಿಯವರು `ತಾವು ಸಾಮಗ್ರಿ ಪೂರೈಸಿದರೂ ರೈತರು ಹಾಗೂ ಕೃಷಿ ಇಲಾಖೆಯವರು ಹಣ ಪಾವತಿ ಮಾಡಿಲ್ಲ’ ಎಂದು ತೆಲಂಗಾಣದ ಸೂಕ್ಷö್ಮ ಮತ್ತು ಸಣ್ಣ ಉದ್ದಿಮೆ ಮಂಡಳಿಯಲ್ಲಿ ಸರ್ಕಾರದ ವಿರುದ್ಧವೇ ಕೇಸು ದಾಖಲಿಸಿದ್ದರು! ನ್ಯಾಯಾಲಯದ ಪ್ರಕರಣದ ಹಿನ್ನಲೆ ಸಿದ್ದಾಪುರದ ಸಹಾಯಕ ಕೃಷಿ ನಿರ್ದೇಶಕಿ ಸುಮಾ ಎಂ ಎಸ್ ಅವರು ಹಳೆಯ ದಾಖಲೆಗಳ ತಪಾಸಣೆ ಮಾಡಿದರು. ಆಗ, ಸಿದ್ದಾಪುರಕ್ಕೆ ಗೊಬ್ಬರ ಪೂರೈಕೆಯೇ ಆಗದಿರುವುದು ಗಮನಕ್ಕೆ ಬಂದಿತು. ಅಂಕೋಲಾಗೆ ಗೊಬ್ಬರ ಪೂರೈಸಿದ ದಾಖಲೆಯನ್ನು ಮುಂದಿರಿಸಿದ್ದ ಕಂಪನಿ ಅದೇ ದಾಖಲೆ ಆಧರಿಸಿ ಸಿದ್ದಾಪುರಕ್ಕೂ ಗೊಬ್ಬರ ಪೂರೈಸಿದ ಬಗ್ಗೆ ಹೇಳಿತ್ತು. ಗೊಬ್ಬರ ಪೂರೈಕೆ ಆಗದೇ ಇದ್ದರೂ ರೈತರು ಹಾಗೂ ಸರ್ಕಾರ ಎರಡು ಕಡೆಯಿಂದ ಕಂಪನಿಗೆ ಹಣ ಪಾವತಿ ಆಗಿದ್ದರೂ `ಬಿಲ್ ಬಾಕಿ’ ಎಂದು ಕೇಸ್ ಹಾಕಿದನ್ನು ಸುಮಾ ಎಂ ಎಸ್ ಅವರು ಗಮನಿಸಿದರು. ಮೋಸ, ವಂಚನೆ ಮೂಲಕ ಸರ್ಕಾರಿ ಇಲಾಖೆಗೂ ಕೆಟ್ಟ ಹೆಸರು ಬರುವಂತೆ ಮಾಡಿದ ಮುಕುಂದ ಮಹೇಶ್ವರಿ ಕಿಯಾ ಬಯೋಟಿಕ್ ಕಂಪನಿ ವಿರುದ್ಧ ಅವರು ದೂರು ನೀಡಿದರು. ನ್ಯಾಯಾಲಯಕ್ಕೂ ತಪ್ಪು ಮಾಹಿತಿ ನೀಡಿದನ್ನು ಅವರು ವಿವರಿಸಿದರು. ಈ ಎಲ್ಲಾ ವಿಷಯ ಅರಿತ ಪೊಲೀಸರು ಕಂಪನಿ ವಿರುದ್ಧ ಪ್ರಕರಣ ದಾಖಲಿಸಿಕೊಂಡರು. - [ಗಡಿ ಜಗಳ: ಎರಡು ಗುಂಪಿನ ನಡುವೆ ಮಾರಾಮಾರಿ!](https://mobiletime.in/2025/12/border-dispute-a-fight-broke-out-between-two-groups/): ಭೂಮಿ ವಿಷಯವಾಗಿ ಶುರುವಾದ ಜಗಳ ಕತ್ತಿ-ಚಪ್ಪಲಿ ಬೀಸುವವರೆಗೆ ಹೋಗಿದ್ದು, ಒಂದೇ ಕುಟುಂಬದ ಹಲವರು ಸೇರಿ ಹೊಡೆದಾಟ ನಡೆಸಿದ್ದಾರೆ. ಈ ಹೊಡೆದಾಟದಲ್ಲಿ ಎರಡು ಗುಂಪಿನವರ ಸಂಬoಧಿಕರು ಭಾಗಿಯಾಗಿದ್ದು, ಗಲಾಟೆ ದೊಡ್ಡದಾಗಿದೆ. ಅಂಕೋಲಾ ಬೆಳಂಬಾರದ ದಿಲೀಪ ಪುರ್ಸು ಖಾರ್ವಿ ಹಾಗೂ ಗಣಪತಿ ನಾಗಪ್ಪ ಖಾರ್ವಿ ನಡುವೆ ಈ ಯುದ್ಧ ಶುರುವಾಗಿದ್ದು, ಅವರವರ ಸಂಬAಧಿಕರು ಸಹ ಹೊಡೆದಾಟದಲ್ಲಿ ಭಾಗಿಯಾಗಿ ಏಟು ತಿಂದಿದ್ದಾರೆ. ಅಂಗಳದಲ್ಲಿ ಎರಡು ಬುಟ್ಟಿ ರೇತಿ ದಾಸ್ತಾನು ಮಾಡಿದಕ್ಕಾಗಿ ಅಶೋಕ ಖಾರ್ವಿ ಹಾಗೂ ಗಣಪತಿ ಖಾರ್ವಿ ನಡುವೆ ಜಗಳ ಶುರುವಾಗಿದ್ದು, ನಂತರ ಹಳೆಯ ವಿಷಯಗಳೆಲ್ಲವೂ ಹೊರ ಬಂದು ಹೊಡೆದಾಟ ನಡೆದಿದೆ. ಗಣಪತಿ ನಾಗಪ್ಪ ಖಾರ್ವಿ ಅವರ ಮನೆ ಅಂಗಳದಲ್ಲಿ ದಿಲೀಪ ಪುರ್ಸು ಖಾರ್ವಿ ಅವರು ಎರಡು ಬುಟ್ಟಿ ರೇತಿ ಹಾಕಿದ್ದರು. ಇದನ್ನು ಸಹಿಸದ ಗಣಪತಿ ಖಾರ್ವಿ ಅವರು `ಆ ರೇತಿ ಇಲ್ಲಿಂದ ತೆಗಿ’ ಎಂದರು. `ಇದು ಸಾಮೂಹಿಕ ಆಸ್ತಿ. ನಮಗೂ ಹಕ್ಕಿದೆ’ ಎಂದು ದಿಲೀಪ ಖಾರ್ವಿ ಹೇಳಿದರು. ಆಗ, ಗಣಪತಿ ಖಾರ್ವಿ ಅವರು ತಮ್ಮ ದಿಲೀಪ ಖಾರ್ವಿ ಅವರ ಕೊರಳಪಟ್ಟಿ ಹಿಡಿದರು. ಇದನ್ನು ನೋಡಿದ ಬೆಳಂಬಾರದ ಅಶೋಕ ಪುರ್ಸು ಖಾರ್ವಿ ಆ ಗಲಾಟೆ ತಪ್ಪಿಸಲು ಮುಂದಾದರು. ಆಗ, ಗಣಪತಿ ಖಾರ್ವಿ ಅವರು ಅಶೋಕ ಖಾರ್ವಿ ಅವರನ್ನು ತಳ್ಳಿದರು. ಗಣಪತಿ ಖಾರ್ವಿ ಅವರು ಮನೆಯೊಳಗೆ ಹೋಗಿ ಪತ್ನಿ ವಾಸಂತಿ ಖಾರ್ವಿ ಅವರನ್ನು ಕರೆದು ತಂದರು. ಬರುವಾಗ ಕೈಯಲ್ಲಿ ಕತ್ತಿ ಹಿಡಿದು ಬಂದಿದ್ದ ಗಣಪತಿ ಖಾರ್ವಿ ಅವರು ಅದನ್ನು ಎದುರುದಾರರ ಕಡೆ ಬೀಸಿದರು. ಅಶೋಕ ಖಾರ್ವಿ ಕತ್ತಿ ಏಟಿನಿಂದ ತಪ್ಪಿಸಿಕೊಂಡರು. ಈ ವೇಳೆ ಅಶೋಕ ಖಾರ್ವಿ ಅವರ ಅಣ್ಣ ತುಕಾರಾಮ ಖಾರ್ವಿ, ಹೆಂಡತಿ ಗೌರಿ ಖಾರ್ವಿ ಹಾಗೂ ಮಕ್ಕಳಾದ ಸುಮಂತ ಖಾರ್ವಿ, ಹೇಮಂತ ಖಾರ್ವಿ ಅಲ್ಲಿಗೆ ಬಂದರು. ಅವರೆಲ್ಲರೂ ಸೇರಿ ಈ ಜಗಳ ಬಿಡಿಸುವ ಪ್ರಯತ್ನ ಮಾಡಿದರು. ಜಗಳ ಬಿಡಿಸಲು ಬಂದವರ ಮೇಲೆಯೂ ಗಣಪತಿ ಖಾರ್ವಿ ಕತ್ತಿ ಬೀಸಿದರು. ಆ ಕತ್ತಿ ಬೇರೆ ಕಡೆ ತಾಗಿದ್ದರಿಂದ ಅವರೆಲ್ಲರು ಬಚಾವಾದರು. ಆಗ, ವಸಂತಿ ಖಾರ್ವಿ ಅವರು ತಮ್ಮ ಮಾವ ನಾಗಪ್ಪ ಕೃಷ್ಣ ಖಾರ್ವಿ, ಮೈದುನ ಮಂಜುನಾಥ ನಾಗಪ್ಪ ಖಾರ್ವಿ, ಸುರೇಶ ನಾಗಪ್ಪ ಖಾರ್ವಿ ಹಾಗೂ ಸಂತೋಷ ಉರಿಯಾ ಖಾರ್ವಿ ಅವರನ್ನು ಸ್ಥಳಕ್ಕೆ ಕರೆಯಿಸಿದರು. ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದಿದ್ದು, ದೊಣ್ಣೆ-ಕಲ್ಲುಗಳ ದಾಳಿ ಶುರುವಾಯಿತು. ಈ ವೇಳೆ ವಾಸಂತಿ ಖಾರ್ವಿ ಅವರು ಎಸೆದ ಚಪ್ಪಲಿ ಅಶೋಕ ಖಾರ್ವಿ ಅವರಿಗೆ ತಾಗಿತು. ಗಣಪತಿ ಖಾರ್ವಿ ಅವರು ಅಶೋಕ ಖಾರ್ವಿ ಅವರಿಗೆ ಹೊಡೆದು ನೋವು ಮಾಡಿದರು. ಈ ವೇಳೆ ವಾಸಂತಿ ಖಾರ್ವಿ ಅವರ ಅವರ ಮಾವ ನಾಗಪ್ಪ ಖಾರ್ವಿ, ಪ್ರಭಾಕರ ಮೋನು ಖಾರ್ವಿ ಸೇರಿ ತುಕಾರಾಮ ಖಾರ್ವಿ ಅವರಿಗೆ ಹೊಡೆಯಲು ಶುರು ಮಾಡಿದರು. ಮಂಜುನಾಥ ಖಾರ್ವಿ, ಸಂತೋಷ ಖಾರ್ವಿ, ವಾಸಂತಿ ಖಾರ್ವಿ, ಸೀತಾಬಾಯಿ ಖಾರ್ವಿ ಸೇರಿ ಗೌರಿ ಖಾರ್ವಿ, ಸುಮಂತ ಖಾರ್ವಿ ಹಾಗೂ ಹೇಮಂತ ಖಾರ್ವಿ ಅವರ ಮೇಲೆ ದಾಳಿ ಮಾಡಿದರು. ಸುರೇಶ ನಾಗಪ್ಪ ಖಾರ್ವಿ ಅವರು ದಿಲೀಪ ಖಾರ್ವಿ ಅವರ ಮೇಲೆ ಹಲ್ಲೆ ಮಾಡಿದರು. ಮಾರ್ಚ 30ರಂದು ಈ ಘಟನೆ ನಡೆದಿದ್ದು, ಈ ಎಲ್ಲಾ ವಿಷಯದ ಬಗ್ಗೆ ಅಶೋಕ ಖಾರ್ವಿ ಅವರು ನ್ಯಾಯಾಲಯದ ಮೆಟ್ಟಿಲೇರಿದರು. ನ್ಯಾಯಾಲಯದ ಸೂಚನೆ ಮೇರೆಗೆ ಅಂಕೋಲಾ ಪೊಲೀಸರು ಪ್ರಕರಣ ದಾಖಲಿಸಿದರು. - [ಕನಸಿನ ರೈಲು ಯೋಜನೆಗೆ ಸಾವಿರ ಕೋಟಿ ಖರ್ಚು!](https://mobiletime.in/2025/12/a-thousand-crores-spent-on-the-dream-train-project/): `ಶಿರಸಿ-ತಾಳಗುಪ್ಪ ಹುಬ್ಬಳ್ಳಿ ರೈಲು ಮಾರ್ಗ, ಜಿಲ್ಲೆಯ ಭಟ್ಕಳ, ಮುರ್ಡೇಶ್ವರ, ಗೋಕರ್ಣ ಮತ್ತು ಹೊನ್ನಾವರ ರೈಲ್ವೆ ನಿಲ್ದಾಣ ಆಧುನೀಕರಣ ಹಾಗೂ ಹುಬ್ಬಳ್ಳಿ-ಅಂಕೋಲಾ ರೈಲ್ವೆ ಸೇರಿ ಉತ್ತರ ಕನ್ನಡ ಜಿಲ್ಲೆಯ ರೈಲ್ವೆ ಯೋಜನೆಗಳ ರೂಪುರೇಷೆಗಳು ಅಚ್ಚುಕಟ್ಟಾಗಿ ನಡೆಯುತ್ತಿದೆ’ ಎಂದು ಕೇಂದ್ರ ರೈಲ್ವೆ ಖಾತೆಯ ರಾಜ್ಯ ಸಚಿವ ವಿ ಸೋಮಣ್ಣ ಅವರು ಹೇಳಿದ್ದಾರೆ. ಕಾರವಾರ ರೈಲು ನಿಲ್ದಾಣದಲ್ಲಿ ಅವರು ಮಾಧ್ಯಮದವರ ಜೊತೆ ಮಾತನಾಡಿದ್ದು, `ಮಲೆನಾಡು ಮತ್ತು ಬಯಲುಸೀಮೆಯನ್ನು ಜೋಡಿಸುವ ಉದ್ದೇಶದಿಂದ ತಾಳಗುಪ್ಪ-ಶಿರಸಿ-ಹುಬ್ಬಳಿ 158 ಕಿಮೀ ಉದ್ದದ ಹೊಸ ಮಾರ್ಗವು ರೈಲ್ವೆ ಮಂಡಳಿಯಲ್ಲಿ ಅನುಮೋದನೆಯಾಗಿದೆ’ ಎಂಬ ಮಾಹಿತಿ ನೀಡಿದರು. `ಈ ಯೋಜನೆ ಸಚಿವ ಸಂಪುಟದಲ್ಲಿ ಅನುಮೋದನೆಯಾಗಬೇಕಿದೆ. ಈ ಯೋಜನೆ ಮತ್ತು ತಾಳಗುಪ್ಪ ಹೊನ್ನಾವರ ಹೊಸ ಮಾರ್ಗಕ್ಕೆ ಒಟ್ಟು ಸುಮಾರು 21 ಸಾವಿರ ಕೋಟಿ ಖರ್ಚು ಮಾಡಲಾಗುತ್ತಿದೆ. ಉತ್ತರ ಕನ್ನಡ ಜಿಲ್ಲೆಯ ಭಟ್ಕಳ, ಮುರ್ಡೇಶ್ವರ, ಗೋಕರ್ಣ ಮತ್ತು ಹೊನ್ನಾವರ ರೈಲ್ವೆ ನಿಲ್ದಾಣಗಳ ಆಧುನೀಕರಣ ಕಾಮಗಾರಿ ಪ್ರಾರಂಭವಾಗಿದೆ’ ಎಂದವರು ತಿಳಿಸಿದರು. `ಉತ್ತರ ಕನ್ನಡ ಜಿಲ್ಲೆಯಲ್ಲಿ ಹುಬ್ಬಳ್ಳಿ- ಅಂಕೋಲಾ ನಡುವಿನ 164 ಕಿ.ಮೀ ಉದ್ದದ ನೂತನ ಯೋಜನೆಯನ್ನು 16,500 ಕೋಟಿ ವೆಚ್ಚದಲ್ಲಿ ರೈಲ್ವೆ ಇಲಾಖೆಯಿಂದ ಮಾಡಲಾಗುತ್ತಿದೆ. ಈಗಾಗಲೇ ಸರ್ವೇ, ಡಿಪಿಆರ್, ಫಾರೆಸಟ್ ಕ್ಲಿಯರೆನ್ಸ್ ಕೂಡ ಮುಕ್ತಾಯಗೊಂಡಿದ್ದು, ವನ್ಯಜೀವಿ ಕ್ಲಿಯರೆನ್ಸ್ ಬಾಕಿ ಇದೆ. ಇನ್ನು 5-6 ತಿಂಗಳಿನೊಳಗೆ ಇದಕ್ಕೆ ಪರಿಹಾರ ಸಿಗುವ ನಿರೀಕ್ಷೆ ಇದೆ. ಈ ಯೋಜನೆಯಿಂದ ಪಶ್ಚಿಮ ಘಟ್ಟಗಳಿಗೆ ಯಾವುದೇ ರೀತಿಯಲ್ಲಿ ಅನಾನುಕುಲವಾಗುವುದಿಲ್ಲ’ ಎಂದು ಹೇಳಿದರು. `1997-98 ರಲ್ಲಿ ಆರಂಭಿಸಿದ ಹುಬ್ಬಳ್ಳಿ-ಅಂಕೋಲಾ ರೈಲ್ವೆ ಯೋಜನೆ ಕಲಘಟಗಿವರೆಗೆ ಮಾಡಲಾಗಿದ್ದು, ಕೆಲವು ಕಾರಣಗಳಿಂದ ನಿಂತುಹೊಗಿತ್ತು. ಈ ಯೋಜನೆಗೆ 2530 ಎಕರೆ ಜಾಗ ಬೇಕಿದೆ’ ಎಂದವರು ವಿವರಿಸಿದರು. `ಕೊಂಕಣ ರೈಲ್ವೆಯ ವಿಲೀನ ಪ್ರಕ್ರಿಯೆ ಚರ್ಚೆಯ ಹಂತದಲ್ಲಿದ್ದು, ಅವುಗಳ ಆಗುಹೋಗಗಳ ಬಗ್ಗೆ ಚರ್ಚಿಸಲಾಗುತ್ತಿದೆ. ರೈಲ್ವೆಯ ಬಹುತೇಕ ರೈಲು ನಿಲ್ದಾಣಗಳು ಆಧುನೀಕರಣಗೊಳ್ಳುತ್ತಿದ್ದು, ಕೊಂಕಣ ರೈಲ್ವೆ ನಿಲ್ದಾಣಗಳನ್ನು ಆಧುನೀಕರಣ ಮಾಡಲು ಕ್ರಮಕೈಗೊಳ್ಳಲಾಗಿದೆ. ದಾಂಡೇಲಿಯ ಅಂಬೇವಾಡಿಗೆ ಮುಂದಿನ ತಿಂಗಳನಿAದ ರೈಲ್ವೆ ಸಂಚಾರ ಪ್ರಾರಂಭಿಸಲಾಗುವುದು’ ಎಂದರು. ಈ ಸಂದರ್ಭದಲ್ಲಿ ಪ್ರಾದೇಶಿಕ ರೈಲ್ವೆ ಮೆನೇಜರ್ ಆಶಾ ಶೆಟ್ಟಿ, ಮುಖ್ಯ ಇಂಜಿನಿಯರ್ ಪ್ರಕಾಶ್, ಹಿರಿಯ ಪ್ರಾದೇಶಿಕ ಸಂಚಾರ ವ್ಯವಸ್ಥಾಪಕ ದಿಲೀಪ್ ಡಿ ಭಟ್, ಹಿರಿಯ ಇಂಜಿನಿಯರ್ ಉದಯ ಭಾಸ್ಕರ್, ಮುಖ್ಯ ಇಂಜಿನಿಯರ್ ವಿಜಯ್ ಕುಮಾರ್, ಸಾರ್ವಜನಿಕ ಸಂಪರ್ಕಾಧಿಕಾರಿ ಸುಧಾ ಕೃಷ್ಣಮೂರ್ತಿ, ಹಿರಿಯ ಪ್ರಾದೇಶಿಕ ಆರ್ಥಿಕ ಸಲಹೆಗಾರ ಪ್ರದೀಪ್ ಬಾಳಿಗ ಮತ್ತಿತರರು ಇದ್ದರು.   - [ಆತ ಕಳ್ಳನಾದರೂ ಪ್ರಾಮಾಣಿಕ!](https://mobiletime.in/2025/12/he-is-a-thief-but-honest/): ರಾಘವೇಂದ್ರ ಭಟ್ಟ ಅವರ ಸ್ಕೂಟರ್’ನ್ನು ತಾನೇ ಕದ್ದಿರುವುದಾಗಿ ಪ್ರಕಾಶ ಸಿದ್ದಿ ಅವರು ಒಪ್ಪಿಕೊಂಡಿದ್ದಾರೆ. ಸಹಚರನ ಜೊತೆ ಸೇರಿ ಈ ಕಳ್ಳತನ ಮಾಡಿರುವುದಾಗಿ ಅವರು ಪೊಲೀಸರ ಮುಂದೆ ಬಾಯ್ಬಿಟ್ಟಿದ್ದಾರೆ. ಯಲ್ಲಾಪುರದ ಅಡಿಕೆ ವ್ಯಾಪಾರಿ ರಾಘವೇಂದ್ರ ಮಹಾಬಲೇಶ್ವರ ಭಟ್ಟ ಅವರ ತಮ್ಮ ಮನೆ ಬಳಿ ಸ್ಕೂಟರ್ ನಿಲ್ಲಿಸಿದ್ದರು. ಕಾಳಮ್ಮ ನಗರದ ಎಂ ಎಚ್ ನಾಯ್ಕ ಕಪೌಂಡ್ ಬಳಿ ಅವರು ಸ್ಕೂಟರ್ ನಿಲ್ಲಿಸುವುದನ್ನು ಹಳಿಯಾಳ ಕ್ರಾಸಿನ ಪ್ರಕಾಶ ಇಲಿಯಾಸ್ ಸಿದ್ದಿ ಅದನ್ನು ಗಮನಿಸಿದ್ದರು. ಅಕ್ಟೊಬರ್ 15ರ ರಾತ್ರಿ ಕಪ್ಪು ಬಣ್ಣದ ಜುಪಿಟರ್ ಸ್ಕೂಟರ್’ನ್ನು ಅವರು ಅಪಹರಿಸಿದ್ದರು. ಸ್ಕೂಟರ್ ಕಾಣೆಯಾದ ಬಗ್ಗೆ ರಾಘವೇಂದ್ರ ಭಟ್ಟ ಅವರು ಪೊಲೀಸರಲ್ಲಿ ದೂರಿದ್ದರು. ಕಳ್ಳತನದ ಪ್ರಕರಣವನ್ನು ದಾಖಲಿಸಿದ್ದರು. ಪೊಲೀಸರು ಆ ಸ್ಕೂಟರ್ ಹುಡುಕಾಟ ಶುರು ಮಾಡಿದ್ದು, ಹಳಿಯಾಳ ಕ್ರಾಸಿನ ಪ್ರಕಾಶ ಸಿದ್ದಿ ಸ್ಕೂಟರ್ ಕದ್ದಿದನ್ನು ಪತ್ತೆ ಮಾಡಿದರು. ವಿಚಾರಣೆ ನಡೆಸಿದಾಗ ಪ್ರಕಾಶ ಸಿದ್ದಿ ತಮ್ಮ ತಪ್ಪು ಒಪ್ಪಿಕೊಂಡರು. ಕದ್ದ ಸ್ಕೂಟರನ್ನು ಪೊಲೀಸರಿಗೆ ಒಪ್ಪಿಸಿದರು. - [ಕಾಗೇರಿ: ಮದುವೆ ಕಾರಣ ರಸ್ತೆ ದುರಸ್ತಿ!](https://mobiletime.in/2025/12/kageri-road-repair-due-to-marriage/): ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಆಗಮನದ ನಿರೀಕ್ಷೆ ಹಿನ್ನಲೆ ಶಿರಸಿಯ ರಸ್ತೆಗಳಿಗೆ ದಿಢೀರ್ ದುರಸ್ಥಿ ಭಾಗ್ಯ ಸಿಕ್ಕಿದೆ. ಕುಮಾರಸ್ವಾಮಿ ಅವರು ಪೂರ್ವನಿಯೋಜಿತ ಕಾರ್ಯಕ್ರಮದಲ್ಲಿ ಬದಲಾವಣೆಯಾದ ಕಾರಣ ಅವರು ಶಿರಸಿ ಪ್ರಯಾಣ ಮೊಟಕುಗೊಳಿಸಿದ್ದು, ಅವರು ಬಾರದಿದ್ದರೂ ಇಲ್ಲಿನ ರಸ್ತೆ ದುರಸ್ಥಿ ಸಾರ್ವಜನಿಕರಿಗೆ ಸಹಾಯ ಮಾಡಿದೆ! ಉತ್ತರ ಕನ್ನಡ ಸಂಸದ ವಿಶ್ವೇಶ್ವರ ಹೆಗಡೆ ಅವರ ಪುತ್ರಿ ರಾಜಲಕ್ಷಿö್ಮà ಅವರು ಬಾಲಚಂದ್ರ ಅವರನ್ನು ಮದುವೆ ಆಗಿದ್ದಾರೆ. ಈ ಹಿನ್ನಲೆ ಕಾಗೇರಿ ಕುಟುಂಬದವರು ಶನಿವಾರ ಸತ್ಕಾರ ಸಮಾರಂಭ ಆಯೋಜಿಸಿದ್ದರು. ಈ ಸಮಾರಂಭಕ್ಕೆ ಕೇಂದ್ರ ಎಚ್ ಡಿ ಕುಮಾರಸ್ವಾಮಿ ಹಾಗೂ ವಿ ಸೋಮಣ್ಣ ಆಗಮಿಸುವ ನಿರೀಕ್ಷೆ ಹಿನ್ನಲೆ ಅವರ ಆಗಮನದ ಅನುಕೂಲಕ್ಕಾಗಿ ರಸ್ತೆಗಳನ್ನು ಸರ್ಕಾರ ಸರಿಪಡಿಸಿತು. ಆದರೆ, ಕುಮಾರಸ್ವಾಮಿ ಅವರು ಶನಿವಾರ ಶಿರಸಿಗೆ ಕಾಲಿಡಲಿಲ್ಲ. ವಿ ಸೋಮಣ್ಣ ಅವರು ಮದುವೆ ಕಾರ್ಯಕ್ರಮವನ್ನು ಮರೆಯಲಿಲ್ಲ. ಇನ್ನೂ ಶಿರಸಿಯ ಸಾಕಷ್ಟು ರಸ್ತೆಗಳು ಗುಂಡಿಗಳಿAದ ಕೂಡಿದ್ದವು. ಅನೇಕರು ಈ ಬಗ್ಗೆ ವ್ಯಾಪಕ ಆಕ್ರೋಶವ್ಯಕ್ತಪಡಿಸಿದ್ದರು. ರಸ್ತೆ ಗುಂಡಿ ಮುಚ್ಚುವಂತೆ ಪ್ರತಿಭಟನೆಗಳು ನಡೆದಿದ್ದವು. ರಸ್ತೆ ದೂಳಿನಿಂದ ಜನರ ಆರೋಗ್ಯ ಸಮಸ್ಯೆ ಹೆಚ್ಚಾದ ಬಗ್ಗೆ ವಕೀಲರೊಬ್ಬರು ನ್ಯಾಯಾಲಯದ ಮೊರೆ ಹೋಗಿದ್ದರು. ಅದಾಗಿಯೂ ಸರ್ಕಾರ, ಸರಿಯಾದ ರಸ್ತೆ ನಿರ್ಮಿಸಲು ಆಸಕ್ತಿವಹಿಸಿರಲಿಲ್ಲ. ಶಿರಸಿಯ ಅಶ್ವಿನಿ ಸರ್ಕಲ್ ಹಾಗೂ ಇನ್ನಿತರ ಭಾಗದ ರಸ್ತೆ ಸಮಸ್ಯೆಯ ಬಗ್ಗೆ ಕಳೆದ ಮೂರು ತಿಂಗಳಿನಿAದ ಭೀಮಗರ್ಜನೆ ಸಂಘಟನೆಯ ಜಿಲ್ಲಾ ಅಧ್ಯಕ್ಷ ಅರ್ಜುನ್ ಮಿಂಟಿ ತಂಡದವರು ಹೋರಾಟ ನಡೆಸಿದ್ದರು. ರಸ್ತೆ ಗುಂಡಿಗಳಿAದ ಜನರಿಗೆ ಆಗುವ ಸಮಸ್ಯೆ ಬಗ್ಗೆ ಅವರು ನಿರಂತರವಾಗಿ ಧ್ವನಿ ಎತ್ತುತ್ತಿದ್ದರು. ಮೂರು ತಿಂಗಳ ಪ್ರತಿಭಟನೆ, ಹೋರಾಟಕ್ಕೂ ಮಣಿಯದ ಸರ್ಕಾರ ಇದೀಗ ಮೂರೇ ದಿನದಲ್ಲಿ ರಸ್ತೆ ಗುಂಡಿಗಳನ್ನು ಮುಚ್ಚಿದೆ. ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಸ್ಥಳದಲ್ಲಿ ನಿಂತು ರಸ್ತೆ ಗುಂಡಿಗೆ ಡಾಂಬರ್ ಹಾಕಿಸುವ ಕೆಲಸ ಮಾಡಿದ್ದಾರೆ. `ಶಿರಸಿಗೆ ಆಗಾಗ ಗಣ್ಯರು ಬರುತ್ತಿರಬೇಕು. ಆಗ ಮಾತ್ರ ಇಲ್ಲಿನ ರಸ್ತೆಗಳು ಸುಸ್ಥಿತಿಯಲ್ಲಿರಲು ಸಾಧ್ಯ’ ಎಂದು ಅಲ್ಲಿನವರು ಹೇಳಿಕೊಂಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಸಹ ಇದೇ ಬಗೆಯ ಚರ್ಚೆ ಶುರುವಾಗಿದೆ. - [ಸರ್ವೇಗೆ ಬಂದವರಿಗೆ ಶೇಮ್ ಶೇಮ್!](https://mobiletime.in/2025/12/shame-on-those-who-came-for-the-survey/): ಬೇಡ್ತಿ-ಅಘನಾಶಿನಿ ನದಿ ತಿರುವು ಯೋಜನೆಗೆ ಕದ್ದು ಮುಚ್ಚಿ ಪ್ರಯತ್ನ ಮುಂದುವರೆದಿದೆ. ಸಾರ್ವಜನಿಕರ ವಿರೋಧದ ನಡುವೆಯೂ ಗುರುತು-ಪರಿಚಯವಿಲ್ಲದ ಜನ ಈ ಯೋಜನೆಗಾಗಿ ಸರ್ವೇ ಕೆಲಸ ಶುರು ಮಾಡಿದ್ದಾರೆ. ಶಿರಸಿ ಹಾಗೂ ಸುತ್ತಲಿನ ಪ್ರದೇಶದಲ್ಲಿ ಕಳೆದ ಕೆಲ ದಿನಗಳಿಂದ ತೆಲಗು ಮಾತನಾಡುವ ಜನ ತಿರುಗಾಡುತ್ತಿದ್ದಾರೆ. ಭೂಮಿ ಸರ್ವೇ ಮಾಡುವ ಬಗ್ಗೆ ಅವರು ಮಾತನಾಡುತ್ತಿದ್ದಾರೆ. ಜನ ಪ್ರಶ್ನಿಸಿದರೂ ಅವರು ಸರಿಯಾಗಿ ಸ್ಪಂದಿಸುತ್ತಿಲ್ಲ. ಗುರುತು-ಪರಿಚಯವನ್ನು ಸಹ ಬಿಟ್ಟು ಕೊಡುತ್ತಿಲ್ಲ. ಕದ್ದು-ಮುಚ್ಚಿ ಸರ್ವೇ ಕೆಲಸಕ್ಕೆ ಬಂದಿದ್ದವರಿಗೆ ಶನಿವಾರ ಜನ ತರಾಠೆಗೆ ತೆಗೆದುಕೊಂಡಿದ್ದಾರೆ. ಮೊನ್ನೆ ಸರ್ವೇ ನಕಾಶೆಯೊಂದನ್ನು ಹಿಡಿದ ಕೆಲವರು ಹೊಳೆ ತೀರ ಪ್ರದೇಶ ಸುತ್ತಾಟ ನಡೆಸಿದ್ದರು. ಸ್ಥಳೀಯರು ವಿಚಾರಿಸಿದಾಗ ಅವರು `ರಸ್ತೆ ಸರ್ವೇ ಮಾಡಲು ಬಂದಿದ್ದೇವೆ’ ಎಂದು ಉತ್ತರಿಸಿದ್ದರು. `ರಸ್ತೆ ಸರ್ವೇ ಮಾಡಲು ಬಂದವರು ಹೊಳೆ ಕಡೆ ಏಕೆ ಹೋದರು?’ ಎಂದು ಜನ ಪ್ರಶ್ನಿಸಿದಾಗ ಅದಕ್ಕೆ ಉತ್ತರ ಸಿಗಲಿಲ್ಲ. `ಸರಿಯಾದ ಮಾಹಿತಿ ಕೊಡಿ’ ಎಂದು ಅಲ್ಲಿನವರು ಜೋರಾದಾಗ ಸರ್ವೇಗೆ ಬಂದವರು ಜಾರಿಕೊಂಡರು. ಶನಿವಾರ ಭೂ ಗರ್ಭ ಇಲಾಖೆಯ ಗಣಿಗಾರಿಕೆ ವಿಭಾಗ ಎನ್ನುವ ಹೆಸರಿನಲ್ಲಿ ಶಿರಸಿಯ ಮುರೇಗಾರು ರಸ್ತೆಯಲ್ಲಿ ಅಪರಿಚಿತರಿಂದ ಮತ್ತೆ ಸರ್ವೇ ಕಾರ್ಯ ಶುರುವಾಯಿತು. ಈ ಸುದ್ದಿ ವ್ಯಾಪಕ ಪ್ರಮಾಣದಲ್ಲಿ ಹಬ್ಬಿದ್ದು, ನೂರಾರು ಜನ ಸ್ಥಳಕ್ಕೆ ಜಮಾಯಿಸಿದರು. ಸ್ಥಳೀಯ ಜನಪ್ರತಿನಿಧಿಗಳು ಅಲ್ಲಿಗೆ ಧಾವಿಸಿದರು. ಅವರೆಲ್ಲರೂ ಸೇರಿ ಹಲವು ಪ್ರಶ್ನೆ ಕೇಳಿದರು. ಆದರೆ, ಸಮೀಕ್ಷೆಗೆ ಬಂದವರು ಸರಿಯಾದ ಮಾಹಿತಿ ನೀಡುವ ಹಾಗೇ ಕಾಣಲಿಲ್ಲ. ಮುರೇಗಾರ್ ಹಾಗೂ ಸಾಲ್ಕಣಿ ಭಾಗದ ಸ್ಥಳೀಯ ಆಡಳಿತಕ್ಕೆ ಸಹ ಈ ಸಮೀಕ್ಷಾ ಕಾರ್ಯದ ಬಗ್ಗೆ ಯಾವುದೇ ಮಾಹಿತಿ ಇರಲಿಲ್ಲ. ಈ ಎಲ್ಲಾ ಹಿನ್ನಲೆ ಆ ಊರಿನವರೆಲ್ಲರೂ ಸೇರಿ ಸರ್ವೇ ಕೆಲಸ ನಿಲ್ಲಿಸುವಂತೆ ತಾಕೀತು ಮಾಡಿದರು. ಜನರ ಒಗ್ಗಟ್ಟು ನೋಡಿದ ಸರ್ವೇ ಸಿಬ್ಬಂದಿ ಅಲ್ಲಿಂದ ವಾಪಸ್ಸು ಹೋದರು. ಸದ್ಯ ಊರಿನ ಜನ ಶಾಂತಿಯುತವಾಗಿಯೇ ಅವರನ್ನು ಅಲ್ಲಿಂದ ಕಳುಹಿಸಿದ್ದು, ಯಾವುದೇ ಕಾರ್ಯ ಮಾಡುವ ಮುನ್ನ ಅಧಿಕೃತ ಮಾಹಿತಿ ನೀಡುವಂತೆ ಒತ್ತಾಯಿಸಿದರು. ಜೊತೆಗೆ `ಅವೈಜ್ಞಾನಿಕ ಯೋಜನೆಗಳನ್ನು ಅನುಷ್ಠಾನಕ್ಕೆ ಬಿಡುವುದಿಲ್ಲ’ ಎಂದು ವಿವರಿಸಿದರು. - [ಈ ಅಧಿವೇಶನದಲ್ಲಾದರೂ ಅತಿಕ್ರಮಣದಾರರ ಬಗ್ಗೆ ಚಿಂತಿಸಿ!](https://mobiletime.in/2025/12/worry-about-trespassers-at-least-during-this-session/): ಭೂಮಿ ಹಕ್ಕಿಗಾಗಿ ಹೋರಾಟ ನಡೆಸಿರುವ ಅರಣ್ಯ ಅತಿಕ್ರಮಣದಾರರು `ಚಳಿಗಾಲದ ಅಧಿವೇಶನದಲ್ಲಿ ಅರಣ್ಯವಾಸಿಗಳ ಸಮಸ್ಯೆ ಬಗ್ಗೆ ಚರ್ಚಿಸಿ’ ಎಂದು ಆಗ್ರಹಿಸಿದ್ದಾರೆ. ಶನಿವಾರ ಜಿಲ್ಲಾಕೇಂದ್ರ ಕಾರವಾರದಲ್ಲಿ ಸಾವಿರಾರು ಜನ ಈ ಬಗ್ಗೆ ಹೋರಾಟ ನಡೆಸಿ, ಸರ್ಕಾರಕ್ಕೆ ತಮ್ಮ ಬೇಡಿಕೆ ಸಲ್ಲಿಸಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ 12 ತಾಲೂಕಿನ ಅರಣ್ಯವಾಸಿಗಳು ಶನಿವಾರ ಕಾರವಾರಕ್ಕೆ ಬಂದಿದ್ದು, ತಮ್ಮ ಆತಂಕದ ಜೊತೆ ಅಹವಾಲು ಸಲ್ಲಿಸಿದರು. ಅರಣ್ಯವಾಸಿಗಳ ಕಲಾ ತಂಡದವರು ವಿವಿಧ ಬೀದಿಗಳಲ್ಲಿ ಸಂಚರಿಸಿ ಜಾಗೃತಿ ಜಾಥಾ ನಡೆಸಿದರು. `ಅರಣ್ಯ ಹಕ್ಕು ಕಾಯಿದೆ, ನ್ಯಾಯಾಲಯದ ತೀರ್ಪು ಮತ್ತು ಕೇಂದ್ರ ಸರ್ಕಾರದ ಆದೇಶಕ್ಕೆ ವ್ಯತಿರಿಕ್ತವಾಗಿ ಉತ್ತರ ಕನ್ನಡ ಜಿಲ್ಲೆಯಲ್ಲಿ 73 ಸಾವಿರ ಅರಣ್ಯ ಹಕ್ಕು ಅರ್ಜಿಗಳು ತಿರಸ್ಕರಿಸಿರುವ ಹಿನ್ನಲೆ ಅವರೆಲ್ಲರೂ ಜಿಲ್ಲಾ ಅರಣ್ಯ ಭೂಮಿ ಹಕ್ಕು ಅಧ್ಯಕ್ಷರೂ ಆಗಿರುವ ಜಿಲ್ಲಾಧಿಕಾರಿಗಳಿಗೆ ಆಕ್ಷೇಪ ಪತ್ರ ಸಲ್ಲಿಸಿದರು. ಇದಕ್ಕೂ ಮುನ್ನ ಹೋರಾಟದ ಭಾಗವಾಗಿ ಮೆರವಣಿಗೆ ನಡೆದಿದ್ದು, ಮಾಲಾದೇವಿ ಕ್ರೀಡಾಮಗಣದಲ್ಲಿ ಸಮಾವೇಶ ಜರುಗಿತು. ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ಅವರ ಜೊತೆ ಪ್ರಮುಖರಾದ ಇಬ್ರಾಹೀಂ ಗೌಡಳ್ಳಿ, ರಾಜೇಶ್ ಮಿತ್ರ ನಾಯ್ಕ, ಮಾಬ್ಲೇಶ್ವರ ನಾಯ್ಕ ಬೇಡ್ಕಣಿ, ಮಂಜುನಾಥ ಮರಾಠಿ ನಾಗೂರು, ಮಹೇಶ ನಾಯ್ಕ ಕಾನಕ್ಕಿ, ಶಿವಾನಂದ ಜೋಗಿ ಮುಂಡಗೋಡ, ರಮಾನಂದ ನಾಯಕ ಅಚವೆ, ಭೀಮಸಿ ವಾಲ್ಮೀಕಿ, ಜಗದೀಶ್ ಶಿರಳಗಿ, ಪಾಂಡುರAಗ ನಾಯ್ಕ ಬೆಳಕೆ, ಚಂದ್ರ ಪೂಜಾರಿ ಮಂಚಿಕೇರಿ, ದಿವಾಕರ್ ಮರಾಠಿ ಆನಗೋಡ, ದೇವರಾಜ ಗೊಂಡ, ರಪೀಕ ಗಫಾರ, ಪ್ರಭಾಕರ ವೇಳಿಪ್ ಜೋಯಿಡ, ವಿಜು ಪೀಟರ್ ಪಿಲ್ಲೆ, ಶಾಂತರಾಮ ನಾಯ್ಕ ಅಂಕೋಲ, ರಾಮು ಕಲಕರಡಿ, ಹರಿಹರ ನಾಯ್ಕ ಓಂಕಾರ, ಸೀತಾರಾಮ ಗೌಡ, ಅರವಿಂದ ಗೌಡ, ಉದಯ ಗುನಗ ಅಚವೆ, ಶಂಕರ್ ಕೊಡಿಯಾ, ಮಾದೇವ ನಾಯಕ ಇತರರು ಹೆಜ್ಜೆ ಹಾಕಿದರು. - [ಶರಾವತಿ ಉಳಿಸಿ: ಗ್ರಾ ಪಂ ಅಧ್ಯಕ್ಷರಿಂದ ಮುಖ್ಯಮಂತ್ರಿಗೆ ಪತ್ರ](https://mobiletime.in/2025/12/save-sharavathi-letter-from-gram-panchayat-president-to-chief-minister/): `ಪರಿಸರ ಹಾಗೂ ಜನರ ಜೀವನೋಪಾಯದ ಹಿತದೃಷ್ಠಿಯಿಂದ ಶರಾವತಿ ಪಂಪ್ ಸ್ಟೋರೇಜ್ ಭೂಗತ ಜಲ ವಿದ್ಯುತ್ ಯೋಜನೆ ಕೈ ಬಿಡಬೇಕು’ ಎಂದು ಹೊನ್ನಾವರದ ಮಾಗೋಡ ಗ್ರಾಮ ಪಂಚಾಯಿತಿಯ ಅಧ್ಯಕ್ಷ ಶಿವರಾಮ ಆರ್ ಹೆಗಡೆ ಅವರು ಆಗ್ರಹಿಸಿದ್ದಾರೆ. ಈ ಬಗ್ಗೆ ಅವರು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಗೆ ಪತ್ರ ಬರೆದಿದ್ದಾರೆ. `ತಮ್ಮ ಊರಿನ ಗ್ರಾಮ ಸಭೆಯಲ್ಲಿ ಸಾರ್ವಜನಿಕರು ಉದ್ದೇಶಿತ ಪಂಪ್ಡ ಸ್ಟೋರೇಜ ಭೂಗತ ವಿದ್ಯುತ್ ಯೋಜನೆಯ ಸಾಧಕ ಭಾದಕಗಳ ಕುರಿತು ಚರ್ಚೆ ನಡೆಸಿದ್ದು, ಆ ಯೋಜನೆಯಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ವಿವರಿಸಿದ್ದಾರೆ. ಯೋಜನೆ ಅನುಷ್ಠಾನದಿಂದ ಈ ಪ್ರದೇಶದಲ್ಲಿ ಭೂಕುಸಿತದ ಅಪಾಯಗಳು ಸೇರಿದಂತೆ ಅಪಾರ ಪ್ರಮಾಣದ ಕಾಡು ನಾಶವಾಗಲಿದೆ. ಆದ್ದರಿಂದ ಉದ್ದೇಶಿಸಿತ ಯೋಜನೆಯನ್ನು ಕೈ ಬಿಡಬೇಕು ಎಂದು ಗ್ರಾಮಸಭೆಯಲ್ಲಿ ನಿರ್ಣಯಿಸಲಾಗಿದೆ’ ಎಂಬ ವಿಷಯವನ್ನು ಅವರು ಉಲ್ಲೇಖಿಸಿದ್ದಾರೆ. `ಭೂಮಿ ಅಗೆತ, ಸ್ಪೋಟಕ ಬಳಕೆ, ಕಾಡು ನಾಶದಿಂದ ಪರಿಸರದ ಮೇಲೆ ಗಂಭೀರ ಪರಿಣಾಮ ಬೀರಲಿದೆ. ಪ್ರಕೃತಿ ವಿಕೋಪದಿಂದ ಭವಿಷ್ಯದಲ್ಲಿ ಅಪಾರ ಸಾವು-ನೋವು ಸಂಭವಿಸುವ ಸಾಧ್ಯತೆಯಿರುವ ಬಗ್ಗೆ ವಿವಿಧ ತಜ್ಞರು ಎಚ್ಚರಿಸಿದ್ದಾರೆ. ಇತ್ತೀಚೆಗೆ ಗೇರುಸೊಪ್ಪೆಯಲ್ಲಿ ನಡೆದ ಕಾರ್ಯಾಗಾರದಲ್ಲಿ ಸಹ ಈ ಬಗ್ಗೆ ವಿವರಿಸಲಾಗಿದ್ದು, ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಾಗಿರುವ ಮಾಧವ ಗಾಡ್ಗೀಳ ಹಾಗೂ ಕಸ್ತೂರಿ ರಂಗನ್ ವರದಿಯಲ್ಲಿಯೂ ಇಲ್ಲಿನ ಪರಿಸರ ವಿಷಯಗಳ ಮಹತ್ವದ ಮಾಹಿತಿಯಿದೆ’ ಎಂದವರು ವಿವರಿಸಿದ್ದಾರೆ. `ಮಾಗೋಡ ಗ್ರಾಮ ಪಂಚಾಯತದ ಹೆಚ್ಚಿನ ಪ್ರದೇಶವು ಪಶ್ಚಿಮ ಘಟ್ಟದ ಅಂಚಿನ ತಗ್ಗು ಪ್ರದೇಶದಲ್ಲಿರುವ ಅತ್ಯಂತ ಸೂಕ್ಷ್ಮ ಪರಿಸರದಲ್ಲಿದೆ. ಬಹುಪಾಲು ಅರಣ್ಯವಿರುವ ಹಾಗೂ ಜೀವನೋಪಾಯಕ್ಕೆ ಇಲ್ಲಿನ ಜನರು ಕೃಷಿ, ತೋಟಗಾರಿಕೆ ಅವಲಂಬಿಸಿದ್ದಾರೆ. ತಾಲೂಕಿನ ಜನ ಕುಡಿಯುವ ನೀರಿಗೆ ಶರಾವತಿ ನದಿ ಅವಲಂಬಿಸಿದ್ದಾರೆ. ಈ ನಡುವೆ ಶರಾವತಿ ನದಿನೀರಿಗೆ ಬೇಸಿಗೆಯಲ್ಲಿ ಸಮುದ್ರದ ಉಪ್ಪು ನೀರು ಸೇರುತ್ತಿರುವುದರಿಂದ ಜನರು ಈಗಾಗಲೇ ಅನೇಕ ಸಮಸ್ಯೆ ಎದುರಿಸುತ್ತಿದ್ದಾರೆ. ಇತ್ತೀಚೆಗೆ ಬೇರೆ, ಬೇರೆ ತಾಲೂಕುಗಳಿಗೂ ಕುಡಿಯುವ ನೀರಿನ ಯೋಜನೆಗಳಿಗೆ ಶರಾವತಿಯ ನೀರನ್ನು ಬಳಸಲಾಗುತ್ತಿದೆ. 11 ಏತ ನೀರಾವರಿ ಯೋಜನೆಗಳ ಮೂಲಕ ತಾಲೂಕಿನ ಲಕ್ಷಾಂತರ ಎಕರೆ ಜಮೀನಿಯಲ್ಲಿ ಕೃಷಿ ಮತ್ತು ತೋಟಗಾರಿಕೆ ಬೆಳೆ ಬೆಳೆಸಲಾಗುತ್ತಿದೆ. ಉದ್ದೇಶಿತ ಯೋಜನೆಯ ಅನುಷ್ಠಾನದಿಂದ ಬೇಸಿಗೆಯಲ್ಲಿ ಸಮುದ್ರದ ಉಪ್ಪುನೀರು ನದಿಗೆ ಸೇರಿ ಕುಡಿಯುವ ನೀರಿನ ಅಗತ್ಯ ಸೇವೆಗಳಿಗೆ ಇನ್ನಷ್ಟು ವ್ಯತ್ಯಯ ಆಗಲಿದೆ’ ಎಂಬ ಅಂಶದ ಬಗ್ಗೆಯೂ ಅವರು ಗಮನಸೆಳೆದಿದ್ದಾರೆ. `ಅಳಿವಿನಂಚಿನಲ್ಲಿರುವ ಅಪರೂಪದ ಸಿಂಗಳಿಕ ಅಭಯಾರಣ್ಯದಲ್ಲಿ ಸ್ಪೋಟಕ ಗಳನ್ನು ಬಳಸಿ 7ಕಿಲೋಮೀಟರ್ ಉದ್ದದ ಸುರಂಗ ಕೊರೆಯುವುದು ಜಲಾಶಯಗಳ ಹಿತದೃಷ್ಟಿಯಿಂದಲೂ ತೀರ ಅಪಾಯಕಾರಿಯಾಗಿದೆ. ಈ ಯೋಜನೆಯ ಅನುಷ್ಠಾನದಿಂದ ಹೇರಳ ಅರಣ್ಯನಾಶವಾಗಲಿದ್ದು ಜೀವ ಸಂಕುಲಗಳು, ಸಿಂಗಳಿಕಸಹಿತ ವಿವಿಧ ವನ್ಯಜೀವಿಗಳ, ಅಪರೂಪದ ಸಸ್ಯ ಪ್ರಭೇದಗಳ ವಿನಾಶಕ್ಕೆ ಕಾರಣವಾಗಲಿದೆ’ ಎಂದವರು ಹೇಳಿದ್ದಾರೆ. ಈ ಎಲ್ಲಾ ಹಿನ್ನಲೆ ಗ್ರಾಮ ಸಭೆಯ ನಿರ್ಣಯವನ್ನು ಶಿವರಾಮ ಹೆಗಡೆ ಅವರು ಮುಖ್ಯಮಂತ್ರಿಗಳಿಗೆ ಕಳುಹಿಸಿದ್ದು, ಉದ್ದೇಶಿತ ಪಂಪ್ಡ ಸ್ಟೋರೇಜ ಯೋಜನೆಯನ್ನು ಕೈಬಿಡುವಂತೆ ಆಗ್ರಹಿಸಿದ್ದಾರೆ. - [ಜೈಲು ಹಕ್ಕಿಗಳಿಗೆ ಮಾದಕ ಮೋಹ: ಮಾರಾಮಾರಿ!](https://mobiletime.in/2025/12/jailbirds-love-for-drugs-fight/): ಕಾರವಾರ ಕಾರಾಗೃಹದಲ್ಲಿರುವ ಕೈದಿಗಳಿಗೆ ಮಾದಕ ವಸ್ತು ಸರಬರಾಜು ಆಗದ ಕಾರಣ ಅಲ್ಲಿನವರು ಕಂಗಾಲಾಗಿದ್ದಾರೆ. ಮಾದಕ ವಸ್ತುವಿಗಾಗಿ ಕಾಡಿ-ಬೇಡಿದ ಕೈದಿಗಳು ಕೊನೆಗೆ ತಮ್ಮ ಉಗ್ರ ಸ್ವರೂಪ ಪ್ರದರ್ಶಿಸಿದ್ದಾರೆ. ಗಾಂಜಾ ಕೊಡದ ಕಾರಣ ಜೈಲರ್ ಹಾಗೂ ಪೊಲೀಸರ ಮೇಲೆ ಆಕ್ರಮಣ ಮಾಡಿದ್ದಾರೆ. ಕಾರವಾರ ಕಾರಾಗೃಹಕ್ಕೆ ಈಚೆಗೆ ಪೊಲೀಸರು ಭೇಟಿ ನೀಡಿದ್ದರು. ಆಗ, ಅಲ್ಲಿ ಮಾದಕ ವಸ್ತುಗಳು ಸಿಕ್ಕಿದ್ದವು. ಮೊಬೈಲ್ ಬಳಕೆ ಸಹ ಪತ್ತೆಯಾಗಿತ್ತು. ಈ ಹಿನ್ನಲೆ ರೌಡಿಗಳ ವಿರುದ್ಧ ಪೊಲೀಸರು ಮತ್ತೊಂದು ಪ್ರಕರಣ ದಾಖಲಿಸಿದ್ದರು. ಜೊತೆಗೆ ಕಾರಾಗೃಹದಲ್ಲಿನ ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸಲು ಸೂಚಿಸಿದ್ದು, ಮಾದಕ ವಸ್ತುಗಳ ಸರಬರಾಜು ಸಂಪೂರ್ಣವಾಗಿ ನಿಲ್ಲಿಸಿದ್ದರು. ಕಾರಾಗೃಹದ ಒಳಗೆ ಮೊಬೈಲ್ ಬಳಕೆ, ಗಾಂಜಾ ಪೂರೈಕೆ ಸೇರಿ ಅಕ್ರಮ ಚಟುವಟಿಕೆಗಳಿಗೆ ತಡೆ ಒಡ್ಡಿದ್ದರು. ಈ ಹಿನ್ನಲೆ ಅಲ್ಲಿನ ಕೈದಿಗಳು ಸಿಟ್ಟಾಗಿದ್ದರು. ಶನಿವಾರ ಅಲ್ಲಿರುವ ಕೈದಿಗಳು `ಗಾಂಜಾ ಕೊಡಿ’ ಎಂದು ಕೂಗಾಡಿದರು. ಕಟ್ಟುನಿಟ್ಟಿನ ಕ್ರಮದ ಹಿನ್ನಲೆ ಅವರಿಗೆ ಮಾದಕ ವಸ್ತು ಸಿಗಲಿಲ್ಲ. ಹೀಗಾಗಿ ಕೈದಿಗಳು ಜೈಲರ್ ಮೇಲೆ ಆಕ್ರಮಣ ನಡೆಸಿದರು. ತಡೆಯಲು ಬಂದ ಭದ್ರತಾ ಸಿಬ್ಬಂದಿ ಮೇಲೆಯೂ ಹಲ್ಲೆ ಮಾಡಿದರು. ಅಪರಾಧ ಪ್ರಕರಣದಲ್ಲಿ ಭಾಗಿಯಾಗಿ ಜೈಲು ಸೇರಿರುವ ಮೊಹ್ಮದ್ ಅಬ್ದುಲ್ ಫಯಾನ್ ಮತ್ತು ಕೌಶಿಕ ನಿಹಾಲ್ ಎಂಬಾತರು ತಮ್ಮ ಉಗ್ರ ಸ್ವರೂಪ ಪ್ರದರ್ಶಿಸಿದ್ದು, ಜೈಲರ್ ಕಲ್ಲಪ್ಪ ಗಸ್ತಿ ಹಾಗೂ ಮೂವರು ಸಿಬ್ಬಂದಿ ಮೇಲೆ ದಾಳಿ ಮಾಡಿದರು. ಸರ್ಕಾರಿ ಸಿಬ್ಬಂದಿಯ ಬಟ್ಟೆ ಹರಿದು ಅವರಿಗೆ ಗಾಯ ಮಾಡಿದರು. ಕಾರಾಗೃಹದಲ್ಲಿ ಗಲಾಟೆ ಮಾಡಿದ ಆ ಇಬ್ಬರ ವಿರುದ್ಧ 12ಕ್ಕೂ ಅಧಿಕ ಪ್ರಕರಣಗಳಿವೆ. ಅವರು ಮಂಗಳೂರು ಮೂಲದವರಾಗಿದ್ದು, ಈಚೆಗೆ ಭದ್ರತಾ ಕಾರಣದಿಂದ ಅವರಿಬ್ಬರನ್ನು ಕಾರವಾರ ಜೈಲಿಗೆ ವರ್ಗಾಯಿಸಲಾಗಿತ್ತು. ಇಲ್ಲಿಯೂ ಅವರಿಬ್ಬರು ಹೊಡೆದಾಟ ನಡೆಸಿ ಮತ್ತೊಂದು ಪ್ರಕರಣದಲ್ಲಿ ಸಿಕ್ಕಿಬಿದ್ದಿದ್ದಾರೆ. ಸದ್ಯ ಗಾಯಗೊಂಡ ಸಿಬ್ಬಂದಿಗೆ ಪೊಲೀಸರು ರಕ್ಷಣೆ ಒದಗಿಸಿದ್ದಾರೆ. ಜೊತೆಗೆ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆಯನ್ನು ಕೊಡಿಸಿದ್ದಾರೆ. - [ಉತ್ತರ ಕನ್ನಡ: ಈ ಜಿಲ್ಲೆಗೆ ಒಬ್ಬರೇ ಡೀಸಿ.. ಒಬ್ಬರೇ ಎಸಿ!](https://mobiletime.in/2025/12/uttara-kannada-this-district-has-only-one-dc-only-one-ac/): 140 ಕಿಮೀ ಕರಾವಳಿ, 10.25 ಲಕ್ಷ ಹೆಕ್ಟೇರ್ ಭೂ ಭಾಗವನ್ನು ಹೊಂದಿರುವ ಉತ್ತರ ಕನ್ನಡ ಜಿಲ್ಲೆಯಲ್ಲಿ ನಾಲ್ಕು ಉಪವಿಭಾಗಗಳಿವೆ. ಆದರೆ, ಅದಕ್ಕೆ ತಕ್ಕ ಹಾಗೇ ಸಹಾಯಕ ಆಯುಕ್ತರಿಲ್ಲ! ರಾಜ್ಯದಲ್ಲಿಯೇ ಅತಿ ದೊಡ್ಡ ಪ್ರದೇಶವನ್ನು ಹೊಂದಿದ ಉತ್ತರ ಕನ್ನಡ ಜಿಲ್ಲೆಯನ್ನು ಸರ್ಕಾರ ಆಡಳಿತ ಕಾರಣಕ್ಕಾಗಿ ನಾಲ್ಕು ಉಪವಿಭಾಗಗಳನ್ನು ಸೃಷ್ಠಿಸಿದೆ. ಕಾರವಾರ, ಕುಮಟಾ, ಶಿರಸಿ ಹಾಗೂ ಭಟ್ಕಳ ವಿಭಾಗಕ್ಕೆ ಪ್ರತ್ಯೇಕ ಸಹಾಯಕ ಆಯುಕ್ತರ ಹುದ್ದೆಯನ್ನು ಸೃಷ್ಠಿಸಿದೆ. ಆದರೆ, ಆ ಹುದ್ದೆಗೆ ಅಗತ್ಯವಿರುವ ಅಧಿಕಾರಿಯನ್ನು ಮಾತ್ರ ನೇಮಿಸುತ್ತಿಲ್ಲ. ಮೊದಲು ಈ ನಾಲ್ಕು ಉಪವಿಭಾಗಕ್ಕೆ ನಾಲ್ಕು ಪ್ರತ್ಯೇಕ ಸಹಾಯಕ ಆಯುಕ್ತರಿದ್ದರು. ಕಾರವಾರದಲ್ಲಿ ಕನಿಷ್ಕ ಅವರು ಸಹಾಯಕ ಆಯುಕ್ತರಾಗಿದ್ದರು. ಕುಮಟಾದಲ್ಲಿ ಶ್ರವಣಕುಮಾರ ಅವರು ಸಹಾಯಕ ಆಯುಕ್ತರಾಗಿ ಸೇವೆ ಸಲ್ಲಿಸುತ್ತಿದ್ದರು. ಭಟ್ಕಳದಲ್ಲಿ ನಯನಾ ಅವರು ಉಪವಿಭಾಗಾಧಿಕಾರಿಯಾಗಿದ್ದರು. ಶಿರಸಿಯಲ್ಲಿ ಕಾವ್ಯರಾಣಿ ಅವರು ಕೆಲಸ ನಿರ್ವಹಿಸುತ್ತಿದ್ದರು. ಹೀಗಿರುವಾಗ ಭಟ್ಕಳದಲ್ಲಿದ್ದ ಕನಿಷ್ಕ ಅವರು ದೀರ್ಘಕಾಲದ ರಜೆಪಡೆದರು. ಕಾರವಾರದಲ್ಲಿದ್ದ ಕನಿಷ್ಕ ಅವರು ಅಲ್ಲಿಂದ ವರ್ಗವಾದರು. ಸರ್ಕಾರ ಈ ಎರಡು ಹುದ್ದೆಗಳಿಗೆ ಬೇರೆ ಅಧಿಕಾರಿಗಳನ್ನು ನೇಮಿಸುವ ಬದಲು ಪ್ರಭಾರಿ ಹುದ್ದೆ ನೀಡಿತು. ಅದರ ಪ್ರಕಾರ, ಶಿರಸಿಯ ಕಾವ್ಯರಾಣಿ ಅವರು ಭಟ್ಕಳದ ಜವಾಬ್ದಾರಿವಹಿಸಿಕೊಂಡರು. ಕುಮಟಾದ ಶ್ರವಣಕುಮಾರ ಅವರು ಕಾರವಾರದ ಹೊಣೆ ಹೊತ್ತರು. ಹಳಿಯಾಳದ ಹಳ್ಳಿಯಿಂದ ಭಟ್ಕಳದ ತುದಿಯವರೆಗೂ ಸಂಚರಿಸಿ ಕೆಲಸ ನಿರ್ವಹಿಸುವುದು ಸಹಾಯಕ ಆಯುಕ್ತೆ ಕಾವ್ಯರಾಣಿ ಅವರಿಗೆ ಹೊರೆಯಾಗಿತ್ತು. ಕುಮಟಾದಿಂದ ಜೊಯಿಡಾದವರೆಗಿನ ಉಸ್ತುವಾರಿ ನೋಡಿಕೊಳ್ಳುವುದು ಶ್ರವಣಕುಮಾರ ಅವರಿಗೆ ಬಾರವಾಗಿತ್ತು. ಇದರಿಂದ ಅನೇಕ ಭೂ ವ್ಯಾಜ್ಯ, ಕಂದಾಯ ಪ್ರಕರಣಗಳು ಪ್ರಗತಿ ಕಾಣುತ್ತಿರಲಿಲ್ಲ. ಈ ಬಗ್ಗೆ ಗೊತ್ತಿದ್ದರೂ ಸರ್ಕಾರ ಹೊಸ ಅಧಿಕಾರಿಗಳ ನೇಮಕ ಮಾಡಿರಲಿಲ್ಲ. ಈ ಎಲ್ಲದರ ನಡುವೆ ಸದ್ಯ ಶಿರಸಿ ಜೊತೆ ಭಟ್ಕಳದಲ್ಲಿಯೂ ಪ್ರಭಾರಿಯಾಗಿದ್ದ ಕಾವ್ಯರಾಣಿ ಅವರನ್ನು ವರ್ಗಾಯಿಸಿದೆ. ಹೀಗಾಗಿ ಸದ್ಯದ ಪರಿಸ್ಥಿತಿಯಲ್ಲಿ ಶ್ರವಣಕುಮಾರ ಅವರೊಬ್ಬರೇ ಉತ್ತರ ಕನ್ನಡ ಜಿಲ್ಲೆಯ ಸಹಾಯಕ ಆಯುಕ್ತರಾಗಿದ್ದಾರೆ. ನಂತರ ಶಿರಸಿ ಹಾಗೂ ಕುಮಟಾ ಸಹಾಯಕ ಆಯುಕ್ತರಿಗೆ ಭಟ್ಕಳ ಹಾಗೂ ಕಾರವಾರದ ಪ್ರಭಾರಿ ಹುದ್ದೆ ಕೊಡಲಾಗಿದ್ದು, ಇದೀಗ ಶಿರಸಿ ಸಹಾಯಕ ಆಯುಕ್ತರಾಗಿದ್ದ ಕಾವ್ಯರಾಣಿ ಅವರನ್ನು ಸರ್ಕಾರ ವರ್ಗಾಯಿಸಿದೆ. ಹೀಗಾಗಿ ಇಡೀ ಉತ್ತರ ಕನ್ನಡ ಜಿಲ್ಲೆಗೆ ಸದ್ಯ ಕುಮಟಾ ವಿಭಾಗಾಧಿಕಾರಿ ಶ್ರವಣಕುಮಾರ ಅವರೇ ಸಹಾಯಕ ಆಯುಕ್ತರಾಗಿದ್ದಾರೆ. ಕಾವ್ಯರಾಣಿ ಅವರ ವರ್ಗಾವಣೆ ಆದೇಶ ಆಗಿದ್ದರೂ ಅವರನ್ನು ಸಹಾಯಕ ಆಯುಕ್ತ ಹುದ್ದೆಯಿಂದ ಬಿಡುಗಡೆ ಮಾಡಿಲ್ಲ. ಅವರ ವರ್ಗಾವಣೆ ಖಚಿತವಾಗಿದ್ದು, ಬಿಡುಗಡೆಗೂ ಮುನ್ನ ಬೇರೆ ಅಧಿಕಾರಿ ನೇಮಕ ಆಗದೇ ಇದ್ದರೆ ಸಮಸ್ಯೆ ಇನ್ನಷ್ಟು ಜಟಿಲವಾಗಲಿದೆ. - [ಶಿರೂರು ಖಾರ್‌ಲ್ಯಾಂಡ್: ಸ್ಥಳಕ್ಕೆ ಬಂದು ಗೊಂದಲ ಬಗೆಹರಿಸಿ!](https://mobiletime.in/2025/12/shiroor-kharland-come-to-the-spot-and-clear-up-the-confusion/): ಅಂಕೋಲಾದ ಶಿರೂರು ಗ್ರಾಮದಲ್ಲಿ ಸಣ್ಣ ನೀರಾವರಿ ಇಲಾಖೆ ಖಾರ್‌ಲ್ಯಾಂಡ್ ಕಾಮಗಾರಿಗೆ ಆಸಕ್ತಿವಹಿಸಿದ್ದು, ಅದರ ತಾಂತ್ರಿಕ ಮಾಹಿತಿ ಗೊಂದಲಕ್ಕೆ ಕಾರಣವಾಗಿದೆ. ಹೀಗಾಗಿ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಯೋಜನೆ ಬಗ್ಗೆ ಜನರಿಗೆ ಸರಿಯಾದ ಮಾಹಿತಿ ನೀಡಬೇಕು ಎಂದು ಅಲ್ಲಿನ ಜನ ಆಗ್ರಹಿಸಿದ್ದಾರೆ. ಈ ಕಾಮಗಾರಿ ಶುರು ಮಾಡುವ ದಿಕ್ಕಿನ ಬಗ್ಗೆ ಊರಿನಲ್ಲಿ ಚರ್ಚೆ ನಡೆಯುತ್ತಿದೆ. ಇದೇ ವಿಷಯವಾಗಿ ಭಿನ್ನಾಭಿಪ್ರಾಯಗಳು ಮೂಡಿದ್ದು, ಪರ-ವಿರೋಧದ ಮಾತು ಕೇಳಿ ಬರುತ್ತಿದೆ. ಕೆಲವರು ಗುತ್ತಿಗೆದಾರರು ಮಾಡುವ ಕೆಲಸದ ಬಗ್ಗೆ ಸಹಮತವ್ಯಕ್ತಪಡಿಸಿದ್ದಾರೆ. ಉಳಿದವರು ನೀರು ಹರಿಯುವ ವಿರುದ್ಧ ದಿಕ್ಕಿನಲ್ಲಿ ಕಾಮಗಾರಿ ಶುರು ಮಾಡಿದರೆ ತಾಂತ್ರಿಕ ದೋಷವಾಗುವ ಬಗ್ಗೆ ಹೇಳಿದ್ದಾರೆ. ಗ್ರಾಮಸ್ಥರಾದ ಪುರುಷೋತ್ತಮ ನಾಯ್ಕ ಹಾಗೂ ಸಹಚರರು `ಕಾಮಗಾರಿಯನ್ನು ನೀರಿನ ಹರಿವಿನ ದಿಕ್ಕಿಗೆ ವಿರುದ್ಧವಾಗಿ ಮಾಡಲಾಗುತ್ತಿದ್ದು, ಇದರಿಂದ ಮಳೆಗಾಲದಲ್ಲಿ ನೀರಿನ ಒತ್ತಡಕ್ಕೆ ಸಿಲುಕಿ ಖಾರ್‌ಲ್ಯಾಂಡ ಕಾಮಗಾರಿಯು ಹಾನಿಯಾಗುವ ಭೀತಿಯಿದೆ’ ಎಂದು ಹೇಳಿದ್ದಾರೆ. ಈ ಬಗ್ಗೆ ಅವರು ಲಿಖಿತ ಅರ್ಜಿಯನ್ನು ಸರ್ಕಾರಕ್ಕೆ ಸಲ್ಲಿಸಿದ್ದಾರೆ. `ಕೆಪಿಡಬ್ಲ್ಯೂಡಿ ನಿಯಮಾವಳಿಗಳ ಪ್ರಕಾರ ಯಾವುದು ಸುರಕ್ಷಿತವೋ ಆ ರೀತಿಯಲ್ಲೇ ಕಾಮಗಾರಿ ನಡೆಸಬೇಕು’ ಎಂದು ಅವರು ಆಗ್ರಹಿಸಿದ್ದಾರೆ. `ಊರಿನ ಕೆಲವರು ಗುತ್ತಿಗೆದಾರರ ಕೆಲಸಕ್ಕೆ ಒಪ್ಪಿಗೆ ನೀಡಿದ್ದಾರೆ. ಆದರೆ ಕಾಮಗಾರಿ ಶಾಶ್ವತವಾಗಿ ಉಳಿಯಬೇಕಾದರೆ ಅದು ತಾಂತ್ರಿಕವಾಗಿ ಬಲವಾಗಿರಬೇಕು. ಜನರ ಒಪ್ಪಿಗೆಗಿಂತ ಸುರಕ್ಷತೆ ಹಾಗೂ ನಿಯಮ ಮುಖ್ಯವಾಗಿರಬೇಕು. ಹೀಗಾಗಿ ಈ ಕೂಡಲೇ ಸಣ್ಣ ನೀರಾವರಿ ಇಲಾಖೆಯ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಬೇಕು’ ಎಂದು ಪುರುಷೋತ್ತಮ ನಾಯ್ಕ ಅವರು ಹೇಳಿದ್ದಾರೆ. `ಯಾವುದು ಸರಿ-ಯಾವುದು ತಪ್ಪು ಎಂಬುದನ್ನು ಸ್ಪಷ್ಟಪಡಿಸಿದ ನಂತರವೇ ಕಾಮಗಾರಿ ಮುಂದುವರಿಸಬೇಕು’ ಎಂದವರು ಒತ್ತಾಯಿಸಿದ್ದಾರೆ. ಈ ಬಗ್ಗೆ ಅವರು ಸಣ್ಣ ನೀರಾವರಿ ಇಲಾಖೆ ಅಧಿಕಾರಿ, ತಹಶೀಲ್ದಾರ್, ಪಂಚಾಯತ ಹಾಗೂ ಜಿಲ್ಲಾಡಳಿತಕ್ಕೆ ತಮ್ಮ ಪತ್ರ ಕಳುಹಿಸಿದ್ದಾರೆ. `ಗ್ರಾಮಸ್ಥರಲ್ಲಿರುವ ಗೊಂದಲ ಬಗೆಹರಿಸಿ ಗುಣಮಟ್ಟದ ಕಾಮಗಾರಿ ನಡೆಸಿ’ ಎಂದವರು ಪತ್ರದ ಮೂಲಕ ಹೇಳಿದ್ದಾರೆ. - [ಶಾಲೆಗೆ ಹೋಗಲು ರೈಲು ಹಳಿಯೇ ಮುಖ್ಯ ರಸ್ತೆ!](https://mobiletime.in/2025/12/the-train-track-is-the-main-road-to-school/): ನಿತ್ಯ 60ಕ್ಕೂ ಅಧಿಕ ಮಕ್ಕಳು ರೈಲ್ವೆ ಹಳಿ ಮೇಲೆ ಸಂಚರಿಸಿ ಶಾಲೆ ಸೇರುತ್ತಿದ್ದು, ಈ ಅಪಾಯದ ಬಗ್ಗೆ ಅರಿವಿದ್ದರೂ ಅಲ್ಲಿನವರಿಗೆ ಪರ್ಯಾಯ ದಾರಿ ಇಲ್ಲ. `ಅನಾಹುತ ತಪ್ಪಿಸಲು ಕಿರು ಸೇತುವೆ ಮಾಡಿಕೊಡಿ’ ಎಂದು ಆ ಊರಿನ ಜನ ಅಳಲು ತೋಡಿಕೊಂಡರೂ ಯಾರೂ ಅದಕ್ಕೆ ಸ್ಪಂದಿಸಿಲ್ಲ. ಕೊoಕಣ ರೈಲ್ವೆ ಬರುವ ಮುನ್ನ ಅಂಕೋಲಾದ ಹಟ್ಟಿಕೇರಿ ಬಳಿಯ ಅರೆಗದ್ದೆ – ತೆಂಗಿನ ಮಡಗಿ ಭಾಗದಲ್ಲಿ ಸಂಕದ ವ್ಯವಸ್ಥೆಯಿತ್ತು. ಆ ಸಂಕ ದಾಡಿ ಜನ ಊರು ಸೇರುತ್ತಿದ್ದರು. ಕೊಂಕಣ ರೈಲ್ವೆಗಾಗಿ ಭೂ ಸ್ವಾಧೀನ ಪ್ರಕ್ರಿಯೆ ನಡೆದಾಗ ಆ ಸಂಕವೂ ಮುರಿದು ಬಿದ್ದಿತು. ಸಂಕವನ್ನು ಬಲಿಪಡೆದ ಕೊಂಕಣ ರೈಲ್ವೆ ಪರ್ಯಾಯ ವ್ಯವಸ್ಥೆ ಕಲ್ಪಿಸಲಿಲ್ಲ. ಹೀಗಾಗಿ ಆಗಿನಿಂದ ಈಗಿನವರೆಗೂ ಊರಿನವರು ಸಮಸ್ಯೆ ಅನುಭವಿಸುವುದು ತಪ್ಪಲಿಲ್ಲ. ಅರೆಗದ್ದೆ – ತೆಂಗಿನ ಮಡಗಿ ಭಾಗಕ್ಕೆ ಸಂಚರಿಸಲು ಯೋಗ್ಯ ರಸ್ತೆ ಇಲ್ಲ. ಹೀಗಾಗಿ ಈ ಊರಿನ ಜನ ಸಹ ತಮ್ಮ ಬೈಕುಗಳನ್ನು ರೈಲ್ವೆ ಹಳಿ ಪಕ್ಕ ನಿಲ್ಲಿಸಿ ನಡೆದು ಹೋಗುತ್ತಾರೆ. ಜೊತೆಗೆ ಮಕ್ಕಳು ಶಾಲೆಗೆ ಬರಬೇಕು ಎಂದರೆ ಸದ್ಯ ರೈಲ್ವೆ ಹಳಿ ಮೇಲಿನ ನಡಿಗೆ ಅನಿವಾರ್ಯ. ಅದಕ್ಕಾಗಿ ಮಕ್ಕಳ ಜೊತೆ ಪಾಲಕರು ಶಾಲೆಯವರೆಗೆ ಬರುತ್ತಿದ್ದು, ಶಾಲೆ ಬಿಟ್ಟ ನಂತರವೂ ಇದೇ ಮಾರ್ಗವಾಗಿ ಮಕ್ಕಳನ್ನು ಮನೆಗೆ ಒಯ್ಯುವ ಕೆಲಸ ಮಾಡುತ್ತಾರೆ. ಈ ಊರಿನಲ್ಲಿ 90ಕ್ಕೂ ಅಧಿಕ ಮನೆಗಳಿದ್ದು, ಅಲ್ಲಿನವರ ಸಮಸ್ಯೆಯನ್ನು ಆಲಿಸಿದವರಿಲ್ಲ. ರೈಲ್ವೆ ಸೇತುವೆಯ ಕೆಳಗೆ ಹಳ್ಳ ಹರಿಯುತ್ತಿದ್ದು, ಮಳೆಗಾಲದಲ್ಲಿಯೂ ಮಕ್ಕಳು ಅಪಾಯಕಾರಿ ಹಳ್ಳ ದಾಟಿ ಶಾಲೆಗೆ ಹೋಗಬೇಕು. ರೇಲ್ವೆ ಹಳಿ ದಾಡಿದ ಮಕ್ಕಳು ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸಿಯೂ ಶಾಲೆ ಸೇರಬಹುದಾಗಿದ್ದು, ಆ ಹೆದ್ದಾರಿ ಇನ್ನಷ್ಟು ಅಪಾಯಕಾರಿ. ಜೊತೆಗೆ ಶಾಲೆ ಸೇರುವ ಮಕ್ಕಳಿಗೆ 4ಕಿಮೀ ಸುತ್ತುವರೆದು ನಡೆಯುವುದು ಅನಿವಾರ್ಯ. 4ಕಿಮೀ ಸುತ್ತುವರೆದಿರುವ ಅಪಾಯಕಾರಿಯಾದ ಆ ರಾಷ್ಟ್ರೀಯ ಹೆದ್ದಾರಿಯಲ್ಲಿ ಮಕ್ಕಳನ್ನು ಕಳುಹಿಸುವ ಬದಲು ರೈಲ್ವೆ ಹಳಿಗಳ ಮೂಲಕವೇ ಶಾಲೆಗೆ ಹೋಗಿಬರುವುದು ಸಲೀಸು. `ನಮಗೆ ಹಳ್ಳ ಹಾಗೂ ರೇಲ್ವೆ ಹಳಿ ದಾಟುವ ನಡೆಯಿಂದ ಮುಕ್ತವಾಗಲು ಕಿರು ಸಂಕ ನಿರ್ಮಿಸಿ ಕೊಡಿ’ ಎಂದು ಹತ್ತಾರು ಸಲ ಇಲ್ಲಿನ ಜನ ರೇಲ್ವೆ ಇಲಾಖೆಗೆ ಮನವಿ ಮಾಡಿದ್ದಾರೆ. ಆದರೆ ರೇಲ್ವೆ ಇಲಾಖೆಯಿಂದ ಯಾವ ಕ್ರಮವೂ ಆಗಿಲ್ಲ. - [ಟಾಟಾ ಬೈಬೈ: ಶಿರಸಿ ತೊರೆದ ಸಹಾಯಕ ಆಯುಕ್ತೆ!](https://mobiletime.in/2025/12/tata-bye-bye-assistant-commissioner-leaves-sirsi/): ಶಿರಸಿಯ ಸಹಾಯಕ ಆಯುಕ್ತರಾಗಿದ್ದ ಕಾವ್ಯರಾಣಿ ಅವರನ್ನು ಸರ್ಕಾರ ದಿಢೀರ್ ಆಗಿ ವರ್ಗಾವಣೆ ಮಾಡಿದೆ. ಭಟ್ಕಳ ಉಪವಿಭಾಗಾಧಿಕಾರಿ ಕಚೇರಿಯ ಪ್ರಭಾರಿಯೂ ಆಗಿದ್ದ ಅವರನ್ನು ಮೈಸೂರಿನ ಹಣಸೂರು ವಿಭಾಗಕ್ಕೆ ವರ್ಗಾಯಿಸಲಾಗಿದೆ. ಸರ್ಕಾರಿ ಶಾಲೆಯಲ್ಲಿ ಓದಿಗೂ ಕೆಎಎಸ್ ಅಧಿಕಾರಿಯಾಗಿದ್ದ ಕಾವ್ಯರಾಣಿ ಅವರು ಕಳೆದ ವರ್ಷ ಶಿರಸಿ ಸಹಾಯಕ ಆಯುಕ್ತರಾಗಿ ಜವಾಬ್ದಾರಿವಹಿಸಿಕೊಂಡಿದ್ದರು. ನಿವೃತ್ತ ಪೊಲೀಸ್ ಅಧಿಕಾರಿ ವೀರೇಶ ನಾಯ್ಕ ಅವರ ಪುತ್ರಿಯಾಗಿದ್ದ ಕಾವ್ಯರಾಣಿ ಅವರು ತಮ್ಮ ಬದುಕಿನುದ್ದಕ್ಕೂ ಶಿಸ್ತು ರೂಢಿಸಿಕೊಂಡಿದ್ದರು. ಉನ್ನತಮಟ್ಟದ ಅಧಿಕಾರಿಯಾಗಬೇಕು ಎಂದು ಅವರು ಬಾಲ್ಯದಲ್ಲಿಯೇ ಕನಸು ಕಂಡಿದ್ದರು. ಅದಕ್ಕಾಗಿ ಸಾಕಷ್ಟು ಶ್ರಮವಹಿಸಿದ್ದರು. 2019ರ ಅವಧಿಯಲ್ಲಿ ಅವರು ಕೆಎಎಸ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದು, ಸರ್ಕಾರಿ ಸೇವೆ ಶುರು ಮಾಡಿದರು. ಅಧಿಕಾರಿಯಾಗಿ ಅಧಿಕಾರವಹಿಸಿಕೊಂಡ ನಂತರ ಅನೇಕ ಶಾಲೆಗಳಿಗೆ ದಿಢೀರ್ ಭೇಟಿ ನೀಡಿ ಮಕ್ಕಳಿಗೆ ಪ್ರೇರಣಾದಾಯಕ ಪಾಠ ಮಾಡಿದ್ದರು. ಆಡಳಿತ ವಿಷಯದಲ್ಲಿಯೂ ಅವರು ಖಡಕ್ ಅಧಿಕಾರಿಯಾಗಿ ಗುರುತಿಸಿಕೊಂಡಿದ್ದರು. ಕೆ ಕಾವ್ಯರಾಣಿ ಅವರು ಪ್ರಸ್ತುತ ಶಿರಸಿ ಉಪವಿಭಾಗಾಧಿಕಾರಿ ಕಚೇರಿಯಲ್ಲಿ ಸಹಾಯಕ ಆಯುಕ್ತರಾಗಿದ್ದು, ಆಡಳಿತಾತ್ಮಕ ಕಾರಣದಿಂದ ಸರ್ಕಾರ ಅವರನ್ನು ಬೇರೆಡೆ ವರ್ಗಾಯಿಸಿದೆ. ಶಿರಸಿ ಹಾಗೂ ಭಟ್ಕಳಕ್ಕೆ ಹೊಸ ಸಹಾಯಕ ಆಯುಕ್ತರ ಆದೇಶ ಹೊರಬಂದಿಲ್ಲ. - [2025 ಡಿಸೆಂಬರ್ 5ರ ದಿನ ಭವಿಷ್ಯ](https://mobiletime.in/2025/12/prediction-for-december-5-2025/): ಮೇಷ ರಾಶಿ: ನಿಮ್ಮ ವೃತ್ತಿ ಜೀವನದಲ್ಲಿ ಸಣ್ಣ ಸವಾಲು ಎದುರಗಲಿದೆ. ಅದನ್ನು ಎದುರಿಸಿದರೆ ಗೌರವ ಹೆಚ್ಚಾಗಲಿದೆ. ಕುಟುಂಬ ಸದಸ್ಯರ ಬೆಂಬಲದಿoದ ಸಮಸ್ಯೆ ದೂರವಾಗಲಿದೆ. ಪ್ರೀತಿ ಸಂಬAಧಗಳಲ್ಲಿ ಸಾಮರಸ್ಯ ಕಾಪಾಡಿಕೊಳ್ಳಿ. ಶತ್ರುಗಳ ಬಗ್ಗೆ ಎಚ್ಚರಿಕೆ ಅಗತ್ಯ. ವೃಷಭ ರಾಶಿ: ಹಣಕಾಸು ವಿಷಯಗಳಲ್ಲಿ ಸಮತೋಲನ ಕಾಯ್ದುಕೊಳ್ಳಬೇಕು. ಕೆಲಸದಲ್ಲಿ ಸಹಕಾರ ಸಿಗುತ್ತದೆಯಾದರೂ ತುರ್ತು ನಿರ್ಧಾರಗಳು ಒಳ್ಳೆಯದಲ್ಲ. ಕುಟುಂಬದಲ್ಲಿ ಸುಖ ಶಾಂತಿ ಕಾಣಬಹುದು. ವಿದ್ಯಾರ್ಥಿಗಳಿಗೆ ಒಳ್ಳೆಯ ಫಲ ಸಿಗಲಿದೆ. ಆರೋಗ್ಯ ಉತ್ತಮವಾಗಿರುತ್ತದೆ. ಮಿಥುನ ರಾಶಿ: ನಿಮ್ಮ ಅದೃಷ್ಟ ಚನ್ನಾಗಿದ್ದು, ವ್ಯವಹಾರದಲ್ಲಿ ಲಾಭದ ಅವಕಾಶಗಳು ಹೆಚ್ಚಿವೆ. ಬುದ್ಧಿವಂತಿಕೆಯಿAದ ಕಷ್ಟಕರ ವಿಷಯಗಳು ದೂರವಾಗುತ್ತವೆ. ನೀವು ಮಾಡುವ ಕೆಲಸ ಯಶಸ್ವಿಯಾಗಲಿದೆ. ಉಡುಗರೆ ಸಿಗುವ ಸಾಧ್ಯತೆಯಿದೆ. ಕರ್ಕ ರಾಶಿ: ನಿಮ್ಮ ವೃತ್ತಿ ಜೀವನ ಸುಧಾರಿಸುತ್ತದೆ. ಹೊಸ ಯೋಜನೆಗಳು ಫಲ ನೀಡುತ್ತವೆ. ಸಂಪತ್ತು ಸೌಕರ್ಯಗಳು ದ್ವಿಗುಣಗೊಳ್ಳುತ್ತವೆ. ಕುಟುಂಬದ ಸಹಕಾರ ಸಿಗುತ್ತದೆ. ಹಣಕಾಸು ಲಾಭ ಸಿಗಲಿದೆ. ಸಿಂಹ ರಾಶಿ: ಕೆಲಸದಲ್ಲಿ ನಿಮ್ಮ ಪ್ರಭಾವ ಹೆಚ್ಚುತ್ತದೆ. ಮೇಲಧಿಕಾರಿಗಳ ಬೆಂಬಲ ದೊರೆಯುತ್ತದೆ. ನಿಮ್ಮ ಆಶಯಗಳು ಈಡೇರುತ್ತವೆ. ಸಹೋದ್ಯೋಗಿಗಳೊಂದಿಗೆ ಸಮನ್ವಯ ಉತ್ತಮವಾಗಿರತ್ತದೆ. ಶಿಕ್ಷಣ ಸ್ಪರ್ಧೆಗಳಲ್ಲಿ ಯಶಸ್ಸು ಸಿಗಲಿದೆ. ಕನ್ಯಾ ರಾಶಿ: ತಂಡದೊAದಿಗೆ ದುಡಿದರೆ ಕೆಲಸ ಸರಳವಾಗಿರುತ್ತದೆ. ವಿದ್ಯುತ್ ಉಪಕರಣಗಳ ಕೆಲಸದಲ್ಲಿ ಲಾಭ ಆಗಲಿದೆ ಶಿಕ್ಷಣದಲ್ಲಿ ಯಶಸ್ಸು ಸಾಧ್ಯವಿದೆ. ಕುಟುಂಬ ಸುಖ ಹಾಗೂ ಆರ್ಥಿಕ ನೆಮ್ಮದಿ ಸಿಗಲಿದೆ. ತುಲಾ ರಾಶಿ: ಮಧ್ಯಾಹ್ನದ ವೇಳೆ ವ್ಯಾಪಾರದಲ್ಲಿ ಲಾಭ ಆಗಲಿದೆ. ಅವಿವಾಹಿತರಿಗೆ ವಿವಾಹ ಭಾಗ್ಯದ ಮಾತುಕಥೆ ಸಾಧ್ಯವಿದೆ. ಕೆಲಸದ ವಿಷಯದಲ್ಲಿ ಗೌರವ ಹೆಚ್ಚಾಗಲಿದೆ. ಶುಭ ಸುದ್ದಿ ನಿರೀಕ್ಷೆಯಲ್ಲಿರಿ. ವೃಶ್ಚಿಕ ರಾಶಿ: ಆಭರಣ ವ್ಯವಹಾರಕ್ಕೆ ಒಳ್ಳೆಯ ದಿನ. ಲಾಭ ಅವಕಾಶಗಳು ಹೆಚ್ಚಿದೆ. ಮಾರ್ಕೆಟಿಂಗ್ ಕ್ಷೇತ್ರದಲ್ಲಿರುವವರಿಗೆ ಯಶಸ್ಸು ಸಿಗಲಿದೆ. ಉಡುಗರೆಯೊಂದು ನಿಮಗಾಗಿ ಕಾದಿದೆ. ಧನು ರಾಶಿ: ಧನ ಯೋಗ ಪ್ರಭಾವ ಹೆಚ್ಚಾಗಿದ್ದು, ಸಂಪತ್ತು ಲಾಭ ಆಗಲಿದೆ. ವ್ಯವಹಾರ ಉತ್ತಮವಾಗಿರುತ್ತದೆ. ಕುಟುಂಬದಲ್ಲಿ ಸಂತೋಷದ ಕ್ಷಣಗಳು ನಡೆಯಲಿದೆ. ಭಯ ಬೇಡ. ಮಕರ ರಾಶಿ: ಒತ್ತಡಗಳ ನಡುವೆ ಜೀವಿಸಲು ಸಹನೆ ಅಗತ್ಯ. ಆರ್ಥಿಕ ಲಾಭ ಸಾಧ್ಯವಾದರೂ ಎಚ್ಚರಿಕೆ ಅಗತ್ಯ. ಹೂಡಿಕೆಗೆ ಒಳ್ಳೆಯ ದಿನ. ಆರೋಗ್ಯದ ಕಡೆ ಗಮನಹರಿಸಬೇಕು. ಕುಂಭ ರಾಶಿ: ಹಿಂದಿನ ಕಾರ್ಯಗಳ ಪರಿಣಾಮ ಈ ದಿನ ದುಪ್ಪಟ್ಟು ಲಾಭ ಸಿಗಲಿದೆ. ಶತ್ರುಗಳು ಕುತಂತ್ರ ಮಾಡುವ ಸಾಧ್ಯತೆಯಿದ್ದು, ಎಚ್ಚರಿಕೆ ಅಗತ್ಯ. ವೃತ್ತಿ ಸವಾಲುಗಳು ಎದುರಾಗಲಿದ್ದು, ಅದನ್ನು ಸಮರ್ಥವಾಗಿ ನಿಭಾಯಿಸುವಿರಿ. ಮೀನ ರಾಶಿ: ನಿಮ್ಮ ಬುದ್ದಿ ಶಕ್ತಿ ಆಧಾರದಲ್ಲಿ ಯಶಸ್ಸು ಸಿಗಲಿದೆ. ಪ್ರೀತಿ ವಿಷಯದಲ್ಲಿ ಸಾಮರಸ್ಯ ಅಗತ್ಯ. ಆರೋಗ್ಯ ಚನ್ನಾಗಿರಲಿದೆ. ಶುಭ ಸಂಕೇತಗಳನ್ನು ಕಾಣುವಿರಿ. - [ಬಯಲು ಶೌಚಕ್ಕೆ ಹೋದಾಗ ದುರ್ಘಟನೆ: ನಗರಸಭೆ ಸಿಬ್ಬಂದಿ ಕೊನೆಯುಸಿರು!](https://mobiletime.in/2025/12/tragedy-while-defecating-in-the-open-municipal-council-employee-dies/): ಕಾರವಾರ ನಗರಸಭೆಯಲ್ಲಿ ನೀರು ಬಿಡುವ ಕೆಲಸ ಮಾಡುತ್ತಿದ್ದ ಅಮಿತ್ ಬಾಂದೇಕರ್ ಅವರು ಬಹಿರ್ದೆಸೆಗೆ ಹೋದಾಗ ಕಾಲು ಜಾರಿ ಬಿದ್ದು ಪೆಟ್ಟು ಮಾಡಿಕೊಂಡಿದ್ದು, ಮನೆಯಲ್ಲಿ ಮಲಗಿದಾಗ ಸಾವನಪ್ಪಿದ್ದಾರೆ. ಕಾರವಾರದ ಶಿರವಾಡ ಬಳಿಯ ನಾರಗೇರಿಯಲ್ಲಿ ಅಮೀತ ಪುತ್ತು ಬಾಂದೇಕರ್ (35) ಅವರು ವಾಸವಾಗಿದ್ದರು. ಅವರು ನಗರಸಭೆಯಲ್ಲಿ ನೀರು ಬಿಡುವ ಕೆಲಸ ಮಾಡಿಕೊಂಡಿದ್ದರು. ಕಳೆದ ಮೂರು ದಿನಗಳಿಂದ ಅವರಿಗೆ ಅನಾರೋಗ್ಯ ಕಾಡಿತ್ತು. ಹೊಟ್ಟೆ ನೋವಿನ ಕಾರಣ ಮನೆಯಲ್ಲಿ ವಿಶ್ರಾಂತಿಪಡೆಯುತ್ತಿದ್ದ ಅವರು ಕೆಲಸಕ್ಕೆ ಹಾಜರಾಗಿರಲಿಲ್ಲ. ಡಿಸೆಂಬರ್ 4ರ ನಸುಕಿನ 3 ಗಂಟೆಗೆ ಅಮೀತ ಬಾಂದೇಕರ್ ಅವರು ಮನೆಯಿಂದ ಹೊರ ಹೋಗಿದ್ದರು. ಬಹಿರ್ದೆಸೆಗಾಗಿ ಅವರು ಮನೆ ಹಿಂದೆ ಹೋಗಿದ್ದು, ಅಲ್ಲಿ ಕಾಲು ಜಾರಿ ಬಿದ್ದಿದ್ದರು. ಇದನ್ನು ಅರಿತ ಅವರ ತಂದೆ-ತಾಯಿ ಅಮೀತ ಬಾಂದೇಕರ್ ಅವರನ್ನು ಮನೆಗೆ ಕರೆತಂದು ಉಪಚರಿಸಿದ್ದರು. `ಆಸ್ಪತ್ರೆಗೆ ಹೋಗಿ ಬಾ’ ಎಂದು ಪಾಲಕರು ಸಲಹೆ ನೀಡಿದ್ದರು. `ನನಗೆ ಏನೂ ಆಗಿಲ್ಲ’ ಎಂದ ಅಮೀತ ಬಾಂದೇಕರ್ ಅವರು ಮನೆಯಲ್ಲಿಯೇ ಮಲಗಿದ್ದರು. 7.30ರ ವೇಳೆಗೆ ಅವರನ್ನು ಎಬ್ಬಿಸಲು ಹೋದಾಗ ಮಾತನಾಡಲಿಲ್ಲ. ಸಂಬAಧಿಕರು ಬಂದು ಕರೆದರೂ ಏಳಲಿಲ್ಲ. ಹೀಗಾಗಿ ಎಲ್ಲರೂ ಸೇರಿ ಅಮೀತ ಬಾಂದೇಕರ್ ಅವರನ್ನು ಕಾರವಾರದ ಕಿಮ್ಸ್’ಗೆ ಕರೆದೊಯ್ದರು. ಅಲ್ಲಿನ ವೈದ್ಯರು `ಅಮೀತ ಬಾಂದೇಕರ್ ಇನ್ನಿಲ್ಲ’ ಎಂದು ಘೋಷಿಸಿದರು. ಮಾಜಾಳಿ ಗುರಾವಾಡದಲ್ಲಿ ವಾಸವಾಗಿರುವ ಅಮೀತ ಅವರ ಅಕ್ಕ ರತ್ನ ಚೈತನ್ಯ ಭಾನಾವಳಿ ಅವರು ಈ ವಿಷಯ ತಿಳಿದು ಆಘಾತಕ್ಕೆ ಒಳಗಾದರು. ಅಮೀತ ಅವರ ಸಾವಿನ ಬಗ್ಗೆ ಅವರೇ ಪೊಲೀಸರಿಗೆ ವರದಿ ಒಪ್ಪಿಸಿ, ಪ್ರಕರಣ ದಾಖಲಿಸಿದರು. - [ಬೈಕಿನಿಂದ ಬಿದ್ದ ಸವಾರ: ಸಾವು!](https://mobiletime.in/2025/12/rider-falls-off-bike-and-dies/): ಬೈಕ್ ಸ್ಕಿಡ್ ಆದ ಪರಿಣಾಮ ಗಾಯಗೊಂಡಿದ್ದ ಸುರೇಶ ನಾಯಕ ಅವರನ್ನು ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲಿಸಲಾಗಿದ್ದು, ನಿರಂತರ ಚಿಕಿತ್ಸೆಯ ನಡುವೆಯೂ ಗುರುವಾರ ಅವರು ಸಾವನಪ್ಪಿದ್ದಾರೆ. ಅಂಕೋಲಾದ ಭಾವಿಕೇರಿಯಲ್ಲಿ ಸುರೇಶ ಗಿರಿಯಣ್ಣ ನಾಯಕ (48) ಅವರು ವಾಸವಾಗಿದ್ದರು. ಡಿಸೆಂಬರ್ 1ರ ರಾತ್ರಿ 11.50ಕ್ಕೆ ಅವರು ವೇಗವಾಗಿ ಬೈಕ್ ಓಡಿಸಿಕೊಂಡು ಹೊರಟಿದ್ದರು. ಅಂಕೋಲಾ ಕಡೆಯಿಂದ ಬೇಲಿಕೇರಿ ಕಡೆ ಅವರು ಹೊರಟಿದ್ದ ಬೈಕು ಸ್ಕಿಡ್ ಆಗಿ ಬಿದ್ದಿತ್ತು. ಕೇಣಿ ಸೇತುವೆ ಬಳಿಯ ಮದ್ದಲೇಶ್ವರ ದೇವಾಲಯ ಎದುರಿನ ಬೇಲಿಕೇರಿ ಡಾಂಬರು ರಸ್ತೆಯಲ್ಲಿ ಬಿದ್ದಿದ್ದ ಸುರೇಶ ನಾಯ್ಕ ಅವರಿಗೆ ದೊಡ್ಡ ಪೆಟ್ಟು ಆಗಿರಲಿಲ್ಲ. ಆದರೆ, ತಲೆ ಒಳಭಾಗದಲ್ಲಿ ಅವರಿಗೆ ನೋವಾಗಿತ್ತು. ಅವರನ್ನು ಅಲ್ಲಿನ ಜನ ರಕ್ಷಿಸಿ ಅಂಕೋಲಾ ಆಸ್ಪತ್ರೆಗೆ ಕಳುಹಿಸಿದ್ದರು. ಅದಾದ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಕಾರವಾರದ ಕಿಮ್ಸ ಆಸ್ಪತ್ರೆಗೆ ರವಾನಿಸಿದ್ದರು. ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದ ಸುರೇಶ ನಾಯಕ ಅವರು ಗುರುವಾರ ಕೊನೆಯುಸಿರೆಳೆದರು. ಪುರ್ಲಕ್ಕಿಬೇಣದ ನಿವೃತ್ತ ಸೈನಿಕ ಗೋಪಾಲ ಗಿರಿಯಣ್ಣ ನಾಯಕ ಅವರು ಅಪಘಾತದ ಬಗ್ಗೆ ಪೊಲೀಸರಿಗೆ ವರದಿ ಒಪ್ಪಿಸಿದ್ದು, ಆಸ್ಪತ್ರೆಯವರು ನೀಡಿದ ಸಾವಿನ ಮಾಹಿತಿಯನ್ನು ಪೊಲೀಸರು ಪ್ರಕರಣದಲ್ಲಿ ದಾಖಲಿಸಿದರು. `ಹೆಲ್ಮೆಟ್ ಧರಿಸಿ.. ಬೈಕ್ ಓಡಿಸಿ’ - [ಮುಂಡಗೋಡ: ಮಹಿಳೆ ಮೇಲೆ ದರ್ಬಾರ್!](https://mobiletime.in/2025/12/mundagoda-durbar-on-women/): ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಲ್ಲಿ ಕೆಲಸ ಮಾಡುವ ಮಹಿಳೆ ಮೇಲೆ ಪುರುಷನೊಬ್ಬ ದಬ್ಬಾಳಿಕೆ ನಡೆಸಿದ್ದು, ರಕ್ಷಣೆ ಕೋರಿ ನೀಲಗಂಗವ್ವ ಚಲವಾದಿ ಅವರು ಪೊಲೀಸರ ಮೊರೆ ಹೋಗಿದ್ದಾರೆ. ಮುಂಡಗೋಡ ಗಾಂಧೀನಗರದ ನೀಲಗಂಗವ್ವ ಚಲವಾದಿ ಅವರು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಲ್ಲಿ ಡಿ ದರ್ಜೆ ನೌಕರರಾಗಿದ್ದಾರೆ. ಡಿಸೆಂಬರ್ 2ರಂದು ಅವರು ಕಚೇರಿಯಲ್ಲಿ ಕೆಲಸ ನಿರ್ವಹಿಸುವ ವೇಳೆಯಲ್ಲಿಯೇ ಅಲ್ಲಿಗೆ ಬಂದ ಬಸವನಬದಿಯ ವೆಂಕಟೇಶ ಕೃಷ್ಣ ಶಿರಾಲಿ ಅವರು ದರ್ಬಾರ್ ನಡೆಸಿದ್ದಾರೆ. `ನಿನ್ನ ಮನೆ ಪಕ್ಕದಲ್ಲಿರುವ ನನ್ನ ಪ್ಲಾಟಿನ ಬಳಿ ನಿನ್ನ ಮಗ ರೂಪೇಶ ಚಲವಾದಿ ಹಾಗೂ ನಿನ್ನ ತಮ್ಮ ನೀಲಪ್ಪ ಹಾಕಿದ ಬೇಲಿ ತೆಗೆಯಬೇಕು’ ಎಂದು ವೆಂಕಟೇಶ ಶಿರಾಲಿ ಅವರು ತಾಕೀತು ಮಾಡಿದ್ದಾರೆ. `ಇಲ್ಲದಿದ್ದರೆ ಗತಿ ಕಾಣಿಸುವೆ. ಕೋರ್ಟಿಗೆ ಎಳೆಯುವೆ’ ಎಂದು ಬೆದರಿಸಿದ್ದಾರೆ. ಸರ್ಕಾರಿ ಕಚೇರಿಯಲ್ಲಿ ಕೆಲಸ ಮಾಡುವ ಮಹಿಳೆಯ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದು, ಆ ಮಹಿಳೆಯ ಜಾತಿ ವಿಷಯವಾಗಿಯೂ ಕೆಟ್ಟದಾಗಿ ನಿಂದಿಸಿದ್ದಾರೆ. ಈ ಎಲ್ಲಾ ವಿಷಯದ ಬಗ್ಗೆ ನೀಲಗಂಗವ್ವ ಚಲವಾದಿ ಅವರು ಕುಟುಂಬದವರ ಜೊತೆ ಚರ್ಚಿಸಿದ್ದು, ಅವರ ಸಲಹೆ ಮೇರೆಗೆ ಪೊಲೀಸರ ಮೊರೆ ಹೋಗಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿದ್ದು, ನೀಲಗಂಗವ್ವ ಚಲವಾದಿ ಅವರಿಗೆ ರಕ್ಷಣೆ ನೀಡುವ ಭರವಸೆ ನೀಡಿದ್ದಾರೆ. - [ಕಳ್ಳನ್ ಮಕ್ಕಳು!](https://mobiletime.in/2025/12/kidnapped-children/): ಶಾಲೆಗೆ ಹೋಗುವ ಮಕ್ಕಳು ಕಳ್ಳತನದ ಹಾದಿ ಹಿಡಿದಿದ್ದು, ಖರ್ಚಿಗಾಗಿ ಪೆಟ್ರೋಲ್ ಕದಿಯುವ ಸಾಹಸ ಮಾಡಿದ್ದಾರೆ. ಅಂಕೋಲಾದಲ್ಲಿನ ಅಪ್ರಾಪ್ತ ಕಳ್ಳರು ಕ್ಯಾಮರಾ ಕಣ್ಣಿಗೆ ಸಿಕ್ಕಿ ಬಿದ್ದಿದ್ದಾರೆ. ರಾತ್ರಿ ವೇಳೆ ಸಂಚರಿಸುವ ಇಬ್ಬರು ಮಕ್ಕಳು ಬೈಕಿನಿಂದ ಪೆಟ್ರೊಲ್ ಕದಿಯುವ ದೃಶ್ಯಾವಳಿಗಳು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ರಸ್ತೆ ಬದಿ ನಿಲ್ಲಿಸಿದ ಬೈಕಿನ ಪೆಟ್ರೋಲ್ ಕಳ್ಳ ಮಕ್ಕಳು ಹಿಡಿದಿದ್ದ ಬಾಟಲಿಗೆ ಭರ್ತಿಯಾಗಿದೆ. ಅಂಕೋಲಾ ಪಟ್ಟಣದ ಕೆನರಾ ಬ್ಯಾಂಕ್ ಹಿಂದಿನ ಗುಡಿಗಾರಗಲ್ಲಿ ರಸ್ತೆಯಲ್ಲಿ ಈ ಕಳ್ಳತನ ನಡೆದಿದೆ. ಬಾಟಲಿ ಹಿಡಿದು ಬರುವ ಇಬ್ಬರು ಮಕ್ಕಳು ಅಕ್ಕ-ಪಕ್ಕ ನೋಡುತ್ತಾರೆ. ಅಲ್ಲಿ ಯಾರೂ ಇಲ್ಲದಿರುವುದನ್ನು ಗಮನಿಸಿ ಬೈಕಿನ ಪೆಟ್ರೋಲ್ ತೆಗೆಯುತ್ತಾರೆ. ಅದಾದ ನಂತರ ಅವರು ಅಲ್ಲಿಂದ ಪರಾರಿಯಾಗಿದ್ದು, ಬೈಕ್ ನಿಲ್ಲಿಸಿದ ಜಾಗದಲ್ಲಿದ್ದ ಮನೆಯೊಂದರ ಸಿಸಿ ಕ್ಯಾಮರಾ ಈ ಚಿತ್ರಣವನ್ನು ಸೆರೆ ಹಿಡಿದಿದೆ. ಈಚೆಗೆ ಅಂಕೋಲಾದಲ್ಲಿ ಮನೆಯೊಳಗಿದ್ದ ಚಿನ್ನಾಭರಣ ಕಳ್ಳತನ, ವಾಹನ ಕಳ್ಳತನ ಪ್ರಕರಣ ವರದಿಯಾಗುತ್ತಿತ್ತು. ಇದೀಗ ಬೈಕ್ ಪೆಟ್ರೋಲ್ ಕಳ್ಳತನವೂ ಬೆಳಕಿಗೆ ಬಂದಿದೆ. ಬಾಲ್ಯದಲ್ಲಿಯೇ ಅಡ್ಡದಾರಿಹಿಡಿದ ಮಕ್ಕಳ ಬಗ್ಗೆ ಜನ ಆತಂಕವ್ಯಕ್ತಪಡಿಸಿದ್ದಾರೆ. - [ದೇವರ ದುಡ್ಡು ದುಷ್ಟರ ಪಾಲು!](https://mobiletime.in/2025/12/gods-money-is-the-share-of-the-wicked/): ದೇವಾಲಯಗಳ ಮೇಲೆ ಕಳ್ಳರ ಕಣ್ಣು ಬಿದ್ದಿದ್ದು, ಕಾಣಿಕೆ ಹುಂಡಿಯ ಹಣ ಕಣ್ಮರೆಯಾಗುತ್ತಿದೆ. ಬನವಾಸಿಯ ಗುಡ್ನಾಪುರದಲ್ಲಿರುವ ದೇಗುಲದಲ್ಲಿಯೂ ದುಷ್ಟರು ಕಾಣಿಕೆ ಹುಂಡಿ ದೋಚಿದ್ದಾರೆ. ಶಿರಸಿಯ ಬನವಾಸಿ ಬಳಿಯ ಗುಡ್ನಾಪುರದಲ್ಲಿ ಬಂಗಾರೇಶ್ವರ ದೇವಸ್ಥಾನವಿದೆ. ಅನೇಕ ಭಕ್ತರು ಈ ದೇವಾಲಯಕ್ಕೆ ನಡೆದುಕೊಳ್ಳುತ್ತಾರೆ. ದೇಗುಲದ ಹೊರಗೆ ಕಾಣಿಕೆ ಡಬ್ಬಿಯಿರಿಸಲಾಗಿದ್ದು, ಜನ ಭಕ್ತಿಯಿಂದ ಅಲ್ಲಿ ಕಾಣಿಕೆ ಸಲ್ಲಿಸುತ್ತಾರೆ. ಇದನ್ನು ಅರಿತಿದ್ದ ದುಷ್ಟರು ಆ ಕಾಣಿಕೆ ಡಬ್ಬಿಗೆ ಕನ್ನ ಹಾಕಿದ್ದಾರೆ. ಗುಡ್ನಾಪುರ ಬಂಗಾರೇಶ್ವರ ದೇವಸ್ಥಾನದ ಪ್ರಧಾನ ಕಾರ್ಯದರ್ಶಿ ಹನುಮಂತ ಕನ್ನಾ ನಾಯ್ಕ ಅವರು ನಿತ್ಯವೂ ದೇಗುಲಕ್ಕೆ ಭೇಟಿ ನೀಡುತ್ತಾರೆ. ಡಿಸೆಂಬರ್ 2ರ ಸಂಜೆ ಅವರು ಭೇಟಿ ನೀಡಿದ್ದು, ಆ ವೇಳೆ ಅಲ್ಲಿ ಯಾವುದೇ ಸಮಸ್ಯೆ ಕಾಣಲಿಲ್ಲ. ಕಾಣಿಕೆ ಡಬ್ಬಿ ಭದ್ರವಾಗಿದದನ್ನು ಅವರು ಗಮನಿಸಿದ್ದರು. ಆದರೆ, ಡಿಸೆಂಬರ್ 3ರಂದು ದೇಗುಲದ ಅರ್ಚಕ ಗಣಪತಿ ಶೇಟ್ ಅವರು ಹನುಮಂತ ನಾಯ್ಕ ಅವರಿಗೆ ಫೋನ್ ಮಾಡಿ ದುಗುಡವ್ಯಕ್ತಪಡಿಸಿದರು. `ಕಾಣಿಕೆ ಹುಂಡಿಯಲ್ಲಿದ್ದ ಕಾಸು ಕಳ್ಳತನವಾಗಿದೆ’ ಎಂದು ಗಣಪತಿ ಶೇಟ್ ಅವರು ಹೇಳಿದರು. ತಕ್ಷಣ ಹನುಮಂತ ನಾಯ್ಕ ಅವರು ದೇಗುಲ ಸಮಿತಿಯ ಇನ್ನಿತರ ಸದಸ್ಯರಿಗೆ ಫೋನ್ ಮಾಡಿ ವಿಷಯ ಮುಟ್ಟಿಸಿದರು. ಅವರೆಲ್ಲರೂ ಸೇರಿ ದೇಗುಲದ ಬಳಿ ಹೋದಾಗ ಅಲ್ಲಿದ್ದ ಎರಡು ಕಾಣಿಕೆ ಹುಂಡಿ ಜಖಂ ಆಗಿದ್ದವು. ಕಳ್ಳರು ಅದರೊಳಗಿದ್ದ ಅಂದಾಜು 10 ಸಾವಿರ ರೂ ಹಣವನ್ನು ದೋಚಿದ್ದರು. ದೇವರ ದುಡ್ಡನ್ನು ಬಿಡದೇ ಅಪಹರಿಸಿದವರ ಪತ್ತೆಗಾಗಿ ಹನುಮಂತ ನಾಯ್ಕ ಅವರು ಪೊಲೀಸ್ ದೂರು ನೀಡಿದರು. - [ನೌಕಾನೆಲೆಯಲ್ಲಿ ಪಟಾಕಿ ಸದ್ದು-ಸಡಗರ!](https://mobiletime.in/2025/12/fireworks-explode-at-the-naval-base/): ಕಾರವಾರದಲ್ಲಿರುವ ಕದಂಬ ನೌಕಾನೆಲೆಗೆ ಗುರುವಾರ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಭೇಟಿ ನೀಡಿದ್ದಾರೆ. ನೌಕಾನೆಲೆ ಅಧಿಕಾರಿಗಳು ಬಣ್ಣ ಬಣ್ಣದ ಸಿಡಿಮದ್ದುಗಳನ್ನು ಸಿಡಿಸಿ ಅವರನ್ನು ಸ್ವಾಗತಿಸಿದ್ದಾರೆ. 1971ರಲ್ಲಿ ಪಾಕಿಸ್ತಾನದ ವಿರುದ್ಧ ನಡೆದ ಯುದ್ಧದಲ್ಲಿ ಡಿಸೆಂಬರ್ 4ರಂದು ಕರಾಚಿಯ ಬಂದರಿನ ಮೇಲೆ ಭಾರತ ದಾಳಿ ನಡೆಸಿ ವಿಜಯ ಸಾಧಿಸಿದ ನೆನಪಿಗೆ ಪ್ರತಿ ವರ್ಷ ಡಿಸೆಂಬರ್ 4ರಂದು ಭಾರತೀಯ ನೌಕಾದಿನ ಆಚರಿಸಲಾಗುತ್ತಿದೆ. ಭಾರತೀಯ ನೌಕಾ ದಿನಾಚರಣೆಯ ಪ್ರಯುಕ್ತ ಕಾರವಾರದ ಐಎನ್‌ಎಸ್ ಕದಂಬ ನೌಕಾನೆಲೆಯ ನೌಕಾದಳ ಭವನದ ಆವರಣದಲ್ಲಿ ಗುರುವಾರ ನಡೆದ ಕಾರ್ಯಕ್ರಮದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಭಾಗವಹಿಸಿದ್ದಾರೆ. ಕಾರ್ಯಕ್ರಮದಲ್ಲಿ ನೌಕಾ ಸಿಬ್ಬಂದಿ ವಾದ್ಯ ಪರಿಕರಗಳಲ್ಲಿ ದೇಶಭಕ್ತಿ ಗೀತೆಗಳನ್ನು ನುಡಿಸಿದರು. ಬ್ಯಾಂಡ್ ಸಿಬ್ಬಂದಿ ಬೀಟಿಂಗ್ ರಿಟ್ರೀಟ್ ಮೂಲಕ ನೌಕಾಪಡೆಯ ಸಿಬ್ಬಂದಿಯ ತ್ಯಾಗ, ಬಲಿದಾನ ಮತ್ತು ಸಾಮರ್ಥ್ಯವನ್ನು ಸ್ಮರಿಸಿದರು. ನಂತರ ನೌಕಾಪಡೆಯ ಧ್ವಜದ ಅವರೋಹಣ ನಡೆಯಿತು. ಸಂಭ್ರಮಾಚರಣೆಯ ಭಾಗವಾಗಿ ನೌಕಾಪಡೆಯ ನೌಕೆಗಳಿಗೆ ಆಕರ್ಷಕ ವಿದ್ಯುತ್ ದೀಪಾಲಂಕಾರ ಮಾಡಲಾಗಿದ್ದು, ಅದು ಗಮನಸೆಳೆಯಿತು. ನೌಕೆಗಳಿಂದ ಸಿಡಿಮದ್ದುಗಳನ್ನು ಸಿಡಿಸಲಾಯಿತು. ನೌಕಾಪಡೆಯ ಸಿಬ್ಬಂದಿ, ನೌಕಾ ಅಗ್ನಿವೀರರು, ನೌಕಾನೆಲೆ ಶಾಲೆಯ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಕರ್ನಾಟಕ ನೌಕಾ ನೆಲೆಯ ಮುಖ್ಯಸ್ಥ ಫ್ಲ್ಯಾಗ್ ಕಮಾಂಡೆಓಟ್ ಆಫಿಸರ್ ರಿಯರ್ ಅಡ್ಮಿರಲ್ ವಿಕ್ರಂ ಮೆನನ್, ಜಿಲ್ಲಾಧಿಕಾರಿ ಕೆ ಲಕ್ಷ್ಮಿ ಪ್ರಿಯಾ, ಜಿ ಪಂ ಸಿಇಓ ದಿಲೀಷ್ ಶಶಿ, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ದೀಪನ್ ಎಂ ಎನ್, ಉಪಅರಣ್ಯ ಸಂರಕ್ಷಣಾಧಿಕಾರಿ ರವಿಶಂಕರ್ ಅವರು ಈ ಕಾರ್ಯಕ್ರಮದಲ್ಲಿದ್ದರು. - [ಅರಣ್ಯ ಹಕ್ಕು: ದಾರಿ ತಪ್ಪಿಸುವವರ ವಿರುದ್ಧ ರೈತ ಸಂಘದ ಸಮರ!](https://mobiletime.in/2025/12/forest-rights-farmers-unions-fight-against-those-who-mislead/): ಬಿಜೆಪಿ ಹಾಗೂ ಕಾಂಗ್ರೆಸ್ಸಿನ ಅನೇಕ ನಾಯಕರ ವಿರುದ್ಧ ಕರ್ನಾಟಕ ಪ್ರಾಂತ ರೈತ ಸಂಘ ಗರಂ ಆಗಿದೆ. ಜೊತೆಗೆ ಅರಣ್ಯ ಹಕ್ಕು ಹೆಸರಿನಲ್ಲಿ ಜನರ ದಾರಿ ತಪ್ಪಿಸುವವರ ಬಂಡವಾಳ ಬಯಲು ಮಾಡುವುದಾಗಿಯೂ ಎಚ್ಚರಿಕೆ ನೀಡಿದೆ. `ಅನೇಕ ನಾಯಕರು ಅಧಿಕಾರದಲ್ಲಿರುವಾಗ ಅರಣ್ಯವಾಸಿಗಳಿಗೆ ಹಕ್ಕುಪತ್ರ ನೀಡಿಲ್ಲ. ಹಿರಿಯರಾದ ಕಾಗೋಡು ತಿಮ್ಮಪ್ಪ ಅವರು ಕಂದಾಯ ಮಂತ್ರಿ ಆಗಿದ್ದಾಗಲೂ ಹಕ್ಕು ಪತ್ರ ದೊರೆಯಲಿಲ್ಲ. ಆರ್ ವಿ ದೇಶಪಾಂಡೆ ಅವರು ಮಂತ್ರಿಯಾದಾಗಲೂ ಹಕ್ಕು ಪತ್ರ ಸಿಕ್ಕಿಲ್ಲ. ಈಗ ಎಚ್ ಕೆ ಪಾಟೀಲ್ ಅವರು ಕಾನೂನು ಮಂತ್ರಿಯಾದರೂ ಸಮಸ್ಯೆ ಆಲಿಸುತ್ತಿಲ್ಲ’ ಎಂದು ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಅಧ್ಯಕ್ಷ ಶಾಂತಾರಾಮ ನಾಯಕ ಅವರು ಅಸಮಧಾನವ್ಯಕ್ತಪಡಿಸಿದ್ದಾರೆ. ಅಂಕೋಲಾದ ಬಾಳೆಗುಳಿಯಲ್ಲಿ ನಡೆದ ರೈತ ಸಮ್ಮೇಳನದಲ್ಲಿ ಮಾತನಾಡಿದ ಅವರು `ಕಾನೂನು ಜಾರಿಯಾಗಿ 20 ವರ್ಷ ಆದರೂ ರೈತರಿಗೆ ಭೂಮಿ ಸಿಕ್ಕಿಲ್ಲ. ಮೂರು ತಲೆಮಾರಿನ ದಾಖಲೆ ಇಲ್ಲ ಎಂದು ಹೇಳಿ ಅರ್ಜಿಗಳನ್ನು ತಿರಸ್ಕರಿಸಲಾಗುತ್ತಿದೆ. ಕೆಲವರು ನಾಯಕರ ಹೆಸರು ಹೇಳಿ ರೈತರ ದಿಕ್ಕು ತಪ್ಪಿಸುತ್ತಿದ್ದಾರೆ. ಅರಣ್ಯ ಸಾಗುವಳಿದಾರರಿಗೆ ಕಾನೂನು ತಿಳುವಳಿಕೆ ಎಂದು ಕೆಲವರು ನೈಜ ಪ್ರಶ್ನೆಯನ್ನು ಮರೆ ಮಾಚುತ್ತಿದ್ದಾರೆ. ತಮ್ಮ ರಾಜಕೀಯ ಹಾಗೂ ಸ್ವಾರ್ಥಕ್ಕಾಗಿ ಮುಗ್ದ ಜನರ ದಾರಿ ತಪ್ಪಿಸುವವರ ನೈಜ ಬಣ್ಣ ಬಯಲು ಮಾಡಲು ರೈತ ಸಂಘ ಹಿಂಜರಿಯುವುದಿಲ್ಲ’ ಎಂದು ಶಾಂತಾರಾಮ ನಾಯಕ ಅವರು ಹೇಳಿದ್ದಾರೆ. `ಚಳಿಗಾಲದ ಅಧಿವೇಶನದಲ್ಲಿ ಅರಣ್ಯ ಹಕ್ಕು ಸಮಸ್ಯೆ ಬಗೆಹರಿಯಬೇಕು. ಅರಣ್ಯ ಭೂಮಿ ಹಕ್ಕು ಕೊಡಲು ಮೂರು ತಲೆಮಾರಿನ ದಾಖಲೆ ಕೇಳುವುದರಿಂದ ಸಮಸ್ಯೆ ಆಗಿದ್ದು, ಅದಕ್ಕೆ ತಿದ್ದುಪಡಿ ಮಾಡಬೇಕು’ ಎಂದು ಅವರು ಆಗ್ರಹಿಸಿದ್ದಾರೆ. ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ರೈತರ ಪರ ಧ್ವನಿ ಎತ್ತಬೇಕಿದೆ’ ಎಂದವರು ಒತ್ತಾಯಿಸಿದ್ದಾರೆ. `ಮುಂದಿನ ಮೂರು ತಿಂಗಳಿನಲ್ಲಿ ಗ್ರಾಮ ಮಟ್ಟದಿಂದ ಕೇಂದ್ರದವರೆಗೂ ರೈತ ಸಮ್ಮೇಳನ ನಡೆಯಲಿದೆ’ ಎಂದವರು ಹೇಳಿದ್ದಾರೆ. ಸಂಘಟನೆ ತಾಲೂಕು ಸಮಿತಿ ಅಧ್ಯಕ್ಷ ಗೌರೀಶ ನಾಯಕ, ಕಾರ್ಯದರ್ಶಿ ಸಂತೋಷ ನಾಯ್ಕ, ವೆಂಕಟರಮಣ ಗೌಡ ಹಾಗೂ ಮಾದೇವ ಗೌಡ ಕಾರ್ಯಕ್ರಮ ನಿರ್ವಹಿಸಿದರು. - [ಗ್ರಾಮ ಪಂಚಾಯತಗೆ ಸಿಕ್ಕಿತು ಪುಕ್ಕಟೆ ಮರಳು!](https://mobiletime.in/2025/12/the-gram-panchayat-got-the-sand/): ಉತ್ತರ ಕನ್ನಡ ಜಿಲ್ಲೆಯ ಮರಳು ಅಕ್ರಮವಾಗಿ ಗೋವಾ ಸಾಗಾಟವಾಗುತ್ತಿದ್ದು, ಇದನ್ನು ಅರಿತ ಅಧಿಕಾರಿಗಳು ಗೋವಾ ನೋಂದಣಿಯ ಲಾರಿಯೊಂದನ್ನು ತಡೆದಿದ್ದಾರೆ. ಸಾಗಾಟವಾಗುತ್ತಿದ್ದ ಮರಳನ್ನು ಜಪ್ತು ಮಾಡಿದ್ದಾರೆ. ಕಾರವಾರದಿಂದ ಗೋವಾಗೆ ಮರಳು ಸಾಗಾಟವಾಗುತ್ತಿರುವ ಬಗ್ಗೆ ಕಾರವಾರ ತಹಶೀಲ್ದಾರ್ ಕಚೇರಿಗೆ ಮಾಹಿತಿ ಬಂದಿತು. ತಹಶೀಲ್ದಾರ್ ನಿಶ್ಚಲ್ ನರೋನಾ ಅವರು ಈ ಬಗ್ಗೆ ಗಣಿ ಇಲಾಖೆಯವರಿಗೆ ಫೋನ್ ಮಾಡಿದರು. ಗಣಿ ಇಲಾಖೆ ಅಧಿಕಾರಿಗಳು ಚಿತ್ತಾಕುಲಕ್ಕೆ ಹೋದಾಗ ಅಲ್ಲಿ ಗೋವಾ ನೋಂದಣಿಯ ವಾಹನವೊಂದು ಕಾಣಿಸಿತು. ಆ ವಾಹನಕ್ಕೆ ಅಡ್ಡಲಾಗಿ ಕೈ ಮಾಡಿದಾಗ ಅದರಲ್ಲಿ ಮರಳು ತುಂಬಿತ್ತು. ಸದ್ಯ ಮರಳುಗಾರಿಕೆಗೆ ಪರವಾನಿಗೆ ಇಲ್ಲದಿರುವುದನ್ನು ಅರಿತ ಅಧಿಕಾರಿಗಳು ಅದನ್ನು ವಶಕ್ಕೆಪಡೆದರು. ಚಿತ್ತಾಕುಲಾ ಗ್ರಾಮದ ಸಾವರಪೈ ಮಜರೆಯಲ್ಲಿ ಮರಳನ್ನು ಅಕ್ರಮವಾಗಿ ದಾಸ್ತಾನು ಮಾಡಲಾಗಿದ್ದು, ಅದನ್ನು ಪತ್ತೆ ಹಚ್ಚಿದರು. ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿ ಜಯರಾಮ್ ಹಾಗೂ ಚಿತ್ತಾಕುಲಾ ಗ್ರಾಮ ಆಡಳಿತ ಅಧಿಕಾರಿ ಸಂತೋಷ್ ಬಾಂದೇಕರ ಈ ಕಾರ್ಯಾಚರಣೆ ನಡೆಸಿದರು. ನಂತರ ಮರಳನ್ನು ಚಿತ್ತಾಕುಲ ಗ್ರಾಮ ಪಂಚಾಯತಗೆ ಹಸ್ತಾಂತರಿಸಿದರು. - [ಆತ ಉಪನ್ಯಾಸಕ ಅಲ್ಲ.. ಕಾಮುಕ!](https://mobiletime.in/2025/12/he-is-not-a-lecturer-a-romantic/): ಪ್ರತಿಷ್ಠಿತ ಪಿಯು ಕಾಲೇಜಿನಲ್ಲಿ ಉನ್ನತ ಹುದ್ದೆ ಗಿಟ್ಟಿಸಿಕೊಂಡಿರುವ ಹನುಂತ ಕುಂಬಾರ ಅವರು ಆ ಹುದ್ದೆಯನ್ನು ದುರುಪಯೋಗಪಡಿಸಿಕೊಂಡಿದ್ದಾರೆ. ವಿದ್ಯಾರ್ಥಿನಿಯರ ಮೈ ಮುಟ್ಟುವ ಮೂಲಕ ಕಾಲೇಜಿನ ಪ್ರಾಚಾರ್ಯ ಸ್ಥಾನಕ್ಕೆ ಅವರು ಧಕ್ಕೆ ತಂದಿದ್ದಾರೆ. ಆ ಅಯೋಗ್ಯ ಪ್ರಾಚಾರ್ಯರ ವಿರುದ್ಧ ವಿದ್ಯಾರ್ಥಿಗಳು ಅಸಮಧಾನವ್ಯಕ್ತಪಡಿಸಿದ್ದಾರೆ. ದಾಂಡೇಲಿಯ ಕನ್ಯಾ ವಿದ್ಯಾಲಯದಲ್ಲಿ ಹನುಮಂತ ಬಿ ಕುಂಬಾರ್ ಅವರು ಪ್ರಾಚಾರ್ಯರಾಗಿದ್ದಾರೆ. 2022ರಲ್ಲಿ ಪ್ರಾಚಾರ್ಯರಾಗಿ ಅಧಿಕಾರವಹಿಸಿಕೊಂಡ ಅವರು ಅಲ್ಲಿ ಉಪನ್ಯಾಸಕಾರಿಗಿಯೂ ಅವರು ಕೆಲಸ ಮಾಡುತ್ತಿದ್ದಾರೆ. ಪಾಠ ಮಾಡುವ ವೇಳೆ ಮಕ್ಕಳ ಮೈ ಮುಟ್ಟುವುದು ಅವರ ಹವ್ಯಾಸ. ಅದರ ಜೊತೆ ಹೆಣ್ಣು ಮಕ್ಕಳನ್ನು ಉದ್ದೇಶಿಸಿ ಅಶ್ಲೀಲ ಶಬ್ದಗಳ ಪ್ರಯೋಗ ಅವರ ಸಂಪ್ರದಾಯ. ತಮ್ಮ ಮಾತು ಒಪ್ಪಿಕೊಳ್ಳದ ವಿದ್ಯಾರ್ಥಿನಿಯರಿಗೆ ನಿಂದಿಸುವುದು ಅವರ ಹುಟ್ಟು ಗುಣ. ಪ್ರಾಚಾರ್ಯ ಹನುಮಂತ ಬಿ ಕುಂಬಾರ್ ಅವರ ವರ್ತನೆಗೆ ಆ ಕಾಲೇಜಿನ ವಿದ್ಯಾರ್ಥಿನಿಯರು ಬೇಸರಿಸಿದ್ದಾರೆ. ತಮಗಾದ ಹಿಂಸೆ ಬಗ್ಗೆ ಪಾಲಕರಿಗೆ ತಿಳಿಸಿದ್ದು, ಪಾಲಕರು ವಿದ್ಯಾರ್ಥಿಗಳ ಜೊತೆ ಸೇರಿ ಪ್ರತಿಭಟನೆ ನಡೆಸಿದ್ದಾರೆ. ಕಾಲೇಜು ಆವರಣದಲ್ಲಿ ನಡೆದ ಪ್ರತಿಭಟನೆಯಲ್ಲಿ ಪ್ರಾಚಾರ್ಯರ ವಿರುದ್ಧ ಪಾಲಕರು ಆಕ್ರೋಶವ್ಯಕ್ತಪಡಿಸಿದ್ದಾರೆ. ಈ ಹಿನ್ನಲೆ ಕಾಲೇಜಿನ ಆಡಳಿತ ಮಂಡಳಿಯವರು ಪ್ರಾಚಾರ್ಯರ ವಿಚಾರಣೆ ನಡೆಸಿದ್ದಾರೆ. ಈ ವೇಳೆ ವಿದ್ಯಾರ್ಥಿನಿಯರು ತಮಗಾದ ಕೆಟ್ಟ ಅನುಭವಗಳನ್ನು ಲಿಖಿತವಾಗಿ ತಿಳಿಸಿದ್ದಾರೆ. ಈ ಎಲ್ಲಾ ಹಿನ್ನಲೆ ದಾಂಡೇಲಿ ವೆಲ್ ಪೆರ್ ಸೊಸೈಟಿಯವರು ಪ್ರಾಚಾರ್ಯ ಹನುಮಂತ ಕುಂಬಾರ್ ವಿರುದ್ಧ ಪೊಲೀಸ್ ದೂರು ನೀಡಿದ್ದಾರೆ. ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ ಕಾರಣ ಹನುಂತ ಕುಂಬಾರರ ವಿರುದ್ಧ ದಾಂಡೇಲಿ ಪೊಲೀಸರು ಪೋಕ್ಸೋ ಕಾಯ್ದೆ ಅಡಿ ಪ್ರಕರಣ ದಾಖಲಿಸಿದ್ದಾರೆ. ಪಿಸೈ ಅಮೀನ್ ಅತ್ತಾರ್ ಅವರು ಪ್ರಕರಣದ ತನಿಖೆ ಶುರು ಮಾಡಿದ್ದಾರೆ. - [2025 ಡಿಸೆಂಬರ್ 4ರ ದಿನ ಭವಿಷ್ಯ](https://mobiletime.in/2025/12/prediction-for-december-4-2025/): ಮೇಷ ರಾಶಿ: ನಿಮ್ಮ ಸಂಪತ್ತು ಮತ್ತು ಸೌಕರ್ಯಗಳು ದ್ವಿಗುಣವಾಗುವ ಸಮಯ ಬಂದಿದೆ. ಹಣಕಾಸಿನಲ್ಲಿ ಅದೃಷ್ಟ ಬೆಂಬಲ ನೀಡುತ್ತದೆ. ಹಿಂದಿನ ಹೂಡಿಕೆಯಿಂದ ಲಾಭ ಸಿಗುತ್ತದೆ. ವ್ಯವಹಾರ ಹಾಗೂ ಹೊಸ ಪ್ರಾರಂಭಕ್ಕೆ ಶುಭ ದಿನ. ನಿಮ್ಮ ಗೌರವ ಹೆಚ್ಚಾಗುತ್ತದೆ. ವೃಷಭ ರಾಶಿ: ವ್ಯಾಪಾರ ಲಾಭ ಸಿಗಲಿದೆ. ನಿರೀಕ್ಷೆಗಿಂತ ಹೆಚ್ಚು ಸುಖ ಅನುಭವಿಸುವಿರಿ. ಐಷಾರಾಮಿ ವಸ್ತು ಮತ್ತು ವಾಹನ ಖರೀದಿಗೆ ಉತ್ತಮ ಸಮಯ. ವಿದೇಶಿ ಮೂಲಗಳಿಂದ ಪ್ರಯೋಜನ ಸಿಗಲಿದೆ. ಮಿಥುನ ರಾಶಿ: ಈ ದಿನ ನಿಮಗೆ ಲಾಭದಾಯಕವಾಗಿದೆ. ಸ್ವಂತ ಹುದ್ದೆ ಉತ್ತಮ. ಹಣ ಆಗಮನ ಪ್ರಯತ್ನಗಳು ಆರಂಭದಲ್ಲಿ ಬೇಸರ ತಂದರೂ ಕ್ರಮೇಣ ಸುಧಾರಣೆ ಕಾಣುತ್ತವೆ. ಕರ್ಕ ರಾಶಿ: ಶೈಕ್ಷಣಿಕ ಪ್ರಯತ್ನಗಳಲ್ಲಿ ಅದೃಷ್ಟ ಕಾಣಲಿದೆ. ನಿಮ್ಮ ಮನದಾಸೆ ಈಡೇರಲಿದೆ. ಕುಟುಂಬ ಜೀವನ ಆಹ್ಲಾದಕರವಾಗಿರಲಿದೆ. ಆರೋಗ್ಯ ಸುಧಾರಣೆ ಆಗಲಿದೆ. ಸಿಂಹ ರಾಶಿ: ಕೆಲ ಕೆಲಸಗಳಿಗೆ ಅಡೆತಡೆ ಆಗುವುದು ಸಾಮಾನ್ಯ. ಆದರೆ, ಬುದ್ಧಿವಂತಿಕೆಯಿAದ ವ್ಯವಹಾರ ಲಾಭ ಆಗಲಿದೆ. ಕುಟುಂಬ ಬೆಂಬಲ ಸಿಗುತ್ತದೆ. ದೂರ ಪ್ರಯಾಣ ಒಳ್ಳೆಯದಲ್ಲ. ಸೋಮಾರಿತನದಿಂದ ಹೊರ ಬಂದರೆ ಯಶಸ್ಸು ಸಿಗಲಿದೆ. ಕನ್ಯಾ ರಾಶಿ: ಕೆಲಸ ಯೋಜನೆಗಳು ಉತ್ತಮವಾಗಿರುತ್ತದೆ. ಆಶ್ಚರ್ಯಕರ ರೀತಿಯಲ್ಲಿ ಆರ್ಥಿಕ ಲಾಭ ಸಿಗಲಿದೆ. ವಿದ್ಯಾರ್ಥಿಗಳಿಗೆ ಯಶಸ್ಸು ಸಿಗಲಿದೆ. ಸರ್ಕಾರಿ ಯೋಜನೆಗಳು ನೆರವಿಗೆ ಬರಲಿದೆ. ತುಲಾ ರಾಶಿ: ಪ್ರೀತಿಯಲ್ಲಿ ವಿವೇಚನಾ ಶಕ್ತಿ ಬಳಸುವುದು ಉತ್ತಮ. ಹೊಸ ಹಣಕಾಸು ಚಿಂತನೆ ಲಾಭಕರವಾಗಲಿದೆ. ನಿಮ್ಮ ಚಟುವಟಿಕೆಗಳು ಆದಾಯ ತರುತ್ತವೆ. ಧ್ಯಾನ-ಯೋಗ ಪ್ರಯೋಜನಕಾರಿ. ವೃಶ್ಚಿಕ ರಾಶಿ: ಈ ದಿನ ಆಹ್ಲಾದಕರವಾಗಿರಲಿದೆ. ಮುಖ್ಯ ಆಶಯ ಈಡೇರಲಿದೆ. ಉದ್ಯೋಗದಲ್ಲಿ ಬದಲಾವಣೆ ಸಮಯ. ಪ್ರಯಾಣಗಳು ಯಶಸ್ವಿಯಾಗಲಿದೆ. ಐಷಾರಾಮಿ ಜೀವನ ಸಂತೋಷ ಕೊಡಲಿದೆ. ಧನು ರಾಶಿ: ಉದ್ಯೋಗದಲ್ಲಿ ಮುನ್ನಡೆ ಸಾಧೀಸುವಿರಿ. ಹಣಕಾಸು ಸ್ಥಿರತೆ ಕಾಪಾಡಲು ಪ್ರಯತ್ನಿಸಿ. ಕುಟುಂಬದಲ್ಲಿ ಸಂತೋಷ ಕಾಣುವಿರಿ. ವಿದ್ಯಾರ್ಥಿಗಳ ಜೀವನದಲ್ಲಿ ಪ್ರಗತಿ ಆಗಲಿದೆ. ಮಕರ ರಾಶಿ: ವೃತ್ತಿ ಅವಕಾಶಗಳು ಬದಲಾಗಲಿದೆ. ಕುಟುಂಬದವರ ಬೆಂಬಲದಿAದ ಯಶಸ್ಸು ಸಾಧ್ಯ. ಆರೋಗ್ಯದ ಬಗ್ಗೆ ಕಾಳಜಿಯಿರಲಿ. ವ್ಯವಹಾರ ಲಾಭ ಕೊಡಲಿದೆ. ಕುಂಭ ರಾಶಿ: ಹಣದ ಆಗಮನ ಆಗಲಿದೆ. ಕೆಲಸದಲ್ಲಿ ನಿರ್ಧಾರ ಸರಿಯಾಗಿರಲಿ. ಸ್ನೇಹಿತರ ಜೊತೆ ಸಮಯ ಕಳೆದರೆ ಮನಸ್ಸು ಹಗುರವಾಗುತ್ತದೆ. ಆರ್ಥಿಕ ಯೋಜನೆಗಳನ್ನು ರೂಪಿಸಲು ಸಕಾಲ. ಮೀನ ರಾಶಿ: ಕಡಿಮೆ ಶ್ರಮಕ್ಕೆ ಹೆಚ್ಚು ಲಾಭ ಸಿಗಲಿದೆ. ಉದ್ದಿಮೆ-ವ್ಯಾಪಾರಗಳಲ್ಲಿ ಉತ್ತಮ ಫಲಿತಾಂಶ ಸಿಗಲಿದೆ. ಮಕ್ಕಳ ವಿದ್ಯೆಗೆ ಪ್ರೋತ್ಸಾಹ ಅಗತ್ಯ. ಈ ದಿನ ನಿಮಗೆ ಉತ್ತಮ ಕೆಲಸಕ್ಕೆ ಪ್ರೇರಣೆ ಆಗಲಿದೆ. - [ವಿದ್ಯುತ್ ಸ್ಪರ್ಶಕ್ಕೆ ವಿಶ್ವೇಶ್ವರನ ಸಾವು: ಮಜ್ಜಿಗೆ ಹಿಂಡಲು ಹೋದವ ಮಸಣ ಸೇರಿದ!](https://mobiletime.in/2025/12/vishweshwar-dies-due-to-electric-shock-he-went-to-squeeze-buttermilk-and-got-electrocuted/): ಕೃಷಿ, ಹೈನುಗಾರಿಕೆ ಮಾಡಿಕೊಂಡಿದ್ದ ವಿಶ್ವೇಶ್ವರ ಭಟ್ಟ ಅವರು ವಿದ್ಯುತ್ ಸ್ಪರ್ಶದಿಂದ ಸಾವನಪ್ಪಿದ್ದಾರೆ. ಯಲ್ಲಾಪುರದ ಬಿಸಗೋಡಿನ ನಾಗರಖಾನ್ ಬಳಿ ವಿಶ್ವೇಶ್ವರ ಗಣಪತಿ ಭಟ್ಟ (73) ಅವರು ವಾಸವಾಗಿದ್ದರು. ತಮ್ಮ ಇಳಿ ವಯಸ್ಸಿನಲ್ಲಿಯೂ ಅವರು ಉತ್ಸಾಹದಿಂದ ಕೃಷಿ ಕಾಯಕದಲ್ಲಿ ತೊಡಗಿದ್ದರು. ಡಿಸೆಂಬರ್ 3ರಂದು ಅವರು ವಿದ್ಯುತ್ ಚಾಲಿತ ಮಜ್ಜಿಗೆ ಕಡಿಯುವ ಯಂತ್ರವನ್ನು ಬಳಸಿದ್ದರು. ಆ ಯಂತ್ರವೇ ಅವರ ಜೀವಕ್ಕೆ ಮುಳುವಾಗಿದೆ. ಮಧ್ಯಾಹ್ನ 12.35ರ ಆಸುಪಾಸಿನಲ್ಲಿ ಅವರು ಎಂದಿನoತೆ ಮಿಶನ್ ಚಾಲು ಮಾಡಿದ್ದರು. ಆದರೆ, ಆ ಮಿಶನ್ ಮೂಲಕ ಪ್ರವಹಿಸಿದ ವಿದ್ಯುತ್ ವಿಶ್ವೇಶ್ವರ ಭಟ್ಟ ಅವರ ದೇಹ ಸೇರಿತು. ಅಲ್ಲಿಯೇ ಕುಸಿದು ಬಿದ್ದ ವಿಶ್ವೇಶ್ವರ ಭಟ್ಟ ಅವರು ಕೊನೆಯುಸಿರೆಳೆದರು. `ಆಕಸ್ಮಿಕ ವಿದ್ಯುತ್ ಅವಘಡವೇ ಈ ಮರಣಕ್ಕೆ ಕಾರಣ’ ಎಂದು ವಿಶ್ವೇಶ್ವರ ಭಟ್ಟ ಅವರ ಪುತ್ರ ಗಣಪತಿ ಭಟ್ಟ ಅವರು ಹೇಳಿದ್ದಾರೆ. ಈ ಸಾವಿನ ಬಗ್ಗೆ ಅರಿತು ಯಲ್ಲಾಪುರ ಪಿಎಸ್‌ಐ ಮಹಾವೀರ ಕಾಂಬಳೆ ಅವರು ಪ್ರಕರಣ ದಾಖಲಿಸಿದ್ದಾರೆ. `ಯಂತ್ರೋಪಕರಣ ಬಳಕೆ ಮಾಡುವಾಗ ಎಚ್ಚರಿಕೆವಹಿಸಿ’   - [ಪ್ರವೇಶವಿಲ್ಲದ ಅಡುಗೆಮನೆಗೆ ಅಧಿಕಾರಿಗಳ ದಾಳಿ!](https://mobiletime.in/2025/12/authorities-raid-an-inaccessible-kitchen/): `ಒಳಗೆ ಪ್ರವೇಶವಿಲ್ಲ’ ಎಂದು ಬೋರ್ಡು ಹಾಕಿದ ಹೊಟೇಲ್ ಅಡುಗೆ ಮನೆಗೆ ಅಧಿಕಾರಿಗಳು ಪ್ರವೇಶಿಸಿದ್ದಾರೆ. ಅಲ್ಲಿನ ಅಶುಚಿತ್ವ ನೋಡಿ ಕಿಡಿಕಾರಿದ್ದಾರೆ. ಶಿರಸಿ ತಹಶೀಲ್ದಾರ್ ಪುಟ್ಟರಾಜ ಗೌಡ ಅವರು ಬುಧವಾರ ನಗರದ ವಿವಿಧ ಹೊಟೇಲುಗಳಿಗೆ ದಿಢೀರ್ ಭೇಟಿ ನೀಡಿದರು. ಗೃಹ ಬಳಕೆಗೆ ಲಭ್ಯವಿರುವ ಸಿಲೆಂಡರುಗಳನ್ನು ವಾಣಿಜ್ಯ ಉದ್ದೇಶಕ್ಕೆ ಬಳಸುತ್ತಿರುವುದನ್ನು ಅವರು ಪತ್ತೆ ಮಾಡಿದರು. ನಿಯಮಗಳ ಪ್ರಕಾರ ತಿಂಡಿ-ತಿನಿಸುಗಳ ಬೆಲೆ ನಮೂದಿಸದ ಬಗ್ಗೆ ಆಕ್ಷೇಪಿಸಿದರು. ಅಡುಗೆ ಮನೆಯಲ್ಲಿ ಶುಚಿತ್ವ ಕಾಪಾಡದ ಹೊಟೇಲ್ ಮಾಲಕರಿಗೆ ಬಿಸಿ ಮುಟ್ಟಿಸಿದರು. ಪರವಾನಿಗೆಪಡೆಯದೇ ಹೊಟೇಲ್ ನಡೆಸುತ್ತಿದ್ದವರಿಗೆ ಕಾನೂನು ಪಾಠ ಮಾಡಿದರು. ಪರವಾನಿಗೆ ಪಡೆದವರು ಅದನ್ನು ಸಾರ್ವಜನಿಕವಾಗಿ ಪ್ರದರ್ಶಿಸಬೇಕು. ಶುಚಿತ್ವಕ್ಕೆ ಒತ್ತು ಕೊಡಬೇಕು ಎಂದು ಒತ್ತಿ ಹೇಳಿದರು. ದುಬಾರಿ ಬೆಲೆಯಲ್ಲಿ ತಿಂಡಿ-ತಿನಿಸು ಮಾರುತ್ತಿರುವುದನ್ನು ಪ್ರಶ್ನಿಸಿದರು. ಹೊಟೇಲ್ ಸಿಬ್ಬಂದಿಯನ್ನು ಮಾತನಾಡಿಸಿ ಅವರ ವೇತನದ ಬಗ್ಗೆ ತಿಳಿದುಕೊಂಡರು. ಎಲ್ಲಾ ಕಾನೂನು ಪಾಲನೆಗೆ ಹೊಟೇಲ್ ಮಾಲಕರು ಗಡುವು ಕೇಳಿದ್ದು, ದಂಡ ವಿಧಿಸಿ ಬಿಸಿ ಮುಟ್ಟಿಸಿದರು. `ನಿಯಮ ಅನುಸರಿಸದೇ ಇದ್ದರೆ ಹೊಟೇಲ್ ಬಾಗಿಲು ಮುಚ್ಚಿಸುವೆ’ ಎಂದು ತಹಶೀಲ್ದಾರ್ ಪುಟ್ಟರಾಜ ಗೌಡ ಅವರು ಎಚ್ಚರಿಸಿದರು. ಆಹಾರ ಇಲಾಖೆ ಅಧಿಕಾರಿಗಳು ಸಹ ತಹಶೀಲ್ದಾರ್ ಅವರ ಜೊತೆಗಿದ್ದರು. ಸಾರ್ವಜನಿಕರ ದೂರಿಗೆ ಸ್ಪಂದಿಸಿ ಹೊಟೇಲ್ ಮೇಲೆ ದಾಳಿ ನಡೆಸಿರುವುದಾಗಿ ಅಧಿಕಾರಿಗಳು ತಿಳಿಸಿದರು. - [ಶಾಲಾ ಮಕ್ಕಳಿಗೆ ಕಳಪೆ ಆಹಾರ!](https://mobiletime.in/2025/12/poor-food-for-school-children/): ಸರ್ಕಾರಿ ಶಾಲೆಯಲ್ಲಿ ಕಳಪೆ ಊಟ ನೀಡುವುದನ್ನು ಖಂಡಿಸಿ ಪಾಲಕರು ಶಾಲೆಗೆ ಮುತ್ತಿಗೆ ಹಾಕಿದ್ದಾರೆ. ಉತ್ತಮ ಸಾಮಗ್ರಿ ಸರಬರಾಜು ಆಗುವವರೆಗೂ ಬಿಸಿಯೂಟ ನಿಲ್ಲಿಸುವಂತೆ ಆಗ್ರಹಿಸಿದ್ದಾರೆ. ಹಳಿಯಾಳದ ಯಡೋಗಾ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಕಳಪೆ ಗುಣಮಟ್ಟದ ಆಹಾರ ಸರಬರಾಜು ಆಗುತ್ತಿದೆ. ಸಾಮಗ್ರಿಗಳಲ್ಲಿ ಕೀಟ-ಕಸ ಕಾಣಿಸುತ್ತಿದೆ. ಇದರಿಂದ ಮಕ್ಕಳ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದ್ದು, ಪಾಲಕರು ಅಧಿಕಾರಿಗಳನ್ನು ತರಾಠೆಗೆ ತೆಗೆದುಕೊಂಡಿದ್ದಾರೆ. ಶಾಲೆಗೆ ಮುತ್ತಿಗೆ ಹಾಕಿದ ಪಾಲಕರು ಉತ್ತಮ ಆಹಾರ ಪದಾರ್ಥ ಸರಬರಾಜಾಗುವವರೆಗೂ ಬಿಸಿಯೂಟ ನಿಲ್ಲಿಸುವಂತೆ ಒತ್ತಡ ಹಾಕಿದ್ದಾರೆ. ಹುಳುಗಳಿಂದ ಕೂಡಿದ ಆಹಾರ ಸಾಮಗ್ರಿಗಳನ್ನು ಕಾಣಿಸಿದ ಪಾಲಕರು ತೊಗರಿ ಬೇಳೆಯ ಗುಣಮಟ್ಟ ಅಳೆದಿದ್ದಾರೆ. ಅದೇ ಬೇಳೆ ಬಳಸಿ ಮಕ್ಕಳಿಗೆ ಆಹಾರ ಬಡಿಸುತ್ತಿರುವುದನ್ನು ಖಂಡಿಸಿದ್ದಾರೆ. ಕಳಪೆ ಆಹಾರ ಸಾಮಗ್ರಿ ಪೂರೈಕೆಯಾದ ಬಗ್ಗೆ ಅರಿವಿದ್ದರೂ ಮೌನವಾಗಿರುವ ಶಾಲಾ ಅಭಿವೃದ್ಧಿ ಸಮಿತಿಯವರ ವಿರುದ್ಧವೂ ಪಾಲಕರು ಕಿಡಿಕಾರಿದ್ದಾರೆ. ಆಹಾರ ಇಲಾಖೆ ಹಾಗೂ ಶಿಕ್ಷಣ ಇಲಾಖೆ ವಿರುದ್ಧ ಅಸಮಧಾನವ್ಯಕ್ತಪಡಿಸಿದ್ದಾರೆ. - [ಸೆಕೆಂಡ್ ಹ್ಯಾಂಡ್ ಸಂತೆ: ಗೋಲ್ ಮಾಲ್ ರವೀಶ ಹೆಗಡೆಯ ಹೊಸ ವ್ಯಾಪಾರ!](https://mobiletime.in/2025/12/second-hand-market-gol-mall-is-ravish-hegdes-new-business/): ವಿವಿಧ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿರುವ ಶಿರಸಿಯ ಪತ್ರಕರ್ತ ರವೀಶ ಹೆಗಡೆ ಬೆಂಗಳೂರು ಸೇರಿದ್ದಾರೆ. ಅಲ್ಲಿ ಅವರು ಸೆಕೆಂಡ್ ಹ್ಯಾಂಡ್ ಕಾರು ವ್ಯಾಪಾರ ಶುರು ಮಾಡಿದ್ದಾರೆ. ಕಾರು ಖರೀದಿಗೆ ಹೋದವರಿಂದ ಕಾಸುಪಡೆದು ಮೋಸ ಮಾಡಿದ್ದಾರೆ! ಶಿರಸಿಯ ಅಜ್ಜಿಬಾಳ ಬಳಿಯ ಸೊಂಡ್ಲೆಬೈಲಿನ ರವೀಶ ವೆಂಕಟ್ರಮಣ ಹೆಗಡೆ ಅವರು ಸ್ವಸ್ತಿಕ್ ನ್ಯೂಸ್ ಮಿಡಿಯಾದ ರೂವಾರಿ. ಈ ಹಿಂದೆ ಅವರು ಯಲ್ಲಾಪುರದ ಉಮ್ಮಚ್ಗಿಯ ಸೊಸೈಟಿಯಲ್ಲಿ ಸಾಲ ಕೊಡಿಸುವ ವಿಷಯವಾಗಿ ಚಿಪಗಿಯ ದಿನೇಶ ಚಿಂಚ್ರೇಕರ್ ಅವರಿಗೆ ಮೋಸ ಮಾಡಿದ್ದರು. ಅದಕ್ಕೂ ಮುನ್ನ, ಮಣಿಪುರಂ ಫೈನಾನ್ಸಿನಲ್ಲಿ ಕೆಲಸ ಮಾಡುವ ರಾಜು ಲಮಾಣಿ ಅವರ ಹೆಸರಿನಲ್ಲಿ ವಿವಿಧ ಬ್ಯಾಂಕ್ ಖಾತೆ ತೆರದು ವಂಚಿಸಿದ್ದರು. ಚಿಪಗೇರಿಯ ಮಹಾಬಲೇಶ್ವರ ಭಟ್ಟ ಅವರ ತೋಟ ಮಾರಾಟ ವ್ಯವಹಾರದಲ್ಲಿ ಮದ್ಯವರ್ತಿಯಾಗಿ ರವೀಶ ಹೆಗಡೆ ಮೂಗು ತೂರಿಸಿದ್ದು, ಅಲ್ಲಿಯೂ ಸಿದ್ದರಾಮೇಶ್ವರ ಮೆಣಸಿನಕಾಯಿ ಎಂಬಾತರಿAದ ಹಣಪಡೆದು ಅನ್ಯಾಯ ಮಾಡಿದ್ದರು. ಇದರೊಂದಿಗೆ ಇನ್ನೂ ಅನೇಕ ಹಣಕಾಸು ಅಪರಾತಪರದಲ್ಲಿ ರವೀಶ ಹೆಗಡೆ ಭಾಗಿಯಾದ ಬಗ್ಗೆ ಮೋಸ ಹೋದವರು ಪೊಲೀಸ್ ದೂರು ನೀಡಿದ್ದು, ಆ ಎಲ್ಲಾ ಪ್ರಕರಣ ವಿಚಾರಣೆ ನಡೆಯುತ್ತಿದೆ. ಹೀಗಿರುವಾಗ ರವೀಶ ಹೆಗಡೆ ಬೆಂಗಳೂರು ಸೇರಿದ್ದು, ಅಲ್ಲಿನ ಚನ್ನಸಂದ್ರ ಸಾಯಿ ನಿಸರ್ಗ ಲೇಔಟಿನಲ್ಲಿ ವಾಸವಾಗಿದ್ದಾರೆ. ಜನರನ್ನು ಮೋಸ ಮಾಡುವುದಕ್ಕಾಗಿ ಅವರು ಸೆಕೆಂಡ್ ಹ್ಯಾಂಡ್ ಕಾರು ಕೊಡಿಸುವುದಾಗಿ ಹೊಸ ಜಾಲ ಬೀಸಿದ್ದಾರೆ. ಈ ಜಾಲಕ್ಕೆ ಹೊನ್ನಾವರದ ಹೊಸಾಕುಳಿ ಗ್ರಾಮದ ಹೆಬ್ಬಾರ್ತಕೇರಿಯ ಎಚ್ ಆರ್ ಗಣೇಶ ರಾಮಾ ಹೆಗಡೆ ಹಾಗೂ ರಾಮಚಂದ್ರ ಕೃಷ್ಣ ಹೆಗಡೆ ಸಿಕ್ಕಿಬಿದ್ದು ಹಣ ಕಳೆದುಕೊಂಡಿದ್ದಾರೆ. ಸೆಕೆAಡ್ ಹ್ಯಾಂಡ್ ಕಾರು ಹುಡುಕುತ್ತಿದ್ದ ಎಚ್ ಆರ್ ಗಣೇಶ ಹೆಗಡೆ ಅವರು ರವೀಶ ಹೆಗಡೆ ಅವರಿಗೆ 4.25 ಲಕ್ಷ ರೂ ಹಣ ಕೊಟ್ಟಿದ್ದಾರೆ. ರಾಮಚಂದ್ರ ಹೆಗಡೆ ಅವರು ಸಹ 1.30 ಲಕ್ಷ ರೂ ಹಣ ಕೊಟ್ಟಿದ್ದಾರೆ. ಆದರೆ, ಈ ಹಣಪಡೆದ ರವೀಶ ಹೆಗಡೆ ಕಾರು ಕೊಡಲಿಲ್ಲ. ಹಣವನ್ನು ಮರಳಿಸಲಿಲ್ಲ. ಹೀಗಾಗಿ ಅವರಿಬ್ಬರು ಸೇರಿ ರವೀಶ ಹೆಗಡೆ ವಿರುದ್ಧ ದೂರು ನೀಡಲು ನಿರ್ಧರಿಸಿದ್ದು, ಕೊನೆಗೆ ಗಣೇಶ ಹೆಗಡೆ ಅವರು ತಮಗಾದ ಅನ್ಯಾಯದ ಬಗ್ಗೆ ಹೊನ್ನಾವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. - [ಮೊಬೈಲ್ ಕಳ್ಳರಿದ್ದಾರೆ.. ಎಚ್ಚರ!](https://mobiletime.in/2025/12/there-are-mobile-thieves-be-careful/): 22 ವರ್ಷದ ಯುವಕನೊಬ್ಬ ಕಾರವಾರ ಪ್ರವೇಶಿಸಿದ್ದು, ಕಂಡ ಕಂಡವರ ಮೊಬೈಲ್ ಕದಿಯುತ್ತಿದ್ದಾನೆ. ಸಂತೋಷ ತಾಮಸೆ ಅವರ ಮೊಬೈಲನ್ನು ಆತ ಕದ್ದಿದ್ದು, ಕಳ್ಳನ ಬೆನ್ನತ್ತಿದಾಗ ಮೊಬೈಲ್ ಎಸೆದು ಆತ ಪರಾರಿಯಾಗಿದ್ದಾನೆ. ಕಾರವಾರದ ಕೋಡಿಭಾಗದ ಶಿವಾಜಿವಾಡದಲ್ಲಿ ಸಂತೋಷ ಗೋವಿಂದ ತಾಮಸೆ (54) ಅವರು ವಾಸವಾಗಿದ್ದಾರೆ. ಅಂಗಡಿ ವ್ಯಾಪಾರ ನಡೆಸಿಕೊಂಡಿರುವ ಅವರು ಒಪ್ಪೋ ಎ17 ಮೊಬೈಲ್ ಹೊಂದಿದ್ದಾರೆ. ಡಿಸೆಂಬರ್ 2ರಂದು ಆ ಮೊಬೈಲ್ ಮೇಲೆ ಕಳ್ಳನ ಕಣ್ಣು ಬಿದ್ದಿದೆ. ನಿನ್ನೆ ಮಧ್ಯಾಹ್ನ ಸಂತೋಷ ತಾಮಸೆ ಅವರು ತಮ್ಮ ಶರ್ಟಿನ ಮೇಲ್ಬಾಗದಲ್ಲಿ ಮೊಬೈಲ್ ಇರಿಸಿಕೊಂಡಿದ್ದರು. ತೆಳ್ಳಗಿನ ವ್ಯಕ್ತಿ ಅವರ ಕಿಸೆಗೆ ಕೈ ಹಾಕಿ ಮೊಬೈಲ್ ಕದಿಯಲು ಪ್ರಯತ್ನಿಸಿದರು. ಇದಕ್ಕೆ ಸಂತೋಷ ತಾಮಸೆ ಅಡ್ಡಿಪಡಿಸಿದರು. ಅದಾಗಿಯೂ ಆ ಪರಿಚಿತ ಕಿಸೆಯೊಗೆ ಕೈ ಹಾಕಿ ಮೊಬೈಲ್ ಎಗರಿಸಿದರು. ಆಗ, ಸಂತೋಷ ತಾಮಸೆ ಅವರು ದೊಡ್ಡದಾಗಿ ಬೊಬ್ಬೆ ಹಾಕಿದರು. `ಮೊಬೈಲ್ ಕಳ್ಳ.. ಮೊಬೈಲ್ ಕಳ್ಳ’ ಎಂದು ಸಂತೋಷ ತಾಮಸೆ ಕೂಗಿದನ್ನು ನೋಡಿ ಇನ್ನಿಬ್ಬರು ಕಳ್ಳನ ಬೆನ್ನಟ್ಟಿದರು. ಸಂತೋಷ ತಾಮಸೆ ಅವರು ಕಳ್ಳನನ್ನು ಹಿಂಬಾಲಿಸಿದರು. ಆಗ, ಆ ಕಳ್ಳ ಮೊಬೈಲನ್ನು ಬಿಸಾಡಿ ಪರಾರಿಯಾಗಿದ್ದು, ಅದಾಗಿಯೂ ಸಂತೋಷ ತಾಮಸೆ ಅವರು ಆತನ ಹುಡುಕಾಟ ನಡೆಸಿದರು. ಕಾರವಾರ ಎಲ್ಲಾ ಕಡೆ ತಿರುಗಾಡಿದರೂ ಮೊಬೈಲ್ ಕಳ್ಳ ಕಾಣಲಿಲ್ಲ. ತಮಗಾದ ಕೆಟ್ಟ ಅನುಭವದ ಬಗ್ಗೆ ಅವರು ಪೊಲೀಸರಲ್ಲಿ ಹೇಳಿದ್ದು, ಆ ಅಪರಿಚಿತ ಕಳ್ಳನ ವಿರುದ್ಧ ಕಾರವಾರ ನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿದರು. - [ಹಕ್ಕು ಪತ್ರಕ್ಕಾಗಿ ಅರಣ್ಯವಾಸಿಗಳ ಹೋರಾಟ: ಹಳ್ಳಿ ಹಳ್ಳಿಗಳಲ್ಲಿ ಕಾನೂನು ಜಾಥ](https://mobiletime.in/2025/12/forest-dwellers-struggle-for-title-deeds-legal-processions-in-villages/): ಮೂರು ಲಕ್ಷ ಕರಪತ್ರ ಹಿಡಿದು 132 ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕಾನೂನು ಕುರಿತು ಸಭೆ ನಡೆಸುವ ಅರಣ್ಯ ಹಕ್ಕು ಹೋರಾಟದ ಇನ್ನೊಂದು ಆಯಾಮ ಶುರುವಾಗಿದೆ. ಭಟ್ಕಳ ಹಾಗೂ ಹೊನ್ನಾವರದಲ್ಲಿ ಈ ದಿನ ರಾಜ್ಯ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯವರು ಜಾಥಾ ನಡೆಸಿದ್ದಾರೆ. `ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ ಪಾರಂಪರಿಕ ಅರಣ್ಯವಾಸಿಗಳ ಸಾಗುವಳಿ ಹಕ್ಕಿಗೆ ಮೂರು ತಲೆಮಾರಿನ ನಿರ್ದಿಷ್ಟ ವಯಕ್ತಿಕ ದಾಖಲೆಗೆ ಒತ್ತಾಯಿಸತಕ್ಕದ್ದಲ್ಲ. ಇಂತಹ ಪ್ರಕ್ರಿಯೆ ಕಾನೂನಿಗೆ ವ್ಯತಿರಿಕ್ತವಾಗಿದೆ’ ಎಂದು ನ್ಯಾಯವಾದಿ ರವೀಂದ್ರ ನಾಯ್ಕ ಅವರು ಪುನರುಚ್ಚರಿಸಿದ್ದಾರೆ. ವಿವಿಧ ಹಂತದ ಅಧಿಕಾರಿಗಳಿಗೆ ಸಹ ಅವರು ಕರ ಪತ್ರ ವಿತರಿಸಿ ಕಾನೂನಿನ ಬಗ್ಗೆ ಮಾಹಿತಿ ನೀಡಿದ್ದಾರೆ. `ಮಂಜೂರಿ ಪ್ರಕ್ರಿಯೆಯಲ್ಲಿ ದಾಖಲೆಗಳಿಗೆ ಆಗ್ರಹಿಸಿ ಅರ್ಜಿಗಳನ್ನು ತಿರಸ್ಕರಿಸುವುದು ಸಮಂಜಸವಲ್ಲ. ಮೂರು ತಲೆಮಾರಿನ ಸಾಗುವಳಿ ಕ್ಷೇತ್ರದಲ್ಲಿನ ಜನವಸತಿ ಪ್ರದೇಶವೆಂದು ಪುಷ್ಠೀಕರಿಸುವುದು ಅವಶ್ಯ’ ಎಂದು ಕೇಂದ್ರ ಸರ್ಕಾರದ ಬುಡಕಟ್ಟು ಮಂತ್ರಾಲಯದ ಆದೇಶದಲ್ಲಿ ತಿಳಿಸಿರುವ ಬಗ್ಗೆ ಅವರು ವಿವರಿಸಿದ್ದಾರೆ. `ಮಂಜೂರಿ ಪ್ರಕ್ರಿಯೆಯಲ್ಲಿ ಕಾನೂನಿಗೆ ವ್ಯತಿರಿಕ್ತವಾಗಿ ಅರ್ಜಿ ಪರಿಶೀಲಿಸಲಾಗಿರುವುದರಿಂದ ರಾಜ್ಯದಲ್ಲಿ ಶೇ.88.90 ಅರ್ಜಿಗಳು ಹಾಗೂ ಜಿಲ್ಲೆಯಲ್ಲಿ ಶೇ 83.50 ಅರ್ಜಿ ತಿರಸ್ಕರಿಸ್ಪಟ್ಟಿದೆ’ ಎಂಬ ವಿಷಯವನ್ನು ಅವರು ತಿಳಿಸಿದ್ದಾರೆ. ಸಂಘಟನೆಯ ಜಿಲ್ಲಾ ಸಂಚಾಲಕ ಪಾಂಡುರAಗ ನಾಯ್ಕ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಇನ್ನರ‍್ವ ಸಂಚಾಯಕ ದೇವರಾಜ ಗೊಂಡ ವಂದಿಸಿದರು ಕಾರ್ಯಕ್ರಮದಲ್ಲಿ ಜಿಲ್ಲಾ ಸಂಚಾಲಕ ಇಬ್ರಾಹೀಂ ಗೌಡಳ್ಳಿ, ರಪೀಕ್ , ನವೀನ್ ಜೈನ್, ಈಶ್ವರ ನಾಯ್ಕ ಹಾಡವಳ್ಳಿ, ಚಂದ್ರ ನಾಯ್ಕ ಬೈರೋಳೆ,ರತ್ನ ನಾಯ್ಕ ರಾಘವೇಂದ್ರ ಮರಾಠಿ, ವಿಮಲಾ ಮೋಗೇರ, ಕವಿತಾ ಮಂಜುನಾಥ ಗೋಂಡ, ನಾಗಮ್ಮ ಮೋಗೇರ, ದತ್ತ ನಾಯ್ಕ ಹಸವಳ್ಳಿ, ಸಬೀರ್, ಮೋಯೈದ್ದೀನ್, ನತ್ತಾರ, ಜಮಾವೀರ್ ಜಾಬೀರ್ ಸಭೆಯಲ್ಲಿದ್ದರು. - [ರಾತ್ರಿ ಕಂಡ ಬಾವಿಗೆ ಹಗಲು ಹಾರಿದ ಲಾರಿ!](https://mobiletime.in/2025/12/a-lorry-that-jumped-into-a-well-seen-at-night-in-broad-daylight/): ಸರಿಯಾದ ರಸ್ತೆಯಲ್ಲಿ ಸಾಗಬೇಕಿದ್ದ ಲಾರಿಯೊಂದು ಬಾವಿಯ ಕಡೆ ಮುಖ ಮಾಡಿದೆ. ಅದೇ ಮಾರ್ಗದಲ್ಲಿ ಸಾಗಿದ ಪರಿಣಾಮ ಆ ಲಾರಿ ಬಾವಿಗೆ ಬಿದ್ದಿದೆ! ಕುಂದಾಪುರದಿoದ ಶಿಗ್ಗಾವಿಗೆ ಅಕ್ಕಿ ತುಂಬಿಕೊoಡು ಹೋಗುತ್ತಿದ್ದ ಲಾರಿ ಭಟ್ಕಳದ ವೆಂಕಟಾಪುರದಲ್ಲಿ ಅಪಘಾತಕ್ಕೀಡಾಗಿದೆ. ಹಗಲಿನ ವೇಳೆಯಲ್ಲಿಯೇ ಲಾರಿ ಬಾವಿಗೆ ಬಿದ್ದಿದ್ದು, ಲಾರಿಯ ಮುಂದಿನ ಭಾಗ ಜಖಂ ಆಗಿದೆ. ಮಂಗಳವಾರ ಈ ಲಾರಿ ಕುಂದಾಪುರದಿoದ ಹೊರಟಿತ್ತು. ಸಿದ್ದರಾಜು ಘೋರ್ಪಡರ ಅವರು ಲಾರಿ ಓಡಿಸುತ್ತಿದ್ದರು. ಬುಧವಾರ ಮಧ್ಯಾಹ್ನದ ವೇಳೆ ಲಾರಿ ಭಟ್ಕಳ ತಲುಪಿದ್ದು, ಅದಾದ ನಂತರ ವೆಂಕಟಾಪುರದಲ್ಲಿರುವ ಬಾವಿ ಬಳಿ ಬಂದಿದೆ. ಲಾರಿಯೂ ಚಾಲಕನ ನಿಯಂತ್ರಣ ತಪ್ಪಿ ಬಾವಿಯ ಕಟ್ಟೆಗೆ ಡಿಕ್ಕಿ ಹೊಡೆದಿದೆ. ಅದಾದ ನಂತರ ಆ ಲಾರಿ ಬಾವಿಯೊಳಗೆ ಹಾರಿದೆ. ಲಾರಿಯ ನಡುವಿನ ಭಾಗ ಬಾವಿಯಲ್ಲಿ ಸಿಕ್ಕಿಬಿದ್ದಿದ್ದು, ಜಖಂ ಆದ ಮುಂದಿನ ಭಾಗ ಬಾವಿಯ ಇನ್ನೊಂದು ಕಡೆಯಿಂದ ಹೊರ ಬಿದ್ದಿದೆ. ಕ್ರೇನ್ ಮೂಲಕ ಆ ಲಾರಿಯನ್ನು ಹೊರಗೆ ತರುವ ಚಿಂತನೆ ನಡೆದಿದೆ. ಈ ಅಪಘಾತದಿಂದ ಲಾರಿಯಲ್ಲಿದ್ದ ಆಹಾರ ಸಾಮಗ್ರಿ ನಾಶವಾಗಿಲ್ಲ. ಈ ಅಪಘಾತದಲ್ಲಿ ಚಾಲಕ ಅಪಾಯದಿಂದ ಪಾರಾಗಿದ್ದಾರೆ. - [2025 ಡಿಸೆಂಬರ್ 3ರ ದಿನ ಭವಿಷ್ಯ](https://mobiletime.in/2025/12/prediction-for-december-3-2025/): ಮೇಷ ರಾಶಿ: ಉದ್ಯೋಗ ಮತ್ತು ವ್ಯವಹಾರದಲ್ಲಿ ಪ್ರಮುಖ ಬದಲಾವಣೆಗಳು ಬರುತ್ತವೆ. ಹೊಸ ಉದ್ಯೋಗ ಅವಕಾಶಗಳ ಸಿಗುವ ಸಾಧ್ಯತೆ ಇದೆ. ಹಣಕಾಸು ದೃಷ್ಟಿಯಿಂದ ಲಾಭದಾಯಕ ದಿನ. ಕುಟುಂಬದಲ್ಲಿ ಸಂತೋಷವು ಹೆಚ್ಚಾಗುತ್ತದೆ. ಐಷಾರಾಮಿ ವಸ್ತುಗಳ ಖರೀದಿಗೆ ಅವಕಾಶ ಸಿಗಲಿದೆ. ಪ್ರಯಾಣ ಸಾಧ್ಯತೆಗಳಿವೆ. ವೃಷಭ ರಾಶಿ: ಸ್ನೇಹಿತರ ಸಹಕಾರದಿಂದ ಲಾಭ ಪಡೆಯುತ್ತೀರಿ. ಹೊಸ ಆದಾಯ ಮಾರ್ಗಗಳು ತೆರೆಯುತ್ತವೆ. ದಾನ ಧರ್ಮದಲ್ಲಿ ತೊಡಗಿಸಿಕೊಳ್ಳುವುದು ಶುಭವಾಗಲಿದೆ. ಕುಟುಂಬದ ಜೊತೆ ಕಾಲ ಕಳೆಯುವಿರಿ. ಆರೋಗ್ಯದ ಕಡೆ ಗಮನಕೊಡಿ. ಮಿಥುನ ರಾಶಿ: ಕೆಲಸದಲ್ಲಿನ ಪರಿಶ್ರಮದ ಫಲವಾಗಿ ಪ್ರಗತಿ ಸಾಧ್ಯ. ನಿಮ್ಮ ಮನೋಬಲ ಹೆಚ್ಚಾಗುತ್ತದೆ. ವಿದ್ಯಾರ್ಜನೆ ಅಥವಾ ತರಬೇತಿಗೆ ಸಮಯ ಕೊಡುವುದು ಸೂಕ್ತ. ಕರ್ಕ ರಾಶಿ: ಆರ್ಥಿಕವಾಗಿ ಉತ್ತಮ ಲಾಭ ಆಗಲಿದೆ. ವೈವಾಹಿಕ ಜೀವನದಲ್ಲಿ ಶಾಂತಿ-ಸುಖ ಸಿಗಲಿದೆ. ಉದ್ಯೋಗದಲ್ಲಿ ಪ್ರಗತಿ ಆಗಲಿದೆ. ಕುಟುಂಬದೊAದಿಗೆ ಸಮಯ ಕಳೆಯಿರಿ. ಆರೋಗ್ಯದಲ್ಲಿ ಜಾಗರೂಕತೆವಹಿಸುವುದು ಮುಖ್ಯ. ಸಿಂಹ ರಾಶಿ: ಶೈಕ್ಷಣಿಕ ಮತ್ತು ವೃತ್ತಿಜೀವನದಲ್ಲಿ ಯಶಸ್ಸು ಸಿಗಲಿದೆ. ಆತ್ಮವಿಶ್ವಾಸ ಹೆಚ್ಚಾಗುತ್ತದೆ. ದೊಡ್ಡ ಆಸ್ತಿಗಳನ್ನು ಖರೀದಿಸುವ ಯೋಗವಿದೆ. ಸೇವೆಗೆ ತಕ್ಕ ಗೌರವ ಸಿಗಲಿದೆ. ನಿಮ್ಮ ಅನುಭವಗಳು ಸದುಪಯೋಗವಾಗುತ್ತವೆ. ಕನ್ಯಾ ರಾಶಿ: ಸಂಬಳ ಮತ್ತು ಜವಾಬ್ದಾರಿಗಳನ್ನು ಹೆಚ್ಚಿಸಲು ಸೂಕ್ತ ಸಮಯ. ಮಾಧ್ಯಮ ಹಾಗೂ ಮಾರ್ಕೆಟಿಂಗ್ ಕ್ಷೇತ್ರದವರಿಗೆ ಲಾಭ ಸಿಗಲಿದೆ. ಗಣೇಶ ಪೂಜೆಯಿಂದ ಶುಭವಾಗಲಿದೆ. ತುಲಾ ರಾಶಿ: ಮಾನಸಿಕ ಒತ್ತಡ ಕಡಿಮೆ ಆಗಲಿದೆ. ಸಮಸ್ಯೆ ನಿವಾರಣೆಗೆ ಸರಿಯಾದ ಸಮಯ. ಸಂಬAಧಗಳಲ್ಲಿ ತಾಳ್ಮೆಯ ಅಗತ್ಯ. ಹಣಕಾಸು ನಿರ್ವಹಣೆ ಚೆನ್ನಾಗಿರಲಿ. ಯುವಜನರಿಗೆ ಹೊಸ ಕಲಿಕೆ ಅವಕಾಶ. ಹೊಸ ತಂತ್ರಜ್ಞಾನ ಅನುಕೂಲಕ್ಕೆ ಬರಲಿದೆ. ವೃಶ್ಚಿಕ ರಾಶಿ: ಉದ್ಯೋಗದಲ್ಲಿ ಅವಕಾಶ ಅರೆಸಿಬರಲಿದೆ. ಕೆಲ ಬದಲಾವಣೆಗಳು ಆಗಲಿದೆ. ಗುರಿ ಸಾಧನೆಗೆ ಸೂಕ್ತ ಸಮಯ. ಆರೋಗ್ಯದ ಬಗ್ಗೆ ಕಾಳಜಿಯಿರಲಿ. ಧನು ರಾಶಿ: ವೈಯಕ್ತಿಕ ಜೀವನದಲ್ಲಿ ಸಮಾಧಾನ ಸಿಗಲಿದೆ. ಯೋಜನೆ ಕಾರ್ಯಗತಗೊಳಿಸಲು ಸುಲಭ ಆಗಲಿದೆ. ಹೊಸ ಸ್ನೇಹಿತರ ಭೇಟಿ ಆಗುವಿರಿ. ಹಣಕಾಸು ಲಾಭ ಆಗಲಿದೆ. ಮಕರ ರಾಶಿ: ವೃತ್ತಿಯಲ್ಲಿ ಸ್ಥಿರತೆ ಕಾಪಾಡಿ. ಆರೋಗ್ಯದಲ್ಲಿ ಏರುಪೇರು ಸಹಜ. ಕುಟುಂಬದ ಜೊತೆ ಕಾರ್ಯಕ್ರಮದಲ್ಲಿ ಭಾಗವಹಿಸಿ. ಧಾರ್ಮಿಕ ಕಾರ್ಯಕ್ರಮಗಳು ಫಲ ಕೊಡುತ್ತದೆ. ಕುಂಭ ರಾಶಿ: ಸೃಜನಶೀಲತೆ ಮತ್ತು ಹೊಸ ಆಲೋಚನೆಗಳಿಗೆ ಅವಕಾಶ ಸಿಗಲಿದೆ. ಕೌಶಲ್ಯವೃದ್ಧಿಯಿಂದ ಸಾಧನೆ ಸಾಧ್ಯವಿದೆ. ಹಣಕಾಸು ಸಮಸ್ಯೆಗಳು ಬಗೆಹರಿಯುವ ಲಕ್ಷಣಗಳಿವೆ. ಶಿಕ್ಷಣದಲ್ಲಿ ಯಶಸ್ಸು ಸಿಗಲಿದೆ. ಮೀನ ರಾಶಿ: ಕಾರ್ಯಕ್ಷೇತ್ರದಲ್ಲಿ ಯಶಸ್ಸು ಸಾಧ್ಯವಿದೆ. ಹಣಕಾಸಿನ ಅಡೆತಡೆ ದೂರವಾಗಲಿದೆ. ಹೊಸ ಸವಾಲುಗಳಿಗೆ ಸಿದ್ಧವಾಗಿರಿ. ಕುಟುಂಬದವರ ಸಹಕಾರದಿಂದ ಸಮಸ್ಯೆ ದೂರವಾಗಲಿದೆ. - [ಅಪಘಾತ: ಲಾರಿಯೊಳಗೆ ಅವಿತಿದ್ದ ಚಾಲಕ!](https://mobiletime.in/2025/12/accident-driver-trapped-inside-lorry/): ಎದುರಿನಿಂದ ಬರುತ್ತಿದ್ದ ಕಾರಿಗೆ ಲಾರಿ ಗುದ್ದುವುದನ್ನು ತಪ್ಪಿಸುವುದಕ್ಕಾಗಿ ಚಾಲಕ ಏಕಾಏಕಿ ಸ್ಟೇರಿಂಗ್ ತಿರುಗಿಸಿದ್ದು, ಆ ಲಾರಿ ಮರಕ್ಕೆ ಗುದ್ದಿದೆ. ಒಂದು ತಾಸಿನಿಂದ ಆ ಲಾರಿಯ ಒಳಗೆ ಸಿಲುಕಿದ್ದ ಚಾಲಕನನ್ನು ಸ್ಥಳೀಯರು ಹೊರಗೆಳೆದಿದ್ದಾರೆ. ಜೋಯಿಡಾ-ಜಗಲಪೇಟೆಯಿಂದದಾAಡೇಲಿಗೆ ಸಂಪರ್ಕಿಸುವ ರಸ್ತೆಯಲ್ಲಿ ಈ ಅವಘಡ ನಡೆದಿದೆ. ಗೋವಾದಿಂದ ದಾಂಡೇಲಿಗೆ ಬರುತ್ತಿದ್ದ ಲಾರಿ ಅಪಘಾತವಾಗಿದೆ. ಅದಾದ ನಂತರ ಲಾರಿ ಪಲ್ಟಿಯಾಗಿದ್ದು, ಅದರೊಳಗಿದ್ದ ಚಾಲಕನಿಗೆ ಹೊರ ಬರಲು ಸಾಧ್ಯವಾಗಿಲ್ಲ. ಮಂಗಳವಾರ ಸಿಂಗರ್‌ಗಾವ್ ಬಳಿ ಲಾರಿಯೊಳಗೆ ಚಾಲಕ ಸಿಲುಕಿದನ್ನು ಜನ ನೋಡಿದ್ದಾರೆ. ಜನರೇ ಸಾಹಸದಿಂದ ಆತನನ್ನು ಹೊರಗೆ ತಂದು ಆಸ್ಪತ್ರೆಗೆ ಸೇರಿಸಿದ್ದಾರೆ. ಚಾಲಕ ಶಾಹಿದ್ ನಾಯಕವಾಡಿ (24) ಗಂಭೀರವಾಗಿ ಗಾಯಗೊಂಡಿದ್ದು, ಚಿಕಿತ್ಸೆಪಡೆಯುತ್ತಿದ್ದಾರೆ. ವಿಷಯ ತಿಳಿದ ತಕ್ಷಣ 108 ಸಿಬ್ಬಂದಿ ಸ್ಥಳಕ್ಕೆ ಆಗಮಿಸಿದ ಪರಿಣಾಮ ಚಾಲಕನ ಜೀವ ಉಳಿದಿದೆ. - [ಗುಳ್ಳಾಪುರ: ಸೇತುವೆಗಾಗಿ ಶಾಸಕರ ಸಭೆ](https://mobiletime.in/2025/12/gullapura-mlas-meet-for-bridge/): ಯಲ್ಲಾಪುರ-ಅಂಕೋಲಾ ಗಡಿಭಾಗದ ಗುಳ್ಳಾಪುರದಲ್ಲಿ ಕೊಚ್ಚಿಹೋದ ಸೇತುವೆ ಮರು ನಿರ್ಮಾಣಕ್ಕಾಗಿ ಶಾಸಕ ಶಿವರಾಮ ಹೆಬ್ಬಾರ್ ಸಭೆ ನಡೆಸಿದ್ದಾರೆ. ಅಧಿಕಾರಿಗಳ ಜೊತೆ ಸಮಾಲೋಚನೆ ನಡೆಸಿದ ಅವರು ವಿವಿಧ ವಿಷಯಗಳ ಕುರಿತು ಸಲಹೆ ನೀಡಿದ್ದಾರೆ. ಯಲ್ಲಾಪುರದ ಪ್ರವಾಸಿ ಮಂದಿರದಲ್ಲಿ ಮಂಗಳವಾರ ಈ ಸಭೆ ನಡೆದಿದ್ದು, ಗುಣಮಟ್ಟದ ಸೇತುವೆ ನಿರ್ಮಾಣಕ್ಕೆ ಒತ್ತು ನೀಡುವಂತೆ ಶಿವರಾಮ ಹೆಬ್ಬಾರ್ ಸೂಚಿಸಿದ್ದಾರೆ. ಲೋಕೋಪಯೋಗಿ ಇಲಾಖೆಯ ಹಿರಿಯ ಅಧಿಕಾರಿಗಳು ಹಾಗೂ ಡಿಪಿಆರ್ ಸಿದ್ಧಪಡಿಸುತ್ತಿರುವ ಗುತ್ತಿಗೆ ಸಂಸ್ಥೆಯ ತಾಂತ್ರಿಕ ತಂಡದೊoದಿಗೆ ಅವರು ಮಾತನಾಡಿದ್ದಾರೆ. ಸೇತುವೆ ನಿರ್ಮಾಣ ಪ್ರಕ್ರಿಯೆಗೆ ಸಂಬoಧಿಸಿದ ತಾಂತ್ರಿಕ ಅಂಶಗಳ ಬಗ್ಗೆಯೂ ಅವರು ಈ ವೇಳೆ ಚರ್ಚಿಸಿದ್ದಾರೆ. ಸೇತುವೆಯ ವಿನ್ಯಾಸ, ವೆಚ್ಚ ಹಾಗೂ ಕಾರ್ಯಗತಿಯ ಕುರಿತು ಅಧಿಕಾರಿಗಳಿಂದ ಅವರು ಮಾಹಿತಿಪಡೆದಿದ್ದಾರೆ. `ಈ ಯೋಜನೆಯನ್ನು ವೇಗವಾಗಿ ಮುಗಿಸಬೇಕು. ಅದೇ ಪ್ರಮಾಣದಲ್ಲಿ ಗುಣಮಟ್ಟವನ್ನು ಕಾಯ್ದುಕೊಳ್ಳಬೇಕು’ ಎಂದು ಶಿವರಾಮ ಹೆಬ್ಬಾರ್ ಹೇಳಿದ್ದಾರೆ. ಲೋಕೋಪಯೋಗಿ ಇಲಾಖೆಯ ಮುಖ್ಯ ಇಂಜಿನಿಯರ್ ಶಿವಾನಂದ ನಾಯ್ಕ, ಕಾರ್ಯನಿರ್ವಾಹಕ ಇಂಜಿನಿಯರ್ ಎಸ್ ಎನ್ ಸಿದ್ಧಾಪುರ, ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಸಂಜಯ ಪಾತ್ರೋಟ್ ಸಭೆಯಲ್ಲಿದ್ದು ಶಾಸಕರ ಮಾತು ಆಲಿಸಿದರು. - [ಆಳದ ಬಾವಿಗೆ ಬಿದ್ದ ಅಡುಗೆ ಸಿಬ್ಬಂದಿ: ಸಾವು!](https://mobiletime.in/2025/12/kitchen-staff-falls-into-deep-well-death/): ಶಾಲೆಯಲ್ಲಿ ಅಡುಗೆ ಕೆಲಸ ಮಾಡಿಕೊಂಡಿದ್ದ ವಿಮಲಾ ನಾಯ್ಕ ಅವರ ಶವ ಬಾವಿಯಲ್ಲಿ ಸಿಕ್ಕಿದೆ. ಸೋಮವಾರ ಸಂಜೆಯೇ ಅವರು ಬಾವಿಗೆ ಬಿದ್ದಿದ್ದು, ಮಂಗಳವಾರ ಬಾವಿಯಲ್ಲಿ ಶವ ತೇಲುವುದನ್ನು ಜನ ನೋಡಿದ್ದಾರೆ. ಭಟ್ಕಳ ಬೈಲೂರಿನ ಶೇರುಗಾರಕೇರಿಯಲ್ಲಿ ವಿಮಲಾ ಮಂಜುನಾಥ ನಾಯ್ಕ (55) ಅವರು ವಾಸವಾಗಿದ್ದರು. ಸಮೀಪದ ಶಾಲೆಯಲ್ಲಿ ಅಡುಗೆ ಕೆಲಸ ಮಾಡುತ್ತಿದ್ದ ಅವರು ಜೊತೆಗೆ ಕೃಷಿ ಕಾಯಕದಲ್ಲಿಯೂ ತಮ್ಮನ್ನು ತೊಡಗಿಸಿಕೊಂಡಿದ್ದರು. ಡಿಸೆಂಬರ್ 1ರ ಸಂಜೆ ಅವರು ದನಗಳ ಮೇವಿಗೆ ಹುಲ್ಲು ಕೊಯ್ಯುವುದಕ್ಕಾಗಿ ಗದ್ದೆಯ ಕಡೆ ಹೋಗಿದ್ದರು. ಕೊಯ್ದ ಹುಲ್ಲನ್ನು ಬುಟ್ಟಿಯಲ್ಲಿ ತುಂಬಿದ ಅವರು ಅದನ್ನು ತಲೆ ಮೇಲೆ ಹೊತ್ತು ನಡೆದು ಬರುತ್ತಿದ್ದರು. ಕೆಳಗಿನ ಶೇರುಗಾರಕೇರಿಯ ಗಣಪತಿ ಅನಂತ ನಾಯ್ಕ ಅವರ ಗದ್ದೆಯಲ್ಲಿ ನೆಲಮಟ್ಟದ ಬಾವಿಯಿರುವ ಬಗ್ಗೆ ವಿಮಲಾ ನಾಯ್ಕ ಅವರು ಅರಿತಿದ್ದರು. ಅದಾಗಿಯೂ, ತಲೆ ಮೇಲೆ ಹುಲ್ಲು ಹೊತ್ತು ಆ ಮಾರ್ಗವಾಗಿ ಬರುವಾಗ ಅವರ ಕಾಲು ಜಾರಿತು. ಬಾವಿಗೆ ಬಿದ್ದ ನಂತರ ಅವರ ಉಸಿರು ಕಟ್ಟಿತು. ಅಲ್ಲಿಯೇ ಅವರು ಸಾವನಪ್ಪಿದರು. ರಾತ್ರಿ ವೇಳೆ ವಿಮಲಾ ನಾಯ್ಕ ಅವರ ಹುಡುಕಾಟ ನಡೆದರೂ ಅವರು ಸಿಗಲಿಲ್ಲ. ಮಂಗಳವಾರ ಬೆಳಗ್ಗೆ ಬಾವಿಯಲ್ಲಿ ಅವರ ಶವ ತೇಲುತ್ತಿರುವುದನ್ನು ಸುಬ್ರಹ್ಮಣ್ಯ ನಾಯ್ಕ ಅವರು ನೋಡಿದರು. ತಾಯಿ ಸಾವಿನ ಬಗ್ಗೆ ಅವರು ಪೊಲೀಸರಿಗೆ ವರದಿ ನೀಡಿದ್ದು, ಮುರುಡೇಶ್ವರ ಪೊಲೀಸರು ಪ್ರಕರಣ ದಾಖಲಿಸಿದರು. `ಅಪಾಯಕಾರಿ ಸ್ಥಳಗಳ ಕಡೆ ಹೋಗಬೇಡಿ’ - [ಅಪಘಾತ: ಮಹಿಳೆಯ ಹಲ್ಲು ಮುರಿತ!](https://mobiletime.in/2025/12/accident-womans-tooth-broken-2/): ಜೋರಾಗಿ ಕಾರು ಓಡಿಸಿಕೊಂಡು ಬಂದ ರಾಘವೇಂದ್ರ ಹೆಗಡೆ ಅವರು ವಾಕಿಂಗ್ ಹೊರಟಿದ್ದ ಉಮ್ಮಯ್ಯಭಾನು ಶೇಖ್ ಅವರಿಗೆ ತಮ್ಮ ವಾಹನ ಗುದ್ದಿದ್ದಾರೆ. ಪರಿಣಾಮ ಉಮ್ಮಯ್ಯಭಾನು ಶೇಖ್ ಅವರ ಮೂರು ಹಲ್ಲು ಮುರಿದಿದೆ. ಕೈ-ಕಾಲಿಗೂ ಪೆಟ್ಟಾಗಿದೆ. ಯಲ್ಲಾಪುರ ನೂತನ ನಗರದ ರಾಘವೇಂದ್ರ ಮಹಾಬಲೇಶ್ವರ ಹೆಗಡೆ ಅವರು ತಮ್ಮದೇ ಆದ ಬ್ಯುಸಿನೆಸ್ ಮಾಡಿಕೊಂಡಿದ್ದಾರೆ. ಉರ್ದು ಶಾಲೆಯಲ್ಲಿ ಬಿಸಿಯೂಟದ ಕೆಲಸ ಮಾಡುವ ಶೈನಾಜಬೇಗಂ ಅವರ ಜೊತೆ ವಾಕಿಂಗ್ ಹೊರಟಿದ್ದ ನೂತನ ನಗರದ ಉಮ್ಮಯ್ಯಭಾನು ಹೈದರ ಶೇಖ್ ಅವರಿಗೆ ರಾಘವೇಂದ್ರ ಹೆಗಡೆ ಅವರು ಕಾರು ಗುದ್ದಿದ್ದಾರೆ. ನ 29ರ ನಸುಕಿನಲ್ಲಿ ಈ ಅಪಘಾತ ನಡೆದಿದ್ದು, ಉಮ್ಮಯ್ಯಭಾನು ಶೇಖ್ ಅವರು ಹುಬ್ಬಳ್ಳಿಯ ಕ್ಷೇಮಾ ಅರ್ಥೋಪೆಟಿಕ್ಸ ಆಸ್ಪತ್ರೆಯಲ್ಲಿ ಚಿಕಿತ್ಸೆಪಡೆಯುತ್ತಿದ್ದಾರೆ. ಆ ದಿನ ಬೆಳಗ್ಗೆ ರಾಘವೇಂದ್ರ ಹೆಗಡೆ ಅವರು ಶಿರಸಿ-ಯಲ್ಲಾಪುರ ಮಾರ್ಗವಾಗಿ ಕಾರು ಓಡಿಸುತ್ತಿದ್ದರು. ಎಪಿಎಂಸಿ ಬಳಿ ನಡೆದು ಹೋಗುತ್ತಿದ್ದ ಮಹಿಳೆಗೆ ಅವರು ಕಾರು ಗುದ್ದಿದರು. ಅಲ್ಲಿಯೇ ಬಿದ್ದ ಉಮ್ಮಯ್ಯಭಾನು ಶೇಖ್ ಅವರು ಮುಂದಿನ ಮೂರು ಹಲ್ಲು ಮುರಿದುಕೊಂಡರು. ಜೊತೆಗೆ ಕೈ ಎಲುಬುಗಳು ಸಹ ಮುರಿದವು. ಕಾಲಿಗೂ ಪೆಟ್ಟಾಗಿದ್ದರಿಂದ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಈ ಎಲ್ಲಾ ವಿಷಯದ ಬಗ್ಗೆ ಗಾಯಾಳು ಜೊತೆಗಿದ್ದ ಶೈನಾಜಬೇಗಂ ಅವರು ವರದಿ ಒಪ್ಪಿಸಿದರು. ಪೊಲೀಸರು ಕಾರು ಚಾಲಕ ರಾಘವೇಂದ್ರ ಹೆಗಡೆ ಅವರ ವಿರುದ್ಧ ಕ್ರಮ ಜರುಗಿಸಿದರು. `ನಿಧಾನವಾಗಿ ವಾಹನ ಓಡಿಸಿ’ - [ಅಂಗನವಾಡಿ ಹುದ್ದೆಗೆ ಆನ್‌ಲೈನ್ ಅರ್ಜಿ](https://mobiletime.in/2025/12/online-application-for-anganwadi-post/): ಉತ್ತರ ಕನ್ನಡ ಜಿಲ್ಲೆಯ 12 ತಾಲೂಕುಗಳಲ್ಲಿನ ವಿವಿಧ ಅಂಗನವಾಡಿಗಳಲ್ಲಿ ವಿವಿಧ ಹುದ್ದೆಗಳು ಖಾಲಿಯಿದ್ದು, ಯೋಗ್ಯರ ಹುಡುಕಾಟ ನಡೆದಿದೆ. ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿಯರ ಹುದ್ದೆಗಾಗಿ ಸದ್ಯ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಕಾರವಾರದಲ್ಲಿ 8 ಸಹಾಯಕಿ ಹುದ್ದೆಗಳು ಖಾಲಿಯಿವೆ. ಅಂಕೋಲಾ ಎರಡು ಕಾರ್ಯಕರ್ತೆ ಹುದ್ದೆಗಳಿಗೆ ಅಭ್ಯರ್ಥಿಗಳು ಬೇಕಾಗಿದ್ದಾರೆ. ಜೊತೆಗೆ ಅಂಕೋಲಾದಲ್ಲಿ 24 ಸಹಾಯಕಿಯರು ಅಗತ್ಯವಿದೆ. ಕುಮಟಾದದಲ್ಲಿ 9 ಕಡೆ ಅಂಗನವಾಡಿ ಸಹಾಯಕಿಯರ ಹುದ್ದೆ ಕಾಲಿಯಿದ್ದು ಹುಡುಕಾಟ ನಡೆದಿದೆ. ಹೊನ್ನಾವರದ ಒಂದು ಅಂಗನವಾಡಿಯಲ್ಲಿ ಕಾರ್ಯಕರ್ತೆ ಹುದ್ದೆ ಖಾಲಿಯಿದೆ. ಜೊತೆಗೆ ಹೊನ್ನಾವರದಲ್ಲಿ 12 ಅಂಗನವಾಡಿಗಳಿಗೆ ಸಹಾಯಕಿಯರು ಬೇಕಾಗಿದ್ದಾರೆ. ಭಟ್ಕಳದಲ್ಲಿ ಒಂದು ಅಂಗನವಾಡಿ ಕಾರ್ಯಕರ್ತೆ ಹಾಗೂ 16 ಸಹಾಯಕಿಯರ ನೇಮಕಾತಿ ಮಾಡಿಕೊಳ್ಳಲಾಗುತ್ತದೆ. ಶಿರಸಿಯಲ್ಲಿ ಅಂಗನವಾಡಿ ಕಾರ್ಯಕರ್ತೆಯರಿಗಾಗಿ ಎರಡು ಹುದ್ದೆ ಖಾಲಿಯಿದ್ದು, ಇಲ್ಲಿ 39 ಸಹಾಯಕಿಯರ ಹುದ್ದೆಗಳಿವೆ. ಸಿದ್ದಾಪುರದಲ್ಲಿ 4 ಅಂಗನವಾಡಿ ಕಾರ್ಯಕರ್ತೆಯರು ಹಾಗೂ 15 ಸಹಾಯಕಿಯರಿಗಾಗಿ ಅರ್ಜಿ ಕರೆಯಲಾಗಿದೆ. ಯಲ್ಲಾಪುರ ಮೂರು ಅಂಗನವಾಡಿ ಕಾರ್ಯಕರ್ತೆಯರ ಜೊತೆ 25 ಸಹಾಯಕಿ ಹುದ್ದೆಗಳಿಗಾಗಿ ಯೋಗ್ಯರ ಹುಡುಕಾಟ ನಡೆದಿದೆ. ಮುಂಡಗೋಡದಲ್ಲಿ ಎರಡು ಕಾರ್ಯಕರ್ತೆ ಹಾಗೂ 16 ಸಹಾಯಕಿ ಹುದ್ದೆಗಳಿವೆ. ಹಳಿಯಾಳ ಮೂರು ಕಾರ್ಯಕರ್ತೆ ಹಾಗೂ 18 ಸಹಾಯಕಿ ಹುದ್ದೆಗಳಿವೆ. ದಾಂಡೇಲಿಯಲ್ಲಿ 8 ಸಹಾಯಕಿ ಹುದ್ದೆಗಳು ಖಾಲಿಯಿವೆ. ಜೋಯಿಡಾದಲ್ಲಿ ಅಂಗನವಾಡಿ ಕಾರ್ಯಕರ್ತೆ ಹುದ್ದೆಗೆ 5 ಹಾಗೂ ಸಹಾಯಕಿ ಹುದ್ದೆಗೆ 16 ಉದ್ಯೋಗ ಅವಕಾಶಗಳಿವೆ. ಒಟ್ಟಾರೆಯಾಗಿ ಜಿಲ್ಲೆಯಲ್ಲಿ 23 ಅಂಗನವಾಡಿ ಕಾರ್ಯಕರ್ತೆರು ಮತ್ತು 206 ಸಹಾಯಕಿಯರ ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ. ಅರ್ಹರು ಇನ್ನಷ್ಟು ಮಾಹಿತಿಗೆ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳನ್ನು ಭೇಟಿ ಮಾಡಬಹುದು. ಜೊತೆಗೆ ಡಿಸೆಂಬರ್ 31ರ ಒಳಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಸೂಚಿಸಲಾಗಿದೆ. ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಕೆಗೆ ಇಲ್ಲಿ ಕ್ಲಿಕ್ಕಿಸಿ: ಅಂಗನವಾಡಿ ಹುದ್ದೆಗೆ ಅರ್ಜಿ - [ಆತನ ಮನೆಯೇ ಶ್ರೀಗಂಧದ ಗುಡಿ!](https://mobiletime.in/2025/12/his-house-is-a-temple-of-sandalwood/): ತಗಡು ಹೊದಕೆಯ ಮುರಕಲು ಮನೆ ಅಂಚಿನ ಗೋಣಿಚೀಲದ ತುಂಬ ಶ್ರೀಗಂಧದ ತುಂಡು ಸಿಕ್ಕದೆ. ಪರಶುರಾಮ ಲಮಾಣಿ ಎಂಬಾತರು ಶೇಖರಿಸಿದ್ದ ಶ್ರೀಗಂಧದ ತುಂಡುಗಳನ್ನು ಅರಣ್ಯಾಧಿಕಾರಿಗಳು ಜಪ್ತು ಮಾಡಿದ್ದಾರೆ. ಮುಂಡಗೋಡದ ಅಗಡಿಯಲ್ಲಿ ವಾಸವಾಗಿದ್ದ ಪರಶುರಾಮ ಲಮಾಣಿ ಅವರು ತಮ್ಮ ಮನೆ ಬದಿಗೆ ಚೀಲದಲ್ಲಿ ಶ್ರೀಗಂಧದ ತುಂಡುಗಳನ್ನು ದಾಸ್ತಾನು ಮಾಡಿದ್ದರು. ಆ ಪ್ರಮಾಣದಲ್ಲಿ ಶ್ರೀಗಂಧಹೊAದಲು ಅವರ ಬಳಿ ಅನುಮತಿಯಿರಲಿಲ್ಲ. ಆ ಮರಗಳನ್ನು ಅವರು ಕದ್ದು ತಂದ ಆರೋಪದ ಹಿನ್ನಲೆ ಅರಣ್ಯಾಧಿಕಾರಿಗಳು ದಾಳಿ ಮಾಡಿದರು. ಮನೆ ಸುತ್ತ ಶೋಧ ನಡೆಸಿದಾಗ ಅಲ್ಲಿ ಅನುಮಾನಾಸ್ಪದ ಗೋಣಿ ಚೀಲಗಳು ಕಾಣಿಸಿದವು. ಅದರ ಒಳಗೆ ಪರಿಶೀಲಿಸಿದಾಗ ಬರಪೂರ ಮರದ ತುಂಡುಗಳಿದ್ದವು. ಶ್ರೀಗಂಧದ ಮರದ ತುಂಡುಗಳನ್ನು ಅಕ್ರಮವಾಗಿ ದಾಸ್ತಾನು ಮಾಡಿದ್ದ ಪರಶುರಾಮ ಆಚಾರಿ ಅವರನ್ನು ವಶಕ್ಕೆಪಡೆಯಲು ಅರಣ್ಯಾಧಿಕಾರಿಗಳು ಮುಂದಾದರು. ಆದರೆ, ಪರಶುರಾಮ ಆಚಾರಿ ಅವರು ಪಕ್ಕದ ಕಬ್ಬಿನಗದ್ದೆಗೆ ಓಡಿ ಹೋಗಿ ಪರಾರಿಯಾದರು. ಅರಣ್ಯಾಧಿಕಾರಿಗಳು ಬೆನ್ನತ್ತಿದರೂ ಸಹ ಪರಶುರಾಮ ಆಚಾರಿ ಅವರು ಸಿಕ್ಕಿ ಬೀಳಲಿಲ್ಲ. ಹೀಗಾಗಿ ನಾಲ್ಕು ಚೀಲದ ಶ್ರೀಗಂಧದ ತುಂಡುಗಳನ್ನು ಅಧಿಕಾರಿಗಳು ಜಪ್ತು ಮಾಡಿದರು. - [ಇನ್ನೂ ತೆರವಾಗದ ಜೇನುಗೂಡು!](https://mobiletime.in/2025/12/a-hive-that-has-not-yet-been-cleared/): ಕುಮಟಾ ಆಡಳಿತ ಸೌಧಕ್ಕೆ ಕಟ್ಟಿರುವ ಜೇನುಗೂಡು ತೆರವು ಮಾಡದ ಅಧಿಕಾರಿಗಳ ವಿರುದ್ಧ ಜನಸಾಮಾನ್ಯರ ಸಮಾಜ ಕಲ್ಯಾಣ ಕೇಂದ್ರದವರು ಉಸ್ತುವಾರಿ ಸಚಿವರಿಗೆ ದೂರಿದ್ದಾರೆ. `ಕುಮಟಾ ಆಡಳಿತ ಸೌಧದ ಕಚೇರಿಯಲ್ಲಿ 4-5 ಜೇನುಗೂಡುಗಳಿವೆ. ಅಲ್ಲಿಗೆ ಬರುವ ಸಾರ್ವಜನಿಕರಿಗೆ ಜೇನು ಕಚ್ಚಿವೆ. ಸಮೀಪದಲ್ಲಿ ಅಂಗನವಾಡಿಯಿದ್ದು, ಅಲ್ಲಿನ ಚಿಕ್ಕ ಮಕ್ಕಳು ಸಹ ಅಪಾಯದ ಸ್ಥಿತಿಯಲ್ಲಿದ್ದಾರೆ’ ಎಂದು ವಿವರಿಸಿದರು. `ಜೇನುಗೂಡು ತೆರವಿಗೆ ಮನವಿ ಸಲ್ಲಿಸಿದರೂ ಸಹಾಯಕ ಆಯುಕ್ತ ಶ್ರವಣಕುಮಾರ ಅವರು ಕ್ರಮ ಜರುಗಿಸಿಲ್ಲ’ ಎಂದು ಆಗ್ನೇಲ್ ರೋಡ್ರಿಗಸ್ ಆರೋಪಿಸಿದರು. `ಅಪಾಯದ ಬಗ್ಗೆ ಅರಿವಿದ್ದರೂ ಅಧಿಕಾರಿಗಳು ಕ್ರಮ ಜರುಗಿಸಿಲ್ಲ. ಅದಾಗಿಯೂ, ನಮ್ಮ ಅರ್ಜಿಗೆ ಸ್ಪಂದನೆ ದೊರೆಯದಿದ್ದರೆ ಕಾನೂನು ಸೇವಾ ಪ್ರಾಧಿಕಾರಕ್ಕೆ ದೂರು ನೀಡಲಾಗುತ್ತದೆ’ ಎಂದು ಎಚ್ಚರಿಸಿದರು. - [ನುಡಿದಂತೆ ನಡೆಯದ ಸಿದ್ದು: ಸ್ವಾಮೀಜಿ ವಾಗ್ದಾಳಿ!](https://mobiletime.in/2025/12/siddhu-who-doesnt-do-as-he-says-swamijis-attack/): ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಬ್ರಹ್ಮಶ್ರೀ ನಾರಾಯಣ ಗುರುಪೀಠದ ಪ್ರಣವಾನಂದ ಸ್ವಾಮೀಜಿ ವಾಗ್ದಾಳಿ ಮಾಡಿದ್ದಾರೆ. `ಸಿದ್ಧರಾಮಯ್ಯ ಅವರು ಈ ಹಿಂದೆ ಆಡಿದ ಮಾತು ಉಳಿಸಿಕೊಳ್ಳಬೇಕು’ ಎಂದು ತಾಕೀತು ಮಾಡಿದ್ದಾರೆ. ಶಿರಸಿಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಪ್ರಣವಾನಂದ ಸ್ವಾಮೀಜಿ `ಕಾಂಗ್ರೆಸ್ ಸರ್ಕಾರ ಈಡಗ ನಾಮದಾರಿ ಸಮುದಾಯವನ್ನು ಕೆಡಗಣಿಸಿದೆ’ ಎಂದು ಅಸಮಧಾನವ್ಯಕ್ತಪಡಿಸಿದರು. `ಈ ಸರ್ಕಾರ ಬಂದು ಎರಡುವರೆ ವರ್ಷ ಆದರೂ ಕೂಡ ನಮ್ಮ ಸಮಾಜದ ಬಗ್ಗೆ ಚಿಂತನೆ ಮಾಡಿಲ್ಲ. ಹಿಂದಿನ ಸರ್ಕಾರ ಇದ್ದಾಗ ನಮ್ಮ ಸಮುದಾಯಕ್ಕೆ ಎರಡು ಮಂತ್ರಿ ಸ್ಥಾನ ನೀಡಿದ್ದರು. ಈ ಸರ್ಕಾರದಲ್ಲಿ ಒಂದು ಸಚಿವ ಸ್ಥಾನ ಮಾತ್ರ ನೀಡಲಾಗಿದೆ’ ಎಂದು ದೂರಿದರು. `ಅಧಿಕಾರ ಹಿಡಿಯಲು ಹಿಂದುಳಿದ ವರ್ಗ ಪರಿಶಿಷ್ಟ ಜಾತಿ ಹಾಗೂ ಪಂಗಡದ ಹೆಸರು ಬಳಕೆ ನಡೆಯುತ್ತಿದೆ. ಅಧಿಕಾರಕ್ಕೆ ಬಂದಮೇಲೆ ಸಮುದಾಯದ ಕಾಂಗ್ರೆಸ್ಸಿಗೆ ಆಡಿದ ಮಾತು ನೆನಪೇ ಇರುವುದಿಲ್ಲ. ಸಮಾನತೆ ಹಾಗೂ ಸಾಮಾಜಿಕ ನ್ಯಾಯದ ಮುಖವಾಡದಲ್ಲಿ ಸಿದ್ಧರಾಮಯ್ಯ ಅವರು ಅಧಿಕಾರ ಅನುಭವಿಸುತ್ತಿದ್ದಾರೆ’ ಎಂದು ದೂರಿದರು. `ಅವರ ಅಧಿಕಾರದ ಏಳುವರೆ ವರ್ಷದಲ್ಲಿ ಹಿಂದುಳಿದ ವರ್ಗಗಳಿಗೆ ಏನು ಕೊಟ್ಟಿದ್ದಾರೆ?’ ಎಂದು ಪ್ರಶ್ನಿಸಿದರು. `ಸಿದ್ದರಾಮಯ್ಯ ಜೆಡಿಎಸ್ ನಿಂದ ಕಾಂಗ್ರೆಸ್ಸಿಗೆ ಬರುವಾಗ ನಮ್ಮ ಸಮುದಾಯದ ನಾಯಕರು ಕಾಂಗ್ರೆಸ್ಸಿನಲ್ಲಿ ಗಟ್ಟಿಯಾಗಿದ್ದರು ಆದರೆ ಸಿದ್ಧರಾಮಯ್ಯ ಅವರು ಎಲ್ಲರನ್ನೂ ಸೈಡ್ ಲೈನ್ ಮಾಡಿ ಮುಂದೆ ಬಂದರು. ನಮ್ಮ ಸಮುದಾಯವನ್ನು ಸಂಪೂರ್ಣ ಹತ್ತಿಕ್ಕಿದರು’ ಎಂದು ದೂರಿದರು. `ಸಿದ್ಧರಾಮಯ್ಯ ಅವರು ಮುಖ್ಯಮಂತ್ರಿಯಾದ ನಂತರ ಅಹಿಂದ್ ಹೆಸರಿನಲ್ಲಿ ಸಾಕಷ್ಟು ಲಾಭ ಮಾಡಿದ್ದಾರೆ. ಆದರೆ, ಕೊಟ್ಟ ಮಾತಿನ ಪ್ರಕಾರ ಅವರು ಡಿಕೆ ಶಿವಕುಮಾರ ಅವರಿಗೆ ಅಧಿಕಾರ ಬಿಟ್ಟು ಕೊಡಲಿಲ್ಲ’ ಎಂದು ಅಸಮಧಾನವ್ಯಕ್ತಪಡಿಸಿದರು. `ದೆಹಲಿಯಲ್ಲಿ ನಡೆದ ಚರ್ಚೆಯ ಪ್ರಕಾರ ಸಿದ್ಧರಾಮಯ್ಯ ಅವರು ಅಧಿಕಾರ ಬಿಡಬೇಕು. ಡಿಕೆ ಶಿವಕುಮಾರ ಅವರು ರಾಜ್ಯದ ಮುಖ್ಯಮಂತ್ರಿ ಆಗಬೇಕು’ ಎಂದು ಆಗ್ರಹಿಸಿದರು. `ಡಿಕೆ ಶಿವಕುಮಾರ ಅವರು ಮುಖ್ಯಮಂತ್ರಿ ಆಗಬೇಕು ಎಂಬುದು ಅನೇಕರ ಬಯಕೆ. ನಮ್ಮ ಅಭಿಪ್ರಾಯದ ಪ್ರಕಾರವೂ ಡಿಕೆ ಶಿವಕುಮಾರ ಅವರೇ ಮುಖ್ಯಮಂತ್ರಿ ಆಗಬೇಕು. ಕುರ್ಚಿ ಕದನದಲ್ಲಿ ಜನರ ಜೀವದ ಜೊತೆ ಚೆಲ್ಲಾಟ ಆಡುವುದನ್ನು ತಡೆಯಬೇಕು’ ಎಂದು ಆಗ್ರಹಿಸಿದರು. - [ಕ್ರಿಕೆಟ್ ನೋಡಲು ಬಂದವನಿಗೆ ಬ್ಯಾಟ್ ಬೀಸಿದ ಭೂಪ!](https://mobiletime.in/2025/12/bhupa-threw-a-bat-at-a-person-who-came-to-watch-cricket/): ಮಕ್ಕಳು ಕ್ರಿಕೆಟ್ ಆಡುತ್ತಿರುವಾಗ ಗಲಾಟೆ ಸಹಿಸದ ರಿಜಾಯ ಶೇಖ್ ಅವರು ಮಕ್ಕಳನ್ನು ಸುಮ್ಮನಿರಸಲು ಹೋಗಿ ಅಲ್ಲಿದ್ದ ಕ್ರಿಕೆಟ್ ಬ್ಯಾಟಿನಿಂದ ಪೆಟ್ಟು ತಿಂದಿದ್ದಾರೆ. ಸರಾಯಿ ಕುಡಿದು ಮಕ್ಕಳ ಬಳಿ ಸುಳಿದಾಡಿದ ಕಾರಣ ರಿಯಾಜ್ ಶೇಖ್ ಅವರಿಗೆ ಅಬೀದ್ ಸಯ್ಯದ್ ಎಂಬಾತರು ತಲೆಗೆ ಹೊಡೆದಿದ್ದಾರೆ. ಸಿದ್ದಾಪುರದ ನೆಜ್ಜೂರಿನಲ್ಲಿ ರಿಯಾಜ್ ಶೇಖ್ (43) ಅವರು ಹಮಾಲಿ ಕೆಲಸ ಮಾಡಿಕೊಂಡಿದ್ದರು. ನವೆಂಬರ್ 25ರ ಸಂಜೆ ಅವರು ಊರಿನ ಆಟದ ಮೈದಾನಕ್ಕೆ ಹೋಗಿದ್ದರು. ಅಲ್ಲಿ ಮಕ್ಕಳು ಕ್ರಿಕೆಟ್ ಆಡುತ್ತಿದ್ದು, ಅದನ್ನು ನೋಡುತ್ತ ನಿಂತಿದ್ದರು. ಈ ವೇಳೆ ಕೆಲ ಮಕ್ಕಳು ಅಲ್ಲಿ ಗಲಾಟೆ ಮಾಡುತ್ತಿದ್ದರು. ಆಗ, ರಿಯಾಜ್ ಶೇಖ್ ಅವರು ಗಲಾಟೆ ಮಾಡುತ್ತಿದ್ದ ಮಕ್ಕಳನ್ನು ಸಮಾಧಾನ ಮಾಡುವ ಪ್ರಯತ್ನ ಮಾಡಿದರು. `ಗಲಾಟೆ ಮಾಡದೇ ಕ್ರಿಕೆಟ್ ಆಡಿ’ ಎಂದವರು ಹೇಳಿದರು. ಆದರೆ, ಈ ವೇಳೆ ರಿಯಾಜ್ ಶೇಖ್ ಅವರು ಮದ್ಯಪಾನ ಮಾಡಿದ್ದು, ಮದ್ಯಪಾನ ಮಾಡಿ ಮಕ್ಕಳ ಹತ್ತಿರ ಹೋಗಿದನ್ನು ಅದೇ ಊರಿನ ಅಬೀದ್ ಸಯ್ಯದ್ ಅವರು ಸಹಿಸಲಿಲ್ಲ. ರಿಯಾಜ್ ಶೇಖ್ ಅವರ ವಿರುದ್ಧ ಸಿಟ್ಟಾದ ಅಬೀದ್ ಸಯ್ಯದ್ ಅವರು ಮಕ್ಕಳ ಬಳಿಯಿದ್ದ ಬ್ಯಾಟ್ ಕಸಿದುಕೊಂಡರು. `ಕುಡಿದು ಬಂದು ಮಕ್ಕಳ ಬಳಿ ಹೋಗುವೆಯಾ?’ ಎಂದು ದಬಾಯಿಸಿದರು. `ನೀ ಸರಾಯಿ ಕುಡಿದು ಮಕ್ಕಳಿಗೆ ಬುದ್ದಿ ಹೇಳಬೇಡ’ ಎಂದು ಬೈದು ಆ ಬ್ಯಾಟಿನಿಂದ ತಲೆಗೆ ಹೊಡೆದರು. ಅದಾದ ನಂತರ ಮೈಮೇಲೆಯೂ ಬಾರಿಸಿದರು. ಇದರಿಂದ ನೊಂದ ರಿಯಾಜ್ ಶೇಖ್ ಅವರು ಪೊಲೀಸರಿಗೆ ದೂರಿದ್ದು, ಸಿದ್ದಾಪುರ ಪೊಲೀಸರು ಪ್ರಕರಣ ದಾಖಲಿಸಿದರು. - [ಕೊರೊನಾ ಹರಡಿದ ಪಾಸ್ಟಪುಡ್ ಮಳಿಗೆ: ಲಾಕ್‌ಡೌನ್ ವೇಳೆ ಪೊಲೀಸರಿಗೆ ಹೊಡೆದವನಿಗೆ ಜೈಲೂಟ!](https://mobiletime.in/2025/12/pastafood-shop-where-corona-spread-man-who-hit-police-during-lockdown-gets-jail-time/): ಪೊಲೀಸ್ ಸಿಬ್ಬಂದಿ ಉದಯ ನಾಯ್ಕ ಹಾಗೂ ಬಸವರಾಜ ಡಿಕೆ ಅವರ ಮೇಲೆ ಹಲ್ಲೆ ಮಾಡಿದ ಪ್ರಶಾಂತ ಪಾಠಣಕರ್ ಅವರಿಗೆ ನ್ಯಾಯಾಲಯ ಜೈಲು ಶಿಕ್ಷೆ ವಿಧಿಸಿದೆ. ಈ ಶಿಕ್ಷೆ ಪ್ರಶ್ನಿಸಿ ಪ್ರಶಾಂತ ಪಾಠಣಕರ್ ಅವರು ಮೇಲ್ಮನವಿ ಸಲ್ಲಿಸಿದ್ದು, ಮೇಲಿನ ನ್ಯಾಯಾಲಯವೂ ತಪ್ಪು ಮಾಡಿದವನಿಗೆ ಸೂಕ್ತ ಶಿಕ್ಷೆ ಅನುಭವಿಸುವಂತೆ ಆದೇಶಿಸಿದೆ. 2021ರಲ್ಲಿ ಕೊರೊನಾ ಹಿನ್ನಲೆ ಸರ್ಕಾರ ಮಾರ್ಗಸೂಚಿ ಪ್ರಕಟಿಸಿತ್ತು. ಸೋಂಕು ಹರಡುವುದನ್ನು ತಡೆಯಲು ಕಠಿಣ ನಿಯಮಾವಳಿಗಳನ್ನು ರೂಪಿಸಿತ್ತು. ಆದರೆ, ಯಲ್ಲಾಪುರದ ಶಾರದಾಗಲ್ಲಿಯ ಕೋರ್ಟ ಕ್ರಾಸಿನ ಬಳಿ ವಾಸಿಸುವ ಪ್ರಶಾಂತ ನಾರಾಯಣ ಪಾಠಣಕರ್ ಅವರು ಇದಕ್ಕೆ ತಲೆಕೆಡಿಸಿಕೊಂಡಿರಲಿಲ್ಲ. ಚೈನಿಸ್ ಫಾಸ್ಟ್ಪುಡ್ & ಗೋಬಿ ಕಾರ್ನರ್ ಎಂಬ ಮಳಿಗೆ ನಡೆಸುವ ಅವರು ಕೊರೊನಾ ಅವಧಿಯಲ್ಲಿಯೂ ತಮ್ಮ ಮಳಿಗೆ ತೆರೆದಿದ್ದರು. ಅಲ್ಲಿ ಬರುವ ಗ್ರಾಹಕರಿಗೆ ತಿನಿಸುಗಳ ಜೊತೆ ಕೊರೊನಾ ಸೋಂಕು ಅಂಟಿಸಿ ಕಳುಹಿಸುವ ಪ್ರಯತ್ನ ನಡೆಸಿದ್ದರು. ಇದನ್ನು ಅರಿತ ಪೊಲೀಸ್ ಸಿಬ್ಬಂದಿ ಉದಯ ಆನಂದ ನಾಯ್ಕ ಅವರು ತಮ್ಮ ಠಾಣಾ ಸಿಬ್ಬಂದಿ ಬಸವರಾಜ ಡಿಕೆ ಅವರ ಜೊತೆ ಆ ಅಂಗಡಿ ಬಳಿ ಹೋಗಿದ್ದರು. ಪ್ರಶಾಂತ ಪಾಠಣಕರ್ ಅವರಿಗೆ ಕೊರೊನಾ ಮುನ್ನಚ್ಚರಿಕೆಯ ಪಾಠ ಮಾಡಿದ್ದರು. `ಕೊರೊನಾ ಮಾರ್ಗಸೂಚಿ ಉಲ್ಲಂಘಿಸಿ ಪಾಸ್ಟಪುಡ್ ಮಾರಾಟ ನಡೆಸುವುದು ತಪ್ಪು’ ಎಂದು ವಿವರಿಸಿದರು. ಆದರೆ, ಪ್ರಶಾಂತ ಪಾಠಣಕರ್ ಅವರು ಇದನ್ನು ಒಪ್ಪಿರಲಿಲ್ಲ. ಪೊಲೀಸರ ಬಳಿ ಎದುರು ಮಾತನಾಡಿದ್ದರು. ಈ ವೇಳೆ ಪೊಲೀಸರು ಹಾಗೂ ಪ್ರಶಾಂತ ಪಾಠಣಕರ್ ನಡುವೆ ವಾಗ್ವಾದ ನಡೆದಿದ್ದು, ಯುನಿಪಾರಂ ಧರಿಸಿದ್ದ ಪೊಲೀಸರ ಮೇಲೆ ಪ್ರಶಾಂತ ಪಾಠಣಕರ್ ಅವರು ಕೈ ಮಾಡಿದ್ದರು. ಪೊಲೀಸ್ ಸಿಬ್ಬಂದಿ ಉದಯ ನಾಯ್ಕ ಅವರನ್ನು ಪ್ರಶಾಂತ ಪಾಠಣಕರ್ ಅವರು ನೆಲಕ್ಕೆ ದೂಡಿದ್ದರು. ಬಸವರಾಜ ಡಿಕೆ ಅವರ ಕೊರಳಿಗೆ ಕೈ ಹಾಕಿ ಕಾಲರ್ ಹಿಡಿದು ಎಳೆದಾಡಿದ್ದರು. ಅದಾದ ನಂತರ ಪ್ರಶಾಂತ ಪಾಠಣಕರ್ ಅವರು ತಮ್ಮ ಬೈಕ್ ಏರಿ ಅಲ್ಲಿಂದ ಪರಾರಿಯಾಗಿದ್ದರು. ಈ ಎಲ್ಲಾ ವಿಷಯದ ಬಗ್ಗೆ ಉದಯ ನಾಯ್ಕ ಅವರು ಪ್ರಕರಣ ದಾಖಲಿಸಿದ್ದರು. ಅದಾದ ನಂತರ ಆಗಿನ ಪಿಐ ಸುರೇಶ ಎಳ್ಳೂರು ಆರೋಪಿಯನ್ನು ಬಂಧಿಸಿದ್ದರು. ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. ಯಲ್ಲಾಪುರ ಜೆಎಂಎಫ್‌ಸಿ ನ್ಯಾಯಾಲಯವೂ ಪ್ರಶಾಂತ ಪಾಠಣಕರ ಅವರಿಗೆ 1 ವರ್ಷದ ಜೈಲು ಶಿಕ್ಷೆ ವಿಧಿಸಿತ್ತು. ಆದರೆ, ಇದನ್ನು ಸಹಿಸದ ಪ್ರಶಾಂತ ಪಾಠಣಕರ್ ಅವರು ಈ ಆದೇಶದ ವಿರುದ್ಧ ಮೇಲ್ಮನವಿ ಹಾಕಿದ್ದರು. ಶಿರಸಿಯ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಮೇಲ್ಮನವಿ ವಿಚಾರಣೆ ನಡೆಸಿತು. ಈ ವೇಳೆ ಸರ್ಕಾರಿ ವಕೀಲ ರಾಜೇಶ ಎಂ ಮಳಗಿಕರ್ ಅವರು ಕೊರೊನಾ ಅವಧಿಯ ಪರಿಸ್ಥಿತಿ ಹಾಗೂ ಆ ವೇಳೆ ಕೊರೊನಾ ವಾರಿಯರ್ಸ ಆಗಿ ಕರ್ತವ್ಯದಲ್ಲಿದ್ದ ಪೊಲೀಸರು ಅನುಭವಿಸಿದ ಸಮಸ್ಯೆಗಳ ಬಗ್ಗೆ ನ್ಯಾಯಾಧೀಶ ಕಿರಣ ಕಿಣಿ ಅವರಿಗೆ ವಿವರಿಸಿದರು. `ಸರ್ಕಾರದ ನಿಯಮ ಉಲ್ಲಂಘಿಸಿದಲ್ಲದೇ, ಆ ಬಗ್ಗೆ ತಿಳುವಳಿಕೆ ಮೂಡಿಸಲು ಆಗಮಿಸಿದ ಸರ್ಕಾರಿ ನೌಕರರ ಮೇಲೆ ಕೈ ಮಾಡುವವರಿಗೆ ಕಠಿಣ ಶಿಕ್ಷೆ ವಿಧಿಸಬೇಕು’ ಎಂದು ವಾದಿಸಿದರು. ವಾದ-ಪ್ರತಿವಾದ ಆಲಿಸಿದ ನ್ಯಾಯಾಧೀಶ ಕಿರಣ ಕಿಣಿ ಅವರು ಕೆಳ ನ್ಯಾಯಾಲಯದಲ್ಲಿ ಆರೋಪ ಸಾಭೀತಾಗಿರುವುದನ್ನು ಗಮನಿಸಿದರು. ಆ ತೀರ್ಫನ್ನು ಮರುಪರಿಶೀಲನೆಗೆ ಒಳಪಡಿಸಿ ಪೊಲೀಸರ ಮೇಲೆ ಕೈ ಮಾಡಿದ್ದ ಪ್ರಶಾಂತ ಪಾಠಣಕರ್ ಅವರಿಗೆ ಆರು ತಿಂಗಳ ಕಾರಾಗೃಹ ಶಿಕ್ಷೆಗೆ ಆದೇಶಿಸಿದರು. - [45' ಚಿತ್ರದ 'AFRO ಟಪಾಂಗ್‌' ಹಾಡಿಗೆ ಜಾಗತಿಕ ಹವಾ ; 28.5 ಮಿಲಿಯನ್ ವೀಕ್ಷಣೆ ಮತ್ತು ಭಾರತದಲ್ಲಿ ಟ್ರೆಂಡಿಂಗ್ ಟಾಪ್!](https://mobiletime.in/2025/12/45-song-afro-tapang-gets-global-buzz-28-5-million-views-and-trending-top-in-india/): ಭಾರತದ ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾ ’45’ ಇದೀಗ ಅದರ ಪ್ರಮೋಷನಲ್ ಹಾಡು ‘AFRO ಟಪಾಂಗ್‌’ ಮೂಲಕ ದೊಡ್ಡ ಮಟ್ಟದ ಸದ್ದು ಮಾಡುತ್ತಿದೆ. ರಿಯಲ್ ಸ್ಟಾರ್ ಉಪೇಂದ್ರ, ಕರುನಾಡ ಚಕ್ರವರ್ತಿ ಶಿವರಾಜ್‌ ಕುಮಾರ್‌ ಮತ್ತು ರಾಜ್‌ ಬಿ ಶೆಟ್ಟಿಯಂತಹ ಸ್ಯಾಂಡಲ್‌ವುಡ್‌ನ ಮೂವರು ಸ್ಟಾರ್‌ಗಳು ಒಟ್ಟಾಗಿ ನಟಿಸಿರುವ ಈ ಬಹುನಿರೀಕ್ಷಿತ ಚಿತ್ರ, ಡಿಸೆಂಬರ್ 2025ರ ಅತ್ಯಂತ ನಿರೀಕ್ಷಿತ ಸಿನಿಮಾ. ಸೋಶಿಯಲ್‌ ಮೀಡಿಯಾದಲ್ಲಿ ದಾಖಲೆ ಮಟ್ಟದ ವೀಕ್ಷಣೆಯನ್ನ ಪಡೆದ ‘AFRO ಟಪಾಂಗ್‌’ ಹಾಡು ಭಾರತದಲ್ಲಿ ಕನ್ನಡ, ತಮಿಳು, ತೆಲುಗು, ಮಲಯಾಳಂ ಮತ್ತು ಹಿಂದಿ ಸೇರಿದಂತೆ ಪಂಚ ಭಾಷೆಗಳಲ್ಲೂ ಟಾಪ್ ಟ್ರೆಂಡಿಂಗ್ ಸಾಂಗ್ ಆಗಿದೆ. ಈ ಹಾಡು ಜಾಗತಿಕವಾಗಿ 28.5 ಮಿಲಿಯನ್ ವೀಕ್ಷಣೆಗಳೊಂದಿಗೆ ಹೊಸ ಮೈಲಿಗಲ್ಲನ್ನು ದಾಟಿದೆ. ನಿರ್ಮಾಪಕ ರಮೇಶ್‌ ರೆಡ್ಡಿ ಅವರ ಈ ಅತಿ ದೊಡ್ಡ ಸಾಹಸಕ್ಕೆ (ಚಿತ್ರದ ಬಜೆಟ್ ₹100 ಕೋಟಿ ಎಂದು ಅಂದಾಜಿಸಲಾಗಿದೆ) ಈ ಭರ್ಜರಿ ಯಶಸ್ಸು ಭದ್ರ ಬುನಾದಿ ಹಾಕಿದೆ. ಸಂಗೀತ ನಿರ್ದೇಶಕ ಅರ್ಜುನ್‌ ಜನ್ಯ ಅವರ ಚೊಚ್ಚಲ ನಿರ್ದೇಶನದ ಚಿತ್ರದ ಈ ಹಾಡು ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಈ ಯಶಸ್ಸನ್ನು ಕಂಡಿದೆ. ಯೂಟ್ಯೂಬ್‌ನಲ್ಲಿ 28.5 ಮಿಲಿಯನ್ ವೀಕ್ಷಣೆಗಳ ಧೂಳೀಪಟ! ‘AFRO ಟಪಾಂಗ್‌’ ಹಾಡು ತನ್ನ ವಿಶಿಷ್ಟ ಮ್ಯೂಸಿಕ್ ಮತ್ತು ಉಗಾಂಡದ ಪ್ರಸಿದ್ಧ ಜಿಟೊ ಕಿಡ್ಸ್ (Ghetto Kids) ತಂಡದ ಆಕರ್ಷಕ ಸ್ಟೆಪ್ಸ್‌ಗಳಿಂದ ಪ್ರೇಕ್ಷಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ. ಜಿಟೊ ಕಿಡ್ಸ್ ತಂಡವು ಭಾರತೀಯ ಚಿತ್ರರಂಗಕ್ಕೆ ಇದೇ ಮೊದಲ ಬಾರಿಗೆ ಎಂಟ್ರಿ ಕೊಟ್ಟಿದೆ. ಈ ಪ್ರಮೋಷನಲ್ ಸಾಂಗ್‌ ಯುಟ್ಯೂಬ್‌ನಲ್ಲಿ ಬರೋಬ್ಬರಿ 28.5M ಮಿಲಿಯನ್ ವೀಕ್ಷಣೆಗಳು ಹಾಗು 265k ಲೈಕ್ಸ್ ಪಡೆಯುವ ಮೂಲಕ ದಾಖಲೆ ಸೃಷ್ಟಿಸಿದೆ. ಕೇವಲ ಪ್ರಚಾರಕ್ಕಾಗಿ ಬಿಡುಗಡೆ ಮಾಡಿದ ಹಾಡಿಗೆ ಇಷ್ಟೊಂದು ದೊಡ್ಡ ಮಟ್ಟದ ವೀಕ್ಷಣೆ ಮತ್ತು ಎಂಗೇಜ್‌ಮೆಂಟ್‌ ಸಿಕ್ಕಿರುವುದು, ಪ್ಯಾನ್ ಇಂಡಿಯಾ ಮಟ್ಟದಲ್ಲಿ ’45’ ಚಿತ್ರದ ಕಂಟೆಂಟ್‌ ಮತ್ತು ಅದರ ಮೇಲಿರುವ ನಿರೀಕ್ಷೆ ಎಷ್ಟಿದೆ ಎಂಬುದಕ್ಕೆ ಸಾಕ್ಷಿಯಾಗಿದೆ. *ಇನ್‌ಸ್ಟಾಗ್ರಾಂ ರೀಲ್ಸ್‌ನಲ್ಲಿ ವೈರಲ್ ಟ್ರೆಂಡ್!* ಯೂಟ್ಯೂಬ್‌ನಲ್ಲಿ ಮಾತ್ರವಲ್ಲದೆ, ಇನ್‌ಸ್ಟಾಗ್ರಾಂನಲ್ಲೂ ‘AFRO ಟಪಾಂಗ್‌’ ಹಾಡು ವೈರಲ್ ಟ್ರೆಂಡ್ ಆಗಿ ಮಾರ್ಪಟ್ಟಿದೆ. ಹಾಡಿನ ಡ್ಯಾನ್ಸ್‌ ಸ್ಟೆಪ್ಸ್‌ ಮತ್ತು ಆಫ್ರೋ ಬೀಟ್ಸ್ ಜನರನ್ನು ಆಕರ್ಷಿಸಿದ್ದು, ರೀಲ್ಸ್‌ಗಳ ಸೃಷ್ಟಿಗೆ ಪ್ರೇರಣೆ ನೀಡಿದೆ. *ಹಾಲಿವುಡ್‌ ಸಂಸ್ಥೆಯ ಸಹಯೋಗ* ಈ ಚಿತ್ರದ ಮತ್ತೊಂದು ವಿಶೇಷವೆಂದರೆ, ಹಾಲಿವುಡ್‌ ಪ್ರಾಜೆಕ್ಟ್‌ಗಳಿಗೆ ಕೆಲಸ ಮಾಡಿರುವ ಕೆನಡಾದ ಪ್ರತಿಷ್ಠಿತ ವಿ.ಎಫ್.ಎಕ್ಸ್ ಸಂಸ್ಥೆ “MARZ” ಕೂಡ ಈ ಚಿತ್ರದ ಭಾಗವಾಗಿದೆ. ಇದು ಚಿತ್ರದ ತಾಂತ್ರಿಕ ಗುಣಮಟ್ಟದ ಬಗ್ಗೆ ಹೆಚ್ಚಿನ ಭರವಸೆ ಮೂಡಿಸಿದೆ. ‘AFRO ಟಪಾಂಗ್‌’ ಹಾಡಿನ ಯಶಸ್ಸಿನ ಈ ಅಲೆಯಲ್ಲಿ, ಡಿಸೆಂಬರ್ 25ರಂದು ವಿಶ್ವಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಲಿರುವ ’45’ ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ ಭಾರೀ ಓಪನಿಂಗ್‌ ಪಡೆಯುವ ನಿರೀಕ್ಷೆ ಮೂಡಿಸಿದೆ. - [2025ರ ಡಿಸೆಂಬರ್ 2ರ ದಿನ ಭವಿಷ್ಯ](https://mobiletime.in/2025/12/prediction-for-december-2-2025/): ಮೇಷ ರಾಶಿ: ಈ ದಿನ ನಿಮ್ಮ ಶ್ರದ್ಧೆ ಹಾಗೂ ಶ್ರಮ ಫಲಪ್ರದವಾಗಿರುತ್ತದೆ. ಹೊಸ ಉದ್ಯೋಗಾವಕಾಶಗಳು ಸಿಗಬಹುದು. ಹಣಕಾಸು ಸ್ಥಿತಿಯಲ್ಲಿ ಸುಧಾರಣೆ ಕಾಣಬಹುದು. ಕುಟುಂಬದಲ್ಲಿ ಸಂತೋಷ ವಾತಾವರಣ ಇರುತ್ತದೆ. ಆರೋಗ್ಯದ ಬಗ್ಗೆ ಜಾಗರೂಕತೆ ಬೇಕು. ವೃಷಭ ರಾಶಿ: ಈ ದಿನ ನೀವು ಮಾಡಿದ ಕೆಲಸ ಯಶಸ್ವಿಯಾಗುತ್ತದೆ. ಆರ್ಥಿಕ ಸ್ಥಿತಿ ಸದೃಢವಾಗಿರುತ್ತದೆ. ವಿದೇಶದಿಂದ ಉತ್ತಮ ಉದ್ಯೋಗ ಅವಕಾಶಗಳಿವೆ. ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ. ಧೈರ್ಯದಿಂದ ಕಾರ್ಯಮಾಡಿ. ಮಿಥುನ ರಾಶಿ: ನಿಮ್ಮ ಭಾವನೆಗಳು ಗಾಢವಾಗಿಯೂ, ಸಕಾರಾತ್ಮಕವಾಗಿಯೂ ಇರುತ್ತವೆ. ಉದ್ಯೋಗದಲ್ಲಿ ಗುರುತಾಗುವ ಅವಕಾಶ ಸಿಗುತ್ತದೆ. ಆತ್ಮವಿಶ್ವಾಸ ಹೆಚ್ಚಾಗುತ್ತದೆ. ಹಣಕಾಸು ಸ್ಥಿತಿ ಸದೃಢವಾಗುತ್ತದೆ. ಕುಟುಂಬದ ಸದಸ್ಯರಿಂದ ಬೆಂಬಲ ಸಿಗುತ್ತದೆ. ಕನ್ಯಾ ರಾಶಿ: ಆರ್ಥಿಕ ಬದುಕಿನಲ್ಲಿ ಶ್ರಮ ಬೇಕಾಗುತ್ತದೆ. ದಾಂಪತ್ಯದಲ್ಲಿ ಮನಸ್ತಾಪಗಳು ಇರಬಹುದು. ಮಕ್ಕಳ ಕಾರ್ಯಗಳಲ್ಲಿ ಒಳ್ಳೆಯ ಸಮಯ. ಕೆಟ್ಟ ಹಾದಿ ತಡೆಯಿರಿ. ಶ್ರಮದಿಂದ ಮಾತ್ರ ಗೆಲುವು ಸಾದ್ಯ. ಗೌರವ ಹಾಗೂ ಸಂಪತ್ತು ಹೆಚ್ಚಾಗುತ್ತದೆ. ತುಲಾ ರಾಶಿ: ನಿಮ್ಮ ಕಾರ್ಯಗಳಲ್ಲಿ ಯಶಸ್ಸು ಹಾದಿ ನೀಡುತ್ತದೆ. ಕುಟುಂಬದಲ್ಲಿ ಶುಭ ಸಮಯ ಬರಲಿದೆ. ಆರ್ಥಿಕ ಲಾಭ ಸಾಧ್ಯ. ಸಮಸ್ಯೆಗಳಿಗೆ ಶಾಂತಿಯುತ ಪರಿಹಾರ ಸಿಗಬಹುದು. ಸ್ನೇಹಿತರಿಂದ ಸಹಾಯ ಸಿಗಲಿದೆ. ವೃಶ್ಚಿಕ ರಾಶಿ: ಶತ್ರುಗಳ ಕಾಟ ಜೋರಾಗಿರಲಿದೆ. ಹಣಕಾಸು ಬಗ್ಗೆ ಜಾಗರೂಕತೆ ಅಗತ್ಯ. ಉದ್ಯೋಗದಲ್ಲಿ ಪ್ರಗತಿಗೆ ಅವಕಾಶವಿದೆ. ಕುಟುಂಬಸ್ಥರಿAದ ಸಹಾಯ ಸಿಗಲಿದೆ. ಧನು ರಾಶಿ: ಹೊಸ ಪ್ರಯತ್ನಗಳಲ್ಲಿ ಯಶಸ್ಸು ಸಿಗಲಿದೆ. ಹಣಕಾಸು ಲಾಭ ಆಗಲಿದೆ. ಕುಟುಂಬದ ಇಚ್ಛೆಗಳು ಪೂರ್ತಿಯಾಗುವ ಸಾಧ್ಯತೆಯಿದೆ. ಆರೋಗ್ಯದ ಬಗ್ಗೆ ಜಾಗರುಕತೆ ಅಗತ್ಯ. ಮಕರ ರಾಶಿ: ನಿಮ್ಮ ಯೋಜನೆಗಳು ಯಶಸ್ವಿ ಆಗಲಿದೆ. ಉದ್ಯೋಗದಲ್ಲಿ ಒಳ್ಳೆಯ ಪ್ರಗತಿ ಸಾಧ್ಯವಿದೆ. ಕುಟುಂಬದಲ್ಲಿ ಸಂತೋಷ ಕಾಣಲಿದೆ. ಧೈರ್ಯದಿಂದ ಮುಂದುವರೆಯಿರಿ. ಕುAಭ ರಾಶಿ: ಹೊಸ ಯೋಜನೆಗಳು ಯಶಸ್ವಿಯಾಗುವ ಕಾಲ ಬಂದಿದೆ. ಹಣಕಾಸು ಲಾಭ ಆಗಲಿದೆ. ಸ್ನೇಹಿತರಿಂದ ಬೆಂಬಲ ಸಿಗಲಿದೆ. ಮಾನಸಿಕ ಶಾಂತಿ ಹಾಗೂ ಕುಟುಂಬದಲ್ಲಿ ಹರ್ಷ ಕಾಣಲು ಸಾಧ್ಯ. ಮೀನ ರಾಶಿ: ಉದ್ಯೋಗ ಕ್ಷೇತ್ರದಲ್ಲಿ ಸಫಲರಗುವಿರಿ. ಆರ್ಥಿಕ ಸ್ಥಿತಿ ಸುಧಾರಣೆ ಸಾಧ್ಯವಿದೆ. ಶತ್ರುಗಳ ವಿರುದ್ಧ ಜಾಗರೂಕತೆ ಅಗತ್ಯ. ಕುಟುಂಬದವರ ಸಮಸ್ಯೆ ಆಲಿಸಿ, ಬಗೆಹರಿಸಲು ಪ್ರಯತ್ನಿಸಿ. - [ಮುಖ್ಯಮಂತ್ರಿ ಖುರ್ಚಿ ಖಾಲಿ ಇಲ್ಲ!](https://mobiletime.in/2025/12/the-chief-ministers-chair-is-not-vacant/): `ರಾಜ್ಯದಲ್ಲಿ ಮುಖ್ಯಮಂತ್ರಿ ಖುರ್ಚಿ ಖಾಲಿ ಇಲ್ಲ’ ಎಂದು ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷರೂ ಆಗಿರುವ ಹಳಿಯಾಳ ಶಾಸಕ ಆರ್ ವಿ ದೇಶಪಾಂಡೆ ಅವರು ಹೇಳಿದ್ದಾರೆ. ಶಿರಸಿಯಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು `ಸಚಿವ ಸ್ಥಾನಕ್ಕಾಗಿ ನಾನು ಯಾರನ್ನು ಭೇಟಿ ಆಗಿಲ್ಲ. ಸಚಿವ ಸ್ಥಾನ ಕೊಡಿ ಎಂದು ಬೇಡಿಲ್ಲ. ಪಕ್ಷ ಯಾವ ಸ್ಥಾನ ಕೊಟ್ಟರೂ ಬೇಡ ಎನ್ನುವುದಿಲ್ಲ’ ಎಂದು ಹೇಳಿದರು. `ನಾಯಕತ್ವ ಬದಲಾವಣೆ ವಿಷಯಕ್ಕೆ ಪೂರ್ಣವಿರಾಮ ಬಿದ್ದಿದೆ. ನಾಯಕರು ಪರಸ್ಪರ ಭೇಟಿಯಾಗಿ ಮಾತನಾಡಿದ್ದಾರೆ. ಮುಖ್ಯಮಂತ್ರಿ ಯಾರು ಆಗಬೇಕು?’ ಎಂದು ಹೈಕಮಾಂಡ್ ನಿರ್ಧಾರ ಮಾಡಲಿದೆ’ ಎಂದು ಹೇಳಿದ್ದಾರೆ. `ರಾಜ್ಯದಲ್ಲಿ ಅಭಿವೃದ್ಧಿ ಆಗುತ್ತಿಲ್ಲ ಎನ್ನುವುದು ಸತ್ಯವಲ್ಲ. ಜನರ ನಿರೀಕ್ಷೆ ಜಾಸ್ತಿಯಿದ್ದ ಕಾರಣ ಅಭಿವೃದ್ಧಿ ಕೆಲಸ ಕಾಣುತ್ತಿಲ್ಲ. ಎಲ್ಲಾ ಶಾಸಕರಿಗೂ ಅನುದಾನ ಕೊಡಲಾಗಿದ್ದು, ಕೆಲಸ ನಡೆಯುತ್ತಿದೆ. ಸಿದ್ಧರಾಮಯ್ಯ ನಾಯಕತ್ವದಲ್ಲಿ ಸರ್ಕಾರ 5 ಗ್ಯಾರಂಟಿ ಅನುಷ್ಠಾನ ಮಾಡಿ ಜನರ ಆದಾಯ ಹೆಚ್ಚಿಸಿದೆ’ ಎಂದವರು ಹೇಳಿದ್ದಾರೆ. - [7 ಲಕ್ಷದ ಬಿಲ್: ಸಚಿವರಿಂದ ಸಹಾಯದ ಭರವಸೆ](https://mobiletime.in/2025/12/7-lakh-bill-minister-promises-help/): ಹಾವು ಕಚ್ಚಿದ ವಿಷಯ ಕೇಳಿ ಆಘಾತಕ್ಕೆ ಒಳಗಾಗಿರುವ ಕುಮಟಾದ ರಮೇಶ ಪಟಗಾರ ಅವರಿಗೆ ನೆರವು ನೀಡುವಂತೆ ಕೋರಿ ಜನಸಾಮಾನ್ಯರ ಸಮಾಜ ಕಲ್ಯಾಣ ಕೇಂದ್ರದವರು ಉಸ್ತುವಾರಿ ಸಚಿವ ಮಂಕಾಳು ವೈದ್ಯ ಅವರ ಮೊರೆ ಹೋಗಿದ್ದಾರೆ. ಭಟ್ಕಳ ಆಡಳಿತ ಸೌಧದಲ್ಲಿ ಮಂಕಾಳು ವೈದ್ಯ ಅವರನ್ನು ಆಗ್ನೇಲ್ ರೋಡ್ರಿಗಸ್ ಅವರು ಭೇಟಿ ಮಾಡಿದರು. `ಸಿದ್ದಾಪುರದಲ್ಲಿ ಕೆಲಸ ಮಾಡುವಾಗ ರಮೇಶ ಪಟಗಾರ ಅವರಿಗೆ ಹಾವು ಕಚ್ಚಿದ್ದು, ಅಧಿಕ ರಕ್ತದ ಒತ್ತಡದಿಂದ ಅವರು ಆಸ್ಪತ್ರೆ ಸೇರಿದ ಬಗ್ಗೆ ವಿವರಿಸಿದರು. ಆಸ್ಪತ್ರೆಯವರು 7 ಲಕ್ಷ ರೂ ಬಿಲ್ ಮಾಡಿದ್ದು ಅದನ್ನು ಪಾವತಿಸಲು ರಮೇಶ ಪಟಗಾರ ಅವರ ಕುಟುಂಬಕ್ಕೆ ಸಾಧ್ಯವಾಗುತ್ತಿಲ್ಲ’ ಎಂದು ವಿವರಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಮಂಕಾಳು ವೈದ್ಯ ಅವರು `ತಾನು ಮಂಗಳೂರಿನ ಎ ಜೆ ಆಸ್ಪತ್ರೆಯವರ ಜೊತೆ ಮಾತನಾಡುವೆ. ವೈಯಕ್ತಿಕವಾಗಿಯೂ ಸಹಾಯ ಮಾಡುವೆ. ಜೊತೆಗೆ ಸರ್ಕಾರದಿಂದ ಪರಿಹಾರ ಕೊಡಿಸುವೆ’ ಎಂಬ ಭರವಸೆ ನೀಡಿದರು. ಈ ವಿಷಯದ ಬಗ್ಗೆ ಆರೋಗ್ಯ ಸಚಿವರಿಗೂ ಪತ್ರ ಬರೆದಿರುವುದಾಗಿ ಆಗ್ನೇಲ್ ರೋಡ್ರಿಗಸ್ ಅವರು ತಿಳಿಸಿದರು. ರಮೇಶ್ ಅವರ ಮಗ ನಿತಿನ್, ಚಿಕ್ಕಪ್ಪ ಗಣಪತಿ ಪಟಗಾರ. ಸಾಮಾಜಿಕ ಕಾರ್ಯಕರ್ತ ಸುಧಾಕರ್ ನಾಯ್ಕ, ನಿವೃತ ಅಧಿಕಾರಿ ನಾಗೇಶ್ ಇತರರು ಇದ್ದರು. - [ಕಾಡು ಕೋಣ ದರ್ಶನ!](https://mobiletime.in/2025/12/wild-corner-visit/): ಅಪರೂಪಕ್ಕೆ ಒಮ್ಮೆ ಊರಿಗೆ ಬಂದು ದರ್ಶನ ಕೊಡುವ ಕಾಡು ಕೋಣ ನಿನ್ನೆ ಸಿದ್ದಾಪುರ ಭಾಗದಲ್ಲಿ ಕಾಣಿಸಿದೆ. ಹಾಳಾದಕಟ್ಟಾ ಸರ್ಕಾರಿ ಪಿಯು ಕಾಲೇಜು ವಿದ್ಯಾರ್ಥಿನಿ ಶ್ರಾವ್ಯ ರಾಜೇಂದ್ರ ನಾಯ್ಕ ಅವರು ಕಾಡು ಕೋಣದ ಚಲನ-ವಲನಗಳನ್ನು ಸೆರೆ ಹಿಡಿದಿದ್ದಾರೆ. ಸಿದ್ದಾಪುರ ಮಾವಿನಕೊಡು ಗ್ರಾಮದಲ್ಲಿ ಭಾನುವಾರ ಹಗಲಿನ ವೇಳೆಯಲ್ಲಿಯೇ ಕಾಡು ಕೋಣ ಓಡಾಟ ನಡೆಸಿದೆ. ಸಂಜೆ ವೇಳೆ ಆ ಕೋಣ ಮಾನವನ ಸಮೀಪದಲ್ಲಿ ಕಾಣಿಸಿದ್ದು, ಶ್ಯಾವ್ಯ ನಾಯ್ಕ ಅವರು ತಮ್ಮ ಮೊಬೈಲ್ ಕ್ಯಾಮರಾದಲ್ಲಿ ಅದನ್ನು ಚಿತ್ರಿಕರಿಸಿದ್ದಾರೆ. ಈ ಮೊದಲು ಸಹ ಈ ಭಾಗದಲ್ಲಿ ಕಾಡು ಕೋಣ ಕಾಣಿಸಿತ್ತು. ಜನ ಅದನ್ನು ಕಾಡಿನ ಕಡೆ ಓಡಿಸುವ ಪ್ರಯತ್ನ ನಡೆಸಿದರೂ ಪ್ರಯೋಜನವಾಗಿರಲಿಲ್ಲ. ಇದೀಗ ಮತ್ತೆ ಕಾಡು ಕೋಣ ಕಾಣಿಸಿದ್ದರಿಂದ ಜನ ಆತಂಕಕ್ಕೆ ಒಳಗಾಗಿದ್ದಾರೆ. ಅರಣ್ಯ ಇಲಾಖೆಯವರು ಕಾಡು ಕೋಣವನ್ನು ಕಾಡಿಗೆ ಕಳುಹಿಸುವ ಪ್ರಯತ್ನ ನಡೆಸಬೇಕು. ಆ ಮೂಲಕ ಜನರ ಆತಂಕ ದೂರ ಮಾಡಬೇಕು ಎಂದು ಅಲ್ಲಿನವರು ಆಗ್ರಹಿಸಿದ್ದಾರೆ. - [ಹುಚ್ಚು ನಾಯಿಗಳಿವೆ.. ಎಚ್ಚರ!](https://mobiletime.in/2025/12/there-are-mad-dogs-be-careful/): ಉತ್ತರ ಕನ್ನಡ ಜಿಲ್ಲೆಯ ಎಲ್ಲಾ ಭಾಗದಲ್ಲಿಯೂ ಬೀಡಾಡಿ ನಾಯಿಗಳ ಕಾಟ ಹೆಚ್ಚಾಗಿದ್ದು, ಅದರಲ್ಲಿಯೂ ಶಿರಸಿಯಲ್ಲಿ ಹುಚ್ಚು ನಾಯಿ ಪತ್ತೆಯಾಗಿದೆ. ಪೊಲೀಸ್ ಸಿಬ್ಬಂದಿಯೊಬ್ಬರ ಸಮಯ ಪ್ರಜ್ಞೆಯಿಂದ ಆ ಹುಚ್ಚು ನಾಯಿ ಮಕ್ಕಳ ಮೇಲೆ ಆಕ್ರಮಣ ನಡೆಸುವುದು ತಪ್ಪಿದೆ. ಶಿರಸಿಯ ಅಂಬೇಡ್ಕರ್ ಸರ್ಕಲ್ ಬಳಿ ತೆರಳುತ್ತಿದ್ದ ಮಕ್ಕಳ ಮೇಲೆ ಹುಚ್ಚು ನಾಯಿ ದಾಳಿಗೆ ಮುಂದಾಗಿತ್ತು. ಇದನ್ನು ಗಮನಿಸಿದ ಸಂಚಾರಿ ಪೋಲಿಸ್ ಠಾಣೆಯ ಸಿಬ್ಬಂದಿ ಅನಿಲ್ ಬಿರಾದಾರ್ ತಕ್ಷಣ ಜಾಗೃತರಾಗಿ ಆ ನಾಯಿಗೆ ಕಡಿವಾಣ ಹಾಕಿದರು. ತೇಲಂಗ ಪ್ರೌಢಶಾಲೆಯ ಶಿಕ್ಷಕ ವೆಂಕಟೇಶ ಜೋಗಳೆಕರ್ ಅವರ ಸಹಾಯದಿಂದ ಆ ನಾಯಿಯನ್ನು ಅಲ್ಲಿಯೇ ಬಂಧಿಸಿದರು. ಆ ಮೂಲಕ ಪೊಲೀಸ್ ಸಿಬ್ಬಂದಿ ಮಕ್ಕಳ ಜೀವ ಕಾಪಾಡಿದರು. ಅನಿಲ್ ಬಿರಾದಾರ್ ಅವರು ಸರಪಳಿ ಬಳಸಿ ನಾಯಿಯನ್ನು ಕಬ್ಬಿಣದ ಗ್ರಿಲ್ಸ್’ಗೆ ಕಟ್ಟಿದ್ದು, ನಗರಸಭೆಯ ಪೌರ ಕಾರ್ಮಿಕರು ಆ ನಾಯಿಯನ್ನು ಅಲ್ಲಿಂದ ಸ್ಥಳಾಂತರಿಸಿದರು. ಹುಚ್ಚು ಹಿಡಿದು ಜೊಲ್ಲು ಸುರಿಸುತ್ತಿದ್ದ ನಾಯಿ ಅತಿ ಅಪಾಯದ ಸ್ಥಿತಿಯಲ್ಲಿದೆ. `ಹುಚ್ಚು ಹಿಡಿದ ನಾಯಿ ಗರಿಷ್ಟ 10 ದಿನಗಳವರೆಗೆ ಮಾತ್ರ ಬದುಕುವ ಸಾಧ್ಯತೆಯಿದ್ದು, ಈ ಅವಧಿಯಲ್ಲಿ ಬೇರೆ ನಾಯಿಗಳಿಗೆ ಕಚ್ಚದಂತೆ ಎಚ್ಚರಿಕೆವಹಿಸಬೇಕು. ಬೇರೆ ನಾಯಿಗೆ ಕಚ್ಚಿದರೆ ಉಳಿದ ನಾಯಿಗಳಿಗೂ ಸೋಂಕು ಹರಡುವ ಅಪಾಯವಿದೆ’ ಎಂದು ಪಶುವೈದ್ಯರು ವಿವರಿಸಿದರು. - [ರಾತ್ರಿಯಿಡೀ ಕಾದವರು ಗೋ ಸಾಗಾಟ ತಡೆದರು!](https://mobiletime.in/2025/12/those-who-waited-all-night-stopped-the-cow-transport/): ಹೊನ್ನಾವರ ಹಾಗೂ ಸುತ್ತಲಿನ ಪ್ರದೇಶದಲ್ಲಿ ಪದೇ ಪದೇ ಗೋ ಕಳ್ಳತನ ನಡೆಯುತ್ತಿದ್ದು, ರಾತ್ರಿಯಿಡೀ ಕಾದ ಜನ ಆ ಕಳ್ಳರ ಕಾರ್ಯಕ್ಕೆ ತಾತ್ಕಾಲಿಕ ತಡೆ ಒಡ್ಡಿದ್ದಾರೆ. ಐಷಾರಾಮಿ ಕಾರನ್ನು ಅಡ್ಡಗಟ್ಟಿದನ್ನು ನೋಡಿ ಗೊ ಕಳ್ಳರು ಓಡಿ ಪರಾರಿಯಾಗಿದ್ದಾರೆ. ರಸ್ತೆ ಬದಿಯ ಹಸುಗಳನ್ನು ಕಾರಿನಲ್ಲಿ ತುಂಬಿಕೊAಡು ಹೋಗುವವರನ್ನು ಹಿಡಿಯುವುದಕ್ಕಾಗಿ ಹೊನ್ನಾವರದ ಜಡ್ಡಿಗದ್ದೆಯ ಜನ ರಾತ್ರಿ ಕಾವಲು ಕೂತಿದ್ದರು. ನಿರೀಕ್ಷೆಯಂತೆ ನಸುಕಿನ ಅವಧಿಯಲ್ಲಿ ಕಳ್ಳರು ಕಾರಿನಲ್ಲಿ ಬಂದಿದ್ದು, ಗೋವುಗಳನ್ನು ಕದಿಯುವಾಗಲೇ ಜನ ದಾಳಿ ನಡೆಸಿದರು. ಅವರ ವಾಹನ ತಡೆದು ಪೊಲೀಸರಿಗೆ ಫೋನ್ ಮಾಡಿದರು. ಜನರನ್ನು ನೋಡಿದ ಕಳ್ಳರು ಕಾರು ಹಾಗೂ ಮೊಬೈಲ್ ಬಿಟ್ಟು ಕಾಡಿನ ಕಡೆ ಓಡಿದರು. ಕಡತೋಕಾ, ಜಡ್ಡಿಗದ್ದೆ, ಮಾಡಗೇರಿ, ಊರಕೇರಿ, ಕೆಕ್ಕಾರ, ಗುಡ್ಡಿನಕಟ್ಟು, ನವೀಲಗೋಣ, ಹಳದೀಪುರ, ಬಾದಳ್ಳಿ, ಚಿಪ್ಪಿಹಕ್ಲು, ನವೀಲಗೋಣ ಸೇರಿ 400ಕ್ಕೂ ಅಧಿಕ ಜನ ನಡೆಸಿದ ಈ ಕಾರ್ಯಾಚರಣೆಯಿಂದ ಗೋ ಕಳ್ಳರು ಬೆದರಿದರು. ಚಂದಾವರದಿAದ ಅರೇಅಂಗಡಿ ಮಾರ್ಗವಾಗಿ ಭಟ್ಕಳಕ್ಕೆ ಸಾಗಾಟವಾಗುತ್ತಿದ್ದ ಗೋವುಗಳನ್ನು ಅಲ್ಲಿನ ಜನ ರಕ್ಷಿಸಿದರು. ಈ ಅವಧಿಯಲ್ಲಿ ಗೋ ಕಳ್ಳರ ಕಾರು ಅಪಘಾತಕ್ಕೀಡಾಗಿದ್ದು, ಕಾರಿನಲ್ಲಿ ಬಗೆ ಬಗೆಯ ನಂಬರ್ ಪ್ಲೇಟ್ ಸಿಕ್ಕಿವೆ. - [ಮೋದಿ ಮನಗೆದ್ದ ಚಾಪಲ್ ನೌಕೆ!](https://mobiletime.in/2025/12/modis-favorite-chappal-boat/): ಕಾರವಾರದಲ್ಲಿರುವ ಯುದ್ದನೌಕೆ ಸಂಗ್ರಹಾಲಯದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ಮಾತನಾಡಿದ್ದಾರೆ. `ಮನಕಿ ಬಾತ್’ ಕಾರ್ಯಕ್ರಮದಲ್ಲಿ ಅವರು ಚಾಪಲ್ ಯುದ್ಧನೌಕೆಯ ಕಾರ್ಯದ ಬಗ್ಗೆ ವಿವರಿಸಿದ್ದಾರೆ. ನವೆಂಬರ್ ತಿಂಗಳ `ಮನಕಿ ಬಾತ್’ ವೇಳೆ ನರೇಂದ್ರ ಮೋದಿ ಅವರು ಕಾರವಾರದ ವಿಷಯ ಪ್ರಸ್ತಾಪಿಸಿದ್ದಾರೆ. ನೌಕಾನೆಲೆ ಕುರಿತು ಮಾತನಾಡಿದ ಅವರು ದೇಶದ ವಿವಿಧೆಡೆಯಲ್ಲಿ ನೌಕಾದಳಕ್ಕೆ ಸಂಬoಧಿಸಿದ ವಸ್ತು ಸಂಗ್ರಹಾಲಯಗಳ ಕುರಿತು ಹೇಳಿದ್ದಾರೆ. ಈ ವೇಳೆ ಕಾರವಾರದ ಚಾಪಲ್ ಯುದ್ಧನೌಕೆಯ ಬಗ್ಗೆಯೂ ಅವರು ಮಾತನಾಡಿದ್ದಾರೆ. `ಕಾರವಾರದಲ್ಲಿಯೂ ಯುದ್ಧನೌಕೆ ವಸ್ತು ಸಂಗ್ರಹಾಲಯವಿದೆ. ಅಲ್ಲಿ ನೌಕಾದಳದ ಸಾಮರ್ಥ್ಯ ಬಿಂಬಿಸುವ ಪರಿಕರಗಳನ್ನು ಇಡಲಾಗಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಜನರ ಮುಂದೆ ಹೇಳಿದ್ದಾರೆ. 1971ರ ಇಂಡೋ ಪಾಕ್ ಯುದ್ಧದ ವೇಳೆ ಬಳಕೆ ಆಗಿದ್ದ ಚಪಲ್ ಯುದ್ಧನೌಕೆ ನಿವೃತ್ತಿಯ ಬಳಿಕ ಕಾರವಾರದಲ್ಲಿ ವಸ್ತುಸಂಗ್ರಹಾಲಯವಾಗಿ ಮಾರ್ಪಡಿಸಲಾಗಿದೆ. 2005ರಲ್ಲಿ ಇದನ್ನು ಕಾರವಾರಕ್ಕೆ ತರಲಾಗಿದ್ದು, 2006ರಿಂದ ಸಾರ್ವಜನಿಕ ವೀಕ್ಷಣೆಗೆ ಮುಕ್ತವಾಗಿಸಲಾಯಿತು. ಕಳೆದ 19 ವರ್ಷಗಳಲ್ಲಿ ಅಂದಾಜು 8 ಲಕ್ಷಕ್ಕೂ ಹೆಚ್ಚು ಪ್ರವಾಸಿಗರು ವಸ್ತು ಸಂಗ್ರಹಾಲಯ ವೀಕ್ಷಿಸಿದ್ದಾರೆ. ಈ ಸಂಗ್ರಹಾಲಯದ ಪಕ್ಕ ಟುಪಲೇವ್ ಯುದ್ಧ ವಿಮಾನ ವಸ್ತು ಸಂಗ್ರಹಾಲಯ ಸಹ ಇದೆ. - [ನಾಯಿಗೆ ತಿಂಡಿ ಹಾಕಿದ ವಿಷಯ: ಜಗಳ-ಮಾರಾಮಾರಿ!](https://mobiletime.in/2025/12/the-matter-of-feeding-the-dog-a-snack-a-fight/): ಬೀದಿ ನಾಯಿಗೆ ಬಿಸ್ಕತ್ ಹಾಕಿದ ವಿಷಯವಾಗಿ ನಾಲ್ವರ ನಡುವೆ ಗಲಾಟೆ ನಡೆದಿದೆ. ಈ ಗಲಾಟೆ ಒಮ್ಮೆ ರಾಜಿ-ಸಂದಾನದಲ್ಲಿ ಅಂತ್ಯವಾಗಿದ್ದರೂ ಅದೇ ವಿಷಯವಾಗಿ ಮತ್ತೆ ಹೊಡೆದಾಟ ನಡೆದು ಪ್ರಕರಣ ನ್ಯಾಯಾಲಯದ ಮೆಟ್ಟಿಲೇರಿದೆ. ನವೆಂಬರ್ 23ರಂದು ಭಟ್ಕಳ ಬಸ್ ನಿಲ್ದಾಣ ಬಳಿಯ ಅಂಗಡಿಯಲ್ಲಿದ್ದ ಮನೋಜ ತಲವಾರ ಎಂಬಾತರು ಅಲ್ಲಿ ಬಂದಿದ್ದ ನಾಯಿಗೆ ಸಮೋಸಾ-ಬಿಸ್ಕತ್ ಹಾಕಿದ್ದರು. ಅವರು ಈ ತಿಂಡಿ ಹಾಕುವ ವೇಳೆ ಮಂಡಳ್ಳಿ ನೀರಗದ್ದೆಯ ಮನೋಜ ಹರಿಶ್ಚಂದ್ರ ನಾಯ್ಕ ಅವರು ಅಲ್ಲಿಗೆ ಬಂದಿದ್ದು, ನಾಯಿಗೆ ತಿಂಡಿ ಹಾಕುವುದನ್ನು ವಿರೋಧಿಸಿದ್ದರು. `ನನ್ನನ್ನು ನೋಡುತ್ತ ನಾಯಿ ಕರೆದು ತಿಂಡಿ ಹಾಕುತ್ತೇಯಾ?’ ಎಂದು ಪ್ರಶ್ನಿಸಿ ಮನೋಜ ನಾಯ್ಕ ಅವರು ಜಗಳ ಮಾಡಿದ್ದರು. ಅವರ ಜಗಳ ತಾರಕ್ಕೇರಿದ್ದು, ಪೊಲೀಸರು ರಾಜಿ ಸಂಧಾನ ಮಾಡಿ ಮುಗಿಸಿದ್ದರು. ನವೆಂಬರ್ 24ರಂದು ಮತ್ತೆ ಆ ಅಂಗಡಿ ಬಳಿ ಬಂದ ಮನೋಜ ನಾಯ್ಕ ಅವರು `ಪೊಲೀಸರ ಬಳಿ ದೂರುವೆಯಾ?’ ಎಂದು ಪ್ರಶ್ನಿಸಿ ಮತ್ತೆ ಜಗಳ ಶುರು ಮಾಡಿದರು. ಈ ವೇಳೆ ಮನೋಜ ನಾಯ್ಕ ಅವರ ಜೊತೆ ಅವರ ಸಹೋದರ ಹರೀಶ ನಾಯ್ಕ ಸಹ ಇದ್ದರು. ಜಗಳ ತಡೆಯುವುದಕ್ಕಾಗಿ ಬಂದ ಭಟ್ಕಳ ಗಾಂಧೀನಗರದ ಕುಡ್ತಮ್ಮನಮನೆಯ ಸುಕ್ರಯ್ಯ ನಾರಾಯಣ ನಾಯ್ಕ (45) ಅವರ ಮೇಲೆ ಆ ಇಬ್ಬರು ದಾಳಿ ಮಾಡಿದರು. ತಂದೆಯ ಮೇಲೆ ನಡೆಯುವ ದಾಳಿ ತಡೆಯಲು ಮುಂದಾದ ಗಣೇಶ ನಾಯ್ಕ ಅವರು ಪೆಟ್ಟು ತಿಂದರು. ಕಬ್ಬಿಣದ ರಾಡಿನಿಂದ ತಲೆಗೆ ಪೆಟ್ಟು ಬಿದ್ದ ಕಾರಣ ಸುಕ್ರಯ್ಯ ನಾರಾಯಣ ನಾಯ್ಕ ಅವರು ಆಸ್ಪತ್ರೆಗೆ ದಾಖಲಾದರು. ಚಿಕಿತ್ಸೆಪಡೆದ ಅವರು ತಮ್ಮ ಮೇಲಾದ ದಾಳಿಯ ಬಗ್ಗೆ ಪೊಲೀಸರಿಗೆ ವಿವರಿಸಿ, ಹರೀಶ ನಾಯ್ಕ ಹಾಗೂ ಮನೋಜ ನಾಯ್ಕ ವಿರುದ್ಧ ದೂರಿದರು. - [ರಾತ್ರಿ ವೇಳೆ ಜನರ ಪಹರೆ: ಅವರವರ ಊರಿಗೆ ಅವರವರೇ ಪೊಲೀಸರು!](https://mobiletime.in/2025/12/peoples-night-patrol-they-are-the-police-in-their-own-town/): ಎಲ್ಲಡೆ ಕಳ್ಳರ ಹಾವಳಿ ವಿಪರೀತವಾಗಿದ್ದು, ಕಳ್ಳರ ಹೆಡೆಮುರಿ ಕಟ್ಟುವುದಕ್ಕಾಗಿ 55 ಊರಿನ ಜನ ಒಂದಾಗಿದ್ದಾರೆ. ಆ ಊರುಗಳಲ್ಲಿ ಪ್ರತಿ ಮನೆಯಿಂದ ಒಬ್ಬರಂತೆ ತಂಡ ಕಟ್ಟಿಕೊಂಡು ರಾತ್ರಿ ವೇಳೆ ಊರಿನ ಪಹರೆ ಕಾಯುತ್ತಿದ್ದಾರೆ. ಪ್ರತಿ ತಂಡದಲ್ಲಿಯೂ 8-10 ಜನ ಸದಸ್ಯರಿದ್ದು, ಆ ಭಾಗದ ಊರುಗಳಲ್ಲಿ ಸರಿಸುಮಾರು 500ಕ್ಕೂ ಅಧಿಕ ಜನ ಒಗ್ಗಟ್ಟಿನಿಂದ ಕೆಲಸ ಮಾಡುತ್ತಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಮಂಚಿಕೇರಿ, ಉಮ್ಮಚ್ಗಿ, ಹಾಸಣಗಿ, ಹಲಸಿನಕೊಪ್ಪ, ಕಂಪ್ಲಿ, ಬೈದಹಕ್ಕಲು, ಕೊಕ್ಕಾರ್ ಸೇರಿ ಆ ಭಾಗದ ಅನೇಕ ಊರುಗಳಲ್ಲಿ ರಾತ್ರಿ ಪಹರೆ ಕಾಯುವ ಕೆಲಸ ಶುರುವಾಗಿದೆ. ಈ ಭಾಗದಲ್ಲಿ ಮನೆ ಕಳ್ಳತನ, ಅಡಿಕೆ ಕಳ್ಳತನ ಸೇರಿ ಅನೇಕ ಅಪರಾಧ ಪ್ರಕರಣಗಳು ನಡೆದಿದ್ದರಿಂದ ಅದಕ್ಕೆಲ್ಲ ಕಡಿವಾಣ ಹಾಕಲು ಊರಿನವರೇ ರಾತ್ರಿ ವೇಳೆ ಗಸ್ತು ತಿರುಗುತ್ತಿದ್ದಾರೆ. ಅನುಮಾನಾಸ್ಪದ ವ್ಯಕ್ತಿಗಳ ವಿಚಾರಣೆ ನಡೆಸುವ ಅಲ್ಲಿನ ಜನ ಅಪರಿಚಿತರು ಬಂದ ತಕ್ಷಣ ಪೊಲೀಸರಿಗೆ ಮಾಹಿತಿ ನೀಡುತ್ತಿದ್ದಾರೆ. ಕೂಡಲೇ ಪೊಲೀಸರು ಸ್ಥಳಕ್ಕೆ ಬಂದು ವಿಚಾರಣೆ ನಡೆಸುತ್ತಿದ್ದಾರೆ. ಸದ್ಯ ಅಡಿಕೆ ಫಸಲಿನ ಹಂಗಾಮು ಶುರುವಾಗಿದ್ದು, ಬೆಳೆ ಕಾಯ್ದುಕೊಳ್ಳುವದೇ ರೈತರಿಗೆ ದೊಡ್ಡ ತಲೆನೋವಾಗಿದೆ. ಈ ನಡುವೆ ಮರಕ್ಕೆ ಇದ್ದ ಅಡಿಕೆ ಕದ್ದು ಒಯ್ದ ಪ್ರಕರಣಗಳು ನಡೆಯುತ್ತಿದೆ. ಕಳ್ಳರ ಕಾಟದಿಂದ ಊರಿನ ಜನರಿಗೆ ನೆಮ್ಮದಿ ಇಲ್ಲದಿರುವುದನ್ನು ಅರಿತ ಯಲ್ಲಾಪುರ ಪಿಐ ರಮೇಶ ಹಾನಾಪುರ ಈ ಭಾಗದಲ್ಲಿ ನಿರಂತರ ಸಭೆ ನಡೆಸಿದ್ದಾರೆ. ಅದರ ಮುಂದುವರೆದ ಭಾಗವಾಗಿ ಊರಿನ ಜನರನ್ನು ಒಂದುಗೂಡಿಸಿ ಅವರ ಮೂಲಕವೇ ಊರಿಗೆ ಭದ್ರತೆ ಒದಗಿಸುವ ಪ್ರಯತ್ನ ಮಾಡಿದ್ದಾರೆ. ಈ 55 ಊರುಗಳಿಗೆ ಮಂಚಿಕೇರಿ ಹೊರಠಾಣೆ ಕೇಂದ್ರವಾಗಿದ್ದು, ತುರ್ತು ಸನ್ನಿವೇಶ ಎದುರಾದಲ್ಲಿ ಜನ 112ಗೆ ಫೋನ್ ಮಾಡುತ್ತಾರೆ. 112 ಸಿಬ್ಬಂದಿ ಜೊತೆ ಮಂಚಿಕೇರಿ ಹೊರಠಾಣೆ ಪೊಲೀಸರು ಸ್ಥಳದಲ್ಲಿ ಹಾಜರಿರುತ್ತಾರೆ. `ಫೋನ್ ಮಾಡದಿದ್ದರೂ ನಮ್ಮೊಂದಿಗೆ ಪೊಲೀಸರು ಬರುತ್ತಾರೆ. ಬೇರೆ ಸ್ಥಳದಲ್ಲಿ ಕರ್ತವ್ಯದಲ್ಲಿದ್ದ ಸಿಬ್ಬಂದಿ ಸಹ ಫೋನ್ ಮಾಡಿದ ತಕ್ಷಣ ಹಾಜರಿರುತ್ತಾರೆ’ ಎಂದು ರಾಮಣ್ಣ ಕಬ್ಬಿನಗುಳಿ ಹಾಗೂ ವಿನೋದ ನಾಯ್ಕ ಕಂಪ್ಲಿ ಅವರು ವಿವರಿಸಿದರು. ಮಂಚಿಕೇರಿ ಹಾಗೂ ಸುತ್ತಲಿನ ಪ್ರದೇಶದಲ್ಲಿ ಕಳ್ಳತನ ಮಾಡುವವರನ್ನು ಪೊಲೀಸರು ಗುರುತಿಸಿದ್ದಾರೆ. ಈಗಾಗಲೇ ಪೊಲೀಸರು ಅಂಥವರನ್ನು ಬಂಧಿಸಿ ಕಾನೂನು ಕ್ರಮ ಜರುಗಿಸಿದ್ದಾರೆ. ಅದಾಗಿಯೂ, ಬೇರೆ ಬೇರೆ ಊರುಗಳಿಂದ ಕಳ್ಳರು ಇಲ್ಲಿ ಬರುವ ಸಾಧ್ಯತೆಗಳಿವೆ. ಈಚೆಗೆ ನಡೆದ ಬ್ಯಾಂಕ್ ದರೋಡೆ, ಅಡಿಕೆ ಕಳ್ಳತನ, ಮನೆ ಲೂಟಿ ಪ್ರಕರಣವನ್ನು ಊರಿನ ಜನ ಗಂಭೀರವಾಗಿ ಪರಿಗಣಿಸಿದ್ದು, ತಮ್ಮ ಊರಿನ ರಕ್ಷಣೆಗಾಗಿ ಎಲ್ಲರೂ ಸೇರಿ ಪಣ ತೊಟ್ಟಿದ್ದಾರೆ. `ಊರಿನವರೆಲ್ಲ ಒಗ್ಗಟ್ಟಿನ ಪ್ರಕಾರ ಗಸ್ತು ಕಾಯುವದರಿಂದ ಕಳ್ಳರಿಗೂ ಭಯ ಶುರುವಾಗಿದೆ. ಊರಿನ ಸೌಹಾರ್ದತೆಗೂ ಈ ಕಾರ್ಯ ಅನುಕೂಲವಾಗಿದೆ’ ಎಂದು ವಸಂತ ಭಟ್ಟ ಹಾಸಣಗಿ ಅವರು ಅನಿಸಿಕೆವ್ಯಕ್ತಪಡಿಸಿದರು. `ಪೊಲೀಸರ ಸಹಕಾರದಿಂದ ಗಸ್ತು ಪದ್ಧತಿ ಶುರುವಾಗಿದೆ. ನಮ್ಮ ಊರಿನ ರಕ್ಷಣೆಗೆ ನಮಗೆ ಜವಾಬ್ದಾರಿ ಸಿಕ್ಕಿದ್ದು ಸಂತಸದ ಸಂಗತಿಯೂ ಹೌದು’ ಎಂದು ನವೀನ ಹೆಗಡೆ ಬೆದೆಹಕ್ಕಲ್ ಅವರು ಹೆಮ್ಮೆಯಿಂದ ಹೇಳಿದರು. `ಪ್ರಮುಖ 15 ಸೊಸೈಟಿಗಳ ಸಭೆ ನಡೆಸಿದಾಗ ಅಡಿಕೆ ಕಳ್ಳತನದ ಬಗ್ಗೆ ಜನ ವಿವರಿಸಿದ್ದು, ಅದರ ತಡೆಗೆ ಗಸ್ತು ತಿರುಗುವ ಯೋಜನೆ ರೂಪಿಸಲಾಯಿತು. ಸ್ಥಳೀಯ ಬೀಟ್ ಪೊಲೀಸರ ಸಹಕಾರದಲ್ಲಿ ಊರಿನವರೇ ಗಸ್ತು ತಿರುಗಲು ಒಪ್ಪಿಕೊಂಡಿದ್ದಾರೆ. ಕಾನೂನು ಕೈಗೆ ತೆಗೆದುಕೊಳ್ಳದಂತೆ ಅಲ್ಲಿನವರಿಗೆ ಎಚ್ಚರಿಸಲಾಗಿದ್ದು ಅನುಮಾನಾಸ್ಪದ ವ್ಯಕ್ತಿ, ವಾಹನಗಳ ಬಗ್ಗೆ ಮಾಹಿತಿ ಕೊಡುವಂತೆ ಅರಿವು ಮೂಡಿಸಲಾಗಿದೆ. ಮಂಚಿಕೇರಿ ಭಾಗದಲ್ಲಿ ಜನರ ಸ್ಪಂದನೆ ಚನ್ನಾಗಿದ್ದು ಇಡಗುಂದಿ, ಅರಬೈಲ್ ಸೇರಿ ತಾಲೂಕಿನ ಇನ್ನಿತರ ಕಡೆಗಳಲ್ಲಿಯೂ ಈ ರೀತಿ ಮಾಡುವ ಪ್ರಯತ್ನ ಸಾಗಿದೆ’ ಎಂದು ಪಿಐ ರಮೇಶ ಹಾನಾಪುರ ಅವರು ತಿಳಿಸಿದರು. - [2025 ಡಿಸೆಂಬರ್ 1ರ ದಿನ ಭವಿಷ್ಯ](https://mobiletime.in/2025/11/prediction-for-december-1-2025/): ಮೇಷ ರಾಶಿ: ಹಳೆಯ ಚಿಂತೆಗಳಿoದ ಹೊರ ಬರುವಿರಿ. ಕೆಲಸದಲ್ಲಿ ಆತ್ಮವಿಶ್ವಾಸ ಹೆಚ್ಚಾಗಿ ಹೊಸ ಅವಕಾಶಗಳಲ್ಲಿ ಭಾಗವಹಿಸುವಿರಿ. ಸಹೋದ್ಯೋಗಿಗಳ ಸಹಕಾರದಿಂದ ಗುರಿ ತಲುಪಲು ದಾರಿ ಸಿಗಲಿದೆ. ಕುಟುಂಬದ ಮಾತು ಕೇಳಿ ನಿರ್ಧಾರ ಮಾಡಿದರೆ ಒಳಿತು. ವಾಹನ ಚಾಲನೆ ಹಾಗೂ ಪ್ರವಾಸದಲ್ಲಿ ಜಾಗ್ರತೆ ಅಗತ್ಯ. ವೃಷಭ ರಾಶಿ: ಮನಸ್ಸಿನಲ್ಲಿರುವ ಗೊಂದಲ ನಿಧಾನವಾಗಿ ಕಡಿಮೆಯಾಗುತ್ತದೆ. ಉದ್ಯೋಗದಲ್ಲಿ ನೆಮ್ಮದಿ ಕೊಡುವ ಕೆಲಸಗಳು ಸಿಗಲಿದೆ. ಅತಿಯಾದ ಹಠ, ಅಹಂ ಬಿಡದಿದ್ದರೆ ಒತ್ತಡ ಹೆಚ್ಚಾಗಲಿದೆ. ಆಹಾರ ಹಾಗೂ ನಿದ್ರೆ ಸರಿಯಾಗಿ ಕಾಪಾಡಿಕೊಂಡರೆ ಆರೋಗ್ಯಕ್ಕೆ ಒಳ್ಳೆಯದು. ದೇವಾಲಯ, ಧಾರ್ಮಿಕ ಕಾರ್ಯಗಳಲ್ಲಿ ಭಾಗವಹಿಸುವುದು ಉತ್ತಮ. ಮಿಥುನ ರಾಶಿ: ಸೃಜನಾತ್ಮಕ ಕೆಲಸದಲ್ಲಿ ತೃಪ್ತಿ ಸಿಗಲಿದೆ. ಹೊಸ ಕಲ್ಪನೆಗಳು ಮೂಡುತ್ತವೆ. ಬರವಣಿಗೆ ಕ್ಷೇತ್ರದಲ್ಲಿದ್ದವರಿಗೆ ಆಸಕ್ತಿಯ ದಿನವಾಗಿರಲಿದೆ. ಸ್ನೇಹಿತರ ಜೊತೆ ಚಟುವಟಿಕೆ ಹೆಚ್ಚಾದರೂ, ಸಮಯ ವ್ಯರ್ಥವಾಗದಂತೆ ನೋಡಿಕೊಳ್ಳಿ. ಚಿಕ್ಕ ಚಿಕ್ಕ ಒಪ್ಪಂದಗಳು ಲಾಭ ತರಲಿದೆ. ಕರ್ಕ ರಾಶಿ: ಮನೆ ಹಾಗೂ ಕಚೇರಿ ಎರಡೂ ಕಡೆ ಒತ್ತಡ ಹೆಚ್ಚಾಗಲಿದೆ. ಹಳೆಯ ಕೆಲಸಗಳು ಮುಗಿಯಲಿದೆ. ಕುಟುಂಬ ಸದಸ್ಯರ ಮಾತನ್ನು ಕೇಳಿ ಪ್ರತಿಕ್ರಿಯೆ ಕೊಡಿ. ಅತಿಯಾದ ಸಂವೇಧನೆಗಳಿಗೆ ಒಳಗಾಗಬೇಡಿ. ಆರೋಗ್ಯದ ವಿಷಯವಾಗಿ ಬೆನ್ನು, ಹೊಟ್ಟೆ ಭಾಗದಲ್ಲಿ ಸಮಸ್ಯೆ ಆಗುವ ಸಾಧ್ಯತೆಗಳಿವೆ. ಬಾವಿ, ಕೆರೆ ಸೇರಿ ಅಪಾಯಕಾರಿ ಪ್ರದೇಶಗಳಿಂದ ದೂರವಿರಿ. ಸಿಂಹ ರಾಶಿ: ದಿನದ ಹೆಚ್ಚಿನ ಭಾಗ ಚಟುವಟಿಕೆಯಿಂದ ಕೂಡಿರಲಿದೆ. ಕಾರ್ಯಕ್ಷೇತ್ರದಲ್ಲಿ ಹೊಣೆಗಾರಿಕೆ ಹೆಚ್ಚಾದರೂ ಹೆಸರು ಬರುತ್ತದೆ. ಮಿತ್ರರಿಂದ ಸಹಾಯ ದೊರೆಯಲಿದೆ. ಖರ್ಚುಗಳಲ್ಲಿ ನಿಯಂತ್ರಣವಿಟ್ಟರೆ ನಂತರ ಉಪಯೋಗಕ್ಕೆ ಬರಲಿದೆ. ಹೃದಯ ಸಮಸ್ಯೆ ಇದ್ದವರು ಜಾಗೃತಿವಹಿಸಬೇಕು. ಕನ್ಯಾ ರಾಶಿ: ನಿರ್ಣಯಗಳನ್ನು ಕೈಗೊಳ್ಳುವ ದಿನವಾಗಿದೆ. ಶತ್ರುಗಳು ದೂರವಾಗಲಿದ್ದಾರೆ. ಕಚೇರಿಯಲ್ಲಿ ಸಣ್ಣ ತಪ್ಪುಗಳಿಗೂ ಟೀಕೆ ಸಹಜ. ಸಂವಹನದಲ್ಲಿ ಕಟುವಾದ ಮಾತು ಬೇಡ, ಮೌನ ಉತ್ತಮ. ಕಾನೂನು, ದಾಖಲೆ, ಬ್ಯಾಂಕ್ ಕಾರ್ಯಗಳಲ್ಲಿ ಗೊಂದಲವಾಗಬಹುದು. ವಿಷ್ಣು ದೇವರ ಆರಾಧನೆ ಸಹಕಾರಿ. ತುಲಾ ರಾಶಿ: ಹಳೆಯ ಜಗಳ, ಗೊಂದಲ ಪರಿಹಾರ ಸಿಗಲಿದೆ. ಉದ್ಯೋಗ, ವ್ಯವಹಾರದಲ್ಲಿ ನಿಂತಿದ್ದ ಕೆಲಸಗಳು ಮುಂದೆ ಸಾಗಲಿದೆ. ಪಾಲುದಾರಿಕೆ ವಿಚಾರದಲ್ಲಿ ಸ್ಪಷ್ಟ ಒಪ್ಪಂದ ಉತ್ತಮ. ಕುಟುಂಬದಲ್ಲಿ ಚಿಕ್ಕ ವಿಚಾರಕ್ಕೂ ವಾಗ್ವಾದ ಒಳ್ಳೆಯದಲ್ಲ. ವೃಶ್ಚಿಕ ರಾಶಿ: ನಿಮ್ಮ ಶ್ರಮಕ್ಕೆ ತಕ್ಕ ಫಲ ಸಿಗಲಿದೆ. ಆತ್ಮವಿಶ್ವಾಸ ಹೆಚ್ಚಳವಾಗಲಿದೆ. ದಿನವಿಡೀ ಕೆಲಸವಿದ್ದರೂ ಸಂತೋಷ ಸಿಗಲಿದೆ. ಉದ್ದಿಮೆ-ವ್ಯಾಪಾರದಲ್ಲಿ ಹೊಸ ಆಲೋಚನೆ ಪ್ರಯೋಜನಕಾರಿ. ಸಾಲ-ಹೂಡಿಕೆ ವಿಚಾರದಲ್ಲಿ ಗೊಂದಲ ಬೇಡ. ತಲೆ ನೋವು, ನಿದ್ರೆ ಸಮಸ್ಯೆ ಇರುವವವರು ಟಿವಿ ನೋಡದಿದ್ದರೆ ಒಳಿತು. ಧನು ರಾಶಿ: ಹೊಸ ಪ್ರಯತ್ನ, ಹೊಸ ಅವಕಾಶಕ್ಕೆ ಒಳ್ಳೆಯ ದಿನ. ಸವಾಲುಗಳು ಎದುರಾದರೂ ಜಯ ಸಿಗಲಿದೆ. ವ್ಯವಹಾರದಲ್ಲಿ ಸಣ್ಣ ಅಪಾಯವಿದ್ದರೂ ಲಾಭ ನಿಶ್ವಿತ. ದೂರ ಪ್ರಯಾಣದ ಬಗ್ಗೆ ಚರ್ಚೆ ನಡೆಯಲಿದೆ. ಮಕ್ಕಳ ಜೊತೆ ಸಣ್ಣ ಭಿನ್ನಾಭಿಪ್ರಾಯ ಬಂದರೂ ಅದನ್ನು ಸರಿಪಡಿಸಿ. ಗುರು ಮಂತ್ರ ಪಠಣೆ ಪ್ರಯೋಜನಕಾರಿ. ಮಕರ ರಾಶಿ: ಸಾಮಾನ್ಯ ದಿನದ ಹಾಗೇ ಇದ್ದರೂ ಕ್ರಮಬದ್ಧ ಕೆಲಸಗಳಿಗೆ ಒತ್ತು ಕೊಡಿ. ವ್ಯಾಪಾರ-ವಹಿವಾಟಿನಲ್ಲಿ ಲಾಭ ಸಿಗಲಿದೆ. ಮಕ್ಕಳ ಭವಿಷ್ಯ ಬಗ್ಗೆ ಪ್ರಮುಖ ನಿರ್ಧಾರ ಕೈಗೊಳ್ಳುವ ಸಾಧ್ಯತೆಗಳಿವೆ. ಮನೆಗಾಗಿ ಹೂಡಿಕೆ, ಉಳಿತಾಯದ ಯೋಜನೆ ಆರಂಭಿಸಲು ಒಳ್ಳೆಯ ದಿನ. ವ್ಯಾಯಾಮ ಮಾಡಲು ಸಮಯ ಕೊಡಿ. ಕುಂಭ ರಾಶಿ: ಆರೋಗ್ಯದ ಕಡೆ ಹೆಚ್ಚು ಗಮನ ಕೊಡಬೇಕಾದ ದಿನ. ಹವಾಮಾನ ಬದಲಾವಣೆಗಳಿಂದ ಶೀತ, ಗಂಟಲು ತೊಂದರೆ ಬರಬಹುದು. ಬೇರೆಯವರ ವಿಷಯದಲ್ಲಿ ಮೂಗು ತೂರಿಸಲು ಹೋಗದಿರುವುದು ಒಳಿತು. ಹಣಕಾಸು ನಿರ್ಣಯದಲ್ಲಿ ಆತುರ ತೋರಬೇಡಿ. ಪ್ರಾಣಾಯಾಮ ಮಾಡುವುದರಿಂದ ಮನಸ್ಸಿಗೆ ಶಾಂತಿ ಸಿಗಲಿದೆ. ಮೀನ ರಾಶಿ: ಈ ದಿನ ಒಟ್ಟಾರೆಯಾಗಿ ನಿಮಗೆ ಲಾಭಕರ, ಬಹಳ ವಿಷಯಗಳಲ್ಲಿನ ಗೊಂದಲ ದೂರವಾಗಲಿದೆ. ಉದ್ಯಮದಲ್ಲಿ ಸಾಹಸ ಮಾಡಿದಷ್ಟು ದೊಡ್ಡದಾಗಿ ಜಯ ಸಿಗಲಿದೆ. ಸೌಮ್ಯ ವರ್ತನೆ, ಸಹನೆ ಬೇರೆಯವರ ಮೇಲೆ ಪ್ರಭಾವ ಬೀರಲಿದೆ. ಇತರರಿಗೆ ನೀವು ಮಾಡುವ ಸಹಾಯ ನಿಮಗೆ ಶಕ್ತಿ ಕೊಡುತ್ತದೆ. ಧ್ಯಾನ, ಜಪ, ದೇವರ ಪೂಜೆಯಿಂದ ಮನಸ್ಸು ಹಗುರವಾಗಲಿದೆ. - [ಬೈಕಿನಿಂದ ಬಿದ್ದವ ಗಂಭೀರ](https://mobiletime.in/2025/11/man-who-fell-off-bike-is-in-serious-condition/): ರಸ್ತೆ ಸುರಕ್ಷತಾ ನಿಯಮ ಪಾಲಿಸದೇ ಬೈಕಿನಲ್ಲಿ ಅಡ್ಡಾದಿಡ್ಡಿ ಸಂಚರಿಸುತ್ತಿದ್ದವರಿಗೆ ಅಪಘಾತವಾಗಿದ್ದು, ಒಬ್ಬರು ಗಂಭೀರ ಪ್ರಮಾಣದಲ್ಲಿ ಗಾಯಗೊಂಡಿದ್ದಾರೆ. ಗೋಕರ್ಣ ಬಳಿಯ ಮೊಗೇರಕಟ್ಟೆಯ ಬಳಿ ಭಾನುವಾರ ಈ ಅವಘಡ ನಡೆದಿದೆ. ಆಂದ್ರ ಪ್ರದೇಶ ಮೂಲದ ನಾಲ್ಕು ಜನ ಎರಡು ಬೈಕಿನಲ್ಲಿ ಚಲಿಸುತ್ತಿದ್ದರು. ಅಡ್ಡಾದಿಡ್ಡಿ ಬೈಕ್ ಓಡಿಸುತ್ತಿದ್ದ ಅವರಲ್ಲಿ ಒಬ್ಬರ ಬೈಕು ಅಪಘಾತಕ್ಕೀಡಾಯಿತು. ಬೈಕಿನಿಂದ ಬಿದ್ದ ಸವಾರರ ತಲೆಗೆ ಗಂಭೀರ ಪ್ರಮಾಣದಲ್ಲಿ ಗಾಯವಾಯಿತು. ತಕ್ಷಣ ಗೋಕರ್ಣ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಗಾಯಾಳುವನ್ನು ಸಾಗಿಸಲಾಯಿತು. ಪ್ರಭಾರಿ ಆಡಳಿತ ವೈದ್ಯಾಧಿಕಾರಿ ಡಾ ಜಗದೀಶ ನಾಯ್ಕ ಅವರು ಚಿಕಿತ್ಸೆ ನೀಡಿದರು. ತಲೆಗೆ ಬಲವಾದ ಪೆಟ್ಟು ಬಿದ್ದ ಕಾರಣ ಗಾಯಾಳು ಅರೆಪ್ರಜ್ಞಾ ವ್ಯವಸ್ಥೆಗೆ ತಲುಪಿದ್ದರು. ಈ ಹಿನ್ನಲೆ ಅವರನ್ನು ಹೆಚ್ಚಿನ ಚಿಕಿತ್ಸೆಗೆ ವೈದ್ಯರು ಬೇರೆ ಕಡೆ ಶಿಫಾರಸ್ಸು ಮಾಡಿದರು. ಜೊತೆಗಿದ್ದವರು ಗಾಯಾಳುವನ್ನು ಉಡುಪಿಗೆ ಕಳುಹಿಸಿದರು. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. `ಸಂಚಾರಿ ನಿಯಮ ಪಾಲಿಸಿ.. ಕಾನೂನನ್ನು ಗೌರವಿಸಿ’ - [ಕಾಲೇಜು ಕಟ್ಟುವ ಕನಸಿಗೆ ಕಿಡಿಗೇಡಿಗಳ ಅಡ್ಡಿ!](https://mobiletime.in/2025/12/miscreants-hinder-the-dream-of-building-a-college/): ಈಶ್ವರ ನಾಯ್ಕ, ಸುರೇಶ ನಾಯ್ಕ ಹಾಗೂ ಗೋವಿಂದ ನಾಯ್ಕ ಸೇರಿ ಸತೀಶ್ ನಾಯ್ಕ ಅವರ ಕನಸಿನ ಯೋಜನೆಗೆ ಕಲ್ಲು ಹೊಡೆದಿದ್ದಾರೆ. ಶಿಕ್ಷಣ ಸಂಸ್ಥೆ ನಿರ್ಮಿಸಬೇಕು ಎಂದು ಸತೀಶ ನಾಯ್ಕ ಅವರು ಖರೀದಿಸಿದ್ದ ಜಾಗದ ವಿಷಯವಾಗಿ ಆ ಮೂವರು ತೊಂದರೆ ಕೊಡುತ್ತಿದ್ದಾರೆ. ಕಾರವಾರದ ಬಾಡದ ಬಳಿಯಿರುವ ಹನವಿವಾಡದಲ್ಲಿ ಸತೀಶ ಮಹಾಬಲೇಶ್ವರ ನಾಯ್ಕ ಅವರು ವಾಸವಾಗಿದ್ದಾರೆ. ಕಾಮದೇನು ಬಿಸಿಎ ಕಾಲೇಜಿನಲ್ಲಿ ಅವರು ಪ್ರಾಚಾರ್ಯರಾಗಿದ್ದಾರೆ. `ತಾನೂ ಒಂದು ವಿದ್ಯಾಸಂಸ್ಥೆ ಕಟ್ಟಬೇಕು’ ಎಂಬುದು ಸತೀಶ ನಾಯ್ಕ ಅವರ ಕನಸು. ಇದಕ್ಕಾಗಿ ಅವರು 13 ವರ್ಷದ ಹಿಂದೆಯೇ 5 ಎಕರೆ ಭೂಮಿ ಖರೀದಿಸಿದ್ದಾರೆ. ಅಂಕೋಲಾದ ಸಕಲಬೇಣದಲ್ಲಿದ್ದ ಸಂತೋಷ ರೇವಣಕರ್ ಅವರ ಭೂಮಿಪಡೆದಿರುವ ಸತೀಶ ನಾಯ್ಕ ಅವರ ವಿರುದ್ಧ ಈಶ್ವರ ನಾಯ್ಕ, ಸುರೇಶ ನಾಯ್ಕ ಹಾಗೂ ಗೋವಿಂದ ನಾಯ್ಕ ಅವರು ಅಸಮಧಾನಿತರಾಗಿದ್ದಾರೆ. `ಖರೀದಿಸಿದ ಭೂಮಿ ಜೊತೆ ಪಕ್ಕದಲ್ಲಿರುವ ತಮ್ಮ ಭೂಮಿಗೂ ಸತೀಶ ನಾಯ್ಕ ಅವರು ಬೇಲಿ ನಿರ್ಮಿಸಿದ್ದಾರೆ’ ಎಂಬುದು ಆ ಮೂವರ ಅಳಲು. ಹೀಗಾಗಿ `ಸರ್ವೇ ಸರಿಯಾಗಿಲ್ಲ’ ಎಂದು ಈಶ್ವರ ನಾಯ್ಕ, ಸುರೇಶ ನಾಯ್ಕ ಹಾಗೂ ಗೋವಿಂದ ನಾಯ್ಕ ತಕರಾರು ಸಲ್ಲಿಸುತ್ತಿದ್ದಾರೆ. ಆದರೆ, ಸತೀಶ ನಾಯ್ಕ ಅವರು ಈ ಮಾತು ನಂಬಿಲ್ಲ. ಸತೀಶ ನಾಯ್ಕ ಅವರು ತಾವು ಖರೀದಿಸಿದ ಭೂಮಿ ಸುತ್ತಲು ಕಪೌಂಡ್ ನಿರ್ಮಿಸಿದ್ದಾರೆ. ಎರಡು ಕಡೆ ಚೀರೆ ಕಲ್ಲು ಹಾಗೂ ಒಂದು ಕಡೆ ಕಬ್ಬಿಣದ ಕಪೌಂಡ್ ನಿರ್ಮಿಸಿ ತಮ್ಮ ಜಾಗವನ್ನು ಭದ್ರಪಡಿಸುವ ಪ್ರಯತ್ನ ಮಾಡಿದ್ದಾರೆ. ಆದರೆ, ಅವರ್ಸಾದ ಈಶ್ವರ ನಾಯ್ಕ ಸುರೇಶ ನಾಯ್ಕ ಹಾಗೂ ಗೋವಿಂದ ನಾಯ್ಕ ಅವರು ತಮ್ಮ ಜಾಗಕ್ಕೂ ಸತೀಶ ನಾಯ್ಕ ಅವರು ಕಪೌಂಡ್ ನಿರ್ಮಿಸಿದ ಬಗ್ಗೆ ಆಕ್ಷೇಪಿಸಿದ್ದು, ಆ ಕಪೌಂಡ್ ಒಡೆದಿದ್ದಾರೆ. ನವೆಂಬರ್ 29ರಂದು ಕಪೌಂಡ್ ಒಡೆದಿದ್ದು ಸತೀಶ ನಾಯ್ಕ ಅವರಿಗೆ ನಂತರ ಗೊತ್ತಾಗಿದೆ. ಕಪೌಂಡ್ ಒಡೆದ ಮೂವರ ವಿರುದ್ಧ ಸತೀಶ ನಾಯ್ಕ ಅವರು ಪೊಲೀಸ್ ದೂರು ಸಲ್ಲಿಸಿದ್ದಾರೆ. ಅವರನ್ನು ವಿಚಾರಣೆಗೆ ಒಳಪಡಿಸಬೇಕು ಎಂದು ಆಗ್ರಹಿಸಿದ್ದಾರೆ. - [ಕರಾವಳಿ ಉತ್ಸವ: ಕುಣಿದು ಕುಪ್ಪಳಿಸಿದ ಜನ ಸಾಗರ!](https://mobiletime.in/2025/12/coastal-festival-a-sea-of-people-dancing-and-having-fun/): ಕಡಲ ನಗರಿ ಕಾರವಾರದಲ್ಲಿ ನಡೆಯುತ್ತಿರುವ ಕರಾವಳಿ ಉತ್ಸವದ ಮೊದಲ ದಿನ ಖ್ಯಾತ ಗಾಯಕ ಶಂಕರ್ ಮಾದವನ್‌ಗಾಯನ ಪ್ರಸ್ತುತಪಡಿಸಿದ್ದಾರೆ. ತಡರಾತ್ರಿಯವರೆಗೂ ಅದ್ಧೂರಿ ರಸ ಮಂಜರಿ ಕಾರ್ಯಕ್ರಮ ನಡೆದಿದ್ದು, ಭಾಗವಹಿಸಿದ ಜನ ಕುಣಿದು ಕುಪ್ಪಳಿಸಿದ್ದಾರೆ. ರವಿಂದ್ರನಾಥ ಠಾಗೋರ ಕಡಲ ತೀರದ ಮಯೂರ ವರ್ಮ ವೇದಿಕೆಯಲ್ಲಿ ಸೋಮವಾರ ನಡೆದ ಕರಾವಳಿ ಉತ್ಸವದ ಉದ್ಘಾಟನಾ ಕಾರ್ಯಕ್ರಮಕ್ಕೂ ಪೂರ್ವ ಬಗೆ ಬಗೆಯ ಮನರಂಜನಾ ಕಾರ್ಯಕ್ರಮಗಳು ನಡೆದಿವೆ. ಉದ್ಘಾಟನೆ ನಂತರವೂ ಜನ ನೆಚ್ಚಿನ ಗಾಯನಗಳಿಗಾಗಿ ಕಾದು ಕುಳಿತಿದ್ದು, ಗಾನಸುಧೆಯಲ್ಲಿ ಮೈ ಮರೆತಿದ್ದಾರೆ. ಕಾರವಾರದ ರವೀಂದ್ರನಾಥ ಠಾಗೋರ ಕಡಲತೀರದಲ್ಲಿ ನಡೆಯುವ ಕರಾವಳಿ ಉತ್ಸವಕ್ಕೆ ಮಂಗಳವಾರ ರಾತ್ರಿ ಗಾಯಕ ಗುರುಕಿರಣ ಅವರು ಆಗಮಿಸಲಿದ್ದಾರೆ. ಅದಕ್ಕೂ ಮುನ್ನ ಬ್ರಹ್ಮದೇವ್ ಗುಮಟಾ ಪಾಂಗ್ ಕಲಾ ತಂಡ ಸಂಘದಿAದ ಗುಮಟಾ ಪಾಂಗ್ ವಾದ್ಯ ಪ್ರದರ್ಶನ, ಸುನೀಲ್ ಬಾರ್ಕೂರ್ ಕೈಗಾ ಅವರಿಂದ ಸಂಗೀತ ಕಾರ್ಯಕ್ರಮ, ಸುಮಂಗಲಾ ದೇಸಾಯಿ ಮತ್ತು ಸಂಗಡಿಗರರಿoದ ಸುಗಮ ಸಂಗೀತ ಹಾಗೂ ಜಾನಪದ ಗೀತೆ, ಮನೋಜ ಅ ಪಾಲೇಕರ, ಕಲಾ ಭಾರತಿ ಕಲಾ ವೈವಿಧ್ಯ ತಂಡ ಶಿರಸಿ ಅವರಿಂದ ರೂಪಕ ಗೊಂಬೆಯಾಟ ಮಿಮಿಕ್ರಿ, ಸುಜಾತ ಕೆ ಹರಿಕಂತ್ರ ಅವರಿಂದ ಯೋಗ ನೃತ್ಯ ಸ್ವರ ಸಂಗೀತ, ರಸಮಂಜರಿ ತಂಡ ಸಂಗೀತ ರಸಮಂಜರಿ ನಡೆಯಲಿದೆ. ಸೋಮವಾರ ಸಂಜೆ ನಡೆದ ರಾಜ್ಯ ಹಾಗೂ ಸ್ಥಳೀಯ ಕಲಾವಿದರಿಂದ ನಡೆದ ಜಾನಪದ ಮತ್ತು ಸುಗಮ ಸಂಗೀತ ಕಾರ್ಯಕ್ರಮಗಳು ಪ್ರೇಕ್ಷಕರನ್ನು ರಂಜಿಸಿವೆ. ಸಭೆಗೂ ಮುನ್ನ ಶ್ರೀನಿವಾಸ ಮೊಳಕಾಲ್ಮುರ್ ಅವರಿಂದ ಕೊಂಬು ಕಹಳೆ ಪ್ರದರ್ಶನ, ನಾಗೇಶ ತಂಡದಿoದ ಕೋಳಿ ಕುಣಿತ, ಗೋರವ ಕಲೆ ಪ್ರದರ್ಶನ ಹುಬ್ಬಳ್ಳಿಯ ಶಂಕ್ರಪ್ಪ ಅವರ ತಂಡದಿoದ ಜಗ್ಗಲಿಗೆ ಮೇಳ ಪ್ರದರ್ಶನ, ಚಿತ್ರದುರ್ಗದ ಮಹಾಂತೇಶ ತಂಡದಿoದ ಮುಖವಾಡ ಕುಣಿತ, ರಾಯಚೂರಿನ ಮಹಾಲಕ್ಷ್ಮಿ ತಂಡದವರಿoದ ಸುಗಮ ಸಂಗೀತ, ಶಿರಸಿಯ ಸೀಮಾ ಭಾಗ್ವತ್ ತಂಡದಿoದ ಭರತ ನಾಟ್ಯ ಪ್ರದರ್ಶನ ಕಾಯ್ರಕಮ ನಡೆಯಿತು. `ಕರಾವಳಿ ಜನರ ಕಲೆ ಮತ್ತು ಸಂಸ್ಕ್ರತಿ ಯನ್ನು ಉಳಿಸಿ ಬೆಳಸಿ ಪ್ರೋತ್ಸಾಹ ನೀಡುವುದರ ಜೊತೆ ರಾಷ್ಟ್ರ ಮಟ್ಟದ ಕಲಾವಿದರನ್ನು ಕರೆಯಿಸಿ ಮನರಂಜನೆ ಆಯೋಜಿಸಲಾಗಿದೆ’ ಎಂದು ಸಭೆ ಉದ್ಘಾಟಿಸಿದ ಸಚಿವ ಮಂಕಾಳು ವೈದ್ಯ ಹೇಳಿದರು. `ಕರಾವಳಿಯ ಜನರು ಉದ್ಯೋಗ ಬಯಸಿ ಹೊರ ರಾಜ್ಯಗಳಿಗೆ ತೆರಲುವುದನ್ನು ತಪ್ಪಿಸಲು ಹಾಗೂ ಕರಾವಳಿ ಪ್ರವಾಸೋದ್ಯಮ ಅಭಿವೃದ್ಧಿ ಪಡೆಸಿ ಉದ್ಯೋಗ ಸೃಷ್ಠಿಸಲು ಪ್ರವಾಸೋದ್ಯಮಕ್ಕೆ ಪ್ರತ್ಯೇಕ ನೀತಿ ಜಾರಿ ಮಾಡಲಾಗುತ್ತದೆ’ ಎಂದವರು ಘೋಷಿಸಿದರು. `ನಿಸರ್ಗ ಮತ್ತು ಮೀನುಗಾರರಿಗೆ ಯಾವುದೇ ರೀತಿ ಹಾನಿಯಾಗದಂತೆ ಪ್ರವಾಸೋದ್ಯಮ ಅಭಿವೃದ್ಧಿ ಪಡಿಸಲಾಗುತ್ತದೆ’ ಎಂದರು. ಕರ್ನಾಟಕ ರಾಜ್ಯ ಮಾರ್ಕೇಟಿಂಗ್ ಕಮ್ಯೂನಿಕೇಷನ್ ಮತ್ತು ಅಡ್ವರ್ಟೈಸಿಂಗ್ ಲಿಮಿಟೆಡ್ ಅಧ್ಯಕ್ಷ ಹಾಗೂ ಶಾಸಕ ಸತೀಶ್ ಸೈಲ್ ಮಾತನಾಡಿ `8 ವರ್ಷಗಳ ನಂತರ ಸಪ್ತಾಹ ಮೂಲಕ ಕಾರ್ಯಕ್ರಮ ಅಯೋಜನೆ ಮಾಡಲಾಗುತ್ತಿದೆ. ಸರ್ಕಾರ ಪಂಚ ಗ್ಯಾರಂಟಿ ಯೋಜನೆ ಜನ ಸಮಾನ್ಯರ ಏಳಿಗೆಗೆ ಶ್ರಮಿಸುತ್ತಿದೆ’ ಎಂದರು. `ಈಗಾಗಲೇ ಜಿಲ್ಲಾ ಆಸ್ಪತ್ರೆಯಲ್ಲಿ ಥಾರ್ಮ ಸೆಂಟರ್ ತೆರೆಯಲಾಗಿದೆ. ಮುಂದಿನ ದಿನಗಳಲ್ಲಿ ಖಂಡಿತವಾಗಿ ಕಾರವಾರದಲ್ಲಿ ಸೂಪರ್ ಸ್ಪೆಷಲಿಟಿ ಆಸ್ಪತ್ರೆ ಮಾಡಲಾಗುತ್ತದೆ’ ಎಂದರು.   - [ಬಿಜೆಪಿ | ಪ್ರತಿಭಟನೆಗೆ ಬಂದವರಿಗೆ ಬಿರಿಯಾನಿ ಭೋಜನ!](https://mobiletime.in/2025/12/bjp-biryani-dinner-for-those-who-came-to-protest/): ಬಡ ಜನರಿಂದ ಹಣಪಡೆದು ಸರ್ಕಾರ ಮನೆ ಕೊಡದ ಕಾರಣ ಫಲಾನುಭವಿಗಳು ಯಲ್ಲಾಪುರ ಪಟ್ಟಣ ಪಂಚಾಯತ ಮುಂದೆ ಆಕ್ರೋಶವ್ಯಕ್ತಪಡಿಸಿದ್ದು, ಪ್ರತಿಭಟನೆ ಸಂಘಟಿಸಿದ್ದ ಬಿಜೆಪಿಗರು ನೊಂದವರಿಗೆ ಬಿರಿಯಾನಿ ಕೊಟ್ಟು ಸಮಾಧಾನ ಮಾಡಿದ್ದಾರೆ. ಜೊತೆಗೆ `ಯಲ್ಲಾಪುರ ಜಾತ್ರೆಯ ಒಳಗೆ ಫಲಾನುಭವಿಗಳಿಗೆ ಮನೆ ಕೊಡಿಸುತ್ತೇವೆ’ ಎಂದು ತಹಶೀಲ್ದಾರ್ ಚಂದ್ರಶೇಖರ ಹೊಸ್ಮನಿ ಅವರಿಂದ ಭರವಸೆ ಕೊಡಿಸಿದ್ದಾರೆ. `ಯಲ್ಲಾಪುರದಲ್ಲಿ ಜಿ + 2 ಮನೆ ನಿರ್ಮಿಸಲಾಗಿದ್ದು,  ಆ ಪ್ರದೇಶಕ್ಕೆಸ್ವಾತಂತ್ರ ಹೋರಾಟಗಾರರ ಹೆಸರನ್ನು ಇಡುವ ನಿರೀಕ್ಷೆಯಿತ್ತು. ಆದರೆ ಹೆಬ್ಬಾರ್ ನಗರ ಎಂದು ಹೆಸರಿಡಲಾಗಿದ್ದು, ಹೆಬ್ಬಾರ ನಗರದಲ್ಲಿನ ಮೊದಲನೇ ಯೋಜನೆಯೇ ವಿಫಲವಾಗಿದ್ದು ಶಾಸಕರ ವೈಫಲ್ಯ. ಕಟ್ಟಡ ನಿರ್ಮಾಣ ನಡೆದು ನಾಲ್ಕು ವರ್ಷವಾದರೂ ಮನೆ ಹಸ್ತಾಂತರ ನಡೆದಿಲ್ಲ’ ಎಂದು ಬಿಜೆಪಿ ಮಂಡಳ ಅಧ್ಯಕ್ಷ ಪ್ರಸಾದ ಹೆಗಡೆ ಅಸಮಧಾನವ್ಯಕ್ತಪಡಿಸಿದರು. `ಪಟ್ಟಣ ಪಂಚಾಯತ ಹಾಗೂ ಶಾಸಕರ ವೈಪಲ್ಯದಿಂದ ಮನೆ ಹಸ್ತಾಂತರ ನಡೆದಿಲ್ಲ’ ಎಂದು ಪ್ರಸಾದ ಹೆಗಡೆ ದೂರಿದರು. `ಬಡವರಿಗೆ ನೀಡುವ ಮನೆಯಲ್ಲಿ 5 ಅಡಿಯ ಒಬ್ಬ ವ್ಯಕ್ತಿ ಸಹ ಮಲಗಲು ಜಾಗವಿಲ್ಲ. ಮನೆ ಮುಂಬಾಗದಲ್ಲಿಯೇ ಶೌಚಾಲಯವಿರಿಸಿದ್ದು ಸಹ ಸರಿಯಲ್ಲ. ಅವ್ಯವಸ್ಥೆಯಿಂದ ಕೂಡಿದ ಮನೆಯನ್ನು ಹಂಚಿಕೆ ಮಾಡಬಾರದು. ತಕ್ಷಣ ಎಲ್ಲಾ ಫಲಾನುಭವಿಗಳಿಗೆ ಶೇ 18ರ ಬಡ್ಡಿ ಜೊತೆಪಡೆದ ಹಣ ಮರಳಿಸಬೇಕು. ಸುಸಜ್ಜಿತ ಮನೆಯನ್ನು ನೀಡಬೇಕು’ ಎಂದು ಬಿಜೆಪಿ ವಕ್ತಾರ ಹರಿಪ್ರಕಾಶ ಕೋಣೆಮನೆ ಆಗ್ರಹಿಸಿದರು. `ಜಿ+2 ವಸತಿಗೃಹದ ವಿಷಯದಲ್ಲಿ ನಡೆದ ಭ್ರಷ್ಟಾಚಾರ, ಹಗರಣದಿಂದ ಯಲ್ಲಾಪುರದ ಜನ ತಲೆ ತಗ್ಗಿಸುವ ಹಾಗಾಗಿದೆ. ಈ ಅಕ್ರಮಕ್ಕೆ ಕಾರಣರಾದವರ ವಿರುದ್ಧ ಕ್ರಮ ಆಗಬೇಕು. ಇಲ್ಲವಾದರೆ ಬಿಜೆಪಿ ಪ್ರತಿಭಟನೆ ಮುಂದುವರಿಸಲಿದೆ’ ಎಂದು ಪ್ರತಿಭಟನಾಕಾರರು ಆಗ್ರಹಿಸಿದರು. `ನಮ್ಮಿಂದ ಹಣಪಡೆದು ಮನೆ ಕೊಟ್ಟಿಲ್ಲ. ಪ್ರಶ್ನಿಸಿದರೆ 15 ದಿನದಲ್ಲಿ ಕೊಡುತ್ತೇವೆ ಎನ್ನುತ್ತಾರೆ. ಆದರೆ, ಈವರೆಗೂ ಯಾವ ಭರವಸೆಯೂ ಈಡೇರಿಲ್ಲ’ ಎಂದು ಫಲಾನುಭವಿಗಳಿಬ್ಬರು ಆಕ್ರೋಶವ್ಯಕ್ತಪಡಿಸಿದರು. `ಗುತ್ತಿಗೆದಾರರಿಗೆ ಸೂಕ್ತ ಕಾಮಗಾರಿ ನಡೆಸುವಂತೆ ಸೂಚಿಸಲಾಗಿದ್ದು, ಯಲ್ಲಾಪುರ ಜಾತ್ರೆಯೊಳಗೆ ಮನೆ ಹಸ್ತಾಂತರ ನಡೆಯಲಿದೆ’ ಎಂದು ತಹಶೀಲ್ದಾರ್ ಚಂದ್ರಶೇಖರ ಹೊಸ್ಮನಿ ಭರವಸೆ ಕೊಟ್ಟರು. ಆದರೆ, `ಈ ಭರವಸೆ ನಂಬುವAಥಹುದಲ್ಲ’ ಎಂದು ಹರಿಪ್ರಕಾಶ ಕೋಣೆಮನೆ ಮೈಕಿನಲ್ಲಿ ಹೇಳಿದರು. ಜಿ ಪಂ ಮಾಜಿ ಸದಸ್ಯ ಉಮೇಶ ಭಾಗ್ವತ, ರಾಘವೇಂದ್ರ ಭಟ್ಟ ಹಾಸಣಗಿ, ಪ್ರಮುಖರಾದ ರಾಮು ನಾಯ್ಕ, ಗೋಪಾಲಕೃಷ್ಣ ಗಾಂವ್ಕರ, ನಾರಾಯಣ ನಾಯಕ, ಗಜಾನನ ನಾಯ್ಕ ತಳ್ಳಿಕೇರಿ, ಅಮೃತ ಬದ್ದಿ, ಸುನೀತಾ ವೆರ್ಣೆಕರ್, ಸುಬ್ಬಣ್ಣ ಬೋಳ್ಮನೆ, ರಾಮಚಂದ್ರ ಚಿಕ್ಯಾನಮನೆ, ದೀಪಕ ಭಟ್ಟ ಶೀಗೆಕೇರಿ, ರವಿ ದೇವಡಿಗ ಇತರರು ಈ ಪ್ರತಿಭಟನೆಯಲ್ಲಿದ್ದರು. ಪ್ರತಿಭಟನೆ ಮುಗಿದ ನಂತರ ಪಟ್ಟಣ ಪಂಚಾಯತ ಆವರಣಕ್ಕೆ ಬಿಜೆಪಿಗರು ವೆಜ್ ಬಿರಿಯಾನಿ ತರಿಸಿದ್ದು, ಪ್ರತಿಭಟನಾಕಾರರು ಅಲ್ಲಿಯೇ ನಿಂತು ಅದನ್ನು ಸೇವಿಸಿದರು. - [ಹೊನ್ನಜ್ಜಿಯ ಹೊಡೆದಾಟ: ಶ್ರೀಪಾದ ಹೆಗಡೆಯೂ ಸಾಚಾ ಅಲ್ಲ!](https://mobiletime.in/2025/12/honnajjajes-fight-sridhar-hegde-is-also-not-true/): ಶಿರಸಿಯ ಹೀಪನಳ್ಳಿ ಬಳಿಯ ಹೊನ್ನಜ್ಜೆಯಲ್ಲಿನ ಹೊಡೆದಾಟ ಪ್ರಕರಣ ಹೊಸ ಸ್ವರೂಪಪಡೆದಿದೆ. ತಾಯಿ ಬಗ್ಗೆ ಕೆಟ್ಟದಾಗಿ ನಿಂದಿಸಿ ಮೈ ಮುಟ್ಟಿದ ಕಾರಣ ರಕ್ಷಣೆಗಾಗಿ ಅನುಪಮ ಹೆಗಡೆ ಅವರು ರಕ್ಷಣೆಗಾಗಿ ಧಾವಿಸಿದ್ದು, ಈ ವೇಳೆ ನಡೆದ ನೂಕಾಟದಲ್ಲಿ ಶ್ರೀಧರ ಹೆಗಡೆ ಅವರ ಕೈಯಲ್ಲಿದ್ದ ಕತ್ತಿಯೇ ಅವರ ಮುಖಕ್ಕೆ ಬಡಿದಿದೆ. ರಕ್ತ ಸುರಿದರೂ ಶ್ರೀಪಾದ ಹೆಗಡೆ ಅವರು ತಮ್ಮ ಬೈಗುಳವನ್ನು ನಿಲ್ಲಿಸಿಲ್ಲ. ಶ್ರೀಪಾದ ಹೆಗಡೆ ಅವರು ಅನುರಾಧಾ ಪುರುಷೋತ್ತಮ ಹೆಗಡೆ ಅವರ ಬಳಿ ಅನುಚಿತವಾಗಿ ವರ್ತಿಸಿದ ನಂತರ ಅವರ ಬಗ್ಗೆ ಕೆಟ್ಟದಾಗಿ ನಿಂದಿಸಿದ ವಿಡಿಯೋ ಮೊಬೈಲ್ ಮಿಡಿಯಾ ನೆಟ್‌ವರ್ಕಗೆ ಸಿಕ್ಕಿದೆ. ಈ ಬಗ್ಗೆ ಅನುರಾಧಾ ಪುರುಷೋತ್ತಮ ಹೆಗಡೆ ಅವರು ತಮಗಾದ ನೋವನ್ನು ತೋಡಿಕೊಂಡಿದ್ದು, ಶ್ರೀಪಾದ ಮಹಾಬಲೇಶ್ವರ ಹೆಗಡೆ ಅವರು ಅನುರಾಧಾ ಹೆಗಡೆ ಅವರ ಮಾಲ್ಕಿ ಜಾಗಕ್ಕೆ ಕತ್ತಿ ಹಿಡಿದು ಪ್ರವೇಶಿಸಿದ ದಾಖಲೆಗಳನ್ನು ಒದಗಿಸಿದ್ದಾರೆ. ಹೊಳೆಯಲ್ಲಿ ಹರಿಯುವ ನೀರನ್ನು ಮಂಡಗಾಲುವೆಯಲ್ಲಿ ಬಿಡುವ ವಿಷಯವಾಗಿ ಶಿರಸಿಯ ಹೀಪನಳ್ಳಿ ಬಳಿಯ ಹೊನ್ನಜ್ಜೆಯಲ್ಲಿನ ವಾತಾವರಣ ಹದಗೆಟ್ಟಿದೆ. ಇದೇ ವಿಷಯವಾಗಿ ಶ್ರೀಪಾದ ಹೆಗಡೆ ಅವರು ವೈಮನಸ್ಸು ಹೊಂದಿದ್ದು, ಡಿಸೆಂಬರ್ 21ರಂದು ಅನುರಾಧಾ ಹೆಗಡೆ ಅವರ ಮನೆ ಅಂಗಳಕ್ಕೆ ಕತ್ತಿ ಹಿಡಿದು ಹೋಗಿ ರಂಪಾಟ ಮಾಡಿದ್ದಾರೆ. `ಕೆಟ್ಟದಾಗಿ ಯಾಕೆ ಬಯ್ಯುವೆ?’ ಎಂದು ಪ್ರಶ್ನಿಸಿದಾಗ ಅನುರಾಧಾ ಹೆಗಡೆ ಅವರ ಬಟ್ಟೆ ಹರಿದಿದ್ದಾರೆ. ಈ ವೇಳೆ ಶ್ರೀಪಾದ ಹೆಗಡೆ ಅವರು ತಾವು ತಂದಿದ್ದ ಕತ್ತಿಯನ್ನು ಅನುರಾಧಾ ಹೆಗಡೆ ಅವರ ಕಡೆ ಬೀಸಿದ್ದು, ಅನುರಾಧಾ ಹೆಗಡೆ ಅವರ ಕೈ ಬೆರಳಿಗೆ ಗಾಯವಾಗಿದೆ. ಈ ವೇಳೆ ಅನುರಾಧಾ ಹೆಗಡೆ ಅವರ ಮಗ ಅನುಪಮ ಹೆಗಡೆ ಅವರು ಕೊಟ್ಟಿಗೆಯಲ್ಲಿ ಕೆಲಸ ಮಾಡುತ್ತಿದ್ದು, ಗಲಾಟೆ ಕೇಳಿ ಅಂಗಳಕ್ಕೆ ಬಂದಿದ್ದಾರೆ. ತಾಯಿ ರಕ್ಷಣೆಗಾಗಿ ಅವರು ಧಾವಿಸಿದಾಗ ಅಲ್ಲಿ ನೂಕಾಟ ನಡೆದಿದ್ದು, ಶ್ರೀಪಾದ ಹೆಗಡೆ ಅವರ ಕೈಯಲ್ಲಿದ್ದ ಕತ್ತಿ ಅವರ ತಲೆಗೆ ಬಡಿದಿದೆ. ಮುಖದಿಂದ ರಕ್ತ ಸುರಿದರೂ ಶ್ರೀಪಾದ ಹೆಗಡೆ ಸುಮ್ಮನಾಗದೇ ಇನ್ನಷ್ಟು ರಂಪಾಟ ಮಾಡಿದ್ದಾರೆ. `ನಾನು ದ್ವೇಷ ಮಾಡುವುದಕ್ಕಾಗಿಯೇ ಬಂದಿದ್ದೇನೆ’ ಎಂಬ ನಿಟ್ಟಿನಲ್ಲಿ ಅವರು ಕೂಗಾಡಿದ್ದಾರೆ. ಗಲಾಟೆಯ ಶಬ್ದ ಕೇಳಿ ಅಕ್ಕ-ಪಕ್ಕದ ಮನೆಯವರು ಆಗಮಿಸಿದ್ದು, ತಂದಿದ್ದ ಕತ್ತಿ ಹಿಡಿದು ಶ್ರೀಪಾದ ಹೆಗಡೆ ಅವರು ಅಲ್ಲಿಂದ ಹೊರಟಿದ್ದಾರೆ. ಈ ಎಲ್ಲಾ ವಿಷಯಗಳ ಬಗ್ಗೆ ಅಲ್ಲಿದ್ದ ಜನ ವಿಡಿಯೋ ಮಾಡಿದ್ದು, ಅದನ್ನು ಮುಖ್ಯ ಸಾಕ್ಷಿಯನ್ನಾಗಿಸಿದ್ದಾರೆ. ಈ ಎಲ್ಲಾ ವಿಷಯಗಳ ಬಗ್ಗೆ ಅನುರಾಧಾ ಹೆಗಡೆ ಅವರು ಪೊಲೀಸರ ಮೊರೆ ಹೋಗಿದ್ದು, ಪೊಲೀಸರು ಪ್ರಕರಣ ದಾಖಲಿಸಿ ವಿಚಾರಣೆ ಶುರು ಮಾಡಿದ್ದಾರೆ. ಅನುರಾಧಾ ಹೆಗಡೆ ಕುಟುಂಬಕ್ಕೆ ಬೆದರಿಕೆ ಒಡ್ಡಿದ ಶ್ರೀಪಾದ ಹೆಗಡೆ ಅವರ ವಿಡಿಯೋ ಇಲ್ಲಿ ನೋಡಿ.. - [ನದಿಯನ್ನೇ ತಿರುಗಿಸಿ ಭೂಮಿ ಅತಿಕ್ರಮಿಸಿದ ಮಾದೇವ!](https://mobiletime.in/2025/12/the-god-who-diverted-the-river-and-encroached-on-the-land/): ಧಾರಾಕಾರವಾಗಿ ಹರಿಯುವ ನದಿಯನ್ನು ಬೇರೆ ದಿಕ್ಕಿನಡೆ ತಿರುಗಿಸಿ ನದಿ ಹರಿವಿನ ಭೂಮಿ ಅತಿಕ್ರಮಿಸಲು ಮಾದೇವ ಮರಾಠಿ ಅವರು ಮುಂದಾಗಿದ್ದಾರೆ. ಇದಕ್ಕಾಗಿ ಅವರು ಜೆಸಿಬಿ ಯಂತ್ರಗಳ ಓಡಾಟ ನಡೆಸಿದ್ದು, ನದಿ ನೀರು ಮಣಿಕಂಠ ಮುಕ್ರಿ ಅವರ ಭೂಮಿ ಕಡೆ ಹೋಗುವಂತೆ ಮಾಡಿದ್ದಾರೆ. ನದಿ ನೀರು ತಮ್ಮ ಜಮೀನಿಗೆ ಬರುವುದನ್ನು ನೋಡಿ ಮಣಿಕಂಠ ಮುಕ್ರಿ ಅವರು ಕಂಗಾಲಾಗಿದ್ದಾರೆ. ಕುಮಟಾದ ಯಾಣದ ಬಳಿಯಿರುವ ಕೋಡಂಬೆಳೆಯ ಮಣಿಕಂಠ ಮಾದೇವ ಮುಕ್ರಿ ಹಾಗೂ ಯಾಣ ಹೊಳೆಬೈಲಿನ ಮಾದೇವ ಪುರುಷ ಮರಾಠಿ ಅವರ ಜಮೀನು ನಡುವೆ ಚಂಡಿಕಾ ನದಿ ಹರಿಯುತ್ತದೆ. ಆ ನದಿಯೇ ಅವರಿಬ್ಬರ ಗಡಿ ಗುರುತಾಗಿದ್ದು, ಮಾದೇವ ಮರಾಠಿ ಅವರು ಆ ಗುರುತನ್ನು ಬದಲಿಸುವ ಪ್ರಯತ್ನ ಮಾಡಿದ್ದಾರೆ. ಈ ವಿಷಯವಾಗಿ ಮಾದೇವ ಮರಾಠಿ ಹಾಗೂ ಮಣಿಕಂಠ ಮುಕ್ರಿ ಅವರ ನಡುವೆ ಜಗಳವಾಗಿದೆ. ಆ ಜಗಳ ವಿಕೋಪಕ್ಕೆ ತೆರಳಿದ್ದು, ಪೊಲೀಸ್ ಠಾಣೆಯ ಮೆಟ್ಟಿಲೇರಿದೆ. ಡಿಸೆಂಬರ್ 12ರಂದು ಮಾದೇವ ಮರಾಠಿ ಅವರು ನದಿ ಬಳಿ ಜೆಸಿಬಿ ಓಡಾಟ ನಡೆಸಿದ್ದರು. ನದಿ ನೀರನ್ನು ತಿರುಗಿಸಿ ನದಿ ಹರಿಯುವ ಜಾಗವನ್ನು ತಾವು ಅತಿಕ್ರಮಿಸುವ ಪ್ರಯತ್ನ ಮಾಡಿದ್ದರು. ಈಗಾಗಲೇ ಒಂದಷ್ಟು ಭೂಮಿ ಅತಿಕ್ರಮಿಸಿರುವ ಮಾದೇವ ಮರಾಠಿ ಇನ್ನಷ್ಟು ಜಾಗ ಕಬಳಿಸಲು ಮುಂದಾಗಿರುವುದಕ್ಕೆ ಮಣಿಕಂಠ ಮುಕ್ರಿ ಅವರು ಆಕ್ಷೇಪವ್ಯಕ್ತಪಡಿಸಿದರು. `ನದಿ ನೀರನ್ನು ತಮ್ಮ ಜಮೀನಿನ ಕಡೆ ತಿರುಗಿಸಿದರೆ ನಮಗೆ ಅಪಾಯ’ ಎಂದು ಮಣಿಕಂಠ ಮುಕ್ರಿ ಅವರು ಹೇಳಿದರು. ಆದರೆ, ಇದರಿಂದ ಮಾದೇವ ಮರಾಠಿ ಅವರು ಸಿಟ್ಟಾದರು. ಮಾದೇವ ಮರಾಠಿ ಅವರ ಜೊತೆ ಈಶ್ವರ ಹರಿಹರ ಮರಾಠಿ, ಮಹೇಂದ್ರ ಮಾದೇವ ಮರಾಠಿ, ಸಂಗೀತಾ ಸದಾಶಿವ ಮರಾಠಿ, ಸುಶೀಲ ಕೃಷ್ಣ ಮರಾಠಿ, ಶ್ಯಾಮಲಾ ಶಾಂಬ ಮರಾಠಿ, ಸದಾಶಿವ ಪುರುಷ ಮರಾಠಿ ಹಾಗೂ ಗೀತಾ ಉಮೇಶ ಮರಾಠಿ ಸೇರಿ ಮಣಿಕಂಠ ಮುಕ್ರಿ ಅವರನ್ನು ನಿಂದಿಸಿದರು. ಈ ಬಗ್ಗೆ ಮಣಿಕಂಠ ಮುಕ್ರಿ ಅವರು ಪೊಲೀಸ್ ದೂರು ನೀಡಿದ್ದು, ಕುಮಟಾ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಜೊತೆಗೆ ತನಿಖೆ ಶುರು ಮಾಡಿದ್ದಾರೆ. - [ಕಳಚೆ: ಕ್ರೀಡಾಕೂಟದ ಜೊತೆ ಸಭೆ-ಸಮಾರಂಭ-ಸನ್ಮಾನ](https://mobiletime.in/2025/12/kalche-meeting-ceremony-honouring-with-sports-event/): ಯಲ್ಲಾಪುರದ ಕಳಚೆಯ ಜನ ಉದ್ಯೋಗದ ನಿಮಿತ್ತ ಬೇರೆ ಬೇರೆ ಊರುಗಳಲ್ಲಿ ವಾಸವಾಗಿದ್ದು, ಅವರೆಲ್ಲರನ್ನು ಒಟ್ಟುಗೂಡಿಸುವ ಉದ್ದೇಶದಿಂದ ಕಳಚೆ ಗ್ರಾಮದಲ್ಲಿ ವಿವಿಧ ಚಟುವಟಿಕೆಗಳನ್ನು ಆಯೋಜಿಸಲಾಗುತ್ತದೆ. ಅದರಂತೆ ಕಳಚೆಯ ಸರ್ವೋದಯ ಯುವಕ ಸಂಘದದವರು ಈ ವರ್ಷವೂ ಧಾರ್ಮಿಕ, ಸಾಮಾಜಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಿದ್ದಾರೆ. ಡಿಸೆಂಬರ್ 27ರಂದು ಸಂಜೆ 4.30ಕ್ಕೆ ಯುವಕ ಸಂಘದ ಸುವರ್ಣ ಮಹೋತ್ಸವದ ಪ್ರಯುಕ್ತ ಹೊರತಂದ `ಸುವರ್ಣ ಸರ್ವೋದಯ’ ಸಂಚಿಕೆ ಲೋಕಾರ್ಪಣೆ ಆಗಲಿದೆ. ಕಳಚೆಯ ಸರ್ವೋದಯ ಸಭಾಮಂಟಪದಲ್ಲಿ ನಡೆಯುವ ಈ ಕಾರ್ಯಕ್ರಮದಲ್ಲಿ ಸಾಧಕರಿಗೆ ಸನ್ಮಾನವನ್ನು ನಡೆಸಲಾಗುತ್ತದೆ. ಸಭಾ ಕಾರ್ಯಕ್ರಮದ ನಂತರ ನೃತ್ಯ ರೂಪಕ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಶ್ರೀ ಗಜಾನನ ನಾಟಕ ಮಂಡಳಿ ಹಾಗೂ ಶ್ರೀ ಲಕ್ಷ್ಮೀನರಸಿಂಹ ನಾಟಕ ಮಂಡಳಿಯ ಕಲಾವಿದರಿಂದ `ಬಸ್ ಕಂಡಕ್ಟರ್ ಹಾಗೂ ಧರ್ಮ ತುಂಬಿದ ಮನೆ’ ಎಂಬ ನಾಟಕ ಪ್ರದರ್ಶನ ನಡೆಯಲಿದೆ. ಇದಕ್ಕಿಂತ ಎರಡು ದಿನ ಮೊದಲು `ಕಳಚೆ ಪ್ರೀಮಿಯರ್ ಲೀಗ್’ ಹೆಸರಿನಲ್ಲಿ ಹವ್ಯಕ ತಂಡಗಳ ಕ್ರಿಕೇಟ್ ಪಂದ್ಯಾವಳಿ ನಡೆಯಲಿದೆ. ಸಭೆ ಹಾಗೂ ಸನ್ಮಾನ ಕಾರ್ಯಕ್ರಮಕ್ಕೆ ಶಾಸಕ ಶಿವರಾಮ ಹೆಬ್ಬಾರ, ಸಂಕಲ್ಪ ಸಂಸ್ಥೆ ಅಧ್ಯಕ್ಷ ಪ್ರಮೋದ ಹೆಗಡೆ ಜಿಲ್ಲಾಧಿಕಾರಿ ಕೆ ಲಕ್ಷ್ಮೀಪ್ರಿಯಾ ಅವರಿಗೆ ಸಂಘಟನೆಯವರು ಆಮಂತ್ರಣ ನೀಡಿದ್ದು, ಅವರೆಲ್ಲರೂ ಭಾಗವಹಿಸುವ ನಿರೀಕ್ಷೆಯಲ್ಲಿ ಜನರಿದ್ದಾರೆ. ಟಿಎಂಎಸ್ ನಿವೃತ್ತ ಮುಖ್ಯಕಾರ್ಯನಿರ್ವಾಹಕ ಸಿ ಎಸ್ ಹೆಗಡೆ ಅವರನ್ನು ಇಲ್ಲಿ ಸನ್ಮಾನಿಸಲಾಗುತ್ತದೆ. ಈ ಬಗ್ಗೆ ಸುವರ್ಣ ಮಹೋತ್ಸವ ಸಮಿತಿ ಅಧ್ಯಕ್ಷ ಜಿ ಆರ್ ಹೆಗಡೆ, ಸಂಚಾಲಕ ಉಮೇಶ ಭಾಗ್ವತ, ಯುವಕ ಸಂಘದ ಅಧ್ಯಕ್ಷ ರಾಘವೇಂದ್ರ ಭಟ್ಟ ಸೂತ್ರೆ, ಪ್ರಮುಖರಾದ ವೆಂಕಟರಮಣ ಗಾಂವ್ಕರ, ಅನಂತ ಹೆಗಡೆ, ಶ್ರೀಕಾಂತ ಹೆಬ್ಬಾರ ಅವರು ಮಾಹಿತಿ ನೀಡಿದ್ದಾರೆ. - [ಹೊನ್ನಜ್ಜಿಯಲ್ಲಿ ನೀರಿಗಾಗಿ ಹೊಡೆದಾಟ!](https://mobiletime.in/2025/12/a-wife-who-scared-eight-people-alone/): ಎಂಟು ಜನ ಸೇರಿ ಶ್ರೀಪಾದ ಹೆಗಡೆ ಅವರನ್ನು ಹಗ್ಗದಿಂದ ಕಟ್ಟಿ ಹಾಕಿ ಕತ್ತಿಯಿಂದ ಹೊಡೆದಿದ್ದಾರೆ. ಶ್ರೀಪಾದ ಹೆಗಡೆ ಅವರು ಜೋರಾಗಿ ಕೂಗಿಕೊಂಡಿದ್ದು, ಈ ವೇಳೆ ಅವರ ಪತ್ನಿ ಬರುವುದನ್ನು ನೋಡಿ ಆ ಎಂಟು ಜನ ಅಲ್ಲಿಂದ ಓಡಿ ಪರಾರಿಯಾಗಿದ್ದಾರೆ. ಶಿರಸಿಯ ಹೀಪನಳ್ಳಿ ಹೊನ್ನಜ್ಜಿಯ ಶ್ರೀಪಾದ ಮಹಾಬಲೇಶ್ವರ ಹೆಗಡೆ ಅವರು ವಾಸವಾಗಿದ್ದಾರೆ. ಅದೇ ಊರಿನ ಅನುಪಮ ಪುರುಷೋತ್ತಮ ಹೆಗಡೆ ಹಾಗೂ ಶ್ರೀಪಾದ ಹೆಗಡೆ ನಡುವೆ ಮೊದಲಿನಿಂದಲೂ ವೈಮನಸ್ಸಿದೆ. ಹರಿಯುವ ನೀರಿನ ವಿಷಯವಾಗಿ ಆ ಎರಡು ಕುಟುಂಬದವರು ಕಚ್ಚಾಟ ನಡೆಸುವ ವಿಷಯ ಊರಿಗೆ ತಿಳಿದಿದೆ. ಇದೇ ವಿಷಯವಾಗಿ ಸದ್ಯ ಹೊಡೆದಾಟ ನಡೆದಿದ್ದು, ಶ್ರೀಪಾದ ಹೆಗಡೆ ಅವರಿಗೆ ಹೊಡೆಯಲು ಅನುಪಮ ಹೆಗಡೆ ಅವರ ಜೊತೆ ಮತ್ತೆ ಏಳು ಜನ ಕೈ ಜೋಡಿಸಿದ್ದಾರೆ. ಇದನ್ನೂ ಓದಿ: ಶ್ರೀಪಾದ ಹೆಗಡೆಯೂ ಸಾಚಾ ಅಲ್ಲ! ಡಿಸೆಂಬರ್ 21ರಂದು ಶ್ರೀಪಾದ ಹೆಗಡೆ ಅವರು ಕಾಲುದಾರಿಯ ಮೂಲಕ ತೋಟಕ್ಕೆ ಹೋಗುತ್ತಿದ್ದರು. ಆಗ ಅವರಿಗೆ ಅನುಪಮ ಹೆಗಡೆ ಅವರು ಎದುರಾದರು. ಶ್ರೀಪಾದ ಹೆಗಡೆ ಅವರನ್ನು ಉದ್ದೇಶಿಸಿ ಅನುಪಮ ಹೆಗಡೆ ಅವರು ಬೈಗುಳ ಶುರು ಮಾಡಿದರು. ಶ್ರೀಪಾದ ಹೆಗಡೆ ಅವರನ್ನು ನಿಂದಿಸಿ ಅವರನ್ನು ನೆಲಕ್ಕೆ ದೂಡಿದರು. ಆಗ ಅಲ್ಲಿ ಪುರುಷೋತ್ತಮ ನಾರಾಯಣ ಹೆಗಡೆ ಅವರು ಕತ್ತಿ ಹಿಡಿದುಕೊಂಡು ಬಂದಿದ್ದು, ಅನುಪಮ ಹೆಗಡೆ ಅವರು ಆ ಕತ್ತಿಪಡೆದರು. ಅಲ್ಲಿಯೇ ಇದ್ದ ಅನುರಾಧಾ ಪುರುಷೋತ್ತಮ ಹೆಗಡೆ ಅವರು ಶ್ರೀಪಾದ ಹೆಗಡೆ ಅವರು ತಪ್ಪಿಸಿಕೊಳ್ಳದ ಹಾಗೇ ಕೈ ಹಿಡಿದುಕೊಂಡರು. ಆಗ, ಅನುಪಮ ಹೆಗಡೆ ಅವರು ಬೀಸಿದ ಕತ್ತಿ ಶ್ರೀಪಾದ ಹೆಗಡೆ ಅವರ ತಲೆಗೆ ತಾಗಿತು. ಹಣೆಯಿಂದ ರಕ್ತವೂ ಸುರಿಯಿತು. ಈ ವೇಳೆ ಅದೇ ಭಾಗದ ಗಜಾನನ ಮಂಜುನಾಥ ಹೆಗಡೆ ಅವರು ಹಗ್ಗ ಹಿಡಿದು ಅಲ್ಲಿಗೆ ಬಂದರು. ಅವರ ಜೊತೆಗಿದ್ದ ರಾಹುಲ್ ಗಜಾನನ ಹೆಗಡೆ, ರಾಜೇಶ್ವರಿ ಗಜಾನನ ಹೆಗಡೆ, ಕೃಷ್ಣ ವೆಂಕಟ್ರಮಣ ಹೆಗಡೆ ಹಾಗೂ ಪ್ರಿಯಾ ಕೃಷ್ಣ ಹೆಗಡೆ ಸೇರಿ ಆ ಹಗ್ಗದಿಂದ ಶ್ರೀಧರ ಹೆಗಡೆ ಅವರನ್ನು ಕಟ್ಟಿ ಹಾಕಿದರು. ಎರಡು ಕೈಗಳನ್ನು ಕಟ್ಟಿ ಹಿಂಸಿಸಲು ಶುರು ಮಾಡಿದರು. ಈ ವೇಳೆ ಶ್ರೀಪಾದ ಹೆಗಡೆ ಅವರ ಪತ್ನಿ ಅಲ್ಲಿಗೆ ಧಾವಿಸಿದ್ದು, ಅವರನ್ನು ನೋಡಿದ ಆ ಎಂಟು ಜನ ಅಲ್ಲಿಂದ ಓಡಿದರು. `ಮತ್ತೊಮ್ಮೆ ಒಬ್ಬನೇ ಸಿಕ್ಕರೆ ನಿನಗೆ ಗತಿ ಕಾಣಿಸುವೆ’ ಎಂದು ಅವರೆಲ್ಲರೂ ಬೆದರಿಸಿದ್ದು, ಬೆದರಿಕೆಗೆ ಹೆದರಿದ ಶ್ರೀಪಾದ ಹೆಗಡೆ ಅವರು ಪೊಲೀಸರ ಮೊರೆ ಹೋದರು. - [ಧನಲಕ್ಷ್ಮಿ ಸ್ವೀಟ್ಸ್ V/S ರಾಮದೇವ ಎಜನ್ಸಿ](https://mobiletime.in/2025/12/dhanalakshmi-sweets-v-s-ramdev-agency/): ಧನಲಕ್ಷ್ಮಿ ಸ್ವೀಟ್ಸ್ ಹಾಗೂ ರಾಮದೇವ ಎಜನ್ಸಿ ಮಾಲಕರ ನಡುವೆ ವೈಮನಸ್ಸು ಉಂಟಾಗಿದ್ದು, ಅದು ಹೊಡೆದಾಟದ ಸ್ವರೂಪಪಡೆದಿದೆ. ತಮಗಾದ ಅನ್ಯಾಯದ ವಿರುದ್ಧ ಎರಡೂ ಕಡೆಯವರು ಪೊಲೀಸರ ಮೊರೆ ಹೋಗಿದ್ದಾರೆ. ಕಾರವಾರದ ಹೆಂಜಾ ನಾಯ್ಕ ಸರ್ಕಲ್ ಬಳಿಯ ಧನಲಕ್ಷ್ಮಿ ಸ್ವೀಟ್ಸ್ ಮಳಿಗೆ ಇದೆ. ಅಲ್ಲಿಯೇ ಪಕ್ಕದಲ್ಲಿ ರಾಮದೇವ ಎಜನ್ಸಿಯೂ ಇದೆ. ಕೆ ಎಚ್ ಬಿ ಕಾಲೋನಿಯ ರಾಜು ಫುಖರಾಜ ಬಾಟಿ ಅವರು ಧನಲಕ್ಷ್ಮಿ ಸ್ವೀಟ್ಸ್ ಮಳಿಗೆ ನಡೆಸುತ್ತಿದ್ದಾರೆ. ಸಂಕ್ರಿವಾಡದ ರಣಚೋರ ರಾಮಾ ಚೌದರಿ ಅವರು ರಾಮದೇವ ಎಜನ್ಸಿ ನಡೆಸುತ್ತಿದ್ದಾರೆ. ಈ ಎರಡು ಮಳಿಗೆಯವರ ನಡುವೆ ಡಿಸೆಂಬರ್ 12ರಂದು ರಾತ್ರಿ ಹೊಡೆದಾಟ ನಡೆದಿದೆ. ಮಾಹಿತಿಗಳ ಪ್ರಕಾರ, ಧನಲಕ್ಷ್ಮಿ ಸ್ವೀಟ್ಸ್ ಅಂಗಡಿಯಲ್ಲಿ ರಾಜು ಅವರು ವ್ಯಾಪಾರ ನಡೆಸುತ್ತಿದ್ದಾಗ ರಣಚೋರ ಚೌದರಿ ಕಡೆಯವರು ಅವರ ಅಂಗಡಿ ಮುಂದೆ ಚಪ್ಪಲಿ ಎಸೆದಿದ್ದಾರೆ. ಈ ವಿಷಯವಾಗಿ ಪ್ರಶ್ನಿಸಿದಾಗ ಮಾತಿಗೆ ಮಾತು ಬೆಳೆದು ಜಗಳವಾಗಿದೆ. ಅದೇ ಹೊಡೆದಾಟಕ್ಕೆ ಕಾರಣವಾಗಿದೆ. `ರಣಚೋರ ರಾಮಾ ಚೌದರಿ ಅವರ ಜೊತೆ ಸಂತೋಷ, ಪದ್ಮರಾಜ ಹಾಗೂ ಪ್ರಕಾಶ ಸೇರಿ ಅಂಗಡಿ ಮುಂದೆ ಚಪ್ಪಲಿ ಅಂಗಡಿ ಹಾಕಿದ್ದು ಇದನ್ನು ಪ್ರಶ್ನಿಸಿದಕ್ಕಾಗಿ ತಂದೆ-ತಾಯಿ ಕೈ ತಿರುಪಿ ಹಲ್ಲೆ ಮಾಡಿದ್ದಾರೆ’ ಎಂದು ರಾಜು ಬಾಟಿ ಅವರು ಪೊಲೀಸ್ ದೂರು ನೀಡಿದ್ದಾರೆ. `ರಾಮದೇವ ಎಜನ್ಸಿಯಲ್ಲಿ ತಾನೂ ವ್ಯಾಪಾರ ಮಾಡುವಾಗ ಫುಖರಾಜ ಬಾಟಿ, ಹಿರಾರಮಾ, ರಾಜು, ಉಷಾ, ಡಿಂಪಲ್ ಸೇರಿ ಹಲ್ಲೆ ಮಾಡಿದ್ದಾರೆ’ ಎಂದು ರಣಚೋರ ಚೌದರಿ ದೂರಿದ್ದಾರೆ. `ಈ ವೇಳೆ ರಾಜು ಅವರು ಕತ್ತರಿಯಿಂದ ಚುಚ್ಚಿದ್ದಾರೆ’ ಎಂದು ರಣಚೋರ ಚೌದರಿ ಹೇಳಿದ್ದಾರೆ. ಕಾರವಾರ ನಗರ ಠಾಣೆ ಪೊಲೀಸರು ಎರಡು ಕಡೆಯವರ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ. - [ಯಲ್ಲಾಪುರ ಜಾತ್ರೆ: ಎಲ್ಲರೂ ಕಾರು ತರುವುದೇ ಇಲ್ಲಿನ ದೊಡ್ಡ ಸಮಸ್ಯೆ!](https://mobiletime.in/2025/12/yellapur-fair-the-biggest-problem-here-is-that-everyone-brings-a-car/): ಫೆಬ್ರವರಿ 11ರಿಂದ 19ರವರೆಗೆ ಯಲ್ಲಾಪುರದಲ್ಲಿ ಅದ್ಧೂರಿಯಾಗಿ ಜಾತ್ರೆ ನಡೆಯಲಿದ್ದು, ಜಾತ್ರೆಗೆ ಬರುವ ಬಹುತೇಕರು ಕಾರುಗಳಲ್ಲಿ ಆಗಮಿಸುವ ಕಾರಣ ಟ್ರಾಫಿಕ್ ಸಮಸ್ಯೆ ಹೆಚ್ಚಾಗುವ ಸಾಧ್ಯತೆಗಳಿದೆ. ಕಾರು ತರುವ ಬದಲು ಬೈಕು ಹಾಗೂ ಸರ್ಕಾರಿ ಬಸ್ಸುಗಳನ್ನು ಬಳಸಿದರೆ ಸಂಚಾರ ದಟ್ಟಣೆ ಸಮಸ್ಯೆ ಬಗೆಹರಿಸಲು ಸಾಧ್ಯ ಎನ್ನುವ ಬಗ್ಗೆ ಸೋಮವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಚರ್ಚೆ ನಡೆದಿದೆ. ಯಲ್ಲಾಪುರ ಪಟ್ಟಣದ ಎಪಿಎಂಸಿ ರೈತಭವನದಲ್ಲಿ ವಾಹನ ದಟ್ಟಣೆ ತಗ್ಗಿಸಲು ಕೈಗೊಳ್ಳಬೇಕಾದ ಕ್ರಮಗಳ ಕುರಿತು ಸಭೆಯಲ್ಲಿ ಸುಧೀರ್ಘ ಚರ್ಚೆ ನಡೆದಿದ್ದು, ಅನೇಕರು ವಿವಿಧ ಸಲಹೆ ನೀಡಿದರು. `ವಾಹನಗಳ ಸಂಚಾರವನ್ನು ಹಂತಹAತವಾಗಿ ಏಕಮುಖವಾಗಿ ಸಂಚರಿಸಲು ವ್ಯವಸ್ಥೆ ಮಾಡಿಕೊಡಿ’ ಎಂದು ಶಿವರಾಮ ಹೆಬ್ಬಾರ್ ಅವರು ಪೊಲೀಸರಿಗೆ ಸೂಚಿಸಿದರು. `ಸಾರ್ವಜನಿಕರು ಸಹ ಕಾರುಗಳಲ್ಲಿ ಬರುವ ಬದಲು ಸಣ್ಣ ಸಣ್ಣ ವಾಹನ ಬಳಸಿದರೆ ಅನುಕೂಲ. ಜಾತ್ರಾ ಪಟ್ಟಣದವರೆಗೂ ವಾಹನ ಒಯ್ಯುವ ಬದಲು 200-300ಮೀಟರ್ ದೂರವಿಟ್ಟರೆ ಒಳಿತು’ ಎಂದು ಶಿವರಾಮ ಹೆಬ್ಬಾರ್ ಅವರು ಸಾರ್ವಜನಿಕರಲ್ಲಿ ಮನವಿ ಮಾಡಿದರು. `ಬೀದಿದೀಪಗಳ ವ್ಯವಸ್ಥೆ ಸಮರ್ಪಕವಾಗಿ ಮಾಡಬೇಕು. ಹೆಚ್ಚುವರಿಯಾಗಿ ಮೊಬೈಲ್ ಶೌಚಗೃಹಗಳ ವ್ಯವಸ್ಥೆ ಮಾಡಿಕೊಡಬೇಕು. ಫೆ 8 ರಿಂದ 22ರವರೆಗೆ ಪ್ರತಿನಿತ್ಯ ಕುಡಿಯುವ ನೀರಿನ ಸರಬರಾಜು ಮಾಡಬೇಕು. ನೀರಿನ ಕೊರತೆಯಾಗದಂತೆ ಮುಂಜಾಗ್ರತೆ ವಹಿಸಬೇಕು’ ಎಂದು ಪಟ್ಟಣ ಪಂಚಾಯತ ಅಧಿಕಾರಿಗಳಿಗೆ ಸೂಚಿಸಿದರು. `ಆರೋಗ್ಯ ಇಲಾಖೆಯವರು ತುರ್ತು ಚಿಕಿತ್ಸೆಗೆ ತಾತ್ಕಾಲಿಕ ಘಟಕ ರಚಿಸಿ, ಅಗತ್ಯ ಸಿಬ್ಬಂದಿ ಹಾಗೂ ವ್ಯವಸ್ಥೆ ಸಿದ್ಧತೆಯಲ್ಲಿರಬೇಕು. ಹೋಟೆಲ್ ಮತ್ತು ಆಹಾರ ಮಳಿಗೆಗಳಲ್ಲಿ ಆಹಾರದ ಗುಣಮಟ್ಟದ ಬಗ್ಗೆ ಸಂಬAಧಿಸಿದ ಅಧಿಕಾರಿಗಳು ಗಮನ ಹರಿಸಬೇಕು’ ಎಂದು ಆರೋಗ್ಯ ಇಲಾಖೆಗೆ ಹೆಬ್ಬಾರ್ ಸೂಚಿಸಿದರು. `ಗ್ರಾಮೀಣ ಭಾಗಗಳಿಗೆ ಅಗತ್ಯವಿರುವಲ್ಲಿ ವಿಶೇಷ ಬಸ್ ಓಡಿಸಬೇಕು. ಹೆಚ್ಚುವರಿ ಬಸ್ ಗಳ ಅಗತ್ಯವಿದ್ದರೆ ಹೊರಗಿನಿಂದ ತರಿಸಿ’ ಎಂದು ಬಸ್ ಘಟಕದ ಅಧಿಕಾರಿಗಳಿಗೆ ತಿಳಿಸಿದರು. `ಅಮ್ಯೂಸ್ ಮೆಂಟ್ ಪಾರ್ಕ್, ಮನರಂಜನೆ ವಿಚಾರದಲ್ಲಿ ಜನರಿಗೆ ತೊಂದರೆಯಾಗದAತೆ ಪಟ್ಟಣ ಪಂಚಾಯಿತಿ ಕ್ರಮ ಕೈಗೊಳ್ಳಬೇಕು. ಜನವರಿ 3 ರಂದು ಮುಂದಿನ ಹಂತದ ಸಿದ್ಧತೆ ಬಗ್ಗೆ ಪಟ್ಟಣ ಪಂಚಾಯಿತಿಯಲ್ಲಿ ಸಭೆ ನಡೆಸಲಾಗುತ್ತದೆ’ ಎಂದರು. `ಜಾತ್ರೆಯಲ್ಲಿ ಭದ್ರತೆಗೆ ಮೊದಲ ಆದ್ಯತೆ ನೀಡಬೇಕು. ಜಾತ್ರೆಯ ಯಶಸ್ಸಿನಲ್ಲಿ ಎಲ್ಲರೂ ಕೈಜೋಡಿಸಬೇಕು. ಪಟ್ಟಣ ಪಂಚಾಯಿತಿ ಹಾಗೂ ಪೊಲೀಸ್ ಇಲಾಖೆಯ ಸಹಾಯವಾಣಿ ಸರಿಯಾಗಿ ಕಾರ್ಯನಿರ್ವಹಿಸಬೇಕು. ಗ್ರಾಮದೇವಿ ದೇವಸ್ಥಾನದ ರಸ್ತೆ ದುರಸ್ತಿಗೆ ಅಗತ್ಯ ಕ್ರಮ ಜರುಗಿಸಬೇಕು’ ಎಂದು ಸೂಚಿಸಿದರು. `ಫುಟ್ ಪಾತ್ ಮೇಲಿನ ಅಂಗಡಿಗಳನ್ನು ನಿರ್ದಾಕ್ಷಿಣ್ಯವಾಗಿ ತೆರವುಗೊಳಿಸಬೇಕು. ಸಂಚಾರ ವ್ಯವಸ್ಥೆಗೆ ಅನುಕೂಲ ಆಗಬೇಕು. ಎಲ್ಲ ಅಧಿಕಾರಿಗಳು, ಸಾರ್ವಜನಿಕರು, ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಜಾತ್ರೆಯನ್ನು ಯಶಸ್ವಿಗೊಳಿಸಬೇಕು. ಅಧಿಕಾರಿಗಳು ಕಾನೂನು ಪುಸ್ತಕ ಬದಿಗಿಟ್ಟು, ಜನರ ಹಿತದೃಷ್ಟಿಯಿಂದ ಕೆಲಸ ಮಾಡಬೇಕು’ ಎಂದು ಎಚ್ಚರಿಸಿದರು. `ಜಾತ್ರೆಯಲ್ಲಿ ಸಂಚಾರ ಮತ್ತು ಪಾರ್ಕಿಂಗ್ ವ್ಯವಸ್ಥೆಗೆ ಯೋಜನೆ ರೂಪಿಸಲಾಗಿದೆ. ಸಂಜೆಯ ನಂತರ ರಾತ್ರಿಯವರೆಗೂ ರಾಷ್ಟ್ರೀಯ ಹೆದ್ದಾರಿಯಲ್ಲಿ ದೊಡ್ಡ ವಾಹನಗಳ ಸಂಚಾರ ಸ್ಥಗಿತಗೊಳಿಸಲಾಗುವುದು. ಆ ವಾಹನಗಳನ್ನು ಇಡಗುಂದಿ, ಗುಳ್ಳಾಪುರ ಹಾಗೂ ಹಿಟ್ಟಿನಬೈಲ್ ಕಡೆ ನಿಲುಗಡೆ ಮಾಡಲಾಗುವುದು. ಸಣ್ಣ ವಾಹನಗಳಿಗೆ ತಟಗಾರ ಕ್ರಾಸಿನಿಂದ ನಿಸರ್ಗಮನೆ ಮೂಲಕ ಬಿಸಗೋಡ ಕ್ರಾಸಿಗೆ ತಲುಪುವ ಒಳಮಾರ್ಗದಲ್ಲಿ ಸಂಚರಿಸಲು ಪರ್ಯಾಯ ವ್ಯವಸ್ಥೆ ಕಲ್ಪಿಸಲಾಗುವುದು. ಜಾತ್ರೆಗೆ ಬರುವ ವಾಹನಗಳಿಗೆ ಪಟ್ಟಣದ ಮದರ್ ತೆರೆಸಾ ಬಳಿಯ ಮೈದಾನ, ಐಬಿ ರಸ್ತೆ ಪಕ್ಕ, ಹಳೆ ತಹಸೀಲ್ದಾರ ಕಚೇರಿ ಹಿಂಭಾಗ, ಉರ್ದು ಶಾಲೆ ಮೈದಾನ, ಎಪಿಎಂಸಿ ಆವಾರ, ಅರಣ್ಯ ಇಲಾಖೆಯ ಸಸ್ಯೋದ್ಯಾನ ಮುಂತಾದೆಡೆ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗುವುದು’ ಎಂದು ಪಿಐ ರಮೇಶ ಹಾನಾಪುರ ಮಾಹಿತಿ ನೀಡಿದರು. ಗ್ರಾಮದೇವಿ ದೇವಸ್ಥಾನದ ಅಧ್ಯಕ್ಷ ರಾಜೇಂದ್ರಪ್ರಸಾದ ಭಟ್ಟ, ಡಿವೈಎಸ್‌ಪಿ ಗೀತಾ ಪಾಟೀಲ, ತಹಸೀಲ್ದಾರ ಚಂದ್ರಶೇಖರ ಹೊಸ್ಮನಿ, ಸಂಕಲ್ಪ ಸಂಸ್ಥೆ ಅಧ್ಯಕ್ಷ ಪ್ರಮೋದ ಹೆಗಡೆ, ಪ್ರಮುಖರಾದ ಹರಿಪ್ರಕಾಶ ಕೋಣೆಮನೆ, ವಿಜಯ ಮಿರಾಶಿ, ವಿ ಎಸ್ ಭಟ್ಟ ಇತರರಿದ್ದರು. - [ಹೆಬ್ಬಾರ್ ಪರಿವಾರದಲ್ಲಿ ದುಖಃ ಜೀವದ ಗೆಳೆಯ ಇನ್ನಿಲ್ಲ](https://mobiletime.in/2025/12/sadly-the-hebbar-family-no-longer-has-a-lifelong-friend/): ಯಲ್ಲಾಪುರ ಶಾಸಕ ಶಿವರಾಮ ಹೆಬ್ಬಾರ್ ಅವರ ಬಾಲ್ಯ ಸ್ನೇಹಿತ ಶ್ರೀಧರ ನಾಯ್ಕ ಅವರು ಭೂ ಲೋಕದ ಯಾತ್ರೆ ಮುಗಿಸಿದ್ದಾರೆ. ಅವರ ನಿಧನಕ್ಕೆ ಶಿವರಾಮ ಹೆಬ್ಬಾರ್ ಅವರು ಕಂಬನಿ ಮಿಡಿದಿದ್ದಾರೆ. ಶ್ರೀಧರ ನಾರಾಯಣ ನಾಯ್ಕ ಅವರು ಯಲ್ಲಾಪುರದ ಅರಬೈಲಿನಲ್ಲಿ ವಾಸವಾಗಿದ್ದರು. ಶ್ರಮ ಜೀವಿ ಆಗಿದ್ದ ಅವರು ಅನೇಕರ ಪಾಲಿಗೆ ಆಪತ್ಬಾಂದವರಾಗಿದ್ದರು. ಅರಬೈಲ್ ಘಟ್ಟದಲ್ಲಿ ಅಪಘಾತಗಳು ನಡೆದಾಗ ತಕ್ಷಣ ಭೇಟಿ ನೀಡಿ ಜನರಿಗೆ ನೆರವಾಗುತ್ತಿದ್ದರು. ಅವರ ಸೇವಾ ಗುಣಗಳಿಂದಲೇ ಪ್ರಸಿದ್ದಿಪಡೆದಿದ್ದು, ಸ್ಥಳೀಯ ಗ್ರಾಮ ಪಂಚಾಯತ ಪ್ರತಿನಿಧಿಯಾಗಿಯೂ ಕೆಲಸ ಮಾಡಿದ್ದರು. ಶ್ರೀಧರ ನಾಯ್ಕ ಅವರು ಶಿವರಾಮ ಹೆಬ್ಬಾರ್ ಅವರ ಬಾಲ್ಯದ ಗೆಳೆಯರಾಗಿದ್ದರು. ಶಿವರಾಮ ಹೆಬ್ಬಾರ್ ಅವರು ಲಾರಿ ಚಾಲಕಾಗಿದ್ದ ಅವಧಿಯಿಂದಲೂ ಶ್ರೀಧರ ನಾಯ್ಕ ಅವರು ಹೆಬ್ಬಾರ್ ಅವರ ಜೊತೆ ದುಡಿದಿದ್ದರು. ಈಚೆಗೆ ವಯೋಸಹಜ ಖಾಯಿಲೆಗೆ ತುತ್ತಾಗಿದ್ದ ಅವರು ಭಾನುವಾರ ತಮ್ಮ ಜೀವನದ ಪ್ರಯಾಣ ಮುಗಿಸಿದರು. ಮೂರು ಗಂಡು ಮಕ್ಕಳ ಜೊತೆ ಅಪಾರ ಪ್ರಮಾಣದ ಬಂಧು-ಬಳಗದವರನ್ನು ಶ್ರೀಧರ ನಾಯ್ಕ ಅವರು ಅಗಲಿದ್ದಾರೆ. ಕೆಪಿಸಿಸಿ ಸದಸ್ಯ ವಿವೇಕ್ ಹೆಬ್ಬಾರ್, ಜಿಲ್ಲಾ ಪಂಚಾಯತ ಮಾಜಿ ಸದಸ್ಯ ವಿಜಯ್ ಮಿರಾಶಿ, ಸತೀಶ ನಾಯ್ಕ ಕೊಂಡೆಮನೆ ಸೇರಿ ಅನೇಕರು ಶ್ರೀಧರ ನಾಯ್ಕ ಅವರ ಕುಟುಂಬಕ್ಕೆ ಸಾಂತ್ವಾನ ಹೇಳಿದ್ದಾರೆ. - [ಅಪರಿಚಿತ ಮಾಡಿದ ಅವಾಂತರ: ಅಪಘಾತಕ್ಕೆ ಬಲಿಯಾದ ಬೈಕ್ ಸವಾರ!](https://mobiletime.in/2025/12/a-stranger-caused-trouble-biker-killed-in-accident/): ಅಪಘಾತದ ನಂತರ ಗಾಯಾಳುವನ್ನು ಚಾಲಕ ಆಸ್ಪತ್ರೆಗೆ ಸಾಗಿಸದೇ ಪರಾರಿಯಾದ ಪರಿಣಾಮ ವ್ಯಕ್ತಿಯೊಬ್ಬರ ಜೀವ ಹೋಗಿದೆ. ರಸ್ತೆ ಅಪಘಾತದಲ್ಲಿ ಗಾಯಗೊಂಡು ನರಳಾಡುತ್ತಿದ್ದ ಸುರೇಶ ಗಾಂವ್ಕರ್ ಅವರು ತಡವಾಗಿ ಆಸ್ಪತ್ರೆ ಸೇರಿದ್ದರಿಂದ ಅವರನ್ನು ಬದುಕಿಸಿಕೊಳ್ಳಲು ಸಾಧ್ಯವಾಗಿಲ್ಲ. ಅಂಕೋಲಾದ ಬೇಳಾಬಂದರಿನಲ್ಲಿ ಸುರೇಶ ಹಿರಿಯಾ ಗಾಂವ್ಕರ್ (61) ಅವರು ವಾಸವಾಗಿದ್ದರು. ಡಿಸೆಂಬರ್ 19ರ ಸಂಜೆ 7.20ರ ವೇಳೆಗೆ ಅವರು ತಮ್ಮ ಬೈಕಿನಲ್ಲಿ ಸಂಚಾರ ನಡೆಸಿದ್ದರು. ಕಾರವಾರ-ಅಂಕೋಲಾ ಮಾರ್ಗದಲ್ಲಿ ಸುರೇಶ ಗಾಂವ್ಕರ್ ಅವರು ಹೊರಟಿರುವಾಗ ಹಿಂದಿನಿAದ ಬಂದ ವಾಹನವೊಂದು ಅವರ ಬೈಕಿಗೆ ಗುದ್ದಿತು. ಬಾಳೆಗುಳಿ ಮೇಲ್ಸೆತುವೆ ಹತ್ತಿರ ಬಿಳಿ ಬಣ್ಣದ ಸಣ್ಣ ವಾಹನ ಗುದ್ದಿದ ರಭಸಕ್ಕೆ ಸುರೇಶ ಗಾಂವ್ಕರ್ ಅವರು ರಸ್ತೆ ಮೇಲೆ ಬಿದ್ದರು. ಅಪಘಾತ ನೋಡಿದ ಬಿಳಿ ವಾಹನದ ಚಾಲಕ ತಕ್ಷಣ ಅಲ್ಲಿಂದ ಪರಾರಿಯಾದರು. ಅಪಘಾತಕ್ಕೆ ಒಳಗಾದವರನ್ನು ಆಸ್ಪತ್ರೆಗೆ ಸೇರಿಸುವ ಕೆಲಸವನ್ನು ಆ ಚಾಲಕ ಮಾಡಲಿಲ್ಲ. ಅಪಘಾತದ ಬಗ್ಗೆ ಪೊಲೀಸರಿಗೆ ಸಹ ಮಾಹಿತಿ ಕೊಡಲಿಲ್ಲ. ಸುರೇಶ ಗಾಂವ್ಕರ್ ಅವರ ತಲೆ, ಕೈ-ಕಾಲಿಗೆ ಗಾಯವಾಗಿ ನರಳಾಡುತ್ತಿದ್ದರು. ಇದನ್ನು ನೋಡಿದ ಕೆಲವರು ಸುರೇಶ ಗಾಂವ್ಕರ್ ಅವರನ್ನು ಅಂಕೋಲಾದ ಆರ್ಯ ಮೆಡಿಕಲ್’ಗೆ ಕಳುಹಿಸಿದರು. ಅದಾದ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಅದಾದ ನಂತರ ಉಡುಪಿ ಆದರ್ಶ ಆಸ್ಪತ್ರೆ ಕರೆದೊಯ್ಯಲಾಯಿತು. ಅದಾಗಿಯೂ, ಡಿಸೆಂಬರ್ 20ರಂದು ಅವರು ಸಾವನಪ್ಪಿದರು. ಐ ಆರ್ ಬಿಯಲ್ಲಿ ಕೆಲಸ ಮಾಡುವ ಅವರ್ಸಾ ಸಕಲಬೇಣದ ನವೀನ ಪಡ್ತಿ ಅವರು ಅಪಘಾತದ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದು, ಸುರೇಶ ಗಾಂವ್ಕರ್ ಅವರು ಸಾವನಪ್ಪಿದ ಬಗ್ಗೆ ಆದರ್ಶ ಆಸ್ಪತ್ರೆಯವರು ತಿಳಿಸಿದರು. `ಅಪಘಾತದ ನಂತರ ಗಾಯಗೊಂಡವರನ್ನು ಆಸ್ಪತ್ರೆಗೆ ಸೇರಿಸುವುದೇ ಧರ್ಮ’   - [ಹೆದ್ದಾರಿ ಹೊಂಡ ತುಂಬಿದ ಎಸಿಸಿ ಸಿಮೆಂಟ್!](https://mobiletime.in/2025/12/acc-cement-filled-the-highway-pothole/): ಹುಬ್ಬಳ್ಳಿ ಅಂಕೋಲಾ ರಾಷ್ಟ್ರೀಯ ಹೆದ್ದಾರಿ ಮೇಲೆ ಚಲಿಸುತ್ತಿದ್ದ ಸಿಮೆಂಟ್ ತುಂಬಿದ ಲಾರಿ ಯಲ್ಲಾಪುರದಲ್ಲಿ ಪಲ್ಟಿಯಾಗಿದೆ. ಪರಿಣಾಮ ಹೆದ್ದಾರಿ ಪೂರ್ತಿ ಸಿಮೆಂಟ್ ಚೀಲಗಳು ಬಿದ್ದಿವೆ. ಯಲ್ಲಾಪುರದ ಕೆ ಮಿಲಿನ್ ಹೊಟೇಲ್ ಬಳಿ ಭಾನುವಾರ ಸಿಮೆಂಟ್ ಲಾರಿ ಪಲ್ಟಿಯಾಯಿತು. ಪರಿಣಾಮ ತಾಸುಗಳ ಕಾಲ ಸಂಚಾರ ದಟ್ಟಣೆ ಉಂಟಾಗಿದ್ದು, ಇನ್ನಿತರ ವಾಹನ ಸವಾರರು ಸಮಸ್ಯೆ ಅನುಭವಿಸಿದರು. ವಿಷಯ ಅರಿತ ಪೊಲೀಸರು ಸ್ಥಳಕ್ಕೆ ಧಾವಿಸಿ ವಾಹನ ಸವಾರರ ಸಮಸ್ಯೆ ಆಲಿಸಿದರು. ನಂತರ ಒಂದು ಬದಿಯಿಂದ ಇನ್ನಿತರ ವಾಹನ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟರು. ಬಳ್ಳಾರಿಯಿಂದ ಎಸಿಸಿ ಸಿಮೆಂಟ್ ಚೀಲಗಳನ್ನು ಹೊತ್ತ ಲಾರಿ ಕೇರಳಕ್ಕೆ ಹೋಗಬೇಕಿತ್ತು. ಯಲ್ಲಾಪುರ ಬಳಿಯ ಹೆದ್ದಾರಿ ಹೊಂಡಕ್ಕೆ ಲಾರಿಯ ನಿಯಂತ್ರಣ ತಪ್ಪಿದ್ದು, ಚಾಲಕನ ನಿರ್ಲಕ್ಷದ ಕಾರಣ ಲಾರಿ ಪಲ್ಟಿಯಾಯಿತು. ಅಪಘಾತದ ರಭಸಕ್ಕೆ ಲಾರಿಯೊಳಗಿದ್ದ ಸಿಮೆಂಟ್ ಚೀಲಗಳೆಲ್ಲವೂ ಹೆದ್ದಾರಿ ಮೇಲೆ ಬಿದ್ದವು. ಸ್ಥಳದಲ್ಲಿ ಸಾಕಷ್ಟು ಧೂಳು ಕಾಣಿಸಿದ್ದು, ಸಿಮೆಂಟ್ ಧೂಳು ಸೇವಿಸಿದ ಜನ ಕೆಮ್ಮಿನ ಸಮಸ್ಯೆಯನ್ನು ಅನುಭವಿಸಿದರು. ನಂತರ ಕ್ರೇನ್ ಮೂಲಕ ಲಾರಿಯನ್ನು ಮೇಲೆತ್ತಲಾಗಿದೆ. ಅಪಘಾತದಲ್ಲಿ ಲಾರಿ ಚಾಲಕನ ಕೈಗೆ ಪೆಟ್ಟಾಗಿದೆ. ಪಿಸೈ ಸಿದ್ದಪ್ಪ ಗುಡಿ ತಂಡದ ಪೊಲೀಸರು ಸ್ಥಳದಲ್ಲಿದ್ದು ವಾಹನ ಸಂಚಾರ ಸುಗಮಗೊಳಿಸಿದರು. - [ದುಡುಕು ನಿರ್ಧಾರ: ಬಾಳಿ ಬದುಕಬೇಕಿದ್ದವನ ಬದುಕು ಅಂತ್ಯ!](https://mobiletime.in/2025/12/a-rash-decision-the-life-of-someone-who-was-meant-to-live-is-over/): ಬಾಳಿ ಬದುಕಬೇಕಿದ್ದ ನಿತಿನ್ ಭಟ್ಟ ಅವರು ದಿಢೀರ್ ಆಗಿ ದುಡುಕು ನಿರ್ಧಾರ ಮಾಡಿದ್ದಾರೆ. 20ನೇ ವಯಸ್ಸಿನಲ್ಲಿಯೇ ಅವರು ತಾವು ವಾಸವಿದ್ದ ಕೊಠಡಿಯಲ್ಲಿಯೇ ಅವರು ಆತ್ಮಹತ್ಯೆಗೆ ಶರಣಾಗಿದ್ದಾರೆ. ನಿತಿನ್ ಭಟ್ಟ ಅವರು ಅಂಕೋಲಾ ತಾಲೂಕಿನ ಕಲ್ಲೇಶ್ವರದ ರಾಘವೇಂದ್ರ ಭಟ್ಟ ಹಾಗೂ ಸ್ಮಿತಾ ಭಟ್ಟ ದಂಪತಿಯ ಪುತ್ರರಾಗಿದ್ದರು. ಬೆಂಗಳೂರಿನಲ್ಲಿ ಅವರು ಇಂಜಿನಿಯರ್ ಓದುತ್ತಿದ್ದರು. ಮೂರನೇ ಸಮಿಸ್ಟರ್ ಅಧ್ಯಯನಕ್ಕಾಗಿ ಶ್ರಮಿಸುತ್ತಿದ್ದ ಅವರು ದಿಢೀರ್ ಆಗಿ ಆತ್ಮಹತ್ಯೆಯ ನಿರ್ಧಾರ ಮಾಡಿದರು. ತಾವು ವಾಸವಿದ್ದ ರೂಮಿನಲ್ಲಿಯೇ ಅವರು ನೇಣಿಗೆ ಶರಣಾದರು. ಗುರುವಾರ ರಾತ್ರಿ ಈ ದುರಂತ ನಡೆದಿದ್ದು, ನಿತಿನ್ ಭಟ್ಟ ಅವರ ಸಾವಿನ ನಿರ್ಧಾರಕ್ಕೆ ಈವರೆಗೂ ಕಾರಣ ಗೊತ್ತಾಗಿಲ್ಲ. ಎಲ್ಲರ ಜೊತೆ ಅನ್ಯೋನ್ಯವಾಗಿದ್ದ ನಿತಿನ್ ಭಟ್ಟ ದಿಢೀರ್ ಆಗಿ ದುಡುಕು ನಿರ್ಧಾರ ಮಾಡಿದ ಬಗ್ಗೆ ಅನೇಕರು ಅಚ್ಚರಿವ್ಯಕ್ತಪಡಿಸಿದ್ದಾರೆ. ಜೊತೆಗೆ ಹಲವರು ಕಂಬನಿ ಮಿಡಿದಿದ್ದಾರೆ. ವಿಷಯ ತಿಳಿದ ಕುಟುಂಬದವರು ಬೆಂಗಳೂರಿಗೆ ದೌಡಾಯಿಸಿದ್ದು, ಅಲ್ಲಿನ ಪೊಲೀಸರು ಸಾವಿನ ತನಿಖೆ ಶುರು ಮಾಡಿದ್ದಾರೆ. `ಆತ್ಮಹತ್ಯೆ ಅಪರಾಧ’   - [ಅನ್ನಪೂರ್ಣ ಮಾರ್ಟಿನಲ್ಲಿ ಐಸ್ ಕ್ರೀಂ ಕಳುವು!](https://mobiletime.in/2025/12/ice-cream-theft-at-annapurna-mart/): ನರಸಿಂಹ ಭಾಗ್ವತ ಅವರ ಅನ್ನಪೂರ್ಣ ಮಾರ್ಟಿಗೆ ನುಗ್ಗಿದ ಕಳ್ಳರು ಐಸ್ ಕ್ರೀಂ ಕದ್ದಿದ್ದಾರೆ. ಅದರ ಜೊತೆ 10 ಸಾವಿರ ರೂ ಹಣ, 5 ಸಾವಿರ ರೂಪಾಯಿಯ ಕಿರಾಣಿ ಸಾಮಗ್ರಿ ಜೊತೆ ನಿತ್ಯ ಬಳಕೆ ವಸ್ತುಗಳನ್ನು ಸಹ ದೋಚಿದ್ದಾರೆ. ಅಂಕೋಲಾದ ಕನಕನಳ್ಳಿಯ ನರಸಿಂಹ ನಾರಾಯಣ ಭಾಗ್ವತ ಅವರು ಅನ್ನಪೂರ್ಣ ಮಾರ್ಟ ಎಂಬ ಕಿರಾಣಿ ಅಂಗಡಿ ನಡೆಸುತ್ತಿದ್ದಾರೆ. ಅವರ ವ್ಯಾಪಾರದ ಮೇಲೆ ಕಳ್ಳರು ಕಣ್ಣು ಹಾಕಿದ್ದು, ರಾತ್ರಿ ವೇಳೆ ಹಿಂದಿನ ಬಾಗಿಲು ಒಡೆದು ಆ ಮಳಿಗೆಗೆ ನುಗ್ಗಿದ್ದಾರೆ. ಅಂಗಡಿಯಲ್ಲಿದ್ದ ಡ್ರಾವರಿಗೆ ಕೈ ಹಾಕಿದ ಕಳ್ಳರಿಗೆ 10 ಸಾವಿರ ರೂ ಹಣ ಸಿಕ್ಕಿದೆ. ಅದಾದ ನಂತರ ವಿವಿಧ ಕಿರಾಣಿ ಹಾಗೂ ನಿತ್ಯದ ಬಳಕೆ ವಸ್ತುಗಳನ್ನು ಕಳ್ಳರು ಕದ್ದಿದ್ದಾರೆ. ಕೊನೆಗೆ ಐಸ್ ಕ್ರೀಂ ಮೇಲೆ ಆಸೆಪಟ್ಟ ಕಳ್ಳರು ಅದನ್ನು ಅಪಹರಿಸಿದ್ದಾರೆ. ಡಿಸೆಂಬರ್ 18ರ ರಾತ್ರಿ ನರಸಿಂಹ ಭಾಗ್ವತ ಅವರು ಅಂಗಡಿಗೆ ಬೀಗ ಹಾಕಿ ಮನೆಗೆ ಹೋದ ನಂತರ ಕಳ್ಳರ ಆಗಮನವಾಗಿದೆ. ಡಿಸೆಂಬರ್ 19ರ ಬೆಳಗ್ಗೆ ಅಂಗಡಿ ಬಾಗಿಲು ತೆರೆದಾಗ ಅಲ್ಲಿದ್ದ ಹಣ ಹಾಗೂ ಸಾಮಗ್ರಿ ಕಾಣೆಯಾಗಿರುವುದು ಭಾಗ್ವತರ ಗಮನಕ್ಕೆ ಬಂದಿದೆ. ಮಳಿಗೆಯ ಹಿಂದಿನ ಬಾಗಿಲಿಗೆ ರಂದ್ರ ಮಾಡಿ, ಲಾಲ್ದಂಡಿ ತೆಗೆದು ಕಳ್ಳರು ಒಳಗೆ ನುಗ್ಗಿರುವುದು ಆ ವೇಳೆ ನರಸಿಂಹ ಭಾಗ್ವತ ಅವರಿಗೆ ಗೊತ್ತಾಗಿದೆ. ಒಂದೇ ರಾತ್ರಿಯಲ್ಲಿ 25 ಸಾವಿರ ರೂ ನಷ್ಟ ಅನುಭವಿಸಿದ ನರಸಿಂಹ ಭಾಗ್ವತ ಅವರು ಕಳ್ಳರ ಕಾಟದ ಬಗ್ಗೆ ಮನೆಯಲ್ಲಿ ಹೇಳಿದ್ದಾರೆ. ಕುಟುಂಬದವರ ಸಲಹೆ ಮೇರೆಗೆ ಅವರು ಅಂಕೋಲಾ ಪೊಲೀಸ್ ಠಾಣೆಗೆ ಹೋಗಿದ್ದು, ಕಳ್ಳತನದ ವರದಿ ಒಪ್ಪಿಸಿದ್ದಾರೆ. ಪೊಲೀಸರು ಕನಕನಳ್ಳಿಗೆ ಬಂದಿದ್ದ ಕಳ್ಳರ ಹುಡುಕಾಟ ನಡೆಸಿದ್ದಾರೆ. - [ಮೀನು ಖರೀದಿಗೆ ಬಂದವನ ಕೈಚೀಲ ಕಾಣೆ!](https://mobiletime.in/2025/12/the-wallet-of-the-man-who-came-to-buy-fish-is-missing/): ಡಿಸ್ಕೋಂಟ್ ಸೇಲ್’ನಲ್ಲಿ ಅಂಗಿ-ಪ್ಯಾoಟು-ಚೂಡಿದಾರ ಖರೀದಿಸಿದ ವ್ಯಕ್ತಿಯೊಬ್ಬರು ಮೀನು ಖರೀದಿಗಾಗಿ ಮಾರುಕಟ್ಟೆಗೆ ಹೋಗಿದ್ದು, ಅಲ್ಲಿ ಅವರ ಕೈ ಚೀಲ ಕಾಣೆಯಾಗಿದೆ. ಹೀಗಾಗಿ ಆ ಕೈ ಚೀಲ ಹುಡುಕಿಕೊಡುವಂತೆ ಕೋರಿ ಅವರು ಪೊಲೀಸರ ಮೊರೆ ಹೋಗಿದ್ದಾರೆ! ಕಾರವಾರದ ಹಳಗಾದ ಇನಾನ್ಸ ಸಂತಾನ್ ಅಲ್ಪಾನ್ಸೋ ಅವರು ಡಿಸೆಂಬರ್ 20ರಂದು ತಮ್ಮ ಮಗಳನ್ನು ಕಾಲೇಜಿಗೆ ಬಿಡಲು ನಗರಕ್ಕೆ ಬಂದಿದ್ದರು. ಮಗಳನ್ನು ಕಾಲೇಜಿಗೆ ಬಿಟ್ಟ ನಂತರ ಅವರಿಗೆ ಕಾಜುಭಾಗದ ಪೊಲೀಸ್ ಕಲ್ಯಾಣ ಮಂಟಪದಲ್ಲಿ `ಡಿಸ್ಕೋಂಟ್ ಸೇಲ್’ ನಡೆಯುತ್ತಿರುವುದು ಕಾಣಿಸಿತು. ಅಲ್ಲಿಗೆ ಹೋದ ಅವರು 500ರೂ ಕೊಟ್ಟು ಪ್ಯಾಂಟ್ ಖರೀದಿಸಿದರು. 350ರೂಪಾಯಿಯ ಅಂಗಿಯನ್ನು ಖರೀದಿಸಿದರು. ಅಲ್ಲಿದ್ದ ಚೂಡಿದಾರವೊಂದು ಚಂದ ಕಾಣಿಸಿದ್ದು, ಚೌಕಾಸಿ ಮಾಡಿ ಅದನ್ನು 500ರೂಪಾಯಿಗೆ ಖರೀದಿಸಿದರು. ಎರಡು ಬಾಟಲಿಗಳನ್ನು ಜೊತೆಗೆ ತೆಗೆದುಕೊಂಡರು. ಕಡಿಮೆ ಬೆಲೆಗೆ ಸಿಕ್ಕಿತು ಎಂದು ನಾಲ್ಕು ಸ್ಪೇಯರ್ ಖಾಲಿ ಬಾಟಲಿಗಳನ್ನು ತೆಗೆದುಕೊಂಡರು. ಅದಾದ ನಂತರ ಇನಾನ್ಸ ಅಲ್ಪಾನ್ಸೋ ಅವರಿಗೆ `ಮೀನು ತನ್ನಿ’ ಎಂದು ಮನೆಯಲ್ಲಿ ಹೇಳಿದ್ದು ನೆನಪಾಯಿತು. ನೇರವಾಗಿ ಮೀನು ಮಾರುಕಟ್ಟೆಗೆ ಹೋದ ಅವರು ಮಾರುಕಟ್ಟೆ ಹೊರಭಾಗದಲ್ಲಿ ಬೈಕ್ ನಿಲ್ಲಿಸಿದರು. ಡಿಸ್ಕೋಂಟ್ ಸೇಲ್’ನಲ್ಲಿ ತಂದಿದ್ದ ಸಾಮಗ್ರಿಗಳ ಚೀಲವನ್ನು ಬೈಕ್ ಮೇಲೆಯಿರಿಸಿ ಮಾರುಕಟ್ಟೆ ಪ್ರವೇಶಿಸಿದರು. ಬಗೆ ಬಗೆಯ ಮೀನು ಖರೀದಿಸಿ ಹೊರ ಬಂದ ಇನಾನ್ಸ ಅಲ್ಪಾನ್ಸೋ ಅವರಿಗೆ ಬೈಕಿನ ಮೇಲಿದ್ದ ಚೀಲ ಕಾಣಲಿಲ್ಲ. ಅಕ್ಕ-ಪಕ್ಕದ ಅಂಗಡಿಯವರ ಬಳಿ ಅವರು ಆ ಚೀಲದ ಬಗ್ಗೆ ವಿಚಾರಿಸಿದರು. ಸುತ್ತಲು ಹುಡುಕಾಟ ನಡೆಸಿದರು. ಎಲ್ಲಿ ಹುಡುಕಿದರೂ ಅವರ ಆ ಕೈಚೀಲ ಮಾತ್ರ ಸಿಗಲಿಲ್ಲ. ಹೊಸದಾಗಿ ಖರೀದಿಸಿದ ಅಂಗಿ-ಪ್ಯಾoಟು-ಚೂಡಿದಾರವಿದ್ದ ಕೈ ಚೀಲ ಎಗರಿಸಿದ ಕಳ್ಳರ ಬಗ್ಗೆ ಅವರು ಬೈದುಕೊಂಡರು. ಖರೀದಿಸಿದ ಮೀನು ಹಿಡಿದು ಮನೆಗೆ ಹೋದ ಇನಾನ್ಸ ಅಲ್ಪಾನ್ಸೋ ಅವರು ಕೈ ಚೀಲ ಕದ್ದವರ ಬಗ್ಗೆ ಆಳವಾಗಿ ಚಿಂತಿಸಿದರು. ಸಂಜೆ ಮತ್ತೆ ಕಾರವಾರಕ್ಕೆ ಬಂದ ಅವರು ಆ ಕಳ್ಳರಿಗೆ ಬುದ್ದಿ ಕಲಿಸಬೇಕು ಎಂದು ನಿರ್ಧರಿಸಿ ಪೊಲೀಸ್ ಠಾಣೆಗೆ ಹೋದರು. `ಬೈಕ್ ಮೇಲೆ ಇದ್ದ ಕೈ ಚೀಲ ಕಳ್ಳತನವಾಗಿದೆ’ ಎಂದು ಕಾರವಾರ ನಗರಠಾಣೆಯಲ್ಲಿ ದೂರು ದಾಖಲಿಸಿದರು. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಇನಾನ್ಸ ಅಲ್ಪಾನ್ಸೋ ಅವರ ಕೈ ಚೀಲದ ಹುಡುಕಾಟ ನಡೆಸಿದ್ದಾರೆ. - [ಕರಾವಳಿ ಉತ್ಸವಕ್ಕೆ ಸಿದ್ಧಗೊಂಡ ಕಡಲ ನಗರಿ!](https://mobiletime.in/2025/12/the-coastal-city-is-ready-for-the-coastal-festival/): ಕಾರವಾರ ಕಡಲತೀರದಲ್ಲಿ 10 ಕೋಟಿ ರೂ ವೆಚ್ಚದಲ್ಲಿ ಅದ್ಧೂರಿಯಾಗಿ `ಕರಾವಳಿ ಉತ್ಸವ’ ನಡೆಸಲು ಜಿಲ್ಲಾಡಳಿತ ನಿರ್ಧರಿಸಿದ್ದು, ಇದಕ್ಕೆ ಎಲ್ಲಾ ಬಗೆಯ ತಯಾರಿಗಳು ಜೋರಾಗಿದೆ. ಡಿಸೆಂಬರ್ 22ರಿಂದ 28ರವರೆಗೆ ಸಪ್ತಾಹದ ಮಾದರಿಯಲ್ಲಿ ಉತ್ಸವ ನಡೆಯಲಿದೆ. ಎಂಟು ವರ್ಷಗಳ ನಂತರ ಕರಾವಳಿ ಉತ್ಸವ ಆಯೋಜಿಸಲಾಗಿದೆ. ಅತ್ಯಂತ ಕಡಿಮೆ ಅವಧಿಯಲ್ಲಿ ಹೆಚ್ಚಿನ ಮುತುವರ್ಜಿಯಿಂದ ಕೆಲಸ ಮಾಡಲಾಗುತ್ತಿದೆ. ಸರ್ಕಾರಿ ಕಚೇರಿ ಗೋಡೆಗಳ ಮೇಲೆ ಚಿತ್ರಕಲೆ, ಸ್ವಾಗತ ಕಮಾನು, ಆಕರ್ಷಕ ಮಂಟಪದ ಜೊತೆ ವಿವಿಧ ಮಳಿಗೆಗಳು ಕರಾವಳಿ ಉತ್ಸವಕ್ಕೆ ಆಗಮಿಸುವವರನ್ನು ಸ್ವಾಗತಿಸುತ್ತಿವೆ. ಖ್ಯಾತ ಕಲಾವಿದರ ಜೊತೆ ಸ್ಥಳೀಯ ಪ್ರತಿಭೆ ಪ್ರದರ್ಶನಕ್ಕೂ ಈ ವೇದಿಕೆಯಲ್ಲಿ ಅವಕಾಶ ನೀಡಲಾಗಿದೆ. ಉತ್ಸವ ಅಂಗವಾಗಿ ನಡೆದ ವಿವಿಧ ಹಂತದ ಸ್ಪರ್ಧೆಗಳು ಯಶಸ್ವಿಯಾಗಿದ್ದು, ಇನ್ನೂ ಅನೇಕ ಬಗೆಯ ಆಟೋಟಗಳು ನಡೆಯಲಿದೆ. ಈ ಬಾರಿಯ ಕರಾವಳಿ ಉತ್ಸವವನ್ನು ಅತ್ಯಂತ ಅಚ್ಚುಕಟ್ಟಾಗಿ ಮಾಡಲು ಜಿಲ್ಲಾಡಳಿತ ಶ್ರಮಿಸುತ್ತಿದೆ. ರಾಜ್ಯ ಹಾಗೂ ಹೊರರಾಜ್ಯದ ಪ್ರವಾಸಿಗರು ಸಹ ಕರಾವಳಿ ಉತ್ಸವಕ್ಕೆ ಆಗಮಿಸುವ ನಿರೀಕ್ಷೆಯಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಕರಾವಳಿ ಉತ್ಸವಕ್ಕೆ ಆಮಂತ್ರಿಸಲಾಗಿದೆ. ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ ಸೇರಿ ಅನೇಕ ಗಣ್ಯರು ಉತ್ಸವದ ಬಗ್ಗೆ ವಿಡಿಯೋ ಸಂದೇಶ ರವಾನಿಸಿದ್ದಾರೆ. `ಜಿಲ್ಲೆಯಲ್ಲಿ ಅತೀ ದೊಡ್ಡ ಉತ್ಸವವೆಂದರೆ ಅದು ಕರಾವಳಿ ಉತ್ಸವ’ ಎಂದು ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ವೈದ್ಯ ಅವರು ಹೇಳಿದ್ದಾರೆ. - [ಹುಂಡಿ ಕದ್ದ ಕಳ್ಳ ಬೈಕ್ ಬಿಟ್ಟು ಹೋದ!](https://mobiletime.in/2025/12/the-thief-who-stole-the-bike-left-the-bike/): ದೇವಾಲಯದ ಹುಂಡಿ ಒಡೆದು ಹಣ ದೋಚಿದ ಕಳ್ಳನೊಪ್ಪ ಅಲ್ಲಿಂದ ಪರಾರಿಯಾಗುವ ದಾವಂತದಲ್ಲಿ ಬೈಕ್ ಬಿಟ್ಟು ಹೋಗಿದ್ದು, ಅದೇ ಬೈಕಿನ ಆಧಾರದಲ್ಲಿ ಪೊಲೀಸರು ಕಳ್ಳನನ್ನು ಹಿಡಿದಿದ್ದಾರೆ. ಹಳಿಯಾಳದ ಅಮ್ಮನಕೊಪ್ಪ ಗ್ರಾಮದ ಮೈಲಾರ ದೇವಸ್ಥಾನದಲ್ಲಿ ಹುಂಡಿ ಕಳ್ಳತನವಾಗಿದೆ. ಇಲ್ಲಿನ ಮೈಲಾರ ದೇವಸ್ಥಾನಕ್ಕೆ ರಾತ್ರಿ ವೇಳೆ ನುಗ್ಗಿದ ಕಳ್ಳರು ದೇವಸ್ಥಾನದ ಬಾಗಿಲಿನ ಬೀಗ ಒಡೆದಿದ್ದಾರೆ. ದೇವಾಲಯದ ಹುಂಡಿಯಲ್ಲಿದ್ದ ಸುಮಾರು 7 ಸಾವಿರ ರೂ ಹಣ ಎಗರಿಸಿದ್ದಾರೆ. ಈ ವಿಷಯ ಅರಿತ ಭಕ್ತರು ಆತಂಕಕ್ಕೆ ಒಳಗಾಗಿದ್ದು, ದೇವಾಲಯದ ಬಳಿ ಅನುಮಾನಾಸ್ಪದ ಬೈಕ್ ಕಾಣಿಸಿದೆ. ಆ ಬೈಕಿನ ಆಧಾರದ ಜೊತೆ ಸಿಸಿ ಕ್ಯಾಮರಾ ಮೂಲಕವೂ ಹುಡುಕಾಟ ನಡೆಸಿದಾಗ ದಾವಣಗೆರೆಯ ಪ್ರಸನ್ನಕುಮಾರ ಎಂಬಾತರ ಮೇಲೆ ಅನುಮಾನ ಮೂಡಿದೆ. ಪ್ರಸನ್ನಕುಮಾರ ಅವರನ್ನು ವಿಚಾರಣೆಗೆ ಒಳಪಡಿಸಿದಾಗ ಕಳ್ಳತನದ ಬಗ್ಗೆ ಒಪ್ಪಿಕೊಂಡಿದ್ದು, ತನಿಖೆ ಅವಧಿಯಲ್ಲಿ ಬನವಾಸಿ ಬಳಿಯ ದೇವಾಲಯದಲ್ಲಿಯೂ ಆತ ಕಳ್ಳತನ ಮಾಡಿರುವುದು ದೃಢವಾಗಿದೆ. ಆತನ ಬಳಿಯಿದ್ದ 2500ರೂ ಹಣದ ಜೊತೆ ಬೈಕನ್ನು ಪೊಲೀಸರು ಜಪ್ತು ಮಾಡಿದ್ದಾರೆ. - [ಯಲ್ಲಾಪುರದಲ್ಲಿಯೂ ತಂಡ ಕಟ್ಟಿದ ಸೂರಜ ಸೋನಿ!](https://mobiletime.in/2025/12/suraj-soni-has-formed-a-team-in-yellapur-too/): ರಾಜಕೀಯ, ಹೋರಾಟದ ಜೊತೆ ಸಾಮಾಜಿಕ ಸಮಸ್ಯೆಗಳಿಗೆ ಸ್ಪಂದಿಸುತ್ತಿರುವ ಕುಮಟಾದ ನಾಯಕ ಸೂರಜ ನಾಯ್ಕ ಸೋನಿ ಅವರು ಯಲ್ಲಾಪುರದಲ್ಲಿಯೂ ಬೆಂಬಲಿಗರನ್ನು ಹೊಂದಿದ್ದು, ಭಾನುವಾರ ಅಭಿಮಾನಿಗಳು ಸೂರಜ ನಾಯ್ಕ ಸೋನಿ ಅವರಿಗೆ ಶಾಲು ಹೊದೆಸಿ ಸನ್ಮಾನಿಸಿದ್ದಾರೆ. ಯಲ್ಲಾಪುರದ ವೇದವ್ಯಾಸ ಕಲ್ಯಾಣ ಮಂಟಪದಲ್ಲಿ ನಡೆದ ಈಡಿಗ ಈಡಿಗ ನಾಮದಾರಿ ಅಭಿವೃದ್ಧಿ ಸಂಘದ ರಜತ ಮಹೋತ್ಸವಕ್ಕೆ ಸೂರಜ ನಾಯ್ಕ ಸೋನಿ ಅವರು ಆಗಮಿಸಿದ್ದರು. ಸೂರಜ ನಾಯ್ಕ ಸೋನಿ ಅವರು ಆ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿದ್ದರು. ಈ ವಿಷಯ ಅರಿತು ಅವರ ಬೆಂಬಲಿಗರು ಅಲ್ಲಿಗೆ ತೆರಳಿದ್ದು, ಅದಾದ ನಂತರ ಪ್ರವಾಸಿ ಮಂದಿರ ಬಳಿಯ ಉದ್ಯಾನವನದಲ್ಲಿ ಒಟ್ಟಿಗೆ ಸೇರಿದರು. ಸೂರಜ ನಾಯ್ಕ ಅವರ ಹೋರಾಟ, ಸಮಾಜಪರ ಚಿಂತನೆಯ ಬಗ್ಗೆ ಅಭಿಮಾನಿಗಳು ಮಾತನಾಡಿದರು. ಅವರ `ರಾಜಕೀಯ ಭವಿಷ್ಯ ಇನ್ನಷ್ಟು ಉಜ್ವಲವಾಗಿರಲಿ’ ಎಂದು ಹಾರೈಸಿದರು. ಸೋಮೇಶ್ವರ ನಾಯ್ಕ, ಗಿರೀಶ ಬೋವಿವಡ್ಡರ್, ಕಾರ್ತಿಕ ನಾಯ್ಕ, ಯೋಗೇಶ ನಾಯ್ಕ, ಮಹೇಶ ಬೋವಿವಡ್ಡರ್, ಮಾಲತೇಶ ಜಲದಿ ಸೇರಿ ಸೂರಜ ನಾಯ್ಕ ಸೋನಿ ಅವರನ್ನು ಗೌರವಿಸಿದರು. `ನೊಂದವರಿಗೆ ನ್ಯಾಯ ಕೊಡಿಸಿದ ಸಮಾಧಾನ ನನಗಿದೆ. ಅಧಿಕಾರ ಇಲ್ಲದಿದ್ದರೂ ನನ್ನ ಸೇವೆ ನಿರಂತರ’ ಎಂದು ಸೂರಜ ನಾಯ್ಕ ಸೋನಿ ಅವರು ಈ ವೇಳೆ ಹೇಳಿದರು. `ಜೀವನದಲ್ಲಿ ಎಲ್ಲರಿಗೂ ಏಕಕಾಲಕ್ಕೆ ಯಶಸ್ಸು ಸಿಗುವುದಿಲ್ಲ. ಆದರೆ, ಒಳ್ಳೆಯ ಮಾರ್ಗದಲ್ಲಿ ಹೋರಾಟ ಹಾಗೂ ಕಷ್ಟಪಟ್ಟ ಪ್ರತಿಯೊಬ್ಬರಿಗೂ ಯಶಸ್ಸು ಖಂಡಿತ’ ಎಂಬ ವಿಶ್ವಾಸವ್ಯಕ್ತಪಡಿಸಿದರು.   - [ಪ್ರೀತಿಸಿ-ಮುದ್ದಿಸಿದ ಕಾಡುಪ್ರಾಣಿಯೇ ಈಗ ಶತ್ರು!](https://mobiletime.in/2025/12/the-wild-animal-that-we-loved-and-cuddled-is-now-our-enemy/): ಕಾಡು ದಾರಿ ತಪ್ಪಿ ಊರಿಗೆ ಬಂದಿದ್ದ ಕಡವೆಯನ್ನು ಆ ಊರಿನ ಜನ ಪ್ರೀತಿಯಿಂದ ಸ್ವಾಗತಿಸಿದ್ದರು. ಚಿಕ್ಕ ಮಕ್ಕಳಿನಿಂದಹಿಡಿದು ವಯೋವೃದ್ಧರವರೆಗೂ ಎಲ್ಲರೂ ಕಡವೆಯನ್ನು ಮುದ್ದಿಸಿದ್ದರು. ಪುಟ್ಟ ಕಡವೆಗೆ ಮನೆಯಲ್ಲಿ ಮಾಡಿದ ತಿನಿಸುಗಳನ್ನು ಕೊಟ್ಟು ಸಲಹುತ್ತಿದ್ದರು. ಆದರೆ, ಬೆಳೆದು ದೊಡ್ಡದಾದ ಆ ಕಡವೆಯೇ ಇದೀಗ ಜನರ ನಿದ್ದೆಗೆಡಿಸಿದೆ! ಸಿದ್ದಾಪುರದ 16ನೇ ಮೈಲುಗಲ್ ಬಳಿ ಕೆಲ ವರ್ಷದ ಹಿಂದೆ ಕಡವೆ ಕಾಣಿಸಿತ್ತು. ಪುಟ್ಟ ಮರಿಯನ್ನು ನೋಡಿದ ಜನ ಆ ಕಡವೆಗೆ ಆರೈಕೆ ಮಾಡಿದ್ದರು. ಜನರ ಸ್ನೇಹ ಸಂಪಾದಿಸಿದ ಕಡವೆ ಅಲ್ಲಿನ ಮಕ್ಕಳ ಹಾಗೇ ಬೆಳೆಯಿತು. ಜನರ ಭಯವಿಲ್ಲದೇ ಎಲ್ಲಡೆ ಸಂಚರಿಸಲು ಶುರು ಮಾಡಿತು. ಅದೇ ಆ ಊರಿನವರಿಗೆ ದೊಡ್ಡ ತಲೆನೋವಾಗಿದೆ. ರೈತರ ಫಸಲುಗಳನ್ನು ಕಡವೆ ನಾಶ ಮಾಡುತ್ತಿದ್ದು, ಮನೆ ಮಕ್ಕಳು ಮುಂದೆ ಹೋದಾಗ ತನ್ನ ಕೋಡುಗಳಿಂದ ಹಾಯಲು ಬರುತ್ತಿದೆ! ಈಗಾಲೇ ಅನೇಕರ ತೋಟಕ್ಕೆ ನುಗ್ಗಿದ ಆ ಕಡವೆ ಅಲ್ಲಿದ್ದ ಬಾಳೆ ಗಿಡಗಳನ್ನು ನಾಶ ಮಾಡಿದೆ. ಒಣಗಿದ ಅಡಿಕೆಯನ್ನು ಸಹ ಈ ಕಡವೆ ತಿನ್ನುತ್ತಿದ್ದು ಆ ಭಾಗದ ರೈತರ ತಲೆನೋವಿಗೆ ಕಾರಣವಾಗಿದೆ. ಚಿಕ್ಕ ಕಡಿವೆಯಾಗಿದ್ದಾಗ ಚಿಕ್ಕದಾಗಿದ್ದ ಕೋಡುಗಳು ಇದೀಗ ದೊಡ್ಡದಾಗಿ ಬೆಳೆದಿದ್ದು, ಆಗ ತಿಂಡಿ-ತಿನಿಸು ಕೊಟ್ಟು ಮುದ್ದಿಸಿದ ಮಹಿಳೆಯರೇ ಇದೀಗ ಕೋಡುಗಳನ್ನು ನೋಡಿ ಹೆದರುತ್ತಿದ್ದಾರೆ. ಹೀಗಾಗಿ ಆ ಕಡವೆಯ ವಿರುದ್ಧ ಊರಿನವರು ಸರ್ಕಾರಕ್ಕೆ ದೂರು ಕೊಟ್ಟಿದ್ದಾರೆ! ಈ ಎಲ್ಲಾ ಹಿನ್ನಲೆ ಈ ಕಡವೆಯನ್ನು ಊರಿನಿಂದ ಹೊರಗೆ ಸಾಗಿಸಬೇಕು ಎಂದು ಜನ ಅರಣ್ಯ ಇಲಾಖೆಯ ಮೊರೆ ಹೋಗಿದ್ದಾರೆ. ಮೊದಲಿನ ಹಾಗೇ ಇದೀಗ ಕಡವೆ ಜನರ ಕೈಗೆ ಸಿಗುವುದು ಅಪರೂಪವಾಗಿದ್ದು, ತಜ್ಞರೇ ಆಗಮಿಸಿ ಅದಕ್ಕೆ ಬಲೆ ಬೀಸುವ ಸಂದಿಗ್ದತೆೆ ಸೃಷ್ಠಿಯಾಗಿದೆ. ಜನರ ಮನವಿ ಆಲಿಸಿದ ಅರಣ್ಯಾಧಿಕಾರಿಗಳು ಕಡವೆಯನ್ನು ಶಿವಮೊಗ್ಗಕ್ಕೆ ಕಳುಹಿಸುವ ಬಗ್ಗೆ ಚಿಂತಿಸಿದ್ದಾರೆ. ಇದಕ್ಕಾಗಿ ಸರ್ಕಾರಕ್ಕೆ ಅಧಿಕಾರಿಗಳು ಪತ್ರವನ್ನು ಬರೆದಿದ್ದಾರೆ. ಪಶು ತಜ್ಞರ ನೆರವುಪಡೆದು ಕಡವೆಯನ್ನು ಸ್ಥಳಾಂತರಿಸುವ ಚಿಂತನೆ ಮುಂದುವರೆದಿದೆ. ಶಿವಮೊಗ್ಗಕ್ಕೆ ಕಳುಹಿಸಿದ ಕಾಟಿ ಸಾವು! ಸಿದ್ದಾಪುರದ ಕಾನಸೂರು ಬಳಿಯ ಗವಿನಗುಡ್ಡದ ಅಡಿಕೆ ತೋಟದಲ್ಲಿದ್ದ ಕಾಡು ಕೋಣ ಶಿವಮೊಗ್ಗಕ್ಕೆ ಕಳುಹಿಸುವಾಗ ಸಾವನಪ್ಪಿದೆ. ಕಳೆದ ವಾರ ಕಾಡು ಕೋಣ ಕಾಲು ಮುರಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಅದನ್ನು ಅರಣ್ಯ ಇಲಾಖೆಯವರು ರಕ್ಷಿಸುವ ಪ್ರಯತ್ನ ಮಾಡಿದ್ದರು. ಆಹಾರ ಸೇವಿಸಲಾಗದೇ ನರಳಾಡುತ್ತಿದ್ದ ಕಾಡು ಕೋಣಕ್ಕೆ ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಸಿಗಲಿಲ್ಲ. ಅದಾದ ನಂತರ ಕಾಡು ಕೋಣವನ್ನು ಶಿವಮೊಗ್ಗಕ್ಕೆ ಸಾಗಿಸುವ ಪ್ರಯತ್ನ ನಡೆದಿದ್ದು, ಅದು ಫಲ ಕೊಡದೇ ಸಾವನಪ್ಪಿದೆ. - [ಮಾರಿಜಾತ್ರೆಗೆ 65 ದಿನ ಮಾತ್ರ ಬಾಕಿ!](https://mobiletime.in/2025/12/only-65-days-left-until-marijatre/): ರಾಜ್ಯದ ಪ್ರಮುಖ ಶಕ್ತಿ ದೇವತೆಗಳಲ್ಲಿ ಒಂದಾದ ಶಿರಸಿಯ ಶ್ರೀ ಮಾರಿಕಾಂಬೆ ಜಾತ್ರೆಗೆ ದಿನಾಂಕ ನಿಗಧಿಯಾಗಿದೆ. ಫೆಬ್ರವರಿ 24ರಿಂದ ಮಾರ್ಚ 4ರವರೆಗೆ ಮಾರಿಕಾಂಬಾ ದೇವಿ ಜಾತ್ರೆ ನಡೆಯಲಿದೆ. ಶಿರಸಿ ಜಾತ್ರೆಗೆ ತನ್ನದೇ ಆದ ಹಿನ್ನಲೆಯಿದೆ. ಅತ್ಯಂತ ಸಾಂಪ್ರದಾಯಕವಾದ ಆಚರಣೆ ಜಾತ್ರೆಯ ಗಮನಸೆಳೆಯುತ್ತದೆ. ಹೀಗಾಗಿ ದೇಶ-ವಿದೇಶಗಳಿಂದ ಭಕ್ತರು ಈ ಜಾತ್ರೆಗೆ ಬರುತ್ತಾರೆ. ನಂಬಿ ಬಂದ ಭಕ್ತರಿಗೆ ಸಕಲ ರೀತಿಯಲ್ಲಿಯೂ ದೇವಿ ಒಳ್ಳೆಯದನ್ನು ಮಾಡುತ್ತದೆ ಎಂಬ ನಂಬಿಕೆಯಿದೆ. ನಿತ್ಯ ಸಾವಿರಾರು ಸಂಖ್ಯೆಯ ಜನ ಶಿರಸಿಗೆ ಬರುತ್ತಾರೆ. ಬಹುತೇಕರು ದೇವಿ ಆಲಯಕ್ಕೆ ಭೇಟಿ ನೀಡಿ ಪವಿತ್ರ ಸನ್ನಿಧಾನದ ಮಹಿಮೆಯನ್ನು ಅನುಭವಿಸುತ್ತಾರೆ. ಪುರಾತನ ವಿನ್ಯಾಸಗಳಿಂದ ಅಲಂಕೃತವಾದ ದೇವಾಲಯವನ್ನು ಕಣ್ತುಂಬಿಕೊAಡ ಭಕ್ತರು ಇಷ್ಟಾರ್ಥ ಸಿದ್ಧಿಗಾಗಿ ಪ್ರಾರ್ಥಿಸುತ್ತಾರೆ. ಶಿರಸಿ ಜಾತ್ರೆಯನ್ನು ಕರ್ನಾಟಕದ ಅತಿ ದೊಡ್ಡ ಜಾತ್ರೆ ಎಂದು ಬಣ್ಣಿಸಲಾಗುತ್ತದೆ. ಅತ್ಯಂತ ಪ್ರಸಿದ್ಧ ಜಾತ್ರೆ ಇದಾಗಿದ್ದು, ಜಾತ್ರೆ ಪೂರ್ವಭಾವಿಯಾಗಿ ಸಭೆ ನಡೆಸಿ ಸಿದ್ಧತೆಗಳ ಬಗ್ಗೆ ಚರ್ಚೆ ನಡೆಯುತ್ತದೆ. ಅದರಂತೆ ಭಾನುವಾರ ಮಾರಿಕಾಂಬಾ ದೇಗುಲದ ಸಭಾ ಮಂಟಪದಲ್ಲಿ ಈ ಸಭೆ ನಡೆದಿದ್ದು, ಈ ಸಭೆಯಲ್ಲಿ ಜಾತ್ರೆ ದಿನಾಂಕವನ್ನು ಅಧಿಕೃತವಾಗಿ ಘೋಷಿಸಲಾಗಿದೆ. ಜಾತ್ರಾ ಮೂಹೂರ್ತದಿಂದ ಹಿಡಿದು ದೇವಿ ಮರು ಪ್ರತಿಷ್ಠೆಯವರೆಗೆ ಸಭೆಯಲ್ಲಿ ವಿವರಿಸಲಾಗಿದೆ. ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಸಮ್ಮುಖದಲ್ಲಿ ಸಭೆ ನಡೆದಿದ್ದು, ಈ ಸಭೆಯಲ್ಲಿಯೇ ದೇಗುಲ ಆಡಳಿತ ಮಂಡಳಿಯವರು ಫೆಬ್ರವರಿ 24ರಿಂದ ಮಾರ್ಚ 4ರವರೆಗೆ ಜಾತ್ರೆ ನಡೆಸುವ ಬಗ್ಗೆ ಘೋಷಿಸಿದ್ದಾರೆ. - [ಹೊಳೆಗೆ ಬಿದ್ದ ಮೀನುಗಾರ: ರಕ್ತ ಹೆಪ್ಪುಗಟ್ಟಿ ಸಾವು!](https://mobiletime.in/2025/12/fisherman-who-fell-into-the-stream-died-of-blood-clot/): ಬೆಳಗ್ಗೆ ಬೇಗ ಎದ್ದು ಮೀನು ಹಿಡಿಯಲು ಹೋಗಿದ್ದ ಮನೋಹರ ಹರಿಕಂತ್ರ ಅವರು ನೀರಿಗೆ ಬಿದ್ದಿದ್ದು, ಅವರ ರಕ್ತ ಹೆಪ್ಪುಗಟ್ಟಿದೆ. ಐದು ಆಸ್ಪತ್ರೆ ತಿರುಗಾಟ ನಡೆಸಿದರೂ ಅವರನ್ನು ಬದುಕಿಸಿಕೊಳ್ಳಲು ಆಗಲಿಲ್ಲ. ಕುಮಟಾ ಹಿರೇಗುತ್ತಿಯ ನುಶೀಕೋಟೆಯಲ್ಲಿ ಮನೋಹರ ಹನುಮಾ ಹರಿಕಂತ್ರ (52) ಅವರು ವಾಸವಾಗಿದ್ದರು. ನವೆಂಬರ್ 15ರ ಬೆಳಗ್ಗೆ ನುಶೀಕೋಟೆ ಸಮೀಪದ ಹೊಳೆಯಲ್ಲಿ ಅವರು ಮೀನುಗಾರಿಕೆಗೆ ಹೋಗಿದ್ದರು. ಬಲೆ ಹಾಕಿ ಕಾಯುತ್ತಿದ್ದಾಗ ಆಯ ತಪ್ಪಿ ಅವರು ಹೊಳೆಗೆ ಬಿದ್ದರು. ಅಸ್ವಸ್ಥರಾದ ಮನೋಹರ ಹರಿಕಂತ್ರ ಅವರನ್ನು ಕುಮಟಾ ಆಸ್ಪತ್ರೆಗೆ ದಾಖಲಿಸಲಾಯಿತು. ಅಲ್ಲಿಂದ ಅವರನ್ನು ಮಣಿಪಾಲ್ ಆಸ್ಪತ್ರೆಗೆ ಕರೆದೊಯ್ಯಲಾಯಿತು. ನಂತರ ಇನ್ನೂ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಎಜೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಯಿತು. `ತಲೆಯಲ್ಲಿ ರಕ್ತ ಹೆಪ್ಪುಗಟ್ಟಿದೆ’ ಎಂದ ವೈದ್ಯರು ಅವರನ್ನು ಮತ್ತೆ ಬೇರೆ ಕಡೆ ಕರೆದೊಯ್ಯುವಂತೆ ಸೂಚಿಸಿದರು. ಹೀಗಾಗಿ ಕುಟುಂಬದವರು ಮನೋಹರ ಹರಿಕಂತ್ರ ಅವರನ್ನು ಕಾರವಾರ ಜಿಲ್ಲಾ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ಕೊಡಿಸಿದರು. ಅಲ್ಲಿಯೂ ಆರೋಗ್ಯದಲ್ಲಿ ಚೇತರಿಕೆ ಕಾಣದ ಕಾರಣ ಮತ್ತೆ ಕುಮಟಾ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದರು. ಒಂದುವರೆ ತಿಂಗಳ ಕಾಲ ನರಳಾಟ ನಡೆಸಿದ ಮನೋಹರ ಹರಿಕಂತ್ರ ಅವರು ಡಿಸೆಂಬರ್ 18ರಂದು ಸಾವನಪ್ಪಿದರು. ಕುಮಟಾ ಹಿರೇಗುತ್ತಿಯ ವಿನೋದ ಕೃಷ್ಣ ಹರಿಕಂತ್ರ ಅವರು ಈ ಮಾಹಿತಿ ತಿಳಿಸಿದರು. - [ದೇಗುಲದ ಹಿಂದೆಯೇ ಅಗ್ನಿಗಾಹುತಿ: ಮಹಿಳೆಯ ಸಜೀವ ದಹನ!](https://mobiletime.in/2025/12/fire-breaks-out-behind-temple-woman-burned-alive/): ಹೊಟ್ಟೆ ನೋವು ಸಹಿಸಿಕೊಳ್ಳಲು ಆಗದ ಮಹಿಳೆಯೊಬ್ಬರು ಮೈಮೇಲೆ ಸೀಮೆ ಎಣ್ಣೆ ಸುರಿದುಕೊಂಡು ಅಗ್ನಿಗೆ ಆಹುತಿಯಾಗಿದ್ದಾರೆ. ಕುಟುಂಬದವರು ನೋಡುವುದರೊಳಗೆ ದೇವಿ ಗೊಂಡ ಅವರು ಬೂದಿಯಾಗಿದ್ದಾರೆ. ಭಟ್ಕಳದ ತೆಂಗಿನಗುoಡಿ ಬಳಿಯ ಜಟಗೇಶ್ವರ ದೇವಾಲಯ ಸಮೀಪ ದೇವಿ ಕೃಷ್ಣ ಗೊಂಡ (52) ಅವರು ವಾಸವಾಗಿದ್ದರು. ಕೂಲಿ ಕೆಲಸ ಮಾಡಿಕೊಂಡಿದ್ದ ಅವರು ಕುಟುಂಬ ಅದೇ ಆದಾಯದಲ್ಲಿ ಕುಟುಂಬ ನಡೆಸುತ್ತಿದ್ದರು. ಈಚೆಗೆ ಅವರಿಗೆ ಹೊಟ್ಟೆ ನೋವು ಕಾಣಿಸಿಕೊಂಡಿದ್ದು, ಎಲ್ಲಿ ತೋರಿಸಿದರೂ ಗುಣಮುಖವಾಗಿರಲಿಲ್ಲ. ಅದೇ ನೋವಿನಲ್ಲಿದ್ದ ದೇವಿ ಗೊಂಡ ಅವರು 15 ದಿನದ ಹಿಂದೆಯೇ ಮನೆ ಮುಂದಿನ ಬಾವಿಗೆ ಹಾರಿದ್ದರು. ತಕ್ಷಣ ಕುಟುಂಬದವರು ಅವರನ್ನು ರಕ್ಷಿಸಿ ಜೀವ ಕಾಪಾಡಿದ್ದರು. ಅದಾದ ನಂತರವೂ ದೇವಿ ಗೊಂಡ ಅವರು ವಿವಿಧ ಬಗೆಯ ಚಿಕಿತ್ಸೆಗೆ ಒಳಗಾಗಿದ್ದರು. ಆದರೆ, ಅವರ ಹೊಟ್ಟೆ ನೋವು ಮಾತ್ರ ಕಡಿಮೆ ಆಗಿರಲಿಲ್ಲ. ಡಿಸೆಂಬರ್ 19ರಂದು ಜಟಗೇಶ್ವರ ದೇವಾಲಯ ಹಿಂದೆ ಹೋದ ದೇವಿ ಗೊಂಡ ಅವರು ಮೈಮೇಲೆ ಸೀಮೆ ಎಣ್ಣೆ ಸುರಿದುಕೊಂಡರು. ಅದಾದ ನಂತರ ಬೆಂಕಿ ಹಚ್ಚಿಕೊಂಡು ನರಳಾಟ ನಡೆಸಿ ಸಾವನಪ್ಪಿದರು. ಅನಪಾಲ್ ಸೂಪರ್ ಮಾರ್ಟನಿಲ್ಲಿ ಕೆಲಸ ಮಾಡುವ ಮಗಳು ಹೇಮಲತ ಗೊಂಡ ಅವರು ಬಂದು ನೋಡುವಷ್ಟರಲ್ಲಿ ದೇವಿ ಗೊಂಡ ಅವರು ಬೂದಿಯಾಗಿದ್ದರು. `ಆತ್ಮಹತ್ಯೆ ಅಪರಾಧ’ - [ಶಿರಸಿ ಸುತ್ತಾಡಿದ ಶಂಕಿತರು!](https://mobiletime.in/2025/12/suspects-roaming-around-sirsi/): ಶಿರಸಿಗೆ ಬಂದಿದ್ದ ಶಂಕಿತರನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ. ವಸತಿಗೃಹದಲ್ಲಿ ವಾಸವಾಗಿದ್ದ ಅವರ ಬಗ್ಗೆ ಜನರಲ್ಲಿಯೂ ಸಾಕಷ್ಟು ಅನುಮಾನ ವ್ಯಕ್ತವಾಗಿದ್ದು, ಪೊಲೀಸರು ಸತ್ಯಾಸತ್ಯತೆಯ ಶೋಧ ನಡೆಸುತ್ತಿದ್ದಾರೆ. ಜಮ್ಮು ಕಾಶ್ಮೀರ ನೋಂದಣಿಯ ವಾಹನವೊಂದು ಶುಕ್ರವಾರ ಶಿರಸಿ ಹಾಗೂ ಸುತ್ತಲಿನ ಪ್ರದೇಶದಲ್ಲಿ ಓಡಾಡುತ್ತಿತ್ತು. ನಾಲ್ಕೆöÊದು ಜನರ ತಂಡದ ಮೇಲೆ ಜನ ಅನುಮಾನವ್ಯಕ್ತಪಡಿಸಿದರು. ಭಾಷೆ ಬಾರದ ಹಾಗೂ ಸ್ಥಳೀಯರಲ್ಲದವರ ಓಡಾಟದಿಂದ ಜನ ಕಂಗಾಲಾಗಿದ್ದು, ಪೊಲೀಸರಿಗೆ ಮಾಹಿತಿ ನೀಡಿದರು. ಪೊಲೀಸರು ವಾಹನ ಬೆನ್ನತ್ತಿದಾಗ ಆ ತಂಡದವರು ಗ್ರಾಮೀಣ ಭಾಗ ಬಿಟ್ಟು ನಗರ ಪ್ರವೇಶಿಸಿದರು. ರಾತ್ರಿ ವೇಳೆ ಆ ವಾಹನ ವಸತಿಗೃಹವೊಂದರ ಮುಂದೆ ಅದು ನಿಂತಿರುವುದು ಗೊತ್ತಾಯಿತು. ವಸತಿಗೃಹ ಪ್ರವೇಶಿಸಿದ ಪೊಲೀಸರು ಅಲ್ಲಿದ್ದವರ ವಿಚಾರಣೆ ನಡೆಸಿದರು. ವಿಚಾರಣೆ ಅವಧಿಯಲ್ಲಿ ಅವರು ತಮ್ಮನ್ನು ವ್ಯಾಪಾರಿಗಳು ಎಂದು ಹೇಳಿಕೊಂಡಿದ್ದಾರೆ. ಈ ನಡುವೆ `ಕಾಶ್ಮಿರದ ಉಗ್ರರು ಶಿರಸಿಗೆ ಬಂದಿದ್ದಾರೆ’ ಎಂಬ ವದಂತಿ ಹಬ್ಬಿದ್ದು, ಅಧಿಕೃತ ಮಾಹಿತಿಗಳು ಅದನ್ನು ಅಲ್ಲಗಳೆದಿವೆ. - [ಕರಾವಳಿ ಉತ್ಸವ: ಯಾವ ದಿನ? ಯಾವ ಕಾರ್ಯಕ್ರಮ?](https://mobiletime.in/2025/12/coastal-festival-what-day-what-program/): ಕರಾವಳಿ ಉತ್ಸವ 2025ರ ಅಂಗವಾಗಿ ಡಿ 22 ರಂದು ಮಧ್ಯಾಹ್ನ 4 ಗಂಟೆಗೆ ಸುಭಾಷಚಂದ್ರ ವೃತ್ತದಿಂದ ಮಯೂರ ವರ್ಮ ವೇದಿಕೆಯವರೆಗೆ 14 ಕಲಾ ತಂಡಗಳಿoದ ಮೆರವಣಿಗೆ ಹಾಗೂ ಮೀನುಗಾರರ ಲಾಟೀನು ಪ್ರದರ್ಶನ ಹಾಗೂ ಶಂಕರ ಮಹಾದೇವನ್ ಅವರಿಂದ ಸಂಗೀತ ಕಾರ್ಯಕ್ರಮ ನಡೆಯಲಿದೆ. ಡಿ 23ರಂದು ಮಧ್ಯಾಹ್ನ 12 ಗಂಟೆಗೆ ಛಾಯಾಚಿತ್ರ ಹಾಗೂ ರೀಲ್ಸ್ ಪ್ರದರ್ಶನ, ಸಂಜೆ 5.30 ಗಂಟೆಯಿoದ ಶ್ರೀ ಬ್ರಹ್ಮದೇವ ಗುಮಟಾ ಪಾಂಗ್ ಕಲಾ ತಂಡದಿAದ ಗುಮಟಾ ಪಾಂಗ್ ವಾದ್ಯ ಪ್ರದರ್ಶನ, ಸುನೀಲ್ ಬಾರ್ಕೂರ ಅವರಿಂದ ಸಂಗೀತ ಕಾರ್ಯಕ್ರಮ, ಸುಮಂಗಲಾ ದೇಸಾಯಿ ಮತ್ತು ಸಂಗಡಿಗರಿAದ ಸುಗಮ ಸಂಗೀತ ಮತ್ತು ಜಾನಪದ ಗೀತೆ, ಕಲಾ ಭಾರತಿ, ಕಲಾ ವೈವಿಧ್ಯ ತಂಡದ ಮನೋಜ ಅ. ಪಾಲೇಕರ ಅವರಿಂದ ರೂಪಕ ಗೊಂಬೆಯಾಟ ಮಿಮಿಕ್ರಿ, ಸುಜಾತಾ ಕೆ ಹರಿಕಂತ್ರ ಅವರಿಂದ ಯೋಗ ನೃತ್ಯ, ಸ್ವರ ಸಂಗೀತ ರಸಮಂಜರಿ ತಂಡದಿoದ ಸಂಗೀತ ರಸಮಂಜರಿ ಹಾಗೂ ಗುರುಕಿರಣ್ ಅವರಿಂದ ಸಂಗೀತ ಕಾರ್ಯಕ್ರಮ ನಡೆಯಲಿದೆ. ಡಿ 24ರಂದು ಬೆಳಗ್ಗೆ 9 ಗಂಟೆಗೆ ಹೊಸ ಜಿಲ್ಲಾಧಿಕಾರಿ ಕಚೇರಿಯಲ್ಲಿ ರಂಗೋಲಿ ಸ್ಪರ್ಧೆ, ಮಾಲಾದೇವಿ ಮೈದಾನದಲ್ಲಿ ಅಡುಗೆ ಸ್ಪರ್ಧೆ ಸಂಜೆ 5.30 ಗಂಟೆಯಿAದ ಎ2 ಮ್ಯೂಸಿಕ್ ಸ್ಟಾರ್ ತಂಡದಿoದ ಸಂಗೀತ ಕಾರ್ಯಕ್ರಮ, ನಾಟ್ಯರಂಭ ನೃತ್ಯ ಸಂಸ್ಥೆಯ ಅಭಿಷೇಕ್ ಜಿ ನೇತ್ರೇಕರ ಅವರಿಂದ ನೃತ್ಯ, ಕುಮಾರ ಮಹಾತ್ಮ ಎಮ್ ಜೈನ್ ಅವರಿಂದ ಪೌರಾಣಿಕ ಕತೆ, ಚಿದಂಬರ್ ರಾಮಪ್ಪ ನಾಯ್ಕ ಅವರಿಂದ ಯಕ್ಷಗಾನ ಪ್ರದರ್ಶನ, ಭಾವೈಕ್ಯತೆ ಡೊಳ್ಳಿನ ಪದ ತಂಡದ ಇಮಾಮಸಾಬ್ ಎಂ ವಲ್ಲಪ್ಪನವರ ಅವರಿಂದ ಡೊಳ್ಳಿನ ಪದ, ಕಲ್ಪನಾ ರಶ್ಮಿ ಕಲಾಲೋಕ ತಂಡದಿAದ ನೃತ್ಯ ಹಾಗೂ ಸೋನು ನಿಗಮ್ ಅವರಿಂದ ಸಂಗೀತ ಕಾರ್ಯಕ್ರಮ ನಡೆಯಲಿದೆ. ಡಿ 25ರಂದು ಮಧ್ಯಾಹ್ನ 3 ಗಂಟೆಗೆ ರವೀಂದ್ರನಾಥ ಠಾಗೋರ್ ಕಡಲ ತೀರದಲ್ಲಿ ಗಾಳಿಪಟ ಮತ್ತು ಮರಳು ಕಲೆ, ಸಂಜೆ 5.30 ಗಂಟೆಯಿAದ ನೃತ್ಮಾಮೃತ ಕಲಾ ಕೇಂದ್ರದಿoದ ನೃತ್ಯ, ಮೇದಾ ಭಟ್ಟ ಅವರಿಂದ ಶಾಸ್ತಿಯ ಸಂಗೀತ, ನಾಣ್ಯರಾಣಿ ಭರತನಾಟ್ಯ ನೃತ್ಯ ಕಲಾ ಕೇಂದ್ರ ಸಮಿತಿಯ ನಾಗವೇಣಿ ಎಂ ಹೆಗಡೆ ಅವರಿಂದ ಭರತನಾಟ್ಯ, ವೈಶಾಲಿ ಮಾಂಜ್ರೇಕರ ಅವರಿಂದ ಸಂಗೀತ, ಸ್ಟಾರ್‌ಚಾಯ್ಸ್ ನೃತ್ಯ ಕಲಾ ತಂಡದಿAದ ನೃತ್ಯ, ರಪ್ತಾರ್ ಅವರಿಂದ ಸಂಗೀತ ಕಾರ್ಯಕ್ರಮ ನಡೆಯಲಿದೆ. ಡಿ 26ರಂದು ಬೆಳಗ್ಗೆ 7 ಗಂಟೆಗೆ ಕರಾವಳಿ ಉತ್ಸವ ವೇದಿಕೆಯಿಂದ ಮೂರು ವಿಭಾಗಳಲ್ಲಿ 21 ಕಿ.ಮೀ (ಪುರುಷ/ಮಹಿಳೆ), 10 ಕಿ.ಮೀ (ಪುರುಷ/ಮಹಿಳೆ), 5 ಕಿ.ಮೀ (ಪುರುಷ/ಮಹಿಳೆ )ಕರಾವಳಿ ರನ್ ಮ್ಯಾರಾಥನ್, ಸಂಜೆ 5.30 ಗಂಟೆಯಿoದ ಕವಿಗೋಷ್ಠಿ, ಲಾವಣಿ ನೃತ್ಯ ಹಾಗೂ ರಾಜೇಶ ಕೃಷ್ಣನ್‌ಅವರಿಂದ ಸಂಗೀತ ಕಾರ್ಯಕ್ರಮ ನಡೆಯಲಿದೆ. ಡಿ 27 ರಂದು ಬೆಳಗ್ಗೆ 9 ಗಂಟೆಗೆ ಮಾಲಾದೇವಿ ಮೈದಾನದಲ್ಲಿ ಶ್ವಾನ ಪ್ರದರ್ಶನ, ಸಂಜೆ 5.30 ಗಂಟೆಯಿAದ ಓಶಿಯನ್ ಹಾರ್ಟ ಬ್ರೇಕರ್ಸ್ ಡಾನ್ಸ್ ಗ್ರೂಪ್ ನ ಜಗದೀಶ ಎಂ ಗೌಡ ಅವರಿಂದ ನೃತ್ಯ ಪ್ರದರ್ಶನ, ದೀಶಾ ಹರಿಕಂತ್ರ ಮತ್ತು ಶಿಲ್ಪಾ ನಾಯ್ಕ ಅವರಿಂದ ನೃತ್ಯ ಪ್ರದರ್ಶನ, ಚಿತ್ರಲೇಖಾ ಮಂಜುನಾಥ ನಾಯ್ಕ ಅವರಿಂದ ಹಿಂದೂಸ್ಥಾನಿ ಶಾಸ್ತಿಯ ಕೊಳಲು ವಾದನ, ದಿಪ್ತಿ ಅರ್ಗೇಕರ ಅವರಿಂದ ಸುಗಮ ಸಂಗೀತ, ಶ್ರೇಯಾ ಅಭಿವೃದ್ಧಿ ಟ್ರಸ್ ಅವರಿಂದ ಯಕ್ಷಗಾನ ನೃತ್ಯ, ದರ್ಶಿನಿ ಪ್ರಶಾಂತ ಶೆಟ್ಟಿ ಮತ್ತು ವರ್ಷಿಣಿ ಪ್ರಶಾಂತ ಶೆಟ್ಟಿ ಅವರಿಂದ ಸುಗಮ ಸಂಗೀತ ಹಾಗೂ ಮಹಮ್ಮದ್ ದಾನೀಶ್ ಅವರಿಂದ ಸಂಗೀತ ಕಾರ್ಯಕ್ರಮ ನಡೆಯಲಿದೆ. ಡಿ 28ರಂದು ಬೆಳಗ್ಗೆ 9 ಗಂಟೆಗೆ ರವೀಂದ್ರನಾಥ ಠಾಗೋರ್ ಕಡಲ ತೀರದಲ್ಲಿ ಹಗ್ಗ ಜಗ್ಗಾಟ, ವಾಲಿಬಾಲ್ ಪಂದ್ಯಾವಳಿ ಮತ್ತು ಮದ್ಯಾಹ್ನ 3 ಗಂಟೆಗೆ ಅಲಿಗದ್ದಾ ತೀರದಿಂದ ರವೀಂದ್ರನಾಥ ಠಾಗೋರ್ ಕಡಲ ತೀರದ ವರೆಗೆ ದೋಣಿ ಸ್ಪರ್ಧೆ, ಸಂಜೆ ಕಾರ್ಯಕ್ರಮದ ಸಮಾರೋಪ ಸಮಾರಂಭ ಹಾಗೂ ದಲೇರ್ ಮೆಹಂದಿ ಅವರಿಂದ ಸಂಗೀತ ಕಾರ್ಯಕ್ರಮ ನಡೆಯಲಿದೆ. - [ಸ್ಕೋಡ್ ವೆಸ್'ನಿಂದ ಆರೋಗ್ಯ ಮೇಳ](https://mobiletime.in/2025/12/health-fair-from-schod-wes/): ಮಕ್ಕಳ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ಶಿರಸಿಯ ಸ್ಕೋಡ್‌ವೆಸ್ ಸಂಸ್ಥೆ ಬಾಲ ಆರೋಗ್ಯ ಮೇಳ ನಡೆಸಿದೆ. ಅದರ ಅಂಗವಾಗಿ ಮಕ್ಕಳಿಗೆ ಆಟ,  ಓಟ,ದ ಸ್ಪರ್ಧೆಯನ್ನು ಮಾಡಿದೆ. ಶಿರಸಿ ನಗರದ ಎಮ್ ಇ ಎಸ್ ಪ್ರೌಢಶಾಲೆಯಲ್ಲಿ ಸ್ಕೊಡ್‌ವೆಸ್ ಸಂಸ್ಥೆ ಹಾಗೂ ಗುಜರಾತ್ ದೇಸಾಯಿ ಫೌಂಡೇಶನ್ ಟ್ರಸ್ಟ್ ಸಹಯೋಗದಲ್ಲಿ ನಡೆದ ಬಾಲ ಆರೋಗ್ಯ ಮೇಳವನ್ನು ಹಂಪಿ ಕನ್ನಡ ವಿಶ್ವ ವಿದ್ಯಾಲಯದ ವಿಶ್ರಾಂತ ಕುಲಪತಿ ಹಿ ಚಿ ಬೋರಲಿಂಗಯ್ಯ ಅವರು ಉದ್ಘಾಟಿಸಿದ್ದಾರೆ. `ಆರೋಗ್ಯವಂತ ಮಕ್ಕಳೇ ಉತ್ತಮ ಸಮಾಜದ ಆಸ್ತಿ’ ಎಂದವರು ಅಭಿಪ್ರಾಯಪಟ್ಟಿದ್ದಾರೆ. `ಅತೀ ಹೆಚ್ಚು ಮೊಬೈಲ್ ಬಳಕೆಯಿಂದ ಮಕ್ಕಳಲ್ಲಿ ಸೃಜನಶೀಲ ವ್ಯಕ್ತಿತ್ವ ಕ್ಷೀಣಿಸುತ್ತಿದೆ. ಮಕ್ಕಳು ಗಂಭೀರವಾದ ಮನೋದೈಹಿಕ ಖಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ. ಒತ್ತಡವಿಲ್ಲದ ಶಿಕ್ಷಣ ಮಾನಸಿಕ, ದೈಹಿಕ ಸದೃಢತೆಗೆ ಅಗತ್ಯವಿರುವ ಕ್ರೀಡೆ ಹಾಗೂ ಸಕಾಲದಲ್ಲಿ ಅಗತ್ಯವಿರುವ ಆರೋಗ್ಯ ಸೌಲಭ್ಯಗಳನ್ನು ಒದಗಿಸುತ್ತದೆ’ ಎಂದವರು ಹೇಳಿದ್ದಾರೆ. ಎಂ ಇ ಎಸ್ ಶಾಲೆಯ ಮುಖ್ಯೋಪಾಧ್ಯಾಪಕಿ ಜ್ಯೋತಿ ಪೆಡ್ನೆಕರ್, ಸ್ಕೊಡ್‌ವೇಸ್ ಸಂಸ್ಥೆಯ ಕಾರ್ಯಕ್ರಮ ಅಧಿಕಾರಿ ನಾರಾಯಣ ಹೆಗಡೆ ಹಾಗೂ ವೈದ್ಯಾಧಿಕಾರಿ ಡಾ ರಿತಿಕ್ ಅವರು ಕಾರ್ಯಕ್ರಮದಲ್ಲಿ ಮಾತನಾಡಿದ್ದಾರೆ. ಸ್ಕೊಡ್‌ವೆಸ್ ಸಂಸ್ಥೆಯ ಕಾರ್ಯದರ್ಶಿ ಸರಸ್ವತಿ ಎನ್ ರವಿ ಅವರು ಅಧ್ಯಕ್ಷತೆವಹಿಸಿದ್ದು, ಮಕ್ಕಳ ಜೊತೆ ಅವರು ಬೆರೆತರು. ಆರೋಗ್ಯ ಮೇಳದಲ್ಲಿ ಎಂ ಇ ಎಸ್ ಶಾಲೆಯ ವಿದ್ಯಾರ್ಥಿಗಳ ಜೊತೆ ತೇಲಂಗ ಪ್ರೌಢಶಾಲೆಯ ವಿದ್ಯಾರ್ಥಿಗಳು, ಶಾಸಕರ ಮಾದರಿ ಶಾಲೆ ನಂ 3 ಶಾಲೆಯ ವಿದ್ಯಾರ್ಥಿಗಳು ಸೇರಿ 700ಕ್ಕೂ ಅಧಿಕ ಜನ ಭಾಗವಹಿಸಿದ್ದರು. ಆರೋಗ್ಯ ಮೇಳದಲ್ಲಿ ವಿಜ್ಞಾನ ವಸ್ತು ಪ್ರದರ್ಶನ, ವಿವಿಧ ಕ್ರೀಡಾ ಸ್ಫರ್ಧೆಗಳು ಮನಸೆಳೆದವು. ಶಾಲಾ ವಿದ್ಯಾರ್ಥಿಗಳಿಗೆ ನುರಿತ ವೈದ್ಯರಿಂದ ಹಿಮೋಗ್ಲೋಬಿನ್ ಪರೀಕ್ಷೆ ಹಾಗೂ ಸಾಮಾನ್ಯ ಆರೋಗ್ಯ ತಪಾಸಣೆ ನಡೆಯಿತು. - [ಹಂಗಾಮಿ ಲಾಗಣಿಗೆ ಹಕ್ಕಿಲ್ಲ!](https://mobiletime.in/2025/12/no-right-to-temporary-employment/): ಕೃಷಿ ಹಾಗೂ ಅರಣ್ಯೇತರ ಉದ್ದೇಶಕ್ಕಾಗಿ ಸರ್ಕಾರ ನೀಡಿದ ಹಂಗಾಮಿ ಲಾಗಣಿ ಮೇಲೆ ರೈತರಿಗೆ ಇನ್ಮುಂದೆ ಯಾವುದೇ ಹಕ್ಕಿಲ್ಲ. ಹೀಗಾಗಿ ಆ ಭೂಮಿಯನ್ನು ಅವರು ಸರ್ಕಾರಕ್ಕೆ ಮರಳಿಸುವುದು ಅನಿವಾರ್ಯವಾಗಿದ್ದು, ಆ ಪ್ರದೇಶದಲ್ಲಿ ಗಿಡ ನಾಟಿ ಮಾಡುವಂತೆ ಸುಪ್ರೀಂ ಕೋರ್ಟು ಸೂಚಿಸಿದೆ. ಅರಣ್ಯ ಸಂರಕ್ಷಣಾ ಕಾಯಿದೆ 1980 ಜಾರಿಗೆ ಬರುವ ಪೂರ್ವದಲ್ಲಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಸಹಸ್ರಾರು ಅರಣ್ಯವಾಸಿಗಳ ಕುಟುಂಬಕ್ಕೆ ಕೃಷಿ ಚಟುವಟಿಕೆಗೆ ಉದ್ದೇಶಿಸಿ ಹಂಗಾಮಿ ಲಾಗಣಿ ಭೂಮಿ ನೀಡಲಾಗಿತ್ತು. ಆ ವೇಳೆ ಕೆಲವು ವರ್ಷಕ್ಕೆ ಮಾತ್ರ ಲಾಗಣಿ ನೀಡಲಾಗಿದ್ದು, ಅವಧಿ ಮುಗಿದ ನಂತರವೂ ಅಲ್ಲಿ ಜನ ಸಾಗುವಳಿ ಮಾಡಿಕೊಂಡಿದ್ದರು. ಅರಣ್ಯ ಸಂರಕ್ಷಣಾ ಕಾಯಿದೆ ಜಾರಿಗೆ ಬಂದ ನಂತರ ರಾಜ್ಯ ಸರ್ಕಾರ ಕೇಂದ್ರ ಸರ್ಕಾರ ಪೂರ್ವಾನುಮತಿ ಪಡೆಯದೇ ಇರುವುದು ಹಾಗೂ ಲಾಗಣಿ ಅವಧಿ ಮುಗಿದ ನಂತರವೂ ಸಾಗುವಳಿ ನಡೆದಿರುವುದನ್ನು ಸುಪ್ರೀಂ ಕೋರ್ಟು ಗಮನಿಸಿದೆ. ಈ ಹಿನ್ನಲೆ `ಕೇಂದ್ರ ಸರ್ಕಾರದ ಅನುಮತಿ ಇಲ್ಲದೇ ಹಂಗಾಮಿ ಲಾಗಣಿ ಭೂಮಿಯಲ್ಲಿ ಸಾಗುವಳಿ ಮಾಡುವುದು ಕಾನೂನುಬಾಹಿರ’ ಎಂದು ಸುಪ್ರೀಂ ಕೋರ್ಟ ಆದೇಶ ನೀಡಿದೆ. ಸುಪ್ರಿಂ ಕೊರ್ಟನ ನ್ಯಾಯಮೂರ್ತಿ ವಿಕ್ರಮ್ ನಾಥ ಮತ್ತು ಸಂದೀಪ್ ಮೆಹತಾ ಅವರ ದ್ವೀ ಸದಸ್ಯತ್ವ ಪೀಠ ಡಿ 18ರಂದು ಕಲಘಟಗಿಯ ಗಾಂಧಿ ಜೀವನ್ ಸಾಮುಹಿಕ ಕೃಷಿ ಸಹಕಾರಿ ಸಂಘಕ್ಕೆ ಕೃಷಿ ಚಟುವಟಿಕೆಗೆ ಅರಣ್ಯ ಭೂಮಿ ಹಂಗಾಮಿ ಲಾಗಣಿ ನೀಡಿದ ವಿಷಯವಾಗಿ ಈ ಆದೇಶ ಮಾಡಿದೆ. ಕೃಷಿ ಸಾಗುವಳಿಗೆ ಮುಂದುವರೆಸುವ ಕುರಿತು ಸಲ್ಲಿಸಿದ ಮೇಲ್ಮನವಿ ಅರ್ಜಿಯನ್ನು ವಜಾ ಮಾಡಿದೆ. `ಅರಣ್ಯ ಭೂಮಿಯನ್ನು ಕೃಷಿ ಮತ್ತು ಅರಣ್ಯೇತರ ಉದ್ದೇಶಗಳಿಗೆ ಬಳಸಲು ಸಾಧ್ಯವಿಲ್ಲ’ ಎಂದು ಸುಪ್ರೀಂ ಕೊರ್ಟ ಪುನರುಚ್ಚರಿಸಿದೆ. `ಅರಣ್ಯ ಭೂಮಿಯನ್ನು ಕೃಷಿ ಚಟುವಟಿಕೆ ನೀಡುವುದು ಸರಿಯಲ್ಲ. ಇದರಿಂದ ಅರಣ್ಯ ಸಾಂದ್ರತೆ ಕಡಿಮೆ ಆಗಲಿದೆ’ ಎಂದು ನ್ಯಾಯಾಲಯ ಹೇಳಿದೆ. ಈ ಬಗ್ಗೆ ನ್ಯಾಯವಾದಿ ರವೀಂದ್ರ ನಾಯ್ಕ ಅವರು ಮಾಹಿತಿ ನೀಡಿದ್ದು, `ಕಲಘಟಗಿ ತಾಲೂಕಿನ ಬೆಣಚಿ ಮತ್ತು ತಮಾರಿಕೊಪ್ಪ ಗ್ರಾಮದಲ್ಲಿ 1976ರಲ್ಲಿ 134 ಎಕರೆ ಅರಣ್ಯ ಭೂಮಿಯನ್ನು 10 ವರ್ಷಕ್ಕೆ ಗಾಂಧಿ ಜೀವನ್ ಸಮೂಹ ರೈತರ ಸಂಸ್ಥೆಗೆ ನೀಡಲಾಗಿತ್ತು. ಆ ಭೂಮಿಯ ಗುತ್ತಿಗೆ ಮುಂದುವರೆಸಬೇಕೆoಬ ಪ್ರಕರಣದಲ್ಲಿ ಸರ್ಕಾರ ಈ ಆದೇಶ ಮಾಡಿದೆ’ ಎಂದು ವಿವರಿಸಿದ್ದಾರೆ. ಇದರಿಂದ ಅರಣ್ಯವಾಸಿಗಳಿಗೆ ಇನ್ನಷ್ಟು ಆತಂಕ ಎದುರಾಗಿದೆ ಎಂದವರು ಹೇಳಿದ್ದಾರೆ. - [ಕಾಲೇಜು ಕ್ಯಾಂಟೀನ್: ಬನ್ಸು-ಬಾಜಿಗೆ ಮನಸೋತ ಶಾಸಕ!](https://mobiletime.in/2025/12/college-canteen-mla-loses-his-mind-over-bansu-baji/): ಕುಮಟಾ ಶಾಸಕ ದಿನಕರ ಶೆಟ್ಟಿ ಅವರು ನೆಲ್ಲಿಕೇರಿಯಲ್ಲಿರುವ ಹನುಮಂತ ಬೆಣ್ಣೆ ಸರ್ಕಾರಿ ಪಿಯು ಕಾಲೇಜಿಗೆ ಭೇಟಿ ನೀಡಿದ್ದು, ಅಲ್ಲಿನ ಕ್ಯಾಂಟೀನಿನಲ್ಲಿ ಬನ್ಸು-ಬಾಜಿ ಸೇವಿಸಿದ್ದಾರೆ. ಕಾಲೇಜಿನಲ್ಲಿ ಶನಿವಾರ ನೂತನವಾಗಿ ಕ್ಯಾಂಟೀನ್ ಶುರು ಮಾಡಲಾಗಿದ್ದು, ಅದನ್ನು ದಿನಕರ ಶೆಟ್ಟಿ ಅವರು ಉದ್ಘಾಟಿಸಿದರು. ಅದಾದ ನಂತರ ಅಲ್ಲಿ ತಯಾರಿಸಿದ ತಿಂಡಿಗಳನ್ನು ಗಮನಿಸಿ ಬನ್ಸು-ಬಾಜಿ ಆರ್ಡರ್ ಮಾಡಿದರು. ಇದಕ್ಕೂ ಮುನ್ನ ದಿನಕರ ಶೆಟ್ಟಿ ಮಕ್ಕಳಿಗೆ ತಿನಿಸುಗಳನ್ನು ಕೊಟ್ಟರು. `1800 ವಿದ್ಯಾರ್ಥಿಗಳಿರುವ ಕಾಲೇಜಿಗೆ ಕ್ಯಾಂಟೀನ್ ಅಗತ್ಯವಿರುವ ಬಗ್ಗೆ ಪ್ರಾಚಾರ್ಯರು ಹೇಳಿದ್ದರು. ದೂರ ದೂರ ಪ್ರದೇಶದಿಂದ ಮಕ್ಕಳು ಇಲ್ಲಿ ಬರುತ್ತಿದ್ದು, ಅವರಿಗೆ ಈ ಕ್ಯಾಂಟೀನ್ ಅನುಕೂಲ ಆಗಲಿದೆ’ ಎಂದು ದಿನಕರ ಶೆಟ್ಟಿ ಅವರು ಹೇಳಿದರು. `ಕೃಷಿ ಇಲಾಖೆ ಕಟ್ಟಡ ಕಾಲಿಯಿರುವುದನ್ನು ಗಮನಿಸಿ ಅಲ್ಲಿ ಕ್ಯಾಂಟೀನ್ ಶುರು ಮಾಡಲಾಗಿದೆ. ಹಸಿದ ಹೊಟ್ಟೆಯಲ್ಲಿ ಕಲಿಕೆ ಸಾಧ್ಯವಿಲ್ಲ ಎಂದು ಅರಿತು ಉಪಹಾರ ವ್ಯವಸ್ಥೆ ಶುರು ಮಾಡಲಾಗಿದ್ದು, ಗುಣಮಟ್ಟದ ತಿಂಡಿ-ತಿನಿಸುಗಳು ಇಲ್ಲಿ ಸಿಗಬೇಕು’ ಎಂದವರು ತಾಕೀತು ಮಾಡಿದರು. ಕಾಲೇಜಿನ ಪ್ರಾಚಾರ್ಯ ಸತೀಶ ನಾಯ್ಕ, ಸಮಿತಿ ಉಪಾಧ್ಯಕ್ಷ ನಿತ್ಯಾನಂದ ನಾಯ್ಕ ಇತರರು ಶಾಸಕರ ಜೊತೆ ತಿಂಡಿ ಸೇವಿಸಿದರು. - [ಆಹಾರ ಸೇವಿಸದೇ ಸಾವನಪ್ಪಿದ ಜಿಪಿಎಸ್ ಹಕ್ಕಿ!](https://mobiletime.in/2025/12/gps-bird-dies-from-starvation/): ಜಿಪಿಎಸ್ ಹೊತ್ತು ಕಾರವಾರ ಕಡಲತೀರದ ಕಡೆ ಬಂದಿದ್ದ ಹಕ್ಕಿ ಗಾಯದ ನೋವು ಸಹಿಸಲಾಗದೇ ಸಾವನಪ್ಪಿದೆ. ಆ ಹಕ್ಕಿಯ ಜೀವ ಉಳಿಸುವ ಕಸರತ್ತು ನಡೆಯಿತಾದರೂ ಅದು ಪ್ರಯೋಜನಕ್ಕೆ ಬಂದಿಲ್ಲ. ಚಳಿಗಾಲದ ಅವಧಿಯಲ್ಲಿ ಭಾರತದ ಕರಾವಳಿ ಪ್ರದೇಶಕ್ಕೆ ಸೀಗಲ್ ಹಕ್ಕಿ ವಲಸೆ ಬರುತ್ತದೆ. ಮೊನ್ನೆ ಕಾರವಾರಕ್ಕೆ ಬಂದ ಹಕ್ಕಿಯ ಬೆನ್ನಿನ ಮೇಲೆ ಜಿಪಿಎಸ್ ಪತ್ತೆಯಾಗಿದ್ದು, ಜನ ಆತಂಕಕ್ಕೆ ಒಳಗಾಗಿದ್ದರು. ನಂತರ ಅಧ್ಯಯನಕ್ಕಾಗಿ ಅದಕ್ಕೆ ಜಿಪಿಎಸ್ ಅಳವಡಿಸಿದ್ದು ಗೊತ್ತಾಗಿತ್ತು. ಗಾಯಗೊಂಡ ಆ ಹಕ್ಕಿಯನ್ನು ಹಿಡಿದು ದಾಂಡೇಲಿ ವನ್ಯಜೀವಿ ಪುರ್ನವಸತಿ ಕೇಂದ್ರದಲ್ಲಿ ಚಿಕಿತ್ಸೆ ನೀಡುವ ಪ್ರಯತ್ನ ನಡೆಯಿತು. ಆದರೆ, ಆ ಹಕ್ಕಿ ಚೇತರಿಸಿಕೊಳ್ಳಲಿಲ್ಲ. ಆಹಾರ ಸೇವಿಸಲು ಸಾಧ್ಯವಾಗದೇ ಹಕ್ಕಿ ಕೊನೆಯುಸಿರೆಳೆಯಿತು. ಮಾರ್ಚ ತಿಂಗಳ ಅವಧಿಯಲ್ಲಿ ಆ ಹಕ್ಕಿಗೆ ಜಿಪಿಎಸ್ ಟ್ರಾಕರ್ ಅಳವಡಿಸಿದ್ದು ಅರಿವಿಗೆ ಬಂದಿದೆ. ಆ ನಂತರ ಸೈಬಿರಿಯಾದತ್ತ ಪ್ರಯಾಣಿಸಿದ್ದ ಸೀಗಲ್ ಹಕ್ಕಿ ಆರ್ಕ್ಟಿಕ್’ನವರೆಗೆ ಸಾಗಿ ನಂತರ ಅಲ್ಲಿ ಸಂತಾನೋತ್ಪತ್ತಿಯಲ್ಲಿ ತೊಡಗಿಸಿಕೊಂಡು ಶ್ರೀಲಂಕಾ ಕಡೆ ಹೊರಟಿತ್ತು. ಈ ನಡುವೆ ಮಾರ್ಗ ಮಧ್ಯೆ ಕಾರವಾರದ ತೀರದಲ್ಲಿ ಹಾರಾಟ ಸ್ಥಗಿತಗೊಳಿಸಿತ್ತು ಎಂದು ಕೊಲಂಬೊದ ಸಂಸ್ಥೆ ಮಾಹಿತಿ ನೀಡಿದೆ. - [ಸದೃಢ ಸಹಕಾರಿಗೆ ವಿಶ್ವದರ್ಶನ ಪ್ರಶಸ್ತಿ](https://mobiletime.in/2025/12/vishwadarshan-award-for-strong-cooperative/): ವಿಶ್ವದರ್ಶನ ದಿನ ಪತ್ರಿಕೆ ಕೊಡುವ `ನ್ಯಾಷನಲ್ ಐಕಾನ್ ಅವಾರ್ಡ್’ಗೆ ಶಿರಸಿಯ ಭೂತೇಶ್ವರ ಪತ್ತಿನ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಾಹಕ ವಿನಾಯಕ ಶೆಟ್ಟಿ ಅವರು ಆಯ್ಕೆಯಾಗಿದ್ದಾರೆ. ವಿಶ್ವದರ್ಶನ ದಿನಪತ್ರಿಕೆ ಸಂಪಾದಕ ಎಸ್ ಎಸ್ ಪಾಟೀಲ್ ಅವರು ಈ ಮಾಹಿತಿ ಹಂಚಿಕೊAಡಿದ್ದು, `ಹಲವು ದಶಕದಿಂದ ಸಾಮಾಜಿಕ ಸೇವೆಯಲ್ಲಿ ತೊಡಗಿರುವ ವಿನಾಯಕ ಶೆಟ್ಟಿ ಅವರ ಕಾರ್ಯ ಗುರುತಿಸಿ ಈ ಪ್ರಶಸ್ತಿ ಕೊಡಲಾಗುತ್ತಿದೆ’ ಎಂದಿದ್ದಾರೆ. `ಸಾಮಾಜಿಕ ಕ್ಷೇತ್ರದಲ್ಲಿ ವಿನಾಯಕ ಶೆಟ್ಟಿ ಅವರು ಮಾಡಿದ ಸಾಧನೆಯನ್ನು ವಿಶ್ವದರ್ಶನ ಪತ್ರಿಕೆ ಗಮನಿಸಿ ಗೌರವಿಸುತ್ತಿದೆ. ವಿನಾಯಕ ಶೆಟ್ಟಿ ಅವರು ಗಣೇಶೋತ್ಸವ ಸಂಘಟನೆ, ಶಿಕ್ಷಣ, ಸಾಮಾಜಿಕ ಸೇವೆಯಲ್ಲಿಯೂ ಸಕ್ರೀಯರಾಗಿದ್ದಾರೆ’ ಎಂದವರು ಸ್ಮರಿಸಿದ್ದಾರೆ. ವಸಂತ ಶೆಟ್ಟಿ ಅವರಿಂದ ಸ್ಥಾಪನೆಯಾಗಿರುವ ಭೂತೇಶ್ವರ ಪತ್ತಿನ ಸಹಕಾರಿ ಸಂಘ ಉತ್ತರ ಕನ್ನಡ ಜಿಲ್ಲೆಯಲ್ಲಿ ಸಧೃಡ ಸಂಸ್ಥೆಯಾಗಿ ಬೆಳೆದಿದೆ. ಅದಕ್ಕೆ ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕ ವಿನಾಯಕ ಶೆಟ್ಟಿ ಅವರು ಕಾರಣರಾಗಿದ್ದಾರೆ. ಅವರ ಸಹಕಾರ ಸೇವೆಯನ್ನು ವಿಶ್ವದರ್ಶನ ಪತ್ರಿಕೆ ಸ್ಮರಿಸಿದೆ. ಡಿಸೆಂಬರ್ 27ರಂದು ದಾವಣಗೆರೆಯಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ. - [ಶಿರಸಿ ನಗರಸಭೆ | ಘರ್ಜಿಸಿದ ಗುರು: ಗರಂ ಆದ ಪರಂ!](https://mobiletime.in/2025/12/sirsi-municipal-council-the-guru-roared-the-most-glorious/): ಶಿರಸಿ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷರಾಗಿ ಅಧಿಕಾರವಹಿಸಿಕೊಂಡ ಗುರು ಅಡಿ ನಗರಸಭೆಯ ಸಭೆಯಲ್ಲಿ ಗರಂ ಆಗಿದ್ದಾರೆ. `ವಿದೇಶಿ ಪ್ರವಾಸ ಮಾಡಿ ಬಂದ ನಗರಸಭೆ ಅಧಿಕಾರಿ-ಸಿಬ್ಬಂದಿ ಇಲ್ಲಿನ ಆಡಳಿತವನ್ನು ಇನ್ನಷ್ಟು ಹದಗೆಡಿಸಿದ್ದಾರೆ’ ಎಂಬ ನಿಟ್ಟಿನಲ್ಲಿ ಗುರು ಅಡಿ ಮಾತನಾಡಿದ್ದಾರೆ. ಹಿರಿಯ ಪತ್ರಕರ್ತ ಪರಮಾನಂದ ಹೆಗಡೆ ಅವರು ಆಡಳಿತ ವೈಖರಿ ವಿರುದ್ಧ ಅಸಮಧಾನವ್ಯಕ್ತಪಡಿಸಿದ್ದಾರೆ. ಶನಿವಾರ ಶಿರಸಿ ನಗರಸಭೆ ಬಜೆಟ್ ಪೂರ್ವಭಾವಿ ಸಭೆಯಲ್ಲಿ ಜನ ಆಡಳಿತದ ವಿರುದ್ಧ ಆಕ್ರೋಶವ್ಯಕ್ತಪಡಿಸಿದ್ದಾರೆ. `ಸಮಸ್ಯೆ ಹೇಳಿದರೂ ಅದನ್ನು ಬಗೆಹರಿಸುವವರಿಲ್ಲ’ ಎಂದು ಅನೇಕರು ಹೇಳಿದ್ದಾರೆ. `ನಗರಸಭೆಯವರು ಪತ್ರಕರ್ತರಿಂದ ಸಲಹೆಪಡೆಯುತ್ತಾರೆ. ಆದರೆ, ಆ ಸಲಹೆಯ ಪೈಕಿ ಒಂದನ್ನೂ ಅನುಷ್ಠಾನಕ್ಕೆ ತರುವುದಿಲ್ಲ’ ಎಂದು ಗುರು ಅಡಿ ಕಿಡಿಕಾರಿದರು. `ಕೋಟಿ ರೂ ಖರ್ಚು ಮಾಡಿ ವಿದೇಶಕ್ಕೆ ಹೋಗಿ ಅಲ್ಲಿನ ಆಡಳಿತ ನೋಡಿದವರು ಇಲ್ಲಿ ಮಾಡಿದ್ದೇನು?’ ಎಂದು ಪ್ರಶ್ನಿಸಿದರು. `ಶಿರಸಿ ನಗರ ಪ್ರವೇಶಿಸುತ್ತಲೇ ರಸ್ತೆ ಪಕ್ಕ ಕಸದ ರಾಶಿ ಕಾಣುತ್ತಿದೆ. ಕಸ ಚೆಲ್ಲಿದವರಿಗೆ ದಂಡ ವಿಧಿಸಿ’ ಎಂದು ತಾಕೀತು ಮಾಡಿದರು. `ಕಸದಿಂದ ರಸ ತೆಗೆದು ನಗರಸಭೆ ಆದಾಯ ವೃದ್ಧಿ ಮಾಡುವ ಯೋಜನೆ ಇಲ್ಲ. ನೀರಿನ ನಲ್ಲಿ ಮಾಪನದ ಬಗ್ಗೆ ನಗರಸಭೆಯವರಿಗೆ ಗೊತ್ತಿಲ್ಲ. ನಲ್ಲಿ ನೀರಿನಲ್ಲಿ ಕೊಳಚೆ ನೀರು ಬಂದರೆ ಏನು? ಎನ್ನುವದರ ಬಗ್ಗೆ ಉತ್ತರವಿಲ್ಲ. ಬೀದಿ ದೀಪಗಳು ಸರಿಯಾಗಿಲ್ಲ’ ಎಂಬ ವಿಷಯ ಬಿಚ್ಚಿಟ್ಟರು. `ವಿವಿಧ ಹೊಟೇಲುಗಳಲ್ಲಿ ಟೇಸ್ಟಿಂಗ್ ಪೌಡರ್ ಬಳಕೆ ನಡೆಯುತ್ತಿದೆ. ಜನರ ಆರೋಗ್ಯಕ್ಕೆ ದುಷ್ಪರಿಣಾಮವಾಗುವ ಕೆಮಿಕಲ್ ಬಳಸುತ್ತಿದ್ದಾರೆ. ಮಳೆಗಾಲದಲ್ಲಿ ಮಳೆ ನೀರನ್ನು ಹಿಡಿದು ಅಡುಗೆ ಮಾಡುವವರಿದ್ದಾರೆ. ದುಡ್ಡು ಕೊಟ್ಟು ಬರುವ ಜನರಿಗೆ ಎಂಜಲು ಊಟ ಬಡಿಸುತ್ತಾರೆ. ಆದರೆ, ನಗರಸಭೆ ಮಾತ್ರ ಅಂಥವರ ವಿರುದ್ಧ ಕ್ರಮ ಜರುಗಿಸುತ್ತಿಲ್ಲ’ ಎಂದು ಕೂಗಾಡಿದರು. ಸ್ವಾಮಿ ಎಂಬ ಕುಂಬೇರಪ್ಪನ ಅಪರಾತಪರದ ಬಗ್ಗೆ ಮಾತನಾಡಿದ ಪತ್ರಕರ್ತ ಪರಮಾನಂದ ಹೆಗಡೆ ನಗರಸಭೆ ಭ್ರಷ್ಟಾಚಾರದ ಬಗ್ಗೆಯೂ ಪ್ರಸ್ತಾಪಿಸಿದರು. `ದೇವಿಕೇರೆ ಬಳಿ ಅಂಗಡಿ ತೆರವು ವಿಚಾರವಾಗಿ ಒಬ್ಬರಿಗೆ ಒಂದು ನ್ಯಾಯ ಇನ್ನೊಬ್ಬರಿಗೆ ಇನ್ನೊಂದು ನ್ಯಾಯಯಾದ ಬಗ್ಗ ನನಗೆ ಫೋನ್ ಬರುತ್ತಿದೆ. ಗಣೇಶ ನಗರ ರಸ್ತೆ ಕಾಮಗಾರಿಯ ಗುತ್ತಿಗೆದಾರ ನಾಪತ್ತೆ ಎಂಬ ಸುದ್ದಿಯಿದೆ. ಅಲ್ಲಿರುವ ಪೈಪ್‌ಲೈನ್ ಅವೈಜ್ಞಾನಿಕವಾಗಿದ್ದು, ಅದನ್ನು ಗಮನಿಸುವವರಿಲ್ಲ’ ಎಂದು ಪರಮಾನಂದ ಹೆಗಡೆ ಆಕ್ರೋಶವ್ಯಕ್ತಪಡಿಸಿದರು. `ದೇವಿಕೇರಿ, ಕೋಟೆಕೆರೆಯಲ್ಲಿ ಸಂಘ-ಸAಸ್ಥೆಗಳು ನೀಡಿದ ಉಪಕರಣವೂ ಹಾಳಾಗುತ್ತಿದೆ. ನಗರಸಭೆ ಜವಾಬ್ದಾರಿ ಏಕೆ ತೆಗೆದುಕೊಂಡಿಲ್ಲ? ಎಂದು ಪರಮಾನಂದ ಹೆಗಡೆ ಪ್ರಶ್ನೆ ಮಾಡಿದರು. `ಬೀಡಾಡಿ ದನ ರಕ್ಷಣೆಗೆ ಕೊಂಡೆವಾಡಿ ಕಟ್ಟಿ ಹಣ ಮಾತ್ರ ಖರ್ಚು ಮಾಡಲಾಗಿದೆ. ನಾಯಿ ಆಪರೇಶನ್ ಏನಾಯಿತು? ಎನ್ನುವುದರ ಬಗ್ಗೆ ಮಾಹಿತಿ ಇಲ್ಲ. ಆಸ್ಪತ್ರೆ ಎದುರೇ ಧೂಳು ಹೆಚ್ಚಾದರೂ ಯಾರೂ ತಲೆಕೆಡಿಸಿಕೊಂಡಿಲ್ಲ. ಇಲ್ಲಿನ ಅವ್ಯವಸ್ಥೆ ನೋಡಿ ಅತಿಕ್ರಮಣಗಳ ತವರು ಹಾಗೂ ಹೊಂಡೆಗುoಡಿ ಎಂದು ಶಿರಸಿಗೆ ಬಿರುದು ಕೊಟ್ಟಿದ್ದಾರೆ’ ಎಂದು ತಮ್ಮ ಅಸಮಧಾನಹೊರ ಹಾಕಿದರು. ಮನೆಗಳಿಗೆ ನೀರು ನುಗ್ಗುವುದು, ಆರೋಗ್ಯದ ಸಮಸ್ಯೆ, ಪಾರ್ಕಿಂಗ್ ತೊಂದರೆ ಬಗ್ಗೆ ಅನೇಕರು ಅಸಮಧಾನವ್ಯಕ್ತಪಡಿಸಿದರು. ಕಚೇರಿ ಅವಧಿಯಲ್ಲಿ ಅಧಿಕಾರಿಗಳು ಸಿಗುವುದಿಲ್ಲ ಎಂದು ಸಹ ಜನ ಆಕ್ರೋಶವ್ಯಕ್ತಪಡಿಸಿದರು. - [ತಹಶೀಲ್ದಾರ್ ಕಚೇರಿ: ಒಂದುವರೆ ಲಕ್ಷ ಕೊಟ್ಟರೂ ಸಿಗದ ಕಂಪ್ಯುಟರ್ ಹುದ್ದೆ!](https://mobiletime.in/2025/12/tahsildars-office-computer-post-not-available-even-after-paying-rs-1-5-lakh/): ಖಾಸಗಿ ಕಂಪನಿಯಲ್ಲಿ ಒಳ್ಳೆಯ ಉದ್ಯೋಗವಿದ್ದರೂ ಸರ್ಕಾರಿ ಕಚೇರಿಯಲ್ಲಿನ ಕಂಪ್ಯುಟರ್ ಆಪರೇಟರ್ ಹುದ್ದೆಗೆ ಕ್ವಿನಿ ಡಿಸೋಜಾ ಅವರು ಆಸೆಪಟ್ಟಿದ್ದಾರೆ. ಈ ಹುದ್ದೆ ಗಿಟ್ಟಿಸಿಕೊಳ್ಳುವುದಕ್ಕಾಗಿ ಅವರು ಒಂದುವರೆ ಲಕ್ಷ ರೂ ಖರ್ಚು ಮಾಡಿದ್ದಾರೆ. ಆದರೆ, ಆ ಕೆಲಸ ಮಾತ್ರ ಅವರಿಗೆ ಸಿಕ್ಕಿಲ್ಲ! ಹಳಿಯಾಳದ ಗರಡೊಳ್ಳಿಯಲ್ಲಿ ಕ್ವಿನಿ ಡಿಸೋಜಾ (25) ಅವರು ವಾಸವಾಗಿದ್ದಾರೆ. ಖಾಸಗಿ ಕಂಪನಿ ಉದ್ಯೋಗಿಯಾಗಿರುವ ಅವರಿಗೆ ಕೈ ತುಂಬಾ ಸಂಬಳ ಸಿಗುತ್ತಿದೆ. ಅದಾಗಿಯೂ ಸರ್ಕಾರಿ ಕಚೇರಿಯಲ್ಲಿ ಕೆಲಸ ಮಾಡಬೇಕು ಎಂಬುದು ಅವರ ಕನಸಾಗಿತ್ತು. ಹೀಗಾಗಿ ಅವರು ತಮ್ಮ ಬಯಕೆಯನ್ನು ತಂದೆಯ ಬಳಿ ಹೇಳಿಕೊಂಡಿದ್ದು, ಕ್ವಿನಿ ಡಿಸೋಜಾ ಅವರ ತಂದೆ ಇಶಾಂತ ಡಿಸೋಜಾ ಅವರು ಸಹ ಮಗಳ ಉದ್ಯೋಗದ ಕನಸು ಈಡೇರಿಕೆಗಾಗಿ ದುಡ್ಡು ಬಿಚ್ಚಿದ್ದಾರೆ. ಹಳಿಯಾಳ ಇಂದಿರಾ ನಗರದ ಮಂಜುಳಾ ಈರಣ್ಣ ಮಾದರ್ ಹಾಗೂ ಆಕಾಶ ಪ್ರಭಾಕರ ಗಜಕೋಶ ಸೇರಿ `ಹಳಿಯಾಳ ತಹಶೀಲ್ದಾರ್ ಕಚೇರಿಯಲ್ಲಿ ಡಾಟಾ ಆಪರೇಟರ್ ಹುದ್ದೆ ಖಾಲಿ ಇದೆ’ ಎಂದು ಕ್ವಿನಿ ಡಿಸೋಜಾ ಅವರಿಗೆ ಹೇಳಿದ್ದಾರೆ. `ಈ ಹುದ್ದೆ ಕೊಡಿಸಲು ಹಣ ಕೊಡಬೇಕಾಗುತ್ತದೆ’ ಎಂದು ನಂಬಿಸಿದ್ದಾರೆ. ಇದನ್ನು ನಂಬಿದ ಕ್ವಿನಿ ಡಿಸೋಜಾ ಅವರು ತಮ್ಮ ಬ್ಯಾಂಕ್ ಖಾತೆಯಲ್ಲಿದ್ದ ಹಣವನ್ನು ಅವರ ಖಾತೆಗೆ ವರ್ಗಾಯಿಸಿದ್ದಾರೆ. ಹಣ ಕಡಿಮೆ ಬಿದ್ದಾಗ ತಂದೆಯ ಮೊರೆ ಹೋಗಿದ್ದು, ಇಶಾಂತ ಡಿಸೋಜಾ ಅವರ ಬ್ಯಾಂಕ್ ಖಾತೆ ಹಣವನ್ನು ಖರ್ಚು ಮಾಡಿದ್ದಾರೆ. 2024ರ ಸೆಪ್ಟೆಂಬರ್ 9ರಿಂದ 2025ರ ಅಕ್ಟೊಬರ್ 3ರವರೆಗಿನ ಅವಧಿಯಲ್ಲಿ ಮಂಜುಳಾ ಮಾದರ್ ಹಾಗೂ ಆಕಾಶ ಗಜಕೋಶ ಸೇರಿ 151000ರೂ ವಸೂಲಿ ಮಾಡಿದ್ದಾರೆ. ಅದಾದ ನಂತರ ಮತ್ತೆ 80 ಸಾವಿರಕ್ಕೆ ಬೇಡಿಕೆ ಇಟ್ಟಿದ್ದು, ಆ ವೇಳೆ ಕ್ವಿನಿ ಡಿಸೋಜಾ ಅವರು `ತನಗೆ ಆ ಉದ್ಯೋಗ ಬೇಡ. ಹಣ ಮರಳಿಸಿ’ ಎಂದಿದ್ದಾರೆ. ಆದರೆ, ಅವರು ಹಣವನ್ನು ಮರಳಿಸಿಲ್ಲ. ಉದ್ಯೋಗವನ್ನು ಸಹ ಕೊಟ್ಟಿಲ್ಲ. ಪೆಚ್ಚುಮೋರೆ ಹಾಕಿದ ಕ್ವಿನಿ ಡಿಸೋಜಾ ಅವರು ತಮಗಾದ ಅನ್ಯಾಯವನ್ನು ತಂದೆಯ ಬಳಿ ಹೇಳಿದ್ದು, ಇಶಾಂತ ಡಿಸೋಜಾ ಅವರು ನ್ಯಾಯಕ್ಕಾಗಿ ಪೊಲೀಸರ ಮೊರೆ ಹೋಗಿದ್ದಾರೆ. `ಸರ್ಕಾರಿ ಉದ್ಯೋಗ ಮಾರಾಟಕ್ಕಿಲ್ಲ. ಕಾಸುಕೊಟ್ಟು ಮೋಸ ಹೋಗುವ ಮುನ್ನ ಎಚ್ಚರ’ - [ಮೂರು ಮಂಗಗಳ ಮರಣ](https://mobiletime.in/2025/12/death-of-three-monkeys/): ಸಿದ್ದಾಪುರದ ಗಣಪತಿ ಗಲ್ಲಿಯಲ್ಲಿ ಮೂರು ಮಂಗಗಳು ಸಾವನಪ್ಪಿದೆ. ಏಕಕಲಕ್ಕೆ ಮೂರು ಮಂಗ ಸಾವನಪ್ಪಿರುವುದು ಜನರ ಆತಂಕಕ್ಕೆ ಕಾರಣವಾಗಿದೆ. ಪಟ್ಟಣದ ಉದಯ ರಂಗೈನ್ ಹಾಗೂ ಅಶೋಕ ಪ್ರಭು ಅವರ ಮನೆಯ ಹಿಂಭಾಗದಲ್ಲಿ ಮೂರು ಮಂಗಗಳು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿವೆ. ವಿಷಯ ತಿಳಿಯುತ್ತಿದ್ದಂತೆಯೇ ಪಟ್ಟಣ ಪಂಚಾಯತ್ ಸದಸ್ಯ ಗುರುರಾಜ ಶಾನಭಾಗ ಅವರು ಸ್ಥಳಕ್ಕೆ ಧಾವಿಸಿದ್ದಾರೆ. ಪರಿಸ್ಥಿತಿಯ ಗಂಭೀರತೆಯನ್ನು ಅರಿತು ತಕ್ಷಣವೇ ಆರೋಗ್ಯ, ಪಶು ಸಂಗೋಪನೆ, ಅರಣ್ಯ ಇಲಾಖೆ ಹಾಗೂ ಪಟ್ಟಣ ಪಂಚಾಯತ್ ಅಧಿಕಾರಿಗಳಿಗೆ ಅವರು ಮಾಹಿತಿ ನೀಡಿದ್ದಾರೆ. ತಾಲೂಕು ಪಶುವೈದ್ಯಾಧಿಕಾರಿಗಳು ಮೃತ ಮಂಗಗಳ ಮರಣೋತ್ತರ ಪರೀಕ್ಷೆ ನಡೆಸಿ, ಅಂಗಾAಶಗಳ ಮಾದರಿಯನ್ನು ಸಂಗ್ರಹಿಸಿ ತಪಾಸಣೆಗಾಗಿ ಪುಣೆ ಮತ್ತು ಶಿವಮೊಗ್ಗದ ಸಂಶೋಧನಾಲಯಗಳಿಗೆ ಕಳುಹಿಸಿದ್ದಾರೆ. ಪಟ್ಟಣ ಪಂಚಾಯತಿಯಿAದ ಆ ಪ್ರದೇಶದಲ್ಲಿ ಕ್ರಿಮಿನಾಶಕ ಸಿಂಪಡಿಸಿ ಶುಚಿಗೊಳಿಸಲಾಗಿದೆ. `ಮಂಗನ ಕಾಯಿಲೆ ಆತಂಕದ ಹಿನ್ನಲೆ ಘಟನೆಯನ್ನು ಗಂಭೀರವಾಗಿ ಪರಿಗಣಿಸಲಾಗಿದೆ’ ಎಂದು ಅಧಿಕಾರಿಗಳು ಹೇಳಿದ್ದಾರೆ. - [ಕರಾವಳಿ ಉತ್ಸವದ ಕರೆಯೋಲೆ](https://mobiletime.in/2025/12/coastal-festival-call/): ಕಾರವಾರದ ರವೀಂದ್ರನಾಥ ಕಡಲತೀರದಲ್ಲಿನ ಮಯೂರವರ್ಮ ವೇದಿಕೆಯಲ್ಲಿ 8 ವರ್ಷದ ನಂತರ `ಕರಾವಳಿ ಉತ್ಸವ’ ನಡೆಸಲು ನಿರ್ಧರಿಸಲಾಗಿದೆ. ಡಿಸೆಂಬರ್ 22ರಿಂದ 28ರವರೆಗೆ ನಡೆಯುವ ಉತ್ಸವದ ಕರೆಯೋಲೆಯನ್ನು ಉಸ್ತುವಾರಿ ಸಚಿವ ಮಂಕಾಳು ವೈದ್ಯ ಅವರು ಬಿಡುಗಡೆ ಮಾಡಿದ್ದಾರೆ. `ಕರಾವಳಿ ಉತ್ಸವವನ್ನು ರಾಜ್ಯದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರು ಉದ್ಘಾಟಿಸಲಿದ್ದು, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸೇರಿದಂತೆ ವಿವಿಧ ಸಚಿವರು ಭಾಗವಹಿಸಲಿದ್ದಾರೆ. ಕಾರ್ಯಕ್ರಮಕ್ಕೆ ರಾಜ್ಯ ಹಾಗೂ ಹೊರ ರಾಜ್ಯದ ಜನರು ಭಾಗವಹಿಸುವ ನಿರೀಕ್ಷೆಯಿದ್ದು, ರಾಜ್ಯ ಹಾಗೂ ಹೊರ ರಾಜ್ಯದ ಕಲಾವಿದರು ಪ್ರದರ್ಶನ ನೀಡಲಿದ್ದಾರೆ’ ಎಂದು ಮಂಕಾಳು ವೈದ್ಯ ಅವರು ಹೇಳಿದ್ದಾರೆ. `ಕಾರ್ಯಕ್ರಮ ಆಯೋಜನೆಗೆ ಸರ್ಕಾರದಿಂದ 5 ಕೋಟಿ ರೂ ಹಣ ಬಿಡುಗಡೆಯಾಗಿದ್ದು, ಕಾರ್ಯಕ್ರಮಕ್ಕೆ 10 ಕೋಟಿ ರೂ ವೆಚ್ಚದ ಬಗ್ಗೆ ಅಂದಾಜಿಸಲಾಗಿದೆ’ ಎಂದವರು ತಿಳಿಸಿದ್ದಾರೆ. `ಕಳೆದ ಒಂದು ತಿಂಗಳಿನಿAದ ಉತ್ಸವದ ಸಿದ್ಧತೆ ನಡೆಯುತ್ತಿದೆ. ಕಾರ್ಯಕ್ರಮದ ಯಶಸ್ವಿಗೆ ಮಾಧ್ಯಮದವರು ಸೇರಿದಂತೆ ಜಿಲ್ಲೆಯ ಸಂಘ ಸಂಸ್ಥೆಗಳು ತಮ್ಮ ಸಹಕಾರ ನೀಡಬೇಕು’ ಎಂದವರು ಮನವಿ ಮಾಡಿದರು. ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಕೆ ಲಕ್ಷಿಪ್ರಿಯಾ, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಹಣಾಧಿಕಾರಿ ದಿಲೀಷ್ ಶಶಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ ಎನ್, ಜಿಲ್ಲಾ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಸತೀಶ ಪಿ ನ್ಯಾಯ್ಕ, ತಹಶೀಲ್ದಾರ ಶ್ರೀಕೃಷ್ಣ ಕಾಮಕರ್ ಇದ್ದರು. - [ಇಲಿ ಮದ್ದು ಸೇವಿಸಿದ ಚಾಲಕ: ಸಾವು!](https://mobiletime.in/2025/12/driver-dies-after-consuming-rat-poison/): ಇಲಿ ಪಾಷಣ ಸೇವಿಸಿದ್ದ ಮಹೇಂದ್ರ ನಾಯ್ಕ ಅವರು ಮಂಗಳೂರಿನ ವೆನ್‌ಲಾಕ್ ಆಸ್ಪತ್ರೆಯಲ್ಲಿ ಸಾವನಪ್ಪಿದ್ದಾರೆ. ಹೊನ್ನಾವರದ ನವಿಲುಗೋಣ ಕಲ್ಲಟ್ಟಿಯಲ್ಲಿ ಮಹೇಂದ್ರ ಮಂಜುನಾಥ ನಾಯ್ಕ ಅವರು ವಾಸವಾಗಿದ್ದರು. ಚಾಲಕರಾಗಿದ್ದ ಅವರು ಜೀವನದಲ್ಲಿ ಬೇಸರ ಎನ್ನುತ್ತಿದ್ದರು. ಅದೇ ನೋವಿನಲ್ಲಿ ಡಿಸೆಂಬರ್ 10ರಂದು ಅವರು ಮನೆಯಲ್ಲಿದ್ದ ಇಲಿ ಪಾಷಣ ಸೇವಿಸಿದ್ದರು. ಕುಟುಂಬದವರು ಮಹೇಂದ್ರ ನಾಯ್ಕ ಅವರನ್ನು ಆಸ್ಪತ್ರೆಗೆ ಕರೆದೊಯ್ದಿದ್ದರು. ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಮಂಗಳೂರಿಗೆ ದಾಖಲಿಸಲಾಗಿದ್ದು, ವೆನ್ಲಾಕ್ ಆಸ್ಪತ್ರೆಯಲ್ಲಿ ಅವರು ಕೊನೆಯುಸಿರೆಳೆದರು. ಈ ಬಗ್ಗೆ ಆಸ್ಪತ್ರೆಯವರು ಮಹೇಂದ್ರ ನಾಯ್ಕ ಅವರ ತಮ್ಮ ಅಕ್ಷಯ ನಾಯ್ಕ ಅವರಿಗೆ ತಿಳಿಸಿದ್ದು, ಅವರ ತಂದೆ ಮಂಜುನಾಥ ತಿಮ್ಮಯ್ಯ ನಾಯ್ಕ ಅವರು ಪೊಲೀಸರಿಗೆ ವಿವರಿಸಿದರು. - [RTO ಕಚೇರಿಯಲ್ಲಿ ಕಡತ ಕಳ್ಳತನ!](https://mobiletime.in/2025/12/file-theft-at-rto-office/): ಕಾರವಾರದ ಆರ್ ಟಿ ಓ ಕಚೇರಿಯಲ್ಲಿನ ಕಡತಗಳು ಕಾಣೆಯಾಗಿವೆ. ಮುಖ್ಯ ದಾಖಲೆಗಳು ಅಲ್ಲಿನ ಅಧಿಕಾರಿಗಳ ಕೈಗೆ ಸಿಗುತ್ತಿಲ್ಲ. ಇದರಿಂದ ಜನ ಸಮಸ್ಯೆ ಅನುಭವಿಸುತ್ತಿದ್ದಾರೆ. ಕಳೆದ ಮೂರು ತಿಂಗಳ ಹಿಂದೆಯೇ ಕಡತ ಕಳ್ಳತನವಾದ ಅನುಮಾನ ಶುರುವಾಗಿದೆ. ಕಡತ ಕಾಣೆಯಾಗಿದ್ದರೂ ಅಧಿಕಾರಿಗಳು ದೂರು ದಾಖಲಿಸದೇ ಇರುವುದು ಇನ್ನಷ್ಟು ಅನುಮಾನ ಹುಟ್ಟಿಸಿದೆ. ಈ ಬಗ್ಗೆ ಪ್ರಶ್ನಿಸಿದರೂ ಅಧಿಕಾರಿಗಳು ಸರಿಯಾಗಿ ಮಾತನಾಡುತ್ತಿಲ್ಲ. ಸಮಸ್ಯೆಗೆ ಸ್ಪಂದಿಸುವ ಕೆಲಸವನ್ನು ಮಾಡುತ್ತಿಲ್ಲ. ಕಡತ ಕಣ್ಮರೆಯ ವಿಷಯ ಅರಿತು ಶುಕ್ರವಾರ ಜನಶಕ್ತಿ ವೇದಿಕೆ ಅಧ್ಯಕ್ಷ ಮಾಧವ ನಾಯಕ ಅವರು ಸ್ಥಳ ಭೇಟಿ ಮಾಡಿದರು. ಮಾಧವ ನಾಯಕ ಅವರ ಪ್ರಶ್ನೆಗೆ ಅಧಿಕಾರಿಗಳು ತಬ್ಬಿಬ್ಬಾದರು. ವಿವಿಧ ಸೇವೆಗಳಿಗೆ ಅರ್ಜಿ ಸಲ್ಲಿಸಿದವರ ಅರ್ಜಿ ಜೊತೆ ಅವರ ವೈಯಕ್ತಿಕ ಕಡತಗಳು ಕಾಣೆಯಾಗಿದ್ದರಿಂದ ಅದರ ದುರುಪಯೋಗದ ಅನುಮಾನವೂ ಜನರನ್ನು ಕಾಡುತ್ತಿದೆ. `ಸಾರಿಗೆ ಇಲಾಖೆ ಕಚೇರಿಯಲ್ಲಿ ದುಡ್ಡಿಲ್ಲದೇ ಯಾವ ಕೆಲಸವೂ ನಡೆಯುವುದಿಲ್ಲ ಎಂಬ ಆರೋಪವಿದೆ. ಈ ನಡುವೆ ಕಡತ ಕಾಣೆಯಾಗಿರುವುದು ಅಧಿಕಾರಿಗಳ ಬೇಜವಬ್ದಾರಿಗೆ ಉದಾಹರಣೆ’ ಎಂದು ಮಾಧವ ನಾಯಕ ಅವರು ಗುಡುಗಿದರು. `ಕಡತ ಕಾಣೆಯಾದ ಬಗ್ಗೆ ಮಾಹಿತಿ ಸಿಕ್ಕಿದೆ. ಭಾನುವಾರ ವಿವಿಧ ಅಧಿಕಾರಿಗಳನ್ನು ಕರೆಯಿಸಿ ಕಡತಗಳ ಹುಡುಕಾಟ ನಡೆಸಲಾಗುತ್ತದೆ. ಅದಾಗಿಯೂ ಸಿಗದಿದ್ದರೆ ಪೊಲೀಸ್ ದೂರು ನೀಡುವೆ’ ಎಂದು ಆರ್ ಟಿ ಓ ಜಾನ್ ಮಿಸ್ಕಿನ್ ಪ್ರತಿಕ್ರಿಯಿಸಿದರು. ಕಡತ ಕಳ್ಳತನದ ಬಗ್ಗೆ ಮಾಧವ ನಾಯಕ ಪ್ರಶ್ನಿಸಿದ್ದೇನು? ಹೇಳಿದ್ದೇನು? ವಿಡಿಯೋ ಇಲ್ಲಿ ನೋಡಿ.. - [ಮುಖ್ಯಮಂತ್ರಿ ಖುರ್ಚಿಗಾಗಿ ದೇವರ ಮೊರೆ!](https://mobiletime.in/2025/12/pray-to-god-for-the-chief-ministers-chair/): ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿಯಾಗಿರುವ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ ಅವರು ಶುಕ್ರವಾರ ಉತ್ತರ ಕನ್ನಡ ಪ್ರವಾಸ ಮಾಡಿದ್ದು, ವಿವಿಧ ದೇವಾಲಯಗಳಲ್ಲಿ ವಿಶೇಷ ಪೂಜೆ ಮಾಡಿದ್ದಾರೆ. ಅದರೊಂದಿಗೆ ಅಂಕೋಲಾದ ಆಂದ್ಲೆಯಲ್ಲಿರುವ ದೇವಿ ಜಗದೀಶ್ವರಿ ದೇಗುಲದಲ್ಲಿ ಒಂದುವರೆ ತಾಸುಗಳ ಕಾಲ ಏಕಾಂತ ಪೂಜೆ ನಡೆಸಿದ ಅವರು ನಂತರ ದೇವಿಯಲ್ಲಿ ತಮ್ಮ ಭವಿಷ್ಯದ ರಾಜಕೀಯದ ಬಗ್ಗೆ ಪ್ರಶ್ನೆ ಕೇಳಿದ್ದಾರೆ. ಇದಕ್ಕೂ ಮುನ್ನ ಗೋಕರ್ಣದ ತಾಮಗ್ರಗೌರಿ ಮಂದಿರದಲ್ಲಿ ರಾಮಚಂದ್ರ ನಿರ್ವಾಣೇಶ್ವರ ಅವರು ಸ್ವಾಗತ ಪೂಜೆ ನೆರವೇರಿಸಿದ್ದು, `ಡಿಕೆ ಶಿವಕುಮಾರ ಅವರಿಗೆ ಮುಖ್ಯಮಂತ್ರಿ ಪಟ್ಟ ದೊರೆಯಲಿ’ ಎಂದು ಆಶಿಸಿದರು. ಮಹಾಗಣಪತಿ ಮಂದಿರದಲ್ಲಿ ಪೂಜೆ ನೇರವೇರಿಸುತ್ತಿರುವ ವೇಳೆ ಗಣೇಶನಿಗೆ ಅರ್ಪಿಸಿದ ಹೂವು ಬಲಗಡೆಯಿಂದ ಕಳೆಗೆ ಬಿದ್ದು ಪ್ರಸಾದವಾಗಿದ್ದನ್ನು ನೋಡಿದ ಜನ `ಡಿಕೆ ಶಿವಕುಮಾರ ಅವರಿಗೆ ದೇವರ ಅಭಯ ದೊರೆತಿದೆ’ ಎಂದು ಭಾವಿಸಿದರು. ಅದಾದ ನಂತರ `ಡಿಕೆ ಶಿವಕುಮಾರ್ ಮುಂದಿನ ಮುಖ್ಯಮಂತ್ರಿ’ ಎಂದು ಅವರ ಬೆಂಬಲಿಗರು ಘೋಷಣೆ ಕೂಗಿದರು. ಅಂಕೋಲಾದ ದೇವಿಯ ಸನ್ನಿಧಿಯಲ್ಲಿ ಕುಳಿತು ಗಂಭೀರವಾಗಿ `ಪ್ರಶ್ನಾಕಾರ್ಯ’ದಲ್ಲಿ ತೊಡಗಿದ್ದು ಅಲ್ಲಿ ಅವರು ನಾಗದೇವತೆ ಹಾಗೂ ತುಳಸಿಗೂ ವಿಶೇಷ ಪೂಜೆ ಸಲ್ಲಿಸಿದರು. ಪೂಜಾ ಕಾರ್ಯ ಮುಗಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಡಿ ಕೆ ಶಿವಕುಮಾರ್, ತಮ್ಮ ಭೇಟಿಯ ಉದ್ದೇಶವನ್ನು ಬಿಚ್ಚಿಟ್ಟರು. `ಐದು ವರ್ಷಗಳ ಹಿಂದೆ ಕುಟುಂಬದ ಕೆಲಸದ ನಿಮಿತ್ತ ಈ ಪುಣ್ಯ ಕ್ಷೇತ್ರಕ್ಕೆ ಬಂದು ಪ್ರಾರ್ಥನೆ ಮಾಡಿದ್ದೆ. ತಾಯಿಯ ದಯೆಯಿಂದ ಆ ಕೆಲಸ ಈಗ ಈಡೇರಿದೆ. ಅಂದೇ ಮತ್ತೆ ಇಲ್ಲಿಗೆ ಬರುತ್ತೇನೆ ಎಂದು ಹರಕೆ ಹೊತ್ತಿದ್ದೆ. ಅದರಂತೆ ಇಂದು ಬಂದು, ಮತ್ತೆ ಆಶೀರ್ವಾದ ಮಾಡುವಂತೆ ತಾಯಿಯಲ್ಲಿ ಕೇಳಿಕೊಂಡಿದ್ದೇನೆ’ ಎಂದು ಹೇಳಿದರು. `ಮುಖ್ಯಮಂತ್ರಿ ಸ್ಥಾನದ ಇಚ್ಛೆ ಹಾಗೂ ಅಧಿಕಾರ ಹಸ್ತಾಂತರದ ದಿನಾಂಕ ನಿಗದಿ ಆಗಿದೆಯೇ?’ ಎಂಬ ಮಾಧ್ಯಮದವರ ಪ್ರಶ್ನೆಗೆ ಡಿಕೆಶಿ ಯಾವುದೇ ಉತ್ತರ ನೀಡಲಿಲ್ಲ. ಡಿಕೆಶಿಯೇ ಮುಖ್ಯಮಂತ್ರಿ! `ಉಪಮುಖ್ಯಮoತ್ರಿ ಡಿ.ಕೆ.ಶಿವಕುಮಾರ್ ಅವರು ಮುಖ್ಯಮಂತ್ರಿಯಾಗುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ’ ಎಂದು ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ವೈದ್ಯ ಸಹ ಹೇಳಿದರು. `ಡಿಕೆ ಶಿವಕುಮಾರ ಅವರು ಸಿಎಂ ಅಲ್ಲ ಎನ್ನಲು ನಾವ್ಯಾರು? ಹೈಕಮಾಂಡ್ ಏನು ನಿಶ್ಚಯ ಮಾಡಿದೆಯೋ ಅದರಂತೆ ಎಲ್ಲವೂ ನಡೆಯುತ್ತದೆ. ಡಿಕೆಶಿ ಅವರು ಗೋಕರ್ಣದಲ್ಲಿ ಮಹಾಬಲೇಶ್ವರ ಮತ್ತು ವಿಘ್ನೇಶ್ವರನ ದರ್ಶನ ಪಡೆದಿದ್ದಾರೆ. ನಾವು ದೇವರನ್ನು ನಂಬಿ ಕೆಲಸ ಮಾಡುವವರು, ದೇವರ ಆಶೀರ್ವಾದದ ಮೇಲೆ ನಂಬಿಕೆ ಇಟ್ಟವರು. ಆದರೆ ಬಿಜೆಪಿಗರು ಕೇವಲ ದೇವರನ್ನು ರಾಜಕೀಯಕ್ಕೆ ಬಳಸಿಕೊಳ್ಳುವವರು’ ಎಂದು ಮಂಕಾಳು ವೈದ್ಯ ಅವರು ಹೇಳಿದರು. - [ಮ್ಯಾಟ್ರುಮುನಿ: ಮದುವೆ ಅಲ್ಲ.. ಮೋಸ!](https://mobiletime.in/2025/12/matrumuni-not-marriage-cheating/): AI ತಂತ್ರಜ್ಞಾನದ ಮೂಲಕ ಹುಡುಗಿಯರನ್ನು ಹುಟ್ಟಿಸುವ ಮ್ಯಾಟ್ರುಮುನಿಗಳು ಶಿರಸಿ-ಯಲ್ಲಾಪುರ-ಕಾರವಾರ ಎಂಬ ಊರುಗಳ ಹೆಸರಿನೊಂದಿಗೆ ಮದುವೆ ಆಗದೇ ನೊಂದಿರುವವರನ್ನು ಯಾಮಾರಿಸುತ್ತಿದ್ದಾರೆ. ಚಂದದ ಹುಡುಗಿಯ ಫೋಟೋ ನೋಡಿದ ಯುವಕರು ತಮ್ಮ ಜಾತಕದ ಜೊತೆ ಮನದಾಳ ಹಂಚಿಕೊಳ್ಳುತ್ತಿದ್ದು, ಮದುವೆ ಆಗದವರ ಖಾಸಗಿ ಮಾಹಿತಿ ಸಂಗ್ರಹಿಸುವ ನಕಲಿ ಸೈಟುಗಳು ಹೆಣ್ಣು ತೋರಿಸುವ ನೆಪದಲ್ಲಿ ಕಾಸು ಕೀಳುತ್ತಿವೆ. ನÀಮ್ಮ ಸಮಾಜದಲ್ಲಿ ಮನೆ-ಮನಗಳನ್ನು ಜೋಡಿಸುವ ಮಹತ್ತರ ಸಂಧಿ. ಕಾಲ ಬದಲಾಗುತ್ತಾ ಬಂದAತೆ ಈ ಸಂಬAಧಗಳ ಹುಡುಕಾಟವೂ ಪರಂಪರೆ, ಶಿಷ್ಠಾಚಾರಗಳಿಂದ ಹೊರಬಂದು, ಆನ್ಲೈನ್ ಮ್ಯಾಟ್ರಮೋನಿಯಲ್ ಸೈಟುಗಳ ಕಡೆ ಸಾಗಿದೆ. ಮದುವೆಗಾಗಿ ಸಂಗಾತಿಯನ್ನು ಹುಡುಕುವ ಅಮಾಯಕರು, ಸುಳ್ಳು ಪ್ರೊಫೈಲುಗಳ ಮೋಸಕ್ಕೊಳಗಾಗಿ ಲಕ್ಷಾಂತರ ರೂ ಹಣ ಕಳೆದುಕೊಳ್ಳುತ್ತಿರುವ ಸಂದರ್ಭಗಳೇ ಹೆಚ್ಚುತ್ತಿವೆ. ಮದುವೆ ಮಾಡಿಸುವುದಾಗಿ ಜನರನ್ನು ನಂಬಿಸುವ ನಕಲಿ ವೆಬ್‌ಸೈಟುಗಳ ಸಂಖ್ಯೆ ಮಿತಿ ಮೀರಿದೆ. ಬೇಸರವಾದಾಗ ಹುಡುಗಿಯರ ಜೊತೆ ಮಾತನಾಡುವುದಕ್ಕೆ ಸಹ ಅನೇಕ ಸೈಟುಗಳು ತೆರೆದುಕೊಂಡಿದ್ದು, ರಾತ್ರಿ ಬೆಳಗಾಗುವುದರೊಳಗೆ ಹುಟ್ಟುವ ನಕಲಿ ಪ್ರೋಪೈಲುಗಳು ಗಣ್ಯರನ್ನು ಸಹ ಬುಟ್ಟಿಗೆ ಹಾಕಿಕೊಳ್ಳುತ್ತಿವೆ. ಮ್ಯಾಟ್ರುಮುನಿಯ ಡಿಜಿಟಲ್ ಹಾದಿಯೂ ಈಗ ಕತ್ತಲ ಕೊಣೆಯಂತೆ ಕಾಣುತ್ತಿದ್ದು, ಕೇಂದ್ರ ಗೃಹ ಸಚಿವಾಲಯವೇ ನೇರ ಎಚ್ಚರಿಕೆ ಜಾರಿ ಮಾಡುವಷ್ಟು ಗಂಭೀರ ಹಂತಕ್ಕೆ ಮ್ಯಾಟ್ರಮೋನಿಯಲ್ ಅಪರಾಧ ನಡೆಯುತ್ತಿದೆ. ಮದುವೆಯಲ್ಲ, ಮಹಾ ಮೋಸ! ಮನೆಗಳಲ್ಲಿ ನಡೆಯುತ್ತಿದ್ದ ವರ-ವಧು ಹುಡುಕಾಟ, ಜಾತಕ-ಕುಲ-ಕುಟುಂಬ ಮಾಹಿತಿ ಪರಿಶೀಲನೆಯ ಹಾದಿ ಈಗ ಮೊಬೈಲ್ ಆಪ್ಲಿಕೇಶನ್ ಪರದೆಗೆ ಸರಿದುಬಿಟ್ಟಿದೆ. ಪರಿಪೂರ್ಣ ಹೊಂದಾಣಿಕೆಯ ಸಂಗಾತಿಯನ್ನು ಕಂಡುಕೊಳ್ಳುವ ಹಾದಿಯೇನೋ ಸುಗಮವಾಗಿದೆಯೆನ್ನಿಸುವಂತೆ ಕಾಣುತ್ತದೆ. ಆದರೆ, ಇದೇ ಜಾಲದಲ್ಲಿ ಈಗ ಅಪಾಯಕಾರಿ ನೆರಳು ದಿನೇ ದಿನೇ ಹೆಚ್ಚುತ್ತಿದೆ. ಸುಳ್ಳು ಪ್ರೊಫೈಲ್, ಡೀಪ್ ಫೇಕ್ ವೀಡಿಯೊಗಳು, ಮಧುರವಾದ ಮಾತುಗಳ ಹಿಂದಿರುವ ಮೋಸಗಾರರ ಕಾರ್ಯವೈಖರಿ ವ್ಯಾಪಕವಾಗಿಬಿಟ್ಟಿದೆ. ಸಂಗಾತಿಯನ್ನು ಹುಡುಕಲು ಲಾಗಿನ್ ಆದ ಕೆಲವೇ ದಿನಗಳಲ್ಲಿ ಪರಿಚಯ, ಮಧುರ ಮಾತು, ಆತ್ಮೀಯತೆ, ನೂರಾರು ಮೆಸೆಜ್ ಬರುತ್ತದೆ. `ನಿನ್ನಂತವರು ಜೀವನದಲ್ಲಿ ಸಿಗುವುದೇ ಇಲ್ಲ’ ಎಂಬOತೆ ಭಾವನಾತ್ಮಕ ಬಲೆ, ಸುಂದರ ಚಿತ್ರಗಳು, ವಿದೇಶದ ಬ್ಯಾಗ್ರೌಂಡ್, ಯುಕೆ ಡಾಕ್ಟರ್, ದುಬೈ ಇಂಜಿನಿಯರ್, ಅಮೆರಿಕ ಐಟಿ ಪ್ರೊಫೆಷನಲ್ ಎಂಬ ಹೆಸರಿನ ಹಿಂದೆ ನಿಜವಾದ ವ್ಯಕ್ತಿಯೇ ಇರುವುದಿಲ್ಲ. ಒಮ್ಮೆ ಭಾವನೆ ಗಟ್ಟಿಯಾದ ನಂತರವೇ ನಾಟಕ ಶುರುವಾಗುತ್ತದೆ. `ನಿನಗಾಗಿ ವಿಶೇಷ ಗಿಫ್ಟ್ ಕಳುಹಿಸಿದ್ದೇನೆ. ಕಸ್ಟಮ್ಸ್ನಲ್ಲಿ ಸಿಲುಕಿದೆ, ವಿಮಾನ ನಿಲ್ದಾಣದಲ್ಲಿ ಲಗೇಜ್ ಜಪ್ತಿ ಮಾಡಿದ್ದಾರೆ. ದಂಡ ತುಂಬಬೇಕಿದೆ’ ಇತ್ಯಾದಿ ಈ ಮಾತುಗಳಲ್ಲಿ ಒಂದಾದರೂ ಬರುತ್ತದೆ. ಹಣ ಕಳುಹಿಸಿದ ಕ್ಷಣದಲ್ಲೇ ಪ್ರೊಫೈಲ್ ನಾಪತ್ತೆ, ನಂಬರ್ ಸ್ವಿಚ್ ಆಫ್! ಇನ್ನೂ ಸುಳ್ಳು ಪ್ರೊಫೈಲುಗಳಿಂದ ಜನರನ್ನು ಸೆಳೆಯುವ, ಭಾವನಾತ್ಮಕ ಅವಲಂಬನೆ ನಿರ್ಮಿಸಿ, ನಂತರ ಹಣದ ಬೇಡಿಕೆಯೊಂದಿಗೆ ಬಲೆಗೆ ಎಳೆಯುವ ವಿಧಾನಗಳು ಈಗ ಮ್ಯಾಟ್ರಮೋನಿಯಲ್ ಮೋಸಗಳ ಸಾಮಾನ್ಯ ಮುಖವಾಗಿಬಿಟ್ಟಿದೆ. ವಿಷಾದವೆಂದರೆ, ಈ ಮೋಸದ ಜಾಲಕ್ಕೆ ಬಲಿಯಾಗುತ್ತಿರುವವರೂ ಶಿಕ್ಷಣವಂತರೇ ಆಗಿದ್ದಾರೆ. ನಮ್ಮ ಸಮಾಜದಲ್ಲಿ ಮದುವೆ ಕೇವಲ ಸಂಬAಧವಲ್ಲ, ಅದು ಭವಿಷ್ಯ ಕಟ್ಟುವ ಹಂತ. ಆ ಹಂತಕ್ಕೆ ಕಾಲಿಡುವ ಮುನ್ನ ಯಾರಿಗಾದರೂ ಹೆಚ್ಚು ನಂಬಿಕೆ ಮೂಡುವುದು ಸಹಜ. ಅದೇ ನಂಬಿಕೆಯನ್ನು ದುರುಪಯೋಗಪಡಿಸಿಕೊಳ್ಳುವುದು ಈ ಅಪರಾಧಿಗಳ ಕುಶಲತೆ. `ಮುಖತಃ ಭೇಟಿಯಾಗದೇ, ಸರಿಯಾದ ಪರಿಶೀಲನೆ ಮಾಡದೇ, ಯಾರ ಮೇಲೂ ಆರ್ಥಿಕ ನಂಬಿಕೆ ಇರಬಾರದು. ಮ್ಯಾಟ್ರಮೋನಿಯಲ್ ಸೈಟ್ ವೆರಿಫೈಡ್ ಎಂದರೂ ಅದನ್ನೇ ಅಂತಿಮ ಸತ್ಯವೆಂದು ಪರಿಗಣಿಸಬಾರದು. ಯಾರೇ ಆಗಲಿ, ಎಷ್ಟೇ ಸೊಬಗು, ಎಷ್ಟೇ ಸಿಹಿ ಮಾತು, ಎಷ್ಟೇ ಕಥೆ ಹೇಳಿ ಹಣ ಕೇಳಿದ ಕ್ಷಣದಲ್ಲಿ ಅದು ನಂಬಿಕೆಗೆ ಅರ್ಹವಲ್ಲ. ನಿಜವಾದ ಸಂಬOಧ ಹಣ ಕೇಳುವುದರಿಂದ ಆರಂಭವಾಗುವುದಿಲ್ಲ. ಎಚ್ಚರಿಕೆ ಹೆಚ್ಚಿಸುವ ಅಗತ್ಯ’ ಎಂಬುದು ಸೈಬರ್ ತಜ್ಞರ ಮಾತು. `ಇಂದಿನ ಕಾಲದಲ್ಲಿ ಪ್ರೀತಿ ಮತ್ತು ವಂಚನೆ ಒಂದೇ ನಾಣ್ಯದ ಎರಡು ಮಗ್ಗಲುಗಳಂತಿರುವಾಗ, ಜಾಗರೂಕತೆ ಎಂಬುದು ಸಂಬAಧದ ಮೊದಲ ಹೆಜ್ಜೆಯಾಗಬೇಕು. ಲಿಸಿ. ಭಾವನೆ ಇರಲಿ, ಆದರೆ ಜಾಗ್ರತೆ ಕಳೆದುಕೊಳ್ಳಬೇಡಿ’ ಎನ್ನುತ್ತಾರೆ ಸೈಬರ್ ಅಪರಾಧಗಳ ಬಗ್ಗೆ ಅರಿವು ಮೂಡಿಸುತ್ತಿರುವ ಸತೀಶ ಮಾಗೋಡು. - [ಸಮುದ್ರಕ್ಕಿಳಿದ ಸಹೋದರರ ಸಾವು!](https://mobiletime.in/2025/12/brothers-die-after-falling-into-the-sea/): ಅರಬ್ಬಿ ಸಮುದ್ರದ ಅಲೆಗೆ ಸಿಲುಕಿ ಸಹೋದರರು ಸಾವನಪ್ಪಿದ್ದಾರೆ. ಒಬ್ಬರನ್ನು ರಕ್ಷಿಸಲು ಹೋಗಿ ಮತ್ತೊಬ್ಬರು ಅಪಾಯಕ್ಕೆ ಸಿಲುಕಿದ್ದು, ಕೊನೆಗೆ ಇಬ್ಬರೂ ಕೊನೆಯುಸಿರೆಳೆದಿದ್ದಾರೆ. ಹೊನ್ನಾವರದ ಮಂಕಿ ಬಳಿಯ ದೇವರಗದ್ದೆಯಲ್ಲಿ ನಾರಾಯಣ ಖಾರ್ವಿ ಅವರು ವಾಸವಾಗಿದ್ದಾರೆ. ಅವರ ಮಕ್ಕಳಾದ ಸುಜನ ಖಾರ್ವಿ (15) ಹಾಗೂ ಮದನ್ ಖಾರ್ವಿ (17) ಅವರು ಗುರುವಾರ ಸಂಜೆ ಸಮುದ್ರಕ್ಕೆ ಹೋಗಿದ್ದರು. ನಿತ್ಯದ ರೂಢಿಯಂತೆ ಅವರು ಅಲ್ಲಿ ಕಬ್ಬಡ್ಡಿ ಆಟ ಆಡಿದ್ದರು. ಅದಾದ ನಂತರ ಮಂಕಿ ಮಡಿ ಸಮುದ್ರ ದಡೆಯಿಂದ ಮೀನು ಹಿಡಿಯುವುದಕ್ಕಾಗಿ ಹೊರಟರು. 100ಮೀ ಸಾಗುವಷ್ಟರಲ್ಲಿ ದೊಡ್ಡ ಅಲೆಯೊಂದು ಬಂದಿತು. ಆ ಅಲೆಯ ರಭಸಕ್ಕೆ ಅವರಿದ್ದ ಪಾತಿದೋಣಿ ಮುಳುಗಿತು. ಈ ವೇಳೆ ಸುಜನ ಖಾರ್ವಿ ಅವರು ಕೊಚ್ಚಿ ಹೋಗಿದ್ದು, ಅವರನ್ನು ರಕ್ಷಿಸಲು ಹೋದ ಮದನ್ ಖಾರ್ವಿ ಸಹ ನೀರು ಪಾಲಾದರು. ಪಾತಿದೋಣಿ ಸಹ ಆ ವೇಳೆ ಕಣ್ಮರೆಯಾಯಿತು. ನೀರಿನಲ್ಲಿ ಮುಳುಗಿದವರು ಮೇಲೆ ಬರಲಾರದೇ ಸಾವನಪ್ಪಿದರು. ಸಾಕಷ್ಟು ಹುಡುಕಾಟ ನಡೆಸಿದ ನಂತರ ರಾತ್ರಿ ವೇಳೆ ಅವರ ಶವ ಸಿಕ್ಕಿತು. ಸೂರಜ ಜನ್ನಾ ಖಾರ್ವಿ ಅವರು ಈ ವಿಷಯದ ಬಗ್ಗೆ ಮಾಹಿತಿ ನೀಡಿದರು. ಮಂಕಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿದರು. ಸಾವನಪ್ಪಿದ ಸಹೋದರರ ಮತ್ತೊಬ್ಬ ಸಹೋದರ ಅಂಗವೈಕಲ್ಯದಿoದ ಬಳಲುತ್ತಿದ್ದು, ಇಡೀ ಕುಟುಂಬ ಶೋಕದಲ್ಲಿ ಮುಳುಗಿದೆ.   - [ಮುರುಡೇಶ್ವರ: ಕೀರ್ತಿ ಲಾಡ್ಜು.. ರೂಂ ನಂ 206!](https://mobiletime.in/2025/12/murudeshwar-kirti-lodge-room-no-206/): ಕೀರ್ತಿ ಲಾಡ್ಜಿಗೆ ಭೇಟಿ ಕೊಟ್ಟ ಸಿಪಿಐ ಜಗದೀಶ ಹಂಚನಾಳ ಅವರು ರೂಂ ನಂ 206ರ ಬಾಗಿಲು ಬಡಿದಿದ್ದಾರೆ. ಆ ವೇಳೆ ಅಲ್ಲಿ ಕಾನೂನುಬಾಹಿರ ಕ್ರೀಡೆಯಲ್ಲಿ ಮಗ್ನರಾಗಿದ್ದ 11 ಜನ ಸಿಕ್ಕಿಬಿದ್ದಿದ್ದಾರೆ. ಭಟ್ಕಳದ ಮುರುಡೇಶ್ವರದ ಉತ್ತರಕೊಪ್ಪ ರಸ್ತೆ ಬಳಿಯಿರುವ ಕೀರ್ತಿ ಲಾಡ್ಜಿನಲ್ಲಿ ಜೂಜಾಟ ನಡೆಯುತ್ತಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಸಿಕ್ಕಿದೆ. ಈ ಹಿನ್ನಲೆ ಡಿಸೆಂಬರ್ 18ರಂದು ಪೊಲೀಸರು ಲಾಡ್ಜಿನ ಮೇಲೆ ದಾಳಿ ಮಾಡಿದ್ದಾರೆ. ಆಗ, ಮುರುಡೇಶ್ವರದ ಗುಮ್ಮನಹಕ್ಲು ಬಳಿಯ ಟೇಲರಿಂಗ್ ಕೆಲಸ ಮಾಡುವ ಸುಬ್ರಹ್ಮಣ್ಯ ಜಟ್ಟಾ ನಾಯ್ಕ, ತೆರ್ನಮಕ್ಕಿಯ ಹಮಾಲಿ ನಾರಾಯಣ ಮಂಜಪ್ಪ ನಾಯ್ಕ, ಕಾಯ್ಕಿಣಿ ಬಿದ್ರೆಮನೆಯ ಶಿಲ್ಪಿ ಕೃಷ್ಣ ಮಂಜುನಾಥ ನಾಯ್ಕ, ಅದೇ ಊರಿನ ಮತ್ತೊಬ್ಬ ಶಿಲ್ಪಿ ರಮೇಶ ನಾಗಪ್ಪ ನಾಯ್ಕ ಅವರು ಎದುರಾಗಿದ್ದಾರೆ. ಅವರ ಜೊತೆ ಬಿದ್ರೆಮನೆಯ ಹೊಟೇಲ್ ಕಾರ್ಮಿಕ ಗೋಪಾಲ ನಾರಾಯಣ ನಾಯ್ಕ, ತೆರ್ನಮಕ್ಕಿ ಸಭಾತಿಯ ಫೋಟೋಗ್ರಾಫರ್ ಮಹೇಶ ಗಣಪತಿ ನಾಯ್ಕ, ಭಟ್ಕಳ ಹರಾಡಿಯ ಶಿಲ್ಪಿ ಶ್ರೀನಿವಾಸ ಮಂಜುನಾಥ ನಾಯ್ಕ, ತೆರ್ನಮಕ್ಕಿ ಸಭಾತಿಯ ಕೂಲಿ ಕಾರ್ಮಿಕ ನಾಗರಾಜ ಮಂಜುನಾಥ ನಾಯ್ಕ, ಅದೇ ಊರಿನ ಶಿಲ್ಪಿ ಭಾಸ್ಕರ್ ಮಂಜುನಾಥ ನಾಯ್ಕ, ಮುರುಡೇಶ್ವರ ತೆರ್ನಮಕ್ಕಿಯ ಚಾಲಕ ರಾಜೇಶ ಮಾದೇವ ನಾಯ್ಕ ಅವರು ಇಸ್ಪೀಟ್ ಆಟದಲ್ಲಿ ಮಗ್ನರಾಗಿದನ್ನು ಪೊಲೀಸರು ಗಮನಿಸಿದ್ದಾರೆ. ಮುರುಡೇಶ್ವರ ಪಿಎಸ್‌ಐ ಹಣಮಂತ ಬೀರಾದರ್, ಮಂಕಿ ಪಿಎಸ್‌ಐ ಭರತಕುಮಾರ ಸೇರಿ ಈ ಕಾರ್ಯಾಚರಣೆ ನಡೆಸಿದ್ದು, ಅಲ್ಲಿ ಸಿಕ್ಕ 7750ರೂ ಹಣವನ್ನು ವಶಕ್ಕೆಪಡೆದಿದ್ದಾರೆ. ಜೊತೆಗೆ ಆರೋಪಿತರ ಬಳಿಯಿದ್ದ 11 ಮೊಬೈಲುಗಳನ್ನು ಜಪ್ತು ಮಾಡಿದ್ದಾರೆ. ಅದಾದ ನಂತರ ಈ 11 ಜನರ ಜೊತೆ ಕೀರ್ತಿ ಲಾಡ್ಜಿನ ಮ್ಯಾನೇಜರ್ ವಿರುದ್ಧವೂ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. - [Myntra ಶಾಫಿಂಗ್ ಮಾಡಿದವನಿಗೆ ಮೋಸ!](https://mobiletime.in/2025/12/cheating-on-a-myntra-shopper/): ಕಡಿಮೆ ಬೆಲೆಗೆ ಬಟ್ಟೆ ಸಿಗುತ್ತದೆ ಎಂದು ಮೈಂತ್ರಾ ಎಂಬ ಆನ್ಲೆöÊನ್ ಮಳಿಗೆ ಮೊರೆ ಹೋಗಿದ್ದ ಸಚಿನ್ ದುರ್ಗೇಕರ್ ಅವರಿಗೆ ಲಕ್ಷ ರೂ ನಷ್ಟವಾಗಿದೆ. ಬಟ್ಟೆ ಖರೀದಿ ನಂತರ ಅವರ ಖಾಸಗಿ ಮಾಹಿತಿ ಸೋರಿಕೆಯಾಗಿದ್ದು, ಆಫರ್ ಹೆಸರಿನಲ್ಲಿ ವಂಚಕರು ಮೋಸ ಮಾಡಿದ್ದಾರೆ. ಕಾರವಾರದ ಮುದುಗಾ ಸೀಬರ್ಡ ಕಾಲೋನಿಯ ಸಚಿನ್ ಪ್ರಕಾಶ ದುರ್ಗೇಕರ್ ಅವರು ಗ್ರಾಸೀಂ ಕಂಪನಿಯ ನೌಕರರಾಗಿದ್ದಾರೆ. ಅಕ್ಟೊಬರ್ 25ರಂದು ಅವರು ಮೈಂತ್ರಾ ಎಂಬ ವೆಬ್‌ಸೈಟ್ ಮೂಲಕ ವಿವಿಧ ಬಟ್ಟೆಗಳನ್ನು ಆರ್ಡರ್ ಮಾಡಿದ್ದಾರೆ. ಅಕ್ಟೊಬರ್ 29ರಂದು ಆ ಬಟ್ಟೆಗಳು ಅವರಿಗೆ ತಲುಪಿದೆ. ಅದಾದ ನಂತರ ಸಚಿನ್ ದುರ್ಗೇಕರ್ ಅವರ ಹೆಸರು, ವಿಳಾಸದ ಜೊತೆ ಮೊಬೈಲ್ ನಂ ಸೋರಿಕೆಯಾಗಿದೆ. ಅಕ್ಟೊಬರ್ 30ರಂದು ಸಚಿನ್ ದುರ್ಗೇಕರ್ ಅವರಿಗೆ ವಾಟ್ಸಪ್ ಮೂಲಕ ಕರೆಯೊಂದು ಬಂದಿದೆ. ಮೈಂತ್ರಾ ಎಂಬ ಹೆಸರಿನಲ್ಲಿ ಫೋನ್ ಬಂದ ಕಾರಣ ಅದನ್ನು ಸಚಿನ್ ದುರ್ಗೇಕರ್ ಅವರು ಸ್ವೀಕರಿಸಿದ್ದಾರೆ. `ಮೈಂತ್ರಾದಲ್ಲಿ ಇನ್ನಷ್ಟು ಆಫರ್ ಇದೆ’ ಎಂದು ಕರೆ ಮಾಡಿದ ವ್ಯಕ್ತಿ ಹೇಳಿದ್ದು, ಅದನ್ನು ಸಚಿನ್ ದುರ್ಗೇಕರ್ ಅವರು ನಂಬಿದ್ದಾರೆ. ಆ ಆಫರ್ ಪಡೆಯುವುದಕ್ಕಾಗಿ ತಮ್ಮ ಬ್ಯಾಂಕ್ ಖಾತೆ ವಿವರವನ್ನು ಹಂಚಿಕೊoಡಿದ್ದಾರೆ. ಅಪರಿಚಿತ ನೀಡಿದ ಲಿಂಕ್ ಕ್ಲಿಕ್ಕಿಸಿ ಅಲ್ಲಿ ತಮ್ಮ ಬ್ಯಾಂಕ್ ಖಾತೆ ವಿವರ ಹಂಚಿಕೊoಡ ತರುವಾಯ ಸಚಿನ್ ದುರ್ಗೇಕರ್ ಅವರ ಖಾತೆಯಲ್ಲಿದ್ದ ಹಣ ಕಡಿತವಾಗಿದೆ. ಅವರ ಯೂನಿಯನ್ ಬ್ಯಾಂಕ್ ಖಾತೆಯಲ್ಲಿದ್ದ 97 ಸಾವಿರ ತಕ್ಷಣ ಖಾಲಿಯಾಗಿದೆ. ಜೊತೆಗೆ ಎಚ್ ಡಿ ಎಫ್ ಸಿ ಬ್ಯಾಂಕಿನ ಖಾತೆಯಲ್ಲಿದ್ದ 40 ಸಾವಿರ ರೂ ಕಡಿತವಾಗಿದೆ. 1.37 ಲಕ್ಷ ರೂ ಕಳೆದುಕೊಂಡ ಸಚಿನ್ ದುರ್ಗೇಕರ್ ಅವರು ಪೊಲೀಸರ ಮೊರೆ ಹೋಗಿದ್ದು, ಸೈಬರ್ ಅಪರಾಧ ಠಾಣೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. - [ಹಸಿ ಅಡಿಕೆ: ಗೊಂದಲದ ನಡುವೆಯೂ ದಾಖಲೆ!](https://mobiletime.in/2025/12/raw-areca-nut-a-record-despite-the-confusion/): ಹಸಿ ಅಡಿಕೆ ಮಾರಾಟ ವಿಷಯವಾಗಿ TSS ಹಾಗೂ ವ್ಯಾಪಾರಸ್ಥರ ನಡುವೆ ಹಗ್ಗ ಜಗ್ಗಾಟ ನಡೆದಿದೆ. ಆ ನಡುವೆಯೂ ದಾಖಲೆ ಪ್ರಮಾಣದಲ್ಲಿ ಹಸಿ ಅಡಿಕೆ ಟೆಂಡರಿಗೆ ಬರುತ್ತಿದ್ದು, ದರವೂ ತೀರಾ ಏರುಪೇರಾಗಿಲ್ಲ. `ಹಸಿ ಅಡಿಕೆ ಟೆಂಡರ್ ವೇಳೆ ಅಡಿಕೆ ಜೊತೆಗಿರುವ ಜಂಗಿನ ತೂಕ ಬಿಡಬೇಕು’ ಎಂಬುದು ವ್ಯಾಪಾರಸ್ಥರ ವಾದ. `ಟಿಎಸ್‌ಎಸ್ ಸಂಸ್ಥೆಯವರು ಜಂಗಿನ ತೂಕವನ್ನು ಸೇರಿ ಕಮಿಷನ್ ವಿಧಿಸುತ್ತಿದ್ದು, ಅದರಿಂದ ವ್ಯಾಪಾರಸ್ಥರಿಗೆ ಅನ್ಯಾಯವಾಗುತ್ತಿದೆ’ ಎಂಬುದು ಅವರ ಅಳಲು. ಆದರೆ, `ಮೊದಲಿನಿಂದಲೂ ಇದೇ ಪದ್ಧತಿಯಿದೆ. ಅದರ ಬದಲಾವಣೆ ಅಸಾಧ್ಯ. `ಸಹಕಾರಿ ಸಂಘವೂ ಟೆಂಡರಿನಲ್ಲಿ ಭಾಗವಹಿಸುತ್ತಿದೆ’ ಎಂಬುದು ಟಿಎಸ್‌ಎಸ್ ಮಾತು. `ಈ ಗೊಂದಲ ಸರಿಯಾಗುವವರೆಗೂ ಟೆಂಡರ್ ಬರೆಯುವುದಿಲ್ಲ’ ಎಂದು ವ್ಯಾಪಾರಸ್ಥರು ಪಟ್ಟು ಹಿಡಿದಿದ್ದು, ಬುಧವಾರದಿಂದಲೇ ಬಹುತೇಕ ವ್ಯಾಪಾರಿಗಳು ಟಿ ಎಸ್ ಎಸ್ ಅಂಗಳದಿOದ ದೂರ ಸರಿದಿದ್ದಾರೆ. ಅದಾಗಿಯೂ ಟಿ ಎಸ್ ಎಸ್ ಅಂಗಳಕ್ಕೆ ಹಸಿ ಅಡಿಕೆ ಬರುವ ಪ್ರಮಾಣ ಕಡಿಮೆ ಆಗಿಲ್ಲ. ದರದಲ್ಲಿಯೂ ದೊಡ್ಡ ಪ್ರಮಾಣದಲ್ಲಿ ಏರಿಳಿತ ಕಂಡಿಲ್ಲ. ಈ ನಡುವೆ `ಹಸಿ ಅಡಕೆ ಖರೀದಿಸುವ ವೇಳೆ ಉಂಟಾಗುತ್ತಿರುವ ಸಮಸ್ಯೆಯನ್ನು ಬಗೆಹರಿಸಿ’ ಎಂದು ಹಸಿ ಅಡಕೆ ಖರೀದಿದಾರರು ಗುರುವಾರ ಎಪಿಎಂಸಿ ಅಧಿಕಾರಿಗಳಿಗೆ ಮನವಿ ಕೊಟ್ಟಿದ್ದಾರೆ. `ಪ್ರಸಕ್ತ ಸಾಲಿನಲ್ಲಿ ಅಡಿಕೆ ಕೊನೆಯಲ್ಲಿ ಜಿಂಗಿನ ಪ್ರಮಾಣ ಜಾಸ್ತಿ ಬರುತ್ತಿದೆ. ಈ ಮೊದಲು ಹಸಿ ಅಡಿಕೆ ಜೊತೆ ಜಂಗನ್ನು ಖರೀದಿಸಿದ್ದರಾದರೂ ಈ ವರ್ಷ ಜಂಗಿನ ಪ್ರಮಾಣ ಹೆಚ್ಚಿರುವ ಕಾರಣ ನಷ್ಟವಾಗುತ್ತಿದೆ’ ಎಂದವರು ತಮ್ಮ ಸಮಸ್ಯೆ ವಿವರಿಸಿದರು. `ಪ್ರತಿ ಕ್ವಿಂಟಾಲ್ ಹಸಿ ಅಡಿಕೆಗೆ 10 ಕೆಜಿ ಜಿಂಗಿನ ತೂಕ, 1 ಕೆಜಿ ವೇಸ್ಟೇಜ್ ಕಡಿಮೆ ಮಾಡಬೇಕು. ನಾವು ಖರೀದಿ ಮಾಡಿದ ಅಡಕೆಗೆ ಶೇ 2.85 5ರಿಂದ ಶೇ 3.5ರಷ್ಟು ಕಮಿಷನ್ ನೀಡುತ್ತಿದ್ದು, ಅದನ್ನು ಪರಿಶೀಲಿಸಬೇಕು’ ಎಂದು ಒತ್ತಾಯಿಸಿದರು. `ಸಂಘ-ಸ0ಸ್ಥೆ, ರೈತರು ಹಾಗೂ ವ್ಯಾಪಾರಸ್ಥರ ಹಿತಾಸಕ್ತಿಯನ್ನು ಕಾಪಾಡಲು ಪ್ರಾಮಾಣಿಕ ಪ್ರಯತ್ನ ಮಾಡಲಿದ್ದು ಹಸಿ ಅಡಿಕೆ ವ್ಯಾಪಾರದಲ್ಲಿ ರೈತರಿಗೆ ಬೆಲೆ-ತೂಕದಲ್ಲಿ ಅನ್ಯಾಯವಾಗದಂತೆ ಹಾಗೂ ವ್ಯಾಪಾರಸ್ಥರಿಗೂ ಹಾನಿಯಾಗದಂತೆ ಅನುಸರಿಸುವ ಮಾರ್ಗದ ಬಗ್ಗೆ ಚಿಂತಿಸಲಾಗುತ್ತದೆ. ಈ ಬಗ್ಗೆ ವರ್ತಕರು, ಸಂಘ ಸಂಸ್ಥೆಗಳು ಮತ್ತು ರೈತರನ್ನೊಳಗೊಂಡು ಚರ್ಚೆ ನಡೆಸುತ್ತೇವೆ’ ಎಂದು ಶಿರಸಿ ಎಪಿಎಂಸಿ ಜಂಟಿ ನಿರ್ದೇಶಕ ಸಿ ಎಚ್ ಮೋಹನ ಅವರು ಪ್ರತಿಕ್ರಿಯಿಸಿದರು. - [ಬಿಜೆಪಿ ಕಚೇರಿಗೆ ಕಾಂಗ್ರೆಸ್ ಮುತ್ತಿಗೆ!](https://mobiletime.in/2025/12/congress-lays-siege-to-bjp-office/): ಸೋನಿಯಾ ಗಾಂಧೀ ಹಾಗೂ ರಾಹುಲ್ ಗಾಂಧೀ ವಿರುದ್ಧ ಬಿಜೆಪಿಗರು ಪದೇ ಪದೇ ಆರೋಪ ಮಾಡುತ್ತಿರುವುದನ್ನು ಖಂಡಿಸಿ ಕಾಂಗ್ರೆಸ್ಸಿಗರು ಬಿಜೆಪಿ ಕಚೇರಿಗೆ ಮುತ್ತಿಗೆ ಹಾಕಿದ್ದಾರೆ. ಬಿಜೆಪಿ ವಿರುದ್ಧ ಜಿಲ್ಲಾ ಕಾಂಗ್ರೆಸ್ಸಿಗರು ಪ್ರತಿಭಟಿಸಿದ್ದಾರೆ. ಶಿರಸಿಯ ಕಾಂಗ್ರೆಸ್ ಕಾರ್ಯಾಲಯದಿಂದ ಬಿಜೆಪಿ ಕಚೇರಿಯವರೆಗೆ ಕಾಂಗ್ರೆಸ್ ಕಾರ್ಯಕರ್ತರು ಪಾದಯಾತ್ರೆ ಮಾಡಿದರು. ನಂತರ ಬಿಜೆಪಿ ಕಚೇರಿಗೆ ಮುತ್ತಿಗೆ ಹಾಕಿ ಆಕ್ರೋಶವ್ಯಕ್ತಪಡಿಸಿದರು. ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ವಿರುದ್ಧ ಧಿಕ್ಕಾರ ಕೂಗಿದರು. `ಕೇಂದ್ರದ ಬಿಜೆಪಿ ಸರ್ಕಾರ ಅಮಾಯಕರ ಮೇಲೆ ಅನಗತ್ಯ ಮೊಕದ್ದಮೆ ದಾಖಲಿಸುತ್ತಿದೆ. ವಿರೋಧ ಪಕ್ಷದ ನಾಯಕರನ್ನು ಗುರಿ ಮಾಡಿ ಪ್ರಕರಣ ದಾಖಲಿಸುತ್ತಿದೆ’ ಎಂದು ದೂರಿದರು. `ನ್ಯಾಶನಲ್ ಹೆರಾಲ್ಡ್ ಪತ್ರಿಕೆಯ ಆಸ್ತಿ ಮತ್ತು ಹಣ ವರ್ಗಾವಣೆಯಾಗಿಲ್ಲ ಎಂದು ನ್ಯಾಯಾಲಯ ತೀರ್ಪು ನೀಡಿದೆ. ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಸ್ವಾಯತ್ತ ತನಿಖಾ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಂಡು ರಾಷ್ಟ್ರೀಯ ನಾಯಕರಾದ ಸೋನಿಯಾ ಗಾಂಧಿ ಹಾಗೂ ರಾಹುಲ್ ವಿರುದ್ಧ ಆರೋಪ ಮಾಡುತ್ತಿದ್ದಾರೆ’ ಎಂದು ಕಿಡಿಕಾರಿದರು. `ನ್ಯಾಶನಲ್ ಹೆರಾಲ್ಡ್ ಪತ್ರಿಕೆಯ ಯಾವುದೇ ಹಣ ಹಾಗೂ ಆಸ್ತಿಯನ್ನು ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ದುರುಪಯೋಗಪಡಿಸಿಕೊಂಡಿಲ್ಲ ಎಂದು ನ್ಯಾಯಾಲಯವು ಕಾಂಗ್ರೆಸ್ ಪರ ತೀರ್ಪು ನೀಡಿದೆ. ಇದರಿಂದ ಬಿಜೆಪಿ ನಾಯಕರು ಕೇಂದ್ರ ಸರ್ಕಾರದ ಅಧಿಕಾರವನ್ನು ಬಳಸಿಕೊಂಡು ಕಾಂಗ್ರೆಸ್ ನಾಯಕರ ವ್ಯಕ್ತಿತ್ವದ ತೇಜೋವಧೆ ಮಾಡುತ್ತಿರುವುದು ಸ್ಪಷ್ಟವಾಗಿದೆ’ ಎಂದರು. - [ಅ ಆ ಇ ಈ ಜೊತೆ ABCD: ಅಂಗನವಾಡಿ ಮಕ್ಕಳಿಗೂ ಇಂಗ್ಲೀಷ್ ಪಾಠ!](https://mobiletime.in/2025/12/abcd-with-abcd-english-lessons-for-anganwadi-children-too/): ಅಂಗನವಾಡಿಗೆ ಬರುವ ಮಕ್ಕಳಿಗೂ ಇಂಗ್ಲೀಷ್ ಪಾಠ ಮಾಡಲು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಆಸಕ್ತಿವಹಿಸಿದೆ. ಜಿಲ್ಲೆಯ 75 ಅಂಗನವಾಡಿಗಳಲ್ಲಿ ಮೊದಲ ಹಂತವಾಗಿ LKG ಹಾಗೂ UKG ಮಾದರಿಯ ತರಗತಿಗಳನ್ನು ಶುರು ಮಾಡಲಾಗಿದೆ. ಅಂಗನವಾಡಿ ಕೇಂದ್ರದಲ್ಲಿ ಮಕ್ಕಳ ದಾಖಲಾತಿ ಹೆಚ್ಚಿಸಲು ಸರ್ಕಾರ ನಾನಾ ಬಗೆಯ ಕಸರತ್ತು ನಡೆಸುತ್ತಿದೆ. ಪಾಲಕರು ಆಂಗ್ಲ ಮಾಧ್ಯಮದ ಕಡೆ ಆಕರ್ಷಿತರಾಗುತ್ತಿರುವ ಹಿನ್ನಲೆ ಅಂಗನವಾಡಿ ಕೇಂದ್ರಗಳಲ್ಲಿಯೂ ಮಾಂಟೆಸರಿ ಮಾದರಿ ಅಂಗನವಾಡಿ ಕೇಂದ್ರಗಳಲ್ಲಿ ಆಂಗ್ಲ ಕಲಿಕೆ ಶುರು ಮಾಡಲಾಗುತ್ತಿದೆ. ಕ್ರಮೇಣ ಇದನ್ನು ಎಲ್ಲಾ ಅಂಗನವಾಡಿಗೂ ವಿಸ್ತರಿಸುವ ಯೋಜನೆ ಸರ್ಕಾರದ ಮುಂದಿದೆ. ಇದರೊಂದಿಗೆ ಸಕ್ಷಮ ಅಂಗನವಾಡಿ ಯೋಜನೆ ಅಡಿ ಶಾಲಾ ಪೂರ್ವ ಶಿಕ್ಷಣದ ಅನುಕೂಲಕ್ಕೆ ಅಂಗನವಾಡಿಗಳಿಗೆ ಟಿವಿಗಳನ್ನು ಕೊಡಲಾಗುತ್ತದೆ. ಈಗಾಗಲೇ 448 ಅಂಗನವಾಡಿಗಳಿಗೆ ಸ್ಮಾರ್ಟ ಟಿವಿ ಪೂರೈಕೆಯಾಗಿದೆ. ಅಂಗನವಾಡಿ ಶಿಕ್ಷಕರಿಗೆ ಸಹ ವಿಶೇಷ ತರಬೇತಿ ನೀಡಿದ್ದು, ಅಪೌಷ್ಠಿಕತೆಯಿಂದ ಬಳಲುತ್ತಿರುವ ಮಕ್ಕಳ ಪೌಷ್ಠಿಕಾಂಶ ಹೆಚ್ಚಳಕ್ಕೆ ವಾರದಲ್ಲಿ 5 ದಿನ ಮೊಟ್ಟೆ ಹಾಗೂ 5 ದಿನ ಹಾಲು ವಿತರಣೆ ನಡೆಯುತ್ತಿದೆ. ಪೌಷ್ಠಿಕವಾಗಿರುವ ಮಕ್ಕಳಿಗೂ ವಾರದಲ್ಲಿ 2 ದಿನ ಮೊಟ್ಟೆ ಹಾಗೂ ಹಾಲು ವಿತರಣೆ ನಡೆದಿದೆ. ಅಂಗನವಾಡಿಗಳಲ್ಲಿ ಶೌಚಾಲಯ, ಶುದ್ಧ ಕುಡಿಯುವ ನೀರು, ಫ್ಯಾನ್ ಸಂಪರ್ಕಕ್ಕೆ ಒತ್ತು ಕೊಡಲಾಗುತ್ತದೆ. ಈ ಎಲ್ಲದರ ಜೊತೆ ಅಂಗನವಾಡಿಗೆ ಸುಣ್ಣ-ಬಣ್ಣ ಬಡಿಯಲಾಗಿದ್ದು ಮಕ್ಕಳನ್ನು ಆಕರ್ಷಿಸುವ ಪ್ರಯತ್ನ ನಡೆದಿದೆ. - [ವಿದ್ಯುತ್ ಕಳ್ಳತನ ಅಪರಾಧ.. ವಿದ್ಯುತ್ ತಂತಿ ಕಳ್ಳತನ ಗಂಭೀರ ಅಪರಾಧ!](https://mobiletime.in/2025/12/electricity-theft-is-a-crime-theft-of-electric-wires-is-a-serious-crime/): ಭಾಸ್ಕರ ಮರಾಠಿ ಅವರ ತೋಟದಿಂದ ಗೋಪಾಲ ಸಿದ್ದಿ ಅವರ ಮನೆ ಸಮೀಪದವರೆಗೆ ಹಾದುಹೋಗಿದ್ದ ವಿದ್ಯುತ್ ತಂತಿಯನ್ನು ಕಳ್ಳರು ಕೊಂಡೊಯ್ದಿದ್ದಾರೆ. ಹೆಸ್ಕಾಂ ಸಿಬ್ಬಂದಿ ಎರಡು ದಿನ ಕಳ್ಳರ ಹುಡುಕಾಟ ನಡೆಸಿದರೂ ಅವರು ಸಿಗದ ಕಾರಣ ಪೊಲೀಸರ ಮೊರೆ ಹೋಗಿದ್ದಾರೆ. ಯಲ್ಲಾಪುರದ ಕಿರವತ್ತಿ ವ್ಯಾಪ್ತಿಯಲ್ಲಿ ಈ ವಿದ್ಯುತ್ ತಂತಿ ಕಳ್ಳತನ ನಡೆದಿದೆ. ಜನಶೆಟ್ಟಿಕೊಪ್ಪದ ಭಾಸ್ಕರ ಮರಾಠಿ ಅವರ ತೋಟದಿಂದ ಕೈರಗಾಳಿ ಗ್ರಾಮದ ಟಿಸಿವರೆಗೆ ಹಾದು ಹೋಗಿದ್ದ 3 ಲೈನ್ ವಿದ್ಯುತ್ ತಂತಿಯನ್ನು ಕಳ್ಳರು ಕದ್ದಿದ್ದಾರೆ. ಇಲ್ಲಿ 484ಮೀಟರ್ ಉದ್ದದ ವಿದ್ಯುತ್ ಮಾರ್ಗ ಕಳ್ಳತನವಾಗಿದೆ. ಇದರೊಂದಿಗೆ ಕೈರಗಾಳಿ ಟಿಸಿಯಿಂದ ಅದೇ ಊರಿನ ಗೋಪಾಲ ಸಿದ್ದಿ ಅವರ ಮನೆಯವರೆಗಿನ ಎರಡು ಲೈನ್ ವಿದ್ಯುತ್ ತಂತಿಯನ್ನು ಕಳ್ಳರು ಕೊಂಡೊಯ್ದಿದ್ದಾರೆ. ಇಲ್ಲಿಯೂ 210 ಮೀಟರ್ ವಿದ್ಯುತ್ ತಂತಿ ಮಾಯವಾಗಿದೆ. ಒಂದು ಕಡೆಯಿಂದ ವಿದ್ಯುತ್ ಪ್ರಸಾರ ಸಮಸ್ಯೆ ಆದರೆ ಇನ್ನೊಂದು ಕಡೆಯಿಂದ ವಿದ್ಯುತ್ ಪೂರೈಸಲು ಈ ಭಾಗದಲ್ಲಿ ಪ್ರತ್ಯೇಕ ತಂತಿ ಅಳವಡಿಸಲಾಗಿತ್ತು. ಸದ್ಯ ಆ ಪ್ರತ್ಯೇಕ ಲೈನಿನ ತಂತಿ ಕಳ್ಳರ ಪಾಲಾಗಿದೆ. ಅಪಾಯಕಾರಿಯಾದ ವಿದ್ಯುತ್ ಕಂಬ ಏರಿ ಕಳ್ಳರು ಅಲ್ಲಿದ್ದ ತಂತಿ ಕದ್ದಿದ್ದಾರೆ. ಕಳ್ಳತನಕ್ಕಾಗಿ ಅವರು ವಿದ್ಯುತ್ ತಂತಿ ತುಂಡು ಮಾಡಿದ್ದು, ಈ ಅವಧಿಯಲ್ಲಿ ವಿದ್ಯುತ್ ಕಂಬವೊAದು ಮುರಿದಿದೆ. ಡಿಸೆಂಬರ್ 12ರಿಂದ 15ರವರೆಗಿನ ಅವಧಿಯಲ್ಲಿ ಈ ಕಳ್ಳತನ ನಡೆದಿರುವ ಅನುಮಾನಗಳಿವೆ. ಒಂದೇ ಮಾರ್ಗದ ಎರಡು ಕಡೆ ಸೇರಿ ಒಟ್ಟು 1872 ಮೀಟರ್ ವಿದ್ಯುತ್ ತಂತಿ ಕಳ್ಳರಿಗೆ ಸಿಕ್ಕಿದ್ದು, ಈ ಕಳ್ಳತನದಿಂದ ಹೆಸ್ಕಾಂ’ಗೆ 98 ಸಾವಿರ ರೂ ನಷ್ಟವಾಗಿದೆ. ವಿದ್ಯುತ್ ತಂತಿ ಕಳ್ಳತನದ ಬಗ್ಗೆ ಅರಿತ ಕಿರವತ್ತಿಯ ಹೆಸ್ಕಾಂ ಅಧಿಕಾರಿ ವಿಶಾಲ ಹೈಗಾರ್ ಅವರು ಮೊದಲು ಕಳ್ಳರ ಹುಡುಕಾಟ ಮಾಡಿದ್ದಾರೆ. ಅದಾದ ನಂತರ ಸಹಾಯಕ ಕಾರ್ಯನಿವಾಹಕ ಇಂಜೀನಿಯರ್ ಅವರಿಗೆ ವಿಷಯ ಮುಟ್ಟಿಸಿದ್ದಾರೆ. ಕಳ್ಳರು ಸಿಗದೇ ಇದ್ದಾಗ ಪೊಲೀಸರ ಮೊರೆ ಹೋಗಿದ್ದು, ಪ್ರಕರಣ ದಾಖಲಿಸಿದ ಯಲ್ಲಾಪುರ ಪೊಲೀಸರು ತನಿಖೆ ಶುರು ಮಾಡಿದ್ದಾರೆ. - [ಬಾಲಕಿ ಮುಂದೆ ಘರ್ಜನೆ: ಬೋನಿಗೆ ಬಿದ್ದ ನಕಲಿ ಸಿಂಹ!](https://mobiletime.in/2025/12/a-fake-lion-roared-in-front-of-a-girl-it-fell-into-a-trap/): ಗೋವಾ ನೋಂದಣಿಯ ಕಾರಿಗೆ `ಕನ್ನಡಿಗರ ರಕ್ಷಣಾ ವೇದಿಕೆ’ ಹೆಸರು ಹಾಕಿಕೊಂಡಿದ್ದ ಕೃಷ್ಣ ಹುಲಸ್ವಾರ್ ಅವರು `ಸಿಂಹ ಘರ್ಜನೆ’ ರಾಜ್ಯಧ್ಯಕ್ಷ ಎಂದು ಹೇಳಿ ಬಾಲಕಿಯೊಬ್ಬರಿಗೆ ಕಾಟ ಕೊಟ್ಟಿದ್ದಾರೆ. ಸಂತ್ರಸ್ತ ಬಾಲಕಿ ರಕ್ಷಣೆಗಾಗಿ ಪಾಲಕರ ಜೊತೆ ಸೇರಿ ಪೊಲೀಸರ ಮೊರೆ ಹೋಗಿದ್ದಾರೆ. ಹಳಿಯಾಳದ ತತ್ವಣಗಿ ಗ್ರಾಮದ ಕೃಷ್ಣ ಮಾರುತಿ ಹುಲಸ್ವಾರ ಅವರು ವಿಶ್ವ ಕನ್ನಡಿಗರ ರಕ್ಷಣಾ ವೇದಿಕೆ (ಸಿಂಹ ಘರ್ಜನೆ) ಸಂಸ್ಥಾಪಕ ರಾಜ್ಯಾಧ್ಯಕ್ಷ ಎಂಬ ಪದವಿಹೊಂದಿದ್ದಾರೆ. ತಮ್ಮ ಸಾಮಾಜಿಕ ಪುಟಗಳಲ್ಲಿ ಅವರು ಅನೇಕ ಬಗೆಯ ಹೋರಾಟದ ವಿಡಿಯೋಗಳನ್ನು ಹಾಕಿದ್ದಾರೆ. ಈ ಎಲ್ಲದರ ನಡುವೆ ಶಾಲೆಗೆ ಹೋಗುವ ಬಾಲಕಿಯನ್ನು ಅವರು ಹಿಂಬಾಲಿಸಿ, ಹಿಂಸೆ ಕೊಟ್ಟಿದ್ದಾರೆ. ಆ ಬಾಲಕಿಯ ವಿಡಿಯೋ ಮಾಡಿ ಹೆದರಿಸಿದ್ದಾರೆ. ಬಾಲಕಿ ಸ್ನೇಹಿತರ ಜೊತೆ ಊಟಕ್ಕಾಗಿ ಉದ್ಯಾನವನದ ಕಡೆ ಹೋದಾಗ ಕೃಷ್ಣ ಹುಲಸ್ವಾರ್ ಬೆನ್ನು ಬಿದ್ದಿದ್ದಾರೆ. ಈ ಬಗ್ಗೆ ಬಾಲಕಿಯ ಪಕ್ಕದ ಮನೆಯ ಪ್ರವೀಣ ಭಜಂತ್ರಿ ಅವರು ಫೋನ್ ಮಾಡಿ ವಿಚಾರಿಸಿದಾಗ ಕೃಷ್ಣ ಹುಲಸ್ವಾರ್ ಬೆದರಿಕೆ ಒಡ್ಡಿದ್ದಾರೆ. . ಬಾಲಕಿ ತಂದೆ ಪರಶುರಾಮ ಮೂಲಿಮನಿ ಅವರು ನೀಡಿದ ಪ್ರಕಾರ ಕೃಷ್ಣ ಹುಲಸ್ವಾರ್ ಅವರ ವಿರುದ್ಧ ಹಳಿಯಾಳ ಪೊಲೀಸರು ಕಾನೂನು ಕ್ರಮ ಜರುಗಿಸಿದ್ದಾರೆ. - [ಕತ್ತಲೆಯಲ್ಲಿ ಬಂದ ಕಾರಿನಲ್ಲಿ ಸಾಗವಾನಿ ತುಂಡು!](https://mobiletime.in/2025/12/a-piece-of-luggage-in-a-car-that-arrived-in-the-dark/): ಕತ್ತಲೆಯ ದಾರಿಯಲ್ಲಿ ಜೋರಾಗಿ ಬರುತ್ತಿದ್ದ ಕಾರಿಗೆ ಅಡ್ಡಲಾಗಿ ಅಧಿಕಾರಿಗಳು ಕೈ ಮಾಡಿದ್ದಾರೆ. ಆ ವೇಳೆ ಆ ಕಾರಿನಲ್ಲಿ ಬೆಲೆ ಬಾಳುವ ಸಾಗವಾನಿ ಮರದ ತುಂಡುಗಳು ಸಿಕ್ಕಿದೆ. ಹಳಿಯಾಳ – ಯಲ್ಲಾಪುರ ಮುಖ್ಯ ರಸ್ತೆಯಲ್ಲಿ ಕಾರು ಸಿಕ್ಕಿ ಬಿದ್ದಿದೆ. ಸಾಂಬ್ರಾಣಿ ವಲಯದ ಅರಣ್ಯಾಧಿಕಾರಿಗಳು ಈ ಕಾರ್ಯಾಚರಣೆ ಮಾಡಿದ್ದಾರೆ. ವಲಯ ಅರಣ್ಯಾಧಿಕಾರಿ ಸಂಗಮೇಶ ಪಾಟೀಲ ಅವರಿಗೆ ಸಿಕ್ಕ ಮುನ್ಸೂಚನೆ ಆಧಾರದಲ್ಲಿ ಅವರ ತಂಡದವರು ಟಾಟಾ ಇಂಡಿಕಾ ವಿಸ್ಟಾ ಕಾರನ್ನು ವಶಕ್ಕೆಪಡೆದಿದ್ದಾರೆ. ಯಾವುದೇ ಪರವಾನಿಗೆ ಇಲ್ಲದೇ ಸಾಗಿಸುತ್ತಿದ್ದ ಸಾಗವಾನಿ ನಾಟಾಗಳು ಅಲ್ಲಿ ದೊರೆತಿದೆ. ಕಾರನ್ನು ನಿಲ್ಲಿಸಿದ ಚಾಲಕ ಕತ್ತಲಿನಲ್ಲಿ ಚಾಣಾಕ್ಷತನದಿಂದ ಪರಾರಿಯಾಗಿದ್ದು, ಅರಣ್ಯ ಅಧಿಕಾರಿಗಳಿಂದ ಆ ಕಳ್ಳನನ್ನು ಹಿಡಿಯಲು ಸಾಧ್ಯವಾಗಿಲ್ಲ. ಸುತ್ತಲಿನ ಅನೇಕ ಹಳ್ಳಿಗಳಲ್ಲಿ ಅರಣ್ಯ ಸಿಬ್ಬಂದಿ ಮರಗಳ್ಳತನ ನಡೆಸಿದವನಿಗಾಗಿ ಶೋಧ ಶುರು ಮಾಡಿದ್ದಾರೆ. ಸದ್ಯ ಕಾರಿನ ಜೊತೆ ಮರದ ತುಂಡುಗಳನ್ನು ಅಧಿಕಾರಿಗಳು ಜಪ್ತು ಮಾಡಿದ್ದಾರೆ. - [ಬಂಗಾರ ಕದ್ದು ಸಿನಿಮಾ ಮಾಡಿದ ನಿರ್ಮಾಪಕ!](https://mobiletime.in/2025/12/producer-who-stole-gold-and-made-a-movie/): ಅಲ್ಲಿ-ಇಲ್ಲಿ ಕಳ್ಳತನ ಮಾಡಿದ ದುಡ್ಡನ್ನು ಸಿನಿಮಾ ನಿರ್ಮಾಣಕ್ಕೆ ಬಳಸುತ್ತಿದ್ದ ಹರ್ಷವರ್ಧನ ಅವರನ್ನು ಪೊಲೀಸರು ಬಂಧಿಸಿದ್ದು, ಬಂಧನದ ಬೆನ್ನಲ್ಲೆ ಅವರ ವಿರುದ್ಧ ಸಿನಿಮಾ ನಟಿಯೊಬ್ಬರನ್ನು ಅಪಹರಿಸಿದ ಆರೋಪ ಕೇಳಿ ಬಂದಿದೆ. 2017ರಲ್ಲಿ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದ ಹಲಗೇರಿ ಸಮೀಪದ ಕುಂಬಾರಕುಳಿಯಲ್ಲಿ ಮನೆ ಕಳ್ಳತನ ನಡೆದಿತ್ತು. ಆ ಪ್ರಕರಣ ಬೆನ್ನತ್ತಿದ ಪೊಲೀಸರು ಬೆಂಗಳೂರಿನಲ್ಲಿ ವಾಸವಾಗಿದ್ದ ಹಾಸನ ಮೂಲದ ಹರ್ಷವರ್ಧನ್ ಎಂಬಾತರನ್ನು ಬಂಧಿಸಿದ್ದರು. ಹರ್ಷವರ್ಧನ್ ಅವರು ಜಾಮೀನುಪಡೆದು ಪರಾರಿಯಾಗಿದ್ದು, ನಂತರ ನ್ಯಾಯಾಲಯಕ್ಕೆ ಹಾಜರಾಗಿರಲಿಲ್ಲ. ಅದಾದ ನಂತರ ಬೆಂಗಳೂರು, ಉಡುಪಿ, ಮೈಸೂರು ಸೇರಿ ಅನೇಕ ಕಡೆ ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿದ್ದ ಹರ್ಷವರ್ಧನ್ ಆ ಹಣವನ್ನು ಸಿನಿಮಾ ನಿರ್ಮಾಣಕ್ಕೆ ಬಳಸಿದ್ದರು. 10ಕ್ಕೂ ಅಧಿಕ ಸಲ ವಾರೆಂಟ್ ಆದರೂ ಹರ್ಷವರ್ಧನ್ ಸಿಕ್ಕಿರಲಿಲ್ಲ. ಡಿಸೆಂಬರ್ 12ರಂದು ಸಿದ್ದಾಪುರ ಪೊಲೀಸರು ಹರ್ಷವರ್ಧನ್ ಅವರು ಬೆಂಗಳೂರಿನ ಬ್ಯಾಟರಾಯನಪುರದಲ್ಲಿರುವ ಮಾಹಿತಿ ಆಧರಿಸಿ ಬಂಧಿಸಿದರು. ಸಿದ್ದಾಪುರ ನ್ಯಾಯಾಲಯದಿಂದ ಮತ್ತೆ ಜಾಮೀನುಪಡೆದು ಹರ್ಷವರ್ಧನ್ ಬೆಂಗಳೂರು ತಲುಪಿದ್ದು, ಅಲ್ಲಿನ ಪೊಲೀಸರು ಅಪಹರಣ ಪ್ರಕರಣದಲ್ಲಿ ಮತ್ತೆ ಅವರನ್ನು ವಶಕ್ಕೆಪಡೆದಿದ್ದಾರೆ. ಹರ್ಷವರ್ಧನ್ ಅವರು `ವರ್ಧನ್ ಸಿನಿಮಾಸ್ ಕಂಪನಿ’ ಮಾಲಕರಾಗಿದ್ದಾರೆ. ಅವರು `ನಿನ್ನಲ್ಲೇನೋ ಹೇಳಬೇಕು’ ಎಂಬ ಚಿತ್ರ ನಿರ್ಮಾಣ ಮಾಡಿದ್ದರು. ಆ ಚಿತ್ರದಲ್ಲಿ ನಟಿಸಿದ್ದ ಚೈತ್ರಾ ಎಂಬ ನಟಿಯನ್ನು ಪ್ರೀತಿಸಿ ಮದುವೆ ಆಗಿದ್ದರು. ಚೈತ್ರಾ ಅವರು ಕಿರುತೆರೆಯಲ್ಲಿ ವಿವಿಧ ಧಾರಾವಾಹಿಗಳಲ್ಲಿಯೂ ನಟನೆ ಮಾಡಿದ್ದು, ಆ ದಂಪತಿಗೆ ಒಬ್ಬ ಮಗುವಿದೆ. ಈ ನಡುವೆ ಹರ್ಷವರ್ಧನ್ ಹಾಗೂ ಚೈತ್ರಾ ನಡುವೆ ಬಿರುಕು ಮೂಡಿತು. ಹೀಗಾಗಿ ಚೈತ್ರಾ ಅವರು ಹರ್ಷವರ್ಧನರ ಸಹವಾಸದಿಂದ ದೂರವಾಗಿದ್ದು, ಮಗಳನ್ನು ತಮ್ಮೊಡನೆ ಕರೆದೊಯ್ದಿದ್ದರು. `ಮಗಳನ್ನು ನೋಡಲು ಪತ್ನಿ ಅವಕಾಶ ನೀಡುವುದಿಲ್ಲ’ ಎಂಬ ಕಾರಣಕ್ಕೆ ಹರ್ಷವರ್ಧನ್ ಅವರು ಚೈತ್ರಾ ಅವರನ್ನು ಅಪಹರಿಸಿದ್ದರು. ಅದಾದ ನಂತರ ಚೈತ್ರಾಳ ತಾಯಿಗೆ ಕರೆ ಮಾಡಿ `ನಿನ್ನ ಮಗಳು ಬೇಕಿದ್ದರೆ ನನ್ನ ಮಗಳನ್ನು ತಂದು ಒಪ್ಪಿಸು’ ಎಂದು ಬೆದರಿಕೆ ಹಾಕಿದ್ದರು. ಚೈತ್ರಾಳ ಸಹೋದರಿ ಲೀಲಾ ಬ್ಯಾಟರಾಯನಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಸಿದ್ದಾಪುರದಿಂದ ಜಾಮೀನುಪಡೆದು ಬೆಂಗಳೂರು ಪ್ರವೇಶಿಸಿದ್ದ ಹರ್ಷವರ್ಧನ್ ಅವರನ್ನು ಅಲ್ಲಿನ ಪೊಲೀಸರು ವಶಕ್ಕೆಪಡೆದರು. - [ಅಧ್ಯಕ್ಷರ ಮೇಲಿನ ಸಿಟ್ಟಿಗೆ ಸಿಬ್ಬಂದಿಗೆ ಹಿಂಸೆ!](https://mobiletime.in/2025/12/presidents-infidelity-safe-star-society-staff-have-no-safety/): ಸೇಫ್ ಸ್ಟಾರ್ ಸೊಸೈಟಿ ಅಧ್ಯಕ್ಷ ಜಿ ಜಿ ಶಂಕರ್ ಅವರು 25ಕ್ಕೂ ಅಧಿಕ ಜನರ ತಂಡ ಕಟ್ಟಿಕೊಂಡು ಕೂಲಿ ಕಾರ್ಮಿಕರ ಮೇಲೆ ಹಲ್ಲೆ ಮಾಡಿದ್ದಾರೆ. ಜಾಗದ ವಿಷಯವಾಗಿ ಗಲಾಟೆ ನಡೆದ ನಂತರ ಜಿ ಜಿ ಶಂಕರ್ ಅವರು ಆ ಕಾರ್ಮಿಕರ ತಂಡಕ್ಕೆ ಸಿಗದೇ ತಪ್ಪಿಸಿಕೊಳ್ಳುತ್ತಿದ್ದು, ಅದೇ ಸಿಟ್ಟಿಗೆ ಜಾಗದ ಮಾಲಕ ಪೀಟರ್ ಹಾಗೂ ಕಾರ್ಮಿಕ ಜೋಯವಿನ್ ತಂಡದವರು ಸೇಫ್ ಸ್ಟಾರ್ ಸೊಸೈಟಿ ಸಿಬ್ಬಂದಿಗೆ ಬೆದರಿಕೆ ಒಡ್ಡುತ್ತಿದ್ದಾರೆ. ಜಿ ಜಿ ಶಂಕರ್ ಅವರು ಕೂಲಿ ಕಾರ್ಮಿಕರ ಮೇಲೆ ಹಲ್ಲೆ ಮಾಡಿದ ತಪ್ಪಿಗೆ ಅವರ ಸೇಫ್ ಸ್ಟಾರ್ ಸೊಸೈಟಿಯಲ್ಲಿ ಕೆಲಸ ಮಾಡುವ ಸಿಬ್ಬಂದಿ ಕಷ್ಟ ಅನುಭವಿಸುತ್ತಿದ್ದಾರೆ. ಸೇಫ್ ಸ್ಟಾರ್ ಸೊಸೈಟಿಯ ಉದ್ಯೋಗಿಯಾಗಿರುವ ನಾಗರತ್ನ ಹಳ್ಳೇರ್ ಹಾಗೂ ಶ್ಯಾಮಲಾ ನಾಯ್ಕ ಅವರಿಗೆ ಜೀವ ಬೆದರಿಕೆ ಬಂದಿದೆ. ಅದರಲ್ಲಿಯೂ ಶ್ಯಾಮಲಾ ನಾಯ್ಕ ಅವರಿಗೆ ಅಪರಿಚಿತರು `ಟಿಪ್ಪರ್ ಹಾಯಿಸಿ ಕೊಲೆ ಮಾಡುವೆ‘ ಎಂದು ಹೆದರಿಸಿದ್ದಾರೆ. ಡಿಸೆಂಬರ್ 9ರಂದು ಹೊನ್ನಾವರ ಮಾವಿನಕೂರ್ವಾ ಬಳಿಯ ಮಂಡಲಕೂರ್ವದ ಜೊಯವಿನ್ ಬಸ್ತೇಂವ್ ಮೆಂಡೋನ್ಸಾ ಅವರು ಪೀಟರ್ ಎಂಬಾತರ ಸೂಚನೆ ಮೇರೆಗೆ ಕೂಲಿ ಕೆಲಸಕ್ಕೆ ಹೋಗಿದ್ದರು. ಜೊಯವಿನ್ ಅವರ ಜೊತೆ ಅವರ ತಂದೆ ಬಸ್ತೇಂವ್ ಮೆಂಡೋನ್ಸಾ, ಪಾವ್ಲು ಡಿಕೋಸ್ತಾ ಸಹ ಇದ್ದರು. ಅವರೆಲ್ಲರೂ ಸೇರಿ ತಾರಿಬಾಗಿಲ ಬಳಿಯಿರುವ ಚರ್ಚಿನ ಬಳಿ ಅವರು ಕೆಲಸ ಮಾಡುತ್ತಿದ್ದರು. ಅಲ್ಲಿದ್ದ ಖಾಲಿ ಜಾಗವೊಂದನ್ನು ಸ್ವಚ್ಛ ಮಾಡುತ್ತಿರುವಾಗ ಅಲ್ಲಿ ಜಿ ಜಿ ಶಂಕರ್ ಅವರು ಆಗಮಿಸಿದರು. ಜಿ ಜಿ ಶಂಕರ್ ಅವರ ಜೊತೆ ಅಂಗಡಿ ಹಿತ್ತಲದ ಮೋಹನ ತಿಮ್ಮಪ್ಪ ಗೌಡ, ಅರುಣ ಮಂಜುನಾಥ ಗೌಡ, ದುರ್ಗಾಕೇರಿಯ ಕಿರಣ ಆರ್ ಹೊನ್ನಾವರಕರ್, ಹೊಂಡಗದ್ದೆಯ ಸತೀಶ ಗೋವಿಂದ ಗೌಡ ಬಂದಿದ್ದರು. ಕಾರಿನಲ್ಲಿ ಬಂದ ಅವರೆಲ್ಲರೂ ಏಕಾಏಕಿ ಕೆಲಸ ಮಾಡುತ್ತಿದ್ದವರನ್ನು ದಬಾಯಿಸಿದರು. ಸ್ವಚ್ಚತಾ ಕೆಲಸಕ್ಕೆ ಅಡ್ಡಿಪಡಿಸಿದ ಅವರೆಲ್ಲರೂ ಜಿ ಜಿ ಶಂಕರ್ ಅವರ ಜೊತೆಗೂಡಿ ಅಲ್ಲಿದ್ದವರ ಮೇಲೆ ದಾಳಿ ಮಾಡಿದರು. ಅದಾದ ನಂತರ ಜಿ ಜಿ ಶಂಕರ್ ಅವರು ಮತ್ತೆ 25 ಜನರನ್ನು ಫೋನ್ ಮಾಡಿ ಕರೆಯಿಸಿಕೊಂಡರು. ಅವರೆಲ್ಲರೂ ಸೇರಿ ಅಲ್ಲಿದ್ದ ಪಾವ್ಲು ಅವರಿಗೆ ಹೊಡೆಯಲು ಶುರು ಮಾಡಿದರು. ಮೋಹನ ಗೌಡ ಅವರು ಪಾವ್ಲು ಅವರ ಕುತ್ತಿಗೆಯನ್ನು ಗಟ್ಟಿಯಾಗಿ ಹಿಡಿದುಕೊಂಡ ಕಾರಣ ಅವರ ಕತ್ತು ಊದಿಕೊಂಡಿದ್ದು, ಪಾವ್ಲು ಅವರನ್ನು ತಪ್ಪಿಸಲು ಹೋದ ಜೊಯವಿನ್ ಅವರಿಗೂ ಅಲ್ಲಿದ್ದವರು ಥಳಿಸಿದರು. ಕೊನೆಗೆ ಅಲ್ಲಿ ಕೆಲಸ ಮಾಡುತ್ತಿದ್ದವರೆಲ್ಲರೂ ಹಾಗೂ ಹೀಗೋ ಮಾಡಿ ತಪ್ಪಿಸಿಕೊಂಡು ಆಸ್ಪತ್ರೆ ಸೇರಿದರು. ನಂತರ ರಕ್ಷಣೆ ಕೋರಿ ಪೊಲೀಸರ ಮೊರೆ ಹೋಗಿದ್ದು, ಬಿಜೆಪಿ ಮುಖಂಡರೂ ಆಗಿರುವ ಸೇಫ್ ಸ್ಟಾರ್ ಸೊಸೈಟಿ ಅಧ್ಯಕ್ಷ ಜಿ ಜಿ ಶಂಕರ್ ಜೊತೆ ಇನ್ನಿತರರ ವಿರುದ್ಧ ದೂರು ಸಲ್ಲಿಸಿದರು. ಅದಾದ ನಂತರ ಜಿ ಜಿ ಶಂಕರ್ ಅವರು ಜೋಯವಿನ್ ಅವರ ಕೈಗೆ ಸಿಗಲಿಲ್ಲ. ಆದರೆ, ನಿತ್ಯವೂ ಕಚೇರಿಗೆ ಬರುತ್ತಿದ್ದ ಸೇಫ್ ಸ್ಟಾರ್ ಸೊಸೈಟಿ ಉದ್ಯೋಗಿಗಳು ಜೋಯವಿನ್ ಕಡೆಯವರ ಕಣ್ಣಿಗೆ ಬಿದ್ದರು. ಜಿ ಜಿ ಶಂಕರ್ ಅವರ ಮೇಲಿನ ಸಿಟ್ಟಿಗೆ ಜೋಯವಿನ್ ಕಡೆಯವರು ಸೇಫ್ ಸ್ಟಾರ್ ಸೊಸೈಟಿ ಸಿಬ್ಬಂದಿಗೆ ಕಾಟ ಕೊಡಲು ಶುರು ಮಾಡಿದರು. ಹೊನ್ನಾವರ ಮೂಡ್ಕಣಿಯ ನಾಗರತ್ನ ಗಣಪತಿ ಹಳ್ಳೇರ್ ಅವರು ಸೇಫ್ ಸ್ಟಾರ್ ಸೊಸೈಟಿಯಲ್ಲಿ ಕೆಲಸ ಮಾಡುತ್ತಿರುವುದನ್ನು ಅರಿತ ಜೋಯವಿನ್ ಮಂಡೋನ್ಸಾ ಹಾಗೂ ಪೀಟರ್ ಮಂಡೋನ್ಸಾ ಅವರು ನಾಗರತ್ನ ಹಳ್ಳೇರ್ ಅವರನ್ನು ಕಾಡಿಸಿದರು. ಅನಾರೋಗ್ಯದಿಂದ ಬಳಲುತ್ತಿರುವ ನಾಗರತ್ನ ಅವರಿಗೆ ಅವರಿಬ್ಬರು ಬೆದರಿಕೆ ಒಡ್ಡಿದರು. ನಾಗರತ್ನ ಹಳ್ಳೇರ್ ಅವರು ಸಾಲ ವಸೂಲಿಗಾಗಿ ಪ್ರಭಾತನಗರದ ಅಮೋಘ ಸೇಫ್ ಸ್ಟಾರ್ ಜಂಟಿ ಭದ್ರತಾ ಸಂಘದ ಬಳಿ ಹೊರಟಾಗ ಅವರನ್ನು ಹಿಂಬಾಲಿಸಿದರು. ನಾಗರತ್ನ ಹಳ್ಳೇರ್ ಅವರು ಸಾಲ ವಸೂಲಾತಿ ಮುಗಿಸಿ ಕೆಳಗಿನಪಾಳ್ಯ ಮಜಿರೆಯಲ್ಲಿದ್ದ ಜಿ ಜಿ ಶಂಕರ್ ಅವರನ್ನು ಮಾತನಾಡಿಸಲು ಹೋದಾಗ ಅಲ್ಲಿ ಜಗಳ ಶುರು ಮಾಡಿದರು. ನಾಗರತ್ನ ಹಳ್ಳೇರ್ ಅವರು `ಏಕೆ ಜಗಳ ಮಾಡುತ್ತೀರಿ?’ ಎಂದು ಪ್ರಶ್ನಿಸಿದ ಕಾರಣ ಜೋಯವಿನ್ ಮಂಡೋನ್ಸಾ ಅವರು ಮುಗಿಬಿದ್ದರು. ಪೀಟರ್ ಮಂಡೋನ್ಸಾ ಅವರು ನಾಗರತ್ನ ಅವರ ಕೂದಲು ಹಿಡಿದು ಎಳೆದಾಡಿದರು. ಜನ ಈ ಜಗಳ ತಪ್ಪಿಸಿದರು. ಅದಾದ ನಂತರ ಜೋಯವಿನ್ ಮಂಡೋನ್ಸಾ ಕಡೆಯವರು ಸೇಫ್ ಸ್ಟಾರ್ ಸೊಸೈಟಿಯ ಅಳ್ಳಂಕಿ ಶಾಖೆಯ ಫಿಲ್ಡ್ ಆಫೀಸರ್ ಶ್ಯಾಮಲಾ ಮಂಜುನಾಥ ನಾಯ್ಕ ಅವರನ್ನು ಹಿಂಬಾಲಿಸಿದರು. ಜಲವಳ್ಳಿ ಹಿರೆಹಿತ್ಲದಲ್ಲಿ ವಾಸವಾಗಿರುವ ಶ್ಯಾಮಲಾ ನಾಯ್ಕ ಅವರಿಗೂ ಬೆದರಿಕೆ ಒಡ್ಡಿದರು. ಡಿಸೆಂಬರ್ 11ರಂದು ಶ್ಯಾಮಲಾ ನಾಯ್ಕ ಅವರು ದಿಬ್ಬಣಗಲ್ ಕಡೆಯಿಂದ ಆಳಂಕಿ ಕಡೆ ಸ್ಕೂಟಿ ಮೇಲೆ ಹೋಗುವಾಗ ಅಪರಿಚಿತರು ಅವರನ್ನು ಅಡ್ಡಗಟ್ಟಿದರು. ಕವಲಕೇರಿಯ ನಿರ್ಜನ ಪ್ರದೇಶದಲ್ಲಿ ಮುಖಕ್ಕೆ ಬಟ್ಟೆ ಕಟ್ಟಿಕೊಂಡು ಬಂದಿದ್ದ ಇಬ್ಬರು ಶ್ಯಾಮಲಾ ಅವರನ್ನು ಕೆಟ್ಟದಾಗಿ ನಿಂದಿಸಿದರು. `ಜೋಯವಿನ್ ಹಾಗೂ ಪೀಟರ್ ವಿರುದ್ಧ ಸಾಕ್ಷಿ ಹೇಳುತ್ತೀಯಾ?’ ಎಂದು ಪ್ರಶ್ನಿಸಿದ ಆ ಆಗಂತುಕರು `ಈ ದೂರು ಹಿಂಪಡೆಯದೇ ಇದ್ದರೆ ಜೀವ ತೆಗೆಯುವೆ’ ಎಂದು ಬೆದರಿಸಿದರು. `ಟಿಪ್ಪರ್ ಲಾರಿ ಹಾಯಿಸಿ ಕೊಲೆ ಮಾಡುವೆ’ ಎಂಬ ಎಚ್ಚರಿಕೆ ನೀಡಿದರು. ಸದ್ಯ ಈ ಪ್ರಕರಣ ಪೊಲೀಸ್ ತನಿಖೆಯಲ್ಲಿದ್ದು, ಎರಡು ಕಡೆಯವರನ್ನು ಪೊಲೀಸರು ವಿಚಾರಣೆ ಶುರು ಮಾಡಿದ್ದಾರೆ. - [ನವ ಉದ್ದಿಮೆಗಳ ಆಶಾಕಿರಣ ನವೋದಿತಾ!](https://mobiletime.in/2025/12/navoditha-the-ray-of-hope-for-new-businesses/): ವ್ಯಾಪಾರ-ವಹೀವಾಟುಗಳನ್ನು ಇನ್ನಷ್ಟು ಎತ್ತರಕ್ಕೆ ಏರಿಸಬೇಕು ಎಂಬುದು ಪ್ರತಿಯೊಬ್ಬ ಉದ್ದಿಮೆದಾರನ ಕನಸು. ಈ ಕನಸು ನನಸು ಮಾಡುವುದಕ್ಕಾಗಿ `ನವೋದಿತಾ’ ಸಂಸ್ಥೆ ಶ್ರಮಿಸುತ್ತಿದೆ. ಡಿಜಿಟಲ್ ಇಂಡಿಯಾ ಪರಿಕಲ್ಪನೆಯ ಅಡಿ `ನವೋದಿತಾ’ ಸಂಸ್ಥೆ ಹುಟ್ಟಿಕೊಂಡಿತು. ಡಿಜಿಟಲ್ ಎಜನ್ಸಿಯಾಗಿ ಕಾರ್ಯನಿರ್ವಹಿಸುತ್ತಿರುವ ಈ ಸಂಸ್ಥೆ ವ್ಯಾಪಾರವಹಿವಾಟು ನಡೆಸುತ್ತಿರುವವರಿಗೆ ಡಿಜಿಟಲ್ ಸ್ಪರ್ಶದ ಅರಿವು ಮೂಡಿಸಿತು. ಸಾಂಪ್ರದಾಯಿಕ ಶೈಲಿಯಲ್ಲಿ ವಹಿವಾಟು ನಡೆಸುತ್ತಿರುವ ಉದ್ದಿಮೆದಾರರನ್ನು ಸ್ಪರ್ಧಾತ್ಮಕ ಯುಗದ ಮುಖ್ಯವಾಹಿನಿಗೆ ತರುವುದಕ್ಕಾಗಿ ಸಂಸ್ಥೆ ಶ್ರಮಿಸಿತು. ಡಿಜಿಟಲ್ ವ್ಯವಹಾರಕ್ಕೆ ವ್ಯವಹಾರಕ್ಕೆ ಅಗತ್ಯವಿರುವ ಜ್ಞಾನವನ್ನು ಉದ್ದಿಮೆದಾರರಿಗೆ ಕೊಡುವುವುದರ ಜೊತೆ ಮಾರುಕಟ್ಟೆ ವ್ಯವಸ್ಥೆಯಲ್ಲಿ ಸರಳ ವಿಧಾನಗಳನ್ನು ಅನುಸರಿಸುವ ನಿಟ್ಟಿನಲ್ಲಿ ನವೋದಿತಾ ಕೆಲಸ ಮಾಡುತ್ತಿದೆ. ಶಿರಸಿಯನ್ನು ಕೇಂದ್ರಸ್ಥಾನವನ್ನಾಗಿಸಿಕೊ0ಡಿರುವ ನವೋದಿತಾ ಸಂಸ್ಥೆ ಬೆಂಗಳೂರಿನಲ್ಲಿಯೂ ಕಚೇರಿ ಹೊಂದಿದೆ ಉತ್ಪನ್ನಗಳ ಕುರಿತು ಆಕರ್ಷಕ ಡಿಸೈನ್, ಅಗತ್ಯವಿರುವ ಬ್ರಾಂಡಿOಗ್, ಜನಸ್ನೇಹಿ ಉದ್ದಿಮೆಗೆ ಬೇಕಿರುವ ಡಿಜಿಟಲ್ ಸ್ಪರ್ಶ ನೀಡುವುದು `ನವೋದಿತಾ’ ಸಂಸ್ಥೆಯ ಗುರಿ. ಹೊಸದಾಗಿ ಉದ್ದಿಮೆ ಶುರು ಮಾಡಿದವರಿಗೆ, ಸಣ್ಣ ಮತ್ತು ಮಧ್ಯಮ ಉದ್ದಿಮೆಗಳಿಗೆ ಹಾಗೂ ಉತ್ಪಾದನಾ ಸಂಸ್ಥೆಗಳಿಗೆ ನವೋದಿತಾದ ನೆರವು ಸಹಕಾರಿ. ಉತ್ಪನ್ನಗಳ ಮಾರಾಟಕ್ಕೆ ಅತಿ ಅಗತ್ಯವಾಗಿ ಬೇಕಿರುವ ಲೋಗೋ ಡಿಸೈನ್, ವೆಬ್ ಸೈಟು, ಕರಪತ್ರಗಳ ನಿರ್ವಹಣೆ, ಉತ್ಪನ್ನಗಳ ಪ್ಯಾಕಿಂಗ್, ಸೋಶಿಯಲ್ ಮಿಡಿಯಾ ಮಾರುಕಟ್ಟೆ, ಜಾಹೀರಾತು ಸೇವೆಯ ಜವಾಬ್ದಾರಿಯನ್ನು ನವೋದಿತಾ ಸಂಸ್ಥೆವಹಿಸಿಕೊಳ್ಳುತ್ತದೆ. ನವೋದಿತಾ ಸಂಸ್ಥೆಯ ಅಡಿ ಈ ಎಲ್ಲಾ ಸೇವೆಗಳನ್ನು ಒಂದೇ ಸೂರಿನಡಿ ತರುವುದಕ್ಕಾಗಿ ವಿನಯ ಹೆಗಡೆ ಹಾಗೂ ಶಾಂಭವಿ ಹೆಗಡೆ ಅವರ ಪ್ರಯತ್ನ ನಿರಂತರ. ಸಮಸ್ಯೆಗಳನ್ನು ಅರ್ಥಮಾಡಿಕೊಂಡು ಬಗೆಹರಿಸುವಲ್ಲಿ ಅವರ 5 ವರ್ಷಗಳ ಅನುಭವ ಹೊರ ರಾಜ್ಯದ ಗ್ರಾಹಕರನ್ನು ಆಕರ್ಷಿಸುತ್ತಿದೆ. ನವೋದಿತಾ ವೆಬ್‌ಸೈಟ್ ವೀಕ್ಷಣೆಗೆ ಇಲ್ಲಿ ಕ್ಲಿಕ್ಕಿಸಿ: https://navodita.com/ ನಿಮ್ಮ ವ್ಯಾಪಾರ ವೃದ್ಧಿಗಾಗಿ ಇಲ್ಲಿ ಫೋನ್ ಮಾಡಿ: 9019876973 ಇನ್ನಷ್ಟು ಮಾಹಿತಿ ತಿಳಿಯಲು ಇಲ್ಲಿ ಭೇಟಿ ನೀಡಿ: ಮೊದಲನೇ ಮಹಡಿ, ಕದಂಬ ಮಾರ್ಕೇಟ್ ಯಾರ್ಡ, ಶಿರಸಿ ಟೆಕ್ ಪಾರ್ಕ, ಶಿರಸಿ – – 581402 #Sponsored - [ಉಪಮುಖ್ಯಮಂತ್ರಿ ಪ್ರವಾಸ: ಸುಗಂಧರಾಜನಿಗೆ ಪ್ರವೇಶ ನಿಷಿದ್ಧ!](https://mobiletime.in/2025/12/deputy-chief-ministers-tour-sugandharaja-denied-entry/): ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ ಅವರು ಶುಕ್ರವಾರ ಉತ್ತರ ಕನ್ನಡ ಜಿಲ್ಲೆಗೆ ಬರುತ್ತಿದ್ದಾರೆ. ಯಾರೂ ಅವರಿಗೆ ಸುಗಂಧರಾಜ ಹೂವಿನ ಹಾರ ಹಾಕದಂತೆ ಸರ್ಕಾರ ಸೂಚನೆ ನೀಡಿದೆ! ಸಾಮಾನ್ಯವಾಗಿ ಜಿಲ್ಲೆಗೆ ಯಾರೇ ಗಣ್ಯರು ಭೇಟಿ ನೀಡಿದರೂ ಅಭಿಮಾನಿಗಳು ಅವರಿಗೆ ಹೂಮಾಲೆ ಹಾಕಿ ಸ್ವಾಗತಿಸುತ್ತಾರೆ. ಜೊತೆಗೆ ಶಾಲು ಹೊದೆಸಿ ಗೌರವಿಸುತ್ತಾರೆ. ಆದರೆ, ಡಿ ಕೆ ಶಿವಕುಮಾರ ಅವರು ಈ ಶಾಲು-ಸನ್ಮಾನದಿಂದ ಕೊಂಚ ದೂರ ಉಳಿದಿದ್ದಾರೆ. ಅದಾಗಿಯೂ, ಅವರ ಬೆಂಬಲಿಗರು ಹೂವಿನ ಮಾಲೆ ಹಾಕಿ ಸಂಭ್ರಮಿಸುತ್ತಾರೆ. ಬೇರೆ ಬೇರೆ ಹೂವಿನ ಮಾಲೆ ಹಾಕಿದರೆ ಸುಮ್ಮನಿರುವ ಅವರು ಸುಗಂಧ ರಾಜ ಹೂವು ಕಂಡರೆ ಸಿಡಿಮಿಡಿಯಾಗುತ್ತಾರೆ! ಸುಗಂಧ ರಾಜ ಹೂವಿನ ಸುವಾಸನೆ ಎಂದರೆ ಡಿಕೆ ಶಿವಕುಮಾರ ಅವರಿಗೆ ಅಲರ್ಜಿ. ಹೀಗಾಗಿ ಅವರ ಪ್ರವಾಸದ ಪಟ್ಟಿಯಲ್ಲಿಯೇ ಆ ಹೂವಿನ ಮಾಲೆ ಹಾಕದಂತೆ ಸರ್ಕಾರವೇ ಸೂಚಿಸಿದೆ. ಅದಾಗಿಯೂ, ಭದ್ರತಾ ಪಡೆಯವರು ಆ ಹೂವಿನ ಮಾಲೆ ಬರದಂತೆ ಎಚ್ಚರಿಕೆವಹಿಸಲಿದ್ದು, ಡಿ ಕೆ ಶಿವಕುಮಾರ ಅವರ ಪ್ರವಾಸದ ವೇಳೆ ಅವರ ಅಭಿಮಾನಿಗಳು ಸುಗಂಧ ರಾಜ ಹೂವಿನಿಂದ ದೂರವಿರುವುದು ಒಳಿತು. ಡಿಕೆ ಶಿವಕುಮಾರ ಅವರು ಹೆಲಿಕಾಪ್ಟರ್ ಮೂಲಕ ಉತ್ತರ ಕನ್ನಡ ಜಿಲ್ಲೆಗೆ ಬರಲಿದ್ದಾರೆ. ಕುಮಟಾ ತಾಲೂಕು ಆಡಳಿತ ಅವರ ಆಗಮನಕ್ಕೆ ಸಿದ್ಧತೆ ನಡೆಸಿದೆ. ಗೋಕರ್ಣದ ಗೋಗರ್ಭ ಕ್ರೀಡಾಂಗಣದಲ್ಲಿ ಹೆಲಿಕಾಪ್ಟರ್ ನಿಲ್ಲಲಿದ್ದು, ಬುಧವಾರ ಕುಮಟಾ ತಹಶೀಲ್ದಾರ ಶ್ರೀಕೃಷ್ಣ ಕಾಮಕರ್ ಅಲ್ಲಿ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಗೋಕರ್ಣ ನಂತರ ಅವರು ಅಂಕೋಲಾ ಭೇಟಿ ಮಾಡಲಿದ್ದು, ತಮ್ಮ ಪೂರ್ವ ನಿಗಧಿತ ಕಾರ್ಯಕ್ರಮ ಮುಕ್ತಾಯದ ನಂತರ ಬೆಳಗಾವಿಗೆ ಮರಳಲಿದ್ದಾರೆ. - [ರೈಲಿನಲ್ಲಿ ಸಿಕ್ಕಿಬಿದ್ದ ಲಾಪ್‌ಟಾಪ್ ಕಳ್ಳ!](https://mobiletime.in/2025/12/laptop-thief-caught-on-train/): ರೈಲಿನ ಪ್ರಯಾಣಿಕರನ್ನು ದರೋಡೆ ಮಾಡುವದನ್ನೇ ಕೆಲಸವನ್ನಾಗಿಸಿಕೊಂಡಿದ್ದ ಜೋಶಿ ನಾಯ್ಕ ಹಾಗೂ ಪ್ರಹ್ಲಾದ ಪೂಜಾರಿ ಅವರು ಸಿಕ್ಕಿಬಿದ್ದಿದ್ದಾರೆ. ಕೊಂಕಣ ರೈಲ್ವೆ ಪೊಲೀಸರು ಆ ಕಳ್ಳರಿಬ್ಬರನ್ನು ಕಾರವಾರ ಪೊಲೀಸರಿಗೆ ಒಪ್ಪಿಸಿದ್ದಾರೆ. ಬುಧವಾರ ಬೆಳಗ್ಗೆ ಕಾರವಾರದ ಶಿರವಾಡ ರೈಲು ನಿಲ್ದಾಣಕ್ಕೆ ಮಂಗಳ ಎಕ್ಸಪ್ರೆಸ್ ರೈಲು ಆಗಮಿಸಿತು. ರೈಲ್ವೇ ಪೊಲೀಸರು ತಪಾಸಣೆ ನಡೆಸುತ್ತಿರುವಾಗ ಇಬ್ಬರು ಅನುಮಾನಾಸ್ಪದವಾಗಿ ವರ್ತಿಸಿದರು. ಅವರನ್ನು ವಿಚಾರಣೆಗೆ ಒಳಪಡಿಸಿದಾಗ ಅವರಿಬ್ಬರು ಕಳ್ಳತನ ಮಾಡುವುದಕ್ಕಾಗಿಯೇ ರೈಲು ಪ್ರಯಾಣ ಮಾಡುತ್ತಿರುವುದು ಗೊತ್ತಾಯಿತು. ಕೊಂಕಣ ರೈಲ್ವೆ ಪೊಲೀಸ್ ಅಧಿಕಾರಿ ರಂಜAತ್ ಮರಾಂಡೆ ಅವರು ಬಳ್ಳಾರಿಯ ಜೋಶಿ ನಾಯ್ಕ ಹಾಗೂ ಕುಂದಾಪುರದ ಪ್ರಹ್ಲಾದ ಪೂಜಾರಿ ಅವರನ್ನು ವಶಕ್ಕೆಪಡೆದರು. ತಪಾಸಣೆ ನಡೆಸಿದಾಗ ಅವರ ಬಳಿ ಲಾಪ್‌ಟಾಪ್, ಐಫೋನ್ ಹಾಗೂ 3500ರೂ ಹಣ ಸಿಕ್ಕಿತು. ಡಿಸೆಂಬರ್ 2ರಂದು ಉದನಾ ಎಕ್ಸಪ್ರೆಸ್ ರೈಲಿನಲ್ಲಿ ಇದನ್ನು ಕದ್ದಿರುವುದಾಗಿ ಅವರಿಬ್ಬರು ಒಪ್ಪಿಕೊಂಡರು. ಹಳೆ ದಾಖಲೆಗಳನ್ನು ಪರಿಶೀಲನೆ ನಡೆಸಿದಾಗ ಸೌಜನ್ಯ ಶೆಟ್ಟಿ ಅವರು ಅದೇ ದಿನ 3.50 ಲಕ್ಷ ರೂ ಮೌಲ್ಯದ ಸಾಮಗ್ರಿ ಕಳ್ಳತನವಾದ ಬಗ್ಗೆ ದೂರು ನೀಡಿರುವುದು ಕಾಣಿಸಿತು. ಈ ಹಿನ್ನಲೆ ರಂಜ ಮರಾಂಡೆ ಅವರು ಆ ಕಳ್ಳರಿಬ್ಬರನ್ನು ಕಾರವಾರ ಗ್ರಾಮೀಣ ಠಾಣೆಗೆ ಒಪ್ಪಿಸಿದರು. ಜೊತೆಗೆ ಅವರ ವಿರುದ್ಧ ದೂರು ನೀಡಿದರು. - [ಟೈಯರ್ ಪಂಚರ್ ಮಾಡುವ ಹಾಳಾದ ಹಂಪ್ಸ್ ಮೊಳೆ!](https://mobiletime.in/2025/12/the-damn-humps-nail-that-punctures-the-tire/): ಕಾರವಾರದ ಕೋಡಿಭಾಗ ರಸ್ತೆಗೆ ಅಳವಡಿಸಿದ್ದ ಹಂಪ್ಸ್ ಹಾಳಾಗಿ ವರ್ಷ ಕಳೆದರೂ ನಗರಸಭೆ ಅದನ್ನು ಸರಿಪಡಿಸಿಲ್ಲ. ಹೀಗಾಗಿ ನಗರಸಭೆ ಈ ನಡೆಗೆ ಜಯಕರ್ನಾಟಕ ಜನಪರ ವೇದಿಕೆ ಆಕ್ರೋಶವ್ಯಕ್ತಪಡಿಸಿದೆ. `ನಾಲ್ಕು ವರ್ಷದ ಹಿಂದೆ ಅಳವಡಿಸಿದ ಹಂಪ್ಸ್ ಹಾಳಾಗಿ ವರ್ಷ ಕಳೆದಿದೆ. ಆದರೆ, ನಗರಸಭೆ ಅಪಘಾತ ಪ್ರಮಾಣ ತಗ್ಗಿಸಲು ಮುನ್ನಚ್ಚರಿಕೆವಹಿಸಿಲ್ಲ’ ಎಂದು ಸಂಘಟನೆ ಜಿಲ್ಲಾಧ್ಯಕ್ಷ ದಿಲೀಪ ಅರ್ಗೇಕರ್ ಅಸಮಧಾನವ್ಯಕ್ತಪಡಿಸಿದ್ದಾರೆ. `ಶಾಲೆ-ಕಾಲೇಜುಗಳಿರುವ ಈ ಪ್ರದೇಶದಲ್ಲಿ ಹೆಚ್ಚಿನ ಅವಘಡ ನಡೆಯುತ್ತಿದೆ. ಸುರಕ್ಷತೆಗಾಗಿ ಇಲ್ಲಿ ತುರ್ತಾಗಿ ಹಂಪ್ಸ್ ಅಳವಡಿಸಬೇಕು’ ಎಂದವರು ಆಗ್ರಹಿಸಿದ್ದಾರೆ. `ಹಂಪ್ಸಿಗೆ ಇದ್ದ ಮೊಳೆಗಳು ಇದೀಗ ಹೊರ ಬಿದ್ದಿದೆ. ಅವರು ವಾಹನದ ಚಕ್ರಕ್ಕೆ ತಾಗಿ ಪದೇ ಪದೇ ಪಂಚರ್ ಆಗುತ್ತಿದೆ. ನಗರಸಭೆ ಆಯುಕ್ತರಿಗೆ ಈ ಬಗ್ಗೆ ಗಮನಕ್ಕೆ ತಂದರೂ ಕ್ರಮ ಜರುಗಿಸಿಲ್ಲ. ನಗರಸಭೆಯಲ್ಲಿ ಹಂಪ್ಸ ಸರಿಪಡಿಸಲು ಆರ್ಥಿಕ ಸಮಸ್ಯೆ ಇದೆಯೇ?’ ಎಂದವರು ಪ್ರಶ್ನಿಸಿದ್ದಾರೆ. `ನಗರಸಭೆಯ ಆಡಳಿತಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿಗಳು ಈ ಬಗ್ಗೆ ಗಮನಿಸಬೇಕು. ಇಲ್ಲವಾದಲ್ಲಿ ಪ್ರತಿಭಟನೆ ಅನಿವಾರ್ಯ’ ಎಂದು ಸಂಘಟನೆ ಪ್ರಮುಖರಾದ ರೋಷನ್ ಹರಿಕಂತ್ರ, ಸುನಿಲ್ ತಾಂಡೇಲ್, ಪ್ರದೀಪ್ ಶೆಟ್ಟಿ, ರಫೀಕ್ ಉದ್ದಾರ್, ಸುದೇಶ್ ನಾಯ್ಕ್, ರಾಹುಲ್ ತಾಂಡೇಲ್, ಮೋಹನ್ ಉಳ್ಳೇಕರ್, ವಿನಯ್ ನಾಯ್ಕ್ ಎಚ್ಚರಿಸಿದ್ದಾರೆ. - [ಅಡಿಕೆಗೆ ಹೋದ ಮಾನ!](https://mobiletime.in/2025/12/the-honor-of-going-to-the-areca-nut/): ಹಸಿ ಅಡಿಕೆ ಮಾರಾಟದ ವಿಷಯದಲ್ಲಿ ಅಡಿಕೆ ಜೊತೆ ಅದರ ಜಂಗನ್ನೂ ತೂಕಕ್ಕೆ ಹಾಕಲಾಗುತ್ತಿದ್ದು, ಅನುಪಯುಕ್ತ ಜಂಗಿನ ತೂಕಕ್ಕೂ ಸಹ ವ್ಯಾಪಾರಸ್ಥರು ಸಹಕಾರಿ ಸಂಸ್ಥೆಗೆ ಕಮಿಶನ್ ನೀಡುತ್ತಿದ್ದಾರೆ. ಹೀಗಾಗಿ ಜಂಗಿನ ತೂಕವನ್ನು ಬಿಡಬೇಕು ಎಂದು ವ್ಯಾಪಾರಸ್ಥರು ಆಗ್ರಹಿಸಿ ಶಿರಸಿ ಟಿಎಸ್‌ಎಸ್ ಅಂಗಳದಲ್ಲಿ ಹಸಿ ಅಡಿಕೆ ಟೆಂಡರ್ ಬರೆಯುವುದನ್ನೇ ನಿಲ್ಲಿಸಿದ್ದಾರೆ! `ಪ್ರತಿ ಕ್ವಿಂಟಲ್ ಅಡಿಕೆಗೆ 10 ಕೆಜಿ ಜಿಂಗ್ ತೂಕ ಬಿಡಬೇಕು. ವ್ಯಾಪಾರಸ್ಥರು ಚೆಕ್ ನೀಡಿದರೂ ಸಹ ಅದನ್ನು ಟಿಎಸ್‌ಎಸ್ ಸಂಸ್ಥೆಯವರು ಪರಿಗಣಿಸಬೇಕು. ತೂಕದ ವಿಷಯದಲ್ಲಿ ಪಾರದರ್ಶಕತೆ ಕಾಪಾಡಿಕೊಳ್ಳಬೇಕು’ ಎಂದು ವ್ಯಾಪಾರಸ್ಥರು ಆಗ್ರಹಿಸಿದ್ದಾರೆ. `ಈ ಬಗ್ಗೆ ಮನವಿ ಕೊಡಲು ಹೋದಾಗ ವ್ಯಾಪಾರಸ್ಥರ ಮೇಲೆ ಹಲ್ಲೆ ನಡೆಯುವ ಪ್ರಯತ್ನ ನಡೆದಿದೆ’ ಎಂದು ದೂರಿದ್ದಾರೆ. ಆದರೆ, ಹಲ್ಲೆ ಆರೋಪಕ್ಕೆ ಸಂಬoಧಿಸಿ ವ್ಯಾಪಾರಿಗಳಿಂದ ಕಾನೂನು ಹೋರಾಟ ನಡೆದಿಲ್ಲ. ಅಡಿಕೆ ವ್ಯಾಪಾರಸ್ಥರು ಹಾಗೂ ಟಿಎಸ್‌ಎಸ್ ನಡುವಿನ ಜಟಾಪಟಿಯಿಂದಾಗಿ ಬುಧವಾರ ಟಿಎಸ್‌ಎಸ್ ಅಂಗಳ ಗೊಂದಲದ ಗೂಡಾಗಿತ್ತು. ಹಸಿ ಅಡಿಕೆ ಟೆಂಡರ್ ವಿಷಯವಾಗಿ ಮಾತಿಗೆ ಮಾತು ಬೆಳೆದಿದ್ದು, ಆಕ್ರೋಶದ ನುಡಿಗಳು ಕೇಳಿಸಿದವು. `ಜಂಗಿನ ತೂಕಕ್ಕೂ ಕಮಿಷನ್ ನೀಡಬೇಕಾದ ಸ್ಥಿತಿಯಿರುವುದರಿಂದ ವ್ಯಾಪಾರಸ್ಥರು ಅನಗತ್ಯವಾಗಿ 12-13 ಸಾವಿರ ರೂ ಹೆಚ್ಚುವರಿಯಾಗಿ ಸಂಘಕ್ಕೆ ಪಾವತಿಸಬೇಕಾಗಿದೆ’ ಎಂದು ವ್ಯಾಪಾರಸ್ಥರು ಅಳಲು ತೋಡಿಕೊಂಡರು. `ಮಧ್ಯಾಹ್ನ 1.30ರ ವೇಳೆಗೆ ಟೆಂಡರ್ ಘೋಷಣೆ ಆಗುತ್ತದೆ. ಆ ಅವಧಿಯಲ್ಲಿ 4-5 ಲಕ್ಷ ರೂ ನಗದು ತಂದು ಕೊಡಲು ವ್ಯಾಪಾರಸ್ಥರಿಂದ ಸಾಧ್ಯವಾಗುವುದಿಲ್ಲ. ಹೀಗಾಗಿ ಚೆಕ್ ನೀಡಲು ಮುಂದಾದರೆ ಅದನ್ನು ಸಂಸ್ಥೆಯವರು ಪಡೆಯುತ್ತಿಲ್ಲ’ ಎಂದು ವ್ಯಾಪಾರಸ್ಥರು ದೂರಿದರು. `ಹಸಿ ಅಡಿಕೆ ತೂಕವನ್ನು ಬೇರೆ ಕಡೆ ನಡೆಸಲಾಗುತ್ತಿದೆ. ಅದರಲ್ಲಿ ಪಾರದರ್ಶಕತೆ ಇಲ್ಲ’ ಎಂದು ಅಸಮಧಾನವ್ಯಕ್ತಪಡಿಸಿದರು. `ಈಚೆಗೆ ವ್ಯಾಪಾರಸ್ಥರು 1 ಲಕ್ಷ ರೂ ಠೇವಣಿ ಕೊಡಬೇಕು ಎಂದು ಸೂಚಿಸಲಾಗಿದೆ. ಯಾವ ಉದ್ದೇಶಕ್ಕೆ ಠೇವಣಿ ಎಂದು ಕೇಳಿದರೂ ಉತ್ತರವಿಲ್ಲ’ ಎಂದು ಅಸಮಧಾನವ್ಯಕ್ತಪಡಿಸಿದರು. `ಟೆಂಡರ್ ವಿಷಯದಲ್ಲಿ ಎಷ್ಟೇ ಸಮಸ್ಯೆ ಇದ್ದರೂ ಅದನ್ನು ಸಹಿಸಿಕೊಂಡಿದ್ದೇವು. ಆದರೆ, ಮನವಿ ಕೊಟ್ಟರೂ ಸ್ಪಂದಿಸದ ಕಾರಣ ಅಡಿಕೆ ಟೆಂಡರ್ ಬರೆಯುವ ಪ್ರಕ್ರಿಯೆಯಿಂದ ಹೊರ ಬಂದಿದ್ದೇವೆ’ ಎಂದು ವ್ಯಾಪಾರಸ್ಥರು ವಿವರಿಸಿದರು. `ವ್ಯವಸ್ಥೆ ಸರಿಯಾಗುವವರೆಗೂ ಟೆಂಡರ್ ಬರೆಯುವುದಿಲ್ಲ’ ಎಂದು ಪಟ್ಟುಹಿಡಿದರು. ಈ ಎಲ್ಲದರ ನಡುವೆ `ಕೆಲ ವರ್ಷಗಳಿಂದ ಹಸಿ ಅಡಿಕೆ ಟೆಂಡರ್ ಯಶಸ್ವಿಯಾಗಿ ನಡೆಯುತ್ತಿದ್ದು, ಕೆಲವರು ಅನಗತ್ಯ ಗೊಂದಲ ಮಾಡುತ್ತಿದ್ದಾರೆ. ಹಸಿ ಅಡಿಕೆ ಟೆಂಡರ್ ರೈತ ಸ್ನೇಹಿಯಾಗಿದೆ. ಟಿಎಸ್‌ಎಸ್ ಸಹ ರೈತರ ಹಿತ ಕಾಯಲು ಬದ್ಧವಾಗಿದ್ದು, ಜನ ಯಾವುದೇ ಒತ್ತಡ ಹಾಗೂ ಅಪಪ್ರಚಾರಕ್ಕೆ ಒಳಗಾಗಬಾರದು’ ಎಂದು ಟಿಎಸ್‌ಎಸ್ ಪ್ರಕಟಣೆ ಹೊರಡಿಸಿದೆ. ಈ ನಡುವೆ ಬುಧವಾರ ಹಸಿ ಅಡಿಕೆ ಕ್ವಿಂಟಾಲಿಗೆ 5579ರೂಪಾಯಿವರೆಗೆ ಮಾರಾಟವಾಗಿದೆ. - [ಸಾಲಗಾರರಿಗೆ ದಂಡದ ಹೊರೆ!](https://mobiletime.in/2025/12/the-burden-of-penalties-for-borrowers/): ಸಾಲ ಮಾಡಿ ಅದನ್ನು ತೀರಿಸದೇ ತಿರುಗಾಡುತ್ತಿದ್ದ ವ್ಯಕ್ತಿಗಳಿಬ್ಬರಿಗೆ ನ್ಯಾಯಾಲಯ ದಂಡ ವಿಧಿಸಿದೆ. ಶಿರಸಿಯ ಶ್ರೀ ಭೂತೇಶ್ವರ ಪತ್ತಿನ ಸಹಕಾರಿ ಸಂಘದಲ್ಲಿ ಶಿವಪ್ರಸಾದ ಗೌಡ ಅವರು 1.25 ಲಕ್ಷ ರೂ ಸಾಲಪಡೆದಿದ್ದರು. ಆದರೆ, ಆ ಸಾಲವನ್ನು ಸಕಾಲದಲ್ಲಿ ಮರು ಪಾವತಿ ಮಾಡಿರಲಿಲ್ಲ. ಹೀಗಾಗಿ ಸಂಘದ ಮುಖ್ಯ ಕಾರ್ಯನಿರ್ವಾಹಕ ವಿನಾಯಕ ಶೆಟ್ಟಿ ಅವರು ನ್ಯಾಯಾಲಯದ ಮೊರೆ ಹೋಗಿದ್ದರು. ಸಂಘಕ್ಕೆ ನೀಡಿದ್ದ ಚೆಕ್ ಅಮಾನ್ಯವಾದ ಬಗ್ಗೆ ಅವರು ದೂರಿದ್ದರು. ವಿಚಾರಣೆ ನಡೆಸಿದ ನ್ಯಾಯಾಲಯ 1.25 ಲಕ್ಷ ರೂ ಸಾಲಪಡೆದಿದ್ದ ವ್ಯಕ್ತಿಗೆ 1 ಲಕ್ಷ ರೂ ದಂಡ ಪಾವತಿಸುವಂತೆ ಸೂಚಿಸಿದೆ. ಆ ದಂಡದ ಜೊತೆ ಸಾಲವನ್ನು ಪಾವತಿ ಮಾಡುವುದು ಸಾಲಗಾರನಿಗೆ ಅನಿವಾರ್ಯವಾಗಿದೆ. ಮತ್ತೊಂದು ಪ್ರಕರಣದಲ್ಲಿಯೂ ನ್ಯಾಯಾಲಯ ಇದೇ ಬಗೆಯ ಆದೇಶ ಮಾಡಿದೆ. ಶಿರಸಿಯಲ್ಲಿ ಸಿಮೆಂಟ್ ಕಂಬ, ರಿಂಗ್ ಮಾಡುವ ಪರಮೇಶ್ವರ ನಾಯ್ಕ ಅವರು ಗಂಗಾಧರ ನಾಯ್ಕ ಅವರಿಂದ ಸಾಲಪಡೆದಿದ್ದರು. ಅವರು ಸಹ ಸಾಲ ಮರು ಪಾವತಿ ಮಾಡಿರಲಿಲ್ಲ. ಸಾಲ ಮರುಪಾವತಿಗೆ ನೀಡಿದ ಚೆಕ್ ಅಮಾನ್ಯವಾಗಿದ್ದರಿಂದ ಗಂಗಾಧರ ನಾಯ್ಕ ಅವರು ಕೋರ್ಟಿನ ಮೊರೆ ಹೋಗಿದ್ದರು. 2023ರಲ್ಲಿ ಕೊಟ್ಟ ಸಾಲ ಬಾರದ ಕಾರಣ ಗಂಗಾಧರ ನಾಯ್ಕ ಅವರು ಅಳಲು ತೋಡಿಕೊಂಡಿದ್ದರು. ಈ ಪ್ರಕರಣದಲ್ಲಿ ನ್ಯಾಯಾಲಯ ಪರಮೇಶ್ವರ ನಾಯ್ಕ ಅವರಿಗೆ 1.1 ಲಕ್ಷ ರೂ ದಂಡ ವಿಧಿಸಿದೆ. - [ಹೋರಾಟ ನಿಲ್ಲಿಸಿದ ಶಾಸಕರ ಪತ್ರ!](https://mobiletime.in/2025/12/letter-from-mlas-who-stopped-fighting/): ಅಭಿವೃದ್ಧಿಗಾಗಿ ಆಗ್ರಹಿಸಿ 65ಕಿಮೀ ದೂರದ ಪಾದಯಾತ್ರೆ ನಡೆಸಲು ಉದ್ದೇಶಿಸಿದ್ದ ಹೋರಾಟವನ್ನು ಶಾಸಕರ ಪತ್ರವೊಂದು ಹತ್ತಿಕ್ಕಿದೆ.. 1.5ಕಿಮೀ ಸಂಚಾರ ನಡೆಸುವುದರೊಳಗೆ ಆ ಪತ್ರ ಬಂದಿದ್ದು, ಅಧಿಕಾರಿಗಳು ಸಹ ದೌಡಾಯಿಸಿ ಪಾದಯಾತ್ರೆಯನ್ನು ಅರ್ದಕ್ಕೆ ನಿಲ್ಲಿಸಿದ್ದಾರೆ. ಜೊಯಿಡಾದ ಸಮಗ್ರ ಅಭಿವೃದ್ಧಿಗೆ ಆಗ್ರಹಿಸಿ ಕರ್ನಾಟಕ ಪ್ರಾಂತ ರೈತ ಸಂಘದವರು ಪಾದಯಾತ್ರೆಗೆ ಕರೆ ನೀಡಿದ್ದರು. ಆ ಪಾದಯತ್ರೆ ಜೊಯಿಡಾದಿಂದ ಶುರುವಾಗಿ 1.5ಕಿಮೀ ಮುಂದುವರೆದಿತ್ತು. ಆಗ, ಕ್ಷೇತ್ರದ ಶಾಸಕ ಆರ್ ವಿ ದೇಶಪಾಂಡೆ ಅವರು ಪತ್ರವೊಂದನ್ನು ರವಾನಿಸಿದರು. ಪಾದಯಾತ್ರೆಯನ್ನು ಮೊಟಕುಗೊಳಿಸಿ ಎಂದು ಅವರು ಮನವಿ ಮಾಡಿದರು. ವಿವಿಧ ಹಂತದ ಅಧಿಕಾರಿಗಳು ಸಹ ಆಗಮಿಸಿ ಪಾದಯಾತ್ರೆಯನ್ನು ಅಲ್ಲಿಗೆ ತಡೆದರು. ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಮಾತಿಗೆ ಬೆಲೆ ಕೊಟ್ಟು ಪ್ರತಿಭಟನಾಕಾರರು ತಮ್ಮ ಹೋರಾಟವನ್ನು ಸದ್ಯದ ಮಟ್ಟಿಗೆ ಹಿಂಪಡೆದರು. ರೈತರು, ಕೂಲಿ ಕಾರ್ಮಿಕರ ಜೊತೆ ಕರ್ನಾಟಕ ಪ್ರಾಂತ ರೈತ ಸಂಘದವರು ಈ ನಡಿಗೆಯಲ್ಲಿ ಭಾಗವಹಿಸಿ, ಭಾಷಣ ಮಾಡಿದರು. ನಂತರ ವಿವಿಧ ಬೇಡಿಕೆಗಳ ಪಟ್ಟಿಯನ್ನು ಪ್ರತಿಭಟನಾಕಾರರು ಸರ್ಕಾರಕ್ಕೆ ಸಲ್ಲಿಸಿದರು. ಬೇಡಿಕೆಗಳ ಈಡೇರಿಕೆಗಾಗಿ ಸಭೆ ನಡೆಸುವಂತೆ ಪ್ರತಿಭಟನಾಕಾರರು ಆಗ್ರಹಿಸಿದ್ದು, ಇದಕ್ಕೆ ದಿನಾಂಕ ನಿಗದಿ ಮಾಡುವಂತೆ ಪಟ್ಟುಹಿಡಿದರು. ಡಿಸೆಂಬರ್ 20ರಂದು ಸಭೆ ನಡೆಸುವುದಾಗಿ ಅಧಿಕಾರಿಗಳು ಘೋಷಿಸಿದರು. ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಟಿ ಯಶವಂತ, ಜಿಲ್ಲಾ ಸಮಿತಿ ಕಾರ್ಯದರ್ಶಿ ಶ್ಯಾಮನಾಥ ನಾಯ್ಕ, ಜೋಯಿಡಾ ತಾಲೂಕು ಅಧ್ಯಕ್ಷ ಪ್ರೇಮಾನಂದ ವೆಳೀಪ, ತಾಲೂಕು ಕಾರ್ಯದರ್ಶಿ ರಾಜೇಶ ಗಾವಡಾ, ಕಾರ್ಮಿಕ ಮುಖಂಡರಾದ ಯಮುನಾ ಗಾಂವ್ಕರ ಅವರು ಇದಕ್ಕೆ ಒಪ್ಪಿದರು. ಈ ಎಲ್ಲರೂ ಸೇರಿ ಹೋರಾಟ ತಾತ್ಪೂರ್ತಿಕ ಹಿಂಪಡೆಯುವದರ ಜೊತೆ ಸಭೆಯಲ್ಲಿ ಹಕ್ಕೊತ್ತಾಯ ಮಾಡಲು ನಿರ್ಣಯಿಸಿದರು. ಪ್ರಮುಖರಾದ ಗಣೇಶ ರಾಠೋಡ್, ಚಂದ್ರು ಸಾವಂತ, ಪ್ರಕಾಶ ವೆಳಿಪ, ಶಾಂತಾ ವೆಳಿಪ್, ಉಮೇಶ ವೆಳಿಪ, ಮಾದೇವ ಸಾವಂತ, ಗಣಪತಿ ಕುಂಡಲ, ರವಿ ಮಿರಾಶಿ ದೇವಿದಾಸ ಮಿರಾಸಿ , ವೆಲಿಕಾ ಸಾವಂತ, ಗೌರವಿ ಸಾವಂತ ಸಹ ಇದಕ್ಕೆ ಸಮ್ಮತಿ ಸೂಚಿಸಿದರು. - [ಅರಣ್ಯಾಧಿಕಾರಿಗೆ ಬೆವರಿಳಿಸಿದ ಅತಿಕ್ರಮಣದಾರ!](https://mobiletime.in/2025/12/encroachment-made-the-forest-officer-sweat/): ಅತಿಕ್ರಮಣದಾರರಿಗೆ ಪದೇ ಪದೇ ನೋಟಿಸ್ ನೀಡುತ್ತಿದ್ದ ಕುಮಟಾ ಎಸಿಎಫ್ ಕೃಷ್ಣ ಗೌಡ ಅವರ ಕಚೇರಿಗೆ ಅರಣ್ಯವಾಸಿಗಳು ದಾಳಿ ಮಾಡಿದ್ದಾರೆ. ಅನಗತ್ಯ ಕಿರುಕುಳ ನೀಡುತ್ತಿರುವುದಕ್ಕೆ ಅಸಮಧಾನವ್ಯಕ್ತಪಡಿಸಿದ್ದಾರೆ. ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ಮಂಜುನಾಥ ಮರಾಠಿ ಅವರು ಅಧಿಕಾರಿಗಳು ಹಿಂಸೆ ನೀಡುತ್ತಿರುವುದನ್ನು ಖಂಡಿಸಿದ್ದಾರೆ. ಈ ವೇಳೆ `ಅರಣ್ಯ ಹಕ್ಕು ಕಾಯಿದೆಯಡಿಯಲ್ಲಿ ಇತ್ಯರ್ಥವಾಗದ ಅರ್ಜಿಗಳನ್ನ ಒಕ್ಕಲೆಬ್ಬಿಸುವ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಲಾಗುತ್ತದೆ’ ಎಂದು ಎಸಿಎಫ್ ಕೃಷ್ಣ ಗೌಡ ಅವರು ಭರವಸೆ ನೀಡಿ ಅತಿಕ್ರಮಣದಾರರನ್ನು ಸಮಾಧಾನ ಮಾಡಿದ್ದಾರೆ. ಕತಗಾಲ ಬಳಿಯ ಕೃಷ್ಣ ದೇವಪ್ಪ ನಾಯ್ಕ, ಈಶ್ವರ ನಾರಾಯಣ ನಾಯ್ಕ. ಈಶ್ವರ್ ದೇವಪ್ಪ ನಾಯ್ಕ, ದುರ್ಗಿ ಕೃಷ್ಣ ನಾಯ್ಕ ಕಡ್ಣೀರ್, ಮಾದೇವ ಸುಬ್ಬ ನಾಯ್ಕ ಅಳವಳ್ಳಿ, ಗಣಪತಿ ಜಟ್ಟಿ ದೇಶಭಂಡಾರಿ ಹರವಳ್ಳಿ ಅವರಿಗೆ ಅಧಿಕಾರಿಗಳು ನೋಟಿಸ್ ನೀಡಿದ್ದರು. ವಿಚಾರಣೆಗೆ ಹಾಜರಾಗದೇ ಇದ್ದರೆ ಕಾನೂನು ಕ್ರಮ ಜರುಗಿಸುವುದಾಗಿ ಎಚ್ಚರಿಸಿದ್ದರು. ಈ ಹಿನ್ನಲೆ ಎಲ್ಲರೂ ಸೇರಿ ಒಗ್ಗಟ್ಟಿನಿಂದ ಸರ್ಕಾರಿ ಕಚೇರಿಗೆ ಮುತ್ತಿಗೆ ಹಾಕಿ ಆಕ್ರೋಶವ್ಯಕ್ತಪಡಿಸಿದರು. - [ಮುರುಡೇಶ್ವರದ ಹೆಸರಿನಲ್ಲಿ ಮತ್ತೆ ಮೋಸ!](https://mobiletime.in/2025/12/cheating-again-in-the-name-of-murudeshwara/): ಉತ್ತರ ಕನ್ನಡ ಜಿಲ್ಲೆಯ ಪುಣ್ಯ ಹಾಗೂ ಪ್ರಸಿದ್ಧ ಪ್ರವಾಸಿ ಕ್ಷೇತ್ರವಾದ ಮುರುಡೇಶ್ವರದ ಹೆಸರಿನಲ್ಲಿ ವಂಚನೆ ನಡೆಯುತ್ತಿದೆ. ಭಕ್ತರು ನಂಬಿಕೆಯಿoದ ನೀಡಿದ ಹಣ ಇರ್ಷಾದ್ ಎಂಬಾತರ ಖಾತೆ ಸೇರುತ್ತಿದೆ. ಮುರುಡೇಶ್ವರ ದೇವಸ್ಥಾನದಿಂದ ಯಾವುದೇ ಬಗೆಯ `ಲಕ್ಕಿ ಡ್ರಾ’ ಯೋಜನೆಗಳಿಲ್ಲ. ಅದಾಗಿಯೂ, ಜಾಲತಾಣಗಳಲ್ಲಿ `ಮುರುಡೇಶ್ವರ ದೇವಸ್ಥಾನ ಅದೃಷ್ಟ ಡ್ರಾ’ ಎಂಬ ಪೋಸ್ಟರ್ ಹರಿದಾಡುತ್ತಿದೆ. ಇರ್ಷಾದ್ ಎಂಬಾತರ ಖಾತೆಗೆ 299ರೂ ಪಾವತಿಸಿದರೆ ಬಗೆ ಬಗೆಯ ಉಡುಗರೆ ನೀಡುವುದಾಗಿ ಘೋಷಿಸಿ ಮೋಸ ಮಾಡಲಾಗುತ್ತಿದೆ. ಮುರುಡೇಶ್ವರದ ಹೆಸರಿನಲ್ಲಿ ನಡೆಯುತ್ತಿರುವ ಮೋಸ ಇದೇ ಮೊದಲಲ್ಲ. ಮುರುಡೇಶ್ವರ ದೇಗುಲ ಸಮಿತಿಯವರೇ ದೇವಾಲಯದ ಹೆಸರು ದುರುಪಯೋಗದ ಬಗ್ಗೆ ಪೊಲೀಸ್ ದೂರು ಸಹ ನೀಡಿದ್ದಾರೆ. ಆದರೆ, ಈವರೆಗೂ ವಂಚಕರ ಪತ್ತೆ ಸಾಧ್ಯವಾಗಿಲ್ಲ. ದೇವಾಲಯದ ಹೆಸರಿನಲ್ಲಿ ಜನರನ್ನು ಮೋಸ ಮಾಡುವ ಕೆಲಸವೂ ನಿಂತಿಲ್ಲ. ಸದ್ಯ `ಡಿಸೆಂಬರ್ 17ರ ಸಂಜೆ 7 ಗಂಟೆಗೆ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಲಕ್ಕಿ ಡ್ರಾ ಹೆಸರನ್ನು ಘೋಷಣೆ ಮಾಡಲಾಗುತ್ತದೆ’ ಎಂಬ ನಿಟ್ಟಿನಲ್ಲಿ ಪೋಸ್ಟರ್ ಹರಿದಾಡುತ್ತಿದೆ. ಕಾರು, ಟ್ರಕ್, ಟಾಕ್ಟರ್, ಬೈಕುಗಳ ಜೊತೆ ಟಿವಿ ಪ್ರಿಜ್ಜುಗಳನ್ನು ಉಡುಗರೆಯಾಗಿ ನೀಡುವುದಾಗಿ ಘೋಷಿಸಲಾಗಿದೆ. ಮಾಹಿತಿಗಾಗಿ ಮೊಬೈಲ್ ಸಂಖ್ಯೆಯನ್ನು ಸಹ ನೀಡಲಾಗಿದ್ದು, ಅಲ್ಲಿ ಸಂಪರ್ಕಿಸಿದವರಿಗೆ 299ರೂ ಪಾವತಿಸುವಂತೆ ಸೂಚಿಸಲಾಗುತ್ತಿದೆ. ಒಟ್ಟು 17 ಬಗೆಯ ಉಡುಗರೆಗಳನ್ನು ಪೋಸ್ಟರ್ ಮೂಲಕ ಕಾಣಿಸಲಾಗಿದ್ದು, ದೇವಾಲಯದಿಂದಲೇ `ಲಕ್ಕಿ ಡ್ರಾ’ ನಡೆಯುತ್ತಿರುವ ಬಗ್ಗೆ ಭಾವಿಸಿ ಜನ ಹಣ ಪಾವತಿಸುತ್ತಿದ್ದಾರೆ. `ವಂಚಕರು ಬೇರೆ ಬೇರೆ ಮೊಬೈಲ್ ಸಂಖ್ಯೆ ಹಾಗೂ ಬೇರೆ ಬೇರೆ ಬ್ಯಾಂಕ್ ಖಾತೆ ಮೂಲಕ ದೇವಾಲಯದ ಹೆಸರು ಬಳಕೆ ಮಾಡುತ್ತಿದ್ದಾರೆ. ಮುರುಡೇಶ್ವರದ ಜೊತೆ ಇನ್ನಿತರ ದೇವಾಲಯಗಳ ಹೆಸರು ದುರ್ಬಳಕೆ ಆಗುತ್ತಿದ್ದು, ಜನರಲ್ಲಿ ನಿರಂತರವಾಗಿ ಜಾಗೃತಿ ಮೂಡಿಸುವ ಕೆಲಸ ನಡೆಯುತ್ತಿದೆ’ ಎಂದು ಮುರುಡೇಶ್ವರ ಪಿಎಸೈ ಹಣಮಂತ ಬೀರಾದರ್ ಅವರು ತಿಳಿಸಿದರು. `ಮುರುಡೇಶ್ವರ ದೇವಾಲಯದಿಂದ ಯಾವುದೇ ಲಕ್ಕಿ ಡ್ರಾ ಯೋಜನೆಗಳಿಲ್ಲ. ವಂಚಕರ ಬಗ್ಗೆ ಈಗಾಗಲೇ ಪೊಲೀಸ್ ದೂರು ಸಹ ನೀಡಲಾಗಿದ್ದು, ಭಕ್ತರು ಮೋಸ ಹೋಗಬಾರದು’ ಎಂದು ದೇಗುಲದ ವ್ಯವಸ್ಥಾಪಕ ಮಂಜುನಾಥ ಶೆಟ್ಟಿ ಮನವಿ ಮಾಡಿದರು. - [ಚೀನಾ ಹಕ್ಕಿಗೆ ಜಿಪಿಎಸ್ ಕಣ್ಣು!](https://mobiletime.in/2025/12/gps-eyes-on-a-chinese-bird/): ಚಳಿಗಾಲದ ಅವಧಿಯಲ್ಲಿ ವಲಸೆ ಬರುವ ಹಕ್ಕಿಯೊಂದರ ಬೆನ್ನಿನ ಮೇಲೆ ಜಿಪಿಎಸ್ ಟ್ರಾಕರ್ ಕಾಣಿಸಿದೆ. ಈ ಹಕ್ಕಿ ಚೀನಾ ದೇಶದಿಂದ ಬಂದಿರುವ ಮಾಹಿತಿ ಸಿಕ್ಕಿದ್ದು, ಅರಣ್ಯ ಇಲಾಖೆಯವರು ಆ ಹಕ್ಕಿಯನ್ನು ಬಂಧಿಸಿದ್ದಾರೆ. ಅತ್ಯoತ ಸೂಕ್ಷ್ಮ ಪ್ರದೇಶಗಳನ್ನು ಹೊಂದಿದ ಉತ್ತರ ಕನ್ನಡ ಜಿಲ್ಲೆಗೆ ಚೀನಾ ದೇಶದ ಹಕ್ಕಿ ಜಿಪಿಎಸ್ ಹೊತ್ತು ಬಂದಿರುವ ಸುದ್ದಿ ಕೇಳಿ ಜನ ಕಂಗಾಲಾಗಿದ್ದಾರೆ. 2024ರ ನವೆಂಬರ್ 11ರಂದು ಸಹ ಕಾರವಾರದಲ್ಲಿ ಕ್ಯಾಮರಾ ಕಣ್ಣು ಹೊಂದಿದ ಜಿಪಿಎಸ್ ಹಕ್ಕಿ ಕಾಣಿಸಿತ್ತು. ಅನೇಕರು ಹಕ್ಕಿಯ ನಡತೆ ಬಗ್ಗೆ ಅನುಮಾನವ್ಯಕ್ತಪಡಿಸಿದ್ದರು. ಆ ವೇಳೆ `ಮಹಾರಾಷ್ಟ್ರದ ಅರಣ್ಯ ಇಲಾಖೆಯವರು ಅಧ್ಯಯನಕ್ಕಾಗಿ ರಣಹದ್ದಿನ ಮೇಲೆ ಜಿಪಿಎಸ್ ಹಾಗೂ ಸೋಲಾರ್ ಪ್ಲೇಟ್ ಅಳವಡಿಸಿದ್ದಾರೆ’ ಎಂಬುದು ದೃಢವಾಗಿತ್ತು. ಅದರಿಂದ ಜನರ ಆತಂಕ ದೂರವಾಗಿತ್ತು. ಆದರೆ, ಈ ದಿನ ಚೀನಾ ದೇಶದಿಂದ ಸೀಬರ್ಡ ಹಕ್ಕಿ ಕಾರವಾರ ಕಡಲತೀರ ಪ್ರವೇಶಿಸಿದೆ. ಈ ಹಕ್ಕಿಯ ಬೆನ್ನಿನ ಮೇಲೆಯೂ ಸೋಲಾರ್ ಪ್ಲೇಟ್ ಮಾದರಿ ಹಾಗೂ ಜಿಪಿಎಸ್ ಟ್ರಾಕರ್ ಕಾಣಿಸುತ್ತಿದೆ. ಕಾರವಾರದ ಕಡಲ ತೀರಕ್ಕೆ ವಲಸೆ ಬಂದ ಸೀಗಲ್ ಹಕ್ಕಿಯೊಂದರಲ್ಲಿ ಜಿಪಿಎಸ್ ಟ್ರ‍್ಯಾಕರ್ ಕಾಣಿಸುತ್ತಿದೆ. ಮಂಗಳವಾರ ಬೆಳಗ್ಗೆ ಸಾಲುಮರದ ತಿಮ್ಮಕ್ಕ ಉದ್ಯಾನವನ ಹಿಂಬದಿಯಲ್ಲಿ ಕೂತಿದ್ದ ಸೀಗಲ್ ಹಕ್ಕಿಯನ್ನು ನೋಡಿದ ಜನ ಅರಣ್ಯ ಇಲಾಖೆಗೆ ಫೋನ್ ಮಾಡಿದ್ದಾರೆ. ಅರಣ್ಯ ಅಧಿಕಾರಿಗಳು ಮರೈನ್ ವಿಭಾಗದ ಅಧಿಕಾರಿಗಳಿಗೆ ಮಾಹಿತಿ ರವಾನಿಸಿದ್ದು, ಸ್ಥಳಕ್ಕೆ ಬಂದ ತಜ್ಞರು ಹಕ್ಕಿಯನ್ನು ಹಿಡಿದಿದ್ದಾರೆ. ಹಕ್ಕಿಯ ಬೆನ್ನಿನಲ್ಲಿದ್ದ ಜಿಪಿಎಸ್ ನಲ್ಲಿ ಚೈನೀಸ್ ವಿಜ್ಞಾನ ಅಕಾಡೆಮಿಯ ರಿಸರ್ಚ್ ಸೆಂಟರ್ ಫಾರ್ ಇಕೋ-ಎನ್ವಿರಾನ್ಮೆಂಟಲ್ ಸೈನ್ಸ್ ಎಂಬ ವಿಳಾಸವಿದೆ. `ಸೀಗಲ್ ಹಕ್ಕಿಗಳ ಚಲನ ವಲನ, ಆಹಾರ ಹಾಗೂ ವಲಸೆಯನ್ನು ಗುರುತಿಸಲು ಜಿಪಿಎಸ್ ಟ್ರ‍್ಯಾಕರ್ ಬಳಸಲಾಗಿದೆ’ ಎಂದು ಅರಣ್ಯ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಸದ್ಯ ಅಧಿಕಾರಿಗಳು ಅಕಾಡೆಮಿಯ ಸಂಪರ್ಕಕ್ಕೆ ಪ್ರಯತ್ನಿಸುತ್ತಿದ್ದು, ಹಕ್ಕಿಯನ್ನು ಮರೈನ್ ಅರಣ್ಯ ವಿಭಾಗದ ಕಚೇರಿಯಲ್ಲಿ ಬಂಧಿಸಿಡಲಾಗಿದೆ. - [ವಾಲ್ಮೀಕಿ ಸಂಘಕ್ಕೆ ನಾಗರಾಜನೇ ಅಧ್ಯಕ್ಷ!](https://mobiletime.in/2025/12/nagaraj-is-the-president-of-the-valmiki-sangha/): ಉತ್ತರ ಕನ್ನಡ ಜಿಲ್ಲಾ ಮಹರ್ಷಿ ವಾಲ್ಮೀಕಿ ನಾಯಕ ಪರಿಶಿಷ್ಟ ಪಂಗಡ ಹಿತರಕ್ಷಣಾ ಸಂಘದ ಜಿಲ್ಲಾಧ್ಯಕ್ಷರಾಗಿ ನಾಗರಾಜ ತಳವಾರ್ ಅವರು ಪುನರಾಯ್ಕೆ ಆಗಿದ್ದಾರೆ. ನಾಗರಾಜ ತಳವಾರ್ ಅವರು ಗುತ್ತಿಗೆದಾರರಾಗಿ ಬದುಕು ಕಟ್ಟಿಕೊಂಡಿದ್ದಾರೆ. ಅದರ ಜೊತೆ ವಿವಿಧ ಸಂಘ-ಸAಸ್ಥೆಗಳಲ್ಲಿ ಅವರು ಸಕ್ರೀಯರಾಗಿದ್ದಾರೆ. ಸಮುದಾಯ ಸಂಕಷ್ಟಕ್ಕೆ ಸಿಲುಕಿದಾಗ ಗಟ್ಟಿ ಧ್ವನಿಯಾಗುವ ಅವರು ಸಂಘಟನೆ ವಿಷಯದಲ್ಲಿ ಚುರುಕಾಗಿ ಕೆಲಸ ಮಾಡಿಕೊಂಡಿದ್ದಾರೆ. ಈ ಎಲ್ಲಾ ಹಿನ್ನಲೆ ಸಂಘಟನೆಯ ಜಿಲ್ಲಾಧ್ಯಕ್ಷರನ್ನಾಗಿ ಅವರನ್ನು ಮತ್ತೆ ಆಯ್ಕೆ ಮಾಡಲಾಗಿದೆ. ಪ್ರಗತಿಪರ ಚಿಂತಕರಾಗಿರುವ ನಾಗರಾಜ ತಳವಾರ್ ಅವರು ನ್ಯಾಯದ ಪರ ಹೋರಾಟ ನಡೆಸಿದ್ದಾರೆ. ಅನ್ಯಾಯಕ್ಕೆ ಒಳಗಾದವರನ್ನು ಸಂತೈಸಿ ಅವರ ಪರ ನಿಲ್ಲುವ ವೈಚಾರಿಕ ಪ್ರಜ್ಞೆ ಹೊಂದಿದವರಾಗಿದ್ದಾರೆ. ಅವರ ಈ ಎಲ್ಲಾ ಸಮಾಜಮುಖಿ ಸೇವೆಯನ್ನು ಮಹರ್ಷಿ ವಾಲ್ಮೀಕಿ ನಾಯಕ ಪರಿಶಿಷ್ಟ ಪಂಗಡ ಹಿತರಕ್ಷಣಾ ಸಂಘದವರು ಗೌರವಿಸಿದ್ದಾರೆ. `ಜನಪರ ನಿಲುವು ಹೊಂದಿರುವ ನಾಗರಾಜ ತಳವಾರ್ ಅವರಿಗೆ ಜಿಲ್ಲಾಧ್ಯಕ್ಷ ಸ್ಥಾನ ಸಿಕ್ಕಿರುವುದು ಖುಷಿಯ ವಿಚಾರ. ಅವರ ಆಡಳಿತ ಅವಧಿಯಲ್ಲಿ ಸಂಘಟನೆ ಕೆಲಸ ಇನ್ನಷ್ಟು ಹೆಚ್ಚಾಗಲಿ’ ಎಂದು ಕರ್ನಾಟಕ ರಾಜ್ಯ ಪರಿಶಿಷ್ಟ ಪಂಗಡ ನೌಕರರ ಬೆಳಗಾವಿ ವಿಭಾಗದ ವಿಭಾಗಿಯ ಅಧ್ಯಕ್ಷ ಪರಸಪ್ಪ ನಾಯಕ ಹಾಗೂ ಸಂಘಟನೆಯ ಕಾರವಾರ ಜಿಲ್ಲಾ ಅಧ್ಯಕ್ಷರಾದ ಗಣೇಶ ಬೀಷ್ಠಣ್ಣನವರ್ ಅವರು ಹಾರೈಸಿದ್ದಾರೆ. - [ಮಕ್ಕಳ ಸಂತೆಗೆ ಮನಸೋತ ಜನ](https://mobiletime.in/2025/12/people-who-are-lost-in-the-childrens-festival/): ಕುಮಟಾದ ಕೋಡ್ಕಣಿ ಶಾಲೆಯಲ್ಲಿ ನಡೆದ ಮಕ್ಕಳ ಸಂತೆಗೆ ಬರಪೂರ ಜನ ಬಂದಿದ್ದು, ಶಾಲಾ ವಿದ್ಯಾರ್ಥಿಗಳು ಸೊಪ್ಪು-ತರಕಾರಿಗಳ ಜೊತೆ ವಿವಿಧ ಖಾದ್ಯಗಳನ್ನು ಮಾರಾಟ ಮಾಡಿದ್ದಾರೆ. ಮಕ್ಕಳಲ್ಲಿ ಪ್ರಾಯೋಗಿಕ ಕಲಿಕೆ, ವ್ಯವಹಾರ ಜ್ಞಾನ ಮತ್ತು ಗಣಿತದ ಆಳ ಅಧ್ಯಯನ ವೃದ್ಧಿಸುವ ಉದ್ದೇಶದಿಂದ ಆಯೋಜಿಸಿದ ಈ ಕಾರ್ಯಕ್ರಮದಲ್ಲಿ ಪುಟಾಣಿ‌ ಮಕ್ಕಳು ಉತ್ಸಾಹದಿಂದ ಪಾಲ್ಗೊಂಡರು.ಕೋಡ್ಕಣಿ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣ ಜನರಿಂದ ತುಂಬಿದ್ದು ನೆರೆದಿದ್ದವರು ಮಕ್ಕಳ ವ್ಯಾಪಾರ-ವಹೀವಾಟು ವೃದ್ಧಿಗೆ ಕೈ ಜೋಡಿಸಿದರು. ​ವಿದ್ಯಾರ್ಥಿಗಳು ತಮ್ಮ ಮನೆಯಿಂದ ತಂದಿದ್ದ ತಾಜಾ ತರಕಾರಿಗಳು, ಸೊಪ್ಪು, ಹಣ್ಣುಗಳು, ಮನೆಯಲ್ಲೇ ತಯಾರಿಸಿದ ತಿಂಡಿ-ತಿನಿಸುಗಳು, ಮಂಡಕ್ಕಿ, ಕರಕುಶಲ ವಸ್ತುಗಳು ಹಾಗೂ ಇನ್ನಿತರ ಸಾಮಗ್ರಿಗಳನ್ನು ಪ್ರದರ್ಶನ ನಡೆಸಿದರು. ‘ಬನ್ನಿ, ಬನ್ನಿ, ತಾಜಾ ತರಕಾರಿ ತಗೊಳ್ಳಿ’ ಎಂದು ಕೂಗುವಿದನ್ನು ನೋಡಿ‌ ಜನ ಮರುಳಾದರು. ‘ಪುಸ್ತಕದ ಅರಿವಿನ ಜೊತೆಗೆ ಜೀವನದ ಕೌಶಲ್ಯಗಳನ್ನು ಕಲಿಸುವುದು ಇಂದಿನ ಅಗತ್ಯವಾಗಿದೆ. ಮಕ್ಕಳು ಹಣದ ಮೌಲ್ಯ ಮತ್ತು ದುಡಿಮೆಯ ಮಹತ್ವವನ್ನು ಅರಿಯಲು ಇಂತಹ ಕಾರ್ಯಕ್ರಮಗಳು ಸಹಕಾರಿ’ ಎಂದು ಆಯೋಜಕರು ವಿವರಿಸಿದರು. ಶಾಲಾ ಶಿಕ್ಷಕರು, ಎಸ್‌ಡಿಎಂಸಿ ಸದಸ್ಯರ ಜೊತೆ ಪೋಷಕರು ಹಾಗೂ ಊರ ನಾಗರಿಕರು ಸೇರಿ ಸಂತೆ ಯಶ್ಸಸ್ಸಿಗೆ ಕಾರಣರಾದರು. - [ರಂಗೋಲಿ ಬಿಡಿಸಿ.. ಅಡುಗೆ ಉಣಬಡಿಸಿ!](https://mobiletime.in/2025/12/draw-a-rangoli-cook-and-serve/): ಕರಾವಳಿ ಉತ್ಸವದ ಅಂಗವಾಗಿ ಜಿಲ್ಲಾಡಳಿತ ರಂಗೋಲಿ ಹಾಗೂ ಅಡುಗೆ ಸ್ಪರ್ಧೆ ಆಯೋಜಿಸಿದೆ. ಡಿಸೆಂಬರ್ 24ರ ಬೆಳಗ್ಗೆ 10ಗಂಟೆಯಿoದ 1ಗಂಟೆಯವರೆಗೂ ಈ ಸ್ಪರ್ಧೆ ನಡೆಯಲಿದೆ. ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿಯೇ ಸ್ಪರ್ಧೆಗೆ ಅವಕಾಶ ಮಾಡಿಕೊಡಲಾಗಿದೆ. ರಂಗೋಲಿ ಸ್ಪರ್ಧೆಗೆ ಅರ್ಹತೆ: ಫ್ರೀ ಹ್ಯಾಂಡ್ ರಂಗೋಲಿ ಸ್ಪರ್ಧೆಗೆ 14-18 ವರ್ಷ ವಯೋಮಾನದನ ಮಕ್ಕಳು ( ಗಂಡು/ಹೆಣ್ಣು) ಮತ್ತು 18 ವರ್ಷ ಮೇಲ್ಪಟ್ಟ ಮಹಿಳೆಯರು ಭಾಗವಹಿಸಬಹುದಾಗಿದೆ. ಹೂವಿನ ರಂಗೋಲಿ ಸ್ಪರ್ಧೆಗೆ 18 ವರ್ಷ ಮೇಲ್ಪಟ್ಟ ಮಹಿಳೆಯರು ಭಾಗವಹಿಸಲು ಅರ್ಹರು. `ರಂಗೋಲಿ ಹಾಕಲು ಅಗತ್ಯವಾಗಿ ಬೇಕಾಗಿರುವ ಬಣ್ಣದ ಪುಡಿ, ಹೂ ಹಾಗೂ ಇತರೆ ಪರಿಕರಗಳನ್ನು ಸ್ಪರ್ಧಾಳುಗಳೇ ತರಬೇಕು. ದೇವರ ಧಾರ್ಮಿಕ ಚಿತ್ರಗಳನ್ನು, ಕೋಮು ಭಾವನೆಗಳನ್ನು ಬಿಂಬಿಸುವoತಹ ಚಿತ್ರಗಳನ್ನು ಬಿಡಿಸತಕ್ಕದ್ದಲ್ಲ. ಕರಾವಳಿ ಉತ್ಸವ ಸಮಿತಿಯವರು ನಿಗದಿಪಡಿಸಿದ ಸ್ಥಳದಲ್ಲಿಯೇ ರಂಗೋಲಿಯನ್ನು ಬಿಡಿಸಬೇಕು. ವಯಸ್ಸಿನ ದೃಢಕರಣವನ್ನು ಕಡ್ಡಾಯ’ ಎಂಬ ನಿಯಮಗಳಿವೆ. ಡಿಸೆಂಬರ್ 23ರ ಮಧ್ಯಾಹ್ನ 12ಗಂಟೆಯೊಳಗೆ ಅರ್ಜಿ ಸಲ್ಲಿಸಿ. ಈ ಸ್ಪರ್ಧೆಯಲ್ಲಿ ಭಾಗವಹಿಸಲು `ರಂಗೋಲಿ ಸ್ಪರ್ಧೆಗೆ ಅರ್ಜಿ’ ಎಂಬ ಪದ ಕ್ಲಿಕ್ ಮಾಡಿ ಅರ್ಜಿ ಸಲ್ಲಿಸಿ: ರಂಗೋಲಿ ಸ್ಪರ್ಧೆಗೆ ಅರ್ಜಿ’ ಇನ್ನೂ ಗೊಂದಲಗಳಿದ್ದರೆ ಇಲ್ಲಿ ಫೋನ್ ಮಾಡಿ: 7760372068 ಅಡುಗೆ ಸ್ಪರ್ಧೆಗೆ ಅರ್ಹತೆ:  ಅಡುಗೆ ಸ್ಪರ್ಧೆಗೆ18 ವರ್ಷ ಮೇಲ್ಪಟ್ಟ ಎಲ್ಲರೂ ಅರ್ಹರು. `ಸ್ಪರ್ಧೆಯಲ್ಲಿ ಭಾಗವಹಿಸುವವರು ಅಡುಗೆ ತಯಾರಿಸಲು ಬೇಕಾಗುವ ಪಾತ್ರೆಗಳನ್ನು ಹಾಗೂ ಸಾಂಬಾರ ಪದಾರ್ಥಗಳನ್ನು ತಾವೇ ತಂದುಕೊಳ್ಳಬೇಕು. ಕರಾವಳಿ ಉತ್ಸವ ಸಮಿತಿಯಿಂದ ಗ್ಯಾಸ್, ಸ್ಟೋವ್, ಅಡುಗೆಗೆ ನೀರು, ಒಂದು ಟೇಬಲ್, ಖುರ್ಚಿ ಹಾಗೂ ಪಾತ್ರೆ ತೊಳೆಯಲು ನೀರನ್ನು ಮಾತ್ರ ಕೊಡಲಾಗುತ್ತದೆ. ಸಸ್ಯಹಾರಿ ಅಡುಗೆ ಸ್ಪರ್ಧೆಯಲ್ಲಿ ಭಾಗವಹಿಸುವವರು ಬದನೆ, ಅಣಬೆ, ಹೀರೆಕಾಯಿ, ಹೂಕೋಸು ಹಾಗೂ ಬೆಂಡೆಕಾಯಿಗಳಲ್ಲಿ ಯಾವುದಾದರೂ ಎರಡು ತರಕಾರಿ ಬಳಸಿ ಅಡುಗೆ ಸಿದ್ಧಪಡಿಸಬೇಕು. ಮಾಂಸಹಾರಿ ಅಡುಗೆ ಸ್ಪರ್ಧೆಯಲ್ಲಿ ಭಾಗವಹಿಸುವವರು ಬಂಗಡೆ ಮೀನು, ಸಿಗಡಿ, ಅಂಜಲ್(ಇಸ್ವಾನ್) ಈ ಮೂರರಲ್ಲಿ ಯಾವುದಾದದರೂ ಒಂದು ಪ್ರಕಾರವನ್ನು ಮಾತ್ರ ಉಪಯೋಗಿಸಬೇಕು’ ಎಂಬ ನಿಯಮವಿದೆ. ಅಡುಗೆ ಸ್ಪರ್ಧೆಗೆ ಹೆಸರು ನೋಂದಾಯಿಸಲು ಡಿ 23 ಕೊನೆ ದಿನ. ಆ ದಿನ ಮಧ್ಯಾಹ್ನ 12ಗಂಟೆಯವರೆಗೂ ಅರ್ಜಿ ಸ್ವೀಕಾರ ನಡೆಯಲಿದೆ. ಅಡುಗೆ ಸ್ಪರ್ಧೆಗೆ ಹೆಸರು ನೋಂದಾಯಿಸಲು ಅಡುಗೆ ಸ್ಪರ್ಧೆಗೆ ನೋಂದಣಿ ಎಂಬ ಪದ ಕ್ಲಿಕ್ ಮಾಡಿ: ಅಡುಗೆ ಸ್ಪರ್ಧೆಗೆ ನೋಂದಣಿ ಇನ್ನೂ ಏನಾದರೂ ಗೊಂದಲವಿದ್ದರೆ ಇಲ್ಲಿ ಫೋನ್ ಮಾಡಿ: 7349113913 - [ಅಪಘಾತ: ಕಾಡು ಸೇರಿದ ಕಾರು!](https://mobiletime.in/2025/12/accident-the-car-belonging-to-the-jungle/): ವೇಗವಾಗಿ ಬರುತ್ತಿದ್ದ ಕಾರಿಗೆ ಲಾರಿ ಗುದ್ದಿದೆ. ಲಾರಿ ಗುದ್ದಿದ ರಭಸಕ್ಕೆ ಕಾರು ರಸ್ತೆ ಬಿಟ್ಟು ಕಾಡು ಸೇರಿದೆ. ದಾಂಡೇಲಿ ಪ್ರವಾಸಕ್ಕೆ ಬಂದಿದ್ದ ವಿಜಯಪುರದ ಜನರಿದ್ದ ಕಾರಿಗೆ ಲಾರಿ ಡಿಕ್ಕಿಯಾಗಿದೆ. ದಾಂಡೇಲಿ ಹಳಿಯಾಳ ರಸ್ತೆ ಮಾರ್ಗದಲ್ಲಿ ಮಂಗಳವಾರ ಈ ಅಪಘಾತ ನಡೆದಿದೆ. ಶ್ರೇಯಸ್ ಪೇಪರ್ ಮಿಲ್ ಸಮೀಪ ಈ ಅವಘಡ ನಡೆದಿದೆ. ಡಿಕ್ಕಿಯ ತೀವ್ರತೆಗೆ ಕಾರು ರಸ್ತೆ ಬಿಟ್ಟು 20 ಮೀಟರ್ ದೂರ ಚಲಿಸಿದೆ. ಅಲ್ಲಿನ ಅರಣ್ಯ ಪ್ರದೇಶದಲ್ಲಿ ಕಾರು ನಿಂತಿದೆ. ಅಪಘಾತದಲ್ಲಿ ಕಾರಿನ ಮುಂದಿನ ಭಾಗ ಸಂಪೂರ್ಣವಾಗಿ ಜಖಂಗೊAಡಿದೆ. ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಪ್ರವಾಸಿಗರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಪೇಪರ್ ಮಿಲ್ ಹತ್ತಿರ ಲಾರಿ ಬಸ್ಸಿಗೆ ಗುದ್ದುವ ಸನ್ನಿವೇಶ ಎದುರಾಗಿದ್ದು, ಬಸ್ಸಿಗೆ ಗುದ್ದುವುದನ್ನು ತಪ್ಪಿಸುವ ದಾವಂತದಲ್ಲಿ ಲಾರಿ ಕಾರಿಗೆ ಡಿಕ್ಕಿಯಾಗಿದೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದಾರೆ. - [ಕಾಡು ಪ್ರಾಣಿ ಕಾಟಕ್ಕೆ ಬೈಕ್ ಸವಾರ ಸುಸ್ತು!](https://mobiletime.in/2025/12/biker-tired-after-being-hit-by-wild-animals/): ರಾತ್ರಿ ಸಂಚಾರದ ವೇಳೆ ಕಾಡುಪ್ರಾಣಿ ಅಡ್ಡ ಬಂದ ಪರಿಣಾಮ ಸುರೇಶ ಪವಾರ್ ಅವರು ದಿಢೀರ್ ಆಗಿ ಬೈಕಿಗೆ ಬ್ರೆಕ್ ಹಾಕಿದ್ದು, ಬೈಕಿನ ಹಿಂದೆ ಕೂತಿದ್ದ ಅಜಯ ಪವಾರ್ ಅವರು ಹಾರಿ ಕೆಳಗೆ ಬಿದ್ದಿದ್ದಾರೆ. ಯಲ್ಲಾಪುರದ ಸಹಸ್ರಳ್ಳಿ ಬಳಿಯ ಹೊಸಗದ್ದೆಯಲ್ಲಿ ಅಭಿಲಾಷ ಸುರೇಶ ಪವಾರ್ (19) ಅವರು ವಾಸವಾಗಿದ್ದಾರೆ. ಡಿಸೆಂಬರ್ 16ರ ನಸುಕಿನಲ್ಲಿ ಅವರು ತಮ್ಮ ಅಣ್ಣ ಅಜಯ ಸುರೇಶ ಪವಾರ್ ಅವರ ಜೊತೆ ಬೈಕಿನಲ್ಲಿ ಹೋಗುತ್ತಿದ್ದರು. ಮುಂಡಗೋಡು-ಯಲ್ಲಾಪುರ ರಸ್ತೆಯಲ್ಲಿ ಅವರು ವೇಗವಾಗಿ ಬೈಕ್ ಓಡಿಸಿಕೊಂಡು ಹೋಗಿದ್ದು, ಲಿಂಗನಕೊಪ್ಪ ಶಾಲೆಯಿಂದ 1ಕಿಮೀ ದೂರದಲ್ಲಿ ಏಕಾಏಕಿ ಕಾಡು ಪ್ರಾಣಿಯೊಂದು ಬೈಕಿಗೆ ಅಡ್ಡ ಬಂದಿತು. ಇದರಿoದ ಗಲಿಬಿಲಿಗೊಂಡ ಅಭಿಲಾಷ ಪವಾರ್ ಅವರು ದಿಢೀರ್ ಆಗಿ ಬೈಕಿನ ಬ್ರೆಕ್ ಅದುಮಿದರು. ಹಿಂದೆ ಕೂತಿದ್ದ ಅಜಯ ಪವಾರ್ ಅವರು ಕಂಗಾಲಾಗಿ ಬೈಕಿನಿಂದ ಹಾರಿ ಡಾಂಬರ್ ರಸ್ತೆ ಮೇಲೆ ಬಿದ್ದರು. ಪರಿಣಾಮ ಅಜಯ ಪವಾರ್ ಅವರ ಹಣೆ, ಕೈ-ಕಾಲುಗಳಿಗೆ ಗಾಯವಾಯಿತು. ಬೈಕ್ ಸಹ ಬಿದ್ದು ಜಖಂ ಆಯಿತು. ಈ ಎಲ್ಲಾ ವಿಷಯದ ಬಗ್ಗೆ ಸಹಸ್ರಳ್ಳಿ ರಾಮನಕೊಪ್ಪದ ರವಿ ಬಾರ್ಕೇಲ್ಯ ಮರಾಠಿ ಅವರು ಪೊಲೀಸರಿಗೆ ಮಾಹಿತಿ ನೀಡಿದರು. - [ಬಟ್ಟೆ ವ್ಯಾಪಾರಿಯ ಸಂಕಷ್ಟ: ಕಾಡಿನಲ್ಲಿ ಕಟ್ಟಿಹಾಕಿ ಥಳಿತ!](https://mobiletime.in/2025/12/the-plight-of-a-cloth-merchant-tied-up-and-beaten-in-the-forest/): ಬಟ್ಟೆ ವ್ಯಾಪಾರ ಮಾಡಿಕೊಂಡು ಬದುಕು ಕಟ್ಟಿಕೊಂಡಿದ್ದ ಪಾಂಡುರoಗ ಮೂಲೆ ಅವರನ್ನು ಅಡಿವೆಪ್ಪ ಮುಡಸಾಲಿ ಅವರು ಕಾಡಿನಲ್ಲಿ ಕಟ್ಟಿ ಹಾಕಿದ್ದಾರೆ. ಅದಾದ ನಂತರ ಪಾಂಡುರoಗ ಅವರಿಗೆ ಹಿಗ್ಗಾಮುಗ್ಗ ಥಳಿಸಿದ್ದು, ಪ್ರಾಣ ಉಳಿಸಿಕೊಂಡು ಬಂದ ಅವರು ಆಸ್ಪತ್ರೆ ಸೇರಿ ಚಿಕಿತ್ಸೆಪಡೆದಿದ್ದಾರೆ. ಮುಂಡಗೋಡದ ಅಲ್ಲಳ್ಳಿಯಲ್ಲಿ ಪಾಂಡುರoಗ ಪುಂಡಳಿಕಪ್ಪ ಮೂಲೆ ಅವರು ವಾಸವಾಗಿದ್ದಾರೆ. ಬೈಕಿನ ಮೇಲೆ ಊರುರು ಅಲೆದಾಟ ನಡೆಸಿ ಅವರು ಬಟ್ಟೆ ವ್ಯಾಪಾರ ಮಾಡುತ್ತಾರೆ. ಡಿಸೆಂಬರ್ 13ರಂದು ಬಟ್ಟೆ ವ್ಯಾಪಾರಕ್ಕಾಗಿ ಅವರು ಮನೆಯಿಂದ ಹೊರಟಿದ್ದರು. ಆಲಳ್ಳಿಯಿಂದ ಬೊಮ್ಮನಳ್ಳಿ ಕಡೆ ಬೈಕಿನಲ್ಲಿ ಹೋಗುತ್ತಿದ್ದ ಪಾಂಡುರoಗ ಅವರಿಗೆ ಬ್ರಹ್ಮ ದೇವಸ್ಥಾನದ ಬಳಿ ಅಲ್ಲಳ್ಳಿಯ ಅಡಿವೆಪ್ಪ ಹನುಮಂತ ಮುಡಸಾಲಿ ಅವರು ಎದುರಾದರು. ಅಡಿವೆಪ್ಪ ಮುಡಸಾಲಿ ಅವರು ಬೈಕಿಗೆ ಅಡ್ಡಲಾಗಿ ಕೈ ಮಾಡಿದರು. ಪಾಂಡುರoಗ ಮೂಲೆ ಅವರು ಬೈಕ್ ನಿಲ್ಲಿಸಿದಾಗ `ಕಾಡಿನಲ್ಲಿ ಕಟ್ಟಿಗೆ ಕೊಯ್ದಿಟ್ಟಿದ್ದೇನೆ. ತಲೆ ಮೇಲೆ ಹೋರಿಸು’ ಎಂದು ಅಡಿವೆಪ್ಪ ಮುಡಸಾಲಿ ಅವರು ಮನವಿ ಮಾಡಿದರು. ಅದನ್ನು ನಂಬಿ ಪಾಂಡುರoಗ ಅವರು ಕಾಡಿನ ಕಡೆ ಹೆಜ್ಜೆ ಹಾಕಿದರು. ಆದರೆ, ಪೂರ್ವ ತಯಾರಿಯ ಪ್ರಕಾರ ಅಡಿವೆಪ್ಪ ಮುಡಸಾಲಿ ಅವರು ಪಾಂಡುರoಗ ಮೂಲೆ ಅವರನ್ನು ಹಗ್ಗದಿಂದ ಕಟ್ಟಿ ಹಾಕಿದರು. `ನಿನ್ನ ಹಾರಾಟ ಜಾಸ್ತಿ ಆಗಿದೆ’ ಎಂದು ಬೈಗುಳ ಶುರು ಮಾಡಿದರು. ಅಡಿವೆಪ್ಪ ಮುಡಸಾಲಿ ಅವರು ಪಾಂಡುರoಗ ಮೂಲೆ ಅವರ ಕಪಾಳಕ್ಕೆ ಬಾರಿಸಿದರು. ಅದಾದ ನಂತರ ಅಲ್ಲಿದ್ದ ಕಟ್ಟಿಗೆ ಕಾವಿನಿಂದಲೂ ಪಾಂಡುರAಗ ಮೂಲೆ ಅವರಿಗೆ ಅಡಿವೆಪ್ಪ ಮೂಡಸಾಲಿ ಅವರು ಥಳಿಸಿದರು. ಕುತ್ತಿಗೆಗೆ ಹಗ್ಗ ಹಾಕಿ `ಕೊಂದೇ ಬಿಡುವೆ’ ಎಂದು ಬೆದರಿಸಿದರು. ಅಲ್ಲಿಂದ ತಪ್ಪಿಸಿಕೊಂಡು ಬಂದ ಪಾಂಡುರAಗ ಮೂಲೆ ಅವರು ಆಸ್ಪತ್ರೆಗೆ ಸೇರಿ ಸುಧಾರಿಸಿಕೊಂಡರು. ಅದಾದ ನಂತರ ಪೊಲೀಸ್ ಠಾಣೆಗೆ ತೆರಳಿ ತಮಗಾದ ಕೆಟ್ಟ ಅನುಭವ ವಿವರಿಸಿದರು. ಪೊಲೀಸರು ಪ್ರಕರಣ ದಾಖಲಿಸಿದರು. - [ಶ್ರೀಕುಮಾರನದು ತಪ್ಪಿಲ್ಲ.. ಆತ ಯಾರಿಗೂ ದುಡ್ಡು ಕೊಡಲ್ಲ!](https://mobiletime.in/2025/12/there-is-nothing-wrong-with-srikumar-he-doesnt-give-money-to-anyone/): ಶಿರಸಿಯಲ್ಲಿ ಪೆಟ್ರೋಲ್ ಬಂಕನ್ನು ಹೊಂದಿರುವ ಶ್ರೀಕುಮಾರ ಸಮೂಹ ಸಂಸ್ಥೆಯವರು ಅರಣ್ಯ ಅತಿಕ್ರಮಣ ಮಾಡಿದ ಬಗ್ಗೆ ಜಾಲತಾಣದಲ್ಲಿ ಸುದ್ದಿ ಹರಿದಾಡುತ್ತಿದೆ. ಆದರೆ, `ಆ ಆರೋಪ ಸತ್ಯವಲ್ಲ’ ಎಂದು ಶ್ರೀಕುಮಾರ ಸಮೂಹ ಸಂಸ್ಥೆ ಮಾಲಕ ವೆಂಕಟರಮಣ ಹೆಗಡೆ ಕವಲಕ್ಕಿ ಹೇಳಿದ್ದಾರೆ. ಶಿರಸಿಯ ಇಸಳೂರಿನಲ್ಲಿರುವ ಶ್ರೀಕುಮಾರ ಸಮೂಹ ಸಂಸ್ಥೆಯ ಪೆಟ್ರೋಲ್ ಬಂಕಿನ ಬಳಿ ಅರಣ್ಯ ಇಲಾಖೆ ಜಾಗ ಅತಿಕ್ರಮಣವಾದ ಬಗ್ಗೆ ಜಾಲತಾಣದಲ್ಲಿ ಸುದ್ದಿ ಹರಿದಾಡುತ್ತಿದೆ. `ಅರಣ್ಯ ಇಲಾಖೆಯವರು ತಮ್ಮ ಜಾಗದ ಸುತ್ತ ಕಾಲುವೆ ತೆಗೆದಿದ್ದಾರೆ. ಪೆಟ್ರೋಲ್ ಬಂಕಿನವರಿAದ ಅರಣ್ಯ ಅತಿಕ್ರಮಣ ನಡೆದಿಲ್ಲ’ ವೆಂಕಟರಮಣ ಹೆಗಡೆ ಹೇಳಿದ್ದಾರೆ. `ಎರಡು ವರ್ಷದ ಹಿಂದೆ ಕೆಲವರು ಪೆಟ್ರೋಲ್ ಬಂಕ್ ಅರಣ್ಯ ಇಲಾಖೆಯ ಜಾಗದಲ್ಲಿದೆ ಎಂಬ ಸುದ್ದಿ ಹರಿಬಿಟ್ಟು ಬೆದರಿಕೆ ಹಾಕಿ ಹಣಕ್ಕೆ ಬೇಡಿಕೆಯಿಟ್ಟಿದ್ದರು. ಪೆಟ್ರೋಲ್ ಬಂಕ್ ಅಧಿಕೃತ ಜಾಗದಲ್ಲಿರುವ ಕಾರಣ ನಾನೂ ಅವರ ಬೆದರಿಕೆಗೆ ನಾನು ಬಗ್ಗಿಲ್ಲ. ಈಗ ಮತ್ತೆ ಅದೇ ಕೆಲಸ ನಡೆದಿದೆ’ ಎಂದು ಅಸಮಧಾನವ್ಯಕ್ತಪಡಿಸಿದರು. `ಪೆಟ್ರೋಲ್ ಬಂಕ್ ಅಧಿಕೃತ ಜಾಗದಲ್ಲಿದೆ. ನಾನು ಯಾವುದೇ ಕಾರಣಕ್ಕೂ ಹಣ ಕೊಡಲ್ಲ’ ಎಂದರು. `ಪೆಟ್ರೋಲ್ ಬಂಕ್ ಸ್ಥಾಪಿಸಲು 16 ಇಲಾಖೆಯ ಅನುಮತಿ ಪತ್ರ ಅವಶ್ಯವಿದ್ದು, ಪೆಟ್ರೋಲ್ ಬಂಕ್ ನಿರ್ಮಾಣವಾಗುವ ಸ್ಥಳಕ್ಕೆ ಜಿಲ್ಲಾಧಿಕಾರಿ ಹಾಗೂ ಸಂಬAಧಪಟ್ಟ ಇಲಾಖೆಯವರು ಪರಿಶೀಲನೆ ನಡೆಸಿದ ನಂತರವೇ ಪೆಟ್ರೋಲ್ ಬಂಕ್ ಆರಂಭಿಸಲಾಗಿದೆ. ಸಂಸ್ಥೆಯಿAದ ಹಣ ವಿನಿಯೋಗಿಸಿದರೂ ಕೇಂದ್ರ ಸರ್ಕಾರದ ಪೆಟ್ರೋಲಿಯಂ ಖಾತೆ ಅಧಿನದಲ್ಲಿ ಬರುವುದರಿಂದ ಅದು ಸಾರ್ವಜನಿಕರ ಆಸ್ತಿಯಾಗಿರುತ್ತದೆ’ ಎಂದವರು ಹೇಳಿದ್ದಾರೆ. `ಪೆಟ್ರೋಲ್ ಬಂಕ್ ಅಧಿಕೃತ ಭೂ ಪರಿವರ್ತನೆ ಆದ ಜಾಗದಲ್ಲಿದೆ. ಆ ಜಾಗದ ಎದುರಿನಲ್ಲಿರುವುದು ಅರಣ್ಯ ಇಲಾಖೆಯ ಜಾಗವಾಗಿದ್ದು, ಅದಕ್ಕೆ ಅವರು ರಕ್ಷಣೆ ಮಾಡಿಕೊಂಡರೆ ನಾನು ತಕರಾರು ಸಲ್ಲಿಸುವುದಿಲ್ಲ. ಅರಣ್ಯ ಇಲಾಖೆಯವರು ಸಹ `ಶ್ರೀಕುಮಾರದವರು ಜಾಗ ಅತಿಕ್ರಮಿಸಿದ್ದಾರೆ’ ಎಂದು ನೋಟಿಸ್ ನೀಡಿಲ್ಲ’ ಎಂದವರು ಸ್ಪಷ್ಠಪಡಿಸಿದರು. `ಪ್ರಯಾಣಿಕರಿಗೆ ಹಾಗೂ ಸಾರ್ವಜನಿಕರಿಗೆ ಅನುಕೂಲವಾಗುವ ದೃಷ್ಟಿಯಿಂದ ಪೆಟ್ರೋಲ್ ಬಂಕ್ ಪಕ್ಕದಲ್ಲಿರುವ ಸಂಸ್ಥೆಯ ಜಾಗದಲ್ಲಿ 10 ಸ್ನಾನ ಹಾಗೂ ಶೌಚಗೃಹಗಳನ್ನು ನಿರ್ಮಾಣ ಮಾಡಲಾಗಿದ್ದು, ಪೆಟ್ರೋಲ್ ಬಂಕ್‌ನ ಎದುರಿನ ಖಾಲಿ ಸಾರ್ವಜನಿಕ ಬಸ್ಸುಗಳು ನಿಲುಗಡೆ ಮಾಡುತ್ತವೆಯೇ ಹೊರತು ಸಂಸ್ಥೆಯ ಬಸ್ಸುಗಳು ಖಾಯಂ ನಿಲುಗಡೆಯಾಗುವುದಿಲ್ಲ’ ಎಂದು ತಿಳಿಸಿದರು. - [ನೀರಿಗೆ ಬಂದ ನಾರಿ ಮೇಲೆ ದೌರ್ಜನ್ಯ!](https://mobiletime.in/2025/12/violence-against-a-woman-who-came-to-the-water/): ನೀರು ತರಲು ಹೋಗಿದ್ದ ರೋಹಿಣಿ ನಾಯ್ಕ ಅವರ ಮೇಲೆ ರಾಘು ನಾಯ್ಕ ಅವರು ಆಕ್ರಮಣ ಮಾಡಿದ್ದಾರೆ. ರೋಹಿಣಿ ನಾಯ್ಕ ಅವರ ಜೊತೆ ಅವರ ಮಗ ಸುಭಾಶ ನಾಯ್ಕ ಅವರನ್ನು ಕೊಲೆ ಮಾಡುವುದಾಗಿ ಬೆದರಿಸಿದ್ದಾರೆ. ಅಂಕೋಲಾದ ಹೊನ್ನೇಕೇರಿಯಲ್ಲಿ ರೋಹಿಣಿ ಗಂಗಾಧರ ನಾಯ್ಕ (62) ಅವರು ವಾಸವಾಗಿದ್ದಾರೆ. ಡಿಸೆಂಬರ್ 15ರಂದು ಅವರು ತಮ್ಮ ಜಾಗದಲ್ಲಿರುವ ಬಾವಿಯಿಂದ ನೀರು ತರಲು ಹೋದಾಗ ಕೇಣಿಯ ರಾಘು ಅಶೋಕ ನಾಯ್ಕ ಅವರು ಅದಕ್ಕೆ ಅಡ್ಡಿಪಡಿಸಿದ್ದಾರೆ. `ಈ ಜಾಗ ನನ್ನದು’ ಎಂದು ರಾಘು ನಾಯ್ಕ ಅವರು ಬೆದರಿಸಿದ್ದಾರೆ. ಆಗ, ರೋಹಿಣಿ ನಾಯ್ಕ ಅವರು `ಈ ಜಾಗ ನನ್ನ ಮಗನ ಹೆಸರಿನಲ್ಲಿದೆ’ ಎಂದಿದ್ದಾರೆ. ಆಗ ಸಿಟ್ಟಾದ ರಾಘು ನಾಯ್ಕ ಅವರು ರೊಹಿಣಿ ಅವರ ಕೂದಲು ಹಿಡಿದು ಎಳೆದಾಡಿದ್ದಾರೆ. ಅವರ ಸೀರೆ ಹರಿದು ಅವಮಾನ ಮಾಡಿದ್ದಾರೆ. ಈ ವೇಳೆ ಊರಿನ ಜನ ಅಲ್ಲಿಗೆ ಬಂದಿದ್ದು, `ನಿನ್ನ ಜೊತೆ ನಿನ್ನ ಮಗನನ್ನು ಕೊಲೆ ಮಾಡುವೆ’ ಎಂದು ರಾಘು ನಾಯ್ಕ ಅವರು ಬೆದರಿಸಿದ್ದಾರೆ. ಅದಾದ ನಂತರ ರಾಘು ನಾಯ್ಕ ಅವರು ಅಲ್ಲಿಂದ ಪರಾರಿಯಾಗಿದ್ದಾರೆ. ತಮಗಾದ ಅನ್ಯಾಯದ ಬಗ್ಗೆ ರೋಹಿಣಿ ನಾಯ್ಕ ಅವರು ಪೊಲೀಸ್ ದೂರು ನೀಡಿದ್ದು, ಅಂಕೋಲಾ ಪೊಲೀಸರು ಕಾನೂನು ಕ್ರಮ ಜರುಗಿಸಿದ್ದಾರೆ. - [ಕೋಣನ ಕಂಡು ಓಡಿದ ಹುಲಿ!](https://mobiletime.in/2025/12/the-tiger-ran-away-after-seeing-the-corner/): ಪ್ರವಾಸಿಗರು ಸಂಚರಿಸುತ್ತಿದ್ದ ರಸ್ತೆಯ ಮೇಲೆ ಕಾಡುಕೋಣ ಕಾಣಿಸಿದೆ. ಕಾಡು ಕೋಣದ ವಿಡಿಯೋ ಮಾಡುತ್ತಿದ್ದಾಗ ಹುಲಿಯೂ ಗೋಚರಿಸಿದೆ! ರಸ್ತೆ ಮದ್ಯೆ ನಿಂತಿದ್ದ ಕಾಡುಕೋಣ ನೋಡಿದ ಹುಲಿ ಆ ಪ್ರಾಣಿಗೆ ಹೆದರಿ ಕಾಡು ಸೇರಿದೆ. ಅದಾದ ನಂತರ ಹುಲಿಯ ಮರಿ ಸಹ ತಾಯಿಯನ್ನು ಹಿಂಬಾಲಿಸಿದೆ. ಜೊಯಿಡಾಗೆ ಬಂದಿದ್ದ ಪ್ರವಾಸಿಗರು ಈ ವಿಡಿಯೋ ಚಿತ್ರಿಕರಿಸಿದ್ದಾರೆ. ಜೋಯಿಡಾ ತಾಲೂಕಿನ ಕುಳಗಿಯ ಕಾಳಿ ಹುಲಿ ರಕ್ಷಿತ ಪ್ರದೇಶದಲ್ಲಿ ತಾಯಿ ಹುಲಿ ಬೇಟೆ ಅರೆಸಿ ಹೋರಟಿತ್ತು. ಎದುರಿಗೆ ಕಾಡುಕೋಣ ಕಂಡರೂ ಆ ಹುಲಿ ಕೋಣನನ್ನು ಭಕ್ಷಿಸಲಿಲ್ಲ. ಕೋಣವೇ ಬುಸುಗುಟ್ಟು ಹುಲಿಯನ್ನು ಹೆದರಿಸಿತು. ಹುಲಿಯ ಜೊತೆ ಮರಿಯೂ ಇದ್ದ ಕಾರಣ ಮರಿಯನ್ನು ರಕ್ಷಿಸಲು ತಾಯಿ ಮುಂದಾಯಿತು. ಈ ವೇಳೆ ಕಾಡುಕೋಣದ ಸಮೀಪದಿಂದಲೇ ಹುಲಿ ಕಾಡು ಸೇರಿತು. ತಾಯಿ ಹುಲಿಯನ್ನು ಮರಿಯೂ ಹಿಂಬಾಲಿಸಿತು. ಕಾಡುಕೋಣದ ಹಿಂದೆ ನಿಂತಿದ್ದ ಪ್ರವಾಸಿಗರು ಖುಷಿ ಅನುಭವಿಸಿದರು. ಹುಲಿ ಬೆದರಿದ ವಿಡಿಯೋ ಇಲ್ಲಿ ನೋಡಿ.. - [ಆಸ್ಪತ್ರೆ ವಿಷಯ: ಅಧಿವೇಶನದ ಹೊರಗೆ ಅನಂತಮೂರ್ತಿ ಘರ್ಜನೆ!](https://mobiletime.in/2025/12/hospital-issue-ananthamurthy-roars-outside-the-session/): ಸಾಮಾಜಿಕ ಕಾರ್ಯಕರ್ತ ಅನಂತಮೂರ್ತಿ ಹೆಗಡೆ ಅವರು ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನಕ್ಕೆ ಹೋಗಿದ್ದಾರೆ. ಸುವರ್ಣಸೌಧದ ಹೊರಭಾಗ ಅವರು ಹೋರಾಟ ಶುರು ಮಾಡಿದ್ದು, ಶಿರಸಿಯ ಸಾರ್ವಜನಿಕ ಪಂಡಿತ್ ಆಸ್ಪತ್ರೆಗಾಗಿ ಪಟ್ಟುಹಿಡಿದಿದ್ದಾರೆ. `ಕಳೆದ ಐದು ವರ್ಷಗಳಿಂದ ಶಿರಸಿಯಲ್ಲಿ ಪಂಡಿತ್ ಸಾರ್ವಜನಿಕ ಆಸ್ಪತ್ರೆಯ ಕಾಮಗಾರಿ ನಡೆಯುತ್ತಿದೆ. ತಜ್ಞ ವೈದ್ಯರ ನೇಮಕಾತಿ, ವೈದ್ಯಕೀಯ ಯಂತ್ರೋಪಕರಣ ಖರೀದಿ ನಡೆದಿಲ್ಲ. ಶೇ 80ರಷ್ಟು ಕಾಮಗಾರಿ ಮುಗಿದರೂ ಆಸ್ಪತ್ರೆಯ ಕೆಲಸ ವೇಗಪಡೆಯುತ್ತಿಲ್ಲ’ ಎಂದು ಅನಂತಮೂರ್ತಿ ಹೆಗಡೆ ಆಕ್ರೋಶದ ಭಾಷಣ ಮಾಡಿದ್ದಾರೆ. ಅವರ ಭಾಷಣ ಕೇಳಿ ಸ್ಥಳಕ್ಕೆ ಸಚಿವ ಶಿವರಾಜ ತಂಗಡಗಿ ಅವರು ಆಗಮಿಸಿದ್ದು, ಹೋರಾಟದಲ್ಲಿ ಮಗ್ನರಾಗಿದ್ದ ಅನಂತಮೂರ್ತಿ ಅವರನ್ನು ಸಮಾಧಾನ ಮಾಡಿದ್ದಾರೆ. `2020ರಲ್ಲಿ ಸರ್ಕಾರ 250 ಹಾಸಿಗೆಯ ಆಸ್ಪತ್ರೆಗೆ ಆದೇಶ ಹೊರಡಿಸಿದ್ದು, ಇದಕ್ಕಾಗಿ 112 ಕೋಟಿ ರೂಪಾಯಿ ಬಿಡುಗಡೆ ಮಾಡಿದೆ. ಯಂತ್ರೋಪಕರಣ ಖರೀದಿಗೆ 30 ಕೋಟಿ ರೂಪಾಯಿ ಪ್ರತ್ಯೇಕವಾಗಿ ಕೊಡಲಾಗಿದೆ. ಕಳೆದ ಒಂದು ವರ್ಷದಿಂದ ಆಸ್ಪತ್ರೆ ಕಾಮಗಾರಿ ನಿಧಾನವಾಗಿದ್ದು, ಯಂತ್ರೋಪಕರಣ ಪೂರೈಕೆ ನಡೆದಿಲ್ಲ. ವೈದ್ಯರ ನೇಮಕಾತಿ ಆಗಿಲ್ಲ’ ಎಂದು ಅನಂತಮೂರ್ತಿ ಹೆಗಡೆ ಅಸಮಧಾನವ್ಯಕ್ತಪಡಿಸಿದರು. `ಉತ್ತರ ಕನ್ನಡ ಜಿಲ್ಲೆಯಲ್ಲಿ ಅಪಘಾತಗಳಿಗೆ ಒಳಗಾಗಿ ಸಾವನಪ್ಪುವವರ ಸಂಖ್ಯೆ ಹೆಚ್ಚಾಗಿದೆ. ಜಿಲ್ಲೆಯಲ್ಲಿ ಒಬ್ಬರೇ ಒಬ್ಬ ನ್ಯೂರೋ ಸರ್ಜನ್ ವೈದ್ಯರು ಇಲ್ಲ. ಹಾರ್ಟ್ ಆಪರೇಷನ್ ಮಾಡುವ ಆಸ್ಪತ್ರೆಗಳೂ ಇಲ್ಲ. ನಮ್ಮ ಜಿಲ್ಲೆಯಲ್ಲಿ ಮಲ್ಟಿ ಸ್ಪೆಷಾಲಿಟಿ ಇಲ್ಲ’ ಎಂಬ ಸಮಸ್ಯೆಗಳನ್ನು ವಿವರಿಸಿದರು. `ಉತ್ತರ ಕನ್ನಡ ಜಿಲ್ಲೆಯಲ್ಲಿ ಕ್ಯಾನ್ಸರ್ ರೋಗಿಗಳ ಸಂಖ್ಯೆ ಹೆಚ್ಚುತ್ತಿರುವುದು ಸಹ ಆತಂಕ ಸಂಗತಿ’ ಎಂಬ ಕಳವಳವ್ಯಕ್ತಪಡಿಸಿದರು. ಈ ಎಲ್ಲ ವಿಷಯ ಆಲಿಸಿದ ಸಚಿವರು `ಶಿರಸಿ ಪಂಡಿತ್ ಸಾರ್ವಜನಿಕ ಆಸ್ಪತ್ರೆಗೆ ತುರ್ತಾಗಿ ವೈದ್ಯಕೀಯ ಉಪಕರಣ ಖರೀದಿಗೆ ಟೆಂಡರ್ ಕರೆಯಲು ಆರೋಗ್ಯ ಇಲಾಖೆಗೆ ಸೂಚಿಸುತ್ತೇವೆ. ತಜ್ಞ ವೈದ್ಯರ ನೇಮಕಾತಿಗೆ ಕೂಡಲೇ ಆದೇಶಿಸಲು ಸೂಕ್ತ ಸಚಿವಾಲಯಕ್ಕೆ ಮಾಹಿತಿ ನೀಡುತ್ತೇವೆ’ ಎಂಬ ಭರವಸೆ ನೀಡಿದರು. ಜಿಪಂ ಮಾಜಿ ಸದಸ್ಯೆ ಉಷಾ ಹೆಗಡೆ, ಪ್ರಮುಖರಾದ ನಾರಾಯಣ ಹೆಗಡೆ, ಚಿದಾನಂದ ಹರಿಜನ ಮುಂಡಗೋಡು, ಮಂಜುನಾಥ ಕುಪ್ಪಗಡ್ಡೆ, ಅಂಕಿತ್ ಶಿರಸಿ, ಭೀಮಶಿ ವಾಲ್ಮೀಕಿ, ಬಸವರಾಜ ಹಸ್ಲರ್, ಶಂಕರಪ್ಪ, ನೂರ್ ಅಹಮದ್ ಜೊತೆಗಿದ್ದರು,   - [ಅರಣ್ಯ ಹಕ್ಕು ಗೊಂದಲ: ಉನ್ನತ ಅಧಿಕಾರಿಗಳ ಜೊತೆ ಹೋರಾಟಗಾರರ ಸಭೆ ಅಗತ್ಯ](https://mobiletime.in/2025/12/forest-rights-confusion-a-meeting-of-activists-with-peoples-representatives-is-necessary/): ಅರಣ್ಯ ಹಕ್ಕು ಗೊಂದಲದ ಬಗ್ಗೆ ಶಾಸಕ ಶಿವರಾಮ ಹೆಬ್ಬಾರ್ ಅಧಿವೇಶನದಲ್ಲಿ ಮಾತನಾಡಿದ್ದು, `ಅರಣ್ಯ ಹಕ್ಕು ಕಾಯ್ದೆಯ ಅನುಷ್ಠಾನ ಕುರಿತಾದ ಗೊಂದಲ ಬಗೆಹರಿಸಲು ಶಾಸಕರು ಹಾಗೂ ಅರಣ್ಯ ಹಕ್ಕು ಹೋರಾಟ ಸಂಘಟನೆಗಳ ಜೊತೆ ಸಭೆ ಆಯೋಜಿಸಬೇಕು’ ಎಂದು ಅರಣ್ಯ ಭೂಮಿ ಹಕ್ಕು ಹೋರಾಟ ಒಕ್ಕೂಟಗಳ ರಾಜ್ಯ ಸಮಿತಿ ಸಂಚಾಲಕ ಚಂದ್ರಕಾoತ ಕೊಚರೇಕರ ಅವರು ಆಗ್ರಹಿಸಿದ್ದಾರೆ. `ರಾಜ್ಯದ ಕರಾವಳಿ, ಮಲೆನಾಡು ಭಾಗದ ಶಾಸಕರು ಮತ್ತು ಅರಣ್ಯ ಹಕ್ಕು ಹೋರಾಟ ಸಂಘಟನೆಗಗಳ ಜೊತೆ ಉನ್ನತಾಧಿಕಾರ ಮಟ್ಟದ ಜಂಟಿ ಸಂವಾದ ಸಭೆ ನಡೆಯಬೇಕು. 2005ರ ಪೂರ್ವದಿಂದ ಅರಣ್ಯ ಭೂಮಿಯಲ್ಲಿ ಬದುಕು ಕಟ್ಟಿಕೊಂಡವರಿಗೆ ಭೂಮಿಯ ಹಕ್ಕು ನೀಡಲು ಪರಿಗಣಿಸಬೇಕು’ ಎಂದವರು ಒತ್ತಾಯಿಸಿದ್ದಾರೆ. `ಶಾಸಕ ಶಿವರಾಮ ಹೆಬ್ಬಾರ್ ಅವರ ಪ್ರಶ್ನೆಗೆ ಅರಣ್ಯ ಸಚಿವ ಈಶ್ವರ ಖಂಡ್ರೆ ಅವರ ಉತ್ತರ ಹಾಗೂ ಉತ್ತರ ಕನ್ನಡ ಜಿಲ್ಲೆಯಲ್ಲಿ ನಡೆಯುತ್ತಿರುವ ಅನುಷ್ಠಾನ ಪ್ರಕ್ರಿಯೆ ನಡುವೆ ಸಾಕಷ್ಟು ವ್ಯತ್ಯಾಸವಿದೆ. ಇಲ್ಲಿ ಅರಣ್ಯ ಹಕ್ಕುಗಳನ್ನು ಮಾನ್ಯ ಮಾಡಲು ಸ್ವಾತಂತ್ರ‍್ಯ ಪೂರ್ವದ ದಾಖಲೆಗಳಿಗಾಗಿ ಒತ್ತಾಯ ಪಡಿಸಲಾಗುತ್ತಿದೆ’ ಎಂಬ ಅಂಶವನ್ನು ಚಂದ್ರಕಾoತ ಕೋಚ್ರೇಕರ್ ಅವರು ಪುನರುಚ್ಚರಿಸಿದ್ದಾರೆ. `ಅರಣ್ಯಾಧಿಕಾರಿಗಲ ನಡೆ 2012ರ ತಿದ್ದುಪಡಿ ನಿಯಮ ಮತ್ತು ಕೇಂದ್ರ ಬುಡಕಟ್ಟು ಸಚಿವಾಲಯದ ನಿರ್ದೇಶನಗಳಿಗೆ ವಿರುದ್ಧವಾಗಿದೆ. ಈ ನಡೆಯಿಂದ ವಸತಿ ಮತ್ತು ಜೀವನೋಪಾಯಕ್ಕೆ ಅರಣ್ಯ ಭೂಮಿಯನ್ನು ಅವಲಂಬಿಸಿರುವ ರಾಜ್ಯದ ಲಕ್ಷಾಂತರ ಅರ್ಹ ಜನರು ಭೂಮಿಯ ಹಕ್ಕಿನಿಂದ ವಂಚಿತರಾಗುವ ಅಪಾಯ ಎದುರಾಗಿದೆ. ಒಂದು ಕಡೆ ಅರಣ್ಯ ಹಕ್ಕುಗಳ ಪರಿಶೀಲನೆ ಮತ್ತು ಹಕ್ಕುಗಳನ್ನು ಮಾನ್ಯ ಮಾಡುವಲ್ಲಿ ಕ್ಷೇತ್ರ ಮಟ್ಟದಲ್ಲಿ ತೊಂದರೆಗಳಿದ್ದು, ಅವುಗಳನ್ನು ಬಗೆಹರಿಸಲು ಮುಖ್ಯ ಕಾರ್ಯದರ್ಶೀಯವರ ಅಧ್ಯಕ್ಷತೆಯ ರಾಜ್ಯ ಮಟ್ಟದ ಮೇಲ್ವಿಚಾರಣಾ ಸಮಿತಿಗೆ ಅಧಿಕಾರವಿರುವ ಬಗ್ಗೆ ಕಾಯ್ದೆಯಲ್ಲಿದೆ. ಈ ಬಗ್ಗೆ ಅರಣ್ಯ ಸಚಿವರೇ ವಿಧಾನಸಭೆಯಲ್ಲಿ ಶಾಸಕರಿಗೆ ಲಿಖಿತ ಉತ್ತರ ನೀಡಿದ್ದಾರೆ’ ಎಂದವರು ವಿವರಿಸಿದರು. `ಈ ಎಲ್ಲದರ ನಡುವೆ ರಾಜ್ಯದ ಪ್ರಸ್ತಾಪವನ್ನು ಕೇಂದ್ರ ಸರ್ಕಾರ ಈಗಾಗಲೇ ತಿರಸ್ಕರಿಸಿದೆ. ಇಂತಹ ದ್ವಂದ್ವ ಮತ್ತು ಗೊಂದಲಗಳಿAದ ಹಾಗೂ ಇಚ್ಛಾಶಕ್ತಿಯ ಕೊರತೆಯಿಂದಾಗಿ ರಾಜ್ಯದಲ್ಲಿ ಲಕ್ಷಾಂತರ ಇತರ ಪಾರಂಪರಿಕ ಅರಣ್ಯವಾಸಿಗಳ ಬದುಕು ಬೀದಿಗೆ ಬರುವ ಅಪಾಯ ಎದುರಾಗಿz’ ಎಂದವರು ಕಳವಳವ್ಯಕ್ತಪಡಿಸಿದ್ದಾರೆ. `ಉತ್ತರ ಕನ್ನಡ ಜಿಲ್ಲೆಯಲ್ಲಿ ಅನಗತ್ಯ ಯೋಜನೆಗಳಿಗೆ ಅರಣ್ಯ ಭೂಮಿ ನೀಡಲಾಗುತ್ತಿದೆ. ಆದರೆ, ಜೀವನೋಪಾಯಕ್ಕಾಗಿ ಅರಣ್ಯ ಭೂಮಿ ಅತಿಕ್ರಮಿಸಿದವರಿಗೆ ಅನಗತ್ಯ ತೊಂದರೆ ನೀಡಲಾಗುತ್ತಿದೆ. ಇದನ್ನು ಬಗೆಹರಿಸುವುದಕ್ಕಾಗಿ ಮುಖ್ಯಮಂತ್ರಿಗಳು, ಸಚಿವರ ಮಟ್ಟದಲ್ಲಿ ಸಭೆ ನಡೆಯಬೇಕು’ ಎಂದವರು ಆಗ್ರಹಿಸಿದ್ದಾರೆ. - [ಹೂವಿನ ಗಿಡದಲ್ಲಿ ಅಡಗಿದ್ದ ಹಾವು: ಗೃಹಿಣಿ ಸಾವು!](https://mobiletime.in/2025/12/snake-hiding-in-flower-plant-housewife-dies/): ಹೂವಿನ ಗಿಡದಲ್ಲಿ ಅಡಗಿದ್ದ ವಿಷಕಾರಿ ಹಾವು ಯಶೋಧಾ ವೈದ್ಯ ಅವರಿಗೆ ಕಚ್ಚಿದೆ. ಆಸ್ಪತ್ರೆ ಸೇರುವ ಮುನ್ನವೇ ಅವರು ಬದುಕಿನ ಪಯಣ ಮುಗಿಸಿದ್ದಾರೆ. ಅಂಕೋಲಾ ತಾಲೂಕಿನ ರಾಮನಗುಳಿ ಬಳಿಯ ಕಂಡ್ರಮನೆಯಲ್ಲಿ ಯಶೋಧಾ ವೈದ್ಯ (39) ಅವರು ವಾಸವಾಗಿದ್ದರು. ಕೃಷಿ ಕುಟುಂಬದ ಅವರು ಹೂವಿನ ಗಿಡಗಳನ್ನು ಬೆಳಸುವಲ್ಲಿ ಅಪಾರ ಆಸಕ್ತಿಹೊಂದಿದ್ದರು. ಡಿಸೆಂಬರ್ 15ರಂದು ತಮ್ಮ ಪತಿ ಶೇಖರ ವೈದ್ಯ ಅವರ ಜೊತೆ ತೋಟದ ಕಡೆ ಹೆಜ್ಜೆ ಹಾಕಿದ್ದರು. ಅಲ್ಲಿದ್ದ ಗಿಡದ ಮೇಲೆ ವಿಷಜಂತು ಕೂತಿದ್ದು, ಅದು ಆ ದಂಪತಿಗೆ ಕಾಣಲಿಲ್ಲ. ಹೂವಿನ ಗಿಡದ ಬುಡಕ್ಕೆ ಬಂದ ಆ ಹಾವು ಯಶೋಧಾ ವೈದ್ಯ ಅವರ ಕಾಲಿಗೆ ಕಚ್ಚಿತು. ಎಡಗಾಲಿನ ಪಾದ ಊದಿಕೊಂಡಿದ್ದು, ನೋವಿನಿಂದ ಬಳಲಿದ ಯಶೋಧಾ ವೈದ್ಯ ಅವರನ್ನು ರಾಮನಗುಳಿಯ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ತರಲಾಯಿತು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಆಂಬುಲೆನ್ಸಿನ ಮೂಲಕ ಯಶೋಧಾ ವೈದ್ಯ ಅವರನ್ನು ಯಲ್ಲಾಪುರದ ಕಡೆ ಕರೆದೊಯ್ಯಲಾಯಿತು. ಆದರೆ, ಅರ್ದ ದಾರಿಯಲ್ಲಿಯೇ ಅವರು ಉಸಿರಾಟ ನಿಲ್ಲಿಸಿದರು. ಆಸ್ಪತ್ರೆಗೆ ಬಂದಾಗ ವೈದ್ಯರು ಯಶೋಧಾ ವೈದ್ಯ ಅವರ ಸಾವನ್ನು ದೃಢಪಡಿಸಿದರು. `ಹೂ ಗಿಡಗಳ ಬಳಿ ತೆರಳುವಾಗ ಎಚ್ಚರ’ - [ಸಿಲೆಂಡರ್ ಸ್ಪೋಟ: ಎರಡು ಕಾರಿನ ಜೊತೆ ಆಟೋ ಅಗ್ನಿಗಾಹುತಿ!](https://mobiletime.in/2025/12/cylinder-explosion-auto-fire-with-two-cars/): ಸಿಲೆಂಡರ್ ಸ್ಪೋಟದ ತೀವೃತೆಗೆ ಮೂರು ವಾಹನಗಳು ಸುಟ್ಟು ಕರಕಲಾಗಿದೆ. ಎರಡು ಕಾರಿನ ಜೊತೆ ಆಟೋವೊಂದು ಭಸ್ಮವಾಗಿದೆ. ಕಾರವಾರದ ಅಮದಳ್ಳಿಯಲ್ಲಿ ಮಂಗಳವಾರ ನಸುಕಿನಲ್ಲಿ ಈ ದುರಂತ ನಡೆದಿದೆ. ಆಟೋದಲ್ಲಿದ್ದ ಸಿಲೆಂಡರ್ ಸ್ಪೋಟದ ತೀವೃತೆಗೆ ಪಕ್ಕದಲ್ಲಿದ್ದ ಎರಡು ಕಾರುಗಳು ಬೆಂಕಿಗೆ ಆಹುತಿಯಾಗಿದೆ. ಸುಪ್ರೀನ್ ಫರ್ನಾಂಡಿಸ್ ಹಾಗೂ ಥಾಮಸ್ ಫರ್ನಾಂಡಿಸ್ ಎಂಬಾತರಿಗೆ ಸೇರಿದ ವಾಹನಗಳು ಇದಾಗಿದ್ದು, ಅಗ್ನಿಶಾಮಕ ಸಿಬ್ಬಂದಿ ಆಗಮಿಸುವುದರೊಳಗೆ ಕಾರು ಕರಕಲಾಗಿದೆ. ದಿಢೀರ್ ಆಗಿ ಬೆಂಕಿ ತಗುಲಿದ್ದರಿಂದ ಅಲ್ಲಿದ್ದವರಿಗೆ ಏನು ಮಾಡಬೇಕು? ಎಂದೇ ಗೊತ್ತಾಗಿಲ್ಲ. ಬೆಂಕಿ ಆರಿಸುವ ಪ್ರಯತ್ನ ನಡೆದರೂ ಅದು ಫಲ ಕೊಡಲಿಲ್ಲ. ಈ ವೇಳೆ ವ್ಯಕ್ತಿಯೊಬ್ಬರು ಪೊಲೀಸರಿಗೆ ಹಾಗೂ ಅಗ್ನಿಶಾಮಕ ಸಿಬ್ಬಂದಿಗೆ ಫೋನ್ ಮಾಡಿದ್ದು, ಅವರು ಬರುವುದರೊಳಗೆ ಮೂರು ವಾಹನಗಳು ನಾಶವಾಗಿದ್ದವು. ಅದಾಗಿಯೂ, ಅಗ್ನಿ ಅವಘಡ ವಿಸ್ತರಿಸದ ಹಾಗೇ ಅಗ್ನಿಶಾಮಕ ಸಿಬ್ಬಂದಿ ತಡೆದರು. ಮೂರು ವಾಹನ ಸಂಪೂರ್ಣವಾಗಿ ಸುಟ್ಟಿದ್ದರಿಂದ ಕಬ್ಬಿಣದ ತುಂಡುಗಳು ಮಾತ್ರ ಸ್ಥಳದಲ್ಲಿವೆ. ಬೆಂಕಿ ಜ್ವಾಲೆ ನೋಡಿದ ಜನ ಆತಂಕಕ್ಕೆ ಒಳಗಾಗಿದ್ದು, ತುರ್ತು ಕಾರ್ಯಾಚರಣೆಯಿಂದ ಅಲ್ಲಿದ್ದ ಮನೆಗಳಿಗೆ ಬೆಂಕಿ ತಗಲುವುದು ತಪ್ಪಿದೆ. ರಿಕ್ಷಾದ ಒಳಗಿದ್ದ ಸಿಲೆಂಡರ್ ಸೋರಿಕೆ ಅನಾಹುತಕ್ಕೆ ಕಾರಣ ಎನ್ನುವ ಬಗ್ಗೆ ಅಂದಾಜಿಸಲಾಗಿದ್ದು, ತನಿಖೆ ಮುಂದುವರೆದಿದೆ. - [ತಹಶೀಲ್ದಾರ್ ಕಚೇರಿಗೆ ಬಾಂಬ್ ಬೆದರಿಕೆ!](https://mobiletime.in/2025/12/bomb-threat-to-tahsildars-office/): ಉತ್ತರ ಕನ್ನಡ ಜಿಲ್ಲೆಯ ಎರಡು ಸರ್ಕಾರಿ ಕಚೇರಿಗೆ ಬಾಂಬ್ ಬೆದರಿಕೆ ಬಂದಿದೆ. ಕಚೇರಿಯನ್ನು ಸ್ಪೋಟಿಸುವುದಾಗಿ ದುಷ್ಕರ್ಮಿಗಳು ಬೆದರಿಕೆ ಒಡ್ಡಿದ್ದಾರೆ. ಕಾರವಾರ ಹಾಗೂ ಭಟ್ಕಳದ ತಹಶೀಲ್ದಾರ್ ಕಚೇರಿಗೆ ಮಂಗಳವಾರ ಬೆಳಗ್ಗೆ ಇಮೇಲ್ ಬಂದಿದೆ. ಆ ಇಮೇಲ್ ಸಂದೇಶದಲ್ಲಿ ಸರ್ಕಾರಿ ಕಚೇರಿಯನ್ನು ಸ್ಪೋಟಿಸುವ ಬಗ್ಗೆ ವಿವರಿಸಲಾಗಿದೆ. ಅಧಿಕಾರಿಗಳು ನೀಡಿದ ಮಾಹಿತಿ ಅನ್ವಯ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದು, ಸರ್ಕಾರಿ ಕಚೇರಿಗೆ ಬಿಗಿ ಭದ್ರತೆ ಒದಗಿಸಿದ್ದಾರೆ. ಬೆಳಗ್ಗೆ 7.20ರ ಅವಧಿಯಲ್ಲಿ ಈ ಸಂದೇಶ ರವಾನೆಯಾಗಿದೆ. ಶೀಘ್ರದಲ್ಲಿಯೇ ಪ್ರಭಲವಾದ ಬಾಂಬ್ ಸ್ಪೋಟಿಸಲಿದೆ ಎಂದು ಇಮೇಲ್ ಮೂಲಕ ತಿಳಿಸಲಾಗಿದೆ. ಬಾಂಬ್ ನಿಷ್ಕಿçÃಯ ದಳದವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕಚೇರಿ ಒಳಗೆ ಹಾಗೂ ಹೊರಗೆ ತೀವೃತರವಾದ ಶೋಧನಡೆಸಲಾಗಿದ್ದು, ಎಲ್ಲಿಯೂ ಬಾಂಬ್ ಪತ್ತೆ ಆಗಿಲ್ಲ. ಈ ಮೊದಲು ಭಟ್ಕಳ ಪೊಲೀಸ್ ಠಾಣೆಯನ್ನು ಸಹ ಸ್ಪೋಟಿಸುವುದಾಗಿ ಬೆದರಿಕೆ ಬಂದಿತ್ತು. ಬೆದರಿಕೆ ಒಡ್ಡಿದ ಆರೋಪಿಯನ್ನು ಪೊಲೀಸರು ಬಂಧಿಸಿದ್ದರು. ಸದ್ಯ ಎರಡು ಕಡೆ ತಹಶೀಲ್ದಾರ್ ಕಚೇರಿಗೆ ಬಾಂಬ್ ಬೆದರಿಕೆ ಬಂದಿದ್ದು, ಅದರತನಿಖೆ ನಡೆಯುತ್ತಿದೆ. ಭಟ್ಕಳ ತಹಶೀಲ್ದಾರ್ ಕಚೇರಿಗೆ ಬಂದ ಮಾದರಿಯಲ್ಲಿಯೇ ಕಾರವಾರ ತಹಶೀಲ್ದಾರ್ ಕಚೇರಿಗೂ ಇಮೇಲ್ ಬಂದಿದ್ದು, ಮಾನಸಿಕವಾಗಿ ಕುಗ್ಗಿರುವ ವ್ಯಕ್ತಿ ಈ ಕೃತ್ಯ ನಡೆಸಿದ ಅನುಮಾನಗಳಿವೆ. ಬಾಂಬ್ ಬೆದರಿಕೆಯ ಬಗ್ಗೆ SP  ದೀಪನ್ ಹೇಳಿದ್ದೇನು? ವಿಡಿಯೋ ಇಲ್ಲಿ ನೋಡಿ.. - [ವರದಕ್ಷಿಣೆ ತರದ ವಧು: ಕಿರುಕುಳ!](https://mobiletime.in/2025/12/bride-who-doesnt-bring-dowry-harassment/): ನಗೀನಾ ಅವರು ಮೊಹಮದ್ ಅವರನ್ನು ಮದುವೆ ಆಗಿ ಚಿತ್ರಹಿಂಸೆ ಅನುಭವಿಸುತ್ತಿದ್ದಾರೆ. ಮೊಹಮದ್ ಅವರ ಜೊತೆ ಅವರ ಕುಟುಂಬದವರು ಸಹ ವರದಕ್ಷಿಣೆಗಾಗಿ ನಗೀನಾ ಅವರನ್ನು ಕಾಡಿಸುತ್ತಿದ್ದಾರೆ. ಯಲ್ಲಾಪುರದ ಮಂಚಿಕೇರಿ ಬಳಿಯ ಹಲಸಿನಕೊಪ್ಪದಲ್ಲಿ ವಾಸವಾಗಿರುವ ಮೊಹಮದ್ ಮುಜಮ್ಮಿಲ್ ಶೇಖ್ ಅವರನ್ನು ನಗೀನಾ ಅವರು ಮದುವೆ ಆಗಿದ್ದಾರೆ. ಆದರೆ, ನಗೀನಾ ಅವರು ವರದಕ್ಷಿಣೆ ಕೊಡದ ಕಾರಣ ಮೊಹಮದ್ ಅವರ ಕುಟುಂಬದವರು ಬೇಸರದಲ್ಲಿದ್ದಾರೆ. ವರದಕ್ಷಿಣೆ ಕೊಡುವಂತೆ ಮೊಹಮದ್ ಕುಟುಂಬದವರು ಕಾಡಿಸುತ್ತಿದ್ದು, ನಗೀನಾ ಅವರ ಮೇಲೆ ದೈಹಿಕ ಹಲ್ಲೆಯನ್ನು ಮಾಡಿದ್ದಾರೆ. ನಗೀನಾ ಅವರ ಮೇಲೆ ಪತಿ ಮಹಮದ್ ಅವರ ಜೊತೆ ಅತ್ತೆ ಜಾಹೀರಾಬಿ ಶೇಖ್, ಮೈದುನರಾದ ಮಸ್ತಾಪ ಶೇಖ್, ಮಹಮದ್ ರಫೀಕ್ ಶೇಕ್, ಖಾಜಾ ಖರೀಂ ಶೇಖ್, ಮಹಮದ್ ಸಲಿಂ ಶೇಖ್, ಮಹಮದ್ ಗೌಸ್ ಶೇಖ್ ಸೇರಿ ದಬ್ಬಾಳಿಕೆ ನಡೆಸಿದ್ದಾರೆ. 2024ರ ಫೆಬ್ರವರಿ 23ರಿಂದಲೂ ಅವರೆಲ್ಲರೂ ಸೇರಿ ಹಿಂಸೆ ನೀಡುತ್ತಿದ್ದಾರೆ. ಇಷ್ಟು ದಿನಗಳ ಕಾಲ ಅದನ್ನು ಸಹಿಸಿಕೊಂಡಿದ್ದ ನಗೀನಾ ಅವರು ಇದೀಗ ಪತಿ ಹಾಗೂ ಅವರ ಕುಟುಂಬದ ವಿರುದ್ಧ ಸಿಡಿದೆದ್ದಿದ್ದಾರೆ. ನವೆಂಬರ್ 7ರಂದು ಆ ಏಳು ಜನ ಸೇರಿ ನಗೀನಾ ಅವರನ್ನು ಪೀಡಿಸಿದ್ದಾರೆ. ವರದಕ್ಷಿಣೆ ತರದ ಕಾರಣ ಮೈ ಮುಟ್ಟಿ ಮಾತನಾಡಿಸಿದ್ದಾರೆ. ಜೊತೆಗೆ ಜೀವ ಬೆದರಿಕೆಯನ್ನು ಒಡ್ಡಿದ್ದಾರೆ. ಈ ಎಲ್ಲಾ ವಿಷಯದ ಬಗ್ಗೆ ನಗೀನಾ ಅವರು ತಂದೆ-ತಾಯಿಗೆ ಹೇಳಿದ್ದು, ಅವರ ಸಲಹೆ ಮೇರೆಗೆ ಗಂಡನ ಜೊತೆ ಅವರ ಕುಟುಂಬದವರ ವಿರುದ್ಧವೂ ದೂರು ನೀಡಿದ್ದಾರೆ. ಮಹಿಳೆಯ ರಕ್ಷಣೆಗಿರುವ ಸಹಾಯವಾಣಿ ಸಂಖ್ಯೆ: 181 - [ದುಬಾರಿ ದರ-ದುರುಪಯೋಗದ ಪ್ರಭಾವ: ಕೆಲಸವಿಲ್ಲದೇ ಖಾಲಿ ಹೊಡೆಯುವ ಆಟೋ!](https://mobiletime.in/2025/12/impact-of-high-fares-and-abuse-autos-that-run-empty-without-work/): ಉತ್ತರ ಕನ್ನಡ ಜಿಲ್ಲೆಯಲ್ಲಿ 7 ಸಾವಿರಕ್ಕೂ ಅಧಿಕ ಆಟೋ ರಿಕ್ಷಾಗಳಿದ್ದು, ಅನೇಕ ಆಟೋ ಚಾಲಕರಿಗೆ ಸರಿಯಾದ ಬಾಡಿಗೆ ಸಿಗುತ್ತಿಲ್ಲ. ಕೆಲವರು ಎರಡಕ್ಕಿಂತ ಅಧಿಕ ಆಟೋ ಪರವಾನಿಗೆಪಡೆದಿದ್ದು, ಅದನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ. ಈ ಬಗ್ಗೆ ಉತ್ತರಕನ್ನಡ ಜಿಲ್ಲಾ ಆಟೋ ಚಾಲಕ ಹಾಗೂ ಮಾಲಕರ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾಧ್ಯಕ್ಷ ವಿಶ್ವನಾಥ ಎಸ್ ಗೌಡ ಶಿರಸಿ ಅವರು ಮಾಹಿತಿ ನೀಡಿದ್ದು, `ಜನಸಂಖ್ಯೆಗೆ ಅನುಗುಣವಾಗಿ ಆಟೋ ಸಂಖ್ಯೆಯಿರಬೇಕಿದ್ದು, ಕೆಲ ತಾಲೂಕುಗಳಲ್ಲಿ ಅದನ್ನು ಮೀರಿ ಆಟೋಗಳಿವೆ. ಇದರಿಂದ ಆಟೋ ನಿಲ್ದಾಣದಲ್ಲಿ ಸ್ಥಳಾವಕಾಶ ಕೊರತೆ, ಟ್ರಾಫಿಕ್ ಕಿರಿಕಿರಿ ಹೆಚ್ಚಾಗಿದೆ’ ಎಂದವರು ವಿವರಿಸಿದ್ದಾರೆ. `ಮುಂದಿನ ಐದು ವರ್ಷದವರೆಗೆ ಆಟೋ ಪರವಾನಿಗೆ ನೀಡುವುದನ್ನು ಸ್ಥಗಿತಗೊಳಿಸಬೇಕು’ ಎಂದು ಅವರು ಆಗ್ರಹಿಸಿದ್ದಾರೆ. ಆಟೋ ರಿಕ್ಷಾಗಳ ಸಂಖ್ಯೆ ಹೆಚ್ಚಳವಾಗಿದ್ದರಿಂದ ಆದ ಸಮಸ್ಯೆ ಬಗ್ಗೆ ಅವರು ವಿವರಿಸಿದ್ದಾರೆ. `ಆಟೋ ಸಂಚರಿಸುವ ಪರ್ಮಿಟ್ ವ್ಯಾಪ್ತಿಯನ್ನು ಕನಿಷ್ಠ 50 ಕಿಲೋ ಮೀಟರ್‌ವರೆಗೆ ವಿಸ್ತರಿಸಬೇಕು’ ಎಂದು ಆಗ್ರಹಿಸಿದ್ದಾರೆ. `ಕೆಲವರು ಲಾಭದಾಸೆಗೆ ಬಿದ್ದು ಆಟೋ ಖರೀದಿ ಮಾಡಿ ಹೆಚ್ಚಿನ ದರಕ್ಕೆ ಮಾರಾಟ ಮಾಡುತ್ತಿದ್ದಾರೆ.ಈ ಹಿನ್ನೆಲೆಯಲ್ಲಿ ಎರಡು ಪರ್ಮಿಟ್‌ಗಿಂತ ಹೆಚ್ಚು ಹೊಂದಿರುವ ಮಾಲಕರ ಮೇಲೆ ಕ್ರಮ ಕೈಗೊಳ್ಳಬೇಕು’ ಎಂದವರು ಒತ್ತಾಯಿಸಿದ್ದಾರೆ. `ಹಲವು ಜಿಲ್ಲೆಗಳಲ್ಲಿ ಪರ್ಮಿಟ್ ತಾತ್ಕಾಲಿಕ ನಿಷೇಧ ಜಾರಿಯಲ್ಲಿದೆ. ಅದರಂತೆ, ಉತ್ತರ ಕನ್ನಡದಲ್ಲೂ ಕನಿಷ್ಠ ಐದು ವರ್ಷಗಳ ಕಾಲ ಹೊಸ ಪರ್ಮಿಟ್ ನೀಡುವುದನ್ನು ಸ್ಥಗಿತಗೊಳಿಸಬೇಕು’ ಎಂದು ಆಗ್ರಹಿಸಿದ್ದಾರೆ. `ಪರ್ಮಿಟ್ ನೀಡುವಾಗ ನಗರಸಭೆ, ಪಟ್ಟಣ ಪಂಚಾಯತ್ ಹಾಗೂ ಗ್ರಾಮ ಪಂಚಾಯತ್‌ನ ಪರವಾನಿಗೆಯನ್ನು ಕಡ್ಡಾಯಗೊಳಿಸಬೇಕು. ಹಳೆಯ ಜಿಲ್ಲಾ ಕೇಂದ್ರಗಳಲ್ಲಿಯೇ ಪರ್ಮಿಟ್ ನೀಡುವ ಪದ್ಧತಿಯನ್ನು ಪುನರುಜ್ಜೀವನಗೊಳಿಸಬೇಕು. ನಗರ ಪ್ರದೇಶಗಳಲ್ಲಿ 7 ಕಿಮೀ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ 3ಕಿಮೀ ಮಾತ್ರ ಸಂಚರಿಸುವ ಪರವಾನಿಗೆ ನೀಡಲಾಗಿದ್ದು, ಅದನ್ನು ಕನಿಷ್ಟ 50ಕಿಮೀ ದೂರಕ್ಕೆ ವಿಸ್ತರಿಸಬೇಕು’ ಎಂದು ಆಗ್ರಹಿಸಿದ್ದಾರೆ. `ಪ್ರವಾಸಿ ತಾಣ ಮುರ್ಡೇಶ್ವರ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬರುವುದರಿಂದ ಅಲ್ಲಿ 300ಕ್ಕೂ ಹೆಚ್ಚು ಆಟೋಗಳಿದ್ದರೂ ಕೇವಲ 3ಕಿಮೀ ಸಂಚಾರ ಮಿತಿ ಇದೆ. ಪ್ರಾದೇಶಿಕ ಸಾರಿಗೆ ಕಚೇರಿ 27 ಕಿಮೀ ದೂರದಲ್ಲಿದ್ದು, ಗ್ಯಾಸ್ ತುಂಬಿಸಲು 15ಕಿಮೀ ದೂರದ ಭಟ್ಕಳ ಅಥವಾ 25ಕಿಮೀ ದೂರದ ಹೊನ್ನಾವರಕ್ಕೆ ತೆರಳುವುದು ಅನಿವಾರ್ಯ’ ಎಂದವರು ಹೇಳಿದರು. `ಬೇರೆ ಜಿಲ್ಲೆಯ ನೋಂದಣಿಯ ಆಟೋಗಳಿಗೆ ಸಹ ಇಲ್ಲಿ ಪರ್ಮಿಟ್ ಕೊಡಬಾರದು’ ಎಂದು ಆಗ್ರಹಿಸಿದರು. - [ಪ್ರಶಾಂತ-ಅಭಿಷೇಕರ ನಡುವೆ ಮುಷ್ಠಿಯುದ್ಧ!](https://mobiletime.in/2025/12/fist-fight-between-prashanth-and-abhishek/): ಕಾರವಾರದ ಅಭಿಷೇಕ ಕಲ್ಗುಟ್ಕರ್ ಹಾಗೂ ಪ್ರಶಾಂತ ಗೋವೇಕರ್ ಅವರ ನಡುವೆ ಹೊಡೆದಾಟ ನಡೆದಿದೆ. ಪ್ರಶಾಂತ ಗೋವೇಕರ್ ಅವರ ಏಟಿಗೆ ಅಭಿಷೇಕ ಕಲ್ಗುಟ್ಕರ್ ಅವರು ಆಸ್ಪತ್ರೆ ಸೇರಿದ್ದಾರೆ. ನಂದನಗದ್ದಾ ಚಿಪ್ಕರವಾಡದ ಅಭಿಷೇಕ ಸುರೇಶ ಕಲ್ಗುಟ್ಕರ್ ಅವರು ಕಿನ್ನರ ಸಿದ್ಧವಾಡದ ಪ್ರಶಾಂತ ದತ್ತಾರಾಮ ಗೋವೇಕರ್ ಅವರು ಅನಗತ್ಯವಾಗಿ ಹೊಡೆದ ಬಗ್ಗೆ ಪೊಲೀಸರಿಗೆ ದೂರಿದ್ದಾರೆ. ಡಿಸೆಂಬರ್ 6 ಸಂಜೆ ತಮ್ಮ ಮೇಲೆ ಹಲ್ಲೆ ನಡೆದಿರುವುದಾಗಿಯೂ ಅವರು ವಿವರಿಸಿದ್ದಾರೆ. ಕಾರವಾರದ ಅಜ್ವೀ ಓಷಿಯನ್ ಬಳಿ ಈ ಹೊಡೆದಾಟ ನಡೆದಿದೆ. ಅಭಿಷೇಕ ಕಲ್ಗುಟ್ಕರ್ ಅವರು ಕಾರಿನಲ್ಲಿ ಹೋಗುತ್ತಿದ್ದಾಗ ಪ್ರಶಾಂತ ಗೋವೇಕರ್ ಅವರು ಆ ಕಾರಿಗೆ ಕೈ ಮಾಡಿದ್ದಾರೆ. ಅಭಿಷೇಕ್ ಕಲ್ಗುಟ್ಕರ್ ಅವರು ಕಾರು ಬಾಡಿಗೆಗೆ ಹೋಗಿದ್ದು, ಬಾಡಿಗೆಗೆ ಬಂದಿದ್ದ ವ್ಯಕ್ತಿಯ ಮುಂದೆಯೇ ಪ್ರಶಾಂತ ಗೋವೇಕರ್ ಅವರು ಅಭಿಷೇಕ ಕಲ್ಗುಟ್ಕರ್ ಅವರ ಮೇಲೆ ಕೈ ಮಾಡಿದ್ದಾರೆ. ಪ್ರಶಾಂತ ಗೋವೇಕರ್ ಅವರು ಕೆನ್ನೆಗೆ ಬಾರಿಸಿದ ಪರಿಣಾಮ ಅಭಿಷೇಕ ಕಲ್ಗುಟ್ಕರ್ ಅವರು ಆಸ್ಪತ್ರೆ ಸೇರಿದ್ದಾರೆ. ಈ ಬಗ್ಗೆ ಅಭಿಷೇಕ ಕಲ್ಗುಟ್ಕರ್ ಅವರು ಅದೇ ದಿನ ಪೊಲೀಸರಿಗೆ ವರದಿ ಒಪ್ಪಿಸಿದ್ದಾರೆ. ಅದಾದ ನಂತರ ನ್ಯಾಯಾಲಯಕ್ಕೆ ಹೋಗಿ ನ್ಯಾಯಾಧೀಶರ ಮುಂದೆ ಪ್ರಶಾಂತ ಗೋವೇಕರ್ ಅವರ ವಿರುದ್ಧ ದೂರಿದ್ದಾರೆ. ನ್ಯಾಯಾಲಯದ ಸೂಚನೆ ಮೇರೆಗೆ ಕಾರವಾರ ಶಹರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. - [ಕಾರವಾರ-ಕುಮಟಾ-ಹೊನ್ನಾವರ: ಒಂದೇ ದಿನ ಮೂರು ಕಡೆ ವಿದ್ಯುತ್ ಕಡಿತ!](https://mobiletime.in/2025/12/karwar-kumata-honnavar-power-outage-in-three-places-on-the-same-day/): ವಿದ್ಯುತ್ ತಂತಿ ಮಾರ್ಗ ದುರಸ್ಥಿ ಹಿನ್ನಲೆ ಕಾರವಾರ, ಕುಮಟಾ ಹಾಗೂ ಹೊನ್ನಾವರದಲ್ಲಿ ಒಂದೇ ದಿನ ವಿದ್ಯುತ್ ಸರಬರಾಜು ಸ್ಥಗಿತಗೊಳಿಸಲು ಹೆಸ್ಕಾಂ ನಿರ್ಧರಿಸಿದೆ. ಕುಮಟಾ ಉಪವಿಭಾಗದ ಮುರೂರ 11 ಕೆ.ವಿ ಮಾರ್ಗದ ಕೇಬಲ್ ಬಿಚ್ಚಿ ಅಳವಡಿಸುವ ಕಾಮಗಾರಿ ಹಿನ್ನಲೆ ಡಿಸೆಂಬರ್ 17ರಂದು ವಿದ್ಯುತ್ ಸರಬರಾಜು ಇರುವುದಿಲ್ಲ. ಕುಮಟಾ ನಗರ ಶಾಖೆಯ 11 ಕೆವಿ ಇಂಡಸ್ಟಿಯಲ್ ಮಾರ್ಗ ಮತ್ತು 11 ಕೆವಿ ವಾಲ್ಗಳ್ಳಿ ಮಾರ್ಗದ ಎಲ್ಲಾ ಭಾಗಗಳಲ್ಲಿ ಆ ದಿನ ವಿದ್ಯುತ್ ಕಡಿತ ಆಗಲಿದೆ. ಕುಮಟಾ ಉಪವಿಭಾಗದ 33 ಕೆ.ವಿ ಗೋಕರ್ಣ ಉಪಕೇಂದ್ರದಲ್ಲಿಯೂ ತುರ್ತು ನಿರ್ವಹಣಾ ಕಾಮಗಾರಿ ಇರುವುದರಿಂದ ಗೋಕರ್ಣ, ಬಂಕಿಕೊಡ್ಲ, ಓಂ ಬೀಚ್, ಬಿಜ್ಜೂರು, ಮಾದನಗೇರಿ, ಗಂಗಾವಳಿ, ತದಡಿಯ ಎಲ್ಲಾ ಭಾಗಗಳಲ್ಲಿ ಬೆಳಗ್ಗೆ 10 ಗಂಟೆಯಿAದ ಸಂಜೆ 5 ಗಂಟೆಯವರೆಗೆ ವಿದ್ಯುತ್ ಸರಬರಾಜು ಸ್ಥಗಿತವಾಗಲಿದೆ. ಕಾರವಾರ ಉಪವಿಭಾಗದ ವ್ಯಾಪ್ತಿಯಲ್ಲಿ ವಾಹಕ ಬದಲಾವಣೆ ಕಾಮಗಾರಿ ಹಿನ್ನಲೆ ನಂದನಗದ್ದಾ ಮತ್ತು ಸುಂಕೇರಿ ಫೀಡರಿನ ವಿವಿಧ ಪ್ರದೇಶಗಳಲ್ಲಿ ಡಿ 17ರಂದು ಬೆಳಗ್ಗೆ 9.30ರಿಂದ ಸಂಜೆ 6 ಗಂಟೆಯವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ. ಇದೇ ದಿನ ಹೊನ್ನಾವರ 110 ಕೆವಿ ವಿದ್ಯುತ್ ವಿತರಣಾ ಕೇಂದ್ರದ 10ಎಮ್‌ವಿಎ ವಿದ್ಯುತ್ ವಿತರಣಾ ಕೇಂದ್ರದ ತುರ್ತು ನಿರ್ವಹಣಾ ಕೆಲಸವೂ ನಡೆಯಲಿದೆ. ಹೀಗಾಗಿ ಹೊನ್ನಾವರ ತಾಲೂಕಿನ ಪಟ್ಟಣ ಶಾಖೆಯ ಬಂದರು ರೋಡ್, ಕೆ ಹೆಚ್ ಬಿ ಕಾಲೋನಿ, ಎಲ್ ಐ ಸಿ ಮತ್ತು ಕರ್ಕಿ ಫೀಡರ್‌ಗಳ ವ್ಯಾಪ್ತಿಯಲ್ಲಿ ಡಿ 17ರಂದು ಬೆಳಗ್ಗೆ 10 ಗಂಟೆಯಿAದ ಮಧ್ಯಾಹ್ನ 3 ಗಂಟೆಯವರೆಗೆ ವಿದ್ಯುತ್ ಸರಬರಾಜು ಸ್ಥಗಿತವಾಗಲಿದೆ. - [ಕಾಣೆಯಾದವ ಸಿಕ್ಕಿಲ್ಲ.. ಪೊಲೀಸ್ ಪ್ರಯತ್ನ ಸಾಕಾಗಿಲ್ಲ!](https://mobiletime.in/2025/12/the-missing-person-has-not-been-found-police-efforts-are-not-enough/): ಕುಮಟಾದ ಈಶ್ವರ ಮುಕ್ರಿ ಅವರು ಕಾಣೆಯಾಗಿ ಐದು ತಿಂಗಳಾಗಿದ್ದು, ಈವರೆಗೂ ಅವರ ಸುಳಿವು ಸಿಕ್ಕಿಲ್ಲ. `ಪೊಲೀಸ್ ದೂರು ನೀಡಿದರೂ ಮಗನನ್ನು ಹುಡುಕುವ ಕಾರ್ಯ ನಡೆದಿಲ್ಲ’ ಎಂದು ಈಶ್ವರ ಮುಕ್ರಿ ಅವರ ತಾಯಿ ಮಾದೇವಿ ಮುಕ್ರಿ ಅವರು ಆರೋಪಿಸಿದ್ದಾರೆ. ಕುಮಟಾದ ಬಗ್ಗೋಣದಲ್ಲಿ ಮಾದೇವಿ ನಾಗು ಮುಕ್ರಿ ಅವರು ವಾಸವಾಗಿದ್ದಾರೆ. ಅವರ ಮಗ ಈಶ್ವರ ಮುಕ್ರಿ ಅವರು ಜೂನ್ 15ರ ಮಧ್ಯಾಹ್ನ 1 ಗಂಟೆ ಅವಧಿಯಲ್ಲಿ ಮನೆ ತೊರೆದಿದ್ದು, ನಂತರ ಮರಳಿಲ್ಲ. `ಪತ್ನಿ ಬಿಟ್ಟಿರುವ ನೋವಿನಲ್ಲಿ ಈಶ್ವರ ಮುಕ್ರಿ ಅವರು ಮನೆ ತೊರೆದಿರುವ ಬಗ್ಗೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆದರೆ, ಈಶ್ವರ ಮುಕ್ರಿ ಅವರು ರಘುಪತಿ ಮುಕ್ರಿ ಅವರ ಜೊತೆಗಿರುತ್ತಿದ್ದು, ಅವರ ಮೇಲೆ ತಮಗೆ ಅನುಮಾನವಿದೆ’ ಎಂದು 70 ವರ್ಷದ ಮಾದೇವಿ ಮುಕ್ರಿ ಅವರು ಹೇಳಿದ್ದಾರೆ. `ಪೊಲೀಸ್ ಠಾಣೆಗೆ ಹೋದರೆ ಅಲ್ಲಿ ತಮ್ಮನ್ನು ಕೆಟ್ಟದಾಗಿ ನಡೆಸಿಕೊಳ್ಳುತ್ತಾರೆ. ಮಗನನ್ನು ಹುಡುಕಿಕೊಡುವಂತೆ ಪೊಲೀಸ್ ಅಧೀಕ್ಷಕರಿಗೂ ಮನವಿ ಮಾಡಿದ್ದೇನೆ’ ಎಂದು ಮಾದೇವಿ ಮುಕ್ರಿ ಅವರು ಜನಸಾಮಾನ್ಯರ ಸಮಾಜ ಕಲ್ಯಾಣ ಕೇಂದ್ರದ ಅಧ್ಯಕ್ಷ ಆಗ್ನೇಲ್ ರೋಡ್ರಿಗಸ್ ಅವರಲ್ಲಿ ವಿವರಿಸಿದ್ದಾರೆ. ಕರ್ತವ್ಯಕೋಪ ಎಸಗಿದ ಪೊಲೀಸರ ವರ್ಗಾವಣೆಗೆ ಜನಸಾಮಾನ್ಯರ ಸಮಾಜ ಕಲ್ಯಾಣ ಕೇಂದ್ರದವರು ಒತ್ತಾಯಿಸಿದ್ದಾರೆ. ಜೊತೆಗೆ ಕಾಣೆಯಾದ ಈಶ್ವರ ಮುಕ್ರಿ ಅವರನ್ನು ಹುಡುಕಿಕೊಡುವಂತೆ ನಾಗು ಮುಕ್ರಿ, ಜಟ್ಟಿ ಮುಕ್ರಿ, ಭಾಸ್ಕರ್ ಮುಕ್ರಿ, ಗಣೇಶ್ ಮುಕ್ರಿ ಹಾಗೂ ಸುಧಾಕರ ನಾಯ್ಕ ಅವರು ಆಗ್ರಹಿಸಿದ್ದಾರೆ. - [13 ವರ್ಷದ ಅಜ್ಞಾತವಾಸ: ವಂಚನೆಯೇ ಆತನ ಕಾಯಕ!](https://mobiletime.in/2025/12/13-years-of-incognito-deception-is-his-job/): ಉದ್ಯೋಗ ಕೊಡುವುದಾಗಿ ವಂಚನೆ, ಚೆಕ್ ಬೌನ್ಸ್ ಸೇರಿ ವಿವಿಧ ಅಪರಾಧ ಪ್ರಕರಣದಲ್ಲಿ ಭಾಗಿಯಾಗಿದ್ದ ಪ್ರಭಾಕರ ಹೆಗಡೆ ಅವರನ್ನು ಪೊಲೀಸರು ಬಂಧಿಸಿದ್ದಾರೆ. 13 ವರ್ಷಗಳ ಕಾಲ ಅಡಗಿಕೊಂಡಿದ್ದ ಪ್ರಭಾಕರ ಹೆಗಡೆ ಅವರು ಇದೀಗ ಸಿಕ್ಕಿಬಿದ್ದಿದ್ದಾರೆ. ಯಲ್ಲಾಪುರದ ಮಾಗೋಡು ಬಳಿಯ ದೇವಿತಗ್ಗುವಿನಲ್ಲಿ ಪ್ರಭಾಕರ ತಿಮ್ಮಣ್ಣ ಹೆಗಡೆ (65) ಅವರು ವಾಸವಾಗಿದ್ದರು. ಉದ್ಯೋಗ ಕೊಡಿಸುವುದಾಗಿ ಹೇಳಿ ಅವರು ಅನೇಕರನ್ನು ವಂಚಿಸಿದ್ದರು. ಕೆಲವರಿಂದ ಕಾಸುಪಡೆದು ಚೆಕ್ ನೀಡಿ ಯಾಮಾರಿಸಿದ್ದರು. ಶಿರಸಿ, ಯಲ್ಲಾಪುರ, ಮಲ್ಲಾಪುರ ಸೇರಿ ವಿವಿಧ ಕಡೆ ಅವರು ಜನರನ್ನು ವಂಚಿಸಿದ ವರದಿಗಳಿವೆ. ಚೆಕ್ ಅಮಾನ್ಯ ಪ್ರಕರಣದಲ್ಲಿ ಅವರು ಆರೋಪಿಯಾಗಿದ್ದು, ತಮ್ಮ ವಿರುದ್ಧ ಪ್ರಕರಣ ದಾಖಲಾಗುತ್ತಲೇ ಪ್ರಭಾಕರ ಹೆಗಡೆ ಅವರು ತಲೆಮರೆಸಿಕೊಮಡಿದ್ದರು. ಪೊಲೀಸರು ಸಾಕಷ್ಟು ಬಾರಿ ಪ್ರಭಾಕರ ಹೆಗಡೆ ಅವರ ಮನೆಯವರೆಗೂ ಹೋಗಿ ಬಂದಿದ್ದರು. ಪೊಲೀಸರು ಮನೆಗೆ ಹೋದಾಗ ಪ್ರಭಾಕರ ಹೆಗಡೆ ಅವರು ಅಲ್ಲಿರಲಿಲ್ಲ. ಮುಂಬೈ, ಚನೈ ಎಂದು ಸುಳ್ಳು ಹೇಳಿ ಅವರು ಪೊಲೀಸರ ದಿಕ್ಕು ತಪ್ಪಿಸುತ್ತಿದ್ದರು. 13 ವರ್ಷಗಳಿಂದಲೂ ಪೊಲೀಸರಿಗೆ ಸಿಗದೇ ಕಣ್ತಪ್ಪಿಸಿಕೊಂಡಿದ್ದ ಪ್ರಭಾಕರ ಹೆಗಡೆ ಅವರು ಮೊನ್ನೆ ಹುಬ್ಬಳ್ಳಿಗೆ ಹೋಗಿದ್ದರು. ಸಿದ್ದಾಪುರ ಪಿಐ ಜೆ ಬಿ ತಿಪ್ಪೇಸ್ವಾಮಿ ಅವರಿಗೆ ಪ್ರಭಾಕರ ಹೆಗಡೆ ಹುಬ್ಬಳ್ಳಿಯಲ್ಲಿ ಅಲೆದಾಡುತ್ತಿರುವ ವಿಷಯ ಗೊತ್ತಾಯಿತು. ಪಿಎಸೈ ಶಾಂತಿನಾಥ ಪಾಸಾನೆ, ಗೀತಾ ಶಿರ್ಶಿಕರ್ ಅವರು ಪ್ರಭಾಕರ ಹೆಗಡೆ ಅವರ ಪತ್ತೆಗೆ ಕಾರ್ಯತಂತ್ರ ರೂಪಿಸಿದರು. ವಾರೆಂಟ್ ವಿಭಾಗದ ಪೊಲೀಸ್ ಸಿಬ್ಬಂದಿ ಚೇತನಕುಮಾರ ಅಲಗೇರಿ ಅವರ ಜೊತೆ ರಮೇಶ ಕುಡಲ್ ಹಾಗೂ ಭರತ ಕುಮಾರ್ ಸೇರಿ ಪ್ರಭಾಕರ ಹೆಗಡೆ ಅವರ ಹೆಡೆಮುರಿ ಕಟ್ಟಿದರು. - [ಜೈಲಿನ ಒಳಗೂ ಜಿಯೋ ನೆಟ್‌ವರ್ಕ!](https://mobiletime.in/2025/12/jio-network-even-inside-the-prison/): ಕಾರವಾರ ಕಾರಾಗೃಹದಲ್ಲಿ ಮತ್ತೆ ಮೊಬೈಲ್ ಸಿಕ್ಕಿದೆ. ಜೊತೆಗೆ ಜಿಯೋ ಸಿಮ್ ಅಲ್ಲಿ ಸದ್ದು ಮಾಡಿದೆ! ಡಿಸೆಂಬರ್ 14ರ ಸಂಜೆ ಜೈಲಿನ ಅಧೀಕ್ಷಕ ಮಲ್ಲಿಕಾರ್ಜುನ ಕೊಣ್ಣೂರು ಅವರು ದಿಢೀರ್ ತಪಾಸಣೆ ನಡೆಸಿದಾಗ ಬಗೆ ಬಗೆಯ ಏಳು ಮೊಬೈಲ್ ಜೊತೆ ಸೊಪ್ಪಿನ ಪುಡಿಗಳು ಪತ್ತೆಯಾಗಿದೆ. ಅಲ್ಲಿದ್ದ ಸಿಮ್ ಕಾರ್ಡನ್ನು ಜೈಲರ್ ವಶಕ್ಕೆಪಡೆದು ನ್ಯಾಯಾಲಯಕ್ಕೆ ಒಪ್ಪಿಸಿದ್ದಾರೆ. ಕೆಲ ದಿನದ ಹಿಂದೆ ಕಾರಾಗೃಹದ ಮೇಲೆ ಪೊಲೀಸರು ದಾಳಿ ಮಾಡಿದ್ದರು. ಆ ವೇಳೆ ಅಲ್ಲಿ ನಿಷೇಧಿತ ಮೊಬೈಲ್ ಹಾಗೂ ಗಾಂಜಾ ಸಿಕ್ಕಿದ್ದವು. ಅದಾದ ನಂತರ ಕಾರಾಗೃಹದಲ್ಲಿ ಕಟ್ಟುನಿಟ್ಟಿನ ನಿಯಮ ಜಾರಿಯಾಗಿದ್ದು, ಮಾದಕ ವ್ಯಸನ ಕೊಡುವಂತೆ ಜೈಲಿನಲ್ಲಿದ್ದವರು ಗಲಾಟೆ ಮಾಡಿದ್ದರು. ಜೈಲು ಸಿಬ್ಬಂದಿ ಮೇಲೆಯೂ ಕೈದಿಗಳು ಹಲ್ಲೆ ನಡೆಸಿದ್ದರು. ಟಿವಿ, ಕಂಪ್ಯುಟರ್ ಸೇರಿ ಜೈಲಿನ ಗಾಜುಗಳನ್ನು ಸಹ ಕೈದಿಗಳು ಒಡೆದಿದ್ದರು. ಈ ಎಲ್ಲಾ ಬೆಳವಣಿಗೆ ನಡುವೆ ಮತ್ತೆ ಅಧಿಕಾರಿಗಳು ಜೈಲಿನ ತಪಾಸಣೆ ಮಾಡಿದ್ದಾರೆ. ಆಗ, ಅಲ್ಲಿ ಇನ್ನಷ್ಟು ನಿಷೇಧಿತ ವಸ್ತುಗಳು ಕಾಣಿಸಿವೆ. ಮಂಗಳೂರು ಮೂಲದ ಕೈದಿಗಳ ಸೆಲ್ಲಿನೊಳಗೆ ನಿಷೇಧಿತ ವಸ್ತು ಸಿಕ್ಕಿದ ಕಾರಣ ಅವರನ್ನು ಬಳ್ಳಾರಿ ಹಾಗೂ ಬೆಳಗಾವಿ ಜೈಲಿಗೆ ಸ್ಥಳಾಂತರಿಸಲಾಗಿದೆ. ಅವರು ಹೋದ ನಂತರವೂ ಇನ್ನಷ್ಟು ಮೊಬೈಲ್ ಹಾಗೂ ಸೊಪ್ಪಿನಪುಡಿ ಕಾಣಿಸಿದ್ದು, ನಿಷೇಧಿತ ವಸ್ತುಗಳನ್ನಿರಿಸಿಕೊಂಡವರ ವಿರುದ್ಧ ಕ್ರಮಕ್ಕಾಗಿ ಜೈಲರ್ ಪೊಲೀಸ್ ದೂರು ನೀಡಿದ್ದಾರೆ. - [ಭಕ್ತನ ಸೇವೆ ಗೌರವಸಿದ ಶ್ರೀಮಠ](https://mobiletime.in/2025/12/srimatt-who-respected-the-service-of-devotees/): ಕಾರವಾರದ ವ್ಯಾಪಾರಿ ರಮೇಶ್ ಇಂಗಳಕಿ ಅವರನ್ನು ಹರಿಹರದ ರಾಜನಹಳ್ಳಿ ಬಳಿಯ ತುಂಗಭದ್ರಾ ನದಿ ದಂಡೆ ಮೇಲಿರುವ ಮಹರ್ಷಿ ವಾಲ್ಮೀಕಿ ಗುರುಪೀಠವೂ ತಮ್ಮ ತಾಲೂಕು ಪ್ರತಿನಿಧಿಯಾಗಿ ನೇಮಿಸಿದೆ. ರಮೇಶ್ ತಿರಕಪ್ಪ ಇಂಗಳಕಿ ಅವರು ಕಾರವಾರದಲ್ಲಿ ತಮ್ಮದೇ ಆದ ವ್ಯಾಪಾರಹೊಂದಿದ್ದು, ಸಮಾಜದ ಅಭಿವೃದ್ಧಿಗಾಗಿ ಶ್ರಮಿಸುತ್ತಿದ್ದಾರೆ. ವಾಲ್ಮೀಕಿ ನಾಯಕ ಜನಾಂಗದ ಮುಖಂಡರಾಗಿರುವ ಅವರು ಆರೋಗ್ಯ, ಶೈಕ್ಷಣಿಕ ಸೇವೆಯಲ್ಲಿ ತೊಡಗಿದ್ದಾರೆ. ಧಾರ್ಮಿಕ ಹಿನ್ನಲೆ, ಸಂಘಟನೆ ವಿಷಯದಲ್ಲಿಯೂ ರಮೇಶ ಇಂಗಳಕಿ ಅವರು ಮುಂಚೂಣಿಯಲ್ಲಿದ್ದು ಜನ ಸಂಪರ್ಕದಲ್ಲಿರುವ ವ್ಯಕ್ತಿಯಾಗಿದ್ದಾರೆ. ಕೋವಿಡ್ ಸನ್ನಿವೇಶದಲ್ಲಿ ರಮೇಶ ಇಂಗಳಗಿ ಅವರು ಸಾಕಷ್ಟು ಸಹಾಯ ಮಾಡಿದ್ದಾರೆ. ಕಾರ್ಮಿಕರೊಬ್ಬರು ಅಸ್ವಸ್ಥರಾದಾಗ ಅವರನ್ನು ಆಸ್ಪತ್ರೆಗೆ ಸೇರಿಸಿ ವೈದ್ಯಕೀಯ ಸೇವೆ ಒದಗಿಸಿದ್ದಾರೆ. ರಮೇಶ ಇಂಗಳಗಿ ಅವರು ಸಮುದಾಯದ ಸಮಸ್ಯೆಗಳಿಗೆ ಸ್ಪಂದಿಸುವುದರ ಜೊತೆ ವಾಲ್ಮೀಕಿ ಜನಾಂಗದ ಅಭ್ಯುದಯಕ್ಕಾಗಿ ದುಡಿಯುತ್ತಿದ್ದಾರೆ. ಅವರ ಕಾರ್ಯ ಹಾಗೂ ಸಾಮಾಜಿಕ ಜೀವನ ಗಮನಿಸಿದ ಶ್ರೀಗಳು ರಮೇಶ್ ಇಂಗಳಕಿ ಅವರನ್ನು ಮಠದ ಪ್ರತಿನಿಧಿಯಾಗಿ ನೇಮಿಸಿದೆ. ಮಠದ ಚಟುವಟಿಕೆಗಳ ಬಗ್ಗೆ ಸಮುದಾಯದವರಿಗೆ ತಿಳಿಸುವುದರ ಜೊತೆ ಜನರ ಭಾವನೆಗಳನ್ನು ಮಠಕ್ಕೆ ಮುಟ್ಟಿಸುವ ಮಹತ್ವದ ಜವಾಬ್ದಾರಿಯನ್ನು ಮಠದ ಪ್ರಸನ್ನಾನಂದ ಸ್ವಮೀಜಿ ಅವರು ರಮೇಶ ಇಂಗಳಗಿ ಅವರಿಗೆವಹಿಸಿದ್ದಾರೆ. `ಮಹರ್ಷಿ ವಾಲ್ಮೀಕಿ ಗುರುಪೀಠದ ಜವಾಬ್ದಾರಿವಹಿಸಿಕೊಂಡಿರುವ ರಮೇಶ ಇಂಗಳಕಿ ಅವರಿಗೆ ಕ ರಾ ಪ ಪಂಗಡ ನೌಕರರ ಜಿಲ್ಲಾಧ್ಯಕ್ಷ ಗಣೇಶ ಬಿಷ್ಟಣ್ಣನವರ ಶುಭ ಕೋರಿದ್ದಾರೆ. ಪ ಪಂಗಡ ಹಿತರಕ್ಷಣಾ ಸಂಘದ ಜಿಲ್ಲಾಧ್ಯಕ್ಷ ನಾಗರಾಜ ತಳವಾರ ಅವರು ಸಹ ರಮೇಶ ಇಂಗಳಕಿ ಅವರನ್ನು ಅಭಿನಂದಿಸಿದ್ದಾರೆ. - [ರಸ್ತೆ ತಡೆದು ಪ್ರತಿಭಟಿಸಿದ ಒಂಟಿ ಸಲಗ!](https://mobiletime.in/2025/12/a-lone-man-protested-by-blocking-the-road/): ಒಂದು ಬದಿಯ ಕಾಡಿನಿಂದ ಇನ್ನೊಂದು ಬದಿಯ ಕಾಡಿಗೆ ಹೋಗಬೇಕಿದ್ದ ಆನೆಯೊಂದು ರಸ್ತೆ ಮೇಲೆ ವಿಶ್ರಾಂತಿಪಡೆದಿದೆ. ರಸ್ತೆಗೆ ಅಡ್ಡಲಾಗಿ ಆನೆ ನಿಂತ ಪರಿಣಾಮ ವಿವಿಧ ಊರುಗಳಿಗೆ ತೆರಳಬೇಕಾದ ಜನ ಅಲ್ಲಿಯೇ ನಿಂತಿದ್ದು, ಆನೆ ಕಾಡಿಗೆ ಹೋದ ನಂತರ ಊರಿಗೆ ತೆರಳಿದ್ದಾರೆ. ಮುಂಡಗೋಡಿನ ಪಾಳಾ-ಕೋಡಂಬಿ ರಸ್ತೆಯಲ್ಲಿ ಆನೆ ಕಾಣಿಸಿದೆ. ಈ ಮಾರ್ಗದಲ್ಲಿ ಆನೆ ಸಂಚಾರ ಸಾಮಾನ್ಯವಾಗಿದ್ದರೂ ರಸ್ತೆ ಮೇಲೆ ನಿಂತು ವಿಶ್ರಮಿಸಿದ ಉದಾಹರಣೆಗಳು ಕಡಿಮೆ. ಸದ್ಯ ಸುಮಾರು ಅರ್ದ ಗಂಟೆಗಳ ಕಾಲ ಆನೆ ರಸ್ತೆ ತಡೆ ನಡೆಸಿದೆ. ಆನೆ ನೋಡಿ ದಂಗಾದ ಜನ ರಸ್ತೆಯಲ್ಲಿ ಕಾರು-ಬೈಕು ನಿಲ್ಲಿಸಿ ಕಾಯುತ್ತಿದ್ದು, ಆನೆ ಕಾಡಿಗೆ ಹೋದ ನಂತರ ಜನ ತಮ್ಮ ಪ್ರಯಾಣ ಮುಂದುವರೆಸಿದ್ದಾರೆ. ಆನೆ ನೋಡಿ ಪ್ರಯಾಣಿಕರು ಬೊಬ್ಬೆ ಹಾಕಿದರೂ ರಸ್ತೆ ಬಿಟ್ಟು ಆ ಜೀವ ಕದಲಲಿಲ್ಲ. ಜನ ಸಹ ಆನೆಯ ಸಮೀಪ ಹೋಗಿ ತೊಂದರೆ ಕೊಡಲಿಲ್ಲ. ಜನ ಹಾಗೂ ವಾಹನದ ಭಯವಿಲ್ಲದೇ ಆನೆ ರಸ್ತೆಯಲ್ಲಿಯೇ ವಿಶ್ರಾಂತಿಪಡೆದಿದೆ. ದಿಢೀರ್ ಆಗಿ ಆನೆ ನೋಡಿದ ಜನ ಮೊಬೈಲ್ ಕ್ಯಾಮರಾದಲ್ಲಿ ಅದನ್ನು ಸೆರೆ ಹಿಡಿದಿದ್ದಾರೆ. ರಸ್ತೆ ಮದ್ಯೆ ಆನೆ ನಿಂತ ಸುದ್ದಿ ಕೇಳಿ ಅನೇಕರು ಅಲ್ಲಿ ಜಮಾಯಿಸಿದರು. ಇನ್ನಷ್ಟು ಜನ ಬರುವುದರೊಳಗೆ ಆನೆ ಕಾಡಿನ ದಾರಿ ಹಿಡಿಯಿತು. - [ಪೊಲೀಸರ ಭ್ರಷ್ಟಾಚಾರ ಎಂದವನ ಕರ್ಮಕಾಂಡ!](https://mobiletime.in/2025/12/the-karmic-consequences-of-police-corruption/): `ಸರ್ವ ರೋಗಕ್ಕೂ ಸರಾಯಿ ಮದ್ದು’ ಎಂಬ ಶಿರ್ಷಿಕೆಯ ಅಡಿ `ಒಲ್ಡ್ಮಂಕ್ ಲವ್ವರ್’ ಎಂಬ ಇನಸ್ಟಾ ಗ್ರಾಂ ಖಾತೆ ಮೂಲಕ ಪೊಲೀಸರ ಭ್ರಷ್ಟಾಚಾರ ಬಯಲಿಗೆಳೆಯುತ್ತಿದ್ದ ಆದಿತ್ಯ ಗೌಡ ಅವರ ಕರ್ಮಕಾಂಡ ಹೊರಬಿದ್ದಿದೆ. 17 ಸಾವಿರಕ್ಕೂ ಅಧಿಕ ಹಿಂಬಾಲಕರನ್ನು ಹೊಂದಿದ ಆದಿತ್ಯ ಗೌಡ ಅವರು ಮಹಿಳೆಯೊಬ್ಬರ ಬಳಿ ಅಸಭ್ಯವಾಗಿ ವರ್ತಿಸಿದ್ದಾರೆ. ಕುಡಿಯಲು ಹಣ ಕೊಡದಿದ್ದರೆ ವಿಡಿಯೋ ವೈರಲ್ ಮಾಡುವೆ ಎಂದು ಬೆದರಿಸಿ ಆದಿತ್ಯ ಗೌಡ ಅವರು ಮಹಿಳೆಯೊಬ್ಬರಿಂದ 4 ಸಾವಿರ ರೂ ದೋಚಿದ್ದಾರೆ. ಈ ಪ್ರಕರಣ ಬೆಳಕಿಗೆ ಬರುತ್ತಲೇ ಪೊಲೀಸರ ವಿರುದ್ಧ ಅವರು ಮಾಡಿದ್ದ ಎಲ್ಲಾ ವಿಡಿಯೋಗಳನ್ನು ಡಿಲಿಟ್ ಮಾಡಿದ್ದಾರೆ! ಕುಮಟಾ ಬಿಜ್ಜೂರಿನ ಆದಿತ್ಯ ಗೌಡ ಅವರು ಸಾಮಾಜಿಕ ಜಾಲತಾಣಗಳ ವಿಡಿಯೋದಿಂದ ಪ್ರಸಿದ್ಧಿಪಡೆದಿದ್ದಾರೆ. ಈಚೆಗೆ ಅವರು `ಗೋಕರ್ಣ ಪೊಲೀಸರ ಭ್ರಷ್ಟಾಚಾರ’ ಎಂಬ ಬರಹದ ಅಡಿ ಹಲವು ವಿಡಿಯೋಗಳನ್ನು ಮಾಡಿದ್ದಾರೆ. ಆದರೆ, ಯಾವ ವಿಡಿಯೋಗೂ ಅವರು ದಾಖಲೆಗಳನ್ನು ಒದಗಿಸಿಲ್ಲ. ಜೀವದ ಆಸೆ ಬಿಟ್ಟು ಈ ವಿಡಿಯೋ ಮಾಡಿರುವುದಾಗಿ ಅವರು ವಿಡಿಯೋದಲ್ಲಿ ಹೇಳಿದ್ದಾರೆ. ಈ ಎಲ್ಲದರ ನಡುವೆ ಆದಿತ್ಯ ಗೌಡ ಅವರ ವಿರುದ್ಧವೇ ಮಹಿಳೆಯೊಬ್ಬರು ಅಸಭ್ಯ ವರ್ತನೆಯ ಆರೋಪ ಮಾಡಿದ್ದಾರೆ. ಚೌಡಗೇರಿಯ ಶಾರದಾ ಜಟ್ಟು ಗೌಡ ಅವರು ಆದಿತ್ಯ ಗೌಡ ಅವರ ವರ್ತನೆಯಿಂದ ಬೇಸತ್ತು ನ್ಯಾಯಕ್ಕಾಗಿ ಪೊಲೀಸರ ಮೊರೆ ಹೋಗಿದ್ದಾರೆ. ಶಾರದಾ ಗೌಡ ಅವರು ಗಂಜಿಗದ್ದೆಯಲ್ಲಿ `ಅಪರಾಜಿತ ಬೈಕ್ ರೆಂಟಲ್’ ಎಂಬ ಮಳಿಗೆ ನಡೆಸುತ್ತಿದ್ದು, ಆದಿತ್ಯ ಗೌಡ ಅವರು ಆರು ತಿಂಗಳ ಹಿಂದೆ ಅಲ್ಲಿಂದ ಬೈಕ್ ಬಾಡಿಗೆಗೆ ಪಡೆದಿದ್ದರು. ಆದರೆ, ಬಾಡಿಗೆ ಹಣ ಪಾವತಿಸಿರಲಿಲ್ಲ. ಬೈಕನ್ನು ಸಹ ಮರಳಿಸಿರಲಿಲ್ಲ. ಸಾಕಷ್ಟು ಬಾರಿ ಬೈಕ್ ಹಾಗೂ ಬಾಡಿಗೆ ಕೊಡುವಂತೆ ಕೇಳಿದರೂ ಅದಕ್ಕೆ ಆದಿತ್ಯ ಗೌಡ ಅವರು ಸ್ಪಂದಿಸುತ್ತಿರಲಿಲ್ಲ. `ನೀ ಯಾರು ಎಂದೇ ಗೊತ್ತಿಲ್ಲ’ ಎಂದಿದ್ದ ಆದಿತ್ಯ ಗೌಡ ಅವರು ಕೊನೆಗೆ `ಬಾಡಿಗೆ ಹಣ ಕೇಳಿದರೆ ಸೋಶಿಯಲ್ ಮಿಡಿಯಾದಲ್ಲಿ ಕೆಟ್ಟದಾಗಿ ವಿಡಿಯೋ ಹಾಕುವೆ’ ಎಂದು ಬೆದರಿಸಿದ್ದರು. ಆ ಬೆದರಿಕೆಗೆ ಬಗ್ಗಿದ ಶಾರದಾ ಗೌಡ ಅವರು `ಬಾಡಿಗೆ ಹಣ ಬೇಡ. ಬೈಕನ್ನಾದರೂ ಕೊಡು’ ಎಂದು ದುಂಬಾಲು ಬಿದ್ದಿದ್ದರು. ಆಗ, ಆದಿತ್ಯ ಗೌಡ ಅವರು `ಸರಾಯಿ ಕುಡಿದು ಬೈಕ್ ಓಡಿಸುವಾಗ ಪೊಲೀಸರು ಹಿಡಿದಿದ್ದಾರೆ. ಡ್ರಿಂಕ್ & ಡ್ರೆöÊವ್ ಕೇಸ್ ಹಾಕಿದ್ದಾರೆ. ಪೊಲೀಸರ ಬಳಿ ಬೈಕ್ ಇದೆ’ ಎಂಬ ವಿಷಯ ಬಾಯ್ಬಿಟ್ಟಿದ್ದರು. `ಆ ಕೇಸಿಗೆ ಸಂಬAಧಿಸಿ ಕೋರ್ಟಿಗೆ ಹಣ ಕಟ್ಟಬೇಕು. ಆ ಹಣ ನೀವು ಕೊಡಬೇಕು. ಇಲ್ಲವಾದಲ್ಲಿ ಸೋಶಿಯಲ್ ಮಿಡಿಯಾದಲ್ಲಿ ನಿಮ್ಮ ಕುಟುಂಬದ ವಿರುದ್ಧ ಕೆಟ್ಟದಾಗಿ ಹಾಕುವೆ’ ಎಂದು ಬೆದರಿಕೆ ಒಡ್ಡಿದ್ದರು. ಬೈಕ್ ಬಿಡಿಸಿಕೊಳ್ಳುವುದಕ್ಕಾಗಿ ಶಾರದಾ ಗೌಡ ಅವರು 12 ಸಾವಿರ ರೂ ಕೊಟ್ಟಿದ್ದರು. ಅದಾದ ನಂತರ `ಕೋರ್ಟಿಗೆ ಹೋಗಲು ಕಾರು ಮಾಡಿಕೊಡಿ’ ಎಂದು ಆದಿತ್ಯ ಗೌಡ ಅವರು ದುಂಬಾಲು ಬಿದ್ದಿದ್ದು, ಬಾಡಿಗೆ ಕಾರಿನ ಮೂಲಕ ಆದಿತ್ಯ ಗೌಡ ಅವರನ್ನು ಕೋರ್ಟಿಗೆ ಕಳುಹಿಸಿಕೊಟ್ಟಿದ್ದರು. ದಂಡ ಕಟ್ಟಿ ಬೈಕ್ ಬಿಡಿಸಿಕೊಂಡು ಬಂದ ನಂತರವೂ ಆದಿತ್ಯ ಗೌಡ ಅವರ ಕಾಟ ಕಡಿಮೆ ಆಗಿರಲಿಲ್ಲ. ಸರಾಯಿ ಕುಡಿದು ಅಂಗಡಿ ಬಳಿ ಬರುತ್ತಿದ್ದ ಆದಿತ್ಯ ಗೌಡ ಅವರು ಪದೇ ಪದೇ ಬೈಕ್ ಒಡುವಂತೆ ಒತ್ತಾಯಿಸುತ್ತಿದ್ದರು. ಬೈಕ್ ಕೊಡದಿದ್ದರೆ ನಿಮ್ಮ ವಿಡಿಯೋ ವೈರಲ್ ಮಾಡುವೆ ಎಂದು ಬೆದರಿಸುತ್ತಿದ್ದರು. `ಕೊನೆಗೆ ಬೈಕ್ ಕೊಡದಿದ್ದರೂ ಪರವಾಗಿಲ್ಲ. ಸರಾಯಿ ಕುಡಿಯಲು 2 ಸಾವಿರ ರೂ ಕೊಡು’ ಎಂದು ಬೇಡಿದ್ದರು. ಆ ಹಣ ಕೊಡದ ಕಾರಣ ಶಾರದಾ ಗೌಡ ಅವರ ಕೈ ಹಿಡಿದು ಎಳೆದಾಡಿ, ಮೊಬೈಲಿನಲ್ಲಿ ವಿಡಿಯೋ ಮಾಡಿದ್ದರು. ಆ ವಿಡಿಯೋ ಸೋಶಿಯಲ್ ಮಿಡಿಯಾದಲ್ಲಿ ಹಾಕುವುದಾಗಿ ಬೆದರಿಸಿ 4 ಬಾರಿ ತಲಾ ಒಂದು ಸಾವಿರ ರೂಪಾಯಿಗಳಂತೆ ವಸೂಲಿ ಮಾಡಿದ್ದರು. ಅದೇ ವಿಡಿಯೋ ತೋರಿಸಿ ಮತ್ತೆ ಮತ್ತೆ ದುಡ್ಡು ಕೇಳಲು ಬರುತ್ತಿದ್ದ ಆದಿತ್ಯ ಗೌಡರ ಕಾಟಕ್ಕೆ ಶಾರದಾ ಗೌಡ ಅವರು ಬೇಸತ್ತಿದ್ದರು. `ತಮಗೆ ನ್ಯಾಯ ಕೊಡಿಸಿ’ ಎಂದು ಶಾರದಾ ಗೌಡ ಅವರು ಪೊಲೀಸರ ಮೊರೆ ಹೋಗಿದ್ದು, ಗೋಕರ್ಣ ಪಿಸೈ ಖಾದರ್ ಭಾಷಾ ಅವರು ಆದಿತ್ಯ ಗೌಡರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಪ್ರಕರಣ ದಾಖಲಾಗುತ್ತಲೇ ಆದಿತ್ಯ ಗೌಡ ಅವರು ಪೊಲೀಸರ ವಿರುದ್ಧ ಮಾಡಿದ್ದ ಎಲ್ಲಾ ವಿಡಿಯೋಗಳನ್ನು ದಿಢೀರ್ ಆಗಿ ಡಿಲಿಟ್ ಮಾಡಿದ್ದಾರೆ. - [ದಲಾಯಿಲಾಮರ ಆಯಸ್ಸು 130 ವರ್ಷ!](https://mobiletime.in/2025/12/the-dalai-lama-is-130-years-old/): ಆರು ವರ್ಷಗಳ ನಂತರ ಮುಂಡಗೋಡಿಗೆ ಬಂದಿರುವ ಟಿಬೇಟಿಯನ್ ಧರ್ಮ ಗುರು ದಲಾಯಿಲಾಮ ಅವರು `ನಾನು 130 ವರ್ಷ ಬದುಕುತ್ತೇನೆ’ ಎಂದು ಭವಿಷ್ಯ ನುಡಿದಿದ್ದಾರೆ! ಹುಬ್ಬಳ್ಳಿಯಿಂದ ತಡಸ್ ಮಾರ್ಗವಾಗಿ ದಲಾಯಿಲಾಮ ಅವರು ಮುಂಡಗೋಡಿಗೆ ಬಂದಿದ್ದಾರೆ. ಟಿಬೇಟಿಯನ್ ಕ್ಯಾಂಪಿಗೆ ಆಗಮಿಸಿದ ದಲಾಯಿಲಾಮ ಅವರಿಗೆ ಭರ್ಜರಿ ಸ್ವಾಗತ ಸಿಕ್ಕಿದೆ. ಇಲ್ಲಿ 45 ದಿನಗಳ ಕಾಲ ತಂಗಲು ಅವರು ನಿರ್ಧರಿಸಿದ್ದಾರೆ. ವಿಶ್ರಾಂತಿಗಾಗಿ ಅವರು ಮುಂಡಗೋಡಿಗೆ ಆಗಮಿಸಿದರಾದರೂ ಧರ್ಮ ಕಾರ್ಯದಲ್ಲಿ ಅವರು ತಮ್ಮನ್ನು ತೊಡಗಿಸಿಕೊಳ್ಳಲಿದ್ದಾರೆ. ಬೌದ್ಧ ಬಿಕ್ಕುಗಳ ಜೊತೆ ಅವರು ಕಾಲ ಕಳೆಯಲಿದ್ದಾರೆ. ಅವರ ಭದ್ರತೆಗಾಗಿ ಪೊಲೀಸರು ಕಾವಲು ಕಾಯುತ್ತಿದ್ದಾರೆ. ಕ್ಯಾಂಪ್ ನಂ 6ರಲ್ಲಿನ ಗೋಮಾಂಗ್ ಮಾನೆಸ್ಟರಿ ಭವನದಲ್ಲಿ ಬೌದ್ಧ ಬುಕ್ಕುಗಳ ಜೊತೆ ಮಾತನಾಡಿದ ದಲಾಯಿಲಾಮ ಅವರು `ನಾನು 130 ವರ್ಷ ಬದುಕುತ್ತೇನೆ’ ಎಂದಿದ್ದಾರೆ. `ಟಿಬೇಟಿಯನ್ನರ ರಕ್ಷಣೆಗಾಗಿ ತಾನೂ 130 ವರ್ಷ ಬದುಕುವುದು ಅನಿವಾರ್ಯ’ ಎಂತಲೂ ಅವರು ಪ್ರತಿಪಾದಿಸಿದ್ದಾರೆ. `ಟಿಬೇಟಿಯನ್ನರ ಪರಂಪರೆ ಹಾಳು ಮಾಡಲು ಚೀನಾ ಪ್ರಯತ್ನಿಸಿತು. ಚೀನಾ ಎಲ್ಲಾ ರೀತಿಯ ಪ್ರಯತ್ನ ನಡೆಸಿದರೂ ಅದಕ್ಕೆ ಟಿಬೇಟಿಯನ್ನರು ಸೋಲಲಿಲ್ಲ. ಭಾರತ ಟಿಬೇಟಿಯನ್ನಿಯರಿಗೆ ನೆಲೆ ಕೊಟ್ಟಿದೆ. ಇಲ್ಲಿ ನಳಂದಾ ಸಂಪ್ರದಾಯವನ್ನು ನಾವು ಮುಂದುವರೆಸಿದ್ದೇವೆ’ ಎಂದು ದಲಾಯಿಲಾಮ ಅವರು ಸ್ಮರಿಸಿದರು. ಅದಾದ ನಂತರ `ಟಿಬೇಟಿಯನ್ನರ ಸಂಪ್ರದಾಯ ಹಾಗೂ ಪರಂಪರೆ ಉಳಿಸಿಕೊಳ್ಳಲು ನಾವು ನಿರಂತರ ಪ್ರಯತ್ನ ಮಾಡುತ್ತಿದ್ದೇವೆ. ಇವತ್ತಿನವರೆಗೂ ಅದನ್ನು ನಾವು ಉಳಿಸಿಕೊಂಡಿದ್ದು, ನಾನು 130ವರ್ಷದವರೆಗೆ ಜೀವಿಸಿ ಅದನ್ನು ಕಾಪಾಡುತ್ತೇನೆ’ ಎನ್ನುತ್ತ ಮಂದಹಾಸ ಬೀರಿದರು. - [ದೇವರ ಪಾದ ಸೇರಿದ ನಂದಿ!](https://mobiletime.in/2025/12/nandi-who-is-at-the-feet-of-god/): ಬನವಾಸಿಯ ಮಧುಕೇಶ್ವರ ದೇವರಿಗೆ ಮೀಸಲಿರಿಸಿದ್ದ ನಂದಿ (ಹೋರಿ) ಸಾವನಪ್ಪಿದೆ. ಹಲವು ವರ್ಷಗಳಿಂದ ಈ ಹೋರಿ ಗ್ರಾಮಕ್ಕೆ ಮೆರಗು ನೀಡಿತ್ತು. ಗ್ರಾಮದಲ್ಲಿ ನಡೆಯುವ ಹೋರಿ ಹಬ್ಬದಲ್ಲಿ ನಂದಿಯೇ ಪ್ರಮುಖ ಆಕರ್ಷಣೆಯಾಗಿತ್ತು. ದೀಪಾವಳಿ, ಯುಗಾದಿ, ಭಸವ ಜಯಂತಿ ಸೇರಿ ಅನೇಕ ಸನ್ನಿವೇಶಗಳಲ್ಲಿ ಜನ ನಂದಿಗೆ ವಿಶೇಷ ಪೂಜೆ ಸಲ್ಲಿಸುತ್ತಿದ್ದರು. ಪ್ರತಿ ಹಬ್ಬದಲ್ಲಿಯೂ ನಂದಿಗೆ ಅಲಂಕಾರ ಮಾಡಿ ಮೆರವಣಿಗೆ ಮಾಡುತ್ತಿದ್ದರು. `ಮಧುಕೇಶ್ವರನ ಹೋರಿ’ ಎಂದೇ ನಂದಿ ಖ್ಯಾತಿಗಳಿಸಿತ್ತು. ಈ ನಡುವೆ ಅನಾರೋಗ್ಯದ ಕಾರಣ ಬಳಲಿದ್ದ ನಂದಿ ಸಾವನಪ್ಪಿತು. ಭಕ್ತಿಯಿಂದ ಪೂಜಿಸುತ್ತಿದ್ದ ನಂದಿ ಸಾವನಪ್ಪಿದ ಕಾರಣ ಜನ ಶೋಕವ್ಯಕ್ತಪಡಿಸಿದರು. ಪುಷ್ಪ ಅಲಂಕೃತ ವಾಹನದಲ್ಲಿ ನಂದಿಯ ಮೆರವಣಿಗೆ ಮಾಡಿ ಅಂತ್ಯ ಸಂಸ್ಕಾರ ಮಾಡಿದರು. ವಿವಿಧ ವಾದ್ಯ-ಮೇಳಗಳ ಜೊತೆ ನಂದಿಯ ಅಂತಿಮ ಮೆರವಣಿಗೆ ನಡೆಯಿತು. ಬನವಾಸಿಯ ವಿವಿಧ ಬೀದಿಗಳಲ್ಲಿ ಮೆರವಣಿಗೆ ಸಂಚರಿಸಿದ್ದು, ಧಾರ್ಮಿಕ ವಿಧಿಗಳ ಪ್ರಕಾರ ಅಂತ್ಯ ಸಂಸ್ಕಾರ ನಡೆಯಿತು. - [ಉಂಡ ಮನೆಗೆ ದ್ರೋಹ ಬಗೆದ ಗೆಳತಿ!](https://mobiletime.in/2025/12/the-girlfriend-who-betrayed-the-house/): ಪ್ರಸಿಲ್ಲಾ ಹಾಗೂ ಪ್ರೇಮಕುಮಾರಿ ಅವರಿಬ್ಬರು ಆಪ್ತ ಸ್ನೇಹಿತರಾಗಿದ್ದು, ಪ್ರೇಮಕುಮಾರಿ ಅವರು ಸ್ನೇಹಿತೆಗೆ ಮೋಸ ಮಾಡಿದ್ದಾರೆ. ಪ್ರಸಿಲ್ಲಾ ಅವರ ಮನೆಗೆ ಬಂದಿದ್ದ ಪ್ರೇಮಕುಮಾರಿ ಅವರು ಆ ಮನೆಯಲ್ಲಿದ್ದ ಒಡವೆ ಕದ್ದು ಪರಾರಿಯಾಗಿದ್ದಾರೆ. ದಾಂಡೇಲಿಯ ಜಂಬೇಹಾಳದ ಸಿ ಎಸ್ ಐ ಚರ್ಚ ಬಳಿ ಪ್ರಸಿಲ್ಲಾ ರಾಜಾ ನಾಯ್ಡು ಅವರು ವಾಸವಾಗಿದ್ದಾರೆ. ದಾಂಡೇಲಿಯ ಡಿಎಫ್‌ಎ ಟೌನ್‌ಶಿಫ್ ಬಳಿ ಪ್ರೇಮಕುಮಾರಿ ಸುಂದರ ಕಲ್ವಕುರಿ ಅವರು ವಾಸವಾಗಿದ್ದಾರೆ. ಈ ಇಬ್ಬರು ಪರಸ್ಪರ ಪರಿಚಯವಾಗಿ ಗೆಳತಿಯರಾಗಿ ಕಷ್ಟ-ಸುಖ ಹಂಚಿಕೊಳ್ಳುತ್ತಿದ್ದು, ಅದಕ್ಕೆ ಇದೀಗ ವಿರಾಮ ಬಿದ್ದಿದೆ. ಪ್ರೇಮಕುಮಾರಿ ಅವರು ಆಗಾಗ ಪ್ರಸಿಲ್ಲಾ ಅವರ ಮನೆಗೆ ಬರುತ್ತಿದ್ದರು. ಪ್ರಸಿಲ್ಲಾ ಅವರ ಮನೆಯಲ್ಲಿಯೇ ಪ್ರೇಮಕುಮಾರಿ ಅವರು ಊಟ ಮಾಡುತ್ತಿದ್ದರು. ಅನೇಕ ಸಲ ಅಲ್ಲಿಯೇ ವಾಸ್ತವ್ಯವನ್ನು ಹೂಡುತ್ತಿದ್ದರು. ಹೀಗಿರುವಾಗ ಅಕ್ಟೊಬರ್ 30ರಂದು ಪ್ರಸಿಲ್ಲಾ ಅವರಿಗೆ ಅನಾರೋಗ್ಯ ಕಾಡಿತು. ಪ್ರಸಿಲ್ಲಾ ಅವರು ದಾಂಡೇಲಿ ಸರ್ಕಾರಿ ಆಸ್ಪತ್ರೆಗೆ ದಾಖಲಾದರು. ಆ ವೇಳೆ ಪ್ರಸಿಲ್ಲಾ ಅವರ ಮನೆಯಲ್ಲಿ ಅವರ ಅತ್ತೆ ರೇಣುಕಾ ಅವರು ವಾಸವಾಗಿದ್ದರು. ಗೆಳತಿ ಅವರು ಆಸ್ಪತ್ರೆಯಲ್ಲಿರುವ ವಿಷಯ ಅರಿತ ಪ್ರೇಮಕುಮಾರಿ ಅವರು ಪ್ರಸಿಲ್ಲಾ ಅವರ ಮನೆಗೆ ಬಂದರು. ರೇಣುಕಾ ಅವರನ್ನು ಯಾಮಾರಿಸಿ ಮನೆ ಒಳಗೆ ಪ್ರವೇಶಿಸಿದರು. ಆ ಮನೆಯಲ್ಲಿದ್ದ 60 ಸಾವಿರ ರೂ ಮೌಲ್ಯದ ಬಂಗಾರದ ಚೈನ್, 10 ಸಾವಿರ ರೂ ಮೌಲ್ಯದ ಕಾಲ್ಗೆಜ್ಜೆ ಜೊತೆ 500ರೂ ಹಣವನ್ನು ಕದ್ದರು. ಪ್ರೇಮಕುಮಾರಿ ಅವರು ಕದ್ದಿರುವುದನ್ನು ಮರಳಿ ಕೊಡಬಹುದು ಎಂದು ಭಾವಿಸಿ ಪ್ರಸಿಲ್ಲಾ ಅವರು ಸುಮ್ಮನ್ನಿದ್ದರು. ಆದರೆ, ಅದನ್ನು ಮರಳಿಸುವಂತೆ ಸೂಚಿಸಿದರೂ ಪ್ರೇಮಕುಮಾರಿ ಅವರು ಕೊಡಲಿಲ್ಲ. ಹೀಗಾಗಿ ಪ್ರಸಿಲ್ಲಾ ಅವರು ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ಪ್ರೇಮಕುಮಾರಿ ಅವರು ಮಾಡಿದ ಕಳ್ಳತನದ ವಿಷಯವನ್ನು ಬಹಿರಂಗಪಡಿಸಿದರು. ಪೊಲೀಸರು ಪ್ರಕರಣ ದಾಖಲಿಸಿದ್ದು, ತನಿಖೆ ಶುರು ಮಾಡಿದ್ದಾರೆ. - [ಮರಕ್ಕೆ ಗುದ್ದಿದ ಕಾರು: ಚಾಲಕನ ಮರಣ](https://mobiletime.in/2025/12/car-crashes-into-tree-driver-dies/): ಜೊಯಿಡಾದ ರಾಮನಗರ-ಧಾರವಾಡ ಮಾರ್ಗದಲ್ಲಿ ಅಪಘಾತವಾಗಿದೆ. ವ್ಯಾಗನಾರ್ ಕಾರು ಮುಂಡವಾಡದ ಬಳಿ ಮರಕ್ಕೆ ಡಿಕ್ಕಿ ಹೊಡೆದಿದೆ. ಭಾನುವಾರ ನಡೆದ ಈ ಅಪಘಾತದಲ್ಲಿ ವ್ಯಕ್ತಿಯೊಬ್ಬರು ಸ್ಥಳದಲ್ಲಿಯೇ ಸಾವನಪ್ಪಿದ್ದಾರೆ. ಗೋವಾದ ಪಣಜಿಯಿಂದ ಆಳಣಾವರ ಕಡೆ ಈ ಕಾರು ಹೊರಟಿತ್ತು. ಅಬ್ದುಲ್ ಖಾದರ್ (55) ಎಂಬಾತರು ಕಾರನ್ನು ಓಡಿಸುತ್ತಿದ್ದರು. ಈ ಕಾರಿನಲ್ಲಿ ದಾದು (30) ಹಾಗೂ ಹಿನಾ ಕೌಸರ್ (39) ಎಂಬಾತರು ಕುಳಿತಿದ್ದರು. ರಾಮನಗರ ದಾಟಿದ ನಂತರ ಕಾರಿನ ವೇಗ ಹೆಚ್ಚಾಗಿದ್ದು, ಆ ಕಾರು ಚಾಲಕನ ನಿಯಂತ್ರಣ ತಪ್ಪಿತು. ಪರಿಣಾಮ ರಸ್ತೆ ಬದಿಗಿದ್ದ ಮರಕ್ಕೆ ಕಾರು ಗುದ್ದಿತು. ಆ ರಭಸಕ್ಕೆ ಕಾರು ಓಡಿಸುತ್ತಿದ್ದ ಅಬ್ದುಲ್ ಖಾದರ್ ಅಲ್ಲಿಯೇ ಕೊನೆಯುಸಿರೆಳೆದರು. ಕಾರಿನಲ್ಲಿ ಜೊತೆಗಿದ್ದ ದಾದು ಹಾಗೂ ಹಿನಾ ಕೌಸರ್ ಅವರು ಗಂಭೀರ ಪ್ರಮಾಣದಲ್ಲಿ ಪೆಟ್ಟು ಮಾಡಿಕೊಂಡರು. ಗಾಯಗೊಂಡ ಇಬ್ಬರನ್ನು ರಾಮನಗರ ಆಸ್ಪತ್ರೆಗೆ ಕರೆತರಲಾಗಿದ್ದು, ಅವರಿಗೆ ತುರ್ತು ಚಿಕಿತ್ಸೆ ನೀಡಲಾಗಿದೆ. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಬೆಳಗಾವಿಗೆ ಕಳುಹಿಸಲಾಗಿದೆ. - [ಬೆಂಗಳೂರಿನಲ್ಲಿ ಅಡಗಿದ್ದ ಬಂಗಾರ ಕಳ್ಳ!](https://mobiletime.in/2025/12/a-gold-thief-hiding-in-bengaluru/): ಪಾರ್ವತಿ ನಾಯ್ಕ ಅವರ ಮನೆಯಲ್ಲಿ ಬಂಗಾರ ಕದ್ದಿದ್ದ ಹರ್ಷವರ್ಧನ ಅವರು ಮೂರು ವರ್ಷಗಳಿಂದ ತಲೆಮರೆಸಿಕೊಂಡಿದ್ದು, ಪೊಲೀಸರು ಅವರನ್ನು ಮತ್ತೆ ಬಂಧಿಸಿದ್ದಾರೆ. ಸಿದ್ದಾಪುರದ ಹುಸೂರು ಗ್ರಾಮದ ಕುಂಬಾರಕುಳಿಯಲ್ಲಿ ಪಾರ್ವತಿ ತಿಮ್ಮ ನಾಯ್ಕ ಅವರು ವಾಸವಾಗಿದ್ದಾರೆ. 2017ರ ಸೆಪ್ಟೆಂಬರ್ 9ರಂದು ಅವರ ಮನೆಗೆ ನುಗ್ಗಿದ್ದ ಹಾಸನದ ಹರ್ಷವರ್ಧನ ಅವರು ಬಂಗಾರದ ಸರ, ಉಂಗುರ, ಕಿವಿಯೋಲೆ ಜೊತೆ 5 ಸಾವಿರ ರೂ ಹಣ ಕದ್ದು ಪರಾರಿಯಾಗಿದ್ದರು. ಅದಾದ ನಂತರ ಹರ್ಷವರ್ಧನ ಅವರು ಬೆಂಗಳೂರಿಗೆ ಹೋಗಿ ಜೀವನ ನಡೆಸುತ್ತಿದ್ದು, ಪ್ರಕರಣದ ಬೆನ್ನತ್ತಿದ ಪೊಲೀಸರು ಅವರನ್ನು ಬಂಧಿಸಿದ್ದರು. ಅದಾದ ನಂತರ ಜಾಮೀನುಪಡೆದು ಜೈಲಿನಿಂದ ಹೊರಬಂದಿದ್ದ ಹರ್ಷವರ್ಧನ ಅವರು ನಂತರ ನ್ಯಾಯಾಲಯಕ್ಕೆ ಹಾಜರಾಗಿರಲಿಲ್ಲ. ಕಳೆದ ಮೂರು ವರ್ಷದ ಅವಧಿಯಲ್ಲಿ ನ್ಯಾಯಾಲಯವೂ ಹರ್ಷವರ್ಧನ ಅವರಿಗೆ 10ಕ್ಕೂ ಅಧಿಕ ಬಾರಿ ವಾರೆಂಟ್ ಜಾರಿ ಮಾಡಿತ್ತು. ಆದರೂ, ಹರ್ಷವರ್ಧನ ನ್ಯಾಯಾಲಯದ ಸೂಚನೆಗೆ ಕಿಮ್ಮತ್ತು ಕೊಟ್ಟಿರಲಿಲ್ಲ. ಪೊಲೀಸರ ಕೈಗೂ ಸಿಗುತ್ತಿರಲಿಲ್ಲ. ಬೆಂಗಳೂರಿನ ಬ್ಯಾಟರಾಯನಪುರದಲ್ಲಿ ಹರ್ಷವರ್ಧನ ಅಡಗಿರುವುದು ಪೊಲೀಸರಿಗೆ ಗೊತ್ತಾಯಿತು. ಹೀಗಾಗಿ ವಿಶೇಷ ತಂಡ ರಚಿಸಿದ ಉತ್ತರ ಕನ್ನಡ ಪೊಲೀಸರು ಮಾರುವೇಷದಲ್ಲಿ ಅಲ್ಲಿ ಹೋಗಿ ಹುಡುಕಾಟ ನಡೆಸಿದರು. ಅಲ್ಲಿಯೇ ಹರ್ಷವರ್ಧನ ಅವರನ್ನು ಬಂಧಿಸಿ ಜಿಲ್ಲೆಗೆ ಕರೆತಂದರು. ಸಿದ್ದಾಪುರ ಪಿಐ ಜೆಬಿ ತಿಪ್ಪೆಸ್ವಾಮಿ, ಪಿಸೈ ಶಾಂತಿನಾಥ ಪಾಸಾನೆ, ಗೀತಾ ಶಿರ್ಶಿಕರ್, ಪೊಲೀಸ್ ಸಿಬ್ಬಂದಿ ಚೇತನಕುಮಾರ ಹಲಗೇರಿ, ರಮೇಶ ಕುಡಲ್, ಭರತಕುಮಾರ ಶ್ರಮಿಸಿದ್ದಾರೆ.   - [ದೇವರಕಾಡು: ಶುಚಿತ್ವ ಕಾಪಾಡಲು ಸಮಾನ ಮನಸ್ಕರ ಸಂಕಲ್ಪ](https://mobiletime.in/2025/12/devarakadu-a-like-minded-determination-to-maintain-cleanliness/): ಯಲ್ಲಾಪುರ-ಮುoಡಗೋಡು ರಸ್ತೆ ಅಂಚಿನಲ್ಲಿರುವ ದೇವರಕಾಡು ಪ್ರದೇಶವನ್ನು ಸ್ವಚ್ಛಗೊಳಿಸುವಂತೆ ಅರಣ್ಯ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದ ಯಲ್ಲಾಪುರದ ರವೀಂದ್ರ ನಗರ ನಿವಾಸಿಗಳನ್ನು ಒಳಗೊಂಡ ಗೆಳೆಯರ ಬಳಗದವರು ಭಾನುವಾರ ಅಲ್ಲಿದ್ದ ಕಸ-ಕಡ್ಡಿ ಆರಿಸಿದ್ದಾರೆ. ಇನ್ನಷ್ಟು ದೊಡ್ಡ ಪ್ರಮಾಣದಲ್ಲಿ ತ್ಯಾಜ್ಯ ಬಿದ್ದಿದ್ದು, ಅದನ್ನು ಸ್ವಚ್ಛಗೊಳಿಸುವಂತೆ ಬಳಗದವರು ಅರಣ್ಯ ಇಲಾಖೆಗೆ ಮನವಿ ಮಾಡಿದ್ದಾರೆ. ಯಲ್ಲಾಪುರ-ಮುಂಡಗೋಡು ರಸ್ತೆಗೆ ಹೊಂದಿಕೊAಡು ರವೀಂದ್ರ ನಗರದ ವ್ಯಾಪ್ತಿಯಲ್ಲಿ ಅರಣ್ಯ ಇಲಾಖೆಯವರು `ದೇವರಕಾಡು’ ನಿರ್ಮಿಸಿದ್ದಾರೆ. ಯಲ್ಲಾಪುರ ಪಟ್ಟಣದಿಂದ 3ಕಿಮೀ ದೂರದಲ್ಲಿರುವ ಈ ಪ್ರದೇಶದಲ್ಲಿ ಅನಾಧಿಕಾಲದಿಂದಲೂ ದೇವಿಯ ಆಲಯವಿದೆ. ಸಾತೇರಿ ದೇವಿಯ ಗುಡಿಗೆ ಅನೇಕ ಭಕ್ತರು ಅಲ್ಲಿ ನಡೆದುಕೊಳ್ಳುತ್ತಿದ್ದು, ಆ ಪ್ರದೇಶದ ವಾತಾವರಣವನ್ನು ಸುಂದರವಾಗಿರಿಸಲು ರವೀಂದ್ರ ನಗರದ ಗೆಳೆಯರ ಬಳಗದವರು ಶ್ರಮಿಸಿದ್ದಾರೆ. ಇಲ್ಲಿರುವ ಗುಹೆ ಆಕಾರದ ಪ್ರವೇಶ ದ್ವಾರ ಜನರ ಗಮನಸೆಳೆಯುತ್ತಿದೆ. ಆದರೆ, ಇಲ್ಲಿ ಪ್ರವೇಶಿಸುವ ಪ್ರವಾಸಿಗರು ಎಲ್ಲೆಂದರಲ್ಲಿ ಮದ್ಯದ ಬಾಟಲಿ ಎಸೆಯುತ್ತಿದ್ದಾರೆ. ಇಲ್ಲಿನ ಮಾಲಿನ್ಯ ಅರಿತ ಸ್ಥಳೀಯರು ಸೋಮೇಶ್ವರ ನಾಯ್ಕ ಅವರ ನೇತ್ರತ್ವದಲ್ಲಿ ಸ್ವಚ್ಛತೆಗಾಗಿ ಮನವಿ ಸಲ್ಲಿಸಿದ್ದರು. `ದೇವರ ಕಾಡಿನಲ್ಲಿ ನಿರ್ಮಿಸಿದ ಆಸನಗಳನ್ನು ಸರಿಯಾಗಿರಿಸಬೇಕು. ಅಲ್ಲಿನ ಮಾಲಿನ್ಯವನ್ನು ಸರಿಪಡಿಸಿ ಪ್ರವಾಸಿಗರಿಗೆ ಮುಜುಗರವಾಗುವುದನ್ನು ತಪ್ಪಿಸಬೇಕು’ ಎಂದು ಸುಜಯ ಮರಾಠಿ, ಸಾಜು ಜೋರೇ, ತೇಜೇಶ್ ಭೋವಿ ಹಾಗೂ ಮನು ಪೊಳ್ ಅವರು ಮನವಿ ಮಾಡಿದ್ದರು. ಆನಂದ್ ಭೋವಿ, ರಿಜ್ವಾನ್ ಶೈಖ್, ಷಣ್ಮುಖ ನಾಯ್ಕ, ನಂದನ್ ಮರಾಠಿ, ಮೋಹನ್ ಪಾಲೇಕಾರ್, ರೋಹಿತ್ ಸಾಲುಂಕೆ, ಗಿರೀಶ್ ಭೋವಿವಡ್ಡರ್, ಕುಮಾರ್ ವಾಲ್ಮೀಕಿ ಹಾಗೂ ರಾಜು ನಾಯ್ಕ ಅವರು ಈ ಬಗ್ಗೆ ಆಗ್ರಹಿಸಿದ್ದರು. ಫೆಬ್ರವರಿಯಲ್ಲಿ ನಡೆಯುವ ಯಲ್ಲಾಪುರ ಜಾತ್ರೆಗೂ ಮುನ್ನ ಹೊರ ಮಂಗಳವಾರ ಪದ್ಧತಿ ಆಚರಣೆಯಲ್ಲಿದ್ದು, ಅದಕ್ಕೆ ಪೂರಕವಾಗಿ ಈ ಪ್ರದೇಶ ಸ್ವಚ್ಛ ಮಾಡಬೇಕು ಎಂದು ಸಂಕಲ್ಪಿಸಿದ ಸಮಾನ ಮನಸ್ಕರು ಭಾನುವಾರ ಶ್ರಮದಾನ ಮಾಡಿದರು. ಈ ದಿನ ಸೋಮೇಶ್ವರ ನಾಯ್ಕ ಅವರ ಜೊತೆಗೂಡಿ ರೋಹಿತ ಸಾಲಂಕೆ, ಹಿರೀಶ ಬೋವಿವಡ್ಡರ್, ತೇಜಸ್ ಬೋವಿವಡ್ಡರ್, ಮಸ್ತಫಾ ಶೇಕ್, ಮಂಜುನಾಥ ಬೋವಿವಡ್ಡರ್ ಹಾಗೂ ಗಣೇಶ ಮರಾಠಿ ಅವರು ಸ್ವಚ್ಛತಾ ಕಾರ್ಯ ನಡೆಸಿದರು. ಜಾತ್ರೆ ಪೂರ್ವದಲ್ಲಿ ಅರಣ್ಯ ಇಲಾಖೆ ಸಹಯೋಗದಲ್ಲಿ ಮತ್ತೊಮ್ಮೆ ಸ್ವಚ್ಚತೆ ನಡೆಸುವುದಾಗಿ ಅಲ್ಲಿದ್ದವರು ಮಾಹಿತಿ ನೀಡಿದರು. - [ಕಂದಕಕ್ಕೆ ಬಿದ್ದ ಕಾರು: ಗ್ರಾಮ ಲೆಕ್ಕಾಧಿಕಾರಿ ಸಾವು!](https://mobiletime.in/2025/12/the-car-fell-into-the-ditch-the-village-accountant-died/): ದರ್ಶನ್ ಅಭಿನಯದ ಡೆವಿಲ್ ಸಿನಿಮಾ ನೋಡಿ ಊರಿಗೆ ಮರಳುತ್ತಿದ್ದ ಗ್ರಾಮ ಲೆಕ್ಕಾಧಿಕಾರಿಯೊಬ್ಬರು ಕಾರು ಅಪಘಾತದಲ್ಲಿ ಕೊನೆಯುಸಿರೆಳೆದಿದ್ದಾರೆ. ಅವರ ಜೊತೆಯಿದ್ದ ಮತ್ತಿಬ್ಬರು ಗ್ರಾಮ ಲೆಕ್ಕಾಧಿಕಾರಿಗಳು ಗಂಭೀರ ಪ್ರಮಾಣದಲ್ಲಿ ಗಾಯಗೊಂಡಿದ್ದಾರೆ. ಮುoಡಗೋಡಿನ ತಹಶೀಲ್ದಾರ್ ಕಚೇರಿಯಲ್ಲಿ ಗೋಪಾಲ ಎಂ, ಗೋವಿಂದ ರಾಠೋಡ್ ಹಾಗೂ ಮಂಜುನಾಥ ಅವರು ಗ್ರಾಮ ಲೆಕ್ಕಾಧಿಕಾರಿಯಾಗಿದ್ದರು. ಶನಿವಾರ ಅವರು ಡೆವಿಲ್ ಸಿನಿಮಾ ನೋಡಲು ಹುಬ್ಬಳ್ಳಿಗೆ ಹೋಗಿದ್ದರು. ಸಿನಿಮಾ ಮುಗಿಸಿ ರಾತ್ರಿ ಮುಂಡಗೋಡಿಗೆ ಮರಳುತ್ತಿದ್ದರು. ತಡಸ ಸಮೀಪದ ತಾಯವ್ವನ ಗುಡಿಯ ಬಳಿ ಅವರ ಕಾರು ಕಂದಕಕ್ಕೆ ಬಿದ್ದಿತು. ಎಷ್ಟು ಹೊತ್ತಾದರೂ ಆ ಮೂವರು ಮನೆಗೆ ಬಾರದ ಕಾರಣ ಕುಟುಂಬದವರು ಹುಡುಕಾಟ ನಡೆಸಿದಾಗ ಕಾರು ಅಪಘಾತದ ಸುದ್ದಿ ಸಿಕ್ಕಿತು. ರಾತ್ರಿ 2.30ರ ವೇಳೆಗೆ ಕಾರು ತಲೆಕೆಳಗಾಗಿ ಬಿದ್ದಿರುವುದು ಕಾಣಿಸಿತು. ಕಾರಿನ ಬಳಿ ಗಮನಿಸಿದಾಗ ಮುಂಡಗೋಡ ತಹಶೀಲ್ದಾರ್ ಕಚೇರಿಯ ಸಿಬ್ಬಂದಿ ಗೋಪಾಲ ಎಂ ಅವರು ಕೊನೆಯುಸಿರೆಳೆದರು. ಕಾರಿನಲ್ಲಿದ್ದ ಗೋವಿಂದ ರಾಠೋಡ್ ಹಾಗೂ ಮಂಜುನಾಥ ಅವರು ಗಂಭೀರ ಪ್ರಮಾಣದಲ್ಲಿ ಗಾಯಗೊಂಡಿದ್ದು, ಅಪಘಾತ ನೋಡಿದವರು ಅವರಿಬ್ಬರನ್ನು ಚಿಕಿತ್ಸೆಗಾಗಿ ಹುಬ್ಬಳ್ಳಿಯ ಆಸ್ಪತ್ರೆಗೆ ದಾಖಲಿಸಿದರು. ಗಾಯಗೊಂಡ ಇನ್ನಿಬ್ಬರು ಗ್ರಾಮ ಲೆಕ್ಕಾಧಿಕಾರಿಗಳ ಸ್ಥಿತಿ ಚಿಂತಾಜನಕವಾಗಿದ್ದು, ಅವರಿಗೆ ನಿರಂತರ ಚಿಕಿತ್ಸೆ ಮುಂದುವರೆದಿದೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಕಾರು ಮೇಲೆತ್ತುವ ಪ್ರಯತ್ನ ಮಾಡಿದ್ದಾರೆ. ಅತಿವೇಗ ಅಪಘಾತಕ್ಕೆ ಕಾರಣ ಎಂಬ ಮಾಹಿತಿಯಿದೆ. ಸರ್ಕಾರಿ ಸೇವೆಯಲ್ಲಿದ್ದು, ಉತ್ತಮ ಕೆಲಸ ಮಾಡುತ್ತಿದ್ದ ಸಹೋದ್ಯೋಗಿ ನಿಧನಕ್ಕೆ ತಹಶೀಲ್ದಾರ್ ಕಚೇರಿ ನೌಕರರು ಕಂಬನಿ ಮಿಡಿದಿದ್ದಾರೆ. - [ಉಪಕಾರ ಮಾಡಿದ ಅಜ್ಜಿಗೆ ಅಪಕಾರ!](https://mobiletime.in/2025/12/a-favor-to-the-grandmother-who-did-a-favor/): ದಣಿದು ಬಂದಿದ್ದ ಅಪರಿಚಿತರಿಗೆ ಹೊನ್ನಮ್ಮ ನಾಯ್ಕ ಅವರು ನೀರು ಕೊಟ್ಟು ಉಪಚರಿಸಿದ್ದು, ಉಪಕಾರ ಮಾಡಿದ ಅಜ್ಜಿಗೆ ಆಗಂತುಕರು ಅಪಕಾರ ಮಾಡಿದ್ದಾರೆ. ಭಟ್ಕಳದ ಬೆಳಕೆ ಗರಡಿ ಹಿತ್ತಲು ಪ್ರದೇಶದಲ್ಲಿ ಹೊನ್ನಮ್ಮ ಮಾಧವ ನಾಯ್ಕ (70) ಅವರು ವಾಸವಾಗಿದ್ದಾರೆ. ಅವರ ಮನೆಗೆ ಬೈಕಿನಲ್ಲಿ ಬಂದ ಅಪರಿಚಿತರಿಬ್ಬರು ಕೋರಿಯರ್ ಬಾಯ್ ಎಂದು ಪರಿಚಯಿಸಿಕೊಂಡಿದ್ದಾರೆ. `ಆನ್‌ಲೈನ್ ಮೂಲಕ ಬ್ಯಾಟರಿ ಬಂದಿದೆ’ ಎಂದು ಅವರು ವಿಳಾಸ ಹೇಳಿದ್ದಾರೆ. ಆಗ ಹೊನ್ನಮ್ಮ ನಾಯ್ಕ ಅವರು `ನಾನು ಬ್ಯಾಟರಿ ಬುಕ್ ಮಾಡಿಲ್ಲ. ನನ್ನ ಮಗಳು ಸಹ ಮಾಡಿಲ್ಲ’ ಎಂದಿದ್ದಾರೆ. `ನನ್ನ ಅಳಿಯ ಬ್ಯಾಟರಿ ಬುಕ್ ಮಾಡಿರಬೇಕು’ ಎಂದು ಹೇಳಿದ್ದಾರೆ. ಆಗ, ಬೈಕಿನಲ್ಲಿದ್ದ ಅಪರಿಚಿತರು `ಕುಡಿಯಲು ನೀರು ಕೊಡಿ’ ಎಂದು ಮನವಿ ಮಾಡಿದ್ದಾರೆ. ದೂರದಿಂದ ಬಂದು ದಣಿದಿದ್ದವರನ್ನು ನೋಡಿದ ಅಜ್ಜಿ ಮಾನವೀಯ ಹಿನ್ನಲೆ ನೀರು ಕೊಟ್ಟು ಉಪಚರಿಸಿದ್ದಾರೆ. ಅದಾದ ನಂತರ ಆ ಅಪರಿಚಿತರು `ಇನ್ನಷ್ಟು ನೀರು ಬೇಕು’ ಎಂದಿದ್ದಾರೆ. ನೀರು ತರುವುದಕ್ಕಾಗಿ ತಿರುಗಿದಾಗ ಬೈಕಿನಲ್ಲಿದ್ದವರು ಅಜ್ಜಿಯ ಕತ್ತಿಗೆ ಕೈ ಹಾಕಿ ಚಿನ್ನದ ಸರ ಕದ್ದಿದ್ದಾರೆ. ಆಘಾತಕ್ಕೆ ಒಳಗಾದ ಅಜ್ಜಿ ಕೂಗಿಕೊಂಡಿದ್ದು, ಸುತ್ತಲಿನ ಜನ ಜಮಾಯಿಸಿದ್ದಾರೆ. ಅವರೆಲ್ಲರೂ ಸೇರಿ ಕಳ್ಳರಿಬ್ಬರನ್ನು ಹಿಡಿಯುವ ಪ್ರಯತ್ನ ಮಾಡಿದರೂ ಪ್ರಯೋಜನ ಆಗಲಿಲ್ಲ. ಬೈಕಿನಲ್ಲಿದ್ದ ಕಳ್ಳರು ಶಿರೂರು ಟೋಲ್‌ಗೇಟ್ ಮಾರ್ಗವಾಗಿ ತಪ್ಪಿಸಿಕೊಂಡಿದ್ದಾರೆ. ವಿಷಯ ಅರಿತ ಡಿವೈಎಸ್ಪಿ ಮಹೇಶ್, ಗ್ರಾಮೀಣ ಠಾಣೆಯ ಸಿಪಿಐ ಮಂಜುನಾಥ ಲಿಂಗಾರೆಡ್ಡಿ ಹಾಗೂ ಸಿಬ್ಬಂದಿ ಅಜ್ಜಿಯ ಮನೆಗೆ ಭೇಟಿ ನೀಡಿ ಪರಿಶೀಲಿಸಿದರು. ಅಜ್ಜಿ ನೀಡಿದ ದೂರಿನ ಅನ್ವಯ ಪ್ರಕರಣ ದಾಖಲಿಸಿದ್ದು, ಕಳ್ಳರನ್ನು ಹುಡುಕುವ ವಿಶ್ವಾಸವ್ಯಕ್ತಪಡಿಸಿದರು. - [ನವೋದಯ ಪರೀಕ್ಷೆ: ಮಗನಿಗೆ ಕಾಫಿ ಚೀಟಿ ಕೊಟ್ಟ ಅಪ್ಪ!](https://mobiletime.in/2025/12/navodaya-exam-father-gives-coffee-voucher-to-son/): ಕೇಂದ್ರ ನವೋದಯ ಪರೀಕ್ಷೆಗೆ ಹಾಜರಾಗಿದ್ದ ವಿದ್ಯಾರ್ಥಿಗೆ ಶಿಕ್ಷಕರಾಗಿರುವ ಅವರ ಅಪ್ಪನೇ ಕಾಫಿ ಚೀಟಿ ಕೊಟ್ಟಿದ್ದಾರೆ. ಪರೀಕ್ಷೆ ಪಾಸ್ ಆಗಲು ಅಸಮರ್ಥನಾಗಿದ್ದ ಮಗನಿಗೆ ಉತ್ತರ ಹೇಳಿಕೊಟ್ಟು ಪಾಸ್ ಮಾಡಿಸುವ ಸಾಹಸ ಮಾಡಿ ಸಿಕ್ಕಿಬಿದ್ದಿದ್ದಾರೆ! ಹಳಿಯಾಳ ಪಟ್ಟಣದ ಕಾರ್ಮೆಲ್ ಪ್ರಾಥಮಿಕ ಶಾಲೆಯಲ್ಲಿ ನವೋದಯ ಪರೀಕ್ಷೆ ನಡೆಯುತ್ತಿದ್ದು, ಶಿಕ್ಷಕ ಚರ್ಚಿಲ್ ಸಂತಾನ್ ದಾಲ್ಮೆಟ್ ಅವರನ್ನು ಪರೀಕ್ಷೆ ಜವಾಬ್ದಾರಿಯಿಂದ ದೂರವಿರಿಸಲಾಗಿತ್ತು. ತಮ್ಮ ಮಗ ದಡ್ಡನಾಗಿದ್ದರೂ ಆತನನ್ನು ನವೋದಯಕ್ಕೆ ಸೇರಿಸಬೇಕು ಎಂಬ ನಿಟ್ಟಿನಲ್ಲಿ ಚರ್ಚಿಲ್ ಅವರು ನಿರ್ಧರಿಸಿದ್ದರು. ಹೀಗಾಗಿ ಅಕ್ರಮವಾಗಿ ಪರೀಕ್ಷಾ ಕೇಂದ್ರ ಪ್ರವೇಶಿಸಿದ ಅವರು ಅಲ್ಲಿನ ಸೂಪರ್‌ವೈಸರನ್ನು ಬುಟ್ಟಿಗೆ ಹಾಕಿಕೊಂಡರು. ಅವರ ಜೊತೆ ಕೈಜೋಡಿಸಿ ತನ್ನ ಮಗನಿಗೆ ಉತ್ತರಗಳನ್ನು ಹೇಳಿಕೊಡಲು ಶುರು ಮಾಡಿದರು. ಕರ್ತವ್ಯದಲ್ಲಿರದ ಚರ್ಚಿಲ್ ಪರೀಕ್ಷಾ ಕೇಂದ್ರದೊಳಗೆ ಬಂದ ಬಗ್ಗೆ ಮಕ್ಕಳು ಪ್ರಶ್ನಿಸಿದರು. ಶಿಕ್ಷಕ ಚರ್ಚಿಲ್‌ನ ಈ ವರ್ತನೆಯಿಂದ ಇತರ ವಿದ್ಯಾರ್ಥಿಗಳ ಪೋಷಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಪ್ರಮೋದ್ ಮಹಾಲೆ ಅವರಿಗೆ ಪಾಲಕರು ದೂರು ಸಲ್ಲಿಸಿದರು. - [ಕರಾವಳಿ ಉತ್ಸವ: ಫೋಟೋ ಕ್ಲಿಕ್ಕಿಸಿ.. ಕಾಸು ಗೆಲ್ಲಿ!](https://mobiletime.in/2025/12/coastal-festival-click-on-the-photo-win-money/): ಕರಾವಳಿ ಉತ್ಸವಕ್ಕೆ ಪ್ರವಾಸಿಗರ ಆಕರ್ಷಿಸಲು ಜಿಲ್ಲಾಡಳಿತ ನಾನಾ ಬಗೆಯ ಕಸರತ್ತು ನಡೆಸುತ್ತಿದ್ದು, ಆ ಪ್ರಯತ್ನ ಜಿಲ್ಲೆಯ ಜನರಲ್ಲಿ ಸ್ಪರ್ಧಾತ್ಮಕ ಭಾವನೆ ಹೆಚ್ಚಿಸಿದೆ. ಸದ್ಯ ಪ್ರವಾಸಿ ತಾಣಗಳಲ್ಲಿನ ಕ್ಷಣಗಳನ್ನು ಸೆರೆಹಿಡಿಯುವ ಸ್ಪರ್ಧೆಯನ್ನು ಆಯೋಜಿಸಿದೆ. ಕಾರವಾರದ ರವೀಂದ್ರನಾಥ ಟ್ಯಾಗೋರ ಕಡಲತೀರದಲ್ಲಿ `ಕರಾವಳಿ ಉತ್ಸವ-2025ನ್ನು ಅದ್ಧೂರಿಯಾಗಿ ನಡೆಸಲು ಎಲ್ಲಾ ಬಗೆಯ ಸಿದ್ಧತೆ ಜೋರಾಗಿದೆ. ಪ್ರವಾಸಿಗರ ಆಕರ್ಷಣೆ ಹಾಗೂ ಪ್ರಚಾರಕ್ಕಾಗಿ ಜಿಲ್ಲೆಯ ಪ್ರಮುಖ ಪ್ರವಾಸಿ ಸ್ಥಳಗಳ, ಜಲಪಾತಗಳ, ಕಡಲತೀರಗಳ, ಪಾರಂಪರಿಕ ತಾಣಗಳ, ಛಾಯಾಚಿತ್ರ ಸ್ಪರ್ಧೆ ಏರ್ಪಡಿಸಲಾಗಿದೆ. ಈ ಸ್ಪರ್ಧೆಯಲ್ಲಿ ಮೊದಲ ಬಹುಮಾನಪಡೆದವರಿಗೆ 10 ಸಾವಿರ ರೂ, ಎರಡನೇ ಬಹುಮಾನಪಡೆದವರಿಗೆ 7 ಸಾವಿರ ರೂ ಹಾಗೂ 3ನೇ ಬಹುಮಾನಪಡೆದವರಿಗೆ 5 ಸಾವಿರ ರೂ ಸಿಗಲಿದೆ. 2*2ಅಡಿ ಎತ್ತರದ ಫೋಟೋಗೆ ಪ್ರೇಮ್ ಅಳವಡಿಸಿ ಸಲ್ಲಿಸುವಂತೆ ಜಿಲ್ಲಾಡಳಿತ ಕೋರಿದ್ದು, ಆ ಫೋಟೋಗಳನ್ನು ಉತ್ಸವದಲ್ಲಿ ಪ್ರದರ್ಶಿಸಲಾಗುತ್ತದೆ. ಉತ್ತರ ಕನ್ನಡ ಜಿಲ್ಲೆಯ ಪ್ರಮುಖ ಪ್ರವಾಸಿ ಸ್ಥಳಗಳ, ಜಲಪಾತಗಳ, ಕಡಲತೀರಗಳ, ಪಾರಂಪರಿಕ ತಾಣಗಳ, ಛಾಯಾಚಿತ್ರಗಳನ್ನು ಮಾತ್ರ ಸ್ಪರ್ಧೆಗೆ ಪರಿಗಣಿಸಲಾಗುತ್ತದೆ. ಸ್ಪರ್ಧೆಯಲ್ಲಿ ಉತ್ತರ ಕನ್ನಡ ಜಿಲ್ಲೆಯವರಿಗೆ ಮಾತ್ರ ಅವಕಾಶವಿದೆ. ಸ್ಪರ್ಧೆಯಲ್ಲಿ ಭಾಗವಹಿಸಲು ಯಾವುದೇ ವಯೋಮಿತಿ ಇಲ್ಲ. ಸ್ವತಃ ಕ್ಲಿಕ್ಕಿಸಿದ ಚಿತ್ರಗಳನ್ನು ಮಾತ್ರ ಕಳುಹಿಸಬೇಕಾಗಿದ್ದು ಛಾಯಾಚಿತ್ರದ ಜೊತೆ ಹೆಸರು, ವಿಳಾಸ, ಆಧಾರ್ ಪ್ರತಿ, ಬ್ಯಾಂಕ್ ಖಾತೆ ವಿವರದ ಜೊತೆ ಮೊಬೈಲ್ ನಂ ನೀಡುವುದು ಕಡ್ಡಾಯ. ಛಾಯಾಚಿತ್ರ ಸಲ್ಲಿಸಲು ಡಿಸೆಂಬರ್ 19 ಕೊನೆಯ ದಿನ. ಫೋಟೋ ಕಳುಹಿಸಬೇಕಾದ ವಿಳಾಸ ಉಪ ನಿರ್ದೇಶಕರು, ಪ್ರವಾಸೋದ್ಯಮ ಇಲಾಖೆ, ಆರ್ ಟಿ ಓ ಕಚೇರಿ ಹತ್ತಿರ, ಕಾರವಾರ – 581301 ಮಾಹಿತಿಗಾಗಿ ಫೋನ್ ಮಾಡಬೇಕಾದ ಸಂಖ್ಯೆ: 8618404610 / 9036074715 - [ಹೈಟೆಕ್ ಆಸ್ಪತ್ರೆ: ಹಳೆ ಹೋರಾಟಕ್ಕೆ ಹೊಸ ಸ್ವರೂಪ!](https://mobiletime.in/2025/12/hi-tech-hospital-a-new-form-for-an-old-struggle/): ಶಿರಸಿಯ ಹೈಟೆಕ್ ಆಸ್ಪತ್ರೆ ವಿಷಯವಾಗಿ ಹೋರಾಟ ಶುರು ಮಾಡಿದ್ದ ಸಾಮಾಜಿಕ ಕಾರ್ಯಕರ್ತ ಅನಂತಮೂರ್ತಿ ಹೆಗಡೆ ಅವರು ಆ ಹೋರಾಟವನ್ನು ಮತ್ತೆ ಮುಂದುವರೆಸಿದ್ದಾರೆ. ಕಾಂಗ್ರೆಸ್ ಸರ್ಕಾರದ ಕೊಳಕಿನ ಬಗ್ಗೆ ಅವರು ಕಿಡಿಕಾರಿದ್ದಾರೆ. `ರಾಜ್ಯದಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್ ಸರಕಾರ ಶಿರಸಿ ಪಂಡಿತ್ ಸಾರ್ವಜನಿಕ ಆಸ್ಪತ್ರೆಯನ್ನು ನಿರ್ಲಕ್ಷಿಸಿ ಜನರ ಸಾವಿನ ಮೇಲೆ ತನ್ನ ರಾಜ್ಯಭಾರವನ್ನು ಮಾಡುತ್ತಿದೆ’ ಎಂದವರು ದೂರಿದ್ದಾರೆ. `ಶಿರಸಿ ಪಂಡಿತ್ ಸಾರ್ವಜನಿಕ ಆಸ್ಪತ್ರೆಯ ಕಾಮಗಾರಿ ಶೇ 8-ರಷ್ಟು ಪೂರ್ಣವಾಗಿ ವರ್ಷ ಕಳೆದರೂ ವೈದ್ಯಕೀಯ ಉಪಕರಣ, ತಜ್ಞ ವೈದ್ಯರ ನೇಮಕಾತಿ ಪ್ರಕ್ರಿಯೆ ನಡೆದಿಲ್ಲ’ ಎಂಬುದನ್ನು ಪುನರುಚ್ಚರಿಸಿದ್ದಾರೆ. `ಸ್ಥಳೀಯ ಶಾಸಕರು, ಜಿಲ್ಲಾ ಉಸ್ತುವಾರಿ ಸಚಿವರು ಹಾಗು ಹಿರಿಯರಾಗಿರುವ ಆರ್ ವಿ ದೇಶಪಾಂಡೆ ಒಳಗೊಂಡು ಕಾಂಗ್ರೆಸ್ ಸರಕಾರ ಶಿರಸಿಯನ್ನು ನಿರ್ಲಕ್ಷಿಸಿದೆ. ಖಂಡಿಸಿ ಡಿಸೆಂಬರ್ 16ರಂದು ಬೆಳಗಾವಿಯ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ಸರಕಾರದ ಗಮನ ಸೆಳೆಯುವ ನಿಟ್ಟಿನಲ್ಲಿ ಬೃಹತ್ ಹೋರಾಟ ನಡೆಯಲಿದೆ’ ಎಂದವರು ಘೋಷಿಸಿದರು. `ಇದು ಕೇವಲ ಯಾರ ವಿರುದ್ಧದ ಹೋರಾಟವಲ್ಲ. ಕ್ಷೇತ್ರದ ಜನರ ಹಿತಕ್ಕಾಗಿ ನಡೆಯುತ್ತಿರುವ ಹೋರಾಟ’ ಎಂದು ಸ್ಪಷ್ಠಪಡಿಸಿದರು. `ಜಿಲ್ಲೆಯಲ್ಲಿ ಅಪಘಾತ ಪ್ರಮಾಣ ಹೆಚ್ಚಾಗಿದೆ. ಸಾವು-ನೋವುಗಳು ಹೆಚ್ಚಾಗಿದೆ. ಮಲ್ಟಿ ಸ್ಪೆಷಾಲಿಟಿ ಇಲ್ಲದಿರುವ ಕಾರಣ ಹೆಚ್ಚಿನ ಚಿಕಿತ್ಸೆಗಾಗಿ ಹೊರ ಜಿಲ್ಲೆಯ ಉತ್ತಮ ಆಸ್ಪತ್ರೆಗೆ ಹೋಗುತ್ತಿದ್ದಾರೆ. ಆ ಕಾರಣಕ್ಕಾಗಿಯೇ ಶಿರಸಿಯಲ್ಲಿ ಅಂದಿನ ಬಿಜೆಪಿ ಸರಕಾರದ ಆಡಳಿತದಲ್ಲಿ 250 ಹಾಸಿಗೆಗಳ ಆಸ್ಪತ್ರೆ ನಿರ್ಮಾಣಕ್ಕೆ ಮುಂದಾಗಿದ್ದು, ಈಗಿನ ರಾಜ್ಯ ಕಾಂಗ್ರೆಸ್ ಸರಕಾರ ರಾಜಕಾರಣ ಕಾರಣಕಕ್ಕೆ ಆಸ್ಪತ್ರೆಗೆ ಆಸಕ್ತಿವಹಿಸಿಲ್ಲ’ ಎಂದವರು ದೂರಿದರು. - [ಅನಾಧಿಕಾಲದ ಅತಿಕ್ರಮಣ ತೆರವು: ಅರಣ್ಯವಾಸಿಗೆ ಆತಂಕ!](https://mobiletime.in/2025/12/untimely-encroachment-clearance-forest-dwellers-worried/): ಅನಾಧಿಕಾಲದಿoದಲೂ ಅರಣ್ಯ ಭೂಮಿ ಅತಿಕ್ರಮಿಸಿಕೊಂಡಿರುವ ಮೋಹನ ದೇಶಭಂಡಾರಿ ಅವರಿಗೆ ಆ ಜಾಗ ಬಿಟ್ಟು ತೆರಳುವಂತೆ ಅರಣ್ಯಾಧಿಕಾರಿಗಳು ಆದೇಶಿಸಿದ್ದಾರೆ. `ತಮಗೆ ನ್ಯಾಯ ಕೊಡಿಸಿ’ ಎಂದು ಮೋಹನ ದೇಶಭಂಡಾರಿ ಅವರು ನ್ಯಾಯವಾದಿ ರವೀಂದ್ರ ನಾಯ್ಕ ಅವರ ಬಳಿ ದೌಡಾಯಿಸಿದ್ದಾರೆ. ಕುಮಟಾ ತಾಲೂಕಿನ ಬೆಳ್ಳಂಗಿ ಗ್ರಾಮದಲ್ಲಿ ಮೋಹನ ನಾರಾಯಣ ದೇಶಭಂಡಾರಿ ಅವರು ವಾಸವಾಗಿದ್ದಾರೆ. ಅನಾಧಿಕಾಲದಿಂದಲೂ ಅವರು ಅತಿಕ್ರಮಣ ಜಮೀನಿನಲ್ಲಿಯೇ ಬದುಕು ಕಟ್ಟಿಕೊಂಡಿದ್ದಾರೆ. ಅತಿಕ್ರಮಣದಾರರ ಹೋರಾಟದಲ್ಲಿಯೂ ಮೋಹನ ದೇಶಭಂಡಾರಿ ಅವರು ಭಾಗವಹಿಸುತ್ತಿದ್ದು, ಅತಿಕ್ರಮಣದಾರರನ್ನು ಒಕ್ಕಲೆಬ್ಬಿಸದಂತೆ ಅವರು ಮನವಿ ಮಾಡಿದ್ದಾರೆ. ಅರಣ್ಯ ಹಕ್ಕು ಕಾಯ್ದೆ ಅಡಿ ಅರ್ಜಿ ಸಹ ಸಲ್ಲಿಸಿದ್ದಾರೆ. ಅದಾಗಿಯೂ, ನವೆಂಬರ್ 28ರಂದು ಅವರ ಅತಿಕ್ರಮಣ ತೆರವಿಗೆ ಆದೇಶವಾಗಿದೆ. ಇದರೊಂದಿಗೆ ಕತಗಾಲ ವಲಯದ ಕೃಷ್ಣ ದೇವಪ್ಪ ನಾಯ್ಕ ಮತ್ತು ಈಶ್ವರ್ ನಾರಾಯಣ ನಾಯ್ಕ ಅವರಿಗೆ ಡಿಸೆಂಬರ್ 17 ರಂದು ವಿಚಾರಣೆಗೆ ಹಾಜಾರಾಗುವಮತೆ ನೋಟಿಸ್ ಸಹ ಬಂದಿದೆ. `ಅರಣ್ಯ ಹಕ್ಕು ಕಾಯಿದೆಯಲ್ಲಿ ಅರ್ಜಿ ಸಲ್ಲಿಸಿದ ಅರಣ್ಯವಾಸಿಯನ್ನು ಒಕ್ಕಲೆಬ್ಬಿಸುವ ಪ್ರಕ್ರೀಯೆಗೆ ಕೇಂದ್ರ ಅರಣ್ಯ ಕಛೇರಿಯಿಂದ ಸಮರ್ಪಕ ಉತ್ತರ ಬರುವವರೆಗೂ ಒಕ್ಕಲೆಬ್ಬಿಸುವುದಿಲ್ಲ’ ಎಂದು ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಟಿ ಹಿರಾಲಾಲ್ ಅವರು ಹೇಳಿದ್ದರು. ಆದರೆ, ಆ ಮಾತು ಇದೀಗ ಸುಳ್ಳಾಗಿದೆ. ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳು ಒಕ್ಕಲೆಬ್ಬಿಸುವ ಕಡತಕ್ಕೆ ಸಹಿ ಮಾಡಿದ್ದಾರೆ. ಹೋಟಾಗರಾರರಿಗೆ ನೀಡಿದ ಮಾತು ಸುಳ್ಳಾಗಿದೆ ಎಂದು ಹೋರಾಟಗಾರ ಉದಯ ನಾಯ್ಕ, ಆನಂದ ಶಿವಪ್ಪ ಜೋಗಿ ಅಚನಳ್ಳಿ, ಗಣಪತಿ ಪುಟ್ಟರಮನೆ, ಪ್ರಶಾಂತ ನಾಯ್ಕ, ಹನುಮಂತ ಕನ್ನಾ ಕುಂಬಾರಗುಣಿ ಅಸಮಧಾನವ್ಯಕ್ತಪಡಿಸಿದ್ದಾರೆ. - [ಭಂಡOಗಿ ಸೋಮನಿಂಗ ಬಂಡತನ: 40 ವಾರೆಂಟಿಗೂ ಡೋಂಟ್ ಕೇರ್!](https://mobiletime.in/2025/12/bhandaogi-somaninga-bandatana-dont-care-about-the-40-warranty/): ಆರು ವರ್ಷಗಳಿಂದ ಪೊಲೀಸರ ಕಣ್ತಪ್ಪಿಸಿಕೊಂಡು ಓಡಾಡುತ್ತಿದ್ದ ಆರೋಪಿಗೆ ಕೋರ್ಟು 40 ಬಾರಿ ವಾರೆಂಟ್ ಹೊರಡಿಸಿದ್ದು,, ಅದಾಗಿಯೂ ನ್ಯಾಯಾಲಯಕ್ಕೆ ಹಾಜರಾಗದೇ ಬಂಡತನ ಮೆರೆದಿದ್ದ ಸೋಮನಿಂಗ ಭಂಡಗಿ ಅವರನ್ನು ಪೊಲೀಸರು ಸೆದೆಬಡಿದಿದ್ದಾರೆ. ಹಳಿಯಾಳದ ಸೋಮನಿಂಗ ನೀಲಕಂಠ ಭಡಂಗಿ ಅವರು ಹಲ್ಲೆ ಪ್ರಕರಣದಲ್ಲಿ ಆರೋಪಿಯಾಗಿದ್ದರು. ಈ ಹಿನ್ನಲೆ ಆರು ವರ್ಷದ ಹಿಂದೆ ಅವರು ನ್ಯಾಯಾಲಯದಿಂದ ಜಾಮೀನುಪಡೆದಿದ್ದರು. ಆದರೆ, ಮತ್ತೆ ನ್ಯಾಯಾಲಯದ ಕಡೆ ಮುಖ ಹಾಕಿರಲಿಲ್ಲ. ಹೀಗಾಗಿ ಕೋರ್ಟು ವಾರೆಂಟ್ ಜಾರಿ ಮಾಡಿದ್ದು, ಅದಕ್ಕೆ ಸಹ ತಲೆಕೆಡಿಸಿಕೊಂಡಿರಲಿಲ್ಲ. 40 ಬಾರಿ ವಾರೆಂಟ್ ಆದರೂ ನೀಲಕಂಠ ಭಂಡಗಿ ಸಿಕ್ಕಿರಲಿಲ್ಲ. ಈ ಹಿನ್ನಲೆ ಹಳಿಯಾಳ ಪೊಲೀಸ್ ಠಾಣೆಯವರು ವಿಶೇಷ ಕಾರ್ಯಾಚರಣೆ ನಡೆಸಿದರು. ಸಂಕನಕೊಪ್ಪದಲ್ಲಿ ಆತ ಅಡಿಗಿರುವ ಸುಳಿವು ಆಧರಿಸಿ ರಾತ್ರಿ ವೇಳೆ ದಾಳಿ ನಡೆಸಿದರು. ಸಿಪಿಐ ಜಯಪಾಲ್ ಪಾಟೀಲ್, ಪಿಎಸ್‌ಐ ಬಸವರಾಜ ಮಬನೂರ, ಕೃಷ್ಣಾ ಅರಕೇರಿ ಅವರ ನೇತೃತ್ವದಲ್ಲಿ ಎಎಸ್‌ಐ ವೆಂಕಟೇಶ ತೆಗ್ಗಿನ, ಸಿಪಿಸಿ ಶ್ರೀಶೈಲ್ ಜಿ ಎಂ, ಲಕ್ಷ್ಮಣ ಪೂಜಾರಿ, ಅರವಿಂದ ಭಜಂತ್ರಿ ಮತ್ತು ರಾಘವೇಂದ್ರ ಕೆರವಾಡ ಆರೋಪಿಯನ್ನು ಬಂಧಿಸಿದರು. - [ಆಚಾರಿ ಮಿಲ್'ಗೆ ಅಗ್ನಿ ಪ್ರವೇಶ!](https://mobiletime.in/2025/12/fire-breaks-out-at-achari-mill/): ಶಂಕರ್ ಆಚಾರಿ ಅವರು ಕಷ್ಟಪಟ್ಟು ಬೆಳಸಿದ್ದ ಕಟ್ಟಿಗೆ ಮಿಲ್ ಬೆಂಕಿಗೆ ಆಹುತಿಯಾಗಿದೆ. ತಮ್ಮ ಜೀವನವಿಡೀ ದುಡಿದು ಕಟ್ಟಿದ್ದ ಕಟ್ಟಡದ ಜೊತೆ 35 ಲಕ್ಷ ರೂ ಮೌಲ್ಯದ ಸಾಮಗ್ರಿಗಳು ಅಗ್ನಿಗೆ ಆಹುತಿಯಾಗಿದೆ. ಗೋಕರ್ಣ ಬಳಿಯ ಹನೇಹಳ್ಳಿ ಗ್ರಾಮ ಪಂಚಾಯತ ಸಮೀಪದ ಹೊಸ್ಕೇರಿಯಲ್ಲಿ ಶಂಕರ್ ಆಚಾರಿ ಅವರು ಕಟ್ಟಿಗೆ ಮಿಲ್ ನಡೆಸುತ್ತಿದ್ದರು. ಶನಿವಾರ ಬೆಳಗ್ಗೆ ಅವರ ಮಿಲ್’ಗೆ ಬೆಂಕಿ ತಗುಲಿತು. ವಿದ್ಯುತ್ ಶಾರ್ಟ ಸರ್ಕೀಟ್ ಕಾರಣ ಅನಾಹುತ ನಡೆದ ಅನುಮಾನಗಳಿದ್ದು, ಸಮೀಪದಲ್ಲಿ ಅಗ್ನಿಶಾಮಕ ಠಾಣೆ ಇಲ್ಲದ ಕಾರಣ ಬೆಂಕಿ ಆರಿಸಲು ಸಮಸ್ಯೆ ಉಂಟಾಯಿತು. ಗೋಕರ್ಣದಲ್ಲಿ ಜನರ ಬೇಡಿಕೆಯಿದ್ದರೂ ಅಗ್ನಿಶಾಮಕ ಠಾಣೆ ಇಲ್ಲದ ಕಾರಣ ಅಂಕೋಲಾ ಹಾಗೂ ಕುಮಟಾದಿಂದ ಹೊಸ್ಕೇರಿಗೆ ಅಗ್ನಿಶಾಮಕ ಸಿಬ್ಬಂದಿ ಆಗಮಿಸಿದರು. ಅಲ್ಲಿಂದ ಅವರು ಬರುವಷ್ಟರೊಳಗೆ ಬಹುತೇಕ ಕಟ್ಟಡ ಸುಟ್ಟು ಕರಕಲಾಗಿತ್ತು. ಅದಾಗಿಯೂ ಅಗ್ನಿಶಾಮಕ ಸಿಬ್ಬಂದಿ ಸಾಹಸ ಮಾಡಿದರು. ಬೆಂಕಿ ಬೇರೆ ಕಡೆ ಹರಡದಂತೆ ಮುನ್ನಚ್ಚರಿಕೆವಹಿಸಿದರು. ಹೊತ್ತಿ ಉರಿಯುತ್ತಿದ್ದ ಕಟ್ಟಿಗೆಗೆ ಅಂಟಿದ ಅಗ್ನಿಯನ್ನು ಆರಿಸಿದರು. ಗ್ರಾಮ ಲೆಕ್ಕಾಧಿಕಾರಿ ರೇಖಾ ನಾಯ್ಕ, ಹಾಗೂ ಸ್ಥಳೀಯ ಗ್ರಾಮ ಪಂಚಾಯತ ಕಾರ್ಯದರ್ಶಿ ಶ್ರೀಧರ ಬೋಮಕರ ಅವರ ಜೊತೆ ಗೋಕರ್ಣ ಪಿಎಸ್‌ಐ ಖಾದರ ಬಾಷಾ ಸ್ಥಳ ಭೇಟಿ ಮಾಡಿದರು. - [ವಜ್ರಕೋಶ: ಸ್ಪೋಟದ ಸುದ್ದಿಗೆ ಸೀಬರ್ಡ ಸ್ಪಂದನೆ](https://mobiletime.in/2025/12/vajrakosh-seabirds-response-to-the-news-of-the-explosion/): ಭಾರತೀಯ ನೌಕಾನೆಲೆಗೆ ಸಂಬoಧಿಸಿದ ಮದ್ದುಗುಂಡುಗಳನ್ನು ಸಂಗ್ರಹಿಸಿಡುವ `ವಜ್ರಕೋಶ’ದಲ್ಲಿ ಸ್ಪೋಟ ಸಂಭವಿಸಿದ ಕುರಿತು mobiletime.in ಪ್ರಕಟಿಸಿದ ವರದಿಗೆ ನೌಕಾನೆಲೆ ಅಧಿಕಾರಿಗಳು ಸ್ಪಂದಿಸಿದ್ದಾರೆ. `ನೌಕಾ ಶಸ್ತ್ರಾಸ್ತ್ರ ಡಿಪೋದಲ್ಲಿ ಶಸ್ತ್ರಾಸ್ತ್ರಗಳ ನಿಷ್ಕ್ರಿಯಗೊಳಿಸುವ ಪ್ರಕ್ರಿಯೆಯಿಂದ ಸ್ಪೋಟವಾಗಿದೆ. ಯಾವುದೇ ಅನಾಹುತ ನಡೆದಿಲ್ಲ’ ಎಂದು ನೌಕಾನೆಲೆಯವರು ಸ್ಪಷ್ಟನೆ ನೀಡಿದ್ದಾರೆ. ವಜ್ರಕೋಶದ ಬಳಿ ಭಾರೀ ಪ್ರಮಾಣದಲ್ಲಿ ಸ್ಪೋಟದ ಸದ್ದು ಕೇಳಿದ್ದರಿಂದ ಜನ ಆತಂಕಗೊAಡಿದ್ದರು. ದೊಡ್ಡ ಪ್ರಮಾಣದ ಹೊಗೆ ಹೊರ ಹೋಗುವುದನ್ನು ನೋಡಿ ಕಂಗಾಲಾಗಿದ್ದರು. ಅದರ ಜೊತೆ ಅಂಕೋಲಾ ಅಲಗೇರಿಯ ಮೂರು ಮನೆಗಳಿಗೂ ಬಿರುಕು ಮೂಡಿದ್ದು, ಸ್ಪೋಟದ ಬಗ್ಗೆ ಅನೇಕ ಅನುಮಾನಗಳು ವ್ಯಕ್ತವಾಗಿದ್ದವು. ಈ ಬಗ್ಗೆ ಮಾಹಿತಿ ಸಂಗ್ರಹಿಸಿ mobiletime.in ವರದಿ ಪ್ರಕಟಿಸಿದ್ದು, ಭಾರತೀಯ ನೌಕಾನೆಲೆ ಅಧಿಕಾರಿಗಳು ಸ್ಪೋಟದ ರಹಸ್ಯ ಬಹಿರಂಗಪಡಿಸಿದ್ದಾರೆ. `ಈ ಸದ್ದು ಮತ್ತು ಕಂಪನವು ನೌಕಾ ಶಸ್ತ್ರಾಸ್ತ್ರ ಡಿಪೋದಲ್ಲಿ ನಡೆದ ವಾಡಿಕೆಯ ಶಸ್ತ್ರಾಸ್ತ್ರಗಳ ನಿಷ್ಕ್ರಿಯಗೊಳಿಸುವ ಪ್ರಕ್ರಿಯೆಯಿಂದ ಉಂಟಾಗಿದೆಯೇಹೊರತು ಯಾವುದೇ ಅನಾಹುತ ಸಂಭವಿಸಿಲ್ಲ’ ಎಂದು ನೌಕಾಪಡೆ ಅಧಿಕಾರಿಗಳು ಹೇಳಿದ್ದಾರೆ. `ಈ ಚಟುವಟಿಕೆಯನ್ನು ಅತ್ಯಂತ ನಿಯಂತ್ರಿತ ವಾತಾವರಣದಲ್ಲಿ ಹಾಗೂ ವಿಷಯ ತಜ್ಞರ ಸಮ್ಮುಖದಲ್ಲಿ ಮತ್ತು ನಿಗದಿಪಡಿಸಿದ ಸುರಕ್ಷತಾ ಶಿಷ್ಟಾಚಾರಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಮೂಲಕ ನಡೆಸಲಾಗಿದೆ. ಈ ಪ್ರಕ್ರಿಯೆಯು ಸಂಪೂರ್ಣ ಸುರಕ್ಷಿತವಾಗಿದ್ದು, ಸಾರ್ವಜನಿಕರು ಆತಂಕಪಡುವ ಅಗತ್ಯವಿಲ್ಲ’ ಎಂದಿದ್ದಾರೆ. ಅದಾಗಿಯೂ, ಸ್ಫೋಟದ ಸದ್ದಿನಿಂದ ಸ್ಥಳೀಯ ನಿವಾಸಿಗಳಲ್ಲಿ ಉಂಟಾಗಿರುವ ಆತಂಕವನ್ನು ನೌಕಾಪಡೆ ಗಂಭೀರವಾಗಿ ಪರಿಗಣಿಸಿದೆ. ಜನರ ಕಾಳಜಿಗೆ ಸ್ಪಂದಿಸಲು ಮತ್ತು ಅವರ ಭಯ ನಿವಾರಿಸಲು ನೌಕಾ ಅಧಿಕಾರಿಗಳು ಜಿಲ್ಲಾಡಡಳಿತದೊಂದಿಗೆ ನಿಕಟ ಸಂಪರ್ಕದಲ್ಲಿದ್ದು, ಸಮನ್ವಯದಿಂದ ಕಾರ್ಯನಿರ್ವಹಿಸುತ್ತಿದ್ದಾರೆ’ ಎಂದು ವಿವರಿಸಿದ್ದಾರೆ. `ಸ್ಥಳೀಯ ಸಮುದಾಯದ ಸುರಕ್ಷತೆ ಮತ್ತು ಯೋಗಕ್ಷೇಮಕ್ಕೆ ಭಾರತೀಯ ನೌಕಾಪಡೆ ಸದಾ ಬದ್ಧವಾಗಿದೆ’ ಎಂದು ಪುನರುಚ್ಚರಿಸಿದ್ದಾರೆ. - [ಅಪಘಾತ: ಆಸ್ಪತ್ರೆ ಸೇರುವ ಮುನ್ನವೇ ಡಾಕ್ಟರ್ ಬದುಕು ಅಂತ್ಯ!](https://mobiletime.in/2025/12/accident-the-doctors-life-ended-before-joining-the-hospital/): ಯಾಣ ಪ್ರವಾಸಕ್ಕೆ ಹೊರಟಿದ್ದ ಎಂ ಬಿ ಬಿ ಎಸ್ ವಿದ್ಯಾರ್ಥಿಗಳ ಬೈಕು ಯಲ್ಲಾಪುರದಲ್ಲಿ ಅಪಘಾತಕ್ಕೀಡಾಗಿದೆ. ಪರಿಣಾಮ ವೈದ್ಯಕೀಯ ವಿದ್ಯಾರ್ಥಿಯೊಬ್ಬರು ಸ್ಥಳದಲ್ಲಿಯೇ ಸಾವನಪ್ಪಿದ್ದಾರೆ. ವೈದ್ಯಕೀಯ ಕಾಲೇಜಿನಲ್ಲಿ ಓದುತ್ತಿದ್ದ ವಿದ್ಯಾರ್ಥಿಗಳು ಸೇರಿಕೊಂಡು ಶನಿವಾರ ಯಾಣಕ್ಕೆ ಹೋಗಲು ನಿರ್ಧರಿಸಿದ್ದರು. ಅದರ ಪ್ರಕಾರ ಒಂದಷ್ಟು ಹುಡುಗರು ಬೈಕಿನಲ್ಲಿ ಹುಬ್ಬಳ್ಳಿ ಕಡೆಯಿಂದ ಹೊರಟಿದ್ದರು. ಬಿಜಾಪುರದ ಸಿಂದಗಿಯ ರಾಜೀವ ಭೀಮಾಶಂಕರ್ ಚೌದರಿ ಅವರು ಓಡಿಸುತ್ತಿದ್ದ ಬೈಕಿನಲ್ಲಿ ಯಾದಗಿರಿಯ ವರ್ಧನ ವೆಂಕಟೇಶ ಶೆಟ್ಟಿ ಅವರು ಕುಳಿತಿದ್ದರು. ಇನ್ನಿತರ ಬೈಕುಗಳ ಜೊತೆ ರಾಜೀವ ಅವರು ಓಡಿಸುತ್ತಿದ್ದ ಬೈಕು ಸಹ ವೇಗವಾಗಿತ್ತು. ಶನಿವಾರ ಮಧ್ಯಾಹ್ನದ ವೇಳೆ ಈ ಬೈಕು ಯಲ್ಲಾಪುರ ಪ್ರವೇಶಿಸಿತು. ಕಣ್ಣಿಗೇರಿ ಗ್ರಾಮದ ಕಣ್ಣಿಗೇರಿ ಗ್ರಾಮದ ಎಚ್ ಕೆ ಜಿ ಎನ್ ಸಿಮೆಂಟ್ ಪಾಕ್ಟರಿ ಬಳಿ ರಾಜೀವ ಚೌದರಿ ಅವರ ಬೈಕು ನಿಯಂತ್ರಣ ತಪ್ಪಿತು. ಪರಿಣಾಮ ಬೈಕು ಎಡ ಮಗ್ಗುಲಾಗಿ ಬಿದ್ದಿದ್ದು, ಬೈಕಿನಲ್ಲಿ ಹಿಂದೆ ಕೂತಿದ್ದ ವರ್ಧನ ಶೆಟ್ಟಿ (19) ಅವರ ತಲೆ ಹೆದ್ದಾರಿಗೆ ಬಡಿಯಿತು. ಆ ತೀವೃತೆಗೆ ವರ್ಧನ ಶೆಟ್ಟಿ ಅವರು ಅಲ್ಲಿಯೇ ಕೊನೆಯುಸಿರೆಳೆದರು. ಅಪಘಾತದ ವಿಷಯ ಕೇಳಿ ಯಲ್ಲಾಪುರ ಪಿಐ ರಮೇಶ ಹಾನಾಪುರ ಅವರು ಸ್ಥಳಕ್ಕೆ ದೌಡಾಯಿಸಿದರು. ಪಿಎಸೈ ಸಿದ್ದಪ್ಪ ಗುಡಿ ಅವರು ಅಪಘಾತದ ಸ್ಥಳಕ್ಕೆ ಹೋದರು. ಗಾಯಗೊಂಡು ಬಿದ್ದಿದ್ದ ರಾಜೀವ ಚೌದರಿ ಅವರನ್ನು ಆಸ್ಪತ್ರೆಗೆ ಸೇರಿಸಿದರು. ಅದಾದ ನಂತರ ಅವರ ಜೊತೆಯಿದ್ದ ಮತ್ತೊಬ್ಬ ಎಂ ಬಿ ಬಿ ಎಸ್ ವಿದ್ಯಾರ್ಥಿ ಸೃಜನ ರಮೇಶ ಶಟ್ಟರ್ ಅವರು ನೀಡಿದ ಹೇಳಿಕೆಪಡೆದರು. ಅತಿವೇಗವೇ ಅಪಘಾತಕ್ಕೆ ಕಾರಣವಾಗಿದ್ದರಿಂದ ರಾಜೀವ ಚೌದರಿ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದರು. `ನಿಧಾನವಾಗಿ ವಾಹನ ಓಡಿಸಿ’ - [ಸಿಕ್ಕಿಬಿದ್ದ ಕಳ್ಳ!](https://mobiletime.in/2025/12/the-thief-was-caught/): ಶಿರಸಿ ಹಾಗೂ ಸುತ್ತಲಿನ ಜನರಿಗೆ ತಲೆನೋವಾಗಿದ್ದ ಕಳ್ಳನನ್ನು ಪೊಲೀಸರು ಹಿಡಿದಿದ್ದಾರೆ. ಆತನ ಬಳಿಯಿದ್ದ 9.95 ಲಕ್ಷ ರೂ ಮೌಲ್ಯದ ಸಾಮಗ್ರಿಗಳನ್ನು ಜಪ್ತು ಮಾಡಿದ್ದಾರೆ. ಶಿರಸಿ ರಾಮನಬೈಲಿನ ಮಹೇಶ ಪರಸಪ್ಪ ಭೋವಿ ಅವರು ತಮ್ಮ 31ನೇ ವಯಸ್ಸಿನಲ್ಲಿಯೇ ಕಳ್ಳತನದ ಮೂಲಕ ಕುಖ್ಯಾತಿಪಡೆದಿದ್ದಾರೆ. ಪೊಲೀಸರು ಸದ್ಯ ಮಹೇಶ ಭೋವಿ ಅವರನ್ನು ಸೆರೆಹಿಡಿದಿದ್ದಾರೆ. ಡಿಸೆಂಬರ್ 8ರಂದು ಮಾರಿಗುಡಿ 3ನೇ ಕ್ರಾಸ್ ನಲ್ಲಿರುವ ಶಾಂತಲಾ ಕಿಣಿ ಅವರ ಮನೆಯಲ್ಲಿ ಕಳ್ಳತನ ನಡೆದಿತ್ತು. ಅಲ್ಲಿ 1.20 ಲಕ್ಷ ರೂ ಹಣ ಹಾಗೂ 9.25 ಲಕ್ಷ ರೂ ಬೆಲೆಯ ಆಭರಣಗಳು ಕಾಣೆಯಾಗಿದ್ದವು. ಆ ಪ್ರಕರಣ ಬೆನ್ನತ್ತಿದ ಪೊಲೀಸರಿಗೆ ಮಹೇಶ ಭೋವಿ ಸಿಕ್ಕಿದ್ದಾರೆ. ಡಿವೈಎಸ್ಪಿ ಗೀತಾ ಪಾಟೀಲ, ಪಿಐ ಶಶಿಕಾಂತ ವರ್ಮಾ, ಪಿಎಸ್‌ಐ ನಾರಾಯಣ ರಾಠೋಡ, ಸಿಬ್ಬಂದಿ ರಾಮಯ್ಯ ಪೂಜಾರಿ,ಸದ್ದಾಂ ಹುಸೆನ್, ಹನುಮಂತ ಮಕಾಪುರ, ಚನ್ನಬಸಪ್ಪ ಕ್ಯಾರಕಟ್ಟಿ, ಸುನೀಲ್, ಹನುಮಂತ ಕಬಾಡಿ, ರಾಜು ಎಮ್, ಕಾರವಾರ ಟೆಕ್ನಿಕಲ್ ಉದಯ ಗುನಗಾ ಹಾಗು ಬಬನ್ ಕದಂ ಕಾರ್ಯಾಚರಣೆಯಲ್ಲಿದ್ದರು. - [ವಜ್ರಕೋಶ: ಮದ್ದು-ಗುಂಡು ಸಂಗ್ರಹದ ಬಳಿ ಸ್ಪೋಟ!](https://mobiletime.in/2025/12/vajrakoshka-explosion-near-the-drug-bullet-collection/): ಯುದ್ಧ ಸಾಮಗ್ರಿಗಳನ್ನು ಸಂಗ್ರಹಿಸಿಡುವ `ವಜ್ರಕೋಶ’ದಲ್ಲಿ ಸ್ಪೋಟ ಸಂಭವಿಸಿದೆ. ಈ ಬಗ್ಗೆ ನೌಕಾನೆಲೆ ಅಧಿಕೃತ ಮಾಹಿತಿ ನೀಡದಿದ್ದರೂ ಸ್ಪೋಟದ ತೀವೃತೆಗೆ ಅನತಿ ದೂರದಲ್ಲಿನ ಮನೆಗಳಲ್ಲಿ ಬಿರುಕು ಮೂಡಿದೆ. ಅಂಕೋಲಾದ ಅಲಿಗೇರಿ ಬಳಿ ನೌಕಾನೆಲೆಯ ವಜ್ರಕೋಶ ಪ್ರದೇಶದಲ್ಲಿ ಸ್ಪೋಟದ ಬಗ್ಗೆ ಅಲ್ಲಿನವರು ಮಾಹಿತಿ ನೀಡಿದ್ದಾರೆ. ಸ್ಪೋಟದ ನಂತರ ದೊಡ್ಡ ಪ್ರಮಾಣದಲ್ಲಿ ಹೊಗೆ ಆಕಾಶದ ಕಡೆ ಸಂಚರಿಸಿದೆ. ಜೊತೆಗೆ ಮೂರು ಮನೆಗಳಲ್ಲಿ ಬಿರುಕು ಕಾಣಿಸಿದೆ. ಇದರಿಂದ ಜನ ಆತಂಕದಲ್ಲಿದ್ದಾರೆ. 2015ರ ನೌಕಾನೆಲೆಯ ವಜ್ರಕೋಶ ಶುರುವಾಗಿದ್ದು, ಅಲ್ಲಿ ದೇಶದ ರಕ್ಷಣೆಗೆ ಬೇಕಾದ ಮದ್ದುಗುಂಡು ಸಂಗ್ರಹಿಸಿಡಲಾಗುತ್ತದೆ. ಈ ವ್ಯಾಪ್ತಿ ಸಂಪೂರ್ಣ ನಿಷೇಧಿತ ಪ್ರದೇಶವಾಗಿದ್ದು, ಸಾಮಾನ್ಯ ಜನರಿಗೆ ಪ್ರವೇಶವಿಲ್ಲ. ಇಂಥ ಭದ್ರತಾ ವಲಯದಲ್ಲಿ ಸ್ಪೋಟವಾಗಿರುವುದು ಚರ್ಚೆಯ ವಿಷಯವಾಗಿದೆ. ಸ್ಪೋಟದ ಕಾರಣದ ಬಗ್ಗೆ ನೌಕಾನೆಲೆ ಅಧಿಕಾರಿಗಳು ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ. ಒಳಭಾಗದಲ್ಲಿ ಕಾಮಗಾರಿಗಾಗಿ ಸ್ಪೋಟ ನಡೆಸಲಾಗಿದೆಯಾ? ಅಥವಾ ಬೇರೆ ಕಾರಣಕ್ಕೆ ಸ್ಪೋಟವಾಗಿದೆಯಾ? ಎನ್ನುವ ಮಾಹಿತಿಯೂ ಹೊರ ಬಂದಿಲ್ಲ. ಸ್ಪೋಟದ ಶಬ್ದ ಹಾಗೂ ಹೊಗೆ ನೋಡಿದ ಜನ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಕಂದಾಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. - [ಅಡುಗೆ ಸಿಬ್ಬಂದಿ ಹತ್ಯೆ: ಹಲವರ ಹೇಳಿಕೆ - ಹೋರಾಟ!](https://mobiletime.in/2026/01/murder-of-kitchen-staff-many-peoples-statements-fight/): ಯಲ್ಲಾಪುರದ ರಾಮನಗರದ ಸರ್ಕಾರಿ ಶಾಲೆಯಲ್ಲಿ ಅಡುಗೆ ಸಹಾಯಕಿಯಾಗಿದ್ದ ರಂಜಿತಾ ಬನಸೋಡೆ ಅವರ ಹತ್ಯೆಯನ್ನು ಅನೇಕರು ಖಂಡಿಸಿದ್ದಾರೆ. ಶಾಸಕ ಶಿವರಾಮ ಹೆಬ್ಬಾರ್ ಅವರು ಇದೇ ವಿಷಯವಾಗಿ ಪೊಲೀಸ್ ಅಧೀಕ್ಷಕ ದೀಪನ್ ಎಂ ಎನ್ ಅವರ ಜೊತೆ ಸಭೆ ನಡೆಸಿದ್ದಾರೆ. `ಯಲ್ಲಾಪುರ ಪಟ್ಟಣದ ಕಾಳಮ್ಮನಗರದಲ್ಲಿ ರಂಜಿತಾ ಬನಸೋಡೆ ಅವರ ಭೀಕರ ಹತ್ಯೆ ನಡೆದಿರುವುದು ಅತ್ಯಂತ ಖಂಡನೀಯ’ ಎಂದು ಕ್ಷೇತ್ರದ ಶಾಸಕ ಶಿವರಾಮ ಹೆಬ್ಬಾರ್ ಹೇಳಿದ್ದಾರೆ. `ಈ ವಿದ್ಯಮಾನ ನಾಗರಿಕ ಸಮಾಜ ತಲೆತಗ್ಗಿಸುವಂತಹ ಅಮಾನವೀಯ ಕೃತ್ಯವಾಗಿದೆ’ ಎಂದವರು ಆಕ್ರೋಶವ್ಯಕ್ತಪಡಿಸಿದ್ದಾರೆ. `ಆರೋಪಿಯನ್ನು ತಕ್ಷಣ ಬಂಧಿಸಿ ಕಠಿಣ ಕ್ರಮ ಜರುಗಿಸಬೇಕು’ ಎಂದವರು ಸೂಚಿಸಿದ್ದಾರೆ. `ಯಾವುದೇ ರಾಜಿ, ವಿಳಂಬ ಅಥವಾ ಸಡಿಲಿಕೆಸಹಿಸಿಕೊಳ್ಳುವುದಿಲ್ಲ’ ಎಂದು ಅವರು ಎಚ್ಚರಿಸಿದ್ದಾರೆ. `ಯಲ್ಲಾಪುರದ ಸಾರ್ವಜನಿಕರು ಶಾಂತಿ ಮತ್ತು ಸಂಯಮವನ್ನು ಕಾಪಾಡಿಕೊಳ್ಳಬೇಕು. ಪೊಲೀಸ್ ಇಲಾಖೆ ಈಗಾಗಲೇ ಆರೋಪಿಯನ್ನು ಬಂಧಿಸುವ ಕಾರ್ಯದಲ್ಲಿ ಸಂಪೂರ್ಣ ತೊಡಗಿಸಿಕೊಂಡಿದ್ದು, ಯಾರೂ ಭಯಪಡುವ ಅಗತ್ಯವಿಲ್ಲ’ ಎಂದು ಶಿವರಾಮ ಹೆಬ್ಬಾರ್ ಹೇಳಿದ್ದಾರೆ. ಪಟ್ಟಣ ಪಂಚಾಯತ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಜಿಲ್ಲಾ ಸಮಿತಿ ಸದಸ್ಯ ಕೈಸರ್ ಸಯ್ಯದ್ ಅಲಿ ಅವರು ಈ ವಿದ್ಯಮಾನವನ್ನು ತೀವೃವಾಗಿ ಖಂಡಿಸಿದ್ದಾರೆ. `ಕೊಲೆ ಆರೋಪಿಯನ್ನು ಕೂಡಲೇ ಬಂಧಿಸಬೇಕು. ಸಂತ್ರಸ್ತರ ಕುಟುಂಬಕ್ಕೆ ಸರ್ಕಾರ ಗರಿಷ್ಠ ಪರಿಹಾರ ಕೊಡಬೇಕು. ಸಮಾಜದಲ್ಲಿ ಇಂಥ ಕೆಲಸ ಆಗುವುದನ್ನು ತಡೆಯಲು ಕಟ್ಟುನಿಟ್ಟಿನ ನಿಯಮಗಳು ಬರಬೇಕು’ ಎಂದು ಕೈಸರ್ ಸಯ್ಯದ್ ಅಲಿ ಅವರು ಹೇಳಿದ್ದಾರೆ. ಬಿಜೆಪಿ ಮುಖಂಡ ಅನಂತಮೂರ್ತಿ ಹೆಗಡೆ ಅವರು ಯಲ್ಲಾಪುರದ ಮಹಿಳೆಯ ಕೊಲೆಯ ಬಗ್ಗೆ ವಿಷಾಧವ್ಯಕ್ತಪಡಿಸಿದ್ದಾರೆ. `ರಾಜ್ಯ ಸರ್ಕಾರದ ಕುಮ್ಮಕ್ಕಿನಿಂದಲೇ ಮತಾಂಧರು ಈ ರೀತಿ ಮುಂದುವರೆದಿದ್ದಾರೆ. ಪೊಲೀಸರು ಆರೋಪಿಯನ್ನು ತಕ್ಷಣ ಬಂಧಿಸಿ ಗಲ್ಲಿಗೇರಿಸಬೇಕು. ಈ ಸರ್ಕಾರದಲ್ಲಿ ಜನಸಾಮಾನ್ಯರಿಗೆ ರಕ್ಷಣೆಯೇ ಇಲ್ಲ’ ಎಂದು ಅನಂತಮೂರ್ತಿ ಹೆಗಡೆ ಹೇಳಿದ್ದಾರೆ. `ದಲಿತ ಮಹಿಳೆಯನ್ನು ಬರ್ಬರವಾಗಿ ಹತ್ಯೆ ಮಾಡಿರುವ ವಿಷಯ ಕೇಳಿ ಆಘಾತವಾಗಿದೆ. ಇಂಥ ಘಟನೆ ಮರುಕಳಿಸದ ಹಾಗೇ ತಡೆಯುವುದು ಅನಿವಾರ್ಯ. ಪೊಲೀಸರು ಈ ಪ್ರಕರಣ ಗಂಭೀರವಾಗಿ ಪರಿಗಣಿಸಬೇಕು. ಸಂತ್ರಸ್ತ ಕುಟುಂಬಕ್ಕೆ ನ್ಯಾಯ ಒದಗಿಸಬೇಕು’ ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದ್ದಾರೆ. `ಆರೋಪಿ ಬಂಧನ ಆಗುವವರೆಗೂ ಶವ ಸಂಸ್ಕಾರ ನಡೆಯಬಾರದು. ಮಹಿಳೆ ಮೇಲಿನ ದೌರ್ಜನ್ಯವನ್ನು ಎಲ್ಲರೂ ಖಂಡಿಸಬೇಕು’ ಎಂದು ಹಿಂದು ಸಂಘಟನೆ ಪ್ರಮುಖ ಪ್ರಮೋದ ಮುತಾಲಿಕ್ ಹೇಳಿದ್ದಾರೆ. - [ಕ್ಲಾಸ್‌ಮೇಟ್ ಜೊತೆ ಮಾತು ಮುರಿದಿದ್ದೇ ಕೊಲೆಗೆ ಕಾರಣ!](https://mobiletime.in/2026/01/a-quarrel-with-a-classmate-was-the-reason-for-the-murder/): ರಫೀಕ್ ಹಾಗೂ ರಂಜಿತಾ ನಿತ್ಯವೂ ಫೋನಿನಲ್ಲಿ ಮಾತನಾಡುತ್ತಿದ್ದು, ರಫೀಕ್ ಜೊತೆ ಮಾತು ಬಿಟ್ಟಿರುವುದೇ ಕೊಲೆಗೆ ಕಾರಣ ಎಂಬ ಸಂಗತಿ ಹೊರಬಿದ್ದಿದೆ. ಯಲ್ಲಾಪುರದ ಆಶ್ರಯ ಕಾಲೋನಿ ಬಳಿ ವಾಸವಾಗಿರುವ ರಂಜಿತಾ ಬನಸೋಡೆ ಅವರು 12 ವರ್ಷದ ಹಿಂದೆ ಸೊಲ್ಲಾಪುರದ ಸಚೀನ್ ಕಾಟೇರ್ ಅವರನ್ನು ಮದುವೆ ಆಗಿದ್ದರು. ಅವರ ದಾಂಪತ್ಯಕ್ಕೆ ಮಗು ಹುಟ್ಟಿದ್ದು, ಆ ಮುಗುವಿಗೆ ಐದು ವರ್ಷವಾದಾಗ ರಂಜಿತಾ ಅವರು ಸಚೀನ್ ಅವರಿಂದ ದೂರವಾಗಿದ್ದರು. ಅದಾದ ನಂತರ ವಿವಾಹ ವಿಚ್ಚೇದನವನ್ನುಪಡೆದಿದ್ದರು. ಈ ನಡುವೆ ರಂಜಿತಾ ಅವರು ರಾಮಾಪುರ ಶಾಲೆಯ ಬಿಸಿಯೂಟ ಸಿಬ್ಬಂದಿ ಆಗಿ ನೇಮಕವಾದರು. ಅಡುಗೆ ಸಹಾಯಕಿ ಆಗಿ ಅವರು ಕೆಲಸ ಮಾಡಿಕೊಂಡಿದ್ದರು. ಆ ಅವಧಿಯಲ್ಲಿಯೇ ಕಾಳಮ್ಮ ನಗರದ ಬಾಲ್ಯದ ಗೆಳೆಯ ರಫೀಕ್ ಇಮಾಮಸಾಬ್ ಯಳ್ಳೂರು ಅವರು ರಂಜಿತಾ ಬನಸೋಡೆ ಅವರ ಸಂಪರ್ಕಕ್ಕೆ ಬಂದರು. ರಫೀಕ್ ಅವರು ರಂಜಿತಾ ಅವರ ಕ್ಲಾಸ್‌ಮೇಟ್ ಆಗಿದ್ದು, ರಂಜಿತಾ ಅವರ ವಿವಾಹ ವಿಚ್ಚೇದನವನ್ನು ರಫೀಕ್ ಅರಿತಿದ್ದರು. ರಂಜಿತಾ ಅವರು ಪ್ರತಿ ದಿನ ಬೆಳಗ್ಗೆ 9 ಗಂಟೆಗೆ ಶಾಲೆಯ ಅಡುಗೆ ಕೆಲಸಕ್ಕೆ ಹೋಗುವುದು ರಫೀಕ್ ಅವರಿಗೆ ಗೊತ್ತಿತ್ತು. ಮಧ್ಯಾಹ್ನ ಮನೆಗೆ ಬರುವ ಸಮಯ ಸಹ ರಫೀಕ್ ಅವರಿಗೆ ತಿಳಿದಿತ್ತು. ರಂಚಿತಾ ಅವರ ಬಗ್ಗೆ ಎಲ್ಲಾ ಮಾಹಿತಿಯನ್ನು ಸಂಗ್ರಹಿಸಿದ್ದ ರಫೀಕ್ ಪ್ರೀತಿ ಮಾಡುವಂತೆ ದುಂಬಾಲು ಬಿದ್ದಿದ್ದರು. ರಂಜಿತಾ ಅವರು ಸಹ ರಫೀಕ್ ಅವರ ಪ್ರೀತಿಗೆ ಬಿದ್ದಿದ್ದು, ರಂಜಿತಾ ಅವರ ಮನೆಗೆ ಸಹ ರಫೀಕ್ ಆಗಾಗ ಭೇಟಿ ನೀಡುತ್ತಿದ್ದರು. ಆದರೆ, ಮದುವೆ ವಿಷಯದಲ್ಲಿ ಈಗಾಗಲೇ ಕೆಟ್ಟ ಅನುಭವಹೊಂದಿದ್ದ ರಂಜಿತಾ ಮತ್ತೊಂದು ಮದುವೆಗೆ ಆಸಕ್ತಿವಹಿಸಿರಲಿಲ್ಲ. ಹೀಗಾಗಿ ರಂಜಿತಾ ಅವರಿಗೆ ರಫೀಕ್ ಅವರನ್ನು ಮದುವೆ ಆಗಲು ಇಷ್ಟವಿರಲಿಲ್ಲ. `ಮದುವೆ ಆಗುವುದು ಬೇಡ’ ಎಂದರೂ ರಫೀಕ್ ಸುಮ್ಮನೆ ಇರುತ್ತಿರಲಿಲ್ಲ. ಪದೇ ಪದೇ ರಂಜಿತಾಗೆ ಫೋನ್ ಮಾಡುತ್ತಿದ್ದ ರಫೀಕ್ `ಮದುವೆ ಆಗೋಣ.. ಮೀಟ್ ಆಗೋಣ’ ಎನ್ನುತ್ತಿದ್ದರು. ದೀಪಾವಳಿ ಹಬ್ಬದ ಅವಧಿಯಲ್ಲಿ ಈ ವಿಷಯವನ್ನು ರಂಜಿತಾ ಅವರು ತಮ್ಮ ಸಹೋದರಿ ಅಕ್ಷತಾ ಅವರ ಬಳಿ ಹೇಳಿದ್ದು, ಅಕ್ಷತಾ ಅವರು ಸಹ ರಫೀಕ್ ಅವರನ್ನು ಕರೆದು ಮಾತನಾಡಿದ್ದರು. `ಅಕ್ಕನಿಗೆ ಹಿಂಸೆ ಕೊಡಬೇಡ’ ಎಂದು ಅಕ್ಷತಾ ಬೈದು ಕಳುಹಿಸಿದ್ದರು. `ರಫೀಕ್ ಜೊತೆ ಮಾತನಾಡಬೇಡ’ ಎಂದು ಅಕ್ಷತಾ ಸಹ ಅಕ್ಕನಿಗೆ ಬುದ್ದಿ ಹೇಳಿದ್ದರು. ಅದಾದ ನಂತರ ರಫೀಕ್ ಮನೆ ಕಡೆ ಬರುವುದನ್ನು ಬಿಟ್ಟಿದ್ದರು. ಏಕಾಏಕಿ ರಂಜಿತಾ ಮಾತು ಬಿಟ್ಟ ಕಾರಣ ರಫೀಕ್ ಸಿಟ್ಟಾಗಿದ್ದರು. ಶನಿವಾರ ಮಧ್ಯಾಹ್ನ ರಂಜಿತಾ ಶಾಲೆಯಿಂದ ಮನೆಗೆ ಬರುವಾಗ ರಫೀಕ್ ಅಡ್ಡಗಟ್ಟಿದರು. ಅಲ್ಲಿ ವಾಗ್ವಾದ ನಡೆದಿದ್ದು, ರಫೀಕ್ ಮೊನಚಾದ ಚಾಕುವಿನಿಂದ ರಂಜಿತಾರ ಕತ್ತಿಗೆ ಚುಚ್ಚಿದರು. ಅದೇ ನೋವಿನಲ್ಲಿ ರಂಜಿತಾ ಕೊನೆಯುಸಿರೆಳೆದರು. ಈ ಎಲ್ಲಾ ವಿಷಯವನ್ನು ರಂಜಿತಾರ ಸಹೋದರಿ ರಕ್ಷತಾ ಅವರು ಪೊಲೀಸರಿಗೆ ವಿವರಿಸಿದ್ದು, ಪೊಲೀಸರು ತನಿಖೆ ಶುರು ಮಾಡಿದ್ದಾರೆ. - [ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!](https://mobiletime.in/2026/01/no-luck-no-supplies-available-yellapur-bandh-on-sunday/): ಮದುವೆಗೆ ಒಪ್ಪದ ರಂಜಿತಾ ಅವರನ್ನು ರಫೀಕ್ ಅವರು ಕೊಲೆ ಮಾಡಿರುವುದನ್ನು ಖಂಡಿಸಿ ಭಾನುವಾರ ಯಲ್ಲಾಪುರ ಬಂದ್’ಗೆ ಕರೆ ನೀಡಲಾಗಿದೆ. ಸ್ವಯಂ ಪ್ರೇರಿತ ಬಂದ್ ಕರೆಗೆ ಹಿಂದು ಸಂಘಟನೆಯವರು ಮನವಿ ಮಾಡಿದ್ದು, ಭಾನುವಾರದ ಸಂತೆಯೂ ದಿಢೀರ್ ಆಗಿ ರದ್ಧಾಗುವ ಸಾಧ್ಯತೆಗಳಿವೆ. ಶನಿವಾರ ಮಧ್ಯಾಹ್ನ ರಂಜೀತಾ ಅವರ ಕುತ್ತಿಗೆಗೆ ರಫೀಕ್ ಚಾಕು ಇರಿದಿದ್ದಾರೆ. ತಕ್ಷಣ ಸರ್ಕಾರಿ ಆಸ್ಪತ್ರೆಗೆ ರಂಜಿತಾ ಅವರನ್ನು ದಾಖಲಿಸಲಾಗಿದ್ದು, ತುರ್ತು ಚಿಕಿತ್ಸೆ ನೀಡಿ ಹುಬ್ಬಳ್ಳಿಗೆ ಕಳುಹಿಸಿದರೂ ರಂಜಿತಾ ಅವರು ಬದುಕಲಿಲ್ಲ. ರಂಚಿತಾ ಅವರ ಸಾವಿನ ಸುದ್ದಿ ಕೇಳಿ ನೂರಾರು ಜನ ಯಲ್ಲಾಪುರ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿದ್ದಾರೆ. `ಕೊಲೆಗಾರರನ್ನು ಕೂಡಲೇ ಬಂಧಿಸಬೇಕು’ ಎಂದು ಅನೇಕರು ಆಗ್ರಹಿಸಿದ್ದಾರೆ. `ಹಿಂದೂಗಳ ಮೇಲೆ ನಿರಂತರ ದಾಳಿ ನಡೆಯುತ್ತಿದೆ. ಆದರೆ, ಶಿಕ್ಷೆ ಆಗಿದ್ದು ಮಾತ್ರ ವಿರಳ. ಯಲ್ಲಾಪುರದ ರಂಜಿತಾ ಪ್ರಕರಣವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು’ ಎಂದು ಯಲ್ಲಾಪುರ ಪೊಲೀಸ್ ಠಾಣೆ ಎದುರು ಜನ ಆಕ್ರೋಶದಿಂದ ಮಾತನಾಡಿದರು. `ಕೊಲೆ ನಡೆದು ಐದು ತಾಸು ನಡೆದರೂ ಆರೋಪಿ ಬಂಧನ ನಡೆದಿಲ್ಲ. ಆರೋಪಿ ಯಲ್ಲಾಪುರದಲ್ಲಿಯೇ ಅಡಿಗಿದ್ದರೂ ಪತ್ತೆ ಕಾರ್ಯ ನಡೆದಿಲ್ಲ’ ಎಂದು ಅಸಮಧಾನವ್ಯಕ್ತಪಡಿಸಿದರು. `ಆರೋಪಿ ಬಂಧನ ಆಗುವವರೆಗೂ ಪೊಲೀಸ್ ಠಾಣೆ ಬಿಟ್ಟು ಹೊರಡುವುದಿಲ್ಲ’ ಎಂದು ಜನ ಪಟ್ಟು ಹಿಡಿದರು. `ಪದೇ ಪದೇ ಹಿಂದುಗಳ ಮೇಲೆ ದಬ್ಬಾಳಿಕೆ ನಡೆಯುತ್ತಿದೆ. ಆಡಳಿತ ವ್ಯವಸ್ಥೆ ಕುಸಿದಿದೆ’ ಎಂದು ಬಿಜೆಪಿ ಮಂಡಳ ಅಧ್ಯಕ್ಷ ಪ್ರಸಾದ ಹೆಗಡೆ ದೂರಿದರು. `ಮಾಹಿತಿ ಬಂದ ತಕ್ಷಣ ಬಂದಿದ್ದೇವೆ. ಕೂಡಲೇ ಕಾನೂನು ಕ್ರಮ ಜರುಗಿಸುತ್ತೇವೆ’ ಎಂದು ಪೊಲೀಸ್ ಅಧೀಕ್ಷಕ ದೀಪನ್ ಎಂ ಎನ್ ಪ್ರತಿಭಟನಾಕಾರರಿಗೆ ಭರವಸೆ ನೀಡಿದರು. ಅದಾಗಿಯೂ, ಭಾನುವಾರ ಯಲ್ಲಾಪುರ ಬಂದ್ ಮಾಡಿ ಸರ್ಕಾರವನ್ನು ಒತ್ತಾಯಿಸಲು ಹಿಂದು ಸಂಘಟನೆಯವರು ನಿರ್ಧರಿಸಿದ್ದಾರೆ. ವಿಶ್ವಹಿಂದೂ ಪರಿಷತ್, ದಲಿತ ಸಂಘಟನೆ ಹಾಗೂ ವಿವಿಧ ಸಂಘಟನೆಯವರು ಬಂದ್ ಕರೆ ನೀಡಿದ್ದಾರೆ. ಬೆಳಗ್ಗೆ 9 ಗಂಟೆಗೆ ಪಟ್ಟಣದಲ್ಲಿ ಪ್ರತಿಭಟನೆಗೂ ಉದ್ದೇಶಿಸಲಾಗಿದ್ದು, ಅಹಿತಕರ ಘಟನೆ ನಡೆಯದಂತೆ ಕಟ್ಟೆಚ್ಚರವಹಿಸಲಾಗಿದೆ. - [ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!](https://mobiletime.in/2026/01/ranjitha-did-not-agree-to-the-marriage-rafiq-stabbed-her-with-a-knife/): ಯಲ್ಲಾಪುರದ ಶಾಲೆಯೊಂದರಲ್ಲಿ ಬಿಸಿಯೂಟ ಸಿಬ್ಬಂದಿಯಾಗಿದ್ದ ರಂಜಿತಾ ಅವರ ಕೊಲೆಯಾಗಿದೆ. ಮದುವೆಗೆ ಒಪ್ಪದ ಕಾರಣ ರಫೀಕ್ ಅವರು ರಂಚಿತಾ ಅವರ ಕತ್ತು ಕೊಯ್ದು ಕೊಲೆ ಮಾಡಿದ್ದಾರೆ. ಯಲ್ಲಾಪುರದ ಕಾಳಮ್ಮ ನಗರದಲ್ಲಿ ರಂಜಿತಾ ಮಲ್ಲಪ್ಪ ಬನ್ಸೋಡೆ ಅವರು ವಾಸವಾಗಿದ್ದರು. ರಾಮಾಪುರದ ಸರ್ಕಾರಿ ಶಾಲೆಯಲ್ಲಿ ಅವರು ಅಡುಗೆ ಸಹಾಯಕಿ ಆಗಿದ್ದರು. ಯಲ್ಲಾಪುರದ ಕಾಳಮ್ಮ ನಗರದಲ್ಲಿ ರಂಜಿತಾ ಅವರು ತಂದೆ, ತಾಯಿ ಹಾಗೂ ಅಣ್ಣನ ಜೊತೆ ವಾಸವಾಗಿದ್ದರು. ರಂಜಿತಾ ಅವರಿಗೆ ಮದುವೆ ಆಗಿದ್ದು,5 ವರ್ಷದ ಹಿಂದೆಯೇ ಅವರು ಪತಿಯಿಂದ ದೂರವಾಗಿದ್ದರು. ರಂಜಿತಾ ಅವರಿಗೆ ಮಗನಿದ್ದು, ರಫಿಕ್ ಯಳ್ಳೂರು ಅವರ ಸ್ನೇಹ ಬೆಳೆಸಿದ್ದರು. ಆ ಸ್ನೇಹ ಪ್ರೀತಿಯಾಗಿ ತಿರುವುಪಡೆದಿತ್ತು. ರಂಜಿತಾ ಅವರು ಸಹ ರಫಿಕ್ ಅವರ ಪ್ರೀತಿಗೆ ತಲೆಭಾಗಿದ್ದರು. ರಂಜಿತ್ ಹಾಗೂ ರಫಿಕ್ ಅವರ ಕುಟುಂಬದ ನಡುವೆಯೂ ಅನ್ಯೋನ್ಯತೆ ಇತ್ತು. ಹೀಗಾಗಿ ರಫಿಕ್ ಸಹ ಆಗಾಗ ರಂಜಿತಾ ಅವರ ಮನೆಗೆ ಬರುತ್ತಿದ್ದರು. ಅಲ್ಲಿಯೇ ಊಟ ಮಾಡಿ ಮರಳುತ್ತಿದ್ದರು. ಈ ನಡುವೆ ರಫಿಕ್ ಪದೇ ಪದೇ ರಂಜಿತಾ ಅವರಿಗೆ ಮದುವೆ ಆಗುವಂತೆ ಒತ್ತಾಯಿಸುತ್ತಿದ್ದರು. `ಈಗಾಗಲೇ ಮದುವೆ ಆಗಿ ಸಾಕಷ್ಟು ಅನುಭವಿಸಿದ್ದೇನೆ. ನಾವು ಹೀಗೇ ಇರೋಣ’ ಎಂದು ರಂಜಿತಾ ಹೇಳಿದ್ದರು. ಆದರೆ, ಇದಕ್ಕೆ ಒಪ್ಪದ ರಫಿಕ್ ಮದುವೆಗಾಗಿ ಕಾಡಿಸುತ್ತಿದ್ದರು. ಶನಿವಾರ ಮಧ್ಯಾಹ್ನ ರಂಜಿತಾ ಅವರು ಶಾಲೆಯಿಂದ ಮರಳುವಾಗ ರಫೀಕ್ ಅವರನ್ನು ಅಡ್ಡಗಟ್ಟಿದರು. `ಮದುವೆ ಆಗುವೆಯಾ?’ ಎಂದು ಮತ್ತೆ ಪ್ರಶ್ನಿಸಿದರು. `ಮದುವೆ ಬೇಡ’ ಎಂದು ರಂಜಿತಾ ಹೇಳಿದ್ದರಿಂದ ರಫೀಕ್ ಸಿಟ್ಟಾದರು. `ನಮ್ಮ ಸಂಭAದ ಹೀಗೆ ಇರಲಿ. ಮದುವೆ ಮಾತ್ರ ಬೇಡ’ ಎಂದು ರಂಜಿತಾ ಹೇಳಿದ್ದರಿಂದ ಕೋಪಗೊಂಡ ರಫೀಕ್ ಅಲ್ಲಿಯೇ ಚಾಕು ಚುಚ್ಚಿದರು. ರಂಜಿತಾ ಅವರ ಕುತ್ತಿಗೆಗೆ ಚಾಕು ಆಳವಾಗಿ ಇಳಿದಿದ್ದು, ಅವರನ್ನು ಯಲ್ಲಾಪುರ ಸರ್ಕಾರಿ ಆಸ್ಪತ್ರೆಗೆ ತರಲಾಯಿತು. ಡಾ ಸುಶಿಷ್ಟ ಗಣಾಚಾರಿ ಅವರು ಗಂಟಲಿಗೆ ಹೊಲಿಗೆ ಹಾಕಿ ಹುಬ್ಬಳ್ಳಿ ಆಸ್ಪತ್ರೆಗೆ ಕಳುಹಿಸಿದರು. ಆದರೂ, ಚಿಕಿತ್ಸೆಗೆ ಸ್ಪಂದಿಸದೇ ರಂಜಿತಾ ಸಾವನಪ್ಪಿದರು. ರಫೀಕ್ ತಲೆಮರೆಸಿಕೊಂಡಿದ್ದು, ಪೊಲೀಸರು ಹುಡುಕುತ್ತಿದ್ದಾರೆ. - [ನಾಲ್ಕು ವರ್ಷ ಕಾಡಿಸಿದವ ಕೊನೆಗೂ ಸಿಕ್ಕಿಬಿದ್ದ!](https://mobiletime.in/2026/01/the-person-who-had-been-stalking-for-four-years-was-finally-caught/): ನಾಲ್ಕು ವರ್ಷದ ಹಿಂದೆ ಹಳಿಯಾಳದಲ್ಲಿ ಕಳ್ಳತನ ಮಾಡಿ ತಪ್ಪಿಸಿಕೊಂಡಿದ್ದ ಕಳ್ಳನನ್ನು ಪೊಲೀಸರು ಹಿಡಿದಿದ್ದಾರೆ. ಜೈಲು ಸೇರಿದರೂ ಜಾಮೀನುಪಡೆದು ಪರಾರಿಯಾಗಿದ್ದ ಧಾರವಾಡದ ಮಹಮದ್ ಇಸಾಕ್ ಅಬ್ದುಲ್ ರೇಹಮಾನ್ ಸೌಧಾಗರ ಇದೀಗ ಮತ್ತೆ ಜೈಲು ಪಾಲಾಗಿದ್ದಾರೆ. ಧಾರವಾಡ ಜಿಲ್ಲೆಯ ಅಳ್ನಾವರದ ಮಹಮದ್ ಇಸಾಕ್ ಅಬ್ದುಲ್ ರೇಹಮಾನ್ ಸೌಧಾಗರ ಮನೆಯೊಂದಕ್ಕೆ ನುಗ್ಗಿ ಚಿನ್ನಾಭರಣ ದೋಚಿದ್ದರು. ಪೊಲೀಸರು ಆ ವೇಳೆಯಲ್ಲಿಯೇ ಕಳ್ಳನನ್ನು ಬಂಧಿಸಿದ್ದು, ನ್ಯಾಯಾಲಯದಿಂದ ಜಾಮೀನುಪಡೆದು ಪರಾರಿಯಾಗಿದ್ದರು. ಸಾಕಷ್ಟು ಪ್ರಯತ್ನ ನಡೆಸಿದರೂ ಪೊಲೀಸರಿಗೆ ಮಹಮದ್ ಸಿಕ್ಕಿಬಿದ್ದಿರಲಿಲ್ಲ. ಹೀಗಾಗಿ ಹಳಿಯಾಳ ಪೊಲೀಸರು ವಿಶೇಷ ತಂಡ ರಚಿಸಿ ಹುಡುಕಾಟ ನಡೆಸಿದರು. ಅಲ್ಲಿ ಇಲ್ಲಿ ಅಲೆದಾಡುತ್ತಿದ್ದ ಕಳ್ಳ ಹುಟ್ಟೂರಾದ ಆಳ್ನಾವರಕ್ಕೆ ಬರುವ ಮಾಹಿತಿ ಆಧರಿಸಿ ಪೊಲೀಸರು ಕಾರ್ಯಾಚರಣೆ ನಡೆಸಿದರು. ಸಿಕ್ಕಿಬಿದ್ದ ಕಳ್ಳನನ್ನು ನ್ಯಾಯಾಲಯಕ್ಕೆ ಒಪ್ಪಿಸಿದರು. ಸಿಪಿಐ ಜಯಪಾಲ್ ಪಾಟೀಲ್ ನೇತೃತ್ವದಲ್ಲಿ ಪಿಎಸ್‌ಐ ಬಸವರಾಜ ಮಬನೂರ ಹಾಗೂ ಕೃಷ್ಣಾ ಅರಕೇರಿ ಜೊತೆ ಸಿಬ್ಬಂದಿ ಶ್ರೀಶೈಲ್ ಜಿ ಎಂ, ಲಕ್ಷö್ಮಣ ಪೂಜಾರಿ, ಅರವಿಂದ ಭಜಂತ್ರಿ, ವಿನೋದ್ ಜಿ ಬಿ ಮತ್ತು ರಾಘವೇಂದ್ರ ಕೆರವಾಡ ಕಾರ್ಯಾಚರಣೆಯಲ್ಲಿದ್ದರು. - [ತಾಯಿ ಸಾವಿನ ನೋವು: ಮಗನೂ ಆತ್ಮಹತ್ಯೆಗೆ ಶರಣು!](https://mobiletime.in/2026/01/pain-of-mothers-death-son-also-commits-suicide/): ಶಿರಸಿಯಲ್ಲಿ ಸೈಬರ್ ಕಫೆ ನಡೆಸುತ್ತಿದ್ದ ಮೇಘನ ನಾಯ್ಕ ಅವರು ಆತ್ಮಹತ್ಯೆಗೆ ಶರಣಾಗಿದ್ದಾರೆ. ತಾಯಿ ಸಾವಿನ ನಂತರ ಮಂಕಾಗಿದ್ದ ಅವರು ತಾಯಿಯ ಅಗಲುವಿಕೆ ಸಹಿಸಲಾಗದೇ ಪ್ರಾಣ ಬಿಟ್ಟಿದ್ದಾರೆ. ಶಿರಸಿಯ ಗಾಂಧೀನಗರದ ಭಾಸ್ಕರ ಧಾಮೋಧರ ನಾಯ್ಕ ಅವರಿಗೆ ಮೂವರು ಮಕ್ಕಳು. ಆ ಪೈಕಿ ಅರ್ಚನಾ ನಾಯ್ಕ ಅವರು ಶಿರಸಿಯಲ್ಲಿ ಬಾಡಿಗೆ ಮನೆ ಮಾಡಿಕೊಂಡು ವಾಸವಾಗಿದ್ದಾರೆ. ಮೇಘನ ನಾಯ್ಕ ಅವರು ಸೈಬರ್ ಸೆಂಟರ್ ನಡೆಸಿ ಬದುಕು ಕಟ್ಟಿಕೊಂಡಿದ್ದು, ಮೇಘನ ನಾಯ್ಕ ಅವರು ಮೂಲ ಮನೆಯಲ್ಲಿ ಒಂಟಿಯಾಗಿ ವಾಸವಾಗಿದ್ದರು. ಮೇಘನ ನಾಯ್ಕ ಅವರು ಮನೆಯಲ್ಲಿಯೇ ಸೈಬರ್ ಸೆಂಟರ್ ನಡೆಸಿ ಬದುಕು ಕಟ್ಟಿಕೊಂಡಿದ್ದರು. 2025ರ ನವೆಂಬರ್ 24ರಂದು ಭಾಸ್ಕರ ನಾಯ್ಕ ಅವರ ಪತ್ನಿ ಸಾವನಪ್ಪಿದರು. ತಾಯಿ ಸಾವಿನ ನಂತರ ಮೇಘನ ನಾಯ್ಕ ಅವರು ತೀರಾ ಮಂಕಾದರು. ಸದಾ ತಾಯಿ ಬಗ್ಗೆ ಚಿಂತೆ ಮಾಡುತ್ತಿದ್ದ ಮೇಘನ ನಾಯ್ಕ ಅವರು ಮಾನಸಿಕವಾಗಿ ಕುಗ್ಗಿದರು. ಮೇಘನ ನಾಯ್ಕ ಅವರು ಮೊದಲಿನಂತೆ ಮಾತನಾಡುತ್ತಿರಲಿಲ್ಲ. ಯಾರ ಬಳಿಯೂ ಹೆಚ್ಚು ಹೊತ್ತು ಸಮಯ ಕಳೆಯುತ್ತಿರಲಿಲ್ಲ. ಒಂಟಿತನವನ್ನು ಹೆಚ್ಚಾಗಿ ಇಷ್ಟಪಡುತ್ತಿದ್ದ ಮೇಘನ ನಾಯ್ಕ ಅವರನ್ನು ಕುಟುಂಬದವರು ಹಾಗೇ ಇರಲು ಬಿಟ್ಟಿದ್ದರು. ಡಿಸೆಂಬರ್ 31ರ ಬೆಳಗ್ಗೆ ಮೇಘನ ನಾಯ್ಕ ಅವರ ಅಕ್ಕ ಅರ್ಚನಾ ನಾಯ್ಕ ಅವರು ನೀರು ತುಂಬಲು ಮೂಲ ಮನೆಗೆ ಬಂದಿದ್ದು, ಆಗ ಮೇಘನ ನಾಯ್ಕ ಅವರ ಬಳಿ ಕೊನೆಯದಾಗಿ ಮಾತನಾಡಿದ್ದರು. ಜನವರಿ 1ರಂದು ಬೆಳಗ್ಗೆ ಮತ್ತೆ ನೀರು ತುಂಬಲು ಮನೆಗೆ ಬಂದಾಗ ಮೇಘನ ನಾಯ್ಕ ಅಲ್ಲಿದ್ದ ಫ್ಯಾನಿಗೆ ನೇತಾಡುತ್ತಿದ್ದರು. ಮೇಘನ ನಾಯ್ಕ ಕೊನೆಯುಸಿರೆಳೆದ ಬಗ್ಗೆ ಅರ್ಚನಾ ನಾಯ್ಕ ಅವರು ಕೂಡಲೇ ತಂದೆ ಭಾಸ್ಕರ ನಾಯ್ಕ ಅವರಿಗೆ ಫೋನ್ ಮಾಡಿದರು. ಮಗಳ ಮನೆಯಲ್ಲಿದ್ದ ಭಾಸ್ಕರ ನಾಯ್ಕ ಅವರು ಅಲ್ಲಿಂದ ಓಡೋಡಿ ಬಂದಿದ್ದು, ಮಗನ ಶವ ನೋಡಿ ಬಿಕ್ಕಿ ಬಿಕ್ಕಿ ಅತ್ತರು. ತಾಯಿ ಸಾವನಪ್ಪಿದ ಆಘಾತದಲ್ಲಿಯೇ ಮೇಘನ ನಾಯ್ಕ ಅವರು ಕೊನೆಯುಸಿರೆಳೆದದನ್ನು ಭಾಸ್ಕರ ನಾಯ್ಕ ಅವರು ಖಚಿತಪಡಿಸಿದರು. - [ಬಿಜೆಪಿ ಬೆಂಬಲಿಸಿದ ವಕೀಲ](https://mobiletime.in/2026/01/advocate-supported-by-bjp/): ತಮ್ಮ ವಿಭಿನ್ನ ಶೈಲಿಯ ಮೂಲಕ ಗಮನಸೆಳೆಯುವ ಯಲ್ಲಾಪುರದ ನ್ಯಾಯವಾದಿ ಗಣೇಶ ಪಾಠಣಕರ್ ಅವರು ಬಿಜೆಪಿ ಸೇರಿದ್ದಾರೆ. ಶುಕ್ರವಾರ ಬಿಜೆಪಿಯ ಶಾಲು ಹೊದ್ದು ಅವರು ಮಾಧ್ಯಮದವರ ಮುಂದೆ ಕಾಣಿಸಿಕೊಂಡಿದ್ದಾರೆ. ಇದೇ ವೇಳೆ ಕಾಂಗ್ರೆಸ್ ವಿರುದ್ಧ ಬಿಜೆಪಿ ಮಂಡಳ ಅಧ್ಯಕ್ಷ ಪ್ರಸಾದ ಹೆಗಡೆ ಕಿಡಿಕಾರಿದ್ದಾರೆ. `ಪಟ್ಟಣ ಪಂಚಾಯಿತಿಯಲ್ಲಿ ಕಾಂಗ್ರೆಸ್ ದುರಾಡಳಿತದ ಬಗ್ಗೆ ಪಟ್ಟಣದ ಮನೆ ಮನೆಗೆ ತೆರಳಿ ಜನರಿಗೆ ಮನವರಿಕೆ ಮಾಡಿಕೊಡಲಾಗುತ್ತದೆ. ಈ ಬಗ್ಗೆ ಅಭಿಯಾನ ನಡೆಸಲು ನಿರ್ಧರಿಸಲಾಗಿದೆ’ ಎಂದು ಪ್ರಸಾದ ಹೆಗಡೆ ಘೋಷಿಸಿದ್ದಾರೆ. ಅಭಿಯಾನದ ಕರಪತ್ರ ಬಿಡುಗಡೆ ಮಾಡಿದ ಅವರು `ಕಾಂಗ್ರೆಸ್ ಆಡಳಿತದಲ್ಲಿ ಪಟ್ಟಣದ ವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಈ ಬಗ್ಗೆ ಮನೆ ಮನೆಗೆ ಹೋಗಿ ಜನರಿಗೆ ತಿಳಿಸುವ ಜೊತೆಗೆ ಮೋದಿ ಸರ್ಕಾರದ ಸಾಧನೆಗಳ ಬಗ್ಗೆಯೂ ಮಾಹಿತಿ ನೀಡಲಾಗುತ್ತದೆ’ ಎಂದಿದ್ದಾರೆ. `ಕೆರೆಗಳ ಅಭಿವೃದ್ಧಿಗೆ ಪ ಪಂ ಆಡಳಿತ ಮುಂದಾಗಿಲ್ಲ. ಹಿಂದು ರುದ್ರಭೂಮಿಯನ್ನು ಕಡೆಗಣಿಸಲಾಗಿದೆ. ಹಂದಿ, ಬೀದಿ ನಾಯಿಗಳ ಕಾಟ ಹೆಚ್ಚಿದೆ. ಕುಡಿಯುವ ನೀರಿನ ವ್ಯವಸ್ಥೆ ಸಮರ್ಪಕವಾಗಿಲ್ಲ. ಟ್ರಾಫಿಕ್ ವ್ಯವಸ್ಥೆ ಸರಿಯಾಗಿಲ್ಲ. ಬೀದಿಗಳಲ್ಲಿ ಮೀನು ಮಾರಾಟ ನಡೆಯುತ್ತಿದೆ. ಪ.ಪಂ ಆಡಳಿತದಲ್ಲಿ ಭ್ರಷ್ಟಾಚಾರ ಹೆಚ್ಚಿದೆ. ಜಿ+2 ಮನೆಗಳ ಹಂಚಿಕೆಯಾಗಿಲ್ಲ’ ಎಂದು ಬಿಜೆಪಿಗರು ದೂರಿದ್ದಾರೆ. ಪ ಪಂ ಮಾಜಿ ಉಪಾಧ್ಯಕ್ಷೆ ಶ್ಯಾಮಿಲಿ ಪಾಟಣಕರ್, ಪಕ್ಷದ ಮುಖಂಡ ರಾಮು ನಾಯ್ಕ, ಪಕ್ಷದ ಪದಾಧಿಕಾರಿಗಳಾದ ಶ್ರೀನಿವಾಸ ಗಾಂವ್ಕರ, ರಜತ ಬದ್ದಿ, ರಜನಿ ಚಂದ್ರಶೇಖರ, ತುಳಸಿದಾಸ ನಾಯ್ಕ, ರವಿ ದೇವಡಿಗ, ಬಾಬಣ್ಣ ದೇಸಾಯಿ, ವಿನಾಯಕ ಪತ್ತರ್, ಉಲ್ಲಾಸ ಕೊಂಡೆಮನೆ, ನಯನ ಇಂಗಳೆ, ಆದಿತ್ಯ ಗುಡಿಗಾರ, ಗಜಾನನ ನಾಯ್ಕ ತಳ್ಳಿಕೇರಿ ಸಹ ಕಾಂಗ್ರೆಸ್ ಆಡಳಿತದ ಬಗ್ಗೆ ಬೇಸರಿಸಿದ್ದಾರೆ. - [ಕಾರಣವಿಲ್ಲದೇ ಕಲ್ಲು ತೂರಾಟ!](https://mobiletime.in/2026/01/stone-throwing-for-no-reason/): ಯಲ್ಲಾಪುರದ ದಿನಕರ ಶೆಟ್ಟಿ ಅವರಿಗೆ ನಾಗರಾಜ ನಾಯ್ಕ ಹಾಗೂ ಈಶ್ವರ ನಾಯ್ಕ ಅವರು ಸೇರಿ ಕಲ್ಲಿನಿಂದ ಹೊಡೆದಿದ್ದಾರೆ. ದಿನಕರ ಶೆಟ್ಟಿ ಅವರ ತಲೆಗೆ ಕಲ್ಲು ತಾಗಿದ್ದು, ಚಿಕಿತ್ಸೆಗಾಗಿ ಅವರು ಆಸ್ಪತ್ರೆ ಸೇರಿದ್ದಾರೆ. ಯಲ್ಲಾಪುರದ ಶಿರನಾಳ ಬಳಿಯ ಅಂಬೇಬೇಣದ ದಿನಕರ ಕೃಷ್ಣ ಶೆಟ್ಟಿ (60) ಅವರು ವಾಸವಾಗಿದ್ದಾರೆ. ಮುಳಕನಜಡ್ಡಿಯ ನಾಗರಾಜ ಈಶ್ವರ ನಾಯ್ಕ (23) ಹಾಗೂ ಪ್ರಶಾಂತ ಈಶ್ವರ ನಾಯ್ಕ (26) ಅವರೊಂದಿಗೆ ದಿನಕರ ಶೆಟ್ಟಿ ಅವರು ವೈಮನಸ್ಸು ಹೊಂದಿದ್ದಾರೆ. ಡಿಸೆಂಬರ್ 31ರ ರಾತ್ರಿ ದಿನಕರ ಶೆಟ್ಟಿ ಅವರು ನಾಗರಾಜ ನಾಯ್ಕ ಅವರಿಗೆ ಒಂಟಿಯಾಗಿ ಸಿಕ್ಕಿದ್ದು, ಈ ವೇಳೆ ಪ್ರಶಾಂತ ನಾಯ್ಕರ ಜೊತೆಗೂಡಿ ಅವರು ದಾಳಿ ನಡೆಸಿದ್ದಾರೆ. ನಾಗರಾಜ ನಾಯ್ಕ ಅವರು ಮೊದಲು ದಿನಕರ ಶೆಟ್ಟಿ ಅವರಿಗೆ ಕೆಟ್ಟದಾಗಿ ಬೈದಿದ್ದು, ಇದಕ್ಕೆ ದಿನಕರ ಶೆಟ್ಟಿ ಅವರು ತಿರುಗೇಟು ನೀಡಿದ್ದಾರೆ. ಇದರಿಂದ ಸಿಟ್ಟಾದ ನಾಗರಾಜ ನಾಯ್ಕ ಅವರು ಕಲ್ಲು ಬೀಸಿದ್ದಾರೆ. ಪ್ರಶಾಂತ ನಾಯ್ಕ ಅವರು ಸಹ ಹೊಡೆದಾಟಕ್ಕೆ ಕೈ ಜೋಡಿಸಿದ್ದಾರೆ. ಈ ವೇಳೆ ದಿನಕರ ಶೆಟ್ಟಿ ಅವರ ತಲೆಗೆ ಕಲ್ಲು ತಾಗಿದೆ. ಹಣೆಯಿಂದ ರಕ್ತ ಬಂದ ಕಾರಣ ದಿನಕರ ಶೆಟ್ಟಿ ಅವರು ಆಸ್ಪತ್ರೆ ಕಡೆ ಓಡಿದ್ದಾರೆ. ಯಲ್ಲಾಪುರ ಆಸ್ಪತ್ರೆಯಲ್ಲಿ ಚಿಕಿತ್ಸೆಪಡೆದ ನಂತರ ಪಿಐ ರಾಜಶೇಖರ ವಂದಲಿ ಅವರನ್ನು ಭೇಟಿ ಆಗಿದ್ದಾರೆ. ತಮ್ಮ ಮೇಲಾದ ಆಕ್ರಮಣದ ಬಗ್ಗೆ ವಿವರಿಸಿ, ಪೊಲೀಸ್ ದೂರು ನೀಡಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿದ್ದು, ತನಿಖೆ ಶುರು ಮಾಡಿದ್ದಾರೆ. - [ಆ ಸಿಗರೇಟ್ ಬದಲು E-ಸಿಗರೇಟ್ ಮಾರಾಟ!](https://mobiletime.in/2026/01/sell-e-cigarettes-instead-of-those-cigarettes/): ಭಟ್ಕಳದ ದುಬೈ ಮಾರ್ಕೇಟಿನಲ್ಲಿ ನಿಷೇಧಿತ ಇ-ಸಿಗರೇಟ್ ಮಾರಾಟ ಮಾಡುತ್ತಿರುವುದನ್ನು ಪೊಲೀಸರು ಪತ್ತೆ ಮಾಡಿದ್ದಾರೆ. ಹೂವಿನ ಚೌಕ ಸಮೀಪ ದಾಳಿ ನಡೆಸಿದ ಪೊಲೀಸರು ಇ-ಸಿಗರೇಟ್ ಜೊತೆ ಅದರ ಒಳಗೆ ತುಂಬುವ ನಿಕೋಟಿನ್’ನ್ನು ವಶಕ್ಕೆಪಡೆದಿದ್ದಾರೆ. ಭಟ್ಕಳದ ಕಾರಗದ್ದೆಯ ಸಿದ್ದಿಕ್ ಅಬ್ದುಲ್ ರೆಹಮಾನ್ @ ಮಸ್ತಾನ್ ತಂದೆ ಸಿದ್ದಿಕ್ ಖಾದಿರ ಮೀರಾ (58) ಅವರು ಈ ಪ್ರದೇಶದಲ್ಲಿ ರಾಜಾರೋಷವಾಗಿ ಇ-ಸಿಗರೇಟ್ ಮಾರಾಟ ಮಾಡುತ್ತಿದ್ದರು. ಅದರ ಮಾರಾಟ ಅಪರಾಧ ಎಂದು ಅರಿವಿದ್ದರೂ ಆ ಬಗ್ಗೆ ಸಿದ್ದಿಕ್ ಅವರು ತಲೆಕೆಡಿಸಿಕೊಂಡಿರಲಿಲ್ಲ. ಜನವರಿ 1ರಂದು ರಾತ್ರಿ 10.3ಕ್ಕೆ ಪೊಲೀಸರು ಅವರ ಅಂಗಡಿ ಬಳಿ ತೆರಳಿದ್ದು, ನಿಷೇಧಿತ ವಸ್ತುಗಳನ್ನು ವಶಕ್ಕೆಪಡೆದರು. 76 ಸಾವಿರ ರೂ ಮೌಲ್ಯದ 38 ಎಲೆಕ್ಟ್ರಾನಿಕ್ ಸಿಗರೇಟಿನ ಜೊತೆ 62500 ರೂ ಮೌಲ್ಯದ ನಿಕೋಟಿನ್ ದೃವಗಳು ಅಲ್ಲಿ ಸಿಕ್ಕಿದವು. ಒಟ್ಟು 1,38,500 ರೂಪಾಯಿ ಮೌಲ್ಯದ ವಸ್ತುಗಳನ್ನು ಪೊಲೀಸರು ಜಪ್ತು ಮಾಡಿದರು. ಭಟ್ಕಳ ಪೋಲಿಸ್ ಉಪಾಧೀಕ್ಷಕ ಮಹೇಶ ಎಂ ಕೆ ಅವರಿಗೆ ಬಂದ ಮಾಹಿತಿ ಆಧಾರದಲ್ಲಿ ಈ ಕಾರ್ಯಾಚರಣೆ ನಡೆದಿದ್ದು, ಪಿಐ ದಿವಾಕರ ಪಿ ಎಂ ಅವರ ಜೊತೆ ಪಿಸೈ ನವೀನ ನಾಯ್ಕ ಮತ್ತು ಸಿಬ್ಬಂದಿ ಉದಯ ನಾಯ್ಕ, ದೀಪಕ ನಾಯ್ಕ, ಮಹಾಂತೇಶ ಹಿರೇಮಠ, ಕಾಶಿನಾಥ ಕೊಟಗೊಣಸಿ, ಸುರೇಶ ರೇವಣಸಿದ್ದಪ್ಪ ಮಾಗಿ, ಜಗದೀಶ ನಾಯ್ಕ ಮತ್ತು ಸುರೇಶ ಮರಾಠಿ ಕಾರ್ಯಾಚರಣೆಯಲ್ಲಿದ್ದರು. - [ಸಿಲೆಂಡರ್ ಸೋರಿಕೆ: ಬಾಯ್ಲರ್ ಸ್ಪೋಟ!](https://mobiletime.in/2026/01/cylinder-leak-boiler-explosion/): ಹುಬ್ಬಳ್ಳಿ-ಅಂಕೋಲಾ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಕಾಮಗಾರಿ ವೇಳೆ ಯಲ್ಲಾಪುರದಲ್ಲಿ ಬಾಯ್ಲರ್ ಸ್ಪೋಟವಾಗಿದೆ. ಆರತಿಬೈಲ್ ಘಟ್ಟ ಪ್ರದೇಶದಲ್ಲಿ ಈ ಅವಘಡ ನಡೆದಿದೆ. ಹೆದ್ದಾರಿಯ ಎಲ್ಲಾ ಕಡೆ ಹೊಂಡಗಳಿoದ ಕೂಡಿದ್ದು, ಸದ್ಯ ಅದರ ದುರಸ್ಥಿ ಕೆಲಸ ನಡೆದಿದೆ. ಪ್ಯಾಚ್‌ವರ್ಕ ಕೆಲಸ ಮುಕ್ತಾಯದ ನಂತರ ಹೆದ್ದಾರಿಯ ಉದ್ದಕ್ಕೂ ಬಿಳಿ ಬಣ್ಣದ ಪಟ್ಟಿಗಳನ್ನು ಎಳೆಯಬೇಕಿದೆ. ಈ ಬಣ್ಣ ಬಡಿಯುವ ಕೆಲಸವನ್ನು ಗದಗದ ಅನಂತ ಆರ್ಟ ಎಂಬ ಕಂಪನಿಗೆ ಗುತ್ತಿಗೆ ನೀಡಲಾಗಿದೆ. ಅದರ ಪ್ರಕಾರ, ಅನಂತ ಆರ್ಟ ಕಂಪನಿಯ ಸಿಬ್ಬಂದಿ ಭಾರತ್ ಗ್ಯಾಸ್ ಸಿಲೆಂಡರ್ ಹಾಗೂ ಬಾಯ್ಲರ್ ಬಳಕೆ ಮಾಡಿ ರಸ್ತೆಗೆ ಬಿಳಿ ಬಣ್ಣದ ಪಟ್ಟಿ ಬಡಿಯುತ್ತಿದ್ದಾರೆ. ಈ ವೇಳೆ ಸಣ್ಣ ಪ್ರಮಾಣದಲ್ಲಿ ಗ್ಯಾಸ್ ಸೋರಿಕೆಯಾಗಿದ್ದು ಸಿಲೆಂಡರ್ ಸ್ಪೋಟಿಸಿದೆ. ಅದೇ ವೇಳೆ ಬಾಯ್ಲರ್ ಬಳಿ ಬೆಂಕಿ ತಾಗಿದ್ದು, ಬಿಸಿಯ ತೀವೃತೆಗೆ ಬಾಯ್ಲರ್ ಸ್ಪೋಟವಾಗಿದೆ. ಲಾರಿಯೊಂದರಲ್ಲಿ ಬಾಯ್ಲರ್ ನಿಲ್ಲಿಸಲಾಗಿದ್ದು, ಸ್ಪೋಟದಿಂದ ಬಾಯ್ಲರ್ ಜೊತೆ ಲಾರಿಗೂ ಅಲ್ಲಲ್ಲಿ ಹಾನಿಯಾಗಿದೆ. ಅಲ್ಲಿದ್ದ ಸಿಬ್ಬಂದಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. - [ಕಾಟ ಕೊಡುವುದೇ ಆತನ ಕಾಯಕ: ಕುಡುಕನ ಮೇಲೆ ಕೇಸು!](https://mobiletime.in/2026/01/his-job-is-to-cause-trouble-sue-the-drunkard/): ಮೂರು ಬಿಯರ್ ಖಾಲಿ ಮಾಡಿದಲ್ಲದೇ ಮತ್ತೊಂದು ಬಿಯರ್ ಹಿಡಿದು ತೂರಾಡುತ್ತಿದ್ದ ವ್ಯಕ್ತಿ ವಿರುದ್ಧ ಗೋಕರ್ಣ ಪೊಲೀಸರು ಕೇಸು ಹಾಕಿದ್ದಾರೆ! ಮಹಾರಾಷ್ಟದ ಶೋನ್ ಕುಹಾರ್ಡೆ ಅವರು ವಿಪರೀತ ಪ್ರಮಾಣದಲ್ಲಿ ಮದ್ಯ ಸೇವನೆ ಮಾಡಿದ್ದಾರೆ. ಜೊತೆಗೆ ಕುಡಿದ ನಶೆಯಲ್ಲಿ ಸಾರ್ವಜನಿಕರಿಗೆ ಕಿರಿಕಿರಿಯಾಗುವಂತೆ ಮಾಡಿದ್ದಾರೆ. ಓಂ ಬೀಚ್ ರಸ್ತೆಯ ಬಂಗ್ಲೆಗುಡ್ಡದ ಬಳಿ ವಾಸವಾಗಿರುವ ಅವರು ಜನವರಿ 1ರಂದು ಜಂಗಲ್ ಬಾಯ್ ಸುಪ್ರೀಂ ಹಾಸ್ಟೇಲ್ ಬಳಿ ತೂರಾಡುತ್ತಿರುವುದನ್ನು ನೋಡಿದ ಜನ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಗೋಕರ್ಣ ಪಿಸೈ ಶಶಿಧರ ಕೆ ಎಚ್ ಅವರು ಬಂಗ್ಲೆಗುಡ್ಡದ ಬಳಿ ತೆರಳಿದ್ದು, ಆಗ ಶೋನ್ ಕುಹಾರ್ಡೆ ಅವರು ಅಲ್ಲಿ ಗಲಾಟೆ ಮಾಡುತ್ತಿರುವುದನ್ನು ನೋಡಿದ್ದಾರೆ. 650ಮಿಲಿಯ ಮೂರು ಬಿಯರ್ ಬಾಟಲಿ ಖಾಲಿ ಮಾಡಿದ್ದ ಶೋನ್ ಕುರ್ಹಾಡೆ ಮತ್ತೊಂದು ಬಿಯರ್ ಬಾಟಲಿ ಹಿಡಿದು ರಂಪಾಟ ನಡೆಸಿದ್ದಾರೆ. ಸಾರ್ವಜನಿಕ ಸ್ಥಳದಲ್ಲಿ ಕುಡಿದು ಗಲಾಟೆ ಮಾಡಿದ ಕಾರಣ ಪೊಲೀಸರು ಶೋನ್ ಕುಹಾರ್ಡೆ ವಿರುದ್ಧ ಪ್ರಕರಣ ದಾಖಲಿಸಿದ್ದು, ಆ ಬಗ್ಗೆ ಮೇಲಧಿಕಾರಿಗಳಿಗೆ ವರದಿ ಒಪ್ಪಿಸಿದ್ದಾರೆ. - [ಸಹಕಾರಿ ಸಂಘಕ್ಕೆ ಸಿಕ್ಕಿತು ಸಾಧಕ ಪ್ರಶಸ್ತಿ](https://mobiletime.in/2026/01/cooperative-society-receives-achievement-award/): `ಲೋಕಧ್ವನಿ’ ಪತ್ರಿಕೆ ನೀಡುವ `ಹೆಮ್ಮೆಯ ಸಾಧಕ’ ಪ್ರಶಸ್ತಿಗೆ ಶಿರಸಿಯ ಶ್ರೀ ಭೂತೇಶ್ವರ ಪತ್ತಿನ ಸಹಕಾರಿ ಸಂಘಕ್ಕೆ ಸಿಕ್ಕಿದೆ. ಗ್ರಾಹಕ ಸ್ನೇಹಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಕಾರಣ ಈ ಪ್ರಶಸ್ತಿಗೆ ಶ್ರೀ ಭೂತೇಶ್ವರ ಪತ್ತಿನ ಸಹಕಾರಿ ಸಂಘವನ್ನು ಆಯ್ಕೆ ಮಾಡಲಾಗಿದೆ. ಕಳೆದ 25 ವರ್ಷಗಳಿಂದ ಯಶಸ್ವಿಯಾಗಿ ಸಂಘ ಕಾರ್ಯನಿರ್ವಹಿಸುತ್ತಿರುವುದನ್ನು ಗಮನಿಸಲಾಗಿದ್ದು, ಸಂಘದ ಕಾರ್ಯ ಚಟುವಟಿಕೆಯ ಬಗ್ಗೆ ಲೋಕಧ್ವನಿ ಪತ್ರಿಕೆ ಬೆಳಕು ಚೆಲ್ಲಲಿದೆ. ಇದರೊಂದಿಗೆ ಸಂಘಕ್ಕೆ `ಲೋಕಧ್ವನಿ ಹೆಮ್ಮೆಯ ಸಾಧಕ ‘ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ. ಕೆಡಿಸಿಸಿ ಬ್ಯಾಂಕ್ ವಿಭಾಗೀಯ ಅಧಿಕಾರಿಯಾಗಿದ್ದ ವಸಂತ ಶೆಟ್ಟಿ ಅವರು ಶ್ರೀ ಭೂತೇಶ್ವರ ಪತ್ತಿನ ಸಹಕಾರಿ ಸಂಘದ ಸ್ಥಾಪಕರಾಗಿದ್ದು, ಅವರು ಕೆಡಿಸಿಸಿ ಬ್ಯಾಂಕ್ ನೌಕರರ ಒಕ್ಕೂಟ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು. ಅವರ ಮರಣದ ನಂತರ ವಸಂತ ಶೆಟ್ಟಿ ಅವರ ಮಗ ವಿನಾಯಕ ಶೆಟ್ಟಿ ಅವರು ಸೊಸೈಟಿಯನ್ನು ಮುನ್ನಡೆಸುತ್ತಿದ್ದಾರೆ. ಶ್ರೀಧರ ಮೊಗೇರ್ ಅವರ ದೂರದೃಷ್ಠಿ ಹಾಗೂ ರಾಘವೇಂದ್ರ ಶೆಟ್ಟಿ ಅವರ ಪ್ರಾಮಾಣಿಕ ಪ್ರಯತ್ನ ಹಾಗೂ ಎಮ್ ಡಿ ಪ್ರಕಾಶ ಮುದ್ಗುಣಿ ಅವರ ಸಲಹೆಯಿಂದ ಸಂಘ ಶಿಸ್ತಿನಿಂದ ನಡೆಯುತ್ತಿದೆ. ಈ ಎಲ್ಲಾ ವಿಷಯ ಗಮನಿಸಿ ಲೋಕಧ್ವನಿ ಪತ್ರಿಕೆ ಶ್ರೀ ಭೂತೇಶ್ವರ ಪತ್ತಿನ ಸಹಕಾರಿ ಸಂಘಕ್ಕೆ ವಿಶೇಷ ಮಾನ್ಯತೆ ನೀಡಿದೆ. ಬೆಂಗಳೂರಿನಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಈ ಪ್ರಶಸ್ತಿ ನೀಡಿ ಗೌರವಿಸಲಿದ್ದಾರೆ. - [ಕಂಠಪೂರ್ತಿ ಕುಡಿದು ಕಡಲತೀರ ಪ್ರವೇಶ: ಆ ಪ್ರವಾಸಿಗನ ಪಾಲಿಗೆ ಇಂದೇ ಪುಣ್ಯ ದಿನ!](https://mobiletime.in/2026/01/entering-the-beach-drunk-today-is-a-blessed-day-for-that-tourist/): ಕಂಠಪೂರ್ತಿ ಕುಡಿದು ಕಡಲ ತೀರಕ್ಕೆ ಬಂದಿದ್ದ ಪ್ರಸನ್ನ ಅವರು ಅರಬ್ಬಿ ಸಮುದ್ರದಲ್ಲಿ ಕೊಚ್ಚಿ ಹೋಗಿದ್ದು, ಮುರುಡೇಶ್ವರದ ಓಸೀಯನ್ ಅಡ್ವೆಂಚರ್ ಸಿಬ್ಬಂದಿಯ ಸಮಯ ಪ್ರಜ್ಞೆಯಿಂದ ಪ್ರಸನ್ನ ಅವರ ಪ್ರಾಣ ಉಳಿದಿದೆ. ಬೆಳಗಾವಿ ಮೂಲದ ಪ್ರಸನ್ನ ಅವರು ಶುಕ್ರವಾರ ಮುರುಡೇಶ್ವರಕ್ಕೆ ಬಂದಿದ್ದರು. ಎಲ್ಲೆಂದರಲ್ಲಿ ಒಂಟಿಯಾಗಿ ಸಂಚರಿಸುವ ಅವರು ಅಲ್ಲಿಯೇ ಬಾರ್ ಪ್ರವೇಶಿಸಿ ಮದ್ಯ ಸೇವಿಸಿದ್ದರು. ಕುಡಿದ ನಶೆಯಲ್ಲಿಯೇ ತೂರಾಡುತ್ತ ಕಡಲ ತೀರಕ್ಕೆ ಬಂದರು. ಅಲೆಗಳ ಅಬ್ಬರದ ಬಗ್ಗೆ ಅರಿವಿಲ್ಲದೇ ಅವರು ಸಮುದ್ರದ ಕಡೆ ಹಾರಿದರು. ಈಜು ಬಾರದಿದ್ದರೂ ಆಳ ಸಮುದ್ರದ ಕಡೆ ನಡೆದು ಹೋಗುತ್ತಿದ್ದ ಪ್ರಸನ್ನ ಅವರಿಗೆ ಅಲೆಯೊಂದು ಅಬ್ಬರಿಸಿತು. ಅದರ ರಭಸಕ್ಕೆ ಅವರು ನೀರಿನ ಆಳಕ್ಕೆ ಕೊಚ್ಚಿ ಹೋದರು. ನೀರಿನಿಂದ ಮೇಲೆ ಬರಲಾಗದೇ ಸಮಸ್ಯೆಗೆ ಸಿಲುಕಿದ್ದ ಪ್ರಸನ್ನ ಅವರು ಅಲ್ಲಿಯೇ ಇದ್ದ ಓಸೀಯನ್ ಅಡ್ವೆಂಚರ್ ಸಿಬ್ಬಂದಿ ವಿಘ್ನೇಶ್ವರ ಹರಿಕಂತ್ರ ಅವರ ಕಣ್ಣಿಗೆ ಬಿದ್ದರು. ತಕ್ಷಣ ವಾಟರ್ ಬೈಕ್ ಮೂಲಕ ಸಮುದ್ರದ ಕಡೆ ತೆರಳಿದ ಅವರು ರಾಜೇಶ ಹರಿಕಂತ್ರ ಅವರ ಜೊತೆಗೂಡಿ ಪ್ರಸನ್ನ ಅವರ ಜುಟ್ಟು ಹಿಡಿದು ಮೇಲೆತ್ತಿದರು. ಸಾಕಷ್ಟು ಪ್ರಮಾಣದಲ್ಲಿ ನೀರು ಕುಡಿದಿದ್ದ ಪ್ರಸನ್ನ ಅವರನ್ನು ನೀರಿನಿಂದ ಮೇಲೆ ಕರೆತಂದು ಅವರ ಜೀವ ಕಾಪಾಡಿದರು. ಅದಾದ ನಂತರ ಓಸೀಯನ್ ಅಡ್ವೆಂಚರ್ ಸಿಬ್ಬಂದಿ ಪೊಲೀಸರನ್ನು ಕರೆದು ವಿಷಯ ತಿಳಿಸಿದರು. ಪೊಲೀಸರು ಪ್ರಸನ್ನ ಅವರಿಗೂ ಎಚ್ಚರಿಕೆ ನೀಡಿ ಕಳುಹಿಸಿದರು. `ಕುಡಿದು ಕಡಲ ತೀರಕ್ಕೆ ಬರಬೇಡಿ. ಕುಡಿಯುವುದಕ್ಕಾಗಿಯೂ ಕಡಲ ತೀರಕ್ಕೆ ಬರಬೇಡಿ’ - [ಒಂದಲ್ಲ.. ಎರಡಲ್ಲ.. 22 ವರ್ಷ ಭೂಗತನಾಗಿದ್ದ ಭೂಪ ಆ ನೀಲಪ್ಪ!](https://mobiletime.in/2026/01/not-one-not-two-that-nilappa-the-man-who-had-been-underground-for-22-years/): ಮಹಿಳೆಯೊಬ್ಬರ ಮಾನಭಂಗಕ್ಕೆ ಯತ್ನಿಸಿ ಪರಾರಿಯಾಗಿದ್ದ ವ್ಯಕ್ತಿಯೊಬ್ಬ 22 ವರ್ಷಗಳ ನಂತರ ಸಿಕ್ಕಿಬಿದ್ದಿದ್ದು, ಆತನನ್ನು ಶಿರಸಿ ಪೊಲೀಸರು ನ್ಯಾಯಾಲಯಕ್ಕೆ ಒಪ್ಪಿಸಿದ್ದಾರೆ. ಆರೋಪಿ ನೀಲಪ್ಪ ಅಗಸೆಬಾಗಿಲು ಅವರು ಹಣಕಾಸು ವಂಚನೆ ಪ್ರಕರಣದಲ್ಲಿಯೂ ಜೈಲು ಸೇರಿದ್ದಾರೆ. ಶಿರಸಿ ಎಕ್ಕಂಬಿಯ ನೀಲಪ್ಪ ಮಲ್ಲಪ್ಪ ಅಗಸೆಬಾಗಿಲು ಅವರು 2003ರಲ್ಲಿ ಮಹಿಳೆಯೊಬ್ಬರ ಮೇಲೆ ಕೈ ಮಾಡಿದ್ದರು. ಮಹಿಳೆ ಜೊತೆ ಅನುಚಿತವಾಗಿ ವರ್ತಿಸಿದ್ದರು. ಜೊತೆಗೆ ಅವರ ಮಾನಭಂಗದ ಪ್ರಯತ್ನ ಮಾಡಿದ್ದರು. ಈ ಹಿನ್ನಲೆ ಸಂತ್ರಸ್ತೆ ಪೊಲೀಸರ ಮೊರೆ ಹೋಗಿದ್ದು, ಆ ವೇಳೆಯಲ್ಲಿಯೇ ಪೊಲೀಸರು ನೀಲಪ್ಪ ಅಗಸೆಬಾಗಿಲು ಅವರನ್ನು ಬಂಧಿಸಿದ್ದರು. ನ್ಯಾಯಾಲಯದಿಂದ ಜಾಮೀನುಪಡೆದು ಹೊರ ಬಂದಿದ್ದ ನೀಲಪ್ಪ ಅಗಸೆಬಾಗಿಲು ಅವರು ಅದಾದ ನಂತರ ಚೆಕ್ ಬೌನ್ಸ ಪ್ರಕರಣವೊಂದರಲ್ಲಿಯೂ ನ್ಯಾಯಾಲಯದ ಮೆಟ್ಟಿಲೇರಿದ್ದರು. ಆ ಅವಧಿಯಲ್ಲಿಯೂ ಜಾಮೀನುಪಡೆದು ಹೊರಬಂದ ಅವರು ನಂತರ ನ್ಯಾಯಾಲಯದ ಕಡೆ ಮುಖ ಹಾಕಿರಲಿಲ್ಲ. ಮಹಿಳಾ ದೌರ್ಜನ್ಯ ಹಾಗೂ ಚೆಕ್ ಬೌನ್ಸ್ ಪ್ರಕರಣದ ವಿಷಯವಾಗಿ ನ್ಯಾಯಾಲಯ ಸಾಕಷ್ಟು ಬಾರಿ ವಾರೆಂಟ್ ಹೊರಡಿಸಿತ್ತು. ಆದರೆ, ನೀಲಪ್ಪ ಅಗಸೆಬಾಗಿಲು ಅವರು ಪೊಲೀಸರ ಕೈಗೆ ಸಿಕ್ಕಿರಲಿಲ್ಲ. 22 ವರ್ಷಗಳಿಂದ ಪೊಲೀಸರು ನೀಲಪ್ಪ ಅವರ ಹುಡುಕಾಟ ನಡೆಸಿದ್ದು, ಡಿಸೆಂಬರ್ 31ರಂದು ಶಿರಸಿ ಮಾರುಕಟ್ಟೆ ಪಿಸೈ ಬಸವರಾಜ ಕನಶೆಟ್ಟಿ ಅವರಿಗೆ ನೀಲಪ್ಪ ಅಗಸೆಬಾಗಿಲು ಅವರು ಬೆಂಗಳೂರಿನಲ್ಲಿರುವ ವಿಷಯ ಗೊತ್ತಾಯಿತು. ಪೊಲೀಸ್ ಇಲಾಖೆಯ ತಾಂತ್ರಿಕ ಸಿಬ್ಬಂದಿ ಬಬನ ಕದಂ ಹಾಗೂ ಉದಯ ಗುನಗಾ ಅವರ ಸಹಾಯಪಡೆದು ಪಿಸೈ ಬಸವರಾಜ ಕನಶೆಟ್ಟಿ ಅವರು ವಿಶೇಷ ಕಾರ್ಯಾಚರಣೆ ನಡೆಸಿದರು. ಪೊಲೀಸ್ ಸಿಬ್ಬಂದಿ ವಿಶ್ವನಾಥ ಭಂಡಾರಿ, ಸಂದೀಪ ನಿಂಬಾಯಿ, ರಮೇಶ ಮುಚ್ಚಂಡಿ ಜೊತೆ ಸೇರಿ ನೀಲಪ್ಪ ಅಗಸೆಬಾಗಿಲು ಅವರ ಹುಡುಕಾಟಕ್ಕೆ ಬಲೆ ಬೀಸಿದರು. ಆ ಬಲೆಗೆ ಬಿದ್ದ ಆರೋಪಿಯನ್ನು ಶಿರಸಿಗೆ ಕರೆತಂದು ಜನವರಿ 1ರಂದು ನ್ಯಾಯಾಲಯಕ್ಕೆ ಒಪ್ಪಿಸಿದ್ದಾರೆ. ಆ ಮೂಲಕ `ತಪ್ಪು ಮಾಡಿದ ಯಾರೂ ಕಾನೂನಿನ ಕಣ್ಣಿನಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ’ ಎಂದು ಪೊಲೀಸರು ಸಂದೇಶ ಸಾರಿದ್ದಾರೆ. - [ಹೊಸ ವರ್ಷ: ಪಾರ್ಟಿ ಮಾಡುವಾಗ ಮಾರಾಮಾರಿ!](https://mobiletime.in/2026/01/new-year-brawl-while-partying/): ಹೊಸ ವರ್ಷದ ಸಂಭ್ರಮದಲ್ಲಿದ್ದವರ ನಡುವೆ ಕಾರವಾರದಲ್ಲಿ ಹೊಡೆದಾಟ ನಡೆದಿದೆ. ಈ ಹೊಡೆದಾಟದಲ್ಲಿ ಏಳು ಜನರಿಗೆ ಗಾಯವಾಗಿದೆ. ಕಾರವಾರದ ಕಿನ್ನರ ಗುಣಸುಭಾದ ಸಚೀನ ಚಂದೋಬಾ ನಾಗೇಕರ್, ಅವರ ಅಣ್ಣ ಹರೀಶ ನಾಗೇಕರ್, ಅವರ ತಮ್ಮ ಸುನೀಲ ನಾಗೇಕರ್ ಜೊತೆ ಅವರ ಮಗ ಸರ್ವೇಶ ನಾಗೇಕರ್ ಹೊಡೆದಾಟದಲ್ಲಿ ಭಾಗಿಯಾಗಿದ್ದಾರೆ. ಅವರ ಜೊತೆ ಕಿನ್ನರ ಗುಣಸಭಾದ ಉದ್ಧಾಸ ಮೋಹನ ಗೋವೇಕರ್, ಅವರ ಹೆಂಡತಿ ಸಂಗೀತಾ ಗೋವೇಕರ್ ಹಾಗೂ ಸಂಬAಧಿ ಸೈರೋಬಾ ಗೋವೇಕರ್ ಸಹ ಹೊಡೆದಾಟಕ್ಕೆ ಕೈ ಜೋಡಿಸಿದ್ದಾರೆ. ಡಿಸೆಂಬರ್ 31ರ ರಾತ್ರಿ 12 ಗಂಟೆ ಅವಧಿಯಲ್ಲಿ ಈ ಎರಡು ಗುಂಪಿನ ನಡುವೆ ಮಾರಾಮಾರಿ ನಡೆದಿದೆ. ಎರಡು ಗುಂಪಿನವರು ಬೆಂಕಿಯ ಉಂಡೆಗನ್ನು ಚೆಲ್ಲಿ ನೋವು ಮಾಡಿಕೊಂಡಿದ್ದಾರೆ. ಪೊಳಿಪಾತಿನ ಸೈರೋಬಾ ಗೋವೇಕರ್ ಅವರ ಮನೆ ಮುಂದೆ ಪಾರ್ಟಿ ನಡೆಯುತ್ತಿದ್ದು, ರಾತ್ರಿ 12.30ರ ನಂತರವೂ ರಸ್ತೆ ಮೇಲೆ ಪಾರ್ಟಿ ನಡೆಸಿರುವುದೇ ಈ ಹೊಡೆದಾಟಕ್ಕೆ ಮೂಲ ಕಾರಣವಾಗಿದೆ. ಆ ದಿನ ರಾತ್ರಿ ಸಚೀನ ನಾಗೇಕರ್ ಅವರು ಸಹೋದರರ ಜೊತೆ ಸಂಬAಧಿಕರ ಮನೆಗೆ ಊಟಕ್ಕೆ ಹೋಗಿದ್ದು, ಮರಳಿ ಬರುವಾಗ ಪೊಳಿಪಾತ್ ಬಳಿ ಕಿನ್ನರ ಮಾಳಿಪೋತಿನಲ್ಲಿ ಪಾರ್ಟಿ ನಡೆಯುವುದನ್ನು ನೋಡಿದರು. ಉದ್ಧಾಸ ಗೋವೇಕರ್ ಅವರು ರಸ್ತೆಯಲ್ಲಿ ಬೆಂಕಿ ಹಾಕಿಕೊಂಡಿರುವುದನ್ನು ಅವರು ಪ್ರಶ್ನಿಸಿದರು. `ರಸ್ತೆ ಪಕ್ಕ ಕಾರು ನಿಲ್ಲಿಸಿ ಬೆಂಕಿ ಹಾಕಲು ಈ ರಸ್ತೆ ನಿಮ್ಮ ಅಪ್ಪನದಾ?’ ಎಂದು ಸಚೀನ್ ನಾಗೇಕರ್ ಜೋರಾದರು. ಇದರಿಂದ ಉಲ್ಲಾಸ ಗೋವೇಕರ್ ಸಿಟ್ಟಾಗಿ ಸಚಿನ್ ನಾಗೇಕರ್ ಇದ್ದ ಬೈಕಿಗೆ ಖುರ್ಚಿ ಎಸೆದರು. ಅದಾದ ನಂತರ ನಡೆದ ಹೊಡೆದಾಟದಲ್ಲಿ ಸಚಿನ್ ನಾಗೇಕರ್ ಅವರು ಅಲ್ಲಿದ್ದ ಬೆಂಕಿಗೆ ಬಿದ್ದರು. ಪರಿಣಾಮ ಅವರ ಕೈ-ಕಾಲಿಗೆ ಗಾಯವಾಯಿತು. ಸಚಿನ್ ನಾಗೇಕರ್ ಕಡೆಯವರಿಗೆ ಉದ್ಧಾಸ ಗೋವೇಕರ್ ಕಡೆಯವರು ಹೊಡೆಯಲು ಶುರು ಮಾಡಿದರು. ಇದಕ್ಕೆ ಪ್ರತಿಯಾಗಿ ಸಚಿನ್ ನಾಗೇಕರ್ ಅವರು ಸಹ ಅಲ್ಲಿದ್ದ ಬೆಂಕಿಯ ಚಂಡು ಬೀಸಿದರು. ಬೆಂಕಿ ಹೊತ್ತಿದ ಕಟ್ಟಿಗೆ ತೆಗೆದುಕೊಂಡು ಉದ್ಧಾಸ ಗೋವೇಕರ್ ಅವರ ಬೆನ್ನಿಗೆ ಹೊಡೆದರು. ಸುನೀಲ ನಾಗೇಕರ್ ಹಾಗೂ ಹರೀಶ ನಾಗೇಕರ್ ಸಹ ಈ ಹೊಡೆದಾಟದಲ್ಲಿ ಭಾಗವಹಿಸಿದ್ದು, ಸಂಗೀತಾ ಗೋವೇಕರ್ ಹಾಗೂ ಸೈರೋಬಾ ಗೋವೇಕರ್ ಅವರು ತಮ್ಮ ಶಕ್ತಿ ಪ್ರದರ್ಶನ ಮಾಡಿದರು. ಈ ಗುಂಪು ಘರ್ಷಣೆಯಲ್ಲಿ ಅಲ್ಲಿದ್ದ ಏಳು ಜನ ನೋವು ತಿಂದರು. - [ಹೊಸ ವರ್ಷ: ಮೊದಲ ದಿನವೇ ಪ್ರವಾಸಿಗನ ಬಲಿ!](https://mobiletime.in/2026/01/new-year-tourist-killed-on-the-first-day/): ಗೋಕರ್ಣ ಕಡಲತೀರಕ್ಕೆ ಬಂದಿದ್ದ ಪ್ರವಾಸಿಗರೊಬ್ಬರು ಸಮುದ್ರಕ್ಕೀಳಿಯುವ ಮುನ್ನವೇ ಕೊನೆಯುಸಿರೆಳೆದಿದ್ದಾರೆ. ಗುರುವಾರ ಮಧ್ಯಾಹ್ನದ ಅವಧಿಯಲ್ಲಿ ಈ ಸಾವು ಸಂಭವಿಸಿದೆ. ಗೋಕರ್ಣದ ಮಿಡ್ಲ ಕಡಲತೀರಕ್ಕೆ ಆಗಮಿಸಿದ್ದ ತಮಿಳುನಾಡಿನ ಆರ್ ಕುಮಾರ್ ಅವರು ಅಲ್ಲಿಯೇ ಕುಸಿದು ಬಿದ್ದಿದ್ದಾರೆ. ಹೊಸ ವರ್ಷ ಆಚರಣೆ ಬಂದಿದ್ದ ಅವರ ಬದುಕು ಅಲ್ಲಿಯೇ ಕೊನೆಯಾಗಿದೆ. ಸಮುದ್ರದಲ್ಲಿ ಈಜುವುದಕ್ಕಾಗಿ ಆರ್ ಕುಮಾರ್ ಅವರು ನೀರಿಗಿಳಿಯುವ ಪ್ರಯತ್ನ ಮಾಡಿದ್ದರು. ಅಷ್ಟರಲ್ಲಿ ಅವರು ಕುಸಿದು ಬಿದ್ದಿದನ್ನು ಆ ಭಾಗದ ರೆಸಾರ್ಟ ಸಿಬ್ಬಂದಿ ನೋಡಿದರು. ಜೀವ ರಕ್ಷಕ ಸಿಬ್ಬಂದಿ ಅವರನ್ನು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕಳುಹಿಸಿದರು. ಆದರೆ, ಅಷ್ಟರೊಳಗೆ ಕುಮಾರ್ ಅವರು ಕೊನೆಯುಸಿರೆಳೆದಿದ್ದರು. ಸದ್ಯ ಕುಮಾರ ಅವರ ಶವವನ್ನು ಜಿಲ್ಲಾಸ್ಪತ್ರೆಗೆ ಸಾಗಿಸಲಾಗಿದೆ. ಪೊಲೀಸರು ಸ್ಥಳ ಭೇಟಿ ನಡೆಸಿ ಕಾನೂನು ಕ್ರಮ ಜರುಗಿಸಿದ್ದಾರೆ. - [ಜಾಗೃತ ಸಮಿತಿ ಸಭೆ: ವಿವಿಧ ವಿಷಯಗಳ ಬಗ್ಗೆ ಚರ್ಚೆ](https://mobiletime.in/2026/01/vigilance-committee-meeting-discussion-on-various-issues/): ಜಿಲ್ಲಾಧಿಕಾರಿ ಕೆ ಲಕ್ಷ್ಮೀಪ್ರಿಯಾ ಅವರು ನಡೆಸಿದ ಜಾಗೃತ ಮತ್ತು ಉಸ್ತುವಾರಿ ಸಮಿತಿ ಸಭೆ ನಡೆಸಿದ್ದು, ಸಮಿತಿ ಸದಸ್ಯರು ವಿವಿಧ ವಿಷಯಗಳ ಬಗ್ಗೆ ಚರ್ಚಿಸಿದ್ದಾರೆ. `ದೌರ್ಜನ್ಯ ಪ್ರಕರಣಗಳಲ್ಲಿ ನೊಂದವರಿಗೆ ತಕ್ಷಣ ಪರಿಹಾರ ವಿತರಣೆ ಮಾಡಬೇಕು’ ಎಂದು ಜಿಲ್ಲಾಧಿಕಾರಿ ಕೆ ಲಕ್ಷ್ಮೀಪ್ರಿಯಾ ಅವರು ಸೂಚನೆ ನೀಡಿದ್ದಾರೆ. `ದೌರ್ಜನ್ಯ ಪ್ರಕರಣದಲ್ಲಿ ಮೃತಪಟ್ಟಿರುವ ವ್ಯಕ್ತಿಯ ಕುಟುಂಬದ ಸದಸ್ಯರಿಗೆ ದಾಖಲೆಗಳ ಕೊರತೆಯಿಂದ ಅನುಕಂಪ ಆಧಾರದ ನೌಕರಿ ನೀಡುವಲ್ಲಿ ವಿಳಂಬವಾಗುತ್ತಿದೆ. ದಾಖಲೆಗಳನ್ನು ದೊರಕಿಸುವ ಬಗ್ಗೆ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳೇ ಮತುವರ್ಜಿ ವಹಿಸಿ, ಒಂದು ತಿಂಗಳ ಒಳಗೆ ಈ ಪ್ರಕರಣವನ್ನು ಇತ್ಯರ್ಥ ಪಡಿಸಸಬೇಕು’ ಎಂದವರು ಸೂಚಿಸಿದ್ದಾರೆ. ಮುಖ್ಯವಾಗಿ ಜಿಲ್ಲೆಯ ಜ್ವಲಂತ ಸಮಸ್ಯೆಗಳ ಬಗ್ಗೆ ಸಮಿತಿ ಸದಸ್ಯರು ಮಾತನಾಡಿದ್ದಾರೆ. `ಬೆಳೆ ರಕ್ಷಣೆಗೆ ರೈತರಿಗೆ ಬಂದೂಕು ಅಗತ್ಯವಿದ್ದು, ಮೂರು ತಿಂಗಳ ಒಳಗೆ ಪರವಾನಿಗೆ ಕೊಡಬೇಕು. ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಸ್ಮಶಾನ ಭೂಮಿಗೆ ಜಾಗ ಮೀಸಲಿಡಬೇಕು. ಸಿದ್ದಾಪುರದಲ್ಲಿ ರೈತರ ಅಡಿಕೆ ಮರ ಕಟಾವು ನಡೆದಿದ್ದು, ಸಂತ್ರಸ್ತರಿಗೆ ನ್ಯಾಯ ಒದಗಿಸಬೇಕು. ಕುಮಟಾದಲ್ಲಿರುವ ಹಕ್ಕಿ-ಪಿಕ್ಕಿ ಜನಾಂಕದವರಿಗೆ ಸರ್ಕಾರಿ ಸೌಲಭ್ಯ ಸಿಗದ ಬಗ್ಗೆ ಗಮನಿಸಬೇಕು. ಅಂಕೋಲಾ ತಾಲೂಕಿನ ವಾಲ್ಮೀಕಿ ಸಮುದಾಯದ ಭವನ ಶೀಘ್ರದಲ್ಲಿ ಉದ್ಘಾಟನೆ ಆಗಬೇಕು. ಫಸಲ್ ಭೀಮಾ ಯೋಜನೆ ಹಣ ಅತಿಕ್ರಮಣದಾರರಿಗೂ ಸಿಗಬೇಕು’ ಎಂದು ಸಮಿತಿ ಸದಸ್ಯ ಸುರೇಶ ಸಿದ್ದಿ ಅವರು ಸಭೆಯ ಗಮನಕ್ಕೆ ತಂದಿದ್ದಾರೆ. ಸಮಿತಿ ಸದಸ್ಯರ ಗುರುತಿನ ಚೀಟಿ, ಜಾತಿ ನಿಂದನೆ ವಿಷಯವಾಗಿ ದಾಖಲಾಗುವ ಸುಳ್ಳು ಪ್ರಕರಣ, ಅಕ್ರಮ ಮರಳುಗಾರಿಕೆ, ಗ್ರಾಮ ಪಂಚಾಯತದ ಶೇ 2ರ ಮೀಸಲು ಅನುದಾನದಲ್ಲಿ ಕ್ರೀಡಾ ಉಪಕರಣ ಖರೀದಿ, ದಲಿತರ ಜಮೀನು ಮಾರಾಟ ವಿಷಯವಾಗಿ ಸಭೆಯಲ್ಲಿ ಚರ್ಚೆ ನಡೆಯಿತು. ಈ ಸಭೆಯಲ್ಲಿ ಜಿ ಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ದಿಲೀಷ್ ಶಶಿ, ಅಪರ ಜಿಲ್ಲಾಧಿಕಾರಿ ಸಾಜಿದ್ ಮುಲ್ಲಾ, ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಉಮೇಶ್ ಹಾಗೂ ಸಮಿತಿಯ ಸದಸ್ಯರಾದ ವಿಶ್ವನಾಥ ಹೆಗಡೆ ಕೂಜಳ್ಳಿ, ಮಾರುತಿ ನಿಂಗಪ್ಪ ಗವಾಡಿ, ರಾಘವೇಂದ್ರ ಜಟ್ಟಿ ಮುಕ್ರಿ, ಪಾತಿಂಬಿ ಫ ಮಾಂಡೇಕರ, ಸುಭಾಷ ಈಶ್ವರ ನಾಯ್ಕ, ರವಿಕುಮಾರ್ ದ ಮಾಳಕರಿ ಇತರರಿದ್ದರು. - [ಹಣಕಾಸು ಅಪರಾತಪರ: ಸಾವಿನ ನಂತರವೂ ಹೊರಬಾರದ ಸತ್ಯ!](https://mobiletime.in/2026/01/financial-crimes-the-truth-that-shouldnt-be-revealed-even-after-death/): ಕಾರವಾರದ ಚಿತ್ತಾಕುಲ ಗ್ರಾಮ ಪಂಚಾಯತದಲ್ಲಿ ಅಧಿಕಾರಿಗಳು ಮಾಡಿದ ಅಪರಾತಪರಾದ ತನಿಖೆ ಹಳ್ಳ ಹಿಡಿದಿದೆ. ದೂರುದಾರರಾಗಿದ್ದ ಗ್ರಾ ಪಂ ಅಧ್ಯಕ್ಷರಾಗಿದ್ದ ರಾಜು ತಾಂಡೇಲ ಅವರ ಮರಣದ ನಂತರ ಆ ಪ್ರಕರಣವನ್ನು ಮುಚ್ಚಿ ಹಾಕುವ ಪ್ರಯತ್ನ ನಡೆದ ಅನುಮಾನವ್ಯಕ್ತವಾಗಿದೆ. ಈ ಬಗ್ಗೆ ಅಧಿಕೃತ ಮಾಹಿತಿ ಕೇಳಿದರೂ ಅದನ್ನು ರಹಸ್ಯವಾಗಿರಿಸಿದ್ದು, ತನಿಖಾಧಿಕಾರಿಗಳ ಮೇಲೆಯೇ ಅನುಮಾನ ಹುಟ್ಟುತ್ತಿದೆ. ಎರಡು ವರ್ಷದ ಹಿಂದೆ ಚಿತ್ತಾಕುಲ ಗ್ರಾಮ ಪಂಚಾಯತದಲ್ಲಿ ಹಣಕಾಸಿನ ಅಪರಾತಪರ ನಡೆದಿತ್ತು. ರಾತ್ರಿ ವೇಳೆ ಗ್ರಾಮ ಪಂಚಾಯತ ಬಾಗಿಲು ತೆರೆದ ಅಧಿಕಾರಿಗಳು ಆಗದ ಕೆಲಸಕ್ಕೆ ಬಿಲ್ ಪಾವತಿಯ ಪ್ರಯತ್ನ ಮಾಡಿದ್ದರು. ಗ್ರಾಮ ಪಂಚಾಯತದ ಮಾಜಿ ಅಧ್ಯಕ್ಷೆ ಜೊತೆ ಕೆಲ ಸದಸ್ಯರು ಸೇರಿ ರಾತ್ರಿ ವೇಳೆ ಕಚೇರಿಗೆ ಆಗಮಿಸಿದ್ದು, ಪಿಡಿಓ ಸಹಕಾರದಲ್ಲಿ ಗುತ್ತಿಗೆದಾರನ ಹೆಸರಿಗೆ ಚೆಕ್ ಬರೆದಿದ್ದರು. ಅದೇ ದಿನ ಚಿತ್ತಾಕುಲ ಗ್ರಾಮ ಪಂಚಾಯತಗೆ ರಾಜು ತಾಂಡೇಲ್ ಅವರು ಅಧ್ಯಕ್ಷರಾಗಿ ಆಯ್ಕೆ ಆಗಿದ್ದರು. ಉಪಾಧ್ಯಕ್ಷರಾಗಿ ಸೂರಜ ದೇಸಾಯಿ ಅವರು ಆಯ್ಕೆಯಾಗಿದ್ದು ಅವರಿಬ್ಬರೂ ಸೇರಿ ಗ್ರಾಮ ಪಂಚಾಯತ ಹೊರಗಡೆ ರಾತ್ರಿ ವೇಳೆ ಸಂಭ್ರಮ ಹಂಚಿಕೊಳ್ಳುತ್ತಿದ್ದರು. ಆಗ ಸರ್ಕಾರಿ ಕಚೇರಿಯಲ್ಲಿ ದೀಪ ಬೆಳಗುತ್ತಿರುವುದನ್ನು ಗಮನಿಸಿದರು. ರಾತ್ರಿ 9.40ರ ವೇಳೆಗೆ ದೀಪ ನೋಡಿದ ರಾಜು ತಾಂಡೇಲ್ ಅವರು ಗ್ರಾಮ ಪಂಚಾಯತ ಕಚೇರಿ ಪ್ರವೇಶಿಸಿದರು. ಆಗ, ಅಲ್ಲಿ ಪಿಡಿಓ ರಾಜೇಶ ನಾಯ್ಕ ಅವರು ಚೆಕ್ ಬರೆಯುತ್ತಿರುವುದನ್ನು ಗಮನಿಸಿದರು. ಗ್ರಾಮ ಪಂಚಾಯತ ಮಾಜಿ ಅಧ್ಯಕ್ಷರು ಆ ಚೆಕ್’ಗೆ ಸಹಿ ಹಾಕುವವರಿದ್ದು, `ಆಗದ ಕೆಲಸಕ್ಕೆ ಚೆಕ್ ಏಕೆ ಬರೆಯಲಾಗುತ್ತಿದೆ?’ ಎಂದು ಪ್ರಶ್ನಿಸಿದರು. ಇದರಿಂದ ಅಲ್ಲಿದ್ದವರು ತಬ್ಬಿಬ್ಬಾದರು. `ರಾತ್ರಿ ವೇಳೆ ಸರ್ಕಾರಿ ಕಚೇರಿ ಬಾಗಿಲು ತೆರೆಯುವುದು ಅಪರಾಧ. ಆ ಅವಧಿಯಲ್ಲಿ ಹಣಕಾಸಿನ ವ್ಯವಹಾರ ನಡೆಸುವುದು ಇನ್ನಷ್ಟು ಗಂಭೀರ ಪ್ರಮಾಣದ ಅಪರಾಧ’ ಎಂದು ರಾಜು ತಾಂಡೇಲ್ ಅವರು ಅಸಮಧಾನವ್ಯಕ್ತಪಡಿಸಿದರು. ಈ ವೇಳೆ ಪೊಲೀಸರು ಸ್ಥಳಕ್ಕೆ ದೌಡಾಯಿಸಿದರು. ಗ್ರಾಮ ಪಂಚಾಯತಗೆ ಭದ್ರತೆ ಒದಗಿಸಿದರು. ಅಕ್ರಮದ ಬಗ್ಗೆ ಅವರು ಸರ್ಕಾರಕ್ಕೆ ದೂರು ಸಲ್ಲಿಸಿದ್ದು, ಜಲ್ಲಾ ಪಂಚಾಯತವೂ ತನಿಖೆಗೆ ಆದೇಶಿಸಿತು. ಅದಾಗಿ ಸುಮಾರು ಒಂದು ವರ್ಷದ ನಂತರ ರಾಜು ತಾಂಡೇಲ್ ಅವರು ಸಾವನಪ್ಪಿದ್ದು, ಅವರು ಕೊಟ್ಟ ದೂರಿನ ತನಿಖೆ ಮಾತ್ರ ಇನ್ನೂ ಮುಗಿದಿಲ್ಲ. ರಾಜು ತಾಂಡೇಲ್ ಅವರ ಸಾವಿನ ಜೊತೆಯೇ ಆ ಅಕ್ರಮದ ಸತ್ಯವೂ ಮುಚ್ಚಿ ಹೋಗುವ ಲಕ್ಷಣಗಳು ಹೆಚ್ಚಾಗಿದೆ. ತನಿಖೆಯ ಬಗ್ಗೆ ಮಾಹಿತಿ ಕೇಳಿ ಮಾಹಿತಿ ಹಕ್ಕು ಕಾಯ್ದೆ ಅಡಿ ಅರ್ಜಿ ಸಲ್ಲಿಸಿದಾಗ `ಕಲಂ 8(1)ಜೆ ಪ್ರಕಾರ ಮಾಹಿತಿ ನೀಡಲು ಬರುವುದಿಲ್ಲ’ ಎಂದು ಜಿಲ್ಲಾ ಪಂಚಾಯತ ಉಪಕಾರ್ಯದರ್ಶಿಗಳು ಉತ್ತರಿಸಿದ್ದು ಸಹ ಅನುಮಾನಕ್ಕೆ ಕಾರಣವಾಗಿದೆ. ದೇಶದ ಸಮಗ್ರತೆ ಮತ್ತು ಸೌರ್ವಭೌಮತ್ವಕ್ಕೆ ಧಕ್ಕೆ ಬರುವ ಹಾಗೂ ವಿದೇಶಿ ಸಂಬoಧಕ್ಕೆ ತೊಂದರೆ ಆಗುವ ಮಾಹಿತಿಯನ್ನು ಈ ನಿಯಮದ ಅಡಿ ನೀಡಲು ಬರುವುದಿಲ್ಲ ಎಂಬುದು ಎಲ್ಲರಿಗೂ ಗೊತ್ತಿರುವ ಸತ್ಯ. ಆದರೆ, ತನಿಖೆಯ ಅಂಶಗಳು ಯಾರ ಜೀವಕ್ಕೆ ಅಪಾಯ ಆಗುವ ಸಂಗತಿ ಅಲ್ಲ. ವೈಯಕ್ತಿಕ ವಿಚಾರಗಳು ಸಹ ಅಲ್ಲ. ಬೌದ್ಧಿಕ ಹಕ್ಕುಗಳಿಗೆ ಸಹ ಈ ಮಾಹಿತಿ ಬಹಿರಂಗಪಡಿಸುವುದರಿAದ ಸಮಸ್ಯೆ ಇಲ್ಲ. ಅದಾಗಿಯೂ, ಅಧಿಕಾರಿಗಳು ಮಾಹಿತಿ ಬಚ್ಚಿಡುತ್ತಿರುವುದರಿಂದ ತನಿಖಾಧಿಕಾರಿಗಳ ಮೇಲೆಯೇ ಅನುಮಾನ ಹುಟ್ಟಿದೆ. - [ಕರಾವಳಿ ಪ್ರವಾಸೋದ್ಯಮಕ್ಕೆ ಹೊಸ ಆಯಾಮ](https://mobiletime.in/2026/01/a-new-dimension-for-coastal-tourism/): ಕರಾವಳಿ ಭಾಗದ ಪ್ರವಾಸೋದ್ಯಮ ಅಭಿವೃದ್ಧಿಗೆ ಸರ್ಕಾರ ಆಸಕ್ತಿವಹಿಸಿದ್ದು, ಇದಕ್ಕಾಗಿ ಜನವರಿ 10ರಂದು ಮಂಗಳೂರಿನಲ್ಲಿ ವಿಶೇಷ ಸಭೆ ನಡೆಯಲಿದೆ. ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ ಅವರು ಸಭೆ ನಡೆಸಲಿದ್ದು ಮೂರು ಜಿಲ್ಲೆಯ ಶಾಸಕರು-ಸಂಸದರ ಜೊತೆ ಇನ್ನಿತರ ಜನಪ್ರತಿನಿಧಿಗಳು ಹಾಗೂ ಉದ್ದಿಮೆದಾರರಿಗೂ ಆಮಂತ್ರಿಸಲಾಗಿದೆ. ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವ ಮಂಕಾಳ ಎಸ್ ವೈದ್ಯ ಅವರು ಈ ಬಗ್ಗೆ ಮಾಹಿತಿ ನೀಡಿದ್ದಾರೆ. `ರಾಜ್ಯದಲ್ಲಿ ಗೋವಾದ ಗಡಿಯಿಂದ ಮಂಗಳೂರಿನ ಗಡಿಯವರೆಗೆ 344 ಕಿಮೀ ಕಡಲ ತೀರವಿದೆ. ಇಲ್ಲಿನ ಜನತೆ ಉದ್ಯೋಗ ಅರಸಿ, ಇತರೆ ಜಿಲ್ಲೆ, ರಾಜ್ಯಗಳಿಗೆ ತೆರಳದೇ ಅವರಿಗಾಗಿ ಪ್ರವಾಸೋದ್ಯಮ ಅಭಿವೃದ್ಧಿಯ ಮೂಲಕ ಇಲ್ಲಿಯೇ ಉದ್ಯೋಗ ಸೃಷ್ಠಿಸಿ, ಆದಾಯದ ಮೂಲಗಳನ್ನು ಸೃಷ್ಠಿಸುವ ಮೂಲಕ ಜಿಲ್ಲೆಗಳನ್ನು ಸಮಗ್ರವಾಗಿ ಅಭಿವೃದ್ಧ್ದಿಪಡಿಸುವ ಉದ್ದೇಶದಿಂದ ಕರಾವಳಿಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿ ನೀತಿಯನ್ನು ರಚಿಸಲಾಗುತ್ತಿದೆ’ ಎಂದವರು ಮಾಹಿತಿ ನೀಡಿದ್ದಾರೆ. `ಕರಾವಳಿ ಜಿಲ್ಲೆಗಳಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಕೇರಳ ಮತ್ತು ಗೋವಾ ಮಾದರಿಯಲ್ಲಿ ಸಿ ಆರ್ ಝಡ್ ನಿಯಮಗಳಲ್ಲಿ ರಿಯಾಯತಿ ನೀಡುವ ಕುರಿತಂತೆ ಈ ಸಭೆಯಲ್ಲಿ ಚರ್ಚಿಸಿ, ಅಗತ್ಯವಿದ್ದಲ್ಲಿ ಕೇಂದ್ರ ಸರ್ಕಾರಕ್ಕೆ ರಿಯಾಯತಿ ಕೋರಿ ಪತ್ರ ಬರೆಯಲಾಗುತ್ತದೆ. ಗೋವಾ ಪ್ರವಾಸೋದ್ಯಮ ಸಚಿವರನ್ನೂ ಸಹ ಸಭೆಗೆ ಆಹ್ವಾನಿಸಲಾಗಿದೆ’ ಎಂದವರು ಹೇಳಿದ್ದಾರೆ. `ಕರಾವಳಿ ಪ್ರದೇಶದಲ್ಲಿನ ಪರಿಸರ, ಮೀನುಗಾರಿಕೆ, ರೈತರು ಮತ್ತು ಸಾರ್ವಜನಿಕರಿಗೆ ತೊಂದರೆಯಾಗದAತೆ ಪ್ರವಾಸೋದ್ಯಮವನ್ನು ಅಭಿವೃದ್ಧಿ ಪಡಿಸುವ ಕುರಿತಂತೆ ಬಂಡವಾಳ ಹೂಡಿಕೆದಾರರನ್ನು ಸಭೆಗೆ ಆಹ್ವಾನಿಸಲಾಗಿದೆ, ಇಲ್ಲಿ ಬಂಡವಾಳ ಹೂಡುವವರಿಗೆ ರಿಯಾಯತಿ ದರದಲ್ಲಿ ಭೂಮಿ, ವಿದ್ಯುತ್, ನೀರು ಸೇರಿದಂತೆ ಸರ್ಕಾರದಿಂದ ಅಗತ್ಯವಿರುವ ಎಲ್ಲಾ ಮೂಲಭೂತ ಸೌಕರ್ಯಗಳನ್ನು ಒದಗಿಸಲಾಗುವುದು’ ಎಂದರು. ಕರಾವಳಿ ಪ್ರವಾಸೋದ್ಯಮ ಅಭಿವೃದ್ಧಿ ಕುರಿತಂತೆ ಪ್ರವಾಸಿ ಕ್ಷೇತ್ರದ ಪರಿಣಿತರು, ಸಾರ್ವಜನಿಕರು ತಮ್ಮ ಸಲಹೆ, ಯೋಜನೆಗಳು ಮತ್ತು ಸೂಚನೆಗಳನ್ನು ನೀಡುವಂತೆ ಸಚಿವರು ತಿಳಿಸಿದರು. ಶಾಸಕ ಸತೀಶ್ ಸೈಲ್ ಮಾತನಾಡಿ `ಕರಾವಳಿ ಭಾಗದಲ್ಲಿ ಸಿ ಆರ್ ಝಡ್ ನಿಯಮಗಳಲ್ಲಿ ಸಡಿಲಿಕೆ, ಬಂಡವಾಳ ಹೂಡಿಕೆದಾರರಿಗೆ ತೆರಿಗೆ ಮತ್ತು ವಿದ್ಯುತ್ ರಿಯಾಯತಿ ಸೇರಿದಂತೆ ಅಗತ್ಯ ಮೂಲ ಸೌಕರ್ಯಗಳನ್ನು ಒದಗಿಸಿದಲ್ಲಿ ಹೆಚ್ಚಿನ ಹೂಡಿಕೆದಾರರು ಆಗಮಿಸಲಿದ್ದಾರೆ’ ಎಂದು ತಿಳಿಸಿದರು. ಶಾಸಕ ಭೀಮಣ್ಣ ನಾಯ್ಕ ಮಾತನಾಡಿ `ಮಲೆನಾಡು ಭಾಗದಲ್ಲಿನ ಜಲಪಾತಗಳ ವೀಕ್ಷಣೆಗೆ ಮುಕ್ತ ಅವಕಾಶ ಹಾಗೂ ರಸ್ತೆಗಳ ದುರಸ್ತಿ ಮತ್ತು ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಬೇಕು’ ಎಂದರು. `ಪ್ರವಾಸಿ ಸ್ಥಳಗಳಲ್ಲಿ ಸೂಕ್ತ ಪಾರ್ಕಿಂಗ್ ವ್ಯವಸ್ಥೆ, ಹೋಟೆಲ್ ಗಳು, ಮುಖ್ಯ ಸ್ಥಳಗಳಲ್ಲಿ ಧ್ವನಿ ಮತ್ತು ಬೆಳಕು ಪ್ರದರ್ಶನ ವ್ಯವಸ್ಥೆ, ಕುಟುಂಬ ಸಮೇತ ಪ್ರವಾಸಕ್ಕೆ ಬಂದು ಆನಂದಿಸಲು ಅಗತ್ಯವಿರುವ ಸೌಲಭ್ಯಗಳನ್ನು ಒದಗಿಸಬೇಕು. ಹೋಂ ಸ್ಟೇ ಗಳಿಗೆ ಅಗತ್ಯ ಅನುಮತಿಯನ್ನು ನೀಡಬೇಕು. ಜಿಲ್ಲೆಯಲ್ಲಿ ವಿವಿಧ ರೀತಿಯ 15 ಬಗೆಯ ಟೂರಿಸಂ ಸರ್ಕಿಟ್‌ಗಳಿದ್ದು ಅವುಗಳನ್ನು ಅಭಿವೃದ್ಧಿಪಡಿಸಬೇಕು’ ಎಂದು ಸಭೆಯಲ್ಲಿ ಹಾಜರಿದ್ದ ಪ್ರವಾಸ ಕ್ಷೇತ್ರದ ಪರಿಣಿತರು ತಿಳಿಸಿದರು. ಸಭೆಯಲ್ಲಿ ವಿಧಾನ ಪರಿಷತ್ ಶಾಸಕ ಗಣಪತಿ ಉಳ್ವೇಕರ್, ಜಿಲ್ಲಾಧಿಕಾರಿ ಕೆ ಲಕ್ಷಿö್ಮÃಪ್ರಿಯಾ, ಜಿ ಪಂ. ಸಿಇಓ ದಿಲೀಷ್ ಶಶಿ, ಎಸ್ಪಿ ದೀಪನ್ ಎಂ ಎನ್, ಅಪರ ಜಿಲ್ಲಾಧಿಕಾರಿ ಸಾಜಿದ್ ಮುಲ್ಲಾ, ಉಪವಿಭಾಗಾಧಿಕಾರಿ ಶ್ರವಣ ಕುಮಾರ್, ತರಬೇತಿ ನಿರತ ಪ್ರೋಬೇಷನರಿ ಅಧಿಕಾರಿ ಝೂಪಿಶಾನ್ ಹಕ್ ಇತರರಿದ್ದರು.   - [ಕೆಎಸ್‌ಆರ್‌ಟಿಸಿ ಬಸ್ಸಿನಲ್ಲಿ ಕಾಮುಕ!](https://mobiletime.in/2025/12/sex-on-a-ksrtc-bus/): ಅಂಕೋಲಾದಿಂದ ಕಾರವಾರ ಕಡೆ ಪ್ರಯಾಣಿಸುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ಸಿನಲ್ಲಿ ಕಾಮುಕನೊಬ್ಬ ಪ್ರವೇಶಿಸಿದ್ದು, ಮೈ ಮೇಲೆ ಕೈ ಹಾಕಿದನ್ನು ಕಾಮುಕನಿಗೆ ಯುವತಿಯೊಬ್ಬರು ಸರಿಯಾಗಿ ಬುದ್ದಿ ಕಲಿಸಿದ್ದಾರೆ. ಕಾಮುಕನಿಗೆ ಎರಡು ಏಟು ಕೊಟ್ಟಿದ್ದಲ್ಲದೇ ಅದನ್ನು ವಿಡಿಯೋ ಮಾಡಿ ಆತನ ಮಾನ ಹರಾಜು ಹಾಕಿದ್ದಾರೆ. ಯುವತಿ ಮಾಡಿದ ಧೈರ್ಯಕ್ಕೆ ಎಲ್ಲಡೆ ಮೆಚ್ಚುಗೆವ್ಯಕ್ತವಾಗಿದೆ. ಅಂಕೋಲಾದ ನಿಶಿಕಾ ಕಾನಡೆ ಅವರು ತಮ್ಮನ ಜೊತೆ ಮಂಗಳವಾರ ಸಂಜೆ ಅಂಕೋಲಾದಿoದ ಕಾರವಾರ ಬಸ್ ಹತ್ತಿದ್ದರು. ಬಸ್ಸಿನಲ್ಲಿ ಕುಳಿತ ಅವರು ನಿದ್ರೆಗೆ ಜಾರಿದ್ದರು. ಆಗ, ಅಮರ ಗುನಗಾ ಎಂಬಾತರು ಅದೇ ಬಸ್ಸು ಏರಿದ್ದು, ನಿಶಿಕಾ ಅವರ ಮೈ ಮುಟ್ಟಲು ಶುರು ಮಾಡಿದರು. ನಿದ್ರೆಯಿಂದ ಎದ್ದ ನಿಶಿಕಾ ಕಾನಡೆ ಮೈ ಮುಟ್ಟಿದವನನ್ನು ಪ್ರಶ್ನಿಸಿದರು. ಆತ ಇನ್ನಷ್ಟು ಉದ್ದಟತನದಿಂದ ಮಾತನಾಡಿದಾಗ ಆತನ ತಲೆಗೆ ಎರಡು ಬಿಟ್ಟರು. ಈ ವೇಳೆ ನಡೆದ ವಿದ್ಯಮಾನಗಳ ಬಗ್ಗೆ ನಿಶಿಕಾ ಕಾನಡೆ ವಿಡಿಯೋ ಮಾಡಿಕೊಂಡರು. ನಿಶಿಕಾ ಕಾನಡೆ ಅವರು ವಿಡಿಯೋದಲ್ಲಿ ಹೇಳಿಕೊಂಡಿರುವ ಹಾಗೇ, ಕಿಟಕಿ ಬದಿಯ ಸೀಟಿನಲ್ಲಿ ನಿಶಿಕಾ ಅವರ ತಮ್ಮ ಕುಳಿತಿದ್ದರು. ನಿಶಿಕಾ ಅವರು ಮಧ್ಯದ ಆಸನದಲ್ಲಿದ್ದರು. ಈ ವೇಳೆ ಪಕ್ಕದ ಖಾಲಿ ಸೀಟಿನಲ್ಲಿ ಬಂದು ಕುಳಿತ ಅಮರ ಗುನಗಾ ತಮ್ಮ ಕೈ ಚಳಕ ಪ್ರದರ್ಶಿಸಲು ಶುರು ಮಾಡಿದ್ದು, ನಿಶಿಕಾ ಅವರ ಜೊತೆ ಅಸಭ್ಯವಾಗಿ ವರ್ತಿಸಿದರು. ನಿದ್ರೆಯಿಂದ ನಿಶಿಕಾ ಅವರು ಎದ್ದಾಗ ಅವರ ಎದೆ ಮೇಲೆ ಅಮರ ಗುನಗಾ ಅವರ ಕೈ ಹಾಕಿದನ್ನು ಗಮನಿಸಿದರು. ಈ ವೇಳೆ ಆಘಾತಕ್ಕೆ ಒಳಗಾದ ನಿಶಿಕಾ ಅವರು ಧೈರ್ಯದಿಂದ ಅಮರ ಗುನಗಾ ಅವರನ್ನು ತರಾಠೆಗೆ ತೆಗೆದುಕೊಂಡರು. ಅಮರ ಗುನಗಾ ಕಾರವಾರದಲ್ಲಿ ಬಸ್ ಇಳಿಯುವುದನ್ನು ಸಹ ಚಿತ್ರಿಸಿ ಅದನ್ನು ವೈರಲ್ ಮಾಡಿದರು. `ಅಮರ್ ಗುನಗಾ ಅವರನ್ನು ತರಾಠೆಗೆ ತೆಗೆದುಕೊಂಡ ನಿಶಿಕಾ ಕಾನಡೆ ಅವರು `ನಮ್ಮ ರಕ್ಷಣೆಗೆ ನಾವೇ ಮುಂದಾಗಬೇಕು’ ಎಂಬ ಸಂದೇಶ ಸಾರಿದ್ದಾರೆ. `ಯಾವ ಮಹಿಳೆಯರು ಅನ್ಯಾಯ ಸಹಿಸಬಾರದು’ ಎಂದು ಅವರು ಕರೆ ನೀಡಿದ್ದಾರೆ. ಜೊತೆಗೆ ಈ `ವಿಡಿಯೋ ಅಮರ ಗುನಗಾ ಅವರ ಕುಟುಂಬಕ್ಕೆ ತಲುಪುವವರೆಗೂ ಶೇರ್ ಮಾಡಿ’ ಎಂದು ಮನವಿ ಮಾಡಿದ್ದಾರೆ. ನಿಶಿಕಾ ಅವರ ಧೈರ್ಯದ ಬಗ್ಗೆ ಎಲ್ಲಡೆ ಮೆಚ್ಚುಗೆವ್ಯಕ್ತವಾಗಿದೆ. ವೈರಲ್ ಆದ ಯುವತಿ ಹೇಳಿಕೆಯ ವಿಡಿಯೋ ಇಲ್ಲಿ ನೋಡಿ.. - [ಅಪಾಯಕ್ಕೆ ಆಹ್ವಾನಿಸಿದ ನದಿ ಅಂಚಿನ ನಡಿಗೆ!](https://mobiletime.in/2025/12/a-walk-along-the-riverside-invites-danger/): ದಾಂಡೇಲಿಯ ಕೊಳಗಿಬನ ನದಿ ದಂಡೆ ಮೇಲೆ ನಡೆಯುತ್ತಿದ್ದ ಮರಿಯಪ್ಪ ಮಾದರ್ ಅವರು ನೀರಿಗೆ ಬಿದ್ದು ಪ್ರಾಣಬಿಟ್ಟಿದ್ದಾರೆ. ಮರಿಯಪ್ಪ ಗದಗೆಪ್ಪ ಮಾದರ್ ಅವರು ದಾಂಡೇಲಿ ಕೊಳಗಿಬನದ ಮೋಮಿನಗಲ್ಲಿಯಲ್ಲಿ ವಾಸವಾಗಿದ್ದರು. ಎರಡು ವರ್ಷದ ಹಿಂದೆ ಅವರಿಗೆ ಪಾರ್ಶವಾಯು ಬಡಿದಿದ್ದು, ಕಾಲು ಸ್ವಾಧೀನ ಕಳೆದುಕೊಂಡಿತ್ತು. ಅದಾಗಿಯೂ ಕೋಲಿನ ಸಹಾಯದಿಂದ ಅವರು ನಡೆದಾಟ ನಡೆಸುತ್ತಿದ್ದರು. ಹೀಗಿರುವಾಗ ಡಿಸೆಂಬರ 30ರಂದು ಅವರು ಕೊಳಗಿಬನ ನದಿ ದಂಡೆ ಮೇಲೆ ನಡೆದಾಡುತ್ತಿದ್ದರು. ಆ ವೇಳೆ ಆಯತಪ್ಪಿ ಅವರು ನೀರಿಗೆ ಬಿದ್ದರು. ಇದನ್ನು ನೋಡಿದ ಸ್ಥಳೀಯರು ಅವರನ್ನು ನೀರಿನಿಂದ ಮೇಲೆತ್ತಿದರು. ಆದರೆ, ಮಾತನಾಡುವ ಸ್ಥಿತಿಯಲ್ಲಿರಲಿಲ್ಲ. ಅದಾಗಿಯೂ ಕುಟುಂಬದವರು ಅವರನ್ನು ಆಸ್ಪತ್ರೆಗೆ ದಾಖಲಿಸಿದರು. ಆದರೆ, ಇದರಿಂದ ಪ್ರಯೋಜನವಾಗಲಿಲ್ಲ. ವೈದ್ಯರು ಸಾವನ್ನು ದೃಢಪಡಿಸಿದ್ದು, ತಂದೆಯ ಸಾವಿನ ಬಗ್ಗೆ ಹಣ್ಣಿನ ವ್ಯಾಪಾರ ಮಾಡುವ ಮನೋಹರ ಮಾದರ್ ಅವರು ಮಾಹಿತಿ ನೀಡಿದರು. `ಅಪಾಯಕಾರಿ ಸ್ಥಳಗಳಿಗೆ ಹೋಗಬೇಡಿ’ - [ಮದುವೆಗೆ ಹೋದವನ ಮನೆಯಲ್ಲಿ ಕಳ್ಳರ ಕೈಚಳಕ!](https://mobiletime.in/2025/12/thieves-break-into-a-mans-house-for-a-wedding/): ಭಟ್ಕಳದ ಫ್ರಾನ್ಸಿಸ್ ಬಸ್ತಾಂವ ಡಿಸೋಜಾ ಅವರ ಮನೆಯಲ್ಲಿ ಕಳ್ಳತನ ನಡೆದಿದೆ. ಅವರು ಮದುವೆಗೆ ಹೋಗಿರುವುದನ್ನು ನೋಡಿದ ಕಳ್ಳರು ಮನೆಗೆ ನುಗ್ಗಿ ಕನ್ನ ಹಾಕಿದ್ದಾರೆ. ಭಟ್ಕಳ ನಗರದ ಪುರವರ್ಗದ 3ನೇ ಕ್ರಾಸ್ ಚರ್ಚ್ ಹಿಂದಿನ ವಸತಿ ಪ್ರದೇಶದಲ್ಲಿ ಫ್ರಾನ್ಸಿಸ್ ಡಿಸೋಜಾ ಅವರು ವಾಸವಾಗಿದ್ದರು. ಪತ್ರಿಕಾ ವಿತರಕರಾಗಿ ಅವರು ಉಪಜೀವನ ನಡೆಸುತ್ತಿದ್ದರು. ಮಂಗಳವಾರ ಮದುವೆಗಾಗಿ ಅವರು ಮಂಗಳೂರಿಗೆ ಹೋಗಿದ್ದರು. ಆ ವೇಳೆ ಅವರ ಮನೆಗೆ ಕಳ್ಳರು ನುಗ್ಗಿದ್ದು, ಚಿನ್ನಾಭರಣ ದೋಚಿ ಪರಾರಿಯಾದರು. ಡಿಸೋಜಾ ಕುಟುಂಬದವರು ಮಂಗಳೂರಿನಲ್ಲಿ ನಡೆದ ಮದುವೆ ಮುಗಿಸಿ ಖುಷಿಯಿಂದ ಮನೆಗೆ ಮರಳಿದರು. ಆಗ, ಕಳ್ಳರು ಮನೆ ಮುಂದಿನ ಬಾಗಿಲು ಒಡೆದು ಒಳಗೆ ನುಗ್ಗಿರುವುದು ಕಾಣಿಸಿತು. ಕೋಣೆಯ ಕಪಾಟಿನಲ್ಲಿ ಇಟ್ಟಿದ್ದ ಸುಮಾರು 3.30 ಲಕ್ಷ ರೂ ಮೌಲ್ಯದ, ಒಟ್ಟು 55 ಗ್ರಾಂ ತೂಕದ ಬಂಗಾರದ ಆಭರಣ ಕಾಣೆಯಾಗಿರುವು ಗಮನಕ್ಕೆ ಬಂದಿತು. - [ಬಂಧನದ ಭೀತಿಗೆ ಕೋಟಿ ರೂ ಕಳೆದ ಶಿಕ್ಷಕ: ಉಗ್ರವಾದಿಗಿಂತಲೂ ಉಗ್ರ ಈ ನಕಲಿ ಪೊಲೀಸ್!](https://mobiletime.in/2025/12/teacher-who-spent-crores-of-rupees-fearing-arrest-this-fake-policeman-is-more-dangerous-than-a-terrorist/): `ನಿಮ್ಮನ್ನು ಅರೆಸ್ಟ್ ಮಾಡುತ್ತೇವೆ’ ಎಂದು ಬಂದ ಫೋನಿಗೆ ಬೆದರಿದ ಮುಂಡಗೋಡಿನಲ್ಲಿರುವ ನಿವೃತ್ತ ಶಿಕ್ಷಕರೊಬ್ಬರು ಆ ಬಂಧನದಿoದ ತಪ್ಪಿಸಿಕೊಳ್ಳುವುದಕ್ಕಾಗಿ ಒಂದುವರೆ ಕೋಟಿ ರೂ ಖರ್ಚು ಮಾಡಿದ್ದಾರೆ. ಅದಾದ ನಂತರ ಆ ಶಿಕ್ಷಕರಿಗೆ ಮೋಸ ಹೋಗಿರುವುದು ಅರಿವಾಗಿದೆ. ಮುಂಡಗೋಡಿನ ಟಿಬೇಟಿಯನ್ ಕಾಲೋನಿಯಲ್ಲಿ ನಿವೃತ್ತ ಶಿಕ್ಷಕ ಪಾಲ್ಡೆನ್ ಚೋದಕ್ ಅವರು ವಾಸವಾಗಿದ್ದಾರೆ. 72 ವರ್ಷದ ಅವರಿಗೆ ನವೆಂಬರ್ 29ರಂದು ವಾಟ್ಸಪ್ ಮೂಲಕ ಫೋನ್ ಬಂದಿದೆ. ಫೋನ್ ಮಾಡಿದ ವ್ಯಕ್ತಿ ತನ್ನನ್ನು ಪೊಲೀಸ್ ಎಂದು ಪರಿಚಯಿಸಿಕೊಂಡಿದ್ದಾರೆ. ಮಹಾರಾಷ್ಟçದ ಕೊಲಬಾ ಪೊಲೀಸ್ ಸ್ಟೇಶನಿನಿಂದ ಫೋನ್ ಮಾಡಿರುವುದಾಗಿಯೂ ಹೇಳಿದ್ದಾರೆ. ಅದಾದ ನಂತರ ಆ ನಕಲಿ ಪೊಲೀಸ್ ವಿಡಿಯೋ ಕಾಲ್ ಮಾಡಿ ತಾನು ಯುನಿಪಾರಂ ಧರಿಸಿರುವುದನ್ನು ಕಾಣಿಸಿದ್ದಾರೆ. `ಅಬ್ದುಲ್ ಸಲಾಂ ಎಂಬ ಉಗ್ರವಾದಿಯನ್ನು ಮುಂಬೈನಲ್ಲಿ ಬಂಧಿಸಿದ್ದೇವೆ. ಆತನಿಂದ 242 ಎಟಿಎಂ ಕಾರ್ಡ ವಶಕ್ಕೆಪಡೆದಿದ್ದು, ಅದರಲ್ಲಿ ನಿಮ್ಮ ಕೆನರಾ ಬ್ಯಾಂಕ್ ಎಟಿಎಂ ಕಾರ್ಡ ಸಹ ಇದೆ. ಆ ಕಾರ್ಡಿನ ಮೂಲಕ ಕೋಟ್ಯಂತರ ರೂ ಅವ್ಯವಹಾರ ನಡೆದಿದೆ. ನಿಮ್ಮನ್ನು ಈಗ ಅರೆಸ್ಟ್ ಮಾಡುತ್ತೇವೆ’ ಎಂದು ವಿಡಿಯೋ ಕಾಲ್ ಮೂಲಕವೇ ಆ ನಕಲಿ ಪೊಲೀಸ್ ಬೆದರಿಸಿದ್ದಾರೆ. `ತಾನೂ ತಪ್ಪು ಮಾಡಿಲ್ಲ. ಅವ್ಯವಹಾರ ನಡೆಸಿಲ್ಲ’ ಎಂದು ಪಾಲ್ಡೆನ್ ಚೋದಕ್ ಅವರು ಹೇಳಿದರೂ ನಕಲಿ ಪೊಲೀಸ್ ನಂಬಿಲ್ಲ. ಹಣ ವರ್ಗಾವಣೆ ಆದ ಬಗ್ಗೆ ಬ್ಯಾಂಕ್ ಸ್ಟೇಟ್‌ಮೆಂಟ್ ರವಾನಿಸಿದ ನಕಲಿ ಪೊಲೀಸ್, `ಸದ್ಯ ನಿಮ್ಮ ಬ್ಯಾಂಕ್ ಖಾತೆಯಲ್ಲಿರುವ ಎಲ್ಲಾ ಹಣವನ್ನು ನ್ಯಾಶನಲ್ ಫಂಡಿಗೆ ಕಳುಹಿಸಬೇಕು. ನೀವು ತಪ್ಪು ಮಾಡದಿದ್ದರೆ ಆ ಹಣ ಮರಳಿಸುತ್ತೇವೆ’ ಎಂದು ನಂಬಿಕೆ ಹುಟ್ಟಿಸಿದ್ದಾರೆ. ಈ ವೇಳೆ `ನನ್ನ ಎಲ್ಲಾ ಹಣ ಪಿಕ್ಸ್ ಡಿಪೋಜಿಟ್ ಆಗಿದೆ’ ಎಂದು ಪಾಲ್ಡೆನ್ ಚೋದಕ್ ಅವರು ಹೇಳಿದ್ದಾರೆ. `ಹಣ ವರ್ಗಾಯಿಸಲು ಸಮಯ ಬೇಕು’ ಎಂದು ಮನವಿ ಮಾಡಿದ್ದಾರೆ. ಆಗ, `ಯಾವುದೇ ಕಾರಣಕ್ಕೂ ಫೋನ್ ಬಂದ್ ಮಾಡುವ ಹಾಗಿಲ್ಲ. ಫೋನ್ ಚಾಲು ಇರುವುದನ್ನು ಖಚಿತಪಡಿಸಲು ಪ್ರತಿ 2 ತಾಸಿಗೆ ಒಮ್ಮೆ ನಮಗೆ ಮೆಸೆಜ್ ಮಾಡಬೇಕು. ಈ ವಿಷಯ ಯಾರಿಗೂ ಹೇಳುವ ಹಾಗಿಲ್ಲ’ ಎಂದು ನಕಲಿ ಪೊಲೀಸ್ ಅಧಿಕಾರಿ ಸೂಚಿಸಿದ್ದಾರೆ. ಆ ಮಾತು ಆಲಿಸಿದ ಪಾಲ್ಡೆನ್ ಚೋದಕ್ ಅವರು ಬ್ಯಾಂಕಿಗೆ ಹೋಗಿ ತಮ್ಮಲ್ಲಿದ್ದ ಎಲ್ಲಾ ಹಣ ವರ್ಗಾಯಿಸಿದ್ದಾರೆ. ಅದಾದ ನಂತರ ಸ್ನೇಹಿತರಿಂದ ಸಾಲ ಮಾಡಿಯೂ ಹಣ ವರ್ಗಾಯಿಸಿದ್ದಾರೆ. ಒಟ್ಟು 1,61,00,047 ರೂ ವರ್ಗಾವಣೆ ನಂತರ ತಾವು ಮೋಸ ಹೋಗಿರುವುದು ಪಾಲ್ಡೆನ್ ಚೋದಕ್ ಅವರಿಗೆ ಗೊತ್ತಾಗಿದೆ. ಅದಾದ ನಂತರ ಕಾರವಾರಕ್ಕೆ ಹೋಗಿ ಸೈಬರ್ ಅಪರಾಧ ಪೊಲೀಸ್ ಠಾಣೆಯಲ್ಲಿ ತಮಗಾದ ಅನ್ಯಾಯದ ಬಗ್ಗೆ ದೂರಿದ್ದಾರೆ. `ನಕಲಿ ಪೊಲೀಸರಿಂದ ಫೋನ್ ಬಂದರೆ ಅಸಲಿ ಪೊಲೀಸರಿಗೆ ಫೋನ್ ಮಾಡಿ’ - [ಹೊಸ ವರ್ಷಕ್ಕೆ ಹಲವು ನಿಯಮ!](https://mobiletime.in/2025/12/many-rules-for-the-new-year/): ಹೊಸ ವರ್ಷದ ಹಿನ್ನಲೆ ಸಮುದ್ರ ತೀರಗಳಲ್ಲಿ ಮೋಜು-ಮಸ್ತಿ ಮಾಡುವುದಕ್ಕೆ ಜಿಲ್ಲಾಧಿಕಾರಿ ಕೆ ಲಕ್ಷ್ಮೀಪ್ರಿಯಾ ಅವರು ಕಡಿವಾಣ ಹಾಕಿದ್ದಾರೆ. ರಾತ್ರಿ 12.30ರ ನಂತರ ಸಂಭ್ರಮಾಚರಣೆ ನಡೆಸದಂತೆಯೂ ಅವರು ಸೂಚಿಸಿದ್ದಾರೆ. `ಡಿಸೆಂಬರ್ 31ರಂದು ಹೊಸ ವರ್ಷ ಆಚರಣೆ ಸಂದರ್ಭದಲ್ಲಿ ಸಾರ್ವಜನಿಕರು ಅಗತ್ಯ ಮುನ್ನೆಚ್ಚರಿಕೆ ವಹಿಸಬೇಕು. ಸುರಕ್ಷಿತ ರೀತಿಯಲ್ಲಿ ಹೊಸ ವರ್ಷವನ್ನು ಆಚರಣೆ ಮಾಡಬೇಕು’ ಎಂದವರು ಹೇಳಿದ್ದಾರೆ. ಡಿಸೆಂಬರ್ 31ರ ಸಂಜೆ 6 ಗಂಟೆ ನಂತರ ಸಮುದ್ರಕ್ಕೆ ಇಳಿಯದಂತೆ ಕಟ್ಟೆಚ್ಚರವಹಿಸಿದ್ದು, ಸಮುದ್ರ ಸ್ನಾನ ಮಾಡುತ್ತಿರುವವರಿಗೆ ತಿಳುವಳಿಕೆ ನೀಡಲಾಗುತ್ತಿದೆ. ಈ ಬಾರಿಯ ಹೊಸ ವರ್ಷಕ್ಕೆ ಕಡಲತೀರದಲ್ಲಿ ಸಭೆ-ಸಮಾರಂಭ ನಡೆಸಲು ಸಹ ಅವಕಾಶ ಇಲ್ಲ. ಎಂದಿನAತೆ, ಸಾರ್ವಜನಿಕ ಸ್ಥಳದಲ್ಲಿ ಮದ್ಯಪಾನ ಮಾಡಿದರೂ ಕಾನೂನು ಕ್ರಮ ಜರುಗಿಸಲಾಗುತ್ತದೆ. ರಾತ್ರಿ 12.30ರ ನಂತರ ಕಡಲತೀರಗಳ ಪ್ರವೇಶವನ್ನು ನಿಷೇಧಿಸಲಾಗಿದೆ. ಜೊತೆಗೆ ವಿವಿಧ ಹೊಟೇಲ್, ರೆಸಾರ್ಟ ಹಾಗೂ ಹೋಂ ಸ್ಟೇಗಳಲ್ಲಿ ಸಹ ರಾತ್ರಿ 12.30ರ ನಂತರ ಯಾವುದೇ ಚಟುವಟಿಕೆ ನಡೆಸದಂತೆ ಡೀಸಿ ಸೂಚಿಸಿದ್ದಾರೆ. - [ಟಾಟಾ ಸ್ಕೈ: ಡಿಶ್ ಕೂರಿಸಲು ಹೋದವನ ಬದುಕು ಅಂತ್ಯ!](https://mobiletime.in/2025/12/tata-sky-the-life-of-the-person-who-went-to-install-the-dish-is-over/): ಭಟ್ಕಳದ ಅರುಣ ನಾಯ್ಕ ಅವರ ಮನೆಗೆ ಟಿವಿ ಡಿಶ್ ಕೂರಿಸಲು ಹೋಗಿದ್ದ ಸಂತೋಷ ನಾಯ್ಕ ಅವರು ಮನೆ ಮಹಡಿಯಿಂದ ಬಿದ್ದು ಸಾವನಪ್ಪಿದ್ದಾರೆ. ಭಟ್ಕಳದ ಗೊರಟೆ ಹೊನ್ನೆಮುಡಿ ಬಳಿಯ ಶಿರಜ್ಜಿಮನೆಯಲ್ಲಿ ಸಂತೋಷ ರಾಮಾ ನಾಯ್ಕ (35) ಅವರು ವಾಸವಾಗಿದ್ದರು. ಎಲೆಕ್ಟಿçಯಿಶನ್ ಆಗಿದ್ದ ಅವರು ಟಾಟಾ ಸ್ಕೈ ಕಂಪನಿಯ ಡಿಶ್ ಕೂರಿಸುವ ಕೆಲಸ ಮಾಡುತ್ತಿದ್ದರು. ಡಿಸೆಂಬರ್ 30ರ ಸಂಜೆ ಸಂತೋಷ ನಾಯ್ಕ ಅವರನ್ನು ಬೆಳಕೆ ಕಟಕೇರಿಯ ಆಟೋ ಚಾಲಕ ಅರುಣ ಈರಪ್ಪ ನಾಯ್ಕ ಅವರು ಮನೆಗೆ ಆಮಂತ್ರಿಸಿದ್ದರು. ಅರುಣ ನಾಯ್ಕ ಅವರ ಮನೆಯಲ್ಲಿದ್ದ ಟಿವಿಗೆ ಕೇಬಲ್ ಕನೆಕ್ಷನ್ ನೀಡಿದ್ದ ಸಂತೋಷ ನಾಯ್ಕ ಅವರು ಮನೆ ಮಹಡಿ ಏರಿ ಡಿಶ್ ಕೂರಿಸುತ್ತಿದ್ದರು. ಆ ಅವಧಿಯಲ್ಲಿ ಸಂತೋಷ ನಾಯ್ಕ ಅವರ ಕಾಲು ಜಾರಿದ್ದು, ಮಹಡಿ ಮೇಲಿಂದ ನೆಲಕ್ಕೆ ಬಿದ್ದರು. ಬಿದ್ದ ರಭಸಕ್ಕೆ ಸಂತೋಷ ನಾಯ್ಕ ಅವರ ತಲೆಗೆ ಭಾರೀ ಪ್ರಮಾಣದಲ್ಲಿ ಪೆಟ್ಟಾಯಿತು. ಸಂತೋಷ ನಾಯ್ಕ ಅವರನ್ನು ಆಸ್ಪತ್ರೆಗೆ ಕರೆದೊಯ್ಯುವ ಕೆಲಸವೂ ನಡೆಯಿತು. ಆದರೆ, ಆಸ್ಪತ್ರೆ ಸೇರುವ ಮೊದಲೇ ಸಂತೋಷ ನಾಯ್ಕ ಅವರು ಕೊನೆಯುಸಿರೆಳೆದರು. ತಮ್ಮನ ಸಾವಿನ ಬಗ್ಗೆ ನಾಗೇಶ ರಾಮ ನಾಯ್ಕ ಅವರು ಮಾಹಿತಿ ನೀಡಿದರು. `ಡಿಶ್ ಕೂರಿಸುವ ತಮ್ಮ ಪರಿಚಯಸ್ಥರಿಗೆ ಈ ಸುದ್ದಿ ಕಳುಹಿಸಿ. ಕೆಲಸದ ಅವಧಿಯಲ್ಲಿ ಮುನ್ನಚ್ಚರಿಕೆವಹಿಸುವಂತೆ ಸೂಚಿಸಿ’ - [ಅಡಿಕೆ ತೋಟಕ್ಕೆ ಕಳ್ಳರ ಕಾಟ!](https://mobiletime.in/2025/12/thieves-threaten-the-areca-nut-plantation/): ಎಲೆಚುಕ್ಕಿ ರೋಗ, ಫಸಲಿನಲ್ಲಿನ ಏರಿಳಿತದ ನಡುವೆ ಅಡಿಕೆ ಬೆಳೆ ಉಳಿಸಿಕೊಂಡಿದ್ದ ರೈತರಿಗೆ ಕಳ್ಳರ ಕಾಟ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಯಲ್ಲಾಪುರದ ವಿಶ್ವೇಶ್ವರ ಹೆಗಡೆ ಅವರ ತೋಟಕ್ಕೆ ನುಗ್ಗಿದ ಕಳ್ಳರು ಹಸಿ ಅಡಿಕೆಯನ್ನು ಕದ್ದು ಪರಾರಿಯಾಗಿದ್ದಾರೆ. ಯಲ್ಲಾಪುರದ ಮಂಚಿಕೇರಿ ಬಳಿಯ ಕಂಪ್ಲಿಯಲ್ಲಿ ವಿಶ್ವೇಶ್ವರ ಗಜಾನನ ಹೆಗಡೆ ಅವರು ವಾಸವಾಗಿದ್ದಾರೆ. 58 ವರ್ಷದ ಅವರು ಅಡಿಕೆ ಮರಗಳ ಬಗ್ಗೆ ಅಪಾರ ಕಾಳಜಿಹೊಂದಿದ್ದು, ಆ ಮರಗಳ ಆರೈಕೆಯಿಂದಲೇ ಬದುಕು ಕಟ್ಟಿಕೊಂಡಿದ್ದಾರೆ. ಸೊಪ್ಪು-ಗೊಬ್ಬರ ಹಾಕಿ ಅವರು ಪೋಷಿಸಿದ್ದ ಅಡಿಕೆ ಮರ ಏರಿದ ಕಳ್ಳರು ಅಲ್ಲಿದ್ದ ಅಡಿಕೆ ಅಪಹರಿಸಿದ್ದಾರೆ. ಡಿಸೆಂಬರ್ 27ರ ಸಂಜೆ 7 ಗಂಟೆಯವರೆಗೂ ವಿಶ್ವೇಶ್ವರ ಹೆಗಡೆ ಅವರು ತೋಟ ಸುತ್ತಾಟ ನಡೆಸಿದ್ದು, ಅದಾದ ನಂತರ ಕಳ್ಳತನ ನಡೆದಿದೆ. ಡಿಸೆಂಬರ 28ರ ಸಂಜೆ 4 ಗಂಟೆಗೆ ಮತ್ತೆ ತೋಟಕ್ಕೆ ಹೋದಾಗ ಅಲ್ಲಿದ್ದ ಅಡಿಕೆ ಮರದಲ್ಲಿದ್ದ ಫಸಲು ಕಾಣೆಯಾಗಿದೆ. ಸುಮಾರು 30 ಮರಗಳನ್ನು ಬೋಳಿಸಿದ ಕಳ್ಳರು 2.40 ಕ್ವಿಂಟಾಲ್ ಹಸಿ ಅಡಿಕೆ ದೋಚಿದ್ದಾರೆ. ಕಳ್ಳರ ಕಾಟದಿಂದ 14 ಸಾವಿರ ರೂ ನಷ್ಟವಾದ ಬಗ್ಗೆ ವಿಶ್ವೇಶ್ವರ ಹೆಗಡೆ ಅವರು ಹೇಳಿದ್ದಾರೆ. ಕಳ್ಳರನ್ನು ಹುಡುಕಿ ಶಿಕ್ಷಿಸಬೇಕು ಎಂದು ಅವರು ಪೊಲೀಸ್ ದೂರು ನೀಡಿದ್ದು, ಯಲ್ಲಾಪುರ ಪೊಲೀಸರು ಕಳ್ಳರ ಶೋಧ ನಡೆಸಿದ್ದಾರೆ. - [ಕುಮಟಾ: ಕಟ್ಟಡ ಕಾರ್ಮಿಕನನ್ನು ಕೊಂದ ಕುಂಬಾರ ಹುಳ!](https://mobiletime.in/2025/12/kumata-a-construction-worker-was-killed-by-a-potters-worm/): ಕಟ್ಟಡ ನಿರ್ಮಾಣ ಕೆಲಸಕ್ಕೆ ಹೋಗಿದ್ದ ಗಣೇಶ ಪಟಗಾರ ಅವರಿಗೆ ಕುಂಬಾರ ಹುಳ ಕಚ್ಚಿದ್ದು, ಅವರು ಅದೇ ನೋವಿನಲ್ಲಿ ಸಾವನಪ್ಪಿದ್ದಾರೆ. ಕುಮಟಾದ ಮಾಸೂರಿನಲ್ಲಿ ಗಣೇಶ ಹನುಮಂತ ಪಟಗಾರ (46) ಅವರು ವಾಸವಾಗಿದ್ದರು. ಕಟ್ಟಡ ಕಾರ್ಮಿಕರಾಗಿ ಅವರು ಬದುಕು ಕಟ್ಟಿಕೊಂಡಿದ್ದರು. ಗಾರೆ ಕೆಲಸವನ್ನು ಅವರು ಅಚ್ಚುಕಟ್ಟಾಗಿ ಮಾಡುತ್ತಿದ್ದರು. ಹೀಗಾಗಿ ಸುತ್ತಲಿನ ಅನೇಕರು ಅವರನ್ನು ಕೆಲಸಕ್ಕೆ ಕರೆಯುತ್ತಿದ್ದರು. ಡಿಸೆಂಬರ್ 30ರಂದು ಮಂಜುನಾಥ ಗುನಗಾ ಅವರ ಜೊತೆ ಗಣೇಶ ಪಟಗಾರ ಅವರು ಕೆಲಸಕ್ಕೆ ಹೋಗಿದ್ದರು. ಗುಂದದ ರಾಜು ನಾಯ್ಕ ಅವರು ಕಪೌಂಡ್ ಕಟ್ಟುವ ಕೆಲಸದಲ್ಲಿ ಅವರು ತಮ್ಮನ್ನು ತೊಡಗಿಸಿಕೊಂಡಿದ್ದರು. ಆ ವೇಳೆ ಕುಂಬಾರ ಹುಳವೊಂದು ದಾಳಿ ಮಾಡಿತು. ಆ ಹುಳ ಗಣೇಶ ಪಟಗಾರ ಅವರ ಕೈ ಹಾಗೂ ತುಟಿಗೆ ಕಚ್ಚಿ ಗಾಯಗೊಳಿಸಿತು. ಹುಳ ಕಚ್ಚಿದ ನೋವಿಗೆ ಗಣೇಶ ಪಟಗಾರ ಅವರು ಅಲ್ಲಿಯೇ ಕುಸಿದು ಬಿದ್ದರು. ಅವರನ್ನು ಆಂಬುಲೆನ್ಸಿನ ಮೂಲಕ ಆಸ್ಪತ್ರೆಗೆ ಕರೆದೊಯ್ಯುವ ಕೆಲಸ ನಡೆಯಿತು. ಆದರೆ, ಅದು ಪರಿಣಾಮ ಬೀರಲಿಲ್ಲ. ಗುಡಿಗಾರ ಗಲ್ಲಿಯ ಬಳಿ ಗಣೇಶ ಪಟಗಾರ ಅವರು ಸಾವನಪ್ಪಿದರು. ಅವರ ಅಣ್ಣ ಮಹದೇವ ಪಟಗಾರ ಅವರು ಈ ಬಗ್ಗೆ ಮಾಹಿತಿ ನೀಡಿದರು. - [ಅಡಿಕೆ ಮರಗಳ ಮರಣ: ಅತಿಕ್ರಮಣದಾರರಿಂದ ಅರಣ್ಯ ಕಚೇರಿಗೆ ಮುತ್ತಿಗೆ!](https://mobiletime.in/2025/12/death-of-areca-trees-encroachers-lay-siege-to-the-forest-office/): ಸಿದ್ದಾಪುರದಲ್ಲಿ ನೂರಾರು ಅಡಿಕೆ ಮರಗಳನ್ನು ಮಾರಣ ಹೋಮ ನಡೆಸಿದ ಅರಣ್ಯಾಧಿಕಾರಿಗಳ ವಿರುದ್ಧ ಅತಿಕ್ರಮಣದಾರರು ಸಿಡಿದೆದ್ದಿದ್ದಾರೆ. ಬುಧವಾರ ಕ್ಯಾದಗಿ ಅರಣ್ಯ ಕಛೇರಿಗೆ ಅತಿಕ್ರಮಣದಾರರು ಮುತ್ತಿಗೆ ಹಾಕಿ ಆಕ್ರೋಶವ್ಯಕ್ತಪಡಿಸಿದ್ದಾರೆ. `ಅಡಿಕೆ ಮರ ನಾಶ ಮಾಡಿದ ಅರಣ್ಯ ಸಿಬ್ಬಂದಿಯನ್ನು ಹಾಜರುಪಡಿಸಿ’ ಎಂದು ಪ್ರತಿಭಟನಾಕಾರರು ಪಟ್ಟು ಹಿಡಿದರು. ಆ ಅರಣ್ಯ ಸಿಬ್ಬಂದಿ ಕಾಣಿಸದ ಕಾರಣ ಕಚೇರಿಗೆ ನುಗ್ಗುವ ಪ್ರಯತ್ನ ಮಾಡಿದರು. `ಅರಣ್ಯ ಇಲಾಖೆಯ ತಪ್ಪು ನೀತಿ-ನಿಯಮಗಳಿಂದ ಜನ ಸಮಸ್ಯೆ ಅನುಭವಿಸುತ್ತಿದ್ದಾರೆ. ಮಾನವೀಯತೆ ಮರೆತು ಅಧಿಕಾರಿಗಳು ವರ್ತಿಸಿದ್ದಾರೆ’ ಎಂದು ಪ್ರತಿಭಟನಾಕಾರರು ಆಕ್ರೋಶವ್ಯಕ್ತಪಡಿಸಿದರು. `ಕಾನೂನು ವಿಧಿ-ವಿಧಾನ ಅನುಸರಿಸದೇ ಅತಿಕ್ರಮಣ ತೆರವು ಮಾಡಲಾಗಿದೆ. ಅರ್ಜಿ ಪುನರ್ ಪರಿಶೀಲನೆ ಹಂತದಲ್ಲಿರುವಾಗ ಒಕ್ಕಲೆಬ್ಬಿಸುವ ಪ್ರಕ್ರಿಯೆ ನಡೆದಿದೆ’ ಎಂದು ಅಸಮಧಾನವ್ಯಕ್ತಪಡಿಸಿದರು. ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ಅವರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಎಸಿಎಫ್ ಪವಿತ್ರಾ ಮತ್ತು ಆರ್ ಎಫ್ ಓ ಮಹೇಶ್ ದೇವಡಿಗ ಅವರು ಜನರ ಪ್ರಶ್ನೆಗೆ ಉತ್ತರಿಸಲಾಗದೇ ತತ್ತರಿಸಿದ್ದು, ತಹಶೀಲ್ದಾರ ಎಮ್ ಆರ್ ಕುಲಕರ್ಣಿ ಮತ್ತು ಸಿಪಿಐ ಸೀತಾರಾಮ ಅವರು ಪ್ರತಿಭಟನಾಕಾರರನ್ನು ಸಮಾಧಾನ ಮಾಡುವ ಪ್ರಯತ್ನ ಮಾಡಿದರು. ಮುಂದಿನ 15 ದಿನದಲ್ಲಿ ಅರಣ್ಯವಾಸಿಗಳ ಸಭೆ ನಡೆಸುವುದಾಗಿ ಅಧಿಕಾರಿಗಳು ಭರವಸೆ ನೀಡಿದರು. ಪ್ರಮುಖರಾದ ಮಾಬ್ಲೇಶ್ವರ ನಾಯ್ಕ ಬೇಡ್ಕಣಿ ಕೆ ಟಿ ನಾಯ್ಕ ಕ್ಯಾದಗಿ, ಇಬ್ರಾಹೀಂ ಗೌಡಳ್ಳಿ, ಮಹೇಶ ನಾಯ್ಕ ಕಾನಕ್ಕಿ, ಬಿಡಿ ನಾಯ್ಕ ಹರಕನಳ್ಳಿ, ರಾಮಕೃಷ್ಣ ನಾಯ್ಕ ತ್ಯಾಗಲಿಮನೆ, ದಿನೇಶ ನಾಯ್ಕ ಬೇಡ್ಕಣಿ, ಸುನೀಲ ನಾಯ್ಕ ಸಂಪಖoಡ, ನೆಹರು ನಾಯ್ಕ, ಶಿವಾನಂದ ಜೋಗಿ, ಚಂದ್ರ ಶಾನಭಾಗ,ರಪೀಕ್ ಗೌಡಳ್ಳಿ, ಹರಿ ನಾಯ್ಕ ಓಂಕಾರ, ಮೋಹನ ಕಾನಳ್ಳಿ, ಉಮೇಶ ಬೇಡ್ಕಣಿ, ಗೋವಿಂದ ಗೌಡ, ಶಿವಪ್ಪ ನಾಯ್ಕ, ಧನಂಜಯ ನಾಯ್ಕ, ಸಂಕೇತ ಹಲಗೇರಿ, ನಾಗರಾಜ ಮರಾಠಿ ಪ್ರತಿಭಟನೆಯಲ್ಲಿದ್ದರು. - [ಸರ್ಕಾರಿ ಶಾಲೆಯಲ್ಲಿ ಆರೋಗ್ಯ ಮೇಳ](https://mobiletime.in/2025/12/health-fair-at-government-school/): `ಮಕ್ಕಳ ಮನೋದೈಹಿಕ ಆರೋಗ್ಯವು ಭವಿಷ್ಯ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ’ ಎಂದು ಶಿರಸಿ ಸ್ಕೊಡ್‌ವೆಸ್ ಸಂಸ್ಥೆಯ ಕಾರ್ಯದರ್ಶಿ ಸರಸ್ವತಿ ಎನ್ ರವಿ ಅವರು ಹೇಳಿದ್ದಾರೆ. ಸ್ಕೊಡ್‌ವೆಸ್ ಹಾಗೂ ದೇಸಾಯಿ ಫೌಂಡೇಶನ್ ಸಹಯೋಗದಲ್ಲಿ ಶಿರಸಿಯ ಕೆ ಎಚ್ ಬಿ ಕಾಲೋನಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಿದ್ದ ಬಾಲ ಆರೋಗ್ಯ ಮೇಳ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು `ಮಕ್ಕಳ ಆರೋಗ್ಯದ ಬಗ್ಗೆ ಅರಿವು ಮೂಡಿಸುವ ಸಲುವಾಗಿ ಬಾಲ ಆರೋಗ್ಯ ಮೇಳವನ್ನು ಆಯೋಜಿಸಲಾಗಿದೆ’ ಎಂದರು,. `ಈ ಕಾರ್ಯಕ್ರಮದಲ್ಲಿ ಆರೋಗ್ಯ ತಪಾಸಣೆ, ವಯಕ್ತಿಕ ಶುಚಿತ್ವ, ಮಾನಸಿಕ ಆರೋಗ್ಯಕ್ಕಾಗಿ ವಿವಿಧ ಮನರಂಜನಾ ಕ್ರೀಡಾ ಚಟುವಟಿಕೆ ನಡೆಸಲಾಗುತ್ತದೆ. ಪೌಷ್ಠಿಕ ಆಹಾರದ ಮಹತ್ವವನ್ನು ತಿಳಿಸುವ ಕಾರ್ಯಕ್ರಮ ಇದಾಗಿದೆ’ ಎಂದರು. ಪ್ರಮುಖರಾದ ಶ್ರೀಮತಿ ಭಟ್, ವೈದ್ಯಾಧಿಕಾರಿ ಡಾ ರಿತಿಕ್, ಉಮೇಶ ಮರಾಠಿ ಹಾಗೂ ಶಾಲಾ ಆಡಳಿತ ಮಂಡಳಿಯವರು ಇದ್ದರು. - [ಶಿರಸಿ ಕ್ಷೇತ್ರ: ಅಕ್ರಮ ಮದ್ಯ ಮಾರಾಟದಿಂದಲೇ ಆದಾಯ ಹೆಚ್ಚಳ!](https://mobiletime.in/2025/12/sirsi-constituency-income-increased-from-illegal-liquor-sales/): `ಶಿರಸಿ-ಸಿದ್ದಾಪುರ ಕ್ಷೇತ್ರದಲ್ಲಿ ಅಕ್ರಮ ಮದ್ಯ ಮಾರಾಟ ಜೋರಾಗಿದ್ದು, ಈ ಬಗ್ಗೆ ಶಾಸಕ ಭೀಮಣ್ಣ ನಾಯ್ಕ ಅವರು ಮಾತನಾಡುತ್ತಿಲ್ಲ. ಅಕ್ರಮ ಮದ್ಯದಿಂದ ಆದಾಯ ಬರುವ ಕಾರಣ ಅವರು ಮೌನವಾಗಿದ್ದಾರೆ’ ಎಂಬ ಅರ್ಥದಲ್ಲಿ ಜೆಡಿಎಸ್ ಮುಖಂಡ ಉಪೇಂದ್ರ ಪೈ ಹೇಳಿಕೆ ನೀಡಿದ್ದಾರೆ! `ಶಿರಸಿ-ಸಿದ್ದಾಪುರ ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸಗಳು ನಡೆಯುತ್ತಿಲ್ಲ. ಬಡ ಅತಿಕ್ರಮಣದಾರರನ್ನು ಒಕ್ಕಲೆಬ್ಬಿಸುವ ಪ್ರಕ್ರಿಯೆ ನಿಂತಿಲ್ಲ. 30 ವರ್ಷ ಹಿಂದಿನ ಅಡಿಕೆ ಮರಗಳ ನಾಶ ನಡೆದರೂ ಶಾಸಕ ಭೀಮಣ್ಣ ನಾಯ್ಕ ಅವರು ಮಾತನಾಡುತ್ತಿಲ್ಲ’ ಎಂದು ಉಪೇಂದ್ರ ಪೈ ಅವರು ಅಸಮಧಾನಹೊರಹಾಕಿದ್ದಾರೆ. `ಪ್ರತಿ ದಿನ ಸಂಜೆ 6 ಗಂಟೆ ನಂತರ ಅಕ್ರಮ ಮದ್ಯ ಸರಬರಾಜು ಹೆಚ್ಚಾಗುತ್ತಿದೆ. ಕಂಡ ಕಂಡ ಹೊಟೇಲುಗಳಲ್ಲಿ ಮದ್ಯ ಮಾರಾಟ ನಡೆಯುತ್ತಿದೆ. ಮದ್ಯದ ಹೊಳೆಯೇ ಹರಿಯುತ್ತಿದ್ದರೂ ಶಾಸಕರು ಗಮನಹರಿಸಿಲ್ಲ. ಅಕ್ರಮ ಮದ್ಯ ಮಾರಾಟ ತಡೆಗೂ ಮುಂದಾಗಿಲ್ಲ. ಇದರಿಂದ ಹೇಗೂ ಆದಾಯ ಬರುತ್ತದೆ ಎಂಬ ನಿಟ್ಟಿನಲ್ಲಿ ಅವರು ಕಣ್ಮುಚ್ಚಿ ಕುಳಿತಿರುವ ಹಾಗೇ ಭಾಸವಾಗುತ್ತಿದೆ’ ಎಂದು ಉಪೇಂದ್ರ ಪೈ ಅವರು ಹೇಳಿದ್ದಾರೆ. `ಕಳೆದ ಜಾತ್ರೆ ಅವಧಿಯಲ್ಲಿ 5 ಕೋಟಿ ರೂ ಹಣ ಬಂದ ಬಗ್ಗೆ ಹೇಳಿದ್ದರು. ಆದರೆ, ಆ ಹಣದ ಬಗ್ಗೆ ಈಗ ಪ್ರಶ್ನಿಸಿದರೆ ಉತ್ತರವಿಲ್ಲ. ಶಾಸಕರು ಗುದ್ದಲಿ ಪೂಜೆಗೆ ಮಾತ್ರ ಸೀಮಿತವಾಗಿದ್ದು, ಅಭಿವೃದ್ಧಿ ಕೆಲಸ ಒಂದೂ ಆಗುತ್ತಿಲ್ಲ. ಹೀಗಿರುವಾಗ ಈ ಜಾತ್ರೆಗಾದರೂ ಶಾಸಕರು ಎಷ್ಟು ಹಣ ತರುತ್ತಾರೆ? ಅದನ್ನು ಹೇಗೆ ಬಳಸುತ್ತಾರೆ? ಎಂದು ಮಾಹಿತಿ ಕೊಡಬೇಕು’ ಎಂದವರು ಆಗ್ರಹಿಸಿದ್ದಾರೆ. `ಮೊನ್ನೆಯೂ ಶಾಸಕರ ಪಟಾಲಂಗರು ಪತ್ರಿಕೆ ಮೂಲಕ ಸುಳ್ಳು ಘೋಷಣೆ ಕೊಟ್ಟಿದ್ದಾರೆ. ನಗರಸಭೆ ಮಾಜಿ ಅಧ್ಯಕ್ಷರ ವರ್ತನೆಯನ್ನು ನೋಡಿದ್ದು, ಈ ಕ್ಷೇತ್ರದಲ್ಲಿ ಗೂಂಡಾಗಿರಿ ನಡೆಯುವುದಿಲ್ಲ’ ಎಂದು ಎಚ್ಚರಿಕೆ ನೀಡಿದ್ದಾರೆ. `ನಗರಸಭೆಯ ಬಗ್ಗೆ ಮಾತನಾಡಿದಾಗ ಅಲ್ಲಿನ ಸದಸ್ಯರು ಆಕ್ಷೇಪವ್ಯಕ್ತಪಡಿಸಿದ್ದರು. ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದ್ದರು. ಆದರೆ, ಅದಾದ ನಂತರ ಇದೇ ನಗರಸಭೆಯ ಭ್ರಷ್ಟಾಚಾರ, ಲಂಚದ ಆರೋಪಗಳು ಬೆಳಕಿಗೆ ಬಂದಿದೆ’ ಎಂದು ಹಳೆಯ ವಿಷಯವನ್ನು ನೆನಪಿಸಿದ್ದಾರೆ. - [ಪೊಲೀಸ್ ಖಾತೆಗೆ ಕನ್ನ ಹಾಕಿದ ಪೆಟ್ರೋ ಕಾರ್ಡ!](https://mobiletime.in/2025/12/petro-card-that-stole-the-police-account/): ಉತ್ತರ ಕನ್ನಡ ಜಿಲ್ಲೆಯನ್ನು ಸೇರಿ ರಾಜ್ಯದ ಅನೇಕ ಪೊಲೀಸ್ ವಾಹನಗಳಿಗೆ ಪೆಟ್ರೋಲ್ ತುಂಬಿಸುವ ವಿಷಯದಲ್ಲಿ ಅಪರಾತಪರ ನಡೆದಿದೆ. ಸರ್ಕಾರಿ ಅಧೀನದಲ್ಲಿರುವ ಎಲ್ಲಾ ಪೊಲೀಸ್ ಠಾಣೆಯ ವಾಹನಗಳಿಗೂ ಇಂಧನ ತುಂಬಿಸುವ ಹೊಣೆಯನ್ನು ಇಂಡಿಯನ್ ಆಯಿಲ್ ಕಾರ್ಪೋರೇಶನ್ ಸಂಸ್ಥೆಗೆ ಗುತ್ತಿಗೆ ನೀಡಲಾಗಿದೆ. ಆ ಗುತ್ತಿಗೆ ಷರತ್ತಿನ ಪ್ರಕಾರ ಇಂಧನ ಪಾವತಿ ನಂತರ ಪಾವತಿ ಮೊತ್ತದ ಶೇ 0.75ರಷ್ಟು ಹಣವನ್ನು ಇಂಡಿಯನ್ ಆಯಿಲ್ ಕಾರ್ಪೋರೇಶನ್ ಸಂಸ್ಥೆ ಪೊಲೀಸ್ ಖಾತೆಗೆ ಪ್ರೋತ್ಸಾಹಧನ ನೀಡಬೇಕು ಎಂಬ ಷರತ್ತು ವಿಧಿಸಲಾಗಿದೆ. ಆದರೆ, 2016ರಿಂದಲೂ ಈ ಪ್ರೋತ್ಸಾಹಧನ ಸರಿಯಾಗಿ ಪಾವತಿ ಆಗಿಲ್ಲ. ಕೆಲವೊಮ್ಮೆ ಪಾವತಿಸಿದ ದಾಖಲೆಗಳಿದ್ದರೂ ಇಂಧನಕ್ಕಾಗಿ ನೀಡಿದ ಹಣಕ್ಕೆ ಅದು ತಾಳೆ ಆಗುತ್ತಿಲ್ಲ. 2016ರ ಏಪ್ರಿಲಿನಿಂದ 2017ರ ಮಾರ್ಚ 31ರವರೆಗೆ ಉತ್ತರ ಕನ್ನಡ ಜಿಲ್ಲೆಯಲ್ಲಿ 194 ಪೊಲೀಸ್ ವಾಹನಗಳಿದ್ದವು. 2017ರಿಂದ 2018ರವರೆಗೆ 184 ಹಾಗೂ 2018ರಿಂದ 2019ರವರೆಗೆ 202 ವಾಹನಗಳಿದ್ದವು. ಈ ಎಲ್ಲಾ ವಾಹನಗಳಿಗೆ ಇಂಧನ ಪಾವತಿಗಾಗಿ ಸರ್ಕಾರವೇ ಪೆಟ್ರೋ ಕಾರ್ಡ ಸೌಲಭ್ಯ ಕಲ್ಪಿಸಿತ್ತು. ಆ ಪೆಟ್ರೋ ಕಾರ್ಡ ಬಳಸಿ ಪೊಲೀಸ್ ವಾಹನಗಳಿಗೆ ಇಂಧನ ಭರ್ತಿ ಮಾಡಲಾಗುತ್ತಿದ್ದು, ಚುನಾವಣೆ ಹಾಗೂ ಇನ್ನಿತರ ಸನ್ನಿವೇಶಗಳ ಅವಧಿಯಲ್ಲಿ ಖಾಸಗಿ ವಾಹಹನಗಳನ್ನು ಸಹ ಬಾಡಿಗೆಗೆಪಡೆದು ಇಂಧನ ಪಾವತಿ ಮಾಡಲಾಗಿದೆ. ಆದರೆ, ಇಂಧನ ಪಾವತಿ ವಿಷಯವಾಗಿ ಸರ್ಕಾರಿ ಖಜಾನೆಯಿಂದ ಇಂಡಿಯನ್ ಆಯಿಲ್ ಕಾರ್ಪೋರೇಶನ್ ಸಂಸ್ಥೆಗೆ ಹಣ ಪಾವತಿ ಆಗಿದ್ದರೂ, ಇಂಡಿಯನ್ ಆಯಿಲ್ ಕಾರ್ಪೋರೇಶನ್ ಸಂಸ್ಥೆಯಿAದ ಪೆಟ್ರೋ ಕಾರ್ಡ ಖಾತೆಗೆ ಬರಬೇಕಿದ್ದ ಪ್ರೋತ್ಸಾಹಧನ ಸರಿಯಾಗಿ ಬಂದಿಲ್ಲ. 2016ರ ಏಪ್ರಿಲ್ ತಿಂಗಳಿನಿAದ 2019ರ ಮಾರ್ಚಿನವರೆಗೆ ಇಂಧನಕ್ಕಾಗಿ ಪಾವತಿಸಿದ ಮೊತ್ತ ಹಾಗೂ ಗುತ್ತಿಗೆ ಸಂಸ್ಥೆಯಿAದ ಪೊಲೀಸ್ ಪೆಟ್ರೋ ಕಾರ್ಡಿಗೆ ಬಂದ ಪ್ರೋತ್ಸಾಹ ಹೊಂದಾಣಿಕೆ ಆಗುತ್ತಿಲ್ಲ ಎಂದು ಲೆಕ್ಕಪರಿಶೋಧನಾ ವರದಿಯಲ್ಲಿ ಪತ್ತೆಯಾಗಿದೆ. `ದಿ ಫೈಲ್’ ಪ್ರಕಟಿಸಿದ ತನಿಖಾ ವರದಿಯಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳ ಅಂಕಿ-ಅoಶಗಳನ್ನು ವಿವರವಾಗಿ ಪ್ರಕಟಿಸಲಾಗಿದೆ. ಅದರ ಪ್ರಕಾರ ಇಂಡಿಯನ್ ಆಯಿಲ್ ಕಾರ್ಪೋರೇಶನ್ ಸಂಸ್ಥೆಯಿAದ ರಾಜ್ಯ ಪೊಲೀಸ್ ಇಲಾಖೆಗೆ 24.61 ಲಕ್ಷ ರೂ ಬರಬೇಕಿದ್ದಯ, ಉತ್ತರ ಕನ್ನಡ ಪೊಲೀಸ್ ಘಟಕದ ಹಣಕಾಸು ವಿಷಯದಲ್ಲಿಯೂ 93311ರೂ ವ್ಯತ್ಯಾಸ ಬರುತ್ತಿದೆ. ಇದರೊಂದಿಗೆ ಹೆಚ್ಚುವರಿ ಪೆಟ್ರೋ ಕಾರ್ಡ ಬಗ್ಗೆ ಲೆಕ್ಕ ಪರಿಶೋಧನೆಯಲ್ಲಿಯೂ ಮಾಹಿತಿ ಸಿಕ್ಕಿಲ್ಲ. ಪೊಲೀಸ್ ಇಲಾಖೆಯ ವಾಹನಗಳಿಗೆ ಇಂಧನ ತುಂಬಿಸಿದ ನಂತರ ಬರಬೇಕಾದ ಕ್ಯಾಶ್ ಬ್ಯಾಕ್ ವಿಷಯದಲ್ಲಿ ಹಲವು ಬಗೆಯ ಉಲ್ಲಂಘನೆ, ಲೋಪ, ನಿಗದಿಪಡಿಸಿದಕ್ಕಿಂತಲೂ ಕಡಿಮೆ ಮೊತ್ತ ಪಾವತಿಯಾಗಿದ್ದರೂ ಸರ್ಕಾರ ಆ ಬಗ್ಗೆ ತಲೆಕೆಡಿಸಿಕೊಂಡಿಲ್ಲ. - [ವಸೂಲಿ ವಿಷಯ: ಅನಗತ್ಯ ಹಸ್ತಕ್ಷೇಪದ ಆರೋಪ!](https://mobiletime.in/2025/12/recovery-matter-accusation-of-unnecessary-interference/): ಯಲ್ಲಾಪುರ ಪಟ್ಟಣ ಪಂಚಾಯತದ ಮಾರುಕಟ್ಟೆ ಶುಲ್ಕ ವಸೂಲಿಗೆ ಮಂಗಳವಾರ ಟೆಂಡರ್ ನಡೆದಿದ್ದು, ಟೆಂಡರ್ ಪ್ರಕ್ರಿಯೆಯಲ್ಲಿ ಪ ಪಂ ಮಾಜಿ ಸದಸ್ಯರಿಬ್ಬರು ಹಸ್ತಕ್ಷೇಪ ಮಾಡಿದ ಆರೋಪವ್ಯಕ್ತವಾಗಿದೆ. ಪಟ್ಟಣದ ಬೀದಿ ಬೀದಿ ವ್ಯಾಪಾರಿಗಳಿಂದ ಶುಲ್ಕ ವಸೂಲಿಗಾಗಿ ಪಟ್ಟಣ ಪಂಚಾಯತ ಟೆಂಡರ್ ಕರೆಯುತ್ತದೆ. ನಿಗದಿತ ಶುಲ್ಕ ವಸೂಲಿಗಾಗಿ ಅನೇಕರು ಪೈಪೋಟಿ ನೀಡುತ್ತಾರೆ. ಅದರಂತೆ ಮಂಗಳವಾರ ಈ ಶುಲ್ಕ ವಸೂಲಾತಿಗೆ ಟೆಂಡರ್ ಕರೆಯಲಾಗಿದ್ದು, ಆ ಅವಧಿಯಲ್ಲಿ ಪಟ್ಟಣ ಪಂಚಾಯತದ ಮಾಜಿ ಸದಸ್ಯರಿಬ್ಬರು ಹಸ್ತಕ್ಷೇಪ ನಡೆಸಿದ ಆರೋಪ ಎದುರಿಸುತ್ತಿದ್ದಾರೆ. ಸದ್ಯ ಪಟ್ಟಣ ಪಂಚಾಯತದ ಜನಪ್ರತಿನಿಧಿಗಳ ಆಡಳಿತ ಅವಧಿ ಮುಕ್ತಾಯವಾಗಿದ್ದು, ತಹಶೀಲ್ದಾರ್ ಆಡಳಿತಾಧಿಕಾರಿಯಾಗಿದ್ದಾರೆ. ಹೀಗಿದ್ದರೂ `ಟೆಂಡರ್ ಪ್ರಕ್ರಿಯೆ ನಡೆಯುವಾಗ ಪಟ್ಟಣ ಪಂಚಾಯತ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಅಬ್ದುಲ್ ಅಲಿ ಹಾಗೂ ಮಾಜಿ ಸದಸ್ಯ ಸತೀಶ ನಾಯ್ಕ ಅವರು ಅಲ್ಲಿ ಆಸನರಾಗಿದ್ದರು. ಅವರಿಬ್ಬರು ಟೆಂಡರ್ ಪ್ರಕ್ರಿಯೆಯಲ್ಲಿ ಹಸ್ತಕ್ಷೇಪ ಮಾಡಿದ್ದಾರೆ’ ಎಂದು ಸಾಮಾಜಿಕ ಕಾರ್ಯಕರ್ತ ಸುಜಯ ಮರಾಠಾ ಅವರು ಆರೋಪಿಸಿದ್ದಾರೆ. ಈ ಬಗ್ಗೆ ಸುಜಯ ಮರಾಠಾ ಅವರು ತಹಶೀಲ್ದಾರ್ ಚಂದ್ರಶೇಖರ ಹೊಸ್ಮನಿ ಅವರಿಗೆ ಮೌಖಿಕ ದೂರು ನೀಡಿದ್ದಾರೆ. ಟೆಂಡರ್ ಪ್ರಕ್ರಿಯೆಯ ವಿಡಿಯೋ ಚಿತ್ರಿಕರಣವನ್ನು ಗಮನಿಸಿ ಕ್ರಮ ಜರುಗಿಸುವುದಾಗಿ ಚಂದ್ರಶೇಖರ್ ಹೊಸ್ಮನಿ ಅವರು ಭರವಸೆ ನೀಡಿದ್ದಾರೆ. `ಪಟ್ಟಣ ಪಂಚಾಯತ ಮಾರುಕಟ್ಟೆ ಕರ ವಸೂಲಿ ಟೆಂಡರ್ ಪಾರದರ್ಶಕವಾಗಿ ನಡೆಯಬೇಕು. ಇದಕ್ಕಾಗಿ ಮರು ಟೆಂಡರ್ ಕರೆಯಬೇಕು’ ಎಂದು ಸುಜಯ ಮರಾಠಾ ಅವರು ಆಗ್ರಹಿಸಿದ್ದಾರೆ. - [ಆ ಶಾಲೆಯ ವಿದ್ಯಾರ್ಥಿಗಳಿಗೆ ಕಾರು ತೊಳೆಯುವುದೇ ಕೆಲಸ!](https://mobiletime.in/2025/12/for-the-students-of-that-school-washing-cars-is-the-only-job/): ಶಿಕ್ಷಕ ಉದಯ ಅವರು ಇಷ್ಟಪಟ್ಟು ಖರೀದಿಸಿದ ಕಾರನ್ನು ಆ ಶಾಲೆಯ ಮಕ್ಕಳು ಕಷ್ಟಪಟ್ಟು ತೊಳೆಯುತ್ತಿದ್ದಾರೆ. `ಕಾರಿಗೆ ಕೊಂಚವೂ ದೂಳು ಬಾರದಂತೆ ನೋಡಿಕೊಳ್ಳಬೇಕು’ ಎಂದು ಉದಯ ಅವರು ತಾಕೀತು ಮಾಡಿದ್ದು, ಮಕ್ಕಳು ಅದನ್ನು ಕಡ್ಡಾಯವಾಗಿ ಪಾಲಿಸುತ್ತಿದ್ದಾರೆ! ಹಳಿಯಾಳದ ಬಿ ಕೆ ಹಳ್ಳಿ ಶಾಲೆಯಲ್ಲಿ ಉದಯ ಅವರು ಶಿಕ್ಷಕರಾಗಿದ್ದಾರೆ. ನಿತ್ಯವೂ ಅವರು ಕಾರಿನಲ್ಲಿ ಶಾಲೆಗೆ ಬರುತ್ತಾರೆ. ಅವರ ಆಗಮನದ ನಂತರ ಆ ಕಾರು ತೊಳೆಯುವುದು ನಿತ್ಯದ ಸಂಪ್ರದಾಯ. ಶಾಲಾ ಅವಧಿಯಲ್ಲಿಯೇ ಪಾಠ ಬಿಟ್ಟು ಮಕ್ಕಳು ಕಾರು ತೊಳೆಯಲು ಹೋಗುತ್ತಾರೆ. ಶಿಕ್ಷಕರ ಈ ಉದ್ದಟತನದಿಂದ ಮಕ್ಕಳ ಕಲಿಕೆಗೆ ಹಿನ್ನಡೆಯಾಗಿದೆ ಎಂಬುದು ಅಲ್ಲಿನವರ ದೂರು. ತಮ್ಮ ಖಾಸಗಿ ಕೆಲಸ ಮಾಡಿಸಿಕೊಳ್ಳುವ ಶಿಕ್ಷಕನ ವಿರುದ್ಧ ವ್ಯಕ್ತಿಯೊಬ್ಬರು ದೂರು ನೀಡಿದ್ದಾರೆ. ಅದೇ ದೂರಿನ ಆಧಾರದಲ್ಲಿ ಬಿಇಓ ಪ್ರಮೋದ ಮಹಾಲೆ ಅವರು ನೋಟಿಸ್ ಜಾರಿ ಮಾಡಿದ್ದಾರೆ. ಜೊತೆಗೆ ದೂರು ನೀಡಿದವರು ಸಾಕ್ಷಿಗಾಗಿ ಫೋಟೋವನ್ನು ಹರಿಬಿಟ್ಟಿದ್ದಾರೆ. - [ನಕಲಿ ವೈದ್ಯರಿಗೆ ನಡುಕ!](https://mobiletime.in/2025/12/fear-the-fake-doctor/): `ಖಾಸಗಿ ವೈದ್ಯಕೀಯ ಸಂಸ್ಥೆಗಳಲ್ಲಿ ನಕಲಿ ವೈದ್ಯರ ನೇಮಕ ಮಾಡಿದ್ದರೆ ಅಂಥವುಗಳನ್ನು ಪತ್ತೆ ಮಾಡಿ ಆಸ್ಪತ್ರೆ ವಿರುದ್ಧ ಕ್ರಮ ಜರುಗಿಸಿ’ ಎಂದು ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಕೆ ಲಕ್ಷ್ಮೀಪ್ರಿಯ ಸೂಚನೆ ನೀಡಿದ್ದಾರೆ. ಅವರು ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಕೆಪಿಎಂಇ ನೊಂದಣಿ ಮತ್ತು ಕುಂದುಕೊರತೆ ನಿವಾರಣಾ ಪ್ರಾಧಿಕಾರದ ಸಭೆ ನಡೆಸಿದ ಅವರು `ಖಾಸಗಿ ನರ್ಸಿಂಗ್ ಕೇಂದ್ರಗಳು ತಮ್ಮಲ್ಲಿ ನೇಮಕ ಮಾಡಿಕೊಳ್ಳುವ ವೈದ್ಯರ ನೈಜ ದಾಖಲೆಗಳನ್ನು ಪರಿಶೀಲಿಸದೇ ನಕಲಿ ವೈದ್ಯರು ಕಾರ್ಯನಿರ್ವಹಿಸಲು ಅವಕಾಶ ಮಾಡಿಕೊಟ್ಟಲ್ಲಿ ಅಂತಹ ಸಂಸ್ಥೆಗಳ ವಿರುದ್ಧ ಮೊದಲ ಬಾರಿಗೆ ನಿಯಮಾನುಸಾರ ದಂಢ ವಿಧಿಸಬೇಕು. ಪುನ: ಅಂಥವು ಮುಂದುವರೆದಲ್ಲಿ ದಂಡ ಮತ್ತು ಜೈಲುಶಿಕ್ಷೆ ವಿಧಿಸುವುದಕ್ಕಾಗಿ ಪ್ರಕರಣ ದಾಖಲು ಮಾಡಬೇಕು’ ಎಂದು ಸೂಚಿಸಿದರು. ನಕಲಿ ವೈದ್ಯರ ವಿರುದ್ದ ಕೂಡಾ ಕಠಿಣ ಕ್ರಮಗಳನ್ನು ಕೈಗೊಳ್ಳುವಂತೆ ತಿಳಿಸಿದ ಅವರು `ಒಮ್ಮೆ ಪತ್ತೆಯಾದ ನಕಲಿ ವೈದ್ಯರು ನಂತರದಲ್ಲಿ ತಮ್ಮ ಕೇಂದ್ರದ ಹೆಸರು ಮತ್ತು ವಿಳಾಸ ಬದಲಿಸಿಕೊಂಡು ಜಿಲ್ಲೆಯ ಇತರೇ ಭಾಗದಲ್ಲಿ ಕಾರ್ಯನಿರ್ವಹಿಸುವ ಸಾಧ್ಯತೆ ಅಧಿಕವಾಗಿದೆ. ಈ ಬಗ್ಗೆ ವ್ಯಾಪಕ ತಪಾಸಣೆಗಳನ್ನು ಕೈಗೊಂಡು, ಜಿಲ್ಲೆಯಲ್ಲಿ ನಕಲಿ ವೈದ್ಯರು ಕಂಡು ಬಾರದಂತೆ ಎಚ್ಚರವವಹಿಸಬೇಕು’ ಎಂದು ನಿರ್ದೇಶನ ನೀಡಿದರು. `ಪ್ರಸ್ತುತ ಜಿಲ್ಲೆಯಲ್ಲಿ ನೊಂದಣಿಯಾಗಿರುವ ಖಾಸಗಿ ವೈದ್ಯಕೀಯ ಸಂಸ್ಥೆಗಳನ್ನು ನವೀಕರಣ ಮಾಡುವ ಸಂದರ್ಭದಲ್ಲಿ ದಾಖಲೆಗಳನ್ನು ಸಮಗ್ರವಾಗಿ ಪರಿಶೀಲಿಸುವಂತೆ ಮತ್ತು ಹೊಸದಾಗಿ ಅನುಮತಿ ಕೋರುವ ಸಂಸ್ಥೆಗಳ ದಾಖಲೆಗಳನ್ನು ಸಮಗ್ರವಾಗಿ ಪರಿಶೀಲಿಸಿ, ಎಲ್ಲಾ ಷರತ್ತುಗಳನ್ನು ಪೂರೈಸಿರುವುದನ್ನು ಖಚಿತಪಡಿಸಿಕೊಂಡು ಅನುಮತಿಯನ್ನು ನೀಡಬೇಕು’ ಎಂದು ತಿಳಿಸಿದರು. ಸಭೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ ನೀರಜ್ ಬಿ ವಿ, ಜಿಲ್ಲಾ ಆಯುಷ್ ಅಧಿಕಾರಿ ಡಾ ಪ್ರವೀಣ್, ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ ಅಶ್ವಿನಿ ಬೋರ್ಕರ್, ಐಎಂಎ ಅಧ್ಯಕ್ಷ ಡಾ ಸುರೇಶ್ ಭಟ್, ಮಹಿಳಾ ಸಾಮಾಜಿಕ ಕಾರ್ಯಕರ್ತೆ ಯಶೋಧಾ ಹೆಗಡೆ ಹಾಗೂ ಆರೋಗ್ಯ ಇಲಾಖೆಯ ವಿವಿಧ ತಾಲೂಕುಗಳ ವೈದ್ಯರು ಉಪಸ್ಥಿತರಿದ್ದರು. - [ಶಿಖಾರಿ ಶೂರರಿಗೆ ಸೆರೆಮನೆವಾಸ!](https://mobiletime.in/2025/12/prison-sentence-for-shikhari-warriors/): ವನ್ಯಜೀವಿ ಹತ್ಯೆಗೆ ಸಂಚು ರೂಪಿಸಿದ್ದ ನಾಲ್ವರನ್ನು ಯಲ್ಲಾಪುರದ ಮಂಚಿಕೇರಿ ಅರಣ್ಯ ಸಿಬ್ಬಂದಿ ಪತ್ತೆ ಮಾಡಿದ್ದಾರೆ. ಆ ಪೈಕಿ ಮೂವರು ಸಿಕ್ಕಿಬಿದ್ದಿದ್ದು, ಮತ್ತೊಬ್ಬರು ತಲೆಮರೆಸಿಕೊಂಡಿದ್ದಾರೆ. ಶಿರಸಿ ಸೋಂದಾ ಕ್ರಾಸಿನ ಹಸನ್ ಖಾನ್ ಇಬ್ರಾಹಿಂ ಖಾನ್, ಮಜಿನುರ್ ರೆಹಮಾನ್ ಅಬ್ದುಲ್ ಮತಲಿಬ್, ಸೋದೆಪೇಟೆಯ ಅಬ್ದುಲ್ ಜಬ್ಬಾರ್ ಹಬೀಬು ರೆಹಮಾನ್ ಸಾಬ್ ಹಾಗೂ ಹೆಗಡೆಕಟ್ಟಾದ ಅಬ್ದುಲ್ ಹನನ್ ಮಹಮದ್ ಸಾಬ್ ಅವರು ಕಾರಿನಲ್ಲಿ ಮಂಚಿಕೇರಿ ಬಳಿ ಬಂದಿದ್ದರು. ಅವರೆಲ್ಲರೂ ಶಿಖಾರಿ ಶೂರರಾಗಿದ್ದು, ಆಗಾಗ ಕಾಡುಪ್ರಾಣಿ ಬೇಟೆಗಾಗಿ ಅಲ್ಲಿ ಇಲ್ಲಿ ತಿರುಗಾಡುತ್ತಿದ್ದರು. ಡಿಸೆಂಬರ್ 30ರಂದು ನಸುಕಿನಲ್ಲಿ ಆ ನಾಲ್ಕು ಜನ ಚಕ್ಕೊತ್ತಿ ಅರಣ್ಯ ಪ್ರದೇಶಕ್ಕೆ ನುಗ್ಗಿದ್ದರು. ಆ ಪೈಕಿ ಅಬ್ದುಲ್ ಹನನ್ ಮಹಮದ್ ಸಾಬ್ ಅವರ ಕೈಯಲ್ಲಿ ಬಂದೂಕು ಇತ್ತು. ಉಳಿದವರು ದೊಡ್ಡದಾದ ಕತ್ತಿ, ಚಾಕುಗಳನ್ನು ಹೊಂದಿದ್ದರು. ಎಲ್ಲರೂ ಸೇರಿ ಕಾಡು ಪ್ರಾಣಿ ಹುಡುಕಾಟ ನಡೆಸುವಾಗ ಅರಣ್ಯ ಸಿಬ್ಬಂದಿ ಅವರನ್ನು ನೋಡಿದರು. ಅರಣ್ಯ ಸಿಬ್ಬಂದಿ ಬೆನ್ನತ್ತಿರುವುದನ್ನು ಗಮನಿಸಿ ಅವರೆಲ್ಲರೂ ತಪ್ಪಿಸಿಕೊಳ್ಳುವ ಪ್ರಯತ್ನ ಮಾಡಿದರು. ಆದರೆ, ಅದುಪ್ರಯೋಜನಕ್ಕೆ ಬರಲಿಲ್ಲ. ಹಸನ್ ಖಾನ್ ಇಬ್ರಾಹಿಂ ಖಾನ್, ಮಜಿನುರ್ ರೆಹಮಾನ್ ಅಬ್ದುಲ್ ಮತಲಿಬ್, ಸೋದೆಅಬ್ದುಲ್ ಜಬ್ಬಾರ್ ಹಬೀಬು ರೆಹಮಾನ್ ಸಾಬ್ ಅವರನ್ನು ಅರಣ್ಯ ಸಿಬ್ಬಂದಿ ಬಂಧಿಸಿದರು. ಬಂದೂಕು ಹಿಡಿದಿದ್ದ ಅಬ್ದುಲ್ ಹನನ್ ಮಹಮದ್ ಸಾಬ್ ಓಡಿ ತಪ್ಪಿಸಿಕೊಂಡರು. ಕಾರ್ಯಾಚರಣೆ ನಡೆಸಿದ ಮಂಚಿಕೇರಿ ವಲಯ ಅರಣ್ಯಾಧಿಕಾರಿ ಬಸವರಾಜ ಬಚ್ಚೋಳ್ಳಿ ಅವರು ಆ ಎಲ್ಲರನ್ನು ಜೈಲಿಗೆ ಕಳುಹಿಸಿದರು. ಡಿಎಫ್‌ಓ ಹರ್ಷಭಾನು ಅವರು ಈ ಮಾಹಿತಿ ನೀಡಿದರು.   - [ಶಿರಸಿ ಜಾತ್ರೆ: ಸರ್ಕಾರಿ ಲೆಕ್ಕದ ಬಗ್ಗೆಯೇ ಎಲ್ಲರಿಗೂ ಚಿಂತೆ!](https://mobiletime.in/2025/12/sirsi-fair-everyone-is-worried-about-the-government-accounts/): ಶಿರಸಿ ಮಾರಿಕಾಂಬಾ ಜಾತ್ರೆಗೆ ಶಾಸಕ ಭೀಮಣ್ಣ ನಾಯ್ಕ ಅವರು ವಿಶೇಷ ಅನುದಾನ ತಂದಿರುವುದಾಗಿ ಹೇಳಿದ್ದು, ಆ ವಿಷಯದ ಬಗ್ಗೆ ಬಿಜೆಪಿ ಮುಖಂಡ ಅನಂತಮೂರ್ತಿ ಹೆಗಡೆ ಮತ್ತೆ ಮಾತನಾಡಿದ್ದಾರೆ. `ಜಾತ್ರೆಗೆ ಸಂಬoಧಿಸಿ ಸರ್ಕಾರದಿಂದ ಯಾವುದೇ ಹೆಚ್ಚುವರಿ ಅನುದಾನ ಬಂದಿಲ್ಲ. ಅದಾಗಿಯೂ, ಕಾಂಗ್ರೆಸ್ಸಿನವರು ಸುಳ್ಳು ಹೇಳುತ್ತಿದ್ದಾರೆ’ ಎಂದು ಅನಂತಮೂರ್ತಿ ಹೆಗಡೆ ದೂರಿದ್ದಾರೆ. ಶಿರಸಿಗೆ ಬರುವ ಅನುದಾನ ಬೇರೆ, ಸಿದ್ದಾಪುರಕ್ಕೆ ಬರುವ ಅನುದಾನ ಬೇರೆ. ಆದರೆ, ಜಾತ್ರೆಗೆ ಬಂದ ಅನುದಾನ ಸಿದ್ದಾಪುರದಲ್ಲಿ ಅಭಿವೃದ್ಧಿ ಮಾಡಿರುವ ಬಗ್ಗೆ ಕಾಂಗ್ರೆಸ್ಸಿಗರು ಹೇಳಿದ್ದು, ಇದರಿಂದ ನಾವೆಲ್ಲರೂ ನಂಬಿರುವ ಶ್ರೀ ಮಾರಿಕಾಂಬಾ ದೇವಿಗೆ ಅಪಚಾರ ಮಾಡಿದ ಹಾಗಾಗಿದೆ’ ಎಂದವರು ಹೇಳಿದ್ದಾರೆ. `ಭೀಮಣ್ಣ ನಾಯ್ಕ ಅವರು ಮಾರಿಕಾಂಬಾ ದೇವಿಗೆ ತಪ್ಪುಗಾಣಿಕೆ ಅರ್ಪಿಸಬೇಕು’ ಎಂದು ಆಗ್ರಹಿಸಿದ್ದಾರೆ. `ಕಳೆದ ಜಾತ್ರೆಗೆಂದು ಶಾಸಕ ಭೀಮಣ್ಣನವರು 5 ಕೋಟಿ ಕೇಳಿದ್ದರು. ಅದರಲ್ಲಿ 3.5 ಕೋಟಿ ರೂಪಾಯಿ ರಾಜ್ಯ ಸರಕಾರದಿಂದ ಬಿಡುಗಡೆಯಾಗಿದೆ ಎಂದು ಕಾಂಗ್ರೆಸಿನವರು ಹೇಳಿದ್ದಾರೆ. ಆದರೆ, ಮಾಹಿತಿ ಹಕ್ಕು ಕಾಯ್ದೆ ಅಡಿ ಕೇಳಿದಾಗ ಜಾತ್ರೆಗೆ ಅನುದಾನ ಬಂದಿಲ್ಲ ಎಂದು ಗೊತ್ತಾಗಿದೆ. ಜಾತ್ರೆ ಹೆಸರಿನಲ್ಲಿ ಅನುದಾನ ತಂದಿರುವುದಾಗಿ ಫ್ಲೆಕ್ಸ್ ಹಾಕಿಸಿ ಭೀಮಣ್ಣ ನಾಯ್ಕ ಅವರು ಆ ಅವಧಿಯಲ್ಲಿ ಪ್ರಚಾರ ಪಡೆದಿದ್ದು ಸರಿಯಲ್ಲ’ ಎಂದರು. ನಗರಸಭೆ ಮಾಜಿ ಅಧ್ಯಕ್ಷ ಪ್ರದೀಪ ಶೆಟ್ಟಿ ವಿರುದ್ಧವೂ ಅನಂತಮೂರ್ತಿ ಹೆಗಡೆ ವಾಗ್ದಾಳಿ ನಡೆಸಿದರು. `ಪ್ರದೀಪ ಶೆಟ್ಟಿಯವರು ಶಿಕ್ಷಿತರು. ಯಾರ ಬಳಿ ಹೇಗೆ ಮಾತನಾಡಬೇಕು ಎಂಬುದನ್ನು ಕಲಿತುಕೊಂಡರೆ ಒಳ್ಳೆಯದು’ ಎಂದು ಸಲಹೆ ನೀಡಿದರು. `ಜನಹಿತಕ್ಕಾಗಿ ಹೋರಾಟ ಮಾಡುವವರ ಮೇಲೆ ಅನಗತ್ಯ ಆರೋಪ ಮಾಡುವುದು ಪ್ರದೀಪ ಶೆಟ್ಟಿ ಅವರಿಗೆ ಒಳ್ಳೆಯದಲ್ಲ. ಅಧಿಕೃತ ದಾಖಲೆ ಇಲ್ಲದೇ ನಾನು ಯಾವ ಆರೋಪವನ್ನು ಮಾಡುವುದಿಲ್ಲ’ ಎಂದು ಅನಂತಮೂರ್ತಿ ಹೆಗಡೆ ಸ್ಪಷ್ಟಪಡಿಸಿದರು. `ಭೀಮಣ್ಣ ನಾಯ್ಕ ಅವರ ಮಾತನ್ನು ಅರಣ್ಯ ಸಿಬ್ಬಂದಿ ಸಹ ಕೇಳುತ್ತಿಲ್ಲ. ರೈತರ ತೋಟ ನಾಶ ಮಾಡಿದರೂ ಅದಕ್ಕೆ ಭೀಮಣ್ಣ ನಾಯ್ಕ ಅವರು ಕ್ರಮ ಜರುಗಿಸಿಲ್ಲ. ಅಧಿಕಾರಿಗಳ ಮೇಲಿನ ಹಿಡಿತವನ್ನು ಶಾಸಕರು ಕಳೆದುಕೊಂಡಿದ್ದಾರೆ’ ಎಂದರು. `ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ ಬೇಡ್ತಿ ಯೋಜನೆ ಬಗ್ಗೆ ಮಾತನಾಡಿದರೂ, ಪಕ್ಕದಲ್ಲಿದ್ದ ಭೀಮಣ್ಣ ನಾಯ್ಕ ಅದನ್ನು ವಿರೋಧಿಸಲಿಲ್ಲ’ ಎಂದು ಕುಟುಕಿದರು. - [ಹೊಗೆ ಉಗುಳುವ ಬಸ್ಸುಗಳೇ KSRTCಯ ಆಸ್ತಿ!](https://mobiletime.in/2025/12/smoke-emitting-buses-are-the-property-of-ksrtc/): ಶಿರಸಿ – ಯಲ್ಲಾಪುರ ಮಾರ್ಗದಲ್ಲಿ ಸಂಚರಿಸುವ ಬಹುತೇಕರಿಗೆ ಹೊಗೆ ಉಗುಳುವ ಬಸ್ಸುಗಳು ಹಿಂಸೆ ನೀಡುತ್ತಿದೆ. ಈ ಮಾರ್ಗದಲ್ಲಿ ಚಲಿಸುವ ಅನೇಕ ಬಸ್ಸುಗಳು ಹೊಗೆ ಉಗುಳುತ್ತಿದ್ದು, ಜನ ತೊಂದರೆ ಅನುಭವಿಸುತ್ತಿದ್ದಾರೆ. ಶಿರಸಿ-ಯಲ್ಲಾಪುರ ರಸ್ತೆ ಮೂರು ಕಡೆ ಹದಗೆಟ್ಟಿದೆ. ಆ ಭಾಗದಲ್ಲಿ ದ್ವಿಚಕ್ರ ವಾಹನದಲ್ಲಿ ಸಂಚರಿಸುವವರು ಸಮಸ್ಯೆ ಅನುಭವಿಸುತ್ತಿದ್ದಾರೆ. ಇದರೊಂದಿಗೆ ಈ ಮಾರ್ಗವಾಗಿ ಸಂಚರಿಸುವ ಸ್ಥಳೀಯ ಬಸ್ಸುಗಳು ಜನರ ಆರೋಗ್ಯ ಹಾಳು ಮಾಡುತ್ತಿವೆ. ಅಪಾರ ಪ್ರಮಾಣದಲ್ಲಿ ಹೊಗೆ ಉಗುಳುತ್ತಿದ್ದರೂ ಅದನ್ನು ಪ್ರಶ್ನಿಸುವವರಿಲ್ಲ. `ಮೊದಲು ಈ ಮಾರ್ಗದಲ್ಲಿ ಸಂಚರಿಸುವವರು ಧೂಳು ಸೇವಿಸಬೇಕಿತ್ತು. ಇದೀಗ ಹೊಗೆ ಸೇವಿಸಬೇಕಿದೆ. ಪ್ರಯಾಣಿಕರ ಆರೋಗ್ಯದ ಬಗ್ಗೆ ಕಾಳಜಿವಹಿಸುವವರೂ ಇಲ್ಲ’ ಎಂದು ಬೈಕ್ ಸವಾರರು ಆಕ್ರೋಶದ ಮಾತುಗಳನ್ನಾಡಿದ್ದಾರೆ. ಮಂಚಿಕೇರಿವರೆಗೆ ತೆರಳಿ ಬರುವ ಬಸ್ಸಿನ ಜೊತೆ ಶಿರಸಿಗೆ ಹೋಗಿ ಬರುವ ಬಸ್ಸು ಸಹ ಸಾಕಷ್ಟು ಪ್ರಮಾಣದಲ್ಲಿ ವಾಯು ಮಾಲಿನ್ಯ ಮಾಡುತ್ತಿದೆ. ಆ ಬಸ್ಸಿನ ಹಿಂದೆ ಹೋಗುವವರಿಗೆ ಅಲ್ಲಿರುವ ಹೊಗೆ ಮೋಡದ ಹಾಗೇ ಭಾಸವಾಗುತ್ತಿದೆ. ಹೊಗೆಯ ದುರ್ವಾಸನೆಗೆ ಉಸಿರುಗಟ್ಟುವ ವಾತಾವರಣ ನಿರ್ಮಾಣವಾಗುತ್ತಿದೆ. ಅದಾಗಿಯೂ ಕೆಟ್ಟ ಬಸ್ಸುಗಳನ್ನು ಗುಜುರಿಗೆ ಕಳುಹಿಸುವ ಕೆಲಸ ನಡೆದಿಲ್ಲ. - [ಕಾಲೇಜು ಮಕ್ಕಳ ಬಸ್ ಪಲ್ಟಿ: ಪ್ರವಾಸಕ್ಕೆ ಬಂದವರಿಗೆ ಪ್ರಯಾಸ!](https://mobiletime.in/2025/12/bus-carrying-college-students-overturns-trouble-for-those-on-a-trip/): ಕಾಲೇಜು ವಿದ್ಯಾರ್ಥಿಗಳನ್ನು ಕರೆದೊಯ್ಯುತ್ತಿದ್ದ ಬಸ್ಸು ಯಾಣದ ಬಳಿ ಪಲ್ಟಿಯಾಗಿದೆ. ಅಪಘಾತದಲ್ಲಿ 12 ಮಕ್ಕಳಿಗೆ ಗಾಯವಾಗಿದೆ. ದಾವಣಗೆರೆಯ ಜೈನ್ ಪಿಯು ಕಾಲೇಜಿನ ವಿದ್ಯಾರ್ಥಿಗಳು ಮಂಗಳವಾರ ಪ್ರವಾಸಕ್ಕೆ ಬಂದಿದ್ದರು. ಶಿರಸಿಗೆ ಬಂದ ವಿದ್ಯಾರ್ಥಿಗಳು ದೇವಿ ದರ್ಶನ ಮಾಡಿ ಮುಂದಿನ ಪ್ರವಾಸಕ್ಕೆ ಅಣಿಯಾಗಿದ್ದರು. ಅದರ ಪ್ರಕಾರ ಎಲ್ಲರೂ ಸೇರಿ ಯಾಣದ ಕಡೆ ಹೊರಟಿದ್ದರು. ವಿದ್ಯಾರ್ಥಿಗಳಿದ್ದ ಆ ಬಸ್ಸು ಯಾಣ ಸಮೀಪಿಸುತ್ತಿರುವಾಗ ಚಾಲಕನ ನಿಯಂತ್ರಣ ತಪ್ಪಿತು. ಪರಿಣಾಮ ಬಸ್ಸು ಪಲ್ಟಿಯಾಯಿತು. ಆ ಬಸ್ಸಿನಲ್ಲಿ 50 ವಿದ್ಯಾರ್ಥಿಗಳಿದ್ದರು. ಮೂವರು ಶಿಕ್ಷಕರು ಜೊತೆಗಿದ್ದರು. 20 ವಿದ್ಯಾರ್ಥಿನಿಯರು ಮತ್ತು 27 ವಿದ್ಯಾರ್ಥಿಗಳ ಪೈಕಿ ಒಟ್ಟಾರೆ 12 ಮಕ್ಕಳಿಗೆ ಅಪಘಾತದಲ್ಲಿ ಗಾಯವಾಯಿತು. ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. - [ಸಿಲೆಂಡರ್ ಸ್ಪೋಟಕ್ಕೆ ರಿಕ್ಷಾ ಕರಕಲು](https://mobiletime.in/2025/12/a-rickshaw-to-start-the-cylinder-sputtering/): ಮುಂಡಗೋಡಿನಲ್ಲಿ ಮನೆ ಮುಂದೆ ನಿಲ್ಲಿಸಿದ್ದ ರಿಕ್ಷಾವೊಂದು ಸುಟ್ಟು ಕರಕಲಾಗಿದೆ. ಸಿಲೆಂಡರ್ ಸ್ಪೋಟದ ಪರಿಣಾಮ ರಿಕ್ಷಾ ಸಂಪೂರ್ಣವಾಗಿ ಸುಟ್ಟು ಹೋಗಿದೆ. ವೀರಭದ್ರ ಹಡಪದ್ ಅವರಿಗೆ ಸೇರಿದ ರಿಕ್ಷಾ ಸುಟ್ಟಿದೆ. ಹುನುಗುಂದದ ಬಳಿ ಈ ಅವಘಡ ನಡೆದಿದೆ. ರಿಕ್ಷಾ ಹೊತ್ತಿ ಉರಿದ ರಭಸಕ್ಕೆ ಪಕ್ಕದಲ್ಲಿದ್ದ ಮನೆಗೂ ಬೆಂಕಿ ತಗುಲಿದೆ. ತಕ್ಷಣ ಮನೆಯಲ್ಲಿದ್ದವರು ಬೆಂಕಿ ಆರಿಸುವ ಪ್ರಯತ್ನ ಮಾಡಿದ್ದಾರೆ. ಆದರೆ, ರಿಕ್ಷಾಗೆ ಹೊತ್ತಿದ ಬೆಂಕಿ ಆರಿಸಲು ಸಾಧ್ಯವಾಗಿಲ್ಲ. ನಿರಂತರ ನೀರು ಹಾಯಿಸಿ ಮನೆಗೆ ಹತ್ತಿದ್ದ ಬೆಂಕಿಯನ್ನು ಹತೋಟಿಗೆ ತಂದಿದ್ದಾರೆ. ಅದಾಗಿಯೂ ಮನೆಯಲ್ಲಿನ ಕೆಲ ಸಾಮಗ್ರಿಗಳು ಸುಟ್ಟು ಕರಕಲಾಗಿದೆ. ರಿಕ್ಷಾದ ಒಳಗಿದ್ದ ಸಿಲೆಂಡರಿನಲ್ಲಿನ ಸೋರಿಕೆ ಅನಾಹುತಕ್ಕೆ ಕಾರಣ ಎನ್ನುವ ಮಾಹಿತಿಯಿದೆ. - [ಕೆರೆಗೆ ಬಿದ್ದ ಬಾಲಕ: ಕೊನೆಯುಸಿರು!](https://mobiletime.in/2025/12/boy-who-fell-into-the-lake-last-breath/): ಸಿದ್ದಾಪುರದ ತೋಟವೊಂದರಲ್ಲಿ ಬಾಲಕನೊಬ್ಬ ಅಲ್ಲಿದ್ದ ಕೆರೆಗೆ ಬಿದ್ದು ಸಾವನಪ್ಪಿದ್ದು, ಕುಟುಂಬದ ಆಕಂದ್ರನ ಮುಗಿಲು ಮುಟ್ಟಿದೆ. ಸಿದ್ದಾಪುರದ ಮನಮನೆ ಗ್ರಾಮದ ಹೊನ್ನುಕಾರ ಕೆರೆಗೆ ಬಿದ್ದು ಆರು ವರ್ಷದ ಬಾಲಕನ ಬದುಕು ಅಂತ್ಯವಾಗಿದೆ. ಸೋಮವಾರ ಸಂಜೆಯವರೆಗೂ ತೋಟದಲ್ಲಿ ಆಡುತ್ತಿದ್ದ ಜಮಾಲಸಾಬ ದುದ್ದುಸಾಬ ಜಾಲಡಗಿ ಆಗಸ್ಮಿಕವಾಗಿ ಕೆರೆಗೆ ಬಿದ್ದಿದ್ದಾರೆ. ಕಾಲು ಜಾರಿ ನೀರಿಗಿಳಿದ ಅವರಿಗೆ ಮೇಲೆ ಬರಲು ಸಾಧ್ಯವಾಗಿಲ್ಲ. ಅಲ್ಲಿಯೇ ಕೊನೆಯುಸಿರೆಳೆದಿದ್ದಾರೆ. ಜಮಾಲಸಾಬ ಜಾಲಡಗಿ ಅವರು ಗದಗ ಜಿಲ್ಲೆಯ ಲಕ್ಷ್ಮೀಶ್ವರ ನಿವಾಸಿಯಾಗಿದ್ದರು. ಗಣೇಶ ನಾಯ್ಕ ಅವರ ಅಡಿಕೆ ತೋಟದಲ್ಲಿ ದುದ್ದುಸಾಬ ಜಾಲಡಗಿ ಕುಟುಂಬದವರು ಕೂಲಿ ಕೆಲಸಕ್ಕೆ ಬಂದಿದ್ದರು. ಆ ವೇಳೆ ಆರು ವರ್ಷದ ಮಗನನ್ನು ಅವರು ಕರೆತಂದಿದ್ದು, ದುರಂತಕ್ಕೆ ಕಾರಣವಾಗಿದೆ. - [ಪೂಜಾರಿ ತಲೆ ಒಡೆದ ತೆಂಗಿನಕಾಯಿ!](https://mobiletime.in/2025/12/the-priests-head-was-smashed-by-a-coconut/): ದೇವಾಲಯದಲ್ಲಿ ಪೂಜೆ ಮಾಡುವ ವಿಷಯವಾಗಿ ಅರ್ಚಕರಿಬ್ಬರ ನಡುವೆ ಹೊಡೆದಾಟ ನಡೆದಿದೆ. ಆ ಅರ್ಚಕರು ಪೂಜೆಗೆ ತಂದಿದ್ದ ತೆಂಗಿನಕಾಯಿಯಿoದ ಹೊಡೆದಾಡಿಕೊಂಡಿದ್ದಾರೆ. ದಾಂಡೇಲಿ ಬಳಿಯ ಕರ್ಕಾ ಚೆಕ್ ಪೋಸ್ಟಿನ ಬಳಿಯಿರುವ ದೊಂಬರಾಣಿ ದೇವಾಲಯದಲ್ಲಿ ಪೂಜೆ ಮಾಡುವ ವಿಷಯ ವಿವಾದಕ್ಕೆ ಕಾರಣವಾಗಿದೆ. ಅಲ್ಲಿ ಯಾರು ಪೂಜೆ ಮಾಡಬೇಕು? ಎನ್ನುವ ನಿಟ್ಟಿನಲ್ಲಿ ಗೊಂದಲ ಉಂಟಾಗಿದೆ. ಹಳಿಯಾಳದ ಹಂದಲಿಯ ಮಹಾದೇವ ಬಾಬು ಪಾಟೀಲ ಹಾಗೂ ಅದೇ ಊರಿನ ಹನುಮಂತ ಮಾದೇವ ಮಿರಾಶಿ ಅವರು ಪೂಜೆಯ ಹಕ್ಕಿಗಾಗಿ ಹೊಡೆದಾಟ ಮಾಡಿದ್ದಾರೆ. ಡಿಸೆಂಬರ 26ರಂದು ಮಹಾದೇವ ಪಾಟೀಲ ಅವರು ಇಲ್ಲಿ ಪೂಜೆ ಮಾಡುತ್ತಿದ್ದರು. ಹೊರಗಿನ ಕಟ್ಟೆ ಮೇಲೆ ಕೂತಿದ್ದ ಹನುಮಂತ ಮಿರಾಶಿ ಅವರು ಇದರಿಂದ ಸಿಟ್ಟಾದರು. `ದೇವಸ್ಥಾನ ಕಟ್ಟಿದ್ದು ನಾವು. ಮೂರ್ತಿ ಸ್ಥಾಪನೆ ಮಾಡಿದ್ದು ನಾವು. ನಿನಗೆ ಇಲ್ಲಿ ಪೂಜೆ ಹಕ್ಕಿಲ್ಲ’ ಎಂದು ಹನುಮಂತ ಮಿರಾಶಿ ಅವರು ಕೂಗಾಟ ನಡೆಸಿದರು. ಈ ವೇಳೆ ಮಹಾದೇವ ಪಾಟೀಲ್ ಅವರು ಪ್ರತಿ ಮಾತನಾಡಿದ್ದು ಜಗಳಕ್ಕೆ ಕಾರಣವಾಯಿತು. `ನೀನು ದೇವಾಲಯದ ದುಡ್ಡು ತಿಂದಿದ್ದೀಯ. ಇಲ್ಲಿ ನನಗೆ ಪೂಜೆ ಮಾಡಲು ನೇಮಿಸಿದ್ದಾರೆ’ ಎಂದು ಹನುಮಂತ ಮಿರಾಶಿ ಹೇಳಿದ್ದು, ಮಹಾದೇವ ಪಾಟೀಲ ಅವರ ಬೆನ್ನಿಗೆ ಗುದ್ದಿದರು. ಅದಾದ ನಂತರ ಅಲ್ಲಿದ್ದ ತೆಂಗಿನ ಕಾಯಿ ತೆಗೆದು ತಲೆಯ ಕಡೆ ಹೊಡೆದರು. ಪರಿಣಾಮ ಮಹಾದೇವ ಪಾಟೀಲ ಅವರ ಮುಖಕ್ಕೆ ಕಾಯಿ ತಾಗಿ ಕಣ್ಣಿಗೆ ಪೆಟ್ಟಾಯಿತು. `ದೇವಾಲಯದ ಒಳಗೆ ಕಾಲಿಟ್ಟರೆ ಕೊಲೆ ಮಾಡುವೆ’ ಎಂದು ಹನುಮಂತ ಮಿರಾಶಿ ಬೆದರಿಸಿದ ಬಗ್ಗೆ ಮಹಾದೇವ ಪಾಟೀಲ ಅವರು ಪೊಲೀಸ್ ದೂರು ನೀಡಿದರು. ದಾಂಡೇಲಿ ಗ್ರಾಮೀಣ ಠಾಣೆ ಪೊಲೀಸರು ಪ್ರಕರಣ ದಾಖಲಿಸಿದ್ದು, ತನಿಖೆ ಶುರು ಮಾಡಿದ್ದಾರೆ. - [ಕರಾವಳಿ ಉತ್ಸವದಲ್ಲಿ ಕಳ್ಳತನ: ಪಜೀತಿಗೆ ಸಿಲುಕಿದ ಪೊಲೀಸ್!](https://mobiletime.in/2025/12/theft-at-the-coastal-festival-policeman-caught-in-the-act/): 1.5 ಲಕ್ಷ ರೂ ಮೌಲ್ಯದ ಚಿನ್ನದ ಸರದ ಜೊತೆ ತಿರುಗುತ್ತಿದ್ದ ಪೊಲೀಸ್ ಸಿಬ್ಬಂದಿ ರಮೇಶ ನಾಯ್ಕ ಅವರ ಮೇಲೆ ಕಳ್ಳರು ಕಣ್ಣಾಡಿಸಿದ್ದಾರೆ. ಅದರ ಪರಿಣಾಮ ಕರಾವಳಿ ಉತ್ಸವದ ಅವಧಿಯಲ್ಲಿ ಅವರ ಸರ ಕಣ್ಮರೆಯಾಗಿದೆ! ಚಿಕ್ಕಮಗಳೂರಿನ ರಮೇಶ ನಾಯ್ಕ ಅವರು ಕಾರವಾರದಲ್ಲಿ ಪೊಲೀಸ್ ಸಿಬ್ಬಂದಿಯಾಗಿದ್ದಾರೆ. ಪೊಲೀಸ್ ವಸತಿಗೃಹದಲ್ಲಿ ವಾಸವಾಗಿರುವ ಅವರು ಡಿಸೆಂಬರ್ 27ರಂದು ಕರ್ತವ್ಯಕ್ಕೆ ಹಾಜರಾಗಿದ್ದರು. ಕರ್ತವ್ಯದ ಅವಧಿ ಮುಗಿದ ನಂತರ ಸಂಜೆ ಕರಾವಳಿ ಉತ್ಸವ ನೋಡಲು ಹೋಗಿದ್ದರು. ಆ ದಿನ ಸಂಜೆ ಗೇಟ್ ನಂ 2ರಲ್ಲಿ ಭಾರೀ ಪ್ರಮಾಣದ ನೂಕು ನುಗ್ಗಲು ಉಂಟಾಗಿದ್ದು, ಇನ್ನಿತರ ಪೊಲೀಸ್ ಸಿಬ್ಬಂದಿ ಜೊತೆ ಅವರು ಮುನ್ನುಗ್ಗಲು ಪ್ರಯತ್ನಿಸಿದ್ದರು. ರಾತ್ರಿ 8 ಗಂಟೆ ಅವಧಿಗೆ ರಮೇಶ ನಾಯ್ಕ ಅವರು ತಮ್ಮ ಜೇಬಿಗೆ ಕೈ ಹಾಕಿದರು. ಮನೆಯಿಂದ ಬರುವಾಗ ಆ ಜೇಬಿನಲ್ಲಿದ್ದ ಬಂಗಾರದ ಸರ ಕಾಣಲಿಲ್ಲ. 23 ಗ್ರಾಂ ತೂಕದ ಚಿನ್ನದ ಸರ ಕಾಣೆಯಾಗಿದ್ದರಿಂದ ಅವರು ಕಂಗಾಲಾದರು. ಅಲ್ಲಿದ್ದ ಸಾರ್ವಜನಿಕರನ್ನು ವಿಚಾರಿಸಿದರು. ಆದರೆ, ಬಂಗಾರದ ಸರ ಮಾತ್ರ ಸಿಗಲಿಲ್ಲ. ಮನೆಯಲ್ಲಿಯೇ ಬಂಗಾರ ಬಿಟ್ಟು ಬಂದಿರುವ ಅನುಮಾನದ ಹಿನ್ನಲೆ ವಸತಿಗೃಹಕ್ಕೆ ತೆರಳಿದ ಅವರು ಅಲ್ಲಿಯೂ ಎಲ್ಲಾ ಕಡೆ ಹುಡುಕಾಟ ನಡೆಸಿದರು. ಆದರೆ, ಅಲ್ಲಿಯೂ ಆ ಸರ ಕಾಣಲಿಲ್ಲ. ಕರಾವಳಿ ಉತ್ಸವದ ಅವಧಿಯಲ್ಲಿ ಚಿನ್ನ ಕಳೆದಿರುವ ಬಗ್ಗೆ ಅವರು ಕಾರವಾರ ನಗರಠಾಣೆಗೆ ದೂರು ನೀಡಿದ್ದು, ಕಳ್ಳನನ್ನು ಹುಡುಕಿ ಕೊಡುವಂತೆ ಅಲ್ಲಿನ ಪೊಲೀಸರಿಗೆ ಮನವಿ ಮಾಡಿದರು.   - [ಅಕ್ರಮ ಗಣಿಗಾರಿಕೆಗೆ ಅರಣ್ಯ ರಸ್ತೆ: ಅಧಿಕಾರಿ ವಿರುದ್ಧ ಆಕ್ರೋಶ!](https://mobiletime.in/2025/12/forest-road-for-illegal-mining-outrage-against-officer/): ಅಕ್ರಮ ಗಣಿಗಾರಿಕೆ ನಡೆಸಲು ಅನುವು ಮಾಡಿಕೊಟ್ಟ ಅರಣ್ಯ ಅಧಿಕಾರಿ ವಿರುದ್ಧ ಅಂಕೋಲಾದ ಜನ ಸಿಡಿದೆದ್ದಿದ್ದಾರೆ. ಅಕ್ರಮ ನಡೆಸುವವರಿಗೆ ಅರಣ್ಯದಲ್ಲಿ ರಸ್ತೆ ನಿರ್ಮಿಸಲು ಅವಕಾಶ ನೀಡಿದ ಕಾರಣ ದೇವಿಗದ್ದೆ ಗ್ರಾಮಸ್ಥರು ಹಿರಿಯ ಅರಣ್ಯಾಧಿಕಾರಿಗಳಿಗೆ ಮುತ್ತಿಗೆ ಹಾಕಿದ್ದಾರೆ. ಅಂಕೋಲಾದ ಸಗಡಗೇರಿ ಗ್ರಾಪಂ ವ್ಯಾಪ್ತಿಯ ದೇವಿಗದ್ದೆಯಲ್ಲಿ ಕಳೆದ 4 ವರ್ಷಗಳಿಂದ ಕಟ್ಟಡ ಕಲ್ಲು ಗಣಿಗಾರಿಗೆ ನಡೆಯುತ್ತಿದೆ. ಗಣಿಗಾರಿಕೆ ವೇಳೆ ಭಾರೀ ಪ್ರಮಾಣದ ಸ್ಪೋಟ ಸಂಭವಿಸುತ್ತಿದ್ದು, ಅದರ ಪರಿಣಾಮ ಮನೆಗಳಿಗೆ ಹಾನಿಯಾಗಿದೆ. ಸ್ಪೋಟದ ತೀವೃತೆಗೆ ಜಾನುವಾರುಳು ಸಹ ಸಾವನಪ್ಪಿವೆ. ಇದನ್ನು ವಿರೋಧಿಸಿ ಕಳೆದ ವರ್ಷ ಜನ ಪ್ರತಿಭಟಿಸಿದ್ದು, ಅದರ ಪರಿಣಾಮ ಗಣಿಗಾರಿಕೆ ನಿಂತಿದೆ. ಇದೆಲ್ಲದರ ನಡುವೆ ಕಳೆದ ಎರಡು ತಿಂಗಳಿನಿAದ ಮತ್ತೆ ಗಣಿ ದಣಿಗಳು ಅಲ್ಲಿಗೆ ಬಂದಿದ್ದಾರೆ. ನಿಯಮಬಾಹಿರವಾಗಿ ಕಲ್ಲುಗಳನ್ನು ಒಡೆಯುತ್ತಿದ್ದಾರೆ. ಗಣಿಗಾರಿಕೆ ಉದ್ದೇಶದಿಂದಲೇ ಅರಣ್ಯದಲ್ಲಿ ರಸ್ತೆ ಮಾಡಲಾಗಿದೆ. ಅದೇ ರಸ್ತೆ ಮೂಲಕ ಭಾರೀ ಪ್ರಮಾಣದಲ್ಲಿ ಕಲ್ಲು ಸಾಗಾಟ ನಡೆಯುತ್ತಿದೆ. ಅರಣ್ಯ ರಸ್ತೆಯಿಂದ ಗಣಿಗಾರಿಕೆಯ ವಾಹನ ಸಾಗಾಟ ಮಾಡಲು ಅವಕಾಶ ನೀಡದಿರಲು ಎಸಿಎಫ್ ಜಯೇಶ ಹಾಗೂ ಆರ್ ಎಫ್ ಓ ದೀಪಕ ನಾಯ್ಕ ಅವರಲ್ಲಿ ಗ್ರಾಮಸ್ಥರು ಒತ್ತಾಯ ಮಾಡಿ ಮನವಿ ಸಲ್ಲಿಸಿದರೂ ಯಾವುದೇ ಕ್ರಮ ಆಗಿಲ್ಲ. ಹೀಗಾಗಿ ಗ್ರಾಮದ ಜನ ಅರಣ್ಯ ಇಲಾಖೆಯ ಅಧಿಕಾರಿಗಳ ವಿರುದ್ದ ಲೋಕಾಯುಕ್ತ ಹಾಗೂ ಅರಣ್ಯ ಸಚಿವರಲ್ಲಿ ತಮ್ಮ ದೂರು ನೀಡಿದ್ದು, ಸ್ಥಳ ಪರಿಶೀಲನೆಗೆ ಬಂದ ಡಿಸಿಎಫ್ ರವಿಶಂಕರ ಅವರನ್ನು ಘೇರಾವ ಹಾಕಿ ಪ್ರತಿಭಟನೆ ನಡೆಸಿದ್ದಾರೆ. `ಬದುಕಲು ಸಣ್ಣ ಪುಟ್ಟ ಅರಣ್ಯ ಅತಿಕ್ರಮಣ ಮಾಡಿದರೆ ದರ್ಪದಿಂದ ತೆರವುಗೊಳಿಸುವ ಅರಣ್ಯ ಇಲಾಖೆಯವರು ಗಣಿಗಾರಿಕೆಗೆ ಮಾತ್ರ ತಮ್ಮದೇ ಜಾಗವನ್ನು ನೀಡುತ್ತಿದ್ದಾರೆ’ ಎಂದು ಜನ ದೂರಿದ್ದಾರೆ. - [ಕಿಮ್ಸ್ ಅವ್ಯವಸ್ಥೆ ಬಗ್ಗೆ ಕಾರ್ಯದರ್ಶಿಗೆ ದೂರು](https://mobiletime.in/2025/12/complaint-to-secretary-about-kims-mess/): `ಕಾರವಾರಕ್ಕೆ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆಯಾಗಿ 12 ವರ್ಷ ಕಳೆದರೂ ತಜ್ಞ ವೈದ್ಯರಿಲ್ಲದೇ ರೋಗಿಗಳು ತೊಂದರೆ ಅನುಭವಿಸುತ್ತಿದ್ದಾರೆ. ನೂರಾರು ಕೋಟಿ ರೂ ವೆಚ್ಚದಲ್ಲಿ ಸುಸಜ್ಜಿತ ಆಸ್ಪತ್ರೆ ಎಂದು ಕಟ್ಟಡ ನಿರ್ಮಿಸುವ ಬದಲು ತಜ್ಞ ವೈದ್ಯರ ನೇಮಕಾತಿಗೆ ಮೊದಲ ಆದ್ಯತೆ ಕೊಡಬೇಕು’ ಎಂದು ಜನಶಕ್ತಿ ವೇದಿಕೆ ಅಧ್ಯಕ್ಷ ಮಾಧವ ನಾಯಕ ಅವರು ಆಗ್ರಹಿಸಿದ್ದಾರೆ. ಈ ಬಗ್ಗೆ ಅವರು ವೈದ್ಯಕೀಯ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ಮೊಹಸೀನ್ ಅವರಿಗೆ ಅರ್ಜಿ ಸಲ್ಲಿಸಿದ್ದಾರೆ. `ಕಿಮ್ಸ್ ಪ್ರಭಾರಿ ನಿರ್ದೇಶಕಿ ಡಾ ಪೂರ್ಣಿಮಾರನ್ನು ಬದಲಿಸಿ ಅನುಭವಿ ಸಮರ್ಥ ನಿರ್ದೇಶಕರನ್ನು ನೀಡಬೇಕು’ ಎಂದು ಪಟ್ಟುಹಿಡಿದಿರುವ ಅವರು 450 ಹಾಸಿಗೆಯ ಹೊಸ ಕಟ್ಟಡದ ಮೇಲ್ಛಾವಣಿ ಕುಸಿದು ಬಿದ್ದಿರುವುದನ್ನು ಗಮನಕ್ಕೆ ತಂದಿದ್ದಾರೆ. ಇದರೊಂದಿಗೆ ಕಿಮ್ಸ್ ಅವ್ಯವಸ್ತೆಗಳ ಬಗ್ಗೆ ಅವರು ಪ್ರಧಾನ ಕಾರ್ಯದರ್ಶಿಗಳಿಗೆ ಮಾಹಿತಿ ನೀಡಿದ್ದಾರೆ. ಇದರೊಂದಿಗೆ `ಬಿಪಿಎಲ್ ಕಾರ್ಡ್ ಹೊಂದಿದವರಿಗೆ ಉಚಿತ ಆಂಬುಲೆನ್ಸ ನೀಡಬೇಕು. ಹೆರಿಗೆ ಕೋಣೆಯಲ್ಲಿ ಶೌಚಾಲಯ ಹಾಗೂ ನೀರಿನ ಕೋಣೆ ಇಲ್ಲದಿರುವುದನ್ನು ಗಮನಿಸಿ ಸೌಕರ್ಯ ಒದಗಿಸಬೇಕು. ಅಗತ್ಯ ತಜ್ಞರ ನೇಮಕಾತಿ ನಡೆಸಬೇಕು. ಅನಗತ್ಯ ಕಟ್ಟಡ ನಿರ್ಮಾಣದ ಬದಲು ಅಗತ್ಯ ಸೇವೆ ಒದಗಿಸಬೇಕು’ ಎಂದು ಆಗ್ರಹಿಸಿದರು. ಮಾಧವ ನಾಯಕ ಅವರು ಮಾತನಾಡಿದ್ದೇನು? ವಿಡಿಯೋ ಇಲ್ಲಿ ನೋಡಿ.. - [ಸರ್ಕಾರಿ ವೈದ್ಯರಿಗೆ ಖಾಸಗಿ ಆಸ್ಪತ್ರೆಯ ಮೋಹ: ಕಠಿಣ ಕ್ರಮಕ್ಕೆ ಸೂಚನೆ!](https://mobiletime.in/2025/12/government-doctors-fascination-with-private-hospitals-warning-for-strict-action/): `ರೋಗಿಗಳಿಗೆ ಚಿಕಿತ್ಸೆ ಹಾಗೂ ಕರ್ತವ್ಯದ ವಿಷಯದಲ್ಲಿ ನಿರ್ಲಕ್ಷ್ಯ ತೋರುವ ವೈದ್ಯರ ವಿರುದ್ದ ಕಠಿಣ ಕ್ರಮ ಜರುಗಿಸುವೆ’ ಎಂದು ವೈದ್ಯಕೀಯ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಮೊಹಮದ್ ಮೊಹಿಸೀನ್ ಅವರು ಎಚ್ಚರಿಕೆ ನೀಡಿದ್ದಾರೆ. ಸೋಮವಾರ ಕಾರವಾರದ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಗೆ ಭೇಟಿ ನೀಡಿದ ಅವರು `ವೈದ್ಯಕೀಯ ಉಪಕರಣಗಳ ಗುಣಮಟ್ಟದಲ್ಲಿ ಯಾವುದೇ ರಾಜಿ ಮಾಡಿಕೊಳ್ಳುವ ಹಾಗಿಲ್ಲ’ ಎಂದು ಸೂಚನೆ ನೀಡಿದ್ದಾರೆ. `ಸರ್ಕಾರಿ ಆಸ್ಪತ್ರೆಯಲ್ಲಿ ಎಲ್ಲಾ ಸೌಲಭ್ಯವಿದ್ದರೂ ರೋಗಿಗಳನ್ನು ಖಾಸಗಿ ಆಸ್ಪತ್ರೆಗೆ ಶಿಫಾರಸ್ಸು ಮಾಡುವ ವೈದ್ಯರನ್ನು ಅಮಾನತು ಮಾಡಲಾಗುತ್ತದೆ’ ಎಂದು ಎಚ್ಚರಿಸಿದರು. `ರೋಗಿಗಳ ಚಿಕಿತ್ಸೆಗೆ ಖರೀದಿಸುವ ವೈದ್ಯಕೀಯ ಉಪಕರಣಗಳು ನಿಗಧಿತ ಮಾನದಂಡಗಳನ್ನು ಹೊಂದಿರುವ ಬಗ್ಗೆ ಪರಿಶೀಲಿಸಬೇಕು. ಅತ್ಯಾಧುನಿಕವಾದ ಮತ್ತು ಧೀರ್ಘ ಕಾಲದ ಬಳಕೆಗೆ ಯೋಗ್ಯವಾಗಬಹುದಾದ ಉಪಕರಣಗಳನ್ನು ಖರೀದಿಸುವ ಮೂಲಕ ರೋಗಿಗಳ ಉತ್ತಮ ವೈದ್ಯಕೀಯ ಸೌಲಭ್ಯಗಳು ದೊರೆಯುವಂತೆ ಮಾಡಬೇಕು’ ಎಂದವರು ಹೇಳಿದರು. `ಆಸ್ಪತ್ರೆಗೆ ಆಗಮಿಸುವ ರೋಗಿಗಳಿಗೆ ಉತ್ತಮ ರೀತಿಯ ಆರೈಕೆ ಮತ್ತು ಚಿಕಿತ್ಸೆ ದೊರೆಯುವಂತೆ ನೋಡಿಕೊಳ್ಳಬೇಕು. ಆಸ್ಪತ್ರೆ ಆವರಣದಲ್ಲಿ ಸ್ವಚ್ಛತೆಗೆ ಹೆಚ್ಚಿನ ಅದ್ಯತೆ ನೀಡಿ, ವೈದ್ಯಕೀಯ ತ್ಯಾಜ್ಯಗಳನ್ನು ಸಮರ್ಪಕ ರೀತಿಯಲ್ಲಿ ನಿಗಧಿತ ಅವಧಿಯೊಳಗೆ ವಿಲೇವಾರಿ ಮಾಡಬೇಕು’ ಎಂದು ಸೂಚಿಸಿದರು. `ಪ್ರಸ್ತುತ ಹೊಸ ಕಟ್ಟಡದಲ್ಲಿ ಕೆಲವು ವಿಭಾಗಗಳು ಕಾರ್ಯನಿರ್ವಹಿಸುತ್ತಿದ್ದು, ಎಲ್ಲಾ ವಿಭಾಗಗಳನ್ನು ಸ್ಥಳಾಂತರಿಸಲು ಕ್ರಮ ಕೈಗೊಳ್ಳಬೇಕು’ ಎಂದು ಸೂಚಿಸಿದರು.   - [ಕರಾವಳಿ ಉತ್ಸವ: ಕಣ್ತುಂಬಿಕೊoಡ ಜನ ಸಾಗರ!](https://mobiletime.in/2025/12/coastal-utsav-dazzling-peoples-ocean/): ಕಾರವಾರ ಕಡಲತೀರದಲ್ಲಿ ಏಳು ದಿನಗಳ ಕಾಲ ಅದ್ಧೂರಿ ಕರಾವಳಿ ಉತ್ಸವ ನಡೆದಿದ್ದು, ಲಕ್ಷಾಂತರ ಜನ ಗಾನಸುಧೆಯಲ್ಲಿ ಕುಣಿದು ಕುಪ್ಪಳಿಸಿದ್ದಾರೆ. ಏಳು ವರ್ಷಗಳ ನಂತರ ಜಿಲ್ಲಾಡಳಿತ ಕರಾವಳಿ ಉತ್ಸವ ಆಯೋಜಿಸಿದ್ದು, ರಾಜ್ಯ, ರಾಷ್ಟ ಮತ್ತು ಸ್ಥಳೀಯ ಕಲಾವಿದರು ತಮ್ಮ ಪ್ರತಿಭೆ ಅನಾವರಣಗೊಳಿಸಿದ್ದಾರೆ. ಡಿಸೆಂಬರ್ 22ರಿಂದ ಶುರುವಾದ ಕರಾವಳಿ ಉತ್ಸವದಲ್ಲಿ ರಾಷ್ಟ ಮತ್ತು ರಾಜ್ಯದ ಪ್ರಖ್ಯಾತ ಗಾಯಕರಾದ ಶಂಕರ್ ಮಹಾದೇವನ್, ಸೋನು ನಿಗಮ್, ರಫ್ತಾರ್, ದಲೇರ್ ಮೆಹಂದಿ. ಮೊಹಮದ್ ದಾನೀಷ್, ರಾಜೇಶ್ ಕೃಷ್ಣನ್, ಗುರುಕಿರಣ್ ಅವರು ತಮ್ಮ ಗಾಯನ ಪ್ರಸ್ತುಪಡಿಸಿದರು. ಉತ್ಸವದ ಅಂಗವಾಗಿ ನಡೆದ ಕವಿಗೋಷ್ಠಿ, ಗೋಡೆ ಮೇಲೆ ಚಿತ್ರ ಬಿಡಿಸುವ ಸ್ಪರ್ಧೆ, ಛಾಯಾಚಿತ್ರ ಮತ್ತು ರೀಲ್ಸ್ ಪ್ರದರ್ಶನ ಹಾಗೂ ಸ್ಪರ್ಧೆ, ರಂಗೋಲಿ ಮತ್ತು ಅಡುಗೆ ಸ್ಪರ್ಧೆ, ಗಾಳಿಪಟ ಉತ್ಸವ, ಮರಳು ಕಲೆ, ಕರಾವಳಿ ರನ್ ಮ್ಯಾರಾಥಾನ್, ಶ್ವಾನ ಪ್ರದರ್ಶನ, ಹಗ್ಗ ಜಗ್ಗಾಟ, ವಾಲಿಬಾಲ್, ಕಬಡ್ಡಿ, ಮೀನುಗಾರರ ದೋಣಿ ಸ್ಪರ್ಧೆಗಳು ಅನೇಕರನ್ನು ಆಕರ್ಷಿಸಿದವು. ಸಮಾರೋಪದ ಅಂತಿಮದಲ್ಲಿ ಆಕರ್ಷಕ ಸಿಡಿಮದ್ದು ಪ್ರದರ್ಶನ ನಡೆಯಿತು. ಪ್ರವಾಸೋದ್ಯಮಕ್ಕೆ ಹೊಸ ನೀತಿ! ಸಮಾರೋಪ ಸಮಾರಂಭಕ್ಕೆ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ ಅವರು ಆಗಮಿಸಿದ್ದು, `ಮಂಗಳೂರು, ಉಡುಪಿ, ಉತ್ತರ ಕನ್ನಡ ಜಿಲ್ಲೆಯ ಕರಾವಳಿ ಪ್ರದೇಶಗಳ ಅಭಿವೃದ್ಧಿಗೆ ಹೊಸ ಪ್ರವಾಸೋದ್ಯಮ ನೀತಿ ಮಾಡುವೆ’ ಎಂದು ಅವರು ಘೋಷಿಸಿದರು. `ಕರಾವಳಿ ಪ್ರದೇಶಗಳ ಅಭಿವೃದ್ಧಿಗೆ ಹೊಸ ಪ್ರವಾಸೋದ್ಯಮ ನೀತಿ ರಚಿಸುವ ಕುರಿತಂತೆ ಜನವರಿ 10 ರಂದು 3 ಜಿಲ್ಲೆಗಳ ಜಿಲ್ಲಾಧಿಕಾರಿಗಳು ಮಂಗಳೂರಿನಲ್ಲಿ ಸಭೆ ನಡೆಸಲಾಗುತ್ತದೆ. `ಪಶ್ಚಿಮ ಘಟ್ಟಕ್ಕೆ ಮತ್ತು ಮಲೆನಾಡಿಗೆ ಪ್ರತ್ಯೇಕವಾದ ಪ್ರವಾಸಿ ನೀತಿಯನ್ನು ಮಾಡಿ, ಹೊರಗಡೆಯಿಂದ ಉದ್ದಿಮೆದಾರರು ಬಂದು ಇಲ್ಲಿಯೇ ಬಂಡವಾಳ ಹೂಡವ ರೀತಿ ಮಾಡಲಾಗುತ್ತದೆ. ಇಲ್ಲಿನ ಯುವಕರು ಬೆಂಗಳೂರು, ಮುಂಬೈ, ಸೌದಿ, ಗೋವಾ ಹೊರ ರಾಜ್ಯ, ಜಿಲ್ಲೆಗಳಿಗೆ ವಲಸೆ ಹೋಗುವುದನ್ನು ತಪ್ಪಿಸಿ ಮನೆ ಬಾಗಲಿಗೆ ಉದ್ಯೋಗವನ್ನು ಸೃಷ್ಠಿಮಾಡಸಬೇಕು ಎಂಬ ಕನಸಿದೆ’ ಎಂದವರು ವಿವರಿಸಿದರು. `ಸಮುದ್ರ ಎಂದರೇ ಒಂದು ದೊಡ್ಡ ಶಕ್ತಿ, ಮೀನುಗಾರಿಗೆ ಇಲ್ಲಿನ ಬದುಕಿಗೆ ದೊಡ್ಡ ಆಧಾರ, ಇಲ್ಲಿ ಪ್ರವಾಸಿಗರ ಸ್ವರ್ಗವನ್ನು ಕಾಣಬಹುದು. ಇಲ್ಲಿನ ಜನ ಸಾಮಾನ್ಯರ ಸಂತೋಷದ ದೃಷ್ಠಿಯಿಂದ, ಜಿಲ್ಲೆಯ ಕಲಾವಿದರಿಗೆ, ಇಲ್ಲಿನ ಸಂಪ್ರದಾಯ, ಆಚಾರ ವಿಚಾರಗಳನ್ನು ಪ್ರಚಾರ ಮಾಡುವುದಕ್ಕಾಗಿ ಕರಾವಳಿ ಉತ್ಸವದಂತಹ ದೊಡ್ಡ ಕಾರ್ಯಕ್ರಮ ಮಾಡಿ ಸಚಿವರು ಇಡೀ ಸರ್ಕಾರಕ್ಕೆ ಗೌರವವನ್ನು ತಂದಿದ್ದಾರೆ’ ಎಂದರು. `ಸಮುದ್ರ ಅಂದರೆ ಸಂಪತ್ತು ಮತ್ತು ಜ್ಞಾನದ ಬಲ, ಬದುಕಿಗೆ ಒಂದು ಆದರ್ಶವನ್ನು ಇಟ್ಟುಕೊಳ್ಳಬೇಕು. ಸಾಧನೆಗೆ ಒಂದು ಗುರಿಯನ್ನು ಇಟ್ಟುಕೊಳ್ಳಬೇಕು. ಇಂತಹ ಕಾರ್ಯಕ್ರಮವು ಸಾವಿರಾರು ಯುವಕರ ತಮ್ಮಲ್ಲಿ ಅಡಗಿರುವ ಚಿತ್ರಕಲೆ, ಕ್ರೀಡೆ, ಜನಪದ ಲೋಕ, ಸಾಹಿತ್ಯ, ಸಂಸ್ಕೃತಿ ಮುಂತಾದ ಕ್ಷೇತ್ರಗಳಲ್ಲಿ ಸಾಧನೆ ಮಾಡಿ ರಾಜ್ಯಕ್ಕೆ, ರಾಷ್ಟçಕ್ಕೆ ಮಟ್ಟದಲ್ಲಿ ಬಿಂಬಿಸಿಕೊಳ್ಳಲು ಇಂತಹ ವೇದಿಕೆಗಳು ದಾರಿಯಾಗಲಿವೆ’ ಎಂದರು. `ಅನಾರೋಗ್ಯದಿoದ ಬಳಲುತ್ತಿರುವ ರೋಗಿಗಳಿಗೆ ಹೆಚ್ಚಿನ ಚಿಕಿತ್ಸೆಗೆ ಗೋವಾ, ಮಂಗಳೂರು, ಉಡುಪಿ ಜಿಲ್ಲೆಗಳ ಮೊರೆ ಹೋಗಬೇಕು ಆದ್ದರಿಂದ ಉತ್ತರ ಕನ್ನಡ ಜಿಲ್ಲೆಯಲ್ಲಿ ಮಲ್ಟಿ ಸ್ಪೇಷಾಲಿಟಿ ಆಸ್ಪತ್ರೆಯನ್ನು ಮಾಡಬೇಕು ಎಂಬ ಸತೀಶ್ ಸೈಲ್ ಅವರು ಬೇಡಿಕೆಗೆ ನಾನು ಕೂಡ ಬೆಂಬಲ ನೀಡುತ್ತೇನೆ’ ಎಂದರು. - [ಶಿರಸಿ-ಕುಮಟಾ: ಹೊಸ ವರ್ಷಕ್ಕೂ ಮೊದಲೇ ಹೊಸ ರಸ್ತೆ!](https://mobiletime.in/2025/12/sirsi-kumata-a-new-road-for-the-new-year/): ಹೊಸ ವರ್ಷಕ್ಕೂ ಮೊದಲೇ ಕುಮಟಾ-ಶಿರಸಿ ಮಾರ್ಗದಲ್ಲಿ ಸರ್ಕಾರಿ ಬಸ್ ಸಂಚಾರ ಶುರುವಾಗಲಿದೆ. 2025ರ ಡಿಸೆಂಬರ್ 30ರಿಂದ 20ಕಿಮೀ ವೇಗದಲ್ಲಿ ಬಸ್ ಓಡಾಟಕ್ಕೆ ಜಿಲ್ಲಾಧಿಕಾರಿ ಕೆ ಲಕ್ಷಿಪ್ರಿಯಾ ಅವರು ಅನುಮತಿ ನೀಡಿದ್ದಾರೆ. ಶಿರಸಿ ಜಾತ್ರೆ ಹಿನ್ನಲೆ ಈ ಮಾರ್ಗದ ಬಸ್ ಓಡಾಟಕ್ಕೆ ಅವಕಾಶ ನೀಡಲಾಗಿದೆ. ಪೊಲೀಸ್ ಅಧೀಕ್ಷಕರು, ಹೆದ್ದಾರಿ ಪ್ರಾಧಿಕಾರದವರ ವರದಿ ಆಧಾರಿಸಿ ಈ ರಸ್ತೆಯನ್ನು ಸಾರ್ವಜನಿಕ ಬಳಕೆಗೆ ಬಿಟ್ಟು ಕೊಡಲಾಗಿದೆ. ಬಸ್ ಬಿಟ್ಟು ಭಾರೀ ಗಾತ್ರದ ಬೇರೆ ವಾಹನಗಳ ಓಡಾಟಕ್ಕೆ ಅವಕಾಶವಿಲ್ಲ. ಸೂಚಿಸಿದಕ್ಕಿಂತ ಹೆಚ್ಚಿನ ವೇಗವಾಗಿ ವಾಹನ ಓಡಿಸುವ ಹಾಗೂ ಇಲ್ಲ. ಇದಕ್ಕಾಗಿ `ಪೊಲೀಸರು ಅಗತ್ಯವಿರುವ ಕಡೆ ಬ್ಯಾರಿಕೇಡ್ ಅಳವಡಿಸಬೇಕು. ಸಂಚಾರ ದಟ್ಟಣೆ ಆಗದ ರೀತಿ ಎಚ್ಚರಿಕೆವಹಿಸಬೇಕು’ ಎಂದು ಡೀಸಿ ಸೂಚಿಸಿದ್ದಾರೆ. `ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರು ಅಗತ್ಯವಿರುವ ಕಡೆಗಳಲ್ಲಿ ವೇಗದ ಮಿತಿ ಫಲಕ, ರಸ್ತೆ ತಿರುವು ಪ್ರದೇಶದಲ್ಲಿ ಅಗತ್ಯ ಸೂಚನಾ ಫಲಕ ಅಳವಡಿಸಬೇಕು. ಅಗತ್ಯ ಸರಕ್ಷಾ ಕ್ರಮಗಳನ್ನು ಕೈಗೊಳ್ಳಬೇಕು’ ಎಂದು ಆದೇಶಿಸಿದ್ದಾರೆ. - [ಜಾಗ ತೆರವು ಮುನ್ನ ಜೀವ ತೆಗೆಯಿರಿ!](https://mobiletime.in/2025/12/take-your-life-before-the-space-is-cleared/): ಜನ ವಿರೋಧ ಹಾಗೂ ಆತಂಕದ ನಡುವೆಯೂ ಅತಿಕ್ರಮಣದಾರರನ್ನು ಒಕ್ಕಲೆಬ್ಬಿಸುವುದಕ್ಕಾಗಿ ಅರಣ್ಯ ಅಧಿಕಾರಿಗಳು ಆಸಕ್ತರಾಗಿದ್ದು, ಅರಣ್ಯವಾಸಿಗಳಿಗೆ ಮತ್ತೆ ಮತ್ತೆ ನೋಟಿಸ್ ನೀಡುತ್ತಿದ್ದಾರೆ. ಹತ್ತು ಹಲವು ಎಕರೆ ಅತಿಕ್ರಮಣ ಮಾಡಿದ ರಾಜಕಾರಣಿಗಳನ್ನು ಬಿಟ್ಟು ಅಸಹಾಯಕ ವೃದ್ಧ ಕುಟುಂಬವನ್ನು ಗುರಿಯಾಗಿರಿಸಿಕೊಂಡು ಅರಣ್ಯಾಧಿಕಾರಿಗಳು ಕಿರುಕುಳ ನೀಡುತ್ತಿದ್ದಾರೆ. ಅರಣ್ಯ ಅಧಿಕಾರಿಗಳು ನೀಡಿದ ನೋಟಿಸ್ ಸ್ವೀಕರಿಸಿದ ಸಿದ್ದಾಪುರದ ರಾಮಚಂದ್ರ ನಾಯ್ಕ ಅವರು `ನಮ್ಮ ಭೂಮಿ ಮಾತ್ರವಲ್ಲ. ನಮ್ಮ ಜೀವವನ್ನು ತೆಗೆದುಕೊಂಡು ಹೋಗಿ’ ಎಂದು ಹತಾಶೆಯ ಮಾತುಗಳನ್ನಾಡಿದ್ದಾರೆ. ಕ್ಯಾದಗಿ ವಲಯ ಅರಣ್ಯಾಧಿಕಾರಿ ಕಚೇರಿಯಿಂದ ಮಾವಿನಕೊಡ ಗ್ರಾಮದ ರಾಮಚಂದ್ರ ತಿಮ್ಮ ನಾಯ್ಕ ಬಿಳ್ಳುಮನೆ ಅವರಿಗೆ ನೋಟಿಸ್ ಬಂದಿದೆ. `ಜೀವ ಹೋಗುವ ಪರಿಸ್ಥಿತಿಯಲ್ಲಿರುವಾಗ ಜೀವನ ಪರ್ಯಂತ ಸಾಗುವಳಿ ಮಾಡಿದ ಭೂಮಿಯನ್ನು ಬಿಡುಕೊಡಬೇಕು’ ಎಂಬ ಆತಂಕದಲ್ಲಿ ರಾಮಚಂದ್ರ ನಾಯ್ಕ ಅವರು ಕಣ್ಣೀರು ಸುರಿಸಿದ್ದಾರೆ. `ಅನಾಧಿಕಾಲದಿಂದಲೂ 3 ಎಕರೆ ಭೂಮಿಯನ್ನು ಸಾಗುವಳಿ ಮಾಡಿಕೊಂಡು ಬಂದಿದ್ದು, ಅದನ್ನು ಒಕ್ಕಲೆಬ್ಬಿಸುವ ಪ್ರಯತ್ನ ನಡೆದಿದೆ. ಒಂದು ವಾರದಲ್ಲಿ ಜಾಗ ಖಾಲಿ ಮಾಡುವಂತೆ ಅಧಿಕಾರಿಗಳು ನೋಟಿಸ್ ನೀಡಿದ್ದಾರೆ. ಕಷ್ಟಪಟ್ಟು ಬೆಳೆಸಿರುವ ಅಡಿಕೆ, ತೆಂಗು ಮರಗಳನ್ನು ನಾಶ ಮಾಡುವುದನ್ನು ಕಣ್ಣಿನಿಂದ ನೋಡಲು ಸಾಧ್ಯವಿಲ್ಲ. ಹೀಗಾಗಿ ಆ ಗಿಡ ನಾಶ ಮಾಡುವ ಮುನ್ನ ನಮ್ಮನ್ನು ಕೊಂದುಬಿಡಿ’ ಎಂದು ರಾಮಚಂದ್ರ ನಾಯ್ಕ ಅವರು ಅಳಲು ತೋಡಿಕೊಂಡಿದ್ದಾರೆ. ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ಅವರ ಜೊತೆ ಮಾಬ್ಲೇಶ್ವರ ನಾಯ್ಕ, ಜಗದೀಶ್ ನಾಯ್ಕ, ರವಿ ನಾಯ್ಕ ಅರಳಿಮಕ್ಕಿ, ಚೌಡಾ ಗೌಡ ಕಿತ್ತಳ್ಳಿ ಅವರು ರಾಮಚಂದ್ರ ನಾಯ್ಕ ಅವರನ್ನು ಸಮಾಧಾನ ಮಾಡಿದ್ದಾರೆ. - [ಅಂಗವಿಕಲರ ಕುಟುಂಬಕ್ಕೆ ನೆರವು](https://mobiletime.in/2025/12/assistance-to-families-of-disabled-people/): ಕುಮಟಾದ ಜನಸಾಮಾನ್ಯರ ಸಮಾಜ ಕಲ್ಯಾಣ ಕೇಂದ್ರದವರು ಹಳಕಾರದ ಹನುಮಂತ ಮುಕ್ರಿ ಅವರ ಮನೆಗೆ ಭೇಟಿ ನೀಡಿದ್ದು, ಅವರಿಗೆ ಅಗತ್ಯವಿರುವ ಆಹಾರ ಸಾಮಗ್ರಿ ವಿತರಿಸಿದ್ದಾರೆ. ಹನುಮಂತ ಮುಕ್ರಿ ಅವರ ಪತ್ನಿ ಹಾಗೂ ಮಗ ಅಂಗವಿಕಲರಾಗಿದ್ದು, ಅವರ ಸಮಸ್ಯೆಯನ್ನು ಕೇಂದ್ರದವರು ಆಲಿಸಿದ್ದಾರೆ. ಹನುಮಂತ ಮುಕ್ರಿ ಅವರು ಚಾಲಕರಾಗಿದ್ದು, ಅಪಘಾತದ ಅವಧಿಯಲ್ಲಿ ಬೆನ್ನಿಗೆ ಪೆಟ್ಟಾಗಿರುವುದರಿಂದ ಜೀವನ ನಿರ್ವಹಣೆ ಕಷ್ಟವಾಗಿರುವ ಬಗ್ಗೆ ವಿವರಿಸಿದ್ದಾರೆ. `ಸರ್ಕಾರದಿಂದ ಈ ಕುಟುಂಬಕ್ಕೆ ಸಿಗುವ ಪಿಂಚಣಿ ಹೆಚ್ಚಾಗಬೇಕು. ಆ ಕುಟುಂಬದ ವಸತಿಗೆ ಯೋಗ್ಯ ಮನೆ ನಿರ್ಮಿಸಿಕೊಡಬೇಕು. ಅಂಗವಿಕಲರಿಗೆ ಅಗತ್ಯವಿರುವ ಸೌಕರ್ಯವನ್ನು ಸಹ ಈ ಕುಟುಂಬಕ್ಕೆ ಒದಗಿಸಬೇಕು’ ಎಂದು ಆಗ್ನೇಲ್ ರೋಡ್ರಿಗಸ್ ಅವರು ಆಗ್ರಹಿಸಿದ್ದಾರೆ. ಇದರೊಂದಿಗೆ `ಸ್ವ ಉದ್ಯೋಗಕ್ಕೆ ಪ್ರೋತ್ಸಾಹ, ಅಂಗವೈಕಲ್ಯಕ್ಕೆ ಅಗತ್ಯವಿರುವ ಚಿಕಿತ್ಸೆ ಒದಗಿಸಬೇಕು’ ಎಂದು ಪ್ರಮುಖರಾದ ಸುಧಾಕರ್ ನಾಯ್ಕ್, ಹನುಮಂತ್ ಮುಕ್ರಿ, ಮಹಾಲಕ್ಷ್ಮಿ ಮುಕ್ರಿ, ಶಿವಿ ಮುಕ್ರಿ ಅವರು ಆಗ್ರಹಿಸಿದ್ದಾರೆ. - [ಗಮನ ಸೆಳೆದ ಸ್ಪರ್ಧೆ](https://mobiletime.in/2025/12/attention-grabbing-competition/): ಶಿರಸಿಯ ಶ್ರೀಭೂತೇಶ್ವರ ಪತ್ತಿನ ಸಹಕಾರಿ ಸಂಘದವರ ಸಹಕಾರದಲ್ಲಿ ಗಾಣಿಗ ಸಮಾಜ ಯವಕ ಮಂಡಳಿಯಿoದ ವಿವಿಧ ಕಾರ್ಯಕ್ರಮ ನಡೆದಿದ್ದು, ಜನ ಉತ್ಸಾಹದಿಂದ ಭಾಗವಹಿಸಿದ್ದಾರೆ. ಯಲ್ಲಾಪುರ ನಾಕಾ ಬಳಿಯ ಗಾಣಿಗ ಸಮಾಜ ಭವನದಲ್ಲಿ ನಡೆದ ಚಿತ್ರಕಲೆ, ಫ್ಯಾನ್ಸಿ ಡ್ರೆಸ್, ಹಾಗೂ ನೃತ್ಯ ಸ್ಪರ್ಧೆಯಲ್ಲಿ ಮಕ್ಕಳು ಆಸಕ್ತಿವಹಿಸಿದ್ದರು. ಮಹಿಳೆಯರಿಗಾಗಿ ನಡೆದ ರಂಗೋಲಿ ಸ್ಪರ್ಧೆ ಗಮನಸೆಳೆಯಿತು. ಈ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಭೂತೇಶ್ವರ ಪತ್ತಿನ ಸಹಕಾರಿ ಸಂಘದ ನಿರ್ದೇಶಕ ಉಮಾಕಾಂತ ಶೆಟ್ಟಿ ಹಾಗೂ ವಸಂತ ಶೆಟ್ಟಿ ಹಾಗೂ ಮುಖ್ಯ ಕಾರ್ಯನಿರ್ವಾಹಕ ವಿನಾಯಕ ಶೆಟ್ಟಿ ಅವರು ಬಹುಮಾನ ವಿತರಿಸಿದರು. ಸಮಾಜದ ಪ್ರಮುಖರು, ಯುವಕ ಮಂಡಳಿಯ ಪದಾಧಿಕಾರಿಗಳು ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ರಾಘವೇಂದ್ರ ಶ್ರೀಧರ ಶೆಟ್ಟಿ, ಗಜಾನನ ಸುರೇಶ ಶೆಟ್ಟಿ, ಸುನೀಲ್ ಜಗದೀಶ ಶೆಟ್ಟಿ ಕಾರ್ಯಕ್ರಮದ ಜವಾಬ್ದಾರಿ ನಿಭಾಯಿಸಿದರು. - [ಗಮನ ಸೆಳೆದ ಆಲ್ಫಾ ಚಿತ್ರದ  "ರಾವ ರಾವ" ಹಾಡು](https://mobiletime.in/2025/12/the-song-rava-rava-from-the-movie-alpha-attracted-attention/): “ಗೀತ”  ಹೊಯ್ಸಳ  ಚಿತ್ರಗಳ ಬಳಿಕ ನಿರ್ದೇಶಕ ವಿಜಯ್  ಆಕ್ಷನ್ ಕಟ್ ಹೇಳಿರುವ  ʼಆಲ್ಫಾ”  ಮೆನ್ ಲವ್ ವೈಲೆನ್ಸ್ ಚಿತ್ರದ ” ರಾವ ರಾವ” ಹಾಡು ಬಿಡುಗಡೆಯಾಗಿದ್ದು ಗಮನ ಸೆಳೆದಿದೆ.‌ನಾಯಕ ಹೇಮಂತ್ ಹಾಡಿನಲ್ಲಿ ಕಾಣಿಸಿಕೊಂಡಿದ್ದು ಹಾಡು ಅದ್ದೂರಿ ಮತ್ತು ಶ್ರೀಮಂತಿಕೆಯಿಂದ ಮೂಡಿಬಂದಿದೆ. ಇದು ಚಿತ್ರದ ಬಗೆಗಿನ‌ ನಿರೀಕ್ಷೆಯನ್ನು ದುಪ್ಪಟ್ಟು ಮಾಡಿದೆ ನಾಯಕ ಹೇಮಂತ್‌ ಕುಮಾರ್  ರಗಡ್ ಲುಕ್ ನಲ್ಲಿ ಕಾಣಿಸಿಕೊಂಡಿರುವ ಅಲ್ಪಾ’ ಚಿತ್ರದ ಮೊದಲ ಹಾಡು ‘ ರಾವ ರಾವ” ಗೀತೆಗೆ  ರಾಗನಿಧಿ ಅನೂಪ್ ಸೀಳಿನ್  ಸಂಗೀತ ನೀಡಿದ್ದಾರೆ.  ರಾವ ರಾವ’ ಹಾಡಿಗೆ ಯವ ಪ್ರತಿಭಾನ್ವಿತ ಗೀತ ರಚನೆಕಾರ ನಾಗಾರ್ಜುನ ಶರ್ಮಾ ಪದ ಪೋಣಿಸಿದ್ದು . ಅನೂರಾಗ ಕುಲಕರ್ಣಿ ಹಾಡಿದ್ದಾರೆ. ಚಿತ್ರದ ಫಸ್ಟ್ ಲುಕ್ ಪೋಸ್ಟರ್  ಬಿಡುಗಡೆಯಾಗಿದ್ದು ಗಮನ ಸೆಳೆದಿದೆ.’ಆಲ್ಫಾ  ಸಿನಿಮಾ ಆಕ್ಷನ್ ಸಿ ಜತೆಗೆ ಅಪ್ಪ ಮತ್ತು ಮಗನ  ಭಾವನಾತ್ಮಕ ಸಂಬಂಧ ಚಿತ್ರದ ಹೈಲೈಟ್. ಚಿತ್ರದ ಮೂಲಕ ಹೇಮಂತ್ ಕುಮಾರ್ ಕನ್ನಡ ಚಿತ್ರರಂಗಕ್ಕೆ  ಪರಿಚಯವಾಗುತ್ತಿದ್ದಾರೆ. ನಿರ್ದೇಶಕ ವಿಜಯ್ ಮಾತನಾಡಿ ಆಕ್ಷನ್ ಮತ್ತು ಕ್ರೈಂನ ಭಯಾನಕತೆ ಎಷ್ಟಿರುತ್ತೆ ಎನ್ನುವುದು  ಚಿತ್ರದ ಪೋಸ್ಟರ್ ನಲ್ಲಿ ಕಾಣಿಸಿಕೊಂಡಿದೆ. ಸಿನಿಮಾದಲ್ಲಿ ಮೂರು ಪಾತ್ರಗಳು ಚಿತ್ರದಲ್ಲಿ ಪ್ರಮುಖವಾಗಿ ಕಾಣಿಸಿಕೊಂಡಿವೆ .ಚಿತ್ರದ ಶೀರ್ಷಿಕೆ ಜತೆಗೆ ಮೆನ್ ಲವ್ ವೈಲನ್ಸ್ ಸಬ್ ಟೈಟಲ್ ಕೂಡ ಗಮನ ಸೆಳೆಯುತ್ತಿದೆ  ಎಣಮದು ಮಾಹಿತಿ ನೀಡಿದ್ದಾರೆ ಚಿತ್ರದ  ಮೂಲಕ ಆನಂದ್ ಕುಮಾರ್ ನಿರ್ಮಾಪಕರಾಗಿ  ಚಿತ್ರರಂಗಕ್ಕೆ ಪರಿಚಯವಾಗುತ್ತಿದ್ದು ‘ಎಲ್ ಎ’ ಬ್ಯಾನರ್‌ನಲ್ಲಿ ಆಲ್ಫಾ ಸಿನಿಮಾ ಮೂಡಿಬರುತ್ತಿದೆ.  ನಾಯಕ ಹೇಮಂತ್ ಕುಮಾರ್ ಸಿನಿಮಾಗಾಗಿ ಭರ್ಜರಿ ತಯಾರಿ ಮಾಡಿಕೊಂಡು ಬಂದಿದ್ದಾರೆ. ನಿರ್ದೇಶಕ ಮತ್ತು ನಟ ರಾಘು ಶಿವಮೊಗ್ಗ ಅವರ ಬಳಿ ನಟನಾ  ತಯಾರಿ ನಡೆಸಿದ್ದಾರೆ. ಅರ್ಜುನ್ ಜತೆ ಸಾಹಸ ಅಭ್ಯಾಸ ಮಾಡಿದ್ರೆ, ಭೂಷಣ್  ಪತ್ನಿ ಬಳಿ ಡಾನ್ಸ್ ಕಲಿತಿದ್ದಾರೆ. ನಟನೆ, ಫೈಟ್, ಡಾನ್ಸ್ ಜತೆಗೆ ಮಾರ್ಶಲ್ ಆರ್ಟ್ ಕಲಿತು ನಾಯಕನಾಗಲು ಬೇಕಾಗುವ ಎಲ್ಲಾ ಕಲೆಯನ್ನು ಕರಗತ ಮಾಡಿಕೊಂಡಿದ್ದಾರೆ. ಚಿತ್ರಕ್ಕೆ  ಕಾರ್ತಿಕ್  ಛಾಯಾಗ್ರಹಣ,ಅನೂಪ್ ಸೀಳಿನ್ ಸಂಗೀತ ಮತ್ತು ಮಾಸ್ತಿ  ಸಂಭಾಷಣೆ ಇದೆ.  ಹೇಮಂತ್‌ಗೆ ನಾಯಕಿಯಾಗಿ ಯಾರು ಕಾಣಿಸಿಕೊಳ್ಳಲಿದ್ದಾರೆ, ಉಳಿದಂತೆ ಪಾತ್ರವರ್ಗ ಏನೆಲ್ಲ ಇರಲಿದೆ ಎನ್ನುವುದು ಸದ್ಯದಲ್ಲೇ ಗೊತ್ತಾಗಲಿದೆ. - [ನದಿ ಜೋಡಣೆ ಗ್ಯಾರಂಟಿ: ಉಡಾಫೆ ಉತ್ತರ ನೀಡಿದ ಉಪಮುಖ್ಯಮಂತ್ರಿ!](https://mobiletime.in/2025/12/river-linking-guaranteed-deputy-chief-ministers-bold-answer/): ಕರಾವಳಿ ಉತ್ಸವಕ್ಕೆ ಆಗಮಿಸಿರುವ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ ಅವರು ಸಾಕಷ್ಟು ಪ್ರಮಾಣದಲ್ಲಿ ಉಡಾಫೆ ಮಾತನಾಡಿದ್ದಾರೆ. ನದಿ ಜೋಡಣೆ ವಿಷಯಕ್ಕೆ ವಿರೋಧವ್ಯಕ್ತವಾಗಿರುವುದನ್ನು ಅವರು ಗ್ಯಾರಂಟಿ ಯೋಜನೆಗೆ ಹೋಲಿಕೆ ಮಾಡಿದ್ದಾರೆ. `ಗ್ಯಾರಂಟಿ ಯೋಜನೆಯನ್ನು ಜನ ವಿರೋಧ ಮಾಡಿದ್ದರು. ಆದರೆ, ಈಗ ಎಲ್ಲರೂ ಅದನ್ನು ಬಳಸುತ್ತಿಲ್ಲವಾ? ಗ್ಯಾರಂಟಿ ಎಲ್ಲವನ್ನು ವಾಪಸ್ಸು ಕೊಟ್ಟುಬಿಡಲಿ, ನೋಡೋಣ’ ಎಂದು ಡಿ ಕೆ ಶಿವಕುಮಾರ ಸವಾಲು ಹಾಕಿದರು. ಕಾರವಾರದಲ್ಲಿ ಪತ್ರಕರ್ತರ ಜೊತೆ ಮಾತನಾಡಿದ ಅವರು `ವ್ಯರ್ಥವಾಗಿ ಹರಿಯುವ ನೀರನ್ನು ಸರ್ಕಾರ ಸದ್ಬಳಕೆ ಮಾಡಲಿದೆ. ಯಾರು ಎಷ್ಟೇ ವಿರೋಧ ಮಾಡಿದರೂ ರೈತರು ಹಾಗೂ ಜನರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಈ ಯೋಜನೆ ಮಾಡಲಿದ್ದೇವೆ. ಕೇಂದ್ರ ಸರ್ಕಾರದ ಶೇ 90ರಷ್ಟು ಹಾಗೂ ರಾಜ್ಯ ಸರ್ಕಾರದ ಶೇ 10ರಷ್ಟು ಅನುಧಾನದ ಅಡಿ ಈ ಕೆಲಸ ಕಾರ್ಯಗತವಾಗುವ ಒಪ್ಪಂದ ನಡೆದಿದೆ’ ಎಂದು ಡಿಕೆ ಶಿವಕುಮಾರ ಗಟ್ಟಿಯಾಗಿ ಹೇಳಿದರು. ಶರಾವತಿ ಭೂಗತ ಯೋಜನೆ ಕುರಿತು ಮಾತನಾಡಿದ ಅವರು `ವಿದ್ಯುತ್ ಸಹ ಪ್ರೀ ಕೊಡುತ್ತಿದ್ದೇವೆ. ಅದನ್ನು ಹೇಗೆ ಕೊಡಲು ಸಾಧ್ಯ? ಶರಾವತಿ ಯೋಜನೆ ರಾಜ್ಯಕ್ಕೆ ದೊಡ್ಡ ಕೊಡುಗೆಯಾಗಿದ್ದು, ಅದಕ್ಕೂ ವಿರೋಧ ಸರಿಯಲ್ಲ’ ಎಂದರು. `ರಸ್ತೆ ಅಗಲೀಕರಣಕ್ಕೂ ವಿರೋಧ ಮಾಡುತ್ತಾರೆ. ಕಾರ್ಖಾನೆ ತೆರೆದರೂ ವಿರೋಧ ಮಾಡುತ್ತಾರೆ. ಯೋಜನೆಯ ಡಿಪಿಆರ್ ತಯಾರು ಮಾಡಲು ಅಧಿಕಾರಿಗಳಿಗೆ ಅನುಮತಿ ಕೊಟ್ಟಿದ್ದೇನೆ. ಎಷ್ಟು ನೀರನ್ನು ಉಪಯೋಗಿಸಲು ಸಾಧ್ಯವೋ ಅಷ್ಟನ್ನು ಸರಿಯಾಗಿ ಬಳಸಿಕೊಳ್ಳಲಾಗುತ್ತದೆ’ ಎಂದರು. ನದಿ ಜೋಡಣೆಗೆ ಸ್ಥಳೀಯರ ವಿರೋಧವಿರುವ ಬಗ್ಗೆ ಪತ್ರಕರ್ತರು ಪ್ರಶ್ನಿಸಿದ್ದು, `ಏನೇ ಮಾಡಿದರೂ ವಿರೋಧ ಮಾಡುವವರಿದ್ದಾರೆ. ವಿರೋಧ ದೊಡ್ಡದಲ್ಲ. ಯೋಜನೆಯಿಂದ ಹಾನಿ ಆದವರಿಗೆ ಪರಿಹಾರ ಕೊಡಲು ಕಾನೂನಿನಲ್ಲಿ ಅವಕಾಶವಿದೆ. ಕಾನೂನಿನ ಪ್ರಕಾರ ನಡೆದುಕೊಳ್ಳುತ್ತೇವೆ’ ಎಂದು ತಿಳಿಸಿದರು. ಸೇತುವೆ ವಿಷಯದಲ್ಲಿಯೂ ಉಡಾಫೆ ಉತ್ತರ! `ಗೋಕರ್ಣ-ಗಂಗಾವಳಿ ಸೇತುವೆ ಉದ್ಘಾಟನೆಗೆ ಸಿದ್ಧವಾಗಿದ್ದರೂ ಉದ್ಘಾಟನೆ ನಡೆದಿಲ್ಲ. ಉದ್ಘಾಟನೆ ನಡೆಯದ ಕಾರಣ ಬಸ್ಸುಗಳನ್ನು ಬಿಡುತ್ತಿಲ್ಲ’ ಎಂದು ಪತ್ರಕರ್ತರು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ ಅವರ ಗಮನಸೆಳೆದರು. `ಸೇತುವೆಗಾಗಿ 45 ವರ್ಷ ಕಾದಿದ್ದೀರಿ. ಇನ್ನೂ ಕೆಲ ದಿನ ಕಾಯಲು ಏನು ಸಮಸ್ಯೆ? ಎಂಬ ನಿಟ್ಟಿನಲ್ಲಿ ಈ ವೇಳೆಯಲ್ಲಿಯೂ ಡಿಕೆ ಶಿವಕುಮಾರ ಅವರು ಉಡಾಫೆಯಾಗಿ ಮಾತನಾಡಿದರು. ನಂತರ `ಸಂಜೆ ಆದ ಕಾರಣ ಉದ್ಘಾಟನೆ ಬೇಡ ಎಂದು ನಿರ್ಣಯಿಸಿದ್ದು, ಸೇತುವೆ ಉದ್ಘಾಟನೆಗೆ ಮತ್ತೆ ಬರುವೆ’ ಎಂದು ಸ್ಪಷ್ಟಪಡಿಸಿದರು. ಶರಾವತಿ ಯೋಜನೆ ದೊಡ್ಡ ಆಸ್ತಿ! `ನಾನು ಪವರ್ ಮಿನಿಸ್ಟರ್ ಆಗಿದ್ದೆ. ವಿದೇಶಗಳಿಗೆ ಹೋಗಿ ನೋಡಿದ್ದೇನೆ. ಶರಾವತಿ ಯೋಜನೆಯಿಂದ ಯಾರಿಗೂ ಹಾನಿ ಇಲ್ಲ. ಈಗ ವಿದ್ಯುತ್ ಪ್ರೀ ಕೊಡುತ್ತಿದ್ದೇವೆ. ಅದನ್ನು ಎಲ್ಲಿಂದ ಕೊಡಲು ಸಾಧ್ಯ? ಅದೊಂದು ವಿಶೇಷವಾದ ಯೋಜನೆ. ಅದಕ್ಕೆ ವಿರೋಧ ಮಾಡುವ ಅಗತ್ಯವಿಲ್ಲ’ ಎಂದರು. - [ಸಾಗರದ ಆಳದಲ್ಲಿ ರಾಷ್ಟ್ರಪತಿಯ ಶೌರ್ಯಯಾನ: ದ್ರೌಪದಿಗೆ ಕೇಳಿಸಿತೇ ನಿರಾಶ್ರೀತರ ಕೂಗು?!](https://mobiletime.in/2025/12/the-presidents-heroic-journey-in-the-depths-of-the-ocean-did-draupadi-hear-the-cries-of-the-refugees/): ನೌಕಾನೆಲೆಯ ಸ್ಥಾಪನೆಯಿಂದಾಗಿ ಭೂಮಿ ಕಳೆದುಕೊಂಡ ಸಾವಿರಾರು ನಿರಾಶ್ರಿತರ ಸಮಸ್ಯೆ ಇಂದಿಗೂ ಸಂಪೂರ್ಣವಾಗಿ ಬಗೆಹರಿದಿಲ್ಲ. ದಶಕಗಳ ಹಿಂದೆ ತಮ್ಮ ಸರ್ವಸ್ವವನ್ನೂ ದೇಶದ ರಕ್ಷಣೆಗಾಗಿ ತ್ಯಾಗ ಮಾಡಿದ ಕುಟುಂಬದವರು ಸರಿಯಾದ ಪುನರ್ವಸತಿ ಮತ್ತು ಉದ್ಯೋಗದ ಭರವಸೆಗಳಿಗಾಗಿ ಕಾಯುತ್ತಿದ್ದಾರೆ. ಹೀಗಿರುವಾಗ ರಾಷ್ಟ್ರಪತಿಗಳೇ ಸಶಸ್ತ್ರ ಪಡೆಗಳ ಮುಖ್ಯಸ್ಥರಾಗಿದ್ದು, ಅವರ ಭೇಟಿ ನಿರಾಶ್ರಿತರ ಪಾಲಿಗೆ ಆಸೆ ಹುಟ್ಟಿಸಿದೆ. ಭಾರತದ ಸಶಸ್ತ್ರ ಪಡೆಗಳ ಸರ್ವೋಚ್ಚ ದಂಡನಾಯಕಿ, ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಕಾರವಾರದಲ್ಲಿರುವ `ಐಎನ್‌ಎಸ್ ಕದಂಬ’ ನೌಕಾನೆಲೆಗೆ ನೀಡಿದ ಭೇಟಿಯು ಭಾರತದ ರಕ್ಷಣಾ ಇತಿಹಾಸದಲ್ಲಿ ಒಂದು ಸುವರ್ಣ ಅಧ್ಯಾಯ. ಅರಬ್ಬಿ ಸಮುದ್ರದ ಆಳದಲ್ಲಿ ಭಾರತೀಯ ನೌಕಾಪಡೆಯ ಕಲ್ವರಿ ದರ್ಜೆಯ `ಐಎನ್‌ಎಸ್ ವಾಗ್ಶೀರ್’ ಜಲಂತರಗಾಮಿಯಲ್ಲಿ ಅವರು ನಡೆಸಿದ ಐತಿಹಾಸಿಕ ಯಾನವು ಕೇವಲ ಒಂದು ಸಾಹಸವಲ್ಲ. ಬದಲಿಗೆ ಅದು ಭಾರತದ `ನೌಕಾ ಶಕ್ತಿ’ಯ ಜಾಗತಿಕ ಪ್ರದರ್ಶನವೂ ಹೌದು. ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ಅವರ ನಂತರ ಸುಮಾರು ಎರಡು ದಶಕಗಳ ಬಳಿಕ ಪ್ರಥಮ ಪ್ರಜೆಯೊಬ್ಬರು ಜಲಂತರಗಾಮಿಯಾಗಿ ಆಳಕ್ಕೆ ಇಳಿದಿರುವುದು ನೌಕಾಪಡೆಯ ಆತ್ಮವಿಶ್ವಾಸವನ್ನು ದ್ವಿಗುಣಗೊಳಿಸಿದೆ. ಪ್ರಸ್ತುತ ಭೇಟಿಯು ಮುಖ್ಯ ಉದ್ದೆಶ, ಕಾರವಾರದ ನೌಕಾನೆಲೆಯನ್ನು ಏಷ್ಯಾದಲ್ಲೇ ಅತಿದೊಡ್ಡ ಮತ್ತು ವಿಶ್ವದರ್ಜೆಯ ರಕ್ಷಣಾ ಕೇಂದ್ರವಾಗಿ ರೂಪಿಸುವುದಾಗಿದೆ. ಅದು ಭಾರತದ ದೃಢ ಸಂಕಲ್ಪಕ್ಕೆ ಸಾಕ್ಷಿಯಾಗಲಿದೆ. ಇಂದು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ರಾಜ್ಯದ ಪರವಾಗಿ ರಾಷ್ಟ್ರಪತಿಗಳನ್ನು ಬರಮಾಡಿಕೊಂಡಿದ್ದು, ಈ ಭೇಟಿಗೆ ಸಾಂವಿಧಾನಿಕ ಘನತೆಯನ್ನು ತುಂಬಿತು. ರಾಜ್ಯ ಸರ್ಕಾರದ ಪ್ರತಿನಿಧಿಯಾಗಿ ಅವರು ನೌಕಾನೆಲೆಯ ಅಭಿವೃದ್ಧಿಗೆ ರಾಜ್ಯದ ಸಂಪೂರ್ಣ ಸಹಕಾರದ ಭರವಸೆ ನೀಡಿದ್ದು, ಕೇಂದ್ರ ಮತ್ತು ರಾಜ್ಯಗಳ ನಡುವಿನ ರಕ್ಷಣಾ ಸಮನ್ವಯಕ್ಕೆ ಕನ್ನಡಿ ಹಿಡಿದಿದೆ. ಆದರೆ, ಈ ರಾಷ್ಟ್ರೀಯ ಹೆಮ್ಮೆಯ ನಡುವೆ ಕಾರವಾರದ ಸ್ಥಳೀಯರ ದಶಕಗಳ ನೋವು ಮತ್ತು ನಿರೀಕ್ಷೆಗಳೂ ರಾಷ್ಟ್ರಪತಿಗಳ ಭೇಟಿಯ ಸಂದರ್ಭದಲ್ಲಿ ಮತ್ತೊಮ್ಮೆ ಮುನ್ನೆಲೆಗೆ ಬಂದಿವೆ. ನೌಕಾನೆಲೆಯ ವಿಸ್ತರಣೆಯ ಭಾಗವಾಗಿ ನಾಗರಿಕ ವಿಮಾನ ನಿಲ್ದಾಣದ ಬೇಡಿಕೆಯೂ ಪ್ರಮುಖವಾಗಿದೆ. ಕಾರವಾರದಲ್ಲಿ ಸುಸಜ್ಜಿತ ವಿಮಾನ ನಿಲ್ದಾಣ ನಿರ್ಮಾಣವಾದರೆ, ಅದು ಕೇವಲ ರಕ್ಷಣಾ ವಲಯಕ್ಕಷ್ಟೇ ಅಲ್ಲದೆ, ಈ ಭಾಗದ ಪ್ರವಾಸೋದ್ಯಮ ಮತ್ತು ಆರ್ಥಿಕ ಪ್ರಗತಿಗೂ ದೊಡ್ಡ ಶಕ್ತಿ ನೀಡಲಿದೆ. ರಾಷ್ಟ್ರಪತಿಗಳ ಈ ಭೇಟಿಯು ದೆಹಲಿಯ ಮಟ್ಟದಲ್ಲಿ ಕಾರವಾರದ ಈ ಮೂಲಭೂತ ಸಮಸ್ಯೆಗಳಿಗೆ ಮತ್ತು ವಿಮಾನ ನಿಲ್ದಾಣದಂತಹ ಕನಸಿನ ಯೋಜನೆಗಳಿಗೆ ಹೊಸ ಚೈತನ್ಯ ನೀಡುವ ನಿರೀಕ್ಷೆ ಇದೆ. ಉತ್ತರ ಕನ್ನಡ ಜಿಲ್ಲೆಯ ಅಭಿವೃದ್ಧಿಗೆ `ಸೀ ಬರ್ಡ್’ ಯೋಜನೆ ಪೂರಕವಾಗಬೇಕೆಂದರೆ, ಅದು ಸ್ಥಳೀಯ ಜನಜೀವನದೊಂದಿಗೆ ಬೆರೆಯಬೇಕು. ರಕ್ಷಣಾ ಇಲಾಖೆಯು ಸ್ಥಳೀಯ ಯುವಕರಿಗೆ ತಾಂತ್ರಿಕ ತರಬೇತಿ ಮತ್ತು ಉದ್ಯೋಗದಲ್ಲಿ ಆದ್ಯತೆ ನೀಡುವ ಮೂಲಕ ನೌಕಾನೆಲೆಯ ಶಕ್ತಿಯನ್ನು ಜನಸಾಮಾನ್ಯರಿಗೂ ತಲುಪಿಸಬೇಕಿದೆ. ಈ ಐತಿಹಾಸಿಕ ಯಾನವು ಕೇವಲ ಸಾಗರದ ಆಳದ ಅರಿವಷ್ಟೇ ಅಲ್ಲದೆ, ಭೂಮಿಯ ಮೇಲಿನ ಸ್ಥಳೀಯರ ಸಂಕಷ್ಟಗಳಿಗೂ ಮದ್ದು ನೀಡಲಿ ಎಂಬುದು ಎಲ್ಲರ ಆಶಯವಾಗಿದೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಈ ಭೇಟಿಯು ಭಾರತದ ಕಡಲ ಗಡಿಯನ್ನು ಭದ್ರಪಡಿಸುವ ಸಂಕಲ್ಪದೊAದಿಗೆ, ಕಾರವಾರದಂತಹ ಆಯಕಟ್ಟಿನ ಪ್ರದೇಶದ ಸರ್ವತೋಮುಖ ಅಭಿವೃದ್ಧಿಗೆ ಮುನ್ನುಡಿಯಾಗಲಿ. ದೇಶದ ಪ್ರಥಮ ಪ್ರಜೆ ಸಮುದ್ರದ ಆಳಕ್ಕೆ ಇಳಿದ ಈ ಘಟನೆ, ಭಾರತದ ರಕ್ಷಣಾ ಪಡೆಗಳ ಮತ್ತು ಜನರ ನಡುವಿನ ಅಂತರವನ್ನು ಕಡಿಮೆ ಮಾಡುವಲ್ಲಿ ಯಶಸ್ವಿಯಾಗಿದೆ. ಕಾರವಾರದ ‘ಸೀ ಬರ್ಡ್’ ಯೋಜನೆಯಡಿ ಅಭಿವೃದ್ಧಿ ಹೊಂದುತ್ತಿರುವ ಈ ನೌಕಾನೆಲೆಯು ಜಾಗತಿಕ ಮಟ್ಟದಲ್ಲಿ ಭಾರತದ ರಕ್ಷಣಾ ನೀತಿಯ ಕೇಂದ್ರಬಿAದುವಾಗಿದೆ. ರಾಷ್ಟ್ರಪತಿಗಳ ಭೇಟಿಯು ಈ ನೆಲೆಯನ್ನು ವಿಶ್ವದರ್ಜೆಯ ಅತ್ಯಾಧುನಿಕ ತಂತ್ರಜ್ಞಾನದ ಹಬ್ ಆಗಿ ಪರಿವರ್ತಿಸುವ ಸಂದೇಶವನ್ನು ಜಗತ್ತಿಗೆ ನೀಡಿದೆ. ಶತ್ರು ದೇಶಗಳ ಕಣ್ಣು ಬಿದ್ದಿರುವ ಹಿಂದೂ ಮಹಾಸಾಗರ ವಲಯದಲ್ಲಿ ಭಾರತದ ಪಾರುಪತ್ಯವನ್ನು ಸ್ಥಾಪಿಸಲು ಇದು ಪ್ರಮುಖವಾಗಿದೆ. `ಆತ್ಮನಿರ್ಭರ ಭಾರತ’ದಡಿ ನಿರ್ಮಾಣವಾದ ಜಲಂತರಗಾಮಿಗಳು ಭಾರತೀಯ ನೌಕಾಪಡೆಯು ಸಾಗರದೊಳಗೆ ಯಾವುದೇ ಸವಾಲನ್ನು ಎದುರಿಸಲು ಸಿದ್ಧವಿದೆ ಎಂಬ ಭರವಸೆ ಮೂಡಿಸಿವೆ. ಇದು ಜಾಗತಿಕ ವೇದಿಕೆಯಲ್ಲಿ ಭಾರತದ ಮಿಲಿಟರಿ ರಾಯಭಾರತ್ವವನ್ನು ಎತ್ತಿ ಹಿಡಿಯುತ್ತದೆ. ರಾಷ್ಟ್ರಪತಿಗಳ ಭೇಟಿಯ ಬೆನ್ನಲ್ಲೇ ಕಾರವಾರದ ಅಭಿವೃದ್ಧಿಯ ಚರ್ಚೆಗಳು ವೇಗ ಪಡೆದಿವೆ. ನೌಕಾನೆಲೆಯ ವ್ಯಾಪ್ತಿಯಲ್ಲಿ ಉದ್ದೇಶಿತ ನಾಗರಿಕ ವಿಮಾನ ನಿಲ್ದಾಣದ ಕಾರ್ಯಾರಂಭವಾದರೆ ಉತ್ತರ ಕನ್ನಡ ಜಿಲ್ಲೆಯ ಚಿತ್ರಣವೇ ಬದಲಾಗಲಿದೆ. ಇದು ಪ್ರವಾಸೋದ್ಯಮದ ಮೂಲಕ ಲಕ್ಷಾಂತರ ಜನರಿಗೆ ಉದ್ಯೋಗ ನೀಡಬಲ್ಲದು. ಆದರೆ, ಈ ಪ್ರಗತಿಯ ಹಾದಿಯಲ್ಲಿ ಭೂಮಿ ನೀಡಿದ ನಿರಾಶ್ರಿತ ಕುಟುಂಬಗಳ ನ್ಯಾಯಯುತ ಬೇಡಿಕೆಗಳನ್ನು ಸರ್ಕಾರ ಮರೆಯಬಾರದು ಎಂಬುದು ಸ್ಥಳೀಯರ ಆಗ್ರಹ. ರಾಜ್ಯ ಸರ್ಕಾರವು ಕೇಂದ್ರದೊAದಿಗೆ ಸಮನ್ವಯ ಸಾಧಿಸಿ, ನಿರಾಶ್ರಿತರಿಗೆ ಕಾಯಂ ಪುನರ್ವಸತಿ ಪತ್ರಗಳು ಮತ್ತು ಸ್ಥಳೀಯ ಯುವಕರಿಗೆ ನೌಕಾನೆಲೆಯಲ್ಲಿ ಹೆಚ್ಚಿನ ಉದ್ಯೋಗ ಮೀಸಲಾತಿ ನೀಡುವ ಮೂಲಕ ‘ರಕ್ಷಣೆ ಮತ್ತು ಪ್ರಗತಿ’ ಎರಡನ್ನೂ ಸಮಾನವಾಗಿ ಕೊಂಡೊಯ್ಯಬೇಕಿದೆ. ಲೇಖಕರು: ಶ್ರೀನಾಥ್ ಜೋಶಿ, ಸಿದ್ದರ. ಹಿರಿಯ ಪತ್ರಕರ್ತರು( 9060188081 ) - [ಆಯುರ್ವೇದ ಚಿಕಿತ್ಸೆಗೆ ಆಸಕ್ತಿವಹಿಸಿದ್ದ ಯೋಗ ಶಿಕ್ಷಕ: ಸಾವು!](https://mobiletime.in/2025/12/yoga-teacher-interested-in-ayurvedic-treatment-death/): ಶಿರಸಿ ಬಳಿಯ ನಿಸರ್ಗಮನೆಯಲ್ಲಿ ಆಯುರ್ವೇದಿಕ್ ಚಿಕಿತ್ಸೆಗೆ ಒಳಗಾಗಬೇಕಿದ್ದ ಯೋಗ ಶಿಕ್ಷಕರೊಬ್ಬರು ದಿಢೀರ್ ಆಗಿ ಕುಸಿದು ಬಿದ್ದಿದ್ದು, ಅಲ್ಲಿಯೇ ಕೊನೆಯುಸಿರೆಳೆದಿದ್ದಾರೆ. ವಿಜಯನಗರ ಹರಪ್ಪನಳ್ಳಿಯ ಸೂರ್ಯ ಪಲ್ಲಾಗಟ್ಟಿ (66) ಅವರು ಖಾಸಗಿ ಸಂಸ್ಥೆಯೊAದರಲ್ಲಿ ಯೋಗ ಶಿಕ್ಷಕರಾಗಿದ್ದರು. ಕೆಲ ವರ್ಷದ ಹಿಂದೆ ಅವರು ನಿವೃತ್ತರಾಗಿದ್ದು, ಅವರ ಕುಟುಂಬದವರು ಬೆಂಗಳೂರಿನಲ್ಲಿ ವಾಸವಾಗಿದ್ದರು. ಸೂರ್ಯ ಪಲ್ಲಾಗಟ್ಟಿ ಅವರು ಹರಪನಳ್ಳಿಯ ಆಚಾರ್ಯ ಲೇಔಟಿನಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಸೂರ್ಯ ಪಲ್ಲಾಗಟ್ಟಿ ಅವರಿಗೆ ಈಚೆಗೆ ಗ್ಯಾಸ್ಟಿಕ್ ಸಮಸ್ಯೆ ಕಾಣಿಸಿಕೊಂಡಿತ್ತು. ಅದಕ್ಕಾಗಿ ಅವರು ಶಿರಸಿಯ ನಿಸರ್ಗಮನೆಯಲ್ಲಿ ಆಯುರ್ವೇದಿಕ್ ಚಿಕಿತ್ಸೆಪಡೆಯಲು ನಿರ್ಧರಿಸಿದ್ದರು. ಈ ಬಗ್ಗೆ ಪತ್ನಿ ರಾಣಿ ಎಸ್ಪಿ ಅವರಿಗೆ ಫೋನ್ ಮಾಡಿದ್ದರು. ಚಿಕಿತ್ಸೆಗಾಗಿ ಅವರು ಶಿರಸಿಗೆ ಬಂದಿದ್ದರು. ಡಿ 26ರ ರಾತ್ರಿ 11.40ಕ್ಕೆ ಶಿರಸಿಯ ಶಿವಾಜಿ ಚೌಕ ಬಳಿಯ ಪರಾಗ ಲಾಡ್ಜಿನಲ್ಲಿ ವಸತಿ ಹೂಡಲು ಅವರು ನಿರ್ಧರಿಸಿದ್ದರು. ಆದರೆ, ಪರಾಗ ಲಾಡ್ಜ ಪ್ರವೇಶಿಸುತ್ತಲೇ ಅವರು ಕುಸಿದು ಬಿದ್ದರು. ಅವರನ್ನು ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ಕೊಡಿಸುವ ಪ್ರಯತ್ನ ನಡೆದರೂ ಅದು ಪ್ರಯೋಜನಕ್ಕೆ ಬರಲಿಲ್ಲ. ಡಿಸೆಂಬರ್ 27ರಂದು ಕುಟುಂಬದವರು ಸೂರ್ಯ ಪಲ್ಲಾಗಟ್ಟಿ ಅವರ ಮೊಬೈಲಿಗೆ ಫೋನ್ ಮಾಡಿದಾಗ ಪೊಲೀಸರು ಆ ಕರೆ ಸ್ವೀಕರಿಸಿದರು. ಸೂರ್ಯ ಪಲ್ಲಾಗಟ್ಟಿ ಅವರು ಕೊನೆಯುಸಿರೆಳೆದ ವಿಷಯ ತಿಳಿಸಿದರು. ಬೆಂಗಳೂರಿನಲ್ಲಿದ್ದ ರಾಣಿ ಎಸ್ಪಿ ಅವರು ಶಿರಸಿಗೆ ಆಗಮಿಸಿದ್ದು, ವಯೋ ಸಹಜ ಕಾರಣದಿಂದ ಸೂರ್ಯ ಪಲ್ಲಾಗಟ್ಟಿ ಅವರು ಸಾವನಪ್ಪಿರುವ ಬಗ್ಗೆ ಅಂದಾಜಿಸಿದರು. ಅದಾಗಿಯೂ, ಅವರ ಸಾವಿನ ಬಗ್ಗೆ ನಿಖರ ಕಾರಣ ಗೊತ್ತಾಗುವುದಕ್ಕಾಗಿ ಮರಣೋತ್ತರ ಪರೀಕ್ಷೆ ಬಯಸಿದರು. ಪೊಲೀಸರು ಪ್ರಕರಣ ದಾಖಲಿಸಿದ್ದು, ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. - [ಅಕ್ರಮ ಅದಿರು ರಪ್ತು: ಸಿಬಿಐಗೆ ಭಾರೀ ಹಿನ್ನಡೆ!](https://mobiletime.in/2025/12/illegal-ore-export-huge-setback-for-cbi/): ಬೇಲಿಕೇರಿ ಅದಿರನ್ನು ಅಕ್ರಮವಾಗಿ ರಪ್ತು ಮಾಡಿದ ಪ್ರಕರಣದಲ್ಲಿ ತನಿಖಾ ಸಂಸ್ಥೆಗೆ ಹಿನ್ನಡೆ ಆಗಿದೆ. ಎಂಎಸ್‌ಪಿಎಲ್ ಲಿಮಿಟೆಡ್ ಹಾಗೂ ಅದರ ನಿರ್ದೇಶಕರ ವಿರುದ್ಧ ದಾಖಲಿಸಿದ್ದ ಕ್ರಿಮಿನಲ್ ಪ್ರಕರಣವನ್ನು ಹೈಕೋರ್ಟ ರದ್ಧುಪಡಿಸಿದೆ. ಬಳ್ಳಾರಿ ಬಳಿಯ ಹೊಸಪೇಟೆಯಲ್ಲಿನ ಅಕ್ರಮ ಗಣಿಗಾರಿಕೆಗೆ ಸಂಬAಧಿಸಿದAತೆ ಸಮಾಜ ಪರಿವರ್ತನಾ ಸಮುದಾಯ ಮತ್ತು ಇತರರು 2009ರಲ್ಲಿ ಸಲ್ಲಿಸಿದ್ದ ಅರ್ಜಿಗಳನ್ನು ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ ಅದರ ತನಿಖೆಗೆ ಸಮಿತಿ ನೇಮಿಸಿತ್ತು. 2009ರ ಜನವರಿಯಿಂದ 2010ರ ಮೇ 31ರವರೆಗೆ ಬೆಲೆಕೇರಿ ಬಂದರಿನ ಮೂಲಕ ರಫ್ತು ಮಾಡಿದ್ದ 32.27 ಲಕ್ಷ ಟನ್ ಕಬ್ಬಿಣದ ಅಧಿರಿನ ತನಿಖೆ ನಡೆಸಲು ಕೋರ್ಟು ಸಿಬಿಐಗೆ ನಿರ್ದೇಶನ ನೀಡಿತ್ತು. ಆ ಆಧಾರದಲ್ಲಿ ಸಿಬಿಐ ತನಿಖಾ ತಂಡದವರು ಎಂಎಸ್‌ಪಿಎಲ್ ಹಾಗೂ ಅದರ ನಿರ್ದೇಶಕರ ವಿರುದ್ಧ ಪ್ರಕರಣ ದಾಖಲಿಸಿದ್ದರು. 9 ವರ್ಷದ ತನಿಖೆ ನಂತರ 2022ರಲ್ಲಿ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಕೆಯಾಗಿತ್ತು. ಎಂಎಸ್‌ಪಿಎಲ್ ಮತ್ತು ಅದರ ನಿರ್ದೇಶಕರಾದ ನರೇಂದ್ರ ಕುಮಾರ್, ಬಲ್ಡೋಟಾ ಮತ್ತು ರಾಹುಲ್ ಕುಮಾರ್ ಅವರು ಗಣಿ ಇಲಾಖೆ ಪರವಾನಿಗೆ ಇಲ್ಲದೇ ಅದಿರು ಖರೀದಿಸಿದ ಬಗ್ಗೆ ದೂರಲಾಗಿತ್ತು. ಇದನ್ನು ಪ್ರಶ್ನಿಸಿ ಆರೋಪಿತರು ಹೈಕೋರ್ಟಿನ ಮೊರೆ ಹೋಗಿದ್ದರು. ವಿಚಾರಣೆ ನಡೆಸಿದ ಹೈಕೋರ್ಟ ಆರೋಪಕ್ಕೆ ಸಂಬAಧಿಸಿದ ಸಾಕ್ಷಿ ಇಲ್ಲದ ಕಾರಣ ಪ್ರಕರಣ ವಜಾ ಮಾಡಿತ್ತು. `ಅರ್ಜಿದಾರರ ವಿರುದ್ಧ 39 ಸಾವಿರ ಮೆಟ್ರಿಕ್ ಟನ್ ಅಕ್ರಮ ಅದಿರು ಸಾಗಾಟ ಆರೋಪವಿದೆ. ಅದು ರಾಜ್ಯ ತನಿಖಾ ವ್ಯಾಪ್ತಿಗೆ ಬರುತ್ತಿದ್ದ ಕಾರಣ ನೀಡಿ ಪ್ರಕರಣವನ್ನು 2024ರಲ್ಲಿ ವಜಾಗೊಳಿಸಿತ್ತು. ಇದನ್ನು ಸಿಬಿಐ ಸುಪ್ರೀಂಕೋರ್ಟಿನ ಮೊರೆ ಹೋಗಿದ್ದು, ಸುಪ್ರೀಂ ಕೋರ್ಟ ಮತ್ತೆ ಮೆರಿಟ್ ಆಧಾರದಲ್ಲಿ ವಿಚಾರಣೆ ನಡೆಸುವಂತೆ ಹೈಕೋರ್ಟಿಗೆ ನಿರ್ದೇಶನ ನೀಡಿತ್ತು. ಪ್ರಾಥಮಿಕ ವಿಚಾರಣೆಗೆ ಒಳಪಟ್ಟಿದ್ದ ಮತ್ತು ಅಧಿಕೃತ ಪರವಾನಗಿ ಇಲ್ಲದೆ 50 ಸಾವಿರ ಮೆಟ್ರಿಕ್ ಟನ್‌ಗಿಂತ ಹೆಚ್ಚಿನ ಕಬ್ಬಿಣದ ಅದಿರನ್ನು ರಫ್ತು ಮಾಡಿದ ರಫ್ತುದಾರರ ವಿರುದ್ಧ ಮಾತ್ರ ಕ್ರಿಮಿನಲ್ ಪ್ರಕರಣ ದಾಖಲಿಸಲು ಸಿಬಿಐಗೆ 2013ರಲ್ಲಿ ನ್ಯಾಯಾಲಯ ಅನುಮತಿ ನೀಡಿತ್ತು. 50 ಸಾವಿರ ಮೆಟ್ರಿಕ್ ಟನ್‌ಗಿಂತ ಕಡಿಮೆ ಇರುವ ಪ್ರಕರಣಗಳ ತನಿಖೆಯನ್ನು ರಾಜ್ಯಮಟ್ಟದಲ್ಲಿ ನಡೆಸಬೇಕು ಎಂದು ಸುಪ್ರೀಂ ಕೋರ್ಟ ಸೂಚಿಸಿತ್ತು. `ರಾಜಧನ ಮತ್ತು ಅರಣ್ಯ ಅಭಿವೃದ್ಧಿ ತೆರಿಗೆ ಪಾವತಿಸದೆ ಸರ್ಕಾರಕ್ಕೆ ನಷ್ಟ ಉಂಟು ಮಾಡಲಾಗಿದೆ. ಪರವಾನಿಗೆ ಇಲ್ಲದೆ ಅದಿರು ಗಣಿಗಾರಿಕೆ ಮಾಡಲಾಗಿದೆ ಎಂದು ಸಿಬಿಐ ವಾದಿಸಿತ್ತು. ಇದನ್ನು ವಿರೋಧಿಸಿದ ಎಂಎಸ್‌ಪಿಎಲ್ `ಗಣಿಗಾರಿಕೆಗೆ ಪರವಾನಿಗೆಗಳನ್ನು ಪಡೆಯುವ ಜವಾಬ್ದಾರಿ ಖರೀದಿದಾರರದಲ್ಲ. ನಮ್ಮ ಖರೀದಿ ಒಪ್ಪಂದಗಳಲ್ಲಿ ಅದಿರು ಪೂರೈಕೆದಾರರು ಅಧಿಕೃತ ಪರವಾನಿಗೆಗಳನ್ನು ಪಡೆದಿರಬೇಕು’ ಎಂದು ವಾದಿಸಿತ್ತು. ಈ ವಾದಗಳನ್ನು ಪರಿಗಣಿಸಿದ ನ್ಯಾಯಾಲಯ `ಸಿಬಿಐ ತನ್ನ ವಾದಗಳಿಗೆ ಪುರಾವೆಗಳನ್ನು ಒದಗಿಸಿಲ್ಲ. ಅಕ್ರಮ ನಡೆಸಲು ಪಿತೂರಿ ನಡೆಸಿದ್ದಾರೆ ಎಂದು ಸಾಬೀತಾಗದ ಹೊರತು ಅದಿರು ಪೂರೈಕೆದಾರರ ತಪ್ಪಿಗೆ ಖರೀದಿದಾರರನ್ನು ಹೊಣೆ ಮಾಡಲು ಸಾಧ್ಯವಿಲ್ಲ; ಎಂದು ಹೇಳಿದೆ. `ಕ್ರಿಮಿನಲ್ ಚಟುವಟಿಕೆಗೆ ಪೂರಕವಾಗಿ ಸಿಬಿಐ ಸಾಕ್ಷಿ ಒದಗಿಸಿಲ್ಲ’ ಎಂಬ ಕಾರಣಕ್ಕೆ ಕ್ರಿಮಿನಲ್ ಪ್ರಕರಣದ ಮೊಕದ್ದಮೆಯನ್ನು ನ್ಯಾಯಾಲಯ ರದ್ಧು ಮಾಡಿದೆ. - [ನವ ವಿವಾಹಿತೆಗೆ ಗೃಹ ಬಂಧನ: 10 ಲಕ್ಷದ ಮದುವೆಗೆ ಒಂದುವರೆ ವರ್ಷ ವಾಯಿದೆ!](https://mobiletime.in/2025/12/newlywed-faces-domestic-confinement-one-and-a-half-years-of-delay-for-a-wedding-costing-10-lakh/): ಶಿರಸಿಯ ಕೀರ್ತಿ ನಾಯಕ ಅವರಿಗೆ ಮದುವೆಯಾದ ಗಂಡನೇ ಚಿತ್ರಹಿಂಸೆ ಕೊಟ್ಟಿದ್ದಾರೆ. 10 ಲಕ್ಷ ರೂ ಮೌಲ್ಯದ ಬಂಗಾರದ ಒಡವೆ ಕೊಟ್ಟು ಮದುವೆ ಮಾಡಿದ್ದರೂ ಇನ್ನಷ್ಟು ಹಪಾಹಪಿತನಕ್ಕೆ ಬಿದ್ದ ಮಧುಕರ ನಾಯಕ ಅವರು ಕೀರ್ತಿ ನಾಯಕ ಅವರನ್ನು ಪೀಡಿಸುತ್ತಿದ್ದಾರೆ. ಶಿರಸಿಯ ಮೇಲಿನ ಓಣಿಕೇರಿಯಲ್ಲಿ ಕೀರ್ತಿ ನಾಯಕ ಅವರು ವಾಸವಾಗಿದ್ದಾರೆ. 2024ರ ಮೇ 5ರಂದು ಅವರು ಕೊಪ್ಪಳದ ಬ್ಯಾಂಕ್‌ವೊAದರ ನೌಕರ ಮಧುಕರ ನಾಯಕ ಅವರನ್ನು ಮದುವೆ ಆಗಿದ್ದಾರೆ. ಅವರ ವಿವಾಹ ನೋಂದಣಿಯೂ ಆಗಿದೆ. ಮದುವೆ ಅವಧಿಯಲ್ಲಿ ಕೀರ್ತಿ ನಾಯಕ ಅವರ ಪಾಲಕರು 10 ಲಕ್ಷ ರೂ ಮೌಲ್ಯದ ಬಂಗಾರದ ಒಡವೆಯನ್ನು ಮಾಡಿಸಿಕೊಟ್ಟಿದ್ದಾರೆ. ಅದಕ್ಕೆ ತೃಪ್ತಿಯಾಗದ ಮಧುಕರ ನಾಯಕ ಅವರು ಇನ್ನಷ್ಟು ವರದಕ್ಷಿಣೆ ತರುವಂತೆ ಕೀರ್ತಿ ನಾಯಕ ಅವರನ್ನು ಕಾಡಿಸುತ್ತಿದ್ದಾರೆ. ಮಧುಕರ ನಾಗಪ್ಪ ನಾಯಕ ಅವರು ಕೊಪ್ಪಳದ ಹಮಾಲರ ಕಾಲೋನಿಯಲ್ಲಿ ವಾಸವಾಗಿದ್ದಾರೆ. ಮದುವೆ ಆದ ಹೊಸತರಲ್ಲಿ ಪತ್ನಿಯನ್ನು ಚನ್ನಾಗಿಯೇ ನೋಡಿಕೊಂಡ ಮಧುಕರ ನಾಯಕ ಅವರು ನಂತರ ಹಣದ ಹಪಾಹಪಿತನಕ್ಕೆ ಒಳಗಾಗಿದ್ದಾರೆ. ಕೀರ್ತಿ ನಾಯಕ ಅವರ ಮೇಲೆ ಮಧುಕರ ನಾಯಕ ಅವರಿಗೆ ಅನುಮಾನ. ಹೀಗಾಗಿ ಕೀರ್ತಿ ನಾಯಕ ಅವರನ್ನು ಮಧುಕರ ನಾಯಕ ಅವರು ಗೃಹ ಬಂಧನದಲ್ಲಿರಿಸಿದ್ದು, ಅವರು ಅಲ್ಲಿಂದ ತಪ್ಪಿಸಿಕೊಂಡು ತವರು ಮನೆಗೆ ಬಂದಿದ್ದಾರೆ. ಕೀರ್ತಿ ನಾಯಕ ಹಾಗೂ ಮಧುಕರ ನಾಯಕ ಅವರ ದಾಂಪತ್ಯಕ್ಕೆ ಸಾಕ್ಷಿಯಾಗಿ ಅಗಸ್ಟ 7ರಂದು ಹೆಣ್ಣು ಮಗುವೊಂದು ಜನಿಸಿದ್ದು, ಆ ಮಗುವಿನ ಮುಖ ನೋಡಲು ಸಹ ಮಧುಕರ ನಾಯಕ ಅವರು ಬರುತ್ತಿಲ್ಲ. ನವೆಂಬರ್ 23ರಂದು ಕೀರ್ತಿ ನಾಯಕ ಅವರು ತವರು ಮನೆ ಸೇರಿದ್ದು, ಮಧುಕರ ನಾಯಕ ಅವರು ಪದೇ ಪದೇ ಕೀರ್ತಿ ನಾಯಕ ಅವರಿಗೆ ಫೋನ್ ಮಾಡಿ ವರದಕ್ಷಿಣೆ ತರುವಂತೆ ದುಂಬಾಲು ಬಿದ್ದಿದ್ದಾರೆ. ವರದಕ್ಷಿಣೆ ಕೊಡದ ಕಾರಣ ಸಿಟ್ಟಿಗೆದ್ದ ಮಧುಕರ ನಾಯಕ ಅವರು ನವೆಂಬರ್ 25ರಂದು ಶಿರಸಿಗೆ ಬಂದಿದ್ದಾರೆ. ತಮ್ಮೊಂದಿಗೆ ಇನ್ನಷ್ಟು ಜನರನ್ನು ಕರೆದುಕೊಂಡು ಬಂದಿದ್ದ ಮಧುಕರ ನಾಯಕ ಅವರು ಮೇಲಿನ ಓಣಿಕೇರಿಗೆ ತೆರಳಿದ್ದಾರೆ. ಕೀರ್ತಿ ನಾಯಕ ಅವರಿದ್ದ ಮನೆ ಬಾಗಿಲು ಬಡಿದು ರಂಪಾಟ ಮಾಡಿದ್ದಾರೆ. ಕೀರ್ತಿ ನಾಯಕ ಅವರ ತಾಯಿ ಬಾಗಿಲು ತೆರೆದಾಗ ಕೆಟ್ಟದಾಗಿ ಬೈದು ನಿಂದಿಸಿದ್ದಾರೆ. ಈ ಎಲ್ಲಾ ವಿಷಯದ ಬಗ್ಗೆ ಕೀರ್ತಿ ನಾಯಕ ಅವರು ನ್ಯಾಯಾಲಯದ ಮೊರೆ ಹೋಗಿದ್ದು, ನ್ಯಾಯಾಲಯದ ಸೂಚನೆ ಮೇರೆಗೆ ಶಿರಸಿ ಗ್ರಾಮೀಣ ಠಾಣೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.  ಅನ್ಯಾಯ, ದೌರ್ಜನ್ಯ ಸೇರಿ ಯಾವುದೇ ಬಗೆಯ ಸಹಾಯಕ್ಕಾಗಿ ಮಹಿಳೆಯರು 181ಗೆ ಫೋನ್ ಮಾಡಿ - [ಜಲಾಂರ್ತಗಾಮಿ ನೌಕೆಯಲ್ಲಿ ರಾಷ್ಟ್ರಪತಿ ಸಂಚಾರ](https://mobiletime.in/2025/12/presidents-trip-on-a-submarine/): ಭಾರತದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಭಾನುವಾರ ಕಾರವಾರಕ್ಕೆ ಭೇಟಿ ನೀಡಿದ್ದಾರೆ. ಇಲ್ಲಿನ ಕದಂಬ ನೌಕಾನೆಲೆಗೆ ಆಗಮಿಸಿದ ಅವರು ಜಲಾಂರ್ತಗಾಮಿ ನೌಕೆಯಲ್ಲಿ ಸಂಚಾರ ಮಾಡಿದ್ದಾರೆ. ಭಾರತೀಯ ಯುದ್ಧನೌಕೆಗಳನ್ನು ಅವರು ಹತ್ತಿರದಿಂದ ಗಮನಿಸಿದ್ದಾರೆ. ಯುದ್ಧನೌಕೆಯ ಮೂಲಕ ಆಳ ಸಮುದ್ರಕ್ಕೆ ತೆರಳಿದ ಅವರು ರಕ್ಷಣಾ ಸಾಮರ್ಥ್ಯಗಳ ಪರಿಶೀಲನೆ ನಡೆಸಿದ್ದಾರೆ. ನೌಕಾಪಡೆಯ ಐ ಎನ್‌ಎಸ್ ವಾಗ್‌ಶೀರ್ ಜಲಾಂರ್ತಗಾಮಿ ನೌಕೆಯಲ್ಲಿ ದ್ರೌಪದಿ ಮುರ್ಮು ಅವರು ಸಂಚಾರ ಮಾಡಿದ್ದು, ಯುದ್ಧ ನೌಕೆಯ ಬಗ್ಗೆ ಅವರು ಅಧಿಕಾರಿಗಳಿಂದ ಮಾಹಿತಿಪಡೆದಿದ್ದಾರೆ. ಕಾರವಾರದ ಕದಂಬ ನೌಕಾನೆಲೆಗೆ ಭಾನುವಾರ ಆಗಮಿಸಿದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ರಾಜ್ಯಪಾಲ ಥಾವರ್ ಚಂದ್ ಗೆಹಲೋಟ್, ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲ ಸಾರಿಗೆ ಸಚಿವ ಮಂಕಾಳು ವೈದ್ಯ ಅವರು ಸ್ವಾಗತಿಸಿದ್ದಾರೆ. ಜಿಲ್ಲಾಧಿಕಾರಿ ಕೆ ಲಕ್ಷಿಪ್ರಿಯಾ, ಎಡಿಜಿಪಿ ಹಿತೇಂದ್ರ, ಐಜಿಪಿ ಅಮಿತ್ ಸಿಂಗ್, ಎಸ್ಪಿ ದೀಪನ್ ಎಂ ಎನ್ ಹಾಗೂ ಚೀಫ್ ಆಫ್ ದ ನೇವಲ್ ಸ್ಟಾಫ್ ಅಡ್ಮಿರಲ್ ದಿನೇಶ್ ಕುಮಾರ್ ತ್ರಿಪಾಟಿ, ಕಾರವಾರ ನೆವಲ್ ಬೇಸ್ ನ ಫ್ಲಾಗ್ ಆಫೀಸರ್ ಕಮಾಂಡಿoಗ್ ರಿಯರ್ ಅಡ್ಮಿರಲ್ ವಿಕ್ರಂ ಮೆನನ್ ಸಹ ದ್ರೌಪದಿ ಮುರ್ಮು ಅವರನ್ನು ಅದ್ಧೂರಿಯಾಗಿ ಬರಮಾಡಿಕೊಂಡಿದ್ದಾರೆ. - [ಉಗ್ರ ಹೋರಾಟ | ಸ್ವ ಪಕ್ಷದವರ ವಿರುದ್ಧವೇ ಕಾಗೇರಿ ಕಿಡಿ!](https://mobiletime.in/2025/12/fierce-struggle-a-firestorm-against-ones-own-party/): ಬೇಡ್ತಿ-ವರದಾ ನದಿ ಜೋಡಣೆಗೆ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನಿರಂತರ ಪ್ರಯತ್ನ ಮಾಡುತ್ತಿದ್ದು, ಬಿಜೆಪಿ ಪಕ್ಷದಿಂದ ಆಯ್ಕೆಯಾದ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಯೋಜನೆ ವಿರುದ್ಧ ತಿರುಗಿ ಬಿದ್ದಿದ್ದಾರೆ. `ಯಾವುದೇ ಕಾರಣಕ್ಕೂ ಪಶ್ಚಿಮ ಘಟ್ಟದ ಸೂಕ್ಷ್ಮ ಪರಿಸರದ ಮೇಲೆ ಅವೈಜ್ಞಾನಿಕ ಯೋಜನೆ ಪ್ರಭಾವ ಬೀರಲು ಬಿಡುವುದಿಲ್ಲ’ ಎಂದು ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದ್ದಾರೆ. `ಕೆಲವರು ತಪ್ಪು ಕಲ್ಪನೆಯಿಂದ ನದಿ ಜೋಡಣೆಗೆ ವಿರೋಧ ಮಾಡುತ್ತಿದ್ದಾರೆ’ ಎಂದು ಬಿಜೆಪಿ ಮುಖಂಡ ಬಸವರಾಜ ಬೊಮ್ಮಾಯಿ ಅವರು ಹೇಳಿದ್ದಾರೆ. ಕಾಂಗ್ರೆಸ್ ಸರ್ಕಾರದ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ ಸಹ ನದಿ ಜೋಡಣೆಗೆ ಆಸಕ್ತಿವಹಿಸಿದ್ದಾರೆ. ಆದರೆ, ಉತ್ತರ ಕನ್ನಡ ಜಿಲ್ಲೆಯ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಈ ಯೋಜನೆಯನ್ನು ವಿರೋಧಿಸಿದ್ದು, ಮುಂದುವರೆದರೆ ಉಗ್ರ ಹೋರಾಟದ ಎಚ್ಚರಿಕೆ ನೀಡಿದ್ದಾರೆ. `ಕೇಂದ್ರ ಸರ್ಕಾರ ನೀಡುವ ಜಲ ಸಂಪನ್ಮೂಲ ಯೋಜನೆಯ ಅನುದಾನದ ಆಸೆಗಾಗಿ ಅಮೂಲ್ಯ ಕೃಷಿ ಹಾಗೂ ಅರಣ್ಯ ಸಂಪತ್ತು ಬಲಿಕೊಡುವುದು ಅಕ್ಷಮ್ಯ ಅಪರಾಧ’ ಎಂದು ಕಾಗೇರಿ ಹೇಳಿದ್ದಾರೆ. `ಉತ್ತರ ಕನ್ನಡ ಜಿಲ್ಲೆಯ ಜೀವನಾಡಿಗಳ ಮೇಲೆ ನೇರ ಪರಿಣಾಮ ಬೀರುವ ಬೇಡ್ತಿ-ವರದಾ ನದಿ ಜೋಡಣೆ ಯೋಜನೆಗೆ ವಿಸ್ತೃತ ಯೋಜನಾ ವರದಿ ಸಿದ್ಧಪಡಿಸಲು ಮುಂದಾಗಿರುವುದು ಅವಿವೇಕದ ನಿರ್ಧಾರ. ಜನಜೀವನ ಮತ್ತು ಇಡೀ ಪರಿಸರವನ್ನು ನಾಶಮಾಡುವ ಈ ಯೋಜನೆ ಕಾರ್ಯಸಾಧುವಲ್ಲ ಎಂದು ತಿರಸ್ಕರಿಸುವ ಬದಲು ರಾಜ್ಯ ಸರ್ಕಾರವು ಇದಕ್ಕೆ ಮನ್ನಣೆ ನೀಡುತ್ತಿರುವುದು ಸಂಶಯಕ್ಕೆ ಕಾರಣ’ ಎಂದವರು ಹೇಳಿದ್ದಾರೆ. `ನೈಸರ್ಗಿಕವಾಗಿ ಬೀಳುವ ಮಳೆಯಿಂದಲೇ ಇಲ್ಲಿನ ರೈತರು ಹಾಗೂ ಪರಿಸರ ಬದುಕುತ್ತಿದ್ದು, ಬೇಸಿಗೆಯ ಅವಧಿಯಲ್ಲಿ ಈ ಭಾಗದಲ್ಲಿಯೇ ತೀವ್ರ ನೀರಿನ ಕೊರತೆ ಇರುತ್ತದೆ. ಇಲ್ಲಿನ ಜನರಿಗೆ ನೀರಿನ ಅವಶ್ಯಕತೆಯಿರುವಾಗ ಇಲ್ಲಿನ ನೀರನ್ನು ತೆಗೆದುಕೊಂಡು ಹೋಗಿ ವರದಾ ನದಿಗೆ ಸೇರಿಸುವುದು ಅವೈಜ್ಞಾನಿಕ’ ಎಂದು ವಿಶ್ವೇಶ್ವರ ಹೆಗಡೆ ಕಾಗೇರಿ ವಿವರ ನೀಡಿದ್ದಾರೆ. `ಜಿಲ್ಲೆಯ ನೈಸರ್ಗಿಕ ಸಂಪತ್ತನ್ನು ಬಲಿಗೊಟ್ಟು ಪಡೆಯುವ ಯಾವುದೇ ಅಭಿವೃದ್ಧಿ ನಮಗೆ ಬೇಕಿಲ್ಲ. ಜನವಿರೋಧಿ ಯೋಜನೆಯನ್ನು ಮುಂದುವರಿಸಿದರೆ ನಾವು ಕೈಕಟ್ಟಿ ಕುಳಿತುಕೊಳ್ಳುವುದಿಲ್ಲ’ ಎಂದು ವಿಶ್ವೇಶ್ವರ ಹೆಗಡೆ ಕಾಗೇರಿ ಎಚ್ಚರಿಕೆ ನೀಡಿದ್ದಾರೆ. - [ಹೊಡೆದಾಟ: ಸೇಫ್ ಸ್ಟಾರ್ ಅಧ್ಯಕ್ಷರಿಗೆ ಬಿಜೆಪಿ ಬೆಂಬಲ!](https://mobiletime.in/2025/12/fight-bjp-supports-safe-star-president/): ಸೇಫ್ ಸ್ಟಾರ್ ಸೊಸೈಟಿ ಅಧ್ಯಕ್ಷ ಜಿ ಜಿ ಶಂಕರ್ ಅವರ ವಿರುದ್ಧ ದಾಖಲಾದ ಕೊಲೆ ಯತ್ನ ಪ್ರಕರಣ ರಾಜಕೀಯ ತಿರುವುಪಡೆದಿದೆ. ಕುಮಟಾ ಕ್ಷೇತ್ರದ ಬಿಜೆಪಿ ಶಾಸಕ ದಿನಕರ ಶೆಟ್ಟಿ ಹಾಗೂ ಮಾಜಿ ಶಾಸಕ ಸುನೀಲ ನಾಯ್ಕ ಅವರು ಜಿ ಜಿ ಶಂಕರ್ ಅವರ ಬೆಂಬಲಕ್ಕೆ ನಿಂತಿದ್ದಾರೆ. ಅವರಿಬ್ಬರು ಸೇರಿ `ರಾಜಕೀಯ ಕಾರಣಕ್ಕಾಗಿ ಬಿಜೆಪಿ ಮುಖಂಡ ಜಿ ಜಿ ಶಂಕರ್ ಅವರ ವಿರುದ್ಧ ಕಾಂಗ್ರೆಸ್ ಸರ್ಕಾರ ಪ್ರಕರಣ ದಾಖಲಿಸಿದೆ’ ಎಂದು ದೂರಿದ್ದಾರೆ. `ನಾನು ನನ್ನ ಉದ್ಯಮ ನಡೆಸಿ ಬಂದವನು. ಇಸ್ಪೀಟ್, ಓಸಿ, ಕೋಳಿ ಅಂಕ, ಜೂಜು ನಡೆಸುವವನಲ್ಲ. ಅದಾಗಿಯೂ ನನ್ನ ಹತ್ತಿಕ್ಕುವ ಪ್ರಯತ್ನ ನಡೆದಿದೆ’ ಎಂದು ಬಿಜೆಪಿ ಮುಖಂಡರೂ ಆಗಿರುವ ಜಿ ಜಿ ಶಂಕರ್ ಅವರು ಅಳಲು ತೋಡಿಕೊಂಡಿದ್ದಾರೆ. `ಕಾಂಗ್ರೆಸ್ ಸರ್ಕಾರ ಪೊಲೀಸರನ್ನು ಬಳಸಿಕೊಂಡು ಬಿಜೆಪಿಗರ ವಿರುದ್ಧ ಸೇಡಿನ ರಾಜಕಾರಣ ಮಾಡುತ್ತಿದೆ. ಜಾಗದ ವಿಷಯವಾಗಿ ನಡೆದ ಗಲಾಟೆಯನ್ನು ತಿರುಚಿ ಜಿ ಜಿ ಶಂಕರ್ ಅವರ ವಿರುದ್ಧ ರಾಜಕೀಯ ದ್ವೇಷದಿಂದ ಕೊಲೆ ಯತ್ನ ಪ್ರಕರಣ ದಾಖಲಿಸಲಾಗಿದೆ’ ಎಂದು ದಿನಕರ ಶೆಟ್ಟಿ ಹಾಗೂ ಸುನೀಲ ನಾಯ್ಕ ಅವರು ಒಮ್ಮತದಿಂದ ಮಾತನಾಡಿದ್ದಾರೆ. `ಅದರಲ್ಲಿಯೂ ಭಟ್ಕಳ-ಹೊನ್ನಾವರ ಕ್ಷೇತ್ರದಲ್ಲಿ ಬಿಜೆಪಿ ಕಾರ್ಯಕರ್ತರಿಗೆ ಉಸಿರುಗಟ್ಟಿಸುವ ವಾತಾವರಣವಿದೆ. ಜಿ ಜಿ ಶಂಕರ್ ಅವರ ವಿರುದ್ಧ ದಾಖಲಾದ ಪ್ರಕರಣದಲ್ಲಿ ಸಚಿವರ ಸಂಚಿದೆ’ ಎಂದು ಸುನೀಲ ನಾಯ್ಕ ಅವರು ಹೇಳಿದ್ದಾರೆ. `ನನ್ನ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಗುಂಡಾಗಿರಿಗೆ ಅವಕಾಶ ನೀಡುವುದಿಲ್ಲ. ಅಮಾಯಕ ಉದ್ಯಮಿಗಳು ಮತ್ತು ಕಾರ್ಯಕರ್ತರಿಗೆ ತೊಂದರೆ ನೀಡಿದರೆ ಸಹಿಸುವುದಿಲ್ಲ’ ಎಂದು ಶಾಸಕ ದಿನಕರ ಶೆಟ್ಟಿ ಎಚ್ಚರಿಕೆ ನೀಡಿದ್ದಾರೆ. `ಹಿಂದಿನ ಶಾಸಕರಾದ ಶಿವಾನಂದ ನಾಯ್ಕ ಅಥವಾ ಜೆ. ಡಿ ನಾಯ್ಕ ಅವರ ಕಾಲದಲ್ಲಿ ಇಂಥ ದ್ವೇಷದ ರಾಜಕಾರಣ ನಡೆದಿರಲಿಲ್ಲ. ಮಂಕಿ ಪಟ್ಟಣ ಪಂಚಾಯತ ಚುನಾವಣೆಯಲ್ಲಿ ಜನರು ಅಹಂಕಾರದ ರಾಜಕಾರಣಕ್ಕೆ ಈಗಾಗಲೇ ಉತ್ತರ ನೀಡಿದ್ದಾರೆ. ಪೊಲೀಸರು ಇದೇ ರೀತಿ ಮುಂದುವರಿದರೆ ಸಾವಿರಾರು ಕಾರ್ಯಕರ್ತರೊಂದಿಗೆ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಲಾಗುತ್ತದೆ’ ಎಂದು ಎಚ್ಚರಿಸಿದ್ದಾರೆ. `ಪೊಲೀಸರು ತನ್ನೊಂದಿಗೂ ಅನುಚಿತವಾಗಿ ವರ್ತಿಸಿದ್ದಾರೆ. ದೂರು ನೀಡಲು ಹೋದಾಗ ಪೊಲೀಸರು ಹಗುರವಾಗಿ ಮಾತನಾಡಿಸಿ, ರಾತ್ರಿಯಿಡೀ ಠಾಣೆಯಲ್ಲಿ ಕೂಡಿಸಿ ದೂರು ಸ್ವೀಕರಿಸದೆ ಮಾನಸಿಕ ಹಿಂಸೆ ನೀಡಿದ್ದಾರೆ’ ಎಂದು ಸೇಫ್ ಸ್ಟಾರ್ ಸೊಸೈಟಿಯಲ್ಲಿ ಕೆಲಸ ಮಾಡುವ ನಾಗರತ್ನ ಹಳ್ಳೇರ ಅವರು ದೂರಿದ್ದಾರೆ. ಡಿಸೆಂಬರ್ 9ರಂದು ಹೊನ್ನಾವರ ಮಾವಿನಕೂರ್ವಾ ಬಳಿಯ ಮಂಡಲಕೂರ್ವದ ಜೊಯವಿನ್ ಬಸ್ತೇಂವ್ ಮೆಂಡೋನ್ಸಾ ಅವರು ಪೀಟರ್ ಎಂಬಾತರ ಸೂಚನೆ ಮೇರೆಗೆ ಕೂಲಿ ಕೆಲಸಕ್ಕೆ ಹೋಗಿದ್ದಾಗ ಅವರ ಮೇಲೆ ಹಲ್ಲೆ ನಡೆದಿತ್ತು. ಜೊಯವಿನ್ ಅವರ ಜೊತೆ ಅವರ ತಂದೆ ಬಸ್ತೇಂವ್ ಮೆಂಡೋನ್ಸಾ, ಪಾವ್ಲು ಡಿಕೋಸ್ತಾ ಅವರ ಮೇಲೆಯೂ ದಾಳಿ ನಡೆದಿತ್ತು. 25ಕ್ಕೂ ಅಧಿಕ ಜನ ಸೇರಿ ಜೊಯವಿನ್ ಅವರ ಮೇಲೆ ದಾಳಿ ನಡೆಸಿದ್ದು, ಇದರಲ್ಲಿ ಜಿ ಜಿ ಶಂಕರ್ ಅವರ ಕೈವಾಡವಿರುವ ಆರೋಪವ್ಯಕ್ತವಾಗಿತ್ತು. ಜಿ ಜಿ ಶಂಕರ್ ಅವರ ಜೊತೆ ಅಂಗಡಿ ಹಿತ್ತಲದ ಮೋಹನ ತಿಮ್ಮಪ್ಪ ಗೌಡ, ಅರುಣ ಮಂಜುನಾಥ ಗೌಡ, ದುರ್ಗಾಕೇರಿಯ ಕಿರಣ ಆರ್ ಹೊನ್ನಾವರಕರ್, ಹೊಂಡಗದ್ದೆಯ ಸತೀಶ ಗೋವಿಂದ ಗೌಡ ಅವರು ಇನ್ನೂ 25 ಜನರ ಜೊತೆ ಸೇರಿ ಆಕ್ರಮಣ ನಡೆಸಿದ ಬಗ್ಗೆ ದೂರು ದಾಖಲಾಗಿದ್ದು, ಇದಕ್ಕೆ ಪ್ರತಿಯಾಗಿ ಸೇಫ್ ಸ್ಟಾರ್ ಸೊಸೈಟಿಯಲ್ಲಿ ಕೆಲಸ ಮಾಡುವ ಹೊನ್ನಾವರ ಮೂಡ್ಕಣಿಯ ನಾಗರತ್ನ ಗಣಪತಿ ಹಳ್ಳೇರ್ ಅವರು ತಮಗೆ ಬೆದರಿಕೆಯಿರುವ ಬಗ್ಗೆ ದೂರಿದ್ದರು. ಜೋಯವಿನ್ ಮಂಡೋನ್ಸಾ ಹಾಗೂ ಪೀಟರ್ ಮಂಡೋನ್ಸಾ ಅವರ ವಿರುದ್ಧ ನಾಗರತ್ನ ಹಳ್ಳೇರ್ ಅವರು ಆರೋಪಿಸಿದ್ದರು. ಅದರ ಬೆನ್ನಲ್ಲೆ ಜೋಯವಿನ್ ಮಂಡೋನ್ಸಾ ಕಡೆಯವರು ಡಿಸೆಂಬರ್ 11ರಂದು ಸೇಫ್ ಸ್ಟಾರ್ ಸೊಸೈಟಿಯ ಅಳ್ಳಂಕಿ ಶಾಖೆಯ ಫಿಲ್ಡ್ ಆಫೀಸರ್ ಶ್ಯಾಮಲಾ ಮಂಜುನಾಥ ನಾಯ್ಕ ಅವರನ್ನು ಬೆದರಿಸಿದ ಬಗ್ಗೆ ಪೊಲೀಸ್ ಪ್ರಕರಣ ದಾಖಲಾಗಿತ್ತು. ಈ ಎಲ್ಲದರ ನಡುವೆ ಶಾಸಕ ದಿನಕರ ಶೆಟ್ಟಿ ಹಾಗೂ ಮಾಜಿ ಶಾಸಕ ಸುನೀಲ ನಾಯ್ಕ ಅವರು ಜಿ ಜಿ ಶಂಕರ್ ಅವರ ಪರವಾಗಿ ಮಾತನಾಡಿದ್ದು, ಬಿಜೆಪಿಗರನ್ನು ಗುರಿಯನ್ನಾಗಿಸಿ ಕಾಂಗ್ರೆಸ್ ದ್ವೇಷ ಸಾಧಿಸುತ್ತಿರುವ ಬಗ್ಗೆ ಹೇಳಿಕೆ ನೀಡಿದ್ದಾರೆ. - [`ಮಕ್ಕಳ ಆರೋಗ್ಯ - ಮುತುವರ್ಜಿ ಅಗತ್ಯ'](https://mobiletime.in/2025/12/childrens-health-mutual-protection-is-necessary/): `ಮಕ್ಕಳ ಆರೋಗ್ಯದ ವಿಷಯದಲ್ಲಿ ಪಾಲಕರು ಹೆಚ್ಚಿನ ಮುತುವರ್ಜಿವಹಿಸಬೇಕು’ ಎಂದು ಸಿದ್ದಾಪುರ ಕ್ಷೇತ್ರ ಶಿಕ್ಷಣಾಧಿಕಾರಿ ಎಂ ಎಚ್ ನಾಯ್ಕ ಅವರು ಹೇಳಿದ್ದಾರೆ. `ಮಕ್ಕಳ ಮನೋದೈಹಿಕ ಆರೋಗ್ಯ ಭವಿಷ್ಯ ರೂಪಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ’ ಎಂದವರು ಮಾಹಿತಿ ನೀಡಿದ್ದಾರೆ. ಶನಿವಾರ ಶಿರಸಿಯ ಸ್ಕೋಡ್‌ವೆಸ್, ದೇಸಾಯಿ ಫೌಂಡೇಶನ್ ಹಾಗೂ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಪ್ರಶಾಂತಿ ಶಿಕ್ಷಣ ಸಂಸ್ಥೆ ಆವಾರದಲ್ಲಿ ಬಾಲ ಆರೋಗ್ಯ ಮೇಳ ನಡೆಯಿತು. ಈ ಮೇಳ ಉದ್ಘಾಟಿಸಿದ ಶಿಕ್ಷಣಾಧಿಕಾರಿ ಎಂ ಎಚ್ ನಾಯ್ಕ ಅವರು `ಬಾಲ್ಯದಲ್ಲಿಯೇ ವಯಕ್ತಿಕ ಆರೋಗ್ಯ, ಪೌಷ್ಠಿಕ ಆಹಾರ, ದೈಹಿಕ ಬೆಳವಣಿಗೆ ಬೇಕಾದ ಎಲ್ಲಾ ಅವಶ್ಯಕತೆಗಳನ್ನು ಪಾಲಕರು ಸಮರ್ಪಕವಾಗಿ ಒದಗಿಸಬೇಕು’ ಎಂದು ಕರೆ ನೀಡಿದರು. ಸ್ಕೋಡ್ ವೆಸ್ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ವೆಂಕಟೇಶ್ ನಾಯ್ಕ ಅವರು ಮಾತನಾಡಿ `ಗ್ರಾಮೀಣ ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಸ್ಕೋಡ್ ವೆಸ್ ಸಂಸ್ಥೆ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಿದೆ. ಬಾಲ ಆರೋಗ್ಯ ಮೇಳದಲ್ಲಿ ವಯಕ್ತಿಕ ಶುಚಿತ್ವ, ಮಾನಸಿಕ ಆರೋಗ್ಯಕ್ಕಾಗಿ ವಿವಿಧ ಮನರಂಜನಾ ಕ್ರೀಡಾ ಚಟುವಟಿಕೆಗಳು, ಆರೋಗ್ಯ ತಪಾಸಣೆ, ಪೌಷ್ಠಿಕ ಆಹಾರದ ಮಹತ್ವ, ವಿಜ್ಞಾನ ವಸ್ತುಪ್ರದರ್ಶನ ಮುಂತಾದ ಚಟುವಟಿಕೆ ನಡೆಯಲಿದೆ’ ಎಂದು ತಿಳಿಸಿದರು. ಪ್ರಶಾಂತಿ ಪ್ರೌಢಶಾಲೆ ಮುಖ್ಯೋಧ್ಯಾಪಕ ದಿನೇಶ ಶೆಟ್ಟಿ, ದೈಹಿಕ ಶಿಕ್ಷಕ ಎಂ ವಿ ನಾಯ್ಕ, ಸಮನ್ವಯ ಅಧಿಕಾರಿ ಶೋಭಾ ಡಿಸಿ, ಪ್ರಶಾಂತಿ ಹಿರಿಯ ಪ್ರಾಥಮಿಕ ಶಾಲೆ ಮುಖ್ಯಾಧ್ಯಾಪಕ ರಾಘವೇಂದ್ರ ಬೇಡ್ಕಣಿ, ಸಂಸ್ಥೆಯ ಸಿಬ್ಬಂದಿ ಉಮೇಶ ಮರಾಠಿ ಕಾರ್ಯಕ್ರಮದಲ್ಲಿದ್ದರು. - [ಕುಡಿದು ಕುಡಿದು ಕೊನೆಯುಸಿರೆಳೆದ ಕೂಲಿಯಾಳು!](https://mobiletime.in/2025/12/a-drunken-laborer-who-died/): ಕುಡಿತದ ಚಟಕ್ಕೆ ಒಳಗಾಗಿದ್ದ ಹೊನ್ನಾವರದ ರಾಘವೇಂದ್ರ ನಾಯ್ಕ ಅವರು ತಮ್ಮ ವ್ಯಸನ ಹೆಚ್ಚಾದ ಪರಿಣಾಮ ಸಾವನಪ್ಪಿದ್ದಾರೆ. ಅಸ್ವಸ್ಥರಾಗಿ ಕುಸಿದು ಬಿದ್ದ ಅವರನ್ನು ಮೂರು ಆಸ್ಪತ್ರೆಗೆ ಕರೆದೊಯ್ದರೂ ಬದುಕಿಸಿಕೊಳ್ಳಲು ಸಾಧ್ಯವಾಗಿಲ್ಲ. ಹೊನ್ನಾವರ ಕುದ್ರಗಿಯಲ್ಲಿ ರಾಘವೇಂದ್ರ ಶಂಕರ ನಾಯ್ಕ (40) ಅವರು ವಾಸವಾಗಿದ್ದರು. ಕೂಲಿ ಕೆಲಸ ಮಾಡಿ ಅವರು ಬದುಕು ಕಟ್ಟಿಕೊಂಡಿದ್ದು, ದುಡಿಮೆಯ ಹಣವನ್ನು ಸರಾಯಿ ಅಂಗಡಿಗೆ ಸುರಿಯುತ್ತಿದ್ದರು. ಅವರ ಕುಡಿತದ ಚಟ ಮಿತಿ ಮೀರಿದ್ದು, ಯಾರಿಂದಲೂ ಅದನ್ನು ನಿಯಂತ್ರಣಕ್ಕೆ ತರಲು ಸಾಧ್ಯವಾಗಿರಲಿಲ್ಲ. ಕುಟುಂಬದವರು ಹೇಳಿದರೂ ಸಹ ರಾಘವೇಂದ್ರ ನಾಯ್ಕ ಅವರು ಕುಡಿಯುವುದನ್ನು ಮಾತ್ರ ಬಿಡುತ್ತಿರಲಿಲ್ಲ. ಡಿಸೆಂಬರ್ 24ರಂದು ಮದ್ಯದ ನಶೆಯಲ್ಲಿರುವಾಗಲೇ ಅವರು ಅಸ್ವಸ್ಥರಾದರು. ಮನೆ ಗೇಟಿನ ಬಳಿ ಏಕಾಏಕಿ ಕುಸಿದು ಬಿದ್ದರು. ರಾಘವೇಂದ್ರ ನಾಯ್ಕ ಅವರನ್ನು ಕುಟುಂಬದವರು ಹೊನ್ನಾವರ ಆಸ್ಪತ್ರೆಗೆ ಕರೆದೊಯ್ದರು. ನಂತರ ಕಾರವಾರ ಆಸ್ಪತ್ರೆಗೆ ದಾಖಲಿಸಿದರು. ಇನ್ನೂ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ವೆನ್ ಲಾಕ್ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದರು. ಆದರೆ, ಅದರಿಂದ ಯಾವ ಪ್ರಯೋಜನವೂ ಆಗಲಿಲ್ಲ. ಡಿಸೆಂಬರ್ 25ರ ರಾತ್ರಿ ರಾಘವೇಂದ್ರ ನಾಯ್ಕ ಅವರು ಆಸ್ಪತ್ರೆಯಲ್ಲಿಯೇ ಸಾವನಪ್ಪಿದರು. ಚಿಕ್ಕಪ್ಪನ ಸಾವಿನ ಬಗ್ಗೆ ಆಟೋ ಚಾಲಕ ವಿನಾಯಕ ಮಂಜುನಾಥ ನಾಯ್ಕ ಅವರು ಮಾಹಿತಿ ನೀಡಿದ್ದು, ಹೊನ್ನಾವರ ಪೊಲೀಸರು ಪ್ರಕರಣ ದಾಖಲಿಸಿದರು. `ಮದ್ಯಪಾನ ಆರೋಗ್ಯಕ್ಕೆ ಹಾನಿಕಾರಕ’ - [ಸಮಯಕ್ಕೆ ಸಿಗದ ಆಂಬುಲೆನ್ಸ್ ಸೇವೆ: ಸಾವು!](https://mobiletime.in/2025/12/ambulance-service-not-available-on-time-death/): ಸಮಯಕ್ಕೆ ಸರಿಯಾಗಿ ಆಂಬುಲೆನ್ಸ್ ಸಿಗದ ಕಾರಣ ವಿಜಯ ಹೊಸ್ಕಟ್ಟಾ ಅವರನ್ನು ಆಸ್ಪತ್ರೆಗೆ ದಾಖಲಿಸಲು ಸಮಸ್ಯೆಯಾಗಿದ್ದು, ಅರ್ದ ಆಯಸ್ಸಿಗೆ ಅವರು ಜೀವ ಬಿಟ್ಟಿದ್ದಾರೆ. ಕುಮಟಾದ ಗೋಕರ್ಣ ಬಳಿಯ ಮೊಗೇರಿಕಟ್ಟೆಯಲ್ಲಿ ವಿಜಯ ಹೊಸ್ಕಟ್ಟಾ (46) ಅವರು ವಾಸವಾಗಿದ್ದರು. ಇಲೆಕ್ಟಿçಷಿಯನ್ ಆಗಿ ಕೆಲಸ ಮಾಡಿಕೊಂಡಿದ್ದ ಅವರು ಗ್ರಾಮ ಪಂಚಾಯತದ ಬೀದಿ ದೀಪ ನಿರ್ವಹಣೆ ಕೆಲಸವನ್ನು ಮಾಡಿಕೊಂಡಿದ್ದರು. ವಿಜಯ ಹೊಸ್ಕಟ್ಟಾ ಅವರಿಗೆ ಈಚೆಗೆ ಮೆದುಳು ಸಂಬAಧಿಸಿದ ಸಮಸ್ಯೆ ಕಾಣಿಸಿಕೊಂಡಿತ್ತು. ಅದಕ್ಕೆ ಅವರು ಚಿಕಿತ್ಸೆಪಡೆಯುತ್ತಿದ್ದರು. ವಾರದ ಹಿಂದೆ ವಿಜಯ ಹೊಸ್ಕಟ್ಟಾ ಅವರಿಗೆ ಹಠಾತ್ ಆಗಿ ತಲೆನೋವು ಕಾಣಿಸಿಕೊಂಡಿತು. ದಿಢೀರ್ ಆಗಿ ಅವರು ಕುಸಿದು ಬಿದ್ದಿದ್ದು, ಕುಟುಂಬದವರು 108ಗೆ ಫೋನ್ ಮಾಡಿದರು. ಅವರ ಮನೆಯಿಂದ 1ಕಿಮೀ ದೂರದಲ್ಲಿ 108 ಆಂಬುಲೆನ್ಸ ನಿಲುಗಡೆಯಿದ್ದರೂ 45 ನಿಮಿಷದ ನಂತರ ಆಂಬುಲೆನ್ಸ್ ಬಂದಿತು. ವಿಜಯ ಹೊಸ್ಕಟ್ಟಾ ಅವರನ್ನು ಗೋಕರ್ಣ ಆಸ್ಪತ್ರೆಗೆ ಕರೆದೊಯ್ದು, ನಂತರ ಅಂಕೋಲಾ ಆಸ್ಪತ್ರೆಗೆ ಬಿಡಲಾಯಿತು. ನಂತರ ಅವರನ್ನು ಬೇರೆ ಆಂಬುಲೆನ್ಸಿನ ಮೂಲಕ ಕಾರವಾರಕ್ಕೆ ಕರೆದೊಯ್ಯಲಾಯಿತು. ಮೆದುಳಿನ ರಕ್ತಸ್ರಾವ ಹೆಚ್ಚಾದ ಕಾರಣ ನಂತರ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಯಿತು. `ಸಮಯಕ್ಕೆ ಸರಿಯಾಗಿ ಆಂಬುಲೆನ್ಸ್ ಸಿಗಲಿಲ್ಲ. ಹೀಗಾಗಿ ಪ್ರಾಥಮಿಕ ಚಿಕಿತ್ಸೆ ಕೊಡುವಲ್ಲಿ ತಡವಾಗಿದೆ’ ಎಂದು ಸಮೀಪದ ನಿವಾಸಿ ಸೂರ್ಯ ನಾಯಕ ಅವರು ವಿವರಿಸಿದರು. 20 ಸಾವಿರಕ್ಕೂ ಅಧಿಕ ಜನ ವಸತಿಯಿರುವ ಗೋಕರ್ಣದಲ್ಲಿ ಆರೋಗ್ಯ ಸೇವೆ ಸರಿಯಾಗಿಲ್ಲ. ಆರೋಗ್ಯ ಸೇವೆ ಸರಿಯಾಗಿದ್ದಿದ್ದರೆ ವಿಜಯ ಹೊಸ್ಕಟ್ಟಾ ಅವರನ್ನು ಬದುಕಿಸಬಹುದಿತ್ತು’ ಎಂದವರು ವಿವರಿಸಿದರು. ಕರಾವಳಿ ಉತ್ಸವದ ಹಿನ್ನಲೆ ಆಂಬುಲೆನ್ಸ್’ಗಳನ್ನು ಕಾರವಾರಕ್ಕೆ ಹೆಚ್ಚುವರಿಯಾಗಿ ನಿಯೋಜಿಸಿದ್ದರಿಂದ ಸಮಯಕ್ಕೆ ಸರಿಯಾಗಿ ಆಂಬುಲೆನ್ಸ್ ಸಿಗುತ್ತಿಲ್ಲ ಎಂದು ಜನ ದೂರಿದರು. - [ಒಂದೇ ವಾರದಲ್ಲಿ ಜಾಗ ಖಾಲಿ ಮಾಡಿ!](https://mobiletime.in/2025/12/clear-the-space-in-one-week/): 60 ವರ್ಷಗಳಿಂದ ಅದೇ ನೆಲದಲ್ಲಿ ಬದುಕು ಕಟ್ಟಿಕೊಂಡಿರುವ ಲಿಂಗ ನಾಯ್ಕ ಅವರ ಕುಟುಂಬಕ್ಕೆ `ಆ ಜಾಗವನ್ನು ಖಾಲಿ ಮಾಡಿ’ ಎಂದು ಅಧಿಕಾರಿಗಳು ನೋಟಿಸ್ ನೀಡಿದ್ದಾರೆ. `ಬೆಳೆದು ನಿಂತ ಅಡಿಕೆ ಮರಗಳ ಜೊತೆ ಮನೆಯನ್ನು ತೆರವು ಮಾಡಿ’ ಎಂದು ಸೂಚಿಸಿದ್ದಾರೆ. `ಒಂದು ವಾರದ ಒಳಗೆ ತೆರವು ಮಾಡದೇ ಇದ್ದರೆ ಒಕ್ಕಲೆಬ್ಬಿಸುತ್ತೇವೆ’ ಎಂದು ಎಚ್ಚರಿಸಿದ್ದಾರೆ. ಸಿದ್ದಾಪುರದ ಇಟಗಿ ಬಳಿಯ ಸುತ್ತಲಮನೆ ಸಮೀಪದ ಗಾಲಮಾಂವದಲ್ಲಿ ಲಿಂಗ ಪುಟ್ಟ ನಾಯ್ಕ ಅವರು ಆರು ದಶಕದಿಂದ ವಾಸವಾಗಿದ್ದಾರೆ. ಅಲ್ಲಿಯೇ ಅವರು ಅಡಿಕೆ-ತೆಂಗಿನ ತೋಟ ನಿರ್ಮಿಸಿಕೊಂಡು ಬದುಕು ಕಟ್ಟಿಕೊಂಡಿದ್ದಾರೆ. ಆದರೆ, ಕ್ಯಾದಗಿ ವಲಯದ ಅರಣ್ಯಾಧಿಕಾರಿಗಳು ಇದೀಗ ಏಕಾಏಕಿ ಅವರನ್ನು ಅಲ್ಲಿಂದ ತೆರವು ಮಾಡಲು ಮುಂದಾಗಿದ್ದಾರೆ. `ಜಾಗ ಖಾಲಿ ಮಾಡಿ’ ಎಂದು ಲಿಂಗ ನಾಯ್ಕ ಅವರಿಗೆ ನೋಟಿಸ್ ನೀಡಿದ್ದು, ಲಿಂಗ ನಾಯ್ಕ ಅವರ ಪತ್ನಿ ಲೀಲಾವತಿ ನಾಯ್ಕ ಅವರು ದಿಕ್ಕೇ ತೋಚದ ಹಾಗೇ ಕೂತಿದ್ದಾರೆ. ಲಿಂಗ ನಾಯ್ಕ ಅವರು ಹೆಚ್ಚಿಗೆ ಓದಿದವರಲ್ಲ. ಸರ್ಕಾರದ ಆದೇಶ-ಸುತ್ತೋಲೆ ಬಗ್ಗೆ ಅವರಿಗೆ ಅರಿವಿಲ್ಲ. 1978ರ ಪೂರ್ವದಿಂದಲೂ ಅವರು ಅರಣ್ಯ ಅತಿಕ್ರಮಣ ಪ್ರದೇಶದಲ್ಲಿ ವಾಸವಾಗಿದ್ದು, ಅಜ್ಞಾನದಿಂದಾಗಿ ಅವರು ಆ ಅವಧಿಯಲ್ಲಿ ಅರ್ಜಿ ಸಲ್ಲಿಸಿರಲಿಲ್ಲ. ನಂತರ ಅರಣ್ಯ ಹಕ್ಕು ಕಾಯ್ದೆ ಅಡಿ ಅವರು ಅರ್ಜಿ ಸಲ್ಲಿಸಿದ್ದರೂ ಅದನ್ನು ಅಧಿಕಾರಿಗಳು ಪರಿಗಣಿಸುತ್ತಿಲ್ಲ. 50 ವರ್ಷದ ಮರಗಳ ಜೊತೆ ವಾಸದ ಮನೆಯನ್ನು ತೆರವು ಮಾಡುವಂತೆ ನೋಟಿಸ್ ನೀಡಿದ್ದಾರೆ. `ಎಲ್ಲವನ್ನು ಬಿಟ್ಟು ಹೋಗುವುದೆಲ್ಲಿ?’ ಎಂದು ಆ ಕುಟುಂಬದವರು ಕಣ್ಣೀರು ಹಾಕುತ್ತಿದ್ದಾರೆ. ಶನಿವಾರ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯವರು ಸ್ಥಳಕ್ಕೆ ಭೇಟಿ ನೀಡಿದರು. ಮಾಬ್ಲೇಶ್ವರ ನಾಯ್ಕ ಬೇಡ್ಕಣಿ, ರಾಮಚಂದ್ರ ನಾಯ್ಕ ತ್ಯಾಗಲಿಮನೆ, ಕೆ ಬಿ ನಾಯ್ಕ ಸುತ್ತಮನೆ, ನಾರಾಯಣ ನಾಯ್ಕ ಗಾಳುಮನೆ, ರಾಮಚಂದ್ರ ನಾಯ್ಕ ಮುಂಡಗೇತಗ್ಗು, ರವಿ ನಾಯ್ಕ, ಗೋವಿಂದ ಗೌಡ ಕಿಲವಳ್ಳೀ, ಗಣಪತಿ ಗೌಡ ಮಕ್ಕಿಗದ್ದೆ ಮುಂತಾದವರು ಲಿಂಗ ನಾಯ್ಕ ಅವರ ಕುಟುಂಬಕ್ಕೆ ಸಮಾಧಾನ ಮಾಡಿದರು. `ನಿಮ್ಮೊಂದಿಗೆ ನಾವಿದ್ದೇವೆ’ ಎಂದು ಧೈರ್ಯ ಹೇಳಿದರು. - [ನಿಯತ್ತಿನ ನಾಯಿಗೆ 25 ಸಾವಿರ ಬಹುಮಾನ!](https://mobiletime.in/2025/12/25-thousand-reward-for-the-lucky-dog/): ಕರಾವಳಿ ಉತ್ಸವದ ಅಂಗವಾಗಿ ಕಾರವಾರದ ಮಾಲಾದೇವಿ ಮೈದಾನದಲ್ಲಿ ನಡೆದ ಶ್ವಾನ ಪ್ರದರ್ಶನದಲ್ಲಿ ನಾನಾ ಭಾಗದ ನಾಯಿಗಳು ಬಂದಿದ್ದು, ಅವುಗಳ ಜಾಣ್ಮೆ, ಚುರುಕುತನ ಹಾಗೂ ಸಾಹಸಕ್ಕೆ ಜನ ಹುಬ್ಬೇರಿಸಿದ್ದಾರೆ. ಲ್ಯಾಬ್ರಾಡರ್, ಜರ್ಮನ್ ಶೆಪರ್ಡ್, ಗೋಲ್ಡನ್ ರಿಟ್ರಿವರ್, ಮುಧೋಳ ಹೌಂಡ್, ಪೊಮೇರಿಯನ್, ವೇನಸ್ ಕಾರ್ಗಿ, ರಾಜ ಪಾಳ್ಯಮ್, ಬೆಲ್ಜಿಯನ್ ಮೆಲಿನಯ್ಸ್ ಸೇರಿ ವಿವಿಧ ತಳಿಯ ನಾಯಿಗಳು ಸಹ ಈ ಉತ್ಸವದಲ್ಲಿ ಪ್ರತಿಭಾ ಪ್ರದರ್ಶನ ಮಾಡಿವೆ. ಜಿಲ್ಲಾ ಪೊಲೀಸ್ ಇಲಾಖೆ ಮತ್ತು ಕೈಗಾದ ಕೈಗಾರಿಕಾ ಭದ್ರತಾ ಪಡೆಯ ಶ್ವಾನಗಳು ತಮ್ಮ ಸಾಹಸ, ಬುದ್ದಿವಂತಿಕೆ ಮತ್ತು ಕೌಶಲ್ಯವನ್ನು ಪ್ರದರ್ಶಿಸಿವೆ. ಪೊಲೀಸ್ ಇಲಾಖೆಯ ಶೈನಿ, ಮಾರ್ವೆಲ್ ಮತ್ತು ಅಖಿರ ಹೆಸರಿನ ಶ್ವಾನಗಳು ಶಿಸ್ತಿನ ಆದೇಶಗಳನ್ನು ಪ್ರದರ್ಶಿಸಿದವು. ಕೈಗಾರಿಕಾ ಭದ್ರತಾ ಪಡೆಯ ಐರಾ, ಅಭಯ್ ಮತ್ತು ಭೈರವ ಶ್ವಾನಗಳು ರೋಮಾಂಚಕ ಸಾಹಸ ಚಟುವಟಿಕೆ ನಡೆಸಿದವು. ಈ ಎರಡೂ ಇಲಾಖೆಗಳ ಶ್ವಾನಗಳಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ ಎನ್ ಅವರು 10 ಸಾವಿರ ರೂ ಬಹುಮಾನ ಕೊಟ್ಟರು. ಬೆಂಗಳೂರಿನಿAದ ಆಗಮಿಸಿದ್ದ ಕುಮಾರ್ ಅವರ 2 ಶ್ವಾನಗಳು ವಿವಿಧ ಆಕರ್ಷಕ ಬುದ್ದಿವಂತ ಚಟುವಟಿಕೆಗಳನ್ನು ಪ್ರದರ್ಶಿಸುವ ಮೂಲಕ ಸಾರ್ವಜನಿಕರ ಪ್ರಶಂಸೆಗೆ ಪಾತ್ರವಾದವು. ಶ್ವಾನ ಪ್ರದರ್ಶನದಲ್ಲಿ ಜಿಲ್ಲೆಯ ಮತ್ತು ಹೊರ ಜಿಲ್ಲೆಯ ಶ್ವಾನಗಳು ಭಾಗವಹಿಸಿದ್ದು, ಚಾಂಪಿಯನ್ ವಿಭಾಗದಲ್ಲಿ ವಿಜೇತವಾದ ಶ್ವಾನಗಳಿಗೆ ಮತ್ತು ಪ್ರತಿ ವಿಭಾಗದಲ್ಲೂ ವಿಜೇತವಾದ ಶ್ವಾನಗಳಿಗೆ ಬಹುಮಾನ ವಿತರಿಸಲಾಯಿತು. ಈ ಶ್ವಾನ ಸ್ಪರ್ಧೆಯಲ್ಲಿ ಸುನೀಲ್ ಉಡಾಡಿ ಅವರ ಜರ್ಮನ್ ಶೆಫರ್ಡ್ ಪ್ರಥಮ ಬಹುಮಾನ ಪಡೆದಿದ್ದು, 25 ಸಾವಿರ ರೂ ತನ್ನದಾಗಿಸಿಕೊಂಡಿತು. ವೆಂಕಪ್ಪ ನವಲಗಿ ಮುಧೋಳ ಅವರ ಮುಧೋಳ ತಳಿ ಶ್ವಾನಕ್ಕೆ ದ್ವಿತೀಯ ಬಹುಮಾನ 15,000ರೂ ಮತ್ತು ಸುಹಾಸ್ ದಾವಣಗೆರೆ ಅವರ ಬೀಗಲ್ ತಳಿ ಶ್ವಾನಕ್ಕೆ ತೃತೀಯ ಬಹುಮಾನವಾಗಿ 10,000 ರೂ ಸಿಕ್ಕಿತು. - [ಕರಾವಳಿ ಉತ್ಸವ: ನಕಲಿ ಪಾಸುಗಳ ಕಾರುಬಾರು!](https://mobiletime.in/2025/12/coastal-festival-a-carload-of-fake-passes/): ಕರಾವಳಿ ಉತ್ಸವಕ್ಕೆ ಬರುವ ಗಣ್ಯರಿಗಾಗಿ ಜಿಲ್ಲಾಡಳಿತ ವಿಐಪಿ ಪಾಸುಗಳನ್ನು ನೀಡಿದ್ದು, ಗಣ್ಯರ ಸಾಲಿನಲ್ಲಿ ಕೂರಲು ಅನೇಕರು ನಕಲಿ ಪಾಸುಗಳ ಮೊರೆ ಹೋಗಿದ್ದಾರೆ. ಗಣ್ಯರಿಗೆ ನೀಡಿದ ಪಾಸುಗಳನ್ನು ಕಲರ್ ಜರಾಕ್ಸ್ ಮಾಡಿಸಿ ಮುಂದಿನ ಸಾಲಿನ ಪ್ರವೇಶ ಪಡೆಯುತ್ತಿದ್ದಾರೆ! ಕರಾವಳಿ ಉತ್ಸವ ದಿನದಿಂದ ದಿನಕ್ಕೆ ರಂಗುಪಡೆಯುತ್ತಿದೆ. ಸ್ಥಳೀಯ ಕಲಾವಿದರ ಜೊತೆ ರಾಷ್ಟçಮಟ್ಟದ ಕಲಾವಿದರು ಆಗಮಿಸಿ ಗಾಯನ ಪ್ರಸ್ತುತಪಡಿಸುತ್ತಿದ್ದಾರೆ. ಕಾರ್ಯಕ್ರಮ ವೀಕ್ಷಣೆಗೆ 12 ಸಾವಿರ ಆಸನಗಳ ವ್ಯವಸ್ಥೆ ಮಾಡಿದ್ದು, ಅದು ಸಾಲುತ್ತಿಲ್ಲ. ಅನೇಕರು ದೂರದಿಂದಲೇ ನಿಂತು ಕಾರ್ಯಕ್ರಮ ನೋಡುತ್ತಿದ್ದು ವೇದಿಕೆ ಸಮೀಪ ತೆರಳಲು ಹಲವರು ಅಡ್ಡದಾರಿ ಹಿಡಿದಿದ್ದಾರೆ. ಗಣ್ಯರು ಹಾಗೂ ಅತಿ ಗಣ್ಯರಿಗಾಗಿ ಜಿಲ್ಲಾಡಳಿತ ಅನೇಕ ಆಸನಗಳನ್ನು ಮೀಸಲಿರಿಸಿದೆ. ಆ ಆಸನಗಳಲ್ಲಿ ಪಕ್ಷವೊಂದರ ಕಾರ್ಯಕರ್ತರು ಆಸೀನರಾಗಿದ್ದಾರೆ. ಇದರೊಂದಿಗೆ ಹೂ-ಹಣ್ಣು, ತರಕಾರಿ ವ್ಯಾಪಾರಿಗಳ ಬಳಿಯೂ ಗಣ್ಯರ ಪಾಸುಗಳಿದ್ದು, ವಿತರಣೆ ಆದ ಪಾಸುಗಳಿಗಿಂತಲೂ ಹೆಚ್ಚಿನ ಸಂಖ್ಯೆಯ ಪಾಸುಗಳು ಉತ್ಸವದ ವೇದಿಕೆ ಕಡೆ ಬರುತ್ತಿದೆ. ಪಾಸುಗಳನ್ನು ಕಲರ್ ಜರಾಕ್ಸ್ ಮಾಡಿ ಗಣ್ಯರ ಪ್ರವೇಶ ದ್ವಾರದ ಬಳಿ ಬರುವವರ ಸಂಖ್ಯೆ ಹೆಚ್ಚಾಗಿದೆ. ರಾತ್ರಿ ವೇಳೆ ಏಕಾಏಕಿ ಜನ ನುಗ್ಗುವುದರಿಂದ ಪಾಸುಗಳನ್ನು ಸೂಕ್ಷö್ಮವಾಗಿ ಪರಿಶೀಲಿಸಲು ಪೊಲೀಸರಿಂದ ಸಾಧ್ಯವಾಗುತ್ತಿಲ್ಲ. ಅದಾಗಿಯೂ, ಪೊಲೀಸರು ನಕಲಿ ಪಾಸುಹೊಂದಿದವರನ್ನು ಹೊರಗೆ ಕಳುಹಿಸುವ ಪ್ರಯತ್ನ ಮಾಡಿದರೆ ವೇದಿಕೆಯ ಮುಂದೆಯೇ ವಾಗ್ವಾದ ಶುರುವಾಗುತ್ತದೆ. ಹೀಗಾಗಿ ನಕಲಿ ಪಾಸ್ ಹಾವಳಿ ತಡೆಯಲು ಜಿಲ್ಲಾಡಳಿತ ಹೆಚ್ಚುವರಿ ಭದ್ರತಾ ಸಿಬ್ಬಂದಿ ನಿಯೋಜಿಸಲು ಸಿದ್ಧತೆ ನಡೆಸಿದೆ. - [ಶಿರಸಿ-ಕುಮಟಾ: ಕದ್ದು ಮುಚ್ಚಿ ಹೋಗುವವರಿಗೆ ಇಲ್ಲ ನಿರ್ಬಂಧ!](https://mobiletime.in/2025/12/sirsi-kumata-there-is-no-restriction-on-those-who-steal-and-hide/): ಶಿರಸಿ-ಕುಮಟಾ ರಸ್ತೆಯಲ್ಲಿ ರಾತ್ರಿ ವೇಳೆ ರಾಜಾರೋಷವಾಗಿ ಮರಳು ಲಾರಿಗಳ ಓಡಾಟ ನಡೆದಿದೆ. ಆದರೆ, ಜನ ಸಾಮಾನ್ಯರಿಗೆ ಅನುಕೂಲವಾಗಬೇಕಾದ ಸ್ಥಳೀಯ ಬಸ್ಸುಗಳ ಓಡಾಟಕ್ಕೆ ಮಾತ್ರ ಅವಕಾಶ ಸಿಗುತ್ತಿಲ್ಲ! ಹೊನ್ನಾವರದಿಂದ ಶಿರಸಿಗೆ ಮರಳು ಸಾಗಾಟ ನಡೆಯುತ್ತಿದೆ. ಭಾರೀ ವಾಹನಗಳ ಓಡಾಟಕ್ಕೆ ನಿಷೇಧವಿರುವ ಶಿರಸಿ-ಕುಮಟಾ ಮಾರ್ಗವಾಗಿಯೇ ಮರಳು ಲಾರಿಗಳು ಚಲಿಸುತ್ತಿವೆ. ರಾತ್ರಿ ವೇಳೆ ಇಲ್ಲಿ ಆ ಪ್ರಮಾಣದಲ್ಲಿ ಲಾರಿ ಸಂಚಾರ ನಡೆದರೂ ಅದನ್ನು ಕೇಳುವವರಿಲ್ಲ. ಆದರೆ, ಸಾರ್ವಜನಿಕರಿಗೆ ಅನುಕೂಲಕರವಾಗಿರುವ ಸರ್ಕಾರಿ ಬಸ್ಸುಗಳ ಓಡಾಟಕ್ಕೆ ಮಾತ್ರ ಇಲ್ಲಿ ಅವಕಾಶವೇ ಸಿಗುತ್ತಿಲ್ಲ. ಶಿರಸಿ: ಕುಮಟಾ- ಶಿರಸಿ ಹೆದ್ದಾರಿ ನಿರ್ಮಾಣ ಶೇ 85 ರಷ್ಟು ಕಾಮಗಾರಿ ಪೂರ್ಣಗೊಂಡಿದ್ದರೂ ಜಿಲ್ಲಾಡಳಿತ ಅಧಿಕೃತವಾಗಿ ವಾಹನ ಸಂಚಾರ ಮುಕ್ತಗೊಳಿಲ್ಲ. ಶಿರಸಿ ಜಾತ್ರೆ ಸಮೀಪಿಸಿದ್ದರಿಂದ ಓಡಾಟಕ್ಕೆ ಅವಕಾಶ ನೀಡಬೇಕು ಎಂದು ಸರ್ಕಾರದ ನಡುವೆ ಪತ್ರ ವಹಿವಾಟು ಶುರುವಾಗಿದ್ದು, ಜನವರಿ 1ರಿಂದ ಬಸ್ ಓಡಾಟ ನಡೆಸುವುದಾಗಿ ಸಂಸದರು ಸಹ ಹೇಳಿದ್ದಾರೆ. ಆದರೆ, ಅದು ಪಕ್ಕಾ ಆಗಿಲ್ಲ. ಸಾಗರಮಾಲಾ ಯೋಜನೆಯ ಕುಂಟುತ್ತ ಸಾಗಿರುವ ಶಿರಸಿ-ಕುಮಟಾ ರಸ್ತೆ ಕಾಮಗಾರಿ ಅಂತೂ ಇಂತೂ ಕೊನೆಯ ಹಂತ ತಲುಪಿದೆ. ಭೂಸ್ವಾಧೀನವಾಗದ ಪ್ರದೇಶಗಳನ್ನುಳಿದು ಇನ್ನುಳಿದ ರಸ್ತೆ ಬಹುತೇಕ ಪೂರ್ಣವಾಗಿದೆ. ಹಾರೂಗಾರ ಸಮೀಪದ ಸೇತುವೆ ಹೊರತುಪಡಿಸಿ ಉಳಿದ ಸೇತುವೆಗಳ ಸಣ್ಣಪುಟ್ಟ ಕೆಲಸಗಳು ಮಾತ್ರ ಬಾಕಿ ಇವೆ. ದೇವಿಮನೆ ಘಟ್ಟದಲ್ಲಿ ಒಂದೂವರೆ ಕಿಲೋಮೀಟರ್ ಕಾಂಕ್ರೀಟ್ ಹಾಕುವುದು ಬಾಕಿ ಇದೆ. ಇವು ಯಾವುದೂ ರಸ್ತೆ ಬಂದ್ ಮಾಡಿಕೊಂಡು ಮಾಡುವ ಕೆಲಸವಲ್ಲ. ಆದಾಗಿಯೂ ಜಿಲ್ಲಾಡಳಿತ ರಸ್ತೆ ಸಂಚಾರವನ್ನು ಮುಕ್ತವಾಗಿಸುವಲ್ಲಿ ಕ್ರಮ ಕೈಗೊಳ್ಳದಿರುವುದು ಜನರಿಗೆ ಬೇಸರ ತರಿಸಿದೆ. ಕರಾವಳಿ ಮತ್ತು ಮಲೆನಾಡು, ಬಯಲುಸೀಮೆಯನ್ನು ಬೆಸೆಯುವ ಸಮೀಪದ ಮತ್ತು ಪ್ರಮುಖ ರಸ್ತೆ ಬಂದ್ ಆಗಿದ್ದರಿಂದ ಜನ ಸಂಚಾರಕ್ಕೆ ಹೆಚ್ಚು ಸಮಯ ಮತ್ತು ಹಣವನ್ನು ಖರ್ಚು ಮಾಡುತ್ತಿದ್ದಾರೆ. ಬದಲಿ ರಸ್ತೆಗಳಲ್ಲಿ ಹೆಚ್ಚು ದೂರ ಸಾಗಬೇಕಾಗಿರುವುದರಿಂದ ಸಾರಿಗೆ ಬಸ್ ದರವನ್ನೂ ಹೆಚ್ಚು ಮಾಡಲಾಗಿದೆ. ಉತ್ತರ ಕರ್ನಾಟಕದಿಂದ ಶಿರಸಿ ಮೂಲಕ ಸಾಗುತ್ತಿದ್ದ ಅನೇಕ ಬಸ್ಸುಗಳು ಯಲ್ಲಾಪುರ ಮೂಲಕ ಸಂಚರಿಸುತ್ತಿವೆ. ಇದರಿಂದಾಗಿ ಕುಮಟಾದವರಿಗೆ ಶಿರಸಿ, ಶಿರಸಿಯವರಿಗೆ ಕುಮಟಾ ಹೋಗುವುದಕ್ಕಾಗಿ ದಿನವಿಡೀ ಪ್ರಯಾಣ ಮಾಡಬೇಕಾಗುತ್ತದೆ. ರಸ್ತೆ ಕಾಮಗಾರಿ ನಡೆಯುತ್ತಿರುವುದರಿಂದ ಮುಂದಾದರೂ ಒಳ್ಳೆಯ ರಸ್ತೆಯಲ್ಲಿ ಕಡಿಮೆ ಸಮಯದಲ್ಲಿ ಸಾಗಬಹುದು ಎಂಬ ಕಾರಣದಿಂದ ಇದನ್ನೆಲ್ಲ ಜನ ಸಹಿಸಿಕೊಂಡು ಸುಮ್ಮನಿದ್ದಾರೆ. ಆದರೆ ನಿಗದಿತ ಸಮಯ ಮುಗಿದರೂ ಕಾಮಗಾರಿ ಮುಗಿದಿಲ್ಲ! ಇನ್ನೂ ಕುಮಟಾ ತಾಲೂಕಿನಲ್ಲಿ ಕತಗಾಲ ಮತ್ತು ದೇವಿಮನೆ ಘಟ್ಟ ಸೇರಿದಂತೆ ಒಟ್ಟೂ ಐದು ಕಿಲೋಮೀಟರ್ ಭೂಸ್ವಾಧೀನ ಬಾಕಿಯಿದೆ. ಶಿರಸಿ ಮತ್ತು ಸಂಪಖAಡ ಹಾಗೂ ಒಂದು ಸೇತುವೆ ಸ್ಥಳ ಸಂಬoಧಿಸಿದoತೆ ಮೂರು ಕಿಲೋಮೀಟರ್, ಹೀಗೆ ಒಟ್ಟೂ ಎಂಟು ಕಿಲೋಮೀಟರ್ ಭೂಸ್ವಾಧೀನ ಬಾಕಿಯಿದೆ. ಖಾಸಗಿ ಜಮೀನು ಇರುವಲ್ಲಿ ಕೆಲವು ಕುಟುಂಬದ ಸದಸ್ಯರಲ್ಲಿನ ಗೊಂದಲದಿoದಾಗಿ ಸಮಸ್ಯೆ ಪರಿಹಾರವಾಗಿಲ್ಲ. - [ಸೇವೆಗೆ ಸಂದ ಗೌರವ: ಸಹಕಾರಿಗೆ ದೊರೆತ ಪುರಸ್ಕಾರ](https://mobiletime.in/2025/12/honor-for-service-award-received-by-cooperative/): ಶಿರಸಿಯ ಭೂತೇಶ್ವರ ಪತ್ತಿನ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಾಹಕ ವಿನಾಯಕ ಶೆಟ್ಟಿ ಅವರಿಗೆ ವಿಶ್ವದರ್ಶನ ಪತ್ರಿಕೆ ನೀಡುವ `ನ್ಯಾಷನಲ್ ಐಕಾನ್ ಅವಾರ್ಡ್’ ದೊರೆತಿದೆ. ವಿನಾಯಕ ಶೆಟ್ಟಿ ಅವರು ಸಹಕಾರಿ ವಲಯದಲ್ಲಿ ಮುಂಚೂಣಿಯಲ್ಲಿದ್ದಾರೆ. ಅದರ ಜೊತೆ ಸಾಮಾಜಿಕ ಕ್ಷೇತ್ರದಲ್ಲಿಯೂ ತಮ್ಮದೇ ಆದ ಕೊಡುಗೆ ನೀಡುತ್ತಿದ್ದಾರೆ. ಅವರ ಈ ಸೇವೆಯನ್ನು ವಿಶ್ವದರ್ಶನ ಪತ್ರಿಕೆಯವರು ಗುರುತಿಸಿ ಗೌರವಿಸಿದ್ದಾರೆ. ಶನಿವಾರ ದಾವಣಗೆರೆಯಲ್ಲಿ ನಡೆದ ಸಮಾರಂಭದಲ್ಲಿ ವಿನಾಯಕ ಶೆಟ್ಟಿ ಅವರು ಈ ಪ್ರಶಸ್ತಿ ಸ್ವೀಕರಿಸಿದ್ದಾರೆ. ಶೈಕ್ಷಣಿಕ ಹಾಗೂ ಧಾರ್ಮಿಕ ಕ್ಷೇತ್ರದಲ್ಲಿ ವಿನಾಯಕ ಶೆಟ್ಟಿ ಅವರ ಸೇವೆಯನ್ನು ಪತ್ರಕರ್ತ ಎಸ್ ಎಸ್ ಪಾಟೀಲ ಅವರು ಸ್ಮರಿಸಿದ್ದಾರೆ. ಧಾರ್ಮಿಕ ನಾಯಕರು ಹಾಗೂ ಅನೇಕ ಗಣ್ಯರ ಸಮ್ಮುಖದಲ್ಲಿ ಈ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆದಿದೆ. - [ಸಿಲೆಂಡರ್ ಸ್ಪೋಟಕ್ಕೆ ಮನೆ ಧ್ವಂಸ!](https://mobiletime.in/2025/12/home-to-cylinder-sputtering/): ಕಾರವಾರದಲ್ಲಿ ಸಿಲೆಂಡರ್ ಸ್ಪೋಟವಾಗಿದೆ. ಸ್ಪೋಟದ ತೀವೃತೆಗೆ ಮನೆಯೊಂದು ಬೆಂಕಿಗೆ ಆಹುತಿಯಾಗಿದೆ. ಶುಕ್ರವಾರ ರಾತ್ರಿ ಈ ಸ್ಪೋಟ ಸಂಭವಿಸಿದೆ. ಕಾರವಾರದ ಬ್ರಹ್ಮಕಟ್ಟಾ ಬಳಿಯ ವಾಳ್ಳೇವಾಡದಲ್ಲಿ ಅವಘಡ ಉಂಟಾಗಿದೆ. ಇಲ್ಲಿನ ಲತಾ ದಯಾನಂದ ನಾಯ್ಕ ಅವರ ಮನೆಯಲ್ಲಿ ಸಿಲೆಂಡರ್ ಸ್ಪೋಟಿಸಿದೆ. ಸಿಲೆಂಡರ್ ಮೇಲಿದ್ದ ಸೇಪ್ಟಿ ವಾಲ್ ತೆರೆದು ಆಕಾಶದ ಕಡೆ ಹಾರಿದೆ. ಪರಿಣಾಮ ಗ್ಯಾಸ್ ಸೋರಿಕೆಯಾಗಿದೆ. ಈ ವೇಳೆ ಬೆಂಕಿಯೂ ಹತ್ತಿಕೊಂಡಿದ್ದು, ಲತಾ ನಾಯ್ಕ ಅವರ ಮನೆಯ ಮೇಲ್ಚಾವಣಿ ಕಿತ್ತು ಹೋಗಿದೆ. ಅವರ ಹಂಚಿನ ಮನೆಗೆ ಭಾರೀ ಪ್ರಮಾಣದಲ್ಲಿ ಹಾನಿಯಾಗಿದೆ. ಸಿಲೆಂಡರ್ ಸ್ಪೋಟದ ವೇಳೆ ಭಾರೀ ಪ್ರಮಾಣದ ಸದ್ದು ಕೇಳಿಸಿದೆ. ಇದರಿಂದ ಅಕ್ಕ-ಪಕ್ಕದ ಜನ ಆತಂಕಕ್ಕೆ ಒಳಗಾಗಿದ್ದಾರೆ. ಸ್ಪೋಟದ ವೇಳೆ ಮನೆಯಲ್ಲಿ ವೃದ್ಧೆಯೊಬ್ಬರಿದ್ದು, ಅವರು ಮನೆಯಿಂದ ಹೊರಬಂದು ಪ್ರಾಣ ಉಳಿಸಿಕೊಂಡಿದ್ದಾರೆ. ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಬೆಂಕಿ ನಂದಿಸುವ ಕಾರ್ಯ ನಡೆದಿದೆ. ಅಗ್ನಿಶಾಮಕ ಅಧಿಕಾರಿಗಳ ಮಾಹಿತಿ ಪ್ರಕಾರ, ವಿದ್ಯುತ್ ಶಾರ್ಟ ಸರ್ಕೀಟಿನಿಂದ ಮನೆಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಅದೇ ಬೆಂಕಿ ಸಿಲೆಂಡರ್ ಬಳಿ ತಲುಪಿದೆ. ಈ ವೇಳೆ ಸಿಲೆಂಡರ್ ಸೇಪ್ಟಿವಾಲ್’ಗೆ ಬೆಂಕಿ ಆಗಿ ಸೇಪ್ಟಿ ವಾಲ್ ಹಾರಿದೆ. ಆಗ ಸಿಲೆಂಡರ್ ಒಳಗಿದ್ದ ಗ್ಯಾಸ್ ಸೋರಿಕೆ ಆಗಿದೆ. - [ಕರಾವಳಿ ಉತ್ಸವ: ಪೊಲೀಸರ ಎದುರೇ ಮಾರಾಮಾರಿ!](https://mobiletime.in/2025/12/coastal-festival-fight-in-front-of-the-police/): ಕಾರವಾರದಲ್ಲಿ ನಡೆಯುತ್ತಿರುವ ಕರಾವಳಿ ಉತ್ಸವ ನೋಡಲು ಬಂದ ಸತೀಶ ನಾಯ್ಕ ಹಾಗೂ ಗ್ಲಾಡಸನ್ ಬ್ಯಾರಟೋ ನಡುವೆ ಹೊಡೆದಾಟ ನಡೆದಿದೆ. ಜಿಲ್ಲಾಧಿಕಾರಿ ಕಚೇರಿ ಎದುರೇ ಅವರಿಬ್ಬರು ಹೊಡೆದಾಡಿಕೊಂಡಿದ್ದಾರೆ. ಡಿಸೆoಬರ್ 25ರ ರಾತ್ರಿ ಅಂಕೋಲಾ ಪೊಲೀಸ್ ನಿರೀಕ್ಷಕ ಚಂದ್ರಶೇಖರ ಮಠಪತಿ ಅವರು ಕರಾವಳಿ ಉತ್ಸವದ ಭದ್ರತೆಯಲ್ಲಿದ್ದು, ಅವರ ಮುಂದೆಯೇ ಸತೀಶ ನಾಯ್ಕ ಹಾಗೂ ಗ್ಲಾಡಸನ್ ಬ್ಯಾರಟೋ ಕುಸ್ತಿ ಹೊಡೆದಿದ್ದಾರೆ. ಕಾರವಾರದ ಕಡವಾಡದ ಗ್ಲಾಡಸನ್ ಪಾಸ್ಕಲ್ ಬ್ಯಾರಟ್ಟೋ ಹಾಗೂ ಹೊಸಾಳಿ ದುಮ್ಮನಶಟ್ಟಾದ ಸತೀಶ ಕೃಷ್ಣಾನಂದ ನಾಯ್ಕ ನಡುವೆ ಮೊದಲಿನಿಂದಲೂ ವೈಯಕ್ತಿಕ ದ್ವೇಷವಿದ್ದು, ಕರಾವಳಿ ಉತ್ಸವದ ಅವಧಿಯಲ್ಲಿಯೇ ಅವರು ದ್ವೇಷ ಸಾಧನೆಗೆ ಮುಂದಾಗಿದ್ದಾರೆ. ಪೊಲೀಸರು ಭದ್ರತಾ ಕರ್ತವ್ಯದಲ್ಲಿದ್ದರೂ ಅದನ್ನು ನಿರ್ಲಕ್ಷಿಸಿ ಅವರಿಬ್ಬರು ಮಾರಾಮಾರಿ ನಡೆಸಿದ್ದಾರೆ. ಪೊಲೀಸರು ತಡೆದರೂ ಸಹ ಸುಮ್ಮನಾಗದೇ ಹೊಡೆದಾಟ ಮುಂದುವರೆಸಿದ್ದಾರೆ. ಉತ್ಸವ ನೋಡಲು ಬಂದ ಅನೇಕರು ಈ ಹೊಡೆದಾಟ ನೋಡಿದ್ದು, ಶಾಂತಿ ಭಂಗವಾಗುವ ರೀತಿ ಶ ನಾಯ್ಕ ಹಾಗೂ ಗ್ಲಾಡಸನ್ ಬ್ಯಾರಟೋ ವರ್ತಿಸಿದ್ದಾರೆ. ಈ ಎಲ್ಲಾ ಹಿನ್ನಲೆ ಚಂದ್ರಶೇಖರ ಮಠಪತಿ ಅವರು ಆ ಇಬ್ಬರ ವಿರುದ್ಧವೂ ಪ್ರಕರಣ ದಾಖಲಿಸಿ, ಕಾನೂನು ಕ್ರಮ ಜರುಗಿಸಿದ್ದಾರೆ. - [ನಾವೆಲ್ಲರೂ ಹಿಂದು: ನಾವೆಲ್ಲರೂ ಒಂದು!](https://mobiletime.in/2025/12/we-are-all-hindus-we-are-all-one/): ಹಳಿಯಾಳದಲ್ಲಿ ನಡೆದ ವಿರಾಟ್ ಹಿಂದು ಸಮಾವೇಶದಲ್ಲಿ ಸಾವಿರಾರು ಜನ ಭಾಗವಹಿಸಿದ್ದಾರೆ. ಭವ್ಯ ಶೋಭಾಯಾತ್ರೆಯಲ್ಲಿ ಮಹಿಳೆಯರು ಪೂರ್ಣಕುಂಭಹಿಡಿದು ಸಂಚರಿಸಿದ್ದು, ಪುರುಷರು ಭಗವಾಧ್ವಜ ಪ್ರದರ್ಶನ ಮಾಡಿದ್ದಾರೆ. ಮಹಾಗಣಪತಿ ದೇವಸ್ಥಾನದಿಂದ ಗ್ರಾಮದೇವಿ ಮೈದಾನದವರೆಗೆ ನಡೆದ ಯಾತ್ರೆಯಲ್ಲಿ ಸಾವಿರಾರು ಜನ ಭಜನೆಗಳನ್ನು ಹಾಡಿದ್ದಾರೆ. ಬಸ್ ನಿಲ್ದಾಣ ರಸ್ತೆ, ಸಂಗೊಳ್ಳಿ ರಾಯಣ್ಣ ವೃತ್ತ, ಶಿವಾಜಿ ವೃತ್ತದ ಮೂಲಕ ಸಾಗಿದ ಮೆರವಣಿಗೆಯನ್ನು ಅನೇಕರು ಕಣ್ತುಂಬಿಕೊAಡಿದ್ದಾರೆ. `ಹಿoದೂ ಸಮಾಜವು ಕೇವಲ ಬೌದ್ಧಿಕವಾಗಿ ಬೆಳೆದರೆ ಸಾಲದು, ವ್ಯವಹಾರಿಕವಾಗಿಯೂ ಜಾಣ್ಮೆ ಹೊಂದಿರಬೇಕು. ತುಂಡುಡುಗೆಗಳ ವ್ಯಾಮೋಹದಿಂದ ನಮ್ಮ ಸಾಂಸ್ಕೃತಿಕ ಪರಂಪರೆ ನಾಶವಾಗುತ್ತಿದ್ದು, ಮಕ್ಕಳು ದಾರಿ ತಪ್ಪುವುದನ್ನು ಹಿರಿಯರು ತಡೆಯಬೇಕು’ ಎಂದು ಮೆರವಣಿಗೆಯಲ್ಲಿ ಭಾಗವಹಿಸಿದ್ದ ಆರ್ ಎಸ್ ಎಸ್ ಕಲಬುರ್ಗಿ ವಿಭಾಗದ ಪ್ರಾಂತ ಪ್ರಮುಖ ಶ್ರೀನಿವಾಸ್ ಅವರು ಕರೆ ನೀಡಿದ್ದಾರೆ. `ಜಾತಿ ವ್ಯವಸ್ಥೆಯ ಭೇದಭಾವಗಳು ಹಿಂದೂ ಸಮಾಜದ ಹಿನ್ನಡೆಗೆ ಕಾರಣವಾಗಿವೆ. ಮೇಲ್ವರ್ಗ-ಕೆಳವರ್ಗ ಎನ್ನುವ ತಾರತಮ್ಯ ತೊಲಗಬೇಕು. ಸ್ವದೇಶಿ ವಸ್ತುಗಳ ಬಳಕೆಯನ್ನು ರೂಢಿಸಿಕೊಳ್ಳಬೇಕು’ ಎಂದು ಅವರು ಹೇಳಿದ್ದಾರೆ. ಕೆ ಕೆ ಹಳ್ಳಿ ಮಠದ ನಿತ್ಯಾನಂದ ಸ್ವಾಮೀಜಿ `ಧರ್ಮದ ಮೇಲೆ ಎಷ್ಟೇ ದಾಳಿಯಾದರೂ ಅದು ನಶಿಸುವುದಿಲ್ಲ. ಸಕಲ ಜೀವರಾಶಿಗಳಲ್ಲಿ ದೇವರನ್ನು ಕಾಣುವ ದೈವಿ ಧರ್ಮ ನಮ್ಮದಾಗಿದೆ’ ಎಂದಿದ್ದಾರೆ. ಕಾರ್ಯಕ್ರಮದ ಪ್ರಾರಂಭದಲ್ಲಿ ಜನ ಸ್ವಾಮೀಜಿಗಳ ಪಾದಪೂಜೆ ನೆರವೇರಿಸಿದ್ದು, ಉಮಾಶಂಕರ ಮದ್ನಳ್ಳಿಮಠ ಪೂಜಾ ವಿಧಿ ವಿಧಾನಗಳನ್ನು ಮಾಡಿದ್ದಾರೆ. - [ಮಹಿಳೆ ಮಾತಿಗೆ ಅಕ್ಕಸಾಲಿಗ ಮರಳು: ಬುರ್ಕಾ ಧರಿಸಿ ಬಂದವರೇ ಆಭರಣ ಕಳ್ಳರು!](https://mobiletime.in/2025/12/jeweler-rejects-womans-words-those-who-came-wearing-burqas-are-the-jewel-thieves/): ಶಿರಸಿ ನಟರಾಜ ರಸ್ತೆಯಲ್ಲಿರುವ `ಶ್ರೀ ದುರ್ಗಾ ಜ್ಯುವೆಲರಿ ವರ್ಕ’ ಮಳಿಗೆಗೆ ಕಳ್ಳರು ನುಗ್ಗಿದ್ದಾರೆ. `ಅದು ತೋರಿಸಿ.. ಇದು ತೋರಿಸಿ’ ಎಂದು ರಾಜೇಶ ಶೇಟ್ ಅವರನ್ನು ಮರಳು ಮಾಡಿ 13 ಲಕ್ಷ ರೂ ಮೌಲ್ಯದ ಒಡವೆ ದೋಚಿದ್ದಾರೆ. ಶಿರಸಿಯ ದೇವಿಕೆರೆ ಪಡ್ತಿಗಲ್ಲಿಯಲ್ಲಿ ರಾಜೇಶ ಗಣಪತಿ ಶೇಟ್ ಅವರು ವಾಸವಾಗಿದ್ದಾರೆ. ಅವರು ಅಕ್ಕಸಾಲಿಗರಾಗಿದ್ದು, ಚಿನ್ನಾಭರಣಗಳನ್ನು ವ್ಯಾಪಾರ ಮಾಡಿ ಬದುಕು ಕಟ್ಟಿಕೊಂಡಿದ್ದಾರೆ. ಕಳೆದ 21 ವರ್ಷಗಳಿಂದ ರಾಜೇಶ ಶೇಟ್ ಅವರು ಶಿರಸಿ ನಟರಾಜ ರಸ್ತೆಯ ಚಿಲುಮೆಕೆರೆ ಎದುರು ಜ್ಯುವೆಲರಿ ಮಳಿಗೆ ನಡೆಸುತ್ತಿದ್ದಾರೆ. `ಶ್ರೀ ದುರ್ಗಾ ಜ್ಯುವೆಲರಿ ವರ್ಕ’ ಎಂಬ ಮಳಿಗೆಹೊಂದಿರುವ ರಾಜೇಶ ಶೇಟ್ ಅವರು ಅಲ್ಲಿ ಬಗೆ ಬಗೆಯ ಚಿನ್ನಾಭರಣಗಳನ್ನು ಇರಿಸಿದ್ದಾರೆ. ಆ ಚಿನ್ನಾಭರಣಗಳನ್ನು ನೋಡಿದ ಮೂವರು ಮಹಿಳೆಯರು ಮಾತಿನ ಮೋಡಿ ಮಾಡಿ ರಾಜೇಶ ಶೇಟ್ ಅವರಿಗೆ ಮೋಸ ಮಾಡಿದ್ದಾರೆ. ಡಿಸೆಂಬರ್ 16ರಂದು ರಾಜೇಶ ಶೇಟ್ ಅವರು ಎಂದಿನAತೆ ಅಂಗಡಿ ತೆಗೆದು ವ್ಯವಹಾರ ಮಾಡಿಕೊಂಡಿದ್ದರು. ಸಂಜೆ 5 ಗಂಟೆಗೆ ಬುರ್ಕಾ ಧರಿಸಿದ ಮೂವರು ಅವರ ಅಂಗಡಿಗೆ ಬಂದರು. ಅವರೆಲ್ಲರೂ ಚನ್ನಾಗಿ ಮಾತನಾಡಿದ್ದರಿಂದ ರಾಜೇಶ ಶೇಟ್ ಅವರು ಮರುಳಾದರು. ಬಂಗಾರದ ಆಭರಣ ತೋರಿಸುವಂತೆ ಅವರು ಹೇಳಿದ ಪ್ರಕಾರ ಬಗೆ ಬಗೆಯ ಆಭರಣಗಳನ್ನು ಪ್ರದರ್ಶಿಸಿದರು. `ಚುಮುಕಿ ತೋರಿಸಿ, ಬಳೆ ತೋರಿಸಿ’ ಎಂದು ನಯವಾಗಿ ಮಾತನಾಡುತ್ತಿದ್ದ ಆ ಮಹಿಳೆಯರು ರಾಜೇಶ ಶೇಟ್ ಅವರ ಗಮನವನ್ನು ಬೇರೆ ಬೇರೆ ಕಡೆ ಸೆಳೆದರು. ರಾಜೇಶ್ ಶೇಟ್ ಅವರಿಗೆ ಅರಿವಿಗೆ ಬಾರದಂತೆ ಅಲ್ಲಿದ್ದ ಬಂಗಾರದ ಆಭರಣಗಳನ್ನು ಅವರು ಅಪಹರಿಸಿದರು. ಒಟ್ಟು 13,38000ರೂ ಮೌಲ್ಯದ ಒಡವೆ ಕಾಣೆಯಾದ ಬಗ್ಗೆ ಆ ನಂತರ ರಾಜೇಶ ಶೇಟ್ ಅವರಿಗೆ ಅರಿವಾಯಿತು. ಬುರ್ಕಾ ಧರಿಸಿ ಬಂದಿದ್ದ ಮಹಿಳೆಯರ ಮಾತಿಗೆ ಮರುಳಾದ ಕಾರಣ ಆದ ನಷ್ಟ ಅರಿತ ಅವರು ತಮಗಾದ ಅನ್ಯಾಯದ ಬಗ್ಗೆ ಪೊಲೀಸರ ಮೊರೆ ಹೋದರು. ಹೆಸರು-ವಿಳಾಸ ಗೊತ್ತಿಲ್ಲದ ಬುರ್ಕಾದಾರಿ ಮಹಿಳೆಯರ ವಿರುದ್ಧ ಅವರು ಪೊಲೀಸ್ ದೂರು ನೀಡಿದರು. ಶಿರಸಿ ನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿದ್ದು, ಆ ಅಪರಿಚಿತ ಮಹಿಳೆಯರ ಹುಡುಕಾಟ ನಡೆಸಿದ್ದಾರೆ. - [ಕೊಟ್ಟ ಕಾಸು ಮರಳಿ ಕೇಳಿದ್ದೇ ಆ ಚಾಲಕನ ತಪ್ಪು!](https://mobiletime.in/2025/12/it-was-the-drivers-fault-for-asking-for-his-money-back/): ಶಿರಸಿಯ ಅಬ್ದುಲ್ ಬ್ಯಾರಿ ಅವರು ಪರಮೇಶ್ವರ ಕೋಣನ್ನವರ್ ಅವರಿಗೆ 45 ಸಾವಿರ ರೂ ಕೊಡಬೇಕಿದೆ. ಆ ಹಣ ಕೇಳಿದಕ್ಕಾಗಿ ಅಬ್ದುಲ್ ಬ್ಯಾರಿ ಅವರು ಪರಮೇಶ್ವರ್ ಕೋಣನ್ನನವರ್ ಅವರ ಉದ್ಯೋಗಕ್ಕೂ ಸಮಸ್ಯೆ ಮಾಡುತ್ತಿದ್ದಾರೆ. ಶಿರಸಿಯ ಚೌಡಿಕಟ್ಟೆ ಕಸ್ತೂರಿಬಾ ನಗರದ 11ನೇ ಕ್ರಾಸಿನಲ್ಲಿ ಪರಮೇಶ್ವರ ಶಿವರುದ್ರಪ್ಪ ಕೋಣನ್ನವರ್ ಅವರು ವಾಸವಾಗಿದ್ದಾರೆ. ಚಾಲಕರಾಗಿ ಬದುಕು ಕಟ್ಟಿಕೊಂಡಿರುವ ಅವರು ಟಿಪ್ಪರ್ ಮೂಲಕ ಕಲ್ಲು ಸಾಗಾಟ ಮಾಡುತ್ತಿದ್ದಾರೆ. ಆದರೆ, ಗೌಡಳ್ಳಿಯ ಅಬ್ದುಲ್ ಬ್ಯಾರಿ ಮಹಮದ್ ಶೇಖ್ ಇಸಾಕ್ ಅವರು ಕಲ್ಲು ಸಾಕಾಣಿಕೆ ಕೆಲಸಕ್ಕೆ ಅಡ್ಡಿಪಡಿಸುತ್ತಿದ್ದಾರೆ. `ನನ್ನ ಏರಿಯಾದಲ್ಲಿ ನೀನು ಜಲ್ಲಿ ಕಲ್ಲು ಖಾಲಿ ಮಾಡುವ ಹಾಗಿಲ್ಲ’ ಎಂದು ಅಬ್ದುಲ್ ಬ್ಯಾರಿ ಅವರು ಪರಮೇಶ್ವರ ಕೋಣನ್ನವರ್ ಅವರಿಗೆ ಬೆದರಿಸುತ್ತಿದ್ದಾರೆ. ಪರಮೇಶ್ವರ ಕೋಣನ್ನನವರಿಗೆ ಅಬ್ದುಲ್ ಬ್ಯಾರಿ ಅವರು 45 ಸಾವಿರ ರೂ ಹಣವನ್ನು ಕೊಡಬೇಕಿದ್ದು, ಅದನ್ನು ಮರಳಿಸುವಂತೆ ಕೇಳಿದ ಕಾರಣ ಇನ್ನಷ್ಟು ತೊಂದರೆ ಮಾಡುತ್ತಿದ್ದಾರೆ. ನವೆಂಬರ್ 29ರಂದು ಸಹ ಪರಮೇಶ್ವರ್ ಕೋಣನ್ನವರ್ ಅವರು ಗೌಡಳ್ಳಿಗೆ ಟಿಪ್ಪರ್ ತೆಗೆದುಕೊಂಡು ಹೋಗಿದ್ದು, ಆ ವೇಳೆ ಅಬ್ದುಲ್ ಬ್ಯಾರಿ ಅವರು ಅದನ್ನು ಅಡ್ಡಗಟ್ಟಿದ್ದಾರೆ. ಈ ವಿಷಯದ ಬಗ್ಗೆ ಪರಮೇಶ್ವರ ಕೋಣನ್ನವರ್ ಅವರು ಪೊಲೀಸರಿಗೆ ಹೇಳಿದ್ದಾರೆ. ನ್ಯಾಯಾಲಯದ ಸೂಚನೆ ಮೇರೆಗೆ ಪೊಲೀಸರು ಅಬ್ದುಲ್ ಬ್ಯಾರಿ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.   - [ಸ್ವಾಮಿ ಶರಣಂ: ಅಯ್ಯಪ್ಪ ಸನ್ನಿಧಿಯಲ್ಲಿ ಅನ್ನದಾನ](https://mobiletime.in/2025/12/swami-sharanam-offering-food-in-the-presence-of-lord-ayyappa/): ಶಿರಸಿಯ ಅಯ್ಯಪ್ಪ ನಗರದಲ್ಲಿರುವ ಅಯ್ಯಪ್ಪ ಸ್ವಾಮಿ ದೇವಾಲಯದಲ್ಲಿ ಮೂರು ದಿನಗಳ ಅನ್ನದಾನ ಸೇವೆಗೆ ಶುಕ್ರವಾರ ಚಾಲನೆ ಸಿಕ್ಕಿದೆ. ಹುಬ್ಬಳ್ಳಿ ರಸ್ತೆಯ ಅಯ್ಯಪ್ಪನಗರದಲ್ಲಿರುವ ಅಯ್ಯಪ್ಪ ಸ್ವಾಮಿ ದೇವಸ್ಥಾನಕ್ಕೆ ಭಕ್ತರು ಆಗಮಿಸಿ ಪ್ರಸಾದ ಸ್ವೀಕರಿಸುತ್ತಿದ್ದಾರೆ. ಅಯ್ಯಪ್ಪ ಸ್ವಾಮಿ ಸೇವಾ ಸಮಿತಿಯವರು `ಅಯ್ಯಪ್ಪ ಸ್ವಾಮಿ ಮಂಡಳ ಉತ್ಸವ’ ಹಾಗೂ ಮಹಾ ಅನ್ನದಾನ ಕಾರ್ಯಕ್ರಮ ಆಯೋಜಿಸಿದ್ದಾರೆ. ಶುಕ್ರವಾರ ಬೆಳಗ್ಗೆ 6ಗಂಟೆಗೆ ಗಣಹೋಮ, ಹಣ್ಣುಕಾಯಿ ಸಮರ್ಪಣೆಯೊಂದಿಗೆ ಉತ್ಸವಕ್ಕೆ ಚಾಲನೆ ದೊರೆತಿದೆ. ನಗರಸಭೆ ಅಧ್ಯಕ್ಷೆ ಶರ್ಮಿಳಾ ಮಾದನಗೇರಿ ಅವರ ದಂಪತಿಸಹಿತ ಗಣಹೋಮದ ಪೂಜೆ ಮಾಡಿದ್ದಾರೆ. ಮಧ್ಯಾಹ್ನ 3 ಗಂಟೆಯವರೆಗೆ ಅನ್ನದಾನ ನಡೆದಿದ್ದು, ಭೂಶ್ವರ ಪತ್ತಿನ ಸಹಕಾರಿ ಮುಖ್ಯ ಕಾರ್ಯನಿರ್ವಾಹಕ ವಿನಾಯಕ ಶೆಟ್ಟಿ ಅವರು ತಮ್ಮ ತಂದೆ ವಸಂತ ಶೆಟ್ಟಿ ಅವರ ನೆನಪಿನಲ್ಲಿ ಅನ್ನದಾನಕ್ಕೆ ಕೈ ಜೋಡಿಸಿದ್ದಾರೆ. ಮೊದಲ ದಿನ 15 ಸಾವಿರಕ್ಕೂ ಅಧಿಕ ಭಕ್ತರು ಇಲ್ಲಿ ಪ್ರಸಾದ ಭೋಜನ ಸ್ವೀಕರಿಸಿದ್ದಾರೆ. ಶಿರಸಿ-ಸಿದ್ದಾಪುರ ಕ್ಷೇತ್ರದ ಶಾಸಕ ಭೀಮಣ್ಣ ನಾಯ್ಕ ಅವರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ವಿಶೇಷ ಮೆರವಣಿಗೆ ಮತ್ತು ದೀಪೋತ್ಸವ: ಡಿಸೆಂಬರ್ 27ರ ಶನಿವಾರ ಸಾಯಂಕಾಲ 7 ಗಂಟೆಗೆ ಶ್ರೀ ಅಯ್ಯಪ್ಪ ಸ್ವಾಮಿಯ ಉತ್ಸವಮೂರ್ತಿಯ ಭವ್ಯ ಮೆರವಣಿಗೆ ನಡೆಯಲಿದೆ. ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಸಂಚರಿಸಲಿದೆ. ಈ ವೇಳೆ ಭಕ್ತಿಪೂರ್ವಕವಾಗಿ `41 ದೀಪೋತ್ಸವ’ ಜರುಗಲಿದ್ದು, ಶಿರಸಿಯಪ್ರೇಮಾ ಮತ್ತು ಗೋವಿಂದ ನೀಲೇಕಣಿ ದಂಪತಿ ಇದನ್ನು ಉದ್ಘಾಟಿಸಲಿದ್ದಾರೆ. ಡಿಸೆಂಬರ್ 28ರ ರವಿವಾರ ಸಂಜೆ ಅಯ್ಯಪ್ಪ ನಗರದಲ್ಲಿ ಪಲ್ಲಕ್ಕಿ ಉತ್ಸವದೊಂದಿಗೆ ಮಂಡಳ ಉತ್ಸವ ಸಂಪನ್ನಗೊಳ್ಳಲಿದೆ. ಗುರುಸ್ವಾಮಿಗಳಾದ ಸಂದೀಪ ಎಂ ಸಿರಸಿಕರ್ ನೇತೃತ್ವದಲ್ಲಿ ಧಾರ್ಮಿಕ ವಿಧಿವಿಧಾನಗಳು ನಡೆಯುತ್ತಿದ್ದು, ಅನೇಕರು ಈ ಪುಣ್ಯ ಕಾರ್ಯಕ್ಕೆ ಸಹಕಾರ ನೀಡಿದ್ದಾರೆ. ಸೇವಾ ಸಮಿತಿ ಅಧ್ಯಕ್ಷ ಅರುಣ ಪ್ರಭು ಈ ಕಾರ್ಯಕ್ರಮದ ಉಸ್ತುವಾರಿವಹಿಸಿದ್ದಾರೆ. - [ಡೀಸಿ ಒಳ್ಳೆಯವರಾಗಿದ್ದೇ ಎಲ್ಲರಿಗೂ ಸಮಸ್ಯೆ!](https://mobiletime.in/2025/12/everyones-problem-is-that-dicey-is-good/): ಉತ್ತರ ಕನ್ನಡ ಜಿಲ್ಲಾಧಿಕಾರಿ ಕೆ ಲಕ್ಷ್ಮೀಪ್ರಿಯಾ ಅವರನ್ನು ಸೇರಿ ಮೂವರು ಅಧಿಕಾರಿಗಳ ವರ್ಗಾವಣೆಗೆ ಜನಶಕ್ತಿ ವೇದಿಕೆಯವರು ಆಗ್ರಹಿಸಿದ್ದಾರೆ. `ಡೀಸಿ ಲಕ್ಷ್ಮೀಪ್ರಿಯಾ ಅವರು ತುಂಬಾ ಒಳ್ಳೆಯವರಾಗಿದ್ದು, ಅವರ ಸೌಮ್ಯ ಸ್ವಭಾವದಿಂದಾಗಿ ಸಾರ್ವಜನಿಕ ಕೆಲಸಗಳು ಸರಿಯಾಗಿ ಆಗುತ್ತಿಲ್ಲ. ಅವರಿಗೆ ಅಧೀನ ಅಧಿಕಾರಿಗಳ ಮೇಲೆ ಹಿಡಿತವಿಲ್ಲದ ಕಾರಣ ಭ್ರಷ್ಟಾಚಾರದ ಬಗ್ಗೆ ದೂರು ನೀಡಿದರೂ ಆ ಬಗ್ಗೆ ತನಿಖೆ ನಡೆದಿಲ್ಲ’ ಎಂದು ಜನಶಕ್ತಿ ವೇದಿಕೆ ಅಧ್ಯಕ್ಷ ಮಾಧವ ನಾಯಕ ಅವರು ಹೇಳಿದ್ದಾರೆ. ಇದರೊಂದಿಗೆ ಕಾರವಾರ ವೈದ್ಯಕೀಯ ವಿಜ್ಞಾನ ಕೇಂದ್ರದ ನಿರ್ದೇಶಕಿ ಡಾ ಪೂರ್ಣಿಮಾ, ಪ್ರಾದೇಶಿಕ ಸಾರಿಗೆ ಇಲಾಖೆ ಅಧಿಕಾರಿ ಜಾನ್ ಮಿಸ್ಕತ್ ಅವರ ವರ್ಗಾವಣೆಗಾಗಿಯೂ ಮಾಧವ ನಾಯಕ ಅವರು ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಆರ್ ವಿ ದೇಶಪಾಂಡೆ ಅವರ ಮೊರೆ ಹೋಗಿದ್ದಾರೆ. ಆರ್‌ಟಿಓ ಅಧಿಕಾರಿ ಜಾನ್ ಮಿಸ್ಕತ್ ಅವರ ಭ್ರಷ್ಟಾಚಾರ ಹಾಗೂ ಕಿಮ್ಸ್ ನಿರ್ದೇಶಕಿ ಡಾ ಪೂರ್ಣಿಮಾ ಅವರ ಕರ್ತವ್ಯಲೋಪ, ಬೇಜವಬ್ದಾರಿ ವರ್ತನೆಯ ಬಗ್ಗೆ ವಿವರವಾಗಿ ಮಾಹಿತಿ ನೀಡಿದ್ದಾರೆ. `ಕಾರವಾರದ ಶಿರವಾಡ ಗ್ರಾಮ ಪಂಚಾಯತ ವ್ಯಾಪ್ತಿಯ ಮಕೇರಿಯಲ್ಲಿ ಸಣ್ಣ ನೀರಾವರಿ ಇಲಾಕೆ 1.5 ಕೋಟಿ ರೂ ವೆಚ್ಚದಲ್ಲಿ ಕಾಮಗಾರಿ ನಡೆಸಲು ನಿರ್ಧರಿಸಿದ್ದು, ಕಾಮಗಾರಿ ಪೂರ್ವದಲ್ಲಿಯೇ ಗುತ್ತಿಗೆದಾರರಿಗೆ 93 ಲಕ್ಷ ರೂ ಪಾವತಿಯಾಗಿದೆ. ಈ ಬಗ್ಗೆ ಜಿಲ್ಲಾಧಿಕಾರಿಗಳಿಗೆ ದೂರು ನೀಡಿ ಐದು ತಿಂಗಳಾದರೂ ತನಿಖೆ ನಡೆದಿಲ್ಲ. ಅವರ ಸೌಮ್ಯ ಸ್ವಭಾವ ಹಾಗೂ ಒಳ್ಳೆಯತನವೇ ಅಭಿವೃದ್ಧಿಗೆ ಅಡ್ಡಿಯಾಗಿದ್ದು, ಅನಗತ್ಯ ವಿಳಂಬ ನೀತಿಯಿಂದ ಜನ ಬೇಸತ್ತಿದ್ದಾರೆ. ಆರ್ ವಿ ದೇಶಪಾಂಡೆ ಅವರು ಉಸ್ತುವಾರಿ ಸಚಿವರಾಗಿದ್ದಾಗ ಇದ್ದ ಹಿಡಿತ ಈಗಿಲ್ಲ. ಹೀಗಾಗಿ ಕೆಲಸ ಮಾಡದ ಅಧಿಕಾರಿಗಳ ವರ್ಗಾವಣೆ ಅನಿವಾರ್ಯ’ ಎಂದು ಮಾಧವ ನಾಯಕ ಅವರು ಪ್ರತಿಪಾದಿಸಿದ್ದಾರೆ. `ಡಾ ಪೂರ್ಣಿಮಾ ಅವರು ಕಿಮ್ಸ್ ನಿರ್ದೇಶಕರಾಗಿ ಅಧಿಕಾರವಹಿಸಿಕೊಂಡ ನಂತರ ಅಲ್ಲಿನ ಆಡಳಿತ ವ್ಯವಸ್ಥೆ ಹದಗೆಟ್ಟಿದೆ. ಆಡಳಿತ ಅನುಭವ ಕೊರತೆಯಿಂದ ಕಾಲೇಜು ಬಡವಾಗುತ್ತಿದೆ. ವೈದ್ಯಕೀಯ ವಿದ್ಯಾರ್ಥಿಗಳ ಮೇಲೆ ನಿರ್ದೇಶಕರಿಗೆ ಹಿಡಿತವಿಲ್ಲ. ತುರ್ತು ಚಿಕಿತ್ಸಾ ವಿಭಾಗದಲ್ಲಿ ಕೆಲಸ ಮಾಡುವ ವೈದ್ಯರು ಸಹ ನಿರ್ದೇಶಕರ ಮಾತು ಕೇಳುತ್ತಿಲ್ಲ. ಹೀಗಾಗಿ ಅನೇಕ ಸಾವು-ನೋವು ಸಂಭವಿಸುತ್ತಿದ್ದು, ವೈದ್ಯಕೀಯ ವಿದ್ಯಾರ್ಥಿಗಲೇ ತಡರಾತ್ರಿ ಗೋವಾಗೆ ಹೋಗಿ ಬರುವಾಗ ಅಪಘಾತದಲ್ಲಿ ಸಾವನಪ್ಪಿದ್ದಾರೆ’ ಎನ್ನುವುದರ ಬಗ್ಗೆ ಮಾಧವ ನಾಯಕ ಅವರು ವಿವರಿಸಿದ್ದಾರೆ. ಇನ್ನೂ ಕಾರವಾರದ ಪ್ರಾದೇಶಿಕ ಸಾರಿಗೆ ಅಧಿಕಾರಿಯಾಗಿರುವ ಜಾನ್ ಮಿಸ್ಕತ್ ಅವರು ಅತ್ಯಂತ ಬೇಜವಬ್ದಾರಿಯಿಂದ ವರ್ತಿಸುತ್ತಾರೆ. ಕಚೇರಿಗೆ ಸರಿಯಾಗಿ ಬರುವುದಿಲ್ಲ. ಬಂದರೂ ಕಾಸು ಕೊಡದೇ ಕೆಲಸ ಮಾಡುವುದಿಲ್ಲ. ಕಚೇರಿಯಲ್ಲಿದ್ದ ಸಾರ್ವಜನಿಕ ದಾಖಲೆಗಳು ಕಣ್ಮರೆಯಾಗಿದ್ದರೂ ಕ್ರಮ ಜರುಗಿಸಿಲ್ಲ’ ಎಂದವರು ಆಕ್ರೋಶವ್ಯಕ್ತಪಡಿಸಿದರು. ಈ ಎಲ್ಲಾ ಹಿನ್ನಲೆ ಈ ಮೂವರು ಅಧಿಕಾರಿಗಳನ್ನು ವರ್ಗಾವಣೆ ಮಾಡಬೇಕು ಎಂದು ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷರಿಗೆ ಮನವಿ ಸಲ್ಲಿಸಿದರು. - [ರಾಷ್ಟ್ರಧ್ವಜಕ್ಕೆ ಅಪಮಾನ: 2 ಸಾವಿರ ರೂ ದಂಡ!](https://mobiletime.in/2025/12/insult-to-the-national-flag-rs-2000-fine/): ಭಾರತೀಯ ರಾಷ್ಟ್ರಧ್ವಜಕ್ಕೆ ಅಪಮಾನ ಮಾಡಿದ ಸಿಮ್ರಾನ್ ತಂಬೋಲಿ ಅವರಿಗೆ ನ್ಯಾಯಾಲಯ 2 ಸಾವಿರ ರೂ ದಂಡ ವಿಧಿಸಿದೆ. 2023ರ ಸೆಪ್ಟೆಂಬರ್ 28ರಂದು ಎಲ್ಲಡೆ ಈದ್ ಮಿಲಾದ್ ಆಚರಣೆ ನಡೆಯುತ್ತಿತ್ತು. ಯಲ್ಲಾಪುರದಲ್ಲಿಯೂ ಈದ್ ಮಿಲಾದ್ ಹಬ್ಬದ ಮೆರವಣಿಗೆಯನ್ನು ಆಯೋಜಿಸಲಾಗಿತ್ತು. ಸಾವಿರ ಸಂಖ್ಯೆಯಲ್ಲಿ ಜನ ಸೇರಿದ್ದ ಈ ಮೆರವಣಿಗೆಯಲ್ಲಿ ಕೇಸರಿ, ಬಿಳಿ, ಹಸಿರಿನ ಧ್ವಜ ಕಾಣಿಸಿತು. ಆದರೆ, ಆ ಧ್ವಜದಲ್ಲಿ ಅಶೋಕ ಚಕ್ರದ ಬದಲು ಅರ್ದ ಚಂದ್ರಾಕೃತಿ ಹಾಗೂ ಅದರೊಳಗೆ 3 ನಕ್ಷತ್ರಗಳ ಚಿತ್ರವನ್ನು ಬಿಡಿಸಲಾಗಿತ್ತು. ಯಲ್ಲಾಪುರದ ಶಾರದಾಗಲ್ಲಿಯಸಿಮ್ರಾನ್ ತಂಬೋಲಿ (30 ವರ್ಷ) ಅವರು ಆ ಧ್ವಜ ಹಿಡಿದಿದ್ದರು. ಆ ಧ್ವಜವನ್ನು ಎತ್ತರಕ್ಕೆ ಹಿಡಿದು ಹಾರಿಸಿದ ಅವರು ರಾಷ್ಟ್ರಧ್ವಜಕ್ಕೆ ಅಪಮಾನ ಮಾಡಿದ್ದರು. ಈ ಹಿನ್ನಲೆ ಪೊಲೀಸರು ಪ್ರಕರಣ ದಾಖಲಿಸಿದರು. ಆಗಿನ ಪಿಐ ರಂಗನಾಥ ನೀಲಮ್ಮನವರ್ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. ಎರಡು ವರ್ಷಗಳ ಕಾಲ ವಿಚಾರಣೆ ನಡೆಸಿದ ನ್ಯಾಯಾಲಯವೂ ಸಿಮ್ರಾನ್ ತಂಬೋಲಿ ಅವರು ರಾಷ್ಟ್ರಧ್ವಜಕ್ಕೆ ಅಪಮಾನ ಮಾಡಿರುವುದನ್ನು ಖಚಿತಪಡಿಸಿಕೊಂಡಿತು. ಸರ್ಕಾರಿ ಅಭಿಯೋಜಕಿ ಝೀನತಭಾನು ಇಬ್ರಾಹಿಂಸಾಬ್ ಅವರು ರಾಷ್ಟ್ರಧ್ವಜಕ್ಕೆ ಆದ ಅಪಮಾನದ ಬಗ್ಗೆ ನ್ಯಾಯಾಧೀಶರ ಗಮನಸೆಳೆದರು. ಮಾಡಿದ ತಪ್ಪಿಗೆ ಸೂಕ್ತ ಶಿಕ್ಷೆ ವಿಧಿಸಬೇಕು ಎಂದು ಅವರು ವಾದಿಸಿದರು. ಅವರ ವಾದ ಮನ್ನಿಸಿದ ನ್ಯಾಯಾಧೀಶೆ ಅನಿತಾಕುಮಾರಿ ಎಸ್ ಅವರು ಆರೋಪಿ ಸಿಮ್ರಾನ್ ತಂಬೋಲಿ ಅವರಿಗೆ 2 ಸಾವಿರ ರೂ ದಂಡ ವಿಧಿಸಿದರು. - [ಗುಂಟೆ ಲೆಕ್ಕದ ಭೂಮಿಯಲ್ಲಿ ಲಕ್ಷ ಲಕ್ಷ ದುಡ್ಡು!](https://mobiletime.in/2025/12/millions-of-dollars-in-a-piece-of-land/): ಪರಮೇಶ್ವರ ನಾಯ್ಕ, ಚಂದ್ರು ನಾಯ್ಕ ಹಾಗೂ ರಘು ನಾಯ್ಕ ಅವರು 10-15 ಗುಂಟೆ ಜಾಗದಲ್ಲಿ ಲಕ್ಷಾಂತರ ರೂ ದುಡಿದಿದ್ದಾರೆ. ಆದರೆ, ಅದು ಸಕ್ರಮವಾಗಲ್ಲ! ಭಟ್ಕಳದ ಬೆಣಂದೂರಿನ ಪರಮೇಶ್ವರ ಜಟ್ಟಾ ನಾಯ್ಕ, ಮುಂಡಳ್ಳಿ ಚೌತನಿಯ ಚಂದ್ರ ನಾರಾಯಣ ನಾಯ್ಕ ಹಾಗೂ ಬೆಳಕೆ ಹಡೀನದ ರಘು ನಾರಾಯಣ ನಾಯ್ಕ ಅವರು ಸರ್ಕಾರಕ್ಕೆ ಮೋಸ ಮಾಡಿದ್ದಾರೆ. ಮಂಡಳ್ಳಿ ಗ್ರಾಮದ ಸರ್ವೇ ನಂ 207ರಲ್ಲಿ ಕಾನೂನುಬಾಹಿರವಾಗಿ ಗಣಿಕಾರಿಕೆ ಮಾಡಿದ್ದಾರೆ. ಪರಮೇಶ್ವರ ನಾಯ್ಕ ಅವರ ಜೊತೆ ಸೇರಿ ಚಂದ್ರು ನಾಯ್ಕ ಹಾಗೂ ರಘು ನಾಯ್ಕ ಸೇರಿ ಚೀರೆಕಲ್ಲು ಕಳ್ಳ ಸಾಗಾಣಿಕೆ ಮಾಡಿದ್ದಾರೆ. ಆ ಮೂಲಕ ಅವರು ಪರಿಸರಕ್ಕೆ ಹಾನಿ ಮಾಡಿ ಲಕ್ಷಾಂತರ ರೂ ಸಂಪಾದಿಸಿದ್ದಾರೆ. ಪರಮೇಶ್ವರ ನಾಯ್ಕ ಅವರು 15 ಗುಂಟೆ ಕ್ಷೇತ್ರದಲ್ಲಿ 2300 ಮೆಟ್ರಿಕ್ ಟನ್ ಚೀರೆಕಲ್ಲು ತೆಗೆದಿದ್ದಾರೆ. ಚಂದ್ರು ನಾಯ್ಕ ಅವರು 10 ಗುಂಟೆ ಜಾಗದಲ್ಲಿ 1500 ಮೆಟ್ರಿಕ್ ಟನ್ ಚೀರೆಕಲ್ಲು ತೆಗೆದಿದ್ದಾರೆ. ರಾಘು ನಾಯ್ಕ ಅವರು ಸಹ 10 ಗುಂಟೆ ಜಾಗದಲ್ಲಿ 1500 ಮೆಟ್ರಿಕ್ ಟನ್ ಚಿರೇಕಲ್ಲು ತೆಗೆದಿದ್ದಾರೆ. ಇದಕ್ಕೆ ಅವರು ಸರ್ಕಾರದಿಂದ ಪರವಾನಿಗೆ ಪಡೆದಿಲ್ಲ. ರಾಜಧನ ಪಾವತಿ ಮಾಡಿಲ್ಲ. ಪರಿಸರಕ್ಕೆ ಆಗುವ ಹಾನಿ ಬಗ್ಗೆ ಅರಿವಿದ್ದರೂ ಆ ಬಗ್ಗೆ ಯೋಚಿಸಿಲ್ಲ. ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಭೂ ವಿಜ್ಞಾನಿ ಸುಭಾಶ್ಚಂದ್ರ ಅವರು ಈ ಗಣಿ ಪ್ರದೇಶಗಳಿಗೆ ಭೇಟಿ ನೀಡಿದ್ದಾರೆ. ಆ ಮೂವರು ಸೇರಿ ನಡೆಸಿದ ಅಕ್ರಮಗಳನ್ನು ನೋಡಿ ಕಂಗಾಲಾಗಿದ್ದಾರೆ. 3.71 ಲಕ್ಷ ರೂ ಮೋಸವಾಗಿರುವ ಬಗ್ಗೆ ಅವರು ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಗೆ ಮಾಹಿತಿ ನೀಡಿ, ಆ ಮೂವರ ವಿರುದ್ಧವೂ ಪ್ರಕರಣ ದಾಖಲಿಸಿದ್ದಾರೆ. - [ಕೂಗಾಟ: ಅಕ್ಕಪಕ್ಕದವರ ನಡುವೆ ಹೊಡೆದಾಟ!](https://mobiletime.in/2025/12/shout-fight-between-neighbors/): ಸುರೇಶ ನಾಯ್ಕ ಅವರ ಕುಟುಂಬದವರ ಮೇಲೆ ನಾರಾಯಣ ನಾಯ್ಕ ಕಡೆಯವರು ಮಾರಕಾಸ್ತ್ರಗಳಿಂದ ದಾಳಿ ಮಾಡಿದ್ದಾರೆ. ಪರಿಣಾಮ ಸುರೇಶ ನಾಯ್ಕ ಅವರ ಜೊತೆ ಅವರ ತಂದೆ ಮಂಜುನಾಥ ನಾಯ್ಕ ಹಾಗೂ ಅವರ ತಾಯಿ ಮಾದೇವಿ ನಾಯ್ಕ ಅವರು ಆಸ್ಪತ್ರೆ ಸೇರಿದ್ದಾರೆ. ಹೊನ್ನಾವರ ಹುಡಗೋಡ ಬಳಿಯ ಮುಟ್ಟಾದದಲ್ಲಿ ಸುರೇಶ ಮಂಜುನಾಥ ನಾಯ್ಕ ಅವರು ವಾಸವಾಗಿದ್ದಾರೆ. ತಂದೆ, ತಾಯಿ, ತಂಗಿ ಜೊತೆ ವಾಸವಾಗಿರುವ ಅವರು ತಮ್ಮದೇ ಆದ ವ್ಯಾಪಾರ ಮಾಡಿ ಬದುಕು ಕಟ್ಟಿಕೊಂಡಿದ್ದಾರೆ. ಮಂಜುನಾಥ ನಾಯ್ಕ ಅವರ ತಾಯಿ ಮಾದೇವಿ ನಾಯ್ಕ ಅವರು ಕೊಟ್ಟಿಗೆ ಕೆಲಸ ನೋಡಿಕೊಳ್ಳುತ್ತಿದ್ದು, ಅವರು ಹೈನುಗಾರಿಕೆ ಮಾಡಿಕೊಂಡಿದ್ದಾರೆ. ಹೀಗಿರುವಾಗ ಡಿಸೆಂಬರ್ 22ರಂದು ರಾತ್ರಿ ಮಾದೇವಿ ನಾಯ್ಕ ಅವರು ಕೊಟ್ಟಿಗೆ ಕೆಲಸಕ್ಕೆ ಹೊಗಿದ್ದರು. ಕೊಟ್ಟಿಗೆಯ ಬಾಗಿಲು ಒಡೆದಿರುವುದನ್ನು ಅವರು ನೋಡಿದರು. ಬಾಗಿಲು ಒಡೆದ ಕಿಡಿಗೇಡಿಗಳ ವಿರುದ್ಧ ಸಿಟ್ಟಾದ ಮಾದೇವಿ ನಾಯ್ಕ ಅವರು ದೊಡ್ಡದಾಗಿ ಗಲಾಟೆ ಮಾಡಿದರು. ಅವರ ಗಲಾಟೆಗೆ ಅಕ್ಕಪಕ್ಕದ ಮನೆಯವರು ಅಲ್ಲಿಗೆ ಆಗಮಿಸಿದರು. ಪಕ್ಕದ ಮನೆಯ ನಾರಾಯಣ ಮಾಳಪ್ಪ ನಾಯ್ಕ, ಅವರ ಮಗ ಮಂಜುನಾಥ ನಾರಾಯಣ ನಾಯ್ಕ ಹಾಗೂ ನಿರ್ಮಲಾ ಮಂಜುನಾಥ ನಾಯ್ಕ ಅವರು `ಏಕೆ ಕೂಗಾಡುವಿರಿ?’ ಎಂದು ಪ್ರಶ್ನೆ ಮಾಡಿದರು. ಆಗ, ಸುರೇಶ ನಾಯ್ಕ ಅವರು `ನೀವೇಕೆ ಸಿಟ್ಟಾಗುತ್ತೀರಿ? ನಿಮಗೆ ಏನು ಹೇಳಿದಲ್ಲ’ ಎಂದರು. ಇದರಿಂದ ಇನ್ನಷ್ಟು ಕೋಪಿತರಾದ ನಾರಾಯಣ ನಾಯ್ಕ ಅವರು ಕಬ್ಬಿಣದ ರಾಡು ತಂದು ಸುರೇಶ ನಾಯ್ಕ ಅವರ ತಂದೆ ಮಂಜುನಾಥ ನಾಯ್ಕ ಅವರ ಮೇಲೆ ಹೊಡೆಯಲು ಶುರು ಮಾಡಿದರು. ತಪ್ಪಿಸಲು ಬಂದ ಸುರೇಶ ನಾಯ್ಕ ಅವರಿಗೂ ಎರಡು ಏಟು ಕೊಟ್ಟರು. ನಿರ್ಮಲಾ ನಾಯ್ಕ ಅವರು ಮಾದೇವಿ ನಾಯ್ಕ ಅವರಿಗೆ ಬಡಿಗೆ ತೆಗೆದುಕೊಂಡು ಹೊಡೆದರು. ಮಂಜುನಾಥ ನಾರಾಯಣ ನಾಯ್ಕ ಅವರು ಸಹ ಸುಮ್ಮನೆ ಕೂರುವ ಬದಲು ಈ ಹೊಡೆದಾಟಕ್ಕೆ ಕೈ ಜೋಡಿಸಿದರು. ಸುರೇಶ ನಾಯ್ಕ ಅವರ ಸಂಬoಧಿ ಅಣ್ಣಪ್ಪ ಮಂಜುನಾಥ ನಾಯ್ಕ, ಸಂಗೀತಾ ಮಂಜುನಾಥ ನಾಯ್ಕ ಹಾಗೂ ಅಕ್ಕಪಕ್ಕದವರು ಬಂದು ಈ ಹೊಡೆದಾಟ ತಪ್ಪಿಸಿದರು. ಅದಾಗಿಯೂ, ಸುರೇಶ ನಾಯ್ಕ ಅವರ ಕುಟುಂಬಕ್ಕೆ ನೋವಾಯಿತು. ಸುರೇಶ ನಾಯ್ಕ ಅವರ ತಂದೆಯ ತಲೆಭಾಗದಿಂದ ರಕ್ತ ಸುರಿಯಿತು. ಮಾದೇವಿ ನಾಯ್ಕ ಅವರ ಬೆನ್ನಿಗೆ ಗಾಯವಾಯಿತು. ಆ ಕುಟುಂಬದವರೆಲ್ಲರೂ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆಪಡೆದರು. ಅದಾದ ನಂತರ ಹೊಡೆದಾಟದ ಬಗ್ಗೆ ಹೊನ್ನಾವರ ಪೊಲೀಸರಿಗೆ ಹೇಳಿದ್ದು, ಪೊಲೀಸರು ಪ್ರಕರಣ ದಾಖಲಿಸಿದರು. - [ರೈತ ದಿನಾಚರಣೆ: ಎಲ್ಲಡೆ ಸಂಭ್ರಮ.. ಆ ಊರಿನವರಿಗೆ ಆಘಾತ!](https://mobiletime.in/2025/12/farmers-day-celebrations-everywhere-shock-for-the-people-of-that-town/): ರೈತ ದಿನಾಚರಣೆಯ ಅವಧಿಯಲ್ಲಿಯೇ ರೈತರ ತೋಟಕ್ಕೆ ದಾಳಿ ಮಾಡಿದ ಅಧಿಕಾರಿಗಳು ಅಡಿಕೆ ಮರಗಳನ್ನು ನಾಶ ಮಾಡಿದ್ದಾರೆ. ಅನಗತ್ಯವಾಗಿ ಅಡಿಕೆ ಮರಗಳನ್ನು ಕಡಿದ ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಸಾಮಾಜಿಕ ಕಾರ್ಯಕರ್ತ ಅನಂತಮೂರ್ತಿ ಹೆಗಡೆ ಅವರು ಆಕ್ರೋಶವ್ಯಕ್ತಪಡಿಸಿದ್ದಾರೆ. ಬಿಜೆಪಿ ರೈತಮೋರ್ಚಾ ಉಪಾಧ್ಯಕ್ಷರಾಗಿರುವ ಅನಂತಮೂರ್ತಿ ಹೆಗಡೆ ಅವರು ಸಿದ್ದಾಪುರಕ್ಕೆ ದೌಡಾಯಿಸಿದ್ದು, ಅಲ್ಲಿನ ರೈತರ ಸಮಸ್ಯೆ ಆಲಿಸಿದ್ದಾರೆ. ಬಿಳಗಿ ಬಳಿಯ ಕ್ಯಾದಗಿ ಅರಣ್ಯ ವಲಯದ ಸಿಬ್ಬಂದಿ ಗೋಳಿಕೈ ಗ್ರಾಮದ ಗಣೇಶ ಹೆಗಡೆ ಅವರ ತೋಟಕ್ಕೆ ನುಗ್ಗಿ ಅಡಿಕೆ ಮರ ಹಾಳು ಮಾಡಿದನ್ನು ಅನಂತಮೂರ್ತಿ ಹೆಗಡೆ ಅವರು ಖಂಡಿಸಿದರು. `ಅರಣ್ಯ ಉಳಿಸುವವರೇ ಈ ರೀತಿಯ ದೌರ್ಜನ್ಯ ನಡೆಸಿದರೆ ರೈತರು ಎಲ್ಲಿಗೆ ಹೋಗಬೇಕು? ಅರಣ್ಯ ಇಲಾಖೆಯವರಿಗೆ ಮರಗಳನ್ನು ಕಡಿಯುವ ಅಧಿಕಾರವನ್ನು ನೀಡಿದವರಾರೂ ಯಾರು?’ ಎಂದು ಅನಂತಮೂರ್ತಿ ಹೆಗಡೆ ಅವರು ಪ್ರಶ್ನಿಸಿದರು. `ರೈತರನ್ನು ಒಕ್ಕಲೆಬ್ಬಿಸಿದರೆ ಉಗ್ರ ಹೋರಾಟ ಖಚಿತ’ ಎಂದು ಎಚ್ಚರಿಸಿದರು. ಸಿದ್ದಾಪುರ ತಾಲೂಕು ಬಿಜೆಪಿ ಮಂಡಲ ಅಧ್ಯಕ್ಷ ಎಂ ಕೆ ತಿಮ್ಮಪ್ಪ ಅವರು ಅರಣ್ಯಾಧಿಕಾರಿ ವರ್ತನೆ ವಿರುದ್ಧ ಅಸಮಧಾನ ಹೊರಹಾಕಿದರು. `ರೈತರು ನೆಮ್ಮದಿಯ ಜೀವನ ನಡೆಸದಂತೆ ಅರಣ್ಯ ಇಲಾಖೆಯವರು ಕಾಯುತ್ತಿದ್ದಾರೆ. ಬೇರೆ ದೇಶಗಳಿಂದ ವಲಸೆ ಬಂದವರಿಗೆ , ನಿರಾಶ್ರಿತರಿಗೆ ಸರ್ಕಾರ ಸಾವಿರಾರು ಎಕರೆ ಭೂಮಿ ಕೊಡುತ್ತಿದೆ. ಆದರೆ, ಇಲ್ಲಿನ ನಿವಾಸಿಗಳ ಮುಲಭೂತ ಹಕ್ಕನ್ನು ಕಸಿಯುತ್ತಿದೆ’ ಎಂದವರು ಕಿಡಿಕಾರಿದರು. `ಕ್ಯಾದಗಿ ವಲಯ ಅರಣ್ಯಾಧಿಕಾರಿಗಳಿಗೆ ಫೋನ್ ಮಾಡಿದಾಗ `ನ್ಯಾಯಾಲಯದ ಆದೇಶದ ಪ್ರಕಾರ ಕೆಲಸ ಮಾಡಿದ್ದೇವೆ’ ಎಂದಿದ್ದಾರೆ. ಬಿಜೆಪಿ ಪ್ರಮುಖರಾದ ರಾಘವೇಂದ್ರ ಶಾಸ್ತ್ರಿ, ತೋಟಪ್ಪ ನಾಯ್ಕ, ಪ್ರಮುಖರಾದ ಕೃಷ್ಣಮೂರ್ತಿ ನಾಯ್ಕ ಐಸೂರು, ಆದರ್ಶ ಪೈ, ಅಣ್ಣಪ್ಪ ನಾಯ್ಕ ಕಡಕೇರಿ, ವಿಜಯ ಹೆಗಡೆ, ರೈತಸಂಘದ ಜಿಲ್ಲಾಧ್ಯಕ್ಷ ಕೆರಿಯಪ್ಪ ನಾಯ್ಕ ಇತರರು ಈ ಕೃತ್ಯವನ್ನು ಖಂಡಿಸಿದ್ದಾರೆ. - [ಸಾವು ಗೆದ್ದು ಬಂದ ಕುಮಟಾದ ಯುವಕ](https://mobiletime.in/2025/12/a-young-man-from-kumta-who-defeated-death/): ಬೆಂಗಳೂರು – ಗೋಕರ್ಣ ಬಸ್ಸು ದುರಂತದಲ್ಲಿ ಕಣ್ಮರೆಯಾಗಿದ್ದ ವಿಜಯ ಭಂಡಾರಿ ಅವರು ಸುರಕ್ಷಿತವಾಗಿದ್ದಾರೆ. ಖಾಸಗಿ ವಾಹನದ ಮೂಲಕ ಅವರು ತಮ್ಮ ಊರು ಸೇರಿದ್ದಾರೆ. ಬೆಂಗಳೂರಿನಿoದ ಹೊರಟ ಸೀಬರ್ಡ ಬಸ್ಸಿನಲ್ಲಿ ವಿಜಯ ಭಂಡಾರಿ ಅವರು ಸಂಚರಿಸುತ್ತಿದ್ದರು. ಚಿತ್ರದುರ್ಗದ ಬಳಿ ಬಸ್ಸು ಅಪಘಾತಕ್ಕೀಡಾಗಿದ್ದು, ಅವಘಡ ಅರಿತ ಅವರು ಬಸ್ಸಿನ ಗಾಜು ಒಡೆದು ಕೆಳಗೆ ಹಾರಿದರು. ಹೀಗಾಗಿ ವಿಜಯ ಭಂಡಾರಿ ಅವರು ಪ್ರಾಣಾಪಾಯದಿಂದ ಪಾರಾದರು. ವಿಜಯ ಭಂಡಾರಿ ಅವರ ಮೊಬೈಲ್ ದುರಂತದಲ್ಲಿ ಸುಟ್ಟು ಹೋಗಿದೆ. ಹೀಗಾಗಿ ಅವರ ಫೋನ್ ಸ್ವಿಚ್ ಆಫ್ ಬರುತ್ತಿದೆ. ವಿಜಯ ಭಂಡಾರಿ ಅವರ ಕೈಗೆ ಪೆಟ್ಟಾಗಿದ್ದು, ಅದಕ್ಕೆ ಅವರು ಚಿಕಿತ್ಸೆಪಡೆದಿದ್ದಾರೆ. ದುರಂತವನ್ನು ಹತ್ತಿರದಿಂದ ನೋಡಿದ ಕಾರಣ ಅವರು ಆಘಾತಕ್ಕೆ ಒಳಗಾಗಿದ್ದಾರೆ. ಸದ್ಯ ವಿಜಯ ಭಂಡಾರಿ ಅವರು ವಿಶ್ರಾಂತಿಪಡೆಯುತ್ತಿದ್ದಾರೆ. - [ಗೋಕರ್ಣ ಬಸ್ಸು: ಮತ್ತೊಬ್ಬ ಪ್ರಯಾಣಿಗನ ಮೊಬೈಲು ಸ್ವಿಚ್ ಆಫ್!](https://mobiletime.in/2025/12/gokarna-bus-another-passengers-mobile-phone-switched-off/): ಬೆಂಗಳೂರು-ಗೋಕರ್ಣ ಮಾರ್ಗದ ಸೀಬರ್ಡ ಬಸ್ಸಿನಲ್ಲಿದ್ದ ಕುಮಟಾದ ವಿಜಯ ಭಂಡಾರಿ ಅವರ ಫೋನು ಸ್ವಿಚ್ ಆಫ್ ಆಗಿದೆ. ಬಸ್ಸು ಅಪಘಾತದ ನಂತರ ವಿಜಯ ಭಂಡಾರಿ ಅವರ ಬಗ್ಗೆ ಯಾವುದೇ ಸುಳಿವು ಸಿಕ್ಕಿರಲಿಲ್ಲ. ಆದರೆ, ಇದೀಗ ಅವರು ಸುರಕ್ಷಿತವಾಗಿ ಊರು ತಲುಪಿದ್ದಾರೆ. ಬುಧವಾರ ರಾತ್ರಿ ಬೆಂಗಳೂರಿನಿoದ ಹೊರಟ ಬಸ್ಸು ಚಿತ್ರದುರ್ಗದಲ್ಲಿ ಅಪಘಾತಕ್ಕೀಡಾಗಿದ್ದು, ಈ ಬಸ್ಸಿನಲ್ಲಿ ಕುಮಟಾದ ವಿಜಯ ಭಂಡಾರಿ ಅವರು ಪ್ರಯಾಣಿಸುತ್ತಿದ್ದರು. ವಿಜಯ ಭಂಡಾರಿ ಅವರು ಮೆಜೆಸ್ಟಿಕ್ ನ ಆನಂದರಾವ್ ಸರ್ಕಲ್ ಬಳಿಯ ಸೀಬರ್ಡ ಕಚೇರಿಯಿಂದಲೇ ಬಸ್ಸು ಹತ್ತಿದ್ದರು. ಕುಮಟಾಗೆ ಬರುವುದಕ್ಕಾಗಿ ಅವರು ಮುಂಗಡ ಟಿಕೆಟ್ ಬುಕ್ಕಿಂಗ್ ಮಾಡಿದ್ದರು. ಅವರಿದ್ದ ಬಸ್ಸಿಗೆ ಗುರುವಾರ ನಸುಕಿನಲ್ಲಿ ಟ್ಯಾಂಕರ್ ಗುದ್ದಿದೆ. ಪರಿಣಾಮ ಬಸ್ಸಿಗೆ ಬೆಂಕಿ ಬಿದ್ದಿದ್ದು, ಅದಾದ ನಂತರ ವಿಜಯ ಭಂಡಾರಿ ಅವರು ಕಣ್ಮರೆಯಾಗಿದ್ದರು. ಬಸ್ಸು ದುರಂತದಲ್ಲಿ ಅನೇಕರ ಮೊಬೈಲ್ ಸುಟ್ಟಿದೆ. ಹೀಗಾಗಿ ವಿಜಯ ಭಂಡಾರಿ ಅವರ ಮೊಬೈಲ್ ಸಹ ಸುಟ್ಟಿರುವ ಅನುಮಾನಗಳಿವೆ. ವಿಜಯ ಭಂಡಾರಿ ಅವರ ಮೊಬೈಲ್’ಗೆ ಫೋನ್ ಮಾಡಿದರೆ `ನೀವು ಸಂಪರ್ಕಿಸಲು ಬಯಸುತ್ತಿರುವ ವ್ಯಕ್ತಿಯೂ ಸಿಗುತ್ತಿಲ್ಲ’ ಎಂದು ತೆಲಗು ಹಾಗೂ ಇಂಗ್ಲೀಷ್ ಭಾಷೆಯಲ್ಲಿ ಮಾಹಿತಿ ಬರುತ್ತಿದೆ. ಪದೇ ಪದೇ ಪ್ರಯತ್ನಿಸಿದಾಗ `ಸ್ವಿಚ್ ಆಫ್’ ಸಂದೇಶ ಬರುತ್ತಿದೆ. ವಿಜಯ ಭಂಡಾರಿ ಅವರು ತಮ್ಮದೇ ಮೊಬೈಲ್ ಸಂಖ್ಯೆ ನೀಡಿ ಆನೈನ್ ಮೂಲಕ ಬಸ್ ಟಿಕೆಟ್ ಬುಕ್ ಮಾಡಿದ್ದರು. ವಿಜಯ ಭಂಡಾರಿ ಅವರು ಬಸ್ಸಿನ ಕಿಟಕಿಯ ಗಾಜು ಒಡೆದು ಜೀವ ಉಳಿಸಿಕೊಂಡಿದ್ದಾರೆ. ನಂತರ ಖಾಸಗಿ ವಾಹನದ ಮೂಲಕ ಅವರು ಊರು ತಲುಪಿದ್ದಾರೆ. ವಿಜಯ ಭಂಡಾರಿ ಅವರ ಕೈ ಸುಟ್ಟಿದ್ದು, ಚಿಕಿತ್ಸೆ ಪಡೆದಿದ್ದಾರೆ. - [ಬಸ್ ದುರಂತ: ಸಾವಿನ ಸಂಖ್ಯೆಯಲ್ಲಿ ಗೊಂದಲ!](https://mobiletime.in/2025/12/bus-tragedy-confusion-over-death-toll/): ಗೋಕರ್ಣಕ್ಕೆ ಬರುತ್ತಿದ್ದ ಸೀಬರ್ಡ ಬಸ್ ದುರಂತದಲ್ಲಿನ ಸಾವಿನ ಸಂಖ್ಯೆಯ ಬಗ್ಗೆ ಸಾಕಷ್ಟು ಗೊಂದಲವಿದೆ. ದುರ್ಘಟನೆ ನಡೆದಾಗ 17 ಜನರ ಸಜೀವ ದಹನ ಎನ್ನಲಾಗಿದ್ದು, ಆ ನಂತರ 9 ಜನ ಸಾವನಪ್ಪಿರುವುದಾಗಿ ಅಧಿಕಾರಿಗಳು ಹೇಳಿದ್ದಾರೆ. ಕೆಲ ಮಾಧ್ಯಮಗಳು 12 ಜನರ ಸಜೀವ ದಹನ ಎಂದು ವರದಿ ಪ್ರಕಟಿಸಿವೆ. ಆದರೆ, ಸಾರಿಗೆ ಸಚಿವರು ಐವರು ಸಾವನಪ್ಪಿದ ಬಗ್ಗೆ ಮಾಹಿತಿ ನೀಡಿದ್ದು, ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು `9ಕ್ಕೂ ಅಧಿಕ ಜೀವ ಹಾನಿ ನಡೆದಿದೆ’ ಎಂದಿದ್ದಾರೆ. ಕುಮಟಾ ಶಾಸಕ ದಿನಕರ ಶೆಟ್ಟಿ ಅವರು 20ಕ್ಕೂ ಅಧಿಕ ಜನ ಸಾವನಪ್ಪಿರುವ ಬಗ್ಗೆ ಬರೆದುಕೊಂಡಿದ್ದಾರೆ. ಬಸ್ಸಿನಲ್ಲಿ ಕುಮಟಾದ ಪ್ರಯಾಣಿಕರು ಸಹ ಇದ್ದಿದ್ದರಿಂದ ಜನರಲ್ಲಿ ಗೊಂದಲ ಮುಂದುವರೆದಿದೆ. ಈ ನಡುವೆ ನಾಪತ್ತೆ ಆದವರ ಶೋಧ ಮುಂದುವರೆದಿದೆ. ಸ್ಥಳದಲ್ಲಿ ಸಿಕ್ಕ ಶವಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. `ಇನ್ನೂ ಮೂವರ ಶವ ಸಿಕ್ಕಿದ್ದು, ಅವರು ಅದೇ ಬಸ್ಸಿನಲ್ಲಿದ್ದವರಾ? ಎನ್ನುವುದರ ಬಗ್ಗೆ ಖಚಿತವಿಲ್ಲ’ ಎಂದು ಸಾರಿಗೆ ಸಚಿವರು ಹೇಳಿದ್ದಾರೆ. ಸಾವನಪ್ಪಿದವರ ಸಂಖ್ಯೆ 9 ಎಂದು ದೃಢವಾಗಿದ್ದರೂ ಅದರಲ್ಲಿ ಮೂವರು ಅದೇ ಬಸ್ಸಿನ ಪ್ರಯಾಣಿಕರಾ? ಅಥವಾ ಬೇರೆ ವಾಹನದಲ್ಲಿದ್ದವರಾ? ಎಂದು ಗೊತ್ತಾಗದ ಕಾರಣ ಸಚಿವರು ಹಾಗೂ ಅಧಿಕಾರಿಗಳಲ್ಲಿ ಗೊಂದಲ ಉಂಟಾಗಿದೆ. ಪ್ರಯಾಣಿಕರ ಹಾಗೂ ಕುಟುಂಬದವರ ಆತಂಕ ದೂರ ಮಾಡಲು ಸರ್ಕಾರ ಸಹಾಯವಾಣಿ ಸ್ಥಾಪಿಸಿದೆ. 9480803100 ಹಾಗೂ 9480803170 ಸಹಾಯವಾಣಿಗಳು ಗೊಂದಲ ನಿವಾರಿಸುವ ಪ್ರಯತ್ನ ಮಾಡುತ್ತಿದೆ. - [ಛೇ | ರಶ್ಮೀ ಇನ್ನಿಲ್ಲ!](https://mobiletime.in/2025/12/oh-rashmi-is-no-more/): ಬೆಂಗಳೂರಿನಿoದ ಗೋಕರ್ಣಕ್ಕೆ ಹೊರಟಿದ್ದ ಭಟ್ಕಳದ ರಶ್ಮೀ ಮಹಾಲೆ ಅವರು ಬಸ್ ಅಪಘಾತದಲ್ಲಿ ಅಗ್ನಿಗೆ ಆಹುತಿಯಾಗಿದ್ದಾರೆ. ವೇ2ನ್ಯೂಸ್ ಮಾಧ್ಯಮ ಇದನ್ನು ದೃಢಪಡಿಸಿದೆ. ಬೆಂಗಳೂರಿನ ಡೇಲಾಯ್ಡ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ರಶ್ಮೀ ಮಹಾಲೆ ಅವರು ಕ್ರಿಸ್ ಮಸ್ ಅಂಗವಾಗಿ ಊರಿಗೆ ಹೊರಟಿದ್ದರು. ತಮ್ಮ ಇಬ್ಬರು ಸ್ನೇಹಿತೆಯರಾದ ಗಗನಾ ಮತ್ತು ರಕ್ಷಿತಾ ಜೊತೆ ಅವರು ಸೀಬರ್ಡ ಬಸ್ ಬುಕ್ ಮಾಡಿದ್ದರು. ಗೆಳತಿಯರ ಜೊತೆ ಗೋಕರ್ಣಕ್ಕೆ ಬಂದು ನಂತರ ಊರಿಗೆ ಮರಳಲು ಅವರು ನಿರ್ಧರಿಸಿದ್ದರು. ಇದಕ್ಕಾಗಿ ಕೆಲಸಕ್ಕೆ ನಾಲ್ಕು ದಿನಗಳ ರಜೆ ಹಾಕಿದ್ದರು. ಬುಧವಾರ ರಾತ್ರಿ ಬೆಂಗಳೂರಿನಿAದ ಹೊರಟ ಬಸ್ಸು ಚಿತ್ರದುರ್ಗದ ಬಳಿ ಅಪಘಾತಕ್ಕೀಡಾಗಿದ್ದು, ಅದರಲ್ಲಿ ರಶ್ಮೀ ಅವರು ಪ್ರಯಾಣಿಸುತ್ತಿದ್ದರು. ಅವರ ಇಬ್ಬರು ಸ್ನೇಹಿತೆಯರು ಬಸ್ ಅಪಘಾತದ ನಂತರ ಕಿಟಕಿಯಿಂದ ಹಾರಿ ಬಚಾವಾಗಿದ್ದು, ರಶ್ಮೀ ಅವರ ಸುಳಿವು ಸಿಕ್ಕಿರಲಿಲ್ಲ. `ಮೊದಲು ರಶ್ಮೀ ಅವರು ಸುರಕ್ಷಿತವಾಗಿದ್ದಾರೆ’ ಎಂಬ ಮಾಹಿತಿ ಬಂದಿತ್ತು. ಅದಾದ ನಂತರ ಅವರು ನಾಪತ್ತೆಯಾಗಿದ್ದಾರೆ ಎಂಬ ವಿಷಯ ಗೊತ್ತಾಗಿತ್ತು. ಸದ್ಯದ ಮಾಹಿತಿ ಪ್ರಕಾರ ರಶ್ಮೀ ಅವರು ಇನ್ನಿಲ್ಲ ಎಂದು ವೇ2ನ್ಯೂಸ್ ಮಾಧ್ಯಮ ದೃಢಪಡಿಸಿದೆ. ಮಗಳ ಹುಡುಕಿ ಹೊರಟ ತಂದೆ ರಶ್ಮೀ ಅವರ ಬಗ್ಗೆ ಸರಿಯಾದ ಮಾಹಿತಿ ಸಿಗದ ಕಾರಣ ಭಟ್ಕಳದ ಶಿರಾಲಿಯಲ್ಲಿದ್ದ ಅವರ ತಂದೆ ದೇವಿದಾಸ ಮಹಾಲೆ ಅವರು ಚಿತ್ರದುರ್ಗದ ಕಡೆ ಹೊರಟಿದ್ದಾರೆ. ರಶ್ಮಿ ಅವರ ತಾಯಿ ಸಾವಿತ್ರಿ ಅವರನ್ನು ಸಂಬAಧಿಕರ ಮನೆಯಲ್ಲಿ ಬಿಟ್ಟು ಮನೆಗೆ ಬೀಗ ಹಾಕಿ ದೇವಿದಾಸ್ ಅವರು ಮಗಳ ಹುಡುಕಾಟಕ್ಕೆ ಹೊರಟಿದ್ದಾರೆ. ಗಗನಾ ಮತ್ತು ರಕ್ಷಿತಾ ಅವರು ಸಹ ರಶ್ಮೀ ಅವರ ಬಗ್ಗೆ ಖಚಿತ ಮಾಹಿತಿ ನೀಡದ ಕಾರಣ ದೇವಿದಾಸ ಅವರು ಚಿತ್ರದುರ್ಗದ ಕಡೆ ಪ್ರಯಾಣ ಬೆಳೆಸಿದ್ದಾರೆ. - [ಸೀಬರ್ಡ ಬಸ್ ದುರಂತ: ಗೋಕರ್ಣಕ್ಕೆ ಬರಬೇಕಿದ್ದವರು ಬೆಂಕಿಗೆ ಆಹುತಿ](https://mobiletime.in/2025/12/seabird-bus-tragedy-those-who-were-supposed-to-go-to-gokarna-were-burnt-to-death/): ಬೆಂಗಳೂರಿನಿoದ ಗೋಕರ್ಣಕ್ಕೆ ಬರುತ್ತಿದ್ದ ಸೀಬರ್ಡ ಬಸ್ ಬೆಂಕಿಗೆ ಆಹುತಿಯಾಗಿದ್ದು, 9 ಜನರ ಸಜೀವ ದಹನ ದೃಢವಾಗಿದೆ. ಈ ಬಸ್ಸಿನಲ್ಲಿ ಈ ಬಸ್ಸಿನಲ್ಲಿ ಉತ್ತರ ಕನ್ನಡ ಜಿಲ್ಲೆಯ ಪ್ರಯಾಣಿಕರೂ ಇದ್ದು, ಜಿಲ್ಲೆಯ ಪ್ರಯಾಣಿಕರ ಸಾವು-ಬದುಕಿನ ಸ್ಥಿತಿಯ ಬಗ್ಗೆ ಖಚಿತ ಮಾಹಿತಿ ಸಿಗುತ್ತಿಲ್ಲ. ಬುಧವಾರ ರಾತ್ರಿ ಬೆಂಗಳೂರಿನಿoದ ಸೀಬರ್ಡ ಬಸ್ಸು ಹೊರಟಿತು. ಪ್ರಯಾಣಿಕರು ಗಾಂಧೀನಗರ, ಯಶವಂತಪುರ, ಮೆಜೆಸ್ಟಿಕ್ ಕಡೆಯಿಂದ ಬಸ್ ಹತ್ತಿದ್ದರು. ಆ ಬಸ್ಸಿನಲ್ಲಿ 32 ಜನ ಪ್ರಯಾಣಿಸುತ್ತಿದ್ದರು. ಬಹುತೇಕ ಎಲ್ಲರೂ ಗೋಕರ್ಣಕ್ಕೆ ಬರುವವರಾಗಿದ್ದರು. ಅದರಂತೆ, ಭಟ್ಕಳದ ಶಿರಾಲಿಯ ರಶ್ಮಿ ಮಹಾಲೆ ಅವರು ಸಹ ಈ ಬಸ್ಸಿನಲ್ಲಿದ್ದರು. ಸಾಪ್ಟವೇರ್ ಇಂಜಿನಿಯರ್ ಆಗಿರುವ ರಶ್ಮಿ ಮಹಾಲೆ ಅವರು ಬೆಂಗಳೂರಿನಲ್ಲಿ ಕೆಲಸಕ್ಕಿದ್ದು, ಕ್ರಿಸ್ ಮಸ್ ರಜೆ ಪ್ರಯುಕ್ತ ಊರಿಗೆ ಬರುತ್ತಿದ್ದರು. ನಾಲ್ಕು ದಿನ ಹೆಚ್ಚುವರಿ ರಜೆ ಬೇಕು ಎಂದು ಪಟ್ಟುಹಿಡಿದು ಅವರು ರಜೆಪಡೆದಿದ್ದರು. ತಮ್ಮ ಸ್ನೇಹಿತರಾದ ಗಗನಾ ಮತ್ತು ರಕ್ಷಿತಾ ಅವರ ಜೊತೆ ರಶ್ಮಿ ಮಹಾಲೆ ಅವರು ಬಸ್ಸು ಏರಿದ್ದರು. ಸ್ನೇಹಿತೆಯರ ಜೊತೆ ಗೋಕರ್ಣಕ್ಕೆ ಬರಲು ಅವರು ಚಿಂತಿಸಿದ್ದು, ಆ ಬಸ್ಸು ಚಿತ್ರದುರ್ಗದ ಹಿರಿಯೂರು ತಾಲೂಕಿನ ಜವರಗೊಂಡದಲ್ಲಿ ಅಪಘಾತಕ್ಕೀಡಾಯಿತು. ಬಸ್ಸಿಗೆ ಲಾರಿ ಗುದ್ದಿದ ಪರಿಣಾಮ ಬಸ್ಸು ಹೊತ್ತಿ ಉರಿಯಿತು. ಈ ಅವಘಡದಲ್ಲಿ ರಶ್ಮಿ ಮಹಾಲೆ ಅವರು ಕಣ್ಮರೆಯಾಗಿದ್ದು, ರಶ್ಮಿ ಮಹಾಲೆ ಅವರ ಫೋನ್ ಸಹ ಸ್ವಿಚ್ ಆಫ್ ಆಗಿದೆ. ಗಗನಾ ಹಾಗೂ ರಕ್ಷಿತಾ ಅವರು ಬಸ್ಸಿನ ಕಿಟಕಿಯಿಂದ ಹಾರಿ ಪ್ರಾಣ ಉಳಿಸಿಕೊಂಡಿದ್ದಾರೆ. `ರಶ್ಮಿ ಅವರು ಸುರಕ್ಷಿತವಾಗಿದ್ದಾರೆ’ ಎಂದು ಮೊದಲು ಅವರ ಮಾವ ಮಾಹಿತಿ ನೀಡಿದ್ದರು. ಆದರೆ, ಇದೀಗ ಕುಟುಂಬದವರು `ರಶ್ಮಿ ಮಹಾಲೆ ಅವರಿಂದ ಯಾವುದೇ ಫೋನ್ ಬಂದಿಲ್ಲ’ ಎಂದು ಸಹ ಹೇಳಿದ್ದಾರೆ. ಸ್ಥಳದಲ್ಲಿ ಸಿಕ್ಕಿರುವ ಶವಗಳ ಡಿಎನ್‌ಎ ಪರೀಕ್ಷೆಗೆ ಸರ್ಕಾರ ಮುಂದಾಗಿದೆ. ಅದಾದ ನಂತರವೇ ಸಾವನಪ್ಪಿದವರ ಗುರುತು ಪತ್ತೆಯಾಗಲಿದೆ. - [ರೆಸಾರ್ಟಿನಲ್ಲಿ ಸದ್ದು: ಪ್ರವಾಸಿಗನಿಗೆ ಗುದ್ದು!](https://mobiletime.in/2025/12/noise-at-the-resort-tourist-punched/): ಮದ್ಯದ ನಶೆಯಲ್ಲಿದ್ದ ಮೂವರು ಗೋಕರ್ಣಕ್ಕೆ ಬಂದಿದ್ದ ವಿದೇಶಿಗನ ಮೇಲೆ ದಾಳಿ ಮಾಡಿದ್ದಾರೆ. ಆ ದಾಳಿಗೆ ಚಾರ್ಲಸ್ ಮಾರ್ಟಿನ್ ವೈಟ್ ತತ್ತರಿಸಿದ್ದು, ಅವರ ಮುಖದ ಆಕಾರವೇ ಬದಲಾಗಿದೆ. ಅಮೇರಿಕಾದ ಚಾರ್ಲಸ್ ಮಾರ್ಟಿನ್ ವೈಟ್ ಅವರು ಗೋಕರ್ಣ ರುದ್ರಪಾದ ಬಳಿಯ ನಾಗೇಶ್ ಹೋಂ ಸ್ಟೇಯಲ್ಲಿ ವಾಸವಾಗಿದ್ದರು. ಡಿಸೆಂಬರ್ 20ರಂದು ಲಘುವಾದ ಸಂಗೀತ ಕೇಳುತ್ತ ಅವರು ನಿದ್ರಿಸುತ್ತಿದ್ದರು. ಆ ವೇಳೆ ಅವರ ಕೋಣೆಯ ಬಾಗಿಲು ಬಡಿದ ಸದ್ದು ಕೇಳಿದ್ದು ಪಾಂಡು, ಸತೀಶ, ಸಂಜಯ ಎಂಬಾತರು ಮ್ಯೂಸಿಕ್ ಬಂದ್ ಮಾಡುವಂತೆ ಸೂಚಿಸಿದರು. `ಏನಾಯಿತು?’ ಎಂದು ಚಾರ್ಲಸ್ ಕೇಳುವುದರೊಳಗೆ ಅವರು ದಾಳಿ ಶುರು ಮಾಡಿದರು. ಆ ಮೂವರಲ್ಲಿ ಇಬ್ಬರು ಅಲ್ಲೇ ಪಕ್ಕದ ಝಯಾ ಕಫೆಯಲ್ಲಿ ಕೆಲಸ ಮಾಡುವ ಸಿಬ್ಬಂದಿಯಾಗಿದ್ದು, ಸಂಜಯ ಗೋಕರ್ಣ ಅವರು ಹೊಡೆದಾಟಕ್ಕೆ ಕೈ ಜೋಡಿಸಿದ್ದರು. ಕುಡಿದ ಮತ್ತಿನಲ್ಲಿದ್ದ ಆ ಮೂವರು ಚಾರ್ಲಿಸ್ ಅವರ ಮುಖಕ್ಕೆ ಗುದ್ದಿದರು. ಗಾಜಿನ ಬಾಟಲಿಯಿಂದ ತಲೆಗೆ ಹೊಡೆದರು. ಚಾಕುವಿನಿಂದ ಚುಚ್ಚುವ ಪ್ರಯತ್ನ ಮಾಡಿದರು. ಗಾಯಗೊಂಡ ಚಾರ್ಲಿಸ್ ಅವರು ನಂತರ ಗೋಕರ್ಣ, ಅಂಕೋಲಾ ಆಸ್ಪತ್ರೆಗೆ ದಾಖಲಾದರು. ಅದಾದ ನಂತರ ಇನ್ನೂ ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ್ ಆಸ್ಪತ್ರೆ ಸೇರಿದರು. ಚಾರ್ಲಿಸ್ ಅವರಿಗೆ ಹಲ್ಲು ಮುರಿದಿರುವುದು, ಮೂಗು ಡೊಂಕಾಗಿರುವುದು ವೈದ್ಯರ ಗಮನಕ್ಕೆ ಬಂದಿತು. ಎಲ್ಲವೂ ಮೊದಲಿನಂತೆ ಆಗಲು ಪ್ಲಾಸ್ಟಿಕ್ ಸರ್ಜರಿ ಮಾಡಿಸಬೇಕು ಎಂದು ವೈದ್ಯರು ಹೇಳಿದರು. ಈ ನಡುವೆ ಹೊಡೆದಾಟ ಮಾಡಿದ ಮೂವರು ಚಾರ್ಲಿಸ್ ಅವರಿಗೆ ಹುಚ್ಚನ ಪಟ್ಟ ಕಟ್ಟಿದ್ದರು. ಈ ಎಲ್ಲಾ ವಿಷಯ ಅರಿತ ಚಾರ್ಲಿಸ್ ಗೋಕರ್ಣ ಪೊಲೀಸರಿಗೆ ದೂರಿದರು. ಪೊಲೀಸರು ಪ್ರಕರಣ ದಾಖಲಿಸಿದ್ದು, ತನಿಖೆ ಶುರು ಮಾಡಿದ್ದಾರೆ. - [ಮಂಕಿಯಲ್ಲಿ ಮಂಕಾಳು ಬಣಕ್ಕೆ ಮುಖಭಂಗ!](https://mobiletime.in/2025/12/a-disgrace-to-the-mangalu-faction-in-monkey/): ಪಟ್ಟಣ ಪಂಚಾಯತ ಆಗಿ ಮೇಲ್ದರ್ಜೆಗೆ ಏರಿದ ಮಂಕಿಗೆ ಮೊದಲ ಚುನಾವಣೆ ನಡೆದಿದ್ದು, ಬಿಜೆಪಿ ಜಯಬೇರಿ ಬಾರಿಸಿದೆ. ಉತ್ತರ ಕನ್ನಡ ಉಸ್ತುವಾರಿ ಸಚಿವರಾದ ಮಂಕಾಳು ವೈದ್ಯ ಅವರು ಸ್ವಕ್ಷೇತ್ರದಲ್ಲಿಯೇ ತಮ್ಮ ಬೆಂಬಲಿಗರನ್ನು ಆರಿಸಲಾಗದೇ ಮುಖಭಂಗ ಅನುಭವಿಸಿದ್ದಾರೆ. ಮಂಕಿ ಪಟ್ಟಣ ಪಂಚಾಯತದಲ್ಲಿ 20 ವಾರ್ಡುಗಳ ರಚನೆಯಾಗಿದೆ. ಈ ವಾರ್ಡುಗಳಿಗೆ ಚುನಾವಣೆ ನಡೆದಿದ್ದು, ಅದರಲ್ಲಿ 12 ವಾರ್ಡುಗಳಲ್ಲಿ ಬಿಜೆಪಿ ಗೆಲುವು ಸಾಧಿಸಿದೆ. ಹೀಗಾಗಿ ಬಿಜೆಪಿ ಅಲ್ಲಿ ಅಧಿಕಾರಕ್ಕೆ ಬರುವುದು ಸ್ಪಷ್ಟವಾಗಿದೆ. ಎರಡು ಸ್ಥಾನಕ್ಕೆ ಅವಿರೋಧ ಆಯ್ಕೆ ನಡೆದಿದ್ದು, ಈ ಚುನಾವಣೆಯಲ್ಲಿ ಕಾಂಗ್ರೆಸ್ ಆರು ಸ್ಥಾನಕ್ಕೆ ತೃಪ್ತಿಪಟ್ಟಿದೆ. ಈ ಕ್ಷೇತ್ರದಲ್ಲಿ ಮಂಕಾಳು ವೈದ್ಯ ಅವರು ಪ್ರಭಾವಿ ನಾಯಕರಾಗಿದ್ದಾರೆ. ಅದಾಗಿಯೂ ಅವರಿಗೆ ತಮ್ಮ ಎಲ್ಲಾ ಬೆಂಬಲಿಗರನ್ನು ಗೆಲ್ಲಿಸಲು ಸಾಧ್ಯವಾಗಿಲ್ಲ. ವಿರೋಧಿ ಬಣದವರು ಹೆಚ್ಚಿನ ಸಂಖ್ಯೆಯಲ್ಲಿ ಗೆದ್ದಿದ್ದರಿಂದ ಮಂಕಾಳು ವೈದ್ಯ ಅವರಿಗೆ ಸಾಕಷ್ಟು ಮುಜುಗರವಾಗಿದೆ. ಅವರ ರಾಜಕೀಯ ಪ್ರಭಾವಕ್ಕೂ ಹಿನ್ನಡೆ ಆಗಿದೆ. ಫಲಿತಾಂಶ ಪ್ರಕಟವಾಗುತ್ತಿದ್ದಂತೆಯೇ ಮಂಕಿ ಪಟ್ಟಣದಲ್ಲಿ ಬಿಜೆಪಿ ಕಾರ್ಯಕರ್ತರು ಸಂಭ್ರಮಾಚರಣೆ ನಡೆಸಿದ್ದಾರೆ. - [ಮನೆಯಲ್ಲಿದ್ದ ಮಹಿಳೆ ಆತ್ಮಹತ್ಯೆ](https://mobiletime.in/2025/12/the-woman-in-the-house-committed-suicide/): ಮಾನಸಿಕವಾಗಿ ಕುಗ್ಗಿದ್ದ ಶಿರಸಿಯ ಚೈತ್ರಾ ಹೆಗಡೆ ಅವರು ವಿಷ ಕುಡಿದಿದ್ದು, ಧಾರವಾಡದ ಎಸ್ ಡಿ ಎಂ ಆಸ್ಪತ್ರೆಗೆ ಕರೆದೊಯ್ದರೂ ಅವರನ್ನು ಬದುಕಿಸಿಕೊಳ್ಳಲು ಸಾಧ್ಯವಾಗಿಲ್ಲ. ಶಿರಸಿಯ ಮಣಜವಳ್ಳಿ ಶಾಂತಿನಗರದ ಚೈತ್ರಾ ರಮಣ ಹೆಗಡೆ (40) ಅವರು ವಾಸವಾಗಿದ್ದರು. ಎರಡು ವರ್ಷದಿಂದ ಮಾನಸಿಕವಾಗಿ ಕುಗ್ಗಿದ್ದ ಅವರು ಜೀವನದಲ್ಲಿಯೂ ನೊಂದಿದ್ದರು. ಚೈತ್ರಾ ಅವರ ಪತಿ ರಮಣ ಹೆಗಡೆ ಹಾಗೂ ಪುತ್ರ ದರ್ಶನ್ ಅವರು ಡಿಸೆಂಬರ್ 21ರಂದು ಬೆಂಗಳೂರಿಗೆ ಹೋಗಿದ್ದರು. ಮನೆಯಲ್ಲಿ ಒಂಟಿಯಾಗಿದ್ದ ಚೈತ್ರಾ ಹೆಗಡೆ ಅವರು ಅದೇ ದಿನ ವಿಷ ಕುಡಿದರು. ಮನೆಯಲ್ಲಿದ್ದ ಮಾಕ್ಸೋನ್ ಎಂಬ ಕಳೆನಾಶಕ ಸೇವಿಸಿ ಚೈತ್ರಾ ಹೆಗಡೆ ಅವರು ಅಸ್ವಸ್ಥರಾಗಿದ್ದರು. ಈ ವಿಷಯ ಅರಿತ ಅಕ್ಕಪಕ್ಕದವರು ಚೈತ್ರಾ ಹೆಗಡೆ ಅವರನ್ನು ಶಿರಸಿಯ ಮಾರಿಕಾಂಬಾ ಆಸ್ಪತ್ರೆಗೆ ಕರೆತಂದರು. ಅಲ್ಲಿನ ವೈದ್ಯರು ಪ್ರಾಥಮಿಕ ಚಿಕಿತ್ಸೆ ನೀಡಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಕುಟುಂಬದವರು ಚೈತ್ರಾ ಅವರನ್ನು ಧಾರವಾಡಕ್ಕೆ ಕರೆದೊಯ್ದರು. ಎಸ್ ಡಿ ಎಂ ಆಸ್ಪತ್ರೆಯಲ್ಲಿ ಚೈತ್ರಾ ಹೆಗಡೆ ಅವರ ಚಿಕಿತ್ಸೆ ಮುಂದುವರೆಯಿತು. ಆದರೆ, ಅದರಿಂದ ಯಾವ ಪ್ರಯೋಜನವೂ ಆಗಲಿಲ್ಲ. ಡಿಸೆಂಬರ್ 23ರಂದು ಚೈತ್ರಾ ಹೆಗಡೆ ಅವರು ಸಾವನಪ್ಪಿದರು. ಸದ್ಯ ಶಿರಸಿ ಭೂತೇಶ್ವರ ಬಡಾವಣೆಯಲ್ಲಿ ವಾಸವಾಗಿರುವ ಪುಟ್ಟನಮನೆಯ ಗಣಪತಿ ನಾರಾಯಣ ಹೆಗಡೆ ಅವರು ಈ ಬಗ್ಗೆ ಮಾಹಿತಿ ನೀಡಿದರು. - [ಮಾತು ಬಾರದ ಮಕ್ಕಳ ಆಕಾಶ ಯಾತ್ರೆ!](https://mobiletime.in/2025/12/a-celestial-journey-for-speechless-children/): ಕರಾವಳಿ ಉತ್ಸವದ ಅಂಗವಾಗಿ ಬುಧವಾರ ಕಾರವಾರಕ್ಕೆ ಹೆಲಿಕಾಪ್ಟರ್ ಆಗಮಿಸಿದೆ. ಆಗಸದಲ್ಲಿ ಹಾರಾಡುತ್ತಿದ್ದ ಹೆಲಿಕಾಪ್ಟರ್ ನೋಡಿ ಸಂಭ್ರಮಿಸುತ್ತಿದ್ದ ಮಕ್ಕಳು ಈ ದಿನ ಸ್ವತಃ ಹೆಲಿಕಾಪ್ಟರಿನಲ್ಲಿ ಹಾರಾಡಿ ಸಂತಸವ್ಯಕ್ತಪಡಿಸಿದ್ದಾರೆ. ಆಶಾನಿಕೇತನ ಶಾಲೆಯ ಕಿವುಡ ಹಾಗೂ ಮಕ್ಕಳಿಗೆ ಶಾಸಕ ಸತೀಶ್ ಸೈಲ್ ಅವರು ತಮ್ಮ ಪ್ರಾಯೋಜಕತ್ವದಲ್ಲಿ ಹೆಲಿಕಾಪ್ಟರ್ ಯಾನ ನಡೆಸಿದ್ದಾರೆ. ತಮ್ಮ ಜೀವನದಲ್ಲಿ ಇದೇ ಮೊದಲ ಬಾರಿಗೆ ಹೆಲಿಕ್ಯಾಪ್ಟರ್ ಮೂಲಕ ಹಾರಾಟ ಮಾಡಿದ ಮಕ್ಕಳು ಚಪ್ಪಾಳೆ ತಟ್ಟಿ ಸಂಭ್ರಮಿಸಿದ್ದಾರೆ. ಡಿಸೆAಬರ್ 21ರಂದು ನಡೆದ ಶಾಸಕ ಸತೀಶ್ ಸೈಲ್ ಅವರು ತಮ್ಮ ಜನ್ಮದಿನದ ಪ್ರಯುಕ್ತ ಆಶಾ ನಿಕೇತನ ವಿಶೇಷ ಶಾಲೆಗೆ ಭೇಟಿ ನೀಡಿದ್ದರು. ಆ ವೇಳೆಯಲ್ಲಿಯೇ ಮಕ್ಕಳನ್ನು ಹೆಲಿಕಾಪ್ಟರ್ ಮೂಲಕ ಹಾರಾಟ ನಡೆಸುವ ಯೋಜನೆ ರೂಪಿಸಿದ್ದರು. ಸತೀಶ್ ಸೈಲ್ ಅವರ ಪುತ್ರಿ ಸಾಚಿ ಸೈಲ್ ಸಹ ಮಕ್ಕಳಿಗೆ ವಿಶೇಷ ಕೊಡುಗೆ ನೀಡಲು ನಿರ್ಧರಿಸಿದ್ದು, ಈ ದಿನ ಸೈಲ್ ಕುಟುಂಬದವರು ಮಕ್ಕಳ ಜೊತೆ ಹೆಲಿಕಾಪ್ಟರ್ ಹಾರಾಟ ನಡೆಸಿದರು. ನಾಲ್ವರು ಪೌರ ಕಾರ್ಮಿಕರಿಗೆ ಸಹ ಸತೀಶ್ ಸೈಲ್ ಅವರು ಹೆಲಿಕಾಪ್ಟರ್ ಹತ್ತಿಸಿದರು. `ಸಾರ್ವಜನಿಕರಿಗೆ ಅನುಕೂಲವಾಗುವಂತೆ 3900ರೂ ದರದಲ್ಲಿ ಹೆಲಿಕಾಪ್ಟರ್ ಯಾನಕ್ಕೆ ಅವಕಾಶ ನೀಡಲಾಗಿದೆ. 7 ನಿಮಿಷಗಳ ಕಾಲ ಹೆಲಿಕಾಪ್ಟರ್ ಹಾರಾಟ ನಡೆಸಲಿದೆ’ ಎಂದು ಜಿಲ್ಲಾಧಿಕಾರಿ ಕೆ ಲಕ್ಷಿಪ್ರಿಯಾ ಮಾಹಿತಿ ನೀಡಿದರು. `ಮುಂದಿನ 5 ದಿನಗಳ ಕಾಲ ಹೇಲಿಕ್ಯಾಪ್ಟರ್ ರೈಡ್ ಬೆಳ್ಳಗೆ 9 ಗಂಟೆಯಿAದ ಸಂಜೆ 4 ಗಂಟೆಯವರೆಗೆ ನಡೆಯಲಿದೆ’ ಎಂದು ತಿಳಿಸಿದರು. - [ಅಡಿಕೆ ಮರಗಳ ಮಾರಣಹೋಮ: ರೈತ ಸಂಘದಿoದಲೂ ಆಕ್ರೋಶ](https://mobiletime.in/2025/12/areca-tree-burning-farmers-union-outraged/): ರೈತನ ಜೀವನಕ್ಕೆ ಆಧಾರವಾಗಿದ್ದ ಅಡಿಕೆ ಮರಗಳನ್ನು ಅರಣ್ಯಾಧಿಕಾರಿಗಳು ಕಟಾವು ಮಾಡಿದಕ್ಕೆ ಎಲ್ಲಡೆ ಆಕ್ರೋಶವ್ಯಕ್ತವಾಗುತ್ತಿದೆ. ಅರಣ್ಯಾಧಿಕಾರಿಗಳ ವಿರುದ್ಧ ಜನ ಸಿಡಿದೆದ್ದಿದ್ದು, ಉಗ್ರ ಸ್ವರೂಪದ ಹೋರಾಟಕ್ಕೆ ಸಜ್ಜಾಗುತ್ತಿದ್ದಾರೆ. ಸಿದ್ದಾಪುರದ ಬಿಳಗಿ ಬಳಿ ಅರಣ್ಯ ಇಲಾಖೆಯವರು ನೂರಾರು ಅಡಿಕೆ ಮರಗಳನ್ನು ಕಡಿದು ನಾಶ ಮಾಡಿದ್ದಾರೆ. ಆತಂಕದಲ್ಲಿರುವ ಆ ಭಾಗದ ಜನ ಕಣ್ಣಲ್ಲಿ ನೀರು ಹಾಕುತ್ತಿದ್ದಾರೆ. ಲಕ್ಷಾಂತರ ರೂ ನಷ್ಟ ಅನುಭವಿಸಿದ ಗಣೇಶ ಹೆಗಡೆ ಅವರು ತಲೆ ಮೇಲೆ ಕೈ ಹೊತ್ತು ಕೂತಿದ್ದು, ಅನೇಕ ಹೋರಾಟಗಾರರು ಅವರಿಗೆ ಧೈರ್ಯ ಹೇಳಿದ್ದಾರೆ. ಅರಣ್ಯ ಇಲಾಖೆಯ ನಡೆಯನ್ನು ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾಧ್ಯಕ್ಷ ಶಾಂತಾರಾಮ ನಾಯಕ ಅವರು ಖಂಡಿಸಿದ್ದಾರೆ. ಏಕಾಏಕಿ ಬಡ ರೈತನ ತೋಟಕ್ಕೆ ನುಗ್ಗಿ ಫಲ ಕೊಡುವ ಅಡಿಕೆ ಮರಗಳನ್ನು ಅಧಿಕಾರಿಗಳು ಕಡಿದದಕ್ಕೆ ಅವರು ಆಕ್ರೋಶವ್ಯಕ್ತಪಡಿಸಿದ್ದಾರೆ. ಅರಣ್ಯ ಇಲಾಖೆ ಅಧಿಕಾರಿಗಳು ಪದೇ ಪದೇ ದೌರ್ಜನ್ಯ ಮಾಡುತ್ತಿದ್ದರೂ ಅದನ್ನು ತಡೆಯುವಲ್ಲಿ ವಿಫಲರಾದ ಜನಪ್ರತಿನಿಧಿಗಳ ವಿರುದ್ಧವೂ ಕರ್ನಾಟಕ ಪ್ರಾಂತ ರೈತ ಸಂಘದವರು ಅಸಮಧಾನವ್ಯಕ್ತಪಡಿಸಿದ್ದಾರೆ. `ತಪ್ಪು ಮಾಡಿರುವ ಅರಣ್ಯ ಸಿಬ್ಬಂದಿ ಮೇಲೆ ಶಿಸ್ತು ಕ್ರಮ ತೆಗೆದುಕೊಳ್ಳಬೇಕು’ ಎಂದು ಶಾಂತಾರಾಮ ನಾಯಕ ಅವರು ಒತ್ತಾಯಿಸಿದ್ದಾರೆ. `ಜನವರಿಯಲ್ಲಿ ನಡೆಯುವ ಜಿಲ್ಲಾ ಸಮ್ಮೇಳನದಲ್ಲಿ ಈ ಬಗ್ಗೆ ಚರ್ಚಿಸಿ ಹೋರಾಟ ರೂಪಿಸಲಾಗುತ್ತದೆ’ ಎಂದವರು ಹೇಳಿದ್ದಾರೆ. - [ಕರಾವಳಿ ಉತ್ಸವ: ಕಲೆಯ ಆರಾಧನೆ.. ಸಂಸ್ಕೃತಿಯ ಆಸ್ವಾದನೆ](https://mobiletime.in/2025/12/coastal-festival-worship-of-art-enjoyment-of-culture/): ಕಾರವಾರದಲ್ಲಿ ನಡೆಯುತ್ತಿರುವ ಕರಾವಳಿ ಉತ್ಸವ ದಿನದಿಂದ ದಿನಕ್ಕೆ ಮೆರಗುಪಡೆಯುತ್ತಿದ್ದು, ಈ ದಿನ ನಡೆದ ರಂಗೋಲಿ ಹಾಗೂ ಅಡುಗೆ ಸ್ಪರ್ಧೆಯಲ್ಲಿ ಅನೇಕರು ಭಾಗವಹಿಸಿದ್ದಾರೆ. ಜಿಲ್ಲೆಯ ಬೇರೆ ಬೇರೆ ತಾಲೂಕುಗಳಿಂದ ಜನ ಆಗಮಿಸಿ ತಮ್ಮ ಪ್ರತಿಭೆ ಪ್ರದರ್ಶಿಸಿದ್ದಾರೆ. ಉತ್ಸವದ ಅಂಗವಾಗಿ ನಡೆದ ಸ್ಪರ್ಧೆಯಲ್ಲಿ ಕಾಣಿಸಿದ ರಂಗೋಲಿಗಳು ನೋಡುಗರ ಕಣ್ಮನ ಸೆಳೆದವು. ಕರಾವಳಿ ಶೈಲಿಯ ಅಡುಗೆಗಳು ಬಾಯಿ ಚಪ್ಪರಿಸುವಂತೆ ಮಾಡಿದವು. ಜಿಲ್ಲಾಧಿಕಾರಿಗಳ ನೂತನ ಕಚೇರಿಯಲ್ಲಿ ಆಯೋಜಿಸಲಾದ ರಂಗೋಲಿ ಸ್ಪರ್ಧೆಗೆ ಮಹಿಳೆಯರು ಉತ್ಸಾಹದಿಂದ ಆಗಮಿಸಿದ್ದರು. ತಮ್ಮ ನಿಯೋಜಿತ ಸ್ಥಳದಲ್ಲಿ ಬಗೆ ಬಗೆಯ ರಂಗೋಲಿ ಹಾಕಿದ್ದರು. ಹೂವಿನ ದಳಗಳಲ್ಲಿ ಹಾಕಿದ ಬಣ್ಣ ಬಣ್ಣದ ರಂಗೋಲಿ ಜೊತೆ ಧಾನ್ಯಗಳಿಂದ ಶೃಂಗರಿಸಿದ ರಂಗೋಲಿಗಳು ಜನರ ಮನ ಗೆದ್ದವು. 14-18 ವರ್ಷದ ಮಕ್ಕಳಿಗೆ ಆಯೋಜಿಸಿದ್ದ ಪ್ರೀ ಹ್ಯಾಂಡ್ ರಂಗೋಲಿ ಸ್ಪರ್ಧೆಯಲ್ಲಿ ಸದಾಶಿವಗಡದ ಕಣಸಗಿರಿಯ ಧನಶ್ರೀ ರತ್ನಾಕರ ಮಾಳ್ವೇಕರ ಪ್ರಥಮ, ಹಬ್ಬುವಾಡದ ಆರ್ಯಶ್ರೀ ಎ ದುರ್ಗೇಕರ ದ್ವಿತೀಯ, ಹಬ್ಬುವಾಡದ ಸ್ಮೃತಿ ಸಂಜೀವ ವರ್ಣೇಕರ ತೃತೀಯ ಬಹಮಾನಪಡೆದರು. 18 ವರ್ಷ ಮೇಲ್ಪಟ್ಟ ಮಹಿಳೆಯರಿಗೆ ಪ್ರೀ ಹ್ಯಾಂಡ್ ರಂಗೋಲಿ ಸ್ಪರ್ಧೆಯಲ್ಲಿ ಕದ್ರಾದ ಸುಮಾ ಸುರೇಂದ್ರ ಪೆಡ್ನೇಕರ ಪ್ರಥಮ, ಬಾಡದ ಸಂಕ್ರಿವಾಡಾದ ಭಾರತಿ ಅರುಣ ನಾಯ್ಕ ದ್ವಿತೀಯ, ಗುರುಮಠದ ಕೊಮಲ್ ಮಂಜುನಾಥ ಪಾಳಂಕರ ತೃತೀಯ ಬಹುಮಾನಪಡೆದರು. 18 ವರ್ಷ ಮೇಲ್ಪಟ್ಟ ಮಹಿಳೆಯರಿಗೆ ಹೂವಿನ ರಂಗೋಲಿ ಸ್ಪರ್ಧೆಯಲ್ಲಿ ಕೋಡಿಭಾಗದ ರಾಸಿಕಾ ಕೆ ಗೋಕರ್ಣ ಪ್ರಥಮ, ಬಿಣಗಾದ ಅರ್ಪಿತಾ ಅಶೋಕ ಗೌಡ ದ್ವಿತೀಯ, ಅಂಕೋಲಾದ ಪ್ರೇಮಾ ಆರ್ ಗಾಂವಕರ ತೃತೀಯ ಬಹಮಾನ ಪಡೆದರು. ನಗರದ ಮಾಲಾದೇವಿ ಮೈದಾನದಲ್ಲಿ ಕರಾವಳಿ ಶೈಲಿಯ ತರಹೇವಾರು ಅಡುಗೆಗಳು ಗಮನ ಸೆಳೆದವು. ಮಹಿಳೆಯರ ಜೊತೆ ಪುರುಷರು ಸ್ಪರ್ಧೆಗೆ ಬಂದು ಪೈಪೋಟಿ ನೀಡಿದ್ದು, ಬಗೆ ಬಗೆ ಖಾದ್ಯಗಳು ಬಾಯಲ್ಲಿ ನೀರುಣಿಸಿದವು. ಕರಾವಳಿ ಶೈಲಿಯ ಮೀನಿನ ಸಾರು, ಫ್ರೆöÊ, ಮಸಾಲಾ ಬಂಗಡೆ ಹಾಗೂ ಸಸ್ಯಹಾರಿ ಅಡುಗೆಗಳನ್ನು ಸವಿಯಲು ಪ್ರೇಕ್ಷಕರು ಮುಗಿಬಿದ್ದರು. ತಟ್ಟೆಯಲ್ಲಿ ವಿಶೇಷವಾಗಿ ಪ್ರಸ್ತುತ ಪಡಿಸಿದ ಎಲ್ಲಾ ಅಡುಗೆಗಳ ರುಚಿ ನೋಡಿದ ನಿರ್ಣಾಯಕರು ತೀರ್ಪು ನೀಡಿದರು. ಮಾಂಸಹಾರಿ ಅಡುಗೆ ಸ್ಪರ್ಧೆಯಲ್ಲಿ ಅಸ್ನೋಟಿ ಪ್ರಸಾದ ವಿ ಸಾಳುಂಕೆ ಪ್ರಥಮ, ಕಾರವಾರದ ಹೊಸಳಿ ನಜರಿನ ಶೇಖ್ ದ್ವಿತೀಯ, ಶುಭಾಂಗಿ ಮಂಜುನಾಥ ಶಿರೋಡಕರ ತೃತೀಯ ಬಹಮಾನ ಪಡೆದದರು. ಶಾಖಾಹಾರಿ ಅಡುಗೆ ಸ್ಪರ್ಧೆಯಲ್ಲಿ ಕ್ರೀಮ್ಸ್ ಕ್ಯಾಂಪಸ್‌ನ ಶ್ವೇತಾ ಕೆ ಎಸ್ ಪ್ರಥಮ, ಮಾಜಾಳಿಯ ಅಶ್ವಿನಿ ಅಶೋಕ ಕುಲಕರ್ಣಿ ದ್ವಿತೀಯ, ಯಲ್ಲಾಪುರ ಅಂಬೇಡ್ಕರ್ ನಗರದ ರೂಪಾ ಪಟನಕರ ತೃತೀಯ ಬಹಮಾನಪಡೆದರು. ಜಿಲ್ಲಾಧಿಕಾರಿ ಕೆ ಲಕ್ಷಿಪ್ರಿಯಾ ಅವರು ಮಾಲಾದೇವಿ ಕ್ರೀಡಾಂಗಣದಲ್ಲಿ ನಡೆದ ಅಡುಗೆ ಸ್ಪರ್ಧೆಯಯಲ್ಲಿ ಆಹಾರ ಸವಿದರು. - [ಶಿರಸಿ | ಜಾತ್ರೆಗೆ ಬಂದ 5 ಕೋಟಿ ಹಣ ಎಲ್ಲಿ?](https://mobiletime.in/2025/12/sirsi-where-is-the-5-crore-money-that-came-from-the-fair/): ಶಿರಸಿ ಜಾತ್ರೆ ವಿಷಯದಲ್ಲಿ ಶಾಸಕ ಭೀಮಣ್ಣ ನಾಯ್ಕ ಅವರು ಸುಳ್ಳು ಹೇಳಿ ಸಿಕ್ಕಿ ಬಿದ್ದಿದ್ದಾರೆ. ಕಳೆದ ಜಾತ್ರೆಗೆ ಸರ್ಕಾರದಿಂದ 5 ಕೋಟಿ ರೂ ಅನುದಾನ ಬಂದಿರುವುದಾಗಿ ಭೀಮಣ್ಣ ನಾಯ್ಕ ಅವರು ಹೇಳಿಕೊಂಡಿದ್ದು, ಇನ್ನೊಂದು ಜಾತ್ರೆ ಘೋಷಣೆ ಆದರೂ `ಸರ್ಕಾರದಿಂದ ಯಾವುದೇ ಅನುದಾನ ಬಂದಿಲ್ಲ’ ಎಂಬ ಸಂಗತಿ ಹೊರಬಿದ್ದಿದೆ. ಮಾಹಿತಿ ಹಕ್ಕು ಕಾಯ್ದೆಯ ದಾಖಲೆಗಳಿಂದ ಈ ಸತ್ಯ ಬಹಿರಂಗವಾಗಿದ್ದು, ಶಾಸಕರು ಆಡಿದ ಸುಳ್ಳಿಗೆ ಸಾಮಾಜಿಕ ಕಾರ್ಯಕರ್ತ ಅನಂತಮೂರ್ತಿ ಹೆಗಡೆ ಅಸಮಧಾನವ್ಯಕ್ತಪಡಿಸಿದ್ದಾರೆ. `ಸುಳ್ಳು ಹೇಳಿ ಸಿಕ್ಕಿಬಿದ್ದ ಶಾಸಕರು ಮಾರಿಕಾಂಬೆಯ ಸನ್ನಿಧಾನದಲ್ಲಿ ಪ್ರಾಯಶ್ಚಿತ ಮಾಡಿಕೊಂಡು ಈ ಬಾರಿಯಾದರೂ ಆ ಹಣ ತರಬೇಕು’ ಎಂದು ಅನಂತಮೂರ್ತಿ ಹೆಗಡೆ ಆಗ್ರಹಿಸಿದ್ದಾರೆ. `ಪಾಪ ಕಳೆದುಕೊಳ್ಳಲು ದೇವಸ್ಥಾನಕ್ಕೆ ತೆರಳುತ್ತಾರೆ. ಆದರೆ, ಶಾಸಕ ಭೀಮಣ್ಣ ನಾಯ್ಕ ಅವರು ದೇವಸ್ಥಾನದ ವಿಷಯದಲ್ಲಿ ಸುಳ್ಳು ಹೇಳಿ ದೊಡ್ಡ ಪಾಪ ಮಾಡಿದ್ದಾರೆ. ಶಿರಸಿಯಲ್ಲಿ ಸಾಕಷ್ಟು ಸುಧಾರಣಾ ಕೆಲಸ ಆಗಬೇಕಿದ್ದು, ಜಾತ್ರೆಯ ನೆಪದಲ್ಲಾದರೂ ಈ ಕೆಲಸ ನಡೆಯಬೇಕು’ ಎಂದು ಅನಂತಮೂರ್ತಿ ಹೆಗಡೆ ಅವರು ಹೇಳಿದ್ದಾರೆ. `ಸರಕಾರಕ್ಕೆ ಕರಾವಳಿ ಉತ್ಸವದ ಹೆಸರಿನಲ್ಲಿ ಮೋಜು-ಮಸ್ತಿ ಮಾಡಲು ಹಣವಿದೆ. ಆದರೆ, ಶಿರಸಿ ಜಾತ್ರೆಗೆ ನೀಡಲು ಹಣವಿಲ್ಲ’ ಎಂದವರು ಕಿಡಿಕಾರಿದ್ದಾರೆ. `ಕಾಂಗ್ರೆಸ್ ಸರಕಾರದಲ್ಲಿ ಈವರೆಗೆ ಬಸವ ವಸತಿ ಯೋಜನೆ, ಅಂಬೇಡ್ಕರ್ ವಸತಿ ಯೋಜನೆ, ದೇವರಾಜ್ ಅರಸು ವಸತಿ ಯೋಜನೆ ಅಡಿಯಲ್ಲಿ ಒಂದೇ ಒಂದು ಮನೆಯೂ ಶಿರಸಿ ಸಿದ್ದಾಪುರ ಭಾಗದಲ್ಲಿ ಮಂಜೂರಾಗಿಲ್ಲ. ಮನೆಹಾನಿ ಆದ ಸ್ಥಳಗಳಿಗೆ ಭೇಟಿ ನೀಡುವ ಶಾಸಕರು ಶಾಶ್ವತ ಮನೆ ನಿರ್ಮಾಣ ಮಾಡಿಕೊಡುವ ಭರವಸೆ ಮಾತ್ರ ನೀಡಿದ್ದು, ಅದು ಈಡೇರಿಲ್ಲ’ ಎಂದು ಅನಂತಮೂರ್ತಿ ಹೆಗಡೆ ಹೇಳಿದ್ದು, ಆ ಕುರಿತಾದ ದಾಖಲೆಯನ್ನು ಸಹ ಸಂಗ್ರಹಿಸಿದ್ದಾರೆ. `ದೇವನಮನೆ ಗ್ರಾಮದಲ್ಲಿ ಅಂಗನವಾಡಿ ಕಾಮಗಾರಿಗೆ ಕಳೆದ ಮೇ ತಿಂಗಳಲ್ಲಿ ಭೂಮಿ ಪೂಜೆ ನೆರವೇರಿಸಲಾಗಿತ್ತು. ಆದರೆ ಇದುವರೆಗೂ ಕಾಮಗಾರಿ ಆರಂಭವೇ ಆಗಿಲ್ಲ. ಸಂಬAಧ ಪಟ್ಟ ಇಂಜಿನೀಯರ್ ಕೇಳಿದರೆ ಸಮರ್ಪಕ ಉತ್ತರ ದೊರೆಯುತ್ತಿಲ್ಲ. ಮಕ್ಕಳಿಗೆ ಅಂಗನವಾಡಿ ಕಟ್ಟಡ ಇಲ್ಲದೆ ಅವರಿವರ ಮನೆಯಲ್ಲಿ ಅಂಗನವಾಡಿ ನಡೆಸಲಾಗುತ್ತಿದೆ’ ಎಂದು ಮತ್ತಿಘಟ್ಟ ಗ್ರಾ ಪಂ ಸದಸ್ಯ ನಾರಾಯಣ ಮತ್ತಿಘಟ್ಟ ದೂರಿದ್ದಾರೆ. ಕೊಡ್ನಗದ್ದೆ ಗ್ರಾಮ ಪಂಚಾಯತ್ ಅಧ್ಯಕ್ಷ ಪ್ರವೀಣ್ ಹೆಗಡೆ ಸಹ ತಮ್ಮ ಅಸಮಧಾನ ಹೊರಹಾಕಿದ್ದಾರೆ. ಬಿಜೆಪಿ ನಗರ ಮಂಡಲ ಅಧ್ಯಕ್ಷ ಆನಂದ್ ಸಾಲೇರ್, ಪಕ್ಷದ ಪ್ರಧಾನ ಕಾರ್ಯದರ್ಶಿ ನಾಗರಾಜ್ ನಾಯ್ಕ್, ಜಿಲ್ಲಾ ಬಿಜೆಪಿ ಎಸ್ಸಿ ಮೋರ್ಚಾ ಅಧ್ಯಕ್ಷ ಶ್ರೀಕಾಂತ್ ಬಳ್ಳಾರಿ, ಪ್ರಮುಖರಾದ ಜಿ ಎಸ್ ಹೆಗಡೆ ಸಹ ಜಾತ್ರೆ ಹೆಸರಿನಲ್ಲಿ ಶಾಸಕರು ಪುಕ್ಕಟ್ಟೆ ಪ್ರಚಾರಪಡೆದಿದನ್ನು ಖಂಡಿಸಿದ್ದಾರೆ. - [ಕುಡುಕನ ಕಾಸಿಗೆ ಕೈ ಹಾಕಿದ ಪೊಲೀಸ್: ಅಮಾನತು!](https://mobiletime.in/2025/12/policeman-who-took-a-drunkards-money-suspended/): ಕುಡಿದು ವಾಹನ ಚಲಾಯಿಸಿದವರನ್ನು ಬೆದರಿಸಿ ಹಣಪಡೆದಿದ್ದ ಪೊಲೀಸ್ ಅಧಿಕಾರಿಯೊಬ್ಬರ ತಲೆದಂಡವಾಗಿದೆ. ಪೊಲೀಸ್ ಅಧಿಕಾರಿ ಜೊತೆ ಸಿಬ್ಬಂದಿಯೊಬ್ಬರನ್ನು ಸರ್ಕಾರ ಅಮಾನತು ಮಾಡಿದೆ. ಕೆಲ ದಿನದ ಹಿಂದೆ ಭಟ್ಕಳ ಗ್ರಾಮೀಣ ಠಾಣೆಯ ಪಿಐ ಮಂಜುನಾಥ್ ಲಿಂಗಾರೆಡ್ಡಿ ಅವರು ಮದ್ಯಪಾನ ಮಾಡಿ ವಾಹನ ಚಲಾಯಿಸಿದವರನ್ನು ತಡೆದಿದ್ದರು. ವಾಹನ ಚಾಲಕರಿಂದ 15 ಸಾವಿರ ರೂ ದಂಡ ವಸೂಲಿ ಮಾಡಿದ್ದರು. ಆದರೆ, ಆ ದಂಡವನ್ನು ಸರ್ಕಾರಕ್ಕೆ ಪಾವತಿಸಿರಲಿಲ್ಲ. ಈ ಬಗ್ಗೆ ದೂರು ಸಲ್ಲಿಕೆಯಾಗಿದ್ದು, ಉನ್ನತ ತನಿಖೆಗೆ ಆದೇಶವಾಗಿತ್ತು. ಈ ಬೆನ್ನಲ್ಲೆ ಮಂಜುನಾಥ ಲಿಂಗಾರೆಡ್ಡಿ ಅವರ ವಿರುದ್ಧ ಇನ್ನೂ ಅನೇಕ ಭ್ರಷ್ಟಾಚರ ಆರೋಪಗಳು ಕೇಳಿ ಬಂದಿದ್ದವು. ಮೇಲಧಿಕಾರಿಗಳು ಸಹ ಮಂಜುನಾಥ ಲಿಂಗರೆಡ್ಡಿ ಅವರಿಗೆ ಸಾಕಷ್ಟು ಎಚ್ಚರಿಕೆ ನೀಡಿದ್ದರು. ಆದರೂ, ಸುಧಾರಣೆ ಕಂಡಿರಲಿಲ್ಲ. ಇದೇ ವೇಳೆ ಹಣಪಡೆದ ಆರೋಪ ಎದುರಾಗಿದ್ದು, ಮದ್ಯಪಾನ ಮಾಡಿ ವಾಹನ ಚಲಾಯಿಸಿದ ವ್ಯಕ್ತಿಯಿಂದ ಸ್ವೀಕರಿಸಿದ ಹಣ ಸರ್ಕಾರಕ್ಕೆ ಪಾವತಿಯಾಗದೇ ಇರುವುದು ಗೊತ್ತಾಯಿತು. ಪ್ರಾಥಮಿಕ ತನಿಖೆಯಲ್ಲಿ ಸಹ ಈ ಅಕ್ರಮ ಸಾಭೀತಾಯಿತು. ಈ ಹಿನ್ನಲೆ ಪಿಐ ಮಂಜುನಾಥ ಲಿಂಗರೆಡ್ಡಿ ಅಮಾನತಾದರು. ಇದೇ ಪ್ರಕರಣದಲ್ಲಿ ಪಿಐಗೆ ಸಹಕರಿಸಿದ್ದ ಆರೋಪದ ಅಡಿ ಭಟ್ಕಳ ಗ್ರಾಮೀಣ ಠಾಣೆಯ ಸಿಬ್ಬಂದಿ ಅಶೋಕ ನಾಯ್ಕ ಸಹ ಅಮಾನತು ಆಗಿದ್ದಾರೆ. `ದೂರು ನೀಡಬೇಡಿ’ ಎಂದು ಅಶೋಕ ನಾಯ್ಕ ಬೆದರಿಸಿದ ಕಾರಣ ಅವರನ್ನು ಅಮಾನತು ಮಾಡಲಾಗಿದೆ. ಈ ಇಬ್ಬರ ವಿರುದ್ಧವೂ ತನಿಖೆ ಮುಂದುವರೆದಿದೆ. - [ಸಾಧಕ ಜೇನು ಕೃಷಿಕನಿಗೆ ಸನ್ಮಾನ](https://mobiletime.in/2025/12/honored-for-a-successful-beekeeper/): ಅನೇಕ ವರ್ಷಗಳಿಂದ ಜೇನು ಕೃಷಿಯಲ್ಲಿ ತೊಡಗಿರುವ ಯಲ್ಲಾಪುರದ ತಿಮ್ಮಣ್ಣ ಭಟ್ಟ ಅವರಿಗೆ `ಉತ್ತಮ ಜೇನು ಕೃಷಿಕ’ ಪ್ರಶಸ್ತಿ ಸಿಕ್ಕಿದೆ. ಯಲ್ಲಾಪುರದ ದೋಣಗಾರದಲ್ಲಿ ತಿಮ್ಮಣ್ಣ ಭಟ್ಟ ಅವರು ಅಡಿಕೆ ಜೊತೆ 25 ವರ್ಷಗಳಿಂದ ಜೇನು ಕೃಷಿ ನಡೆಸುತ್ತಿದ್ದಾರೆ. ವೈಜ್ಞಾನಿಕ ಜೇನು ಕೃಷಿ ವಿಷಯವಾಗಿ ಅವರು ಪರಿಣಿತರಾಗಿದ್ದು, ರಾಜ್ಯದ ನಾನಾ ಭಾಗಗಳಿಗೆ ತೆರಳಿ ರೈತರಿಗೆ ತರಬೇತಿ ನೀಡಿದ್ದಾರೆ. ಜೇನು ಸಾಕಾಣಿಕೆಗೆ ಅಗತ್ಯವಿರುವ ಪರಿಕ್ಕರಗಳನ್ನು ಸಹ ಅವರು ಒದಗಿಸುತ್ತಿದ್ದಾರೆ. ಜೇನು ಸಾಕಾಣಿಕೆಯಿಂದ ಫಸಲು ಹೆಚ್ಚಳವಾಗುವುದನ್ನು ತಿಮ್ಮಣ್ಣ ಭಟ್ಟ ಅವರು ಪ್ರಾಯೋಗಿಕ ವಿಧಾನಗಳ ಮೂಲಕ ಕಂಡುಕೊAಡಿದ್ದಾರೆ. ಈ ಬಗ್ಗೆ ಅವರು ಎಲ್ಲಡೆ ಪ್ರಚಾರ ನಡೆಸಿದ್ದು, ಅವರ ಸೇವೆಯನ್ನು ಕೃಷಿ ಹಾಗೂ ತೋಟಗಾರಿಕಾ ಇಲಾಖೆ ಗಮನಿಸಿ ಗೌರವಿಸಿದೆ. ರಾಜ್ಯದಲ್ಲಿಯೇ ಮೊದಲ ಬಾರಿಗೆ ಆಧುನಿಕ ತಂತ್ರಜ್ಞಾನ ಅಳವಡಿಸಿಕೊಂಡು ಯಂತ್ರದ ಮೂಲಕ ಮೇಣದ ಹಾಳೆ ತಯಾರಿಸುವ ಬಗ್ಗೆ ತಿಮ್ಮಣ್ಣ ಭಟ್ಟ ಅವರು ಮಾಹಿತಿ ನೀಡಿದರು. ಅಗತ್ಯವಿರುವ ಅರ್ಹರಿಗೆ ತೋಟಗಾರಿಕಾ ಇಲಾಖೆ ಮೂಲಕ ತಿಮ್ಮಣ್ಣ ಭಟ್ಟ ಅವರು ಜೇನು ಪೆಟ್ಟಿಗೆಗಳನ್ನು ಪೂರೈಸುತ್ತಿದ್ದಾರೆ. - [ಅರಣ್ಯಾಧಿಕಾರಿಗಳ ಅಟ್ಟಹಾಸ: ಎಕರೆ ಕ್ಷೇತ್ರದ ಅಡಿಕೆ ಮರ ಸಂಪೂರ್ಣ ನಾಶ!](https://mobiletime.in/2025/12/forest-officials-outrage-areca-trees-in-an-acre-of-land-were-completely-destroyed/): ರಾಜಕಾರಣಿಗಳ ದೊಡ್ಡ ದೊಡ್ಡ ಅರಣ್ಯ ಅತಿಕ್ರಮಣದ ಬಗ್ಗೆ ಅರಿವಿದ್ದರೂ ಮೌನವಾಗಿರುವ ಅರಣ್ಯ ಇಲಾಖೆ ಜೀವನೋಪಾಯಕ್ಕಾಗಿ ಅಡಿಕೆ ಬೆಳೆದವರ ಮೇಲೆ ದಬ್ಬಾಳಿಕೆ ಮಾಡುತ್ತಿದೆ. ಫಸಲು ಕೊಡಲು ಸಿದ್ಧವಾಗಿದ್ದ ಅಡಿಕೆ ಮರವನ್ನು ಅರಣ್ಯಾಧಿಕಾರಿಗಳು ಕಡಿದು ನಾಶ ಮಾಡಿದ್ದಾರೆ. ಸಿದ್ದಾಪುರದ ಬಿಳಗಿ ಬಳಿ 35ಕ್ಕೂ ಅಧಿಕ ಅರಣ್ಯ ಸಿಬ್ಬಂದಿ ಅಡಿಕೆ ತೋಟಕ್ಕೆ ನುಗ್ಗಿದ್ದಾರೆ. ಗಣೇಶ ವೆಂಕಟ್ರಮಣ ಹೆಗಡೆ ಗೊಳಿಕೈ ಅವರು ಮಗುವಿನಂತೆ ಬೆಳೆಸಿದ್ದ ಅಡಿಕೆ ಮರಗಳಿಗೆ ಅರಣ್ಯ ಸಿಬ್ಬಂದಿ ಕೊಡಲಿ ಏಟು ಕೊಟ್ಟಿದ್ದಾರೆ. ಸುಮಾರು ಒಂದು ಎಕರೆ ಪ್ರದೇಶದ ಅಡಿಕೆ ಮರಗಳನ್ನು ಅರಣ್ಯ ಇಲಾಖೆಯವರು ಕಡಿದಿದ್ದಾರೆ. ಗಣೇಶ ಹೆಗಡೆ ಅವರು 1998ರಿಂದಲೂ ಅದೇ ಜಾಗದಲ್ಲಿ ತೋಟ ಮಾಡಿಕೊಂಡಿದ್ದರು. 35 ವರ್ಷಗಳ ಹಿಂದಿನ ಮರವನ್ನು ಬಿಡದೇ ಸಿಬ್ಬಂದಿ ನಾಶ ಮಾಡಿದರು. ಕ್ಯಾದಗಿ ಅರಣ್ಯ ವಲಯದಲ್ಲಿ ಅಡಿಕೆ ಮರ ಇರುವುದಕ್ಕಾಗಿ ಅಧಿಕಾರಿಗಳು ಈ ಕ್ರಮ ಜರುಗಿಸಿದ್ದು, ಫಲ ನೀಡುತ್ತಿದ್ದ ಮರಗಳು ನೆಲಕ್ಕೆ ಉರುಳಿದವು. `ಅಜ್ಜನ ಕಾಲದಿಂಲೂ ಆ ಭೂಮಿಯಲ್ಲಿ ಉಳುಮೆ ಮಾಡಿಕೊಂಡು ಬರಲಾಗುತ್ತಿದೆ. 98ರ ಅವಧಿಯಲ್ಲಿ ಅಡಿಕೆ ನಾಟಿ ಮಾಡಿದ್ದು, ಅದನ್ನು ನಾಶ ಮಾಡಿದ್ದಾರೆ’ ಎಂದು ಕುಟುಂಬದವರು ಅಳಲು ತೋಡಿಕೊಂಡರು. `ಗಿಡ ನೆಡಬೇಕಾದ ಅರಣ್ಯ ಇಲಾಖೆಯವರು ಆ ಜಾಗಕ್ಕೆ ಬೇಲಿ ಹಾಕಬಹುದಿತ್ತು. ಆದರೆ, ಗಿಡಗಳನ್ನು ನಾಶ ಮಾಡಿದ್ದು ಸರಿ ಅಲ್ಲ’ ಎಂದು ಜನ ಆಕ್ರೋಶವ್ಯಕ್ತಪಡಿಸಿದರು. ಹೋರಾಟಗಾರರ ಆಕ್ರೋಶ: ಅನಾಧಿಕಾಲದಿಂದಲೂ ಸಾಗುವಳಿ ಮಾಡುತ್ತಿದ್ದ ಕ್ಷೇತ್ರದಲ್ಲಿನ ಅಡಿಕೆ ಗಿಡ ಕಡಿದ ವಿಷಯ ಅರಿತು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ಅವರು ಆತಂಕವ್ಯಕ್ತಪಡಿಸಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿ ರೈತರ ಅಳಲು ಆಲಿಸಿದ ಅವರು `ಗಿಡ ಕಟಾವು ಪ್ರಕ್ರಿಯೆಯಿಂದ ಕಾನೂನು ಉಲ್ಲಂಘನೆ ಆಗಿದೆ’ ಎಂದಿದ್ದಾರೆ. `1998ರಲ್ಲಿ ಅರಣ್ಯವಾಸಿಗಳ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಾಗಿದೆ. ಜಿಪಿಎಸ್ ಸರ್ವೆ ಮೂಲಕ ಅತಿಕ್ರಮಣ ದೃಢಪಡಿಸಿಕೊಂಡಿದ್ದು, ಹೆಗಡೆ ಅವರು ಅತಿಕ್ರಮಣಕ್ಕೆ ಅರ್ಜಿ ಸಲ್ಲಿಸಿದ್ದು ದಾಖಲೆಯಿದೆ. ಹೀಗಿರುವಾಗ ಜಂಟಿ ಸರ್ವೇ ನಡೆಸದೇ ಒಕ್ಕಲೆಬ್ಬಿಸುವ ವಿಧಾನ ಅನುಸರಿಸಿದ್ದು ಸರಿಯಲ್ಲ’ ಎಂದಿದ್ದಾರೆ. ಮಾಬ್ಲೇಶ್ವರ ನಾಯ್ಕ ಬೇಡ್ಕಣಿ, ಚಂದ್ರ ಶಾನಭಾಗ ಬಂಡಲ್, ರಾಘು ಕವಂಚೂರು, ದಿನೇಶ ನಾಯ್ಕ ಬೇಡ್ಕಣಿ, ಬಾಬು ಮರಾಠಿ, ಯಶವಂತ ನಾಯ್ಕ ಬಂಡಲ್, ಜಗದೀಶ ಶಿರಳಗಿ, ಸಂಕೇತ ನಾಯ್ಕ, ತಿಮ್ಮಪ್ಪ ನಾಯ್ಕ, ಸುಧಾಕರ್ ಮಡಿವಾಳ, ಶೇಖರ್ ನಾಯ್ಕ, ವಾಸು ನಾಯ್ಕ ಹಂಜಗಿ, ಲಕ್ಷಣ ನಾಯ್ಕ ಇತರರು ಅಧಿಕಾರಿಗಳ ಕ್ರಮಕ್ಕೆ ಆಕ್ಷೇಪವ್ಯಕ್ತಪಡಿಸಿದ್ದಾರೆ. - [ಕನಸಿನ ಚಿತ್ರಕ್ಕೆ `ಡ್ರೀಮ್ಸ್' ಎಂದು ಹೆಸರು!](https://mobiletime.in/2025/12/the-dream-movie-is-called-dreams/): ಉತ್ತರ ಕನ್ನಡ ಜಿಲ್ಲೆಯ ಯಶವಂತ ರಾಯ್ಕರ್ ಅವರು ಬರೆದ ಕಥೆ ಸಿನಿಮಾ ಆಗುತ್ತಿದೆ. `ಡ್ರೀಮ್ಸ್’ ಎಂಬ ಸಿನಿಮಾಗೆ ಯಶ್ವಂತ ರಾಯ್ಕರ್ ಅವರು ಚಿತ್ರಕಥೆ ಬರೆದಿದ್ದು, ಅವರೇ ನಿರ್ದೇಶನವನ್ನು ಮಾಡಿದ್ದಾರೆ. ಯಶವಂತ ರಾಯ್ಕರ್ ಅವರು ಅಂಕೋಲಾದ ಮಂಜಗುಣಿಯವರಾಗಿದ್ದು, ಬಾಲ್ಯದಿಂದಲೂ ಸಿನಿಮಾ ಕ್ಷೇತ್ರದ ಬಗ್ಗೆ ಅಪಾರ ಆಸಕ್ತಿಹೊಂದಿದ್ದಾರೆ. ಯಕ್ಷಗಾನ ಕಲಾವಿರಾಗಿರುವ ಅವರು ರಂಗಭೂಮಿ ಪ್ರವೇಶಿಸಿ ಅಲ್ಲಿಯೂ ವಿವಿಧ ಪಾತ್ರಗಳನ್ನು ನಿಭಾಯಿಸಿದ್ದಾರೆ. ಕಳೆದ ಒಂದು ದಶಕದಿಂದ ಸಿನಿಮಾ ಕ್ಷೇತ್ರದಲ್ಲಿರುವ ಅವರು ಸದ್ಯ ಸ್ವಂತ ನಿರ್ದೇಶನದ ಸಾಹಸಕ್ಕೆ ಕೈ ಹಾಕಿದ್ದಾರೆ. ರಾಯಾ ಆರ್ಟ್ಸ್ ಸಂಸ್ಥೆಯ ಅಡಿ ನಿರ್ಮಾಣಗೊಂಡಿರುವ ‘ಡ್ರೀಮ್ಸ್’ ಎಂಬ ಕಿರುಚಿತ್ರದ ಜವಾಬ್ದಾರಿಯನ್ನು ಯಶವಂತ ರಾಯ್ಕರ್ ಅವರು ಹೊಂದಿದ್ದಾರೆ. ಈ ಚಿತ್ರದ ಟ್ರೇಲರ್ `ರಾಯಾ ಆರ್ಟ್ಸ್’ ಯೂಟೂಬ್ ಮೂಲಕ ಬಿಡುಗಡೆಯಾಗಿದೆ. `ಪ್ರತಿಯೊಬ್ಬರಿಗೂ ಒಂದು ಕನಸಿದೆ. ನಮ್ಮ ಸರಳ ಬದುಕನಲ್ಲಿ ಬದುಕಿನ ಅರ್ಥ ಗೊತ್ತಾದಾಗ ಕನಸಿನ ದಾರಿ ಸ್ಪಷ್ಟವಾಗುತ್ತದೆ’ ಎನ್ನುತ್ತ ಟ್ರೇಲರ್ ಜನರ ಗಮನಸೆಳೆಯುತ್ತದೆ. ಬಾಲ್ಯದ ಕನಸು, ಮೌನದ ಸಂಕಟ, ಆಶಾವಾದ ಹಾಗೂ ನೈಜತೆಯನ್ನು ಬಿಂಬಿಸುವ ಕಥನವನ್ನು `ಡ್ರೀಮ್ಸ್’ ಚಿತ್ರದಲ್ಲಿ ಕಣ್ಣಿಗೆ ಕಟ್ಟುವಂತೆ ಚಿತ್ರಿಸಲಾಗಿದೆ. ಭಾವನಾತ್ಮಕ ಸನ್ನಿವೇಶಗಳು ಚಿತ್ರದ ಪ್ರಮುಖ ಶಕ್ತಿ. ಸಾಮಾನ್ಯ ಬದುಕಿನ ಮಧ್ಯೆಯೂ ಕನಸುಗಳನ್ನು ಬಿಟ್ಟುಕೊಡದ ಒಂದು ಮಗುವಿನ ಪ್ರಯಾಣವೇ ಚಿತ್ರದ ಸಾರಾಂಶ. ಈ ಚಿತ್ರದಲ್ಲಿ ಪೃಥ್ವಿರಾಜ್ ಕೊಪ್ಪ, ಅಗಸ್ತ್ಯ ಪೃಥ್ವಿರಾಜ್ ಮತ್ತು ಆಶಿಷ್ ಕುಮಾರ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಸುವರ್ಣಾ ರಾಯ್ಕರ್ ನಿರ್ಮಾಣದಲ್ಲಿ ಚಿತ್ರ ಮೂಡಿಬಂದಿದೆ. ಶಶಿರ್ ಶೃಂಗೇರಿ ಮತ್ತು ಅಶ್ವತ್ ಪೂಜಾರಿ ಅವರ ಛಾಯಾಗ್ರಹಣ, ದಯಾನಂದ ಎಂ ಬಿ ಅವರ ಎಡಿಟಿಂಗ್, DI & VFX ಚಿತ್ರಕ್ಕೆ ತಾಂತ್ರಿಕ ಬೆಂಬಲ ನೀಡಿದೆ. ಅಧ್ವಿಕ್ ಶರ್ಮಾ ಸಂಗೀತ ಸಂಯೋಜನೆ ಚಿತ್ರಕ್ಕೆ ಭಾವನಾತ್ಮಕ ಸ್ಪರ್ಶ ನೀಡುತ್ತದೆ. ಚಿತ್ರದ ಸಹನಿರ್ದೇಶಕರಾಗಿ ಗುರುರಾಜ್, ವೈ ಮಾಧವರಾವ್ ಮತ್ತು ಗೌರಿಶಂಕರ ನಿಂಗಪ್ಪ ಕಾರ್ಯನಿರ್ವಹಿಸಿದ್ದಾರೆ. ಪ್ರಭಾಕರ ಶೆಟ್ಟಿ ಡಬ್ಬಿಂಗ್ ನಿರ್ವಹಿಸಿದ್ದಾರೆ. ಪೋಸ್ಟ್ ಪ್ರೊ ಸ್ಟುಡಿಯೋ ಪಬ್ಲಿಸಿಟಿ ಡಿಸೈನ್ ವಹಿಸಿಕೊಂಡಿದೆ. ಡ್ರೀಮ್ಸ್ ಚಿತ್ರದ ಟ್ರೇಲರ್ ಇಲ್ಲಿ ನೋಡಿ.. - [ಕೈಗಾ ಉದ್ಯೋಗಿಯ ವಿಚಿತ್ರ ವರ್ತನೆ: ಲೈವ್ ವಿಡಿಯೋ ಮೂಲಕ ಆತ್ಮಹತ್ಯೆ!](https://mobiletime.in/2025/12/kaiga-employees-strange-behavior-suicide-via-live-video/): ಕೈಗಾ ಅಣು ವಿದ್ಯುತ್ ಘಟಕದ ಉದ್ಯೋಗಿಯೊಬ್ಬರು ಪತ್ನಿ ಹಾಗೂ ಮಕ್ಕಳಿಗೆ ವಿಡಿಯೋ ಕಾಲ್ ಮಾಡಿ ನೇಣಿಗೆ ಶರಣಾಗಿದ್ದಾರೆ. ಆತ್ಯಹತ್ಯೆಯ ದೃಶ್ಯವಾಳಿಗಳನ್ನು ನೇರವಾಗಿ ನೋಡಿದವರು ದಂಗಾಗಿದ್ದಾರೆ. ಕಾರವಾರದ ಕೈಗಾ ಅಣು ವಿದ್ಯುತ್ ಘಟಕದಲ್ಲಿ ಸಚ್ಚಿದಾನಂದ ಬೀಕಾಜಿ ವಾಗ್ಳೆಕರ್ (44) ಉದ್ಯೋಗಿಯಾಗಿದ್ದರು. ಮಲ್ಲಾಪುರದ ಮಲ್ಟೀಯಲ್ಲಿ ಅವರು ವಾಸವಾಗಿದ್ದರು. ಅವರ ಮಕ್ಕಳು ಮಂಗಳೂರಿನಲ್ಲಿ ವಾಸವಾಗಿದ್ದು, ಮಕ್ಕಳ ವಿದ್ಯಾಬ್ಯಾಸ ನೋಡಿಕೊಳ್ಳುವುದಕ್ಕಾಗಿ ಸಚ್ಚಿದಾನಂದ ಅವರ ಪತ್ನಿ ಇತಿಶ್ರೀ ಅವರು ಮಂಗಳೂರಿನಲ್ಲಿಯೇ ಇದ್ದರು. ಡಿಸೆಂಬರ್ 22ರ ರಾತ್ರಿ 11.30ಕ್ಕೆ ಸಚ್ಚಿದಾನಂದ ವಾಗ್ಳೆಕರ್ ಅವರು ಪತ್ನಿ ಇತಿಶ್ರೀ ಅವರಿಗೆ ವಿಡಿಯೋ ಕಾಲ್ ಮಾಡಿದ್ದರು. ಪತ್ನಿ ಹಾಗೂ ಮಕ್ಕಳ ಜೊತೆ ಕೆಲ ಕಾಲ ಮಾತನಾಡಿದ ಅವರು `ಈಗ ಏನು ಮಾಡುತ್ತೇನೆ ನೋಡಿ’ ಎಂದು ಹೇಳಿದರು. ಸಚ್ಚಿದಾನಂದ ವಾಗ್ಳೆಕರ್ ಅವರು ಏನು ಮಾಡಬಹುದು? ಎಂದು ಅವರ ಪತ್ನಿ ಹಾಗೂ ಮಕ್ಕಳು ಕಾಯುತ್ತಿದ್ದರು. ವಿಡಿಯೋ ಕಾಲ್ ಮೂಲಕ ಮಾತನಾಡುತ್ತಲೇ ಮನೆಯಲ್ಲಿನ ಕೋಣೆ ಪ್ರವೇಶಿಸಿದ ಸಚ್ಚಿದಾನಂದ ವಾಗ್ಳೆಕರ್ ಅವರು ಸ್ಟೂಲ್ ಹತ್ತಿದರು. ಫ್ಯಾನಿಗೆ ಹಗ್ಗ ಕಟ್ಟಿ ಕೊರಳಿಗೆ ಹಾಕಿಕೊಂಡರು. ಕುಟುಂಬದವರು `ಬೇಡ ಬೇಡ’ ಎಂದರೂ ಕೇಳದೇ ಸ್ಟೂಲಿನಿಂದ ಹಾರಿದರು. ಅಲ್ಲಿಗೆ ಅವರ ಪ್ರಾಣಪಕ್ಷಿಯೂ ಹಾರಿ ಹೋಗಿತ್ತು. `ಆತ್ಮಹತ್ಯೆ ಅಪರಾಧ’ - [ಅಪರಿಚಿತ ಮಹಿಳೆ ಮೇಲೆ ಅನಾಚಾರ: ಉಸಿರುಕಟ್ಟಿಸಿ ಸಾಯಿಸಿದ ಕೊಲೆಗಾರ!](https://mobiletime.in/2025/12/murderer-commits-indecency-on-unknown-woman-strangled-to-death/): ಮೀನು ಮಾರುಕಟ್ಟೆಯ ಬಳಿ ಅರೆನಗ್ನ ರೂಪದಲ್ಲಿ ಮಹಿಳೆಯ ಶವ ಕಾಣಿಸಿದ್ದು, ಅತ್ಯಾಚಾರ ನಡೆಸಿ ಕೊಲೆ ಮಾಡಿರುವ ಅನುಮಾನ ವ್ಯಕ್ತವಾಗಿದೆ. ಕಾರವಾರ ನಗರದ ಹಳೆ ಮೀನು ಮಾರುಕಟ್ಟೆಯ ಹಳೆಯ ಕಟ್ಟಡದ ಸಮೀಪ ಶವ ಕಾಣಿಸಿದೆ. ಅಂದಾಜು 50 ವರ್ಷದ ಮಹಿಳೆ ಶವವಾಗಿದ್ದು, ಸಾವನಪ್ಪಿದವರ ಗುರುತು ಪತ್ತೆಯಾಗಿಲ್ಲ. ಹಾಲಿ ಕಾರವಾರದಲ್ಲಿ ವಾಸವಾಗಿರುವ ಹೊನ್ನಾವರ ಕವಲಕ್ಕಿಯ ನಾಗರಾಜ ಫಣಿಯಪ್ಪ ಶೆಟ್ಟಿ ಅವಯೀ ಶವ ನೋಡಿ, ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ದುರ್ವಾಸನೆ ಬರುತ್ತಿರುವುದನ್ನು ನೋಡಿ ಜನ ಆ ಕಡೆ ತೆರಳಿದಾಗ ಶವ ನೋಡಿ ಹೌಹಾರಿದ್ದಾರೆ. ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಮೊದಲು ಅಸಹಜ ಸಾವು ಎಂದು ಭಾವಿಸಲಾಗಿದ್ದು, ನಂತರದ ಮರಣೋತ್ತರ ಪರೀಕ್ಷೆಯಲ್ಲಿ ಅಸಹಜ ಸಾವಲ್ಲ ಎಂಬುದು ಗೊತ್ತಾಗಿದೆ. ಮಹಿಳೆಯ ತುಟಿಯ ಮೇಲೆ ಕಚ್ಚಿದ ಗುರುತು ಕಾಣಿಸಿದೆ. ಉಸಿರುಗಟ್ಟಿಸಿ ಕೊಲೆ ಮಾಡಿದ ಬಗ್ಗೆ ಶವ ಪರೀಕ್ಷೆಯಲ್ಲಿ ಗೊತ್ತಾಗಿದೆ. ಶವದ ಮೇಲೆ ಬಟ್ಟೆಗಳಿರದ ಕಾರಣ ಅತ್ಯಾಚಾರದ ಅನುಮಾನವ್ಯಕ್ತವಾಗಿದೆ. ಮಹಿಳೆಯ ಮಾಹಿತಿ ಜೊತೆ ಆರೋಪಿಗಳಿಗಾಗಿಯೂ ಶೋಧ ನಡೆದಿದೆ.   - [ಮಹೇಶ ಹೆಗಡೆಯೇ ಅಡಿಕೆ ಕಳ್ಳ!](https://mobiletime.in/2025/12/mahesh-hegde-is-a-areca-nut-thief/): ವಿಘ್ನೇಶ್ವರ ಹೆಗಡೆ ಅವರ ತೋಟದಲ್ಲಿದ್ದ ಅಡಿಕೆಯನ್ನು ಮಹೇಶ ಹೆಗಡೆ ಅವರು ಕದ್ದಿದ್ದಾರೆ. ಕದ್ದ ಅಡಿಕೆ ಮರಳಿಸುವಂತೆ ಕೇಳಿದರೂ ಅವರು ಕೊಟ್ಟಿಲ್ಲ. ಯಲ್ಲಾಪುರದ ಹಿತ್ಲಳ್ಳಿ ಹೀರೆಸರದಲ್ಲಿ ವಿಘ್ನೇಶ್ವರ ಗಣಪತಿ ಹೆಗಡೆ ಅವರು ವಾಸವಾಗಿದ್ದಾರೆ. ಕೃಷಿ ಕೆಲಸ ಮಾಡಿಕೊಂಡಿರುವ ಅವರು ತಮ್ಮ ತೋಟದಲ್ಲಿ ಅಡಿಕೆ ಬೆಳೆದಿದ್ದಾರೆ. ಅವರ ಅಡಿಕೆ ತೋಟದಲ್ಲಿದ್ದ 700 ಅಡಿಕೆ ಕೊನೆಗಳು ಕಾಣೆಯಾಗಿದೆ. ಅಲ್ಲಿದ್ದ 47 ಕ್ವಿಂಟಲ್ ಹಸಿ ಅಡಿಕೆಯನ್ನು ವಿಘ್ನೇಶ್ವರ ಹೆಗಡೆ ಅವರ ಚಿಕ್ಕಪ್ಪನ ಮಗ ಮಹೇಶ ಸುಬ್ರಾಯ ಹೆಗಡೆ ಅವರು ಕದ್ದಿದ್ದಾರೆ. ಹಿತ್ಲಳ್ಳಿ ಗ್ರಾಮದ ಬಾಳಗಿಮನೆಯಲ್ಲಿ ಮಹೇಶ ಹೆಗಡೆ ಅವರು ವಾಸವಾಗಿದ್ದು, ಆ ನಂತರ ಮಹೇಶ ಹೆಗಡೆ ಅವರೇ ಅಡಿಕೆ ಕದ್ದಿರುವುದು ಗೊತ್ತಾಗಿದೆ. ಇದರಿಂದ ವಿಘ್ನೇಶ್ವರ ಹೆಗಡೆ ಅವರಿಗೆ 3 ಲಕ್ಷ ರೂ ನಷ್ಟವಾಗಿದೆ. ನವೆಂಬರ್ 14ರಂದು ಅವರ ತೋಟದಲ್ಲಿ ಅಡಿಕೆಯಿದ್ದು, ನವೆಂಬರ್ 20ರಂದು ಅದು ಕಳ್ಳತನವಾಗಿದೆ. ಅಡಿಕೆ ಕದ್ದ ಚಿಕ್ಕಪ್ಪನ ಮಗ ಮಹೇಶ ಹೆಗಡೆ ವಿರುದ್ಧ ವಿಘ್ನೇಶ್ವರ ಹೆಗಡೆ ಅವರು ಸಿಡಿಮಿಡಿಗೊಂಡಿದ್ದಾರೆ. `ಆ ಅಡಿಕೆಯನ್ನು ತನಗೆ ಮರಳಿಸಿಕೊಡಬೇಕು’ ಎಂದು ಅವರು ಪೊಲೀಸ್ ದೂರು ನೀಡಿದ್ದಾರೆ. ಯಲ್ಲಾಪುರ ಪೊಲೀಸರು ಪ್ರಕರಣ ದಾಖಲಿಸಿದ್ದು, ತನಿಖೆ ಶುರು ಮಾಡಿದ್ದಾರೆ. - [ನದಿ ನೀರು ಮಲೀನ ಮಾಡಿದ ಮಹಿಳೆ: ಸಾವು!](https://mobiletime.in/2025/12/woman-who-polluted-river-water-death/): ನಿತ್ಯವೂ ನದಿಗೆ ಕಸ ಎಸೆಯುತ್ತಿದ್ದ ಮಾಸ್ತಮ್ಮ ನಾಯ್ಕ ಅವರನ್ನು ಆ ನದಿಯೇ ಬಲಿಪಡೆದಿದೆ. ಕಸ ಎಸೆಯುವ ವೇಳೆಯಲ್ಲಿಯೇ ನದಿಗೆ ಕಾಲು ಜಾರಿ ಬಿದ್ದು ಮಾಸ್ತಮ್ಮ ನಾಯ್ಕ ಅವರು ಸಾವನಪ್ಪಿದ್ದಾರೆ. ಭಟ್ಕಳದ ಮಾವಿನಕೂರ್ವಾ ಬಂದರಿನ ಬಳಿ ಮಾಸ್ಪಮ್ಮ ನಾಗಪ್ಪ ನಾಯ್ಕ (48) ಅವರು ವಾಸವಾಗಿದ್ದರು. ಮನೆ ಕೆಲಸ ಮಾಡಿಕೊಂಡಿದ್ದ ಅವರು ಮನೆಯ ಎಲ್ಲಾ ಕಸವನ್ನು ಶರಾಬಿ ನದಿಗೆ ಎಸೆಯುತ್ತಿದ್ದರು. ನಿತ್ಯವೂ ಮನೆಯನ್ನು ಸ್ವಚ್ಚ ಮಾಡಿ ಅಲ್ಲಿನ ತ್ಯಾಜ್ಯವನ್ನು ನದಿಗೆ ಬಿಡುತ್ತಿದ್ದರು. ಡಿಸೆಂಬರ್ 22ರಂದು ಸಹ ಅವರು ಬೆಳಗ್ಗೆ ಮನೆ ಕೆಲಸ ಮುಗಿಸಿದ್ದರು. ಮನೆಯನ್ನು ಸುಂದರವನ್ನಾಗಿಸಿದ ನಂತರ ಮಧ್ಯಾಹ್ನ ಕಸ ಎಸೆಯಲು ನದಿ ಬದಿಗೆ ಹೋದರು. ಕಸ ಎಸೆಯುವ ವೇಳೆಯಲ್ಲಿಯೇ ಅವರು ಕಾಲು ಜಾರಿ ನೀರಿಗೆ ಬಿದ್ದರು. ಎಷ್ಟೇ ಪ್ರಯತ್ನ ಮಾಡಿದರೂ ನೀರಿನಿಂದ ಮೇಲೆ ಬರಲು ಸಾಧ್ಯವಾಗಲಿಲ್ಲ. ಅಲ್ಲಿಯೇ ಮುಳುಗಿ ಅವರು ಕೊನೆಯುಸಿರೆಳೆದರು. ಮಾಸ್ತಮ್ಮ ನಾಯ್ಕ ಅವರ ಮಗ ದೇವಿದಾಸ ನಾಯ್ಕ ಅವರು ಈ ಬಗ್ಗೆ ಮಾಹಿತಿ ನೀಡಿದರು. ಭಟ್ಕಳ ಗ್ರಾಮೀಣ ಠಾಣೆ ಪೊಲೀಸರು ವಿವರ ಕೇಳಿ, ಪ್ರಕರಣ ದಾಖಲಿಸಿದರು. - [ಪಾರ್ಟ ಟೈಂ ಉದ್ಯೋಗ: ಮೋಸ!](https://mobiletime.in/2025/12/part-time-job-fraud/): ಮೊದಲ ಬಾರಿ ದಿವ್ಯಾ ಗೌಡ ಅವರು 800ರೂ ಹೂಡಿಕೆ ಮಾಡಿ 200 ರೂ ಲಾಭ ಮಾಡಿದ್ದು, ಎರಡನೇ ಬಾರಿ 3 ಸಾವಿರ ರೂ ಹೂಡಿಕೆ ಮಾಡಿ 900ರೂ ಲಾಭ ಮಾಡಿದ್ದಾರೆ. ಮೂರನೇ ಬಾರಿ 17 ಲಕ್ಷ ರೂ ಹೂಡಿಕೆ ಮಾಡಿ ಮೋಸ ಹೋಗಿದ್ದಾರೆ! ಹೊನ್ನಾವರ ಮಾವಿನಕೂರ್ವಾದದಲ್ಲಿ ದಿವ್ಯಾ ಸುಕ್ರು ಗೌಡ ಅವರು ವಾಸವಾಗಿದ್ದಾರೆ. ಆನ್‌ಲೈನ್ ಮೂಲಕ ಉದ್ಯೋಗ ಹುಡುಕುತ್ತಿರುವ ಅವರಿಗೆ ಇನಸ್ಟಾ ಗ್ರಾಮಿನಲ್ಲಿ ವಾಟ್ಸಪ್ ಸಂಖ್ಯೆಯೊAದು ಕಾಣಿಸಿದೆ. `ಮನೆಯಲ್ಲಿಯೇ ಕುಳಿತು ಹಣಗಳಿಸಿ’ ಎಂಬ ಜಾಹೀರಾತಿಗೆ ಅವರು ಮಾರು ಹೋಗಿದ್ದಾರೆ. ವಾಟ್ಸಪ್ ಮೂಲಕ ಪರಿಚಯ ಆದವರು ವೆಬ್ ಸೈಟ್ ಒಂದನ್ನು ಕಾಣಿಸಿ ಅಲ್ಲಿರುವ ಉತ್ಪನ್ನಗಳಿಗೆ ರೇಟಿಂಗ್ ನೀಡುವಂತೆ ಸೂಚಿಸಿದ್ದಾರೆ. ಅವರ ಸೂಚನೆಯನ್ನು ದಿವ್ಯಾ ಗೌಡ ಅವರು ಪಾಲಿಸಿದ್ದಾರೆ. ಮತ್ತೊಂದು ದಿನ ಇನ್ನೊಂದು ವೆಬ್‌ಸೈಟ್ ಕಾಣಿಸಿ ಅದಕ್ಕೆ ರಿವ್ಯು ಬರೆಯುವಂತೆ ಹೇಳಿದ್ದಾರೆ. ಅದನ್ನು ಸಹ ದಿವ್ಯಾ ಗೌಡ ಅವರು ಮಾಡಿದ್ದಾರೆ. `ನಾವು ಹೇಳಿದ ಕಡೆ ಹಣ ಹೂಡಿಕೆ ಮಾಡಿದರೆ ಲಾಭ ಬರುತ್ತದೆ’ ಎಂದು ವಂಚಕರು ಹೇಳಿದ್ದಾರೆ. ದಿವ್ಯಾ ಗೌಡ ಅವರು ಮೊದಲು 800ರೂ ಹೂಡಿಕೆ ಮಾಡಿ 1 ಸಾವಿರ ರೂ ಗೆದ್ದಿದ್ದಾರೆ. ಮರುದಿನ 3 ಸಾವಿರ ರೂ ಹೂಡಿಕೆ ಮಾಡಿ 3900ರೂಪಡೆದಿದ್ದಾರೆ. ಅದಾದ ನಂತರ 1710921ರೂ ಹೂಡಿಕೆ ಮಾಡಿದ್ದು, ಆ ಹಣವೂ ಬಂದಿಲ್ಲ. ಲಾಭವೂ ಸಿಕ್ಕಿಲ್ಲ! - [ಲೋಕಾಯುಕ್ತ ವ್ಯಾಪ್ತಿಗೆ ಸಹಕಾರಿ ಸಂಘ: ಭ್ರಷ್ಟ ನೌಕರನಿಗೆ ಸಂಕಟ!](https://mobiletime.in/2025/12/cooperative-society-under-lokayukta-jurisdiction-trouble-for-corrupt-employee/): ಉತ್ತರ ಕನ್ನಡ ಜಿಲ್ಲೆಯ ಮೂರು ಕಡೆ ಮಂಗಳವಾರ ಲೋಕಾಯುಕ್ತ ದಾಳಿ ನಡೆದಿದೆ. ಜಿಲ್ಲೆಯ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಸಹಕಾರಿ ಸಂಘದ ಅಧಿಕಾರಿ ಮೇಲೆ ಲೋಕಾಯುಕ್ತರು ದಾಳಿ ಮಾಡಿದ್ದಾರೆ. ಸಹಕಾರಿ ಸಂಘಗಳು ಸಾರ್ವಜನಿಕ ಆಸ್ತಿಯಾಗಿದೆ. ಹೀಗಾಗಿ ಅಲ್ಲಿ ಕೆಲಸ ಮಾಡುವ ನೌಕರರು ಸಹ ಲೋಕಾಯುಕ್ತ ಅಧೀನದಲ್ಲಿ ಬರುವ ಬಗ್ಗೆ ಈಚೆಗೆ ನ್ಯಾಯಾಲಯ ಆದೇಶ ಹೊರಡಿಸಿದೆ. ಈ ಹಿನ್ನಲೆ ಲೋಕಾಯುಕ್ತ ಅಧಿಕಾರಿಗಳು ಭ್ರಷ್ಟ ನೌಕರನ ಬಗ್ಗೆ ಮಾಹಿತಿ ಸಂಗ್ರಹಿಸಿದ್ದು, ದಾಳಿ ಮಾಡಿದ್ದಾರೆ. ಸಿದ್ಧಾಪುರ ತಾಲೂಕಿನ ಕೋಲಸಿರ್ಸಿ ಗ್ರೂಪ್ ಗ್ರಾಮ ಸೇವಾ ಸಹಕಾರಿ ಸಂಘದ ಮುಖ್ಯ ಅಧಿಕಾರಿ ಮಾರುತಿ ಯಶವಂತ ಮಾಲ್ವಿ ಅವರ ಮೇಲೆ ಲೋಕಾಯುಕ್ತ ದಾಳಿ ನಡೆದಿದೆ. ಸಿದ್ದಾಪುರ ಹಾಗೂ ಹಳಿಯಾಳದಲ್ಲಿ ಅವರು ಹೊಂದಿದ್ದ ಆಸ್ತಿಗಳ ಮೇಲೆ ಲೋಕಾಯುಕ್ತರು ದಾಳಿ ಮಾಡಿದ್ದು, ವಿವಿಧ ದಾಖಲೆಗಳ ಪರಿಶೀಲನೆ ಮಾಡಿದ್ದಾರೆ. ಮಾರುತಿ ಮಾಲ್ವಿ ಅವರ ಮನೆ, ಕಚೇರಿ ಹಾಗೂ ಅವರ ಒಡೆತನದ ಅಂಗಡಿಗಳ ಮೇಲೆ ದಾಳಿ ನಡೆದಿದ್ದು, ಲೆಕ್ಕಪತ್ರಗಳ ತಪಾಸಣೆ ನಡೆಯುತ್ತಿದೆ. ಮಾರುತಿ ಮಾಲ್ವಿ ಅವರ ಆಸ್ತಿ ಪತ್ರ, ಬ್ಯಾಂಕ್ ದಾಖಲೆಗಳನ್ನು ಲೋಕಾಯುಕ್ತ ಪಿಐ ವಿನಾಯಕ ಬಿಲ್ಲವ ಅವರು ಪರಿಶೀಲಿಸಿದ್ದಾರೆ. ಹಳಿಯಾಳದಲ್ಲಿರುವ ಆಸ್ತಿಗಳನ್ನು ಡಿವೈಎಸ್ಪಿ ಧನ್ಯಾ ನಾಯಕ ಅವರು ತಪಾಸಣೆ ಮಾಡುತ್ತಿದ್ದಾರೆ. - [ಗಣಿ ದಣಿಗಳಿಗೆ ಅಧಿಕಾರಿಗಳೇ ಶರಣು!](https://mobiletime.in/2026/01/officials-surrender-to-mine-owners/): `ಕಂದಾಯ, ಪೊಲೀಸ್ ಹಾಗೂ ಗಣಿ ಇಲಾಖೆ ಅಧಿಕಾರಿಗಳ ಹೆಸರು ದುರುಪಯೋಗಪಡಿಸಿಕೊಂಡು ಅನೇಕರು ಅಕ್ರಮ ಮರಳುಗಾರಿಕೆ ನಡೆಸುತ್ತಿದ್ದಾರೆ. ಅಕ್ರಮದ ವಿರುದ್ಧ ದೂರು ನೀಡಿದರೂ ಅಧಿಕಾರಿಗಳು ಕ್ರಮ ಜರುಗಿಸದಿರುವುದು ಅನುಮಾನಕ್ಕೆ ಕಾರಣ’ ಎಂದು ಯಲ್ಲಾಪುರ ಪಟ್ಟಣ ಪಂಚಾಯತ ಮಾಜಿ ಸದಸ್ಯ ಸೋಮೇಶ್ವರ ನಾಯ್ಕ ಹೇಳಿದ್ದಾರೆ. `ಯಲ್ಲಾಪುರ ತಾಲೂಕಿನಲ್ಲಿ ಎಲ್ಲೆಂದರಲ್ಲಿ ಮರಳು ಗುಡ್ಡೆ ಕಾಣಿಸುತ್ತಿದೆ. ಕರಾವಳಿ ಭಾಗದಿಂದ ರಾತ್ರಿ ವೇಳೆ ಮರಳು ಬರುತ್ತಿದೆ. ನಸುಕಿನ ಅವಧಿಯಲ್ಲಿ ಮರಳು ಲಾರಿಗಳು ಯಲ್ಲಾಪುರ ಪ್ರವೇಶಿಸುತ್ತಿದ್ದು, ಈ ಬಗ್ಗೆ ಮಾಹಿತಿ ನೀಡಿದರೂ ಅಧಿಕಾರಿಗಳು ಲಾರಿ ಹಿಡಿದಿಲ್ಲ. ಮರಳು ಮಾರಾಟಗಾರರು ಸಹ ಪೊಲೀಸ್, ಕಂದಾಯ ಹಾಗೂ ಗಣಿ ಇಲಾಖೆ ಅಧಿಕಾರಿಗಳ ಹೆಸರು ಹೇಳಿ ಗ್ರಾಹಕರಿಂದ ಹಣ ವಸೂಲಿ ಮಾಡುತ್ತಿದ್ದಾರೆ. 15-17 ಸಾವಿರ ರೂಪಾಯಿಗೆ ಸಿಗಬೇಕಿದ್ದ ಮರಳನ್ನು 30-35 ಸಾವಿರ ರೂಪಾಯಿಗೆ ಮಾರಾಟ ಮಾಡಲಾಗುತ್ತಿದೆ’ ಎಂದವರು ಆರೋಪಿಸಿದ್ದಾರೆ. `ಕಟ್ಟಡ ನಿರ್ಮಾಣ ಕೆಲಸಕ್ಕಾಗಿ ಬಡವರು ಮರಳು ಬಯಸುತ್ತಿದ್ದು, ಕೆಲವರು ಅದನ್ನೇ ಬಂಡವಾಳವನ್ನಾಗಿಸಿಕೊoಡಿದ್ದಾರೆ. ಅಧಿಕಾರಿಗಳ ಹೆಸರಿನಲ್ಲಿ ದುಡ್ಡು ಹೋಗುತ್ತಿದ್ದರೂ ಅದನ್ನು ಕೇಳುವವರಿಲ್ಲ’ ಎಂದು ಅಸಮಧಾನವ್ಯಕ್ತಪಡಿಸಿದ್ದಾರೆ. `ಅಕ್ರಮ ಮರಳುಗಾರಿಕೆಯ ಸಮಸ್ಯೆಗಳ ಬಗ್ಗೆ ತಹಶೀಲ್ದಾರ್ ಗಮನಕ್ಕೆ ತರಲಾಗಿದೆ. ಪೊಲೀಸರಿಗೆ ಸಹ ಮಾಹಿತಿ ಕೊಡಲಾಗಿದೆ. ಅದಾಗಿಯೂ ಯಾವುದೇ ಕ್ರಮವಾಗಿಲ್ಲ’ ಎಂದು ಸೋಮೇಶ್ವರ ನಾಯ್ಕ ಅಸಮಧಾನಹೊರ ಹಾಕಿದ್ದಾರೆ.  ಇನ್ನೂ ಒಂದು ವಾರದ ಒಳಗೆ ಅಕ್ರಮ ಮರಳುಗಾರಿಕೆ ತಡೆಯದೇ ಇದ್ದರೆ ತಹಶೀಲ್ದಾರ್ ಕಚೇರಿ ಎದುರು ಪ್ರತಿಭಟನೆ ನಡೆಸುವುದಾಗಿಯೂ ಸೋಮೇಶ್ವರ ನಾಯ್ಕ ಅವರು ಎಚ್ಚರಿಸಿದ್ದಾರೆ.   - [ಕಳ್ಳರ ಕೈ ಸೇರಿದ ಮಾಜಿ ಶಾಸಕರ ಪಿಸ್ತೂಲು!](https://mobiletime.in/2026/01/ex-lawmakers-pistol-belonging-to-thieves/): ಯಲ್ಲಾಪುರ-ಮುಂಡಗೋಡು ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ವಿ ಎಸ್ ಪಾಟೀಲ್ ಅವರ ರಕ್ಷಣೆಗಿದ್ದ ಬಂದೂಕು ಕಳ್ಳತನವಾಗಿದೆ. ವಿ ಎಸ್ ಪಾಟೀಲ್ ಅವರ ಮನೆಗೆ ನುಗ್ಗಿ ಕಳ್ಳರು ಬಂದೂಕು ಕದ್ದಿದ್ದಾರೆ. ಯಲ್ಲಾಪುರ ವಿಧಾನಸಭಾ ಕ್ಷೇತ್ರ ರಚನೆ ಆದಾಗ ವಿ ಎಸ್ ಪಾಟೀಲ್ ಅವರು ಬಿಜೆಪಿಯಿಂದ ಸ್ಪರ್ಧಿಸಿದ್ದರು. ಮೊದಲ ಚುನಾವಣೆಯಲ್ಲಿಯೇ ಅವರು ಜಯಬೀರಿ ಬಾರಿಸಿದ್ದರು. ಆ ಅವಧಿಯಲ್ಲಿಯೇ ಅವರು ತಮ್ಮ ರಕ್ಷಣೆಗಾಗಿ ಬಂದೂಕು ಪರವಾನಿಗೆ ಹೊಂದಿದ್ದರು. ಡಬಲ್ ಬ್ಯಾರಲ್ ಬಂದೂಕನ್ನು ಸಹ ವಿ ಎಸ್ ಪಾಟೀಲ್ ಅವರು ಖರೀದಿಸಿದ್ದರು. ಅದೇ ಬಂದೂಕು ಇದೀಗ ಕಳ್ಳತನವಾಗಿದೆ. ಮಾಜಿ ಶಾಸಕ ವಿ ಎಸ್ ಪಾಟೀಲ ಅವರು ಮುಂಡಗೋಡಿನ ಅಂದಲಗಿಯಲ್ಲಿ ಅವರಿಗೆ 9 ಎಕರೆ ಕೃಷಿಭೂಮಿಹೊಂದಿದ್ದಾರೆ. ಅಲ್ಲಿಯೇ ಅವರು ವಾಸವಾಗಿದ್ದಾರೆ. ಸದ್ಯ ಕಾಂಗ್ರೆಸ್ ಪಕ್ಷದ ಪ್ರಮುಖ ನಾಯಕರಾಗಿರುವ ಅವರು ರಾಜಕಾರಣದ ಜೊತೆ ಕೃಷಿ ಕಾಯಕದಲ್ಲಿಯೂ ಸಕ್ರೀಯರಾಗಿದ್ದಾರೆ. ಹೀಗಿರುವಾಗ ಅವರು ತಮ್ಮ ಸ್ವ ರಕ್ಷಣೆಗಾಗಿ ಹೊಂದಿದ್ದ ಬಂದೂಕನ್ನು ಕಳೆದುಕೊಂಡಿದ್ದಾರೆ. ವಿ ಎಸ್ ಪಾಟೀಲ್ ಅವರು ತಮ್ಮ ಜಮೀನಿನಲ್ಲಿರುವ ಬೋರಿನ ಮನೆಯಲ್ಲಿ ಬಂದೂಕು ಇಡುತ್ತಿದ್ದರು. 2025ರ ಡಿಸೆಂಬರ್ 31ರ ಸಂಜೆ ಅವರು ಕೊನೆಯದಾಗಿ ಬಂದೂಕು ಬಳಸಿದ್ದರು. ಜನವರಿ 1ರ ಬೆಳಗ್ಗೆ 10 ಗಂಟೆ ಅವಧಿಗೆ ಬೋರಿನ ಮನೆ ಕಡೆ ಹೋದಾಗ ಅಲ್ಲಿ ಬಂದೂಕು ಕಾಣಲಿಲ್ಲ. 40 ಸಾವಿರ ರೂ ಮೌಲ್ಯದ ಡಬಲ್ ಬ್ಯಾರೆಲ್ ಬಂದೂಕು ಕಾಣದ ಕಾರಣ ಅವರು ಆತಂಕಕ್ಕೆ ಒಳಗಾದರು. ಕುಟುಂಬದವರು ಹಾಗೂ ಸಂಬoಧಿಕರ ಬಳಿಯೂ ಚರ್ಚಿಸಿದರು. ಆದರೆ, ಯಾರೂ ಅವರ ಬಂದೂಕಿನ ಬಗ್ಗೆ ಸುಳಿವು ಕೊಡಲಿಲ್ಲ. ಕಳೆದು ಹೋದ ಬಂದೂಕನ್ನು 15 ದಿನಗಳ ಕಾಲ ವಿ ಎಸ್ ಪಾಟೀಲ ಅವರು ಹುಡುಕಾಡಿದ್ದಾರೆ. ಆದರೆ, ಎಲ್ಲಿಯೂ ಆ ಬಂದೂಕು ಸಿಕ್ಕಿಲ್ಲ. ಅದನ್ನು ಕದ್ದ ಕಳ್ಳನ ಬಗ್ಗೆಯೂ ಗೊತ್ತಾಗಲಿಲ್ಲ. ಈ ಎಲ್ಲಾ ಹಿನ್ನಲೆ ವಿ ಎಸ್ ಪಾಟೀಲ ಅವರು ಮುಂಡಗೋಡು ಪೊಲೀಸ್ ಠಾಣೆಗೆ ಆಗಮಿಸಿದ್ದು, ಸ್ವ ರಕ್ಷಣೆಗಾಗಿಪಡೆದಿದ್ದ ಬಂದೂಕು ಕಳ್ಳತನದ ಬಗ್ಗೆ ಪೊಲೀಸರಿಗೆ ದೂರಿದರು. ಸದ್ಯ ಮುಂಡಗೋಡು ಪೊಲೀಸರು ಆ ಬಂದೂಕಿನ ಹುಡುಕಾಟ ನಡೆಸಿದ್ದಾರೆ. - [ವಾಟ್ಸಪ್ ಚಾಟ್ ರಹಸ್ಯ: ಸಾವಿನ ಹಿಂದಿನ ಸತ್ಯ ಏನು?](https://mobiletime.in/2026/01/whatsapp-chat-evidence-what-is-the-truth-behind-the-death/): ಜಿಲ್ಲಾ ಪಂಚಾಯತ ಮಾಜಿ ಸದಸ್ಯೆ ಚೈತ್ರಾ ಕೋಠಾರಕರ್ ಅವರ ಪುತ್ರ ಚಿರಾಗ ಕೋಠಾರಕರ್ ಅವರ ಕಾಟ ಸಹಿಸಲಾಗದೇ  ಆತ್ಮಹತ್ಯೆಗೆ ಶರಣಾದ ರಿಶೀಲ್ ಡಿಸೋಜಾ ಅವರ ಜೊತೆ ವಾಟ್ಸಪ್ ಚಾಟ್ ಬಹಿರಂಗವಾಗಿದೆ. ಚಿರಾಗ್ ಕೋಠಾರಕರ್ ಅವರು ರಿಶೀಲ್ ಡಿಸೋಜಾ ಅವರನ್ನು ಕೆಟ್ಟದಾಗಿ ಬೈದು ನಿಂದಿಸಿರುವ ಹಾಗೇ ಕಾಣುತ್ತಿದೆ. ಕಾರವಾರದ ಕದ್ರಾದಲ್ಲಿ ಈಚೆಗೆ ರಿಶೇಲ್ ಡಿಸೋಜಾ ಅವರು ಆತ್ಮಹತ್ಯೆಗೆ ಶರಣಾಗಿದ್ದರು. ಚಿರಾಗ ಕೋಠಾರಕರ್ ಅವರ ಹಿಂಸೆ ಸಹಿಸಲಾಗದೇ ರಿಶೇಲ್ ಡಿಸೋಜಾ ಅವರು ಆತ್ಮಹತ್ಯೆಗೆ ಶರಣಾಗಿರುವ ಅನುಮಾನವ್ಯಕ್ತವಾಗಿತ್ತು. ಇದಕ್ಕೆ ಪೂರಕವಾಗಿ ರಿಶೇಲ್ ಡಿಸೋಜಾ ಅವರ ಕುಟುಂಬದವರು ಚಿರಾಗ ಕೋಠಾರಕರ್ ವಿರುದ್ಧ ಅನೇಕ ಆರೋಪ ಮಾಡಿದ್ದರು. ಚಿರಾಗ ಕೋಠಾರಕರ್ ಅತ್ಯಾಚಾರವೆಸರಿಗಿದ ಬಗ್ಗೆಯೂ ಅನುಮಾನವ್ಯಕ್ತಪಡಿಸಿದ್ದರು. ಈ ಬೆನ್ನಲ್ಲೇ ಚಿರಾಗ ಕೋಠಾರಕರ್ ಹಾಗೂ ರಿಶೇಲ್ ಡಿಸೋಜಾ ನಡುವೆ ನಡೆದ ವಾಟ್ಸಪ್ ಚಾಟ್ ಬಹಿರಂಗವಾಗಿದೆ. ಚಿರಾಗ ಕೋಠಾರಕರ್ ಅವರು ಅಸಭ್ಯವಾಗಿ ಚಾಟ್ ಮಾಡಿದ ದಾಖಲೆಗಳನ್ನು ರಿಶೀಲ್ ಡಿಸೋಜಾ ಅವರ ಕುಟುಂಬದವರು ಬಿಡುಗಡೆ ಮಾಡಿದ್ದಾರೆ. ರಿಶೀಲ್ ಡಿಸೋಜಾ ಅವರ ಆತ್ಮಹತ್ಯೆಗೆ ಚಿರಾಗ ಕೋಠಾರಕರ್ ಅವರೇ ಕಾರಣರಾಗಿದ್ದು, ಪೊಲೀಸ್ ತನಿಖೆಯ ಬಗ್ಗೆಯೂ ಅಸಮಧಾನವ್ಯಕ್ತಪಡಿಸಿದ್ದಾರೆ. ಈ ಪ್ರಕರಣದ ಪ್ರಮುಖ ಆರೋಪಿ ಚಿರಾಗ ಕೋಠಾರ್ಕರ ಎಂಬಾತನನ್ನು ಬಂಧಿಸಲು ಒತ್ತಾಯಿಸಿ ಬುಧವಾರ ಕಾರವಾರದಲ್ಲಿ ಕ್ರೈಸ್ತ ಸಮುದಾಯದ ಸದಸ್ಯರು ಸುದ್ದಿಗೋಷ್ಠಿ ನಡೆಸಿ ಒತ್ತಾಯಿಸಿದ್ದಾರೆ. ಈ ತನಿಖೆಯಲ್ಲಿ ರಾಜಕೀಯ ಒತ್ತಡಗಳಿರುವ ಬಗ್ಗೆಯೂ ಆರೋಪಿಸಿದ್ದಾರೆ. ಪ್ರಮುಖರಾದ ಮಾಬೇಲ್ ಪಿಂಟೋ ಅವರು ಮಾತನಾಡಿ `ಆರೋಪಿಯನ್ನು ಬಂಧಿಸದ ಕಾರಣ ಸಾಕ್ಷಿ ನಾಶವಾಗುವ ಸಾಧ್ಯತೆಯಿದೆ’ ಎಂದಿದ್ದಾರೆ. ಕಾರವಾರ ಅಂಕೋಲಾ ಕ್ರಿಶ್ಚಿಯನ್ ಫೋರಮ್‌ನ ಅಧ್ಯಕ್ಷ ಲಿಯೋ ಲೂಯಿಸ್ ಮಾತನಾಡಿ `ರಿಶೇಲ್ ಡಿಸೋಜಾ ಅವರ ದೇಹದಲ್ಲಿ ಕಂಡುಬAದಿದ್ದೆAದು ಹೇಳಲಾಗುತ್ತಿರುವ ಕೆಲವು ಶಾರೀರಿಕ ಗುರುತುಗಳ ಬಗ್ಗೆ ತಕ್ಷಣವೇ ಫಾರೆನ್ಸಿಕ್ ಪರೀಕ್ಷೆಗೆ ಒಳಪಡಿಸಬೇಕು’ ಎಂದು ಆಗ್ರಹಿಸಿದ್ದಾರೆ. `ಆರೋಪಿತ ವ್ಯಕ್ತಿಯ ಸಂಬoಧಿಯೊಬ್ಬರು ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದು ಈ ತನಿಖೆಗೆ ಸಂಬAಧಿಸಿದ ಮಾಹಿತಿಯನ್ನು ಕುಟುಂಬಕ್ಕೆ ಸೋರಿಕೆ ಮಾಡುತ್ತಿದ್ದಾರೆ’ ಎಂದು ಸುದ್ದಿಗೋಷ್ಠಿಯಲ್ಲಿದ್ದವರು ಹೇಳಿದ್ದಾರೆ. ಪ್ರಮುಖರಾದ ಸ್ಯಾಮಸನ್ ಡಿಸೌಝಾ, ಕೆರೋಲಿನ ಫರ್ನಾಂಡಿಸ್, ಫ್ರಾಂಕಿ ಗುಡಿನ್ಹೋ, ಕ್ಲೆಮೆಂಟ್ ಗುಡಿನ್ಹೋ, ವಿಲ್ಸನ್ ಫರ್ನಾಂಡಿಸ್, ಜೂಜೆ ಫರ್ನಾಂಡಿಸ್, ಅಕ್ವಿಲ್ ಫರ್ನಾಂಡಿಸ್, ನಿರ್ಮಲಾ ಅಲ್ಫಾನ್ಸೋ, ಜೂಲಿಯಟ್ ಡಯಾಸ್, ಜೋನ್ಹಿ ಲೋಪೇಝ್, ಅಗಸ್ಟಿನ್ ನರೋನ್ಹಾ, ಪೆರ್ಪೆಟ್ ಡಿಸೌಝಾ, ಹಿಲ್ಡಾ ಕಾರ್ಡೊಝಾ, ಮಾಯಾ ಫರ್ನಾಂಡಿಸ್, ಝ್ಸೆವಿಯರ್, ಸೀಮಾ ಪಾಟಿಲ, ಅಂಥೋನಿ ಡಿಕೋಸ್ಟಾ, ದಿಲ್ಶಾದ್ ಕುಟ್ಟಿ, ಸ್ನೇಹಾ ಹಲ್ದನಕರ್ ಇನ್ನಿತರರು ವಿವಿಧ ಆರೋಪ ಮಾಡಿದ್ದಾರೆ.   - [ಟ್ಯಾಂಕರ್ ಚಕ್ರಕ್ಕೆ ಸಿಲುಕಿದ ಬೈಕ್ ಸವಾರ: ಸಾವು!](https://mobiletime.in/2026/01/biker-hit-by-tanker-truck-death/): ಹೊನ್ನಾವರದ ಶರಾವತಿ ಸೇತುವೆ ಮೇಲೆ ನಡೆದ ಅಪಘಾತದಲ್ಲಿ ಮೀನು ವ್ಯಾಪಾರಿಯೊಬ್ಬರು ಸಾವನಪ್ಪಿದ್ದಾರೆ. ಅತಿ ವೇಗ ಅಪಘಾತಕ್ಕೆ ಕಾರಣ. ಹೊನ್ನಾವರದ ಗುಂಡುಬಾಳ ಬಳಿಯ ಮುಟ್ಟಾದ ಜಾನ್ ಲುವಿಸ್ (61) ಅವರು ಮೀನು ವ್ಯಾಪಾರ ಮಾಡಿ ಬದುಕು ಕಟ್ಟಿಕೊಂಡಿದ್ದರು. ಬುಧವಾರ ಅವರು ಕಾಸರಕೋಡಿನಿಂದ ಮೀನು ತರುತ್ತಿದ್ದರು. ಶರಾವತಿ ಸೇತುವೆ ಬಳಿ ಅವರು ಮುಂದಿದ್ದ ಟ್ಯಾಂಕರ್ ಹಿಂದಿಕ್ಕುವುದಕ್ಕಾಗಿ ತಮ್ಮ ಬೈಕಿನ ವೇಗ ಹೆಚ್ಚಿಸಿದರು. ಈ ವೇಳೆ ಟ್ಯಾಂಕರ್ ಚಕ್ರಕ್ಕೆ ಸಿಲುಕಿ ಅವರು ನೆಲಕ್ಕೆ ಅಪ್ಪಳಿಸಿದ್ದು, ಅದೇ ನೋವಿನಲ್ಲಿ ಕೊನೆಯುಸಿರೆಳೆದರು. ಅಪಘಾತದಲ್ಲಿ ಜಾನ್ ಲುವಿಸ್ ಅವರ ಕಾಲು ತುಂಡಾಗಿದ್ದು, ರಕ್ತ ಸೋರುತ್ತಿತ್ತು. ಅವರನ್ನು ಆಸ್ಪತ್ರೆಗೆ ಸೇರಿಸುವ ಪ್ರಯತ್ನ ನಡೆದರೂ ಪ್ರಯೋಜನವಾಗಲಿಲ್ಲ. - [ಒಂದು ಸಾವು: ಹಲವು ಶಂಕೆ!](https://mobiletime.in/2026/01/one-death-many-suspicions/): ಸಿದ್ದಾಪುರ ಗರಿಗಡ್ಡೆಯಲ್ಲಿ ಮಹೇಶ ನಾಯ್ಕ ಅವರ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಅವರ ಸಾವಿನಲ್ಲಿ ಅನೇಕ ಅನುಮಾನಗಳುವ್ಯಕ್ತವಾಗಿದೆ. ಸಿದ್ದಾಪುರದ ನೆಲ್ಲಿಮಡ್ಕಿ ಬಳಿ ಮಹೇಶ ವೆಂಕಟ್ರಮಣ ನಾಯ್ಕ (33) ಅವರು ವಾಸವಾಗಿದ್ದರು. ಬುಧವಾರ ಬೆಳಗ್ಗೆ ಹಳ್ಳಿಕಾನದಿಂದ ನೆಲ್ಲಿಮಡ್ಕಿಯ ಮನೆ ಕಡೆ ಅವರು ಬೈಕಿನಲ್ಲಿ ಬರುತ್ತಿದ್ದರು. ಗಿರಗಡ್ಡೆ ರಸ್ತೆ ಮದ್ಯೆ ಅವರ ಬೈಕ್ ಬಿದ್ದಿರುವುದನ್ನು ನೋಡಿದ ಜನ ಕಾಡಿನ ಕಡೆ ಕಣ್ಣಾಯಿಸಿದರು. ಗುಡ್ಡದ ಮೇಲಿರುವ ವಿದ್ಯುತ್ ಕಂಬಕ್ಕೆ ಮಹೇಶ ನಾಯ್ಕ ಅವರು ನೇತಾಡುತ್ತಿರುವುದು ಕಾಣಿಸಿತು. ಮಹೇಶ ನಾಯ್ಕ ಅವರ ಮೈ ಮೇಲೆ ಪೂರ್ಣ ಪ್ರಮಾಣದಲ್ಲಿ ಬಟ್ಟೆಗಳಿರಲಿಲ್ಲ. ಮಹೇಶ ನಾಯ್ಕ ಅವರು ಹೀಗೆ ಆತ್ಮಹತ್ಯೆಗೆ ಶರಣಾಗುವ ಚಂಚಲ ಮನಸ್ಸಿನವರು ಸಹ ಆಗಿರಲಿಲ್ಲ. ಅದರಲ್ಲಿಯೂ ಮನೆಗೆ ಮರಳುತ್ತಿದ್ದ ಮಹೇಶ ನಾಯ್ಕ ಅವರ ಬೈಕ್ ರಸ್ತೆ ಮೇಲೆ ಬಿದ್ದಿರುವುದು ಹಾಗೂ ಅವರು ವಿದ್ಯುತ್ ಕಂಬಕ್ಕೆ ನೇತಾಡುತ್ತಿರುವುದು ಸಂಶಯಕ್ಕೆ ಕಾರಣವಾಯಿತು. ಹೀಗಾಗಿ ಕುಟುಂಬದವರು ಈ ಸಾವಿನ ಬಗ್ಗೆ ಅನುಮಾನವ್ಯಕ್ತಪಡಿಸಿದರು. ಶಿರಸಿ ಡಿವೈಎಸ್ಪಿ ಗೀತಾ ಪಾಟೀಲ್, ಸಿದ್ದಾಪುರ ಪಿಐ ಸೀತಾರಾಮ ಬಿ ಜೆ ಹಾಗೂ ಪಿಸೈ ಶಾಂತಿನಾಥ ಪಾಸಾನೆ ಸದ್ಯ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಸಾವಿನ ಬಗ್ಗೆ ತನಿಖೆ ಶುರುವಾಗಿದೆ. - [ಹಳೆ ದ್ವೇಷಕ್ಕೆ ಹೊಸ ವಿಷಯ: ನಡು ರಸ್ತೆಯಲ್ಲಿ ಮಾರಾಮಾರಿ!](https://mobiletime.in/2026/01/a-new-topic-for-an-old-feud-a-fight-in-the-middle-of-the-road/): ಯಲ್ಲಾಪುರದ `ಮಹಾಗಣಪತಿ ಆಟೋ ವರ್ಕ’ ಗ್ಯಾರೇಜಿನಲ್ಲಿ ಗಲಾಟೆ ನಡೆದಿದೆ. ಅಲ್ಲಿದ್ದ ಸ್ಪಾನರ್-ರಾಡ್ ತೆಗೆದುಕೊಂಡು ಸತೀಶ ಹೆಗಡೆ ಹಾಗೂ ಗೋಪಾಲಕೃಷ್ಣ ಭಟ್ಟ ಹೊಡೆದಾಡಿಕೊಂಡಿದ್ದಾರೆ. ಯಲ್ಲಾಪುರದ ಉಮ್ಮಚ್ಗಿ ಬಳಿಯ ಕುಂದರಗಿ ಸಮೀಪದ ಹಿತ್ಲಳ್ಳಿ ಹೀರೆಸರದಲ್ಲಿ ಸತೀಶ ನಾರಾಯಣ ಹೆಗಡೆ ಅವರು ವಾಸವಾಗಿದ್ದಾರೆ. ಅದೇ ಭಾಗದ ತೋಟದ ಕಲ್ಲಳ್ಳಿಯ ಗೋಪಾಲಕೃಷ್ಣ ಉದಯ ಭಟ್ಟ ಅವರು ವಾಸವಾಗಿದ್ದಾರೆ. ಸತೀಶ ಹೆಗಡೆ ಅವರು ಕೃಷಿಕರಾಗಿದ್ದು, ಗೋಪಾಲಕೃಷ್ಣ ಭಟ್ಟ ಅವರು ಉಮ್ಮಚ್ಗಿಯ ಮಹಾಗಣಪತಿ ಆಟೋ ವರ್ಕನಲ್ಲಿ ಕೆಲಸ ಮಾಡುತ್ತಾರೆ. ಸತೀಶ ಹೆಗಡೆ ಹಾಗೂ ಗೋಪಾಲಕೃಷ್ಣ ಭಟ್ಟ ಸಂಬoಧಿಕರಾಗಿದ್ದಾರೆ. ಆದರೆ, ಅವರಿಬ್ಬರ ನಡುವೆ ಆಸ್ತಿ ವಿಷಯವಾಗಿ ಕಲಹ ನಡೆಯುತ್ತಿದೆ. ಅದೇ ಅವರಿಬ್ಬರ ನಡುವಿನ ವೈಮನಸ್ಸಿಗೂ ಕಾರಣವಾಗಿದೆ. ಆ ದ್ವೇಷದ ಮುಂದುವರೆದ ಭಾಗವಾಗಿ ಜನವರಿ 14ರಂದು ಅವರಿಬ್ಬರು ಪರಸ್ಪರ ಹೊಡೆದಾಟ ನಡೆಸಿದ್ದಾರೆ. ಸತೀಶ ಹೆಗಡೆ ಅವರ ಜಮೀನು ವಿಷಯವಾಗಿ ಗೋಪಾಲಕೃಷ್ಣ ಭಟ್ಟರು ತಂಟೆ-ತಕರಾರು ಮಾಡುತ್ತಿದ್ದಾರೆ. ಇದಕ್ಕೆ ಪ್ರತಿಯಾಗಿ ಮೊನ್ನೆ ಗೋಪಾಲಕೃಷ್ಣರ ಭಟ್ಟರ ತಂದೆ ಉದಯ ಭಟ್ಟರ ಮೇಲೆ ಸತೀಶ ಹೆಗಡೆ ಅವರು ಕಳ್ಳತನದ ಆರೋಪ ಮಾಡಿದ್ದಾರೆ. ಅದೇ ಊರಿನ ವಿನಾಯಕ ಎಂಬಾತರ ಮುಂದೆ ಸತೀಶ ಹೆಗಡೆ ಅವರು `ಉದಯ ಭಟ್ಟರು ಬಟ್ಟೆ ಕಳ್ಳತನ ಮಾಡಿದ್ದಾರೆ. ಹಂಚುಗಳನ್ನು ಸಹ ಕದ್ದಿದ್ದಾರೆ’ ಎಂದು ಹೇಳಿದ್ದಾರೆ. ಆ ವಿಷಯವನ್ನು ಅಲ್ಲಿಗೆ ಬಿಡದ ವಿನಾಯಕ ಅವರು ಗೋಪಾಲಕೃಷ್ಣ ಭಟ್ಟರಿಗೆ ಸುದ್ದಿ ಮುಟ್ಟಿಸಿದ್ದಾರೆ. ಹೀಗಾಗಿ ಅವರಿಬ್ಬರ ನಡುವಿನ ದ್ವೇಷ ಇನ್ನಷ್ಟು ಹೆಚ್ಚಾಗಿದೆ. ಬುಧವಾರ ಬೆಳಗ್ಗೆ ಸತೀಶ ಹೆಗಡೆ ಅವರು ಜೋಳದ ಹಿಟ್ಟು ಮಾಡಿಸಲು ಉಮ್ಮಚ್ಗಿಗೆ ಬಂದಿದ್ದರು. ಅವರ ಬೈಕಿನ ಟೈಯರ್’ಗೆ ಗಾಳಿ ಕಡಿಮೆ ಇದ್ದ ಕಾರಣ ಮಹಾಗಣಪತಿ ಆಟೋ ವರ್ಕ ಗ್ಯಾರೇಜಿಗೆ ಹೋಗಿದ್ದರು. ಅಲ್ಲಿ ಸತೀಶ ಹೆಗಡೆ ಅವರನ್ನು ನೋಡಿದ ಗೋಪಾಲಕೃಷ್ಣ ಭಟ್ಟ `ನೀ ಯಾಕೆ ಈ ಗ್ಯಾರೇಜಿಗೆ ಬಂದೆ?’ ಎಂದು ಪ್ರಶ್ನಿಸಿದರು. `ಬಟ್ಟೆ ಹಾಗೂ ಹಂಚು ಕಳ್ಳತನ ಮಾಡಿದವ’ ಎಂದು ಊರ ತುಂಬ ಸುದ್ದಿ ಮಾಡಿದ ವಿಷಯ ಪ್ರಸ್ತಾಪಿಸಿದರು. ಈ ವೇಳೆ ಅವರಿಬ್ಬರ ನಡುವೆ ವಾಗ್ವಾದ ನಡೆದಿದ್ದು, ಅದು ಹೊಡೆದಾಟದ ಸ್ವರೂಪಪಡೆಯಿತು. ಗ್ಯಾರೇಜಿನಲ್ಲಿದ್ದ ಸೈಕಲ್ ಸೇಪ್ಟಿ ಗಾರ್ಡಿನಿಂದ ಗೋಪಾಲಕೃಷ್ಣ ಭಟ್ಟರು ಸತೀಶ ಹೆಗಡೆ ಅವರಿಗೆ ಹೊಡೆದರು. ಅಲ್ಲಿಯೇ ಇದ್ದ ಕಬ್ಬಿಣದ ಸ್ಪಾನರಿನಿಂದ ಸತೀಶ ಹೆಗಡೆ ಅವರು ಗೋಪಾಲಕೃಷ್ಣ ಭಟ್ಟ ಅವರಿಗೆ ಬಾರಿಸಿದರು. ಸತೀಶ ಹೆಗಡೆ ಅವರ ತಲೆ ಹಾಗೂ ಎಡಬುಜಕ್ಕೆ ಭಾರೀ ಪ್ರಮಾಣದಲ್ಲಿ ನೋವಾಗಿದ್ದು, ಅವರು ಯಲ್ಲಾಪುರ ಆಸ್ಪತ್ರೆ ಸೇರಿದರು. ಗೋಪಾಲಕೃಷ್ಣ ಭಟ್ಟರ ದವಡೆ ಹಾಗೂ ಮೂಗಿಗೆ ಗಾಯವಾಗಿ ರಕ್ತ ಬಂದಿದ್ದು, ಅವರು ಸಹ ಚಿಕಿತ್ಸೆಗೆ ಒಳಗಾದರು. ಈ ಹೊಡೆದಾಟದ ವಿಷಯ ಕೇಳಿ ಯಲ್ಲಾಪುರ ಪಿಐ ರಮೇಶ ಹಾನಾಪುರ, ಪಿಸೈ ಶೇಡ್ ಜಿ ಚೌಹಾಣ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಅವರಿಬ್ಬರ ಮಾತು ಆಲಿಸಿದ ಪೊಲೀಸರು ಇಬ್ಬರ ವಿರುದ್ಧವೂ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಶುರು ಮಾಡಿದ್ದಾರೆ. - [SSLC: ಈ ಬಾರಿ ಒಬ್ಬರೂ ಫೇಲ್ ಆಗುವ ಹಾಗಿಲ್ಲ!](https://mobiletime.in/2026/01/sslc-no-one-should-fail-this-time/): `ಈ ಬಾರಿಯ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಒಬ್ಬ ವಿದ್ಯಾರ್ಥಿಯೂ ಅನುತ್ತೀರ್ಣ ಆಗುವ ಹಾಗಿಲ್ಲ. ಆ ನಿಟ್ಟಿನಲ್ಲಿ ಶಿಕ್ಷಣ ಅಧಿಕಾರಿಗಳು ಜವಾಬ್ದಾರಿಯಿಂದ ಕೆಲಸ ಮಾಡಬೇಕು’ ಎಂದು ಜಿಲ್ಲಾಧಿಕಾರಿ ಕೆ ಲಕ್ಷ್ಮೀಪ್ರಿಯಾ ಸೂಚಿಸಿದ್ದಾರೆ. `ಅರ್ಧ ವಾರ್ಷಿಕ ಪರೀಕ್ಷೆ ಮತ್ತು ಮೊದಲ ಪ್ರಿಪರೇಟರಿ ಫಲಿತಾಂಶವನ್ನು ವಿಶ್ಲೇಷಣೆ ಮಾಡಬೇಕು. ಆ ಮೂಲಕ ಕಲಿಕೆಯಲ್ಲಿ ಹಿಂದುಳಿದಿರುವ ಮಕ್ಕಳ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ಅವರ ಬಗ್ಗೆ ವೈಯಕ್ತಿಕವಾಗಿ ಗಮನಹರಿಸಿ ಅವರು ಉತ್ತೀರ್ಣರಾಗುವಂತೆ ಮಾಡಬೇಕು’ ಎಂದು ಅವರು ಶಿಕ್ಷಕರಿಗೆ ಸೂಚನೆ ನೀಡಿದ್ದಾರೆ. `ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಪಾಸಾದ ಮಕ್ಕಳು ತಮ್ಮ ಮುಂದಿನ ಭವಿಷ್ಯವನ್ನು ಸರಿಯಾಗಿ ರೂಪಿಸಿಕೊಳ್ಳುತ್ತಾರೆ. ಹೀಗಾಗಿ ಶಿಕ್ಷಕರು ತಮ್ಮ ಎಲ್ಲಾ ಅನುಭವಗಳನ್ನು ಧಾರೆಯೆರೆದು ವಿದ್ಯಾರ್ಥಿಗಳು ಅತ್ಯುತ್ತಮ ಅಂಕಗಳೊAದಿಗೆ ಉತ್ತೀರ್ಣರಾಗುವ ಹಾಗೇ ಮಾಡಬೇಕು’ ಎಂದು ಹೇಳಿದ್ದಾರೆ. ಬುಧವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಎಸ್ ಎಸ್ ಎಲ್ ಸಿ ಫಲಿತಾಂಶ ವೃದ್ಧಿಗೆ ಕೈಗೊಂಡಿರುವ ಕ್ರಮದ ಕುರಿತು ಶಾಲಾ ಮುಖ್ಯಾಧ್ಯಾಪಕರು ಹಾಗೂ ಶಿಕ್ಷಣಾಧಿಕಾರಿಗಳ ಸಭೆ ನಡೆಸಿದ ಅವರು ಅನೇಕ ಸಲಹೆಗಳನ್ನು ನೀಡಿದ್ದಾರೆ. `ಶಾಲೆಗಳಿಗೆ ನಿರಂತರವಾಗಿ ಗೈರಾಗುತ್ತಿರುವ ಮಕ್ಕಳನ್ನು ಗುರುತಿಸಿ ಅವರ ಬಗ್ಗೆ ವಿಶೇಷ ಗಮನ ಹರಿಸಬೇಕು. ಪೋಷಕರ ಮತ್ತು ವಿದ್ಯಾರ್ಥಿಯ ಮನವೊಲಿಸಿ ಶಾಲೆಗೆ ಬರುವಂತೆ ಮಾಡಬೇಕು. ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳು ಉತ್ತೀರ್ಣರಾಗುವಂತೆ ಮಾಡುವ ಜವಾಬ್ದಾರಿವಹಿಸಿಕೊಳ್ಳಬೇಕು. ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಮಂಡಳಿಯು ಸಿದ್ದಪಡಿಸಿರುವ ಮಾದರಿ ಪ್ರಶ್ನೆ ಪತ್ರಿಕೆಗಳನ್ನು ಹಾಗೂ ಡಯಟ್ ಮೂಲಕ ಸಿದ್ದಪಡಿಸಿರುವ ಪ್ರಶ್ನೆ ಪತ್ರಿಕೆಗಳನ್ನು ಅಭ್ಯಾಸ ಮಾಡಿಸಬೇಕು’ ಎಂದು ತಿಳಿಸಿದರು. `ಜಿಲ್ಲೆಯ ಒಟ್ಟಾರೆ ಫಲಿತಾಂಶದಲ್ಲಿ ರ‍್ಯಾಂಕ್ ಬರುವುದು ಮುಖ್ಯವಲ್ಲ. ವಿದ್ಯಾರ್ಥಿಗಳು ಅತ್ಯುತ್ತಮ ಅಂಕಗಳೊAದಿಗೆ ಪ್ರತಿಯೊಬ್ಬರೂ ಉತ್ತೀರ್ಣರಾಗಬೇಕಾಗಿರುವುದು ಮುಖ್ಯ’ ಎಂದು ಸೂಚಿಸಿದರು. `ಶಾಲಾ ಪರೀಕ್ಷೆಯಲ್ಲಿ ಅನುತ್ತೀರ್ಣರಾಗುವ ವಿದ್ಯಾರ್ಥಿಗಳಿಗಾಗಿ ಶಿಕ್ಷಕರು ಹೆಚ್ಚುವರಿ ಸಮಯವನ್ನು ಮೀಸಲಿಟ್ಟು ಕಲಿಕೆಯಲ್ಲಿ ಹಿಂದುಳಿದಿರುವ ವಿಷಯಗಳನ್ನು ಬೋಧಿಸಬೇಕು. ವಿದ್ಯಾರ್ಥಿಗಳು ಪ್ರಶ್ನೆ ಪತ್ರಿಕೆಯಲ್ಲಿ ಎಲ್ಲಾ ಪ್ರಶ್ನೆಗಳಿಗೂ ಉತ್ತರಿಸಬೇಕು. ಯಾವುದೇ ಪ್ರಶ್ನೆಗೂ ಉತ್ತರವನ್ನು ಖಾಲಿ ಬಿಡದೇ, ಸಾಧ್ಯವಾದಷ್ಟು ಉತ್ತರ ಬರೆಯಲು ಪ್ರಯತ್ನಿಸುವ ಬಗ್ಗೆ ಶಿಕ್ಷಕರು ತಿಳಿಸಬೇಕು. ಫಲಿತಾಂಶ ವೃದ್ಧಿಗೆ ಈಗಾಗಲೇ ರೂಪಿಸಿರುವ 29 ಅಂಶಗಳ ಅನುಷ್ಠಾನ ಮಾತ್ರವಲ್ಲದೇ, ಶಿಕ್ಷಕರು ಮತ್ತು ಪೋಷಕರು ಹಾಗೂ ಅಧಿಕಾರಿಗಳು ಸಂಘಟಿತ ಪ್ರಯತ್ನದ ಮೂಲಕ ಉತ್ತಮ ಫಲಿತಾಂಶ ಬರುವಂತೆ ಕಾರ್ಯನಿರ್ವಹಿಸಬೇಕು’ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ದಿಲೀಷ್ ಶಶಿ ಸೂಚಿಸಿದರು. ಕಾರವಾರ ಶೈಕ್ಷಣಿಕ ಜಿಲ್ಲೆಯ ಉಪ ನಿರ್ದೇಶಕಿ ಲತಾ ನಾಯ್ಕ, ಡಯಟ್ ಪ್ರಾಂಶುಪಾಲ ಎನ್ ಆರ್ ಹೆಗಡೆ, ಕಾರವಾರ, ಅಂಕೋಲಾ, ಕುಮಟಾ, ಹೊನ್ನಾವರ, ಭಟ್ಕಳ ತಾಲೂಕು ಶಿಕ್ಷಣಾಧಿಕಾರಿಗಳು ಹಾಗೂ ವಿವಿಧ ಶಾಲೆಗಳ ಮುಖ್ಯೋಪಾಧ್ಯಾಯರು ಸಭೆಯಲ್ಲಿದ್ದರು. - [ಕರಿಮಣಿ ಮಾಲಕ ನೀನಲ್ಲ!](https://mobiletime.in/2026/01/you-are-not-the-owner-of-the-black-pearl/): ಹೊನ್ನಾವರದ ವೈದ್ಯೆ ರಮ್ಯ ನಾಯ್ಕ ಅವರನ್ನು ಕಿರಣ ನಾಯ್ಕ ಅವರು ಅಪಹರಿಸಿ ಮದುವೆ ಆಗಿದ್ದಾರೆ. ಈ ವಿವಾಹ ನೋಂದಣಿ ರದ್ಧುಪಡಿಸುವಂತೆ ರಮ್ಯ ನಾಯ್ಕ ಅವರು ಹೋರಾಟ ಶುರು ಮಾಡಿದ್ದಾರೆ. ಹೊನ್ನಾವರ ಮಾಗೋಡು ಬಜ್ಜಿಕೇರಿಯಲ್ಲಿ ಕಿರಣ ಮಂಜುನಾಥ ನಾಯ್ಕ ಅವರು ವಾಸವಾಗಿದ್ದಾರೆ. 2020ರಲ್ಲಿ ಅದೇ ಊರಿನ ರಮ್ಯ ಶಾಂತರಾಮ ನಾಯ್ಕ ಅವರ ಸ್ನೇಹ ಬೆಳೆಸಿದ ಕಿರಣ ನಾಯ್ಕ ಪ್ರೀತಿಯ ಪ್ರಸ್ತಾಪ ಮಾಡಿದ್ದಾರೆ. ಪ್ರೀತಿ ಒಪ್ಪದ ರಮ್ಯಾ ನಾಯ್ಕ ಸ್ನೇಹಕ್ಕೆ ಸಮ್ಮತಿ ನೀಡಿದ್ದು, ಅದಾದ ನಂತರವೂ ಕಿರಣ ನಾಯ್ಕ ಹಾಗೂ ರಮ್ಯ ನಾಯ್ಕ ಅವರು ಅನೇಕ ಕಡೆ ಒಟ್ಟಿಗೆ ಓಡಾಟ ನಡೆಸಿದ್ದಾರೆ. 2024ರ ಅವಧಿಯಲ್ಲಿ ಕಿರಣ ನಾಯ್ಕ ರಮ್ಯಾ ನಾಯ್ಕ ಅವರ ಮನೆಗೆ ಬಂದು ಮದುವೆ ಪ್ರಸ್ತಾಪ ಮಾಡಿದ್ದಾರೆ. `ಮದುವೆ ಆಗದೇ ಇದ್ದರೆ ಫೋಟೋ ವೈರಲ್ ಮಾಡುವೆ’ ಎಂದು ಬೆದರಿಸಿದ್ದಾರೆ. ರಮ್ಯ ನಾಯ್ಕ ಅವರನ್ನು ಹೆದರಿಸಿದ ಕಿರಣ ನಾಯ್ಕ ಅವರನ್ನು ಕುಂದಾಪುರಕ್ಕೆ ಕರೆದೊಯ್ದು ಫೋಟೋ ಶೂಟ್ ಮಾಡಿಸಿದ್ದಾರೆ. ಅಲ್ಲಿನ ಸ್ಟೂಡಿಯೋ ಒಂದರಲ್ಲಿ ಕರಿಮಣಿ ಕಟ್ಟಿ ಮದುವೆಯ ಫೋಟೋ ತೆಗೆಸಿದ್ದಾರೆ. 2025ರ ಸೆಪ್ಟೆಂಬರ್ 25ರಂದು ರಮ್ಯಾ ನಾಯ್ಕ ಅವರು ಮಂಗಳೂರಿನಿAದ ಬಸ್ಸಿನಲ್ಲಿ ಬರುವಾಗ ಅವರಿಗೆ ಫೋನ್ ಮಾಡಿದ ಕಿರಣ ನಾಯ್ಕ ಭಟ್ಕಳದಲ್ಲಿಯೇ ಇಳಿಯುವಂತೆ ಸೂಚಿಸಿದ್ದಾರೆ. ಭಟ್ಕಳಕ್ಕೆ ಕಾರು ತೆಗೆದುಕೊಂಡು ಹೋಗಿದ್ದ ಕಿರಣ ನಾಯ್ಕ ಅದರಲ್ಲಿ ರಮ್ಯಾ ನಾಯ್ಕ ಅವರನ್ನು ಇಡಗುಂಜಿ ಕಡೆ ಕರೆ ತಂದಿದ್ದಾರೆ. ಮುಂದೆ ಮಾಗೋಡು ಕಡೆ ಹೋಗುವ ಬದಲು ಹೊನ್ನಾವರದ ಕಡೆ ಕಾರು ಓಡಿಸಿದ್ದಾರೆ. ಅಲ್ಲಿದ್ದ ಕಿರಣ ನಾಯ್ಕ ಅವರ ಸ್ನೇಹಿತ ಮನೋಜ ಮಾದೇವ ನಾಯಕ ವಿವಿಧ ಕಾಗದ ಪತ್ರಗಳ ಮೇಲೆ ರಮ್ಯಾ ನಾಯ್ಕ ಅವರ ಸಹಿ ಮಾಡಿಸಿದ್ದಾರೆ. ಸಹಿ ಮಾಡಲು ಒಪ್ಪದೇ ಇದ್ದಾಗ ಕೆನ್ನೆಗೆ ಬಾರಿಸಿದ್ದಾರೆ. ಅದಾದ ನಂತರ ರಮ್ಯಾ ನಾಯ್ಕ ಅವರ ಮೊಬೈಲಿಗೆ ಓಟಿಪಿ ಒಂದು ಬಂದಿದ್ದು, ಮೊಬೈಲ್ ಕಸಿದ ಮನೋಜ ನಾಯ್ಕ ಮತ್ತೊಬ್ಬರಿಗೆ ಫೋನ್ ಮಾಡಿ ಆ ಓಟಿಪಿಯನ್ನು ಓದಿ ಹೇಳಿದ್ದಾರೆ. ಸ್ಟೂಡಿಯೋದಲ್ಲಿ ತೆಗೆದ ಮದುವೆ ಆದ ಫೋಟೋ, ಕಾಗದಪತ್ರಗಳ ಮೇಲೆ ಮಾಡಿದ ಸಹಿ ಹಾಗೂ ಓಟಿಪಿ ಹೇಳಿದ ತಕ್ಷಣ ವಿವಾಹ ನೋಂದಣಿ ಕಚೇರಿ ಮೂಲಕ ರಮ್ಯಾ ನಾಯ್ಕ ಹಾಗೂ ಕಿರಣ ನಾಯ್ಕ ಅವರ ವಿವಾಹ ನೋಂದಣಿ ಆಗಿದೆ. ವಿವಾಹ ನೋಂದಣಿ ಪ್ರತಿಯನ್ನು ಕಿರಣ ನಾಯ್ಕ ಅವರು ರಮ್ಯಾ ನಾಯ್ಕ ಅವರ ತಂದೆ ಶಾಂತರಾಮ ನಾಯ್ಕ ಅವರಿಗೆ ವಾಟ್ಸಪ್ ಮಾಡಿದ್ದಾರೆ. ರಮ್ಯಾ ನಾಯ್ಕ ಅವರು ಈ ನಡುವೆ ಮಂಕಿಯಲ್ಲಿ ಕರ್ತವ್ಯ ನಿಭಾಯಿಸುತ್ತಿದ್ದು, ಅದಕ್ಕೂ ಕಿರಣ ನಾಯ್ಕ ಅಡ್ಡಿಪಡಿಸಿದ್ದಾರೆ. ಅಲ್ಲಿನ ವೈದ್ಯರ ಮೇಲೆ ಅನುಮಾನವ್ಯಕ್ತಪಡಿಸಿದ ಕಿರಣ ನಾಯ್ಕ ಅವರು ರಮ್ಯಾ ನಾಯ್ಕ ಅವರಿಗೆ ಹೊನ್ನಾವರದಲ್ಲಿಯೇ ಕರ್ತವ್ಯ ನಿಭಾಯಿಸುವಂತೆ ತಾಕೀತು ಮಾಡಿದ್ದಾರೆ. ಅಪಹರಿಸಿ ವಿವಾಹ ಆಗಿದಲ್ಲದೇ, ಮೋಸದಿಂದ ವಿವಾಹ ನೋಂದಣಿ ಮಾಡಿಸಿದ ಕಿರಣ ನಾಯ್ಕ ಹಾಗೂ ಅವರ ಸ್ನೇಹಿತ ಮನೋಜ ನಾಯ್ಕ ವಿರುದ್ಧ ರಮ್ಯಾ ನಾಯ್ಕ ಅವರು ಸಿಡಿದೆದ್ದಿದ್ದಾರೆ. ಕಿರಣ ನಾಯ್ಕ ಅವರು ದೈಹಿಕ ಹಾಗೂ ಮಾನಸಿಕ ಹಿಂಸೆ ನೀಡಿದ ಬಗ್ಗೆ ಅವರು ದೂರಿದ್ದಾರೆ. - [ಮರಗಳ್ಳನ ಮನೆ ಮೇಲೆ ದಾಳಿ!](https://mobiletime.in/2026/01/attack-on-the-house-of-a-wood-thief/): ಕಾಡಿನಲ್ಲಿದ್ದ ಮರಗಳನ್ನು ಕಡಿದು ಅದನ್ನು ಮಾರಾಟ ಮಾಡುತ್ತಿದ್ದ ಕಿರಣ ನಾಯ್ಕ ವಿರುದ್ಧ ಸಿದ್ದಾಪುರ ಅರಣ್ಯ ಅಧಿಕಾರಿಗಳು ಕಾನೂನು ಕ್ರಮ ಜರುಗಿಸಿದ್ದಾರೆ. ಕಿರಣ ನಾಯ್ಕ ತಪ್ಪಿಸಿಕೊಂಡಿದ್ದರೂ ನಾಟಾ ಸಾಗಿಸಲು ಬಳಸಿದ್ದ ವಾಹನವನ್ನು ಜಪ್ತು ಮಾಡಿದ್ದು, ವಾಹನ ಮಾಲಕನನ್ನು ಬಂಧಿಸಿದ್ದಾರೆ. ಸಿದ್ದಾಪುರದ ಕ್ಯಾದಗಿ ವಲಯದ ಹಸ್ವಿಗುಳಿಯಲ್ಲಿ ಕಿರಣ ರಾಮಾ ನಾಯ್ಕ ಎಂಬಾತರು ಮರ ಕಟಾವು ಮಾಡಿದ್ದರು. ಅದನ್ನು ಅಲ್ಲಿಯೇ ದಾಸ್ತಾನು ಮಾಡಿದ್ದ ಅವರು ನಂತರ ತಮ್ಮ ಮನೆ ಬಳಿ ಸಾಗಿಸಿದ್ದರು. ಭರಣಿ ಜಾತಿಗೆ ಸೇರಿದ ಮರಗಳನ್ನು ತುಂಡರಿಸಿ ಅಗತ್ಯ ಅಳತೆಗಳನ್ನು ಮಾಡಿಕೊಂಡಿದ್ದರು. ಖಚಿತ ಮಾಹಿತಿ ಆಧರಿಸಿ ಅರಣ್ಯ ಅಧಿಕಾರಿಗಳು ಅಲ್ಲಿ ದಾಳಿ ಮಾಡಿದರು. ಆಗ, ಅಲ್ಲಿ ನಾಟಾ ಸಾಗಾಟಕ್ಕೆ ಬಳಸಿದ ವಾಹನ ಹಾಗೂ ವಾಹನದ ಮಾಲಕ ಸಿಕ್ಕಿಬಿದ್ದರು. ಅರಣ್ಯಾಧಿಕಾರಿಗಳ ಆಗಮನ ಅರಿತು ಕಿರಣ ನಾಯ್ಕ ಪರಾರಿಯಾದರು. ವಾಹನ ಹಾಗೂ ವಾಹನ ಮಾಲಕನನ್ನು ವಶಕ್ಕೆಪಡೆದ ಅಧಿಕಾರಿಗಳು ಆರೋಪಿ ಕಿರಣ ನಾಯ್ಕ ವಿರುದ್ಧ ಪ್ರಕರಣ ದಾಖಲಿಸಿದರು. ಜೊತೆಗೆ ಶೋಧ ಕಾರ್ಯ ಮುಂದುವರೆಸಿದರು. 3.820ಕ್ಯೂಬಿಕ್ ಮೀಟರ್ ನಾಟಾ ದಾಳಿಯಲ್ಲಿ ಸಿಕ್ಕಿದೆ. - [ಉತ್ತರ ಕನ್ನಡ: ರಾಷ್ಟ್ರೀಯ ಯೋಜನೆಗೆ ಬಲಿಯಾಗಿದ್ದು 64 ಸಾವಿರ ಹೆಕ್ಟೇರ್ ಅರಣ್ಯ!](https://mobiletime.in/2026/01/uttara-kannada-64-thousand-hectares-of-forest-have-been-lost-to-the-national-project/): ವಿವಿಧ ಯೋಜನೆಗಳಿಗಾಗಿ ಉತ್ತರ ಕನ್ನಡ ಜಿಲ್ಲೆಯ 64 ಸಾವಿರ ಹೆಕ್ಟೇರ್ ಅರಣ್ಯ ಭೂಮಿಯನ್ನು ಸರ್ಕಾರ ಬಳಕೆ ಮಾಡಿಕೊಂಡಿದ್ದು, ಸದ್ಯ ನದಿ ಜೋಡಣೆಗಾಗಿ ಇನ್ನಷ್ಟು ಭೂಮಿ ಕಬಳಿಕೆ ಮಾಡಲು ಮುಂದಾಗಿದೆ. ಆದರೆ, ಅನಾಧಿಕಾಲದಿಂದಲೂ ಇಲ್ಲಿಯೇ ವಾಸವಾಗಿರುವ 80 ಸಾವಿರ ಅತಿಕ್ರಮಣದಾರರಿಗೆ ಮಾತ್ರ ಸರ್ಕಾರ ಅವರವರ ಭೂಮಿಗೆ ಹಕ್ಕು ಪತ್ರ ನೀಡುತ್ತಿಲ್ಲ! ಕಳೆದ 70 ವರ್ಷದ ಅವಧಿಯಲ್ಲಿ ಉತ್ತರ ಕನ್ನಡ ಜಿಲ್ಲೆಯ 64,365 ಹೇಕ್ಟೇರ್ ಅರಣ್ಯ ಪ್ರದೇಶ ವಿವಿಧ ಯೋಜನೆಗಳಿಗೆ ಬಲಿಯಾಗಿದೆ. ಮಾಹಿತಿಗಳ ಪ್ರಕಾರ ಮುಂಡಗೋಡದಲ್ಲಿ 1600 ಹೆಕ್ಟರ್ ಭೂಮಿಯನ್ನ ಟೀಬೇಟಿಯನ್ ಕಾಲೋನಿಗೆ ನೀಡಲಾಗಿದೆ. ಇದರೊಂದಿಗೆ ಕಾಳಿ ಹೈಡ್ರೋ ಪ್ರೋಜೆಕ್ಟ್’ಗೆ 15205.365 ಹೆಕ್ಟೇರ್, ಶರವಾತಿ ಟೇಲರೆಸ್ 700 ಹೆಕ್ಟೇರ್, ಕೈಗಾ ಅನುಸ್ಥಾವರಕ್ಕೆ 732ಹೆಕ್ಟೇರ್, ನೌಕಾನೆಲೆಗೆ 2259ಹೆಕ್ಟೇರ್, ಕೋಕಣ ರೈಲ್ವೇಗೆ 272.140ಹೆಕ್ಟೇರ್, ಹುಬ್ಬಳ್ಳಿ ಅಂಕೋಲ ರೈಲ್ವೇ ಯೋಜನೆಗೆ ಪರಿಸರ ಸೂಕ್ಷö್ಮ ಪ್ರದೇಶ ಹೊರತಾಗಿ 600ಹೆಕ್ಟೇರ್ ಭೂಮಿ ಕೊಡಲಾಗಿದೆ. ಇದರೊಂದಿಗೆ ನಿಯೋಜಿತ ಶರಾವತಿ ಪಂಪ್ ಸ್ಟೋರೆಜ್ ಯೋಜನೆಗೆ 193.34ಹೆಕ್ಟೇರ್, ಅಂಕೋಲಾ ಹುಬ್ಬಳ್ಳಿ ರಸ್ತೆ ಅಗಲೀಕರಕ್ಕೆ 49.431ಹೆಕ್ಟೇರ್, ಕಾಳಿ ಮತ್ತು ಕೈಗಾ ಪುನರ್ ವಸತಿ ಯೋಜನೆಗೆ 316.410ಹೆಕ್ಟೇರ್, ಕೈಗಾ 400 ಕೆಪಿಡಿಸಿ ಪರ್ಯಾಯ ವಿದ್ಯುತ್ ಪ್ರಸರಣಾ ಮಾರ್ಗ ನಿರ್ಮಾಣಕ್ಕೆ 330ಹೆಕ್ಟೇರ್, ನೌಕಾನೆಲೆ ಎರಡನೇ ಹಂತದ ವಿಸ್ತೀರ್ಣಕ್ಕೆ ಅಂದಾಜು 5684ಹೆಕ್ಟೇರ್, ಸಿವಿಲ್ ಏಪ್ ಪೋಟ್, ಬೇಡ್ತಿ ಎತ ನೀರಾವರಿ ಮುಂತಾದ ರಾಷ್ಟಿçÃಯ ಯೋಜನೆ ಮತ್ತು ಮೂಲ ಸೌಕರ್ಯಕ್ಕಾಗಿ ಸುಮಾರು 64365ಹೆಕ್ಟೇರ್ ಅರಣ್ಯ ಭೂಮಿಯ ಬಳಕೆ ನಡೆದಿದೆ. ವಿವಿಧ ಯೋಜನೆಗಳಿಗಾಗಿ ಇಷ್ಟು ಪ್ರಮಾಣದಲ್ಲಿ ಅರಣ್ಯ ಭೂಮಿ ಬಳಕೆಯಾಗಿರುವಾಗ ಜಿಲ್ಲೆಯ 80 ಸಾವಿರ ಅರಣ್ಯವಾಸಿ ಕುಟುಂಬಗಳಿಗೆ 19 ಸಾವಿರ ಹೆಕ್ಟೇರ್ ಭೂಮಿ ಮಂಜೂರಿ ನೀಡಲು ಸಮಸ್ಯೆ ಏನು? ಎಂಬ ಪ್ರಶ್ನೆ ಉದ್ಬವಿಸಿದೆ. 1973ರ ಅವಧಿಯಲ್ಲಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಶೇ 72.26ರಷ್ಟು ಅರಣ್ಯ ಪ್ರಮಾಣವಿದ್ದು, ಸರ್ಕಾರದ ತಪ್ಪು ನೀತಿಯಿಂದಾಗಿ 2013ರಲ್ಲಿ ಶೇ 59.70ರಷ್ಟು ಮಾತ್ರ ಅರಣ್ಯ ಉಳಿದಿದೆ. ಹೀಗಾಗಿ `ಯೋಜನೆಗಳಿಗೆ ಭೂಮಿ ಕೊಟ್ಟಿದ್ದು ಸಾಕು. ಇನ್ಮುಂದೆ ಜೀವನಕ್ಕಾಗಿ ಭೂಮಿ ಕೊಡಿ’ ಎಂದು ನ್ಯಾಯವಾದಿ ರವೀಂದ್ರ ನಾಯ್ಕ ಅವರು ಆಗ್ರಹಿಸಿದ್ದಾರೆ. ರಾಷ್ಟಿçÃಯ ಯೋಜನೆಗಳಿಗೆ ದಾರಾಳವಾಗಿ ಅರಣ್ಯ ಭೂಮಿ ನೀಡುವ ಸರ್ಕಾರ ಜೀವನಕ್ಕಾಗಿ ಭೂÄ ನೀಡದಿರುವುದು ಸರಿಯಲ್ಲ. ಪರಿಸರ ವಿರೋಧ ಯೋಜನೆಗೆ ಜನರು ಪ್ರತಿಭಟಿಸಿದರೂ ಅರಣ್ಯ ಭೂಮಿ ನೀಡುವುದು ಖಂಡನಾರ್ಹ’ ಎಂದವರು ಹೇಳಿದ್ದಾರೆ. - [ಶಿಕ್ಷಣಾಧಿಕಾರಿಗೆ ಸನ್ಮಾನ-ಸ್ವಾಗತ](https://mobiletime.in/2026/01/honorary-welcome-to-the-education-officer/): ಯಲ್ಲಾಪುರ ಕ್ಷೇತ್ರ ಶಿಕ್ಷಣಾಧಿಕಾರಿಯಾಗಿ ಅಧಿಕಾರವಹಿಸಿಕೊಂಡಿರುವ ರೇಖಾ ನಾಯ್ಕ ಅವರನ್ನು ಅನುದಾನಿತ ಶಿಕ್ಷಕರ ಸಂಘದ ಸದಸ್ಯರು ಸನ್ಮಾನಿಸಿ, ಸ್ವಾಗತಿಸಿದ್ದಾರೆ. ಶಿಕ್ಷಕರ ಸಮಸ್ಯೆಗೆ ಸ್ಪಂದಿಸುವoತೆ ಮನವಿಯನ್ನು ಮಾಡಿದ್ದಾರೆ. ವೈ ಟಿ ಎಸ್ ಎಸ್ ಆವರಣದಲ್ಲಿ ನಡೆದ ಸಮಾರಂಭದಲ್ಲಿ ಅನುದಾನಿತ ಶಿಕ್ಷಕರ ಸಂಘದವರು ಶಿಕ್ಷಣಾಧಿಕಾರಿ ರೇಖಾ ನಾಯ್ಕ ಅವರನ್ನು ಭೇಟಿ ಮಾಡಿದರು. ಸರ್ಕಾರದ ಕಾರ್ಯಕ್ರಮಗಳ ಯಶಸ್ಸಿಗೆ ಶಿಕ್ಷಕರು ಶ್ರಮಿಸುತ್ತಿರುವ ವಿಧಾನಗಳ ಬಗ್ಗೆ ವಿವರಿಸಿದರು. 60 ಶಿಕ್ಷಕರು ಸೇರಿ ಶಿಕ್ಷಣಾಧಿಕಾರಿಗಳನ್ನು ಗೌರವಿಸಿದರು. `ಯಲ್ಲಾಪುರದ ಅಭಿವೃದ್ಧಿಗೆ ಅನುದಾನಿತ ಶಾಲೆಗಳ ಕೊಡುಗೆ ಅಪಾರವಾಗಿದೆ. ಶಿಸ್ತು ಬದ್ಧ ಸಂಘಟನೆಗೆ ಅನುದಾನಿತ ಶಿಕ್ಷಕರು ಮಾದರಿಯಾಗಿದ್ದು, ಪರೀಕ್ಷಾ ಫಲಿತಾಂಶ ಹೆಚ್ಚಳದಲ್ಲಿಯೂ ಶಿಕ್ಷಕರು ಕೊಡುಗೆ ನೀಡುತ್ತಿದ್ದಾರೆ’ ಎಂದು ಶಿಕ್ಷಣಾಧಿಕಾರಿ ರೇಖಾ ನಾಯ್ಕ ಅವರು ಹೇಳಿದರು. `ವಿದ್ಯಾರ್ಥಿಗಳಲ್ಲಿ ಸ್ಪರ್ಧಾತ್ಮಕ ಶಿಕ್ಷಣ ನೀಡಲು ವಿವಿಧ ಕಾರ್ಯಕ್ರಮ ಆಯೋಜಿಸಲಾಗುತ್ತದೆ. ಅನುದಾನಿತ ಶಿಕ್ಷಕರ ಸಮಸ್ಯೆಗಳಿಗೂ ಶಿಕ್ಷಣ ಇಲಾಖೆ ಸ್ಪಂದಿಸಲಿದೆ’ ಎಂಬ ಭರವಸೆ ನೀಡಿದರು. `ವಿಜ್ಞಾನ, ಸಾಂಸ್ಕೃತಿಕ, ಪ್ರತಿಭಾ ಕಾರಂಜಿ, ಕ್ರೀಡೆಯಂಥ ವಿವಿಧ ಕಾರ್ಯಕ್ರಮಗಳಲ್ಲಿ ಅನುದಾನಿತ ಶಾಲೆಗಳ ಶಿಕ್ಷಕರ ಹಾಗೂ ಸಂಸ್ಥೆಗಳ ಪಾತ್ರ ಬಹಳ ಮಹತ್ವದ್ದಾಗಿದೆ’ ಎಂದು ದೈಹಿಕ ಶಿಕ್ಷಣ ಪರಿವೀಕ್ಷಕ ಪ್ರಕಾಶ ತಾರೀಕೋಪ್ಪ ಅವರು ಹೇಳಿದರು.   - [10 ಲಕ್ಷದ ಸಾಲ.. 17 ಲಕ್ಷ ಪರಿಹಾರ.. 20 ಸಾವಿರ ರೂ ದಂಡ!](https://mobiletime.in/2026/01/loan-of-10-lakhs-compensation-of-17-lakhs-fine-of-20-thousand-rupees/): ಕಷ್ಟ ಕಾಲದಲ್ಲಿ ಸಾಲಪಡೆದು ನಂತರ ಅದನ್ನು ತೀರಿಸದೇ ವಂಚಿಸಲು ಪ್ರಯತ್ನಿಸಿದ ಕಮಲಾಕರ ಭಂಡಾರಿ ಅವರಿಗೆ ಶಿರಸಿ ನ್ಯಾಯಾಲಯ ದಂಡ ವಿಧಿಸಿದೆ. 10 ಲಕ್ಷ ರೂ ಸಾಲ ಮಾಡಿದ್ದ ವ್ಯಕ್ತಿಗೆ 17 ಲಕ್ಷ ರೂ ಪರಿಹಾರದ ಜೊತೆ 20 ಸಾವಿರ ರೂ ದಂಡ ಪಾವತಿ ಮಾಡುವಂತೆ ನ್ಯಾಯಾಲಯ ಆದೇಶಿಸಿದೆ. ಕಮಲಾಕರ್ ನರಸಿಂಹ ಭಂಡಾರಿ ಎಂಬಾತರು 2019ರಲ್ಲಿ ಶಿರಸಿ ನಗರದ ಶ್ರೀ ಭೂತೇಶ್ವರ ಪತ್ತಿನ ಸಹಕಾರಿ ಸಂಘದಲ್ಲಿ ಸಾಲ ಮಾಡಿದ್ದರು. ಕಷ್ಟ ಎಂದು ಬಂದ ವ್ಯಕ್ತಿಯ ಮೇಲೆ ಕರುಣೆ ತೋರಿದ ಬ್ಯಾಂಕ್ ಅಧಿಕಾರಿಗಳು ಅವರ ಅಗತ್ಯಕ್ಕೆ ಅನುಗುಣವಾಗಿ ಸಾಲ ನೀಡಿದ್ದರು. 10 ಲಕ್ಷ ರೂ ಸಾಲಪಡೆದಿದ್ದ ಕಮಲಾಕರ ಭಂಡಾರಿ ಅವರು ಕಂತು ಪಾವತಿ ಮಾಡಿರಲಿಲ್ಲ. ಪಡೆದ ಸಾಲ ತೀರಿಸುವುದನ್ನು ಸಹ ಅವರು ಮರೆತಿದ್ದರು. ಸೊಸೈಟಿ ಸಿಬ್ಬಂದಿ ಸಾಲ ವಸೂಲಾತಿಗೆ ಹೋದಾಗ ಬಡ್ಡಿ ಸೇರಿ 13.27 ಲಕ್ಷ ರೂ ಮೌಲ್ಯದ ಚೆಕ್ ನೀಡಿದ್ದರು. ಆದರೆ, ಬ್ಯಾಂಕಿಗೆ ಹಾಕಿದ ಆ ಚೆಕ್ ಸಹ ಅಮಾನ್ಯವಾಗಿತ್ತು. ಸಾಕಷ್ಟು ಬಾರಿ ಕೇಳಿದರೂ ಕಮಲಾಕರ ಭಂಡಾರಿ ಸಾಲ ಮರು ಪಾವತಿಗೆ ಪ್ರಯತ್ನಿಸಿರಲಿಲ್ಲ. ಹೀಗಾಗಿ ಸಹಕಾರಿ ಸಂಘದವರು ಅನಿವಾರ್ಯವಾಗಿ ಕಾನೂನು ಹೋರಾಟ ಶುರು ಮಾಡಿದರು. ಚೆಕ್ ಬೌನ್ಸ್ ಆಧಾರದಲ್ಲಿ ಸಂಘದ ಮುಖ್ಯ ಕಾರ್ಯನಿರ್ವಾಹಕ ವಿನಾಯಕ ಶೆಟ್ಟಿ ಅವರು ಕಮಲಾಕರ ಭಂಡಾರಿ ಅವರ ವಿರುದ್ಧ ಪ್ರಕರಣ ದಾಖಲಿಸಿದರು. ಶಿರಸಿ 1ನೇ ಹೆಚ್ಚುವರಿ ಜೆ ಎಂ ಎಫ್ ಸಿ ನ್ಯಾಯಾಲಯದಲ್ಲಿ ಚೆಕ್ ಬೌನ್ಸ ದಾವೆ ಪ್ರಕರಣ ವಿಚಾರಣೆ ನಡೆಯಿತು. `ಕಷ್ಟ ಕಾಲದಲ್ಲಿ ಸಾಲ ನೀಡುವ ಸಹಕಾರಿ ಸಂಘಕ್ಕೆ ವಂಚನೆ ಮಾಡುವುದು ಸರಿಯಲ್ಲ. ಸಹಕಾರಿ ಸಂಘದ ಏಳಿಗೆಗೆ ಸಾಲಗಾರರು ಕಂತು ಪಾವತಿ ಮಾಡುವುದು ಅತಿ ಮುಖ್ಯವಾಗಿದ್ದು, ಚೆಕ್ ಬೌನ್ಸ್ ಆರೋಪಿಗೆ ಶಿಕ್ಷೆ ವಿಧಿಸಬೇಕು’ ಎಂದು ವಕೀಲ ಪ್ರಶಾಂತ್ ವಿ ನಾಯ್ಕ ವಾದ ಮಂಡಿಸಿದರು. ಈ ವಾದ ಆಲಿಸಿದ ನ್ಯಾಯಾಧೀಶ ಅಲ್ತಾಫ್ ಹುಸೇನಸಾಬ್ ಖನಗಾಂವಿ ಅವರು ಕಮಲಾಕರ ಭಂಡಾರಿ ಅವರಿಗೆ ದಂಡ ವಿಧಿಸಿದರು. `ಸಾಲಪಡೆದು ವಂಚಿಸಲು ಪ್ರಯತ್ನಿಸಿದ ಕಮಲಾಕರ ಭಂಡಾರಿ ಅವರು ಸಾಲ ನೀಡಿದ ಸಂಘಕ್ಕೆ ಪರಿಹಾರವಾಗಿ ಕಮಲಾಕರ ಭಂಡಾರಿ ಅವರು 17 ಲಕ್ಷ ರೂ ಪಾವತಿಸಬೇಕು. 20 ಸಾವಿರ ರೂಪಾಯಿಯನ್ನು ಸರ್ಕಾರಕ್ಕೆ ದಂಡವಾಗಿ ಪಾವತಿಸಬೇಕು. ಇದನ್ನು ತಪ್ಪಿದರೆ 6 ತಿಂಗಳು ಕಾರಾಗೃಹವಾಸ ಅನುಭವಿಸಬೇಕು’ ಎಂದು ಆದೇಶಿಸಿದರು. - [ಶಿರಸಿಗೆ ಹೋಗಿದ್ದ ಯಲ್ಲಾಪುರದ ಯುವಕ: ಸಾವು!](https://mobiletime.in/2026/01/a-young-man-from-yellapur-who-had-gone-to-sirsi-death/): ಶಿರಸಿಯಲ್ಲಿ ನಡೆದ ಅಪಘಾತದಲ್ಲಿ ಯಲ್ಲಾಪುರದ ಯುವಕನೊಬ್ಬ ಸಾವನಪ್ಪಿದ್ದು, ಮತ್ತೊಬ್ಬರು ಗಂಭೀರ ಪ್ರಮಾಣದಲ್ಲಿ ಗಾಯಗೊಂಡಿದ್ದಾರೆ. ಶಿರಸಿ-ಕುಮಟಾ ರಸ್ತೆಯಲ್ಲಿ ಮಂಗಳವಾರ ರಾತ್ರಿ ಈ ಅವಘಡ ನಡೆದಿದೆ. ಶಿರಸಿ ತಾಲೂಕಿನ ಹಾರುಗಾರ ಸೇತುವೆ ಬಳಿ ಬೈಕ್ ಪಲ್ಟಿಯಾಗಿದೆ. ಪರಿಣಾಮ ಬೈಕಿನಲ್ಲಿ ಸಂಚರಿಸುತ್ತಿದ್ದ ವ್ಯಕ್ತಿಯೊಬ್ಬರು ಅಲ್ಲಿಯೇ ಕೊನೆಯುಸಿರೆಳೆದಿದ್ದಾರೆ. ಜೊತೆಗಿದ್ದ ಮತ್ತೊಬ್ಬ ಪ್ರಯಾಣಿಕರು ಗಂಭೀರ ಪ್ರಮಾಣದಲ್ಲಿ ಗಾಯಗೊಂಡು ಆಸ್ಪತ್ರೆ ಸೇರಿದ್ದಾರೆ. ಯಲ್ಲಾಪುರದ ಕಣ್ಣಿಗೇರಿ ಬಳಿಯ ಅಂತಿಗೇರಿಯಲ್ಲಿ ಸಂಕೇತ ನೀಲಕಂಠ ದೇಸಾಯಿ (25) ಅವರು ವಾಸವಾಗಿದ್ದರು. ಕಟ್ಟಡ ಕಾರ್ಮಿಕರಾಗಿದ್ದ ಅವರು ಗೌಂಡಿ ಕೆಲಸ ಮಾಡಿಕೊಂಡು ಬದುಕು ಕಟ್ಟಿಕೊಂಡಿದ್ದರು. ಜನವರಿ 13ರ ಸಂಜೆ ಶಿರಸಿಗೆ ಹೋಗಿದ್ದರು. ಅಲ್ಲಿಂದ ಕುಮಟಾ ಮಾರ್ಗವಾಗಿ ಅವರು ಬೈಕ್ ಓಡಿಸುತ್ತಿದ್ದರು. ಆ ಬೈಕಿನಲ್ಲಿ ಯಲ್ಲಾಪುರದ ಬಿಜನಕೊಪ್ಪದ ನಾಗರಾಜ ಹರಿಶ್ಚಂದ್ರ ಪಾಟೀಲ ಅವರು ಹಿಂದೆ ಕೂತಿದ್ದರು. ಹಾರುಗಾರ ಸೇತುವೆ ಬಳಿ ಬೈಕಿನ ವೇಗ ಹೆಚ್ಚಾಯಿತು. ಆ ಬಯಕು ಸಂಕೇತ ದೇಸಾಯಿ ಅವರ ನಿಯಂತ್ರಣ ತಪ್ಪಿತು. ಪರಿಣಾಮ ಬೈಕ್ ರಸ್ತೆ ಮೇಲೆ ಬಿದ್ದಿದ್ದು, ಆ ರಭಸಕ್ಕೆ ಸಂಕೇತ ದೇಸಾಯಿ ಅವರ ತಲೆ ಒಡೆಯಿತು. ಹಿಂಬದಿ ಸವಾರರಾಗಿದ್ದ ನಾಗರಾಜ ಪಾಟೀಲ ಅವರ ತಲೆ, ಸೊಂಟ, ಕಾಲುಗಳಿಗೂ ಪೆಟ್ಟಾಯಿತು. ಈ ಅಪಘಾತದಲ್ಲಿ ಸಂಕೇತ ದೇಸಾಯಿ ಅವರು ಅಲ್ಲಿಯೇ ಸಾವನಪ್ಪಿದರು. ಗಂಭೀರ ಪ್ರಮಾಣದಲ್ಲಿ ಗಾಯಗೊಂಡ ನಾಗರಾಜ ಪಾಟೀಲ್ ಅವರು ಶಿರಸಿ ಸರ್ಕಾರಿ ಆಸ್ಪತ್ರೆಗೆ ದಾಖಲಾದರು. `ನಿಧಾನವಾಗಿ ಬೈಕ್ ಓಡಿಸಿ.. ಸುರಕ್ಷಿತ ಪ್ರಯಾಣಕ್ಕೆ ಹೆಲ್ಮೇಟ್ ಧರಿಸಿ’ - [ಅಧ್ಯಕ್ಷನಿಂದಲೇ ಅಕ್ರಮ: ಅರೆಸ್ಟ್!](https://mobiletime.in/2026/01/illegality-from-the-president-himself-arrest/): ಜೊಯಿಡಾದ ಶಿಗ್ಗರಗಾಂವ್ ಗ್ರಾಮ ಪಂಚಾಯತ ಅಧ್ಯಕ್ಷ ಶ್ಯಾಮ್ ಮಂಡೋಸ್ ಅವರು ಅಕ್ರಮ ಮರಳುಗಾರಿಕೆ ನಡೆಸುತ್ತಿದ್ದಾರೆ. ಅವರ ಮರಳು ಲಾರಿಯನ್ನು ಅರಣ್ಯಾಧಿಕಾರಿಗಳು ತಡೆದಿದ್ದಾರೆ. ಜೊತೆಗೆ ಶ್ಯಾಮ್ ಮಂಡೋಸ್ ಅವರನ್ನು ಬಂಧಿಸಿದ್ದಾರೆ. ಜೊಯಿಡಾದ ಅಮಸೇತ್ ಗ್ರಾಮದ ಶ್ಯಾಮ್ ಜೋನ್ ಮಂಡೋಸ್ ಅವರು ಜೊಯಿಡಾದ ಶಿಗ್ಗರಗಾಂವ್ ಗ್ರಾಮ ಪಂಚಾಯತ ಅಧ್ಯಕ್ಷರಾಗಿದ್ದಾರೆ. ಅವರು ತಮ್ಮ ಲಾರಿ ಮೂಲಕ ಅಕ್ರಮ ನಡೆಸಿದ್ದು, ಮರಳುಗಾರಿಕೆ ನಡೆಸುವಾಗ ಸಿಕ್ಕಿ ಬಿದ್ದಿದ್ದಾರೆ. ಜೊಯಿಡಾದ ಬರ್ಚಿಯಲ್ಲಿ ಅರಣ್ಯಾಧಿಕಾರಿಗಳು ಕಾರ್ಯಾಚರಣೆ ಮಾಡಿದ್ದಾರೆ. ದಾಂಡೇಲಿ ಮಾರ್ಗವಾಗಿ ಮರಳು ಸಾಗಾಟವಾಗುತ್ತಿರುವುದನ್ನು ತಡೆದಿದ್ದಾರೆ. ಅಮಸೇತ್ ಗ್ರಾಮದಿಂದ ದಾಂಡೇಲಿ ಕಡೆ ಮರಳು ಸಾಗಾಟ ಮಾಡುವಾಗಲೇ ಅರಣ್ಯಾಧಿಕಾರಿಗಳು ದಾಳಿ ಮಾಡಿದ್ದಾರೆ. ಲಾರಿಯನ್ನು ವಶಕ್ಕೆಪಡೆದ ಅಧಿಕಾರಿಗಳು ದಾಖಲೆಗಳ ಪರಿಶೀಲನೆ ಮಾಡಿದ್ದಾರೆ. ನಿಸರ್ಗಕ್ಕೆ ಹಾನಿ ಆಗುವ ರೀತಿ ಮರಳು ತೆಗೆದು ಸಾಗಾಟ ಮಾಡಿದ ಕಾರಣ ಜೋನ್ ಮಂಡೋಸ್ ವಿರುದ್ಧ ಕ್ರಮ ಜರುಗಿಸಿದ್ದಾರೆ. ಜಾನ್ ಮಂಡೋಸ್ ಅವರನ್ನು ಅರಣ್ಯಾಧಿಕಾರಿಗಳು ದಾಂಡೇಲಿ ಪೊಲೀಸರಿಗೆ ಒಪ್ಪಿಸಿದ್ದಾರೆ. - [ವಿದ್ಯುತ್ ಸ್ಪರ್ಶ: ದುಡಿಯಲು ಬಂದಿದ್ದ ಕಾರ್ಮಿಕನ ಕೊನೆಯುಸಿರು!](https://mobiletime.in/2026/01/electric-shock-worker-dies-after-coming-to-work/): ಶಿರಸಿಯ ಬಂಡಲ್-ಕಸಗೆ ರಸ್ತೆ ನಿರ್ಮಾಣದ ವೇಳೆ ವ್ಯಕ್ತಿಯೊಬ್ಬರ ಸಾವಾಗಿದೆ. ಹೊಸದಾಗಿ ನಿರ್ಮಿಸಿದ ರಸ್ತೆಗೆ ಅಡಿಕೆ ಸಿಪ್ಪೆ ಸುರಿಯುತ್ತಿದ್ದ ಅಜಿತಕುಮಾರ ಪಲ್ಲಿಗಟ್ಟಿ ವಿದ್ಯುತ್ ಸ್ಪರ್ಶಕ್ಕೆ ಒಳಗಾಗಿ ಕೊನೆಯುಸಿರೆಳೆದಿದ್ದಾರೆ. ಆಂದ್ರ ಪ್ರದೇಶದ ಅಜಿತಕುಮಾರ ಪಲ್ಲಿಗಟ್ಟಿ (27) ಅವರು ಶಿರಸಿ ಬಂಡಲದಲ್ಲಿ ವಾಸವಾಗಿದ್ದರು. ಅಲ್ಲಿನ ರಸ್ತೆ ನಿರ್ಮಾಣ ಕೆಲಸಕ್ಕಾಗಿ ಅವರು ದುಡಿಯುತ್ತಿದ್ದರು. ಜನವರಿ 11ರಂದು ಹೊಸದಾಗಿ ನಿರ್ಮಿಸಿದ ರಸ್ತೆಗೆ ಅವರು ಅಡಿಕೆ ಸಿಪ್ಪೆ ಹೊಯ್ಯುತ್ತಿದ್ದರು. ಟಿಪ್ಪರಿನಲ್ಲಿ ಅಡಿಕೆ ಸಿಪ್ಪೆ ತಂದ ಅಜಿತಕುಮಾರ ಪಲ್ಲಿಗಟ್ಟಿ ಅವರು ಟಿಪ್ಪರ ಹಿಂಭಾಗ ಕಬ್ಬಿಣದ ಹಿಡಿಕೆ ಹಿಡಿದು ಅದನ್ನು ರಸ್ತೆ ಮೇಲೆ ಚಲ್ಲುತ್ತಿದ್ದರು. ಆ ರಸ್ತೆ ಮೇಲ್ಬಾಗ ವಿದ್ಯುತ್ ಲೈನ್ ಹಾದು ಹೋಗಿದ್ದು, ಅದನ್ನು ಅಜಿತಕುಮಾರ ಪಲ್ಲಿಗಟ್ಟಿ ಅವರು ಗಮನಿಸಲಿಲ್ಲ. ಅಲ್ಲಿ ವಿದ್ಯುತ್ ತಂತಿಯಿರುವುದು ಟಿಪ್ಪರ್ ಚಾಲಕನ ಅರಿವಿಗೂ ಬರಲಿಲ್ಲ. ಟಿಪ್ಪರ್ ಮುಂದೆ ಸಾಗುತ್ತಲೇ ಅದರ ಹಿಂದಿನ ಭಾಗವನ್ನು ಮೇಲೆತ್ತುವಾಗ ಟಿಪ್ಪರಿಗೆ ವಿದ್ಯುತ್ ತಂತಿ ಸ್ಪರ್ಶಿಸಿತು. ಪರಿಣಾಮ ಅಜಿತಕುಮಾರ ಪಲ್ಲಿಗಟ್ಟಿ ಅಲ್ಲಿಯೇ ಕೊನೆಯುಸಿರೆಳೆದರು. - [ಹೆಜ್ಜೇನು ದಾಳಿ: ಕೊನೆಯುಸಿರೆಳೆದ ಕೃಷಿಕ!](https://mobiletime.in/2026/01/honey-bee-attack-farmer-dies/): ಹೊನ್ನಾವರದ ಜನತಾ ವಿದ್ಯಾಲಯ ಹಿಂದಿನ ಕಾಡಿನಲ್ಲಿ ಜೇನು ಗೂಡು ಕಟ್ಟಿದ್ದು, ಅಲ್ಲಿದ್ದ ದುಂಬಿಗಳ ಆಕ್ರಮಣಕ್ಕೆ ಮಂಜುನಾಥ ಅಂಬಿಗ ಅವರು ಸಾವನಪ್ಪಿದ್ದಾರೆ. ಹೊನ್ನಾವರ ಅನಿಲಗೋಡದ ಹೊಳೆ ಬದಿಕೇರಿಯಲ್ಲಿ ಮಂಜುನಾಥ ಗಣಪ ಅಂಬಿಗ (53) ಅವರು ವಾಸವಾಗಿದ್ದರು. ಕೃಷಿ ಕೆಲಸ ಮಾಡಿಕೊಂಡು ಅವರು ಜೀವನ ನಡೆಸುತ್ತಿದ್ದರು. ಜನವರಿ 13ರ ಬೆಳಗ್ಗೆ ಮಂಜುನಾಥ ಅಂಬಿಗ ಅವರು ಕೃಷಿ ಕೆಲಸಕ್ಕಾಗಿ ಬೇರಂಕಿ ಗ್ರಾಮಕ್ಕೆ ಹೊರಟಿದ್ದರು. ಆ ವೇಳೆಯಲ್ಲಿ ಅನಿಲಗೋಡಿನ ಜನತಾ ವಿದ್ಯಾಲಯ ಬಳಿಯ ಹೆಜೇನು ನೊಣಗಳು ಅವರ ಮೇಲೆ ದಾಳಿ ನಡೆಸಿದವು. ಅರಣ್ಯ ಪ್ರದೇಶದ ಮಣ್ಣಿನ ರಸ್ತೆಯಲ್ಲಿ ಸಾಗುತ್ತದ್ದ ಮಂಜುನಾಥ ಅಂಬಿಗ ಅವರಿಗೆ ಜೇನು ನೊಣಗಳಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಒಮ್ಮೆಗೆ ಮುತ್ತಿಗೆ ಹಾಕಿದ ದುಂಬಿಗಳು ಅವರ ತಲೆ, ಮೈ-ಕೈಗೆ ಕಚ್ಚಿ ಗಾಯಗೊಳಿಸಿದವು. ಇದರಿಂದ ಮಂಜುನಾಥ ಅಂಬಿಗ ಅವರು ಅಸ್ವಸ್ಥರಾಗಿದ್ದು, ಅವರನ್ನು ಆಸ್ಪತ್ರೆಗೆ ಸೇರಿಸಲಾಯಿತು. ಆದರೆ, ಮಂಜುನಾಥ ಅಂಬಿಗ ಅವರ ಆರೋಗ್ಯದಲ್ಲಿ ಚೇತರಿಕೆ ಕಾಣಲಿಲ್ಲ. 10.45ರ ಅವಧಿಗೆ ಅವರು ಕೊನೆಯುಸಿರೆಳೆದಿದ್ದು, ವೈದ್ಯರು ಸಾವನ್ನು ದೃಢಪಡಿಸಿದರು. ಮಂಜುನಾಥ ಅಂಬಿಗ ಅವರ ಜೊತೆ ಕೆಲಸಕ್ಕೆ ಹೋಗಿದ್ದ ಜನಾರ್ಧನ ಲಕ್ಷö್ಮಣ ನಾಯ್ಕ ಅವರು ಪ್ರಾಣ ಉಳಿಸಿಕೊಂಡಿದ್ದು, ಅವರೇ ಈ ಬಗ್ಗೆ ಮಾಹಿತಿ ನೀಡಿದರು. - [ಮರ ಹತ್ತಿದ ಯುವಕನಿಗೆ ವಿದ್ಯುತ್ ಸ್ಪರ್ಶ: ಸಾವು](https://mobiletime.in/2026/01/young-man-dies-after-being-electrocuted-while-climbing-a-tree/): ಅಂಕೋಲಾದ ಮಂಜುನಾಥ ನಾಯ್ಕ ಅವರ ಮನೆ ಬಳಿ ತೆಂಗಿನ ಮರ ಏರಿದ್ದ ರಾಜು ಗೌಡ ಅವರಿಗೆ ವಿದ್ಯುತ್ ತಂತಿ ತಗುಲಿದೆ. ಪರಿಣಾಮ ಅವರು ಮರದಿಂದ ಬಿದ್ದು ಸಾವನಪ್ಪಿದ್ದಾರೆ. ಅಂಕೋಲಾದ ಹೊಸಗದ್ದೆಯಲ್ಲಿ ರಾಜು ಖೇಮು ಗೌಡ (32) ಅವರು ಸೆಂಟ್ರಿAಗ್ ಕೆಲಸ ಮಾಡಿ ಬದುಕು ಕಟ್ಟಿಕೊಂಡಿದ್ದರು. ಬಿಡುವಿನ ವೇಳೆ ಅವರು ತೆಂಗಿನ ಕಾಯಿ ಕೊಯ್ಯುವ ಕೆಲಸಕ್ಕೂ ಹೋಗುತ್ತಿದ್ದರು. ಜನವರಿ 12ರಂದು ಅವರು ಹೊಸಗದ್ದೆ ಗ್ರಾಮದಲ್ಲಿರುವ ಮಂಜುನಾಥ ಮಾದೇವ ನಾಯ್ಕ ಅವರ ಮನೆ ಬಳಿ ಹೋಗಿದ್ದರು. ಅಲ್ಲಿದ್ದ ತೆಂಗಿನ ಮರ ಏರಿ ಕಾಯಿ ಕೊಯ್ದಿದ್ದ ರಾಜು ಗೌಡ ಅವರು ತೆಂಗಿನ ಗರಿಗಳನ್ನು ಸ್ವಚ್ಛ ಮಾಡುತ್ತಿದ್ದರು. ಈ ವೇಳೆ ಆ ತೆಂಗಿನ ಹೆಡೆಗೆ ವಿದ್ಯುತ್ ತಂತಿ ತಗುಲಿತು. ಹಸಿ ಹೆಡೆಯ ಮೂಲಕ ಆ ವಿದ್ಯುತ್ ರಾಜು ಗೌಡ ಅವರನ್ನು ಸ್ಪರ್ಶಿಸಿತು. ಗಟ್ಟಿಯಾಗಿ ಮರ ಹಿಡಿದುಕೊಂಡಿದ್ದ ರಾಜು ಗೌಡ ಅವರು ವಿದ್ಯುತ್ ಆಘಾತಕ್ಕೆ ಕೈ ಸಡಿಲಗೊಳಿಸಿದರು. ಕೆಳಗಿದ್ದ ಹೂವಿನ ಗಿಡಗಳ ಮೇಲೆ ಅವರು ಬಿದ್ದು ಪೆಟ್ಟು ಮಾಡಿಕೊಂಡರು. ಗಂಭೀರ ಪ್ರಮಾಣದಲ್ಲಿ ಗಾಯಗೊಂಡಿದ್ದ ರಾಜು ಗೌಡ ಅವರನ್ನು ಅಂಕೋಲಾ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ, ಅಷ್ಟರೊಳಗೆ ರಾಜು ಗೌಡ ಅವರು ಕೊನೆಯುಸಿರೆಳೆದಿದ್ದರು. ಅಂಕೋಲಾ ಆಸ್ಪತ್ರೆಗೆ ಭೇಟಿ ನೀಡಿದ್ದ ಪೊಲೀಸ್ ಸಿಬ್ಬಂದಿ ಸುಧಾಕರ ನಾಯ್ಕ ಅವರಿಗೆ ರಾಜು ಗೌಡ ಅವರ ಸಹೋದರ ಸಂದೀಪ ಗೌಡ ಅವರು ಈ ವಿಷಯ ವಿವರಿಸಿದರು. ಸುಧಾಕರ ನಾಯ್ಕ ಅವರು ಪಿಸೈ ಗುರುನಾಥ ಹಾದಿಮನಿ ಅವರಿಗೆ ತಿಳಿಸಿದ್ದು, ಪೊಲೀಸರು ಪ್ರಕರಣ ದಾಖಲಿಸಿದರು. - [ಗೋವಾದಿಂದ ಹುಬ್ಬಳ್ಳಿಗೆ ಹೊರಟ ಸರಾಯಿ: ತಡೆ!](https://mobiletime.in/2026/01/sarai-leaving-goa-for-hubballi-stop/): ಕಡಿಮೆ ಬೆಲೆಗೆ ಸರಾಯಿ ಖರೀದಿಸಿ ಅದನ್ನು ದುಬಾರಿ ಬೆಲೆಗೆ ಮಾರಲು ಯತ್ನಿಸಿದ್ದ ನಾರಾಯಣ ದಲಬಂಜನ್ ಅವರ ಯೋಜನೆ ಉಲ್ಟಾ ಆಗಿದೆ. ಗೋವಾದಿಂದ ಹುಬ್ಬಳ್ಳಿಗೆ ಸರಾಯಿ ಸಾಗಿಸುತ್ತಿದ್ದ ವೇಳೆ ನಾರಾಯಣ ದಲಬಂಜನ್ ಅವರು ಸಿಕ್ಕಿಬಿದ್ದಿದ್ದಾರೆ. ಹುಬ್ಬಳ್ಳಿಯ ಗೋಕುಲ ರಸ್ತೆ ಸಮೀಪದ ನೆಹರು ನಗರದಲ್ಲಿ ನಾರಾಯಣ ದಲಬಂಜನ್ ಅವರು ವಾಸವಾಗಿದ್ದಾರೆ. ಜನವರಿ 12ರಂದು ಸ್ಕಾರ್ಪಿಯೋದಲ್ಲಿ ಗೋವಾಗೆ ಹೋಗಿದ್ದ ಅವರು ಅಲ್ಲಿ ಬಗೆ ಬಗೆಯ ಮದ್ಯದ ಬಾಟಲಿಗಳನ್ನು ಖರೀದಿಸಿದ್ದಾರೆ. 1.26 ಲಕ್ಷ ರೂ ಮೌಲ್ಯದ ಸರಾಯಿ ಖರೀದಿಸಿದ ಅವರು ಆ ಸರಾಯಿಯನ್ನು ಹುಬ್ಬಳ್ಳಿಯಲ್ಲಿ ದುಪ್ಪಟ್ಟು ಬೆಲೆಗೆ ಮಾರಾಟ ಮಾಡಲು ನಿರ್ಧರಿಸಿದ್ದಾರೆ. ತಮ್ಮ ವಾಹನದ ತುಂಬ ಸರಾಯಿ ಬಾಟಲಿ ಹಾಕಿಕೊಂಡು ಅವರು ಅದೇ ದಿನ ರಾತ್ರಿ ಗೋವಾ ಗಡಿ ದಾಟಿದ್ದಾರೆ. ಖಚಿತ ಮಾಹಿತಿ ಆಧಾರದಲ್ಲಿ ಕಾಯುತ್ತಿದ್ದ ಪೊಲೀಸರು ಮೂಡಗೇರಿಯಿಂದ ಸದಾಶಿವಗಡ ಚಿಂಚೆವಾಡ ಬರುವ ಮಾರ್ಗದಲ್ಲಿ ಬರುತ್ತಿದ್ದ ಸ್ಕಾರ್ಪಿಯೋಗೆ ಅಡ್ಡಲಾಗಿ ಕೈ ಮಾಡಿದ್ದಾರೆ. ಇಲ್ಲಿನ ಹಳೆ ಐಸ್ ಪಾಕ್ಟರಿ ಹತ್ತಿರ ಆ ವಾಹನವನ್ನು ನಿಲ್ಲಿಸಿದ್ದಾರೆ. ಪಿಸೈ ಪರಶುರಾಮ ಮಿರ್ಜಗಿ ವಾಹನ ತಪಾಸಣೆ ನಡೆಸಿದಾಗ ಅವರಿಗೆ ಬಂದ ಮಾಹಿತಿಯಂತೆ ಅಲ್ಲಿ ಸರಾಯಿ ಬಾಟಲಿಗಳು ಕಾಣಿಸಿವೆ. ಗೋವಾದಲ್ಲಿ ಮಾತ್ರ ಮಾರಾಟಕ್ಕೆ ಸಿಗುವ ಸರಾಯಿ ಬಾಟಲಿಯನ್ನು ಅಕ್ರಮವಾಗಿ ಕರ್ನಾಟಕಕ್ಕೆ ತಂದ ಕಾರಣ ಅದೆಲ್ಲವನ್ನು ಪೊಲೀಸರು ವಶಕ್ಕೆಪಡೆದಿದ್ದಾರೆ. ಭಾರೀ ಪ್ರಮಾಣದಲ್ಲಿ ಕಾರ್ಯಾಚರಣೆ ನಡೆಸಿದ ಪೊಲೀಸರ ಕಾರ್ಯವನ್ನು ಎಸ್ಪಿ ದೀಪನ್ ಎಂ ಎನ್, ಹೆಚ್ಚುವರಿ ಎಸ್ಪಿ ಕೃಷ್ಣಮೂರ್ತಿ ಜಿ, ಜಗದೀಶ ಎಂ, ಡಿವೈಎಸ್ಪಿ ಗಿರೀಶ ಎಸ್ ವಿ ಹಾಗೂ ಕದ್ರಾ ಸಿಪಿಐ ಪ್ರಭಾಕರ ಧರ್ಮಟ್ಟಿ ಶ್ಲಾಘಿಸಿದ್ದಾರೆ. ಎಸೈ ಸಂತೋಷ ನಾಯ್ಕ, ಗೌಥಮ ರೊಡ್ಡನ್ನನವರ್, ವಿನಯ ಕಾಣಕೋಣಕರ್, ಬಸಪ್ಪಾ ಕಿತ್ತೂರ, ಅಭಿಜಿತ್ ಆರ್ ಎಲ್ ಹಾಗೂ ಪ್ರದೀಪ ಈ ಕಾರ್ಯಾಚರಣೆ ನಡೆಸಿದವರಾಗಿದ್ದಾರೆ. - [SBI: ಬ್ಯಾಂಕ್ ಖಾತೆ ಹಣವೂ ಸೇಫ್ ಅಲ್ಲ!](https://mobiletime.in/2026/01/sbi-even-bank-account-money-is-not-safe/): ಗ್ರಾಮ ಪಂಚಾಯತ ಕಾರ್ಯದರ್ಶಿ ಬ್ಯಾಂಕ್ ಖಾತೆಯಲ್ಲಿ ಲಕ್ಷಾಂತರ ರೂ ದುಡ್ಡಿರುವುದನ್ನು ಅರಿತ ಕಳ್ಳರು ಆ ಖಾತೆಗೆ ಕನ್ನ ಹಾಕಿದ್ದಾರೆ. ಭಟ್ಕಳದಲ್ಲಿ ಸರ್ಕಾರಿ ನೌಕರರಾಗಿರುವ ಮಂಜುನಾಥ ಶೆಟ್ಟಿಮನೆ ಅವರು ಬ್ಯಾಂಕ್ ಖಾತೆಯಲ್ಲಿದ್ದ 8 ಲಕ್ಷ ರೂ ಹಣ ಕಳೆದುಕೊಂಡಿದ್ದಾರೆ! ಭಟ್ಕಳದ ಮುರುಡೇಶ್ವರ ಬಳಿಯ ಬೇಂಗ್ರೇ ಮಾವಿನತೋಳದ ಮಂಜುನಾಥ ಶೆಟ್ಟಿಮನೆ ಅವರು ಗ್ರಾಮ ಪಂಚಾಯತದಲ್ಲಿ ಕಾರ್ಯದರ್ಶಿಯಾಗಿದ್ದಾರೆ. ಎಸ್‌ಬಿಐ ಬ್ಯಾಂಕಿನಲ್ಲಿ ಅವರು ಖಾತೆ ಹೊಂದಿದ್ದಾರೆ. 2025ರ ಡಿಸೆಂಬರ್ 24ರಂದು ಅವರ ಬ್ಯಾಂಕ್ ಖಾತೆಯನ್ನು ಸೈಬರ್ ಕಳ್ಳರು ಹ್ಯಾಕ್ ಮಾಡಿದ್ದಾರೆ. ಮೊದಲ ಸಲ 900ರೂಪಾಯಿಗಳಂತೆ ಎರಡು ಬಾರಿ ಹಣ ಕದ್ದಿದ್ದಾರೆ. 2700ರೂ ಹಣ ಕಡಿತವಾದ ಬಗ್ಗೆ ಅರಿತ ಮಂಜುನಾಥ ಶೆಟ್ಟಿಮನೆ ತಮ್ಮ ಬ್ಯಾಂಕ್ ಖಾತೆಯನ್ನು ನಿಷ್ಕ್ರಿಯಗೊಳಿಸಿದ್ದಾರೆ. ಡಿಸೆಂಬರ್ 26ರಂದು ನಿಷ್ಕ್ರಿಯಗೊಳಿಸಿದ್ದ ಬ್ಯಾಂಕ್ ಖಾತೆಯನ್ನು ಮತ್ತೆ ಚಾಲು ಸ್ಥಿತಿಗೆ ತಂದಿದ್ದಾರೆ. ಅದೇ ದಿನ ಸಂಜೆ ಅವರ ಅದೇ ಬ್ಯಾಂಕ್ ಖಾತೆಯಿಂದ 1.94 ಲಕ್ಷ ರೂ ಮಾಯವಾಗಿದೆ. ಅದಾದ ಕೆಲ ಸಮಯದ ನಂತರ ಮತ್ತೆ 1.95 ಲಕ್ಷ ರೂ ಕಡತವಾಗಿದೆ. ಮೂರನೇ ಬಾರಿ ಮತ್ತೆ 68 ಸಾವಿರ ರೂ ಕಳ್ಳತನವಾಗಿದೆ. ಆ ದಿನ ಒಟ್ಟು 457000ರೂ ನಾಪತ್ತೆ ಆಗಿದ್ದರಿಂದ ಮಂಜುನಾಥ ಶೆಟ್ಟಿಮನೆ ಅವರು ಆತಂಕಕ್ಕೆ ಒಳಗಾಗಿದ್ದಾರೆ. ಅದಾದ ನಂತರ ಅವರ ಬ್ಯಾಂಕ್ ಖಾತೆಗೆ 8 ಲಕ್ಷ ರೂ ಜಮಾ ಆಗಿದ್ದು, ಆ ವೇಳೆಯಲ್ಲಿಯೂ ಕಳ್ಳರು ಕ್ರಮವಾಗಿ 185000ರೂ ಹಾಗೂ 158000ರೂ ಎಗರಿಸಿದ್ದಾರೆ. ಇದರಿಂದ ಮಂಜುನಾಥ ಶೆಟ್ಟಿಮನೆ ಅವರಿಗೆ ಒಟ್ಟಾರೆಯಾಗಿ 802,700ರೂ ನಷ್ಟವಾಗಿದೆ. ದುಷ್ಕರ್ಮಿಗಳು ಕಂಪ್ಯುಟರ್ ಸಾಧನ ಬಳಸಿ ಮಂಜುನಾಥ ಶೆಟ್ಟಿಮನೆ ಅವರ ಹಾಗೇ ಕಂಪ್ಯುಟರ್ ಮುಂದೆ ನಟಿಸಿ ಹಣ ದೋಚಿದ್ದಾರೆ. ಮಂಜುನಾಥ ಶೆಟ್ಟಿಮನೆ ಅವರ ಎಲೆಕ್ಟಾçನಿಕ್ ಸಹಿ ದುರುಪಯೋಗಪಡಿಸಿ ಹಣ ಕೊಳ್ಳೆಹೊಡೆದ ಅನುಮಾನಗಳಿವೆ. - [ಬದುಕಿತು ಬಡ ಜೀವ!](https://mobiletime.in/2026/01/poor-life-lived/): ಗೋಕರ್ಣ ಸಮುದ್ರಕ್ಕೆ ಹಾರಿ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದ ಇಬ್ಬರನ್ನು ಅಲ್ಲಿನ ಜೀವ ರಕ್ಷಕ ಸಿಬ್ಬಂದಿ ಕಾಪಾಡಿದ್ದಾರೆ. ಸಮುದ್ರವನ್ನೇ ನೋಡದ ಗುಲ್ಬರ್ಗಾ ಹಾಗೂ ಬೀದರಿನ ಪ್ರವಾಸಿಗರಿಬ್ಬರು ಆಳ-ಅಗಲ ಅರಿಯದೇ ನೀರಿಗೆ ಹಾರಿದ್ದು, ಜೀವ ರಕ್ಷಕ ಸಿಬ್ಬಂದಿಯ ಸಮಯ ಪ್ರಜ್ಞೆಯಿಂದ ಅವರು ಬದುಕುಳಿದಿದ್ದಾರೆ. ಗುಲ್ಬರ್ಗಾದ ಸಂಗಮೇಶ್ ರಾಜಪ್ಪ ಪಾಟೀಲ್ (23) ಹಾಗೂ ಬೀದರಿನ ಜಯಪ್ರಕಾಶ್ (23) ಎಂಬಾತರು ಬೆಂಗಳೂರಿನ ಖಾಸಗಿ ಕಂಪನಿ ಉದ್ಯೋಗಿಗಳಾಗಿದ್ದಾರೆ. 10 ಸ್ನೇಹಿತರ ಜೊತೆ ಅವರು ಮಂಗಳವಾರ ಗೋಕರ್ಣಕ್ಕೆ ಬಂದಿದ್ದು, ನೀರು ಕಂಡ ತಕ್ಷಣ ಸಮುದ್ರಕ್ಕೆ ಹಾರಿದ್ದಾರೆ. ಈಜು ಬಾರದಿದ್ದರೂ ಈಜುವ ಸಾಹಸ ಮಾಡಿದ್ದು, ಅದು ವಿಫಲವಾಗಿದೆ. ಹೀಗಾಗಿ ಆಳ ಸಮುದ್ರದ ಕಡೆ ಹೋದ ಅವರು ನೀರಿನಲ್ಲಿ ಮುಳುಗಿದ್ದಾರೆ. ಕಡಲತೀರದಿಂದಲೇ ಇದನ್ನು ನೋಡಿದ ರೋಷನ್ ಖಾರ್ವಿ, ಶಿವಪ್ರಸಾದ ಅಂಬಿಗ ಅವರು ಕಾರ್ಯಾಚರಣೆ ನಡೆಸಿದ್ದಾರೆ. ಮೋಹನ ಅಂಬಿಗ, ಲೊಕೇಶ ಹರಿಕಂತ್ರ, ರವಿ ನಾಯ್ಕ್, ಶೇಖರ್ ಹರಿಕಂತ್ರ, ಗಜೇಂದ್ರ ಗೌಡ ಕೂಡಲೇ ಸಮುದ್ರಕ್ಕೆ ಹಾರಿದ್ದಾರೆ. ಸಮುದ್ರದಲ್ಲಿ ಮುಳುಗುತ್ತಿದ್ದ ಇಬ್ಬರ ಜುಟ್ಟು ಹಿಡಿದು ದಡಕ್ಕೆ ತಂದಿದ್ದಾರೆ. ಬೀಚ್ ವಾಟರ್ ಸ್ಪೋರ್ಟ್ಸ್ ಸಿಬ್ಬಂದಿ ಜಗ್ಗು ಹರಿಕಂತ್ರ, ಮಹೇಶ್ ಹರಿಕಂತ್ರ, ಕಮಲಾಕರ ಹೊಸಕಟ್ಟ, ಸಚಿನ್ ಹರಿಕಂತ್ರ, ಮಹಾಬಲೇಶ್ವರ ಹರಿಕಾಂತ್ರ ಜೊತೆ ಗೃಹರಕ್ಷಕ ಸಿಬ್ಬಂದಿ ಗಜಾನನ್ ನಾಗೇಕರ್ ಸಹ ಅವರಿಬ್ಬರ ಜೀವ ಉಳಿಸುವಲ್ಲಿ ಶ್ರಮಿಸಿದ್ದಾರೆ. - [ಆ ಆಹಾರ ಸೇವಿಸಲೇ ಬೇಡಿ!](https://mobiletime.in/2026/01/dont-eat-that-food/): `ರೆಡಿಮೇಡ್ ಹಾಗೂ ಜಂಕ್ ಫುಡ್ ಬಳಕೆಯಿಂದ ಸಹಜವಾಗಿ ರೋಗ ನಿರೋಧಕ ಶಕ್ತಿ ಕ್ಷೀಣಿಸಲಿದೆ. ಹೀಗಾಗಿ ಪ್ರತಿಯೊಬ್ಬರು ದಿನನಿತ್ಯ ಸಾವಯವ ಸಿರಿ ಧಾನ್ಯ ಆಹಾರವನ್ನು ಮಾತ್ರ ಬಳಸಬೇಕು’ ಎಂದು ಶಿರಸಿ-ಸಿದ್ದಾಪುರ ಕ್ಷೇತ್ರ ಶಾಸಕ ಭೀಮಣ್ಣ ನಾಯ್ಕ ಅವರು ಮನವಿ ಮಾಡಿದ್ದಾರೆ. `ಸಾವಯವ ಆಹಾರಗಳಿಂದ ಮಾತ್ರ ಸುಸ್ಥಿರ ಆರೋಗ್ಯ ಹೊಂದಲು ಸಾಧ್ಯ’ ಎಂದವರು ಪ್ರತಿಪಾದಿಸಿದ್ದಾರೆ. `ಬದಲಾಗುತ್ತಿರುವ ಆಧುನಿಕ ಜೀವನ ಶೈಲಿಯಲ್ಲಿ ರೆಡಿಮೇಡ್ ಹಾಗೂ ಜಂಕ್ ಫುಡ್‌ಗಳ ಬಳಕೆ ಹೆಚ್ಚಾಗುತಿರುವುದು ಕಳವಳಕಾರಿ. ಅಂಥ ಆಹಾರ ಬಳಸುವುದರಿಂದ ಮಾನವನ ಸಾಮರ್ಥ್ಯ ಕುಸಿಯುವುದರಿಂದ ದೇಶದ ಅಭಿವೃದ್ಧಿಯಲ್ಲಿ ಸಮರ್ಪಕ ಮಾನವ ಸಂಪನ್ಮೂಲದ ಬಳಕೆಗೆ ತಡೆ ಉಂಟಾಗುತ್ತದೆ’ ಎಂದವರು ಹೇಳಿದ್ದಾರೆ. `ಸಾವಯವ ಸಿರಿ ಧಾನ್ಯ ಆಹಾರ ಎಲ್ಲರಿಗೂ ಕ್ಷೇಮ. ಆರೋಗ್ಯಕ್ಕೂ ಸಹಕಾರಿ. ಹೀಗಾಗಿ ಎಲ್ಲರೂ ಸಾವಯವ ಸಿರಿ ಧಾನ್ಯಗಳ ಬಳಕೆ ಹೆಚ್ಚು ಮಾಡಬೇಕು’ ಎಂದವರು ಕರೆ ನೀಡಿದ್ದಾರೆ. ಉತ್ತರ ಕನ್ನಡ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಕೃಷಿ ಇಲಾಖೆ ಹಾಗೂ ಸಂಘ-ಸAಸ್ಥೆಗಳ ಸಹಯೋಗದಲ್ಲಿ ಅಂತರರಾಷ್ಟಿಯ ಸಿರಿಧಾನ್ಯ ಮತ್ತು ಸಾವಯವ ವಾಣಿಜ್ಯ ಮೇಳಕ್ಕೆ ಭೀಮಣ್ಣ ನಾಯ್ಕ ಅವರು ಚಾಲನೆ ನೀಡಿದ್ದು, ಅದಾದ ನಂತರ ತಮ್ಮ ಸಂದೇಶ ರವಾನಿಸಿದರು. ಸಾವಯವ ಸಿರಿಧಾನ್ಯ ವಾಕಥಾನ್ ಜಾಥಾದಲ್ಲಿ ಭಾಗವಹಿಸಿದ ಜಂಟಿ ಕೃಷಿ ನಿರ್ದೇಶಕ ಶಿವಪ್ರಸಾದ ಗಾಂವಕರ್ ಅವರು ಸಾವಯವ ಹಾಗೂ ಸಿರಿಧಾನ್ಯಗಳ ಕುರಿತಾದ ಮಹತ್ವವನ್ನು ವಿವರಿಸಿದರು. ಈ ವಾಕಥಾನ್ ಜಾಥಾದಲ್ಲಿ ತೋಟಗಾರಿಕಾ ಇಲಾಖೆ ಜಂಟಿ ನಿರ್ದೇಶಕರಾದ ಬಿ.ಪಿ. ಸತೀಶ್, ಉತ್ತರ ಕನ್ನಡ ಜಿಲ್ಲಾ ಸಾವಯವ ಕೃಷಿ ಒಕ್ಕೂಟದ ಅಧ್ಯಕ್ಷ ವಿಶ್ವೇಶ್ವರ ಭಟ್, ಸ್ಕೊಡ್‌ವೆಸ್ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ವೆಂಕಟೇಶ ನಾಯ್ಕ, ಅರಣ್ಯ ಮಹಾವಿದ್ಯಾಲಯದ ಡೀನ್ ಆರ್ ವಾಸುದೇವ, ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥೆ ರೂಪಾ ಪಾಟೀಲ್, ತೋಟಗಾರಿಕಾ ಮಹಾವಿದ್ಯಾಲಯದ ಎಮ್ ಹೆಚ್ ತಟಗಾರ, ಶಿರಸಿ ತಾಲೂಕಾ ಪಂಚಾಯತ್‌ನ ಕಾರ್ಯನಿರ್ವಾಹಕ ಅಧಿಕಾರಿ ಚನ್ನಬಸಪ್ಪ ಹಾವಣಗಿ ಇತರರಿದ್ದರು. ದಿನೇಶ ಹೆಗಡೆ ಅವರು ಕಾರ್ಯಕ್ರಮಕ್ಕೆ ಸಾಕಷ್ಟು ಸಿದ್ಧತೆ ಮಾಡಿದ್ದರು. ಶಿರಸಿ ಮಾರಿಕಾಂಬಾ ದೇವಸ್ಥಾನ, ಶಿವಾಜಿ ವೃತ್ತ, ಪೋಸ್ಟ್ ಆಫೀಸ್ ಸರ್ಕಲ್, ಸಿ ಪಿ ಬಝಾರ್, ಝೂ ಸರ್ಕಲ್ ಮೂಲಕ ರಾಘವೇಂದ್ರ ಮಠದವರೆಗೆ ಜಾಗೃತಿ ಜಾಥಾ ಸಂಚರಿಸಿತು. ವಾಕ್‌ಥಾನ್ ಉದ್ದಕ್ಕೂ ಸಾವಯವ, ಸಿರಿಧಾನ್ಯಗಳ ಬಗ್ಗೆ ಘೋಷಣೆಗಳನ್ನು ಕೂಗುತ್ತಾ, ಕರಪತ್ರಗಳನ್ನು ಹಂಚುತ್ತಾ ಅರಿವು ಮೂಡಿಸಲಾಯಿತು. ವಾಕಥಾನ್‌ನ ಆರಂಭದಲ್ಲಿ ಕೃಷಿ ನಿರ್ದೇಶಕ ಪಾಂಡು ಕೆ ಹೆಚ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಹಾಯಕ ಕೃಷಿ ನಿರ್ದೇಶಕ ಮಧುಕರ ನಾಯ್ಕ ಕಾರ್ಯಕ್ರಮವನ್ನು ನಿರ್ವಹಿಸಿದರು. - [ಮಾಹಿತಿ ನೀಡದ ಪೊಲೀಸ್ ಅಧಿಕಾರಿ!](https://mobiletime.in/2026/01/a-police-officer-who-did-not-provide-information/): ಹೊನ್ನಾವರ ಪೊಲೀಸ್ ಠಾಣೆಯಲ್ಲಿ ದಾಖಲಾದ ಪ್ರಕರಣಗಳ ವಿವರ ಕೋರಿ ಸಾಮಾಜಿಕ ಕಾರ್ಯಕರ್ತ ಆಗ್ನೇಲ್ ರೋಡ್ರಿಗ್ರಸ್ ಅರ್ಜಿ ಸಲ್ಲಿಸಿದ್ದಾರೆ. ಆದರೆ, ಪೊಲೀಸರು ಆ ಮಾಹಿತಿ ನೀಡಿಲ್ಲ. ಅರ್ಜಿ ಸಲ್ಲಿಸಿ 63 ದಿನ ಕಳೆದರೂ ಮಾಹಿತಿ ನೀಡಿದ ಅಧಿಕಾರಿಗಳ ವಿರುದ್ಧ ಅರ್ಜಿದಾರರು ಅಸಮಧಾನವ್ಯಕ್ತಪಡಿಸಿದ್ದಾರೆ. 2025ರ ಜುಲೈ, ಅಗಸ್ಟ, ಸೆಪ್ಟೆಂಬರ್ ಹಾಗೂ ಅಕ್ಟೊಬರ್ ಅವಧಿಯಲ್ಲಿನ ಮಾಹಿತಿಗಾಗಿ ಆಗ್ನೇಲ್ ರೋಡ್ರಿಗಸ್ ಅರ್ಜಿ ಸಲ್ಲಿಸಿದ್ದಾರೆ. ಕಳ್ಳತನ ಪ್ರಕರಣಗಳ ಮಾಹಿತಿ ಅಗತ್ಯವಿರುವ ಕಾರಣ ಅವರು ಈ ಅರ್ಜಿ ಸಲ್ಲಿಸಿದ್ದಾರೆ. ಸಮಯಕ್ಕೆ ಸರಿಯಾಗಿ ಮಾಹಿತಿ ಸಿಗದ ಕಾರಣ ಪ್ರಥಮ ಮೇಲ್ಮನವಿ ಸಲ್ಲಿಸಿದ್ದಾರೆ. ಆದರೆ, ಪ್ರಥಮ ಮೇಲ್ಮನವಿ ಸಲ್ಲಿಸಿದ ನಂತರವೂ ಅವರಿಗೆ ಅಗತ್ಯ ದಾಖಲೆ ಸಿಕ್ಕಿಲ್ಲ. ಹೀಗಾಗಿ ಕಾನೂನು ಹೋರಾಟ ಮುಂದುವರೆಸುವುದಾಗಿ ಅವರು ಹೇಳಿದ್ದಾರೆ. `ನಿಯಮಗಳ ಪ್ರಕಾರ 30 ದಿನದಲ್ಲಿ ದಾಖಲೆ ಒದಗಿಸಬೇಕು. ಆದರೆ, ಆ ನಿಯಮ ಪಾಲನೆ ಆಗುತ್ತಿಲ್ಲ. ಈ ಬಗ್ಗೆ ಪ್ರಶ್ನಿಸಲು ಠಾನೆಗೆ ಹೋದರೂ ಅಧಿಕಾರಿಗಳು ಸಿಕ್ಕಿಲ್ಲ’ ಎಂದವರು ದೂರಿದ್ದಾರೆ. `ಮಾಹಿತಿ ನೀಡದ ಅಧಿಕಾರಿಗಳಿಗೆ ದಂಡ ವಿಧಿಸುವ ಬಗ್ಗೆ ಕಾನೂನು ಹೇಳಿದ್ದು, ಈ ಬಗ್ಗೆ ದೂರು ಸಲ್ಲಿಸಲಾಗುತ್ತದೆ ಎಂದವರು ಮಾಹಿತಿ ನೀಡಿದ್ದಾರೆ. - [ವಕೀಲನ ಕೊಂದವನಿಗೆ ಜೀವನವಿಡೀ ಜೈಲು!](https://mobiletime.in/2026/01/life-imprisonment-for-the-lawyers-killer/): ನ್ಯಾಯವಾದಿ ಅಜೀತ ನಾಯ್ಕರನ್ನು ನಡುರಸ್ತೆಯಲ್ಲಿ ಕೊಲೆ ಮಾಡಿದ ಪಾಂಡುರoಗ ಕಾಂಬ್ಳೆಗೆ ಜೀವನಪೂರ್ತಿ ಜೈಲುವಾಸ ಅನುಭವಿಸುವಂತೆ ನ್ಯಾಯಾಲಯ ಆದೇಶಿಸಿದೆ. 2018ರಲ್ಲಿ ಅಜೀತ ನಾಯ್ಕ ಅವರ ಕೊಲೆ ನಡೆದಿತ್ತು. ವಾದ ಆಲಿಸಿದ ನ್ಯಾಯಾಲಯ ಪಾಂಡುರoಗ ಕಾಂಬ್ಳೆ ಕೊಲೆ ಮಾಡಿದನ್ನು ದೃಢಪಡಿಸಿತ್ತು. `ಕಕ್ಷಿದಾರರ ಪರ ವಾದ ಮಂಡಿಸಿದ ಕಾರಣ ವಕೀಲರನ್ನು ಕೊಲೆ ಮಾಡುವ ಹಂತಕ್ಕೆ ತಲುಪಿದ ಅಪರಾಧಿಗೆ ಗಲ್ಲು ಶಿಕ್ಷೆ ನೀಡಬೇಕು’ ಎಂದು ಸರ್ಕಾರಿ ಅಭಿಯೋಜಕ ರಾಜೇಶ ಮಳಗಿಕರ್ ಅವರು ವಾದಿಸಿದ್ದರು. ಅಪರಾಧಿಗೆ ಮರಣ ದಂಡನೆ ಅಥವಾ ಜೀವಾವಧಿ ಶಿಕ್ಷೆ ನೀಡುವ ವಿಷಯವಾಗಿ ತೀರ್ಪು ನೀಡಲು ನ್ಯಾಯಾಧೀಶ ಕಿರಣ ಕಿಣಿ ಅವರು ಜನವರಿ 13ಕ್ಕೆ ದಿನಾಂಕ ನಿಗದಿ ಮಾಡಿದ್ದರು. ಅದರ ಪ್ರಕಾರ, ಈ ದಿನ ನ್ಯಾಯಾಧೀಶ ಕಿರಣ ಕಿಣಿ ಅವರು ಶಿಕ್ಷೆಯ ಪ್ರಮಾಣ ಪ್ರಕಟಿಸಿದರು. ದಾಂಡೇಲಿಯ ವಕೀಲ ಅಜೀತ ನಾಯ್ಕ ಅವರನ್ನು ಪಾಂಡುರoಗ ಕಾಂಬಳೆ ಅವರು ಕೊಚ್ಚಿ ಕೊಲೆ ಮಾಡಿದ್ದು ಸಾಭೀತಾದ್ದು, `ಮಾಡಿದ ತಪ್ಪಿಗೆ ಪಾಂಡುರoಗ ಕಾಂಬಳೆ ಜೀವನ ಪೂರ್ತಿ ಜೈಲು ಶಿಕ್ಷೆ ಅನುಭವಿಸಬೇಕು’ ಎಂದು ತೀರ್ಪು ಪ್ರಕಟಿಸಿದರು. ಇದರೊಂದಿಗೆ 25 ಸಾವಿರ ರೂ ದಂಡ ವಿಧಿಸಿದ್ದು, ಸಂತ್ರಸ್ತ ಕುಟುಂಬಕ್ಕೆ 50 ಸಾವಿರ ರೂ ಪರಿಹಾರ ನೀಡಬೇಕು ಎಂದು ಆದೇಶಿಸಿದರು. ಪ್ರಕರಣದ ಹಿನ್ನಲೆ: 2018ರ ಜುಲೈ 27ರಂದು ದಾಂಡೇಲಿ ಅಯ್ಯಂಗಾರ್ ಬೇಕರಿ ಎದುರು ವಕೀಲ ಅಜೀತ ನಾಯ್ಕ ಅವರ ಬರ್ಬರ ಹತ್ಯೆಯಾಗಿತ್ತು. ಪಟೇಲ್ ಸರ್ಕಲ್ ಬದಿಯಿಂದ ದಾಂಡೇಲ್ ಬಸ್ ನಿಲ್ದಾಣ ಬಳಿ ಬರುವ ರಸ್ತೆಯಲ್ಲಿ ಅಜೀತ ನಾಯ್ಕ ಅವರ ಮೇಲೆ ದಾಳಿ ನಡೆದಿತ್ತು. ಭೂ ವಿವಾದದ ಪ್ರಕರಣವೊಂದರಲ್ಲಿ ಅಜೀತ ನಾಯ್ಕ ಅವರು ವಕಾಲತ್ತುವಹಿಸಿದನ್ನು ಪಾಂಡುರoಗ ಕಾಂಬಳೆ ಸಹಿಸಿರಲಿಲ್ಲ. ಹೀಗಾಗಿ ವಿನಾಯಕ ಕರ್ನಿಂಗ್, ಈ ಎಲ್ ಮಂಜುನಾಥ, ನಜೀರ ಅಹ್ಮದ್ ಲಾಲುಸಾಬ್ ಜಮಾಲಿ ಹಾಗೂ ಈಶ್ವರ ಶೆಟ್ಟಿಯಾರ್ ಎಂಬಾತರ ಜೊತೆ ಸೇರಿ ವಕೀಲ ಅಜಿತ ನಾಯ್ಕ ಅವರನ್ನು ಕೊಲೆ ಮಾಡಲು ಪಾಂಡುರoಗ ಕಾಂಬಳೆ ನಿರ್ಧರಿಸಿದ್ದರು. ಆ ದಿನ ನೀಲಿ ಬಣ್ಣದ ಜರ್ಕೀನ್ ಧರಿಸಿ ಅದರೊಳಗೆ ಆಯುಧ ಅಡಗಿಸಿಟ್ಟುಕೊಂಡಿದ್ದ ಪಾಂಡುರoಗ ಕಾಂಬಳೆ, ಅಜಿತ ನಾಯ್ಕ ಅವರು ತಮ್ಮ ಕಚೇರಿಯಿಂದ ಹೊರ ಬರುವುದನ್ನು ಕಾಯುತ್ತಿದ್ದರು. ರಮೇಶ ನಾಯ್ಕ ಹಾಗೂ ಹನುಮಂತ ಕುಂಬಾರ ಅವರ ಜೊತೆ ದಾಂಡೇಲಿ ನಗರದ ಸಂಡೆ ಮಾರ್ಕೇಟ್ ಬಳಿ ಕಚೇರಿಯಿಂದ ಅಜಿತ್ ನಾಯ್ಕ ಅವರು ಹೊರ ಬರುತ್ತಿರುವಾಗಲೇ ಅವರ ಮೇಲೆ ದಾಳಿ ನಡೆಸಿದ್ದರು. ಅಜೀತ್ ನಾಯ್ಕ ಕೊಲೆ ನಂತರ ಜರ್ಕೀನ್ ಅನ್ನು ಹಾಳಾದ ಕಾರಿನ ಅಡಿ ಹುದುಗಿಸಿ, ಮೀನು ಮಾರುಕಟ್ಟೆ ಬಳಿಯಿದ್ದ ಬೈಕಿನಲ್ಲಿ ಆರೋಪಿ ಪರಾರಿ ಆಗಿದ್ದರು. ಹತ್ಯೆ ನಂತರವೂ ಆರೋಪಿತರು ಜೈಲಿನಲ್ಲಿಯೇ ಕುಳಿತು ಕಾಳಿ ನದಿ ದಂಡೆ ಮೇಲಿರುವ ಜಮೀನನ್ನು ಪ್ರವಾಸೋಧ್ಯಮಿಯೊಬ್ಬರಿಗೆ ಮಾರಾಟಕ್ಕೆ ಯತ್ನಿಸಿದ್ದರು. ಈ ಪ್ರಕರಣದ ಬಗ್ಗೆ ಆಗಿನ ಪಿಐ ಎ ಎ ಮುಜಾವರ್ ತನಿಖೆ ನಡೆಸಿದ್ದರು. ಪಿ ಸಿ ಮಂಜುನಾಥ ಎಚ್ ಶೆಟ್ಟಿ ಸಹಾಯಕ ತನಿಖಾಧಿಕಾರಿಯಾಗಿ ಕೆಲಸ ಮಾಡಿದರು. ನಂತರ ಅವರು ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದು, ಈ ಪ್ರಕರಣ ಸಿಐಡಿ ತನಿಖೆಯವರೆಗೂ ಹೋಗಿತ್ತು. ಸರ್ಕಾರಿ ಅಭಿಯೋಜಕ ರಾಜೇಶ ಮಳಗಿಕರ್ ಅವರು ಪ್ರಕರಣದ ವಾದ ಶುರು ಮಾಡಿದರು. ಕೊಲೆ ಕುರಿತಾಗಿ ನಡೆಸಿದ ಸಂಚು, ಈ ಹಿಂದೆಯೂ ಆರೋಪಿತರು ವಕೀಲರ ಜೊತೆ ನಡೆಸಿದ ವಾಗ್ವಾದ, ಕೊಲೆಗೆ ಇದ್ದ ಕಾರಣದ ಬಗ್ಗೆ ರಾಜೇಶ ಮಳಗಿಕರ್ ಅವರು ನ್ಯಾಯಾಲಯಕ್ಕೆ ವಿವರಿಸಿದರು. ಆದರೆ, ಅಜೀತ ನಾಯ್ಕ ಅವರ ಕೊಲೆ ಪ್ರಕರಣದಲ್ಲಿ ಸಾಕ್ಷಿ ಹೇಳಲು ಸಾಕ್ಷಿದಾರರು ಹಿಂದೇಟು ಹಾಕಿದ್ದರು. ಕೊಲೆ ಆಗಿರುವುದನ್ನು ಕಣ್ಣಾರೆ ಕಂಡವರಿದ್ದರೂ ಅವರು ನ್ಯಾಯಾಲಯದ ಮುಂದೆ ಬರಲಿಲ್ಲ. ಅದಾಗಿಯೂ, ವಕೀಲರ ಮೇಲೆ ನಡೆದ ದಾಳಿಯನ್ನು ಸರ್ಕಾರಿ ಅಭಿಯೋಜಕ ರಾಜೇಶ ಮಳಗಿಕರ್ ಅವರು ಸವಾಲಾಗಿ ಸ್ವೀಕರಿಸಿದ್ದು, ಸಾಂದರ್ಭಿಕ ಸಾಕ್ಷಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದರು. `ವಕೀಲರ ಮೇಲೆ ದಾಳಿ ಮಾಡಿ ಅವರ ಕೊಲೆಗೆ ಕಾರಣರಾದ ಆರೋಪಿಗೆ ಮರಣ ದಂಡನೆ ಶಿಕ್ಷೆ ವಿಧಿಸಬೇಕು’ ಎಂದು ರಾಜೇಶ ಮಳಗಿಕರ್ ಅವರು ನ್ಯಾಯಾಲಯಕ್ಕೆ ಮನವಿ ಮಾಡಿದರು. ಈ ವಾದ ಆಲಿಸಿದ ನ್ಯಾಯಾಲಯ ಪ್ರಮುಖ ಆರೋಪಿ ಪಾಂಡುರoಗ ಮಾರುತಿ ಕಾಂಬಳೆ ವಿರುದ್ಧ ಆರೋಪ ಸಾಬೀತಾಗಿದೆ ಎಂದು ಘೋಷಿಸಿತು. ಶಿಕ್ಷೆಯ ಪ್ರಮಾಣವನ್ನು ಜನವರಿ 13ರಂದು ಪ್ರಕಟಿಸಲು ನಿರ್ಧರಿಸಿದ್ದು, ಈ ದಿನ ಶಿಕ್ಷೆ ಪ್ರಮಾಣ ಪ್ರಕಟಿಸಿತು. ಉಳಿದ ನಾಲ್ವರು ಆರೋಪಿಗಳನ್ನು ಸಾಕ್ಷಿ ಕೊರತೆಯಿಂದ ನ್ಯಾಯಾಲಯ ಖುಲಾಸೆಗೊಳಿದೆ. ಅದಾಗಿಯೂ, ಸರ್ಕಾರಿ ಅಭಿಯೋಜಕ ರಾಜೇಶ ಮಳಗಿಕರ್ ಅವರು `ಈ ಪ್ರಕರಣದಲ್ಲಿ ಉಳಿದ ನಾಲ್ವರು ಆರೋಪಿತರಿಗೂ ಶಿಕ್ಷೆ ಆಗಬೇಕಿತ್ತು. ಈ ಬಗ್ಗೆ ಸರ್ಕಾರಕ್ಕೆ ಮೇಲ್ಮನವಿ ಸಲ್ಲಿಸುವದಕ್ಕೆ ಪತ್ರ ಬರೆಯಲಾಗುತ್ತದೆ’ ಎಂದು ಹೇಳಿದ್ದಾರೆ. - [ಕೊಡುಗೈ ದಾನಿಗೆ ಸಿಕ್ಕಿತು ಸನ್ಮಾನ-ಪುರಸ್ಕಾರ!](https://mobiletime.in/2026/01/the-generous-donor-received-an-honor-and-award/): ಕನ್ನಡ ಮಾಧ್ಯಮ ಶಾಲೆಯಲ್ಲಿ ಓದಿ ಉನ್ನತ ಹುದ್ದೆಯಲ್ಲಿ ಕಾರ್ಯನಿರ್ವಹಿಸಿದಲ್ಲದೇ ಗುಡ್ಡಗಾಡು ಮಕ್ಕಳ ಶೈಕ್ಷಣಿಕ ಸೇವೆ ಮಾಡುತ್ತಿರುವ ಕಾರವಾರದ ದಿನಕರ ಸಾಳುಂಕೆ ಅವರಿಗೆ `ಆದಿ ಲೋಕೋತ್ಸವ ಪ್ರಶಸ್ತಿ’ ದೊರೆತಿದೆ. ಕಾರವಾರದ ಅಸ್ನೋಟಿಯ ಕೊಳಗೆ ಗ್ರಾಮದವರಾದ ದಿನಕರ ಸಾಳುಂಕೆ ಅವರು ತಮ್ಮ ಬಾಲ್ಯವನ್ನು ದಾಂಡೇಲಿಯಲ್ಲಿ ಕಳೆದಿದ್ದರು. ಅಲ್ಲಿನ ಜನತಾ ವಿದ್ಯಾಲಯದಲ್ಲಿ ಓದಿದ ಅವರು ಗುಡ್ಡಗಾಡು ಮಕ್ಕಳ ಕಷ್ಟವನ್ನು ಹತ್ತಿರದಿಂದ ನೋಡಿದ್ದರು. ಸಾಮಾನ್ಯ ಕುಟುಂಬದಲ್ಲಿ ಜನಿಸಿದ ಅವರು ತಮ್ಮ ಪ್ರತಿಭೆ ಹಾಗೂ ಶ್ರಮದ ಫಲವಾಗಿ ಡಿಪ್ಲೋಮಾ ಸಿವಿಲ್ ಪೂರೈಸಿದರು. ಕಾರವಾರ ಬಂದರುವಿನಲ್ಲಿ ಕೆಲಸ ಶುರು ಮಾಡಿದ ಅವರಿಗೆ ಮಹಾರಾಷ್ಟ ಸರ್ಕಾರ ಉದ್ಯೋಗ ನೀಡಿತು. ಮೂರು ವರ್ಷದ ಸರ್ಕಾರಿ ಸೇವೆ ನಂತರ ಇಂಜಿನಿಯರ್ ಹುದ್ದೆ ತ್ಯಜಿಸಿದ ಅವರು ಸ್ವಂತ ಕಂಪನಿ ಕಟ್ಟಿದರು. ಪ್ರೀಮಿಯರ್ ಹಾಸ್ಪಿಟಾಲಿಟಿಸ್ & ಡೇವಲಪರ್ಸ ಇಂಡಿಯಾ ಪೈ ಲಿ ಹಾಗೂ ಪ್ರೀಮಿಯರ್ ಲೈಫ್ ಸ್ಟೈಲ್ ಬಿಲ್ಡರ್ಸ ಮೂಲಕ ಅವರು ಸಾಕಷ್ಟು ಕೆಲಸ ಮಾಡಿದ್ದಾರೆ. ಕರ್ನಾಟಕ, ಗೋವಾ ಹಾಗೂ ಮಹಾರಾಷ್ಟದಲ್ಲಿ ಜಲ ವಿದ್ಯುತ್, ರಸ್ತೆ ಸೇರಿ ಅನೇಕ ಬಗೆಯ ಕಾಮಗಾರಿಗಳ ಗುತ್ತಿಗೆ ಕಾರ್ಯ ನಿರ್ವಹಿಸಿದ್ದಾರೆ. ಈ ಎಲ್ಲದರ ಜೊತೆ ಜೊಯಿಡಾ ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಓದಿಗೆ ತಮ್ಮದೇ ಆದ ಕೊಡುಗೆ ನೀಡುತ್ತಿದ್ದಾರೆ. ಅಸ್ನೋಟಿಯ ಶಿವಾಜಿ ವಿದ್ಯಾ ಮಂದಿರದ ಹಾಸ್ಟೇಲ್ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಅವರು ನೆರವಾಗಿದ್ದಾರೆ. ದಿನಕರ ಸಾಳುಂಕೆ ಅವರ ಈ ಎಲ್ಲಾ ಸಾಧನೆ ಗಮನಿಸಿ ಗೋವಾ ಸರ್ಕಾರದ ಸಚಿವ ರಮೇಶ ಬಿ ತಾವಡ್ಕರ ಅವರು `ಆದಿ ಲೋಕೋತ್ಸವ ಪ್ರಶಸ್ತಿ’ ನೀಡಿ ಗೌರವಿಸಿದ್ದಾರೆ. ಕಾರವಾರದ ರಾಘವೇಂದ್ರ ಗಾಂವಕರ ಇತರರು ಈ ಪ್ರಶಸ್ತಿ ವಿತರಣೆಗೆ ಸಾಕ್ಷಿಯಾಗಿದ್ದರು. ದಿನಕರ ಸಾಳುಂಕೆ ಅವರಿಗೆ ಭಾರತೀಯ ವಿಕಾಸ ರತ್ನ ಅವಾರ್ಡ್, ಅಚಿವರ್ಸ ಆಫ್ ಕರ್ನಾಟಕ ಅವಾರ್ಡ್ ಹಾಗೂ ಶಿಕ್ಷಣ ಸೇವಾ ರತ್ನ ಪ್ರಶಸ್ತಿಗಳು ಸಹ ಸಂದಿವೆ. - [ಸುಂದರಿಯ ಶವದ ಮೇಲೆ ಅನುಮಾನಾಸ್ಪದ ಕುರುಹು!](https://mobiletime.in/2026/01/suspicious-marks-on-the-body-of-a-beautiful-woman/): ಕಾರವಾರದ ಜೆಡಿಎಸ್ ಮುಖಂಡೆ ಚೈತ್ರಾ ಕೋಠಾರಕರ್ ಅವರ ಪುತ್ರ ಚಿರಾಗ ಕೋಠಾರಕರ್ ಕಾಟಕ್ಕೆ ಬೇಸತ್ತು ಸಾವಿಗೆ ಶರಣಾಗಿರುವ ರೀಶಲ್ ಡಿಸೋಜಾ ಅವರ ದೇಹದ ಮೇಲೆ ಅನುಮಾನಾಸ್ಪದ ಕುರುಹುಗಳು ಪತ್ತೆಯಾಗಿದೆ. ರೀಶಲ್ ಡಿಸೋಜಾ ಅವರ ಮೇಲೆ ಚಿರಾಗ ಕೋಠಾರಕರ್ ಅತ್ಯಾಚಾರವೆಸಗಿದ ಅನುಮಾನ ಅವರ ಕುಟುಂಬವನ್ನು ಕಾಡುತ್ತಿದೆ. ಕಾರವಾರದ ಕದ್ರಾದಲ್ಲಿ ರೀಶಲ್ ಡಿಸೋಜಾ ಅವರು ವಾಸವಾಗಿದ್ದರು. ರೀಶಲ್ ಡಿಸೋಜಾ ಅವರು ಗಗನ ಸಖಿ ಆಗುವ ಕನಸು ಕಂಡಿದ್ದರು. ರೀಶಲ್ ಡಿಸೋಜಾ ಅವರ ಕನಸಿಗೆ ಅವರ ಕುಟುಂಬದವರು ಸಹಕಾರ ನೀಡಿದ್ದು, ಕದ್ರಾ ಗ್ರಾಮ ಪಂಚಾಯತ ಸದಸ್ಯರಾಗಿರುವ ರೀನಾ ಡಿಸೋಜಾ ಅವರು ಮಗಳನ್ನು ಮುದ್ದಾಗಿ ಬೆಳೆಸಿದ್ದರು. ಮಗಳ ಆಸೆಯಂತೆ ರೀಶಲ್ ಡಿಸೋಜಾ ಅವರನ್ನು ಬೆಂಗಳೂರಿನ ಡಾನ್ ಬಸ್ಕೋ ಕಾಲೇಜಿಗೆ ದಾಖಲಿಸಿದ್ದರು. 2021-22ರ ಅವಧಿಯಲ್ಲಿ ರೀಶಲ್ ಡಿಸೋಜಾ ಅವರು ಕಾರವಾರದ ಸೆಂಟ್ ಜೋಸೆಪ್ ವಿದ್ಯಾಲಯದಲ್ಲಿ ಓದುತ್ತಿದ್ದರು. ಆಗ, ಅದೇ ವಿದ್ಯಾಲಯದಲ್ಲಿ ಕಲಿಕೆಗೆ ಬಂದಿದ್ದ ಚಿರಾಗ ಕೋಠಾರಕರ್ ಅವರು ರೀಶಲ್ ಡಿಸೋಜಾ ಅವರಿಗೆ ಪರಿಚಯವಾಗಿದ್ದರು. ಚಿರಾಗ ಕೋಠಾರಕರ್ ಅವರು ಜಿಲ್ಲಾ ಪಂಚಾಯತ ಮಾಜಿ ಸದಸ್ಯೆ ಚೈತ್ರಾ ಕೋಠಾರಕರ್ ಅವರ ಪುತ್ರರಾಗಿದ್ದು, ಅಲ್ಪ ಪ್ರಮಾಣದಲ್ಲಿ ರಾಜಕೀಯ ಪ್ರಭಾವವನ್ನು ಹೊಂದಿದ್ದರು. ಚಿರಾಗ ಕೋಠಾರಕರ್ ಅವರ ತಂದೆ ಚಂದ್ರಹಾಸ ಕೋಠಾರಕರ್ ಅವರು ಸಹ ರಾಜಕಾರಣಿಗಳ ಜೊತೆ ನಿಕಟ ಸಂಪರ್ಕದಲ್ಲಿದ್ದರು. ಹೀಗಿರುವಾಗ ಚಿರಾಗ ಕೋಠಾರಕರ್ ಅವರು ರೀಶಲ್ ಡಿಸೋಜಾ ಅವರಿಗೆ ಪ್ರೀತಿಯ ಸಂದೇಶ ರವಾನಿಸಿದ್ದರು. `ತನ್ನನ್ನು ಪ್ರೀತಿಸು’ ಎಂದು ದುಂಬಾಲು ಬಿದ್ದಿದ್ದರು. ಪ್ರೀತಿ ನಿರಾಕರಿಸಿದ ಕಾರಣ ಪೀಡಿಸಲು ಶುರು ಮಾಡಿದ್ದರು. ಚಿರಾಗ ಕೋಟಾರಕರ್ ಕಾಟದ ಬಗ್ಗೆ ರೀಶಲ್ ಡಿಸೋಜಾ ಅವರು ತಾಯಿ ಬಳಿ ಹೇಳಿಕೊಂಡಿದ್ದರು. `ಪ್ರೀತಿ ಪ್ರೇಮದ ಬಗ್ಗೆ ಚಿಂತಿಸದೇ ಭವಿಷ್ಯದ ಬಗ್ಗೆ ಯೋಚಿಸು’ ಎಂದು ರೀನಾ ಡಿಸೋಜಾ ಅವರು ಮಗಳಿಗೆ ಬುದ್ದಿ ಹೇಳಿದ್ದರು. ಆ ಮೂಲಕ ಮಗಳಿಗೆ ಭವಿಷ್ಯದ ಕನಸುಗಳ ಬಗ್ಗೆ ರೀನಾ ಡಿಸೋಜಾ ಅವರು ಸ್ಪಷ್ಟವಾದ ಕಲ್ಪನೆ ನೀಡಿದ್ದರು. ಅದರ ಪ್ರಕಾರವೇ ರೀಶಲ್ ಡಿಸೋಜಾ ಓದಿಕೊಂಡಿದ್ದು, ಗಗನ ಸಖಿ ಆಗಬೇಕು ಎಂದು ಕನಸು ಕಂಡಿದ್ದರು. ಈ ನಡುವೆ 20205 ಏಪ್ರಿಲ್ ಅವಧಿಯಲ್ಲಿ ಚಿರಾಗ ಕೋಠಾರಕರ್ ಅವರ ಸಹೋದರ ಸಂಬoಧಿಯಿoದ ರೀನಾ ಡಿಸೋಜಾ ಅವರಿಗೆ ಫೋನ್ ಬಂದಿತು. `ಎಷ್ಟು ಫೋನ್ ಮಾಡಿದರೂ ರೀಶಲ್ ಡಿಸೋಜಾ ಫೋನ್ ಸ್ವೀಕರಿಸುತ್ತಿಲ್ಲ. ಚಿರಾಗ್ ಕೋಠಾರಕರ್ ಫೋನ್ ಸ್ವೀಕರಿಸದೇ ಇದ್ದರೆ ಸರಿಯಿರುವುದಿಲ್ಲ’ ಎಂದು ಫೋನ್ ಮಾಡಿದವರು ಎಚ್ಚರಿಕೆ ನೀಡಿದ್ದರು. ಆ ಕ್ಷಣಕ್ಕೆ ಹೆದರಿದ್ದ ರೀನಾ ಡಿಸೋಜಾ ಆ ಫೋನ್ ಕರೆ ಕಟ್ ಮಾಡಿದ್ದರು. ಬೆದರಿಕೆಯ ಫೋನ್ ಬಂದ ಬಗ್ಗೆ ಯಾರಲ್ಲಿಯೂ ಹೇಳಿರಲಿಲ್ಲ. ಕಳೆದ ನಾಲ್ಕು ತಿಂಗಳಿನಿoದ ರೀಶಲ್ ಡಿಸೋಜಾ ಅವರ ನಡುವಳಿಕೆಯಲ್ಲಿ ಬದಲಾವಣೆ ಆಗಿರುವುದನ್ನು ರೀನಾ ಡಿಸೋಜಾ ಅವರು ಗಮನಿಸಿದ್ದರು. ಸದಾ ಲವಲವಿಕೆಯಿಂದಿರುತ್ತಿದ್ದ ರೀಶಲ್ ಡಿಸೋಜಾ ಈಚೆಗೆ ಮಂಕಾಗಿದ್ದರು. ಚಿರಾಗ ಕೋಠಾರಕರ್ ಅವರ ಮಾನಸಿಕ ಹಿಂಸೆಯೇ ಇದಕ್ಕೆ ಕಾರಣ ಎಂಬುದು ರೀನಾ ಡಿಸೋಜಾ ಅವರಿಗೆ ನಂತರ ಅರ್ಥವಾಯಿತು. ಮೊನ್ನೆ ಏರ್‌ಫೋನ್ ಹಾಕಿಕೊಂಡು ಮಾತನಾಡುತ್ತಿರುವಾಗಲೇ ರೀಶಲ್ ಡಿಸೋಜಾ ನೇಣು ಹಾಕಿಕೊಂಡರು. ಅವರು ಸಾವನಪ್ಪಿದ ನಂತರ ಶವದ ಮೇಲೆ ಗಾಯದ ಗುರುತಿರುವುದನ್ನು ರೀನಾ ಡಿಸೋಜಾ ಅವರು ಗಮನಿಸಿದರು. ಈ ಹಿನ್ನಲೆ ಚಿರಾಗ ಕೋಠಾರಕರ್ ಅವರು ರೀಶಲ್ ಅವರ ಮೇಲೆ ಅತ್ಯಾಚಾರವೆಸಗಿ, ಬ್ಲಾಕ್ ಮೇಲ್ ಮಾಡುತ್ತಿದ್ದು ಅದೇ ನೋವಿನಲ್ಲಿ ರೀಶಲ್ ಸಾವನಪ್ಪಿರುವ ಶಂಕೆವ್ಯಕ್ತಪಡಿಸಿದರು. ಈ ಬಗ್ಗೆ ಸಮಗ್ರ ತನಿಖೆಗಾಗಿ ಅವರು ಒತ್ತಾಯಿಸಿದರು. ಸದ್ಯ ಈ ಎಲ್ಲಾ ವಿಷಯದ ಬಗ್ಗೆ ರೀಶಲ್ ಡಿಸೋಜಾ ಅವರ ತಾಯಿ ರೀನಾ ಡಿಸೋಜಾ ಅವರು ಪೊಲೀಸ್ ಅಧೀಕ್ಷಕರಿಗೆ ಪತ್ರ ಬರೆದಿದ್ದು, ಅದರಲ್ಲಿ ತಮ್ಮ ಅಂತರಾಳದ ನೋವು ತೋಡಿಕೊಂಡಿದ್ದಾರೆ. - [ಕೋಲ್ಡ್ ಡ್ರಿಂಕ್ಸ್ ಕುಡಿದವನ ಮೇಲೆ ಸರಾಯಿ ಕುಡಿದವನಿಂದ ಹಲ್ಲೆ!](https://mobiletime.in/2026/01/a-man-who-drank-cold-drinks-was-attacked-by-a-man-who-drank-liquor/): ಕುಮಟಾದ ಬಾಲಚಂದ್ರ ಪಟಗಾರ ಹಾಗೂ ಮಹೇಶ ಪಟಗಾರ ಅವರ ನಡುವೆ ಹೊಡೆದಾಟ ನಡೆದಿದೆ. ಕೋಲ್ಡ್ ಡ್ರಿಂಕ್ಸ ಕುಡಿದು ಬರುತ್ತಿದ್ದ ಕುಪ್ಪಯ್ಯ ಪಟಗಾರ ಅವರಿಗೆ ಸರಾಯಿ ಕುಡಿದು ಬಂದಿದ್ದ ಮಹೇಶ ಪಟಗಾರ ಅವರು ಬಡಿಗೆ ತೆಗೆದುಕೊಂಡು ಬಡಿದಿದ್ದಾರೆ! ಕುಮಟಾದ ಮಾಸೂರಿನಲ್ಲಿ ಬಾಲಚಂದ್ರ ಕುಪ್ಪಯ್ಯ ಪಟಗಾರ ಅವರು ಕೂಲಿ ಕೆಲಸ ಮಾಡಿಕೊಂಡು ಬದುಕು ಕಟ್ಟಿಕೊಂಡಿದ್ದಾರೆ. ಅದೇ ಊರಿನ ಮಹೇಶ ಹೊನ್ನಪ್ಪ ಪಟಗಾರ ಸಹ ಕೂಲಿ ಕಾರ್ಮಿಕರಾಗಿದ್ದಾರೆ. ಬಾಲಚಂದ್ರ ಪಟಗಾರ ಅವರು ತಾವು ದುಡಿದ ಹಣವನ್ನು ಮಾರಿಮನೆ ರಸ್ತೆ ಬಳಿಯ ಮಂಜುನಾಥ ಪಟಗಾರ ಅವರ ಅಂಗಡಿಗೆ ಕೊಟ್ಟು, ಅಲ್ಲಿಯೇ ಕೋಲ್ಡ್ ಡ್ರಿಂಕ್ಸ್ ಸೇವಿಸುತ್ತಾರೆ. ಮಹೇಶ ಪಟಗಾರ ಅವರು ತಾವು ದುಡಿದ ಹಣವನ್ನು ಸರಾಯಿ ಅಂಗಡಿಗೆ ಕೊಟ್ಟು ನಶೆಯೇರಿಸಿಕೊಳ್ಳುತ್ತಾರೆ. ಹೀಗಿರುವಾಗ ಜನವರಿ 9ರ ಮಧ್ಯಾಹ್ನ ಬಾಲಚಂದ್ರ ಪಟಗಾರ ಅವರು ಎಂದಿನAತೆ ಮಂಜುನಾಥ ಪಟಗಾರ ಅವರ ಅಂಗಡಿಗೆ ಹೋಗಿದ್ದರು. ಅಲ್ಲಿ ತಮ್ಮ ಇಷ್ಟದ ತಂಪು ಪಾನೀಯ ಕುಡಿದು ಮನೆಗೆ ಮರಳುತ್ತಿದ್ದರು. ಕೋಲ್ಡ್ ಡ್ರಿಂಕ್ಸ್ ಕುಡಿದು ಬರುತ್ತಿದ್ದ ಬಾಲಚಂದ್ರ ಪಟಗಾರ ಅವರನ್ನು ಮಹೇಶ ಪಟಗಾರ ಅವರು ನೋಡಿ ಗುರಾಯಿಸಿದರು. `ಯಾಕೆ ಗುರಾಯಿಸುವೆ?’ ಎಂದು ಬಾಲಚಂದ್ರ ಪಟಗಾರ ಅವರು ಕೇಳಿದ್ದು, ಮದ್ಯದ ನಶೆಯಲ್ಲಿದ್ದ ಮಹೇಶ ಪಟಗಾರ ಅಲ್ಲಿಯೇ ಇದ್ದ ಬಡಿಗೆಯನ್ನು ತೆಗೆದುಕೊಂಡರು. ಬಾಲಚಂದ್ರ ಪಟಗಾರ ಅವರನ್ನು ಬೆನ್ನತ್ತಿ ಹೊಗಿ ಹೊಡೆಯಲು ಶುರು ಮಾಡಿದರು. ಬಾಲಚಂದ್ರ ಪಟಗಾರ ಅವರು ತಪ್ಪಿಸಿಕೊಳ್ಳಲು ಪ್ರಯತ್ನಿಸಿದರೂ ಮಹೇಶ ಪಟಗಾರ ಅವರನ್ನು ಬಿಡಲಿಲ್ಲ. ಅಡ್ಡಗಟ್ಟಿ ಇನ್ನಷ್ಟು ಏಟು ಕೊಟ್ಟರು. ಇದರಿಂದ ಬಾಲಚಂದ್ರ ಪಟಗಾರ ಅವರ ಕಾಲು, ತೊಡೆ, ಕೈ, ಕಿವಿಗೆ ನೋವಾಯಿತು. - [ಕಾಳಿ ನದಿಯಲ್ಲಿ ಖನೀಜ ಲೂಟಿ!](https://mobiletime.in/2026/01/mineral-looting-in-the-kali-river/): ಕಾರವಾರದ ಕಾಳಿ ನದಿಯಲ್ಲಿ ಅಕ್ರಮ ಮರಳುಗಾರಿಕೆ ನಡೆಯುತ್ತಿದೆ. ಕಾರವಾರದ ಕಿನ್ನರದಲ್ಲಿ ಕಾಳಿ ನದಿ ಹಿನ್ನೀರು ಪ್ರದೇಶದಲ್ಲಿ ಅಕ್ರಮ ಮರಳುಗಾರಿಕೆ ನಡೆಯುತ್ತಿದೆ. ಹುಬ್ಬಳ್ಳಿ ನೋಂದಣಿಯ ಲಾರಿ ಮೂಲಕ ಅಕ್ರಮ ಮರಳುಗಾರಿಕೆ ನಡೆಯುತ್ತಿದೆ. ಈ ಮೂವರು ಮರಳು ತೆಗೆಯಲು ಪರವಾನಿಗೆಪಡೆದಿಲ್ಲ. ಸಾಗಾಟಕ್ಕೆ ಅಗತ್ಯ ಅನುಮತಿ ತೆಗೆದುಕೊಂಡಿಲ್ಲ. ಪರಿಸರಕ್ಕೆ ಹಾನಿ ಆಗದ ರೀತಿ ಮರಳುಗಾರಿಕೆ ನಡೆಸುವ ಮುನ್ನಚ್ಚರಿಕೆವಹಿಸಿಲ್ಲ. ರಾಜಧನವನ್ನು ಸಹ ಪಾವತಿಸಿಲ್ಲ. ತಮ್ಮ ಸ್ವಂತ ಲಾಭದ ಬಗ್ಗೆ ಮಾತ್ರ ಯೋಚಿಸಿರುವ ಗಣಿ ದಣಿಗಳು ರಾತ್ರಿ ವೇಳೆ ನದಿ ತೀರಕ್ಕೆ ಹೋಗಿ ಸರ್ಕಾರಿ ಸ್ವತ್ತನ್ನು ದೋಚುತ್ತಿದ್ದಾರೆ. ಪರಿಸರಕ್ಕೆ ಹಾನಿ ಆಗುವ ರೀತಿ ಮರಳುಗಾರಿಕೆ ನಡೆಸುತ್ತಿದ್ದಾರೆ. ಕಿನ್ನರದ ವಾಣಿವಾಡ ರಸ್ತೆಯಿಂದ ಕಾರವಾರದ ಕಡೆ ಆ ರೇತಿ ತುಂಬಿದ ಲಾರಿಗಳ ಓಡಾಟ ನಡೆಯುತ್ತಿದೆ. ಪುಕ್ಕಟ್ಟೆ ಸಿಗುವ ಆ ಮರಳನ್ನು ದುಬಾರಿ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ. ಜನವರಿ 10ರಂದು ರಾತ್ರಿ ರಾಜ್ಯ ಹೆದ್ದಾರಿ ಮೇಲೆ ಕಾರವಾರ ಗ್ರಾಮೀಣ ಠಾಣೆ ಪಿಸೈ ನೇಹಲ್ ಖಾನ್ ಅವರು ನಿಂತಿದ್ದು, ಅವರ ಎದುರಿನಲ್ಲಿಯೇ ಅಕ್ರಮ ಮರಳು ಸಾಗಾಟದ ಲಾರಿ ಹೋಗಿದೆ. ತಕ್ಷಣ ನೇಹಲ್ ಖಾನ್ ಅವರು ಆ ಲಾರಿ ಬೆನ್ನತ್ತಿ ಹಿಡಿದಿದ್ದು, ಆ ವೇಳೆ ಲಾರಿ ಒಳಗಿದ್ದವರನ್ನು ಹಿಡಿದಿದ್ದಾರೆ. ಲಾರಿಯಲ್ಲಿದ್ದ 30 ಸಾವಿರ ರೂ ಮೌಲ್ಯದ 3 ಬರಾಸ್ ರೇತಿಯನ್ನು ಜಪ್ತು ಮಾಡಿದ್ದಾರೆ. - [ವರ್ಕ ಪ್ರಂ ಹೋಂ: ಕೆಲಸ ಮಾಡಿ ಕಾಸು ಕಳೆದುಕೊಂಡ!](https://mobiletime.in/2026/01/work-from-home-lost-money-while-working/): ವಕ್ ಪ್ರಂ ಹೋಂ ಕೆಲಸಕ್ಕೆ ಸೇರಿದ ದಿನವೇ 500ರೂ ಸಂಪಾದಿಸಿದ ಮುಂಡಗೋಡಿನ ಅಕ್ಷಯ ರೇವಣಕರ್ ಅವರು ಅದಾದ ನಂತರ ಆಮೀಷಕ್ಕೆ ಒಳಗಾಗಿ 1.57 ಲಕ್ಷ ರೂ ಕಳೆದುಕೊಂಡಿದ್ದಾರೆ! ಮುoಡಗೋಡದ ಮಳಗಿಯಲ್ಲಿ ಅಕ್ಷಯ ಸುರೇಶ ರೇವಣಕರ್ ಅವರು ವಾಸವಾಗಿದ್ದಾರೆ. ಡಿಸೆಂಬರ್ 30ರಂದು ಅವರು ಟೆಲಿಗ್ರಾಂ ಬಳಸುವಾಗ `ವರ್ಕ ಪ್ರಂ ಹೋಂ’ ಎಂಬ ಜಾಹೀರಾತು ನೋಡಿದ್ದಾರೆ. ಆ ಬಗ್ಗೆ ಅವರು ವಿಚಾರಿಸಿದಾಗ ನಿಶಾ ಮೇತ್ರಾ ಎಂಬಾತರು ನಯವಾಗಿ ಮಾತನಾಡಿದ್ದಾರೆ. ನಿಶಾ ಮೇತ್ರಾ ಅವರು ಸುರೇಶ ಮೆಲ್ತೋರಾ ಎಂಬಾತರನ್ನು ಪರಿಚಯಿಸಿದ್ದು, ಅವರ ಸೂಚನೆ ಮೇರೆಗೆ ಅಕ್ಷಯ ರೇವಣಕರ್ ಅವರು `ವರ್ಕ ಪ್ರಂ ಹೋಂ’ ಕೆಲಸ ಶುರು ಮಾಡಿದ್ದಾರೆ. ಕೆಲಸಕ್ಕೆ ಸೇರಿದ ಮೊದಲ ದಿನ ಅಕ್ಷಯ ರೇವಣಕರ್ ಅವರಿಗೆ ವೆಬ್‌ಸೈಟಿನಲ್ಲಿರುವ ಉತ್ಪನ್ನಗಳ ಬಗ್ಗೆ ರಿವ್ಯು ಬರೆಯುವ ಸೂಚನೆ ಬಂದಿದೆ. ಆ ಕೆಲಸವನ್ನು ಅಚ್ಚುಕಟ್ಟಾಗಿ ಪೂರೈಸಿದ ಕಾರಣ ಅಕ್ಷಯ ರೇವಣಕರ್ ಅವರ ಖಾತೆಗೆ 500ರೂ ಜಮಾ ಆಗಿದೆ. ಅದಾದ ನಂತರ ನಿಶಾ ಮೇತ್ರಾ ಅವರು `ತಾವು ಹೇಳಿದ ಕಡೆ ಹಣ ಹೂಡಿಕೆ ಮಾಡಿದರೆ ಒಳ್ಳೆಯ ಲಾಭ ಸಿಗಲಿದೆ’ ಎಂದು ನಂಬಿಸಿದ್ದಾರೆ. ಆ ಮಾತು ನಂಬಿದ ಅಕ್ಷಯ ರೇವಣಕರ್ ಅವರು 700ರೂ ಹೂಡಿಕೆ ಮಾಡಿದ್ದು, ಅದಕ್ಕೆ ಪ್ರತಿಯಾಗಿ ಅವರಿಗೆ 920ರೂ ಸಿಕ್ಕಿದೆ. ಹಣ ಸಿಕ್ಕಿದ ನಂಬಿಕ ಆಧಾರದಲ್ಲಿಯೇ ಅಕ್ಷಯ ರೇವಣಕರ್ ಅವರು 157,800ರೂ ಹೂಡಿಕೆ ಮಾಡಿದ್ದಾರೆ. ಆದರೆ, ಆಗ ಆ ಹಣವೂ ಮರಳಿ ಬಂದಿಲ್ಲ. ಲಾಭವೂ ಸಿಕ್ಕಿಲ್ಲ. ಮೋಸ ಹೋಗಿರುವುದನ್ನು ಅರಿತ ಅವರು ಸೈಬರ್ ಅಪರಾಧ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಸಾಕಷ್ಟು ಜಾಗೃತಿ ಮೂಡಿಸಿದರೂ ಮೋಸ ಹೋದ ಅಕ್ಷಯ ಅವರ ಬಗ್ಗೆ ಅನೇಕರು ಮರುಕವ್ಯಕ್ತಪಡಿಸಿದ್ದಾರೆ. `ಆಮೀಷಕ್ಕೆ ಒಳಗಾಗಬೇಡಿ. ಮೋಸ ಹೋಗಬೇಡಿ’ - [ಕಳ್ಳರ ಕೈಚಳಕ: ಬ್ಯಾಂಕ್ ಬರೋಡಾಗೆ ಮತ್ತೊಂದು ಬಾಗಿಲು!](https://mobiletime.in/2026/01/thieves-cunning-another-door-to-the-bank-of-baroda/): ಅಂಕೋಲಾದ ಸುಂಕಸಾಳದಲ್ಲಿರುವ ಬ್ಯಾಂಕ್ ಆಫ್ ಬರೋಡಾಗೆ ಕಳ್ಳರು ನುಗ್ಗಿದ್ದಾರೆ. ಬ್ಯಾಂಕಿನ ಶೌಚಾಲಯದ ಪಕ್ಕ ಮತ್ತೊಂದು ಬಾಗಿಲು ಕೊರೆದು ಕಳ್ಳರು ದರೋಡೆಗೆ ಪ್ರಯತ್ನಿಸಿದ್ದಾರೆ. ಶನಿವಾರ ಬ್ಯಾಂಕ್ ಸಿಬ್ಬಂದಿ ಕೆಲಸ ಮುಗಿಸಿ ಮನೆಗೆ ಮರಳಿದ್ದರು. ಭಾನುವಾರ ರಜೆ ಮುಗಿಸಿ ಸೋಮವಾರ ಬ್ಯಾಂಕ್ ಪ್ರವೇಶಿಸಿದಾಗ ಕಳ್ಳತನಕ್ಕೆ ಕೈ ಹಾಕಿರುವುದು ಕಾಣಿಸಿದೆ. ಬ್ಯಾಂಕಿಗೆ ನುಗ್ಗಿದ್ದ ಕಳ್ಳರಿಗೆ ಏನೂ ಸಿಕ್ಕಿಲ್ಲ. ಭದ್ರ ಲಾಕರ್ ಇದ್ದ ಗೋಡೆಯನ್ನು ಅರ್ದ ಕೊರೆದ ನಂತರ ಅವರು ಅಲ್ಲಿಂದ ಪರಾರಿಯಾಗಿದ್ದಾರೆ. ಹೆದ್ದಾರಿ ಪಕ್ಕದಲ್ಲಿಯೇ ಬ್ಯಾಂಕ್ ಇದ್ದು, ಜನ ಬರುವುದನ್ನು ನೋಡಿ ಕಳ್ಳರು ಓಡಿರುವ ಅನುಮಾನವ್ಯಕ್ತವಾಗಿದೆ. ದರೋಡೆಕೋರರು ಬ್ಯಾಂಕಿನ ಶೌಚಾಲಯದ ಗೋಡೆ ಕೆಳಭಾಗದಲ್ಲಿ ಮತ್ತೊಂದು ದ್ವಾರ ಸೃಷ್ಟಿಸಿದ್ದಾರೆ. ಅದರ ಮೂಲಕವೇ ಬ್ಯಾಂಕ್ ಒಳಗೆ ಪ್ರವೇಶಿಸಿ ಎಲ್ಲಾ ಕಡೆ ಹುಡುಕಾಟ ನಡೆಸಿದ್ದಾರೆ. ಬ್ಯಾಂಕ್ ಒಳ ಆವರಣದಲ್ಲಿ ಏನೂ ಸಿಗದ ಕಾರಣ ಲಾಕರ್ ಕಡೆ ಹೋಗಿದ್ದಾರೆ. ಬ್ಯಾಂಕ್ ಶೌಚಾಲಯ ಒಡೆದ ಮಾದರಿಯಲ್ಲಿಯೇ ಹಿಂದಿನಿAದ ಲಾಕರ್ ಒಡೆಯುವ ಪ್ರಯತ್ನವನ್ನು ಮಾಡಿದ್ದು, ಕಳ್ಳರ ಪಾಲಿಗೆ ಅದು ಫಲ ಕೊಡಲಿಲ್ಲ. ಬ್ಯಾಂಕಿನಲ್ಲಿ ಕಳ್ಳತನ ಪ್ರಯತ್ನ ನಡೆದ ಬಗ್ಗೆ ಅಲ್ಲಿನ ಸಿಬ್ಬಂದಿ ಪೊಲೀಸರಿಗೆ ಫೋನ್ ಮಾಡಿದ್ದಾರೆ. ಉತ್ತರ ಕನ್ನಡ ಪೊಲೀಸ್ ಅಧೀಕ್ಷಕ ದೀಪನ್ ಎಂ ಎನ್ ಮತ್ತು ಡಿವಾಯ್‌ಎಸ್ಪಿ ಗಿರೀಶ ಅವರು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಅಂಕೋಲಾ ಠಾಣೆಯ ಸಿಪಿಐ ಚಂದ್ರಶೇಖರ ಮಠಪತಿ, ಪಿಎಸ್‌ಐ ಗುರುನಾಥ ಹಾದಿಮನೆ, ವಿಶ್ವನಾಥ ಹಾಗೂ ಸುಂಕಸಾಳ ಹೊರಠಾಣೆಯ ಸಂತೋಷ ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದಾರೆ. ಶ್ವಾನದಳ, ಬೆರಳಚ್ಚು ತಜ್ಞರು ಸಹ ಸ್ಥಳ ಭೇಟಿ ಮಾಡಿದ್ದಾರೆ. ಪೊಲೀಸರು ಸುತ್ತಲು ಇರುವ ಸಿಸಿಟಿವಿ ದೃಶ್ಯಾವಳಿಗಳ ಪರಿಶೀಲನೆ ಆರಂಭಿಸಲಾಗಿದೆ. ಶೀಘ್ರದಲ್ಲಿಯೇ ದರೋಡೆಕೋರರ ಹೆಡೆಮುರಿ ಕಟ್ಟುವುದಾಗಿ ಪೊಲೀಸರು ವಿಶ್ವಾಸವ್ಯಕ್ತಪಡಿಸಿದ್ದಾರೆ. - [ವ್ಯಸನದ ವಿರುದ್ಧ ಜಾಗೃತಿಯ ಓಟ!](https://mobiletime.in/2026/01/awareness-race-against-addiction/): `ಮಾದಕ ವಸ್ತು ಮುಕ್ತ ಭಾರತ’ ಎಂಬ ಸಂದೇಶ ಹೊತ್ತು ಶಿರಸಿಯ ಭಗತಸಿಂಗ್ ಬ್ರಿಗೇಡ್ ಆಂದೋಲನ ನಡೆಸಿದೆ. ಮಾದಕ ವಸ್ತುಗಳಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸಲು ಮ್ಯಾರಥಾನ್ ಓಟವನ್ನು ಆಯೋಜಿಸಿದೆ. ಭಾನುವಾರ ನಡೆದ ಈ ಮ್ಯಾರಥಾನ್’ಗೆ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಚಾಲನೆ ನೀಡಿದ್ದಾರೆ. ಮಾದಕ ವಸ್ತುಗಳ ಸೇವನೆಯಿಂದ ಆಗುವ ಹಾನಿಯ ಬಗ್ಗೆ ಅವರು ಜನರಲ್ಲಿ ಅರಿವು ಮೂಡಿಸಿದ್ದಾರೆ. `ವಿವೇಕಾನಂದರ ತತ್ವ ಆದರ್ಶಗಳನ್ನು ಅನುಸರಿಸಿ ಯುವ ಜನಾಂಗದವರು ಜೀವಿಸಬೇಕು. ಭಾರತೀಯರಾದ ನಾವೆಲ್ಲರೂ ವ್ಯಸನಗಳಿಂದ ದೂರವಿರಬೇಕು’ ಎಂದು ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಕರೆ ನೀಡಿದ್ದಾರೆ. `ಉತ್ತಮ ಆರೋಗ್ಯ ಇದ್ದಾಗ ಮಾತ್ರ ಎಲ್ಲರೂ ಕ್ರಿಯಾಶೀಲರಾಗಲಿರಲು ಸಾಧ್ಯವಿದೆ. ಶಿರಸಿಯನ್ನು ಡ್ರಗ್ಸ್ ಮುಕ್ತ ಪ್ರದೇಶವನ್ನಾಗಿಸಲು ಪ್ರತಿಯೊಬ್ಬರು ಪಣತೊಡಬೇಕಿದೆ’ ಎಂದವರು ಹೇಳಿದರು. ಮರಾಠಿಕೊಪ್ಪದಿಂದ 7ಕಿಮೀ ಓಟ ಸ್ಪರ್ಧೆ ಶುರುವಾಗಿದ್ದು, ರಾಜ್ಯದ ನಾನಾ ಭಾಗಗಳಿಂದ ಬಂದಿದ್ದ 500ಕ್ಕೂ ಅಧಿಕ ಜನ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. 350 ಸ್ಪರ್ಧಾಳುಗಳು ಕೊನೆಯವರೆಗೂ ಓಡಿ ತಲುಪಿ ಗುರಿ ಸಾಧಿಸಿದರು. ಪುರುಷರ ವಿಭಾಗದಲ್ಲಿ ಸಿದ್ದಾಪುರ ದಿಲೀಪ ನಾಯ್ಕ ಹಾಗೂ ಮಹಿಳೆಯರ ವಿಭಾಗದಲ್ಲಿ ಬೆಂಗಳೂರಿನ ಭವಿಷ್ಯ ಕೆ ಪಿ ಅವರು ಪ್ರಥಮ ಬಹುಮಾನಪಡೆದರು. ಭಗತಸಿಂಗ್ ಬ್ರಿಗೇಡ ಅಧ್ಯಕ್ಷ ಹಾಗೂ ರನ್ ಶಿರಸಿ ರನ್ ಸಂಘಟಕ ಸುಭಾಷ್ ಈಶ್ವರ್ ನಾಯ್ಕ ಬಹುಮಾನ ಘೋಷಿಸಿದರು. ನಗರಸಭೆ ಮಾಜಿ ಅಧ್ಯಕ್ಷೆ ಶರ್ಮಿಳಾ ಮಾದನಗೇರಿ, ನಗರ ಪ್ರಾಧಿಕಾರದ ಮಾಜಿ ಅಧ್ಯಕ್ಷ ನಂದನ ಸಾಗರ, ನಗರಸಭಾ ಮಾಜಿ ಸದಸ್ಯ ಶ್ರೀಧರ ಮೊಗೇರ, ಪ್ರಮುಖರಾದ ವಿನಾಯಕ ವಸಂತ್ ಶೆಟ್ಟಿ, ರಾಘು ಶೆಟ್ಟಿ, ರವಿ ಗೌಳಿ, ರವಿ ಶೆಟ್ಟಿ ಇತರರು ಇದ್ದರು. - [ಹವಾಮಾನ ಅಳತೆಯೂ ಗ್ರಾಮ ಲೆಕ್ಕಾಧಿಕಾರಿ ಹೊಣೆ!](https://mobiletime.in/2026/01/the-village-accountant-is-also-responsible-for-weather-measurements/): `ಉತ್ತರ ಕನ್ನಡ ಜಿಲ್ಲೆಯಲ್ಲಿನ ಎಲ್ಲ ಮಳೆ ಮಾಪಕ ಹಾಗೂ ಹವಾಮಾನ ಮಾಪಕ ಕೇಂದ್ರಗಳ ಬಗ್ಗೆ ನಿರಂತರ ತಪಾಸಣೆ ನಡೆಸಬೇಕು’ ಎಂದು ಅಪರ ಜಿಲ್ಲಾಧಿಕಾರಿ ಸಾಜಿದ್ ಮುಲ್ಲಾ ಸೂಚಿಸಿದ್ದಾರೆ. ಮಾಪನ ಕೇಂದ್ರಗಳ ನಿರ್ವಹಣೆ ಮತ್ತು ಮೇಲ್ವಿಚಾರಣೆ ಕುರಿತ ಸಭೆ ನಡೆಸಿದ ಅವರು `ಉತ್ತರ ಕನ್ನಡ ಜಿಲ್ಲೆಯ ವಿವಿಧ ತಾಲೂಕು ಹಾಗೂ ಹೋಬಳಿ ಮಟ್ಟದಲ್ಲಿ 39 ಟೆಲಿಮೆಟ್ರಿಕ್ ಹವಾಮಾನ ಮಾಪನ ಕೇಂದ್ರಗಳಿವೆ. ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 253 ಟೆಲಿಮೆಟ್ರಿಕ್ ಮಳೆಮಾಪಕ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಅವುಗಳಿಂದ ಮಳೆ, ತಾಪಮಾನ, ಆದ್ರ‍್ರತೆ, ಗಾಳಿಯ ವೇಗ ಮತ್ತು ದಿಕ್ಕುಗಳಿಗೆ ಸಂಬoಧಿಸಿದ ಮಾಹಿತಿಯೂ ಕೃಷಿ, ತೋಟಗಾರಿಕೆ, ಜಲಸಂಪನ್ಮೂಲ ಹಾಗೂ ವಿಪತ್ತು ನಿರ್ವಹಣೆಗೆ ಅತ್ಯಂತ ಅಗತ್ಯವಾಗಿದೆ. ಹೀಗಾಗಿ ಅವುಗಳ ಮೇಲ್ವಿಚಾರಣೆ ಸರಿಯಾಗಿರಬೇಕು’ ಎಂದು ಸೂಚಿಸಿದ್ದಾರೆ. `ಈ ಯಂತ್ರಗಳ ಕಾರ್ಯನಿರ್ವಹಣೆಯಲ್ಲಿ ದೋಷ ಕಂಡುಬAದಲ್ಲಿ ತಕ್ಷಣವೇ ವರದಿ ಸಲ್ಲಿಸಬೇಕು. ಸೂಚಿಸಿದ ಏಜೆನ್ಸಿಗಳ ಮೂಲಕ ದುರಸ್ತಿ ಕಾರ್ಯ ಕೈಗೊಳ್ಳಬೇಕು. ತಹಶೀಲ್ದಾರರು, ಗ್ರಾಮ ಆಡಳಿತಾಧಿಕಾರಿಗಳು ಹಾಗೂ ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರು ತಮ್ಮ ಕರ್ತವ್ಯ ಮತ್ತು ಜವಾಬ್ದಾರಿಗಳನ್ನು ಸಂಪೂರ್ಣವಾಗಿ ಅರಿತು ಕೆಲಸ ಮಾಡಬೇಕು. ಪ್ರತಿ ಗ್ರಾಮ ಆಡಳಿತಾಧಿಕಾರಿಗಳುತಮ್ಮ ವ್ಯಾಪ್ತಿಯ ಟೆಲಿಮೆಟ್ರಿಕ್ ಮಳೆಮಾಪಕ ಕೇಂದ್ರಗಳ ದಿನನಿತ್ಯದ ಮೇಲ್ವಿಚಾರಣೆ ಮಾಡಲು ಜವಾಬ್ದಾರರಾಗಿದ್ದಾರೆ’ ಎಂದರು. ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರು ಪ್ರತಿವಾರ ಕನಿಷ್ಠ 10 ಟೆಲಿಮೆಟ್ರಿಕ್ ಮಳೆಮಾಪನ ಕೇಂದ್ರಗಳಿಗೆ ಭೇಟಿ ನೀಡಿ, ಅವುಗಳ ಕಾರ್ಯನಿರ್ವಹಣೆಯ ಸ್ಥಿತಿಗತಿಗಳನ್ನು ಪರಿಶೀಲಿಸಬೇಕು’ ಎಂದರು. ಕೃಷಿ ಇಲಾಖೆ ಜಂಟಿ ನಿರ್ದೇಶಕ ಶಿವ ಪ್ರಸಾದ್ ಗಾಂವಕರ್, ತೋಟಗಾರಿಕಾ ಇಲಾಖೆ ಉಪನಿರ್ದೇಶಕ ಸತೀಶ್ ಹಾಗೂ ಜಿಲ್ಲೆಯ ಎಲ್ಲಾ ತಹಶೀಲ್ದಾರರು ಮತ್ತು ಗ್ರಾಮ ಆಡಳಿತಾಧಿಕಾರಿಗಳು ಈ ಸಭೆಯಲ್ಲಿದ್ದರು. - [ವೃದ್ಧೆಯ ಮೈ ಮುಟ್ಟಿದ ನೀಚ: ತಪ್ಪಿಸಲು ಬಂದವನಿಗೆ ಥಳಿತ!](https://mobiletime.in/2026/01/a-mean-person-touched-an-old-womans-body-the-one-who-came-to-avoid-it-was-beaten-up/): ಕೇಶವ ಸಿದ್ದಿ ಹಾಗೂ ವಿನಾಯಕ ಸಿದ್ದಿ ಸೇರಿ ಯಲ್ಲಾಪುರದ ಅರಬೈಲ್ ಬಳಿ ಅಲೆದಾಡುತ್ತಿದ್ದ ವೃದ್ಧೆ ಮಹಿಳೆಯ ಮೈ ಮುಟ್ಟಿದ್ದಾರೆ. ಇದನ್ನು ತಡೆಯಲು ಬಂದ ಗಣೇಶ ಸಿದ್ದಿ ಅವರಿಗೆ ಅವರಿಬ್ಬರು ಬೈದು ಹೊಡೆದಿದ್ದಾರೆ. ಯಲ್ಲಾಪುರದ ಅರಬೈಲ್ ಬಳಿ ಶಿವಾಲಕ್ಕಿ ಎಂಬ ಮಹಿಳೆಯೊಬ್ಬರು ಅಲೆದಾಡುತ್ತಿದ್ದರು. ಗೊತ್ತು ಗುರಿಯಿಲ್ಲದ ಆ ವೃದ್ಧೆಯನ್ನು ತಾಳಿಕುಂಬ್ರಿಯ ಕೇಶವ ಸಿದ್ದಿ ಹಾಗೂ ಉಪಳೇಶ್ವರ ಜೂಜಿನಬೈಲಿನ ವಿನಾಯಕ ಸಿದ್ದಿ ಕಾಡಿಸುತ್ತಿದ್ದರು. ಜನವರಿ 7ರ ಸಂಜೆ 6.30ರ ವೇಳೆಗೆ ಅವರಿಬ್ಬರು ಸೇರಿ ಆ ವೃದ್ಧೆಯ ಮೈ ಮುಟ್ಟಿದ್ದರು. ಅಲ್ಲಿನ ಮಾರುತಿ ಗದ್ದೆ ಬಳಿ ಇದ್ದ ವೃದ್ಧೆಯ ಮಾನಕ್ಕೆ ಅವಮಾನ ಆಗುವ ರೀತಿ ಅವರಿಬ್ಬರು ವರ್ತಿಸುತ್ತಿದ್ದರು. ಈ ವೇಳೆ ಅರಬೈಲ್ ಸಿದ್ದಿ ಕಾಲೋನಿಯ ಗಣೇಶ ಮುನಿಯಪ್ಪ ಸಿದ್ದಿ ಅವರು ತಮ್ಮ ಚಿಕ್ಕಮ್ಮ ಲಲಿತಾ ಸಿದ್ದಿ ಅವರ ಜೊತೆ ಅದೇ ಮಾರ್ಗದಲ್ಲಿ ಹೋಗುತ್ತಿದ್ದರು. ದನಕರುಗಳನ್ನು ನೋಡಿ ಬರಲು ಮೊಗದ್ದೆಯಲ್ಲಿರುವ ತಮ್ಮ ಜಮೀನು ಕಡೆ ಹೊರಟಿದ್ದರು. ಆ ವೇಳೆ ಗಣೇಶ ಸಿದ್ದಿ ಹಾಗೂ ಲಲಿತಾ ಸಿದ್ದಿ ಅವರಿಗೆ ಕೇಶವ ಸಿದ್ದಿ ಹಾಗೂ ವಿನಾಯಕ ಸಿದ್ದಿ ಕಾಣಿಸಿದರು. ಅವರಿಬ್ಬರು ಸೇರಿ ವೃದ್ಧೆಯ ಜೊತೆ ಅನುಚಿತವಾಗಿ ವರ್ತಿಸುತ್ತಿರುವುದನ್ನು ನೋಡಿದರು. ಇದರಿಂದ ಸಿಟ್ಟಾದ ಗಣೇಶ ಸಿದ್ದಿ ಆ ಇಬ್ಬರನ್ನು ತರಾಟೆಗೆ ತೆಗೆದುಕೊಂಡು ವೃದ್ಧೆಯನ್ನು ರಕ್ಷಿಸುವ ಪ್ರಯತ್ನ ಮಾಡಿದರು. ಈ ವೇಳೆ ಕೇಶವ ಸಿದ್ದಿ ಹಾಗೂ ವಿನಾಯಕ ಸಿದ್ದಿ ಸೇರಿ ಗಣೇಶ ಸಿದ್ದಿ ಅವರ ವಿರುದ್ಧ ತಿರುಗಿ ಬಿದ್ದರು. ವೃದ್ಧೆ ಮೈ ಮುಟ್ಟುವಾಗ ತಡೆದ ಕಾರಣ ಗಣೇಶ ಸಿದ್ದಿ ಅವರಿಗೆ ಕೇಶವ ಸಿದ್ದಿ ಹೊಡೆದರು. ಈ ವೇಳೆ ಅಲ್ಲಿದ್ದ ಮಂಜು ನಾಯ್ಡು ಅವರು ಜೋರಾಗಿ ಬೊಬ್ಬೆ ಹೊಡೆಯುತ್ತ ಬಂದಿದ್ದು, ಅವರನ್ನು ನೋಡಿದ ಕೇಶವ ಸಿದ್ದಿ ಹಾಗೂ ವಿನಾಯಕ ಸಿದ್ದಿ ಓಡಿ ಪರಾರಿಯಾದರು. ಈ ಎಲ್ಲಾ ವಿಷಯಗಳ ಬಗ್ಗೆ ಗಣೇಶ ಸಿದ್ದಿ  ಮಾಹಿತಿ ನೀಡಿದರು. - [ಪೊಲೀಸ್ ಮನೆಯಲ್ಲಿಯೇ ಕಳ್ಳತನ!](https://mobiletime.in/2026/01/theft-at-the-police-station/): ಕುಮಟಾ ಹಿರೆಗುತ್ತಿಯ ಚಂದ್ರಕಾoತ್ ಮಸಾಕಲ್ ಅವರ ಮನೆಯಲ್ಲಿ ಕಳ್ಳತನ ನಡೆದಿದೆ. ಚಂದ್ರಕಾoತ್ ಮಸಾಕಲ್ ಅವರು ಪೊಲೀಸ್ ಸಿಬ್ಬಂದಿ ಆಗಿದ್ದು, ಕಳ್ಳರು ಅವರ ಮನೆಗೆ ನುಗ್ಗಿ 6 ಲಕ್ಷ ರೂ ಮೌಲ್ಯದ ಚಿನ್ನಾಭರಣ ದೋಚುವ ಧೈರ್ಯ ಮಾಡಿದ್ದಾರೆ. ಜನವರಿ 10ರಂದು ಚಂದ್ರಕಾoತ್ ಮಸಾಕಲ್ ಅವರು ಮನೆಯಲ್ಲಿರಲಿಲ್ಲ. ಅವರ ಮನೆಯಲ್ಲಿ ಆ ಅವಧಿಯಲ್ಲಿ ಯಾರೂ ಇರಲಿಲ್ಲ. ಈ ವಿಷಯ ಅರಿತ ಕಳ್ಳರು ಅವರ ಮನೆ ಬಾಗಿಲು ಮುರಿದು ತಮ್ಮ ಕೈ ಚಳಕ ಪ್ರದರ್ಶಿಸಿದ್ದಾರೆ. ಬೆಳಗ್ಗೆ 9ರಿಂದ 12 ಗಂಟೆ ಅವಧಿಯಲ್ಲಿ ಈ ಕಳ್ಳತನ ನಡೆದಿದ್ದರೂ ಆ ಅವಧಿಯಲ್ಲಿ ಯಾರಿಗೂ ಗೊತ್ತಾಗಲಿಲ್ಲ. ಪೊಲೀಸ್ ಸಿಬ್ಬಂದಿ ಮನೆಗೆ ನುಗ್ಗಿದ ಕಳ್ಳರಿಗೆ 2.80 ಲಕ್ಷ ರೂ ಮೌಲ್ಯದ ಬಂಗಾರದ ಬಳೆ, 3 ಲಕ್ಷ ರೂ ಮೌಲ್ಯದ ಚಿನ್ನದ ಕರಿಮಣಿ ಸರ, 80 ಸಾವಿರ ರೂ ಮೌಲ್ಯದ ಕಿವಿಯೋಲೆ ಸಿಕ್ಕಿದೆ. ಮನೆ ಕಳ್ಳತನಕ್ಕಾಗಿ ಬಂದಿದ್ದ ಆ ಕಳ್ಳರು ಮನೆಯ ಪ್ರಧಾನ ಬಾಗಿಲಿಗೂ ಹಾನಿ ಮಾಡಿದ್ದಾರೆ. ಬೆಡ್ ರೂಮಿನ ಸೇಫ್ ಲಾಕರಿನಲ್ಲಿರಿಸಿದ್ದ ಚಿನ್ನವನ್ನು ಕಳ್ಳರು ದೋಚಿದ್ದಾರೆ. ಆ ಅಪರಿಚಿತ ಕಳ್ಳರ ವಿರುದ್ಧ ಚಂದ್ರಕಾAತ್ ಮಸಾಕಲ್ ಅವರು ದೂರು ನೀಡಿದ್ದಾರೆ. ಗೋಕರ್ಣ ಪೊಲೀಸರು ಪ್ರಕರಣ ದಾಖಲಿಸಿದ್ದು, ತನಿಖೆ ನಡೆಸಿದ್ದಾರೆ. ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಜಗದೀಶ, ಡಿವೈಎಸ್‌ಪಿ ಮಹೇಶ ಎಂ ಕೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಶ್ವಾನದಳವೂ ಆಗಮಿಸಿ ಶೋಧ ನಡೆಸಿದೆ. ಗೋಕರ್ಣ ಪಿಐ ಶ್ರೀಧರ ಎಸ್. ಆರ್ ಹಾಗೂ ಪಸೈ ಖಾದರ್ ಬಾಷಾ, ಶಶಿಧರ ಕಳ್ಳರ ಹುಡುಕಾಟ ಶುರು ಮಾಡಿದ್ದಾರೆ. `ಕಳ್ಳತನ ತಡೆಗೆ ಸಿಸಿ ಕ್ಯಾಮರಾ ಅಳವಡಿಸಿ’ - [ವಕೀಲರ ವಿರುದ್ಧವೇ ಪೊಲೀಸ್ ಕೇಸು!](https://mobiletime.in/2026/01/police-case-against-lawyers/): `ಅಂಕೋಲಾದ ವಕೀಲ ನಾರಾಯಣ ನಾಯಕ ಅವರಿಂದ 4 ಲಕ್ಷ ರೂ ನಷ್ಟವಾಗಿದೆ’ ಎಂದು 70 ವರ್ಷದ ಶಾಲಿನಿ ಗೋಳಿಕಟ್ಟಿ ದೂರಿದ್ದಾರೆ. `ಆ ಮಹಿಳೆ ಹಾಗೂ ಅವರ ಪುತ್ರಿ ಸ್ಪೂರ್ತಿ ಎಸ್ ಆರ್ ಅವರಿಂದ ತಮಗೂ 2 ಲಕ್ಷ ರೂ ಹಾನಿ ಆಗಿದೆ’ ಎಂದು ನಾರಾಯಣ ನಾಯಕ ಅವರು ಆರೋಪಿಸಿದ್ದಾರೆ. ಅಂಕೋಲಾದ ಸೂರ್ವೆಯ ನಾರಾಯಣ ರಾಮಕೃಷ್ಣ ನಾಯಕ ಅವರು ಆ ಭಾಗದಲ್ಲಿ ಪ್ರಸಿದ್ಧ ವಕೀಲರಾಗಿದ್ದಾರೆ. ಅವರ ವಿರುದ್ಧ ಇದೀಗ ನಿವೃತ್ತ ಸರ್ಕಾರಿ ನೌಕರರಾದ ಶಾಲಿನಿ ಗಣಪತಿ ಗೋಳಿಕಟ್ಟಿ ಅವರು ತಿರುಗಿ ಬಿದ್ದಿದ್ದಾರೆ. `ತಮ್ಮ ಹಿಡಿತದಲ್ಲಿರುವ ಜಮೀನಿಗೆ ನುಗ್ಗಿ ವಕೀಲರು ದಾಂಧಲೆ ನಡೆಸಿದ್ದಾರೆ’ ಎಂಬುದು ಬೆಳಗಾವಿಯಲ್ಲಿ ವಾಸವಾಗಿರುವ ಶಾಲಿನಿ ಗೋಳಿಕಟ್ಟಿ ಅವರ ಆರೋಪ. `ಶಾಲಿನಿ ಹಾಗೂ ಸ್ಪೂರ್ತಿ ಸೇರಿ ಇತನ್ನ ಜಮೀನಿಗೂ ನುಗ್ಗಿ ಕಪೌಂಡ್ ಒಡೆದಿದ್ದಾರೆ’ ಎಂಬುದು ನಾರಾಯಣ ನಾಯಕ ಅವರ ದೂರು. ಅಂಕೋಲಾದ ಸೂರ್ವೆಯಲ್ಲಿ ನಾರಾಯಣ ನಾಯಕ ಅವರ ಜಮೀನಿದೆ. ಅದರ ಸಮೀಪವೇ ಸ್ಪೂರ್ತಿ ಅವರ ಹೆಸರಿನಲ್ಲಿಯೂ ಭೂಮಿಯಿದೆ. ಡಿಸೆಂಬರ್ 25ರಂದು ಸ್ಪೂರ್ತಿ ಎಸ್ ಆರ್ ಅವರ ಹೆಸರಿನ ಜಮೀನಿಗೆ ನಾರಾಯಣ ನಾಯಕ ಅವರು ನುಗ್ಗಿದ್ದು, ಜೆಸಿಬಿ ಯಂತ್ರಗಳನ್ನು ಬಳಸಿ ಆ ಜಮೀನಿನ ರೂಪ ಬದಲಿಸಿದ್ದಾರೆ. ತೋಟದ ಸುತ್ತಲಿನ ಕಪೌಂಡ್ ಒಡೆದ ಕಾರಣ ಸ್ಪೂರ್ತಿ ಎಸ್ ಆರ್ ಅವರಿಗೆ 4 ಲಕ್ಷ ರೂ ಹಾನಿಯಾಗಿದೆ. ಇದನ್ನು ಪ್ರಶ್ನಿಸಿದ ಸ್ಪೂರ್ತಿ ಅವರ ತಾಯಿ ಶಾಲಿನಿ ಗೋಳಿಕಟ್ಟಿ ಅವರಿಗೆ ನಿಂದಿಸಿದ್ದಾರೆ. `ಇದು ನನ್ನ ಜಾಗ, ಏನೂ ಬೇಕಾದರೂ ಮಾಡುವೆ’ ಎಂದು ನಾರಾಯಣ ನಾಯಕ ಅವರು ಹೇಳಿದ್ದು, ಅದರಿಂದ ಆ ವೇಳೆ ಶಾಲಿನಿ ಗೋಳಿಕಟ್ಟಿ ಅವರು ಬೆದರಿದ್ದಾರೆ. ನಾರಾಯಣ ನಾಯಕ ಅವರ ಬೈಗುಳವನ್ನು ಶಾಲಿನಿ ಗೋಳಿಕಟ್ಟಿ ಅವರಿಂದ ಸಹಿಸಲಾಗಲಿಲ್ಲ. ಹೀಗಾಗಿ ಅವರು ಸಹ ನಾರಾಯಣ ನಾಯಕ ಅವರಿಗೆ ಬುದ್ದಿ ಕಲಿಸಲು ಮುಂದಾಗಿದ್ದು, ಜನವರಿ 6ರಿಂದ 8ರ ಅವಧಿಯಲ್ಲಿ ಶಾಲಿನಿ ನಾಯಕ ಅವರು ಆ ಭೂಮಿ ಬಳಿ ಜೆಸಿಬಿ ಸದ್ದು ಮಾಡಿಸಿದ್ದಾರೆ. ತಮ್ಮ ಆಳುಗಳನ್ನು ಬಿಟ್ಟು ನಾರಾಯಣ ನಾಯಕ ಅವರ ಜಮೀನಿನ ಕಪೌಂಡ್ ಒಡೆದು ಹಾಕಿದ್ದಾರೆ. ಪಶ್ಚಿಮ ದಿಕ್ಕಿನಲ್ಲಿರುವ ಪಗಾರ್ ಬಿಟ್ಟು ಉಳಿದವೆಲ್ಲವನ್ನು ನೆಲಸಮ ಮಾಡಿಸಿದ್ದಾರೆ. ಇದರಿಂದ ನಾರಾಯಣ ನಾಯಕ ಅವರಿಗೂ 2 ಲಕ್ಷ ರೂ ನಷ್ಟವಾಗಿದೆ. ಸದ್ಯ ನಾರಾಯಣ ನಾಯಕ ಅವರ ತಪ್ಪಿನ ಬಗ್ಗೆ ಶಾಲಿನಿ ಗೋಳಿಕಟ್ಟಿ ಅವರು ಪೊಲೀಸ್ ದೂರು ನೀಡಿದ್ದಾರೆ. ಶಾಲಿನಿ ಗೋಳಿಕಟ್ಟಿ ಹಾಗೂ ಅವರ ಪುತ್ರಿ ಸ್ಪೂರ್ತಿ ಸೇರಿ ಮಾಡಿದ ಅವಾಂತರದ ಬಗ್ಗೆ ನಾರಾಯಣ ನಾಯಕ ಅವರು ದೂರಿದ್ದಾರೆ. ಎರಡು ಕಡೆಯವರ ಮಾತು ಆಲಿಸಿದ ಅಂಕೋಲಾ ಪೊಲೀಸರು, ಇಬ್ಬರ ವಿರುದ್ಧವೂ ಪ್ರಕರಣ ದಾಖಲಿಸಿ ತನಿಖೆ ಶುರು ಮಾಡಿದ್ದಾರೆ. - [ಜೀವ ಜಲಕ್ಕಾಗಿ ಜನ ಸಾಗರ: ನೀರು ಕೊಡಲ್ಲ.. ಹೋರಾಟ ಹಿಂಪಡೆಯಲ್ಲ!](https://mobiletime.in/2026/01/peoples-ocean-for-living-water-water-is-not-given-the-struggle-is-not-withdrawal/): ಬೇಡ್ತಿ ಹಾಗೂ ಅಘನಾಶಿನಿ ನದಿ ತಿರುವು ಯೋಜನೆಯ ವಿರುದ್ಧದ ಹೋರಾಟ ಜೋರಾಗಿದೆ. ನಿಸರ್ಗವನ್ನು ಉಳಿಸುವ ನಿಟ್ಟಿನಲ್ಲಿ ಜಿಲ್ಲೆಯ ಉತ್ತರ ಕನ್ನಡ ಜನ ಒಂದಾಗಿದ್ದು, ಅವೈಜ್ಞಾನಿಕ ಯೋಜನೆಯ ವಿರುದ್ಧ ಸಾವಿರ ಸಾವಿರ ಸಂಖ್ಯೆಯಲ್ಲಿ ಆಂದೋಲನ ನಡೆಸಿದ್ದಾರೆ. ಭಾನುವಾರ ಮಧ್ಯಾಹ್ನ ಶಿರಸಿಯಲ್ಲಿ ನಡೆದ ಸಮಾವೇಶದಲ್ಲಿ ಜನ ಒಕ್ಕೂರಲಿನಿಂದ ನದಿ ತಿರುವು ಯೋಜನೆ ವಿರೋಧಿಸಿದ್ದಾರೆ. ಸೋಂದಾ ಸ್ವರ್ಣವಲ್ಲಿ ಸಂಸ್ಥಾನದ ಗಂಗಾಧರೇoದ್ರ ಸರಸ್ವತೀ ಸ್ವಾಮೀಜಿ ಅವರ ನೇತ್ರತ್ವದಲ್ಲಿ ಯೋಜನೆ ವಿರುದ್ಧ ಹೋರಾಟ ನಡೆಯುತ್ತಿದೆ. `ಪರಿಸರ ಉಳಿಸಲು ಹೋರಾಟ ಅನಿವಾರ್ಯವಾಗಿದ್ದು, ಜನರ ಭಾವನೆಗೆ ಸರ್ಕಾರ ಸ್ಪಂದಿಸದೇ ಇದ್ದರೆ ಚುನಾವಣೆ ಬಹಿಷ್ಕಾರ ಅನಿವಾರ್ಯ’ ಎಂದು ಸೋಂದಾ ಶ್ರೀಗಳು ಹೇಳಿದ್ದಾರೆ. ಈ ಜನಾಕ್ರೋಶ ಅರಿತ ಜಿಲ್ಲೆಯ ಕೆಲ ಜನಪ್ರತಿನಿಧಿಗಳು ಇದೀಗ ತಮ್ಮ ನಿಲುವು ಬದಲಿಸಿದ್ದಾರೆ. ಆಂತರಿಕವಾಗಿ ಯೋಜನೆ ಪರವಾಗಿದ್ದ ಮುಖಂಡರು ಸಹ ಇದೀಗ ಬಹಿರಂಗವಾಗಿ ಅವೈಜ್ಞಾನಿಕ ಯೋಜನೆಯನ್ನು ವಿರೋಧಿಸಲು ಶುರು ಮಾಡಿದ್ದಾರೆ. ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಸೇರಿದ ಜನರನ್ನು ನೋಡಿದ ಜನಪ್ರತಿನಿಧಿಗಳು ಈ ಹೋರಾಟಕ್ಕೆ ಬೆಂಬಲವ್ಯಕ್ತಪಡಿಸಿದ್ದು, `ಯಾವುದೇ ಕಾರಣಕ್ಕೂ ನದಿ ನೀರು ತಿರುವು ಯೋಜನೆಯನ್ನು ಬೆಂಬಲಿಸುವುದಿಲ್ಲ’ ಎಂದು ಶ್ರೀಗಳ ಮುಂದೆ ಪ್ರಮಾಣ ಮಾಡಿದ್ದಾರೆ. ಶಾಸಕ-ಸಚಿವ-ಸಂಸದರು ಸೇರಿ ಈ ಜನಧ್ವನಿಯನ್ನು ಸರ್ಕಾರಕ್ಕೆ ಮುಟ್ಟಿಸಿದರೆ ಮಾತ್ರ ಯೋಜನೆ ಸ್ಥಗಿತವಾಗುವ ಸಾಧ್ಯತೆಯಿದ್ದು, ಈ ಎಲ್ಲಾ ನಾಯಕರು ಕೊಟ್ಟ ಮಾತು ಉಳಿಸಿಕೊಳ್ಳುತ್ತಾರೆಯೇ? ಎನ್ನುವುದರ ಬಗ್ಗೆ ಮುಂದಿನ ಚರ್ಚೆ ಶುರುವಾಗಿದೆ. `ನದಿಗಳಿಗೆ ಸಹ ಬದುಕುವ ಹಕ್ಕಿದೆ. ನೈಸರ್ಗಿಕವಾಗಿ ಹರಿಯುವ ನದಿಯನ್ನು ಬೇರೆ ದಿಕ್ಕಿನ ಕಡೆ ತಿರುಚುವುದು ಸರಿಯಲ್ಲ. ನದಿಗಳ ಸಹಜ ಅರಿವಿಗೆ ಅಡ್ಡಿಪಡಿಸುವುದು ಅಪರಾಧ’ ಎಂದು ಸ್ವರ್ಣವಲ್ಲಿ ಶ್ರೀಗಳು ಪ್ರತಿಪಾದಿಸಿದ್ದಾರೆ. `ಕುಡಿಯುವ ನೀರಿನ ಯೋಜನೆ ಹೆಸರಿನಲ್ಲಿ ಬೇರೆ ಹುನ್ನಾರ ನಡೆಯುವ ಅನುಮಾನ ಕಾಡುತ್ತಿದೆ. ಜಿಲ್ಲೆಯ ಸಂಪತ್ತು ಲೂಟಿ ಮಾಡುವ ಯೋಜನೆಯನ್ನು ಎಲ್ಲರೂ ಸೇರಿ ವಿರೋಧಿಸಬೇಕು’ ಎಂದು ಶಿರಳಗಿಯ ಚೈತನ್ಯ ರಾಜಾರಾಮ ಆಶ್ರಮದ ಬ್ರಹ್ಮಾನಂದ ಭಾರತೀ ಸ್ವಾಮೀಜಿ ಹೇಳಿದ್ದಾರೆ. `ಸ್ವರ್ಣವಲ್ಲಿ ಶ್ರೀಗಳು ತೆಗೆದುಕೊಳ್ಳುವ ನಿರ್ಧಾರಗಳಿಗೆ ನಾವು ಬದ್ಧ. ನೀರಿನ ವಿಷಯದಲ್ಲಿ ಪ್ರತಿಯೊಬ್ಬರು ಸಾತ್ವಿಕ ಹೋರಾಟ ನಡೆಸುತ್ತಿದ್ದು, ಸರ್ಕಾರ ಜನರ ಭಾವನೆ ಅರ್ಥ ಮಾಡಿಕೊಳ್ಳಬೇಕು’ ಎಂದು ಜಡೆ ಸಂಸ್ಥಾನದ ಮಹಾಂತ ಮಹಾಸ್ವಾಮೀಜಿ ಹೇಳಿದ್ದಾರೆ. `ನದಿ ತಿರುವು ಎಂಬುದು ಪೃಕೃತಿ ಮೇಲಿನ ಹಿಂಸಾಚಾರ. ಪಶ್ಚಿಮಘಟ್ಟಕ್ಕೆ ಗಾಯ ಆದರೆ ಅದರ ನೋವನ್ನು ಜಗತ್ತೇ ಅನುಭವಿಸಲಿದೆ’ ಎಂದು ನೆಲಮಾವು ಮಠದ ಮಾಧವಾನಂದ ಸ್ವಾಮೀಜಿ ಎಚ್ಚರಿಕೆ ನೀಡಿದ್ದಾರೆ. ಈಗಾಗಲೇ ನಡೆದ ಪ್ರಕೃತಿ ವಿಕೋಪಗಳ ಬಗ್ಗೆಯೂ ಅವರು ವಿವಿಧ ನಿದರ್ಶನಗಳನ್ನು ನೀಡಿದ್ದಾರೆ. `ನಾಗರಿಕತೆಯ ಉಳಿಯುವಿಕೆಗೆ ನದಿ ಸಂರಕ್ಷಣೆ ಅನಿವಾರ್ಯ. ನದಿಗಳಿಗೆ ತೊಂದರೆ ನೀಡಲು ಮುಂದಾದರೆ ಅದನ್ನು ಎಂದಿಗೂ ಸಹಿಸುವುದಿಲ್ಲ’ ಎಂದು ಸೋಂದಾ ಸ್ವಾದಿ ಜೈನ ಮಠದ ಬಟ್ಟಕಳಂಕ ಪಟ್ಟಾಚಾರ್ಯವರ್ಯ ಸ್ವಾಮೀಜಿ ಹೇಳಿದ್ದಾರೆ. `ನದಿಗಳಿಗೆ ಹಿಂಸೆ ನೀಡುವ ಇಂಥ ಯೋಜನೆ ಕೂಡಲೇ ನಿಲ್ಲಿಸಬೇಕು’ ಎಂದು ಸರ್ಕಾರದ ನಿಲುವನ್ನು ಅವರು ಕಟುವಾಗಿ ಟೀಕಿಸಿದ್ದಾರೆ. `ನಿಮ್ಮೆಲ್ಲರ ಹಾಗೇ ನಾನು ಸಹ ಕೃಷಿಕ. ರೈತರು ಜಮೀನು ಕಳೆದುಕೊಂಡಾಗ ಆಗುವ ನೋವು ನನಗೆ ಅರಿವಿದೆ. ರೈತರ ಜೀವನದ ಜೊತೆ ಆಟವಾಡುವ ಯೋಜನೆ ಬರಲು ಬಿಡುವುದಿಲ್ಲ’ ಎಂದು ಶಿರಸಿ ಕ್ಷೇತ್ರದ ಶಾಸಕ ಭೀಮಣ್ಣ ನಾಯ್ಕ ಅವರು ವಾಗ್ದಾನ ಮಾಡಿದ್ದಾರೆ. `ಜಿಲ್ಲೆಯ ಜನ ಈಗಾಗಲೇ ಸಾಕಷ್ಟು ತ್ಯಾಗ ಮಾಡಿದ್ದಾರೆ. ಮತ್ತೆ ಕೊಡುವುದಕ್ಕೆ ಜನರಲ್ಲಿ ಏನೂ ಉಳಿದಿಲ್ಲ. ನಮ್ಮ ಪಾಡಿಗೆ ನಮ್ಮನ್ನು ಬದುಕಲು ಬಿಡಿ’ ಎಂದು ಯಲ್ಲಾಪುರ ಕ್ಷೇತ್ರ ಶಾಸಕ ಶಿವರಾಮ ಹೆಬ್ಬಾರ್ ಹೇಳಿದ್ದಾರೆ. `ಸರ್ಕಾರ ಜನಾಭಿಪ್ರಾಯಕ್ಕೆ ಮನ್ನಣೆ ನೀಡಬೇಕು. ಯೋಜನೆಯನ್ನು ಕೂಲಂಕುಶವಾಗಿ ಅಧ್ಯಯನ ಮಾಡಬೇಕು. ಸ್ಥಳೀಯರ ಅಭಿಪ್ರಾಯಗಳಿಗೆ ಮನ್ನಣೆ ನೀಡಬೇಕು’ ಎಂದು ವಿಧಾನ ಪರಿಷತ್ ಸದಸ್ಯ ಶಾಂತರಾಮ ಸಿದ್ದಿ ಆಗ್ರಹಿಸಿದ್ದಾರೆ. `ಪರಿಸರ ಧಾರಣಾ ಸಾಮರ್ಥ್ಯ ಅರಿಯದೇ ಯೋಜನೆ ರೂಪಿಸುವುದು ಸರಿಯಲ್ಲ. ನದಿ ತಿರುವು ವಿರುದ್ಧ ನನ್ನ ನಿಲುವಿನಲ್ಲಿ ಯಾವುದೇ ಬದಲಾವಣೆಗಳಿಲ್ಲ. ಮುಂದಿನ ಪೀಳಿಗೆಯ ರಕ್ಷಣೆಗಾಗಿ ಯೋಜನೆ ವಿರೋಧಿಸುವುದು ಅನಿವಾರ್ಯ’ ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದ್ದಾರೆ. `ಉತ್ತರ ಕನ್ನಡ ಜಿಲ್ಲೆಯ ಜನರಿಗೆ ಬೇಡವಾದ ಹಾಗೂ ಪರಿಸರಕ್ಕೆ ಮಾರಕವಾದ ಯೋಜನೆಗೆ ಸರ್ಕಾರವೂ ಆಸಕ್ತಿವಹಿಸಿಲ್ಲ. ಜಿಲ್ಲೆಯ ಜನರ ಹಿತಾಸಕ್ತಿ ಕಾಪಾಡುವುದೇ ನಮ್ಮ ಧ್ಯೇಯ’ ಎಂದು ಉತ್ತರ ಕನ್ನಡ ಉಸ್ತುವಾರಿ ಸಚಿವ ಮಂಕಾಳು ವೈದ್ಯ ಹೇಳಿದ್ದಾರೆ. `ಜಿಲ್ಲೆಯ ಜನ ಕೇಳದಿದ್ದರೂ ಸರ್ಕಾರದವರು ಇಲ್ಲಿ ಅಣು ಸ್ಥಾವರ, ನೌಕಾನೆಲೆ ಕೊಟ್ಟಿದ್ದಾರೆ. ಆದರೆ, ಜನ ಕೇಳಿದ ಉತ್ತಮ ಆಸ್ಪತ್ರೆಯನ್ನು ಕೊಡಲು ಸಾಧ್ಯವಾಗಲಿಲ್ಲ. ಇದೀಗ ನೀರಾವರಿ ನೆಪವೊಡ್ಡಿ ನದಿ ಅಪಹರಣಕ್ಕೆ ಮುಂದಾಗಿರುವುದು ನಾಚಿಕೆಗೇಡು’ ಎಂದು ಪರಿಸರ ತಜ್ಞ ಬಿ ಎಂ ಕುಮಾರಸ್ವಾಮಿ ಆಕ್ರೋಶದ ಮಾತನಾಡಿದ್ದಾರೆ. - [ಪಾಗಲ್ ಪ್ರೇಮಿ ಕಾಟಕ್ಕೆ ಪ್ರೇಯಸಿ ಸಾವು!](https://mobiletime.in/2026/01/the-death-of-his-mistress-due-to-the-misadventure-of-a-crazy-lover/): ಕಾರವಾರದ ಚಿರಾಗ್ ಕೋಠಾರಕರ್ ಅವರು ಕದ್ರಾದ ರೀಶೆಲ್ ಡಿಸೋಜಾ ಅವರನ್ನು ಪ್ರೀತಿಸುವಂತೆ ಬೆನ್ನು ಬಿದ್ದಿದ್ದು, ಚಿರಾಗ ಕೋಠಾರಕರ್ ಅವರ ಕಾಟ ಸಹಿಸಲಾಗದೇ ರೀಶೆಲ್ ಡಿಸೋಜಾ ಅವರು ಸಾವಿಗೆ ಶರಣಾಗಿದ್ದಾರೆ. ಕಾರವಾರದ ಬಾಡ ನಂದನಗದ್ದಾದಲ್ಲಿ ಚಿರಾಗ ಚಂದ್ರಹಾಸ ಕೋಠಾರಕರ್ ಅವರು ವಾಸವಾಗಿದ್ದಾರೆ. ಚಿರಾಗ ಕೋಟಾರಕರ್ ಅವರು ಕಾರವಾರ ಕದ್ರಾದ ರೀಶೆಲ್ ಡಿಸೋಜಾ (20) ಅವರನ್ನು ಪ್ರೀತಿಸುತ್ತಿದ್ದರು. ರೀಶೆಲ್ ಡಿಸೋಜಾ ಅವರು ಕಾಲೇಜು ವಿದ್ಯಾರ್ಥಿಯಾಗಿದ್ದು, ಅವರು ಕಾಲೇಜಿಗೆ ಹೋಗಿ ಬರುವಾಗಲೆಲ್ಲ ಚಿರಾಗ ಕೋಟಾರಕರ್ ಅಡ್ಡಗಟ್ಟಿ ಪ್ರೀತಿಸುವಂತೆ ಕಾಡಿಸುತ್ತಿದ್ದರು. ಆದರೆ, ಆ ಪ್ರೀತಿಯನ್ನು ರೀಶೆಲ್ ಡಿಸೋಜಾ ಅವರು ಮನ್ನಿಸಿರಲಿಲ್ಲ. ಅದಾಗಿಯೂ, ಚಿರಾಗ ಕೋಠಾರಕರ್ ಅವರು ರೀಶೆಲ್ ಡಿಸೋಜಾ ಅವರನ್ನು ಬಿಟ್ಟಿರಲಿಲ್ಲ. ರೀಶೆಲ್ ಡಿಸೋಜಾ ಅವರಿಗೆ ಚಿರಾಗ ಕೋಠಾಕರ್ ಅವರು ಪದೇ ಪದೇ ಫೋನ್ ಮಾಡುತ್ತಿದ್ದರು. ರೀಶೆಲ್ ಡಿಸೋಜಾ ಅವರ ಮನೆಯವರೆಗೂ ಬಂದು ಸುತ್ತಾಡುತ್ತಿದ್ದರು. ರೀಶೆಲ್ ಡಿಸೋಜಾ ಅವರನ್ನು ಅನಗತ್ಯವಾಗಿ ಕಾಡಿಸುತ್ತಿದ್ದರು. ಆದರೆ, ಚಿರಾಗ ಕೋಠಾರಕರ್ ಅವರ ಬಗ್ಗೆ ಒಳ್ಳೆಯ ಅಭಿಪ್ರಾಯ ಇಲ್ಲದ ಕಾರಣ ರೀಶೆಲ್ ಡಿಸೋಜಾ ಆ ಪ್ರೀತಿಯನ್ನು ನಿರಾಕರಿಸಿದ್ದರು. ಚಿರಾಗ ಕೋಠಾರಕರ್ ಅವರಿಂದ ಆಗುವ ಹಿಂಸೆಯ ಬಗ್ಗೆ ತಂದೆ ಕಿಸ್ಟೋಡ್ ಡಿಸೋಜಾ ಅವರ ಬಳಿಯೂ ಹೇಳಿಕೊಂಡಿದ್ದರು. ಪ್ರೀತಿ ನಿರಾಕರಿಸಿದ ರೀಶೆಲ್ ಡಿಸೋಜಾ ಅವರಿಗೆ ಚಿರಾಗ ಕೋಠಾರಕರ್ ಅತ್ಯಂತ ಕೆಟ್ಟದಾಗಿ ನಿಂದಿಸಿದರು. `ನೀ ಬದುಕಿ ಪ್ರಯೋಜನವೇ ಇಲ್ಲ. ಬದುಕುವುದಕ್ಕಿಂತ ಸತ್ತರೆ ಒಳಿತು’ ಎಂದು ಬೈದಿದ್ದರು. ಚಿರಾಗ ಕೋಠಾರಕರ್ ಅವರ ಬೈಗುಳದಿಂದ ಬೇಸತ್ತ ರೀಶೆಲ್ ಡಿಸೋಜಾ ಅವರು ಆತ್ಮಹತ್ಯೆಯ ನಿರ್ಧಾರ ಮಾಡಿದರು. ಜನವರಿ 9ರಂದು ಬೆಡ್ ರೂಮಿನ ಒಳಗೆ ಪ್ರವೇಶಿದ ಅವರು ಫ್ಯಾನಿಗೆ ನೇಣು ಹಾಕಿಕೊಂಡು ಕೊನೆಯುಸಿರೆಳೆದರು. ಈ ಎಲ್ಲಾ ವಿದ್ಯಮಾನಗಳ ಬಗ್ಗೆ ಕಿಸ್ಟೋಡ್ ಡಿಸೋಜಾ ಅವರು ಮಾಹಿತಿ ನೀಡಿದರು. - [ನೌಕಾನೆಲೆಯಲ್ಲಿಯೂ ಲಂಚದ ಹಾವಳಿ!](https://mobiletime.in/2026/01/bribery-is-rampant-even-at-the-naval-base/): `ಕಾರವಾರದ ಕದಂಬ ನೌಕಾನೆಲೆಯಲ್ಲಿ ಲಂಚದ ಹಾವಳಿ ವಿಪರೀತವಾಗಿದೆ’ ಎಂದು ಮೀನುಗಾರ ಮುಖಂಡ ಗಣಪತಿ ಮಾಂಗ್ರೇ ಹೇಳಿದ್ದಾರೆ. `ಅಲ್ಲಿನ ಅಧಿಕಾರಿಗಳ ಹಪಾಹಪಿತನದಿಂದ ನಿರಾಶ್ರಿತರು ಸಮಸ್ಯೆಗೆ ಒಳಗಾಗಿದ್ದಾರೆ’ ಎಂದವರು ಅಳಲು ತೋಡಿಕೊಂಡಿದ್ದಾರೆ. `ನೌಕಾನೆಲೆಯಿAದ ಸ್ಥಳೀಯರಿಗೆ ಹಾಗೂ ರೈತರಿಗೆ ಯಾವುದೇ ತೊಂದರೆಯಾಗುವುದಿಲ್ಲ ಎಂದು ಭರವಸೆ ನೀಡಿದ್ದರು. ಆದರೆ ಪ್ರಸ್ತುತ ಪರಿಸ್ಥಿತಿ ತದ್ವಿರುದ್ಧವಾಗಿದೆ. ಉದ್ಯೋಗದ ವಿಷಯದಲ್ಲಿ ಸ್ಥಳೀಯರಿಗೆ ಅನ್ಯಾಯವಾಗಿದ್ದು, ಅರ್ಹ ಸ್ಥಳೀಯರಿಗೆ ಕೆಲಸ ಸಿಗುತ್ತಿಲ್ಲ. ಲಂಚಪಡೆದು ಬೇರೆ ಬೇರೆಯವರಿಗೆ ಉದ್ಯೋಗ ನೀಡಲಾಗುತ್ತಿದೆ. ಶೇ 60ರಷ್ಟು ಸ್ಥಳೀಯರನ್ನು ನೇಮಿಸಿಕೊಳ್ಳುವ ಬದಲು ಲಂಚ ನೀಡಿದವರಿಗೆ ಉದ್ಯೋಗ ನೀಡಲಾಗುತ್ತಿದೆ’ ಎಂದವರು ದೂರಿದರು. `ಒಡಿಶಾ ಮತ್ತು ಆಂಧ್ರಪ್ರದೇಶದ ನೂರಾರು ಯುವಕರಿಗೆ ತರಬೇತಿ ನೀಡಿ ಅವರನ್ನು ಇಲ್ಲಿ ಖಾಯಂ ಉದ್ಯೋಗಿಯನ್ನಾಗಿ ನೇಮಿಸಲಾಗಿದೆ. ನೌಕಾನೆಲೆಯ ಕೆಲವು ಅಧಿಕಾರಿಗಳು ಹಾಗೂ ಸಂಘಟನೆಗಳು ಕೈಜೋಡಿಸಿ ಸ್ಥಳೀಯರ ಹಕ್ಕನ್ನು ಕಸಿದುಕೊಳ್ಳುತ್ತಿವೆ. ಅಲ್ಲಿ ಕೆಲಸ ಮಾಡುತ್ತಿರುವ ಕೆಲವೇ ಕೆಲವು ಸ್ಥಳೀಯ ನೌಕರರನ್ನು ಅವರ ಜಾತಿ ಮತ್ತು ಭೂಮಿ ಕಳೆದುಕೊಂಡವರು ಎಂಬ ಕಾರಣಕ್ಕೆ ಅವಮಾನಿಸುವ, ಹೀಗಳೆಯುವ ಅನಿಷ್ಠ ಪದ್ಧತಿ ನೌಕಾನೆಲೆಯ ಒಳಗೆ ನಡೆಯುತ್ತಿದೆ. ಜಮೀನು ನೀಡಿ ಬೀದಿ ಪಾಲಾದವರನ್ನು ಕೀಳುಮಟ್ಟದ ದೃಷ್ಟಿಯಿಂದ ನೋಡುವ ಅಧಿಕಾರಿಗಳ ವರ್ತನೆಯು ಅಮಾನವೀಯವಾಗಿದೆ’ ಎಂದವರು ಆಕ್ರೋಶವ್ಯಕ್ತಪಡಿಸಿದರು. `9 ವರ್ಷಗಳ ಹಿಂದೆ ನೀಡಿದ ಭರವಸೆಯಂತೆ ನೌಕಾನೆಲೆಯ ವ್ಯಾಪ್ತಿಯಲ್ಲಿ ಮೀನುಗಾರಿಕೆಗೆ ಅವಕಾಶ ನೀಡುತ್ತಿಲ್ಲ. ಕಾನೂನಿನಲ್ಲಿ ಅವಕಾಶವಿದ್ದರೂ ಅಧಿಕಾರಿಗಳು ಮೀನುಗಾರರನ್ನು ಒಳಗೆ ಬಿಡದೆ ಕಿರುಕುಳ ನೀಡುತ್ತಿದ್ದಾರೆ. ನೌಕಾನೆಲೆಯ ಒಳಭಾಗದಲ್ಲಿ ಸಣ್ಣ ಮೀನುಗಳು ಈಗ ದೈತ್ಯ ಗಾತ್ರಕ್ಕೆ ಬೆಳೆದಿವೆ. ಆದರೆ ಅವುಗಳನ್ನು ಹಿಡಿಯಲು ಸ್ಥಳೀಯ ಮೀನುಗಾರರಿಗೆ ಸಾಧ್ಯವಾಗುತ್ತಿಲ್ಲ’ ಎಂದು ವಿನೋದ ಕುಡ್ತಲಕರ್ ಅವರು ವಿವರಿಸಿದರು. `ನೌಕಾನೆಲೆಯಲ್ಲಿ ನಡೆಯುವ ಗುತ್ತಿಗೆ ಕಾಮಗಾರಿಗಳಲ್ಲೂ ಸ್ಥಳೀಯ ಗುತ್ತಿಗೆದಾರರಿಗೆ ಅವಕಾಶ ನೀಡದೇ ಎಲ್ಲಾ ಗುತ್ತಿಗೆಗಳನ್ನು ಹೊರರಾಜ್ಯದವರಿಗೇ ನೀಡಲಾಗುತ್ತಿದೆ. ಭೂಮಿ ಕಳೆದುಕೊಂಡ ಕುಟುಂಬಗಳ ಜೀವನೋಪಾಯಕ್ಕೆ ಭಾರಿ ಹಿನ್ನಡೆಯಾಗಿದ್ದು, ವಯೋಮಿತಿ ಮೀರಿದ ನಿರಾಶ್ರಿತರಿಗೂ ಉದ್ಯೋಗ ನೀಡುವ ಬಗ್ಗೆ ಸರ್ಕಾರ ವಿಶೇಷ ಗಮನ ಹರಿಸಬೇಕು’ ಎಂದು ಆಗ್ರಹಿಸಿದರು. ವಿನೋದ ನಾಯ್ಕ ಹಾಗೂ ಪವನ್ ದುರ್ಗೇಕರ್ ಅವರು ಹೋರಾಟದ ಎಚ್ಚರಿಕೆ ನೀಡಿದರು. - [ಸಮೃದ್ಧ ಜೀವನ: ಹೂಡಿಕೆದಾರರ ಬದುಕು ಅಧ್ವಾನ!](https://mobiletime.in/2026/01/prosperous-life-investors-money-is-in-the-air/): `ಸಮೃದ್ಧ ಜೀವನ’ ಎಂಬ ಯೋಜನೆ ಅಡಿ ಹೂಡಿಕೆ ಮಾಡಿದ ಅನೇಕರು ಕಾಸು ಕಳೆದುಕೊಂಡಿದ್ದಾರೆ. ತಮ್ಮ ಹಣ ತಮಗೆ ಮರಳಿಸಿ ಎಂದು ಅವರು ಪಟ್ಟುಹಿಡಿದಿದ್ದು, ಹಣಪಡೆದವರಾರೂ ಕೈಗೆ ಸಿಗುತ್ತಿಲ್ಲ! ಸಮೃದ್ಧ ಜೀವನ ಮಲ್ಟಿಸ್ಟೇಟ್ ಮಲ್ಟಿ ಪರ್ಪೋಸಸ್ ಕೋ-ಆಪ್ರೇಟಿವ್ ಸೊಸೈಟಿ ಹಾಗೂ ಪುಣೆಯ ಸಮೃದ್ಧ ಜೀವನ ಅಗ್ರೋ ಪ್ರಾಪರ್ಟಿ ಕಂಪನಿ ಲಿಮಿಟೆಡ್ ಸಹಯೋಗದಲ್ಲಿ ಜನರಿಗೆ ಅನ್ಯಾಯ ನಡೆದಿದೆ. ಭಾರತದ ಎಲ್ಲಡೆ ಶಾಖೆ ಹೊಂದಿರುವುದಾಗಿ ನಂಬಿಸಿದ ಈ ಕಂಪನಿ ಜನರಿಂದ ಹಣ ಸಂಗ್ರಹಿಸಿ ಮೋಸ ಮಾಡಿದೆ. ಆರ್‌ಡಿ, ಎಫ್‌ಡಿ, ಎಸ್ ಐ ಪಿ ಸೇರಿ ಹಲವು ಯೋಜನೆಗಳ ಹೆಸರಿನಲ್ಲಿ ಜನರನ್ನು ಯಾಮಾರಿಸಿದೆ. ಲಕ್ಷಾಂತರ ಜನ ಈ ವಂಚನೆಗೆ ಒಳಗಾಗಿದ್ದು, ಸಾಕಷ್ಟು ಹೋರಾಟ ನಡೆಸಿದರೂ ಅವರ ಹಣ ಮಾತ್ರ ಮರಳಿ ಸಿಕ್ಕಿಲ್ಲ ಕೂಲಿ ಕಾರ್ಮಿಕರು, ನಿವೃತ್ತ ನೌಕರರು, ಮಹಿಳೆಯರು ಸೇರಿ ಬಡವರನ್ನು ಗುರಿಯಾಗಿರಿಸಿಕೊಂಡು ಈ ಸಂಸ್ಥೆ ಹಣ ಸಂಗ್ರಹಿಸಿದೆ. 1600 ಕೋಟಿ ರೂಪಾಯಿಗೂ ಅಧಿಕ ಮೊತ್ತದ ಅವ್ಯವಹಾರ ನಡೆಸಿದೆ. ಸಂಸ್ಥೆ ಮುಖ್ಯಸ್ಥರೇ ಈ ಅಪರಾತಪರ ನಡೆಸಿದ್ದು, ಅವರು ಬಡವರ ಕೈಗೆ ಸಿಗದೇ ತಪ್ಪಿಸಿಕೊಂಡಿದ್ದಾರೆ. ಆ ಕಂಪನಿ ಆಸ್ತಿ ಮುಟ್ಟುಗೋಲು ಹಾಕಿ ಸಂತ್ರಸ್ತರ ಹಣ ಮರಳಿಸುವಂತೆ ಒತ್ತಾಯಿಸಿದರೂ ಆ ಕೆಲಸ ನಡೆದಿಲ್ಲ. ಈ ಎಲ್ಲಾ ಹಿನ್ನಲೆ ಉತ್ತರ ಕನ್ನಡ ಜಿಲ್ಲಾ ಅಂಗವಿಕಲರ ಹಾಗೂ ಪಾಲಕರ ಒಕ್ಕೂಟದವರು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟಿಸಿದ್ದಾರೆ. - [ಪಿಕಳೆ ಕುಟುಂಬದ ವಿರುದ್ಧ ಅಪಪ್ರಚಾರ!](https://mobiletime.in/2026/01/slander-against-the-pikale-family/): ಸಾವಿರಾರು ಜನರ ಜೀವ ಕಾಪಾಡಿದ ಕಾರವಾರದ ಡಾ ಪಿಕಳೆ ಕುಟುಂಬದ ವಿರುದ್ಧ ಜಾಲತಾಣದಲ್ಲಿ ಅಪಪ್ರಚಾರ ನಡೆಯುತ್ತಿದೆ. ವೈದ್ಯಕೀಯ ಸೌಲಭ್ಯಗಳು ಸರಿಯಾಗಿ ಇಲ್ಲದ ಅವಧಿಯಲ್ಲಿ ಎಸ್ ಆರ್ ಪಿಕಳೆ ಅವರು ಕಾರವಾರದಲ್ಲಿ ಸೇವೆ ಶುರು ಮಾಡಿದ್ದರು. ಬಡವರ ಸೇವೆಗಾಗಿ ಅವರು ತಮ್ಮ ಜೀವನವನ್ನು ಮೀಸಲಿಟ್ಟಿದ್ದರು. ತಂದೆ ನಡೆದ ಹಾದಿಯಲ್ಲಿಯೇ ನಿತಿನ್ ಪಿಕಳೆ ಹಾಗೂ ಸಂಜಯ ಪಿಕಳೆ ಅವರು ಮುಂದುವರೆದಿದ್ದು, ಸಮಾಜ ಸೇವೆಯ ಜೊತೆ ವೈದ್ಯಕೀಯ ಸೇವೆಯನ್ನು ಅವರು ಮುಂದುವರೆಸಿದ್ದಾರೆ. ಈ ಕುಟುಂಬದ ಡಾ ಅನುರಾಧಾ, ಡಾ ಅರ್ಚನಾ ಅವರು ಸಹ ವೈದ್ಯಕೀಯ ಕ್ಷೇತ್ರದಲ್ಲಿ ಸಾಕಷ್ಟು ಸಾಧನೆ ಮಾಡಿದ್ದಾರೆ. ಡಾ ಪಿಕಳೆ ಪರಿವಾರದವರು ಹಗಲು-ರಾತ್ರಿ ಎನ್ನದೇ ವೈದ್ಯಕೀಯ ಸೇವೆಯಲ್ಲಿದ್ದಾರೆ. ತುರ್ತು ಸನ್ನಿವೇಶದ ಅವಧಿಯಲ್ಲಿ ಬಂದ ರೋಗಿಯನ್ನು ಸಹ ಅವರು ಬದುಕಿಸಿದ ಸಾಕಷ್ಟು ನಿದರ್ಶನಗಳಿವೆ. ರಾತ್ರಿ ವೇಳೆ ವೈದ್ಯರು ಮನೆಯಲ್ಲಿ ವಿಶ್ರಾಂತಿಪಡೆಯುತ್ತಿದ್ದರೂ ತುರ್ತು ಕರೆ ಬಂದಾಗ ನಿದ್ದೆಯಿಂದ ಎದ್ದು ಬಂದು ಜನರ ಜೀವ ಕಾಪಾಡಿದ ಉದಾಹರಣೆಗಳಿವೆ. ಹೀಗಿದ್ದರೂ ಆ ಬಗ್ಗೆ ಅರಿಯದ ಕೆಲವರು ಡಾ ಪಿಕಳೆ ಪರಿವಾರದ ವಿರುದ್ಧ ಅಪಪ್ರಚಾರ ನಡೆಸುತ್ತಿದ್ದಾರೆ. ಪಿಕಳೆ ಆಸ್ಪತ್ರೆಯಲ್ಲಿನ ಸಿಬ್ಬಂದಿಯೊಬ್ಬರು ಕಣ್ತಪ್ಪಿನಿಂದ ರೋಗಿಗೆ ಅವಧಿ ಮುಗಿದ ಔಷಧಿ ನೀಡಿದ್ದಾರೆ. ತಮ್ಮಿಂದ ತಪ್ಪಾಗಿರುವುದನ್ನು ಸಹ ಆ ಸಿಬ್ಬಂದಿ ಒಪ್ಪಿಕೊಂಡಿದ್ದಾರೆ. ಬದಲಿ ಔಷಧಿ ನೀಡಿ ಕ್ಷಮೆ ಕೋರಿದ್ದಾರೆ. ಈ ವಿಷಯವನ್ನು ವ್ಯಕ್ತಿಯೊಬ್ಬರು ವಿಡಿಯೋ ಮಾಡಿದ್ದು, ಆಸ್ಪತ್ರೆ ಸಿಬ್ಬಂದಿಯಿOದ ಆದ ಅಚಾತುರ್ಯಕ್ಕೆ ವೈದ್ಯರ ಹೆಸರು ಕೆಡಿಸುವ ಕೆಲಸ ಮಾಡಿದ್ದಾರೆ. ಗೊತ್ತುಗುರಿಯಿಲ್ಲದ ಅನೇಕರು ಅದೇ ವಿಡಿಯೋ ಆಧಾರದಲ್ಲಿ ಡಾ ಪಿಕಳೆ ವೈದ್ಯ ಕುಟುಂಬದ ವಿರುದ್ಧ ಸದ್ಯ ಜಾಲತಾಣದಲ್ಲಿ ಅನಗತ್ಯ ಆರೋಪ ಮಾಡುತ್ತಿದ್ದಾರೆ. ಜನರ ಸೇವೆಗಾಗಿ ತಮ್ಮ ವೈಯಕ್ತಿಕ ಜೀವನವನ್ನು ಕಳೆದುಕೊಂಡ ಇಡೀ ಪರಿವಾರಗಳಿಸಿದ ಹೆಸರನ್ನು ಒಂದೇ ಒಂದು ವಿಡಿಯೋ ತುಣುಕು ಹಾಳು ಮಾಡುತ್ತಿರುವ ಬಗ್ಗೆ ಜನ ಅಸಮಧಾನವ್ಯಕ್ತಪಡಿಸಿದ್ದಾರೆ. `ಉತ್ತರ ಕನ್ನಡ ಜಿಲ್ಲೆಯ ವೈದ್ಯಕೀಯ ಕ್ಷೇತ್ರದಲ್ಲಿ ತನ್ನದೇ ಆದ ವಿಶಿಷ್ಟ ಛಾಪು ಮೂಡಿಸಿದಲ್ಲದೇ ಸಾವಿರಾರು ಬಡ ಕುಟುಂಬಗಳಿಗೆ ಆಸರೆಯಾಗಿರುವ ಪಿಕಳೆ ಆಸ್ಪತ್ರೆಯ ವಿರುದ್ಧ ವ್ಯವಸ್ಥಿತ ಸಂಚು ನಡೆಯುತ್ತಿರುವುದು ವಿಷಾದನೀಯ’ ಎಂದು ಜನಶಕ್ತಿ ವೇದಿಕೆಯ ಅಧ್ಯಕ್ಷ ಮಾಧವ ನಾಯಕ ಅವರು ಹೇಳಿದ್ದಾರೆ. `ಪಿಕಳೆ ಕುಟುಂಬವು ಎಂದಿಗೂ ರೋಗಿಗಳ ಪ್ರಾಣದ ಜೊತೆ ಆಟವಾಡುವವರಲ್ಲ. ಅವರ ನಿಸ್ವಾರ್ಥ ಸೇವೆಗೆ ಕಾರವಾರದ ಜನತೆ ಸದಾ ಚಿರಋಣಿಯಾಗಿರಬೇಕು’ ಎಂದು ಅವರು ಹೇಳಿದ್ದಾರೆ. `ಹಾಳಾದ ಔಷಧಿ ನೀಡಿದ್ದರೆ ಆ ಬಗ್ಗೆ ಕಾನೂನು ಹೋರಾಟ ನಡೆಸಬೇಕು. ಅದರ ಬದಕು ಕಾರವಾರದ ಜನರ ಭಾವನೆಯೊಂದಿಗೆ ಬೆಸೆದುಕೊಂಡಿರುವವರ  ವಿರುದ್ಧ ಇಲ್ಲಸಲ್ಲದ ಆರೋಪ ಮಾಡಿರುವ ಹಿಂದೆ ಹೆಸರಿಗೆ ಮಸಿ ಬಡಿಯುವ ಪ್ರಯತ್ನದ ಶಂಕೆಯಿದೆ’ ಎಂದು ಮಾಧವ ನಾಯಕ ಅವರು ಹೇಳಿದ್ದಾರೆ. - [ಗಡಿ ಜಗಳ: ಕೋರ್ಟಿನ ಮಾತಿಗೂ ಬೆಲೆ ಇಲ್ಲ!](https://mobiletime.in/2026/01/border-dispute-even-the-courts-word-is-worthless/): ಸಿದ್ದಾಪುರದ ನಿರಂಜನ ಹೆಗಡೆ ಅವರು ತೋಟದ ಸುತ್ತ ನಿರ್ಮಿಸಿದ್ದ ಬೇಲಿಯನ್ನು ನರಸಿಂಹ ಹೆಗಡೆ ಅವರು ಕಿತ್ತೊಗೆದಿದ್ದಾರೆ. ಇದನ್ನು ಪ್ರಶ್ನಿಸಿದ ನಿರಂಜನ ಹೆಗಡೆ ಅವರ ಮಾವ ಕೃಷ್ಣಮೂರ್ತಿ ಭಟ್ಟ ಅವರಿಗೆ ನರಸಿಂಹ ಹೆಗಡೆ ಅವರು ನಿಂದಿಸಿದ್ದಾರೆ. ಸಿದ್ದಾಪುರದ ತ್ಯಾಗಲಿ ಗ್ರಾಮದಲ್ಲಿ ನಿರಂಜನ ಹೆಗಡೆ ಅವರ ಭೂಮಿಯಿದೆ. ಹಣಜಿಬೈಲಿನ ಕೃಷ್ಣಮೂರ್ತಿ ಗಂಗಾಧರ ಭಟ್ಟ ಅವರು ತಮ್ಮ ಅಳಿಯ ಅಳಿಯ ನಿರಂಜನ್ ಹೆಗಡೆ ಅವರಿಂದ ಆ ಭೂಮಿಯ ವಿಷಯವಾಗಿ ಪವರ್ ಆಫ್ ಅಟಾರ್ನಿ ಅಧಿಕಾರಪಡೆದಿದ್ದಾರೆ. ಆದರೆ, ಆ ಭೂಮಿಯ ವಹಿವಾಟಿಗೆ ಮೊದಲಿನಿಂದಲೂ ಮಂತಿಗೆಮನೆಯ ನರಸಿಂಹ ಗಣಪತಿ ಹೆಗಡೆ ಅವರು ಅಡ್ಡಿಪಡಿಸುತ್ತಿದ್ದಾರೆ. ಇದೇ ವಿಷಯವಾಗಿ ನಿರಂಜನ ಹೆಗಡೆ ಅವರು ನ್ಯಾಯಾಲಯದ ಮೆಟ್ಟಿಲೇರಿದ್ದು, 2022ರಲ್ಲಿ ನ್ಯಾಯಾಲಯವೂ ನರಸಿಂಹ ಹೆಗಡೆ ಅವರಿಗೆ ಅನಗತ್ಯ ತಂಟೆ-ತಕರಾರಿಗೆ ಹೋಗದಂತೆ ಸೂಚನೆ ನೀಡಿದೆ. ಅದಾಗಿಯೂ 2025ರ ಡಿಸೆಂಬರ್ 31ರಂದು ನರಸಿಂಹ ಹೆಗಡೆ ಅವರು ತಮ್ಮ ಕಿಡಿಗೇಡಿತನ ಮುಂದುವರೆಸಿದ್ದಾರೆ. ಆ ದಿನ ಐದು ಜನ ಆಳುಗಳ ಜೊತೆ ನಿರಂಜನ ಹೆಗಡೆ ಅವರ ತೋಟಕ್ಕೆ ಬಂದ ನರಸಿಂಹ ಹೆಗಡೆ ಅವರು ಅಲ್ಲಿದ್ದ ಬೇಲಿಯನ್ನು ಕಿತ್ತು ಹಾಕಿದ್ದಾರೆ. ಇದನ್ನು ಪ್ರಶ್ನಿಸಿದ ಕೃಷ್ಣಮೂರ್ತಿ ಭಟ್ಟ ಅವರಿಗೆ ಬೈದಿದ್ದಾರೆ. ಇದರಿಂದ ನೊಂದ ಕೃಷ್ಣಮೂರ್ತಿ ಭಟ್ಟ ಅವರು ಪೊಲೀಸರ ಬಳಿ ತಮ್ಮ ಅಳಲು ತೋಡಿಕೊಂಡಿದ್ದು, ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. - [ಆನ್‌ಲೈನ್ ಉದ್ಯೋಗ: ಮೋಸ!](https://mobiletime.in/2026/01/online-employment-fraud/): ಆನ್‌ಲೈನ್ ಉದ್ಯೋಗಕ್ಕೆ ಆಸೆಪಟ್ಟ ಕಾರವಾರದ ಅಮೃತ ಕೋಳಂಬಕರ್ ಅವರು 26 ಲಕ್ಷ ರೂ ಕಳೆದುಕೊಂಡಿದ್ದಾರೆ. ಅವರಿಗೆ ಉದ್ಯೋಗವೂ ಸಿಕ್ಕಿಲ್ಲ. ಕೊಟ್ಟ ಕಾಸನ್ನು ಹಿಂಪಡೆಯಲು ಸಾಧ್ಯವಾಗಿಲ್ಲ. ಕಾರವಾರದಬಾಡ ನಂದನಗದ್ದಾದ ಪಾದ್ರಿಭಾಗ ಕ್ರಾಸಿನ ಬಳಿ ಅಮೃತ ಕೋಳಂಬಕರ್ ಅವರು ವಾಸವಾಗಿದ್ದಾರೆ. ಅವರು ಆನ್‌ಲೈನ್ ಮೂಲಕ ಉದ್ಯೋಗ ಹುಡುಕಾಟದಲ್ಲಿದ್ದಾಗ ಅದೇ ವಿಷಯದ ಜಾಹೀರಾತೊಂದು ಅವರಿಗೆ ಕಾಣಿಸಿದೆ. ಆ ಬಗ್ಗೆ ಅವರು ಆಸಕ್ತರಾಗಿ ಜಾಹೀರಾತು ಬಗ್ಗೆ ವಿಚಾರಿಸಿದ್ದಾರೆ. 2025ರ ಸೆಪ್ಟೆಂಬರ್ 10ರಂದು ವಾಟ್ಸಪ್ ಮೂಲಕ ವಂಚಕರು ಅಮೃತ ಕೋಳಂಬಕರ್ ಅವರನ್ನು ಸಂಪರ್ಕಿಸಿದ್ದಾರೆ. ಆನ್ ಲೈನ್ ಮೂಲಕ ಪಾರ್ಟ ಟೈಂ ಉದ್ಯೋಗ ಮಾಡಿ ಹಣ ಸಂಪಾದಿಸಲು ಸಾಧ್ಯ ಎಂದವರು ವಿವರಿಸಿದ್ದಾರೆ. `ಆನ್ ಲೈನ್ ಮೂಲಕ ವಿವಿಧ ಉತ್ಪನ್ನಗಳಿಗೆ ರಿವ್ಯು ಬರೆದರೆ ಹಣ ಕೊಡುತ್ತೇವೆ’ ಎಂದು ನಂಬಿಸಿದ್ದಾರೆ. ಅಮೃತ ಕೋಳಂಬಕರ್ ಅವರಿಗೆ ಈ ವೇಳೆ ಆನ್‌ಲೈನ್ ಮೂಲಕವೇ ಕಾವ್ಯ ಹಾಗೂ ಗಿರೀಶ್ ರಾಮಕೃಷ್ಣ ಎಂಬಾತರು ಪರಿಚಿತರಾಗಿದ್ದು, ಅವರು ಹೇಳಿದಂತೆ ಅಮೃತ ಕೋಳಂಬಕರ್ ಕೆಲಸ ಮಾಡಿದ್ದಾರೆ. ಇದಕ್ಕಾಗಿ ಅಮೃತ ಕೋಳಂಬಕರ್ ಅವರ ಖಾತೆಗೆ 1500ರೂ ಹಣ ಜಮಾ ಆಗಿದೆ. ಅದಾದ ನಂತರ `ನಾವು ಹೇಳಿದ ಕಡೆ ಹಣ ಹೂಡಿಕೆ ಮಾಡಿದರೆ ದುಪ್ಪಟ್ಟು ಲಾಭ ಕೊಡುತ್ತೇವೆ’ ಎಂದು ಕಾವ್ಯ ಎಂಬಾತರು ನಂಬಿಸಿದ್ದಾರೆ. ಆ ಮಾತು ಕೇಳಿ ಅಮೃತ ಕೋಳಂಬಕರ್ ಅವರು 10 ಸಾವಿರ ರೂ ಹೂಡಿಕೆ ಮಾಡಿದ್ದಾರೆ. ಅದಕ್ಕೆ ಅವರಿಗೆ 15 ಸಾವಿರ ರೂ ದೊರೆತಿದೆ. ಅದಾದ ನಂತರ 26 ಲಕ್ಷ ರೂ ಹೂಡಿಕೆ ಮಾಡಿದ್ದಾರೆ. ಆ ವೇಳೆ ಅವರಿಗೆ ಲಾಭವೂ ಸಿಕ್ಕಿಲ್ಲ. ಕೊಟ್ಟ ಹಣವೂ ಮರಳಿ ಬಂದಿಲ್ಲ. - [ಅಸಹಜ ಸಾವಿನಲ್ಲಿ ಇನ್ನಷ್ಟು ಅನುಮಾನ!](https://mobiletime.in/2026/01/more-suspicions-in-unnatural-death/): ಅಂಕೋಲಾದಲ್ಲಿ ಟೈಲ್ಸ ಕೆಲಸ ಮಾಡುತ್ತಿದ್ದ ನಾರಾಯಣ ಹುಲಸ್ವಾರ್ ಅವರು ಅನುಮಾನಾಸ್ಪದ ರೀತಿಯಲ್ಲಿ ಸಾವನಪ್ಪಿದ್ದಾರೆ. ಮರಕ್ಕೆ ನೇಣು ಹಾಕಿಕೊಂಡ ಸ್ಥಿತಿಯಲ್ಲಿ ಅವರ ಶವ ಪತ್ತೆಯಾಗಿದೆ. ಅದಾಗಿಯೂ, ಅವರ ಸಾವಿನ ಸಮಗ್ರ ತನಿಖೆಗೆ ಕುಟುಂಬದವರು ಆಗ್ರಹಿಸಿದ್ದಾರೆ. ಅಂಕೋಲಾ ಶಿರಕುಳಿ ಅಸ್ಲಗದ್ದೆಯ ನಾರಾಯಣ ಪಾಂಡು ಹುಲಸ್ವಾರ್ (31) ಅವರು ಟೈಲ್ಸ ಕೆಲಸ ಮಾಡಿಕೊಂಡಿದ್ದರು. ಜನವರಿ 4ರಂದು ಅವರು `ಕೆಲಸಕ್ಕೆ ಹೋಗಿ ಬರುತ್ತೇನೆ’ ಎಂದು ಹೇಳಿ ಮನೆಯಿಂದ ಹೊರಟಿದ್ದರು. ಆದರೆ, ಎಷ್ಟು ಹೊತ್ತಾದರೂ ಮನೆಗೆ ಮರಳಿರಲಿಲ್ಲ. ಜನವರಿ 9ರಂದು ಅರಣ್ಯ ಪ್ರದೇಶದಲ್ಲಿ ನಾರಾಯಣ ಹುಲಸ್ವಾರ್ ಅವರು ಶವವಾಗಿದ್ದರು. ವಿಠ್ಠಲಘಾಟ್ ಬಳಿಯ ಕಾಡಿನಲ್ಲಿದ್ದ ಗೇರು ಮರಕ್ಕೆ ಅವರು ನೇಣು ಹಾಕಿಕೊಂಡ ಸ್ಥಿತಿಯಲ್ಲಿದ್ದರು. ಐದಾರು ದಿನದ ಹಿಂದೆಯೇ ನಾರಾಯಣ ಹುಲಸ್ವಾರ್ ಅವರು ಸಾವನಪ್ಪಿದ ಶಂಕೆಯನ್ನು ಅಲ್ಲಿನವರು ವ್ಯಕ್ತಪಡಿಸಿದರು. ಕೊಳೆತ ವಾಸನೆ ಆಧಾರದಲ್ಲಿ ಅಲ್ಲಿ ಹೋದವರಿಗೆ ಶವ ಕಾಣಿಸಿದ್ದು, ತಮ್ಮನ ಸಾವಿನಲ್ಲಿ ಸಂಶಯವಿರುವುದಾಗಿ ಮಂಜುನಾಥ ಹುಲಸ್ವಾರ್ ಅವರು ಹೇಳಿದರು. ಈ ಹಿನ್ನಲೆ ಪೊಲೀಸರು ಪ್ರಕರಣ ದಾಖಲಿಸಿದ್ದು, ತನಿಖೆ ಶುರು ಮಾಡಿದ್ದಾರೆ. - [ನದಿ ಜೋಡಣೆ: ಮೌನ ಮುರಿದ ಶಿರಸಿ ಶಾಸಕ!](https://mobiletime.in/2026/01/river-linking-sirsi-mla-breaks-silence/): ನದಿ ಜೋಡಣೆ ಯೋಜನೆ ಪರ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ ಅವರು ಮಾತನಾಡಿದಾಗ ಮೌನವಾಗಿದ್ದ ಶಿರಸಿ ಶಾಸಕ ಭೀಮಣ್ಣ ನಾಯ್ಕ ಅವರು ಶುಕ್ರವಾರ ಅದೇ ವಿಷಯವಾಗಿ ಬಸವರಾಜ ಬೊಮ್ಮಾಯಿ ಅವರ ವಿರುದ್ಧ ಕಿಡಿಕಾರಿದ್ದಾರೆ. `ನದಿ ಜೋಡಣೆ ವಿಚಾರವಾಗಿ ಜಿಲ್ಲೆಗೆ ಕಾಲಿಟ್ಟರೆ ಹುಷಾರ್!’ ಎಂದು ಭೀಮಣ್ಣ ನಾಯ್ಕ ಬಸವರಾಜ ಬೊಮ್ಮಾಯಿ ಅವರಿಗೆ ಎಚ್ಚರಿಕೆ ನೀಡಿದ್ದಾರೆ. ಕೆಲ ದಿನದ ಹಿಂದೆ ಕಾರವಾರಕ್ಕೆ ಭೇಟಿ ನೀಡಿದ್ದ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ ಅವರು `ಯಾರು ಎಷ್ಟೇ ವಿರೋಧ ಮಾಡಿದರೂ ನದಿ ಜೋಡಣೆ ಯೋಜನೆ ಹಿಂಪಡೆಯುವುದಿಲ್ಲ’ ಎಂದು ಹೇಳಿಕೆ ನೀಡಿದ್ದರು. ಆ ವೇಳೆ ಶಿರಸಿ ಕ್ಷೇತ್ರದ ಶಾಸಕ ಭೀಮಣ್ಣ ನಾಯ್ಕ ಅವರು ಡಿ ಕೆ ಶಿವಕುಮಾರ ಅವರ ಪಕ್ಕದಲ್ಲಿಯೇ ಇದ್ದರು. ಡಿ ಕೆ ಶಿವಕುಮಾರ ಅವರು ಆ ದಿನ ಸಾಕಷ್ಟು ಉಡಾಫೆಯಾಗಿ ಮಾತನಾಡಿದ್ದರು. ಆದರೆ, ಆ ವೇಳೆ ಭೀಮಣ್ಣ ನಾಯ್ಕ ಅವರು ಡಿ ಕೆ ಶಿವಕುಮಾರ ಅವರ ಮಾತಿಗೆ ಕಿಂಚಿತ್ತು ವಿರೋಧವ್ಯಕ್ತಪಡಿಸಿರಲಿಲ್ಲ. ಇದನ್ನು ಓದಿ: ನದಿ ಜೋಡಣೆ ಗ್ಯಾರಂಟಿ: ಉಪಮುಖ್ಯಮಂತ್ರಿಯಿoದ ಉಡಾಫೆ ಉತ್ತರ! ಆದರೆ, ಶುಕ್ರವಾರ ಸುದ್ದಿಗಾರರ ಜೊತೆ ಮಾತನಾಡಿದ ಭೀಮಣ್ಣ ನಾಯ್ಕ ಅವರು ನದಿ ಜೋಡಣೆ ವಿಚಾರವಾಗಿ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಎಚ್ಚರಿಕೆ ನೀಡಿದ್ದಾರೆ. ಬೇಡ್ತಿ ಅಘನಾಶಿನಿ ಕೊಳ್ಳ ಸಂರಕ್ಷಣಾ ಸಮಿತಿ ಆಯೋಜಿಸಿರುವ ಜನ ಸಮಾವೇಶಕ್ಕೆ ಬೆಂಬಲ ನೀಡುವುದಾಗಿ ಅವರು ಘೋಷಿಸಿದ್ದಾರೆ. `ನದಿ ಜೋಡಣೆ ವಿಷಯದ ವಾಸ್ತವ ಭೀಕರವಾಗಿದೆ. ಗದಗ ಹಾವೇರಿ ಜನರ ದಾರಿ ತಪ್ಪಿಸಲು ಈ ಯೋಜನೆ ಮುನ್ನಲೆಗೆ ತರಲಾಗುತ್ತಿದ್ದು, ಪರಿಸರಕ್ಕೆ ಮಾರಕವಾದ ಯೋಜನೆ’ ಎಂದು ಭೀಮಣ್ಣ ನಾಯ್ಕ ಅವರು ಹೇಳಿದ್ದಾರೆ. `ಪಶ್ಚಿಮ ಘಟ್ಟದ ಅತ್ಯಂತ ಸೂಕ್ಷ್ಮ ಪ್ರದೇಶದಲ್ಲಿ ಬೇಡ್ತಿ ನದಿ ಹರಿಯುತ್ತಿದೆ. ಈ ಯೋಜನೆಗಾಗಿ ಸಾವಿರಾರು ಎಕರೆ ಅರಣ್ಯ ನಾಶವಾಗಲಿದ್ದು, ಈಗಾಗಲೇ ಗುಡ್ಡ ಕುಸಿತವಾಗುತ್ತಿರುವ ಪ್ರದೇಶದಲ್ಲಿ ಇಂಥ ಯೋಜನೆ ಅಪಾಯಕಾರಿ. ಪರಿಸರಕ್ಕೆ ಹಾನಿಯಾಗದಂತೆ ಯೋಜನೆ ರೂಪಿಸುತ್ತೇವೆ ಎಂಬುದು ಅಸಾಧ್ಯ’ ಎಂದು ಭೀಮಣ್ಣ ನಾಯ್ಕ ಅವರು ಹೇಳಿದ್ದಾರೆ. `ನದಿ ನೀರು ಸಮುದ್ರಕ್ಕೆ ಸೇರುವುದು ವ್ಯರ್ಥವಲ್ಲ. ಸಿಹಿ ನೀರು ಸಮುದ್ರಕ್ಕೆ ಸೇರಿದಾಗ ಮಾತ್ರ ಅಲ್ಲಿನ ಮೀನುಗಾರಿಕೆ ಮತ್ತು ಜಲಚರಗಳು ಬದುಕಲು ಸಾಧ್ಯ’ ಎಂದು ವೈಜ್ಞಾನಿಕ ಮಾತುಗಳನ್ನು ಆಡಿದ್ದಾರೆ. ಆದರೆ, `ನದಿ ನೀರು ವ್ಯರ್ಥವಾಗಲು ಬಿಡುವುದಿಲ್ಲ’ ಎಂದು ಡಿ ಕೆ ಶಿವಕುಮಾರ ಅವರು ಹೇಳಿದಾಗ ಭೀಮಣ್ಣ ನಾಯ್ಕ ಅವರು ಮಾತನಾಡಿರಲಿಲ್ಲ. `ಪರಿಸರ ನಾಶ ಆಗದ ಹಾಗೇ ಯೋಜನೆ ರೂಪಿಸುತ್ತೇವೆ’ ಎಂದು ಡಿ ಕೆ ಶಿವಕುಮಾರ ಅವರು ಹೇಳಿದಾಗ ಸಹ ಭೀಮಣ್ಣ ನಾಯ್ಕ ಅವರು ಪಕ್ಕದಲ್ಲಿಯೇ ಇದ್ದರೂ ಅದಕ್ಕೆ ಚಕಾರ ಎತ್ತಿರಲಿಲ್ಲ. ಹೀಗಾಗಿ ಸದ್ಯ ಭೀಮಣ್ಣ ನಾಯ್ಕ ಅವರ ನಿಲುವಿನ ಬಗ್ಗೆ ಪ್ರಶ್ನೆ ಎದ್ದಿದ್ದು, ಆ ಬಗ್ಗೆ ಚರ್ಚೆ ಶುರುವಾಗಿದೆ. - [ತೋಟದ ಕಾಲುವೆ ವಿಷಯ: ಭಟ್ಟ-ಹೆಗಡೆರ ನಡುವೆ ಹೊಡೆದಾಟ!](https://mobiletime.in/2026/01/garden-canal-issue-fight-between-bhatta-hegad/): ಅಡಿಕೆ ತೋಟದಲ್ಲಿರುವ ಕಾಲುವೆ ವಿಷಯವಾಗಿ ಶಿರಸಿಯ ತಿರುಮಲೇಶ್ವರ ಹೆಗಡೆ ಹಾಗೂ ರಘುಪತಿ ಭಟ್ಟ ಅವರ ನಡುವೆ ಹೊಡೆದಾಟ ನಡೆದಿದೆ. ಶಿರಸಿಯ ಇಸಳೂರು ಬಳಿಯ ಬೋಪನಳ್ಳಿಯಲ್ಲಿ ತಿರುಮಲೇಶ್ವರ ಸತ್ಯನಾರಾಯಣ ಹೆಗಡೆ ಅವರು ವಾಸವಾಗಿದ್ದಾರೆ. ಅವರಿಗೆ ಅಲ್ಲಿ 2.10 ಎಕರೆ ಕ್ಷೇತ್ರದ ಭೂಮಿಯಿದ್ದು, ಅಲ್ಲಿ ಅವರು ಅಡಿಕೆ ಬೆಳೆದಿದ್ದಾರೆ. ಅವರ ತೋಟದ ಪಕ್ಕ ಬೋಪ್ಪನಳ್ಳಿ ಜಂಬೆಕೊಪ್ಪದ ರಘುಪತಿ ಗೋಪಾಲ ಭಟ್ಟ ಅವರ ತೋಟವಿದೆ. ಈ ಎರಡು ತೋಟಗಳ ನಡುವೆ ಮಳೆಗಾಲದಲ್ಲಿ ನೀರು ಹರಿಯುವ ಕಾಲುವೆಯಿದೆ. ರಘುಪತಿ ಭಟ್ಟ ಅವರು ಆ ಕಾಲುವೆ ನೀರನ್ನು ಬೇರೆ ಕಡೆ ತಿರುಗಿಸಿದ್ದಾರೆ. ಕಾಲುವೆ ಮೂಲಕ ಹರಿಯುವ ನೀರನ್ನು ರಘುಪತಿ ಭಟ್ಟ ಅವರು ತಿರುಮಲೇಶ್ವರ ಅವರ ತೋಟದ ಕಡೆ ಬಿಟ್ಟಿದ್ದು ಅವರಿಬ್ಬರ ನಡುವಿನ ವೈಮನಸ್ಸಿಗೆ ಕಾರಣವಾಗಿದೆ. ಕಾಲುವೆ ನೀರು ತೋಟಕ್ಕೆ ನುಗ್ಗಿದ ಕಾರಣ ತಿರುಮಲೇಶ್ವರ ಅವರ ಅಡಿಕೆ ಫಸಲಿಗೆ ಹಾನಿಯಾಗಿದೆ. ಆ ಹಾನಿ ತಪ್ಪಿಸುವುದಕ್ಕಾಗಿ ಅವರು ನೀರಿನಿಂದ ಹೊಂಡ ಬಿದ್ದ ಪ್ರದೇಶಕ್ಕೆ ಮಣ್ಣು ತುಂಬಿಸುವ ಕೆಲಸ ಮಾಡಿದ್ದಾರೆ. ಆದರೆ, ಇದನ್ನು ಸಹಿಸದ ರಘುಪತಿ ಭಟ್ಟರು ಜನವರಿ 1ರ ಸಂಜೆ ಅಲ್ಲಿಗೆ ಬಂದು `ಕಾಲುವೆ ಏಕೆ ಮುಚ್ಚುವೆ?’ ಎಂದು ಪ್ರಶ್ನಿಸಿದ್ದಾರೆ. `ತಮ್ಮ ತೋಟಕ್ಕೆ ಹಾನಿ ಆಗುತ್ತಿದೆ’ ಎಂದು ತಿರುಮಲೇಶ್ವರ ಹೆಗಡೆ ಅವರು ಹೇಳಿದ್ದಾರೆ. ಈ ವೇಳೆ ಅವರಿಬ್ಬರ ನಡುವೆ ಮಾತಿನ ಚಕಾಮಕಿ ನಡೆದಿದ್ದು, ಅದೇ ಹೊಡೆದಾಟದ ಸ್ವರೂಪಪಡೆದಿದೆ. ಈ ವೇಳೆ ರಘುಪತಿ ಭಟ್ಟರು ತಿರುಮಲೇಶ್ವರ ಹೆಗಡೆ ಅವರಿಗೆ ಹೊಡೆದಿದ್ದಾರೆ. ಆ ನೋವು ಸಹಿಸದ ತಿರುಮಲೇಶ್ವರ ಹೆಗಡೆ ಅವರು ನ್ಯಾಯಕ್ಕಾಗಿ ಪೊಲೀಸರ ಮೊರೆ ಹೋಗಿದ್ದಾರೆ. `ದ್ವೇಷ ಬೆಳೆಯುವ ಮುನ್ನ ಬಗೆಹರಿಸಿಕೊಳ್ಳುವುದು ಒಳಿತು’ - [ಎಲ್ಲಿ ಹೋದರು ಅವರಿಬ್ಬರು?](https://mobiletime.in/2026/01/where-did-they-both-go/): ಹಳಿಯಾಳದ ಯುವತಿಯರಿಬ್ಬರು ಈಚೆಗೆ ಕಾಣೆಯಾಗಿದ್ದಾರೆ. ಎಲ್ಲಾ ಕಡೆ ಹುಡುಕಿದರೂ ಅವರ ಸುಳಿವು ಸಿಗುತ್ತಿಲ್ಲ. ಹಳಿಯಾಳದ ಗುಂಡೋಳಿಯ ಸೋನಾಲ ನಾರಾಯಣ ಸಾಳುಂಕೆ (25) ಅವರು 2025ರ ನವೆಂಬರ್ 7ರಂದು ಕಾಣೆ ಆಗಿದ್ದಾರೆ. ಮಧ್ಯಾಹ್ನ 1 ಗಂಟೆಯವರೆಗೆ ಮನೆಯಲ್ಲಿದ್ದ ಅವರು ಅದಾದ ನಂತರ ಯಾರಿಗೂ ಹೇಳದೇ ಮನೆ ಬಿಟ್ಟು ಹೋಗಿದ್ದಾರೆ. ಸಂಬoಧಿಕರ ಮನೆಯಲ್ಲಿ ಹುಡುಕಿದರೂ ಅವರು ಸಿಕ್ಕಿಲ್ಲ. ಹಳಿಯಾಳದ ಮುಗದಕೊಪ್ಪದ ಸ್ಪೂರ್ತಿ ಹನಮಂತ ಜಾಲಗಾರ(19) ಅವರು ಸಹ ದಿಢೀರ್ ಆಗಿ ನಾಪತ್ತೆ ಆಗಿದ್ದಾರೆ. 2025ರ ಡಿಸೆಂಬರ್ 27ರಂದು ಅವರು ಕಂಪ್ಯುಟರ್ ಕ್ಲಾಸಿಗೆ ಹೋಗಿ ಬರುವುದಾಗಿ ಹೊರಟಿದ್ದು, ಅದಾದ ನಂತರ ಮನೆಗೆ ಮರಳಿಲ್ಲ. ಈ ಇಬ್ಬರಿಗಾಗಿ ಪೊಲೀಸರು ಹುಡುಕಾಡುತ್ತಿದ್ದಾರೆ. ಫೋಟೋದಲ್ಲಿರುವವರು ಕಂಡರೆ ಇಲ್ಲಿ ಫೋನ್ ಮಾಡಿ: 9480805265 - [ಇ-ಸ್ಟಾಂಪಿoಗ್: ತಜ್ಞರಿಂದ ತರಬೇತಿ](https://mobiletime.in/2026/01/e-stampiog-training-from-experts/): ಇ-ಸ್ಟಾಂಪಿoಗ್ ತಂತ್ರಾoಶ ಬಳಕೆ ವಿಧಾನಗಳ ಬಗ್ಗೆ ಉಪನೋಂದಣಾಧಿಕಾರಿ ಕಚೇರಿ ಸಿಬ್ಬಂದಿ, ವಕೀಲರು ಹಾಗೂ ದಸ್ತಾವೇಜು ಬರಹಗಾರರಿಗೆ ಸರ್ಕಾರ ತರಬೇತಿ ನೀಡುತ್ತಿದೆ. ಯಲ್ಲಾಪುರದ ಉಪನೋಂದಣಾಧಿಕಾರಿ ಕಚೇರಿಯಲ್ಲಿಯೂ ಈ ತರಬೇತಿ ನಡೆದಿದೆ. ಕಾವೇರಿ ತಂತ್ರಾoಶ ಬಳಕೆ ವಿಧಾನದ ಬಗ್ಗೆ ತಜ್ಞ ಹಜರತ್ ಅಲಿ ಅವರು ಮಾಹಿತಿ ನೀಡಿದ್ದಾರೆ. ಜೊತೆಗೆ ಡಿಜಿಟಲ್ ಇ-ಸ್ಟಾಂಪ್ ಕುರಿತು ಅವರು ಅರಿವು ಮೂಡಿಸಿದ್ದಾರೆ. ವಕೀಲರಾದ ಪ್ರಕಾಶ ಭಟ್ಟ, ಎನ್ ಕೆ ಭಾಗ್ವತ್ ಹಾಗೂ ಸುಭಾಶ ಭಟ್ಟ ಅವರು ಈ ತರಬೇತಿಪಡೆದಿದ್ದಾರೆ. ಕೆಲ ಸಾರ್ವಜನಿಕರು ಸಹ ಈ ತರಬೇತಿಯಲ್ಲಿ ಭಾಗವಹಿಸಿದ್ದು, ತಮ್ಮ ಜ್ಞಾನ ವೃದ್ಧಿಸಿಕೊಂಡಿದ್ದಾರೆ. ಕಚೇರಿ ಸಿಬ್ಬಂದಿ ಹಣವಂತಕುಮಾರ ಸುರೆಬಾನ್ ಹಾಗೂ ಸುವರ್ಣ ಕಾಮತ್ ಅವರು ತಂತ್ರಾoಶ ಅಳವಡಿಕೆ ವಿಧಾನಗಳ ಬಗ್ಗೆ ಮಾಹಿತಿಪಡೆದಿದ್ದಾರೆ. ಅಗತ್ಯ ದಾಖಲೆಗಳ ಕ್ರೂಢೀಕರಣ, ದಾಖಲೆಗಳನ್ನು ಅಪ್ಲೋಡ್ ಮಾಡುವಿಕೆ, ಹಣ ಪಾವತಿ ಹಾಗೂ ಇನ್ನಿತರ ವಿಷಯಗಳ ವಿಚಾರವಾಗಿ ತಜ್ಞರು ಮಾತನಾಡಿದ್ದಾರೆ. ಮುದ್ರಾಂಕ ಇಲಾಖೆಯೂ ಈ ತರಬೇತಿ ಕಾರ್ಯಾಗಾರ ಆಯೋಜಿಸಿದ್ದು, ಡಿಜಿಟಲ್ ಇ-ಸ್ಟಾಂಪ್ ಪ್ರಯೋಜನಗಳ ಬಗ್ಗೆ ವಿವರಿಸಿದ್ದಾರೆ. ತಂತ್ರಾoಶದಲ್ಲಿ ಎದುರಾಗುವ ಸಮಸ್ಯೆ ಹಾಗೂ ಅದನ್ನು ಬಗೆಹರಿಸುವ ವಿಧಾನಗಳ ಬಗ್ಗೆ ತರಬೇತಿ ಕಾರ್ಯಾಗಾರದಲ್ಲಿ ವಿವರಿಸಲಾಗಿದೆ. ಉಪನೋಂದಣಾಧಿಕಾರಿ ಕಲಾವತಿ ಬೋರ್ಗಾಂವ್ ಇದ್ದರು. - [ಅರಣ್ಯಾಧಿಕಾರಿ ಕೊಂದವನಿಗೆ 10 ವರ್ಷ ಜೈಲು!](https://mobiletime.in/2026/01/man-who-killed-forest-officer-gets-10-years-in-prison/): ACF ಮಧನ ನಾಯಕ ಅವರನ್ನು ಕಲ್ಲಿನಿಂದ ಹೊಡೆದು ಸಾಯಿಸಿದ ಪ್ರಶಾಂತ ಲಮಾಣಿಗೆ 10 ವರ್ಷ ಜೈಲು ಹಾಗೂ 11 ಸಾವಿರ ರೂ ದಂಡ ವಿಧಿಸಿ ನ್ಯಾಯಾಲಯ ಆದೇಶಿಸಿದೆ. 2012ರ ಅವಧಿಯಲ್ಲಿ ಮಧನ ನಾಯಕ ಅವರು ದಾಂಡೇಲಿಯಲ್ಲಿ ಅರಣ್ಯಾಧಿಕಾರಿಯಾಗಿ ಕೆಲಸ ನಿರ್ವಹಿಸುತ್ತಿದ್ದರು. ಅವರು ಕುಟುಂಬಸಹಿತ ದಾಂಡೇಲಪ್ಪ ದೇಗುಲಕ್ಕೆ ಹೋಗಿದ್ದು, ಆ ಅವಧಿಯಲ್ಲಿ ಒಂದಷ್ಟು ಜನ ಮೊಸಳೆಗೆ ಮಾಂಸ ಎಸೆಯುತ್ತಿರುವುದನ್ನು ನೋಡಿದ್ದರು. ಮೊಸಳೆಗೆ ಮಾಂಸ ಎಸೆಯದಂತೆ ಮಧನ ನಾಯಕ ಅವರು ಪ್ರವಾಸಿಗರಿಗೆ ತಡೆದಿದ್ದು, ಇದನ್ನು ಸಹಿಸದ ಪ್ರವಾಸಿಗರು ಮಧನ ನಾಯಕ ಹಾಗೂ ಅವರ ಕುಟುಂಬದ ಮೇಲೆ ದಾಳಿ ಮಾಡಿದ್ದರು. ದಾಳಿ ನಂತರ ಮಧನ ನಾಯಕ ಅವರು ಗಂಭೀರ ಪ್ರಮಾಣದಲ್ಲಿ ಗಾಯಗೊಂಡು ಆಸ್ಪತ್ರೆಗೆ ಸೇರಿದ್ದರು. ಆಕ್ರಮಣಕಾರರ ಬೆದರಿಕೆಗೆ ಹೆದರಿದ ಮಧನ ನಾಯಕ ಅವರು ಶೌಚಾಲಯದಲ್ಲಿ ಬಿದ್ದು ಪೆಟ್ಟು ಮಾಡಿಕೊಂಡಿರುವ ಬಗ್ಗೆ ಹೇಳಿಕೆ ನೀಡಿದ್ದರು. ಚಿಕಿತ್ಸೆ ಫಲಕಾರಿಯಾಗದೇ ಮಧನ ನಾಯಕ ಅವರು ಸಾವನಪ್ಪಿದ್ದರು. ಅದಾಗಿಯೂ, ವಿವಿಧ ಸಾಕ್ಷಿಗಳನ್ನು ಪರಿಗಣಿಸಿ ನ್ಯಾಯಾಲಯ ಕಲ್ಲು ತೂರಾಟ ನಡೆಸಿದ ಪ್ರಶಾಂತ ಲಮಾಣಿಗೆ ಶಿಕ್ಷೆ ಪ್ರಕಟಿಸಿದೆ. ಉಳಿದ ಆರೋಪಿತರಿಗೆ ದಂಡ ವಿಧಿಸಿದೆ. 2012ರ ಮೇ 6ರಂದು ಆನಂದ ರೂಪಸಿಂಗ ನಾಯಕ, ಸುರೇಶ ಶಂಕ್ರಪ್ಪ ನಾಯಕ, ಶೈಲಜಾ ಅರವಿಂದ ಬಾಬು ಚೌಹಾಣ, ಅರವಿಂದ ಬಾಬು ಕೃಷ್ಣಪ್ಪ ಚೌಹಾಣ, ಧನಬಾಯಿ ರೂಪಸಿಂಗ್ ನಾಯಕ್, ಕೆ ಮಾದುರಿ ಜಯಸಿಂಗ್ ರಾತೋಡ್, ರಾಧಾ ಸುರೇಶ ನಾಯಕ ಎಂಬಾತರು ದಾಂಡೇಲಿಗೆ ಬಂದಿದ್ದರು. ಅವರೆಲ್ಲರೂ ದಾಂಡೇಲಪ್ಪ ದೇವಸ್ಥಾನಕ್ಕೆ ಪೂಜೆ ಸಲ್ಲಿಸಿದ್ದು, ಕಾಳಿ ನದಿ ಅಂಚಿನ ಶಿವರಾಮ ಅಪ್ಪಾಜಿ ಪಾಟೀಲ ಅವರ ಶೆಡ್ಡಿನಲ್ಲಿ ಅಡುಗೆ ತಯಾರಿಸಿದ್ದರು. ಅಲ್ಲಿ ಊಟ ಮಾಡಿದ ನಂತರ ಮಾಂಸದ ತುಂಡುಗಳನ್ನು ಅಲ್ಲಿದ್ದ ಮೊಸಳೆಗಳಿಗೆ ಆಹಾರವಾಗಿ ನೀಡುತ್ತಿದ್ದರು. ಅದೇ ವೇಳೆ ಎಸಿಎಫ್ ಮಧನ ನಾಯಕ ಅವರು ಪತ್ನಿ ಸುಮತಿ ನಾಯಕ್ ಹಾಗೂ ಮಕ್ಕಳಾದ ಶಿಶಿರ ನಾಯಕ, ಮೇಘ ನಾಯಕ ಅವರ ಜೊತೆ ಅಲ್ಲಿಗೆ ಬಂದಿದ್ದು, ಮೊಸಳೆಗೆ ಆಹಾರ ನೀಡುವುದನ್ನು ತಡೆದರು. ಈ ವೇಳೆ ಶಿಶಿರ ನಾಯಕ ಅವರು ಫೋಟೋ ತೆಗೆದಿದ್ದು, ಆರೋಪಿತರು ಇದರಿಂದ ರೊಚ್ಚಿಗೆದ್ದರು. ಆನಂದ ನಾಯಕ ಹಾಗೂ ಶೈಲಜಾ ನಾಯಕ ಸೇರಿ ಶಿಶಿರ ನಾಯಕ ಅವರನ್ನೇ ಮೊಸಳೆಗೆ ಆಹಾರವನ್ನಾಗಿ ನೀಡುವ ಬಗ್ಗೆ ಮಾತನಾಡಿದರು. ಕಾರಿನಲ್ಲಿ ಕೂರಲು ಹೊರಟ ಮಧನ ನಾಯಕ ಅವರನ್ನು ಎಳೆದು ತಂದು ಅವರ ಮೇಲೆ ಆಕ್ರಮಣ ನಡೆಸಿದರು. ಅವರನ್ನು ಬಿಡಿಸಲು ಹೋದ ಪತ್ನಿ ಸುಮತಿ ನಾಯಕ್ ಹಾಗೂ ಮೇಘಾ ನಾಯಕ ಅವರ ಮೇಲೆಯೂ ಧನಬಾಯಿ ನಾಯಕ ದಾಳಿ ಮಾಡಿದರು. ಅವರಿಬ್ಬರ ಜುಟ್ಟು ಹಿಡಿದು ಎಳೆದಾಡಿದ್ದರು. ಸುರೇಶ ನಾಯಕ ಅವರು ಮೇಘಾ ನಾಯಕ ಅವರನ್ನು ಹಿಡಿದು ಥಳಿಸಿದ್ದರು. ಅಲ್ಲಿಯೇ ಇದ್ದ ಶಿಶಿರ ನಾಯಕ ಅವರಿಗೆ ಆನಂದ ನಾಯಕ ಎಂಬಾತರು ಕೈ ಮಾಡಿದ್ದರು. ಕೆ ಮಾದುರಿ ಜಯಸಿಂಗ್ ರಾತೋಡ್, ರಾಧಾ ಸುರೇಶ ನಾಯಕ ಸಹ ಹೊಡೆದಾಟಕ್ಕೆ ಕೈ ಜೋಡಿಸಿದ್ದರು. ಈ ಗಲಾಟೆಯಲ್ಲಿ ಪ್ರಶಾಂತ ಲಮಾಣಿ ಹಾಗೂ ಮಲ್ಲಿಕಾರ್ಜುನ ಚೌಹಾಣ್ ಸೇರಿ ಮಧನ ನಾಯಕ ಅವರ ಕಡೆ ಕಲ್ಲು ಬೀಸಿದ್ದರು. ಆ ಕಲ್ಲು ಮಧನ ನಾಯಕ ಅವರ ತಲೆಗೆ ತಾಗಿ ಅವರಿಗೆ ತಲೆ ಒಳಗೆ ಗಂಭೀರ ಪ್ರಮಾಣದಲ್ಲಿ ನೋವಾಗಿತ್ತು. ಈ ಹೊಡೆದಾಟ ಪ್ರಕರಣದಲ್ಲಿ ಆರೋಪಿಯಾಗಿರುವ ಇಬ್ಬರು ಸರ್ಕಾರಿ ನೌಕರರಾಗಿದ್ದು, ಅವರು ಮಧನ ನಾಯಕ ಕುಟುಂಬದವರನ್ನು ಬೆದರಿಸಿದ್ದರು. ಸುಳ್ಳು ದೂರು ನೀಡುವುದಾಗಿ ಹೆದರಿಸಿದ್ದರು. ಹೀಗಾಗಿ ಚಿಕಿತ್ಸೆಗಾಗಿ ಧಾರವಾಡದ ಎಸ್ ಡಿ ಎಂ ಆಸ್ಪತ್ರೆಗೆ ದಾಖಲಾಗಿದ್ದ ಮಧನ ನಾಯಕ ಅವರು `ಶೌಚಾಲಯದಿಂದ ಜಾರಿ ಬಿದ್ದು ನೋವಾಗಿದೆ’ ಎಂದು ಸುಳ್ಳು ಹೇಳಿದ್ದರು. 2012ರ ಡಿಸೆಂಬರ್ 6ರಂದು ಮಧನ ನಾಯ್ಕ ಅವರ ತಲೆಗೆ ಶಸ್ತçಚಿಕಿತ್ಸೆ ನಡೆಯಿತು. ಆದರೆ, ಅದನ್ನು ಅರಗಿಸಿಕೊಳ್ಳಲಾಗದೇ ಮೇ 8ರಂದು ರಾತ್ರಿ ಅವರು ಸಾವನಪ್ಪಿದರು. ಈ ಪ್ರಕರಣ ಸಿಐಡಿ ತನಿಖೆಗೆ ಆದೇಶವಾಗಿದ್ದು, ಡಿವೈಎಸ್ಪಿ ಬಿಬಿ ಅಶೋಕಕುಮಾರ ಅವರು ತನಿಖಾಧಿಕಾರಿ ಆಗಿದ್ದರು. ಹೆಡ್ ಕಾನ್ಸಟೇಬಲ್ ಮಂಜು ಶೆಟ್ಟಿ ಅವರು ಸಾಕ್ಷಿದಾರರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಶಿರಸಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಕಿರಣ ಕಿಣಿ ಅವರು ಯಲ್ಲಾಪುರ ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ನಡೆಸಿದರು. ಸರ್ಕಾರಿ ಅಭಿಯೋಜಕ ರಾಜೇಶ ಮಳಗಿಕರ್ ಅವರು ಪ್ರಕರಣದಲ್ಲಿ ಸುಧೀರ್ಘವಾಗಿ ವಾದ ಮಂಡಿಸಿದರು. ಮಧನ ನಾಯಕ ಅವರ ಪುತ್ರಿ ಮೇಘಾ ನಾಯಕ ಅವರು ಜರ್ಮನಿಯಲ್ಲಿದ್ದು, ನ್ಯಾಯಾಧೀಶರು ವಿಡಿಯೋ ಕಾನ್ಪರೆನ್ಸ ಮೂಲಕ ಅವರ ಹೇಳಿಕೆಪಡೆದರು. 13 ವರ್ಷಗಳ ಕಾಲ ಪ್ರಕರಣದ ವಿಚಾರಣೆ ನಡೆದಿದ್ದು, ಶುಕ್ರವಾರ ತಮ್ಮ ಆದೇಶ ಪ್ರಕಟಿಸಿದರು. ಕಲ್ಲಿನಿಂದ ಹೊಡೆದವರ ಪೈಕಿ ಈಗಾಗಲೇ ಒಬ್ಬರು ಸಾವನಪ್ಪಿದ್ದು, ಬದುಕಿರುವ ಪ್ರಶಾಂತ ಲಮಾಣಿಗೆ 11 ವರ್ಷ ಜೈಲು ಶಿಕ್ಷೆ ಹಾಗೂ 11 ಸಾವಿರ ರೂ ದಂಡ ಪಾವತಿಗೆ ಸೂಚಿಸಿದರು. ಅದರೊಂದಿಗೆ ಸಂತ್ರಸ್ತ ಕುಟುಂಬಕ್ಕೂ 50 ಸಾವಿರ ರೂ ಪರಿಹಾರ ನೀಡಬೇಕು ಎಂದು ಆದೇಶಿಸಿದರು. ಉಳಿದ ಆರೋಪಿತರಿಗೆ ತಲಾ 1 ಸಾವಿರ ರೂ ದಂಡ ವಿಧಿಸಿದರು. ವಾದ ಮಂಡಿಸಿದವರಿಗೆ ಅಭಿನಂದನೆ ಅರಣ್ಯಾಧಿಕಾರಿ ಹತ್ಯೆ ಮಾಡಿದವರಿಗೆ ಶಿಕ್ಷೆ ದೊರೆತದಕ್ಕೆ ಅರಣ್ಯ ಇಲಾಖೆ ಅಧಿಕಾರಿ-ಸಿಬ್ಬಂದಿ ನ್ಯಾಯಾಲಯಕ್ಕೆ ಆಗಮಿಸಿ ಸರ್ಕಾರಿ ಅಭಿಯೋಜಕ ರಾಜೇಶ ಮಳಗಿಕರ್ ಅವರನ್ನು ಸನ್ಮಾನಿಸಿದರು. `ಅರಣ್ಯಾಧಿಕಾರಿಗಳು ಬಹಳ ಎಚ್ಚರಿಕೆಯಿಂದ ಕೆಲಸ ಮಾಡಬೇಕು. ಸವಾಲುಗಳನ್ನು ಮೆಟ್ಟಿ ನಿಂತು ಮುನ್ನಡೆಯಬೇಕು’ ಎಂದು ರಾಜೇಶ ಮಳಗಿಕರ್ ಅವರು ಸಲಹೆ ನೀಡಿದರು. ಮಧನ ನಾಯಕ ಅವರ ಪತ್ನಿ ಸುಮತಿ ನಾಯಕ ಹಾಗೂ ಪುತ್ರ ಶಶೀರ ನಾಯಕ ಸಹ ಸರ್ಕಾರಿ ಅಭಿಯೋಜಕರಿಗೆ ಕೃತಜ್ಞತೆ ಸಲ್ಲಿಸಿ ಭಾವುಕರಾದರು.     - [ವಕೀಲನ ಕೊಂದ ಈತನಿಗೆ ಶಿಕ್ಷೆ ಖಚಿತ!](https://mobiletime.in/2026/01/the-man-who-killed-the-lawyer-is-certain-to-be-punished/): ರಾಜ್ಯವನ್ನೇ ಬೆಚ್ಚಿ ಬೀಳಿಸಿದ್ದ ದಾಂಡೇಲಿಯ ವಕೀಲ ಅಜೀತ ನಾಯ್ಕ ಅವರನ್ನು ಪಾಂಡುರoಗ ಕಾಂಬಳೆ ಅವರು ಕೊಚ್ಚಿ ಕೊಲೆ ಮಾಡಿದ್ದು ಸಾಭೀತಾಗಿದೆ. ಶಿರಸಿಯ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಕಿರಣ ಕಿಣಿ ಅವರು ಯಲ್ಲಾಪುರ ಪೀಠದಿಂದ ತೀರ್ಪು ನೀಡಿದ್ದಾರೆ. ಆರೋಪಿಗೆ ಮರಣ ದಂಡನೆ ಅಥವಾ ಜೀವಾವಧಿ ಜೈಲು ಶಿಕ್ಷೆ ನೀಡಲು ನ್ಯಾಯಾಧೀಶರು ನಿರ್ಧರಿಸಿದ್ದಾರೆ. 2018ರ ಜುಲೈ 27ರಂದು ದಾಂಡೇಲಿ ಅಯ್ಯಂಗಾರ್ ಬೇಕರಿ ಎದುರು ವಕೀಲ ಅಜೀತ ನಾಯ್ಕ ಅವರ ಬರ್ಬರ ಹತ್ಯೆಯಾಗಿತ್ತು. ಪಟೇಲ್ ಸರ್ಕಲ್ ಬದಿಯಿಂದ ದಾಂಡೇಲ್ ಬಸ್ ನಿಲ್ದಾಣ ಬಳಿ ಬರುವ ರಸ್ತೆಯಲ್ಲಿ ಅಜೀತ ನಾಯ್ಕ ಅವರ ಮೇಲೆ ದಾಳಿ ನಡೆದಿತ್ತು. ಭೂ ವಿವಾದದ ಪ್ರಕರಣವೊಂದರಲ್ಲಿ ಅಜೀತ ನಾಯ್ಕ ಅವರು ವಕಾಲತ್ತುವಹಿಸಿದನ್ನು ಪಾಂಡುರoಗ ಕಾಂಬಳೆ ಸಹಿಸಿರಲಿಲ್ಲ. ಹೀಗಾಗಿ ವಿನಾಯಕ ಕರ್ನಿಂಗ್, ಇ ಎಲ್ ಮಂಜುನಾಥ, ನಜೀರ ಅಹ್ಮದ್ ಲಾಲುಸಾಬ್ ಜಮಾಲಿ ಹಾಗೂ ಈಶ್ವರ ಶೆಟ್ಟಿಯಾರ್ ಎಂಬಾತರ ಜೊತೆ ಸೇರಿ ವಕೀಲ ಅಜಿತ ನಾಯ್ಕ ಅವರನ್ನು ಕೊಲೆ ಮಾಡಲು ಪಾಂಡುರoಗ ಕಾಂಬಳೆ ನಿರ್ಧರಿಸಿದ್ದರು. ಆ ದಿನ ನೀಲಿ ಬಣ್ಣದ ಜರ್ಕೀನ್ ಧರಿಸಿ ಅದರೊಳಗೆ ಆಯುಧ ಅಡಗಿಸಿಟ್ಟುಕೊಂಡಿದ್ದ ಪಾಂಡುರoಗ ಕಾಂಬಳೆ, ಅಜಿತ ನಾಯ್ಕ ಅವರು ತಮ್ಮ ಕಚೇರಿಯಿಂದ ಹೊರ ಬರುವುದನ್ನು ಕಾಯುತ್ತಿದ್ದರು. ರಮೇಶ ನಾಯ್ಕ ಹಾಗೂ ಹನುಮಂತ ಕುಂಬಾರ ಅವರ ಜೊತೆ ದಾಂಡೇಲಿ ನಗರದ ಸಂಡೆ ಮಾರ್ಕೇಟ್ ಬಳಿ ಕಚೇರಿಯಿಂದ ಅಜಿತ್ ನಾಯ್ಕ ಅವರು ಹೊರ ಬರುತ್ತಿರುವಾಗಲೇ ಅವರ ಮೇಲೆ ದಾಳಿ ನಡೆಸಿದ್ದರು.  ಅಜೀತ್ ನಾಯ್ಕ ಕೊಲೆ ನಂತರ ಜರ್ಕೀನ್ ಅನ್ನು ಹಾಳಾದ ಕಾರಿನ ಅಡಿ ಹುದುಗಿಸಿ, ಮೀನು ಮಾರುಕಟ್ಟೆ ಬಳಿಯಿದ್ದ ಬೈಕಿನಲ್ಲಿ ಆರೋಪಿ ಪರಾರಿ ಆಗಿದ್ದರು. ಹತ್ಯೆ ನಂತರವೂ ಆರೋಪಿತರು ಜೈಲಿನಲ್ಲಿಯೇ ಕುಳಿತು ಕಾಳಿ ನದಿ ದಂಡೆ ಮೇಲಿರುವ ಜಮೀನನ್ನು ಪ್ರವಾಸೋಧ್ಯಮಿಯೊಬ್ಬರಿಗೆ ಮಾರಾಟಕ್ಕೆ ಯತ್ನಿಸಿದ್ದರು. ಈ ಪ್ರಕರಣದ ಬಗ್ಗೆ ಆಗಿನ ಪಿಐ ಎ ಎ ಮುಜಾವರ್ ತನಿಖೆ ನಡೆಸಿದ್ದರು. ಪಿ ಸಿ ಮಂಜುನಾಥ ಎಚ್ ಶೆಟ್ಟಿ ಸಹಾಯಕ ತನಿಖಾಧಿಕಾರಿಯಾಗಿ ಕೆಲಸ ಮಾಡಿದರು. ನಂತರ ಅವರು ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದು, ಈ ಪ್ರಕರಣ ಸಿಐಡಿ ತನಿಖೆಯವರೆಗೂ ಹೋಗಿತ್ತು. ಪ್ರಕರಣ ನ್ಯಾಯಾಲಯಕ್ಕೆ ಬಂದಾಗ ಸರ್ಕಾರಿ ಅಭಿಯೋಜಕ ರಾಜೇಶ ಮಳಗಿಕರ್ ಅವರು ಪ್ರಕರಣದ ವಾದ ಶುರು ಮಾಡಿದರು. ಕೊಲೆ ಕುರಿತಾಗಿ ನಡೆಸಿದ ಸಂಚು, ಈ ಹಿಂದೆಯೂ ಆರೋಪಿತರು ವಕೀಲರ ಜೊತೆ ನಡೆಸಿದ ವಾಗ್ವಾದ, ಕೊಲೆಗೆ ಇದ್ದ ಕಾರಣದ ಬಗ್ಗೆ ರಾಜೇಶ ಮಳಗಿಕರ್ ಅವರು ನ್ಯಾಯಾಲಯಕ್ಕೆ ವಿವರಿಸಿದರು. ಆದರೆ, ಅಜೀತ ನಾಯ್ಕ ಅವರ ಕೊಲೆ ಪ್ರಕರಣದಲ್ಲಿ ಸಾಕ್ಷಿ ಹೇಳಲು ಸಾಕ್ಷಿದಾರರು ಹಿಂದೇಟು ಹಾಕಿದ್ದರು. ಕೊಲೆ ಆಗಿರುವುದನ್ನು ಕಣ್ಣಾರೆ ಕಂಡವರಿದ್ದರೂ ಅವರು ನ್ಯಾಯಾಲಯದ ಮುಂದೆ ಬರಲಿಲ್ಲ. ಅದಾಗಿಯೂ, ವಕೀಲರ ಮೇಲೆ ನಡೆದ ದಾಳಿಯನ್ನು ಸರ್ಕಾರಿ ಅಭಿಯೋಜಕ ರಾಜೇಶ ಮಳಗಿಕರ್ ಅವರು ಸವಾಲಾಗಿ ಸ್ವೀಕರಿಸಿದ್ದು, ಸಾಂದರ್ಭಿಕ ಸಾಕ್ಷಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದರು. `ವಕೀಲರ ಮೇಲೆ ದಾಳಿ ಮಾಡಿ ಅವರ ಕೊಲೆಗೆ ಕಾರಣರಾದ ಆರೋಪಿಗೆ ಮರಣ ದಂಡನೆ ಶಿಕ್ಷೆ ವಿಧಿಸಬೇಕು’ ಎಂದು ರಾಜೇಶ ಮಳಗಿಕರ್ ಅವರು ನ್ಯಾಯಾಲಯಕ್ಕೆ ಮನವಿ ಮಾಡಿದರು. ಈ ವಾದ ಆಲಿಸಿದ ನ್ಯಾಯಾಲಯ ಪ್ರಮುಖ ಆರೋಪಿ ಪಾಂಡುರAಗ ಮಾರುತಿ ಕಾಂಬಳೆ ವಿರುದ್ಧ ಆರೋಪ ಸಾಬೀತಾಗಿದೆ ಎಂದು ಘೋಷಿಸಿತು. ಶಿಕ್ಷೆಯ ಪ್ರಮಾಣವನ್ನು ಜನವರಿ 13ರಂದು ಪ್ರಕಟಿಸಲು ನಿರ್ಧರಿಸಿತು. ಉಳಿದ ನಾಲ್ವರು ಆರೋಪಿಗಳನ್ನು ಸಾಕ್ಷಿ ಕೊರತೆಯಿಂದ ಖುಲಾಸೆಗೊಳಿಸಿತು. ಪೊಲೀಸರಿಂದ ಅಭಿನಂದನೆ ಸಮರ್ಥವಾಗಿ ವಾದ ಮಂಡಿಸಿ ಕೊಲೆಗಾರನಿಗೆ ಶಿಕ್ಷೆ ವಿಧಿಸಿದ ರಾಜೇಶ ಮಳಗಿಕರ್ ಅವರಿಗೆ ದಾಂಡೇಲಿ ಪೊಲೀಸರು ಅಭಿನಂದಿಸಿದರು. ಶಾಲು ಹೊದೆಸಿ ಸನ್ಮಾನಿಸಿದರು. ವಕೀಲರ ಮೇಲೆ ದಾಳಿನಡೆಸಿ ಅವರ ಹತ್ಯೆಗೆ ಕಾರಣರಾದವನಿಗೆ ಶಿಕ್ಷೆಯಾಗುವಂತೆ ಮಾಡಿದ ಸರ್ಕಾರಿ ಅಭಿಯೋಜಕ ರಾಜೇಶ ಮಳಗಿಕರ್ ಅವರನ್ನು ವಕೀಲರ ಸಂಘದವರು ಅಭಿನಂದಿಸಿದರು. `ಈ ಪ್ರಕರಣದಲ್ಲಿ ಉಳಿದ ನಾಲ್ವರು ಆರೋಪಿತರಿಗೂ ಶಿಕ್ಷೆ ಆಗಬೇಕಿತ್ತು. ಈ ಬಗ್ಗೆ ಸರ್ಕಾರಕ್ಕೆ ಮೇಲ್ಮನವಿ ಸಲ್ಲಿಸುವದಕ್ಕೆ ಪತ್ರ ಬರೆಯಲಾಗುತ್ತದೆ’ ಎಂದು ರಾಜೇಶ ಮಳಗಿಕರ್ ಅವರು ಮಾಹಿತಿ ನೀಡಿದರು. - [ಯಲ್ಲಾಪುರ: ಎಲ್ಲಾ ಕಡೆ ಅಕ್ರಮ ಮರಳು ಗುಡ್ಡೆ!](https://mobiletime.in/2026/01/yallapur-illegal-sand-hill-everywhere/): ಉತ್ತರ ಕನ್ನಡ ಜಿಲ್ಲೆಯ ಎಲ್ಲಾ ಕಡೆ ಅಧಿಕಾರಿಗಳು ಅಕ್ರಮ ಮರಳು ಸಾಗಾಟ ಲಾರಿಗಳ ಬೆನ್ನು ಬಿದ್ದಿದ್ದಾರೆ. ಪೊಲೀಸ್, ಕಂದಾಯ ಹಾಗೂ ಗಣಿ ಇಲಾಖೆ ಅಧಿಕಾರಿಗಳಿಗೆ ಅಕ್ರಮ ಮರಳುಗಾರಿಕೆ ತಡೆಯುವ ಅಧಿಕಾರವಿದ್ದರೂ ಯಲ್ಲಾಪುರದಲ್ಲಿ ಮಾತ್ರ ಈ ವರ್ಷ ಒಂದೂ ಲಾರಿ ಸಿಕ್ಕಿ ಬಿದ್ದಿಲ್ಲ! ಹುಬ್ಬಳ್ಳಿ-ಅಂಕೋಲಾ ಹೆದ್ದಾರಿ ನವೀಕರಣ ಕಾರ್ಯ ನಡೆಯುತ್ತಿದ್ದು, ಕುಮಟಾ-ಹೊನ್ನಾವರ ಭಾಗದಿಂದ ಅಕ್ರಮವಾಗಿ ಬರುವ ಮರಳು ಲಾರಿಗಳು ಹೆದ್ದಾರಿಯನ್ನು ಹದಗೆಡಿಸುತ್ತಿವೆ. ಅತಿಭಾರ ಹೊತ್ತು ಸಾಗುವ ಅಕ್ರಮ ಮರಳುಗಾರಿಕೆ ಲಾರಿಗಳು ಪಟ್ಟಣ ಹಾಗೂ ಗ್ರಾಮೀಣ ರಸ್ತೆಗಳಿಗೂ ಮಾರಕವಾಗಿದೆ. ಪಟ್ಟಣದಲ್ಲಿ ಎಲ್ಲೆಂದರಲ್ಲಿ ಮರಳು ಗುಡ್ಡೆಗಳು ಕಾಣಿಸುತ್ತಿವೆ. ಸದ್ಯ ಮರಳುಕಾರಿಕೆಗೆ ಅನುಮತಿ ಇಲ್ಲದ ಕಾರಣ ದಂಧೆಕೋರರಲು ಅಕ್ರಮ ಮರಳುಗಾರಿಕೆಯ ದಾರಿ ಹಿಡಿದಿದ್ದು, ನಸುಕಿನ ನಿದ್ದೆಯಲ್ಲಿರುವ ಅಧಿಕಾರಿಗಳು ಅಕ್ರಮದ ಬಗ್ಗೆ ಅರಿವಿದ್ದರೂ ಅದನ್ನು ಪ್ರಶ್ನಿಸುತ್ತಿಲ್ಲ. ಪರಿಸರಕ್ಕೆ ಹಾನಿ ಆಗುವ ರೀತಿ ಮರಳುಗಾರಿಕೆ ಮಾಡಲಾಗುತ್ತದೆ. ಜನ ಜೀವನಕ್ಕೆ ತೊಂದರೆ ಆಗುವ ರೀತಿ ಆ ಮರಳನ್ನು ಸಾಗಿಸಲಾಗುತ್ತಿದೆ. ಅದಾದ ನಂತರವೂ ಸಾರ್ವಜನಿಕ ಸಂಚಾರಕ್ಕೆ ಅಡ್ಡಿ ಆಗುವ ರೀತಿ ಮರಳು ದಾಸ್ತಾನು ಮಾಡಲಾಗುತ್ತಿದೆ. ಈ ಎಲ್ಲಾ ವಿಷಯಗಳ ಬಗ್ಗೆ ಅರಿವಿದ್ದರೂ ಅಕ್ರಮ ದಂಧೆಕೋರರ ವಿರುದ್ಧ ಕ್ರಮ ಆಗುತ್ತಿಲ್ಲ. ಕಾರವಾರ, ಅಂಕೋಲಾ, ಕುಮಟಾ, ಶಿರಸಿ ಸೇರಿ ಬೇರೆ ಬೇರೆ ಪ್ರದೇಶದಲ್ಲಿ ಮರಳು ಲಾರಿಗಳನ್ನು ಪೊಲೀಸರು ತಡೆದಿದ್ದಾರೆ. ಆದರೆ, ರಾಜಾರೋಷವಾಗಿ ಮರಳು ಬಂದರೂ ಯಲ್ಲಾಪುರದಲ್ಲಿ ಅದನ್ನು ಹಿಡಿಯುವವರಿಲ್ಲ. ಯಲ್ಲಾಪುರದ ಕೆಲ ಲಾರಿ ಮಾಲಕರ ಜೊತೆ ಬೇರೆ ಬೇರೆ ಭಾಗದವರು ಸಹ ಈ ದಂಧೆಯಲ್ಲಿ ತೊಡಗಿದ್ದು, ಅಧಿಕಾರಿಗಳ ಹೆಸರು ಹೇಳಿ ಅವರು ದುಡ್ಡು ಮಾಡುತ್ತಿದ್ದಾರೆ. ಸರಿ ಸುಮಾರು 5 ಸಾವಿರ ರೂ ವೆಚ್ಚದಲ್ಲಿ ಅಕ್ರಮ ಮರಳು ಲಾರಿಗೆ ಭರ್ತಿಯಾಗುತ್ತದೆ. ಚಾಲಕರ ವೇತನ, ಭತ್ಯೆ ಸೇರಿ ಸುಮಾರು 10 ಸಾವಿರ ರೂ ಸಾಗಾಣಿಕಾ ವೆಚ್ಚ ಬರುತ್ತದೆ. ಅದಾಗಿಯೂ ದಂಧೆಕೋರರು 30ರಿಂದ 35 ಸಾವಿರ ರೂ ವಸೂಲಿ ಮಾಡುತ್ತಿದ್ದು, ಪ್ರಶ್ನಿಸಿದರೆ `ಅವರಿಗೆ ಕೊಡಬೇಕು.. ಇವರಿಗೆ ಕೊಡಬೇಕು’ ಎನ್ನುತ್ತಿದ್ದಾರೆ. `ಅಧಿಕಾರಿಗಳಿಗೆ ಕೊಡುವುದಕ್ಕಾಗಿಯೇ ಪ್ರತಿ ತಿಂಗಳು 1.70 ಲಕ್ಷ ರೂ ಖರ್ಚಾಗುತ್ತಿದೆ. 35 ಸಾವಿರ ರೂ ವಸೂಲಿ ಮಾಡಿದರೂ ನಮಗೆ ಏನೂ ಉಳಿಯುತ್ತಿಲ್ಲ’ ಎಂಬುದು ಮರಳು ದಂಧೆಕೋರರು ಗ್ರಾಹಕರ ಬಳಿ ಹೇಳುವ ಮಾತು. ಅಕ್ರಮ ಮರಳು ಲಾರಿ ಸಾಗಾಟದಿಂದ ರಸ್ತೆ ಹಾಳಾಗುತ್ತಿರುವ ಬಗ್ಗೆ ಸಾರ್ವಜನಿಕರು ದೂರಿದ್ದಾರೆ. ಪಟ್ಟಣದ ಎಲ್ಲಡೆ ರಸ್ತೆ ಮೇಲೆ ರಾಶಿ ರಾಶಿ ಮರಳು ಬಿದ್ದರೂ ಅದರ ವಿರುದ್ಧ ಕ್ರಮಜರುಗಿಸುವವರಿಲ್ಲ ಎಂದು ಅಸಮಧಾನವ್ಯಕ್ತಪಡಿಸುತ್ತಿದ್ದಾರೆ. ಅಪಘಾತಕ್ಕೆ ಆಹ್ವಾನ ನೀಡುವ ಹಾಗೇ ಮರಳು ಲಾರಿಗಳು ಸಂಚರಿಸುತ್ತಿದ್ದರೂ ಅದನ್ನು ತಡೆಯುವ ಧೈರ್ಯ ಯಾರಿಗೂ ಇಲ್ಲವೇ? ಎಂದು ಜನ ಪ್ರಶ್ನಿಸುತ್ತಿದ್ದಾರೆ. ಸರ್ಕಾರಿ ಅಧಿಕಾರಿಗಳ ಹೆಸರು ಹೇಳಿ ಗಣಿದಣಿಗಳು ದುಡ್ಡು ಮಾಡುತ್ತಿದ್ದರೂ ಅಧಿಕಾರಿಗಳು ಮಾತ್ರ ಮೌನವಾಗಿದ್ದಾರೆ. - [ಕೋರ್ಟಿನ ಮೇಲೆಯೂ ಕಳ್ಳರ ಕಣ್ಣು!](https://mobiletime.in/2026/01/thieves-eyes-are-on-the-court-too/): ಕಾರವಾರ ಕೋರ್ಟ ಆವರಣದಲ್ಲಿಯೇ ಕಳ್ಳತನ ನಡೆದಿದೆ. ಅಲ್ಲಿದ್ದ ಬ್ಯಾಟರಿಯನ್ನು ಕಳ್ಳರು ಅಪಹರಿಸಿದ್ದಾರೆ. ಕಾರವಾರದ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ತುರ್ತು ಅಗತ್ಯಕ್ಕೆ ಅನುಗುಣವಾಗಿ ಜನರೇಟರ್ ಅಳವಡಿಸಲಾಗಿದೆ. ಆ ಜನರೇಟರ್ 17 ಸಾವಿರ ರೂ ಮೌಲ್ಯದ ಬ್ಯಾಟರಿಯನ್ನು ಹೊಂದಿದ್ದು, ಆ ಬ್ಯಾಟರಿಯೇ ಇದೀಗ ಕಾಣೆಯಾಗಿದೆ. ಜನವರಿ 6ರ ರಾತ್ರಿಯವರೆಗೂ ಅಲ್ಲಿನ ಸಿಬ್ಬಂದಿ ಬ್ಯಾಟರಿ ನೋಡಿದ್ದಾರೆ. ಜನವರಿ 7ರಂದು ನೋಡಿದಾಗ ಅಲ್ಲಿ ಬ್ಯಾಟರಿ ಕಾಣಲಿಲ್ಲ. ಕೋರ್ಟ ಆವರಣದ ಎಲ್ಲಾ ಕಡೆ ಹುಡುಕಿದರೂ ಬ್ಯಾಟರಿ ಸಿಕ್ಕಿಲ್ಲ. ಹೀಗಾಗಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಮುಖ್ಯ ಆಡಳಿತಾಧಿಕಾರಿ ರವೀಂದ್ರ ನಾಯ್ಕ ಅವರು ಈ ಬಗ್ಗೆ ವಿಚಾರಿಸಿದ್ದಾರೆ. ಆ ದಿನ ರಾತ್ರಿ ಪಾಳಿಯಲ್ಲಿದ್ದ ಸಿಬ್ಬಂದಿಯನ್ನು ಮಾತನಾಡಿಸಿ ಬ್ಯಾಟರಿ ಬಗ್ಗೆ ಪ್ರಶ್ನಿಸಿದ್ದಾರೆ. ಆದರೆ, ಕಾವಲು ಸಿಬ್ಬಂದಿಗೆ ಸಹ ಅರಿವಿಗೆ ಬಾರದ ಹಾಗೇ ಕಳ್ಳರು ಬ್ಯಾಟರಿ ಕದ್ದಿದ್ದಾರೆ. ಈ ಎಲ್ಲಾ ಹಿನ್ನಲೆ ರವೀಂದ್ರ ನಾಯ್ಕ ಅವರು ಬ್ಯಾಟರಿ ಪತ್ತೆಗಾಗಿ ಪೊಲೀಸರ ಮೊರೆ ಹೋಗಿದ್ದಾರೆ. ಕಾರವಾರ ಶಹರ ಠಾಣೆ ಪೊಲೀಸರು ಬ್ಯಾಟರಿ ಕಳ್ಳರ ಹುಡುಕಾಟ ಶುರು ಮಾಡಿದ್ದಾರೆ. - [ಮ್ಯಾನೇಜರ್ ಸಾವಿನಲ್ಲಿಯೂ ಅನುಮಾನ!](https://mobiletime.in/2026/01/suspicion-also-exists-in-the-managers-death/): ಶಿರಸಿಯ ರಾಮರಾಜ ಬಟ್ಟೆ ಅಂಗಡಿಯಲ್ಲಿ ಅಸಿಸ್ಟೆಂಟ್ ಮ್ಯಾನೇಜರ್ ಆಗಿದ್ದ ಮುಖೇಶ ಶೆಟ್ಟಿ ಅವರು ಅನುಮಾನಾಸ್ಪದ ರೀತಿಯಲ್ಲಿ ಸಾವನಪ್ಪಿದ್ದಾರೆ. ರಾತ್ರಿ 11.30ರವರೆಗೂ ಸ್ನೇಹಿತರ ಜೊತೆಯಿರುವುದಾಗಿ ಹೇಳಿದ್ದ ಮುಖೇಶ ಶೆಟ್ಟಿ ಮರುದಿನ ಶವವಾಗಿದ್ದು, ಸಾವಿನ ಸಮಗ್ರ ತನಿಖೆಗಾಗಿ ಅವರ ಕುಟುಂಬದವರು ಒತ್ತಾಯಿಸಿದ್ದಾರೆ. ಜನವರಿ 6ರಂದು ಸಂಜೆ ಮುಖೇಶ ಯಶ್ವಂತ ಶೆಟ್ಟಿ (29) ಅವರು ಮನೆಯಿಂದ ಹೊರ ಹೋಗಿದ್ದರು. `ಸ್ವಲ್ಪ ಕೆಲಸ ಇದೆ. ಹೋಗಿ ಬರುವೆ’ ಎಂದು ಅಮ್ಮನ ಬಳಿ ಹೇಳಿದ್ದರು. ಕತ್ತಲು ಕವಿದರೂ ಮಗ ಬಾರದ ಕಾರಣ ಅವರ ಅಮ್ಮ ಜಯಶ್ರೀ ಶೆಟ್ಟಿ ಅವರು ಫೋನ್ ಮಾಡಿದ್ದರು. ಆಗ, `ಸ್ನೇಹಿತರ ಜೊತೆ ಇದ್ದೇನೆ. ಆಮೇಲೆ ಬರುತ್ತೇನೆ’ ಎಂದಿದ್ದರು. ಅನೇಕ ಬಾರಿ ಫೋನ್ ಮಾಡಿದರೂ ಅದೇ ಮಾತನ್ನು ಪುನರುಚ್ಚರಿಸಿದ್ದರು. ಆ ದಿನ ರಾತ್ರಿ 11.30ಕ್ಕೆ ಜಯಶ್ರೀ ಶೆಟ್ಟಿ ಅವರು ಕೊನೆಯದಾಗಿ ಮಗನ ಬಳಿ ಫೋನಿನಲ್ಲಿ ಮಾತನಾಡಿದ್ದರು. ಅದಾದ ನಂತರ ಅನೇಕ ಬಾರಿ ಫೋನ್ ಮಾಡಿದರೂ ಕರೆ ಸ್ವೀಕರಿಸಲಿಲ್ಲ. ಮರುದಿನ ಶಿರಸಿ ಕೋಟೆಕೆರೆಯಲ್ಲಿ ಮುಖೇಶ ಶೆಟ್ಟಿ ಅವರು ಶವವಾಗಿದ್ದರು. ಜನವರಿ 7ರ ಮಧ್ಯಾಹ್ನ ಈ ವಿಷಯ ಜಯಶ್ರೀ ಶೆಟ್ಟಿ ಅವರಿಗೆ ಗೊತ್ತಾಯಿತು. ಮಗ ಕಾಲು ಜಾರಿ ನೀರಿಗೆ ಬಿದ್ದರಾ? ಅಥವಾ ಆತ್ಮಹತ್ಯೆ ಮಾಡಿಕೊಂಡರಾ? ಎಂದು ಜಯಶ್ರೀ ಶೆಟ್ಟಿ ಅವರಿಗೆ ಗೊತ್ತೇ ಆಗಲಿಲ್ಲ. `ಈ ಸಾವಿನ ತನಿಖೆ ನಡೆಯಬೇಕು. ಸತ್ಯ ಹೊರಬರಬೇಕು’ ಎಂದು ಜಯಶ್ರೀ ಶೆಟ್ಟಿ ಅವರು ಆಗ್ರಹಿಸಿದರು. ಅವರ ದೂರು ಸ್ವೀಕರಿಸಿದ ಶಿರಸಿ ಹೊಸ ಮಾರುಕಟ್ಟೆ ಪೊಲೀಸ್ ಠಾಣೆಯ ಸಿಬ್ಬಂದಿ ಪ್ರಕರಣ ದಾಖಲಿಸಿದರು. ಸಾವಿನ ಬಗ್ಗೆ ತನಿಖೆ ಶುರುವಾಗಿದೆ. - [ಸಜೀವ ದಹನ: ಸಹೋದರರ ಸಾವಿನಲ್ಲಿ ಹಲವು ಅನುಮಾನ!](https://mobiletime.in/2026/01/burning-alive-many-doubts-in-the-brothers-death/): ಸಿದ್ದಾಪುರದ ಸಹೋದರರಿಬ್ಬರು ಹೊನ್ನಾವರದಲ್ಲಿ ಭೀಕರ ಕಾರು ಅಪಘಾತದಲ್ಲಿ ಸಾವನಪ್ಪಿದ್ದು, ಆ ಸಾವಿನ ಬಗ್ಗೆ ಅನೇಕರು ಸಂಶಯವ್ಯಕ್ತಪಡಿಸಿದ್ದಾರೆ. ಸಾವಿನ ಸಮಗ್ರ ತನಿಖೆಗಾಗಿ ಕುಟುಂಬದವರ ಜೊತೆ ಹಸ್ಲರ ಕ್ಷೇಮಾಭಿವೃದ್ಧಿ ಸಂಘದವರು ಆಗ್ರಹಿಸಿದ್ದಾರೆ. ಈ ಬಗ್ಗೆ ತಹಶೀಲ್ದಾರ್ ಹಾಗೂ ಪೊಲೀಸ್ ಅಧೀಕ್ಷಕರಿಗೆ ಮನವಿ ಸಲ್ಲಿಕೆಯಾಗಿದೆ. ಸಿದ್ದಾಪುರದ ವಾಜಗೋಡ ಪಂಚಾಯತ್ ಕುಡಗುಂದ ನಿವಾಸಿಗಳಾದ ಚಂದ್ರಶೇಖರ ವೀರಭದ್ರ ಹಸ್ಲರ ಹಾಗೂ ಅವರ ಸಹೋದರ ಮಂಜುನಾಥ ವೀರಭದ್ರ ಹಸ್ಲರ ಅವರು ಜನವರಿ 6ರಂದು ಶಿರಸಿಗೆ ಹೋಗುವುದಾಗಿ ಹೇಳಿ ಹೊರಟಿದ್ದರು. ಅಂದು ಮಧ್ಯಾಹ್ನ ಮಂಜುನಾಥ್ ಅವರು ತಮ್ಮ ಪತ್ನಿಗೆ ಕರೆ ಮಾಡಿ, ತಾವು ಸಿದ್ಧಾಪುರದಲ್ಲಿ ತಮ್ಮನಾದ ಚಂದ್ರಶೇಖರ ಹಾಗೂ ಚಂದ್ರಘಟಗಿಯ ಪ್ರಮೋದ ಎಂಬುವವರ ಜೊತೆ ಇರುವುದಾಗಿ ತಿಳಿಸಿದ್ದರು. ಆದರೆ ಅದಾದ ನಂತರ ಅವರ ಫೋನ್ ಸ್ವಿಚ್ ಆಫ್ ಆಗಿತ್ತು ಎಂಬುದನ್ನು ಕುಟುಂಬದವರು ಹೇಳಿದ್ದಾರೆ. `ಚಂದ್ರಶೇಖರ ಅವರಿಗೆ ಕಾಲಿಗೆ ಪೆಟ್ಟಾಗಿದ್ದರಿಂದ ಅವರಿಗೆ ಕಾರು ಚಲಾಯಿಸಲು ಸಾಧ್ಯವಿರಲಿಲ್ಲ. ಹಾಗಿದ್ದಲ್ಲಿ ಅಂದು ಕಾರು ಚಲಾಯಿಸುತ್ತಿದ್ದವರು ಯಾರು? ಇಬ್ಬರ ಶವಗಳು ಕಾರಿನ ಹಿಂಬದಿಯ ಸೀಟಿನಲ್ಲಿ ಸುಟ್ಟು ಕರಕಲಾದ ಸ್ಥಿತಿಯಲ್ಲಿ ಪತ್ತೆಯಾಗಿರುವುದು ಹೇಗೆ? ಅಪಘಾತವಾದರೆ ಚಾಲಕನ ಸೀಟಿನಲ್ಲಿ ಶವವಿರಬೇಕಿತ್ತಲ್ಲವೇ? ಅಂದು ಇವರ ಜೊತೆಗಿದ್ದ ಎನ್ನಲಾದ ಪ್ರಮೋದ ಎಂಬ ವ್ಯಕ್ತಿ ಈಗ ಎಲ್ಲಿ ಹೋದರು? ಘಟನಾ ಸ್ಥಳಕ್ಕೆ ಅವರು ಬಾರದಿರುವುದು ಮತ್ತು ಅವರ ಮೊಬೈಲ್ ಸಂಪರ್ಕಕ್ಕೆ ಸಿಗದಿರುವುದು ಹಲವು ಅನುಮಾನಕ್ಕೆ ಕಾರಣ’ ಎಂದು ವಿವರಿಸಿದ್ದಾರೆ. ಇದನ್ನು ಓದಿ: ಆ ಕಾರಿನ ಸುತ್ತ ಅನುಮಾನದ ಹುತ್ತ! ಅಂಬೇಡ್ಕರ್ ಶಕ್ತಿ ಸಂಘದ ಅಧ್ಯಕ್ಷ ನಂದನ್ ಬೋರಕರ್ ಅವರು `ದಲಿತ ಕುಟುಂಬದ ಇಬ್ಬರ ಸಾವಾಗಿದ್ದು ದಲಿತರಿಗೆ ರಕ್ಷಣೆ ಇಲ್ಲದಾಗಿದೆ. ಶಿರಸಿಗೆ ಹೋಗಿ ಬರುವುದಾಗಿ ಹೇಳಿ ಹೋದ ಸಹೋದರರು ಶವವಾಗಿ ಪತ್ತೆಯಾಗಿದ್ದು ಹಲವು ಅನುಮಾನಗಳನ್ನು ಹುಟ್ಟುಹಾಕಿದೆ. ಈ ಬಗ್ಗೆ ಸಮಗ್ರ ತನಿಖೆ ಅಗತ್ಯ’ ಎಂದಿದ್ದಾರೆ. `ಪರಿಶಿಷ್ಟ ಜಾತಿಯ ಈ ಇಬ್ಬರು ಸಹೋದರರ ಸಾವು ಅಸಹಜವಾಗಿದ್ದು, ಇದರ ಹಿಂದೆ ದೊಡ್ಡ ಸಂಚು ಇರುವ ಸಾಧ್ಯತೆಯಿದೆ. ಆದ್ದರಿಂದ ಈ ಪ್ರಕರಣವನ್ನು ಕೇವಲ ಅಪಘಾತ ಎಂದು ಪರಿಗಣಿಸದೇ ಉನ್ನತ ಮಟ್ಟದ ತನಿಖೆ ನಡೆಸಿ ಸತ್ಯಾಸತ್ಯತೆಯನ್ನು ಹೊರತರಬೇಕು’ ಎಂದು ಹಸ್ಲರ ಕ್ಷೇಮಾಭಿವೃದ್ಧಿ ಸಂಘದ ಗೌರವಾಧ್ಯಕ್ಷ ವೆಂಕಟ್ರಮಣ ಹಸ್ಲರ್, ಅಧ್ಯಕ್ಷ ಮಂಜುನಾಥ್ ಕನ್ನ ಹಸ್ಲರ್, ಸಂದೇಶ್ ಹಸ್ಲರ್, ತಾಲೂಕಾ ಅಧ್ಯಕ್ಷ ಅಣ್ಣಪ್ಪ ಹಸ್ಲರ್, ಸಾಮಾಜಿಕ ಧುರೀಣರಾದ ವಸಂತ್ ನಾಯ್ಕ, ಮಂಜುನಾಥ್ ನಾಯ್ಕ ತ್ಯಾರ್ಸಿ, ವಿನಾಯಕ್ ನಾಯ್ಕ ದೊಡ್ಗದ್ದೆ, ಎಚ್ ಕೆ ಶಿವಾನಂದ ಸೇರಿದಂತೆ ಗ್ರಾಮಸ್ಥರು ಹೇಳಿದ್ದಾರೆ. - [ಮದ್ಯದ ನಶೆ: ವಿಷ ಕುಡಿದ ಭಕ್ತನಿಗೆ ಬದುಕುವ ಆಸೆ!](https://mobiletime.in/2026/01/alcohol-intoxication-a-devotee-who-drank-poison-wants-to-live/): ನಿತ್ಯವೂ ಸರಾಯಿ ಕುಡಿಯುತ್ತಿದ್ದ ಬನವಾಸಿಯ ಜಾನಕ ಬಂದಿಗೇರ್ ಅವರು ಸರಾಯಿ ಗುಂಗಿನಲ್ಲಿ ವಿಷ ಕುಡಿದಿದ್ದು, ಅದಾದ ನಂತರ `ನನ್ನನ್ನು ಕಾಪಾಡು’ ಎಂದು ದೇವರ ಮೊರೆ ಹೋಗಿದ್ದಾರೆ. ಆದರೆ, ಆ ದೇವರಿಂದಲೂ ಜಾನಕ ಬಂದಿಗೇರ್ ಅವರನ್ನು ಕಾಪಾಡಲು ಆಗಲಿಲ್ಲ! ಶಿರಸಿ ಬನವಾಸಿ ಮೊಗಳ್ಳಿಯ ಜಾನಕ ಗುತ್ಯಪ್ಪ ಬಂದಿಗೇರ್ (54) ಅವರು ಕೃಷಿ ಕೆಲಸ ಮಾಡಿಕೊಂಡು ಬದುಕು ಕಟ್ಟಿಕೊಂಡಿದ್ದರು. ನಿತ್ಯವೂ ಅವರು ಸರಾಯಿ ಕುಡಿಯುತ್ತಿದ್ದರು. ಮದ್ಯ ಸೇವನೆ ಒಳ್ಳೆಯದಲ್ಲ ಎಂದು ಅವರ ಪತ್ನಿ ಬುದ್ದಿ ಹೇಳಿದರೂ ಕೇಳುವ ಸ್ಥಿತಿಯಲ್ಲಿರಲಿಲ್ಲ. ಡಿಸೆಂಬರ್ 27ರಂದು ಮೊಗಳ್ಳಿಯ ಕರಿಕಲ್ಲು ಅಜ್ಜ ದೇವಾಲಯಕ್ಕೆ ಹೋಗಿದ್ದ ಜಾನಕ ಬಂದಿಗೇರ್ ಅವರು `ತನ್ನನ್ನು ಉಳಿಸು’ ಎಂದು ಕೂಗಾಡುತ್ತಿದ್ದರು. `ದೇವರೇ ನನ್ನನ್ನು ಕಾಪಾಡು’ ಎಂದು ಅವರು ಪದೇ ಪದೇ ಬೇಡಿಕೊಳ್ಳುತ್ತಿದ್ದರು. ಇದನ್ನು ನೋಡಿದ ಮೊಗವಳ್ಳಿಯ ಚೌಡಪ್ಪ ಬಂದಿಗೇರ್ ಅವರು `ಏನಾಯಿತು?’ ಎಂದು ಪ್ರಶ್ನಿಸಿದರು. ಆಗ, ಜಾನಕ ಬಂದಿಗೇರ್ ಅವರು `ಡಿಸೆಂಬರ್ 22ರ ರಾತ್ರಿ ಮನೆಯಲ್ಲಿರುವ ಕಳೆ ನಾಶಕ ಸೇವಿಸಿದ್ದೇನೆ’ ಎಂಬ ವಿಷಯ ಬಾಯ್ಬಿಟ್ಟರು! ತಕ್ಷಣ ಚೌಡಪ್ಪ ಬಂದಿಗೇರ್ ಅವರು ಜಾನಕ ಬಂದಿಗೇರ್ ಅವರನ್ನು ಶಿರಸಿ ಮಾರಿಕಾಂಬಾ ಆಸ್ಪತ್ರೆಗೆ ಕರೆದೊಯ್ದರು. ಅದಾದ ನಂತರ ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ಕೆ ಎಸ್ ಹೆಗಡೆ ಆಸ್ಪತ್ರೆಗೆ ದಾಖಲಿಸಿದರು. ಆದರೆ, ಅದರಿಂದ ಪ್ರಯೋಜನವಾಗಲಿಲ್ಲ. ಜನವರಿ 5ರಂದು ಜಾನಕ ಬಂದಿಗೇರ್ ಅವರು ಸಾವನಪ್ಪಿದರು. - [ಕೃಷಿಕನಿಗೆ ಗುದ್ದಿದ ಕುರಿಮರಿ: ಸಾವು!](https://mobiletime.in/2026/01/lamb-punches-farmer-death/): ಕುರಿ ಸಾಕಾಣಿಕೆ ಮಾಡಿ ಬದುಕು ಕಟ್ಟಿಕೊಂಡಿದ್ದ ಮುಂಡಗೋಡದ ಶೇಖಪ್ಪ ಹೆಸರಂಬಿ ಅವರು ಕುರಿ ಹೊಟ್ಟೆಗೆ ಗುದ್ದಿದ ಪರಿಣಾಮ ಸಾವನಪ್ಪಿದ್ದಾರೆ. ಮುಂಡಗೋಡಿನ ನ್ಯಾಸರ್ಗಿಯಲ್ಲಿ ಶೇಖಪ್ಪ ಹೆಸರಂಬಿ (53) ಅವರು ಕುರಿ ಸಾಕಾಣಿಕೆ ಮಾಡಿಕೊಂಡಿದ್ದರು. ಜನವರಿ 2ರ ಮಧ್ಯಾಹ್ನ ಅವರು ಕುರಿ ಮರಿಗಳ ಆರೈಕೆಗೆ ಹೋಗಿದ್ದರು. ಆ ವೇಳೆ ಕುರಿಗಳಿಗೆ ಅವರು ಮೇವು ನೀಡಿದ್ದು, ಒಂದು ಕುರಿ ಅವರ ಹೊಟ್ಟೆಗೆ ಗುದ್ದಿತು. ಪರಿಣಾಮ ಅವರು ಗಾಯಗೊಂಡರು. ಶೇಖಪ್ಪ ಹೆಸರಂಬಿ ಅವರನ್ನು ಮೊದಲು ಶಿಗ್ಗಾವಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಯಿತು. ನಂತರ ಹೆಚ್ಚಿನ ಚಿಕಿತ್ಸೆಗೆ ಅಲ್ಲಿಂದ ಹುಬ್ಬಳ್ಳಿಗೆ ರವಾನಿಸಲಾಯಿತು. ಆದರೆ, ನೋವು ಸಹಿಸಿಕೊಳ್ಳಲಾಗದೇ ಅವರು ಜನವರಿ 5ರಂದು ಪ್ರಾಣಬಿಟ್ಟರು. ಅವರ ಮಗ ನಾಗರಾಜ ಹೆಸರಂಬಿ ಅವರು ಈ ವಿಷಯದ ಬಗ್ಗೆ ಮಾಹಿತಿ ನೀಡಿದರು. - [ನ್ಯಾಯಬೆಲೆ ಅಂಗಡಿ: ಪರಿಶಿಷ್ಟರಿಗೆ ಆದ್ಯತೆ ನೀಡಲು ಸೂಚನೆ](https://mobiletime.in/2026/01/fair-price-shop-instructions-to-give-priority-to-scheduled-castes/): `ಉತ್ತರ ಕನ್ನಡ ಜಿಲ್ಲೆಯಲ್ಲಿ ಹೊಸದಾಗಿ ನ್ಯಾಯಬೆಲೆ ಅಂಗಡಿಗಳನ್ನು ತೆರಯುವ ಸಂದರ್ಭದಲ್ಲಿ ಪ ಜಾತಿ ಮತ್ತು ಪಂಗಡದ ಸಮುದಾಯದವರಿಗೆ ಆದ್ಯತೆ ಕೊಡಬೇಕು’ ಎಂದು ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯ ಅಧಿಕಾರಿಗಳಿಗೆ ಅಪರ ಜಿಲ್ಲಾಧಿಕಾರಿ ಸಾಜಿದ್ ಮುಲ್ಲಾ ಸೂಚನೆ ನೀಡಿದ್ದಾರೆ. `ನಗರ ಮತ್ತು ಗ್ರಾಮಾಂತರ ಪ್ರದೇಶದಲ್ಲಿನ ಪಡಿತರ ಚೀಟಿಗಳ ಸಂಖ್ಯೆಯಲ್ಲಿ ಪರಿಶೀಲಿಸಿ ಹೊಸದಾಗಿ ನ್ಯಾಯಬೆಲೆ ಅಂಗಡಿಗಳನ್ನು ತೆರಯುವ ಕುರಿತಂತೆ ಸರ್ಕಾರದ ಮಾರ್ಗಸೂಚಿಗಳನ್ನು ಪಾಲಿಸಬೇಕು. ಪ ಜಾತಿ ಪಂಗಡದ ಸಮುದಾಯದ ಶೇ 40ಕ್ಕಿಂತಲೂ ಹೆಚ್ಚಿನ ಜನ ವಾಸವಿರುವ ಕಡೆಗಳಲ್ಲಿ ಪ ಜಾತಿ ಮತ್ತು ಪಂಗಡದ ಸಮುದಾಯದವರಿಗೆ ಆದ್ಯತೆಯ ಮೇಲೆ ಪಡಿತರ ಅಂಗಡಿಗಳನ್ನು ಮಂಜೂರು ಮಾಡಬೇಕು. ಪ ಜಾತಿ ಸಮುದಾಯದಲ್ಲಿ ಮೀಸಲಾತಿಯನುಸಾರ ಒಳಮೀಸಲಾತಿಯನ್ನು ಅನುಸರಿಸಬೇಕು’ ಎಂದವರು ಸೂಚಿಸಿದರು. ಹೊಸ ನ್ಯಾಯಬೆಲೆ ಅಂಗಡಿಗಳನ್ನು ತೆರೆಯುವ ಕುರಿತಂತೆ ಪ್ರಕಟಣೆ ಹೊರಡಿಸುವ ಸಂದರ್ಭದಲ್ಲಿ ಪ.ಜಾತಿ ಮತ್ತು ಪಂಗಡದ ಸಮುದಾಯದವರಿಗೆ ಮೀಸಲಿಟ್ಟಿರುವ ಅಂಗಡಿಗಳ ಸಂಖ್ಯೆಯನ್ನು ನಮೂದಿಸುವಂತೆ ಅವರು ತಿಳಿಸಿದರು. ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಪ.ಜಾತಿ ಪಂಗಡದ ಸಮುದಾಯದ ಶೇ 40 ಕ್ಕಿಂತಲೂ ಹೆಚ್ಚಿನ ಜನ ವಾಸವಿರುವ ಪ್ರದೇಶಗಳ ಮಾಹಿತಿಯನ್ನು ಆಹಾರ ಇಲಾಖೆ ಅಧಿಕಾರಿಗಳಿಗೆ ಒದಗಿಸುವಂತೆ ಸಮಾಜ ಕಲ್ಯಾಣ ಮತ್ತು ಪ.ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಸಭೆಯಲ್ಲಿ ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯ ಉಪ ನಿರ್ದೇಶಕ ಮಂಜುನಾಥ ರೇವಣ್‌ಕರ, ಪೌರಾಯುಕ್ತ ಜಗದೀಶ್ ಹುಲಿಗಜ್ಜಿ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಮತ್ತು ಆಹಾರ ಇಲಾಖೆಯ ತಾಲೂಕುಗಳ ಅಧಿಕಾರಿಗಳು ಉಪಸ್ಥಿತರಿದ್ದರು. - [ಬಹಿಷ್ಕಾರ: ಜೈಲಿನ ಜೊತೆ ದಂಡ ಅನಿವಾರ್ಯ!](https://mobiletime.in/2026/01/boycott-jail-and-fines-are-inevitable/): `ಯಾವುದೇ ವ್ಯಕ್ತಿ ಅಥವಾ ಕುಟುಂಬಕ್ಕೆ ಬಹಿಷ್ಕಾರ ಹಾಕುವುದು ಕಾನೂನುಬಾಹಿರವಾಗಿದ್ದು, ಬಹಿಷ್ಕಾರ ಹಾಕಿದವರಿಗೆ ಕಾನೂನು 1 ಲಕ್ಷ ರೂ ದಂಡ ಹಾಗೂ 3 ವರ್ಷ ಜೈಲು ಶಿಕ್ಷೆ ವಿಧಿಸುತ್ತದೆ’ ಎಂದು ಕುಮಟಾದ ಜನಸಾಮಾನ್ಯರ ಸಮಾಜ ಕಲ್ಯಾಣ ಕೇಂದ್ರದವರು ಮಾಹಿತಿ ನೀಡಿದ್ದಾರೆ. ಕುಮಟಾದ ಮಾಸೂರಿನ ಲುಕ್ಕೇರಿ ಗ್ರಾಮದ ಕೇಶವ ಗಣಪತಿ ಅಂಬಿಗ ಅವರ ಕುಟುಂಬಕ್ಕೆ ಬಹಿಷ್ಕಾರ ಹಾಕಿರುವ ಬಗ್ಗೆ ಅರಿತ ಕೇಂದ್ರದ ಅಧ್ಯಕ್ಷ ಆಗ್ನೇಲ್ ರೋಡಿಗ್ರಿಸ್ ಅವರು ಈ ಬಗ್ಗೆ ಜನ ಜಾಗೃತಿಗಾಗಿ ಕಾನೂನಿ ಅರಿವು ಮೂಡಿಸಿದ್ದಾರೆ. `2025ರ ವಿಧಾನ ಸಭೆಯಲ್ಲಿ ಸಾಮಾಜಿಕ ಬಹಿಷ್ಕಾರ ಮಸೂದೆ ಮಂಡನೆ ಆಗಿದೆ. ಅದರ ಪ್ರಕಾರ ಯಾವುದೇ ಕುಟುಂಬಕ್ಕೂ ಬಹಿಷ್ಕಾರ ಹಾಕುವ ಹಾಗಿಲ್ಲ’ ಎಂದವರು ವಿವರಿಸಿದ್ದಾರೆ. `ಬಹಿಷ್ಕಾರ ಮಾಡಲು ನಡೆಸುವ ಸಭೆ ಹಾಗೂ ಪಂಚಾಯತಿ ನಡೆಸಿದವರನ್ನು ಈ ಪ್ರಕರಣದಲ್ಲಿ ಆರೋಪಿಯನ್ನಾಗಿ ಮಾಡಲಾಗುತ್ತದೆ. ಇಂಥ ಪ್ರಕರಣದಲ್ಲಿ ಒತ್ತಡ ಹೇರಿದವರನ್ನು ಸಹ ಆರೋಪಿ ಎಂದು ಪರಿಗಣಿಸಲಾಗುತ್ತದೆ. ಬಹಿಷ್ಕಾರದ ಬಗ್ಗೆ ಸಭೆ ಸಮಾವೇಶ ನಡೆಸುವುದು ಸಹ ಕಾನೂನುಬಾಹಿರ ಎಂದು ಮಸೂದೆಯಲ್ಲಿದೆ’ ಎಂದವರು ಹೇಳಿದ್ದಾರೆ. ಸದ್ಯ ಬಹಿಷ್ಕಾರಕ್ಕೆ ಒಳಗಾಗಿರುವ ಕುಟುಂಬದವರಿಗೆ ಜನಸಾಮಾನ್ಯರ ಸಮಾಜ ಕಲ್ಯಾಣ ಕೇಂದ್ರದವರು ಧೈರ್ಯ ಹೇಳಿದ್ದಾರೆ. `ಎಲ್ಲಿಯೇ ಇಂಥ ಅಮಾನವೀಯ ಪ್ರಕರಣ ನಡೆದರೂ 7892221590ಗೆ ಫೋನ್ ಮಾಡಿ ತಮ್ಮ ಗಮನಕ್ಕೆ ತನ್ನಿ. ಬಹಿಷ್ಕಾರ ಹಾಕಿದವರ ವಿರುದ್ಧ ಕಾನೂನು ಹೋರಾಟ ನಡೆಸೋಣ’ ಎಂದವರು ಕರೆ ನೀಡಿದ್ದಾರೆ. - [ಗ್ರಾಮ ಆಡಳಿತ: ಅಧಿಕಾರ ಇದ್ದರೂ ಅನುದಾನ ಇಲ್ಲ!](https://mobiletime.in/2026/01/village-administration-despite-authority-there-is-no-funding/): ಸಣ್ಣಪುಟ್ಟ ಸಮಸ್ಯೆಗಳಿಗೂ ಜನರಿಂದ ಬೈಸಿಕೊಳ್ಳುವ ಗ್ರಾಮ ಪಂಚಾಯತ ಸದಸ್ಯರು ಆಡಳಿತ ವಿಷಯದಲ್ಲಿ ತಾವು ಅನುಭವಿಸುವ ಸಮಸ್ಯೆಗಳನ್ನು ಬಗೆಹರಿಸುವಂತೆ ಕೋರಿ ಪ್ರತಿಭಟಿಸಿದ್ದಾರೆ. ಯಲ್ಲಾಪುರದ ಗಾಂಧೀ ಕುಟೀರದಲ್ಲಿ ಗಾಂಧೀಜಿ ಅವರ ಭಾವಚಿತ್ರದ ಮುಂದೆ ಗ್ರಾ ಪಂ ಪ್ರತಿನಿಧಿಗಳು ತಮ್ಮ ಅಳಲು ತೋಡಿಕೊಂಡಿದ್ದಾರೆ. ಗ್ರಾಮ ಪಂಚಾಯತಗಳಿಗೆ ಅನುದಾನ ಕೊರತೆ ಹಾಗೂ ಇನ್ನಿತರ ಸಮಸ್ಯೆಗಳ ಬಗ್ಗೆ ಅವರು ಅಧಿಕಾರಿಗಳಿಗೆ ಮನವರಿಕೆ ಮಾಡಿದ್ದಾರೆ. ಚುನಾಯತ ಗ್ರಾಮ ಪ್ರತಿನಿಧಿಗಳ ಒಕ್ಕೂಟದ ಅಧ್ಯಕ್ಷ ಎಂ ಕೆ ಭಟ್ಟ ಅವರು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಹಾಗೂ ಪಂಚಾಯತ ರಾಜ್ ಸಚಿವ ಪ್ರಿಯಾಂಕ ಖರ್ಗೆ ಅವರಿಗೆ ಸಮಸ್ಯೆಗಳ ಪಟ್ಟಿ ರವಾನಿಸಿದ್ದು, ತುರ್ತು ಪರಿಶೀಲನೆಗಾಗಿ ಒತ್ತಾಯಿಸಿದ್ದಾರೆ. `15ನೇ ಹಣಕಾಸನ್ನು ತರಿಸಿ ಉದ್ಯೋಗ ಖಾತ್ರಿ ಯೋಜನೆಯ ಅನುಷ್ಠಾನದಲ್ಲಿ ಬದಲಾವಣೆ ಮಾಡಿಕೊಡಬೇಕು’ ಎಂದು ಅವರು ಆಗ್ರಹಿಸಿದ್ದಾರೆ. ಈ ಬಗ್ಗೆ ತಾ ಪಂ ಇಒ ರಾಜೇಶ ಧನವಾಡಕರ್ ಅವರ ಮೂಲಕ ಸರ್ಕಾರಕ್ಕೆ ಲಿಖಿತ ಪತ್ರವನ್ನು ಸಲ್ಲಿಸಿದ್ದಾರೆ. `ರಾಜ್ಯದ ಎಲ್ಲ ಪಂಚಾಯತಿಗಳಲ್ಲಿ 15ನೇ ಹಣಕಾಸು ಬರದೇ ಯಾವ ಕೆಲಸವೂ ನಡೆಯುತ್ತಿಲ್ಲ. ಉದ್ಯೋಗ ಖಾತ್ರಿ ಯೋಜನೆಯಿಂದ ಅಭಿವೃದ್ಧಿ ಕೆಲಸಗಳನ್ನು ಮಾಡಲು ಸಾಧ್ಯವಿದ್ದು, ಕಟ್ಟುನಿಟ್ಟಾದ ನಿಯಮಗಳಿಂದ ಕೆಲಸ ಆಗುತ್ತಿಲ್ಲ’ ಎಂದವರು ವಿವರಿಸಿದ್ದಾರೆ. `ಉದ್ಯೋಗ ಖಾತರಿ ಕಾಮಗಾರಿಯ ತಾಂತ್ರಿಕ ಸಮಸ್ಯೆ ಬಗೆಹರಿಸಬೇಕು. ಕೂಲಿ ಹಣವನ್ನು ಹೆಚ್ಚಿಸಬೇಕು. ಒಂದು ಎಕರೆ ಒಳಗಿನ ಭೂಮಿ ಹೊಂದಿದ ರೈತರಿಗೂ ಕೃಷಿ ಬಾವಿಯ ಸೌಲಭ್ಯ ನೀಡಬೇಕು. ಅತಿಕ್ರಮಣದಾರರಿಗೂ ವೈಯಕ್ತಿಕ ಸೌಲಭ್ಯ ದೊರೆಯುವಂತೆ ಆಗಬೇಕು. ಸಾರ್ವಜನಿಕ ಕುಡಿಯುವ ನೀರಿನ ಬಾವಿ ನಿರ್ಮಾಣಕ್ಕೆ ಅವಕಾಶ ನೀಡಬೇಕು. ಸಾರ್ವಜನಿಕ ಶೌಚಾಲಯಕ್ಕೆ ಅವಕಾಶವನ್ನು ನೀಡಬೇಕು. ಸಾರ್ವಜನಿಕ ಗೋಡಾನ್ ನಿರ್ಮಾಣ ಕಾಮಗಾರಿಗಳನ್ನು ವಿಶೇಷ ಕಾಮಗಾರಿಯಾಗಿ ಪರಿವರ್ತಿಸಬೇಕು. ಮೂರು ವರ್ಷದೊಳಗೆ ಕಾಮಗಾರಿ ಅನುಷ್ಠಾನ ಮಾಡಲು ಅವಕಾಶ ನೀಡಬೇಕು. ಕೇಂದ್ರ ಸರ್ಕಾರ ಶೇ 60, ರಾಜ್ಯ ಸರ್ಕಾರ ಶೇ.40 ಅನುದಾನ ನೀಡುವ ನಿರ್ಧಾರ ಸರಿಯಲ್ಲ’ ಎಂಬ ವಿಷಯವನ್ನು ಗಮನಕ್ಕೆ ತಂದಿದ್ದಾರೆ. ಪ್ರಮುಖರಾದ ಸುಬ್ಬಣ್ಣ ಕುಂಟೆಕುಳಿ, ಕೆ ಟಿ ಹೆಗಡೆ, ಗಜಾನನ ಭಟ್ಟ, ಸುಬ್ಬಣ್ಣ ಉದ್ದಾಬೈಲ, ರಾಮಕೃಷ್ಣ ಗಾಂವ್ಕರ, ಗಣೇಶ ಹೆಗಡೆ, ಪರಮೇಶ್ವರ ಗಾಂವ್ಕರ ಇತರರಿದ್ದರು. - [ನೀರು ಉಳಿಸಿ.. ಅಘನಾಶಿನಿ ರಕ್ಷಿಸಿ!](https://mobiletime.in/2026/01/save-water-protect-aghanashini/): `ಜೀವ ವೈವಿಧ್ಯಮಯಕ್ಕೆ ಮಾರಕವಾಗಿರುವ ಅಘನಾಶಿನಿ ನದಿ ನೀರು ಎತ್ತುವ ಯೋಜನೆಯನ್ನು ಸರ್ಕಾರ ಕೈ ಬಿಡಬೇಕು’ ಎಂದು ಶಿರಸಿಯ ನ್ಯಾಯವಾದಿ ರವೀಂದ್ರ ನಾಯ್ಕ ಆಗ್ರಹಿಸಿದ್ದಾರೆ. `ಅಘನಾಶಿನಿ ನದಿ ನೀರು ಎತ್ತುವಿಕೆ ಯೋಜನೆಯಲ್ಲಿ ಒಂದು ಲಕ್ಷದ ಇಪ್ಪತ್ತು ಸಾವಿರ ಗಿಡ ನಾಶಗೊಳ್ಳಲಿದೆ. ಆರು ನೂರು ಎಕರೆ ಅಘನಾಶಿನಿ ಕಣಿವೆಯ ಮೌಲ್ಯಯುತ ಜೀವ ವೈವಿಧ್ಯಕ್ಕೆ ಹಾನಿ ಉಂಟಾಗಲಿದೆ. ಪಶ್ಚಿಮ ಘಟ್ಟ ಪ್ರದೇಶದ ಜನ ಜೀವನ, ಪ್ರಾಣಿ, ಪಕ್ಷಿಗಳ ಹಾಗೂ ಅತ್ಯಮೂಲ್ಯ ಗಿಡ ಸಸ್ಯಗಳ ಮೇಲೆ ದುಷ್ಪರಿಣಾಮ ಬೀಳಲಿದೆ. ಇದರಿಂದ ನೈಸರ್ಗಿಕ ಅಸಮತೋಲನಕ್ಕೆ ಕಾರಣವಾಗಲಿದೆ’ ಎಂದವರು ವಿವರಿಸಿದ್ದಾರೆ. `20 ಸಾವಿರ ಕೋಟಿ ವೆಚ್ಚದಲ್ಲಿ 35 ಟಿ ಎಂ ಸಿ ನೀರನ್ನು ಅಘನಾಶಿನಿಯಿಂದ ವಾಣಿವಿಲಾಸ ಜಲಾಶಯಕ್ಕೆ ಸಿದ್ದಾಪುರ ಮತ್ತು ಸಾಗರ ಮೂಲಕ ಚಿತ್ರದುರ್ಗ, ದಾವಣಗೆರೆ ಮತ್ತು ಬಳ್ಳಾರಿ ಮುಂತಾದ ಜಿಲ್ಲೆಗಳ ಮೂಲಕ ಸಾಗಿಸುವ ಯೋಜನೆ ಸರ್ಕಾರದ ಮುಂದಿದೆ. ಪೈಪ್ ಲೈನ್ ಕಾಲುವೆ ಮೂಲಕ ನೀರು ಒಯ್ಯುವ ಯೋಜನೆಯಿಂದ ಅಘನಾಶಿನಿಯ ಪರಿಸರದಲ್ಲಿ ನೀರಿನ ಸಂಕಟಕ್ಕೆ ಕಾರಣವಾಗಲಿದೆ. `ಸಮುದ್ರದಲ್ಲಿನ ಉಪ್ಪು ನೀರು ಕರಾವಳಿ ಭಾಗದ ಕೃಷಿ ಚಟುವಟಿಕೆ ಮತ್ತು ಸಾಗುವಳಿ ಕ್ಷೇತ್ರಕ್ಕೆ ಆತಂಕ ಉಂಟಾಗಲಿದೆ’ ಎಂದವರು ವಿಶ್ಲೇಷಿಸಿದ್ದಾರೆ. `ಮಳೆಗಾಲದಲ್ಲಿ ಅಘನಾಶಿನಿಯ ಪರಿಸರದಲ್ಲಿ ಸುಮಾರು 600 ಚದರ ಕಿಮೀ ವಿಸ್ತೀರ್ಣದಲ್ಲಿ 2864ಮಿಮೀ ಸರಾಸರಿ ಮಳೆ ಆಗುತ್ತದೆ. ಅದರಂತೆ ಶಿರಸಿಯ ಅಘನಾಶಿನಿ ಉಗಮ ಸ್ಥಾನದಲ್ಲಿ 2500ಮಿಮೀ ಮಳೆ ಆಗುತ್ತದೆ. ಎಂಬತ್ತೊAದು ಟಿಎಂಸಿ ನೀರು ಸಮುದ್ರಕ್ಕೆ ಸೇರಲಿದ್ದು, ಉಂಚಳ್ಳಿ ಜಲಪಾತದ ಬಳಿ ಹರಿಯುವ ನೀರಿನ ಪ್ರಮಾಣ ಕೇವಲ 45 ಟಿಎಂಸಿ ಆಗಿದೆ. ಇದರಲ್ಲಿ 35 ಟಿಎಂಸಿ ನೀರು ಎತ್ತುವಿಕೆಗೆ ಕಾರ್ಯ ಸಾಧುವಲ್ಲ’ ಎಂದವರು ವೈಜ್ಞಾನಿಕ ಕಾರಣಗಳನ್ನು ನೀಡಿದ್ದಾರೆ. - [ಮರಕ್ಕೆ ಗುದ್ದಿದ ಬಸ್ಸು: 20 ಜನರಿಗೆ ಸುಸ್ತು!](https://mobiletime.in/2026/01/bus-hits-tree-20-people-injured/): ಕಲಘಟಗಿಯಿಂದ ಹಳಿಯಾಳಕ್ಕೆ ಬರುತ್ತಿದ್ದ ಬಸ್ಸು ಅಪಘಾತಕ್ಕೀಡಾಗಿದ್ದು, 12ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಗಾಯವಾಗಿದೆ. 20ಕ್ಕೂ ಅಧಿಕ ಪ್ರಯಾಣಿಕರಿಗೆ ಈ ಅವಘಡದಲ್ಲಿ ಪೆಟ್ಟಾಗಿದೆ. ಹಳಿಯಾಳ ತಾಲೂಕಿನ ಬಾಣಸಗೇರಿ ಗ್ರಾಮದ ಬಳಿ ಈ ಅವಘಡ ನಡೆದಿದೆ. ಮುಂದಿನಿAದ ಬಂದ ಕಾರಿಗೆ ಬಸ್ಸು ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಬಸ್ಸಿನ ಚಾಲಕ ಸ್ಟೇರಿಂಗ್ ತಿರುಗಿಸಿದ್ದು, ಆ ಬಸ್ಸು ಮರಕ್ಕೆ ಗುದ್ದಿದೆ. ಬಸ್ಸಿನ ಚಾಲಕನಿಗೆ ಗಂಭೀರ ಪ್ರಮಾಣದಲ್ಲಿ ಗಾಯವಾಗಿದೆ. ಜೊತೆಗೆ ಇಬ್ಬರು ಮಕ್ಕಳಿಗೂ ಗಂಭೀರ ಪ್ರಮಾಣದಲ್ಲಿ ಗಾಯವಾಗಿದೆ. ಗಾಯಗೊಂಡವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಸಾಗಿಸಲಾಗಿದ್ದು, ವೈದ್ಯರು ಆರೈಕೆ ಮಾಡುತ್ತಿದ್ದಾರೆ. ಈ ಬಸ್ಸಿನಲ್ಲಿ 40ಕ್ಕೂ ಅಧಿಕ ಪ್ರಯಾಣಿಕರಿದ್ದರು. ಆ ಪೈಕಿ 8 ವಿದ್ಯಾರ್ಥಿನಿಯರು, ಇಬ್ಬರು ಮಹಿಳೆಯರು ಹಾಗೂ ಇಬ್ಬರು ಶಾಲಾ ಮಕ್ಕಳು ಹೆಚ್ಚಿನ ಪ್ರಮಾಣದಲ್ಲಿ ನೋವು ಅನುಭವಿಸಿದರು. ಬಸ್ಸಿನ ಮುಂದಿನ ಭಾಗ ಸಂಪೂರ್ಣವಾಗಿ ಜಖಂ ಆಗಿದ್ದು, ಮುಂದಿನ ಆಸನದಲ್ಲಿದ್ದ ವಿದ್ಯಾರ್ಥಿಯ ಕಾಲು ಅಲ್ಲಿಯೇ ಸಿಲುಕಿ ಬಿದ್ದಿತ್ತು. ಒಂದು ತಾಸಿನ ಕಾರ್ಯಾಚರಣೆ ನಂತರ ಆ ವಿದ್ಯಾರ್ಥಿಯನ್ನು ಅಲ್ಲಿಂದ ಹೊರ ತೆಗೆಯಲಾಯಿತು. ಹಳಿಯಾಳ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ತಾಸುಗಳ ಕಾಲ ಸಂಚಾರ ದಟ್ಟಣೆ ಕಾಣಿಸಿತು. ನಂತರ ಪೊಲೀಸರು ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು. - [ಬೆಟ್ಟ ಭೂಮಿಯನ್ನು ಬಿಟ್ಟುಬಿಡಿ: ಅರಣ್ಯ ಸಚಿವರ ಮುಂದೆ ಅನಂತಣ್ಣನ ಅಳಲು](https://mobiletime.in/2026/01/leave-the-hill-land-behind-ananthanas-cry-before-the-forest-minister/): ಅರಣ್ಯ ಅತಿಕ್ರಮಣ ಹಾಗೂ ಸೊಪ್ಪಿನ ಬೆಟ್ಟ ವಿಷಯದ ಆಳ-ಅಗಲ ಅರಿಯುವುದಕ್ಕಾಗಿ ಉತ್ತರ ಕನ್ನಡ ಜಿಲ್ಲೆಗೆ ಬರುವಂತೆ ಅರಣ್ಯ ಸಚಿವರಿಗೆ ಬಿಜೆಪಿ ರೈತಮೋರ್ಚಾ ಉಪಾಧ್ಯಕ್ಷ ಅನಂತಮೂರ್ತಿ ಹೆಗಡೆ ಆಹ್ವಾನ ನೀಡಿದ್ದಾರೆ. `ಅ ಖರಾಬು’ ಹಾಗೂ `ಬ ಖರಾಬು’ ವಿಷಯದಲ್ಲಿನ ಗೊಂದಲ, ಅರಣ್ಯ ಅತಿಕ್ರಮಣದಾರರು ಅನುಭವಿಸುತ್ತಿರುವ ಸಮಸ್ಯೆ ಬಗ್ಗೆ ಅವರು ಈಶ್ವರ ಖಂಡ್ರೇ ಅವರಿಗೆ ಮಾಹಿತಿ ನೀಡಿದ್ದಾರೆ. `ಉತ್ತರ ಕನ್ನಡ ಜಿಲ್ಲೆ ಅತಿ ಹೆಚ್ಚು ಸೊಪ್ಪಿನ ಬೆಟ್ಟ ಭೂಮಿಯನ್ನು ಹೊಂದಿದ್ದು, ಈ ಸೊಪ್ಪಿನ ಬೆಟ್ಟ ಜಾಗಕ್ಕೆ ಬ್ರಿಟಿಷರ ಕಾಲದಿಂದನೂ ರೈತರು ತೆರಿಗೆ ತುಂಬುತ್ತಿದ್ದಾರೆ. ರೈತರು ತೋಟದ ನಿರ್ವಣೆಗೆ ಸೊಪ್ಪಿನ ಬೆಟ್ಟದಿಂದ ಸೊಪ್ಪು, ಮಣ್ಣು, ದರಕು ಅತ್ಯಗತ್ಯವಾಗಿದೆ. ಆದರೆ, ಇದೀಗ ತೋಟಕ್ಕೆ ಮಣ್ಣು ತೆಗೆಯಲು ಅವಕಾಶ ಸಿಗದೇ ತೋಟಗಳು ಒಣಗುತ್ತಿದೆ. ಹೀಗಾಗಿ ತೋಟದ ಅಭಿವೃದ್ದಿಗಾಗಿ ಪೂರ್ಜರ ಕಾಲದಿಂದಲೂ ಬಿಟ್ಟುಕೊಟ್ಟಿರುವ ಸೊಪ್ಪಿನ ಬೆಟ್ಟ ಪ್ರದೇಶವನ್ನು ಸರಕಾರ ಇದೀಗ ಬ ಖರಾಬ್ ಎಂದು ಪರಿವರ್ತನೆ ಮಾಡುವ ವಿಚಾರವನ್ನು ಕೈಬಿಡಬೇಕು’ ಎಂದವರು ಆಗ್ರಹಿಸಿದ್ದಾರೆ. `ಜಿಲ್ಲೆಯ ಶೇ 80ರಷ್ಟು ಜನ ಸೊಪ್ಪಿನ ಬೆಟ್ಟದಲ್ಲಿ ಮನೆ ನಿರ್ಮಿಸಿಕೊಂಡಿದ್ದು, ಸೊಪ್ಪಿನ ಬೆಟ್ಟ ಬಳಕೆ ಮೊದಲಿನ ಹಾಗೇ ಇರುವಂತೆ ನೋಡಿಕೊಳ್ಳಬೇಕು’ ಎಂದು ಆಗ್ರಹಿಸಿದ್ದಾರೆ. `ಉತ್ತರ ಕನ್ನಡ ಜಿಲ್ಲೆಯ ಜನ ಮನೆಯಿಂದ ಹೊರಗೆ ಕಾಲಿಟ್ಟರೆ ಅರಣ್ಯ ಬರುತ್ತದೆ. ಹೀಗಿರುವಾಗ ಅರಣ್ಯ ಇಲಾಖೆಯವರು ರೈತರ ಮೇಲೆ ದಬ್ಬಾಳಿಕೆ ನಡೆಸುತ್ತಿದ್ದು, ಅತಿಕ್ರಮಣದಲ್ಲಿನ ಅಡಿಕೆ ಮರ ನಾಶ ಮಾಡುತ್ತಿದ್ದಾರೆ. 60 ವರ್ಷಗಳಿಂದ ಸಾಗುವಳಿ ಮಾಡುತ್ತಿದ್ದ ಫಲ ಬರುತ್ತಿದ್ದ ತೋಟಗಳನ್ನು ನಾಶ ಮಾಡಿದ್ದಾರೆ. ಈಗಾಗಲೇ ಅನೇಕರಿಗೆ ನೋಟಿಸ್ ನೀಡಿದ್ದಾರೆ. ಈ ಬಗ್ಗೆಯೂ ಅರಿತು ಜನರ ಸಮಸ್ಯೆ ಅರ್ಥ ಮಾಡಿಕೊಂಡು ಬದುಕಲು ಬಿಡಬೇಕು’ ಎಂದು ಮನವಿ ಮಾಡಿದ್ದಾರೆ. ಬೆಂಗಳೂರಿನಲ್ಲಿ ಅರಣ್ಯ ಸಚಿವ ಈಶ್ವರ ಖಂಡ್ರೆ ಅವರನ್ನು ಭೇಟಿ ಮಾಡಿದ ಅನಂತಮೂರ್ತಿ ಹೆಗಡೆ ಅವರು ಅರಣ್ಯ ಸಚಿವರನ್ನು ಜಿಲ್ಲೆಗೆ ಆಹ್ವಾನಿಸಿದ್ದಾರೆ. ಆ ವೇಳೆ ಅರಣ್ಯ ಸಚಿವರು ಅಧಿಕಾರಿಗಳಿಗೆ ಫೋನ್ ಮಾಡಿ `ಜನರಿಗೆ ಸಮಸ್ಯೆ ಮಾಡಬೇಡಿ’ ಎಂದು ಸೂಚಿಸಿದ್ದಾರೆ. ಬನವಾಸಿ ರೈತನ ನಾಯಕರಾದ ರಮೇಶ ನಾಯಕ್ ಕುಪ್ಪಳ್ಳಿ, ರಾಘವೇಂದ್ರ ನಾಯಕ್ ಬಿಸಿಲುಕೊಪ್ಪ, ಸೋಮಶೇಖರ್ ನಾಯಕ್ ಬಾಸಿ, ಜಗದೀಶ ಹೆಗಡೆ ಬ್ಯಾಗದ್ದೆ ಇತರರು ಇದ್ದರು. - [ಕಾಂಗ್ರೆಸ್ ವಿರುದ್ಧ ಮುತಾಲಿಕ್ ಕಿಡಿ!](https://mobiletime.in/2026/01/muthalik-sparks-anger-against-congress/): ರಫೀಕ್ ಕ್ರೌರ್ಯಕ್ಕೆ ಬಲಿಯಾದ ಯಲ್ಲಾಪುರದ ರಂಜಿತಾ ಕುಟುಂಬದವರನ್ನು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ ಮುತಾಲಿಕ್ ಭೇಟಿಯಾಗಿದ್ದಾರೆ. `ದುಃಖದಲ್ಲಿರುವ ಕುಟುಂಬಕ್ಕೆ ಹಿಂದು ಸಂಘಟನೆಗಳು ಸದಾ ಬೆಂಬಲವಾಗಿ ನಿಲ್ಲುತ್ತದೆ’ ಎಂದವರು ಧೈರ್ಯ ಹೇಳಿದ್ದಾರೆ. ಅದಾದ ನಂತರ ಕಾಂಗ್ರೆಸ್ ಸರ್ಕಾರದ ವಿರುದ್ಧ ಪ್ರಮೋದ ಮುತಾಲಿಕ್ ಕಿಡಿಕಾರಿದ್ದಾರೆ. `ಕಾಂಗ್ರೆಸ್ ಸರ್ಕಾರ ಮತಕ್ಕಾಗಿ ಜಿಹಾದಿಗಳನ್ನು, ಕೊಲೆಗಡುಕರನ್ನು, ಗೋ ಹಂತಕರ ಓಲೈಕೆ ಮಾಡುತ್ತಿದೆ. ಅವರಿಗೆ ನಾಚಿಕೆ, ಮಾನ, ಮರ್ಯಾದೆ, ದೇಶಭಕ್ತಿ ಯಾವುದೂ ಇಲ್ಲ. ಅಮಾನವೀಯತೆಯೇ ಕಾಂಗ್ರೆಸಿನಲ್ಲಿರುವ ಹಿಂದುಗಳನ್ನೂ ನುಂಗಿ ಹಾಕಲಿದೆ’ ಎಂದರು. `ಸರ್ಕಾರ, ಪೊಲೀಸ್ ಇಲಾಖೆ, ನ್ಯಾಯಾಲಯ ಹೇಗೆ ಬೇಕಾದರೂ ನಡೆದುಕೊಳ್ಳುತ್ತದೆ ಎನ್ನುವುದಕ್ಕೆ ಹುಬ್ಬಳ್ಳಿಯ ನೇಹಾ ಕೊಲೆ ಪ್ರಕರಣವೇ ಸಾಕ್ಷಿ. ಅಮಾನವೀಯವಾಗಿ ಆಕೆಯನ್ನು ಕೊಚ್ಚಿ ಕೊಂದಿರುವ ಪ್ರಕರಣಕ್ಕೆ ನ್ಯಾಯಾಲಯ ತಡೆಯಾಜ್ಞೆ ನೀಡಿದೆ. ಇದು ಯಾವ ರೀತಿಯ ನ್ಯಾಯ ವ್ಯವಸ್ಥೆ?’ ಎಂದು ಪ್ರಶ್ನಿಸಿದರು. `ಯಲ್ಲಾಪುರದ ರಂಜಿತಾರನ್ನು ಹಲಾಲ್ ಮಾದರಿಯಲ್ಲಿ ಕತ್ತರಿಸಿ ಹಾಕಿರುವುದು ಖಂಡನೀಯ. ಕೊಲೆ ಮಾಡಿದ ವ್ಯಕ್ತಿ ಸತ್ತರೂ, ಕೊಲೆ, ಗೋಹತ್ಯೆ, ಲವ್ ಜಿಹಾದ್ ನಂತಹ ಕೃತ್ಯ ಮಾಡುವ ಮಾನಸಿಕತೆ ಸಾಯುವುದಿಲ್ಲ. ಈ ಪ್ರವೃತ್ತಿಯನ್ನು ತಡೆಯುವ ಬಗ್ಗೆ ಸರ್ಕಾರ, ರಾಜಕಾರಣಿಗಳು, ಸಮಾಜ ಚಿಂತನೆ ಮಾಡಬೇಕಾಗಿದೆ. ಈ ವಿಚಾರದಲ್ಲಿ ಹಿಂದು ಸಂಘಟನೆಗಳು ಒಗ್ಗೂಡಿ ಬೀದಿಗಿಳಿದು ಹೋರಾಟ ಮಾಡಲಿವೆ’ ಎಂದು ಘೋಷಿಸಿದರು. `ಬಳ್ಳಾರಿಯಲ್ಲಿ ಹತ್ಯೆಯಾದ ಕಾಂಗ್ರೆಸ್ ಕಾರ್ಯಕರ್ತನ ಕುಟುಂಬಕ್ಕೆ ತಕ್ಷಣ ಹೋಗಿ 25 ಲಕ್ಷ ರೂ ಪರಿಹಾರ ನೀಡಲಾಗಿದೆ. ಯಲ್ಲಾಪುರದಲ್ಲಿ ದಲಿತ ಮಹಿಳೆಯ ಕೊಲೆಯಾದರೂ ಜಿಲ್ಲಾ ಉಸ್ತುವಾರಿ ಸಚಿವರು ಭೇಟಿ ನೀಡಿಲ್ಲ’ ಎಂದು ಕಿಡಿಕಾರಿದರು. `ಹೆಣದ ಮೇಲೆ ರಾಜಕೀಯ ಮಾಡಬೇಡಿ ಎಂದು ಕ್ಷೇತ್ರದ ಶಾಸಕರು ಹೇಳುತ್ತಾರೆ. ಅವರಿಗೆ ನಿಜವಾಗಿ ದಲಿತರ ಮೇಲೆ ಕಾಳಜಿ ಇದ್ದರೆ ಮೃತ ಮಹಿಳೆಯ ಕುಟುಂಬಕ್ಕೆ 2 ಎಕರೆ ಕೃಷಿ ಭೂಮಿ, 50 ಲಕ್ಷ ರೂ ಪರಿಹಾರ ಕೊಡಿಸಲಿ’ ಎಂದು ಆಗ್ರಹಿಸಿದರು. `ದಲಿತರನ್ನು ರಾಜಕಾರಣಿಗಳು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ. ಕ್ಷೇತ್ರದ ದಲಿತರೆಲ್ಲ ಮುಂದಿನ ಚುನಾವಣೆಯಲ್ಲಿ ಒಂದು ಮತವನ್ನೂ ಕಾಂಗ್ರೆಸಿಗೆ ಹಾಕದೇ ತಕ್ಕ ಬುದ್ದಿ ಕಲಿಸಬೇಕು’ ಎಂದು ಹೇಳಿದರು. ಕರ್ನಾಟಕ ಉತ್ತರ ರಾಜ್ಯದ ಗೌರವಾಧ್ಯಕ್ಷ ಸತ್ಯಪ್ರಮೋದೇಂದ್ರ ಸರಸ್ವತಿ ಸ್ವಾಮೀಜಿ, ಜಿಲ್ಲಾಧ್ಯಕ್ಷ ಮಂಜುನಾಥ ಕೆ. ಎಚ್, ಪ್ರಾಂತ ಸಹ ಸಂಘಟನಾ ಕಾರ್ಯದರ್ಶಿ ಮಹಾಲಿಂಗ ಐಗಳಿ, ಧಾರವಾಡ ಸಂಘಟನಾ ಕಾರ್ಯದರ್ಶಿ ಮಂಜುನಾಥ ಕಾಟ್ಕರ್, ಹರೀಶ ಪೂಜಾರಿ, ಸೋಮೇಶ್ವರ ನಾಯ್ಕ, ಶ್ರೀಪಾದ ಭಟ್ಟ, ಬಾಬು ಬಾಂದೇಕರ್, ಸಿದ್ದಾರ್ಥ ನಂದೊಳ್ಳಿಮಠ, ಕಿರಣ ಚೌಹಾಣ ಇತರರಿದ್ದರು. - [ಸುಟ್ಟ ಕಾರಿನ ಸುತ್ತ ಅನುಮಾನದ ಹುತ್ತ!](https://mobiletime.in/2026/01/suspicion-surrounds-burnt-car/): ಮೀನು ಮಾರಾಟ ಮಾಡಿ ಬದುಕು ಕಟ್ಟಿಕೊಂಡ ಚಂದ್ರಶೇಖರ ಹಸ್ಲೇರ್ ಅವರಿಗೆ ವಾರ್ಷಿಕ 5 ಲಕ್ಷ ರೂ ಆದಾಯವೇ ಇರಲಿಲ್ಲ. ಅದಾಗಿಯೂ ಅವರು ವರ್ಷಕ್ಕೆ 5 ಲಕ್ಷ ರೂ ಕಂತು ಪಾವತಿಯ ಒಂದುವರೆ ಕೋಟಿ ರೂ ಮೌಲ್ಯದ ಜೀವ ವಿಮೆಗೆ ಪ್ರಯತ್ನಿಸಿದ್ದು, ಅದಾಗಿ ವರ್ಷದೊಳಗೆ ಅವರು ವಿಚಿತ್ರವಾಗಿ ಸಾವನಪ್ಪಿದ್ದಾರೆ! ಸಿದ್ದಾಪುರದ ಕುಡಗುಂದ ಬಳಿಯ ಆಲವಳ್ಳಿಯಲ್ಲಿ ವೀರಭದ್ರ ಹಸ್ಲೇರ್ ಅವರು ವಾಸವಾಗಿದ್ದಾರೆ. ವೀರಭದ್ರ ಹಸ್ಲೇರ್ ಅವರಿಗೆ ಮಂಜುನಾಥ ಹಸ್ಲೇರ್, ಚಂದ್ರಶೇಖರ ಹಸ್ಲೇರ್ ಹಾಗೂ ಉಮೇಶ ಹಸ್ಲರ್ ಎಂಬ ಮೂವರು ಮಕ್ಕಳು. ಈ ಪೈಕಿ ಉಮೇಶ ಹಸ್ಲರ್ ಅವರು ಕೂಲಿ ಕೆಲಸ ಮಾಡಿಕೊಂಡಿದ್ದು, ಮಂಜುನಾಥ ಹಸ್ಲೇರ್ ಹಾಗೂ ಚಂದ್ರಶೇಖರ ಹಸ್ಲೇರ್ ಅವರು ಮೀನು ವ್ಯಾಪಾರ ಮಾಡಿಕೊಂಡು ಬದುಕು ಕಟ್ಟಿಕೊಂಡಿದ್ದರು. ಆ ಕುಟುಂಬದಲ್ಲಿ ವೀರಭದ್ರ ಹಸ್ಲೇರ್ ಅವರ ಪತ್ನಿ ಸಾವಿತ್ರಿ ಹಸ್ಲರ್, ಮಗಳು ಅಕ್ಕಮ್ಮ ಹಸ್ಲೇರ್, ಮಂಜುನಾಥ ಹಸ್ಲರ್ ಅವರ ಪತ್ನಿ ಮಹಾಲಕ್ಷಿ ಹಸ್ಲೇರ್ ಹಾಗೂ ಮಗು ಮೋಕ್ಷಿತ ಹಸ್ಲೇರ್ ವಾಸವಾಗಿದ್ದರು. ಜನವರಿ 7ರ ನಸುಕಿನಲ್ಲಿ ಹೊನ್ನಾವರದ ಸೂಳೆಮುರ್ಕಿ ತಿರುವಿನಲ್ಲಿ ನಡೆದ ಕಾರು ಅಪಘಾತದಲ್ಲಿ ಮಂಜುನಾಥ ಹಸ್ಲೇರ್ ಹಾಗೂ ಚಂದ್ರಶೇಖರ ಹಸ್ಲೇರ್ ಸುಟ್ಟು ಕರಕಲಾಗಿದ್ದಾರೆ. ಈ ಬಗ್ಗೆ ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ದಾಖಲಾದ ಪ್ರಕರಣದಲ್ಲಿ ಪ್ರಮೋದ ನಾಯ್ಕ ಅವರ ಬೈಕುಪಡೆದು ಹೋಗಿದ್ದ ಚಂದ್ರಶೇಖರ ಹಸ್ಲೇರ್ ಅವರು ಪ್ರಮೋದ ನಾಯ್ಕ ಅವರ ಮಧ್ಯಸ್ಥಿಕೆಯಲ್ಲಿಯೇ ಉದಯ ಮಡಿವಾಳ ಅವರ ಕಾರು ಖರೀದಿಸಿದ ಉಲ್ಲೇಖವಿದೆ. ಸಿದ್ದಾಪುರ ಚಂದ್ರಘಟಕಿಯ ಪ್ರಮೋದ ನಾಯ್ಕ ಅವರು ವಿಮಾ ಪ್ರತಿನಿಧಿಯಾಗಿದ್ದು, ಚಂದ್ರಶೇಖರ ಹಸ್ಲೇರ್ ಅವರ ಹೆಸರಿನಲ್ಲಿ ಜೀವ ವಿಮೆ ಮಾಡಿಸಲು ನಾನಾ ಕಡೆ ಓಡಾಟ ಮಾಡಿರುವ ಸಂಗತಿ ಹೊರಬಿದ್ದಿದೆ. ವಿಮಾ ಕಂಪನಿಯೊoದರ ಎಜೆಂಟ್ ಆಗಲು ಅರ್ಜಿ ಸಲ್ಲಿಸಿದ್ದ ಪ್ರಮೋದ ನಾಯ್ಕ ಅವರು ತಾವು ಕೆಲಸಕ್ಕೆ ಸೇರಿದ ದಿನವೇ 5 ಲಕ್ಷ ರೂ ವಿಮಾ ಕಂತಿನ ಪಾಲಿಸಿ ತಂದಿದ್ದರು. ಸಾಮಾನ್ಯವಾಗಿ ಕಂಪನಿಗೆ ಸೇರಿದ ಹೊಸತರಲ್ಲಿ ಎಜೆಂಟರು 10-20 ಸಾವಿರ ರೂ ಕಂತಿನ ಪಾಲಿಸಿ ತರುತ್ತಿದ್ದು, ಪ್ರಮೋದ ನಾಯ್ಕ ಅವರು 5 ಲಕ್ಷ ರೂ ವಿಮಾ ಕಂತಿನ ಪಾಲಿಸಿ ತಂದ ಕಾರಣ ಕಂಪನಿ ಪ್ರತಿನಿಧಿಗಳು ಹುಬ್ಬೇರಿಸಿದ್ದರು. ಆ ಬಗ್ಗೆ ವಿಮಾ ಕಂಪನಿಯವರು ವಿಚಾರಣೆ ನಡೆಸಿದಾಗ ವಿಮೆಗಾಗಿ ಅರ್ಜಿ ಸಲ್ಲಿಸಿದ ಚಂದ್ರಶೇಖರ್ ಹಸ್ಲೇರ್ ಅವರು ಮೀನು ಮಾರಾಟ ಮಾಡಿ ಬದುಕು ಕಟ್ಟಿಕೊಂಡಿರುವುದು ಗೊತ್ತಾಗಿತ್ತು. 5 ಲಕ್ಷ ರೂ ಆದಾಯವೇ ಇಲ್ಲದ ವ್ಯಕ್ತಿ 5 ಲಕ್ಷ ರೂ ವಿಮಾ ಕಂತು ಪಾವತಿ ಮಾಡಲು ಬಂದಿದನ್ನು ನೋಡಿ ಕಂಪನಿಯವರು ಆ ಅರ್ಜಿಯನ್ನು ತಿರಸ್ಕರಿಸಿದ್ದರು. ವಿಮೆ ಕೋರಿ ಕಂಪನಿಗೆ ಶೇ 50ರಷ್ಟು ಹಣ ಪಾವತಿ ಆಗಿದ್ದರೂ ಅದನ್ನು ಕಂಪನಿಯವರು ಹಿಂತಿರುಗಿಸಿದ್ದರು. ತಮ್ಮ ಮೂಲಕ ಬಂದ ವಿಮಾ ಅರ್ಜಿ ತಿರಸ್ಕಾರವಾಗಿರುವ ಬಗ್ಗೆ ಪ್ರಮೋದ ನಾಯ್ಕ ಅವರು ತಕರಾರು ಸಲ್ಲಿಸಿದ್ದರು. `ನೀವು ವಿಮೆ ಕೊಡದಿದ್ದರೆ ಬೇರೆ ಕಂಪನಿಯಲ್ಲಿ ಮಾಡಿಸುವೆ’ ಎಂದು ಸವಾಲು ಹಾಕಿದ್ದರು. ಅದಾದ ನಂತರ ಚಂದ್ರಶೇಖರ್ ಹಸ್ಲೇರ್ ಹೆಸರಿನಲ್ಲಿ ಮತ್ತೊಂದು ಕಂಪನಿ ವಿಮೆ ಮಾಡಿದ ಅನುಮಾನವಿದ್ದು, ಅದು ತನಿಖೆಯಿಂದ ಗೊತ್ತಾಗಬೇಕಿದೆ. ಈ ಎಲ್ಲದರ ನಡುವೆ ಹೊನ್ನಾವರದ ಸುಳೇಮರ್ಕಿ ತಿರುವಿನಲ್ಲಿ ನಡೆದ ಕಾರು ದುರಂತದಲ್ಲಿ ಸಿದ್ದಾಪುರದ ಚಂದ್ರಶೇಖರ ಹಸ್ಲೇರ್ (30) ಅವರ ಜೊತೆ ಅವರ ಅಣ್ಣ ಮಂಜುನಾಥ ಹಸ್ಲೇರ್ (35) ಸಹ ಸುಟ್ಟು ಕರಕಲಾಗಿದ್ದಾರೆ. ಸಿದ್ದಾಪುರದ ಕುಡಗುಂದ ಬಳಿಯ ಅಳವಳ್ಳಿ ತಮ್ಮ ಉಮೇಶ ಹಸ್ಲರ್ ಅವರು ನೀಡಿದ ದೂರಿನ ಪ್ರಕಾರ, ಜನವರಿ 6ರಂದು ಚಂದ್ರಶೇಖರ ಹಸ್ಲರ್ ಅವರು ತಾಳಗುಪ್ಪಾದಲ್ಲಿರುವ ಸಂಬoಧಿಕರ ಮನೆಯಲ್ಲಿದ್ದರು. ಆ ದಿನ ಬೆಳಗ್ಗೆ 7 ಗಂಟೆಗೆ ಪ್ರಮೋದ ನಾಯ್ಕ ಅವರ ಬೈಕುಪಡೆದು ಮಂಜುನಾಥ ಹಸ್ಲರ್ ಅವರು ಚಂದ್ರಶೇಖರ ಹಸ್ಲೇರ್ ಅವರನ್ನು ಮನೆಗೆ ಕರೆತಂದಿದ್ದರು. 10.30ಕ್ಕೆ ಮತ್ತೆ ಪ್ರಮೋದ ನಾಯ್ಕ ಅವರ ಬೈಕಿನಲ್ಲಿ ಶಿರಸಿಗೆ ಹೋಗುವುದಾಗಿ ಹೊರಟ ಅವರಿಬ್ಬರು ಮಧ್ಯಾಹ್ನ ಮನೆಗೆ ಮರಳಲಿಲ್ಲ. ಮಂಜುನಾಥ ಹಸ್ಲರ್ ಹಾಗೂ ಚಂದ್ರಶೇಖರ ಹಸ್ಲರ್ ಅವರು ಕುಮಟಾದ ಉದಯ ಮಡಿವಾಳ ಅವರ ಮಾರುತಿ ಜನ್ ಕಾರು ಖರೀದಿಸಿದ್ದು, ಅದಕ್ಕೆ ಸಹ ಪ್ರಮೋದ ನಾಯ್ಕ ಮಧ್ಯಸ್ಥಿಕೆವಹಿಸಿದ್ದರು. ಜನವರಿ 7ರ ನಸುಕಿನಲ್ಲಿ ಆ ಕಾರು ಸುಟ್ಟು ಕರಕಲಾಗಿದ್ದು ಹಾಗೂ ಅದರಲ್ಲಿ ಇಬ್ಬರು ಶವವಾಗಿರುವ ವಿಷಯವನ್ನು ಸಹ ಪ್ರಮೋದ ನಾಯ್ಕ ಅವರೇ ಉಮೇಶ ಹಸ್ಲರ್ ಅವರಿಗೆ ತಿಳಿಸಿದ್ದರು. ಪ್ರಮೋದ ನಾಯ್ಕ ಅವರು ಉಮೇಶ ಹಸ್ಲರ್ ಅವರಿಗೆ ನೀಡಿದ ಮಾಹಿತಿ ಪ್ರಕಾರ, ಕಾರಿನ ಹಣ ಬಾಕಿ ಪಾವತಿ, ಕಾರು ವರ್ಗಾವಣೆ ಹಾಗೂ ಮೀನು ವ್ಯಾಪಾರ ವಿಷಯವಾಗಿ ಮಂಜುನಾಥ ಹಸ್ಲರ್ ಹಾಗೂ ಚಂದ್ರಶೇಖರ ಹಸ್ಲೇರ್ ಅವರು ಹೊರಟಿದ್ದರು. ಹೊನ್ನಾವರದ ಸೂಳೆಮುರ್ಕಿ ತಿರುವಿನಲ್ಲಿ ಅವರು ಸುಟ್ಟು ಶವವಾದರು. ಈ ವಿಷಯ ಅರಿತು ಜನವರಿ 7ರಂದು ಬೆಳಗ್ಗೆ 8 ಗಂಟೆಗೆ ಸಿದ್ದಾಪುರ ಚಂದ್ರಘಟಕಿಯ ಪ್ರಮೋದ ನಾಯ್ಕ ಅವರು ಈ ವಿಷಯವನ್ನು ಉಮೇಶ ಹಸ್ಲರ್ ಅವರಿಗೆ ತಿಳಿಸಿದ್ದು, ಉಮೇಶ ಹಸ್ಲರ್ ಅವರು ತಂದೆ ವೀರಭದ್ರ ಹಸ್ಲರ್ ಊರಿನವರಾದ ನಾಗರಾಜ ಹಸ್ಲರ್, ಗಣಪತಿ ಹಸ್ಲರ್, ದಿನೇಶ ಹಸ್ಲರ್ ಜೊತೆ ಘಟನಾ ಸ್ಥಳಕ್ಕೆ ಹೋಗಿದ್ದರು. ನಸುಕಿನ 2-4 ಗಂಟೆ ಅವಧಿಯಲ್ಲಿ ಕಾರು ಅಪಘಾತಕ್ಕೀಡಾಗಿರುವುದನ್ನು ಅವರು ಅಂದಾಜಿಸಿದ್ದು, ಇನ್ನೂ ಬೆಳಕು ಹರಿಯದ ಆ ವೇಳೆಯಲ್ಲಿ ಅಣ್ಣ-ತಮ್ಮಂದಿರು ಹೋಗಿದ್ದೇಕೆ? ಎಂಬುದು ಪ್ರಶ್ನೆಯಾಗಿಯೇ ಉಳಿದಿದೆ. - [ಹೊರ ಮಂಗಳವಾರ: ಇಲ್ಲಿ ಬಿಟ್ಟು ಬೇರೆಲ್ಲೂ ಹೋಗಬೇಡಿ!](https://mobiletime.in/2026/01/outside-tuesday-dont-go-anywhere-else-but-here/): ಯಲ್ಲಾಪುರದ ಗಂಟೆ ಗಣಪತಿ ಸನ್ನಿಧಿಯ ಅನತಿ ದೂರದಲ್ಲಿರುವ ಯುಕೆ ನೇಚರ್ ಸ್ಟೇ ಹೊರ ಮಂಗಳವಾರ ಸನ್ನಿವೇಶಕ್ಕೆ ಸಿದ್ಧಗೊಂಡಿದೆ. ಪ್ರಕೃತಿಯನ್ನು ಆಹ್ವಾದಿಸಿ ಬರುವ ಅತಿಥಿಗಳಿಗೆ ಊಟ-ತಿಂಡಿ ಜೊತೆ ಬರಪೂರ ಮನರಂಜನೆಯನ್ನು ನೀಡಲು ವೇದಿಕೆ ಸಜ್ಜಾಗಿದೆ. ಯಲ್ಲಾಪುರದಲ್ಲಿಯೇ ಎಲ್ಲಿಯೂ ಇಲ್ಲದ ಝಿಪ್ ಲೈನ್, ಸ್ಕೈ ಸೈಕ್ಲಿಂಗ್ ಸೇರಿದಂತೆ 11ಕ್ಕೂ ಹೆಚ್ಚು ಸಾಹಸ ಚಟುವಟಿಕೆಗಳ ಜೊತೆ ನೈಸರ್ಗಿಕವಾಗಿ ಹರಿಯುವ ಹಳ್ಳದ ಬಳಿ ಕೃತಕ ಮಳೆ ಸೃಷ್ಠಿಸಿ ಅದರಲ್ಲಿ ಮಿಂದೆಳುವ ಮೋಜಿನ ಆಟವೂ ಇಲ್ಲಿ ನಡೆಯಲಿದೆ. ಈಜು ಬಾರದಿದ್ದವರೂ ನೀರಿಗಿಳಿದು ಆಡಬಹುದಾದ ಈಜು ಕೊಳ ಇಲ್ಲಿದೆ. ಯಲ್ಲಾಪುರ ಗ್ರಾಮ ದೇವಿ ಜಾತ್ರೆಗೆ ದಿನಾಂಕ ಘೋಷಣೆ ಆಗಿದೆ. ಜಾತ್ರೆಗೂ ಮುನ್ನ ಹೊರ ಮಂಗಳವಾರ ಆಚರಣೆ ಸಂಪ್ರದಾಯ ರೂಢಿಯಲ್ಲಿದೆ. ಜಾತ್ರೆ ಪೂರ್ವದ ಮೂರು ಮಂಗಳವಾರದ ಅವಧಿಯಲ್ಲಿ ಪಟ್ಟಣದ ಜನ ಮನೆಯಲ್ಲಿ ಇರುವ ಹಾಗಿಲ್ಲ. ಮನೆಯಿಂದ ಹೊರಗೆ ಹೋಗಿ ಸಂಜೆ ಮರಳಬೇಕು ಎಂಬ ನಿಯಮವಿದೆ. ಹೊರ ಮಂಗಳವಾರದ ಅವಧಿಯಲ್ಲಿ ಎಲ್ಲಿ ಹೋಗಬೇಕು? ಏನು ಮಾಡಬೇಕು? ಎಂದು ಯೋಚಿಸುತ್ತಿದ್ದವರನ್ನು ಯುಕೆ ನೇಚರ್ ಸ್ಟೇ ಆಮಂತ್ರಿಸುತ್ತಿದೆ. ಹೊರ ಮಂಗಳವಾರವನ್ನು ಪ್ರಕೃತಿಯ ಮಡಿಲಲ್ಲಿ ಆಚರಿಸುವ ಹೊಸ ಆಲೋಚನೆಗೆ ಇಲ್ಲಿ ವೇದಿಕೆ ಸೃಷ್ಠಿಸಲಾಗಿದೆ. ಸಣ್ಣ ಮಕ್ಕಳಿಂದ ಹಿಡಿದು ವೃದ್ಧರವರೆಗೆ ಪ್ರತಿಯೊಬ್ಬರಿಗೂ ಅಗತ್ಯವಿರುವ ರೀತಿಯಲ್ಲಿ ಇಲ್ಲಿ ಸಮಯ ಕಳೆಯಲು ಚಟುವಟಿಕೆಗಳನ್ನು ಆಯೋಜಿಸಲಾಗಿದೆ. ಹೊರ ಮಂಗಳವಾರದ ದಿನ ಬರುವ ಅತಿಥಿಗಳಿಗೆ ಬೆಳಗ್ಗೆ ತಿಂಡಿ ಕೊಡಲಾಗುತ್ತದೆ. ಮಧ್ಯಾಹ್ನ ಊಟವನ್ನು ಒದಗಿಸಲಾಗುತ್ತದೆ. ಸಂಜೆ ಅಲ್ಪ ಉಪಹಾರದ ಜೊತೆ ಚಹಾ ವಿತರಣೆ ನಡೆಯುತ್ತದೆ. ಈ ಎಲ್ಲಾ ಸೌಲಭ್ಯಗಳ ಜೊತೆ ಅತಿಥಿಗಳಿಗೆ ಇನ್ನಷ್ಟು ಮನರಂಜನೆ ನೀಡಲು ವಿವಿಧ ಕಲಾವಿದರನ್ನು ಸಹ ಕರೆಯಿಸುವ ಯೋಜನೆಯಿದೆ. ಇಲ್ಲಿನ ವೇದಿಕೆಯೊಂದರಲ್ಲಿ ಭಜನೆ, ಯಕ್ಷಗಾನ, ತಾಳಮದ್ದಲೆ ಸೇರಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. ಅಗತ್ಯವಿದ್ದವರಿಗೆ ಕೊಠಡಿಗಳನ್ನು ಸಹ ನೀಡಲಾಗುತ್ತದೆ. ಶುದ್ಧ ಗಾಳಿ, ಹಸಿರು ಮರಗಳ ನಡುವೆ ಮಕ್ಕಳ ಜೊತೆ ಕಾಲ ಕಳೆಯಲು ಯುಕೆ ನೇಚರ್ ಸ್ಟೇ ಉತ್ತಮ ತಾಣ. ನೀರು-ನೆರಳು ಸಮೃದ್ಧವಾಗಿರುವ ಈ ಪ್ರದೇಶದಲ್ಲಿ ದಿನವಿಡೀ ಆಟ-ಊಟದ ಜೊತೆ ವಿಶ್ರಾಂತಿಪಡೆದು ಮರಳುವವರಿಗೆ ಇನ್ನಷ್ಟು ಚೈತನ್ಯ ನೀಡಲು ನಿರಂಜನ ಭಟ್ಟ ದಂಪತಿ ಶ್ರಮಿಸುತ್ತಿದ್ದಾರೆ. 2026ರ ಜನವರಿ 20, ಜನವರಿ 27 ಹಾಗೂ ಫೆಬ್ರವರಿ 3ರಂದು ಯಲ್ಲಾಪುರದಲ್ಲಿ ಹೊರ ಮಂಗಳವಾರದ ಆಚರಣೆ ನಡೆಯಲಿದೆ. ಈ ಮೂರು ದಿನದ ಅವಧಿಯಲ್ಲಿ ಯುಕೆ ನೇಚರ್ ಸ್ಟೇ ಬರಲು ಬಯಸುವ ವಯಸ್ಕರಿಗೆ 500ರೂ ಶುಲ್ಕವಿದೆ. 5ರಿಂದ 12 ವರ್ಷದ ಮಕ್ಕಳಿಗೆ 250ರೂ ಶುಲ್ಕ ವಿಧಿಸಲಾಗುತ್ತದೆ. 5ವರ್ಷದೊಳಗಿನ ಮಕ್ಕಳಿಗೆ ಸಂಪೂರ್ಣ ಉಚಿತ ಪ್ರವೇಶ. ಊಟ-ತಿಂಡಿಯ ಜೊತೆ ಬಗೆ ಬಗೆಯ ಕ್ರೀಡೆ ಹಾಗೂ ಮನರಂಜನೆಗೆ ಪ್ರತ್ಯೇಕ ಶುಲ್ಕ ಪಾವತಿ ಮಾಡಬೇಕಿಲ್ಲ. ಇನ್ನೂ ಏನಾದರೂ ಅನುಮಾನಗಳಿದ್ದರೆ ಇಲ್ಲಿ ಮೆಸೆಜ್ ಮಾಡಿ: 9449567673 #Sponsored - [ಚಂದನ ಸ್ಕೂಲ್: ಸೇಡು ತೀರಿಸಿಕೊಂಡ ಮಾಜಿ ಉದ್ಯೋಗಿ!](https://mobiletime.in/2026/01/chandana-school-former-employee-takes-revenge-on-founder/): ಶಿರಸಿ ಚಂದನ ಶಿಕ್ಷಣ ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಲ್ ಎಂ ಹೆಗಡೆ ಅವರಿಗೆ ಅದೇ ಸಂಸ್ಥೆಯ ಮಾಜಿ ಉದ್ಯೋಗಿಯೊಬ್ಬರು ಚಪ್ಪಲಿ ಕಾಣಿಸಿದ್ದಾರೆ. ನಡು ರಸ್ತೆಯಲ್ಲಿ ಹೆಗಡೆ ಅವರನ್ನು ನಿಲ್ಲಿಸಿ ಅವರ ಮುಖಕ್ಕೆ ಎಂಜಿಲು ಉಗಿದಿದ್ದಾರೆ. ಶಿರಸಿ ಗೋಳಿಕೊಪ್ಪದ ಲಕ್ಷ್ಮೀನಾರಾಯಣ ಮಹಾಬಲೇಶ್ವರ ಹೆಗಡೆ (58) ಅವರು ತಮಗಾದ ಅವಮಾನದಿಂದ ಕುಗ್ಗಿ ಹೋಗಿದ್ದಾರೆ. ಸಾರ್ವಜನಿಕರ ಎದುರು ತಮ್ಮನ್ನು ಅಡ್ಡಗಟ್ಟಿ ಚಪ್ಪಲಿ ತೋರಿಸಿದಲ್ಲದೇ, ಮುಖಕ್ಕೆ ಎಂಜಿಲು ಉಗಿದು ಅವಮಾನ ಮಾಡಿದ ಚಂದನ ಶಿಕ್ಷಣ ಸಂಸ್ಥೆಯ ಮಾಜಿ ಉದ್ಯೋಗಿ ಸಂತೋಷ ಕೆಪಿ ವಿರುದ್ಧ ಕಾನೂನು ಕ್ರಮಕ್ಕೂ ಆಗ್ರಹಿಸಿದ್ದಾರೆ. ಸದ್ಯ ವಿವೇಕಾನಂದನಗರದಲ್ಲಿ ವಾಸವಾಗಿರುವ ಸಂತೋಷ ಕೆಪಿ ಅವರು ಮೊದಲು ಚಂದನ ಶಿಕ್ಷಣ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದರು. ಸಂತೋಷ ಕೆಪಿ ಅವರು ಸಹ ಶಿಕ್ಷಕರ ಜೊತೆ ಸೇರಿ ತಂಟೆ-ತಕರಾರು ಮಾಡುತ್ತಿದ್ದ ಕಾರಣ ಎಲ್ ಎಂ ಹೆಗಡೆ ಅವರು ಸಂತೋಷ ಕೆಪಿ ಅವರ ವಿರುದ್ಧ ಕ್ರಮ ಜರುಗಿಸಿದ್ದರು. ಸಂತೋಷ ಕೆಪಿ ಅವರಿಗೆ ಬುದ್ದಿ ಹೇಳಿ ಎಚ್ಚರಿಕೆಯನ್ನು ನೀಡಿದ್ದರು. ಅದರಿಂದ ಬೇಸತ್ತ ಸಂತೋಷ ಕೆಪಿ ಅವರು ಚಂದನ ಶಿಕ್ಷಣ ಸಂಸ್ಥೆಗೆ ವಿದಾಯ ಹೇಳಿ ಮತ್ತೊಂದು ಕೆಲಸಕ್ಕೆ ಸೇರಿದ್ದರು. ಇದೇ ಚಂದನ ಶಿಕ್ಷಣ ಸಂಸ್ಥೆಯಲ್ಲಿ ಹಂಚಿನಕೆರೆಯ ಶಾಂತರಾಮ ನಾಯ್ಕ ಅವರು ಸಹ ಕೆಲಸಕ್ಕಿದ್ದರು. ಅವರು ಇದೀಗ ನಿವೃತ್ತರಾಗಿದ್ದು, ಚಂದನ ಸಂಸ್ಥೆಯವರಿoತ ತಮಗಾದ ಅನ್ಯಾಯದ ಬಗ್ಗೆ ಎಲ್ಲಾ ಕಡೆ ಹೇಳುತ್ತಿದ್ದರು. `ತಮಗೆ ಚಂದನ ಸಂಸ್ಥೆಯಿoದ ಹಣ ಬರಬೇಕು. ಅದನ್ನು ಅವರು ಸರಿಯಾಗಿ ಕೊಡುತ್ತಿಲ್ಲ’ ಎಂದು ಶಾಂತರಾಮ ನಾಯ್ಕ ಅವರು ಹೇಳಿಕೊಂಡಿದ್ದರು. ಈಗಾಗಲೇ ಚಂದನ ಶಿಕ್ಷಣ ಸಂಸ್ಥೆ ತೊರೆದಿದ್ದ ಸಂತೋಷ ಕೆಪಿ ಹಾಗೂ ಸಂಸ್ಥೆಯಿoದ ಹಣ ಬರಬೇಕು ಎನ್ನುತ್ತಿದ್ದ ಶಾಂತರಾಮ ನಾಯ್ಕ ಅವರು ಒಂದಾದರು. ಶಾಂತರಾಮ ನಾಯ್ಕ ಅವರ ಸೂಚನೆ ಮೇರೆಗೆ ಸಂತೋಷ ಕೆಪಿ ಅವರು ತಮಗೆ ಅವಮಾನ ಮಾಡಿದ್ದ ಎಲ್ ಎಂ ಹೆಗಡೆ ಅವರ ಸೊಕ್ಕು ಇಳಿಸಲು ನಿರ್ಧರಿಸಿದರು. ಜನವರಿ 2ರ ರಾತ್ರಿ ವಿವೇಕಾನಂದ ನಗರದ ಹುಸುರಿ ರಸ್ತೆಯಲ್ಲಿ ಗಣಪತಿ ದೇವಸ್ಥಾನದ ಬಳಿ ಹೆಗಡೆ ಅವರು ಹೋಗುತ್ತಿದ್ದಾಗ ಅಲ್ಲಿಗೆ ಬಂದ ಸಂತೋಷ ಕೆಪಿ ಅವರು ಹೆಗಡೆ ಅವರ ಕಾರನ್ನು ಅಡ್ಡಗಟ್ಟಿದರು. ಕಾರಿನ ಬಾಗಿಲು ತೆಗೆಯುವಂತೆ ಸೂಚಿಸಿದರು. ಎಲ್ ಎಂ ಹೆಗಡೆ ಅವರು ಕಾರಿನ ಬಾಗಿಲು ತೆಗೆಯುತ್ತಿದ್ದಂತೆ ಸಂತೋಷ ಕೆಪಿ ಅವರು ಅಪ್ಪ-ಅಮ್ಮನ ಹೆಸರನೆಲ್ಲ ತೆಗೆದು ಬಯ್ಯಲು ಶುರು ಮಾಡಿದರು. ಕೆಟ್ಟದಾಗಿ ನಿಂದಿಸಿದ ಅವರು ತಮ್ಮ ಕಾಲಿನಲ್ಲಿದ್ದ ಚಪ್ಪಲಿ ತೆಗೆದು ಹೆಗಡೆ ಅವರ ಮುಖದ ಕಡೆ ಬೀಸಿದರು. ಅದಾದ ನಂತರ ಬಾಯಲ್ಲಿದ್ದ ಎಂಜಲನ್ನು ಹೆಗಡೆ ಅವರ ಮುಖಕ್ಕೆ ಉಗಿದರು. ಸಾರ್ವಜನಿಕರ ಎದುರೇ ಈ ಎಲ್ಲಾ ವಿದ್ಯಮಾನ ನಡೆದಿದ್ದು, ಅದರಿಂದ ಎಲ್ ಎಂ ಹೆಗಡೆ ಅವರು ಆಘಾತಕ್ಕೆ ಒಳಗಾದರು. `ಈ ಹಿಂದೆ ನನ್ನ ವಿರುದ್ಧ ದೂರು ನೀಡಿ ಏನೂ ಮಾಡಲು ಆಗಲಿಲ್ಲ. ಈಗಲೂ ಏನೂ ಮಾಡಲಾಗುವುದಿಲ್ಲ’ ಎಂಬ ಅರ್ಥದಲ್ಲಿ ಸಂತೋಷ ಕೆಪಿ ಅವರು ಹೇಳಿದ್ದು, ಹೆಗಡೆರ ಮೇಲಿದ್ದ ತಮ್ಮ ಸೇಡು ತೀರಿಸಿಕೊಂಡರು. ಎಲ್ ಎಂ ಹೆಗಡೆ ಅವರು ನಿಧಾನವಾಗಿ ಮನೆಗೆ ಹೋಗಿ ಆದ ವಿಷಯಗಳ ಬಗ್ಗೆ ಕುಟುಂಬದವರಲ್ಲಿ ಚರ್ಚಿಸಿದರು. ಕುಟುಂಬದವರ ಸಲಹೆಪಡೆದು ಸಂತೋಷ ಕೆಪಿ ಹಾಗೂ ಅವರಿಗೆ ಉತ್ತೇಜನ ನೀಡಿದ ಶಾಂತರಾಮ ನಾಯ್ಕ ಅವರ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾದರು. ಶಿರಸಿ ಮಾರುಕಟ್ಟೆ ಪೊಲೀಸ್ ಠಾಣೆಗೆ ಆಗಮಿಸಿದ ಹೆಗಡೆ ಅವರು ತಮಗಾದ ಅವಮಾನದ ಬಗ್ಗೆ ದೂರು ಸಲ್ಲಿಸಿದ್ದು, ನ್ಯಾಯಕ್ಕಾಗಿ ಅಂಗಲಾಚಿದರು. ಪೊಲೀಸರು ಪ್ರಕರಣ ದಾಖಲಿಸಿದ್ದು, ಕಾನೂನು ಕ್ರಮದ ಭರವಸೆ ನೀಡಿದ್ದಾರೆ. - [ಹುಟ್ಟುಹಬ್ಬದ ಸಂಭ್ರಮಕ್ಕೆ ಅಡ್ಡಿ!](https://mobiletime.in/2026/01/birthday-celebration-interrupted/): ಮಗಳ ಹುಟ್ಟುಹಬ್ಬದ ಪ್ರಯುಕ್ತ ದಾಂಡೇಲಿಯ ನೆಂಟರ ಮನೆಗೆ ಹೋಗಿದ್ದ ಹಳಿಯಾಳದ ದಂಪತಿಗೆ ಅಲ್ಲಿದ್ದವರು ಸುತ್ತಿಗೆಯಿಂದ ಹೊಡೆದು ಓಡಿಸಿದ್ದಾರೆ! ಹಳಿಯಾಳದ ಯಡೋಗಾ ಬಳಿಯ ಮುದಲ್ಗೇರದಲ್ಲಿ ಯುಪಿಎಸ್ ದುರಸ್ಥಿ ಕೆಲಸ ಮಾಡುವ ಪಾಂಡುರoಗ ಜಯಪ್ಪ ಮುಗೇರಿ ಹಾಗೂ ಅವರ ಪತ್ನಿ ರಂಜಿತಾ ಮುಗೇರಿ ಅವರು ಪೆಟ್ಟು ತಿಂದಿದ್ದಾರೆ. ಜನವರಿ 4ರಂದು ಪಾಂಡುರoಗ ಅವರ ಪುತ್ರಿ ದೃತಿ ಅವರ ಹುಟ್ಟುಹಬ್ಬವಿತ್ತು. ದೃತಿ ಅವರು ದಾಂಡೇಲಿ ಹಾರ್ನೋಡ ಗ್ರಾಮ ಸಾಕ್ಷಿಹಳ್ಳಿಯಲ್ಲಿ ವಾಸವಾಗಿದ್ದು, ಹುಟ್ಟು ಹಬ್ಬಕ್ಕೆ ಶುಭ ಕೋರಲು ಪಾಂಡುರoಗ ಹಾಗೂ ರಂಜಿತಾ ದಂಪತಿ ಹೋಗಿದ್ದರು. ಆದರೆ, ಅಲ್ಲಿದ್ದ ರೇಷ್ಮಾ ಗೋಕುಲ ಮಿರಾಶಿ ಅವರು ಪಾಂಡುರoಗ ಅವರಿಗೆ ಮಗಳನ್ನು ಭೇಟಿ ಆಗಲು ಬಿಡಲಿಲ್ಲ. ಪ್ರಶ್ನಿಸಿದಾಗ ಕತ್ತಿಯಿಂದ ಪಾಂಡುರoಗ ಅವರಿಗೆ ಹೊಡೆಯಲು ಶುರು ಮಾಡಿದರು. ತಡೆಯಲು ಬಂದ ಪಾಂಡುರoಗ ಅವರ ಪತ್ನಿ ರಂಜತಾ ಮೇಲೆ ಸುತ್ತಿಗೆಯಿಂದ ಬಡಿದು ಗಾಯ ಮಾಡಿದರು. ಆ ವೇಳೆ ಅಲ್ಲಿದ್ದ ಅಕ್ಷತಾ ರಾಘವೇಂದ್ರ, ಗೋಕುಲ ಲೋಕಪ್ಪ ಮಿರಾಶಿ ಹಾಗೂ ಪ್ರತೀಕಾ ಗೋಕುಲ ಮಿರಾಶಿ ಅವರು ಈ ದಂಪತಿಯನ್ನು ಹಿಡಿದು ಥಳಿಸಿದರು. ಅವರೆಲ್ಲರೂ ಸೇರಿ ಆ ದಂಪತಿಯನ್ನು ಮನೆಯಿಂದ ಹೊರದಬ್ಬಿದರು. ತಮಗಾದ ನೋವಿನ ಬಗ್ಗೆ ಪಾಂಡುರoಗ ಮೋಗ್ರಿ ಅವರು ದಾಂಡೇಲಿ ಪೊಲೀಸರಿಗೆ ದೂರಿದ್ದು, ಪೊಲೀಸರು ವಿಚಾರಣೆ ನಡೆಸಿದ್ದಾರೆ.   - [ಸರ್ಕಾರಿ ಸೇವಕನಿಗೆ ಜೀವ ಬೆದರಿಕೆ!](https://mobiletime.in/2026/01/life-threat-to-government-servant/): ಕಾರವಾರದ ಅರಗಾ ನೇವಲ್ ಬೇಸಿನಲ್ಲಿ ಕೆಲಸ ಮಾಡುವ ಕೇಂದ್ರ ಸರ್ಕಾರಿ ಉದ್ಯೋಗಿ ಗುರುರಾಜ ಕಲ್ಲೋಳ್ಳಿ ಅವರಿಗೆ ಜೀವ ಬೆದರಿಕೆ ಬಂದಿದೆ. ಅಲ್ಲಿಯೇ ಕೆಲಸ ಮಾಡುವ ಕಾರ್ಮಿಕ ಮುಖಂಡ ದೀಪಕ ತಾಂಡೇಲ್ ಅವರು ಬೆದರಿಕೆ ಒಡ್ಡಿದ್ದಾರೆ. ಕಾರವಾರದ ಬಸ್ ಡಿಪೋ ಬಳಿಯ ಪಾರಿಜಾತ ಅಪಾರ್ಟಮೆಂಟಿನಲ್ಲಿ ಗುರುರಾಜ್ ಶ್ರೀಶೈಲ್ ಕಲ್ಲೋಳ್ಳಿ ಅವರು ವಾಸವಾಗಿದ್ದಾರೆ. ಭಾರತೀಯ ನೌಕಾನೆಲೆಯ ನೇವಲ್ ಬೇಸ್ ಒಳಗೆ ಅವರು ಕರ್ತವ್ಯದಲ್ಲಿದ್ದಾರೆ. ಅಂಕೋಲಾದ ಹಾರವಾಡ ಸೀಬರ್ಡ ಕಾಲೋನಿಯ ದೀಪಕ ತಾಂಡೇಲ್ ಅವರು ಸೂಚಿಸಿದ ಕೆಲಸವೊಂದನ್ನು ಮಾಡದ ಕಾರಣ ಗುರುರಾಜ ಕಲ್ಲೋಳ್ಳಿ ಅವರಿಗೆ ಬೆದರಿಕೆ ಬಂದಿದೆ. ದೀಪಕ ತಾಂಡೇಲ್ ಅವರು ಗುರುರಾಜ ಕಲ್ಲೋಳ್ಳಿ ಅವರು ಯುನಿಪಾರಂ ಧರಿಸಿರುವಾಗಲೇ ಅವರ ಕಾಲರ್ ಪಟ್ಟಿ ಹಿಡಿದು ದಬಾಯಿಸಿದ್ದಾರೆ. ಯೂನಿಯನ್ ಪ್ರಮುಖರಾಗಿರುವ ದೀಪಕ ತಾಂಡೇಲ್ ಅವರು ಕಾರ್ಮಿಕರಿಗೆ ಬೈದ ಕಾರಣ ಕಾರ್ಮಿಕರು ಮುನಿಸಿಕೊಂಡಿದ್ದಾರೆ. ಹೀಗಿರುವಾಗ ಡಿಸೆಂಬರ್ 24ರಂದು ನೇವಲ್ ಬೇಸಿನ ಶಿಫ್ ರಿಪೇರ್ ಯಾರ್ಡಿನಲ್ಲಿ ಗುರುರಾಜ ಕಲ್ಲೋಳ್ಳಿ ಅವರು ಕೆಲಸ ಮಾಡುತ್ತಿದ್ದು, ಪಿ 6ನಲ್ಲಿ ನಡೆಯುವ ಪೋರೋಪ್ಲಿಪ್ಟ್ ಕೆಲಸ ಬಂದ್ ಮಾಡುವಂತೆ ದೀಪಕ ತಾಂಡೇಲ್ ಅವರು ಸೂಚಿಸಿದ್ದಾರೆ. ಆ ವೇಳೆ ಗುರುರಾಜ ಕಲ್ಲೋಳ್ಳಿ ಅವರು `ಮೇಲಧಿಕಾರಿಯಿಂದ ಸೂಚನೆ ಬಂದರೆ ಮಾತ್ರ ಬಂದ್ ಮಾಡುವೆ’ ಎಂದಿದ್ದಾರೆ. ಈ ವಿಷಯವನ್ನು ಗುರುರಾಜ ಕಲ್ಲೋಳ್ಳಿ ಅವರು ಮೇಲಧಿಕಾರಿಗಳ ಗಮನಕ್ಕೂ ತಂದಿದ್ದು, ಇದರಿಂದ ದೀಪಕ ತಾಂಡೇಲ್ ಸಿಟ್ಟಾಗಿದ್ದಾರೆ. ಅದಾದ ನಂತರ ದೀಪಕ ತಾಂಡೇಲ್ ಅವರು ನೇವಲ್ ಬೇಸ್ ಯಸ್ ಅಪಾರ್ಟಮೆಂಟಿಗೆ ನುಗ್ಗಿ ಅಲ್ಲಿದ್ದ ಗುರುರಾಜ ಕಲ್ಲೋಳ್ಳಿ ಕಲ್ಲೋಳ್ಳಿ ಅವರ ಕೊರಳಪಟ್ಟಿ ಹಿಡಿದಿದ್ದಾರೆ. `ಹೊರಗಡೆ ಸಿಗು, ನಿನ್ನ ಹಾಗೂ ನಿನ್ನ ಕುಟುಂಬವನ್ನು ನೋಡಿಕೊಳ್ಳುವೆ’ ಎಂದು ಬೆದರಿಸಿದ್ದಾರೆ. ಆ ಬೆದರಿಕೆಯಿಂದ ಕಂಗಾಲಾದ ಗುರುರಾಜ ಕಲ್ಲೋಳ್ಳಿ ಅವರು ಕಾರವಾರ ಗ್ರಾಮೀಣ ಪೊಲೀಸ್ ಠಾಣೆಗೆ ತೆರಳಿ ದೂರಿದ್ದಾರೆ. - [ಮಗುವಿನ ಕೈ ಮುರಿದ ಪುಸ್ತಕದ ಭಾರ!](https://mobiletime.in/2026/01/the-weight-of-a-book-broke-a-childs-hand/): ಭಾರವಾದ ಪಟ್ಟಿ-ಪುಸ್ತಕ ಹೊತ್ತು ಶಾಲೆಗೆ ಹೋಗುವ ಸಮರ್ಥ ನಾಯ್ಕ ಅವರ ಕೈ ಊದಿಕೊಂಡಿದೆ. ತೋಳಿನಲ್ಲಿರುವ ಎಲುಬಿಗೆ ಪೆಟ್ಟು ಬಿದ್ದ ಕಾರಣ ಸಮರ್ಥ ನಾಯ್ಕ ಅವರು ಆಸ್ಪತ್ರೆಗೆ ತೆರಳಿ ಚಿಕಿತ್ಸೆಪಡೆದಿದ್ದಾರೆ. ಕಾರವಾರದ ಸೆಂಟ್ ಮೈಕಲ್ ಶಾಲೆಯಲ್ಲಿ ಸಮರ್ಥ ನಾಯ್ಕ ಅವರು 6ನೇ ತರಗತಿ ಓದುತ್ತಿದ್ದಾರೆ. ನಿತ್ಯ ಬ್ಯಾಗಿನ ತುಂಬ ಪಟ್ಟಿ-ಪುಸ್ತಕದ ಬಾರ ಹೊತ್ತು ಅವರು ಶಾಲೆಗೆ ಬರುತ್ತಾರೆ. ಶಾಲೆಯ ಬ್ಯಾಗ್ ಬಾರಕ್ಕೆ ಅವರ ಕೈ ಬುಜವೊಂದು ಊದಿಕೊಂಡಿದೆ. ಅದರಿಂದ ಸಮರ್ಥ ನಾಯ್ಕ ಸಾಕಷ್ಟು ನೋವು ಅನುಭವಿಸಿದ್ದು, ಅದನ್ನು ಸಹಿಸಿಕೊಳ್ಳಲಾಗದೇ ಆಸ್ಪತ್ರೆಗೆ ಹೋಗಿದ್ದಾರೆ. ಕಾರವಾರ ವೈದ್ಯಕೀಯ ವಿಜ್ಞಾನ ಕಾಲೇಜಿನ ವೈದ್ಯಾಧಿಕಾರಿಗಳು ಬಾಲಕನ್ನು ಪ್ರಶ್ನಿಸಿದ್ದಾರೆ. ಬಾರವಾದ ವಸ್ತು ಎತ್ತಿದ ಬಗ್ಗೆ ಕೇಳಿದಾಗ ಶಾಲಾ ಬ್ಯಾಗ್ ಬಗ್ಗೆ ಬಾಲಕ ಮಾಹಿತಿ ನೀಡಿದ್ದು, ಅಲ್ಲಿದ್ದವರು ಸಹ ಶಾಲೆಯ ಬ್ಯಾಗ್ ತೂಕ ನೋಡಿದ್ದಾರೆ. ವಿದ್ಯಾರ್ಥಿಯ ದೇಹದ ಸಾಮರ್ಥ್ಯಕ್ಕಿಂತಲೂ ಬ್ಯಾಗ್ ಬಾರವಾಗಿರುವುದು ಆಗ ದೃಢವಾಗಿದೆ. ತುರ್ತಾಗಿ ವೈದ್ಯರು ಕೈಗೆ ಚಿಕಿತ್ಸೆ ನೀಡಿದ್ದಾರೆ. `ಅತಿ ಬಾರದ ಪಠ್ಯದಿಂದ ಮಕ್ಕಳಿಗೆ ಬೆನ್ನು ನೋವು ಶುರುವಾಗುತ್ತಿದೆ. ಅತಿ ಬಾರದ ಪಠ್ಯವನ್ನು ಮಕ್ಕಳಿಂದ ಹೋರಿಸಬಾರದು’ ಎಂದು ಜನಶಕ್ತಿ ವೇದಿಕೆ ಅಧ್ಯಕ್ಷ ಮಾಧವ ನಾಯಕ ಅವರು ಆಗ್ರಹಿಸಿದ್ದಾರೆ. ಈ ಬಗ್ಗೆ ಮಾಧವ ನಾಯಕ ಅವರು ಶಿಕ್ಷಣ ಇಲಾಖೆ ಜಂಟಿ ಆಯುಕ್ತ ಈಶ್ವರ ಉಳಾಗಡ್ಡಿ ಅವರಿಗೆ ಫೋನ್ ಮಾಡಿದ್ದಾರೆ. ಆಗ, `ಆಯಾ ದಿನದ ಶಾಲಾ ಪಠ್ಯಕ್ಕೆ ಸೀಮಿತವಾಗಿರುವ ಪುಸ್ತಕವನ್ನು ಮಾತ್ರ ಮಕ್ಕಳು ತರಬೇಕು. ಅಗತ್ಯವಿರುವುದಕ್ಕಿಂತ ಹೆಚ್ಚಿನ ಪಠ್ಯ ಹೊತ್ತು ತರದಂತೆ ಶಾಲಾ ಆಡಳಿತ ಮಂಡಳಿಯವರು ಕ್ರಮ ಜರುಗಿಸಬೇಕು. ಈ ಬಗ್ಗೆ ಆಡಳಿತ ಮಂಡಳಿಯವರಿಗೆ ಸೂಚನೆ ನೀಡಲಾಗುತ್ತದೆ’ ಎಂದು ಈಶ್ವರ ಉಳಾಗಡ್ಡಿ ಅವರು ಹೇಳಿದ್ದಾರೆ. - [ಕಂದಕಕ್ಕೆ ಬಿದ್ದ ಕಾರು: ಎರಡು ಜನ ಸುಟ್ಟು ಕರಕಲು!](https://mobiletime.in/2026/01/a-car-fell-into-a-ditch-two-people-burned-to-death/): ಪದೇ ಪದೇ ಅಪಘಾತವಾಗುತ್ತಿರುವ ಹೊನ್ನಾವರದ ಸೂಳೆಮುರ್ಕಿ ತಿರುವಿನಲ್ಲಿ ಕಳೆದ ರಾತ್ರಿಯೂ ಕಾರೊಂದು ಬೆಂಕಿಗೆ ಆಹುತಿಯಾಗಿದೆ. ಕಾರಿನಲ್ಲಿದ್ದ ಇಬ್ಬರು ಗುರುತು ಸಿಗದಷ್ಟರ ಮಟ್ಟಿಗೆ ಸುಟ್ಟು ಕರಕಲಾಗಿದ್ದಾರೆ. ಈವರೆಗೆ ಬಂದ ಮಾಹಿತಿ ಪ್ರಕಾರ ಸಿದ್ದಾಪುರ ವ್ಯಕ್ತಿಗಳಿಬ್ಬರು ಇಲ್ಲಿ ಸುಟ್ಟು ಬೂದಿಯಾಗಿದ್ದಾರೆ. ದುರಂತದಲ್ಲಿ ಕಾರಿನ ಜೊತೆ ನಂಬರ್ ಪ್ಲೇಟ್ ಸಹ ಕರಗಿದ್ದರಿಂದ ಖಚಿತ ಮಾಹಿತಿ ಸಿಗುತ್ತಿಲ್ಲ. ಕಾರು ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ದುರಂತ ನಡೆದಿರುವ ಬಗ್ಗೆ ಶಂಕಿಸಲಾಗಿದೆ. ಈ ಭೀಕರ ಕಾರು ಅಪಘಾತದಿಂದ ಕಾರಿಗೆ ಬೆಂಕಿ ಹತ್ತಿಕೊಂಡಿದ್ದು, ಕ್ಷಣ ಮಾತ್ರದಲ್ಲಿ ಕಾರು ಸುಟ್ಟಿದೆ. ಬೆಂಕಿಯಲ್ಲಿ ಉರಿದ ಕಾರು ಕಂದಕಕ್ಕೆ ಬಿದ್ದಿದ್ದು, ಕಾರಿನ ಒಳಗಿದ್ದವರು ಹೊರಗೆ ಬರಲಾಗದೇ ಅಲ್ಲಿಯೇ ಪ್ರಾಣ ಕಳೆದುಕೊಂಡಿದ್ದಾರೆ. ಸದ್ಯ ಪೊಲೀಸರು ಸ್ಥಳದಲ್ಲಿದ್ದಾರೆ. ಅಗ್ನಿಶಾಮಕ ಸಿಬ್ಬಂದಿಯೂ ಅಲ್ಲಿಯೇ ಇದ್ದಾರೆ. ಮಂಗಳವಾರ ರಾತ್ರಿ ದುರಂತ ನಡೆದಿದ್ದು, ಬುಧವಾರ ಗೊತ್ತಾಗಿದೆ. ಸದ್ಯ ಸಾವನಪ್ಪಿದವರ ಪತ್ತೆ ಕಾರ್ಯ ನಡೆದಿದ್ದು, ಕೆಲ ಅನುಮಾನಗಳ ಮೇಲೆ ಅವರ ಸಂಬoಧಿಕರ ವಿಚಾರಣೆ ನಡೆದಿದೆ. - [ಸಹಾಯ ಟ್ರಸ್ಟಿಗೆ ಸಹಾಯ ಮಾಡಿದ ಸಹಕಾರಿ](https://mobiletime.in/2026/01/a-cooperative-that-helped-the-aid-trustee/): ಶಿರಸಿಯ ಸಹಾಯ ಟ್ರಸ್ಟ್ ಸಹಯೋಗದಲ್ಲಿ ಕಸ್ತೂರಬಾ ನಗರದಲ್ಲಿ ನಡೆಯುತ್ತಿರುವ ಲಿಟ್ಲಪ್ಲವರ್ ಸ್ಕೂಲ್’ಗೆ ಭೂತೇಶ್ವರ ಪತ್ತಿನ ಸಹಕಾರಿ ಸಂಘದಿoದ ಸಹಾಯ ಮಾಡಲಾಗಿದೆ. ಆ ಶಾಲೆಯ ಮಕ್ಕಳಿಗೆ ಅಗತ್ಯವಿರುವ ಸಮವಸ್ತ್ರವನ್ನು ಭೂತೇಶ್ವರ ಪತ್ತಿನ ಸಹಕಾರಿ ಸಂಘ ನೀಡಿದೆ. ಶಾಲೆಯ ವಾರ್ಷಿಕೋತ್ಸವ ಸಮಾರಂಭದ ಅವಧಿಯಲ್ಲಿ ಭೂತೇಶ್ವರ ಪತ್ತಿನ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಾಹಕ ವಿನಾಯಕ ಶೆಟ್ಟಿ ಅವರು ಈ ನೆರವು ನೀಡಿದರು. `ಸರ್ಕಾರದ ಯಾವುದೇ ನೆರವಿಲ್ಲದೇ ಅತ್ಯುತ್ತಮವಾಗಿ ಈ ಶಾಲೆ ನಡೆಯುತ್ತಿದೆ. ಶಾಲೆಯ ಅಭಿವೃದ್ಧಿಗೆ ಎಲ್ಲ ಸಹಕಾರ ಅಗತ್ಯವಿದ್ದು, ಸಮಾಜುಮುಖಿ ಕೆಲಸ ಮಾಡುವ ಶಾಲೆಗೆ ನೆರವು ನೀಡಲು ಸದಾ ಬದ್ಧ’ ಎಂದವರು ಹೇಳಿದರು. ಸಹಾಯ ಟ್ರಸ್ಟ್ ಅಧ್ಯಕ್ಷ ಸತೀಶ್ ಶೆಟ್ಟಿ ಮಾತನಾಡಿ `ಲಿಟ್ಲಪ್ಲವರ್ ಸ್ಕೂಲಿನಲ್ಲಿ ಎಲ್ ಕೆ ಜಿಯಿಂದ ಐದನೇ ತರಗತಿಯವರೆಗೆ ನೂರಕ್ಕೂ ಅಧಿಕ ಮಕ್ಕಳಿದ್ದಾರೆ. ಮಕ್ಕಳ ಅನುಕೂಲಕ್ಕಾಗಿ ಕರಾಟೆ ವಿಭಾಗವನ್ನೂ ಸಹ ಆರಂಭಿಸಲಾಗಿದೆ’ ಎoದು ತಿಳಿಸಿದರು. ಹೊಸ ಬಟ್ಟೆ ಸ್ವೀಕರಿಸಿದ ಮಕ್ಕಳು ಸಂತಸಹAಚಿಕೊAಡರು. ನಗರಸಭೆ ಸದಸ್ಯ ಖಾದರ್ ಆನವಟ್ಟಿ, ನ್ಯಾಯವಾದಿ ಎಸ್ ಎನ್‌ನಾಯ್ಕ, ಕೆಡಿಸಿಸಿ ನಿವೃತ್ತ ಅಧಿಕಾರಿ ಎಮ್ ಡಿ ಪ್ರಕಾಶ ಮುದ್ಗುಣಿ, ಸಹಾಯ ಟ್ರಸ್ಟ್ ಕಾರ್ಯದರ್ಶಿ ಶಾರದಾ ಶೆಟ್ಟಿ, ಮುಖ್ಯೋದ್ಯಾಪಕಿ ಸರೋಜಾ ನಾಯ್ಕ ಇದ್ದರು. ಮಕ್ಕಳಿಂದ ನಡೆದ ಮನರಂಜನಾ ಕಾರ್ಯಕ್ರಮಗಳು ಗಮನಸೆಳೆದವು. - [ಸರಳ ವಿವಾಹದಲ್ಲಿಯೇ ಸಡಗರ: ಮದುವೆ ಮಾಡಿಸಿ.. ದುಡ್ಡುಗಳಿಸಿ!](https://mobiletime.in/2026/01/a-simple-wedding-is-a-big-deal-get-married-and-make-money/): ಸರಳ ವಿವಾಹ ಉತ್ತೇಜನಕ್ಕಾಗಿ ಸರ್ಕಾರವೇ ಹೊಸ ಯೋಜನೆ ಜಾರಿಗೆ ತಂದಿದೆ. ಸರಳ ವಿವಾಹ ಆಗುವವರಿಗೆ ಹಾಗೂ ಸರಳ ವಿವಾಹ ಮಾಡಿಸುವವರಿಗೆ ಸರ್ಕಾರ ಪ್ರೋತ್ಸಾಹಧನ ನೀಡುತ್ತಿದೆ. ಈಚೆಗೆ ಎಲ್ಲಡೆ ಅದ್ಧೂರಿ ಮದುವೆ ನಡೆಯುತ್ತಿದೆ. ಅನೇಕರು ಸಾಲ ಮಾಡಿ ಮಕ್ಕಳ ಮದುವೆ ಮಾಡುತ್ತಿದ್ದಾರೆ. ಐಷಾರಾಮಿಯ ಆಸೆ, ಪ್ರತಿಷ್ಠೆಯ ಸಂಕೇತದಿAದಾಗಿ ಅನಗತ್ಯ ವೆಚ್ಚದ ಆಡಂಬರದ ಕಾರ್ಯಕ್ರಮಗಳು ಹೆಚ್ಚಾಗಿದೆ. ವಧು-ವರರು ಜೀವನಪೂರ್ತಿ ಬಾಳಿ ಬದಕಲು ಬೇಕಾಗುವಷ್ಟು ಹಣ-ಒಡವೆ ಮದುವೆಯ ಒಂದು ದಿನಕ್ಕೆ ವೆಚ್ಚ ಮಾಡುವವರಿದ್ದಾರೆ. ಇಂಥ ಮದುವೆಯ ಪ್ರಮಾಣ ತಗ್ಗಿಸಲು ಸರ್ಕಾರ ಹೊಸ ಆಲೋಚನೆಯೊಂದನ್ನು ಜಾರಿಗೆ ತಂದಿದೆ. ದುAದು ವೆಚ್ಚಗಳಿಂದ ಕೂಡಿದ ವಿವಾಹದ ಬದಲು ಸರಳ ವಿವಾಹ ಆದವರಿಗೆ ಸರ್ಕಾರ ಸಹಾಯಧನ ನೀಡುತ್ತದೆ. ಅದರೊಂದಿಗೆ ಸಾಮೂಹಿಕವಾಗಿ ಸರಳ ವಿವಾಹ ಆಯೋಜಿಸುವವರಿಗೆ ಸಹ ಸರ್ಕಾರದಿಂದ ಹಣ ಸಿಗಲಿದೆ. ಸರಳ ವಿವಾಹಕ್ಕೆ ಪ್ರೋತ್ಸಾಹ ಯೋಜನೆಯಡಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಈ ಯೋಜನೆಯನ್ನು ಜಾರಿಗೆ ತಂದಿದೆ. ಸ್ವಯಂ ಸೇವಾ ಸಂಸ್ಥೆಗಳ ಮೂಲಕ ನಡೆಯುವ ಸಾಮೂಹಿಕ ವಿವಾಹಗಳ ವೆಚ್ಚಗಳಿಗಾಗಿ ಪ್ರತಿ ಜೋಡಿಗೆ 50 ಸಾವಿರ ರೂ ಹಾಗೂ ಸಾಮೂಹಿಕ ವಿವಾಹವನ್ನು ಆಯೋಜಿಸುವ ಆಯೋಜಕರ ಖರ್ಚು-ವೆಚ್ಚಗಳಿಗಾಗಿ ಪ್ರತಿ ಜೋಡಿಗೆ 5 ಸಾವಿರ ರೂ ನೀಡಲಾಗುತ್ತದೆ. `ಸರಳ ವಿವಾಹಕ್ಕೆ ಅರ್ಜಿ ಸಲ್ಲಿಸುವ ವಧು-ವರರು ಕರ್ನಾಟಕ ರಾಜ್ಯದ ನಿವಾಸಿಯಾಗಿರಬೇಕು. ವಧುವಿಗೆ ಕನಿಷ್ಠ 18 ವರ್ಷದಿಂದÀ ಗರಿಷ್ಠ 42 ವರ್ಷ ಹಾಗೂ ವರನಿಗೆ ಕನಿಷ್ಠ 21 ವರ್ಷದಿಂದÀ ಗರಿಷ್ಠ 45 ವರ್ಷವಾಗಿರಬೇಕು. ವಧು-ವರರ ಒಟ್ಟು ವಾರ್ಷಿಕ ಆದಾಯ 5 ಲಕ್ಷ ರೂಪಾಯಿ ಒಳಗಿರಬೇಕು’ ಎಂಬ ನಿಯಮವಿದೆ. ಅದರೊಂದಿಗೆ ಒಂದು ಕುಟುಂಬದಲ್ಲಿ ಒಬ್ಬರು ಮಾತ್ರ ಈ ಸೌಲಭ್ಯವನ್ನು ಜೀವನದಲ್ಲಿ ಒಂದು ಬಾರಿ ಮಾತ್ರ ಪಡೆಯಲು ಅವಕಾಶವಿದೆ. ಇನ್ನೂ ವರನಿಗೆ ಜೀವಂತ ಪತ್ನಿ ಅಥವಾ ವಧುಗೆ ಜೀವಂತ ಪತಿ ಇದ್ದಲ್ಲಿ ಈ ಯೋಜನೆ ಅನ್ವಯಿಸುವುದಿಲ್ಲ. ವಧು-ವರರು ಕನಿ಼ಷ್ಠ 7 ದಿನ ಮುಂಚಿತವಾಗಿ ವಿವಾಹವಾಗುವ ಸ್ಥಳದ ಜಿಲ್ಲೆಗಳಲ್ಲ್ಲಿಯೇ ಅರ್ಜಿ ಸಲ್ಲಿಸುವುದು ಅನಿವಾರ್ಯ. ಸಾಮೂಹಿಕ ವಿವಾಹಗಳಲ್ಲಿ ಕನಿಷ್ಟ 5 ಜೋಡಿಗಳು ಭಾಗವಹಿಸಬೇಕು’ ಎಂಬ ನಿಯಮವಿದೆ. ಸದ್ಯ ಅಲ್ಪ ಸಂಖ್ಯಾತರ ಸಮುದಾಯ ಎಂದು ಗುರುತಿಸಲಾದ ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಬೌದ್ಧ, ಸಿಖ್ಖ್ ಮತ್ತು ಪಾರ್ಸಿಗಳಲ್ಲಿ ಆರ್ಥಿಕವಾಗಿ ಹಿಂದುಳಿದವರಿಗೆ ಸರಳ ವಿವಾಹಕ್ಕೆ ಪ್ರೋತ್ಸಾಹ ಯೋಜನೆ ಸಿಗಲಿದೆ. ಯಾವುದೇ ಸಮುದಾಯದ ಕನಿಷ್ಠ 5 ಜೋಡಿ ವಿವಾಹವಾದಲ್ಲಿ ಅದರಲ್ಲಿ ಮೂರು ಅಲ್ಪಸಂಖ್ಯಾತರ ಜೋಡಿಯಿದ್ದರೂ ಯೋಜನೆ ಸಿಗಲಿದೆ. ಸಮಾಜ ಸೇವಕರು, ಸಮಾಜ ಸೇವಾ ಸಂಸ್ಥೆಯವರ ಜೊತೆ ವಧು-ವರರು ಸಹ ಯೋಜನೆಗೆ ಅರ್ಜಿ ಸಲ್ಲಿಸಲು ಅರ್ಹರು. ವiಂಜೂರಾದ ಪ್ರೋತ್ಸಾಹಧನದ ಹಣವನ್ನು ವಧುವಿನ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತದೆ. ಈ ಯೋಜನೆಯ ಕುರಿತು ಹೆಚ್ಚಿನ ಮಾಹಿತಿಗಾಗಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಇಲಾಖಾ ಸಹಾಯವಾಣಿ ಗೆ ಫೋನ್ ಮಾಡಿ: 8277799990 - [ಅಧಿಕಾರಿಗಳನ್ನು ಇಕ್ಕಟ್ಟಿಗೆ ಸಿಲುಕಿಸಿದ ಬಹಿಷ್ಕಾರದ ಬಿಸಿ!](https://mobiletime.in/2026/01/the-heat-of-the-boycott-has-put-the-authorities-in-a-dilemma/): ಕುಮಟಾ ಲುಕ್ಕೇರಿಯ ಗಣಪತಿ ಅಂಬಿಗ ಅವರ ಕುಟುಂಬದವರು ಬಹಿಷ್ಕಾರಕ್ಕೆ ಒಳಗಾಗಿದ್ದಾರೆ. ಆ ಬಹಿಷ್ಕಾರದ ಬಿಸಿಯಿಂದ ನೊಂದ ಗಣಪತಿ ಅಂಬಿಗ ಅವರು ನ್ಯಾಯಕ್ಕಾಗಿ ಸರ್ಕಾರದ ಮೊರೆ ಹೋಗಿದ್ದಾರೆ. ಕುಮಟಾದ ಲುಕ್ಕೇರಿ ಗ್ರಾಮದಲ್ಲಿ ಮೀನುಗಾರ ಅಂಬಿಗ ಸಮಾಜದ 76 ಮನೆಗಳಿವೆ. ಆ ಊರಿನಲ್ಲಿ ಎಲ್ಲರೂ ಪರಸ್ಪರ ಸಹಕಾರದಿಂದ ಜೀವನ ನಡೆಸಿಕೊಂಡು ಬಂದಿದ್ದಾರೆ. ಹೀಗಿರುವಾಗ ಹೋಳಿ ಹಬ್ಬದ ಅವಧಿಯಲ್ಲಿ ನಡೆದ ವಿದ್ಯಮಾನವೊಂದು ಗಣಪತಿ ಅಂಬಿಗ ಅವರ ಕುಟುಂಬಕ್ಕೆ ಸಮಸ್ಯೆ ಮಾಡಿಕೊಟ್ಟಿದೆ. ಗಣಪತಿ ಅಂಬಿಗ ಅವರ ಮನೆ ಮುಂದಿನ ಜಮೀನಿನಲ್ಲಿ ಇನ್ನಿತರ ಕೆಲ ಮನೆಯವರ ಶೌಚಾಲಯದ ಪೈಪ್ ಹಾದು ಹೋಗಿದ್ದು, ಆ ಪೈಪ್ ಒಡೆದ ಬಗ್ಗೆ ಧ್ವನಿ ಎತ್ತಿರುವುದೇ ಗಣಪತಿ ಅಂಬಿಗ ಅವರ ಕುಟುಂಬದವರ ಬಹಿಷ್ಕಾರಕ್ಕೆ ಮೂಲ ಕಾರಣ. `ಪೈಪ್ ಲೈನ್ ಒಡೆದು ದುರ್ವಾಸನೆ ಬರುತ್ತಿದ್ದು, ಅದನ್ನು ತೆರವು ಮಾಡಿ’ ಎಂದು ಗಣಪತಿ ಅಂಬಿಗ ಅವರು ಗ್ರಾಮ ಪಂಚಾಯತಗೆ ಮನವಿ ನೀಡಿದ್ದಾರೆ. ಅದನ್ನು ಸಹಿಸದ ಕೆಲವರು `ಗಣಪತಿ ಅಂಬಿಗ ಅವರ ಮಗನ ನಡತೆ ಸರಿಯಿಲ್ಲ’ ಎಂದು ಊರಿನಲ್ಲಿ ಸುದ್ದಿ ಹಬ್ಬಿಸಿದ್ದಾರೆ. ಅವರ ಮಗ ಕೇಶವ ಅಂಬಿಗ ಅವರ ಮದುವೆಗೂ ಕಲ್ಲು ಹೊಡೆದಿದ್ದಾರೆ. ಜೊತೆಗೆ ಕೆಲ ಮುಖಂಡರೇ ಗಣಪತಿ ಅಂಬಿಗ ಅವರಿಗೆ ಬಹಿಷ್ಕಾರ ಹಾಕಿದ್ದು, `ತಾವು ಹೇಳಿದ ಹಾಗೇ ಕೇಳಿದರೆ ಮಾತ್ರ ಬಹಿಷ್ಕಾರ ಹಿಂಪಡೆಯುತ್ತೇವೆ’ ಎಂದು ಬೆದರಿಸಿದ್ದಾರೆ. ಗಣಪತಿ ಅಂಬಿಗ ಅವರ ದೂರಿನ ಪ್ರಕಾರ, ಅವರ ಕುಟುಂಬದವರ ಬಳಿ ಯಾರೂ ಮಾತನಾಡುವ ಹಾಗಿಲ್ಲ. ಮಾತನಾಡಿದರೆ ಅಂಥವರ ವಿರುದ್ಧವೂ ಕ್ರಮ ಜರುಗಿಸುವುದಾಗಿ ಮುಖಂಡರು ಹೇಳಿದ್ದಾರೆ. ಬಹಿಷ್ಕಾರ ಹಿಂಪಡೆಯಬೇಕು ಎಂದಾದರೆ ಗಣಪತಿ ಅಂಬಿಗ ಅವರು ಎಲ್ಲಾ ಮನೆಗಳಿಗೂ ತೆಂಗಿನ ಕಾಯಿ ಹೋಳು ಹಂಚಬೇಕು ಎಂದು ತಾಕೀತು ಮಾಡಿದ ಬಗ್ಗೆ ಆರೋಪಿಸಲಾಗಿದೆ. ಊರಿನ ಮುಖಂಡರ ಬೆದರಿಕೆ ಭಯದಿಂದ ಗಣಪತಿ ಅಂಬಿಗ ಅವರ ಕುಟುಂಬದವರನ್ನು ಊರಿನ ಜನ ದೂರವಿಟ್ಟಿದ್ದಾರೆ. ಅಧಿಕಾರಿಗಳ ವಿರುದ್ಧ ಆಕ್ಷೇಪ: ಗಣಪತಿ ಅಂಬಿಗ ಅವರು ತಮಗಾದ ಅನ್ಯಾಯದ ಬಗ್ಗೆ ಕಂದಾಯ ಹಾಗೂ ಪೊಲೀಸ್ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ಆದರೆ, ಅಧಿಕಾರಿಗಳು ಸಹ ಮುಖಂಡರ ಮಾತನ್ನೇ ಪುನರುಚ್ಚರಿಸಿದ ಬಗ್ಗೆ ಜನಸಾಮಾನ್ಯರ ಸಮಾಜ ಕಲ್ಯಾಣ ಕೇಂದ್ರದ ಅಧ್ಯಕ್ಷ ಆಗ್ನೇಲ್ ರೋಡ್ರಿಗಸ್ ದೂರಿದ್ದಾರೆ. ಕೇಶವ ಅಂಬಿಗ ಅವರ ಮನೆಗೆ ಜನಸಾಮಾನ್ಯರ ಸಮಾಜ ಕಲ್ಯಾಣ ಕೇಂದ್ರದವರು ಭೇಟಿ ನೀಡಿ ಸಮಸ್ಯೆ ಆಲಿಸಿದ್ದು, ಈ ಬಗ್ಗೆ ಮಾನವ ಹಕ್ಕು ಆಯೋಗ ಹಾಗೂ ಸಮಾಜ ಕಲ್ಯಾಣ ಇಲಾಖೆ ಸಚಿವರಿಗೆ ಪತ್ರ ಬರೆದಿದ್ದಾರೆ. `ಸುಗ್ಗಿ ಕಾರ್ಯಕ್ರಮದ ಅವಧಿಯಲ್ಲಿ ಆದ ಜಗಳದಿಂದ ಕುಟುಂಬವೊoದು ಬಹಿಷ್ಕಾರಕ್ಕೆ ಒಳಗಾಗಿದೆ. ಆ ಕುಟುಂಬದವರು ಸಾರ್ವಜನಿಕ ಬಾವಿಯ ನೀರು ಬಳಸಬಾರದು. ಆ ಮಕ್ಕಳು ಶಾಲೆಯಲ್ಲಿಯೂ ಇನ್ನಿತರ ಮಕ್ಕಳ ಜೊತೆ ಬೆರೆಯಬಾರದು’ ಎಂದು ಫಾರ್ಮಾನು ಹೊರಡಿಸಿದ ಬಗ್ಗೆ ದೂರಲಾಗಿದೆ. `ಬಹಿಷ್ಕಾರ ತೆಗೆಯಬೇಕಾದರೆ 50 ಸಾವಿರ ರೂ ದಂಡದ ಜೊತೆ ಎಲ್ಲಾ ಮನೆಗಳಿಗೂ ತೆಂಗಿನ ಕಾಯಿ ಹಂಚುವAತೆ ತಾಕೀತು ಮಾಡಲಾಗಿದ್ದು, ತಹಶೀಲ್ದಾರ್ ಶ್ರೀಕೃಷ್ಣ ಕಾಮುಕರ್ ಹಾಗೂ ಪಿಐ ಯೋಗೇಶ್ ಅವರು ಮನೆಗೆ ಬಂದು ಮಾತುಕಥೆ ಮಾಡಿದ್ದಾರೆ. ಆದರೆ, ಅವರು ಸಹ ತೆಂಗಿನಕಾಯಿ ಚೂರು ಹಂಚಿ ಸಮಸ್ಯೆ ಬಗೆಹರಿಸಿಕೊಳ್ಳುವಂತೆ ಸೂಚಿಸಿದ್ದಾರೆ’ ಎಂದು ಆಗ್ನೇಲ್ ರೋಡಿಗ್ರಿಸ್ ಅವರು ವಿವರಿಸಿದ್ದಾರೆ. ಸಾಮಾಜಿಕ ಕಾರ್ಯಕರ್ತ ಸುಧಾಕರ್ ನಾಯ್ಕ್, ನಿವೃತ್ತ ಸರಕಾರಿ ಅಧಿಕಾರಿ ನಾಗೇಶ್, ಹನುಮು ಪಟಗಾರ, ಗಣಪತಿ ಪಟಗಾರ, ಸಂಜಯ ಬಾಡ್ಕರ, ಸ್ಟೈಫನ್ ನರೋನ, ಈಶ್ವರ ನಾಯ್ಕ, ತಿಮ್ಮು ಗೌಡ, ಸುಬ್ಬಿ ಅಂಬಿಗ ಅವರು ಈ ವೇಳೆ ಇದ್ದರು. - [ಸ್ಕೋಡ್‌ವೆಸ್ ಪರಿಕಲ್ಪನೆ.. ಶಾಸಕರ ಉದ್ಘಾಟನೆ: ಶಾಲಾ ಮಕ್ಕಳಿಗೆ ಶೌಚಾಲಯ ಕೊಡುಗೆ](https://mobiletime.in/2026/01/skodves-concept-mla-inauguration-toilet-gift-to-school-children/): `ದೈಹಿಕ ಆರೋಗ್ಯ ಕಾಪಾಡಿಕೊಳ್ಳುವಲ್ಲಿ ಸ್ವಚ್ಚತೆಯ ಪ್ರಾಮುಖ್ಯತೆ ಅತಿ ಮುಖ್ಯ’ ಎಂದು ಶಿರಸಿ ಕ್ಷೇತ್ರ ಶಾಸಕ ಭೀಮಣ್ಣ ನಾಯ್ಕ ಅವರು ಹೇಳಿದ್ದಾರೆ. ದಾಸನಕೊಪ್ಪದಲ್ಲಿರುವ ಮಲೆನಾಡು ಪ್ರೌಢಶಾಲೆಯ ಆವಾರದಲ್ಲಿ ನಾರಾಯಣ ಹೃದಯಾಲಯದವರ ಸಿ ಎಸ್ ಆರ್ ಅನುದಾನದ ಅಡಿ ಸ್ಕೋಡ್‌ವೆಸ್ ಸಂಸ್ಥೆಯವರು ಶೌಚಾಲಯ ನಿರ್ಮಿಸಿದ್ದು, ಭೀಮಣ್ಣ ನಾಯ್ಕ ಅವರು ಆ ಶೌಚಾಲಯವನ್ನು ಮಕ್ಕಳ ಬಳಕೆಗೆ ಒಪ್ಪಿಸಿದರು. ಈ ವೇಳೆ ಮಾತನಾಡಿದ ಅವರು `ಶೌಚಾಲಯಗಳು ವಿದ್ಯಾರ್ಥಿಗಳ ಮಾನಸಿಕ, ದೈಹಿಕ ಆರೋಗ್ಯ ಕಾಪಾಡುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ’ ಎಂದರು. `ಈಗಲೂ ಗ್ರಾಮೀಣ ಪ್ರದೇಶದ ಹಲವಾರು ಮಕ್ಕಳಲ್ಲಿ ಶೌಚ ಪ್ರಕ್ರಿಯೆಗಳ ಕುರಿತು ಮುಕ್ತವಾಗಿ ಮಾತನಾಡುವ ವಾತಾವರಣವಿಲ್ಲದೇ ಇರುವುದರಿಂದ ಸಕಾಲದಲ್ಲಿ ಶೌಚಾಲಯಗಳನ್ನು ಬಳಸದೇ ದೈಹಿಕ ಹಿಂಸೆ, ಮಾನಸಿಕ ಒತ್ತಡಕ್ಕೆ ಒಳಗಾಗುತ್ತಿದ್ದಾರೆ. ಇದರಿಂದ ತರಗತಿಗಳಲ್ಲಿ ಕ್ರೀಯಾಶೀಲರಾಗಿ ಭಾಗವಹಿಸಲು ಸಾಧ್ಯವಾಗದೇ ಉತ್ತಮ ಅಂಕಗಳಿಸುವಲ್ಲಿ ವಿಫಲರಾಗುತ್ತಿದ್ದಾರೆ. ಅದನ್ನು ಅರಿತು ಇಲ್ಲಿ ಶೌಚಾಲಯ ನಿರ್ಮಿಸಲಾಗಿದ್ದು, ವಿದ್ಯಾರ್ಥಿಗಳು ಶೌಚಾಲಯಗಳನ್ನು ಸಮರ್ಪಕವಾಗಿ ಬಳಸಬೇಕು’ ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು. ಮುಖ್ಯ ಅತಿಥಿಗಳಾಗಿದ್ದ ಬೆಂಗಳೂರಿನ ನಾರಾಯಣ ಹೃದಯಾಲಯದ ಸಿ ಎಸ್ ಆರ್ ವಿಭಾಗದ ಡೆಪ್ಯುಟಿ ಮ್ಯಾನೇಜರ್ ಮುತ್ತುರಾಜ ಮಾತನಾಡಿ, `ಗ್ರಾಮೀಣ ಆರೋಗ್ಯ ಕ್ಷೇತ್ರದಲ್ಲಿನ ವೈದ್ಯರ ಕೊರತೆಯನ್ನು ನೀಗಿಸಲು ನಾರಾಯಣ ಹೃದಯಾಲಯದ ಡಾ ದೇವಿಪ್ರಸಾದ ಶೆಟ್ಟಿಯವರ ಆಶಯದಂತೆ ಸ್ಥಳೀಯ ವಿದ್ಯಾರ್ಥಿಗಳ ಕೌಶಲ್ಯವನ್ನಾಧರಿಸಿ ವೈದ್ಯಕೀಯ ಶಿಕ್ಷಣಕ್ಕೆ ಸಹಾಯ ಮಾಡುವುದರೊಂದಿಗೆ ಗ್ರಾಮೀಣ ವೈದ್ಯರ ಕೊರತೆಯನ್ನು ನೀಗಿಸಲು ಶ್ರಮಿಸಲಾಗುತ್ತಿದೆ’ ಎಂದರು. ಅಧ್ಯಕ್ಷತೆ ವಹಿಸಿದ್ದ ಸ್ಕೊಡ್‌ವೆಸ್‌ನ ಕಾರ್ಯನಿರ್ವಾಹಕ ನಿರ್ದೇಶಕ ವೆಂಕಟೇಶ ನಾಯ್ಕ ಮಾತನಾಡಿ `ಋತುಚಕ್ರದ ಸಮಯದಲ್ಲಿ ಸಮರ್ಪಕ ಶೌಚಾಲಯಗಳಿಲ್ಲದೇ ತರಗತಿಗೆ ಗೈರು ಆಗುತ್ತಿರುವ ಅಂಶವು ಸಂಸ್ಥೆಯ ಗಮನಕ್ಕೆ ಬಂದಿರುವುದರಿAದ ಗ್ರಾಮೀಣ ವಿದ್ಯಾರ್ಥಿನಿಯರ ಋತುಚಕ್ರದ ಸಂದರ್ಭದಲ್ಲೂ ಅನುಕೂಲವಾಗುವಂತಹ ಶೌಚಾಲಯಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ಅಲ್ಲದೇ ಶೌಚದ ನಂತರದಲ್ಲಿ ಅನುಸರಿಸಬೇಕಾದ ಸ್ವಚ್ಛತೆಯ ಬಗ್ಗೆಯೂ ಕೂಡ ತರಬೇತಿ ನೀಡಲಾಗುತ್ತಿದೆ’ ಎಂದರು. ವೇದಿಕೆಯಲ್ಲಿ ಶಿವಮೊಗ್ಗ ನಾರಾಯಣ ಹಾಸ್ಪಿಟಲ್‌ನ ಸೀನಿಯರ್ ಮ್ಯಾನೇಜರ್ ಶೈಲೇಶ್ ಎಸ್ ಎನ್, ಬದನಗೋಡ ಗ್ರಾಮ ಪಂಚಾಯಿತಿಯ ಅಧ್ಯಕ್ಷ ನಟರಾಜ್ ಹೊಸೂರ್, ಉಪಾಧ್ಯಕ್ಷೆ ಅಕ್ಕಮಹಾದೇವಿ ಆಲೂರು, ಮಲೆನಾಡು ಪ್ರೌಢಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯರಾದ ಶೈಲೇಶ್ ಕೊಯಿನ್ ಸಂದರ್ಭೋಚಿತವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಮಲೆನಾಡು ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ಗೋಪಾಲಕೃಷ್ಣ ಬಿ ಕೆ ಅವರು ಸ್ವಾಗತಿಸಿದರು. ಮಲೆನಾಡು ಪ್ರೌಢಶಾಲೆಯ ದೈಹಿಕ ಶಿಕ್ಷಕ ದಯಾನಂದ ವಂದಿಸಿದರು. ಸ್ಕೊಡ್‌ವೆಸ್ ಸಂಸ್ಥೆಯ ಕಾರ್ಯಕ್ರಮಾಧಿಕಾರಿ ನಾರಾಯಣ ಹೆಗಡೆ ಕಾರ್ಯಕ್ರಮ ನಿರ್ವಹಿಸಿದರು. ವಿರೇಂದ್ರ ಸಿ ಜೊತೆ ಸಿಬ್ಬಂದಿ ಕಾರ್ಯಕ್ರಮ ಸಂಘಟಿಸಿದ್ದರು. - [ಕೋರ್ಟ ಸಿಬ್ಬಂದಿಗೆ ದಮ್ಕಿ!](https://mobiletime.in/2026/01/threat-to-the-court-staff/): ಭಟ್ಕಳ ನ್ಯಾಯಾಲಯದ ವಾರೆಂಟ್ ಜಾರಿಗೆ ಮುರುಡೇಶ್ವರಕ್ಕೆ ಹೋಗಿದ್ದ ಕೋರ್ಟಿ ಸಿಬ್ಬಂದಿ ಗಣಪತಿ ನಾಯ್ಕ ಅವರ ಮೇಲೆ ಮಹಮದ್ ಇರ್ಫಾನ್ ಅಬುಕರ್ ಹಜೀಅಮೀನ್ ಅವರು ಕೈ ಮಾಡಿದ್ದಾರೆ. ಅವರ ಅಣ್ಣ ಪಿಯಾನ್ ಅಬುಬಕರ್ ಹಜಿಅಮೀನ್ ಅವರು ಸಹ ಸರ್ಕಾರಿ ಸೇವಕರನ್ನು ನಿಂದಿಸಿದ್ದಾರೆ. ಮಾವಿನಖುರ್ವೆ ಬಂದರು ಬಳಿಯ ತಲಗೋಡು ಸೀತಾರಾಮಮನೆಯಲ್ಲಿ ಗಣಪತಿ ಹನುಮಂತ ನಾಯ್ಕ ಅವರು ವಾಸವಾಗಿದ್ದಾರೆ. ಕಳೆದ 19 ವರ್ಷಗಳಿಂದ ಅವರು ಕೋರ್ಟ ಸಿಬ್ಬಂದಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಎರಡು ತಿಂಗಳಿನಿoದ ಅವರು ಭಟ್ಕಳ ಕೋರ್ಟಿಗೆ ನಿಯೋಜನೆಯಾಗಿದ್ದು, ಕೋರ್ಟಿನ ಸೂಚನೆ ಮೇರೆಗೆ ಅವರು ಆರೋಪಿಗಳಿಗೆ ವಾರೆಂಟ್ ಮುಟ್ಟಿಸುತ್ತಿದ್ದಾರೆ. ಹೀಗಿರುವಾಗ ಜನವರಿ 6ರಂದು ಶ್ರೀರಾಮ ಫೈನಾನ್ಸಿನ ವಂಚನೆ ಪ್ರಕರಣವೊಂದು ಗಣಪತಿ ನಾಯ್ಕ ಅವರ ಎದುರಿಗೆ ಬಂದಿತು. ನ್ಯಾಯಾಲಯದ ಸೂಚನೆ ಪ್ರಕಾರ ಅವರು ಮುರುಡೇಶ್ವರ ಬಳಿಯ ಮಾವಳ್ಳಿ ನ್ಯಾಶನಲ್ ಕಾಲೋನಿಯ ಮಹಮದ್ ಇರ್ಫಾನ್ ಅಬುಕರ್ ಹಜೀಅಮೀನ್ ಅವರಿಗೆ ವಾರೆಂಟ್ ಜಾರಿಗೊಳಿಲು ಮುಂದಾದರು. ಅದಕ್ಕಾಗಿ ಶ್ರೀರಾಮ ಫೈನಾನ್ಸಿನ ಸಿಬ್ಬಂದಿ ರೋಹಿತ ಶೆಟ್ಟಿ ಹಾಗೂ ಗಣೇಶ ನಾಯ್ಕ ಅವರ ಜೊತೆ ಆರೋಪಿ ಮನೆಗೆ ಹೋದರು. ದಸ್ತಗಿರಿ ವಾರೆಂಟ್ ಬಗ್ಗೆ ಅರಿತ ಆರೋಪಿ ಮಹಮದ್ ಸರ್ಕಾರಿ ಸಿಬ್ಬಂದಿ ಗಣಪತಿ ನಾಯ್ಕ ಅವರ ಮೈ ಮೇಲೆ ಕೈ ಹಾಕಿದರು. ತಮ್ಮ ಅಣ್ಣ ನೂಪಿಯಾನ್ ಅಬುಬಕರ್ ಹಜಿಅಮೀನ್ ಅವರನ್ನು ಮಹಮದ್ ಸ್ಥಳಕ್ಕೆ ಕರೆದು ವಾರೆಂಟ್ ನೀಡಲು ಬಂದವರನ್ನು ಬೆದರಿಸಿದರು. `ಇಲ್ಲಿ ಏಕೆ ಬಂದಿದ್ದೀರಿ. ಇಂತ ಹಲವು ವಾರೆಂಟ್ ನಾನು ನೋಡಿದ್ದೇನೆ. ನಿಮಗೆ ಏನು ಮಾಡಬೇಕು ಎಂದು ಗೊತ್ತು’ ಎಂದು ಅವರಿಬ್ಬರು ಸೇರಿ ಬೆದರಿಕೆ ಹಾಕಿದರು. ಫೈನಾನ್ಸ ಸಿಬ್ಬಂದಿಗೆ ಸಹ ಕೆಟ್ಟದಾಗಿ ನಿಂದಿಸಿದರು. ಈ ವಿಷಯದ ಬಗ್ಗೆ ಹನುಮಂತ ನಾಯ್ಕ ಅವರು ಪೊಲೀಸ್ ದೂರು ನೀಡಿದ್ದು, ಮುರುಡೇಶ್ವರ ಪೊಲೀಸರು ತನಿಖೆ ಶುರು ಮಾಡಿದ್ದಾರೆ. - [ಕುಟುಂಬ ಕಲಹಕ್ಕೆ ಕಲ್ಪವೃಕ್ಷ ಕಾರಣ!](https://mobiletime.in/2026/01/the-kalpa-tree-is-the-cause-of-family-strife/): ಅಬ್ದುಲ್ ಅವರ ಮನೆಯ ತೆಂಗಿನ ಮರ ಗಫರ್ ಅವರ ಮನೆ ಕಡೆ ವಾಲಿದ್ದು, ಆ ಮರದ ಫಸಲು ಪದೇ ಪದೇ ಗಫರ್ ಅವರ ಮನೆ ಮೇಲೆ ಬೀಳುತ್ತಿದೆ. ಇದೇ ವಿಷಯವಾಗಿ ಅವರಿಬ್ಬರ ಕುಟುಂಬದ ನಡುವೆ ಜಗಳವಾಗಿದೆ. ಭಟ್ಕಳದ ಜಾಲಿಯ ಟಗ್ಗರಗೋಡ ನಿವಾಸಿ ಅಬ್ದುಲ್ ಸಮೀರ ಮುಲ್ಲಾ ತಂದೆ ಅಬ್ದುಲ್ ಖಾದೀರ ಮುಲ್ಲಾ (36) ಅವರು ತಮ್ಮ ನೆರೆಮನೆಯವರಾದ ಮೋಹಿದ್ದಿನ ಸಾಬ ಹೊಸ್ಮನಿ (60) ಮತ್ತು ಗಫರ ಮೋಹಿದ್ದಿನ ಸಾಬ ಹೊಸ್ಮನಿ (38) ವಿರುದ್ಧ ಕಿಡಿಕಾರಿದ್ದಾರೆ. ಅವರಿಬ್ಬರ ನಡುವೆ ಗಲಾಟೆಯ ಬಗ್ಗೆ ಅವರು ಭಟ್ಕಳ ಶಹರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಆಪಾದಿತರ ಹಿತ್ತಲಿನಲ್ಲಿದ್ದ ತೆಂಗಿನ ಮರಗಳು ದೂರುದಾರರ ಮನೆಯ ಮುಂದಿನ ರಸ್ತೆಯ ಮೇಲೆ ವಾಲಿಕೊಂಡು ಬಂದಿದ್ದು ಮರಗಳಲ್ಲಿನ ಒಣಗಿದ ಕಾಯಿಗಳು ಮತ್ತು ಗರಿಗಳು ಮೈ ಮೇಲೆ ಬಿಳುತ್ತದೆ. ಆಪಾದಿತರ ಮನೆಯ ಗಟಾರದ ನೀರು ಸಹ ಮನೆಯ ಹಿತ್ತಲಿಗೆ ಬರುತ್ತಿದೆ ಎಂದವರು ದೂರಿದ್ದಾರೆ. ಜನವರಿ 5ರಂದು ತೆಂಗಿನ ಮರದ ಗರಿ ಅಬ್ದುಲ್ಲಾ ಅವರ ತಾಯಿಯ ಮೇಲೆ ಬಿದ್ದ ವಿಚಾರವಾಗಿ ಆ ಕುಟುಂಬಗಳ ನಡುವೆ ಜಗಳವಾಗಿದೆ. ಈ ವೇಳೆ ಬಿಬಿ ಫಾತೀಮಾ ಅವರು ಮಾತನಾಡಿದಾಗ ಗಫರ್ ಅವರು ಬಿಬಿ ಫಾತೀಮಾ ಅವರಿಗೆ ಬೈದು ಕಲ್ಲಿನಿಂದ ಹೊಡೆದಿದ್ದಾರೆ. ಈ ವಿಷಯವಾಗಿ ಅಬ್ದುಲ್ಲಾ ಅವರು ಪೊಲೀಸ್ ದೂರು ನೀಡಿದ್ದಾರೆ. - [ಪುರೋಹಿತನ ಪ್ರೀತಿಗೆ ಕೊಕ್ಕೆ: ಆತ್ಮಹತ್ಯೆ!](https://mobiletime.in/2026/01/the-hook-for-a-priests-love-suicide/): ಅಂಕೋಲಾದ ಪವನ್ ಭಟ್ಟ ಆತ್ಮಹತ್ಯೆಯ ಹಾದಿ ಹಿಡಿದಿದ್ದಾರೆ. ಪ್ರೀತಿಸಿದ ಯುವತಿ ಮದುವೆಗೆ ಒಪ್ಪದ ಕಾರಣ ಅವರು ಈ ದುಡುಕು ನಿರ್ಧಾರ ಮಾಡಿದ್ದಾರೆ. ಅಂಕೋಲಾದ ಅಸ್ಲಗದ್ದೆಯಲ್ಲಿ ಪವನ್ ಭಟ್ಟ (24) ಅವರು ವಾಸವಾಗಿದ್ದರು. ಪುರೋಹಿತರಾಗಿ ಅವರು ಬದುಕು ಕಂಡುಕೊoಡಿದ್ದರು. ಪವನ್ ಭಟ್ಟ ಅವರು ಅದೇ ಊರಿನ ಯುವತಿಯನ್ನು ಪ್ರೀತಿಸುತ್ತಿದ್ದರು. ಆ ಯುವತಿ ಸಹ ಪವನ್ ಭಟ್ಟ ಅವರ ಪ್ರೀತಿಗೆ ಮನಸೋತಿದ್ದರು. ಆದರೆ, ಎಷ್ಟು ಬಾರಿ ವಿನಂತಿಸಿದರೂ ಆ ಯುವತಿ ಪುರೋಹಿತ ಪವನ್ ಭಟ್ಟ ಅವರನ್ನು ಮದುವೆ ಆಗಲು ಮಾತ್ರ ಒಪ್ಪಿಗೆ ನೀಡಿರಲಿಲ್ಲ. `ಮದುವೆ ಆಗು’ ಎಂದು ಪವನ್ ಭಟ್ಟ ಕೊನೆಯದಾಗಿ ಯುವತಿಯನ್ನು ಕೇಳಿಕೊಂಡರು. ಪುರೋಹಿತರಾಗಿರುವ ಕಾರಣ ವಿವಾಹ ಆಗಲು ಮನಸ್ಸಿಲ್ಲ ಎಂದು ಯುವತಿ ಹೇಳಿದನ್ನು ಕೇಳಿ ಪವನ್ ಭಟ್ಟ ಆಘಾತಕ್ಕೆ ಒಳಗಾದರು. ಪ್ರೀತಿಸಿದ ಯುವತಿ ಮದುವೆಗೆ ಒಪ್ಪದ ಕಾರಣ ಪವನ್ ಭಟ್ಟ ಮಾನಸಿಕವಾಗಿ ಕುಗ್ಗಿದ್ದರು. ಜೀವನ ಪೂರ್ತಿ ಜೊತೆಯಾಗಿರಲು ಬಯಸಿದ ಹುಡುಕಿ ದೂರವಾಗುತ್ತಿರುವುದನ್ನು ಅರಿತು ಅವರು ಆತ್ಮಹತ್ಯೆಯ ನಿರ್ಧಾರ ಮಾಡಿದರು. ಅದರಂತೆ, ಮಂಗಳವಾರ ಪವನ್ ಭಟ್ಟ ತಮ್ಮ ಬದುಕಿಗೆ ವಿದಾಯ ಹೇಳಿದರು. ನೇಣಿಗೆ ಶರಣಾಗಿ ಅವರು ಪ್ರಾಣ ಬಿಟ್ಟರು. - [ಬೋಟಿನಿಂದ ಬಿದ್ದ ಮೀನುಗಾರ: ಸಾವು](https://mobiletime.in/2026/01/fisherman-dies-after-falling-from-boat/): ಭಟ್ಕಳದ ಮಾವಿನಕೂರ್ವಾ ಬಂದರಿನ ಮೂಲಕ ಮೀನುಗಾರಿಕೆಗೆ ನಡೆಸುವ ಸಿದ್ಧತೆಯಲ್ಲಿದ್ದ ಶಂಕರ ನಾಯ್ಕ ಅವರು ಶವವಾಗಿದ್ದಾರೆ. ಮೀನುಗಾರಿಕೆಗೆ ತೆರಳುವ ವೇಳೆ ಶಂಕರ್ ನಾಯ್ಕ ಅವರು ಕಾಲು ಜಾರಿ ಸಮುದ್ರಕ್ಕೆ ಬಿದ್ದು ಸಾವನಪ್ಪಿದ್ದಾರೆ. ಕಾಯ್ಕಿಣಿ ಮೂಡಕೇರಿ ಬಸ್ತಿಯಲ್ಲಿ ಶಂಕರ ತಂದೆ ಸಣ್ಣತಮ್ಮ ನಾಯ್ಕ (40) ಅವರು ವಾಸವಾಗಿದ್ದರು. ಅವರು ಕಳೆದ ರಾತ್ರಿ ಮೀನುಗಾರಿಕೆಗೆ ಹೊರಡುವ ಉದ್ದೇಶದಿಂದ ಬಂದರಿನಲ್ಲಿ ನಿಲ್ಲಿಸಿದ್ದ ದೋಣಿಯಲ್ಲಿ ಬಲೆ ಸಿದ್ಧಪಡಿಸುತ್ತಿದ್ದರು. ಈ ವೇಳೆ ಅವರು ದಕ್ಕೆಯಿಂದ ಬೋಟಿಗೆ ಹತ್ತಲು ಯತ್ನಿಸಿದಾಗ ದಕ್ಕೆ ಹಾಗೂ ಬೋಟಿನ ನಡುವೆ ಸಿಲುಕಿದ್ದಾರೆ. ಕಾಲು ಜಾರಿ ಅವರು ಸಮುದ್ರಕ್ಕೆ ಬಿದ್ದಿದ್ದು, ಮೇಲೆ ಬರಲಾಗದೇ ಅಲ್ಲಿಯೇ ಸಾವನಪ್ಪಿದ್ದಾರೆ. ಪತಿ ಶವ ನೋಡಿದ ಗಿರಿಜಾ ನಾಯ್ಕ ಅವರು ಕಣ್ಣೀರಾದರು. ಸಾವಿನ ಬಗ್ಗೆ ಅವರು ಮಾಹಿತಿ ನೀಡಿದರು. - [ಕಾಣೆಯಾದವರ ಬಗ್ಗೆ ಪ್ರಕಟಣೆ: ಪ್ರತಿಭಟನೆ!](https://mobiletime.in/2026/01/announcement-about-missing-persons-protest/): ಶಿರಸಿ ಗಣೇಶ ನಗರ ರಸ್ತೆ ನಿರ್ಮಾಣ ಜವಾಬ್ದಾರಿಪಡೆದ ಗುತ್ತಿಗೆದಾರ ಹನುಮಂತ ನಾಯ್ಕ ಅವರು ಕಾಣೆಯಾಗಿದ್ದಾರೆ. ಹೀಗಾಗಿ ಅಲ್ಲಿನ ಕೆಲಸ ಅರೆಬರೆಯಾಗಿದ್ದು, ಜನ ಆಕ್ರೋಶವ್ಯಕ್ತಪಡಿಸುತ್ತಿದ್ದಾರೆ. ಶಿರಸಿ ಗಣೇಶ ನಗರ ರಸ್ತೆ ಸಂಚಾರಕ್ಕೆ ಯೋಗ್ಯವಾಗಿಲ್ಲ. ರಸ್ತೆ ತುಂಬ ಧೂಳು ತುಂಬಿದ್ದು ಜನ ಸಮಸ್ಯೆ ಅನುಭವಿಸುತ್ತಿದ್ದಾರೆ. ನಗರೋತ್ಥಾನ ಯೋಜನೆಯ ರಸ್ತೆ ಕಾಮಗಾರಿ ಅರ್ಧಕ್ಕೆ ಸ್ಥಗಿತವಾಗಿದೆ. ಮೊದಲಿದ್ದ ರಸ್ತೆಯನ್ನು ಕಿತ್ತು ಹಾಕಿದ ಗುತ್ತಿಗೆದಾರ ಸರಿಯಾದ ರಸ್ತೆ ನಿರ್ಮಿಸದೇ ಪರಾರಿಯಾಗಿದ್ದಾರೆ. ಇದರಿಂದ ನಿತ್ಯ ಓಡಾಡುವವರ ಜೊತೆ ವಾಹನ ಸವಾರರು ಪರದಾಡುತ್ತಿದ್ದಾರೆ. ಅಪೂರ್ಣ ಕಾಮಗಾರಿಯಿಂದ ಎಲ್ಲಡೆ ಧೂಳು ಹೆಚ್ಚಾಗಿದೆ. ಪರಿಣಾಮ ಸುತ್ತಲಿನ ಜನ ಆರೋಗ್ಯ ಸಮಸ್ಯೆಗೆ ಒಳಗಾಗಿದ್ದಾರೆ. ಕಾಮಗಾರಿ ಹಿನ್ನಲೆ ಕುಡಿಯುವ ನೀರಿನ ಪೈಪ್ ಲೈನುಗಳನ್ನು ತುಂಡರಿಸಿದ್ದು ಮತ್ತೊಂದು ಸಮಸ್ಯೆ ಸೃಷ್ಠಿಸಿದೆ. ಈ ರಸ್ತೆ ಅಭಿವೃದ್ಧಿಗೆ ಗುದ್ದಲಿ ಪೂಜೆ ನಡೆದಿದ್ದು, ರಸ್ತೆ ಲೋಕಾರ್ಪಣೆ ಮುಹೂರ್ತಕ್ಕಾಗಿ ಜನ ಕಾಯುತ್ತಿದ್ದಾರೆ. `ಗುಣಮಟ್ಟದ ಕಾಮಗಾರಿ ನಡೆಸಿ’ ಎಂದು ಗುದ್ದಲಿ ಪೂಜೆಯ ವೇಳೆ ಶಾಸಕ ಭೀಮಣ್ಣ ನಾಯ್ಕ ಅವರು ಸೂಚನೆ ನೀಡಿದ್ದು, ಕಾಮಗಾರಿ ಗುಣಮಟ್ಟವನ್ನು ನಂತರ ಪರಿಶೀಲಿಸಿದವರಿಲ್ಲ. ಗಣೇಶನಗರ ರಸ್ತೆಯನ್ನು ಅಗೆದು ಗುತ್ತಿಗೆದಾರ ನಾಪತ್ತೆಯಾಗಿದ್ದು, ರಸ್ತೆಯಲ್ಲಿ ಓಡಾಡಲು ತೀವ್ರ ತೊಂದರೆ ಅನುಭವಿಸುತ್ತಿರುವ ಸ್ಥಿತಿ ಖಂಡಿಸಿ ಸ್ಥಳೀಯರು ನಗರಸಭೆಗೆ ಮುತ್ತಿಗೆ ಹಾಕಿದ್ದಾರೆ. `ಎರಡು ತಿಂಗಳ ಹಿಂದೆ ರಸ್ತೆ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಲಾಗಿದೆ. ನಂತರ ರಸ್ತೆಯನ್ನು ಅಗೆದಾಗ ಕುಡಿಯುವ ನೀರಿನ ನಳ ಸಂಪರ್ಕದ ಪೈಪ್‌ಗಳು ತುಂಡಾಗಿದ್ದು ಅದನ್ನು ಸರಿ ಮಾಡಿಲ್ಲ. ಸ್ಥಳಕ್ಕೆ ಜೆಲ್ಲಿಕಲ್ಲು, ಕ್ರಷರ್ ಫೌಡರ್ ಹಾಕಿ ಗುತ್ತಿಗೆದಾರ ಕೆಲಸ ಸ್ಥಗಿತಗೊಳಿಸಿದರೂ ಕೇಳುವವರಿಲ್ಲ’ ಎಂದು ಅಲ್ಲಿದ್ದವರು ಆಕ್ರೋಶವ್ಯಕ್ತಪಡಿಸಿದರು. `ದಾವಣಗೆರೆಯ ಗುತ್ತಿಗೆದಾರ ಹನುಮಂತ ನಾಯ್ಕ ರಸ್ತೆ ಅಗೆದು ಓಡಿ ಹೋಗಿದ್ದಾರೆ. ಶೀಘ್ರದಲ್ಲಿ ರಸ್ತೆ ಆರಂಭಗೊಳಿಸದಿದ್ದರೆ ಸಾಮೂಹಿಕವಾಗಿ ಎಲ್ಲರೂ ಬೀದಿಗೆ ಬಂದು ರಸ್ತೆಯನ್ನು ಅಗೆದು ಹಾಕಲು ನಿರ್ಧರಿಸಿದ್ದೇವೆ’ ಎಂದು ನಗರಸಭೆ ಮಾಜಿ ಅಧ್ಯಕ್ಷ ಪ್ರದೀಪ ನಾಯ್ಕ ಆಕ್ರೋಶವ್ಯಕ್ತಪಡಿಸಿದ್ದಾರೆ. `ಒಂದುವರೆ ತಿಂಗಳಿನಿAದ ರಸ್ತೆಯ ಸ್ಥಿತಿಯನ್ನು ಸಹಿಸಿಕೊಂಡಿದ್ದೇವೆ. ಅಗೆದ ರಸ್ತೆಯಲ್ಲಿ ತಿರುಗಾಡಲು ತೀವ್ರ ತೊಂದರೆಯಾಗುತ್ತಿದೆ. ಗುತ್ತಿಗೆದಾರನನ್ನು ಯಂತ್ರಗಳು ಹಾಳಾಗಿವೆ ಎನ್ನುತ್ತಾರೆ’ ಎಂದು ಸ್ಥಳೀಯ ಮುಖಂಡ ಅನಂತ ನಾಯ್ಕ ವಿವರಿಸಿದರು. ಗಣೇಶ ನಗರ ರಸ್ತೆ ಕುರಿತು ಮಾತನಾಡಿದ ನಗರಸಭೆ ಪೌರಾಯಕ್ತ ಪ್ರಕಾಶ ಚೆನ್ನಪ್ಪನವರ್ `ರಸ್ತೆ ಕಾಮಗಾರಿ ಆದಷ್ಟು ಶೀಘ್ರ ಪ್ರಾರಂಭಿಸುವAತೆ ಸೂಚನೆ ನೀಡುತ್ತಿದ್ದೇವೆ. ಗುತ್ತಿಗೆದಾರ ಕೆಲ ಬಾರಿ ದೂರವಾಣಿ ಕರೆಯನ್ನು ಸ್ವೀಕರಿಸುತ್ತಿಲ್ಲ. ಗುತ್ತಿಗೆದಾರನ ನಿರ್ಲಕ್ಷ್ಯದ ಕುರಿತು ಜಿಲ್ಲಾಧಿಕಾರಿಗಳಿಗೂ ದೂರು ನೀಡಲಾಗಿದೆ’ ಎಂದರು. ಅದಾದ ನಂತರ ಜನ ಪ್ರತಿಭಟನೆ ಮುಗಿಸಿದರು. ಪ್ರಮುಖರಾದ ನಾಗರಾಜ ಶೆಟ್ಟಿ, ಗಣೇಶ ಆಚಾರಿ, ಸಂಕೇತ ಶೆಟ್ಟಿ, ನಾಗೇಶ ಗೋಸಾವಿ, ಕೃಷ್ಣ ಶೆಟ್ಟಿ, ಆಟೋ ಬಾಳಾ, ಕೃಷ್ಣ ಗಾಂವಕರ, ಉಮೇಶ ನಾಯ್ಕ, ಅವಿನಾಶ ನಾಯ್ಕ, ಅಭಿಷೇಕ ದೇವಾಡಿಗ ಪ್ರತಿಭಟನೆಯಲ್ಲಿದ್ದರು. - [ಗಟಾರಕ್ಕೆ ಬಿದ್ದ ಬೈಕು!](https://mobiletime.in/2026/01/a-bike-that-fell-into-the-gutter/): ದಾಂಡೇಲಿಯ ಜಿ ಎನ್ ರಸ್ತೆಯಲ್ಲಿನ ಗಟಾರಕ್ಕೆ ಬೈಕ್ ಬಿದ್ದಿದೆ. ಪರಿಣಾಮ ಸವಾರರಿಬ್ಬರು ಗಾಯಗೊಂಡಿದ್ದಾರೆ. ಮಳೆಗಾಲದ ದುರಸ್ಥಿಗಾಗಿ ಗಟಾರ ತೆಗೆಯಲಾಗಿದ್ದು, ಮಳೆ ಮುಗಿದು ಮೂರು ತಿಂಗಳು ಕಳೆದರೂ ಗಟಾರ ಸರಿಪಡಿಸಿಲ್ಲ. ಹೀಗಾಗಿ ಈ ಭಾಗದಲ್ಲಿ ಪದೇ ಪದೇ ಅಪಘಾತವಾಗುತ್ತಿದೆ. ನಿತ್ಯ ನೂರಾರು ವಾಹನ ಈ ಮಾರ್ಗದಲ್ಲಿ ಸಂಚರಿಸುತ್ತಿದ್ದು ಬಾಯ್ತೆರೆದಿರುವ ಗಟಾರದಿಂದ ಜನ ಸಮಸ್ಯೆಗೆ ಸಿಲುಕಿದ್ದಾರೆ. ಸೋಮವಾರ ಸಂಜೆ ಈ ದಾರಿಯಲ್ಲಿ ಸಂಚರಿಸುತ್ತಿದ್ದ ಬೈಕು ಗಟಾರದಲ್ಲಿ ಪಲ್ಟಿಯಾಗಿದೆ. ಅಪಘಾತದಲ್ಲಿ ಬೈಕ್ ಸವಾರರಿಗೆ ಪೆಟ್ಟಾಗಿದೆ. ನಗರಾಡಳಿತದ ನಿರ್ಲಕ್ಷ್ಯಕ್ಕೆ ಸಾರ್ವಜನಿಕರಿಂದ ತೀವ್ರ ಆಕ್ರೋಶವ್ಯಕ್ತಪಡಿಸಿದ್ದಾರೆ. ಜೊತೆಗೆ ತಕ್ಷಣ ಗಟಾರ ದುರಸ್ತಿ ಮಾಡಿ ಸುಗಮ ಸಂಚಾರಕ್ಕೆ ಅವಕಾಶ ಕಲ್ಪಿಸಬೇಕು ಎಂದು ಆಗ್ರಹಿಸಿದ್ದಾರೆ. - [ಮೊಬೈಲ್ ಹ್ಯಾಕ್!](https://mobiletime.in/2026/01/mobile-hack/): ಕುಮಟಾದ ವಾಸುದೇವ್ ಶಾನಭಾಗ ಅವರ ಮೊಬೈಲ್ ಹ್ಯಾಕ್ ಆಗಿದೆ. ಪರಿಣಾಮ ಅವರ ಬ್ಯಾಂಕ್ ಖಾತೆಯಲ್ಲಿದ್ದ 2 ಲಕ್ಷ ರೂ ಹಣ ಕಣ್ಮರೆಯಾಗಿದೆ. ಕುಮಟಾದ ಮೂರುಕಟ್ಟೆಯ ಹಳೆ ಪೋಸ್ಟ್ ಆಫೀಸ್ ಸಮೀಪ ವಾಸುದೇವ ದಾಮೋದರ ಶಾನಭಾಗ ಅವರು ವಾಸವಾಗಿದ್ದಾರೆ. ವ್ಯಾಪಾರ-ವಹೀವಾಟು ನಡೆಸುವ ಅವರು ಯೂನಿಯನ್ ಬ್ಯಾಂಕಿನಲ್ಲಿ ಖಾತೆ ಹೊಂದಿದ್ದಾರೆ. ಇದನ್ನು ಅರಿತ ವಂಚಕರು ಡಿಸೆಂಬರ್ 19ರಂದು ಅವರಿಗೆ ಫೋನ್ ಮಾಡಿದ್ದಾರೆ. ಫೋನ್ ಮಾಡಿದವರು ತಮ್ಮನ್ನು ಯುನಿಯನ್ ಬ್ಯಾಂಕ್ ಅಧಿಕಾರಿಗಳು ಎಂದು ಪರಿಚಯಿಸಿಕೊಂಡಿದ್ದಾರೆ. ಅದಾದ ನಂತರ ವಾಸುದೇವ ಶಾನಭಾಗ ಅವರಿಗೆ ಲಿಂಕ್ ಒಂದನ್ನು ಕಳುಹಿಸಿದ್ದು, ಆ ಲಿಂಕ್ ಮೂಲಕವೇ ಅವರ ಮೊಬೈಲ್ ಹ್ಯಾಕ್ ಮಾಡಿದ್ದಾರೆ. ವಾಸುದೇವ ಶಾನಭಾಗ ಅವರ ಬ್ಯಾಂಕ್ ಖಾತೆಯಲ್ಲಿದ್ದ 2 ಲಕ್ಷ ರೂ ಹಣವನ್ನು ಆ ಅಪರಿಚಿತರು ಎಗರಿಸಿದ್ದಾರೆ. ಮೊಬೈಲ್ ಹ್ಯಾಕ್ ಆಗಿದ್ದು ಹೇಗೆ? ಹಣ ಕಾಣೆಯಾಗಿದ್ದು ಹೇಗೆ? ಎಂದು ವಾಸುದೇವ್ ಶಾನಭಾಗ ಅವರಿಗೆ ಗೊತ್ತೇ ಆಗಲಿಲ್ಲ. ಬ್ಯಾಂಕಿನವರಿಗೆ ಹೋಗಿ ಕೇಳಿದರೂ ಅವರು ಹಣ ಮರಳಿಸುವ ಬಗ್ಗೆ ಗ್ಯಾರಂಟಿ ಕೊಡಲಿಲ್ಲ. ಹೀಗಾಗಿ ವಾಸುದೇವ ಶಾನಭಾಗ ಅವರು ಪೊಲೀಸರ ಮೊರೆ ಹೋಗಿದ್ದು, ಕುಮಟಾ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. - [ಶಾಸಕರ ಸಭೆಯಲ್ಲಿ ಗೊರಕೆ ಸದ್ದು!](https://mobiletime.in/2026/01/snoring-noise-in-the-mla-meeting/): ಜ್ವಲಂತ ಸಮಸ್ಯೆಗಳ ಬಗ್ಗೆ ಚರ್ಚಿಸಲು ಕುಮಟಾ ಶಾಸಕ ದಿನಕರ ಶೆಟ್ಟಿ ಗಂಭೀರ ಸಭೆ ನಡೆಸಿದ್ದು, ಆ ಸಭೆಗೆ ಹಾಜರಾಗಿದ್ದ ಕೆಲ ಅಧಿಕಾರಿಗಳು ನಿದ್ದೆ ಮಾಡಿದ್ದಾರೆ. ಇನ್ನೂ ಕೆಲ ಅಧಿಕಾರಿಗಳು ಸಭೆಯಲ್ಲಿ ಆಕಳಿಸುತ್ತಿದ್ದು, ಬಹುತೇಕ ಅಧಿಕಾರಿಗಳು ಮೊಬೈಲ್ ಮಾಯೆಯೊಳಗೆ ಮಗ್ನರಾಗಿರುವುದು ಕಾಣಿಸಿತು. ಕುಮಟಾದ ತಾಲೂಕು ಪಂಚಾಯತ ಸಭಾ ಭವನದಲ್ಲಿ ಮಂಗಳವಾರ ಶಾಸಕ ದಿನಕರ ಶೆಟ್ಟಿ ಅಧಿಕಾರಿಗಳ ಸಭೆ ನಡೆಸಿದರು. ಈ ತ್ರೈಮಾಸಿಕ ಸಭೆಗೆ ಅಧಿಕಾರಿಗಳು ಒಲ್ಲದ ಮನಸ್ಸಿನಿಂದಲೇ ಆಗಮಿಸಿದ್ದರು. ಹೀಗಾಗಿ ಸಭೆ ಶುರುವಾಗುತ್ತಲೇ ಆಕಳಿಕೆ ಶಬ್ದ ಕೇಳಿದ್ದು, ಕೆಲ ಸಮಯದ ನಂತರ ಗೊರಕೆ ಸದ್ದು ಸಹ ಶುರುವಾಯಿತು. ಸಮವಸ್ತ್ರದಲ್ಲಿದ್ದ ಮಹಿಳಾ ಅಧಿಕಾರಿಯೊಬ್ಬರು ಗಾಡವಾದ ನಿದ್ದೆಗೆ ಹೋಗಿದ್ದರು. ಅವರ ಕೈಯಲ್ಲಿದ್ದ ಫೈಲು-ಪೆನ್ನು ಒಮ್ಮೆ ಜಾರಿದ್ದು, ಅದನ್ನು ಸರಿಪಡಿಸಿಕೊಂಡು ಮತ್ತೆ ನಿದ್ದೆಗೆ ಜಾರಿದರು. ಅವರ ಹಿಂದಿನ ಸಾಲಿನಲ್ಲಿದ್ದ ಅಧಿಕಾರಿಯೂ ಸಹ ನಿದ್ದೆಯ ಮಂಪರಿನಲ್ಲಿದ್ದರು. ಅವರನ್ನು ನೋಡಿದ ಇನ್ನಷ್ಟು ಅಧಿಕಾರಿಗಳು ಸಭೆಯ ಬಗ್ಗೆ ಗಮನಹರಿಸಿದೇ ತಮ್ಮ ಪಾಡಿಗೆ ತಾವಿದ್ದರು. ತಾವು ಪ್ರತಿನಿಧಿಸುವ ಇಲಾಖೆ ವಿಷಯ ಬಂದಾಗ ಮಾತ್ರ ನಿದ್ದೆಯಲ್ಲಿದ್ದ ಅಧಿಕಾರಿಗಳು ಎಚ್ಚರವಾಗಿ ಮಾತನಾಡಿದ್ದು, ಇಲಾಖೆಗಳ ನಡುವೆ ಸಮನ್ವಯ ಸಾಧಿಸಿ ಕಾರ್ಯಗತವಾಗಬೇಕಾದ ವಿಷಯಗಳು ಗಾಳಿಯಲ್ಲಿ ಹಾರಿ ಹೋದವು. ಅಕ್ರಮ ಮದ್ಯ ಮಾರಾಟ ಸೇರಿ ಇನ್ನಿತರ ಕಾರ್ಯಾಚರಣೆ ನಡೆಸುವ ಹೊಣೆಹೊತ್ತಿದ್ದ ಅಬಕಾರಿ ಇಲಾಖೆ ಇನ್ಸಪೆಕ್ಟರ್ ಜ್ಯೋತಿಶ್ರೀ ಅವರು ಸಭೆಗೆ ಆಗಮಿಸಿದ ಕೆಲವೇ ಕ್ಷಣದಲ್ಲಿ ನಿದ್ದೆಗೆ ಜಾರಿದರು. ಅಕ್ಕಪಕ್ಕದಲ್ಲಿದ್ದವರು ಎರಡು ಬಾರಿ ಅವರನ್ನು ಎಬ್ಬಿಸಿದರೂ ಸಹ ಕೆಲ ಸಮಯ ಕಣ್ಣು ತೆರೆದ ಅವರು ಮತ್ತೆ ಕಣ್ಮುಚ್ಚಿ ಧೀರ್ಘವಾದ ಉಸಿರಾಟ ನಡೆಸಿದರು. ಹಿಂದಿನ ಸಾಲಿನಲ್ಲಿ ಕೂತಿದ್ದ ಹಿಂದುಳಿದ ವರ್ಗಗಳ ಇಲಾಖೆಯ ಗಜಾನನ ಭಟ್ಟ ಅವರು ಸಭೆಗೆ ಬರುವಾಗ ಆಕಳಿಸುತ್ತಿದ್ದು, ಸಭೆಯಲ್ಲಿ ಕಣ್ಮುಚ್ಚಿ ಕುಳಿತಿದ್ದರು. ಅದೇ ಸಾಲಿನಲ್ಲಿದ್ದ ಮತ್ತಿಬ್ಬರು ಅಧಿಕಾರಿಗಳು ಪದೇ ಪದೇ ಮೊಬೈಲ್ ನೋಡುತ್ತಿರುವುದು ಕಾಣಿಸಿತು. ಒತ್ತಡದಿಂದ ಕೆಲಸ ಮಾಡುವ ಅಧಿಕಾರಿಗಳು ಆಯಾಸವಾಗಿ ನಿದ್ರೆಗೆ ಜಾರಿದರೂ ಶಾಸಕ ದಿನಕರ ಶೆಟ್ಟಿ ಅವರನ್ನು ತರಾಟೆಗೆ ತೆಗೆದುಕೊಳ್ಳಲಿಲ್ಲ. ಸಭೆಯ ಶಿಸ್ತು ಕಾಪಾಡದ ಅಧಿಕಾರಿಗಳ ವಿರುದ್ಧ ತಹಶೀಲ್ದಾರ್ ಶ್ರೀಕೃಷ್ಣ ಕಾಮುಕರ್ ಅವರು ಸಹ ಅಸಮಧಾನಹೊರಹಾಕಲಿಲ್ಲ. ವೇದಿಕೆಯಲ್ಲಿದ್ದ ತಾ ಪಂ ಕಾರ್ಯನಿರ್ವಹಣಾಧಿಕಾರಿ ರಾಜೇಂದ್ರ ಭಟ್ಟ ಅವರು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಲಿಲ್ಲ. ತಾ.ಪಂ ಆಡಳಿತಾಧಿಕಾರಿ ಪ್ರಕಾಶ ಹಾಲಮ್ಮನವರ್ ಸಹ ಈ ವಿಷಯ ನೋಡಿಯೂ ಸುಮ್ಮನಿದ್ದರು. `ಕರಾವಳಿ ಭಾಗದಲ್ಲಿ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿರುವವರ ಸಂಖ್ಯೆ ಹೆಚ್ಚಾಗಿದೆ. ಈ ಬಗ್ಗೆ ಸಮಗ್ರ ಅಧ್ಯಯನ ಅಗತ್ಯ’ ಎಂದು ಸಭೆಯಲ್ಲಿ ಶಾಸಕ ದಿನಕರ ಶೆಟ್ಟಿ ಅವರು ಸೂಚಿಸಿದರು. `ಈ ಬಗ್ಗೆ ತಜ್ಷರಿಂದ ಅಧ್ಯಯನ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸಿ’ ಎಂದು ದಿನಕರ ಶೆಟ್ಟಿ ಆರೋಗ್ಯ ಅಧಿಕಾರಿಗಳಿಗೆ ಸೂಚಿಸಿದರು. ಡಯಾಲಿಸೀಸ್ ಮಾಡಿಸಿಕೊಳ್ಳಲು ಬರುವವರ ಅಂಕಿ-ಸAಖ್ಯೆ ಪರಿಶೀಲನೆ ಮಾಡಿದ ಅವರು ಆಸ್ಪತ್ರೆಯ ಆಡಳಿತಾಧಿಕಾರಿ ಗಣೇಶ ನಾಯ್ಕ ಅವರಿಂದ ಇನ್ನಷ್ಟು ಮಾಹಿತಿಪಡೆದರು. `ಹೃದಯ ರೋಗ ಸಮಸ್ಯೆ ಸಹ ಕರಾವಳಿ ಭಾಗದಲ್ಲಿ ಹೆಚ್ಚಾಗಿದೆ’ ಎಂದು ಗಣೇಶ ನಾಯ್ಕ ಅವರು ಮಾಹಿತಿ ನೀಡಿದರು. ಪಶು ಸಿಬ್ಬಂದಿ ಕೊರತೆ, ಕೆಎಸ್‌ಆರ್‌ಟಿಸಿ ಓಡಿಸುವ ಡಕೋಟಾ ಬಸ್ಸು, ಬೆಂಗಳೂರಿನಿoದ ಬರುವ ಖಾಸಗಿ ಬಸ್ಸುಗಳಲ್ಲಿ ಲಗೇಜ್ ಭರ್ತಿ ಮಾಡುವಿಕೆ, ಮನೆ ಮನೆಗೆ ವಿದ್ಯುತ್ ಸಂಪರ್ಕ, ಅರಣ್ಯ, ಕೃಷಿ, ಲೋಕೋಪಯೋಗಿ, ತೋಟಗಾರಿಕೆ ಸೇರಿ ಇನ್ನಿತರ ವಿಷಯಗಳ ಬಗ್ಗೆ ಚರ್ಚೆ ನಡೆಯಿತು. - [ಕುಡಿಯಲು ನೀರಿಲ್ಲದೇ ಪರದಾಟ: ಪ್ರತಿಭಟನೆ](https://mobiletime.in/2026/01/protest-struggling-without-drinking-water/): ಕುಮಟಾದ ದೀವಗಿ ಬಳಿಯ ಜನತಾ ಕಾಲೋನಿಗೆ ಕುಡಿಯುವ ನೀರು ಸರಿಯಾಗಿ ಸರಬರಾಜು ಆಗುತ್ತಿಲ್ಲ. ಹೀಗಾಗಿ ಆ ಭಾಗದ ಜನ ದೀವಗಿ ಗ್ರಾಮ ಪಂಚಾಯತ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದ್ದಾರೆ. `ಕಳೆದ ಎರಡು ತಿಂಗಳಿನಿAದ ಸರಿಯಾಗಿ ನೀರು ಪೂರೈಕೆ ಆಗುತ್ತಿಲ್ಲ. ಗ್ರಾಮ ಪಂಚಾಯತ ಅಧಿಕಾರಿಗಳಿಗೆ ಹಲವು ಬಾರಿ ತಿಳಿಸಿದರೂ ಯಾವುದೇ ಕ್ರಮ ಜರುಗಿಸಿಲ್ಲ’ ಎಂದು ಆ ಭಾಗದ ಜನ ದೂರಿದರು. ಕರಾವಳಿ ಕನ್ನಡ ಸಂಘದ ಅಧ್ಯಕ್ಷ ಭಾಸ್ಕರ ಪಟಗಾರ ಅವರು ಪ್ರತಿಭಟನಾಕಾರರಿಗೆ ಬೆಂಬಲ ನೀಡಿದ್ದು, ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. `ಜೆಜೆಎ ಕಾಮಗಾರಿಯಿಂದ ಕುಡಿಯುವ ನೀರಿನ ಸರಬರಾಜಾಗುತ್ತಿದ್ದ ಕೊಳವೆಗಳನ್ನು ತೆರವು ಮಾಡಿದ್ದರಿಂದ ನೀರಿನ ಸರಬರಾಜಿನ ನಿರ್ವಹಣೆಗೆ ಸಮಸ್ಯೆಯಾಗಿದೆ’ ಎಂದು ಅಧಿಕಾರಿಗಳು ಹೇಳಿದರು. ಆದರೆ, ಆ ಸಮಜಾಯಿಶಿಗೆ ಒಪ್ಪದ ಗ್ರಾಮಸ್ಥರು ವಾಗ್ವಾದ ನಡೆಸಿದರು. ಬಳಿಕ ಗ್ರಾಪಂ ಅಧಿಕಾರಿಗಳು ನಾಳೆಯಿಂದ ನೀರು ಬಿಡುವುದಾಗಿ ಭರವಸೆ ನೀಡಿದ್ದು, ಜನ ಪ್ರತಿಭಟನೆ ಹಿಂಪಡೆದರು. `ಜೆಜೆಎ ಅಸಮರ್ಪಕ ಕಾಮಗಾರಿಯಿಂದ ಗ್ರಾಮೀಣ ಭಾಗದ ಕುಡಿಯುವ ನೀರಿನ ಸರಬರಾಜು ವ್ಯವಸ್ಥೆ ಅಸ್ತವ್ಯಸ್ಥವಾಗಿದೆ. ಹಳೇ ಯೋಜನೆಯ ಕೊಳವೆಯನ್ನು ಬಳಸಿಕೊಂಡು ಜೆಜೆಎಂ ಯೋಜನೆಗೆ ಮಾಡುತ್ತಿರುವ ಆರೋಪ ಇದೆ. ಅಧಿಕಾರಿಗಳು ನೀರಿನ ಪೈಪ್ ದುರಸ್ತಿಯನ್ನು ಜೆಜೆಎಂ ಗುತ್ತಿಗೆದಾರರಿಂದ ಮಾಡಿಸುತ್ತಿರುವ ಆರೋಪವೂ ಇದೆ. ನೀರಿನ ವ್ಯವಸ್ಥೆ ಸರಿಯಾಗದಿದ್ದರೆ ಈ ಬಗ್ಗೆ ಜಿಲ್ಲಾಧಿಕಾರಿ ಅವರಿಗೆ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ವೈದ್ಯರಿಗೂ ದೂರು ನೀಡಲಾಗುತ್ತದೆ’ ಎಂದು ಭಾಸ್ಕರ ಪಟಗಾರ ಅವರು ಎಚ್ಚರಿಸಿದರು. ಈ ಪ್ರತಿಭಟನೆಯಲ್ಲಿ ಗ್ರಾಮಸ್ಥರಾದ ವಿಠೋಬಾ ಭಂಡಾರಿ, ಪ್ರವೀಣ್ ಅಂಬಿಗ್, ಪ್ರದೀಪ್ ಭಂಡಾರಿ, ನಾಗವೇಣಿ ಅಂಬಿಗ, ಸುಷ್ಮಾ ಭಂಡಾರಿ, ಪುಷ್ಪ ನಾಯ್ಕ, ಚರಣ್ ಬಂಡಾರಿ, ನಾಗವೇಣಿ ಅಂಬಿಗ, ಸಾಯಿನಾಥ್ ಭಂಡಾರಿ, ಶಶಿಕಲಾ ಅಂಬಿಗ, ಮಂಗಲ್ ಅಂಬಿಗ, ವಿದ್ಯಾಧರ ಅಂಬಿಗ್, ಮಮತಾ ಭಂಡಾರಿ, ಸುನೀತಾ ಭಂಡಾರಿ, ಪ್ರೇಮ ಬಂಡಾರಿ, ಪ್ರೇಮ ಭಂಡಾರಿ, ಗಿರಿಜಾ ಅಂಬಿಗ, ರಾಮಚಂದ್ರ ಅಂಬಿಗ, ಲಕ್ಷ್ಮಿ ಅಂಬಿಗ, ಸೀತಾ ಅಂಬಿಗ, ಗುಲಾಬಿ ಭಂಡಾರಿ, ವಾಸಂತಿ ಅಂಬಿಗ, ಕಲ್ಪನಾ ಭಂಡಾರಿ, ರಾಮಚಂದ್ರ ಬಂಡಾರಿ, ಮಾದೇವಿ ಅಂಬಿಗ, ಗೋಪಿ ಅಂಬಿಗ ಇದ್ದರು. - [ಅಣ್ಣನಿಗೆ ಕತ್ತಿ ಬೀಸಿದ ತಮ್ಮ!](https://mobiletime.in/2026/01/the-younger-brother-who-brandished-a-sword-at-his-older-brother/): ಯಲ್ಲಾಪುರದ ಮಹಾಬಲೇಶ್ವರ ಭಟ್ಟ ಅವರಿಗೆ ಅಂಕೋಲಾದ ಕೃಷ್ಣ ಭಟ್ಟ ಅವರು ಕತ್ತಿ ಬೀಸಿದ್ದಾರೆ. ಮಹಾಬಲೇಶ್ವರ ಭಟ್ಟ ಹಾಗೂ ಕೃಷ್ಣ ಭಟ್ಟ ಅವರು ಅಣ್ಣ-ತಮ್ಮಂದಿರಾಗಿದ್ದು, ಜಮೀನಿನ ವಿಷಯವಾಗಿ ಕಾದಾಟ ನಡೆಸಿದ್ದಾರೆ. ಯಲ್ಲಾಪುರದ ಚಂದ್ಗುಳಿಯಲ್ಲಿ ಮಹಾಬಲೇಶ್ವರ ವಿಶ್ವೇಶ್ವರ ಭಟ್ಟ ಅವರು ವೈದಿಕರಾಗಿದ್ದಾರೆ. ಅಂಕೋಲಾದ ಹೆಗ್ಗಾರಿನಲ್ಲಿಯೂ ಮಹಾಬಲೇಶ್ವರ ಭಟ್ಟ ಅವರಿಗೆ ಜಮೀನಿದ್ದು, ಆ ಜಮೀನಿಗೆ ಹೋಗಲು ಅವರ ತಮ್ಮ ಕೃಷ್ಣ ವಿಶ್ವೇಶ್ವರ ಭಟ್ಟ ಅವರು ಬಿಡುತ್ತಿಲ್ಲ. ಅಣ್ಣ-ತಮ್ಮರ ನಡುವೆ ಮೂಡಿದ ವೈಮನಸ್ಸು ಒಂದು ವರ್ಷದ ಈಚೆಗೆ ತಾರಕಕ್ಕೇರಿದ್ದು, ಅದೇ ಇದೀಗ ಕತ್ತಿ ಬೀಸುವಷ್ಟರ ಮಟ್ಟಿಗೆ ಮುಂದುವರೆದಿದೆ. ಒoದು ವರ್ಷದಿಂದ ಜಮೀನಿನಲ್ಲಿ ಬೆಳೆ ತೆಗೆಯಲು ಸಾಧ್ಯವಾಗದ ಕಾರಣ 62 ವರ್ಷದ ಮಹಾಬಲೇಶ್ವರ ಭಟ್ಟ ಅವರು ನೊಂದಿದ್ದು, ಜನವರಿ 3ರಂದು ಅವರು ತೋಟ ಸುತ್ತಾಟಕ್ಕಾಗಿ ಹೆಗ್ಗಾರಿಗೆ ಹೋಗಿದ್ದರು. ತೋಟ ತಿರುಗಾಟದ ನಂತರ ಅವರು ಅಲ್ಲಿಯೇ ವಿಶ್ರಾಂತಿ ಪಡೆದರು. ಆ ವೇಳೆ ಅಲ್ಲಿ 52 ವರ್ಷದ ಅವರ ತಮ್ಮ ಕೃಷ್ಣ ಭಟ್ಟರು ಬಂದರು. ಕೈಯಲ್ಲಿ ಕತ್ತಿ ಹಿಡಿದು ಬಂದಿದ್ದ ಅವರು ಅಣ್ಣನ ಕುತ್ತಿಗೆಯ ಕಡೆ ಅದನ್ನು ಬೀಸಿದರು. ತಕ್ಷಣ ವಿಶ್ವೇಶ್ವರ ಭಟ್ಟರು ಕುತ್ತಿಗೆಗೆ ಅಡ್ಡಲಾಗಿ ಕೈ ಹಿಡಿದಿದ್ದು, ಆ ಕತ್ತಿ ಅವರ ಕೈಗೆ ತಾಗಿತು. ಕೈಯಿಂದ ರಕ್ತ ಸುರಿದಿದ್ದು, ವಿಶ್ವೇಶ್ವರ ಭಟ್ಟ ಅವರು ನೆಲಕ್ಕೆ ಬಿದ್ದರು. ಆಗ, ಕೃಷ್ಣ ಭಟ್ಟರು ತಮ್ಮ ಕಾಲಿನಿಂದ ವಿಶ್ವೇಶ್ವರ ಭಟ್ಟರನ್ನು ತುಳಿದರು. `ಈ ಜಾಗಕ್ಕೆ ನೀ ಬರುವ ಹಾಗಿಲ್ಲ’ ಎಂದು ಕೃಷ್ಣ ಭಟ್ಟರು ತಾಕೀತು ಮಾಡಿದರು. `ನನ್ನ ಜಾಗಕ್ಕೆ ನಾನು ಬರುವೆ’ ಎಂದು ವಿಶ್ವೇಶ್ವರ ಭಟ್ಟರು ಇನ್ನಷ್ಟು ಗಟ್ಟಿಯಾಗಿ ಅಬ್ಬರಿಸಿದರು. ಹೀಗಾಗಿ ಕೃಷ್ಣ ಭಟ್ಟರ ಸಿಟ್ಟು ಮತ್ತೆ ಹೆಚ್ಚಾಗಿದ್ದು, ಇನ್ನಷ್ಟು ಥಳಿಸಿದರು. `ಮತ್ತೆ ಬಂದರೆ ಇದೇ ಕತ್ತಿಯಿಂದ ಕೊಚ್ಚಿ ಹಾಕುವೆ’ ಎಂದು ಕೃಷ್ಣ ಭಟ್ಟರು ಬೆದರಿಸಿದರು. ತಮ್ಮನಿಂದಲೇ ಪೆಟ್ಟು ತಿಂದ ವಿಶ್ವೇಶ್ವರ ಭಟ್ಟರು ತಮ್ಮ ಮೇಲಿನ ದಾಳಿಯ ಬಗ್ಗೆ ಅಳಲು ತೋಡಿಕೊಂಡರು. ನ್ಯಾಯ ಕೊಡಿಸಿ ಎಂದು ಪೊಲೀಸರ ಮೊರೆ ಹೋದರು. - [ಹಾರ್ಡವೇರ್ ವ್ಯಾಪಾರಿಗೆ ಮೋಸ!](https://mobiletime.in/2026/01/hardware-dealer-cheated/): ಕಡಿಮೆ ದರಕ್ಕೆ ಒಳ್ಳೆಯ ಸಾಮಗ್ರಿ ಸಿಗುತ್ತದೆ ಎಂದು ನಂಬಿದ ಶಿರಸಿಯ ವ್ಯಾಪಾರಿಯೊಬ್ಬರು 3.60 ಲಕ್ಷ ರೂ ಕಳೆದುಕೊಂಡಿದ್ದಾರೆ. ಸಾಮಗ್ರಿ ಕಳುಹಿಸುವುದಾಗಿ ನಂಬಿಸಿದವರ ಫೋನ್ ಸ್ವಿಚ್ ಆಫ್ ಆಗಿದ್ದು, ಬೆಂಗಳೂರಿಗೆ ಹೋಗಿ ಹುಡುಕಿದರೂ ಹಣಪಡೆದವ ಸಿಕ್ಕಿಲ್ಲ. ಶಿರಸಿಯ ಬನವಾಸಿ ಬಳಿಯ ಪಂಪವನ ಹತ್ತಿರ ವಾಸಿಸುವ ವಿನಿತ್ ಪರಮೇಶ್ವರ ಕೆಳಗಿನಮನೆ ಅವರು ಸೊರಬಾ ರಸ್ತೆಯಲ್ಲಿ ಹಾರ್ಡವೇರ್ ಮಳಿಗೆ ನಡೆಸುತ್ತಾರೆ. ಕದಂಬ ಬಿಲ್ಡಿಂಗ್ ಸಲ್ಯುಶನ್ ಎಂಬ ಅಂಗಡಿಯ ಮೂಲಕ ಅವರು ವಿವಿಧ ಕಬ್ಬಿಣದ ಸಾಮಗ್ರಿಗಳ ಮಾರಾಟ ಮಾಡುತ್ತಾರೆ. ಕಳೆದ ಮೂರು ವರ್ಷಗಳಿಂದ ವಿನಿತ್ ಅವರು ಮಳಿಗೆಗೆ ಬೇಕಾಗಿರುವ ಎಲ್ಲಾ ಬಗೆಯ ಸ್ಟೀಲುಗಳನ್ನು ಹೈದರಾಬಾದ್, ತಮಿಳುನಾಡು, ಪೂನಾ, ಬೆಂಗಳೂರು, ಹುಬ್ಬಳ್ಳಿಯಿಂದ ಖರೀದಿಸುತ್ತಿದ್ದಾರೆ. ಡಿಸೆಂಬರ್ 9ರಂದು ವಿನಿತ ಅವರ ಅಣ್ಣ ಶಿವರಾಜರ ಮೊಬೈಲಿಗೆ ಫೋನ್ ಒಂದು ಬಂದಿದ್ದು, ಶ್ರೀನಿವಾಸ ಎಂದು ಪರಿಚಯಿಸಿಕೊಂಡ ವ್ಯಕ್ತಿ ಕಡಿಮೆ ದರದಲ್ಲಿ ಜಿಐ ಪೈಪ್ ರವಾನಿಸುವುದಾಗಿ ಹೇಳಿದ್ದಾರೆ. . ಬೆಂಗಳೂರಿನ ಯಲಹಂಕಾ ಬಳಿಯಿರುವ ಶ್ರೀ ಗಣೇಶ ಎಂಟರ್ಪ್ರೈಸ್ ಎಂದು ಪರಿಚಯಿಸಿಕೊಂಡ ಶ್ರೀನಿವಾಸ ಅವರು 15 ಟನ್ ಜಿಐ ಪೈಪ್ ರವಾನೆಗೆ ಮುಂಗಡವಾಗಿ 4 ಲಕ್ಷ ಕೇಳಿದ್ದಾರೆ. ಎಲ್ಲರೂ ಕೊಡುವುದಕ್ಕಿಂತ ಕಡಿಮೆ ದುಡ್ಡಿಗೆ ಸಿಗುತ್ತದೆ ಎಂದು ನಂಬಿದ ವಿನಿತ ಅವರು ಶ್ರೀನಿವಾಸ ಅವರು ಸೂಚಿಸಿದ ಖಾತೆಗೆ 3.60 ಲಕ್ಷ ರೂ ಹಣ ಹಾಕಿದ್ದಾರೆ. ಆದರೆ, ಅಗತ್ಯವಿರುವ ಜಿಐ ಪೈಪ್ ಶಿರಸಿಗೆ ಬಂದಿಲ್ಲ. ಈ ಬಗ್ಗೆ ಪ್ರಶ್ನಿಸಲು ಶ್ರೀನಿವಾಸ ಅವರಿಗೆ ಫೋನ್ ಮಾಡಿದಾಗ ಆ ನಂ ಸ್ವಿಚ್ ಆಫ್ ಆಗಿದೆ. ಬೆಂಗಳೂರಿಗೆ ಹೋಗಿ ಹುಡುಕಾಟ ನಡೆಸಿದರೂ ಗಣೇಶ ಎಂಟರ್ಪ್ರೈಸ್ ಎಂಬ ಮಳಿಗೆ ಕಾಣಿಸಿಲ್ಲ. ಮೋಸ ಹೋದ ಬಗ್ಗೆ ಅರಿತ ವಿನಿತ್ ಅವರು ಫೋನ್ ಮಾಡಿದ ವ್ಯಕ್ತಿಯ ಮೊಬೈಲ್ ಸಂಖ್ಯೆ ಆಧಾರದಲ್ಲಿ ಪೊಲೀಸರ ಮೊರೆ ಹೋಗಿದ್ದಾರೆ. ಬನವಾಸಿ ಪೊಲೀಸರು ಪ್ರಕರಣ ದಾಖಲಿಸಿದ್ದು, ವಂಚಕರ ಶೋಧ ನಡೆಸಿದ್ದಾರೆ. - [ವೈಮನಸ್ಸು: ಗಂಗಾವಳಿ ಕೊಳ್ಳದ ಬಳಿ ಕೋಲಾಹಲ!](https://mobiletime.in/2026/01/enmity-riot-near-gangavali-valley/): ಗೋಕರ್ಣ ಬಳಿಯ ಗಂಗಾವಳಿ ಬಳಿ ರೆಸಾರ್ಟಿಗೆಪಡೆದ ವಿದ್ಯುತ್ ಲೈನ್ ವಿಚಾರವಾಗಿ ವೈಮನಸ್ಸು ಉಂಟಾಗಿದೆ. ಆ ದ್ವೇಷ ಹೊಡೆದಾಟಕ್ಕೆ ಕಾರಣವಾಗಿದೆ. ಗಂಗಾವಳಿಯ ವ್ಯಾಪಾರಿ ಗಣಪತಿ ನಾರಾಯಣ ನಾಯ್ಕ ಅವರ ಮೇಲೆ ನಾಲ್ವರು ಸೇರಿ ಆಕ್ರಮಣ ನಡೆಸಿದ್ದಾರೆ. ಕುಮಟಾ ಬಾವಿಕೊಡ್ಲದ ಮನೋಹರ ಸುರೇಶ ಗೌಡ, ಸುರೇಶ ಗೌಡ, ಈಶ್ವರ ವೆಂಕಟ್ರಮಣ ಗೌಡ, ಪ್ರಶಾಂತ ಗೌಡ ಅವರು ಗಣಪತಿ ನಾಯ್ಕ ಅವರನ್ನು ಹಿಡಿದು ಥಳಿಸಿದ್ದಾರೆ. ಗಣಪತಿ ನಾಯ್ಕ ಹಾಗೂ ಮನೋಹರ ಗೌಡ ಅವರ ನಡುವೆ ನಕ್ಷತ್ರ ಬೀಚ್ ಸ್ಟೇಗೆ ವಿದ್ಯುತ್ ಲೈನ್ ಪಡೆದ ವಿಚಾರದಲ್ಲಿ ತಕರಾರು ಶುರುವಾಗಿದ್ದೇ ಈ ಹೊಡೆದಾಟಕ್ಕೆ ಕಾರಣ. ಗಣಪತಿ ನಾಯ್ಕ ಅವರ ದೂರಿನ ಪ್ರಕಾರ, ಜನವರಿ 3ರ ರಾತ್ರಿ ನಕ್ಷತ್ರ ಬೀಚ್ ಸ್ಟೇ ಆವರಣೆಗೆ ನುಗ್ಗಿದ ಆಗಂತುಕರು ಅವರ ಮೇಲೆ ಕೈ ಮಾಡಿದ್ದಾರೆ. ಈಶ್ವರ ಗೌಡ ಅವರು ಮೊದಲು ಕೈ ಮಾಡಿದ್ದು, ಅದಾದ ನಂತರ ಉಳಿದವರು ಸೇರಿ ಗಣಪತಿ ನಾಯ್ಕ ಅವರನ್ನು ಥಳಿಸಿದ್ದಾರೆ. ಹಲ್ಲೆಗೆ ಒಳಗಾದ ಗಣಪತಿ ನಾಯ್ಕ ಅವರು ಗೋಕರ್ಣ ಪೊಲೀಸರ ಬಳಿ ತಮಗಾದ ಅನ್ಯಾಯ ವಿವರಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿದ್ದು, ತನಿಖೆ ಶುರು ಮಾಡಿದ್ದಾರೆ. - [ಮರಕ್ಕೆ ಗುದ್ದಿದ ಬೈಕು: ಅಂತ್ಯವಾದ ಸವಾರನ ಬದುಕು!](https://mobiletime.in/2026/01/bike-hits-tree-riders-life-ends/): ಶಿರಸಿಯ ಉಮೇಶ ನಾಯ್ಕ ಅವರ ಮಾಲಿಕತ್ವದ ತೋಟಕ್ಕೆ ಕಳೆ ಹೊಡೆಯಲು ಹೊರಟಿದ್ದ ರಾಘವೇಂದ್ರ ಪೂಜಾರಿ ಅವರು ಅಪಘಾತದಲ್ಲಿ ಸಾವನಪ್ಪಿದ್ದಾರೆ. ಪಂಡೀತ್ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗೆ ಟಿ ಎಸ್ ಎಸ್ ಆಸ್ಪತ್ರೆಗೆ ದಾಖಲಿಸುವ ಪ್ರಯತ್ನ ನಡೆದರೂ ಪ್ರಯೋಜನವಾಗಲಿಲ್ಲ. ಶಿರಸಿಯ ಹುಲೆಕಲ್ ಬಳಿಯ ಬೆಳ್ಳದ್ದದಲ್ಲಿ ರಾಘವೇಂದ್ರ ಸೀನಾ ಪೂಜಾರಿ (43) ಅವರು ವಾಸವಾಗಿದ್ದರು. ಕೂಲಿ ಕೆಲಸ ಮಾಡಿಕೊಂಡಿದ್ದ ಅವರು ಬೇರೆ ಬೇರೆ ಊರುಗಳಿಗೆ ಸಂಚರಿಸಿ ನಿತ್ಯದ ದುಡಿಮೆ ಮಾಡುತ್ತಿದ್ದರು. ಅದರಂತೆ ಜನವರಿ 3ರಂದು ಉಮೇಶ ನಾಯ್ಕ ಅವರ ಹೊಲಕ್ಕೆ ಕಳೆ ಹೊಡೆಯಲು ಅವರು ಬೈಕ್ ಮೇಲೆ ಹೊರಟಿದ್ದರು. ಸೋಂದಾ ಪಂಚಾಯತ ವ್ಯಾಪ್ತಿಯ ಬೆಳ್ಳದ್ದ ಕರ್ಕೊಳ್ಳಿ ಕಚ್ಚಾ ರಸ್ತೆಯ ಕಡೆಗುಂಟಾ ಮಾರ್ಗವಾಗಿ ರಾಘವೇಂದ್ರ ಪೂಜಾರಿ ಅವರು ಸಂಚರಿಸುತ್ತಿದ್ದರು. ಬಹುಬೇಗ ಕೆಲಸದ ಸ್ಥಳ ಸೇರಬೇಕು ಎಂಬ ನಿಟ್ಟಿನಲ್ಲಿ ರಾಘವೇಂದ್ರ ಪೂಜಾರಿ ಅವರು ವೇಗವಾಗಿ ಬೈಕ್ ಓಡಿಸಿದ್ದು, ಆ ಬೈಕ್ ನಿಯಂತ್ರಣ ತಪ್ಪಿತು. ಪರಿಣಾಮ ರಾಘವೇಂದ್ರ ಪೂಜಾರಿ ಅವರಿದ್ದ ಬೈಕು ಅಲ್ಲಿದ್ದ ಅನೇಕ ಮರಗಳಿಗೆ ಬಡಿಯಿತು. ಇದರಿಂದ ರಾಘವೇಂದ್ರ ಪೂಜಾರಿ ಅವರ ತಲೆಗೆ ಗಂಭೀರ ಪ್ರಮಾಣದಲ್ಲಿ ಗಾಯವಾಯಿತು. ಅಪಘಾತ ನೋಡಿದ ಜನ ಅವರನ್ನು ಪಂಡೀತ್ ಸಾರ್ವಜನಿಕ ಆಸ್ಪತ್ರೆಗೆ ಸೇರಿಸಿದರು. ಅಲ್ಲಿನ ವೈದ್ಯರು ಪ್ರಾಥಮಿಕ ಚಿಕಿತ್ಸೆ ನೀಡಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ರಾಘವೇಂದ್ರ ಪೂಜಾರಿ ಅವರನ್ನು ಟಿ ಎಸ್ ಎಸ್ ಆಸ್ಪತ್ರೆಗೆ ಕರೆತರಲಾಯಿತು. ಆದರೆ, ಆಸ್ಪತ್ರೆಗೆ ಬರುವ ಮುನ್ನವೇ ಅವರು ಕೊನೆಯುಸಿರೆಳೆದಿದ್ದರು. ರಾಘವೇಂದ್ರ ಪೂಜಾರಿ ಅವರ ಸಹೋದರ ಸತೀಶ ಪೂಜಾರಿ ಅವರು ಈ ವಿಷಯ ವಿವರಿಸಿದರು. `ಸಂಚಾರಿ ನಿಯಮ ಪಾಲಿಸಿ. ಸುರಕ್ಷಿತವಾಗಿ ವಾಹನ ಓಡಿಸಿ’ - [ಸ್ವೀಟ್ ಅಂಗಡಿಯಲ್ಲಿ ಸಿಗದ ಸಿಗರೇಟು: ಟಿವಿ-ಗಾಜು ಪುಡಿ ಪುಡಿ!](https://mobiletime.in/2026/01/cigarettes-not-available-in-sweet-shops-tv-glass-powder-powder/): ಶಿರಸಿಯ ಸ್ವೀಟ್ ಅಂಗಡಿಯಲ್ಲಿ ಸಿಗರೇಟು ಸಿಗದ ಕಾರಣ ಆಕ್ರೋಶಗೊಂಡ ಗ್ರಾಹಕರು ಆ ಅಂಗಡಿಯ ಗಾಜು ಒಡೆದಿದ್ದಾರೆ. ಜೊತೆಗೆ ಅಂಗಡಿ ಒಳಗೆ ನುಗ್ಗಿ ಅಲ್ಲಿದ್ದ ಟಿವಿಯನ್ನು ಧ್ವಂಸ ಮಾಡಿದ್ದಾರೆ. ರಾಜಸ್ಥಾನದ ರಮೇಶ ಮಾಂಗಿಲಾಲ್ ಅವರು ಶಿರಸಿ ಗಡೇಹಳ್ಳಿ ಸುಬ್ರಾಯ ನಾಯ್ಕ ಅಂಗಡಿ ಮಳಿಗೆಯಲ್ಲಿ ಜೈ ಮಾತಾ ಸ್ವೀಟ್ಸ್ ಎಂಬ ಮಳಿಗೆ ನಡೆಸುತ್ತಿದ್ದಾರೆ. ಡಿ 31ರಂದು ಅರೆಕೊಪ್ಪದ ಅಮಾನ್ ಹನೀಪ ಶೇಖ್ ಹಾಗೂ ಬನವಾಸಿ ರಸ್ತೆಯ ರಕ್ಷಿತ ರಾಮು ಬೆಳಗಾವ್ ಅವರು ಆ ಅಂಗಡಿಗೆ ಬಂದು ಸಿಗರೇಟು ಕೇಳಿದ್ದಾರೆ. ಆಗ, ರಮೇಶ್ ಅವರು `ನಾವು ಇಲ್ಲಿ ಸಿಗರೇಟು ಮಾರುವುದಿಲ್ಲ’ ಎಂದಿದ್ದಾರೆ. ಅದರಿಂದ ಆ ಇಬ್ಬರು ಸಿಟ್ಟಾಗಿ ಬೈದು ಅಲ್ಲಿಂದ ಹೋಗಿದ್ದಾರೆ. ಅದೇ ದಿನ ಮಧ್ಯಾಹ್ನ ಮತ್ತೆ ಕಾರಿನಲ್ಲಿ ಬಂದ ಅಮಾನ್ ಶೇಖ್ ಹಾಗೂ ರಕ್ಷಿತ ಬೆಳಗಾವ್ ಅವರು ಮತ್ತೆ ಬೈಗುಳ ಶುರು ಮಾಡಿದ್ದಾರೆ. ಅಂಗಡಿಗೆ ತಾಡಪಲ್ ಹಾಸಿ ಒಳಗೆ ಮಲಗಿದ್ದ ರಮೇಶ ಮಾಂಗಿಲಾಲ್ ಅವರನ್ನು ಎಬ್ಬಿಸಿ ನಿಂದಿಸಿದ್ದಾರೆ. `ಹೊರಗಿನಿಂದ ಬಂದು ನಮ್ಮ ಏರಿಯಾದಲ್ಲಿ ವ್ಯಾಪಾರ ಮಾಡುತ್ತೀಯಾ. ಸಿಗರೇಟು ಕೇಳಿದರೆ ಕೊಡುವುದಿಲ್ಲವಾ?’ ಎಂದು ದಬಾಯಿಸಿದ್ದಾರೆ. ಅದಾದ ನಂತರ ದೊಡ್ಡ ದೊಡ್ಡ ಕಲ್ಲುಗಳನ್ನು ಅಂಗಡಿ ಮೇಲೆ ಎಸೆದಿದ್ದಾರೆ. ಆಗ ಅಂಗಡಿಯ ಹೊರಭಾಗದಲ್ಲಿ ಗಾಜು ಪುಡಿಪುಡಿಯಾಗಿದ್ದು, ಅದಾದ ನಂತರ ಅಂಗಡಿ ಒಳಗೆ ನುಗ್ಗಿ ಟಿವಿಯನ್ನು ಧ್ವಂಸ ಮಾಡಿದ್ದಾರೆ. ಇದರಿಂದ ವ್ಯಾಪಾರಿ ರಮೇಶ ಮಾಂಗಿಲಾಲ್ ಅವರಿಗೆ 45 ಸಾವಿರ ರೂ ನಷ್ಟವಾಗಿದೆ. ತಮ್ಮ ಅಂಗಡಿಗೆ ನುಗ್ಗಿ ದಾಂಧಲೆ ಮಾಡಿದರ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ರಮೇಶ ಮಾಂಗಿಲಾಲ್ ಅವರು ಪೊಲೀಸ್ ದೂರು ನೀಡಿದ್ದಾರೆ. ಶಿರಸಿ ಗ್ರಾಮೀಣ ಠಾಣೆ ಪೊಲೀಸರು ಪ್ರಕರಣ ದಾಖಲಿಸಿದ್ದು, ವಿಚಾರಣೆ ನಡೆಸಿದ್ದಾರೆ. - [ಜಗಳ: ವಿಡಿಯೋ ಮಾಡಿದಕ್ಕಾಗಿ ಹೊಡೆದಾಟ!](https://mobiletime.in/2026/01/fight-fight-over-making-a-video/): ಪಕ್ಕದ ಮನೆಯಲ್ಲಿ ಜಗಳ ನಡೆದ ಜಗಳವನ್ನು ವಿಡಿಯೋ ಮಾಡಿದ ಕಾರಣ ಅಂಕೋಲಾದ ಅಪೇಕ್ಷಾ ನಾಯಕ ಅವರು ಪೆಟ್ಟು ತಿಂದಿದ್ದಾರೆ. ಅಪೇಕ್ಷಾ ನಾಯಕ ಅವರನ್ನು ಸಮರ್ಥಿಸಿಕೊಳ್ಳಲು ಹೋದ ಅವರ ಪತಿ ಗರೀಶ ನಾಯಕ ಅವರಿಗೂ ಮಂಜುನಾಥ ನಾಯಕ ಅವರು ಹೊಡೆದು ಕಳುಹಿಸಿದ್ದಾರೆ. ಇದರಿಂದ ಸಿಟ್ಟಾದ ಮಂಜುನಾಥ ನಾಯಕ ಅವರು ಗುಂಪು ಕಟ್ಟಿಕೊಂಡು ಬಂದು ಅಪೇಕ್ಷಾ ನಾಯಕ ಅವರ ಕುಟುಂಬದವರ ಮೇಲೆ ಆಕ್ರಮಣ ಮಾಡಿದ್ದಾರೆ. ಜನವರಿ 4ರಂದು ಅಂಕೋಲಾದ ಹಿಲ್ಲೂರು ಬಳಿಯ ಮರಾಕಲ್’ನ ಮಂಜುನಾಥ ಬೊಮ್ಮಯ್ಯ ನಾಯಕ ಹಾಗೂ ಲಕ್ಷಿö್ಮÃಧರ ಅವರ ನಡುವೆ ಜಗಳ ನಡೆಯುತ್ತಿತ್ತು. ಆ ಜಗಳವನ್ನು ಅದೇ ಊರಿನ ಅಪೇಕ್ಷಾ ನಾಯಕ ಅವರು ವಿಡಿಯೋ ಮಾಡಿದ್ದರು. ಜಮೀನು ವಿಷಯವಾಗಿ ಅಪೇಕ್ಷಾ ನಾಯಕ ಅವರ ಕುಟುಂಬದ ವಿರುದ್ಧ ಸಿಟ್ಟಾಗಿದ್ದ ಮಂಜುನಾಥ ನಾಯಕ ಅವರು ಜಗಳದ ವಿಡಿಯೋ ಮಾಡಿದ ಕಾರಣ ರೊಚ್ಚಿಗೆದ್ದರು. `ಸಂಬAಧವಿಲ್ಲದ ವಿಷಯ ವಿಡಿಯೋ ಏಕೆ ಮಾಡುವೆ?’ ಎಂದು ಪ್ರಶ್ನೆ ಮಾಡಿ ಅಪೇಕ್ಷಾ ನಾಯಕ ಅವರನ್ನು ದಬಾಯಿಸಿದರು. ಅಪೇಕ್ಷಾ ನಾಯಕ ಅವರ ಎದೆಗೆ ಕೈ ಹಾಕಿ ದೂಡಿದರು. ನೆಲಕ್ಕೆ ಬಿದ್ದ ಅಪೇಕ್ಷಾ ನಾಯಕ ಅವರಿಗೆ ನೋವಾಯಿತು. ಅಪೇಕ್ಷಾ ನಾಯಕ ಅವರು ಈ ವಿಷಯವನ್ನು ಆಟೋ ಚಾಲಕರಾಗಿರುವ ತಮ್ಮ ಪತಿ ಗಿರೀಶ ನಾಯಕ ಅವರಿಗೆ ತಿಳಿಸಿದರು. ಮಂಜುನಾಥ ನಾಯಕ ಅವರ ಬಳಿ ತೆರಳಿದ ಗಿರೀಶ ನಾಯಕ `ನನ್ನ ಹೆಂಡತಿಗೆ ಬೈಯುವೆಯಾ? ಹಿಲ್ಲೂರಿಗೆ ಬಾ ಗತಿ ಕಾಣಿಸುವೆ’ ಎಂದು ಎಚ್ಚರಿಸಿದರು. ಅದೇ ದಿನ ಸಂಜೆ ಮಂಜುನಾಥ ನಾಯಕ ಅವರು ತಮ್ಮ ಪತ್ನಿ ಸಂಧ್ಯಾ ನಾಯಕ ಅವರ ಜೊತೆ ಸೇರಿ ಹಿಲ್ಲೂರಿಗೆ ಹೋದರು. ಅಲ್ಲಿ ಗಿರೀಶ ನಾಯಕ ಅವರ ಜೊತೆ ಅಪೇಕ್ಷಾ ನಾಯಕ ಅವರು ಸಂಧ್ಯಾ ನಾಯಕ ಹಾಗೂ ಮಂಜುನಾಥ ನಾಯಕ ಅವರನ್ನು ಅಡ್ಡಗಟ್ಟಿದರು. ಹಿಲ್ಲೂರಿನ ಗಣಪತಿ ಕೃಷ್ಣ ನಾಯಕ, ರವಿ ಗಣಪತಿ ನಾಯಕ ಅವರು ಸಹ ಮಂಜುನಾಥ ನಾಯಕ ಹಾಗೂ ಸಂಧ್ಯಾ ನಾಯಕ ದಂಪತಿ ಮೇಲೆ ಮುಗಿಬಿದ್ದರು. `ನನ್ನ ಹೆಂಡತಿ ಜೊತೆ ಜಗಳ ಮಾಡುವೆಯಾ?’ ಎಂದು ಬೈದ ಗಿರೀಶ ನಾಯಕ ಅವರು ಮಂಜುನಾಥ ನಾಯಕ ಅವರನ್ನು ದೊಣ್ಣೆಯಿಂದ ಹೊಡೆದು ಥಳಿಸಿದರು. ಉಳಿದ ಮೂವರು ಗಿರೀಶ ನಾಯಕ ಅವರಿಗೆ ಹೊಡೆಯಲು ಬಂದಾಗ ಸಂಧ್ಯಾ ನಾಯಕ ಅವರು ಅದನ್ನು ತಪ್ಪಿಸುವ ಪ್ರಯತ್ನ ಮಾಡಿದರು. ಆದರೆ, ಅಡ್ಡಬಂದ ಕಾರಣ ಸಂಧ್ಯಾ ನಾಯಕ ಅವರು ಪೆಟ್ಟು ತಿಂದರು. ಈ ವೇಳೆ ಸಿಟ್ಟಿನಲ್ಲಿದ್ದ ಗಿರೀಶ ನಾಯಕ ಅವರು ಸಂಧ್ಯಾ ನಾಯಕ ಅವರಿಗೆ ಚಪ್ಪಲಿಯಿಂದ ಹೊಡೆದರು. `ಸಂದೀಪ ನಾಯಕ ಅವರ ಮನೆಗೆ ಬಾ. ಹಿರಿಯರ ಮುಂದೆ ನಿರ್ಣಯವಾಗಲಿ’ ಎಂದ ಅಪೇಕ್ಷಾ ನಾಯಕ ಈ ವೇಳೆ ಹೇಳಿದರು. `ನಾನು ಮೊಬೈಲ್ ನೋಡುತ್ತಿದ್ದೆ. ವಿಡಿಯೋ ಮಾಡಿಲ್ಲ’ ಎಂದು ಅಪೇಕ್ಷಾ ನಾಯಕ ಆ ವೇಳೆ ಸಮರ್ಥಿಸಿಕೊಂಡರು. ಅದಾದ ನಂತರ ಈ ಎರಡು ಕಡೆಯವರು ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದು, ಆದ ವಿದ್ಯಮಾನಗಳ ಬಗ್ಗೆ ವಿವರಿಸಿದರು. ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಶುರು ಮಾಡಿದರು.   - [ಊಟಕ್ಕೆ ಹೋಗಿ ಹೊಡೆತ ತಿಂದ ಜೊಮೆಟೋ ಬಾಯ್!](https://mobiletime.in/2026/01/zomato-boy-gets-beaten-up-for-going-out-for-dinner/): ಕಾರವಾರದ ಸರ್ವೋದಯ ನಗರದಲ್ಲಿ ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದಿದೆ. ಕೆ ಎಚ್ ಬಿ ಕಾಲೋನಿಯ ಜೊಮೆಟೋ ಡಿಲೆವರಿ ಬಾಯ್ ಹೃದಯ ಮಡ್ಲೇರಿ ಅವರು ಈ ಹೊಡೆದಾಟದಲ್ಲಿ ಪೆಟ್ಟು ತಿಂದಿದ್ದು, ಪ್ರತಿಯಾಗಿ ಅವರು ಸಹ ಮೂವರ ಮೇಲೆ ಆಕ್ರಮಣ ಮಾಡಿದ್ದಾರೆ. ಎರಡು ವರ್ಷದ ಹಿಂದೆ ಕಾರವಾರ ಬಸ್ ನಿಲ್ದಾಣದ ಬಳಿ ಹೃದಯ ಮಲ್ಲೇಶ ಮೇಡ್ಲರಿ ಹಾಗೂ ಪುನೀತ ಅಂಬಿಗ ಅವರ ನಡುವೆ ಜಟಾಪಟಿ ನಡೆದಿತ್ತು. ಅದೇ ದ್ವೇಷದ ಮುಂದುವರೆದ ಭಾಗವಾಗಿ ಜನವರಿ 4ರಂದು ಸರ್ವೋದಯ ನಗರದ ಆಕಾಶ ಅವರ ಮನೆ ಮುಂದೆ ಮಾರಾಮಾರಿ ನಡೆದಿದೆ. ಸರ್ವೋದಯ ನಗರದಲ್ಲಿರುವ ಆಕಾಶ ಅವರ ಮನೆಗೆ ಊಟಕ್ಕೆ ಹೋಗಿದ್ದ ಹೃದಯ ಮಡ್ಲೇರಿ ಅವರಿಗೆ ನಾಲ್ವರು ಹಿಡಿದು ಥಳಿಸಿದ್ದಾರೆ. ಅದಕ್ಕೆ ಪ್ರತಿಯಾಗಿ ಹೃದಯ ಮಡ್ಲೇರಿ ಕಡೆಯವರು ಸಹ ಮೂವರನ್ನು ಹಿಡಿದು ಹೊಡೆದಿದ್ದಾರೆ. ಹೃದಯ ಮಡ್ಲೇರಿ ಅವರ ದೂರಿನ ಪ್ರಕಾರ, ಕೊಂಕಣ ಖಾರ್ವಿವಾಡದ ಅಮೀನ ನರಸಿಂಹ ಕುಡ್ತಿಳಕರ್, ತರುಣ ಭಾನಾವಳಿಕರ್, ಗುರುಪ್ರಸಾದ ಸುರಂಗೇಕರ್ ಹಾಗೂ ಸನೀದ ಭಾನಾವಳಿಕರ್ ಸೇರಿ ಅವರ ಮೇಲೆ ಹಲ್ಲೆ ಮಾಡಿದ್ದಾರೆ. ಅಮೀನ ಕುಡ್ತಳ್ಳಿಕರ್ ಅವರ ದೂರಿನ ಪ್ರಕಾರ, ಕೆ ಎಚ್ ಬಿ ಕಾಲೋನಿಯ ಹೃದಯ ಮಡ್ಲೇರಿ, ಕಳಸವಾಡದ ಸೂರ್ಯಕಾಂತ ಕಳಸ್, ಮಾರಿಯಾ ನಗರದ ರಜತ ಗಣೇಶ ಆಚಾರಿ ಸೇರಿ ಅಮೀನ ಕುಡ್ತಳ್ಳಿಕರ್ ಅವರ ಮೇಲೆ ದಾಳಿ ಮಾಡಿದ್ದಾರೆ. ಈ ಎರಡು ಗುಂಪಿನವರು ಚಾಕು-ಚೂರಿ ಹಿಡಿದು ಹೊಡೆದಾಡಿಕೊಂಡಿದ್ದು, ಗಾಯಗೊಂಡವರು ಆಸ್ಪತ್ರೆ ಸೇರಿದ್ದಾರೆ. ಈ ಎರಡೂ ಕಡೆಯವರು ಕಾರವಾರ ನಗರ ಪೊಲೀಸ್ ಠಾಣೆಗೆ ಆಗಮಿಸಿ ದೂರು ನೀಡಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿ ವಿಚಾರಣೆ ನಡೆಸುತ್ತಿದ್ದಾರೆ. - [ಹುಲ್ಲಿನ ವಾಹನಕ್ಕೆ ಬೆಂಕಿ](https://mobiletime.in/2026/01/fire-in-a-grass-vehicle/): ಹೊನ್ನಾವರದಲ್ಲಿ ಹುಲ್ಲು ಸಾಗಿಸುತ್ತಿದ್ದ ಬುಲೇರೋ ವಿದ್ಯುತ್ ಕಂಬಕ್ಕೆ ಡಿಕ್ಕಿಯಾಗಿದೆ. ಪರಿಣಾಮ ವಿದ್ಯುತ್ ಸ್ಪರ್ಶದಿಂದ ಬೆಂಕಿ ತಗುಲಿದ್ದು, ವಾಹನದಲ್ಲಿದ್ದ ಹುಲ್ಲು ಹೊತ್ತಿ ಉರಿದಿದೆ. ಸಾಗರದಿಂದ ಹುಲ್ಲು ತುಂಬಿಕೊAಡು ಬಂದ ಬುಲೆರೋ ಸಾಲ್ಕೋಡ ಗ್ರಾಮದ ಜನತಾ ಕಾಲೋನಿ ರಸ್ತೆಯಲ್ಲಿ ಅಪಘಾತಕ್ಕೀಡಾಗಿದೆ. ಈ ಅವಘಡದಲ್ಲಿ ಬುಲೆರೋ ವಾಹನವೂ ಬೆಂಕಿಗೆ ಆಹುತಿಯಾಗಿದೆ. ಆ ವಾಹನದಲ್ಲಿದ್ದ ವಿವಿಧ ದಾಖಲೆಗಳ ಜೊತೆ ಮೊಬೈಲ್ ಫೋನ್ ಸಹ ಸುಟ್ಟಿದೆ. ವಿಷಯ ಅರಿತ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿದ್ದಾರೆ. ಬೆಂಕಿ ಆರಿಸುವ ಪ್ರಯತ್ನವನ್ನು ಮಾಡಿದ್ದಾರೆ. ಅರಣ್ಯ ಪ್ರದೇಶಕ್ಕೆ ಬೆಂಕಿ ಆವರಿಸುವ ಸಾಧ್ಯತೆಯಿದ್ದು, ಅಗ್ನಿಶಾಮಕ ಸಿಬ್ಬಂದಿ ಅದನ್ನು ತಡೆದಿದ್ದಾರೆ. ವಾಹನದಲ್ಲಿದ್ದ ಚಾಲಕ ಹಾಗೂ ಮತ್ತೊಬ್ಬ ಅಲ್ಲಿಂದ ಹಾರಿ ಜೀವ ಉಳಿಸಿಕೊಂಡಿದ್ದಾರೆ. - [ಊಟಕ್ಕೆ ಬಂದವ ಸ್ನೇಹಿತರಿಗೆ ಚಾಕು ಚುಚ್ಚಿದ!](https://mobiletime.in/2026/01/a-man-who-came-for-dinner-stabbed-his-friend/): ಕಾರವಾರದ ಕೂರ್ಮಗಡ ಜಾತ್ರೆಗೆ ಹೋಗಿ ಬಂದವರ ನಡುವೆ ಕ್ಷುಲ್ಲಕ ಕಾರಣಕ್ಕೆ ಜಗಳ ನಡೆದಿದ್ದು, ಸೂರ್ಯಕಾಂತ ಕಳಸ ಎಂಬಾತರು ಮೂವರಿಗೆ ಚಾಕು ಚುಚ್ಚಿ ಪರಾರಿಯಾಗಿದ್ದಾರೆ. ಕಾರವಾರದ ಕೋಡಿಬಾಗ ಬಳಿಯ ಸರ್ವೋದಯ ನಗರದಲ್ಲಿ ಶನಿವಾರ ರಾತ್ರಿ ಗಲಾಟೆ ನಡೆದಿದೆ. ಸೂರ್ಯಕಾಂತ ಕಳಸ ಅವರು ತನ್ನ ಸಹಚರರ ಜೊತೆ ನರಸಿಂಹ ದೇವರ ಜಾತ್ರೆಗೆ ಹೋಗಿದ್ದರು. ಅದಾದ ನಂತರ ಜಾತ್ರೆ ಹಿನ್ನಲೆ ಸ್ನೇಹಿತರ ಮನೆಗೆ ಊಟಕ್ಕೆ ಹೋಗಿದ್ದರು. ಆ ವೇಳೆಯಲ್ಲಿ ಮಾತಿಗೆ ಮಾತು ಬೆಳೆದಿದ್ದು, ಚೂರಿ-ಚಾಕು ಸದ್ದಾಗಿದೆ. ಸೂರ್ಯಕಾಂತ ಕಳಸ ಅವರು ತಮ್ಮೊಂದಿಗೆ ಇದ್ದ ಸಹಚರರಿಗೆ ಚಾಕು ಚುಚ್ಚಿದ್ದಾರೆ. ಮೂವರಿಗೆ ಗಾಯವಾಗಿದ್ದು, ಗಾಯಗೊಂಡವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಸೂರ್ಯಕಾಂತ ಕಳಸ ತಲೆಮರೆಸಿಕೊಂಡಿದ್ದರಿAದ ಪೊಲೀಸರು ಶೋಧ ಶುರು ಮಾಡಿದ್ದಾರೆ. - [ಗೇಟಿಗೆ ಬೀಗ ಹಾಕಿ ಚೀಟಿ ಬರೆದ: ಮಹಿಳೆ ಮೈ ಮುಟ್ಟಿ ಪೆಟ್ಟು ತಿಂದ!](https://mobiletime.in/2026/01/locked-the-gate-and-wrote-a-note-woman-got-hit-by-a-car/): ದಾoಡೇಲಿಯ ಪ್ರಶಾಂತ ರೇವಣಕರ್ ಅವರ ಮಾಲಿಕತ್ವದ ರೆಸಾರ್ಟಿಗೆ ಪಕ್ಕದ ಜಮೀನಿನ ರಾಮಾ ಚರಾಟಕರ್ ಅವರು ಬೀಗ ಹಾಕಿದ್ದಾರೆ. ಅದಾದ ನಂತರ `ಬೀಗ ತೆಗೆಯಬೇಕು ಎಂದಾದರೆ ನೀ ನಾ ಹೇಳಿದ ಹಾಗೇ ಕೇಳಬೇಕು’ ಎಂದು ಪ್ರಶಾಂತ ಅವರ ಪತ್ನಿ ಪ್ರತಿಮಾ ರೇವಣಕರ್ ಅವರಿಗೆ ರಾಮಾ ಚರಾಕರ್ ಸೂಚಿಸಿದ್ದಾರೆ. ಅದೇ ವೇಳೆ ಪ್ರತಿಮಾ ರೇವಣಕರ್ ಅವರ ಮೈ ಮೇಲೆ ಕೈ ಹಾಕಿ ಪೆಟ್ಟು ತಿಂದಿದ್ದಾರೆ. ದಾoಡೇಲಿಯ ಅಂಬಿಕಾನಗರದಲ್ಲಿ ಪ್ರಶಾಂತ ರೇವಣಕರ್ ಅವರು ಫಾರ್ಮ ಹೌಸ್ ಹೊಂದಿದ್ದಾರೆ. ಫಾರ್ಮ ಹೌಸ್ ಸುತ್ತ ಕಪೌಂಡ್ ನಿರ್ಮಿಸಿ ಅವರು ಅದಕ್ಕೆ ಬೀಗ ಹಾಕುತ್ತಾರೆ. ಆಗಾಗ ಅವರು ಅಲ್ಲಿ ಕುಟುಂಬಸಹಿತವಾಗಿ ಆಗಮಿಸಿ ಪಾರ್ಟಿ ಮಾಡುತ್ತಾರೆ. ಜನವರಿ 1ರಂದು ಸಹ ಅವರು ಅಲ್ಲಿಗೆ ಹೋಗಿದ್ದು, ಆ ವೇಳೆ ಪಕ್ಕದ ಜಮೀನಿನವರ ಜೊತೆ ಜಗಳವಾಗಿದೆ. ಬೊಮ್ಮನಳ್ಳಿಯ ರಾಮಾ ಚರಾಟಕರ್ ಅವರು ಕೇಗದಾಳದ ಪ್ರಶಾಂತ ರೇವಣಕರ್ ಹಾಗೂ ಅವರ ಪತ್ನಿ ಪ್ರತಿಮಾ ರೇವಣಕರ್ ಅವರ ತಂಟೆಗೆ ಹೋಗಿ ಆಸ್ಪತ್ರೆ ಸೇರಿದ್ದಾರೆ. ಜನವರಿ 1ರಂದು ಪ್ರಶಾಂತ ರೇವಣಕರ್ ಅವರ ರೆಸಾರ್ಟ ಗೇಟಿಗೆ ರಾಮಾ ಚರಾಟಕರ್ ಅವರು ಬೀಗ ಹಾಕಿದ್ದಾರೆ. ಅದಾದ ನಂತರ `ಚಾವಿ ಬೇಕಾದರೆ ನನ್ನನ್ನು ಸಂಪರ್ಕಿಸಿ’ ಎಂದು ಅಲ್ಲಿ ಚೀಟಿಯನ್ನು ಬರೆದಿದ್ದಾರೆ. ತಾವು ರೆಸಾರ್ಟ ಒಳಗಿದ್ದಾಗ ಹೊರಗಿನಿಂದ ಬೀಗ ಹಾಕಿದನ್ನು ನೋಡಿದ ಪ್ರತಿಮಾ ರೇವಣಕರ್ ಅವರು ರಾಮಾ ಚರಾಟಕರ್ ಅವರಿಗೆ ಫೋನ್ ಮಾಡಿದ್ದಾರೆ. ಚಾವಿ ಹಿಡಿದು ಬಂದ ರಾಮಾ ಚರಾಟಕರ್ ಅವರು ಪ್ರತಿಮಾ ರೇವಣಕರ್ ಅವರ ಮೈ ಮುಟ್ಟಿದ್ದು, ಈ ವೇಳೆ ಅಲ್ಲಿಗೆ ಬಂದ ಪ್ರಶಾಂತ ರೇವಣಕರ್ ಇದನ್ನು ಖಂಡಿಸಿದರು. ಈ ವೇಳೆ ವಾಗ್ವಾದ ನಡೆದಿದ್ದು, ಹೊಡೆದಾಟ ನಡೆದಿದೆ. ರಾಮಾ ಚರಾಟಕರ್ ಅವರಿಗೆ ಬಾಸುಂಡೆ ಬರುವ ರೀತಿ ಪೆಟ್ಟು ಬಿದ್ದಿದೆ. ಪ್ರಶಾಂತ ರೇವಣಕರ್ ಹಾಗೂ ಅವರ ಕುಟುಂಬದವರು ಬೂಟು ಗಾಲಿನಿಂದ ರಾಮಾ ಚರಾಟಕರ್ ಅವರನ್ನು ತುಳಿದು ನೋವುಂಟು ಮಾಡಿದ್ದಾರೆ. `ಪ್ರಶಾಂತ ರೇವಣಕರ್ ಅವರು ಗೇಟಿಗೆ ಬೀಗ ಹಾಕಿರಲಿಲ್ಲ. ಇದರಿಂದ ನಾವು ಸಾಕಿದ ದನ ಅವರ ರೆಸಾರ್ಟಿಗೆ ನುಗ್ಗಿದ್ದರಿಂದ ಬೇರೆ ಬೀಗ ಹಾಕಿದ್ದೇನೆ’ ಎಂದು ರಾಮಾ ಚರಾಟಕರ್ ಅವರು ತಮ್ಮನ್ನು ಸಮರ್ಥಿಸಿಕೊಂಡಿದ್ದಾರೆ. ಅಂಬಿಕಾನಗರದ ಪೊಲೀಸರು ಎರಡು ಕಡೆಯವರ ಮಾತು ಆಲಿಸಿ ಪ್ರಕರಣ ದಾಖಲಿಸಿದ್ದಾರೆ. - [ಬೈಕಿಗೆ ಗುದ್ದಿದ ಟಾಕ್ಟರ್: ಸವಾರ ಸಾವು](https://mobiletime.in/2026/01/tractor-hits-bike-rider-dies/): ಭಾನುವಾರ ಬೆಳಗ್ಗೆ ಹಳಿಯಾಳದಲ್ಲಿ ಟಾಕ್ಟರ್ ಬೈಕಿಗೆ ಗುದ್ದಿದೆ. ಪರಿಣಾಮ ವಿಶಾಲ ಸರೋಜಿ ಅವರು ಅಲ್ಲಿಯೇ ಸಾವನಪ್ಪಿದ್ದಾರೆ. ಕಾವಲವಾಡ ಗ್ರಾಮದ ಸಮೀಪ ಈ ಅವಘಡ ನಡೆದಿದೆ. ವಿಶಾಲ ಸುರೋಜಿ (28) ಹಳಿಯಾಳದಿಂದ ಕಲಘಟಗಿಗೆ ಬೈಕಿನಲ್ಲಿ ಹೋಗುತ್ತಿದ್ದರು. ಆಗ, ಎದುರಿನಿಂದ ಬಂದ ಟಾಕ್ಟರ್ ಅವರಿಗೆ ಡಿಕ್ಕಿ ಹೊಡೆದಿದೆ. ತಲೆಗೆ ಗಂಭೀರ ಗಾಯವಾಗಿದ್ದರಿಂದ ವಿಶಾಲ ಸರೋಜಿ ಸಾವನಪ್ಪಿದ್ದಾರೆ. ಟಾಕ್ಟರ್ ಅತಿ ವೇಗವೇ ಅಪಘಾತಕ್ಕೆ ಕಾರಣವಾಗಿದೆ. ಅಪಘಾತದ ಶಬ್ದ ಕೇಳಿದ ಸ್ಥಳೀಯರು ತಕ್ಷಣ ಸ್ಥಳಕ್ಕೆ ಧಾವಿಸಿದ್ದು, ರಕ್ಷಣೆಗೆ ಹರಸಾಹಸ ನಡೆಸಿದರು. ಆದರೆ, ಅದರಿಂದ ಪ್ರಯೋಜನವಾಗಲಿಲ್ಲ. ಅಪಘಾತದಲ್ಲಿ ಬೈಕ್ ಜಖಂ ಆಗಿದೆ. ಕೆಲ ಕಾಲ ರಸ್ತೆ ಸಂಚಾರ ಅಸ್ತವ್ಯಸ್ಥಗೊಂಡಿದ್ದು ವಾಹನಗಳು ಸಾಲಾಗಿ ನಿಂತ ದೃಶ್ಯ ಕಾಣಿಸಿತು. ಶವವನ್ನು ಮರಣೋತ್ತರ ಪರೀಕ್ಷೆಗೆ ಹಳಿಯಾಳ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಯಿತು. - [ಸಿಲೆಂಡರ್ ಸ್ಪೋಟ: ಮಗು ಸೇರಿ ಆರು ಜನರಿಗೆ ಗಾಯ!](https://mobiletime.in/2026/01/cylinder-explosion-six-people-ncluding-a-child-injured/): ಅಂಕೋಲಾದಲ್ಲಿ ಅಡುಗೆಗೆ ಬಳಸುವ ಸಿಲೆಂಡರ್ ಸ್ಪೋಟವಾಗಿದ್ದು, ಐದು ವರ್ಷದ ಬಾಲಕ ಸೇರಿ ಆರು ಜನರಿಗೆ ಗಾಯವಾಗಿದೆ. ಅಂಕೋಲಾದ ಕೇಣಿಯ ಗ್ರಾಮದ ಗಾಂವ್ಕರವಾಡದ ಗೌರೀಶ ನಾಯಕ ಅವರ ಮನೆಯಲ್ಲಿ ಸಿಲೆಂಡರ್ ಸ್ಪೋಟವಾಗಿದೆ. ಈ ಮನೆಯನ್ನು ಸುದರ್ಶನ ನಾಯ್ಕ ಎಂಬಾತರು ಬಾಡಿಗೆಗೆಪಡೆದಿದ್ದು, ಸಿಲೆಂಡರ್ ಸೋರಿಕೆ ಪರಿಣಾಮ ಮನೆಯವರು ಕಂಪನಿಗೆ ಮಾಹಿತಿ ನೀಡಿದ್ದರು. ಸಿಲೆಂಡರ್ ಕಂಪನಿ ಸಿಬ್ಬಂದಿ ಶ್ರವಣ ಬಂಟ್ ಅವರು ದುರಸ್ಥಿ ಕಾರ್ಯದಲ್ಲಿ ತೊಡಗಿರುವಾಗಲೇ ಸ್ಪೋಟ ಸಂಭವಿಸಿತು. ಸ್ಪೋಟದ ವೇಳೆ ಭಾರೀ ಪ್ರಮಾಣದ ಸದ್ದು ಕೇಳಿಸಿತು. ಈ ವೇಳೆ ಅಲ್ಲಿಯೇ ಆಟವಾಡುತ್ತಿದ್ದ ಗೌರೀಶ ನಾಯಕರ ಮೊಮ್ಮಗ ಕೃಷ್ಣ ನಾಯಕ (5), ಬಾಡಿಗೆದಾರ ಸುದರ್ಶನ ನಾಯ್ಕ ಹಾಗೂ ದುರಸ್ತಿಗೆ ಬಂದಿದ್ದ ಶ್ರವಣ ಬಂಟ್ ಅವರಿಗೆ ಗಂಭೀರ ಪ್ರಮಾಣದಲ್ಲಿ ಗಾಯವಾದವು. ಗಾಯಗೊಂಡವರನ್ನು ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ವೇಳೆ ಮನೆಯಲ್ಲಿದ್ದ ಇನ್ನಿತರರಿಗೂ ಗಾಯವಾಗಿದೆ. ಪಿಸೈ ವಿಶ್ವನಾಥ್ ನಿಂಗೊಳ್ಳಿ ಹಾಗೂ ಸುನೀಲ್ ಹುಳ್ಳೊಳ್ಳಿ ಜೊತೆ ಅಗ್ನಿ ಶಾಮಕ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿದ್ದಾರೆ.   - [ಬಿಜೆಪಿಯಿಂದ ಸಾಂತ್ವಾನ.. ಕಾಂಗ್ರೆಸ್ಸಿನಿoದ ಸಮಾಧಾನ](https://mobiletime.in/2026/01/consolation-from-bjp-congresss-relief/): ರಫೀಕ್ ನೀಡಿದ ಕಾಟ ವಿರೋಧಿಸಿದ ಕಾರಣ ಕೊಲೆಯಾದ ರಂಜಿತಾ ಕುಟುಂಬಕ್ಕೆ ಬಿಜೆಪಿ 5 ಲಕ್ಷ ರೂ ಪರಿಹಾರ ಕೊಟ್ಟಿದೆ. ಕಾಂಗ್ರೆಸ್ ಸರ್ಕಾರವೂ ಸಂತ್ರಸ್ತ ಕುಟುಂಬಕ್ಕೆ 8.25 ಲಕ್ಷ ರೂ ನೆರವು ನೀಡಿದೆ. ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಅವರು ಭಾನುವಾರ ಯಲ್ಲಾಪುರಕ್ಕೆ ಆಗಮಿಸಿದ್ದಾರೆ. ರಂಜಿತಾ ಅವರ ಮನೆಗೆ ಭೇಟಿ ನೀಡಿದ ಅವರು ಪಕ್ಷದ ನಿಧಿಯಿಂದ ಹಣಕಾಸು ಸಹಾಯ ಮಾಡಿದ್ದಾರೆ. ನಂತರ ಮಾತನಾಡಿದ ಅವರು `ಸಂತ್ರಸ್ತ ಕುಟುಂಬಕ್ಕೆ ಸರ್ಕಾರ 50 ಲಕ್ಷ ರೂ ಪರಿಹಾರ ನೀಡಬೇಕು. ಜೊತೆಗೆ 2 ಎಕರೆ ಕೃಷಿ ಭೂಮಿ ಕೊಡಬೇಕು’ ಎಂದು ಆಗ್ರಹಿಸಿದ್ದಾರೆ. `ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಗೃಹ ಸಚಿವರು ಸಿದ್ಧ ಉತ್ತರ ಕೊಡಲು ಮಾತ್ರ ಸೀಮಿತರಾಗಿದ್ದಾರೆ. ತನಿಖೆಗೂ ಪೂರ್ವದಲ್ಲಿಯೇ ಲವ್ ಜಿಹಾದ್ ಅಲ್ಲ ಎಂದು ಆಡಳಿತ ಪಕ್ಷ ಹೇಳುತ್ತಿದ್ದು, ಹಿಂದು ಮಹಿಳೆಯ ಪರ ಧ್ವನಿ ಎತ್ತುವ ಬಿಜೆಪಿಯನ್ನು ಕೋಮುವಾದಿ ಎಂದು ಬಿಂಬಿಸಲಾಗುತ್ತಿದೆ’ ಎಂದು ಅಸಮಧಾನವ್ಯಕ್ತಪಡಿಸಿದರು. ಸಂತ್ರಸ್ತ ಕುಟುಂಬಕ್ಕೆ ಸರ್ಕಾರದ ಪರವಾಗಿ ಶಾಸಕ ಶಿವರಾಮ ಹೆಬ್ಬಾರ್ 8.25 ಲಕ್ಷ ರೂ ಪರಿಹಾರ ವಿತರಿಸಿದ್ದಾರೆ. ಸಮಾಜ ಕಲ್ಯಾಣ ಇಲಾಖೆ ಮೂಲಕ ಈ ಹಣ ನೀಡಲಾಗಿದ್ದು, ಕುಟುಂಬದವರಿಗೂ ಅವರು ಧೈರ್ಯ ಹೇಳಿದ್ದಾರೆ. `ದಲಿತ ಮಹಿಳೆ ಹತ್ಯೆ ಪ್ರಕರಣದಿಂದ ನಾಗರಿಕ ಸಮಾಜ ತಲೆ ತಗ್ಗಿಸುವ ಹಾಗಾಗಿದೆ. ಇಂಥ ಕೃತ್ಯ ಎಂದಿಗೂ ಮರುಕಳಿಸಬಾರದು’ ಎಂದು ಶಿವರಾಮ ಹೆಬ್ಬಾರ್ ಹೇಳಿದ್ದಾರೆ. ಉತ್ತರ ಕನ್ನಡ ಜಿಲ್ಲಾ ಪೋಲಿಸ್ ಅಧಿಕಾರ ದೀಪನ್ ಎಂ ಎನ್, ಶಿರಸಿ ಉಪವಿಭಾಗಾಧಿಕಾರಿ ಕಾವ್ಯರಾಣಿ, ತಹಶಿಲ್ದಾರ ಚಂದ್ರಶೇಖರ ಹೊಸ್ಮನಿ ಇನ್ನಿತರರು ಸರ್ಕಾರಿ ನೆರವು ನೀಡುವ ವೇಳೆ ಇದ್ದರು. - [ಹಳೆ ಫೋಟೋ: ರಂಜಿತಾ ಸಹೋದರನ ಜೊತೆ ರಫೀಕ್ ಪಾರ್ಟಿ!](https://mobiletime.in/2026/01/rafiq-party-with-ranjitas-brother/): ಯಲ್ಲಾಪುರದ ರಂಜಿತಾ ಕೊಲೆ ಹಾಗೂ ರಫೀಕ್ ಆತ್ಮಹತ್ಯೆ ಪ್ರಕರಣಕ್ಕೆ ಮತ್ತೊಂದು ತಿರುವು ಸಿಕ್ಕಿದೆ. ರಂಜಿತಾ ಜೊತೆ ಅನ್ಯೋನ್ಯವಾಗಿದ್ದ ರಫೀಕ್ ಅವರ ಕುಟುಂಬದವರ ಜೊತೆಯೂ ಉತ್ತಮ ಒಡನಾಟಹೊಂದಿದ್ದು, ಇದಕ್ಕೆ ಸಾಕ್ಷಿಯಾಗಿ ರಫೀಕ್ ಹಾಗೂ ರಂಜಿತಾ ಸಹೋದರ ಒಟ್ಟಿಗೆ ಪಾರ್ಟಿ ಮಾಡಿದ ಫೋಟೋ mobiletime.inಗೆ ಸಿಕ್ಕಿದೆ. ರಫೀಕ್ ಹಾಗೂ ರಂಜಿತಾ ಬಾಲ್ಯದಿಂದಲೂ ಪರಿಚಯಸ್ಥರಾಗಿದ್ದರು. ಹೀಗಾಗಿ ರಂಜಿತಾ ಅವರ ಕುಟುಂಬದವರು ರಫೀಕ್ ಅವರನ್ನು ನಂಬಿದ್ದರು. ಸಂಘದ ಸಾಲ ವಸೂಲಿ ವಿಷಯವಾಗಿ ರಫೀಕ್ ಆಗಾಗ ರಂಜಿತಾ ಅವರ ಮನೆಗೆ ಬರುತ್ತಿದ್ದರು. ರಂಜೀತಾ ಅವರು ವಿವಾಹ ವಿಚ್ಚೇದಿತರಾಗಿರುವ ವಿಷಯ ಅರಿತು ರಫೀಕ್ ಆ ಕುಟುಂಬಕ್ಕೆ ಇನ್ನಷ್ಟು ಹತ್ತಿರವಾದರು. ಸಾಲ ವಸೂಲಾತಿ ವಿಷಯವಾಗಿ ಬಂದಾಗಲೇ ರಂಜಿತಾರ ಮೊಬೈಲ್ ಸಂಖ್ಯೆ ಪಡೆದಿದ್ದ ರಫೀಕ್ ಪದೇ ಪದೇ ಫೋನ್ ಮಾಡಲು ಶುರು ಮಾಡಿದ್ದರು. ರಂಜಿತಾ ಅವರ ಸಹೋದರ ವೀರಭದ್ರ ಬನ್ಸೊಡೆ ಅವರ ಸ್ನೇಹವನ್ನು ರಫೀಕ್ ಸಂಪಾದಿಸಿದ್ದರು. ಅದೇ ಸ್ನೇಹದ ಆಧಾರದಲ್ಲಿ ರಫೀಕ್ ಹಾಗೂ ವೀರಭದ್ರ ಅನೇಕ ಸಲ ಒಟ್ಟಿಗೆ ಊಟ ಮಾಡಿದ್ದರು. ಅದಾದ ನಂತರ ಸ್ನೇಹಿತನ ಸಹೋದರಿ ಮೇಲೆ ರಫೀಕ್ ಕಣ್ಣು ಹಾಕಿದ್ದು, ವೀರಭದ್ರ ಅವರ ನಂಬಿಕೆಯನ್ನು ರಫೀಕ್ ಹುಸಿಯಾಗಿಸಿದ್ದಾರೆ. ರಫೀಕ್ ಅನೇಕ ಸಲ ರಂಜಿತಾ ಅವರ ಮನೆಗೆ ಭೇಟಿ ನೀಡಿ ಅಲ್ಲಿಯೂ ಊಟ ಮಾಡುತ್ತಿದ್ದರು. ಕಾಳಮ್ಮ ನಗರದ ಆಶ್ರಯ ಕಾಲೋನಿ ಸುತ್ತಲು ರಫೀಕ್ ಓಡಾಟ ಸಹಜವಾಗಿದ್ದು, ಯಾರೂ ಆ ಬಗ್ಗೆ ಹೆಚ್ಚಿಗೆ ತಲೆಕೆಡಿಸಿಕೊಂಡಿರಲಿಲ್ಲ. ಆದರೆ ಕಳೆದ ದೀಪಾವಳಿ ಹಬ್ಬದ ಅವಧಿಯಲ್ಲಿ ರಫೀಕ್, ರಚಿತಾ ಅವರ ಬೆನ್ನು ಬಿದ್ದು ಪೀಡಿಸಲು ಶುರು ಮಾಡಿದ್ದರು. ರಂಜಿತಾ ಅವರ ಸಹೋದರಿ ಅಕ್ಷತಾ ಅವರು ಸಹ ಇದನ್ನು ಖಂಡಿಸಿ ರಫೀಕ್’ಗೆ ಬೈದು ಬುದ್ದಿ ಹೇಳಿದ್ದರು. ಅದಾದ ನಂತರವೂ ಬೇರೆ ಬೇರೆ ಮೊಬೈಲ್ ಸಂಖ್ಯೆಯಿAದ ರಫೀಕ್ ಫೋನ್ ಮಾಡುತ್ತಿದ್ದು, ರಂಜಿತಾ ಅವರ ಸಹೋದರ ವೀರಭದ್ರ ಅವರು ಸಹ ರಫೀಕ್’ಗೆ ಬೈದಿದ್ದರು. ಇದೇ ವಿಷಯವಾಗಿ ರಫೀಕ್ ಸಿಟ್ಟಾಗಿದ್ದು, ರಂಜಿತಾ ಅವರಲ್ಲಿ `ಮದುವೆ ಆಗೋಣ’ ಎಂಬ ಪ್ರಸ್ತಾಪ ಮಾಡಿದ್ದರು. ಅದನ್ನು ವಿರೋಧಿಸಿದ ಕಾರಣ ಶನಿವಾರ ಕಾಳಮ್ಮ ನಗರದ ಅಂಗಡಿಯ ಬಳಿ ಎರಡು ತಾಸು ಕಾದು ಕುಳಿತ ರಫೀಕ್, ರಂಜಿತಾ ಅವರ ಕುತ್ತಿಗೆಗೆ ಚಾಕು ಚುಚ್ಚಿದ್ದಾರೆ. ಅದಾದ ನಂತರ ರಫೀಕ್ ಸಹ ಕಾಡಿಗೆ ತೆರಳಿದ್ದು, ನಶೆಯ ಗುಂಗಿನಲ್ಲಿರುವಾಗಲೇ ನೇಣಿಗೆ ಶರಣಾಗಿದ್ದಾರೆ.   - [ಕೊಲೆಗೆ ಖಂಡಿಸಿ ಪ್ರತಿಭಟನೆ: ಯಲ್ಲಾಪುರ ಬಂದ್ ಯಶಸ್ವಿ!](https://mobiletime.in/2026/01/protest-condemning-the-murder-yellapur-bandh-a-success/): ಹಿಂದು ಸಂಘಟನೆಗಳು ಕರೆ ನೀಡಿದ್ದ ಯಲ್ಲಾಪುರ ಬಂದ್ ಯಶಸ್ವಿಯಾಗಿದೆ. ರಂಜಿತಾ ಕೊಲೆ ಖಂಡಿಸಿ 500ಕ್ಕೂ ಅಧಿಕ ಜನ ಮೌನಾಚರಣೆ ಮಾಡಿದ್ದು, ಕೃತ್ಯವನ್ನು ಖಂಡಿಸಿದ್ದಾರೆ. ಯಲ್ಲಾಪುರದ ಬಸವೇಶ್ವರ ವೃತ್ತದಲ್ಲಿ ಸೇರಿದ ಜನ ಶೋಕವ್ಯಕ್ತಪಡಿಸಿದರು. ರಂಜಿತಾರನ್ನು ಕೊಂದ ರಫೀಕ್ ನಿಲುವನ್ನು ಖಂಡಿಸಿದರು. ಆ ವೇಳೆಗಾಗಲೇ ರಫೀಕ್ ಆತ್ಮಹತ್ಯೆಗೆ ಶರಣಾದ ಸುದ್ದಿ ಬಂದಿದ್ದರೂ ಜನ ಪ್ರತಿಭಟನೆ ಹಿಂಪಡೆಯಲಿಲ್ಲ. `ಭವಿಷ್ಯದಲ್ಲಿ ಈ ಬಗೆಯ ಕೃತ್ಯ ಮರುಕಳಿಸದ ಹಾಗೇ ಕಠಿಣ ಕಾನೂನು ಬರಬೇಕು’ ಎಂದು ಆಗ್ರಹಿಸಿ ಜನ ಧರಣಿ ನಡೆಸಿದರು. ಪಟ್ಟಣದ ಬಹುತೇಕ ಅಂಗಡಿ ಮುಂಗಟ್ಟುಗಳು ಬಂದ್ ಆಗಿದ್ದವು. ವ್ಯಾಪಾರಸ್ಥರು ಸ್ವಯಂ ಪ್ರೇರಣೆಯಿಂದ ಅಂಗಡಿಯ ಬಾಗಿಲು ಮುಚ್ಚಿದ್ದರು. ಪ್ರತಿಭಟನೆಯ ವೇಳೆ ಮೀನು ಮಾರುಕಟ್ಟೆಯಲ್ಲಿ ವ್ಯಾಪಾರ ನಡೆಯುತ್ತಿರುವ ವಿಷಯ ಬಂದಿದ್ದು, ಪ್ರತಿಭಟನಾಕಾರರು ಅದನ್ನು ವಿರೋಧಿಸಿದರು. ಅದಾದ ಕೆಲ ಕ್ಷಣದಲ್ಲಿ ಮೀನು ಮಾರುಕಟ್ಟೆಯೂ ಬಂದ್ ಆಯಿತು. ಪ್ರತಿಭಟನೆಯ ಕಾವು ಏರಿದ್ದರೂ ವಾಹನ ಸಂಚಾರಕ್ಕೆ ಸಮಸ್ಯೆ ಆಗಲಿಲ್ಲ. ಶಾಂತಿಯುತ ಪ್ರತಿಭಟನೆಗೆ ಪೊಲೀಸರು ಅವಕಾಶ ನೀಡಿದ್ದು, ಪೊಲೀಸ್ ಅಧೀಕ್ಷಕ ದೀಪನ್ ಎಂ ಎನ್ ನೇತ್ರತ್ವದಲ್ಲಿ ನೂರಾರು ಪೊಲೀಸರು ಭದ್ರತೆಯಲ್ಲಿದ್ದರು. ಪ್ರತಿಭಟನೆಯಲ್ಲಿ ಭಾಷಣ ಮಾಡಿದ ಕೆಲ ಮುಖಂಡರು ಈ ಘಟನೆಗೆ ರಾಜಕೀಯ ಬಣ್ಣ ಲೇಪಿಸಿದರು. ಬಿಜೆಪಿ ಪ್ರಮುಖರು ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ಮಾಡಿದರು. `ಕಾಂಗ್ರೆಸ್ ಆಡಳಿತ ಬಂದ ನಂತರ ಇಂಥ ಘಟನಾವಳಿಗಳು ಹೆಚ್ಚಾಗಿದೆ’ ಎಂದು ಭಾಷಣಕಾರರು ದೂರಿದರು. ಕೆಲವರು ಈ ಮಾತನ್ನು ಒಪ್ಪಿದರು. ಇನ್ನೂ ಕೆಲವರು ಸಾವಿನ ವಿಷಯದಲ್ಲಿ ರಾಜಕೀಯ ಬೇಡ ಎನ್ನುತ್ತಿದ್ದರು. `ಹಿಂದು ಧರ್ಮದ ಮೇಲೆ ನಡೆಯುವ ಆಕ್ರಮಣ ನಿಲ್ಲಬೇಕು’ ಎಂದು ಪ್ರತಿಭಟನಾಕಾರರು ಧ್ವನಿಗೂಡಿಸಿದರು. `ಬಿಜೆಪಿ ರಾಜ್ಯ ಅಧ್ಯಕ್ಷರು ರಂಜಿತಾ ಅವರ ಮನೆಗೆ ಭೇಟಿ ನೀಡಲಿದ್ದು, ಕಾಂಗ್ರೆಸ್ ಪ್ರಮುಖರು ಬಂದು ನ್ಯಾಯ ಒದಗಿಸಬೇಕು’ ಎಂದು ಬಿಜೆಪಿಗರು ಆಗ್ರಹಿಸಿದರು. ಭಾನುವಾರ ಯಲ್ಲಾಪುರದಲ್ಲಿ ನಡೆಯಬೇಕಿದ್ದ ಸಂತೆಯೂ ದಿಢೀರ್ ಆಗಿ ರದ್ದಾಗಿದ್ದು, ವ್ಯಾಪಾರಿಗಳು ಪಟ್ಟಣದ ಹೊರಭಾಗದಲ್ಲಿ ವ್ಯಾಪಾರ ಮಾಡಿದರು. ಹಳಿಯಾಳ ಕ್ರಾಸಿನ ಬಳಿ ಕೆಲವರು ತರಕಾರಿ ಮಾರಾಟ ಮಾಡಿ ಮನೆ ಸೇರಿದರು. - [ರಫೀಕ್ ಶವ ಹುಡುಕಿದ್ದು ಇದೇ ನಾಯಿ!](https://mobiletime.in/2026/01/this-is-the-dog-that-found-rafiqs-body/): ಯಲ್ಲಾಪುರದ ರಂಜಿತಾ ಅವರನ್ನು ಕೊಲೆ ಮಾಡಿದ ರಫೀಕ್ ಕಾಡಿನ ಕಡೆ ಓಡಿದ್ದು, ಶನಿವಾರ ರಾತ್ರಿಯಿಡೀ ಪೊಲೀಸರು ಕಾಡು ಸುತ್ತಿದರೂ ಆರೋಪಿ ಸುಳಿವು ಸಿಕ್ಕಿರಲಿಲ್ಲ. ಭಾನುವಾರ ಬೆಳಗ್ಗೆ ಕಾರ್ಯಾಚರಣೆಗಿಳಿದ ಅಖೇರಾ ಎಂಬ ಶ್ವಾನ ಒಂದುವರೆ ತಾಸಿನೊಳಗೆ ರಫೀಕ್ ಇದ್ದ ಸ್ಥಳ ಪತ್ತೆ ಮಾಡಿದೆ. ಎರಡುವರೆ ವರ್ಷದ ಹಿಂದೆ ಅಖೀರಾ ಎಂಬ ಶ್ವಾನ ಪೊಲೀಸ್ ಇಲಾಖೆಯನ್ನು ಸೇರಿತು. ಕಾಳಿ ಎಂಬ ಶ್ವಾನಕ್ಕೆ ತರಬೇತಿ ನೀಡಿ ಪಳಗಿಸಿದ್ದ ಪೊಲೀಸ್ ಸಿಬ್ಬಂದಿ ಗೋಪಾಲಕೃಷ್ಣ ನಾಯ್ಕ ಅವರು ಅಖೀರಾ ಅವರಿಗೆ ತರಬೇತಿ ಶುರು ಮಾಡಿದ್ದರು. ಅತ್ಯಂತ ಚುರುಕು ಸ್ವಭಾವದ ಈ ಶ್ವಾನ ಬಹುಬೇಗ ತನಿಖಾ ವಿದ್ಯೆ ಕಲಿತಿದ್ದು, ಅನೇಕ ಅಪರಾಧ ಪ್ರಕರಣಗಳಲ್ಲಿ ಪೊಲೀಸರಿಗೆ ನೆರವಾಗಿದೆ. ಕರಾವಳಿ ಉತ್ಸವದ ಅವಧಿಯಲ್ಲಿಯೂ ಅಖೀರಾ ಅತ್ಯುತ್ತಮ ಪ್ರದರ್ಶನ ನೀಡಿದ್ದು, ಅಖೀರಾ ಮಾಡಿದ ಸಾಹಸಗಳನ್ನು ಜನ ಕಣ್ತುಂಬಿಕೊoಡಿದ್ದರು. ಆ ಅವಧಿಯಲ್ಲಿ ಅಖೀರಾವನ್ನು ಒಳಗೊಂಡ ಶ್ವಾನದಳಕ್ಕೆ ಪೊಲೀಸ್ ಅಧೀಕ್ಷಕರು 10 ಸಾವಿರ ರೂ ಬಹುಮಾನ ನೀಡಿದ್ದರು. ರಂಜೀತಾ ಕೊಲೆ ಪ್ರಕರಣ ಗಂಭೀರ ಸ್ವರೂಪಪಡೆದಿದ್ದರಿಂದ ಈ ಕಾರ್ಯಾಚರಣೆಗೆ ಅಖೀರಾ ನೆರವುಪಡೆಯಲು ನಿರ್ಧರಿಸಲಾಗಿತ್ತು. ಆರೋಪಿ ರಫೀಕ್ ಆನಗೋಡು ಭಾಗದ ಅರಣ್ಯ ಪ್ರದೇಶಕ್ಕೆ ಹೋದ ಬಗ್ಗೆ ಮಾಹಿತಿಯಿತ್ತು. ಆದರೆ, ಎಲ್ಲಿ ಅವಿತಿದ್ದಾರೆ? ಎಂದು ಗೊತ್ತಾಗಿರಲಿಲ್ಲ. ಹೀಗಾಗಿ ಯಲ್ಲಾಪುರದಲ್ಲಿ ನಡೆದ ರಂಜಿತಾ ಕೊಲೆ ಪ್ರಕರಣರದಲ್ಲಿಯೂ ಆರೋಪಿ ರಫೀಕ್ ಹುಡುಕಾಟಕ್ಕೆ ಅಖೀರಾ ಆಗಮಿಸಿದ್ದು ಕಾರ್ಯಾಚರಣೆ ನಡೆಸದ ಒಂದುವರೆ ತಾಸಿನಲ್ಲಿ ರಫೀಕ್ ಸುಳಿವು ಸಿಕ್ಕಿತು. ಆದರೆ, ಪೊಲೀಸರು ಕಾಜುವಾಡದ ಅರಣ್ಯ ಪ್ರದೇಶಕ್ಕೆ ಹೋಗುವಷ್ಟರೊಳಗೆ ರಫೀಕ್ ಶವವಾಗಿದ್ದರು. - [ಕೈ ಕೊಟ್ಟ ತುರ್ತು ಸೇವೆ.. ಸಕಾಲಕ್ಕೆ ಸ್ಪಂದಿಸಿದ ಆಟೋ ಆಂಬುಲೆನ್ಸ್!](https://mobiletime.in/2026/01/emergency-service-that-gave-a-hand-auto-ambulance-that-responded-on-time/): ರಫೀಕ್ ದಾಳಿಯಿಂದ ತತ್ತರಿಸಿದ್ದ ರಂಜಿತಾ ರಕ್ತದ ಮಡುವಿನಲ್ಲಿ ಬಿದ್ದಿದ್ದರೂ ಅವರ ಸಹಾಯಕ್ಕೆ ಯಾರೂ ಬಂದಿರಲಿಲ್ಲ. ಆಗ, ಅದೇ ಊರಿನ ಚಂದ್ರಣ್ಣ ತಮ್ಮ ಆಟೋವನ್ನು ಆಂಬುಲೆನ್ಸ್ ಆಗಿ ಪರಿವರ್ತಿಸಿ ರಂಜಿತಾ ಅವರನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಚಂದ್ರಶೇಖರ ಬೋವಿವಡ್ಡರ್ ಅವರು ಯಲ್ಲಾಪುರ ಬಸ್ ನಿಲ್ದಾಣ ಬಳಿಯ ಆಟೋ ಸ್ಟಾಂಡಿನ ಉಪಾಧ್ಯಕ್ಷರಾಗಿದ್ದಾರೆ. ಚಂದ್ರಶೇಖರ್ ಬೋವಿವಡ್ಡರ್ ಅವರು ಅಧ್ಯಕ್ಷರಾಗಿರುವ ರಾಮಾಪುರ ಸರ್ಕಾರಿ ಶಾಲೆಯಲ್ಲಿಯೇ ರಂಜಿತಾ ಬನ್ಸೋಡೆ ಅವರು ಅಡಿಗೆ ಸಹಾಯಕಿ ಆಗಿ ಕೆಲಸ ಮಾಡುತ್ತಿದ್ದರು. ರಂಜಿತಾ ಬನ್ಸೋಡೆ ಹಾಗೂ ಚಂದ್ರಶೇಖರ್ ಬೋವಿವಡ್ಡರ್ ಅವರ ಮನೆ ಅಕ್ಕಪಕ್ಕದಲ್ಲಿಯೇ ಇದ್ದು, ಘಟನೆ ನಡೆದ ವೇಳೆ ಚಂದ್ರಶೇಖರ್ ಬೋವಿವಡ್ಡರ್ ಅವರು ಶಾಲೆಯಿಂದ ಮನೆಗೆ ಮರಳುತ್ತಿದ್ದರು. ಈ ವೇಳೆ ರಂಜಿತಾ ಅವರು ರಕ್ತದ ಮೊಡವಿನಲ್ಲಿ ಬಿದ್ದಿರುವ ಬಗ್ಗೆ ಚಂದ್ರಶೇಖರ್ ಬೋವಿವಡ್ಡರ್ ಅವರಿಗೆ ಫೋನ್ ಬಂದಿದ್ದು, ತಕ್ಷಣ ಅವರು ಆಸ್ಪತ್ರೆಯ ಕಡೆ ಆಟೋ ತಿರುಗಿಸಿದರು. ಎರಡು ತಾಸು ಕಾದು ಕೊಲೆ ಮಾಡಿದ: ಸಂಘದ ಸಾಲ ವಸೂಲಿಗೆ ರಂಜಿತಾರ ಮನೆ ಕಡೆ ಬರುತ್ತಿದ್ದ ರಫೀಕ್ ಆ ಕುಟುಂಬದವರ ಜೊತೆಯೂ ಆತ್ಮೀಯ ಸಂಬoಧ ಹೊಂದಿದ್ದರು. ಜಿಂಕೆ ಕೊಂದ ಪ್ರಕರಣದಲ್ಲಿಯೂ ಆರೋಪಿಯಾಗಿದ್ದು, ವಿಪರೀತ ಪ್ರಮಾಣದಲ್ಲಿ ವಿವಿಧ ವ್ಯಸನಹೊಂದಿದ್ದರು. ವ್ಯಸನಕ್ಕೆ ಬೇಸತ್ತು ರಂಜಿತಾ ರಫೀಕ್ ಅವರಿಂದ ದೂರವಾಗಿದ್ದರು. ರಂಜಿತಾ ದೂರವಾದ ಕಾರಣ ರಫೀಕ್ ಸಿಟ್ಟಾಗಿದ್ದು, ಮದುವೆ ಆಗುವಂತೆ ಪೀಡಿಸುತ್ತಿದ್ದರು. ಮದುವೆಗೆ ಒಪ್ಪದ ಕಾರಣ ಕೊಲೆ ಮಾಡುವ ನಿರ್ಧಾರಕ್ಕೆ ಬಂದಿದ್ದರು. ಕೊಲೆ ಮಾಡುವುದಕ್ಕೆ ಸಂಚು ರೂಪಿಸಿಯೇ ಬಂದಿದ್ದ ರಫೀಕ್, ರಂಜಿತಾರಿಗೆ ಹಿಂಸಿಸಲು ಎರಡು ತಾಸು ಕಾದಿದ್ದರು. ರಂಜಿತಾ ಅವರ ಮನೆ ಬಳಿಯಿರುವ ಗೂಡಂಗಡಿಯಲ್ಲಿ ರಫೀಕ್ ಕಾಯುತ್ತಿರುವುದನ್ನು ಜನ ಗಮನಿಸಿದ್ದರು. ಬೆಳಗ್ಗೆ 11.30ರ ಸುಮಾರಿಗೆ ಅಂಗಡಿ ಬಳಿ ಬಂದಿದ್ದ ರಫೀಕ್ ಅವರನ್ನು ಅದೇ ಭಾಗದ ಸಂತೋಷ ಭಾಗವತಕರ್ ಅವರು ಮಾತನಾಡಿಸಿದ್ದರು. ಆದರೆ, ಆಗಾಗ ಅಲ್ಲಿ ಬರುತ್ತಿದ್ದ ರಫೀಕ್ ಈ ಬಾರಿ ರಂಜಿತಾ ಅವರನ್ನು ಕೊಲೆ ಮಾಡುವ ಬಗ್ಗೆ ಯಾರೂ ಊಹಿಸಿರಲಿಲ್ಲ. ರಂಜಿತಾ ಅವರು ರಕ್ತದ ಮೊಡವಿನಲ್ಲಿ ಬಿದ್ದಿರುವ ಬಗ್ಗೆ ಕುಟುಂಬದವರು ಆಂಬುಲೆನ್ಸಿಗೆ ಫೋನ್ ಮಾಡಿದರೂ ಸಕಾಲದಲ್ಲಿ ಆಂಬುಲೆನ್ಸ ಸಿಗಲಿಲ್ಲ. 20 ನಿಮಿಷ ಕಳೆದರೂ ಆಂಬುಲೆನ್ಸ ಬಾರದ ವಿಷಯ ತಿಳಿದ ಸಂತೋಷ ಭಾಗವತಕರ್ ಅವರು ಅಲ್ಲಿಗೆ ದೌಡಾಯಿಸಿದ್ದು, ಆ ವೇಳೆ ಅಲ್ಲಿಗೆ ಬಂದಿದ್ದ ಚಂದ್ರಶೇಖರ ಬೋವಿವಡ್ಡರ್ ಅವರ ಆಟೋ ಒಳಗೆ ರಂಜಿತಾ ಅವರನ್ನು ಕೂರಿಸಿದರು. ಆ ವೇಳೆಗಾಗಲೇ ಪೇಟೆಗೆ ಹೋಗಿದ್ದ ರಂಜಿತಾ ಅವರ ಅಣ್ಣ ವೀರಭದ್ರ, ಅವರ ತಾಯಿ ಭಾಗೀರಥಿ, ತಂಗಿ ಅಕ್ಷತಾ ಸಹ ಆಟೋ ಮೇಲೆರಿದ್ದು ಚಂದ್ರಣ್ಣ ಅವರು ಗಾಯಾಳುವನ್ನು ಆಸ್ಪತ್ರೆಗೆ ಕರೆದೊಯ್ದರು. `ರಂಜಿತಾ ಅವರನ್ನು ಬದುಕಿಸಿಕೊಳ್ಳಲು ಸಾಕಷ್ಟು ಶ್ರಮವಹಿಸಿದರೂ ಪ್ರಯೋಜನವಾಗಲಿಲ್ಲ. ತಕ್ಷಣಕ್ಕೆ ಆಂಬುಲೆನ್ಸ ಸಿಗದಿರುವುದು ಸಮಸ್ಯೆಯಾಯಿತು’ ಎಂದು ಚಂದ್ರಶೇಖರ ಬೋವಿವಡ್ಡರ್ ಹಾಗೂ ಸಂತೋಷ ಭಾಗವತಕರ್ ಅವರು ವಿವರಿಸಿದರು. - [ರಂಜಿತಾ ಕೊಂದ ರಫೀಕ್ ಇನ್ನಿಲ್ಲ!](https://mobiletime.in/2026/01/rafiq-who-killed-ranjitha-is-no-more/): ಮದುವೆ ಆಗದ ಕಾರಣ ರಂಜಿತಾ ಅವರ ಕತ್ತು ಕೊಯ್ದು ಕೊಲೆ ಮಾಡಿದ್ದ ರಫೀಕ್ ಆತ್ಮಹತ್ಯೆಗೆ ಶರಣಾಗಿದ್ದಾರೆ. ಕೊಲೆ ನಂತರ ಕಾಡಿಗೆ ಪರಾರಿಯಾಗಿದ್ದ ರಫೀಕ್ ಕಾಜಲವಾಡದ ಬಳಿ ಸಾವನಪ್ಪಿದ್ದಾರೆ. ಯಲ್ಲಾಪುರದ ರಾಮಾಪುರ ಶಾಲೆಯ ಬಿಸಿಯೂಟ ಸಿಬ್ಬಂದಿ ಆಗಿದ್ದ ರಂಜಿತಾ ಅವರನ್ನು ರಫಿಕ್ ಕೊಲೆ ಮಾಡಿದ್ದರು. ಶನಿವಾರ ಮಧ್ಯಾಹ್ನ ಶಾಲೆಯಿಂದ ಮನೆಗೆ ಬರುತ್ತಿದ್ದ ರಂಜಿತಾ ಅವರನ್ನು ಮದುವೆ ಆಗುವಂತೆ ರಫೀಕ್ ಪೀಡಿಸಿದ್ದು, ಒಪ್ಪದ ಕಾರಣ ಕುತ್ತಿಗೆಗೆ ಚಾಕು ಚುಚ್ಚಿದ್ದರು. ಅದಾದ ನಂತರ ರಫೀಕ್ ಕಾಡಿನ ಕಡೆ ಓಡಿದ್ದು, ರಫೀಕ್ ಹುಡುಕಾಟಕ್ಕೆ ಪೊಲೀಸರು ವಿಶೇಷ ತಂಡ ರಚಿಸಿದ್ದರು. ಆದರೆ, ರಫೀಕ್ ಮಾತ್ರ ಯಾರ ಕೈಗೂ ಸಿಕ್ಕಿರಲಿಲ್ಲ. ರಂಜಿತಾ ಅವರು ಮದುವೆ ಆಗಿ ಗಂಡನಿAದ ಬೇರೆಯಾಗಿದ್ದು, ಮತ್ತೊಂದು ಮದುವೆಗೆ ಮನಸ್ಸು ಮಾಡಿರಲಿಲ್ಲ. ಆದರೆ, ರಫೀಕ್ ಮದುವೆ ಆಗುವಂತೆ ಪೀಡಿಸುವುದನ್ನು ಬಿಟ್ಟಿರಲಿಲ್ಲ. ಮದುವೆ ಆಗಲು ಒಪ್ಪದ ರಂಜಿತಾ ಅವರು ರಫೀಕ್ ಜೊತೆ ಮಾತನಾಡುವುದನ್ನು ನಿಲ್ಲಿಸಿದ್ದರಿಂದ ಆಕ್ರೋಶಗೊಂಡ ರಫೀಕ್, ರಂಚಿತಾ ಅವರ ಕೊಲೆ ಮಾಡಿ ಪರಾರಿಯಾಗಿದ್ದರು. ಭಾನುವಾರ ಬೆಳಗ್ಗೆ ರಫೀಕ್ ಶವವಾಗಿದ್ದಾರೆ. - [ಕಾಡಿನ ಕಡೆ ಓಡಿದ ಕೊಲೆಗಾರ!](https://mobiletime.in/2026/01/the-murderer-ran-towards-the-forest/): ಪ್ರೀತಿ-ಪ್ರೇಮ ಎಂದು ದುಂಬಾಲು ಬಿದ್ದು ಮದುವೆಗೆ ಒಪ್ಪದ ಕಾರಣ ರಂಜಿತಾ ಅವರಿಗೆ ಚಾಕು ಇರಿದ ರಫೀಕ್ ಕಾಡು ಸೇರಿದ್ದಾರೆ. ಮಾಹಿತಿಗಳ ಪ್ರಕಾರ ಯಲ್ಲಾಪುರದ ಆನಗೋಡು ಭಾಗದ ಕಾಡಿನ ಕಡೆ ರಫೀಕ್ ಓಡಿದ್ದಾರೆ. ಶನಿವಾರ ಮಧ್ಯಾಹ್ನ ಕಾಳಮ್ಮ ನಗರಕ್ಕೆ ಬಂದಿದ್ದ ರಫೀಕ್ ಆಶ್ರಯ ಕಾಲೋನಿ ಬಳಿ ರಂಜಿತಾ ಅವರ ಕುತ್ತಿಗೆಗೆ ಚಾಕು ಚುಚ್ಚಿದ್ದಾರೆ. ಅದಾದ ನಂತರ ಅಲ್ಲಿಂದ ಓಡಿ ಪರಾರಿಯಾಗಿದ್ದಾರೆ. ಕಾಳಮ್ಮ ನಗರದ ಗದ್ದೆ ದಾಟಿದ ರಫಿಕ್ ಕಾಜಲವಾಡ ಪ್ರವೇಶಿಸಿ ಅದಾದ ನಂತರ ಆನಗೋಡು ಭಾಗದ ಕಾಡಿನ ಕಡೆ ಪ್ರಯಾಣ ಮಾಡಿದ್ದಾರೆ. ಶನಿವಾರ ರಾತ್ರಿ 10ಗಂಟೆಯವರೆಗೂ ರಫಿಕ್ ಪತ್ತೆ ಆಗಿಲ್ಲ. ಆರೋಪಿ ರಫಿಕ್ ಬಂಧನಕ್ಕಾಗಿ ಅನೇಕರು ಆಗ್ರಹಿಸುತ್ತಿದ್ದಾರೆ. ಕಾಡು ಪ್ರದೇಶದಲ್ಲಿ ರಫಿಕ್ ಹುಡುಕಾಟ ಮುಂದುವರೆದಿದೆ. ರಫಿಕ್ ಕೊನೆಯದಾಗಿ ಕಪ್ಪು ಬಣ್ಣದ ಅಂಗಿ ಧರಿಸಿದ್ದು, ಆರೋಪಿಯ ಫೋಟೋವನ್ನು ಪೊಲೀಸರು ಹಂಚಿಕೊAಡಿದ್ದಾರೆ. ಸಾರ್ವಜನಿಕರ ಸಹಾಯವನ್ನು ಕೋರಿದ್ದು, ಶೋಧ ಕಾರ್ಯ ಜೋರಾಗಿದೆ. ಪೊಲೀಸ್ ಅಧೀಕ್ಷಕ ದೀಪನ್ ಎಂ ಎನ್ ಸೇರಿದಂತೆ ಅನೇಕ ಹಿರಿಯ ಅಧಿಕಾರಿಗಳು ಯಲ್ಲಾಪುರದಲ್ಲಿ ಬೀಡು ಬಿಟ್ಟಿದ್ದಾರೆ. ಆರೋಪಿ ಬಂಧಿಸುವ ಜೊತೆ ಶಾಂತಿ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿಯೂ ಪೊಲೀಸರು ಹರಸಾಹಸ ಮಾಡುತ್ತಿದ್ದಾರೆ. - [ಕೋಣ ಕೊಂದ ಕೃಷ್ಣಪ್ರಸಾದ!](https://mobiletime.in/2026/01/krishnaprasad-killed-the-corner/): ಯಲ್ಲಾಪುರ ತೆಲಂಗಾರದ ಕೃಷ್ಣಪ್ರಸಾದ ಶೇಟ್ ಅವರು ಕೋಣಕ್ಕೆ ಬೈಕ್ ಗುದ್ದಿದ್ದು, ಡಿಕ್ಕಿಯ ರಭಸಕ್ಕೆ ಆ ಕೋಣ ಸಾವನಪ್ಪಿದೆ. ಕೃಷ್ಣಪ್ರಸಾದ ಶೇಟ್ ಅವರಿಗೂ ಗಂಭೀರ ಪ್ರಮಾಣದಲ್ಲಿ ಗಾಯವಾಗಿದೆ. ಯಲ್ಲಾಪುರದ ಚಿಮ್ನಳ್ಳಿ ಬಳಿಯ ತೆಲಂಗಾರದಲ್ಲಿ ಕೃಷ್ಣಪ್ರಸಾದ ಮಂಜುನಾಥ ಶೇಟ್ ಅವರು ವಾಸವಾಗಿದ್ದಾರೆ. 22 ವರ್ಷದ ಅವರು ಕೂಲಿ ಕೆಲಸ ಮಾಡಿಕೊಂಡು ಬದುಕು ಕಟ್ಟಿಕೊಂಡಿದ್ದಾರೆ.ಜನವರಿ 23ರಂದು ಸಹ ಅವರು ವೇಗವಾಗಿ ಬೈಕ್ ಓಡಿಸಿದ ಪರಿಣಾಮ ಬಿದ್ದು ಪೆಟ್ಟು ಮಾಡಿಕೊಂಡಿದ್ದಾರೆ. ಆ ದಿನ ಸಂಜೆ ಯಲ್ಲಾಪುರಕ್ಕೆ ಬಂದಿದ್ದ ಕೃಷ್ಣಪ್ರಸಾದ ಶೇಟ್ ಅವರು ರಾತ್ರಿ ಚಿಮ್ನಳ್ಳಿ ಕಡೆ ಹೊರಟಿದ್ದರು. ಬೈಕ್ ಓಡಿಸಿಕೊಂಡು ಹೊರಟ ಅವರಿಗೆ ಬಿದ್ರೆಮನೆ ಕ್ರಾಸಿನ ಬಳಿ ಕೋಣವೊಂದು ಎದುರಾಯಿತು. ಆ ಕೋಣಕ್ಕೆ ಅವರು ಬೈಕ್ ಡಿಕ್ಕಿ ಹೊಡೆದರು. ಡಿಕ್ಕಿಯ ರಭಸಕ್ಕೆ ಕೋಣ ಅಲ್ಲಿಯೇ ಸಾವನಪ್ಪಿತು. ಬೈಕಿನಿಂದ ಬಿದ್ದ ಕೃಷ್ಣಪ್ರಸಾದರಿಗೂ ಪೆಟ್ಟಾಯಿತು. ಎಡ ಕೈ, ತಲೆ ಹಿಂಭಾಗ ಗಾಯ ಮಾಡಿಕೊಂಡ ಕೃಷ್ಣಪ್ರಸಾದ ಅವರ ಮೂಗಿನಿಂದಲೂ ರಕ್ತ ಸುರಿಯುತ್ತಿತ್ತು. ಅಪಘಾತಕ್ಕೀಡಾದ ಬೈಕ್ ಸಹ ನುಚ್ಚು ನೂರಾಗಿತ್ತು. ಹೆಂಡತಿಯ ತಮ್ಮನಿಗೆ ಆದ ಅಪಘಾತದ ಬಗ್ಗೆ ಅರಿತು ಯಲ್ಲಾಪುರದ ದೇಹಳ್ಳಿ ಬಳಿಯ ಕುಂಬ್ರಾಳದ ಮಂಜುನಾಥ ಶ್ರೀಧರ ಮಹಾಲೆ ಅವರು ಸ್ಥಳಕ್ಕೆ ದೌಡಾಯಿಸಿದರು. ಅಪಘಾತ ನೋಡಿದವರಿಂದ ಮಾಹಿತಿಪಡೆದು ಪೊಲೀಸ್ ದೂರು ದಾಖಲಿಸಿದರು. ಮನವಿ: ಈ ಅಪಘಾತದಲ್ಲಿ ಗಾಯಗೊಂಡ ಕೃಷ್ಣಪ್ರಸಾದ ಅವರ ಪರಿಸ್ಥಿತಿ ಗಂಭೀರವಾಗಿದ್ದು, ಅವರು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಬಗ್ಗೆ ಮಂಜುನಾಥ ಮಹಾಲೆ ಅವರು ದಾಖಲೆ ಹಂಚಿಕೊAಡಿದ್ದು, ಸಹಾಯಕ್ಕಾಗಿ ಮನವಿ ಮಾಡಿದ್ದಾರೆ. `ಅತಿ ವೇಗ ಅಪಾಯಕ್ಕೆ ಕಾರಣ’ - [ಇದೇಂಥ ದೇಶಭಕ್ತಿ?!!](https://mobiletime.in/2026/01/is-this-kind-of-patriotism/): ಜನವರಿ 26ರ ಗಣರಾಜ್ಯೋತ್ಸವವನ್ನು ಅದ್ಧೂರಿಯಾಗಿ ಆಚರಿಸುವುದಕ್ಕೆ ಸರ್ಕಾರ ಸಿದ್ಧತೆ ನಡೆಸಿದರೆ, ರಾಷ್ಟ್ರೀಯ ಹಬ್ಬದ ಮಹತ್ವ ಅರಿಯದ ಪುಂಡ-ಪೋಕರಿಗಳು ಸಾಲು ಸಾಲು ರಜೆ ಹಿನ್ನಲೆ ಮೋಜು-ಮಸ್ತಿಯ ಕಡೆ ಮನಸ್ಸು ಮಾಡಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಗೋಕರ್ಣಕ್ಕೆ ದೌಡಾಯಿಸಿದ ಅನೇಕರು ಬೀದಿ ಬೀದಿಯಲ್ಲಿ ಬೀಡಿ-ಸಿಗರೇಟು ಸೇದಿ ಹಬ್ಬದ ವಾತಾವರಣವನ್ನು ಹದಗೆಡಿಸಿದ್ದಾರೆ. ವಾರಾಂತ್ಯದ ಅವಧಿಯಲ್ಲಿ ಗೋಕರ್ಣಕ್ಕೆ ಸಾವಿರಾರು ಪ್ರವಾಸಿಗರು ಬರುತ್ತಾರೆ. ಅದರಲ್ಲಿಯೂ ಸೋಮವಾರವೂ ರಜೆ ಸಿಕ್ಕರೆ ಪ್ರವಾಸಿಗರ ಸಂಖ್ಯೆ ದುಪ್ಪಟ್ಟಾಗುತ್ತದೆ. ಸರ್ಕಾರಿ ನೌಕರರ ಜೊತೆ ಬ್ಯಾಂಕ್ ಸಿಬ್ಬಂದಿ ಸಹ ಹೆಚ್ಚಿನ ಪ್ರಮಾಣದಲ್ಲಿ ಗೋಕರ್ಣಕ್ಕೆ ಬರುತ್ತಿದ್ದು, ಈ ಬಾರಿ ಗಣರಾಜ್ಯೋತ್ಸವ ಆಚರಣೆಯಲ್ಲಿ ಭಾಗವಹಿಸಬೇಕಾದ ಅನೇಕರು ಕಡಲಿನಲ್ಲಿ ಮೋಜು-ಮಸ್ತಿ ಮಾಡುತ್ತಿದ್ದಾರೆ. ಅದರಲ್ಲಿಯೂ, ಸಾರ್ವಜನಿಕ ಪ್ರದೇಶದಲ್ಲಿ ನಿಷೇಧವಿರುವ ಧೂಮಪಾನ ಹಾಗೂ ಮದ್ಯಪಾನ ಮಾಡುವವರು ಎಲ್ಲಡೆ ಕಾಣಿಸುತ್ತಿದ್ದಾರೆ. ಮಹಾನಗರದಲ್ಲಿನ ವಿವಿಧ ಕಂಪನಿಯವರು ಸುಧೀರ್ಘ ರಜೆ ಹಿನ್ನಲೆ ಉತ್ತರ ಕನ್ನಡ ಪ್ರವಾಸಕ್ಕೆ ಬಂದಿದ್ದಾರೆ. ಕೆಲ ಕಂಪನಿಯ ಉದ್ಯೋಗಿಗಳು ಕುಟುಂಬಸಹಿತ ಗೋಕರ್ಣಕ್ಕೆ ಬಂದಿದ್ದು, ಅವರ ಮಕ್ಕಳು ಸಹ ಈ ಬಾರಿಯ ಗಣರಾಜ್ಯೋತ್ಸವ ಆಚರಣೆಯಲ್ಲಿ ಪಾಲ್ಗೊಂಡಿಲ್ಲ. ಸೋಮವಾರ ರಾಷ್ಟಿçÃಯ ಹಬ್ಬ ಬಂದರೆ ಹಬ್ಬ ಆಚರಿಸದೇ ಮೋಜು-ಮಸ್ತಿಗೆ ಬರುವುದು ಇದೇ ಮೊದಲಲ್ಲ. ವಿವಿಧ ಚುನಾವಣೆಗಳಲ್ಲಿ ಮತದಾನವನ್ನು ಸಹ ತಪ್ಪಿಸಿ ಪ್ರವಾಸಕ್ಕೆ ಬರುವವರು ಹೆಚ್ಚಿದ್ದು, ಯುವಕರೇ ಹೆಚ್ಚಿನ ಪ್ರಮಾಣದಲ್ಲಿ ಮೋಜು-ಮಸ್ತಿಗಾಗಿ ಅಲೆದಾಟ ನಡೆಸುತ್ತಿದ್ದಾರೆ. - [ಸಂತೆ ಅಲ್ಲ... ಸರಾಯಿ ಮಾರುಕಟ್ಟೆ!](https://mobiletime.in/2026/01/not-a-market-sarai-market/): ಕುಮಟಾದ ಸಂತೆ ಮಾರುಕಟ್ಟೆ ಸಂಪೂರ್ಣವಾಗಿ ಸರಾಯಿ ಬಾಟಲಿಗಳಿಂದ ಕೂಡಿದೆ. ಸಂತೆ ಮಾರುಕಟ್ಟೆ ಒಳಗೆ ಪ್ರವೇಶಿಸುತ್ತಲೇ ಎಲ್ಲೆಂದರಲ್ಲಿ ಕಸ ಹಾಗೂ ಸರಾಯಿ ಬಾಟಲಿಗಳು ಕಾಣಿಸುತ್ತಿವೆ. ಪ್ರತಿ ಬುಧವಾರ ಕುಮಟಾದಲ್ಲಿ ಸಂತೆ ನಡೆಯುತ್ತಿದೆ. ಇಲ್ಲಿನ ಎಪಿಎಂಸಿ ಮಾರುಕಟ್ಟೆಗೆ ಸಾವಿರಾರು ಜನ ಆಗಮಿಸಿ ತಮ್ಮ ನೆಚ್ಚಿನ ತರಕಾರಿ ಖರೀದಿಸುತ್ತಾರೆ. ಸುತ್ತಲಿನ ರೈತರ ಜೊತೆ ಬೇರೆ ಬೇರೆ ಜಿಲ್ಲೆಯ ರೈತರು ಆ ದಿನ ಇಲ್ಲಿಗೆ ಆಗಮಿಸಿ ವ್ಯಾಪಾರ ಮಾಡುತ್ತಾರೆ. ವ್ಯಾಪಾರ-ವಹೀವಾಟು ನಡೆಯುವ ಸ್ಥಳಕ್ಕೆ ಸ್ಥಳೀಯ ಆಡಳಿತ ಬಾಡಿಗೆ ವಸೂಲಿ ಮಾಡುತ್ತಿದ್ದರೂ ಅಲ್ಲಿನ ಸ್ವಚ್ಛತೆಗೆ ಗಮನ ಕೊಟ್ಟಿಲ್ಲ. ಎಲ್ಲೆಂದರಲ್ಲಿ ಸರಾಯಿ ಬಾಟಲಿಗಳ ಜೊತೆ ಪ್ಲಾಸ್ಟಿಕ್ ತ್ಯಾಜ್ಯವೂ ಸಂತೆ ಮಾರುಕಟ್ಟೆ ಆವರಣವನ್ನು ತುಂಬಿದೆ. ಜನಸಾಮಾನ್ಯರ ಸಮಾಜ ಕಲ್ಯಾಣ ಕೇಂದ್ರದ ಅಧ್ಯಕ್ಷ ಆಗ್ನೇಲ್ ರೋಡ್ರಿಗಸ್ ಹಾಗೂ ಸುಧಾಕರ ನಾಯ್ಕ ಈ ವಿಷಯವನ್ನು ಮಾಧ್ಯಮದವರ ಗಮನಕ್ಕೆ ತಂದಿದ್ದಾರೆ. ಆ ಪ್ರದೇಶದಲ್ಲಿ ಜಾನುವಾರುಗಳು ಸಹ ಪ್ಲಾಸ್ಟಿಕ್ ತ್ಯಾಜ್ಯ ಸೇವಿಸುತ್ತಿರುವುದನ್ನು ಅವರು ಪ್ರಸ್ತಾಪಿಸಿದ್ದು, ಸ್ವಚ್ಛತೆ ಕಾಪಾಡುವಂತೆ ಆಗ್ರಹಿಸಿದ್ದಾರೆ. `ಕೆಲ ಗೂಡಂಗಡಿಗಳಲ್ಲಿ ಅನಧಿಕೃತ ಸರಾಯಿ ಮಾರಾಟ ನಡೆಯುತ್ತಿದೆ’ ಎಂದು ಅವರು ದೂರಿದ್ದಾರೆ. - [ವಿಮೆ: ವಂಚನೆ ಕುರಿತು ದೂರು-ಸ್ಪಷ್ಠನೆ](https://mobiletime.in/2026/01/vehicle-insurance-if-you-insure-him-you-wont-get-any-compensation/): ಅಪಘಾತ ಪ್ರಕರಣದಲ್ಲಿ ಪರಿಹಾರಪಡೆಯಲು ವಾಹನ ವಿಮೆ ಕಡ್ಡಾಯವಾಗಿದ್ದು, ನಕಲಿ ವಿಮೆ ಮಾಡಿಸಿದ ಬಗ್ಗೆ ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಲ್ಲೇಶ್ವರದ ಕೃಷ್ಣ ನಾಯ್ಕ ಅವರ ವಿರುದ್ಧ ರಾಯಲ್ ಸುಂದರo ಜನರಲ್ ಇನ್ಸುರೆನ್ಸ ಕಂಪನಿಯ ತನಿಖಾಧಿಕಾರಿ ಕರಿಬಸವೇಶ್ವರ ಹೊಳೆಮ್ಮನವರ್ ಅವರು ದೂರು ನೀಡಿದ್ದಾರೆ. ‘ನಾನು ವಿಮಾ ಪ್ರತಿನಿಧಿಯೇ ಅಲ್ಲ. ಅಪಘಾತದ ಅವಧಿಯಲ್ಲಿ ನಾನು ಲಾರಿ ಚಾಲಕನಾಗಿದ್ದು, ವಿಮೆಗೆ ಹಾಗೂ ತನಗೆ ಸಂಬoಧವೇ ಇಲ್ಲ’ ಎಂದು ಕೃಷ್ಣ ನಾಯ್ಕ ಅವರು ಮಾಹಿತಿ ನೀಡಿದ್ದಾರೆ. 2020ರ ಜುಲೈ 2ರಂದು ಯಲ್ಲಾಪುರದ ದೇಶಪಾಂಡೆ ನಗರದಲ್ಲಿ ಅಪಘಾತವೊಂದು ನಡೆದಿತ್ತು. ಆ ದಿನ ಚಾಲಕ ಜಗದೀಶ ಮದ್ನೂರು ಅವರು ತಾವು ಓಡಿಸುವ ಭಾರತ್ ಬೆಂಜ್ ಲಾರಿಯನ್ನು ಹೆದ್ದಾರಿ ಪಕ್ಕ ನಿಲ್ಲಿಸಿ ಹೋಗಿದ್ದರು. ಆ ಲಾರಿಗೆ ಹಿಂದಿನಿ0ದ ಮಿನಿ ಟ್ರಕ್ ಗುದ್ದಿದ ಪರಿಣಾಮ ಹಾವೇರಿಯ ಫಕ್ಕೀರೇಶ್ ಭಜಂತ್ರಿ ಎಂಬಾತರು ಸಾವನಪ್ಪಿದ್ದರು. ಜೊತೆಗೆ ಶಿವಕುಮಾರ ಎಂಬಾತರು ಗಾಯಗೊಂಡಿದ್ದರು. ಅಪಘಾತಕ್ಕೀಡಾದ ವಾಹನಕ್ಕೆ 2020ರ ಜೂನ್ 7ರಿಂದ ಮುಂದಿನ ಒಂದು ವರ್ಷದವರೆಗೆ ರಾಯಲ್ ಸುಂದರo ಜನರಲ್ ಇನ್ಸುರೆನ್ಸ ಕಂಪನಿಯ ವಿಮೆ ಮಾಡಿಸಿದ್ದು ಕಾಣಿಸಿತು. ಸಂತ್ರಸ್ತ ಕುಟುಂಬಕ್ಕೆ ವಿಮಾ ಪರಿಹಾರ ಕೊಡುವುದಕ್ಕಾಗಿ ವಿಮಾ ಕಂಪನಿ ಪ್ರತಿನಿಧಿಗಳು ವಿಚಾರಣೆ ನಡೆಸಿದರು. ಹುಬ್ಬಳ್ಳಿಯ ರಾಯಲ್ ಸುಂದರo ಜನರಲ್ ಇನ್ಸುರೆನ್ಸ ಕಂಪನಿಯ ತನಿಖಾಧಿಕಾರಿ ಕರಿಬಸವೇಶ್ವರ ಹೊಳೆಮ್ಮನವರ್ ಅವರು ಕಂಪನಿ ಪರವಾಗಿ ತನಿಖೆ ನಡೆಸಿದರು. ಆ ವೇಳೆ, ವಿಮಾ ಕಂಪನಿ ಹೆಸರಿನಲ್ಲಿ ನಕಲಿ ಬಾಂಡ್ ವಿತರಣೆ ನಡೆದಿರುವುದು ಗಮನಕ್ಕೆ ಬಂದಿತು. ಕಾರವಾರ ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ ನೋಂದಣಿಯಾದ ಲಾರಿಗೆ ಆರೋಪಿತರು ನಕಲಿ ವಿಮಾ ಪತ್ರ ನೀಡಿದ ಬಗ್ಗೆ ಅವರು ದೂರಿದ್ದಾರೆ. ಸ್ಪಷ್ಠನೆ: `ನಾನು ವಿಮಾ ಪ್ರತಿನಿಧಿಯೇ ಅಲ್ಲ. ಅಪಘಾತದ ಅವಧಿಯಲ್ಲಿ ನಾನು ಲಾರಿ ಚಾಲಕನಾಗಿದ್ದು, ವಿಮೆಗೆ ಹಾಗೂ ತನಗೆ ಸಂಬoಧವೇ ಇಲ್ಲ’ ಎಂದು ಕೃಷ್ಣ ನಾಯ್ಕ ಅವರು ಮಾಹಿತಿ ನೀಡಿದ್ದಾರೆ. ‘ಆ ವೇಳೆ ಅಪಘಾತ ಆಗಿದ್ದು ನಿಜ.‌ ಸಾವು-ನೋವಾಗಿರುವುದು ಸತ್ಯ. ಆದರೆ, ವಿಮೆ ಹಾಗೂ ವಂಚನೆ ವಿಷಯ ತಮಗೆ ಸಂಬಂಧಿಸಿದಲ್ಲ. ಲಾರಿ ಚಾಲಕನಾಗಿದ್ದ‌ ನಾನು ವಿಮೆ ಮಾಡಿಸುವ ಅಧಿಕಾರವನ್ನು ಹೊಂದಿಲ್ಲ’ ಎಂದವರು ಹೇಳಿದ್ದಾರೆ. - [ಅಲೆಗಳ ಅಬ್ಬರಕ್ಕೆ ಕಾಲೇಜು ಕನ್ಯೆಯ ಕೊನೆಯುಸಿರು: ಡಾಕ್ಟರ್ ಆಗಬೇಕಿದ್ದ ಕನಸು ನುಚ್ಚು ನೂರು!](https://mobiletime.in/2026/01/college-girl-dies-in-the-crash-of-waves-her-dream-of-becoming-a-doctor-shattered/): ಡಾಕ್ಟರ್ ಆಗಬೇಕು ಎಂದು ಕನಸು ಕಂಡಿದ್ದ ಕಲ್ಯಾಣಿ ಅವರ ಬದುಕು ಗೊಕರ್ಣ ಸಮುದ್ರದಲ್ಲಿ ಅಂತ್ಯವಾಗಿದೆ. ಕೇರಳದ ಕಲ್ಯಾಣಿ ಅವರು ತಮ್ಮ ಸಹಪಾಠಿಗಳ ಜೊತೆ ಗೋಕರ್ಣಕ್ಕೆ ಬಂದಿದ್ದು, ಕಡಲತೀರದಲ್ಲಿ ಆಟವಾಡುವಾಗ ಅರಬ್ಬಿ ಸಮುದ್ರದ ಅಲೆಗೆ ಕೊಚ್ಚಿ ಹೋಗಿದ್ದಾರೆ. ಸಾಕಷ್ಟು ಹುಡುಕಾಟದ ನಂತರ ಅವರ ಶವ ಸಿಕ್ಕಿದೆ. ಕೇರಳದ ಕಲ್ಯಾಣಿ (22) ಅವರು ಕೊಪ್ಪಳದ ಕೆಎಂಸಿ ವೈದ್ಯಕೀಯ ಕಾಲೇಜಿನಲ್ಲಿ ಓದುತ್ತಿದ್ದರು. ಅಲ್ಲಿನ 11 ಜನರ ಜೊತೆ ಅವರು ಭಾನುವಾರ ಗೋಕರ್ಣಕ್ಕೆ ಬಂದಿದ್ದರು. ಸಂಜೆ ಕಡಲತೀರದಲ್ಲಿ ಆಟವಾಡುವ ವೇಳೆ ಕಲ್ಯಾಣಿ ಅವರು ಕೊಚ್ಚಿ ಹೋಗಿದ್ದು, ಅವರ ಜೊತೆ ಇನ್ನೊಬ್ಬರು ಸಹ ಸಮುದ್ರ ಪಾಲಾಗಿದ್ದರು. ಆ ವೇಳೆ ಅಲ್ಲಿದ್ದ ಜೀವರಕ್ಷಕ ಸಿಬ್ಬಂದಿ ಒಬ್ಬರನ್ನು ರಕ್ಷಿಸಿದ್ದರು. ಸಮುದ್ರದ ನೀರು ಕುಡಿದಿದ್ದ ಮಹಮದ್ ಅಲಿ ಅವರನ್ನು ರಕ್ಷಣಾ ಸಿಬ್ಬಂದಿ ದಡಕ್ಕೆ ತಂದಿದ್ದು, ಅವರನ್ನು ಆಂಬುಲೆನ್ಸಿನ ಮೂಲಕ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ, ಕಲ್ಯಾಣಿ ಅವರ ಹುಡುಕಾಟ ನಡೆದರೂ ಅವರು ಸಿಗಲಿಲ್ಲ. ಅಂಕೋಲಾ ತಾಲೂಕ ಆರೋಗ್ಯಾಧಿಕಾರಿ ಡಾ ಜಗದೀಶ ನಾಯ್ಕ ಅವರು ಅಲಿ ಅವರಿಗೆ ಚಿಕಿತ್ಸೆ ನೀಡಿ ಜೀವ ಕಾಪಾಡಿದರು. ಈ ನಡುವೆ ಸಮುದ್ರ ಪಾಲಾದ ಕಲ್ಯಾಣಿ ಅವರ ಹುಡುಕಾಟಕ್ಕೆ ಅಗ್ನಿಶಾಮಕ ಸಿಬ್ಬಂದಿಯೂ ಬಂದರು. ಸಾಕಷ್ಟು ಶೋಧದ ನಂತರ ರಾತ್ರಿ ಅವರ ಶವ ಸಿಕ್ಕಿತು. ಕಾರವಾರದ ಶವಾಗಾರದಲ್ಲಿ ಕಲ್ಯಾಣಿ ಅವರ ದೇಹವಿರಿಸಲಾಗಿದೆ. ಪೊಲೀಸರು ಸ್ಥಳ ಭೇಟಿ ಮಾಡಿದ್ದಾರೆ. ಕಲ್ಯಾಣಿ ಅವರ ಕುಟುಂಬದವರು ಆಗಮಿಸುತ್ತಿದ್ದು, ಮರಣೋತ್ತರ ಪರೀಕ್ಷೆ ನಂತರ ಶವ ಹಸ್ತಾಂತರ ನಡೆಯಲಿದೆ. `ಅಪಾಯಕಾರಿ ಸ್ಥಳದಲ್ಲಿ ಅತಿಯಾದ ಮೋಜು ಒಳಿತಲ್ಲ’ - [ಬೆಳಗ್ಗೆ ನಿಶ್ಚಿತಾರ್ಥ.. ರಾತ್ರಿ ಹೊಡೆದಾಟ!](https://mobiletime.in/2026/01/engagement-in-the-morning-fight-at-night/): ದಾಂಡೇಲಿಯಲ್ಲಿ ನಡೆದ ನಿಶ್ಚಿತಾರ್ಥ ಕಾರ್ಯಕ್ರಮದಲ್ಲಿ ಗಲಾಟೆ ನಡೆದಿದೆ. ನಿಶ್ಚಿತಾರ್ಥಕ್ಕೆ ಬಂದವರು ದೊಡ್ಡ ಜಗಳವಾಡಿ ಕೈ ಕೈ ಮಿಲಾಯಿಸಿಕೊಂಡಿದ್ದಾರೆ. ಜನವರಿ 22ರಂದು ತೋಹಿದ್ ಶಾಲೆಯ ಮುಂದಿನ ಮೈದಾನದಲ್ಲಿ ವಿವಾಹ ನಿಶ್ಚಯ ಕಾರ್ಯಕ್ರಮವೊಂದು ನಡೆಯುತ್ತಿತ್ತು. ಆ ಕಾರ್ಯಕ್ರಮ ಮುಗಿಯುವಾಗ ರಾತ್ರಿ ಆಗಿದ್ದು, ರಾತ್ರಿ 11 ಗಂಟೆ ವೇಳೆಗೆ ಅಲ್ಲಿ ಗಲಾಟೆ ಶುರುವಾಯಿತು. ಎರಡು ಗುಂಪಿನ ಜನ ಪರಸ್ಪರ ಕೂಗಿ ಜಗಳ ಶುರು ಮಾಡಿದರು. ನಡುವೆ ಅವರಿವರ ನಡುವೆ ವಾಗ್ವಾದ ಜೋರಾಗಿದ್ದು, ಅದು ಹೊಡೆದಾಟದ ಸ್ವರೂಪಪಡೆಯಿತು. ದಾಂಡೇಲಿ ಗಾಂಧೀನಗರ ರಾಮ ಅಶೋಕ ಕಂಜರಬಾಟ್, ಸುನಿಲ ಅನಿಲ ಕಂಜರಬಾಟ್, ರೋಹನ್ ಇಂದ್ರಜಿತ್ ಕಂಜರಬಾಟ್ ಹಾಗೂ ಕಿರಣ ಅನಿಲ ಕಂಜರಬಾಟ್ ಸೇರಿ ಗಲಾಟೆ ಶುರು ಮಾಡಿದರು. ಗಾಂಧೀನಗರದ ಕಂಜರಬಾಟಿನ ದೀಪಕ ಸೂರ ಕಂಜರಬಾಟ್, ಪೃಮ ಜಿತೇಂದ್ರ ಕಂಜರಬಾಟ್, ಗಣೇಶ ದೀಪಕ ಕಂಜರಬಾಟ್, ರಿಹಾನ್ ಸುಧೀರ ಕಂಜರಬಾಟ್, ಸುಮೀತ ಸೂರಜ ಕಂಜರಬಾಟ್ ಅವರ ಜೊತೆ ಚಾಂದಿನಿ ದೀಪಕ ಕಂಜರಬಾಟ್, ಆಸ್ಮಾ ದೀಪಕ ಕಂಜರಬಾಟ್, ರೇಷ್ಮಾ ಸುಧೀರ ಕಂಜರಬಾಟ್ ಈ ಜಗಳವನ್ನು ದೊಡ್ಡದಾಗಿ ಮಾಡಿದರು. ಈ ಗಲಾಟೆ ಬಗ್ಗೆ ಅರಿತ ದಾಂಡೇಲಿ ನಗರ ಪೊಲೀಸ್ ಠಾಣೆ ಎಸೈ ಮಂಜುನಾಥ ದೇಮಟಿ ಅವರು ಅಲ್ಲಿಗೆ ಧಾವಿಸಿದರು. ಆ ಎರಡು ಕಡೆಯವರನ್ನು ಸಮಾಧಾನ ಮಾಡುವ ಪ್ರಯತ್ನ ಮಾಡಿದರು. ಪೊಲೀಸರ ಮುಂದೆಯೇ ಎರಡು ಗುಂಪಿನವರು ಕೈ ಕೈ ಮಿಲಾಯಿಸಿಕೊಂಡಿದ್ದು, ಶಾಂತತಾ ಭಂಗ ಮಾಡಿದ ಕಾರಣ ಆ 12 ಜನರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದರು. - [ಬೈಕಿನಿಂದ ಬಿದ್ದ ಯುವಕನ ಬದುಕು ಅಂತ್ಯ](https://mobiletime.in/2026/01/a-young-mans-life-ends-after-falling-off-a-bike/): ಒಳ್ಳೆಯ ಉದ್ಯೋಗ, ಕೈ ತುಂಬ ಸಂಪಾದನೆ, ನೆಮ್ಮದಿಯ ಜೀವನವಿದ್ದರೂ ಜೊಯಿಡಾದ ವೈ ಸಚಿನ್ ಸಾವರ್ಡೆಕರ್ ಅವರಿಗೆ ಜೀವನವನ್ನು ಅನುಭವಿಸಲು ಸಾಧ್ಯವಾಗಲಿಲ್ಲ. ವೇಗದ ಬೈಕ್ ಚಾಲನೆ ಅವರ ಬದುಕು ಕಸಿದುಕೊಂಡಿದ್ದು, ಕುಟುಂಬದವರಿಗೆ ಆಧಾರವಾಗಬೇಕಿದ್ದ ಜೊಯಿಡಾದ ಸಚಿನ್ ಸಾವರ್ಡೆಕರ್ ಇದೀಗ ಶವವಾಗಿದ್ದಾರೆ. ಜೊಯಿಡಾದ ಕುರುವೈ ಸಚಿನ್ ಸಾವರ್ಡೆಕರ್ (25) ಅವರು ವಾಸವಾಗಿದ್ದರು. ಗೋವಾದ ಖಾಸಗಿ ಕಂಪನಿಯಲ್ಲಿ ಅವರು ಒಳ್ಳೆಯ ಉದ್ಯೋಗದಲ್ಲಿದ್ದರು. ಶ್ರಮಜೀವಿ ಆಗಿದ್ದ ಅವರಿಗೆ ಇನ್ನಷ್ಟು ಉನ್ನತ ಹುದ್ದೆ ಅಲಂಕರಿಸುವ ಅವಕಾಶವಿದ್ದಿತು. ಆದರೆ, ವೇಗವ ಬೈಕ್ ಚಾಲನೆ ಅವರ ಬದುಕನ್ನು ಕಿತ್ತುಕೊಂಡಿತು. ರಾಮನಗರ-ಗೋವಾ ರಾಷ್ಟ್ರೀಯ ಹೆದ್ದಾರಿಯ ಆನಮೋಡ ಘಟ್ಟ ಭಾನುವಾರ ರಾತ್ರಿ ನಡೆದ ಅಪಘಾತದಲ್ಲಿ ವೈ ಸಚಿನ್ ಸಾವರ್ಡೆಕರ್ ಅವರು ಕೊನೆಯುಸಿರೆಳೆದರು. ಸಚಿನ್ ಸಾವರ್ಡೆಕರ್ ಅವರು ಓಡಿಸುತ್ತಿದ್ದ ಬೈಕಿನಲ್ಲಿ ಸೋನಾರ್ವಾಡಿಯ ಅಮರ್ ಠಾಕೂರ್ ಅವರು ಜೊತೆಯಾಗಿದ್ದರು. ಗೋವಾ ಕಡೆ ಹೊರಟಿದ್ದ ಆ ಬೈಕು ಆನಮೋಡು ಘಟ್ಟ ಪ್ರದೇಶದಲ್ಲಿ ಚಾಲಕನ ನಿಯಂತ್ರಣ ತಪ್ಪಿದ್ದು, ಡಿವೈಡರಿಗೆ ಗುದ್ದಿತು. ಬೈಕ್ ಗುದ್ದಿದ ರಭಸಕ್ಕೆ ಸವಾರರಿಬ್ಬರು ನೆಲಕ್ಕೆ ಬಿದ್ದು ಗಾಯ ಮಾಡಿಕೊಂಡರು. ಅಪಘಾತ ನೋಡಿದ ಅಲ್ಲಿನ ಜನ ಆಂಬುಲೆನ್ಸಿಗೆ ಫೋನ್ ಮಾಡಿದರು. ಗಾಯಗೊಂಡವರನ್ನು ರಾಮನಗರ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಯಿತು. ಇನ್ನೂ ಹೆಚ್ಚಿನ ಚಿಕಿತ್ಸೆ ಅಗತ್ಯವಿರುವ ಕಾರಣ ಬೆಳಗಾವಿಗೆ ಸ್ಥಳಾಂತರಿಸುವ ಕೆಲಸ ನಡೆಯಿತು. ಆದರೆ, ಸಚಿನ್ ಸಾವರ್ಡೆಕರ್ ಅವರ ಸ್ಥಿತಿ ಗಂಭೀರವಾಗಿದ್ದು, ಅವರು ದಾರಿ ಮದ್ಯೆಯೇ ಪ್ರಾಣ ತ್ಯಜಿಸಿದರು. ಅಮರ್ ಠಾಕೂರ್ ಅವರನ್ನು ರಾಮನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದ್ದು, ಅವರು ಚೇತರಿಸಿಕೊಳ್ಳುತ್ತಿದ್ದಾರೆ. `ಸಂಚಾರಿ ನಿಯಮ ಪಾಲಿಸಿ. ನಿಧಾನವಾಗಿ ವಾಹನ ಓಡಿಸಿ’ - [ಯುವಕನ ಜೀವ ತೆಗೆದ ಹೆದ್ದಾರಿ ಹಂಪ್!](https://mobiletime.in/2026/01/highway-hump-that-took-the-life-of-a-young-man/): ಕುಮಟಾದ – ಹೊನ್ನಾವರ ಹೆದ್ದಾರಿಯಲ್ಲಿನ ಅವೈಜ್ಞಾನಿಕ ಹಂಪ್ ವ್ಯಕ್ತಿಯೊಬ್ಬರ ಸಾವಿಗೆ ಕಾರಣವಾಗಿದೆ. ಬೈಕು ಹಂಪ್ ಹಾರಿದ ವೇಗಕ್ಕೆ ಸಹ ಸವಾರರೊಬ್ಬರು ನೆಲಕ್ಕೆ ಬಿದ್ದು ಸಾವಪ್ಪಿದ್ದಾರೆ. ಕುಮಟಾ ಪಟ್ಟಣದ ಪಶು ಆಸ್ಪತ್ರೆ ಎದುರು ಹಾದುಹೋದ ಹೆದ್ದಾರಿಯಲ್ಲಿ ನಾಲ್ಕು ಚಿಕ್ಕ ಚಿಕ್ಕ ಹಂಪುಗಳಿವೆ. ಆ ಹಂಪುಗಳಿಗೆ ಬಣ್ಣ ಬಡಿದಿಲ್ಲ. ವೈಜ್ಞಾನಿಕ ವಿಧಾನದಲ್ಲಿಯೂ ಆ ಹಂಪುಗಳಿಲ್ಲ. ಹೀಗಾಗಿ ಇಲ್ಲಿ ಪದೇ ಪದೇ ಅಪಘಾತಗಳಾಗುತ್ತಿದ್ದು, ಮೊನ್ನೆ ರಾತ್ರಿ ನಡೆದ ಅಪಘಾತದಲ್ಲಿ 23 ವರ್ಷದ ವ್ಯಕ್ತಿಯೊಬ್ಬರು ಸಾವನಪ್ಪಿದ್ದಾರೆ. 19 ವರ್ಷದ ವಿದ್ಯಾರ್ಥಿಯೊಬ್ಬರು ಗಂಭೀರ ಪ್ರಮಾಣದಲ್ಲಿ ಗಾಯಗೊಂಡಿದ್ದಾರೆ. ಕುಮಟಾ ಮಿರ್ಜಾನಿನ ವಿಕಾಸ ಮಧುಕರ ಪಟಗಾರ (19) ಅವರು ಶುಕ್ರವಾರ ರಾತ್ರಿ ಕುಮಟಾ ಮಾಸ್ತಿಕಟ್ಟೆ ಸರ್ಕಲ್ ಕಡೆಯಿಂದ ಹೊನ್ನಾವರ ಕಡೆ ಓಡಿದ ಬೈಕು ಓಡಿಸುತ್ತಿದ್ದರು. ಆ ಬೈಕಿನಲ್ಲಿ ಹೊಲನಗದ್ದೆಯ ಕಿರಣ ಶಿವಾನಂದ ಪಟಗಾರ (23) ಅವರು ಜೊತೆಯಿದ್ದರು. ಬೈಕು ವೇಗವಾಗಿ ಬಂದಿದ್ದು, ಹಂಪು ಹಾರಿತು. ಪರಿಣಾಮ ಶಿಲ್ಪಿಯಾಗಿದ್ದ ಕಿರಣ ಪಟಗಾರ ಅವರು ಬೈಕಿನಿಂದ ನೆಲಕ್ಕೆ ಬಿದ್ದು ಕೊನೆಯುಸಿರೆಳೆದರು. ವಿಕಾಸ ಪಟಗಾರ ಅವರು ಸಹ ಈ ಅಪಘಾತದಲ್ಲಿ ಪೆಟ್ಟು ಮಾಡಿಕೊಂಡರು. ಅಪಘಾತದ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿದರು. - [ವೈಜ್ಞಾನಿಕ ತಳಹದಿಯ ಶಿಕ್ಷಣ ಅಗತ್ಯ](https://mobiletime.in/2026/01/science-based-education-is-necessary/): `ಮಕ್ಕಳ ಓದು ಹಾಗೂ ಕೌಶಲ್ಯ ಸರ್ಕಾರಿ ನೌಕರಿಗೆ ಮಾತ್ರ ಸೀಮಿತವಾಗಬಾರದು. ವೈಜ್ಞಾನಿಕ ತಳಹದಿಯಲ್ಲಿ ರೈತ, ಸೈನಿಕ ಸೇರಿ ವಿವಿಧ ವೃತ್ತಿ ಆಯ್ಕೆಗೂ ಅನುಕೂಲವಾಗುವ ಶಿಕ್ಷಣ ಪ್ರತಿಯೊಬ್ಬರಿಗೂ ದೊರೆಯಬೇಕು’ ಎಂದು ಕಾರವಾರದ ನ್ಯಾಯವಾದಿ ನಾಗರಾಜ ನಾಯಕ ಅವರು ಹೇಳಿದ್ದಾರೆ. ಅಮದಳ್ಳಿಯ ಎಜುಕೇರ್ ಆಂಗ್ಲ ಮಾಧ್ಯಮ ಶಾಲೆಯ ವಾರ್ಷಿಕೋತ್ಸವದಲ್ಲಿ ಮಾತನಾಡಿದ ಅವರು `ಸಾಮಾಜಿಕ ಮೌಲ್ಯಗಳನ್ನು ಎತ್ತಿ ಹಿಡಿಯುವ ವಿದ್ಯಾಬ್ಯಾಸ ಈಗಿನ ಅಗತ್ಯಗಳಲ್ಲಿ ಒಂದು. ಪರಿಸರ ಸಂರಕ್ಷಣೆ, ಹೊಸ ಸಂಶೋಧನೆ, ಸಮರ್ಥ ನಾಯಕತ್ವ ಗುಣ ಬೆಳೆಸುವ ಉತ್ತಮ ಶಿಕ್ಷಣ ಶಾಲೆಯಲ್ಲಿ ದೊರೆಯಬೇಕು. ದೂರ ದೃಷ್ಟಿಯುಳ್ಳ ದೇಶ ಕಟ್ಟುವ ವ್ಯಕ್ತಿಯ ನಿರ್ಮಾಣ ಬಾಲ್ಯದಲ್ಲಿಯೇ ಕಲಿಸಬೇಕು’ ಎಂದು ಕರೆ ನೀಡಿದರು. `ಎಜುಕೇರ್ ಆಂಗ್ಲ ಮಾಧ್ಯಮ ಶಾಲೆಯು ಗ್ರಾಮೀಣ ಭಾಗದಲ್ಲಿ ವಿಶೇಷ ಶಿಕ್ಷಣವನ್ನು ನೀಡುವ ಕೆಲಸ ಮಾಡುತ್ತಿದೆ. ಅದರ ಪರಿಣಾಮ ವಿದ್ಯಾರ್ಥಿಗಳು ಉತ್ತಮ ಪ್ರಜೆಗಳಾಗಿ ಹೊರಹೊಮ್ಮುತ್ತಿದ್ದಾರೆ’ ಎಂದರು. ಈ ವೇದಿಕೆಯಲ್ಲಿ ಸಾಧಕರನ್ನು ಸನ್ಮಾನಿಸಲಾಯಿತು. ಮಹಾದೇವ ದೇವಸ್ಥಾನದ ಪ್ರಧಾನ ಅರ್ಚಕ ಪಾಂಡುರAಗ ಜೋಷಿ, ಊರಿನ ಹಿರಿಯರಾದ ದುರ್ಗಾ ನಾಯ್ಕ, ಮಂಜುನಾಥ ಮಧುಗೆಕರ್, ಶಿವಮೊಗ್ಗ ಜಿಲ್ಲೆಯ ರೈತ ಸಂಘದ ಹೋರಾಟಗಾರ ಪಿ ಶೇಖರಪ್ಪ, ಪ್ರಾಚಾರ್ಯೆ ನಾಗರತ್ನ ಜೈರಂಗನಾಥ, ಉಪಪ್ರಾಚಾರ್ಯ ವಿನೋದ ಅಲ್ಮೆಡ, ಶಿಕ್ಷಕಿ ಟೀನಾ ಅಸ್ನೋಟಿ ವೇದಿಕೆ ಕಾರ್ಯಕ್ರಮ ನಿರ್ವಹಿಸಿದರು. - [ಅಪಾಯಕ್ಕೆ ಸಿಲುಕಿದ ಪ್ರವಾಸಿಗ: ರಕ್ಷಣೆ](https://mobiletime.in/2026/01/tourist-in-danger-rescued/): ಗೋಕರ್ಣ ಕಡಲ ತೀರಕ್ಕೆ ಬಂದಿದ್ದ ಮೈಸೂರಿನ ಮಧು ಆಳ ಸಮುದ್ರದಲ್ಲಿ ಕೊಚ್ಚಿ ಹೋಗಿದ್ದು, ಇದನ್ನು ನೋಡಿದ ಜೀವರಕ್ಷಕ ಸಿಬ್ಬಂದಿ ತಮ್ಮ ಜೀವದ ಹಂಗು ಮರೆತು ಪ್ರವಾಸಿಗನ ಜೀವ ಕಾಪಾಡಿದ್ದಾರೆ. 10 ಜನ ಸ್ನೇಹಿತರ ಜೊತೆ ಮಧು ಗೋಕರ್ಣಕ್ಕೆ ಬಂದಿದ್ದರು. ಭಾನುವಾರ ಬೆಳಗ್ಗೆ ಅವರು ಕಡಲ ತೀರವನ್ನು ಪ್ರವೇಶಿಸಿದ್ದು, ಈಜು ಬಾರದಿದ್ದರು ನೀರಿಗೆ ಇಳಿದಿದ್ದರು. ಈ ವೇಳೆ ಅಲೆಗಳ ಅಬ್ಬರಕ್ಕೆ ಮಧು ಅವರು ಕೊಚ್ಚಿ ಹೋದರು. ಇದನ್ನು ನೋಡಿದ ಜೀವ ರಕ್ಷಕ ಸಿಬ್ಬಂದಿ ಮೋಹನ ಅಂಬಿಗ ಅವರು ಅಲ್ಲಿದ್ದ ಲೋಕೇಶ ಹರಿಕಂತ್ರ, ಶಿವಪ್ರಸಾದ್ ಅಂಬಿಗ ಹಾಗೂ ರೋಷನ್ ಖಾರ್ವಿ ಅವರನ್ನು ಕೂಗಿ ಕರೆದರು. ಈ ಎಲ್ಲರೂ ಸೇರಿ ಸಮುದ್ರಕ್ಕೆ ಹಾರಿ ಮಧು ಅವರ ಜೀವ ಕಾಪಾಡಿದರು. ಕಡಲ ತೀರದ ಸಿಬ್ಬಂದಿ ರವಿ ನಾಯ್ಕ್, ಪ್ರವಾಸಿ ಮಿತ್ರ ಶೇಖರ್ ಹರಿಕಂತ್ರ ಜೊತೆ ಜಸ್ಕಿ ಚಾಲಕ ದರ್ಶನ್ ಲಕ್ಕುಮನೆ, ಜಗ್ಗು ಹೊಸ್ಕಟ್ಟ, ದೀಪಕ್ ಗೌಡ, ಅಶೋಕ್ ಹೊಸಕಟ್ಟ, ಕಮಲಾಕರ್ ಹೊಸಕಟ್ಟ, ಮಹೇಶ್ ಹೊಸ್ಕಟ್ಟ, ಸಚಿನ್ ಹೊಸ್ಕಟ್ಟ ಸಹ ಕಾರ್ಯಾಚರಣೆಯಲ್ಲಿದ್ದರು. ಸಮುದ್ರದ ಅಪಾಯದ ಬಗ್ಗೆ ಅವರೆಲ್ಲರೂ ಪ್ರವಾಸಿಗರಿಗೆ ವಿವರಿಸಿದರು. - [ಸುಳ್ಳು ಹೇಳಿದ ಸಚಿವ: ಸವಾಲು ಸ್ವೀಕರಿಸಿದ ಸಾಮಾಜಿಕ ಕಾರ್ಯಕರ್ತ!](https://mobiletime.in/2026/01/the-minister-who-lied-a-social-activist-who-accepted-the-challenge/): ಶಿರಸಿಗೆ ಬಂದಿದ್ದ ಸಚಿವ ಮಂಕಾಳು ವೈದ್ಯ ಅವರು ಸಾಮಾಜಿಕ ಕಾರ್ಯಕರ್ತ ಅನಂತಮೂರ್ತಿ ಹೆಗಡೆ ಅವರಿಗೆ ಅವಮಾನ ಮಾಡಿದ್ದು, ಸದ್ಯ ಅನಂತಮೂರ್ತಿ ಹೆಗಡೆ ಅವರು ಆ ಅವಮಾನಕ್ಕೆ ತಕ್ಕ ಉತ್ತರ ಕೊಟ್ಟಿದ್ದಾರೆ. ಶಿರಸಿಗೆ ಬಂದು ಸವಾಲು ಹಾಕಿದ ಸಚಿವರಿಗೆ ಉತ್ತರ ಕೊಡುವುದಕ್ಕಾಗಿ ಅನಂತಮೂರ್ತಿ ಹೆಗಡೆ ಅವರ ಅವರ ಸ್ವಕ್ಷೇತ್ರವಾದ ಭಟ್ಕಳಕ್ಕೆ ಹೋಗಿದ್ದಾರೆ. ಅಲ್ಲಿ ಸುದ್ದಿಗೋಷ್ಠಿ ನಡೆಸಿ ವಿವಿಧ ದಾಖಲೆಗಳನ್ನು ಬಿಡುಗಡೆ ಮಾಡಿದ್ದಾರೆ. `ಕಳೆದ 7 ವರ್ಷದ ಅವಧಿಯಲ್ಲಿ ಉತ್ತರ ಕನ್ನಡ ಜಿಲ್ಲೆಗೆ ಒಂದೇ ಒಂದು ಬಸ್ ಹೊಸದಾಗಿ ಬಂದಿಲ್ಲ. ಈಗ ಕಾಂಗ್ರೆಸ್ ಸರಕಾರ ಆಡಳಿತಕ್ಕೆ ಬಂದ ಮೇಲೆ ಹೊಸದಾಗಿ ಬಸ್ ಜಿಲ್ಲೆಗೆ ಖರೀದಿಸಲಾಗಿದೆ’ ಎಂದು ಮಂಕಾಳು ವೈದ್ಯ ಹೇಳಿದ್ದರು. ಆ ವೇಳೆಯಲ್ಲಿಯೇ ಅನಂತಮೂರ್ತಿ ಹೆಗಡೆ ಅದನ್ನು ವಿರೋಧಿಸಿದ್ದರು. `ಮಂಕಾಳ ವೈದ್ಯ ದಾಖಲೆಗಳಿಲ್ಲದೇ ಯಾವತ್ತೂ ಮಾತನಾಡುವುದಿಲ್ಲ ಮತ್ತು ಸುಳ್ಳು ಹೇಳುವುದಿಲ್ಲ’ ಎಂದು ಎಲ್ಲ ಅಧಿಕಾರಿಗಳ ಮುಂದೆ ಅನಂತಮೂರ್ತಿ ಹೆಗಡೆ ಅವರಿಗೆ ಅವಮಾನ ಮಾಡಿದ್ದರು. `ನಿಮ್ಮಲ್ಲಿ ದಾಖಲೆ ಇದ್ದರೆ ಬಿಡುಗಡೆ ಮಾಡಿ’ ಎಂದು ಸಹ ಮಂಕಾಳು ವೈದ್ಯ ಸವಾಲು ಹಾಕಿದ್ದರು. ಆ ಸವಾಲು ಸ್ವೀಕರಿಸದ ಅನಂತಮೂರ್ತಿ ಹೆಗಡೆ `2018-19 ಸಾಲಿನಿಂದ 22-23ಸಾಲಿನ ಬಿಜೆಪಿ ಸರಕಾರದ ಅವಧಿಯಲ್ಲಿ ಶಿರಸಿ ವಿಭಾಗಕ್ಕೆ 87 ಬಸ್ಸುಗಳು ಹೊಸದಾಗಿ ಖರೀದಿ ಆಗಿದೆ. ಅದರಲ್ಲಿ ಶಿರಸಿ ಘಟಕಕ್ಕೆ 28 ಹೊಸ ವಾಹನಗಳನ್ನು ಖರೀದಿ ಮಾಡಲಾಗಿದೆ’ ಎಂಬ ಅಂಶವನ್ನು ಬಹಿರಂಗಗೊಳಿಸಿದ್ದಾರೆ. ಶಿರಸಿಯ ಮಾರಿಕಾಂಬಾ ಜಾತ್ರಾ ಸಭೆಯಲ್ಲಿ ಸಚಿವರು ಸುಳ್ಳು ಹೇಳಿದ್ದಾರೆ’ ಎಂದು ಕಿಡಿಕಾರಿದ್ದಾರೆ. `ಸಚಿವರ ಕ್ಷೇತ್ರವಾದ ಮಂಕಿ ಚುನಾವಣೆಯಲ್ಲಿ ಮಂಕಾಳು ವೈದ್ಯ ಮುಖಭಂಗ ಅನುಭವಿಸಿದ್ದು, ಅದರ ಸಿಟ್ಟಿನಿಂದ ಬಿಜೆಪಿಗರನ್ನು ನಿಂದಿಸುತ್ತಿದ್ದಾರೆ. ಸುಳ್ಳು ಹೇಳುವುದು ಸಚಿವರಿಗೆ ಹೊಸದಲ್ಲ. ಬೇಡ್ತಿ ಸಮಾವೇಶದಲ್ಲಿ ಗುರುಗಳ ಎದುರಿಗೆ ಎಲ್ಲರೂ ಒಗ್ಗೂಡಿ ಈ ಯೋಜನೆಯನ್ನು ವಿರೋಧಿಸೋಣ ಎಂದಿದ್ದ ವೈದ್ಯರು ಮರುದಿನವೇ ರಾಜಕೀಯ ಮಾತನಾಡಿದ್ದು ಸಹ ಸ್ಮರಿಸಬೇಕು’ ಎಂದು ಅನಂತಮೂರ್ತಿ ಹೆಗಡೆ ಹೇಳಿದ್ದಾರೆ. `ಚುನಾವಣೆಯಲ್ಲಿ ಗೆದ್ದು ಬಂದರೆ ಕ್ಷೇತ್ರದ ಜನರಿಗಾಗಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯನ್ನು ಕಟ್ಟಿಸುತ್ತೇನೆ ಎಂದ ಮಾತನ್ನು ಸಚಿವರು ಮರೆತಿದ್ದಾರೆ’ ಎಂದವರು ದೂರಿದ್ದಾರೆ. ಬಿಜೆಪಿ ಪ್ರಮುಖರಾದ ಶ್ರೀನಿವಾಸ ನಾಯ್ಕ, ಮಂಜುನಾಥ ನಾಯ್ಕ, ರಮೇಶ ನಾಯ್ಕ, ರಾಘವೇಂದ್ರ ನಾಯ್ಕ, ಗಣೇಶ ಹೆಗಡೆ ಇನ್ನಿತರರು ಸಹ ಮಂಕಾಳು ವೈದ್ಯರ ನಡೆ ವಿರೋಧಿಸಿದ್ದಾರೆ. - [ಅಪಘಾತ: ವೈದ್ಯ ವಿದ್ಯಾರ್ಥಿಗಳಿಗೆ ಆರೈಕೆ](https://mobiletime.in/2026/01/accident-medical-students-receive-care/): ಚೆನೈಯಿಂದ ಗೋಕರ್ಣಕ್ಕೆ ಹೊರಟಿದ್ದ ಟೆಂಪೋ ಟ್ರಾವಲರ್ ಯಲ್ಲಾಪುರ ಅರಬೈಲ್ ಘಟ್ಟದಲ್ಲಿ ಪಲ್ಟಿಯಾಗಿದೆ. ಪರಿಣಾಮ 7 ಜನ ಗಾಯಗೊಂಡಿದ್ದಾರೆ. ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿಗಳು ಗೋಕರ್ಣ ಪ್ರವಾಸಕ್ಕೆ ಯೋಜನೆ ರೂಪಿಸಿದ್ದರು. ಅದರಂತೆ ಅವರು ಶನಿವಾರ ತಮ್ಮ ಪ್ರಯಾಣ ಶುರು ಮಾಡಿದ್ದರು. ಹುಬ್ಬಳ್ಳಿ ಮಾರ್ಗವಾಗಿ ಉತ್ತರ ಕನ್ನಡ ಜಿಲ್ಲೆ ಪ್ರವೇಶಿಸಿದ ಆ ವಿದ್ಯಾರ್ಥಿಗಳು ಯಲ್ಲಾಪುರ ಮಾರ್ಗವಾಗಿ ಮುಂದೆ ಹೊರಟಿದ್ದರು. ಅರಬೈಲ್ ಘಟ್ಟ ಪ್ರದೇಶದ `S’ ಆಕಾರದ ತಿರುವಿನಲ್ಲಿ ಅವರಿದ್ದ ಟೆಂಪೋ ಟ್ರಾವೆಲರ್ ಚಾಲಕನ ನಿಯಂತ್ರಣ ತಪ್ಪಿತು. ಆ ವಾಹನ ಅಲ್ಲಿಯೇ ಪಲ್ಟಿಯಾಯಿತು. ಕೊಂಡೆಮನೆಯ ಸತೀಶ ನಾಯ್ಕ ಹಾಗೂ ಅರಬೈಲಿನ ಬಾಲಕೃಷ್ಣ ನಾಯ್ಕ ಅವರು ಅದೇ ಮಾರ್ಗವಾಗಿ ಸಂಚರಿಸುತ್ತಿದ್ದರು. ಅಪಘಾತ ನೋಡಿದ ತಕ್ಷಣ ಅವರು 108ಗೆ ಫೋನ್ ಮಾಡಿದರು. ವಾಹನದಲ್ಲಿ ಸಿಲುಕಿದ್ದ ಗಾಯಾಳುವನ್ನು ಹೊರಗೆ ತಂದು ಅವರನ್ನು ಆಂಬುಲೆನ್ಸ ಮೂಲಕ ಆಸ್ಪತ್ರೆಗೆ ಕಳುಹಿಸಿದರು. ಪಿಸೈ ಸಿದ್ದಪ್ಪ ಗುಡಿ ಅವರು ಸ್ಥಳಕ್ಕೆ ಧಾವಿಸಿ ಗಾಯಾಳುಗಳ ರಕ್ಷಣಾ ಕಾರ್ಯಕ್ಕೆ ಕೈ ಜೋಡಿಸಿದರು. ಯಲ್ಲಾಪುರ ಸರ್ಕಾರಿ ಆಸ್ಪತ್ರೆಯಲ್ಲಿ ಗಾಯಗೊಂಡವರಿಗೆ ಚಿಕಿತ್ಸೆ ನೀಡಲಾಗಿದೆ. ಟೆಂಪೋ ಟ್ರಾವೆಲರ್ ಪಲ್ಟಿಯಾದ ಪರಿಣಾಮ ಆ ವಾಹನ ಜಖಂ ಆಗಿದೆ. ಸ್ಥಳದಲ್ಲಿ ಸಂಚಾರ ದಟ್ಟಣೆ ಕಾಣಿಸಿದ್ದು, ಪೊಲೀಸರು ಇನ್ನಿತರ ವಾಹನಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ. ಗಾಯಗೊಂಡು ಆಸ್ಪತ್ರೆ ಸೇರಿದ ವಿದ್ಯಾರ್ಥಿಗಳು ಚೇತರಿಸಿಕೊಳ್ಳುತ್ತಿದ್ದಾರೆ. - [ಬೈಕ್ ಸವಾರನ ಪ್ರಾಣ ತೆಗೆದ ಟ್ಯಾಂಕರ್!](https://mobiletime.in/2026/01/tanker-kills-biker/): ಕಾರವಾರ – ಅಂಕೋಲಾ ಮಾರ್ಗವಾಗಿ ಸಂಚರಿಸುವ ಟ್ಯಾಂಕರ್ ಬೈಕ್ ಸವಾರನ ಪ್ರಾಣ ತೆಗೆದಿದೆ. ಶಿಕ್ಷಣ ಇಲಾಖೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ಸಿಬ್ಬಂದಿಯೊಬ್ಬರು ಅಪಘಾತದಲ್ಲಿ ಸಾವನಪ್ಪಿದ್ದಾರೆ. ಕಾರವಾರ-ಅಂಕೋಲಾ ರಾಷ್ಟ್ರೀಯ ಹೆದ್ದಾರಿ 66ರ ಬಿಣಗಾ ಬಳಿ ಶನಿವಾರ ಸಂಜೆ ಅಪಘಾತ ನಡೆದಿದೆ. ಜೋರಾಗಿ ಸಂಚರಿಸಿದ ಟ್ಯಾಂಕರ್ ಬೈಕಿಗೆ ಡಿಕ್ಕಿ ಹೊಡೆದಿದೆ. ಬೈಕಿನಲ್ಲಿ ಬರುತ್ತಿದ್ದವನ ತಲೆ ಒಡೆದಿದ್ದು, ಹೆದ್ದಾರಿ ಮೇಲೆ ರಕ್ತ ಹರಿದಿದೆ. ಅಪಘಾತದ ನಂತರ ಟ್ಯಾಂಕರ್ ಚಾಲಕ ತನ್ನ ವಾಹನ ಅಲ್ಲಿಯೇ ಬಿಟ್ಟು ಪರಾರಿಯಾಗಿದ್ದು, ಪೊಲೀಸರು ಶೀಘ್ರ ಕಾರ್ಯಾಚರಣೆ ನಡೆಸಿ ಚಾಲಕನನ್ನು ವಶಕ್ಕೆಪಡೆದಿದ್ದಾರೆ. ಡಾಂಬರ್ ಹೊತ್ತ ಟ್ಯಾಂಕರ್ ಕಾರವಾರದಿಂದ ಅಂಕೋಲಾ ಕಡೆ ಹೊರಟಿತ್ತು. ಕಾರವಾರ ನಗರ ಪ್ರದೇಶ ಮುಗಿದ ನಂತರ ಟ್ಯಾಂಕರ್ ವೇಗ ಹೆಚ್ಚಾಯಿತು. ಬಿಣಗಾ ಬಳಿ ಟ್ಯಾಂಕರ್ ಅಡ್ಡಾದಿಡ್ಡಿ ಚಲಿಸಿದ್ದು, ಎದುರಿನಿಂದ ಬರುತ್ತಿದ್ದ ಬೈಕಿಗೆ ರಭಸವಾಗಿ ಗುದ್ದಿತು. ಈ ಅಪಘಾತದಲ್ಲಿ ಬೈಕ್ ಸವಾರನ ಮುಖ ಕಾಣದ ಹಾಗೇ ಜರ್ಜರಿತವಾಯಿತು. ಬೈಕ್ ಸಂಪೂರ್ಣವಾಗಿ ಜಖಂ ಆಗಿದೆ. ಡಿಡಿಪಿಐ ಕಚೇರಿಯಲ್ಲಿ ಕ್ಲರ್ಕ ಆಗಿದ್ದ ದಿನಕರ ಗುನಗಿ ಅವರು ಈ ಬೈಕಿನಲ್ಲಿದ್ದ ಬಗ್ಗೆ ಮಾಹಿತಿಯಿದ್ದು, ಸ್ಥಳದಲ್ಲಿ ಜನ ಜಮಾಯಿಸಿದ್ದಾರೆ. ದಿನಕರ ಗುನಗಿ ಅವರು ಬಿಣಗಾದಲ್ಲಿ ನಡೆಯುವ ಜಾತ್ರೆಗೆ ತಮ್ಮ ಪತ್ನಿ ಬಿಟ್ಟು ಮರಳುತ್ತಿದ್ದರು. ಅಪಘಾತದಲ್ಲಿ ಟ್ಯಾಂಕರ್ ಹಿಂದಿನ ಚಕ್ರ ಅವರ ತಲೆ ಮೇಲೆ ಹತ್ತಿದೆ. ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. - [ಪೊಲೀಸರ ಎದುರೇ ಕೈ ಕೊಯ್ದುಕೊಂಡ ಕೋಠಾರಕರ್!](https://mobiletime.in/2026/01/kothakar-cut-his-hand-in-front-of-the-police/): ಕಾರವಾರದ ರಿಶೇಲ್ ಡಿಸೋಜಾ ಆತ್ಮಹತ್ಯೆ ಹಾಗೂ ಚಿರಾಗ ಕೋಠಾರಕರ್ ಪರಾರಿ ಪ್ರಕರಣದ ವಿಚಾರಣೆಗೆ ಹಾಜರಾಗಿದ್ದ ಯುವಕನೊಬ್ಬ ಪೊಲೀಸರ ಎದುರೇ ಕೈ ಕೊಯ್ದುಕೊಂಡಿದ್ದು, ತಕ್ಷಣ ಪೊಲೀಸರು ಆತನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಜಿಲ್ಲಾ ಪಂಚಾಯತ ಮಾಜಿ ಸದಸ್ಯೆ ಚೈತ್ರಾ ಕೋಠಾರಕರ್ ಹಾಗೂ ತಾಲೂಕು ಪಂಚಾಯತ ಮಾಜಿ ಸದಸ್ಯ ಚಂದ್ರಹಾಸ ಕೋಠಾರಕರ್ ಅವರ ಪುತ್ರ ಚಿರಾಗ ಕೋಠಾರಕರ್ ಅವರ ಕಾಟ ಸಹಿಸಲಾಗದೇ ಕದ್ರಾ ಗ್ರಾ ಪಂಚಾಯತ ಸದಸ್ಯೆ ರೀನಾ ಡಿಸೋಜಾ ಅವರ ಪುತ್ರಿ ರಿಶೇಲ್ ಡಿಸೋಜಾ ಆತ್ಮಹತ್ಯೆಗೆ ಶರಣಾಗಿದ್ದರು. ಈ ಪ್ರಕರಣದ ಕಾವು ಏರಿದ್ದು, ಚಿರಾಗ ಕೋಠಾರಕರ್ ಬಂಧನಕ್ಕಾಗಿ ಪ್ರತಿಭಟನೆಗಳು ನಡೆದಿದ್ದವು. ಕದ್ರಾ ಪಿಸೈ ಸುನೀಲ ಅವರು ಸಹ ಈ ಪ್ರಕರಣದಿಂದಾಗಿ ಅಮಾನತು ಆಗಿದ್ದರು. ಈ ಎಲ್ಲಾ ಹಿನ್ನಲೆ ಪೊಲೀಸರ ಮೇಲೆ ಒತ್ತಡ ಹೆಚ್ಚಾಗಿದ್ದು, ಪೊಲೀಸರು ವಿಚಾರಣೆಗಾಗಿ ಚಂದ್ರಹಾಸ ಕೋಠಾರಕರ್ ಅವರ ಕಚೇರಿಯಲ್ಲಿದ್ದ ರಾಹುಲ್ ಕೋಠಾರಕರ್ ಅವರನ್ನು ಕರೆಯಿಸಿದ್ದರು. ಪದೇ ಪದೇ ಪೊಲೀಸರ ಎದುರು ಹೇಳಿಕೆ ನೀಡುವುದನ್ನು ಸಹಿಸದ ರಾಹುಲ್ ಕೋಠಾರಕರ್ ಡಿವೈಎಸ್ಪಿ ಕಚೇರಿಯಲ್ಲಿಯೇ ತಮ್ಮ ಕೈ ಕೊಯ್ದುಕೊಂಡರು. ಬ್ಲೇಡಿನಿಂದ ಕೈಗೆ ಗಾಯ ಮಾಡಿಕೊಂಡಿದ್ದ ರಾಹುಲ್ ಕೋಠಾರಕರ್ ಅವರನ್ನು ಪೊಲೀಸರೇ ಆಸ್ಪತ್ರೆಗೆ ದಾಖಲಿಸಿದರು. ಶುಕ್ರವಾರ ಸಂಜೆ ಆಸ್ಪತ್ರೆಯಲ್ಲಿದ್ದ ರಾಹುಲ್ ಕೋಠಾರಕರ್ ಶನಿವಾರ ಅಲ್ಲಿಂದ ಬಿಡುಗಡೆ ಆಗಿದ್ದಾರೆ. - [ಕಾಸಿನ ಆಸೆಗಾಗಿ ಕೊಲೆ ಮಾಡಿದ ಪಾಪಿ!](https://mobiletime.in/2026/01/a-sinner-who-committed-murder-for-the-sake-of-money/): ಹೊನ್ನಾವರದ ಸೂಳೇಮುರ್ಕಿ ತಿರುವಿನಲ್ಲಿ ಪದೇ ಪದೇ ಅಪಘಾತವಾಗುತ್ತಿರುವುದನ್ನು ಅರಿತ ಸಿದ್ದಾಪುರದ ಪ್ರಮೋದ ನಾಯ್ಕ ತಮ್ಮ ಸ್ನೇಹಿತರಿಬ್ಬರನ್ನು ಅಲ್ಲಿಯೇ ಕೊಲೆ ಮಾಡಿದ್ದಾರೆ. ಕುಡಗುಂದದ ಆಲಳ್ಳಿಯಲ್ಲಿ ಮೀನು ಮಾರಾಟ ಮಾಡಿಕೊಂಡಿದ್ದ ಮಂಜುನಾಥ ಹಸ್ಲರ್ ಹಾಗೂ ಚಂದ್ರಶೇಖರ ಹಸ್ಲರ್ ಅವರನ್ನು ಕೊಂದ ಪ್ರಮೋದ ನಾಯ್ಕ ಜೈಲು ಸೇರಿದ್ದಾರೆ. ಹೊನ್ನಾವರದ ಸೂಳೆಮುರ್ಕಿ ತಿರುವಿನಲ್ಲಿ ಜನವರಿ 7ರಂದು ಕಾರೊಂದು ಸುಟ್ಟ ಸ್ಥಿತಿಯಲ್ಲಿ ಸಿಕ್ಕಿತ್ತು. ಆ ಕಾರಿನಲ್ಲಿ ಇಬ್ಬರ ದಹನವಾಗಿದ್ದು, ಅವರಿಬ್ಬರು ಸುಡುವ ಮುನ್ನವೇ ಶವವಾಗಿದ್ದರು. ಮಂಜುನಾಥ ಹಸ್ಲರ್ ಹಾಗೂ ಚಂದ್ರಶೇಖರ ಹಸ್ಲರ್ ಅವರಿಗೆ ಸರಾಯಿ ಕುಡಿಸಿದ್ದ ಪ್ರಮೋದ ನಾಯ್ಕ ಆ ಸರಾಯಿಯಲ್ಲಿ ವಿಷ ಹಾಕಿದ್ದರು. ವಿಷ ಸೇವನೆಯಿಂದ ಸಾವನಪ್ಪಿದ ಆ ಸಹೋದರರನ್ನು ಕಾರಿನಲ್ಲಿ ಕೂರಿಸಿ ಕಾರಿಗೆ ಬೆಂಕಿ ಹಚ್ಚಿದ್ದರು. ಈ ಕೃತ್ಯದಲ್ಲಿ ಪ್ರಮೋದ ನಾಯ್ಕ ಅವರಿಗೆ ಮತ್ತಿಬ್ಬರು ಸಹಾಯ ಮಾಡಿದ್ದು, ಕಾರಿಗೆ ಬೆಂಕಿ ಬಿದ್ದ ನಂತರ ಆ ಎಲ್ಲರೂ ಊರು ಬಿಟ್ಟಿದ್ದರು. ಪ್ರಮೋದ ನಾಯ್ಕ ನಾಪತ್ತೆ ಆಗಿರುವುದು ಅನೇಕರಿಗೆ ಅನುಮಾನ ಹುಟ್ಟಿಸಿತ್ತು. ಪ್ರಕರಣದ ಸಮಗ್ರ ತನಿಖೆಗಾಗಿ ಪ್ರತಿಭಟನೆಗಳು ಶುರುವಾಗಿತ್ತು. ಮೊದಲು ಅಪಘಾತ ಎಂದು ಪ್ರಕರಣ ದಾಖಲಿಸಿದ್ದ ಸಹೋದರರ ಸಹೋದರ ಉಮೇಶ ಹಸ್ಲರ್ ಅದಾದ ನಂತರ ಪ್ರಮೋದ ನಾಯ್ಕರ ಮೇಲೆ ಅನುಮಾನವಿರುವ ಬಗ್ಗೆ ದೂರಿದ್ದರು. ತನಿಖೆ ನಡೆಸಿದ ಪೊಲೀಸರು ಅಡಗಿದ್ದ ಪ್ರಮೋದ ನಾಯ್ಕ ಹಾಗೂ ಸಹಚರರನ್ನು ಬಂಧಿಸಿದರು. ವಿಚಾರಣೆ ವೇಳೆ ಸಾವನಪ್ಪಿದ ಸಹೋದರರು ಹಾಗೂ ಪ್ರಮೋದ ನಾಯ್ಕ ನಡುವೆ ಹಣಕಾಸಿನ ವ್ಯವಹಾರವಿದ್ದು, ಹಣಕ್ಕಾಗಿಯೇ ಪ್ರಮೋದ ನಾಯ್ಕ ಆ ಇಬ್ಬರನ್ನು ಕೊಲೆ ಮಾಡಿರುವುದು ಗೊತ್ತಾಗಿದೆ. - [ಮೊದಲು ಸ್ನೇಹ.. ನಂತರ ಬ್ಲಾಕ್‌ಮೇಲ್!](https://mobiletime.in/2026/01/friendship-first-then-blackmail/): ಮಹಿಳೆಯರ ಸ್ನೇಹ ಬಯಸುವ ಹೊನ್ನಾವರದ ಮಹಮದ್ ಯೂಷಾ ಅವರು ಉಪಾಯವಾಗಿ ಮಹಿಳೆಯರ ಮೊಬೈಲ್ ಸಂಖ್ಯೆ ಪಡೆಯುತ್ತಿದ್ದು, ಅವರ ಸ್ನೇಹ ಸಂಪಾದಿಸುತ್ತಾರೆ. ಅದಾದ ನಂತರ ಮಹಿಳೆಯರ ಖಾಸಗಿ ಫೋಟೋಗಳನ್ನಿರಿಸಿಕೊಂಡು ಅವರನ್ನು ಬೆದರಿಸುವುದನ್ನೇ ಕಾಯಕವನ್ನಾಗಿಸಿಕೊಂಡಿದ್ದಾರೆ. ಹೊನ್ನಾವರದ ಮಂಕಿಯಲ್ಲಿ ಮಹಮದ್ ಯೂಷಾ ಅವರು ವಾಸವಾಗಿದ್ದಾರೆ. ವಿದೇಶಿ ಸಂಖ್ಯೆಯನ್ನು ಸೇರಿ ಅವರು ಐದಕ್ಕೂ ಹೆಚ್ಚು ಮೊಬೈಲ್ ಮೊಬೈಲ್ ನಂ ಹೊಂದಿದ್ದಾರೆ. ಅವರು ನಾನಾ ಬಗೆಯ ತಂತ್ರಗಳನ್ನು ಉಪಯೋಗಿಸಿ ಮಹಿಳೆಯರ ಮೊಬೈಲ್ ಸಂಖ್ಯೆ ಪಡೆಯುತ್ತಾರೆ. ಅದಾದ ನಂತರ ಮಹಿಳೆಯರಿಗೆ ಪದೇ ಪದೇ ಮೆಸೆಜ್ ಮಾಡಿ ಸ್ನೇಹ ಸಂಪಾದಿಸುತ್ತಾರೆ. ಕಷ್ಟ-ಸುಖಗಳ ಬಗ್ಗೆ ಮಾತನಾಡಿ ಆಪ್ತ ಸ್ನೇಹಿತರಾಗುತ್ತಾರೆ. ಅದಾದ ನಂತರ ಮಹಿಳೆಯರ ಅವರ ಖಾಸಗಿ ಫೋಟೋಗಳನ್ನು ಪಡೆಯುತ್ತಿದ್ದು, ಆ ಖಾಸಗಿ ಫೋಟೋಗಳ ಆಧಾರದಲ್ಲಿಯೇ ಅವರನ್ನು ಬೆದರಿಸುವ ಕೆಲಸ ಮಾಡುತ್ತಿದ್ದಾರೆ. ಒಂದು ವರ್ಷದವರೆಗೆ ಮಹಿಳೆಯರ ಜೊತೆ ಸಭ್ಯವಾಗಿಯೇ ವರ್ತಿಸುವ ಮಹಮದ್ ಯೂಷಾ ಆ ನಂತರ ತಮ್ಮ ಚಾಳಿ ಶುರು ಮಾಡುತ್ತಾರೆ. ಪದೇ ಪದೇ ಫೋನ್ ಮಾಡುವುದು, ಕೆಟ್ಟ ಕೆಟ್ಟ ಸಂದೇಶ ಕಳುಹಿಸಿ ಪೀಡಿಸುವುದು, ಖಾಸಗಿ ಫೋಟೋಗಳನ್ನು ವೈರಲ್ ಮಾಡುವುದಾಗಿ ಬೆದರಿಸುವುದು, ಮಹಿಳೆಯ ಸ್ನೇಹಿತರ ಫೋನ್ ಸಂಖ್ಯೆಯನ್ನು ಸಂಪಾದಿಸಿ ಅವರಿಗೆ ಕಾಡಿಸುವುದು ಹಾಗೂ ಆ ಮಹಿಳೆಯರಿಗೆ ಆಪ್ತರಾಗಿರುವ ಕುಟುಂಬಗಳಿಗೆ ಖಾಸಗಿ ಫೋಟೋ ಕಳುಹಿಸುವ ಮೂಲಕ ತಮ್ಮ ವಿಕೃತ ಮನಸ್ಸನ್ನು ಸಮಾಧಾನ ಮಾಡಿಕೊಳ್ಳುತ್ತಾರೆ. ಭಟ್ಕಳದ ಮುಗ್ದುಂ ಕಾಲೋನಿಯ ನ್ಯಾಶನಲ್ ರಸ್ತೆ ಬಳಿ ಮೌಲನಾ ಆಗಿರುವ ಮಹಮದ್ ಇನಾಯತ್ತುಲ್ಲಾ ಅವರ ಪತ್ನಿಗೂ ಮಹಮದ್ ಯೂಷಾ ಅವರು ಕಾಡಿಸುತ್ತಿದ್ದಾರೆ. ಮಿಸ್ಟಾ ರೋಹಿ ಅವರ ಜೊತೆ ಸಲುಗೆಯಿಂದ ಇದ್ದ ಮಹಮದ್ ಯೂಷಾ ಅವರ ಫೋನ್ ನಂ ಪಡೆದಿದ್ದಾರೆ. ಒಂದು ವರ್ಷದ ಅವಧಿಯಲ್ಲಿ ಅವರ ಸ್ನೇಹ ಸಂಪಾದಿಸಿದ್ದಾರೆ. ಆಗಾಗ ಫೋನ್ ಮಾಡುವುದು, ವಾಟ್ಸಪ್ ಮೂಲಕ ಪ್ರೀತಿಯ ಸಂದೇಶ ರವಾನಿಸುವ ಕೆಲಸ ಮಾಡಿದ್ದಾರೆ. ಈ ವೇಳೆ ಮಿಸ್ಟಾ ರೋಹಿ ಅವರು ತಮ್ಮ ಖಾಸಗಿ ಫೋಟೋಗಳನ್ನು ಮಹಮದ್ ಯೂಷಾ ಅವರಿಗೆ ಕಳುಹಿಸಿದ್ದಾರೆ. ಆ ಫೋಟೋಗಳನ್ನು ಹಾಗೇ ಇರಿಸಿಕೊಂಡಿದ್ದ ಮಹಮದ್ ಯೂಷಾ, ವರ್ಷ ಕಳೆದ ನಂತರ ತಮ್ಮ ವರಸೆ ಬದಲಿಸಿದ್ದಾರೆ. ಮಹಮದ್ ಯೂಷಾ ಅವರ ಕಾಟಕ್ಕೆ ನಲುಗಿದ ಮಿಸ್ಟಾ ರೋಹಿ ಅವರು ಮಹಮದ್ ಕಾಟದಿಂದ ದೂರವಾಗಲು ಬಯಸಿದ್ದಾರೆ. ಇದರಿಂದ ಇನ್ನಷ್ಟು ಸಿಟ್ಟಾದ ಮಹಮದ್ ಯೂಷಾ ಅವರು ಭಟ್ಕಳ ಜಮಿಯಾಬಾದಿನಲ್ಲಿರುವ ಮಿಸ್ಟಾ ರೋಹಿ ಅವರ ಅಣ್ಣನ ಹೆಂಡತಿ ಜೀಬಾ ಮಹಮದ್ ಸೀಬಿತುಲ್ಲಾ ಅವರ ಮೊಬೈಲಿಗೆ ಆ ಖಾಸಗಿ ಫೋಟೋಗಳನ್ನು ಕಳುಹಿಸಿದ್ದಾರೆ. ಇದರಿಂದ ಮಿಸ್ಟಾ ರೋಹಿ ಅವರ ಕೌಟುಂಬಿಕ ಜೀವನಕ್ಕೆ ಸಮಸ್ಯೆಯಾಗಿದೆ. ತಮ್ಮ ಮಾನಕ್ಕೆ ಕುತ್ತು ತಂದ ಮಹಮದ್ ಯೂಷಾ ವಿರುದ್ಧ ಇದೀಗ ಮಿಸ್ಟಾ ರೋಹಿ ಅವರು ಸಿಡಿದೆದ್ದಿದ್ದು, ಕಾನೂನು ಕ್ರಮಕ್ಕಾಗಿ ಪೊಲೀಸರ ಮೊರೆ ಹೊಗಿದ್ದಾರೆ. ಭಟ್ಕಳ ನಗರ ಪೊಲೀಸರು ಮಹಮದ್ ಯೂಷಾ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. - [ಅಡ್ಡಾದಿಡ್ಡಿ ಓಡಿದ ಬೈಕಿಗೆ ಅಡ್ಡಬಂದ ನಾಯಿ!](https://mobiletime.in/2026/01/a-dog-came-across-a-bike-that-was-running-around/): ಕುಮಟಾ ಮೂರೂರಿನ ಜಯರಾಮ ಭಟ್ಟರ ಮನೆ ಬಳಿಯಿರುವ ನಾಯಿಯೊಂದು ಬೈಕ್ ಸವಾರರನ್ನು ಬೆದರಿಸುತ್ತಿದೆ. ಆ ನಾಯಿ ಕಾಟಕ್ಕೆ ಕಂದವಳ್ಳಿಯ ಕೃಷ್ಣ ಭಟ್ಟರು ಬೈಕಿನಿಂದ ಬಿದ್ದಿದ್ದು, ಕೃಷ್ಣ ಭಟ್ಟರ ಪತ್ನಿ ಗೀತಾ ಭಟ್ಟ ಅವರ ತಲೆಗೆ ಗಂಭೀರ ಪ್ರಮಾಣದಲ್ಲಿ ಪೆಟ್ಟಾಗಿದೆ. ಕುಮಟಾ ಕಂದವಳ್ಳಿಯ ಕೃಷ್ಣ ಪರಮೇಶ್ವರ ಭಟ್ಟ ಅವರು ತಮ್ಮ 73ನೇ ವಯಸ್ಸಿನಲ್ಲಿಯೂ ವೇಗವಾಗಿ ಬೈಕ್ ಓಡಿಸುತ್ತಾರೆ. ಜನವರಿ 21ರ ಸಂಜೆ ಅವರು ಪತ್ನಿ ಗೀತಾ ಭಟ್ಟ ಅವರ ಜೊತೆ ಕುಮಟಾ ಕಡೆ ಹೊರಟಿದ್ದರು. ಕಂದವಳ್ಳಿಯಿoದ ಕುಮಟಾ ಕಡೆ ಹೊರಟಿದ್ದ ಅವರ ಬೈಕಿಗೆ ಮೂರೂರಿನ ಜಯರಾಮ ಭಟ್ಟರ ಮನೆ ಬಳಿ ನಾಯಿಯೊಂದು ಅಡ್ಡ ಬಂದಿತು. ಏಕಾಏಕಿ ನಾಯಿ ಅಡ್ಡ ಬಂದಿದ್ದರಿAದ ಬೆದರಿದ ಕೃಷ್ಣ ಭಟ್ಟರು ಆ ಬೈಕು ನಾಯಿಗೆ ಗುದ್ದುವುದನ್ನು ತಪ್ಪಿಸಲು ಪ್ರಯತ್ನಿಸಿದರು. ನಾಯಿ ಬೈಕಿನಿಂದ ತಪ್ಪಿಸಿಕೊಂಡಿದ್ದು, ಕೃಷ್ಣ ಭಟ್ಟರು ಅವರ ಪತ್ನಿ ಗೀತಾ ಭಟ್ಟರ ಜೊತೆ ಕಂದಕಕ್ಕೆ ಬಿದ್ದರು. ಪರಿಣಾಮ ಗೀತಾ ಭಟ್ಟ ಅವರ ತಲೆಗೆ ಗಂಭೀರ ಪ್ರಮಾಣದಲ್ಲಿ ಗಾಯವಾಯಿತು. ಗೀತಾ ಭಟ್ಟ ಅವರ ಕೈಗೂ ನೋವಾಯಿತು. ಈ ಅಪಘಾತದಲ್ಲಿ ಕೃಷ್ಣ ಭಟ್ಟರಿಗೂ ಅಲ್ಲಲ್ಲಿ ನೋವಾಗಿದ್ದು, ಅವರಿಬ್ಬರು ಹೊನ್ನಾವರದ ಸೆಂಟ್ ಇಗ್ನೇಶಿಯಸ್ ಆಸ್ಪತ್ರೆ ಸೇರಿದರು. ಮಾವನಿಗೆ ಅಪಘಾತ ಆಗಿರುವುದನ್ನು ಅರಿತು ಮೂರೂರಿನ ಅಮೋದ ವೆಂಕಟ್ರಮಣ ಹೆಗಡೆ ಅವರು ಆಸ್ಪತ್ರೆಗೆ ದೌಡಾಯಿಸಿದರು. ಈ ಅಪಘಾತದ ಬಗ್ಗೆ ಅವರೇ ಮಾಹಿತಿ ನೀಡಿ, ವೇಗವಾಗಿ ಬೈಕ್ ಓಡಿಸಿದ ಕೃಷ್ಣ ಭಟ್ಟರ ವಿರುದ್ಧ ಪೊಲೀಸ್ ದೂರು ನೀಡಿದರು. - [ಪೊಲೀಸರ ಹೆಸರಿನಲ್ಲಿ ಬೆದರಿಕೆ: ಪೊಲೀಸರಿಂದ ತನಿಖೆ](https://mobiletime.in/2026/01/threat-in-the-name-of-police-police-investigating/): ಕುಮಟಾ ಹಳಕಾರಿನ ಹನುಮಂತ ಮುಕ್ರಿ ಅವರಿಗೆ ಪೊಲೀಸರ ಹೆಸರಿನಲ್ಲಿ ಬೆದರಿಕೆ ಬಂದ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿದ್ದು, ತನಿಖೆ ಶುರು ಮಾಡಿದ್ದಾರೆ. ರಾಮನಗರದ ಪಿಸೈ ಹೆಸರಿನಲ್ಲಿ ಹನುಮಂತ ಮುಕ್ರಿ ಅವರಿಗೆ ಫೋನ್ ಕರೆ ಬಂದಿತ್ತು. ಹನುಮಂತ ಮುಕ್ರಿ ಅವರು ಹುಡುಗಿಯೊಬ್ಬರಿಗೆ ಕಾಡಿಸಿದ ಬಗ್ಗೆ ಆರೋಪಿಸಿ 3 ಲಕ್ಷ ರೂ ದಂಡ ಪಾವತಿಗೆ ವಂಚಕರು ಸೂಚಿಸಿದ್ದರು. ಅದಾದ ನಂತರ 25 ಸಾವಿರ ರೂ ಫೋನ್ ಪೇ ಮಾಡುವಂತೆ ಹೇಳಿದ್ದರು. ಈ ಬಗ್ಗೆ ಹನುಮಂತ ಮುಕ್ರಿ ಅವರು ಜನಸಾಮಾನ್ಯರ ಸಮಾಜ ಕಲ್ಯಾಣ ಕೇಂದ್ರದವರ ಗಮನಕ್ಕೆ ತಂದಿದ್ದರು. ಆ ಕೇಂದ್ರದ ಅಧ್ಯಕ್ಷ ಆಗ್ನೇಲ್ ರೋಡ್ರಗಸ್ ನೇತ್ರತ್ವದಲ್ಲಿ ಹನುಮಂತ ಮುಕ್ರಿ ಅವರು ಪೊಲೀಸ್ ದೂರು ನೀಡಿದ್ದು, ಸದ್ಯ ನ್ಯಾಯಾಲಯದ ಸೂಚನೆ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಸೈಬರ್ ಅಪರಾಧ ನಡೆಸುವವರ ವಿರುದ್ಧ ಕಠಿಣ ಕ್ರಮ ಜರುಗಿಸುವುದಾಗಿ ಪೊಲೀಸರು ಹೇಳಿದ್ದಾರೆ. - [ವೈದ್ಯ ಸಿಬ್ಬಂದಿ ಆತ್ಮಹತ್ಯೆ: ಸೋಶಿಯಲ್ ಮಿಡಿಯಾ ಶೂರರ ಸೆರೆ!](https://mobiletime.in/2026/01/medical-staff-commits-suicide-social-media-heroes-arrested/): ಕಾರವಾರದ ಪಿಕಳೆ ನರ್ಸಿಂಗ್ ಹೋಂ’ನ ಔಷಧ ವಿತರಕ ರಾಜೀವ ಪಿಕಳೆ ಅವರು ಆತ್ಮಹತ್ಯೆಗೆ ಶರಣಾಗಿದ್ದರೂ ಅವರ ಆತ್ಮಸ್ಥೆöÊರ್ಯ ಕುಗ್ಗುವ ಹಾಗೇ ಮಾಡಿದ್ದ ಮೂವರನ್ನು ಪೊಲೀಸರು ವಶಕ್ಕೆಪಡೆದಿದ್ದಾರೆ. ರಾಜೀವ ಪಿಕಳೆ ಅವರು ಈಚೆಗೆ ಕಣ್ತಪ್ಪಿನಿಂದ ಅವಧಿ ಮೀರಿದ ಔಷಧ ವಿತರಿಸಿದ್ದರು. ಆದ ಪ್ರಮಾದಕ್ಕೆ ಅವರು ಬಹಿರಂಗವಾಗಿ ಕ್ಷಮೆ ಕೋರಿದ್ದರು. ಅದಾಗಿಯೂ ರಾಜೀವ ಪಿಕಳೆ ಅವರನ್ನು ತರಾಟೆಗೆ ತೆಗೆದುಕೊಂಡ ವಿಡಿಯೋ ಮಾಡಿದ ಕಿಡಿಗೇಡಿಗಳು ಅದನ್ನು ಎಲ್ಲಡೆ ಹರಿಬಿಟ್ಟಿದ್ದರು. ಆ ಮೂಲಕ ಪಿಕಳೆ ಆಸ್ಪತ್ರೆಯ ಹೆಸರು ಹಾಳು ಮಾಡುವ ಪ್ರಯತ್ನ ಮಾಡಿದ್ದರು. ಇದರಿಂದ ಕುಗ್ಗಿದ ರಾಜೀವ ಪಿಕಳೆ ಅವರು ಬಂದೂಕಿನಿoದ ಗುಂಡು ಹಾರಿಸಿಕೊಂಡು ಪ್ರಾಣ ಬಿಟ್ಟಿದ್ದರು. ರಾಜೀವ ಪಿಕಳೆ ಅವರು ಅತ್ಯಂತ ಪ್ರಾಮಾಣಿಕರಾಗಿದ್ದು, ಮೃದು ಸ್ವಭಾವದವರಾಗಿದ್ದರು. ಅವರು ಕ್ಷಮೆ ಕೋರಿದ ನಂತರವೂ ವಿಡಿಯೋ ಸಾಕಷ್ಟು ಪ್ರಮಾಣದಲ್ಲಿ ವೈರಲ್ ಆಗಿದ್ದರಿಂದ ಮಾನಸಿಕವಾಗಿ ನೋವು ಅನುಭವಿಸಿದ್ದರು. ಕಾರವಾರ ತಾಲೂಕಿನ ವೈಲವಾಡ ಗ್ರಾಮದ ಸುಭಾಷ ಕೃಷ್ಣ ನಾಯ್ಕ, ಹರಿಶ್ಚಂದ್ರ ನಾಯ್ಕ ಹಾಗೂ ಅನಿಲ್ ಸುರೇಶ್ ನಾಯ್ಕ ಎಂಬಾತರು ಆ ವಿಡಿಯೋ ಹರಿಬಿಟ್ಟವರಾಗಿದ್ದಾರೆ. ಈ ಹಿನ್ನಲೆ ಪೊಲೀಸರು ಆ ಮೂವರನ್ನು ವಶಕ್ಕೆಪಡೆದಿದ್ದಾರೆ. - [ಗೋಕರ್ಣ: ಈ ಊರು ಉದ್ಧಾರ ಆಗುವುದು ಯಾವಾಗ?!](https://mobiletime.in/2026/01/gokarna-when-will-this-town-be-saved/): ಉತ್ತರ ಕನ್ನಡ ಜಿಲ್ಲೆಯ ಪುಣ್ಯ ಹಾಗೂ ಪ್ರಸಿದ್ಧ ಕ್ಷೇತ್ರವಾಗಿರುವ ಗೋಕರ್ಣದಲ್ಲಿ ಮೂಲಭೂತ ಸೌಕರ್ಯಗಳೇ ಸರಿಯಾಗಿಲ್ಲ. ನಿತ್ಯ ಸಾವಿರಾರು ಪ್ರವಾಸಿಗರು ಭೇಟಿ ನೀಡುವ ಗೋಕರ್ಣದ ಸಮಗ್ರ ಅಭಿವೃದ್ಧಿಗೆ ಈವರೆಗೂ ಮನಸ್ಸು ಮಾಡಿದವರಿಲ್ಲ. ಅನೇಕ ಧಾರ್ಮಿಕ ಕೇಂದ್ರಗಳ ಜೊತೆ ಸುಂದರ ಕಡಲ ತೀರವನ್ನು ಹೊಂದಿರುವ ಗೋಕರ್ಣದ ಅಭಿವೃದ್ಧಿಗೆ ಅನೇಕರು ಆಗ್ರಹಿಸಿದ್ದಾರೆ. ಆದರೆ, ಆ ಆಗ್ರಹ ಸರ್ಕಾರವನ್ನು ತಲುಪುತ್ತಿಲ್ಲ. ಜನಪ್ರತಿನಿಧಿಗಳಿಗೆ ಈ ಬಗ್ಗೆ ಅರಿವಿದ್ದರೂ ಅದನ್ನು ಗಂಭೀರವಾಗಿ ಪರಿಗಣಿಸಿಲ್ಲ. `ಗೋಕರ್ಣದಲ್ಲಿ ಕುಡಿಯುವ ನೀರಿನ ಸಮಸ್ಯೆಗೆ ಈವರೆಗೂ ಪರಿಹಾರ ದೊರೆತಿಲ್ಲ. ಇಲ್ಲಿ ಅಗತ್ಯವಿರುವ ಕಡೆ ಶೌಚಾಲಯಗಳಿಲ್ಲ. ನವೆಂಬರ್ – ಡಿಸೆಂಬರ್ ಅವಧಿಯಲ್ಲಿ ನಿರೀಕ್ಷೆಗೂ ಮೀರಿ ಪ್ರವಾಸಿಗರು ಬರುತ್ತಿದ್ದು, ಅವರ ಆಗು-ಹೋಗುಗಳಿಗೆ ಸ್ಪಂದನೆ ಸಿಗುತ್ತಿಲ್ಲ. ಆ ಅವಧಿಯಲ್ಲಿ ಕಾಸು ಕೊಟ್ಟರೂ ಸಹ ಪ್ರವಾಸಿಗರಿಗೆ ವಸತಿ ವ್ಯವಸ್ಥೆ ಆಗುತ್ತಿಲ್ಲ. `ಬೇರೆ ಬೇರೆ ಜಿಲ್ಲೆಯ ಪುಣ್ಯ ಹಾಗೂ ಪ್ರವಾಸಿ ತಾಣಗಳಿಗೆ ಹೋಲಿಸಿದರೆ ದಕ್ಷಿಣ ಕಾಶಿ ಎನಿಸಿಕೊಂಡಿರುವ ಗೋಕರ್ಣ ಹಿಂದುಳಿದಿದೆ. ಉಡುಪಿ, ಧರ್ಮಸ್ಥಳ ಸೇರಿ ಇನ್ನಿತರ ಕಡೆಗಳ ಹಾಗೇ ಇಲ್ಲಿಯೂ ಬಡವರಿಗೆ ಅನುಕೂಲವಾಗುವ ರೀತಿ ಕಡಿಮೆ ದರದಲ್ಲಿ ವಸತಿ ಸೌಕರ್ಯ ಕಲ್ಪಿಸಬೇಕು. ಕುಡಿಯುವ ನೀರು, ಉತ್ತಮ ರಸ್ತೆ ಸಂಪರ್ಕ, ಅಗತ್ಯ ಶೌಚಾಲಯಗಳ ನಿರ್ಮಾಣದ ಜೊತೆ ಈ ನೆಲದ ಯಕ್ಷಗಾನ, ಭರತನಾಟ್ಯ ಹಾಗೂ ಇನ್ನಿತರ ಕಲಾ ಪ್ರಕಾರ ಉಳಿಸುವಿಕೆಗಾಗಿ ಉತ್ತಮ ಸಭಾ ಭವನವನ್ನು ನಿರ್ಮಿಸಬೇಕು’ ಎಂದು ಕರವೇ ಜನಧ್ವನಿಯ ಜಿಲ್ಲಾಧ್ಯಕ್ಷ ಉಮಾಕಾಂತ್ ಹೊಸಕಟ್ಟಾ ಅವರು ಆಗ್ರಹಿಸಿದ್ದಾರೆ. ಇದರೊಂದಿಗೆ `ಪ್ರಾಮಾಣಿಕ ಸೇವೆ ನೀಡುವ ಟಾಕ್ಸಿ ಹಾಗೂ ರಿಕ್ಷಾ ಚಾಲಕರಿಗೆ ಅನುಕೂಲ ಆಗುವ ಹಾಗೇ ಯೋಜನೆ ರೂಪಿಸಬೇಕು. ಪ್ರವಾಸೋದ್ಯಮ ಹೆಸರಿನಲ್ಲಿ ಹಣ ವಸೂಲಿ ಮಾಡುವ ಬದಲು ಅಭಿವೃದ್ಧಿಗೆ ಹಣ ವಿನಿಯೋಗವಾಗಬೇಕು. ಗಣ್ಯರು ಬಂದಾಗ ಅವರಿಗೆ ಭದ್ರತೆ ಕೊಡುವ ಬದಲು ಪೊಲೀಸರು ಜನ ಸಾಮಾನ್ಯರ ರಕ್ಷಣೆಗೆ ಒತ್ತು ಕೊಡಬೇಕು. ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಈ ಬಗ್ಗೆ ಗಮನಹರಿಸಿ ಶ್ರೀ ಕ್ಷೇತ್ರದ ಅಭಿವೃದ್ಧಿಗೆ ಆಸಕ್ತಿವಹಿಸಬೇಕು’ ಎಂದು ಅವರು ಒತ್ತಾಯಿಸಿದ್ದಾರೆ. `ಗೋಕರ್ಣದ ಅಭಿವೃದ್ಧಿ ಬಗ್ಗೆ ಗಮನಹರಿಸದೇ ಉದ್ದರೆ ಹೋರಾಟ ಅನಿವಾರ್ಯ’ ಎಂದವರು ಎಚ್ಚರಿಸಿದ್ದಾರೆ. - [ಸ್ಟೇರಿಂಗ್ ಹಿಡಿದು ತೂಕಡಿಸಿದ ಬಸ್ ಚಾಲಕ!](https://mobiletime.in/2026/01/bus-driver-falls-asleep-while-holding-the-steering-wheel/): ಮೈಸೂರಿನಿಂದ ದಾಂಡೇಲಿಗೆ ಹೊರಟಿದ್ದ ಬಸ್ಸು ಯಲ್ಲಾಪುರದಲ್ಲಿ ಅಪಘಾತಕ್ಕೀಡಾಗಿದೆ. ಮಂಚಿಕೇರಿ ಸಮೀಪದ ಚವತ್ತಿ-ಉಮ್ಮಚ್ಗಿ ನಡುವಿನ ಗೋರ್ಸಗದ್ದೆ ಬಳಿ ಈ ಬಸ್ಸು ರಸ್ತೆ ಪಕ್ಕದ ಧರೆಗೆ ಗುದ್ದಿದೆ. ಶುಕ್ರವಾರ ಮೈಸೂರಿನಿಂದ ಹೊರಟ ಖಾಸಗಿ ಬಸ್ಸಿನಲ್ಲಿ 23ಕ್ಕೂ ಅಧಿಕ ಪ್ರಯಾಣಿಕರಿದ್ದರು. ಅವರೆಲ್ಲರೂ ದಾಂಡೇಲಿ ಪ್ರವಾಸಕ್ಕೆ ಹೊರಟಿದ್ದರು. ಶಿರಸಿಯವರೆಗೂ ಬಸ್ ಚಾಲಕ ಸುರಕ್ಷಿತ ಚಾಲನೆ ಮಾಡಿದ್ದು, ಅದಾದ ನಂತರ ನಿದ್ರೆಯ ಮಂಪರಿಗೆ ಜಾರಿದರು. ಪರಿಣಾಮ ಆ ಬಸ್ಸು ಚಾಲಕನ ನಿಯಂತ್ರಣ ತಪ್ಪಿ ಧರೆಗೆ ಗುದ್ದಿತು. ಬಸ್ಸು ವೇಗವಾಗಿ ಗುದ್ದಿದ್ದರಿಂದ ಚಾಲಕನಿಗೆ ಗಂಭೀರ ಪ್ರಮಾಣದಲ್ಲಿ ಗಾಯವಾಯಿತು. ಶನಿವಾರ ಮುಂಜಾನೆ ಈ ಅವಘಡ ನಡೆದಿದ್ದು, ಬಸ್ಸಿನಲ್ಲಿದ್ದ ಇನ್ನಿತರ ಪ್ರಯಾಣಿಕರು ತೊಂದರೆ ಅನುಭವಿಸಿದರು. ಈ ಅಪಘಾತದಲ್ಲಿ ಅನೇಕ ಪ್ರಯಾಣಿಕರಿಗೆ ನೋವಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಿ ಆರೈಕೆ ಮಾಡಲಾಯಿತು. ಬಸ್ ಅಪಘಾತವಾಗಿರುವುದನ್ನು ಅರಿತು ಅನೇಕರು ಅಲ್ಲಿಗೆ ಭೇಟಿ ನೀಡಿದರು. ಗಾಯಗೊಂಡವರನ್ನು ರಕ್ಷಿಸುವ ಪ್ರಯತ್ನ ಮಾಡಿದರು. ಗಾಯಗೊಂಡ ಬಹುತೇಕರು ಮೈಸೂರಿನವರಾಗಿದ್ದು, ಸ್ಥಳೀಯರ ಸಹಕಾರವನ್ನು ಪ್ರವಾಸಿಗರು ಸ್ಮರಿಸಿದರು. - [ಉಳುವಿಯಲ್ಲಿ ಉಳಿದು ಜಾತ್ರೆ ನೋಡಿ!](https://mobiletime.in/2026/01/stay-in-uluvi-and-see-the-fair/): `ಪ್ರಸಿದ್ಧ ಉಳವಿ ಚೆನ್ನಬಸವೇಶ್ವರ ದೇವರ ಜಾತ್ರಾ ಮಹೋತ್ಸವ ಜನವರಿ 25ರಿಂದ ಫೆಬ್ರವರಿ 5ರವರೆಗೆ ನಡೆಯಲಿದೆ. ಅದ್ಧೂರಿಯಾಗಿ ಜಾತ್ರೆ ನಡೆಸಲು ಎಲ್ಲಾ ಬಗೆಯ ಸಿದ್ಧತೆ ಮಾಡಿಕೊಳ್ಳಲಾಗಿದೆ’ ಎಂದು ಉಳವಿ ಚೆನ್ನಬಸವೇಶ್ವರ ಟ್ರಸ್ಟ್ ಅಧ್ಯಕ್ಷ ಸಂಜಯ ಕಿತ್ತೂರು ಅವರು ಹೇಳಿದ್ದಾರೆ. ಪತ್ರಕರ್ತರ ಜೊತೆ ಮಾತನಾಡಿದ ಅವರು `ಜನವರಿ 25ರಂದು ಬೆಳಿಗ್ಗೆ 7 ಗಂಟೆಗೆ ಷಟಸ್ಥಲ ಧ್ವಜಾರೋಹಣ ನಡೆಯಲಿದ್ದು, ಸಂಜೆ 8 ಗಂಟೆಗೆ ರಥಗಳ ಪೂಜೆ ಹಾಗೂ ಸೀಮೆ ಕಟ್ಟುವ ಮಹಾ ಪೂಜೆ ಜರುಗಲಿದೆ. ಜನವರಿ 26ರಂದು ಪಲ್ಲಕ್ಕಿ ಉತ್ಸವ, 27ರಂದು ಭೂಮಿಪೂಜೆ, 28ರಂದು ಉತ್ಸವ ಮೂರ್ತಿ ಪ್ರತಿಷ್ಠಾಪನೆ, 29ರಂದು ಪಲ್ಲಕ್ಕಿ ಉತ್ಸವ ಹಾಗೂ ರಕ್ಷಾ ದೇವಿ ಸಣ್ಣ ರಥೋತ್ಸವ ನಡೆಯಲಿದೆ. 30ರಂದು ವೀರಭದ್ರೇಶ್ವರ ಸಣ್ಣ ರಥೋತ್ಸವ, 31ರಂದು ಎತ್ತಿಕಾಯುವ ಬಸವಣ್ಣನ ರಥೋತ್ಸವ ಜರುಗಲಿದೆ’ ಎಂಬ ಮಾಹಿತಿ ನೀಡಿದರು. `ಫೆಬ್ರವರಿ 1ರಂದು ಸರ್ವ ದೇವಾನುದೇವತೆಗಳ ಸಣ್ಣ ರಥೋತ್ಸವ ನಡೆಯಲಿದ್ದು, ಫೆ 2ರಂದು ರಾತ್ರಿ 8 ಗಂಟೆಗೆ ಚೆನ್ನಬಸವೇಶ್ವರ ರಥಾರೋಹಣ ನಡೆಯಲಿದೆ. ಫೆ 3ರಂದು ಮಹಾ ರಥೋತ್ಸವ, ಫೆ 4ರಂದು ಕುಸ್ತಿ ಕಾರ್ಯಕ್ರಮ ನಡೆಯಲಿದ್ದು, ಫೆ 5ರಂದು ಓಕಳಿ ಸಣ್ಣ ರಥೋತ್ಸವದೊಂದಿಗೆ ಜಾತ್ರಾ ಮಹೋತ್ಸವಕ್ಕೆ ತೆರೆ ಬೀಳಲಿದೆ’ ಎಂದು ವಿವರಿಸಿದರು. `ಪ್ರತಿವರ್ಷದಂತೆ ಈ ಬಾರಿ ಕೂಡ ರಾಜ್ಯದ ವಿವಿಧ ಜಿಲ್ಲೆಗಳಿಂದ ಲಕ್ಷಾಂತರ ಭಕ್ತರು ಉಳವಿ ಜಾತ್ರೆಯಲ್ಲಿ ಭಾಗವಹಿಸಲಿದ್ದಾರೆ. ನೂರಾರು ಭಕ್ತರು ಚಕ್ಕಡಿ ಗಾಡಿಗಳ ಮೂಲಕ ದೇವರಿಗೆ ಪೂಜೆ ಸಲ್ಲಿಸಲಿದ್ದು, ಜಾತ್ರೆಗೆ ಅಗತ್ಯವಿರುವ ಎಲ್ಲಾ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ’ ಎಂದು ವಿಧಾನ ಪರಿಷತ್ ಸದಸ್ಯ ಗಣಪತಿ ಉಳ್ವೇಕರ್ ಅವರು ಮಾಹಿತಿ ನೀಡಿದರು. `ಭಕ್ತರಿಗೆ ಯಾವುದೇ ತೊಂದರೆಯಾಗದAತೆ ಬೀದಿ ದೀಪ, ರಸ್ತೆ ದುರಸ್ತಿ, ಕುಡಿಯುವ ನೀರು ಹಾಗೂ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ’ ಎಂದು ಅಲ್ಲಿನ ಗ್ರಾಮ ಪಂಚಾಯತ್ ಅಧ್ಯಕ್ಷ ಮಂಜುನಾಥ ಅವರು ಹೇಳಿದರು. `ಸುರಕ್ಷತೆ ಮತ್ತು ಆರೋಗ್ಯದ ದೃಷ್ಟಿಯಿಂದ ಹೆಚ್ಚಿನ ಮುಂಜಾಗ್ರತೆ ವಹಿಸಲಾಗಿದ್ದು, 15 ಮೊಬೈಲ್ ಶೌಚಾಲಯಗಳಿಗಾಗಿ ಬೆಳಗಾವಿ ಮಹಾನಗರ ಪಾಲಿಕೆಗೆ ಮನವಿ ಮಾಡಲಾಗಿದೆ. ಸುಮಾರು 2000 ಚಕ್ಕಡಿ ಗಾಡಿಗಳು ಆಗಮಿಸುವ ನಿರೀಕ್ಷೆಯಿದ್ದು, ಮದ್ಯ ಹಾಗೂ ಪ್ಲಾಸ್ಟಿಕ್ ಮುಕ್ತ ಜಾತ್ರೆಗಾಗಿ ಜಾಗೃತಿ ಮೂಡಿಸಲಾಗಿದೆ’ ಎಂದರು. ಉಳವಿ ಚೆನ್ನಬಸವೇಶ್ವರ ಟ್ರಸ್ಟ್ ಉಪಾಧ್ಯಕ್ಷ ಪ್ರಕಾಶ ಕಿತ್ತೂರು, ಸದಸ್ಯ ವಿರೇಶ ಕಂಬಳಿ, ಸಿದ್ದಾರೂಢ ಪಾಟೀಲ ಎಲ್ಲರನ್ನು ಜಾತ್ರೆಗೆ ಆಮಂತ್ರಿಸಿದರು. - [ಆತ್ಮಹತ್ಯೆ ಎಂಬ ಮಾನಸಿಕ ದೌರ್ಬಲ್ಯ: ಭಾವೋದ್ವೇಗದ ರಾಜಕೀಯಕ್ಕಿಂತ ಜಾಗೃತಿ ಅಗತ್ಯ](https://mobiletime.in/2026/01/suicide-is-a-mental-weakness-awareness-is-needed-rather-than-emotional-politics/): ಜೀವನದ ಪ್ರತಿ ಹಂತದಲ್ಲೂ ಸವಾಲುಗಳು ಎದುರಾಗುವುದು ಸಹಜ. ಆದರೆ ಆ ಸವಾಲುಗಳಿಗೆ ಹೆದರಿ ಬದುಕನ್ನೇ ಕೊನೆಗೊಳಿಸಿಕೊಳ್ಳುವ ನಿರ್ಧಾರ ತೀರಾ ದುರದೃಷ್ಟಕರ.  ಯಾವುದೋ ಕ್ಷಣಿಕ ಆವೇಶಕ್ಕೆ ಬಲಿಯಾಗಿ ಅಥವಾ ಜೀವನದ ಸವಾಲುಗಳನ್ನು ಎದುರಿಸಲಾಗದೆ ಆತ್ಮಹತ್ಯೆಯಂತಹ ನಿರ್ಧಾರಕ್ಕೆ ಮುಂದಾಗುವುದು ಕೇವಲ ವೈಯಕ್ತಿಕ ದುರಂತವಲ್ಲ, ಅದು ಸಮಾಜದ ಸ್ವಾಸ್ಥ್ಯ ಕೆಡಿಸುತ್ತಿರುವ ‘ಮಾನಸಿಕ ದೌರ್ಬಲ್ಯ. ಈಚೆಗೆ ಅಂಕೋಲಾದಲ್ಲಿ ಯುವಕನೊಬ್ಬ ಪತ್ರ ಬರೆದಿಟ್ಟು ಜೀವನ ಅಂತ್ಯಗೊಳಿಸಿಕೊಂಡಿದ್ದು, ವೈದ್ಯೆಯೊಬ್ಬರ ಮಗಳು ಫಲಿತಾಂಶದ ಒತ್ತಡಕ್ಕೆ ಬಲಿಯಾದದ್ದು, ಅಥವಾ ಕಾರವಾರದಲ್ಲಿ ಪ್ರೇಮ ವೈಫಲ್ಯದ ಹಿನ್ನೆಲೆಯಲ್ಲಿ ಯುವತಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿದ್ದು – ಇವೆಲ್ಲವೂ ತೀವ್ರವಾದ ಮಾನಸಿಕ ಖಿನ್ನತೆ ಮತ್ತು ಒತ್ತಡದ ಪ್ರತಿಫಲನಗಳೇ ಹೊರತು ಮತ್ತೇನೂ ಅಲ್ಲ. ದುರಂತವೆಂದರೆ, ಇಂದಿನ ಸಮಾಜವು ಪ್ರತಿಯೊಂದು ಸಾವಿನಲ್ಲೂ ಧಾರ್ಮಿಕ ಬಣ್ಣ ಅಥವಾ ರಾಜಕೀಯ ಲಾಭವನ್ನು ಹುಡುಕಲು ಹೊರಟಿರುವುದು ಖೇದಕರ. ಪ್ರೀತಿ-ಪ್ರೇಮ ಎಂಬುದು ಎರಡು ಮನಸ್ಸುಗಳ ನಡುವಿನ ತೀರಾ ವೈಯಕ್ತಿಕ ಭಾವನೆ. ಅಲ್ಲಿ ಮೂಡುವ ಭಿನ್ನಾಭಿಪ್ರಾಯಗಳಾಗಲಿ ಅಥವಾ ವೈಫಲ್ಯಗಳಾಗಲಿ ಸಾವಿಗೆ ಕಾರಣವಾಗಬಾರದು. ನಮ್ಮ ಸಮಾಜವು ಇಂದು ಎತ್ತ ಸಾಗುತ್ತಿದೆ ಎಂಬುದು ಗಂಭೀರ ಚಿಂತನೆಯ ವಿಷಯವಾಗಿದೆ. ದುರದೃಷ್ಟವಶಾತ್, ಪ್ರತಿ ಸಾವಿನಲ್ಲೂ ನಾವು ಧರ್ಮದ ಬಣ್ಣ ಅಥವಾ ರಾಜಕೀಯದ ಲಾಭವನ್ನು ಹುಡುಕುವ ಕೆಟ್ಟ ಚಾಳಿಯನ್ನು ಬೆಳೆಸಿಕೊಂಡಿದ್ದೇವೆ. ಯಾರೋ ಒಬ್ಬರು ಮಾನಸಿಕ ದೌರ್ಬಲ್ಯದಿಂದ ತೆಗೆದುಕೊಂಡ ನಿರ್ಧಾರವನ್ನು ಇಡೀ ಸಮುದಾಯದ ಅಥವಾ ರಾಜಕೀಯ ಸಿದ್ಧಾಂತದ ಸಂಘರ್ಷವನ್ನಾಗಿ ಪರಿವರ್ತಿಸುವುದು ಮಾನವೀಯತೆಯ ದೃಷ್ಟಿಯಿಂದ ಅಕ್ಷಮ್ಯ ಅಪರಾಧ. ಇಂತಹ ಘಟನೆಗಳು ನಡೆದಾಗ ಸುಳ್ಳು ಸುದ್ದಿಗಳ ಮೂಲಕ ಪೊಲೀಸರ ಮೇಲೆ ಅನಗತ್ಯ ಒತ್ತಡ ಹೇರುವುದು ಸರಿಯಲ್ಲ. ಇಂತಹ ಒತ್ತಡದಿಂದಾಗಿ ತನಿಖಾ ಸಂಸ್ಥೆಗಳು ಮುಗ್ಧರನ್ನು ವಿಚಾರಣೆಗೆ ಒಳಪಡಿಸಿದಾಗ, ಅವರು ಅನುಭವಿಸುವ ಮಾನಸಿಕ ಯಾತನೆ ಮತ್ತೊಂದು ಆತ್ಮಹತ್ಯೆಗೆ ದಾರಿ ಮಾಡಿಕೊಡುವ ಅಪಾಯವಿರುತ್ತದೆ. ಭಾರತದಲ್ಲಿ ಪ್ರತಿ ವರ್ಷ ಸಾವಿರಾರು ಜೀವಗಳು ಹೀಗೆ ಅರ್ಧದಲ್ಲೇ ಮರೆಯಾಗುತ್ತಿವೆ. ಕರ್ನಾಟಕದಲ್ಲಿಯೂ ಈ ಸಂಖ್ಯೆ ಕಡಿಮೆ ಏನಿಲ್ಲ. ಈ ಎಲ್ಲ ಸಾವುಗಳ ಹಿಂದೆ ಪ್ರಚೋದನೆಗಿಂತ ಹೆಚ್ಚಾಗಿ ಕಾಣುವುದು ಒಳಗಿನ ಒಂಟಿತನ ಮತ್ತು ಅತೀವವಾದ ಖಿನ್ನತೆ. ಮಕ್ಕಳಿಗೆ ಕೇವಲ ಅಂಕಗಳನ್ನು ಗಳಿಸುವುದನ್ನಷ್ಟೇ ಕಲಿಸಿದರೆ ಸಾಲದು, ಸೋತಾಗ ಎದ್ದು ನಿಲ್ಲುವ ಕೆಚ್ಚನ್ನು ಕಲಿಸಬೇಕಿದೆ. ಬದುಕು ಎಂದರೆ ಕೇವಲ ಯಶಸ್ಸಲ್ಲ, ಅದು ಎಡವಿ ಬಿದ್ದಾಗ ಧೂಳು ಕೊಡವಿಕೊಂಡು ಮತ್ತೆ ನಡೆಯುವ ಅದ್ಭುತ ಕಲೆ ಎಂಬ ಅರಿವು ಮೂಡಿಸಬೇಕಿದೆ. ಪೋಷಕರು ತಮ್ಮ ಮಕ್ಕಳೊಂದಿಗೆ ಸ್ನೇಹಿತರಂತೆ ಬೆರೆತು ಅವರ ಮನಸ್ಸಿನ ಆಳದ ನೋವನ್ನು ಅರಿಯುವ ಕೆಲಸ ಮಾಡಬೇಕು. ಸಮಾಜ ಕೂಡ ಇಂತಹ ವಿಚಾರಗಳಲ್ಲಿ ಪಕ್ವತೆಯನ್ನು ಮೆರೆಯಬೇಕಿದೆ. ಒಂದು ಘಟನೆ ನಡೆದಾಗ ಅದಕ್ಕೆ ವೈಯಕ್ತಿಕ ಕಾರಣಗಳನ್ನು ಹುಡುಕಿ ಪರಿಹಾರ ಸೂಚಿಸುವ ಬದಲು, ಲಾಭ-ನಷ್ಟದ ಲೆಕ್ಕಾಚಾರ ಹಾಕುವುದು ನಾಗರಿಕ ಸಮಾಜಕ್ಕೆ ಶೋಭೆಯಲ್ಲ. ಯಾರನ್ನೂ ದೂಷಿಸುವುದರಿಂದ ಅಥವಾ ಯಾರ ಮೇಲೋ ಆಕ್ರೋಶ ಹೊರಹಾಕುವುದರಿಂದ ಕಳೆದುಹೋದ ಜೀವ ಮರಳಿ ಬರುವುದಿಲ್ಲ. ಬದಲಾಗಿ, ಇನ್ನು ಮುಂದೆ ಯಾವ ಜೀವವೂ ಹೀಗೆ ಬಲಿಯಾಗದಂತೆ ತಡೆಯುವ ಕರುಣಾಭರಿತ ವಾತಾವರಣವನ್ನು ನಾವು ನಿರ್ಮಿಸಬೇಕು. ಬದುಕುವ ಆಸೆ ಕಳೆದುಕೊಂಡವರಿಗೆ ಧರ್ಮದ ಭಾಷಣಕ್ಕಿಂತ, “ನಾನಿದ್ದೇನೆ ನಿನ್ನ ಜೊತೆ” ಎಂಬ ಪ್ರೀತಿಯ ಸಾಂತ್ವನ ಹೆಚ್ಚು ಶಕ್ತಿಯನ್ನು ನೀಡುತ್ತದೆ. ಬದುಕು ಮತ್ತು ಸಾವಿನ ನಡುವಿನ ಅಂತರ ಬಹಳ ಚಿಕ್ಕದು. ಆದರೆ ಇಂದು ಆ ಅಂತರವನ್ನು ಮಾನಸಿಕ ದೌರ್ಬಲ್ಯ ಒಂದು ಕಡೆ ತಗ್ಗಿಸುತ್ತಿದ್ದರೆ, ನಮ್ಮ ಕೈಯಲ್ಲಿರುವ ಮೊಬೈಲ್ ಫೋನ್‌ಗಳು ಮತ್ತು ಸಾಮಾಜಿಕ ಜಾಲತಾಣದ ಹುಚ್ಚು ಗೀಳು ಮತ್ತೊಂದು ಕಾರಣವಾಗಿದೆ. ಕೇವಲ ಪ್ರಚಾರಕ್ಕಾಗಿ ಅಥವಾ ಸೇಡಿಗಾಗಿ ಒಬ್ಬರ ವ್ಯಕ್ತಿತ್ವವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಾಜಿಗಿಟ್ಟು ಅವರ ಪ್ರಾಣ ತೆಗೆಯುವ ಮಟ್ಟಕ್ಕೆ ಈ ವಿಕೃತಿ ತಲುಪಿರುವುದು ಭಯಾನಕ. ಕೇರಳದಲ್ಲಿ ಇತ್ತೀಚೆಗೆ ನಡೆದ ಘಟನೆ ಇಡೀ ಸಮಾಜ ತಲೆತಗ್ಗಿಸುವಂತಿದೆ. ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಯುವತಿಯೊಬ್ಬಳು ಪುರುಷನೊಬ್ಬ ಅನುಚಿತವಾಗಿ ವರ್ತಿಸಿದನೆಂದು ಸುಳ್ಳು ಆರೋಪ ಹೊರಿಸಿ ವಿಡಿಯೋ ವೈರಲ್ ಮಾಡಿದ್ದಳು. ಆ ವಿಡಿಯೋ ಸೃಷ್ಟಿಸಿದ ಮುಜುಗರ ಮತ್ತು ಅಪಮಾನವನ್ನು ತಾಳಲಾರದೆ ಆ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡರು. ಪ್ರಾಥಮಿಕ ತನಿಖೆಯಲ್ಲಿ ಆತನದ್ದು ಯಾವುದೇ ತಪ್ಪಿಲ್ಲ ಎಂದು ಸಾಬೀತಾಗಿ ಇಂದು ಆ ಯುವತಿ ಕಂಬಿ ಎಣಿಸುತ್ತಿದ್ದಾಳೆ. ಆದರೆ ಕಳೆದುಹೋದ ಆ ಮುಗ್ಧ ಜೀವ ಮರಳಿ ಬರಲು ಸಾಧ್ಯವೇ? ಇದೇ ರೀತಿಯ ಘಟನೆಯೊಂದು ನಮ್ಮಲ್ಲೂ ನಡೆದಿದ್ದು, ಯುವಕನೊಬ್ಬನ ವಿರುದ್ಧ ವಿಡಿಯೋ ಹರಿಬಿಟ್ಟಿದ್ದ ಯುವತಿ ಈಗ ಸದ್ದಿಲ್ಲದೆ ತನ್ನ ಖಾತೆಯಿಂದ ಅದನ್ನು ಅಳಿಸಿ ಹಾಕಿದ್ದಾಳೆ. ಕೇವಲ ಒಂದು ‘ಕ್ಲಿಕ್’ ಮೂಲಕ ಇನ್ನೊಬ್ಬರ ಜೀವನವನ್ನು ನಾಶಮಾಡುವ ಈ ಪ್ರವೃತ್ತಿ ಅತ್ಯಂತ ಅಪಾಯಕಾರಿ. ಇನ್ನೊಂದೆಡೆ, ಸಮಾಜಕ್ಕೆ ಸೇವೆ ಸಲ್ಲಿಸುತ್ತಿದ್ದ ಪ್ರಸಿದ್ಧ ಪಿಕಳೆ ನರ್ಸಿಂಗ್ ಹೋಮ್‌ನ ಫಾರ್ಮಸಿ ಇನ್‌ಚಾರ್ಜ್ ರಾಜು ಅವರ ಸಾವು ನಮ್ಮನ್ನು ಬೆಚ್ಚಿಬೀಳಿಸಿದೆ. ಅವಧಿ ಮೀರಿದ ಔಷಧಿ ನೀಡಿದ್ದಾರೆಂದು ವ್ಯಕ್ತಿಯೊಬ್ಬ ಹರಿಬಿಟ್ಟ ವಿಡಿಯೋದಿಂದ ಮನನೊಂದು ಅವರು ಆತ್ಮಹತ್ಯೆಯಂತಹ ನಿರ್ಧಾರಕ್ಕೆ ಮುಂದಾದರು ಎನ್ನಲಾಗುತ್ತಿದೆ. ಅವಧಿ ಮೀರಿದ್ದ ಔಷಧಿ ನೀಡಿದ್ದನ್ನು ಅವರು ಒಪ್ಪಿಕೊಂಡು, ಅಂದೇ ಕ್ಷಮೆಯನ್ನೂ ಯಾಚಿಸಿದ್ದರು. ಆದರೆ, ವೈರಲ್‌ ಆಗಿದ್ದ ವಿಡಿಯೋ ಹರಿದಾಡುತ್ತಲೇ ಇತ್ತು. ಅಪಮಾನದ ಭೀತಿ ಮತ್ತು ಮಾನಸಿಕ ಕುಸಿತ ಒಬ್ಬ ವ್ಯಕ್ತಿಯನ್ನು ಸಾವಿನ ಅಂಚಿಗೆ ತಳ್ಳುತ್ತಿದೆ. ಪ್ರತಿಯೊಂದು ಘಟನೆಯನ್ನು ಧಾರ್ಮಿಕವಾಗಿ ಅಥವಾ ರಾಜಕೀಯವಾಗಿ ನೋಡಿ, ಸಾಮಾಜಿಕ ಜಾಲತಾಣಗಳಲ್ಲಿನ ಪ್ರಚಾರದ ಹಪಹಪಿಗೆ ಬಿದ್ದಿರುವ ಜನರಿಗೆ, ಆ ಸಾವುಗಳು ನೀಡುವ ನೋವಿನ ಅರಿವೇ ಇಲ್ಲದಂತಾಗಿದೆ. ಸಾವಿನ ಸುತ್ತ ಸಂಭ್ರಮಿಸುವ ಮತ್ತು ತಪ್ಪು-ಒಪ್ಪುಗಳ ವಿವೇಚನೆ ಇಲ್ಲದೆ ಸಾಮಾಜಿಕ ಜಾಲತಾಣಗಳಲ್ಲಿ ನ್ಯಾಯಾಧೀಶರಂತೆ ವರ್ತಿಸುವ ಈ ವಿಕೃತ ಮನಸ್ಥಿತಿಯನ್ನು ಸಮಾಜ ಬಿಡಬೇಕಿದೆ. ಆರೋಪ ಸಾಬೀತಾಗುವ ಮುನ್ನವೇ ಒಬ್ಬರ ವ್ಯಕ್ತಿತ್ವ ಹರಣ ಮಾಡುವುದು ಅಕ್ಷಮ್ಯ. ಪೊಲೀಸರ ಮೇಲೆ ಒತ್ತಡ ಹೇರುವುದು, ರಾಜಕೀಯ ಲಾಭಕ್ಕಾಗಿ ಸಾವನ್ನು ಬಳಸಿಕೊಳ್ಳುವುದು ಸಮಾಜದ ಸ್ವಾಸ್ಥ್ಯವನ್ನು ಹಾಳುಮಾಡುತ್ತಿದೆ. ನಮಗೆ ಇಂದು ಬೇಕಿರುವುದು ಪರಸ್ಪರ ಗೌರವಿಸುವ ಮತ್ತು ಬದುಕುವ ಹಕ್ಕನ್ನು ಎತ್ತಿಹಿಡಿಯುವ ಮಾನವೀಯ ಸಮಾಜ. ಇನ್ನೊಬ್ಬರ ಬದುಕನ್ನು ನೋಯಿಸುವ ಮುನ್ನ, ಆ ಸ್ಥಾನದಲ್ಲಿ ನಾವಿದ್ದರೆ ಎಂಬ ಕನಿಷ್ಠ ಪ್ರಜ್ಞೆ ಪ್ರತಿಯೊಬ್ಬರಲ್ಲೂ ಮೂಡಬೇಕಿದೆ. ಬದುಕು ಸುಂದರವಾಗಿದೆ, ಅದನ್ನು ಕ್ಷುಲ್ಲಕ ಕಾರಣಗಳಿಗಾಗಿ ಅಥವಾ ಸಾಮಾಜಿಕ ಜಾಲತಾಣದ ಅಬ್ಬರಕ್ಕೆ ಬಲಿಯಾಗದಂತೆ ಕಾಪಾಡಿಕೊಳ್ಳುವ ಜವಾಬ್ದಾರಿ ನಮ್ಮದಾಗಲಿ. ಲೇಖಕರು: ಮಾಧವ ಬಿ ನಾಯಕ ಅಧ್ಯಕ್ಷರು, ಜನಶಕ್ತಿ ವೇದಿಕೆ - [ಅನಂತ ಅಡಿ: ಅರ್ದ ಆಯಸ್ಸಿಗೆ ಆತ್ಮಹತ್ಯೆ!](https://mobiletime.in/2026/01/anantha-adi-suicide-at-half-life/): ಅತ್ಯಂತ ಉತ್ಸಾಹದಿಂದಲೇ ಬದುಕು ನಡೆಸುತ್ತಿದ್ದ ಗೋಕರ್ಣದ ಅನಂತ ಅಡಿ ದಿಢೀರ್ ಆಗಿ ದುಡುಕಿನ ನಿರ್ಧಾರ ಮಾಡಿದ್ದಾರೆ. ಅರ್ದ ಆಯಸ್ಸಿಗೆ ಅವರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಗೋಕರ್ಣದ ರಥಬೀದಿಯಲ್ಲಿ ಅನಂತ ರಾಮಕೃಷ್ಣ ಅಡಿ (56) ಅವರು ವಾಸವಾಗಿದ್ದರು. ಯಂಗ್ ಸ್ಟಾರ್ ಕ್ಲಬ್ ಸದಸ್ಯರಾಗಿದ್ದ ಅವರು ಸಂಸ್ಥೆ ಅಭಿವೃದ್ಧಿಗೆ ಶ್ರಮಿಸಿದ್ದರು. ಯಕ್ಷಪ್ರೇಮಿ ಆಗಿದ್ದ ಅವರು ಪ್ರತಿ ವರ್ಷ ವಿವಿಧ ಕಡೆ ಯಕ್ಷಗಾನ ಪ್ರದರ್ಶನ ಆಯೋಜಿಸುತ್ತಿದ್ದರು. ಸಾಹಿತ್ಯ, ಸಮ್ಮೇಳನಗಳಲ್ಲಿಯೂ ಅನಂತ ಅಡಿ ಅತ್ಯಂತ ಉತ್ಸಾಹದಿಂದ ತೊಡಗಿಕೊಳ್ಳುತ್ತಿದ್ದರು. ವಿವಿಧ ಬಗೆಯ ಸಾಂಸ್ಕೃತಿಕ ಕಾರ್ಯಕ್ರಮಗಳ ಆಯೋಜನೆಯಲ್ಲಿಯೂ ಮುಂಚೂಣಿಯಲ್ಲಿರುತ್ತಿದ್ದರು. ಅತ್ಯAತ ಸರಳ ಹಾಗೂ ಶಾಂತ ಸ್ವಭಾವದ ಅನಂತ ಅಡಿ ಅವರು ಶುಕ್ರವಾರ ಏಕಾಏಕಿ ದುಡುಕಿನ ನಿರ್ಧಾರ ಮಾಡಿದರು. ಮನೆಯಲ್ಲಿಯೇ ಅವರು ನೇಣಿಗೆ ಶರಣಾದರು. ಮಾನಸಿಕವಾಗಿ ಕೊರಗುತ್ತಿದ್ದ ಅವರು ಆ ಕೊರಗನ್ನು ಯಾರಲ್ಲಿಯೂ ಹೇಳಿಕೊಳ್ಳಲಾಗದೇ ಕೊನೆಯುಸಿರೆಳೆದರು. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು, ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. `ಆತ್ಮಹತ್ಯೆ ಅಪರಾಧ’ - [ಹಲ್ಲೆ-ಹೊಡೆದಾಟ!](https://mobiletime.in/2026/01/assault-and-battery/): ಶಿರಸಿ – ಬನವಾಸಿ ರಸ್ತೆಯಲ್ಲಿ ಮೂತ್ರ ವಿಸರ್ಜನೆಗೆ ನಿಂತಿದ್ದ ವ್ಯಕ್ತಿಯ ಮೇಲೆ ಮೂವರು ಹಲ್ಲೆ ಮಾಡಿದ್ದಾರೆ. ಅನೈತಿಕ ಸಂಬoಧ ಹಲ್ಲೆಗೆ ಕಾರಣ ಎನ್ನುವ ಮಾಹಿತಿಯಿದ್ದರೂ ಹಲ್ಲೆಗೆ ಕಾರಣ ಎಂಬ ಸುದ್ದಿ ಹರಿದಾಡುತ್ತಿದ್ದರೂ ಹೊಡೆದಾಟಕ್ಕೆ ಕಾರಣವಾದ ನೈಜ ರಹಸ್ಯ ಹೊರ ಬಿದ್ದಿಲ್ಲ! ಹುಬ್ಬಳ್ಳಿಯಲ್ಲಿ ಕಟ್ಟಡ ಕಾರ್ಮಿಕರಾಗಿ ಕೆಲಸ ಮಾಡುವ ಗೌಡಳ್ಳಿಯ ಗೌಂಡಿ ತನ್ವೀರಖಾನ್ ನಸರುಲ್ಲಾ ಖಾನ್ ಹಲ್ಲೆಗೆ ಒಳಗಾದ ವ್ಯಕ್ತಿ. ಶಿರಸಿ ಗಡಿಹಳ್ಳಿಯ ಮಹಮದ್ ಶರೀಫ್ ಅಬ್ದುಲ್ ಖುದ್ದುಸ್ ಶೇಖ್, ಅರೆಕೊಪ್ಪದ ಮಜೀರ್ ಅಬ್ದುಲ್ ಜಬ್ಬಾರ್ ಹಾಗೂ ಅರೆಕೊಪ್ಪದ ಖಯಂ ಮಹಮದ್ ಅಲಿ ಸೇರಿ ತನ್ವೀರ್ ಖಾನ್ ಅವರನ್ನು ಹಿಗ್ಗಾಮುಗ್ಗ ಥಳಿಸಿದ್ದಾರೆ. ಮಾಹಿತಿಗಳ ಪ್ರಕಾರ ತನ್ವೀಖಾನ್ ಅವರು ಮಹಮದ್ ಶೇಖ್ ಅವರ ಅಕ್ಕನ ಮಗಳ ಭೇಟಿಗೆ ಬರುತ್ತಿದ್ದು, ಅದನ್ನು ಆರೋಪಿತರು ವಿರೋಧಿಸಿದ್ದರು. ಎಚ್ಚರಿಕೆ ನೀಡಿದ್ದರೂ ಸಹ ಅವರ ಪ್ರೇಮ-ಪ್ರಣಯ ಕದ್ದುಮುಚ್ಚಿ ನಡೆಯುತ್ತಿತ್ತು. ಇದನ್ನು ಸಹಿಸದೇ ಮೂವರು ಸೇರಿ ತನ್ವಿರ್ ಖಾನ್ ಅವರನ್ನು ಥಳಿಸಿದ್ದಾರೆ. ಆದರೆ, ತಮ್ಮ ಮೇಲಾದ ದಾಳಿಯ ಬಗ್ಗೆ ತನ್ವೀರಖಾನ್ ನೀಡಿದ ದೂರಿನಲ್ಲಿ ಮತ್ತೊಂದು ಕಥೆ ಹೇಳಿದ್ದಾರೆ. ಗೌಡಳ್ಳಿಯಲ್ಲಿರುವ ತಂದೆ ನಸರುಲ್ಲಾ ಖಾನ್ ಅವರ ಭೇಟಿಯಾಗಿ ಮರಳುವಾಗ ಮೂವರು ದಾಳಿ ನಡೆಸಿದ ಬಗ್ಗೆ ಅವರು ದೂರಿದ್ದಾರೆ. `ಬನವಾಸಿಯ ಅರೆಕೊಪ್ಪ ಸರ್ವಿಸ್ ಸ್ಟೇಶನ್ ಬಳಿ ಬೈಕ್ ನಿಲ್ಲಿಸಿ ಮೂತ್ರ ವಿಸರ್ಜನೆ ಮಾಡುವಾಗ ಮೂವರು ತಡೆದರು. ಇಲ್ಲಿ ಏಕೆ ಮೂತ್ರ ವಿಸರ್ಜಿಸುವೆ? ಎಂದು ಪ್ರಶ್ನಿಸಿ ಹಲ್ಲೆ ಮಾಡಿದ್ದಾರೆ’ ಎಂದವರು ಪೊಲೀಸರ ಬಳಿ ಹೇಳಿದ್ದಾರೆ. ಜನವರಿ 2ರಂದು ಈ ಹೊಡೆದಾಟ ನಡೆದಿದ್ದು, ಅದೇ ದಿನ ತನ್ವೀರಖಾನ್ ಅದೇ ದಿನ ಪೊಲೀಸ್ ದೂರು ನೀಡಿದ್ದಾರೆ. ಅದಾದ ನಂತರ ನ್ಯಾಯಾಲಯದ ಮೊರೆ ಹೊಗಿ ಪ್ರಕರಣ ದಾಖಲಿಸುವಂತೆ ಪೊಲೀಸರಿಗೆ ಸೂಚನೆ ಕೊಡಿಸಿದ್ದಾರೆ. ಶಿರಸಿ ಗ್ರಾಮೀಣ ಠಾಣೆ ಪೊಲೀಸರು ಪ್ರಕರಣ ದಾಖಲಿಸಿದ್ದು, ತನಿಖೆ ಶುರು ಮಾಡಿದ್ದಾರೆ. - [ಆ ಅಪಘಾತ ಆಕಸ್ಮಿಕ ಅಲ್ಲವೇ ಅಲ್ಲ!](https://mobiletime.in/2026/01/that-accident-was-not-an-accident-at-all/): ಹೊನ್ನಾವರದ ಸೂಳೆಮುರ್ಕಿ ತಿರುವಿನಲ್ಲಿ ಸಿದ್ದಾಪುರದ ಸಹೋದರರು ಸುಟ್ಟು ಕರಕಲಾದ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ. ವಾರ್ಷಿಕ 5 ಲಕ್ಷ ರೂ ಆದಾಯವೇ ಇಲ್ಲದ ಹಸ್ಲರ್ ಸಹೋದರರು ವಾರ್ಷಿಕ 5 ಲಕ್ಷ ರೂ ಕಂತು ಪಾವತಿಸುವ ಪ್ರಯತ್ನ ಮಾಡಿದ ಮೊಬೈಲ್ ಮಿಡಿಯಾ ನೆಟ್ ವರ್ಕ ತನಿಖಾ ವರದಿ ಪ್ರಕಟಿಸಿದ್ದು, ಅನುಮಾನಾಸ್ಪದ ವ್ಯಕ್ತಿ ಇರುದ್ಧ ಇದೀಗ ಅವರ ಕುಟುಂಬದವರೇ ದೂರು ಸಲ್ಲಿಸಿದ್ದಾರೆ. ಸಿದ್ದಾಪುರದ ಕುಡಗುಂದ ಬಳಿಯ ಆಲವಳ್ಳಿಯಲ್ಲಿ ವೀರಭದ್ರ ಹಸ್ಲೇರ್ ಅವರು ವಾಸವಾಗಿದ್ದು, ಅವರ ಮೂವರು ಮಕ್ಕಳಲ್ಲಿ ಇಬ್ಬರು ಸಜೀವ ದಹನವಾಗಿದ್ದಾರೆ. ಮಂಜುನಾಥ ಹಸ್ಲೇರ್, ಚಂದ್ರಶೇಖರ ಹಸ್ಲೇರ್ ಅವರು ಮೀನು ಮಾರಾಟ ಮಾಡಿಕೊಂಡು ಬದುಕು ಕಟ್ಟಿಕೊಂಡಿದ್ದು ಜನವರಿ 7ರಂದು ಅವರು ಕಾರಿನೊಳಗೆ ಸುಟ್ಟು ಕರಕಲಾಗಿದ್ದಾರೆ. ಕಾರು ಸುಡುವ ಮುನ್ನ ಪ್ರಮೋದ ನಾಯ್ಕ ಅವರು ಕ್ಯಾನಿನಲ್ಲಿ ಪೆಟ್ರೋಲ್ ಖರೀದಿಸಿದ್ದು ಹಾಗೂ ಘಟನೆಯಲ್ಲಿ ಪ್ರಮೋದ ನಾಯ್ಕ ಸಹ ಗಾಯಗೊಂಡಿರುವ ವಿಷಯ ಹೊರ ಬಿದ್ದಿದೆ. ಸುಟ್ಟುಹೋದ ಸಹೋದರರ ತಮ್ಮ ಉಮೇಶ ಹಸ್ಲರ್ ಈ ವಿಷಯವನ್ನು ಪೊಲೀಸರ ಎದುರು ಬಹಿರಂಗಪಡಿಸಿದ್ದಾರೆ. ದುರ್ಘಟನೆ ನಡೆದ ನಂತರ ಪ್ರಮೋದ ನಾಯ್ಕ ಕಣ್ಮರೆಯಾಗಿದ್ದಾರೆ. ಪ್ರಮೋದ ನಾಯ್ಕ ಅವರ ಫೋನ್ ಸಹ ಸ್ವಿಚ್ ಆಫ್ ಆಗಿದೆ. ಸಹೋದರರು ಸುಟ್ಟು ಕರಕಲಾದ ನಂತರ ಉಮೇಶ ಹಸ್ಲರ್ ಅವರು ಪ್ರಮೋದ ನಾಯ್ಕ ಅವರ ಮನೆಗೆ ಭೇಟಿ ನೀಡಿದ್ದಾರೆ. ಆದರೆ, ಆ ವೇಳೆ ಪ್ರಮೋದ ನಾಯ್ಕ ಅಲ್ಲಿರಲಿಲ್ಲ. ಇದೇ ಅವಧಿಯಲ್ಲಿ ಪ್ರಮೋದ ನಾಯ್ಕ ಹಾಗೂ ಸಾವನಪ್ಪಿದ ಹಸ್ಲರ್ ಸಹೋದರರ ನಡುವೆ ಹಣಕಾಸಿನ ವ್ಯವಹಾರ ನಡೆಯುತ್ತಿರುವುದು ಉಮೇಶ ಹಸ್ಲರ್ ಅವರಿಗೆ ನೆನಪಾಗಿದೆ. ಜನವರಿ 6ರಂದು ಪ್ರಮೋದ ನಾಯ್ಕ ಕ್ಯಾನಿನಲ್ಲಿ ಪೆಟ್ರೋಲ್ ಖರೀದಿಸಿದ ಬಗ್ಗೆ ಆಲಳ್ಳಿಯ ಆನಂದ ರಮೇಶ ಹಸ್ಲರ್ ಅವರು ಮಾಹಿತಿ ನೀಡಿದ್ದಾರೆ. ಮತ್ತೊಬ್ಬನ ಜೊತೆ ಸೇರಿ ಮಾವಿನಗುಂಡಿಯಲ್ಲಿರುವ ಪೆಟ್ರೋಲ್ ಬಂಕಿನಿAದ ಪೆಟ್ರೋಲ್‌ಪಡೆದ ಬಗ್ಗೆಯೂ ಅವರು ತಿಳಿಸಿದ್ದಾರೆ. ಕಾರು ಸುಟ್ಟು 8 ದಿನ ಕಳೆದರೂ ಪ್ರಮೋದ ನಾಯ್ಕ ಮನೆಗೆ ಬಾರದ ಕಾರಣ ಉಮೇಶ ಹಸ್ಲರ್ ಅವರಿಗೆ ಅನುಮಾನ ಶುರುವಾಗಿದೆ. ಪ್ರಕರಣ ನಡೆದು 17 ದಿನ ಕಳೆದರೂ ಪ್ರಮೋದ ನಾಯ್ಕ ಬಾರದ ಕಾರಣ ಪ್ರಮೋದ ನಾಯ್ಕ ಅವರ ಬಗ್ಗೆ ಕುಟುಂಬದವರು ವಿಚಾರಿಸಿದ್ದಾರೆ. ಆಗ, ಕಾರ್ಗಾಲ್’ದಲ್ಲಿ ಪ್ರಮೋದ ನಾಯ್ಕ ಅವರನ್ನು ವ್ಯಕ್ತಿಯೊಬ್ಬರು ನೋಡಿದ್ದು, ಪ್ರಮೋದ ನಾಯ್ಕ ಕೈ-ಕಾಲು ಸುಟ್ಟಿರುವುದನ್ನು ಗಮನಿಸಿದ್ದಾರೆ. ಇದನ್ನು ಓದಿ: ಸುಟ್ಟ ಕಾರಿನ ಸುತ್ತ ಅನುಮಾನದ ಹುತ್ತ! ಈ ಎಲ್ಲಾ ಹಿನ್ನಲೆ ಉಮೇಶ ಹಸ್ಲರ್ ಅವರು ಹೊನ್ನಾವರ ಪೊಲೀಸ್ ಠಾಣೆಗೆ ಹೋಗಿದ್ದು, ಪ್ರಮೋದ ನಾಯ್ಕ ಮಾಡಿದ ಕೊಲೆಯ ಬಗ್ಗೆ ವಿವರಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿ, ಪ್ರಮೋದ ನಾಯ್ಕ ಅವರ ಶೋಧ ನಡೆಸಿದ್ದಾರೆ. ಶೀಘ್ರದಲ್ಲಿಯೇ ಪ್ರಮೋದ ನಾಯ್ಕ ಅವರ ಬಂಧನದ ವಿಷಯ ಹೊರಬರುವ ಸಾಧ್ಯತೆಗಳಿವೆ. - [ಸರ್ಕಾರಿ ಪ್ರಕಟಣೆ: ಸಮಾಜ ಸೇವಕರು ಬೇಕಾಗಿದ್ದಾರೆ!](https://mobiletime.in/2026/01/government-announcement-social-workers-wanted/): ಮಹಿಳೆಯರಿಗೆ ಒಂದೇ ಸೂರಿನ ಅಡಿ ಅನೇಕ ಬಗೆಯ ನೆರವು ನೀಡುವುದಕ್ಕಾಗಿ ಶಿರಸಿಯಲ್ಲಿ `ಸಖಿ ಕೇಂದ್ರ’ ತೆರೆಯಲು ಸರ್ಕಾರ ಸಮ್ಮತಿ ಸೂಚಿಸಿದೆ. ಈ ಸಖಿ ಕೇಂದ್ರದಲ್ಲಿ ಕೆಲಸ ಮಾಡುವುದಕ್ಕಾಗಿ ಅರ್ಹರ ಹುಡುಕಾಟವನ್ನು ನಡೆದಿದೆ. ಶಿರಸಿಯ ಸರ್ಕಾರಿ ಆಸ್ಪತ್ರೆಯಲ್ಲಿ ಸಖಿ ಕೇಂದ್ರ ಶುರುವಾಗಲಿದೆ. ಕಾನೂನು ನೆರವು, ವೈದ್ಯಕೀಯ ನೆರವು, ವಿವಿಧ ವಿಷಯಗಳ ಕುರಿತು ಅರಿವು ಸೇರಿ ಮಹಿಳೆಯರ ಮೇಲಿನ ದೌರ್ಜನ್ಯ ತಡೆಗಾಗಿ ಈ ಸಖಿ ಕೇಂದ್ರವನ್ನು ತೆರೆಯಲಾಗುತ್ತಿದೆ. ಸದ್ಯ ಕಾರವಾರದಲ್ಲಿ ಸಖಿ ಕೇಂದ್ರ ಕಾರ್ಯನಿರ್ವಹಿಸುತ್ತಿದ್ದು, ಶಿರಸಿಯಲ್ಲಿ ಇನ್ನೊಂದು ಕೇಂದ್ರ ತೆರೆಯುವ ಪ್ರಸ್ತಾವನೆಗೆ ಸರ್ಕಾರ ಒಪ್ಪಿಗೆ ನೀಡಿದೆ. ಈ ಕೇಂದ್ರದಲ್ಲಿ ಕಾರ್ಯ ನಿರ್ವಹಿಸಲು ಕೇಂದ್ರ ಆಡಳಿತಾಧಿಕಾರಿ, ಆಪ್ತ ಸಮಾಲೋಚಕರು, ಸಮಾಜ ಸೇವಾ ಕಾರ್ಯಕರ್ತರು ಹಾಗೂ ಸ್ವಚ್ಚತಾಕಾರರು ಹಾಗೂ ಭದ್ರತಾ ಸಿಬ್ಬಂದಿ ಅಗತ್ಯವಿದೆ. ಆಡಳಿತಾಧಿಕಾರಿಗಳಿಗೆ ಮಾಸಿಕ 40 ಸಾವಿರ ರೂ, ಆಪ್ತ ಸಮಾಲೋಚಕರಿಗೆ 30 ಸಾವಿರ ರೂ, ಸಮಾಜ ಸೇವಾ ಕಾರ್ಯಕರ್ತರಿಗೆ 25 ಸಾವಿರ ರೂ ವೇತನ ನಿಗದಿ ಮಾಡಲಾಗಿದೆ. ಸ್ವಚ್ಚತಾಕಾರರು ಹಾಗೂ ಭದ್ರತಾ ಸಿಬ್ಬಂದಿಗೆ ಮಾಸಿಕ 15 ಸಾವಿರ ರೂ ವೇತನ ಸಿಗಲಿದೆ. ಈ ಎಲ್ಲಾ ಹುದ್ದೆಗಳನ್ನು ನೇರ ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲಾಗುತ್ತದೆ. ಒಂದು ವರ್ಷದ ತಾತ್ಕಾಲಿಕ ಅವಧಿಗೆ ಈ ನೇಮಕಾತಿ ನಡೆಯಲಿದ್ದು, ನೌಕರರ ಕಾರ್ಯನಿರ್ವಹಣೆ ಸರಿಯಾಗಿದ್ದರೆ ಮಾತ್ರ ಮುಂದಿನ ಅವಧಿಗೆ ಸೇವೆ ಮುಂದುವರೆಸಲಾಗುತ್ತದೆ. 18ರಿಂದ 45 ವರ್ಷದೊಳಗಿನವರು ಅರ್ಜಿ ಸಲ್ಲಿಸಬಹುದಾಗಿದ್ದು, ಆಡಳಿತಾಧಿಕಾರಿ ಹುದ್ದೆಗೆ ಕಾನೂನು, ಮಾನವಶಾಸ್ತ, ಅಥವಾ ಮನೋವೈದ್ಯ ಶಾಸ್ತ ಅಧ್ಯಯನ ಮಾಡಿರುವವು ಅರ್ಜಿ ಸಲ್ಲಿಸಲು ಅರ್ಹರು. ಕನಿಷ್ಟ 5 ವರ್ಷ ಸೇವಾ ಅನುಭವವನ್ನು ಪರಿಗಣಿಸಲಾಗುತ್ತದೆ. ಆಪ್ತ ಸಮಾಲೋಚಕರ ಹುದ್ದೆಗೆ ಸಹ ಎಂ ಎಸ್ ಡಬ್ಲು ಹಾಗೂ ಇದೇ ವಿಷಯದಲ್ಲಿ 3 ವರ್ಷದ ಅನುಭವ ಇದ್ದವರ ಹುಡುಕಾಟ ನಡೆದಿದೆ. ಸಮಾಜ ಸೇವಾ ಕಾರ್ಯಕರ್ತರು ಪದವಿಧರರಾಗಬೇಕಿದ್ದು, 2 ವರ್ಷದ ಅನುಭವವ ಕಡ್ಡಾಯ. ಸ್ವಚ್ಚತಾಕಾರರು ಹಾಗೂ ಭದ್ರತಾ ಸಿಬ್ಬಂದಿ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಪಾಸಾಗಿರಬೇಕು ಎಂಬ ನಿಯಮವಿದೆ. ಕನ್ನಡ, ಇಂಗ್ಲಿಷ್ ಹಾಗೂ ಹಿಂದಿ ಭಾಷೆ ಬರುವ ಹಾಗೂ ವ್ಯವಹಾರ ಪರಿಜ್ಞಾನ ಹೊಂದಿರುವವರಿಗೆ ಉದ್ಯೋಗದಲ್ಲಿ ಆದ್ಯತೆ ಕೊಡಲಾಗುತ್ತದೆ. ಅರ್ಜಿ ಸಲ್ಲಿಸುವ ಮಹಿಳಾ ಅಭ್ಯರ್ಥಿ ಉತ್ತರ ಕನ್ನಡ ಜಿಲ್ಲೆಯವರಾಗಿದ್ದು, ಅರ್ಜಿ ಜೊತೆ ಅಗತ್ಯ ದಾಖಲೆ ಸಲ್ಲಿಸುವುದು ಕಡ್ಡಾಯ. 24*7 ಮಾದರಿಯಲ್ಲಿ ಸಖಿ ಕೇಂದ್ರ ಕಾರ್ಯ ನಿರ್ವಹಿಸಲಿದ್ದು, ಪಾಳಿ ಪ್ರಕಾರ ಕೆಲಸ ಮಾಡಲು ಸಿಬ್ಬಂದಿ ಸಿದ್ಧವಿರಬೇಕು. ಪದವಿಯಲ್ಲಿ ಶೇ 30, ಕಂಪ್ಯುಟರ್ ಪರೀಕ್ಷೆಯಲ್ಲಿ ಶೇ 20 ಹಾಗೂ ಸಂದರ್ಶನದ ಮೂಲಕ ಶೇ 50ರಷ್ಟು ಅಂಕದ ಮೂಲಕ ಅಭ್ಯರ್ಥಿಗಳ ಆಯ್ಕೆ ನಡೆಯಲಿದೆ. ಜನವರಿ 27ರಿಂದ ಫೆಬ್ರವರಿ 26ರವರೆಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಲ್ಲಿ ಅರ್ಜಿ ನಮೂನೆ ಸಿಗಲಿದೆ. ಉತ್ತರ ಕನ್ನಡ ಜಿಲ್ಲಾಧಿಕಾರಿ, ಪೊಲೀಸ್ ಅಧೀಕ್ಷಕರು, ಜಿಲ್ಲಾ ಪಂಚಾಯತ ಮುಖ್ಯಾಧಿಕಾರಿ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕರ ನೇತ್ರತ್ವದಲ್ಲಿ ಸಮಿತಿ ರಚನೆಯಾಗಿದ್ದು, ಅದೇ ಸಮಿತಿ ಅಭ್ಯರ್ಥಿಗಳ ಆಯ್ಕೆ ಮಾಡಲಿದೆ. ಕೆಲಸದ ಅನುಭವ ಹಾಗೂ ಸೇವಾ ಮನೋಭಾವಹೊಂದಿರುವವರಿಗೆ ಮೊದಲ ಆದ್ಯತೆ ಆಧಾರದಲ್ಲಿ ಕೆಲಸ ಕೊಡಲಾಗುತ್ತದೆ. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ಬೇಕೇ? ಹಾಗಾದರೆ, ಇಲ್ಲಿ ಫೋನ್ ಮಾಡಿ: 08382-200727 ಅಥವಾ 8618006406   - [ಪಾದಚಾರಿ ಮಾರ್ಗದಲ್ಲಿ ಹೊಂಡ: ಗಿಡ ನೆಟ್ಟು ಪ್ರತಿಭಟನೆ!](https://mobiletime.in/2026/01/potholes-on-the-sidewalk-protest-by-planting-trees/): ಯಲ್ಲಾಪುರ ಪಟ್ಟಣದಲ್ಲಿನ ಪಾದಚಾರಿ ಮಾರ್ಗದಲ್ಲಿ ಹೊಂಡ ಬಿದ್ದಿದ್ದು, ಆ ಹೊಂಡದಲ್ಲಿ ಜನ ಕಾಲು ಸಿಕ್ಕಿಸಿಕೊಳ್ಳುತ್ತಿದ್ದಾರೆ. ಈ ಬಗ್ಗೆ ದೂರಿದರೂ ಕ್ರಮ ಜರುಗಿಸದ ಕಾರಣ ಸಾರ್ವಜನಿಕ ಸೇವಾ ಕೇಂದ್ರದವರು ಶುಕ್ರವಾರ ಹೊಂಡದ ಒಳಗೆ ಗಿಡ ನೆಟ್ಟು ಪ್ರತಿಭಟಿಸಿದ್ದಾರೆ. ಯಲ್ಲಾಪುರ ಪಟ್ಟಣದ ಅನೇಕ ಕಡೆ ಪಾದಚಾರಿ ಮಾರ್ಗದಲ್ಲಿ ಹೊಂಡಗಳಾಗಿವೆ. ಮೊನ್ನೆ ಚರ್ಚ ಕಾಂಪ್ಲೇಕ್ಸ್ ಎದುರು ಶಾಲಾ ಬಾಲಕಿಯೊಬ್ಬರು ಆ ಹೊಂಡದಲ್ಲಿ ಕಾಲು ಸಿಕ್ಕಿಸಿಕೊಂಡಿದ್ದರು. ಅದಾದ ನಂತರ ಅಲ್ಲಿನ ಧೀರಜ ತಿನ್ನೇಕರ್ ಅವರು ಆ ಹೊಂಡಕ್ಕೆ ಕಲ್ಲು ಮುಚ್ಚಿದ್ದರು. ಆ ಕಲ್ಲು ಸಹ ಹೊಂಡದ ಆಳ ಸೇರಿದ್ದು, ಶುಕ್ರವಾರ ಮತ್ತೊಬ್ಬರು ಅದೇ ಹೊಂಡದಲ್ಲಿ ಬಿದ್ದು ಪೆಟ್ಟು ಮಾಡಿಕೊಂಡಿದ್ದಾರೆ. ತುರ್ತು ಕ್ರಮಕ್ಕೆ ಒತ್ತಾಯಿಸಿದರೂ ಕ್ರಮವಾಗದ ಕಾರಣ ಸಾರ್ವಜನಿಕ ಸೇವಾ ಕೇಂದ್ರದವರು ಈ ದಿನ ಹೊಂಡದಲ್ಲಿ ಗಿಡ ನಾಟಿ ಮಾಡಿ ಪ್ರತಿಭಟಿಸಿದರು. ವಿಷಯ ತಿಳಿದು ಅಲ್ಲಿಗೆ ಆಗಮಿಸಿದ ಪಟ್ಟಣ ಪಂಚಾಯತ ಸಿಬ್ಬಂದಿ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದರು. `ಪಟ್ಟಣದ ಅನೇಕ ಕಡೆ ಹೊಂಡ ಬಿದ್ದಿದೆ. ಸದ್ಯ ಯಲ್ಲಾಪುರ ಜಾತ್ರೆ ಆಗಮಿಸಲಿದ್ದು, ಸಾವಿರಾರು ಜನ ಅದೇ ಪಾದಚಾರಿ ಮಾರ್ಗದಿಂದ ಸಂಚರಿಸುತ್ತಾರೆ. ಜಾತ್ರೆಗೆ ಬರುವ ಭಕ್ತರು ಹೊಂಡಕ್ಕೆ ಬೀಳದ ಹಾಗೇ ತಪ್ಪಿಸಲು ತುರ್ತು ಕ್ರಮ ಜರುಗಿಸಬೇಕು’ ಎಂದು ಪ್ರತಿಭಟನಾಕಾರರು ಆಗ್ರಹಿಸಿದರು. ಧೀರಜ ತಿನ್ನೇಕರ್ ಅವರ ಜೊತೆ ಜಾನಿ ಫರ್ನಾಂಡಿಸ್ ಹಾಗೂ ಮಾರಿಯಾ ವಡ್ಡರ್ ಇದ್ದರು. - [ರಾಜ್ಯಪಾಲರ ನಡೆಗೆ ರೈತ ಸಂಘದ ಖಂಡನೆ](https://mobiletime.in/2026/01/farmers-association-condemns-governors-move/): `ಜoಟಿ ಸದನವನ್ನು ಉದ್ದೇಶಿಸಿ ಮಾತನಾಡಲು ನಿರಾಕರಿಸುವ ರಾಜ್ಯಪಾಲರ ನಡೆ ಅಸಂವಿಧಾನಿಕ’ ಎಂದು ಕರ್ನಾಟಕ ಪ್ರಾಂತ ರೈತ ಸಂಘ ಹೇಳಿದೆ ಈ ಬಗ್ಗೆ ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾಧ್ಯಕ್ಷ ಶಾಂತರಾಮ ನಾಯಕ ಅವರು ಪ್ರಕಟಣೆ ನೀಡಿದ್ದು, ರಾಜ್ಯಪಾಲರಾದ ತಾವರಚಂದ್ ಗೆಹ್ಲೋಟ್ ಸಂವಿಧಾನದ ವಿಧಿಯಂತೆ ನಡೆದುಕೊಂಡಿಲ್ಲ. ಜಂಟಿ ಸದನ ಅಧಿವೇಶನದಲ್ಲಿ ಸರಕಾರದ ಭಾಷಣ ಓದುವ ಬದಲು ತಮ್ಮದೇ ಮಾತನಾಡಿ ನಿರ್ಗಮಿಸಿರುವುದು ಪ್ರಜಾಪ್ರಭುತ್ವ ವಿರೋಧಿ ನಡೆಯಾಗಿದೆ’ ಎಂದು ಹೇಳಿದ್ದಾರೆ. `ರಾಜ್ಯಪಾಲರು ಕೇಂದ್ರ ಸರಕಾರದ ಮೂಲಕ ನೇಮಕಗೊಳ್ಳುವವರಾಗಿದ್ದು, ಅವರು ಚುನಾಯಿತ ಪ್ರತಿನಿಧಿಗಳಲ್ಲ. ರಾಜ್ಯ ಸರಕಾರದ ಅಥವಾ ಮಂತ್ರಿಮAಡಲ ಸಿದ್ಧಪಡಿಸಿದ ರಾಜ್ಯಪಾಲರ ಭಾಷಣವನ್ನು ರಾಜ್ಯ ಸರಕಾರವನ್ನು ಪ್ರತಿನಿಧಿಸಿ ಜಂಟಿ ಸದನದಲ್ಲಿ ಓದುವುದು ರಾಜ್ಯಪಾಲರ ಕರ್ತವ್ಯ. ಅದನ್ನು ತಮ್ಮ ಮನಬಂದAತೆ ತಿದ್ದುಪಡಿ ಮಾಡಿ ಭಾಷಣ ಮಾಡಲು ಅದು ಅವರ ವಯಕ್ತಿಕ ಭಾಷಣ ಅಲ್ಲ’ ಎಂದವರು ಹೇಳಿದ್ದಾರೆ. ಈಚೆಗೆ ಹಲವು ರಾಜ್ಯಗಳಲ್ಲಿ ರಾಜ್ಯಪಾಲರುಗಳು ತಾವು ರಾಜ್ಯ ಸರಕಾರವನ್ನು ಪ್ರತಿನಿಧಿಸುವವರೆಂಬುದನ್ನು ಮರೆತು ಕೇಂದ್ರ ಸರಕಾರದ ಪ್ರತಿನಿಧಿಯ ಹಾಗೇ ವರ್ತಿಸುತ್ತಿದ್ದಾರೆ. ಅದೇ ರಾಜ್ಯ ಸರ್ಕಾರದ ಜೊತೆ ನಿತ್ಯ ತಿಕ್ಕಾಟಕ್ಕೆ ಕಾರಣವಾಗಿದೆ. ಇದು ಪ್ರಜಾಪ್ರಭುತ್ವ ವಿರೋಧಿ ಕ್ರಮವಾಗಿದೆ’ ಎಂದು ಶಾಂತಾರಾಮ ನಾಯಕ ಅಭಿಪ್ರಾಯಪಟ್ಟಿದ್ದಾರೆ. `ದೇಶದ ಒಕ್ಕೂಟವಾದಿ ಸ್ವರೂಪವನ್ನು ಬಲಗೊಳಿಸುವ ದಿಶೆಯಲ್ಲಿ ಕೇಂದ್ರ ಹಾಗು ರಾಜ್ಯ ಸಂಬAಧಗಳನ್ನು ಬಲಗೊಳಿಸುವ ಬದಲು ನರೇಂದ್ರ ಮೋದಿ ರಾಜ್ಯ ಸರಕಾರಗಳ ಸಂವಿಧಾನಾತ್ಮಕ ಹಕ್ಕುಗಳನ್ನು ಮೊಟಕುಗೊಳಿಸುವಲ್ಲಿ ನಿರತವಾಗಿದ್ದಾರೆ. ಅದಕ್ಕಾಗಿ ರಾಜ್ಯಪಾಲರ ಕಛೇರಿ ಹಾಗು ಸ್ಥಾನವನ್ನು ದುರುಪಯೋಗ ಮಾಡುತ್ತಿದ್ದಾರೆ’ ಎಂದವರು ದೂರಿದ್ದಾರೆ. - [ಪೊಲೀಸರ ಹೆಸರಿನಲ್ಲಿ ಫೋನು: ದೂರು!](https://mobiletime.in/2026/01/phone-call-in-the-name-of-the-police-complaint/): ಕುಮಟಾದ ಹನುಮಂತ ಮುಕ್ರಿ ಅವರಿಗೆ ಪೊಲೀಸರ ಹೆಸರಿನಲ್ಲಿ ಪೋನ್ ಮಾಡಿ ಹಣ ಕೇಳಿದ ವಿಷಯ ಪೊಲೀಸ್ ಠಾಣೆಯ ಮೆಟ್ಟಿಲೇರಿದೆ. ಅಪರಿಚಿತ ವ್ಯಕ್ತಿ ಫೋನ್ ಮಾಡಿ ಬೆದರಿಕೆ ಒಡ್ಡಿದ ಬಗ್ಗೆ ಹನುಮಂತ ಮುಕ್ರಿ ಅವರು ದೂರು ನೀಡಿದ್ದಾರೆ. `ಜನವರಿ 22ರಂದು ರಾಮನಗರ ಪೊಲೀಸ್ ಠಾಣೆಯ ಪಿಸೈ ಎಂದು ಪರಿಚಯಿಸಿಕೊಂಡ ವ್ಯಕ್ತಿಯೊಬ್ಬರು ಫೋನ್ ಮಾಡಿ ಬೆದರಿಸಿದ್ದಾರೆ. ಹುಡುಗಿಯೊಬ್ಬರಿಗೆ ಕೆಟ್ಟದಾಗಿ ಮೆಸೆಜ್ ಮಾಡಿದ ವಿಷಯ ಹೇಳಿ 3 ಲಕ್ಷ ರೂಪಾಯಿ ದಂಡ ಕಟ್ಟಬೇಕು ಎಂದು ಸೂಚಿಸಿದ್ದಾರೆ. ಕೂಡಲೇ 25 ಸಾವಿರ ರೂ ಪಾವತಿ ಮಾಡದೇ ಇದ್ದರೆ ಬಂಧಿಸುವುದಾಗಿ ಹೆದರಿಸಿದ್ದಾರೆ’ ಎಂದು ಹನುಮಂತ ಮುಕ್ರಿ ಅವರು ಪೊಲೀಸರ ಮುಂದೆ ವಿವರಿಸಿದ್ದಾರೆ. ಜನಸಾಮಾನ್ಯರ ಸಮಾಜ ಕಲ್ಯಾಣ ಕೇಂದ್ರದ ನೆರವುಪಡೆದ ಹನುಮಂತ ಮುಕ್ರಿ ಸೈಬರ್ ಕ್ರೆöÊಂ ವಂಚಕರನ್ನು ಸೆದೆಬಡಿಯುವಂತೆ ಅರ್ಜಿ ಸಲ್ಲಿಸಿದ್ದಾರೆ. ಪೊಲೀಸ್ ಅಧೀಕ್ಷಕರಿಗೆ ಸಹ ಅವರು ತಮ್ಮ ದೂರು ಪತ್ರ ರವಾನಿಸಿದ್ದು, ಪೊಲೀಸ್ ಸಹಾಯಕ ಉಪನಿರೀಕ್ಷಕ ಸದಾನಂದ ನೆಗಳೂರು ಅಳಲು ಆಲಿಸಿದ್ದಾರೆ. ಅದಾದ ನಂತರ ಅವರು ಜನಸಾಮಾನ್ಯರ ಸಮಾಜ ಕಲ್ಯಾಣ ಕೇಂದ್ರದ ಅಧ್ಯಕ್ಷ ಆಗ್ನೇಲ್ ರೋಡಿಗ್ರಸ್ ಹಾಗೂ ಸುಧಾಕರ ನಾಯ್ಕ ಅವರಿಗೆ ಅವರಿಗೆ ವಂಚಕರನ್ನು ಬಂಧಿಸುವ ಭರವಸೆ ನೀಡಿದ್ದಾರೆ. - [ಸಹಕಾರಿ ಸಂಘಕ್ಕೆ ಪ್ರಶಸ್ತಿ ಗರಿ: ಮುಖ್ಯಮಂತ್ರಿ ಮನಗೆದ್ದ ಶಿರಸಿ ಸಾಧಕ](https://mobiletime.in/2026/01/award-for-co-operative-society-chief-minister-managedda-shirsi-sadhaka/): ಶಿರಸಿಯ ಪ್ರತಿಷ್ಠಿತ ಸಹಕಾರಿ ಸಂಸ್ಥೆಯಾಗಿರುವ ಶ್ರೀ ಭೂತೇಶ್ವರ ಪತ್ತಿನ ಸಹಕಾರಿ ಸಂಘಕ್ಕೆ `ಲೋಕಧ್ವನಿ ಹೆಮ್ಮೆಯ ಸಾಧಕ’ ಪ್ರಶಸ್ತಿ ಸಿಕ್ಕಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ. ಬೆಂಗಳೂರಿನಲ್ಲಿ ನಡೆದ ಅದ್ಧೂರಿ ಸಮಾರಂಭದಲ್ಲಿ ಸಂಘದ ಅಧ್ಯಕ್ಷ ಶ್ರೀಧರ ಮೊಗೇರ್ ಹಾಗೂ ಮುಖ್ಯ ಕಾರ್ಯನಿರ್ವಾಹಕ ವಿನಾಯಕ ಶೆಟ್ಟಿ ಅವರು ಈ ಪ್ರಶಸ್ತಿ ಸ್ವೀಕರಿಸಿದ್ದಾರೆ. ಸಂಘದ ಉಪಾಧ್ಯಕ್ಷ ಭಾಸ್ಕರ ಶೆಟ್ಟಿ ಹಾಗೂ ಸಹ ಕಾರ್ಯನಿರ್ವಾಹಕ ರಾಘವೇಂದ್ರ ಶೆಟ್ಟಿ ಪ್ರಶಸ್ತಿ ಸ್ವೀಕಾರದ ಸಂತಸ ಹಂಚಿಕೊAಡಿದ್ದಾರೆ. `ಸಹಕಾರಿ ಕ್ಷೇತ್ರದ ಆಶಯಗಳನ್ನು ಎತ್ತಿ ಹಿಡಿಯುವ ಉದ್ದೇಶದಿಂದ ವಸಂತ ಶೆಟ್ಟಿ ಅವರ ದೂರದೃಷ್ಟಿಯ ಫಲವಾಗಿ ಈ ಸಂಘವು ಸ್ಥಾಪನೆಯಾಗಿತ್ತು. ಆರಂಭದಿAದಲೂ ಸಾಮಾನ್ಯ ಜನರ ಆರ್ಥಿಕ ಸಬಲೀಕರಣಕ್ಕೆ ಒತ್ತು ನೀಡುತ್ತಾ ಬಂದಿರುವ ಈ ಸಂಸ್ಥೆ ಇದೀಗ ಶಿರಸಿ ಭಾಗದ ಪ್ರಮುಖ ಆರ್ಥಿಕ ಶಕ್ತಿಯಾಗಿ ಬೆಳೆದಿದೆ’ ಎಂದು ಸನ್ಮಾನಿತರು ವಿವರಿಸಿದರು. `ಬ್ಯಾಂಕಿಗ್ ಜೊತೆ ಸಾಮಾಜಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಿಗೂ ಸಂಸ್ಥೆ ಬೆಂಬಲ ನೀಡುತ್ತಿದೆ. ಈ ಹಿನ್ನಲೆ ಪ್ರಶಸ್ತಿ ಬಂದಿರುವುದಕ್ಕೆ ಖುಷಿಯಾಗಿದೆ’ ಎಂದವರು ಹೆಮ್ಮೆಯಿಂದ ಮಾತನಾಡಿದರು. ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಸಚಿವ ಮಂಕಾಳ ವೈದ್ಯ, ಶಾಸಕ ಶಿವರಾಮ್ ಹೆಬ್ಬಾರ್, ವಿಧಾನ ಪರಿಷತ್ ಸದಸ್ಯ ಶಾಂತರಾಮ ಸಿದ್ದಿ, ಜನಶಕ್ತಿ ವಿಶ್ವಸ್ಥ ಮಂಡಳಿ ಧರ್ಮದರ್ಶಿ ವಿಶ್ವೇಶ್ವರ ಭಟ್ ಇನ್ನಿತರರು ಈ ವೇಳೆ ಇದ್ದರು. - [ಕೈ ಮುಗಿದರೂ ಕ್ಷಮಿಸದ ಜನ: ಬಂದೂಕಿನ ಗುಂಡಿಗೆ ವೈದ್ಯ ಸಿಬ್ಬಂದಿ ದುರ್ಮರಣ!](https://mobiletime.in/2026/01/people-who-dont-forgive-even-when-their-hands-are-full-the-tragic-death-of-a-medical-staff-member/): ಸಾವಿರಾರು ಜನರ ಜೀವ ಕಾಪಾಡಿದ ಡಾ ಪಿಕಳೆ ಪರಿವಾರದ ವೈದ್ಯಕೀಯ ಸಿಬ್ಬಂದಿಯೊಬ್ಬರು ಅವಮಾನ ಸಹಿಸಲಾಗದೇ ಸಾವನಪ್ಪಿದ್ದಾರೆ. ಅಚಾತುರ್ಯದಿಂದ ಅವಧಿ ಮೀರಿದ ಔಷಧಿ ನಡೆದ ತಪ್ಪಿಗೆ ಕೈ ಮುಗಿದು ಕ್ಷಮೆ ಕೋರಿದರೂ ಕ್ಷಮಿಸದವರ ಕಾಟಕ್ಕೆ ಕಾರವಾರದ ಪಿಕಳೆ ನರ್ಸಿಂಗ್ ಹೋಂ ಸಿಬ್ಬಂದಿ ರಾಜೀವ ಪಿಕಳೆ ಅವರು ಆತ್ಮಹತ್ಯೆಗೆ ಶರಣಾಗಿದ್ದಾರೆ. ರೋಗಿಗಳ ಪಾಲಿನ ಆಪತ್ಪಾಂದವರಾಗಿರುವ ಕಾರವಾರದ ಡಾ ಪಿಕಳೆ ಪರಿವಾರದ ವಿರುದ್ಧ ಕೆಲ ದಿನದ ಹಿಂದೆ ವಿಡಿಯೋ ಒಂದು ವೈರಲ್ ಆಗಿತ್ತು. ಪಿಕಳೆ ಆಸ್ಪತ್ರೆಯಲ್ಲಿ ಅವಧಿ ಮೀರಿದ ಔಷಧಿ ನೀಡಿದ ಬಗ್ಗೆ ರೋಗಿ ಸಂಬoಧಿಕರೊಬ್ಬರು ಪ್ರಶ್ನಿಸಿದ್ದು, ಆ ವೇಳೆ ಆಸ್ಪತ್ರೆ ಸಿಬ್ಬಂದಿಯನ್ನು ನಿಂದಿಸುವ ವಿಡಿಯೋವನ್ನು ವೈರಲ್ ಮಾಡಿದ್ದರು. ತಮ್ಮಿಂದ ಆದ ತಪ್ಪಿಗೆ ಆಸ್ಪತ್ರೆ ಸಿಬ್ಬಂದಿ ವಿಷಾಧವ್ಯಕ್ತಪಡಿಸಿ, ಬದಲಿ ಔಷಧಿಯನ್ನು ಸಹ ನೀಡಿದ್ದರು. ಆದರೆ, ಆಸ್ಪತ್ರೆ ವಿರುದ್ಧ ವಿಡಿಯೋ ಹರಿಬಿಟ್ಟವರು ಸುಮ್ಮನಿರಲಿಲ್ಲ. ಸಾಕಷ್ಟು ಪ್ರಮಾಣದಲ್ಲಿ ವಿಡಿಯೋ ಹರಿದಾಡುತ್ತಿದ್ದ ಕಾರಣ ರಾಜೀವ ಪಿಕಳೆ ಅವರು ಅವಮಾನ ಅನುಭವಿಸಿದ್ದರು. ಬಡವರಿಗಾಗಿ ತಮ್ಮ ಜೀವನವನ್ನೇ ಮೀಸಲಾಗಿಟ್ಟಿರುವ ಡಾ ಪಿಕಳೆ ಪರಿವಾರದ ಬಗ್ಗೆ ಅನೇಕರು ಅನುಕಂಪವ್ಯಕ್ತಪಡಿಸಿದ್ದರು. ಪ್ರತಿಷ್ಠಿತ ವೈದ್ಯ ಕುಟುಂಬದ ವಿರುದ್ಧ ಅಪಪ್ರಚಾರ ಮಾಡದಂತೆ ಮನವಿ ಮಾಡಿದ್ದರು. `ಹಗಲು-ರಾತ್ರಿ ಎನ್ನದೇ ವೈದ್ಯಕೀಯ ಸೇವೆಯಲ್ಲಿರುವವರನ್ನು ಗೌರವಿಸೋಣ’ ಎಂಬ ಸಂದೇಶ ನೀಡಿದರೂ ಅನೇಕರಿಗೆ ಅದು ಅರ್ದವಾಗಲಿಲ್ಲ. ವೈರಲ್ ಆದ ವಿಡಿಯೋದಿಂದ ನಿತ್ಯವೂ ಹಿಂಸೆ ಅನುಭವಿಸುತ್ತಿದ್ದ ರಾಜೀವ ಪಿಕಳೆ ಅವರು ಶುಕ್ರವಾರ ದುಡುಕು ನಿರ್ಧಾರಕ್ಕೆ ಮುಂದಾದರು. ಡಬಲ್ ಬ್ಯಾರಲ್ ಗನ್’ನಿಂದ ತಮಗೆ ತಾವೇ ಗುಂಡು ಹಾರಿಸಿಕೊಂಡು ಅವರು ಶವವಾದರು. ಇದನ್ನೂ ಓದಿ: ಪಿಕಳೆ ಪರಿವಾವರದ ಹಿನ್ನಲೆ ಏನು? ಆ ದಿನ ನಡೆದಿದ್ದೇನು? ಅಂಕೋಲಾ ತಾಲೂಕಿನ ಅವರ್ಸಾದಲ್ಲಿರುವ ಮನೆಯಲ್ಲಿ ರಾಜೀವ ಪಿಕಳೆ ಅವರು ಆತ್ಮಹತ್ಯೆಗೆ ಶರಣಾದರು. ಸದ್ಯ ಪೊಲೀಸರು ಅವರ ಮನೆಗೆ ಭೇಟಿ ನೀಡಿದ್ದಾರೆ. ವಿಚಾರಣೆ ಮುಂದುವರೆದಿದೆ. - [ಕಾಡು ಪ್ರಾಣಿ ಕೊಂದವನಿಗೆ ಜೈಲೂಟ!](https://mobiletime.in/2026/01/jail-for-killing-wild-animal/): ವನ್ಯಜೀವಿಗಳ ತಾಣವಾಗಿರುವ ದಾಂಡೇಲಿಯಲ್ಲಿ ಕಾಡು ಪ್ರಾಣಿ ಭೇಟೆಯಾಡಿ ಅದರ ಮಾಂಸ ಸಾಗಿಸುತ್ತಿದ್ದ ರಾಜು ಪೋತದಾರ್ ಸಿಕ್ಕಿ ಬಿದ್ದಿದ್ದಾರೆ. ದಾಂಡೇಲಿ ಕೆರವಾಡದ ರಾಜು ಮಂಜು ಪೋತದಾರ ವನ್ಯಜೀವಿ ಹತ್ಯೆ ಪ್ರಕರಣದಲ್ಲಿ ಬಂಧಿಯಾಗಿದ್ದಾರೆ. ಪ್ರಾಣಿ ಕೊಂದ ರಾಜು ಪೋತದಾರ್ ಅದರ ಮಾಂಸವನ್ನು ಬೈಕಿನಲ್ಲಿ ಸಾಗಿಸುತ್ತಿದ್ದಾಗ ಅರಣ್ಯಾಧಿಕಾರಿಗಳು ಹಿಡಿದಿದ್ದಾರೆ. ಬರ್ಚಿ ರಸ್ತೆಯಲ್ಲಿ ತಪಾಸಣೆ ವೇಳೆ ಆರೋಪಿ ಸಿಕ್ಕಿಬಿದ್ದಿದ್ದು, ಬೈಕನ್ನು ಅಧಿಕಾರಿಗಳು ಜಪ್ತು ಮಾಡಿದ್ದಾರೆ. ರಾಜು ಪೋತದಾರ್ ಸಂಶಯಾಸ್ಪದವಾಗಿ ಸಂಚರಿಸುತ್ತಿದ್ದಾಗ ಅಧಿಕಾರಿಗಳು ಬೈಕಿಗೆ ಅಡ್ಡಲಾಗಿ ಕೈ ಮಾಡಿದ್ದಾರೆ. ಆಗ, ಆರೋಪಿ ತಪ್ಪಿಸಿಕೊಳ್ಳುವ ಪ್ರಯತ್ನ ಮಾಡಿದ್ದು, ಸಿಬ್ಬಂದಿ ಒಗ್ಗಟ್ಟಿನಿಂದ ಕಾರ್ಯಾಚರಣೆ ನಡೆಸಿದ್ದಾರೆ. ಮಾರಾಟ ಮಾಡುವ ಉದ್ದೇಶದಿಂದ ಮಾಂಸ ಸಾಗಾಟ ಮಾಡುತ್ತಿರುವುದು ವಿಚಾರಣೆ ವೇಳೆ ಗೊತ್ತಾಗಿದೆ. - [ಬೈಕಿನಿಂದ ಬಿದ್ದ ವಾಚ್‌ಮೆನ್: ಸಾವು!](https://mobiletime.in/2026/01/watchmen-fall-from-bike-death/): ಭಟ್ಕಳ ಅರಣ್ಯ ಇಲಾಖೆಯಲ್ಲಿ ವಾಚ್ ಮೆನ್ ಆಗಿದ್ದ ಶಂಕರ ನಾಯ್ಕ ಅವರು ಬೈಕ್ ಅಪಘಾತದಲ್ಲಿ ಸಾವನಪ್ಪಿದ್ದಾರೆ. ಮುಟ್ಟಳ್ಳಿಯ ಕಚ್ಚಾ ರಸ್ತೆಯ ಮೇಲೆ ಸಂಚರಿಸುವಾಗ ಬೈಕಿನಿಂದ ಬಿದ್ದು ಅವರು ಪ್ರಾಣ ಬಿಟ್ಟಿದ್ದಾರೆ. ಭಟ್ಕಳದ ಬೇದ್ರಿಕೇರಿ ಬೆಳಕೆಯಲ್ಲಿ ಶಂಕರ ಮಾಸ್ತಪ್ಪ ನಾಯ್ಕ (56) ಅವರು ವಾಸವಾಗಿದ್ದರು. ಅರಣ್ಯ ಇಲಾಖೆಯ ಕಾವಲುಗಾರರಾಗಿದ್ದ ಅವರು ಕಾಡಿನಲ್ಲಿ ಗಸ್ತು ತಿರುಗುತ್ತಿದ್ದರು. ಗುರುವಾರ ಮುಟ್ಟಳ್ಳಿಯ ಕಿರಿದಾದ ರಸ್ತೆಯಲ್ಲಿ ಅವರು ಬೈಕ್ ಓಡಿಸಿದ್ದರು. ಇಳಿಜಾರಿನಲ್ಲಿ ಅವರ ಬೈಕು ನಿಯಂತ್ರಣ ತಪ್ಪಿದ್ದು, ಅದರಿಂದ ನೆಲಕ್ಕೆ ಬಿದ್ದು ಗಾಯಗೊಂಡರು. ಗoಭೀರ ಪ್ರಮಾಣದಲ್ಲಿ ಪೆಟ್ಟು ಮಾಡಿಕೊಂಡಿದ್ದ ಶಂಕರ ನಾಯ್ಕ ಅವರನ್ನು ಭಟ್ಕಳ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಯಿತು. ಅದಾದ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಕುಂದಾಪುರಕ್ಕೆ ಕರೆದೊಯ್ಯುವ ಪ್ರಯತ್ನ ನಡೆಯಿತು. ಆದರೆ, ದಾರಿ ಮಧ್ಯೆಯೇ ಅವರು ತಮ್ಮ ಉಸಿರು ನಿಲ್ಲಿಸಿದರು. ಅರಣ್ಯ ಸಿಬ್ಬಂದಿ ಅವರ ಅಂತಿಮ ದರ್ಶನಪಡೆದರು. - [ದೇಶದ್ರೋಹಿ ಸಯ್ಯದ್'ಗೆ ಜೈಲು ಪಕ್ಕಾ!](https://mobiletime.in/2026/01/jail-the-traitor-syed/): ಭಯೋತ್ಪಾದನಾ ಚಟುವಟಿಕೆಯಲ್ಲಿ ಭಾಗಿಯಾಗಿದ್ದ ಉತ್ತರ ಕನ್ನಡದ ವ್ಯಕ್ತಿಗೆ ನ್ಯಾಯಾಲಯ ಕಠಿಣ ಶಿಕ್ಷೆ ವಿಧಿಸಿದೆ. ಪಾಕಿಸ್ತಾನ ಮೂಲದ `ಲಷ್ಕರ್ ಎ ತಯಾಬಾ’ ಎಂಬ ಉಗ್ರ ಸಂಘಟನೆಗೆ ಸೇರುವಂತೆ ಯುವಕರನ್ನು ಪ್ರೇರೇಪಿಸುತ್ತಿದ್ದ ಸಯ್ಯದ್ ಎಂ ಇದ್ರಿಸ್ ಮೇಲಿನ ಆರೋಪ ಸಾಭೀತಾಗಿದೆ. ಈ ಹಿನ್ನಲೆ ರಾಷ್ಟ್ರೀಯ ತನಿಖಾ ದಳ (ಎನ್ ಐ ಎ) ನಡೆಸಿದ ಕಾರ್ಯಾಚರಣೆಯಲ್ಲಿ ಸಿಕ್ಕಿಬಿದ್ದ ದೇಶದ್ರೋಹಿಗೆ ನ್ಯಾಯಾಲಯ 10 ವರ್ಷಗಳ ಕಠಿಣ ಶಿಕ್ಷೆ ವಿಧಿಸಿದೆ. ಜೊತೆಗೆ ಕಾನೂನುಬಾಹಿರ ಚಟುವಟಿಕೆಯಲ್ಲಿ ಭಾಗಿಯಾಗಿದ್ದ ಸಯ್ಯದ್ ಎಂ ಇದ್ರಿಸ್’ಗೆ ನ್ಯಾಯಾಲಯ 70 ಸಾವಿರ ರೂ ದಂಡವನ್ನು ವಿಧಿಸಿದೆ. ಕೊಲ್ಕತ್ತದ ವಿಶೇಷ ನ್ಯಾಯಾಲಯ ಈ ಆದೇಶ ಹೊರಡಿಸಿದೆ. ಪಶ್ಚಿಮ ಬಂಗಾಳ ಪೊಲೀಸರು ಸಯ್ಯದ್ ಎಂ ಇದ್ರಿಸ್ ವಿರುದ್ಧ ಪ್ರಕರಣ ದಾಖಲಿಸಿದ್ದರು. ಆ ಪ್ರಕರಣ ಎನ್ ಐ ಎ ತಂಡಕ್ಕೆ ವರ್ಗಾವಣೆ ಆಗಿದ್ದು, 2020ರಲ್ಲಿ ತನಿಖಾದಳದವರು ಆರೋಪಿಯನ್ನು ಬಂಧಿಸಿದ್ದರು. ಪಶ್ಚಿಮ ಬಂಗಾಳದ ಯುವಕರಿಗೆ ಆಮೀಷ ಒಡ್ಡಿ ಅವರನ್ನು ಲಷ್ಕರ್ ಸಂಘಟನೆಗೆ ಸೇರಿಸಿದ ಆರೋಪ ಸಯ್ಯದ್ ಇದ್ರಿಸ್ ವಿರುದ್ಧವಿದ್ದು, ಅದಕ್ಕೆ ಪೂರಕ ದಾಖಲೆಗಳು ಸಹ ಸಿಕ್ಕಿದ್ದವು. ಆ ಎಲ್ಲಾ ದಾಖಲೆಗಳನ್ನು ತನಿಖಾಧಿಕಾರಿಗಳು ನ್ಯಾಯಾಲಯದ ಮುಂದೆ ಹಾಜರು ಮಾಡಿದ್ದರು. ನ್ಯಾಯಾಲಯ ಇದೀಗ ಆರೋಪಿಗೆ 10 ವರ್ಷ ಜೈಲು ಹಾಗೂ 70 ಸಾವಿರ ರೂ ದಂಡ ವಿಧಿಸಿದೆ. ಈ ಪ್ರಕರಣದಲ್ಲಿ ಇನ್ನಿಬ್ಬರು ಪಾಕಿಸ್ತಾನದಲ್ಲಿ ತಲೆಮರೆಸಿಕೊಂಡಿದ್ದು, ಅವರ ವಿರುದ್ಧ ರಾಷ್ಟ್ರೀಯ ತನಿಖಾ ದಳ ರೆಡ್ ಹಾಗೂ ಬ್ಲೂ ಕಾರ್ನ ನೋಟಿಸ್ ಜಾರಿ ಮಾಡಿದೆ.     - [ಉದ್ಯೋಗ ಆಮೀಷ: ಶಿಕ್ಷಕನ ಖಾತೆಗೆ ಕನ್ನ!](https://mobiletime.in/2026/01/job-lure-teachers-account-is-stolen/): ಭಟ್ಕಳದಲ್ಲಿ ವಾಸವಾಗಿರುವ ಅಂಕೋಲಾದ ಶಿಕ್ಷಕರೊಬ್ಬರಿಗೆ ಮೋಸವಾಗಿದೆ. ಒಳ್ಳೆಯ ಉದ್ಯೋಗ ಕೊಡಿಸುವುದಾಗಿ ನಂಬಿಸಿದ ವಂಚಕರು ಹಣಪಡೆದು ಮೋಸ ಮಾಡಿದ್ದಾರೆ. ಅಂಕೋಲಾ ಅಂಕೋಲಾ ಹುಲಿದೇವರವಾಡದ ಮದಿಯಾ ಮಹಬೂಬ್ ಸಾಬ್ ಭೇಪಾರಿ ಅವರು ಸದ್ಯ ಭಟ್ಕಳದ ಹನೀಪಾಬಾದಿನ ಶಮ್ಸ ಸ್ಕೂಲ್ ಹತ್ತಿರ ವಾಸವಾಗಿದ್ದಾರೆ. 21 ವರ್ಷದ ಅವರು ಸದ್ಯ ಶಿಕ್ಷಕರಾಗಿದ್ದು, ದೊಡ್ಡ ದೊಡ್ಡ ಉದ್ಯೋಗಕ್ಕಾಗಿ ಹುಡುಕಾಟ ನಡೆಸಿದ್ದಾರೆ. ಮದಿಯಾ ಸಾಬ್ ಅವರ ಉದ್ಯೋಗ ಹುಡುಕಾಟದ ಬಗ್ಗೆ ಅರಿತ ವಂಚಕರು ಅವರಿಗೆ ಒಳ್ಳೆಯ ಉದ್ಯೋಗದ ಆಮೀಷ ಒಡ್ಡಿ ಹಣಪಡೆದಿದ್ದಾರೆ. ಆದರೆ, ಉದ್ಯೋಗ ನೀಡದೇ ವಂಚಿಸಿದ್ದಾರೆ. ಮದಿಯಾ ಸಾಬ್ ಅವರಿಗೆ ಆನ್‌ಲೈನ್ ಮೂಲಕ ಅಪರಿಚಿತ ಉದ್ಯೋಗದಾತರು ಪರಿಚಯವಾಗಿದ್ದಾರೆ. ಒಳ್ಳೆಯ ಸಂಬಳ ಕೊಡುವ ಉದ್ಯೋಗ ಕೊಡಿಸುವುದಾಗಿ ನಂಬಿಸಿದ್ದಾರೆ. ಇದಕ್ಕಾಗಿ ಕೊಂಚ ಹಣ ಖರ್ಚು ಮಾಡಬೇಕು ಎಂದು ತಿಳಿಸಿ ಫೋನ್ ಪೇ ಸ್ಕಾನರ್ ಕಳುಹಿಸಿದ್ದಾರೆ. ಅದರ ಮೂಲಕ ಮದಿಯಾ ಸಾಬ್ ಅವರಿಂದ 36492ರೂ ವಸೂಲಿ ಮಾಡಿದ್ದಾರೆ. ನಂತರ ಹಣಪಡೆದವರು ಕೈಗೆ ಸಿಕ್ಕಿಲ್ಲ. ಅವರು ಯಾರು? ಎಂದು ಸಹ ಮದಿಯಾ ಸಾಬ್ ಅವರಿಗೆ ಗೊತ್ತಾಗಿಲ್ಲ. ಹೀಗಾಗಿ ಮೋಸ ಮಾಡಿದವರ ವಿರುದ್ಧ ಸಿಡಿದೆದ್ದ ಮದಿಯಾ ಸಾಬ್ ಅವರು ಪೊಲೀಸರಿಗೆ ದೂರಿದ್ದಾರೆ. ಭಟ್ಕಳ ಗ್ರಾಮೀಣ ಠಾಣೆ ಪೊಲೀಸರು ಪ್ರಕರಣ ದಾಖಲಿಸಿದ್ದು, ತನಿಖೆ ಶುರು ಮಾಡಿದ್ದಾರೆ. `ಅಪರಿಚಿತರ ಬಗ್ಗೆ ಎಚ್ಚರಿಕೆವಹಿಸಿ’ - [ಗುಂಪು ಘರ್ಷಣೆ: ಕಲ್ಲು-ಕತ್ತಿಯಿಂದ ಹೊಡೆದಾಟ!](https://mobiletime.in/2026/01/group-clash-stone-and-sword-fight/): ಕುಮಟಾದ ಹೊಳೆಗದ್ದೆ ಟೋಲ್ ಬಳಿ ಗಲಾಟೆ ನಡೆದಿದೆ. ಈ ಗಲಾಟೆ ಹೊಡೆದಾಟದ ಸ್ವರೂಪಪಡೆದಿದ್ದು, ಎರಡು ಗುಂಪಿನವರು ಕತ್ತಿ-ಕಲ್ಲು ತೆಗೆದುಕೊಂಡು ಮಾರಾಮಾರಿ ನಡೆಸಿದ್ದಾರೆ. ಈ ಹೊಡೆದಾಟದಲ್ಲಿ ಹೊಳೆಗದ್ದೆಯ ಅಜಯ ಮುಕ್ರಿ ಅವರಿಗೆ ಕತ್ತಿ ತಾಗಿದೆ. ಅವರ ಎದುರಾಳಿ ಬಣದ ರಮೇಶ ಮುಕ್ರಿ ಅವರ ತಲೆಗೆ ಕಲ್ಲು ತಾಗಿದೆ. ಹೊಳಗದ್ದೆ ಟೋಲ್ ಬಳಿಯಿರುವ ಸುಬ್ಬಣ್ಣ ಉಡದಂಗಿ ಅವರ ಚಹಾ ಅಂಗಡಿಯಲ್ಲಿ ಹೊಡೆದಾಟ ನಡೆದಿದೆ. ಚಹಾ ಸೇವನೆಗೆ ಬಂದಿದ್ದ ಎರಡು ಗುಂಪುಗಳು ಅಲ್ಲಿ ದೊಡ್ಡ ಪ್ರಮಾಣದಲ್ಲಿ ಕಚ್ಚಾಟ ನಡೆಸಿದ್ದು, ಎರಡು ಕಡೆಯವರು ಇದೀಗ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಹೊಳಗದ್ದೆ ಅಜಯ ಅನಂತ ಮುಕ್ರಿ ಅವರ ದೂರಿನ ಪ್ರಕಾರ ಗೌಥಮ ಶಿವು ಮುಕ್ರಿ, ಚಂದ್ರಹಾಸ ಮಾಸ್ತಿ ಮುಕ್ರಿ, ದಿಲೀಪ ನಾಗರಾಜ ಮುಕ್ರಿ, ರಮೇಶ ನಾಗು ಮುಕ್ರಿ, ಉಮೇಶ ಗಣಪತಿ ಮುಕ್ರಿ ಹಾಗೂ ಕೃತಿಕ ನಾಗರಾಜ ಮುಕ್ರಿ ಸೇರಿ ಆಕ್ರಮಣ ಮಾಡಿದ್ದಾರೆ. ಆ ಆಕ್ರಮಣದಿಂದ ಅಜಯ ಅನಂತ ಮುಕ್ರಿ ಅವರ ಜೊತೆ ಮಂಜುನಾಥ ಗಣಪತಿ ಮುಕ್ರಿ, ಮನೋಜ ಮಹಾಬಲೇಶ್ವರ ಮುಕ್ರಿ ಹಾಗೂ ರಿತಿಕ್ ಮಾರು ಮುಕ್ರಿ ಅವರಿಗೆ ನೋವಾಗಿದೆ. ಕರ್ಕಿ ಕೋಣಕಾರಿನ ಆಟೋ ಚಾಲಕ ಚಂದ್ರಹಾಸ್ ಮುಕ್ರಿ ಅವರ ದೂರಿನ ಪ್ರಕಾರ, ಗೌಥಮ ಮುಕ್ರಿ ರಮೇಶ ಮುಕ್ರಿ, ದಿಲೀಪ ಮುಕ್ರಿ ಉಮೇಶ ಮುಕ್ರಿ ಹಾಗೂ ಕೃತಿಕ ಜೊತೆ ಇದ್ದಾಗ ಎದುರಾಳಿಗಳು ಕಲ್ಲು ತೂರಾಟ ಮಾಡಿದ್ದಾರೆ. ಜನವರಿ 18ರ ರಾತ್ರಿ 11.15ಕ್ಕೆ ಹೊಳೆಗದ್ದೆ ಟೋಲ್ ಗೇಟ್ ಹತ್ತಿರ ಈ ಹೊಡೆದಾಟ ನಡೆದಿದೆ. ಹಳೆ ದ್ವೇಷ ಈ ಹೊಡೆದಾಟಕ್ಕೆ ಕಾರಣವಾಗಿದೆ. ಈ ಗಲಾಟೆಯಲ್ಲಿ ಕೃತಿಕ ಮುಕ್ರಿ ಅವರು ತಮ್ಮ ಕೈಯಲ್ಲಿದ್ದ ಕತ್ತಿ ಬೀಸಿದ್ದು, ಆ ಕತ್ತಿ ಅಜಯ ಮುಕ್ರಿ ಅವರ ಕೈಗೆ ತಾಗಿದೆ. ಈ ವೇಳೆ ಮನೋಜ ಮುಕ್ರಿ ಅವರು ಹೊಡೆದ ಕಲ್ಲು ರಮೇಶ ಮುಕ್ರಿ ತಲೆಗೆ ತಾಗಿದೆ. ಎರಡು ಕಡೆಯವರ ದೂರು ಸ್ವೀಕರಿಸಿದ ಕುಮಟಾ ಪೊಲೀಸರು ವಿಚಾರಣೆ ಶುರು ಮಾಡಿದ್ದಾರೆ. - [ಸಾಲಗಾರನನ್ನು ಬೆದರಿಸಿದಿ ಸೈಬರ್ ಕ್ರೈಂ!](https://mobiletime.in/2026/01/cybercrime-by-threatening-a-borrower/): ಕುಮಟಾದ ಹನುಮಂತ ಮುಕ್ರಿ ಅವರಿಗೆ ಪೊಲೀಸರ ಹೆಸರಿನಲ್ಲಿ ವಂಚಕರು ಫೋನ್ ಮಾಡಿದ್ದಾರೆ. 25 ಸಾವಿರ ರೂ ಫೋನ್ ಪೇ ಮಾಡದೇ ಇದ್ದರೆ 3 ಲಕ್ಷ ರೂ ದಂಡ ವಿಧಿಸುವುದಾಗಿ ಬೆದರಿಸಿದ್ದಾರೆ. ಜನವರಿ 22ರಂದು ಹಳಕಾರದ ಹನುಮಂತ ಮುಕ್ರಿ ಅವರಿಗೆ ಫೋನ್ ಬಂದಿದೆ. `ರಾಮನಗರ ಪೊಲೀಸ್ ಠಾಣೆಯ ಪಿಸೈ ಜಾದವ್’ ಎಂದು ಪರಿಚಯಿಸಿಕೊಂಡ ವಂಚಕರು `ಹುಡುಗಿಗೆ ಫೋಟೋ ಶೇರ್ ಮಾಡಿದ ಬಗ್ಗೆ ದೂರು ಬಂದಿದೆ. ಇದಕ್ಕೆ 3 ಲಕ್ಷ ರೂ ದಂಡ ಪಾವತಿಸಬೇಕಿದ್ದು, ತಕ್ಷಣ 25 ಸಾವಿರ ರೂ ಫೋನ್ ಪೇ ಮಾಡದಿದ್ದರೆ ಜೈಲಿಗೆ ಹಾಕುತ್ತೇವೆ’ ಎಂದು ಬೆದರಿಸಿದ್ದಾರೆ. `ಹೆಂಡತಿ-ಮಕ್ಕಳನ್ನು ಸಹ ಪೊಲೀಸ್ ಠಾಣೆಗೆ ಕರೆಯಿಸುತ್ತೇವೆ’ ಎಂದು ಸಹ ವಂಚಕರು ಹೆದರಿಸಿದ್ದಾರೆ. ಈ ಫೋನ್ ಕರೆಯಿಂದ ಕಂಗಾಲಾದ ಹನುಮಂತ ಮುಕ್ರಿ ಅವರು ಜನಸಾಮಾನ್ಯರ ಸಮಾಜ ಕಲ್ಯಾಣ ಕೇಂದ್ರಕ್ಕೆ ಓಡಿ ಬಂದಿದ್ದಾರೆ. ಅಲ್ಲಿದ್ದ ಆಗ್ನೇಲ್ ರೋಡ್ರಿಗಸ್ ಅವರು ಫೋನ್ ಬಂದ ಸಂಖ್ಯೆಯನ್ನು ಬ್ಲಾಕ್ ಮಾಡಿದ್ದಾರೆ. ಅದಾದ ನಂತರ ವಂಚನೆಯ ಫೋನ್ ಕರೆಯ ಬಗ್ಗೆ ಹನುಮಂತ ಮುಕ್ರಿ ಅವರಿಗೆ ಅರಿವು ಮೂಡಿಸಿದ್ದಾರೆ. ಸಾಲಪಡೆಯುವುದಕ್ಕಾಗಿ ಹನುಮಂತ ಮುಕ್ರಿ ಅವರು ಅರ್ಜಿ ಹಾಕಿದ್ದು, ಅವರಿಗೆ 3 ಲಕ್ಷ ರೂ ಮಂಜೂರಿ ಆಗಿದೆ. ಅದೇ ಮಾಹಿತಿ ಸೋರಿಕೆಯಾಗಿ ಸೈಬರ್ ಕಳ್ಳರಿಗೆ ಸಿಕ್ಕ ಅನುಮಾನವ್ಯಕ್ತವಾಗಿದೆ. `ಸೈಬರ್ ಅಪರಾಧದ ಬಗ್ಗೆ ಜನ ಹೆದರದೇ 1930ಗೆ ಫೋನ್ ಮಾಡಿ’ ಎಂದು ಜನಸಾಮಾನ್ಯರ ಸಮಾಜ ಕಲ್ಯಾಣ ಕೇಂದ್ರದವರು ಕೋರಿದ್ದಾರೆ. - [ಮುಷ್ಠಿಯುದ್ಧ: ಕಾದಾಟಕ್ಕೆ ನಲುಗಿದ ಕಲಾಲ್!](https://mobiletime.in/2026/01/fist-fight-kalal-gets-into-a-fight/): ಕಾರವಾರದ ಸೌರವ್ ಕಲಾಲ್ ಹಾಗೂ ಪ್ರಶಾಂತ ರಾಯ್ಕರ್ ಅವರ ನಡುವೆ ಕಾದಾಟ ನಡೆದಿದೆ. ಈ ಜಗಳದಲ್ಲಿ ಪ್ರಶಾಂತ ರಾಯ್ಕರ್ ಅವರು ಸೌರವ್ ಕಲಾಲ್ ಅವರ ಮುಖಕ್ಕೆ ಮುಷ್ಟಿಯಿಂದ ಹೊಡೆದಿದ್ದಾರೆ. ಪರಿಣಾಮ ಸೌರವ್ ಕಲಾಲ್ ಅವರ ಮೂಗಿನಿಂದ ರಕ್ತ ಸುರಿದಿದೆ. ಕಾರವಾರದ ದೋಬಿಗಾಟ್ ರಸ್ತೆಯ ಲಿಂಗನಾಯ್ಕವಾಡದಲ್ಲಿ ಸೌರವ್ ಅಶೋಕ ಕಲಾಲ್ ಅವರು ವಾಸವಾಗಿದ್ದಾರೆ. ಸೌರವ್ ಕಲಾಲ್ ಅವರು ಸಣ್ಣಪುಟ್ಟ ವ್ಯಾಪಾರ ಮಾಡಿಕೊಂಡು ಬದುಕು ಕಟ್ಟಿಕೊಂಡಿದ್ದಾರೆ. ಸಮೀಪದ ಸೋನಾರವಾಡದಲ್ಲಿ ಪ್ರಶಾಂತ ರಾಯ್ಕರ್ ಅವರು ವಾಸವಾಗಿದ್ದಾರೆ. ಪ್ರಶಾಂತ ರಾಯ್ಕರ್ ಅವರು ಪೆಂಟಿAಗ್ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದಾರೆ. 22 ವರ್ಷದ ಪ್ರಶಾಂತ ರಾಯ್ಕರ್ ಅವರು ವಯಸ್ಸಿನಲ್ಲಿ ಕಿರಿಯರಾಗಿದ್ದರೂ 25 ವರ್ಷದ ಸೌರವ್ ಕಲಾಲ್ ಅವರ ಮೇಲೆ ಕೈ ಮಾಡಿದ್ದಾರೆ. ಜನವರಿ 18ರ ರಾತ್ರಿ 10.30ಕ್ಕೆ ಸೌರವ್ ಕಲಾಲ್ ಅವರು ದೈವಜ್ಞ ಹಾಲ್ ಬಳಿ ಹೋಗುವಾಗ ಅಲ್ಲಿಯೇ ನಿಂತಿದ್ದ ಪ್ರಶಾಂತ ರಾಯ್ಕರ್ ಅವರು ಸೌರವ್ ಕಲಾಲ್ ಅವರನ್ನು ಕರೆದಿದ್ದಾರೆ. ಇದಕ್ಕೆ ಸೌರವ್ ಕಲಾಲ್ ಪ್ರತಿಕ್ರಿಯಿಸದ ಕಾರಣ `ಕುರಿ ಕಾಯುವ ಕಲಾಲ್’ ಎಂದು ನಿಂದಿಸಿದ್ದಾರೆ. ಆಗಲೂ ಮಾತನಾಡಿದ ಕಾರಣ `50 ರೂಪಾಯಿಗೆ ಹೆಣ್ಮಕ್ಕಳ ಚಡ್ಡಿ ಮಾರುವವನೇ’ ಎಂದು ಕೂಗಿ ಹೇಳಿದ್ದಾರೆ. ಇದರಿಂದ ಸೌರವ್ ಕಲಾಲ್ ಅವರು ಅವಮಾನ ಅನುಭವಿಸಿ, ಮೌನವಾಗಿದ್ದಾರೆ. ರೇಗಿಸಿದರೂ ಮೌನವಾಗಿರುವ ಸೌರವ್ ಕಲಾಲ್ ಅವರನ್ನು ನೋಡಿ ಪ್ರಶಾಂತ ರಾಯ್ಕರ್ ಅವರ ಸಿಟ್ಟು ಹೆಚ್ಚಾಗಿದೆ. ಆಗ, ದೋಬಿಘಾಟ್ ಕಡೆ ಹೋಗುತ್ತಿದ್ದ ಸೌರವ್ ಕಲಾಲ್ ಅವರನ್ನು ಪ್ರಶಾಂತ ರಾಯ್ಕರ್ ಅಡ್ಡಗಟ್ಟಿದ್ದು ಮುಖದ ಮೇಲೆ ಮುಷ್ಟಿಯಿಂದ ಹೊಡೆದಿದ್ದಾರೆ. ಆ ಏಟಿಗೆ ಸೌರವ್ ಕಲಾಲ್ ಅವರ ಮೂಗಿಗೆ ಗಾಯವಾಗಿದೆ. ರಕ್ತವೂ ಸುರಿದಿದೆ. `ನನಗೆ ಹೊಡೆಯಲು ನಿನ್ನ ಅಪ್ಪನನ್ನು ಕರೆಯುಸುತ್ತೀಯಾ?’ ಎಂದು ಪ್ರಶಾಂತ ರಾಯ್ಕರ್ ಈ ವೇಳೆ ಪ್ರಶ್ನಿಸಿದ್ದು, `ಮತ್ತೊಮ್ಮೆ ಸಿಕ್ಕಾಗ ಸುಮ್ಮನೆ ಬಿಡುವುದಿಲ್ಲ’ ಎಂದು ಬೆದರಿಸಿ ಅಲ್ಲಿಂದ ಪರಾರಿಯಾಗಿದ್ದಾರೆ. ಅನಗತ್ಯವಾಗಿ ತಮ್ಮ ಮೇಲೆ ಹಲ್ಲೆ ನಡೆದ ಬಗ್ಗೆ ಸೌರವ್ ಕಲಾಲ್ ಪೊಲೀಸರ ಮೊರೆ ಹೋಗಿದ್ದಾರೆ. ಕಾರವಾರ ನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿದ್ದು, ವಿಚಾರಣೆ ಶುರು ಮಾಡಿದ್ದಾರೆ. - [ಹೆಗ್ಗಾರ್ ಸೊಸೈಟಿ: ಸೂಪರ್ ಮಾರ್ಟಿಗೆ ನುಗ್ಗಿದ್ದ ಕಿರಾತಕ!](https://mobiletime.in/2026/01/heggar-society-a-thief-broke-into-super-mart/): ಯಲ್ಲಾಪುರ – ಅಂಕೋಲಾ ಗಡಿಯಲ್ಲಿರುವ ಹೆಗ್ಗಾರಿನಲ್ಲಿ ಕಳ್ಳತನ ನಡೆದಿದೆ. ಕಲ್ಪತರು ವಿವಿದೋದ್ದೇಶ ಸಂಘದ ಸೂಪರ್ ಮಾರ್ಟಿಗೆ ಕಳ್ಳರು ನುಗ್ಗಿದ್ದಾರೆ. ಅಂಕೋಲಾ ತಾಲೂಕಿನ ಹೆಗ್ಗಾರಿನಲ್ಲಿರುವ ಕಲ್ಪತರು ವಿವಿದೋದ್ದೇಶ ಸಂಘದ ವಿವಿಧ ರೀತಿಯ ಸೇವೆ ನೀಡುತ್ತಿದೆ. ಸಹಕಾರಿ ವ್ಯವಸ್ಥೆಯ ಮುಖ್ಯ ಆಧಾರವನ್ನಾಗಿಸಿಕೊಂಡ ಈ ಸೊಸೈಟಿ ಮೂರು ಶಾಖೆಯನ್ನು ಹೊಂದಿದೆ. ಕೃಷಿ ಉಪಕರಣಗಳ ಮಾರಾಟ, ಬ್ಯಾಂಕಿoಗ್ ಹಾಗೂ ಸೂಪರ್ ಮಾರ್ಟ ನಡೆಸುತ್ತಿದೆ. ಜನರಿಗೆ ಅನುಕೂಲವಾಗುವ ವಿವಿಧ ಸೇವಾ ಕಾರ್ಯಗಳ ಜೊತೆ ಸರ್ಕಾರಿ ವಿಮಾ ಯೋಜನೆ ಹಾಗೂ ಪಡಿತರ ವಿತರಣೆ ಮಾಡುವ ಕೆಲಸವನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಿದೆ. ಅಡಿಕೆ ಸೇರಿ ವಿವಿಧ ಬೆಳೆಗಳಿಗೆ ಬರುವ ರೋಗದ ಬಗ್ಗೆ ಮಾಹಿತಿ ನೀಡುವ ಕಾರ್ಯಾಗಾರ, ಕೃಷಿ ಸಾಧಕರಿಗೆ ಸನ್ಮಾನ ಸೇರಿ ವಿವಿಧ ಬಗೆಯ ಚಟುವಟಿಕೆಗಳಿಂದ ಸೊಸೈಟಿ ಪ್ರಸಿದ್ಧಿಪಡೆದಿದೆ. ಹೀಗಿರುವಾಗ ಆ ಸೊಸೈಟಿ ಮೇಲೆ ಕಳ್ಳರ ಕಣ್ಣು ಬಿದ್ದಿದ್ದು, ಸೂಪರ್ ಮಾರ್ಟಿಗೆ ನುಗ್ಗಿ ಕನ್ನ ಹಾಕಿದ್ದಾರೆ. ಜನವರಿ 17ರ ಸಂಜೆ 6 ಗಂಟೆಗೆ ಸೊಸೈಟಿ ಸಿಬ್ಬಂದಿ ಸೂಪರ್ ಮಾರ್ಟ ಬಂದ್ ಮಾಡಿ ಮನೆಗೆ ಹೋಗಿದ್ದು, ಅದಾದ ನಂತರ ಕಳ್ಳರು ತಮ್ಮ ಕೈ ಚಳಕ ಪ್ರದರ್ಶಿಸಿದ್ದಾರೆ. ಹೆಗ್ಗಾರಿನಲ್ಲಿರುವ ಸೂಪರ್ ಮಾರ್ಟಿನ ಹಿಂದಿನ ಬಾಗಿಲಿಗೆ ರಂದ್ರ ಕೊರೆದ ಕಳ್ಳರು ಆ ರಂದ್ರದ ಮೂಲಕ ಬಾಗಿಲಿನ ದಂಡಿ ತೆಗೆದಿದ್ದಾರೆ. ಅದಾದ ಮೇಲೆ ಸುಲಭವಾಗಿ ಸೂಪರ್ ಮಾರ್ಟಿನ ಒಳಗೆ ನುಗ್ಗಿ ಅಲ್ಲಿದ್ದ ಡ್ರಾವರನ್ನು ಜಾಲಾಡಿದ್ದಾರೆ. ಅಲ್ಲಿದ್ದ 8 ಸಾವಿರ ರೂ ಎಗರಿಸಿ ಪರಾರಿ ಆಗಿದ್ದಾರೆ. ಜನವರಿ 19ರ ಬೆಳಗ್ಗೆ ಸಿಬ್ಬಂದಿ ಸೊಸೈಟಿ ಸೂಪರ್ ಮಾರ್ಟಿನ ಬಾಗಿಲು ತೆರೆದಾಗ ಕಳ್ಳತನ ನಡೆದಿರುವುದು ಗೊತ್ತಾಗಿದೆ. ಅಂಕೋಲಾದ ಕನಕನಳ್ಳಿಯಲ್ಲಿ ವಾಸವಾಗಿರುವ ಸೊಸೈಟಿಯ ಮುಖ್ಯಾಧಿಕಾರಿ ರಾಮಚಂದ್ರ ಮಹಾಬಲೇಶ್ವರ ಭಟ್ಟ ಅವರು ಈ ಬಗ್ಗೆ ಪೊಲೀಸರಿಗೆ ದೂರಿದ್ದಾರೆ. ಅನತಿ ದೂರದ ಇನ್ನೊಂದು ಸೊಸೈಟಿ ಹಾಗೂ ಶಾಲೆಯ ಮೇಲೆಯೂ ಕಳ್ಳರು ಕಣ್ಣು ಹಾಕಿದ್ದು, ಅಲ್ಲಿಯೂ ಸಣ್ಣಪುಟ್ಟ ಕಳ್ಳತನ ನಡೆದಿದೆ. `ಕಳ್ಳತನ ತಡೆಗೆ ಸಿಸಿ ಕ್ಯಾಮರಾ ಸಹಕಾರಿ’ - [ಕಾರಿನ ಮೇಲೆ ಕಡ್ಡಿಗೀರಿದ ಕಿಡಿಗೇಡಿ!](https://mobiletime.in/2026/01/the-bastard-who-got-stuck-on-the-car/): ಗೋಕರ್ಣ ಕಡಲತೀರ ಬಳಿ ನಿಲ್ಲಿಸಿದ್ದ ಕಾರಿನ ಮೇಲೆ ಕಿಡಿಗೇಡಿಗಳು ಕಡ್ಡಿ ಗೀರಿದ್ದಾರೆ. ಇದರಿಂದ ವಾಹನ ಮಾಲಕರು ಗಲಾಟೆ ಮಾಡಿದ್ದಾರೆ. ಚಿಕ್ಕಮಂಗಳೂರಿನ ಕುಟುಂಬವೊoದು ಬುಧವಾರ ಗೋಕರ್ಣ ಪ್ರವಾಸಕ್ಕೆ ಬಂದಿತ್ತು. ಆ ಕುಟುಂಬದವರು ತಮ್ಮ ಕಾರನ್ನು ಪಾರ್ಕಿಂಗ್ ಸ್ಥಳದಲ್ಲಿ ನಿಲ್ಲಿಸಿ ಶುಲ್ಕ ಪಾವತಿ ಮಾಡಿದ್ದರು. ಕಡಲ ತೀರದ ಸೊಬಗು ಸವಿದು ಮರಳಿದ ಕುಟುಂಬಕ್ಕೆ ಆಘಾತ ಕಾದಿತ್ತು. ಅವರ ಕಾರಿನ ಮೇಲೆ ಕಿಡಿಗೇಡಿಗಳು ಗೀಚಿದ್ದರು. ಇದರಿಂದ `30 ಸಾವಿರ ರೂ ಹಾನಿ ಆಗಿದ್ದು, ಅದನ್ನು ಕಾರು ನಿಲುಗಡೆಗೆ ಶುಲ್ಕಪಡೆದವರು ಭರಿಸಿಕೊಡಬೇಕು’ ಎಂದು ಪ್ರವಾಸಿಗರು ಗಲಾಟೆ ಮಾಡಿದರು. `ಲಕ್ಷಾಂತರ ರೂ ವೆಚ್ಚ ಮಾಡಿ ಕಾರು ಖರೀದಿಸುತ್ತೇವೆ. ಅದನ್ನು ಸುರಕ್ಷಿತವಾಗಿ ನಿಲ್ಲಿಸಲು ಶುಲ್ಕವನ್ನು ಕೊಡುತ್ತೇವೆ. ಅದಾಗಿಯೂ, ಶುಲ್ಕಪಡೆದವರು ಗಮನಹರಿಸಿಲ್ಲ’ ಎಂದು ಅಸಮಧಾನವ್ಯಕ್ತಪಡಿಸಿದರು. ಪೊಲೀಸರು ಸ್ಥಳಕ್ಕೆ ಆಗಮಿಸಿ ಸಮಾಧಾನ ಮಾಡಿದ್ದು, ಶುಲ್ಕ ವಸೂಲಿ ಮಾಡಿದ ಟೆಂಡರದಾರರಿAದ ಅಲ್ಪ ಪ್ರಮಾಣದ ಪರಿಹಾರ ಕೊಡಿಸಿದರು. ಅದಾದ ನಂತರ ಪಕ್ಕದಲ್ಲಿದ್ದ ಬೇರೆ ರಾಜ್ಯದ ಕಾರಿಗೂ ಕಿಡಿಗೇಡಿಗಳು ಕಡ್ಡಿ ತಾಗಿಸಿರುವುದು ಗಮನಕ್ಕೆ ಬಂದಿದ್ದು, ಆ ಕಾರಿನಲ್ಲಿದ್ದವರು ಸಹ ಗಲಾಟೆ ಶುರು ಮಾಡಿದರು. ಅವರು ಪರಿಹಾರಕ್ಕಾಗಿ ಪಟ್ಟುಹಿಡಿದಿದ್ದು, ಕೊನೆಗೆ ರಾಜಿ ಸೂತ್ರಕ್ಕೆ ಒಪ್ಪಿದರು. - [ಹೊಟ್ಟೆನೋವಿನಿಂದ ಸಾವನಪ್ಪಿದ ಮಾನಸಿಕ ಅಸ್ವಸ್ಥ](https://mobiletime.in/2026/01/mentally-ill-person-who-died-of-stomach-ache/): ಶಿರಸಿಯಲ್ಲಿ ವಾಸವಾಗಿದ್ದ ಕುಮಟಾದ ಪುರಂದರ ಪಟಗಾರ ಅವರು ಹೊಟ್ಟೆ ನೋವಿನಿಂದ ಸಾವನಪ್ಪಿದ್ದಾರೆ. ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿದರೂ ಅವರನ್ನು ಬದುಕಿಸಲು ಸಾಧ್ಯವಾಗಿಲ್ಲ. ಕುಮಟಾ ಮಾಸೂರು ಬಳಿಯ ಹೊಸಕೇರಿಯ ಪುರಂದರ ಹೊನ್ನಪ್ಪ ಪಟಗಾರ ಅವರು ಸದ್ಯ ಶಿರಸಿಯ ಸೋಂದಾ ಬಳಿಯ ಮೊಗದ್ದೆಯಲ್ಲಿ ವಾಸವಾಗಿದ್ದರು. 10 ವರ್ಷಗಳ ಹಿಂದೆ ಮಾನಸಿಕ ಕಾಯಿಲೆಗೆ ಒಳಗಾಗಿದ್ದ ಅವರನ್ನು ಹೊನ್ನಾವರ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಒಳಪಡಿಸಲಾಗಿತ್ತು. ಅಲ್ಲಿನ ವೈದ್ಯರು ನೀಡಿದ ಮೂರು ಮಾತ್ರೆಗಳನ್ನು ಅವರು ಸೇವಿಸುತ್ತಿದ್ದರು. ಹೀಗಿರುವಾಗ ಜನವರಿ 6ರ ಸಂಜೆ ಪುರಂದರ ಪಟಗಾರ ಅವರಿಗೆ ಹೊಟ್ಟೆನೋವು ಕಾಣಿಸಿತು. ಶಿರಸಿ ಸರ್ಕಾರಿ ಆಸ್ಪತ್ರೆಗೆ ಅವರನ್ನು ಕರೆತಂದು ಚಿಕಿತ್ಸೆ ಕೊಡಿಸಲಾಯಿತು. ಆದರೆ, ಅವರ ನೋವು ಮಾತ್ರ ಕಡಿಮೆ ಆಗಲಿಲ್ಲ. ಹೀಗಾಗಿ ಕುಟುಂಬದವರು ಪುರಂದರ ಪಟಗಾರ ಅವರನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ಕರೆದೊಯ್ದರು. ಅಲ್ಲಿನ ಚಿಕಿತ್ಸೆಯೂ ಪ್ರಯೋಜನಕ್ಕೆ ಬರಲಿಲ್ಲ. ಜನವರಿ 21ರಂದು ಅವರು ಸಾವನಪ್ಪಿದರು. ಪರಂದರ ಪಟಗಾರ ಅವರ ಪತ್ನಿ ಸರೋಜಾ ಪಟಗಾರ ಅವರು ಈ ಬಗ್ಗೆ ಮಾಹಿತಿ ನೀಡಿದರು.   - [ಮೊಬೈಲ್ ಮರಳಿಸಿದ ಕಳ್ಳ ಬಂಗಾರ ಕೊಡಲಿಲ್ಲ!](https://mobiletime.in/2026/01/the-thief-who-returned-the-mobile-phone-did-not-give-the-gold/): ಕಾರವಾರದ ಶಿಕ್ಷಕಿ ಶಿಲ್ಪಾ ಮಾಳ್ಸೇಕರ್ ಅವರ ಮೊಬೈಲ್ ಹಾಗೂ ಬಂಗಾರ ಕಳ್ಳತನವಾಗಿದ್ದು, ಮೊಬೈಲ್ ಕದ್ದ ಅನೀಲ ಕಾಂಬಳೆ ಅದನ್ನು ಹಿಂತಿರುಗಿಸಿದ್ದಾರೆ. ಆದರೆ, ಬಂಗಾರದ ಒಡವೆಯನ್ನು ಮಾತ್ರ ಕೊಡಲು ಒಪ್ಪುತ್ತಿಲ್ಲ! ಕಾರವಾರದ ದೋಬಿಘಾಟ್ ರಸ್ತೆಯ ರೋಹನ ಅಪಾರ್ಟಮೆಂಟಿನಲ್ಲಿ ಶಿಲ್ಪಾ ಸುರೇಶ ಮಾಳ್ಸೇಕರ್ ಅವರು ವಾಸವಾಗಿದ್ದಾರೆ. 2025ರ ನವೆಂಬರ್ 2ರಂದು ಅವರು ತುಳಸಿ ಹಬ್ಬದ ಅಂಗವಾಗಿ ಮಾರುಕಟ್ಟೆಗೆ ಹೋದಾಗ ತಮ್ಮ ಬ್ಯಾಗ್ ಕಳೆದುಕೊಂಡಿದ್ದರು. ಹಬ್ಬದ ಅಂಗವಾಗಿ ಹೂವು ಖರೀದಿಸಿ ಅವರು ಕೋಡಿಭಾಗ ಮಾರ್ಗ ಹೊರಟಿದ್ದು, ನಡುವೆ ಸ್ಕೂಟರ್ ನಿಲ್ಲಿಸಿದಾಗ ಸ್ಕೂಟರ್ ಮೇಲಿರಿಸಿದ್ದ ಬ್ಯಾಗನ್ನು ಕಳ್ಳರು ದೋಚಿದ್ದರು. ಹಾಲು ತರಲು ಹೋಗಿದ್ದ ಶಿಲ್ಪಾ ಅವರು ಮರಳಿ ಬಂದಾಗ ಬ್ಯಾಗ್ ಕಾಣಿಸಿರಲಿಲ್ಲ. ಆ ಬ್ಯಾಗಿನಲ್ಲಿ ಮೊಬೈಲ್ ಜೊತೆ 2.10 ಲಕ್ಷ ರೂ ಮೌಲ್ಯದ ಬಂಗಾರದ ಆಭರಣಗಳಿದ್ದು, ಮೊಬೈಲ್ ಕಾಣೆಯಾದ ಬಗ್ಗೆ ಅವರು ಆನ್‌ಲೈನ್ ಮೂಲಕ ದೂರು ನೀಡಿದ್ದರು. ಅದಾದ ನಂತರ ಶಿಲ್ಪಾ ಅವರ ಮೊಬೈಲ್ ಅನೀಲ ಕಾಂಬಳೆ ಅವರ ಬಳಿಯಿರುವುದನ್ನು ಪೊಲೀಸರು ಪತ್ತೆ ಮಾಡಿದ್ದರು. ಡಿಸೆಂಬರ್ 29ರಂದು ಅನೀಲ ಕಾಂಬಳೆ ಆ ಮೊಬೈಲನ್ನು ಮರಳಿಸಿದ್ದರು. ಆದರೆ, ಬಂಗಾರವನ್ನು ಮಾತ್ರ ಕೊಟ್ಟಿರಲಿಲ್ಲ. ಎಷ್ಟು ಬಾರಿ ಕೇಳಿದರೂ ಬಂಗಾರದ ಬಗ್ಗೆ ಅನೀಲ ಕಾಂಬಳೆ ಮಾತನಾಡುತ್ತಿರಲಿಲ್ಲ. ಹೀಗಾಗಿ ಅನೀಲ ಕಾಂಬಳೆ ಮೇಲೆ ಶಿಲ್ಪಾ ಮಾಳ್ಸೇಕರ್ ಅವರು ಅನುಮಾನವ್ಯಕ್ತಪಡಿಸಿ ದೂರು ನೀಡಿದ್ದು, `ಕಳ್ಳರು ಕದ್ದ ಬಂಗಾರವನ್ನು ಮರಳಿಸಿ’ ಎಂದು ಅವರು ಪೊಲೀಸರ ಮೊರೆ ಹೋಗಿದ್ದಾರೆ. ಕಾರವಾರ ನಗರಠಾಣೆಯವರು ಪ್ರಕರಣದ ವಿಚಾರಣೆ ನಡೆಸುತ್ತಿದ್ದಾರೆ. - [ಮಹಿಳೆಯರಿದ್ದ ಮನೆಗೆ ಆಗಂತುಕರ ಆಗಮನ!](https://mobiletime.in/2026/01/strangers-arrive-at-the-house-where-the-women-are/): ಕಾರವಾರದ ಗುಲಾಬಿ ಮರಾಠೆ ಅವರ ಮನೆಗೆ ದಾಂಡಿಗರು ನುಗ್ಗಿದ್ದಾರೆ. ಕೈಯಲ್ಲಿ ಕತ್ತಿ ಹಿಡಿದು ಅವರು ರಂಪಾಟ ಮಾಡಿದ್ದಾರೆ. ಕಾರವಾರದ ಉಳಗಾ ಬಳಿಯ ಸಾತಗೇರಿಯಲ್ಲಿ ಗುಲಾಬಿ ಗೋವಿಂದ ಮರಾಠೆ ಅವರು ವಾಸವಾಗಿದ್ದಾರೆ. ಉಳಗಾ ಫೈಲವಾಡದ ವತಿಭಾಗದ ಚಂದನ ವೆಂಕಟರಾಯ್ ಮರಾಠೆ ಹಾಗೂ ರಾಘವೇಂದ್ರ ವೆಂಕಟರಾಯ್ ಮರಾಠೆ ಅವರು ಕತ್ತಿ ಹಿಡಿದು ಗುಲಾಬಿ ಮರಾಠೆ ಅವರ ಮನೆಗೆ ನುಗ್ಗಿದ್ದಾರೆ. ಜನವರಿ 20ರ ರಾತ್ರಿ ಏಕಾಏಕಿ ಇಬ್ಬರು ಮನೆಗೆ ನುಗ್ಗಿದನ್ನು ನೋಡಿ ಗುಲಾಬಿ ಮರಾಠೆ ಅವರು ಆತಂಕಕ್ಕೆ ಒಳಗಾಗಿದ್ದಾರೆ. ಮನೆಗೆ ನುಗ್ಗಿದ ಆ ಆಗಂತುಕರಿಬ್ಬರು ಗುಲಾಬಿ ಮರಾಠೆ ಅವರ ಮೊಮ್ಮಗ ಓಂಕಾರ್ ಅವರ ಕುತ್ತಿಗೆ ಹಿಡಿದಿದ್ದಾರೆ. `ನಿನ್ನ ಮಗ ವಿಜಯ ಮರಾಠೆಯನ್ನು ನಮ್ಮೊಂದಿಗೆ ಕಳುಹಿಸು. ಇಲ್ಲವಾದರೆ, ಮೊಮ್ಮಗನನ್ನು ಮುಗಿಸಿ ಬಿಡುವೆ’ ಎಂದು ಬೆದರಿಸಿದ್ದಾರೆ. ಆಗ, ಓಂಕಾರ್ ಅವರ ತಾಯಿ ಮಗನ ರಕ್ಷಣೆಗೆ ಹೋಗಿದ್ದು, ಆ ಮಹಿಳೆಗೂ ರಾಘವೇಂದ್ರ ಮರಾಠೆ ಅವರು ಕಾಲಿನಿಂದ ಒದ್ದಿದ್ದಾರೆ. `ರಾತ್ರಿ 12 ಗಂಟೆಗೆ ಮನೆಗೆ ಬರಲು ಹೇಳು’ ಎಂದು ದಬಾಯಿಸಿ ಹೋದ ಅವರಿಬ್ಬರು ಮತ್ತೆ ರಾತ್ರಿ 1ಗಂಟೆಗೆ ಬಂದು ಬೆದರಿಕೆ ಒಡ್ಡಿದ್ದಾರೆ. ಈ ಎಲ್ಲಾ ವಿಷಯಗಳ ಬಗ್ಗೆ ಗುಲಾಬಿ ಮರಾಠೆ ಅವರು ಕದ್ರಾ ಪೊಲೀಸ್ ಠಾಣೆಗೆ ದೂರು ನೀಡಿದ್ದು, ರಕ್ಷಣೆಗಾಗಿ ಮನವಿ ಮಾಡಿದ್ದಾರೆ. ಜೊತೆಗೆ ಆರೋಪಿತರ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದ್ದಾರೆ. - [ವ್ಯಸನಗಳಿಂದ ದೂರವಿರಿ](https://mobiletime.in/2026/01/stay-away-from-addictions/): ತಂಬಾಕು ಸೇವನೆ ದುಷ್ಪರಿಣಾಮಗಳ ಬಗ್ಗೆ ಕಾರವಾರದ ಅಮದಳ್ಳಿ ವಲಯದ ಶ್ರೀ ಕ್ಷೇತ್ರಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಮಕ್ಕಳಿಗೆ ಅರಿವು ಮೂಡಿಸಿದೆ. ಮುದುಗಾದ ಜನತಾ ವಿದ್ಯಾಲಯದಲ್ಲಿ ವ್ಯಸನ ಮುಕ್ತ ಸಮಾಜ ನಿರ್ಮಾಣ ಕಾರ್ಯದಲ್ಲಿ ತೊಡಗಿರುವ ಜನಜಾಗೃತಿ ವೇದಿಕೆಯ ಸದಸ್ಯ ಶ್ರೀಕೃಷ್ಣ ಕಾಮತ್ ಅವರು ವಿದ್ಯಾರ್ಥಿಗಳಿಗೆ ಸಾಮಾಜಿಕ ಪಿಡುಗುಗಳ ಬಗ್ಗೆ ವಿವರಿಸಿದ್ದಾರೆ. `ಧೂಮಪಾನ, ಸರಾಯಿ ಸೇವನೆ ಜೊತೆ ಗುಟಕಾ ತಿನ್ನುವುದರಿಂದಲೂ ಆರೋಗ್ಯ ಹಾಳಾಗುತ್ತದೆ. ಮಕ್ಕಳು ಮಾದಕ ವ್ಯಸನದಿಂದ ದೂರವಿರುವುದು ಒಳಿತು’ ಎಂದವರು ಹೇಳಿದ್ದಾರೆ. ಈ ವೇಳೆ ರಸಪ್ರಶ್ನೆ ಕಾರ್ಯಕ್ರಮ ಆಯೋಜಿಸಿ ಅವರು ಜಾಗೃತಿ ನಡೆಸಿದ್ದಾರೆ. ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ವಲಯದ ಮೇಲ್ವಿಚಾರಕಿ ಲತಾ ವಿಶ್ವನಾಥ ನಾಯ್ಕ ಹಾಗೂ ಸೇವಾ ಪ್ರತಿನಿಧಿಗಳಾದ ಗುಣವಂತಿ ಪುರಂದರ ಚಿಂಚನಕರ್, ಶೀತಲ ರೋಷನ್ ತಾಂಡಲ್, ಶಿಕ್ಷಣ ಸಂಸ್ಥೆಯ ಜೈ ರಂಗನಾಥ ಬಿ ಎಸ್, ಸ್ಮಿತಾ ನಾಯ್ಕ, ಕ್ಷಮಾ ನಾಯ್ಕ ಈ ಕಾರ್ಯಕ್ರಮದಲ್ಲಿ ಮಾತನಾಡಿದ್ದಾರೆ. - [ವಿಶ್ವದರ್ಶನ: ಶಿಕ್ಷಣ ಸಂಸ್ಥೆ ಕಟ್ಟುವ ಅವಕಾಶದಿಂದ ಹೆಬ್ಬಾರ್ ದೂರ!](https://mobiletime.in/2026/01/vishwadarshan-hebbar-is-far-from-the-opportunity-to-build-an-educational-institution/): ಬಿಜೆಪಿ ವಕ್ತಾರ ಹರಿಪ್ರಕಾಶ ಕೋಣೆಮನೆ ಅವರು ಅಧ್ಯಕ್ಷರಾಗಿರುವ ಯಲ್ಲಾಪುರದ ವಿಶ್ವದರ್ಶನ ಶಿಕ್ಷಣ ಸಂಸ್ಥೆಯನ್ನು ಶಾಸಕ ಶಿವರಾಮ ಹೆಬ್ಬಾರ್ ಅವರು ದತ್ತು ತೆಗೆದುಕೊಳ್ಳುವ ಅವಕಾಶ ತಪ್ಪಿಸಿಕೊಂಡಿರುವ ಬಗ್ಗೆ ಪ್ರಕಟಣೆಯೊಂದು ಹೊರಬಿದ್ದಿದೆ. ಬಿಜೆಪಿ ಯಲ್ಲಾಪುರ ಘಟಕದವರು ಇಂಥಹದೊoದು ಪ್ರಕಟಣೆ ನೀಡಿದ್ದು, ಬಿಜೆಪಿ ಮಾಧ್ಯಮ ಸಂಚಾಲಕ ಕೆ ಟಿ ಹೆಗಡೆ ಅವರು ಆ ಪ್ರಕಟಣೆಯನ್ನು ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ನದಿ ತಿರುವು ವಿಷಯವಾಗಿ ಈಚೆಗೆ ಬಿಜೆಪಿ ವಕ್ತಾರ ಹರಿಪ್ರಕಾಶ ಕೋಣೆಮನೆ ಹಾಗೂ ಯಲ್ಲಾಪುರ ಬಿಜೆಪಿ ಮಂಡಳ ಅಧ್ಯಕ್ಷ ಪ್ರಸಾದ ಹೆಗಡೆ ಜಂಟಿ ಸುದ್ದಿಗೋಷ್ಠಿ ನಡೆಸಿ ಶಿವರಾಮ ಹೆಬ್ಬಾರ್ ಅವರ ಉದ್ದಿಮೆಯ ಕುರಿತು ಮಾತನಾಡಿದ್ದರು. `ಹಾವೇರಿ ಜಿಲ್ಲೆಯಲ್ಲಿ ಶಿವರಾಮ ಹೆಬ್ಬಾರ್ ಅವರು ಉದ್ದಿಮೆಯಿರುವ ಕಾರಣ ಶಾಸಕರಿಗೆ ನೆರೆ ಜಿಲ್ಲೆಯ ಮೇಲೆ ಹೆಚ್ಚಿನ ವ್ಯಾಮೋಹ’ ಎಂಬರ್ಥದಲ್ಲಿ ಮಾತನಾಡಿದ್ದರು. ಇದಕ್ಕೆ ಪ್ರತಿಯಾಗಿ ಶಿವರಾಮ ಹೆಬ್ಬಾರ್ ಅವರ ಬೆಂಬಲಿಗರು ಪ್ರಸಾದ ಹೆಗಡೆ ಒಡೆತನದ ನಿಸರ್ಗಮನೆ ಹಾಗೂ ಹರಿಪ್ರಕಾಶ ಅವರ ಒಡೆತನದ ಸಂಸ್ಥೆಯ ವ್ಯವಹಾರಗಳ ಬಗ್ಗೆ ಹೇಳಿಕೆ ನೀಡಿದ್ದರು. ಅದಕ್ಕೆ ಪ್ರತಿಯಾಗಿ ಬುಧವಾರ ಬಿಜೆಪಿ ಘಟಕದ ಹೆಸರಿನಲ್ಲಿ ಮತ್ತೊಂದು ಹೇಳಿಕೆ ಹರಿದಾಡುತ್ತಿದೆ. `ಬಿಜೆಪಿ ಹಾಗೂ ಮಾಧ್ಯಮ’ ಎಂಬ ವಾಟ್ಸಪ್ ಗುಂಪಿನಲ್ಲಿ ಕೆ ಟಿ ಹೆಗಡೆ ಅವರು ಈ ಪ್ರಕಟಣೆಯನ್ನು ಮೊದಲು ಹಂಚಿಕೊoಡಿದ್ದಾರೆ. ಅದಾದ ನಂತರ ಅದೇ ಪ್ರಕಟಣೆ ವಿವಿಧ ಕಡೆ ಹರಿದಾಡಿದೆ. ಪ್ರಕಟಣೆಯ ಕೊನೆಯಲ್ಲಿ ಬಿಜೆಪಿ ಪ್ರಮುಖರಾದ ರವಿ ಕೈಟ್ಕರ್, ನಟರಾಜ ಗೌಡ, ಜಿ ಎನ್ ಗಾಂವ್ಕರ್, ಉಮೇಶ ಭಾಗ್ವತ, ರಾಘವೇಂದ್ರ ಭಟ್ಟ ಹಾಸಣಗಿ ಹಾಗೂ ಕೆ ಟಿ ಹೆಗಡೆ ಅವರ ಹೆಸರಿದೆ. ಆದರೆ, ಬಿಜೆಪಿ ಲೇಟರ್ ಹೆಡ್ ಮೂಲಕ ಆ ಪ್ರಕಟಣೆ ಬಂದಿದ್ದರೂ ಯಾರೂ ಅದಕ್ಕೆ ಸಹಿ ಮಾಡಿಲ್ಲ. `ಮಾಜಿ ಶಾಸಕ ಉಮೇಶ ಭಟ್ಟ ಅವರು ಕಟ್ಟಿದ ಶಿಕ್ಷಣ ಸಂಸ್ಥೆ ಕಾರಣಾಂತರದಿoದ ಸಮಸ್ಯೆಯ ಸುಳಿಗೆ ಸಿಲುಕಿತ್ತು. ಅವರ ಕುಟುಂಬದವರ ಆಶಯದಂತೆ ಹರಿಪ್ರಕಾಶ ಕೋಣೆಮನೆ ಅವರು ಸಂಸ್ಥೆಯ ಜವಾಬ್ದಾರಿವಹಿಸಿಕೊಂಡಿದ್ದು, ಶಕ್ತಿ ಮೀರಿ ಸಂಸ್ಥೆ ಮುನ್ನಡೆಸಿದ್ದಾರೆ. ಡೊಮಗೇರಿಯಲ್ಲಿ ಬಡ ಗೌಳಿ ಮಹಿಳೆ ಸಾವನಪ್ಪಿದಾಗ ಆಕೆಯ ಹಸುಗೂಸಿಗೆ ವಿಶ್ವದರ್ಶನದಲ್ಲಿ ಉಚಿತ ಶಿಕ್ಷಣದ ಘೋಷಣೆ ಮಾಡಲಾಗಿದೆ. ದಲಿತ ಹೆಣ್ಣು ಮಗಳ ಹತ್ಯೆ ಆದಾಗ ಅನಾಥ ಮಗುವಿಗೆ ಶಿಕ್ಷಣ ನೀಡುವ ಬಗ್ಗೆ ಘೋಷಣೆ ಮಾಡಲಾಗಿದೆ. ನೂರಾರು ಬಡ ಮಧ್ಯಮ ವರ್ಗದವರಿಗೆ ಉಚಿತ ಶಿಕ್ಷಣ ಕೊಡಲಾಗುತ್ತಿದೆ. ಹೀಗಿರುವಾಗ ಇದು ವ್ಯಾಪಾರಿಕರಣವಾ ಅಥವಾ ಉದಾರಿಕರಣವಾ? ಎಂದು ಬಲ್ಲವರಿಗೆ ಗೊತ್ತಿದೆ. ಬೆವರು ಸುರಿಸಿ ಸಾವಿರಾರು ಕೋಟಿ ಸಂಪಾದನೆ ಮಾಡಿದ ಮಾಜಿ ಶಾಸಕ ಶಿವರಾಮ ಹೆಬ್ಬಾರ್ ಅವರು ಮತದಾರರಿಗೆ ಒಳ್ಳೆಯ ಮಾಡುವ ಕನಸು ಹೊಂದಿದ್ದರೆ ವಿಶ್ವದರ್ಶನ ಸಂಸ್ಥೆಯನ್ನೇ ದತ್ತುಪಡೆಯಬಹುದಾಗಿತ್ತು. ಶಿಕ್ಷಣ ಸಂಸ್ಥೆ ಮೂಲಕ ಸಾವಿರಾರು ವಿದ್ಯಾರ್ಥಿಗಳಿಗೆ ಸಹಾಯ ಮಾಡಬಹುದಾಗಿತ್ತು. ಆದರೆ, ಮತದಾರರ ಮಕ್ಕಳ ಭವಿಷ್ಯದ ಬದಲು ತಮ್ಮ ಮಕ್ಕಳ ಭವಿಷ್ಯಕ್ಕಾಗಿ ಶಿವರಾಮ ಹೆಬ್ಬಾರ್ ಅವರು ಸಾವಿರಾರು ಕೋಟಿ ರೂ ವೆಚ್ಚ ಮಾಡಿ ಪಕ್ಕದ ಜಿಲ್ಲೆಯಲ್ಲಿ ಉದ್ದಿಮೆ ಮಾಡಿದ್ದಾರೆ. ಬೇರೆ ಬೇರೆ ದಂಧೆಗೂ ಇಳಿದಿದ್ದು ಎಲ್ಲರಿಗೂ ಗೊತ್ತಿದೆ’ ಎಂದು ಆ ಪ್ರಕಟಣೆಯಲ್ಲಿ ಉಲ್ಲೇಖಿಸಲಾಗಿದೆ. `ಶಿರಸಿಯಲ್ಲಿ ನಡೆದ ಜನ ಸಮಾವೇಶದಲ್ಲಿ ನದಿ ತಿರುವು ಯೋಜನೆ ಬಿಜೆಪಿ ಅವಧಿಯಲ್ಲಿ ನಡೆದಿದ್ದು ಎಂದು ಸಚಿವ ಮಂಕಾಳು ವೈದ್ಯ ಅವರೇ ಹೇಳಿದ್ದಾರೆ. ಆ ವೇಳೆ ಬಿಜೆಪಿಯಿಂದ ಸಚಿವರಾಗಿದ್ದ ಶಿವರಾಮ ಹೆಬ್ಬಾರ್ ಅವರು ಅದನ್ನು ಏಕೆ ವಿರೋಧಿಸಲಿಲ್ಲ?’ ಎಂದು ಪ್ರಕಟಣೆಯಲ್ಲಿ ಪ್ರಶ್ನಿಸಲಾಗಿದೆ. ಇದರೊಂದಿಗೆ ನಿಸರ್ಗಮನೆ ಮನೆಯೂ ಪ್ರಮೋದ ಹೆಗಡೆ ಅವರ ಕನಸಿನ ಕೂಸು. ಅಲ್ಲಿ ಯಾವುದೇ ಅಕ್ರಮ ನಡೆಯುತ್ತಿಲ್ಲ’ ಎಂಬ ಬಗ್ಗೆಯೂ ಪ್ರಕಟಣೆಯಲ್ಲಿದೆ. ಗಣಿ ಹಗರಣ ಸೇರಿ ಇನ್ನಷ್ಟು ವಿಷಯಗಳ ಬಗ್ಗೆ ಪ್ರಕಟಣೆಯಲ್ಲಿ ಉಲ್ಲೇಖಿಸಲಾಗಿದೆ. - [ಬೇಡ್ತಿ-ವರದಾ: ಆ ನೀರು ಕುಡಿಯುವುದಕ್ಕೆ ಮಾತ್ರ ಅಲ್ಲ!](https://mobiletime.in/2026/01/bedi-varaddha-that-water-is-not-just-for-drinking/): `ಕುಡಿಯುವ ಯೋಜನೆ ಹೆಸರಿನಲ್ಲಿ ಸರ್ಕಾರ ನದಿ ತಿರುವು ಯೋಜನೆಗೆ ಮುಂದಾಗಿದ್ದು, ವಾಸ್ತವವಾಗಿ ಅದು ಕುಡಿಯುವ ನೀರಿನ ಯೋಜನೆಯೇ ಅಲ್ಲ’ ಎಂದು ಶಿರಸಿಯ ಸಾಮಾಜಿಕ ಕಾರ್ಯಕರ್ತ ಅನಂತಮೂರ್ತಿ ಹೆಗಡೆ ಹೇಳಿದ್ದಾರೆ. ಸರ್ಕಾರಿ ದಾಖಲೆಗಳ ಪ್ರಕಾರ `ರಾಯಚೂರು ಜಿಲ್ಲೆಗೆ ನೀರಾವರಿ’ ಎಂಬ ಹೆಸರಿನಲ್ಲಿ ಈ ಯೋಜನೆಯಿರುವ ಆಘಾತಕಾರಿ ಅಂಶವನ್ನು ಅವರು ಬಿಚ್ಚಿಟ್ಟಿದ್ದಾರೆ. `ಬೇಡ್ತಿ-ವರದಾ ನದಿ ತಿರುವು ಯೋಜನೆಯನ್ನು ಹಾವೇರಿ ಭಾಗದ ಜನರ ಕುಡಿಯುವ ನೀರಿಗಾಗಿ ಎಂದು ಸುಳ್ಳು ಹೇಳಿ ಜನರ ದಿಕ್ಕು ತಪ್ಪಿಸುವ ಪ್ರಯತ್ನ ನಡೆದಿದೆ. ಸರ್ಕಾರದ ವೆಬ್ ಸೈಟಿನಲ್ಲಿಯೇ ಆ ಯೋಜನೆಗೆ ರಾಯಚೂರು ಜಿಲ್ಲೆಗೆ ನೀರಾವರಿ ಎಂದು ವಿವರ ನೀಡಲಾಗಿದೆ. ರಾಯಚೂರಿಗೆ ನೀರು ಬೇಕಾದರೆ ಹಾವೇರಿ ಜನ ಹೋರಾಟ ಮಾಡುವುದರ ಹಿಂದೆ ಬೇರೆ ಹುನ್ನಾರವೇ ಅಡಗಿದೆ’ ಎಂದು ಅನಂತಮೂರ್ತಿ ಹೆಗಡೆ ಅನುಮಾನವ್ಯಕ್ತಪಡಿಸಿದ್ದಾರೆ. `ಉತ್ತರ ಕನ್ನಡ ಜಿಲ್ಲೆಯಲ್ಲಿಯೇ ಕುಡಿಯುವ ನೀರಿನ ಅಭಾವ ಎದುರಾಗಿದೆ. ಹೀಗಿರುವಾಗ ಅಂತ ಯೋಜನೆ ಮಾಡುವುದೇ ಅವೈಜ್ಞಾನಿಕ’ ಎಂದವರು ಹೇಳಿದ್ದಾರೆ. `ಸ್ವರ್ಣವಲ್ಲಿ ಶ್ರೀಗಳು ಯಾವುದೇ ಸ್ವಾರ್ಥ ಇಲ್ಲದೇ ಯೋಜನೆ ವಿರುದ್ಧ ಹೋರಾಟ ನಡೆಸಿದ್ದಾರೆ. ಅದಕ್ಕೆ ಎಲ್ಲರೂ ಕೈ ಜೋಡಿಸಬೇಕು’ ಎಂದವರು ಮನವಿ ಮಾಡಿದ್ದಾರೆ. `ಈ ಯೋಜನೆ ಮೂಲಕ 50ಕ್ಕೂ ಅಧಿಕ ಹಳ್ಳಿಗಳು ನಾಶವಾಗಲಿದೆ. ನದಿ ನಂಬಿ ನಡೆಯುವ ಪ್ರವಾಸೋದ್ಯಮ ಚಟುವಟಿಕೆಗಳು ನಶಿಸಲಿದೆ’ ಎಂದು ನಿವೃತ್ತ ಲೋಕೋಪಯೋಗಿ ಅಧಿಕಾರಿ ವಿ ಎಂ ಭಟ್ಟ ಅವರು ಹೇಳಿದ್ದಾರೆ. `ನದಿ ನೀರಿನ ಬಳಕೆ ಪೂರ್ಣ ಪ್ರಮಾಣದಲ್ಲಿ ನಡೆಯಬೇಕು. ಉಳಿದರೆ ಮಾತ್ರ ಹೊರ ಜಿಲ್ಲೆಗೆ ನೀಡಬೇಕು. ಈ ಬಗ್ಗೆ ತಜ್ಞರೆಲ್ಲರೂ ಸೇರಿ ಯೋಜನಾ ವರದಿ ತಯಾರಿಸಬೇಕು’ ಎಂದು ಜಿ ಪಂ ಮಾಜಿ ಸದಸ್ಯ ಹಾಲಪ್ಪ ಅವರು ಹೇಳಿದ್ದಾರೆ. `ನಮ್ಮದೆಲ್ಲವನ್ನು ಬೇರೆಡೆ ಕೊಟ್ಟು ನಾವು ಬದುಕುವುದು ಹೇಗೆ?’ ಎಂದು ಅವರು ಪ್ರಶ್ನಿಸಿದ್ದಾರೆ. - [ಭೂ ವ್ಯಾಜ್ಯ: ಕೇಸು ಹಾಕಿದವನ ಕೊಲೆ!](https://mobiletime.in/2026/01/land-dispute-murder-of-the-person-who-filed-the-case/): ಹಕ್ಕಿನ ಜಮೀನಿನ ಬಗ್ಗೆ ಕೋರ್ಟಿನಲ್ಲಿ ಕೇಸು ಹಾಕಿದ ಕಾರಣ ಕುಮಟಾದ ಮಾರುತಿ ಹೆಗಡೆ ಅವರ ಕೊಲೆಯಾಗಿದೆ. ಜಮೀನು ಖರೀದಿಸಿದ್ದ ನಾಗಪ್ಪ ಗೌಡ ಅವರು ಮಾರುತಿ ಹೆಗಡೆ ಅವರ ಮೇಲೆ ಹಲ್ಲೆ ನಡೆಸಿ, ಅವರ ಸಾವಿಗೆ ಕಾರಣರಾಗಿದ್ದಾರೆ. ಕುಮಟಾದ ಕೂಜಳ್ಳಿಯ ಮೇಣಸಿನಕೇರಿಯಲ್ಲಿ ಮಾರುತಿ ಬೀರಾ ಹೆಗಡೆ ಅವರು ವಾಸವಾಗಿದ್ದರು. ಅವರಿಗೆ ಪತ್ನಿ ತವರು ಮನೆ ಭೂಮಿ ಮೇಲೆ ಮನಸ್ಸಿತ್ತು. ಆದರೆ, ಮಾರುತಿ ಹೆಗಡೆ ಅವರ ಭಾವ ಅನಂತ ಈಶ್ವರ ಹೆಗಡೆ ಅವರು 1 ಎಕರೆ ಭೂಮಿಯನ್ನು ಮೇಲಿನ ಕೂಜಳ್ಳಿಯ ನಾಗಪ್ಪ ಜಟ್ಟು ಗೌಡ ಅವರಿಗೆ ಮಾರಾಟ ಮಾಡಿದ್ದರು. ಈ ಮಾರಾಟ ಸಹಿಸದ ಮಾರುತಿ ಹೆಗಡೆ ಅವರು ಜಮೀನು ಹಕ್ಕಿನ ವಿಷಯವಾಗಿ ಕೋರ್ಟಿನಲ್ಲಿ ಕೇಸು ಹಾಕಿದ್ದರು. ಜಮೀನು ಖರೀದಿಸಿ ಕೇಸು ಎದುರಿಸಬೇಕಾದ ಪರಿಸ್ಥಿತಿ ಬಂದಿದ್ದರಿoದ ನಾಗಪ್ಪ ಗೌಡ ಅವರು ಸಿಟ್ಟಾಗಿದ್ದರು. ಕೇಸು ದಾಖಲಿಸಿದ ಮಾರುತಿ ಹೆಗಡೆ ಅವರ ವಿರುದ್ಧ ನಾಗಪ್ಪ ಗೌಡ ಅವರು ದ್ವೇಷ ಹೊಂದಿದ್ದರು. ಜನವರಿ 17ರ ಸಂಜೆ ಮಾರುತಿ ಗೌಡ ಅವರು ತಮ್ಮ ಮನೆ ಮುಂದೆ ನಿಂತಾಗ ಅಲ್ಲಿ ನಾಗಪ್ಪ ಗೌಡ ಅವರು ಬಂದರು. ಕೇಸಿನ ವಿಷಯವಾಗಿ ಜಗಳ ಶುರು ಮಾಡಿದರು. ಆ ಜಗಳ ದೊಡ್ಡದಾಗಿದ್ದು, ಅವರಿಬ್ಬರ ನಡುವೆ ಗಲಾಟೆ ನಡೆಯಿತು. ಆ ಗಲಾಟೆಯಲ್ಲಿ ನಾಗಪ್ಪ ಗೌಡ ಅವರು ಮಾರುತಿ ಹೆಗಡೆ ಅವರ ಹೊಟ್ಟೆಗೆ ಒದ್ದರು. ತಮ್ಮ ಕೈಯಿಂದ ಹಿಗ್ಗಾಮುಗ್ಗ ಥಳಿಸಿದರು. ಪರಿಣಾಮ ಮಾರುತಿ ಹೆಗಡೆ ಅವರು ಕುಸಿದು ಬಿದ್ದಿದ್ದು, ಆಸ್ಪತ್ರೆಗೆ ದಾಖಲಿಸಿದರೂ ಅವರನ್ನು ಬದುಕಿಸಿಕೊಳ್ಳಲು ಆಗಲಿಲ್ಲ. ತಂದೆಯ ಸಾವಿನ ಬಗ್ಗೆ ಚೇತನಾ ಹೆಗಡೆ ಅವರು ಮಾಹಿತಿ ನೀಡಿದರು. ಕೊಲೆ ಮಾಡಿದ ನಾಗಪ್ಪ ಗೌಡ ಅವರನ್ನು ಶಿಕ್ಷಿಸುವಂತೆ ಪೊಲೀಸ್ ದೂರು ನೀಡಿದರು. - [ಬಾಲಕನ ಜೀವ ತೆಗೆದ ಹೊಸ ಕಾರು!](https://mobiletime.in/2026/01/a-new-car-took-the-life-of-a-boy/): ಕಾರು ಓಡಿಸಲು ಬಾರದ ವ್ಯಕ್ತಿಯೊಬ್ಬ ಹೊಸದಾಗಿ ಕಾರು ಖರೀದಿಸಿದ್ದು, ಅದೇ ಕಾರು ಹಳಿಯಾಳದ ಬಾಲಕನ ಜೀವ ತೆಗೆದಿದೆ. ಹಳಿಯಾಳ ಕಾವಲವಾಡದ ಹಟ್ಟಿಓಣಿಯಲ್ಲಿ ಕಾರು ಗುದ್ದಿದ ರಭಸಕ್ಕೆ 5 ವರ್ಷದ ಬಾಲಕ ಹುಜೇರ್ ಸಲೀಂ ಶಿಗಳ್ಳಿ ಕೊನೆಯುಸಿರೆಳೆದಿದ್ದಾರೆ. ಅದಾದ ನಂತರ ಆ ಕಾರು ಮನೆಯೊಂದಕ್ಕೆ ನುಗ್ಗಿದ್ದು, ಹುಜೇರ್ ಅವರ ಅಜ್ಜಿಗೂ ಡಿಕ್ಕಿ ಹೊಡೆದಿದೆ. ಪರಿಣಾಮ ಅಜ್ಜಿ ಆಶಾಬಿ ಮುಲ್ಲಾ ಅವರ ಕೈ ಮುರಿದಿದೆ. ಅದೇ ಭಾಗದ ಗೋರೆಸಾಬ್ ವಲೀಸಾಬ್ ಹೊಸದಾಗಿ ಇಕೋ ಕಾರು ಖರೀದಿಸಿದ್ದರು. ಗೋರೆಸಾಬ್ ವಲೀಸಾಬ್ ಅವರಿಗೆ ಸರಿಯಾಗಿ ಕಾರು ಓಡಿಸಲು ಬರುತ್ತಿರಲಿಲ್ಲ. ಅದಾಗಿಯೂ ವೇಗವಾಗಿ ಅವರು ಕಾರು ಓಡಿಸಿದ್ದು, ದುರಂತಕ್ಕೆ ಕಾರಣವಾಗಿದೆ. ಕಾರು ಮನೆಯ ಕಟ್ಟೆಗೆ ಗುದ್ದಿದ್ದರಿಂದ ಕಟ್ಟಡಕ್ಕೂ ಹಾನಿ ಆಗಿದೆ. ಅದರ ಮುಂದಿದ್ದ ಬೈಕ್ ಒಂದು ಜಖಂ ಆಗಿದೆ. ಗೋರೆಸಾಬ್ ವಲೀಸಾಬ್ ಅವರನ್ನು ಪೊಲೀಸರು ಬಂಧಿಸಿದ್ದಾರೆ. - [ನದಿ ಆಳ ಬಗೆದವರಿಗೆ ಕಾನೂನು ಕಂಟಕ!](https://mobiletime.in/2026/01/legal-hurdles-for-those-who-cross-the-river/): ಉತ್ತರ ಕನ್ನಡದ ನದಿ ಉಳಿವಿಗೆ ಜನ ಹೋರಾಟ ನಡೆಸುತ್ತಿದ್ದು, ಮರಳು ದಂಧೆಕೋರರು ನದಿ ಆಳವನ್ನು ಅಗೆದು ಪರಿಸರಕ್ಕೆ ಹಾನಿ ಮಾಡುತ್ತಿದ್ದಾರೆ. ಈ ವಿಷಯ ಅರಿತ ಹೊನ್ನಾವರ ತಹಶೀಲ್ದಾರ್ ನದಿ ಅಂಚಿನ ಪ್ರದೇಶಕ್ಕೆ ದಿಢೀರ್ ಭೇಟಿ ನೀಡಿ ಅಕ್ರಮವಾಗಿ ದಾಸ್ತಾನು ಮಾಡಿದ್ದ ಮರಳನ್ನು ಜಪ್ತು ಮಾಡಿದ್ದಾರೆ. ಶರಾವತಿ ನದಿಯ ಬಳ್ಕೂರಿನಲ್ಲಿ ಅಪಾರ ಪ್ರಮಾಣದಲ್ಲಿ ಮರಳು ತೆಗೆಯಲಾಗುತ್ತಿದೆ. ನದಿ ಹಾಗೂ ಪರಿಸರಕ್ಕೆ ಅಪಾಯ ಆಗುವ ರೀತಿ ಮರಳು ದಂಧೆ ನಡೆಯುತ್ತಿದೆ. ಮನೆ ನಿರ್ಮಾಣಕ್ಕೆ ಬಳ್ಕೂರು ರೇತಿಗೆ ಅಪಾರ ಬೇಡಿಕೆಯಿದ್ದು, ಅದೇ ಹಿನ್ನಲೆ ದುರುಪಯೋಗಪಡಿಸಿಕೊಂಡು ಮರಳು ಮಾಫಿಯಾ ನಡೆಯುತ್ತಿದೆ. ದಂಧೆಕೋರರು ತೆಗೆದ ಮರಳನ್ನು ನದಿ ಅಂಚಿನಲ್ಲಿ ಗುಡ್ಡೆ ಹಾಕಿ ದಾಸ್ತಾನು ಮಾಡಿದ್ದು, ಅದನ್ನು ದುಪ್ಪಟ್ಟು ಬೆಲೆಗೆ ವಿವಿಧ ಕಡೆ ಸಾಗಿಸುತ್ತಿದ್ದಾರೆ. ಅಕ್ರಮ ಮರಳುಗಾರಿಕೆ ತಡೆಯುವಲ್ಲಿ ಜಿಲ್ಲಾಡಳಿತ ವಿಫಲವಾಗಿದೆ ಎಂಬ ಆರೋಪವ್ಯಕ್ತವಾಗಿದ್ದು, ಅದರ ಬೆನ್ನಲ್ಲೆ ಅಧಿಕಾರಿಗಳು ಮರಳು ಅಡ್ಡೆಯ ಮೇಲೆ ದಾಳಿ ಮಾಡಿದ್ದಾರೆ. ಮಂಗಳವಾರ ಶರಾವತಿ ನದಿ ತೀರದ ಬಳಿ ದಾಸ್ತಾನು ಮಾಡಿದ್ದ 20 ಲೋಡ್ ಮರಳನ್ನು ಅಧಿಕಾರಿಗಳು ವಶಕ್ಕೆಪಡೆದಿದ್ದಾರೆ. ಹೊನ್ನಾವರ ತಹಶೀಲ್ದಾರ್ ಪ್ರವೀಣ ಕರಾಂಡೆ ಮರಳು ಅಡ್ಡೆ ಪ್ರದೇಶಕ್ಕೆ ತೆರಳಿದ್ದಾರೆ. ಅಲ್ಲಿದ್ದ 70 ಬರಾಸ್ ಮರಳನ್ನು ಜಪ್ತು ಮಾಡಿದ್ದಾರೆ. ಪೊಲೀಸ್ ಸುಪರ್ಧಿಯಲ್ಲಿ ಆ ಮರಳನ್ನು ಗ್ರಾಮ ಪಂಚಾಯತ ವಶಕ್ಕೆ ಹಸ್ತಾಂತರಿಸಿದ್ದಾರೆ. - [ಅತಿಯಾದ ವ್ಯಸನ: ಊಟಕ್ಕೂ ಸಮಯಕೊಡದ ಯಮ!](https://mobiletime.in/2026/01/excessive-addiction-yama-who-doesnt-even-have-time-for-meals/): ಒಂದು ದಿನವೂ ಬಿಡದೇ ಸರಾಯಿ ಸೇವಿಸುತ್ತಿದ್ದ ಶಿರಸಿಯ ಗಣಪತಿ ಶಿರಗೋಡ ಅವರು ಸರಿಯಾಗಿ ಊಟ ಮಾಡಲು ಸಹ ಸಾಧ್ಯವಾಗದೇ ಸಾವನಪ್ಪಿದ್ದಾರೆ. ಶಿರಸಿಯ ಕಸ್ತೂರಿಬಾ ನಗರದ ಮಸೀದಿ ಹಿಂದೆ ಗಣಪತಿ ಫಕ್ಕೀರಪ್ಪ ಶಿರಗೋಡ (60) ಅವರು ವಾಸವಾಗಿದ್ದರು. ಸೂಪಾದವರಾಗಿದ್ದ ಅವರು ಶಿರಸಿಯಲ್ಲಿಯೇ ಖಾಯಂ ಆಗಿದ್ದು, ಗಣಪತಿ ಶಿರಗೋಡ ಅವರ ಪುತ್ರ ಗುತ್ತೆಪ್ಪ ಶಿರಗೋಡ ಅವರು ತರಕಾರಿ ವ್ಯಾಪಾರ ಮಾಡಿ ಸಂಸಾರ ನಡೆಸುತ್ತಿದ್ದರು. ದುಡಿದ ಬಹುಪಾಲು ಹಣವನ್ನು ಗಣಪತಿ ಶಿರಗೋಡ ಅವರು ಸರಾಯಿ ಅಂಗಡಿಗೆ ಕೊಡುತ್ತಿದ್ದರು. ಗಣಪತಿ ಶಿರಗೋಡು ಅವರು ಸರಾಯಿ ಇಲ್ಲದೇ ಒಂದು ದಿನವೂ ಸಹ ಸುಮ್ಮನಿರುತ್ತಿರಲಿಲ್ಲ. ಆ ಪ್ರಮಾಣದಲ್ಲಿ ಅವರು ಮದ್ಯ ವ್ಯಸನಕ್ಕೆ ದಾಸರಾಗಿದ್ದರು. ಜನವರಿ 19ರ ರಾತ್ರಿ 10.30ಕ್ಕೆ ಗಣಪತಿ ಶಿರಗೋಡ ಅವರು ಊಟ ಮಾಡುತ್ತಿದ್ದರು. ಆದರೆ, ಆ ವೇಳೆ ಅವರಿಗೆ ಊಟ ಮಾಡಲು ಸಾಧ್ಯವಾಗಲಿಲ್ಲ. ವಾಂತಿ ಮಾಡಿಕೊಂಡಿದ್ದ ಅವರನ್ನು ಗುತ್ತೆಪ್ಪ ಶಿರಗೋಡ ಅವರು ಆಸ್ಪತ್ರೆಗೆ ಕರೆದೊಯ್ದರು. ಶಿರಸಿ ಸರ್ಕಾರಿ ಆಸ್ಪತ್ರೆಯವರು ತಪಾಸಣೆ ನಡೆಸಿ `ಸ್ಕಾö್ಯನ್ ಮಾಡಬೇಕು’ ಎಂದರು. ಹೀಗಾಗಿ ಗಣಪತಿ ಶಿರಗೋಡ ಅವರನ್ನು ಶಿರಸಿ ಸ್ಕಾö್ಯನ್ ಸೆಂಟರ್’ಗೆ ಕರೆದೊಯ್ಯಲಾಯಿತು. ಅಲ್ಲಿ ತಪಾಸಣೆ ನಡೆಸಿ ಮರಳಿ ಆಸ್ಪತ್ರೆಗೆ ಬರುವಾಗ ಗಣಪತಿ ಶಿರಗೋಡ ಅವರು ಒಮ್ಮೆಗೆ ದೊಡ್ಡದಾಗಿ ಕೂಗಿದರು. ಅದಾದ ನಂತರ ಸಂಪೂರ್ಣವಾಗಿ ಮೌನವಾದರು. ಗಣಪತಿ ಶಿರಗೋಡ ಅವರನ್ನು ಕುಟುಂಬದವರು ಎಬ್ಬಿಸುವ ಪ್ರಯತ್ನ ಮಾಡಿದರು. ಪದೇ ಪದೇ ಮಾತನಾಡಿಸಿದರು. ಆದರೆ, ಅವರು ಮಾತನಾಡಲಿಲ್ಲ. ಪರೀಕ್ಷಿಸಿದ ವೈದ್ಯರು ಗಣಪತಿ ಶಿರಗೋಡ ಇನ್ನಿಲ್ಲ ಎಂಬ ಸತ್ಯ ಬಿಚ್ಚಿಟ್ಟರು. ದಾರಿ ಮದ್ಯೆಯೇ ಅವರು ಸಾವನಪ್ಪಿದನ್ನು ಕುಟುಂಬದವರು ಖಚಿತಪಡಿಸಿಕೊಂಡರು. `ಮದ್ಯ ವ್ಯಸನ ಅಪಾಯಕ್ಕೆ ಕಾರಣ’   - [ಶಿರಸಿ-ಹೊನ್ನಾವರ: ಇನ್ಮುಂದೆ ಇನ್ನಷ್ಟು ಹತ್ತಿರ!](https://mobiletime.in/2026/01/sirsi-honnavara-even-closer-now/): ಕುಮಟಾ ಕಲ್ಲಬ್ಬೆ ಬಳಿಯ ಬೋಗ್ರಿಬೈಲ್ ಬಳಿ ಅಘನಾಶಿನಿ ನದಿಗೆ ಅಡ್ಡಲಾಗಿ ಸರ್ಕಾರ ಸೇತುವೆ ನಿರ್ಮಿಸಿದೆ. ಹೀಗಾಗಿ ಇನ್ಮುಂದೆ ಶಿರಸಿ-ಹೊನ್ನಾವರ ಪ್ರಯಾಣ ಇನ್ನಷ್ಟು ಹತ್ತಿರವಾಗಲಿದೆ. ಹೊನ್ನಾವರ ಕಡೆಯಿಂದ ಶಿರಸಿ ಕಡೆಗೆ ಹಾಗೂ ಶಿರಸಿ ಕಡೆಯಿಂದ ಹೊನ್ನಾವರ ಕಡೆಗೆ ಪ್ರಯಾಣಿಸುವವರು ಈ ಸೇತುವೆ ಮಾರ್ಗ ಬಳಸಿದರೆ ಕುಮಟಾ ಪಟ್ಟಣಕ್ಕೆ ಪ್ರವೇಶಿಸಬೇಕಿಲ್ಲ. ಇದರಿಂದ ವಾಹನ ಸವಾರರಿಗೆ ಸರಿ ಸುಮಾರು 15ಕಿಮೀ ಉಳಿತಾಯವಾಗಲಿದೆ. 2018ರಲ್ಲಿ ಕುಮಟಾ ಶಾಸಕರಾಗಿದ್ದ ಶಾರದಾ ಶೆಟ್ಟಿ ಅವರು ಈ ಸೇತುವೆ ಮಂಜೂರಿ ಮಾಡಿಸಿದ್ದರು. ಆದರೆ, ಗುತ್ತಿಗೆದಾರರಿಗೆ ಹಣ ಪಾವತಿ ಆಗದ ಕಾರಣ ಸೇತುವೆ ಪೂರ್ಣವಾಗಿರಲಿಲ್ಲ. ಈಗಿನ ಶಾಸಕ ದಿನಕರ ಶೆಟ್ಟಿ ಈ ವಿಷಯವನ್ನು ವಿಧಾನಸಭೆ ಅಧಿವೇಶನದಲ್ಲಿ ಪ್ರಾಸ್ತಾಪಿಸಿದ್ದು, ಸರ್ಕಾರದಿಂದ ಅನುದಾನ ಬಿಡುಗಡೆ ಮಾಡಿಸಿದ್ದರು. ಅದರ ಪರಿಣಾಮ ಸೇತುವೆ ಕೆಲಸ ಮುಗಿದಿದ್ದು, ಹೊನ್ನಾವರ ಕತಗಾಲ ರಸ್ತೆಯಲ್ಲಿ ಅಘನಾಶಿನಿ ನದಿಗೆ ಅಡ್ಡವಾಗಿ 23 ಕೋಟಿ ರೂಪಾಯಿ ವೆಚ್ಚದಲ್ಲಿ ಸೇತುವೆ ಕಾಣಿಸಿತು. ಮಂಗಳವಾರ ಈ ಸೇತುವೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಅವರು ಉದ್ಘಾಟಿಸಿದರು. ಶಾಸಕ ದಿನಕರ ಶೆಟ್ಟಿ ಅವರ ಜೊತೆ ಮಾಜಿ ಶಾಸಕಿ ಶಾರದಾ ಶೆಟ್ಟಿ ಅವರು ಸಹ ಈ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಸೇತುವೆ ಮಾಡಿಕೊಟ್ಟ ಕಾರಣ ಮಂಕಾಳು ಎಸ್ ವೈದ್ಯ, ದಿನಕರ ಶೆಟ್ಟಿ ಹಾಗೂ ಶಾರದಾ ಮೋಹನ ಶೆಟ್ಟಿ ಅವರಿಗೆ ಜನ ಸನ್ಮಾನಿಸಿದರು. ಕತಗಾಲ್-ಹೊನ್ನಾವರ ರಸ್ತೆಯನ್ನು ಅಗಲೀಕರಣಗೊಳಿಸುವಂತೆ ವಕೀಲ ಜಯಂತ ನಾಯ್ಕ ಮನವಿ ಸಲ್ಲಿಸಿದರು. ಪ್ರಮುಖರಾದ ರವಿ ಹೆಗಡೆ, ಟಿ ಬಿ ಹೆಗಡೆ, ಸುಬ್ರಹ್ಮಣ್ಯ ಭಟ್, ಗಜಾನನ ಕೋಡಿಯಾ, ವಸಂತ ಶೆಟ್ಟಿ, ಸಿ ಜಿ ಹೆಗಡೆ, ಮಂಜುನಾಥ ನಾಯ್ಕ, ಗೋಪಾಲ ನಾಯ್ಕ ಇತರರು ಇದ್ದರು. ಕುಮಟಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಭುವನ್ ಭಾಗ್ವತ್, ಕಲ್ಲಬ್ಬೆ ಗ್ರಾಪಂ ಅಧ್ಯಕ್ಷೆ ಕಮಲ ನಾಗರಾಜ ಮುಕ್ರಿ, ಮೂರೂರು ಗ್ರಾಪಂ ಅಧ್ಯಕ್ಷೆ ಭಾರತಿ ನಾಯ್ಕ, ಮಾಜಿ ಅಧ್ಯಕ್ಷೆ ಶೋಭಾ ನಾಯ್ಕ, ಮುಖಂಡರಾದ ರತ್ನಾಕರ ನಾಯ್ಕ, ಭಾಸ್ಕರ ಪಟಗಾರ, ವೈಭವ ನಾಯ್ಕ, ಪ್ರಮುಖರಾದ ಚಂದ್ರಾಸ ನಾಯ್ಕ, ಮೈಕಲ್ ಫರ್ನಾಂಡೀಸ್, ವಿನಾಯಕ ಅಂಬಿಗ ಸಹ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡರು. - [ರಾಮತೀರ್ಥದ ಬಳಿ ಗಾಂಜಾ ಪ್ರಸಾದ!](https://mobiletime.in/2026/01/ganja-prasada-near-ramatheertha/): ಹೊನ್ನಾವರದ ರಾಮತೀರ್ಥದ ಬಳಿ ಸಿಪ್ರಿನ್ ಪೋಸ್ಗೆ, ಸಯ್ಯದ್ ಗುಲ್ಜಾರ್ ಹಾಗೂ ಅರ್ಬು ಸೇರಿ ಗಾಂಜಾ ಮಾರಾಟ ಮಾಡಿದ್ದಾರೆ. ನಿಷೇಧಿತ ವಸ್ತು ಮಾರಾಟದಿಂದ 3 ಸಾವಿರ ರೂ ಸಂಪಾದಿಸಿದ ಅವರು ಇನ್ನಷ್ಟು ಹಣಗಳಿಸುವ ಹಪಾಹಪಿಗೆ ಬಿದ್ದು ಪೊಲೀಸರ ಬಳಿ ಸಿಕ್ಕಿ ಬಿದ್ದಿದ್ದಾರೆ. ಹೊನ್ನಾವರ ಕಾಸರಕೋಡುವಿನ ಸಿಪ್ರಿನ್ ಯೂಸಿಪ್ ಪೋಸ್ಗೆ ಅವರು ಮೀನುಗಾರಿಕೆ ಮಾಡಿಕೊಂಡಿದ್ದರು. 27ನೇ ವಯಸ್ಸಿನಲ್ಲಿಯೇ ಅವರು ಅಡ್ಡದಾರಿ ಹಿಡಿದಿದ್ದು, ಗಾಂಜಾ ಮಾರಾಟದಿಂದ ದುಡ್ಡು ಮಾಡಲು ಯೋಚಿಸಿದರು. ಹೊನ್ನಾವರದ ಪ್ರಭಾತ ನಗರ ಪಾರೆಸ್ಟ್ ಕಾಲೋನಿಯಲ್ಲಿ ವಾಸವಾಗಿರುವ ಸಯ್ಯದ್ ಗುಲ್ಜಾರ್ ಸಯ್ಯದ್ ಮುಕ್ತಾರ್ ಅವರು 22ನೇ ವಯಸ್ಸಿನಲ್ಲಿಯೇ ದಾರಿ ತಪ್ಪಿದ್ದರು. ಸೂಪರ್ ಮಾರ್ಟಿನಲ್ಲಿ ಕೆಲಸ ಮಾಡುವ ಸಯ್ಯದ್ ಗುಲ್ಜಾರ್ ಆ ಕೆಲಸದ ಜೊತೆ ಅಕ್ರಮ ಕೂಟದಲ್ಲಿ ಸಿಪ್ರಿನ್ ಪೋಸ್ಗೆ ಸಹಚರರಾಗಿದ್ದು, ಕುಮಟಾದ ಅರ್ಬು ಎಂಬಾತರ ಜೊತೆ ಸೇರಿ ಅವರೆಲ್ಲರೂ ಗಾಂಜಾ ವ್ಯಾಪಾರ ಶುರು ಮಾಡಿದರು. ಜನವರಿ 19ರ ರಾತ್ರಿ ರಾಮತೀರ್ಥದ ಕ್ರಾಸಿನ ಬಳಿ ಆ ಮೂವರು ಒಂದೇ ಬೈಕಿನಲ್ಲಿ ಓಡಾಡುತ್ತಿದ್ದರು. ಅಲ್ಲಿ ಬರುವ ಜನರನ್ನು ಮಾತನಾಡಿಸಿ ಹಣಪಡೆದು ಗಾಂಜಾ ಕೊಡುತ್ತಿದ್ದರು. ಮೂರು ಸಾವಿರ ರೂ ಸಂಪಾದಿಸಿದ್ದ ಆ ಮೂವರು ಮತ್ತೆ 6 ಸಾವಿರ ಸಂಪಾದನೆಗಾಗಿ ಗಿರಾಕಿ ಹುಡುಕುತ್ತಿದ್ದರು. ಹೊನ್ನಾವರ ಪಿಐ ಸಿದ್ದರಾಮೇಶ್ವರ ಎಸ್ ಅವರು ಆ ಮೂವರನ್ನು ನೋಡಿದರು. ಪೊಲೀಸರನ್ನು ಕಂಡ ತಕ್ಷಣ ಕುಮಟಾದ ಅರ್ಬು ಅಲ್ಲಿಂದ ಓಡಿ ಪರಾರಿಯಾದರು. ಸಿಪ್ರಿನ್ ಪೋಸ್ಗೆ ಹಾಗೂ ಸಯ್ಯದ್ ಗುಲ್ಜಾರ್ ಅವರ ಬಳಿ ಬಿಳಿ ಮತ್ತು ಕೆಂಪು ಕೊಟ್ಟೆಯಲ್ಲಿ ಗಾಂಜಾ ಕಾಣಿಸಿತು. 106 ಗ್ರಾಂ ಗಾಂಜಾ ವಶಕ್ಕೆಪಡೆದ ಪೊಲೀಸರು ಅವರಿಬ್ಬರನ್ನು ಬಂಧಿಸಿದರು. ಜೊತೆಗೆ ಮೂವರ ಹೆಸರನ್ನು ನಮೂದಿಸಿ ಪ್ರಕರಣ ದಾಖಲಿಸಿದ್ದು, ಗಾಂಜಾ ಮಾರಾಟಗಾರರ ವಿರುದ್ಧ ಕಾನೂನು ಕ್ರಮ ಜರುಗಿಸಿದರು. ಬಂಧಿತರಿoದ ಮೊಬೈಲ್ ಹಾಗೂ ಬೈಕನ್ನು ಜಪ್ತು ಮಾಡಿದರು. `ಮಾದಕ ವ್ಯಸನ ಜೀವನಕ್ಕೆ ಮಾರಕ’ - [ಹೊರ ಮಂಗಳವಾರ: ಯಲ್ಲಾಪುರ ಪಟ್ಟಣ ಪೂರ್ತಿ ಖಾಲಿ ಖಾಲಿ!](https://mobiletime.in/2026/01/outside-tuesday-the-entire-town-of-yellapur-is-empty/): ಮೂರು ವರ್ಷಕ್ಕೆ ಒಮ್ಮೆ ನಡೆಯುವ ಯಲ್ಲಾಪುರ ಜಾತ್ರೆ ಅಂಗವಾಗಿ `ಹೊರ ಮಂಗಳವಾರ’ ಆಚರಣೆ ಸಂಪ್ರದಾಯ ಈ ದಿನ ನಡೆದಿದ್ದು, ಅಧಿಕೃತವಾಗಿ ಜಾತ್ರೆ ಸಂಪ್ರದಾಯ ಶುರುವಾಗಿದೆ. ಯಲ್ಲಾಪುರ ಜಾತ್ರೆಯ ಪೂರ್ವದ ವಿಶಿಷ್ಠ ಆಚರಣೆಗಳಲ್ಲಿ ಹೊರ ಮಂಗಳವಾರವೂ ಒಂದಾಗಿದ್ದು, ಅದರ ಅಂಗವಾಗಿ ಪಟ್ಟಣದ ಜನ ಮನೆಗೆ ಬೀಗ ಹಾಕಿದ್ದರು. ಬೆಳಗ್ಗೆ 9 ಗಂಟೆಗೆ ಮನೆಯಿಂದ ಹೊರಟ ಭಕ್ತರು ಸಂಜೆ 5 ಗಂಟೆಗೆ ಮರಳಿದರು. ಈ ಸಮಯದಲ್ಲಿ ದೇವಿಯು ಪ್ರತಿ ಮನೆಗೆ ಸಂಚಾರಕ್ಕೆ ಬರುವ ನಂಬಿಕೆಯಿದ್ದು, ಆ ನಂಬಿಕೆ ಹಿನ್ನಲೆ ಜನ ದೇವಿಗೆ ನೀರು, ಅರಿಶೀನ, ಕುಂಕುಮ ಹೂವನ್ನಿಟ್ಟು ಬಾಗಲು ಮುಚ್ಚಿ ಮನೆಯಿಂದ ಹೊರ ಹೋಗುವುದು ವಾಡಿಕೆ. ಹಿಂದಿನಿoದಲೂ ಬಂದ ಸಂಪ್ರದಾಯದ ಪ್ರಕಾರ ಕುಟುಂಬದವರು ಮೊದಲೇ ಅಡುಗೆ ಸಿದ್ಧಪಡಿಸಿ, ಅದನ್ನು ಕಟ್ಟಿಕೊಂಡು ಮನೆಯಿಂದ ಹೊರ ಹೋದರು. ಶಿರಸಿ ರಸ್ತೆಯಲ್ಲಿರುವ ಅರಣ್ಯ ಇಲಾಖೆಯ ಉದ್ಯಾನವನ, ಜೊಡಕೇರೆ ಬಳಿ ಇರುವ ಪಟ್ಟಣ ಪಂಚಾಯತ ಉದ್ಯಾನವನ ಜನರಿಂದ ತುಂಬಿತ್ತು. ಮಾಗೋಡು, ಸಾತೊಡ್ಡಿ, ಕವಡೀಕೆರೆ, ಜೇನುಕಲ್ಲು ಗುಡ್ಡ, ಚಂದಗುಳಿಯ ಗಂಟೆ ಗಣಪತಿ ದೇವಸ್ಥಾನದ ಬಳಿಯೂ ಸಾಕಷ್ಟು ಪ್ರಮಾಣದಲ್ಲಿ ಜನ ಸೇರಿದ್ದರು. ಫೆಬ್ರವರಿ 11ರಿಂದ 19ರವರೆಗೆ ಯಲ್ಲಾಪುರ ಜಾತ್ರೆ ನಡೆಯಲಿದ್ದು, ಜನವರಿ 27 ಹಾಗೂ ಫೆಬ್ರವರಿ 03ರಂದು ಸಹ ಹೊರ ಮಂಗಳವಾರ ಆಚರಣೆ ನಡೆಯಲಿದೆ. - [ಅಕ್ರಮ ಮರಳು ಸಾಗಾಟ: ಸಿಕ್ಕಿಬಿದ್ದ ಖಳನಾಯಕ!](https://mobiletime.in/2026/01/illegal-sand-transportation-the-villain-caught/): ಕುಮಟಾ ಹಿರೇಗುತ್ತಿಯ ಅಶೋಕ ನಾಯಕ ಅವರು ಸರ್ಕಾರಕ್ಕೆ ವಂಚಿಸಿದ್ದಾರೆ. ಜೊತೆಗೆ ಪರಿಸರಕ್ಕೆ ಮಾರಕವಾದ ಚಟುವಟಿಕೆ ನಡೆಸುತ್ತಿದ್ದಾರೆ. ಕುಮಟಾದ ಹಿರೆಗುತ್ತಿಯಲ್ಲಿ ವಾಸವಾಗಿರುವ ಅಶೋಕ ಹಮ್ಮಣ್ಣ ನಾಯಕ (58) ಅವರು ವ್ಯಾಪಾರಿಯಾಗಿದ್ದಾರೆ. ಆದರೆ, ಮರಳು ವ್ಯಾಪಾರ ಮಾಡಲು ಅವರು ಅನುಮತಿಪಡೆದಿಲ್ಲ. ಅದಾಗಿಯೂ, ಅವರು ಅಲ್ಲಿ-ಇಲ್ಲಿ ದಾಸ್ತಾನಾದ ಮರಳನ್ನು ಕದ್ದು ಅದನ್ನು ದುಬಾರಿ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ. ಅಕ್ರಮವಾಗಿ ಮರಳುಗಾರಿಕೆ ನಡೆಸುವುದು ಪರಿಸರಕ್ಕೆ ಮಾರಕ ಎಂಬ ಅರಿವಿದ್ದರೂ ಅವರು ಅದನ್ನು ಬಿಟ್ಟಿಲ್ಲ. `ಪರಿಸರ ನಾಶವಾದರೂ ಪರವಾಗಿಲ್ಲ. ತಾನೂ ದುಡ್ಡು ಮಾಡಬೇಕು’ ಎಂಬ ನಿಟ್ಟಿನಲ್ಲಿ ಅಶೋಕ ನಾಯಕ ಅವರು ತಮ್ಮ ಮರಳು ಲಾರಿ ಓಡಿಸುತ್ತಿದ್ದಾರೆ. ಗೋವಾ ನೋಂದಣಿ ಲಾರಿಯಲ್ಲಿ ಅವರು ನಿರಂತರವಾಗಿ ಮರಳು ಕದ್ದು ಸಾಗಾಟ ಮಾಡುತ್ತಿದ್ದಾರೆ. ಅಶೋಕ ನಾಯಕ ಅವರ ಅವ್ಯವಹಾರದ ಮೇಲೆ ಇದೀಗ ಪೊಲೀಸರ ಕಣ್ಣು ಬಿದ್ದಿದೆ. ಜನವರಿ 19ರ ರಾತ್ರಿ ಅಶೋಕ ನಾಯಕ ಅವರು ಹೊನ್ನಾವರದ ಮೂಡ್ಕಣಿಯಿಂದ ಮರಳು ಸಾಗಾಟ ಮಾಡುವಾಗ ಪೊಲೀಸರು ಬೆನ್ನತ್ತಿದ್ದಾರೆ. ಕುಮಟಾದಿಂದ ಅಂಕೋಲಾ ಕಡೆ ಹೊರಟಿದ್ದ ಅವರನ್ನು ಅವರದ್ದೇ ಊರಿನ ಹಿರೆಗುತ್ತಿ ಚೆಕ್ ಪೋಸ್ಟ್ ಬಳಿ ಗೋಕರ್ಣ ಪೊಲೀಸರು ತಡೆದಿದ್ದಾರೆ. ಗೋಕರ್ಣ ಪಿಸೈ ಶಶಿಧರ್ ಮರಳು ಲಾರಿ ತಪಾಸಣೆ ನಡೆಸಿದ್ದು, ಅಕ್ರಮ ನಡೆಸಿದ ಅಶೋಕ ನಾಯಕ ವಿರುದ್ಧ ಕಾನೂನು ಕ್ರಮ ಜರುಗಿಸಿದ್ದಾರೆ. - [ಅರಣ್ಯಾಧಿಕಾರಿಗಳ ಮೋಜಿಗೆ ಸಾಗವಾನಿ ಮರಕ್ಕೆ ಕೊಡಲಿ!](https://mobiletime.in/2026/01/let-the-savoy-tree-be-chopped-down-for-the-fun-of-the-forest-officials/): ಕಾಳಿ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಮೋಜು-ಮಸ್ತಿ ಮಾಡುವದಕ್ಕಾಗಿ ಅರಣ್ಯಾಧಿಕಾರಿಗಳು ಪ್ಯಾರಾಗೊಲಾ ನಿರ್ಮಾಣ ಮಾಡುತ್ತಿದ್ದಾರೆ. ಈ ಪ್ಯಾರಾಗೋಲಾ ನಿರ್ಮಾಣಕ್ಕೆ ಸಾಗವಾನಿ ಮರ ತುಂಡರಿಸಿದ್ದಾರೆ! ಕಾಳಿ ಹುಲಿ ಸಂರಕ್ಷಿತ ಪ್ರದೇಶವನ್ನು ಅತ್ಯಂತ ಸೂಕ್ಷ ಪ್ರದೇಶ ಎಂದು ಗುರುತಿಸಲಾಗಿದೆ. ಅದಾಗಿಯೂ ಜೊಯಿಡಾದ ಗುಂದ ವಲಯದ ಚಾಪೆರಾ ಕಳ್ಳಬೇಟೆ ನಿಗ್ರಹ ಕ್ಯಾಂಪಿನಲ್ಲಿ ಅರಣ್ಯ ಕಾನೂನುಗಳ ಉಲ್ಲಂಘನೆ ನಡೆಯುತ್ತಿದೆ. ಕಾಡಿನಲ್ಲಿ ಕಳ್ಳಬೇಟೆ, ಅಕ್ರಮ ಮರಕಡಿತ ತಡೆಯಬೇಕಾದ ಕ್ಯಾಂಪಿನ ಆವರಣದಲ್ಲೇ ಇದೀಗ ಪಾರ್ಟಿ ಮಾಡುವುದಕ್ಕಾಗಿ ಪ್ಯಾರಾಗೋಲಾ ನಿರ್ಮಾಣ ಕೆಲಸ ನಡೆದಿದೆ. ಇಲ್ಲಿ ಸಾಗವಾನಿ ಮರಗಳನ್ನು ಬಳಸಿ ಹೊಸ ಪ್ಯಾರಾಗೊಲಾ ನಿರ್ಮಾಣ ಕೆಲಸ ನಡೆದಿದೆ. ಬೃಹತ್ ಗಾತ್ರದ ಜೀವಂತ ನಂದಿ ಮರದ ಕೊಂಬೆಗಳನ್ನು ಕಡಿದು ಅದರ ಅಡಿ ಜಾಗ ಸಿದ್ಧಪಡಿಸಲಾಗಿದೆ. ಮೆಣಪತ್ರಿ ಕಾಡಿನಿಂದ ಲಕ್ಷಾಂತರ ರೂಪಾಯಿ ಮೌಲ್ಯದ ೫೦ಕ್ಕೂ ಹೆಚ್ಚು ಸಾಗವಾನಿ ಎಳೆಗಳು ಹಾಗೂ ಕಂಬಗಳನ್ನು ತಂದು ಕಾಮಗಾರಿ ಮಾಡಲಾಗುತ್ತಿದೆ. ಹುಲಿ ಸಂರಕ್ಷಿತ ಪ್ರದೇಶದಲ್ಲಿ ಮರ ಕಡಿತ, ಸಾಗವಾನಿ ಸಾಗಣೆ, ಯಾವುದೇ ಶಾಶ್ವತ ನಿರ್ಮಾಣ ಕಾರ್ಯಗಳಿಗೆ ಕಟ್ಟುನಿಟ್ಟಿನ ನಿಯಮಗಳಿವೆ. ಆದರೆ ಇಲ್ಲಿ ಪ್ಯಾರಾಗೊಲಾ ನಿರ್ಮಾಣಕ್ಕೆ ಅದ್ಯಾವ ನಿಯಮೂ ಅನ್ವಯ ಆಗಿಲ್ಲ. ಸಾಗವಾನಿ ಮರ ಸಾಗಾಣಿಕೆ, ನಂದಿ ಮರ ಕಡಿತದ ಬಗ್ಗೆ ಅಧಿಕಾರಿಗಳ ಬಳಿಯೂ ಉತ್ತರವಿಲ್ಲ. - [ಶಿವ ಶಿವ ಎಂದರೆ ಭಯವಿಲ್ಲ..](https://mobiletime.in/2026/01/shiva-shiva-means-no-fear/): ಪ್ರಸಿದ್ಧ ಪುಣ್ಯ ಕ್ಷೇತ್ರ ಮುರುಡೇಶ್ವರ ಜಾತ್ರೆಗೆ ಲಕ್ಷಾಂತರ ಜನ ಆಗಮಿಸಿದ್ದು, ಎಲ್ಲರೂ ಸೇರಿ ಭಕ್ತಿ-ಭಾವದಿಂದ ದೇವರ ಸೇವೆ ಮಾಡಿದ್ದಾರೆ. ಮಂಗಳವಾರ ಸಂಜೆ ಮುರುಡೇಶ್ವರ ದೇವರ ಮಹಾರಥೋತ್ಸವ ನಡೆದಿದೆ. ಮಂಟಪ ಅಲಂಕಾರ, ಭಕ್ತರ ಹರ್ಷೋದ್ಗಾರದ ನಡುವೆ ವಿಜ್ರಂಭಣೆಯಿAದ ಉತ್ಸವ ಆಚರಿಸಲಾಗಿದೆ. ಜಾತ್ರೆಯ ಅಂಗವಾಗಿ ಜನವರಿ 15ರಂದು ಮಕರ ಸಂಕ್ರಾAತಿಯ ದಿನ ಧ್ವಜಾರೋಹಣ ನಡೆಯಿತು. ವಿವಿಧ ಧಾರ್ಮಿಕ ಕಾರ್ಯಕ್ರಮಗಳು, ಪ್ರತಿ ದಿನ ಉತ್ಸವಾದಿಗಳು ನಡೆದವು. ಅದಾದ ನಂತರ ಚಿನ್ನದ ರಥೋತ್ಸವ ಜರುಗಿ ಜನವರಿ 20ರಂದು ಮಹಾರಥೋತ್ಸವ ಜರುಗಿತು. ಮಹಾರಥೋತ್ಸವದ ಅಂಗವಾಗಿ ಬೆಳಿಗ್ಗೆಯಿಂದಲೆ ದೇವಸ್ಥಾನದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಹೋಮ ಹವನಗಳನ್ನು ಭಕ್ತರು ಕಣ್ತುಂಬಿಕೊoಡರು. ಮಧ್ಯಾಹ್ನ ರಥಾರೋಹಣದ ನಂತರ ಸಾವಿರಾರು ಭಕ್ತಾಧಿಗಳು ರಥಕಾಣಿಕೆ ನೀಡಿ, ರಥೋತ್ಸವದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಸಂಜೆ ರಥೋತ್ಸವಕ್ಕೆ ಚಾಲನೆ ನೀಡಲಾಯಿತು. ರಥೋತ್ಸವದ ಸಂದರ್ಭದಲ್ಲಿ ಸಾವಿರಾರು ಜನರು ಭಾಗವಹಿಸಿ ಭಕ್ತಿ ಪ್ರದರ್ಶನ ಮಾಡಿದರು. ದೇವಸ್ಥಾನದ ವ್ಯವಸ್ಥಾಪಕ ಮಂಜುನಾಥ ಶೆಟ್ಟಿ, ನಾಗರಾಜ ಶೆಟ್ಟಿ, ಹಿರಿಯರಾದ ಎಸ್ ಎಸ್ ಕಾಮತ್, ಎನ್ ಎಸ್ ಭಟ್ರಹಿತ್ಲು, ಮಾವಳ್ಳಿ-1 ಗ್ರಾಮ ಪಂಚಾಯತ್ ಅಧ್ಯಕ್ಷೆ ನಯನಾ ನಾಯ್ಕ, ಮಾವಳ್ಳಿ – 2 ಗ್ರಾಮ ಪಂಚಾಯತ್ ಅಧ್ಯಕ್ಷೆ ನಾಗರತ್ನಾ ಪಡಿಯಾರ್, ಪ್ರಧಾನ ಅರ್ಚಕರಾದ ಜಯರಾಮ ಅಡಿಗಳ್, ಶಿವರಾಮ ಅಡಿಗಳ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವೆಂಕಟೇಶ ನಾಯ್ಕ, ಕಾಂಗ್ರೆಸ್ ರಾಜ್ಯ ಮಹಿಳಾ ಕಾರ್ಯದರ್ಶಿ ಬೀನಾ ವೈದ್ಯ, ಗ್ರಾಮ ಪಂಚಾಯತ್ ಸದಸ್ಯ ಕೃಷ್ಣ ನಾಯ್ಕ ಜಮೀನ್ದಾರ, ಕೈಕಿಣಿ ಗ್ರಾಮ ಪಂಚಾಯತ್ ಅಧ್ಯಕ್ಷ ರಾಜು ನಾಯ್ಕ, ಉದ್ಯಮಿಗಳಾದ ಗಣೇಶ್ ಹರಿಕಾಂತ ಈ ಉತ್ಸವದಲ್ಲಿ ಮುಂಚೂಣಿಯಾಗಿ ಕಾಣಿಸಿದರು. ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕೃಷ್ಣಮೂರ್ತಿ, ಡಿ ವೈ ಎಸ್ ಪಿ. ಮಹೇಶ ಎಂ ಕೆ., ಮುರ್ಡೇಶ್ವರ ವೃತ್ತ ನಿರೀಕ್ಷಕ ಜಗದೀಶ ಹಂಚಿನಾಳ್ ಹಾಗೂ ಪಿಎಸ್‌ಐ ಹನುಮಂತ ಬಿರಾದಾರ ನೇತೃತ್ವದಲ್ಲಿ ಬಿಗಿ ಭದ್ರತೆ ಮಾಡಲಾಗಿತ್ತು. ದೂರ ದೂರದ ಊರಿನಿಂದ ಬಂದ ಭಕ್ತರು ಸಾಗರದ ಅಂಚಿನಲ್ಲಿ ನಡೆದ ಉತ್ಸವಕ್ಕೆ ಸಾಕ್ಷಿಯಾದರು. - [ಗಗನಸಖಿಯ ಆತ್ಮಹತ್ಯೆ: 11ನೇ ದಿನಕ್ಕೂ ಬಾರದ ಆರೋಪಿ!](https://mobiletime.in/2026/01/flight-attendants-suicide-accused-fails-to-return-even-after-11-days/): ಗಗನಸಖಿ ಆಗಬೇಕು ಎಂದು ಕನಸು ಕಂಡಿದ್ದ ರಿಶೇಲ್ ಡಿಸೋಜಾ ಆತ್ಮಹತ್ಯೆ ಹಾಗೂ ಚಿರಾಗ್ ಕೋಠಾರಕರ್ ಪರಾರಿ ಪ್ರಕರಣ ಮತ್ತೊಂದು ಸ್ವರೂಪಪಡೆದಿದೆ. ಆರೋಪಿ ಬಂಧನ ಹಾಗೂ ಸಮಗ್ರ ತನಿಖೆಗೆ ಆಗ್ರಹಿಸಿ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆದಿದೆ. ಪ್ರತಿಭಟನೆಯಲ್ಲಿ ಭಾಗವಹಿಸಿದ ಸಾವಿರಾರು ಜನರ ಮುಂದೆ ರಿಶೇಲ್ ಡಿಸೋಜಾ ಅವರ ತಾಯಿ ರೀನಾ ಡಿಸೋಜಾ ಕಣ್ಣೀರು ಸುರಿಸಿದ್ದಾರೆ. `ತಮ್ಮ ಮಗಳ ಸಾವಿಗೆ ನ್ಯಾಯ ಸಿಗಬೇಕು’ ಎಂದವರು ಒತ್ತಾಯಿಸಿದ್ದಾರೆ. `ಜಿಲ್ಲಾ ಪಂಚಾಯತ ಮಾಜಿ ಸದಸ್ಯೆ ಚೈತ್ರಾ ಕೋಠಾರಕರ್ ಅವರ ಪುತ್ರ ಚಿರಾಗ್ ಕೋಠಾರಕರ್ ಅವರ ಕಾಟದಿಂದಲೇ ರಿಶೇಲ್ ಡಿಸೋಜಾ ಆತ್ಮಹತ್ಯೆಗೆ ಶರಣಾಗಿದ್ದಾರೆ. ರೀಶೆಲ್ ಅವರ ದೇಹದ ಮೇಲೆ ಗಾಯದ ಗುರುತುಗಳಿದ್ದು, ಸಾವಿಗೂ ಮುನ್ನ ಅತ್ಯಾಚಾರ ನಡೆದಿದೆ’ ಎಂದು ಪ್ರತಿಭಟನಾಕಾರರು ದೂರಿದ್ದಾರೆ. `ರೀಶೆಲ್ ದೇಹವನ್ನು ಮರು ಮರಣೋತ್ತರ ಪರೀಕ್ಷೆ ನಡೆಸಬೇಕು. ದೇಹದ ಮೇಲಿದ್ದ ಗಾಯದ ಗುರುತನ್ನು ಲವ್ ಬೈಟ್ ಎಂದು ವೈದ್ಯರು ನಮೂದಿಸಿದ್ದು, ಆ ಬಗ್ಗೆಯೂ ತನಿಖೆ ನಡೆಯಬೇಕು’ ಎಂದು ಆಗ್ರಹಿಸಿದ್ದಾರೆ. ಮಂಗಳವಾರ ಮಿತ್ರ ಸಮಾಜದ ಮೈದಾನದಿಂದ ಜಿಲ್ಲಾಧಿಕಾರಿ ಕಚೇರಿವರೆಗೂ ಪ್ರತಿಭಟನಾಕಾರರು ಪಾದಯಾತ್ರೆ ನಡೆಸಿದ್ದು, ಪ್ರತಿಭಟನಾಕಾರರ ಪರ ಶಾಸಕ ಸತೀಶ್ ಸೈಲ್ ಸಹ ಮಾತನಾಡಿದ್ದಾರೆ. ಸಾವಿರಾರು ಜನ ರಿಶೇಲ್ ಸಾವಿಗೆ ಕಾರಣರಾದವರ ವಿರುದ್ಧ ಘೋಷಣೆ ಕೂಗಿ ನ್ಯಾಯಕ್ಕಾಗಿ ಆಗ್ರಹಿಸಿದ್ದಾರೆ. `ಪೊಲೀಸರು ತನಿಖೆಯಲ್ಲಿ ವಿಳಂಬ ನೀತಿ ಅನುಸರಿಸಿದ್ದಾರೆ’ ಎಂದು ಸಹ ಪ್ರತಿಭಟನಾಕಾರರು ಆಕ್ರೋಶವ್ಯಕ್ತಪಡಿಸಿದ್ದಾರೆ. `ರೀಶೆಲ್ ಸಾವು ಸಂಭವಿಸಿ 11 ದಿನ ಕಳೆದರೂ ಆರೋಪಿ ಸಿಕ್ಕಿಲ್ಲ. ಈ ಪ್ರಕರಣ ತನಿಖೆಗೆ ಎಸ್ ಐ ಟಿ ರಚಿಸಬೇಕು’ ಎಂದು ಪ್ರತಿಭಟನಾಕಾರರು ಒತ್ತಾಯಿಸಿದ್ದಾರೆ. ಜಿಲ್ಲಾಧಿಕಾರಿ ಕೆ ಲಕ್ಷ್ಮೀಪ್ರಿಯಾ ಹಾಗೂ ಎಸ್ಪಿ ದೀಪನ್ ಎಂ ಎನ್ ಪ್ರತಿಭಟನಾಕಾರರ ಅಳಲು ಆಲಿಸಿದ್ದಾರೆ. ಮರು ಮರಣೋತ್ತರ ಪರೀಕ್ಷೆಗೆ ಒಪ್ಪಿಗೆ ಸಿಕ್ಕಿದೆ. - [ರೈಲಿನ ಅಡಿಗೆ ಬಿದ್ದ ಲಾರಿ ಚಾಲಕ: ಸಾವು!](https://mobiletime.in/2026/01/lorry-driver-dies-after-falling-into-trains-kitchen/): ಲಾರಿಗಳನ್ನು ಒಯ್ಯುವ ರೋ ರೋ ರೈಲಿನಿಂದ ಬಿದ್ದು ಚಾಲಕರೊಬ್ಬರು ಸಾವನಪ್ಪಿದ್ದಾರೆ. ಮಹಾರಾಷ್ಟದ ಲಕ್ಷಣ ಸೂರ್ಯವಂಶಿ ಅವರು ಲಾರಿ ಚಾಲಕರಾಗಿದ್ದರು. ಮುಂಬೈಗೆ ಹೋಗಿ ಲಾರಿಯಲ್ಲಿ ಆಹಾರ ಸಾಮಗ್ರಿ ತುಂಬಿಸಿದ ಅವರು ಆ ಲಾರಿಯನ್ನು ರೈಲಿನ ಮೂಲಕ ಕೇರಳಕ್ಕೆ ಒಯ್ಯುವ ಕೆಲಸ ಮಾಡಿದ್ದರು. ರೈಲಿನ ಮೇಲೆ ಲಾರಿ ಹತ್ತಿಸಿ ಅದೇ ಲಾರಿಯಲ್ಲಿ ಅವರು ಮಲಗಿದ್ದರು. ಕೋಲಾಡ್ ರೈಲು ನಿಲ್ದಾಣದಿಂದ ಹೊರಟ ರೈಲು ಉತ್ತರ ಕನ್ನಡ ಪ್ರವೇಶಿಸಿದ್ದು, ಜನವರಿ 19ರ ನಸುಕಿನಲ್ಲಿ ಹೊನ್ನಾವರದ ಮಂಕಿ ಪ್ರದೇಶವನ್ನು ದಾಟಿತು. ಆ ವೇಳೆ ನಿದ್ದೆಯಿಂದ ಎದ್ದ ಲಾರಿ ಚಾಲಕ ಲಕ್ಷಣ ಸೂರ್ಯವಂಶಿ ಅವರು ಮೂತ್ರ ವಿಸರ್ಜನೆಗಾಗಿ ಕೆಳಗಿಳಿದರು. ಆದರೆ, ಅವರು ಲಾರಿಯಿಂದ ಹಾರಿ ರೈಲು ಹಳಿಗಳ ಮೇಲೆ ಬಿದ್ದರು. ಅದೇ ರೈಲಿನ ಚಕ್ರದ ಅಡಿಗೆ ಸಿಲುಕಿ ಸಾವನಪ್ಪಿದರು. ಅವರ ದೇಹ ಛಿದ್ರ ಛಿದ್ರವಾಗಿದ್ದು, ಮತ್ತೊಬ್ಬ ಲಾರಿ ಚಾಲಕ ಅದನ್ನು ಗಮನಿಸಿ ಪೊಲೀಸರಿಗೆ ತಿಳಿಸಿದರು. ಕೆಳಗಿನೂರಿನ ನಾಜಗಾರದಲ್ಲಿ ಅವರ ಶವ ಸಿಕ್ಕಿದೆ. - [ಬೆಂಕಿಯಲ್ಲಿ ಬೆಂದ ದೇಹಕ್ಕೆ ಮುಕ್ತಿ](https://mobiletime.in/2026/01/liberation-from-a-body-burned-in-fire/): ಭಟ್ಕಳದ ವೃದ್ಧೆಯೊಬ್ಬರು ತಮ್ಮ ಬೆಂಕಿಯಲ್ಲಿ ಬೆಂದು ಸಾವನಪ್ಪಿದ್ದಾರೆ. ಅಡುಗೆ ಮಾಡುವಾಗ ಬಟ್ಟೆಗೆ ಅಂಟಿದ ಬೆಂಕಿ ಅವರ ಮೈ ಸುಟ್ಟಿದ್ದು, ಎರಡು ವಾರ ನರಳಾಟ ನಡೆಸಿ ಕೊನೆಯುಸಿರೆಳೆದಿದ್ದಾರೆ. ಭಟ್ಕಳದ ಮುರುಡೇಶ್ವರ ಬಳಿಯ ಉಳ್ಮಣ ಬೆಂಗ್ರೇಯಲ್ಲಿ ಮಾಸ್ತಿ ಜಟ್ಟಯ್ಯ ದೇವಾಡಿಗ ಅವರು ವಾಸವಾಗಿದ್ದರು. 88 ವರ್ಷದ ಅವರು ದಿನ ನಿತ್ಯದ ಕೆಲಸಗಳನ್ನು ತಾವೇ ಮಾಡಿಕೊಳ್ಳುತ್ತಿದ್ದರು. ಜನವರಿ 5ರಂದು ಅವರು ಮನೆಯಲ್ಲಿ ಕೆಲಸ ಮಾಡುತ್ತಿದ್ದಾಗ ಅವರ ಅರಿವಿಗೆ ಬಾರದೇ ಮನೆಯ ಒಲೆಯಲ್ಲಿದ್ದ ಬೆಂಕಿ ದೇಹ ಸ್ಪರ್ಶಿಸಿತು. ಪರಿಣಾಮ ಅವರ ಹೊಟ್ಟೆ, ಎದೆ, ಕುತ್ತಿಗೆ ಭಾಗಗಕ್ಕೆ ಭಾರೀ ಪ್ರಮಾಣದ ಗಾಯವಾಯಿತು. ಮೈ ಸುಟ್ಟಿಕೊಂಡು ನರಳಾಡುತ್ತಿದ್ದ ಮಾಸ್ತಿ ದೇವಾಡಿಗ ಅವರನ್ನು ಪುತ್ರ ಗಣಪತಿ ದೇವಾಡಿಗ ಅವರು ಆಸ್ಪತ್ರೆಗೆ ದಾಖಲಿಸಿದರು. ಭಟ್ಕಳ ಸರ್ಕಾರಿ ಆಸ್ಪತ್ರೆಯ ವೈದ್ಯರು ಮಾಸ್ತಿ ದೇವಾಡಿಗ ಅವರ ಆರೈಕೆ ಮಾಡಿದರು. ಆದರೆ, ಅವರನ್ನು ಬದುಕಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಬೆಂಕಿಯಲ್ಲಿ ಬೆಂದು 15 ದಿನಗಳ ಕಾಲ ಬದುಕಿದ್ದ ಮಾಸ್ತಿ ದೇವಾಡಿಗ ಅವರು ಸೋಮವಾರ ಕೊನೆಯುಸಿರೆಳೆದರು. - [ಬಹಿಷ್ಕಾರದ ಬಿಸಿಗೆ ಮತಾಂತರದ ಕಾವು: ಸ್ಪಷ್ಟನೆ!](https://mobiletime.in/2026/01/the-heat-of-boycott-is-fueling-conversions-clarification/): ಕುಮಟಾದ ಕೇಶವ ಅಂಬಿಗ ಕುಟುಂಬದ ಬಹಿಷ್ಕಾರದ ವಿಷಯ ಹೊಸ ತಿರುವುಪಡೆದಿದೆ. `ಆ ಕುಟುಂಬಕ್ಕೆ ಬಹಿಷ್ಕಾರ ಹಾಕಿಲ್ಲ’ ಎಂದು ಊರಿನವರು ಹೇಳಿದ್ದು, ಅದನ್ನು ಕೇಶವ ಅಂಬಿಗ ಕುಟುಂಬದವರು ಅಲ್ಲಗಳೆದಿದ್ದಾರೆ. `ಬಹಿಷ್ಕಾರದ ವಿಷಯ ಪ್ರಸ್ತಾಪಿಸಿದರೆ ಅದಕ್ಕೆ ಕೋಮು ಬಣ್ಣ ಬಡಿಯಲಾಗುತ್ತಿದೆ. ಮತಾಂತರದ ವಿಷಯ ಮುಂದೆ ಮಾಡಿ ತನಿಖೆಯ ದಿಕ್ಕು ತಪ್ಪಿಸಲಾಗುತ್ತಿದೆ’ ಎಂದು ಕೇಶವ ಅಂಬಿಗ ಅವರು ದೂರಿದ್ದಾರೆ. `75 ಕುಟುಂಬದವರು ತಮ್ಮೊಂದಿಗೆ ಮಾತನಾಡುತ್ತಿಲ್ಲ. ಮಾತನಾಡಿದರೆ 5 ಸಾವಿರ ರೂ ದಂಡ ಕಟ್ಟಬೇಕು’ ಎಂದು ಗಂಗಾಧರ ಅಂಬಿಗ ಅವರು ಬೆದರಿಕೆ ಹಾಕಿದ್ದಾರೆ. ಹೀಗಾಗಿ 9 ತಿಂಗಳಿನಿAದ ನಮ್ಮ ಸಮುದಾಯದ ಯಾರೂ ನೆರವಿಗೆ ಬಂದಿಲ್ಲ’ ಎಂದವರು ಅಳಲು ತೋಡಿಕೊಂಡಿದ್ದಾರೆ. `ನ್ಯಾಯಕ್ಕಾಗಿ ನಾವು ಜನಸಾಮಾನ್ಯರ ಸಮಾಜ ಕಲ್ಯಾಣ ಕೇಂದ್ರವನ್ನು ಸಂಪರ್ಕಿಸಿದ್ದು, ಅಲ್ಲಿನ ಅಧ್ಯಕ್ಷ ಆಗ್ನೇಲ್ ರೋಡ್ರಿಗಸ್ ಅವರು ಕ್ರಿಶ್ಚಿಯನ್ ಎಂಬ ಕಾರಣಕ್ಕೆ ಮತಾಂತರದ ಆರೋಪ ಮಾಡುತ್ತಿದ್ದಾರೆ. ನಮ್ಮ ಊರಿಗೆ ಸಂಬAಧವೇ ಇಲ್ಲದ ಮಿರ್ಜಾನಿನ ಗಣೇಶ ಅಂಬಿಗ ಅವರು ಅನಗತ್ಯ ಆರೋಪ ಮಾಡುತ್ತಿದ್ದಾರೆ’ ಎಂದು ದೂರಿದ್ದಾರೆ. ಆಗ್ನೇಲ್ ರೋಡ್ರಿಗಸ್ ಮಾತನಾಡಿ `ಜನಸಾಮಾನ್ಯರ ಸಮಾಜ ಕಲ್ಯಾಣ ಕೇಂದ್ರ ಯಾವುದೇ ಒಂದು ಸಮುದಾಯಕ್ಕೆ ಮಾತ್ರ ಸೀಮಿತವಲ್ಲ’ ಎಂದರು. ನಿವೃತ್ತ ಸರಕಾರಿ ನೌಕರ ನಾಗೇಶ್ ಹುಲಾಸ್ವಾರ ಮಾತನಾಡಿ ಗಣೇಶ ಅಂಬಿಗ ಅವರ ವಿರುದ್ಧ ಕಿಡಿಕಾರಿದರು. ಪ್ರಮುಖರಾದ ಕೃಷ್ಣ ಪಟಗಾರ, ಗಣಪತಿ ಅಂಬಿಗ, ಸುಬ್ಬಿ ಅಂಬಿಗ, ಸುಧಾಕರ್ ನಾಯ್ಕ, ನಾಗೇಶ್ ಹುಲಾಸ್ವಾರ, ಕೃಷ್ಣ ನಾರಾಯಣ ಪಟಗಾರ, ಹನುಮ ಪಟಗಾರ, ಪುರ್ಸು ಹರಿಕಂತ್ರ, ರತ್ನಾಕರ್ ಭಟ್, ಈಶ್ವರ್ ನಾಯ್ಕ್ ಇದ್ದರು. - [ಹೆಗಡೆ ಜಾತ್ರೆ: ಅಂಗಡಿಕಾರರ ಹಸಿವು ನೀಗಿಸಿದ ನ್ಯಾಯವಾದಿ](https://mobiletime.in/2026/01/hegde-fair-lawyer-satisfies-shopkeepers-hunger/): ಕುಮಟಾದ ಹೆಗಡೆಯಲ್ಲಿ ಜನವರಿ 15ಕ್ಕೆ ಅದ್ಧೂರಿ ಜಾತ್ರೆ ನಡೆದಿದ್ದು, ಜಾತ್ರೆಗೆ ಬಂದಿದ್ದ ಅಂಗಡಿಕಾರರಿಗೆ ನ್ಯಾಯವಾದಿ ವಿನಾಯಕ ಪಟಗಾರ ಅವರು ಅನ್ನದಾನ ಮಾಡಿದ್ದಾರೆ. ಕುಮಟಾದ ಹೆಗಡೆಯಲ್ಲಿ ಪ್ರತಿ ವರ್ಷ ಜಾತ್ರೆ ನಡೆಯುತ್ತದೆ. ಇಲ್ಲಿನ ಶಾಂತಿಕಾoಬಾ ದೇವಿಯ ಜಾತ್ರೆಗೆ ಸಾವಿರಾರು ಜನ ಬರುತ್ತಾರೆ. ಬರುವ ಭಕ್ತರನ್ನು ನಂಬಿ ಬಗೆ ಬಗೆಯ ಅಂಗಡಿಕಾರರು ಮಳಿಗೆ ಹಾಕುತ್ತಿದ್ದು, ಅಂಗಡಿಕಾರರು ಮೂರು ದಿನಗಳ ಕಾಲ ಅಲ್ಲಿಯೇ ವಾಸವಾಗಿರುತ್ತಾರೆ. ಆ ಅಂಗಡಿಕಾರರ ಮೇಲೆ ಅನುಕಂಪಹೊoದಿದ ನ್ಯಾಯವಾದಿ ವಿನಾಯಕ ಶಿವರಾಮ ಪಟಗಾರ ಅವರು ತಮ್ಮ ಸ್ವಂತ ವೆಚ್ಚದಿಂದ ಅವರ ಹೊಟ್ಟೆ ಹಸಿವು ದೂರ ಮಾಡಿದ್ದಾರೆ. ವಿನಾಯಕ ಪಟಗಾರ ಅವರು ಮನೆಯಲ್ಲಿಯೇ ಶುದ್ಧ ಆಹಾರ ತಯಾರಿಸಿ ಅದನ್ನು ಪ್ಯಾಕೇಟ್ ಮೂಲಕ ತಂದು ಅಂಗಡಿಕಾರರಿಗೆ ನೀಡಿದ್ದಾರೆ.  ಅಂಗಡಿಕಾರರು ಇದ್ದ ಸ್ಥಳಕ್ಕೆ ತೆರಳಿ ಅವರಿಗೆ ಆಹಾರ ಕೊಟ್ಟಿದ್ದಾರೆ. ಕಳೆದ ಐದು ವರ್ಷಗಳಿಂದ ವಿನಾಯ ಪಟಗಾರ ಅವರು ಈ ಕಾರ್ಯ ಮಾಡುತ್ತಿದ್ದು, ಬೇರೆ ಬೇರೆ ಊರುಗಳಿಂದ ಕುಮಟಾಗೆ ಬಂದಿದ್ದವರಿಗೆ ಈ ಕ್ಷೇತ್ರದ ಬಗ್ಗೆ ಹೆಮ್ಮೆಯಾಗುವ ಹಾಗೇ ನಡೆದುಕೊಂಡಿದ್ದಾರೆ. ವಿನಾಯಕ ಪಟಗಾರ ಅವರು ಗ್ರಾಮು ಒಕ್ಕಲು ಯುವ ಬಳಗದ ಅಧ್ಯಕ್ಷರೂ ಆಗಿದ್ದಾರೆ. ಅವರ ಸೇವಾ ಕಾರ್ಯಕ್ಕೆ ಎಲ್ಲಡೆ ಮೆಚ್ಚುಗೆಯ ಮಾತುಗಳು ವ್ಯಕ್ತವಾಗಿದೆ. - [ಉಪವಾಸಕ್ಕೆ ತಡೆ ಒಡ್ಡಿದ ಉಸ್ತುವಾರಿ ಸಚಿವ!](https://mobiletime.in/2026/01/minister-blocks-satyagriha-from-fasting/): ಶಿರಸಿ ಜಾತ್ರೆಗೆ ಮೂಲಭೂತ ಸೌಕರ್ಯ ಕಲ್ಪಿಸದೇ ಇದ್ದರೆ ಉಪವಾಸ ಸತ್ಯಾಗ್ರಹ ನಡೆಸುವುದಾಗಿ ಘೋಷಿಸಿದ್ದ ಸಾಮಾಜಿಕ ಕಾರ್ಯಕರ್ತ ಅನಂತಮೂರ್ತಿ ಹೆಗಡೆ ಅವರಿಗೆ ಸಚಿವ ಮಂಕಾಳು ವೈದ್ಯ ಸಮಾಧಾನ ಮಾಡಿದ್ದಾರೆ. ಹೀಗಾಗಿ ಸದ್ಯದ ಮಟ್ಟಗೆ ಉಪವಾಸ ಸತ್ಯಾಗ್ರಹವನ್ನು ಮುಂದೂಡಿರುವುದಾಗಿ ಅನಂತಮೂರ್ತಿ ಹೆಗಡೆ ಘೋಷಿಸಿದ್ದಾರೆ. `ಪ್ರಸಿದ್ಧ ಶಿರಸಿ ಜಾತ್ರೆಗೆ ಸಂಬoಧಿಸಿ ಬರುವ ಭಕ್ತಾದಿಗಳಿಗೆ ವಸತಿ, ಊಟ, ನೀರು ಒಳಗೊಂಡ ಮೂಲಭೂತ ಸೌಕರ್ಯ ಒದಗಿಸಬೇಕು’ ಎಂದು ಅನಂತಮೂರ್ತಿ ಹೆಗಡೆ ಅವರು ಆಗ್ರಹಿಸಿದ್ದರು. ತಮ್ಮ ಬೇಡಿಕೆ ಈಡೇರಿಕೆಗಾಗಿ ಫೆ 3ರಂದು ಧರಣಿ ನಡೆಸುವುದಾಗಿ ಅವರು ಹೇಳಿದ್ದರು. ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ, ಜಿಲ್ಲಾಧಿಕಾರಿ ಕೆ ಲಕ್ಷ್ಮೀಪ್ರಿಯ ಹಾಗೂ ಶಾಸಕ ಭೀಮಣ್ಣ ನಾಯ್ಕ ಅವರಿಗೆ ಅನಂತಮೂರ್ತಿ ಹೆಗಡೆ ಈ ಕುರಿತು ಪತ್ರ ನೀಡಿದರು. ಈ ವೇಳೆ ಸಚಿವ ಮಂಕಾಳು ವೈದ್ಯ ಅವರು ಅನಂತಮೂರ್ತಿ ಹೆಗಡೆ ಅವರನ್ನು ಸಮಾಧಾನ ಮಾಡಿದರು. ಜಾತ್ರಾ ಪೂರ್ವಭಾವಿ ಸಭೆಯಲ್ಲಿ ಅನಂತಮೂರ್ತಿ ಹೆಗಡೆ ಮಾತನಾಡಿ ತಮ್ಮ ಬೇಡಿಕೆ ಮಂಡಿಸಿದರು. `ಜಾತ್ರಾ ಆರಂಭವಾಗುವುದರೊಳಗೆ ವ್ಯಾಪಾರಿಗಳು, ಭಕ್ತಾದಿಗಳನ್ನು ಒಳಗೊಂಡು ಸರ್ವರಿಗೂ ಅನುಕೂಲವಾಗುವಂತೆ ಎಲ್ಲ ಮೂಲಭೂತ ಸೌಕರ್ಯದ ವ್ಯವಸ್ಥೆ ಮಾಡಲಾಗುತ್ತದೆ’ ಎಂದು ಮಂಕಾಳು ವೈದ್ಯ ಅವರು ಘೋಷಿಸಿದರು. `ಸಚಿವರ ಮಾತಿನ ಮೇಲೆ ವಿಶ್ವಾಸವಿರಿಸಿ ಸದ್ಯಕ್ಕೆ ಫೆ 3ರ ಪ್ರತಿಭಟನೆ ಹಿಂಪಡೆಯಲಾಗಿದೆ’ ಎಂದು ಅನಂತಮೂರ್ತಿ ಹೆಗಡೆ ಹೇಳಿದ್ದಾರೆ. - [ಅಘನಾಶಿನಿ ಉಳಿಸಿ: ನದಿ ನೀರಿನಲ್ಲಿ ಜನ ಸಮಾವೇಶ!](https://mobiletime.in/2026/01/save-aghanashini-peoples-rally-in-the-river-water/): `ಅಘನಾಶಿನಿ ಉಳಿಸಿ’ ಎಂಬ ಹೋರಾಟ ದಿನದಿಂದ ದಿನಕ್ಕೆ ಸ್ವರೂಪ ಬದಲಿಸುತ್ತಿದ್ದು, ಅವೈಜ್ಞಾನಿಕ ಯೋಜನೆ ವಿರುದ್ಧ ಸಿದ್ದಾಪುರದ ಜನರು ರೊಚ್ಚಿಗೆದ್ದಿದ್ದಾರೆ. ಅಘನಾಶಿನಿ ನದಿಗೆ ಆಣೆಕಟ್ಟು ಕಟ್ಟಲು ಉದ್ದೇಶಿಸಿದ ಗೆಜಕಟ್ಟಾ ಭಾಗಕ್ಕೆ ಭೇಟಿ ನೀಡಿದ ಬಾಳೆಕೊಪ್ಪದ ಜನ ಅಲ್ಲಿನ ನದಿಗೆ ಇಳಿದು ಧರಣಿ ನಡೆಸಿದ್ದಾರೆ. `ಚಳಿಗಾಲದ ನಂತರ ನೀರು ಹರಿಯುವ ಪ್ರಮಾಣ ಕಡಿಮೆ ಆಗಲಿದೆ. ದಟ್ಟವಾದ ಕಾಡನ್ನು ಯೋಜನೆಗಾಗಿ ನಾಶ ಮಾಡಲಾಗುತ್ತದೆ. ಈ ಯೋಜನೆಯಿಂದ ವನ್ಯಜೀವಿ ಸಂಕಲಕ್ಕೆ ಸಹ ಸಮಸ್ಯೆ ಆಗಲಿದೆ’ ಎಂದು ಅಲ್ಲಿದ್ದವರು ವಿವರಿಸಿದರು. `ಅವೈಜ್ಞಾನಿಕ ಮತ್ತು ಪರಿಸರ ವಿರೋಧಿ ಅಘನಾಶಿನಿ ನದಿ ಜೋಡಣೆಯ ಯೋಜನೆಯನ್ನು ಸ್ಥಗಿತಗೊಳಿಸಬೇಕು’ ಎಂದು ಈ ವೇಳೆ ಹೋರಾಟಗಾರ ರವೀಂದ್ರ ನಾಯ್ಕ ಆಗ್ರಹಿಸಿದರು. ಹೋರಾಟಗಾರರು ನದಿಯ ಅಕ್ಕಪಕ್ಕದ ಮಣ್ಣಿನ ಗುಣವವನ್ನು ಪರೀಕ್ಷಿಸಿದರು. `ಯೋಜನೆಯಲ್ಲಿ ಪ್ರಸ್ತಾಪಿಸಿದಂತೆ ಕೇವಲ 1.2 ಲಕ್ಷ ಗಿಡ ಮಾತ್ರ ನಾಶವಾಗುವುದಿಲ್ಲ. ಇನ್ನಷ್ಟು ಕಾಡು ನಶಿಸಲಿದೆ’ ಎಂದವರು ವಿವರಿಸಿದರು. `ನದಿ ಜೋಡಣೆಯಿಂದ ನದಿಯ ಪಾವಿತ್ರತೆ ಮತ್ತು ಜನ ಸಾಮಾನ್ಯರ ಜೀವನಕ್ಕೆ ಆತಂಕ ಎದುರಾಗಿದೆ’ ಎಂದು ಸುರೇಶ ಹೆಗಡೆ ಹಸಗೆ ಕಳವಳವ್ಯಕ್ತಪಡಿಸಿದರು. `ಜನಾಭಿಪ್ರಾಯ ಸಂಗ್ರಹಿಸದೇ ಯೋಜನೆ ರೂಪಿಸಲಾಗಿದೆ’ ಎಂದು ನಾಗಪತಿ ಗೌಡ ಹುಕ್ಕಳ್ಳಿ ಅಸಮಧಾನವ್ಯಕ್ತಪಡಿಸಿದರು. ಮಾಬ್ಲೇಶ್ವರ ನಾಯ್ಕ ಬೇಡ್ಕಣಿ, ಹರಿ ನಾಯ್ಕ ಓಂಕಾರ, ಸೀತಾರಾಮ ಗೌಡ ಹುಕ್ಕಳ್ಳಿ, ನಾಗರಾಜ ಹಲಸಿನಮನೆ ಅವರು ತಮ್ಮ ಅಭಿಪ್ರಾಯಹೊರಹಾಕಿದರು. ಕೆ ಟಿ ನಾಯ್ಕ , ಎಮ್ ಪಿ ಗೌಡ, ರಾಜೇಶ್ ಭಟ್ಟ ಮಕ್ಕಿಗದ್ದೆ, ರಫೀಕ ಗೌಡಳ್ಳಿ, ಅಶೋಕ ನಾಯ್ಕ ಇಟಗಿ, ರಮೇಶ್ ನಾಯ್ಕ, ಮಧುಕೇಶ್ವರ, ವಿನಯ ನಾಯ್ಕ, ಮಾಬ್ಲೇಶ್ವರ ಕೃಷ್ಣಪ್ಪ ನಾಯ್ಕ, ವಿನಯ ತಿಮ್ಮಪ್ಪ ನಾಯ್ಕ, ಮಾದೇವ ನಾಯ್ಕ, ಭದ್ರ ಗೌಡ, ವಿನೋದ ಗೌಡ ಹುಕ್ಕಳ್ಳಿ, ಮಂಜುನಾಥ ನಾಯ್ಕ ಹುತ್ಗಾರ, ಮಾಬ್ಲೇಶ್ವರ ಗೌಡ ಸುಳಗಾರ, ನಾರಾಯಣ ಗೌಡ, ಈಶ್ವರ ನಾಯ್ಕ, ರಾಜು ನಾಯ್ಕ, ಶಿವಾನಂದ, ದಿವಾಕರ್ ಬಾಳೆಜಡ್ಡಿ ಅವರು ಯೋಜನೆ ಬಗ್ಗೆ ಆತಂಕವ್ಯಕ್ತಪಡಿಸಿದರು. ಅಘನಾಶಿನಿ ನದಿ ಜೋಡಣೆ ವಿರೋಧವಾಗಿ ಜಾಗೃತೆ ಮೂಡಿಸುವ ಉದ್ದೇಶದಿಂದ ಫೆಬ್ರವರಿ 2ರಂದು ಗೋಳಿಮಕ್ಕಿಯಲ್ಲಿ ಸಭೆ ನಡೆಸಲು ಎಲ್ಲರೂ ಸೇರಿ ನಿರ್ಧರಿಸಿದರು. ಗೋಳಿಮಕ್ಕಿಯಿಂದ ಗೆಜಕಟ್ಟಾವರೆಗೆ ಪಾದಯಾತ್ರೆ ನಡೆಸಲು ನಿರ್ಣಯ ಮಾಡಿದರು. - [ಅಸ್ನೋಟಿ: ಮಕ್ಕಳ ಮನಸ್ಸು ಅರಿತ ವಿಮಾ ಅಧಿಕಾರಿ](https://mobiletime.in/2026/01/asnoti-an-insurance-officer-who-understands-the-minds-of-children/): ಕಾರವಾರದ ಜೀವ ವಿಮಾ ನಿಗಮದ ಅಭಿವೃದ್ಧಿ ಅಧಿಕಾರಿ ಸಚಿನ್ ನಾಯಕ ಅವರು ಅಸ್ನೋಟಿಯ ಶಿವಾಜಿ ವಿದ್ಯಾ ಮಂದಿರಕ್ಕೆ ಭೇಟಿ ನೀಡಿದ್ದು, ಅಲ್ಲಿಯೇ ತಮ್ಮ ಪುತ್ರ ಕ್ರಿಶನ್ ನಾಯಕ ಅವರ ಜನ್ಮದಿನ ಆಚರಿಸಿದರು. ಮಗನ ಜನ್ಮ ದಿನದ ಅಂಗವಾಗಿ ಅಸ್ನೋಟಿ ವಸತಿ ನಿಲಯಕ್ಕೆ ಅಗತ್ಯವಿರುವ ಆಹಾರ ಧಾನ್ಯಗಳನ್ನು ಅವರು ವಿತರಿಸಿದರು. ನಂತರ ಮಾತನಾಡಿದ ಅವರು `ಸಾಮಾಜಿಕ ಹಾಗೂ ಶೈಕ್ಷಣಿಕವಾಗಿ ಸಾಧನೆ ಮಾಡಲು ಪ್ರತಿಯೊಬ್ಬರಿಗೂ ಶ್ರದ್ಧೆ ಬೇಕು. ಗುರುಗಳ ನುಡಿಯನ್ನು ಪಾಲಿಸಿ ಮಕ್ಕಳು ಸಾಧನೆ ಮಾಡಬೇಕು’ ಎಂದು ಕರೆ ನೀಡಿದರು. `ಸಾಮಾಜಿಕ ಕ್ಷೇತ್ರದಲ್ಲಿ ಮಹತ್ವದ ಸಾಧನೆ ಮಾಡಿದ ಸಚಿನ ನಾಯಕ ಅವರ ಸೇವೆ ಸದಾ ಸ್ಮರಣೀಯ’ ಎಂದು ಶಾಲಾ ಮುಖ್ಯಾಧ್ಯಾಪಕ ಗಣೇಶ ಬೀಷ್ಠಣ್ಣನವರ್ ಅವರು ಹೇಳಿದರು. ಸಂಸ್ಥೆ ವ್ಯವಸ್ಥಾಪಕರಾದ ಸಂದೀಪ ನಾಯಕ ಹಾಗೂ ಶಿಕ್ಷಕ ಸಂತೋಷ ಕಾಂಬಳೆ ಅವರು ಈ ವೇಳೆ ಹಾಜರಿದ್ದು, ಶಾಲೆಗೆ ನೆರವು ನೀಡಿದಕ್ಕೆ ಕೃತಜ್ಞತೆ ಸಲ್ಲಿಸಿದರು. - [ಅರಣ್ಯ ಹಕ್ಕು ಹೋರಾಟಕ್ಕೆ ರೈತ ಸಂಘ ಬದ್ಧ!](https://mobiletime.in/2026/01/farmers-union-committed-to-fight-for-forest-rights/): `ರಾಜ್ಯದಲ್ಲಿ ಎರಡೂವರೆ ಲಕ್ಷಕ್ಕೂ ಹೆಚ್ಚು ಅರಣ್ಯ ಭೂಮಿ ಸಾಗುವಳಿದಾರರಿದ್ದು, ಅವರಿಗೆ ಸಿಗಬೇಕಾದ ಹಕ್ಕು ನೀಡಲು ಕೇಂದ್ರ ಹಾಗೂ ರಾಜ್ಯ ಸರ್ಕಾರ ಹೊಸ ಷರತ್ತು ಮೂಲಕ ವಂಚಿಸುತ್ತಿದೆ’ ಎಂದು ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಟಿ ಯಶವಂತ ಅವರು ದೂರಿದ್ದಾರೆ. `ಈ ನಡೆ ವಿರೋಧಿಸಿ ರಾಜ್ಯದ ಎಲ್ಲಡೆ ಪ್ರತಿಭಟಿಸುತ್ತೇವೆ’ ಎಂದು ಅವರು ಎಚ್ಚರಿಸಿದ್ದಾರೆ. ಅಂಕೋಲಾದ ನಾಡವರ ಸಮುದಾಯ ಭವನದಲ್ಲಿ ಜಿಲ್ಲಾ ಮಟ್ಟದ 6ನೇ ರೈತ ಸಮ್ಮೇಳನದಲ್ಲಿ ಮಾತನಾಡಿದ ಅವರು `ಅತಿಕ್ರಮಣದಾರರಿಗೆ ಹಕ್ಕು ನೀಡಲು ಸರ್ಕಾರ ಅನಗತ್ಯ ದಾಖಲೆಗಳನ್ನು ಕೇಳುತ್ತಿದೆ. ಅರಣ್ಯ ಭೂಮಿ ಹಕ್ಕು ಪ್ರತಿಯೊಬ್ಬ ಅರ್ಜಿದಾರರಿಗೂ ಸಿಗಬೇಕು. ಗ್ರಾಮ ಅರಣ್ಯ ಹಕ್ಕು ಸಮಿತಿ ಅನುಮೋದನೆಯೇ ಅಂತಿಮ ವಾಗಿದ್ದು ಅದನ್ನು ಪರಿಗಣಿಸಬೇಕು’ ಎಂದು ಆಗ್ರಹಿಸಿದರು. `ಉತ್ತರ ಕನ್ನಡ ಜಿಲ್ಲೆಯ ಪರಿಸರಕ್ಕೆ ಮಾರಕವಾದ ನದಿ ಜೋಡಣೆ ಕೈಬಿಡಬೇಕು’ ಎಂದು ಒತ್ತಾಯಿಸಿದರು. `ಕುಣಬಿ, ಹಾಲಕ್ಕಿ, ಗೌಳಿ, ಕುಂಬ್ರಿ ಮರಾಠಿ ಸಮುದಾಯವನ್ನು ಪರಿಶಿಷ್ಟ ಸಮುದಾಯಕ್ಕೆ ಸೇರಿಸಲು ರೈತ ಸಂಘ ಹೋರಾಟ ನಡೆಸುತ್ತದೆ’ ಎಂದರು. ಸಿಐಟಿಯು ಜಿಲ್ಲಾ ಅಧ್ಯಕ್ಷ ತಿಲಕ್ ಗೌಡ, ರೈತ ಸಂಘದ ಜಿಲ್ಲಾಧ್ಯಕ್ಷ ಶಾಂತಾರಾಮ ನಾಯಕ, ಪ್ರಮುಖರಾದ ವೀರೇಶ ರಾಠೋಡ, ಶ್ಯಾಮನಾಥ ನಾಯ್ಕ, ಗೌರೀಶ ನಾಯಕ ತಿಮ್ಮಪ್ಪ ಗೌಡ, ಪ್ರೇಮಾನಂದ ವೇಳಿಪ್, ಸಂತೋಷ ನಾಯ್ಕ, ಪ್ರೇಮಾ ಉಳಗೇಕರ ವೇದಿಕೆ ಕಾರ್ಯಕ್ರಮ ನಿರ್ವಹಿಸಿದರು. ಫೆಬ್ರವರಿ 12ರಂದು ಕಾರ್ಮಿಕ ಕಾನೂನು ತಿದ್ದುಪಡಿ, ರೇಗಾ ತಿದ್ದುಪಡಿ, ಬೀಜ ಕಾಯ್ದೆ ತಿದ್ದುಪಡಿ ವಿರುದ್ಧ ನಡೆಯುವ ಅಖಿಲ ಭಾರತ ಮುಷ್ಕರ ಬೆಂಬಲಿಸಲು ಈ ಸಮ್ಮೇಳನ ನಿರ್ಣಯ ಕೈಗೊಳ್ಳಲಾಯಿತು. ಪದಾಧಿಕಾರಿಗಳ ಮರು ಆಯ್ಕೆ ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಸಮ್ಮೇಳನದಲ್ಲಿ ರೈತ ಸಂಘದ ಪದಾಧಿಕಾರಿಗಳ ಆಯ್ಕೆ ನಡೆಯಿತು. ಅಧ್ಯಕ್ಷರಾಗಿ ಶಾಂತಾರಾಮ ನಾಯಕ ಮತ್ತು ಕಾರ್ಯದರ್ಶಿಯಾಗಿ ಶ್ಯಾಮನಾಥ ನಾಯ್ಕ ಪುನರಾಯ್ಕೆ ಆದರು. ಸಂಘಟನೆ ಉಪಾಧ್ಯಕ್ಷರಾಗಿ ತಿಮ್ಮಪ್ಪ ಗೌಡ ಹೊನ್ನಾವರ, ಗೌರೀಶ ನಾಯಕ ಅಂಕೋಲಾ, ಸಹಕಾರ್ಯದರ್ಶಿಗಳಾಗಿ ರಾಜೇಶ್ ಗಾವಡಾ ಜೋಯಡಾ ಮತ್ತು ಸಂತೋಷ ನಾಯ್ಕ ಅಂಕೋಲಾ ಆಯ್ಕೆಯಾದರು. ಸಮಿತಿ ಸದಸ್ಯರಾಗಿ ರಮಾನಂದ ನಾಯಕ ಅಚವೆ, ಗಣೇಶ ಪಟಗಾರ, ಮಂಜುನಾಥ ಶೆಟ್ಟಿ ಹೊನ್ನಾವರ, ಶಂಕರ್ ಗೌಡ ಹಳದಿಪುರ, ಜೂಲಿ ಬ್ರೀಟ್ಟೊ ಕಾರವಾರ, ಮೋಹಿನಿ ನಮಸೇಕರ ಬೈರಾ, ಬುಜಂಗ್ ಚಿಬ್ಲಕರ್ ಹಳಿಯಾಳ , ಸಹದೇವ ಹಳಿಯಾಳ, ನಾಗಪ್ಪ ಸಿದ್ದಿ ಯಲ್ಲಾಪುರ, ಸಂತೋಷ ನಾಯ್ಕ ಜರಡಿ, ಪುಂಡಲೀಕ ನಾಯ್ಕ ಭಟ್ಕಳ ಆಯ್ಕೆಯಾದರು. - [ಮಹಿಳೆಗೆ ಮೆಸೆಜ್ ಮಾಡಿದವನ ಸೆರೆ!](https://mobiletime.in/2026/01/man-arrested-for-texting-woman/): ಕುಮಟಾದ ಮೆಹ್ರಾನ್ ಶಾಬಂದ್ರಿ ಅವರು ಸಾಮಾಜಿಕ ಜಾಲತಾಣದಲ್ಲಿ 18 ನಕಲಿ ಖಾತೆ ಹೊಂದಿದ್ದು, ಆ ಖಾತೆಗಳ ಮೂಲಕ ಮಹಿಳೆಯರಿಗೆ ಕೆಟ್ಟ ಕೆಟ್ಟ ಮೆಸೆಜ್ ಮಾಡಿ ಸಿಕ್ಕಿ ಬಿದ್ದಿದ್ದಾರೆ. ಭಟ್ಕಳದ ಪಾತಿಮಾ ಸಿದ್ಧಿಕಾ ಅವರಿಗೆ ಕಾಡಿಸದ ಆರೋಪದ ಅಡಿ ಪೊಲೀಸರು ಮೆಹ್ರಾನ್ ಶಾಬಂದ್ರಿ ಅವರನ್ನು ಬಂಧಿಸಿದ್ದಾರೆ. ಹೊನ್ನಾವರದ ಮಂಕಿಯ ಮೆಹ್ರಾನ್ ಮೆಹ್ತಾಬ್ ಶಾಬಂದ್ರಿ (19) ಅವರು ಕುಮಟಾದ ತುಳಸಿಕಟ್ಟೆಯ ಬಳಿ ವಾಸವಾಗಿದ್ದರು. ಮಂಗಳೂರಿನ ಖಾಸಗಿ ಕಾಲೇಜಿನಲ್ಲಿ ಬಿಸಿಎ ವಿದ್ಯಾರ್ಥಿಯಾಗಿರುವ ಅವರು ಎಲ್ಲಿ ಯಾರದೇ ಮದುವೆ ಇದ್ದರೂ ಅಲ್ಲಿ ಹಾಜರಾಗುತ್ತಿದ್ದರು. ಮದುವೆಗೆ ಆಮಂತ್ರಣ ಇಲ್ಲದಿದ್ದರೂ ಅಲ್ಲಿ ಹೋಗಿ ಫೋಟೋ ಕ್ಲಿಕ್ಕಿಸುತ್ತಿದ್ದರು. ನಂತರ ಆ ಫೋಟೋಗಳನ್ನು ದುರುಪಯೋಗಪಡಿಸಿಕೊಂಡು ಮಹಿಳೆಯರಿಗೆ ಮೆಸೆಜ್ ಮಾಡುತ್ತಿದ್ದರು. ಅಶ್ಲೀಲ ಮೆಸೆಜ್ ಕಳುಹಿಸಿ ಬೆದರಿಕೆಯನ್ನು ಒಡ್ಡುತ್ತಿದ್ದರು. ತಮ್ಮ ಈ ಕೆಟ್ಟ ಚಟಕ್ಕಾಗಿಯೇ ಮೆಹ್ರಾನ್ ಶಾಬಂದ್ರಿ ಇನಸ್ಟಾಗ್ರಾಂ ಸೇರಿ ವಿವಿಧ ಕಡೆ 18 ನಕಲಿ ಜಾಲತಾಣ ಖಾತೆಗಳನ್ನು ಹೊಂದಿದ್ದರು. ಅಪರಿಚಿತ ವ್ಯಕ್ತಿಗಳ ವಿವಾಹ ಸಮಾರಂಭಗಳಲ್ಲಿ ತಮ್ಮ ಮೊಬೈಲ್ ಬಳಸಿ ಮಹಿಳೆಯರ ಫೋಟೋ ತೆಗೆಯುವ ಮೆಹ್ರಾನ್ ಶಾಬಂದ್ರಿ ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡುತ್ತಿದ್ದರು. ಭಟ್ಕಳದ ಪಾತಿಮಾ ಸಿದ್ಧಿಕಾ ಅವರ ಕುಟುಂಬದ ಮದುವೆಗೆ ಹೋಗಿದ್ದ ಆರೋಪಿ ಪಾತಿಮಾ ಸಿದ್ಧಿಕಾ ಅವರ ಫೋಟೋಗಳನ್ನು ಕದ್ದು ತೆಗೆದಿದ್ದರು. ನಂತರ ಜಾಲತಾಣದ ಮೂಲಕ ಪಾತಿಮಾ ಸಿದ್ಧಿಕಾ ಅವರ ಸ್ನೇಹ ಮಾಡಿ, ಇನ್ನಷ್ಟು ಖಾಸಗಿ ಫೋಟೋಗಳನ್ನುಪಡೆದಿದ್ದರು. ನಂತರ ಆ ಎಲ್ಲಾ ಫೋಟೋ ಬಳಸಿ ಜಾಲತಾಣದಲ್ಲಿ ಅಶ್ಲೀಲ ಬರಹಗಳ ಜೊತೆ ಪೋಸ್ಟ್ ಮಾಡಿದ್ದರು. ಮೆಹ್ರಾನ್ ಶಾಬಂದ್ರಿ ಕಾಟ ಸಹಿಸದೇ ಪಾತಿಮಾ ಸಿದ್ಧಿಕಾ ಅವರು ತಮ್ಮ ಜಾಲತಾಣದ ಸಹವಾಸದಿಂದ ದೂರ ಸರಿದರೂ ಸಹ ಮೆಹ್ರಾನ್ ಶಾಬಂದ್ರಿ ಸುಮ್ಮನಿರಲಿಲ್ಲ. ಈ ಹಿನ್ನಲೆ ಮೆಹ್ರಾನ್ ಶಾಬಂದ್ರಿ ವಿರುದ್ಧ ಪಾತಿಮಾ ಸಿದ್ಧಿಕಾ ಅವರು ದೂರು ನೀಡಿದ್ದು, ಪೊಲೀಸರು ಆರೋಪಿಯನ್ನು ಬಂಧಿಸಿದರು. ವಿಚಾರಣೆ ವೇಳೆ ಮೆಹ್ರಾನ್ ಶಾಬಂದ್ರಿ ಅನೇಕರಿಗೆ ನಗ್ನ ಫೋಟೋ ಕಳುಹಿಸುವಂತೆ ದುಂಬಾಲು ಬಿದ್ದಿರುವುದು ಬೆಳಕಿಗೆ ಬಂದಿದೆ. - [ಆ ಪೊಲೀಸರು ಜನಸ್ನೇಹಿ ಮಾತ್ರವಲ್ಲ.. ಮಕ್ಕಳ ಸ್ನೇಹಿಯೂ ಹೌದು!](https://mobiletime.in/2026/01/those-police-are-not-only-people-friendly-they-are-also-child-friendly/): ಶಿರಸಿ ಗ್ರಾಮೀಣ ಭಾಗದಲ್ಲಿ ಅನುಮಾನಾಸ್ಪದ ಕಾರು ಓಡಾಟ ಪ್ರಕರಣವನ್ನು ಪೊಲೀಸರು ಬೇಧಿಸಿದ್ದಾರೆ. ತಕ್ಷಣ ಸ್ಥಳಕ್ಕೆ ಧಾವಿಸಿದ ಪೊಲೀಸರು ಆ ಕಾರಿನಲ್ಲಿದ್ದವರನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಜನವರಿ 16ರಂದು ಶಿರಸಿ ಸಿದ್ದಾಪುರ ಮಾರ್ಗದ ಹರೂರು ಭಾಗದಲ್ಲಿ ಅನುಮಾನಾಸ್ಪದ ಕಾರು ಓಡಾಟ ನಡೆದಿತ್ತು. ಬಸ್ಸಿಗಾಗಿ ಕಾಯುತ್ತಿದ್ದ ಹೈಸ್ಕೂಲು ವಿದ್ಯಾರ್ಥಿನಿಯರ ಜೊತೆ ಕಾರಿನಲ್ಲಿದ್ದವರು ಅನುಮಾನಾಸ್ಪದ ರೀತಿ ವರ್ತಿಸಿದ ಆರೋಪವ್ಯಕ್ತವಾಗಿತ್ತು. ಆ ವೇಳೆ ಅಲ್ಲಿಗೆ ಬಂದ ಬಸ್ಸಿನಲ್ಲಿದ್ದ ಬ್ಯಾಂಕ್ ಉದ್ಯೋಗಿಯೊಬ್ಬರು ಕಾರಿನಲ್ಲಿದ್ದವರನ್ನು ಪ್ರಶ್ನಿಸಿದ್ದರು. ಕಾರಿನಲ್ಲಿದ್ದವರು ಮಾತನಾಡಲು ತಡವರಿಸಿದ ಕಾರಣ ಅವರ ಮೇಲೆ ಅನುಮಾನ ಹೆಚ್ಚಾಗಿದ್ದು, ಅಪರಿಚಿತರ ಓಡಾಟ ಹಾಗೂ ಮಕ್ಕಳ ಸುರಕ್ಷತೆಯ ಬಗ್ಗೆ ಬ್ಯಾಂಕಿನ ಮಹಿಳಾ ಉದ್ಯೋಗಿ ಮಾಹಿತಿ ಹಂಚಿಕೊoಡಿದ್ದರು. ಈ ಬಗ್ಗೆ ಮೊಬೈಲ್ ಮಿಡಿಯಾ ನೆಟ್‌ವರ್ಕನ mobiletime.in ವರದಿ ಪ್ರಸಾರ ಮಾಡಿದ್ದು, ಅನುಮಾನಾಸ್ಪದ ಕಾರು ಓಡಾಟದ ಬಗ್ಗೆ ಆ ಭಾಗದ ಶಿಕ್ಷಕ ವಿಘ್ನೇಶ್ವರ ಭಟ್ಟ ಅವರು 112 ಸಹಾಯವಾಣಿಗೆ ಫೋನ್ ಮಾಡಿದ್ದರು. ತಕ್ಷಣ ಸ್ಥಳಕ್ಕೆ ಧಾವಿಸಿದ ಪೊಲೀಸರು ಕಾರಿನ ಮಾಹಿತಿ ಕಲೆ ಹಾಕಿದರು. ಆ ಕಾರಿನಲ್ಲಿದ್ದವರ ದಾಖಲೆಗಳನ್ನು ಪರಿಶೀಲನೆ ಮಾಡಿದರು. ಬೆಂಗಳೂರಿನಿAದ ಬಂದಿದ್ದ ಸಂತೋಷ ಹೆಗಡೆ ಎಂಬಾತರು ಚಾರಪುಲಿಯ ಶ್ರೀಧರ ಹೆಗಡೆ ಅವರ ಮನೆಗೆ ಹೋಗಬೇಕಿದ್ದು, ದಾರಿ ಗೊತ್ತಾಗದೇ ಬಸ್ ನಿಲ್ದಾಣ ಬಳಿ ನಿಂತಿರುವುದಾಗಿ ಸಮಜಾಯಿಶೀ ನೀಡಿದರು. `ವಿಳಾಸ ಕೇಳುವುದಕ್ಕಾಗಿ ಹೈಸ್ಕೂಲ್ ಮಕ್ಕಳ ಬಳಿ ಮಾತನಾಡಿದ್ದೇವೆ. ಅವರ ಜೊತೆ ಅನುಚಿತವಾಗಿ ವರ್ತಿಸಿಲ್ಲ’ ಎಂದು ಸಂತೋಷ ಹೆಗಡೆ ಹಾಗೂ ಅವರ ಸಹಚರರು ಸಮರ್ಥಿಸಿಕೊಂಡರು. ಅದಾದ ನಂತರ ಪೊಲೀಸರು ಶ್ರೀಧರ ಹೆಗಡೆ ಅವರನ್ನು ಸಹ ಸಂಪರ್ಕಿಸಿ ಆ ಅಪರಿಚಿತರ ಬಗ್ಗೆ ವಿಚಾರಿಸಿದರು. `ಆ ವ್ಯಕ್ತಿಗಳು ತಮ್ಮ ಮನೆಗೆ ಬಂದಿದ್ದು ಸತ್ಯ’ ಎಂದು ಶ್ರೀಧರ ಹೆಗಡೆ ಅವರು ಸಾಕ್ಷಿ ಹೇಳಿದರು. ಜಗದಾಂಬಾ ಪ್ರೌಢಶಾಲೆ ಅಧ್ಯಕ್ಷ ಎಂ ಜಿ ಹೆಗಡೆ ಅವರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ಮಾಡಿದರು. ಅವರೆಲ್ಲರ ಗುರುತಿನ ಚೀಟಿ ತಪಾಸಣೆ ಹಾಗೂ ಕಾರು ತಪಾಸಣೆ ಮಾಡಿದ ಬಳಿಕ ಎಚ್ಚರಿಕೆ ನೀಡಿ ಪೊಲೀಸರು ಬಿಟ್ಟರು. ಶಿರಸಿ ಗ್ರಾಮೀಣ ಪೊಲೀಸರ ಜೊತೆ ಸಿದ್ದಾಪುರ ಪೊಲೀಸರು ಸಹ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ಎಲ್ಲರೂ ಸೇರಿ ಮಕ್ಕಳ ಆತಂಕವನ್ನು ದೂರ ಮಾಡಿದರು. `ಅನುಮಾನಾಸ್ಪದ ವ್ಯಕ್ತಿಗಳ ಬಗ್ಗೆ ಗಮನಹರಿಸಿ. ತುರ್ತು ಸನ್ನಿವೇಶಗಳಲ್ಲಿ 112ಗೆ ಫೋನ್ ಮಾಡಿ’ - [ಶಿರಸಿ ಜಾತ್ರೆ: ಕುಮಟಾದಲ್ಲಿ ಕಾಗೇರಿ ಸಭೆ](https://mobiletime.in/2026/01/sirsi-festival-kageri-meeting-in-kumta/): ಶಿರಸಿ-ಕುಮಟಾ ಮಾರ್ಗವಾಗಿ ಸಂಚರಿಸುವ ಪ್ರಯಾಣಿಕರಿಗೆ ಸಂಚಾರಕ್ಕೆ ಸಮಸ್ಯೆ ಆಗದ ಹಿನ್ನಲೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಸಭೆ ನಡೆಸಿದ್ದಾರೆ. `ಶಿರಸಿ ಜಾತ್ರೆ ಹಿನ್ನಲೆ ಬರುವ ಭಕ್ತರಿಗೆ ಸಮಸ್ಯೆ ಆಗದಂತೆ ನೋಡಿಕೊಳ್ಳಬೇಕು’ ಎಂದು ಕಾಗೇರಿ ತಾಕೀತು ಮಾಡಿದ್ದಾರೆ. ಭಾನುವಾರ ಕುಮಟಾ ಆಡಳಿತ ಸೌಧಕ್ಕೆ ಭೇಟಿ ಮಾಡಿದ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಶಾಸಕ ದಿನಕರ ಶೆಟ್ಟಿ ಅವರಿಗೆ ಫೋನ್ ಮಾಡಿದರು. ಅದಾದ ನಂತರ ಗುತ್ತಿಗೆದಾರರನ್ನು ಸ್ಥಳಕ್ಕೆ ಕರೆಯಿಸಿ ಪ್ರಗತಿಯ ವಿವರಪಡೆದರು. `ಕುಮಟಾ ಶಿರಸಿ ರಸ್ತೆಶಿರಸಿ ಭಾಗದಲ್ಲಿ ಬಹುಪಾಲು ಮುಕ್ತಾಯವಾಗಿದೆ. ಕುಮಟಾ ಭಾಗದಲ್ಲಿ ಬಾಕಿಯಿದೆ. ಅದನ್ನು ಕೂಡಲೇ ಮುಗಿಸಬೇಕು’ ಎಂದು ಸೂಚಿಸಿದರು. `ಶಿರಸಿ ಹಾವೇರಿ ರಸ್ತೆ ಒಂದು ಕಡೆಯಲ್ಲಿ 12 ಅಡಿ ತಗ್ಗು ಕಾಣುತ್ತಿದೆ. ಜಾತ್ರೆ ಒಳಗೆ ಅದನ್ನು ಸರಿಪಡಿಸಬೇಕು’ ಎಂದು ತಾಕೀತು ಮಾಡಿದರು. `ಶಿರಸಿಯಿಂದ ನಾಕೂರು ಕ್ರಾಸಿನವರೆಗೆ 42 ಕಿಮೀ ರಸ್ತೆ ಕಾಮಗಾರಿ ಪೂರ್ಣಗೊಂಡಿದ್ದು, 35 ಕಿ.ಮೀ ರಸ್ತೆ ಕಾಮಗಾರಿ ಬಾಕಿ ಇದೆ. ಅದರಲ್ಲಿ 22ಕಿಮೀ ಶಿರಸಿ ತಾಲೂಕಿನಲ್ಲಿ ಹಾಗೂ 13ಕಿಮಿ ಹಾವೇರಿಯಲ್ಲಿ ಬಾಕಿ ಇದೆ. ಜಾತ್ರೆ ಪೂರ್ವದಲ್ಲಿ ಇನ್ನೂ 10 ಕಿಮೀ ಕಾಮಗಾರಿ ಪೂರ್ಣಗೊಳ್ಳಲಿದ್ದು, ಉಳಿದ ಭಾಗ ಅಗೆಯದೇ ಈಗ ಅಗೆದಿರುವ ಭಾಗ ಮೊದಲು ಸರಿ ಮಾಡುತ್ತೇವೆ’ ಎಂದು ಗುತ್ತಿಗೆ ಕಂಪನಿಯವರು ಹೇಳಿದರು. `ಈ ರಸ್ತೆ ಕಾಮಗಾರಿಯ ಮಧ್ಯೆ ವಾಹನ ಒಡಾದಿಂದ ಅಗುವ ಧೂಳಿನಿಂದ ಸಾರ್ವಜನಿಕರು ಮತ್ತು ಪ್ರಯಾಣಿಕರಿಗೆ ತೊಂದರೆ ಉಂಟಾಗುತ್ತಿದೆ. ಜಾತ್ರೆಗೆ ಬರುವ ದ್ವಿಚಕ್ರ ವಾಹನ ಸವಾರರಿಗೆ ತೀವ್ರ ತೊಂದರೆ ಉಂಟಾಗದAತೆ ತಡೆಯಲು ಆಗಾಗ ನೀರು ಸಿಂಪಡಿಸಬೇಕು’ ಎಂದು ಕಾಗೇರಿ ಸೂಚಿಸಿದರು.` ಕತಗಾಲ ಬಿ ಎಸ್ ಎನ್ ಎಲ್ ಕಚೇರಿ ಹತ್ತಿರ ನಿರ್ಮಿಸಿದ ವಾಲ್ ಅವೈಜ್ಞಾನಿಕವಾಗಿದೆ. ಇದರ ಬದಲು ಸೇತುವೆ ನಿರ್ಮಿಸುವುದು ಉತ್ತಮ’ ಎಂದು ಶಾಸಕ ದಿನಕರ ಶೆಟ್ಟಿ ಸಲಹೆ ನೀಡಿದರು. ಚತುಷ್ಪಥ ಕಾಮಗಾರಿ ನಿಧಾನವಾದ ಬಗ್ಗೆ ಕಾಗೇರಿ ಅಸಮಧಾನವ್ಯಕ್ತಪಡಿಸಿದರು. `ಹೊನ್ನಾವರ ಶರಾವತಿ ನದಿಯ ಹಳೆ ಸೇತುವೆ ಬಗ್ಗೆ ಇನ್ನೊಮ್ಮೆ ಪರಿಣಿತರ ವರದಿ ಪಡೆದು ಲಘು ವಾಹನ ಓಡಾಟಕ್ಕೆ ಅವಕಾಶ ಕೊಡಬೇಕು’ ಎಂದು ದಿನಕರ ಶೆಟ್ಟಿ ಸೂಚಿಸಿದರು. ÀÄಟಾ ಸಹಾಯಕ ಆಯುಕ್ತ ಪಿ ಶ್ರವಣಕುಮಾರ, ತಹಶೀಲ್ದಾರ್ ಶ್ರೀಕೃಷ್ಣ ಕಾಮ್ಕರ್, ಗೇಡ್-2-ತಹಶೀಲ್ದಾರ್ ಸತೀಶ ಗೌಡ, ಗುತ್ತಿಗೆ ಕಂಪನಿಯ ಮಲ್ಲಿಕಾರ್ಜುನ್, ನಿತೀಶ ಶೆಟ್ಟಿ, ಬಿಜೆಪಿ ಕುಮಟಾ ಮಂಡಲಾಧ್ಯಕ್ಷ ಜಿ ಐ ಹೆಗಡೆ ಇದ್ದರು. - [ಅನ್ನ ಭಾಗ್ಯಕ್ಕೆ ಕನ್ನ!](https://mobiletime.in/2026/01/a-blessing-for-the-food/): ಅನ್ನ ಭಾಗ್ಯ ಯೋಜನೆಗೆ ಕನ್ನ ಹಾಕಿದ್ದ ಆಸಿಫ್ ಉಲ್ಲಾ ಖಾನ್ ಎಂಬಾತನನ್ನು ಭಟ್ಕಳದ ಆಹಾರ ಅಧಿಕಾರಿ ಉದಯ ತಳವಾರ್ ಅವರು ಹಿಡಿದಿದ್ದಾರೆ. ಓಮಿನಿಯಲ್ಲಿ ಸಾಗಿಸುತ್ತಿದ್ದ ಅಕ್ಕಿ ಮೂಟೆಗಳನ್ನು ಅವರು ವಶಕ್ಕೆಪಡೆದಿದ್ದಾರೆ. ಭಟ್ಕಳ ಪುರವರ್ಗದ ಗಣೇಶನಗರ ಮೊಹಮ್ಮದ್ ಸಮೀರ ಮೊಹಮ್ಮದ್ ಭಾಷಾ (29) ಹಾಗೂ ಹನುಮಾನನಗರದ ಆಟೋ ಚಾಲಕ ರಾಮಚಂದ್ರ ಮಾಸ್ತಪ್ಪ ನಾಯ್ಕ ಜೊತೆ ಆಸೀಫ್ ಉಲ್ಲಾ ಖಾನ್ ಅಕ್ರಮವಾಗಿ ಅಕ್ಕಿ ಸಾಗಾಟ ಮಾಡುತ್ತಿದ್ದರು. ಅನ್ನ ಭಾಗ್ಯ ಯೋಜನೆ ಅಡಿ ನೀಡುವ ಅಕ್ಕಿಯನ್ನು ಅವರು ಕದ್ದಿದ್ದು, ಓಮಿನಿಯಲ್ಲಿ ಸಾಗಿಸಿ ಅದನ್ನು ಮಾರಾಟ ಮಾಡುವ ಯೋಜನೆ ರೂಪಿಸಿದ್ದರು. 39,100 ರೂ ಮೌಲ್ಯದ 1,150 ಕೆಜಿ ಅಕ್ರಮ ಸಾಗಾಟದ ಬಗ್ಗೆ ಅರಿತು ಅಧಿಕಾರಿಗಳು ದಾಳಿ ಮಾಡಿದರು. ಅಕ್ಕಿಯನ್ನು ಮುಗ್ಧಂ ಕಾಲೋನಿಯಿಂದ ಶಿರಾಲಿ ಕಡೆಗೆ ಅಕ್ಕಿ ಸಾಗಿಸುವಾಗ ಆರೋಪಿತರು ಸಿಕ್ಕಿಬಿದ್ದರು. ಅಕ್ಕಿಯ ಜೊತೆಯಿದ್ದ ಆಸೀಫ್ ಖಾನ್’ರನ್ನು ವಶಕ್ಕೆಪಡೆದು ಕಾನೂನು ಕ್ರಮ ಜರುಗಿಸಿದರು. - [ಮದುವೆಗೆ ಬಂದವ ಮೆಸೆಜ್ ಮಾಡಿದ: ಮಹಿಳೆ ಮನಸ್ಸು ನೋಯಿಸಿದ!](https://mobiletime.in/2026/01/someone-who-came-to-the-wedding-sent-a-message-the-woman-hurt-my-feelings/): ಭಟ್ಕಳದ ಪಾತಿಮಾ ಸಿದ್ಧಿಕಾ ಹಾಗೂ ಅವರ ಕುಟುಂಬದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅಶ್ಲೀಲ ಬರಹ ಹರಿದಾಡುತ್ತಿದ್ದು, ಕುಮಟಾದ ಮೆಹರಾನ್ ಶಾಬಂದ್ರೀ ಈ ಪೋಸ್ಟ್ ಮಾಡಿದ ಅನುಮಾನವ್ಯಕ್ತವಾಗಿದೆ. ಭಟ್ಕಳದ ಸಂಶುದ್ಧಿನ್ ರಸ್ತೆಯ ನವಾಯಿತ್ ಕಾಲೋನಿಯಲ್ಲಿ ಪಾತಿಮಾ ಇನಾಸ್ ಸಿದ್ದಿಕಾ ಅವರು ವಾಸವಾಗಿದ್ದಾರೆ. ಈಚೆಗೆ ಅವರ ತಮ್ಮನ ಮದುವೆ ಆಗಿದ್ದು, ಆ ಮದುವೆಗೆ ಕುಮಟಾದ ಮೆಹರಾನ್ ಮೆಹತಾಬ್ ಶಾಬಂದ್ರೀ ಅವರು ಬಂದಿದ್ದರು. ಅದಾದ ನಂತರ ಮೆಹರಾನ್ ಶಾಬಂದ್ರೀ ಅವರು ಪಾತಿಮಾ ಸಿದ್ಧಿಕಾ ಅವರನ್ನು ಇನಸ್ಟಾಗ್ರಾಮಿನ ಮೂಲಕ ಪರಿಚಯಿಸಿಕೊಂಡು ಮೆಸೆಜ್ ಮಾಡಲು ಶುರು ಮಾಡಿದ್ದರು. ಆ ವೇಳೆ ಪಾತಿಮಾ ಸಿದ್ಧಿಕಾ ಅವರು ತಮ್ಮ ಹಾಗೂ ತಮ್ಮ ಕುಟುಂಬದ ಫೋಟೋಗಳನ್ನು ಮೆಸೆಜ್ ಮಾಡುವ ವ್ಯಕ್ತಿಯ ಜೊತೆ ಹಂಚಿಕೊAಡಿದ್ದರು. ಅದಾದ ನಂತರ ಮೆಸೆಜ್ ಮಾಡುವವರ ಕಾಟ ಜಾಸ್ತಿ ಆಗಿದ್ದರಿಂದ ಪಾತಿಮಾ ಸಿದ್ಧಿಕಾ ಅವರು ಇನಸ್ಟಾಗ್ರಾಮಿನಿಂದ ಹೊರಬಂದರು. ಆದರೆ, ಅವರಿಗೆ ಕಾಟ ಕೊಡುವವರ ಸಂಖ್ಯೆ ಕಡಿಮೆ ಆಗಲಿಲ್ಲ. ಈ ವೇಳೆ ಪಾತಿಮಾ ಸಿದ್ಧಿಕಾ ಅವರಿಗೆ ಬೆದರಿಕೆ ಕರೆಯೊಂದು ಬಂದಿತು. ಫೋನ್ ಮಾಡಿದವರು ರಾಜಕೀಯ ಪ್ರಭಾವಿಗಳ ಹೆಸರು ಹೇಳಿ ಕೊಲೆ ಮಾಡುವುದಾಗಿಯೂ ಹೆದರಿಸಿದ್ದರು. ಪಾತಿಮಾ ಸಿದ್ಧಿಕಾ ಅವರು ಇನಸ್ಟಾಗ್ರಾಂ ಖಾತೆ ಡಿ ಆಕ್ಟೀವ್ ಮಾಡಿದ ನಂತರ ಅವರ ಕುಟುಂಬದ ಬಗ್ಗೆ ಇಲ್ಲಸಲ್ಲದ ಆರೋಪಗಳು ವ್ಯಕ್ತವಾದವು. ಪಾತಿಮಾ ಸಿದ್ಧಿಕಾ ಅವರ ತಮ್ಮ ಶಿಬಾನಾ ಸಿದ್ದಾಕಾ ಆ ಅಶ್ಲೀಲ ಬರಹಗಳನ್ನು ನೋಡಿ ಕುಟುಂಬದವರಿಗೆ ತಿಳಿಸಿದರು. ಆಜಾದ್ ನಗರದಲ್ಲಿ ವಾಸವಾಗಿರುವ ಪಾತಿಮಾ ಸಿದ್ಧಿಕಾ ಅತ್ತಿಗೆ ಬಿಬಿ ನಫಿಸಾ ಶಿಬಾಸ್ ಸಿದ್ದಿಕಾ ಹಾಗೂ ಭಟ್ಕಳದಲ್ಲಿ ವಾಸವಾಗಿರುವ ಆಯಿಷಾ ಅನ್ನಾಸ್ ಅನ್ಸಾರ್ ಅವರಿಗೆ ಸಹ ಬೆದರಿಕೆ ಕರೆ ಬಂದಿತು. ಜಾಲತಾಣಗಳ ಮೂಲಕ ಅವರ ವಿರುದ್ಧವೂ ಅಶ್ಲೀಲ ಮೆಸೆಜ್ ಹರಿದಾಡುತ್ತಿತ್ತು. ತಮ್ಮನ ಮದುವೆಗೆ ಬಂದಿದ್ದ ಕುಮಟಾದ ಮೆಹರಾನ್ ಶಾಬಂದ್ರೀಯೇ ಈ ಕಿಡಿಗೇಡಿ ಕೆಲಸ ಮಾಡಿದ ಬಗ್ಗೆ ಪಾತಿಮಾ ಸಿದ್ಧಿಕಾ ಅವರಿಗೆ ಅನುಮಾನವ್ಯಕ್ತವಾಯಿತು. ಹೀಗಾಗಿ ಬೆದರಿಕೆ ಬಂದಿದ್ದ ಫೋನ್ ನಂ ಜೊತೆ ತಮಗಾದ ನೋವಿನ ಬಗ್ಗೆ ಅವರು ಪೊಲೀಸ್ ದೂರು ನೀಡಿದ್ದು, ಭಟ್ಕಳ ಶಹರ ಪೊಲೀಸರು ಪ್ರಕರಣದ ತನಿಖೆ ಶುರು ಮಾಡಿದ್ದಾರೆ. - [ಕೈ ಕೊಟ್ಟ ಕಾರು: ಬಾಳಿ ಬದುಕಬೇಕಿದ್ದವರ ಸಾವು!](https://mobiletime.in/2026/01/a-car-given-away-the-death-of-those-who-had-to-survive/): ಭಟ್ಕಳದಲ್ಲಿ ನಡೆದ ಭೀಕರ ಅಪಘಾತದಲ್ಲಿ ಯುವಕರಿಬ್ಬರು ಸಾವನಪ್ಪಿದ್ದಾರೆ. ಭಟ್ಕಳದ ವೆಂಕಟಾಪುರ ರಾಷ್ಟ್ರೀಯ ಹೆದ್ದಾರಿಯಲ್ಲಿ ಶನಿವಾರ ತಡರಾತ್ರಿ ಈ ದುರಂತ ನಡೆದಿದೆ. ಭಟ್ಕಳದ ಆಜಾದ್ ನಗರದ ಮೊಹಮ್ಮದ್ ಅಶ್ರಫ್ ರುಕ್ನುದ್ದೀನ್ ಶಿಪೈ ಅವರ ಮಗ ಬಿಲಾಲ್ ಹಾಗೂ ಅಬ್ದುಲ್ ಸಲಾಮ್ ಅಕ್ರಮಿ ಅವರ ಮಗ ಆಯನ್ ಅವಘಡದಲ್ಲಿ ಕೊನೆಯುಸಿರೆಳೆದವರಾಗಿದ್ದಾರೆ. ಮಧ್ಯರಾತ್ರಿ ಸುಮಾರಿಗೆ ಅವರಿಬ್ಬರು ಶಿರಾಲಿಯಿಂದ ಭಟ್ಕಳಕ್ಕೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ವಾಹನವು ರಾಷ್ಟ್ರೀಯ ಹೆದ್ದಾರಿಯ ವೆಂಕಟಾಪುರ ಮಾರ್ಗವನ್ನು ತಲುಪಿದಾಗ ಅದು ರಸ್ತೆಬದಿಯಲ್ಲಿದ್ದ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದೆ. ಆಗ, ಬಿಲಾಲ್ ಅವರು ಅಲ್ಲಿಯೇ ಕೊನೆಯುಸಿರೆಳೆದಿದ್ದಾರೆ. ಆಯನ್ ಅವರು ಆಸ್ಪತ್ರೆಗೆ ಸಾಗಿಸುವಾಗ ಸಾವನಪ್ಪಿದ್ದಾರೆ. ಸದ್ಯ ಕಾರು ನಿಯಂತ್ರಣ ತಪ್ಪಿ ಅಪಘಾತ ನಡೆದ ಬಗ್ಗೆ ಮಾಹಿತಿಯಿದೆ. ಅದಾಗಿಯೂ, ಅಪಘಾತದ ಸ್ಥಳದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಜೆಲ್ಲಿ ಕಲ್ಲುಗಳು ಕಾಣಿಸಿದ್ದು, ಆ ಬಗ್ಗೆಯೂ ತನಿಖೆ ನಡೆಯುತ್ತಿದೆ. .ಅಪಘಾತ ಸ್ಥಳದ ಸುತ್ತಮುತ್ತಲ ಪ್ರದೇಶದಲ್ಲಿ ಮೂರು ಸಿಸಿ ಕ್ಯಾಮರಾಗಳಿದ್ದು, ಅಪಘಾತಕ್ಕೆ ಕಾರಣವಾದ ಘಟನೆಗಳ ನಿಖರವಾದ ಕಾರಣ ತಿಳಿಯಲು ಸಹಾಯವಾಗುವ ಸಾಧ್ಯತೆಗಳಿವೆ. - [ರಾಜಕೀಯ ಒತ್ತಡಕ್ಕೆ PSI ತಲೆದಂಡ!](https://mobiletime.in/2026/01/psi-faces-political-pressure/): ತಮ್ಮ ಚಾಣಾಕ್ಷತನದಿಂದ ಅನೇಕ ಅಪರಾಧ ಪ್ರಕರಣಗಳನ್ನು ಭೇದಿಸಿ ಪೊಲೀಸ್ ಇಲಾಖೆಗೆ ನೆರವಾಗಿದ್ದ ಪಿಸೈ ಸುನೀಲ್ ಬಂಡಿವಡ್ಡರ್ ಅವರನ್ನು ಅದೇ ಪೊಲೀಸ್ ಇಲಾಖೆ ಸೇವೆಯಿಂದ ಅಮಾನತು ಮಾಡಿದೆ. ಕಾರವಾರ ಕದ್ರಾದ ರಿಶೇಲ್ ಡಿಕೋಸ್ತಾ ಆತ್ಮಹತ್ಯೆ ಹಾಗೂ ಚಿರಾಗ್ ಕೋಠಾರಕರ್ ಪರಾರಿ ಪರಿಣಾಮ ಪಿಸೈ ಸುನೀಲ ಬಂಡಿವಡ್ಡರ್ ಅವರು ಶಿಕ್ಷೆಗೆ ಗುರಿಯಾಗಿದ್ದಾರೆ. ಈ ಪ್ರಕರಣದಲ್ಲಿ ಆರೋಪಿ ಸಿಗದಿದ್ದರೂ ಆರೋಪಿಗೆ ಆಶ್ರಯ ನೀಡಿದ್ದ ಇಬ್ಬರನ್ನು ಸುನೀಲ ಬಂಡಿವಡ್ಡರ್ ಅವರು ಪತ್ತೆ ಹಚ್ಚಿದ್ದು, ಆ ಇಬ್ಬರಿಗೂ ಜಾಮೀನು ಸಿಕ್ಕ ಬೆನ್ನಲ್ಲೇ ಪ್ರಕರಣದ ತನಿಖೆಗೆ ಶ್ರಮಿಸಿದ್ದ ಸುನೀಲ ಬಂಡಿವಡ್ಡರ್ ಅವರು ಅಮಾನತಾಗಿದ್ದಾರೆ. ಜಿಲ್ಲಾ ಪಂಚಾಯತ ಮಾಜಿ ಸದಸ್ಯೆ ಚೈತ್ರಾ ಕೋಠಾರಕರ್ ಅವರ ಪುತ್ರ ಚಿರಾಗ ಕೋಠಾರಕರ್ ಅವರು ಕದ್ರಾ ಗ್ರಾಮ ಪಂಚಾಯತ ಸದಸ್ಯೆ ರೀನಾ ಡಿಸೋಜಾ ಅವರ ಪುತ್ರಿ ರೀಶಲ್ ಡಿಕೋಸ್ತಾ ಅವರನ್ನು ಪ್ರೀತಿಸುತ್ತಿದ್ದರು. ಚಿರಾಗ ಕೋಠಾರಕರ್ ಅವರ ಕಾಟಕ್ಕೆ ರೀಶಲ್ ಡಿಕೋಸ್ತಾ ಆತ್ಮಹತ್ಯೆಗೆ ಶರಣಾದ ಆರೋಪವ್ಯಕ್ತವಾಗಿತ್ತು. ಅದಾದ ನಂತರ ಚಿರಾಗ ಕೋಠಾರಕರ್ ಅವರು ರೀಶಲ್ ಡಿಕೋಸ್ತಾ ಅವರನ್ನು ಅತ್ಯಾಚಾರ ಮಾಡಿದ ಬಗ್ಗೆಯೂ ಕುಟುಂಬದವರು ದೂರಿದ್ದರು. ಈ ನಡುವೆ ರಿಶೇಲ್ ಹಾಗೂ ಚಿರಾಗ ನಡುವೆ ನಡೆದ ವಾಟ್ಸಪ್ ಸಂಭಾಷಣೆ ಹೊರಬಿದ್ದಿತ್ತು. ರಿಶೇಲ್ ದೇಹದ ಮೇಲೆ ಅನುಮಾನಾಸ್ಪದ ಕುರುಹುಗಳು ಪತ್ತೆ ಆಗಿದ್ದವು. ಸಂತ್ರಸ್ತೆ ಹಾಗೂ ಆರೋಪಿ ಎರಡು ಕುಟುಂಬದವರು ರಾಜಕೀಯ ಪ್ರಭಾವಹೊಂದಿದ್ದರಿoದ ಈ ಪ್ರಕರಣ ಗಂಭೀರ ಸ್ವರೂಪಪಡೆದಿತ್ತು. ಸಂತ್ರಸ್ತೆ ಹಾಗೂ ಆರೋಪಿ ಎರಡು ಕಡೆಯವರು ತಮ್ಮ ಪ್ರಭಾವ ಬೀರಿ ತಮ್ಮ ಅನುಕೂಲಕ್ಕೆ ತಕ್ಕ ಹಾಗೇ ಪ್ರಕರಣ ಬದಲಿಸುವ ಕಸರತ್ತು ನಡೆಸಿದ್ದರು. ಈ ಪ್ರಯತ್ನ ಪೊಲೀಸರನ್ನು ಸಹ ಸಾಕಷ್ಟು ಪ್ರಮಾಣದಲ್ಲಿ ಒತ್ತಡಕ್ಕೆ ಸಿಲುಕಿಸಿತ್ತು. ರಾಜಕೀಯ ಪ್ರಭಾವಿಗಳ ಒತ್ತಡ ಹಾಗೂ ಸರ್ಕಾರಕ್ಕೆ ಬೇಕಾದ ಉತ್ತರದ ಪರಿಣಾಮ ಕದ್ರಾ ಪಿಸೈ ಸುನೀಲ ಬಂಡಿವಡ್ಡರ್ ಅವರನ್ನು ಅಮಾನತು ಮಾಡಲಾಯಿತು. ಚಿತ್ತಾಕುಲದಲ್ಲಿ ಅಪರಿಚಿತ ಶವ ಸಿಕ್ಕಾಗ ಅದನ್ನು ಕೊಲೆ ಎಂದು ಅರಿತು ಕೊಲೆಗಾರರನ್ನು ಬಂಧಿಸುವಲ್ಲಿ ಸುನೀಲ ಬಂಡಿವಡ್ಡರ್ ಪ್ರಮುಖ ಪಾತ್ರ ನಿಭಾಯಿಸಿದ್ದರು. ಹಣಕೋಣದಲ್ಲಿ ಉದ್ಯಮಿ ಮೇಲೆ ಮಾರಕಾಸ್ತ ದಾಳಿ ನಡೆದಾಗಲೂ ಆ ಪ್ರಕರಣದಲ್ಲಿ ಸುನೀಲ ಬಂಡಿವಡ್ಡರ್ ಸಾಕಷ್ಟು ಪ್ರಮಾಣದಲ್ಲಿ ಶ್ರಮಿಸಿದ್ದರು. ಕುಮಟಾದ ದೇವಿಮನೆ ಘಟ್ಟದಲ್ಲಿ ನಡೆದ ಕೊಲೆ ಪ್ರಕರಣಗಳನ್ನು ಅತ್ಯಂತ ಚಾಣಾಕ್ಷತನದಿಂದ ಬೇದಿಸಿದ್ದರು. ಕಳ್ಳತನ ಪ್ರಕರಣಗಳನ್ನು ಜಾಲಾಡಿ ದಾಖಲೆ ಪ್ರಮಾಣದಲ್ಲಿ ಚಿನ್ನಾಭರಣಗಳನ್ನು ವಶಕ್ಕೆಪಡೆದಿದ್ದರು. ಈ ಎಲ್ಲಾ ಕೆಲಸಗಳ ಜೊತೆ ಅಕ್ರಮ ಸರಾಯಿ ಸಾಗಾಟ ಪ್ರಕರಣಗಳಿಗೆ ತಡೆ ಒಡ್ಡಿದ್ದರು. ಕಾನೂನುಬಾಹಿರ ಜೂಜಾಟ ನಡೆದ ಸುಳಿವು ಸಿಕ್ಕ ತಕ್ಷಣ ದಾಳಿ ನಡೆಸಿ ಅದನ್ನು ತಡೆಯುತ್ತಿದ್ದರು. ಕದ್ರಾ ಪೊಲೀಸ್ ಠಾಣೆಗೆ ಬಂದ ನಂತರ ಅಲ್ಲಿನ ವಾತಾವರಣದ ಮೇಲೆ ಹಿಡಿಯವಿಟ್ಟುಕೊಂಡಿದ್ದು, ಸಣ್ಣಪುಟ್ಟ ಅಪರಾಧಿಗಳಿಗೂ ನಡುಕ ಹುಟ್ಟಿಸಿದ್ದರು. 35 ವರ್ಷಗಳಿಂದ ಬಾಕಿಯಿದ್ದ ಪ್ರಕರಣವನ್ನು ಬೇದಿಸಿ ಮೇಲಧಿಕಾರಿಗಳು ಹುಬ್ಬೇರಿಸುವಂತೆ ಮಾಡಿದ್ದರು. ಈ ಎಲ್ಲಾ ಕೆಲಸದ ಜೊತೆ ಪಾಳುಬಿದ್ದ ಕೊಂಪೆಯ ಹಾಗಿದ್ದ ಕದ್ರಾ ಪೊಲೀಸ್ ಠಾಣೆಯ ನವೀಕರಣ ಕೆಲಸ ಮಾಡಿದ್ದರು. ಸದ್ಯ ರೀಚಲ್ ಡಿಕೋಸ್ತಾ ಆತ್ಮಹತ್ಯೆ ಹಾಗೂ ಚಿರಾಗ ಕೋಠಾರಕರ್ ಪರಾರಿ ಪ್ರಕರಣದಲ್ಲಿಯೂ ಸುನೀಲ ಬಂಡಿವಡ್ಡರ್ ಅವರು ಸುಮ್ಮನಿರಲಿಲ್ಲ. ಅಮಾನತು ಆಗುವ ಮುನ್ನವೇ ಅವರು ಚಿರಾಗ ಕೋಠಾರಕರ್ ಅವರಿಗೆ ಆಶ್ರಯ ನೀಡಿದ್ದ ಇಬ್ಬರನ್ನು ಬಂಧಿಸಿದ್ದರು. ಆರೋಪಿ ಸಿಗದಿದ್ದರೂ ಸಹ ಆ ಆರೋಪಿಗೆ ಆಶ್ರಯ ನೀಡಿದ ಸುವರ್ಣ ಗಾಂವ್ಕರ್ ಹಾಗೂ ಸುನೀಲ ನಾಯರ್ ಎಂಬಾತರನ್ನು ವಶಕ್ಕೆಪಡೆದಿದ್ದರು. ಆ ಆರೋಪಿಗೆ ಆಶ್ರಯ ನೀಡಿದ ಇಬ್ಬರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದ್ದು, ಅದರ ಬೆನ್ನಲ್ಲೆ ಅದೇ ಪ್ರಕರಣದಲ್ಲಿ ಸುನೀಲ ಬಂಡಿವಡ್ಡರ್ ಅವರನ್ನು ಅಮಾನತು ಮಾಡಲಾಗಿದೆ. - [ಹೊರ ಮಂಗಳವಾರಕ್ಕೆ ಉದ್ಯಾನವನ ಸಿದ್ದ!](https://mobiletime.in/2026/01/the-park-is-ready-for-tuesday/): ಯಲ್ಲಾಪುರ ಜಾತ್ರೆ ಅಂಗವಾಗಿ ನಡೆಯುವ `ಹೊರ ಮಂಗಳವಾರ’ ಆಚರಣೆಗೆ ಮಕ್ಕಳ ಉದ್ಯಾನವನ ಸಿದ್ಧಗೊಂಡಿದೆ. ಜನವರಿ 20, 27 ಹಾಗೂ ಫೆಬ್ರವರಿ 3ರಂದು `ಹೊರ ಮಂಗಳವಾರ’ ಆಚರಣೆ ನಡೆಯಲಿದ್ದು, ಜೋಡಕೆರೆ ಬಳಿಯಿರುವ ಉದ್ಯಾನವನವನ್ನು ಸ್ವಚ್ಚ ಮಾಡಲಾಗಿದೆ. ಉದ್ಯಾನವನಕ್ಕೆ ಬರುವವರ ಅನುಕೂಲಕ್ಕಾಗಿ ಅಲ್ಲಿ ಕುಡಿಯುವ ನೀರು, ನೆರಳಿನ ವ್ಯವಸ್ಥೆ ಮಾಡಲಾಗಿದೆ. ಗಿಡ-ಗಂಟಿಗಳನ್ನು ತೆರವು ಮಾಡಲಾಗಿದೆ. ಮುರಿದು ಬಿದ್ದಿದ್ದ ಕಪೌಂಡ್ ಸರಿಪಡಿಸಿ ಅದಕ್ಕೆ ಬಣ್ಣ ಬಡಿಯುವ ಕೆಲಸ ನಡೆದಿದೆ. ಎಲ್ಲೆಂದರಲ್ಲಿ ಬಿದ್ದಿದ್ದ ಕಸವನ್ನು ಆರಿಸಿ ಉದ್ಯಾನವನವನ್ನು ಸುಂದರವನ್ನಾಗಿಸಲಾಗಿದೆ. ಅಗತ್ಯವಿರುವ ಕಡೆಗಳಲ್ಲಿ ದೀಪಗಳನ್ನು ಅಳವಡಿಸಲಾಗಿದೆ. ಮಂಜುನಾಥ ನಗರದ ಪಟ್ಟಣ ಪಂಚಾಯತ ಮಾಜಿ ಸದಸ್ಯ ಸತೀಶ ನಾಯ್ಕ, ಪ ಪಂ ಆರೋಗ್ಯ ನಿರಿಕ್ಷಕ ಗುರು ಗಡಗಿ ಜೊತೆ ಮುಖ್ಯಾಧಿಕಾರಿ ಕುಮಾರ ನಾಯ್ಕ ಹಾಗೂ ಇಂಜಿನಿಯರ್ ಹೇಮಚಂದ್ರ ನಾಯ್ಕ ಉದ್ಯಾನವನ ವೀಕ್ಷಣೆ ಮಾಡಿದ್ದಾರೆ. 50ಕ್ಕೂ ಅಧಿಕ ಕಾರ್ಮಿಕರನ್ನು ಅಲ್ಲಿ ನಿಯೋಜಿಸಿ ನಾಲ್ಕು ದಿನಗಳ ಕೆಲಸ ಮಾಡಿಸಿದ್ದಾರೆ. ಈ ಎಲ್ಲಾ ಹಿನ್ನಲೆ ಹೊರ ಮಂಗಳವಾರ ಆಚರಣೆಗೆ ಉದ್ಯಾನವನವೂ ಯೋಗ್ಯ ಪ್ರದೇಶವಾಗಿದ್ದು, ಜನ ಅದರ ಪ್ರಯೋಜನಪಡೆಯಬೇಕು. ವಿವಿಧ ಪ್ರವಾಸಿ ತಾಣಗಳಿಗೆ ಹೋಗುವುದರ ಜೊತೆ ಉದ್ಯಾನವನದ ವಾತಾವರಣವನ್ನು ಅನುಭವಿಸಬೇಕು ಎಂದು ಆ ಭಾಗದವರು ಮನವಿ ಮಾಡಿದ್ದಾರೆ. - [ಕೊನೆ ಕೊಯ್ಲಿಗೆ ಬಂದವನಿಗೆ ಅದೇ ಕೊನೆ ದಿನ!](https://mobiletime.in/2026/01/its-the-last-day-for-the-one-who-came-to-the-last-harvest/): ಶಿರಸಿ ದೇವನಳ್ಳಿ ಬಳಿ ಕೊನೆ ಕೊಯ್ಲಿಗೆ ಹೋಗಿದ್ದ ರಾಮಚಂದ್ರ ಗೌಡ ಅವರ ಬದುಕು ಕೊನೆಯಾಗಿದೆ. ಅಡಿಕೆ ಮರದಿಂದ ಬಿದ್ದು ಅವರು ಕೊನೆಯುಸಿರೆಳೆದಿದ್ದಾರೆ. ದೇವನಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಕುದ್ರಗೋಡ ಗ್ರಾಮದಲ್ಲಿ ಜ 15ರಂದು ರಾಮಚಂದ್ರ ಗೌಡ (37) ಅವರು ಅಡಿಕೆ ಕೊಯ್ಲು ಕಾರ್ಯ ಮಾಡುತ್ತಿದ್ದರು. ಮರ ಏರಿದ ಅವರು 60 ಅಡಿ ಎತ್ತರಕ್ಕೆ ಹೋದಾಗ ಅವರ ಕಾಲು ಜಾರಿತು. ಮರದಿಂದ ಅವರು ನೆಲಕ್ಕೆ ಅಪ್ಪಳಿಸಿದರು. ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ಆಸ್ಪತ್ರೆಗೆ ಸೇರಿಸಿ ಬದುಕಿಸುವ ಪ್ರಯತ್ನ ನಡೆಯಿತು. ಶಿರಸಿ ನಗರದ ಪಂಡಿತ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ಕೊಡಲಾಗಿದ್ದು, ನಂತರ ಧಾರವಾಡದ ಆಸ್ಪತ್ರೆಗೆ ರವಾನಿಸಲಾಯಿತು. ಆದರೆ, ಅದರಿಂದ ಯಾವ ಪ್ರಯೋಜನವೂ ಬರಲಿಲ್ಲ. ರಾಮಚಂದ್ರ ಗೌಡ ಅವರು ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದರು. `ಕೊನೆ ಕೊಯ್ಲು: ಅಪಾಯ ತಪ್ಪಿಸಲು ದೋಟಿ ಬಳಸಿ’ - [ಕೈ ಮಾಡಿದರೂ ನಿಲ್ಲದ ಕಾರು: ಕೇಸು!](https://mobiletime.in/2026/01/car-wont-stop-even-if-you-wave-your-hand-case/): ಭಟ್ಕಳದ ಅಮಿತ್ ಶಿರಾಳಿಕರ್ ಅವರ ಕಾರಿಗೆ ಅಡ್ಡಲಾಗಿ ಪೊಲೀಸರು ಕೈ ಮಾಡಿದ್ದಾರೆ. ಪೊಲೀಸರನ್ನು ನೋಡಿಯೂ ಕಾರು ನಿಲ್ಲಿಸಿದ ಕಾರಣ ಅವರ ವಿರುದ್ಧ ಕೇಸು ದಾಖಲಿಸಿದ್ದಾರೆ! ಭಟ್ಕಳ ಹುರುಳಿಸಾಲ ಬಳಿಯ ಕಾರಗದ್ದೆಯಲ್ಲಿ ಅಮೀತ ಸುರೇಶ ಶಿರಾಳಿಕರ್ ಅವರು ವಾಸವಾಗಿದ್ದಾರೆ. 33 ವರ್ಷದ ಅಮೀತ ಶಿರಾಳಿಕರ್ ಅವರು ಖಾಸಗಿ ಕಂಪನಿಯ ಉದ್ಯೋಗಿಯಾಗಿದ್ದಾರೆ. ಕೈ ತುಂಬ ಸಂಬಳ ಸಿಗುವ ಕಾರಣ ಮೋಜು-ಮಸ್ತಿಗೆ ಅವರು ಎಂದಿಗೂ ಕೊರತೆ ಮಾಡಿಕೊಂಡಿಲ್ಲ. ಗೋವಾ ನೋಂದಣಿಯ ಹುಂಡೈ ಕ್ರೇಟಾ ಕಾರನ್ನು ಅಮೀತ ಶಿರಾಳಿಕರ್ ಅವರು ಹೊಂದಿದ್ದು, ಬೇರೆಯವರಿಗೆ ಅಪಾಯವಾಗುವಂತೆ ಕಾರು ಓಡಿಸುವುದು ಎಂದರೆ ಅವರಿಗೆ ಎಲ್ಲಿಲ್ಲದ ಖುಷಿ! ಅದರಂತೆ, ಜನವರಿ 16ರಂದು ಅಮೀತ ಶಿರಾಳಿಕರ್ ಅವರು ತಮ್ಮ ಕಾರನ್ನು ಅತ್ಯಂತ ವೇಗವಾಗಿ ಓಡಿಸುತ್ತಿದ್ದರು. ಆ ದಿನ ಸಂಜೆ 5 ಗಂಟೆ ವೇಳೆಗೆ ಅಮೀತ ಅವರು ಕಾರಗದ್ದೆ 2ನೇ ಕ್ರಾಸಿನಿಂದ ಹೆದ್ದಾರಿಗೆ ಹೋಗುವ ಗುಡ್ ಲಕ್ ರಸ್ತೆಯಲ್ಲಿ ಅಡ್ಡಾದಿಡ್ಡಿ ಕಾರು ಚಲಾಯಿಸಿದ್ದರು. ಇದನ್ನು ನೋಡಿದ ಭಟ್ಕಳ ಗ್ರಾಮೀಣ ಠಾಣೆಯ ಪಿಸೈ ರನ್ನಗೌಡ ಪಾಟೀಲ್ ಅವರು ಕಾರಿಗೆ ಅಡ್ಡಲಾಗಿ ಕೈ ಮಾಡಿದರು. ಕಾರು ನಿಲ್ಲಿಸುವಂತೆ ಸೂಚಿಸಿದರು. ಅದಾಗಿಯೂ ಅಮೀತ ಶಿರಾಳಿಕರ್ ಕಾರು ನಿಲ್ಲಿಸಲಿಲ್ಲ. ಇನ್ನಷ್ಟು ವೇಗವಾಗಿ ಕಾರು ಓಡಿಸಿದ್ದು, ಪೊಲೀಸರಿಂದ ತಪ್ಪಿಸಿಕೊಳ್ಳುವ ಪ್ರಯತ್ನ ಮಾಡಿದರು. ಅಮೀತ ಶಿರಾಳಿಕರ್ ಅವರ ಉದ್ದಟತನದ ವರ್ತನೆ ಪೊಲೀಸರಿಗೆ ಅನುಮಾನ ಮೂಡಿಸಿತು. ಹೀಗಾಗಿ ಆ ಕಾರು ಬೆನ್ನತ್ತಿ ಹೋದ ಪೊಲೀಸರು ಮುಂದಿನ ತಿರುವಿನಲ್ಲಿ ಅಡ್ಡಗಟ್ಟಿದರು. ಪೊಲೀಸರು ಕೈ ಮಾಡಿದರೂ ಕಾರು ನಿಲ್ಲಿಸಿದ ಕಾರಣ ಪ್ರಶ್ನಿಸಿದ್ದು, ಆ ವೇಳೆ ಇನ್ನಷ್ಟು ಉದ್ದಟತನ ಪ್ರದರ್ಶಿಸಿದ ಕಾರಣ ಅಮೀತ ಶಿರಾಳಿಕರ್ ಅವರ ವಿರುದ್ಧ ಪ್ರಕರಣ ದಾಖಲಿಸಿದರು. - [ಹೊಸ ಹೋರಾಟಕ್ಕೆ ಮುಹೂರ್ತ: ಜಾತ್ರೆ ಅಂಗವಾಗಿ ಇಡೀ ದಿನ ಉಪವಾಸ!](https://mobiletime.in/2026/01/the-time-for-a-new-struggle-a-whole-day-fast-as-part-of-the-fair/): ಫೆಬ್ರವರಿ 24ರಿಂದ ಶಿರಸಿ ಜಾತ್ರೆ ಶುರುವಾಗಲಿದ್ದು, ಅದರ ಅಂಗವಾಗಿ ಸಾಮಾಜಿಕ ಕಾರ್ಯಕರ್ತ ಅನಂತಮೂರ್ತಿ ಹೆಗಡೆ ಉಪವಾಸ ಮಾಡಲಿದ್ದಾರೆ. ಜಾತ್ರೆಗೆ ಬರುವ ಭಕ್ತರಿಗೆ ಆಗುವ ಅನಾನುಕೂಲದ ಬಗ್ಗೆ ಗಮನಸೆಳೆಯುವುದಕ್ಕಾಗಿ ಅವರು ಈ ಹೋರಾಟ ನಡೆಸುವುದಾಗಿ ಘೋಷಿಸಿದ್ದಾರೆ. ಶಿರಸಿ ಜಾತ್ರೆಗೆ ದಿನಾಂಕ ನಿಗದಿ ಆಗಿದ್ದು, ಎಲ್ಲರೂ ಜಾತ್ರೆಯ ಬಗ್ಗೆಯೇ ಯೋಚಿಸುತ್ತಿದ್ದಾರೆ. ಆದರೆ, ಸಾಮಾಜಿಕ ಕಾರ್ಯಕರ್ತ ಅನಂತಮೂರ್ತಿ ಹೆಗಡೆ ಜಾತ್ರೆಗೆ ಬರುವವರ ಅನುಕೂಲಕ್ಕಾಗಿ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಗಮನಸೆಳೆಯುವ ಪ್ರಯತ್ನ ಮಾಡಿದ್ದಾರೆ. ಅದರಂತೆ, ಶಿರಸಿ ಜಾತ್ರೆಗೆ ಅಗತ್ಯವಿರುವ ಮೂಲಭೂತ ಸೌಕರ್ಯ ಕಲ್ಪಿಸುವಂತೆ ಆಗ್ರಹಿಸಿ ಫೆ 3ಕ್ಕೆ ಉಪವಾಸ ಸತ್ಯಾಗ್ರಹ ನಡೆಸುವುದಾಗಿ ಅವರು ಘೋಷಿಸಿದ್ದಾರೆ. `ರಾಜ್ಯದಲ್ಲಿಯೇ ಅತಿ ದೊಡ್ಡ ಶಿರಸಿ ಮಾರಿಕಾಂಬಾ ಜಾತ್ರೆಗೆ ಇನ್ನೂ ಜಾತ್ರಾ ಅನುದಾನ ಮಂಜೂರಿಯಾಗಿಲ್ಲ. ಮೂಲಭೂತ ಸೌಕರ್ಯಕ್ಕೆ ಆಗ್ರಹಿಸಿದರೂ ಆ ಕೆಲಸ ನಡೆದಿಲ್ಲ. ಜಾತ್ರೆಗೆ ಬರುವ ಲಕ್ಷಾಂತರ ಭಕ್ತರಿಗೆ ಶೌಚಾಲಯ, ಸ್ನಾನಗೃಹ, ರಾತ್ರಿ ಮಲಗುವ ವ್ಯವಸ್ಥೆ, ಬೆಳಿಗ್ಗೆ ತಿಂಡಿ ವ್ಯವಸ್ಥೆ ಆಗಬೇಕು. ಕುಂಭಮೇಳದ ಮಾದರಿ ಕನಿಷ್ಟ 10 ಸಾವಿರ ಜನರಿಗೆ ಈ ಎಲ್ಲಾ ವ್ಯವಸ್ಥೆ ಮಾಡಬೇಕು’ ಎಂದು ಅನಂತಮೂರ್ತಿ ಹೆಗಡೆ ಆಗ್ರಹಿಸಿದ್ದಾರೆ. `ಶಿರಸಿಯ ಎಲ್ಲ ಕಲ್ಯಾಣ ಮಂಟಪ ಬಾಡಿಗೆಗೆಪಡೆದು ಸರಕಾರವೇ ಅದರ ಹಣ ಪಾವತಿಸಿ ಧರ್ಮ ಛತ್ರವಾಗಿ ಪರಿವರ್ತಿಸಬೇಕು. ಬೆಳಿಗ್ಗೆ ಸ್ನಾನಕ್ಕೆ ಜನ ಕೋಟೆಕೆರೆಗೆ ಹೋಗುವುದನ್ನು ತಪ್ಪಿಸಬೇಕು. ಅಂಚೆ ಕಚೇರಿ ಪಕ್ಕದ ಮಾರಿಕಾಂಬಾ ಗದ್ದುಗೆ ಹತ್ತಿರದ ಶೌಚಾಲಯ ಸ್ವಚ್ಛಗೊಳಿಸಬೇಕು’ ಎಂದು ಒತ್ತಾಯಿಸಿದ್ದಾರೆ. ಭೀಮಣ್ಣರ ಬಗ್ಗೆ ಅನುಕಂಪ! ಶಿರಸಿ ಶಾಸಕ ಭೀಮಣ್ಣ ನಾಯ್ಕ ಅವರ ವೈಫಲ್ಯಗಳ ಬಗ್ಗೆ ಮಾತನಾಡುತ್ತಿದ್ದ ಅನಂತಮೂರ್ತಿ ಹೆಗಡೆ ಈ ಬಾರಿ ಭೀಮಣ್ಣ ನಾಯ್ಕ ಅವರ ಬಗ್ಗೆ ಅನುಕಂಪದ ಮಾತನಾಡಿದ್ದಾರೆ. ಸಿದ್ದಾಪುರದ ಕಾರ್ಯಕ್ರಮವೊಂದರಲ್ಲಿ ಶಾಸಕ ಭೀಮಣ್ಣ ನಾಯ್ಕ ಕರಾವಳಿ ಉತ್ಸವದ ಬಗ್ಗೆ ಅಸಮಧಾನವ್ಯಕ್ತಪಡಿಸಿದ್ದನ್ನು ಉಲ್ಲೇಖಿಸಿ `50 ಕೋಟಿ ಕ್ರಿಯಾ ಯೋಜನೆ ಮಾಡಿ ಕಳಿಸಿದರೆ ನಯಾಪೈಸೆ ಹಣ ಬಿಡುಗಡೆ ಮಾಡುತ್ತಿಲ್ಲ’ ಎಂದು ಅವರು ಸರ್ಕಾರದ ನಡವಳಿಕೆ ಪ್ರಶ್ನಿಸಿದನ್ನು ಸ್ವಾಗತಿಸಿದ್ದಾರೆ. ಉತ್ಸವಕ್ಕೆ ಶಾಸಕರನ್ನು ಸಹ ಕರೆಯದೇ ಉತ್ಸವ ಮಾಡಿದನ್ನು ಖಂಡಿಸಿದ್ದಾರೆ. `ಜನಪ್ರತಿನಿಧಿಯನ್ನು ಸರ್ಕಾರ ಹಾಗೂ ಸಚಿವರು ಅಷ್ಟು ತುಚ್ಚವಾಗಿ ನಡೆಸಿಕೊಳ್ಳಬಾರದು. ಕರಾವಳಿ ಉತ್ಸವಕ್ಕೆ ಹಣ ಕೊಟ್ಟ ರೀತಿ ಶಿರಸಿ ಜಾತ್ರೆಗೂ ಕೊಡಬೇಕು. ಜಾತ್ರೆಯ ಒಳಗೆ ಈ ಸಲದ ಜಾತ್ರಾ ಅನುದಾನ ಬಿಡುಗಡೆ ಮಾಡಿಸುವ ಮೂಲಕ ಶಾಸಕ ಭೀಮಣ್ಣ ಜನರ ಸ್ವಾಭಿಮಾನ ಎತ್ತಿ ಹಿಡಿಯುವ ಕಾರ್ಯ ಮಾಡಬೇಕು’ ಎಂದು ಆಗ್ರಹಿಸಿದ್ದಾರೆ. ಆ ಮೂಲಕ ಉಸ್ತುವಾರಿ ಸಚಿವ ಮಂಕಾಳ ವೈದ್ಯರಿಗೆ ನಿಮ್ಮ ತಾಕತ್ತನ್ನು ತೋರಿಸಬೇಕು’ ಎಂದು ಹೇಳಿದ್ದಾರೆ. - [ಕೆಲಸಕ್ಕೆ ಬಂದಿದ್ದ ಕೂಲಿಯ ಮರಣ](https://mobiletime.in/2026/01/death-of-a-laborer-who-had-come-to-work/): ಭಟ್ಕಳದ ಶ್ರೀಧರ ನಾಯ್ಕ ಅವರ ತೋಟದ ಕೆಲಸಕ್ಕೆ ಹೋಗಿದ್ದ ಮೋಹನ ನಾಯ್ಕ ಅವರು ಅಲ್ಲಿಯೇ ಕುಸಿದು ಬಿದ್ದು ಸಾವನಪ್ಪಿದ್ದಾರೆ. ಭಟ್ಕಳದ ಮುಂಡಳ್ಳಿ ಡಿ ಪಿ ಕಾಲೋನಿಯಲ್ಲಿ ಮೋಹನ ನಾರಾಯಣ ನಾಯ್ಕ (55) ಅವರು ವಾಸವಾಗಿದ್ದರು. ಅವರಿವರ ಮನೆಯ ಕೂಲಿ ಕೆಲಸಕ್ಕೆ ಹೋಗಿ ಅವರು ಬದುಕು ಕಟ್ಟಿಕೊಂಡಿದ್ದರು. ಜನವರಿ 17ರ ಬೆಳಗ್ಗೆ 8 ಗಂಟೆಗೆ ಮೋಹನ ನಾಯ್ಕ ಅವರು ಶ್ರೀಧರ ಶನಿಯಾರ ನಾಯ್ಕ ಅವರ ತೋಟಕ್ಕೆ ಹೋಗಿದ್ದರು. ಶ್ರೀಧರ ನಾಯ್ಕ ಅವರ ಸೂಚನೆ ಮೇರೆಗೆ ಅಲ್ಲಿ ಅಡಿಕೆ ಹಾಗೂ ತೆಂಗಿನ ಮರದ ಬುಡ ಸರಿಪಡಿಸುವ ಕೆಲಸ ಮಾಡುತ್ತಿದ್ದರು. ಕೆಲ ಸಮಯದ ನಂತರ ಮೋಹನ ನಾಯ್ಕ ಅವರು ದಿಢೀರ್ ಆಗಿ ಕುಸಿದು ಬಿದ್ದರು. ಅಲ್ಪ ಪ್ರಮಾಣದಲ್ಲಿ ಉಪಚಾರ ಮಾಡಿ ಅವರನ್ನು ಭಟ್ಕಳ ಸರ್ಕಾರಿ ಆಸ್ಪತ್ರೆಗೆ ಕರೆತರಲಾಯಿತು. ಆದರೆ, ಅದರಿಂದ ಯಾವ ಪ್ರಯೋಜನವೂ ಆಗಲಿಲ್ಲ. ವೈದ್ಯರು ಪರಿಕ್ಷಿಸುವುದರೊಳಗೆ ಮೋಹನ ನಾಯ್ಕ ಅವರು ಸಾವನಪ್ಪಿದ್ದರು. ಮೋಹನ ನಾಯ್ಕ ಅವರ ಪುತ್ರ ಲೋಕನಾಥ ನಾಯ್ಕ ಅವರು ಈ ಬಗ್ಗೆ ಮಾಹಿತಿ ನೀಡಿದರು. - [ದೇಗುಲ ಆಡಳಿತಕ್ಕೆ ಡಿಜಿಟಲ್ ಸ್ಪರ್ಶ](https://mobiletime.in/2026/01/digital-touch-for-temple-administration/): ಶಿರಸಿ ನಗರದ ಯಲ್ಲಾಪುರ ಮಹಾಸತಿ ವೃತ್ತದ ಬಳಿಯ ಶ್ರೀ ಕೊಪ್ಪರಗೆ ಕೆಂಡ ಮಹಾಸತಿ ದೇವಸ್ಥಾನದಲ್ಲಿ ಹೊಸದಾಗಿ ಕಂಪ್ಯೂಟರ್ ಆಧಾರಿತ ಸೇವಾ ಕೌಂಟರ್ ಶುರುವಾಗಿದೆ. ಶ್ರೀ ಭೂತೇಶ್ವರ ಪತ್ತಿನ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಾಹಕ ವಿನಾಯಕ ವಸಂತ ಶೆಟ್ಟಿ ಅವರು ಈ ಕೇಂದ್ರವನ್ನು ಉದ್ಘಾಟಿಸಿದ್ದಾರೆ. ಈ ವೇಳೆ ಸಂಘದ ಪರವಾಗಿ ಅವರು ದೇವಸ್ಥಾನಕ್ಕೆ ಪ್ರಿಂಟರ್ ಹಾಗೂ ಮೋನಿಟರ್ ಕೊಡುಗೆ ನೀಡಿದ್ದಾರೆ. ಶ್ರೀ ಭೂತೇಶ್ವರ ಪತ್ತಿನ ಸಹಕಾರಿ ಸಂಘದ ಸ್ಥಾಪಕರಾಗಿದ್ದ ವಸಂತ ಶೆಟ್ಟಿ ಅವರು ತಮ್ಮ ಜೀವಿತ ಅವಧಿಯಲ್ಲಿ ನಡೆಸಿದ ಧಾರ್ಮಿಕ ಹಾಗೂ ಸಾಮಾಜಿಕ ಕಾಳಜಿಯನ್ನು ದೇವಸ್ಥಾನದ ಅಧ್ಯಕ್ಷ ಆಯ್ ಎಮ್ ಹೆಗಡೆ ಅವರು ಸ್ಮರಿಸಿದರು. ದೇಗುಲಕ್ಕೆ ಕೊಡುಗೆ ನೀಡಿದ ವಿನಾಯಕ ಶೆಟ್ಟಿ ಅವರನ್ನು ಆಡಳಿತ ಮಂಡಳಿಯವರು ಸನ್ಮಾನಿಸಿದರು. `ದೇವರ ಸೇವೆ ಮಾಡಲು ಅವಕಾಶ ಸಿಕ್ಕಿದ್ದರಿಂದ ಕೃತಜ್ಞನಾಗಿರುವೆ’ ಎಂದು ವಿನಾಯಕ ಶೆಟ್ಟಿ ಅವರು ಹೇಳಿದರು. ಆಡಳಿತ ಮಂಡಳಿ ಸದಸ್ಯರು, ಭಕ್ತರು ಹಾಗೂ ಕೆಂಡ ಮಹಾಸತಿ ಯುವಕ ಮಂಡಳಿಯ ಸದಸ್ಯರು ಈ ವೇಳೆ ಹಾಜರಿದ್ದರು. - [ಅಕ್ಕಸಾಲಿಗನ ಮನೆಯಲ್ಲಿ ಕಳ್ಳತನ](https://mobiletime.in/2026/01/theft-in-the-goldsmiths-house/): ಶಿರಸಿ ಬನವಾಸಿ ರಸ್ತೆಯ ಕೆನರಾ ಬ್ಯಾಂಕ್ ಎದುರು ಕಳ್ಳತನ ನಡೆದಿದೆ. ಮಂಜುನಾಥ ಕುಡ್ತರಕರ್ ಅವರ ಮನೆಗೆ ನುಗ್ಗಿದ ಕಳ್ಳರು ಬೆಲೆ ಬಾಳುವ ಒಡವೆ ಹಾಗೂ ಹಣ ದೋಚಿ ಪರಾರಿ ಆಗಿದ್ದಾರೆ. ಕೆನರಾ ಬ್ಯಾಂಕ್ ಎದುರಿಗಿನ ಯಮೂನಾ ಲಕ್ಷö್ಮಣ ನಿವಾಸದಲ್ಲಿ ಮಂಜುನಾಥ ಕುಡ್ತರಕರ್ ಅವರು ವಾಸವಾಗಿದ್ದಾರೆ. ಅವರು ಅಕ್ಕಸಾಲಿಗರಾಗಿ ಕೆಲಸ ಮಾಡಿಕೊಂಡಿದ್ದು, ಮನೆಯಲ್ಲಿ ಆಭರಣಗಳಿರಿಸಿದನ್ನು ಕಳ್ಳರು ಅರಿತಿದ್ದಾರೆ. ಜನವರಿ 14ರ ಮಧ್ಯಾಹ್ನ ಮಂಜುನಾಥ ಕುಡ್ತರಕರ್ ಅವರು ಮುಂಬೈಗೆ ಹೋಗಿದ್ದು, ಮರಳಿ ಬರುವಷ್ಟರಲ್ಲಿ ಕಳ್ಳರು ಅವರ ಮನೆಗೆ ನುಗ್ಗಿ ಕಳ್ಳತನ ಮಾಡಿದ್ದಾರೆ. ಜನವರಿ 15ರಂದು ಮಂಜುನಾಥ ಕುಡ್ತಕರ್ ಅವರು ಮನೆಗೆ ಬಂದಾಗ ಕಳ್ಳತನ ನಡೆದಿರುವುದು ಗೊತ್ತಾಗಿದೆ. ದೇವರ ಮನೆ ಬೀಗ ಒಡೆದ ಕಳ್ಳರು ಅಲ್ಲಿನ ಕಪಾಟಿನಲ್ಲಿದ್ದ 93 ಸಾವಿರ ರೂ ಮೌಲ್ಯದ ಬೆಳ್ಳಿ ಸಾಮಗ್ರಿ ಕದ್ದಿದ್ದಾರೆ. 53 ಸಾವಿರ ರೂ ಹಣವನ್ನು ದೋಚಿದ್ದಾರೆ.   - [ಕಾಟ ಕೊಟ್ಟ ಕಾಮುಕರ ಸೆರೆ](https://mobiletime.in/2026/01/arrest-of-wild-lovers/): ಬನವಾಸಿ ಬಳಿಯ ಬಾಲಕಿಗೆ ಕಾಟ ಕೊಟ್ಟಿದ್ದ ವಸಂತ ಕಮಾಟಿ ಹಾಗೂ ಅಣ್ಣಪ್ಪ ಮೇದಾರ್ ಎಂಬಾತರನ್ನು ಪೊಲೀಸರು ಹಿಡಿದಿದ್ದಾರೆ. ಶಿರಸಿ ದಾಸನಕೊಪ್ಪ ಗ್ರಾಮದ ವಸಂತ ಹನುಮಂತ ಕಮಾಟಿ ಹಾಗೂ ಅಣ್ಣಪ್ಪ ಮೇದಾರ ಸೇರಿ ಬನವಾಸಿ ಬಳಿಯ ಬಾಲಕಿಯೊಬ್ಬರಿಗೆ ಬಗೆ ಬಗೆಯ ಆಮೀಷ ಒಡ್ಡಿದ್ದರು. ಅದಾದ ನಂತರ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದರು. ಅದಾದ ನಂತರ ಅವರಿಬ್ಬರು ಪರಾರಿಯಾಗಿದ್ದು, ಪೊಲೀಸರು ಸಾಕಷ್ಟು ಹುಡುಕಾಟ ನಡೆಸಿ ಕಾಮುಕರನ್ನು ಸೆದೆಬಡಿದಿದ್ದಾರೆ. ಬಾಲಕಿ ಮೇಲೆ ನಡೆದ ದೌರ್ಜನ್ಯದ ಬಗ್ಗೆ ಬಾಲಕಿಯ ತಾಯಿ ದೂರು ನೀಡಿದ್ದರು. ಪ್ರಕರಣದ ಗಂಭೀರತೆ ಅರಿತ ಪೊಲೀಸರು ವಿಶೇಷ ತಂಡ ರಚಿಸಿ ಅವರಿಬ್ಬರ ಹುಡುಕಾಟ ನಡೆಸಿದರು. ಊರು ಬಿಟ್ಟು ಓಡಿ ಹೋದವರು ಪೊಲೀಸರ ಕೈಗೆ ಸಿಕ್ಕಿಬಿದ್ದರು. ಸದ್ಯ ವಸಂತ ಕಮಾಟಿ ಹಾಗೂ ಅಣ್ಣಪ್ಪ ಮೇದಾರ್’ರನ್ನು ಬಂಧಿಸಿದ ಪೊಲೀಸರು ನ್ಯಾಯಾಲಯಕ್ಕೆ ಒಪ್ಪಿಸಿದ್ದಾರೆ. - [ಹೋರಿ ಹಾಯ್ದು ಪಾದಚಾರಿ ಸಾವು!](https://mobiletime.in/2026/01/pedestrian-dies-after-being-run-over-by-bull/): ಶಿರಸಿಯಲ್ಲಿರುವ ಬೀಡಾಡಿ ದನಗಳ ನಿಯಂತ್ರಣಕ್ಕೆ ಶಾಸಕ ಹಾಗೂ ಸಚಿವರು ಜಂಟಿ ಸಭೆ ನಡೆಸಿದರೂ ಅದರಿಂದ ದೊಡ್ಡ ಪ್ರಮಾಣದ ಪ್ರಯೋಜನ ಆಗಲಿಲ್ಲ. ಬೀಡಾಡಿ ಜಾನುವಾರು ಗುದ್ದಿದ ಪರಿಣಾಮ ಪಾದಚಾರಿಯೊಬ್ಬರ ಪ್ರಾಣ ಹೋಗಿದ್ದರೂ ಸರ್ಕಾರ ಅದನ್ನು ಗಂಭೀರವಾಗಿ ಪರಿಗಣಿಸಿಲ್ಲ. ಶಿರಸಿ ಟಿಎಸ್‌ಎಸ್ ರಸ್ತೆಯ ಜೊಸೆಫ್ ಡಯಾಸ್ (62) ಅವರು ಬೀಡಾಡಿ ಜಾನುವಾರು ಕಾಟಕ್ಕೆ ಪ್ರಾಣ ಬಿಟ್ಟಿದ್ದಾರೆ. ಹೋರಿಯೊಂದು ಅವರ ಹೊಟ್ಟೆಗೆ ಗುದ್ದಿದ್ದು ಆ ನೋವಿಗೆ ಜೊಸೆಫ್ ಡಯಾಸ್ ಅವರು ಸಾವನಪ್ಪಿದ್ದಾರೆ. ಶುಕ್ರವಾರ ಕೆಲಸಕ್ಕಾಗಿ ಮನೆಯಿಂದ ಹೊರಟ ಅವರಿಗೆ ದಿಢೀರ್ ಆಗಿ ಹೋರಿ ಒಂದು ಎದುರಾಗಿದೆ. ಜೊಸೆಫ್ ಡಯಾಸ್ ಅವರ ಮೇಲೆ ಆ ಹೋರಿ ದಾಳಿ ಮಾಡಿದೆ. ರಸ್ತೆ ಮೇಲೆ ಬಿದ್ದು ಅವರು ಪೆಟ್ಟು ಮಾಡಿಕೊಂಡಿದ್ದರು. ಶಿರಸಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿದ ನಂತರ ಜೊಸೆಫ್ ಡಯಾಸ್ ಅವರನ್ನು ಹುಬ್ಬಳ್ಳಿಗೆ ಕರೆದೊಯ್ಯಲಾಯಿತು. ಆದರೆ, ಅಲ್ಲಿಯೂ ಅವರನ್ನು ಬದುಕಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಶಿರಸಿ ನಗರದಲ್ಲಿ ಬೀಡಾಡಿ ಜಾನುವಾರು ಸಮಸ್ಯೆ ದಿನದಿಂದ ದಿನಕ್ಕೆ ಉಲ್ಬಣವಾಗುತ್ತಿದ್ದು, ಅವುಗಳ ನಿಯಂತ್ರಣಕ್ಕಾಗಿ ಜನ ಪಟ್ಟು ಹಿಡಿದಿದ್ದಾರೆ. - [ಮಕ್ಕಳಿದ್ದ ವಾಹನ ಅಪಘಾತ: ಐವರಿಗೆ ಗಾಯ](https://mobiletime.in/2026/01/five-injured-in-vehicle-accident-involving-children/): ಕುಮಟಾದ ಎ ವಿ ಬಾಳಿಗಾ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳಿದ್ದ ಓಮಿನಿ ಅಪಘಾತಕ್ಕೀಡಾಗಿದೆ. ನಾಲ್ವರು ಮಕ್ಕಳ ಜೊತೆ ಓಮಿನಿ ಓಡಿಸುತ್ತಿದ್ದವರು ಗಾಯಗೊಂಡಿದ್ದಾರೆ. ಶನಿವಾರ ಶಾಲೆ ಮುಗಿಸಿ ಬಂದ ಮಕ್ಕಳನ್ನು ಓಮಿನಿ ಅವರವರ ಮನೆಗೆ ಕರೆದೊಯ್ಯುತ್ತಿತ್ತು. ಹಳೆ ಬಸ್ ನಿಲ್ದಾಣದ ಬಳಿ ಓಮಿನಿ ಚಾಲಕನ ನಿಯಂತ್ರಣ ತಪ್ಪಿದ್ದು ಬುಲೆರೋಗೆ ಡಿಕ್ಕಿ ಹೊಡೆಯಿತು. ತನಿಷ್ಕ (15), ಅದ್ವಿತ್ (12), ಅರ್ಜುನ್ (13), ಆಯಿರಾ (10) ಎಂಬ ವಿದ್ಯಾರ್ಥಿಗಳು ಅಪಘಾತದಲ್ಲಿ ಗಾಯಗೊಂಡರು. ಓಮಿನಿ ವಾಹನದ ಚಾಲಕ ಜಟ್ಟಿ ಮುಕ್ರಿ ಅವರು ಸಹ ಪೆಟ್ಟು ಮಾಡಿಕೊಂಡರು. ಸದ್ಯ ಎಲ್ಲ ಗಾಯಾಳುಗಳನ್ನು ಕುಮಟಾ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಶಾಲೆಯಿಂದ ಮಕ್ಕಳನ್ನು ಮನೆಗೆ ಕರೆದೊಯ್ಯುವ ವೇಳೆ ಓಮಿನಿ ಚಾಲಕನಿಗೆ ತಲೆ ಸುತ್ತು ಬಂದ ಕಾರಣ ವಾಹನದ ನಿಯಂತ್ರಣ ತಪ್ಪಿದೆ. ಓಮಿನಿ ವಾಹನದ ಮುಂಭಾಗ ಸಂಪೂರ್ಣವಾಗಿ ಜಖಂ ಆಗಿದೆ. ಸ್ಥಳೀಯರು ಸಾಕಷ್ಟು ಪ್ರಮಾಣದಲ್ಲಿ ಸಹಕಾರ ನೀಡಿದ್ದು, ಗಾಯಾಳುಗಳ ಆರೈಕೆ ಮಾಡಿದ್ದಾರೆ. - [ಕೋಣೆಮನೆಗೆ ನಾಚಿಕೆ ಇಲ್ಲ.. ಪ್ರಸಾದ ಹೆಗಡೆಗೆ ಬುದ್ದಿ ಇಲ್ಲ.!](https://mobiletime.in/2026/01/the-housekeeper-has-no-shame-prasad-hegde-has-no-brains/): `ಯಲ್ಲಾಪುರ ಬಿಜೆಪಿ ಮಂಡಳ ಅಧ್ಯಕ್ಷ ಪ್ರಸಾದ ಹೆಗಡೆ ಅವರ ಮಾಲಿಕತ್ವದ ನಿಸರ್ಗಮನೆಯಲ್ಲಿ ಏನೇನು ನಡೆಯುತ್ತಿದೆ? ಎಂಬುದು ಎಲ್ಲರಿಗೂ ಗೊತ್ತಿದೆ. ಅವರಿವರಿಗೆ ವಂಚಿಸಿ ಶಿಕ್ಷಣವನ್ನು ವ್ಯಾಪಾರವನ್ನಾಗಿಸಿದ ಬಿಜೆಪಿ ರಾಜ್ಯ ವಕ್ತಾರ ಹರಿಪ್ರಕಾಶ ಕೋಣೆಮನೆ ಅವರಿಂದಲೂ ಶಿವರಾಮ ಹೆಬ್ಬಾರ್ ನೈತಿಕತೆ ಹಾಗೂ ಬದ್ಧತೆಯ ಪಾಠ ಕಲಿಯಬೇಕಿಲ್ಲ’ ಎಂದು ಯಲ್ಲಾಪುರ ಶಾಸಕ ಶಿವರಾಮ ಹೆಬ್ಬಾರ್ ಅವರ ಬೆಂಬಲಿಗರು ಹೇಳಿದ್ದಾರೆ. ಹಾವೇರಿಯಲ್ಲಿರುವ ಕಾರ್ಖಾನೆ ಉಳಿಸಿಕೊಳ್ಳುವುದಕ್ಕಾಗಿ ಶಿವರಾಮ ಹೆಬ್ಬಾರ್ ಅವರು ನದಿ ತಿರುವು ಯೋಜನೆ ಪರ ಒಲವು ಹೊಂದಿದ್ದಾರೆ ಎಂದು ಬಿಜೆಪಿಗರು ದೂರಿದ್ದರು. ಈ ಆರೋಪಕ್ಕೆ ಶಿವರಾಮ ಹೆಬ್ಬಾರ್ ಬೆಂಬಲಿಗರು ತಿರುಗೇಟು ನೀಡಿದ್ದಾರೆ. ಶಿವರಾಮ ಹೆಬ್ಬಾರ್ ಅವರ ಉದ್ದಿಮೆಯ ಬಗ್ಗೆ ಮಾತನಾಡಿದ ಪ್ರಸಾದ ಹೆಗಡೆ ಹಾಗೂ ಹರಿಪ್ರಕಾಶ ಕೋಣೆಮನೆ ಅವರ ವ್ಯವಹಾರಗಳ ಬಗ್ಗೆಯೂ ಹೆಬ್ಬಾರ್ ಬೆಂಬಲಿಗರು ಪ್ರಶ್ನಿಸಿದ್ದಾರೆ. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ ಎಸ್ ಭಟ್ಟ, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರವಿ ಭಟ್ಟ ಬರಗದ್ದೆ, ಜಿಲ್ಲಾ ಕಾಂಗ್ರೆಸ್ ಹಿಂದುಳಿದ ವರ್ಗಗಳ ವಿಭಾಗದ ಉಪಾಧ್ಯಕ್ಷ ಪ್ರೇಮಾನಂದ ನಾಯ್ಕ ಈ ಕುರಿತು ಪ್ರಕಟಣೆ ನೀಡಿದ್ದು, ಪ್ರಸಾದ ಹೆಗಡೆ ಹಾಗೂ ಹರಿಪ್ರಕಾಶ ಕೋಣೆಮನೆ ಅವರ ನಡೆಯನ್ನು ಪ್ರಮುಖರಾದ ಲಾರೇನ್ಸ್ ಸಿದ್ದಿ, ನರಸಿಂಹ ನಾಯ್ಕ, ಗೋಪಾಲ ಸಿದ್ದಿ, ಗಜಾನನ ಭಟ್ಟ, ಕುಪ್ಪಯ್ಯ ಪೂಜಾರಿ ಹಾಗೂ ಗಣೇಶ ಹೆಗಡೆ ಪಣತಗೇರಿ ಖಂಡಿಸಿದ್ದಾರೆ. `ಪ್ರಸಾದ ಹೆಗಡೆ ಬೇರೆಯವರ ಬಗ್ಗೆ ಮಾತನಾಡುವ ಬದಲು ತಮ್ಮ ರಾಜಕೀಯ ಹಾಗೂ ವೈಯಕ್ತಿಕ ಹಿನ್ನಲೆ ಬಗ್ಗೆ ಅರಿತುಕೊಳ್ಳಬೇಕು’ ಎಂದು ಅವರೆಲ್ಲರೂ ಸಲಹೆ ನೀಡಿದ್ದಾರೆ. `ಹರಿಪ್ರಕಾಶ ಕೋಣೆಮನೆ ಬೇರೆಯವರ ದುಡ್ಡಿನಲ್ಲಿ ಸುದ್ದಿ ಸಂಸ್ಥೆ ಮಾಡಿ ಅದನ್ನು ದಿವಾಳಿಯಾಗಿಸಿದ್ದಾರೆ. ಬೇರೆಯವರು ಕಟ್ಟಿದ ಶಿಕ್ಷಣ ಸಂಸ್ಥೆಯನ್ನು ಬೇರೆಯವರ ಹಣದಲ್ಲಿ ಖರೀದಿ ಮಾಡಿ, ಹಣ ನೀಡಿದವರಿಗೆ ಮೋಸ ಮಾಡಿದ್ದಾರೆ. ಅವರಿಗೆ ಹಣ ಕೊಟ್ಟ ಅನೇಕರು ಕೋರ್ಟ ಮೆಟ್ಟಿಲೇರಿದರೂ ಹರಿಪ್ರಕಾಶ ಕೋಣೆಮನೆ ಶಿಕ್ಷಣವನ್ನು ವ್ಯಾಪಾರವನ್ನಾಗಿಸಿಕೊಂಡಿರುವ ವಿಚಾರ ಎಲ್ಲರಿಗೂ ತಿಳಿದಿದೆ. ರಾಜಕೀಯ ಹಂಬಲಕ್ಕಾಗಿ ನಿನ್ನೆ-ಮೊನ್ನೆ ಯಲ್ಲಾಪುರಕ್ಕೆ ಕಾಲಿಟ್ಟಿರುವ ಕೋಣೆಮನೆ ಅವರು ನಾಲ್ಕು ದಶಕದಿಂದ ಯಲ್ಲಾಪುರದ ಜನರ ಜೊತೆಯಿರುವ ಶಿವರಾಮ ಹೆಬ್ಬಾರ್ ಅವರ ಬಗ್ಗೆ ಮಾತನಾಡುವುದು ಹಾಸ್ಯಾಸ್ಪದ’ ಎಂದು ಹೇಳಿದ್ದಾರೆ. `ಶಿವರಾಮ ಹೆಬ್ಬಾರ್.ಅವರು ಸಚಿವರಾಗಿದ್ದ ಅವಧಿಯಲ್ಲಿ ಬೇಡ್ತಿ-ವರದಾ ನದಿ ಜೋಡಣೆ ಬಗ್ಗೆ ವಿರೋಧಿಸಿದ್ದರು. ಶಿಗ್ಗಾವಿಯಲ್ಲಿ ಶಿವರಾಮ ಹೆಬ್ಬಾರ್ ಒಡೆತನದ ಕಾರ್ಖಾನೆ ಆಧುನಿಕ ತಂತ್ರಜ್ಞಾನದಲ್ಲಿ ನಿರ್ಮಾಣವಾಗಿದ್ದು, ನೀರನ್ನು ಅವಲಂಭಿಸಿ ಅವರು ಆ ಉದ್ದಿಮೆ ಕಟ್ಟಿಲ್ಲ. ಬೋರ್‌ವೆಲ್ ಹಾಗೂ ಇನ್ನಿತರ ಜಲಮೂಲಗಳಿಂದ ಕಾರ್ಖಾನೆ ನಡೆಯುತ್ತಿದ್ದು, ತಾಂತ್ರಿಕ ವಿಷಯದ ಬಗ್ಗೆ ಮಾಹಿತಿ ಇಲ್ಲದೇ ಅವರಿಬ್ಬರು ಮಾತನಾಡುವುದು ಸರಿಯಲ್ಲ’ ಎಂದು ಹೇಳಿದ್ದಾರೆ. `ಪ್ರಸಾದ ಹೆಗಡೆ ಹಾಗೂ ಹರಿಪ್ರಕಾಶ ಕೋಣೆಮನೆ ಇಬ್ಬರೂ ರಾಜಕೀಯ ತೆವಲಿಗಾಗಿ ಇಂಥ ಹೇಳಿಕೆ ನೀಡುವುದನ್ನು ಬಿಡಬೇಕು. `ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ ಅವರ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಿ ರಾಜಕೀಯ ಬೇಳೆ ಬೇಯಿಸಿಕೊಳ್ಳುವ ಪ್ರಯತ್ನದಿಂದ ಹೊರಬರಬೇಕು’ ಎಂದು ಹೇಳಿದ್ದಾರೆ. `ಸ್ವರ್ಣವಲ್ಲಿಯ ಗಂಗಾಧರೇoದ್ರ ಸರಸ್ವತಿ ಸ್ವಾಮೀಜಿ ಅವರ ನೇತ್ರತ್ವದಲ್ಲಿ ಬೇಡ್ತಿ-ವರದಾ ನದಿ ಜೋಡಣೆಯ ವಿರುದ್ಧ ಹೋರಾಟ ನಡೆಯುತ್ತಿದೆ. ಶಿವರಾಮ ಹೆಬ್ಬಾರ್ ಬೆಂಬಲಿಗರೆಲ್ಲರೂ ಯೋಜನೆ ವಿರುದ್ಧ ಸ್ವಾಮೀಜಿಗಳ ಪರವಾಗಿದ್ದಾರೆ. ನೆಲ, ಜಲ ಮತ್ತು ಭಾಷೆಯ ಪ್ರಶ್ನೆ ಬಂದಾಗ ನಾವು ರಾಜಕೀಯ ಮಾಡಲು ಸಿದ್ದರಿಲ್ಲ. ನೈತಿಕತೆ ಹಾಗೂ ಬದ್ಧತೆಯ ಪಾಠ ಮಾಡುವ ಬದಲು ಬಿಜೆಪಿ ಪ್ರಮುಖರು ಹಾವೇರಿ ಸಂಸದರಾದ ಬಸವರಾಜ ಬೊಮ್ಮಾಯಿ ಅವರ ಪ್ರಯತ್ನವನ್ನು ತಡೆಯಲಿ’ ಎಂದು ಸವಾಲು ಹಾಕಿದ್ದಾರೆ. - [ಕೊಡಲಿ ಹಿಡಿದ ಶಿವನ ಸೆರೆ!](https://mobiletime.in/2026/01/dead-body-caught-holding-an-axe/): ಮುಂಡಗೋಡಿನ ಶಿವಾನಂದರ ಮೇಲೆ ಕೊಡಲಿ ಬೀಸಿದ್ದ ಶಿವಾನಂದರ ಅವರ ಮೂರನೇ ಹೆಂಡತಿಯ ಮೊದಲೇ ಗಂಡನ ಮಗನಾದ ಶಿವರಾಜ್ ಅವರನ್ನು ಪೊಲೀಸರು ಬಂಧಿಸಿದ್ದಾರೆ. ತoದೆಯ ಹತ್ಯೆಗೆ ಪ್ರಯತ್ನಿಸಿದ ನಂತರ ಶಿವರಾಜ ರಾಣೆಬೆನ್ನೂರಿಗೆ ಓಡಿ ಹೋಗಿದ್ದು, ವಿವಿಧ ತಂತ್ರಜ್ಞಾನಗಳ ಆಧಾರದಲ್ಲಿ ಪೊಲೀಸರು ಆರೋಪಿಯನ್ನು ಹುಡುಕಿ ಹೆಡೆಮುರಿ ಕಟ್ಟಿದ್ದಾರೆ. ಮುಂಡಗೋಡದ ತಾಲೂಕಿನ ತಟ್ಟಿಹಳ್ಳಿಯಲ್ಲಿ ಗುರುವಾರ ಶಿವಾನಂದರ ಹತ್ಯೆ ಪ್ರಯತ್ನ ನಡೆದಿತ್ತು. ಶಿವಾನಂದರ ಮೇಲೆ ಅವರ ಮಗ ಶಿವರಾಜ ಕತ್ತಿ ಬೀಸಿ ಪರಾರಿಯಾಗಿದ್ದರು. ತಾಯಿಗೆ ಕಿರುಕುಳ ನೀಡುತ್ತಿರುವುದನ್ನು ಸಹಿಸದೇ ಶಿವರಾಜ್ ತಂದೆ ಮೇಲೆ ಹಲ್ಲೆ ಮಾಡಿದ ಬಗ್ಗೆ ಮಾಹಿತಿಯಿದ್ದು, ಪೊಲೀಸರು ಇದೀಗ ತಾಯಿ ನೀಡಿದ ಮಾಹಿತಿಯನ್ನು ಬಳಸಿಕೊಂಡು ಆರೋಪಿಯನ್ನು ಹುಡುಕಿದ್ದಾರೆ. ಶಿವಾನಂದ ಹಾಗೂ ಶಿವರಾಜ ನಡುವೆ ಮಾತಿಗೆ ಮಾತು ಬೆಳೆದಿದ್ದು, ಕೊಡಲಿ ಏಟಿಗೆ ಕಾರಣವಾಗಿತ್ತು. - [ಬೆಂಗಳೂರಿನ ಕಂಪನಿಗಳಿಗೆ ಉತ್ತರ ಕನ್ನಡದ ಅಧ್ಯಕ್ಷ!](https://mobiletime.in/2026/01/uttara-kannada-president-for-bengaluru-companies/): ಬೆಂಗಳೂರಿನ ಕಂಪನಿ ಕಾರ್ಯದರ್ಶಿಗಳ ಶಾಖೆಯ ಅಧ್ಯಕ್ಷರಾಗಿ ಉತ್ತರ ಕನ್ನಡದ ವಿಶ್ವಾಸ ಹೆಗಡೆ ಅವರು ಆಯ್ಕೆಯಾಗಿದ್ದಾರೆ. ವಿಶ್ವಾಸ ಶಂಕರ ಹೆಗಡೆ ಅವರು ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಹೆಗಡೆ ಗ್ರಾಮದ ನಿವಾಸಿಯಾಗಿದ್ದಾರೆ. ಅವರು ವಾಣಿಜ್ಯ, ಆಡಳಿತ ಹಾಗೂ ಕಾನೂನು ವಿಭಾಗಗಳಲ್ಲಿ ಪದವೀಧರರಾಗಿದ್ದು, 2015ರಲ್ಲಿ ಕಂಪನಿ ಕಾರ್ಯದರ್ಶಿಯಾಗಿ ಅರ್ಹತೆ ಪಡೆದಿದ್ದಾರೆ. ಸುಮಾರು ಹತ್ತು ವರ್ಷಗಳಿಗಿಂತ ಹೆಚ್ಚಿನ ವೃತ್ತಿಪರ ಅನುಭವ ಹೊಂದಿರುವ ಅವರು ಪ್ರಸ್ತುತ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿಯಮಿತದಲ್ಲಿ ಡೆಪ್ಯುಟಿ ಕಂಪನಿ ಕಾರ್ಯದರ್ಶಿಯಾಗಿದ್ದಾರೆ. ಬೆಂಗಳೂರು ಶಾಖೆಯು 4,000ಕ್ಕೂ ಹೆಚ್ಚು ಕಂಪನಿ ಕಾರ್ಯದರ್ಶಿಗಳನ್ನು ಒಳಗೊಂಡಿದ್ದು, ದೇಶದ ಮೂರನೇ ಅತಿದೊಡ್ಡ ಶಾಖೆಯಾಗಿದೆ. ಇನ್ಸ್ಟಿಟ್ಯೂಟ್ ಆಫ್ ಕಂಪನಿ ಸೆಕ್ರೆಟರೀಸ್ ಆಫ್ ಇಂಡಿಯಾ ಎಂಬುದು ಸಂಸತ್ತಿನ ಕಾಯ್ದೆಯಡಿ ಸ್ಥಾಪಿತಗೊಂಡ ಪ್ರಮುಖ ವೃತ್ತಿಪರ ಸಂಸ್ಥೆಯಾಗಿದ್ದು, ಕಂಪನಿ ಕಾರ್ಯದರ್ಶಿಗಳ ವೃತ್ತಿಯನ್ನು ನಿಯಂತ್ರಿಸುವ ಹಾಗೂ ಅಭಿವೃದ್ಧಿಪಡಿಸುವ ಉದ್ದೇಶ ಹೊಂದಿದೆ. ಈ ಸಂಸ್ಥೆಯು ಭಾರತ ಸರ್ಕಾರದ ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯದ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತದೆ. ಸಿಎಸ್ ಕೋರ್ಸ್ನ ವಿದ್ಯಾರ್ಥಿಗಳಿಗೆ ಉನ್ನತ ಮಟ್ಟದ ಶಿಕ್ಷಣ ಹಾಗೂ ಸದಸ್ಯರಿಗೆ ವೃತ್ತಿಪರ ಮಾನದಂಡಗಳನ್ನು ಒದಗಿಸುವಲ್ಲಿ ಐಸಿಎಸ್‌ಐ ಪ್ರಮುಖ ಪಾತ್ರವಹಿಸುತ್ತದೆ. ನವದೆಹಲಿಯಲ್ಲಿ ಪ್ರಧಾನ ಕಚೇರಿಯನ್ನು ಹೊಂದಿರುವ ಐಸಿಎಸ್‌ಐ ನವದೆಹಲಿ, ಚೆನ್ನೈ, ಕೋಲ್ಕತ್ತಾ ಹಾಗೂ ಮುಂಬೈನಲ್ಲಿ ನಾಲ್ಕು ಪ್ರಾದೇಶಿಕ ಕಚೇರಿಗಳನ್ನು ಹೊಂದಿದ್ದು, ದೇಶಾದ್ಯಂತ 73 ಶಾಖಾ ಕಚೇರಿಗಳಲ್ಲಿ ಕಾರ್ಯನಿರ್ವಹಿಸುತ್ತಿವೆ. ಅಲ್ಲದೇ, ಮುಂಬೈ, ಹೈದರಾಬಾದ್ ಮತ್ತು ಕೋಲ್ಕತ್ತಾದಲ್ಲಿ ಕಾರ್ಪೊರೇಟ್ ಆಡಳಿತ, ಸಂಶೋಧನೆ ಮತ್ತು ತರಬೇತಿ ಕೇಂದ್ರಗಳು (ಅಅಉಖಖಿ) ಸ್ಥಾಪಿತವಾಗಿವೆ. ಆಸ್ಟ್ರೇಲಿಯಾ, ಕೆನಡಾ, ಸಿಂಗಾಪುರ, ಯುಎಇ, ಯುಕೆ ಹಾಗೂ ಯುಎಸ್‌ಎಗಳಲ್ಲಿ ವಿದೇಶಿ ಕೇಂದ್ರಗಳನ್ನು ಹೊಂದಿದೆ. ಅಷ್ಟೇ ಅಲ್ಲದೇ, 75,000ಕ್ಕೂ ಹೆಚ್ಚು ಸದಸ್ಯರನ್ನು ಒಳಗೊಂಡಿದ್ದು ವಿಶ್ವದಲ್ಲೇ ಅತಿ ಹೆಚ್ಚು ಸದಸ್ಯರನ್ನು ಒಳಗೊಂಡ ಕಂಪನಿ ಕಾರ್ಯದರ್ಶಿಗಳ ವೃತ್ತಿಯನ್ನು ನಿಯಂತ್ರಿಸುವ ಹಾಗೂ ಅಭಿವೃದ್ಧಿಗೊಳಿಸುವ ಶಾಖೆಯಾಗಿದೆ. ಈ ಹಿಂದೆ ಡಿಸೆಂಬರ್ 2022ರಲ್ಲಿ ನಡೆದಿದ್ದ ಬೆಂಗಳೂರು ಶಾಖೆಯ ಆಡಳಿತ ಮಂಡಳಿಯ ಚುನಾವಣೆಯ ಮತಗಳಿಕೆಯಲ್ಲಿ ವಿಶ್ವಾಸ ಹೆಗಡೆ ಅವರು ಮೂರನೇ ಸ್ಥಾನ ಪಡೆದುಕೊಂಡಿದ್ದರು. ಅಂದಿನ ಮೊದಲ ಅವಧಿಯಲ್ಲಿ ಖಜಾಂಚಿಯಾಗಿ ಕಾರ್ಯನಿರ್ವಹಿಸಿದ್ದ ಅವರು, ನಂತರ ಕಾರ್ಯದರ್ಶಿ ಹಾಗೂ ಉಪಾಧ್ಯಕ್ಷರಾಗಿಯೂ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಿದ್ದರು. - [ಕಾಳಿ ನದಿ ಮೇಲೆ ಕಳ್ಳರ ಕಣ್ಣು!](https://mobiletime.in/2026/01/thieves-eyes-on-the-kali-river/): ಕಾರವಾರದ ಕಾರ್ತಿಕ ಗೌಡ ಹಾಗೂ ಅನುಫ ಮಾಳ್ಸೆಕರ್ ಸೇರಿ ಕಳ್ಳತನ ಶುರು ಮಾಡಿದ್ದಾರೆ. ಕಾಳಿ ನದಿಯ ಖನಿಜವನ್ನು ಅವರು ಕದ್ದು ಸಾಗಿಸುತ್ತಿದ್ದಾರೆ. ಕಾರವಾರದ ಕಿನ್ನರದಲ್ಲಿ ಹರಿಯುವ ಕಾಳಿ ನದಿಯಲ್ಲಿ ಸದಾಶಿವಗಡ ಅರ್ಜುನಕೋಟದ ಕಾರ್ತಿಕ ರವಿ ಗೌಡ ಹಾಗೂ ನಂದನಗದ್ದಾ ತೆಲಂಗ ರಸ್ತೆಯ ಅನುಫ್ ಧನವಂತ ಮಾಳ್ಸೆಕರ್ ಸೇರಿ ಮರಳು ತೆಗೆದಿದ್ದು, ಅದನ್ನು ಕಾನೂನುಬಾಹಿರವಾಗಿ ಸಾಗಾಟ ಮಾಡುತ್ತಿದ್ದಾರೆ. ಈ ಅಪರಾಧ ಕೃತ್ಯಕ್ಕೆ ಕಾಂಗ್ರೆಸ್ ಪ್ರಮುಖರೊಬ್ಬರು ಬೆನ್ನೆಲುಬಾಗಿದ್ದಾರೆ ಎಂಬ ಆರೋಪವ್ಯಕ್ತವಾಗಿದೆ. ಶುಕ್ರವಾರ ನಸುಕಿನಲ್ಲಿ ಮೂರು ಲಾರಿಗಳಲ್ಲಿ ಅಕ್ರಮ ಮರಳು ಸಾಗಾಟ ನಡೆದಿದ್ದು, ಹುಬ್ಬಳ್ಳಿ ಹಾಗೂ ಗೋವಾಗೆ ಹೋಗುತ್ತಿದ್ದ ಮರಳು ಲಾರಿಯನ್ನು ಆ ಭಾಗದ ಜನರೇ ತಡೆದಿದ್ದಾರೆ. ಅಲ್ಲಿನವರು ನೀಡಿದ ಮಾಹಿತಿ ಪ್ರಕಾರ, ಪ್ರಭಾವಿಯೊಬ್ಬರು ಬಂದು ಎರಡು ಲಾರಿಗಳನ್ನು ಬಿಟ್ಟು ಕಳುಹಿಸಿದ್ದು, ಅದಾದ ನಂತರ ಪೊಲೀಸರು ಒಂದು ಲಾರಿಯನ್ನು ವಶಕ್ಕೆಪಡೆದಿದ್ದಾರೆ. ಸರ್ಕಾರಕ್ಕೆ ತೆರಿಗೆಯನ್ನು ಕಟ್ಟದೇ ಪರಿಸರಕ್ಕೆ ಹಾನಿ ಆಗುವ ರೀತಿ ಮರಳುಗಾರಿಕೆ ನಡೆಯುತ್ತಿದ್ದರೂ ಅದನ್ನು ತಡೆಯುವ ಕೆಲಸ ನಡೆದಿಲ್ಲ. ಬಡ ಜನ ಮನೆ ನಿರ್ಮಾಣಕ್ಕೂ ಮರಳು ಸಿಗದೇ ಸಮಸ್ಯೆ ಅನುಭವಿಸುತ್ತಿದ್ದಾರೆ. ಆದರೆ, ಪ್ರಭಾವಿಗಳು ಮರಳನ್ನು ಕದ್ದು ಸಾಗಿಸಿ ಕಾಸು ಮಾಡುತ್ತಿದ್ದಾರೆ. ಕಳೆದ ವರ್ಷ ಅಕ್ರಮ ಮರಳು ಸಾಗಾಟ ನಡೆಯದ ಹಾಗೇ ನದಿ ಪ್ರದೇಶದ ರಸ್ತೆಗಳಿಗೆ ಅಡ್ಡಲಾಗಿ ಕಾಲುವೆ ತೆಗೆದಿದ್ದು, ಈ ವರ್ಷ ಕಾಲುವೆ ತೆಗೆಯುವ ಕೆಲಸವೂ ನಡೆದಿಲ್ಲ. - [ಪುಣ್ಯಕ್ಷೇತ್ರದಲ್ಲಿ ಪಾಪದ ಕೆಲಸ!](https://mobiletime.in/2026/01/sinful-act-in-the-holy-field/): ಹೊನ್ನಾವರದ ಪುಣ್ಯ ಕ್ಷೇತ್ರಗಳಲ್ಲಿ ಒಂದಾದ ರಾಮತೀರ್ಥವನ್ನು ಕೆಲವರು `ತೀರ್ಥ’ ಸೇವನೆಗೆ ಬಳಸುತ್ತಿದ್ದಾರೆ. ಆ ಪ್ರದೇಶದಲ್ಲಿ ಎಲ್ಲೆಂದರಲ್ಲಿ ಸರಾಯಿ ಬಾಟಲಿಗಳು ಬಿದ್ದಿವೆ. ಪ್ರತಿ ದಿನ ಸಂಜೆ ಇಲ್ಲಿ ಯುವಕರ ಗುಂಪೊAದು ಬರುತ್ತದೆ. ಮಾದಕ ವ್ಯಸನದಲ್ಲಿ ತೊಡಗುವ ಆ ಗುಂಪಿನ ಸದಸ್ಯರು ರಾಮತೀರ್ಥವನ್ನು ಗಲೀಜು ಮಾಡಿ ಹೋಗುತ್ತಾರೆ. ಅದರ ಪರಿಣಾಮ ರಾಮತೀರ್ಥದ ಸುತ್ತಲು ಬಿಯರ್ ಬಾಟಲಿ, ಸಿಗರೇಟಿನ ತುಂಡು, ಸರಾಯಿ ಪ್ಯಾಕೇಟ್ ಹಾಗೂ ಶೆಂಗಾ ಕೊಟ್ಟೆಗಳು ಬಿದ್ದಿವೆ. ನಿತ್ಯ ಪೂಜೆಗೆ ಅಲ್ಲಿ ಬರುವ ಭಟ್ಟರಿಗೂ ಹೇಸಿಗೆ ಆಗುವಷ್ಟರ ಮಟ್ಟಿಗೆ ಆ ಪ್ರದೇಶ ಗಬ್ಬೆದ್ದಿದೆ. ರಾಮತೀರ್ಥ ಪ್ರದೇಶದಲ್ಲಿ ಅಳವಡಿಸಲಾದ ವಿದ್ಯುತ್ ದೀಪಗಳು ಹಾಳಾಗಿದೆ. ಅಲ್ಲಿನ ಶೌಚಾಲಯದ ಬಾಗಿಲು ಮುರಿದು ವರ್ಷ ಕಳೆದಿದೆ. ಇಂಥ ಅವ್ಯವಸ್ಥೆಗಳು ಪುಂಡಪೋಕರಿಗಳಿಗೆ ವರದಾನವಾಗಿದೆ. ದೇವರ ದರ್ಶನಕ್ಕೆ ಬರುವವರಿಗೆ ಮೊದಲು ಅಲ್ಲಿನ ಗಬ್ಬು ಪ್ರದೇಶದ ದರ್ಶನವಾಗುತ್ತಿದೆ. ಈ ಬಗ್ಗೆ ಮಾಹಿತಿಯಿದ್ದರೂ ಯಾರೂ ತಲೆಕೆಡಿಸಿಕೊಂಡಿಲ್ಲ. ಶುಕ್ರವಾರ ಕುಮಟಾದ ಜನಸಾಮಾನ್ಯರ ಸಮಾಜ ಕಲ್ಯಾಣ ಕೇಂದ್ರದ ಅಧ್ಯಕ್ಷ ಆಗ್ನೇಲ್ ರೋಡ್ರಿಗಸ ಹಾಗೂ ಸಾಮಾಜಿಕ ಕಾರ್ಯಕರ್ತ ಸುಧಾಕರ ನಾಯ್ಕ ಅವರು ಈ ಪ್ರದೇಶಕ್ಕೆ ಭೇಟಿ ನೀಡಿದ್ದು, ಅವ್ಯವಸ್ಥೆಗಳ ವಿರುದ್ಧ ಅಸಮಧಾನವ್ಯಕ್ತಪಡಿಸಿದರು. `ಈ ಭಾಗದಲ್ಲಿ ಪೊಲೀಸರು ಬೀಟ್ ವ್ಯವಸ್ಥೆ ಬಿಗಿಗೊಳಿಸಬೇಕು. ಅಕ್ರಮ ಚಟುವಟಿಕೆಗಳನ್ನು ತಡೆಯಬೇಕು’ ಎಂದು ಆಗ್ರಹಿಸಿದರು. ಅವ್ಯವಸ್ಥೆಗಳ ಬಗ್ಗೆ ಅಲ್ಲಿನ ಸುಬ್ರಾಯ ಹೆಬ್ಬಾರ ಅವರು ಆಕ್ರೋಶವ್ಯಕ್ತಪಡಿಸಿದರು. - [ಪಾಠ ಮಾಡಲು ಹೋದ ಕಾಮುಕನಿಗೆ ಕಪಾಳಮೋಕ್ಷ!](https://mobiletime.in/2026/01/a-slap-in-the-face-to-a-lover-who-went-to-teach/): ದಾಂಡೇಲಿಯ ಕನ್ಯಾ ವಿದ್ಯಾಲಯದಲ್ಲಿನ ಕನ್ಯೆಯರಿಗೆ ಕಿರುಕುಳ ನೀಡಿ ಅಮಾನತು ಆಗಿದ್ದ ಪ್ರಾಚಾರ್ಯ ಹನುಮಂತ ಕುಂಬಾರ್ ಅವರು ನ್ಯಾಯಾಲಯಕ್ಕೆ ಹೋಗಿ ತಮ್ಮ ಅಮಾನತು ಆದೇಶಕ್ಕೆ ತಡೆ ತಂದಿದ್ದಾರೆ. ಆ ಆದೇಶ ಪ್ರತಿಯೊಂದಿಗೆ ಕಾಲೇಜು ಪ್ರವೇಶಿಸಿದ ಹನುಮಂತ ಕುಂಬಾರ್ ಅವರು ಅಲ್ಲಿನ ಆಡಳಿತ ಮಂಡಳಿಯವರಿಂದ ಪೆಟ್ಟು ತಿಂದಿದ್ದಾರೆ! ದಾoಡೇಲಿಯ ಕನ್ಯಾ ಪಿಯು ಕಾಲೇಜಿನಲ್ಲಿ ಪ್ರಾಚಾರ್ಯರಾಗಿದ್ದ ಹನುಮಂತ ಕುಂಬಾರ್ ಅವರು ಆ ಹುದ್ದೆಯನ್ನು ದುರುಪಯೋಗಪಡಿಸಿಕೊಂಡಿದ್ದರು. ವಿದ್ಯಾರ್ಥಿನಿಯರ ಮೈ ಮುಟ್ಟುವ ಮೂಲಕ ಕಾಲೇಜಿನ ಪ್ರಾಚಾರ್ಯ ಸ್ಥಾನಕ್ಕೆ ಅವರು ಧಕ್ಕೆ ತಂದಿದ್ದರು. ಪಾಠ ಮಾಡುವ ವೇಳೆ ಮಕ್ಕಳ ಮೈ ಮುಟ್ಟುವುದು, ಹೆಣ್ಣು ಮಕ್ಕಳನ್ನು ಉದ್ದೇಶಿಸಿ ಅಶ್ಲೀಲ ಶಬ್ದಗಳ ಪ್ರಯೋಗ ಮಾಡುವ ಆರೋಪವನ್ನು ಅವರು ಎದುರಿಸಿದ್ದರು. ತಮ್ಮ ಮಾತು ಒಪ್ಪಿಕೊಳ್ಳದ ವಿದ್ಯಾರ್ಥಿನಿಯರಿಗೆ ನಿಂದಿಸುವ ಅವರ ಸ್ವಭಾವದ ಖಂಡಿಸಿ ಅಲ್ಲಿನ ವಿದ್ಯಾರ್ಥಿನಿಯರೇ ಸಿಡಿದೆದ್ದಿದ್ದರು. ಆ ಅಯೋಗ್ಯ ಪ್ರಾಚಾರ್ಯರ ವಿರುದ್ಧ ವಿದ್ಯಾರ್ಥಿಗಳು ಅಸಮಧಾನವ್ಯಕ್ತಪಡಿಸಿದ್ದರು. ಕಾಲೇಜು ಆವರಣದಲ್ಲಿ ಮಕ್ಕಳು ಪ್ರತಿಭಟಿಸಿದ್ದು ದೊಡ್ಡ ಪ್ರಮಾಣದಲ್ಲಿ ಪ್ರಭಾವ ಬೀರಿತ್ತು. ಪ್ರತಿಭಟನೆಯಲ್ಲಿ ವಿದ್ಯಾರ್ಥಿನಿಯರು ತಮಗಾದ ಕೆಟ್ಟ ಅನುಭವಗಳ ಬಗ್ಗೆ ವಿವರಿಸಿದಲ್ಲದೇ ಅದನ್ನು ಲಿಖಿತವಾಗಿಯೂ ನೀಡಿದ್ದರು. ಹನುಮಂತ ಕುಂಬಾರ್ ವಿರುದ್ಧ ದಾಂಡೇಲಿ ವೆಲ್ ಪೆರ್ ಸೊಸೈಟಿಯವರು ಪೊಲೀಸ್ ದೂರು ಸಹ ನೀಡಿದ್ದು, ಈ ಎಲ್ಲಾ ಹಿನ್ನಲೆ ಹನುಮಂತ ಕುಂಬಾರ್ ಅವರು ಸೇವೆಯಿಂದ ಅಮಾನತಾಗಿದ್ದರು. ಹನುಮಂತ ಕುಂಬಾರ ಅವರ ವಿರುದ್ಧ ಪೋಕ್ಸೋ ಕಾಯ್ದೆ ಅಡಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸಿದ್ದರು. ಆದರೆ, ಈ ಎಲ್ಲಾ ಘಟನಾವಳಿಗಳ ಬೆನ್ನಲ್ಲೆ ಹನುಮಂತ ಕಂಬಾರ್ ಅವರು ಧಾರವಾಡದ ಉಚ್ಛ ನ್ಯಾಯಾಲಯದ ಮೊರೆ ಹೋದರು. ಅಮಾನತು ಆದೇಶದ ವಿರುದ್ಧ ತಡೆಯಾಜ್ಞೆಯನ್ನು ತಂದರು. ಮತ್ತೆ ಪ್ರಾಚಾರ್ಯ ಹುದ್ದೆ ಗಿಟ್ಟಿಸಿಕೊಳ್ಳುವುದಕ್ಕಾಗಿ ಅವರು ಕಾಲೇಜು ಪ್ರವೇಶಿಸಿದ್ದು, ಅದನ್ನು ಆಡಳಿತ ಮಂಡಳಿಯುವರು ಸಹಿಸಲಿಲ್ಲ. ಆ ದಿನದ ಈ ಸುದ್ದಿ ನೀವು ಓದಿಲ್ಲವೇ? ಇದನ್ನು ಓದಿ: ಆತ ಉಪನ್ಯಾಸಕ ಅಲ್ಲ.. ಕಾಮುಕ! ಜನವರಿ 12ರಂದು ಕಾಲೇಜು ಪ್ರವೇಶಿಸಿದ ಹನುಮಂತ ಕುಂಬಾರ್ ಅವರನ್ನು ಕಾಲೇಜು ಕಾರ್ಯದರ್ಶಿ ರಾಜೇಂದ್ರ ಕೋಡ್ಕಣಿ ಅವರು ತಡೆದರು. ಕಾಲೇಜು ಖಜಾಂಚಿ ಅರುಣಾಧಿ ರಾವ್ ಅವರು ಹನುಮಂತ ಕುಂಬಾರ್ ಮತ್ತೆ ಕಾಲೇಜಿಗೆ ಬಂದಿದನ್ನು ವಿರೋಧಿಸಿದರು. ಮಕ್ಕಳ ಜೊತೆ ಅಸಭ್ಯವಾಗಿ ವರ್ತಿಸುತ್ತಿದ್ದ ಹನುಮಂತ ಕುಂಬಾರ್ ಅವರನ್ನು ಮತ್ತೆ ಪಾಠ ಮಾಡಲು ಬಿಡಲಿಲ್ಲ. ಆಗ, ಅನಗತ್ಯ ರಂಪಾಟ ನಡೆಸಿದ ಹನುಮಂತ ಕುಂಬಾರ್ ಅವರನ್ನು ಕಾಲೇಜು ಕೊಠಡಿಯೊಳಗೆ ಕೂಡಿ ಹಾಕಿದರು. ಇನ್ನಷ್ಟು ಉಗ್ರವಾದ ಹನುಮಂತ ಕುಂಬಾರ ಅವರನ್ನು ಸಮಾಧಾನ ಮಾಡಲು ರಾಜೇಂದ್ರ ಕೋಡ್ಕಣಿ ಹಾಗೂ ಅರುಣಾಧಿ ರಾವ್ ಸೇರಿ ಕೆನ್ನೆಗೆ ಬಾರಿಸಿದರು. ಗಂಡನ ರಕ್ಷಣೆಗೆ ಹೋದ ವಿಜಯಲಕ್ಷಿ ಕುಂಬಾರ್ ಅವರು ಈ ವೇಳೆ ಪೆಟ್ಟು ತಿಂದರು. - [ಬಾಲಕನ ಬದುಕು ಕಸಿದ ಸಂಕ್ರಾoತಿ ರಜೆ!](https://mobiletime.in/2026/01/a-boys-life-was-taken-away-during-the-sankranti-holiday/): ಕಾರವಾರದಲ್ಲಿ 8ನೇ ತರಗತಿ ಓದುತ್ತಿದ್ದ ಸೋನಾಲ ಅರ್ಗೇಕರ್ ಸಮುದ್ರಕ್ಕೆ ಬಿದ್ದು ಸಾವನಪ್ಪಿದ್ದಾರೆ. ಸಂಕ್ರಾoತಿ ರಜೆ ಹಿನ್ನಲೆ ಸಮುದ್ರದ ಬಳಿ ಆಡಲು ಹೋಗಿದ್ದ ಸೋನಾಲ ಅರ್ಗೇಕರ್ ಅಲೆಗಳ ರಭಸಕ್ಕೆ ಸಿಲುಕಿ ಕೊನೆಯುಸಿರೆಳೆದಿದ್ದಾರೆ. ಮುದಗಾದ ನೌಕಾನೆಲೆ ನಿರಾಶ್ರಿತರ ಕಾಲೋನಿಯಲ್ಲಿ ಸೋನಾಲ ಅರ್ಗೇಕರ್ (12) ವಾಸವಾಗಿದ್ದರು. ಗುರುವಾರ ಶಾಲೆಗೆ ರಜೆ ಇದ್ದ ಹಿನ್ನಲೆ ಅವರು ಸ್ನೇಹಿತರ ಜೊತೆ ಆಟಕ್ಕೆ ಹೋಗಿದ್ದರು. ಸಂಜೆ ಎಲ್ಲರೂ ಸೇರಿ ಸಮೀಪದ ಸಮುದ್ರಕ್ಕೆ ಹೋಗಿದ್ದು, ಅಲ್ಲಿ ಅವಘಡ ನಡೆದಿದೆ. ಆಟವಾಡುತ್ತಲೇ ಸಮುದ್ರಕ್ಕೆ ಹೋದ ಸೋನಾಲ್ ಅರ್ಗೇಕರ್ ಅಲ್ಲಿನ ರಭಸ ಅಲೆಗಳಿಗೆ ಸಿಕ್ಕದ್ದು, ಬಲವಾಗಿ ಅಪ್ಪಳಿಸಿದ ಅಲೆ ಸೋನಾಲ್ ಅರ್ಗೇಕರ್ ಅವರನ್ನು ಬಹುದೂರದವರೆಗೆ ಕರೆದೊಯ್ದಿದೆ. ಈ ವೇಳೆ ನೀರಿನಲ್ಲಿ ಮುಳುದಿದ್ದು, ಜೊತೆಗಿದ್ದ ಸ್ನೇಹಿತರು ದೊಡ್ಡದಾಗಿ ಕೂಗಿದ್ದಾರೆ. ಆಗ, ಸ್ಥಳೀಯರು ಬಂದು ಹುಡುಕಾಟ ನಡೆಸಿದರೂ ಸೋನಾಲ್ ಅರ್ಗೇಕರ್ ಸಿಕ್ಕಿಲ್ಲ. ಕೆಲ ಸಮಯದ ನಂತರ ಬಾಲಕನ ಶವ ದಡಕ್ಕೆ ತೇಲಿ ಬಂoದಿದೆ. - [ನದಿ ಜೋಡಣೆ: ಶಾಸಕ ಹೆಬ್ಬಾರ್'ಗೆ ಕಾರ್ಖಾನೆ ಉಳಿಸಿಕೊಳ್ಳುವುದೇ ಸವಾಲು!](https://mobiletime.in/2026/01/river-linking-mla-hebbars-challenge-is-to-save-the-factory/): `ಹಾವೇರಿಯಲ್ಲಿ ಕಾರ್ಖಾನೆ ಹೊಂದಿರುವ ಯಲ್ಲಾಪುರ ಕ್ಷೇತ್ರ ಶಾಸಕ ಶಿವರಾಮ ಹೆಬ್ಬಾರ್ ಅವರು ತಮ್ಮ ಉದ್ದಿಮೆ ರಕ್ಷಣೆಗಾಗಿ ಬೇಡ್ತಿ-ಅಘನಾಶಿನಿ ನದಿ ತಿರುವು ಯೋಜನೆಗೆ ಆಸಕ್ತಿವಹಿಸಿದ್ದಾರೆ’ ಎಂದು ಯಲ್ಲಾಪುರ ಬಿಜೆಪಿ ಮಂಡಳ ಅಧ್ಯಕ್ಷ ಪ್ರಸಾದ ಹೆಗಡೆ ಹೇಳಿದ್ದಾರೆ. ಸುದ್ದಿಗಾರರ ಜೊತೆ ಮಾತನಾಡಿದ ಅವರು `ಈ ಯೋಜನೆಗೆ ಶಿವರಾಮ ಹೆಬ್ಬಾರ್ ಅವರ ಬೆಂಬಲವಿರುವ ಬಗ್ಗೆ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ ಅವರೇ ಬಹಿರಂಗವಾಗಿ ಹೇಳಿದ್ದಾರೆ. ಶಾಸಕ ಶಿವರಾಮ ಹೆಬ್ಬಾರರ ದ್ವಿಮುಖ ನೀತಿ ಕರಾವಳಿ ಉತ್ಸವದ ಅವಧಿಯಲ್ಲಿ ಡಿ ಕೆ ಶಿವಕುಮಾರ ಅವರ ಮಾತಿನ ಮೂಲಕ ಬಹಿರಂಗವಾಗಿದೆ’ ಎಂದು ಹೇಳಿದ್ದಾರೆ. `ತಮ್ಮ ಉದ್ಯಮದ ರಕ್ಷಣೆಗಾಗಿ ಹಾವೇರಿ ಮೇಲೆ ಹೆಬ್ಬಾರ ಅವರಿಗೆ ವಿಶೇಷ ಪ್ರೀತಿ ಇರುವಂತೆ ಕಾಣುತ್ತಿದೆ. ಆದರೆ, ಯೋಜನೆಗಾಗಿ ತ್ಯಾಗ ಮಾಡಿ ಸರ್ಕಾರ ನೀಡುವ ಪರಿಹಾರ ತೆಗೆದುಕೊಂಡು ಸುಮ್ಮನಾಗಲು ಜಿಲ್ಲೆಯ ಜನತೆ ಭಿಕ್ಷುಕರಲ್ಲ’ ಎಂದು ಪ್ರಸಾದ ಹೆಗಡೆ ಹೇಳಿದ್ದಾರೆ. `ನದಿ ತಿರುವು ವಿಷಯವಾಗಿ ತಮ್ಮ ನಿಲುವು ಏನು ಎಂಬುದನ್ನು ಶಾಸಕರು ಸ್ಪಷ್ಟಪಡಿಸಬೇಕು’ ಎಂದು ಆಗ್ರಹಿಸಿದ್ದಾರೆ. `ಬಿಜೆಪಿ ಸರ್ಕಾರದಲ್ಲಿ ಕಾಗೇರಿ ವಿಧಾನಸಭಾಧ್ಯಕ್ಷರಾಗಿದ್ದರು ಎಂಬುದು ಸತ್ಯ. ಆದರೆ, ಆ ಅವಧಿಯಲ್ಲಿ ಶಾಸಕ ಶಿವರಾಮ ಹೆಬ್ಬಾರ್ ಅವರು ಉಸ್ತುವಾರಿ ಸಚಿವರಾಗಿದ್ದರು. ಆಗಲೇ, ಹೆಬ್ಬಾರ್ ಅವರು ವಿರೋಧದ ಧ್ವನಿ ಎತ್ತಿದ್ದರೆ ಈ ಸ್ಥಿತಿ ಬರುತ್ತಿರಲಿಲ್ಲ. ಶಿವರಾಮ ಹೆಬ್ಬಾರ್ ಅವರು ಪಕ್ಷ ಬದಲಾಯಿಸಿದ ಮಾತ್ರಕ್ಕೆ ನೈತಿಕ ಹೊಣೆ ಬದಲಾಗಲು ಸಾಧ್ಯವಿಲ್ಲ’ ಎಂದು ಬಿಜೆಪಿ ರಾಜ್ಯ ವಕ್ತಾರ ಹರಿಪ್ರಕಾಶ ಕೋಣೆಮನೆ ಹೇಳಿದ್ದಾರೆ. `ಬೇಡ್ತಿ-ವರದಾ, ಅಘನಾಶಿನಿ-ವೇದಾವತಿ ನದಿ ಜೋಡಣೆ ಯೋಜನೆಯಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ಸಂಸದರ ನೇತೃತ್ವದಲ್ಲಿ ಕೇಂದ್ರದ ಬಳಿ ನಿಯೋಗದೊಂದಿಗೆ ಹೋಗಿ ಕೇಂದ್ರಕ್ಕೆ ಮನವರಿಕೆ ಮಾಡಿಕೊಡಲಾಗುತ್ತದೆ. ಅಗತ್ಯ ಬಿದ್ದಲ್ಲಿ ಪ್ರಧಾನ ಮಂತ್ರಿಗಳನ್ನೂ ಭೇಟಿ ಮಾಡಿ ಯೋಜನೆ ಕೈ ಬಿಡಲು ವಿನಂತಿಸಲಾಗುತ್ತದೆ’ ಎಂದು ಹರಿಪ್ರಕಾಶ ಕೋಣೆಮನೆ ಹೇಳಿದ್ದಾರೆ. - [ಕಳ್ಳರ ಕಾಟಕ್ಕೆ ಜನ ಸುಸ್ತು!](https://mobiletime.in/2026/01/people-are-tired-of-the-menace-of-thieves/): ಅಂಕೋಲಾ ಹಾಗೂ ಸುತ್ತಲಿನ ಪ್ರದೇಶದಲ್ಲಿ ಕಳ್ಳರ ಕಾಟ ಹೆಚ್ಚಾಗಿದೆ. ಹಿರೇಗುತ್ತಿಯಲ್ಲಿ ಪೊಲೀಸ್ ಮನೆಗೆ ನುಗ್ಗಿದ ಕಳ್ಳರು ಹಣ-ಒಡವೆ ದೋಚಿದ್ದು, ಅದಾದ ನಂತರ ಸುಂಕಸಾಳದ ಬ್ಯಾಂಕ್ ದರೋಡೆಗೆ ಯತ್ನಿಸಿದ್ದರು. ಅದರ ಬೆನ್ನಲ್ಲೆ ಮತ್ತೆ ಮೂರು ಕಡೆ ಕಳ್ಳರು ಕೈ ಚಳಕ ಪ್ರದರ್ಶಿಸಿದ್ದಾರೆ. ಅಂಕೋಲಾದ ಅಗಸೂರಿನ ಬಳಿ ಒಂದೇ ರಾತ್ರಿ ಮೂರು ಕಡೆ ಕಳ್ಳರು ಮನೆಯ ಬೀಗ ಒಡೆದಿದ್ದಾರೆ. ಸರಳೆಬೈಲಿನ ಎರಡು ಮನೆ ಜೊತೆ ಅಗಸೂರು ಮುಖ್ಯ ರಸ್ತೆಯಲ್ಲಿ ಒಂದು ಮನೆಗೆ ಕಳ್ಳರು ನುಗ್ಗಿದ್ದಾರೆ. ಸರಳೆಬೈಲಿನ ನಿವೃತ್ತ ನೌಕರರ ಮನೆಯಲ್ಲಿ ಕಳ್ಳರಿಗೆ ಬೆಲೆಬಾಳುವ ಲಾಪ್‌ಟಾಪ್ ಸಿಕ್ಕಿದೆ. ಇನ್ನೆರಡು ಮನೆಯಲ್ಲಿ ಏನೂ ಸಿಗದ ಕಾರಣ ಹಾಗೇ ಮರಳಿದ್ದಾರೆ. ಜನರಿಲ್ಲದ ಮನೆ ಗುರುತಿಸುವ ಕಳ್ಳರು ಹಗಲು – ರಾತ್ರಿ ಎನ್ನದೇ ಸಮಯ ಸಾಧಿಸಿ ಕಳ್ಳತನ ಮಾಡುತ್ತಿದ್ದಾರೆ. ಹೊರ ರಾಜ್ಯ ನೋಂದಣಿಯ ವಿವಿಧ ವಾಹನಗಳು ಈ ಭಾಗದಲ್ಲಿ ಓಡಾಟ ನಡೆಸುತ್ತಿರುವ ಬಗ್ಗೆ ಜನ ಹೇಳಿದ್ದಾರೆ. ರಾತ್ರಿ ವೇಳೆ ಬೀದಿ ದೀಪ ಸರಿಯಾಗಿಲ್ಲದಿರುವುದು ಸಹ ಕಳ್ಳರ ಪಾಲಿಗೆ ವರ ನೀಡಿದ ಹಾಗಾಗಿದೆ. ಕಳ್ಳರ ಹೆಡೆಮುರಿ ಕಟ್ಟಲು ಪೊಲೀಸರು ಶ್ರಮಿಸಬೇಕು ಎಂದು ಜನ ಒತ್ತಾಯಿಸಿದ್ದಾರೆ. `ಅಪರಿಚಿತರ ಬಗ್ಗೆ ನಿಗಾವಹಿಸಿ’ - [ಜಲ ಸಾಹಸದಲ್ಲಿರುವಾಗಲೇ ಜೀವ ಹಾನಿ!](https://mobiletime.in/2026/01/life-lost-while-on-a-water-adventure/): ಗೋಕರ್ಣದಲ್ಲಿ ಬೋಟಿಂಗ್ ಚಟುವಟಿಕೆಗೆ ತೆರಳಿದ್ದ ಮಹಿಳೆಯೊಬ್ಬರು ಸಾವನಪ್ಪಿದ್ದಾರೆ. ಪ್ಯಾರಾಡೈಸ್ ತೀರದಲ್ಲಿ ಮಹಿಳೆ ಕುಸಿದು ಬಿದ್ದಿದ್ದು, ಅಲ್ಲಿಯೇ ಬದುಕಿನ ಪಯಣ ಮುಗಿಸಿದ್ದಾರೆ. ತಮಿಳುನಾಡು ಸತ್ಯಮಂಗಲo ಜಿಲ್ಲೆಯ ನಾಗರತಿನಂ (51) ಅವರು ಕುಟುಂಬದ ಜೊತೆ ಗೋಕರ್ಣಕ್ಕೆ ಬಂದಿದ್ದರು. ಎಲ್ಲರೂ ಸೇರಿ ಗುರುವಾರ ಸಂಜೆ ವಾಯು ವಿಹಾರಕ್ಕೆ ಹೋಗಿದ್ದರು. ಅಲ್ಲಿ ಬೋಟಿಂಗ್ ಮಾಡಲು ನಿರ್ಧರಿಸಿದ್ದು, ಬೋಟ್ ಹತ್ತಿ ಕೆಲ ದೂರ ಕ್ರಮಿಸಿದ ನಂತರ ನಾಗರತಿನಂ ಅವರ ಆರೋಗ್ಯದಲ್ಲಿ ಏರುಪೇರಾಯಿತು. ಅಲ್ಲಿಯೇ ಅವರು ಕುಸಿದು ಬಿದ್ದರು. ತಕ್ಷಣ ಅವರನ್ನು ತಡಕ್ಕೆ ತಂದು ಆಸ್ಪತ್ರೆಗೆ ಸಾಗಿಸುವ ಕಾರ್ಯ ನಡೆಯಿತು. ಬೋಟಿನವರು ಖಾಸಗಿ ಆಂಬುಲೆನ್ಸಿಗೆ ಫೋನ್ ಮಾಡಿ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಿದರು. ಆದರೆ, ಅಷ್ಟರೊಳಗೆ ಅವರು ಸಾವನಪ್ಪಿದ್ದರು. - [ಅವರೆಲ್ಲರೂ ಕಳ್ಳರು!](https://mobiletime.in/2026/01/they-are-all-thieves/): ಶಿರಸಿ ಸರಗುಪ್ಪಾದಲ್ಲಿ ಕೊಟ್ಟಿಗೆಗೆ ನುಗ್ಗಿ ಅಲ್ಲಿದ್ದ ದನಗಳನ್ನು ಕದ್ದಿದ್ದ ಕಳ್ಳರನ್ನು ಪೊಲೀಸರು ಪತ್ತೆ ಮಾಡಿದ್ದಾರೆ. ಅವರೆಲ್ಲರನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ. ಶಿರಸಿ ಬಳಗೇರಿಯ ಸಿರಗುಪ್ಪಾದ ರಾಮಚಂದ್ರ ಗೌಡ ಹಾಗೂ ಅವರ ಸಹೋದರರು ಸಾಕಿದ್ದ ಜಾನುವರುಗಳನ್ನು ಕಳ್ಳರು ಅಪಹರಿಸಿದ್ದರು. ಹೊಲದಲ್ಲಿದ್ದ ಜಾನುವಾರುಗಳ ಜೊತೆ ಕೊಟ್ಟಿಗೆಯಲ್ಲಿದ್ದ ದನಗಳನ್ನು ಕಳ್ಳರು ಕದ್ದೊಯ್ದಿದ್ದರು. ನಾಲ್ಕು ಎತ್ತು ಹಾಗೂ ಮೂರು ಹೋರಿ ಕಳ್ಳತನವಾದ ಬಗ್ಗೆ ಕುಟುಂಬದವರು ಪೊಲೀಸರಲ್ಲಿ ಅಳಲು ತೋಡಿಕೊಂಡಿದ್ದರು. ಶಿರಸಿ ಗ್ರಾಮೀಣ ಠಾಣಾ ಪೊಲೀಸರು ಕಳ್ಳರ ಹುಡುಕಾಟಕ್ಕೆ ಮೂರು ತಂಡ ರಚಿಸಿದ್ದರು. ಅವರು ನಡೆಸಿದ ಶೋಧ ಕಾರ್ಯಾಚರಣೆಯಲ್ಲಿ ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಹಿರೂರು ಗೊಲ್ಲರ ಬಿಡಾರದ ಮೋಹನ ಶೇಖಪ್ಪ ಗೊಲ್ಲರ (22), ಬಸವರಾಜ ಅಮ್ಮಣ್ಣಪ್ಪ ಗೊಲ್ಲರ(39), ಅವಿನಾಶ ರುದ್ದಪ್ಪ ಗೊಲ್ಲರ್ (22), ಸುರೇಶ್ ಪಕೀರಪ್ಪ ಗೊಲ್ಲರ (38) ಬಸವರಾಜ ಪಕೀರಪ್ಪ ಗೊಲ್ಲರ (47) ಹಾಗೂ ಹಾನಗಲ್ ತಾಲೂಕ ಅಕ್ಕಿಆಲೂರಿನ ಅಯೂಬ್ ಅನೀಮ್ ಸಾಬ್ (54) ಅವರು ಸಿಕ್ಕಿಬಿದ್ದರು. ಅವರೇ ಜಾನುವಾರು ಕಳ್ಳತನ ಮಾಡಿರುವುದು ಸಹ ತನಿಖೆಯಿಂದ ದೃಢವಾಯಿತು. ಗುರುವಾರ ಆ ಎಲ್ಲರನ್ನು ಪೊಲೀಸರು ವಶಕ್ಕೆಪಡೆದರು. ಜೊತೆಗೆ ಕಳ್ಳತನಕ್ಕೆ ಬಳಸಿದ್ದ ಮಹೇಂದ್ರ ಪಿಕಪ್ ಹಾಗೂ ಬೈಕನ್ನು ಜಪ್ತು ಮಾಡಿದರು. ಶಿರಸಿ ಗ್ರಾಮೀಣ ಠಾಣೆ ಪೊಲೀಸ್ ನಿರೀಕ್ಷಕ ರಮೇಶ ಎಂ ಹೂಗಾರ ಕಾರ್ಯಾಚರಣೆ ಮುಂದಾಳತ್ವವಹಿಸಿದ್ದು, ಪಿಸೈ ಸಂತೋಷ್ ಕುಮಾರ್, ಅಶೋಕ ರಾಥೋಡ್ ಮತ್ತು ಎ ಎಸ್ ಐ ಸಂತೋಷ ಕಮಟಗೇರಿ, ಪ್ರದೀಪ ಎಂ ರೇವಣಕರ ಕಳ್ಳರನ್ನು ಹಿಡಿಯುವಲ್ಲಿ ಪ್ರಮುಖ ಪಾತ್ರ ನಿಭಾಯಿಸಿದ್ದರು.   - [ಅಪ್ಪನಿಗೆ ಕತ್ತಿ ಬೀಸಿದ ಮಗ!](https://mobiletime.in/2026/01/a-son-who-stabbed-his-father/): ಮುಂಡಗೋಡಿನಲ್ಲಿ ಅಪ್ಪ-ಮಗನ ನಡುವೆ ಕೌಟುಂಬಿಕ ಕಲಹ ನಡೆದಿದ್ದು, ಈ ವೇಳೆ ಸಿಟ್ಟಾದ ಶಿವರಾಜ ಅವರು ತಂದೆ ಶಿವಾನಂದ ಅವರ ಮೇಲೆ ಕತ್ತಿ ಬೀಸಿದ್ದಾರೆ. ಮುಂಡಗೋಡ ತಾಲೂಕಿನ ತಟ್ಟಿಹಳ್ಳಿಯಲ್ಲಿ ಗುರುವಾರ ಈ ದುರಂತ ನಡೆದಿದೆ. ಶಿವಾನಂದ ಎಂಬಾತರ ಮೇಲೆ ಕತ್ತಿ ಪ್ರಯೋಗ ನಡೆದಿದೆ. ಅವರ ಮಗ ಶಿವರಾಜ ಎಂಬಾತರು ಕತ್ತಿ ಬೀಸಿದ್ದು, ದಾಳಿಗೆ ತುತ್ತಾದ ಶಿವಾನಂದ ಅವರು ಸದ್ಯ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾರೆ. 42 ವರ್ಷದ ಶಿವಾನಂದ ಹಾಗೂ ಅವರ ಪುತ್ರನ ನಡುವೆ ಮೊದಲಿನಿಂದಲೂ ವೈಮನಸ್ಸಿತ್ತು. ಗುರುವಾರ ಅವರಿಬ್ಬರ ನಡುವಿನ ದ್ವೇಷ ತಾರಕಕ್ಕೇರಿತು. ಪರಿಣಾಮ ಶಿವಾನಂದ ಅವರ ಮೇಲೆ ಅವರ ಪುತ್ರ ಕತ್ತಿಯಿಂದ ಹಲ್ಲೆ ಮಾಡಿದರು. ಅದಾದ ನಂತರ ಶಿವರಾಜ ಸ್ಥಳದಿಂದ ಪರಾರಿಯಾಗಿದ್ದಾರೆ. ಶಿವಾನಂದ ಅವರ ಕುತ್ತಿಗೆಯ ಮೇಲೆ ಕತ್ತಿಯಿಂದ ಏಟು ಬಿದ್ದಿದೆ. ಕೊಲೆ ಮಾಡುವ ಉದ್ದೇಶದಿಂದಲೇ ಶಿವರಾಜ ಅವರು ಕತ್ತಿ ಬೀಸಿದ ಅನುಮಾನವಿದೆ. ರಕ್ತದ ಮಡುವಿನಲ್ಲಿ ಬಿದ್ದಿದ್ದ ಶಿವಾನಂದ ಅವರನ್ನು ಸದ್ಯ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. - [ಕಾನ್ಸರ್ ಗೆಲ್ಲಲು ಆಗದವ ಜೀವನದಲ್ಲಿ ಸೋತ!](https://mobiletime.in/2026/01/the-one-who-cannot-beat-cancer-has-lost-in-life/): ಗಂಟಲು ಕಾನ್ಸರಿನಿಂದ ನೋವು ಅನುಭವಿಸುತ್ತಿದ್ದ ಭಟ್ಕಳದ ತಿಮ್ಮಪ್ಪ ಗೊಂಡ ಅವರು ರಾಗಿ ಗಂಜಿಯಲ್ಲಿ ವಿಷ ಬೆರೆಸಿ ಕುಡಿದಿದ್ದಾರೆ. ನಿರಂತರ 17 ತಾಸು ಚಿಕಿತ್ಸೆ ಮಾಡಿದರೂ ಅವರನ್ನು ಬದುಕಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಭಟ್ಕಳದ ಜಾಲಿಯಲ್ಲಿ ತಿಮ್ಮಪ್ಪ ಮಂಗಳ ಗೊಂಡ (51) ಅವರು ವಾಸವಾಗಿದ್ದರು. ಕೂಲಿ ಕೆಲಸ ಮಾಡಿ ಅವರು ಬದುಕು ನಡೆಸುತ್ತಿದ್ದರು. ವರ್ಷದ ಹಿಂದೆ ಅವರಿಗೆ ಕಾನ್ಸರ್ ಕಾಣಿಸಿಕೊಂಡಿತು. ಗಂಟಲು ಕಾನ್ಸರ್ ಸಮಸ್ಯೆ ಅನುಭವಿಸಿದ ತಿಮ್ಮಪ್ಪ ಗೊಂಡ ಅವರು ಮಂಗಳೂರು ಹಾಗೂ ಮಣಿಪಾಲ್’ಗೆ ಹೋಗಿ ಚಿಕಿತ್ಸೆಪಡೆಯುತ್ತಿದ್ದರು. ಪರಿಣಾಮ ಅವರು ದುಡಿದ ಹಣ ಖಾಲಿಯಾಯಿತೇ ವಿನಃ ಕಾನ್ಸರ್ ದೂರವಾಗಲಿಲ್ಲ. ತಿಮ್ಮಪ್ಪ ಗೊಂಡ ಅವರು ಅಪಾರ ಪ್ರಮಾಣದಲ್ಲಿ ಗಂಟಲು ನೋವು ಅನುಭವಿಸಿದರು. ಆ ನೋವು ಸಹಿಸಲಾಗದೇ ಜೀವನದಲ್ಲಿಯೂ ಬೇಸರಗೊಂಡಿದ್ದರು. ಜನವರಿ 14ರ ಸಂಜೆ ಅವರು ತಾವು ಸೇವಿಸುವ ರಾಗಿ ಗಂಜಿಯಲ್ಲಿ ಇಲಿ ಪಾಷಣದ ಪೇಸ್ಟ್ ಬೆರೆಸಿದರು. ಅದನ್ನು ಅವರು ಸೇವಿಸಿ ಅಸ್ವಸ್ಥರಾದರು. ತಿಮ್ಮಪ್ಪ ಗೊಂಡ ಅವರನ್ನು ಕುಟುಂಬದವರು ಭಟ್ಕಳ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದರು. ಅಲ್ಲಿ ಅವರನ್ನು ಬದುಕಿಸುವ ಪ್ರಯತ್ನ ನಡೆದರೂ ಪ್ರಯೋಜನಕ್ಕೆ ಬರಲಿಲ್ಲ. ಈ ವಿಷಯದ ಬಗ್ಗೆ ತಿಮ್ಮಪ್ಪ ಗೊಂಡ ಅವರ ಪುತ್ರ ಮಹೇಶ ಗೊಂಡ ಅವರು ಮಾಹಿತಿ ನೀಡಿದರು. `ಆತ್ಮಹತ್ಯೆ ಅಪರಾಧ’ - [ಸ್ನಾನಕ್ಕೆ ಹೋದವನನ್ನು ಸಾಯಿಸಿದ ಕಾಳಿ ನದಿ!](https://mobiletime.in/2026/01/the-kali-river-killed-a-man-who-went-to-bathe/): ದಾಂಡೇಲಿಯಲ್ಲಿ ಹರಿಯುವ ಕಾಳಿ ನದಿಯಲ್ಲಿ ಸ್ನಾನಕ್ಕೆ ಹೋಗಿದ್ದ ನವಾಜ್ ಅವರು ನದಿಯ ನೀರು ಕುಡಿದು ಸಾವನಪ್ಪಿದ್ದಾರೆ. ದಾಂಡೇಲಿ ಗಾಂಧೀನಗರದ ನವಾಜ್ ಅವರಿಗೆ ಈಗಿನ್ನೂ 18 ವರ್ಷ. ಅದಾಗಲೇ ಅವರು ಈ ಲೋಕದ ಯಾತ್ರೆ ಮುಗಿಸಿದ್ದಾರೆ. ಗುರುವಾರ ಮಧ್ಯಾಹ್ನ ನವಾಜ್ ಅವರು ಸ್ನೇಹಿತರ ಜೊತೆ ಮೌಳಂಗಿ ಪ್ರದೇಶಕ್ಕೆ ಹೋಗಿದ್ದರು. ನದಿ ಸಂಗಮದಲ್ಲಿ ಅವರು ನೀರಿಗೆ ಇಳಿದಿದ್ದರು. ಅಲ್ಲಿಂದ ಮೇಲೆ ಬರಲು ಸಾಧ್ಯವಾಗದೇ ಅಲ್ಲಿಯೇ ಕೊನೆಯುಸಿರೆಳೆದರು. ನದಿ ನೀರಿನಲ್ಲಿ ಸ್ನಾನ ಮಾಡುವಾಗ ನೀರಿನ ಹರಿವು ಏರಿಕೆಯಾಗಿದ್ದು, ನವಾಜ್ ಅವರು ನೀರಿನಲ್ಲಿ ಕೊಚ್ಚಿ ಹೋದರು. ಈ ವಿಷಯ ಅರಿತು ಪೊಲೀಸರು ಸಾಕಷ್ಟು ಹುಡುಕಾಟ ನಡೆಸಿದರು. ಅರಣ್ಯ ಇಲಾಖೆ ಹಾಗೂ ಅಗ್ನಿಶಾಮಕ ಸಿಬ್ಬಂದಿ ಸಹ ನೀರಿನ ಆಳದಲ್ಲಿ ಸಾಹಸ ಮಾಡಿದರು. ರಾಪ್ಟಿಂಗ್ ತಂಡದವರು ಸಹ ಕಾರ್ಯಾಚರಣೆಗೆ ಕೈ ಜೋಡಿಸಿದರು. ಆದರೆ, ಸಂಜೆ ವೇಳೆ ನವಾಜ್ ಅವರು ಶವವಾಗಿ ಸಿಕ್ಕಿದರು. ಸದ್ಯ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. `ಅಪಾಯಕಾರಿ ಪ್ರದೇಶಗಳಿಗೆ ಹೋಗಬೇಡಿ’ - [ಅದು ಏಳೇಳು ಜನ್ಮದ ಲವ್!](https://mobiletime.in/2026/01/thats-love-for-seven-lives/): `ಜೆಡಿಎಸ್ ಮುಖಂಡೆ ಚೈತ್ರಾ ಕೋಠಾರಕರ್ ಅವರ ಪುತ್ರ ಚಿರಾಗ ಕೋಠಾರಕರ್ ಹಾಗೂ ಕಾಂಗ್ರೆಸ್ ಕಾರ್ಯಕರ್ತೆ ರೀನಾ ಡಿಸೋಜಾ ಅವರ ಪುತ್ರಿ ರೀಶಲ್ ಡಿಸೋಜಾ ಪರಸ್ಪರ ಪ್ರೀತಿಸುತ್ತಿದ್ದು, ಆ ಪ್ರೀತಿಗೆ ವಿರೋಧವಾಗಿದ್ದೇ ರೀಶಲ್ ಡಿಸೋಜಾ ಅವರ ಸಾವಿಗೆ ಕಾರಣ’ ಎಂದು ಕೋಠಾರಕರ್ ಕುಟುಂಬದವರು ಹೇಳಿದ್ದಾರೆ. `ಕಾರವಾರದ ಚಿರಾಗ್ ಹಾಗೂ ಕದ್ರಾದ ರೀಶೆಲ್ ನಡುವೆ ಪ್ರೀತಿ ಅಪಾರವಾದ ಪ್ರೀತಿ ಇತ್ತು. ಅದು ಪವಿತ್ರವಾದ ಪ್ರೀತಿಯಾಗಿತ್ತೇ ವಿನಃ ಅದರಲ್ಲಿ ಬೇರೆ ಏನೂ ಇರಲಿಲ್ಲ. ರಿಶೇಲ್ ಹಾಗೂ ಚಿರಾಗ್ ನಡುವೆ ಪ್ರೀತಿ-ಪ್ರೇಮ ನಡೆದಿರುವುದು ಎರಡೂ ಕುಟುಂಬಕ್ಕೆ ತಿಳಿದಿತ್ತು. ರೀಶಾಲ್ ಸಹ ಅನೇಕ ಬಾರಿ ಚಿರಾಗ್ ಮನೆಗೆ ಬರುತ್ತಿದ್ದರು. ಅನೇಕ ಕಾರ್ಯಕ್ರಮಕ್ಕೆ ರಿಶೇಲ್ ಹಾಗೂ ಚಿರಾಗ್ ಒಟ್ಟಿಗೆ ಬಂದಿದ್ದರು. ಆದರೆ, ರೀಶೇಲ್ ಅವರ ತಾಯಿ ಆ ಪ್ರೀತಿಯನ್ನು ವಿರೋಧಿಸಿದ್ದರು. ಆ ವಿರೋಧವೇ ರೀಶೆಲ್ ಅವರ ಸಾವಿಗೆ ಕಾರಣ’ ಎಂದು ಚಿರಾಗ ಕೋಠಾರಕರ್ ಅವರ ಚಿಕ್ಕಮ್ಮನೂ ಆಗಿರುವ ಕಿನ್ನರ ಗ್ರಾಮದ ಸೀಮಾ ಕೊಠಾರಕರ್ ಅವರು ಹೇಳಿದ್ದಾರೆ. `ಕಾರವಾರದ ಕದ್ರಾ ಗ್ರಾಮದ ರಿಶೇಲ್ ಸಾವಿನ ವಿಚಾರವನ್ನ ರಾಜಕೀಯ ದ್ವೇಷ ಸಾಧನೆಗೆ ಬಳಸಿಕೊಳ್ಳಲಾಗುತ್ತಿದೆ. ಆದರೆ, ರೀಶೆಲ್ ಅವರಿಗೆ ಅವರ ತಾಯಿಯೇ ಕಿರುಕುಳ ನೀಡಿದ್ದು, ಅದೇ ನೋವಿನಲ್ಲಿ ರೀಶೆಲ್ ಸಾವನಪ್ಪಿದ್ದಾರೆ’ ಎಂದವರು ದೂರಿದ್ದಾರೆ. `ರಿಶೇಲ್ ಆತ್ಮಹತ್ಯೆಯ ನಂತರ ಚಿರಾಗ್ ಮಾನಸಿಕವಾಗಿ ಕುಗ್ಗಿದ್ದಾನೆ. ಪ್ರೀತಿ ಮಾಡುತ್ತಿದ್ದ ಹುಡಗಿ ಆತ್ಮಹತ್ಯೆ ಮಾಡಿಕೊಂಡಿರುವುದು ಆತನ ಮನಸ್ಸಿಗೆ ಗಾಸಿಯಾಗಿದೆ. ರಿಶೇಲ್ ಸಾವಿನ ದುರುಪಯೋಗ ಪಡೆಯಲು ಕೇವಲ ದುಷ್ಟ ಶಕ್ತಿಗಳು ಪ್ರಯತ್ನಿಸುತ್ತಿದೆ. ಇದಕ್ಕೆ ಜಾತಿಯ ಬಣ್ಣವನ್ನ ಸಹ ಕೊಡಲಾಗುತ್ತಿದೆ’ ಎಂದು ದೂರಿದರು. `ಚಿರಾಗ ಅತ್ಯಂತ ಮುಗ್ದನಾಗಿದ್ದು, ಆತ ಮುಗ್ದ ಎಂದು ತೋರಿಸಲು ಅನೇಕ ಸಾಕ್ಷಾಧಾರಗಳಿವೆ. ಅದನ್ನು ಪೊಲೀಸ್ ತನಿಖೆ ವೇಳೆ ನೀಡಲಾಗುತ್ತದೆ. ಚಿರಾಗ್ ಅವರ ಪ್ರೇಯಸಿ ರೀಶಲ್ ಸಾವಿನ ವಿಷಯವಾಗಿ ಅನಗತ್ಯವಾಗಿ ಚೈತ್ರಾ ಕೋಠಾರಕರ್ ಅವರ ಫೋಟೋ ಬಳಸಲಾಗುತ್ತಿದ್ದು, ಕಾನೂನು ಕ್ರಮ ಜರುಗಿಸುವುದು ಅನಿವಾರ್ಯ’ ಎಂದು ಎಚ್ಚರಿಸಿದರು. ಕಿನ್ನರ ಗ್ರಾಮ ಪಂಚಾಯಿತಿಯ ಮಾಜಿ ಅಧ್ಯಕ್ಷ ಮುನ್ನಾ ಕೊಠಾರಕರ್, ವೀಣಾ ಕೊಠಾರಕರ್, ಶೈಲಾ ಚಿಂಚ್ರೇಕರ್, ಪ್ರಶಾಂತ್ ನಾಯ್ಕ, ಮಾನ್ಯ ಕೊಠಾರಕರ್, ಸುನೀಲ್ ಅನ್ವೇಕರ್, ಪ್ರಮೋದ್ ತಳೇಕರ್, ಸಂತೋಷ್ ಕಲ್ಗುಟ್ಕರ್, ಮಂಜುನಾಥ್ ಅನ್ವೇಕರ್, ಸಂಗೀತ ಗೋವೆಕರ್ ಅವರು `ಚಿರಾಗ್ ಕೋಠಾರಕರ್ ಅವರ ತಪ್ಪಿಲ್ಲ’ ಎಂದು ಸಮರ್ಥಿಸಿಕೊಂಡರು. - [ಕೈ ಕೊಟ್ಟ ಪೂಜಾ.. ಕ್ರಿಮಿನಾಶಕ ಸೇವಿಸಿದ ಚೇತನ!](https://mobiletime.in/2026/01/pooja-who-gave-her-hand-a-spirit-who-consumed-pesticide/): ಮುಂಡಗೋಡಿನ ಚೇತನ ಕುಡಾಳಕರ್ ಅವರು ಯಲ್ಲಾಪುರದ ಪೂಜಾ ಅವರನ್ನು ಪ್ರೀತಿಸಿದ್ದು, ಪೂಜಾ ಅವರು ಮದುವೆ ನಿರಾಕರಿಸಿದ ಕಾರಣ ಚೇತನ ಅವರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಮುಂಡಗೋಡದ ಆನಂದನಗರದಲ್ಲಿ ಚೇತನ ನಾಗರಾಜ ಕುಡಾಳಕರ್ (24) ಅವರು ವಾಸವಾಗಿದ್ದರು. ವಾಹನ ಚಾಲಕರಾಗಿ ಚೇತನ ಕುಡಾಳಕರ್ ಅವರು ಬದುಕು ಕಟ್ಟಿಕೊಂಡಿದ್ದರು. ಚೇತನ ಕುಡಾಳಕರ್ ಅವರು ತಮ್ಮ ಮಾವನ ಮಗಳಾದ ಪೂಜಾ ಅವರನ್ನು ಪ್ರೀತಿಸುತ್ತಿದ್ದರು. ಅಂಬೇಡ್ಕರ ನಗರದಲ್ಲಿರುವ ಪೂಜಾ ಅವರ ಮನೆಗೂ ಅವರು ಆಗಾಗ ಭೇಟಿ ನೀಡುತ್ತಿದ್ದರು. ಪೂಜಾ ಅವರು ಸಹ ಚೇತನ ಅವರನ್ನು ಪ್ರೀತಿಸಿದ್ದು, ಅವರಿಬ್ಬರು ಕಳೆದ ನಾಲ್ಕು ವರ್ಷಗಳಿಂದ ಅನ್ಯೋನ್ಯವಾಗಿಯೇ ಇದ್ದರು. ಈ ನಡುವೆ ಚೇತನ ಕುಡಾಳಕರ್ ಅವರು ಪೂಜಾ ಅವರಲ್ಲಿ ಮದುವೆ ಪ್ರಸ್ತಾಪ ಮಾಡಿದರು. ಅದನ್ನು ಪೂಜಾ ಅವರು ನಿರಾಕರಿಸಿದ ಕಾರಣ ಜನವರಿ 9ರಂದು ಚೇತನ ಅವರು ಕೀಟನಾಶಕ ಸೇವಿಸಿದರು. ಮಾವನ ಮನೆಗೆ ಬಂದು ಕೀಟನಾಶಕ ಸೇವಿಸಿದ ಚೇತನ್ ಅವರನ್ನು ಯಲ್ಲಾಪುರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಯಿತು. ಅದಾದ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ಕರೆದೊಯ್ಯಲಾಯಿತು. ವಿಷ ಸೇವಿಸಿದ ನಂತರವೂ ಐದು ದಿನಗಳ ಕಾಲ ಬದುಕುಳಿದ ಚೇತನ ಕುಡಾಳಕರ್ ಅವರು ಮಂಗಳವಾರ ತಮ್ಮ ಉಸಿರು ನಿಲ್ಲಿಸಿದರು. ಬೆಂಗಳೂರಿನ ಐಫೋನ್ ಕಂಪನಿಯಲ್ಲಿ ಕೆಲಸ ಮಾಡುವ ಕಾವ್ಯ ಕುಡಾಳಕರ್ ಅವರು ಸಹೋದರನ ಸಾವಿನ ಬಗ್ಗೆ ಅರಿತು ಊರಿಗೆ ಬಂದರು. ಪ್ರೀತಿಯಲ್ಲಿ ಆದ ಮೋಸದಿಂದ ಚೇತನ ಕುಡಾಳಕರ್ ಅವರು ಸಾವನಪ್ಪಿದ ಬಗ್ಗೆ ಅವರು ಮಾಹಿತಿ ನೀಡಿದರು. - [ಗೋಕರ್ಣ ಸಮುದ್ರ: ಅವರಿಗೆ ಹಾರುವ ಕೆಲಸ.. ಇವರಿಗೆ ರಕ್ಷಿಸುವುದೇ ಕಾಯಕ!](https://mobiletime.in/2026/01/gokarna-sea-their-job-is-to-fly-theirs-is-to-protect/): ಗೋಕರ್ಣಕ್ಕೆ ಬರುವ ಅನೇಕ ಪ್ರವಾಸಿಗರು ಪದೇ ಪದೇ ಸಮುದ್ರಕ್ಕೆ ಹಾರುತ್ತಿದ್ದು, ಜೀವನ್ಮರಣದ ನಡುವೆ ಹೋರಾಡುತ್ತಿದ್ದವರನ್ನು ರಕ್ಷಿಸುವುದೇ ಅಲ್ಲಿನ ಜೀವ ರಕ್ಷಕ ಸಿಬ್ಬಂದಿಗೆ ಸವಾಲಾಗಿದೆ. ಗುರುವಾರ ಸಹ ಸಮುದ್ರ ಪಾಲಾಗುತ್ತಿದ್ದ ವ್ಯಕ್ತಿಯೊಬ್ಬರನ್ನು ಅಲ್ಲಿನ ಸಿಬ್ಬಂದಿ ರಕ್ಷಿಸಿದ್ದಾರೆ. ಗೋಕರ್ಣ ಮುಖ್ಯ ಕಡಲತೀರಕ್ಕೆ ಬಂದಿದ್ದ ದಾವಣಗೆರೆಯ ಪರಶುರಾಮ ರಾಜಪ್ಪ (21) ಅವರು ಎಲ್ಲಾ ನಿಯಮಗಳನ್ನು ಮೀರಿ ಸಮುದ್ರಕ್ಕೆ ಹಾರಿದ್ದಾರೆ. ಆಳ ಸಮುದ್ರದವರೆಗೂ ಹೋದ ಅವರು ಅಲ್ಲಿ ನೀರು ಕುಡಿದಿದ್ದು, ಜೀವ ಉಳಿಸಿಕೊಳ್ಳಲು ಪರದಾಡುತ್ತಿದ್ದ ಅವರನ್ನು ನೋಡಿದ ರಕ್ಷಣಾ ಸಿಬ್ಬಂದಿ ತುರ್ತು ಕಾರ್ಯಾಚರಣೆ ನಡೆಸಿ ಅವರನ್ನು ರಕ್ಷಿಸಿದ್ದಾರೆ. ಆರು ಜನ ಪ್ರವಾಸಿಗರ ಜೊತೆ ಪರಶುರಾಮ ರಾಜಪ್ಪ ಅವರು ಗೋಕರ್ಣಕ್ಕೆ ಆಗಿಮಿಸಿದ್ದರು. ತಮಗೆ ಈಜು ಬಾರದಿದ್ದರೂ ಸಮುದ್ರಕ್ಕೆ ಇಳಿದಿದ್ದರು. ಅವರು ಅಪಾಯಕ್ಕೆ ಸಿಲುಕಿರುವುದನ್ನು ಲೋಕೇಶ ಹರಿಕಂತ್ರ, ಶಿವಪ್ರಸಾದ್ ಅಂಬಿಗ, ರೋಷನ್ ಖಾರ್ವಿ, ಮೋಹನ ಅಂಬಿಗ ಗಮನಿಸಿದರು. ರವಿ ನಾಯ್ಕ ಹಾಗೂ ಶೇಖರ್ ಹರಿಕಂತ್ರ ಅವರ ಜೊತೆ ಅಶೋಕ್ ಹೊಸಕಟ್ಟ, ಕಮಲಾಕರ್ ಹೊಸ್ಕಟ್ಟ, ದರ್ಶನ್ ಲಕ್ಕುಮನೆ, ದೀಪಕ್ ಗೌಡ ಹಾಗೂ ಲಿಂಗರಾಜ ಗೌಡ ನೆರವಿನಿಂದ ಪರಶುರಾಮ ಅವರು ಜೀವ ಉಳಿಸಿಕೊಂಡರು. - [ರಾಜ್ಯಮಟ್ಟದ ರಸಪ್ರಶ್ನೆ: ಉತ್ತರ ಕನ್ನಡಿಗರ ಸಾಧನೆ](https://mobiletime.in/2026/02/state-level-quiz-achievements-of-north-kannadigas/): ಬೆಂಗಳೂರಿನ ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಯವರು ನಡೆಸಿದ ವಿಜ್ಞಾನ ರಸಪ್ರಶ್ನೆ ಕಾರ್ಯಕ್ರಮದಲ್ಲಿ ಉತ್ತರ ಕನ್ನಡ ಜಿಲ್ಲೆಯ ವಿದ್ಯಾರ್ಥಿಗಳು ಭಾಗವಹಿಸಿದ್ದು, ಮಹತ್ವದ ಸಾಧನೆ ಮಾಡಿದ್ದಾರೆ. ರಾಷ್ಟ್ರೀಯ ವಿಜ್ಞಾನ ದಿನಾಚರಣೆಯ ಅಂಗವಾಗಿ ವಿದ್ಯಾರ್ಥಿಗಳಿಗೆ ರಾಜ್ಯಮಟ್ಟದಲ್ಲಿ ಈ ಸ್ಪರ್ಧೆ ನಡೆಯುತ್ತಿದೆ. ಸತತ ಏಳು ವರ್ಷಗಳಿಂದ ಈ ಸ್ಪರ್ಧೆ ಆಯೋಜಿಸಲಾಗುತ್ತಿದೆ. `ಸಿ ವಿ ರಾಮನ್ ವಿಜ್ಞಾನ ರಸಪ್ರಶ್ನೆ-2025’ರಲ್ಲಿ ರಾಜ್ಯದ 10 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಭಾಗವಹಿಸಿದ್ದು, ಉತ್ತರ ಕನ್ನಡ ಜಿಲ್ಲೆಯಿಂದ 250ಕ್ಕೂ ಅಧಿಕ ಮಕ್ಕಳು ಭಾಗವಹಿಸಿದ್ದರು. ಈ ಸ್ಪರ್ಧೆಯ ಫಲಿತಾಂಶ ಪ್ರಕಟವಾಗಿದ್ದು, ಜಿಲ್ಲೆಯ ಮೂವರು ಮಕ್ಕಳು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಅಂಕೋಲಾದ ಪಿಎಂ ಆಂಗ್ಲ ಮಾಧ್ಯಮ ಪ್ರೌಢಶಾಲೆಯ 9ನೇ ತರಗತಿಯ ವಿದ್ಯಾರ್ಥಿನಿ ಕೀರ್ತಿ ಗೋವಿಂದ ನಾಯ್ಕ ಪ್ರಥಮ ಸ್ಥಾನ. ಕಾರವಾರ ತಾಲೂಕಿನ ಜನತಾ ವಿದ್ಯಾಲಯ ಮುದುಗ ಪ್ರೌಢಶಾಲೆಯ ಎಂಟನೇ ತರಗತಿಯ ವಿದ್ಯಾರ್ಥಿನಿ ಪೂರ್ವಿ ತೇಕು ದುರ್ಗೆಕರ್ ದ್ವಿತೀಯ ಸ್ಥಾನ ಹಾಗೂ ಕಾರವಾರದ ಎಜುಕೇರ್ ಆಂಗ್ಲ ಮಾಧ್ಯಮ ಶಾಲೆಯ 9ನೇ ತರಗತಿಯ ವಿದ್ಯಾರ್ಥಿನಿ ಸ್ಮೃತಿ ಸುರೇಶ ದುರ್ಗೆಕರ್ ತೃತೀಯ ಬಹುಮಾನವನ್ನು ತಮ್ಮದಾಗಿಸಿಕೊಂಡಿದ್ದಾರೆ. ಈ ವಿದ್ಯಾರ್ಥಿಗಳಿಗೆ ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಯ ಉತ್ತರ ಕನ್ನಡ ಜಿಲ್ಲಾ ಸಂಯೋಜಕರಾದ ಜೈ ರಂಗನಾಥ ಬಿ ಎಸ್, ಮುದುಗಾ ಜನತಾ ವಿದ್ಯಾಲಯ ಪ್ರೌಢಶಾಲೆಯ ಮುಖ್ಯಾಧ್ಯಾಪಕರಾದ ವೀಣಾ ಮಾಳಿಗೆರ, ಪಿಎಂ ಪ್ರೌಢಶಾಲೆಯ ಮುಖ್ಯಾಧ್ಯಾಪಕರಾದ ಚಂದ್ರಶೇಖರ್ ಕಡೆಮನಿ. ಪಿಎಂ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಮುಖ್ಯಾಧ್ಯಾ ಪಕೆಯರಾದ ಕೋಮಲ ಹಿರೇಮಠ, ಎಜುಕೇರ್ ಆಂಗ್ಲ ಮಾಧ್ಯಮ ಶಾಲೆ ಅಮದಳ್ಳಿಯ ಪ್ರಾಂಶುಪಾಲರಾದ ನಾಗರತ್ನ ಎಸ್. ಮತ್ತು ಶಾಲಾ ಸಂಯೋಜಕರಾದ ಟಿ ನ ಸುರೇಶ್ ಆಸ್ನೋಟಿಕರ. ನಿಕಿತಾ ನಾಯ್ಕ್ ಅವರು ಶುಭ ಕೋರಿದರು. ರಾಜ್ಯಮಟ್ಟದ ಪರೀಕ್ಷೆಯು ಫೆ 8ರಂದು ನಡೆಯಲಿದ್ದು, ಅಲ್ಲಿಯೂ ಸಾಧನೆ ಮಾಡಿ ಎಂದು ಹಾರೈಸಿದರು. - [ಕೋಳಿ ಕಾಲಿಗೆ ಕತ್ತಿ ಕಟ್ಟಿ ಕಾದಾಟ: ಕಠಿಣ‌ ಕ್ರಮ](https://mobiletime.in/2026/02/fighting-with-a-sword-tied-to-a-chicken-leg-strict-action/): ಕೋಳಿ ಕಾಲಿಗೆ ಕತ್ತಿ ಕಟ್ಟಿ ಅವುಗಳ ಕಾದಾಟ ನಡೆಸಿದವರ ವಿರುದ್ಧ ಪೊಲೀಸರು ಕಾನೂನು ಕ್ರಮ ಜರುಗಿಸಿದ್ದಾರೆ. ಅರಣ್ಯ ಪ್ರದೇಶದಲ್ಲಿ ಕೋಳಿ ಅಂಕ ನಡೆಸಿದ ಇಬ್ಬರನ್ನು ಭಟ್ಕಳ ಗ್ರಾಮೀಣ ಪೊಲೀಸರು ಬಂಧಿಸಿದ್ದಾರೆ. ಭಟ್ಕಳ ತಾಲೂಕಿನ ಮುಟ್ಟಳ್ಳಿಯ ಸುಕ್ರಪ್ಪ ಕನ್ನಯ್ಯ ನಾಯ್ಕ (63) ಮತ್ತು ಜಾಲಿಕೋಡಿಯ  ಪುರುಷೋತ್ತಮ ತಂದೆ ಮಂಜುನಾಥ ನಾಯ್ಕ (36) ಅವರು ಕೋಳಿ ಅಂಕ ನಡೆಸುತ್ತಿದ್ದರು. ಫೆಬ್ರವರಿ 5ರ ಸಂಜೆ ಈ ಆಟದ ಬಗ್ಗೆ ಪೊಲೀಸರಿಗೆ ಪೋನ್ ಬಂದಿತು. ಕೋಣಾರ ಗ್ರಾಮದ ಕೆರೆಹಿತ್ಲು ಅರಣ್ಯಕ್ಕೆ ಪೊಲೀಸರು ಧಾವಿಸಿದರು. ಹುಂಜಗಳ ಕಾಲುಗಳಿಗೆ ಕತ್ತಿ ಕಟ್ಟಿ ಅದನ್ನು ಕಾದಾಟಕ್ಕೆ ಬಿಟ್ಟಿರುವುದನ್ನು ಪೊಲೀಸರು ನೋಡಿದರು. ಆ ಕೋಳಿಗಳ ಮೇಲೆ ಹಣ ಕಟ್ಟಿ ಕೆಲವರು ಜೂಜಾಡುತ್ತಿದ್ದರು. ಪೊಲೀಸರನ್ನು ಕಂಡ‌ ತಕ್ಷಣ ಎಲ್ಲರೂ ಓಡಿ ಪರಾರಿಯಾಗಿದ್ದು, ಅದಾಗಿಯೂ ಪಿಸೈ ಮಲ್ಲೊಕಾರ್ಜುನ‌ ಕೋರಾಣಿ ಇಬ್ಬರನ್ನು ಸೆದೆಬಡಿದರು. ಅವರಿಬ್ಬರ ವಿರುದ್ಧ ಕೇಸು ದಾಖಲಿಸಿದರು. - [ಭೂತೇಶ್ವರ ಸೊಸೈಟಿಗೆ ಕೆಡಿಸಿಸಿ ನಿರ್ದೇಶಕರ ಭೇಟಿ](https://mobiletime.in/2026/02/kdcc-director-visits-bhuteshwara-society/): ಶಿರಸಿಯ ಪ್ರತಿಷ್ಠಿತ ಶ್ರೀ ಭೂತೇಶ್ವರ ಪತ್ತಿನ ಸಹಕಾರಿ ಸಂಘಕ್ಕೆ ‘ಲೋಕಧ್ವನಿ ಹೆಮ್ಮೆಯ ಸಾಧಕ ‘ ಪ್ರಶಸ್ತಿ ಸಂದ ಹಿನ್ನಲೆಯಲ್ಲಿ ಕೆಡಿಸಿಸಿ ಬ್ಯಾಂಕ್ ನೂತನ ನಿರ್ದೇಶಕ ಮೋಹನ್ ನಾಯಕ್ ಗೋಕರ್ಣ ಭೇಟಿ ನೀಡಿ ಶುಭ ಕೋರಿದ್ದಾರೆ. ಕಳೆದ ಅಕ್ಟೋಬರ್ ತಿಂಗಳಲ್ಲಿ ನಡೆದ ಚುನಾವಣೆಯಲ್ಲಿ ಕೆಡಿಸಿಸಿ ಬ್ಯಾಂಕ್ ನಿರ್ದೇಶಕರಾಗಿ ಆಯ್ಕೆಯಾದ ಬಳಿಕ ಇದೇ ಮೊದಲ ಬಾರಿಗೆ ಸಂಘದ ಕಚೇರಿಗೆ ಭೇಟಿ ನೀಡಿದ ಮೋಹನ್ ನಾಯಕ್ ಅವರನ್ನು ಸಂಘದ ವತಿಯಿಂದ ಆತ್ಮೀಯವಾಗಿ ಸನ್ಮಾನಿಸಲಾಯಿತು. ‘ಸಂಘವು ಇತ್ತೀಚಿಗೆ ಲೋಕಧ್ವನಿ ಹೆಮ್ಮೆಯ ಸಾಧಕ ಪ್ರಶಸ್ತಿಗೆ ಭಾಜನರಾಗಿರುವುದು ಅತ್ಯಂತ ಹೆಮ್ಮೆಯ ಸಂಗತಿಯಾಗಿದೆ. ಇನ್ನಷ್ಟು ಪ್ರಶಸ್ತಿಗಳು ಸಂಘಕ್ಕೆ ಬರುವಂತಾಗಲಿ.ವಸಂತ ಶೆಟ್ಟಿಯವರಿಂದ ಸ್ಥಾಪನೆಯಾದ ಶ್ರೀ ಭೂತೇಶ್ವರ ಪತ್ತಿನ ಸಹಕಾರಿ ಸಂಘವು ಇನ್ನಷ್ಟು ಬೆಳೆಯಲಿ ‘ ಎಂದು ಮೋಹನ್ ನಾಯಕ್ ಆಶಿಸಿದರು. ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಶ್ರೀಧರ ಮೊಗೇರ್, ಉಪಾಧ್ಯಕ್ಷ ಭಾಸ್ಕರ ಶೆಟ್ಟಿ, ಆಂತರಿಕ ಸಲಹೆಗಾರ ಪಿ ಡಿ ಮದ್ಗುಣಿ, ನಿರ್ದೇಶಕರಾದ ಅಮಿತ್ ಹೆಗಡೆ, ರಾಘವೇಂದ್ರ ಹೆಗಡೆ, ಪೀಟರ್ ಫರ್ನಾಂಡೀಸ್, ತುಕಾರಾಮ ನೆತ್ರೇಕರ ಮುಖ್ಯ ಕಾರ್ಯನಿರ್ವಾಹಕ ವಿನಾಯಕ ಶೆಟ್ಟಿ ಇತರರು ಇದ್ದರು. - [ಆಟೋ ಚಾಲಕರ ನಡುವೆ ಹೊಡೆದಾಟ!](https://mobiletime.in/2026/02/fight-between-auto-drivers/): ಆಟೋದಲ್ಲಿ ಹೆಚ್ಚು ಜನರನ್ನು ಹಾಕಿಕೊಂಡು ಹೊರಟಿದ್ದ ಚಾಲಕನನ್ನು ಮತ್ತೊಬ್ಬ ಚಾಲಕ ಪ್ರಶ್ನಿಸಿದ್ದು, ಇದೇ ವಿಷಯ ಅವರಿಬ್ಬರ ನಡುವಿನ ಹೊಡೆದಾಟಕ್ಕೆ ಕಾರಣವಾಗಿದೆ. ಭಟ್ಕಳ ತಾಲೂಕಿನ ತಲಗೋಡ ಗ್ರಾಮದ ಒಂಕನ ಮನೆಯ ರಾಮಾ ಮಂಜಪ್ಪ ನಾಯ್ಕ ಹಾಗೂ ತಲಗೋಡ ಗ್ರಾಮದ ಹನುಮಂತ ಸುಬ್ರಾಯ ನಾಯ್ಕ ಅವರ ನಡುವೆ ಜಟಾಪಟಿ‌ ನಡೆದಿದೆ. ಫೆ 3ರಂದು ಸಂಜೆ ಭಟ್ಕಳದ ಬಂದರ ರಸ್ತೆಯಲ್ಲಿರುವ ಅಟೋ ರಿಕ್ಷಾ ನಿಲ್ದಾಣದಲ್ಲಿ ಆಟೋ ಚಾಲಕ ರಾಮ ನಾಯ್ಕ ತಮ್ಮ ಅಟೋ ರಿಕ್ಷಾದಲ್ಲಿ ೩ ಜನ ಪ್ರಯಾಣಿಕರನ್ನು ಹತ್ತಿಸಿಕೊಂಡಿದ್ದಾರೆ. ಅದಾದ ನಂತರ ಮತ್ತೆ ಎರಡು ಮಕ್ಕಳನ್ನು ಹತ್ತಿಸಿದ್ದಾರೆ. ರಿಕ್ಷಾ ಸರತಿಯಲ್ಲಿ ಕಾಯುತ್ತಿದ್ದ ಹನುಮಂತ ಸುಬ್ರಾಯ ನಾಯ್ಕ ಅವರು ಇದನ್ನು ಪ್ರಶ್ನಿಸಿದ್ದಾರೆ. ರಾಮಾ ನಾಯ್ಕರನ್ನು ಹನುಂಮತ ನಾಯ್ಕ ಅವರು ಅಡ್ಡಗಟ್ಟಿದ್ದಾರೆ. ಅವಾಚ್ಯ ಶಬ್ದಗಳಿಂದ ಬೈದು ತಮ್ಮ ಅಟೋ ರಿಕ್ಷಾದಲ್ಲಿ ಇದ್ದ ಸ್ಟೀಲ್ ಬಾಟಲಿಯಿಂದ ಎದೆಗೆ ಹೊಡೆದಿದ್ದಾರೆ. ಕೈಯಿಂದ ಹೊಡೆದು ಉಗುರಿನಿಂದ ಕುತ್ತಿಗೆಯ ಭಾಗದಲ್ಲಿ ಪರಚಿ ದೂಡಿ ಹಾಕಿದ್ದಾರೆ. ನಂತರ ಎದುರಾಳಿಯ ಎಡಕೈಯನ್ನು ತಿರುವಿ ನೋವು ಪಡಿಸಿದ್ದು, ಕೊಲೆ ಮಾಡುವುದಾಗಿ ಜೀವದ ಬೆದರಿಕೆ ಹಾಕಿದ್ದಾರೆ. ಈ ಕುರಿತು ರಾಮಾ ನಾಯ್ಕ ಅವರ ಪತ್ನಿ  ಪಾರ್ವತಿ ನಾಯ್ಕ ಅವರು ಪೊಲೀಸ್ ದೂರು ನೀಡಿದ್ದಾರೆ.   - [ಕಾರವಾರ: ಶಿರವಾಡದಲ್ಲಿ ಬೆಂಕಿ-ಬಿರುಗಾಳಿ!](https://mobiletime.in/2026/02/karwar-fire-and-storm-in-shirwad/): ಕಾರವಾರದ ಶಿರವಾಡದಲ್ಲಿರುವ ತ್ಯಾಜ್ಯ ವಿಲೆವಾರಿ ಘಟಕಕ್ಕೆ ಬೆಂಕಿ ಬಿದ್ದಿದೆ. ಭಾರೀ ಪ್ರಮಾಣದ ಗಾಳಿಗೆ ಬೆಂಕಿ ಪ್ರಮಾಣ ಉಲ್ಬಣಿಸಿದ್ದು ಅಗ್ನಿಶಾಮಕ ಸಿಬ್ಬಂದಿ ಸಾಹಸದಿಂದ ದೊಡ್ಡ ಅನಾಹುತ ತಪ್ಪಿದೆ. ಕಾರವಾರ ನಗರಸಭೆಯ ತ್ಯಾಜ್ಯ ವಿಲೇವಾರಿ ಘಟಕಕ್ಕೆ ಶುಕ್ರವಾರ ಬೆಳಗಿನ ಜಾವ ಬೆಂಕಿ ಬಿದ್ದಿದೆ. ಬೆಂಕಿಯನ್ನು ನಂದಿಸಲು ಅಗ್ನಿಶಾಮಕ ದಳದವರು ಗಂಟೆಗಟ್ಟಲೆ ಕಾರ್ಯಾಚರಣೆ ನಡೆಸಿದ್ದಾರೆ. ನಸುಕಿನ 3ಗಂಟೆಗೆ ಈ ಅವಘಡ ನಡೆದಿದ್ದು, ಸ್ಥಳದಲ್ಲಿ ಸಂಗ್ರಹವಾಗಿದ್ದ ಪ್ಲಾಸ್ಟಿಕ್ ತ್ಯಾಜ್ಯ ಸುಟ್ಟಿದೆ. ಕೆಲವೇ ಕ್ಷಣಗಳಲ್ಲಿ ಬೆಂಕಿ ವ್ಯಾಪಕವಾಗಿ ಹರಡಿದೆ. ಹಲವು ಕಿಲೋಮೀಟರ್ ದೂರದಿಂದಲೂ ದಟ್ಟವಾದ ಹೊಗೆ ಹಾಗೂ ಎತ್ತರದ ಜ್ವಾಲೆಗಳು ಕಾಣಿಸಿಕೊಂಡಿದ್ದು, ಸುತ್ತಮುತ್ತಲಿನ ನಿವಾಸಿಗಳು ಆತಂಕಕ್ಕೆ ಒಳಗಾದರು‌. ಸ್ಥಳೀಯರು ಮಾಹಿತಿ ನೀಡುತ್ತಿದ್ದಂತೆ ಅಗ್ನಿಶಾಮಕ ಮತ್ತು ತುರ್ತು ಸೇವಾ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸುವ ಕಾರ್ಯಾಚರಣೆಯನ್ನು ಆರಂಭಿಸಿದರು. ಬೆಂಕಿಯ ತೀವ್ರತೆಯನ್ನು ಗಮನಿಸಿ, ಅಂಕೋಲಾ ಹಾಗೂ ಗ್ರಾಸಿಮ್ ಇಂಡಸ್ಟ್ರೀಸ್‌ನಿಂದ ಹೆಚ್ಚುವರಿ ಅಗ್ನಿಶಾಮಕ ವಾಹನಗಳನ್ನು ಕರೆಸಲಾಯಿತು. ಡಂಪಿಂಗ್ ಯಾರ್ಡ್ ಸಮೀಪದಲ್ಲಿರುವ ಪ್ರದೇಶಗಳಿಗೆ ಬೆಂಕಿ ಹರಡದಂತೆ ಅಧಿಕಾರಿಗಳು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡರು. ಕತ್ತಲೆಯಲ್ಲಿಯೂ ಕಾರ್ಯಾಚರಣೆ ಮುಂದುವರೆಸಿದ ಪರಿಣಾಮ‌ ಇನ್ನಷ್ಟು ಅನಾಹುತ ತಪ್ಪಿತು. ಬೆಂಕಿ ಅವಘಡಕ್ಕೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಅಥವಾ ಚಳಿ ತಪ್ಪಿಸಲು ಕೆಲವರು ಹಚ್ಚಿದ ಸಣ್ಣ ಬೆಂಕಿಯಿಂದ ಈ ಘಟನೆ ಸಂಭವಿಸಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. - [ಸರ್ಕಾರಿ ಕಚೇರಿ: ಬೀಗ ಹಾಕುವುದನ್ನೇ ಮರೆತ PDO!](https://mobiletime.in/2026/02/government-office-pdo-forgot-to-lock-it/): ಗ್ರಾಮಸ್ಥರು ಹಾಗೂ ಅಧಿಕಾರಿಗಳ ನಡುವೆ ಹೊನ್ನಾವರದಲ್ಲಿ ಜಗಳವಾಗಿದ್ದು, ಇದರಿಂದ ಆಘಾತಕ್ಕೆ ಒಳಗಾದ ಹಡನಬಾಳ ಗ್ರಾ ಪಂ ಅಧಿಕಾರಿಗಳು ಕಚೇರಿಗೆ ಬೀಗ ಹಾಕುವುದನ್ನೇ ಮರೆತು ಮನೆಗೆ ಹೋಗಿದ್ದಾರೆ. ಪರಿಣಾಮ ರಾತ್ರಿಯೂ ಸರ್ಕಾರಿ ಕಚೇರಿ ಬಾಗಿಲು ತೆರೆದಿರುವುದು ಕಾಣಿಸಿದೆ. `ಕಚೇರಿಯಲ್ಲಿನ ಅವ್ಯವಸ್ಥೆ ಸರಿಪಡಿಸಿ’ ಎಂದು ಆ ಭಾಗದ ಗ್ರಾಮಸ್ಥರು ಒತ್ತಾಯಿಸುತ್ತಿದ್ದರು. ಆದರೆ, ಪಿಡಿಓ ಮಾತ್ರ ಇದಕ್ಕೆ ಸ್ಪಂದಿಸರಲಿಲ್ಲ. ಹೀಗಾಗಿ ಊರಿನ ಜನ ಗ್ರಾಮ ಪಂಚಾಯತ ಕಚೇರಿ ಎದುರು ಪ್ರತಿಭಟಿಸಿದರು. ಇದರಿಂದ ಅಸಮಧಾನಗೊಂಡ ಅಧಿಕಾರಿಗಳು ಸಂಜೆ ಕಚೇರಿಗೆ ಬೀಗ ಹಾಕದೇ ಮನೆಗೆ ಮರಳಿದರು. ಕೆಲ ಕಾಲ ಪ್ರತಿಭಟನೆ ನಡೆಸಿದ ಊರಿನವರು ನಂತರ ಮರಳಿದ್ದು, ರಾತ್ರಿಯೂ ಅಲ್ಲಿ ಬೆಳಕು ಉರಿಯುತ್ತಿರುವುದು ಕಾಣಿಸಿತು. ಅದಾದ ನಂತರ ಪೊಲೀಸ್ ಭದ್ರತೆಯಲ್ಲಿ ಬಂದ ಅಧಿಕಾರಿಗಳು ಬೀಗ ಹಾಕಿ ಹೋಗಿದ್ದಾರೆ. ಅಕ್ರಮ ಕಾಮಗಾರಿ, ಆಡಳಿತದ ವಿರುದ್ಧ ಅಸಮಧಾನ ಹಾಗೂ ಇನ್ನಿತರ ವಿಷಯಗಳ ಬಗ್ಗೆ ಊರಿನವರು ಆಕ್ರೋಶವ್ಯಕ್ತಪಡಿಸಿದ್ದಾರೆ. ದಾಖಲೆ ನೀಡಿದರೂ ಅಕ್ರಮದ ವಿರುದ್ಧ ತನಿಖೆ ನಡೆಸದ ಬಗ್ಗೆ ಕಿಡಿಕಾರಿದ್ದಾರೆ. ಗ್ರಾಮಸಭೆಯನ್ನು ಸರಿಯಾಗಿ ನಡೆಸದ ಬಗ್ಗೆ ಆಕ್ಷೇಪಿಸಿದ್ದಾರೆ. `ನಾಲ್ಕು ಬಾರಿ ಸಭೆ ಕಡೆಯುವಂತೆ ಸೂಚಿಸಿದರೂ ಸಭೆ ಕರೆದಿಲ್ಲ. ಈಗ ಸಭೆ ಮುಗಿದಿದೆ ಎನ್ನುವ ಉತ್ತರ ನೀಡಲಾಗುತ್ತಿದೆ’ ಎಂದು ಜನ ದೂರಿದ್ದಾರೆ. `ಕಚೇರಿಗೆ ಬಾಗಿಲು ಹಾಕದೇ ಹೋದ ಕಾರಣ ಅಲ್ಲಿ ದಾಖಲೆ ಕಳ್ಳತನ ನಡೆದರೆ ಯಾರು ಹೊಣೆ?’ ಎಂದು ಊರಿನವರು ಪ್ರಶ್ನಿಸಿದ್ದಾರೆ. ಸಿಬ್ಬಂದಿಯ ವರ್ತನೆ ವಿರುದ್ಧ ಜನ ಅಸಮಧಾನಹೊರಹಾಕಿದ್ದಾರೆ. - [ಬ್ಲೂವೆಲ್ ಅಲ್ಲ.. ಬಿಗ್ ಡ್ಯಾಡಿ: ಮನುಷ್ಯನನ್ನೇ ಮಾಯ ಮಾಡಿ ಆನ್‌ಲೈನ್ ಗೇಮ್!](https://mobiletime.in/2026/02/not-bluewell-big-daddy-an-online-game-that-makes-people-disappear/): ಗ್ರಾಮ ಒನ್ ಕೇಂದ್ರದಲ್ಲಿ ಕೆಲಸ ಮಾಡಿಕೊಂಡಿದ್ದ ಮಹಮದ್ ಶೇಖ್ ಅವರು ಆನ್‌ಲೈನ್ ಗೇಮ್ ಆಟದ ಚಟಕ್ಕೆ ಹಣ ಕಳೆದುಕೊಂಡಿದ್ದಾರೆ. ಅದಾಗಿಯೂ ಆನ್‌ಲೈನ್ ಗೇಮ್ ವ್ಯಾಮೋಹ ಬಿಡದ ಅವರು ಸಾಲ ಮಾಡಿ ಆ ಆಟ ಆಡಿದ್ದು, ಮನೆಯಲ್ಲಿ ಬೈದ ಕಾರಣ ಮನೆ ಬಿಟ್ಟು ಹೋಗಿದ್ದಾರೆ! ಯಲ್ಲಾಪುರದ ಜಯಂತಿ ನಗರದಲ್ಲಿ ಮಹಮದ್ ಇಂತ್ಯಾಮ ಗೌಸಲಿ ಶೇಖ್ (24) ಅವರು ವಾಸವಾಗಿದ್ದರು. ತಮ್ಮ ಮೊಬೈಲಿನಲ್ಲಿ ಅವರು `ಬಿಗ್ ಡ್ಯಾಡಿ’ ಎಂಬ ಆನ್ ಲೈನ್ ಗೇಮ್ ಆಡುತ್ತಿದ್ದರು. ತಮ್ಮಲ್ಲಿದ್ದ ಹಣವನ್ನೆಲ್ಲ ಆ ಆಟದ ಮೇಲೆ ಸುರಿದಿದ್ದ ಮಹಮದ್ ಅವರು ಆ ಆಟ ಆಡುವುದಕ್ಕಾಗಿ ಸಾಲವನ್ನು ಮಾಡಿದ್ದರು. ಆದರೆ, ಹಣ ಗೆದ್ದ ಉದಾಹರಣೆಗಳಿರಲಿಲ್ಲ. ಅದಾಗಿಯೂ, ಅವರ ಆನ್‌ಲೈನ್ ಆಟದ ವ್ಯಾಮೋಹ ಕಡಿಮೆ ಆಗಿರಲಿಲ್ಲ. ಫೆಬ್ರವರಿ 4ರ ರಾತ್ರಿ ಮನೆಗೆ ಬಂದ ನಂತರವೂ ಮಹಮದ್ ಶೇಖ್ ಅವರು ಮೊಬೈಲ್ ನೋಡುತ್ತಿದ್ದರು. ಬೆಂಬಿಡದೇ ಅವರು `ಬಿಗ್ ಡ್ಯಾಡಿ’ ಎಂಬ ಆಟ ಆಡುತ್ತಿದ್ದರು. ಇದನ್ನು ನೋಡಿದ ಕುಟುಂಬದವರು `ಇನ್ಮುಂದೆ ಆ ಆಟ ಆಡಬೇಡ’ ಎಂದು ಸಲಹೆ ನೀಡಿದರು. ಈ ವಿಷಯವಾಗಿ ಮನೆಯಲ್ಲಿ ಕೆಲ ವಾಗ್ವಾದ-ಗೊಂದಲ ಉಂಟಾಗಿದ್ದು, ಮಹಮದ್ ಶೇಖ್ ಅವರು ಇದರಿಂದ ಮಾನಸಿಕವಾಗಿ ಕುಗ್ಗಿದರು. ಆ ದಿನ ರಾತ್ರಿ ಮನೆಯಲ್ಲಿ ಮಲಗಿದ್ದ ಅವರು ಮರು ದಿನ ಮನೆಯಲ್ಲಿ ಕಾಣಲಿಲ್ಲ. ಸಂಜೆಯವರೆಗೆ ಹುಡುಕಾಟ ನಡೆಸಿದರೂ ಮಹಮದ್ ಶೇಖ್ ಅವರ ಸುಳಿವು ಸಿಗಲಿಲ್ಲ. ಹೀಗಾಗಿ ಸಿವಿಲ್ ಇಂಜಿನಿಯರ್ ಆಗಿರುವ ಜಾವಿದ್ ಗೌಸ್ ಅಲಿ ಶೇಖ್ ಅವರು ಪೊಲೀಸರಿಗೆ ಮಾಹಿತಿ ನೀಡಿದರು. ಈ ಎಲ್ಲಾ ವಿಷಯ ಆಲಿಸಿದ ಯಲ್ಲಾಪುರ ಪೊಲೀಸರು ಪ್ರಕರಣ ದಾಖಲಿಸಿದ್ದು, ಮಹಮದ್ ಶೇಖ್ ಅವರ ಶೋಧ ಶುರು ಮಾಡಿದ್ದಾರೆ. `ಜೂಜಾಟ ಜೀವನಕ್ಕೆ ಮಾರಕ’ - [ನೇಣಿಗೆ ನಿರ್ಧರಿಸಿದವ ನೆಲಕ್ಕೆ ಬಿದ್ದು ಸಾವು!](https://mobiletime.in/2026/02/the-one-who-decided-to-hang-himself-fell-to-the-ground-and-died/): `ಕೆಲಸ ಸರಿ ಇಲ್ಲ. ಸಂಬಳ ಸಾಲುತ್ತಿಲ್ಲ’ ಎಂದು ಕೊರಗುತ್ತಿದ್ದ ಕಿಶೋರ ನಾಯ್ಕ ಅವರು ಆತ್ಮಹತ್ಯೆಗೆ ನಿರ್ಧರಿಸಿದ್ದು, ನೇಣು ಹಾಕಿಕೊಳ್ಳುವಾಗ ಹಗ್ಗ ತುಂಡಾದ ಪರಿಣಾಮ ಅವರು ನೆಲಕ್ಕೆ ಬಿದ್ದು ಸಾವನಪ್ಪಿದ್ದಾರೆ! ಸಿದ್ದಾಪುರ ಕಾನಗೋಡ ಗಣೇಶ ನಗರದ ಕಿಶೋರ ಈಶ್ವರ ನಾಯ್ಕ (23) ಅವರು ವಾಸವಾಗಿದ್ದರು. ಹೊಟೇಲ್ ಕೆಲಸ ಮಾಡಲು ಅವರು ಆಸಕ್ತಿವಹಿಸಿದ್ದರು. ಹೀಗಾಗಿ ಹೋಟೆಲ್ ಕೆಲಸಕ್ಕಾಗಿ ಅವರು ಎಲ್ಲಡೆ ಅಲೆದಾಡುತ್ತಿದ್ದರು. ಎಲ್ಲಿಯೂ ಒಳ್ಳೆಯ ಕೆಲಸ ಸಿಗದ ಕಾರಣ ಬೆಂಗಳೂರಿಗೂ ಹೋಗಿದ್ದರು. ಎರಡು ತಿಂಗಳ ಹಿಂದೆ ಬೆಂಗಳೂರು ಹೋಗಿದ್ದ ಅವರಿಗೆ ಅಲ್ಲಿಯೂ ಸೂಕ್ತ ಉದ್ಯೋಗ ಸಿಕ್ಕಿರಲಿಲ್ಲ. ಹೀಗಾಗಿ ಕಿಶೋರ ನಾಯ್ಕ ಅವರು ಸರಾಯಿ ಸೇವನೆಯ ಚಟ ಅಂಟಿಸಿಕೊAಡರು. ಸರಾಯಿ ಕುಡಿಯಲು ಅಗತ್ಯವಿರುವಷ್ಟು ಕಾಸು ದುಡಿಯಲು ಅವರಿಗೆ ಸಾಧ್ಯವಾಗಿರಲಿಲ್ಲ. `ಕೆಲಸ ಸರಿ ಇಲ್ಲ. ಇಲ್ಲಿನ ಸಂಬಳ ಸಾಲುತ್ತಿಲ್ಲ’ ಎಂದು ಅವರು ಬೇಸರಿಸಿಕೊಂಡಿದ್ದರು. ವಾರದ ಹಿಂದೆ ಅವರು ಊರಿಗೆ ಮರಳಿದ್ದು, ಮತ್ತೆ ಇಲ್ಲಿಯೂ ಕೆಲಸದ ಹುಟುಕಾಟ ನಡೆಸಿದರು. ಆದರೆ, ಅವರಿಗೆ ಸಮಾಧಾನ ನೀಡುವ ಕೆಲಸ ಎಲ್ಲಿಯೂ ಸಿಗಲಿಲ್ಲ. ಜೀವನದಲ್ಲಿ ಜಿಗುಪ್ಸೆಗೆ ಒಳಗಾದ ಕಿಶೋರ ನಾಯ್ಕ ಅವರು ಫೆಬ್ರವರಿ 5ರಂದು ಆತ್ಮಹತ್ಯೆಗೆ ನಿರ್ಧರಿಸಿದರು. ತಾವು ವಾಸವಾಗಿರುವ ಮದ್ಯದ ಕೋಣೆಗೆ ಹೋದರು. ಅಲ್ಲಿದ್ದ ಮರದ ತೊಲೆಗೆ ಹಗ್ಗ ಕಟ್ಟಿದರು. ಹಗ್ಗದ ಇನ್ನೊಂದು ತುದಿಯನ್ನು ಕುತ್ತಿಗೆಗೆ ಸಿಕ್ಕಿಸಿಕೊಂಡು ನೇಣು ಹಾಕಿಕೊಂಡರು. ಆದರೆ, ಆ ಹಗ್ಗ ಅಲ್ಲಿ ತುಂಡಾಗಿದ್ದರಿoದ ಅವರು ನೆಲಕ್ಕೆ ಅಪ್ಪಳಿಸಿದರು. ಎತ್ತರದಿಂದ ನೆಲಕ್ಕೆ ಬಿದ್ದ ರಭಸಕ್ಕೆ ಅವರು ಅಲ್ಲಿಯೇ ಸಾವನಪ್ಪಿದರು. ಅರಣ್ಯ ಇಲಾಖೆಯಲ್ಲಿ ಬೀಟ್ ಪಾರೆಸ್ಟರ್ ಆಗಿರುವವ ಕಿರಣಕುಮಾರ ನಾಯ್ಕ ಅವರು ಸಹೋದರ ಸಾವನಪ್ಪಿರುವುದನ್ನು ನೋಡಿದರು. ಕಿರಣಕುಮಾರ ನಾಯ್ಕ ಅವರು ಸಿದ್ದಾಪುರ ಪೊಲೀಸ್ ಠಾಣೆಗೆ ಫೋನ್ ಮಾಡಿದರು. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ನೇಣು ಹಾಕಿಕೊಳ್ಳುವಾಗ ಹಗ್ಗ ತುಂಡಾಗಿ ಬಿದ್ದಿರುವುದನ್ನು ಅಲ್ಲಿದ್ದವರು ಗಮನಿಸಿದರು. ಸಹೋದರ ನೀಡಿದ ಮಾಹಿತಿ ಪ್ರಕಾರ ಪೊಲೀಸರು ಪ್ರಕರಣ ದಾಖಲಿಸಿದರು. `ಆತ್ಮಹತ್ಯೆ ಅಪರಾಧ’ - [38 ಅಡಿ ಆಳದ ಬಾವಿ: ಮಣ್ಣು ಕುಸಿದು ಕಾರ್ಮಿಕ ಸಾವು!](https://mobiletime.in/2026/02/38-foot-deep-well-worker-dies-after-soil-collapses/): ಹೊನ್ನಾವರದ ಮಂಕಿಯ ಉದಯ ನಾಯ್ಕ ಅವರ ಜಮೀನಿನಲ್ಲಿದ್ದ 38 ಅಡಿ ಆಳದ ಬಾವಿಗೆ ಬಿದ್ದು ರಾಜೀವ ರಾಜನ್ ಅವರು ಸಾವನಪ್ಪಿದ್ದಾರೆ. ಹೊನ್ನಾವರದ ಮಂಕಿಯ ಗಣೇಶ ನಗರದ ಬಳಿ ಉದಯ ಸಾಂತಯ್ಯ ನಾಯ್ಕ ಅವರು ವಾಸವಾಗಿದ್ದಾರೆ. ಅವರು ತಮ್ಮ ಜಮೀನಿನಲ್ಲಿ ಬಾವಿ ತೋಡಿಸಿದ್ದು, ಅದಕ್ಕೆ ಸಿಮೆಂಟ್ ರಿಂಗ್’ಗಳನ್ನು ಅಳವಡಿಸಿದ್ದಾರೆ. ಬಾವಿ ನಿರ್ಮಾಣ ಹಾಗೂ ರಿಂಗ್ ಅಳವಡಿಸುವ ಪ್ರಕ್ರಿಯೆಗೆ ಕೇರಳದ ರಾಜೀವ ರಾಜನ್ ಅವರು ತಮ್ಮ ತಂಡದ ಜೊತೆ ಬಂದಿದ್ದು, ಕೆಲಸ ಅವಧಿಯಲ್ಲಿ ಬಾವಿಯ ಅಂಚಿನ ಮಣ್ಣು ಕುಸಿದ ಪರಿಣಾಮ ರಾಜೀವ ರಾಜನ್ (29) ಅವರು ಬಾವಿ ಆಳಕ್ಕೆ ಬಿದ್ದಿದ್ದಾರೆ. ಅಲ್ಲಿಂದ ಮೇಲೆ ಬರಲಾಗದೇ ಕೊನೆಯುಸಿರೆಳೆದಿದ್ದಾರೆ. ಜನವರಿ 3ರಂದು ಈ ಅವಘಡ ನಡೆದಿದೆ. ಇನ್ನಿತರ ಕೆಲಸಗಾರರ ಸಮ್ಮುಖದಲ್ಲಿಯೇ ದುರಂತ ನಡೆದರೂ ರಾಜೀವ ಅವರನ್ನು ಬದುಕಿಸಲು ಸಾಧ್ಯವಾಗಲಿಲ್ಲ. ದುರಂತಕ್ಕೂ ಮುನ್ನ ರಾಜೀವ ರಾಜನ್ ಅವರು ಸಿಮೆಂಟ್ ರಿಂಗುಗಳಿಗೆ ಅಳವಡಿಸಿದ್ದ ಕಬ್ಬಿಣದ ಬಾಕ್ಸುಗಳನ್ನು ತೆಗೆಯುತ್ತಿದ್ದು, ಅವರು ಮುನ್ನಚ್ಚರಿಕೆವಹಿಸದಿರುವುದೇ ಸಾವಿಗೆ ಮುಖ್ಯ ಕಾರಣವಾಗಿದೆ. ಅವರ ಜೊತೆ ಕೆಲಸ ಮಾಡುತ್ತಿದ್ದ ಮನೋಜ ಮೋಹನನ್ ಈ ಬಗ್ಗೆ ಮಾಹಿತಿ ನೀಡಿದ್ದು, ಮಂಕಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. - [ನೇಣಿಗೆ ಶರಣಾದ ಭದ್ರತಾ ಸಿಬ್ಬಂದಿ](https://mobiletime.in/2026/02/security-guard-who-committed-suicide/): ಭಟ್ಕಳದಲ್ಲಿ ಭದ್ರತಾ ಸಿಬ್ಬಂದಿಯಾಗಿದ್ದ ಶಂಕರ್ ದೇವಾಡಿಗ ಅವರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಶಂಕರ್ ದೇವಾಡಿಗ ಅವರು ಖಾಸಗಿ ಬ್ಯಾಂಕ್‌ನಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿದ್ದರು. ಶಿರಾಲಿ ಚಿತ್ರಾಪುರದಲ್ಲಿರುವ ಖಾಸಗಿ ಬ್ಯಾಂಕ್‌ನ ಹಿಂಭಾಗದ ವಾಶ್‌ರೂಮ್ ಪಕ್ಕದ ಪಾಕಾಶಿಯಲ್ಲಿ ನೈಲಾನ್ ದಾರದಿಂದ ಉರುಳು ಹಾಕಿಕೊಂಡು ಅವರು ಸಾವನಪ್ಪಿದ್ದಾರೆ. ಬೆಳಗಿನ ಜಾವ ಬ್ಯಾಂಕ್ ಸಿಬ್ಬಂದಿ ಶವ ನೋಡಿ ಪೊಲೀಸರಿಗೆ ವಿಷಯ ಮುಟ್ಟಿಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಕಡಿಮೆ ವೇತನ, ನಿರಂತರ ಕರ್ತವ್ಯದ ಒತ್ತಡ ಹಾಗೂ ವೈಯಕ್ತಿಕ ಸಮಸ್ಯೆಗಳು ಆತ್ಮಹತ್ಯೆಗೆ ಕಾರಣವಾಗಿರಬಹುದೆಂದು ಶಂಕಿಸಲಾಗಿದೆ. - [ಕಾಸು ಕದ್ದ ಕರ್ಕಿಯ ಪೋಸ್ಟ್ ಮಾಸ್ಟರ್!](https://mobiletime.in/2026/02/karkis-postmaster-stole-money/): ಹೊನ್ನಾವರದ ಜಲವಳ್ಳಿ ಅಂಚೆ ಇಲಾಖೆಯಲ್ಲಿ ಅವ್ಯವಹಾರ ನಡೆದಿದೆ. ಅಂಚೆ ಅಧಿಕಾರಿಯಾಗಿದ್ದ ಮೋಹನ ಪೂಜಾರಿ ಅವರೇ ಅಲ್ಲಿ ಅಪರಾತಪರ ಮಾಡಿದ್ದಾರೆ. ಹೊನ್ನಾವರ ಜಲವಳ್ಳಿ ಕರ್ಕಿಯಲ್ಲಿ ಮೋಹನ ಹನುಮಂತ ಪೂಜಾರಿ ಅವರು ವಾಸವಾಗಿದ್ದಾರೆ. ಜಲವಳ್ಳಿಯ ಅಂಚೆ ಕಚೇರಿಯಲ್ಲಿ ಅವರು ಪೋಸ್ಟ್ ಮಾಸ್ಟರ್ ಆಗಿ ಕೆಲಸ ಮಾಡಿಕೊಂಡಿದ್ದಾರೆ. ತಾವು ಕೆಲಸ ಮಾಡುವ ಜಲವಳ್ಳಿ ಅಂಚೆ ಕಚೇರಿಯ ಗ್ರಾಹಕರಿಗೆ ಅವರು ಅನ್ಯಾಯ ಮಾಡಿದ್ದಾರೆ. ಆ ಭಾಗದ ಜನ ಅಂಚೆ ಇಲಾಖೆಗೆ ಜಮಾ ಮಾಡಿದ್ದ ಹಣವನ್ನು ಮೋಹನ ಪೂಜಾರಿ ಅವರು ದುರುಪಯೋಗಪಡಿಸಿಕೊಂಡಿದ್ದಾರೆ. ಅಂಚೆ ಇಲಾಖೆಗೆ ಜನ ಹಣ ಜಮಾ ಮಾಡಲು ಬಂದಾಗ ಅವರ ಪಾಸ್‌ಬುಕ್’ನಲ್ಲಿ ಹಣ ಜಮಾ ಮಾಡಿದ ಹಾಗೇ ತೋರಿಸಿದ ಹನುಮಂತ ಪೂಜಾರಿ ಅವರು ಆ ಹಣವನ್ನು ಅಂಚೆ ಇಲಾಖೆಗೆ ಜಮಾ ಮಾಡಿಲ್ಲ. ಹೀಗಾಗಿ ಪಾಸ್ ಬುಕ್’ನಲ್ಲಿ ಹಣ ಕಾಣಿಸಿದರೂ ಗ್ರಾಹಕರ ಖಾತೆಯಲ್ಲಿ ಹಣ ಇರಲಿಲ್ಲ. ಈ ವಿಷಯ ಊರಿನಲ್ಲಿ ದೊಡ್ಡ ಗೌಜಿ ಆಗದಿದ್ದರೂ ಅಂಚೆ ಇಲಾಖೆಯ ಗಮನಕ್ಕೆ ಬಂದಿತ್ತು. ಹೀಗಾಗಿ ಅಂಚೆ ಇಲಾಖೆಯವರು ಆಂತರಿಕ ತನಿಖೆ ನಡೆಸಿದಾಗ ಸರ್ಕಾರಿ ಹಣ ದುರುಪಯೋಗ ನಡೆದಿರುವುದು ಗೊತ್ತಾಯಿತು. ಖಾತೆದಾರರಿಂದ ಹಣಪಡೆದು ಅದನ್ನು ಸ್ವಂತ ಉಪಯೋಗಕ್ಕೆ ಬಳಸಿರುವುದು ಸಾಭೀತಾಯಿತು. ಈ ಎಲ್ಲಾ ಹಿನ್ನಲೆ ಅಂಚೆ ಅಧೀಕ್ಷಕ ಕೃಷ್ಣಪ್ಪ ಸಂಕ್ರಟ್ಟಿ ಅವರು ಕಾನೂನು ಕ್ರಮಕ್ಕೆ ಮುಂದಾದರು. ಹೊನ್ನಾವರ ಪೊಲೀಸ್ ಠಾಣೆಗೆ ಹೋದ ಅವರು ಮೋಹನ ಪೂಜಾರಿ ವಿರುದ್ಧ ದೂರು ನೀಡಿದರು. ಸದ್ಯದ ಮಾಹಿತಿ ಪ್ರಕಾರ 1.83 ಲಕ್ಷ ರೂ ವಂಚನೆ ನಡೆದಿದೆ. ಆ ಹಣ ದುರುಪಯೋಗಪಡಿಸಿಕೊಂಡ ಅಂಚೆ ಸಿಬ್ಬಂದಿ ಮೋಹನ ಪೂಜಾರಿ ವಿರುದ್ಧ ಪೊಲೀಸರು ಕಾನೂನು ಕ್ರಮ ಜರುಗಿಸಿದ್ದಾರೆ. - [ಸರ್ಕಾರಿ ಬಸ್ಸಿಗೆ ಗುದ್ದಿದ ಸೈನಿಕನ ಕಾರು!](https://mobiletime.in/2026/02/a-soldiers-car-hit-a-government-bus/): ಕಾರವಾರ ನಗರದ ಬಿಲ್ಡ್ ಸರ್ಕಲ್ ಬಳಿ ಗುರುವಾರ ಮಧ್ಯಾಹ್ನ ಕಾರು- ಬಸ್ಸಿನ ನಡುವೆ ಅಪಘಾತ ನಡೆದಿದೆ. ಈ ಅಪಘಾತದಲ್ಲಿ ಕಾರು ಜಖಂ ಆಗಿದೆ. ಸರ್ಕಾರಿ ಬಸ್ಸಿಗೂ ಅಲ್ಲಲ್ಲಿ ಹಾನಿ ಆಗಿದೆ. ನೌಕಾನೆಲೆಯ ಸಿಬ್ಬಂದಿ ಗುನಾಜಿತ್ ಅವರು ತಮ್ಮ ಪುತ್ರನ ಜೊತೆ ಕಾರವಾರದಿಂದ ಬಿಣಗಾ ಕಡೆ ಹೊರಟಾಗ ಈ ಅಪಘಾತ ನಡೆದಿದೆ. ವೃತ್ತದ ತಿರುವಿನಲ್ಲಿ ಬಸ್ ಬಂದಾಗ ಕಾರು ಬಸ್‌ನ ಮುಂಭಾಗಕ್ಕೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಕಾರಿನ ಏರ್ ಬ್ಯಾಗ್ ತೆರೆದಿದ್ದು ಪ್ರಯಾಣಿಕರು ಜೀವಾಪಾಯದಿಂದ ಪಾರಾಗಿದ್ದಾರೆ. ಕಾರಿನ ಮುಂಭಾಗ ಸಂಪೂರ್ಣ ಜಖಂಗೊAಡಿದೆ. ಕಾರಿನಿಂದ ಆಯಲ್ ಕೂಡ ಸೋರುತ್ತಿದ್ದು ಅದನ್ನು ನೋಡಿ ಜನ ಹೌಹಾರಿದ್ದಾರೆ. ನಂತರ ಕಾರಿನ ಒಳಗೆ ಸಿಲುಕಿದ್ದವರನ್ನು ಹೊರಗೆ ಎಳೆದಿದ್ದಾರೆ. ಅಪಘಾತದಲ್ಲಿ ಕಾರಿನಲ್ಲಿದ್ದವರಿಗೆ ಸಣ್ಣ ಗಾಯಗಳಾಗಿವೆ. ಕಾರವಾರ ಸಂಚಾರ ಠಾಣೆಯ ಪೊಲಿಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. - [ರೈಲಿನ ಅಡಿ ಬಿದ್ದ ಯುವಕ: ಸಾವು](https://mobiletime.in/2026/02/youth-falls-under-train-dies/): ಭಟ್ಕಳ ತಾಲೂಕಿನ ಗುಲ್ಮಿ ಸೇತುವೆ ಸಮೀಪದ ರೈಲ್ವೆ ಮಾರ್ಗದಲ್ಲಿ ಯುವಕನೊಬ್ಬನ ಶವ ಸಿಕ್ಕಿದೆ. ಗುಲ್ಮಿಯ ನಿವಾಸಿ ಮುಹಮ್ಮದ್ ನಾಸಿರ್ ಶೇಖ್ ಹುಸೇನ್ (33) ರೈಲಿನ ಅಡಿ ಬಿದ್ದು ಸಾವನಪ್ಪಿದ್ದಾರೆ. ರೈಲ್ವೆ ಹಳಿಗಳ ಮೇಲೆ ಮೃತದೇಹ ಬಿದ್ದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ದೇಹದ ಮೇಲೆ ಗಂಭೀರ ಗಾಯಗಳು ಹಾಗೂ ಹರಿದ ಬಟ್ಟೆಗಳು ಕಂಡುಬoದಿವೆ. ಈ ಹಿನ್ನೆಲೆ ರೈಲು ಅಪಘಾತವೇ ಸಾವಿಗೆ ಕಾರಣ ಎಂದು ಗೊತ್ತಾಗಿದೆ. ಘಟನೆಯ ಮಾಹಿತಿ ದೊರಕುತ್ತಿದ್ದಂತೆ ರೈಲ್ವೆ ಪೊಲೀಸ್ ಸಿಬ್ಬಂದಿ ಹಾಗೂ ಸಂಬAಧಿತ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಪೊಲೀಸ್ ತನಿಖೆ ಮುಂದುವರೆದಿದೆ.   - [ಕಳ್ಳ ಕಮಲಾಕರ ಗುರೂಜಿ ಆಗಿದ್ದೇ ರೋಚಕ!](https://mobiletime.in/2026/02/its-exciting-to-become-the-guruji-of-the-thief-kamalakara/): ಅಕ್ರಮ ಸಂಬoಧ ಉಳಿಸಿಕೊಳ್ಳುವುದಕ್ಕಾಗಿ ಕೊಲೆ ಮಾಡುವುದರ ಮಟ್ಟಕ್ಕೆ ಇಳಿದಿದ್ದ ಸಿದ್ದಾಪುರ ಕಮಲಾಕರ ಹೆಗಡೆ ಹೆಚ್ಚಿಗೆ ಓದಿದವರಲ್ಲ. ಅವರಿವರ ಕಾಲು ಹಿಡಿದು ಟಿವಿ ವೇದಿಕೆಗಳಲ್ಲಿ ಅವಕಾಶಪಡೆದಿದ್ದ ಕಮಲಾಕರ ಹೆಗಡೆ ಭಕ್ತರನ್ನು ಯಾಮಾರಿಸಿಯೇ ದುಡ್ಡು ಮಾಡಿಕೊಂಡಿದ್ದು, ನಂತರ ದಾನ-ಧರ್ಮದ ಹೆಸರಿನಲ್ಲಿ ಹಾಳಾದ ಹೆಸರು ಸರಿ ಮಾಡಿಕೊಳ್ಳಲು ಪ್ರಯತ್ನಿಸಿದ ವಿಷಯ ಗುಟ್ಟಾಗಿ ಉಳಿದಿಲ್ಲ. ಅಲ್ಲಿ-ಇಲ್ಲಿ ಅಲೆದಾಡುಕೊಂಡಿದ್ದ ಕಮಲಾಕರ ಹೆಗಡೆ ಊರು ಬಿಟ್ಟು ನಂತರ ಟಿವಿಯಲ್ಲಿ ಕುಳಿತು ಜ್ಯೋತಿಷ್ಯ ಹೇಳಲು ಶುರು ಮಾಡಿದ್ದು, `ಹೆಗಡೆ’ ಎಂಬ ಹೆಸರು ತೆಗೆದು `ಗುರೂಜಿ’ಯಾಗಿಸಿಕೊಂಡಿದ್ದರು. ಗುರೂಜಿ ಎಂಬ ಪದವೇ ಅವರ ವ್ಯವಹಾರದ ಗುಟ್ಟಾಗಿದ್ದು, ಅನೇಕರು ಕಾಲಿಗೆ ಬಿದ್ದು ನಮಸ್ಕಾರ ಮಾಡುತ್ತಿದ್ದರು. ಕಾಲಿಗೆ ಬಿದ್ದ ದೊಡ್ಡ ದೊಡ್ಡ ವ್ಯಕ್ತಿಗಳ ಜೊತೆ ಫೋಟೋ ತೆಗೆಸಿಕೊಳ್ಳುವ ಕಮಲಾಕರ ಗುರೂಜಿ ಅದನ್ನು ವಿವಿಧ ಕಡೆ ಹಂಚಿಕೊoಡು ತಮ್ಮ ವ್ಯವಹಾರ ವಿಸ್ತರಿಸಿದ್ದರು. ಸದ್ಯ ಕಚೇರಿ ಕೆಲಸದಾಕೆಯ ಮೋಹಕ್ಕೆ ಒಳಗಾಗಿದ್ದ ಕಮಲಾಕರ ಹೆಗಡೆ ಆಕೆಯ ಮೇಲಿನ ಪ್ರೀತಿ ಸಾಭೀತುಪಡಿಸಿಕೊಳ್ಳುವುದಕ್ಕಾಗಿ ತೆರಳಿ ಜೈಲು ಸೇರಿದ್ದಾರೆ. ರಾಜಕೀಯ ವ್ಯಕ್ತಿಗಳ ಜೊತೆ ಕಮಲಾಕರ ಹೆಗಡೆ ಅವರ ಒಡನಾಟದ ಫೋಟೋಗಳು ವೈರಲ್ ಆಗಿದ್ದು, ರಾಜಕಾರಣಿಗಳಿಗೆ ಸಹ ಈ ಚಿತ್ರಗಳು ಮುಜುಗರ ತರುಸಿದೆ. 15 ವರ್ಷಗಳ ಹಿಂದೆ ಕಮಲಾಕರ ಹೆಗಡೆ ಬಳಿ ಏನೂ ಇರಲಿಲ್ಲ. ಗುರುಜಿ ಆಗಿ ಬದಲಾದ ನಂತರ ಕಾರು, ಬಂಗಲೆ, ಕಚೇರಿ ಜೊತೆ ಕೆಲಸದಾಕೆಯೂ ಒಲಿದಿದ್ದಳು. ಸಿದ್ದಾಪುರ ತಾಲೂಕಿನ ಸೋವಿನಕೊಪ್ಪ ಬಡ ಕುಟುಂಬದಲ್ಲಿ ಹುಟ್ಟಿದ್ದ ಕಮಲಾಕರ ಹೆಗಡೆ ಪ್ರಾಥಮಿಕ, ಪ್ರೌಢ ಶಿಕ್ಷಣ ಕಲಿತ ನಂತರ ಕೆಲಕಾಲ ಸಿದ್ದಾಪುರದಲ್ಲೇ ಓಡಾಡಿಕೊಂಡಿದ್ದರು. ನಂತರ ಕೇರಳಕ್ಕೆ ತೆರಳಿ ಜ್ಯೋತಿಷ ಕಲಿತಿದ್ದರು, 2010ರಲ್ಲಿ ಬೆಂಗಳೂರಿಗೆ ತೆರಳಿ ಕಚೇರಿ ತೆರೆದ ಅವರು ವಿವಿಧ ವಾಹಿನಿಗಳಲ್ಲಿ ಜ್ಯೋತಿಷ ಕಾರ್ಯಕ್ರಮ ನೀಡಲು ಶುರು ಮಾಡಿದರು. ಜೊತೆಗೆ ಬೆಂಗಳೂರಿನ ಇನ್ನಿತರ ಕಡೆ ಕಚೇರಿ ಶುರು ಮಾಡಿದ್ದರು. ಶಿವಮೊಗ್ಗದಲ್ಲಿಯೂ ಕಚೇರಿ ತೆರೆದು ಕೆಲಸಗಾರರನ್ನು ನೇಮಿಸಿದ್ದರು. ಕಮಲಾಕರ ಹೆಗಡೆ ಅವರು ಕಮಲಾಕರ ಗುರೂಜಿ ಆಗಿ ಬದಲಾದ ನಂತರ ಕಾನ್ಸರ್ ಪೀಡಿತರಿಗೆ ಹಾಗೂ ಅನಾಥರಿಗೆ ಸಹಾಯ ಮಾಡುವ ಮುಖವಾಡಹೊಂದಿದ್ದರು. ದೊಡ್ಡ ದೊಡ್ಡ ಮಾಧ್ಯಮಗಳಿಗೆ ದುಡ್ಡು ಕೊಟ್ಟು ಆ ಬಗ್ಗೆ ಲೇಖನ ಪ್ರಕಟಿಸಿಕೊಂಡಿದ್ದರು. ರಾಜಕೀಯ ವ್ಯಕ್ತಿಗಳ ಜೊತೆಯಿದ್ದ ಫೋಟೋವನ್ನು ಅವರು ದುರುಪಯೋಗಪಡಿಸಿಕೊಂಡು ತಮ್ಮ ಪ್ರಭಾವ ಹೆಚ್ಚಿಸಿಕೊಂಡಿದ್ದರು. ಈ ಎಲ್ಲದರ ನಡುವೆ ಕಮಲಾಕರ ಗುರೂಜಿ ಅವರ ಪತ್ನಿ ಸಾವನಪ್ಪಿದ್ದು, ಒಂಟಿತನ ಸಹಿಸಲಾಗದ ಗುರೂಜಿ ಕಚೇರಿ ಕೆಲಸದಾಕೆಯ ಜೊತೆ ಸಂಬAಧ ಹೊಂದಿದ್ದರು. ಆ ಕೆಲಸದಾಕೆಯ ಮಗಳ ವಿಷಯವಾಗಿ ಮೂಗು ತೂರಿಸಲು ಹೋದಾಗ ಸಿದ್ದಾಪುರದ ಅವರೆಕೊಪ್ಪದಲ್ಲಿ ಕೊಲೆ ನಡೆದಿದ್ದು, ಆ ಕೊಲೆ ಪ್ರಕರಣದಲ್ಲಿ ಈ ಗುರೂಜಿ ಜೈಲು ಸೇರಿದರು.   - [ಫೋನ್ ಪೇ: ಆತನ ಬದಲು ಈತನ ಖಾತೆ ಸೇರಿದ ಕಾಸು!](https://mobiletime.in/2026/02/phonepe-money-credited-to-his-account-instead-of-his/): ಹೊನ್ನಾವರದ ಗಣಪತಿ ನಾಯ್ಕ ಅವರು ತಮ್ಮ ಕಣ್ತಪ್ಪಿನಿಂದ ಸಂತೋಷಕುಮಾರ ಆಚಾರಿ ಅವರಿಗೆ 5 ಸಾವಿರ ರೂ ಪೋನ್ ಪೇ ಮಾಡಿದ್ದಾರೆ. ಆ ಹಣ ಮರಳಿ ಕೇಳಿದ ಕಾರಣ ಗಣಪತಿ ನಾಯ್ಕ ಅವರು ಪೆಟ್ಟು ತಿಂದು ಆಸ್ಪತ್ರೆ ಸೇರಿದ್ದಾರೆ. ಹೊನ್ನಾವರದ ಗೇರುಸೊಪ್ಪ ಬಳಿಯ ವರ್ನಕೋಡದ ಗಣಪತಿ ನಾರಾಯಣ ನಾಯ್ಕ ಅವರು ವಿದ್ಯುತ್ ನಿಗಮದಲ್ಲಿ ಚಾಲಕರಾಗಿದ್ದಾರೆ. ಕಳೆದ ಎಂಟು ವರ್ಷಗಳಿಂದ ಅವರು ಅಲ್ಲಿ ಹೊರಗುತ್ತಿಗೆ ಆಧಾರದಲ್ಲಿ ದುಡಿಯುತ್ತಿದ್ದಾರೆ. ಜನವರಿ 7ರಂದು ಅವರು ಗೇರುಸೊಪ್ಪದಲ್ಲಿ ಅಂಗಡಿಹೊಂದಿದ ಸಂತೋಷ ಅವರ ಖಾತೆಗೆ 5 ಸಾವಿರ ರೂ ಹಾಕಬೇಕಿದ್ದು, ಅಲ್ಲಿ ಹಣ ಹಾಕುವ ಬದಲು ಕೆಪಿಸಿ ಕಾಲೋನಿಯ ಸಂತೋಷಕುಮಾರ ರಾಮಚಂದ್ರ ಆಚಾರಿ ಅವರ ಖಾತೆಗೆ ಪೋನ್‌ ಪೇ ಮಾಡಿದ್ದಾರೆ. ನಂತರ ಮತ್ತೆ 3030ರೂ ಹಣ ಕಳುಹಿಸಿದ್ದಾರೆ. ಅದಾದ ನಂತರ ಅಂಗಡಿ ಸಂತೋಷ ಅವರಿಗೆ ಹಾಕಬೇಕಾದ ಹಣ ಕೆಪಿಸಿಯಲ್ಲಿ ಕೆಲಸ ಮಾಡುವ ಸಂತೋಷ ಆಚಾರಿ ಅವರಿಗೆ ಪಾವತಿ ಆಗಿರುವುದು ಗಣಪತಿ ನಾಯ್ಕ ಅವರಿಗೆ ಗೊತ್ತಾಗಿದೆ. ಈ ಬಗ್ಗೆ ಗಣಪತಿ ನಾಯ್ಕ ಅವರು ಸಂತೋಷ ಆಚಾರಿ ಅವರಲ್ಲಿ ವಿಚಾರಿಸಿದ್ದಾರೆ. ಮೊದಲು ‘ಹಣ ಬಂದೇ ಇಲ್ಲ’ ಎಂದಿದ್ದ ಸಂತೋಷ ಆಚಾರಿ, ಸ್ಕ್ರೀನ್ ಶಾಟ್ ಕಾಣಿಸಿದ ನಂತರ ಹಣ ಬಂದಿರುವುದನ್ನು ಒಪ್ಪಿಕೊಂಡಿದ್ದಾರೆ. ‘ಕಣ್ತಪ್ಪಿನಿಂದ ಹಣ ಕಳುಹಿಸಿದ್ದೇನೆ. ಅದನ್ನು ಮರಳಿಸು’ ಎಂದು ಗಣಪತಿ ನಾಯ್ಕ ಅವರು ಮನವಿ ಮಾಡಿದ್ದಾರೆ. ‘ನಾಳೆ ಕೊಡುವೆ’ ಎನ್ನುತ್ತಲೇ ಸಂತೋಷ ಆಚಾರಿ ಅವರು ತಿಂಗಳು ಕಳೆದಿದ್ದಾರೆ. ‘ಆ ಸಂತೋಷ ಹಣ ಕೊಡುತ್ತಿಲ್ಲ’ ಎಂದು ಗಣಪತಿ‌ ನಾಯ್ಕ ಅವರು ಎಲ್ಲಾ ಕಡೆ ಹೇಳಿದ್ದು ಸಂತೋಷ ಆಚಾರಿ ಅವರ ಸಿಟ್ಟಿಗೆ ಕಾರಣವಾಗಿದೆ. ಹೀಗಿರುವಾಗ ಫೆಬ್ರವರಿ 4ರಂದು ಗೇರುಸೊಪ್ಪದ ಕನ್ನಿಕಾ ಹೊಟೇಲ್ ಎದುರು ಗಣಪತಿ‌ ನಾಯ್ಕ ಅವರು ನಿಂತಿದ್ದಾಗ ಅಲ್ಲಿಗೆ ಬಂದ ಸಂತೋಷ ಆಚಾರಿ ಅವರು ‘ಹಣ ಕೊಡುವುದಿಲ್ಲ’ ಎಂದು ಕೂಗಾಡಿದ್ದಾರೆ. ಜೊತೆಗೆ ಗಣಪತಿ ನಾಯ್ಕ ಅವರ ಮೇಲೆ‌ ಕೈ ಮಾಡಿದ್ದಾರೆ. ಈ ವೇಳೆ ಹೊಟೇಲಿನಲ್ಲಿದ್ದ ಯೋಗೇಶ‌ ನಾಯ್ಕ, ರಾಮಾ ನಾಯ್ಕ ಹಾಗೂ ಇನ್ನಿತರ ಜನ ಸೇರಿ ಆ ಹೊಡೆದಾಟ ತಪ್ಪಿಸಿದ್ದಾರೆ. ಅದಾಗಿಯೂ, ಸಂತೋಷ ಆಚಾರಿ ಅವರು ಗಣಪತಿ ನಾಯ್ಕ ಅವರ ಕಡೆ ಕಲ್ಲು ಬೀಸಿದ್ದಾರೆ. ಕಲ್ಲು ತಾಗಿದ್ದರಿಂದ ಗಣಪತಿ ನಾಯ್ಕ ಅವರು ಗಾಯಗೊಂಡಿದ್ದು, ಅವರನ್ನು ಕೆಪಿಸಿ ಆಂಬುಲೆನ್ಸಿನ ಮೂಲಕ ಹೊನ್ನಾವರದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದರು. ಅದಾದ ನಂತರ ಸೆಂಟ್ ಇಗ್ನೇಷಿಯಸ್ ಆಸ್ಪತ್ರೆಯಲ್ಲಿ ಗಣಪತಿ ನಾಯ್ಕ ಅವರು ಚಿಕಿತ್ಸೆಪಡೆದರು. ಹೊನ್ನಾವರ ಎಸೈ ಗಿರೀಶ ಶೆಟ್ಟಿ ಆಸ್ಪತ್ರೆಗೆ ಭೇಟಿ ನೀಡಿ ಗಣಪತಿ ನಾಯ್ಕ ಅವರ ಆರೋಗ್ಯ‌ ವಿಚಾರಿಸಿದರು. ಗಣಪತಿ ನಾಯ್ಕ ಅವರ ಹೇಳಿಕೆ ಆಧರಿಸಿ ಪೊಲೀಸರು ಪ್ರಕರಣ ದಾಖಲಿಸಿದರು. - [ಕೊಲೆ ಆರೋಪಿಗೆ ಶಿಕ್ಷೆ ಪ್ರಕಟ](https://mobiletime.in/2026/02/murder-accused-sentenced/): ಕೊಲೆ ಯತ್ನಕ್ಕೆ ಸಂಬಂಧಿಸಿದ ಆರೋಪಿಗೆ ಚಾಕು ತಾಗಿ ಆತ ಮೃತಪಡಲು ಕಾರಣನಾದ ಮಹಮ್ಮದ ಫಾರೂಕ್ ಮಹಮ್ಮದ ಷಫೀವುಲಾ ಪಟೇಲ್ ಅವರ ಮೇಲಿನ ಆಪಾದನೆಯು ರುಜುವಾತಾಗಿದ್ದು, ಆರೋಪಿಗೆ 10 ವರ್ಷ ಸಾದಾ ಕಾರಾಗೃಹ ಶಿಕ್ಷೆ ಹಾಗೂ ರೂ10000 ದಂಡ ಹಾಗೂ ಮೃತನ ಅವಲಂಬಿತ ತಾಯಿಗೆ 50,000ರೂ ಪರಿಹಾರ ನೀಡುವಂತೆ ನ್ಯಾಯಾಲಯ ಆದೇಶಿಸಿದೆ. ಶಿರಸಿಯ 1ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ನ್ಯಾಯಾಧೀಶರಾದ ಕಿರಣ ಕಿಣಿ ತೀರ್ಪು ನೀಡಿದ್ದಾರೆ. ಆರೋಪಿತನು ಸಿರ್ಸಿ ನಗರದ ಸಿರ್ಸಿ-ಕರಿಗುಂಡಿ ರಸ್ತೆಯಲ್ಲಿ ಕಸ್ತೂರಬಾನಗರ ಕ್ರಾಸ್ ಹತ್ತಿರ ರಸ್ತೆ ಬಳಿ 2019ರಲ್ಲಿ ಮಹಮ್ಮದ ಅನೀಸ್ ತಹಶೀಲ್ದಾರ ಇತನು ತನ್ನ ಮೋಟಾರ್ ಸೈಕಲ್ ಮೇಲೆ ಕುಳಿತ್ತಿದ್ದಾಗ ಆತನನ್ನು ಕೊಲೆ ಮಾಡುವ ಉದ್ದೇಶದಿಂದ ಇತರೆ ಆರೋಪಿತರು ಸೇರಿಕೊಂಡು ಮಾರುತಿ ಕಾರ್ ನಲ್ಲಿ ಹೋಗಿ, ಮೋಟಾ‌ರ್ ಸೈಕಲಿಗೆ ಡಿಕ್ಕಿ ಹೊಡೆದಿದ್ದರು ‌ನಂತರ ಕಾರಿನಲ್ಲಿದ್ದ ಕಬ್ಬಿಣದ ಪೈಪ್, ಬಡಿಗೆ ರಾಡನಿಂದ ಹೊಡೆದು ಚಾಕುವಿನಿಂದ ಹೊಟ್ಟೆ, ಎದೆಗೆ, ಕೈ ಕಾಲುಗಳಿಗೆ ಚುಚ್ಚುವಾಗ ಸಾಕ್ಷಿದಾರ ಮಹಮ್ಮದ ಅನೀಸ್ ತಹಶೀಲ್ದಾರ ಇತನು ಜೋರಾಗಿ ಕೂಗಿ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದರು. ಆ ವೇಳೆ ಆರೋಪಿತರು ಮಹಮ್ಮದ ಅನೀಸ್ ತಹಶೀಲ್ದಾರ ಇತನಿಗೆ ಹೊಡೆಯುವಾಗ ತಮ್ಮ ಕೈಯಲ್ಲಿದ್ದ ಚಾಕುವಿನಿಂದ ಇರಿದರೆ ಆತನು ಸಾಯುತ್ತಾನೆ ಅಂತಾ ಗೊತ್ತಿದ್ದೂ ತನ್ನ ಬಳಿಯಿದ್ದ ಚಾಕುವಿನಿಂದ ಮೃತ ಅಸ್ಲಂ ಸೈಯ್ಯದ ಇತನಿಗೆ ಹಿಂದಿನಿದ ಇರಿದು ಕೊಲೆ ಮಾಡಿದ್ದಲ್ಲದೇ, ಇತರೆ ಆರೋಪಿತರು ಸಾಕ್ಷ್ಯ ನಾಶಪಡಿಸುವ ಉದ್ದೇಶದಿಂದ ತಾವು ಕೃತ್ಯದ ವೇಳೆ ಧರಿಸಿದ ರಕ್ತ ತಾಗಿದ ಬಟ್ಟೆಗಳನ್ನು ಕುಮಟಾದ ಸಂತೆಗುಳಿಯಲ್ಲಿ ಮತ್ತು ಇನ್ನೊಬ್ಬ ಆರೋಪಿಯ ಮನೆಯ ಅಡಿಗೆ ಕೋಣೆಯಲ್ಲಿರುವ ಒಲೆಯಲ್ಲಿ ಹಾಕಿ ಸಾಕ್ಷ್ಯ, ನಾಶ ಪಡಿಸಿದಲ್ಲದೇ, ಇತರೇ ಆರೋಪಿತರಿಗೆ ತನ್ನ ಮನೆಯಲ್ಲಿ ಆಶ್ರಯ ನೀಡಿ ತಲೆಮರೆಸಿಕೊಳ್ಳಲು ಸಹಕರಿಸಿದಲ್ಲದೇ, ತನ್ನ ಕಾರನಲ್ಲಿ ಆರೋಪಿತನ ಮನೆಗೆ ಕರೆದುಕೊಂಡು ಹೋಗಿ ಆಶ್ರಯ ನೀಡಿದಲ್ಲದೇ, ಆರೋಪಿತರು ಆರೋಪಿತರು ಪರಾರಿಯಾಗಿ ತಲೆಮರೆಸಿಕೊಳ್ಳಲು ಸಹಕರಿಸುವ ಉದ್ದೇಶದಿಂದ ಮತ್ತು ಆರೋಪಿತರು ಕುಮಟಾದ ಮಿರ್ಜಾನ್ ನಲ್ಲಿ ಹಾಗೂ ಕುಮಟಾದ ಸಂತೆಗುಳಿಯಲ್ಲಿ ಉಳಿಯಲು ಆಶ್ರಯ, ಊಟ, ವಾಹನದ ವ್ಯವಸ್ಥೆ ಮಾಡಿದ ಅಪರಾಧ ಬಗ್ಗೆ, ಆರೋಪಿತರ ವಿರುದ್ಧ ದೋಷಾರೋಪಣೆ ಪತ್ರ ನ್ಯಾಯಾಲಯಕ್ಕೆ ಸಲ್ಲಿಕೆಯಾಗಿ ವಿಚಾರಣೆ ನಡೆಸಲಾಗಿತ್ತು. ಶಿರಸಿ ಹೊಸ ಮಾರುಕಟ್ಟೆ ಪೊಲೀಸ್ ಠಾಣೆಯ ಅಂದಿನ ತನಿಖಾಧಿಕಾರಿಯಾದ ಪೊಲೀಸ್ ಉಪ ನಿರೀಕ್ಷಕ ಶಶಿಕುಮಾರ ಸಿ.ಆ‌ರ್ ತನಿಖೆ ಕೈಗೊಂಡು ನ್ಯಾಯಾಲಯಕ್ಕೆ ದೋಷಾರೋಪಣೆ ಪತ್ರ ಸಲ್ಲಿಸಿದ್ದರು ಹಾಗೂ ಪೊಲೀಸ್ ಹೆಡ್ ಕಾನ್ಸಟೆಬಲ್ ರಾದ ಬಿ.ಆರ್. ಹನುಮಂತ ಹಾಗೂ ರಮೇಶ ಮುಚ್ಚಿಂಡಿ ಇವರು ಸಾಕ್ಷಿ ವಿಚಾರಣೆಯ ಕಾಲಕ್ಕೆ ಸಾಕ್ಷಿದಾರರನ್ನು ಸಮಯೋಜಿತ ಪ್ರಕರಣದಲ್ಲಿ ಹಾಜರು ಪಡಿಸಿ ಆರೋಪಿತರನ್ನು ಶಿಕ್ಷೆಗೆ ಗುರಿಪಡಿಸುವಲ್ಲಿ ಸಹಕರಿಸಿದ್ದರು. ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕ ರಾಜೇಶ್ ಎಂ. ಮಳಗಿಕರ್ ಪ್ರಕರಣದ ವಿದ್ಯಮಾನಗಳನ್ನು ಮತ್ತು ಸಾಕ್ಷಿದಾರರ ಸಾಕ್ಷಕಿವನ್ನು ಗಂಭೀರವಾಗಿ ತೆಗೆದುಕೊಂಡು ಆರೋಪಿತನಿಗೆ ಶಿಕ್ಷೆ ವಿಧಿಸಬೇಕೆಂದು ಸುದೀರ್ಘ ವಾದ ಮಂಡಿಸಿದ್ದರು. - [ಅನುಮಾನ ಮೂಡಿಸಿದ ಅಂಕಿ-ಸoಖ್ಯೆಗಳು!](https://mobiletime.in/2026/02/suspicious-figures/): ಸಿದ್ದಾಪುರದ ಕ್ಯಾದಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಲ್ಲಾಳ ಹಾಗೂ ನಾಯ್ಕಾರ್ ಗ್ರಾಮಗಳ ಅರಣ್ಯ ಪ್ರದೇಶದಲ್ಲಿ ಮರ, ರಸ್ತೆ ಮತ್ತು ವಿದ್ಯುತ್ ಕಂಬಗಳಿಗೆ ವಿವಿಧ ಸಂಖ್ಯೆ ಬರೆಯಲಾಗಿದೆ. ಯಾವ ಕಾರಣಕ್ಕಾಗಿ ಈ ಸಂಖ್ಯೆ ಬರೆಯಲಾಗಿದೆ? ಎಂಬುದು ಯಾರಿಗೂ ಗೊತ್ತಿಲ್ಲ. ಯಾವ ಸಮಯದಲ್ಲಿ, ಯಾರು ಬಂದು ಈ ಮಾರ್ಕಿಂಗ್ ಮಾಡಿದ್ದಾರೆ? ಎಂಬುದರ ಕುರಿತು ಸಾರ್ವಜನಿಕರಿಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಅಧಿಕಾರಿಗಳಿಗೂ ಈ ಬಗ್ಗೆ ಮಾಹಿತಿ ಇಲ್ಲ. ಗ್ರಾಮಸ್ಥರಿಗೆ ಮುನ್ನೆಚ್ಚರಿಕೆ ನೀಡದೆ ಈ ರೀತಿ ಗುರುತು ಹಾಕಿರುವುದು ಅನುಮಾನ ಮತ್ತು ಆತಂಕಕ್ಕೆ ಕಾರಣವಾಗಿದೆ. ಚರ್ಚೆಯಾಗುತ್ತಿರುವ ಅಘನಾಶಿನಿ ನದಿ ತಿರುವು ಯೋಜನೆಯ ಭಾಗವಾಗಿ, ಕಲ್ಲಾಳ ಗ್ರಾಮದ ಇಳಿಮನೆ ಹೊಳೆಗೆ ಚಿಕ್ಕ ಡ್ಯಾಮ್ ನಿರ್ಮಾಣ ಮಾಡುವ ಸಾಧ್ಯತೆ ಇದೆ ಎಂಬ ಸುದ್ದಿಯೂ ಹರಿದಾಡುತ್ತಿದ್ದು, ಈ ಹಿನ್ನೆಲೆಯಲ್ಲಿ ಮಾರ್ಕಿಂಗ್ ಮಾಡಿರುವುದೇ ಎಂಬ ಅನುಮಾನ ಜನರಲ್ಲಿ ಮೂಡಿದೆ. ಯೋಜನೆಯ ಬಗ್ಗೆ ಸರ್ಕಾರ ಅಥವಾ ಸಂಬAಧಪಟ್ಟ ಇಲಾಖೆಯಿಂದ ಅಧಿಕೃತ ಮಾಹಿತಿ ಇಲ್ಲದಿರುವುದರಿಂದ, ಅರಣ್ಯ ನಾಶ, ಜಮೀನು ಕಳೆದುಕೊಳ್ಳುವ ಭೀತಿಗೆ ಜನ ಒಳಗಾಗಿದ್ದಾರೆ. - [ಅಕ್ರಮ ರೆಸಾರ್ಟ ಮಾಲಕರಿಗೆ ನಡುಕ!](https://mobiletime.in/2026/02/fear-for-illegal-resort-owners/): ಗೋಕರ್ಣ ಬಳಿಯ ನಾಡುಮಾಸ್ಕೇರಿ ಸುತ್ತಲಿನ ಅಕ್ರಮ ರೆಸಾರ್ಟ ಹಾಗೂ ಹೊಟೇಲ್ ಮಾಲಕರಿಗೆ ನಡುಕ ಶುರುವಾಗಿದೆ. ಆ ಭಾಗದ ಹೊಟೇಲ್ ಹಾಗೂ ರೆಸಾರ್ಟಗಳ ಸರ್ವೇ ಕಾರ್ಯ ಶುರುವಾಗಿದೆ. ಇಲ್ಲಿನ ಕಡಲತೀರ ವ್ಯಾಪ್ತಿಯಲ್ಲಿ ಸಾಕಷ್ಟು ಹೊಟೇಲುಗಳಿವೆ. ಅದೇ ಪ್ರಮಾಣದಲ್ಲಿ ಅಕ್ರಮ ರೆಸಾರ್ಟುಗಳಿವೆ. ಭಾವಿಕೊಡ್ಲ ಗ್ರಾಮದ ದುಬ್ಬನಸಶಿ, ಹಾರೂಮಾಸ್ಕೇರಿ ಗ್ರಾಮ, ನಾಡುಮಾಸ್ಕೇರಿ ಗ್ರಾಮದ ಗಂಗೆಕೊಳ್ಳ ಭಾಗದ 57 ಕಟ್ಟಡಗಳ ಜಾಗದ ಸರ್ವೆಯನ್ನ ಭೂಮಾಪನಾ ಇಲಾಖೆಯ ಜೊತೆ ಕಂದಾಯ ಇಲಾಖೆ ಶುರು ಮಾಡಿದೆ. ಕಳೆದ ಹಲವು ತಿಂಗಳ ಹಿಂದೆ ಅಕ್ರಮ ಕಟ್ಟಡ ತೆರವಿನ ಕುರಿತು ಸಿ.ಆರ್.ಝಡ್ ಇಲಾಖೆ ನೀಡಿದ್ದ ನೋಟಿಸ್ ವಿರುದ್ದ ರೆಸಾರ್ಟನವರು ನ್ಯಾಯಾಲಯ ಮೊರೆ ಹೋಗಿದ್ದರು. ನಂತರ ಜಾಗದ ಅತಿಕ್ರಮಣವಾಗಿರುವ ಬಗ್ಗೆ ಪರಿಶೀಲಿಸಿ ಸರಿಯಾದ ರೀತಿಯಲ್ಲಿ ಕ್ರಮಕೈಗೊಳ್ಳುವಂತೆ ನ್ಯಾಯಾಲಯ ಸೂಚಿಸಿತ್ತು. ಅದರಂತೆ ಇದೀಗ ಸರ್ವೇ ಕಾರ್ಯ ನಡೆದಿದ್ದು, ಇದು ಪೂರ್ಣಗೊಂಡ ನಂತರ ಅಕ್ರಮ ಕಟ್ಟಡಗಳ ತೆರವು ನಡೆಯಲಿದೆ ಎನ್ನಲಾಗುತ್ತಿದೆ. ಸರ್ವೆ ಕಾರ್ಯದಲ್ಲಿ ಸ್ಥಳೀಯ ಕಂದಾಯ ಇಲಾಖೆ ಅಧಿಕಾರಿಗಳು, ಭೂಮಾಪನಾ ಇಲಾಖೆ ಸಿಬ್ಬಂದಿ, ಗ್ರಾಮ ಪಂಚಾಯತ ಅಧಿಕಾರಿಗಳು ಪಾಲ್ಗೊಂಡಿದ್ದಾರೆ. ಪಿಸೈ ಅನಿಲ ನೇತೃತ್ವದಲ್ಲಿ ಪೊಲೀಸ್ ಸಿಬ್ಬಂದಿ ಸ್ಥಳದಲ್ಲಿದ್ದು ಸೂಕ್ತ ಬಂದೂಬಸ್ತ ಕಲ್ಪಿಸಿದ್ದಾರೆ.   - [ಮ್ಯಾನೇಜರ್ ಮನೆಗೆ ಕನ್ನ!](https://mobiletime.in/2026/02/the-managers-house-is-a-mess/): ಬಜಾಜ್ ಪಿನ್ ಸರ್ವನಲ್ಲಿ ಮ್ಯಾನೇಜರ್ ಆಗಿದ್ದ ಕಾರವಾರದ ಮನೋಜ ಆಚಾರಿ ಅವರ ಮನೆಯಲ್ಲಿ ಕಳ್ಳತನ ನಡೆದಿದೆ. ಮನೆಯಲ್ಲಿದ್ದ ವಸ್ತುಗಳನೆಲ್ಲ ಚಲ್ಲಾಪಿಲ್ಲಿಯಾಗಿಸಿ ಕಳ್ಳರು ಪರಾರಿಯಾಗಿದ್ದಾರೆ. ಕಾರವಾರದ ಹಪಕರ್ಣಿಯ ಮನೋಜ ರಾಮದಾಸ ಆಚಾರಿ ಅವರು ಬಜಾಜ್ ಪಿನ್ ಸರ್ವನಲ್ಲಿ ಮ್ಯಾನೇಜರ್ ಆಗಿದ್ದರು. ಫೆಬ್ರವರಿ 2ರಂದು ಅವರು ಮನೆಯಲ್ಲಿರಲಿಲ್ಲ. ಆ ಅವಧಿಯಲ್ಲಿ ಅವರ ಮನೆಗೆ ಕಳ್ಳರು ನುಗ್ಗಿದ್ದು, ಮನೆಯಲ್ಲಿದ್ದ 25 ಸಾವಿರ ರೂ ಹಣವನ್ನು ಕದ್ದು ಪರಾರಿಯಾಗಿದ್ದಾರೆ. ಸಂಜೆ ಮನೆಗೆ ಮರಳಿದ ಮನೋಜ ಆಚಾರಿ ಅವರಿಗೆ ಮನೆಯ ಬೀಗ ತೆರೆದಿರುವುದು ಕಾಣಿಸಿದೆ. ಒಳಗೆ ಹೋಗಿ ನೋಡಿದಾಗ ಅಲ್ಲಿದ್ದ ಸಾಮಗ್ರಿಗಳೆಲ್ಲವೂ ಚಲ್ಲಾಪಿಲ್ಲಿಯಾಗಿರುವುದನ್ನು ಅವರು ನೋಡಿದ್ದಾರೆ. ನಂತರ ಬೆಡ್ ರೂಮಿನ ಕಪಾಟಿನಲ್ಲಿದ್ದ ಹಣ ಕಳ್ಳತನವಾಗಿರುವುದು ಗಮನಕ್ಕೆ ಬಂದಿದೆ. ಈ ಎಲ್ಲಾ ಹಿನ್ನಲೆ ಅವರು ಕದ್ರಾ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. - [ಜಿಲ್ಲಾಡಳಿತದ ಕ್ರಮಕ್ಕೆ ಮೆಚ್ಚುಗೆ](https://mobiletime.in/2026/02/appreciation-for-the-district-administrations-action/): ಕುಮಟಾ ರಾಷ್ಟ್ರೀಯ ಹೆದ್ದಾರಿ ಪಕ್ಕ ರಾಶಿ ರಾಶಿ ಕಸದ ರಾಶಿ ಬಿದ್ದಿದ್ದು, ಈ ಬಗ್ಗೆ ದೂರು ಸಲ್ಲಿಕೆಯಾದ ತಕ್ಷಣ ಜಿಲ್ಲಾಡಳಿತ ಕ್ರಮ ಜರುಗಿಸಿದೆ. ಮಂಗಳವಾರ ಹೆದ್ದಾರಿ ಪಕ್ಕ ಭಾರೀ ಪ್ರಮಾಣದಲ್ಲಿ ಕಸ ಬಿದ್ದಿತ್ತು. ಜನಸಾಮಾನ್ಯರ ಸಮಾಜ ಕಲ್ಯಾಣ ಕೇಂದ್ರದವರು ಈ ಬಗ್ಗೆ ಜಿಲ್ಲಾಡಳಿತಕ್ಕೆ ದೂರು ಸಲ್ಲಿಸಿದ್ದರು. ನಾಯಿ ಸತ್ತು ಕೊಳೆತಿರುವ ಫೋಟೋವನ್ನು ಕೇಂದ್ರದ ಅಧ್ಯಕ್ಷ ಆಗ್ನೇಲ್ ರೋಡಿಗ್ರಸ್ ಅವರು ಹಂಚಿಕೊAಡಿದ್ದರು. ಜಿಲ್ಲಾಧಿಕಾರಿ ಕಚೇರಿಯ ವಾಟ್ಸಪ್ ದೂರು ವಿಭಾಗದವರು ಈ ದೂರು ಸ್ವೀಕರಿಸಿದ್ದು, ತಕ್ಷಣ ಕ್ರಮ ಜರುಗಿಸಿದ್ದಾರೆ. ಅದರ ಪರಿಣಾಮ ಹೆದ್ದಾರಿ ಪಕ್ಕದ ತ್ಯಾಜ್ಯ ಕಣ್ಮರೆಯಾಗಿದೆ. ಹೆದ್ದಾರಿ ಪಕ್ಕ ಬಿದ್ದಿದ್ದ ಮಾಂಸದ ತ್ಯಾಜ್ಯ, ಅಲ್ಲಿದ್ದ ಕಸ ಹಾಗೂ ಇನ್ನಿತರ ಕೊಳಚೆಯನ್ನು ಪುರಸಭೆಯವರು ಸ್ವಚ್ಚ ಮಾಡಿದ್ದಾರೆ. ಬುಧವಾರ ಬೆಳಗ್ಗೆ ಅಲ್ಲಿನ ತ್ಯಾಜ್ಯಗಳನ್ನು ತೆಗೆಯಲಾಗಿದ್ದು, ಜಿಲ್ಲಾಡಳಿತದ ಈ ಕ್ರಮಕ್ಕೆ ಜನಸಾಮಾನ್ಯರ ಸಮಾಜ ಕಲ್ಯಾಣ ಕೇಂದ್ರದವರು ಸಂತಸವ್ಯಕ್ತಪಡಿಸಿದ್ದಾರೆ.     - [ನದಿ ತಿರುವು: ಅವೈಜ್ಞಾನಿಕ ನೀತಿ ವಿರುದ್ಧ ಆಕ್ಷೇಪ](https://mobiletime.in/2026/02/river-diversion-objection-against-unscientific-policy/): ನದಿ ತಿರುವು ಯೋಜನೆ ವಿರೋಧಿಸಿ 25 ಸಾವಿರಕ್ಕೂ ಅಧಿಕ ಅರ್ಜಿ ಸರ್ಕಾರಕ್ಕೆ ಸಲ್ಲಿಕೆಯಾಗಲು ಸಿದ್ಧವಾಗಿದೆ. `ಅಘನಾಶಿನಿ – ವರದ ನದಿ ಜೋಡಣೆಯ ಯೋಜನೆಯು ಜನ ಮತ್ತು ಪರಿಸರ ವಿರೋಧಿ ಯೋಜನೆ’ ಎನ್ನುವುದರ ಬಗ್ಗೆ ವೈಜ್ಞಾನಿಕ ಕಾರಣಗಳ ಜೊತೆ ಸರ್ಕಾರಕ್ಕೆ ಮನವರಿಕೆ ಮಾಡುವ ಪ್ರಯತ್ನ ನಡೆದಿದೆ. `ಪಶ್ಚಿಮಘಟ್ಟಗಳು ಕೇವಲ ಪ್ರಾದೇಶಿಕ ಪರಿಸರ ಸಂಪತ್ತು ಅಲ್ಲ. ಹವಮಾನ ಭದ್ರತೆ ವ್ಯವಸ್ಥೆಯ ಅವಿಭಾಜ್ಯ ಅಂಗ. ಇಂತಹ ಪರಿಸರ ಪ್ರದೇಶದಲ್ಲಿ ನದಿಯ ನೀರನ್ನು ತಿರುಗಿಸುವುದು, ಸುರಂಗ ನಿರ್ಮಾಣ ಮತ್ತು ಆಣೆ ಕಟ್ಟುಗಳಂತ ಕಾಮಗಾರಿಗಳನ್ನು ಜರುಗಿಸುವುದು ಆತಂಕಕಾರಿ. ಅರಣ್ಯ ನಾಶ, ಭೂ ಕುಸಿತ ಅಸ್ಥಿರತೆ, ಜೀವ ವೈವಿದ್ಯ ಹಾನಿ, ಹವಮಾನದ ವ್ಯತಿರಿಕ್ತತೆ ಮೇಲೆ ಪರಿಣಾಮ ಬೀರುವುದೆಂಬುದು ಅಧ್ಯಯನದಿಂದ ತಿಳಿದು ಬಂದಿರುವುದರಿAದ ನಿಯೋಜಿತ ಯೋಜನೆಯು ಅವೈಜ್ಞಾನಿಕ’ ಎಂಬ ವಿಷಯಗಳ ಬಗ್ಗೆ ಪತ್ರದಲ್ಲಿ ಉಲ್ಲೇಖಿಸಲಾಗಿದೆ. `ಪಶ್ಚಿಮ ಘಟ್ಟ ಪ್ರದೇಶದ 64,365 ಹೇಕ್ಟರ್ ಅರಣ್ಯ ಪ್ರದೇಶವನ್ನು ಅರಣ್ಯೇತರ ಚಟುವಟಿಕೆಗೆ ನೀಡಲಾಗಿದೆ. ಜಿಲ್ಲೆಯ ಸಾಂದ್ರತೆ ಅನುಗುಣವಾಗಿ ಹೆಚ್ಚಿನ ಒತ್ತಡವನ್ನು ಭರಿಸಲು ಸಾಧ್ಯತೆಗಳಿಲ್ಲ. ಕಾರಣ, ಕರ್ನಾಟಕ ರಾಜ್ಯದ ಉತ್ತರಕನ್ನಡ ಜಿಲ್ಲೆಯಲ್ಲಿನ ಸಿದ್ದಾಪುರದಲ್ಲಿ ನಿಯೋಜಿಸಲಾಗುವ ಅಘನಾಶಿನಿ – ವರದ ನದಿ ಜೋಡಣೆಯ ಯೋಜನೆಯು ಜನ ಮತ್ತು ಪರಿಸರ ವಿರೋಧಿ ಯೋಜನೆ’ ಎಂದು ಆ ಪತ್ರದಲ್ಲಿ ಉಲ್ಲೇಖಿಸಲಾಗಿದೆ. ಅರಣ್ಯ ಅತಿಕ್ರಮಣದಾರರು ಈ ಪತ್ರ ಬರೆಯುತ್ತಿದ್ದು, ಸಿದ್ದಾಪುರದ ಕ್ಯಾದಗಿ ಬಳಿಯ ಗಣಪತಿ ದೇವಾಲಯದಲ್ಲಿ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ಈ ವಿಷಯದ ಬಗ್ಗೆ ಮಾಹಿತಿ ನೀಡಿದ್ದಾರೆ. `ಉತ್ತರ ಕನ್ನಡದ ಪಶ್ಚಿಮ ಘಟ್ಟಗಳು ಜೀವ ವೈವಿದ್ಯದ ತಾಣ. ಪ್ರಮುಖ ನದಿಗಳ ಉಗಮ ಸ್ಥಾನ ಮತ್ತು ಮಳೆಮಾರುತಗಳ ನಿಯಂತ್ರಕವಾಗಿ ಮಹತ್ವ ಪಡೆದಿವೆ. ಇದು ಕನಾಟಕದ ಪರಿಸರ ಮತ್ತು ಆರ್ಥಿಕತೆಗೆ ನಿರ್ಣಾಯಕವಾಗಿದೆ. ಈ ಭಾಗವು ದಟ್ಟ ಕಾಡುಗಳು, ಸುಂದರ ಜಲಪಾತಗಳು ಮತ್ತು ವಿಶಿಷ್ಟ ಸಸ್ಯ ಹಾಗೂ ಪ್ರಾಣಿ ಸಂಕುಲಗಳ ತವರಾಗಿದೆ. ಇದನ್ನು ಯುನೆಸ್ಕೋ ವಿಶ್ವ ಪರಂಪರೆಯ ತಾಣವೆಂದು ಗುರುತಿಸಿದೆ. ಪಶ್ಚಿಮ ಘಟ್ಟಗಳು ವಿಶ್ವದ 8 ಪ್ರಮುಖ ಜೈವಿಕ ವೈವಿದ್ಯತೆಯ ಹಾಟ್ ಸ್ಪಾಟ್‌ಗಳಲ್ಲಿ ಒಂದಾಗಿದೆ. ಇಲ್ಲಿ ಅಪಾರ ಸಂಖ್ಯೆಯ ಸ್ಥಳೀಯ ಮತ್ತು ಅಳಿವಿನಂಚಿನಲ್ಲಿರುವ ಪ್ರಭೇದಗಳಿವೆ. ಇದು ವೈಜ್ಞಾನಿಕ ಸಂಶೋಧನೆಯಿAದ ಕಂಡುಬAದಿದೆ. ಇಂತಹ ಅಭಿಯಾರಣ್ಯ ಪ್ರದೇಶವೆಂದು ಘೋಷಿಸಿದ ಪ್ರದೇಶದಲ್ಲಿ ಯೋಜನೆಯೂ ಪರಿಸರಕ್ಕೆ ಮಾರಕವಾಗುದೆಂಬುದನ್ನು ಆಕ್ಷೇಪಣೆಯಲ್ಲಿ ಉಲ್ಲೇಖಿಸಲ್ಪಟ್ಟಿದೆ’ ಎಂದು ರವೀಂದ್ರ ನಾಯ್ಕ ಅವರು ಹೇಳಿದ್ದಾರೆ. `ಉತ್ತರ ಕನ್ನಡದ ಪಶ್ಚಿಮ ಘಟ್ಟಗಳು ಪರಿಸರ ಸಮತೋಲನ, ಜಲ ಸಂಪನ್ಮೂಲ ಮತ್ತು ಜೈವಿಕ ವೈವಿಧ್ಯತೆಯ ದೃಷ್ಟಿಯಿಂದ ಅತ್ಯಂತ ಮಹತ್ವದ ಪ್ರಾಕೃತಿಕ ಸಂಪತ್ತಾಗಿದೆ. ದಾರಾಳವಾಗಿ ಜಿಲ್ಲೆಯ ಅರಣ್ಯ ಭೂಮಿಯನ್ನು ಅರಣ್ಯೇತರ ಚಟುವಟಿಕೆಗೆ ನೀಡಿರುವುದರಿಂದ 1973 ರಲ್ಲಿ ಇರುವಂತ ಅರಣ್ಯ ಪ್ರಮಾಣ ಶೇ.72.26 ರಿಂದ 2013 ರಲ್ಲಿ ಜಿಲ್ಲೆಯ ಅರಣ್ಯ ಪ್ರಮಾಣ ಶೇ 59.70ರಷ್ಟು ಕುಸಿತವಾಗಿರುವ ಅಂಶವನ್ನು ಆಕ್ಷೇಪಣೆಯಲ್ಲಿ ಪ್ರಸ್ತಾಪಿಸಿರುವುದು ಗಮನಾರ್ಹ ಅಂಶ’ ಎಂದವರು ಮಾಹಿತಿ ನೀಡಿದ್ದಾರೆ. - [ಬಗ್ಗೊಣ ಭಟ್ಟರ ಬೆಟ್ಟದಲ್ಲಿ ಶವ!](https://mobiletime.in/2026/02/a-body-was-found-in-baggona-bhattara-hill/): ಕುಮಟಾದ ಬಗ್ಗೋಣ ಬಳಿಯ ಉದಯ ಪಂಡೀತ ಅವರ ಬೆಟ್ಟಕ್ಕೆ ಹೋಗಿದ್ದ ಮಂಜು ಮುಕ್ರಿ ಅವರು ಅಲ್ಲಿಯೇ ಶವವಾಗಿದ್ದಾರೆ. ಕುಮಟಾ ಬಗ್ಗೋಣ ಇಪ್ಪಡಿಯಲ್ಲಿ ಮಂಜು ನಾರಾಯಣ ಮುಕ್ರಿ ಅವರು ವಾಸವಾಗಿದ್ದರು. ಕೂಲಿ ಕೆಲಸ ಮಾಡಿಕೊಂಡು ಅವರು ಬದುಕು ಕಟ್ಟಿಕೊಂಡಿದ್ದರು. ಎಂಟು ವರ್ಷಗಳ ಹಿಂದೆ ಅವರಿಗೆ ಹೃದಯದ ರೋಗ ಕಾಣಿಸಿಕೊಂಡಿತು. ಎಂಟು ತಿಂಗಳ ಹಿಂದೆ ಆ ರೋಗ ಉಲ್ಬಣಿಸಿದ್ದು, ಮಂಗಳೂರಿನ ವೆನ್ ಲಾಕ್ ಆಸ್ಪತ್ರೆಗೆ ಹೋಗಿ ಚಿಕಿತ್ಸೆಪಡೆದಿದ್ದರು. ಆ ವೇಳೆ ಮೆದುಳಿನಲ್ಲಿ ರಕ್ತ ಹೆಪ್ಪುಗಟ್ಟಿರುವುದು ಗೊತ್ತಾಯಿತು. ಜೊತೆಗೆ ಕಿಡ್ನಿಯಲ್ಲಿಯೂ ಸಮಸ್ಯೆ ಕಾಣಿಸಿಕೊಂಡಿತು. ಅದಕ್ಕೆ ಅಲ್ಲಿನ ವೈದ್ಯರು ಔಷಧಿ ನೀಡಿದ್ದು, ಅದನ್ನುಪಡೆದ ಮಂಜು ಮುಕ್ರಿ ಅವರು ಮನೆಗೆ ಮರಳಿದ್ದರು. ತಲೆಯಲ್ಲಿ ರಕ್ತ ಹೆಪ್ಪುಗಟ್ಟಿದ ಸಮಸ್ಯೆ ತೀವೃವಾದ ನಂತರ ಮಂಜು ಮುಕ್ರಿ ಅವರು ಮಾತನಾಡಲು ಸಮಸ್ಯೆ ಅನುಭವಿಸಿದರು. ಅನಾರೋಗ್ಯದ ಕಾರಣ ಮಾನಸಿಕವಾಗಿಯೂ ಕುಗ್ಗಿದ್ದ ಅವರು ಫೆಬ್ರವರಿ 2ರಂದು ಆತ್ಮಹತ್ಯೆಯ ನಿರ್ಧಾರ ಮಾಡಿದರು. ಬಗ್ಗೋಣದ ಉದಯ ಪಂಡೀತ ಅವರ ಬೆಟ್ಟಕ್ಕೆ ಹೋಗಿ ಅಲ್ಲಿ ಮಂಜು ಮುಕ್ರಿ ಅವರು ನೇಣಿಗೆ ಶರಣಾದರು. ಮಂಜು ಮುಕ್ರಿ ಅವರ ತಂಗಿ ಸುಧಾ ರಾಜು ಮುಕ್ರಿ ಅವರು ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದು, ಕುಮಟಾ ಪೊಲೀಸರು ಪ್ರಕರಣ ದಾಖಲಿಸಿದರು. - [ಜನ ಮೆಚ್ಚಿದ ಅಧಿಕಾರಿಗೆ ಪ್ರಶಸ್ತಿಯ ಗೌರವ](https://mobiletime.in/2026/02/award-honors-officer-who-is-admired-by-the-people/): ಕಾರವಾರದಲ್ಲಿ ಜನ ಮೆಚ್ಚಿದ ಅಧಿಕಾರಿಯಾಗಿದ್ದ ವಿನೋದ ಅಣ್ವೇಕರ್ ಅವರ‌ ಮುಡಿಗೆ ಮತ್ತೊಂದು ಪ್ರಶಸ್ತಿ ಸಿಕ್ಕಿದೆ. 35 ವರ್ಷಗಳ ಸರ್ಕಾರಿ ಸೇವೆ ಸಲ್ಲಿಸಿದ ಅವರು ಉತ್ತರ ಕನ್ನಡ ಜಿಲ್ಲಾ ಮಟ್ಟದ 2023ರ ‘ಸರ್ವೋತ್ತಮ ಸೇವಾ ಪ್ರಶಸ್ತಿ’ಗೆ ಭಾಜನರಾಗಿದ್ದಾರೆ. ಸರ್ಕಾರಿ ಕಚೇರಿ ಎಂದರೆ ಕಡತಗಳು, ಸಹಿಗಳು ಮತ್ತು ಸಮಯದ ಒತ್ತಡ—ಇದೇ ಸಾಮಾನ್ಯ ಚಿತ್ರ. ಆದರೆ ಈ ವ್ಯವಸ್ಥೆಯೊಳಗೇ ನಿಂತು ಆಡಳಿತಕ್ಕೆ ಮನುಷ್ಯತ್ವದ ಅರ್ಥ ನೀಡಿದ ಅಧಿಕಾರಿಗಳಲ್ಲಿ ವಿನೋದ್ ವಾಮನ ಅಣ್ವೇಕರ ಅವರು ಮೊದಲ ಸ್ಥಾನದಲ್ಲಿ ಕಾಣುತ್ತಾರೆ. ಅಂಕೋಲಾ ತಾಲೂಕಿನ ಅವರ್ಸಾದ ಗ್ರಾಮೀಣ ಹಿನ್ನಲೆಯಲ್ಲಿ ಬೆಳೆದ ಅಣ್ವೇಕರ ಅವರ ತಂದೆ ನಿವೃತ್ತ ಮುಖ್ಯಧ್ಯಾಪಕರಾಗಿದ್ದರು. ತಂದೆ ವಾಮನ ಕೃಷ್ಣ ಅಣ್ವೇಕರ ಅವರು ಕಲಿಸಿದ ಸಂಸ್ಕಾರವನ್ನು ಜೀವನದ ದಿಕ್ಕಾಗಿಸಿಕೊಂಡ ವಿನೋದ ಅಣ್ವೇಕರ್ ಅವರು ಜನರ ಸಂಕಷ್ಟಗಳ ನೇರ ಅನುಭವ ಮತ್ತು ಶಿಕ್ಷಣದ ಮೌಲ್ಯವೇ ಅವರ ಆಡಳಿತದ ದೃಷ್ಟಿಕೋನಕ್ಕೆ ಅಳವಡಿಕೊಂಡು ಜನ ಮೆಚ್ಚುಗೆಗಳಿಸಿದ್ದಾರೆ. 31 ಅಕ್ಟೋಬರ್ 1989ರಂದು ಕಾರವಾರದಲ್ಲಿ ಸಹಾಯಕ ಸಾಂಖ್ಯಿಕ ಅಧಿಕಾರಿಯಾಗಿ ಸರ್ಕಾರಿ ಸೇವೆ ಆರಂಭಿಸಿದ ಅವರು, ಹುದ್ದೆಯನ್ನು ಗುರಿಯನ್ನಾಗಿಸದೇ ಜವಾಬ್ದಾರಿಯನ್ನೇ ಸೇವೆಯ ಕೇಂದ್ರಬಿಂದು ಮಾಡಿಕೊಂಡರು. ಅಂಕಿಅಂಶಗಳನ್ನು ಕೇವಲ ಸಂಖ್ಯೆಗಳಂತೆ ಅಲ್ಲ, ಸಮಾಜದ ಜೀವನಾಡಿಯಂತೆ ನೋಡಿದ ಅವರ ದೃಷ್ಟಿ ಎಲ್ಲ ಹುದ್ದೆಗಳಲ್ಲೂ ಒಂದೇ ಆಗಿತ್ತು. ಡೇಟಾ ಶುದ್ಧವಾಗಬೇಕು. ಯೋಜನೆ ನೆಲಮಟ್ಟ ತಲುಪಬೇಕು.‌ಫಲಾನುಭವಿಗೆ ನಿಜವಾದ ಲಾಭ ಸಿಗಬೇಕು ಎಂಬ ನಿಟ್ಟಿನಲ್ಲಿ ಅವರು ಸಾಕಷ್ಟು ಶ್ರಮಿಸಿದ್ದಾರೆ. ಸಾರ್ವಜನಿಕ ಶಿಕ್ಷಣ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ಆರ್ಥಿಕ ಮತ್ತು ಸಾಂಖ್ಯಿಕ ಇಲಾಖೆ, ತಾಲೂಕು ಹಾಗೂ ಜಿಲ್ಲಾ ಪಂಚಾಯತ್‌ಗಳಲ್ಲಿ ಸೇವೆ ಸಲ್ಲಿಸಿದ ಅವರು, 2010–11ರಲ್ಲಿ ಹುಬ್ಬಳ್ಳಿಯಲ್ಲಿ ಆರೋಗ್ಯ ಇಲಾಖೆಯ ತರಬೇತಿ ಕೇಂದ್ರದಲ್ಲಿ ಬೋಧಕ, 2011ರಲ್ಲಿ ಅಂಕೋಲಾ ತಾಪಂ ಯೋಜನಾಧಿಕಾರಿ, 2014ರಲ್ಲಿ ಬೆಳಗಾವಿ ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ, 2017–18ರಲ್ಲಿ ಉತ್ತರ ಕನ್ನಡ ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ, 2018ರಲ್ಲಿ ಬೆಳಗಾವಿ ಜಿಲ್ಲೆಯಲ್ಲಿ ಯೋಜನಾ ಅಂದಾಜು–ಮೌಲ್ಯಮಾಪನಾಧಿಕಾರಿ, 2019 – 20ರಲ್ಲಿ ಬೆಳಗಾವಿ ಮತ್ತು ಉತ್ತರ ಕನ್ನಡ ಜಿಪಂ ಮುಖ್ಯ ಯೋಜನಾಧಿಕಾರಿ, 2021–2024ರಲ್ಲಿ ಹೊನ್ನಾವರ ತಾಪಂ ಆಡಳಿತಾಧಿಕಾರಿ ಸೇರಿ ವಿವಿಧ ಜವಾಬ್ದಾರಿಗಳನ್ನು ನಿಭಾಯಿಸಿದ್ದಾರೆ. ಉನ್ನತ ಹುದ್ದೆಯಲ್ಲಿದ್ದರೂ ಸರ್ಕಾರಿ ಬಸ್ ಪ್ರಯಾಣ, ಕಚೇರಿಯ ಕೊನೆಯ ಸಿಬ್ಬಂದಿಗೂ ಸಮಾನ ಗೌರವ, ಸಾರ್ವಜನಿಕರನ್ನು ಅರ್ಜಿದಾರರಂತೆ ಅಲ್ಲ—ನಾಗರಿಕರಂತೆ ನೋಡುವ ದೃಷ್ಟಿ ಅವರ ಆಡಳಿತದ ನಿಜವಾದ ಶಕ್ತಿ. ಶಿಕ್ಷಣ ಪ್ರೋತ್ಸಾಹ, ಸಾಮಾಜಿಕ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಿಗೆ ಮೌನ ಬೆಂಬಲ ಇವೆಲ್ಲವೂ ವಾಮನ ಅಣ್ವೇಕರ್ ಅವರು ಪ್ರಚಾರವಿಲ್ಲದೆ ನಡೆದ ಸೇವೆಗಳಾಗಿವೆ. ಈ ಎಲ್ಲಾ ಹಿನ್ನಲೆ ಅವರಿಗೆ ಸಾಕಷ್ಟು ಪ್ರಶಸ್ತಿಗಳು ಸಿಕ್ಕಿದೆ. ಕಾಯಕ ರತ್ನ (2022–23), ಉತ್ತರ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ (2024–25) ಮತ್ತು ಜಿಲ್ಲಾ ಸರ್ವೋತ್ತಮ ಸೇವಾ ಪ್ರಶಸ್ತಿ (2023)—ಈ ಗೌರವಗಳು ಅವರ ಸೇವೆಯ ಪ್ರತಿಫಲ. ಗೌರವ ಸ್ವೀಕಾರದ ವೇಳೆ ಸಚಿವ ಮಂಕಾಳ ವೈದ್ಯ, ಶಾಸಕ ಸತೀಶ್ ಸೈಲ್, ಜಿಲ್ಲಾಧಿಕಾರಿ ಲಕ್ಷ್ಮೀ ಪ್ರಿಯಾ, ಜಿಪಂ ಸಿಇಓಗಳು, ಪೊಲೀಸ್ ಅಧಿಕಾರಿಗಳು ಹಾಗೂ ಸಹೋದ್ಯೋಗಿಗಳಿಗೆ ಕೃತಜ್ಞತೆ ಸಲ್ಲಿಸಿದ ಅವರ ನಡೆ, ಅಹಂಕಾರವಿಲ್ಲದ ನಾಯಕತ್ವಕ್ಕೆ ಸಾಕ್ಷಿ. ಹುದ್ದೆಗಳು ಮುಗಿಯಬಹುದು. ಆದರೆ ಮೌಲ್ಯಾಧಾರಿತ ಸೇವೆ ಉಳಿಯುತ್ತದೆ. - [ಗುಡುಗುಡಿ ಆಟ: ರಾತ್ರಿಯೂ ಕಾಣಿಸಿದ ಸೂರ್ಯ!](https://mobiletime.in/2026/02/thunderstorm-game-the-sun-appeared-even-at-night/): ಅಂಕೋಲಾದ ಲಕ್ಷಿಶ್ವರ ದೈವಜ್ಞ ಭವನದ ಬಳಿ ಗುಡುಗುಡಿ ಆಟ ನಡೆದಿದ್ದು, ಪೊಲೀಸರನ್ನು ಕಂಡ ನಾಲ್ವರು ಓಡಿ ಪರಾರಿಯಾಗಿದ್ದಾರೆ. ಆಟ ಆಡಿಸುತ್ತಿದ್ದ ಇಬ್ಬರು ಸಿಕ್ಕಿ ಬಿದ್ದಿದ್ದಾರೆ. ಜನವರಿ 31ರಂದು ಕುಮಟಾ ಹಿರೇಗುತ್ತಿ ಎಣ್ಣೆಮುಡಿಯ ಶಂಕರ್ ಸತ್ಯನಾರಾಯಣ ನಾಯ್ಕ, ಅಂಕೋಲಾ ಬೊಬ್ರುವಾಡದ ನವೀನ ರತ್ನಾಕರ ನಾಯ್ಕ ಸೇರಿ ಇಲ್ಲಿ ಗುಡುಗುಡಿ ಆಟ ಆಯೋಜಿಸಿದ್ದರು. `ಚಂದ್ರನಿಗೆ 50ರೂಪಾಯಿ, ಸೂರ್ಯನಿಗೆ 500ರೂಪಾಯಿ’ ಎನ್ನುತ್ತ ಅವರು ಆಟ ಶುರು ಮಾಡಿದ್ದರು. ಕುಮಟಾ ಸಾಣೆಕಟ್ಟಾ ಬಳಿಯ ಹೊಸ್ಕಟ್ಟಾದ ಈಶ್ವರ ಹರಿಕಂತ್ರ, ಅಂಕೋಲಾ ಕನಸಿನಗದ್ದೆಯ ದೀಪಕ ನಾಯ್ಕ, ಹಾರವಾಡದ ಸಂದೀಪ ನಾಯ್ಕ ಹಾಗೂ ಪೂಜಗೇರಿಯ ಸತೀಶ ಗಾಂವಕರ್ (ಪುಟ್ಟು) ಸಹ ಈ ಆಟದ ಪಾಲುದಾರರಾಗಿದ್ದರು. ಕಾನೂನುಬಾಹಿರ ಕ್ರೀಡೆ ನಡೆದ ಬಗ್ಗೆ ಪೊಲೀಸರಿಗೆ ಫೋನ್ ಬಂದಿತು. ನಸುಕಿನ 1 ಗಂಟೆ ಸುಮಾರಿಗೆ ಪಿಸೈ ಸುನಿಲ ಹುಲ್ಲೋಳ್ಳಿ ಅಲ್ಲಿ ದಾಳಿ ಮಾಡಿದರು. ಪೊಲೀಸರನ್ನು ನೋಡಿದ ಈಶ್ವರ ಹರಿಕಂತ್ರ, ದೀಪಕ ನಾಯ್ಕ, ಸಂದೀಪ ನಾಯ್ಕ ಹಾಗೂ ಸತೀಶ ಗಾಂವಕರ್ ಅಲ್ಲಿಂದ ಓಡಿ ಪರಾರಿಯಾದರು. ಆದರೆ, ಶಂಕರ್ ನಾಯ್ಕ ಹಾಗೂ ನವೀನ ನಾಯ್ಕ ಅವರ ಬಳಿ ಓಡಲು ಆಗಲಿಲ್ಲ. ಅವರಿಬ್ಬರು ಪೊಲೀಸರಿಗೆ ಶರಣಾಗಿದ್ದು, ಪೊಲೀಸರು ಅವರ ಬಳಿಯಿದ್ದ 2 ಮೊಬೈಲನ್ನು ಜಪ್ತು ಮಾಡಿದರು. ಜೊತೆಗೆ ಜೂಜಾಟಕ್ಕೆ ಬಳಸಿದ್ದ 2360ರೂ ಹಣವನ್ನು ವಶಕ್ಕೆಪಡೆದರು. ಓಡಿ ಹೋದವರನ್ನು ಸೇರಿಸಿ ಎಲ್ಲರ ವಿರುದ್ಧ ಪ್ರಕರಣ ದಾಖಲಿಸಿದರು.   - [ಬೈಕ್ ಸ್ಕಿಡ್: ಸವಾರ ಸಾವು](https://mobiletime.in/2026/02/bike-skid-rider-dies/): ಹುಬ್ಬಳ್ಳಿಯಿಂದ ಉಳವಿ ಕ್ಷೇತ್ರಕ್ಕೆ ಪ್ರಯಾಣಿಸುತ್ತಿದ್ದ ವ್ಯಕ್ತಿಯೊಬ್ಬರು ಬೈಕಿನಿಂದ ಬಿದ್ದು ಸಾವನಪ್ಪಿದ್ದಾರೆ. ಬಿರಂಪಾಲಿ ಕ್ರಾಸ್ ಹತ್ತಿರ ರಾಜ್ಯ ಹೆದ್ದಾರಿಯಲ್ಲಿ ಸಂಚರಿಸುತ್ತಿದ್ದ ಅಭಿಷೇಕ ಈರಪ್ಪ ಚಂದರಗಿ (21) ಅವರು ಸಾವನಪ್ಪಿದ್ದಾರೆ. ಹುಬ್ಬಳ್ಳಿ ಅಮರಗೋಳ ನಿವಾಸಿಯಾಗಿದ್ದ ಅವರು ಜಾತ್ರೆ ಅಂಗವಾಗಿ ಉಳವಿಗೆ ಹೊರಟಿದ್ದರು. ವೇಗವಾಗಿ ಅವರು ಬೈಕ್ ಓಡಿಸಿದ್ದು, ಬೈಕು ನಿಯಂತ್ರಣ ತಪ್ಪಿದ ಪರಿಣಾಮ ನೆಲಕ್ಕೆ ಬಿದ್ದರು. ಈ ವೇಳೆ ಬೈಕಿನ ಹಿಂಬದಿ ಸವಾರರಾಗಿದ್ದ ಸಾಧಿಕ ಮಾಬುಸಾಬ ನದಾಫ (17) ಎಂಬಾತರಿಗೂ ಗಾಯವಾಗಿದೆ. ಮಂಗಳವಾರ ಮುಂಜಾನೆ ಈ ಅಪಘಾತ ನಡೆದಿದೆ. ಅಪಘಾತದ ರಭಸಕ್ಕೆ ಬೈಕ್ ಸಹ ಜಖಂ ಆಗಿದೆ. - [ಜನ್ಮದಿನ: ವೃದ್ಧಾಶ್ರಮಕ್ಕೆ ನೆರವು ನೀಡಿದ ಜನಸಾಮಾನ್ಯ](https://mobiletime.in/2026/02/birthday-ordinary-people-who-helped-an-old-age-home/): ಕುಮಟಾದ ನಿವೃತ್ತ ಅಧಿಕಾರಿ ನಾಗೇಶ ಅವರ ಜನ್ಮದಿನದ ಅಂಗವಾಗಿ ಜನಸಾಮಾನ್ಯರ ಸಮಾಜ ಕಲ್ಯಾಣ ಕೇಂದ್ರದವರು ಜಾನಕಿರಾಮ ವೃದ್ಧಾಶ್ರಮಕ್ಕೆ ಹಣ್ಣು-ಹಂಪಲು ವಿತರಿಸಿದ್ದಾರೆ. ಈ ವೇಳೆ ಜನಸಾಮಾನ್ಯರ ಸಮಾಜ ಕಲ್ಯಾಣ ಕೇಂದ್ರದ ಅಧ್ಯಕ್ಷ ಆಗ್ನೇಲ್ ರೋಡ್ರಿಗಸ್ ಮಾತನಾಡಿ `ನಾಗೇಶ್ ಅವರು 64ವಯಸ್ಸಿನಲ್ಲಿಯೂ ಜನ ಸೇವೆ ಮಾಡುತ್ತಿದ್ದಾರೆ. ಅವರ ಸಮಾಜಮುಖಿ ಕಾರ್ಯ ಎಲ್ಲರಿಗೂ ಮಾದರಿ’ ಎಂದರು. `ನ್ಯಾಯ ಕೇಳಿ ಬರುವ ಎಲ್ಲರಿಗೂ ಅವರು ಸಹಾಯ ಮಾಡುತ್ತಾರೆ. ಹಿರಿಯ ನಾಗರಿಕರಾಗಿ ಅವರು ಮಾಡುವ ಸೇವೆ ಅನನ್ಯ’ ಎಂದು ಶ್ಲಾಘಿಸಿದರು. ವೃದ್ದಾಶ್ರಮದ ಮುಖ್ಯಸ್ಥೆ ಆಶಾ ನಾಯ್ಕ, ನ್ಯಾಯಾಲಯದ ನಿವೃತ್ತ ಸಿಬ್ಬಂದಿ ಸುಮಾ ಭಟ್, ಸುನೀಲ್ ಭಟ್ ಹಾಗೂ ಸಾಮಾಜಿಕ ಕಾರ್ಯಕರ್ತ ಸುಧಾಕರ ನಾಯ್ಕ ಹಾಜರಿದ್ದರು. - [ಅನಾರೋಗ್ಯ: ಅರ್ದ ಆಯಸ್ಸಿಗೂ ಮುನ್ನವೇ PSI ಮರಣ!](https://mobiletime.in/2026/02/illness-psi-dies-before-reaching-half-his-life/): ಅನೇಕ ಅಪರಾಧ ಪ್ರಕರಣಗಳನ್ನು ಬೇದಿಸಿದ್ದ ಮುಂಡಗೋಡು ಪಿಸೈ ಯಲ್ಲಾಲಿಂಗ ಕುನ್ನೂರು ಅಕಾಲಿಕ ಮರಣಕ್ಕೊಳಗಾಗಿದ್ದಾರೆ. 33ನೇ ವಯಸ್ಸಿನಲ್ಲಿಯೇ ಅವರು ಕೊನೆಯುಸಿರೆಳೆದಿದ್ದಾರೆ. ಬನವಾಸಿ, ಯಲ್ಲಾಪುರ ಸೇರಿ ವಿವಿಧ ಪೊಲೀಸ್ ಠಾಣೆಯಲ್ಲಿ ಯಲ್ಲಾಲಿಂಗ ಕನ್ನೂರು ಅವರು ಕೆಲಸ ಮಾಡಿದ್ದಾರೆ. ನಂತರ ಮುಂಡಗೋಡು ಪೊಲೀಸ್ ಠಾಣೆಗೆ ಅವರು ವರ್ಗವಾಗಿದ್ದರು. ಕಳೆದ ಕೆಲವು ದಿನಗಳಿಂದ ಯಲ್ಲಾಲಿಂಗ್ ಕುನ್ನೂರು ಅವರು ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದರು. ಆರಂಭದಲ್ಲಿ ಸ್ಥಳೀಯವಾಗಿ ಚಿಕಿತ್ಸೆ ಪಡೆದಿದ್ದ ಅವರು ನಂತರ ಬೆಂಗಳೂರು ಆಸ್ಪತ್ರೆಗೆ ದಾಖಲಾಗಿದ್ದರು. ವೈದ್ಯರ ನಿರಂತರ ಪ್ರಯತ್ನದ ನಂತರವೂ ಆರೋಗ್ಯದಲ್ಲಿ ಚೇತರಿಕೆ ಕಾಣದೇ ಅವರು ಸಾವನಪ್ಪಿದರು. ಶಿಸ್ತುಬದ್ಧ ಕಾರ್ಯವೈಖರಿ ಮತ್ತು ಜನರ ಸಮಸ್ಯೆಗಳಿಗೆ ಸ್ಪಂದಿಸುವ ಗುಣದಿಂದಾಗಿ ಯಲ್ಲಾಲಿಂಗ ಕನ್ನೂರು ಅವರು ಜನಸ್ನೇಹಿ ಆಗಿದ್ದರು. ಅನೇಕ ಕ್ಲಿಷ್ಟಕರ ಪ್ರಕರಣಗಳನ್ನು ಅವರು ಉಪಾಯವಾಗಿ ಬೇದಿಸಿದ್ದರು. ಭವಿಷ್ಯದಲ್ಲಿ ಉನ್ನತ ಹುದ್ದೆಗೇರಬೇಕಿದ್ದ ಯುವ ಅಧಿಕಾರಿಯ ಸಾವು ಕುಟುಂಬಸ್ಥರನ್ನು ಶೋಕಸಾಗರದಲ್ಲಿ ಮುಳುಗಿಸಿದೆ. ಅವರ ಸಾವಿನ ಸುದ್ದಿ ಪೊಲೀಸರಿಗೂ ಆಘಾತ ತಂದಿದೆ. - [ಶಿವರಾತ್ರಿಗೆ ಸಜ್ಜುಗೊಂಡ ಮಹಾದೇವಸ್ಥಾನ](https://mobiletime.in/2026/02/mahadevsthan-ready-for-shivaratri/): ಕಾರವಾರದ ಬಾಡದಲ್ಲಿರುವ ಶ್ರೀ ಮಹಾದೇವಸ್ಥಾನ ಶಿವರಾತ್ರಿ ಆಚರಣೆಗೆ ಸಜ್ಜಾಗಿದೆ. ಫೆಬ್ರವರಿ 15ರಂದು ಅದ್ಧೂರಿ ಶಿವರಾತ್ರಿ ಉತ್ಸವ ಇಲ್ಲಿ ನಡೆಯಲಿದೆ. ಶಿವರಾತ್ರಿಯ ದಿನದಂದು ಬೆಳಗಿನ ಜಾವ 2 ಗಂಟೆಗೆ ದೇವಸ್ಥಾನದ ವತಿಯಿಂದ ಅಭಿಷೇಕ ನಡೆಯಲಿದೆ. ತದನಂತರ ಪ್ರಾತ ಕಾಲ 2.30ರಿಂದ ಪ್ರಾರಂಭವಾಗಿ ಪ್ರತಿ ಒಂದು ತಾಸಿನ ಅವಧಿಯ ಸರಣಿಯಂತೆ ಅಭಿಷೇಕಕ್ಕೆ ಅವಕಾಶ ಮಾಡಿಕೊಡಲಾಗುತ್ತದೆ. 70ರೂ ಪಾವತಿಸಿ ಸಾರ್ವಜನಿಕರು ಅಭಿಷೇಕ ಮಾಡಲು ಅನುಕೂಲ ಮಾಡಿಕೊಡಲಾಗಿದ್ದು, ಫೆಬ್ರವರಿ 5ರಿಂದ ದೇವಸ್ಥಾನದ ಕಚೇರಿಯಲ್ಲಿ ಅಭಿಷೇಕದ ಕೂಪನ್ ಕೊಡಲಾಗುತ್ತದೆ. ವಯಸ್ಕರಿಗೆ ವಿಶೇಷ ವ್ಯವಸ್ಥೆ ಮೂಲಕ ದೇವರ ಅಭಿಷೇಕ ಮಾಡಲು ವ್ಯವಸ್ಥೆ ಮಾಡಲಾಗಿದೆ. ಗ್ರಾಮದ ಜನ ಈ ಅವಕಾಶ ಬಳಸಿಕೊಂಡು ದೇವರ ಸೇವೆಗೆ ಬರಬೇಕು ಎಂದು ಶ್ರೀ ಮಹಾದೇವ ವಿನಾಯಕ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರು ಹಾಗೂ ಸರ್ವ ಸದಸ್ಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಇನ್ನೂ ಹೆಚ್ಚಿನ ಮಾಹಿತಿಗಾಗಿ ದೇವಸ್ಥಾನದ ಕಚೇರಿ ಸಂಪರ್ಕಿಸಲು ಕೋರಿದೆ. - [ಚಿತ್ರೋತ್ಸವ: ಅಂತರಾಷ್ಟ್ರೀಯ ವೇದಿಕೆಯಲ್ಲಿ ಮಿಂಚಿದ ಯಲ್ಲಾಪುರದ ಪ್ರತಿಭೆ!](https://mobiletime.in/2026/02/film-festival-talent-from-yellapur-shines-internationally/): ನಗರ ನಿವಾಸಿಗಳಿಗೆ ಕಾಡಿನ ಬದುಕು ಪರಿಚಯಿಸುವ `ವನ್ಯಾ’ ಚಲನಚಿತ್ರದಲ್ಲಿ ಯಲ್ಲಾಪುರದ ಧಾತ್ರಿ ಭಟ್ಟ ಅವರು ಅಭಿನಯಿಸಿದ್ದಾರೆ. ಗೋವಾದಲ್ಲಿ ನಡೆದ ಅಂತರಾಷ್ಟ್ರೀಯ ಚಿತ್ರ ಸಮ್ಮೇಳನದಲ್ಲಿ ಈ ಚಿತ್ರ ಪ್ರದರ್ಶನವಾಗಿದ್ದು, ಧಾತ್ರಿ ಭಟ್ಟ ಅವರ ಅಭಿನಯ ಜನ ಮೆಚ್ಚುಗೆಗೆ ಪಾತ್ರವಾಗಿದೆ. ಜೊತೆಗೆ ಇನ್ನೂ ಎರಡು ಚಿತ್ರಗಳಿಗೆ ಧಾತ್ರಿ ಭಟ್ಟ ಅವರು ಬಾಲ ಕಲಾವಿದರಾಗಿ ಆಯ್ಕೆ ಆಗಿದ್ದಾರೆ. ಧಾತ್ರಿ ಭಟ್ಟ ಅವರು ಸದ್ಯ ಮೈಸೂರು ಇಂಟರ್ ನ್ಯಾಶನಲ್ ಸ್ಕೂಲಿನಲ್ಲಿ 5ನೇ ತರಗತಿ ಓದುತ್ತಿದ್ದಾರೆ. ಶಾಲಾ ಕಲಿಕೆಯಲ್ಲಿಯೂ ಮುಂಚೂಣಿಯಲ್ಲಿರುವ ಧಾತ್ರಿ ಭಟ್ಟ ಅವರು ಬಾಲ್ಯದಿಂದಲೂ ಅಭಿನಯದಲ್ಲಿ ಅಪಾರ ಆಸಕ್ತಿಹೊಂದಿದ್ದಾರೆ. ಧಾತ್ರಿ ಭಟ್ಟ ಅವರು ಉದ್ದಿಮೆಯ ಜೊತೆ ಸಾಮಾಜಿಕ, ಧಾರ್ಮಿಕ ಹಾಗೂ ಶೈಕ್ಷಣಿಕ ಸೇವೆಯಲ್ಲಿಯೂ ಚಾಪು ಮೂಡಿಸಿರುವ ಯಲ್ಲಾಪುರದ ಶ್ರೀನಿವಾಸ ಭಟ್ಟ ಅವರ ಪುತ್ರಿ. ಮಗಳ ಅಭಿನಯ ಆಸಕ್ತಿಯನ್ನು ಗುರುತಿಸಿದ ಶ್ರೀನಿವಾಸ ಭಟ್ಟ ಹಾಗೂ ಚೈತ್ರಾ ಭಟ್ಟ ಅವರು ಮಗಳ ಪ್ರತಿಭೆಯನ್ನು ಪ್ರೋತ್ಸಾಹಿಸಿದ್ದಾರೆ. ಇದಕ್ಕೆ ಪೂರಕವಾಗಿ `ವನ್ಯಾ’ ಚಿತ್ರದಲ್ಲಿ ಧಾತ್ರಿ ಭಟ್ಟ ಅವರಿಗೆ ಮೊದಲ ಅವಕಾಶ ಸಿಕ್ಕಿದೆ. ಆ ಮೊದಲ ಅವಕಾಶದಲ್ಲಿಯೇ ಧಾತ್ರಿ ಭಟ್ಟ ಅವರು ಅಂತರಾಷ್ಟ್ರೀಯ ಚಿತ್ರೋತ್ಸವದ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಅರಣ್ಯವಾಸಿಗಳಾದ ಆದಿವಾಸಿ ಜನರನ್ನು ಒಕ್ಕಲೆಬ್ಬಿಸುವ ಕುರಿತಾಗಿ ಈ ಚಿತ್ರ ಕಥೆ ಹೇಳುತ್ತಿದ್ದು, ಮೂರು ತಲೆಮಾರಿಗೆ ಸಂಬoಧಿಸಿದ ಚಿತ್ರಣವನ್ನು ಕಟ್ಟಿಕೊಡುತ್ತದೆ. ಕಾಡು ಹಾಗೂ ನಗರದ ನಡುವಿನ ಸಂಘರ್ಷದ ಬಗ್ಗೆ ಚಿತ್ರದಲ್ಲಿ ವಿಷಯ ಕಟ್ಟಿಕೊಡಲಾಗಿದೆ. ಹಾಸ್ಯನಟರಾಗಿದ್ದ ವೈಜನಾಥ ಬೀರಾದರ್ ಅವರು ಮುಖ್ಯ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಅವರ ಮಗಳಾಗಿ ಮೇಘನಾ ಬೆಳವಾಡಿ ಅವರು ಪಾತ್ರ ನಿಭಾಯಿಸಿದ್ದು, ಮೂರನೇ ತಲೆಮಾರಿನ ಹುಡುಗಿಯಾಗಿ ಧಾತ್ರಿ ಭಟ್ಟ ಅಭಿನಯಿಸಿದ್ದಾರೆ. ಧಾತ್ರಿ ಭಟ್ಟ ಅವರ ಅಭಿನಯ ನೋಡಿದ ಇನ್ನೆರಡು ಚಿತ್ರ ತಂಡದವರು ಅವರನ್ನು ತಮ್ಮ ಚಿತ್ರಕ್ಕೂ ಆಯ್ಕೆ ಮಾಡಿಕೊಂಡಿದ್ದಾರೆ. - [ಬುರುಡೆ ಭವಿಷ್ಯ: ಕೊಲೆ ಪ್ರಕರಣದಲ್ಲಿ ಕಾರಾಗೃಹ ಸೇರಿದ ಕಳ್ಳ ಜ್ಯೋತಿಷಿ!](https://mobiletime.in/2026/02/burude-bhavishya-thief-astrologer-jailed-for-murder-case/): ಟಿವಿ ಕ್ಯಾಮರಾದ ಮುಂದೆ ಬುರುಡೆ ಭವಿಷ್ಯ ನುಡಿದು ಪ್ರಸಿದ್ಧಿಪಡೆದಿದ್ದ ಕಮಲಾಕರ ಭಟ್ಟ ಅವರು ಕೊಲೆ ಪ್ರಕರಣದಲ್ಲಿ ಜೈಲು ಸೇರಿದ್ದಾರೆ. ಕಚೇರಿ‌‌ ಕೆಲಸದಾಕೆ ಸುಚಿತ್ರಾ ನಾಯ್ಕ ಅವರ ಜೊತೆ ಅಕ್ರಮ‌ ಸಂಬಂಧ ಹೊಂದಿದ್ದ  ಕಮಲಾಕರ ಭಟ್ಟರು ಸುಚಿತ್ರಾ ನಾಯ್ಕ ಅವರ ಮಗಳ ವಿಷಯದಲ್ಲಿ ಮೂಗು ತೂರಿಸಲು ಹೋಗಿ ಜೈಲು ಪಾಲಾಗಿದ್ದಾರೆ. ಸಿದ್ದಾಪುರದ ಮಹೇಶ ಜಟ್ಟಾ ನಾಯ್ಕ ಅವರು 20 ವರ್ಷದ ಹಿಂದೆ ಸುಚಿತ್ರಾ ನಾಯ್ಕ ಅವರನ್ನು ಪ್ರೀತಿಸಿ ಮದುವೆ ಆಗಿದ್ದರು. ಸುಮಿತ್ರಾ ಮಹೇಶ ದಂಪತಿಗೆ ಸುಮಶ್ರೀ ಹಾಗೂ ಅಮೃತಾ ಎಂಬ ಮಕ್ಕಳಿದ್ದರು. ಈ ದಂಪತಿ ಕುಟುಂಬಸಹಿತ ಸಿದ್ದಾಪುರ ತಾಲೂಕಿನ ಬೆಳ್ಳಟ್ಟೆಯ ವಡ್ನಗದ್ದೆಯಲ್ಲಿ ವಾಸವಾಗಿದ್ದರು. ಈ ನಡುವೆ ಸುಮಿತ್ರಾ ನಾಯ್ಕ ಅವರಿಗೆ ಕಮಲಾಕರ ಭಟ್ಟರ ಪರಿಚಯವಾಗಿದ್ದು, ಕಮಲಾಕರ ಭಟ್ಟರ ಜೊತೆ ಸುಮಿತ್ರಾ‌ ನಾಯ್ಕ ಅವರು ಅಕ್ರಮ ಸಂಬಂಧಹೊಂದಿದ್ದರು. ಮಹೇಶ‌ ನಾಯ್ಕ ಅವರು ಬೆಂಗಳೂರಿನ ಹೊಟೇಲ್ ಒಂದರಲ್ಲಿ ಕೆಲಸಕ್ಕೆ ಹೋದಾಗ ಸುಮಿತ್ರಾ ಅವರು ಕಮಲಾಕರ ಭಟ್ಟರ ಶಿವಮೊಗ್ಗದ ಕಚೇರಿಯ ಕೆಲಸಕ್ಕೆ ಸೇರಿದ್ದರು. ಸುಮಿತ್ರಾ ನಾಯ್ಕ ಹಾಗೂ‌‌ ಕಮಲಾಕರ ಭಟ್ಟ ಸೇರಿ ಸುಮಶ್ರೀ ಹಾಗೂ ಅಮೃತ ಎಂಬ  ಮಕ್ಕಳಿಗೆ ನಿತ್ಯ ಹಿಂಸಿಸುತ್ತಿದ್ದರು. ಇದನ್ನು ಸಹಿಸದ ಸುಮಿತ್ರಾ ತಮಗಾದ ಹಿಂಸೆಯ ಬಗ್ಗೆ ತಂದೆಗೆ ಮೆಸೆಜ್ ಮಾಡಿದ್ದರು. ‘ನಮ್ಮನ್ನು ಇಲ್ಲಿಂದ ಕರೆದುಕೊಂಡು ಹೋಗಿ.‌ ಇಲ್ಲವಾದರೆ ಸಾಯುತ್ತೇವೆ’ ಎಂದು ಸುಮಶ್ರೀ ಮೆಸೆಜ್ ಮಾಡಿದ್ದರು. ಆ ಮೆಸೆಜ್‌ ನೋಡಿದ ಮಹೇಶ‌ ನಾಯ್ಕ ಅವರು ಸೋಮವಾರ ಮಗಳು ಸುಮಶ್ರೀ ಅವರನ್ನು ಸಿದ್ದಾಪುರಕ್ಕೆ ಕರೆಯಿಸಿದ್ದರು. ಪೊಲೀಸ್ ಠಾಣೆ ಹಾಗೂ ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳ ಮುಂದೆ ಹಾಜರುಪಡಿಸಿ‌ ಮಕ್ಕಳ ಮೇಲಾದ ದೌರ್ಜನ್ಯದ ಬಗ್ಗೆ ದೂರು ಕೊಡಿಸಿದ್ದರು. ಅದಾದ‌ ನಂತರ ಮಹೇಶ‌ ನಾಯ್ಕ ಅವರು ಮಗಳ ಜೊತೆ ಅಣ್ಣ ವಸಂತ ನಾಯ್ಕ ಅವರ ಮನೆಗೆ ಬಂದರು. ಪತ್ನಿಯ ಕಾಟ ಹಾಗೂ ಕಿರುಕುಳದ ಬಗ್ಗೆ ಅಣ್ಣನ ಕುಟುಂಬದವರಲ್ಲಿ ಹೇಳಿಕೊಂಡರು. ಸುಮಶ್ರೀ ಅವರು ಸಹ ತಾಯಿಯ ಅಕ್ರಮ ಸಂಬಂಧದ ಬಗ್ಗೆ ಮಾಹಿತಿ ನೀಡಿದ್ದು, ತಮಗಾದ ತೊಂದರೆಗಳನ್ನು ಹೇಳಿದರು. ಆ ದಿನ ರಾತ್ರಿ ಎಲ್ಲರೂ ಊಟಕ್ಕೆ ಉಳಿತಾಗ ಸುಚಿತ್ರಾ ನಾಯ್ಕ, ಅವರ ತಂದೆ ಲೋಕನಾಥ ನಾಯ್ಕ, ಹೆಮ್ಮಿನಬೈಲಿನ ಕಮಲಾಕರ ಭಟ್ಟ ಜೊತೆ ಮತ್ತೆ ನಾಲ್ಕು ಜನ ಅವರೆಕೊಪ್ಪದ ವಸಂತ ನಾಯ್ಕ ಅವರ ಮನೆಗೆ ಬಂದರು. ನಾಲ್ಕು ಜನ ಅಪರಿಚಿತರು‌ ಕೈಯಲ್ಲಿ ಚಾಕು ಹಿಡಿದಿದ್ದು, ಸುಮಶ್ರೀ ಅವರನ್ನು ಹೆದರಿಸಿ ಕೋಣೆಯಲ್ಲಿ ಕೂಡಿಹಾಕಿದರು. ಇದನ್ನು ತಡೆಯಲು ಬಂದ ವಸಂತ ನಾಯ್ಕ ಅವರ ಎದೆಗೆ ಆ ಅಪರಿಚಿತರು ಚಾಕು ಹಾಕಿದರು. ಹೊಡೆದಾಟ ತಪ್ಪಿಸಲು ಬಂದ ಮಹೇಶ ನಾಯ್ಕ ಹಾಗೂ ಕುಮಾರ ನಾಯ್ಕ ಎಂಬಾತರ ಹೊಟ್ಟೆಗೂ ಅವರು ಚಾಕು ಚುಚ್ಚಿದರು. ಈ ವೇಳೆ ವಸಂತ ನಾಯ್ಕ ಅವರ ಪತ್ನಿ ಸಂಧ್ಯಾ‌ ನಾಯ್ಕ ಅವರು ಪೊಲೀಸರಿಗೆ ಪೋನ್ ಮಾಡಿದರೂ ತಾಗಲಿಲ್ಲ. ಸಂಧ್ಯಾ ಅವರು ತಮ್ಮ ಅತ್ತೆಯ ಮಗ ಬಳ್ಳುವಿಗೆ ಫೋನ್ ಮಾಡಿ ವಿಷಯ ಮುಟ್ಟಿಸಿದರು. ಆದರೆ, ಈ ವೇಳೆಗಾಗಲೇ ರಕ್ತದ ಮಡುವಿನಲ್ಲಿ ಬಿದ್ದಿದ್ದ ವಸಂತ ನಾಯ್ಕ ಅವರು ಸಾವನಪ್ಪಿದ್ದರು.‌ ಮಹೇಶ ನಾಯ್ಕ ಹಾಗೂ ಕುಮಾರ‌ ನಾಯ್ಕ ಅವರನ್ನು ಬಾಡಿಗೆ ಮನೆಯಲ್ಲಿದ್ದ ಮಂಗಲಾ ಟೀಚರ್, ಬಸ್ ಕಂಡೆಕ್ಟರ್ ಮಂಜಣ್ಣ ಹಾಗೂ ಅಕ್ಕಪಕ್ಕದ ಮನೆಯ ರಾಮಚಂದ್ರ ಕೆರಿಯಾ ನಾಯ್ಕ ಅವರು ಆಸ್ಪತ್ರೆಗೆ ಕರೆದೊಯ್ಯುವ ಕೆಲಸ ಮಾಡಿದರು. ರಾಮಚಂದ್ರ ನಾಯ್ಕ ಅವರ ಕಾರಿನಲ್ಲಿ ಅವರೆಲ್ಲರನ್ನು ಆಸ್ಪತ್ರೆಗೆ ರವಾನೆ ಮಾಡಲಾಗಿದ್ದು, ವೈದ್ಯರು ವಸಂತ ನಾಯ್ಕ ಸಾವುನ್ನು ದೃಢಪಡಿಸಿದರು. ಗಾಯದಿಂದ ನರಳಾಡುತ್ತಿದ್ದ ಮತ್ತಿಬ್ಬರನ್ನು ಶಿವಮೊಗ್ಗದ ಆಸ್ಪತ್ರೆಗೆ ದಾಖಲಿಸಲಾಯಿತು. ಈ ಕೊಲೆ ಹಾಗೂ ಹಲ್ಲೆ ಪ್ರಕರಣದ ವೇಳೆ ಕಮಲಾಕರ ಭಟ್ಟ ಅವರು ಕಾರಿನಲ್ಲಿದ್ದು, ಅವರ ಕುಮ್ಮಕ್ಕಿನ ಬಗ್ಗೆ ಸಂಧ್ಯಾ ನಾಯ್ಕ ಅವರು ಪೊಲೀಸ್‌ ದೂರು ನೀಡಿದರು. ಈ ಹಿನ್ನಲೆ‌ ಕಮಲಾಕರ ಭಟ್ಟ ಹಾಗೂ ಅವರ ಆರು ಜನ ಸಹಚರರನ್ನು ಪೊಲೀಸರು ಬಂಧಿಸಿದ್ದಾರೆ. - [ಎಜುಕೇರ್ ಶಾಲೆ: ಸಾಧನೆಯ ಹಾದಿಯಲ್ಲಿ ಮತ್ತೊಂದು ಮೈಲುಗಲ್ಲು!](https://mobiletime.in/2026/02/educare-school-another-milestone-on-the-path-to-success/): ಕಾರವಾರದ ಅಮದಳ್ಳಿ ಹಾಗೂ ಶಿರಸಿಯ ಬನವಾಸಿಯಲ್ಲಿ ಗುಣಾತ್ಮಕ ಶಿಕ್ಷಣದ ಮೂಲಕ ಮನೆ ಮಾತಾಗಿರುವ ಎಜುಕೇರ್ ಆಂಗ್ಲ ಮಾಧ್ಯಮ ಶಾಲೆ ಮತ್ತೊಂದು ಶಾಖೆ ತೆರೆದಿದೆ. ಕೋಡಿಭಾಗದ ವಿವೇಕಾನಂದ ವಿದ್ಯಾಸಂಸ್ಥೆಯ ಆಶ್ರಯದಲ್ಲಿ ನಡೆಯುತ್ತಿರುವ ಸ್ವಾಮಿ ವಿವೇಕಾನಂದ ವಿದ್ಯಾಸಂಸ್ಥೆಯ ಜೊತೆ ಎಜುಕೇರ್ ಆಂಗ್ಲ ಮಾಧ್ಯಮ ಶಾಲೆ ಒಡಂಬಡಿಕೆ ಮಾಡಿಕೊಂಡಿದೆ. ಹೀಗಾಗಿ ಮುಂದಿನ ಶೈಕ್ಷಣಿಕ ವರ್ಷದಿಂದ ಕಾರವಾರ ನಗರದಲ್ಲಿಯೂ ಎಜುಕೇರ್ ಆಂಗ್ಲ ಮಾಧ್ಯಮ ಶಾಲೆಯ ಕಾರ್ಯಕ್ಷೇತ್ರ ವಿಸ್ತರಣೆ ಆಗಲಿದೆ. ಕಳೆದ 20 ವರ್ಷಗಳಿಂದ ಎಜುಕೇರ್ ಆಂಗ್ಲ ಮಾಧ್ಯಮ ಶಾಲೆ ಮೌಲ್ಯಾಧಾರಿತ ಶಿಕ್ಷಣ ನೀಡುತ್ತಿದೆ. ಶಿಕ್ಷಣದ ಜೊತೆ ಮಕ್ಕಳಿಗೆ ಅಗತ್ಯವಿರುವ ಸ್ಪರ್ಧಾತ್ಮಕ ಪರೀಕ್ಷೆಗಳ ಬಗ್ಗೆಯೂ ಅರಿವು ಮೂಡಿಸುತ್ತಿದೆ. ಈ ಹಿನ್ನಲೆ ಸ್ವಾಮಿ ವಿವೇಕಾನಂದ ವಿದ್ಯಾ ಸಂಸ್ಥೆಯ ಆಡಳಿತ ಮಂಡಳಿಯ ಅಧ್ಯಕ್ಷರಾದ ದೀಪಕ್ ಡಿ ವೈ ಗಣ್ಕರ್, ಕಾರ್ಯದರ್ಶಿ ವಿ ಜೆ ತಾಮ್ಸೆ ಮತ್ತು ಖಜಾಂಚಿ ಕಿರಣ್ ತ್ಥಾಮ್ಸೆ ಅವರು ಹರ್ಷವ್ಯಕ್ತಪಡಿಸಿದ್ದಾರೆ. ಅವರೆಲ್ಲರೂ ಸೇರಿ ಶಿಕ್ಷಣ ಸಂಸ್ಥೆಯ ಸಂಪೂರ್ಣ ಜವಾಬ್ದಾರಿಯನ್ನು ಹಸ್ತಾಂತರಿಸಿದ್ದು, ಎಜುಕೇಶನ್ ಆಂಗ್ಲ ಮಾಧ್ಯಮ ಶಾಲೆಯ ಆಡಳಿತ ಮಂಡಳಿಯ ಆಡಳಿತ ಅಧಿಕಾರಿ ನಾಗರತ್ನ ಜೈ ರಂಗನಾಥ ಅವರು ಈ ಅಧಿಕಾರವಹಿಸಿಕೊಂಡಿದ್ದಾರೆ. ಸAಸ್ಥೆಯ ಕೋಆರ್ಡಿನೇಟರ್ ವಿನೋದ್ ಆಲ್ಮೆಡ, ನೇಹಾ ಬೈರನಕೇರಿ. ವಿವೇಕಾನಂದ ಪ್ರೌಢಶಾಲೆಯ ಮುಖ್ಯಾಧ್ಯಾಪಕ ಪ್ರಾಜೆಕ್ತ್ತ ಮಹೇಕರ್ ಇನ್ನಿತರರು ಶುಭಕೋರಿದರು. - [ಜಾತ್ರೆಯಲ್ಲಿ ಜೂಜಾಟ: ಎಲೆಮಾನವರಿಗೆ ಜೈಲೂಟ!](https://mobiletime.in/2026/02/gambling-at-the-fair-jail-for-the-green-man/): ಗದಗ ಹಾಗೂ ಬೆಳಗಾವಿಯಿಂದ ಜೊಯಿಡಾಗೆ ಬಂದು ಅಂದರ್ – ಬಾಹರ್ ಆಟದಲ್ಲಿ ತೊಡಗಿದ್ದವರ ಮೇಲೆ ಪೊಲೀಸರು ಕಾನೂನು ಕ್ರಮ ಜರುಗಿಸಿದ್ದಾರೆ. ಉಳವಿ ಜಾತ್ರೆಯಲ್ಲಿ ರಾಜಾರೋಷವಾಗಿ ಇಸ್ಪಿಟ್ ಆಡುವವರ ವಿರುದ್ಧ ಪೊಲೀಸರು ಕಠಿಣ ಕ್ರಮ ಅನುಸರಿಸಿದ್ದಾರೆ. ರಾಜಾರೋಷವಾಗಿ ಅಂದರ್ ಬಾಹರ್ ಆಟ ನಡೆಯುತ್ತಿದ್ದ ಬಗ್ಗೆ ವಿವಿಧ ಮಾಧ್ಯಮಗಳಲ್ಲಿ ವರದಿ ಪ್ರಸಾರ ಆಗಿತ್ತು. ಜೊಯಿಡಾ ಪಿಸೈ ಮಹೇಶ ಮಾಳಿ ಅವರು ಎಲ್ಲಡೆ ಸಂಚಾರ ನಡೆಸಿದ್ದು, ಆ ವೇಳೆ ಅವರಿಗೂ ಅಕ್ರಮ ಆಟ ಕಾಣಿಸಿತು. ವಿವಿಧ ಕಡೆ ದಾಳಿ ಮಾಡಿದ ಅವರು 15 ಜನರನ್ನು ವಶಕ್ಕೆಪಡೆದರು. ಜೊತೆಗೆ ಅವರ ಬಳಿಯಿದ್ದ 34030ರೂ ಹಣವನ್ನು ಜಪ್ತು ಮಾಡಿದರು. ಉಳುವಿ ಜಾತ್ರೆಯಲ್ಲಿ ಕಾನೂನುಬಾಹಿರ ಕ್ರೀಡೆ ನಡೆಯದಂತೆ ಎಚ್ಚರಿಕೆವಹಿಸಲು ಪೊಲೀಸ್ ಅಧೀಕ್ಷಕ ದೀಪನ್ ಎಂ ಎನ್ ಅವರು ಒಂದು ವಿಶೇಷ ತಂಡ ರಚಿಸಿದ್ದಾರೆ. ಆ ತಂಡದವರು ನಡೆಸಿದ ಕಾರ್ಯಾಚರಣೆ ಅಂಗವಾಗಿ ಮೂರು ಪೊಲೀಸ್ ಪ್ರಕರಣಗಳು ದಾಖಲಾಗಿವೆ. - [ಪಲ್ಟಿಯಾದ ಈರುಳ್ಳಿ ಲಾರಿ: ನನಗೂ ಪ್ರೀ.. ನಿನಗೂ ಪ್ರೀ!](https://mobiletime.in/2026/02/overturned-onion-truck-free-for-me-too-free-for-you-too/): ಅಂಕೋಲಾ-ಗೋಕರ್ಣ ನಡುವಿನ ಮಾದನಗೇರಿ ಬಳಿ ಈರುಳ್ಳಿ ತುಂಬಿದ ಲಾರಿ ಪಲ್ಟಿಯಾಗಿದ್ದು, ರಸ್ತೆ ಮೇಲೆ ಬಿದ್ದಿದ್ದ ಈರುಳ್ಳಿಗಾಗಿ ಜನ ಭಾರೀ ಪ್ರಮಾಣದ ಪೈಪೋಟಿ ನಡೆಸಿದ್ದಾರೆ. ಕೆಲವರು ದೊಡ್ಡ ದೊಡ್ಡ ಚೀಲ ತಂದು ಅದರ ತುಂಬ ಈರುಳ್ಳಿ ತುಂಬಿಕೊAಡು ಹೋಗಿದ್ದಾರೆ. ಮಹಾರಾಷ್ಟ್ರದಿಂದ ಕೇರಳಕ್ಕೆ ತೆರಳುತ್ತಿದ್ದ ಲಾರಿ ಮಾದನಗೇರಿ ಬಳಿ ವಿದ್ಯುತ್ ಕಂಬಕ್ಕೆ ಗುದ್ದಿದೆ. ಹಿರೇಗುತ್ತಿ ಪೊಲೀಸ್ ತಪಾಸಣಾ ಕೇಂದ್ರದವರು ತಕ್ಷಣ ಆಗಮಿಸಿ ವಿದ್ಯುತ್ ಸಂಪರ್ಕ ಕಡಿತಗೊಳಿಸಿದ್ದಾರೆ. ಅದಾದ ನಂತರ ಹೆಸ್ಕಾಂ ಸಿಬ್ಬಂದಿ, ಹೆದ್ದಾರಿ ನಿರ್ವಹಣೆಯವರು ಆಗಮಿಸಿ ಸುರಕ್ಷತಾ ಕ್ರಮ ಜರುಗಿಸಿದ್ದಾರೆ. ಇದಾದ ನಂತರ ಅಲ್ಲಿಗೆ ಜಮಾಯಿಸಿದ ಜನ ಸಾಕಷ್ಟು ಪ್ರಮಾಣದಲ್ಲಿ ಈರುಳ್ಳಿಪಡೆದಿದ್ದು, ಜನ ಬೊಗಸೆ ತುಂಬ ಈರುಳ್ಳಿ ತುಂಬಿಕೊAಡ ವಿಡಿಯೋ ಸಹ ವೈರಲ್ ಆಗಿದೆ. ಲಾರಿ ಚಾಲಕ ನಿದ್ದೆ ಗುಂಗಿನಲ್ಲಿ ಅಪಘಾತ ಮಾಡಿದ ಬಗ್ಗೆ ಅನುಮಾನವಿದ್ದು, ಈ ಬಗ್ಗೆ ವಿಚಾರಣೆ ನಡೆದಿದೆ. - [ತಂದೆ ಸಾವಿನ ನೋವು: ಮಗನೂ ಸಾವಿಗೆ ಶರಣು!](https://mobiletime.in/2026/02/the-pain-of-a-fathers-death-the-son-also-surrenders-to-death/): ಕಾರವಾರದ ಮಹಾದೇವ ಠಕ್ಕರಕರ್ ಅವರು ಆರು ತಿಂಗಳ ಹಿಂದೆ ಸಾವನಪ್ಪಿದ್ದು, ಆ ನೋವು ಸಹಿಸಲಾಗದೇ ಅವರ ಮಗ ಸಂದೀಪ ಠಕ್ಕರಕರ್ ಅವರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಕಾರವಾರದ ಚಿತ್ತಾಕುಲ ಬಳಿಯ ಕೊಳಗೆ ಗಣೇಶ ನಗರದಲ್ಲಿ ಸಂದೀಪ ಮಹಾದೇವ ಠಕ್ಕರಕರ್ (39) ಅವರು ವಾಸವಾಗಿದ್ದರು. ಕೊಂಕಣ ರೈಲ್ವೆಯ ಗುತ್ತಿಗೆದಾರರ ಬಳಿ ಕೆಲಸ ಸಂದೀಪ ಠಕ್ಕರಕರ್ ಅವರು ಕೆಲಸ ಮಾಡಿಕೊಂಡಿದ್ದರು. ತಂದೆ ಸಾವಿನ ನಂತರ ಸಂದೀಪ ಅವರು ಕೆಲಕ್ಕೆ ಹೋಗುವುದನ್ನು ನಿಲ್ಲಿಸಿದರು. ತಂದೆ ಕಳೆದುಕೊಂಡ ನೋವಿನಲ್ಲಿಯೇ ಸರಾಯಿ ಸೇವನೆ ಶುರು ಮಾಡಿದರು. ಮನೆಯಲ್ಲಿ ಒಬ್ಬರೇ ವಾಸಿಸುತ್ತಿದ್ದ ಸಂದೀಪ ಠಕ್ಕರಕರ್ ಅವರ ಸರಾಯಿ ಸೇವನೆಯ ಚಟ ವಿಪರೀತವಾಯಿತು. ಮಾನಸಿಕ ಖಿನ್ನತೆಗೆ ಒಳಗಾದ ಅವರು ಜನವರಿ 31ರಂದು ಆತ್ಮಹತ್ಯೆಗೆ ಶರಣಾದರು. ಮನೆ ಒಳಗಿನ ಕಟ್ಟಿಗೆ ಜಂತಿಗೆ ಕಪ್ಪು ಕೇಬಲ್ ವೈಯರ್ ಕಟ್ಟಿಕೊಂಡು ನೇಣು ಹಾಕಿಕೊಂಡರು. ಫೆಬ್ರವರಿ 1ರ ಸಂಜೆ ಸಂದೀಪ ಠಕ್ಕರಕರ್ ಅವರು ಸಾವನಪ್ಪಿರುವುದನ್ನು ಅವರ ಸಹೋದರ ರಾಜೇಶ ಮಹಾದೇವ ಠಕ್ಕರಕರ್ ಅವರು ಗಮನಿಸಿ, ಪೊಲೀಸರಿಗೆ ಮಾಹಿತಿ ನೀಡಿದರು. ಚಿತ್ತಾಕುಲ ಠಾಣಾ ಪೊಲೀಸರು ಪ್ರಕರಣ ದಾಖಲಿಸಿದರು. - [ಅಘನಾಶಿನಿ ಉಳಿಸಿ: ಜನಾಂದೋಲನ ಯಶಸ್ವಿ](https://mobiletime.in/2026/02/save-aghanashini-a-successful-peoples-movement/): ಅಘನಾಶಿನಿ – ವರದಾ ನದಿ ಜೋಡಣೆಯ ವಿರುದ್ಧ ಸಿದ್ದಾಪುರದ ಜನ ಸಿಡಿದೆದ್ದಿದ್ದಾರೆ. ನದಿ ನೀರಿನಲ್ಲಿ ನಿಂತು ಅವರು ಪ್ರತಿಭಟನೆ ಮಾಡಿದ್ದಾರೆ. ಯೋಜನೆ ವಿರುದ್ಧ ನಡೆದ ಜನ ಜಾಗೃತಿಗೂ ಸಾವಿರಾರು ಜನ ಭಾಗವಹಿಸಿ ಅವೈಜ್ಞಾನಿಕ ನೀತಿ ವಿರುದ್ಧ ಆಕ್ರೋಶವ್ಯಕ್ತಪಡಿಸಿದ್ದಾರೆ. ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ನೇತೃತ್ವದಲ್ಲಿ ಸಿದ್ದಾಪುರದ ಗೋಳಿಮಕ್ಕಿ ನದಿ ತಿರುವು ಯೋಜನೆ ವಿರುದ್ಧ ಜನಾಂದೋಲನ ನಡೆಯಿತು. ಬಾಳೆಕೊಪ್ಪ ಗ್ರಾಮದ ಅಘನಾಶಿನಿ ಹರಿಯುವ ಗೇಜ್‌ಕಟ್ಟ ನದಿಯವರೆಗೆ ಪಾದಯಾತ್ರೆ ಮಾಡಿದ ಜನ ಬಹಿರಂಗ ಸಭೆಯಲ್ಲಿ ಭಾಗವಹಿಸಿ ಯೋಜನೆ ವಿರುದ್ಧ ತಮ್ಮ ನಿಲುವು ಪ್ರಕಟಿಸಿದರು. `ರಾಷ್ಟಿಯ ಯೋಜನೆಗಳಿಗೆ ಜನ ವಿರೋಧ ವ್ಯಕ್ತಪಡಿಸಿದಾಗಲೂ ಸರ್ಕಾರ 64,354 ಹೇಕ್ಟರ್ ಅರಣ್ಯ ಭೂಮಿ ಒದಗಿಸುತ್ತದೆ. ಆದರೆ, 80 ಸಾವಿರ ಕುಟುಂಬಗಳಿಗೆ ವಾಸ್ತವ್ಯ ಮತ್ತು ಸಾಗುವಳಿಗಾಗಿ 53 ಸಾವಿರ ಎಕರೆ ಸಾಗುವಳಿ ಹಕ್ಕು ನೀಡಲು ಹಿಂಜರಿಯುತ್ತಿದೆ’ ಎಂಬ ವಿಷಯ ಇಂದಿನ ಮುಖ್ಯ ವಿಷಯವಾಗಿತ್ತು. `ಅಘನಾಶಿನಿ ನದಿಯನ್ನು ಯೋಜನೆಗೆ ಬಿಡುವುದಿಲ್ಲ. ಹೋರಾಟ ಮಾಡಿ ನದಿ ಉಳಿಸಿಕೊಳ್ಳುತ್ತೇವೆ’ ಎಂದು ಜನ ನದಿ ನೀರು ಮುಟ್ಟಿ ಪ್ರತಿಜ್ಞೆ ಮಾಡಿದರು. ಅಘನಾಶಿನಿ ನದಿವರೆಗೂ ಹೋರಾಟಗಾರರು ಹೋರಾಟದ ಭಾವುಟ ಪ್ರದರ್ಶಿಸಿದರು. ಸಾಕಷ್ಟು ಸಂಖ್ಯೆಯಲ್ಲಿ ಮಹಿಳೆಯರು ಭಾಗವಹಿಸಿ ಹೋರಾಟಕ್ಕೆ ಸದಾ ಜೊತೆಯಾಗಿರುವುದಾಗಿ ಘೋಷಿಸಿದರು.   - [ಶಿವರಾತ್ರಿಗಾದರೂ ಬಸ್ ಬಿಡಿ!](https://mobiletime.in/2026/02/leave-the-bus-at-least-for-shivaratri/): `ಶಿವರಾತ್ರಿಯ ಒಳಗೆ ಗಂಗಾವಳಿ-ಮoಜಗುಣಿ ಮಾರ್ಗವಾಗಿ ನಿರ್ಮಿಸಿದ ಸೇತುವೆ ಮೇಲೆ ಬಸ್ ಬಿಡದೇ ಇದ್ದರೆ ಪ್ರತಿಭಟನೆ ಅನಿವಾರ್ಯ’ ಎಂದು ಕರಾವಳಿ ರಕ್ಷಣಾ ವೇದಿಕೆ ಅಧ್ಯಕ್ಷ ಭಾಸ್ಕರ ಪಟಗಾರ ಅವರು ಎಚ್ಚರಿಸಿದ್ದಾರೆ. `ಪ್ರತಿಭಟನೆ ವೇಳೆ ಎಲ್ಲಾ ವಾಹನ ತಡೆಯುವುದು ಅನಿವಾರ್ಯ’ ಎಂದವರು ಹೇಳಿದ್ದಾರೆ. ಗಂಗಾವಳಿಯ ನೂತನ ಸೇತುವೆಗೆ ಭೇಟಿ ನೀಡಿದ ಅವರು `ಸೇತುವೆಯ ಕಾಮಗಾರಿ ಪೂರ್ಣಗೊಳಿಸುವವರೆಗೂ ಹೋರಾಟ ನಡೆಯಿತು. ಅದಾದ ನಂತರ ಸೇತುವೆ ಮೇಲೆ ಬಸ್ ಓಡಾಟ ಶುರು ಮಾಡುವಂತೆಯೂ ಹೋರಾಟ ನಡೆಸಬೇಕಾದ ಸ್ಥಿತಿ ಬಂದಿದೆ. ಎಲ್ಲಾ ವಾಹನ ಓಡಾಟ ನಡೆದರೂ ಬಸ್ಸುಗಳ ಓಡಾಟ ಮಾತ್ರ ಶುರುವಾಗಿಲ್ಲ. ಅಗತ್ಯ ಸೇವೆ ಒದಗಿಸುವಲ್ಲಿ ಅನಗತ್ಯ ವಿಳಂಭ ಮಾಡಲಾಗುತ್ತಿದೆ’ ಎಂದವರು ದೂರಿದರು. ಸಂಘಟನೆ ಪ್ರಮುಖರಾದ ಗಣಪತಿ ನಾಯ್ಕ, ನಾಗೇಂದ್ರ ಪಡ್ತಿ, ಕುಮಾರ ದಿವಟಗಿ ಹಾಗೂ ಸ್ಥಳೀಯರಾದ ವಸಂತ ಗೌಡ, ವೆಂಕಟೇಶ್ ಕಿಣಿ, ಪಾಂಡುರoಗ ಎಂ ನಾಯ್ಕ್, ರಾಜು ಗಾಂವ್ಕರ್, ದೇವು ಅಂಬಿಗ, ಹುಲಿಯಪ್ಪ ನಾಯ್ಕ, ಬಶೀರ್ ಸಾಬ್ ಬಸ್ ಬಿಡುವಂತೆ ಆಗ್ರಹಿಸಿದರು. - [ಫೇಸ್ಬುಕ್ ನೋಡಿದವನ ಪಾಸ್‌ಬುಕ್ ಖಾಲಿ: ಕಾಸು ಕಳೆದುಕೊಂಡವ ಊರಿನ ಹೆಸರನ್ನೇ ಬದಲಿಸಿದ!](https://mobiletime.in/2026/02/passbook-of-man-who-saw-facebook-is-empty-the-man-who-lost-money-changed-the-name-of-the-town/): ದಿನಕ್ಕೆ ಮೂರು ತಾಸು ಫೇಸ್ಬುಕ್ ನೋಡುತ್ತಿದ್ದ ಯಲ್ಲಾಪುರದ ಸುಹಾಸ್ ಕೆ ಆರ್ ಅವರ ಬ್ಯಾಂಕ್ ಪಾಸ್ ಬುಕ್’ನ ಹಣ ಖಾಲಿ ಆಗಿದೆ. 29 ಲಕ್ಷ ರೂ ಕಳೆದುಕೊಂಡ ಅವರು ಕಾಳಮ್ಮ ನಗರವನ್ನು `ಟಿಪ್ಪು ನಗರ’ ಎಂದು ನಮೂದಿಸಿ ಪೊಲೀಸ್ ಪ್ರಕರಣ ದಾಖಲಿಸಿದ್ದಾರೆ. ಆ ಮೂಲಕ ಗೂಗಲ್ ಮ್ಯಾಪ್’ಗೆ ಮಾತ್ರ ಸೀಮಿತವಾಗಿದ್ದ ಟಿಪ್ಪು ನಗರವನ್ನು ಸುಹಾಸ್ ಕೆ ಆರ್ ಅವರು ಸರ್ಕಾರಿ ಕಡತಕ್ಕೆ ಸೇರಿಸಿದ್ದಾರೆ. ಸರ್ಕಾರಿ ದಾಖಲೆಗಳ ಪ್ರಕಾರ ಯಲ್ಲಾಪುರದ ಕಾಳಮ್ಮ ನಗರದ ಬಳಿ ಎಲ್ಲಿಯೂ ಟಿಪ್ಪು ನಗರ ಇಲ್ಲ. ಅದಾಗಿಯೂ, ಗೂಗಲ್ ಮ್ಯಾಪ್ ಕಾಳಮ್ಮ ನಗರವನ್ನು `ಟಿಪ್ಪು ನಗರ’ ಎಂದು ಕಾಣಿಸಿದ್ದು ವಿರೋಧಕ್ಕೆ ಕಾರಣವಾಗಿತ್ತು. ಅದಾದ ನಂತರ ಮತ್ತೆ ಅದು ಕಾಳಮ್ಮ ನಗರ ಎಂದು ಬದಲಾಗಿತ್ತು. ಇದೀಗ ಮತ್ತೆ ಗೂಗಲ್ ಮ್ಯಾಪಿನಲ್ಲಿ ಟಿಪ್ಪು ನಗರ ಎಂದು ನಮೂದಾಗಿದ್ದು, ಅದೇ ಆಧಾರದಲ್ಲಿ ಸುಹಾಸ್ ಕೆ ಆರ್ ಅವರು ತಾವು ವಾಸವಾಗಿರುವ ಪ್ರದೇಶದ ವಿಳಾಸವನ್ನು ಟಿಪ್ಪು ನಗರ ಎಂದು ಸರ್ಕಾರಕ್ಕೆ ನೀಡುವ ಕಡತದಲ್ಲಿ ನಮೂದಿಸಿದ್ದಾರೆ. ಸೈಬರ್ ಅಪರಾಧ ಠಾಣೆ ಪೊಲೀಸರು ಆ ಬಗ್ಗೆ ಅರಿವಿಲ್ಲದೇ ಹಾಗೇ ಪ್ರಕರಣ ದಾಖಲಿಸಿದ್ದು, ಆ ಕಡತ ಸರ್ಕಾರಿ ದಾಖಲೆಗೆ ಸೇರಿದೆ. ಆ ದಿನ ಏನಾಯ್ತು ಎಂದರೆ.. ಮoಡ್ಯದ ಶಂಕರನಗರ ಸುಹಾಸ್ ಕೆ ಆರ್ ಅವರು ಯಲ್ಲಾಪುರದಲ್ಲಿ ವಾಸವಾಗಿದ್ದಾರೆ. ಖಾಸಗಿ ಕಂಪನಿಯೊAದರಲ್ಲಿ ಅವರು ಉದ್ಯೋಗಿಯಾಗಿದ್ದಾರೆ. ಯಲ್ಲಾಪುರದ ಚಿತ್ರಣದ ಬಗ್ಗೆ ಅವರಿಗೆ ಅರಿವಿಲ್ಲ. ಹೀಗಾಗಿ ಮೊಬೈಲಿನಲ್ಲಿದ್ದ ಗೂಗಲ್ ಮ್ಯಾಪ್ ನೋಡಿ ಅವರು ವ್ಯವಹರಿಸುತ್ತಿದ್ದು, ಅದೇ ಮೊಬೈಲಿನ ಫೇಸ್ಬುಕ್ ಖಾತೆ ಅವರ ಬ್ಯಾಂಕ್ ಖಾತೆಯ ವಂಚನೆಗೆ ಕಾರಣವಾಗಿದೆ. 2025ರ ಏಪ್ರಿಲ್ 27ರಂದು ಸುಹಾಸ್ ಕೆ ಆರ್ ಅವರು ಫೇಸ್ಬುಕ್ ನೋಡುತ್ತಿರುವಾಗ ಅವರಿಗೆ `ಆನ್‌ಲೈನ್ ಜಾಬ್’ ಎಂಬ ಜಾಹೀರಾತು ಕಾಣಿಸಿದೆ. ಆಕರ್ಷಕ ಜಾಹೀರಾತು ನೋಡಿದ ಅವರು ವಂಚಕರು ನೀಡಿದ ಗುಂಪಿಗೆ ಸೇರಿದ್ದಾರೆ. ಅಲ್ಲಿದ್ದ ನಿಶಾ ಶರ್ಮಾ ಅವರು ಸುಹಾಸ್ ಕೆ ಆರ್ ಅವರನ್ನು ಮಾತನಾಡಿಸಿದ್ದಾರೆ. ಅವರ ಮಾತಿನ ಮೋಡಿಗೆ ಮರಳಾದ ಸುಹಾಸ್ ಅವರು ಆನ್ ಲೈನ್ ಉದ್ಯೋಗ ಮಾಡುವುದಾಗಿ ಹೇಳಿದ್ದಾರೆ. ವಿವಿಧ ವೆಬ್‌ಸೈಟಿನ ಉತ್ಪನ್ನಗಳಿಗೆ ದಿನಕ್ಕೆ 2 ತಾಸು ರೇಟಿಂಗ್ ಕೊಟ್ಟು ರಿವ್ಯು ಬರೆದರೆ 49 ಡಾಲರ್ ಹಣ ಕೊಡುವುದಾಗಿ ನಂಬಿಸಿದ್ದಾರೆ. ಅದರಂತೆ ಕೆಲಸ ಮಾಡಿದ ಸುಹಾಸ್ ಕೆ ಆರ್ ಅವರಿಗೆ 500ರೂ ಆದಾಯವೂ ಬಂದಿದೆ. ಆ ಆದಾಯವನ್ನು ಮತ್ತೊಂದು ಕಡೆ ಹೂಡಿಕೆ ಮಾಡುವಂತೆ ನಿಶಾ ಶರ್ಮಾ ಅವರು ಸೂಚಿಸಿದ್ದು, ಅದರಂತೆ ಹೂಡಿಕೆ ಮಾಡಿದಾಗ ಸುಹಾಸ್ ಅವರಿಗೆ 1 ಸಾವಿರ ರೂ ಸಿಕ್ಕಿದೆ. ಹೆಚ್ಚು ಹೆಚ್ಚು ಹಣ ಸಿಗುವ ಆಟ ನೋಡಿದ ಸುಹಾಸ್ ಕೆ ಆರ್ ಅವರು 2026ರ ಫೆಬ್ರವರಿ 2ರವರೆಗೆ ಒಟ್ಟು 29 ಲಕ್ಷ ರೂ ಹಣ ಹೂಡಿಕೆ ಮಾಡಿದ್ದಾರೆ. ಒಟ್ಟು 2913459ರೂ ಹೂಡಿಕೆ ನಂತರ ನಿಶಾ ಶರ್ಮ ಅವರು ಸುಹಾಸ್ ಕೆ ಆರ್ ಅವರನ್ನು ದೂರ ಮಾಡಿದ್ದಾರೆ. ಹೀಗಾಗಿ ಅವರಿಗೆ ಹೂಡಿಕೆ ಹಣವೂ ಸಿಕ್ಕಿಲ್ಲ. ಲಾಭವೂ ಬಂದಿಲ್ಲ. ಈ ಎಲ್ಲಾ ಹಿನ್ನಲೆ ಸುಹಾಸ್ ಕೆ ಆರ್ ಅವರು ಸೈಬರ್ ಕಾರವಾರದ ಅಪರಾಧ ಪೊಲೀಸ್ ಠಾಣೆಗೆ ತೆರಳಿದ್ದಾರೆ. ತಮಗಾದ ಅನ್ಯಾಯದ ಬಗ್ಗೆ ಅವರು ಪೊಲೀಸರಲ್ಲಿ ಹೇಳಿಕೊಂಡಿದ್ದು, ಪ್ರಕರಣ ದಾಖಲಿಸಿದ್ದಾರೆ. ಆ ಪ್ರಕರಣ ದಾಖಲಿಸುವಾಗ ವಿಳಾಸ ನೀಡುವಾಗ `ಕಾಳಮ್ಮ ನಗರ’ದ ಹೆಸರನ್ನು `ಟಿಪ್ಪು ನಗರ’ ಎಂದು ಬರೆದಿದ್ದಾರೆ. ಸೈಬರ್ ಕ್ರೈಂ ಕುರಿತು ಕೂಡಲೇ ಇಲ್ಲಿ ಫೋನ್ ಮಾಡಿ: 1930 - [ಹದಗೆಟ್ಟ ರಸ್ತೆಗೆ ಸಿಕ್ಕಿಲ್ಲ ದುರಸ್ತಿ ಭಾಗ್ಯ!](https://mobiletime.in/2026/02/the-deteriorated-road-has-not-been-repaired/): ಸಿದ್ದಾಪುರ-ಚಂದ್ರಗುತ್ತಿ ಭಾಗದಲ್ಲಿ ವರ್ಷದಿಂದ ವರ್ಷಕ್ಕೆ ಅಪಘಾತಗಳ ಪ್ರಮಾಣ ಹೆಚ್ಚಾಗುತ್ತಿದೆ. ಹದಗೆಟ್ಟ ರಸ್ತೆಯೇ ಅಪಘಾತಕ್ಕೆ ಕಾರಣ ಎಂಬ ಅರಿವಿದ್ದರೂ ರಸ್ತೆ ಸರಿಪಡಿಸುವ ಕಾರ್ಯ ನಡೆದಿಲ್ಲ. ಧಾರ್ಮಿಕ ಕ್ಷೇತ್ರವಾಗಿರುವ ಚಂದ್ರಗುತ್ತಿಗೆ ನಿತ್ಯ ಸಾವಿರಾರು ಭಕ್ತರು ಬರುತ್ತಾರೆ. ಸಿದ್ದಾಪುರ, ಹಳ್ಳಿಬೈಲು, ಐಗೋಡು, ಕಾನಗೋಡು ಮಾರ್ಗವಾಗಿ ಜನ ಓಡಾಡುತ್ತಾರೆ. ಆದರೆ, ಈ ಮಾರ್ಗದ ರಸ್ತೆಗೆ ಕಳೆದ ಐದಾರು ವರ್ಷಗಳಿಂದ ನವೀಕರಣ ಭಾಗ್ಯ ಸಿಕ್ಕಲ್ಲ. ಅಲ್ಲಿಲ್ಲಿ ತೇಪೆ ಹಾಕಲಾಗಿದ್ದರೂ ಅದು ಸರಿಯಾಗಿಲ್ಲ. ಹೀಗಾಗಿ ಎಲ್ಲಡೆ ಹೊಂಡ ತುಂಬಿದ ಗುಂಡಿಗಳಿದ್ದು, ಅನೇಕರು ಆ ಗುಂಡಿಗಳಲ್ಲಿ ಬಿದ್ದು ಪೆಟ್ಟು ಮಾಡಿಕೊಳ್ಳುತ್ತಿದ್ದಾರೆ. ಐಗೋಡಿನ ಮುಖ್ಯ ತಿರುವಿನಲ್ಲಿ ರಸ್ತೆಯು ಕಿತ್ತು ಹೊಗಿದೆ. ಸಣ್ಣ ಜೆಲ್ಲಿಕಲ್ಲುಗಳು ಹರಡಿರುವ ಕಾರಣ ಬೈಕ್ ಸವಾರರು ಅಲ್ಲಿ ಬೀಳುತ್ತಿದ್ದಾರೆ. ಈ ಕುರಿತು ಗ್ರಾಮಸ್ಥರು ಸಾಕಷ್ಟು ಬಾರಿ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದರೂ ಸಮಸ್ಯೆ ಮಾತ್ರ ಹಾಗೇ ಇದೆ. ಅಲ್ಲದೇ ಟೆಂಡರ್ ಪಡೆಯುವವರೂ ಕೂಡ ಜೆಲ್ಲಿಯ ಮೇಲೆ ಡಾಂಬರ್ ಹಾಕಿ ಹಣ ಎಣಿಸಿಕೊಳ್ಳುತ್ತಿದ್ದು, ವಾಹನ ಸವಾರರು ಇದರಿಂದ ಹೈರಣಾಗಿದ್ದಾರೆ. ಈ ಎಲ್ಲಾ ಹಿನ್ನಲೆ ಗ್ರಾಮಸ್ಥರು ಇದೀಗ ಒಗ್ಗಟ್ಟಾಗಿದ್ದಾರೆ. ಒಂದು ತಿಂಗಳ ಒಳಗಾಗಿ ರಸ್ತೆ ನವೀಕರಣ ಆಗದಿದ್ದರೆ ಪ್ರತಿಭಟನೆ ನಡೆಸುವ ಎಚ್ಚರಿಕೆ ನೀಡಿದ್ದಾರೆ. ಎರಡು ಜಿಲ್ಲೆಗಳ ಪ್ರಮುಖ ಕೊಂಡಿಯಾಗಿರುವ ರಸ್ತೆಯ ಅಭಿವೃದ್ಧಿಗೆ ಮನಸ್ಸು ಮಾಡಿದ ಜನಪ್ರತಿನಿಧಿಗಳಿಗೂ ಬಿಸಿ ಮುಟ್ಟಿಸುವ ಬಗ್ಗೆ ನಿರ್ಣಯಿಸಿದ್ದಾರೆ. - [ಬೈಕ್ ಡಿಕ್ಕಿ: ಪಾದಚಾರಿ ಸಾವು](https://mobiletime.in/2026/02/bike-collision-pedestrian-dies/): ಕುಮಟಾ ಬಗ್ಗೋಣದ ಆದಿತ್ಯ ಮುಕ್ರಿ ಅವರು ಧಾರೇಶ್ವರದ ಶ್ರೀಧರ ನಾಯ್ಕ ಅವರಿಗೆ ಬೈಕ್ ಗುದ್ದಿದ್ದು, ಆ ಅಪಘಾತದ ರಭಸಕ್ಕೆ ಶ್ರೀಧರ ನಾಯ್ಕ ಅವರು ಸಾವನಪ್ಪಿದ್ದಾರೆ. ಕುಮಟಾದ ಬಗ್ಗೋಣದಲ್ಲಿ ಆದಿತ್ಯ ಮುಕ್ರಿ ಅವರು ಮನೆ ಮಾಡಿಕೊಂಡಿದ್ದಾರೆ. 23 ವರ್ಷದ ಆದಿತ್ಯ ಮುಕ್ರಿ ಅವರು ವೇಗವಾಗಿ ಬೈಕ್ ಓಡಿಸುತ್ತಿದ್ದು, ಅವರ ಅತಿ ವೇಗದ ಚಾಲನೆ ಶ್ರೀಧರ ಹನುಮಂತ ನಾಯ್ಕ (55) ಅವರ ಸಾವಿಗೆ ಕಾರಣವಾಗಿದೆ. ಜನವರಿ 30ರ ರಾತ್ರಿ ಆದಿತ್ಯ ಮುಕ್ರಿ ಅವರು ಹೊನ್ನಾವರದಿಂದ ಕುಮಟಾ ಕಡೆ ಬೈಕ್ ಓಡಿಸಿಕೊಂಡು ಹೊರಟಿದ್ದರು. ಅದೇ ವೇಳೆ ಧಾರೇಶ್ವರ ಕಡಲತೀರದ ತಿರುವಿನ ಬಳಿ ಧಾರೇಶ್ವರದ ಶ್ರೀಧರ ಹನುಮಂತ ನಾಯ್ಕ ಅವರು ನಡೆದು ಹೋಗುತ್ತಿದ್ದರು. ಆದಿತ್ಯ ಮುಕ್ರಿ ಅವರು ಓಡಿಸುತ್ತಿದ್ದ ಬೈಕು ಶ್ರೀಧರ ನಾಯ್ಕ ಅವರಿಗೆ ಡಿಕ್ಕಿಯಾಯಿತು. ಪರಿಣಾಮ ಶ್ರೀಧರ ನಾಯ್ಕ ಅವರು ಅಲ್ಲಿಯೇ ಕುಸಿದು ಬಿದ್ದರು. ಆದಿತ್ಯ ಮುಕ್ರಿ ಅವರು ಬಿದ್ದು ಪೆಟ್ಟು ಮಾಡಿಕೊಂಡರು. ಗಂಭೀರ ಪ್ರಮಾಣದಲ್ಲಿ ಗಾಯಗೊಂಡಿದ್ದ ಶ್ರೀಧರ ನಾಯ್ಕ ಅವರನ್ನು ಕುಮಟಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಯಿತು. ಆದರೆ, ಅದು ಪ್ರಯೋಜನಕ್ಕೆ ಬರಲಿಲ್ಲ. ಚಿಕಿತ್ಸೆಗೆ ಸ್ಪಂದಿಸದೇ ಶ್ರೀಧರ ನಾಯ್ಕ ಅವರು ಸಾವನಪ್ಪಿದರು. ಸಹೋದರನ ಸಾವಿನ ಬಗ್ಗೆ ಧಾರೇಶ್ವರದ ಶಂಕರ ಹನುಮಂತ ನಾಯ್ಕ ಅವರು ಪೊಲೀಸ್ ಮಾಹಿತಿ ನೀಡಿದ್ದು, ಕುಮಟಾ ಪೊಲೀಸರು ಆದಿತ್ಯ ಮುಕ್ರಿ ಅವರ ವಿರುದ್ಧ ಪ್ರಕರಣ ದಾಖಲಿಸಿದರು. - [ಬಡವರಿಗೆ ಅಲ್ಲ ಈ ಬಜೆಟ್!](https://mobiletime.in/2026/02/this-budget-is-not-for-the-poor/): `ಕೇಂದ್ರ ಸರ್ಕಾರ ಈ ದಿನ ಮಂಡಿಸಿದ ಬಜೆಟ್ ಕೃಷಿ ಕ್ಷೇತ್ರಕ್ಕಿಂತಲೂ ಕಾರ್ಪೋರೇಟ್ ಕಂಪನಿಗಳಿಗೆ ಅನುಕೂಲಕರವಾಗಿದೆ. ಈ ಬಜೆಟ್ ಕೃಷಿ ಕ್ಷೇತ್ರ ಅಭದ್ರಗೊಳಿಸುವುದರ ಜೊತೆ ಒಕ್ಕೂಟ ವ್ಯವಸ್ಥೆಗೆ ಮಾರಕವಾಗಿದೆ’ ಎಂದು ರೈತ ಸಂಘದ ಜಿಲ್ಲಾಧ್ಯಕ್ಷ ಶಾಂತಾರಾಮ ನಾಯಕ ಅವರು ಹೇಳಿದ್ದಾರೆ. `ಮೆಕ್ ಇನ್ ಇಂಡಿಯಾ ಮತ್ತು ಆತ್ಮ ನಿರ್ಬರ ಎಂಬ ಮಹಾ ಮೋಸ ಇಡೀ ಕೃಷಿ ಕ್ಷೇತ್ರವನ್ನು ಕಾರ್ಪೊರೇಟ್ ಸಂಸ್ಥೆಗಳಿಗೆ ಅರ್ಪಿಸುತ್ತಿದೆ. ಈ ವ್ಯವಸ್ಥೆಯಿಂದ ಕೃಷಿ ಕ್ಷೇತ್ರ ಅಭದ್ರವಾಗಲಿದೆ’ ಎಂದವರು ಆತಂಕವ್ಯಕ್ತಪಡಿಸಿದ್ದಾರೆ. `ಬಜೆಟಿನಲ್ಲಿ ಕಿಸಾನ್ ನಿಧಿ ಹೆಚ್ಚಿಸಿಲ್ಲ. ಗ್ರಾಮೀಣ ಯುವ ಜನರಿಗೆ ಉದ್ಯೋಗ ಕೊಡುವ ಯೋಜನೆಗಳಿಲ್ಲ’ ಎಂದವರು ಅಸಮಧಾನಹೊರಹಾಕಿದ್ದಾರೆ. `ಕೇಂದ್ರ ಬಜೆಟ್ ಸಂಪೂರ್ಣವಾಗಿ ದಕ್ಷಿಣ ಭಾರತವನ್ನು ನಿರ್ಲಕ್ಷಿಸಿದೆ. ಹೀಗಾಗಿ ಒಕ್ಕೂಟ ವ್ಯವಸ್ಥೆಗೆ ಈ ಬಜೆಟ್ ಮಾರಕವಾಗಿದೆ’ ಎಂದವರು ಹೇಳಿದ್ದಾರೆ. `ಅಂಕೋಲಾ- ಹುಬ್ಬಳ್ಳಿ ರೇಲ್ವೆ ಲೈನ್ ಬಗ್ಗೆ ಪ್ರಸ್ತಾಪ ಇಲ್ಲ. ರಾಷ್ಟ್ರೀಯ ಹೆದ್ದಾರಿ ದ್ವಿಪತದ ಬಗ್ಗೆ ಏನನ್ನೂ ಹೇಳಿಲ್ಲ. ಹೀಗಾಗಿ ಕೇಂದ್ರ ಬಜೆಟ್ ನಿರಾಸದಾಯಕವಾಗಿದ್ದು, ಜನ ವಿರೋಧಿ ನೀತಿ ವಿರುದ್ಧ ಪ್ರತಿಭಟನೆ ಅನಿವಾರ್ಯ’ ಎಂದು ಶಾಂತರಾಮ ನಾಯಕ ಅವರು ಹೇಳಿದ್ದಾರೆ. - [ಅನಾರೋಗ್ಯಕ್ಕೆ ಒಳಗಾದ ಅಂಗವಿಕಲ: ಅಗ್ನಿಗಾಹುತಿ!](https://mobiletime.in/2026/02/disabled-person-who-fell-ill-firefighter/): ಅನಾರೋಗ್ಯಕ್ಕೆ ಒಳಗಾಗಿದ್ದ ಕುಮಟಾದ ಅಂಗವಿಕಲ ಗಣೇಶ ಹರಿಕಂತ್ರ ಅವರು ಅಗ್ನಿಗೆ ಆಹುತಿಯಾಗಿದ್ದಾರೆ. ಬೆಂಕಿ ಜ್ವಾಲೆಯಲ್ಲಿ ಉರಿಯುತ್ತಿದ್ದ ಅವರನ್ನು ರಕ್ಷಿಸುವ ಪ್ರಯತ್ನ ನಡೆದರೂ ಅದು ಪ್ರಯೋಜನಕ್ಕೆ ಬರಲಿಲ್ಲ. ಕುಮಟಾದ ಹಳಕಾರಿನ ಗಣೇಶ ಕೃಷ್ಣ ಹರಿಕಂತ್ರ ಅವರು ವಾಸವಾಗಿದ್ದರು. ಅಂಗವಿಕಲ್ಯದಿoದ ಅವರು ಬಳಲುತ್ತಿದ್ದರು. ಈ ನಡುವೆ ಗಣೇಶ ಹರಿಕಂತ್ರ ಅವರಿಗೆ ಅನಾರೋಗ್ಯ ಕಾಡಲು ಶುರುವಾಯಿತು. ಕಳೆದ ಒಂದು ವರ್ಷದಿಂದ ಅವರು ವಿವಿಧ ಆಸ್ಪತ್ರೆ ಓಡಾಟ ನಡೆಸಿದರು. ಆದರೆ, ಅವರ ಆರೋಗ್ಯ ಸರಿ ಆಗಲಿಲ್ಲ. ಮಾನಸಿಕವಾಗಿಯೂ ನೋವು ಅನುಭವಿಸಿದ ಗಣೇಶ ಹರಿಕಂತ್ರ ಅವರು ಜನವರಿ 31ರಂದು ಮೈಮೇಲೆ ಸೀಮೆಎಣ್ಣೆ ಸುರಿದುಕೊಂಡರು. ಅದಾದ ನಂತರ ಬೆಂಕಿ ಹಚ್ಚಿಕೊಂಡರು. ಅವರನ್ನು ಕುಮಟಾ ಆಸ್ಪತ್ರೆಗೆ ದಾಖಲಿಸಲಾಯಿತು. ಅದಾದ ನಂತರ ಕಾರವಾರ ಆಸ್ಪತ್ರೆಗೂ ಕರೆದೊಯ್ದು ಚಿಕಿತ್ಸೆ ಕೊಡಿಸಲಾಯಿತು. ಆದರೆ, ಸುಟ್ಟು ಹೋಗಿದ್ದ ಗಣೇಶ ಹರಿಕಂತ್ರ ಅವರು ರಾತ್ರಿ ಸಾವನಪ್ಪಿದರು. ಹಳಕಾರದ ಕೃಷ್ಣ ಘಟಬೀರ ಹರಿಕಂತ್ರ ಅವರು ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದು, ಕುಮಟಾ ಪೊಲೀಸರು ಪ್ರಕರಣ ದಾಖಲಿಸಿದರು. - [ಮಹಿಳೆಗೆ ಗುದ್ದಿದ ಬೈಕು: ಪರಿಸ್ಥಿತಿ ಗಂಭೀರ!](https://mobiletime.in/2026/02/woman-hit-by-bike-situation-serious/): ವೇಗವಾಗಿ ಬೈಕ್ ಓಡಿಸುವ ಬನವಾಸಿಯ ನಾಗರಾಜ ಕೆಳಗಿನಮನೆ ಅವರು ತಮ್ಮ ಬೈಕನ್ನು ಗಿರಿಜಮ್ಮ ಚೆನ್ನಯ್ಯ ಅವರಿಗೆ ಗುದ್ದಿದ್ದಾರೆ. ಈ ಅಪಘಾತದಲ್ಲಿ ಗಿರಿಜಮ್ಮ ಚೆನ್ನಯ್ಯ ಅವರ ತಲೆಗೆ ಗಂಭೀರ ಪ್ರಮಾಣದಲ್ಲಿ ಗಾಯವಾಗಿದೆ. ಶಿರಸಿ ಬನವಾಸಿಯ ಯಡೂರಬೈಲಿನ ನಾಗರಾಜ ಯಲ್ಲಪ್ಪ ಕೆಳಗಿನಮನೆ ಅವರು ವೇಗವಾಗಿ ಬೈಕ್ ಓಡಿಸುತ್ತಾರೆ. ಬೇರೆಯವರ ಜೀವಕ್ಕೆ ಅಪಾಯವಾಗುವ ಬಗ್ಗೆ ಅರಿವಿದ್ದರೂ ಅವರು ಸಂಚಾರಿ ನಿಯಮಗಳನ್ನು ಉಲ್ಲಂಘಿಸುತ್ತಾರೆ. ಜನವರಿ 1ರಂದು ಸಹ ಅವರು ಬನವಾಸಿ-ಸೊರಬಾ ರಸ್ತೆಯಲ್ಲಿ ವೇಗವಾಗಿ ಬೈಕ್ ಓಡಿಸಿದ್ದು, ಆ ಬೈಕು ಅಪಘಾತಕ್ಕೀಡಾಗಿದೆ. ಆ ದಿನ ಮಧ್ಯಾಹ್ನ ಬನವಾಸಿಯ ಟಿ ಎಂ ಎಸ್ ಹತ್ತಿರ ಗಿರಿಜಮ್ಮ ಬಸಪ್ಪ ಚೆನ್ನಯ್ಯ ಅವರು ನಡೆದು ಹೋಗುತ್ತಿದ್ದರು. ಎಂದಿನAತೆ ನಾಗರಾಜ ಕೆಳಗಿನಮನೆ ಅವರು ವೇಗವಾಗಿ ಬೈಕ್ ಓಡಿಸಿಕೊಂಡು ಅಲ್ಲಿಗೆ ಬಂದರು. ಬೈಕು ಅವರ ನಿಯಂತ್ರಣ ತಪ್ಪಿದ್ದು, ಗಿರಿಜಮ್ಮ ಚೆನ್ನಯ್ಯ ಅವರಿಗೆ ಗುದ್ದಿತು. ಪರಿಣಾಮ ಗಿರಿಜಮ್ಮ ಚೆನ್ನಯ್ಯ ಅವರು ನೆಲಕ್ಕೆ ಅಪ್ಪಳಿಸಿದ್ದು, ಅವರ ತಲೆಗೆ ಗಂಭೀರ ಪ್ರಮಾಣದಲ್ಲಿ ಪೆಟ್ಟಾಯಿತು. ಕೂಲಿ ಕೆಲಸ ಮಾಡಿಕೊಂಡಿದ್ದ ಗಿರಿಜಮ್ಮ ಚೆನ್ನಯ್ಯ ಅವರು ನಾಗರಾಜ ಕೆಳಗಿನಮನೆ ಅವರ ಅತಿ ವೇಗದ ಬೈಕ್ ಚಾಲನೆಯಿಂದ ಸಮಸ್ಯೆಗೆ ಸಿಲುಕಿದರು. ಅಪಘಾತಕ್ಕೆ ಕಾರಣರಾದ ನಾಗರಾಜ ಕೆಳಗಿನಮನೆ ಅವರ ವಿರುದ್ಧ ಬನವಾಸಿ ದೊಡ್ಡಕೇರಿಯ ನಂದಕುಮಾರ ನಾಗರಾಜ ಚೆನ್ನಯ್ಯ ಅವರು ಪೊಲೀಸ್ ದೂರು ನೀಡಿದರು. ಬನವಾಸಿ ಪೊಲೀಸರು ಪ್ರಕರಣ ದಾಖಲಿಸಿದರು. - [ತೆಂಗಿನಕಾಯಿ ವ್ಯಾಪಾರ: ಹೊಡೆದಾಟಕ್ಕೆ ಕಾರಣವಾದ ಹೆಣ್ಣಿನ ಜೊತೆಗಿನ ವ್ಯವಹಾರ!](https://mobiletime.in/2026/02/coconut-business-dealing-with-a-woman-led-to-a-fight/): ಕಾರವಾರದ ಕೋಡಿಭಾಗದ ಅರವಿಂದ ನಾಯ್ಕ ಅವರ ಮನೆಗೆ ಸಂಗೀತಾ ಚಿಂಚನಕರ್ ಅವರು ಆಗಮಿಸಿದ್ದು, ಅದನ್ನು ಸಹಿಸದ ಅಕ್ಕಪಕ್ಕದ ಮನೆಯವರು ಅರವಿಂದ ನಾಯ್ಕ ಅವರಿಗೆ ಹಿಗ್ಗಾಮುಗ್ಗ ಥಳಿಸಿದ್ದಾರೆ. ಕಾರವಾರ ಕೋಡಿಭಾಗದ ಪಂಚರಿಶಿವಾಡದಲ್ಲಿ ಅರವಿಂದ ಹೊನ್ನಪ್ಪ ನಾಯ್ಕ ಅವರು ವಾಸವಾಗಿದ್ದಾರೆ. ತೆಂಗಿನ ಕಾಯಿ ವ್ಯಾಪಾರ ಮಾಡಿ ಅವರು ಬದುಕು ಕಟ್ಟಿಕೊಂಡಿದ್ದಾರೆ. ಸಂಗೀತಾ ಅಶೋಕ ಚಿಂಚನಕರ್ ಅವರು ಕಳೆದ ನಾಲ್ಕು ವರ್ಷಗಳಿಂದ ಅರವಿಂದ ನಾಯ್ಕ ಅವರ ಬಳಿಯೇ ತೆಂಗಿನ ಕಾಯಿ ಖರೀದಿಸುತ್ತಿದ್ದಾರೆ. ಮನೆಗೆ ಬಂದು ಅವರು ಕಾಯಿಪಡೆಯುತ್ತಿದ್ದು, ಅರವಿಂದ ನಾಯ್ಕ ಅವರ ಮನೆಯ ಅಕ್ಕಪಕ್ಕದವರು ಇದನ್ನು ವಿರೋಧಿಸಿದ್ದಾರೆ. ಅದಾಗಿಯೂ, ಜನವರಿ 5ರ ಮಧ್ಯಾಹ್ನ ಸಂಗೀತಾ ಚಿಂಚನಕರ್ ಅವರು ಅರವಿಂದ ನಾಯ್ಕ ಅವರ ಮನೆಗೆ ಬಂದಿದ್ದರು. ಆಗ, ಪಕ್ಕದ ಮನೆಯ ಬೀರಪ್ಪ ಕರಿಯಣ್ಣ ಅಂಬಿಗ, ಗಜಾನನ ಸುಬ್ರಾಯ ಅಂಬಿಗ ಹಾಗೂ ಶ್ರೀನಿವಾಸ ಬೀರಪ್ಪ ಅಂಬಿಗ ಅವರು ಅಲ್ಲಿ ಮುತ್ತಿಗೆ ಹಾಕಿದರು. `ನಿಮ್ಮ ಮನೆಗೆ ಆ ಹೆಂಗಸು ಬಂದಿದ್ದೇಕೆ?’ ಎಂದು ಆ ಮೂವರು ಪ್ರಶ್ನಿಸಿದರು. `ಆಕೆ ನನ್ನ ಮನೆಗೆ ಬಂದರೆ ನಿಮಗೇನು ತೊಂದರೆ?’ ಎಂದು ಅರವಿಂದ ನಾಯ್ಕರು ಮರುಪ್ರಶ್ನೆ ಹಾಕಿದರು. ಈ ವೇಳೆ ಮಾತಿನ ಚಕಾಮಕಿ ನಡೆದಿದ್ದು, ಅದು ಹೊಡೆದಾಟದ ಸ್ವರೂಪಪಡೆಯಿತು. ಆ ಮೂವರು ಸೇರಿ ಅರವಿಂದ ನಾಯ್ಕ ಅವರ ತಲೆ, ಬೆನ್ನು, ಕಾಲಿಗೆ ಪೆಟ್ಟು ಕೊಟ್ಟರು. ಎಲ್ಲರೂ ಸೇರಿ ಹಿಗ್ಗಾಮುಗ್ಗ ಥಳಿಸಿದರು. ಈ ವಿಷಯದ ಬಗ್ಗೆ ಅರವಿಂದ ನಾಯ್ಕ ಅವರು ಪೊಲೀಸ್ ದೂರು ನೀಡಿದ್ದು, ಅದಾದ ನಂತರ ನ್ಯಾಯಕ್ಕಾಗಿ ನ್ಯಾಯಾಲಯದ ಮೊರೆ ಹೋದರು. ನ್ಯಾಯಾಲಯದ ಸೂಚನೆ ಮೇರೆಗೆ ಕಾರವಾರ ನಗರಠಾಣೆ ಪೊಲೀಸರು ಥಳಿಸಿದ ಮೂವರ ವಿರುದ್ಧ ಪ್ರಕರಣ ದಾಖಲಿಸಿದರು. - [ಸರ್ಕಾರಿ ಸಹಾಯ: ಈ ಊರಿನಲ್ಲಿ ಮನೆ ರಿಪೇರಿಗೆ ಅರ್ಜಿ ಹಾಕುವವರೇ ಇಲ್ಲ!](https://mobiletime.in/2026/02/government-assistance-no-one-applies-for-home-repairs-in-this-town/): ಮುಖ್ಯಮಂತ್ರಿ ಅಮೃತ ನಗರೋತ್ಥಾನ ಯೋಜನೆಯ ಕಾಯ್ದಿಟ್ಟ ಅನುದಾನದ ಅಡಿ ಬಡ ಜನರಿಗೆ ಮನೆ ರಿಪೇರಿ ಮಾಡಿಕೊಡಲು ಸರ್ಕಾರ ಆಸಕ್ತಿವಹಿಸಿದೆ. ಹೊನ್ನಾವರದಲ್ಲಿ ನೂತನವಾಗಿ ರಚಿತವಾಗಿರುವ ಮಂಕಿ ಪಟ್ಟಣ ಪಂಚಾಯತದಲ್ಲಿ ಈ ಯೋಜನೆಗೆ ಅರ್ಜಿ ಹಾಕುವವರೇ ಇಲ್ಲ! `ಮನೆ ಛಾವಣಿ ಹಾಳಾದವರು ಅರ್ಜಿ ಸಲ್ಲಿಸಿ’ ಎಂದು ಸಕಾರ ಪ್ರಕಟಣೆ ಹೊರಡಿಸಿತ್ತು. ಆದರೆ, ಒಂದು ಅರ್ಜಿ ಸಹ ಈ ಊರಿನಲ್ಲಿ ಸಲ್ಲಿಕೆ ಆಗಿಲ್ಲ. ಹೀಗಾಗಿ `ಮನೆ ಛಾವಣಿ ಹಾಳಾದವರು ಅರ್ಜಿ ಸಲ್ಲಿಸಿ ದುರಸ್ಥಿ ಮಾಡಿಸಿಕೊಳ್ಳಿ’ ಎಂದು ಇದೀಗ ಮತ್ತೊಮ್ಮೆ ಸರ್ಕಾರ ಪ್ರಕಟಣೆ ಹೊರಡಿಸಿದೆ. 2022-23 ನೇ ಸಾಲಿನ ಮುಖ್ಯಮಂತ್ರಿ ಅಮೃತ ನಗರೋತ್ಥಾನ (ಮುನಿಸಿಪಾಲಟಿ) ಯೋಜನೆ ಹಂತ-4 ಯೋಜನೆಯಡಿ ಬಡ ಜನರಿಗೆ ಮನೆ ಛಾವಣಿ ದುರಸ್ಥಿಗೆ ಸರ್ಕಾರದಿಂದಲೇ ಹಣ ಕೊಡಲಾಗುತ್ತದೆ. ಈ ಯೋಜನೆಯ ಬಗ್ಗೆ ಸರ್ಕಾರ ವ್ಯಾಪಕ ಪ್ರಚಾರವನ್ನು ಮಾಡುತ್ತಿದೆ. ಅರ್ಹರನ್ನು ಗುರುತಿಸಿ ಯೋಜನೆಯನ್ನು ತಲುಪಿಸುವ ಪ್ರಯತ್ನ ನಡೆಯುತ್ತಿದೆ. ಹೊನ್ನಾವರದ ಮಂಕಿಯಲ್ಲಿ ಮೊದಲ ಬಾರಿ ಹೊರಡಿಸಿದ ಪ್ರಕಟಣೆಗೆ ಸ್ಪಂದನೆ ಸಿಗದ ಹಿನ್ನಲೆ ಫೆ 11ರವರೆಊ ಅವಕಾಶ ಕೋರಿ ಮತ್ತೊಮ್ಮೆ ಅವಕಾಶ ಕೊಟ್ಟಿದೆ. ಮಂಕಿ ಪಟ್ಟಣ ಪಂಚಾಯತ ವ್ಯಾಪ್ತಿಯಲ್ಲಿ ಮನೆ ರಿಪೇರಿ ಮಾಡಿಸಿಕೊಳ್ಳಲು ಬಯಸುವವರು ವಿವಿಧ ದೃಢೀಕೃತ ದಾಖಲೆ ಹಾಗೂ ಪ್ರಮಾಣ ಪತ್ರ ಸಲ್ಲಿಸಿದರೆ ಸರ್ಕಾರದ ಈ ಸೌಲಭ್ಯ ಸಿಗಲಿದೆ. ಅರ್ಜಿ ನಮೂನೆ ಜೊತೆ ಇನ್ನೂ ಹೆಚ್ಚಿನ ಮಾಹಿತಿಗೆ ಪಂಚಾಯತಗೆ ಭೇಟಿ ನೀಡುವುದು ಉತ್ತಮ. - [ಔಷಧಿ ಅಂಗಡಿ ಮೇಲೆ ಅಧಿಕಾರಿಗಳ ದಾಳಿ: ಕಿವಿ ಸ್ವಚ್ಛಗೊಳಿಸುವ ಬಡ್ಸ್'ನ್ನು ಬಿಡದೇ ವಶ!](https://mobiletime.in/2026/02/authorities-raid-drug-store-ear-cleaning-buds-seized-without-leaving-any-trace/): ಪ್ಲಾಸ್ಟಿಕ್ ಬಳಕೆ ತಡೆಯುವುದಕ್ಕಾಗಿ ಗೋಕರ್ಣದ ಔಷಧಿ ಅಂಗಡಿ ಮೇಲೆ ದಾಳಿ ನಡೆಸಿದ ಅಧಿಕಾರಿಗಳು ಕಿವಿ ಸ್ವಚ್ಛ ಮಾಡಲು ಬಳಸುವ ಬಡ್ಸ್ ವಶಕ್ಕೆಪಡೆದಿದ್ದಾರೆ. `ಪ್ಲಾಸ್ಟಿಕ್ ಅಂಶವಿರುವ ಕಾರಣ ಅದನ್ನು ಮಾರುವ ಹಾಗಿಲ್ಲ’ ಎಂದು ತಾಕೀತು ಮಾಡಿ, ದಂಡ ವಿಧಿಸಿದ್ದಾರೆ! ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯವರು ಅಪರೂಪಕ್ಕೆ ಒಮ್ಮೆ ಏಕ ಬಳಕೆ ಪ್ಲಾಸ್ಟಿಕ್ ಮಾರಾಟ ತಡೆಗೆ ಮುಂದಾಗುತ್ತಾರೆ. ಆ ಅವಧಿಯಲ್ಲಿ ಎಲ್ಲಾ ಕಡೆ ದಾಳಿ ನಡೆಸಿ ದೊಡ್ಡ ದೊಡ್ಡ ಪ್ಲಾಸ್ಟಿಕ್ ಮೂಟೆಗಳನ್ನು ರಾಶಿ ಹಾಕುತ್ತಾರೆ. ಹಾಗೇ, ಮೊನ್ನೆ ಗೋಕರ್ಣದ ವಿವಿಧ ಮಳಿಗೆಗಳ ಮೇಲೆಯೂ ಆ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಕಾರವಾರ ಪ್ರಾದೇಶಿಕ ಕಚೇರಿ ಪರಿಸರ ಅಧಿಕಾರಿ ಬಿ ಕೆ ಸಂತೋಷ್ ಅವರ ಜೊತೆ ಗೋಕರ್ಣ ಪಂಚಾಯತ ಅಭಿವೃದ್ಧಿ ಅಧಿಕಾರಿ ವೆಂಕಟರಮಣ ಪಟಗಾರ ಹಾಗೂ ಗ್ರಾ ಪಂ ಕಾರ್ಯದರ್ಶಿ ಮಂಜುನಾಥ ಸೇರಿ ಅನೇಕ ಮಳಿಗೆಗಳ ಬಾಗಿಲು ತಟ್ಟಿದ್ದಾರೆ. ಪ್ಲಾಸ್ಟಿಕ್ ಸ್ಟಾç, ಕಪ್ ಮತ್ತು ಕ್ಯಾರಿಬ್ಯಾಗ್ ಜೊತೆ ಔಷಧಿ ಅಂಗಡಿಯಲ್ಲಿ ಮಾರಾಟವಾಗುತ್ತಿದ್ದ ಕಿವಿ ಸ್ವಚ್ಛ ಮಾಡುವ ಬಡ್ಸ್’ನ್ನು ಜಪ್ತು ಮಾಡಿದ್ದಾರೆ. ಈ ಎಲ್ಲವೂ ಸೇರಿ 24 ಕೆಜಿ ಪ್ಲಾಸ್ಟಿಕ್ ವಶಕ್ಕೆಪಡೆದು ಅದನ್ನು ಮಾರಾಟ ಮಾಡುವವರಿಂದ 1700ರೂ ದಂಡ ವಸೂಲಿ ಮಾಡಿದ್ದಾರೆ. `ದಾಳಿ ಮಾಡಿದಕ್ಕೆ ಬೇಸರವಿಲ್ಲ. ದಂಡ ಪಾವತಿಸುವುದು ಸಹ ದೊಡ್ಡದಲ್ಲ. ಆದರೆ, ಸಣ್ಣ ಸಣ್ಣ ವ್ಯಾಪಾರಿಗಳ ಮೇಲೆ ಕ್ರಮ ಜರುಗಿಸುವ ಅಧಿಕಾರಿಗಳಿಗೆ ಕಂಪನಿ ಮಾಲಕರಿಗೆ ಬಿಸಿ ಮುಟ್ಟಿಸುವ ಧೈರ್ಯವಿಲ್ಲ’ ಎಂದು ಅಂಗಡಿಕಾರರು ಆಕ್ರೋಶವ್ಯಕ್ತಪಡಿಸಿದ್ದಾರೆ. `ಪ್ಲಾಸ್ಟಿಕ್ ಕ್ಯಾರಿ ಬ್ಯಾಗ್ ವಶಕ್ಕೆಪಡೆದಿದ್ದು ಸರಿಯಾಗಿದೆ. ಆದರೆ, ಟಿಶ್ಯು ಪೆಪರ್, ಕಿವಿ ಸ್ವಚ್ಚ ಮಾಡುವ ಬಡ್ಸನ್ನು ಬಿಡದೇ ಜಪ್ತು ಮಾಡಿದ್ದು ಸರಿಯಲ್ಲ. ಖರೀದಿ ಬಿಲ್ ತೋರಿಸಿದರೂ ಅದನ್ನು ಬಿಟ್ಟಿಲ್ಲ’ ಎಂದು ಅಂಗಡಿಕಾರರು ದೂರಿದ್ದಾರೆ.   - [ಹೃದಯಘಾತ: ತವರಿಗೆ ಬಂದಿದ್ದ ಬಾಣಂತಿ ಬದುಕು ಅಂತ್ಯ](https://mobiletime.in/2026/02/heart-attack-banantis-life-ends-after-returning-home/): ಮಗುವಿಗೆ ಜನ್ಮ ನೀಡುವುದಕ್ಕಾಗಿ ದಾಂಡೇಲಿಯ ತವರುಮನೆಗೆ ಬಂದಿದ್ದ ಹೇಮಾವತಿ ತೊಟ್ಟಿನಾಯಕ ಅವರು ಹೃದಯಕ್ಕೆ ಆದ ಆಘಾತದಿಂದ ಸಾವನಪ್ಪಿದ್ದಾರೆ. ಎದೆನೋವಿನಿಂದ ಬಳಲುತ್ತಿದ್ದ ಅವರನ್ನು ಧಾರವಾಡದ ಆಸ್ಪತ್ರೆಗೆ ಕರೆದೊಯ್ದರೂ ಬದುಕಿಸಲು ಸಾಧ್ಯವಾಗಲಿಲ್ಲ. ದಾಂಡೇಲಿ ಗಾಂಧೀನಗರದ ಹೇಮಾವತಿ ಪ್ರೇಮಕುಮಾರ ತೊಟ್ಟಿನಾಯಕ (29) ಅವರನ್ನು ತಮಿಳುನಾಡಿನ ವ್ಯಕ್ತಿಯೊಬ್ಬರಿಗೆ ಮದುವೆ ಮಾಡಿಕೊಡಲಾಗಿತ್ತು. ಗರ್ಭಿಣಿ ಆಗಿದ್ದ ಅವರು 9 ತಿಂಗಳ ಹಿಂದೆ ತಮ್ಮ ತವರೂರಿಗೆ ಬಂದಿದ್ದರು. ಮೂರು ತಿಂಗಳ ಹಿಂದೆ ಗಂಡು ಮಗುವಿಗೆ ಜನ್ಮ ನೀಡಿದ್ದರು. ತವರುಮನೆಯವರೇ ಬಾಣಂತಿ ಹಾಗೂ ಮಗುವಿನ ಆರೈಕೆ ಮಾಡುತ್ತಿದ್ದರು. ಜನವರಿ 31ರಂದು ಎದೆನೋವು ಹೇಮಾವತಿ ಅವರಿಗೆ ಎದೆನೋವು ಕಾಣಿಸಿಕೊಂಡಿತು. ಅವರ ಅಕ್ಕ ರಾಮಕ್ಕ ಹಾಗೂ ಭಾವ ಕೃಷ್ಣ ಸೇರಿ ಹೇಮಾವತಿ ಅವರನ್ನು ದಾಂಡೇಲಿ ಆಸ್ಪತ್ರೆಗೆ ದಾಖಲು ಮಾಡಿದರು. ಅಲ್ಲಿನ ವೈದ್ಯರು ಹೆಚ್ಚಿನ ಚಿಕಿತ್ಸೆಗೆ ಧಾರವಾಡಕ್ಕೆ ಶಿಫಾರಸ್ಸು ಮಾಡಿದರು. ಧಾರವಾಡದ ಆಸ್ಪತ್ರೆಗೆ ಹೋಗುವಾಗಲೇ ಹೇಮಾವತಿ ಅವರು ಕೊನೆಯುಸಿರೆಳೆದರು. ಧಾರವಾಡದ ಸಿವಿಲ್ ಆಸ್ಪತ್ರೆ ವೈದ್ಯರು ಸಾವನ್ನು ದೃಢಪಡಿಸಿದ್ದು, ಬೆಳಗಾವಿಯ ಖಾನಾಪುರದಲ್ಲಿ ಧರ್ಮಸ್ಥಳ ಸಂಘದಲ್ಲಿ ಕೆಲಸ ಮಾಡುವ ತಿಮ್ಮಕ್ಕ ಲೋಬೋ ಅವರು ಈ ಮಾಹಿತಿಯನ್ನು ಪೊಲೀಸರಿಗೆ ತಿಳಿಸಿದರು. ದಾಂಡೇಲಿ ಪೊಲೀಸರು ಪ್ರಕರಣ ದಾಖಲಿಸಿದರು. - [ಸಾಧಕ ಶಿಕ್ಷಕನಿಗೆ ಸನ್ಮಾನ](https://mobiletime.in/2026/02/honoring-a-successful-teacher/): 32 ವರ್ಷಗಳ ಕಾಲ ಶಿಕ್ಷಕರಾಗಿ ಸೇವೆ ಸಲ್ಲಿಸಿದ ಕುಮಟಾದ ಪಾಂಡುರoಗ ಹುಲಸ್ವಾರ ಅವರು ನಿವೃತ್ತರಾಗಿದ್ದಾರೆ. ಮುಂಡಗೋಡ, ಹೊಂಡದಕ್ಕಲ, ಹೊನ್ನಳ್ಳಿ, ಗರಡಿ ಬೈಲ್, ಕತಗಾಲದಲ್ಲಿಯೂ ಪಾಂಡುರoಗ ಹುಲಸ್ವಾರ್ ಅವರು ಸೇವೆ ಸಲ್ಲಿಸಿದ್ದಾರೆ. ಅದಾದ ನಂತರ ತಾವು ಕಲಿತ ಕುಮಟಾದ ಚಿತ್ರಗಿ ಶಾಲೆಯಲ್ಲಿ ಶಿಕ್ಷಕರಾಗಿ ಆಗಮಿಸಿದ ಅವರು ಅಲ್ಲಿಯೇ ನಿವೃತ್ತರಾಗಿದ್ದಾರೆ. ಪಾಂಡುರoಗ ಹುಲಸ್ವಾರ ಅವರ ಪತ್ನಿ ರಾಜೇಶ್ವರಿ ಅವರು ಸಹ ಕೂಜಳ್ಳಿ ಶಾಲೆಯಲ್ಲಿದ್ದು, ಮಕ್ಕಳ ಮನಸ್ಸಿನಲ್ಲಿ ಜ್ಞಾನದ ಪ್ರಸಾರ ಮಾಡುತ್ತಿದ್ದಾರೆ. ಈ ಎಲ್ಲಾ ಹಿನ್ನಲೆ ಜನಸಾಮಾನ್ಯರ ಸಮಾಜ ಕಲ್ಯಾಣ ಕೇಂದ್ರದವರು ಪಾಂಡುರoಗ ಹುಲಸ್ವಾರ ಅವರ ಸೇವೆ ಸ್ಮರಿಸಿದ್ದಾರೆ. ಅವರ ಮನೆಗೆ ಹೊಗಿ ಶಿಕ್ಷಕರನ್ನು ಗೌರವಿಸಿದ್ದಾರೆ. `ಜನರಿಗೆ ಅಗತ್ಯವಿರುವ ಕಾಗದ ಪತ್ರಗಳನ್ನು ತೆಗೆಸುವುದು ಹಾಗೂ ಅದನ್ನು ಕ್ರಮಬದ್ಧವಾಗಿಸುವಲ್ಲಿ ಜನಸಾಮಾನ್ಯರ ಸಮಾಜ ಕಲ್ಯಾಣ ಕೇಂದ್ರ ಹಾಗೂ ನಾಗೇಶ ಹುಲಸ್ವಾರ್ ಅವರ ಶ್ರಮ ಅಸಾಮಾನ್ಯ’ ಎಂದು ಸನ್ಮಾನ ಸ್ವೀಕರಿಸಿದ ಪಾಂಡುರoಗ ಹುಲಸ್ವಾರ್ ಅವರು ಹೇಳಿದರು. ಕೇಂದ್ರದ ಅಧ್ಯಕ್ಷ ಅಗ್ನೇಲ್ ರೋಡ್ರಿಗಸ್ ಸಾಮಾಜಿಕ ಕಾರ್ಯಕರ್ತ ಸುಧಾಕರ ನಾಯ್ಕ, ನಿವೃತ್ತ ಅಧಿಕಾರಿ ನಾಗೇಶ ಹುಲಸ್ವಾರ, ವಿನಾಯಕ ಪಟಗಾರ, ಹಾಗೂ ಇಸ್ಮಾಯಿಲ್ ಶೇಖ್ ಇದ್ದರು. - [ನಿರ್ಮಲ ಬಜೆಟ್ ಜನಪರ](https://mobiletime.in/2026/02/clean-budget-is-pro-people/): `ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿದ ಬಜೆಟ್ ಜನಪರ’ ಎಂದು ವಿಧಾನ ಪರಿಷತ್ ಶಾಸಕ ಗಣಪತಿ ಉಳ್ವೇಕರ್ ಅವರು ಹೇಳಿದ್ದಾರೆ. ಬಜೆಟ್ ಕುರಿತು ವಿಶ್ಲೇಷಿಸಿದ ಅವರು `ಕರಾವಳಿ ಸೇರಿ ಉತ್ತರ ಕನ್ನಡ ಜಿಲ್ಲೆಯ ಅಭಿವೃದ್ಧಿಗೆ ಪೂರಕವಾಗಿ ಬಜೆಟ್ ಮಂಡಿಸಲಾಗಿದೆ. ಮೀನುಗಾರಿಕೆ ಹಾಗೂ ಪ್ರವಾಸೋದ್ಯಮಕ್ಕೆ ಬಜೆಟ್ ಒತ್ತು ನೀಡಿದ್ದು ಆಶಾದಾಯಿಕ ಬೆಳವಣಿಗೆ’ ಎಂದು ಹೇಳಿದ್ದಾರೆ. `ಮೀನುಗಾರಿಕೆಗಾಗಿ ಪ್ರತ್ಯೇಕ ಸಚಿವಾಲಯ ಸ್ಥಾಪನೆಯಿಂದ ಅನೇಕ ಸಮಸ್ಯೆಗಳು ದೂರವಾಗಲಿದೆ’ ಎಂದವರು ಹೇಳಿದ್ದಾರೆ. `ಮತ್ಸö್ಯ ಸಂಪದ ಯೋಜನೆ ಅಡಿ 55 ಲಕ್ಷ ಉದ್ಯೋಗ ಸೃಷ್ಠಿಗೆ ಒತ್ತು ನೀಡಿರುವುದರಿಂದ ನಿರುದ್ಯೋಗ ಸಮಸ್ಯೆ ದೂರವಾಗಲಿದೆ. ಇದರೊಂದಿಗೆ ಪ್ರವಾಸೋದ್ಯಮ ಮತ್ತು ಆತಿಥ್ಯ ವಲಯವನ್ನು ಬಲಪಡಿಸುವ ಮೂಲಕ ಆರ್ಥಿಕತೆಯನ್ನು ವಿಸ್ತರಿಸುವ ಗುರಿಯೂ ಉದ್ಯೋಗ ಸೃಷ್ಠಿಗೆ ನೆರವು ನೀಡಲಿದೆ. ಒಳನಾಡು ಮತ್ತು ಕರಾವಳಿ ಮೀನುಗಾರಿಕೆಗೆ ಆಧುನಿಕ ತಂತ್ರಜ್ಞಾನ ಹಾಗೂ ಮೂಲಸೌಕರ್ಯ, ಕರ್ನಾಟಕದ ಅಣೆಕಟ್ಟುಗಳಲ್ಲಿ ಮೀನುಗಾರಿಕೆ ಅಭಿವೃದ್ಧಿಯ ಬಗ್ಗೆ ಸಚಿವರು ಬಜೆಟಿನಲ್ಲಿ ವಿವರಿಸಿದ್ದು, ಈ ಬಜೆಟ್ ಜನಪರ ಕಾಳಜಿಯನ್ನು ಹೊಂದಿದೆ’ ಎಂದು ಗಣಪತಿ ಉಳ್ವೇಕರ್ ಅವರು ಹರ್ಷವ್ಯಕ್ತಪಡಿಸಿದ್ದಾರೆ.   - [ಬೈಕುಗಳ ನಡುವೆ ಡಿಕ್ಕಿ: ಸಾವು-ನೋವು!](https://mobiletime.in/2026/01/collision-between-bikes-deaths-and-injuries/): ಮುರುಡೇಶ್ವರ ಬಳಿ ನಡೆದ ಬೈಕ್ ಅಪಘಾತದಲ್ಲಿ ವ್ಯಕ್ತಿಯೊಬ್ಬರು ಸಾವನಪ್ಪಿದ್ದಾರೆ. ಮತ್ತೊಬ್ಬರು ಗಾಯಗೊಂಡಿದ್ದಾರೆ. ಜನವರಿ 30ರ ರಾತ್ರಿ ಭಟ್ಕಳ ಹೊನ್ನಾವರ ರಸ್ತೆಯಲ್ಲಿ ಭಟ್ಕಳದ ಸಚಿನ್ ಮುರುಗಾ ಅವರು ಬೈಕ್ ಓಡಿಸಿಕೊಂಡು ಹೊರಟಿದ್ದರು. ಮಾವಿನಕಟ್ಟಾದ ಕೋಕ್ತಿ ಕ್ರಾಸಿನ ಬಳಿ ಅವರ ಬೈಕು ಅಪಘಾತಕ್ಕೀಡಾಯಿತು. ರಾತ್ರಿ 9 ಗಂಟೆ ಅವಧಿಯಲ್ಲಿ ಅವರ ಬೈಕು ಮತ್ತೊಂದು ಬೈಕಿಗೆ ಗುದ್ದಿತು. ಅಪಘಾತಕ್ಕೀಡಾದ ಮತ್ತೊಂದು ಬೈಕಿನಲ್ಲಿ ಕೊಕ್ತಿಯ ಜಮಾಲಿಮನೆಯ ನಾಗರಾಜ ವೆಂಕಟ್ರಮಣ ನಾಯ್ಕ (30) ಅವರು ಚಲಿಸುತ್ತಿದ್ದರು. ಅವರ ಜೊತೆ ಮತ್ತೊಬ್ಬರು ಸಹ ಆ ಬೈಕಿನಲ್ಲಿದ್ದರು. ಅಪಘಾತದ ರಭಸಕ್ಕೆ ಅವರಿಬ್ಬರು ಗಾಯಗೊಂಡರು. ಆ ಪೈಕಿ ಜನವರಿ 31ರಂದು ಬೆಳಗ್ಗೆ ನಾಗರಾಜ ವೆಂಕಟ್ರಮಣ ನಾಯ್ಕ ಅವರು ಸಾವನಪ್ಪಿದರು. ಈ ಅಪಘಾತದ ಬಗ್ಗೆ ಮಂಜುನಾಥ ಮಾಸ್ತಿ ನಾಯ್ಕ ಅವರು ಮುರುಡೇಶ್ವರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸಚಿನ್ ಮುರುಗಾ ಅವರ ವಿರುದ್ಧ ಪ್ರಕರಣವನ್ನು ದಾಖಲಿಸಿದ್ದಾರೆ.   - [ಕಿಲಾಡಿ ಕಳ್ಳ ಕೊನೆಗೂ ಸಿಕ್ಕಿಬಿದ್ದ!](https://mobiletime.in/2026/01/the-notorious-thief-was-finally-caught/): ಮುಂಡಗೋಡದ ಅಂಬೇಡ್ಕರ್ ಓಣಿಯ ಬಸವರಾಜ ಚಲವಾದಿ ಅವರ ಮನೆಯಲ್ಲಿ ಕಳ್ಳತನ ಮಾಡಿದ್ದ ಮಂಜುನಾಥ ನಾಯಕ ಅವರು ಸಿಕ್ಕಿಬಿದ್ದಿದ್ದಾರೆ. ಆ ಕಳ್ಳನ ಬಳಿಯಿದ್ದ 2.44 ಲಕ್ಷ ರೂ ಮೌಲ್ಯದ ಚಿನ್ನಾಭರಣವನ್ನು ಪೊಲೀಸರು ಜಪ್ತು ಮಾಡಿದ್ದಾರೆ. ಮುಂಡಗೋಡ ಪಟ್ಟಣದ ಅಂಬೇಡ್ಕರ್ ಓಣಿಯಲ್ಲಿ ಜನವರಿ 27ರಂದು ಕಳ್ಳತನ ನಡೆದಿತ್ತು. ಬಸವರಾಜ ಚಲವಾದಿ ಅವರು ಕೆಲಸಕ್ಕೆ ಹೋದಾಗ ಅವರ ಮನೆಗೆ ಕಳ್ಳರು ನುಗ್ಗಿದ್ದರು. ಕಪಾಟಿನಲ್ಲಿದ್ದ ಬಂಗಾರದ ಆಭರಣ ಹಾಗೂ ಬೆಳ್ಳಿ ಸರವನ್ನು ದೋಚಿದ್ದರು. ಪೊಲೀಸರು ಪ್ರಕರಣ ದಾಖಲಿಸಿದ್ದು, ತನಿಖೆ ಶುರು ಮಾಡಿದ್ದರು. ಮುಂಡಗೋಡ ಪೊಲೀಸ್ ನಿರೀಕ್ಷಕ ರಂಗನಾಥ ನೀಲಮ್ಮನವರ ವಿಶೇಷ ತಂಡ ರಚಿಸಿ ಕಳ್ಳರ ಶೋಧ ನಡೆಸಿದರು. ಜನವರಿ 31 ರಂದು ಬೆಳಗ್ಗೆ ಧಾರವಾಡ ಜಿಲ್ಲೆ ಕಲಘಟಗಿ ತಾಲೂಕಿನ ತಬಕದ ಹೊನ್ನಳ್ಳಿಯ ಮಂಜುನಾಥ ಬಸವಂತಪ್ಪ ನಾಯಕ (34) ಎಂಬಾತರ ಮೇಲೆ ಅನುಮಾನ ಮೂಡಿದ್ದು, ಪೊಲೀಸರು ಮಂಜುನಾಥ ನಾಯಕ ಅವರನ್ನು ವಿಚಾರಣೆಗೆ ಒಳಪಡಿಸಿದರು. ಆ ವೇಳೆ ಮಂಜುನಾಥ ನಾಯಕರ ಬಳಿ ಬಂಗಾರದ ಗುಂಡಿನ ಸರ, ಇಯರ್ ರಿಂಗ್, ಲಕ್ಷ್ಮಿ ಲಾಕೆಟ್, ಉಂಗುರ ಮೊದಲಾದವು ಕಾಣಿಸಿದವು. ಆ ಎಲ್ಲಾ ವಸ್ತುಗಳು ಬಸವರಾಜ ಚಲವಾದಿ ಅವರಿಗೆ ಸೇರಿದ್ದು ಎಂದು ದೃಢವಾಯಿತು. ಹೀಗಾಗಿ ಕಳ್ಳನನ್ನು ಪೊಲೀಸರು ಬಂಧಿಸಿ, ನ್ಯಾಯಾಲಯಕ್ಕೆ ಒಪ್ಪಿಸಿದರು. - [ಅಕ್ರಮ ಆಟಕ್ಕೆ ಪೊಲೀಸರ ಅಡ್ಡಗಾಲು!](https://mobiletime.in/2026/01/police-crackdown-on-illegal-gambling/): ಹೊನ್ನಾವರಕ್ಕೆ ವರ್ಗವಾಗಿರುವ ಪಿಸೈ ಮಹಾಂತೇಶ ವಾಲ್ಮಿಕಿ ಅವರು ಅಲ್ಲಿನ ಅಕ್ರಮ ಆಟಗಳಿಗೆ ಕಡಿವಾಣ ಹಾಕುವ ಪ್ರಯತ್ನ ಮಾಡಿದ್ದಾರೆ. ಒಂದು ವಾರದ ಹಿಂದೆ ಹೊನ್ನಾವರ ಪಿಸೈ ಆಗಿ ಅಧಿಕಾರವಹಿಸಿಕೊಂಡ ಮಹಾಂತೇಶ ವಾಲ್ಮೀಕಿ ಅವರು ಅಲ್ಲಿನ ಆಗು-ಹೋಗುಗಳ ಅಧ್ಯಯನ ಮಾಡಿದ್ದಾರೆ. ಮಟ್ಕಾ, ಅಕ್ರಮ ಮರಳುಗಾರಿಕೆಯ ವಿರುದ್ಧ ಅವರು ಕಾನೂನು ಕ್ರಮ ಜರುಗಿಸಿದ್ದಾರೆ. ಹೊನ್ನಾವರ ಕರ್ಕಿಯ ರಾಮೇಶ್ವರಕಂಬಿ ಬಳಿ ವ್ಯಾಪಾರಿ ಮಟ್ಕಾ ಆಡಿಸುತ್ತಿರುವುದನ್ನು ಅರಿತು ಅಲ್ಲಿ ದಾಳಿ ಮಾಡಿದ್ದಾರೆ. ಅದಾದ ನಂತರ ಕಾಸರಕೋಡು ತೊಪ್ಪಲಿನ ಚಾಲಕ ಪ್ರಕಾಶ ಶ್ರೀನಿವಾಸ ಪುರಾಣಿಕ ಅವರು ಅಕ್ರಮ ಮರಳುಗಾರಿಕೆ ನಡೆಸುತ್ತಿರುವುದಕ್ಕೂ ತಡೆ ಒಡ್ಡಿದ್ದಾರೆ. ಜನವರಿ 29ರಂದು ಹೊನ್ನಾವರ ಕರ್ಕಿ ರಾಮೇಶ್ವರಕಂಬಿ ಬಳಿ ಅಶೋಕ ನಾಯ್ಕ ಅವರು 1 ರೂಪಾಯಿಗೆ 80ರೂ ಕೊಡುವುದಾಗಿ ಹೇಳಿ ಜನರಿಂದ ಹಣ ಸಂಗ್ರಹಿಸುತ್ತಿದ್ದರು. ವ್ಯಾಪಾರಿಯಾಗಿರುವ ಅವರು ಮಟ್ಕಾ ಚೀಟಿ ವ್ಯವಹಾರವನ್ನು ನಡೆಸುತ್ತಿದ್ದರು. ಕರ್ಕಿ ಗ್ರಾಮದ ದೇವೇಂದ್ರ ಕಾಂಪ್ಲೇಕ್ಸಿನ ಪಕ್ಕದ ಬೇಲೆಗದ್ದೆ ಕೇರಿ ಬಳಿ ನಿಂತಿದ್ದ ಅಶೋಕ ನಾಯ್ಕ ಅವರ ಮೇಲೆ ಮಹಾಂತೇಶ ವಾಲ್ಮೀಕಿ ಅವರು ದಾಳಿ ಮಾಡಿದರು. ಆ ದಿನ ಅವರು ಸಂಗ್ರಹಿಸಿದ್ದ 750ರೂ ಹಣದ ಜೊತೆ ಬಾಲ್ ಪೆನ್ನು ಸೇರಿ ವಿವಿಧ ಪರಿಕ್ಕರಗಳನ್ನ ವಶಕ್ಕೆಪಡೆದರು. ಜನವರಿ 30ರಂದು ನಸುಕಿನ 2 ಗಂಟೆ ಅವಧಿಯಲ್ಲಿ ನದಿ ತೀರದ ಕಡೆಯಿಂದ ಬರುವ ಲಾರಿಗಳಿಗೆ ಜನ ಅಡ್ಡಲಾಗಿ ಕೈ ಮಾಡಿದ್ದಾರೆ. ಆ ಲಾರಿಯನ್ನು ಜನ ಪೊಲೀಸ್ ಠಾಣೆಗೆ ಕರೆತಂದಿದ್ದು, ಮಹಂತೇಶ ವಾಲ್ಮೀಕಿ ಅವರು ಮರಳು ಸಾಗಾಣಿಕೆ ಮಾಡುತ್ತಿದ್ದ ಲಾರಿ ಚಾಲಕ ಪ್ರಕಾಶ ಪುರಾಣಿಕ್ ವಿರುದ್ಧ ಕಠಿಣ ಕ್ರಮ ಜರುಗಿಸಿದ್ದಾರೆ. ಕವಲಕ್ಕಿಯ ಲೆಕ್ಕಪರಿಶೋಧಕ ಶಶಾಂಕ ವೆಂಕಟ್ರಮಣ ಹೆಗಡೆ ಹಾಗೂ ತಾರಿಕೆರೆಯ ವಿನಾಯಕ ನಾರಾಯಣ ಹೆಗಡೆ ಅವರ ನೆರವಿನಿಂದ ಮರಳನ್ನು ಜಪ್ತು ಮಾಡಿದ್ದಾರೆ. - [ಮಹಿಳೆಯ ಮೈ ಸ್ಪರ್ಶಿಸಿದ ಅಡುಗೆಯ ಅಗ್ನಿ: ಸಾವು!](https://mobiletime.in/2026/01/womans-body-touched-by-cooking-fire-death/): ಕಾರವಾರದ ವೈದ್ಯಕೀಯ ಸಿಬ್ಬಂದಿಯೊಬ್ಬರು ಅಡುಗೆ ಮಾಡುವಾಗ ಬೆಂಕಿ ತಗುಲಿ ಸಾವನಪ್ಪಿದ್ದಾರೆ. ಸುಟ್ಟ ಗಾಯಗಳಿಂದ ನರಳಾಡುತ್ತಿದ್ದ ಅವರನ್ನು ಮಂಗಳೂರಿನ ಎಜೆ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದರೂ ಬದುಕಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಕಾರವಾರದ ಸಾಯಿನಗರ ಬಳಿಯ ಗಿಂಡಿವಾಡದಲ್ಲಿ ಜೋಸ್ನಾ ವಿಜಯ ಮಾಂಗ್ರೇಕರ್ (38) ಅವರು ವಾಸವಾಗಿದ್ದರು. ವೈದ್ಯಕೀಯ ಸೇವೆಯಲ್ಲಿ ಪರಿಣಿತಿಪಡೆದಿದ್ದ ಜೋಸ್ನಾ ಮಾಂಗ್ರೇಕರ್ ಅವರು ಹಲ್ಲಿನ ಡಾಕ್ಟರ್ ಒಬ್ಬರ ಬಳಿ ಕೆಲಕ್ಕಿದ್ದರು. 2025ರ ಡಿಸೆಂಬರ್ 12ರಂದು ಅವರು ಮನೆಯಲ್ಲಿ ಅಡುಗೆ ಮಾಡುವಾಗ ಸೀರೆ ಸೆರಗಿಗೆ ಬೆಂಕಿ ತಗುಲಿತು. ಬೆಂಕಿಯ ಜ್ವಾಲೆ ಅವರ ಇಡೀ ದೇಹವನ್ನು ಆವರಿಸಿತು. ನೀರು ತಾಗಿಸಲು ಇರಿಸಿದ್ದ ಗ್ಯಾಸ್ ಸ್ಟೌವ್ ಉರಿಯೂ ಅವರ ದೇಹ ಸ್ಪರ್ಶಿಸಿದ್ದು, ತೊಡೆ, ಬುಜ, ಕೈ ಸೇರಿ ವಿವಿಧ ಕಡೆ ಗಂಭೀರ ಪ್ರಮಾಣದಲ್ಲಿ ಗಾಯವಾಗಿತ್ತು. ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆಪಡೆದ ಅವರನ್ನು ಉನ್ನತ ಚಿಕಿತ್ಸೆಗಾಗಿ ಮಂಗಳೂರು ಕೆ ಎಸ್ ಹೆಗಡೆ ಆಸ್ಪತ್ರೆಗೆ ಸೇರಿಸಲಾಯಿತು. ಆದರೆ, ಒಂದುವರೆ ತಿಂಗಳುಗಳ ಕಾಲ ನೋವು ಅನುಭವಿಸಿದ ಅವರು ಜನವರಿ 30ರ ರಾತ್ರಿ ಕೊನೆಯುಸಿರೆಳೆದರು. ಅವರ ಸಾವಿನ ಬಗ್ಗೆ ಸಿದ್ದಾಂತ ಮಹದೇವ್ ಮಾಂಗ್ರೇಕರ್ ಅವರು ಕಾರವಾರ ನಗರ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿದರು. `ಅಡುಗೆ ಮಾಡುವಾಗ ಮುನ್ನಚ್ಚರಿಕೆವಹಿಸಿ’   - [ಅಪಘಾತ: ಸ್ವರ್ಗ ಸೇರುವ ಮುನ್ನ ಅನುಭವಿಸಿದ ನೋವು ನರಕ!](https://mobiletime.in/2026/01/accident-the-pain-experienced-before-reaching-heaven-was-hell/): ಸಿದ್ದಾಪುರ ಆಡುಕಟ್ಟಾದ ಕೃಷ್ಣ ನಾಯ್ಕ ಅವರು ಬೈಕಿನಿಂದ ಬಿದ್ದು ಸಾವನಪ್ಪಿದ್ದಾರೆ. 20 ದಿನಗಳ ಕಾಲ ನಾಲ್ಕು ಆಸ್ಪತ್ರೆ ಓಡಾಟ, ಲಕ್ಷಾಂತರ ರೂ ವೆಚ್ಚ ಮಾಡಿದರೂ ಅವರನ್ನು ಬದುಕಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಸಿದ್ದಾಪುರದ ಆಡುಕಟ್ಟಾದ ಕೃಷ್ಣ ರಾಮ ನಾಯ್ಕ ಅವರು ಕೃಷಿ ಕೆಲಸ ಮಾಡಿಕೊಂಡು ಬದುಕು ಕಟ್ಟಿಕೊಂಡಿದ್ದರು. ಜನವರಿ 10ರಂದು ತಾಳಗುಪ್ಪಾ ಕಡೆಯಿಂದ ಆಡುಕಟ್ಟಾ ಕಡೆ ಅವರು ಬೈಕ್ ಓಡಿಸುತ್ತಿದ್ದರು. ಅವರ ಬೈಕು ಎಂದಿಗಿAತ ವೇಗವಾಗಿ ಸಂಚರಿಸಿದ್ದು, ಮುಸುವಳ್ಳಿ ಬಳಿಯ ಚೌಡಿಗುಂಡಿ ಬಸ್ ನಿಲ್ದಾಣದ ಬಳಿ ಅಪಘಾತಕ್ಕೀಡಾಯಿತು. ಬೈಕ್ ಸ್ಕಿಡ್ ಆಗಿದ್ದರಿಂದ ಕೃಷ್ಣ ನಾಯ್ಕ ಅವರ ತಲೆಗೆ ನೋವಾಯಿತು. ಗುತ್ತಿಗೆ, ಮೈ-ಕೈಗೆ ಸಹ ಗಾಯವಾಯಿತು. ಮೊದಲು ಕೃಷ್ಣ ನಾಯ್ಕ ಅವರನ್ನು ಸಾಗರ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ನಂತರ ಶಿವಮೊಗ್ಗ ಸರ್ಜಿ ಆಸ್ಪತ್ರೆಗೆ ದಾಖಲಿಸಲಾಯಿತು. ಅಲ್ಲಿಂದ ಮುಂದೆ ಮಂಗಳೂರಿಗೆ ಕಳುಹಿಸಿ ಕೆ ಎಸ್ ಹೆಗಡೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಯಿತು. ಅಲ್ಲಿಯೂ ಚೇತರಿಕೆ ಕಾಣದ ಪರಿಣಾಮ ಊರಿಗೆ ಕರೆತರಲಾಗುತ್ತಿದ್ದು, ಬರುವಾಗಲೇ ಉಸಿರಾಟ ಸಮಸ್ಯೆ ಕಾಣಿಸಿತು. ಹೀಗಾಗಿ ಕೃಷ್ಣ ನಾಯ್ಕ ಅವರನ್ನು ಜನವರಿ 28ರಂದು ಅಲ್ಲಿಂದ ಸಾಗರದ ಭಾಗ್ವತ ಆಸ್ಪತ್ರೆಗೆ ದಾಖಲಿಸಿ, ಅಲ್ಲಿ ಎರಡು ದಿನ ಆರೈಕೆ ಮಾಡಲಾಯಿತು. ಜನವರಿ 30ರಂದು ಅವರು ಸಾವಪ್ಪಿದರು. ಬೇಡ್ಕಣಿ ಹುಲಿಮನೆಯ ವಕೀಲ ಸುಧರ್ಶನ ಸೀತಾರಾಮ ನಾಯ್ಕ ಅವರು ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿ, ಪ್ರಕರಣ ದಾಖಲಿಸಿದರು.   - [ಹೆದ್ದಾರಿ ಮೇಲೆ ಹೊತ್ತಿ ಉರಿದ ಟ್ಯಾಂಕರ್!](https://mobiletime.in/2026/01/a-tanker-caught-fire-on-the-highway/): ಹುಬ್ಬಳ್ಳಿ – ಅಂಕೋಲಾ ಹೆದ್ದಾರಿ ಮಾರ್ಗವಾಗಿ ಎಥನಾಲ್ ಸಾಗಿಸುತ್ತಿದ್ದ ಟ್ಯಾಂಕರಿಗೆ ಯಲ್ಲಾಪುರದಲ್ಲಿ ಬೆಂಕಿ ಬಿದ್ದಿದೆ. ಪರಿಣಾಮ ಲಾರಿ ಹೊತ್ತಿ ಉರಿದಿದೆ. ಯಲ್ಲಾಪುರದ ಅರಬೈಲ್ ಘಟ್ಟದಲ್ಲಿ ಈ ಅವಘಡ ನಡೆದಿದೆ. ಎಸ್ ಆಕಾರದ ತಿರುವಿನಿಂದ 1ಕಿಮೀ ಮುಂದೆ ಟ್ಯಾಂಕರಿಗೆ ಬೆಂಕಿ ಬಿದ್ದಿದೆ. ಟ್ಯಾಂಕರ್ ಡಿವೈಡರಿಗೆ ಡಿಕ್ಕಿ ಹೊಡೆದಿರುವುದೇ ಅವಘಡಕ್ಕೆ ಕಾರಣ. ಟ್ಯಾಂಕರ್ ಚಾಲಕನ ಅತಿವೇಗ ಹಾಗೂ ಆತುರದ ನಿರ್ಧಾರದಿಂದ ಲಾರಿ ಮಾಲಕನಿಗೆ ನಷ್ಟವಾಗಿದೆ. ಜನವರಿ 29ರಂದು ವಿಜಯಪುರದ ಶಿವಾನಂದ ಬಿರಾದರ್ ಅವರು ಆ ಟ್ಯಾಂಕರ್ ಓಡಿಸಿಕೊಂಡು ಬಂದಿದ್ದು, ನಿದ್ದೆಯ ಮಂಪರಿನಲ್ಲಿ ಅಪಘಾತವನ್ನುಂಟು ಮಾಡಿದ್ದಾರೆ. ಲಾರಿ ಪಲ್ಟಿಯಾಗಿದ್ದು, ಆ ವೇಳೆ ನಡೆದ ಘರ್ಷಣೆಯಲ್ಲಿ ಎಥನಾಲ್’ಗೆ ಅಗ್ನಿ ಸ್ಪರ್ಶವಾಗಿದೆ. ಎಥನಾಲ್ ಕಂಪನಿಯವರ ಜೊತೆ ಚರ್ಚಿಸಿದ ಬೆಳಗಾವಿಯ ಲಾರಿ ಮಾಲಕ ಬನಪ್ಪ ಮಾಸ್ಕಿ ಚಾಲಕನ ವಿರುದ್ಧ ದೂರು ನೀಡಿದ್ದಾರೆ. ಯಲ್ಲಾಪುರ ಪೊಲೀಸರು ಸ್ಥಳ ಭೇಟಿ ಮಾಡಿ ಪರಿಶೀಲನೆ ನಡೆಸಿದ್ದಾರೆ. - [ಹಿಮ್ಮುಖವಾಗಿ ಚಲಿಸಿದ ಲಾರಿ: 5 ಲಕ್ಷ ರೂ ಹಾನಿ!](https://mobiletime.in/2026/01/lorry-that-moved-backwards-damage-worth-rs-5-lakh/): ಹೊನ್ನಾವರ ಕರ್ಕಿಯ ಲೋಹಿತ್ ದೇವಾಡಿಗ ಅವರು ಹಿಮ್ಮುಖವಾಗಿ ಲಾರಿ ಓಡಿಸಿದ್ದು, ಅಂಕೋಲಾದ ಅಂಗಡಿಯೊoದಕ್ಕೆ ಆ ಲಾರಿ ಗುದ್ದಿದೆ. ಪರಿಣಾಮ ಆ ಅಂಗಡಿ ಮುರಿದು ಬಿದ್ದಿದೆ. ಅಂಕೋಲಾ ಹಿರೇಗುತ್ತಿಯ ಅಶೋಕ ಹಮ್ಮಣ್ಣ ನಾಯಕ ಅವರ ಅಂಗಡಿಗೆ ಹೊನ್ನಾವರ ಕರ್ಕಿಯ ಲೋಹಿತ್ ಚಂದ್ರಕಾAತ ದೇವಾಡಿಗ ಅವರು ಲಾರಿ ಗುದ್ದಿದ್ದಾರೆ. ಅವಸರದಲ್ಲಿ ಓಡಿದ ಶ್ರೀಕುಮಾರ ರೋಡ್‌ಲೈನ್ಸಿನ ಲಾರಿ ಅಪಘಾತಕ್ಕೀಡಾಗಿದೆ. ಲಾರಿ ಚಾಲಕ ಮಾಡಿದ ತಪ್ಪಿಗೆ ಅಶೋಕ ನಾಯಕ ಅವರು ನಷ್ಟ ಅನುಭವಿಸಿದ್ದಾರೆ. ಜನವರಿ 28ರಂದು ಈ ಅವಘಡ ನಡೆದಿದೆ. ಶ್ರೀಕುಮಾರ ರೋಡ್ ಲೈನ್ಸಿನ ಲಾರಿಯೊಂದು ಡಿಸೀಲ್ ಹಾಕಿಸಿಕೊಂಡಿದ್ದು, ಅದೇ ಕಂಪನಿಯ ಇನ್ನೊಂದು ಲಾರಿಗೆ ಡಿಸೇಲ್ ಹಾಕಿಸಿದ ನಂತರ ಲೋಹಿತ್ ದೇವಾಡಿಗ ಅವರು ಲಾರಿಯನ್ನು ಹಿಮ್ಮುಖವಾಗಿ ಚಲಾಯಿಸಿದ್ದಾರೆ. ಆ ವೇಳೆ ಲಾರಿ ಅಲ್ಲಿಯೇ ಇದ್ದ ಅಂಗಡಿಗೆ ಗುದ್ದಿದೆ. ಗುದ್ದಿದ ನಂತರವೂ ಲಾರಿ ಅಲ್ಲಿಗೆ ನಿಂತಿಲ್ಲ. ಲಾರಿ ಗುದ್ದಿದ ರಭಸಕ್ಕೆ ಅಂಗಡಿ ಮುರಿದು ಬಿದ್ದಿದ್ದು, ಬೆಳಗ್ಗೆ ಬೇಗ ಈ ಅವಘಡ ನಡೆದ ಕಾರಣ ಅಂಗಡಿಯಲ್ಲಿ ಯಾರೂ ಇರಲಿಲ್ಲ. ಹೀಗಾಗಿ ಜೀವಾಪಾಯ ಸಂಭವಿಸಿಲ್ಲ. `ಲಾರಿ ಚಾಲಕ ಮಾಡಿದ ತಪ್ಪಿಗೆ ತಮಗೆ 5 ಲಕ್ಷ ರೂ ಹಾನಿಯಾಗಿದೆ’ ಎಂದು ಅಶೋಕ ನಾಯಕ ಅವರು ದೂರಿದ್ದಾರೆ. - [ಕಳ್ಳರಿಂದ ಕನ್ನ!](https://mobiletime.in/2026/01/robbed-by-thieves/): ಹಳಿಯಾಳದ ಮದ್ನಳ್ಳಿ ಹಾಗೂ ಆರ್ಲವಾಡಕ್ಕೆ ಕಳ್ಳರು ಬಂದಿದ್ದು, ಅಲ್ಲಿನ ಮನೆಗಳಿಗೆ ಕನ್ನ ಹಾಕಿದ್ದಾರೆ. ಹಳಿಯಾಳ ಮದ್ನಳ್ಳಿಯ ಶಂಕರಯ್ಯ ವಿರುಪಾದಯ್ಯ ಹೀರೆಮಠ್ ಅವರ ಮನೆಯಲ್ಲಿ ಕಳ್ಳತನ ನಡೆದಿದೆ. ಆರ್ಲವಾಡದ ಸಂತೋಷ ಏಕನಾಥ ಕೋಚಾರಿ ಅವರ ಮನೆಯಲ್ಲಿಯೂ ಚಿನ್ನಾಭರಣ ಕಾಣೆಯಾಗಿದೆ. ರೈತಾಪಿ ಕೆಲಸ ಮಾಡಿಕೊಂಡಿರುವ ಶಂಕರ ಹೀರೆಮಠ ಅವರ ಮನೆಗೆ ನುಗ್ಗಿದ ಕಳ್ಳರು 25 ಸಾವಿರ ರೂ ಹಣ, ಬಂಗಾರದ ಒಡವೆಯನ್ನು ದೋಚಿದ್ದಾರೆ. ಮೆಕಾನಿಕ್ ಆಗಿರುವ ಸಂತೋಷ ಕೋಚಾರಿ ಅವರ ಮನೆಗೆ ನುಗ್ಗಿದ ಕಳ್ಳರು 10 ಸಾವಿರ ರೂ ಹಣ ಹಾಗೂ ದೇವರ ಮೂರ್ತಿ, ದೇವರ ಆಭರಣಗಳನ್ನು ಕದ್ದಿದ್ದಾರೆ. ಜನವರಿ 25 ಹಾಗೂ 26ರ ಅವಧಿಯಲ್ಲಿ ಈ ಕಳ್ಳತನ ನಡೆದಿದೆ. ಜನವರಿ 28ರಂದು ಕಳ್ಳತನ ನಡೆದಿರುವುದು ಶಂಕರಯ್ಯ ಹೀರೆಮಠ್ ಅವರಿಗೆ ಗೊತ್ತಾಗಿದೆ. ಎರಡು ಕಡೆ ಮುಂದಿನ ಬಾಗಿಲು ಮುರಿದು ಕಳ್ಳರು ಮನೆಗೆ ನುಗ್ಗಿದ್ದಾರೆ. 1.48 ಲಕ್ಷ ರೂ ನಷ್ಟವಾದ ಬಗ್ಗೆ ಶಂಕರಯ್ಯ ಹೀರೆಮಠ್ ಅವರು ದೂರಿದ್ದಾರೆ. 56 ಸಾವಿರ ರೂ ನಷ್ಟವಾಗಿರುವ ಬಗ್ಗೆ ಸಂತೋಷ ಕೋಚಾರಿ ಅವರು ದೂರಿದ್ದಾರೆ. ಪೊಲೀಸರು ಎರಡು ಪ್ರಕರಣ ದಾಖಲಿಸಿದ್ದು, ಕಳ್ಳರ ಶೋಧ ನಡೆಸಿದ್ದಾರೆ. `ಕಳ್ಳತನ ತಡೆಗೆ ಸಿಸಿ ಕ್ಯಾಮರಾ ಸಹಕಾರಿ’ - [ದ್ವೇಷ: ಅಡಿಕೆ ಮರ ನಾಶ!](https://mobiletime.in/2026/01/hate-destroy-the-areca-nut-tree/): ಭಟ್ಕಳದ ಶಿರಾಲಿ ಬಳಿಯ ಪಾರ್ವತಿ ನಾಯ್ಕ ಅವರು ಬೆಳೆಸಿದ್ದ ಅಡಿಕೆ ಮರಗಳನ್ನು ಅದೇ ಊರಿನ ಮೂವರು ಕಡಿದಿದ್ದಾರೆ. ಇದನ್ನು ತಡೆಯಲು ಹೋದಾಗ ಎದುರಾಳಿಗಳು ಗುಂಪು ಕಟ್ಟಿಕೊಂಡು ಗಲಾಟೆ ಮಾಡಿದ್ದಾರೆ. ಭಟ್ಕಳ ಶಿರಾಲಿಯ ಶಾರದಾಹೊಳೆ ಹಿರೇಹಿತ್ಲುವಿನ ಬೈರಜ್ಜಿಮನೆಯಲ್ಲಿ ಪಾರ್ವತಿ ಗಣಪತಿ ನಾಯ್ಕ ಅವರು ವಾಸವಾಗಿದ್ದಾರೆ. ಪಾರ್ವತಿ ನಾಯ್ಕ ಅವರ ಅಜ್ಜಿ ಈರಮ್ಮ ಬೈರಾ ನಾಯ್ಕ ಅವರಿಗೆ ಗಣಪತಿ ನಾಯ್ಕ ಅವರ ಕುಟುಂಬದ ಆಸ್ತಿ ಸಿಕ್ಕಿದ್ದು, ಭೂ ನ್ಯಾಯ ಮಂಡಳಿಯಿAದ ಆ ಭೂಮಿಯ ಹಕ್ಕಿನ ಆದೇಶವಾಗಿದೆ. ತಮ್ಮ ಪರವಾಗಿ ಆದೇಶ ಸಿಕ್ಕಿದ ಕಾರಣ ಪಾರ್ವತಿ ನಾಯ್ಕ ಅವರು ಅಲ್ಲಿದ್ದ ಅಡಿಕೆ ಮರಗಳ ಆರೈಕೆ ಮಾಡಿದ್ದಾರೆ. ಜೊತೆಗೆ ತಮ್ಮ ಜಾಗಕ್ಕೆ ಅವರು ಕಪೌಂಡನ್ನು ನಿರ್ಮಿಸಿದ್ದಾರೆ. ಹೀಗಿರುವಾಗ ಅದೇ ಭಾಗದ ಸಾವಿತ್ರಿ ಗಣಪತಿ ನಾಯ್ಕ, ಪದ್ಮಾವತಿ ಶಂಕರ ನಾಯ್ಕ ಹಾಗೂ ಸೀತಾ ರಾಮಚಂದ್ರ ನಾಯ್ಕ ಅವರು ಜನವರಿ 27ರ ರಾತ್ರಿ ಆ ಪ್ರದೇಶಕ್ಕೆ ದಾಳಿ ಮಾಡಿದ್ದಾರೆ. ಕಲ್ಲಿನಿಂದ ಕಟ್ಟಿದ್ದ ಗೋಡೆ ಉದುರಿಸಿ ಅವರು ಅಲ್ಲಿದ್ದ ಅಡಿಕೆ ಗಿಡಗಳನ್ನು ಕಡಿದಿದ್ದಾರೆ. ಇದನ್ನು ತಡೆಯಲು ಹೋದ ಪಾರ್ವತಿ ನಾಯ್ಕ ಅವರನ್ನು ಬೆದರಿಸಿದ್ದು, ಇನ್ನಷ್ಟು ಜನರ ಗುಂಪು ಕಟ್ಟಿಕೊಂಡು ಬಂದು ರಂಪಾಟ ಮಾಡಿದ್ದಾರೆ. ನಾಲ್ಕು ಮರ ಕಡಿತದ ನಂತರ ಪಾರ್ವತಿ ನಾಯ್ಕ ಅವರು ತಮ್ಮ ಆಕ್ರೋಶಹೊರ ಹಾಕಿದ್ದು, ಬಂದವರೆಲ್ಲರೂ ಜೀವ ಬೆದರಿಕೆ ಹಾಕಿ ಅಲ್ಲಿಂದ ಪರಾರಿಯಾಗಿದ್ದಾರೆ. ಈ ಎಲ್ಲಾ ವಿಷಯದ ಬಗ್ಗೆ ಪಾರ್ವತಿ ನಾಯ್ಕ ಅವರು ಭಟ್ಕಳ ಗ್ರಾಮೀಣ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಶುರು ಮಾಡಿದ್ದಾರೆ. - [ನದಿ ಜೊಡಣೆ: ನಮಗೂ ಮಾರಕ.. ನಿಮಗೂ ಕಂಟಕ!](https://mobiletime.in/2026/01/river-linking-deadly-for-us-deadly-for-you-too/): ಉತ್ತರ ಕನ್ನಡ ಜಿಲ್ಲೆಯಲ್ಲಿ ನೈಸರ್ಗಿಕವಾಗಿ ಹರಿಯುವ ನದಿಯನ್ನು ಬೇರೆಡೆ ತಿರುಗಿಸಿದರೆ ಅದರಿಂದ ಅನೇಕ ದುಷ್ಪರಿಣಾಮಗಳಾಗಲಿವೆ. ಇಲ್ಲಿನ ಕೃಷಿ, ಮೀನುಗಾರಿಕೆ ಜೊತೆ ಪರಿಸರದ ಮೇಲೆಯೂ ನದಿ ತಿರುವು ಯೋಜನೆ ಪರಿಣಾಮ ಬೀರಲಿದೆ. ಅಘನಾಶಿನಿ ನದಿಯ ನೀರನ್ನು ಸಿದ್ದಾಪುರದ ಮೂಲಕ ವಾಣಿ ವಿಲಾಸ ಸರೋವರಕ್ಕೆ 35 ಟಿಎಂಸಿ ನೀರು ಸರಬರಾಜು ಮಾಡಲು ಸರ್ಕಾರ 134ಕಿಮೀ ಕಾಲುವೆ ನಿರ್ಮಿಸಲು ಉದ್ದೇಶಿಸಿದೆ. ಈ ಯೋಜನೆಯಿಂದ 250 ಜಾತಿಯ ಮೀನುಗಳು, 120 ಜಾತಿಯ ಪಕ್ಷಿಗಳು ಹಾಗೂ 13 ಜಾತಿಯ ಮ್ಯಾಂಗ್ರೋ ಸಂತತಿ ಕುಸಿತವಾಗಲಿದೆ. ಈ ಯೋಜನೆ ಜಾರಿ ಆದಲ್ಲಿ ನದಿ ನೀರಿನ ಪ್ರಮಾಣ ಕಡಿಮೆ ಆಗಲಿದ್ದು, ಸಮುದ್ರದ ಉಪ್ಪು ನೀರು ನದಿ ಆವರಿಸುವ ಆತಂಕ ಎದುರಾಗಲಿದೆ. ಜೊತೆಗೆ ಮೀನಿನ ಸಂತತಿ ನಾಶ, ಜೀವ ವೈವಿಧ್ಯ ಉತ್ಪಾದನೆಯ ಕುಸಿತ, ಕೃಷಿ ಚಟುವಟಿಕೆ ಮತ್ತು ಕುಡಿಯುವ ನೀರಿಗೆ ಅಭಾವ ಆಗುವ ಲಕ್ಷಣಗಳು ಹೆಚ್ಚಿದೆ. ಅಘನಾಶಿನಿ ನದಿಯ ಮೇಲೆ ಅವಲಂಬಿತವಾಗಿರುವ ಕರಾವಳಿ ಭಾಗದ ಸುಮಾರು 20 ಸಾವಿರ ಕುಟುಂಬಗಳ ಮೇಲೆ ವೃತ್ತಿ, ಕೃಷಿ ಮತ್ತು ಆರ್ಥಿಕ ಅವಲಂಬಿತರ ಮೇಲೆ ನೇರವಾಗಿ ಯೋಜನೆ ಪರಿಣಾಮ ಬೀರಲಿದೆ. ಮುಖ್ಯವಾಗಿ ಅಘನಾಶಿನಿ ನದಿ ಅಂಚಿನಲ್ಲಿ ಉತ್ಪತ್ತಿಯಾಗುತ್ತಿರುವ ಚಿಪ್ಪು ಮೀನು ನಶಿಸಲಿದೆ. ಅಘನಾಶಿನಿ ನದಿಯ ತೀರದಲ್ಲಿ ಸಹಸ್ರಾರು ಕುಟುಂಬಗಳು ನೈಸರ್ಗಿಕವಾಗಿ ಬೆಳೆಯುತ್ತಿರುವ ಚಿಪ್ಪು ಮೀನು ಬದುಕಿ ಜೀವನ ಕಟ್ಟಿಕೊಂಡಿದ್ದು, ಅವರ ಸ್ವಾವಲಂಭಿ ಬದುಕಿಗೆ ನಷ್ಟವಾಗಲಿದೆ. ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ಅವರು ಈ ವಿಷಯದ ಬಗ್ಗೆ ಸ್ಥಳ ಭೇಟಿ ನಡೆದಿ ಅಧ್ಯಯನ ಮಾಡಿದ್ದಾರೆ. ಕರಾವಳಿ ಭಾಗದ ನದಿ ಅವಲಂಬಿತ ಜನರ ಆಥೀಕ ಬಿಕ್ಕಟ್ಟಿಗೆ ಅಘನಾಶಿನಿ ನದಿ ಜೋಡಣೆ ಕಾರಣವಾಗುವ ಬಗ್ಗೆ ಅವರು ಮಾಹಿತಿ ನೀಡಿದ್ದಾರೆ. ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಮಂಜುನಾಥ ಮರಾಠಿ ನಾಗೂರು, ಮುಜಾಫರ್ ಕರೀಂ ಸಾಬ ಸಂತೆಗುಳಿ, ಸೀತಾರಾಮ ನಾಯ್ಕ ಬುಗರಿಬೈಲ್, ಶಂಕರ್ ಗೌಡ ಕಂದವಳ್ಳಿ, ಕಾಸಿಂ ಅಬುಬಕರ್ ಸಂತೆಗುಳಿ, ದಿವಾಕರ್ ನಾಯ್ಕ ಸಂತೆಗುಳಿ, ಕುರಿಯಾ ಕೋಸ್ತಾ ಹಳವಳ್ಳಿ, ಬೀರ ಗೋವಿಂದ ಗೌಡ ಬಡಾಳ, ಹಿಲ್ಲರ್ ಪಿಂಟೊ ದೂಳ್‌ಹೊಳೆ ಅವರು ಸ್ಥಳ ಭೇಟಿ ಮಾಡಿ, ವಿವರ ದಾಖಲಿಸಿದ್ದಾರೆ. - [ವೈದ್ಯರ ಚೀಟಿ ಇಲ್ಲದೇ ಔಷಧಿ: ಮೂರು ಮಳಿಗೆಗೆ ಬೀಗ!](https://mobiletime.in/2026/01/medicine-without-a-doctors-note-three-shops-locked/): ಉತ್ತರ ಕನ್ನಡ ಜಿಲ್ಲೆಯಲ್ಲಿ ವೈದ್ಯರ ಜೀಟಿ ಇಲ್ಲದೇ ಔಷಧ ವಿತರಿಸಿದ ಮೂರು ಔಷಧ ಮಳಿಗೆಗಳಿಗೆ ಬೀಗ ಬಿದ್ದಿದೆ. ಅಂಕೋಲಾ, ಕಾರವಾರ ಮತ್ತು ಮಿರ್ಜಾನ್’ನ ಒಂದೊoದು ಔಷಧ ಮಳಿಗೆಯ ಲೈಸನ್ಸನ್ನು ಅಧಿಕಾರಿಗಳು ಅಮಾನತು ಮಾಡಿದ್ದಾರೆ. ಈ ಬಗ್ಗೆ ಜಿಲ್ಲಾಧಿಕಾರಿ ಕೆ ಲಕ್ಷ್ಮೀಪ್ರಿಯಾ ಅವರು ಮಾಹಿತಿ ನೀಡಿದ್ದಾರೆ. ಔಷಧ ಮಳಿಗೆಗಳಲ್ಲಿ ವೈದ್ಯರ ಸಲಹಾ ಚೀಟಿ ಇಲ್ಲದೇ ಔಷಧಗಳನ್ನು ವಿತರಣೆ ಮಾಡದಂತೆ ಅವರು ಸೂಚನೆ ನೀಡಿದ್ದು, ಈ ಬಗ್ಗೆ ತಪಾಸಣೆ ನಡೆಸುವಂತೆಯೂ ಜಿಲ್ಲಾ ಔಷಧ ನಿಯಂತ್ರಕರಿಗೆ ನಿರ್ದೇಶನ ನೀಡಿದ್ದಾರೆ. ಮಾದಕ ವಸ್ತುಗಳ ಬಳಕೆ ಮತ್ತು ಸಿಂಥೇಟಿಕ್ ಡ್ರಗ್ ತಯಾರಿಕೆ ಕುರಿತಂತೆ ಅನುಮಾನಾಸ್ಪದ ಸ್ಥಳಗಳಲ್ಲಿ ವ್ಯಾಪಕ ತಪಾಸಣೆ ನಡೆಸುವಂತೆಯೂ ಅವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ. `ಉತ್ತರ ಕನ್ನಡ ಜಿಲ್ಲೆಯಲ್ಲಿ 18-30 ವರ್ಷದವರು ಹೆಚ್ಚಿನ ಪ್ರಮಾಣದಲ್ಲಿ ಮಾದಕ ವಸ್ತು ಬಳಕೆ ಮಾಡಿದ್ದಾರೆ. ಈ ಹಿನ್ನಲೆ ಮಾದಕ ವ್ಯಸನದ ವಿರುದ್ಧ ಜಾಗೃತಿ ಮೂಡಿಸಬೇಕು. ಡ್ರಗ್ ಸೇವನೆಯಲ್ಲಿ ಪತ್ತೆಯಾಗಿ ಚಿಕಿತ್ಸೆ ಪಡೆದವರ ಬಗ್ಗೆ ಪ್ರತ್ಯೇಕ ದಾಖಲಾತಿ ನಿರ್ವಹಿಸಿ, ಅವರು ಸಂಪೂರ್ಣವಾಗಿ ಈ ವ್ಯಸನದಿಂದ ಬಿಡುಗಡೆ ಮಾಡಿಸಬೇಕು’ ಎಂದವರು ಹೇಳಿದ್ದಾರೆ. `ರಾಸಾಯನಿಕ ವಸ್ತುಗಳನ್ನು ಬಳಸಿ ಡ್ರಗ್ಸ್ ತಯಾರು ಮಾಡುವುದರ ಬಗ್ಗೆ ಹೆಚ್ಚಿನ ನಿಗಾ ವಹಿಸಬೇಕು. ಹೆಚ್ಚಿನ ಪ್ರಮಾಣದಲ್ಲಿ ನಿಷೇಧಿತ ಮತ್ತು ಡ್ರಗ್ಸ್ ತಯಾರಿಕೆಗೆ ಬಳಸುವ ರಾಸಾಯನಿಕಗಳನ್ನು ಖರೀದಿಸುವವರ ಬಗ್ಗೆ ಅಧಿಕಾರಿಗಳು ಗಮನಿಸಬೇಕು. `ಶೆಡ್‌ಗಳನ್ನು ಮರೆಮಾಡಿ ಲ್ಯಾಬ್ ಮಾದರಿಯಲ್ಲಿ ಡ್ರಗ್ಸ್ ತಯಾರಿಕೆ ಮಾಡುವ ಸಾಧ್ಯತೆಗಳಿದ್ದು, ರೆಸಾರ್ಟ್ ಮತ್ತು ಹೋಂ ಸ್ಟೇ ಗಳಲ್ಲಿ ಮಾದಕ ವಸ್ತುಗಳ ಸರಬರಾಜು ನಡೆಯದಂತೆ ಎಚ್ಚರಿಕೆವಹಿಸಬೇಕು’ ಎಂದು ಸೂಚಿಸಿದ್ದಾರೆ. `ಮೀನುಗಾರಿಕಾ ಬಂದರು, ಪೋರ್ಟ್ ಮತ್ತು ಬೀಚ್ ನಲ್ಲಿ ಮಾದಕ ವಸ್ತುಗಳ ಸರಬರಾಜು ಮತ್ತು ಸೇವನೆ ಕುರಿತಂತೆ ಹೆಚ್ಚಿನ ತಪಾಸಣೆ ನಡೆಸಬೇಕು. ಅಂಚೆ ಇಲಾಖೆಯಲ್ಲಿ ಸ್ವೀಕೃತವಾಗುವ ಅನುಮಾನಾಸ್ಪದ ಪಾರ್ಸೆಲ್ ಗಳನ್ನು ತಪಾಸಣೆ ನಡೆಸಲು ಪೊಲೀಸ್ ಶ್ವಾನದಳದ ನೆರವುಪಡೆಯಬೇಕು. ಪೊಲೀಸ್, ಕೋಸ್ಟ್ ಗಾರ್ಡ್, ಕರಾವಳಿ ಕಾವಲು ಪೊಲೀಸ್, ಅಬಕಾರಿ, ಮೀನುಗಾರಿಕೆ, ಬಂದರು ಸೇರಿದಂತೆ ಎಲ್ಲಾ ಇಲಾಖೆಗಳು ಸಮನ್ವಯದಿಂದ ಕೆಲಸ ಮಾಡಬೇಕು’ ಎಂದು ಸೂಚಿಸಿದ್ದಾರೆ. ಈ ಸಭೆಯಲ್ಲಿ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ ಎನ್, ಕೋಸ್ಟ್ ಗಾರ್ಡ್, ಕರಾವಳಿ ಕಾವಲು ಪೊಲೀಸ್, ಅಬಕಾರಿ, ಮೀನುಗಾರಿಕೆ, ಬಂದರು, ಶಿಕ್ಷಣ, ಆರೋಗ್ಯ ಇಲಾಖೆಯ ಅಧಿಕಾರಿಗಳು ಇದ್ದರು. - [ಮನೆ ಮನೆಗಳಲ್ಲಿಯೂ ಗಾಂಧೀಜಿ ವಿಚಾರ: ಜನಜಾಗೃತಿಗಾಗಿ ಸಮಾನ ಮನಸ್ಕರ ನಿರ್ಧಾರ](https://mobiletime.in/2026/01/gandhijis-thoughts-in-every-home-a-decision-of-like-minded-people-for-public-awareness/): ಗಾಂಧೀಜಿ ವಿಚಾರಧಾರೆಗಳ ಬಗ್ಗೆ ಜಾಗೃತಿ ಮೂಡಿಸಲು ಅಂಕೋಲಾದ ಸಮಾನ ಮನಸ್ಕರು ನಿರ್ಧರಿಸಿದ್ದಾರೆ. ಅಂಕೋಲಾ ಪಟ್ಟಣದ ಸತ್ಯಾಗ್ರಹ ಸ್ಮಾರಕ ಸಭಾಭವನದಲ್ಲಿ ಮಹಾತ್ಮ ಗಾಂಧಿ ನಿಧನದ `ಮಹಾತ್ಮ ಹುತಾತ್ಮ ದಿನ’ದ ಅಂಗವಾಗಿ ಗಾಂಧಿ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ನಂತರ ಹಿರಿಯ ಸಾಹಿತಿ ಶಾಂತರಾಮ ನಾಯಕ ಅವರು ಈ ವಿಷಯ ಪ್ರಕಟಿಸಿದ್ದಾರೆ. ರೈತ ಸಂಘದ ಪ್ರಮುಖರಾದ ಶಾಂತರಾಮ ನಾಯಕ ಅವರು ಇದಕ್ಕೆ ಧ್ವನಿಗೂಡಿಸಿದ್ದಾರೆ. `ಇಂದು ಗಾಂಧಿ ಹತ್ಯೆ ಮಾಡಿದ ಗೋಡ್ಸೆ ಆರಾಧಿಸುವ ಮಟ್ಟಕ್ಕೆ ಬಂದಿದೆ. ಅದರಿಂದ ನಮ್ಮ ದೇಶ ಅಧಪತನದ ಕಡೆ ಸಾಗುತ್ತಿರುವಂತೆ ಭಾಸವಾಗುತ್ತಿದೆ. ಕೇಂದ್ರ ಸರಕಾರ ನರೇಗಾ ಹೆಸರನ್ನು ಬದಲಿಸುತ್ತಿದೆ. ಮಹಾತ್ಮಾ ಗಾಂಧಿಯ ಅವಮಾನ ಮಾಡುವ ರೀತಿಯಲ್ಲಿ ಕೆಲವರು ತೊಡಗಿಸಿಕೊಂಡಿದ್ದಾರೆ. ಇದನ್ನು ತಡೆಯುವುದಕ್ಕಾಗಿ ಮುಂದಿನ ದಿನಗಳಲ್ಲಿ ಗಾಂಧಿಜಿ ವಿಚಾರಧಾರೆ ಬಗ್ಗೆ ಜಾಗೃತಿ ಮುಡಿಸುವ ಕಾರ್ಯ ಮಾಡಲಾಗುತ್ತದೆ’ ಎಂದವರು ಘೋಷಿಸಿದರು. ಸಾಹಿತಿ ಮೋಹನ ಹಬ್ಬು ಮಾತನಾಡಿ `ಗಾಂಧೀಜಿ ಅವರ ಹೆಸರನ್ನು ಕೆಡಿಸುವ ಹುನ್ನಾರ ನಡೆಯುತ್ತಿದೆ. ಗಾಂಧೀಜಿ ಅವರ ತತ್ವ ವಿಚಾರಗಳನ್ನು ಅರಿಯದೇ ಯಾರು ಹೇಳಿದ ಮಾತ್ರಕ್ಕೆ ಯುವ ಜನತೆ ಕೂಡ ಬಲಿಯಾಗುತ್ತಿರುವುದು ನಿಜಕ್ಕೂ ಆಘಾತಕಾರಿಯಾಗಿದೆ’ ಎಂದು ಕಳವಳವ್ಯಕ್ತಪಡಿಸಿದರು. ಕವಿ ಕೃಷ್ಣಾ ನಾಯಕ ಮಾತನಾ `ಜಾಲತಾಣಗಳಲ್ಲಿ ಗಾಂಧಿ ಬೇಕೆ ಅಥವಾ ಗೋಡ್ಸೆ ಬೇಕೆ ಎನ್ನುವ ಮಾಹಿತಿಯನ್ನು ಹರಿಬಿಡುತ್ತಿದ್ದಾರೆ. ಎಲ್ಲ ಕ್ಷೇತ್ರಗಳಲ್ಲಿಯೂ ಗಾಂಧಿಯ ಅವಮಾನಿಸುವ ಕಾರ್ಯ ನಡೆಯುತ್ತಿದೆ’ ಎಂದು ವಿಷಾಧಿಸಿದರು. ಕಸಾಪ ಅಧ್ಯಕ್ಷ ಗೋಪಾಲಕೃಷ್ಣ ನಾಯಕ ಮಾತನಾಡಿ `ಗಾಂಧೀಜಿ ವಿಷಯವಾಗಿ ಮಾತನಾಡುವುದೇ ಅಪಾಯಕಾರಿ ಎಂಬ ಪರಿಸ್ಥಿತಿ ಬಂದಿದೆ. ಸಾತ್ವಿಕ ಮನಸ್ಸುಗಳನ್ನು ಒಂದಾಗಿಸುವ ಕೆಲಸ ನಡೆಯಬೇಕಿದೆ’ ಎಂದರು. ಹೋರಾಟಗಾರ್ತಿ ಯಮುನಾ ಗಾಂವಕರ ಮಾತನಾಡಿ `ಗಾಂಧೀಜಿ-ಅAಬೇಡ್ಕರ ಅವರ ನಡುವಿನ ಅವತ್ತಿನ ಚರ್ಚೆಯನ್ನು ಇದೀಗ ದ್ವೇಷದ ಚರ್ಚೆಯನ್ನಾಗಿ ಬಳಸಿಕೊಳ್ಳುತ್ತಿರುವುದು ಸರಿಯಲ್ಲ’ ಎಂದರು. ಸಾಹಿತಿ ಆರ್ ಜಿ ಗುಂದಿ, ಜೆ ಪ್ರೇಮಾನಂದ, ರೈತ ಸಂಘದ ಗೌರೀಶ ನಾಯಕ, ಜಗದೀಶ ಜಿ ನಾಯಕ ಹೊಸ್ಕೇರಿ, ಸಂತೋಷ ನಾಯ್ಕ, ಉದಯ ನಾಯ್ಕ ಹೊಸಗದ್ದೆ, ಗೀತಾ ಗೌಡ ಶಿರೂರ, ಪೂರ್ಣಿಮಾ ನಾಯ್ಕ, ಹಟ್ಟಿಕೇರಿ, ವಿನೋದ ನಾಯ್ಕ ಹಾರವಾಡ, ಎಚ್ ಬಿ ನಾಯಕ, ರಾಜಗೋಪಾಲ್ ಶೇಟ್, ಶ್ಯಾಮಲಾ ನಾಯ್ಕ ಇತರರು ಕಾರ್ಯಕ್ರಮದಲ್ಲಿದ್ದು ಗಾಂಧೀಜಿ ಸ್ಮರಣೆ ಮಾಡಿದರು. - [ದೇಶ ಸುತ್ತಿ ಜೈಲು ಸೇರಿದ ಚಿರಾಗ!](https://mobiletime.in/2026/01/chiraga-who-traveled-around-the-country-and-ended-up-in-prison/): ಬೆಂಗಳೂರು, ಪುಣೆ, ಮಹಾರಾಷ್ಟ್ರ ಹಾಗೂ ಹೈದರಾಬಾದ್ ಓಡಾಟ ನಡೆಸಿ ಕೊನೆಗೆ ಚೆನೈಗೆ ತಲುಪಿದ್ದ ಕಾರವಾರದ ಚಿರಾಗ ಕೋಠಾರಕರ್ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ ನಂತರ ವಿಚಾರಣೆಗಾಗಿ ಪೊಲೀಸ್ ಕಸ್ಟಡಿಗೆಪಡೆದಿದ್ದಾರೆ. ಕಾರವಾರದ ಕದ್ರಾದ ರಿಶೇಲ್ ಡಿಸೋಜಾ ಆತ್ಮಹತ್ಯೆ ನಂತರ ಚಿರಾಗ ಕೋಠಾರಕರ್ ಪರಾರಿಯಾಗಿದ್ದರು. ಚಿರಾಗ ಕೋಠಾರಕರ್ ಅವರ ತಾಯಿ ಚೈತ್ರಾ ಕೋಠಾರಕರ್ ಅವರು ಜಿಲ್ಲಾ ಪಂಚಾಯತ ಮಾಜಿ ಸದಸ್ಯೆಯಾಗಿದ್ದು, ಪ್ರಭಾವಿಯೂ ಆಗಿದ್ದರಿಂದ ಈ ವಿಷಯ ದೊಡ್ಡದಾಗಿತ್ತು. ಚಿರಾಗ ಕೋಠಾರಕರ್ ಅವರು ರಿಶೇಲ್ ಅವರ ಮೇಲೆ ಅತ್ಯಾಚಾರ ನಡೆಸಿದ ಆರೋಪವ್ಯಕ್ತವಾಗಿದ್ದು, ಚಿರಾಗ ಬಂಧನಕ್ಕೆ ಆಗ್ರಹಿಸಿ ಸಾಕಷ್ಟು ಪ್ರತಿಭಟನೆಗಳು ಸಹ ನಡೆದಿದ್ದವು. 20 ದಿನಗಳ ಕಾಲ ತಲೆಮರೆಸಿಕೊಂಡಿದ್ದ ಚಿರಾಗ ಕೋಠಾರಕರ್ ನಿನ್ನೆ ಚೆನೈಯಲ್ಲಿ ಸಿಕ್ಕಿ ಬಿದ್ದಿದ್ದರು. ಚಿರಾಗ ಕೋಠಾರಕರ್ ಹುಡುಕಾಟಕ್ಕೆ ಮೂರು ತಂಡ ರಚಿಸಲಾಗಿತ್ತು. ಮೂವರು ಇನ್ಸಪೆಕ್ಟರ್ ಹಾಗೂ ಆರು ಪಿಸೈ ಶೋಧ ಕಾರ್ಯಾಚರಣೆ ನಡೆಸಿದ್ದರು. ಈ ವೇಳೆ ಆರೋಪಿ ತಪ್ಪಿಸಿಕೊಳ್ಳಲು ಸುವರ್ಣ ಗಾಂವ್ಕರ್ ಹಾಗೂ ನಿತಿನ್ ಗಾಂವ್ಕರ್ ಎಂಬಾತರು ಸಹಾಯ ಮಾಡಿದ್ದು ಪೊಲೀಸರ ಗಮನಕ್ಕೆ ಬಂದಿತ್ತು. ಪೊಲೀಸ್ ಲೋಪದ ಹಿನ್ನಲೆ ಕದ್ರಾ ಪಿಸೈ ಸುನೀಲ ಬಂಡಿವಡ್ಡರ್ ಅವರನ್ನು ಅಮಾನತು ಮಾಡಲಾಗಿತ್ತು. ಚಿರಾಗ ಕೋಠಾರಕರ್ ಪರಾರಿ ಹಾಗೂ ರಿಶೇಲ್ ಡಿಸೋಜಾ ಸಾವಿನ ವಿಷಯವಾಗಿ ಜಾಲತಾಣದಲ್ಲಿ ಸುಳ್ಳು ಸುದ್ದಿ ಹರಡಿದವರ ವಿರುದ್ಧವೂ ಪೊಲೀಸರು ಕ್ರಮ ಜರುಗಿಸಿದ್ದರು. ಸದ್ಯ ರಿಶೇಲ್ ಡಿಸೋಜಾ ಅವರ ಶವದ ಮರು ಮರಣೋತ್ತರ ಪರೀಕ್ಷೆ ನಡೆಯಲಿದ್ದು, ಚಿರಾಗ ಕೋಠಾರಕರ್ ಅವರ ವಿಚಾರಣೆಯೂ ನಡೆಯಲಿದೆ. ಪೊಲೀಸರ ಮೇಲೆ ಸಾಕಷ್ಟು ಒತ್ತಡ ತಂದಿದ್ದ ಈ ಪ್ರಕರಣ ಚಿರಾಗ ಬಂಧನದ ನಂತರ ಇನ್ನೊಂದು ಹಂತ ತಲುಪಿದೆ. - [ದಾರಿ ತಪ್ಪಿದ ಮಕ್ಕಳು!](https://mobiletime.in/2026/01/wayward-children/): ಯಲ್ಲಾಪುರದಲ್ಲಿ 18-19ನೇ ವಯಸ್ಸಿನ ಯುವಕರಿಬ್ಬರು ಅಡ್ಡದಾರಿ ಹಿಡಿದಿದ್ದಾರೆ. ವಿದ್ಯೆ, ದುಡಿಮೆ ಮಾಡಬೇಕಾದ ವಯಸ್ಸಿನಲ್ಲಿ ಅವರಿಬ್ಬರು ಮಾದಕ ವ್ಯಸನಕ್ಕೆ ದಾಸರಾಗಿದ್ದಾರೆ. ಯಲ್ಲಾಪುರದ ಉದ್ಯಮ ನಗರದಲ್ಲಿ ಮೆಕ್ಯಾನಿಕ್ ಆಗಿರುವ ಸುಜಲ ರಘುನಾಥ ಆಚಾರಿ (19) ಹಾಗೂ ಅದೇ ಊರಿನಲ್ಲಿ ಪೇಟಿಂಗ್ ಕೆಲಸ ಮಾಡುವ ಸುದೀಪ ಶ್ರೀಕಾಂತ ಕಲ್ಬುರ್ಗಿ (18) ಮಾದಕ ವ್ಯಸನದ ಮೋಹಕ್ಕೆ ಒಳಗಾಗಿದ್ದಾರೆ. ಜನವರಿ 30ರಂದು ಅವರಿಬ್ಬರು ಕದ್ದು ಮುಚ್ಚಿ ಗಾಂಜಾ ಸೇದುವಾಗ ಸಿಕ್ಕಿ ಬಿದ್ದಿದ್ದಾರೆ. ಜನವರಿ 30ರ ಬೆಳಗ್ಗೆಯೇ ಸುಜಲ ಆಚಾರಿ ಅವರು ಬಿಸಗೋಡು ಕ್ರಾಸಿನ ಬಳಿ ಹೋಗಿದ್ದರು. ಸಾತೊಡ್ಡಿ ಜಲಪಾತಕ್ಕೆ ಹೋಗುವ ರಸ್ತೆ ಅಂಚಿನಲ್ಲಿ ನಿಂತು ಹೊಗೆ ಬಿಡುತ್ತಿದ್ದರು. ಪಿಸೈ ಶೇಡ್ ಜಿ ಚೌಹಾಣ್ ಅವರು ಸುಜಲ ಆಚಾರಿ ಅವರನ್ನು ಮಾತನಾಡಿಸಿದರು. ಆದರೆ, ಅಮಲಿನಲ್ಲಿದ್ದ ಸುಜಲ ಆಚಾರಿ ಮಾತು ತೊದಲಿದ್ದು, ಅವರನ್ನು ಪೊಲೀಸರು ವೈದ್ಯಕೀಯ ಪರೀಕ್ಷೆಗೆ ಕಳುಹಿಸಿದರು. ಸುದೀಪ ಕಲ್ಬುರ್ಗಿ ಅವರು ಶಿರಸಿ ಎಪಿಎಂಸಿ ಬಳಿಯ ಉದ್ಯಾನವನದಲ್ಲಿ ಅಲೆದಾಡುತ್ತಿದ್ದರು. ಮಧ್ಯಾಹ್ನದ ವೇಳೆಗೆ ಉದ್ಯಾನವನದ ಹೊರಭಾಗ ಸುದೀಪ ಕಲ್ಬುರ್ಗಿ ಅಮಲಿನಲ್ಲಿರುವುದನ್ನು ಪಿಐ ರಮೇಶ ಹಾನಾಪುರ ಅವರು ಗಮನಿಸಿದರು. ಸುದೀಪ ಕಲ್ಬುರ್ಗಿ ಅವರನ್ನು ವಶಕ್ಕೆಪಡೆದು ವಿಚಾರಣೆ ನಡೆಸಿದಾಗ ಗಾಂಜಾ ಸೇದಿರುವುದು ದೃಢವಾಯಿತು. ಸುಜಲ ಆಚಾರಿ ಅವರ ವೈದ್ಯಕೀಯ ವರದಿಯೂ ಗಾಂಜಾ ಸೇವನೆಯನ್ನು ದೃಢಪಡಿಸಿತು. ಈ ಹಿನ್ನಲೆ ಪೊಲೀಸರು ಅವರಿಬ್ಬರಿಗೂ ಮಾದಕ ವ್ಯಸನದ ದುಷ್ಪರಿಣಾಮಗಳನ್ನು ವಿವರಿಸಿದರು. ಸಾಕಷ್ಟು ಜಾಗೃತಿ ಮೂಡಿಸಿದರೂ ಗಾಂಜಾ ಸೇವಿಸಿ ಅನುಚಿತವಾಗಿ ವರ್ತಿಸಿದ ಕಾರಣ ಪ್ರಕರಣವನ್ನು ದಾಖಲಿಸಿದರು. `ಮಾದಕ ವ್ಯಸನ ಜೀವನಕ್ಕೆ ಮಾರಕ’ - [ದುಡುಕು ನಿರ್ಧಾರ: ಬಣ್ಣದ ಬದುಕಿಗೆ ಯುವಕನ ವಿದಾಯ!](https://mobiletime.in/2026/01/a-rash-decision-a-young-mans-farewell-to-a-colorful-life/): ಯಲ್ಲಾಪುರದಲ್ಲಿ ಪೇಂಟಿoಗ್ ಕೆಲಸ ಮಾಡಿಕೊಂಡಿದ್ದ ಪುನೀತ ಅರಸಿನಗೋಡಿ ಅವರು 22ನೇ ವಯಸ್ಸಿನಲ್ಲಿಯೇ ತಮ್ಮ ಬದುಕನ್ನು ಅಂತ್ಯಗೊಳಿಸಿದ್ದಾರೆ. ನಾಲ್ಕು ವಿದ್ಯುತ್ ವೈಯರ್ ಜೋಡಿಸಿದ ಅವರು ಅದನ್ನೇ ಹಗ್ಗದ ರೀತಿ ಬಳಸಿ ನೇಣಿಗೆ ಶರಣಾಗಿದ್ದಾರೆ. ಯಲ್ಲಾಪುರದ ಕಾಳಮ್ಮ ನಗರದಲ್ಲಿ ಪುನೀತ ಅರಸಿನಗೋಡಿ ಅವರು ವಾಸವಾಗಿದ್ದರು. ಪುನೀತ ಅವರ ತಂದೆ ಪ್ರಭಾಕರ ಅರಶಿನಕೋಡಿ ಅವರು ಮುಂಡಗೋಡಿನ ಬಿಸಿಎಂ ಹಾಸ್ಟೇಲ್‌ಲಿ ಅಡುಗೆ ಕೆಲಸ ಮಾಡಿಕೊಂಡಿದ್ದು, ಪುನೀತ ಅವರು ಯಲ್ಲಾಪುರದಲ್ಲಿ ಪೇಟಿಂಗ್ ಕೆಲಸ ನಿರ್ವಹಿಸುತ್ತಿದ್ದರು. ಅವರಿಬ್ಬರ ದುಡಿಮೆ ಕುಟುಂಬಕ್ಕೆ ಆಧಾರವಾಗಿತ್ತು. ಈ ನಡುವೆ ಪುನೀತ ಅರಸಿನಗೋಡಿ (22) ಮಂಕಾಗಿದ್ದರು. ಮಾನಸಿಕವಾಗಿ ಅವರು ಕುಗ್ಗಿದ್ದರು. ಆದರೆ, ಅದಕ್ಕೆ ಕಾರಣ ಏನು? ಎಂಬುದು ಗೊತ್ತಾಗಿರಲಿಲ್ಲ. ಜನವರಿ 28ರಂದು ಜನ ಪುನೀತ ಅವರನ್ನು ಕೊನೆಯದಾಗಿ ನೋಡಿದ್ದರು. ಜನವರಿ 29ರ ಸಂಜೆ ಅವರು ಸಾವನಪ್ಪಿರುವ ವಿಷಯ ಹೊರಬಂದಿತು. ಕಾಳಮ್ಮ ನಗರದಲ್ಲಿರುವ ವಾಸದ ಮನೆಯಲ್ಲಿಯೇ ಪುನೀತ ಅರಸಿನಗೋಡಿ ದುಡುಕು ನಿರ್ಧಾರ ಮಾಡಿದ್ದರು. ಮನೆಯಲ್ಲಿದ್ದ 4 ವಿದ್ಯುತ್ ವೈಯರ್ ಒಟ್ಟಿಗೆ ಜೋಡಿಸಿ ಅದನ್ನು ಫ್ಯಾನಿನ ಹುಕ್ಕಿಗೆ ಸಿಕ್ಕಿಸಿದ್ದು, ಅದಕ್ಕೆ ಕುತ್ತಿಗೆ ಕೊಡ್ಡಿದರು. ಕುಟುಂಬದವರು ನೋಡುವುದರೊಳಗೆ ಪುನೀತ ಅರಸಿನಗೋಡಿ ಶವವಾಗಿದ್ದರು.   - [ಕಳ್ಳರ ಕೈ ಸೇರಿದ ಕಾಡಿನ ಕ್ಯಾಮರಾ!](https://mobiletime.in/2026/01/a-camera-in-the-forest-fell-into-the-hands-of-thieves/): ಜೊಯಿಡಾದ ಕಾಡು ಅಧ್ಯಯನಕ್ಕೆ ಅಳವಡಿಸಿದ್ದ ಕ್ಯಾಮರಾವನ್ನು ಕಳ್ಳರು ಕದ್ದಿದ್ದಾರೆ. ಹುಲಿ ಸಮೀಕ್ಷೆಗಾಗಿ ಕಾಡಿನಲ್ಲಿರಿಸಿದ್ದ 53 ಸಾವಿರ ರೂ ಮೌಲ್ಯದ ಕ್ಯಾಮರಾ ಕಾಣೆಯಾಗಿದೆ. ಜನವರಿ 13ರಿಂದ ಭಾರತದಲ್ಲಿ ಹುಲಿ ಸಮೀಕ್ಷೆ ಕಾರ್ಯ ನಡೆಯುತ್ತಿದೆ. ಇದರೊಂದಿಗೆ ಕಾಡಿನಲ್ಲಿ ಓಡಾಡುವ ಇನ್ನಿತರ ಪ್ರಾಣಿಗಳ ಚಲನ-ವಲನವನ್ನು ಕ್ಯಾಮರಾ ಮೂಲಕ ಸಹ ಗಮನಿಸಲಾಗುತ್ತದೆ. ಕಾಡಿನಲ್ಲಿ ಕ್ಯಾಮರಾ ಕಂಡ ಕಳ್ಳರು ತಮ್ಮ ಅಕ್ರಮ ಚಟುವಟಿಕೆಗೆ ಸಮಸ್ಯೆ ಆಗುವ ಆತಂಕದಲ್ಲಿ ಆ ಕ್ಯಾಮರಾವನ್ನೇ ಕದ್ದಿದ್ದಾರೆ. ಜೊಯಿಡಾ ರಾಮನಗರ ಬಳಿಯ ಕ್ಯಾಸಲ್ ರಾಕ್ ವನ್ಯಜೀವಿ ವಲಯದಲ್ಲಿ ಕ್ಯಾಮರಾ ಕಳ್ಳತನ ನಡೆದಿದೆ. ಇಲ್ಲಿನ ಅವೇಡಾ-ಪೊಪ್ಪವಾಡಿ ಬೀಟ್ ಬಳಿಯ ವಜ್ರ ಪಾಲ್ಸ್ ಗೆ ಹೋಗುವ ರಸ್ತೆಯಲ್ಲಿ ಅರಣ್ಯಾಧಿಕಾರಿಗಳು ಕ್ಯಾಮರಾ ಅಳವಡಿಸಿದ್ದು, ಕ್ಯಾಮರಾ ಜೊತೆಗಿದ್ದ ಮೆಮೋರಿ ಕಾರ್ಡನ್ನು ಕಿಡಿಗೇಡಿಗಳು ಅಪಹರಿಸಿದ್ದಾರೆ. ಜನವರಿ 21ರ ಸಂಜೆ ಕ್ಯಾಮರಾ ಕಾಡಿನಲ್ಲಿರುವುದನ್ನು ಅರಣ್ಯ ಸಿಬ್ಬಂದಿ ನೋಡಿದ್ದಾರೆ. ಆದರೆ, ಮರುದಿನ ಬೆಳಗ್ಗೆ ನೋಡಿದಾಗ ಅಲ್ಲಿ ಕ್ಯಾಮರಾ ಸಿಕ್ಕಿಲ್ಲ. ಎಲ್ಲಾ ಕಡೆ ಹುಡುಕಾಟ ನಡೆಸಿದರೂ ಕ್ಯಾಮರಾ ಪತ್ತೆ ಆಗಿಲ್ಲ. ಈ ಹಿನ್ನಲೆ ಆ ಕ್ಯಾಮರಾ ಕದ್ದವರನ್ನು ಪತ್ತೆ ಮಾಡಿಕೊಡುವಂತೆ ಬಜಾರಕೋಣದ ಉಪವಲಯ ಅರಣ್ಯಾಧಿಕಾರಿ ಸಂದೀಪ ಅರ್ಕಸಾಲಿ ಅವರು ಪೊಲೀಸರ ಮೊರೆ ಹೋಗಿದ್ದಾರೆ. ರಾಮನಗರ ಪೊಲೀಸರು ಪ್ರಕರಣ ದಾಖಲಿಸಿದ್ದು, ಕಳ್ಳರ ಹುಡುಕಾಟ ನಡೆಸಿದ್ದಾರೆ. - [ಸುಲಭ ಸೊಸೈಟಿಯಲ್ಲಿ ಕಳ್ಳತನವೂ ಸುಲಭ!](https://mobiletime.in/2026/01/in-an-easy-society-theft-is-also-easy/): ಕುಮಟಾದ ಸುಲಭ ಸೌಹಾರ್ದ ಸಹಕಾರಿ ಸಂಘದಲ್ಲಿ ಕಳ್ಳತನ ನಡೆದಿದೆ. ಕುಮಟಾದ ಉಪ್ಪಾರಕೇರಿಯಲ್ಲಿ ಸುಲಭ ಸೌಹಾರ್ದ ಸಹಕಾರಿ ಸಂಘ ಕಾರ್ಯನಿರ್ವಹಿಸುತ್ತಿದೆ. ಈ ಶಾಖೆಗೆ ಅಘನಾಶಿನಿ ಬಳಿಯ ದಿವಾಕರ ನಾಗೇಶ ನಾಯ್ಕ ಅವರು ಅಧ್ಯಕ್ಷರಾಗಿದ್ದಾರೆ. ಜನವರಿ ೨೪ರಂದು ಸೊಸೈಟಿಯಲ್ಲಿ ಎಲ್ಲಾ ವ್ಯವಹಾರ ಸರಿಯಾಗಿಯೇ ನಡೆದಿದ್ದು, ಜನವರಿ ೨೬ರ ಅವಧಿಯಲ್ಲಿ ಕಳ್ಳತನ ನಡೆದಿರುವುದು ಗೊತ್ತಾಗಿದೆ. ಸೊಸೈಟಿಯ ಬಗ್ಗೆ ಎಲ್ಲಾ ವಿಷಯ ಅರಿತ ಕಳ್ಳರು ಕನ್ನ ಹಾಕಿರುವ ಸಾಧ್ಯತೆಗಳಿವೆ. ಸೊಸೈಟಿಯ ಬಾಗಿಲು ಮುರಿದ ಕಳ್ಳರು ಒಳಗೆ ಎಲ್ಲಾ ಕಡೆ ಜಾಲಾಡಿದ್ದಾರೆ. ಆಗ ಅವರಿಗೆ ಕೆಡಿಸಿಸಿ ಬ್ಯಾಂಕಿನ ಮೂರು ಚೆಕ್ಕು ಕಾಣಿಸಿದೆ. ಅದನ್ನು ಜೇಬಿಗಿಳಿಸಿದ ನಂತರ ಎಚ್ ಡಿ ಎಫ್ ಸಿ ಬ್ಯಾಂಕಿನ ಎರಡು ಚೆಕ್ಕು ಸಿಕ್ಕಿದೆ. ಅದನ್ನು ಕದ್ದು ಹೊರಗೆ ಹೋಗುವಾಗ ಸಿಸಿ ಕ್ಯಾಮರಾ ಅಳವಡಿಸಿರುವುದು ಗೊತ್ತಾಗಿದ್ದು, ಸಾಕ್ಷಿ ನಾಶಕ್ಕಾಗಿ ಅವರು ಕ್ಯಾಮರಾಗೆ ಅಳವಡಿಸಿದ್ದ ಡಿವಿಆರ್’ನ್ನು ದೋಚಿದ್ದಾರೆ. ಸೊಸೈಟಿಯಿಂದ ಹೊರಬಿದ್ದ ಕಳ್ಳರಿಗೆ ಅಲ್ಲಿ ನಿಲ್ಲಿಸಿದ್ದ ಸ್ಕೂಟಿಯೊಂದು ಕಾಣಿಸಿದ್ದು, ಅದನ್ನು ಕದ್ದಿದ್ದಾರೆ. ಕೆಡಿಸಿಸಿ ಹಾಗೂ ಎಚ್ ಡಿ ಎಫ್ ಸಿ ಬ್ಯಾಂಕಿನ ಚೆಕ್ ಜೊತೆ ೪೦ ಸಾವಿರ ರೂ ಮೌಲ್ಯದ ಸ್ಕೂಟಿಯನ್ನು ಕದ್ದವರಿಗಾಗಿ ಸೊಸೈಟಿಯವರು ತಲೆಕೆಡಿಸಿಕೊಂಡಿದ್ದಾರೆ. ೫ ಸಾವಿರ ರೂ ಮೌಲ್ಯದ ಸಿಸಿ ಕ್ಯಾಮರಾದ ಡಿವಿಆರ್ ಪತ್ತೆ ಆದಲ್ಲಿ ಕಳ್ಳರ ಸುಳಿವು ಸಿಗುವ ಸಾಧ್ಯತೆಯಿರುವುದರಿಂದ ಕಳ್ಳತನದ ಬಗ್ಗೆ ದಿವಾಕರ ನಾಯ್ಕ ಅವರು ಪೊಲೀಸ್ ದೂರು ನೀಡಿದ್ದಾರೆ. ಕುಮಟಾ ಪೊಲೀಸರು ಪ್ರಕರಣ ದಾಖಲಿಸಿದ್ದು, ಕಳ್ಳರ ಹುಡುಕಾಟ ಶುರು ಮಾಡಿದ್ದಾರೆ.   - [ಹಲ್ಲು ನೋವು: ಆಸ್ಪತ್ರೆಗೆ ಹೋದವನ ಮನೆಯಲ್ಲಿ ಹಗಲು ದರೋಡೆ!](https://mobiletime.in/2026/01/toothache-daytime-robbery-at-the-house-of-a-man-who-went-to-the-hospital/): ಹಲ್ಲು ನೋವಿನ ಚಿಕಿತ್ಸೆಗಾಗಿ ಕಾರವಾರಕ್ಕೆ ಹೋಗಿದ್ದ ಹಣಕೋಣದ ರಾಮ ನಾಯ್ಕ ಅವರಿಗೆ ಲಕ್ಷಾಂತರ ರೂ ನಷ್ಟವಾಗಿದೆ. ಬೆಳಗ್ಗೆ 10 ಗಂಟೆಗೆ ಅವರು ಆಸ್ಪತ್ರೆಗೆ ಹೋಗಿದ್ದು, ಮಧ್ಯಾಹ್ನ 1 ಗಂಟೆಗೆ ಮನೆಗೆ ಬರುವಷ್ಟರಲ್ಲಿ ಕೂಡಿಟ್ಟ ಕಾಸು ಕಳ್ಳತನವಾಗಿದೆ. ಕಾರವಾರದ ಹಣಕೋಣದಲ್ಲಿರುವ ರುಕ್ಮಿಣಿ ಕೃಷ್ಣಾ ನಿವಾಸದಲ್ಲಿ ರಾಮ ಕೃಷ್ಣಾ ನಾಯ್ಕ ಅವರು ವಾಸವಾಗಿದ್ದಾರೆ. ಶಿಕ್ಷಕರಾಗಿದ್ದ ಅವರು ನಿವೃತ್ತಿ ನಂತರ ಆ ಊರಿನಲ್ಲಿಯೇ ನೆಮ್ಮದಿಯ ಬದುಕು ನಡೆಸುತ್ತಿದ್ದಾರೆ. ಹೀಗಿರುವಾಗ ಜನವರಿ 29ರಂದು ರಾಮ ನಾಯ್ಕ ಅವರ ಪತ್ನಿಗೆ ಅಪಾರ ಪ್ರಮಾಣದಲ್ಲಿ ಹಲ್ಲು ನೋವು ಕಾಣಿಸಿತು. 70 ವರ್ಷದ ಅವರು ತಮ್ಮ ಪತ್ನಿ ಅವರನ್ನು ಕಾರವಾರದ ಆಸ್ಪತ್ರೆಗೆ ಕರೆದೊಯ್ಯಲು ನಿರ್ಧರಿಸಿದರು. ಕೋಡಿಭಾಗದ ಆಸ್ಪತ್ರೆಗೆ ಹೋಗಿ ಅವರು ಹಲ್ಲು ನೋವಿನ ಔಷಧಿಪಡೆದರು. ಸರತಿ ಸಾಲಿನಲ್ಲಿ ನಿಂತು ವೈದ್ಯರನ್ನು ಭೇಟಿ ಮಾಡುವಷ್ಟರಲ್ಲಿ ಮಧ್ಯಾಹ್ನವಾಗಿದ್ದು, 1 ಗಂಟೆ ಅವಧಿಗೆ ಅವರು ಹಣಕೋಣಕ್ಕೆ ಮರಳಿದರು. ಈ ವೇಳೆ ರುಕ್ಮಿಣಿ ಕೃಷ್ಣಾ ನಿವಾಸದ ಬಾಗಿಲು ತೆರೆದಿತ್ತು. ಕಾರವಾರಕ್ಕೆ ಹೋಗುವ ಮುನ್ನ ಬಾಗಿಲು ಹಾಕಿದ ನೆನಪು ಮಾಡಿಕೊಂಡ ಕೃಷ್ಣ ನಾಯ್ಕ ಅವರು ಹತ್ತಿರ ಹೋಗಿ ನೋಡಿದಾಗ ಬಾಗಿಲಿನ ಬೀಗ ಒಡೆದಿರುವುದು ಕಾಣಿಸಿತು. ಇಂಟರ್ ಲಾಕ್ ಮುರಿದ ಕಳ್ಳರು ಕೃಷ್ಣ ನಾಯ್ಕ ಅವರ ಮನೆಯೊಳಗೆ ಪ್ರವೇಶಿಸಿ ಅಲ್ಲಿದ್ದ ನಗ-ನಾಣ್ಯ ದೋಚಿದ್ದರು. ಎರಡು ವಾಚು, ದೇವರ ಚಿತ್ರವಿದ್ದ ಲಾಕೇಟು, ಚಿನ್ನ ಲೇಪಿತ ಸ್ಟಾಂಡ್ ಜೊತೆ 15 ಸಾವಿರ ರೂ ಹಣವನ್ನು ಕಳ್ಳರು ದೋಚಿದ್ದರು. ಒಟ್ಟು ಎರಡುವರೆ ಲಕ್ಷ ರೂ ಮೌಲ್ಯ ನಷ್ಟವಾದ ಕಾರಣ ರಾಮ ನಾಯ್ಕ ಅವರು ಪೊಲೀಸರಿಗೆ ದೂರಿದರು. ಚಿತ್ತಾಕುಲ ಪೊಲೀಸರು ಪ್ರಕರಣ ದಾಖಲಿಸಿದ್ದು, ಕಳ್ಳರ ಶೋಧ ಶುರು ಮಾಡಿದರು. `ಕಳ್ಳತನ ತಡೆಗೆ ಸಿಸಿ ಕ್ಯಾಮರಾ ಸಹಕಾರಿ’ - [ಅಪಘಾತ: ಒಂದುವರೆ ತಿಂಗಳ ಆಸ್ಪತ್ರೆ ಓಡಾಟ ವ್ಯರ್ಥ!](https://mobiletime.in/2026/01/accident-one-and-a-half-months-of-hospital-stays-in-vain/): ಅಂಕೋಲಾ ಬಳಿ ನಡೆದ ಅಪಘಾತದಲ್ಲಿ ಗಾಯಗೊಂಡಿದ್ದ ಅಗಸೂರಿನ ಗಜಾನನ ನಾಯಕ ಅವರು ಒಂದುವರೆ ತಿಂಗಳು ಆಸ್ಪತ್ರೆಯಲ್ಲಿದ್ದು, ಸಾಕಷ್ಟು ಆರೈಕೆ ಮಾಡಿದರೂ ಚೇತರಿಸಿಕೊಂಡಿಲ್ಲ. ಆಸ್ಪತ್ರೆ ಓಡಾಟಕ್ಕಾಗಿ ದೊಡ್ಡ ಮಟ್ಟದಲ್ಲಿ ದುಡ್ಡು ಖರ್ಚು ಮಾಡಿದರೂ ಗಜಾನನ ನಾಯಕ ಅವರನ್ನು ಉಳಿಸಿಕೊಳ್ಳಲು ಸಾಧ್ಯವಾಗಿಲ್ಲ. 2025ರ ಡಿಸೆಂಬರ್ 19ರಂದು ಅಂಕೋಲಾದ ಬೋಗ್ರಿಬೈಲ್ ಬಳಿ ಎರಡು ಬೈಕುಗಳ ನಡುವೆ ಅಪಘಾತ ನಡೆದಿತ್ತು. ಅಂಕೋಲಾದಿAದ ಯಲ್ಲಾಪುರದ ಕಡೆ ಬಡಿಗೇರಿಯ ನಟರಾಜ ನಾಯ್ಕ ಅವರು ಓಡಿಸುತ್ತಿದ್ದ ಬೈಕು ಎದುರಿನಿಂದ ಬಂದಿದ್ದ ಗಜಾನನ ಶಾಂತರಾಮ ನಾಯಕ ಅವರ ಬೈಕಿಗೆ ಡಿಕ್ಕಿ ಹೊಡೆದಿತ್ತು. ಆ ವೇಳೆ ನಟರಾಜ ನಾಯ್ಕ ಹಾಗೂ ಶಾಂತರಾಮ ನಾಯಕ ಇಬ್ಬರೂ ಡಾಂಬರ್ ರಸ್ತೆ ಮೇಲೆ ಬಿದ್ದು ಗಾಯಗೊಂಡಿದ್ದರು. ಅವರಿಬ್ಬರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆ ಪೈಕಿ ಗಜಾನನ ನಾಯಕ ಅವರನ್ನು ಅಂಕೋಲಾ ಆಸ್ಪತ್ರೆಗೆ ದಾಖಲಿಸಿ, ನಂತರ ಕಾರವಾರ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿತ್ತು. ಅದಾದ ನಂತರ ಗಜಾನನ ನಾಯಕ ಅವರನ್ನು ಗೋವಾದ ಬಾಂಬೋಲಿಯA ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಲಿಸಲಾಯಿತು. ಸರಿಸುಮಾರು ಒಂದುವರೆ ತಿಂಗಳ ಕಾಲ ಅವರ ಆರೈಕೆ ಮಾಡಿದರೂ ಬದುಕಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಆ ದಿನ ನಡೆದ ಅಪಘಾತದಲ್ಲಿ ಹೊರಭಾಗದಿಂದ ಸಣ್ಣಪುಟ್ಟ ನೋವಾಗಿದ್ದರೂ ದೇಹದ ಒಳಗಿನ ನೋವು ಸಹಿಸುವ ಶಕ್ತಿ ಗಜಾನನ ನಾಯಕ ಅವರಿಗೆ ಇರಲಿಲ್ಲ. ಹೀಗಾಗಿ ಜನವರಿ 28ರಂದು ಅವರು ಗೋವಾ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ಅಪಘಾತದ ಬಗ್ಗೆ ವಂದಿಗೆಯ ಸಂಜೀವ ಬೀರಣ್ಣ ನಾಯಕ ಅವರು ಅಂಕೋಲಾ ಪೊಲೀಸ್ ಪ್ರಕರಣ ದಾಖಲಿಸಿದ್ದು, ಆ ಅಪಘಾತದಿಂದ ನೋವು ಅನುಭವಿಸುತ್ತಿದ್ದ ಗಜಾನನ ನಾಯಕ (21) ಅವರು ಕೊನೆಯುಸಿರೆಳೆದ ಬಗ್ಗೆ ಆಸ್ಪತ್ರೆಯವರು ಮಾಹಿತಿ ನೀಡಿದರು. `ನಿಮ್ಮ ಜೀವ ನಿಮ್ಮ ಕುಟುಂಬದವರಿಗೂ ಅಮೂಲ್ಯ. ನಿಧಾನವಾಗಿ ವಾಹನ ಚಲಾಯಿಸಿ’ - [ಅಂಕಲ್ ಮನೆಯಲ್ಲಿ ಅಡಗಿದ್ದ ಆರೋಪಿ!](https://mobiletime.in/2026/01/the-accused-was-hiding-in-his-uncles-house/): ಕಾರವಾರದ ರೀಶೆಲ್ ಡಿಸೋಜಾ ಆತ್ಮಹತ್ಯೆ ನಂತರ ಪರಾರಿಯಾಗಿದ್ದ ಚಿರಾಗ ಕೋಠಾರಕರ್ ಚೆನೈಯಲ್ಲಿರುವ ಅಂಕಲ್ ಮನೆಯಲ್ಲಿ ಅಡಗಿದ್ದು ಗೊತ್ತಾಗಿದೆ. ಈ ಹಿನ್ನಲೆ ಪೊಲೀಸರು ಅಲ್ಲಿಗೆ ಹೋಗಿ ಚಿರಾಗ ಕೋಠಾರಕರ್ ಅವರನ್ನು ವಶಕ್ಕೆಪಡೆದಿದ್ದಾರೆ. ಕಾರವಾರದ ಕದ್ರಾದ ರಿಶೇಲ್ ಡಿಸೋಜಾ ಅವರು ಆತ್ಮಹತ್ಯೆಗೆ ಶರಣಾಗಿದ್ದರು. ಆಕೆಯನ್ನು ಪ್ರೀತಿಸುತ್ತಿದ್ದ ಚಿರಾಗ ಕೋಠಾರಕರ್ ಅವರ ಕಾಟ ಸಹಿಸಲಾಗದೇ ರೀಶೆಲ್ ಡಿಸೋಜಾ ಸಾವನಪ್ಪಿದ ಬಗ್ಗೆ ಆರೋಪಿಸಲಾಗಿತ್ತು. ಅದಾದ ನಂತರ ರೀಶೆಲ್ ಡಿಸೋಜಾ ಮೇಲೆ ಅತ್ಯಾಚಾರ ನಡೆದ ಬಗ್ಗೆ ಅವರ ಕುಟುಂಬದವರು ಆರೋಪಿಸಿದ್ದರು. ಚಿರಾಗ ಕೋಠಾರಕರ್ ಬಂಧನಕ್ಕೆ ಆಗ್ರಹಿಸಿ ಭಾರೀ ಪ್ರಮಾಣದಲ್ಲಿ ಪ್ರತಿಭಟನೆಗಳು ನಡೆದಿದ್ದವು. ಆರೋಪಿ ಚಿರಾಗ ಕೋಠಾರಕರ್ ಜಿಲ್ಲಾ ಪಂಚಾಯತ ಮಾಜಿ ಸದಸ್ಯೆಯೂ ಆಗಿರುವ ಜೆಡಿಎಸ್ ಮುಖಂಡೆ ಚೈತ್ರಾ ಕೋಠಾರಕರ್ ಪುತ್ರರಾಗಿರುವ ಕಾರಣ ಪ್ರಕರಣ ಇನ್ನಷ್ಟು ಗಂಭೀರವಾಗಿತ್ತು. ಜೊತೆಗೆ ವಿವಿಧ ರಾಜಕೀಯ ಒತ್ತಡಗಳು ಕೆಲಸ ಮಾಡಿದ್ದವು. ಅದರ ಪರಿಣಾಮ ಈ ಪ್ರಕರಣದಲ್ಲಿ ಪಿಸೈ ಸುನೀಲ ಬಂಡಿವಡ್ಡರ್ ಅವರನ್ನು ಅಮಾನತು ಮಾಡಲಾಗಿತ್ತು. ಸದ್ಯ ಚಿರಾಗ ಕೊಠಾರಕರ ಅವರನ್ನು ಗುರುವಾರ ಪೊಲೀಸರು ಬಂಧಿಸಿದ್ದಾರೆ. ಕಳೆದ ಎರಡು ವಾರಗಳಿಂದ ಪೊಲೀಸ್ ಅಧಿಕಾರಿಗಳ ತಂಡವು ಗೋವಾ, ಮಹಾರಾಷ್ಟ್ರ ಸೇರಿದಂತೆ ಹೊರ ರಾಜ್ಯಗಳಲ್ಲಿ ಚಿರಾಗ ಕೋಠಾರಕರ್ ಅವರಿಗಾಗಿ ಹುಡುಕಾಟ ನಡೆಸಿದ್ದು, ಈ ದಿನ ಚಿರಾಗ್ ಸಿಕ್ಕಿ ಬಿದ್ದಿದ್ದಾರೆ. - [ಯಲ್ಲಾಪುರ ಜಾತ್ರೆ: ಖಜಾನೆ ತುಂಬ ಕಾಸು!](https://mobiletime.in/2026/01/yellapur-fair-the-treasury-is-full-of-money/): ಗ್ರಾಮದೇವಿ ಜಾತ್ರೆ ಹಿನ್ನಲೆ ಯಲ್ಲಾಪುರ ಪಟ್ಟಣ ಪಂಚಾಯತಗೆ ಒಂದೇ ದಿನ ಲಕ್ಷಾಂತರ ರೂ ಆದಾಯ ಬಂದಿದೆ. ಯಲ್ಲಾಪುರ ಪಟ್ಟಣ ಪಂಚಾಯತದಿoದ ಪಟ್ಟಣದ ಬೀದಿ ಬೀದಿಗಳಲ್ಲಿನ ಜಾಗವನ್ನು ತಾತ್ಕಾಲಿಕ ಮಳಿಗೆ ನಿರ್ಮಾಣಕ್ಕಾಗಿ ಹರಾಜು ಹಾಕಲಾಗಿದ್ದು, 200ಕ್ಕೂ ಅಧಿಕ ವ್ಯಾಪಾರಿಗಳು ಹರಾಜಿನಲ್ಲಿ ಭಾಗವಹಿಸಿದ್ದಾರೆ. 30 ಸಾವಿರ ರೂಪಾಯಿಯಿಂದ 1 ಲಕ್ಷ ರೂ ಆಸುಪಾಸಿನವರೆಗೆ ಹರಾಜು ಕೂಗಿ ಜಾತ್ರಾ ಅವಧಿಯ ವ್ಯಾಪಾರಕ್ಕೆ ಜಾಗ ಕಾಯ್ದಿರಿಸಿಕೊಂಡಿದ್ದಾರೆ. ಬೆಳಗ್ಗೆ 11ಗಂಟೆಯಿoದ ಸಂಜೆ 4ಗಂಟೆಯವರೆಗೂ ಜಾಗಗಳ ಹರಾಜು ಪ್ರಕ್ರಿಯೆ ನಡೆದಿದ್ದು, ತೀವೃ ಪೈಪೋಟಿ ಹಿನ್ನಲೆ ಮುಕ್ತಾಯದ ಸಮಯಕ್ಕೆ 19 ಪ್ಲಾಟುಗಳು ಮಾತ್ರ ಹರಾಜು ಆಗಿವೆ. ಪಟ್ಟಣ ಪಂಚಾಯತದಿoದ ಒಟ್ಟು 122 ಪ್ಲಾಟುಗಳಿಗಾಗಿ ಜಾಗ ಮೀಸಲಿರಿಸಿದ್ದು, ಇನ್ನೂ ನಾಲ್ಕು ದಿನ ಹರಾಜಿಗೆ ಸಮಯ ಬೇಕಾಗಬಹುದಾಗಿ ಅಧಿಕಾರಿಗಳು ಅಂದಾಜಿಸಿದ್ದಾರೆ. ಪೊಲೀಸ್ ಠಾಣೆ ಹಾಗೂ ಪಟ್ಟಣ ಪಂಚಾಯತ ರಸ್ತೆಯ ತಿರುವಿನಲ್ಲಿ 10*10 ಗಾತ್ರದ ಜಾಗವನ್ನು ಪಟ್ಟಣ ಪಂಚಾಯತವೂ 14 ಸಾವಿರ ರೂಪಾಯಿಯ ಬೆಲೆ ನಿಗದಿ ಮಾಡಿತ್ತು. ಕಳೆದ ಜಾತ್ರೆಯಲ್ಲಿ 5 ಸಾವಿರ ರೂ ಬೆಲೆಗೆ ಹರಾಜುಕೂಗಲಾಗಿದ್ದು,, ಈ ಬಾರಿ ಸರ್ಕಾರವೇ 14 ಸಾವಿರ ರೂ ನಿಗದಿ ಮಾಡಿದಕ್ಕೆ ಹರಾಜಿಗೆ ಬಂದವರು ಆಕ್ಷೇಪವ್ಯಕ್ತಪಡಿಸಿದರು. ಶೇ 18ರ ಜಿಎಸ್‌ಟಿ ಪ್ರತ್ಯೇಕವಾಗಿ ಪಾವತಿಸುವ ಬಗ್ಗೆಯೂ ತಕರಾರು ಸಲ್ಲಿಸಿದರು. ಆದರೆ, ಅದೇ ಪ್ಲಾಟು ಕೊನೆಗೆ 28 ಸಾವಿರ ರೂಪಾಯಿಯವರೆಗೆ ಕೂಗಲ್ಪಟ್ಟಿದ್ದು, ನಂತರದ ಪ್ಲಾಟುಗಳು ಸಹ 30 ಸಾವಿರ ಮೇಲ್ಪಟ್ಟು ಆದಾಯ ತಂದುಕೊಟ್ಟವು. ಪೊಲೀಸ್ ಠಾಣೆ ಹಾಗೂ ಹೆದ್ದಾರಿ ತಿರುವಿನ ಜಾಗದಲ್ಲಿದ್ದ 12*10 ಗಾತ್ರದ ಪ್ಲಾಟು 1 ಲಕ್ಷದ ಸಮೀಪಕ್ಕೆ ಹೋಗಿದ್ದು, ಅದಾದ ನಂತರದ ಅನೇಕ ಪ್ಲಾಟುಗಳನ್ನು ಜನ ಪೈಪೋಟಿಗೆ ಬಿದ್ದು ಹರಾಜು ಕೂಗಿದರು. ಸಣ್ಣಪುಟ್ಟ ವ್ಯಾಪಾರಸ್ಥರು ಹರಾಜಿನಲ್ಲಿ ಭಾಗವಹಿಸಿದರಾದರೂ ಆ ದರಕ್ಕೆ ಭೂಮಿ ಬಾಡಿಗೆ ಪಾವತಿಸಲಾಗದೇ ಮೌನವಾಗಿದ್ದರು. ಈ ನಡುವೆ ಕೆಲ ಸಂಘಟನೆಯವರು `ಪ್ರತಿ ಜಾತ್ರೆಯಂತೆ ತಮಗೂ ಕೆಲ ಪ್ಲಾಟುಗಳನ್ನು ಮೀಸಲಿರಿಸಬೇಕು’ ಎಂದು ಆಗ್ರಹಿಸಿದರು. ಆದರೆ, ಅಧಿಕಾರಿಗಳು ಅದನ್ನು ಒಪ್ಪಲಿಲ್ಲ. `ಈ ಬಾರಿ ಶಿರಸಿ, ಸಾಗರ ಎಲ್ಲಾ ಕಡೆ ಜಾತ್ರೆಯಿದೆ. ಹೀಗಾಗಿ ದುಬಾರಿ ಬಾಡಿಗೆ ನೀಡಿ ಪ್ಲಾಟು ಪಡೆದರೂ ವ್ಯಾಪಾರ ಕಷ್ಟ’ ಎಂದು ಕೆಲವರು ಹರಾಜಿನಿಂದ ಹಿಂದೆ ಸರಿದರು. ಆದರೆ, ಪೈಪೋಟಿಗೆ ಬಿದ್ದ ಕೆಲವರು ಪಟ್ಟುಹಿಡಿದು ಹರಾಜು ಕೂಗಿ ಸರ್ಕಾರಿ ಬೊಕ್ಕಸ ತುಂಬಿಸಿದರು. ಪೂರ್ವ ನಿಗದಿಯಾದಂತೆ ಮುಂದಿನ ಎರಡು ದಿನಗಳ ಕಾಲ ಹರಾಜು ಪ್ರಕ್ರಿಯೆ ನಡೆಯಲಿದೆ. ಆ ದಿನದಲ್ಲಿಯೂ ಲಕ್ಷಾಂತರ ರೂ ಸರ್ಕಾರಿ ಬೊಕ್ಕಸಕ್ಕೆ ಬರುವ ಸಾಧ್ಯತೆಗಳಿವೆ. - [ಮೀನು ಗಾಡಿಗೆ ಗುದ್ದಿದ ಸರ್ಕಾರಿ ಬಸ್ಸು: ಏಳು ಜನರಿಗೆ ಗಾಯ](https://mobiletime.in/2026/01/government-bus-hits-fish-cart-seven-injured/): ಮೀನು ಸಾಗಾಟ ಬುಲೆರೋ ಹಾಗೂ ಪ್ರಯಾಣಿಕರನ್ನು ಹೊತ್ತೊಯ್ಯುವ ಸರ್ಕಾರಿ ಬಸ್ ನಡುವೆ ಕುಮಟಾದಲ್ಲಿ ಅಪಘಾತವಾಗಿದೆ. ಈ ಅವಘಡದಲ್ಲಿ ಏಳು ಜನರಿಗೆ ಗಾಯವಾಗಿದೆ. ರಾಷ್ಟಿಯ ಹೆದ್ದಾರಿಯ ಮಾನೀರ ದೇವಸ್ಥಾನದ ಬಳಿ ಗುರುವಾರ ಈ ದುರಂತ ನಡೆದಿದೆ. ಕುಮಟಾ ಡಿಪೋಗೆ ಸೇರಿದ ಬಸ್ಸು ಗೋಕರ್ಣದಿಂದ ಮರಳುತ್ತಿರುವಾಗ ಕಾರವಾರದಿಂದ ಮೀನು ತಂದಿದ್ದ ಬುಲೆರೋಗೆ ಗುದ್ದಿದೆ. ಕುಮಟಾದಲ್ಲಿ ಮೀನು ಮಾರಾಟ ಮಾಡಿ ಮರಳುತ್ತಿದ್ದ ಬುಲೆರೋಗೆ ಎದುರಿನಿಂದ ಬಂದ ಬಸ್ಸು ಡಿಕ್ಕಿ ಹೊಡೆದಿದೆ. ಪರಿಣಾಮ ಎರಡು ವಾಹನಗಳ ಮುಂದಿನ ಭಾಗ ಜಖಂ ಆಗಿದೆ. ಬೋಲೆರೂ ವಾಹನದ ಚಾಲಕ ಕಾರವಾರದ ಡೇವಿಡ್ ಪಾಸ್ಕಲ್ ಅವರು ಗಂಭೀರ ಪ್ರಮಾಣದಲ್ಲಿ ಗಾಯಗೊಂಡಿದ್ದಾರೆ. ಜೊತೆಗೆ ಬಸ್ಸಿನಲ್ಲಿದ್ದ ಆರು ಜನರಿಗೆ ನೋವಾಗಿದೆ. ಡೇವಿಡ್ ಅವರನ್ನು ಮಂಗಳೂರು ಆಸ್ಪತ್ರೆಗೆ ಕಳುಹಿಸಲಾಗಿದ್ದು, ಉಳಿದವರಿಗೆ ಕುಮಟಾ ಸರ್ಕಾರಿ ಆಸ್ಪತ್ರೆಯಲ್ಲಿ ಆರೈಕೆ ನಡೆದಿದೆ. ಅಪಘಾತದ ಪರಿಣಾಮ 1 ತಾಸುಗಳ ಕಾಲ ಸಂಚಾರ ದಟ್ಟಣೆ ಉಂಟಾಗಿದ್ದು, ಹೆದ್ದಾರಿ ಉದ್ದಕ್ಕೂ ವಾಹನ ನಿಂತಿರುವುದು ಕಾಣಿಸಿತು. ಪೊಲೀಸರು ಕ್ರೇನ್ ಬಳಸಿ ಅಪಘಾತಕ್ಕೀಡಾದ ವಾಹನವನ್ನು ರಸ್ತೆ ಬದಿಗೆ ಸರಿಸಿದರು. - [ಗಂಡನ ಚಿನ್ನ ಕದ್ದ ಹೆಂಡತಿ: ಉಂಗುರ ಮಾರಾಟ!](https://mobiletime.in/2026/01/the-wife-who-stole-her-husbands-gold-sell-the-ring/): ಸಿದ್ದಾಪುರದ ತನ್ವೀರ್ ಸಾಬ್ ಅವರು ಗ್ಯಾಸ್ ರಿಪೇರಿ ಮಾಡಿ ಚಿನ್ನ ಹಾಗೂ ಹಣ ಸಂಪಾದಿಸಿದ್ದು, ಅದನ್ನು ಅವರ ಪತ್ನಿ ರೇಷ್ಮಾ ಸಾಬ್ ಅವರು ಅಪಹರಿಸಿದ್ದಾರೆ. ತಮ್ಮ ಸಹೋದರರ ಸಹಾಯದಿಂದ ರೇಷ್ಮಾ ಸಾಬ್ ಅವರು ಗಂಡನ ಉಂಗುರವನ್ನು ಮಾರಾಟ ಮಾಡಿದ್ದಾರೆ. ಸಿದ್ದಾಪುರದ ಹಾಳಾದಕಟ್ಟಾದಲ್ಲಿ ತನ್ವೀರ ಹುಸೇನ್ ಸಾಬ್ ಅವರು ವಾಸವಾಗಿದ್ದಾರೆ. ಗ್ಯಾಸ್ ಒಲೆ ರಿಪೇರಿ ಮಾಡಿ ಅವರು ಬದುಕು ಕಟ್ಟಿಕೊಂಡಿದ್ದಾರೆ. ಧಾರವಾಡದ ಮಾಲಾಪುರ ಬಸ್ ನಿಲ್ದಾಣ ಬಳಿಯ ಹಾತರಕಿ ನಗರದ ರೇಷ್ಮಾ ಸಾಬ್ ಅವರನ್ನು ತನ್ವೀರ್ ಸಾಬ್ ಅವರು ವಿವಾಹವಾಗಿದ್ದಾರೆ. ರೇಷ್ಮಾ ಸಾಬ್ ಹಾಗೂ ತನ್ವೀರ್ ಸಾಬ್ ಅವರ ನಡುವೆ ಸಣ್ಣ ಸಣ್ಣ ವಿಷಯಕ್ಕೆ ಜಗಳವಾಗುತ್ತಿದ್ದು, ಅದನ್ನೇ ದೊಡ್ಡದಾಗಿಸಿದ ರೇಷ್ಮಾ ಸಾಬ್ ಅವರು ತವರು ಮನೆ ಸೇರಿದ್ದಾರೆ. ಈ ನಡುವೆ ರೇಷ್ಮಾ ಸಾಬ್ ಅವರು ಧಾರವಾಡದ ಕೌಟುಂಬಿಕ ನ್ಯಾಯಾಲಯದಲ್ಲಿ ತನ್ವೀರ್ ಸಾಬ್ ಅವರ ವಿರುದ್ಧ ದೂರು ನೀಡಿದ್ದಾರೆ. ತವರು ಮನೆಗೆ ಹೋಗುವಾಗ ಸಿದ್ದಾಪುರದ ಮನೆಯಲ್ಲಿದ್ದ ಕಪಾಟಿನ ಬೀಗದ ಕೀಯನ್ನು ರೇಷ್ಮಾ ಸಾಬ್ ಅವರು ಒಯ್ದಿದ್ದು, ತನ್ವೀರ್ ಸಾಬ್ ಅವರು ಮನೆಯಲ್ಲಿ ಇಲ್ಲದ ವೇಳೆ ಬಂದು ಅಲ್ಲಿದ್ದ ಚಿನ್ನ-ಹಣ ಅಪಹರಿಸಿ ಪರಾರಿ ಆಗಿದ್ದಾರೆ. `ಗ್ಯಾಸ್ ರಿಪೇರಿ ಮಾಡಿ ತಾವು ಕೂಡಿಟ್ಟಿದ್ದ 1 ಲಕ್ಷ ರೂ ಹಣ, ಬಳೆ, ಚೈನು, ಲೊಕೇಟ್, ಉಂಗುರವನ್ನು ರೇಷ್ಮಾ ಸಾಬ್ ಅವರು ತಮ್ಮ ಸಹೋದರರಾದ ನಿಯಾಜ್ ಮಹಮದ್ ಅಲಿ ಮುಲ್ಲಾ ಹಾಗೂ ಸಾನು ಮಹಮದ್ ಅಲಿ ಸಹಾಯದಿಂದ ದೋಚಿದ್ದಾರೆ’ ಎಂದು ತನ್ವೀರ್ ಸಾಬ್ ಅವರು ಅಳಲು ತೋಡಿಕೊಂಡಿದ್ದಾರೆ. `ಈ ಪೈಕಿ 1 ಲಕ್ಷ ರೂ ಹಣವನ್ನು ರೇಷ್ಮಾ ಸಾಬ್ ಅವರು ಸಿದ್ದಾಪುರದ ಎಸ್ ಬಿ ಐ ಖಾತೆಗೆ ಜಮಾ ಮಾಡಿದ್ದಾರೆ. ತನ್ನ ಉಂಗುರವನ್ನು ಮಾರಾಟ ಮಾಡಿದ್ದಾರೆ. 2021ರಲ್ಲಿ ಈ ಎಲ್ಲಾ ಘಟನೆ ನಡೆದಿದ್ದರೂ ಅನಾರೋಗ್ಯದ ಕಾರಣ ಇದೀಗ ದೂರು ನೀಡುತ್ತಿದ್ದು, ಕ್ರಮ ಜರುಗಿಸಬೇಕು’ ಎಂದು ತನ್ವೀರ್ ಶೇಖ್ ಅವರು ಪೊಲೀಸರ ಮೊರೆ ಹೋಗಿದ್ದಾರೆ. ಸಿದ್ದಾಪುರ ಪೊಲೀಸರು ಪ್ರಕರಣ ದಾಖಲಿಸಿ, ವಿಚಾರಣೆ ಶುರು ಮಾಡಿದ್ದಾರೆ. - [ಎಪಿಎಂಸಿ ಆವರಣ ಗಲೀಜು: ಲೋಕಾಯುಕ್ತರಿಗೆ ದೂರು!](https://mobiletime.in/2026/01/apmc-premises-are-dirty-complaint-to-lokayukta/): ಕುಮಟಾದ ಕೃಷಿ ಉತ್ಪನ್ನ ಮಾರುಕಟ್ಟೆ ಅವ್ಯವಸ್ಥೆಯ ಬಗ್ಗೆ ಮಾಹಿತಿ ನೀಡಿದರೂ ಕ್ರಮ ಜರುಗಿಸದ ಕಾರಣ ಲೋಕಾಯುಕ್ತರಿಗೆ ದೂರು ನೀಡುವುದಾಗಿ ಜನಸಾಮಾನ್ಯರ ಸಮಾಜ ಕಲ್ಯಾಣ ಕೇಂದ್ರದವರು ಎಚ್ಚರಿಸಿದ್ದಾರೆ. ದೂರಿನ ಪ್ರತಿಯನ್ನು ಪ್ರದರ್ಶಿಸಿದ ಕೇಂದ್ರದ ಅಧ್ಯಕ್ಷ ಆಗ್ನೇಲ್ ರೋಡ್ರಿಗಸ್ ಅಧಿಕಾರಿಗಳ ಅಸಡ್ಡೆ ಬಗ್ಗೆ ಆಕ್ರೋಶವ್ಯಕ್ತಪಡಿಸಿದರು. `ಎಪಿಎಂಸಿ ಆವರಣದಲ್ಲಿ ವ್ಯಾಪಕ ಪ್ರಮಾಣದಲ್ಲಿ ತ್ಯಾಜ್ಯ ಬಿದ್ದಿದೆ. ಎಲ್ಲೆಂದರಲ್ಲಿ ಬಿಯರ್ ಬಾಟಲಿಗಳು ಕಾಣಿಸುತ್ತಿವೆ. ಅಲ್ಲಿರುವ ತ್ಯಾಜ್ಯವನ್ನು ಜಾನುವಾರುಗಳು ತಿನ್ನುತ್ತಿವೆ. ಈ ಬಗ್ಗೆ ಮಾಧ್ಯಮಗಳಲ್ಲಿ ವರದಿ ಪ್ರಸಾರವಾದ ಬಗ್ಗೆ ಅರಿವಿದ್ದರೂ ಅಧಿಕಾರಿಗಳು ಮೌನವಾಗಿದ್ದಾರೆ. ಸರ್ಕಾರಿ ಸಂಬಳಪಡೆದು ಸೇವೆ ಮಾಡಿದ ಅಧಿಕಾರಿಗಳ ವಿರುದ್ಧ ಲೋಕಾಯುಕ್ತ ದೂರು ನೀಡಲಾಗುತ್ತಿದೆ’ ಎಂದವರು ಮಾಹಿತಿ ನೀಡಿದ್ದಾರೆ. `ಎಪಿಎಂಸಿ ಆವರಣದಲ್ಲಿನ ಅಶುಚಿತ್ವ ರೋಗಕ್ಕೆ ಕಾರಣವಾಗಿದೆ. ಜಾನುವಾರುಗಳು ಸಹ ಇಲ್ಲಿ ಅಸ್ವಸ್ಥವಾಗಿದ್ದು, ತ್ಯಾಜ್ಯದಿಂದ ಪರಿಸರ ಮಾಲಿನ್ಯವಾಗುತ್ತಿದೆ’ ಎಂದು ಸಾಮಾಜಿಕ ಕಾರ್ಯಕರ್ತ ಸುಧಾಕರ ನಾಯ್ಕ, ನಿವೃತ ಸರಕಾರಿ ಅಧಿಕಾರಿ ನಾಗೇಶ್ ಹಾಗೂ ಪ್ರಮುಖರಾದ ಗಣಪತಿ ಪಟಗಾರ ಅವರು ದೂರಿದ್ದಾರೆ. - [ಆಫ್ರಿಕಾದಲ್ಲಿ ಜಗಳ.. ಶಿರಸಿಯಲ್ಲಿ ಹೊಡೆದಾಟ!](https://mobiletime.in/2026/01/quarrel-in-africa-fight-in-sirsi/): ಆಫ್ರಿಕಾದಿಂದ ಶಿರಸಿಗೆ ಬಂದ ಮೊಹಮದ್ ಸಾಬ್ ಅವರಿಗೆ ಮೂವರು ಸೇರಿ ಹೊಡೆದಿದ್ದಾರೆ. ಉದ್ಯೋಗಕ್ಕಾಗಿ ಆಫ್ರಿಕಾದಲ್ಲಿ ನಡೆದ ಕಲಹ ಈ ಹೊಡೆದಾಟಕ್ಕೆ ಕಾರಣವಾಗಿದೆ. ಹೆಗಡೆಕಟ್ಟಾ ಸಮೀಪದ ಶಿವಳ್ಳಿಯ ಮೊಹಮದ್ ಅನೀಸ್ ಅಬ್ದುಲ್ ಸಮದ್ ಸಾಬ್ ಅವರು ವಾಸವಾಗಿದ್ದಾರೆ. ಅವರು ಸೌತ್ ಆಫ್ರಿಕಾದಲ್ಲಿ ವಾಚ್ ರಿಪೇರಿ ಕೆಲಸ ಮಾಡಿಕೊಂಡಿದ್ದಾರೆ. ಅದೇ ದೇಶದಲ್ಲಿ ಶಿರಸಿ ಹೊಸಪೇಟೆ ರಸ್ತೆಯ ಸುಫಿಯಾನ ಸಲೀಂ ಶೇಖ್ ಹಾಗೂ ಲಿಕಮಾನ್ ಶಫಿ ಶೇಖ್ ಕಿರಾಣಿ ಅಂಗಡಿಯಲ್ಲಿ ಕೆಲಸಕ್ಕಿದ್ದು, ಆ ಕಿರಾಣಿ ಅಂಗಡಿ ಮಾಲಕ ಅವರಿಬ್ಬರನ್ನು ಕೆಲಸದಿಂದ ತೆಗೆದ ಕಾರಣ ಮಹಮದ್ ಸಾಬ್ ಅವರು ಪೆಟ್ಟು ತಿಂದಿದ್ದಾರೆ. ಸುಫಿಯಾನ ಶೇಖ್ ಹಾಗೂ ಲಿಕಮಾನ್ ಶೇಖ್ ಕೆಲಸ ಮಾಡುತ್ತಿದ್ದ ಕಿರಾಣಿ ಅಂಗಡಿಯಲ್ಲಿ ಮಹಮದ್ ಸಾಬ್ ಅವರ ಮಾವನ ಮಗ ಮೋಶಿನ್ ಅಬ್ದುಲ್ ವಹಾಬ್ ಸಹ ಕೆಲಸ ಮಾಡುತ್ತಿದ್ದರು. ಮೋಶಿನ್ ವಹಾಬ್ ಹಾಗೂ ಸುಫಿಯಾನ ಶೇಖ್ ನಡುವೆ ಆಗಾಗ ಜಗಳ ನಡೆಯುತ್ತಿದ್ದು, ಮಹಮದ್ ಸಾಬ್ ಮಧ್ಯಸ್ಥಿಕೆವಹಿಸಿ ಬುದ್ದಿ ಹೇಳಿದ್ದರು. ಅವರ ಜಗಳ ಸಹಿಸದ ಕಿರಾಣಿ ಅಂಗಡಿ ಮಾಲಕ ಸುಫಿಯಾನ ಶೇಖ್ ಹಾಗೂ ಲಿಕಮಾನ್ ಶೇಖ್ ಅವರನ್ನು ಕೆಲಸದಿಂದ ತೆಗೆದಿದ್ದರು. ಕೆಲಸ ಇಲ್ಲದ ಕಾರಣ ಅವರಿಬ್ಬರು ಶಿರಸಿಗೆ ಮರಳಿದ್ದರು. ಹೀಗಿರುವಾಗ ವಾರದ ಹಿಂದೆ ಮಹಮದ್ ಸಾಬ್ ಅವರು ಶಿರಸಿಗೆ ಬಂದಿದ್ದರು. ಸ್ನೇಹಿತ ಖಾಲಿದ್ ಮಹಮದ್ ನಜೀರ್ ಸಾಬ್ ಜೊತೆ ಮಹಮದ್ ಸಾಬ್ ಅವರು ರಿಲಾಯನ್ಸ್ ಮಾಲ್ ಹೋಗಿರುವುದನ್ನು ನೋಡಿ ಸುಫಿಯಾನ ಶೇಖ್ ಅವರನ್ನು ಹಿಂಬಾಲಿಸಿದರು. ಬಿಡ್ಕಿಬೈಲ್ ಮೀನು ಮಾರುಕಟ್ಟೆ ಕಡೆ ಬರುತ್ತಿದ್ದ ಮಹಮದ್ ಸಾಬ್ ಅವರನ್ನು ಶೆಟ್ಟರ್ ಅಂಗಡಿ ಕ್ರಾಸಿನ ಬಳಿ ಸುಫಿಯಾನ ಶೇಖ್ ಅಡ್ಡಗಟ್ಟಿದರು. `ಮಹಮದ್ ಸಾಬ್ ಅವರ ಪಿತೂರಿಯಿಂದಲೇ ನಮ್ಮ ಕೆಲಸ ಹಾಳಾಗಿದೆ’ ಎಂದು ತಿಳಿದ ಸುಫಿಯಾನ ಶೇಖ್ ಬೈಕಿನಲ್ಲಿ ಹೋಗುವಾಗಲೇ ಮಹಮದ್ ಸಾಬ್ ಅವರ ಬಟ್ಟೆ ಹಿಡಿದು ಎಳೆದರು. ಕೈಯಲ್ಲಿದ್ದ ವಾಚನ್ನು ಕಿತ್ತುಕೊಂಡರು. ಇದರಿಂದ ಹೆದರಿದ ಮಹಮದ್ ಸಾಬ್ ಖಾಲೀದ್ ಅವರ ಅಂಗಡಿಗೆ ಹೋಗಿ ಅವಿತುಕೊಂಡರು. ಅದಾದ ನಂತರ ಅಲ್ಲಿ ಹೊಸಪೇಟೆ ರಸ್ತೆಯ ಲುಕುಮಾನ್ ಹಾಗೂ ಕೆರೆಗುಂಡಿ ರಸ್ತೆಯ ಅವೇಸ್ ಇಮ್ತಿಯಾಜ್ ಶೇಖ್ ಆಗಮಿಸಿದ್ದು, ಅವರಿಬ್ಬರು ಸೇರಿ ಮೊಹಮದ್ ಸಾಬ್ ಅವರನ್ನು ಹಿಗ್ಗಾಮುಗ್ಗ ಥಳಿಸಿದರು. `ನಮ್ಮನ್ನು ಉದ್ಯೋಗದಿಂದ ತೆಗೆಸಿ ನೀನು ಅಲ್ಲಿ ಕೆಲಸಕ್ಕೆ ಸೇರಿದ್ದೀಯಾ?’ ಎಂದು ಪ್ರಶ್ನಿಸಿ ಮತ್ತಷ್ಟು ಹೊಡೆದರು. ಆ ನೋವು ಸಹಿಸಲಾಗದ ಮೊಹಮದ್ ಸಾಬ್ ಶಿರಸಿ ನಗರ ಠಾಣೆ ಪೊಲೀಸರಿಗೆ ದೂರು ನೀಡಿದರು. `ದ್ವೇಷ ಒಳ್ಳೆಯದಲ್ಲ’   - [ಗೆಲುವಿನ ಹಾದಿಯಲ್ಲಿ ಬೆಂಗಳೂರು ಜವಾನ್ಸ್](https://mobiletime.in/2026/01/bangalore-jawans-on-the-road-to-victory/): ವಿಶ್ವ ಪಿಕಲ್ ಬಾಲ್ ಲೀಗ್ ನ ಎರಡನೇ ಸೀಸನ್ ನಿನ್ನೆ ಪ್ರಾರಂಭವಾಗಿದೆ.ನಿನ್ನೆ ನಡೆದ ಮ್ಯಾಚ್ ನಲ್ಲಿ ‘ಬೆಂಗಳೂರು ಜವಾನ್ಸ್ ‘ತಂಡವು ‘ಪುಣೆ ಯುನೈಟೆಡ್’ ತಂಡದ ವಿರುದ್ಧ 5-0 ಅಂತರದಿಂದ ಕ್ಲೀನ್ ಸ್ವೀಪ್ ಮಾಡುವ ಮೂಲಕ ಭರ್ಜರಿ ಗೆಲುವು ಸಾಧಿಸಿದೆ. ಪ್ರಿಯಾ ಅಟ್ಲೀ ಮತ್ತು ಹೆಸರಾಂತ ನಿರ್ದೇಶಕ ಅಟ್ಲೀ ಮಾಲೀಕತ್ವದ ಬೆಂಗಳೂರು ಜವಾನ್ಸ್ ತಂಡವು ವಿಶ್ವ ಪಿಕಲ್ ಬಾಲ್ ಲೀಗ್ ನ ಮೊದಲ ಸೀಸನ್ ನ ಚಾಂಪಿಯನ್ ತಂಡವಾಗಿದ್ದು, ಮತ್ತೆ ತನ್ನ ಚಾಂಪಿಯನ್ ಆಟವನ್ನು ಈ ಮ್ಯಾಚ್ ಗೆಲ್ಲುವುದರ ಮೂಲಕ ಮುಂದುವರೆಸಿದೆ. ಆತ್ಮ ವಿಶ್ವಾಸ ಮತ್ತು ಛಲದೊಂದಿದೆ ಅದ್ಭುತ ಪ್ರದರ್ಶನ ನೀಡಿರುವ ‘ಬೆಂಗಳೂರು ಜವಾನ್ಸ್’ ತಂಡವು ಲೀಗ್ ನ ಅತ್ಯಂತ ಬಲಿಷ್ಠ ತಂಡಗಳಲ್ಲಿ ಒಂದೆಂದು ಪುನಃ ಸಾಬೀತುಪಡಿಸಿದೆ. ಇನ್ನು ಸ್ಟೇಡಿಯಂನಲ್ಲಿ ನೆರೆದಿದ್ದ ಅಟ್ಲಿ ಅವರ ಅಭಿಮಾನಿಗಳ ಹರ್ಷೋದ್ಗಾರ ಮತ್ತು ಬೆಂಬಲ ಪಂದ್ಯಕ್ಕೆ ಇನ್ನಷ್ಟು ಮೆರುಗನ್ನು ನೀಡಿತು. ಇಡೀ ಕ್ರೀಡಾಂಗಣದಲ್ಲಿ ‘ಜವಾನ್ಸ್’ ಮಯವಾಗಿತ್ತು.ಮೊದಲ ಸೀಸನ್ ಗೆದ್ದ ಹಾಗೇ ಎರಡನೇಯ ಸೀಸನ್ ಗೆದ್ದು, ತನ್ನ ಪ್ರಶಸ್ತಿಯನ್ನು ಉಳಿಸಿಕೊಳ್ಳಲು ಸನ್ನದವಾಗಿದೆ ಎನ್ನುವ ಬಲವಾದ ಸಂದೇಶವನ್ನು ನೀಡಿದೆ. - [ಹೊಂಡ ಹಾರಿದ ಬೈಕ್ ಸವಾರ: ಸಾವು!](https://mobiletime.in/2026/01/biker-who-jumped-a-pothole-death/): ಕಾರವಾರದ ದೇವಳಮಕ್ಕಿ ಬಳಿ ವಾಸವಾಗಿದ್ದ ನಾಗರಾಜ ಗೌಡ ಅವರು ಬೈಕಿನಿಂದ ಬಿದ್ದು ಸಾವನಪ್ಪಿದ್ದಾರೆ. ರಸ್ತೆ ಪಕ್ಕದ ಹೊಂಡಕ್ಕೆ ಬಿದ್ದು ಪೆಟ್ಟು ಮಾಡಿಕೊಂಡಿದ್ದ ಅವರನ್ನು ಹುಬ್ಬಳ್ಳಿ ಆಸ್ಪತ್ರೆಗೆ ದಾಖಲಿಸಿದರೂ ಬದುಕಿಸಲು ಸಾಧ್ಯವಾಗಿಲ್ಲ. ಕಾರವಾರದ ದೇವಳಮಕ್ಕಿ ಸಮೀಪದ ಶಿರ್ವೇಯಲ್ಲಿ ನಾಗರಾಜ ಗಣೇಶ ಗೌಡ (32) ಅವರು ವಾಸವಾಗಿದ್ದರು. ಜನವರಿ 25ರ ಸಂಜೆ ಅವರು ಸೋರಗದ್ದೆಯಿಂದ ಶಿರ್ವೇ ಬೈಕ್ ಮೇಲೆ ಹೋಗುತ್ತಿದ್ದರು. ರಸ್ತೆ ತಿರುವು ಪ್ರದೇಶದಲ್ಲಿ ಅವರು ಬೈಕ್ ಮೇಲಿನ ನಿಯಂತ್ರಣ ಕಳೆದುಕೊಂಡರು. ಬೈಕ್ ಜೊತೆ ಅವರು ರಸ್ತೆ ಪಕ್ಕದ ಹೊಂಡಕ್ಕೆ ಬಿದ್ದು ಪೆಟ್ಟು ಮಾಡಿಕೊಂಡರು. ಎದೆ ಹಾಗೂ ತೋಳಿನ ಭಾಗಕ್ಕೆ ಗಂಭೀರ ಗಾಯ ಮಾಡಿಕೊಂಡಿದ್ದ ನಾಗರಾಜ ಗೌಡ ಅವರನ್ನು ಹುಬ್ಬಳ್ಳಿಯ ಆಸ್ಪತ್ರೆಗೆ ಸಾಗಿಸಲಾಯಿತು. ಅಲ್ಲಿ ಅವರನ್ನು ಬದುಕಿಸುವುದಕ್ಕಾಗಿ ನಿರಂತರ ಆರೈಕೆಯೂ ನಡೆಯಿತು. ಆದರೆ, ಅದರಿಂದ ಯಾವ ಪ್ರಯೋಜನವೂ ಆಗಲಿಲ್ಲ. ಜನವರಿ 27ರಂದು ಅವರು ಸಾವನಪ್ಪಿದ್ದು, ಸೊರಗದ್ದೆಯ ಮಾದೇವ ಗೋವಿಂದ ಗೌಡ ಅವರು ಈ ಬಗ್ಗೆ ಪೊಲೀಸರಿಗೆ ವಿಷಯ ಮುಟ್ಟಿಸಿದರು. ಮಲ್ಲಾಪುರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿದರು. - [ಮಕ್ಕಳ ಜೀವ ರಕ್ಷಿಸಿದ ಬಸ್ ಚಾಲಕ](https://mobiletime.in/2026/01/bus-driver-saves-childrens-lives/): ಕಾರವಾರದಲ್ಲಿ ಶಾಲಾ ಮಕ್ಕಳನ್ನು ಕರೆದೊಯ್ಯುತ್ತಿದ್ದ ಸರ್ಕಾರಿ ಬಸ್ಸಿನ ಬ್ರೆಕ್ ಹಾಗೂ ಕ್ಲಚ್ ಪೇಲ್ ಆಗಿದ್ದು, ಚಾಲಕನ ಸಮಯ ಪ್ರಜ್ಞೆಯಿಂದ ಮಕ್ಕಳ ಜೀವ ಉಳಿದಿದೆ. ನಾಲ್ಕು ದಿನದ ಹಿಂದೆ ನಡೆದ ವಿದ್ಯಮಾನದ ವಿಡಿಯೋ ಇದೀಗ ವೈರಲ್ ಆಗಿದೆ. ಕಾರವಾರ ಡಿಪೋದಿಂದ ದೇವಳಮಕ್ಕಿ ಹಾಗೂ ನಗೆಕೋವೆ ಪ್ರದೇಶಕ್ಕೆ ತೆರಳುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ಸು ಹಾಳಾಗಿದೆ. ಘಟ್ಟದ ಪ್ರದೇಶದಲ್ಲಿ ಬಸ್ಸು ಹಾಳಾಗಿದ್ದರಿಂದ ಪ್ರಯಾಣಿಕರು ಕಂಗಾಲಾಗಿದ್ದು, ಕೂಡಲೇ ಬಸ್ಸಿನ ಚಾಲಕ ವಾಹನವನ್ನು ಹಿಂದಕ್ಕೆ ಚಲಿಸಿ ಗುಡ್ಡಕ್ಕೆ ಡಿಕ್ಕಿ ಹೊಡೆದಿದ್ದಾರೆ. ಅದರಿಂದಾಗಿ ಬಸ್ಸಿನ ಒಳಗಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸರ್ಕಾರಿ ಸಾರಿಗೆ ಸಂಸ್ಥೆ ಬಸ್ಸುಗಳನ್ನು ಸರಿಯಾಗಿ ನಿರ್ವಹಣೆ ಮಾಡುತ್ತಿಲ್ಲ ಎಂಬ ಆರೋಪ ಕೇಳಿ ಬಂದಿದ್ದು, ಈ ಪ್ರಕರಣವನ್ನು ಅಧಿಕಾರಿಗಳು ಹಗುರವಾಗಿ ಪರಿಗಣಿಸಿದ್ದಾರೆ. ಡಿಪೋ ಮ್ಯಾನೇಜರ್ ಸೌಮ್ಯಾ ನಾಯಕ್ ಅವರು `ಅಪಘಾತ ನಡೆದು ದಿನ ಕಳೆದಿದೆ. ಯಾರಿಗೂ ಗಾಯವಾಗಿಲ್ಲ. ಬಸ್ ಸರಿಯಾಗಿಯೇ ಇದೆ’ ಎಂದು ಸಮರ್ಥಿಸಿಕೊಂಡಿದ್ದಾರೆ. - [ಬೆಂಬಿಡದೇ ಕಾಡುತ್ತಿರುವ ಗುಡ್ಡದ ಭೂತ: ಉತ್ತರ ಕನ್ನಡಕ್ಕೆ ಕಾದಿದೆ ಇನ್ನಷ್ಟು ಅಪಾಯ!](https://mobiletime.in/2026/01/the-ghost-of-the-hill-haunts-without-stopping-more-danger-awaits-uttara-kannada/): ಉತ್ತರ ಕನ್ನಡ ಜಿಲ್ಲೆಯ ಶಿರೂರು ಗುಡ್ಡ ಕುಸಿತದ ನಂತರ ಧಾರವಾಡದ ಐಐಟಿ ಪ್ರಾಧ್ಯಾಪಕ ಅಮರನಾಥ್ ಹೆಗಡೆ ಅವರು ಗುಡ್ಡ ಕುಸಿತದ ಬಗ್ಗೆ ಸಮಗ್ರ ಅಧ್ಯಯನ ನಡೆಸಿದ್ದು, ಜಿಲ್ಲೆಯಲ್ಲಿ ಇನ್ನಷ್ಟು ಅಪಾಯ ಸಂಭವಿಸಬಹುದಾದ ಆತಂಕದ ವಿಷಯ ಹೊರಬಿದ್ದಿದೆ. ಧಾರವಾಡ ಐಐಟಿ ಸಿವಿಲ್ ಮತ್ತು ಮೂಲಸೌಕರ್ಯ ಎಂಜಿನಿಯರಿoಗ್ ವಿಭಾಗದ ಸಹಾಯಕ ಪ್ರಾಧ್ಯಾಪಕ ಅಮರನಾಥ್ ಹೆಗಡೆ ಮತ್ತು ಸಂಶೋಧನಾ ವಿದ್ಯಾರ್ಥಿ ಮಲಯ್ ಪ್ರಾಮಾಣಿಕ್ ಈ ಅಧ್ಯಯನ ನಡೆಸಿದ್ದಾರೆ. ಈ ಅಧ್ಯಯನದಲ್ಲಿ ಶಿರೂರು ಗುಡ್ಡದ ಉಪಗ್ರಹಗಳ ಚಿತ್ರಗಳು, ಈ ಹಿಂದಿನ ಆ ಪ್ರದೇಶಲ್ಲಾದ ಭೂಕುಸಿತದ ದಾಖಲೆಗಳು, ಮಣ್ಣಿನ ರಚನೆ, ಮಳೆ ಪ್ರಮಾಣ ಸೇರಿದಂತೆ ದತ್ತಾಂಶ ಸಂಗ್ರಹಿಸಿ, ಅದನ್ನು ವಿಶ್ಲೇಷಿಸಲಾಗಿದೆ. ಆ ಅವಧಿಯಲ್ಲಿ ಪಶ್ಚಿಮ ಘಟ್ಟಗಳ ಜಿಲ್ಲೆಗಳಲ್ಲಿ ಭವಿಷ್ಯದಲ್ಲಾಗುವ ಅಪಾಯದ ಅಂಶಗಳು ಹೊರಬಿದ್ದಿವೆ. ಅಪಾಯದಲ್ಲಿ ಉತ್ತರ ಕನ್ನಡ ಈ ವರೆಗೆ ಪಶ್ಚಿಮ ಘಟ್ಟ ಹೊಂದಿರುವ ಜಿಲ್ಲೆಗಳಲ್ಲಿ ಆಗಿರುವ ಭೂಕುಸಿತಗಳ ಪೈಕಿ ಉತ್ತರ ಕನ್ನಡ ಜಿಲ್ಲೆಯೊಂದರಲ್ಲಿಯೇ ಅತಿ ಹೆಚ್ಚು ಕುಸಿತವಾಗಿದೆ. ಶೇ 30ರಷ್ಟು ಭೂಕುಸಿತಗಳು ಉತ್ತರ ಕನ್ನಡ ಜಿಲ್ಲೆಯಲ್ಲಿ ನಡೆದ ಬಗ್ಗೆ ದಾಖಲಾಗಿದೆ. ಪಶ್ಚಿಮ ಘಟ್ಟಗಳಲ್ಲಿ ಭೂಕುಸಿತಗಳಿಗೆ ಮೂರು ಪ್ರಮುಖ ಅಂಶಗಳನ್ನು ಈ ಅಧ್ಯಯನ ಕಂಡುಕೊAಡಿದೆ. ವಾರ್ಷಿಕವಾಗಿ 3000 ಮಿಮೀಗಿಂತ ಹೆಚ್ಚಿನ ಮಳೆ, ಮಣ್ಣಿನ ರಚನೆ ಮತ್ತು 28 ಡಿಗ್ರಿಗಿಂತ ಹೆಚ್ಚಿನ ಕಡಿದಾದ ಇಳಿಜಾರು ಪ್ರದೇಶದಲ್ಲಿ ಭೂಕುಸಿತ ಉಂಟಾಗಿರುವುದು ವರದಿಯಿಂದ ಗೊತ್ತಾಗಿದೆ. ಶತಮಾನಗಳಿಂದ ಅಸ್ತಿತ್ವದಲ್ಲಿದ್ದ ಸಾಂಪ್ರದಾಯಿಕ ನೈಸರ್ಗಿಕ ಮಳೆ ನೀರಿನ ಹರಿವಿಗೆ ಅಡ್ಡಿಯಾಗಿರುವುದು, ರಾಷ್ಟ್ರೀಯ ಹೆದ್ದಾರಿ-52ರ ವಿಸ್ತರಣೆ ಸೇರಿದಂತೆ ಹಲವಾರು ಮೂಲಸೌಕರ್ಯ ಯೋಜನೆಗಳನ್ನು ಅವೈಜ್ಞಾನಿಕ ರೀತಿಯಲ್ಲಿ ಕಾರ್ಯಗತಗೊಳಿಸಿರುವುದೇ ಭೂಕುಸಿತಕ್ಕೆ ಕಾರಣವಾಗಿದೆ. ಹಲವು ರಸ್ತೆ ಯೋಜನೆಗಳಲ್ಲಿ ವೈಜ್ಞಾನಿಕ ಗೋಡೆಗಳನ್ನು ನಿರ್ಮಿಸದೆ ಇಳಿಜಾರಿನ ತುದಿಯನ್ನು ಕತ್ತರಿಸಲಾಗಿದೆ. ಹೀಗಾಗಿ ನೀರಿನ ಸೋರಿಕೆಯಾಗಿ ಭೂಕುಸಿತಗಳಾಗುತ್ತವೆ ಎಂದು ವರದಿಯಲ್ಲಿ ವಿವರಿಸಲಾಗಿದೆ.   - [ಹಸಿವು: ಅಪರಿಚಿತ ಮಹಿಳೆ ಸಾವು!](https://mobiletime.in/2026/01/hunger-unknown-woman-dies/): ಮುರುಡೇಶ್ವರ ರೈಲು ನಿಲ್ದಾಣಕ್ಕೆ ಹೋಗುವ ರಸ್ತೆಯಲ್ಲಿ ಅಪರಿಚಿತ ಮಹಿಳೆಯೊಬ್ಬರ ಶವ ಸಿಕ್ಕಿದೆ. ಹಸಿವು ತಾಳಲಾರದೇ ಅವರು ಸಾವನಪ್ಪಿದ ಶಂಕೆವ್ಯಕ್ತವಾಗಿದೆ. ಮುರುಡೇಶ್ವರ ಬಳಿಯ ಮಾವಳ್ಳಿಯ ಜನತಾ ಕಾಲೋನಿಯ ಹೊಟೇಲ್ ಕಾರ್ಮಿಕ ಮಹೇಶ ನಾಗಪ್ಪ ನಾಯ್ಕ ಅವರು ಈ ಶವ ನೋಡಿದ್ದಾರೆ. 30-35 ವಯಸ್ಸಿನ ಒಳಗಿನ ಮಹಿಳೆ ಸಾವನಪ್ಪಿರುವುದನ್ನು ಪೊಲೀಸರು ಖಚಿತಪಡಿಸಿದ್ದಾರೆ. ಆದರೆ, ಆ ಮಹಿಳೆಯ ಗುರುತು ಪತ್ತೆ ಆಗಿಲ್ಲ. ಜನವರಿ 27ರ ಬೆಳಗ್ಗೆ 10.30ರ ನಂತರ ಈ ಸಾವು ಸಂಭವಿಸಿದ್ದು, ಜನವರಿ 28ರ ಬೆಳಗ್ಗೆ ಶವ ಕಾಣಿಸಿದೆ. ಯಾವುದೋ ರೋಗ ಅಥವಾ ಹಸಿವು ತಾಳಲಾರದೇ ಮಹಿಳೆ ಸಾವನಪ್ಪಿರುವ ಬಗ್ಗೆ ಮಹೇಶ ನಾಯ್ಕ ಅವರು ಅಂದಾಜಿಸಿದ್ದಾರೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮುರುಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮಹಿಳೆಯ ಸಂಬoಧಿಕರ ಹುಡುಕಾಟ ಮುಂದುವರೆದಿದೆ. `ಹಸಿವು ಎಂದವರಿಗೆ ಕಾಸು ಕೊಡುವ ಬದಲು ಆಹಾರ ಕೊಡಿಸಿ’ - [ಕಾರುಗಳ ನಡುವೆ ಭೀಕರ ಅಪಘಾತ: ಮೂವರ ಸಾವು!](https://mobiletime.in/2026/01/terrible-accident-between-cars-three-dead/): ಉತ್ತರ ಕನ್ನಡ ಜಿಲ್ಲೆಯ ಜೊಯಿಡಾ ಬಳಿಯ ರಾಮನಗರ- ಬೆಳಗಾವಿಯ ಖಾನಾಪುರ ಭಾಗದ ಬಳಿ ಭೀಕರ ರಸ್ತೆ ಅಪಘಾತ ನಡೆದಿದೆ. ಈ ಅಫಘಾತದಲ್ಲಿ ಮೂವರು ಸಾವನಪ್ಪಿದ್ದಾರೆ. ಗೋವಾ – ಬೆಳಗಾವಿ ರಸ್ತೆಯಲ್ಲಿ ಸಂಚರಿಸುತ್ತಿದ್ದ ಕಾರು ರಾಮನಗರದ ಬಳಿ ಎದುರಿನಿಂದ ಬಂದ ಕಾರಿಗೆ ಡಿಕ್ಕಿ ಹೊಡೆದಿದೆ. ಇನೋವಾ ಹಾಗೂ ರೆನಾಲ್ಟ್ ಕ್ವಿಡ್ ಕಾರುಗಳ ನಡುವೆ ಈ ಮುಖಾಮುಖಿ ಡಿಕ್ಕಿ ನಡೆದಿದೆ. ಈ ಅಪಘಾತದಲ್ಲಿ ಇಬ್ಬರು ಸ್ಥಳದಲ್ಲಿಯೇ ಸಾವನಪ್ಪಿದ್ದು, ಗಂಭೀರವಾಗಿ ಗಾಯಗೊಂಡಿದ್ದ ಮಹಿಳೆಯೊಬ್ಬರು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಕಾರಿನಲ್ಲಿ ಸಿಲುಕಿ ವೃದ್ಧರೊಬ್ಬರು ಸಾವನಪ್ಪಿದ್ದಾರೆ. ಈ ಅಪಘಾತದಲ್ಲಿ ಇನ್ನಿಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಹೆಚ್ಚಿನ ಚಿಕಿತ್ಸೆಗೆ ಬೆಳಗಾವಿಗೆ ರವಾನಿಸಲಾಗಿದೆ. ಸಾವನಪ್ಪಿದವರು ಹಾಗೂ ಗಾಯಗೊಂಡವರು ಹುಬ್ಬಳ್ಳಿ ತಾಲೂಕಿನ ಲಕ್ಷ್ಮೇಶ್ವರದವರಾಗಿದ್ದಾರೆ. ಕುಟುಂಬವೊoದು ಗೋವಾಗೆ ಹೋಗಿ ಹುಬ್ಬಳ್ಳಿ ಕಡೆ ಮರಳುವಾಗ ಅವಘಡ ನಡೆದಿದೆ. ಆಂಬುಲೆನ್ಸ ಕೊರತೆಯಿಂದ ಗಾಯಗೊಂಡವರನ್ನು ಆಸ್ಪತ್ರೆಗೆ ಸಾಗಿಸುವಲ್ಲಿ ಸಮಸ್ಯೆಯಾಗಿದ್ದು, ಜನ ಶಾಶ್ವತ ಆಂಬುಲೆನ್ಸ ನಿಯೋಜನೆಗೆ ಒತ್ತಾಯಿಸಿದ್ದಾರೆ. ರಾಮನಗರ ಪೊಲೀಸರು ಸ್ಥಳದಲ್ಲಿದ್ದಾರೆ. - [ಸುಳ್ಳು ಸುದ್ದಿ ಹರಡಿದವನಿಗೆ ಸಂಕಷ್ಟ!](https://mobiletime.in/2026/01/woe-to-the-one-who-spreads-false-news/): ಕಾರವಾರದ ರೀಶಲ್ ಡಿಸೋಜಾ ಆತ್ಮಹತ್ಯೆ ಹಾಗೂ ಚಿರಾಗ ಕೋಠಾರಕರ್ ಪರಾರಿ ಪ್ರಕರಣ ವಿಷಯವಾಗಿ ಸುಳ್ಳು ಸುದ್ದಿ ಹರಡಿದ ವ್ಯಕ್ತಿ ವಿರುದ್ಧ ಪೊಲೀಸರು ಕಾನೂನು ಕ್ರಮ ಜರುಗಿಸಿದ್ದಾರೆ. ಪೊಲೀಸ್ ಅಧೀಕ್ಷಕರ ಹೆಸರು ಬಳಸಿ ಸುಳ್ಳು ಸುದ್ದಿ ಹರಡಿದ ಮೊಬೈಲ್ ಸಂಖ್ಯೆ ಆಧಾರದಲ್ಲಿ ಪ್ರಕರಣ ದಾಖಲಾಗಿದ್ದು, ಜನರ ದಿಕ್ಕು ತಪ್ಪಿಸುವ ಪ್ರಯತ್ನ ಮಾಡಿದವನ ಶೋಧ ನಡೆದಿದೆ. `ರೀಶಲ್ ಸಾವಿನ ನಂತರ ಹುಬ್ಬಳ್ಳಿಯ ವೈದ್ಯರು ಎರಡನೇ ಮರಣೋತ್ತರ ಪರೀಕ್ಷೆ ನಡೆಸಿದ್ದು, ಮರಣೋತ್ತರ ಪರೀಕ್ಷೆಯಲ್ಲಿ ಮಹತ್ವದ ಸುಳಿವು ಲಭ್ಯವಾಗಿದೆ’ ಎಂದು ವಾಟ್ಸಪ್ ಮೂಲಕ ವಿಷಯ ಹರಿದಾಡಿತ್ತು. `ಈ ಪ್ರಕರಣದಲ್ಲಿ ಪೊಲೀಸ್ ಅಧೀಕ್ಷಕರು ಪ್ರೆಸ್ ಮೀಟ್ ಮಾಡಿದ್ದಾರೆ’ ಎಂದು ಅದರಲ್ಲಿ ನಮೂದಿಸಲಾಗಿತ್ತು. ಜೊತೆಗೆ `ಚಿರಾಗ ಕೋಠಾರಕರ್ ಬಂಧನ ಆಗಿದ್ದು, ಅವರು ಮೂರು ದಿನಗಳ ಕಾಲ ಪೊಲೀಸ್ ಕಸ್ಟಡಿಯಲ್ಲಿದ್ದಾರೆ’ ಎಂದು ವಾಟ್ಸಪ್ ಸಂದೇಶ ಹರಿದಾಡಿತ್ತು. ಆದರೆ, ಈ ಯಾವ ವಿಷಯದಲ್ಲಿಯೂ ಸತ್ಯಾಂಶವಿರಲಿಲ್ಲ. ಅದಾಗಿಯೂ, ಈ ತಪ್ಪು ಮಾಹಿತಿ ಎರಡು ವಾಟ್ಸಪ್ ಗುಂಪುಗಳಲ್ಲಿ ಹರಿದಾಡಿದ್ದು, ಕದ್ರಾದ ಪೊಲೀಸ್ ಸಿಬ್ಬಂದಿ ಮಹೇಶ ಸಾವಸಂಗಿ ಅವರು ಅದನ್ನು ನೋಡಿದ್ದರು. ಜನವರಿ 18ರಂದು ಪೊಲೀಸ್ ಅಧೀಕ್ಷಕರು ಸುದ್ದಿಗೋಷ್ಠಿ ನಡೆಸಿದ ಬಗ್ಗೆ ಹಾಗೂ ರೀಶಲ್ ಡಿಸೋಜಾ ಮೊಬೈಲಿನಿಂದ ಸೈಬರ್ ಅಪರಾಧ ತಡೆ ಪೊಲೀಸರು ಕೆಲ ವೈಸ್ ನೋಟ್ ರಿಕವರಿ ಮಾಡಿದ ಬಗ್ಗೆಯೂ ಸಂದೇಶ ಹರಿದಾಡಿತ್ತು. ಈ ಎಲ್ಲಾ ವಿಷಯ ಸುಳ್ಳು ಎಂದು ಅರಿತ ಮಹೇಶ ಸಾವಸಂಗಿ ಅವರು ಸುಳ್ಳು ಸುದ್ದಿ ಹರಡಿದವರ ವಿರುದ್ಧ ದೂರು ನೀಡಿದರು. ಸಾರ್ವಜನಿಕರಲ್ಲಿ ಗೊಂದಲ ಸೃಷ್ಠಿಸಿದ ಕಾರಣ ಆ ಸಂದೇಶ ಹರಿಬಿಟ್ಟ ಫೋನ್ ಸಂಖ್ಯೆ ನೀಡಿ ಅವರು ಪ್ರಕರಣ ದಾಖಲಿಸಿದ್ದು, ಪೊಲೀಸರು ಸುಳ್ಳು ಹೇಳಿದವನ ಹುಡುಕಾಟ ಶುರು ಮಾಡಿದ್ದಾರೆ. - [ಕಲ್ಲು ಕದ್ದವನ ವಿರುದ್ಧ ಕಠಿಣ ಕ್ರಮ!](https://mobiletime.in/2026/01/strict-action-against-the-stone-thief/): ಭಟ್ಕಳದ ಮಾಲಾ ನಾಯಕ ಅವರು ದಾಸ್ತಾನು ಮಾಡಿದ್ದ ಕೆಂಪು ಕಲ್ಲುಗಳನ್ನು ಸರ್ಪನಕಟ್ಟಾದ ಮಹೇಶ ನಾಯ್ಕ ಅವರು ಕದ್ದಿದ್ದಾರೆ. 450 ಕಲ್ಲು ಕಾಣೆಯಾಗಿದ್ದರಿಂದ ಮಾಲಾ ನಾಯಕ ಅವರು ಕಾನೂನು ಕ್ರಮಕ್ಕೆ ಮುಂದಾಗಿದ್ದಾರೆ. ಭಟ್ಕಳದ ಬೆಳಕೆ ಹಡೀನ್ ಗ್ರಾಮದಲ್ಲಿ ಮಾಲಾ ಮಂಜುನಾಥ ನಾಯಕ ಅವರು ವಾಸವಾಗಿದ್ದಾರೆ. ಸಣ್ಣ ಕೈಗಾರಿಕಾ ಇಲಾಖೆಯಿಂದ ಅವರು ಉದ್ದಿಮೆಗಾಗಿ ಭೂಮಿ ಖರೀದಿಸಿದ್ದು, ಆ ಜಾಗವನ್ನು ಇಲಾಖೆ ಮಂಜೂರಿ ಮಾಡಿದೆ. ಅಲ್ಲಿರುವ ಕಟ್ಟಡ ಹಳೆಯದಾಗಿರುವ ಕಾರಣ ಅದನ್ನು ದುರಸ್ಥಿಗೊಳಿಸಲು ಮಾಲಾ ನಾಯಕ ಅವರು ನಿರ್ಧರಿಸಿದ್ದಾರೆ. ಅದರ ಪ್ರಕಾರ, ಕಟ್ಟಡದ ದುರಸ್ಥಿಗಾಗಿ ಅವರು ಕೆಂಪು ಕಲ್ಲುಗಳನ್ನು ತರಿಸಿದ್ದಾರೆ. ಎರಡುವರೆ ಲಾರಿಯಷ್ಟು ಕಲ್ಲುಗಳನ್ನು ಅವರು ತಮ್ಮ ಜಾಗದಲ್ಲಿ ಇಳಿಸಿದ್ದಾರೆ. ನಾಲ್ಕು ದಿನದ ಹಿಂದೆ ಆ ಕಲ್ಲಿನ ಮೇಲೆ ಭಟ್ಕಳ ಯ್ಲವಡಿಕುವೂರು ಬಳಿಯ ಸರ್ಪಿನಕಟ್ಟಾದ ಮಹೇಶ ಕೃಷ್ಣಪ್ಪ ನಾಯ್ಕ ಅವರ ಕಣ್ಣು ಬಿದ್ದಿದೆ. ಒಂದುವರೆ ಲೋಡಿನಷ್ಟು ಕಲ್ಲನ್ನು ಅವರು ಅಲ್ಲಿಂದ ಅಪಹರಿಸಿದ್ದಾರೆ. ಸುಮಾರು 450 ಕಲ್ಲು ಕಾಣೆಯಾದ ಬಗ್ಗೆ ಮಾಲಾ ನಾಯಕ ಅವರು ವಿಚಾರಿಸಿದ್ದು, ಆಗ ಮಹೇಶ ನಾಯ್ಕ ಮಾಡಿದ ಕಿತಾಪತಿ ಗೊತ್ತಾಗಿದೆ. ತಮಗಾದ ನಷ್ಟದ ಬಗ್ಗೆ ಅವರು ಪೊಲೀಸ್ ದೂರು ನೀಡಿದ್ದಾರೆ. ಕಲ್ಲು ಕದ್ದವನ ವಿರುದ್ಧ ಪ್ರಕರಣ ದಾಖಲಿಸಿ ಕಾನೂನು ಕ್ರಮಕ್ಕೆ ಆಗ್ರಹಿಸಿದ್ದಾರೆ.   - [ಕಾರಿಗೆ ಗುದ್ದಿದ ಬೈಕು: ಕಾಲಿಗೆ ಗಾಯ](https://mobiletime.in/2026/01/bike-hit-by-car-leg-injured/): ಯಲ್ಲಾಪುರದ ಮಾಗೋಡಿನ ಕಡೆ ವೇಗವಾಗಿ ಬೈಕ್ ಓಡಿಸಿದ ಕಾಳಮ್ಮನಗರದ ದಾಮೋದರ ಕೋಟಾರಕರ್ ಅವರು ಎದುರಿನಿಂದ ಬರುತ್ತಿದ್ದ ಕಾರಿಗೆ ತಮ್ಮ ಬೈಕ್ ಗುದ್ದಿದ್ದಾರೆ. ಪರಿಣಾಮ ದಾಮೋದರ ಕೋಟಾರಕರ್ ಅವರ ಜೊತೆ ಬೈಕಿನಲ್ಲಿದ್ದ ಆನಂದ ಗೊಂದಲಿ ಅವರಿಗೂ ಪೆಟ್ಟಾಗಿದೆ. ಯಲ್ಲಾಪುರದ ಕಾಳಮ್ಮನಗರದ ಗೌಂಡಿ ಕೆಲಸ ಮಾಡಿಕೊಂಡು ಆನಂದ ರಾಮಚಂದ್ರ ಗೊಂದಲಿ ಅವರು ವಾಸವಾಗಿದ್ದಾರೆ. ಅಲ್ಲಿಯೇ ಪೆಂಟಿAಗ್ ಕೆಲಸ ಮಾಡಿಕೊಂಡು ದಾಮೋದರ ದೇವರಾಯ ಕೋಟಾರಕರ್ ಅವರು ವಾಸವಾಗಿದ್ದಾರೆ. ಜನವರಿ 27ರಂದು ದಾಮೋದರ ಕೋಟಾರಕರ್ ಅವರು ಮಾಗೋಡಿನ ಕಡೆ ಬೈಕ್ ಓಡಿಸಿದ್ದು, ಆ ಬೈಕಿನಲ್ಲಿ ಆನಂದ ಗೊಂದಲಿ ಅವರು ಜೊತೆಯಾಗಿದ್ದಾರೆ. ವೇಗವಾಗಿ ಹೊರಟ ಬೈಕು ನಂದೂಳ್ಳಿ ಕಡೆಯಿಂದ ಬರುತ್ತಿದ್ದ ಮಾವಿನಗದ್ದೆಕುಮ್ರಿಯ ನಾಗಪ್ಪ ಗಿಡ್ಡಾ ಸಿದ್ದಿ ಅವರ ಕಾರಿಗೆ ಡಿಕ್ಕಿ ಹೊಡೆದಿದೆ. ಮಾಗೋಡು ಕ್ರಾಸಿನಿಂದ 200ಮೀ ದೂರದಲ್ಲಿ ಈ ಅಪಘಾತ ನಡೆದಿದೆ. ಅಪಘಾತದ ರಭಸಕ್ಕೆ ಆನಂದ ಗೊಂದಳಿ ಅವರ ಎರಡು ಕಾಲುಗಳಿಗೆ ನೋವಾಗಿದೆ. ದಾಮೋದರ ಕೋಟಾರಕರ್ ಅವರ ಮಯ-ಮುಖಕ್ಕೆ ಗಾಯವಾಗಿದೆ. ನಾಗಪ್ಪ ಸಿದ್ದಿ ಅವರ ಕಾರಿನ ಮುಂದಿನ ಭಾಗವೂ ಜಖಂ ಆಗಿದೆ. ಈ ಬಗ್ಗೆ ನಾಗಪ್ಪ ಸಿದ್ದಿ ಅವರೇ ಪೊಲೀಸರಿಗೆ ಮಾಹಿತಿ ನೀಡಿದ್ದು, ಪ್ರಕರಣ ದಾಖಲಿಸಿಕೊಂಡ ಪಿಸೈ ರಾಜಶೇಖರ್ ವಂದಲಿ ಅವರು ವೇಗವಾಗಿ ವಾಹನ ಓಡಿಸಿದ ಬೈಕ್ ಸವಾರರ ಮೇಲೆ ಕಾನೂನು ಕ್ರಮ ಜರುಗಿಸಿದ್ದಾರೆ. - [ವಿಡಿಯೋ ಕಾಲ್ ಮಾಡಿ ವಿಷ ಸೇವಿಸಿದ!](https://mobiletime.in/2026/01/he-consumed-poison-during-a-video-call/): ಧಾರವಾಡದಲ್ಲಿ ಹೇರ್ ಕಟಿಂಗ್ ಕೆಲಸ ಮಾಡಿಕೊಂಡಿದ್ದ ಆಕಾಶ ಹೋಸೂರು ಅವರು  ಜೊಯಿಡಾ ಬಳಿಯ ಗೋವಾ-ಬೆಳಗಾವಿ ರಸ್ತೆಯ ರಾಮನಗರದ ಬಳಿ ಶವವಾಗಿದ್ದಾರೆ. ಮುಖ್ಯ ಹೆದ್ದಾರಿಯಿಂದ ಅನತಿ ದೂರದಲ್ಲಿ ಅಪರಿಚಿತ ಶವ ನೋಡಿದ ಜನ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಸ್ಥಳಕ್ಕೆ ಆಗಮಿಸಿ ಸಾವನಪ್ಪಿದ ವ್ಯಕ್ತಿಯ ಗುರುತು ಪತ್ತೆ ಹಚ್ಚಿದ್ದಾರೆ. ಆ ವೇಳೆ ಧಾರವಾಡದ ಕವಲಗಿರಿಯ ಆಕಾಶ ಹೋಸೂರು (24) ಅವರು ಸಾವನಪ್ಪಿದ ವಿಷಯ ಗೊತ್ತಾಗಿದೆ. ಎರಡು ದಿನಗಳ ಹಿಂದೆ ಆಕಾಶ ಹೋಸೂರು ಕಾಣೆಯಾಗಿದ್ದರು. ಅದಕ್ಕೂ ಮುನ್ನ ಅವರು ವಿಡಿಯೋ ಕಾಲ್ ಮಾಡಿ ವಿಷ ಸೇವಿಸುವ ಬಗ್ಗೆ ಕುಟುಂಬಕ್ಕೆ ತಿಳಿಸಿದ್ದರು. ಅದಾದ ನಂತರ ಆಕಾಶ ಹೋಸೂರು ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿರುವುದು ಗೊತ್ತಾಗಿದೆ. ಶವವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. - [ಮದುವೆ ಆಗದ ಕೊರಗು: ಆಸಿಡ್ ಕುಡಿದ ವೃದ್ಧ!](https://mobiletime.in/2026/01/lamenting-over-not-getting-married-an-old-man-who-drank-acid/): 60 ವರ್ಷ ದಾಡಿದರೂ ಮದುವೆ ಆಗಿಲ್ಲ ಎಂಬ ಕೊರಗಿನಲ್ಲಿದ್ದ ಅಪ್ಪಾಜಿ ಜೋಸೆಫ್ ಮುರುಡೇಶ್ವರದ ಬಳಿ ಆಸಿಡ್ ಕುಡಿದಿದ್ದಾರೆ. ರಾತ್ರಿ ಬೆಳಗಾಗುವುದರೊಳಗೆ ಅವರು ಸಾವನಪ್ಪಿದ್ದಾರೆ. ಕೇರಳದ ಅಪ್ಪಾಜಿ ಜೊಸೆಪ್ ಅನೇಕ ವರ್ಷಗಳ ಹಿಂದೆಯೇ ಭಟ್ಕಳಕ್ಕೆ ಬಂದಿದ್ದರು. ಅವರಿವರ ತೋಟದ ಕೆಲಸ ಮಾಡಿಕೊಂಡಿದ್ದ ಅವರು ಭಟ್ಕಳದ ಉತ್ತರಕೊಪ್ಪ ಗಾಳಿಬೈಲಿನಲ್ಲಿ ವಾಸವಾಗಿದ್ದರು. ಅವರು ಒಂಟಿಯಾಗಿ ಜೀವಿಸಿದ್ದು, ಏಕಾಂಗಿಯಾಗಿರುವುದಕ್ಕೆ ಬೇಸರಿಸಿಕೊಳ್ಳುತ್ತಿದ್ದರು. `ತನಗೆ ಯಾರು ಇಲ್ಲ. ಸಂಬoಧಿಕರು ಸಹ ಇಲ್ಲ’ ಎಂದು ಅವರು ಎಲ್ಲಡೆ ಹೇಳಿಕೊಂಡಿದ್ದರು. ಹೀಗಿರುವಾಗ ಕಳೆದ ಒಂದು ತಿಂಗಳ ಹಿಂದೆ ಅವರ ಒಂದು ಕಣ್ಣು ಕಾಣದ ಹಾಗಾಯಿತು. ಮದುವೆ ಆಗದ ಕೊರಗು ಸಹ ಅವರನ್ನು ಕಾಡುತ್ತಲೇ ಇತ್ತು. ಸಂಬoಧಿಕರು ಇಲ್ಲ. ಮದುವೆಯೂ ಆಗಿಲ್ಲ ಎಂಬ ನೋವಿನಲ್ಲಿದ್ದ ಅವರು ತಾವಿದ್ದ ಮಾಸ್ತಿಮನೆಯಲ್ಲಿ ಆಸಿಡ್ ಕುಡಿದರು. ಜನವರಿ 25ರ ರಾತ್ರಿ 9ಗಂಟೆಗೆ ಸುಮಾರಿಗೆ ಅವರು ಆಸಿಡ್ ಕುಡಿದ ಬಗ್ಗೆ ಅಂದಾಜಿಸಲಾಗಿದ್ದು, ಮರುದಿನ ಬೆಳಗಾಗುವುದರೊಳಗೆ ಕೊನೆಯುಸಿರೆಳೆದಿದ್ದರು. ಭಟ್ಕಳ ಮಾರುತಿ ನಗರದ ಅಮೀತ ಭಾಸ್ಕರ್ ಶಾನಭಾಗ್ ಅವರು ಅಪ್ಪಾಜಿ ಜೋಸೆಫ್ ಅವರ ಸಾವಿನ ಬಗ್ಗೆ ಮಾಹಿತಿ ನೀಡಿದರು. ಮುರುಡೇಶ್ವರ ಪೊಲೀಸರು ಪ್ರಕರಣ ದಾಖಲಿಸಿದರು. - [ಆಪತ್ತು ತಂದ ರಾತ್ರಿ ಸಂಚಾರ](https://mobiletime.in/2026/01/dangerous-night-traffic/): ರಾತ್ರಿ ವೇಳೆ ವೇಗವಾಗಿ ಬೈಕ್ ಓಡಿಸುತ್ತಿದ್ದ ಜೊಯಿಡಾದ ಜನಾರ್ಧನ ವೇಳಿಪ್ ಅವರು ಅಪಘಾತದಲ್ಲಿ ಸಾವನಪ್ಪಿದ್ದಾರೆ. ಸೇತುವೆ ಕಟ್ಟೆಗೆ ಬೈಕ್ ಗುದ್ದಿದ ಪರಿಣಾಮ ಅವರ ಬದುಕು ಅಲ್ಲಿಯೇ ಅಂತ್ಯವಾಗಿದೆ. ಜೊಯಿಡಾದ ಕಳಸಾಯಿ ಬಳಿಯ ಮಾತಕರ್ಣಿ ಬಳಿ ಜನಾರ್ಧನ ಅರ್ಜುನ ವೇಳಿಪ್ (24) ಅವರು ವಾಸವಾಗಿದ್ದರು. ಕೂಲಿ ಕೆಲಸ ಮಾಡಿಕೊಂಡಿದ್ದ ಅವರು ಮನೆಗೆ ಆಧಾರವಾಗಿದ್ದರು. ಜನವರಿ 26ರಂದು ಅವರು ಕಳಸಾಯಿಗೆ ಹೋಗಿ ಬರುವುದಾಗಿ ಹೊರಟಿದ್ದರು. ಉಳವಿ-ಕಳಸಾಯಿ ರಸ್ತೆಯಲ್ಲಿ ವೇಗವಾಗಿ ಬೈಕ್ ಓಡಿಸುತ್ತಿದ್ದ ಅವರು ಅಪಘಾತಕ್ಕೀಡಾದರು. ರಾತ್ರಿ ವೇಳೆ ಅವರ ಬೈಕು ಮಾತಕರ್ಣಿ ಕ್ರಾಸಿನ ಬಳಿ ಸೇತುವೆ ಕಟ್ಟೆಗೆ ಡಿಕ್ಕಿಯಾಯಿತು. ಆ ಡಿಕ್ಕಿ ರಭಸಕ್ಕೆ ಜನಾರ್ಧನ ವೇಳಿಪ್ ಅವರು ಬಹುದೂರ ಹಾರಿ ಬಿದ್ದು ಗಂಭೀರ ಪ್ರಮಾಣದಲ್ಲಿ ಪೆಟ್ಟು ಮಾಡಿಕೊಂಡರು. ಕೈ, ಎದೆ ಹಾಗೂ ಕುತ್ತಿಗೆಗೆ ನೋವು ಮಾಡಿಕೊಂಡಿದ್ದ ಜನಾರ್ಧನ ವೇಳಿಪ್ ಅವರನ್ನು ಜೊಯಿಡಾದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಯಿತು. ಆ ಅಪಘಾತದ ಬಗ್ಗೆ ಅದೇ ಊರಿನ ರೂಪೇಶ್ ಅವರು ಕುಟುಂಬಕ್ಕೆ ಸುದ್ದಿ ಮುಟ್ಟಿಸಿದರು. ಮಗನಿಗೆ ಅಪಘಾತವಾದ ವಿಷಯ ಕೇಳಿ ಅರ್ಜುನ ವೇಳಿಪ್ ಅವರು ಆಸ್ಪತ್ರೆಗೆ ದೌಡಾಯಿಸಿದರು. ಆದರೆ, ಅಷ್ಟರೊಳಗೆ ಚಿಕಿತ್ಸೆ ಫಲಿಸದೇ ಅರ್ಜುನ ವೆಳಿಪ್ ಅಸುನೀಗಿದ್ದರು. `ರಾತ್ರಿ ವೇಳೆ ಬೈಕ್ ಓಡಿಸುವಾಗ ಎಚ್ಚರ’ - [ಕುಡುಕನ ಸಾವಿನಲ್ಲಿ ಕುಟುಂಬಕ್ಕೆ ಅನುಮಾನ!](https://mobiletime.in/2026/01/family-suspicious-of-drunkards-death/): ಹಳಿಯಾಳದ ಸುಭಾಸ್ ವರ್ಣೇಕರ್ ಅವರ ಮನೆಯ ಬಳಿ ಬಾಬು ಅಡೋಳ್ಕರ್ ಅವರು ಶವವಾಗಿದ್ದಾರೆ. ಅವರ ಸಾವಿನ ಬಗ್ಗೆ ಕುಟುಂಬದವರಿಗೆ ಅನುಮಾನ ಶುರುವಾಗಿದೆ. ಹಳಿಯಾಳದ ಮಾಗವಾಡ ಬಳಿಯ ಗೌಳಿವಾಡದಲ್ಲಿ ಬಾಬು ಅಡೋಳ್ಕರ್ (45) ಅವರು ವಾಸವಾಗಿದ್ದರು. ಬಾಬು ಆಡೋಳ್ಕರ್ ಅವರು 3-4 ದಿನಗಳಿಗೆ ಒಮ್ಮೆ ಮನೆಗೆ ಬರುತ್ತಿದ್ದರು. ಒಂದರೆಡು ದಿನ ಮನೆಯಲ್ಲಿ ವಾಸ ಹೂಡಿ ಮತ್ತೆ ಬೇರೆ ಕಡೆ ಹೋಗುತ್ತಿದ್ದರು. ಬಾಬು ಅಡೋಳ್ಕರ್ ಅವರು ಒಂದು ದಿನವೂ ಸರಾಯಿ ಬಿಟ್ಟು ಬದುಕುತ್ತಿರಲಿಲ್ಲ. ಕೂಲಿ ಕೆಲಸದಲ್ಲಿ ಸಿಗುವ ಎಲ್ಲಾ ಹಣವನ್ನು ಅವರು ಸರಾಯಿ ಅಂಗಡಿಯವರಿಗೆ ಕೊಡುತ್ತಿದ್ದರು. ಪ್ರತಿ ದಿನ ಸರಾಯಿ ಕುಡಿದು ಅವರು ಎಲ್ಲೆಂದರಲ್ಲಿ ಮಲಗುತ್ತಿದ್ದರು. ಜನವರಿ 24ರಂದು ಅವರು ಮನೆಗೆ ಬಂದಿದ್ದು, ಮರುದಿನ ಮತ್ತೆ ಹೊರಗೆ ಹೋಗಿದ್ದರು. ಕೂಲಿ ಕೆಲಸಕ್ಕೆ ಹೋಗಿ ಬರುವುದಾಗಿ ಅವರು ಮನೆಯಲ್ಲಿ ಹೇಳಿದ್ದರು. ಆದರೆ, ಹಳಿಯಾಳ ಪಟ್ಟಣದ ಗಣಪತಿ ದೇವಸ್ಥಾನ ಹಿಂದಿರುವ ಗಣೇಶನಗರದ ಸುಭಾಸ ರಾಮಚಂದ್ರ ವರ್ಣೇಕರ್ ಅವರ ಮನೆ ಕಪೌಂಡ್ ಬಳಿ ಬಾಬು ಅಡೋಳ್ಕರ್ ಅವರು ಬಿದ್ದಿದ್ದರು. ಸಮೀಪ ಹೊಗಿ ನೋಡಿದಾಗ ಆ ಖಾಲಿ ಜಾಗದಲ್ಲಿ ಅವರು ಶವವಾಗಿದ್ದರು. ಬಾಬು ಅವರ ಪತ್ನಿ ದೊಂಡುಬಾಯಿ ಅಡೋಳ್ಕರ್ ಅವರು ಈ ಬಗ್ಗೆ ಪೊಲೀಸರಿಗೆ ತಿಳಿಸಿದ್ದು, ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಸಾವಿನ ಬಗ್ಗೆ ಅನುಮಾನವಿರುವುದಾಗಿಯೂ ದೊಂಡುಬಾಯಿ ಅವರು ಹೇಳಿದ್ದಾರೆ. - [ಬಾತ್ ರೂಮಿಗೆ ನುಗ್ಗಿದ ಕಳ್ಳನಿಗೆ ಸಿಕ್ಕಿದ್ದು ಲಕ್ಷ ರೂ!](https://mobiletime.in/2026/01/thief-who-broke-into-bathroom-gets-lakhs-of-rupees/): ಶಿರಸಿಯ ಕಾಶೀಂ ಸಾಬ್ ಅವರ ಮನೆಗೆ ಕಳ್ಳರು ನುಗ್ಗಿದ್ದಾರೆ. ಮನೆಯಲ್ಲಿದ್ದ ಹಣ ಹಾಗೂ ಒಡವೆ ದೋಚಿ ಅವರು ಪರಾರಿಯಾಗಿದ್ದಾರೆ. ಶಿರಸಿಯ ಹುಬ್ಬಳ್ಳಿ ರಸ್ತೆಯ ಬಸವೇಶ್ವರ ನಗರದಲ್ಲಿ ಕಾಶೀಂ ಅಬ್ದುಲ್ ಮಹಾಬ್ ಶೇಖ್ ಅವರು ವಾಸವಾಗಿದ್ದಾರೆ. 70 ವರ್ಷದ ಅವರ ಮನೆ ಮೇಲೆ ಕಳ್ಳರು ಕಣ್ಣು ಹಾಕಿದ್ದಾರೆ. ಜನವರಿ 22ರಿಂದ 26ರ ಅವಧಿಯಲ್ಲಿ ಕಾಶೀಂ ಸಾಬ್ ಅವರು ಮನೆಯಲ್ಲಿ ಇಲ್ಲದ ವಿಷಯ ಅರಿತು ಕಳ್ಳರು ಮನೆಗೆ ಬಂದಿದ್ದಾರೆ. ಮನೆ ಬಾಗಿಲು ಹಾಕಿದ ಕಾರಣ ಬಾತ್ ರೂಂ ಮೂಲಕ ಕಳ್ಳರು ಒಳಗೆ ಪ್ರವೇಶಿಸಿದ್ದಾರೆ. ಬಾತ್ ರೂಮಿನ ಹಂಚು ತೆಗೆದ ಕಳ್ಳರು ಅಲ್ಲಿಂದ ಒಳಗೆ ಆಗಮಿಸಿದ್ದು, ನೇರವಾಗಿ ಕೋಣೆಗೆ ಹೋಗಿದ್ದಾರೆ. ಅಲ್ಲಿದ್ದ ಟ್ರಿಜೋರಿಗೆ ಕಾಶೀಂ ಸಾಬ್ ಅವರು ಬೀಗ ಹಾಕದ ಕಾರಣ ಕಳ್ಳರಿಗೆ ಅನುಕೂಲವಾಗಿದೆ. ಕಪಾಟಿನಲ್ಲಿದ್ದ 1.20 ಲಕ್ಷ ರೂ ಹಣ ಕದ್ದ ಕಳ್ಳರು ಅಲ್ಲಿಯೇ ಇದ್ದ 10 ಗ್ರಾಂ ಚಿನ್ನದ ಸರವನ್ನು ಸಹ ಜೇಬಿಗಿಳಿಸಿಕೊಂಡಿದ್ದಾರೆ. ಜನವರಿ 27ರಂದು ಮನೆಗೆ ಬಂದ ಕಾಶೀಂ ಸಾಬ್ ಅವರಿಗೆ ಮನೆಯೊಳಗಿನ ಸಾಮಗ್ರಿ ಚಲ್ಲಾಪಿಲ್ಲಿಯಾಗಿರುವುದು ಕಾಣಿಸಿದೆ. ಆ ನಂತರ ಬಾತ್ ರೂಮಿನ ಹಂಚು ಹಾರಿರುವುದು ಗೋಚರವಾಗಿದೆ. ಮನೆ ಪೂರ್ತಿ ಹುಡುಕಾಟ ನಡೆಸಿದಾಗ 1.20 ಲಕ್ಷ ರೂ ಹಣ ಹಾಗೂ 60 ಸಾವಿರ ರೂ ಮೌಲ್ಯದ ಸರ ಕಾಣೆಯಾಗಿರುವುದು ಗಮನಕ್ಕೆ ಬಂದಿದೆ. ಶಿರಸಿ ಹೊಸ ಮಾರುಕಟ್ಟೆ ಪೊಲೀಸ್ ಠಾಣೆಗೆ ಹೋದ ಕಾಶೀಂ ಸಾಬ್ ಅವರು ಕಳ್ಳರ ವಿರುದ್ಧ ಕಿಡಿಕಾರಿದ್ದಾರೆ. ಆ ಕಳ್ಳನನ್ನು ಹುಡುಕಿ ತಮ್ಮ ಹಣ-ಆಭರಣ ಮರಳಿಸಿ ಎಂದವರು ಮನವಿ ಮಾಡಿದ್ದು, ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಕಳ್ಳನನ್ನು ಹುಡುಕುವುದಾಗಿ ಪೊಲೀಸರು ಹೇಳಿದ್ದಾರೆ. - [ದ್ವೇಷ: ದಿನಕರನ ಮನೆಗೆ ಬೆಂಕಿ ಹಚ್ಚಿದ ಜಾಪರ!](https://mobiletime.in/2026/01/enmity-japara-set-fire-to-dinakarans-house/): ದೇವರ ಫೋಟೋಗಳಿಗೆ ಪ್ರೇಮ್ ಅಳವಡಿಸಿ ಬದುಕು ಕಟ್ಟಿಕೊಂಡಿದ್ದ ಕುಮಟಾದ ದಿನಕರ ಕುಮಟಾಕರ್ ಅವರ ಮನೆಗೆ ಅದೇ ಊರಿನ ಜಪರ್ ಅಲಿ ಹಾಗೂ ಮಹಮದ್ ಹಸನ್ ಸೇರಿ ಬೆಂಕಿ ಹಚ್ಚಿದ್ದಾರೆ. ಕುಮಟಾದ ದೇವರಹಕ್ಕಲದ ಪೈರಗದ್ದೆಯಲ್ಲಿ ದಿನಕರ ಕುಮಟಾಕರ್ ಅವರು ವಾಸವಾಗಿದ್ದಾರೆ. ಫೋಟೋಗಳಿಗೆ ಪ್ರೇಮ್ ಅಳವಡಿಸಿ ಅವರು ಜೀವಕ ಕಟ್ಟಿಕೊಂಡಿದ್ದಾರೆ. ಅವರ ಮನೆ ಪಕ್ಕದಲ್ಲಿ ಜಾಫರ್ ಅಲಿ ಆದಂ ಸಾಬ್ ಹಾಗೂ ಮಹಮದ್ ಹಸನ್ ಪೈಜಾನ್ ಸಾಬ್ ಜಫರ್ ಅಲಿ ವಾಸವಾಗಿದ್ದಾರೆ. ಈ ಎರಡು ಕುಟುಂಬದವರ ನಡುವೆ ಜಮೀನು ವಿಷಯವಾಗಿ ಗಲಾಟೆ ಸಾಮಾನ್ಯವಾಗಿದ್ದು, ಅದೇ ದ್ವೇಷ ಇದೀಗ ವಿಕೋಪಕ್ಕೆ ತೆರಳಿದೆ. ಆರೋಪಿತರಿಬ್ಬರು ಸೇರಿ ಪದೇ ಪದೇ ದಿನಕರ ಕುಮಟಾಕರ್ ಅವರ ಮನೆ ಮುಂದಿದ್ದ ತುಳಸಿ ಗಿಡ ಕಡಿಯುತ್ತಿದ್ದರು. ಮನೆ ಬಳಿ ಬೆಳೆದಿದ್ದ ಹೂವಿನ ಗಿಡಗಳನ್ನು ನಾಶ ಮಾಡುತ್ತಿದ್ದರು. ಮನೆ ಮೇಲೆ ಕಲ್ಲು ಎಸೆಯುವುದು ಆಗಾಗ ನಡೆದೇ ಇತ್ತು. ಈ ಎಲ್ಲದರ ಜೊತೆ ದಿನಕರ ಕುಮಟಾಕರ್ ಅವರ ಪತ್ನಿ ಹಾಗೂ ಮಕ್ಕಳು ಸ್ನಾನಕ್ಕೆ ಹೋದಾಗ ಇಣುಕಿ ನೋಡುವ ಕೆಟ್ಟ ಅಭ್ಯಾಸವನ್ನು ಜಪರ್ ಅಲಿ ಹಾಗೂ ಮಹಮದ್ ಹಸನ್ ಹೊಂದಿದ್ದರು. ಒಟ್ಟಿನಲ್ಲಿ ದಿನಕರ ಕುಮಟಾಕರ್ ಅವರು ನೆಮ್ಮದಿಯ ಜೀವನ ನಡೆಸಲು ಸಾಧ್ಯವಾಗದ ರೀತಿ ಅವರಿಬ್ಬರು ಕಾಡಿಸುತ್ತಿದ್ದರು. ಜನವರಿ 27ರ ಸಂಜೆ ದಿನಕರ ಕುಮಟಾಕರ್ ಅವರು ಕುಟುಂಬದವರ ಜೊತೆ ಜಾತ್ರೆಗೆ ಹೋಗಿದ್ದರು. ದಿನಕರ ಕುಮಟಾಕರ್ ಅವರ ಮನೆಯಲ್ಲಿ ಯಾರೂ ಇಲ್ಲದ ವಿಷಯ ಅರಿತು ಜಪರ್ ಅಲಿ ಹಾಗೂ ಮಹಮದ್ ಹಸನ್ ಅವರ ಮನೆಗೆ ನುಗ್ಗಿದರು. ಮನೆ ಹೊರಗಿದ್ದ ಪ್ಲಾಸ್ಟಿಕ್ ಉತ್ಪನ್ನಗಳಿಗೆ ಬೆಂಕಿ ಹಚ್ಚಿ ಪರಾರಿಯಾದರು. ಪರಿಣಾಮ ದಿನಕರ ಕುಮಟಾಕರ್ ಅವರ ಮನೆ ಹೊತ್ತಿ ಉರಿದಿದ್ದು, ಮನೆ ಮಾಲಕರು 50 ಸಾವಿರಕ್ಕೂ ಅಧಿಕ ಮೊತ್ತದ ಹಾನಿ ಅನುಭವಿಸಿದರು. ವಿಷಯ ಅರಿತ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದಾರೆ. ಸ್ಥಳದಲ್ಲಿ ಬಿಗಿ ಭದ್ರತೆ ಮಾಡಲಾಗಿದ್ದು, ಆರೋಪಿತರ ವಿರುದ್ಧ ಕ್ರಮಕ್ಕಾಗಿ ದಿನಕರ ಕುಮಟಾಕರ್ ಅವರು ಆಗ್ರಹಿಸಿದ್ದಾರೆ. - [ಅಪರಾಧ: ಅಂಕಿ-ಅ0ಶಗಳನ್ನು ಬಿಡುಗಡೆಗೊಳಿಸಿದ SP](https://mobiletime.in/2026/01/crime-sp-releases-statistics/): ಸೈಬರ್ ಅಪರಾಧದ ಕುರಿತು ಅರಿವು, ಜಾಲತಾಣದಲ್ಲಿ ಸುಳ್ಳು ಸುದ್ದಿ ಹರಡುವವರ ವಿರುದ್ಧ ಕಠಿಣ ಕ್ರಮ, `ಭಟ್ಕಳದಲ್ಲಿರುವ 14 ಪಾಕಿಸ್ತಾನಿ ಪ್ರಜೆಗಳ ವಿಚಾರಣೆ, ಸಂಚಾರಿ ನಿಯಮ ಉಲ್ಲಂಘನೆಗೆ ದಂಡ ಹಾಗೂ ಅಪಘಾತ ತಡೆಗೆ ಜಾಗೃತಿ ಸೇರಿ ಉತ್ತರ ಕನ್ನಡ ಪೊಲೀಸ್ ಇಲಾಖೆ ಅನೇಕ ಬಗೆಯ ಕಾರ್ಯ ಮಾಡುತ್ತಿದೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ ಎನ್ ಹೇಳಿದ್ದಾರೆ. ಮಂಗಳವಾರ ಅವರು ಮಾಧ್ಯಮದವರ ಎದುರು ಕಾನೂನು ಸುವ್ಯವಸ್ಥೆ ಮತ್ತು ವಿವಿಧ ಅಪರಾಧ ಅಂಕಿಅ0ಶಗಳ ವಿಷಯ ಹಂಚಿಕೊoಡಿದ್ದಾರೆ. ಈ ವೇಳೆ ರಸ್ತೆ ಅಪಘಾತಗಳ ಕುರಿತು ಕಳವಳ ವ್ಯಕ್ತಪಡಿಸಿದ ಅವರು ಉತ್ತರ ಕನ್ನಡ ಜಿಲ್ಲೆಯಲ್ಲಿ 192 ಅಪಘಾತಗಳಲ್ಲಿ 214 ಜನರು ಪ್ರಾಣ ಕಳೆದುಕೊಂಡಿದ್ದಾರೆ’ ಎಂಬ ಮಾಹಿತಿ ತಿಳಿಸಿದರು. ಇದರೊಂದಿಗೆ `ಸಂಚಾರ ನಿಯಮ ಉಲ್ಲಂಘಿಸಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗಿದ್ದು, 58,425 ಪ್ರಕರಣಗಳಿಂದ ಒಟ್ಟು 2.84 ಕೋಟಿ ದಂಡ ವಸೂಲಿ ಮಾಡಲಾಗಿದೆ. ಮದ್ಯಪಾನ ಮಾಡಿ ವಾಹನ ಚಲಾಯಿಸಿದ 1,039 ಜನರ ವಿರುದ್ಧ ಪ್ರಕರಣ ದಾಖಲಿಸಿ, 810 ಜನರ ಚಾಲನಾ ಪರವಾನಗಿ ರದ್ದುಪಡಿಸಲಾಗಿದೆ’ ಎಂದು ವಿವರಿಸಿದರು. `2025ರ ಸಾಲಿನಲ್ಲಿ ಜಿಲ್ಲೆಯಲ್ಲಿ ಅಪರಾಧ ಚಟುವಟಿಕೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗಿದೆ. ಒಟ್ಟು 430 ಮಟ್ಕಾ ಹಾಗೂ ಒಸಿ ಪ್ರಕರಣಗಳು, 146 ಬೀದಿ ಗ್ಯಾಂಬ್ಲಿoಗ್, 442 ಅಬಕಾರಿ ಕಾಯ್ದೆ ಉಲ್ಲಂಘನೆ ಹಾಗೂ 295 ಮಾದಕ ದ್ರವ್ಯ ಪ್ರಕರಣಗಳನ್ನು ದಾಖಲಿಸಲಾಗಿದೆ. ಉಳಿದಂತೆ ಅಕ್ರಮ ಮರಳು ಸಾಗಾಟಕ್ಕೆ ಸಂಬAಧಿಸಿದoತೆ 21 ಪ್ರಕರಣಗಳನ್ನು ದಾಖಲಿಸಲಾಗಿದ್ದು, 141 ಪ್ರಕರಣಗಳನ್ನು ಗಣಿ ಇಲಾಖೆಗೆ ಹಸ್ತಾಂತರಿಸಲಾಗಿದೆ. ಗಂಭೀರ ಅಪರಾಧಗಳ ಪೈಕಿ ಜಿಲ್ಲೆಯಲ್ಲಿ 17 ಕೊಲೆ, 15 ಅತ್ಯಾಚಾರ ಹಾಗೂ 7 ದರೋಡೆ ಪ್ರಕರಣಗಳು ದಾಖಲಾಗಿವೆ’ ಎಂಬ ವಿಷಯ ಬಹಿರಂಗಪಡಿಸಿದರು. ಸೈಬರ್ ಅಪರಾಧಗಳ ಬಗ್ಗೆ ಮಾಹಿತಿ ನೀಡಿದ ಅವರು `ಸಾರ್ವಜನಿಕರು ಲಕ್ಷಾಂತರ ರೂ ಹಣ ಕಳೆದುಕೊಳ್ಳುತ್ತಿದ್ದಾರೆ. ಕಳೆದ ಅವಧಿಯಲ್ಲಿ 127 ಲಕ್ಷ ರೂಪಾಯಿಗಳನ್ನು ಫ್ರೀಜ್ ಮಾಡುವಲ್ಲಿ ಪೊಲೀಸ್ ಇಲಾಖೆ ಯಶಸ್ವಿಯಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಹರಡುವವರ ಮೇಲೆ ನಿಗಾ ಇರಿಸಲಾಗಿದ್ದು, ಈವರೆಗೆ 36 ಪ್ರಕರಣಗಳನ್ನು ದಾಖಲಿಸಲಾಗಿದೆ’ ಎಂದರು. `ಕಳೆದ ವರ್ಷ ನಾಪತ್ತೆಯಾಗಿದ್ದ 332 ಜನರ ಪೈಕಿ 300 ಜನರನ್ನು ಪತ್ತೆಹಚ್ಚಲಾಗಿದ್ದು, ಉಳಿದ 32 ಜನರ ಪತ್ತೆಗೆ ಕಾರ್ಯಚರಣೆ ಮುಂದುವರಿದಿದೆ’ ಎಂದರು. ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎಂ ಜಗದೀಶ ಜೊತೆಗಿದ್ದರು.     - [ಅಗ್ನಿಗೆ ಆಹುತಿಯಾದ ಆಹಾರ ಮಳಿಗೆ](https://mobiletime.in/2026/01/food-stall-gutted-by-fire/): ಕಾರವಾರದ ಡೆಸರ್ಟಿನೊ ಆಹಾರ ಮಳಿಗೆಯಲ್ಲಿ ಮಂಗಳವಾರ ಗ್ರಾಹಕರು ತುಂಬಿದ್ದು, ಈ ಅವಧಿಯಲ್ಲಿಯೇ ಮಳಿಗೆಗೆ ಬೆಂಕಿ ಬಿದ್ದಿದೆ. ಬೆಂಕಿ ನೋಡಿದ ಜನ ಕೆಫೆಯಿಂದ ಹೊರಗೆ ಓಡಿ ಬಂದು ಅಪಾಯದಿಂದ ಪಾರಾಗಿದ್ದಾರೆ. ಕಾರವಾರದ ಗ್ರೀನ್ ಸ್ಟಿಟ್ ರಸ್ತೆಯಲ್ಲಿ ಡೆಸರ್ಟಿನೊ ಆಹಾರ ಮಳಿಗೆಯಿದೆ. ಈ ಮಳಿಗೆಯಲ್ಲಿ ತಿನಿಸು ಖರೀದಿಸಲು ಗ್ರಾಹಕರು ಬರುತ್ತಿದ್ದು, ಗ್ರಾಹಕರಿರುವಾಗಲೇ ವಿದ್ಯುತ್ ಶಾರ್ಟ ಸರ್ಕೀಟ್ ಸಂಭವಿಸಿದೆ. ಪರಿಣಾಮ ಮಳಿಗೆ ಒಳಭಾಗ ದಟ್ಟ ಹೊಗೆ ಕಾಣಿಸಿದೆ. ಇದರಿಂದ ಅಲ್ಲಿನ ಸಿಬ್ಬಂದಿ ಹಾಗೂ ಗ್ರಾಹಕರು ಆತಂಕಕ್ಕೆ ಒಳಗಾಗಿ ಹೊರಗೆ ಒಡಿದ್ದಾರೆ. ಅನಿರೀಕ್ಷಿತವಾಗಿ ಬೆಂಕಿ ಕಾಣಿಸಿಕೊಳ್ಳುತ್ತಿದ್ದ ಹಾಗೇ ಜನ ಆತಂಕಕ್ಕೆ ಒಳಗಾಗಿದ್ದು, ಮಾಹಿತಿಪಡೆದು ಅಗ್ನಿಶಾಮಕ ಸಿಬ್ಬಂದಿ ಆಗಮಿಸಿದರು. ಅವರು ಬೆಂಕಿ ಆರಿಸುವ ಮೂಲಕ ದೊಡ್ಡ ಅನಾಹುತ ತಪ್ಪಿಸಿದರು. ಬೆಂಕಿ ಪಕ್ಕದ ಕಟ್ಟಡಕ್ಕೂ ಹಬ್ಬುವ ಆತಂಕವಿದ್ದು, ಅದನ್ನು ಅಗ್ನಿಶಾಮಕ ಸಿಬ್ಬಂದಿ ದೂರ ಮಾಡಿದರು. ಮಳಿಗೆಗೆ ಬೆಂಕಿ ಬಿದ್ದ ಪರಿಣಾಮ ವಿವಿಧ ಪೀಠೋಪಕರಣಗಳು ಸುಟ್ಟು ಕರಕಲಾಗಿದೆ. - [ಸವಾರನನ್ನು ಕೊಂದ ಶ್ರೀಕುಮಾರ ಬಸ್ಸು](https://mobiletime.in/2026/01/srikumar-bus-kills-rider/): ಭಟ್ಕಳ – ಹೊನ್ನಾವರ ಮಾರ್ಗದಲ್ಲಿ ಸಂಚರಿಸುತ್ತಿದ್ದ ಶ್ರೀಕುಮಾರ ಬಸ್ಸು ಬೈಕಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಬೈಕ್ ಸವಾರ ಬಸ್ಸಿನ ಅಡಿಗೆ ಬಿದ್ದು ಸಾವನಪ್ಪಿದ್ದಾರೆ. ಜನವರಿ 26ರ ರಾತ್ರಿ ಹಾವೇರಿಯ ಶ್ರೀನಿವಾಸ ವಡ್ಡರ್ ಅವರು ಈ ಮಾರ್ಗದಲ್ಲಿ ಬಸ್ಸು ಓಡಿಸುತ್ತಿದ್ದರು. ಬೆಂಗಳೂರಿಗೆ ಹೋಗಬೇಕಿದ್ದ ಆ ಬಸ್ಸು ಭಟ್ಕಳ ಕಡೆಯಿಂದ ಮುರುಡೇಶ್ವರದ ಕಡೆ ಪ್ರಯಾಣಿಕರನ್ನು ಕರೆತರಲು ಆಗಮಿಸಿತ್ತು. ಬೇಗ ಬೆಂಗಳೂರಿಗೆ ಹೋಗಬೇಕು ಎಂಬ ಆತುರದಲ್ಲಿ ಶ್ರೀನಿವಾಸ ವಡ್ಡರ್ ಅವರು ಬಸ್ಸನ್ನು ವೇಗವಾಗಿ ಓಡಿಸುತ್ತಿದ್ದರು. ಸಭಾತಿ ಕ್ರಾಸಿನ ಡಿವೈಡರ್ ಹತ್ತಿರ ಹೋಗುತ್ತಿದ್ದ ಬೈಕಿಗೆ ಹಿಂದಿನಿoದ ಬಸ್ಸು ಗುದ್ದಿದರು. ಆ ಬೈಕನ್ನು ತೆರ್ನಮಕ್ಕಿ ಜನತಾ ಕಾಲೋನಿಯ ಎಲೆಕ್ಟಿಶಿಯನ್ ಜೋಸೆಫ್ ಡಿಸೋಜಾ (40) ಅವರು ಓಡಿಸುತ್ತಿದ್ದು, ಬಸ್ಸು ಗುದ್ದಿದ ರಭಸಕ್ಕೆ ಅವರು ನೆಲಕ್ಕೆ ಬಿದ್ದರು. ಗಂಭೀರ ಪ್ರಮಾಣದಲ್ಲಿ ಗಾಯವಾದ ಕಾರಣ ಅವರು ಅಲ್ಲಿಯೇ ಸಾವನಪ್ಪಿದರು. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಬಸ್ ಚಾಲಕನ ವಿರುದ್ಧ ಪ್ರಕರಣ ದಾಖಲಿಸಿದ್ದು, ಕಾನೂನು ಕ್ರಮ ಜರುಗಿಸಿದ್ದಾರೆ. - [ಸಂಚಿನ ಸುಳಿಯಲ್ಲಿ ಸಾಮಾಜಿಕ ಹೋರಾಟಗಾರ!](https://mobiletime.in/2026/01/a-social-activist-caught-in-a-conspiracy/): ವಿವಿಧ ಸಮಸ್ಯೆಗಳ ಕುರಿತು ಹೋರಾಟ ನಡೆಸುತ್ತಿದ್ದ ಶಿರಸಿಯ ಸಾಮಾಜಿಕ ಕಾರ್ಯಕರ್ತ ಅನಂತಮೂರ್ತಿ ಹೆಗಡೆ ಅವರೇ ಇದೀಗ ಸಂಕಷ್ಟಕ್ಕೆ ಸಿಲುಕಿದ್ದಾರೆ. ತಮ್ಮ ವಿರುದ್ಧ ನಿರಂತರ ಸಂಚು ನಡೆಯುತ್ತಿದೆ ಎಂದ ಅವರು ಅದೇ ಚಿಂತೆಯಲ್ಲಿದ್ದಾರೆ. ಅನoತಮೂರ್ತಿ ಅವರೇ ಹೇಳಿಕೊಂಡಿರುವ ಹಾಗೇ ಅವರ ವಿರುದ್ಧ ಗಾಂಜಾ ಪ್ರಕರಣ ದಾಖಲಾಗುವ ಸಾಧ್ಯತೆ ಹೆಚ್ಚಿದೆ. ಮಾದಕ ವ್ಯಸನ ಪ್ರಕರಣದಲ್ಲಿ ಅನಂತಮೂರ್ತಿ ಹೆಗಡೆ ಅವರನ್ನು ಜೈಲಿಗೆ ಕಳುಹಿಸುವುದಕ್ಕಾಗಿ ಕೆಲವರು ಕಾಯುತ್ತಿದ್ದಾರೆ. `ಇಂಥ ದೂರು ಬಂದರೆ ಮೊದಲು ಸಮಗ್ರ ವಿಚಾರಣೆ ನಡೆಸಬೇಕು. ಅದಾದ ನಂತರವೇ ಕಾನೂನು ಕ್ರಮ ಜರುಗಿಸಬೇಕು’ ಎಂದು ಅನಂತಮೂರ್ತಿ ಹೆಗಡೆ ಅವರು ಪೊಲೀಸರಿಗೆ ಪತ್ರ ಬರೆದಿದ್ದಾರೆ. ಪೋಲೀಸ್ ಉಪಅಧೀಕ್ಷಕಿ ಗೀತಾ ಪಾಟೀಲ್ ಅವರನ್ನು ಭೇಟಿಯಾಗಿ ತಮ್ಮ ಅಂತರಾಳದ ನೋವನ್ನು ತೋಡಿಕೊಂಡಿದ್ದಾರೆ. `ಕಳೆದ ವರ್ಷ ತಮ್ಮನ್ನು ಜೈಲಿಗೆ ಕಳುಹಿಸುವ ಹುನ್ನಾರ ನಡೆಯಿತು. ಅದಾದ ನಂತರ ರಾತ್ರಿ ವೇಳೆ ಅಡ್ಡಗಟ್ಟಿ ಹೊಡೆಯುವ ಪ್ರಯತ್ನ ನಡೆಯಿತು. ಅದಾದ ನಂತರ ಮಹಿಳೆಯರನ್ನು ಛೂ ಬಿಟ್ಟು ತೇಜೋವಧೆ ಮಾಡುವ ಕೆಲಸ ಶುರುವಾಯಿತು. ಅದೆಲ್ಲದರ ಮುನ್ಸೂಚನೆ ಸಿಕ್ಕಿ ತಪ್ಪಿಸಿಕೊಂಡಿದ್ದು, ಇನ್ನಷ್ಟು ಸಂಚು ನಿರಂತರವಾಗಿ ನಡೆದಿದೆ’ ಎಂದವರು ತಮ್ಮ ಆತಂಕ ತೋಡಿಕೊಂಡಿದ್ದಾರೆ. `ನಾನು ಯಾವುದೇ ಅಕ್ರಮ ಮಾಡಿಲ್ಲ. ಯಾರಿಗೂ ಅನ್ಯಾಯ ಮಾಡಿಲ್ಲ. ಅದಾಗಿಯೂ, ತಮ್ಮ ವಿರುದ್ಧ ಕುತಂತ್ರ ನಡೆಯುತ್ತಿದ್ದು, ಜೀವ ಹಾಗೂ ಜೀವನ ಎರಡೂ ಅಪಾಯದಲ್ಲಿದೆ. ಹೀಗಾಗಿ ತಮಗೆ ರಕ್ಷಣೆ ಒದಗಿಸಿ’ ಎಂದು ಅನಂತಮೂರ್ತಿ ಹೆಗಡೆ ಪೊಲೀಸರ ಮೊರೆ ಹೋಗಿದ್ದಾರೆ. `ತಮ್ಮ ವಿರುದ್ಧ ಸಂಚು ರೂಪಿಸಿದವರನ್ನು ಪತ್ತೆ ಮಾಡಿ ಬಂಧಿಸಬೇಕು’ ಎಂದು ಅವರು ಆಗ್ರಹಿಸಿದ್ದಾರೆ. `ನಾನು ಬಿಜೆಪಿ ಜಿಲ್ಲಾ ರೈತ ಮೋರ್ಚಾ ಪದಾಧಿಕಾರಿಯಾಗಿದ್ದು, ರಾಜಕೀಯವಾಗಿ ಹಲವಾರು ಬಾರಿ ಜನರ ಪರವಾಗಿ ಹೇಳಿಕೆ ಕೊಟ್ಟಿದ್ದೇನೆ. ಅದೇ ಕಾರಣಕ್ಕೆ ತಮ್ಮ ವಿರುದ್ಧ ಸುಳ್ಳು ದೂರು ದಾಖಲಿಸಲಾಗಿದ್ದು, ಅದಕ್ಕೆ ನ್ಯಾಯಾಲಯ ತಡೆ ಒಡ್ಡಿತು. ಅದಾದ ನಂತರ ರಾತ್ರಿ ವೇಳೆ ಕ್ರಿಕೆಟ್, ಕಬಡ್ಡಿ ಪಂದ್ಯಾವಳಿ ಹೋಗುವಾಗ ದೈಹಿಕ ಹಲ್ಲೆ ನಡೆಸಲು ಸಂಚು ರೂಪಿಸಲಾಗಿತ್ತು. ಅದಾದ ಮೇಲೆ ಜಾತಿ ನಿಂದನೆ, ಮಹಿಳೆಯರಿಂದ ದೂರು ಕೊಡಿಸುವ ಪ್ರಯತ್ನವೂ ನಡೆಯಿತು’ ಎಂಬ ವಿಷಯವನ್ನು ಅವರು ಬಿಚ್ಚಿಟ್ಟಿದ್ದಾರೆ. - [ಕಂಡವರ ಕಾಸಿಗೆ ಆಸೆಪಡೆಯದ ಕಂಡೆಕ್ಟರ್](https://mobiletime.in/2026/01/the-conductor-who-got-his-wish-for-the-money-of-those-who-saw-him/): ನೆಲ್ಲೂರಿನಿoದ ಶಿರಸಿಗೆ ಬರುತ್ತಿದ್ದ ಬಸ್ಸಿನಲ್ಲಿ ಮಹಿಳೆಯೊಬ್ಬರು ಬ್ಯಾಗ್ ಬಿಟ್ಟು ಹೋಗಿದ್ದು, ಆ ಬ್ಯಾಗನ್ನು ಬಸ್ಸಿನ ಕಂಡೆಕ್ಟರ್ ವಾರಸುದಾರರಿಗೆ ಒಪ್ಪಿಸಿದ್ದಾರೆ. ಮಂಗಳವಾರ ಶಾರದಾ ಎಂಬಾತರು ನೆಲ್ಲೂರಿನಿಂದ ಸರ್ಕಾರಿ ಬಸ್ಸು ಹತ್ತಿದ್ದು, ಶಿರಸಿಗೆ ಬಂದು ತಲುಪಿದ್ದರು. ಬಸ್ಸಿನಿಂದ ಇಳಿಯವ ಆತುರದಲ್ಲಿ ಅವರು ತಮ್ಮ ಬ್ಯಾಗನ್ನು ಬಸ್ಸಿನಲ್ಲಿಯೇ ಮರೆತಿದ್ದರು. ಆ ಬ್ಯಾಗಿನಲ್ಲಿ 16 ಸಾವಿರ ರೂ ಹಣದ ಜೊತೆ ಕೆಲ ಮಹತ್ವದ ಕಾಗದ ಪತ್ರಗಳಿದ್ದವು. ಬ್ಯಾಗ್ ಕಳೆದ ಬಗ್ಗೆ ಶಾರದಾ ಅವರ ಅರಿವಿಗೆ ಬಂದ ನಂತರ ಅವರು ಆತಂಕಕ್ಕೆ ಒಳಗಾಗಿದ್ದರು. ಬಸ್ಸಿನಲ್ಲಿ ಬ್ಯಾಗ್ ಕಂಡ ಕಂಡೆಕ್ಟರ್ ಮಂಜುನಾಥ್ ಚೆಲುವಾದಿ ಆ ಮಹಿಳಾ ಪ್ರಯಾಣಿಕರ ಹುಡುಕಾಟ ನಡೆಸಿದರು. ಕೊನೆಗೆ ಬಸ್ ನಿಲ್ದಾಣದ ಸಂಚಾರ ನಿಯಂತ್ರಕ ರಾಮಚಂದ್ರ ಶೆಟ್ಟಿ ಅವರಿಗೆ ಬ್ಯಾಗ್ ಸಿಕ್ಕ ವಿಷಯ ಮುಟ್ಟಿಸಿದರು. ಅಲ್ಲಿದ್ದ ನಾಗೇಂದ್ರ ಬೈಂದೂರು ಅವರು ಬ್ಯಾಗನ್ನು ಜೋಪಾನ ಮಾಡಿದ್ದು, ಈ ವೇಳೆ ಶಾರದಾ ಅವರು ಅಲ್ಲಿಗೆ ಬಂದು ಬ್ಯಾಗ್ ಕಾಣೆಯಾದ ವಿಷಯ ತಿಳಿಸಿದರು. ಮಂಜುನಾಥ್ ಚೆಲುವಾದಿ ಅವರು ಬ್ಯಾಗ್ ಮುಟ್ಟಿಸಿದ ವಿಷಯ ತಿಳಿಸಿ ಮಹಿಳೆಗೆ ಅವರ ಸ್ವತ್ತನ್ನು ಸಾರಿಗೆ ಸಿಬ್ಬಂದಿ ನೀಡಿದರು. ಬ್ಯಾಗ್ ಮರಳಿ ಸಿಕ್ಕಿದಕ್ಕೆ ಶಾರದಾ ಅವರು ಹರ್ಷವ್ಯಕ್ತಪಡಿಸಿದರು. - [1 ಲಕ್ಷ ಗೆಲ್ಲಿ!](https://mobiletime.in/2026/01/win-1-lakh/): `ಭ್ರೂಣ ಲಿಂಗ ಪತ್ತೆ ಮಾಡುವವರ ಕುರಿತು ಮಾಹಿತಿ ನೀಡಿದವರಿಗೆ 1 ಲಕ್ಷ ರೂ ಹಣ ಕೊಡಲಾಗುತ್ತದೆ’ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ ಶಂಕರ್ ರಾವ್ ಅವರು ಹೇಳಿದ್ದಾರೆ. ಮಂಗಳವಾರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಚೇರಿಯಲ್ಲಿ ಹೆಣ್ಣು ಮಕ್ಕಳ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು `ಹೆಣ್ಣು ಮಕ್ಕಳ ರಕ್ಷಣೆ ಹಾಗೂ ಲಿಂಗ ತಾರತಮ್ಯವನ್ನು ಹೋಗಲಾಡಿಸಲು ರಾಷ್ಟ್ರಿಯ ಹೆಣ್ಣು ಮಗುವಿನ ದಿನಾಚರಣೆಯನ್ನು ಆಚರಿಸಲಾಗುತ್ತಿದೆ. ಭ್ರ‍್ರೂಣ ಲಿಂಗ ಪತ್ತೆ ಪ್ರಕರಣ ಕುರಿತು ಮಾಹಿತಿಯನ್ನು ನೀಡಿದ್ದಲ್ಲಿ ಸರ್ಕಾರದಿಂದ ಒಂದು ಲಕ್ಷ ಬಹುಮಾನ ನೀಡಲಾಗುತ್ತದೆ’ ಎಂದು ತಿಳಿಸಿದ್ದಾರೆ. `ನಮ್ಮ ದೇಶದ ಸಂಸ್ಕೃತಿಯಲ್ಲಿ ಹೆಣ್ಣು ಮಕ್ಕಳಿಗೆ ವಿಶೇಷ ಗೌರವ ಮತ್ತು ಸ್ಥಾನಮಾನ ಇದೆ. ಹೆಣ್ಣು ಮಗುವನ್ನು ಮನೆಯನ್ನು ಬೆಳಗುವ ದೀಪ ಎಂದು ಕರೆಯುತ್ತಾರೆ. ಹೀಗಿರುವಾಗ ಅದೇ ಜನ ಮನೆಯಲ್ಲಿ ಹೆಣ್ಣು ಹುಟ್ಟಿದರೆ ತಲೆ ಮೇಲೆ ಕೈ ಹೊತ್ತು ಕುಳಿತುಕೊಳ್ಳುತ್ತಿದ್ದು, ಅದನ್ನು ತಡೆಯಬೇಕು’ ಎಂದವರು ಕರೆ ನೀಡಿದ್ದಾರೆ. ತೋಡುರು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯ ಡಾ ರಾಹುಲ್ ಎಸ್, ಸಹಾಯಕ ಆಡಳಿತಾಧಿಕಾರಿ ಯೂಸುಫ್ ಖಾನ್, ಜಿಲ್ಲಾ ಆರೋಗ್ಯ ಉಪ ಶಿಕ್ಷಣಾಧಿಕಾರಿ ಬಸವರಾಜ್ ಕನ್ನಕ್ಕನವರ, ನರ್ಸಿಂಗ್ ಅಫೀಸರ್ ಸುಷ್ಮ್ಮಾ, ಸಂಧ್ಯಾ, ರತೀಶ್ ನಾಯ್ಕ ಕಾರ್ಯಕ್ರಮದಲ್ಲಿದ್ದರು. - [ಕನ್ನಡ ಚಿತ್ರರಂಗದಲ್ಲಿ ಹೊಸ ಪ್ರಯೋಗ: ಉದಯೋನ್ಮುಖ ಪ್ರತಿಭೆಗಳ ಅನಾವರಣ](https://mobiletime.in/2026/01/a-new-experiment-in-kannada-cinema-unveiling-emerging-talents/): ಕನ್ನಡ ಚಿತ್ರ ರಂಗದಲ್ಲಿ ಇತ್ತೀಚಿನ ದಿನಗಳಲ್ಲಿ ಅನೇಕ ಹೊಸ ಪ್ರಯೋಗಗಳು ನಡೆಯುತ್ತಿವೆ. ಅದು ಕಥೆಯಲ್ಲಾಗಿರಬಹುದು ಅಥವಾ ಪಾತ್ರಗಳ ಆಯ್ಕೆಯಲ್ಲಾಗಿರಬಹುದು.ಉದಯೋನ್ಮುಖ ಪ್ರತಿಭೆಗಳು ಹೊಸ ರೀತಿಯಲ್ಲಿ ಯೋಚಿಸುತ್ತಾರೆ. ಇದೀಗ ಇದೇ ರೀತಿ ಹೊಸ ಕಥೆಯ ಮೂಲಕ ಉದಯೋನ್ಮುಖ ತಂಡವೊಂದು ಬರುತ್ತಿದೆ. ಮನಂ ಮೂವಿ ಮೇಕರ್ಸ್ ‘ ಬ್ಯಾನರ್ ಅಡಿಯಲ್ಲಿ ‘ದಿ 1979 ಅನ್ ಟೋಲ್ಡ್ ಸ್ಟೋರಿ ‘ ಎನ್ನುವ ಹೊಸ ಚಿತ್ರ ಬಿಡುಗಡೆಗೆ ಸಜ್ಜಾಗಿದೆ. ಈ ಚಿತ್ರಕ್ಕೆ ಪುಷ್ಪ ರಾಜ್ ಅವ್ರು ಆಕ್ಷನ್ ಕಟ್ ಹೇಳಿದ್ದು, ಬೀರಮಾನಹಳ್ಳಿ ಎಂ ಶ್ರೀನಿವಾಸ್ ಅವರು ಬಂಡವಾಳ ಹೂಡಿದ್ದಾರೆ.1979 ರಲ್ಲಿ ಬಂಗಾಳದಲ್ಲಿ ನಡೆದಿರುವ ನೈಜ್ಯ ಕಥೆಯನ್ನಾಧರಿಸಿರುವ ಕಾಲ್ಪನಿಕ ಕಥೆ ಇರುವ ಸಿನಿಮಾ ಇದಾಗಿದ್ದು,ಸಂಪೂರ್ಣ ಕಥೆಯು ಬಂಗಾಳದ ಹಿನ್ನೆಲೆಯನ್ನು ಹೊಂದಿದ್ದರು ,ಚಿತ್ರವನ್ನು ನಮ್ಮ ಕೋಲಾರದಲ್ಲಿ ಚಿತ್ರೀಕರಣ ಮಾಡಿರುವುದು ವಿಶೇಷ.ಹಾಗಾಗಿ ಚಿತ್ರದ ಬಗ್ಗೆ  ಕುತೂಹಲದ ಜೊತೆಗೆ ನೀರಿಕ್ಷೆ ಹೆಚ್ಚಿದೆ. ಈಗಾಗಲೇ ಸಿನಿಮಾದ ಟೀಸರ್ ಅನ್ನು ಚಿತ್ರ ತಂಡ  ಜನವರಿ 23 ರಂದು ‘ಮ್ಯೂಸಿಕ್ ಬಜಾರ್ ‘ ಯೌಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆ ಮಾಡಿದೆ.ಟೀಸರ್ ನೋಡಿದಾಗ ಇದು ನಮ್ಮ ಮಣ್ಣಿನ ಕಥೆ ಎನ್ನುವುದು ಬಹಳ ಸುಲಭವಾಗಿ ತಿಳಿಯುತ್ತದೆ. ಅಷ್ಟು ನೈಜ್ಯವಾಗಿ ಸಿನಿಮಾವನ್ನು ಸೆರೆ ಹಿಡಿದಿದ್ದಾರೆ. ರಾಜಕೀಯ, ಅಧಿಕಾರ, ಆಡಳಿತ,ಸ್ವಾಭಿಮಾನ, ನೋವು,ಹಿಂಸೆ ಇದರ ಸುತ್ತ  ಈ ಚಿತ್ರ ಸುತ್ತುತದೆ ಎನ್ನುವುದನ್ನು ಟೀಸರ್ ಮೂಲಕ ಕಾಣಬಹುದಾಗಿದೆ.ಇದರ ಜೊತೆಗೆ ಸಿನಿಮಾದ ಬಿಜಿಎಂ ಕೂಡ ಬಹಳ ಅದ್ಭುತವಾಗಿದೆ. ಒಟ್ಟಿನಲ್ಲಿ ಸಿನಿಮಾ ಸಿನಿ ಪ್ರಿಯರಲ್ಲಿ ಕುತೂಹಲತೆಯನ್ನು ಹೆಚ್ಚಿಸಿದೆ. ಇನ್ನು ಸಿನಿಮಾದ ಟ್ರೈಲರ್ ಹಾಗೂ ಹಾಡುಗಳು ಮುಂದಿನ ದಿನಗಳಲ್ಲಿ ಬಿಡುಗಡೆ ಮಾಡುವುದಾಗಿ ಚಿತ್ರ ತಂಡ ಮಾಹಿತಿ ನೀಡಿದೆ. ಸಿನಿಮಾದ ರಿಲೀಸ್ ಡೇಟ್ ಅಧಿಕೃತವಾಗಿ ಘೋಷಣೆಯಾಗದಿದ್ದರೂ  ಇದೇ ಫೆಬ್ರವರಿ ತಿಂಗಳಲ್ಲಿ ಬಿಡುಗಡೆ ಮಾಡುವುದಾಗಿಯೂ ತಂಡ ತಿಳಿಸಿದೆ. ಸಿನಿಮಾವು ಹೊಸ ಪ್ರತಿಭೆಗಳಿಂದ ಕೂಡಿದ್ದು, ಅಜ್ಜು,ಸುಜಿತ್, ಪ್ರಾನ್ವಿ ಗೌಡ ಹಾಗೂ ಅಮೃತ ಗೌಡ ಅವರು ಮುಖ್ಯ ಭೂಮಿಕೆಯಲ್ಲಿ ನಟಿಸುತ್ತಿದ್ದಾರೆ.ಸಿನಿಮಾದ ತಾಂತ್ರಿಕ ವರ್ಗವು ಬಲಿಷ್ಠವಾಗಿದ್ದು,ಚಲಾಕಿ ಚರಣ್ ಅವರ ಛಾಯಾಗ್ರಾಹಣದಲ್ಲಿ ಚಿತ್ರ ಮೂಡಿಬಂದಿದೆ.ಜತೆಗೆ ಜಶ್ವಂತ್ ವಸುವುಲೇಟಿ ಸಂಗೀತ ಸಂಯೋಜನೆಯನ್ನು ಮಾಡಿದ್ದಾರೆ. ಸಿನಿ ಪ್ರಿಯರು ಸದಾ ಹೊಸತನವನ್ನು ಬಯಸುತ್ತಾರೆ.ಈ ವಿಚಾರದಲ್ಲಿ’ ದಿ 1979 ಅನ್ ಟೋಲ್ಡ್ ಸ್ಟೋರಿ ‘ ಹಲವಾರು ಪ್ರತಿಭೆಗಳಿಗೆ ಅವಕಾಶ ನೀಡಿರುವುದರ ಜೊತೆಗೆ ಒಂದೊಳ್ಳೆ ಕಥೆಯ ಮೂಲಕ ಸ್ಯಾಂಡಲ್ ವುಡ್ ನಲ್ಲಿ ತಮ್ಮದೇ ಛಾಪ್ಪನ್ನು ಸೃಷ್ಟಿಸಲು ಬರುತ್ತಿದೆ. - [ಡಿವೈಡರಿಗೆ ಗುದ್ದಿದ ರಿಕ್ಷಾ: ನೋವು ಅನುಭವಿಸಿದ ಚಾಲಕ ಸಾವು!](https://mobiletime.in/2026/01/rickshaw-hits-divider-driver-dies-in-pain/): ಕಾರವಾರ – ಅಂಕೋಲಾ ರಾಷ್ಟ್ರೀಯ ಹೆದ್ದಾರಿಯಲ್ಲಿನ ಡಿವೈಡರಿಗೆ ರಿಕ್ಷಾ ಡಿಕ್ಕಿಯಾಗಿದೆ. ಪರಿಣಾಮ ರಿಕ್ಷಾ ಚಾಲಕ ರಮಾಕಾಂತ ನಾಯ್ಕ ಅವರು ಸಾವನಪ್ಪಿದ್ದಾರೆ. ಅಂಕೋಲಾದ ಅವರ್ಸಾ ಬಳಿಯ ಹಟ್ಟಿಕೇರಿಯ ರಮಾಕಾಂತ ವಿಷ್ಣು ನಾಯ್ಕ (29) ಅವರು ರಿಕ್ಷಾ ಚಾಲಕರಾಗಿ ಬದುಕು ಕಟ್ಟಿಕೊಂಡಿದ್ದರು. ಕಾರವಾರದ ಮಾಲಾದೇವಿ ಮೈದಾನದ ಬಳಿ ಅವರು ವಾಸವಾಗಿದ್ದರು. ಅತಿ ವೇಗದ ವಾಹನ ಚಾಲನೆ ಅವರ ಬದುಕನ್ನು ಕಿತ್ತುಕೊಂಡಿತು. ರಿಕ್ಷಾ ಪಲ್ಟಿಯಾಗಿ ನೋವು ಅನುಭವಿಸಿದ್ದ ರಮಾಕಾಂತ ನಾಯ್ಕ ಅವರನ್ನು ಆಸ್ಪತ್ರೆಗೆ ದಾಖಲಿಸಿದರೂ ಬದುಕಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಜನವರಿ 26ರಂದು ಮಧ್ಯಾಹ್ನ ರಮಾಕಾಂತ ನಾಯ್ಕ ಅವರು ಅಂಕೋಲಾದಿAದ ಕಾರವಾರದ ಕಡೆ ರಿಕ್ಷಾ ಓಡಿಸುತ್ತಿದ್ದರು. ಹಾರವಾಡ ಕ್ರಾಸಿನ ಬಳಿ ಅವರ ವಾಹನದ ವೇಗ ಹೆಚ್ಚಾಗಿದ್ದು, ಅಲ್ಲಿದ್ದ ಡಿವೈಡರಿಗೆ ರಿಕ್ಷಾ ಗುದ್ದಿತು. ಪರಿಣಾಮ ರಿಕ್ಷಾ ಪಲ್ಟಿಯಾಯಿತು. ಒಳಗಿದ್ದ ರಮಾಕಾಂತ ನಾಯ್ಕ ಅವರು ರಿಕ್ಷಾ ಜೊತೆ ರಭಸವಾಗಿ ನೆಲಕ್ಕೆ ಅಪ್ಪಳಿಸಿದರು. ಈ ಅಪಘಾತದಿಂದ ರಮಾಕಾಂತ ನಾಯ್ಕ ಅವರ ತಲೆಗೆ ಭಾರೀ ಪ್ರಮಾಣದಲ್ಲಿ ಪೆಟ್ಟಾಯಿತು. ಕೈ, ಎದೆ, ಸೊಂಟಕ್ಕೂ ನೋವಾಯಿತು. ಅಲ್ಲಿದ್ದ ಜನ ಆಂಬುಲೆನ್ಸಿಗೆ ಫೋನ್ ಮಾಡಿದರು. ಗಾಯಗೊಂಡ ರಮಾಕಾಂತ ನಾಯ್ಕ ಅವರನ್ನು ಅಂಕೋಲಾ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದ್ದು, ಅದಾದ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಕಾರವಾರದ ಕಿಮ್ಸ್’ಗೆ ಕಳುಹಿಸಲಾಯಿತು. ಕೊನೆಕ್ಷಣದವರೆಗೂ ರಮಾಕಾಂತ ನಾಯ್ಕ ಅವರನ್ನು ಉಳಿಸಿಕೊಳ್ಳಲು ನಿರಂತರ ಆರೈಕೆ ನಡೆಯಿತು. ಆದರೆ, ಆ ಚಿಕಿತ್ಸೆಗೆ ಅವರು ಸ್ಪಂದಿಸಲಿಲ್ಲ. ರಾತ್ರಿ 9.30ಕ್ಕೆ ರಮಾಕಾಂತ ನಾಯ್ಕ ಅವರು ಉಸಿರಾಟ ನಿಲ್ಲಿಸಿದರು. ಸಹೋದರನ ಸಾವಿನ ಬಗ್ಗೆ ಹಟ್ಟಿಕೇರಿಯ ಟೆಂಪೋ ಕ್ಲೀನರ್ ನಾಗರಾಜ ವಿಷ್ಣು ನಾಯ್ಕ ಅವರು ಪೊಲೀಸರಿಗೆ ಮಾಹಿತಿ ನೀಡಿದರು. ಅಪಘಾತದ ಬಗ್ಗೆ ಅಂಕೋಲಾ ಪೊಲೀಸರು ಪ್ರಕರಣ ದಾಖಲಿಸಿದರು. `ಅತಿ ವೇಗ ಅಪಾಯಕ್ಕೆ ಕಾರಣ’ - [ಯಲ್ಲಾಪುರ: ದುಡ್ಡು ಕೊಟ್ಟರೂ ಶುದ್ಧ ನೀರು ಸಿಗಲ್ಲ!](https://mobiletime.in/2026/01/yellapur-even-if-you-pay-money-you-wont-get-clean-water/): ಯಲ್ಲಾಪುರ ಪಟ್ಟಣ ವ್ಯಾಪ್ತಿಯಲ್ಲಿ 4 ಶುದ್ಧ ಕುಡಿಯುವ ನೀರಿನ ಘಟಕಗಳಿದ್ದು, ಅದರಲ್ಲಿ ಮೂರು ಘಟಕ ಕೆಲಸ ಮಾಡುತ್ತಿಲ್ಲ. ಮತ್ತೊಂದು ಘಟಕ 1 ರೂಪಾಯಿಗೆ 5 ಲೀಟರ್ ನೀರು ನೀಡುವ ಬದಲು ಒಂದೇ ಲೀಟರ್ ನೀರು ಕೊಡುತ್ತಿದೆ. ಜನವರಿ 27ರಂದು ಯಲ್ಲಾಪುರ ಪಟ್ಟಣದಲ್ಲಿ ಹೊರ ಮಂಗಳವಾರ ಆಚರಣೆ ನಡೆದಿದ್ದು, ಮನೆಯಿಂದ ಹೊರಗಿದ್ದ ಜನ ಕುಡಿಯುವ ನೀರಿಗೆ ತೊಂದರೆ ಅನುಭವಿಸಿದ್ದಾರೆ. ನಾಲ್ಕು ಘಟಕಗಳಿಗೆ ತೆರಳಿದರೂ ಸೂಕ್ತ ನೀರು ಸಿಗದ ಕಾರಣ ಜನ ಪಟ್ಟಣ ಪಂಚಾಯತ ಆಡಳಿತದ ವಿರುದ್ಧ ಅಸಮಧಾನವ್ಯಕ್ತಪಡಿಸಿದ್ದಾರೆ. ಶುದ್ಧ ಕುಡಿಯುವ ನೀರು ಕೊಡುತ್ತಿದ್ದ ಘಟಕಗಳು ಐದೇ ವರ್ಷದಲ್ಲಿ ಹಾಳಾದ ಬಗ್ಗೆ ಆಕ್ರೋಶಹೊರಹಾಕಿದ್ದಾರೆ. ಯಲ್ಲಾಪುರ ಪಟ್ಟಣದ ಬಸ್ ನಿಲ್ದಾಣ, ಬಸವೇಶ್ವರ ವೃತ್ತ, ಕೃಷಿ ಉತ್ಪನ್ನ ಮಾರುಕಟ್ಟೆ ಹಾಗೂ ದೇವಿ ದೇವಾಲಯದ ಬಳಿ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಸ್ಥಾಪಿಸಲಾಗಿದೆ. ಶುರುವಾದ ಕೆಲ ಸಮಯ ಶುದ್ಧವಾಗಿಯೇ ನಡೆದ ಈ ಘಟಕ ಕ್ರಮೇಣ ನೀರು ಕೊಡುವ ಕೆಲಸ ನಿಲ್ಲಿಸಿದೆ. ಆಗಾಗ, ಈ ಘಟಕವನ್ನು ದುರಸ್ಥಿ ಮಾಡಿದರೂ ಜನರ ನಿರೀಕ್ಷೆಗೆ ಅನುಗುಣವಾಗಿ ನೀರು ಸಿಗುತ್ತಿಲ್ಲ. ಯಲ್ಲಾಪುರದ ಜಾತ್ರೆ ಹಿನ್ನಲೆ ಈ ದಿನ ಪಟ್ಟಣದ ಜನ ಹೊರ ಮಂಗಳವಾರ ಆಚರಣೆಗಾಗಿ ವಿವಿಧ ಕಡೆ ತೆರಳುತ್ತಿದ್ದು, 1ರೂಪಾಯಿಗೆ 5 ಲೀಟರ್ ನೀರು ಸಿಗಬೇಕಾದ ಘಟಕ ಹಾಳಾದ ಕಾರಣ ದುಬಾರಿ ದುಡ್ಡು ಕೊಟ್ಟು ಬಾಟಲಿ ನೀರು ಖರೀದಿಸಿದ್ದಾರೆ. ಕುಡಿಯುವ ನೀರಿನ ಘಟಕದ ಅವ್ಯವಸ್ಥೆಯ ಬಗ್ಗೆ ಪಟ್ಟಣ ಪಂಚಾಯತ ಮಾಜಿ ಸದಸ್ಯ ಸೋಮೇಶ್ವರ ನಾಯ್ಕ ಅಸಮಧಾನವ್ಯಕ್ತಪಡಿಸಿದ್ದು, ಅಧಿಕಾರಿಗಳನ್ನು ಪ್ರಶ್ನಿಸಿದ ನಂತರ ಬಸ್ ನಿಲ್ದಾಣದ ಘಟಕ ದುರಸ್ಥಿ ಆಗಿದೆ. ಆದರೆ, ಆ ಘಟಕ ಸಹ ಕೊಟ್ಟ ಕಾಸಿಗೆ ತಕ್ಕಂತೆ ನೀರು ಪೂರೈಸಿಲ್ಲ. 1 ರೂಪಾಯಿಗೆ 5 ಲೀಟರ್ ನೀರು ಒದಗಿಸುವ ಬದಲು ಒಂದೇ ಲೀಟರ್ ನೀರು ನೀಡುತ್ತಿದ್ದು, ಪಟ್ಟಣ ಪಂಚಾಯತದ ನೀರಿನ ವ್ಯಾಪಾರದಲ್ಲಿಯೂ ನಗರದ ಜನರಿಗೆ ಅನ್ಯಾಯವಾಗಿದೆ. 5-10 ಲೀಟರ್ ನೀರಿನ ಕ್ಯಾನು ತಂದವರು ಆ ಕ್ಯಾನು ಭರ್ತಿಯಾಗುವಷ್ಟು ಪ್ರಮಾಣದಲ್ಲಿ ನೀರು ಸಿಗದೇ ಸಮಸ್ಯೆ ಅನುಭವಿಸಿದ್ದಾರೆ. `ಪಟ್ಟಣ ಪಂಚಾಯತದಲ್ಲಿ ದುಡ್ಡು ಕೊಟ್ಟರೆ ಮಾತ್ರ ಕೆಲಸ ಆಗುತ್ತದೆ. ಶುದ್ಧ ನೀರಿನ ಘಟಕದಲ್ಲಿಯೂ ಹಾಗೇ ಆಗಿದ್ದು, ಮುಂದಿನ ಹೊರ ಮಂಗಳವಾರದ ಒಳಗೆ ಅವ್ಯವಸ್ಥೆ ಸರಿಪಡಿಸಬೇಕು. ಜಾತ್ರೆಯ ಅವಧಿಯಲ್ಲಿ ಜನರಿಗೆ ಸಮಸ್ಯೆ ಆಗದ ಹಾಗೇ ಎಚ್ಚರಿಕೆವಹಿಸಬೇಕು’ ಎಂದು ಸೋಮೇಶ್ವರ ನಾಯ್ಕ ಅವರು ಆಗ್ರಹಿಸಿದ್ದಾರೆ. ದೀಪಕ ನಾಯ್ಕ ಹಾಗೂ ಹನುಮಂತ ಕಾಳಮ್ಮನಗರ ಅವರು ತಮಗಾದ ಸಮಸ್ಯೆ ವಿವರಿಸಿದ್ದಾರೆ. - [ಆಲೆಮನೆ ಉತ್ಸವದಲ್ಲಿ ಪುಂಡ-ಪೋಕರಿಗಳ ಹಾವಳಿ!](https://mobiletime.in/2026/01/a-plague-of-hooligans-at-the-alemane-festival/): ಶಿರಸಿಯ ವಿಕಾಸಾಶ್ರಮ ಮೈದಾನದಲ್ಲಿ ಆಲೆಮನೆ ಉತ್ಸವ ನಡೆಯುತ್ತಿದ್ದು, ಈ ಬಾರಿ ಪುಂಡ-ಪೋಕರಿಗಳ ಹಾವಳಿ ಜೋರಾಗಿದೆ. ಆಲೆಮನೆಗೆ ಬರುವ ಯುವತಿಯರನ್ನು ಚುಡಾಯಿಸುವುದಕ್ಕಾಗಿಯೇ ಕೆಲ ಗುಂಪುಗಳು ಲಗ್ಗೆಯಿಟ್ಟಿದ್ದು, ಇಲ್ಲಿರುವ ಪುಂಡರ ಕಾಟಕ್ಕೆ ಮಹಿಳೆಯರು ಬೇಸತ್ತಿದ್ದಾರೆ. ಕಳೆದ ನಾಲ್ಕು ವರ್ಷಗಳಿಂದ ರೋಟರಿ ಆಲೆಮನೆ ಉತ್ಸವ ಅಚ್ಚುಕಟ್ಟಾಗಿ ನಡೆಯುತ್ತಿದೆ. ಹೀಗಾಗಿ ಆ ಉತ್ಸವಕ್ಕೆ ಅಪಾರ ಜನ ಮನ್ನಣೆಯೂ ಸಿಕ್ಕಿದೆ. ನಗರದಲ್ಲಿ ಹಳ್ಳಿಯ ವಾತಾವರಣ ಸೃಷ್ಠಿಸುವ ಕಾರ್ಯ ರೋಟರಿ ಸಂಸ್ಥೆಯಿoದ ನಡೆದಿದೆ. ಆದರೆ, ಈ ಬಾರಿ ಅನೇಕ ಲೋಪಗಳಾಗಿದ್ದು, ಆ ಲೋಪಗಳನ್ನು ಪಡ್ಡೆ ಹುಡುಗರು ದುರುಪಯೋಗಪಡಿಸಿಕೊಂಡಿದ್ದಾರೆ. ಈ ಬಾರಿಯೂ ಜನ ಪ್ರವೇಶ ಶುಲ್ಕ ಪಾವತಿಸಿ ಜನ ಆಲೆಮನೆ ಉತ್ಸವಕ್ಕೆ ಬಂದಿದ್ದಾರೆ. ಕಬ್ಬಿನ ಹಾಲಿನ ಜೊತೆ ಅಲ್ಲಿನ ಮನರಂಜನಾ ಕಾರ್ಯಕ್ರಮವನ್ನು ಆಹ್ವಾದಿಸುತ್ತಿದ್ದಾರೆ. ಸ್ಥಳೀಯ ಪ್ರತಿಭೆಗಳಿಗೆ ಹೆಚ್ಚಿನ ಅವಕಾಶ ಕೊಟ್ಟಿರುವ ಕಾರಣ ವೇದಿಕೆಯಲ್ಲಿನ ಕಲಾವಿದರ ಜೊತೆ ಅವರ ಬಂಧು-ಮಿತ್ರರು ಸಹ ಕಾರ್ಯಕ್ರಮಕ್ಕೆ ಆಗಮಿಸಿದ್ದು, ಮಹಿಳೆಯರನ್ನೇ ಗುರಿಯಾಗಿರಿಸಿಕೊಂಡು ಹಿಂಸೆ ನೀಡುವ ಕೆಲಸ ಅಲ್ಲಿ ನಡೆಯುತ್ತಿದೆ. ಕಿಡಿಗೇಡಿಗಳ ಕಾಟಕ್ಕೆ ಬೇಸತ್ತ ಜನ ಅಸಮಧಾನವ್ಯಕ್ತಪಡಿಸಿದ್ದಾರೆ. ಉತ್ಸವಕ್ಕೆ ಅಗತ್ಯ ಭದ್ರತಾ ವ್ಯವಸ್ಥೆ ಕಾಣಲಿಲ್ಲ. ಆರಂಭದಲ್ಲಿ ಜನ ಕೊರತೆ ಎದ್ದು ತೋರಿದರೂ ಶನಿವಾರ ಹಾಗೂ ಭಾನುವಾರ ಅನೇಕರಿಗೆ ಸ್ಥಳಾವಕಾಶ ಸಿಗಲಿಲ್ಲ. ವೇದಿಕೆಯಲ್ಲಿ ಕಾರ್ಯಕ್ರಮ ನಡೆಯುವಾಗಲೇ ಕಿಡಿಗೇಡಿಗಳು ಮಹಿಳೆಯೊಬ್ಬರ ಮೈ ಮುಟ್ಟಿದ ಪ್ರಕರಣವೂ ನಡೆದಿದ್ದು, ಅಂಥಹುದನ್ನು ತಡೆಯಲು ಉತ್ಸವದ ಪ್ರವೇಶ ದ್ವಾರದಲ್ಲಿ ಇಬ್ಬರು ವಾಚಮೆನ್ ಹೊರತುಪಡಿಸಿ ಬೇರೆ ಭದ್ರತಾ ಸಿಬ್ಬಂದಿ ಕಾಣಲಿಲ್ಲ. ಪೊಲೀಸರು ಇಲ್ಲದಿರುವುದನ್ನು ಗಮನಿಸಿದ ಪುಂಡರು ನಿತ್ಯವೂ ಮಹಿಳೆಯರನ್ನು ಪೀಡಿಸುತ್ತಿದ್ದು, ಯುವತಿಯನ್ನು ಚುಡಾಯಿಸುವವರ ಸಂಖ್ಯೆ ಕಡಿಮೆಯಿರಲಿಲ್ಲ. ಉತ್ಸವ ನಡೆಯುವ ಸ್ಥಳದಲ್ಲಿ ಪುಂಡರ ಹಾವಳಿ ಬಗ್ಗೆ ಸಂತ್ರಸ್ತೆ ತಮ್ಮ ಸ್ನೇಹಿತರಿಗೆ ತಿಳಿಸಿದ್ದು, ಉತ್ಸವ ಮುಗಿದ ನಂತರ ಪುಂಡರ ಮೇಲೆ ಕೆಲವರು ಕೈ ಮಾಡಿದ್ದಾರೆ. ಈ ವೇಳೆ ಆ ಪಡ್ಡೆ ಹುಡುಗರು ಸಹ ಗಲಾಟೆ ಮಾಡಿದ್ದು, ಉತ್ಸವದ ಪ್ರವೇಶ ದ್ವಾರದ ಎದುರೇ ಮಾರಾಮಾರಿ ನಡೆದರೂ ಆಯೋಜಕರು ಅದನ್ನು ಪ್ರಶ್ನಿಸಿಲ್ಲ. ತಡೆಯುವ ಪ್ರಯತ್ನವನ್ನು ಮಾಡಿಲ್ಲ. ಇನ್ನೂ ಈ ವರ್ಷದ ಆಲೆಮನೆ ಉತ್ಸವದಲ್ಲಿ ಮೊದಲಿನ ಅಚ್ಚುಕಟ್ಟಾದ ವ್ಯವಸ್ಥೆ ಕಾಣಲಿಲ್ಲ. ಉತ್ಸವಕ್ಕೆ ಬಂದ ಸಾರ್ವಜನಿಕರು ವಿಕಾಸಾಶ್ರಮದ ಎದುರಿನ ಹೆದ್ದಾರಿಯಲ್ಲೇ ಸಾಲಾಗಿ ವಾಹನಗಳನ್ನು ನಿಲ್ಲಿಸಿದ್ದು, ಇದರಿಂದ ಸಂಚಾರ ಸಮಸ್ಯೆಯಾಯಿತು. ಎಲ್ಲೆಂದರಲ್ಲಿ ವಾಹನ ನಿಲ್ಲಿಸಿದ್ದರಿಂದ ನಗರಸಭೆ ಸಿಬ್ಬಂದಿಯೂ ಪರದಾಡಿದರು. ಜೊತೆಗೆ ಪದೇ ಪದೆ ಮೈಕ್‌ನಲ್ಲಿ `ಇಂಥ ವಾಹನ ರಸ್ತೆಗೆ ಅಡ್ಡಲಾಗಿದ್ದು, ಕೂಡಲೇ ತೆರವು ಮಾಡಿ’ ಎನ್ನುವ ಸಂದೇಶ ಜನರಿಗೆ ಬೇಸರ ತರಿಸಿತು. - [ವಿಭೂತಿ ಜಲಪಾತ: ನೀರಿನಲ್ಲಿ ಮುಳುಗಿದವನಿಗೆ ಮರುಜೀವ!](https://mobiletime.in/2026/01/vibhuti-falls-drowned-man-brought-back-to-life/): ವಿಭೂತಿ ಜಲಪಾತದ ನೀರಿಗೆ ಬಿದ್ದಿದ್ದ ಪ್ರವಾಸಿಗರೊಬ್ಬರು ನೀರಿನ ಆಳಕ್ಕೆ ತಲುಪಿದ್ದು, ಅಲ್ಲಿನ ರಕ್ಷಣಾ ಸಿಬ್ಬಂದಿಯ ಸಮಯ ಪ್ರಜ್ಞೆಯಿಂದ ಬದುಕುಳಿದಿದ್ದಾರೆ. ಶಿರಸಿ-ಯಲ್ಲಾಪುರ-ಅಂಕೋಲಾ ಗಡಿ ಪ್ರದೇಶದ ವಿಭೂತಿ ಜಲಪಾತಕ್ಕೆ ಸೋಮವಾರ ಬರಪೂರ ಜನ ಬಂದಿದ್ದರು. ಅದರಂತೆ, ತಮಿಳುನಾಡಿನ ಆದಿತ್ಯೆ (19) ಅವರು ಸಹ ಜಲಪಾತ ನೋಡಲು ಸಮೀಪ ಹೋಗಿದ್ದರು. 40 ಜನರ ಜೊತೆ ಬಂದಿದ್ದ ಆದಿತ್ಯೆ ಅವರು ಎಲ್ಲರಿಗಿಂತ ಮುಂದೆ ಹೋಗಿ ಅಪಾಯಕ್ಕೆ ಸಿಲುಕಿದ್ದರು. ನೀರಿಗೆ ಹಾರಿ ಮುಳುಗುತ್ತಿದ್ದ ಅವರನ್ನು ಅಲ್ಲಿಯೇ ಇದ್ದ ಜೀರಕ್ಷಕ ಸಿಬ್ಬಂದಿ ವಿಜಯಕುಮಾರ ನಾಯಕ ಅವರು ನೋಡಿದರು. ತಕ್ಷಣ ತಮ್ಮ ಕೈಯಲ್ಲಿದ್ದ ಹಗ್ಗವನ್ನು ಹಳ್ಳಕ್ಕೆ ಎಸೆದ ಅವರು ಪ್ರವಾಸಿಗನ ರಕ್ಷಣೆಗೆ ಪ್ರಮುಖ ಪಾತ್ರವಹಿಸಿದರು. ಆ ಹಗ್ಗದ ಸಹಾಯದಿಂದ ಆದಿತ್ಯೆ ಅವರು ದಡ ತಲುಪಿದ್ದು, ತಮ್ಮ ಜೀವ ಉಳಿಸಿಕೊಂಡರು. `ಅಪಾಯಕಾರಿ ಸ್ಥಳಗಳಿಗೆ ಹೋಗಬೇಡಿ’ - [ಬೊಮ್ಮಾಯಿ: ತಲೆಯಲ್ಲಿ ಕೂದಲು ಮಾತ್ರ ಅಲ್ಲ.. ಬುದ್ದಿಯೂ ಇಲ್ಲ!](https://mobiletime.in/2026/01/bommai-not-only-is-there-no-hair-on-the-head-there-is-no-brain-either/): ಉತ್ತರ ಕನ್ನಡ ಜಿಲ್ಲೆಯ ಜೀವನಾಡಿಯಾಗಿರುವ ನದಿಗಳ ಮೇಲೆ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೆಟ್ಟದೃಷ್ಠಿ ಬೀರಿದ್ದಾರೆ. ಸಂಸದರಾಗಿರುವ ಅವರು ನದಿ ತಿರುವು ಯೋಜನೆ ಪರವಾಗಿ ಭಾಷಣ ಮಾಡಿದ್ದು, `ನಿಸರ್ಗ ಕೊಟ್ಟ ನದಿ ಒಂದು ಜಿಲ್ಲೆಗೆ ಮಾತ್ರ ಸೀಮಿತವಲ್ಲ’ ಎಂದು ಮೂರ್ಖತನದ ಮಾತನಾಡಿದ್ದಾರೆ. `ನದಿ ಉಳಿಸಿ’ ಅಭಿಯಾನದ ಅಂಗವಾಗಿ ಉತ್ತರ ಕನ್ನಡ ಜಿಲ್ಲೆಯಲ್ಲಿ ನಡೆದ ಅಭಿಯಾನಕ್ಕೆ ಪ್ರತಿಯಾಗಿ ಬಸವರಾಜ ಬೊಮ್ಮಾಯಿ ಅವರು ಹಾವೇರಿಯ ಹುಕ್ಕೇರಿಮಠದಲ್ಲಿ ಸಮಾವೇಶ ಮಾಡಿದ್ದಾರೆ. ಆ ಸಮಾವೇಶದಲ್ಲಿ `ಬೆಡ್ತಿ ವರದಾ ನದಿ ಜೋಡಣೆ ಯೋಜನೆ ನಮ್ಮ ಬದುಕಿನ ಪ್ರಶ್ನೆ’ ಎಂದು ಭಾಷಣ ಮಾಡಿದ್ದಾರೆ. ಆ ಭಾಗದ ಸರ್ವ ಪಕ್ಷದ ನಾಯಕರು ಸಭೆಗೆ ಆಗಮಿಸಿ ಚಪ್ಪಾಳೆ ಹೊಡೆದಿದ್ದಾರೆ. `ನಿಸರ್ಗ ತನ್ನದೇ ಆದ ರೀತಿಯಲ್ಲಿ ಸಮತೋಲನ ಕಾಯ್ದುಕೊಳ್ಳುತ್ತದೆ. ಆ ನದಿಯ ನೀರು ಅವರು ಇಟ್ಟಕೊಳ್ಳಲು ಸಾಧ್ಯವೂ ಇಲ್ಲ. ಪೂರ್ಣ ಬಳಕೆ ಮಾಡಲು ಅಸಾಧ್ಯ. ನದಿ ತುಂಬಿ ಹರಿಯುವಾಗ ಒಂದು ಕೊಡಪಾನ ನೀರು ತೆಗೆದರೆ ಏನೂ ಆಗುವುದಿಲ್ಲ. ನದಿ ಜೋಡಣೆಯಿಂದ ಪರಿಸರಕ್ಕೆ ಹಾನಿ ಆಗುವುದಿಲ್ಲ. ಅಲ್ಪ ಪ್ರಮಾಣದಲ್ಲಿ ಹಾನಿ ಆದರೂ ಅದಕ್ಕೆ ಪಯಾರ್ಯ ವ್ಯವಸ್ಥೆ ಮಾಡುತ್ತೇವೆ’ ಎಂದು ಬೊಮ್ಮಾಯಿ ಭಾಷಣದಲ್ಲಿ ಹೇಳಿದ್ದಾರೆ. ವಿವಿಧ ಮಠಾಧೀಶರ ಬೆಂಬಲಪಡೆದ ಬೊಮ್ಮಾಯಿ ಭಾವನಾತ್ಮಕವಾಗಿ ಜನರ ದಿಕ್ಕು ತಪ್ಪಿಸುವ ಕೆಲಸ ಶುರು ಮಾಡಿದ್ದಾರೆ. `ಎರಡು ಕಡೆಯಿಂದ ನೀರು ತೆಗೆದಾಗ ಡ್ಯಾಮ್ ಬದಲು ಬ್ಯಾರೆಜ್ ಕಟ್ಟುತ್ತೇವೆ. ನದಿ ಪಾತ್ರದ ಹೊರಗಡೆಯಿಂದ ನದಿ ನೀರನ್ನು ಲಿಪ್ಟ್ ಮಾಡುವ ವ್ಯವಸ್ಥೆ ಮಾಡುತ್ತೇವೆ. ನದಿ ಪಾತ್ರದ ಜನರ ಜೀವಕ್ಕೆ ಸಮಸ್ಯೆ ಆಗದ ಹಾಗೇ ನೋಡಿಕೊಳ್ಳುತ್ತೇವೆ. ನಿಮ್ಮೂರಿನ ಮುಂದಿನ ಭವಿಷ್ಯ ತೀರ್ಮಾನ ಮಾಡುವುದು ಬೆಡ್ತಿ ವರದಾ ನದಿ ಜೋಡಣೆಯಿಂದ ಮಾತ್ರ ಸಾಧ್ಯ’ ಎಂದು ಹೇಳಿದ್ದಾರೆ. `ನದಿ ತಿರುವು ಯೋಜನೆಗೆ ಈಗಾಗಲೇ ಕೇಂದ್ರ ಸರ್ಕಾರ ಒಪ್ಪಿದೆ. ಈಗ ಡಿಪಿಆರ್ ಮಾಡಲು ಎಂಒಯು ಸೈನ್ ಆಗಿದೆ. ಅವರು ವಿರೋಧ ಮಾಡಿದ ಮಾತ್ರಕ್ಕೆ ನಾವು ವಿರೋಧ ಮಾಡಲು ಸಾಧ್ಯವಿಲ್ಲ. ನದಿ ತಿರುವಿನ ನೀರು ನಮ್ಮ ಬದುಕಿನ ಪ್ರಶ್ನೆ’ ಎಂದು ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. `ಈ ಯೋಜನೆ ನಮ್ಮ ಬದುಕಿನ ಹೋರಾಟವಾಗಿದ್ದು, 25 ವರ್ಷಗಳಿಂದ ಪ್ರಯತ್ನ ನಡೆದಿದೆ. ನಮಗೆ ಎಷ್ಟು ನೀರು ಬೇಕು ಅದನ್ನು ನಾವುಪಡೆಯಬೇಕು. ಅದಕ್ಕಾಗಿ ಇನ್ನಷ್ಟು ಹೋರಾಟ ನಡೆಸಬೇಕು. ಈ ಬಗ್ಗೆ ಜನ ಜಾಗೃತಿ ಅಗತ್ಯ’ ಎಂದೂ ಹೇಳಿದ್ದಾರೆ. `ಸುಧೀರ್ಘ ಹೋರಾಟಕ್ಕೆ ಜನ ಸೇರಬೇಕು. ಬೇಸರ ಮಾಡಿಕೊಳ್ಳದೇ ಹೋರಾಟಕ್ಕೆ ಬರಬೇಕು. ನಮ್ಮ ಪ್ರಯತ್ನದಲ್ಲಿ ಸ್ವಲ್ಪ ಹೆಚ್ಚು-ಕಡಿಮೆ ಆದರೂ ಸಮಸ್ಯೆ ಆಗಲಿದ್ದು, ಸಮಸ್ಯೆ ತಡೆಯಲು ತಕಬದ್ಧವಾಗಿ ಕೆಲಸ ಮಾಡಿ ಜಯಗಳಿಸಬೇಕು’ ಎಂದು ಹಾವೇರಿ ಜನರನ್ನು ಹೋರಾಟಕ್ಕೆ ಬರುವಂತೆ ಪ್ರೇರೇಪಿಸಿದ್ದಾರೆ. `ನೀರಾವರಿ ಯೋಜನೆಗೆ ಸಾಕಷ್ಟು ಅಡೆತಡೆಗಳಿರುತ್ತವೆ. ಅದನ್ನು ಮೀರಿ ಹೋರಾಟ ನಡೆಸಬೇಕು’ ಎಂದವರು ಹೇಳಿದ್ದಾರೆ. - [ಕಾರವಾರ ಕೋರ್ಟಿಗೆ ಇಮೇಲ್ ಬಾಂಬ್!](https://mobiletime.in/2026/02/email-bomb-sent-to-karwar-court/): ಕಾರವಾರದ ಕೋರ್ಟನ್ನು ಸ್ಪೋಟಿಸುವುದಾಗಿ ವ್ಯಕ್ತಿಯೊಬ್ಬರು ಬೆದರಿಕೆ ಒಡ್ಡಿದ್ದಾರೆ. ಇಮೇಲ್ ಮೂಲಕ ಈ ಬೆದರಿಕೆ ಬಂದಿದೆ. ಸದ್ಯ ಕಾರವಾರ ಕೋರ್ಟಿನಲ್ಲಿ ಕಟ್ಟೆಚ್ಚರವಹಿಸಲಾಗಿದೆ. ಪೊಲೀಸರು ಕೋರ್ಟಿನ ಮೂಲೆ ಮೂಲೆಯನ್ನು ಶೋಧ ಮಾಡಿದ್ದಾರೆ. ಈ ವೇಳೆ ಎಲ್ಲಿಯೂ ಬಾಂಬ್ ಕಾಣಿಸಿಲ್ಲ. ಕಾರವಾರ ನಗರದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಆಡಳಿತ ಕಚೇರಿಯ ಕಂಪ್ಯೂಟರ್ ವಿಭಾಗಕ್ಕೆ ಬೆಳಗ್ಗೆ 8.25ಕ್ಕೆ ಬಾಂಬ್ ಬೆದರಿಕೆಯ ಇಮೇಲ್ ಬಂದಿದೆ. `ಕೋರ್ಟಿನಲ್ಲಿರುವ ಎಲ್ಲರನ್ನು 12.15ರ ಒಳಗೆ ಸ್ಥಳಾಂತರಿಸಬೇಕು’ ಎಂಬ ಸೂಚನೆಯೂ ಆ ಬೆದರಿಕೆಯ ಸಂದೇಶದಲ್ಲಿದೆ. ಇದರೊAದಿಗೆ ವಿವಿಧ ರಾಜಕೀಯ ವಿಷಯ, ಮಾಧ್ಯಮಗಳ ನಿರ್ವಹಣೆ ಸೇರಿ ಇನ್ನಿತರ ವಿಷಯಗಳ ಬಗ್ಗೆ ಇಮೇಲ್ ಮೂಲಕ ಬರೆಯಲಾಗಿದೆ. ಬಾಂಬ್ ಬೆದರಿಕೆ ಹಿನ್ನಲೆ ಕೋರ್ಟಿನ ಕಲಾಪವನ್ನು ಕೆಲ ಕಾಲ ಮುಂದೂಡಲಾಗಿದ್ದು, ಆವರಣದಲ್ಲಿ ಆತಂಕದ ವಾತಾವರಣ ಕಾಣಿಸಿತು. ವಿವಿಧ ವ್ಯಕ್ತಿಗಳ ಹೆಸರು ಹಾಗೂ ಕೆಲ ಆರೋಪಗಳು ಇಮೇಲ್ ಸಂದೇಶದಲ್ಲಿದ್ದವು. ಆ ಎಲ್ಲಾ ವಿಷಯದ ಬಗ್ಗೆ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಕೋರ್ಟ ಆವರಣಕ್ಕೆ ಪೊಲೀಸರು ಹಾಗೂ ಭದ್ರತಾ ಸಿಬ್ಬಂದಿ ಆಗಮಿಸಿದ್ದು, ನ್ಯಾಯಾಲಯದಲ್ಲಿದ್ದ ಎಲ್ಲರನ್ನು ಹೊರಕ್ಕೆ ಕಳುಹಿಸಿದರು. ಯಾವುದೇ ಬಾಂಬ್ ಪತ್ತೆಯಾಗದ ಹಿನ್ನಲೆ ಎಲ್ಲರೂ ನಿರಾಳರಾದರು. - [ದಂಪತಿ ಮರಣಕ್ಕೆ ಇಲಿ ಪಾಷಣ ಕಾರಣ!](https://mobiletime.in/2026/02/rat-poison-is-the-cause-of-death-of-a-young-couple/): ವಾರದ ಹಿಂದೆ ವಿಷ ಸೇವಿಸಿದ್ದ ಯಲ್ಲಾಪುರದ ಉಮ್ಮಚ್ಗಿಯ ನಾಗೇಂದ್ರ ಬೋವಿವಡ್ಡರ್ ಹಾಗೂ ನಮಿತಾ ಬೋವಿವಡ್ಡರ್ ದಂಪತಿ ಸಾವನಪ್ಪಿದ್ದಾರೆ. ಮೂರು ದಿನದ ಹಿಂದೆ ನಾಗೇಂದ್ರ ಬೋವಿವಡ್ಡರ್ ಅವರು ಕೊನೆಯುಸಿರೆಳೆದಿದ್ದು, ನಿನ್ನೆ ನಮಿತಾ ಬೋವಿವಡ್ಡರ್ ಅವರು ಸಹ ಉಸಿರಾಟ ನಿಲ್ಲಿಸಿದ್ದಾರೆ. ಯಲ್ಲಾಪುರದ ಉಮ್ಮಚ್ಗಿ ಬಳಿಯ ಸಂಕದಗುoಡಿಯಲ್ಲಿ ನಾಗೇಂದ್ರ ಬೋವಿವಡ್ಡರ್ (28) ಹಾಗೂ ನಮಿತಾ ಬೋವಿವಡ್ಡರ್ (26) ಅವರು ವಾಸವಾಗಿದ್ದರು. ಫೆಬ್ರವರಿ 7ರಂದು ಈ ದಂಪತಿ ಇಲಿ ಪಾಷಣ ಸೇವಿಸಿದ್ದರು. ವಿಷ ಸೇವಿಸಿ ಅಸ್ವಸ್ಥಗೊಂಡ ಅವರನ್ನು ಮೊದಲು ಟಿಎಸ್‌ಎಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಂತರ ಅವರನ್ನು ದೇರಳಕಟ್ಟೆಯ ಏನೋಪೇಯಾ ಆಸ್ಪತ್ರೆಗೆ ಕಳುಹಿಸಿ ಆರೈಕೆ ಮಾಡಲಾಯಿತು. ಆದರೆ, ಮೂರು ದಿನಗಳ ಹಿಂದೆ ನಾಗೇಂದ್ರ ಬೋವಿವಡ್ಡರ್ ಅವರು ಸಾವನಪ್ಪಿದ್ದು, ಅದಾದ ನಂತರ ನಮಿತಾ ಬೋವಿವಡ್ಡರ್ ಅವರನ್ನು ಹುಬ್ಬಳ್ಳಿಯ ಕಿಮ್ಸ್’ಗೆ ಸಾಗಿಸಿ ಚಿಕಿತ್ಸೆ ಕೊಡಿಸಲಾಯಿತು. ಆದರೆ, ಅಲ್ಲಿಯೂ ನಮಿತಾ ಬೋವಿವಡ್ಡರ್ ಅವರನ್ನು ಬದುಕಿಸಿಕೊಳ್ಳಲು ಸಾಧ್ಯವಾಗಲಿಲ್ಲ. ನಿರಂತರ ಆರೈಕೆ ಮಾಡಿದರೂ ಶನಿವಾರ ಮಧ್ಯಾಹ್ನದ ವೇಳೆಗೆ ನಮಿತಾ ಬೋವಿವಡ್ಡರ್ ಅವರು ಕೊನೆಯುಸಿರೆಳೆದರು. ಈ ದಂಪತಿ ಯಾವುದೋ ಒಂದು ಸಮಸ್ಯೆಯಿಂದ ಅವರು ಬಳಲುತ್ತಿದ್ದರು. ಆದರೆ, ಸಮಸ್ಯೆ ಯಾವುದು? ಎಂದು ಯಾರಿಗೂ ಗೊತ್ತಾಗಿರಲಿಲ್ಲ. ನಾಗೇಂದ್ರ ಬೋವಿವಡ್ಡರ್ ಅವರ ಸಾವಿನ ಬಗ್ಗೆ ಉಮ್ಮಚ್ಗಿಯ ಸಿವಿಲ್ ಗುತ್ತಿಗೆದಾರ ಗೋವಿಂದ ಬಸಾಪುರ ಅವರು ಪೊಲೀಸರಿಗೆ ವಿಷಯ ಮುಟ್ಟಿಸಿದ್ದು, ನಮಿತಾ ಬೋವಿವಡ್ಡರ್ ಅವರ ಸಾವಿನ ಬಗ್ಗೆ ಸೊರಬದಲ್ಲಿರುವ ಅವರ ಸಹೋದರ ನವೀನ ರೋಡಿಗ್ರಸ್ ಅವರು ಮಾಹಿತಿ ನೀಡಿದ್ದಾರೆ. ಜೀವನದಲ್ಲಿ ಜಿಗುಪ್ಸೆ ಹೊಂದಿ ದಂಪತಿ ಆತ್ಮಹತ್ಯೆಗೆ ಶರಣಾದ ಬಗ್ಗೆ ಯಲ್ಲಾಪುರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. `ಆತ್ಮಹತ್ಯೆ ಮಹಾ ಅಪರಾಧ’ - [ವಾದದಿಂದ ವಾಗ್ವಾದ-ಹೊಡೆದಾಟ: ಹಳೆ ಪ್ರಕರಣಕ್ಕೆ ಹೊಸ ಸ್ವರೂಪ!](https://mobiletime.in/2026/02/argument-turns-into-a-fight-a-new-twist-to-an-old-case/): ನಾಲ್ಕು ತಿಂಗಳ ಹಿಂದೆ ಶಿರಸಿಯಲ್ಲಿ ವಕೀಲರ ನಡುವೆ ನಡೆದಿದ್ದ ಹೊಡೆದಾಟ ಪ್ರಕರಣಕ್ಕೆ ದಾಖಲಾದ ಪೊಲೀಸ್ ದೂರುಗಳಿಗೆ ಹೈಕೋರ್ಟ ತಾತ್ಕಾಲಿಕ ತಡೆಯಾಜ್ಞೆ ನೀಡಿದೆ. ಇದರ ಬೆನ್ನಲ್ಲೆ ಮತ್ತೆ ಎರಡು ಪ್ರಕರಣಗಳು ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ! 2025ರ ನವೆಂಬರ್ 11ರಂದು ಶಿರಸಿಯಲ್ಲಿ ವಕೀಲರ ಸಭೆಯಲ್ಲಿ ನಡೆದ ಹೋಡೆದಾಟ ನಡೆದಿತ್ತು. ಅಧಿಕಾರ ಅವಧಿ ಮುಗಿದರೂ ಆಗದ ಹೊಸ ನೇಮಕಾತಿ, ಸದಸ್ಯತ್ವ ರದ್ಧತಿಯ ಬಗ್ಗೆ ಪ್ರಶ್ನೆ ಮಾಡಿದ್ದು ಸೇರಿ ವಿವಿಧ ವಿಷಯಗಳು ಹೊಡೆದಾಟಕ್ಕೆ ಕಾರಣವಾಗಿದ್ದವು. ಎರಡು ಬಣಗಳ ನಡುವೆ ನಡೆದ ವಾದ-ವಾಗ್ವಾದ ಗೊಂದಲ ಸೃಷ್ಠಿಸಿತ್ತು. ಈ ವಿಷಯವಾಗಿ ಶಿರಸಿ ಮಾರುಕಟ್ಟೆ ಪೊಲೀಸ್ ಠಾಣೆಯಲ್ಲಿ ವಿವಿಧ ದೂರುಗಳು ದಾಖಲಾಗಿದ್ದವು. ಜಾತಿ ನಿಂದನೆ, ಹಲ್ಲೆ ಹಾಗೂ ಮಹಿಳೆಯ ಮೈ ಮುಟ್ಟಿದ ಬಗ್ಗೆ ದೂರಿನ ಆರೋಪಗಳಿದ್ದು, ಆ ಎಲ್ಲಾ ಪ್ರಕರಣಗಳಿಗೂ ಹೈಕೋರ್ಟ ತಡೆಯಾಜ್ಞೆ ನೀಡಿದೆ. ಸದ್ಯ ಇದೇ ವಿಷಯದ ಮುಂದುವರೆದ ಭಾಗವಾಗಿ ಮತ್ತೆರಡು ಪೊಲೀಸ್ ಕೇಸ್ ದಾಖಲಾಗಿದೆ! ವಕೀಲ ಆರ್ ಎಸ್ ಹೊಸೂರು ಅವರು ಶಿರಸಿ ಮಾರುಕಟ್ಟೆ ಪೊಲೀಸ್ ಠಾಣೆಗೆ ತೆರಳಿ ಆ ದಿನ ನಡೆದ ಕಹಿ ಘಟನೆಗಳ ಬಗ್ಗೆ ವಿವರಿಸಿದ್ದಾರೆ. ಮರಾಠಿಕೊಪ್ಪದ ವಕೀಲ ಸಿ ಎಫ್ ಈರೇಶ್, ಸಿದ್ದಾಪುರದ ವಕೀಲ ಮಂಜುನಾಥ ನಾಯ್ಕ, ಶಿರಸಿ ಆಳ್ಮನೆಯ ವಕೀಲ ವಿ ಎಂ ಹೆಗಡೆ, ರಾಮನಬೈಲಿನ ವಕೀಲ ರಾಜೀವ ರೇವಣಕರ್ ಅವರ ವಿರುದ್ಧ ಆರ್ ಎಸ್ ಹೊಸೂರು ಅವರು ಆರೋಪ ಮಾಡಿದ್ದಾರೆ. `ಸಂಘದ ಚುನಾವಣೆಯಲ್ಲಿ ತಮಗೆ ಸಹಕರಿಸಿಲ್ಲ ಎಂಬ ಕಾರಣಕ್ಕೆ ಮಾಜಿ ಅಧ್ಯಕ್ಷ ಸಿ ಎಫ್ ಈರೇಶ್ ಅವರು ದ್ವೇಷದಿಂದ ಇದ್ದರು. ಆ ದಿನ 80ಕ್ಕೂ ಅಧಿಕ ಸದಸ್ಯರಿದ್ದರೂ ಸಹ ಅವರು ಸಂಘದ ಸಭೆ ಮುಂದೂಡಿರುವುದಾಗಿ ವೇದಿಕೆ ಮೇಲೆ ಘೋಷಿಸಿದರು. ಆ ವೇಳೆ ಅದನ್ನು ರಾಜೇಶ್ ಶೆಟ್ಟಿ ಅವರು ಪ್ರಶ್ನಿಸಿದ್ದು, ಎದುರುದಾರರಾದ ನಾಲ್ಕು ವಕೀಲರು ಸೇರಿ ಗಲಾಟೆ ಶುರು ಮಾಡಿದರು’ ಎಂದು ಆರ್ ಎಸ್ ಹೊಸೂರು ಅವರು ಹೇಳಿದ್ದಾರೆ. `ಈ ವೇಳೆ ಸಮಾಧಾನ ಮಾಡಲು ಮುಂದಾದ ತಮಗೂ ಆ ನಾಲ್ವರು ವಕೀಲರು ಕುತ್ತಿಗೆ ಹಿಡಿದು ಕೊಲೆ ಪ್ರಯತ್ನ ಮಾಡಿದ್ದಾರೆ. ರಿಟ್ ಪಿಟಿಶನ್ ಹಾಕಿದನ್ನು ಪ್ರಶ್ನಿಸಿ ಬೈದಿದ್ದಾರೆ. ಇದರಿಂದ ತಮಗೆ ಹಾಗೂ ತಮ್ಮ ಕುಟುಂಬಕ್ಕೆ ಜೀವ ಬೆದರಿಕೆಯಿದೆ’ ಎಂದು ಆರ್ ಎಸ್ ಹೊಸೂರು ಅವರು ಪೊಲೀಸರ ಬಳಿ ವಿವರಿಸಿದ್ದಾರೆ. ಜೊತೆಗೆ ರಕ್ಷಣೆ ಕೋರುವಂತೆಯೂ ಮನವಿ ಮಾಡಿದ್ದಾರೆ. ಇದೇ ವಿಷಯವಾಗಿ ರಾಮನಬೈಲಿನ ವಕೀಲ ರಾಜೇಶ ವಿ ಶೆಟ್ಟಿ ಅವರು ಸಹ ಪೊಲೀಸರ ಬಳಿ ಇನ್ನಷ್ಟು ವಿಷಯ ಪ್ರಸ್ತಾಪಿಸಿದ್ದಾರೆ. ವಕೀಲರಾದ ಸಿ ಎಫ್ ಈರೇಶ್, ಮಂಜುನಾಥ ನಾಯ್ಕ, ವಿ ಎಂ ಹೆಗಡೆ ಹಾಗೂ ರಾಜೀವ ರೇವಣಕರ್ ಅವರ ವಿರುದ್ಧ ರಾಜೇಶ ಶೆಟ್ಟಿ ಅವರು ಆರೋಪ ಮಾಡಿದ್ದಾರೆ. `ಸಂಘದ ಸಭೆಯಲ್ಲಿ ಪ್ರಶ್ನಿಸಿದ ಕಾರಣ ನೀನು ಸಂಘದ ಸದಸ್ಯನಲ್ಲ ಎಂದು ವಕೀಲ ಸಿ ಎಫ್ ಈರೇಶ್ ಅವರು ಕೂಗಾಡಿದ್ದು, ನಾನು ಇನ್ನೂ ಒಂದು ಅವಧಿಗೆ ಅಧ್ಯಕ್ಷನಾಗಬೇಕಿದೆ. ಅದಕ್ಕೆ ಅವಕಾಶ ಕೊಡದೇ ನನ್ನ ವಿರುದ್ಧ ರಿಟ್ ಹೋಗುವಿರಾ?’ ಎಂದು ಪ್ರಶ್ನಿಸಿದ ಬಗ್ಗೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಸುಳ್ಳು ಕೇಸ್ ದಾಖಲಿಸುವುದಾಗಿ ಬೆದರಿಸಿ ಕುತ್ತಿಗೆ ಹಿಡಿದ ಬಗ್ಗೆಯೂ ವಿವರಿಸಿದ್ದು, ಆ ವೇಳೆ ಇನ್ನಿತರ ವಕೀಲರು ಹೊಡೆದಾಟ ಬಿಡಿಸಿರುವುದಾಗಿ ರಾಜೇಶ ಶೆಟ್ಟಿ ಅವರು ಹೇಳಿದ್ದಾರೆ. ಆ ದಿನ ನಡೆದಿದ್ದೇನು? ಆ ಸುದ್ದಿ ಇಲ್ಲಿ ಓದಿ: ವಾದದಿಂದ ವಾಗ್ವಾದ! ಶಿರಸಿ ಮಾರುಕಟ್ಟೆ ಠಾಣೆ ಪೊಲೀಸರು ಈ ಎರಡು ಪ್ರಕರಣ ದಾಖಲಿಸಿದ್ದು, ಸತ್ಯಾಸತ್ಯತೆಯ ಪರಿಶೀಲನೆ ಶುರು ಮಾಡಿದ್ದಾರೆ. - [ಮಹಿಳೆ ಆತ್ಮಹತ್ಯೆ](https://mobiletime.in/2026/02/despite-having-three-children-chakkanda-is-having-an-affair-with-a-third-man-suspicion-of-his-involvement-in-her-death/): ಭಟ್ಕಳದ ರೂಪಾ ಪೈ ಅವರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಭಟ್ಕಳ ಮಣ್ಕುಳಿಯ ನಾಗಯಕ್ಷೆ ದೇವಾಲಯದ ಬಳಿ ರೂಪಾ ಪೈ (36) ಅವರು ವಾಸವಾಗಿದ್ದರು. 16 ವರ್ಷಗಳ ಹಿಂದೆ ಅವರು ಪುಂಡ್ಲಿಕ್ ಪೈ ಅವರನ್ನು ಮದುವೆ ಆಗಿದ್ದರು. ರೂಪಾ ಪೈ ಅವರಿಗೆ ಮೂವರು ಮಕ್ಕಳು ಇದ್ದರು. ಮೂಡ ಭಟ್ಕಳದ ರವಿಚಂದ್ರ ನಾಯ್ಕ ಅವರು ರೂಪಾ ಪೈ ಅವರಿಗೆ ಪದೇ ಪದೇ ಫೋನ್ ಮಾಡುತ್ತಿದ್ದರು. ಇದಕ್ಕೆ ಪುಂಡ್ಲಿಕ್ ಪೈ ಅವರು ವಿರೋಧವ್ಯಕ್ತಪಡಿಸಿದ್ದು, `ಮೂರು ಮಕ್ಕಳಿರುವ ನೀನು ಆ ವ್ಯಕ್ತಿ ಜೊತೆ ಹೀಗೆ ಮಾತನಾಡುವುದು ಸರಿಯಲ್ಲ’ ಎಂದು ಬುದ್ದಿ ಹೇಳಿದ್ದರು. ಪತಿ ಆಡಿದ ಮಾತಿನಿಂದ ಬೇಸರಗೊಂಡ ರೂಪಾ ಪೈ ಅವರು ಫೆಬ್ರವರಿ ೧೪ರಂದು ತಮ್ಮ ಮನೆಯಲ್ಲಿನ ಕೋಣೆಗೆ ಹೋಗಿ ಉರುಳು ಹಾಕಿಕೊಂಡರು. ಫ್ಯಾನಿಗೆ ನೇಣು ಹಾಕಿಕೊಂಡ ಅವರು ಅಲ್ಲಿಯೇ ಶವವಾಗಿದ್ದರು. ರೂಪಾ ಪೈ ಅವರ ಮರಣದ ಬಗ್ಗೆ ಅವರ ಸಹೋದರಿ ಸ್ಮಿತಾ ಮಂಜುನಾಥ ಹೆಗಡೆ ಅವರು ಪೊಲೀಸ್ ದೂರು ನೀಡಿದ್ದಾರೆ. - [ಜಲ್ಲಿ ತುಂಬಿದ ಟಿಪ್ಪರ್'ಗೆ ಕಲ್ಲು ತೂರಾಟ: ಚಾಲಕನಿಗೆ ಥಳಿತ!](https://mobiletime.in/2026/02/stones-thrown-at-a-tipper-loaded-with-gravel-driver-beaten-up/): ಹುಬ್ಬಳ್ಳಿಯಿಂದ ಕೈಗಾಗೆ ಜಲ್ಲಿಕಲ್ಲು ಸಾಗಿಸುತ್ತಿದ್ದ ಯಲ್ಲಾಪುರದ ತನಜೀಲ್ ಶೇಖ್ ಅವರಿಗೆ ಕಾರವಾರದಲ್ಲಿ ವ್ಯಕ್ತಿಗಳಿಬ್ಬರು ಸೇರಿ ಥಳಿಸಿದ್ದಾರೆ. ಅವರ ಟಿಪ್ಪರ್’ಗೆ ಕಲ್ಲು ಎಸೆದು ಗಾಜು ಒಡೆದಿದ್ದಾರೆ. ಯಲ್ಲಾಪುರದ ಉದ್ಯಮ ನಗರದಲ್ಲಿ ತನಜೀಲ್ ಆದಂ ಶೇಖ್ (25) ಅವರು ವಾಸವಾಗಿದ್ದಾರೆ. ಟಿಪ್ಪರ್ ಚಾಲಕರಾಗಿ ಅವರು ದುಡಿದು ಜೀವನ ನಡೆಸುತ್ತಿದ್ದಾರೆ. ಹುಬ್ಬಳ್ಳಿಯ ತಡಸ್’ದಿಂದ ಅವರು ಜಲ್ಲಿ ಕಲ್ಲುಗಳನ್ನು ತುಂಬಿಕೊAಡು ಅಗತ್ಯವಿದ್ದವರಿಗೆ ಪೂರೈಕೆ ಮಾಡುತ್ತಾರೆ. ಹೀಗಿರುವಾಗ, ಕಾರವಾರದ ಕೈಗಾಗೆ ಜಲ್ಲಿ ಕಲ್ಲು ಬೇಕಿರುವ ಬಗ್ಗೆ ಅರಿತು ಅವರು ಆ ಕಡೆ ತಮ್ಮ ಟಿಪ್ಪರ್ ಓಡಿಸಿದ್ದಾರೆ. ಫೆ 13ರಂದು ಜಲ್ಲಿ ಕಲ್ಲು ತುಂಬಿಕೊoಡು ಕಾರವಾರದ ಕೈಗಾ ಕಡೆ ಹೊರಟ ಅವರಿಗೆ ಫೆ 14ರಂದು ಕೆರವಡಿಯಲ್ಲಿ ಅದೇ ಊರಿನ ರವಿ ದೇವಿದಾಸ ನಾಯ್ಕ ಹಾಗೂ ಕಿರಣ ದೇವಿದಾಸ ನಾಯ್ಕ ಅವರು ಅಡ್ಡಗಟ್ಟಿದ್ದಾರೆ. ಟಿಪ್ಪರ್ ನಿಲ್ಲಿಸುವಂತೆ ಸೂಚಿಸಿದ ಅವರಿಬ್ಬರು ಬೈಗುಳ ಶುರು ಮಾಡಿದ್ದಾರೆ. ಇದರಿಂದ ಬೆದರಿದ ತನಜೀಲ್ ಶೇಖ್ ಅವರು ಟಿಪ್ಪರಿನ ಗ್ಲಾಸು ಏರಿಸಿದ್ದು, ಆಗ ಎದುರಾಳಿಗಳಿಬ್ಬರು ಸೇರಿ ಕಲ್ಲು ತೂರಾಟ ಮಾಡಿದ್ದಾರೆ. ಈ ವೇಳೆ ಟಿಪ್ಪರಿನ ಗ್ಲಾಸು ಒಡೆದಿದೆ. ಅದಾದ ನಂತರ ತನಜೀಲ್ ಶೇಖ್ ಅವರನ್ನು ಹಿಡಿದು ಥಳಿಸಿದ್ದಾರೆ. `ಮತ್ತೆ ಈ ದಾರಿಯಲ್ಲಿ ಓಡಾಡಿದರೆ ಎಚ್ಚರ’ ಎಂದು ಅವರಿಬ್ಬರು ಬೆದರಿಸಿದ್ದು, ತಮಗಾದ ನೋವಿನ ಬಗ್ಗೆ ತನಜೀಲ್ ಶೇಖ್ ಅವರು ಪೊಲೀಸ್ ದೂರು ನೀಡಿದ್ದಾರೆ. ರವಿ ನಾಯ್ಕ ಹಾಗೂ ಕಿರಣ ನಾಯ್ಕ ಅವರ ವಿರುದ್ಧ ಮಲ್ಲಾಪುರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. - [ಅಪಘಾತದಲ್ಲಿ ಅಂತ್ಯವಾದ ಅಡಿಕೆ ವ್ಯಾಪಾರಿ ಬದುಕು!](https://mobiletime.in/2026/02/the-areca-nut-merchant-who-died-in-an-accident-survived/): ಹೊನ್ನಾವರದ ಹಳದಿಪುರದಲ್ಲಿ ನಡೆದ ಅವಘಡದಲ್ಲಿ ಅಡಿಕೆ ವ್ಯಾಪಾರಿಯೊಬ್ಬರು ಸಾವನಪ್ಪಿದ್ದಾರೆ. ಬೈಕ್ ಹಾಗೂ ಕಾರಿನ ನಡುವೆ ನಡೆದ ಅಪಘಾತದಲ್ಲಿ ಹಳದಿಪುರದ ವಿನಾಯಕ ರಘುವೀರ ಶ್ಯಾನಭಾಗ (50) ಅವರ ಬದುಕು ಕೊನೆಯಾಗಿದೆ. ವಿನಾಯಕ ಶ್ಯಾನಭಾಗ ಅವರು ಅಡಿಕೆ ವ್ಯಾಪಾರಿಯಾಗಿ ಬದುಕು ಕಟ್ಟಿಕೊಂಡಿದ್ದರು. ಸ್ನೇಹಜೀವಿ ಆಗಿದ್ದ ಅವರು ಜನಪರ ನಿಲುವು ಹೊಂದಿದ್ದರು. ಸಮಾಜಮುಖಿ ವ್ಯಕ್ತಿತ್ವದಿಂದ ಅವರು ಜನ ಮನ್ನಣೆಗಳಿಸಿದ್ದರು. ಭಾನುವಾರ ಬೆಳಗ್ಗೆ ನಡೆದ ದುರಂತದಲ್ಲಿ ಅವರು ಗಂಭೀರ ಪ್ರಮಾಣದಲ್ಲಿ ಗಾಯಗೊಂಡರು. ಅವರನ್ನು ಸ್ಥಳೀಯರು ರಕ್ಷಿಸುವ ಪ್ರಯತ್ನ ಮಾಡಿದರು. ಪೊಲೀಸರ ಜೊತೆ ಸೇರಿ ಅಲ್ಲಿದ್ದ ಜನ ವಿನಾಯಕ ಶ್ಯಾನಭಾಗ ಅವರನ್ನು ಹೊನ್ನಾವರದ ಸರ್ಕಾರಿ ಆಸ್ಪತ್ರೆಗೆ ಸಾಗಿಸಿದರು. ಅಲ್ಲಿ ಅವರಿಗೆ ಪ್ರಾಥಮಿಕ ಚಿಕಿತ್ಸೆ ಸಿಕ್ಕಿದ್ದು, ಪರಿಸ್ಥಿತಿ ಚಿಂತಾಜನಕವಾಗಿದ್ದರಿoದ ವೈದ್ಯರು ದೊಡ್ಡ ಆಸ್ಪತ್ರೆಉ ಶಿಫಾರಸ್ಸು ಮಾಡಿದರು. ಹೀಗಾಗಿ ವಿನಾಯಕ ಶ್ಯಾನಭಾಗ ಅವರನ್ನು ಮಣಿಪಾಲದ ಆಸ್ಪತ್ರೆಗೆ ದಾಖಲಿಸಲಾಯಿತು. ಅಲ್ಲಿ ಅವರಿಗೆ ಚಿಕಿತ್ಸೆ ಮುಂದುವರೆದರೂ ಅದಕ್ಕೆ ಅವರ ದೇಹ ಸ್ಪಂದಿಸಲಿಲ್ಲ. ಪರಿಣಾಮ ವಿನಾಯಕ ಶ್ಯಾನಭಾಗ ಅವರು ಅಲ್ಲಿಯೇ ಕೊನೆಯುಸಿರೆಳೆದರು. `ನಿಧಾನವಾಗಿ ವಾಹನ ಓಡಿಸಿ. ಸಂಚಾರಿ ನಿಯಮಗಳನ್ನು ತಪ್ಪದೇ ಪಾಲಿಸಿ’ - [`ಲಯನ್ಸ ಸೇವೆ ಸಮಾಜಕ್ಕೆ ಮಾದರಿ'](https://mobiletime.in/2026/02/lions-service-is-a-model-for-society/): `ಸಾಮಾಜಿಕ ಸೇವೆ ಮಾಡುವಲ್ಲಿ ಕಾರವಾರದ ಸದಾಶಿವಗಡ ಲಯನ್ಸ ಕ್ಲಬ್ ಮುಂಚೂಣಿಯಲ್ಲಿದ್ದು, ಅದರ ಸೇವೆ ನಿರಂತರವಾಗಿರಲಿ’ ಎಂದು ಲಯನ್ಸ್ ಕ್ಲಬ್ಬಿನ ಡೆಸ್ಟಿಕ್ ಗವರ್ನರ್ ಜೈಮೊಲ್ ನಾಯ್ಕ ಅವರು ಹೇಳಿದ್ದಾರೆ. ವಾರ್ಷಿಕ ಭೇಟಿ ಕಾರ್ಯಕ್ರಮದ ಅಂಗವಾಗಿ ಅಸ್ನೋಟಿ ಶಿವಾಜಿ ಮಂದಿರಕ್ಕೆ ಆಗಮಿಸಿದ ಅವರು ಲಯನ್ಸ ಸೇವೆಯನ್ನು ಶ್ಲಾಘಿಸಿದರು. `ಗ್ರಾಮೀಣ ಭಾಗದ ಜನರ ಜೀವನ ಮಟ್ಟ ಸುಧಾರಣೆಗೆ ಲಯನ್ಸ ಕ್ಲಬ್ ಶ್ರಮಿಸುತ್ತಿದೆ. ಇದಕ್ಕೆ ಪೂರಕವಾಗಿ ಶಿವಾಜಿ ಬಾಲಕರ ವಸತಿ ನಿಲಯದ ವಿದ್ಯಾರ್ಥಿಗಳಿಗೆ ಆಹಾರ ಧಾನ್ಯ ಹಾಗೂ ಪ್ರೇಮ ಆಶ್ರಮ ಟ್ರಸ್ಟ್ ಬಾಲಕಿಯರ ವಸತಿ ನಿಲಯದ ವಿದ್ಯಾರ್ಥಿನಿಯರ ಅನುಕೂಲಕ್ಕೆ ಬರ್ನಿಂಗ್ ಕಂಟ್ರೋಲ್ ಮಿಶನ್ ಒದಗಿಸುವೆ’ ಎಂದು ಅವರು ಘೋಷಿಸಿದರು. ಲಯನ್ಸ ಪ್ರಮುಖರಾದ ಡಾ ಕೀರ್ತಿ ನಾಯ್ಕ ಅವರು `ಕಾರವಾರ ತನ್ನ ಜನ್ಮಭೂಮಿಯಾಗಿದ್ದು, ಇಲ್ಲಿ ಭೇಟಿ ನೀಡುವುದು ಖುಷಿ ನೀಡುತ್ತದೆ. ಸೇವೆ ಮಾಡುವ ಮನಸ್ಸಿರುವವರಿಗೆ ಲಯನ್ಸ ಕ್ಲಬ್ ಅವಕಾಶ ನೀಡುತ್ತಿದೆ’ ಎಂದರು. ವೇದಿಕೆಯಲ್ಲಿದ್ದ ರಾಹುಲ್ ವೇರೇಕರ್, ರಾಜೇಶ ಸಾಲೇಹಿತ್ತಲ, ಅನೀಲ ಶೇಠ್ ಅವರು ಮಾತನಾಡಿದರು. ಲಯನ್ಸ್ ಕ್ಲಬ್ಬಿನ ಅಧ್ಯಕ್ಷ ನಯೀಮ್ ಮುಖಾದಮ್ ಅವರು ಅಧ್ಯಕ್ಷತೆವಹಿಸಿದ್ದರು. ಕ್ಲಬ್ಬಿನ ಮಾಜಿ ಅಧ್ಯಕ್ಷರಾದ ರಾಮಚಂದ್ರ ಅಂದ್ಲಮನೆ, ಸುನೀಲ್ ಐಗಳ್ ಹಾಗೂ ಜಯಶೀಲಾ ಬಿಷ್ಟಣ್ಣನವರ ಅವರು ವೇದಿಕೆಯಲ್ಲಿದ್ದರು. ಜೆ ಬಿ ತಿಪ್ಪೇಸ್ವಾಮಿ ಅವರು ವರದಿ ವಾಚಿಸಿದ್ದು, ಸಂದೀಪ್ ಅಣ್ವೇಕರ ಅವರು ಕಾರ್ಯಕ್ರಮ ನಿರ್ವಹಿಸಿದರು. ರೋಶನ್ ರೇವಣಕರ ಅವರು ಪರಿಚಯ ಭಾಷಣ ಮಾಡಿದರು. ಸೋನಿಯಾ ಅಣ್ವೇಕರ ಅವರು ಧ್ವಜವಂದನೆ ನೆರವೇರಿಸಿದರು. ಗಣೇಶ ಬಿಷ್ಟಣ್ಣನವರ ಅವರು ವಂದಿಸಿದರು. - [ಶಿವರಾತ್ರಿ: ಆ ಭಕ್ತನ ಪಾಲಿಗೆ ವೈದ್ಯರೇ ದೇವರು!](https://mobiletime.in/2026/02/shivaratri-for-that-devotee-the-doctor-is-god/): ಶಿವರಾತ್ರಿ ಆಚರಣೆಗೆ ಗೋಕರ್ಣಕ್ಕೆ ಬಂದಿದ್ದ ಭಕ್ತರೊಬ್ಬರು ಏಕಾಏಕಿ ಅಸ್ವಸ್ಥರಾಗಿದ್ದು, ವೈದ್ಯಾಧಿಕಾರಿ ಡಾ ಜಗದೀಶ ನಾಯ್ಕ ಅವರು ಆ ಭಕ್ತರ ಜೀವ ಕಾಪಾಡಿದ್ದಾರೆ. ಭಾನುವಾರ ಗೋಕರ್ಣದಲ್ಲಿರುವ ಆತ್ಮಲಿಂಗ ದರ್ಶನಕ್ಕೆ ಸಾವಿರ ಸಾವಿರ ಸಂಖ್ಯೆಯ ಭಕ್ತರು ಆಗಮಿಸಿದ್ದಾರೆ. ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನಪಡೆಯುತ್ತಿದ್ದಾರೆ. ದೂರ ದೂರದ ಊರುಗಳಿಂದ ಆಗಮಿಸಿದ ಜನ ಆತ್ಮಲಿಂಗ ದರ್ಶನಕ್ಕಾಗಿ ದಿನವಿಡೀ ಕಾಯುತ್ತಿದ್ದಾರೆ. ಹೀಗಿರುವಾಗ ಪರ ಪ್ರದೇಶದ ಭಕ್ತರೊಬ್ಬರು ಶ್ರೀಕ್ಷೇತ್ರ ಗೋಕರ್ಣಕ್ಕೆ ಆಗಮಿಸಿದ್ದು, ಅನಾರೋಗ್ಯಕ್ಕೆ ಒಳಗಾದರು. ಅಂಕೋಲಾ ಆಸ್ಪತ್ರೆಯ ವೈದ್ಯಾಧಿಕಾರಿಯಾಗಿರುವ ಡಾ ಜಗದೀಶ ನಾಯ್ಕ ಅವರು ಗೋಕರ್ಣದಲ್ಲಿ ಪ್ರಭಾರಿಯಾಗಿ ಕರ್ತವ್ಯ ನಿಭಾಯಿಸುತ್ತಿದ್ದು, ಅಸ್ವಸ್ಥಗೊಂಡ ಆ ಭಕ್ತರ ಆರೈಕೆ ಮಾಡಿದರು. ವೈದ್ಯರ ಸಮಯ ಪ್ರಜ್ಞೆ ಹಾಗೂ ನಿರಂತರ ಚಿಕಿತ್ಸೆ ಪರಿಣಾಮ ಅಸ್ವಸ್ಥಗೊಂಡ ವ್ಯಕ್ತಿ ಜೀವಾಪಾಯದಿಂದ ಪಾರಾದರು. ಡಾ ವಿಶ್ವಾಸ್ ಕಗಾಲ್ ಅವರು ರೋಗಿಗೆ ಚಿಕಿತ್ಸೆ ನೀಡುವಲ್ಲಿ ಸಾಕಷ್ಟು ಶ್ರಮವಹಿಸಿದರು. ಆಸ್ಪತ್ರೆ ಸಿಬ್ಬಂದಿಯೂ ಮುತುವರ್ಜಿವಹಿಸಿ ಆರೈಕೆ ಮಾಡಿದರು. ಮಿನಿ ಆಂಬುಲೆನ್ಸ್ ಸೇವೆಗೆ ಆಗ್ರಹ: ಈ ದಿನ ಆತ್ಮಲಿಂಗ ದರ್ಶನ ಮಾಡಿದ ಭಕ್ತರೊಬ್ಬರು ಹೃದಯಘಾತದಿಂದ ಕುಸಿದು ಬಿದ್ದಿದ್ದು, ಅವರನ್ನು ಪೊಲೀಸ್ ವಾಹನದಲ್ಲಿ ಆರೋಗ್ಯ ಕೇಂದ್ರಕ್ಕೆ ಸಾಗಿಸಲಾಯಿತು. ಜಾತ್ರೆ ಸಮಯದಲ್ಲಿ ತುರ್ತು ಸನ್ನಿವೇಶ ಎದುರಿಸಲು ಮಿನಿ ಆಂಬುಲೆನ್ಸ ಅಗತ್ಯವಿರುವ ಬಗ್ಗೆ ಜಾತ್ರಾ ಸಿದ್ಧತಾ ಸಭೆಯಲ್ಲಿ ತಿಳಿಸಿದರೂ ಆಗದ ಬಗ್ಗೆ ಅನೇಕ ಜನ ಆಕ್ಷೇಪಿಸಿದರು. ಬೇಡಿಕೆಯ ಪ್ರಕಾರ ಮಿನಿ ಆಂಬುಲೆನ್ಸ್ ಸೇವೆಗಾಗಿ ಒತ್ತಾಯಿಸಿದರು.   - [ಶಿವರಾತ್ರಿ: ಆತ್ಮಲಿಂಗ ದರ್ಶನದ ನಂತರ ಶಿವನ ಪಾದ ಸೇರಿದ ಭಕ್ತ!](https://mobiletime.in/2026/02/shivaratri-devotee-worships-lord-shiva-after-seeing-atmalinga/): ಶಿವರಾತ್ರಿ ಹಿನ್ನಲೆ ಗೋಕರ್ಣಕ್ಕೆ ಬಂದಿದ್ದ ಭಕ್ತರೊಬ್ಬರು ಆತ್ಮಲಿಂಗ ದರ್ಶನ ಮಾಡಿ ಶಿವನ ಪಾದ ಸೇರಿದ್ದಾರೆ. ಗೋವಾದ ರತ್ನಾಕರ ಬೋಮಕರ್ ಅವರು ಭಾನುವಾರ ಗೋಕರ್ಣಕ್ಕೆ ಬಂದಿದ್ದರು. ಅತ್ಯಂತ ಭಕ್ತಿಯಿಂದ ಅವರು ಆತ್ಮಲಿಂಗದ ದರ್ಶನ ಮಾಡಿದ್ದರು. ದರ್ಶನ ಮುಗಿಸಿ ಹೊರ ಬರುವಾಗಲೇ ಅವರು ತಮ್ಮ ಬದುಕು ಅಂತ್ಯಗೊಳಿಸಿದರು. ರತ್ನಾಕರ ಬೋಮಕರ್ ಅವರು ಏಕಾಂಗಿಯಾಗಿ ಶಿವನ ದರ್ಶನಕ್ಕೆ ಬಂದಿದ್ದರು. ಹೃದಯ ಆಘಾತದಿಂದ ಅವರು ಕುಸಿದು ಬಿದ್ದಿದ್ದು, ಪೊಲೀಸ್ ವಾಹನದಲ್ಲಿ ಅವರನ್ನು ಪ್ರಾಥಮಿಕ ಚಿಕಿತ್ಸೆಗೆ ಕರೆದೊಯ್ಯಲಾಯಿತು. ವೈದ್ಯರು ತಪಾಸಣೆಗೆ ಆಗಮಿಸುವದರಷ್ಟರಲ್ಲಿಯೇ ಅವರು ತಮ್ಮ ಬದುಕಿನ ಪ್ರಯಾಣ ಮುಗಿಸಿದ್ದರು. - [ಜಾತ್ರೆ ಪೇಟೆಯಲ್ಲಿ ಗಾಂಜಾ ಗುಂಗು!](https://mobiletime.in/2026/02/the-smell-of-marijuana-in-the-fairgrounds/): ಗಾoಜಾ ಗುಂಗಿನಲ್ಲಿ ಜಾತ್ರೆ ಪೇಟೆ ಅಲೆದಾಡುತ್ತಿದ್ದ ಉಮ್ಮಚ್ಗಿ ಹಾಗೂ ಚವತ್ತಿಯಯ ಪಡ್ಡೆ ಹೈಕಳಿಗೆ ಯಲ್ಲಾಪುರ ಪೊಲೀಸರು ಬಿಸಿ ಮುಟ್ಟಿಸಿದ್ದಾರೆ. ಯಲ್ಲಾಪುರದಲ್ಲಿ ಅದ್ಧೂರಿ ಜಾತ್ರಾ ಮಹೋತ್ಸವ ನಡೆಯುತ್ತಿದ್ದು, ದೇಶದ ನಾನಾ ಭಾಗಗಳಿಂದ ಜನ ಬರುತ್ತಿದ್ದಾರೆ. ಅದರಲ್ಲಿಯೂ ರಜಾ ದಿನವಾದ ಶನಿವಾರ ಲಕ್ಷಾಂತರ ಭಕ್ತರು ಜಾತ್ರೆ ಪೇಟೆಗೆ ಬಂದಿದ್ದಾರೆ. ಉಮ್ಮಚ್ಗಿಯ ಜನತಾ ಕಾಲೋನಿಯ ಚಂದನ ಹನುಮಂತ ಹರಿಕಂತ್ರ (22) ಹಾಗೂ ಚವತ್ತಿಯ ಪ್ರಮೋದ ಅಶೋಕ ಶೇರುಗಾರ (29) ಸಹ ಫೆಬ್ರವರಿ 14ರ ರಾತ್ರಿ ಯಲ್ಲಾಪುರಕ್ಕೆ ಬಂದಿದ್ದು, ಅವರಿಬ್ಬರು ಮೋಜು ಮಸ್ತಿಯಲ್ಲಿ ತೊಡಗಿದ್ದರು. ಅಲ್ಲಿ ಇಲ್ಲಿ ತಿರುಗಾಟದ ನಂತರ ಅವರಿಬ್ಬರು ವೈಟಿಎಸ್‌ಎಸ್ ಶಾಲೆ ಎದುರಿನ ರಸ್ತೆ ಬಳಿ ಬಂದಿದ್ದರು. ಅಲ್ಲಿ ಬರುವ ಮುನ್ನ ಇಬ್ಬರು ಗಾಂಜಾ ನಶೆ ಏರಿಸಿಕೊಂಡಿದ್ದರು. ಕದ್ದು ಮುಚ್ಚಿ ಗಾಂಜಾ ಹೊಡೆದ ಅವರಿಬ್ಬರು ಜಾತ್ರೆಯ ಎಲ್ಲಾ ಕಡೆ ಸುತ್ತಾಟ ನಡೆಸಿದ್ದು, ನಶೆಯಲ್ಲಿದ್ದ ಅವರಿಬ್ಬರು ಸಾರ್ವಜನಿಕರ ಜೊತೆ ಅನುಚಿತವಾಗಿ ವರ್ತಿಸಲು ಶುರು ಮಾಡಿದರು. ಅಮಲಿನಲ್ಲಿ ಗೊಣಗುತ್ತಿದ್ದ ಅವರಿಬ್ಬರನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದರು. ಕುಲುಮೆ ಕೆಲಸ ಮಾಡಿಕೊಂಡಿದ್ದ ಚಂದನ ಹರಿಕಂತ್ರ ಅವರ ಜೊತೆ ಚಾಲಕನಾಗಿರುವ ಪ್ರಮೋದ ಶೇರುಗಾರ್ ಅವರನ್ನು ಪೊಲೀಸರು ವೈದ್ಯಕೀಯ ತಪಾಸಣೆಗೆ ಒಳಪಡಿಸಿದರು. ವೈದ್ಯರು ಅವರಿಬ್ಬರು ಗಾಂಜಾ ಸೇವನೆ ಮಾಡಿರುವುದನ್ನು ದೃಢಪಡಿಸಿದರು. ಈ ಹಿನ್ನಲೆ ಪಿಸೈ ರಾಜಶೇಖರ ವಂದಲಿ ಅವರು ಆ ಯುವಕರಿಬ್ಬರಿಗೂ ಬುದ್ದಿ ಹೇಳಿದರು. ಗಾಂಜಾ ಸೇವನೆಯಿಂದ ದೇಹ ಹಾಗೂ ಮನಸ್ಸಿನ ಮೇಲಾಗುವ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸಿದರು. ಮಾಡಿದ ತಪ್ಪಿಗೆ ಶಿಕ್ಷೆ ಅನುಭವಿಸುವಂತೆ ಸೂಚಿಸಿ ಅವರಿಬ್ಬರ ವಿರುದ್ಧವೂ ಪ್ರಕರಣ ದಾಖಲಿಸಿದರು. `ಮಾದಕ ವ್ಯಸನ ಬದುಕಿಗೆ ಮಾರಕ’ - [ಮೀನಿನ ಬಲೆಗೆ ಬಿದ್ದ ಹೋರಿ: ಸಾವು!](https://mobiletime.in/2026/02/bull-falls-into-fishing-net-death/): ರಾಜ್ಯಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸಿ ಹಲವು ಬಹುಮಾನಪಡೆದಿದ್ದ ಹೋರಿಯೊಂದು ಮುಂಡಗೋಡಿನ ಮಳಗಿ ಜಲಾಶಯದಲ್ಲಿನ ಬಲೆಗೆ ಬಿದ್ದು ಸಾವನಪ್ಪಿದೆ! ಮುಂಡಗೋಡದ ಕುರ್ಲಿಯಲ್ಲಿ ನಡೆದ ರಾಜ್ಯಮಟ್ಟದ ಹೋರಿ ಸ್ಪರ್ಧೆಗೆ ಹಾವೇರಿಯ `ವಿಬಿಪಿ ಡಾನ್’ ಎಂಬ ಹೋರಿ ಆಗಮಿಸಿತ್ತು. ಹೊಂಬರಡಿ ಗ್ರಾಮದ ಶ್ರೀಶೈಲ್ ಬೆಲವಾಡಿ ಅವರ ಈ ಹೋರಿ ಮೈದಾನಕ್ಕೆ ಇಳಿದು ಎಲ್ಲರನ್ನು ಆಕರ್ಷಿಸಿತ್ತು. ಆ ಹೋರಿಯ ಚುರುಕು ಚಲನ-ವಲನವನ್ನು ಜನ ಕಣ್ತುಂಬಿಕೊAಡಿದ್ದರು. ಶುಕ್ರವಾರ ಸ್ಪರ್ಧೆಗೆ ಬಿಟ್ಟಿದ್ದ ಹೋರಿ ಮೈದಾನ ಬಿಟ್ಟು ಹೊರ ಹೋಗಿದ್ದು, ಯಾರ ಕೈಗೂ ಸಿಕ್ಕಿರಲಿಲ್ಲ. ಆ ಹೋರಿ ಅರಣ್ಯದ ಕಡೆ ಓಡಿತು. ಮಾಲಕರ ಜೊತೆ ಇನ್ನಿತರರು ಹೋರಿಯನ್ನು ಹುಡುಕಿ ಹೊರಟರು. ಆದರೆ, ಎಲ್ಲರ ಕಣ್ತಪ್ಪಿಸಿದ ಹೋರಿ ಕಾಡಿನ ಕಡೆ ಹೋಗಿದ್ದು, ರಾತ್ರಿಯಿಡೀ ಕರೆದರೂ ಊರಿನ ಕಡೆ ಬರಲಿಲ್ಲ. `ಆಗಾಗ ಈ ಹೋರಿ ಹೀಗೆ ಓಡುವುದು ಸಾಮಾನ್ಯ. ಸ್ವಲ್ಪ ಸಮಯದಲ್ಲಿ ಮರಳುತ್ತದೆ’ ಎಂದು ಮಾಲಕರು ಭಾವಿಸದ್ದರು. ಅದಾಗಿಯೂ, ಕತ್ತಲ ದಾರಿಯಲ್ಲಿ ಹೋರಿಯನ್ನು ಕರೆಯುತ್ತ ಸುತ್ತಾಟ ನಡೆಸಿದ್ದರು. ರಾತ್ರಿಯಿಡೀ ಹುಡುಕಿದರೂ ಹೋರಿಯ ಸದ್ದು ಕೇಳಿಸಲಿಲ್ಲ. ಆದರೆ, ಶನಿವಾರ ಬೆಳಗ್ಗೆ ಹೊರಿ ಜಲಾಶಯದ ಬಳಿ ಶವವಾಗಿರುವ ಸುದ್ದಿ ಕೇಳಿಸಿತು. ಅಲ್ಲಿ ಹೋಗಿ ನೋಡಿದಾಗ ಮೀನಿಗೆ ಹಾಕಿದ್ದ ಬಲೆಯಲ್ಲಿ ಸಿಲುಕಿ ಆ ಹೋರಿ ಕೊನೆಯುಸಿರೆಳೆದಿತ್ತು. ನೀರಿನಿಂದ ತಪ್ಪಿಸಿಕೊಂಡು ಬಾರದೇ ಒದ್ದಾಟ ನಡೆಸಿದ ಹೋರಿ ಅಲ್ಲಿಯೇ ಸಾವನಪ್ಪಿರುವುದು ಗೊತ್ತಾಯಿತು. ಊರಿನವರೆಲ್ಲ ಸೇರಿ ತೆಪ್ಪದ ಸಹಾಯದಿಂದ ಹೋರಿಯ ಶವ ಮೇಲೆತ್ತಿದರು. ಕೆಲವರು ಹೋರಿ ಬದುಕಿರಬಹುದು ಎಂದು ಅಂದಾಜಿಸಿ ಅದರ ಮೈಮೇಲೆ ಬಡಿದರು. ಆದರೆ, ಹೋರಿ ಸಾವನಪ್ಪಿರುವುದನ್ನು ಅರಿತು ಕಣ್ಣೀರು ಸುರಿಸಿದರು.   - [ಚಿನ್ನ ಕೇಳಿ ಪೆಟ್ಟು ತಿಂದ ನಾಯಿ ಮಾರಾಟಗಾರ!](https://mobiletime.in/2026/02/dog-seller-gets-hit-after-asking-for-gold/): ಕಾರವಾರದ ಪ್ರಶಾಂತ ಗೋವೇಕರ್ ಅವರು ಮಹಿಳೆಯೊಬ್ಬರಿಗೆ ನಾಯಿ ಮಾರಾಟ ಮಾಡಿದ್ದು, ಅದರ ಹಣಪಡೆಯಲು ಹೋಗಿ ಪೆಟ್ಟು ತಿಂದಿದ್ದಾರೆ. ಮಹಿಳೆಯರಿಬ್ಬರು ಸೇರಿ ಪ್ರಶಾಂತ ಗಾಂವ್ಕರ್ ಅವರಿಗೆ ಕೆಟ್ಟದಾಗಿ ಬೈದು ಥಳಿಸಿದ್ದಾರೆ. ಕಾರವಾರದ ಕಿನ್ನರ ಬಳಿಯ ಸಿದ್ಧವಾಡದಲ್ಲಿ ಪ್ರಶಾಂತ ದತ್ತರಾಮ ಗೋವೆಕರ್ ಅವರು ವಾಸವಾಗಿದ್ದಾರೆ. ವ್ಯಾಪಾರಿಯಾಗಿ ಅವರು ಬದುಕು ಕಟ್ಟಿಕೊಂಡಿದ್ದಾರೆ. ಪ್ರಶಾಂತ ಗೋವೆಕರ್ ಅವರು ತಾವು ಸಾಕಿದ್ದ ನಾಯಿಯನ್ನು ಸದಾಶಿವಗಡ ಕಣಸಗಿರಿಯ ಸುಮಾ ಸುಧಾಕರ ಪಡವಾಳಕರ್ ಅವರಿಗೆ ಮಾರಾಟ ಮಾಡಿದ್ದಾರೆ. ಆದರೆ, ಸುಮಾ ಪಡವಾಳಕರ್ ಅವರು ನಾಯಿ ಖರೀದಿಸಿದ ಹಣ ಪಾವತಿ ಮಾಡಿಲ್ಲ. ಹೀಗಾಗಿ ಫೆಬ್ರವರಿ 7ರಂದು ಪ್ರಶಾಂತ ಗೋವೇಕರ್ ಅವರು ಸದಾಶಿವಗಡದ ಕಡೆ ಹೋಗಿದ್ದಾರೆ. ಕಣಸಗಿರಿಯಲ್ಲಿರುವ ಸುಮಾ ಪಡವಾಳಕರ್ ಅವರ ಮನೆಗೆ ಹೋಗಿ ನಾಯಿ ಖರೀದಿಸಿದ ಹಣ ಕೇಳಿದ್ದಾರೆ. ಈ ವೇಳೆ ಈ ಹಿಂದೆಪಡೆದಿದ್ದ 10 ತೊಲೆ ಬಂಗಾರ ಹಾಗೂ 5 ಲಕ್ಷ ರೂ ಹಣಪಡೆದ ಬಗ್ಗೆಯೂ ವಿಚಾರಿಸಿದ್ದು, ಅದರ ಬಗ್ಗೆ ಪ್ರಶ್ನೆ ಕೇಳಿದ್ದಾರೆ. ಇದರಿಂದ ಸುಮಾ ಪಡವಾಳಕರ್ ಅವರ ಸಿಟ್ಟು ನೆತ್ತಿಗೇರಿದೆ. ಮನೆಯಲ್ಲಿದ್ದ ಕತ್ತಿ ಹಿಡಿದು ಹೊರಬಂದ ಸುಮಾ ಪಡವಾಳಕರ್ ಅವರು ಪ್ರಶಾಂತ  ಅವರ ಕಡೆ ತಮ್ಮ ಆಯುಧ ಬೀಸಿದ್ದಾರೆ. ಮನೆಯಲ್ಲಿದ್ದ ಸುಮಾ ಅವರ ಮಗಳು ಈಗಾಗಲೇ 10 ತೊಲೆ ಬಂಗಾರ, ಐದು ಲಕ್ಷ ರೂ ಹಣಪಡೆದ ಬಗ್ಗೆ ವಿಚಾರಣೆ ಶ್ರೇಯಾ ಪಡವಾಳಕರ್ ಅವರು ಈ ಹೊಡೆದಾಟಕ್ಕೆ ಕೈ ಜೋಡಿಸಿದ್ದಾರೆ. ಅಮ್ಮ-ಮಗಳು ಸೇರಿ ಪ್ರಶಾಂತ ಗೋವೆಕರ್ ಅವರಿಗೆ ಥಳಿಸಿದ್ದು, ಕತ್ತಿಯ ಏಟು ಅವರನ್ನು ಗಾಯಗೊಳಿಸಿದೆ. ಅಲ್ಲಿಂದ ಓಡಿ ತಪ್ಪಿಸಿಕೊಂಡ ಪ್ರಶಾಂತ ಗೋವೆಕರ್ ಅವರು ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾರೆ. ಚಿತ್ತಾಕುಲ ಪೊಲೀಸರ ಬಳಿ ತಮಗೆ ನ್ಯಾಯಯುತವಾಗಿ ಬರಬೇಕಾದ ನಾಯಿ ಹಣದ ಬಗ್ಗೆ ಹೇಳಿದ್ದಾರೆ. ಹಣ ಕೇಳಲು ಹೋದಾಗ ನಡೆದ ಹೊಡೆದಾಟದ ಬಗ್ಗೆ ವಿವರಿಸಿ ಆ ಅಮ್ಮ-ಮಗಳ ವಿರುದ್ಧ ದೂರು ನೀಡಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿದ್ದು, ತನಿಖೆ ನಡೆಸಿದ್ದಾರೆ. - [ಶಿಕ್ಷಕನ ಮನೆಯಲ್ಲಿ ಕಳ್ಳರ ಕಿತಾಪತಿ!](https://mobiletime.in/2026/02/thieves-den-in-the-teachers-house/): ಕಾರವಾರದ ಸಿದ್ಧರದ ಶಿಕ್ಷಕ ಸುನೀಲ ಗಾಂವ್ಕರ್ ಅವರ ಸದಾಶಿವಗಡದಲ್ಲಿನ ಮನೆಯಲ್ಲಿ ಕಳ್ಳತನ ನಡೆದಿದೆ. ಶಿಕ್ಷಕರು ಶಾಲೆಗೆ ಹೋದ ಸನ್ನಿವೇಶ ನೋಡಿದ ಕಳ್ಳರು ಮನೆಗೆ ನುಗ್ಗಿ ತಮ್ಮ ಕೈ ಚಳಕ ಪ್ರದರ್ಶಿಸಿದ್ದಾರೆ. ಕಾರವಾರದ ಸದಾಶಿವಗಡ ಬಳಿಯ ಚಿಂಚೇವಾಡದಲ್ಲಿ ಸುನೀಲ ರಾಮಚಂದ್ರ ಗಾಂವ್ಕರ್ ಅವರು ವಾಸವಾಗಿದ್ದಾರೆ. ಅವರು ಸಿದ್ಧರದ ಮಲ್ಲಿಕಾರ್ಜುನ ಹೈಸ್ಕೂಲಿನಲ್ಲಿ ಶಿಕ್ಷಕರಾಗಿದ್ದಾರೆ. ಸುನೀಲ ಗಾಂವ್ಕರ್ ಅವರ ಪುತ್ರಿ ರೀತು ಅವರು ಅಮೃತ ವಿದ್ಯಾಲಯದಲ್ಲಿ ವಿದ್ಯಾರ್ಜನೆ ಮಾಡುತ್ತಿದ್ದು, ಕಳ್ಳತನ ನಡೆದಿರುವುದನ್ನು ರೀತು ಅವರೇ ಮೊದಲು ನೋಡಿದ್ದಾರೆ. ಫೆಬ್ರವರಿ 13ರ ಬೆಳಗ್ಗೆ 9.15ಕ್ಕೆ . ಸುನೀಲ ಗಾಂವ್ಕರ್ ಅವರು ಮನೆ ಬಾಗಿಲು ಹಾಕಿದ್ದರು. ಭದ್ರವಾದ ಬೀಗವನ್ನು ಅಳವಡಿಸಿ ಅವರು ಶಾಲೆಗೆ ಹೋಗಿದ್ದರು. ರೀತು ಅವರು ಸಹ ಅಮೃತ ವಿದ್ಯಾಲಯಕ್ಕೆ ಹೋಗಿದ್ದು, ಸಂಜೆ 4 ಗಂಟೆಗೆ ಮನೆಗೆ ಮರಳಿದ್ದರು. ಮನೆ ಬಾಗಿಲು ತೆರೆದಿರುವುದನ್ನು ನೋಡಿದ ರೀತು ಅವರು ಆತಂಕಕ್ಕೆ ಒಳಗಾದರು. . ಸುನೀಲ ಗಾಂವ್ಕರ್ ಅವರು ಶಾಲೆ ಮುಗಿಸಿ ಬಂದಾಗ ಮನೆ ಬಾಗಿಲು ಮುರಿದಿದ್ದು, ಕಳ್ಳರು 48 ಸಾವಿರ ರೂ ಮೌಲ್ಯದ ಸ್ವತ್ತುಗಳನ್ನು ಕದ್ದಿರುವುದು ಗೊತ್ತಾಯಿತು. ಕಳ್ಳರು ಮಾಡಿದ ಕಿತಾಪತಿಯ ಬಗ್ಗೆ ಸುನೀಲ ಗಾಂವ್ಕರ್ ಅವರು ಪೊಲೀಸರಿಗೆ ಮಾಹಿತಿ ನೀಡಿದರು. ಚಿತ್ತಾಕುಲ ಪೊಲೀಸರು ಪ್ರಕರಣ ದಾಖಲಿಸಿದ್ದು, ಕಳ್ಳರ ಶೋಧ ನಡೆಸಿದ್ದಾರೆ. `ಕಳ್ಳತನ ತಡೆಗೆ ಸಿಸಿ ಕ್ಯಾಮರಾ ಸಹಕಾರಿ’ - [ಮುರುಡೇಶ್ವರ: ಶಿವರಾತ್ರಿ ಸಂಭ್ರಮಕ್ಕೆ ಕ್ಯೂ ಆರ್ ಕೋಡ್ ಸಾರಥ್ಯ!](https://mobiletime.in/2026/02/murudeshwar-qr-code-leads-the-way-for-shivaratri-celebrations/): ಉತ್ತರ ಕನ್ನಡ ಜಿಲ್ಲೆಯ ಮುರುಡೇಶ್ವರ ಶಿವರಾತ್ರಿ ಸಂಭ್ರಮಕ್ಕೆ ಸಜ್ಜಾಗಿದೆ. ಈ ಬಾರಿಯ ಶಿವರಾತ್ರಿ ಭಾನುವಾರ ಬಂದಿರುವುದರಿoದ ಲಕ್ಷಾಂತರ ಭಕ್ತರು ಶ್ರೀಕ್ಷೇತ್ರಕ್ಕೆ ಬರುವ ಸಾಧ್ಯತೆಯಿದ್ದು, ಅವರ ಅನುಕೂಲಕ್ಕಾಗಿ ಪೊಲೀಸರು ಆಧುನಿಕ ತಂತ್ರಜ್ಞಾನದ ಮೊರೆ ಹೋಗಿದ್ದಾರೆ. ಮುರುಡೇಶ್ವರ ಪಿಸೈ ಹನುಮಂತ ಬೀರಾದರ್ ಅವರ ಮುಂದಾಳತ್ವದಲ್ಲಿ ಮುರುಡೇಶ್ವರದ ಅನೇಕ ಕಡೆ ಕ್ಯೂ ಆರ್ ಕೋಡ್ ಸ್ಟಿಕರ್ ಅಳವಡಿಸಲಾಗಿದೆ. ಮೊಬೈಲ್ ಮೂಲಕ ಆ ಕೋಡನ್ನು ಸ್ಕಾನ್ ಮಾಡಿದರೆ ಪೊಲೀಸರು ನೀಡುವ ಅನೇಕ ಮಾಹಿತಿ ಸಿಗುತ್ತಿದೆ. ಪೊಲೀಸ್ ಸಹಾಯ ಕೇಂದ್ರ, ಸುರಕ್ಷತಾ ಕ್ರಮ, ಪಾರ್ಕಿಂಗ್ ವ್ಯವಸ್ಥೆ ಸೇರಿ ಜನರಿಗೆ ಅಗತ್ಯವಿರುವ ವಿಷಯಗಳ ಮೇಲೆ ಕ್ಯೂ ಆರ್ ಕೋಡ್ ಬೆಳಕು ಚೆಲ್ಲಿದೆ. ಲಕ್ಷಾಂತರ ಭಕ್ತರು ಬರುವುದರಿಂದ ಸಾಮಾನ್ಯವಾಗಿ ಶಿವರಾತ್ರಿ ಅವಧಿಯಲ್ಲಿ ಮುರುಡೇಶ್ವರದಲ್ಲಿ ಸಂಚಾರ ದಟ್ಟಣೆ ಅಧಿಕವಾಗುತ್ತದೆ. ಇದನ್ನು ತಪ್ಪಿಸುವುದಕ್ಕಾಗಿ ಕ್ಯೂ ಆರ್ ಕೋಡ್ ಮೂಲಕ ಪೊಲೀಸರು ವಿವಿಧ ಮಾರ್ಗದರ್ಶನ ಮಾಡಿದ್ದಾರೆ. ಬರುವ ಭಕ್ತರಿಗೆ ಅನುಕೂಲವಾಗುವ ಹಾಗೇ ಪಾರ್ಕಿಂಗ್ ಸ್ಥಳ ಗುರುತಿಸಲು ಈ ಕ್ಯೂ ಆರ್ ಕೋಡ್ ನೆರವು ನೀಡಲಿದೆ. ಇದರೊಂದಿಗೆ ಪೊಲೀಸ್ ಸಹಾಯ ಕೇಂದ್ರವನ್ನು ಸ್ಥಾಪಿಸಲಾಗಿದ್ದು, ಸಹಾಯ ಕೇಂದ್ರಕ್ಕೆ ತೆರಳುವ ಮಾಹಿತಿಯನ್ನು ಕ್ಯೂ ಆರ್ ಕೋಡ್ ಒದಗಿಸುತ್ತಿದೆ. ತುರ್ತು ಸನ್ನಿವೇಶಕ್ಕೆ ಅಗತ್ಯವಿರುವ ಆಸ್ಪತ್ರೆ, ಕಡಲತೀರದಲ್ಲಿ ಅನುಸರಿಸಬೇಕಾದ ಸುರಕ್ಷತಾ ಕ್ರಮ, ಮುಖ್ಯವಾಗಿ ಸೇವ್ ಮಾಡಿಕೊಳ್ಳಬೇಕಾದ ಫೋನ್ ನಂಬರ್, ಸಮೀಪದ ಬಸ್ಸು ಹಾಗೂ ರೈಲು ನಿಲ್ದಾಣದ ಬಗ್ಗೆಯೂ ಕ್ಯೂ ಆರ್ ಕೋಡ್ ಮಾಹಿತಿ ನೀಡುತ್ತಿದೆ. ಹೊರ ಪ್ರದೇಶದಿಂದ ಬರುವ ಭಕ್ತರಿಗೆ ಮೊಬೈಲಿನಲ್ಲಿಯೇ ಸಮಗ್ರ ಮಾಹಿತಿ ನೀಡುವುದಕ್ಕಾಗಿ ಪೊಲೀಸ್ ಇಲಾಖೆ ಈ ಕ್ಯು ಆರ್ ಕೋಡ್ ಸಿದ್ಧಪಡಿಸಿದ್ದು, ಮುರುಡೇಶ್ವರದ ಪ್ರಮುಖ ಸ್ಥಳದಲ್ಲಿ ಅದನ್ನು ಅಂಟಿಸಲಾಗಿದೆ. - [ಜಾತ್ರೆ: ಕಲರ್ ಬಾಲ್ ಆಟಕ್ಕೂ ಕಡಿವಾಣ!](https://mobiletime.in/2026/02/jatre-cut-to-the-color-ball-game/): `ಯಲ್ಲಾಪುರ ಜಾತ್ರೆಯಲ್ಲಿ ಕಲರ್ ಬಾಲ್ ಆಟಕ್ಕೂ ಕಡಿವಾಣ ಹಾಕಬೇಕು’ ಎಂದು ಒಂದಷ್ಟು ಜನ ಮನವಿ ಮಾಡಿದ್ದಾರೆ. ಈ ಬಗ್ಗೆ ಪೊಲೀಸ್ ಠಾಣೆಗೂ ಲಿಖಿತ ಪತ್ರ ಸಲ್ಲಿಸಿದ್ದಾರೆ. `ಫೆಬ್ರವರಿ 11ರಿಂದ ಯಲ್ಲಾಪುರ ಜಾತ್ರೆ ಶುರುವಾಗಿದ್ದು, ಅನೇಕ ಅಂಗಡಿಕಾರರು ವ್ಯಾಪಾರ ಮಾಡಿಕೊಂಡಿದ್ದಾರೆ. ಆದರೆ, ಮುಂಡಗೋಡು ರಸ್ತೆಯ ಸುಮಾರು 20 ಮಳಿಗೆಗಳಲ್ಲಿ ಜೂಜಾಟಕ್ಕೆ ಸಮಾನವಾದ ಕಲರ್ ಬಾಲ್, ರಿಂಗ್ ಎಸೆತ ನಡೆದಿದೆ. ಇಂಥ ಆಟಗಳಿಗಾಗಿ ಜನ ಹಣ ಹಾಳು ಮಾಡುತ್ತಿದ್ದಾರೆ. ಇದಕ್ಕೆ ಅವಕಾಶ ಕೊಡಬಾರದು’ ಎಂದು ಮನವಿ ಮಾಡಿದ್ದಾರೆ. `ಇಂಥ ಆಟ ಆಡಿಸುವವರು ಹಾಗೂ ಆಡುವವರ ನಡುವೆ ವಾಗ್ವಾದ ನಡೆಯುತ್ತಿರುವುದರಿಂದ ಅದನ್ನು ತಡೆಯಬೇಕು. ತಂಟೆ-ತಕರಾರು ಕಡಿಮೆ ಮಾಡುವುದಕ್ಕಾಗಿ ಇಂಥ ಆಟಗಳನ್ನು ತಡೆಯುವ ಅನಿವಾರ್ಯವಿದ್ದು, ಜಾತ್ರೆ ಶುರುವಾಗುವ ಮುನ್ನವೇ ಈ ಬಗ್ಗೆ ತಿಳಿಸಲಾಗಿತ್ತು. ಅದಾಗಿಯೂ, ಕೆಲ ಆಟಗಳು ಬಂದಿವೆ. ಆಟ ನಿಲ್ಲಿಸುವಂತೆ ಅಂಗಡಿಕಾರರ ಬಳಿ ಮನವಿ ಮಾಡಿದರೂ ಪ್ರಯೊಜನವಾಗಿಲ್ಲ’ ಎಂದು ದೂರಿದ್ದಾರೆ. - [ಕಾಲು ಜಾರಿ ಕೃಷಿ ಹೊಂಡಕ್ಕೆ ಬಿದ್ದ ವೃದ್ಧೆ: ಸಾವು!](https://mobiletime.in/2026/02/elderly-woman-slips-and-falls-into-agricultural-pit-death/): ಕಳೆದ 13 ವರ್ಷಗಳಿಂದ ಮಂಗಗಳನ್ನು ಓಡಿಸಿಕೊಂಡು ಜೀವನ ನಡೆಸುತ್ತಿದ್ದ ಶಿರಸಿಯ ಮಳಲಗಾವಿನ ಸೂರಕ್ಕ ಶೆಟ್ಟಿ ಅವರು ಕೃಷಿ ಹೊಂಡಕ್ಕೆ ಬಿದ್ದು ಸಾವನಪ್ಪಿದ್ದಾರೆ. ಸೂರಕ್ಕ ಸೀನ ಶೆಟ್ಟಿ (77) ಅವರು 15 ವರ್ಷಗಳ ಹಿಂದೆ ಬಿಣಗಿ ತುಯಲುಕೊಪ್ಪದ ನಾಗೇಶ ರಾಮಾ ಗಾಣಿಗ ಅವರಿಗೆ ಪರಿಚಯವಾಗಿದ್ದರು. ಮೀನು ವ್ಯಾಪಾರಿಯಾಗಿರುವ ನಾಗೇಶ ಗಾಣಿಗ ಅವರನ್ನು ಸೂರಕ್ಕ ಅವರು `ಮಗ ಮಗ’ ಎಂದು ಪ್ರೀತಿಯಿಂದ ಕರೆಯುತ್ತಿದ್ದರು. ಹೀಗಾಗಿ ನಾಗೇಶ ಗಾಣಿಗ ಅವರು ಸೂರಕ್ಕ ಅವರನ್ನು ತಮ್ಮ ಮನೆಗೆ ಆಮಂತ್ರಿಸಿದ್ದರು. 13 ವರ್ಷಗಳಿಂದ ಸೂರಕ್ಕ ಶೆಟ್ಟಿ ಅವರು ನಾಗೇಶ ಗಾಣಿಗ ಅವರ ಮನೆಯಲ್ಲಿ ವಾಸವಾಗಿದ್ದರು. ತೋಟಕ್ಕೆ ಬರುವ ಮಂಗಗಳನ್ನು ಓಡಿಸುವುದು ಸೂರಕ್ಕ ಶೆಟ್ಟಿ ಅವರ ನಿತ್ಯದ ಕಾಯಕವಾಗಿತ್ತು. ತೋಟಕ್ಕೆ ಬರುವ ಕಾಡು ಪ್ರಾಣಿಗಳನ್ನು ಓಡಿಸಿಯೇ ಅವರು ಅಲ್ಲಿ ಬದುಕು ಕಟ್ಟಿಕೊಂಡಿದ್ದರು. ಈ ನಡುವೆ ಸೂರಕ್ಕ ಶೆಟ್ಟಿ ಅವರು ಸರಾಯಿ ಸೇವನೆ ಶುರು ಮಾಡಿದ್ದು, ನಾಗೇಶ ಗಾಣಿಗ ಅವರು ದುಶ್ಚಟ ಬಿಡುವಂತೆ ಸೂಚಿಸಿದ್ದರು. ಆದರೆ, `ಸರಾಯಿ ಸೇವಿಸದೇ ಇದ್ದರೆ ಓಡಾಡಲು ಆಗುವುದಿಲ್ಲ’ ಎಂದು ಸೂರಕ್ಕ ಹೇಳಿದ್ದರು. ಹೀಗಿರುವಾಗ ಫೆಬ್ರವರಿ 12ರಂದು ನಾಗೇಶ ಗಾಣಿಗ ಅವರು ಸೂರಕ್ಕನ್ನು ಭೇಟಿಯಾಗಿ ಮಾತನಾಡಿದ್ದರು. 13ರಂದು ಹೊನ್ನೇಶ್ವರಿ ಎಂಬಾತರು ಫೋನ್ ಮಾಡಿ `ಸೂರಕ್ಕ ಕಾಣುತ್ತಿಲ್ಲ. ಮನೆಯೂ ಬಾಗಿಲು ಹಾಕಿದೆ’ ಎಂಬ ವಿಷಯ ಮುಟ್ಟಿಸಿದರು. ನಾಗೇಶ ಗಾಣಿಗ ಅವರು ಮಳಗಿಯಿಂದ ತುಯಲುಕೊಪ್ಪಕ್ಕೆ ಬಂದು ಹುಡುಕಾಟ ನಡೆಸಿದರು. ಆಗ, ಮನೆ ಬಳಿಯಿರುವ ಕೃಷಿ ಹೊಂಡದಲ್ಲಿ ಸೂರಕ್ಕ ಅವರ ಶವ ಕಾಣಿಸಿತು. ಸರಾಯಿ ನಶೆ ಅಥವಾ ಕಾಲು ಜಾರಿ ಬಿದ್ದು ಸೂರಕ್ಕ ಸಾವನಪ್ಪಿರುವ ಬಗ್ಗೆ ನಾಗೇಶ ಗಾಣಿಗ ಅವರು ಪೊಲೀಸರಿಗೆ ಮಾಹಿತಿ ನೀಡಿದರು. ಬನವಾಸಿ ಪೊಲೀಸರು ಪ್ರಕರಣ ದಾಖಲಿಸಿದರು.     - [ದಾಂಡೇಲಿ ದಾರಿಯಲ್ಲಿ ಜೋಡಿ ಚಿರತೆ ದರ್ಶನ!](https://mobiletime.in/2026/02/a-pair-of-leopards-were-spotted-on-the-way-to-dandeli/): ದಾಂಡೇಲಿಗೆ ಹೋಗುವ ದಾರಿ ಅಂಚಿನಲ್ಲಿ ಚಿರತೆ ಹಾಗೂ ಅದರ ಮರಿ ಕಾಣಿಸಿಕೊಂಡಿದ್ದು, ಕ್ಯಾಮರಾ ಕಣ್ಣಿಗೆ ಸೆರೆಯಾಗಿದೆ. ದಾಂಡೇಲಿ ಅಂಬಿಕಾ ನಗರ ಪವರ್ ಹೌಸ್ ಸಮೀಪ ಈ ಎರಡು ಚಿರತೆ ದರ್ಶನವಾಗಿದೆ. ರಸ್ತೆ ಅಂಚಿನ ಕಟ್ಟೆಯ ಮೇಲೆ ಚಿರತೆಗಳೆರಡು ಶಾಂತವಾಗಿ ಕುಳಿತು ವಿಶ್ರಾಂತಿಪಡೆದಿವೆ. ಈ ರೀತಿ ರಸ್ತೆ ಅಂಚಿನಲ್ಲಿ ಸಾಕಷ್ಟು ಸಮಯ ಚಿರತೆ ಕಾಣಿಸಿಕೊಂಡಿದ್ದು ಅಪರೂಪದಲ್ಲಿಯೇ ಅಪರೂಪ. ಅದರಲ್ಲಿಯೂ ತಾಯಿ ಚಿರತೆ ಜೊತೆ ಮರಿಯೂ ದರ್ಶನ ನೀಡಿದ್ದು ಪ್ರವಾಸಿಗರ ಸಂತಸ ಹೆಚ್ಚಿಸಿದೆ. ಕಾರಿನಲ್ಲಿ ಸಾಗುತ್ತಿದ್ದ ಪ್ರವಾಸಿಗರು ತಮ್ಮ ಮೊಬೈಲ್ ಕ್ಯಾಮರಾದಲ್ಲಿ ಈ ಅಪರೂಪದ ದೃಶ್ಯವನ್ನು ಚಿತ್ರಿಕರಿಸಿಕೊಂಡಿದ್ದಾರೆ. ಪ್ರವಾಸಿಗರು ಎಚ್ಚರಿಕೆಯಿಂದ ಸಾಗಬೇಕು ಎಂದು ಅರಣ್ಯಾಧಿಕಾರಿಗಳು ಮನವಿ ಮಾಡಿದ್ದಾರೆ. ಚಿರತೆ ಚಲನ-ವಲನದ ಚಿತ್ರಣ ಇಲ್ಲಿ ನೋಡಿ.. - [ಸರ್ಕಾರಿ ಬಸ್ಸು.. ಡಕೋಟಾ ಎಕ್ಸಪ್ರೆಸ್ಸು!](https://mobiletime.in/2026/02/government-bus-dakota-express/): ಕಾರವಾರ-ಅಂಕೋಲಾ ಭಾಗದ ಸಾರಿಗೆ ವ್ಯವಸ್ಥೆ ಸಂಪೂರ್ಣವಾಗಿ ಹಾದಿ ತಪ್ಪಿದೆ. ನಿತ್ಯವೂ ಒಂದೊoದು ಬಸ್ಸು ತಾಂತ್ರಿಕ ದೋಷದ ಕಾರಣದಿಂದ ರಸ್ತೆ ಮದ್ಯೆ ನಿಲ್ಲುತ್ತಿದೆ. ಪ್ರಯಾಣಿಕರ ಅನುಕೂಲಕ್ಕಾಗಿ ಉತ್ತಮ ಬಸ್ಸುಗಳನ್ನು ಬಿಡದೇ ಗುಜುರಿ ಬಸ್ಸುಗಳ ಸೇವೆ ಮುಂದುವರೆದಿದೆ. ಅದರ ಪರಿಣಾಮ ಪ್ರಯಾಣಿಕರು ಸಮಸ್ಯೆ ಅನುಭವಿಸುತ್ತಿದ್ದಾರೆ. ಇಲ್ಲಿನ ಡಿಪೋಗಳಲ್ಲಿ ಕಳೆದ ಹತ್ತಾರು ವರ್ಷಗಳಿಂದ ಕೆಲ ಅಧಿಕಾರಿಗಳು ಬೀಡು ಬಿಟ್ಟಿದ್ದು, ಅವರ ಬೇಜವಬ್ದಾರಿ ವರ್ತನೆ ಜನ ಸಾಮಾನ್ಯರ ಸಮಸ್ಯೆಗೆ ಕಾರಣವಾಗಿದೆ. ಬಸ್‌ಗಳ ನಿರ್ವಹಣೆಗೆ ಬರುವ ಅನುದಾನ ಸರಿಯಾಗಿ ಬಳಸಿಕೊಳ್ಳದಿರುವ ಆರೋಪವ್ಯಕ್ತವಾಗಿದೆ. ಸರ್ಕಾರಿ ಬಸ್ಸುಗಳ ಸರಿಯಾದ ಮೇಲ್ವಿಚಾರಣೆ ಮಾಡದೇ, ಗುಜರಿ ಸೇರಬೇಕಾದ ಬಸ್‌ಗಳಿಗೆ ಕಣ್ಣು ಮುಚ್ಚಿ `ಪಾಸಿಂಗ್’ ನೀಡುತ್ತಿರುವ ಆರ್‌ಟಿಓ ವಿರುದ್ಧವೂ ಜನ ಅಸಮಧಾನವ್ಯಕ್ತಪಡಿಸಿದ್ದಾರೆ. ಈ ದಿನ ಕಾರವಾರದಿಂದ ಸಿದ್ದರಕ್ಕೆ ತೆರಳುತ್ತಿದ್ದ ಬಸ್ ಕಿನ್ನರ ಬೋರಿಬಾಗದಲ್ಲಿ ಎಕ್ಸಲ್ ತುಂಡಾಗಿದ್ದರಿAದ ಅಲ್ಲಿಯೇ ನಿಂತಿದೆ. ಇದರಿಂದಾಗಿ ಇಡೀ ರಸ್ತೆ ಬಂದ್ ಆಗಿದ್ದು, ನೂರಾರು ವಾಹನ ಸವಾರರು ಹಾಗೂ ಶಾಲಾ ಮಕ್ಕಳು ಬಿಸಿಲಿನಲ್ಲಿ ನಿಂತು ಪರದಾಡಿದ್ದಾರೆ. ಇನ್ನೂ ಬಸ್ ನಿಲ್ದಾಣದಲ್ಲಿ ಬಸ್‌ಗಳು ನಿಂತಿದ್ದರೂ ಇಂಜಿನ್ ಮಾತ್ರ ಅಬ್ಬರಿಸುತ್ತಿರುತ್ತವೆ. ಬ್ಯಾಟರಿಗಳ ಸ್ಥಿತಿ ಎಷ್ಟು ದಯನೀಯವಾಗಿದೆ ಎಂದರೆ ಒಮ್ಮೆ ಇಂಜಿನ್ ಆಫ್ ಮಾಡಿದರೆ ಮತ್ತೆ ಚಾಲು ಮಾಡಲು ಪ್ರಯಾಣಿಕರೇ ಬಂದು ತಳ್ಳಬೇಕು ಎನ್ನುವ ಹಾಗಿದೆ. ಬೆಳಿಗ್ಗೆ ನಾಲ್ಕು ಬಸ್‌ಗಳು ಎರಡು ಗಂಟೆಗಳ ಕಾಲ ಇಂಜಿನ್ ಚಾಲನೆಯಲ್ಲಿರಿಸಿರುವುದನ್ನು ಜನ ವಿಡಿಯೋಸಹಿತ ಮಾಧ್ಯಮಕ್ಕೆ ರವಾನಿಸಿದ್ದಾರೆ. ಇದರಿಂದ ಇಂಧನ ವ್ಯರ್ಥವಾಗುತ್ತಿದ್ದರೂ ಅಧಿಕಾರಿಗಳಿಗೆ ಮಾತ್ರ ಇದು `ನಿತ್ಯದ ಕಾಯಕ’ ಎಂಬAತಾಗಿದೆ. ಹ್ಯಾoಡ್ ಬ್ರೇಕ್ ಇಲ್ಲ. ಕಲ್ಲೇ ಆಸರೆ: ಈ ಭಾಗದ ಬಹುತೇಕ ಬಸ್‌ಗಳಲ್ಲಿ ಹ್ಯಾಂಡ್ ಬ್ರೇಕ್ ಕೆಲಸ ಮಾಡುತ್ತಿಲ್ಲ. ಚಾಲಕರು ಬಸ್ ನಿಲ್ಲಿಸಿದಾಗ ಗಾಲಿಗೆ ಕಲ್ಲುಗಳನ್ನು ಆಸರೆಯಾಗಿಡುತ್ತಿದ್ದಾರೆ. ಕಳೆದ ವಾರವಷ್ಟೇ ನಗೆಕೊವೆ ಘಟ್ಟದಲ್ಲಿ ಬ್ರೇಕ್ ಮತ್ತು ಕ್ಲಚ್ ಫೇಲ್ ಆಗಿ ಬಸ್ ಹಿಂದಕ್ಕೆ ಚಲಿಸಿ ಭೀತಿ ಸೃಷ್ಟಿಸಿತ್ತು. ಚಾಲಕನ ಸಮಯಪ್ರಜ್ಞೆಯಿಂದ ದೊಡ್ಡ ಅನಾಹುತ ತಪ್ಪಿತು. ಆದರೆ, ಸಾರಿಗೆ ಇಲಾಖೆ ಈ ಬಗ್ಗೆ ತಲೆಕೆಡಿಸಿಕೊಂಡಿರಲಿಲ್ಲ.     - [ಹ್ಯಾಪಿ ಬರ್ತಡೆ: ಸೋಮಣ್ಣ ಬೆಂಬಲಿಗರಿoದ ಸಮಾಜ ಸೇವೆ](https://mobiletime.in/2026/02/happy-birthday-social-service-from-somannas-supporters/): ಯಲ್ಲಾಪುರ ಪಟ್ಟಣ ಪಂಚಾಯತ ಮಾಜಿ ಸದಸ್ಯ ಸೋಮೇಶ್ವರ ನಾಯ್ಕ ಅವರು ಶುಕ್ರವಾರ ಹುಟ್ಟುಹಬ್ಬ ಆಚರಿಸಿಕೊಂಡಿದ್ದು, ಅವರ ಬೆಂಬಲಿಗರು ಈ ದಿನ ಅಶಕ್ತರಿಗೆ ನೆರವಾಗಿದ್ದಾರೆ. ಸೋಮೇಶ್ವರ ನಾಯ್ಕ ಅವರ 40ನೇ ವರ್ಷದ ಹುಟ್ಟು ಹಬ್ಬದ ಅಂಗವಾಗಿ ರವೀಂದ್ರ ನಗರ ಗೆಳೆಯರ ಬಳಗದವರು ನಾಯ್ಕನಕೆರೆಯಲ್ಲಿರುವ ವೃದ್ಧಾಶ್ರಮಕ್ಕೆ ಭೇಟಿ ನೀಡಿದರು. ಅಲ್ಲಿನ ವೃದ್ಧರನ್ನು ಮಾತನಾಡಿಸಿದ ಪ್ರಮುಖರು ಅವರ ಊಟಕ್ಕೆ ಅಗತ್ಯವಿರುವ ಅಕ್ಕಿಯನ್ನು ವಿತರಿಸಿದರು. ಜೊತೆಗೆ ಹಣ್ಣು ಹಂಪಲುಗಳನ್ನು ಕೊಟ್ಟು ಆಶೀರ್ವಾದಪಡೆದರು. ಪ್ರಮುಖರಾದ ಮಾಲತೇಶ್ ಜಲದಿ, ಮಹೇಶ್ ಭೋವಿವಡ್ಡರ, ಕಾರ್ತಿಕ್ ಉಪ್ಪಿ ಮಂಜು ವಡ್ಡರ ದೇವಿಕೊಪ್ಪ, ಷಣ್ಮುಖ ನಾಯ್ಕ, ಗಿರೀಶ ಬೋವಿ, ಸಾಜು ಕುಮಾರ್ ವಾಲ್ಮೀಕಿ, ಶಿವು ಬೋವಿ, ಸಮೀರ ಶೇಖ್, ಸಂತು ಬೋವಿ ಇನ್ನಿತರರು ಅಲ್ಲಿದ್ದವರಿಗೆ ನೆರವಾದರು. - [ಲಡ್ಡು ವಿತರಣೆ: ಲಾರಿ ಮಾಲಕರ ಸೇವೆಗೆ ಶ್ಲಾಘನೆ](https://mobiletime.in/2026/02/fair-laddu-continued-service-on-the-third-day/): ಯಲ್ಲಾಪುರ ಜಾತ್ರೆಗೆ ಬರುವ ಭಕ್ತರಿಗೆ ಲಡ್ಡು ಪ್ರಸಾದ ವಿತರಣೆ ಮೂರನೇ ದಿನವೂ ಮುಂದುವರೆದಿದೆ. ಯಲ್ಲಾಪುರ ದೇವಿ ಗದ್ದುಗೆಯ ಬಲಭಾಗದಲ್ಲಿ ಲಡ್ಡು ವಿತರಣೆ ನಡೆದಿದೆ. ಲಾರಿ ಮಾಲಕ ಸಂಘದವರು ಲಡ್ಡು ಪ್ರಸಾದ ವಿತರಣೆಯ ಜವಾಬ್ದಾರಿವಹಿಸಿಕೊಂಡಿದ್ದು, ಈವರೆಗೆ 20 ಸಾವಿರಕ್ಕೂ ಅಧಿಕ ಭಕ್ತರಿಗೆ ಅವರು ಲಡ್ಡು ಹಂಚಿದ್ದಾರೆ. ಲಡ್ಡು ವಿತರಣಾ ಮಳಿಗೆಗೆ ಶನಿವಾರ ಜಿಲ್ಲಾ ಪಂಚಾಯತ ಮಾಜಿ ಸದಸ್ಯ ವಿಜಯ ಮಿರಾಶಿ ಅವರು ಭೇಟಿ ನೀಡಿದರು. ಅವರು ಪ್ರಸಾದ ಸ್ವೀಕರಿಸಿದ್ದು, ಸಂಘಟನೆಯ ಕಾರ್ಯವನ್ನು ಶ್ಲಾಘಿಸಿದರು. ಲಡ್ಡು ಪ್ರಸಾದ ವಿತರಣೆ ಪಕ್ಕದಲ್ಲಿ ಡಿ ಎನ್ ಗಾಂವ್ಕರ್ ಅವರು ನಿಂತಿದ್ದು, ಅವರು ಭಕ್ತರಿಗೆ ಪಾನಕ ಸೇವೆ ಒದಗಿಸುತ್ತಿದ್ದರು. ಲಾರಿ ಮಾಲಕ ಸಂಘದ ಅಧ್ಯಕ್ಷ ಸುಜಯ ಮರಾಠಿ, ಗೌರವ ಅಧ್ಯಕ್ಷ ಮಹೇಶ್ ನಾಯ್ಕ, ಟಿಪ್ಪರ್ ಸಂಘದ ಅಧ್ಯಕ್ಷ ನವೀನ್ ನಾಯ್ಕ, ಪ್ರಮುಖರಾದ ಎಂ ಡಿ ಮುಲ್ಲಾ, ರೂಪೇಶ ನಾಯ್ಕ, ನಾಗೇಂದ್ರ ಭಟ್ಟ, ರೂಪೇಶ ನಾಯ್ಕ, ಮುರಳಿ ರಾವಲ್, ಸುರೇಶ ಮರಾಠಿ ಇನ್ನಿತರರು ಭಕ್ತಿಯಿಂದ ಪ್ರಸಾದ ವಿತರಣಾ ಕಾರ್ಯದಲ್ಲಿರುವುದು ಕಾಣಿಸಿತು. ಉದ್ಯಮಿ ಬಾಲು ನಾಯ್ಕ ಅವರು ದೇವಿ ಗೆದ್ದುಗೆಯಲ್ಲಿದ್ದು, ಲಡ್ಡು ಪ್ರಸಾದ ವಿತರಣೆ ಹಾಗೂ ಪಾನಕ ವಿತರಣೆ ಮಾಡುತ್ತಿರುವವರ ಕಾರ್ಯವನ್ನು ಶ್ಲಾಘಿಸಿದರು. - [ಮೂರು ದಿನ-ಆರು ಜನ: ವಾಲಿಬಾಲ್ ಪಂದ್ಯಾವಳಿಗೆ ಚಾಲನೆ](https://mobiletime.in/2026/02/three-days-six-people-volleyball-tournament-kicks-off/): ಶಿರಸಿ ಮರಾಠಿಕೊಪ್ಪದ ಶಿವಾ ಬಾಯ್ಸ ಗೆಳೆಯರ ಬಳಗದವರು ಮೂರು ದಿನದ ಆರು ಜನರ ಹೊನಲು ಬೆಳಕಿನ ಖೊಡ್ಡಾ ವಾಲಿಬಾಲ್ ಪಂದ್ಯಾವಳಿ ಆಯೋಜಿಸಿದ್ದಾರೆ. ಫೆ 13ರಿಂದ ಈ ಕ್ರೀಡಾಕೂಟ ಶುರುವಾಗಿದ್ದು, ಫೆ 15ರವರೆಗೆ ನಡೆಯಲಿದೆ. ಮೊದಲ ದಿನ ನಡೆದ ಕಾರ್ಯಕ್ರಮವನ್ನು ಸಾಮಾಜಿಕ ಕಾರ್ಯಕರ್ತ ಉಪೇಂದ್ರ ಪೈ ಅವರು ಉದ್ಘಾಟಿಸಿದ್ದಾರೆ. ನಂತರ ಮಾತನಾಡಿದ ಅವರು `ಕ್ರೀಡೆ ಎಂಬುದು ಕೇವಲ ಸೋಲು-ಗೆಲುವಿನ ಮಾತಲ್ಲ. ಅದು ನಮ್ಮ ದೈಹಿಕ, ಮಾನಸಿಕ ಆರೋಗ್ಯದ ಸಂಕೇತ’ ಎಂದು ಹೇಳಿದ್ದಾರೆ ಸಾಮಾಜಿಕ ಕಾರ್ಯಕರ್ತ ಚಂದ್ರಶೇಖರ ಮಾದನಗೇರಿ ಅವರು ಮಾತನಾಡಿ `ಕ್ರೀಡೆಯಿಂದ ಮನೋಬಲ ಹೆಚ್ಚುತ್ತದೆ. ಹೀಗಾಗಿ ಇಂಥ ಪಂದ್ಯಾವಳಿಗಳು ಹೆಚ್ಚು ನಡೆಯಬೇಕು’ ಎಂದಿದ್ದಾರೆ. ಅಧ್ಯಕ್ಷತೆವಹಿಸಿದ್ದ ಭೂತೇಶ್ವರ ಪತ್ತಿನ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಾಹಕ ವಿನಾಯಕ ಶೆಟ್ಟಿ ಅವರು ಮಾತನಾಡಿ `ಕ್ರೀಡೆಯಲ್ಲಿ ಒಬ್ಬರ ಚಾಕಚಕ್ಯತೆಗಿಂತಲೂ ಇಡೀ ತಂಡದ ಸಮನ್ವಯತೆ ಮುಖ್ಯ.ಸೋಲಿಗೆ ಕುಗ್ಗಬೇಡಿ, ಗೆಲುವಿಗೆ ಬೀಗಬೇಡಿ. ಇಂತಹ ಪಂದ್ಯಾವಳಿಗಳೇ ನಾಳಿನ ರಾಜ್ಯ ಮತ್ತು ರಾಷ್ಟ್ರ ಮಟ್ಟದ ಆಟಗಾರರನ್ನು ರೂಪಿಸುತ್ತವೆ ಎಂದರು. `ಲೋಕಧ್ವನಿ ಹೆಮ್ಮೆಯ ಸಾಧಕ ಪ್ರಶಸ್ತಿ’ಪಡೆದ ಶ್ರೀ ಭೂತೇಶ್ವರ ಪತ್ತಿನ ಸಹಕಾರಿ ಸಂಘದ ಪರವಾಗಿ ವಿನಾಯಕ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು. ಪ್ರಮುಖರಾದ ನಾಗರಾಜ ಗುಡಿಗಾರ್, ಮಹೇಶ ಪ್ರಭು, ಅಜಯಲಾಡನವರ್, ಉಪೇಂದ್ರ ಮೇಸ್ತ, ಅಶೋಕ ಶೆಟ್ಟಿ ಅವರು ಕಾರ್ಯಕ್ರಮದಲ್ಲಿದ್ದರು. ಕೇಮು ವಂದಿಗೆ ಅವರು ನಿರೂಪಿಸಿದರು. - [ಬೇಡ್ತಿ-ವರದಾ ನದಿ ಜೋಡಣೆ: ಒಂದೇ ವಾಕ್ಯದಲ್ಲಿ ಉತ್ತರಿಸಿದ ಸಿದ್ದು!](https://mobiletime.in/2026/02/bedi-varada-river-linking-sidhu-answered-in-one-sentence/): ಬೇಡ್ತಿ-ವರದಾ ನದಿ ಜೋಡಣೆ ವಿಷಯವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿದ್ದಾರೆ. ಈ ವಿಷಯವಾಗಿ ಅವರು ಈ ಬಾರಿ ಒಂದೇ ವಾಕ್ಯದಲ್ಲಿ ಉತ್ತರಿಸಿ ಪ್ರಶ್ನೆಯ ಸುರಿಮಳೆಯಿಂದ ತಪ್ಪಿಸಿಕೊಂಡಿದ್ದಾರೆ. ಹಾವೇರಿಯ ಹೆಲಿಪ್ಯಾಡಿಗೆ ಬಂದಿದ್ದ ಸಿಎಂ ಸಿದ್ದರಾಮಯ್ಯ ಅವರನ್ನು ಪತ್ರಕರ್ತರು ಮುತ್ತಿಗೆ ಹಾಕಿದ್ದು, ಬಗೆ ಬಗೆಯ ಪ್ರಶ್ನೆ ಕೇಳಿದರು. ಈ ವೇಳೆ `ಬೇಡ್ತಿ-ವರದಾ ನದಿ ತಿರುವು ವಿಷಯವಾಗಿ ಉತ್ತರ ಕನ್ನಡ ಜಿಲ್ಲೆಯವರು ವಿರೋಧಿಸುತ್ತಿದ್ದಾರೆ’ ಎಂದು ಪತ್ರಕರ್ತರೊಬ್ಬರು ಪ್ರಸ್ತಾಪಿಸಿದರು. ಮುಖ್ಯಮಂತ್ರಿಗಳ ಹಿಂದಿದ್ದ ವ್ಯಕ್ತಿಯೊಬ್ಬರು `ಈ ವಿಷಯವಾಗಿ ಈಗಾಗಲೇ ಡಿಪಿಆರ್ ಸಿದ್ಧಪಡಿಸಲಾಗಿದೆ. ಅದನ್ನು ಕೇಂದ್ರ ಸರ್ಕಾರಕ್ಕೆ ಕಳುಹಿಸಲಾಗಿದೆ’ ಎಂದರು. ಅದಾದ ನಂತರ ಸಿದ್ಧರಾಮಯ್ಯ ಅವರು ಸಹ ಕೇಂದ್ರ ಸರ್ಕಾರದ ಕಡೆ ತಮ್ಮ ಮಾತು ತಿರುಗಿಸಿದರು. ಬೇಡ್ತಿ – ವರದಾ ನದಿಯ ಜೋಡಣೆ ಬಗ್ಗೆ ಉತ್ತರ ಕನ್ನಡ ಜನತೆ ವಿರೋಧ ವ್ಯಕ್ತಪಡಿಸಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಸಿದ್ಧರಾಮಯ್ಯ ಅವರು `ಡಿಪಿಆರ್ ನ್ನು ಕೇಂದ್ರ ಸರ್ಕಾರಕ್ಕೆ ಕಳುಹಿಸಿಕೊಡಲಾಗಿದ್ದು, ಅವರು ತೀರ್ಮಾನ ಕೈಗೊಳ್ಳಬೇಕಾಗಿದೆ. ಕೇಂದ್ರ ಸರ್ಕಾರ ಯಾವುದರ ಬಗ್ಗೆಯೂ ತೀರ್ಮಾನ ಮಾಡುತ್ತಿಲ್ಲ. ಹಾಗಾಗಿ ನಮಗೆ ಅವರು ತೀರ್ಮಾನ ಕೈಗೊಳ್ಳುವ ಬಗ್ಗೆ ಭರವಸೆಯೂ ಇಲ್ಲ, ನಂಬಿಕೆಯೂ ಇಲ್ಲ’ ಎಂದು ಹೇಳಿದರು. ಪತ್ರಕರ್ತರು ಕೇಳಿದ್ದೇನು? ಸೀಎಂ ಹೇಳಿದ್ದೇನು? ವಿಡಿಯೋ ಇಲ್ಲಿ ನೋಡಿ.. - [ಯಲ್ಲಾಪುರ ಜಾತ್ರೆ: ಅನುದಿನವೂ ಅನ್ನ ದಾನ!](https://mobiletime.in/2026/02/yellapur-fair-food-and-drinks-every-day/): ಯಲ್ಲಾಪುರ ಗ್ರಾಮ ದೇವಿ ಜಾತ್ರೆಗೆ ಬರುವ ಭಕ್ತರಿಗೆ ಸಮಾನ ಮನಸ್ಕರ ಸಂಘಟನೆಯೊoದು ಅನುದಿನವೂ ಅನ್ನ ಪ್ರಸಾದ ವಿತರಿಸುತ್ತಿದೆ. ಕಾಳಮ್ಮ-ದುರ್ಗಮ್ಮ ದೇವಿಯರಿಗೆ ನೈವೆದ್ಯ ಮಾಡಿದ ಪಾಯಸವನ್ನು ಇಲ್ಲಿ ಭಕ್ತರಿಗೆ ಉಣಬಡಿಸಲಾಗುತ್ತಿದೆ. ಯಲ್ಲಾಪುರದ ಉಪ ಅರಣ್ಯ ಸಂರಕ್ಷಣಾಧಿಕಾರಿ ಕಚೇರಿ ಬಳಿ ನಿತ್ಯ ಸರಿ ಸುಮಾರು 5 ಸಾವಿರಕ್ಕೂ ಅಧಿಕ ಭಕ್ತರಿಗೆ ಅನ್ನದಾನ ಮಾಡಲಾಗುತ್ತಿದೆ. ಬರುವ ಭಕ್ತರಿಗೆ ಹೊಟ್ಟೆ ತುಂಬ ಅನ್ನ, ಸಾಂಬಾರ್, ಚಟ್ನಿ, ಪಲ್ಯ, ಪಾಯಸದ ಔತಣ ನೀಡಲಾಗುತ್ತಿದೆ. ಅತ್ಯಂತ ಶಿಸ್ತು, ಸಂಯಮದಿoದ ಈ ಕಾರ್ಯಕ್ಕಾಗಿ ಕಾರ್ಯಕರ್ತರು ದುಡಿಯುತ್ತಿದ್ದಾರೆ. ಜಾತ್ರೆ ಅವಧಿಯಲ್ಲಿ ನಾಟಕ ಪ್ರದರ್ಶನ ನಡೆಸುತ್ತಿದ್ದ ವಿ ವಿ ಜೋಶಿ ಅವರು ಈ ಅನ್ನದಾನ ಸಂಘಟನೆಯ ರೂವಾರಿ. ನಾಟಕ ಪ್ರದರ್ಶನದಿಂದ ನಷ್ಟ ಅನುಭವಿಸುತ್ತಿದ್ದ ವಿ ವಿ ಜೋಶಿ ಅವರು ಈ ಬಗ್ಗೆ ದೇವಿಯರಲ್ಲಿ ಪ್ರಸಾದ ಕೇಳಿದ್ದು, ಆ ಅವಧಿಯಲ್ಲಿ ಅವರಿಗೆ ಅನ್ನದಾನ ಮಾಡುವ ಸೂಚನೆ ಸಿಕ್ಕಿತು. ಈ ಹಿನ್ನಲೆ ಅನ್ನದಾನದ ಸಂಕಲ್ಪ ಮಾಡಿದ ಅವರು ಮೊದಲು ವೆಂಕಟ್ರಮಣ ಮಠದಲ್ಲಿ ಮೂರು ದಿನದ ಅನ್ನದಾನ ಸೇವೆ ಮಾಡಿದರು. ಅದಾದ ನಂತರ ಕಳೆದ ನಾಲ್ಕು ವರ್ಷಗಳಿಂದ ಜಾತ್ರೆಯ ಎಲ್ಲಾ ದಿನವೂ ಅನ್ನದಾನ ಮಾಡುವ ಕಾಯಕ ಮಾಡಿಕೊಂಡು ಬಂದಿದ್ದಾರೆ. ದೇವಾಲಯದ ಅರ್ಚಕ ಪರಶುರಾಮ ಆಚಾರಿ, ಸಂತೋಷ ಗುಡಿಗಾರ, ಗಣೇಶ ಪಂಡ್ರಾಪುರ, ಪ್ರಕಾಶ ರೇವಣಕರ್ ಅವರು ವಿ ವಿ ಜೋಶಿ ಅವರ ಕಾರ್ಯಕ್ಕೆ ಕೈ ಜೋಡಿಸಿದ್ದಾರೆ. ಅನೇಕ ದಾನಿಗಳು ಈ ಸೇವೆಗೆ ಕೈ ಜೋಡಿಸಿದ್ದು, ಅಕ್ಕಿ-ಕಾಯಿ, ಬೆಲ್ಲ, ಬೆಳೆಗಳನ್ನು ದೇಣಿಗೆ ರೂಪದಲ್ಲಿ ಕೊಡುತ್ತಿದ್ದಾರೆ. `ಶಿಸ್ತಿನ ಸಾಲಿನಲ್ಲಿ ನಿಂತು ಪ್ರಸಾದ ಬೋಜನ ಸ್ವೀಕರಿಸಬೇಕು. ಆಹಾರವನ್ನು ಹಾಳು ಮಾಡಬಾರದು. ನೀರನ್ನು ನಿಯಮಿತವಾಗಿ ಬಳಸಬೇಕು’ ಎಂಬುದು ಇಲ್ಲಿನ ನಿಯಮ. ವೃದ್ಧರು, ವಿದ್ಯಾರ್ಥಿಗಳು, ನೌಕರರು ಹಾಗೂ ಅಂಗವಿಕಲರು ಇಲ್ಲಿ ಸಾಲಿನಲ್ಲಿ ನಿಲ್ಲಬೇಕಾದ ಅಗತ್ಯವಿಲ್ಲ. ಪ್ರವೇಶ ದ್ವಾರದ ಬಳಿ ಅವರಿಗೆ ಪ್ರತ್ಯೇಕ ಕೌಂಟರ್ ತೆರೆಯಲಾಗಿದ್ದು, ಅಲ್ಲಿಂದ ಪ್ರವೇಶಿಸಿ ಅವರು ಪ್ರಸಾದ ಸ್ವೀಕರಿಸುವ ಅವಕಾಶ ಕಲ್ಪಿಸಲಾಗಿದೆ. ಜಾತ್ರೆ ನಡುವಿನ ದಿನ ಶಿವರಾತ್ರಿ ಬಂದಿದ್ದು, ಶಿವರಾತ್ರಿಯ ದಿನ ಅನ್ನ ಪ್ರಸಾದದ ಬದಲು ಅಲ್ಪ ಉಪಹಾರದ ವ್ಯವಸ್ಥೆ ಮಾಡಲಾಗಿದೆ. ಈ ದಿನವೂ ಒಗ್ಗರಣೆ ಅವಲಕ್ಕಿ ಜೊತೆ ಗೋದಿ ಕಡಿ ಪಾಯಸವನ್ನು ಭಕ್ತರಿಗೆ ಕೊಡಲಾಗುತ್ತದೆ. ಅನ್ನ ಪ್ರಸಾದದ ಅವಧಿಯಲ್ಲಿ ಪ್ರತಿ ಹಂತದಲ್ಲಿಯೂ ಸ್ವಯಂ ಸೇವಕರು ಭಕ್ತರ ನೆರವಿಗೆ ಬರುತ್ತಿದ್ದಾರೆ. ನಿತ್ಯ 35ಕ್ಕೂ ಅಧಿಕ ಸ್ವಯಂ ಸೇವಕರು ಭಕ್ತರ ಸೇವೆಗೆ ನಿಂತಿದ್ದಾರೆ. ವಿವಿಧ ಮಹಿಳಾ ಮಂಡಳ, ಸ್ತಿಶಕ್ತಿ ಸಂಘಟನೆಯವರು ಈ ಸೇವಾ ಕಾರ್ಯಕ್ಕೆ ಕೈ ಜೋಡಿಸಿದ್ದಾರೆ. ಗ್ರಾಮೀಣ ಭಾಗದ ಮಹಿಳೆಯರು ಸಹ ಹೆಚ್ಚಿನ ಪ್ರಮಾಣದಲ್ಲಿ ಆಗಮಿಸಿ ತಮ್ಮಿಂದ ಆದ ಸೇವೆ ಮಾಡುತ್ತಿದ್ದಾರೆ. ಕನ್ನಡಗಲ್ ಹಾಗೂ ಲಿಂಗನಕೊಪ್ಪದ ಭಾಗದ ಜನ ಅಚ್ಚುಕಟ್ಟಾಗಿ ಅಡುಗೆ ಸಿದ್ಧಪಡಿಸುತ್ತಿದ್ದಾರೆ. ಮಧ್ಯಾಹ್ನ 12.30ಕ್ಕೆ ದೇವಿಯರಿಗೆ ನೈವೆದ್ಯ ಮಾಡಿ ನಂತರ ಪ್ರಸಾದ ವಿತರಣೆಯ ಕಾರ್ಯ ನಡೆಯುತ್ತಿದೆ. ಎಲ್ಲಾ ಭಕ್ತರ ಊಟ ಮುಗಿದ ನಂತರವೇ ಇಲ್ಲಿ ಸಂಘಟಕರು ಊಟ ಮಾಡುತ್ತಿದ್ದಾರೆ. - [ಬಸ್ ಅಪಘಾತ: ಮಂಗನ ಕಾಟಕ್ಕೆ ಮಾನವರಿಗೆ ಸಂಕಷ್ಟ!](https://mobiletime.in/2026/02/bus-accident-humans-suffer-due-to-monkey-attack/): ಹುಬ್ಬಳ್ಳಿ – ಶಿರಸಿ ಬಸ್ಸು ಶುಕ್ರವಾರ ತಡಸ್ ಬಳಿ ಅಪಘಾತಕ್ಕೀಡಾಗಿದೆ. ಬಸ್ಸಿನಲ್ಲಿದ್ದ 35ಕ್ಕೂ ಅಧಿಕ ಪ್ರಯಾಣಿಕರು ಗಾಯಗೊಂಡಿದ್ದಾರೆ. ಮಾಹಿತಿಗಳ ಪ್ರಕಾರ ಚಲಿಸುತ್ತಿದ್ದ ಬಸ್ಸಿಗೆ ಅಡ್ಡಲಾಗಿ ಮಂಗ ಬಂದಿದೆ. ಮಂಗನನ್ನು ನೋಡಿದ ಬಸ್ ಚಾಲಕ ವಿಚಲಿತನಾಗಿದ್ದು, ಆ ವೇಲೆ ಬಸ್ಸು ಚಾಲಕನ ನಿಯಂತ್ರಣ ತಪ್ಪಿದೆ. ಪರಿಣಾಮ ಆ ಬಸ್ಸು ಎದುರಿಗೆ ಹೋಗುತ್ತಿದ್ದ ಲಾರಿಗೆ ಜೋರಾಗಿ ಗುದ್ದಿದೆ. ಈ ಅಪಘಾತದ ರಭಸಕ್ಕೆ ಬಸ್ಸಿನ ಮುಂದಿನ ಭಾಗ ಜಖಂ ಆಗಿದೆ. ಬಸ್ಸಿನ ಒಳಗಿದ್ದ 35ರಷ್ಟು ಪ್ರಯಾಣಿಕರು ಗಾಯಗೊಂಡಿದ್ದಾರೆ. ಅನೇಕ ಪ್ರಯಾಣಿಕರಿಗೆ ಮುಖದ ಭಾಗಕ್ಕೆ ನೋವಾಗಿದೆ. ಈ ಬಸ್ಸು ಹುಬ್ಬಳ್ಳಿಯಿಂದ ಹೊರಟಿದ್ದು, ಶಿರಸಿಗೆ ಬರುವಾಗ ಈ ಅವಘಡ ನಡೆದಿದೆ. ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಹೀಗಾಗಿ ಆತಂಕಪಡುವ ಅಗತ್ಯವಿಲ್ಲ. - [ಸೊಸೈಟಿ ಸಾಲ: ಶೂಲದ ಹೊರೆ ಸಹಿಸದ ರೈತ ಸಾವು!](https://mobiletime.in/2026/02/society-loan-farmer-dies-after-not-being-able-to-bear-the-burden-of-the-stake/): ಸಿದ್ದಾಪುರದ ಅಥರ್ವ ಸೊಸೈಟಿ ಹಾಗೂ ಶಿರಸಿಯ ಶ್ರೀಮಾತಾ ಸೊಸೈಟಿಯಲ್ಲಿ ಸಾಲ ಮಾಡಿದ್ದ ಸಂದೀಪ ಪಲ್ಲೇದ್ ಅವರು ಸಾಲದ ಹೊರೆ ಸಹಿಸಲಾಗದೇ ಸಾವನಪ್ಪಿದ್ದಾರೆ. ಸಿದ್ದಾಪುರದ ಬಸವನಗಲ್ಲಿಯ ಸಂದೀಪ ಮುರಿಗಪ್ಪಾ ಪಲ್ಲೇದ್ (45) ಅವರು ವಾಸವಾಗಿದ್ದರು. ಕೃಷಿಕರಾಗಿದ್ದ ಅವರು ಕೃಷಿ ಜೊತೆ ಕೋಲ್ಡ್ ಡ್ರಿಂಕ್ಸ್ ವ್ಯಾಪಾರವನ್ನು ಶುರು ಮಾಡಿದ್ದರು. ಸಂದೀಪ ಪಲ್ಲೇದ ಅವರ ಪತ್ನಿ ಮಂಜುಳಾ ಪಲ್ಲೇದ್ ಅವರು ಅತಿಥಿ ಶಿಕ್ಷಕರಾಗಿ ದುಡಿಯುತ್ತಿದ್ದರು. ಆದರೆ, ಅವರಿಬ್ಬರ ದುಡಿಮೆಯಿಂದ ಕುಟುಂಬ ನಿರ್ವಹಣೆ ಸಾಧ್ಯವಾಗಿರಲಿಲ್ಲ. ಹೀಗಾಗಿ ಕವಂಚೂರು ಗ್ರಾಮದಲ್ಲಿದ್ದ ಗದ್ದೆಯನ್ನು ತೋಟವನ್ನಾಗಿ ಪರಿವರ್ತಿಸಲು ್ಲ ಸಂದೀಪ ಪಲ್ಲೇದ್ ಅವರು ನಿರ್ಧರಿಸಿದರು. ಇದಕ್ಕಾಗಿ ಅವರು ಅಲ್ಲಲ್ಲಿ ಕೈಗಡ ಸಾಲಪಡೆದರು. ಕೋಲ್ಡ್ ಡ್ರಿಂಕ್ಸ ಜೊತೆ ನೀರಿನ ಬಾಟಲಿ ವ್ಯಾಪಾರ ವೃದ್ಧಿಗಾಗಿಯೂ ಅವರು ಇನ್ನಷ್ಟು ಸಾಲ ಸ್ವೀಕರಿಸಿದರು. ಇದರೊಂದಿಗೆ ಅಡಿಕೆ ಸಸಿ ನಾಟಿ, ಮಣ್ಣು ಹಾಕಿಸುವಿಕೆ ಸೇರಿ ಇನ್ನಿತರ ಕೆಲಸಗಳಿಗೆ ಹಣದ ಅಡಚಣೆ ಉಂಟಾಯಿತು. ಸಿದ್ದಾಪುರದ ಅಥರ್ವ ಸೊಸೈಟಿ ಹಾಗೂ ಶಿರಸಿಯ ಶ್ರೀಮಾತಾ ಸೊಸೈಟಿಗೆ ಹೋಗಿ ಅಲ್ಲಿಯೂ ಸಂದೀಪ ಪಲ್ಲೇದ್ ಅವರು ಸಾಲಪಡೆದರು. ಆದರೆ, ವ್ಯಾಪಾರದಲ್ಲಿ ನಿರೀಕ್ಷಿತ ಪ್ರಮಾಣದ ಲಾಭ ಅವರಿಗೆ ಸಿಗಲಿಲ್ಲ. ಕೃಷಿ ಕೆಲಸವೂ ಸರಿಯಾಗಿ ಆಗಲಿಲ್ಲ. ನಷ್ಟಕ್ಕೆ ಹೆದರಿದ ಅವರು ದುಡುಕು ನಿರ್ಧಾರಕ್ಕೆ ಮುಂದಾಗಿದ್ದು, ಫೆ 12ರಂದು ತಮ್ಮ ಹಳೆ ಮನೆಯಲ್ಲಿ ಕಳೆನಾಶಕ ಸೇವಿಸಿದರು. ಇದನ್ನು ನೋಡಿದ ಕುಟುಂಬದವರು ಸಂದೀಪ ಪಲ್ಲಾಟೆ ಅವರನ್ನು ಸಿದ್ದಾಪುರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದರು. ಅದಾದ ನಂತರ ಅವರನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಕರೆದೊಯ್ಯಲಾಯಿತು. ನಿರಂತರ ಚಿಕಿತ್ಸೆ ನಂತರವೂ ಅವರು ಫೆ 13ರಂದು ಸಾವನಪ್ಪಿದರು. ಈ ವಿಷಯದ ಬಗ್ಗೆ ಮಂಜುಳಾ ಪಲ್ಲೇದ್ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದು, ಸಿದ್ದಾಪುರ ಪೊಲೀಸರು ಪ್ರಕರಣ ದಾಖಲಿಸಿದರು. - [ಮಹಡಿ ಮೇಲಿಂದ ಬಿದ್ದ ಪೊಲೀಸ್: ಸಾವು](https://mobiletime.in/2026/02/policeman-dies-after-falling-from-top-floor/): ಕಾರವಾರ ನಗರ ಪೊಲೀಸ್ ಠಾಣೆಯ ಸಿಬ್ಬಂದಿ ಸಂಜಯ ನಾಯ್ಕ ಅವರು ಮನೆ ಮಹಡಿ ಮೇಲಿದ್ದ ಬಿದ್ದು ಸಾವನಪ್ಪಿದ್ದಾರೆ. ಕಾರವಾರದ ಸದಾಶಿವಗಡದ ಮಾನವಾಡದಲ್ಲಿ ಸಂಜಯ ದಿಗಂಬರ್ ನಾಯ್ಕ (52) ಅವರು ವಾಸವಾಗಿದ್ದರು. ಕಾರವಾರ ನಗರ ಪೊಲೀಸ್ ಠಾಣೆಯಲ್ಲಿ ಅವರು ಕರ್ತವ್ಯ ನಿಭಾಯಿಸುತ್ತಿದ್ದರು. ಫೆಬ್ರವರಿ 11ರಂದು ಮಧ್ಯಾಹ್ನ ಊಟಕ್ಕೆ ಮನೆಗೆ ಹೋಗಿದ್ದ ಅವರು ಊಟದ ನಂತರ ಮಹಡಿ ಹತ್ತಿದ್ದರು. ಮಹಡಿ ಮೇಲಿನ ಗ್ಯಾಲರಿ ಬಳಿಯಿದ್ದ ಮೆಟ್ಟಿಲುಗಳ ಮೂಲಕ ಅಂಗಳಕ್ಕೆ ಇಳಿಯುವಾಗ ಆಯತಪ್ಪಿ ಬಿದ್ದರು. ಮೆಟ್ಟಿಲ ಮೇಲೆ ಮುಗುಚಿ ಬಿದ್ದ ಪರಿಣಾಮ ಸಂಜಯ ನಾಯ್ಕ ಅವರ ಪ್ರಜ್ಞೆ ತಪ್ಪಿತು. ಅವರು ಮಾತನಾಡುವ ಸ್ಥಿತಿಯಲ್ಲಿಯೂ ಇರಲಿಲ್ಲ. ಹೀಗಾಗಿ ಕುಟುಂಬದವರು ಸಂಜಯ ನಾಯ್ಕ ಅವರನ್ನು ಕಾರವಾರ ಜಿಲ್ಲಾಸ್ಪತ್ರೆಗೆ ದಾಖಲಿಸಿದರು. ಅಲ್ಲಿ ಅವರಿಗೆ ನಿರಂತರ ಚಿಕಿತ್ಸೆ ನೀಡಲಾಯಿತು. ಆದರೆ, ಅದರಿಂದ ಯಾವ ಪ್ರಯೋಜನವೂ ಆಗಲಿಲ್ಲ. ಫೆಬ್ರವರಿ 13ರಂದು ಸಂಜಯ ನಾಯ್ಕ ಅವರು ಕೊನೆಯುಸಿರೆಳೆದರು. ಪತಿಯ ಸಾವಿನ ಬಗ್ಗೆ ಸುಲಕ್ಷಾ ನಾಯ್ಕ ಅವರು ಚಿತ್ತಾಕುಲ ಪೊಲೀಸರಿಗೆ ಹೇಳಿದ್ದು, ಪೊಲೀಸರು ಪ್ರಕರಣ ದಾಖಲಿಸಿದರು. - [ನಾರಿಗಳ ಕೈಯಲ್ಲಿ ಖಾಲಿ ಕೊಡಗಳ ಮೆರವಣಿಗೆ: ಇದೇ ನಮ್ಮ ಸರ್ಕಾರದ ಸಾಧನೆ!](https://mobiletime.in/2026/02/the-procession-of-empty-pots-in-the-hands-of-women-this-is-the-achievement-of-our-government/): ಕುಡಿಯುವ ನೀರಿನ ಯೋಜನೆಗಾಗಿ ಕೋಟಿ ಕೋಟಿ ರೂ ವೆಚ್ಚ ಮಾಡುವ ಸರ್ಕಾರಕ್ಕೆ ಶಿರಸಿಯ ಬದನಗೋಡು ಬಳಿಯ ರಂಗಾಪುರದ ಜನರಿಗೆ ಶುದ್ಧ ನೀರು ಕೊಡಲು ಸಾಧ್ಯವಾಗಿಲ್ಲ. ಕುಡಿಯಲು ನೀರಿಲ್ಲದ ಜನ ಗ್ರಾಮ ಪಂಚಾಯತ ವಿರುದ್ಧ ಆಕ್ರೋಶವ್ಯಕ್ತಪಡಿಸಿದ್ದು, ಈ ದಿನ ಆ ಭಾಗದ ಮಹಿಳೆಯರು ಖಾಲಿ ಕೊಡಗಳ ಮೆರವಣಿಗೆ ನಡೆಸಿ ಪ್ರತಿಭಟಿಸಿದ್ದಾರೆ. ಬದನಗೋಡ ಗ್ರಾಮ ಪಂಚಾಯತ ವ್ಯಾಪ್ತಿಯ ರಂಗಾಪುರ ಗ್ರಾಮದಲ್ಲಿ ಕೆಲ ದಿನಗಳಿಂದ ಕುಡಿಯಲು ನೀರು ಸಿಗುತ್ತಿಲ್ಲ. ಶುದ್ಧ ನೀರಿಗಾಗಿ ಜನ ಹಪಹಪಿಸುತ್ತಿದ್ದು, ಈ ಬಗ್ಗೆ ಮನವಿ ಮಾಡಿದರೂ ಸ್ಥಳೀಯ ಆಡಳಿತ ತಲೆಕೆಡಿಸಿಕೊಂಡಿಲ್ಲ. ಸುತ್ತಲಿನ ವಿವಿಧ ಹಳ್ಳಿಗಳಲ್ಲಿಯೂ ಇದೇ ಸಮಸ್ಯೆ ಉಲ್ಬಣಿಸಿದೆ. ಅಲ್ಲಿನ ಜನರ ಮನವಿಯನ್ನು ಸಹ ಆಡಳಿತದಲ್ಲಿರುವವರು ಆಲಿಸಿಲ್ಲ. ಒಂದು ವಾರದಿಂದ ನೀರಿನ ಸಮಸ್ಯೆ ಹೆಚ್ಚಾದ ಕಾರಣ ಜನ ಆಕ್ರೋಶಕ್ಕೆ ಒಳಗಾಗಿದ್ದಾರೆ. ಇಲ್ಲಿ ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿ ಪರಸಪ್ಪ ಲಂಬಾಣಿ ಅವರು ಸಹ ಜನರ ಕೈಗೆ ಸಿಗುತ್ತಿಲ್ಲ. ತಿಂಗಳಿಗೆ ಮೂರು ದಿನ ಮಾತ್ರ ಅವರು ಕಚೇರಿಗೆ ಬರುತ್ತಿರುವ ಬಗ್ಗೆ ಜನ ಆರೋಪಿಸಿದ್ದಾರೆ. ಮಧ್ಯಾಹ್ನ ೧೨ಗಂಟೆಗೆ ಬರುವ ಅಧಿಕಾರಿ ೨ ಗಂಟೆಯ ಒಳಗೆ ಮನೆಗೆ ಮರಳುತ್ತಿದ್ದು, ನೀರಿನ ಸಮಸ್ಯೆ ಬಗ್ಗೆ ಹೇಳಿಕೊಳ್ಳಲು ಅವರು ಸಿಗುತ್ತಿಲ್ಲ ಎಂಬುದು ಅಲ್ಲಿನವರ ದೂರು. ನೀರು ಬಿಡಬೇಕಾದ ಸಿಬ್ಬಂದಿ ಸಹ ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂದು ಜನ ಬೇಸರವ್ಯಕ್ತಪಡಿಸಿದ್ದಾರೆ. ಅಧಿಕಾರಿಗಳ ಬಳಿ ಸಮಸ್ಯೆ ಹೇಳಲು ಹೋದಾಗ `ಸಿಬ್ಬಂದಿ ಮೇಲೆ ದಬ್ಬಾಳಿಕೆ’ ಎಂಬ ಪದ ಪ್ರಯೋಗ ನಡೆದ ಬಗ್ಗೆ ಜನ ಆಕ್ಷೇಪಿಸಿದ್ದಾರೆ. ಹಿಂದಿನ ಆಡಳಿತ ಮಂಡಳಿಯಲ್ಲಿದ್ದ ಸದಸ್ಯರು ಜನರ ಸಮಸ್ಯೆಗೆ ಸ್ಪಂದಿಸುತ್ತಿದ್ದರು. ಇದೀಗ ಸಮಸ್ಯೆ ಆಲಿಸುವವರೇ ಇಲ್ಲ ಎಂದು ಅಸಮಧಾನವ್ಯಕ್ತಪಡಿಸಿದರು. ಪಂಚಾಯತ ಎದುರು ಖಾಲಿ ಕೊಡದ ಮೆರವಣಿಗೆ ನಡೆಸಿ ತಮ್ಮ ಆಕ್ರೋಶಹೊರಹಾಕಿದರು. - [ಮಾಜಿ ಪತ್ನಿಗೆ ಕತ್ತಿ ಬೀಸಿದ ಕಿರಾತಕ: ಡೈವರ್ಸ ಆದರೂ ಆಕೆಗೆ ನೆಮ್ಮದಿ ಇಲ್ಲ!](https://mobiletime.in/2026/02/a-man-who-stabbed-his-ex-wife-even-though-they-are-divorced-she-is-not-at-peace/): ಸಿದ್ದಾಪುರದ ಹಸವಂತೆ ಬಳಿ ವಾಸವಾಗಿರುವ ಗಂಗಾ ನಾಯ್ಕ ಅವರು ಅದೇ ಊರಿನ ಅಶೋಕ ನಾಯ್ಕ ಅವರನ್ನು ಮದುವೆ ಆಗಿದ್ದು, ಅಶೋಕ ನಾಯ್ಕ ಅವರ ಕಾಟ ಸಹಿಸಲಾಗದೇ ವಿಚ್ಚೇದನಪಡೆದಿದ್ದಾರೆ. ಅದಾಗಿಯೂ, ಅವರಿಗೆ ನೆಮ್ಮದಿಯಿಂದ ಬದುಕಲು ಅಶೋಕ ನಾಯ್ಕ ಅವರು ಬಿಡುತ್ತಿಲ್ಲ! ಸಿದ್ದಾಪುರದ ನೆಜ್ಜೂರು ಸಮೀಪದ ಹಸವಂತೆಯಲ್ಲಿ ಗಂಗಾ ಗಣಪತಿ ನಾಯ್ಕ (28) ಅವರು ವಾಸವಾಗಿದ್ದಾರೆ. ಸದ್ಯ ಅವರು ಬ್ಯುಟಿಷಿಯನ್ ಆಗಿ ಬದುಕು ಕಟ್ಟಿಕೊಂಡಿದ್ದಾರೆ. ಗಂಗಾ ನಾಯ್ಕ ಅವರು ಅದೇ ಊರಿನ ಅಶೋಕ ಅಣ್ಣಪ್ಪ ನಾಯ್ಕ ಅವರನ್ನು ವಿವಾಹವಾಗಿದ್ದು, ಸಂಸಾರದಲ್ಲಿ ವೈಮನಸ್ಸು ಬಂದ ಕಾರಣ ಅವರಿಂದ ದೂರವಾಗಿದ್ದಾರೆ. 2022ರಲ್ಲಿಯೇ ಅವರಿಬ್ಬರ ವಿಚ್ಚೇದನ ನಡೆದ್ದರೂ ಅಶೋಕ ನಾಯ್ಕ ಅವರು ಗಂಗಾ ನಾಯ್ಕ ಅವರನ್ನು ಕಾಡಿಸುವುದನ್ನು ಬಿಟ್ಟಿಲ್ಲ. ಗಂಗಾ ನಾಯ್ಕ ಅವರ ಮೇಲೆ ಎರಡು ಬಾರಿ ಹಲ್ಲೆ ನಡೆಸಿದ್ದ ಅಶೋಕ ನಾಯ್ಕ ಅವರು ಇದೀಗ ಅವರ ಕೊಲೆ ಪ್ರಯತ್ನವನ್ನು ಮಾಡಿದ್ದಾರೆ. ಕತ್ತಿ ಬೀಸಿದಾಗ ಗಂಗಾ ನಾಯ್ಕ ಅವರು ತಪ್ಪಿಸಿಕೊಂಡಿದ್ದು, ಆ ಕತ್ತಿ ಗಂಗಾ ನಾಯ್ಕ ಅವರ ತಂದೆ ಗಣಪತಿ ನಾಯ್ಕ ಅವರ ಕೈಗೆ ತಾಗಿದೆ. ಅಶೋಕ ನಾಯ್ಕ ಅವರಿಗೆ ಗಂಗಾ ನಾಯ್ಕ ಅವರ ಜೊತೆಗಿರುವ ಮನಸ್ಸಿದ್ದರೂ ಅದಕ್ಕೆ ಗಂಗಾ ನಾಯ್ಕ ಅವರು ಒಪ್ಪಿಗೆ ಸೂಚಿಸಿಲ್ಲ. `ಮಗುವಿಗಾಗಿ ಒಟ್ಟಿಗೆ ಬದುಕೋಣ’ ಎಂದು ಅಶೋಕ ನಾಯ್ಕ ಅವರು ಹೇಳಿದ್ದು, ಆಗಲೂ ಗಂಗಾ ನಾಯ್ಕ ಅವರು ಅದನ್ನು ಮನ್ನಿಸಲಿಲ್ಲ. ಹೀಗಾಗಿ `ನಿನಗೆ ಸಿಗದಿದ್ದದ್ದು ನನಗೂ ಸಿಗಬಾರದು’ ಎಂದ ಅಶೋಕ ನಾಯ್ಕ ಅವರು ಮಗುವಿನ ಅಪಹರಣ ಮಾಡುವುದಾಗಿಯೂ ಬೆದರಿಸಿದ್ದಾರೆ. ಡೈವರ್ಸ ಆದ ಕಾರಣಕ್ಕೆ ಸಿಟ್ಟಿನಿಂದಿದ್ದ ಅಶೋಕ ನಾಯ್ಕ ಅವರು 2022ರಲ್ಲಿ ಗಂಗಾ ನಾಯ್ಕ ಅವರ ಪರವಾಗಿ ಮಾತನಾಡಿದ್ದ ಅವರ ಮಾವ ವೀರಭದ್ರ ಮೈಲಾ ನಾಯ್ಕ ಅವರ ಮೇಲೆಯೂ ಕೈ ಮಾಡಿದ್ದಾರೆ. ಈ ಎಲ್ಲದರ ನಡುವೆ ಒಂದು ವಾರದ ಹಿಂದೆ ಮತ್ತೆ ಗಂಗಾ ನಾಯ್ಕ ಅವರನ್ನು ಅಶೋಕ ನಾಯ್ಕ ಅವರು ಅಡ್ಡಗಟ್ಟಿದ್ದಾರೆ. ಆಗಲೂ `ಮಗುವಿಗಾಗಿ ಒಟ್ಟಿಗಿರೋಣ’ ಎಂದು ಹೇಳಿದ್ದಾರೆ. ಅದಕ್ಕೆ ಒಪ್ಪದ ಕಾರಣ `ಕೊಲೆ ಮಾಡುವೆ’ ಎಂದು ಬೆದರಿಸಿ ಅಲ್ಲಿಂದ ಹೋಗಿದ್ದಾರೆ. ಫೆಬ್ರವರಿ 12ರಂದು ಮತ್ತೆ ಹಸುವಂತೆ ಬಸ್ ನಿಲ್ದಾಣದ ಬಳಿ ಗಂಗಾ ನಾಯ್ಕ ಅವರು ನಿಂತಿದ್ದಾಗ ಸ್ಕೂಟಿ ಮೇಲೆ ಅಲ್ಲಿಗೆ ಬಂದ ಅಶೋಕ ನಾಯ್ಕ ಅವರು ಕತ್ತಿ ಬೀಸಿದ್ದಾರೆ. ಗಂಗಾ ನಾಯ್ಕ ಅವರ ತಲೆ ಹಿಡಿದು `ಕೆಲಸಕ್ಕೆ ಹೋಗುತ್ತಿದ್ದೀಯಾ?’ ಎಂದು ಪ್ರಶ್ನಿಸಿ ಬೈದಿದ್ದಾರೆ. ತಪ್ಪಿಸಲು ಬಂದ ಗಂಗಾ ನಾಯ್ಕ ಅವರ ತಂದೆ ಗಣಪತಿ ನಾಯ್ಕ ಅವರ ಮೇಲೆಯೂ ಕತ್ತಿಯ ದಾಳಿ ನಡೆಸಿದ್ದಾರೆ. ಈ ವೇಳೆ ಗಣಪತಿ ನಾಯ್ಕ ಅವರ ಕೈಗೆ ಕತ್ತಿ ತಾಗಿದೆ. ಕತ್ತಿಯ ಹಿಡಿಕೆ ಗಂಗಾ ನಾಯ್ಕ ಅವರಿಗೆ ತಾಗಿದ್ದು, ಅವರು ನೋವು ಅನುಭವಿಸಿದ್ದಾರೆ. ಅದಾದ ನಂತರ ಅಶೋಕ ನಾಯ್ಕ ಅವರು ಗಂಗಾ ನಾಯ್ಕ ಅವರ ಕೂದಲು ಹಿಡಿದು ಎಳೆದಾಡಿದ್ದಾರೆ. ಕತ್ತಿನಲ್ಲಿದ್ದ ಮಾಂಗಲ್ಯದ ಸರ ಹರಿದು ಹಾಕಿದ್ದಾರೆ. ಗಣಪತಿ ನಾಯ್ಕ ಅವರ ಎದೆಗೆ ಗುದ್ದಿ ಅಲ್ಲಿಂದ ಪರಾರಿಯಾಗಿದ್ದಾರೆ. ಈ ಹಿಂದೆ ಮಾಡಿದ ಹಲ್ಲೆ, ನೀಡಿದ ಕಿರುಕುಳ ಹಾಗೂ ಮೊನ್ನೆ ನಡೆದ ವಿದ್ಯಮಾನಗಳ ಬಗ್ಗೆ ಗಂಗಾ ನಾಯ್ಕ ಅವರು ಸಿದ್ದಾಪುರ ಪೊಲೀಸರ ಬಳಿ ಹೇಳಿದ್ದಾರೆ. ಎಲ್ಲಾ ವಿಷಯ ಆಲಿಸಿದ ಪಿಸೈ ಶಾಂತಿನಾಥ ಪಾಸಾನೆ ಅವರು ಅಶೋಕ ನಾಯ್ಕ ಅವರ ವಿರುದ್ಧ ಪ್ರಕರಣ ದಾಖಲಿಸಿದ್ದು, ಕಾನೂನು ಕ್ರಮ ಜರುಗಿಸಿದ್ದಾರೆ. - [ಹೊಸ ರಸ್ತೆ ಸೃಷ್ಠಿಸಿದ ಹೊಸ ಅಪಾಯ!](https://mobiletime.in/2026/02/a-new-road-creates-a-new-danger/): 95 ಲಕ್ಷ ರೂ ವೆಚ್ಚ ಮಾಡಿ ಶಿರಸಿಯಿಂದ ದೊಡ್ನಳ್ಳಿಗೆ ಹೋಗುವ ರಸ್ತೆಯನ್ನು ಅಭಿವೃದ್ಧಿಪಡಿಸಲಾಗಿದ್ದು, ಆ ಅಭಿವೃದ್ಧಿ ಕೆಲಸದ ನಂತರವೇ ಅಲ್ಲಿ ಅಪಘಾತದ ಪ್ರಮಾಣ ಹೆಚ್ಚಾಗಿದೆ! ಶಿರಸಿಯಿಂದ ದೊಡ್ನಳ್ಳಿಗೆ ಹೋಗುವ ರಸ್ತೆ ಹದಗೆಟ್ಟಿತ್ತು. ಸಾರ್ವಜನಿಕರು ಸಾಕಷ್ಟು ಸಮಸ್ಯೆ ಅನುಭವಿಸುತ್ತಿದ್ದ ಕಾರಣ ಆ ರಸ್ತೆ ಅಭಿವೃದ್ಧಿಗೆ ಸರ್ಕಾರ ಮುಂದಾಯಿತು. ಒಂದು ತಿಂಗಳ ಹಿಂದೆ ರಸ್ತೆಗೆ ಮರುಡಾಂಬರೀಕರಣ ಕೆಲಸ ನಡೆಯಿತು. ಕೆಲಸದ ಗುಣಮಟ್ಟವೂ ಚನ್ನಾಗಿಯೇ ಇದ್ದು, ಚಿಕ್ಕದೊಂದು ಅವೈಜ್ಞಾನಿಕ ಪದ್ಧತಿ ಅನುಸರಿಸಿದ್ದರಿಂದ ಅಪಘಾತಗಳ ಪ್ರಮಾಣ ಹೆಚ್ಚಾಯಿತು. ಕಳೆದ ಒಂದು ತಿಂಗಳ ಅವಧಿಯಲ್ಲಿ ಈ ಮಾರ್ಗದಲ್ಲಿ ಮೂರು ವಾಹನಗಳು ರಸ್ತೆ ಬಿಟ್ಟು ಗಟಾರಕ್ಕೆ ಬಿದ್ದಿವೆ. ರಸ್ತೆ ಕೆಲಸ ಸರಿ ಮಾಡಿದ ಗುತ್ತಿಗೆದಾರರು ರಸ್ತೆಯ ಅಂಚು ಸರಿಪಡಿಸುವ ಕೆಲಸ ಮಾಡಿಲ್ಲ. ರಸ್ತೆ ಬದಿಯ ಒಂದು ಕಡೆ ಚರಂಡಿವರೆಗೆ ಡಾಂಬರು ಹಾಕಲಾಗಿದೆ. ಇನ್ನೊಂದು ಕಡೆ ಡಾಂಬರು ಸುರಿಯದೇ ಹಾಗೇ ಬಿಡಲಾಗಿದೆ. ರಸ್ತೆ ಅಂಚಿನ ಅಲೈನಮೆಂಟ್ ಸರಿಯಾಗಿ ಗಮನಿಸದೇ ಮಾಡಿದ ಕಾಮಗಾರಿಯಿಂದ ವಾಹನಗಳು ಚರಂಡಿಗೆ ಬೀಳುತ್ತಿವೆ. ಚರಂಡಿ ಕಡೆ ಡಾಂಬರಿಕರಣ ಭಾಗದ ಕಡೆ ವಾಹನಗಳು ವಾಲುತ್ತಿದ್ದು, ಚಾಲಕ ಕೊಂಚ ಆಯತಪ್ಪಿದರೂ ಅವು ಗಟಾರಕ್ಕೆ ಬೀಳುತ್ತಿದೆ. ಹೀಗಾಗಿ ಆ ಅವೈಜ್ಞಾನಿಕ ಪದ್ಧತಿ ಸರಿಪಡಿಸಿ ವಾಹನ ಸವಾರರಿಗೆ ಅನುಕೂಲ ಮಾಡಿಕೊಡಬೇಕು ಎಂದು ಜನ ಆಗ್ರಹಿಸಿದ್ದಾರೆ. ರಸ್ತೆ ಅಂಚಿನ ಎರಡು ಕಡೆ ಸಮಾನ ಜಾಗ ಬಿಟ್ಟರೆ ಅಪಾಯ ಕಡಿಮೆ ಆಗಲಿದ್ದು, ಅದನ್ನು ಗಮನಿಸಬೇಕು ಎಂದು ಒತ್ತಾಯಿಸಿದ್ದಾರೆ. - [ಪರೀಕ್ಷೆ ಬರೆದ ಶಿಕ್ಷಕರೇ ನಪಾಸು!](https://mobiletime.in/2026/02/the-teacher-who-wrote-the-exam-is-a-failure/): ಮುಖ್ಯಾಧ್ಯಾಪಕ ಹುದ್ದೆಯ ಕನಸು ಕಟ್ಟಿಕೊಂಡು ನಿವೃತ್ತಿ ಅಂಚಿನಲ್ಲಿರುವಾಗ ಟಿಇಟಿ ಪರೀಕ್ಷೆ ಎದುರಿಸಿದ ಅಂಕೋಲಾದ 285 ಶಿಕ್ಷಕರು ಆ ಪರೀಕ್ಷೆಯಲ್ಲಿ ಪಾಸಾಗಿಲ್ಲ! ಅಂಕೋಲಾ ತಾಲೂಕಿನಲ್ಲಿ 79 ಕಿರಿಯ ಪ್ರಾಥಮಿಕ ಮತ್ತು 74 ಹಿರಿಯ ಪ್ರಾಥಮಿಕ ಶಾಲೆಗಳು, 11 ಸರಕಾರಿ ಪ್ರೌಢ ಶಾಲೆಗಳು ಸೇರಿ 164 ಶಾಲೆಗಳಿವೆ. ಈ ಪೈಕಿ ಒಟ್ಟು 486 ಶಿಕ್ಷಕರಿದ್ದಾರೆ. ಈ ಪೈಕಿ ಅನೇಕ ಶಿಕ್ಷಕರು ಹಲವು ವರ್ಷಗಳ ಸೇವಾ ಅನುಭವಹೊಂದಿದ್ದಾರೆ. ಮಕ್ಕಳಿಗೆ ಮನಸ್ಸು ಮುಟ್ಟುವ ರೀತಿ ಪಾಠ ಮಾಡುವ ಕೌಶಲ್ಯಗಳಿಸಿದ್ದಾರೆ. ಆದರೆ, ಪರೀಕ್ಷೆ ಎದುರಿಸಿದವರಲ್ಲಿ ಶೇ 75ರಷ್ಟು ಶಿಕ್ಷಕರು ಪಾಸಾಗಿಲ್ಲ! ಈ ಹಿಂದೆ ಟಿಇಟಿ ವ್ಯವಸ್ಥೆ ಇರಲಿಲ್ಲ. ಹೊಸ ವ್ಯವಸ್ಥೆಗೆ ಒಗ್ಗಿಕೊಳ್ಳಲು ಶಿಕ್ಷಕರಿಂದ ಸಾಧ್ಯವಾಗುತ್ತಿಲ್ಲ. ಶಿಕ್ಷಕರ ಅನುಭವಕ್ಕೂ ಟಿಇಟಿಗೂ ಸಾಕಷ್ಟು ವ್ಯತ್ಯಾಸವಿರುವುದು ಸಮಸ್ಯೆಗೆ ಕಾರಣವಾಗಿದ್ದು, ಬೇರೆ ಯಾವ ಇಲಾಖೆಗೂ ಇಲ್ಲದ ಕಠಿಣ ನಿಯಮ ಶಿಕ್ಷಣ ಇಲಾಖೆಗೆ ಬಂದಿದೆ. ಈ ಹೊಸ ಪರೀಕ್ಷಾ ಪದ್ದತಿ ಶಿಕ್ಷಕರ ಮೇಲೆ ಒತ್ತಡ ತರುತ್ತಿದೆ. ಜೊತೆಗೆ ಅದಕ್ಕೆ ಸಿದ್ಧವಾಗುವುದರಲ್ಲಿಯೇ ಶಿಕ್ಷಕರ ಸಮಯ ಹಾಳಾಗುತ್ತಿದೆ. ಸದ್ಯ ಟಿಇಟಿ ಎಂಬುದು ಶಿಕ್ಷಕರ ಬಡ್ತಿಗೂ ಕುತ್ತು ತಂದಿದೆ. ಕಳೆದ 4-5 ವರ್ಷದಿಂದ ಬಡ್ತಿ ಭಾಗ್ಯದ ನಿರೀಕ್ಷೆಯಲ್ಲಿದ್ದ ಶಿಕ್ಷಕರಿಗೆ ಸುಪ್ರೀಂ ಆದೇಶ ನಿರಾಸೆ ಮೂಡಿಸಿದೆ. ಸಹಶಿಕ್ಷಕರ ಹುದ್ದೆಯಿಂದ ಮುಖ್ಯಗುರುಗಳ ಹುದ್ದೆ ಕನಸಾಗಿಯೇ ಉಳಿದಿದೆ. ಬಹುತೇಕ ಶಿಕ್ಷಕರು ಅಂದಿನ ಶಿಕ್ಷಣ ವ್ಯವಸ್ಥೆಗೆ ಅಗತ್ಯವಾಗಿದ್ದ ಟಿಸಿಎಚ್, ಜಿಪಿಟಿ, ಇಂಟರ್‌ಶಿಪ್ ಪರೀಕ್ಷೆಗಳ ಬಳಿಕವೇ ನೇಮಕವಾಗಿದ್ದಾರೆ. ಈಗಾಗಲೇ ಇಂಟರ್‌ಶಿಪ್‌ನಿAದ ನೇಮಕಗೊಂಡ ನಹುತೇಕ ಶಿಕ್ಷಕರು ನಿವೃತ್ತಿಯಾಗಿದ್ದಾರೆ. ಆದರೆ, ಟಿಸಿಎಚ್ ಆಧರಿಸಿದ ಶಿಕ್ಷಕರು ಇಂದಿಗೂ ಸೇವೆಯಲ್ಲಿದ್ದು, ಟಿಇಟಿ ಪರೀಕ್ಷೆ ಅವರ ಸಮಸ್ಯೆಗೆ ಕಾರಣವಾಗಿದೆ. - [ಉತ್ತರ ಕನ್ನಡ: ಮೂರು ದಿನ ಮನೆಯಲ್ಲಿಯೇ ಇರಿ!](https://mobiletime.in/2026/02/uttara-kannada-stay-at-home-for-three-days/): ಉತ್ತರ ಕನ್ನಡ ಜಿಲ್ಲೆಯಲ್ಲಿ ಮುಂದಿನ ಮೂರು ದಿನಗಳ ಕಾಲ ವಾತಾವರಣದಲ್ಲಿ ಬದಲಾವಣೆ ಆಗುವ ಸಾಧ್ಯತೆ ಹೆಚ್ಚಿದೆ. ಕಳೆದ ಎರಡು ದಿನಗಳಿಂದ ಹವಾಮಾನದಲ್ಲಿ ಅಲ್ಪ-ಸ್ವಲ್ಪ ಬದಲಾವಣೆ ಆಗುತ್ತಿದೆ. ಮುಂದಿನ ಮೂರು ದಿನಗಳ ಕಾಲ ಇನ್ನಷ್ಟು ವ್ಯಾಪಕ ಪ್ರಮಾಣದಲ್ಲಿ ಬದಲಾವಣೆಯ ಲಕ್ಷಣಗಳಿದೆ. ಅದರಲ್ಲಿಯೂ ಉತ್ತರ ಕನ್ನಡ ಜಿಲ್ಲೆಯ ಕರಾವಳಿ ಭಾಗದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಬಿಸಿಲು ಕಾಣಿಸಿಕೊಂಡಿದ್ದು, ಅದರ ಪ್ರಭಾವ ಮಲೆನಾಡು ಭಾಗಕ್ಕೂ ಬೀಸಲಿದೆ. ಜಿಲ್ಲೆಯಲ್ಲಿ ಶಾಖದ ಅಲೆ ಏಳುವ ಲಕ್ಷಣಗಳು ಗೋಚರಿಸಿವೆ. ಈ ಬಗ್ಗೆ ವಿಜ್ಞಾನಿಗಳು ಮಾಹಿತಿ ರವಾನಿಸಿದ್ದು, ಮುನ್ನಚ್ಚರಿಕೆವಹಿಸುವಂತೆ ಸೂಚನೆ ನೀಡಿದ್ದಾರೆ. ಅದರಲ್ಲಿಯೂ ಫೆಬ್ರವರಿ 14 ಹಾಗೂ 15ರಂದು ಮನೆಯಿಂದ ಹೊರಬರದೇ ಇರುವುದು ಒಳಿತು ಎಂದು ತಜ್ಞರು ಹೇಳಿದ್ದಾರೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಬಿಸಿ ಹಾಗೂ ಆರ್ದ್ರ ಪರಿಸ್ಥಿತಿ ಹೆಚ್ಚಾಗಿರುವ ಸಾಧ್ಯತೆಯಿರುವ ಹಿನ್ನಲೆ ಎಲ್ಲೋ ಅಲರ್ಟ ಘೋಷಿಸಲಾಗಿದೆ. - [ಕಾಲೇಜು ಕನ್ಯೆಯ ದಿಢೀರ್ ಕಣ್ಮರೆ: ಎಲ್ಲಡೆ ಶೋಧ!](https://mobiletime.in/2026/02/college-girls-sudden-disappearance-search-everywhere/): ಶಿರಸಿಯ ಪಡ್ತಿಗಲ್ಲಿಯಲ್ಲಿರುವ ಪಿಜಿಯಲ್ಲಿದ್ದ ಕಾಲೇಜು ಕನ್ಯೆಯೊಬ್ಬರು ಕಾಣೆಯಾಗಿದ್ದಾರೆ. ಆ ವಿದ್ಯಾರ್ಥಿನಿಗಾಗಿ ಪಾಲಕರ ಜೊತೆ ಪೊಲೀಸರು ಹುಡುಕಾಟ ನಡೆಸಿದ್ದಾರೆ. ಹಾವೇರಿಯ ಹಾನಗಲ್ಲಿನ ಶೇಷಗಿರಿ ಬಳಿಯ ಅಮೂಲ್ಯಾ ಕಾಳಿ (18) ಅವರು ಶಿರಸಿಯಲ್ಲಿ ವಾಸವಾಗಿದ್ದರು. ಬಿಳೂರು ಕಾಲೇಜಿನಲ್ಲಿ ಅವರು ದ್ವಿತೀಯ ಪಿಯುಸಿ ಓದುತ್ತಿದ್ದರು. ಶಾಂತ ಸ್ವಭಾವದವರಗಿದ್ದ ಅವರು ಫೆಬ್ರವರಿ 8ರಂದು ಬೆಳಗ್ಗೆ ಬ್ಯಾಗ್ ಹಾಕಿಕೊಂಡು ಪಿಜಿಯಿಂದ ಹೊರಟಿದ್ದು, ಮರಳಿ ಬಂದಿಲ್ಲ. ಪಿಜಿಯ ವಾರ್ಡನ್ ಅಮೂಲ್ಯಾ ಅವರ ಕುಟುಂಬದವರಿಗೆ ಫೋನ್ ಮಾಡಿದಾಗ ವಿದ್ಯಾರ್ಥಿನಿ ಕಾಣೆಯಾಗಿರುವುದು ಗೊತ್ತಾಗಿದೆ. ಕಾಲೇಜಿನಲ್ಲಿಯೂ ಅಮೂಲ್ಯಾ ಅವರು ಕಾಣದಿರುವಾಗ ಎಲ್ಲರ ಆತಂಕ ಹೆಚ್ಚಾಗಿದೆ. ಶಿರಸಿ ನಗರ ಬಸ್ ನಿಲ್ದಾಣ, ಸುತ್ತಮುತ್ತಲಿನ ಪ್ರದೇಶಗಳಲ್ಲಿ ಶೋಧ ನಡೆಸಿದರೂ ಯಾವುದೇ ಸುಳಿವು ಸಿಕ್ಕಿಲ್ಲ. ಹೀಗಾಗಿ ಅಮೂಲ್ಯಾ ಅವರ ತಾಯಿ ಜಯಶ್ರೀ ಶಂಕ್ರಪ್ಪ ಕಾಳಿ ಅವರು ಪೊಲೀಸರ ಮೊರೆ ಹೋಗಿದ್ದಾರೆ. ಪೊಲೀಸರು ವಿದ್ಯಾರ್ಥಿನಿಯ ಮೊಬೈಲ್ ಕರೆ ವಿವರ, ಸ್ನೇಹಿತರ ಸಂಪರ್ಕದ ಆಧಾರದಲ್ಲಿ ಹುಡುಕಾಟ ನಡೆಸಿದ್ದಾರೆ.   - [ಶರಾವತಿ ಉಳಿಸಿ: ಮತ್ತೊಂದು ಉಗ್ರ ಹೋರಾಟಕ್ಕೆ ಸಜ್ಜು!](https://mobiletime.in/2026/02/save-sharavati-get-ready-for-another-fierce-fight/): ಪರಿಸರ ವಿರೋಧಿ,  ಅವೈಜ್ಞಾನಿಕ ಉದ್ದೇಶಿತ ಶರಾವತಿ ಪಂಪ್ಡ ಸ್ಟೋರೇಜ ಭೂಗತ ವಿದ್ಯುತ ಯೋಜನೆಯ ವಿರುದ್ಧ ವಿವಿಧ ಮಠಾಧೀಶರ ನೇತ್ರತ್ವದಲ್ಲಿ ಹೋರಾಟ ನಡೆಸಲು `ಶರಾವತಿ ಉಳಿಸಿ’ ಹೋರಾಟ ಸಮಿತಿ ನಿರ್ಧರಿಸಿದೆ. ಮಾರ್ಚ 10ರಂದು ಹೊನ್ನಾವರದಲ್ಲಿ ದೊಡ್ಡ ಮಟ್ಟದಲ್ಲಿ ಜನ ಸಮಾವೇಶ ಆಯೋಜಿಸುವ ಸಿದ್ಧತೆ ನಡೆದಿದೆ. ಜೆ ಟಿ ಪೈ ಅವರ ಅಧ್ಯಕ್ಷತೆಯಲ್ಲಿ ನಡೆದ ಸರ್ವ ಸಂಘಟನೆಗಳ ಪ್ರಮುಖರು ಸಭೆ ನಡೆಸಿದ್ದು, ಈ ಸಭೆಯಲ್ಲಿ ಹೋರಾಟದ ಬಗ್ಗೆ ನಿರ್ಧರಿಸಲಾಗಿದೆ. ರಾಮಚಂದ್ರಾಪುರ ಮಠಧ ರಾಘವೇಶ್ವರ ಭಾರತಿ ಸ್ವಾಮೀಜಿ, ಬಂಗಾರಮಕ್ಕಿಯ ಧರ್ಮಾಧಿಕಾರಿ ಮಾರೂತಿ ಗುರೂಜಿ ಅವರ ಜೊತೆ ಒಕ್ಕಲಿಗ, ದೈವಜ್ಞ, ನಾಮಧಾರಿ ಸಮುದಾಯಗಳ ಮಠಾಧೀಶರನ್ನು ಈ ಸಮಾವೇಶಕ್ಕೆ ಆಹ್ವಾನಿಸಲು ಸಭೆಯಲ್ಲಿ ನಿರ್ಧರಿಸಲಾಗಿದೆ. ಹೋರಾಟದ ರೂಪುರೇಷೆಗಳನ್ನು ಚರ್ಚಿಸಲು ಫೆಬ್ರವರಿ 16ರ ಮಧ್ಯಾಹ್ನ ವಿವಿಧ ಸಮುದಾಯ ಪ್ರಮುಖರ ಹಾಗೂ ಸಂಘ-ಸAಸ್ಥೆಗಳ ಸಭೆ ನಡೆಯಲಿದೆ. ಆ ದಿನ ಸಂಜೆ 4ಘಂಟೆಗೆ ಹೊನ್ನಾವರ ಮೂಡಗಣಪತಿ ಸಭಾಂಗಣದಲ್ಲಿ ಆಸಕ್ತರು ಭಾಗವಹಿಸಲು ಹೋರಾಟಗಾರರು ಮನವಿ ಮಾಡಿದ್ದಾರೆ. ಪರಿಸರ ಆಸಕ್ತರ ಹೋರಾಟ ಪ್ರಮುಖರ ಇನ್ನೊಂದು ಸುತ್ತಿನ ಸಭೆಯಲ್ಲಿ ಸಮಾವೇಶದ ಪೂರ್ವಭಾವಿ ಸಿದ್ಧತೆಗಳ ಕುರಿತು ಚರ್ಚಿಸಲಾಗುತ್ತದೆ. ಸದ್ಯ ನಡೆದ ಸಭೆಯಲ್ಲಿ ಶ್ರೀಕುಮಾರ ಸಾರಿಗೆ ಸಂಸ್ಥೆಯ ಪುಟ್ಟು ಹೆಗಡೆ, ಹೋರಾಟ ಸಮಿತಿಯ ಚಂದ್ರಕಾAತ ಕೊಚರೇಕರ, ಮಂಜುನಾಥ ಎಂ ನಾಯ್ಕ ಗೇರುಸೊಪ್ಪ, ಜಿ ಜಿ ಶಂಕರ, ಯೋಗೇಶ ರಾಯ್ಕರ, ಕೇಶವ ನಾಯ್ಕ ಬಳ್ಕೂರ, ವಕೀಲ ವಿಕ್ರಮ ನಾಯ್ಕ, ಹೊನ್ನಾವರ ಉಳಿಸಿ ಸಂಘಟನೆಯ ಜಿ ಎನ್ ಗೌಡ, ಎಂ ಎಸ್ ಹೆಗಡೆ, ಪ್ರಭು ಪಟಗಾರ, ಶ್ರೀಧರ ಶೆಟ್ಟಿ ಜಂಬೆಬೆಟ್ಟ, ಶ್ರೀಕಲಾ ಶಾಸ್ತ್ರೀ, ಗಣೇಶ ಜಿ ನಾಯ್ಕ ಉಪ್ಪೋಣಿ ಹೋರಾಟದ ಬಗ್ಗೆ ಚರ್ಚಿಸಿದ್ದಾರೆ. - [ಆ ಶಿಕ್ಷಕ ನಮ್ಮ ನಿಮ್ಮೆಲ್ಲರ ಹೆಮ್ಮೆಯ ಸಾಧಕ!](https://mobiletime.in/2026/02/that-teacher-is-a-source-of-pride-for-all-of-us/): ಲೋಕಧ್ವನಿ ಪತ್ರಿಕೆ ನೀಡುವ `ಹೆಮ್ಮೆಯ ಸಾಧಕ’ ಪ್ರಶಸ್ತಿ ಸ್ವೀಕರಿಸಿರುವ ಕಾರವಾರದ ಶಿಕ್ಷಕ ಗಣೇಶ ಬೀಷ್ಠಣ್ಣನವರ್ ಅವರಿಗೆ ಹಾವೇರಿ ಜಿಲ್ಲೆಯಲ್ಲಿಯೂ ಸನ್ಮಾನ ದೊರೆತಿದೆ. ಮುಖ್ಯಮಂತ್ರಿಗಳಿAದ ಪ್ರಶಸ್ತಿ ಸ್ವೀಕರಿಸಿದ ಗಣೇಶ ಬೀಷ್ಠಣ್ಣನವರ್ ಅವರ ಜೊತೆ ಅವರ ಪತ್ನಿ, ಕ್ರಿಯಾಶೀಲ ಶಿಕ್ಷಕಿ ಜಯಶೀಲ ಬೀಷ್ಠಣ್ಣನವರ್ ಅವರಿಗೂ ಬ್ಯಾಡಗಿಯ ಜನ ಗೌರವಿಸಿದ್ದಾರೆ. ಅಲ್ಲಿನ ಗುಡ್ಡದಮಲ್ಲಾಪುರ ಶಾಲೆಯಲ್ಲಿ ಈ ಸನ್ಮಾನ ಕಾರ್ಯಕ್ರಮ ನಡೆದಿದೆ. ಶಿಕ್ಷಣ ಇಲಾಖೆ ಹಾಗೂ ಶಾಲಾ ಆಡಳಿತ ಮಂಡಳಿ ಜೊತೆ ಹಳೆ ವಿದ್ಯಾರ್ಥಿಗಳ ಸಂಘದವರು ಸಾಧಕ ಶಿಕ್ಷಕ ದಂಪತಿಯನ್ನು ಗೌರವಿಸಿದ್ದಾರೆ. `ಪ್ರತಿ ಮನೆಯಲ್ಲಿಯೂ ನಿತ್ಯ ಕನಿಷ್ಟ ಎರಡು ತಾಸು ಟಿವಿ, ಮೊಬೈಲ್ ಬಂದ್ ಮಾಡಿ ಪುಸ್ತಕದ ಕಡೆ ಗಮನಕೊಡಬೇಕು. ಆ ಮೂಲಕ ಪ್ರತಿಯೊಬ್ಬ ಪಾಲಕರು ಮಕ್ಕಳ ಜ್ಞಾನಾಭಿವೃದ್ಧಿಗೆ ಸಹಕರಿಸಬೇಕು’ ಎಂದು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಬ್ಯಾಡಗಿ ಕ್ಷೇತ್ರ ಶಿಕ್ಷಣಾಧಿಕಾರಿ ಎಸ್ ಜಿ ಕೋಟಿ ಅವರು ಹೇಳಿದ್ದಾರೆ. ಸನ್ಮಾನ ಸ್ವೀಕರಿಸಿದ ಗಣೇಶ ಬೀಷ್ಠಣ್ಣನವರ್ ಅವರು `ಶ್ರೀ ಶ್ರೀ ಮೂಕಪ್ಪಜ್ಜನ ಆಶಿರ್ವಾದವೇ ಎಲ್ಲದಕ್ಕೂ ಪ್ರೇರಣೆ. ಊರಿನವರ ಪ್ರೀತಿ ತನ್ನುö್ನ ಪುಳಕಿತಗೊಳಿಸಿದೆ’ ಎಂದಿದ್ದಾರೆ. ವೇದಿಕೆ ಸಾನಿಧ್ಯವಹಿಸಿದ್ದ ಹುಚ್ಚೇಶ್ವರ ಸಂಸ್ಥಾನ ದಾಸೋಹಮಠದ ಧರ್ಮಾಧಿಕಾರಿ ಹುಚ್ಚಯ್ಯಸ್ವಾಮಿ ಮೃತ್ಯುಂಜಯಸ್ವಾಮಿ ದಾಸೋಹಮಠವರು ಆಶೀರ್ವಚನ ನೀಡಿದರು. ಮುಖ್ಯಾಧ್ಯಪಕರಾದ ಕೆ ಎಲ್.ಬಾಸೂರ, ಪ್ರಮುಖರಾದ ಕುಬೇರಪ್ಪ ನೆಲ್ಲಿಕೊಪ್ಪದ, ಶಾಂತಪ್ಪ ದೊಡ್ಡಮನಿ, ಹುಚ್ಚಯ್ಯಸ್ವಾಮಿ ಚೌಕಿಮಠ, ಪ್ರಭಣ್ಣ ದೇಸಾಯಿ, ಪರಮೇಶಣ್ಣ ಸೊಡ್ರಿ, ನಾಗಪ್ಪ ಬಿಷ್ಟಣ್ಣನವರ, ಇಸ್ಮಾಯಿಲ್ ಸೂಡಂಬಿ. ವಿರೇಶ ಮೂಡಿ ಇತರರು ವೇದಿಕೆಯಲ್ಲಿದ್ದರು. ಎಲ್ ಜಿ ಮಾಳ್ವದೆಯವರ, ರುದ್ರೇಶ, ಕವಿತಾ ತಳವಾರ ವಿವಿಧ ಜವಾಬ್ದಾರಿ ನಿಭಾಯಿಸಿದರು. - [ಬಾಡಿಗೆಗಾಗಿ - ಅಂಥ ಕಾರುಗಳನ್ನು ಬಳಸಲೇಬೇಡಿ!](https://mobiletime.in/2026/02/for-rent-never-use-such-cars/): ವಯಕ್ತಿಕ ಬಳಕೆಗಾಗಿ ಖರೀದಿಸಿದ ಕಾರುಗಳನ್ನು ಬಾಡಿಗೆಗೆ ಕಳುಹಿಸಿ ಹಣ ಸಂಪಾದಿಸುವವರ ವಿರುದ್ಧ ಕಠಿಣ ಕ್ರಮಕ್ಕೆ ಜಿಲ್ಲಾಡಳಿತ ನಿರ್ಧರಿಸಿದೆ. ನಿಯಮಗಳನ್ನು ಉಲ್ಲಂಘಿಸಿ ಬಾಡಿಗೆಗೆ ಬರುವ ವಾಹನಗಳ ಪರವಾನಿಗೆ ರದ್ದುಪಡಿಸುವಂತೆ ಉತ್ತರ ಕನ್ನಡ ಜಿಲ್ಲೆಯ ಎಲ್ಲಾ ಪ್ರಾದೇಶಿಕ ಸಾರಿಗೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಕೆ ಲಕ್ಷ್ಮೀಪ್ರಿಯಾ ಅವರು ಸೂಚನೆ ನೀಡಿದ್ದಾರೆ. ಖಾಸಗಿ ವಾಹನಗಳಲ್ಲಿ ಪ್ರವಾಸಿಗಳನ್ನು ಕರೆದೊಯ್ಯುತ್ತಿರುವ ಕುರಿತಂತೆ ಟ್ಯಾಕ್ಸಿ ಚಾಲಕರು ನೀಡಿದ ದೂರಿಗೆ ಅವರು ಸ್ಪಂದಿಸಿದ್ದು, `ಅಂಥಹ ವಾಹನಗಳ ಕುರಿತು ಟ್ಯಾಕ್ಸಿ ಚಾಲಕರು ಪೋಟೋಸಹಿತ ದೂರು ನೀಡಿದ್ದಾರೆ. ಈ ಕುರಿತು ಪರಿಶೀಲಿಸಿ ನಿಯಮಾನುಸಾರ ದಂಡ ವಿಧಿಸಿ, ಪದೇ ಪದೇ ಇದನ್ನು ಪುನಾರಾವರ್ತನೆ ಮಾಡುತ್ತಿರುವ ವಾಹನಗಳ ಲೈಸೆನ್ಸ್ ರದ್ದುಗೊಳಿಸಬೇಕು’ ಎಂದು ಸೂಚಿಸಿದ್ದಾರೆ. ಜೊತೆಗೆ ಜಿಲ್ಲೆಯಲ್ಲಿ ಅನಧಿಕೃತವಾಗಿ ಸಂಚರಿಸುತ್ತಿರುವ ಟ್ಯಾಕ್ಸಿ, ಆಟೋ ಮತ್ತು ಬಾಡಿಗೆ ಬೈಕ್‌ಗಳ ಕುರಿತಂತೆ ಕಠಿಣ ಕ್ರಮಕ್ಕೆ ನಿರ್ದೇಶನ ನೀಡಿದ್ದಾರೆ. `ಆಟೋ ರಿಕ್ಷಾಗಳ ನಿಲ್ದಾಣ ಮತ್ತು ಟ್ಯಾಕ್ಸಿಗಳ ನಿಲ್ದಾಣದ ಕುರಿತಂತೆ ಹಾಗೂ ರಿಕ್ಷಾಗಳ ಸಂಚಾರ ವ್ಯಾಪ್ತಿ ವಿಸ್ತರಣೆಯ ಕುರಿತಂತೆ ಸಂಬAಧಪಟ್ಟ ತಾಲೂಕುಗಳ ವ್ಯಾಪ್ತಿಯ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು, ತಹಶೀಲ್ದಾರಗಳು, ಪೊಲೀಸ್ ಅಧಿಕಾರಿಗಳು ಹಾಗೂ ಆಟೋ ಮತ್ತು ಟ್ಯಾಕ್ಷಿ ಸಂಘಟನೆಗಳು ಸಭೆ ನಡೆಸಬೇಕು. ಆ ಸಭೆಯಲ್ಲಿ ಸೂಕ್ತ ನಿರ್ಣಯ ಕೈಗೊಂಡು ಕಳುಹಿಸಿದಲ್ಲಿ ಈ ಬಗ್ಗೆ ಅಗತ್ಯ ನಿರ್ಣಯ ಕೈಗೊಳ್ಳಲಾಗುತ್ತದೆ’ ಎಂದವರು ಹೇಳಿದರು. `ಜಿಲ್ಲಾಡಳಿತ ರಿಕ್ಷಾ ಮತ್ತು ಆಟೋ ಚಾಲಕರ ಎಲ್ಲಾ ಸಮಸ್ಯೆಗಳಿಗೆ ಸೂಕ್ತವಾಗಿ ಸ್ಪಂದಿಸಲಿದ್ದು, ಎರಡೂ ಸಂಘಟನೆಗಳು ಪರಸ್ಪರ ಸಮನ್ವಯತೆಯಿಂದ ಕಾರ್ಯನಿರ್ವಹಿಸಬೇಕು’ ಎಂದರು. `ಗೋವಾದಲ್ಲಿ ಜಿಲ್ಲೆಯ ವಾಹನಗಳ ವಾಯು ಮಾಲಿನ್ಯ ತಪಾಸಣಾ ಪತ್ರಕ್ಕೆ ಮಾನ್ಯತೆ ನೀಡದ ಬಗ್ಗೆ ಗೋವಾದ ಜಿಲ್ಲಾಧಿಕಾರಿಗಳು ಮತ್ತು ಪೊಲೀಸ್ ಅಧಿಕ್ಷಕರ ಜೊತೆ ಚರ್ಚಿಸಲಾಗುತ್ತದೆ. ವಾಯು ಮಾಲಿನ್ಯ ತಪಾಸಣಾ ಪತ್ರವನ್ನು ಆನ್‌ಲೈನ್ ನಲ್ಲಿ ದಾಖಲಿಸುವ ಕುರಿತಂತೆ ರಾಜ್ಯದ ಸಾರಿಗೆ ಆಯುಕ್ತಾಲಯದ ಗಮನಕ್ಕೆ ತರಲಾಗುತ್ತದೆ. ಟ್ಯಾಕ್ಸಿಗಳಲ್ಲಿ ಅಳವಡಿಸಲಾಗುತ್ತಿರುವ ಪ್ಯಾನಿಕ್ ಬಟನ್ ಕಾರ್ಯನಿರ್ವಹಣೆ ಮತ್ತು ಇದಕ್ಕೆ ಸಂಬAಧಿಸಿದ ಸಮಸ್ಯೆಗಳ ಬಗ್ಗೆ ಸಂಬAಧಪಟ್ಟವರೊAದಿಗೆ ಚರ್ಚಿಸಲಾಗುತ್ತದೆ’ ಎಂದವರು ಹೇಳಿದರು. ರಾಜ್ಯ ಸಾರಿಗೆ ಸಂಸ್ಥೆಯ ಬಸ್‌ಗಳಿಗೆ ಜಿಲ್ಲೆಯ ಗ್ರಾಮೀಣ ಪ್ರದೇಶದ 400 ಕ್ಕೂ ಅಧಿಕ ಮಾರ್ಗಗಳಲ್ಲಿ ಸಂಚರಿಸಲು ಅನುಮತಿಯನ್ನು ನೀಡಿದ ಜಿಲ್ಲಾಧಿಕಾರಿಗಳು, ದುರ್ಗಮ ಪ್ರದೇಶದಲ್ಲಿ ಮತ್ತು ಈಗಾಗಲೇ ಗುರುತಿಸಲಾಗಿರುವ ಬ್ಲಾಕ್‌ಸ್ಪಾಟ್ ಗಳನ್ನು ಅತ್ಯಂತ ಎಚ್ಚರಿಕೆಯಿಂದ ವಾಹನ ಚಲಾಯಿಸುವಂತೆ ಚಾಲಕರಿಗೆ ಸೂಚನೆ ನೀಡುವಂತೆ ರಾಜ್ಯ ಸಾರಿಗೆ ಸಂಸ್ಥೆಯ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಸಭೆಯಲ್ಲಿ ಭಾಗವಹಿಸಿದ್ದ ಆಟೋ ಮತ್ತು ಟ್ಯಾಕ್ಸಿ ಸಂಘಟನೆಗಳ ಪ್ರತಿನಿಧಿಗಳು ಮತ್ತು ಚಾಲಕರು, `ಹೊಸದಾಗಿ ಆಟೋಗಳಿಗೆ ಪರ್ಮಿಟ್ ನೀಡುವುದನ್ನು ಕನಿಷ್ಠ 5 ವರ್ಷಗಳ ವರೆಗೆ ಸ್ಥಗಿತಗೊಳಿಸಬೇಕು’ ಎಂದು ಮನವಿ ಮಾಡಿದರು. ಎಲ್ ಪಿ ಜಿ ಮತ್ತು ಸಿ ಎನ್ ಜಿ ವಾಹನಗಳಿಗೆ ವಾಯುಮಾಲಿನ್ಯ ಪ್ರಮಾಣ ಪತ್ರದ ಅವಶ್ಯಕತೆ ಬಗ್ಗೆ ಹಾಗೂ ಪರ್ಮಿಟ್ ವ್ಯಾಪ್ತಿ ಉಲ್ಲಂಘಿಸಿ ವಾಹನ ಚಲಾಯಿಸುತ್ತಿರುವ ಬಗ್ಗೆ ಹಾಗೂ ಬಾಡಿಗೆ ಬೈಕ್ ನಿಷೇಧದ ಕುರಿತು ಚರ್ಚಿಸಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ ಎನ್, ಅಪರ ಜಿಲ್ಲಾಧಿಕಾರಿ ಸಾಜಿದ್ ಮುಲ್ಲಾ, ಪ್ರಾದೇಶಿಕ ಸಾರಿಗೆ ಅಧಿಕಾರಿಗಳಾದ ಜಾನ್ ಬಿ ಮಿಸ್ಕಿತ್, ಮಲ್ಲಿಕಾರ್ಜುನಪ್ಪ ಕೊಪ್ಪರದ, ರವೀಂದ್ರ ಕೆ.ಎಸ್, ಅವಿನಾಶ ಕಾವೇರಿ ಹಾಗೂ ಜಿಲ್ಲೆಯ ವಿವಿಧ ತಾಲೂಕುಗಳಿಂದ ಆಗಮಿಸಿದ್ದ ರಿಕ್ಷಾ ಹಾಗೂ ಟ್ಯಾಕ್ಸಿ ಸಂಘಟನೆಗಳ ಪ್ರತಿನಿಧಿಗಳು ಮತ್ತು ಚಾಲಕರು ಉಪಸ್ಥಿತರಿದ್ದರು. - [ಮದುವೆ ಆಗುವುದಾಗಿ ಮಹಿಳೆಗೆ ಮೋಸ!](https://mobiletime.in/2026/02/a-woman-was-deceived-into-believing-she-was-getting-married/): ಮದುವೆ ಆಗುವುದಾಗಿ ನಂಬಿಸಿ ಮಹಿಳೆಗೆ ಮೋಸ ಮಾಡಿದ ಯುವಕನನ್ನು ಶಿರಸಿ ಪೊಲೀಸರು ಬಂಧಿಸಿದ್ದಾರೆ. ಮಹಿಳೆ ಜೊತೆ ಸರಸ-ಸಲ್ಲಾಪ ನಡೆಸಿದ ನಂತರ ಪರಾರಿಯಾಗಿದ್ದ ಕಿರಣ ಮೊಗೇರ್ ಇದೀಗ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಶಿರಸಿ ಬರೂರು ಬಳಿಯ ಅರಸಿಕೇರಿಯ ಕಿರಣ ಶಾಂತರಾಮ ಮೊಗೇರ (25) ಅವರು ಕಾರವಾರದ ಕನ್ಯೆಯೊಬ್ಬರ ಮೋಹಕ್ಕೆ ಬಿದ್ದಿದ್ದರು. ಅವರ ಬೆನ್ನು ಬಿದ್ದು ಪ್ರೀತಿಸುವಂತೆ ಕಾಟ ಕೊಡುತ್ತಿದ್ದರು. ಆ ಯುವತಿ ಕಿರಣ ಮೊಗೇರ್ ಅವರ ಪ್ರೇಮಕ್ಕೆ ಒಪ್ಪಿಗೆ ನೀಡಿದ್ದು, ನಂತರ ಕಿರಣ ಮೊಗೇರ್ ಅದನ್ನು ದುರುಪಯೋಗಪಡಿಸಿಕೊಂಡಿದ್ದರು. ಸಾಮಾಜಿಕ ಜಾಲತಾಣವಾದ ಇನಸ್ಟಾಗ್ರಾಮಿನಲ್ಲಿ ಯುವತಿಯನ್ನು ಪರಿಚಯಿಸಿಕೊಂಡ ಕಿರಣ ಮೊಗೇರ್ ಆಕೆಯನ್ನು ಪುಸಲಾಯಿಸಿ ಲೈಂಗಿಕ ಸಂಪರ್ಕ ಮಾಡಿದ್ದರು. ಕೊನೆಗೆ ಮದುವೆ ಆಗದೇ ಮೋಸ ಮಾಡಿದ್ದರು. ಸಂತ್ರಸ್ತ ಮಹಿಳೆಗೆ ಈಗಾಗಲೇ ಒಂದು ಮದುವೆ ಆಗಿದ್ದು, ಎರಡು ಮಕ್ಕಳಿದ್ದರು. ಅದಾಗಿಯೂ ಆ ಮಹಿಳೆ ಮೋಹಕ್ಕೆ ಒಳಗಾದ ಕಿರಣ ಮೊಗೇರ್ ಅವರನ್ನು ಪುಸಲಾಯಿಸಿದ್ದರು. ಆ ಮಹಿಳೆಯನ್ನು ತಮ್ಮ ಮನೆಗೆ ಕರೆದುಕೊಂಡು ಬಂದಿದ್ದರು. ಅವರ ಜೊತೆ ವಾಸವಾಗಿರುವಾಗಲೇ ಲೈಂಗಿಕ ದೌರ್ಜನ್ಯ ಎಸಗಿದ್ದರು. ನಂತರ ಮಹಿಳೆಗೆ ಬೈದು ಮನೆಯಿಂದ ಹೊರ ಹಾಕಿದ್ದರು. ಹೀಗಾಗಿ ಮಹಿಳೆ ದೂರಿದ್ದು, ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. - [ಮೆದುಳು ರೋಗಕ್ಕೆ ಬೆದರಿ ಉರುಳು!](https://mobiletime.in/2026/02/brain-disease-is-a-scary-thing/): ಮೆದುಳು ರೋಗಕ್ಕೆ ಬೆದರಿದ ಮಹಿಳೆಯೊಬ್ಬರು ಮುರುಡೇಶ್ವರದಲ್ಲಿ ಉರುಳು ಹಾಕಿಕೊಂಡಿದ್ದಾರೆ. ಭಟ್ಕಳ ತಾಲೂಕಿನ ಮುರುಡೇಶ್ವರದ ಮಾವಳ್ಳಿ ಸೋನಾರಕೇರಿಯ ಗುಲಾಬಿ ಸುಕ್ರಾ ನಾಯ್ಕ (35) ಅವರು ವಾಸವಾಗಿದ್ದರು. ಮನೆ ಕೆಲಸ ಮಾಡಿಕೊಂಡಿದ್ದ ಅವರಿಗೆ 15 ವರ್ಷದ ಹಿಂದೆ ಮೆದುಳು ಸಂಬoಧಿಸಿದ ರೋಗ ಕಾಣಿಸಿಕೊಂಡಿತ್ತು. ಕೆಲ ಕಾಲದ ನಂತರ ಪೀಡ್ಸ ಸಹ ಶುರುವಾಗಿದ್ದು, ಅನಾರೋಗ್ಯದ ಕಾರಣ ಗುಲಾಬಿ ನಾಯ್ಕ ಅವರು ಸದಾ ಮಂಕಾಗಿರುತ್ತಿದ್ದರು. ದಿನದಿAದ ದಿನಕ್ಕೆ ಗುಲಾಬಿ ನಾಯ್ಕ ಅವರ ಮಾನಸಿಕ ಸ್ಥಿತಿ ಹದಗೆಟ್ಟಿತು. ರೋಗದ ಬಗ್ಗೆ ಯೋಚಿಸುತ್ತಿದ್ದ ಅವರು ಆತ್ಮಹತ್ಯೆಯ ನಿರ್ಧಾರ ಮಾಡಿದರು. ಫೆ 12ರಂದು ಮನೆಯ ಕೋಣೆಗೆ ಹೋದ ಅವರು ಅಲ್ಲಿಯೇ ನೇಣಿಗೆ ಶರಣಾದರು. ಸಮೃದ್ಧಿ ಕೋ ಆಪರೇಟಿವ್ ಸೊಸೈಟಿಯಲ್ಲಿ ಕೆಲಸ ಮಾಡುವ ಮುಕ್ತಾ ನಾಯ್ಕ ಅವರು ಅಕ್ಕನ ಸಾವಿನ ಬಗ್ಗೆ ಮಾಹಿತಿ ನೀಡಿದರು. ಮುರುಡೇಶ್ವರ ಪೊಲೀಸರು ಪ್ರಕರಣ ದಾಖಲಿಸಿದರು. `ಆತ್ಮಹತ್ಯೆ ಅಪರಾಧ’ - [ಒಂದೇ ದಿನ: ಮೂರು ಕಡೆ ದಹನ!](https://mobiletime.in/2026/02/one-day-burning-on-three-sides/): ಕುಮಟಾದಲ್ಲಿ ಗುರುವಾರ ಒಂದೇ ದಿನ ಮೂರು ಕಡೆ ಅಗ್ನಿ ಅನಾಹುತ ನಡೆದಿದೆ. ಪುರಸಭೆ ವ್ಯಾಪ್ತಿಯ ವನ್ನಳ್ಳಿಯ ಹನೀಫಾ ಫಕೀರ ಲಂಗಾಡೋ ಅವರ ಮನೆಯ ಬಳಿಯಿದ್ದ ದಾಸ್ತಾನು ಕೊಠಡಿಗೆ ಬೆಂಕಿ ಬಿದ್ದಿದೆ. ವಿದ್ಯುತ್ ಶಾರ್ಟ ಸರ್ಕೀಟ್ ಕಾರಣದಿಂದ ಅಲ್ಲಿ ಅವಘಡ ಉಂಟಾಗಿದೆ. ಅಲ್ಲಿದ್ದ ಮೂರು ದೋಣಿಯ ಯಂತ್ರ, ವಾಷಿಂಗ್ ಮಿಷನ್, ಸೋಲಾರ್ ಪ್ಯಾನಲ್ ಸುಟ್ಟು ಕರಲಾಗಿದೆ. ಇದರಿಂದ ಹನೀಫಾ ಅವರು 7 ಲಕ್ಷ ರೂ ನಷ್ಟ ಅನುಭವಿಸಿದ್ದಾರೆ. ಗೋಕರ್ಣ ಬಳಿಯ ಬೆಲೆಹಿತ್ತಲಿನ ಈಶ್ವರ ನಾಗಪ್ಪ ಅಂಬಿಗ ಅವರ ಮನೆಯ ಆವರಣದಲ್ಲಿ ಇಟ್ಟಿದ್ದ ಮೀನುಗಾರಿಕೆಯ ಬಲೆಗೂ ಇದೇ ದಿನ ಬೆಂಕಿ ತಗಲಿದೆ. ಅದರಿಂದ ಅವರು ಸಹ 70 ಸಾವಿರ ರೂ ನಷ್ಟ ಅನುಭವಿಸಿದ್ದಾರೆ. ಈ ಅಗ್ನಿ ಅನಾಹುತಕ್ಕೆ ಕಾರಣ ಗೊತ್ತಾಗಿಲ್ಲ. ಗುರುವಾರ ಮಧ್ಯಾಹ್ನದ ವೇಳೆಗೆ ಮೂರೂರು ಗುಡ್ಡದ ಮೇಲೆ ಸುಮಾರು 30 ಎಕರೆ ಅರಣ್ಯ ಪ್ರದೇಶದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಈ ಪ್ರದೇಶದಲ್ಲಿ ಬೆಳೆದಿದ್ದ ಕರಡ ಬೆಂಕಿಯ ಜ್ವಾಲೆಗೆ ಹೊತ್ತಿ ಉರಿದಿದೆ. ಈ ಎಲ್ಲಾ ಕಡೆ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ಆರಿಸುವ ಸಾಹಸ ನಡೆಸಿದ್ದಾರೆ. ಗುಡ್ಡದ ಮೇಲೆ ಬಿದ್ದ ಬೆಂಕಿ ಆರಿಸಲು ಅರಣ್ಯ ಸಿಬ್ಬಂದಿಯೂ ಪ್ರಯತ್ನಿಸಿದ್ದಾರೆ.   - [ಬಕೆಟ್ ಹಿಡಿದವರೇ ಇಲ್ಲಿ ಅಧ್ಯಕ್ಷ: ತೆನೆ ಹೊತ್ತ ಮಹಿಳೆಗೆ ಸೋನಿ ನಾಯಕತ್ವ!](https://mobiletime.in/2026/02/the-one-holding-the-bucket-is-the-president-here-sonis-leadership-to-the-woman-carrying-the-grain/): ಜೆಡಿಎಸ್ ಜಿಲ್ಲಾಧ್ಯಕ್ಷರಾಗಿ ಸೂರಜ ನಾಯ್ಕ ಸೋನಿ ಅವರು ಆಯ್ಕೆಯಾಗಿದ್ದು, ಇದಕ್ಕೆ ಜೆಡಿಎಸ್ ಕಾರ್ಯಕರ್ತರಿಂದಲೇ ಅಸಮಧಾನವ್ಯಕ್ತವಾಗಿದೆ. `ಪಕ್ಷಕ್ಕಾಗಿ ದುಡಿದವರಿಗೆ ಬಿಟ್ಟು ಬಕೆಟ್ ಹಿಡಿದವರನ್ನು ಆಯ್ಕೆ ಮಾಡಲಾಗಿದೆ’ ಎಂದು ಅನೇಕರು ಕಿಡಿಕಾರಿದ್ದಾರೆ. ಕುಮಟಾ ಕ್ಷೇತ್ರದಿಂದ ವಿಧಾನಸಭೆಗೆ ಸ್ಪರ್ಧಿಸಿದ್ದ ಸೂರಜ ನಾಯ್ಕ ಸೋನಿ ಅವರು ಅತಿ ಅಲ್ಪ ಮತದಿಂದ ಸೋಲು ಅನುಭವಿಸಿದ್ದಾರೆ. ಉತ್ತಮ ಸಂಘಟನಾ ಶಕ್ತಿ ಹೊಂದಿದ ಅವರನ್ನು ಗುರುತಿಸಿ ಜೆಡಿಎಸ್ ಜಿಲ್ಲಾಧ್ಯಕ್ಷ ಸ್ಥಾನ ನೀಡಿದೆ. ಸದ್ಯ. ಪಕ್ಷ ಸಂಘಟನೆಗಾಗಿ ಅವರು ಶಪಥ ಮಾಡಿದ್ದಾರೆ. ಆದರೆ, ಸೂರಜ ನಾಯ್ಕ ಸೋನಿ ಅವರ ವಿರುದ್ಧ ಅವರದ್ದೇ ಪಕ್ಷದವರು ತಿರುಗಿ ಬಿದ್ದಿದ್ದು, ಆಂತರಿಕ ಕಲಹಕ್ಕೆ ಕಾರಣವಾಗಿದೆ. `ವರಿಷ್ಠರು ಪಕ್ಷಕ್ಕಾಗಿ ದುಡಿಯುವವರನ್ನು ಬಿಟ್ಟು ಬಕೆಟ್ ಹಿಡಿಯುವವರಿಗೆ ಮಣೆ ಹಾಕುತ್ತಿದ್ದಾರೆ’ ಎಂದು ಪಕ್ಷದ ಪ್ರಮುಖರಾದ ರಮೇಶ ನಾಯ್ಕ ಅವರು ದೂರಿದ್ದಾರೆ. `ಸೂರಜ್ ಸೋನಿ ಅವರು ಈವರೆಗೂ ಪಕ್ಷದ ಪ್ರಾಥಮಿಕ ಸದಸ್ಯತ್ವವನ್ನೂ ಪಡೆದಿಲ್ಲ. ಯಾವುದೇ ಪಕ್ಷದ ಚಟುವಟಿಕೆಗಳಲ್ಲಿ ಭಾಗಿಯಾಗಿಲ್ಲ. ಇಂತಹ ವ್ಯಕ್ತಿಯನ್ನು ಏಕಾಏಕಿ ಅಧ್ಯಕ್ಷರನ್ನಾಗಿ ಮಾಡಿರುವುದು ಇಡೀ ಒಕ್ಕಲಿಗ ಸಮುದಾಯಕ್ಕೆ ಮಾಡಿದ ಅವಮಾನ’ ಎಂದು ಅವರು ಕಿಡಿಕಾರಿದ್ದಾರೆ. `ಕಳೆದ 15 ವರ್ಷಗಳಿಂದ ಪಕ್ಷದ ಉಪಾಧ್ಯಕ್ಷರಾಗಿ ನಿಷ್ಠೆಯಿಂದ ಸೇವೆ ಸಲ್ಲಿಸುತ್ತಾ ಬಂದಿರುವ ಜಿ ಕೆ ಪಟಗಾರ ಅವರನ್ನು ಜೆಡಿಎಸ್ ಪಕ್ಷ ಕಡೆಗಣಿಸಿದೆ’ ಎಂದು ಜಿ ಕೆ ಪಟಗಾರ ಅವರೇ ಹೇಳಿದ್ದಾರೆ. `ಸೂರಜ್ ನಾಯ್ಕ ಸೋನಿ ಅವರನ್ನು ಏಕಾಏಕಿ ಜಿಲ್ಲಾಧ್ಯಕ್ಷರನ್ನಾಗಿ ಘೋಷಿಸಿರುವುದು ಸರಿಯಲ್ಲ’ ಎಂದವರು ತಮ್ಮ ಅಸಮಧಾನಹೊರಹಾಕಿದ್ದಾರೆ. `ಕಳೆದ ಸಾಕಷ್ಟು ವರ್ಷದಿಂದ ಜಿಲ್ಲಾ ಜೆಡಿಎಸ್ ಉಪಾಧ್ಯಕ್ಷರಾಗಿ ನಾನು ಕಾರ್ಯ ನಿರ್ವಹಿಸುತಿದ್ದು, ಸಂಘಟನೆಗೆ ದುಡಿದಿದ್ದೇನೆ. ಜಿಲ್ಲಾಧ್ಯಕ್ಷರಾಗಿದ್ದ ಗಣಪಯ್ಯ ಗೌಡ ಅವರಿಗೆ ಅಪಘಾತವಾಗಿದ್ದ ಸಂದರ್ಭದಲ್ಲಿಯೂ ಹೆಚ್ಚಿನ ಜವಾಬ್ದಾರಿ ಹೊತ್ತು ಕೆಲಸ ಮಾಡಿದ್ದೇನೆ. ಪಕ್ಷ ಸಂಘಟನೆಗಾಗಿ ಸದಸ್ಯತ್ವ ಮಾಡಿದ್ದೇನೆ. ಹೀಗಿರುವಾಗ ಜಿಲ್ಲಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ವೇಳೆ ಪಕ್ಷದ ವರಿಷ್ಠರ ಆದೇಶದಂತೆ ಚುನಾವಣೆ ಮಾಡಿ ನನ್ನ ಜಿಲ್ಲಾಧ್ಯಕ್ಷನಾಗಿ ಆಯ್ಕೆ ಮಾಡಲಾಗಿತ್ತು. ಉತ್ತರ ಕರ್ನಾಟಕದ ಸಮಾವೇಶದ ಬಿಜಾಪುರದಲ್ಲಿ ನಡೆಯುತ್ತಿದ್ದ ಸಂದರ್ಭದಲ್ಲಿ ವರಿಷ್ಠರು ಏಕಾಏಕಿ ಸೂರಜ್ ಸೋನಿ ಜಿಲ್ಲಾಧ್ಯಕ್ಷ ಎಂದು ಘೋಷಣೆ ಮಾಡಿದ್ದಾರೆ. ಇದು ಪ್ರಾಮಾಣಿಕ ಸೇವೆಗೆ ಮಾಡಿದ ಅನ್ಯಾಯ’ ಎಂದು ಅವರು ಹೇಳಿದ್ದಾರೆ. `ಚುನಾವಣಾಧಿಕಾರಿ ರಾಘವೇಂದ್ರ ಮಡಿವಾಳ ಅವರ ಸಮ್ಮುಖದಲ್ಲಿ ಯಲ್ಲಾಪುರದಲ್ಲಿ ನಡೆದ ಸಾಂಸ್ಥಿಕ ಚುನಾವಣೆಯಲ್ಲಿ 65 ಸದಸ್ಯರ ಪೈಕಿ 53 ಸದಸ್ಯರ ಬೆಂಬಲದೊAದಿಗೆ ಜಿ ಕೆ ಪಟಗಾರ ಅವರು ಅಧಿಕೃತವಾಗಿ ಅವಿರೋಧವಾಗಿ ಆಯ್ಕೆ ಮಾಡಲಾಗಿತ್ತು. ಅವರಿಗೆ ಗುರುತಿನ ಚೀಟಿಯನ್ನು ಸಹ ಪಕ್ಷದಿಂದ ನೀಡಲಾಗಿತ್ತು. ಮಾಜಿ ಜಿಲ್ಲಾಧ್ಯಕ್ಷ ಗಣಪಯ್ಯ ಗೌಡರ ಅವಧಿಯಲ್ಲಿಯೂ ಸಕ್ರಿಯರಾಗಿದ್ದ ಪಟಗಾರ ಅವರು, ಜಿಲ್ಲಾಧ್ಯಕ್ಷರ ಅನುಪಸ್ಥಿತಿಯಲ್ಲಿ ಪಕ್ಷ ಸಂಘಟನೆಯ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಿದ್ದರು. ಹೀಗಿದ್ದರೂ, ಹೈಕಮಾಂಡ್ ಚುನಾವಣಾ ಪ್ರಕ್ರಿಯೆಯನ್ನು ಬದಿಗೊತ್ತಿ ಹೊಸಬರನ್ನು ನೇಮಿಸಿರುವುದು ಅಚ್ಚರಿ ಮೂಡಿಸಿದೆ’ ಎಂದವರು ಹೇಳಿದ್ದಾರೆ. ಗುಣವಂತೆಯ ಗೋವಿಂದೇ ಗೌಡರು ಮಾತನಾಡಿ `ಮೂರು ಸಲ ಚುನಾವಣೆ ಸೋತ ಕುಮಟಾದ ಸೂರಜ್ ಸೋನಿ, ರಾಮನಗರದ ನಿಖಿಲ್ ಕುಮಾರಸ್ವಾಮಿ ಅಂಥವರಿಗೆ ಹುದ್ದೆ ಕೊಡುವುದಾದರೆ ನಮ್ಮಂಥ ನಿಷ್ಟಾವಂತರಿಗೆ ಬೆಲೆಯೇ ಇಲ್ಲ. ನಾನು ವಿದ್ಯಾರ್ಥಿಯಾದಾಗಿನಿಂದ ಜೆಡಿಎಸ್ ಪಕ್ಷದಲ್ಲಿದ್ದೇನೆ. ಯಾವುದೇ ಹುದ್ದೆ ಪಡೆದಿಲ್ಲ. ಗಣಪೇ ಗೌಡರು ಜಿಲ್ಲಾಧ್ಯಕ್ಷರಾಗಿ ಹಣ ಮಾಡಲಿಲ್ಲ. ಆಮಿಷಕ್ಕೆ ಒಳಗಾಗಲಿಲ್ಲ’ ಎಂದರು. ರಾಜ್ಯ ಸಮಿತಿ ಸದಸ್ಯ ಗೋವಿಂದೆ ಗೌಡ ಮಾತನಾಡಿ `ಪಕ್ಷದ ವರಿಷ್ಠರು ತಮ್ಮ ನಿರ್ಧಾರವನ್ನು ಮರುಪರಿಶೀಲಿಸಿ, ಪ್ರಜಾಪ್ರಭುತ್ವ ಮಾದರಿಯಲ್ಲಿ ಆಯ್ಕೆಯಾದ ಜಿ ಕೆ ಪಟಗಾರ ಅವರಿಗೆ ನ್ಯಾಯ ಒದಗಿಸಬೇಕು. ಈ ನಿಟ್ಟಿನಲ್ಲಿ ಪಕ್ಷಕ್ಕೆ ಒಂದು ವಾರದ ಕಾಲಾವಕಾಶ ನೀಡಲಾಗಿದ್ದು, ಅಷ್ಟರೊಳಗೆ ಸರಿಪಡಿಸದಿದ್ದಲ್ಲಿ ಜಿಲ್ಲೆಯ ಪ್ರಮುಖ ಪದಾಧಿಕಾರಿಗಳು ಮತ್ತು ಬೆಂಬಲಿಗರು ಸಾಮೂಹಿಕವಾಗಿ ರಾಜೀನಾಮೆ ನೀಡುತ್ತೇವೆ’ ಎಂದು ಎಚ್ಚರಿಸಿದರು. ಪ್ರಮುಖರಾದ ಶೇಖರ್ ಪೂಜಾರಿ, ಸತೀಶ್ ಮಹಾಲೆ, ಈಶ್ವರ ನಾಯ್ಕ ಭಟ್ಕಳ, ಶೇಖರ್ ನಾಯ್ಕ ಶಿರಸಿ, ಗಣೇಶ ನಾಯ್ಕ, ಶಂಕರ್ ನಾಯ್ಕ, ರಾಜೇಶ ಪಟಗಾರ್, ಲಕ್ಷ್ಮಣ ಪಟಗಾರ, ರಾಮು ಆರ್. ಶಿರಸಿ, ವಿನಾಯಕ ಶಿರಸಿ, ಅನಿಲ್ ಗೌಡ ಹಾಗೂ ಇನ್ನಿತರರು ಪತ್ರಿಕಾಗೋಷ್ಠಿಯಲ್ಲಿದ್ದರು. - [ರೆಸಾರ್ಟ ಸರ್ವೇ: ಅಧಿಕಾರಿಗಳ ಜೊತೆ ಅತಿಕ್ರಮಣದಾರರ ವಾಗ್ವಾದ!](https://mobiletime.in/2026/02/resort-survey-encroachers-clash-with-officials/): ಕುಮಟಾದ ನಾಡುಮಾಸ್ಕೇರಿ ಗ್ರಾಮ ಪಂಚಾಯತ ಸುತ್ತಲಿನ ಪ್ರದೇಶದಲ್ಲಿ ವ್ಯಾಪಕ ಪ್ರಮಾಣದಲ್ಲಿ ಅಕ್ರಮ ರೆಸಾರ್ಟುಗಳಿದ್ದು, ಆ ಜಾಗದ ಸರ್ವೇ ಕಾರ್ಯ ಮುಕ್ತಾಯವಾಗಿದೆ. ಸರ್ವೇಯ ಕೊನೆಯ ದಿನವಾದ ಗುರುವಾರ ರೆಸಾರ್ಟ ಮಾಲಕರು ಹಾಗೂ ಅಧಿಕಾರಿಗಳ ನಡುವೆ ವಾಗ್ವಾದವೂ ನಡೆದಿದೆ. ನಾಡುಮಾಸ್ಕೇರಿ ಗ್ರಾಮದ ಗಂಗೆಕೊಳ್ಳ, ಹಾರುಮಾಸ್ಕೇರಿ ಗ್ರಾಮ, ಭಾವಿಕೊಡ್ಲ ಗ್ರಾಮದ ದುಬ್ಬನಶಸಿ ಭಾಗದಲ್ಲಿ ಒಟ್ಟು 57 ರೆಸಾರ್ಟುಗಳ ಸರ್ವೇ ಮುಗಿದಿದೆ. ಮೂರು ಹಂತದಲ್ಲಿ ಈ ಸರ್ವೇ ನಡೆಸಲಾಗಿದೆ. ಸರ್ಕಾರಿ ಜಾಗ ಅತ್ರಿಕ್ರಮಿಸಿದರ ಕುರಿತು ಹಾಗೂ ಈ ಬಗ್ಗೆ ಆಕ್ಷೇಪಣೆಯ ಕುರಿತು ನೋಟಿಸ್ ನೀಡಿ ಅದರ ತೆರವಿಗೆ ಕ್ರಮ ಜರುಗಿಸುವ ಸಾಧ್ಯತೆಗಳಿವೆ. ಅತಿಕ್ರಮಣದಾರರು ಸ್ವಯಂ ಪ್ರೇರಣೆಯಿಂದ ತೆರವು ಮಾಡುವಂತೆ ಸೂಚಿಸಲಾಗಿದ್ದು, ಅದಕ್ಕೆ ಬಗ್ಗದೇ ಇದ್ದರೆ ಸರ್ಕಾರದಿಂದಲೇ ತೆರವು ಮಾಡುವ ಬಗ್ಗೆ ಚಿಂತನೆ ನಡೆದಿದೆ. ಕಂದಾಯ ಹಾಗೂ ಭೂ ಮಾಪನಾ ಇಲಾಖೆ ಜಂಟಿ ಸರ್ವೇ ನಡೆದಿದ್ದರಿಂದ ಈ ಭಾಗದ ಅಕ್ರಮ ಕಟ್ಟಡಗಳ ನೆಲಸಮ ಆಗುವ ಲಕ್ಷಣಗಳಿವೆ. ಭೂ ಮಾಪನಾ ಇಲಾಖೆ ಅಧಿಕಾರಿಗಳು ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಗುರುವಾರ ಅಂತಿಮ ಹಂತ ಸರ್ವೆ ಪೂರ್ಣಗೊಳಿಸುವ ವೇಳೆ ಹಲವು ರೆಸಾರ್ಟ ಮಾಲಕರು ತಕರಾರು ಸಲ್ಲಿಕೆ ಮಾಡಿದ್ದಾರೆ. `ಎಲ್ಲರಿಗೂ ಒಂದೇ ರೀತಿಯ ಕಾನೂನು ಮಾಡಿ’ ಎಂದು ಕೆಲ ರೆಸಾರ್ಟ ಮಾಲಕರು ವಾಗ್ವಾದ ನಡೆಸಿದ್ದಾರೆ. ವಿವಾದ ದೊಡ್ಡದಾದ ಹಿನ್ನಲೆ ತಹಶೀಲ್ದಾರ್ ಶ್ರೀಕೃಷ್ಣ ಕಾಮಕರ್ ಅವರು ಸ್ಥಳಕ್ಕೆ ದೌಡಾಯಿಸಿದ್ದಾರೆ. ನಂತರ ಅವರು ಅಲ್ಲಿದ್ದವರನ್ನು ಸಮಾಧಾನ ಮಾಡಿ ಪರಿಸ್ಥಿತಿ ತಿಳಿಗೊಳಿಸಿದ್ದಾರೆ. ಪಿಐ ಶ್ರೀಧರ ಎಸ್ ಆರ್ ನೇತೃತ್ವದಲ್ಲಿ ಪಿಎಸ್‌ಐ. ಅನಿಲ ಹಾಗೂ ಪೊಲೀಸ್ ಸಿಬ್ಬಂದಿ ಸ್ಥಳದಲ್ಲಿದ್ದು ಕಟ್ಟೆಚ್ಚರವಹಿಸಿದ್ದರು. - [ದುಶ್ಚಟಕ್ಕೆ ದಾಸನಾದವನ ದುರ್ಮರಣ!](https://mobiletime.in/2026/02/the-cruel-death-of-one-who-becomes-a-slave-to-evil/): ದಿನದ 24 ತಾಸು ಸರಾಯಿ ಸೇವಿಸುತ್ತಿದ್ದ ಸಿದ್ದಾಪುರದ ಶ್ರೀಧರ ಮೊಗೇರ್ ಅವರು 38ನೇ ವಯಸ್ಸಿನಲ್ಲಿಯೇ ಸಾವನಪ್ಪಿದ್ದಾರೆ. `ಸರಾಯಿ ಸೇವನೆ ಒಳ್ಳೆಯದಲ್ಲ’ ಎಂದು ವೈದ್ಯರು ಸೂಚನೆ ನೀಡಿದರೂ ಪಾಲಿಸದ ಅವರು ಸಣ್ಣ ವಯಸ್ಸಿನಲ್ಲಿಯೇ ಭೂಲೋಕದ ಯಾತ್ರೆ ಮುಗಿಸಿದ್ದಾರೆ. ಸಿದ್ದಾಪುರದ ರವೀಂದ್ರ ನಗರದಲ್ಲಿ ಶ್ರೀಧರ ಮಂಜು ಮೊಗೇರ್ ಅವರು ವಾಸವಾಗಿದ್ದರು. ಕೂಲಿ ಕೆಲಸ ಮಾಡಿಕೊಂಡಿದ್ದ ಅವರು ತಮ್ಮ ದುಡಿಮೆಯ ಹಣವನ್ನು ಸರಾಯಿ ಅಂಗಡಿಗೆ ಕೊಡುತ್ತಿದ್ದರು. ಸರಾಯಿ ನಶೆಯಲ್ಲಿರುವ ಅವಧಿಯಲ್ಲಿ ಅವರು ಊಟ-ತಿಂಡಿಯನ್ನು ಸಹ ಸೇವಿಸುತ್ತಿರಲಿಲ್ಲ. ದುಶ್ಚಟದ ಪರಿಣಾಮವಾಗಿ ಅವರು ವರ್ಷದ ಹಿಂದೆಯೇ ತಮ್ಮ ಎರಡು ಕಾಲುಗಳ ಸ್ವಾಧೀನ ಕಳೆದುಕೊಂಡಿದ್ದರು. ಅದಾಗಿಯೂ ಅವರು ಕುಡಿತದ ಚಟದಿಂದ ಮಾತ್ರ ಹೊರಬಂದಿರಲಿಲ್ಲ. ದಿನದ 24 ತಾಸು ಸರಾಯಿ ನಶೆಯಲ್ಲಿಯೇ ಇರುತ್ತಿದ್ದ ಶ್ರೀಧರ ಮೊಗೇರ್ ಅವರಿಗೆ ಸಾಕಷ್ಟು ವೈದ್ಯರು ತಿಳುವಳಿಕೆ ಮೂಡಿಸಿದ್ದರು. ವರ್ಷದ ಹಿಂದೆ ನೆಲಕ್ಕೆ ಬಿದ್ದು ಪೆಟ್ಟು ಮಾಡಿಕೊಂಡಿದ್ದ ಅವಧಿಯಲ್ಲಿಯೂ ವೈದ್ಯರು ಅವರಿಗೆ ಬುದ್ದಿ ಹೇಳಿದ್ದರು. ಮಂಗಳೂರು ಎಜೆ ಆಸ್ಪತ್ರೆಗೆ ದಾಖಲಾದಾಗ ಅಲ್ಲಿನ ವೈದ್ಯರು ಸರಾಯಿ ಕುಡಿಯದಂತೆ ಸೂಚನೆಯನ್ನು ನೀಡಿದ್ದರು. ಆದರೆ, ವೈದ್ಯರ ಮಾತನ್ನು ಕೇಳುವ ಪರಿಸ್ಥಿತಿಯಲ್ಲಿ ಶ್ರೀಧರ ಮೊಗೇರ್ ಅವರಿರಲಿಲ್ಲ. ಫೆ 10ರಂದು ಸಿದ್ದಾಪುರದ ಕೊಡ್ಲಿಯಲ್ಲಿ ಸಣ್ಣ ಪುಟ್ಟ ಕೆಲಸ ಮಾಡುವಾಗಲೂ ಶ್ರೀಧರ ಮೊಗೇರ್ ಅವರು ಸರಾಯಿ ನಶೆಯಲ್ಲಿದ್ದರು. ಪರಿಣಾಮ ಅಲ್ಲಿಯೇ ಕುಸಿದು ಬಿದ್ದರು. ಅವರನ್ನು ಸಿದ್ದಾಪುರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ನಂತರ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಕಳುಹಿಸಲಾಯಿತು. ಫೆ 11ರಂದು ಶ್ರೀಧರ ಮೊಗೇರ್ ಅವರು ಸಾವನಪ್ಪಿದ ಬಗ್ಗೆ ವೈದ್ಯರು ಘೋಷಿಸಿದರು. ಸಹೋದರನ ಸಾವಿನ ಬಗ್ಗೆ ಸಿದ್ದಾಪುರ ಹಳದಕಟ್ಟಾ ವಾಜಪೇಯಿ ನಗರದ ಲತಾ ಮಂಜು ಮೊಗೇರ್ ಅವರು ಮಾಹಿತಿ ನೀಡಿದ್ದು, ಸಿದ್ದಾಪುರ ಪೊಲೀಸರು ಪ್ರಕರಣ ದಾಖಲಿಸಿದರು. `ಕುಡಿತ ಒಳ್ಳೆಯದಲ್ಲ’   - [ಮಾನಸಿಕ ವೇದನೆ: ವಿಷ ಸೇವಿಸಿದ ಯುವ ದಂಪತಿ!](https://mobiletime.in/2026/02/mental-anguish-young-couple-who-consumed-poison/): ಯಲ್ಲಾಪುರದ ಉಮ್ಮಚ್ಗಿಯ ನಾಗೇಂದ್ರ ಬೋವಿವಡ್ಡರ್ ಹಾಗೂ ನಮಿತಾ ಬೋವಿವಡ್ಡರ್ ದಂಪತಿ ವಿಷ ಸೇವಿಸಿದ್ದಾರೆ. ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಿದರೂ ನಾಗೇಂದ್ರ ಬೋವಿವಡ್ಡರ್ ಅವರು ಸಾವನಪ್ಪಿದ್ದಾರೆ. ಯಲ್ಲಾಪುರದ ಉಮ್ಮಚ್ಗಿ ಸುಂಕದಗುoಡಿಯಲ್ಲಿ ನಾಗೇಂದ್ರ ರಾಮಣ್ಣ ಬೋವಿವಡ್ಡರ್ (26) ಅವರು ವಾಸವಾಗಿದ್ದರು. ಯಾವುದೋ ಒಂದು ಸಮಸ್ಯೆಯಿಂದ ಅವರು ಬಳಲುತ್ತಿದ್ದರು. ಆದರೆ, ಆ ಸಮಸ್ಯೆ ಯಾವುದು? ಎಂದು ಯಾರಿಗೂ ಗೊತ್ತಾಗಿರಲಿಲ್ಲ. ಮಾನಸಿಕವಾಗಿ ಕುಗ್ಗಿದ್ದ ಅವರು ಫೆಬ್ರವರಿ 7ರಂದು ವಿಷ ಸೇವಿಸಿದ್ದರು. ಇದನ್ನು ನೋಡಿದ ಕೆಲವರು ಆ ದಂಪತಿಯನ್ನು ಆಸ್ಪತ್ರೆಗೆ ದಾಖಲಿಸಿದ್ದರು. ಶಿರಸಿ ಟಿ ಎಸ್ ಎಸ್ ಆಸ್ಪತ್ರೆಗೆ ದಾಖಲಾದ ನಾಗೇಂದ್ರ ಬೋವಿವಡ್ಡರ್ ಅವರು ಚೇತರಿಸಿಕೊಳ್ಳಲಿಲ್ಲ. ಇನ್ನಷ್ಟು ಅಸ್ವಸ್ಥರಾದ ಅವರನ್ನು ವೈದ್ಯರ ಶಿಫಾರಸ್ಸಿನ ಮೇರೆಗೆ ದರಳಕಟ್ಟೆಗೆ ಕಳುಹಿಸಲಾಯಿತು. ಅಲ್ಲಿ ಸಾಕಷ್ಟು ಪ್ರಮಾಣದಲ್ಲಿ ನಾಗೇಂದ್ರ ಬೋವಿವಡ್ಡರ್ ಅವರಿಗೆ ಆರೈಕೆ ಮಾಡಿ ಬದುಕಿಸುವ ಪ್ರಯತ್ನ ನಡೆಯಿತು. ಆದರೆ, ಅದರಿಂದ ಯಾವ ಪ್ರಯೋಜನವೂ ಆಗಲಿಲ್ಲ. ಫೆಬ್ರವರಿ 11ರಂದು ನಾಗೇಂದ್ರ ಬೋವಿವಡ್ಡರ್ ಅವರು ಚಿಕಿತ್ಸೆ ಫಲಕಾರಿಯಾಗದೇ ಸಾವನಪ್ಪಿದರು. ಉಮ್ಮಚ್ಗಿಯ ಸಿವಿಲ್ ಗುತ್ತಿಗೆದಾರ ಗೋವಿಂದ ಬಸಾಪುರ ಅವರು ಈ ವಿಷಯದ ಬಗ್ಗೆ ಮಾಹಿತಿ ನೀಡಿದ್ದು, ಯಲ್ಲಾಪುರ ಪೊಲೀಸರು ಪ್ರಕರಣ ದಾಖಲಿಸಿದರು. - [ಜಾತ್ರೆ ಬಂದರೂ ಸರಿಯಾಗದ ಶಿರಸಿ-ಹುಬ್ಬಳ್ಳಿ ರಸ್ತೆ!](https://mobiletime.in/2026/02/the-sirsi-hubballi-road-is-not-in-good-condition-even-after-the-fair/): ಶಿರಸಿ-ಹುಬ್ಬಳ್ಳಿ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ಇದರಿಂದ ಆ ಭಾಗದಲ್ಲಿ ಓಡಾಡುವ ಜನ ರೊಚ್ಚಿಗೆದ್ದಿದ್ದಾರೆ. ಜಾತ್ರೆ ಸಮೀಪಿಸಿದರೂ ರಸ್ತೆ ಸರಿಯಾಗಿಲ್ಲ ಎಂಬ ಕಾರಣಕ್ಕೆ ಆಕ್ರೋಶವ್ಯಕ್ತಪಡಿಸಿದ್ದಾರೆ. ಚಿಪಗಿಯಿಂದ ಬಿಸಲಕೊಪ್ಪದವರೆಗೆ ಸಾಕಷ್ಟು ಪ್ರಮಾಣದಲ್ಲಿ ರಸ್ತೆ ಹಾಳಾಗಿದೆ. ನಿತ್ಯ ಸಾವಿರಾರು ವಾಹನಗಳು ಈ ಮಾರ್ಗದಲ್ಲಿ ಓಡಾಡುತ್ತಿದ್ದು, ಧೂಳಿನಿಂದ ಜನ ತತ್ತರಿಸಿದ್ದಾರೆ. ನಿತ್ಯವೂ ಧೂಳು ತಿನ್ನುವ ಆ ಮಾರ್ಗದ ಅಕ್ಕಪಕ್ಕದ ನಿವಾಸಿಗಳು ಅಸ್ತಮಾ ರೋಗದ ಆತಂಕದಲ್ಲಿದ್ದಾರೆ. ಜಾತ್ರೆ ಸಮೀಪಿಸಿದರೂ ರಸ್ತೆ ದುರಸ್ಥಿ ನಡೆಯದಿರುವುದು ಜನರ ಅಸಮಧಾನಕ್ಕೆ ಕಾರಣವಾಗಿದೆ. ಈ ಎಲ್ಲಾ ಸಮಸ್ಯೆ ಹಿನ್ನಲೆ ಶಿರಸಿ – ಹುಬ್ಬಳ್ಳಿ ಹೆದ್ದಾರಿ ಮಾರ್ಗದ ಗೌಡಳ್ಳಿ ಬಳಿ ಜನ ದಿಢೀರ್ ಆಗಿ ಪ್ರತಿಭಟನೆ ನಡೆಸಿದ್ದಾರೆ. ಬುಧವಾರ ಸಂಜೆ ಅರ್ದ ಗಂಟೆಗಳ ಕಾಲ ರಸ್ತೆ ಬಂದ್ ಮಾಡಿ ಜನ ಆಕ್ರೊಶ ಹೊರಹಾಕಿದ್ದಾರೆ. ಲಾರಿಗಳ ಜೊತೆ ವಿವಿಧ ವಾಹನಗಳು ಸಾಲುಗಟ್ಟಿ ನಿಂತಿರುವುದನ್ನು ಅರಿತು ಗುತ್ತಿಗೆದಾರರು ಸ್ಥಳಕ್ಕೆ ದೌಡಾಯಿಸಿದ್ದಾರೆ. ಅದಾದ ನಂತರ ಜನ ಪ್ರತಿಭಟನೆ ಹಿಂಪಡೆದಿದ್ದು, ಶೀಘ್ರದಲ್ಲಿ ರಸ್ತೆ ರಿಪೇರಿ ನಡೆಯದೇ ಇದ್ದರೆ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ. - [ಕಾಡಿನಿಂದ ಬಂದ ಕಡವೆ ಕೊನೆಯುಸಿರು!](https://mobiletime.in/2026/02/the-last-breath-of-the-raven-from-the-forest/): ಕಾಡಿನಿಂದ ನಾಡಿಗೆ ಬಂದಿದ್ದ ಕಡವೆ ಮುಂಡಗೋಡದಲ್ಲಿ ಕೊನೆಯುಸಿರೆಳೆದಿದೆ. ಮುಂಡಗೋಡ ಸನವಳ್ಳಿ ಗ್ರಾಮಕ್ಕೆ ಗುರುವಾರ ಕಡವೆಯೊಂದು ಆಗಮಿಸಿತ್ತು. ಆ ವನ್ಯಜೀವಿ ಮೇಲೆ ನಾಯಿಗಳು ಆಕ್ರಮಣ ನಡೆಸಿದವು. ಅಲ್ಲಿದ್ದ ರೈತರು ನಾಯಿಗಳನ್ನು ಓಡಿಸುವ ಪ್ರಯತ್ನ ಮಾಡಿದರು. ಆದರೆ, ಅದು ಪ್ರಯೋಜನಕ್ಕೆ ಬರಲಿಲ್ಲ. ನಾಯಿ ದಾಳಿಗೆ ಒಳಗಾಗಿದ್ದ ಕಾಡು ಪ್ರಾಣಿಯನ್ನು ಊರಿನವರು ರಕ್ಷಿಸುವ ಕೆಲಸ ಮಾಡಿದರು. ರೈತ ಮುಖಂಡರಾದ ರಾಜು ಗುಬ್ಬಕ್ಕನವರ್, ಧರ್ಮೊಜಿ ಅರಶಿಣಗೇರಿ, ಪ್ರಭು ಅರಶಿಣಗೇರಿ, ಪರಶುರಾಮ ಬಾಲಣ್ಣನವರ್, ರಾಮ ಪೂಜಾರ, ಪರಶುರಾಮ ಮಟ್ಟಿಮನಿ, ಫಕ್ಕೀರಪ್ಪ ಕಳಸಗೇರಿ, ಬೀಟ್ ಫಾರೆಸ್ಟರ ರಾಜು ಪರೀಟ್, ವಾಚಮನ್ ಕೃಷ್ಣ ದೊಡ್ಮನಿ, ನಿತಿನ ಯಳವಟ್ಟಿ ಸೇರಿ ವನ್ಯಜೀವಿ ರಕ್ಷಣೆಗೆ ಸಾಹಸ ಮಾಡಿದರು. ಆದರೆ, ಅದಾಗಲೇ ಅಸ್ವಸ್ಥಗೊಂಡಿದ್ದ ಕಡವೆ ಅಲ್ಲಿಯೇ ಕೊನೆಯುಸಿರೆಳೆಯಿತು. ಈ ಬಗ್ಗೆ ರೈತರು ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. - [ಮೀಸೆ ಮೂಡದ ಯುವಕರಿಗೆ ಶೋಕಿಯ ಚಟ: ಕದಿಯುವ ಹಠ!](https://mobiletime.in/2026/02/young-men-who-dont-grow-a-moustache-have-a-sad-habit-a-tendency-to-steal/): 17 ಹಾಗೂ 18 ವರ್ಷದ ಬಾಲಕರಿಬ್ಬರು ಸೇರಿ ಕುಮಟಾದ ಪೆಟ್ರೋಲ್ ಬಂಕಿಗೆ ಕನ್ನ ಹಾಕಿದ್ದಾರೆ. ಪೆಟ್ರೊಲ್ ಬಂಕ್ ಕಚೇರಿಗೆ ನುಗ್ಗಿ 25 ಸಾವಿರ ರೂ ಹಣ ಕದ್ದವರನ್ನು ಪೊಲೀಸರು ಬಂಧಿಸಿದ್ದಾರೆ. ಕುಮಟಾ ಮಾಸೂರು ಕ್ರಾಸಿನ ಬಳಿ ಪೆಟ್ರೋಲ್ ಬಂಕಿನಲ್ಲಿ ಕಳ್ಳತನ ನಡೆದಿತ್ತು. ಪೆಟ್ರೋಲ್ ಬಂಕಿನ ಕಿಟಕಿ ಸರಳು ತುಂಡರಿಸಿದ ಕಳ್ಳರು 25 ಸಾವಿರ ರೂ ಹಣ ಕದ್ದು ಪರಾರಿ ಆಗಿದ್ದರು. ಈ ಬಗ್ಗೆ ಪ್ರಕರಣ ದಾಖಲಿಸಿದ ಕುಮಟಾ ಪೊಲೀಸರು ತನಿಖೆ ಶುರು ಮಾಡಿದರು. ಪೊಲೀಸ್ ನಿರೀಕ್ಷಕ ಯೋಗೇಶ ಕೆ ಎಂ ಅವರ ಜೊತೆ ಪಿಸೈ ರವಿ ಗುಡ್ಡಿ, ಮಯೂರ ಪಟ್ಟಣಶೆಟ್ಟಿ ಹಾಗೂ ಸಾವಿತ್ರಿ ನಾಯಕ ಅವರ ತಂಡ ಶೋಧ ಕಾರ್ಯಾಚರಣೆ ನಡೆಸಿತು. ಪೊಲೀಸ್ ಸಿಬ್ಬಂದಿ ದಯಾನಂದ ನಾಯ್ಕ, ಗಣೇಶ ನಾಯ್ಕ, ಕಿರಣ ನಾಯ್ಕ, ಪ್ರದೀಪ ನಾಯಕ, ಚಿದಾನಂದ ನಾಯ್ಕ, ಗಿರೀಶ ನಾಯ್ಕ, ಹರೀಶ ನಾಯ್ಕಕ, ಅರುಣ ನಾಯ್ಕ ಅವರು ಜೀಪಿನ ಚಾಲಕ ಮಾರುತಿ ಗಳಪೂಜಿ ಅವರ ಜೊತೆ ಸೇರಿ ಕಳ್ಳರ ಹುಡುಕಾಟ ಮಾಡಿದರು. ಆಗ, ಕುಮಟಾ ವನ್ನಳ್ಳಿ ಬಳಿಯ ಕಲ್ಗುಡ್ಡದ ಅಸ್ಲಂ ಹನೀಪ್ ದಂಡು (18) ಸಿಕ್ಕಿಬಿದ್ದರು. 17 ವರ್ಷದ ಮತ್ತೊಬ್ಬ ಬಾಲಕನ ಜೊತೆ ಸೇರಿ ಕಳ್ಳತನ ಮಾಡಿರುವುದನ್ನು ಅವರು ಒಪ್ಪಿಕೊಂಡರು. ಆ ಕಳ್ಳರ ಬಳಿಯಿದ್ದ 3 ಲಕ್ಷ ರೂ ಮೌಲ್ಯದ ಎರಡು ಸ್ಕೂಟರ್ ಜೊತೆ ವಿವಿಧ ಆಯುಧ ಹಾಗೂ ಕಳ್ಳತನದ ಹಣವನ್ನು ಪೊಲೀಸರು ವಶಕ್ಕೆಪಡೆದರು. ಕಳ್ಳರ ವಿರುದ್ಧ ಕಾನೂನು ಕ್ರಮ ಜರುಗಿಸಿದರು.   - [ಶರಾವತಿ ಪಂಪ್ಡ ಸ್ಟೋರೇಜ್: ಕೇಂದ್ರದ ನಿರ್ಧಾರವೇ ಇಲ್ಲಿ ಅಂತಿಮ!](https://mobiletime.in/2026/02/sharavati-pumped-storage-the-centres-decision-is-final-here/): ಹೊನ್ನಾವರದ ಶರಾವತಿ ಪಂಪ್ಡ ಸ್ಟೋರೇಜ ಯೋಜನೆಗೆ 54.155 ಹೆಕ್ಟೇರ ಅರಣ್ಯ ಭೂಮಿ ಬಳಸಿಕೊಳ್ಳಲು ಉದ್ದೇಶಿಸಲಾಗಿದ್ದು, ಈ ವಿಚಾರದಲ್ಲಿ ಕೇಂದ್ರ ಸರ್ಕಾರದ ನಿರ್ಧಾರವೇ ಅಂತಿಮ ಎಂದು ಅರಣ್ಯ ಇಲಾಖೆ ಹೇಳಿದೆ. ಈ ವಿಷಯವಾಗಿ ಶಿವಮೊಗ್ಗ ವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿಯಿAದ ಹೋರಾಟಗಾರ ಚಂದ್ರಹಾಸ ಕೋಚ್ರೇಕರ್ ಅವರಿಗೆ ಪತ್ರ ಬಂದಿದೆ. `ಶರಾವತಿ ಪಂಪ್ಡ ಸ್ಟೋರೇಜ ಯೋಜನೆಗೆ ಸಂಬAಧಿಸಿದ ಸಾರ್ವಜನಿಕ ಕುಂದುಕೊರತೆ ವಿಷಯವಾಗಿ ಶಿವಮೊಗ್ಗ ವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಕಚೇರಿಯಿಂದ ಬರೆದ ಪತ್ರದಲ್ಲಿ ಈ ವಿಷಯದ ಬಗ್ಗೆ ವಿವರಿಸಲಾಗಿದೆ. `ಪಶ್ಚಿಮ ಘಟ್ಟಗಳ ಅರಣ್ಯ ಮತ್ತು ಜೀವ ವೈವಿಧ್ಯಕ್ಕೆ ಹಾನಿಯಾಗುವ ಭೀತಿಯಿಂದ ಸಾರ್ವಜನಿಕರು ಸಲ್ಲಿಸಿದ್ದ ದೂರನ್ನು ಪರಿಶೀಲಿಸಲಾಗಿದ್ದು, ಈ ಕುರಿತಾದ ವಿವರವಾದ ವರದಿ ಈಗಾಗಲೇ ಮೇಲಾಧಿಕಾರಿಗಳಿಗೆ ಸಲ್ಲಿಸಲಾಗಿದೆ’ ಎಂದು ಅರಣ್ಯ ಇಲಾಖೆ ತಿಳಿಸಿದೆ. `ಕರ್ನಾಟಕ ವಿದ್ಯುತ ನಿಗಮದ 2000 ಮೆಗಾ ವ್ಯಾಟ್ ಸಾಮರ್ಥ್ಯದ ಈ ಬ್ರಹತ್ ಯೋಜನೆಗಾಗಿ ಸಾಗರ, ಶಿವಮೊಗ್ಗ ವನ್ಯಜೀವಿ ಮತ್ತು ಹೊನ್ನಾವರ ಅರಣ್ಯ ವಿಭಾಗಗಳ ವ್ಯಾಪ್ತಿಯಲ್ಲಿ ಒಟ್ಟೂ 54.155 ಹೆಕ್ಟೇರ ಅರಣ್ಯ ಭೂಮಿ ಬಳಸಿಕೊಳ್ಳಲು ಉದ್ದೇಶಿಸಲಾಗಿದೆ. ಅದರಲ್ಲಿ 14.582 ಹೆಕ್ಟೇರ ಭೂಮಿ ಶಿವಮೊಗ್ಗ ವನ್ಯಜೀವಿ ವಿಭಾಗಕ್ಕೆ ಸೇರಿದ್ದು ಇಲಾಖೆಯು ನಿಯಮಾನುಸಾರ ಸ್ಥಳ ಪರಿಶೀಲನೆ ನಡೆಸಿ 2025ರ ಜೂನ್ 24ರಂದು ವರದಿ ಸಲ್ಲಿಸಿದೆ. ವನಸಂರಕ್ಷಣಾ ಅಧಿನಿಯಮ 1980ರ ಪ್ರಕಾರ ಈ ಯೋಜನೆಯ ಅರಣ್ಯ ಭೂಮಿ ಬಿಡುಗಡೆಗೆ ಕೇಂದ್ರ ಸರ್ಕಾರದ ಪೂರ್ವಾನುಮತಿ ಕಡ್ಡಾಯವಾಗಿದ್ದು ಕೇಂದ್ರದ ನಿರ್ಧಾರವೇ ಈ ವಿಷಯದಲ್ಲಿ ಅಂತಿಮ’ ಎಂದು ಬರೆಯಲಾಗಿದೆ. - [ಅಖಿಲ ಭಾರತ ಮುಷ್ಕರ: ಅಂಕೋಲಾದಲ್ಲಿ ಪ್ರತಿಭಟನೆ](https://mobiletime.in/2026/02/all-india-strike-protest-in-ankola/): ಕೇಂದ್ರ ಸರ್ಕಾರದ ನಾಲ್ಕು ಕಾರ್ಮಿಕ ಸಂಹಿತೆಗಳ ವಿರುದ್ಧ ವಿವಿಧ ಸಂಘಟನೆಯವರು ಸೇರಿ ಮುಷ್ಕರಕ್ಕೆ ಕರೆ ನೀಡಿದ್ದು, ಅಂಕೋಲಾದಲ್ಲಿಯೂ ಮುಷ್ಕರಕ್ಕೆ ಬೆಂಬಲವ್ಯಕ್ತವಾಗಿದೆ. ಸತ್ಯಾಗ್ರಹ ಸ್ಮಾರಕ ಭವನದ ಎದುರು 500ಕ್ಕೂ ಅಧಿಕ ರೈತ, ಕಾರ್ಮಿಕ, ನೌಕರ ಹಾಗೂ ಕೂಲಿ ಕಾರ್ಮಿಕರು ಜಮಾಯಿಸಿ ಪ್ರತಿಭಟನೆ ನಡೆಸಿದ್ದಾರೆ. ಪಟ್ಟಣದ ಜೈಹಿಂದ್ ಸರ್ಕಲ್ ಬಳಿ ಬಹಿರಂಗ ಸಭೆ ನಡೆದಿದ್ದು, ಮೆರವಣಿಗೆಯಲ್ಲಿ ಭಾಗವಹಿಸಿದ ಜನರು ಸಹ ಜನ ವಿರೋಧಿ ನೀತಿಗಳ ವಿರುದ್ಧ ಘೋಷಣೆ ಕೂಗಿದ್ದಾರೆ. ವಿಬಿ ಗ್ರಾಮ ಜಿ ಕಾಯ್ದೆ, ವಿದ್ಯುತ್ ಶಕ್ತಿ ತಿದ್ದುಪಡಿ ಮಸೂದೆ, ಶಾಂತಿ ಕಾಯ್ದೆ, ಬೀಜ ಮಸೂದೆ, ವಿಮಾ ಮಸೂದೆ ನೀತಿಗಳು ಜನ ವಿರೋಧಿ ಎಂದು ಪ್ರತಿಭಟನಾಕಾರರು ಹೇಳಿದರು. ಅಮೆರಿಕ-ಭಾರತ ವಾಣಿಜ್ಯ ಒಪ್ಪಂದ ರದ್ದತಿಗಾಗಿ ಒತ್ತಾಯಿಸಿದರು. ಇದರೊಂದಿಗೆ `ಸ್ಕೀಂ ನೌಕರರ ಕಾಯಂ ಮಾಡಬೇಕು. ಕನಿಷ್ಠ ವೇತನ ಕಾಯ್ದೆ ಜಾರಿ ಆಗಬೇಕು. ಅರಣ್ಯ ಭೂಮಿ ಹಕ್ಕು ಸಿಗಬೇಕು’ ಎಂದು ಆಗ್ರಹಿಸಿದರು. ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾಧ್ಯಕ್ಷ ಶಾಂತಾರಾಮ ನಾಯಕ `ಬಿಜೆಪಿ ನೇತೃತ್ವದ ಕೇಂದ್ರ ಸರಕಾರ ಜನ ವಿರೋಧಿಯಾಗಿದೆ. ಕಾರ್ಪೋರೇಟ್ ಕಂಪನಿ ಪರವಾಗಿ ಸರಕಾರ ಕೆಲಸ ಮಾಡುತ್ತಿದೆ. ದೇಶ ವಿರೋಧಿ ಈ ಕಾರ್ಮಿಕ ಸಂಹಿತೆಗಳು ರದ್ಧಾಗಬೇಕು. ನರೆಗಾ ಯೋಜನೆ ಮತ್ತೆ ಸ್ಥಾಪನೆಯಾಗಬೇಕು’ ಎಂದು ಆಗ್ರಹಿಸಿದರು. ಸಿಐಟಿಯು ತಾಲೂಕು ಸಂಚಾಲಕ ಎಚ್ ಬಿ ನಾಯಕ ಮಾತನಾಡಿ `ಸಾರ್ವಜನಿಕ ಆರೋಗ್ಯ, ಶಿಕ್ಷಣ, ಪಿಂಚಣಿ, ಉದ್ಯೋಗ ಭದ್ರತೆ ಮತ್ತು ಭೂಮಿ ಹಕ್ಕನ್ನು ರಕ್ಷಣೆ ಮಾಡುವ ಮೂಲಕ ಜನರ ಬದುಕಿನ ಹಕ್ಕನ್ನು ರಕ್ಷಿಸಬೇಕು’ ಎಂದು ಒತ್ತಾಯಿಸಿದರು. ಅಂಗನವಾಡಿ ನೌಕರರ ಸಂಘ ಅದ್ಯಕ್ಷೆ ಗೀತಾ ಗೌಡ, ಅಕ್ಷರ ದಾಸೋಹ ನೌಕರರ ಸಂಘದ ಅಧ್ಯಕ್ಷೆ ವರದಾ ಅಂಕೋಲೆಕರ ಸಭೆಯಲ್ಲಿ ಮಾತನಾಡಿದರು. ವಿವಿಧ ಸಂಘಟನೆಗಳ ಪದಾದಿಕಾರಿಗಳಾದ ಗೌರೀಶ ನಾಯಕ, ಸಂತೋಷ ನಾಯ್ಕ, ಉಷಾ ಪಡ್ತಿ, ರಾಜೇಶ್ವರಿ, ಮಾದೇವ ಗೌಡ, ವೆಂಕಟರಮಣ ಗೌಡ, ಯಶೋದಾ ನಾಯ್ಕ, ಪುಷ್ಪಾ ನಾಯ್ಕ, ರಾಜಗೋಪಾಲ್ ಶೇಟ್, ಗುರುದಾಸ ನಾಯ್ಕ ಪ್ರತಿಭಟನೆಯಲ್ಲಿದ್ದರು. ಯಲ್ಲಾಪುರದಲ್ಲಿಯೂ ಪ್ರತಿಭಟನೆ: ಅಖಿಲ ಭಾರತ ಸಾರ್ವತ್ರಿಕ ಮುಷ್ಕರ ನಿಮಿತ್ತ ಯಲ್ಲಾಪುರದಲ್ಲಿಯೂ ಪ್ರತಿಭಟನೆ ನಡೆದಿದೆ. ನಾಲ್ಕು ಕಾರ್ಮಿಕ ಕೋಡ್ ವಾಪಸ್ ಪಡೆಯುವಂತೆ ಆಗ್ರಹಿಸಿ ತಹಶೀಲ್ದಾರ್ ಮೂಲಕ ಮನವಿ ಸಲ್ಲಿಕೆಯಾಗಿದೆ. ವಿದ್ಯುತ್ ತಿದ್ದುಪಡಿ ಮಸೂದೆ, ಬೀಜ ಮಸೂದೆ, ರೇಗಾ ಬದಲಾವಣೆಯನ್ನು ಪ್ರತಿಭಟನಾಕಾರರು ವಿರೋಧಿಸಿದರು. ಸಿಐಟಿಯು ಮುಖಂಡರಾದ ಲಕ್ಷ್ಮಿ ಸಿದ್ದಿ, ಗೌರಿ ಮರಾಠೆ, ತ್ರೇಷಾ ರೊಜಾರಿಯೋ, ನಾಗರತ್ನ, ಬಾಗಿ ಸಿದ್ದ, ರೂಪಾ ಪಾಟಣಕರ, ಶಾಂತಾ ಮೋಗೆರ, ರೈತ ಮುಖಂಡರಾದ ನಾಗಪ್ಪ ಸಿದ್ದಿ, ಮಂಜು ಮುಂತಾದವರು ಹಾಜರಿದ್ದರು. - [ಅರಣ್ಯ ಹಕ್ಕು: ಮರುಪರಿಶೀಲನೆ ಗಡುವು ವಿಸ್ತರಿಸಲು ಮನವಿ](https://mobiletime.in/2026/02/forest-rights-request-to-extend-review-deadline/): ಅರಣ್ಯ ಅತಿಕ್ರಮಣದಾರರು ಸಲ್ಲಿಸಿದ ಭೂಮಿ ಹಕ್ಕಿನ ಅರ್ಜಿ ಮರುಪರಿಶೀಲನೆಗೆ ನಿಗದಿಪಡಿಸಿದ ಗಡುವು ಫೆಬ್ರವರಿ 13ಕ್ಕೆ ಮುಗಿಯಲಿದೆ. ಹೀಗಾಗಿ ಈ ಅವಧಿಯನ್ನು ಇನ್ನೂ 6 ತಿಂಗಳು ವಿಸ್ತರಿಸಬೇಕು ಎಂದು ಉತ್ತರ ಕನ್ನಡ ಜಿಲ್ಲಾ ಅರಣ್ಯ ಭೂಮಿಸಾಗುವಳಿದಾರರ ಹೋರಾಟ ಸಮಿತಿ ಆಗ್ರಹಿಸಿದೆ. ಹೋರಾಟ ಸಮಿತಿಯ ಅಧ್ಯಕ್ಷ ಚಂದ್ರಕಾAತ ಕೊಚರೇಕರ ನೇತ್ರತ್ವದಲ್ಲಿ ಒಂದು ನಿಯೋಗದವರು ಈ ಬಗ್ಗೆ ಹೊನ್ನಾವರ ತಹಶೀಲ್ದಾರ್ ಪ್ರವೀಣ ಕರಾಂಡೆ ಅವರನ್ನು ಭೇಟಿ ಮಾಡಿ ಚರ್ಚಿಸಿದ್ದಾರೆ. ಅದಾದ ನಂತರ ಜಿಲ್ಲಾಡಳಿತ ಹಾಗೂ ರಾಜ್ಯದ ಮುಖ್ಯ ಕಾರ್ಯದರ್ಶಿಗಳಿಗೆ ಮನವಿ ಸಲ್ಲಿಸಿದ್ದಾರೆ. `ಅರಣ್ಯ ಹಕ್ಕು ರಾಜ್ಯ ಮಟ್ಟದ ಮೇಲುಸ್ತುವಾರಿ ಸಮಿತಿಯ ನಿರ್ದೇಶನದಂತೆ ಜಿಲ್ಲೆಯಲ್ಲಿ ಈಗಷ್ಟೇ ಅರಣ್ಯ ಒತ್ತುವರಿ ಸ್ಥಳದ ಮಹಜರು ಪ್ರಕ್ರಿಯೆ ಆರಂಭವಾಗಿದೆ. ಮಹಜರು ಪ್ರಕ್ರಿಯೆ ಪೂರ್ಣಗೊಳ್ಳಲು ಕನಿಷ್ಠ ಎರಡು ತಿಂಗಳು ಬೇಕಾಗುತ್ತದೆ. ಆ ನಂತರವೇ ತಿರಸ್ಕರಿಸಿದ ಅರ್ಜಿಗಳ ಪುನರ್ ಪರಿಶೀಲನೆಯ ಕಾರ್ಯಕ್ಕೆ ಚಾಲನೆ ನೀಡಲು ಉಪವಿಭಾಗೀಯ ಮಟ್ಟದಲ್ಲಿ ಸಮಿತಿಗಳಿಗೆ ಸಾಧ್ಯವಾಗಲಿದೆ’ ಎಂಬ ಅಂಶವನ್ನು ನಿಯೋಗದವರು ವಿವರಿಸಿದ್ದಾರೆ. `ಪಾರಂಪರಿಕ ಅರಣ್ಯವಾಸಿಗಳು ಭೂಮಿಯ ಹಕ್ಕಿನಿಂದ ಅರಣ್ಯ ಹಕ್ಕುನಿಯಮ 13ರಲ್ಲಿ ಸೂಚಿಸಿರುವ ಅಗತ್ಯ ಸಾಕ್ಷ್ಯ ಮತ್ತು ಪುರಾವೆಯನ್ನು ಗುರುತಿಸುವ ಸಲುವಾಗಿ ಜಿಲ್ಲಾಧಿಕಾರಿಗಳು ಸ್ಥಳೀಯ ಅಧಿಕಾರಿಗಳ ಜಂಟಿ ಸಮಿತಿ ರಚಿಸಿದ್ದಾರೆ. ಸ್ಥಳ ಮಹಜರು ಕೇವಲ ಕಾಟಾಚಾರ ಪ್ರಕ್ರಿಯೆ ಆದರೆ ಪ್ರಯೋಜನವಿಲ್ಲ. ಸರ್ವೆ ಕಾರ್ಯ ನಡೆಸಿ ನೈಜ ಸಾಗುವಳಿ ಕ್ಷೇತ್ರವನ್ನು ಮತ್ತು ಸ್ಥಳದಲ್ಲಿನ ಪುರಾವೆಗಳನ್ನು ಗುರುತಿಸಿ ಅರಣ್ಯಭೂಮಿ ಸಾಗುವಳಿದಾರರಿಗೆ ಭೂಮಿಯ ಹಕ್ಕು ನೀಡುವ ಕೆಲಸ ಆಗಬೇಕು’ ಎಂದು ಆಗ್ರಹಿಸಿದ್ದಾರೆ. ಪ್ರಮುಖರಾದ ಶ್ರೀಧರ ಶೆಟ್ಟಿ ಜಂಬೆಬೆಟ್ಟ ಗುಂಡಬಾಳಾ, ಮನೋಹರ ಅಂಕೋಲೇಕರ ಮತ್ತಿತರು ಈ ಬಗ್ಗೆ ಅಧಿಕಾರಿಗಳ ಮನವರಿಕೆ ಮಾಡುವ ಪ್ರಯತ್ನ ನಡೆಸಿದ್ದಾರೆ. - [ಮನೆ ಮೇಲೆ ಬಿದ್ದ ಮರ: ಮಹಿಳೆಗೆ ಗಾಯ!](https://mobiletime.in/2026/02/tree-falls-on-house-woman-injured/): ದಾಂಡೇಲಿಯಲ್ಲಿ ಮನೆಯ ಮೇಲೆ ಮರ ಬಿದ್ದಿದ್ದು, ಮನೆಯೊಳಗೆ ಇದ್ದ ವ್ಯಕ್ತಿಯೊಬ್ಬರಿಗೆ ಭಾರೀ ಪ್ರಮಾಣದ ಗಾಯವಾಗಿದೆ. ಮರ ಬಿದ್ದ ರಭಸಕ್ಕೆ ಮನೆಯ ಮೇಲ್ಚಾವಣಿ ಮನುಷ್ಯನ ಮೇಲೆ ಬಿದ್ದಿದ್ದರಿಂದ ಮಹಿಳೆಯೊಬ್ಬರು ಆಸ್ಪತ್ರೆ ಸೇರಿದ್ದಾರೆ. ಹಳೆ ದಾಂಡೇಲಿಯಲ್ಲಿ ಮಹಮ್ಮದ್ ಗೌಸ್ ತಿಗಡಿ ಅವರು ವಾಸವಾಗಿದ್ದರು. ಅವರ ಮನೆ ಪಕ್ಕ ಅಪಾಯಕಾರಿ ರೀತಿಯಲ್ಲಿ ಮಾವಿನ ಮರವಿತ್ತು. ಆ ಮರ ಕಟಾವು ಬಗ್ಗೆ ಅವರು ಚಿಂತಿಸಿರಲಿಲ್ಲ. ರೆಂಬೆ-ಕೊAಬೆಗಳನ್ನು ಸಹ ಕಟಾವು ಮಾಡಿರಲಿಲ್ಲ. ಹೀಗಾಗಿ ಆ ಮರ ಮನೆಯ ಮೇಲೆ ಬಿದ್ದಿದ್ದು, ಮನೆಯ ಮೇಲ್ಚಾವಣಿಯನ್ನು ಮುರಿಯಿತು. ಈ ವೇಳೆ ಮಹಮ್ಮದ್ ಗೌಸ್ ತಿಗಡಿ ಅವರ ಮನೆಯಲ್ಲಿ ಮಹಿಳೆಯೊಬ್ಬರು ಇದ್ದು, ಅವರ ತಲೆ ಮೇಲೆ ಮೇಲ್ಚಾವಣಿ ಕುಸಿಯಿತು. ಗಂಭೀರ ಪ್ರಮಾಣದಲ್ಲಿ ಗಾಯಗೊಂಡ ಮಹಿಳೆಯನ್ನು ಅಕ್ಕಪಕ್ಕದಲ್ಲಿದ್ದವರು ರಕ್ಷಿಸಿದರು. ಸಿಮೆಂಟ್ ಶೀಟ್ ಬಿದ್ದ ಕಾರಣ ಮಹಿಳೆ ತಲೆಭಾಗದಿಂದ ರಕ್ತ ಬಂದಿದ್ದು, ಅವರನ್ನು ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಮನೆಗೂ ಅಲ್ಲಲ್ಲಿ ಹಾನಿ ಉಂಟಾಗಿದೆ. - [ಜಾತ್ರೆಗೆ ಬಂದವರಿಗೆ ಲಡ್ಡು ಪ್ರಸಾದ!](https://mobiletime.in/2026/02/laddu-prasad-for-those-who-come-to-the-fair/): ಯಲ್ಲಾಪುರ ಜಾತ್ರೆಗೆ ಬರುವ ಪ್ರತಿಯೊಬ್ಬರಿಗೂ ದೇವಿ ಗದ್ದುಗೆಯ ಬಲಭಾಗ ಲಡ್ಡು ಪ್ರಸಾದ ವಿತರಿಸಲಾಗುತ್ತಿದೆ. ಜೊತೆಗೆ ಭಕ್ತರ ದಾಹ ನೀಗಿಸಲು ಅಲ್ಲಿಯೇ ಪಾನಕವನ್ನು ಕೊಡಲಾಗುತ್ತಿದೆ. ಲಡ್ಡು ಪ್ರಸಾದ ಸ್ವೀಕಾರ ಹಾಗೂ ಪಾನಕ ಸೇವನೆಗೆ ಯಾವುದೇ ಶುಲ್ಕವಿಲ್ಲ. ಬರುವ ಭಕ್ತರಿಗೆ ಸಂಪೂರ್ಣ ಉಚಿತವಾಗಿ ಈ ಸೇವೆ ನೀಡಲಾಗುತ್ತಿದೆ. ಫೆ 12ರಂದು ಯಲ್ಲಾಪುರ ಲಾರಿ ಚಾಲಕ ಹಾಗೂ ಮಾಲಕ ಸಂಘದವರು ಭಕ್ತರಿಗೆ ಲಡ್ಡು ಪ್ರಸಾದ ವಿತರಿಸಿದ್ದಾರೆ. ದೇವಿ ದರ್ಶನ ಹಾಗೂ ಪೂಜಾ ಸೇವೆಯ ಮೊದಲ ದಿನವೇ 6 ಸಾವಿರಕ್ಕೂ ಅಧಿಕ ಭಕ್ತರು ಲಡ್ಡು ಪ್ರಸಾದ ಸ್ವೀಕರಿಸಿದ್ದಾರೆ. ಅಲ್ಲಿಯೇ ಸತ್ಯ ಸಾಯಿ ಸೇವಾ ಸಮಿತಿಯವರು ಪಾನಕ ನೀಡುತ್ತಿದ್ದಾರೆ. ದಣಿದು ಬರುವ ಭಕ್ತರ ದಾಹ ತೀರಿಸುವುದಕ್ಕಾಗಿ ಪಟ್ಟಣ ಪಂಚಾಯತ ಮಾಜಿ ಸದಸ್ಯ ರಾಧಾಕೃಷ್ಣ ಅವರ ತಂಡದವರು ಪಾನಕ ವಿತರಿಸುವ ಕಾಯಕದಲ್ಲಿ ತೊಡಗಿದ್ದಾರೆ. ಲಾರಿ ಮಾಲಕ ಸಂಘದ ಅಧ್ಯಕ್ಷ ಸುಜಯ ಮರಾಠಿ, ಪದಾಧಿಕಾರಿಗಳಾದ ನವೀನ್ ನಾಯ್ಕ, ಮಹೇಶ್ ನಾಯ್ಕ, ರೂಪೇಶ್ ನಾಯ್ಕ, ಮುರಳಿ ರಾವಲ್, ಸುರೇಶ ಮರಾಠಿ, ವೆಂಕಟ್ರಮಣ ಹೆಗಡೆ ಹಾಗೂ ನಾಗೇಂದ್ರ ಭಟ್ ಸ್ಥಳದಲ್ಲಿದ್ದು ಸೇವೆ ಮಾಡುತ್ತಿದ್ದಾರೆ. - [ಅಕ್ರಮ ಹಣ ವಸೂಲಿಗೆ ಗ್ರಾಮ ಪಂಚಾಯತ ಆಸಕ್ತಿ: ವಿರೋಧ!](https://mobiletime.in/2026/02/gram-panchayats-interest-in-collecting-illegal-money-opposition/): ಸಾರ್ವಜನಿಕರು ಸರಾಗವಾಗಿ ಓಡಾಡುವ ರಸ್ತೆಗೆ ಅಡ್ಡಲಾಗಿ ಕುಮಟಾದ ಮಿರ್ಜಾನ್ ಗ್ರಾಮ ಪಂಚಾಯತದವರು ಗೇಟ್ ನಿರ್ಮಿಸಿ, ಹಣ ವಸೂಲಿಗೆ ನಿರ್ಧರಿಸಿದ್ದಾರೆ. ಈ ಕ್ರಮದ ವಿರುದ್ಧ ಜನ ಆಕ್ರೋಶವ್ಯಕ್ತಪಡಿಸಿದ್ದಾರೆ. ಕುಮಟಾಗೆ ಸಾಗುವ ಹೆದ್ದಾರಿ ಅಂಚಿನಿAದ ಛತ್ರಕೂರ್ವೆ ಗ್ರಾಮಕ್ಕೆ ಸಂಪರ್ಕ ಕಲ್ಪಿಸಲು ಕಿರಿದಾದ ದಾರಿಯಿದೆ. ಮಿರ್ಜಾನ್ ಗ್ರಾಮ ಪಂಚಾಯತದವರು ಆ ದಾರಿಗೆ ಅಡ್ಡಲಾಗಿ ಗೇಟ್ ನಿರ್ಮಿಸಿ ಅಲ್ಲಿ ಹೋಗಿ-ಬರುವ ವಾಹನಗಳಿಂದ ಟೋಲ್ ವಸೂಲಿ ಮಾಡುವ ಪ್ರಯತ್ನ ಮಾಡಿದ್ದಾರೆ. ಮಿರ್ಜಾನ್ ಕೋಟೆ ವೀಕ್ಷಣೆಗಾಗಿ ನಿತ್ಯ ನೂರಾರು ಜನ ಬರುತ್ತಿದ್ದು, ಅವರಿಂದ ಅಕ್ರಮ ಹಣ ವಸೂಲಿಗೆ ಅಧಿಕಾರಿಗಳೇ ರೂಪುರೇಷೆ ಸಿದ್ಧಪಡಿಸಿದ್ದಾರೆ. ಹಣ ವಸೂಲಿಗೆ ಅನುಕೂಲವಾಗುವಂತೆ ಮಾಡಿಕೊಳ್ಳಲು ಅಲ್ಲಿ ರಸ್ತೆಗೆ ಅಡ್ಡಲಾಗಿ ಗೇಟ್ ಅಳವಡಿಸುವ ಸಿದ್ಧತೆ ಮಾಡಿಕೊಂಡಿದ್ದಾರೆ. ಈ ವಿಷಯ ಅರಿತ ಊರಿನ ಜನ ಪ್ರತಿಭಟನೆ ಎಚ್ಚರಿಕೆ ನೀಡಿದ್ದಾರೆ. ಮಿರ್ಜಾನ ಕೋಟೆಯ ಕೆಳಭಾಗದಲ್ಲಿರುವ ಛತ್ರಕೂರ್ವೆ ಗ್ರಾಮಕ್ಕೆ ಅನಾದಿಕಾಲದಿಂದಲೂ ಮಿರ್ಜಾನ ಮೂಲಕ ಕೋಟೆಯ ಮಾರ್ಗವಾಗಿ ಸಾಗುವ ರಸ್ತೆಯೇ ಪ್ರಮುಖ ಸಂಪರ್ಕ ಕೊಂಡಿಯಾಗಿದೆ. ಈ ರಸ್ತೆಯು ಲೋಕೋಪಯೋಗಿ ಇಲಾಖೆಯ ಕುಮಟಾ ಉಪವಿಭಾಗದ ಅಡಿಯಲ್ಲಿ ನಿರ್ವಹಣೆಯಲ್ಲಿದೆ. ಆದರೆ, ಇತ್ತೀಚೆಗೆ ಮಿರ್ಜಾನ ಗ್ರಾಮ ಪಂಚಾಯತ್ ಆಡಳಿತ ಸಮಿತಿಯು ಸಭೆ ನಡೆಸಿ, ಪ್ರವಾಸಿ ವಾಹನಗಳಿಂದ ಪಾರ್ಕಿಂಗ್ ಶುಲ್ಕ ವಸೂಲಿ ಮಾಡುವ ಬಗ್ಗೆ ನಿರ್ಧರಿಸಿದ್ದು, ಆ ನಿರ್ಧಾರಕ್ಕೆ ಕಾನೂನು ಮಾನ್ಯತೆಯೇ ಇಲ್ಲ ಎಂಬುದು ಊರಿನವರ ದೂರು. ಮೇಲಾಧಿಕಾರಿಗಳ ನಿರ್ದೇಶನ ಎಂಬ ತಪ್ಪು ಮಾಹಿತಿ ನೀಡಿ ಗ್ರಾಮ ಪಂಚಾಯತದವರು ಹಣ ವಸೂಲಿಗೆ ಮುಂದಾಗಿದ್ದಾರೆ. ಇಲ್ಲಿ ಗೇಟ್ ಅಳವಡಿಕೆಯಿಂದ ಛತ್ರಕೂರ್ವೆ ಗ್ರಾಮದ ನಿವಾಸಿಗಳಿಗೆ, ನಿತ್ಯ ಓಡಾಡುವ ವಿದ್ಯಾರ್ಥಿಗಳಿಗೆ ಹಾಗೂ ತುರ್ತು ವಾಹನಗಳಿಗೆ ಸಂಚರಿಸಲು ಅಡ್ಡಿಯಾಗುತ್ತದೆ ಎಂಬ ಅರಿವಿದ್ದರೂ ಆ ಬಗ್ಗೆ ಸ್ಥಳೀಯ ಆಡಳಿತ ತಲೆಕೆಡಿಸಿಕೊಂಡಿಲ್ಲ. ಗೇಟ್ ಅಳವಡಿಸಿದರೆ ಕೃತಕವಾಗಿ ವಾಹನ ದಟ್ಟಣೆ ಆಗಲಿದ್ದು, ಕಿರಿದಾದ ರಸ್ತೆಯಲ್ಲಿ ಅಪಘಾತದ ಸಾಧ್ಯತೆಗಳು ಹೆಚ್ಚಿವೆ. ಈ ಕುರಿತು ಛತ್ರಕೂರ್ವೆ ಗ್ರಾಮದ 50 ಕ್ಕೂ ಹೆಚ್ಚು ಗ್ರಾಮಸ್ಥರು ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ಗ್ರಾಮದ ಮುಖಂಡ ವಿನಾಯಕ ಪಟಗಾರ, `ಗೇಟ್ ಹಾಕುವುದರಿಂದ ಗ್ರಾಮದ ಜನಜೀವನಕ್ಕೆ ತೊಂದರೆಯಾಗುತ್ತದೆ. ಕೂಡಲೇ ಈ ಕಾಮಗಾರಿ ನಿಲ್ಲಿಸಬೇಕು’ ಎಂದು ಒತ್ತಾಯಿಸಿದರು. ಇನ್ನೊಬ್ಬ ಮುಖಂಡ ಶಿವಾನಂದ ಮಾತನಾಡಿ `ಒಂದೊಮ್ಮೆ ಪಂಚಾಯತ್ ಹಠಮಾರಿ ಧೋರಣೆ ಮುಂದುವರಿಸಿದರೆ ಗ್ರಾಮಸ್ಥರೆಲ್ಲರೂ ಸೇರಿ ಪಂಚಾಯತ್ ಮುಂದೆ ಅನಿರ್ದಿಷ್ಟಾವಧಿ ಧರಣಿ ನಡೆಸಲಿದ್ದೇವೆ’ ಎಂದು ಎಚ್ಚರಿಸಿದರು. ಗ್ರಾಮದ ಪ್ರಮುಖರಾದ ರವಿ, ಚೆನ್ನಪ್ಪ, ಲೋಕೇಶ, ಪುರಸಯ್ಯ, ಗಣೇಶ, ನವೀನ, ಓಮು, ಮಹೆಂದ್ರ ಶಾಂತಿ, ದಾಮೋದರ, ಲಕ್ಷಣ, ಗುರುನಾಥ, ರಾಮಚಂದ್ರ ವೆಂಕಟ್ರಮಣ ಇತರರು ಎಚ್ಚರಿಕೆಯ ಸಂದೇಶ ರವಾನಿಸಿದರು. - [ಕಾಂಕ್ರೆಟ್ ರಸ್ತೆ ಹಾಳು ಮಾಡಿದವನಿಂದಲೇ ಕಳಪೆ ಕಾಮಗಾರಿ ಆರೋಪ!](https://mobiletime.in/2026/02/the-same-person-who-damaged-the-concrete-road-is-accused-of-shoddy-work/): ಮುಂಡಗೋಡದ ತೆಗ್ಗಿನಕೊಪ್ಪದಲ್ಲಿ ಹೊಸದಾಗಿ ನಿರ್ಮಿಸಿದ ಸಿಮೆಂಟ್ ರಸ್ತೆ ಮೇಲೆ ವಿನೋದ ರಾಠೋಡ್ ಅವರು ಬೈಕ್ ಓಡಿಸಿ ರಂಪಾಟ ಮಾಡಿದ್ದಾರೆ. ಇದನ್ನು ಪ್ರಶ್ನಿಸಿದವರಿಗೆ ವಿನೋದ ರಾಠೋಡ್ ಬೆದರಿಕೆ ಒಡ್ಡಿದ್ದಾರೆ. ತೆಗ್ಗಿನಕೊಪ್ಪ ಗ್ರಾಮದಿಂದ ಲಾಮಾ ಕ್ಯಾಂಪ್ ನಂ-01ರವರೆಗೆ ಹೊಸದಾಗಿ ಸಿಮೆಂಟ್ ರಸ್ತೆ ನಿರ್ಮಿಸಲಾಗಿತ್ತು. ರಸ್ತೆ ಗಟ್ಟಿಯಾಗಲಿ ಎಂಬ ಉದ್ದೇಶಕ್ಕೆ ಅಲ್ಲಿ ವಾಹನ ಓಡಾಟಕ್ಕೆ ತಡೆ ಒಡ್ಡಲಾಗಿತ್ತು. ತೆಗ್ಗಿನಕೊಪ್ಪ ಗ್ರಾಮದ ನಿವಾಸಿ ಅನಿಲಕುಮಾರ್ ರಾಠೋಡ್ ಅವರು ಲಂಬಾಣಿ ಅಭಿವೃದ್ಧಿ ನಿಗಮದಿಂದ ಈ ರಸ್ತೆ ಕೆಲಸ ಮಾಡಿದ್ದರು. ಫೆಬ್ರವರಿ 9ರಂದು ಕಾಮಗಾರಿ ನಡೆದಿದ್ದು, ರಸ್ತೆ ಶುರುವಿನಲ್ಲಿ ಟಾಕ್ಟರ್ ನಿಲ್ಲಿಸಿ ರಸ್ತೆ ಓಡಾಟಕ್ಕೆ ತಡೆ ಒಡ್ಡಲಾಗಿತ್ತು. ಆದರೆ, ಅದೇ ಗ್ರಾಮದ ವಿನೋದ ರಾಠೋಟ್ ಅವರು ಉದ್ದೇಶಪೂರ್ವಕವಾಗಿ ಹಸಿ ಕಾಂಕ್ರೀಟ್ ರಸ್ತೆಯ ಮೇಲೆ ಬೈಕ್ ಓಡಿಸಿದರು. ಆ ಮೂಲಕ ಆ ರಸ್ತೆಯನ್ನು ಹಾಳು ಮಾಡಿದರು. ನಂತರ `ರಸ್ತೆ ಕೆಲಸ ಕಳಪೆಯಾಗಿದೆ’ ಎಂದು ಆರೋಪಿಸಿ ಗುತ್ತಿಗೆದಾರರಿಗೆ ನಿಂದಿಸಿದರು. ಈ ಬಗ್ಗೆ ಬುಧವಾರ ಗುತ್ತಿಗೆದಾರ ಅನಿಲಕುಮಾರ್ ಪೊಲೀಸ್ ದೂರು ನೀಡಿದ್ದಾರೆ.   - [ಯಲ್ಲಾಪುರ ಜಾತ್ರೆ: ಗದ್ದುಗೆ ಏರಿದ ಕಾಳಮ್ಮ-ದುರ್ಗಮ್ಮ](https://mobiletime.in/2026/02/yallapura-fair-kalamma-durgamma-who-rose-to-victory/): ಮೂರು ವರ್ಷಕ್ಕೆ ಒಮ್ಮೆ ನಡೆಯುವ ಯಲ್ಲಾಪುರ ಜಾತ್ರೆಗೆ ಅದ್ಧೂರಿ ಚಾಲನೆ ಸಿಕ್ಕಿದೆ. ಬುಧವಾರ ಮಧ್ಯಾಹ್ನ ಗ್ರಾಮದೇವಿ ದೇವಾಲಯದಿಂದ ಹೊರಟ ಕಾಳಮ್ಮ ಹಾಗೂ ದುರ್ಗಮ್ಮ ದೇವಿಯರು ದೇವಿ ಮೈದಾನದ ಗದ್ದುಗೆ ಏರಿದ್ದಾರೆ. ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ದೇವಿಯರಿಬ್ಬರ ಮೆರವಣಿಗೆ ನಡೆದಿದೆ. ಈ ಮೆರವಣಿಗೆಯಲ್ಲಿ ವಿವಿಧ ಕಲಾ ಪ್ರಕಾರಗಳು ಗಮನ ಸೆಳೆದಿದ್ದು, ಭಕ್ತಿ-ಭಾವದಲ್ಲಿ ಜನ ಮಿಂದೆದ್ದಿದ್ದಾರೆ. ಜಾಗಡೆ ವಾದನ, ಚಂಡೆ ವಾದ್ಯ, ಛದ್ಮವೇಶ, ಕುದಿರೆ ಕುಣಿತದ ಜೊತೆ ಎಲ್ಲಡೆ ಕಾಣಿಸಿದ ತೋರಣ ಜಾತ್ರೆಯ ಮೆರಗು ಹೆಚ್ಚಿಸಿದೆ. ಚಿಕ್ಕ ಮಕ್ಕಳಿಂದಹಿಡಿದು ವಯೋವೃದ್ಧರವರೆಗೆ ಭಕ್ತರು ಮೆರವಣಿಗೆಯಲ್ಲಿ ಭಾಗವಹಿಸಿದ್ದು, ದೇವಿಯರ ಭವ್ಯ ಶೋಭಾಯಾತ್ರೆಯನ್ನು ಕಣ್ತುಂಬಿಕೊAಡಿದ್ದಾರೆ. ಯಲ್ಲಾಪುರ ಪಟ್ಟಣದ ಗ್ರಾಮದೇವಿ ಜಾತ್ರಾ ಉತ್ಸವ ಅಧಿಕೃತವಾಗಿ ಶುರುವಾಗಿದೆ. ಕೆೆಂಪು ಬಣ್ಣದಿಂದ ಶೋಭಿತವಾದ ದುರ್ಗಮ್ಮ ದೇವಿ ಹಾಗೂ ಹಸಿರು ಬಣ್ಣದಿಂದ ಶೋಭಿತವಾದ ಕಾಳಮ್ಮ ದೇವಿಯರು ಭವ್ಯ ಶೋಭಾಯಾತ್ರೆಯ ಮೂಲಕ ಜಾತ್ರಾ ಗದ್ದುಗೆಯಲ್ಲಿ ಬುಧವಾರ ಸಂಜೆ ಆಸೀನರಾಗಿದ್ದಾರೆ. ಅಕ್ಕ ದುಗ9ಮ್ಮ ಗ್ರಾಮದೇವಿ ದೇವಸ್ಥಾನದಿಂದ ಮೊದಲು ಹೊರಬಂದು ಬಲಭಾಗದಲ್ಲಿ ನಿಂತಾಗ ಜನ ಕೈ ಮುಗಿದರು. ನಂತರ ತಂಗಿ ಕಾಳಮ್ಮ ಹೊರಬಂದು ಎಡಭಾಗದಲ್ಲಿ ನಿಂತಿದ್ದು ಆ ವೇಳೆ ಭಕ್ತರು ಎರಡು ದೇವಿಯರ ಮುಂದೆ ಮನದಾಳದ ಪ್ರಾರ್ಥನೆ ಸಲ್ಲಿಸಿದರು. ಶೋಭಾಯಾತ್ರೆಯ ಆರಂಭದಲ್ಲಿ ದುರ್ಗಮ್ಮ ದೇವಿ ಮುಂದೆ ಸಾಗಿದ್ದು, ಕಾಳಮ್ಮ ದೇವಿ ಹಿಂಬಾಲಿಸುತ್ತಿರುವAತೆ ಕಾಣಿಸಿತು. ಎರಡೂ ದೇವಿಯರು ಅಲ್ಲಲ್ಲಿ ಹಿಂದೆ ಮುಂದೆ ಸಾಗಿತ್ತ ಬಸವೇಶ್ವರ ವೃತ್ತದವರೆಗೂ ಬಂದು ನಂತರ ಜಾತ್ರಾ ಗದ್ದುಗೆಯತ್ತ ನಡೆದರು. ಯಾವುದೇ ವಿಶೇಷ ಎಳೆದಾಟ, ಹೆಚ್ಚಿನ ಜಗ್ಗಾಟವಿಲ್ಲದೆ ದೇವಿಯರು ಸರಳವಾಗಿ ಜಾತ್ರಾ ಗದ್ದುಗೆಗೆ ಬಂದು ತಲುಪಿದರು. ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ ಅಪಾರ ಸಂಖ್ಯೆಯ ಭಕ್ತರು ಮೆರವಣಿಗೆಯಲ್ಲಿ ಪಾಲ್ಗೊಂಡರು. ವಿವಿಧ ವಾದ್ಯತಂಡಗಳು, ವೇಷಭೂಷಣದ ಗೊಂಬೆಗಳು ಶೋಭಾಯಾತ್ರೆಯುದ್ದಕ್ಕೂ ಸಾಗಿದವು.   - [ಹೊಟೇಲ್ ಎದುರು ಗಾಂಜಾ ಪಾರ್ಟಿ!](https://mobiletime.in/2026/02/cannabis-party-in-front-of-the-hotel/): ಶಿರಸಿಯ ಶಿವಾನಿ ಹೊಟೇಲ್ ಬಳಿ ನಶೆಯ ಗುಂಗಿನಲ್ಲಿದ್ದ ನಾಲ್ವರನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ. ಆಗ, ಅವರೆಲ್ಲರೂ ಮಾದಕ ವ್ಯಸನ ಸೇವಿಸಿದ್ದು ದೃಢವಾಗಿದೆ. ಶಿರಸಿ ಕಸ್ತೂರಿಬಾ ನಗರದ ಸಲಾಮತ್ ಗಲ್ಲಿಯಲ್ಲಿ ಕಾಂಕ್ರೆಟ್ ಕೆಲಸ ಮಾಡುವ ಮಹಮದ್ ಭಾಷಸಾಬ್ ಕೋಡಬಾಳ, ಅದೇ ಭಾಗದಲ್ಲಿ ಟೈಲ್ಸ ಕೆಲಸ ಮಾಡುವ ಇರ್ಫಾನ್ ಫಕ್ರುದ್ಧೀನ್ ಮುಲ್ಲಾ, ಉರ್ದು ಶಾಲೆ ಬಳಿಯ ಆಸಿಫ್ ಶೇಖ್ ಹಾಗೂ ಆಸಿಪ್ ಮಹಮದ್ ರಫೀಕ್ ಚೌದರಿ ವಿರುದ್ಧ ಶಿರಸಿ ಮಾರುಕಟ್ಟೆ ಪೊಲೀಸ್ ಠಾಣೆ ಪಿಸೈ ಬಸವರಾಜ ಕನೆಶೆಟ್ಟಿ ಕಠಿಣ ಕ್ರಮ ಜರುಗಿಸಿದ್ದಾರೆ. ಫೆಬ್ರವರಿ 10ರಂದು ಆ ನಾಲ್ವರು ಕೆ ಎಚ್ ಬಿ ಕಾಲೋನಿ ಬಳಿಯಿರುವ ಶಿವಾನಿ ಹೊಟೇಲ್ ಎದುರು ನಿಂತಿದ್ದರು. ಅವರು ಯಾರೂ ಮಾತನಾಡುವ ಸ್ಥಿತಿಯಲ್ಲಿರಲಿಲ್ಲ. ಅಮಲಿನಲ್ಲಿ ಅಲೆದಾಡುತ್ತಿದ್ದ ಅವರನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದರು. ನಂತರ ಅವರನ್ನು ಪಂಡಿತ್ ಸಾರ್ವಜನಿಕ ಆಸ್ಪತ್ರೆಗೆ ಕರೆದೊಯ್ದು ವೈದ್ಯಕೀಯ ತಪಾಸಣೆ ನಡೆಸಿದರು. ಆಗ, ಅವರೆಲ್ಲರೂ ಗಾಂಜಾ ಪಾರ್ಟಿ ಮಾಡಿದ್ದು ಅರಿವಿಗೆ ಬಂದಿತು. ಗಾಂಜಾ ಸೇವಿಸಿದ ಬಗ್ಗೆ ವೈದ್ಯರು ವರದಿ ನೀಡಿದರು. ಆ ವರದಿ ಹಿನ್ನಲೆ ಪೊಲೀಸರು ನಾಲ್ವರ ವಿರುದ್ಧವೂ ಪ್ರಕರಣ ದಾಖಲಿಸಿದರು. - [ಸಾಕು ಪ್ರಾಣಿಗಳ ಮೇಲೆ ವ್ಯಾಮೋಹ:: ವಿರೋಧಸಹಿಸದ ಮಹಿಳೆಯ ಸಜೀವ ದಹನ!](https://mobiletime.in/2026/02/obsession-with-pets-burning-of-a-woman-alive-without-any-objection/): ಮನೆಯಲ್ಲಿ ಬೆಕ್ಕು ಹಾಗೂ ನಾಯಿಗಳನ್ನು ಸಾಕಲು ವಿರೋಧವ್ಯಕ್ತವಾದ ಕಾರಣ ಅಂಕೋಲಾದ ಕವಿತಾ ಹರಿಕಂತ್ರ ಅವರು ಮೈಮೇಲೆ ಸೀಮೆಎಣ್ಣೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದಾರೆ. ಆತ್ಮಹತ್ಯೆಯ ನಿರ್ಧಾರ ಮಾಡಿದ ಅವರು ಸಜೀವ ದಹನವಾಗಿದ್ದಾರೆ. ಅಂಕೋಲಾದ ಹಾರವಾಡದ ಸೀಬರ್ಡ ಕಾಲೋನಿಯಲ್ಲಿ ಕವಿತಾ ಚೇತನ ಹರಿಕಂತ್ರ (40) ಅವರು ವಾಸವಾಗಿದ್ದರು. ಮನೆಯಲ್ಲಿಯೇ ಕೆಲಸ ಮಾಡಿಕೊಂಡಿದ್ದ ಅವರು ಬೆಕ್ಕು ಹಾಗೂ ನಾಯಿಗಳ ಬಗ್ಗೆ ಅಪಾರ ಪ್ರೀತಿ ಹೊಂದಿದ್ದರು. ಹೀಗಾಗಿ ಅವರು ತಮ್ಮ ಜೊತೆ ಬೆಕ್ಕು-ನಾಯಿಗಳ ಆರೈಕೆ ಮಾಡುತ್ತಿದ್ದರು. ಆದರೆ, ಕವಿತಾ ಹರಿಕಂತ್ರ ಅವರ ಅತ್ತೆಗೆ ಬೆಕ್ಕು-ನಾಯಿಗಳೆಂದರೆ ಆಗಿ ಬರುತ್ತಿರಲಿಲ್ಲ. ಹೀಗಾಗಿ ಕವಿತಾ ಹರಿಕಂತ್ರ ಅವರನ್ನು ಅವರ ಅತ್ತೆ ನಿಂದಿಸುತ್ತಿದ್ದರು. ಇದರಿಂದ ಕವಿತಾ ಹರಿಕಂತ್ರ ಅವರು ಬೇಸರಕ್ಕೆ ಒಳಗಾಗಿದ್ದರು. ಅತ್ತೆ ಬೈದ ಕಾರಣ ಅವರು ಹಿಂದೊಮ್ಮೆ ಪಿನೈಲ್ ಸೇವಿಸಿದ್ದರು. ಆ ವೇಳೆ ಸಾವಿನ ದವಡೆಯಿಂದ ಪಾರಾಗಿ ಬಂದಿದ್ದರು. ಅದಾದ ನಂತರ ಮತ್ತೊಮ್ಮೆ ಸೀಮೆಎಣ್ಣೆಯನ್ನು ಮೈಮೇಲೆ ಸುರಿದುಕೊಂಡಿದ್ದರು. ಆಗಲೂ, ಅವರನ್ನು ಕುಟುಂಬದವರು ಉಳಿಸಿಕೊಂಡಿದ್ದರು. ಹೀಗಿರುವಾಗ ಫೆಬ್ರವರಿ 9ರ ರಾತ್ರಿ ಕವಿತಾ ಹರಿಕಂತ್ರ ಅವರು ಮತ್ತೊಮ್ಮೆ ಆತ್ಮಹತ್ಯೆಯ ನಿರ್ಧಾರ ಮಾಡಿದರು. ಮೈಮೇಲೆ ಸೀಮೆಎಣ್ಣೆ ಸುರಿದುಕೊಂಡ ಅವರು ಬೆಂಕಿ ಹಂಚಿಕೊAಡರು. ಮನೆ ಹಿಂಬದಿ ಅವರು ಸುಟ್ಟು ಶವವಾದರು. ಸದ್ಯ ಅಂಕೋಲಾದ ಹೊನ್ನೆಬೈಲಿನಲ್ಲಿ ವಾಸವಾಗಿರುವ ಮುರುಡೇಶ್ವರ ಮಾವಳ್ಳಿಯ ಮಾರುತಿ ನೀಲಜ್ಜ ಹರಿಕಂತ್ರ ಅವರು ಅಕ್ಕನ ಸಾವಿನ ಬಗ್ಗೆ ಪೊಲೀಸರಿಗೆ ತಿಳಿಸಿದರು. ಪೊಲೀಸರು ಪ್ರಕರಣ ದಾಖಲಿಸಿದರು.   - [ಕಳ್ಳ ಜ್ಯೋತಿಷಿಗೆ ಜೈಲೇ ಗತಿ!](https://mobiletime.in/2026/02/the-thief-astrologer-is-destined-for-jail/): ಸಿದ್ದಾಪುರದ ವಸಂತ ನಾಯ್ಕ ಅವರ ಕೊಲೆ ಪ್ರಕರಣದಲ್ಲಿ ಜೈಲು ಪಾಲಾಗಿರುವ ಟಿವಿ ಜ್ಯೋತಿಷಿ ಕಮಲಾಕರ ಭಟ್ಟರಿಗೆ ನ್ಯಾಯಾಲಯ ಜಾಮೀನು ನೀಡಿಲ್ಲ. ಫೆ 21ರವರೆಗೆ ಅವರ ನ್ಯಾಯಾಂಗ ಬಂಧನ ವಿಸ್ತರಣೆಯಾಗಿದ್ದು, ಜ್ಯೋತಿಷಿ ಜೊತೆ ಅವರ ಸಹಚರರಿಗೂ ಅಲ್ಲಿಯವರೆಗೆ ಜೈಲೂಟ ಸೇವನೆ ಅನಿವಾರ್ಯವಾಗಿದೆ. ಜ್ಯೋತಿಷಿ ಕಮಲಾಕರ ಭಟ್ಟ ಹಾಗೂ ಅವರ ಪ್ರೇಯಸಿ ಸುಚಿತ್ರಾ ಸೇರಿ ಐವರು ಆರೋಪಿತರನ್ನು ಬುಧವಾರ ನ್ಯಾಯಾಧೀಶರು ವಿಡಿಯೋ ಕಾನ್ಪರೆನ್ಸಿನ ಮೂಲಕ ವಿಚಾರಣೆ ಮಾಡಿದ್ದಾರೆ. ಅದಾದ ನಂತರ ಅವರ ಮನವಿಯನ್ನು ತಿರಸ್ಕರಿಸಿ ನ್ಯಾಯಾಂಗ ಬಂಧನವನ್ನು ವಿಸ್ತರಿಸಿದ್ದಾರೆ. ವಸಂತ ನಾಯ್ಕ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಸುಜಿತ್ರಾ ಜೊತೆ ಅವರ ತಂದೆ ಲೋಕನಾಥ, ಪ್ರಿಯತಮ ಕಮಲಾಕರ ಭಟ್ಟ ಹಾಗೂ ಜೊತೆಗಾರರಾದ ಆಕಾಶ್ ವಿನಯ್ ಅವರ ಬಂಧನದ ಅವಧಿ ವಿಸ್ತರಿಸಿ ನ್ಯಾಯಾಲಯ ಆದೇಶಿಸಿದೆ. ಪ್ರಕರಣದ ಗಂಭೀರತೆ ಅರಿತು ಈ ಆದೇಶ ಮಾಡಲಾಗಿದೆ. ಇದರೊಂದಿಗೆ ಇದೇ ಪ್ರಕರಣದಲ್ಲಿ ಇತರೆ ಮೂವರು ಆರೋಪಿಗಳಾದ ಮಹ್ಮದ್ ಮೆಹಫೂಪ್, ಮಹ್ಮದ್ ಫೈಸಲ್ ಮತ್ತು ಇರ್ಫಾನ್ ಸದ್ಯ ಪೊಲೀಸ್ ಕಸ್ಟಡಿಯಲ್ಲಿದ್ದಾರೆ. ಅವರಿಂದ ಕೊಲೆಗೆ ಬಳಸಲಾದ ಮಾರಕಾಸ್ತ್ರಗಳ ಪತ್ತೆ ಹಾಗೂ ಸ್ಥಳ ಮಹಜರು ಪ್ರಕ್ರಿಯೆ ನಡೆಸಲಾಗಿದ್ದು, ಆರೋಪಿತರನ್ನು ಶಿವಮೊಗ್ಗಕ್ಕೆ ಕರೆದೊಯ್ದು ಪಂಚನಾಮೆ ನಡೆಸಲಾಗುತ್ತದೆ.   - [ಗರ್ಭಿಣಿಯಿದ್ದ ರಿಕ್ಷಾಗೆ ಗುದ್ದಿದ ಕಾರು: ಪರಾರಿ!](https://mobiletime.in/2026/02/car-hits-pregnant-rickshaw-driver-escaped/): ಭಟ್ಕಳದ ಮಣಕುಳಿ ಬಳಿ ಗರ್ಭಿಣಿ ಸಂಚರಿಸುತ್ತದ್ದ ರಿಕ್ಷಾಗೆ ಕಾರು ಡಿಕ್ಕಿಯಾಗಿದ್ದು, ಗರ್ಭಿಣಿ ಜೊತೆ ಆರು ಜನರಿಗೆ ಗಾಯವಾಗಿದೆ. ಅಪಘಾತಕ್ಕೆ ಕಾರಣವಾದ ಕಾರಿನ ಜೊತೆ ಚಾಲಕನು ಪರಾರಿಯಾಗಿದ್ದು, ಶೋಧ ನಡೆಯುತ್ತಿದೆ. ಫೆಬ್ರವರಿ 8ರಂದು ಭಟ್ಕಳ ರಾಘವೇಂದ್ರ ಮಠದ ಹತ್ತಿರ ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ಅವಘಡ ನಡೆದಿದೆ. ಕಾರು ಓಡಿಸಿಕೊಂಡು ಬಂದ ಅಪರಿಚಿತ ಕುಂದಾಪುರ ಕಡೆಯಿಂದ ಭಟ್ಕಳ ಕಡೆಗೆ ಹೊರಟಿದ್ದು, ಮುಂದೆ ಸಂಚರಿಸುತ್ತಿದ್ದ ಆಟೋಗೆ ಕಾರು ಗುದ್ದಿದ್ದರಿಂದ ಅಪಘಾತ ನಡೆದಿದೆ. ರಿಕ್ಷಾ ಹಿಂದಿಕ್ಕುವ ಅವಸರದಲ್ಲಿ ಅಪಘಾತ ನಡೆದಿದ್ದು, ಪರಿಣಾಮ ರಿಕ್ಷಾ ರಸ್ತೆ ಮೇಲೆಯೇ ಪಲ್ಟಿಯಾಗಿದೆ. ಈ ಅವಘಡದಲ್ಲಿ ರಿಕ್ಷಾ ಚಾಲಕ ನಾಗರಾಜ ಬಿಳಿಯಾ ದೇವಾಡಿಗರಿಗೆ ಭಾರೀ ಪ್ರಮಾನದಲ್ಲಿ ಗಾಯವಾಗಿದೆ. ಜೊತೆಗೆ ದೇವಿದಾಸ ಸುಬ್ರಾಯ ದೇವಾಡಿಗ ಅವರಿಗೂ ಅಲ್ಲಲ್ಲಿ ನೋವಾಗಿದೆ. ಲಕ್ಷ್ಮಿ ತಿಮ್ಮಪ್ಪ ಮೋಗೇರ, ಹೇಮಾವತಿ ದಿನೇಶ ಮೋಗೇರ, ಶ್ರುತಿ ರಾಮ ಮೊಗೇರ್ ಅವರಿಗೆ ಗಾಯಗಳಾಗಿವೆ. ಗರ್ಭಿಣಿ ರಂಜಿತಾ ಸಂತೋಷ ಮೊಗೇರ ಅವರ ಸೊಂಟ ಹಾಗೂ ಮೈಗೆ ನೋವಾಗಿದೆ. ಅವರೆಲ್ಲರೂ ಆಟೋದಲ್ಲಿ ಪ್ರಯಾಣಿಸುತ್ತಿದ್ದು, ಆಟೋ ಸಹ ಜಖಂ ಆಗಿದೆ. ಕಾರಿನ ಚಾಲಕ ಅಪಘಾತದ ನಂತರ ಅಲ್ಲಿಂದ ಪರಾರಿಯಾಗಿದ್ದಾರೆ. ಈ ಹಿನ್ನಲೆ ಮುಂಡಳ್ಳಿಯ ಜೋಗಿಮನೆಯ ಮಹೇಶ ಮಾದೇವ ದೇವಾಡಿಗ ಪೊಲೀಸ್ ದೂರು ನೀಡಿದ್ದು, ಭಟ್ಕಳ ಶಹರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. - [ಮತ್ತೊಂದು ಅಪಘಾತ: ದಂಪತಿಗೆ ಆಘಾತ!](https://mobiletime.in/2026/02/another-accident-shock-for-the-couple/): ಪದೇ ಪದೇ ಅಪಘಾತವಾಗುತ್ತಿರುವ ಜೊಯಿಡಾದ ಆನಮೋಡ-ಹೆಮ್ಮೆಡ್ಗಾ ಮಾರ್ಗದಲ್ಲಿ ಮಂಗಳವಾರ ರಾತ್ರಿ ಮತ್ತೊಂದು ಅಪಘಾತವಾಗಿದ್ದು, ಮಹಿಳೆಯೊಬ್ಬರು ಸಾವನಪ್ಪಿದ್ದಾರೆ. ಜೊತೆಗೆ ಮತ್ತೊಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಹಳೆಯ ಗೋವಾದಲ್ಲಿ ವಾಸಿಸುತ್ತಿದ್ದ ದತ್ತಪ್ರಸಾದ್ ಹರಿದಾಸ್ ಹಾಗೂ ಜಾಗೃತಿ ಹರಿದಾಸ ಅವರು ಈ ಮಾರ್ಗದಲ್ಲಿ ಸಂಚರಿಸುತ್ತಿದ್ದರು. ಅವರು ಹೊರಟಿದ್ದ ಕಾರು ಮರಕ್ಕೆ ಗುದ್ದಿದ್ದು, ಗುದ್ದಿದ ರಭಸಕ್ಕೆ ಜಾಗೃತಿ ಹರಿದಾಸ ಅವರು ಅಲ್ಲಿಯೇ ಸಾವನಪ್ಪಿದರು. ಈ ದಂಪತಿ ಸಂಬAಧಿಕರ ವಿವಾಹ ಸಮಾರಂಭದಲ್ಲಿ ಭಾಗವಹಿಸಲು ಖಾನಾಪುರಕ್ಕೆ ಆಗಮಿಸಿದ್ದರು. ಕಾರ್ಯಕ್ರಮ ಮುಗಿಸಿ ಕಾರಿನಲ್ಲಿ ಮರಳುವಾಗ ಅವಘಡ ನಡೆದಿದೆ. ಅನಮೋಡ – ಹೆಮ್ಮೆಡ್ಗಾ ರಸ್ತೆಯ ಪಾಲಿ ಸಮೀಪ ಎದುರುಗಡೆಯಿಂದ ಬಂದ ಭಾರೀ ಪ್ರಮಾಣದ ವಾಹನಕ್ಕೆ ಕಾರು ಗುದ್ದುವುದನ್ನು ತಪ್ಪಿಸುವ ಅವಸರದಲ್ಲಿ ಈ ಅವಘಡ ನಡೆದಿದೆ. ಗಂಭೀರ ಗಾಯಗೊಂಡ ದತ್ತಪ್ರಸಾದ್ ಹರಿದಾಸ್ ಅವರನ್ನು ಗೋವಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಸಾವನಪ್ಪಿದ ಜಾಗೃತಿ ಹರಿದಾಸ್ ಅವರು ಜೊಯಿಡಾ ತಾಲ್ಲೂಕಿನ ಕೊನಶೇತ್ ಗ್ರಾಮದವರಾಗಿದ್ದು, ಮಹಾರಾಷ್ಟ್ರದ ಸಾವಂತವಾಡಿಯ ದತ್ತಪ್ರಸಾದ್ ಹರಿದಾಸ್ ಅವರನ್ನು ವಿವಾಹವಾಗಿದ್ದರು. ವಿವಾಹದ ನಂತರ ದಂಪತಿ ಗೋವಾದಲ್ಲಿ ನೆಲೆಸಿದ್ದರು. - [ಮೊಬೈಲ್ ಕ್ಯಾಂಟೀನ್ ಮಾಡಲು ಬಯಸುವಿರಾ?](https://mobiletime.in/2026/02/want-to-make-a-mobile-canteen/): ಮೊಬೈಲ್ ಕ್ಯಾಂಟೀನ್ ಮಾಡಲು ಬಯಸುವ ವೀರಶೈವ-ಲಿಂಗಾಯತ ಹಾಗೂ ಅದರ ಉಪಜಾತಿಯವರಿಗೆ ಸರ್ಕಾರ ವಿಶೇಷ ಸಹಾಯಧನ ನೀಡಲು ನಿರ್ಧರಿಸಿದೆ. ಮರಾಠಾ ಸಮುದಾಯದವರು ಸಹ ಈ ಯೋಜನೆ ಅಡಿ ಸಬ್ಸಿಡಿಪಡೆಯಲು ಅರ್ಹರಾಗಿದ್ದಾರೆ. ಕರ್ನಾಟಕದಲ್ಲಿ `ಆಹಾರ ವಾಹಿನಿ ಯೋಜನೆ’ ಅಸ್ತಿತ್ವಕ್ಕೆ ಬಂದಿದೆ. ಸಂಚಾರಿ ಆಹಾರ ಮಳಿಗೆ ಸ್ಥಾಪಿಸಲು ಉದ್ದೇಶಿಸುವವರಿಗೆ ಸರ್ಕಾರ ಈ ಯೋಜನೆ ಅಡಿ 3 ಲಕ್ಷ ರೂವರೆಗೆ ಸಬ್ಸಿಡಿ ನೀಡುತ್ತಿದೆ. ವಿಶೇಷವಾಗಿ ಮಹಿಳೆಯರು, ಯುವಕರಿಗೆ ಅನುಕೂಲವಾಗುವ ಹಾಗೇ ಕಡಿಮೆ ಬಂಡವಾಳದಲ್ಲಿ ಉದ್ದಿಮೆ ಮಾಡಲು ಬಯಸುವವರಿಗೆ ಸರ್ಕಾರ ನೆರವು ನೀಡುತ್ತಿದೆ. ರಸ್ತೆ ಬದಿಗಳಲ್ಲಿ ಕ್ಯಾಂಟೀನ್ ನಡೆಸುವವರಿಗೆ ಸರ್ಕಾರ ತನ್ನ ಯೋಜನೆಯ ಮೂಲಕ ಪ್ರತ್ಸಾಹಿಸುತ್ತಿದೆ. ಆಹಾರ ವಿತರಣೆ ಉದ್ದಿಮೆ ಮಾಡಲು ಬಯಸುವವರಿಗೆ 4 ಚಕ್ರಗಳ ಮೊಬೈಲ್ ವಾಹನಗಳನ್ನು ಒದಗಿಸುವುದು ಈ ಯೋಜನೆಯ ಮುಖ್ಯ ಉದ್ದೇಶ. ರಾಜ್ಯದ ಎಲ್ಲಡೆ ಈ ಯೋಜನೆ ಜಾರಿಯಲ್ಲಿದ್ದು, ವೀರಶೈವ-ಲಿಂಗಾಯತ ಹಾಗೂ ಅದರ ಉಪ ಜಾತಿಗಳು ಮತ್ತು ಮರಾಠಾ ಸಮುದಾಯದವರಿಗೆ ಪ್ರಾಮುಖ್ಯತೆ ನೀಡಲಾಗಿದೆ. ಇದರೊಂದಿಗೆ ಮನೆ ಮನೆಗೆ ರೇಶನ್ ವಿತರಣೆ ಮಾಡುವುದಕ್ಕೆ ಸಹ ಈ ಮೊಬೈಲ್ ಕ್ಯಾಂಟೀನ್ ಬಳಕೆ ಮಾಡುವ ಅವಕಾಶವಿದೆ. ಆಹಾರ ಕಿಯೋಸಕ್ ಯೋಜನೆ ಅಡಿ ಅದಕ್ಕೆ ಸಬ್ಸಿಡಿ ನೀಡಲು ಸರ್ಕಾರ ಮುಂದಾಗಿದೆ. ಈ ಯೋಜನೆಗಾಗಿ ಗ್ರಾಮ ಒನ್ ಕೇಂದ್ರದ ಮೂಲಕ ಅರ್ಜಿ ಸಲ್ಲಿಕೆಗೆ ಅವಕಾಶ ನೀಡಲಾಗಿದ್ದು, ಅಗತ್ಯ ದಾಖಲಾತಿ ಒದಗಿಸುವುದು ಕಡ್ಡಾಯ. ಒಕ್ಕಲಿಗ ಸಮುದಾಯ ಅಭಿವೃದ್ಧಿ ನಿಗಮದಿಂದ ಕಾರವಾರ ವಿಧಾನಸಭಾ ಕ್ಷೇತ್ರದಲ್ಲಿ, ಮರಾಠ ಸಮುದಾಯ ಅಭಿವೃದ್ಧಿ ನಿಗಮದಿಂದ ಹಳಿಯಾಳ, ಯಲ್ಲಾಪುರ, ಕಾರವಾರ ವಿಧಾನಸಭಾ ಕ್ಷೇತ್ರದಲ್ಲಿ ಈ ಯೋಜನೆ ಜಾರಿಯಾಗುತ್ತಿದೆ. ನಿಜಶರಣ ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮದಿಂದ ಹಳಿಯಾಳ, ಯಲ್ಲಾಪುರ, ಕಾರವಾರ, ಭಟ್ಕಳ, ಶಿರಸಿ, ಕುಮಟಾ ವಿಧಾನಸಭಾ ಕ್ಷೇತ್ರದಲ್ಲಿ ಹಾಗೂ ವೀರಶೈವ-ಲಿಂಗಾಯತ ಸಮುದಾಯ ಅಭಿವೃದ್ಧಿ ನಿಗಮದಿಂದ ಹಳಿಯಾಳ, ಯಲ್ಲಾಪುರ, ಕಾರವಾರ, ಭಟ್ಕಳ, ಶಿರಸಿ, ಕುಮಟಾದಲ್ಲಿ ಯೋಜನೆಯ ಸಹಾಯಧನಪಡೆಯಲು ಅವಕಾಶವಿದೆ. ಅರ್ಜಿ ಸಲ್ಲಿಕೆಗೆ ಮಾರ್ಚ 4 ಕೊನೆ ದಿನ ಎಂದು ಗ್ರಾಮ ಒನ್ ಪ್ರಾಜೆಕ್ಟ್ ಮ್ಯಾನೇಜರ್ ಪೂಜಾ ನಾಯ್ಕ ಅವರು ಮಾಹಿತಿ ನೀಡಿದ್ದಾರೆ. ಇನ್ನೂ ಹೆಚ್ಚಿನ ಮಾಹಿತಿಗೆ ಇಲ್ಲಿ ಸಂಪರ್ಕಿಸಿ: 9480362267 - [ನದಿ ಜೋಡಣೆ: ಸಾವಿರ ಸಾವಿರ ಸಂಖ್ಯೆಯಲ್ಲಿ ಆಕ್ಷೆಪಣೆ](https://mobiletime.in/2026/02/river-linking-thousands-of-people-object/): ಅಘನಾಶಿನಿ ನದಿ ಜೋಡಣೆ ಸ್ಥಗಿತಗೊಳಿಸುವಂತೆ ಆಗ್ರಹಿಸಿ 25 ಸಾವಿರಕ್ಕೂ ಅಧಿಕ ಜನ ಸಿದ್ದಾಪುರದಿಂದ ಸರ್ಕಾರಕ್ಕೆ ಪತ್ರ ರವಾನಿಸಿದ್ದಾರೆ. ಕೇಂದ್ರ ಸರ್ಕಾರದ ಅರಣ್ಯ ಮತ್ತು ಪರಿಸರ ಸಚಿವರಿಗೆ ಈ ಪತ್ರ ರವಾನೆಯಾಗಿದೆ. ಉತ್ತರಕನ್ನಡ ಜಿಲ್ಲೆಯಲ್ಲಿ ಅರಣ್ಯ ನಾಶ ಮಾಡಿ ಹೊಸ ಯೋಜನೆ ತರುವ ಅಗತ್ಯವಿಲ್ಲ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ. ತಾಲೂಕಾ ದಂಡಾಧಿಕಾರಿ ಎಮ್ ಆರ್ ಕುಲಕರ್ಣಿ ಅವರ ಮೂಲಕ ಪತ್ರ ರವಾನೆಯಾಗಿದ್ದು, ಪರಿಸರ ಉಳಿಸುವ ಅನಿವಾರ್ಯತೆಯ ಬಗ್ಗೆ ವಿವರಿಸಲಾಗಿದೆ. ನ್ಯಾಯವಾದಿ ರವೀಂದ್ರ ನಾಯ್ಕ ಮುಂದಾಳತ್ವದಲ್ಲಿ ಈ ಜನಾಂದೋಲನ ನಡೆದಿದೆ. `ಪಶ್ಚಿಮಘಟ್ಟಗಳು ಕೇವಲ ಪ್ರಾದೇಶಿಕ ಪರಿಸರ ಸಂಪತ್ತು ಅಲ್ಲ. ಹವಮಾನ ಭದ್ರತೆ ವ್ಯವಸ್ಥೆಯ ಅವಿಭಾಜ್ಯ ಅಂಗ’ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ. `ಅರಣ್ಯ ನಾಶ, ಭೂ ಕುಸಿತ ಅಸ್ಥಿರತೆ, ಜೀವ ವೈವಿದ್ಯ ಹಾನಿ, ಹವಮಾನದ ವ್ಯತಿರಿಕ್ತತೆ ಮೇಲೆ ಪರಿಣಾಮ ಬೀರುವುದೆಂಬುದು ಅಧ್ಯಯನದಿಂದ ತಿಳಿದು ಬಂದಿರುವುದರಿAದ ನಿಯೋಜಿತ ಯೋಜನೆಯು ಅವೈಜ್ಞಾನಿಕ’ ಎಂದು ವಿವರವಾಗಿ ಬರೆಯಲಾಗಿದೆ. ಮಾಬ್ಲೇಶ್ವರ ನಾಯ್ಕ ಬೇಡ್ಕಣಿ, ನಾಗಪತಿ ಗೌಡ ಹುಕ್ಕಳ್ಳಿ, ಜಿ ಎನ್ ಹೆಗಡೆ, ಮಂಜು ಮರಾಠಿ ಕುಮಟಾ, ಸುರೇಶ್ ಮೇಸ್ತಾ, ಶ್ಯಾಮಲ ಗೌಡ, ರಾಜೇಶ್ ವಿ ಭಟ್ ಮಕ್ಕಿಗದ್ದೆ, ಮಂಜುನಾಥ, ಮಹೇಶ ಭಟ್, ಎನ್ ವಿ ಹೆಗಡೆ ಮುತ್ತಿಗೆ, ರಾಜು ನಾಯ್ಕ ಕಿರೇಕೋಡ, ರಾಮಕೃಷ್ಣ ನಾಯ್ಕ ಶಿರೂರು ಸಭೆಯನ್ನು ಉದ್ದೇಶಿಸಿ ಮಾತನಾಡಿದ್ದಾರೆ. ಇಬ್ರಾಹೀಂ ಗೌಡಳ್ಳಿ, ಮಹೇಶ್ ನಾಯ್ಕ ಕಾನಕ್ಕಿ, ಹರಿಹರ್ ನಾಯ್ಕ ಓಂಕಾರ, ಸತೀಶ್ ನಾಯ್ಕ, ಮಹೇಂದ್ರ ಕತಗಾಲ, ಸೀತಾರಾಮ ಗೌಡ ಹುಕ್ಕಳ್ಳಿ, ಸಾರಂಬಿ, ಕೆ ಟಿ ನಾಯ್ಕ, ಪರಮ ಗೌಡ, ದ್ಯಾವ ಗೌಡ, ಯಂಕ ಗೌಡ್ರು, ಕೆ ಟಿ ಗೌಡ ಮಾದ್ಲಮನೆ, ಗೋವಿಂದ ಗೌಡ ಕಿಲವಳ್ಳಿ, ಮೋಹನ್ ನಾಯ್ಕ ಕಾನಳ್ಲಿ, ರಾಮಚಂದ್ರ ನಾಯ್ಕ, ಜಿ ಎನ್ ಹೆಗಡೆ ಗುಂಜಗೋಡ, ಸುಬಾಷ್ ನಾಯ್ಕ ಕ್ಯಾದಗಿ ಸಭೆಯ ಸಂಘಟನೆ ನೋಡಿಕೊಂಡಿದ್ದಾರೆ. - [ಕುಗ್ರಾಮದ ಹಾಗಿದ್ದ ಊರಿನಲ್ಲಿ ಇದೀಗ ಅಭಿವೃದ್ಧಿಯ ಕ್ರಾಂತಿ: ಹುದ್ದೆ ಇಲ್ಲದಿದ್ದರೂ ಅಧಿಕಾರ ಚಲಾಯಿಸಿದ ಆನಂದ!](https://mobiletime.in/2026/02/a-development-revolution-is-now-underway-in-a-town-that-used-to-be-a-hamlet-ananda-wields-power-despite-not-having-a-position/): ಶಿರಸಿ – ಸಿದ್ದಾಪುರ ಬಳಿಯಿರುವ ಶೀಗೇಹಳ್ಳಿಯ ಆನಂದ ಹೆಗಡೆ ಅವರು ಶಾಸಕರಲ್ಲ. ಸಂಸದರಾಗಿಯೂ ಅವರು ಕೆಲಸ ಮಾಡಿಲ್ಲ. ಕನಿಷ್ಟ ಅವರು ಗ್ರಾಮ ಪಂಚಾಯತ ಸದಸ್ಯರು ಸಹ ಅಲ್ಲ. ಅದಾಗಿಯೂ ಅವರು ತಮ್ಮ ಊರಿನ ಅಭಿವೃದ್ಧಿ ಮಾಡಿದ್ದಾರೆ! ಆನಂದ ಹೆಗಡೆ ಅವರು ತಮ್ಮ ನಿರಂತರ ಪತ್ರ ಚಳುವಳಿಯಿಂದ ಅವರ ಊರಿಗೆ ಸರ್ಕಾರದಿಂದ ರಸ್ತೆ ಮಾಡಿಸಿದ್ದಾರೆ. ಆ ರಸ್ತೆಯಲ್ಲಿ ಬಸ್ ಓಡಾಡುವ ಹಾಗೇ ಮಾಡಿದ್ದಾರೆ. ಊರಿಗೆ ಇಂಟರ್‌ನೆಟ್ ಸಂಪರ್ಕ ಕೊಡಿಸಿದ್ದಾರೆ. ಮನೆ ಮನೆಗೂ ಗ್ಯಾಸ್ ಸಿಲೆಂಡರ್ ತಲುಪುವ ವ್ಯವಸ್ಥೆ ಮಾಡಿದ್ದಾರೆ. ಮೊಬೈಲ್ ನೆಟ್‌ವರ್ಕ ಬರುವ ಹಾಗೇ ಟವರ್ ಮಾಡಿಸಿದ್ದಾರೆ. ಚುನಾವಣೆ ವೇಳೆ ಮತದಾನಕ್ಕಾಗಿ ದೂರದ ಊರಿಗೆ ತೆರಳುವ ಬದಲು ಸಮೀಪದಲ್ಲಿಯೇ ಮತಗಟ್ಟೆ ಮಾಡಿಸಿದ್ದಾರೆ. ಶಿರಸಿಯ ಶೀಗೇಹಳ್ಳಿ ಅತ್ಯಂತ ಹಿಂದುಳಿದ ಪ್ರದೇಶ. ಸಾಪ್ಟೆಂಬರ್ ಇಂಜಿನಿಯರ್ ಆಗಿರುವ ಆನಂದ ಹೆಗಡೆ ಅವರು ಸಹ ಅದೇ ಊರಿನವರು. ಕೊರೊನಾ ಕಾಲಘಟ್ಟದ ಅವಧಿಯಲ್ಲಿ ಊರಿಗೆ ಬಂದಿದ್ದ ಆನಂದ ಹೆಗಡೆ ಅವರು ಆ ಪ್ರದೇಶದ ಸಮಸ್ಯೆಗಳಿಗೆ ಮುಕ್ತಿ ಕೊಡುವ ಸಂಕಲ್ಪ ಮಾಡಿದರು. ಕಾನೂನಾತ್ಮಕ ಹೋರಾಟ ನಡೆಸಿ ಆ ಊರಿನ ಅಗತ್ಯ ಸೌಕರ್ಯಗಳನ್ನು ಕೊಡಿಸಿದರು. ನಿರಂತರ ಪತ್ರ ಚಳುವಳಿ ಅವರ ಸಾಧನೆಗೆ ಪೂರಕವಾಗಿದ್ದು, ಐದು ವರ್ಷದ ಅವಧಿಯಲ್ಲಿ ಶೀಗೇಹಳ್ಳಿಯ ಚಿತ್ರಣವೇ ಬದಲಾಗಿದೆ. ಶೀಗೆಹಳ್ಳಿ ಗ್ರಾಮಕ್ಕೆ ತೆರಳಲು ಮೊದಲು ರಸ್ತೆ ಇರಲಿಲ್ಲ. ಕಾಲು ದಾರಿಯಲ್ಲಿ ಜನ ಸಂಚರಿಸಬೇಕಾದ ಪರಿಸ್ಥಿತಿಯಿದ್ದು, ವಾಹನಗಳ ಓಡಾಟ ಸುಲಭವಾಗಿರಲಿಲ್ಲ. ಮಕ್ಕಳು ಶಾಲೆಗೆ ಹೋಗಲು ಸಹ 12ಕಿಮೀ ನಡೆಯಬೇಕಿತ್ತು. ಜನಪ್ರತಿನಿಧಿಗಳ ಭೇಟಿ ಮಾಡಿದ ನಂತರ ಹೋರಾಟ ಶುರು ಮಾಡಿದ ಆನಂದ ಹೆಗಡೆ ಅವರು ಸರ್ಕಾರದಿಂದ ರಸ್ತೆ ಮಂಜೂರಿ ಮಾಡಿಸಿದರು. ಊರಿಗೆ ಡಾಂಬರ್ ರಸ್ತೆ ನಿರ್ಮಾಣವಾದ ನಂತರ ಬಸ್ಸು ಬಿಡುವಂತೆ ಪಟ್ಟುಹಿಡಿದರು. ಊರಿಗೆ ಬಸ್ಸು ಬಿಡಿಸುವಲ್ಲಿಯೂ ಅವರು ಯಶಸ್ವಿಯಾದರು. ಕೋವಿಡ್ ಅವಧಿಯಲ್ಲಿ ನೆಟ್‌ವರ್ಕ ಸಿಗದ ಸಮಸ್ಯೆ ಅರಿತಿದ್ದ ಅವರು ಊರಿಗೆ ಇಂಟರ್‌ನೆಟ್ ವ್ಯವಸ್ಥೆ ಕೊಡಿಸುವಂತೆ ಪತ್ರ ಚಳುವಳಿ ಮಾಡಿದರು. ಅದರ ಪರಿಣಾಮ ಶೀಗೆಹಳ್ಳಿ ಗ್ರಾಮ ಡಿಜಿಟಲ್ ವ್ಯವಸ್ಥೆಗೆ ಬದಲಾಗಿದ್ದು, ಊರಿನಲ್ಲಿ ಟವರ್ ನಿರ್ಮಾಣವೂ ಆಗಿದ್ದರಿಂದ ಮೊಬೈಲುಗಳು ರಿಂಗಣಿಸಲು ಶುರುವಾದವು. ಶಿಗೇಹಳ್ಳಿ ಗ್ರಾಮದ ಎಲ್ಲರ ಮನೆಯಲ್ಲಿಯೂ ಅಡುಗೆ ಗ್ಯಾಸ್ ಸಿಲೆಂಡರ್ ಇತ್ತು. ಆದರೆ, ಅದನ್ನುಪಡೆಯುವುದಕ್ಕಾಗಿ ಜನ ಶಿರಸಿ ಅಥವಾ ಸಿದ್ದಾಪುರಕ್ಕೆ ಹೋಗಬೇಕಿತ್ತು. 13ಕಿಮೀ ದೂರದವರೆಗೆ ಗ್ಯಾಸ್ ಸಿಲೆಂಡರ್ ಹೋರಬೇಕಿತ್ತು. ಆನಂದ ಹೆಗಡೆ ಅವರ ಪ್ರಯತ್ನದಿಂದ ಇದೀಗ ಮನೆ ಮನೆಗೂ ಗ್ಯಾಸ್ ಸಿಲೆಂಡರ್ ಡಿಲೆವರಿ ಆಗುತ್ತಿದೆ. ಕಂಪನಿ ಜೊತೆ ಮಾತನಾಡಿದ ಆನಂದ ಹೆಗಡೆ ಅವರು ನಿಯಮಗಳ ಬಗ್ಗೆ ಕಟ್ಟುನಿಟ್ಟಾಗಿ ವಿವರಿಸಿ ಆ ಸೇವೆಯನ್ನು ಒದಗಿಸಿದ್ದಾರೆ. ಶೀಗೇಹಳ್ಳಿ ಸಮೀಪದಲ್ಲಿ ಬ್ಯಾಂಕ್ ವ್ಯವಸ್ಥೆ ಇರಲಿಲ್ಲ. ಶಿರಸಿ-ಸಿದ್ದಾಪುರದ ಬ್ಯಾಂಕ್ ಕೆಲಸಕ್ಕೆ ಹೋದರೆ ಇಡೀ ದಿನ ಹಾಳಾಗುತ್ತಿತ್ತು. ಆ ಬಗ್ಗೆ ಅರಿತ ಆನಂದ ಹೆಗಡೆ ಅವರು ಅಂಚೆ ಇಲಾಖೆ ಜೊತೆ ಸಂಪರ್ಕ ಬೆಳೆಸಿ ಊರಿನಲ್ಲಿ ಅಂಚೆ ಕಚೇರಿ ತೆರೆಸಿದರು. ಅಲ್ಲಿಂದಲೇ ಇದೀಗ ಬ್ಯಾಂಕ್ ಕೆಲಸವೂ ನಡೆಯುತ್ತಿದೆ. ಆ ಊರಿನ ಜನ ಚುನಾವಣೆ ಅವಧಿಯಲ್ಲಿಯೂ ಸಂಕಷ್ಟ ಅನುಭವಿಸುತ್ತಿದ್ದರು. ಮತದಾನಕ್ಕಾಗಿ ಸಹ 10ಕಿಮೀ ಹೆಚ್ಚು ನಡೆಯಬೇಕಿತ್ತು. ಈ ಸಮಸ್ಯೆ ಬಗೆಹರಿಸಲು ಆನಂದ ಹೆಗಡೆ ಅವರು ಚುನಾವಣಾ ಆಯೋಗದ ಮೊರೆ ಹೋದರು. ಊರಿನ ಸಮಸ್ಯೆ ಬಗ್ಗೆ ವಿವರಿಸಿ ತಮ್ಮ ಊರಿಗೆ ಮತಗಟ್ಟೆಯನ್ನು ಮಂಜೂರಿ ಮಾಡಿಸಿದರು. ಅದರ ಪರಿಣಾಮ ಲೋಕಸಭೆ ಚುನಾವಣೆಯಲ್ಲಿ ಶೇ 92ರಷ್ಟು ಮತದಾನವೂ ನಡೆಯಿತು. ಊರಿನಲ್ಲಿ ನಡೆಯುವ ಸಾಂಸ್ಕೃತಿಕ ಉತ್ಸವಗಳಿಗೂ ಆನಂದ ಹೆಗಡೆ ಅವರು ಕೈ ಜೋಡಿಸಿದ್ದಾರೆ. ಕಳೆದ ಐದು ವರ್ಷದ ಅವಧಿಯಲ್ಲಿ ಆನಂದ ಹೆಗಡೆ ಅವರು ಊರಿನ ಚಿತ್ರಣವನ್ನೇ ಬದಲಿಸಿದ್ದಾರೆ. ಹುದ್ದೆಯಿಲ್ಲದೇ ಮಾಡಿದ ಅವರ ಸೇವೆಗೆ ಇಂಡಿಯಾ ಬುಕ್ ಆಫ್ ರೆಕಾರ್ಡ ಗೌರವ ಸಿಕ್ಕಿದೆ. `ವೈಯಕ್ತಿಕ ಬದ್ಧತೆ, ನಿರಂತರ ಪ್ರಯತ್ನವೇ ಈ ಯಶಸ್ಸಿಗೆ ಕಾರಣ’ ಎಂದು ಆನಂದ ಹೆಗಡೆ ಅವರು ಮೊಬೈಲ್ ಮಿಡಿಯಾ ನೆಟ್‌ವರ್ಕ ಜೊತೆ ಮಾತನಾಡಿದ್ದಾರೆ. ನಿಮ್ಮೂರಿನ ಅಭಿವೃದ್ಧಿಗೂ ಈ ವಿಡಿಯೋ ಪ್ರೇರಣೆ ಆಗಲಿ.. ಐದು ವರ್ಷದ ಅವಧಿಯಲ್ಲಿ ಆನಂದ ಹೆಗಡೆ ಮಾಡಿದ್ದೇನು? ವಿಡಿಯೋ ಇಲ್ಲಿ ನೋಡಿ.. - [ಯಲ್ಲಾಪುರ ಜಾತ್ರೆಗೆ ಕ್ಷಣಗಣನೆ!](https://mobiletime.in/2026/02/countdown-to-the-yellapur-fair/): ರಾಜ್ಯದ ಪ್ರಸಿದ್ಧ ಜಾತ್ರೆಗಳಲ್ಲಿ ಒಂದಾದ ಯಲ್ಲಾಪುರದ ಕಾಳಮ್ಮ-ದುರ್ಗಮ್ಮ ಜಾತ್ರೆಗೆ ಕ್ಷಣಗಣನೆ ಶುರುವಾಗಿದೆ. ಫೆಬ್ರವರಿ 11ರಿಂದ 19ರವರೆಗೆ ಅದ್ಧೂರಿಯಾಗಿ ಗ್ರಾಮದೇವಿ ಜಾತ್ರೆ ನಡೆಯಲಿದ್ದು, ಮೂರು ವರ್ಷಕ್ಕೆ ಒಮ್ಮೆ ನಡೆಯುವ ಈ ಜಾತ್ರೆಯಲ್ಲಿ ಈ ಬಾರಿಯೂ ಲಕ್ಷಾಂತರ ಭಕ್ತರು ಭಾಗವಹಿಸಲಿದ್ದಾರೆ. ಯಲ್ಲಾಪುರದಲ್ಲಿ ನೆಲೆಸಿರುವ ದೇವಿಯರ ಪ್ರತಿಮೆಗಳು 600 ವರ್ಷಗಳಿಗೂ ಅಧಿಕ ಇತಿಹಾಸ ಹೊಂದಿವೆ. ಶತಮಾನಗಳ ಹಿಂದೆ ಹಿಂದುಳಿದ ಪ್ರದೇಶವಾದ ನಾರಾಯಣಗೆರೆಯಲ್ಲಿ ವ್ಯಕ್ತಿಯೊಬ್ಬರು ಉಳುಮೆ ಮಾಡುತ್ತಿರುವಾಗ ಎರಡು ಸವಕಲು ಪ್ರತಿಮೆಗಳು ಸಿಕ್ಕಿದ್ದು, ಅದನ್ನು ಹೋಲುವ ಶಿವಣಿ ಕಟ್ಟಿಗೆಯ ಹೊಸಪ್ರತಿಮೆಯನ್ನು ಮಾಡಿ ಪಟ್ಟಣದ ಕೇಂದ್ರ ಸ್ಥಾನದಲ್ಲಿ ಪ್ರತಿಷ್ಠಾಪಿಸಲಾಯಿತು. ಆ ಪ್ರತಿಮೆಗಳೇ ಕಾಳಮ್ಮ ಹಾಗೂ ದುರ್ಗಮ್ಮಾ ಎಂದು ಕರೆಯಿಸಿಕೊಂಡು ಗ್ರಾಮದ ಅಭಿವೃದ್ಧಿ ಮಾಡುತ್ತಿವೆ. ಆಕಾಶ ಬಣ್ಣದ ಪ್ರತಿಮೆ ಕಾಳಮ್ಮ ದೇವಿಯದ್ದಾಗಿದ್ದು, ಕೋಣ ಈ ದೇವರ ವಾಹನ. ಕೆಂಪು ಬಣ್ಣದ ಪ್ರತಿಮೆ ದುರ್ಗಮ್ಮನಾಗಿದ್ದು, ದುರ್ಗಮ್ಮ ದೇವಿಯ ವಾಹನ ಸಿಂಹವಾಗಿದೆ. ಚಿಕ್ಕ ಗುಡಿಯಿಂದ ಆರಂಭವಾದ ಈ ದೇವಿ ಸನ್ನಿದಿ ಇದೀಗ ವಿಶಾಲವಾದ ದೇವಾಲಯದೊಂದಿಗೆ ಊರಿನ ಹೆಮ್ಮೆಯೆನಿಸಿದೆ. ದೇವಿಯರ ಶಕ್ತಿ ಎಷ್ಟರ ಮಟ್ಟಿಗೆ ಇದೆಯಂದರೆ, ಯಲ್ಲಾಪುರಕ್ಕೆ ಬರುವ ಗಣ್ಯರು-ಸಾಧಕರು ಮೊದಲು ದೇವಿ ದರ್ಶನಪಡೆದೇ ನಂತರ ತಮ್ಮ ಕೆಲಸ ಶುರು ಮಾಡುತ್ತಾರೆ. ನಿತ್ಯಪೂಜೆ, ನೈವೇದ್ಯ, ಕುಂಕುಮಾರ್ಚನೆ, ಉಡಿ ತುಂಬುವುದು, ದೇವಿ ಪಾರಾಯಣೆ, ನವರಾತ್ರಿಯಲ್ಲಿ 9 ದಿನಗಳ ಕಾಲ ಕೀರ್ತನೆ ಸೇರಿ ನಾನಾ ಬಗೆಯ ಧಾರ್ಮಿಕ ಕಾರ್ಯಕ್ರಮಗಳು ಇಲ್ಲಿ ನಿರಂತರವಾಗಿ ನಡೆಯುತ್ತದೆ. ಅದರ ಪ್ರಕಾರ ಮೂರು ವರ್ಷಕ್ಕೆ ಒಮ್ಮೆ ಅದ್ಧೂರಿ ಜಾತ್ರೆಯೂ ನಡೆಯುತ್ತಿದೆ. ವಿಶೇಷ ಹೊರ ಮಂಗಳವಾರ: ರಾಜ್ಯದ ಯಾವುದೇ ಪ್ರಾದೇಶಿಕ ಜಾತ್ರೆಗಲಲ್ಲಿಲ್ಲದ ಹೊರ ಮಂಗಳವಾರ ಎಂಬ ವಿಶಿಷ್ಟ ಆಚರಣೆಯೊಂದು ಯಲ್ಲಾಪುರ ಜಾತ್ರೆಯಲ್ಲಿ ನಡೆಯುತ್ತದೆ. ಜಾತ್ರೆ ನಡೆಯುವ ಮುನ್ನದ ಮೂರು ಅಥವಾ ಐದು ಮಂಗಳವಾರಗಳನ್ನು ಹೊರಮಂಗಳವಾರ ಎಂದು ಆಚರಿಸಲಾಗುತ್ತದೆ. ದೇವಿಯ ಪ್ರಸಾದದ ಮೂಲಕ ಜಾತ್ರೆಯ ದಿನಾಂಕ ನಿರ್ಧಾರವಾದ ಬಳಿಕ ದೇವಸ್ಥಾನ ಸಮಿತಿಯವರು ಹೊರ ಮಂಗಳವಾರದ ದಿನಾಂಕಗಳನ್ನು ಪ್ರಕಟಿಸುತ್ತಾರೆ. ಹೊರಮಂಗಳವಾರದ ದಿನ ಜನತೆ ಬೆಳಿಗ್ಗೆ 10 ಘಂಟೆಯಿAದ ಸಂಜೆ 5 ಘಂಟೆಯವರೆಗೆ ಮನೆಯಿಂದ ಹೊರಗೆ ದೂರದ ಹಳ್ಳಿಗಳಿಗೆ ತೆರಳುತ್ತಾರೆ. ಊರ ಹೊರಗೆಯೇ ಆ ದಿನದ ಅಡುಗೆ ಬೇಯಿಸಿ ಊಟಮಾಡಿ ಕಾಲ ಕಳೆಯುತ್ತಾರೆ. ಈ ವೇಳೆ ದೇವಿಯರು ಮನೆಯಲ್ಲಿ ನೃತ್ಯ ಮಾಡಿ ಮನೆಯವರನ್ನು ಹರಸುತ್ತಾರೆಂಬ ಪ್ರತೀತಿಯಿದೆ. ಅತ್ಯಂತ ಕಟ್ಟು ನಿಟ್ಟಾಗಿ ಈ ಪದ್ಧತಿಯನ್ನು ಅನೇಕ ತಲೆಮಾರುಗಳಿಂದ ಆಚರಿಸಿಕೊಂಡು ಬಂದಿದ್ದಾರೆ. ಜಾತ್ರೆಗೂ ಮುನ್ನ ದೇವಿಯರನ್ನು ಅಲಂಕಾರ ಮಾಡುವುದಕ್ಕೆ `ಅಂಕೆ’ ಎನ್ನುತ್ತಾರೆ. ನಂತರ ದೇವಿಗೆ ಮಂಗಲಸೂತ್ರ ಕಟ್ಟಿ,ಭಕ್ತರ ಮನದಿಚ್ಛೆ ಅರ್ಪಿಸುವುದಕ್ಕೆ `ಅಹಿರ’ ಎನ್ನುವರು. ಧರ್ಮದರ್ಶಿ ಏರ್ಪಡಿಸುವ ಭೋಜನಕ್ಕೆ `ಹುಲಪ’ ಎಂದು ಕರೆಯುತ್ತಾರೆ. ಪ್ರತಿ ಬಾರಿಯೂ ಬುಧವಾರವೇ ಜಾತ್ರೆ ಆರಂಭವಾಗುವದು ಇತಿಹಾಸದ ಪುಟಗಳಲ್ಲಿ ಲಭ್ಯವಾಗುವ ಮಾಹಿತಿಗಳಲ್ಲಿ ಪ್ರಮುಖವಾದದ್ದಾಗಿದೆ. ದೇವಿಯರ ಲಗ್ನದೊಂದಿಗೆ ಜಾತ್ರೆ ಆರಂಭವಾಗುತ್ತದೆ. ಎಲ್ಲಡೆ ವೇದಘೋಷಗಳು ಮೊಳಗುತ್ತವೆ. ಶಿವಾಷ್ಟೋತ್ತರ ನಾಮಾವಳಿ ಮಂತ್ರ ಪಠಣದೊಂದಿಗೆ ಅಲಂಕಾರದಿoದ ಕಂಗೊಳಿಸುತ್ತಿರುವ ದೇವಿಯರನ್ನು ಭಕ್ತರೇ ತಲೆಯ ಮೇಲೆ ಹೊತ್ತು ದೇವಿ ಮೈದಾನದ ಗದ್ದುಗೆಗೆ ಕರೆತರುತ್ತಾರೆ. ಸುಮಾರು ಲಕ್ಷಕ್ಕೂ ಅಧಿಕ ಭಕ್ತಾದಿಗಳು ಮಧ್ಯಾಹ್ನದ ಸುಡು ಬಿಸಿಲಿನಲ್ಲಿ ದೇವಿಯೊಂದಿಗೆ ಪಟ್ಟಣದಲ್ಲಿ ಹೆಜ್ಜೆಯಿಡುತ್ತಾರೆ. ಪಟ್ಟಣದ ಎಲ್ಲೆಲ್ಲೂ ಭಕ್ತಾದಿಗಳು ದರ್ಶನಕ್ಕೆ ಮುಗಿ ಬೀಳುತ್ತಲಿರುತ್ತಾರೆ. ಜಾತ್ರೆ ಆರಂಭದ ದಿನ ಮಂಟಪದ ಎದುರು ದೇವಿಗೆ ಅಕ್ಕಿರಾಶಿ ಪಂಚಜ್ಯೋತಿಗಳನ್ನು ಹಚ್ಚಿ ಅವು ಒಂಬತ್ತು ದಿನಗಳ ಕಾಲ ನಿರಂತರವಾಗಿ ಉರಿಯುವಂತೆ ನೋಡಿಕೊಳ್ಳಲಾಗುತ್ತದೆ ಅದನ್ನು `ಹುಲುಸು’ ಎಂದು ಕರೆಯುತ್ತಾರೆ. ಹಿಟ್ಟಿನ ಕೋಣನ ಬಲಿ, ಊರಿಗೆ ಅನ್ನ ಬೇಲಿ ಹಾಕಿ ಕುಂಕುಮ ಮಿಶ್ರಿತ ಅನ್ನದ ಉಂಡೆಗಳನ್ನು ನಾಲ್ಕು ದಿಕ್ಕುಗಳಲ್ಲಿ ಯಾವದೇ ವಿಘ್ನ ಬಾರದಂತೆ ಪ್ರಾರ್ಥಿಸಿ ಗಣಪತಿಯನ್ನು ಸ್ಮರಿಸಿ ಇಡಲಾಗುತ್ತದೆ. ಮುಂದಿನ ಒಂಬತ್ತು ದಿವಸಗಳ ಕಾಲ ಧಾರ್ಮಿಕ ಸಾಂಸ್ಕೃತಿಕ ಹಬ್ಬವೇ ಯಲ್ಲಾಪುರದಲ್ಲಿ ನೆಲೆಸುತ್ತದೆ. ಅಲಂಕಾರಗೊoಡ ಯಲ್ಲಾಪುರ: ಜಾತ್ರೆಗಾಗಿ ಇಡೀ ಯಲ್ಲಾಪುರ ಸಿಂಗಾರಗೊoಡಿದ್ದು, ಎಲ್ಲೆಡೆ ಹಬ್ಬದ ಸಂಭ್ರಮ ಮನೆ ಮಾಡಿದೆ. ಪಟ್ಟಣದ ಪ್ರಮುಖ ರಸ್ತೆಗಳನ್ನು ತಳಿರು ತೋರಣಗಳಿಂದ ಅಲಂಕರಿಸಲಾಗಿದೆ. ಮೆರವಣಿಗೆ ಸಾಗಿ ಬರುವ ರಸ್ತೆಯುದ್ದಕ್ಕೂ ಆಕರ್ಷಕ ರಂಗೋಲಿಗಳು ದೇವಿಯರ ಸ್ವಾಗತಕ್ಕೆ ಅಣಿಯಾಗಿವೆ. 25 ಲಕ್ಷ ರೂ ವೆಚ್ಚದಲ್ಲಿ ಕಂಚಿ ದೇವಸ್ಥಾನದ ಮಾದರಿಯಲ್ಲಿ ಮಂಟಪ ನಿರ್ಮಾಣಗೊಂಡಿದೆ. ವೈಟಿಎಸ್‌ಎಸ್ ಮೈದಾನ, ಶ್ರೀರಾಮ ರೆಸಿಡೆನ್ಸಿ ಹಿಂಭಾಗದಲ್ಲಿ ಅಮ್ಯೂಸಮೆಂಟ್ ಪಾರ್ಕ್ ಜನರನ್ನು ರಂಜಿಸಲಿವೆ. ಪಟ್ಟಣದ ವಿವಿಧೆಡೆ ಅಂಗಡಿ ಪ್ಲಾಟ್ ಗಳನ್ನು ಬಾಡಿಗೆಗೆ ಪಡೆದಿರುವವರು ಟೆಂಟ್ ನಿರ್ಮಿಸಿ ಅಂಗಡಿ ಆರಂಭಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಜಾತ್ರೆಗೆ ಚಾಲನೆ: ಫೆಬ್ರವರಿ 11ರ ಮಧ್ಯಾಹ್ನ 3.30ಕ್ಕೆ ಗ್ರಾಮದೇವಿಯವರ ಮೆರವಣಿಗೆ ಆರಂಭಗೊAಡು, ದೇವಿ ಮೈದಾನದ ಜಾತ್ರಾ ಗದ್ದುಗೆಯಲ್ಲಿ ಗ್ರಾಮದೇವಿಯರು ವಿರಾಜಮಾನರಾಗಲಿದ್ದಾರೆ. ಫೆ.12 ರಿಂದ ಭಕ್ತರು ಉಡಿ, ಹಣ್ಣುಕಾಯಿ ಮುಂತಾದ ಸೇವೆಗಳನ್ನು ಸಲ್ಲಿಸಲು ಅವಕಾಶವಿದೆ. ಪೊಲೀಸ್ ಬಂದೋಬಸ್ತ್: ಜಾತ್ರೆಯಲ್ಲಿ ಸುರಕ್ಷತೆಗೆ ಪೊಲೀಸರು ಹೆಚ್ಚಿನ ಮಹತ್ವ ನೀಡಿದ್ದು, 400 ಕ್ಕೂ ಹೆಚ್ಚು ಸಿಬ್ಬಂದಿ ನೇಮಿಸಲಾಗಿದೆ. - [ಪೂಜೆಯ ಹಕ್ಕಿಗಾಗಿ ರಕ್ತ ಕ್ರಾಂತಿ!](https://mobiletime.in/2026/02/a-bloody-revolution-for-the-right-to-worship/): ಕುಟುoಬದೊಳಗಿನ ಪೂಜೆ ಹಕ್ಕಿಗಾಗಿ ಜೊಯಿಡಾದಲ್ಲಿ ದಾಯಾದಿಗಳ ನಡುವೆ ಕಲಹ ನಡೆದಿದ್ದು, ಅದೇ ವಿಷಯ ದೊಡ್ಡದಾಗಿ ರಕ್ತ ಹರಿದಿದೆ. ಇಲ್ಲಿನ ವೈಣಿ ಠಾಕೋರವಾಡದಲ್ಲಿರುವ ಶ್ರೀ ರಾಮಲಿಂಗೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸುವ ವಿಷಯವಾಗಿ ಮಿರಾಶಿ ಕುಟುಂಬದಲ್ಲಿ ಬಿರುಕು ಮೂಡಿತ್ತು. ದೇವಾಲಯದ ಅರ್ಚಕರಾಗಿದ್ದ ಈಶ್ವರ ರಾಮ ಮಿರಾಶಿ ಈಚೆಗೆ ನಿಧನರಾಗಿದ್ದು, ಸಂಪ್ರದಾಯದAತೆ ಅವರ ಸಹೋದರ ಪಾಂಡುರAಗ ರಾಮ ಮಿರಾಶಿಗೆ ಪೂಜೆಯ ಜವಾಬ್ದಾರಿ ನೀಡಬೇಕು ಎಂಬ ಮಾತು ಕುಟುಂಬದಲ್ಲಿ ಕೇಳಿ ಬಂದಿತ್ತು. ಆದರೆ, ಸಾವನಪ್ಪಿದ ಈಶ್ವರ ಮಿರಾಶಿ ಅವರ ಪುತ್ರ ಪ್ರಕಾಶ ಮಿರಾಶಿ ಅವರು ಇದಕ್ಕೆ ಒಪ್ಪಿರಲಿಲ್ಲ. ಪಾಂಡುರAಗ ಮಿರಾಶಿ ಅವರ ವಿರುದ್ಧ ಪ್ರಕಾಶ ಮಿರಾಶಿ ಸಿಡಿದೆದ್ದಿದ್ದರು. ಪೂಜೆ ವಿಷಯವಾಗಿ ಅವರಿಬ್ಬರ ನಡುವೆ ವಾಗ್ವಾದ ಸಾಮಾನ್ಯವಾಗಿತ್ತು. ಸೋಮವಾರ ಪ್ರಕಾಶ ಮಿರಾಶಿ ದೇವಾಲಯದಲ್ಲಿ ಪೂಜೆ ಮಾಡಿದ್ದು, ನಂತರ ಪೂಜೆ ಮಾಡುವುದಕ್ಕಾಗಿ ದೇವಾಲಯದ ಕೀ ಕೊಡುವಂತೆ ಪಾಂಡುರAಗ ಮಿರಾಶಿ ಕೇಳಿದ್ದರು. ಕೀ ಕೇಳಿದ್ದರಿಂದ ಸಿಟ್ಟಾದ ಪ್ರಕಾಶ ಮಿರಾಶಿ ಮತ್ತೆ ಮಾತಿನ ಚಕಾಮಕಿ ನಡೆಸಿದ್ದು, ಅದು ವಿಕೋಪಕ್ಕೆ ತೆರಳಿತು. `ದೇವಾಲಯದ ವಿಚಾರದಲ್ಲಿ ಮತ್ತೆ ಹಸ್ತಕ್ಷೇಪ ಮಾಡಿದರೆ ಜೀವಂತವಾಗಿ ಬಿಡುವುದಿಲ್ಲ’ ಎಂದು ಬೆದರಿಸಿದ ಪ್ರಕಾಶ ಮಿರಾಶಿ ಕತ್ತಿಯಿಂದ ಚಿಕ್ಕಪ್ಪನ ತಲೆಗೆ ಹೊಡೆದರು. ಇದರಿಂದ ಪಾಂಡುರAಗ ಮಿರಾಶಿ ಅಲ್ಲಿಯೇ ಕುಸಿದು ಬಿದ್ದರು. ರಕ್ತದ ಮೊಡವಿನಲ್ಲಿ ಬಿದ್ದ ಅವರನ್ನು ಅಲ್ಲಿದ್ದವರು ಆಸ್ಪತ್ರೆಗೆ ಸೇರಿಸಿದರು. ಈ ಕುರಿತು ಪಾಂಡುರAಗ ಮಿರಾಶಿ ಅವರ ಪತ್ನಿ ಪ್ರಿಯಾಂಕಾ ಮಿರಾಶಿ ನೀಡಿದ ದೂರಿನ ಆಧಾರದಲ್ಲಿ ರಾಮನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪ್ರಕಾಶ ಮಿರಾಶಿಯನ್ನು ಬಂಧಿಸಿದ್ದಾರೆ. - [ಪ್ರಭಾವಿ ಪುತ್ರನಿಗೆ ಜೈಲೇ ಗತಿ!](https://mobiletime.in/2026/02/influential-son-faces-prison/): ಕಾರವಾರದ ರೀಶೆಲ್ ಡಿಸೋಜಾ ಆತ್ಮಹತ್ಯೆ ಪ್ರಕರಣದ ಪ್ರಮುಖ ಆರೋಪಿ ಚಿರಾಗ ಕೋಠಾರಕರ್ ಅವರಿಗೆ ಜಾಮೀನು ಮಂಜೂರಾಗಿಲ್ಲ. ಹೀಗಾಗಿ ಅವರು ಇನ್ನಷ್ಟು ದಿನ ಜೈಲಿನಲ್ಲಿಯೇ ಕಾಲ ಕಳೆಯುವುದು ಅನಿವಾರ್ಯವಾಗಿದೆ. ಜನವರಿ 9ರಂದು ರಿಶೆಲ್ ಕ್ರಿಸ್ತೋದ್ ಡಿಸೋಜಾ ಅವರು ಆತ್ಮಹತ್ಯೆಗೆ ಶರಣಾಗಿದ್ದರು. ಆತ್ಮಹತ್ಯೆ ನಂತರ ಅವರ ಕುಟುಂಬದವರು ಅತ್ಯಾಚಾರದ ಆರೋಪ ಮಾಡಿದ್ದರು. ಜಿ ಪಂ ಮಾಜಿ ಸದಸ್ಯೆ ಚೈತ್ರಾ ಕೋಠಾರಕರ್ ಅವರ ಪುತ್ರ ಚಿರಾಗ ಕೋಠಾರಕರ್ ಪ್ರಕರಣದ ಪ್ರಮುಖ ಆರೋಪಿಯಾಗಿದ್ದು, ಚಿರಾಗ ಕೋಠಾರಕರ್ ಅವರು ತಲೆಮರೆಸಿಕೊಂಡಿದ್ದರು. ಅನೇಕ ದಿನದ ಕಾರ್ಯಾಚರಣೆ ನಂತರ ಪೊಲೀಸರು ಆರೋಪಿಯನ್ನು ಬಂಧಿಸಿದ್ದರು. ಚನೈಯಲ್ಲಿ ಅಡಗಿದ್ದ ಆರೋಪಿಯನ್ನು ಬಂಧಿಸಿದ ಪೊಲೀಸರು ಆಶ್ರಯ ನೀಡಿದ ಇಬ್ಬರ ವಿರುದ್ಧವೂ ಕಾನೂನು ಕ್ರಮ ಜರುಗಿಸಿದ್ದರು. ಅದಾದ ನಂತರ ಚಿರಾಗ ಕೋಠಾರಕರ್ ಜಾಮೀನಿಗಾಗಿ ಅರ್ಜಿ ಸಲ್ಲಿಸಿದರೂ ನ್ಯಾಯಾಲಯ ಅದಕ್ಕೆ ಸಮ್ಮತಿ ನೀಡಲಿಲ್ಲ. ಸದ್ಯ ಮತ್ತೊಮ್ಮೆ ಜಾಮೀನಿಗಾಗಿ ಅರ್ಜಿ ಕೋರಲಾಗಿದ್ದು, ಅದನ್ನು ಕೋರ್ಟ ನಿರಾಕರಿಸಿದೆ. ಫೆ 10ರವರೆಗೂ ನ್ಯಾಯಾಲಯ ನ್ಯಾಯಾಂಗ ಬಂಧನಕ್ಕೆ ಆದೇಶಿಸಿದ್ದು, ಈ ದಇನ ಮತ್ತೆ ಜಾಮೀನು ಅರ್ಜಿಯನ್ನು ತಿರಸ್ಕರಿಸಿದೆ. ಈ ಪ್ರಕರಣದಲ್ಲಿ ಚಿರಾಗ್ ಹಾಗೂ ರಿಶೆಲ್ ಮೊಬೈಲ್‌ಗಳ ಎಫ್‌ಎಸ್‌ಎಲ್ ರಿಪೋರ್ಟ್ ಬರಲು ಬಾಕಿಯಿದೆ. ಇನ್ನು ರಿಶೆಲ್ ಮನೆಯವರು ಮಾಡಿರುವ ಅತ್ಯಾಚಾರ ಹಿನ್ನಲೆ ಮರು ಮರಣೋತ್ತರ ಪರೀಕ್ಷಾ ವರದಿಯೂ ಹೊರಬರಬೇಕಿದೆ. ಪ್ರಕರಣದ ಗಂಭೀರತೆ ಹಾಗೂ ಆರೋಪಿ ತಲೆಮರೆಸಿಕೊಂಡಿರುವುದನ್ನು ಗಮನಿಸಿದ ನ್ಯಾಯಾಧೀಶ ಪರಮೇಶ್ವರ ಪ್ರಸನ್ನ ಬಿ ಅವರು ಚಿರಾಗ್ ಕೋಠಾರಕರ್ ಅವರ ಜಾಮೀನು ನಿರಾಕರಿಸಿದ್ದಾರೆ. ಸರಕಾರದ ಪರವಾಗಿ ಪಬ್ಲಿಕ್ ಪ್ರಾಸಿಕ್ಯೂಟರ್ ತನುಜಾ ಹೊಸಪಟ್ಟಣ ಅವರು ವಾದಿಸಿ ಅರ್ಜಿ ತಿರಸ್ಕರಿಸುವಂತೆ ಮನವಿ ಮಾಡಿದ್ದು, ಅದಕ್ಕೆ ನ್ಯಾಯಾಲಯ ಮನ್ನಣೆ ನೀಡಿದೆ. ತನಿಖಾಧಿಕಾರಿ ಕದ್ರಾ ಪೊಲೀಸ್ ನಿರೀಕ್ಷಕ ಪ್ರಭಾಕರ್ ತನಿಖಾ ವರದಿಗಳನ್ನು ಸಲ್ಲಿಸಿದ್ದಾರೆ. ಕಾರವಾರ ಜಿಲ್ಲಾ ನ್ಯಾಯಾಲಯದಲ್ಲಿ ಜಾಮೀನು ಸಇಗದ ಕಾರಣ ಚಿರಾಗ ಹೈಕೋರ್ಟ ಮೊರೆ ಹೋಗುವ ಸಾಧ್ಯತೆಗಳಿವೆ. - [ಬೈಕಿನಲ್ಲಿ ಕೂತು ತರಕಾರಿ ಖರೀದಿ: ಆಯತಪ್ಪಿ ಬಿದ್ದ ಮಹಿಳೆಯ ಮರಣ!](https://mobiletime.in/2026/02/woman-dies-after-falling-off-bike-while-buying-vegetables/): ಬೈಕಿನ ಹಿಂಬದಿ ಕುಳಿತು ತರಕಾರಿ ಖರೀದಿಸುತ್ತಿದ್ದ ಶಿರಸಿಯ ವಿಜಯಲಕ್ಷ್ಮೀ ಹೆಗಡೆ ಅವರು ಆಯತಪ್ಪಿ ನೆಲಕ್ಕೆ ಬಿದ್ದು ಸಾವನಪ್ಪಿದ್ದಾರೆ. ಶಿರಸಿ ಹಳೆ ಉಂಚಳ್ಳಿಯ ವಿಜಯಲಕ್ಷ್ಮೀ ಮಂಜುನಾಥ ಹೆಗಡೆ (71) ಅವರು ವಾಸವಾಗಿದ್ದರು. ಹಳೆ ಉಂಚಳ್ಳಿಯಲ್ಲಿ ಅವರು ಮನೆ ಕಟ್ಟಿಸುತ್ತಿದ್ದರು. ಆಗಾಗ ಸ್ಥಳಕ್ಕೆ ಭೇಟಿ ನೀಡಿ ಮನೆ ಕೆಲಸದ ಆಗು-ಹೋಗುಗಳನ್ನು ಅವರು ನೋಡಿಕೊಳ್ಳುತ್ತಿದ್ದರು. ಅದರಂತೆ ಫೆಬ್ರವರಿ 8ರಂದು ಸಹ ಅವರು ಮನೆ ಬಳಿ ಹೋಗಿದ್ದರು. ಅಲ್ಲಿಂದ ಉಂಚಳ್ಳಿಗೆ ಮರಳುವ ಸಿದ್ಧತೆಯಲ್ಲಿರುವಾಗ ವಾಸು ಮಡಿವಾಳ ಅವರು ಬೈಕಿನಲ್ಲಿ ಬರುವುದು ಕಾಣಿಸಿತು. ವಿಜಯಲಕ್ಷ್ಮೀ ಹೆಗಡೆ ಅವರು ವಾಸು ಮಡಿವಾಳ ಅವರ ಬೈಕಿಗೆ ಅಡ್ಡಲಾಗಿ ಕೈ ಮಾಡಿದರು. ವಾಸು ಮಡಿವಾಳ ಅವರು ಬೈಕು ನಿಲ್ಲಿಸಿದ್ದರಿಂದ ಅವರ ಬೈಕು ಏರಿದರು. ಹರೀಶಿ ಕ್ರಾಸಿನ ಬಳಿ ಫಾಮಿದಾ ಅವರ ಮನೆ ಎದುರು ತರಕಾರಿ ವ್ಯಾಪಾರ ನಡೆಯುತ್ತಿರುವುದನ್ನು ವಿಜಯಲಕ್ಷ್ಮೀ ಹೆಗಡೆ ಅವರು ನೋಡಿದರು. ಬೈಕಿನಲ್ಲಿ ಕುಳಿತು ತರಕಾರಿಪಡೆಯುತ್ತಿರುವಾಗ ವಿಜಯಲಕ್ಷ್ಮೀ ಹೆಗಡೆ ಅವರು ನೆಲಕ್ಕೆ ಬಿದ್ದರು. ಪರಿಣಾಮ ಅವರ ತಲೆಗೆ ಗಂಭೀರ ಪ್ರಮಾಣದಲ್ಲಿ ಪೆಟ್ಟಾಯಿತು. ಹುಬ್ಬಳ್ಳಿಯ ಆಸ್ಪತ್ರೆಗೆ ಅವರನ್ನು ದಾಖಲಿಸಲಾಗಿದ್ದು, ನಂತರ ಶಿರಸಿಯ ಪಿಜಿ ಆಸ್ಪತ್ರೆಗೆ ಕರೆತರಲಾಯಿತು. ಆದರೆ, ದಾರಿ ಮಧ್ಯೆಯೇ ಅವರು ಕೊನೆಯುಸಿರೆಳೆದರು. ಬೆಂಗಳೂರಿನ ಕೆಂಗೇರಿಯಲ್ಲಿ ವಾಸವಾಗಿರುವ ಜಾನ್ವಿ ಸತೀಶ ಅಯ್ಯರ್ ಅವರು ತಾಯಿ ಸಾವಿನ ಬಗ್ಗೆ ಮಾಹಿತಿ ನೀಡಿದ್ದು, ಬನವಾಸಿ ಪೊಲೀಸರು ಪ್ರಕರಣ ದಾಖಲಿಸಿದರು. - [ವ್ಯಾಪಾರಿ-ಚಾಲಕನ ಜೊತೆ ಶಿಕ್ಷಕನಿಗೂ ಜೂಜಾಟದ ಚಟ!](https://mobiletime.in/2026/02/along-with-the-businessman-driver-the-teacher-is-also-addicted-to-gambling/): ಶಿರಸಿಯ ವ್ಯಾಪಾರಿ, ಸಿದ್ದಾಪುರದ ಚಾಲಕನ ಜೊತೆ ಕುಮಟಾದ ಶಿಕ್ಷಕರೊಬ್ಬರು ಅಂದರ್ ಬಾಹರ್ ಆಟಕ್ಕೆ ಹೋಗಿ ಸಿಕ್ಕಿಬಿದ್ದಿದ್ದಾರೆ. ಮತ್ತಿಬ್ಬರು ಕೂಲಿ ಕಾರ್ಮಿಕರು ಈ ಆಟಕ್ಕೆ ಕೈ ಜೋಡಿಸಿದ್ದು, ಅವರು ಸಹ ಕಾನೂನು ಕ್ರಮಕ್ಕೆ ಒಳಗಾಗಿದ್ದಾರೆ. ಕುಮಟಾ ಮಿರ್ಜಾನಿನ ತಾರಿಬಾಗಿಲುವಿನ ಶಿಕ್ಷಕ ಶ್ರೀಕಾಂತ ಸೀತಾರಾಮ ಪಟಗಾರ ಅವರು ಇಸ್ಪಿಟ್ ಆಟದಲ್ಲಿ ತಲ್ಲೀನರಾಗಿರುವಾಗ ಕುಮಟಾ ಪಿಐ ಯೋಗೀಶ ಕೆ ಎಂ ಅವರು ದಾಳಿ ಮಾಡಿದ್ದಾರೆ. ಆ ವೇಳೆ ಸಿದ್ದಾಪುರದ ಹೊಸೂರಿನ ಕಾನಗೇರಿಯ ಚಾಲಕ ಸತೀಶ ಬೊಮ್ಮ ನಾಯ್ಕ, ಸಿದ್ದಾಪುರ ಹೆಗನೂರು ಅತ್ತಿಸೌಲು ಬಳಿಯ ಗೋಳಿಮಕ್ಕಿ ನರಹರಿ ಮಾಬ್ಲು ಗೌಡ, ಕುಮಟಾ ಸಂತೆಗುಳಿಯ ಡಿಯೋಗ ಸಂತಾನ ಅಲ್ಮೇಡಾ, ಕುಮಟಾ ನೆಹರು ನಗರ ಇಂಡಿಯನ್ ಗ್ಯಾಸ್ ಬಳಿಯ ಮಂಜುನಾಥ ನಾಗು ಗೌಡ ಹಾಗೂ ಶಿರಸಿ ಬನವಾಸಿ ಬಳಿಯ ಹುಸೇರಿಯ ವ್ಯಾಪಾರಿ ಕೃಷ್ಣಮೂರ್ತಿ ನಾಗರಾಜ ನಾಯ್ಕ ಅವರು ಅಲ್ಲಿ ಜೂಜಾಟದಲ್ಲಿ ನಿರತರಾಗಿರುವುದು ಗೊತ್ತಾಗಿದೆ. ಕುಮಟಾದ ಮೇದಿನಿ ಗ್ರಾಮದ ಅರಣ್ಯ ಪ್ರದೇಶದಲ್ಲಿ ಫೆಬ್ರವರಿ 9ರ ರಾತ್ರಿ ಭಾರೀ ಪ್ರಮಾಣದಲ್ಲಿ ಜೂಜಾಟ ನಡೆಯುತ್ತಿತ್ತು. ಈ ಬಗ್ಗೆ ಮಾಹಿತಿ ಅರೆಸಿ ಕುಮಟಾ ಪೊಲೀಸರು ಅಲ್ಲಿ ಹೋದರು. ಕಾಡಿನಲ್ಲಿ ಅವಿತಿದ್ದ ಎಲೆಮಾನವರಿಗಾಗಿ ಪೊಲೀಸರು ಶೋಧ ನಡೆಸಿದರು. ನಸುಕಿನ 4.45ರ ಅವಧಿಯಲ್ಲಿ ಈ ಆರು ಜನ ಪೊಲೀಸರ ಕಣ್ಣಿಗೆ ಬಿದ್ದರು. ಅವರು ಜೂಜಾಟಕ್ಕೆ ಬಳಸಿದ್ದ ಸಾಮಗ್ರಿಗಳನ್ನು ಪೊಲೀಸರು ಜಪ್ತು ಮಾಡಿದರು. ಆ ಕಾಡಿನಲ್ಲಿ ಸಿಕ್ಕ 27700ರೂ ಹಣವನ್ನು ವಶಕ್ಕೆಪಡೆದರು. ಇಸ್ಪಿಟ್ ಎಲೆ, ಪ್ಲಾಸ್ಟಿಕ್ ತಡಪಾಲ್, ಚಾರ್ಜಿಂಗ್ ಬಲ್ಪ್ ಸೇರಿ ಅಲ್ಲಿದ್ದ ವಸ್ತುಗಳನ್ನು ಜಪ್ತು ಮಾಡಿ, ಎಲೆಮಾನವರ ವಿರುದ್ಧ ಕಾನೂನು ಕ್ರಮ ಜರುಗಿಸಿದರು. `ಜೂಜಾಟದಿಂದ ಜೀವನ ಹಾಳು’ - [ಕುಮಟಾದಲ್ಲಿ ಕಾಣಿಸಿದ ಕುಟು ಕುಡಿ ಮಂಡ!](https://mobiletime.in/2026/02/a-skunk-spotted-in-kumta/): ಕುಮಟಾ ಮೇದಿನಿಯ ಅನಂತೇಶ್ವರ ದೇವಾಲಯಕ್ಕೆ ಹೋಗುವ ರಸ್ತೆಯಲ್ಲಿ ಕುಟು ಕುಟಿ ಮಂಡ ಹಾಕಿದ್ದ ಮೂವರು ಪೊಲೀಸರಿಗೆ ಸಿಕ್ಕಿ ಬಿದ್ದಿದ್ದಾರೆ. ಫೆಬ್ರವರಿ 9ರಂದು ಕುಮಟಾ ಪೊಲೀಸರು ಮೇದಿನಿ ಗ್ರಾಮದ ಬಳಿ ತೆರಳಿದ್ದು, ರಾತ್ರಿ ವೇಳೆ ಕಾಡಿನ ದಾರಿಯಲ್ಲಿ ಬೆಳಕು ಮೂಡಿರುವುದನ್ನು ನೋಡಿದ್ದಾರೆ. ಹತ್ತಿರ ಹೋಗಿ ನೋಡಿದಾಗ ಅಲ್ಲಿ ಬಗ್ಗೋಣದ ಸುಧಾಕರ ವೆಂಕಟ್ರಮಣ ನಾಯ್ಕ ಅವರು ಕುಟು ಕುಡಿ ಮಂಡ ಹಾಕಿ ಜೂಜಾಟ ಆಯೋಜಿಸಿರುವುದು ಗೊತ್ತಾಗಿದೆ. ಈ ವೇಳೆ ಅಪ್ಪೆಓಣಿ ಗೌಡರಕೊಪ್ಪದ ಆಟೋ ಚಾಲಕ ಮಂಜುನಾಥ ಗೊಯ್ದು ಗೌಡ ಹಾಗೂ ದಿವಗಿ ಮಣಕೋಣದ ಗ್ಯಾರೇಜ್ ಕಾರ್ಮಿಕ ಪರಮೇಶ್ವರ ಸುಕ್ರು ಗೌಡ ಸಹ ಆ ಆಟದಲ್ಲಿ ತಲ್ಲೀನರಾಗಿದನ್ನು ಪೊಲೀಸರು ನೋಡಿದ್ದಾರೆ. ಆ ಮೂವರು ಸೇರಿ ಸೂರ್ಯ, ಚಂದ್ರ, ಕಳಾವರ ಸೇರಿ ಬಗೆ ಬಗೆಯ ಚಿತ್ರದ ಮೇಲೆ ಹಣ ಹೂಡುವಂತೆ ಅವರೆಲ್ಲರೂ ಜನರಿಗೆ ಉತ್ತೇಜಿಸುತ್ತಿದ್ದು, ಜೂಜಾಟ ನಡೆಸುವುದು ಕಾನೂನುಬಾಹಿರ ಎಂಬ ಅರಿವಿದ್ದರೂ ಅದನ್ನು ಮುಂದುವರೆಸಿದ್ದಾರೆ. ಪೊಲೀಸರನ್ನು ನೋಡಿದ ತಕ್ಷಣ ಆ ಮೂವರು ಅಲ್ಲಿಂದ ತಪ್ಪಿಸಿಕೊಳ್ಳುವ ಪ್ರಯತ್ನ ಮಾಡಿದ್ದಾರೆ. ಅದಾಗಿಯೂ, ಪೊಲೀಸ್ ನಿರೀಕ್ಷಕ ಯೋಗೀಶ ಎಂ ಅವರನ್ನು ಅಡ್ಡಗಟ್ಟಿದ್ದಾರೆ. ಆ ಮೂವರ ಬಳಿಯಿದ್ದ 2500ರೂ ಹಣ, ಕುಟಿ ಕುಟಿ ಮಂಡಲದ ಪಟ್ಟಿ, ಬ್ಯಾಟರಿ, ಪ್ಲಾಸ್ಟಿಕ್ ಡಬ್ಬಿ ಹಾಗೂ ಥರ್ಮಕೋಲ್ ಬಳಸಿ ಮಾಡಿದ ಮೂರು ಗುಂಡುಗಳನ್ನು ಪೊಲೀಸರು ಜಪ್ತು ಮಾಡಿದ್ದಾರೆ. ನಂತರ ಅವರೆಲ್ಲರ ವಿರುದ್ಧವೂ ಪ್ರಕರಣ ದಾಖಲಿಸಿ ತನಿಖೆ ನಡೆಸಿದ್ದಾರೆ. - [ಶಿರಸಿ ಜಾತ್ರೆ: ದೇವರ ಬಳಿ ಬೇದ-ಭಾವಕ್ಕೆ ಇಲ್ಲಿ ಅವಕಾಶವೇ ಇಲ್ಲ!](https://mobiletime.in/2026/02/sirsi-fair-there-is-no-room-for-discrimination-with-god/): ಶಿರಸಿ ಜಾತ್ರೆ ಅಂಗವಾಗಿ ನಡೆಯುವ ಹೊರಬೀಡಿನ ಪಲ್ಲಕ್ಕಿ ಉತ್ಸವದ ವೇಳೆ ಪ್ರಮುಖ ಸಮುದಾಯವೊಂದನ್ನು ಕೆಡೆಗಣಿಸಿದ ಬಗ್ಗೆ ಅಧಿಕಾರಿಗಳಿಗೆ ಅರ್ಜಿ ಸಲ್ಲಿಕೆಯಾಗಿದ್ದು, ಇದೇ ವಿಷಯ ಇಂದಿನ ಚರ್ಚೆಗೆ ಕಾರಣವಾಗಿದೆ. ಬೇದ-ಭಾವ ಮಾಡಿದ ಆರೋಪದ ವಿಷಯವಾಗಿ ಮಾರಿಕಾಂಬಾ ದೇಗುಲದಲ್ಲಿ ತುರ್ತು ಸಭೆ ನಡೆದಿದೆ. ಈ ಸಭೆಯಲ್ಲಿ `ಯಾವುದೇ ಬೇದ-ಭಾವ ನಡೆದಿಲ್ಲ’ ಎಂದು ದೇಗುಲ ಸಮಿತಿಯವರು ಹೇಳಿದ್ದು, ಆ ಬಗ್ಗೆ ಮನವರಿಕೆ ಮಾಡುವ ಪ್ರಯತ್ನವನ್ನು ಮಾಡಿದ್ದಾರೆ. `ಜಾತ್ರೆ ಹೊರಬೀಡಿನ ಪಲ್ಲಕ್ಕಿ ಉತ್ಸವದ ವೇಳೆ ಚಲುವಾದಿ ಸಮಾಜದ ಪಡಲಿಗಳನ್ನು ಕಡೆಗಣಿಸಲಾಗುತ್ತಿದೆ’ ಎಂದು ಪತ್ರವೊಂದು ಸಲ್ಲಿಕೆಯಾಗಿತ್ತು. ಮಾರಿಕಾಂಬಾ ದೇವಸ್ಥಾನದ ಸಭಾಂಗಣದಲ್ಲಿ ಆಡಳಿತ ಮಂಡಳಿಯವರು ಈ ವಿಷಯವಾಗಿ ಸಭೆ ನಡೆಸಿದರು. ಈ ಸಭೆಯಲ್ಲಿ ಅನೇಕರು ತಮ್ಮ ಅಭಿಪ್ರಾಯ ಮಂಡಿಸಿದರು. `ಪಡಲಗಿ ಇಡುವ ವೇಳೆ ಬೇಧ-ಭಾವ ಮಾಡುತ್ತಿದ್ದಾರೆ. ಅಲ್ಲದೇ, ಹಿಂದುಳಿದ ವರ್ಗದವರನ್ನು ಕಡೆಗಣಿಸುತ್ತಿದ್ದಾರೆ’ ಎಂದು ಆರೋಪಿಸಿ ಸಹಾಯಕ ಆಯುಕ್ತರಿಗೆ, ತಹಸೀಲ್ದಾರರಿಗೆ, ಸಮಾಜ ಕಲ್ಯಾಣ ಇಲಾಖೆಗೆ ಅರ್ಜಿ ಸಲ್ಲಿಕೆಯಾಗಿದ್ದು, ಆ ಎಲ್ಲಾ ಅಧಿಕಾರಿಗಳು ಸಭೆಗೆ ಆಗಮಿಸಿ ಸಮಸ್ಯೆ ಆಲಿಸಿದರು. `ಪಡಲಗಿ ವಿಷಯದಲ್ಲಿ ತಾರತಮ್ಯ ಕಾಣುತ್ತಿರುವುದರಿಂದ ನಮ್ಮ ಸಮಾಜದವರು ನನ್ನ ನಮನಕ್ಕೆ ತಂದರು. ಆ ವಿಷಯದ ಕುರಿತು ಸಂಬAಧಿಸಿದ ಅಧಿಕಾರಿಗಳಿಗೆ ಮನವಿ ಸಲ್ಲಿಸಿ, ಇದನ್ನು ಸರಿಪಡಿಸುವಂತೆ ವಿನಂತಿಸಲಾಗಿದೆ. ಪಡಲಗಿಗಳನ್ನು ಕೆಳಗಿಟ್ಟು ಪೂಜೆ ಮಾಡುತ್ತಾರೆ. ಸಾಮೂಹಿಕವಾಗಿ ಪೂಜೆಗೆ ಅವಕಾಶ ನೀಡಬೇಕು’ ಎಂದು ಚಲುವಾದಿ ಸಮಾಜದ ಜಿಲ್ಲಾಧ್ಯಕ್ಷ ಮಾದೇವ ಚಲುವಾದಿ ಅವರು ಆಗ್ರಹಿಸಿದರು. `ಅನಾದಿಕಾಲದಿಂದಲೂ ದೇವಿ ಸೇವೆಯ ಮಾಡುತ್ತಿದ್ದೇವೆ. ಹಿಂದಿನ ಕಾಲದಲ್ಲಿ ತಾರತಮ್ಯ ಇದ್ದಿತ್ತು. ಅದು ಕಳೆದು ಎಷ್ಟೋ ದಶಕಗಳಾಗಿವೆ. ಜಾತಿ ಬೇಧ-ಭಾವ ಎಂದಿಗೂ ಕಂಡುಬAದಿಲ್ಲ. ಸುಮಾರು 35 ರಿಂದ 40 ಜಾತ್ರೆ ನೋಡಿದ್ದೇನೆ’ ಎಂದು ಅಲ್ಲಿದ್ದ ಶಾಂತವ್ವ ಅವರು ಹೇಳಿದರು. `ಜಾತ್ರೆ ಹೋರಬೀಡಿನ ವೇಳೆ ಸುಮಾರು 53ರಿಂದ 58 ಪಡಲಗಿಗಳು ಆಗುತ್ತದೆ. ಸ್ಥಳವಕಾಶ ಕಡಿಮೆ ಇದೆ. ಎಲ್ಲರೂ ಸಹಕಾರ ನೀಡಬೇಕು’ ಎಂದು ವಿಜಯ ನಾಡಿಗ್ ಅವರು ಮನವಿ ಮಾಡಿದರು. `ದೇವಸ್ಥಾನದ ಧಾರ್ಮಿ ಕಾರ್ಯಕ್ರಮಗಳು ನೆರವೇರಿಸುವ ವೇಳೆ ಬೇಧ-ಭಾವ ಮಾಡುವ ಪ್ರಶ್ನೆಯೇ ಇಲ್ಲ. ವಿಧಿ-ವಿಧಾನಗಳನ್ನು ಬದಲಾಯಿಸಲು ಸಾಧ್ಯವಿಲ್ಲ’ ಎಂದು ದೇಗುಲ ಮುಖ್ಯಸ್ಥರು ಸ್ಪಷ್ಠಪಡಿಸಿದರು. ಈ ಸಭೆಯಲ್ಲಿ ಬಾಬುದಾರರು, ಸಹಾಯಕರು ದೇವಸ್ಥಾನದ ವಿಧಿ-ವಿಧಾನಗಳನ್ನು ನೇರವೇರಿಸುವ ಮುಖ್ಯಸ್ಥರು ಅಭಿಪ್ರಾಯ ವ್ಯಕ್ತಪಡಿಸಿದರು. ಎಲ್ಲರ ವಿಷಯಗಳನ್ನು ಪರಿಗಣಿಸಿ, ಕಟ್ಟೆಯ ಮೇಲೆ ದೇವಸ್ಥಾನದ 4 ಪಡಲಗಿಗಳನ್ನು ಮಾತ್ರ ಇಡಲಾಗುತ್ತದೆ. ಉಳಿದ ಎಲ್ಲ ಪಡಲಿಗಿಯನ್ನು ಎದುರು ಇಡಲಾಗುತ್ತದೆ. ಈ ಕುರಿತು ಜಿಲ್ಲಾ ನ್ಯಾಯಾಧೀಶರಿಗೆ ಪತ್ರದ ಮೂಲಕ ಮಾಹಿತಿ ನೀಡುವ ಬಗ್ಗೆ ಸಭೆಯಲ್ಲಿ ನಿರ್ಧರಿಸಲಾಯಿತು. ಬಾಬುದಾರರ ಮುಖ್ಯಸ್ಥ ಜಗದೀಶ ಗೌಡ, ಮಾರಿಕಾಂಬಾ ದೇವಸ್ಥಾನದ ಅಧ್ಯಕ್ಷ ಆರ್ ಜಿ.ನಾಯ್ಕ ಅವರು ಮಾತನಾಡಿ `ಸಭೆಯಲ್ಲಿ ಕೈಗೊಂಡ ನಿರ್ಣಯಗಳನ್ನು ಜಿಲ್ಲಾ ನ್ಯಾಯಾಧೀಶರಿಗೆ ಕಳುಹಿಸಲಾಗುತ್ತದೆ. ಅವರಿಂದ ಬಂದ ಉತ್ತರ ತಿಳಿಸಲಾಗುತ್ತದೆ’ ಎಂದರು. ಸಭೆಯಲ್ಲಿ ದೇವಸ್ಥಾನದ ಆಡಳಿತ ಮಂಡಳಿ ಉಪಾಧ್ಯಕ್ಷ ಸುದೇಶ ಜೋಗಳೇಕರ, ಧರ್ಮದರ್ಶಿಗಳಾದ ಸುಧೀರ ಹಂದ್ರಾಳ, ಎಸ್.ಪಿ.ಶೆಟ್ಟಿ, ವತ್ಸಲಾ ಹೆಗಡೆ, ಸಹಾಯಕ ಆಯುಕ್ತ ಚಂದ್ರಶೇಖರ ಜಿ ಆರ್, ತಹಸೀಲ್ದಾರ ಪಟ್ಟರಾಜ ಗೌಡ, ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು ಹಾಜರಿದ್ದು, ಅಹವಾಲು ಆಲಿಸಿದರು. - [ಮೆಸೆಜ್ ಮಾಡಿದ ಮೋಸಗಾರ!](https://mobiletime.in/2026/02/the-scammer-who-sent-the-message/): ಮಹಿಳೆಯರ ಸ್ನೇಹ ಬೆಳೆಸಿ ಅವರ ಖಾಸಗಿ ಫೋಟೋಪಡೆದು ನಂತರ ಬೆದರಿಕೆ ಒಡ್ಡುತ್ತಿದ್ದ ವ್ಯಕ್ತಿಯನ್ನು ಭಟ್ಕಳ ಪೊಲೀಸರು ಬಂಧಿಸಿದ್ದಾರೆ. ಸಾಮಾಜಿಕ ಜಾಲತಾಣಗಳ ಮೂಲಕ ಮಹಿಳೆಯರನ್ನು ಸಂಪರ್ಕಿಸುತ್ತಿದ್ದ ಹೊನ್ನಾವರದ ಮಹ್ಮದ್ ಯುಶಾ ನಂತರ ಅವರ ಸಲುಗೆ ಬೆಳೆಸಿ ಅಶ್ಲೀಲ ಸಂದೇಶ ರವಾನಿಸುತ್ತಿರುವುದು ಬೆಳಕಿಗೆ ಬಂದಿದೆ. ಹೊನ್ನಾವರದ ಮಂಕಿ ಬಳಿಯಿರುವ ಭಾಷಾ ಕಾಲೋನಿಯಲ್ಲಿ ಮಹ್ಮದ್ ಯುಶಾ ಮಹ್ಮದ್ ಸಾಯಿ ಅಬು ಮಹ್ಮದಾ (31) ಅವರು ವಾಸವಾಗಿದ್ದರು. ಫೇಸ್ಬುಕ್, ವಾಟ್ಸಪ್, ಇನಸ್ಟಾಗ್ರಾಂ ಸೇರಿ ವಿವಿಧ ಸಾಮಾಜಿಕ ಜಾಲತಾಣಗಳ ಮೂಲಕ ಅವರು ಮಹಿಳೆಯರ ಸ್ನೇಹ ಸಂಪಾದಿಸುತ್ತಿದ್ದರು. ಮಹಿಳೆಯರ ಅಂದ-ಚAದದ ಬಗ್ಗೆ ಹೊಗಳಿ ಅವರ ಸ್ನೇಹ ಸಂಪಾದಿಸುತ್ತಿದ್ದರು. ಅದಾದ ನಂತರ ತಮ್ಮ ಬಲೆಗೆ ಬಿದ್ದ ಮಹಿಳೆಯರ ಖಾಸಗಿ ಫೋಟೋಗಳನ್ನು ಪಡೆಯುತ್ತಿದ್ದರು. ನಂತರ ಅದೇ ಫೋಟೋಗಳನ್ನು ಬಳಸಿ ಬೆದರಿಸುತ್ತಿದ್ದರು. ಜಾಲತಾಣಗಳ ಮೂಲಕ ಮಹಿಳೆಯರಿಗೆ ಅಶ್ಲೀಲ ಮೆಸೆಜ್ ಮಾಡುತ್ತಿದ್ದರು. ಮಹ್ಮದ್ ಯುಶಾರ ವಿಕೃತ ಮನಸ್ಸಿಗೆ ಅನೇಕ ಮಹಿಳೆಯರು ನೊಂದಿದ್ದರು. ಭಟ್ಕಳದ ಮುಗ್ದುಂ ಕಾಲೋನಿಯ ಮಹಿಳೆಯೊಬ್ಬರಿಗೂ ಮಹ್ಮದ್ ಯುಶಾ ಕೆಟ್ಟ ಮೆಸೆಜ್ ಮಾಡಿದ್ದರು. ಮಹಿಳೆಯ ಮೊಬೈಲ್ ಸಂಖ್ಯೆ ಸಂಪಾದಿಸಿ ಸಲುಗೆ ಬೆಳೆಸಿಕೊಂಡಿದ್ದ ಮಹ್ಮದ್ ಯುಶಾ ಆ ಸಲುಗೆಯಿಂದಲೇ ಖಾಸಗಿ ಫೋಟೋ ಸಂಗ್ರಹಿಸಿದ್ದರು. ನಂತರ ಅದೇ ಫೋಟೋ ಬಳಸಿ ಬೆದರಿಕೆ ಒಡ್ಡಿದ್ದರು. ಕೆಟ್ಟ ಕೆಟ್ಟ ಮೆಸೆಜುಗಳನ್ನು ಮಾಡುತ್ತಿದ್ದರು. ಆ ಫೋಟೋಗಳನ್ನು ಎಲ್ಲಡೆ ವೈರಲ್ ಮಾಡುವುದಾಗಿಯೂ ಹೆದರಿಸಿದ್ದರು. ಈ ಬಗ್ಗೆ ಕಾರ್ಯಾಚರಣೆ ನಡೆಸಿದ ಪೊಲೀಸರು ಬೆಂಗಳೂರಿನಲ್ಲಿ ಅಡಗಿದ್ದ ಮಹ್ಮದ್ ಯುಶಾ ಅವರನ್ನು ಬಂಧಿಸಿದ್ದಾರೆ. ಆತನ ಬಳಿಯಿದ್ದ ಮೊಬೈಲ್ ಹಾಗೂ ಪೆನ್‌ಡ್ರವ್’ನ್ನು ವಶಕ್ಕೆಪಡೆದಿದ್ದಾರೆ. ಜಪ್ತಿಗೊಂಡ ವಸ್ತುಗಳನ್ನು ಎಫ್‌ಎಸ್‌ಎಲ್ ಪರೀಕ್ಷೆಗೆ ಕಳುಹಿಸಲಾಗಿದ್ದು, ವರದಿಗಾಗಿ ಪೊಲೀಸರು ಕಾಯುತ್ತಿದ್ದಾರೆ. - [ವಿದ್ಯುತ್ ಆಘಾತ: ಪೇಂಟಿoಗ್ ಕೆಲಸಕ್ಕೆ ಬಂದವನ ಬದುಕು ಅಂತ್ಯ](https://mobiletime.in/2026/02/electric-shock-the-life-of-a-painter-who-came-to-work-ended/): ಶಿರಸಿಯ ಅಲ್ಬೇರ್ ಸ್ಕೂಲಿನಲ್ಲಿ ಪೇಂಟಿoಗ್ ಕೆಲಸ ಮುಗಿಸಿದ ಅಲ್ತಾಪ ಮೊಹ್ಮದ್ ಅವರು ಕೈ-ಕಾಲು ತೊಳೆಯುವ ವೇಳೆ ಕುಸಿದು ಬಿದ್ದು ಸಾವನಪ್ಪಿದ್ದಾರೆ. ಆ ಪ್ರದೇಶದಲ್ಲಿ ಅರೆಬರೆ ಸಂಪರ್ಕದ ವಿದ್ಯುತ್ ತಂತಿಗಳು ಬಿದ್ದಿದ್ದು, ವಿದ್ಯುತ್ ಸ್ಪರ್ಶದಿಂದ ಅವರು ಸಾವನಪ್ಪಿದ ಸಂಶಯಗಳಿವೆ. ಮoಗಳೂರಿನ ಪರಂಗಿಪೇಟೆಯ ಅಲ್ತಾಪ ಮೊಹ್ಮದ್ (31) ಅವರು ಪೇಂಟಿoಗ್ ಕೆಲಸಕ್ಕಾಗಿ ಶಿರಸಿಗೆ ಬಂದಿದ್ದರು. ಶಿರಸಿ ಹೆಲಿಪ್ಯಾಡ್ ಬ್ಯಾಣದ ಹತ್ತಿರವಿರುವ ಅಲ್ಬೇರ್ ಸ್ಕೂಲಿನಲ್ಲಿ ಅವರು ಪೇಂಟಿoಗ್ ಕೆಲಸಕ್ಕೆ ನಿಯೋಜನೆಯಾಗಿದ್ದರು. ಫೆಬ್ರವರಿ 7ರಂದು ಪೇಂಟಿoಗ್ ಕೆಲಸ ಮುಗಿಸಿದ ಅವರು ಕೈ-ಕಾಲು ತೊಳೆಯುವುದಕ್ಕಾಗಿ ನೀರಿರುವ ಸ್ಥಳಕ್ಕೆ ಹೋಗಿದ್ದರು. ಅಲ್ಲಿಯೇ ಕುಸಿದು ಬಿದ್ದರು. ಅಸ್ವಸ್ಥಗೊಂಡಿದ್ದ ಅಲ್ತಾಪ ಮಹ್ಮದ್ ಅವರನ್ನು ಆಸ್ಪತ್ರೆಗೆ ಕರೆತರಲಾಯಿತು. ಆದರೆ, ಅಷ್ಟರೊಳಗೆ ಅವರು ಸಾವನಪ್ಪಿರುವ ಬಗ್ಗೆ ವೈದ್ಯರು ಘೋಷಿಸಿದರು. ಅಲ್ತಾಪ ಮೊಹ್ಮದ್ ಅವರು ಕುಸಿದು ಬಿದ್ದ ಸ್ಥಳದಲ್ಲಿ ವಿದ್ಯುತ್ ಪರಿಕ್ಕರಗಳು ಬಿದ್ದಿರುವುದನ್ನು ಅವರ ಸಹೋದ್ಯೋಗಿ ಪಿ ಎಚ್ ಅಬ್ಬಾಸ್ ಅವರು ಗಮನಿಸಿದ್ದರು. ವಿದ್ಯುತ್ ಆಘಾತ ಅಥವಾ ಹೃದಯಘಾತದಿಂದ ಅವರು ಸಾವನಪ್ಪಿರುವ ಶಂಕೆವ್ಯಕ್ತಪಡಿಸಿದರು. ಈ ಬಗ್ಗೆ ತನಿಖೆಗಾಗಿ ಪಿ ಎಚ್ ಅಬ್ಬಾಸ್ ಅವರು ಪೊಲೀಸ್ ದೂರು ನೀಡಿದ್ದು, ಶಿರಸಿ ಮಾರುಕಟ್ಟೆ ಠಾಣೆ ಪೊಲೀಸರು ಪ್ರಕರಣ ದಾಖಲಿಸಿದರು. - [ಮಹಡಿ ಮೇಲೆ ಬೆಳೆದ ಹೂವು: ಪೂಜೆಗೆ ಹೋದವ ಸಾವು!](https://mobiletime.in/2026/02/a-flower-grew-on-the-floor-the-person-who-went-to-worship-died/): ದೇವರ ಪೂಜೆಗಾಗಿ ಹೂವು ಕೀಳುತ್ತಿದ್ದ ಕಾರವಾರದ ದೇವಪ್ಪ ಭಾನಾವಳಿಕರ್ ಅವರು ಮಹಡಿ ಮೇಲಿಂದ ಬಿದ್ದು ಸಾವನಪ್ಪಿದ್ದಾರೆ. ಕಾರವಾರದ ಕೋಡಿಭಾಗ ಸರ್ವೋದಯ ನಗರದಲ್ಲಿ ದೇವಪ್ಪ ಈರು ಭಾನಾವಳಿಕರ್ (77) ಅವರು ವಾಸವಾಗಿದ್ದರು. ಸರ್ಕಾರಿ ನೌಕರಿಯಲ್ಲಿದ್ದ ಅವರು ನಿವೃತ್ತಿ ನಂತರ ನೆಮ್ಮದಿಯ ಬದುಕು ಕಂಡಿಕೊoಡಿದ್ದರು. ಮನೆ ಮಹಡಿ ಮೇಲೆ ಅವರು ಹೂವಿನ ಗಿಡಗಳನ್ನು ಬೆಳೆದಿದ್ದರು. ನಿತ್ಯದ ಪೂಜೆಗಾಗಿ ಅವರು ಅಲ್ಲಿಂದಲೇ ಹೂವುಪಡೆಯುತ್ತಿದ್ದರು. ಫೆಬ್ರವರಿ 4ರಂದು ದೇವರ ಪೂಜೆಗಾಗಿ ಅವರು ಹೂವು ಕೀಳಲು ಮಹಡಿ ಮೇಲೆ ಹೋಗಿದ್ದರು. ಹೂವು ಕೀಳುವಾಗ ಮಹಡಿ ಮೇಲಿಂದ ಕೆಳಗೆ ಬಿದ್ದರು. ಕಾಲು ಜಾರಿ ಬಿದ್ದ ಪರಿಣಾಮ ತಲೆಗೆ ಗಂಭೀರ ಪ್ರಮಾಣದಲ್ಲಿ ಗಾಯವಾಯಿತು. ಕಾರವಾರ ಜಿಲ್ಲಾಸ್ಪತ್ರೆಗೆ ಅವರನ್ನು ದಾಖಲಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಎಜೆ ಆಸ್ಪತ್ರೆ ಕರೆದೊಯ್ಯಲಾಯಿತು. ಆಗ, ಅಲ್ಲಿನ ವೈದ್ಯರು `ತಲೆಯೊಳಗೆ ರಕ್ತ ಹೆಪ್ಪುಗಟ್ಟಿದೆ’ ಎಂಬ ವಿಷಯ ತಿಳಿಸಿದರು. `ಬಿಪಿ ಹಾಗೂ ಶುಗರ್ ಪ್ರಮಾಣ ಕಡಿಮೆ ಆಗಿದ್ದರಿಂದ ಚಿಕಿತ್ಸೆ ನೀಡುವುದು ಕಷ್ಟ’ ಎಂದು ಆಸ್ಪತ್ರೆಯವರು ಹೇಳಿದರು. ಹೀಗಾಗಿ ಫೆ 6ರಂದು ದೇವಪ್ಪ ಭಾನಾವಳಿಕರ್ ಅವರನ್ನು ಮತ್ತೆ ಕಾರವಾರ ಆಸ್ಪತ್ರೆಗೆ ಕರೆ ತರಲಾಯಿತು. ಫೆಬ್ರವರಿ 7ರಂದು ಅವರು ಸಾವನಪ್ಪಿದರು. ತಂದೆಯ ಸಾವಿನ ಬಗ್ಗೆ ನಿವೃತ್ತ ಸೈನಿಕ ನಾಗರಾಜ ಭಾನಾವಳಿಕರ್ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದು, ಕಾರವಾರ ಶಹರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿದರು. `ಅಪಾಯಕಾರಿ ಸ್ಥಳಗಳಿಗೆ ಹೋಗಬೇಡಿ’ - [ಅಪಘಾತ: ಟೈಯರ್ ಪಂಚರ್ ಆಗಿ ಸಿಕ್ಕಿಬಿದ್ದ ಚಾಲಕ!](https://mobiletime.in/2026/02/accident-the-driver-was-caught-as-a-tire-puncturer/): ಜೊಯಿಡಾದ ರಾಮನಗರ-ಧಾರವಾಡ ಮಾರ್ಗದಲ್ಲಿ ಬುಲೇರೋ ಪಿಕಪ್ ಸ್ಕೂಟಿಗೆ ಗುದ್ದಿದೆ. ಪರಿಣಾಮ ಸ್ಕೂಟಿ ಹಿಂದೆ ಕೂತಿದ್ದ ಮಹಮದ್ ಇಜಾಜ್ ಅವರು ಸಾವನಪ್ಪಿದ್ದಾರೆ. ಅಪಘಾತದ ನಂತರ ಬುಲೆರೋ ಚಾಲಕ ಪರಾರಿಯಾಗಲು ಪ್ರಯತ್ನಿಸಿದ್ದು, ಬುಲೆರೋ ಟೈಯರ್ ಪಂಚರ್ ಆದ ಕಾರಣ ತಪ್ಪಿತಸ್ಥರು ಸಿಕ್ಕಿಬಿದ್ದಿದ್ದಾರೆ. ರಾಮನಗರ – ಧಾರವಾಡ ಮಾರ್ಗದಲ್ಲಿ ಈ ಅಪಘಾತ ನಡೆದಿದೆ. ಕೊಡಗೈ ಕ್ರಾಸ್ ಸಮೀಪ ರಾಮನಗರದಿಂದ ಹುಬ್ಬಳ್ಳಿ ಕಡೆಗೆ ತೆರಳುತ್ತಿದ್ದ ಬೊಲೆರೋ ಗೋವಾ ಕಡೆಗೆ ಸಾಗುತ್ತಿದ್ದ ಸ್ಕೂಟಿಗೆ ಡಿಕ್ಕಿ ಹೊಡೆದಿದೆ. ಅಪಘಾತದ ರಭಸಕ್ಕೆ ಸ್ಕೂಟಿಯ ಸಹ ಸವಾರರಾಗಿದ್ದ ಗೋವಾದ ಮೊಹಮ್ಮದ್ ಇಜಾಜ್ (18) ಅವರು ಸ್ಥಳದಲ್ಲಿಯೇ ಸಾವನಲ್ಲಿದ್ದಾರೆ. ಸ್ಕೂಟಿ ಓಡಿಸುತ್ತಿದ್ದ ಗೋವಾದ ಅಬ್ದುಲ್ ಲತೀಫ್ (22) ಅವರು ಗಂಭೀರ ಪ್ರಮಾಣದಲ್ಲಿ ಗಾಯಗೊಂಡಿದ್ದಾರೆ. ಅವರನ್ನು 108 ಆಂಬುಲೆನ್ಸಿನ ಮೂಲಕ ಗೋವಾ ಆಸ್ಪತ್ರೆಗೆ ಸಾಗಿಸಲಾಗಿದೆ. ಅಪಘಾತದ ಬಳಿಕ ಬೊಲೆರೋ ಪಿಕಪ್ ಚಾಲಕ ಧಾರವಾಡದ ಕಡೆಗೆ ಪರಾರಿಯಾಗಲು ಯತ್ನಿಸಿದರು. ಕುಂಭಾರಡಾ ಸಮೀಪ ಬುಲೆರೋ ಟೈಯರ್ ಸ್ಪೋಟವಾಗಿ ಅವರು ಸಿಕ್ಕಿ ಬಿದ್ದರು. ಒಳ ದಾರಿಯಲ್ಲಿ ವಾಹನ ನಿಲ್ಲಿಸಿ ಟೈಯರ್ ಬದಲಿಸುತ್ತಿದ್ದ ವೇಳೆ ಪೊಲೀಸರು ಆರೋಪಿಯನ್ನು ವಶಕ್ಕೆಪಡೆದರು. ಸ್ಕೂಟಿ ಸವಾರರು ಉರುಸ್ ಕಾರ್ಯಕ್ರಮಕ್ಕಾಗಿ ಭಾನುವಾರ ಹುಲಗೂರಿಗೆ ಹೋಗಿದ್ದು, ಸೋಮವಾರ ಮರಳುವಾಗ ಅವಘಡ ನಡೆದಿದೆ. ಖಾನಾಪುರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. - [ಇಂಡಿಕೇಟರ್ ಹಾಕದ ಸ್ಕೂಟಿ ಸವಾರ: ಕಾರಿನಲ್ಲಿದ್ದವರಿಂದ ಹೊಡೆದಾಟ!](https://mobiletime.in/2026/02/scooty-rider-who-didnt-use-indicator-fight-from-car-occupants/): ಸ್ಕೂಟಿ ಸವಾರ ಇಂಡಿಕೇಟರ್ ಹಾಕದೇ ಸ್ಕೂಟಿಯನ್ನು ಬಲಕ್ಕೆ ತಿರುಗಿಸಿದ ಕಾರಣ ಹೊನ್ನಾವರದ ಕಾಸರಕೋಡು ಟೊಂಕಾದ ಬಳಿ ಹೊಡೆದಾಟ ನಡೆದಿದೆ. ಕಾರಿನಲ್ಲಿದ್ದ ಕೆಲವರು ಸ್ಕೂಟಿ ಸವಾರನ ಜೊತೆ ವಾಗ್ವಾದ ನಡೆಸಿದ್ದು, ಇದೇ ವಿಷಯ ದೊಡ್ಡದಾಗಿ ಹೊಡೆದಾಟಕ್ಕೆ ಕಾರಣವಾಗಿದೆ. ಫೆಬ್ರವರಿ 8ರಂದು ಕಾಸರಕೋಡು ಟೊಂಕಾದ ಬಳಿ ಈ ಹೊಡೆದಾಟ ನಡೆದಿದೆ. ಪೊಲೀಸ್ ಸಿಬ್ಬಂದಿ ರವಿ ಹನುಮಂತ ನಾಯ್ಕ ಅವರು ಈ ಹೊಡೆದಾಟ ನೋಡಿದ್ದಾರೆ. ಹೊಡೆದಾಟ ತಪ್ಪಿಸುವ ಪ್ರಯತ್ನ ಮಾಡಿದರೂ ಅದು ಸಾಧ್ಯವಾಗಿಲ್ಲ. ಸಾರ್ವಜನಿಕ ಪ್ರದೇಶದಲ್ಲಿ ಹೊಡೆದಾಟ ನಡೆಸಿದವರ ವಿರುದ್ಧ ಅವರು ಮೇಲಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಶಿರಾಲಿ ಚಿತ್ರಾಪುರದ ಚಾಲಕ ರಾಘವೇಂದ್ರ ರಾಮಚಂದ್ರ ನಾಯ್ಕ ಹಾಗೂ ಕಾಸರಕೋಡು ಟೊಂಕಾದ ಕ್ಯಾಟರಿಂಗ್ ಕೆಲಸ ಮಾಡುವ ಮಹಮದ್ ಜುನೈದ್ ಬಾಬುಲ್ ಸಾಬ್, ಪೈಯಾಜ್ ಅಬುಕರ್ ಸಯ್ಯದ್, ಸುಲೇಮಾನ್ ಹಸನ್ ಸಾಬ್, ಜೊತೆಗೆ ಮೂರು ಜನ ಇಲ್ಲಿ ಪರಸ್ಪರ ಕೈ ಕೈ ಮಿಲಾಯಿಸಿಕೊಂಡವರಾಗಿದ್ದಾರೆ. ಸ್ಕೂಟಿ ಸವಾರ ಹಾಗೂ ಕಾರಿನಲ್ಲಿದ್ದವರ ನಡುವೆ ನಡೆದ ಹೊಡೆದಾಟಕ್ಕೆ ಮತ್ತೆ ಮೂವರು ಕೈ ಜೋಡಿಸಿದ್ದಾರೆ. ಇದರಿಂದ ಸ್ಥಳದಲ್ಲಿ ಗೊಂದಲ ವಾತಾವರಣ ಸೃಷ್ಠಿಯಾಗಿದ್ದು, ಜನರು ಆತಂಕಕ್ಕೆ ಒಳಗಾಗಿದ್ದರು. ಪೊಲೀಸ್ ಸಿಬ್ಬಂದಿ ರವಿ ನಾಯ್ಕ ಅವರು ಹೊಡೆದಾಟದಲ್ಲಿ ಭಾಗವಹಿಸಿದ ಎಲ್ಲರ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾಗಿದ್ದಾರೆ. ಅವರೆಲ್ಲರ ಹೆಸರು ಸೇರಿಸಿ ಪೊಲೀಸ್ ಪ್ರಕರಣವನ್ನು ದಾಖಲಿಸಿದ್ದಾರೆ.   - [`ಸುಯೋಗಾಶ್ರಮದಲ್ಲಿ ಸ್ಕೋಡ್‌ವೆಸ್ ಸೇವೆ'](https://mobiletime.in/2026/02/skodves-service-at-suyoga-ashram/): `ಹಿರಿಯರ ಸೇವೆ ದೇವರ ಪೂಜೆಗೆ ಸಮ’ ಎಂದು ಶಿರಸಿ ಉಪವಿಭಾಗೀಯ ದಂಡಾಧಿಕಾರಿ ಚಂದ್ರಶೇಖರ್ ಆರ್ ಜಿ ಅವರು ಹೇಳಿದ್ದಾರೆ. ಧಾರವಾಡದ ಹಿರಿಯ ನಾಗರಿಕರ ಕ್ಷೇಮಾಭಿವೃದ್ಧಿ ಸಂಸ್ಥೆಯ ರಾಜ್ಯ ಉಪಾಧ್ಯಕ್ಷ ಎಸ್ ಎಸ್ ಭಟ್ ಲೋಕೇಶ್ವರ ಅವರ ಆಶಯದಂತೆ ಸ್ಕೋಡ್‌ವೆಸ್ ಸಹಯೋಗದಲ್ಲಿ ಸುಯೋಗಾಶ್ರಮದಲ್ಲಿ ಆಯೋಜಿಸಿದ್ದ `ಹೊದೆಯಲೊಂದು ರಗ್ಗು – ಕುಡಿಯಲೊಂದು ಮಗ್ಗು’ ಎಂಬ ಕಾರ್ಯಕ್ರಮದಲ್ಲಿ ಚಂದ್ರಶೇಖರ್ ಆರ್ ಜಿ ಅವರು ಭಾಗವಹಿಸಿದ್ದಾರೆ. ಕಾರ್ಯಕ್ರಮ ಉದ್ಘಾಟಿಸಿದ ಅವರು `ಆಧುನಿಕತೆಯ ಪೈಪೋಟಿಯಲ್ಲಿ ಪ್ರತಿಭೆಗಳು ಅವಕಾಶಗಳ ಬೆನ್ನತ್ತಿ ಹೋಗುತ್ತಿರುವುದರಿಂದ ಹಿರಿಯರ ಇಳಿ ವಯಸ್ಸಿನ ಸಮಸ್ಯೆಗಳಿಗೆ ವೃದ್ಧಾಶ್ರಮಗಳು ಮಾತ್ರ ಪರಿಹಾರ ಒದಗಿಸಬಲ್ಲದು. ಹೀಗಾಗಿ ವೃದ್ಧಾಶ್ರಮಗಳ ಬಲರ್ಧನೆಗೆ ಎಲ್ಲರೂ ಕೈ ಜೋಡಿಸಬೇಕು’ ಎಂದು ಕರೆ ನೀಡಿದ್ದಾರೆ. ಸ್ಕೋಡ್‌ವೆಸ್ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ವೆಂಕಟೇಶ ನಾಯ್ಕ ಅವರು ಈ ವೇಳೆ ಸೋಲಾರ್ ದೀಪವನ್ನು ಉದ್ಘಾಟಿಸಿದ್ದಾರೆ. ನಂತರ ಮಾತನಾಡಿದ ಅವರು ಪರಿಸರ ಸ್ನೇಹಿ ಹಾಗೂ ನವೀಕರಿಸಬಹುದಾದ ಇಂಧನ ಬಳಕೆಯ ಮಹತ್ವವನ್ನು ವಿವರಿಸಿದ್ದಾರೆ. ಎಸ್. ಎಸ್. ಭಟ್ಟ ಲೋಕೇಶ್ವರ ಅವರ ಸಾಮಾಜಿಕ ಸೇವಾ ಕಾರ್ಯಗಳನ್ನು ಈ ಸಭೆ ಸ್ಮರಿಸಿದ್ದು, `ಅವರ ಇಂಥ ಪ್ರಯತ್ನಗಳು ಇತರರಿಗೆ ಮಾದರಿಯಾಗಲಿ’ ಎಂದು ಸಭೆಯಲ್ಲಿದ್ದವರು ಆಶಿಸಿದರು. ಸ್ಕೋಡ್‌ವೆಸ್ ಮುಖ್ಯ ಹಣಕಾಸು ಮತ್ತು ಆಡಳಿತಾಧಿಕಾರಿ ಸರಸ್ವತಿ ಎನ್ ರವಿ, ಯಡಳ್ಳಿ ಕಾಲೇಜಿನ ಶಿಕ್ಷಣ ಸಮಿತಿ ಅಧ್ಯಕ್ಷರಾದ ಆರ್ ವಿ ಹೆಗಡೆ ಮತ್ತು ಸುಯೋಗಾಶ್ರಮದ ಮುಖ್ಯಸ್ಥರಾದ ಲತಿಕಾ ಭಟ್ ಕಾರ್ಯಕ್ರಮದಲ್ಲಿದ್ದರು. ಸ್ಕೋಡ್‌ವೆಸ್ ಕಾರ್ಯಕ್ರಮಾಧಿಕಾರಿ ನಾರಾಯಣ ಹೆಗಡೆ ತಮ್ಮ ಜವಾಬ್ದಾರಿ ನಿಭಾಯಿಸಿದ್ದು, ಸುಯೋಗಾಶ್ರಮದ ಎಲ್ಲಾ ಹಿರಿಯ ಚೇತನರಿಗೆ ಉಚಿತವಾಗಿ ರಗ್ಗು ಮತ್ತು ಮಗ್ಗುಗಳನ್ನು ವಿತರಿಸಲಾಯಿತು. - [ಅಪಘಾತ: ಬೈಕಿನಿಂದ ಬಿದ್ದ ಯುವಕ ಸಾವು](https://mobiletime.in/2026/02/accident-young-man-dies-after-falling-from-bike/): ಯಲ್ಲಾಪುರದ ಸವಣಗೇರಿಯ ಭಾಸ್ಕರ ಮರಾಠಿ ಅವರು ಮನೆಯಲ್ಲಿ ಮಲಗಿದ್ದಾಗ ಜೋರಾಗಿ ಸದ್ದು ಕೇಳಿಸಿದೆ. ಹೊರಗೆ ಬಂದು ನೋಡಿದ ಅವರಿಗೆ ವಿಠ್ಠಲ ನಾಯ್ಕ ಅವರು ರಕ್ತದ ಮಡುವಿನಲ್ಲಿ ನರಳಾಡುತ್ತಿರುವುದು ಕಾಣಿಸಿದೆ. ವಿಠ್ಠಲ ನಾಯ್ಕ ಅವರನ್ನು ಆಸ್ಪತ್ರೆಗೆ ಸಾಗಿಸಿದರೂ ಬದುಕಿಸಿಕೊಳ್ಳಲು ಸಾಧ್ಯವಾಗಿಲ್ಲ. ಯಲ್ಲಾಪುರದ ಸವಣಗೇರಿ ಬಳಿಯ ಬೆಳಸೂರು ಕ್ರಾಸಿನ ಬಳಿ ವಿಠ್ಠಲ ದಶರಥ ನಾಯ್ಕ (26)ಅವರು ವಾಸವಾಗಿದ್ದರು. ಕೂಲಿ ಕೆಲಸ ಮಾಡಿಕೊಂಡು ಅವರು ಕುಟುಂಬ ನೋಡಿಕೊಳ್ಳುತ್ತಿದ್ದರು. ಫೆಬ್ರವರಿ 8ರಂದು ವಿಠ್ಠಲ ನಾಯ್ಕ ಅವರು ಬೈಕಿನಲ್ಲಿ ಹೋಗುತ್ತಿದ್ದರು. ಅದೇ ವೇಳೆ ಸವಣಗೇರಿಯ ಚಾಲಕ ಭಾಸ್ಕರ ನಾಗೇಶ ಮರಾಠಿ ಅವರು ಮನೆಯಲ್ಲಿ ಮಲಗಿದ್ದರು. ಭಾಸ್ಕರ ಮರಾಠಿ ಅವರಿಗೆ ದೊಡ್ಡದಾಗಿ ಶಬ್ದವೊಂದು ಕೇಳಿದ್ದು, ನಿದ್ದೆಯಿಂದ ಎದ್ದ ಭಾಸ್ಕರ್ ಮರಾಠಿ ಅವರು ಮನೆಯಿಂದ ಹೊರಗೆ ಬಂದರು. ಆ ವೇಳೆ, ವಿಠ್ಠಲ ಮರಾಠಿ ಅವರು ರಕ್ತದ ಮಡುವಿನಲ್ಲಿ ಬಿದ್ದಿದ್ದರು. ಇದನ್ನು ನೋಡಿದ ಭಾಸ್ಕರ ಮರಾಠಿ ಅವರು ತಕ್ಷಣ ಮಂಜುನಾಥ ಕೇಶವ ನಾಯ್ಕ ಅವರಿಗೆ ಫೋನ್ ಮಾಡಿದರು. ಮಂಜುನಾಥ ನಾಯ್ಕ ಅವರು 108ಗೆ ಫೋನ್ ಮಾಡಿದ್ದು, ಆಂಬುಲೆನ್ಸ ಮೂಲಕ ವಿಠ್ಠಲ ನಾಯ್ಕ ಅವರನ್ನು ಆಸ್ಪತ್ರೆಗೆ ಸೇರಿಸಲಾಯಿತು. ಅಲ್ಲಿ ತಪಾಸಣೆ ನಡೆಸಿದ ವೈದ್ಯರು ವಿಠ್ಠಲ ನಾಯ್ಕ ಅವರು ಸಾವನಪ್ಪಿರುವುದನ್ನು ಘೋಷಿಸಿದರು. ಅಪರಿಚಿತ ವಾಹನಬಡಿದು ವಿಠ್ಠಲ ನಾಯ್ಕ ಅವರು ಬೈಕಿನಿಂದ ಬಿದ್ದ ಅನುಮಾನವ್ಯಕ್ತವಾಗಿದೆ. ಸದ್ಯ ವಿಠ್ಠಲ ನಾಯ್ಕ ಅವರ ದೇಹವನ್ನು ಶವಾಗಾರದಲ್ಲಿರಿಸಿದ್ದು, ಭಾಸ್ಕರ ಮರಾಠಿ ಅವರು ನೀಡಿದ ಮಾಹಿತಿ ಅನ್ವಯ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. - [ಮದುವೆಗೆ ಹೆದರಿ ಮೊಬೈಲ್ ಮಾರಿದ: ಕಾರ್ಖಾನೆಯಲ್ಲಿ ಅಡಗಿದವ ಕುಟುಂಬ ಸೇರಿದ!](https://mobiletime.in/2026/02/fearing-marriage-he-sold-his-mobile-phone-the-man-who-hid-in-the-factory-was-reunited-with-his-family/): ಬಂಗಾರ ಖರೀದಿಸಲು ಕುಟುಂಬದ ಜೊತೆ ಭಟ್ಕಳಕ್ಕೆ ಬಂದಿದ್ದ ಕುಮಟಾದ ಮಧುಮಗ ಕಾಣೆಯಾಗಿದ್ದು, ಪೊಲೀಸರು ಹರಸಾಹಸದಿಂದ ಜಾಕೀರ ಬೇಗ್ ಅವರನ್ನು ಹುಡುಕಿದ್ದಾರೆ. ಮದುವೆಗಾಗಿ ಚಿನ್ನ ಖರೀದಿಸಿಲು ಹೋಗಿ ಕಣ್ಮರೆಯಾಗಿದ್ದ ಜಾಕೀರ ಬೇಗ್ ಸರಿ ಸುಮಾರು ಐದು ತಿಂಗಳ ನಂತರ ಪತ್ತೆಯಾಗಿದ್ದಾರೆ. ಕುಮಟಾದ ಜಾಕೀರ ಬೇಗ್ (33) ಅವರು ವಿದೇಶದಲ್ಲಿ ಕೆಲಸಕ್ಕಿದ್ದರು. ಊರಿಗೆ ಬಂದ ಅವರಿಗೆ ಮದುವೆ ಮಾಡಿಸುವ ಮಾತುಕತೆ ನಡೆದಿತ್ತು. ಮದುವೆಗಾಗಿ ಚಿನ್ನ ಖರೀದಿಸಲು ಅವರು ಭಟ್ಕಳಕ್ಕೆ ಹೋಗಿದ್ದರು. ಅಲ್ಲಿ ಮಸೀದಿಗೆ ಹೋಗಿ ಬರುವೆ ಎಂದು ಹೊರಟಿದ್ದ ಜಾಕೀರ್ ಬೇಗ್ ಕಾಣೆಯಾಗಿದ್ದರು. ಈ ಬಗ್ಗೆ ಪ್ರಕರಣ ದಾಖಲಿಸಿದ ಪೊಲೀಸರು ಎಲ್ಲಾ ಕಡೆ ಶೋಧ ನಡೆಸಿದ್ದರು. ಆದರೆ, ಕಾಣೆಯಾದ ಯುವಕನ ಸುಳಿವೇ ಸಿಕ್ಕಿರಲಿಲ್ಲ. ಅಕ್ಟೋಬರ್ 18ರಿಂದ ಜಾಕೀರ ಅವರಿಗಾಗಿ ಹುಡುಕಾಟ ನಡೆದಿದ್ದು, ಸಂಬAಧಿಕರು-ಪರಿಚಿತರ ಮನೆಯಲ್ಲಿ ಹುಡುಕಿದರೂ ಪ್ರಯೋಜನವಾಗಿರಲಿಲ್ಲ. ಮೊಬೈಲ್ ಸಹ ಸ್ವಿಚ್ ಆಫ್ ಆಗಿದ್ದರಿಂದ ಎಲ್ಲರೂ ಆತಂಕಕ್ಕೆ ಒಳಗಾಗಿದ್ದರು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ಆರಂಭಿಸಿದ್ದ ಪೊಲೀಸರು ತಾಂತ್ರಿಕ ಜಾಡು ಹಿಡಿದಾಗ ಸಿಕ್ಕ ಸುಳಿವು ರೋಚಕವಾಗಿತ್ತು. ನಾಪತ್ತೆಯಾದ ಜಾಕೀರ ಅವರು ತಾವು ಬಳಸುತ್ತಿದ್ದ ಮೊಬೈಲ್ ಫೋನ್ ಮಾರಾಟ ಮಾಡಿರುವುದು ಗಮನಕ್ಕೆ ಬಂದಿತು. ಇದರ ಜಾಡು ಹಿಡಿದು ಹೊರಟ ಇನ್ಸಪೆಕ್ಟರ್ ದಿವಾಕರ್ ಪಿ ಎಂ ಹಾಗೂ ಪಿಸೈ ನವೀನ ನಾಯ್ಕ ನೇತೃತ್ವದ ವಿಶೇಷ ತಂಡ ತುಮಕೂರಿನಲ್ಲಿ ಶೋಧ ನಡೆಸಿದಾಗ ಅಲ್ಲಿನ ಪ್ಯಾಕ್ಟರಿಯೊಂದರಲ್ಲಿ ಜಾಕೀರ್ ಸಿಕ್ಕಿ ಬಿದ್ದರು. ಅಲ್ಲಿ ಕೆಲಸಕ್ಕೆ ಸೇರಿದ್ದ ಜಾಕೀರ್ ಅವರನ್ನು ಪೊಲೀಸರು ಕುಟುಂಬದವರಿಗೆ ಹಸ್ತಾಂತರಿಸಿದರು. ವಿದೇಶದಿಂದ ಮರಳಿ, ಮದುವೆ ಸಡಗರದಲ್ಲಿದ್ದ ಯುವಕ ದಿಢೀರ್ ಆಗಿ ಕಾರ್ಖಾನೆಯ ಕೂಲಿಯಾಳಾಗಿರುವದರ ಹಿಂದಿನ ರಹಸ್ಯ ಗೊತ್ತಾಗಿಲ್ಲ. - [ನೊಂದವರಿಗೆ ನ್ಯಾಯ ಕೊಡಿಸುವ ಸರ್ಕಾರಿ ಅಭಿಯೋಜಕ](https://mobiletime.in/2026/02/a-government-prosecutor-who-brings-justice-to-the-aggrieved/): ಕಳೆದ ಐದು ವರ್ಷದ ಅವಧಿಯಲ್ಲಿ ಶಿರಸಿ ನ್ಯಾಯಾಲಯ 50ಕ್ಕೂ ಅಧಿಕ ಪ್ರಕರಣದಲ್ಲಿ ಶಿಕ್ಷೆ ಪ್ರಕಟಿಸಿದೆ. ತಪ್ಪು ಮಾಡಿದವರಿಗೆ ಶಿಕ್ಷೆ ಕೊಡಿಸುವಲ್ಲಿ ಸರ್ಕಾರಿ ಅಭಿಯೋಜಕ ರಾಜೇಶ ಮಳಗಿಕರ್ ಅವರು ಪ್ರಮುಖ ಪಾತ್ರ ನಿಭಾಯಿಸಿದ್ದಾರೆ. ಮುಂಡಗೋಡಿನ ಜನಮೆಚ್ಚಿದ ಶಿಕ್ಷಕ ಎಂ ಎಫ್ ಮಳಗಿಕರ್ ಅವರ ಪುತ್ರರಾಗಿರುವ ರಾಜೇಶ ಮಳಗಿಕರ್ ಅವರಿಗೆ ಉಪನ್ಯಾಸಕರಾಗಬೇಕು ಎಂಬ ಕನಸಿತ್ತು. ತಂದೆ ಮರಣದ ನಂತರ ದೂರದ ಊರಿನ ಶಿಕ್ಷಣ ಅವರಿಗೆ ಸವಾಲಾಯಿತು. ಹೀಗಾಗಿ ಶಿರಸಿಯಲ್ಲಿ ರಾಜೇಶ ಮಳಗಿಕರ್ ಅವರು ಕಾನೂನು ಪದವಿ ಪೂರೈಸಿದ್ದು, ಅದಾದ ನಂತರ ಹಾವೇರಿಯ ಹಾನಗಲ್’ಗೆ ಹೋಗಿ ವಕೀಲ ವೃತ್ತಿ ಜೀವನ ಶುರು ಮಾಡಿದರು. ಅದಾದ ನಂತರ ಅಲ್ಲಿನ ಕಾನೂನು ಸೇವಾ ಸಮಿತಿ ಸದಸ್ಯರಾಗಿ ನೇಮಕವಾದರು. ನೊಂದವರಿಗೆ ನೆರವು ನೀಡುವ ಅವರ ಜನಪರ ನಿಲುವು ಕಕ್ಷಿದಾರರನ್ನು ಆಕರ್ಷಿಸಿತು. ತಾಳ್ಮೆಯಿಂದ ಸಮಸ್ಯೆ ಆಲಿಸಿ ಅದಕ್ಕೆ ಪರಿಹಾರ ಒದಿಗಿಸಿಕೊಡುವ ಮಾರ್ಗವೂ ರಾಜೇಶ ಮಳಗಿಕರ್ ಅವರನ್ನು ಮುನ್ನಡೆಸಿತು. ವಕೀಲ ವೃತ್ತಿ ಶುರು ಮಾಡಿದ ಕೆಲವೇ ವರ್ಷಗಳಲ್ಲಿ ರಾಜೇಶ ಮಳಗಿಕರ್ ಅವರು ಪ್ರಸಿದ್ಧಿಪಡೆದಿದ್ದರು. ತಮ್ಮ ಅನುಭವ, ಅಂತರಾಳದ ಕೌಶಲ್ಯ ಹಾಗೂ ತಪ್ಪಿತಸ್ಥರನ್ನು ತಕ್ಷಣ ಗುರುತಿಸುವ ಚಾಣಾಕ್ಷತನದಿಂದ ಅವರು ಹೆಸರು ಮಾಡಿದ್ದರು. ಈ ನಡುವೆ ಸರ್ಕಾರಿ ಅಭಿಯೊಜಕ ಹುದ್ದೆಗೆ ಅರ್ಜಿ ಕರೆಯಲಾಗಿದ್ದು, ತಮ್ಮ ಅದೃಷ್ಟ ಪರೀಕ್ಷೆಗಾಗಿ ರಾಜೇಶ ಮಳಗಿಕರ್ ಅವರು ಅರ್ಜಿ ಹಾಕಿದರು. ಲಿಖಿತ ಪರೀಕ್ಷೆ, ಸಂದರ್ಶನ ಎದುರಿಸಿದ ನಂತರ ರಾಜೇಶ ಮಳಗಿಕರ್ ಅವರ ಪ್ರತಿಭೆಗೆ ಸರ್ಕಾರ ವೇದಿಕೆ ಕಲ್ಪಿಸಿತು. ಧಾರವಾಡ, ಗದಗ, ಲಕ್ಷಿಶ್ವರ, ಕುಂದಗೋಳ, ಮಂಗಳೂರು ಹಾಗೂ ಬೆಂಗಳೂರಿನಲ್ಲಿ ಸರ್ಕಾರಿ ಅಭಿಯೋಜಕರಾಗಿ ಸೇವೆ ಸಲ್ಲಿಸಿದ ನಂತರ ರಾಜೇಶ ಮಳಗಿಕರ್ ಅವರು ಶಿರಸಿಗೆ ಬಂದರು. 2021ರಲ್ಲಿ ಶಿರಸಿ ನ್ಯಾಯಾಲಯದಲ್ಲಿ ಅವರು ಕರ್ತವ್ಯ ಶುರು ಮಾಡಿದ್ದು, ಈವರೆಗೆ 52 ಪ್ರಕರಣಗಳಲ್ಲಿ ಅವರು ಅಪರಾಧಿಗಳಿಗೆ ಶಿಕ್ಷೆ ವಿಧಿಸಿದ್ದಾರೆ. ರಾಜೇಶ ಮಳಗಿಕರ್ ಅವರಿಗೆ `ಉಪನ್ಯಾಸಕನಾಗಬೇಕು’ ಎಂಬ ಬಾಲ್ಯದ ಕನಸು ಹಾಗೇ ಇತ್ತು. ಹೀಗಾಗಿ ಸರ್ಕಾರಿ ಅಭಿಯೋಜಕರಾಗಿದ್ದ ಅವರು ಸರ್ಕಾರಿ ಅಧಿಕಾರಿಗಳಿಗೆ ಪಾಠ ಮಾಡಲು ಶುರು ಮಾಡಿದರು. ಶಾಲಾ-ಕಾಲೇಜುಗಳಿಗೆ ತೆರಳಿ ಕಾನೂನು ತಿಳುವಳಿಕೆ ಮೂಡಿಸುವ ಆಂದೋಲನ ನಡೆಸಿದರು. ಸರ್ಕಾರಿ ಸಿಬ್ಬಂದಿಗೆ ಅಗತ್ಯವಾಗಿ ಅನುಸರಿಸಬೇಕಾದ ನೀತಿ-ನಿಯಮಗಳ ಬಗ್ಗೆ ಅವರು ಮಾಹಿತಿ ನೀಡಿದರು. ತಮ್ಮಲ್ಲಿರುವ ಕಾನೂನು ಜ್ಞಾನವನ್ನು ಉಪನ್ಯಾಸದ ಮೂಲಕ ಎಲ್ಲಾ ಕಡೆ ಪಸರಿಸುವ ಕಾಯಕ ನಡೆಸಿದರು. ನ್ಯಾಯಾಲಯದಲ್ಲಿಯೂ ಅಷ್ಟೇ, ನೇರವಾಗಿ ಸಾಕ್ಷಿ ಲಭ್ಯವಿಲ್ಲದಿದ್ದರೂ ಸಾಂದರ್ಭಿಕ ಸಾಕ್ಷಿ ಆಧಾರದಲ್ಲಿ ಅವರು ವಾದ ಮಾಡುತ್ತಾರೆ. ಉಪನ್ಯಾಸಕರ ಮಾದರಿಯಲ್ಲಿ ಸಾಕ್ಷಿಸಹಿತ ವಿವರಿಸಿ ಮನವರಿಕೆ ಮಾಡುತ್ತಿದ್ದಾರೆ. ಬೇರೆ ಬೇರೆ ನ್ಯಾಯಾಲಯದಲ್ಲಿನ ವಿಚಾರಣೆ ಹಾಗೂ ತೀರ್ಪುಗಳ ಬಗ್ಗೆ ಉಲ್ಲೇಖಿಸಿ ಅವರು ತಮ್ಮ ಕಕ್ಷಿದಾರರರಿಗೆ ನ್ಯಾಯ ಕೊಡಿಸುವ ಪ್ರಯತ್ನ ಮಾಡುತ್ತಾರೆ. ಸುಳ್ಳು ಸಾಕ್ಷಿ ಹೇಳಿದವರನ್ನು ಸಹ ರಾಜೇಶ ಮಳಗಿಕರ್ ಅವರು ಸುಮ್ಮನೆ ಬಿಟ್ಟಿಲ್ಲ. ಮೊದಲು ಅಪರಾಧ ಕೃತ್ಯ ನೋಡಿರುವುದಾಗಿ ಹೇಳಿಕೆ ನೀಡಿ, ನಂತರ ಹೇಳಿಕೆ ತಿರುಚಿದವರನ್ನು ಸಹ ಸುಧೀರ್ಘ ವಿಚಾರಣೆ ನಡೆಸಿ ಅವರಿಂದ ಸತ್ಯಾಂಶ ಬಾಯ್ಬಿಡಿಸಿದ ಅನೇಕ ಉದಾಹರಣೆಗಳಿವೆ. ಪ್ರತಿಕೂಲ ಸಾಕ್ಷಿ ನುಡಿದ 25ಕ್ಕೂ ಅಧಿಕ ಜನರ ವಿರುದ್ಧ ಪಾಟಿ ಸವಾಲು ಹಾಕಿ ಸತ್ಯ ಹೊರತಂದಿದ್ದಾರೆ. ರಾಜೇಶ ಮಳಗಿಕರ್ ಅವರು ಯಾವುದೇ ದೂರಾದರೂ ಮೊದಲು ಆ ದೂರಿನ ಸತ್ಯಾಸತ್ಯತೆ ಅರಿಯುತ್ತಾರೆ. ನಂತರ ಅದಕ್ಕೆ ಸಂಬAಧಿಸಿದ ದಾಖಲೆ ನೋಡಿ ವಾದ ಮಂಡಿಸುತ್ತಾರೆ. ಕೆಳ ನ್ಯಾಯಾಲಯದಲ್ಲಿ ನ್ಯಾಯ ಸಿಗದೇ ಇದ್ದರೆ ಮೇಲಿನ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಿ ನೊಂದವರಿಗೆ ನ್ಯಾಯ ಕೊಡಿಸುತ್ತಿದ್ದಾರೆ. ಅತ್ಯಂತ ಕ್ಲಿಷ್ಟಕರ ಪ್ರಕರಣಗಳನ್ನು ಸಹ ನಿರಂತರ ಅಧ್ಯಯನ, ಸಮರ್ಥ ವಾದದಿಂದ ಅವರು ಗೆದ್ದಿದ್ದಾರೆ. ಸಾಕ್ಷಿ ಕೊರತೆ ಕಾರಣದಿಂದ ಶಿಕ್ಷೆಯಿಂದ ತಪ್ಪಿಸಿಕೊಳ್ಳುತ್ತಿದ್ದ ಆರೋಪಿಗಳನ್ನು ಸಹ ಸಾಂದರ್ಭಿಕ ಸಾಕ್ಷಿಗಳಲ್ಲಿ ಸಿಲುಕಿಸಿ ವಾದ ಮಾಡಿದ್ದಾರೆ. ದಾಂಡೇಲಿ ನ್ಯಾಯವಾದಿ ಅಜೀತ ನಾಯಕ ಹಾಗೂ ಅರಣ್ಯಾಧಿಕಾರಿ ಮಧನ ನಾಯಕ ಕೊಲೆ ಪ್ರಕರಣ, ಮುಂಡಗೋಡು ಟಿಬೇಟಿಯನ್ ಕ್ಯಾಂಪಿನ ದರೋಡೆ ಪ್ರಕರಣ, ಶ್ರೀಗಂಧ ಕಳ್ಳತನ ಪ್ರಕರಣ, ಹಳಿಯಾಳದ ಅರಣ್ಯ ವೀಕ್ಷಕನ ಕೊಲೆ ಪ್ರಕರಣ, ಸಿದ್ದಾಪುರದ ಹಿರೆಕೈ ಕೊಲೆ ಪ್ರಕರಣ, ಬಿಜೆಪಿ ಮುಖಂಡನ ಕೊಲೆ ಪ್ರಕರಣದಲ್ಲಿ ಎಸ್ ಡಿ ಪಿ ಐ ಬೆಂಬಲಿತರಿಗೆ ಶಿಕ್ಷೆ ಸೇರಿ ಉತ್ತರ ಕನ್ನಡ ಜಿಲ್ಲೆಯ 52 ಪ್ರಕರಣಗಳಲ್ಲಿ ಅವರು ತಪ್ಪಿತಸ್ಥರಿಗೆ ಶಿಕ್ಷೆ ಕೊಡಿಸಿದ್ದಾರೆ. ಅವರ ಈ ಪ್ರಾಮಾಣಿಕ ಸೇವೆಗೆ ಹತ್ತು-ಹಲವು ಪ್ರಶಸ್ತಿಗಳು ಸಿಕ್ಕಿವೆ.   - [ಸಾಮಾಜಿಕ ಕಾರ್ಯಕರ್ತನ ಧಾರ್ಮಿಕ ಚಿಂತನೆ: ದಿವ್ಯ ದೇಗುಲ ನಿರ್ಮಾಣಕ್ಕೆ ಸಂಕಲ್ಪ](https://mobiletime.in/2026/02/religious-thought-of-a-social-worker-a-will-to-build-a-divine-temple/): ಶಿರಸಿಯ ಬ್ಯಾಗದ್ದೆಯಲ್ಲಿ ಸೋದೆ ಅರಸರ ಕಾಲದಲ್ಲಿದ್ದ ಶ್ರೀ ಉಮಾಮಹೇಶ್ವರ ದೇವಾಲಯದ ಪುನರ್ ನಿರ್ಮಾಣಕ್ಕೆ ಸಾಮಾಜಿಕ ಕಾರ್ಯಕರ್ತ ಅನಂತಮೂರ್ತಿ ಹೆಗಡೆ ಸಂಕಲ್ಪ ಮಾಡಿದ್ದಾರೆ. 500 ವರ್ಷಕ್ಕೂ ಹಳೆದ ದೇಗುಲದ ಜೀರ್ಣೋದ್ಧಾರಕ್ಕಾಗಿ ಅವರು ಶ್ರಮಿಸುತ್ತಿದ್ದು, ಇದಕ್ಕಾಗಿ ಭೂಮಿ ಪೂಜೆ ನೆರವೇರಿಸಿದ್ದಾರೆ. ಬ್ಯಾಗದ್ದೆಯಲ್ಲಿರುವ ಉಮಾಮಹೇಶ್ವರ ದೇವಾಲಯ ಅತ್ಯಂತ ಶಕ್ತಿಪೀಠಗಳಲ್ಲಿ ಒಂದಾಗಿದೆ. ಇಲ್ಲಿ ಶೀಘ್ರ ಪ್ರಸಾದ ಸ್ವರೂಪಿ ಉಮಾಮಹೇಶ್ವರ ದೇವರ ಜೊತೆಗೆ ಪಾರ್ವತಿ ದೇವಿ, ಗಣಪತಿ, ಲಕ್ಷ್ಮೀನಾರಾಯಣ, ಆಂಜನೇಯ ದೇವರ ಸಾನಿಧ್ಯವಿದೆ. ಮಹಾಶಿವರಾತ್ರಿಯಲ್ಲಿ ವಿಶೇಷ ಧಾರ್ಮಿಕ ಕಾರ್ಯಕ್ರಮಗಳು ಇಲ್ಲಿ ನಡೆಯುತ್ತವೆ. ಭಕ್ತರ ಮನದಾಸೆಯನ್ನು ಈಡೇರಿಸುವ ಉಮಾಮಹೇಶ್ವರ ದೇವರಿಗೆ ಸುತ್ತಲಿನ ಅನೇಕ ಭಕ್ತರು ನಡೆದುಕೊಳ್ಳುತ್ತಾರೆ. ಅನೇಕ ವರ್ಷಗಳಿಂದ ಈ ದೇವಾಲಯ ಪುನರ್ ನಿರ್ಮಾಣಕ್ಕೆ ಜನ ಪ್ರಯತ್ನಿಸುತ್ತಿದ್ದರು. ಆದರೆ, ಅದು ಸಾಧ್ಯವಾಗಿರಲಿಲ್ಲ. ದೇವಾಲಯ ಶಿಥಿಲವಾಗಿದ್ದು, ಆ ಬಗ್ಗೆ ಊರಿನವರು ಅನಂತಮೂರ್ತಿ ಹೆಗಡೆ ಅವರ ಗಮನಕ್ಕೆ ತಂದಿದ್ದರು. ದೇವಾಲಯ ಅಭಿವೃದ್ಧಿಗೆ ಕೈ ಜೋಡಿಸುವಂತೆ ಊರಿನವರು ಮನವಿ ಮಾಡಿದ್ದು, ಹುಟ್ಟೂರಿನ ದೇಗುಲ ಪುನರ್ ನಿರ್ಮಾಣಕ್ಕೆ ಅನಂತಮೂರ್ತಿ ಹೆಗಡೆ ಅವರು ಸಂಕಲ್ಪ ಮಾಡಿದರು. ಅದರ ಮುಂದುವರೆದ ಭಾಗವಾಗಿ ಊರಿನವರ ಸಹಕಾರದಲ್ಲಿ ದೇಗುಲ ಜೀರ್ಣೋದ್ಧಾರಕ್ಕಾಗಿ ಅನಂತಮೂರ್ತಿ ಹೆಗಡೆ ಮುಂದಾಗಿದ್ದಾರೆ.   - [ಬ್ರಾಹ್ಮಣ ದ್ವೇಷಿ ಪತ್ರಕರ್ತನಿಗೆ ಮಂಡೆಬಿಸಿ!](https://mobiletime.in/2026/02/a-brahmin-hating-journalist-was-fired/): ಸಾಮಾಜಿಕ ಜಾಲತಾಣಗಳಲ್ಲಿ ಬ್ರಾಹ್ಮಣರ ಬಗ್ಗೆ ಅವಹೇಳನ ಮಾಡುತ್ತಿದ್ದ ಸಿದ್ದಾಪುರದ ಪತ್ರಕರ್ತ ಕೋಲಸಿರ್ಸಿ ಕನ್ನೇಶ ಅವರಿಗೆ ತಲೆಬಿಸಿ ಶುರುವಾಗಿದೆ. ವೈದಿಕರ ಬಗ್ಗೆ ನಿಂದನಿಯ ಬರಹ ಪ್ರಕಟಿಸಿದ್ದ ಕಾರಣ ಸಿದ್ದಾಪುರ ಪೊಲೀಸರು ಕನ್ನೇಶ ನಾಯ್ಕ ಅವರ ವಿರುದ್ಧ ಕಾನೂನು ಕ್ರಮ ಜರುಗಿಸಿದ್ದಾರೆ. ಕನ್ನೇಶ ನಾಯ್ಕ ಅವರು ಪ್ರತಿಷ್ಠಿತ ಸುದ್ದಿ ವಾಹಿನಿಯೊಂದರ ವರದಿಗಾರರಾಗಿದ್ದರು. ಆ ವಾಹಿನಿ ತೊರೆದ ನಂತರ `ಸಮಾಜಮುಖಿ’ ಎಂಬ ಹೆಸರಿನಲ್ಲಿ ಸ್ವತಂತ್ರ ಪತ್ರಿಕೋದ್ಯಮ ಶುರು ಮಾಡಿದ್ದರು. ಅದೇ ಹೆಸರಿನ ಫೇಸ್ಬುಕ್ ಪುಟದಲ್ಲಿ ಅವರು ಆಗಾಗ ಬ್ರಾಹ್ಮಣರ ವಿರುದ್ಧ ಬರಹಗಳನ್ನು ಪ್ರಕಟಿಸುತ್ತಿದ್ದರು. ಕೊಲೆ ಆರೋಪದ ಅಡಿ ಜೈಲು ಪಾಲಾಗಿರುವ ಜ್ಯೋತಿಷಿ ಕಮಲಾಕರ ಭಟ್ಟರ ವಿರುದ್ಧ ಕನ್ನೇಶ ನಾಯ್ಕ ಅವರು ಮಾಹಿತಿ ಪ್ರಸಾರ ಮಾಡಿದ್ದು, ಇದರೊಂದಿಗೆ ಬ್ರಾಹ್ಮಣ ಸಮುದಾಯದ ವಿರುದ್ಧ ಅಸಂಬದ್ಧ ಪದ ಪ್ರಯೋಗ ಮಾಡಿದ್ದರು. ಬ್ರಾಹ್ಮಣರ ಜುಟ್ಟು ಹಾಗೂ ಜನಿವಾರದ ಬಗ್ಗೆ ಕನ್ನೇಶ ನಾಯ್ಕ ಅವರು ಕೆಟ್ಟದಾಗಿ ಬರೆದಿದ್ದರು. `ಜುಟ್ಟು ಜನಿವಾರ ಕಿತ್ತು ಮಧ್ಯ ಎಶಿಯಾಗೆ ಪಾರ್ಸಲ್ ಮಾಡಬೇಕು. ಬಿಜೆಪಿ ಬೆಂಬಲಿಗ ಹಗಲು ದರೋಡೆಕೋರರನ್ನು ಜೀವಂತವಾಗಿ ದಹಿಸಬೇಕು’ ಎಂಬುದನ್ನು ಸೇರಿ `ಕಮಲಾಕರ ಭಟ್ಟ ಅವರ ಗುರು’ ಎಂದು ಬಿಂಬಿಸಿದ್ದರು. ಜೊತೆಗೆ `ದೇಶಕ್ಕೆ ಕಂಟಕ’ ಎಂಬ ನಿಟ್ಟಿನಲ್ಲಿ ತಮ್ಮ ಬರಹವನ್ನು ಪ್ರಸಾರ ಮಾಡಿದ್ದರು. ಕಮಲಾಕರ ಭಟ್ಟರ ಪ್ರಕರಣ ಮುಖ್ಯವಾಗಿಸಿಕೊಂಡು ಆರ್ ಎಸ್ ಎಸ್, ಬಿಜೆಪಿ ಹಾಗೂ ಬ್ರಾಹ್ಮಣರ ವಿರುದ್ಧ ಕಿಡಿಕಾರಿದ್ದರು.. ಫೇಸ್ಬುಕ್ ಮೂಲಕ ಹರಿದಾಡಿದ ಈ ಬರಹವನ್ನು ಫೆಬ್ರವರಿ 6ರಂದು ಪೊಲೀಸ್ ಸಿಬ್ಬಂದಿ ಮೋಹನ ಗಾವಡಿ ಅವರು ಗಮನಿಸಿದರು. ಪೊಲೀಸ್ ಸಿಬ್ಬಂದಿ ಪ್ರಶಾಂತಕುಮಾರ ಬಿ ಅವರಿಗೆ ಮೋಹನ ಗಾವಡಿ ಅವರು ಈ ವಿಷಯ ತಿಳಿಸಿದರು. ಈ ನಡುವೆ ಕನ್ನೇಶ ನಾಯ್ಕ ಅವರ ಬರಹಕ್ಕೆ ಕೆಲವರು ವಿರುದ್ಧವಾಗಿ ಕಮೆಂಟ್ ಮಾಡಿದ್ದು, ಕಮೆಂಟ್ ಮಾಡಿದವರ ವಿರುದ್ಧ ದೂರು ನೀಡಲು ಕನ್ನೇಶ ನಾಯ್ಕ ಅವರು ಪೊಲೀಸ್ ಠಾಣೆಗೆ ಹೋಗಿದ್ದರು. ಈ ವೇಳೆ ಜಾತಿಯ ಬಗ್ಗೆ ಕೆಟ್ಟದಾಗಿ ನಿಂದಿಸಿ ದ್ವೇಷ ಭಾವನೆ ಮೂಡಿಸಲು ಪ್ರಯತ್ನಿಸಿದ್ದ ಕನ್ನೇಶ ನಾಯ್ಕ ವಿರುದ್ಧವೇ ಪೊಲೀಸರು ಕ್ರಮ ಜರುಗಿಸಿದರು. ಸದ್ಯ, ಬ್ರಾಹ್ಮಣರ ಬಗ್ಗೆ ಕೆಟ್ಟದಾಗಿ ಬರಹ ಪ್ರಕಟಿಸಿ ಗಲಭೆ ಸೃಷ್ಠಿಸಲು ಪ್ರಯತ್ನಿಸಿದ ಕಾರಣ ಕನ್ನೇಶ ನಾಯ್ಕ ಅವರ ವಿರುದ್ಧ ಪೊಲೀಸ್ ಪ್ರಕರಣ ದಾಖಲಾಗಿದೆ. ದ್ವೇಷದ ಬರಹ ಪ್ರಕಟಿಸಿ ಕಾನೂನು ಸುವ್ಯವಸ್ಥೆಗೆ ಧಕ್ಕೆತರಲು ಪ್ರಯತ್ನಿಸಿದ ಆರೋಪದ ಅಡಿ ಪೊಲೀಸರು ಕಠಿಣ ಕ್ರಮಕ್ಕೆ ಮುಂದಾಗಿದ್ದಾರೆ. - [ವಿದೇಶಿ ಸಂಸ್ಕೃತಿಯಿoದ ದೂರವಿರೋಣ: ಹಿಂದುತ್ವಕ್ಕಾಗಿ ಹೋರಾಡೋಣ](https://mobiletime.in/2026/02/lets-stay-away-from-foreign-culture-lets-fight-for-hindutva/): `ವಿದೇಶಿ ಸಂಸ್ಕೃತಿಯ ಆರಾಧನೆಯಿಂದ ಹಿಂದು ಪರಂಪರೆ, ಆಚಾರ-ವಿಚಾರಗಳು ಅವನತಿಯ ಕಡೆ ಸಾಗುತ್ತಿದೆ’ ಎಂದು ಸಿದ್ದಾಪುರದ ಶ್ರೀ ಮನ್ನಲೆಮಾವು ಮಠ ಶ್ರೀ ಶ್ರೀಮಾಧವಾನಂದ ಭಾರತಿ ಶ್ರೀಗಳು ಕಳವಳವ್ಯಕ್ತಪಡಿಸಿದ್ದಾರೆ. ಅಂಕೋಲಾ ಅಲಗೇರಿಯಲ್ಲಿ ನಡೆದ ಹಿಂದು ಸಮಾಜೋತ್ಸವದಲ್ಲಿ ಆಶೀರ್ವಚನ ನೀಡಿದ ಅವರು `ವಿದೇಶಿ ಸಂಸ್ಕೃತಿಯ ಅತಿಯಾದ ಪ್ರಭಾವದಿಂದ ನಮ್ಮ ಪಾರಂಪರಿಕ ಆಚಾರ, ವಿಚಾರಗಳು ನಿಧಾನವಾಗಿ ಮರೆಯಾಗುತ್ತಿದೆ. ಹಿಂದು ಸಂಸ್ಕೃತಿ ಉಳಿಸಲು ಎಲ್ಲರೂ ಪಣತೊಡಬೇಕು’ ಎಂದು ಕರೆ ನೀಡಿದ್ದಾರೆ. `ಯಾವುದು ಕೆಟ್ಟದು, ಯಾವುದು ಅಧರ್ಮ, ಯಾವುದು ಸರಿಯಾದ ಮಾರ್ಗವಲ್ಲ ಎಂಬುದನ್ನು ಪ್ರತಿಯೊಬ್ಬರು ಅರಿಯಬೇಕು. ಕೆಟ್ಟದನ್ನು ತ್ಯಜಿಸುವವನೇ ನಿಜವಾದ ಹಿಂದು ಎಂದು ಅರಿತು ಜೀವನ ನಡೆಸಬೇಕು’ ಎಂದವರು ಕಿವಿಮಾತು ಹೇಳಿದ್ದಾರೆ. `ನಮ್ಮ ಪೂರ್ವಜರು ಹಾಕಿಕೊಟ್ಟ ಸನ್ಮಾರ್ಗದಲ್ಲಿ ನಡೆಯುವುದು ನಮ್ಮ ಕರ್ತವ್ಯ. ಆಧುನಿಕ ಜೀವನದ ಒತ್ತಡ ಎಷ್ಟೇ ಇದ್ದರೂ, ಮನೆಯಲ್ಲೊಂದು ದೀಪ ಹಚ್ಚುವುದು, ದೇವಸ್ಥಾನಕ್ಕೆ ತೆರಳುವುದು, ಸಂಜೆಯ ಹೊತ್ತಿನಲ್ಲಿ ಭಜನೆ ಮಾಡುವಂತಹ ಪವಿತ್ರ ಆಚರಣೆಗಳನ್ನು ಎಂದಿಗೂ ಬಿಡಬಾರದು’ ಎಂದವರು ಹೇಳಿದ್ದಾರೆ. `ಇಂದಿನ ದಿನಗಳಲ್ಲಿ ಸಂಜೆ ಆರು ಗಂಟೆ ಆಗುತ್ತಲೇ ಮನೆಯ ಎಲ್ಲರೂ ಟಿವಿ ಮುಂದೆ ಕುಳಿತು ಧಾರಾವಾಹಿಗಳಲ್ಲಿ ಮುಳುಗುತ್ತಿರುವುದು ವಿಷಾದಕರ ಸಂಗತಿ. ಭಜನೆ, ಪ್ರಾರ್ಥನೆ, ಆತ್ಮಶುದ್ಧಿಯಂತಹ ಸಂಸ್ಕೃತಿಯ ಅಂಶಗಳು ಹಿನ್ನಡೆಯಾಗುತ್ತಿವೆ. ಈ ಸ್ಥಿತಿಯನ್ನು ತಪ್ಪಿಸಬೇಕು, ನಮ್ಮ ಸಂಸ್ಕೃತಿಯನ್ನು ಮತ್ತೆ ಮನೆಮನೆಯೊಳಗೆ ಜೀವಂತಗೊಳಿಸಬೇಕು’ ಎಂದವರು ಕರೆ ನೀಡಿದ್ದಾರೆ. `ಮಕ್ಕಳಿಗೆ ಊಟ ಮಾಡಿಸುವ ಸಂದರ್ಭದಲ್ಲೂ ರಾಮಾಯಣ, ಮಹಾಭಾರತ, ಪುರಾಣಗಳ ಕಥೆಗಳನ್ನು ಹೇಳುವ ಸಂಸ್ಕೃತಿ ನಶಿಸುತ್ತಿದ್ದು, ಅದರ ಬದಲು ಮೊಬೈಲ್ ನೀಡುವ ದುಷ್ಪ್ರವೃತ್ತಿ ಹೆಚ್ಚಾಗಿದೆ. ಇದು ಸಮಾಜದ ಪತನಕ್ಕೆ ದಾರಿ ಮಾಡಿಕೊಡುತ್ತಿದೆ. ಅಪರಾಧ ಪ್ರಕರಣಗಳ ಹೆಚ್ಚಳಕ್ಕೂ ಈ ಮಾಧ್ಯಮಗಳ ದುರುಪಯೋಗವೇ ಒಂದು ಪ್ರಮುಖ ಕಾರಣವಾಗಿದೆ’ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಈ ಸಂದರ್ಭದಲ್ಲಿ ವಿಶ್ವ ಹಿಂದು ಪರಿಷತ್ತಿನ ರಾಜ್ಯ ಉಪಾಧ್ಯಕ್ಷ ಗಂಗಾಧರ ಹೆಗಡೆ ಮುಖ್ಯ ವಕ್ತಾರರಾಗಿ ಉಪಸ್ಥಿತರಿದ್ದರು. ಸಮ್ಮೆಳನದ ಸಮಿತಿ ಅಲಗೇರಿ ಮಂಡಳದ ಸದಸ್ಯೆ ಶೋಬಾ ಆಗೇರ, ಹಿಂದೂ ಸಮ್ಮೆಳನದ ಸಮಿತಿ ತಾಲೂಕಾಧ್ಯಕ್ಷ ನಾಗೇಶ ನಾಯ್ಕ, ಸಮ್ಮೆಳನದ ಸಮಿತಿ ಅಲಗೇರಿ ಮಂಡಳದ ಅಧ್ಯಕ್ಷ ಗಣೇಶ ಚಿನ್ನಾ ನಾಯ್ಕ, ಪ್ರಮುಖರಾದ ಸುರೇಶ ವೆರ್ಣೇಕರ, ನಾಗರಾಜ ಎಸ್ ನಾಯ್ಕ, ಆನಂದ ಎಚ್ ಗಾಂವಕರ ಅವರು ವಿವಿಧ ಜವಾಬ್ದಾರಿ ನಿಭಾಯಿಸಿದರು. ಕಾರ್ಯಕ್ರಮ ಪೂರ್ವದಲ್ಲಿ ಈಶ್ವರ ದೇವಸ್ಥಾನದಿಂದ ಬೃಹತ್ ಶೋಭಾಯಾತ್ರೆ ನಡೆಯಿತು. - [ಅತ್ತೆ-ಮಾವನ ಕಾಟಕ್ಕೆ ಅಳಿಯ ಬಲಿ!](https://mobiletime.in/2026/02/son-in-law-falls-victim-to-mother-in-laws-cruelty/): ಮುಂಡಗೋಡದ ಬಸವರಾಜ ಮೋರೆನ್ನವರ್ ಅವರು ಅತ್ತೆ-ಮಾವನ ಕಾಟ ಸಹಿಸಲಾಗದೇ ಸಾವಿಗೆ ಶರಣಾಗಿದ್ದಾರೆ. ಮುಂಡಗೋಡದ ಉಗ್ಗಿನಕೇರಿಯ ದೇವರಾಜ ಶಂಕರಪ್ಪ ಮೊರೇನವರ್ ಅವರು ಈ ಬಗ್ಗೆ ಪೊಲೀಸ್ ದೂರು ನೀಡಿದ್ದಾರೆ. `ಬಸವರಾಜ ದೇವೇಂದ್ರಪ್ಪ ಮೋರೆನ್ನವರ್ ಅವರು ಕ್ರಿಮಿನಾಶಕ ಸೇವಿಸಿ ಸಾವನಪ್ಪಿದ್ದು, ಅವರ ಅತ್ತೆ ಜಗನ್ಮಾಥ, ಮಾವ ಪ್ರಬಪ್ಪ ಹಾಗೂ ಸಂಬAಧಿಕರಾದ ಉಮೇಶ ಹಾಗೂ ಆನಂದರ ಕಿರುಕುಳವೇ ಇದಕ್ಕೆ ಕಾರಣ’ ಎಂದು ದೂರಿದ್ದಾರೆ. ಹುಬ್ಬಳ್ಳಿಯ ಗೋಪಿನಕೊಪ್ಪದಲ್ಲಿ ಆರೋಪಿತರು ವಾಸವಾಗಿದ್ದು, ಬಸವರಾಜ ಮೋರೆನ್ನವರ್ ಅವರಿಗೆ ಅವರೆಲ್ಲರೂ ಪದೇ ಪದೇ ಹಿಂಸೆ ನೀಡುತ್ತಿದ್ದರು. ಆ ಮಾನಸಿಕ ಕಿರುಕುಳ ಸಹಿಸಲಾಗದೇ ಬಸವರಾಜ ಮೋರೆನ್ನವರ್ ಅವರು ಫೆಬ್ರವರಿ 7ರ ಸಂಜೆ ಕ್ರಿಮಿನಾಶಕ ಸೇವಿಸಿದರು. ಫೆಬ್ರವರಿ 8ರಂದು ಅವರು ಸಾವನಪ್ಪಿದ್ದಾರೆ ಎಂದು ದೇವರಾಜ ಮೊರೇನವರ್ ಅವರು ದೂರಿದ್ದಾರೆ. ಹಿಂಸೆ ನೀಡಿದ ಆ ಎಲ್ಲಾ ಆರೋಪಿತರ ವಿರುದ್ಧ ಕ್ರಮ ಜರುಗಿಸಬೇಕು ಎಂದು ಅವರು ಆಗ್ರಹಿಸಿದ್ದು, ಮುಂಡಗೋಡು ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. - [ರವೀಂದ್ರ ನಗರದ ಹುಡುಗರು ನಾವು.. ಎಂದಿಗೂ ಒಳಿತನ್ನೇ ಬಯಸುವೆವು!](https://mobiletime.in/2026/02/we-the-boys-of-ravindra-nagar-will-always-wish-for-the-best/): ಯಲ್ಲಾಪುರ ಜಾತ್ರೆ ಹಿನ್ನಲೆ ವಿವಿಧ ಸಂಘಟನೆಯವರು ಸ್ವಯಂ ಪ್ರೇರಣೆಯಿಂದ ವಿವಿಧ ಸಮಾಜಮುಖಿ ಕೆಲಸ ಮಾಡುತ್ತಿದ್ದು, ರವೀಂದ್ರ ನಗರದ ಯುವಕರು ಅಪಘಾತ ತಡೆಗಾಗಿ ರಸ್ತೆಗೆ ಬಿಳಿ ಬಣ್ಣ ಬಡಿದಿದ್ದಾರೆ. ಫೆಬ್ರವರಿ 11ರಿಂದ 19ರವರೆಗೆ ಯಲ್ಲಾಪುರದಲ್ಲಿ ಅದ್ಧೂರಿಯಾಗಿ ಗ್ರಾಮದೇವಿ ಜಾತ್ರೆ ನಡೆಯಲಿದೆ. ಈ ಜಾತ್ರೆಗೆ ಲಕ್ಷಾಂತರ ಜನ ಬರುತ್ತಾರೆ. ಮುಂಡಗೋಡು ರಸ್ತೆಯ ಮೂಲಕವೂ ನಿತ್ಯ ಸಾವಿರಾರು ಜನ ಸಂಚರಿಸುತ್ತಾರೆ. ಇಲ್ಲಿನ ರವೀಂದ್ರ ನಗರದ ಶಾಲೆ ಹಾಗೂ ಅಂಗನವಾಡಿ ಬಳಿ ರಸ್ತೆಗೆ ಅಡ್ಡಲಾಗಿ ಎರಡು ಹಂಪುಗಳಿದ್ದು, ಅಲ್ಲಿ ಅಪಘಾತವಾಗುವುದನ್ನು ಅರಿತ ಆ ಭಾಗದ ಜನ ಹಂಪುಗಳಿಗೆ ಬಣ್ಣ ಬಡಿದಿದ್ದಾರೆ. ರಸ್ತೆ ದುರಸ್ಥಿ, ಅವೈಜ್ಞಾನಿಕ ಹಂಪುಗಳಿಗೆ ಮುಕ್ತಿ ಜೊತೆ ಅಪಘಾತ ತಡೆಗೆ ವಿವಿಧ ಕ್ರಮ ಜರುಗಿಸುವಂತೆ ಶಾಸಕ ಶಿವರಾಮ ಹೆಬ್ಬಾರ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಆದರೆ, ಲೋಕೋಪಯೋಗಿ ಅಧಿಕಾರಿಗಳು ಮುಂಡಗೋಡು ರಸ್ತೆಯ ಶಾಲೆ ಹಾಗೂ ಅಂಗನವಾಡಿ ಬಳಿಯಿರುವ ಹಂಪುಗಳ ಬಗ್ಗೆ ಗಮನಹರಿಸಿಲ್ಲ. ಆ ಭಾಗದ ಜನ ಈ ಬಗ್ಗೆ ಪ್ರಶ್ನಿಸಿದರೂ ಸರಿಯಾಗಿ ಉತ್ತರ ನೀಡಿಲ್ಲ. ಹೀಗಾಗಿ ರವೀಂದ್ರ ನಗರದ ಹುಡುಗರೆಲ್ಲರೂ ಒಂದಾಗಿ ತಾವೇ ಹಂಪಿಗೆ ಬಣ್ಣ ಬಡಿದು ಜನರನ್ನು ಎಚ್ಚರಿಸುವ ಕೆಲಸ ಮಾಡಿದ್ದಾರೆ. ಆ ಭಾಗದ ಸೋಮೇಶ್ವರ ನಾಯ್ಕ, ಕಾರ್ತಿಕ ನಾಯ್ಕ, ನಂದನ ಮರಾಠಿ, ಗಿರೀಶ ಬೋವಿ, ಮಂಜುನಾಥ ಬೋವಿ, ಶೈಲೇಶ್ ನಾಯ್ಕ, ಮನೋಜ ಪೋಳ್, ಇರ್ಫಾನ್ ಖಾನ್, ಮುಸ್ತಪಾ ತೆರಗಟ್ಟಿ, ಬೆಟ್ಟಪ್ಪ ಬೋವಿ ಒಟ್ಟಾಗಿ ಈ ಸಮಾಜಮುಖಿ ಕೆಲಸ ಮಾಡಿದ್ದಾರೆ. `ರಾತ್ರಿ ವೇಳೆ ಇಲ್ಲಿನ ಹಂಪುಗಳು ಸರಿಯಾಗಿ ಕಾಣುವುದಿಲ್ಲ. ಈ ಹಿಂದೆ ನಡೆದ ಜಾತ್ರೆ ಅವಧಿಯಲ್ಲಿ ಕೆಲವರು ಬಿದ್ದು ಪೆಟ್ಟು ಮಾಡಿಕೊಂಡಿದ್ದು, ಅದನ್ನು ತಡೆಯುವುದಕ್ಕಾಗಿ ದೇಣಿಗೆ ಸಂಗ್ರಹಿಸಿ ರಸ್ತೆಗೆ ಬಣ್ಣ ಬಡಿಯವ ಕೆಲಸ ಮಾಡಿದ್ದೇವೆ’ ಎಂದವರು ವಿವರಿಸಿದ್ದಾರೆ. - [ಮರದಿಂದ ಬಿದ್ದ ಕುಶಲಕರ್ಮಿ: ಸಾವು!](https://mobiletime.in/2026/02/craftsman-falls-from-tree-death-2/): ತೆಂಗಿನ ಕಾಯಿ ಕೊಯ್ಯಲು ಮರ ಏರಿದ್ದ ಯಲ್ಲಾಪುರದ ವಿನಾಯಕ ಸಿದ್ದಿ ಅವರು ಮರದಿಂದ ಬಿದ್ದು ಸಾವನಪ್ಪಿದ್ದಾರೆ. ಯಲ್ಲಾಪುರದ ಮಾಗೋಡು ಬಳಿಯ ಕಂಚಿತಗ್ಗುವಿನಲ್ಲಿ ವಿನಾಯಕ ದೇವೇಂದ್ರ ಸಿದ್ದಿ (25) ಅವರು ವಾಸವಾಗಿದ್ದರು. ಅವರ ಪೂರ್ವಜರು ತಮ್ಮ ಅಡಿಕೆ ತೋಟದಲ್ಲಿ ತೆಂಗಿನ ಗಿಡಗಳನ್ನು ನಾಟಿ ಮಾಡಿದ್ದರು. ಆ ಮರ ಬೆಳೆದು ದೊ