90 ವರ್ಷದ ಹಿಂದೆ ಉತ್ತರ ಕನ್ನಡ ಜಿಲ್ಲೆಗೆ ಗಾಂಧೀಜಿ ಬಂದಿದ್ದರು. ಕುದುರೆ ಏರಿ ಬರುತ್ತಿದ್ದ ಗಾಂಧೀಜಿ ಅವರನ್ನು ನೋಡಲು ಆ ಕಾಲದಲ್ಲಿಯೇ 2 ಸಾವಿರ ಜನ ಸೇರಿದ್ದರು. ಅವರೆಲ್ಲರೂ ಗಾಂಧೀಜಿ ಅವರು ಮಾಡಿದ ಅಸ್ಪçಶ್ಯತೆ ವಿರುದ್ಧದ ಭಾಷಣ ಕೇಳಿ ಪುಳಕಿತರಾದರು.
1934 ಫೆ 27ರಂದು ಮಹಾತ್ಮಾ ಗಾಂಧೀಜಿ ಉಡುಪಿಯಿಂದ ಕಾರವಾರಕ್ಕೆ ಆಗಮಿಸಿದ್ದರು. ನಗರಕ್ಕೆ ಬಂದಿದ್ದ ಗಾಂಧೀಜಿ ಇಲ್ಲಿನ ವಾಮಾನಶ್ರಮ ರಸ್ತೆಯಲ್ಲಿರುವ ಹಳದಿಪುರ ಎಂಬಾತರ ಮನೆಯಲ್ಲಿ ತಂಗಿದ್ದರು. ಮರುದಿನ ಮುಂಜಾನೆ ಅಸ್ಪೃಶ್ಯತೆಯ ಕುರಿತು ಸಾವಿರಾರು ಜನರನ್ನು ಉದ್ದೇಶಿಸಿ ಮಾತನಾಡಿದ್ದರು. ಆ ವೇಳೆ ಕಾರವಾರ ನಗರಾಡಳಿತ ಅಧ್ಯಕ್ಷರಾಗಿದ್ದ ಪಿ.ಎಸ್.ಮುಜುಂದಾರ್, ಹಿಂದು ಮಹಾಸಭಾದ ಅಧ್ಯಕ್ಷ ಎಂ ಬಿ ಬರ‍್ಕರ್. ಉದ್ಯಮಿ ಕೆ ಆರ್.ಹಳದಿಪುರಕರ್ ಹಾಗೂ ಹೊರ ಜಿಲ್ಲೆಗಳ ಹಲವು ಗಣ್ಯರು ಗಾಂಧಿಜೀಯವರನ್ನು ಆತ್ಮೀಯವಾಗಿ ಬರಮಾಡಿಕೊಂಡು ಆತಿಥ್ಯ ನೀಡಿದ್ದರು. ಗಾಂಧೀಜಿ ನಡೆದ ಹೆಜ್ಜೆಗಳು ಹಳದಿಪುರ ಕುಟುಂಬದವರ ಮನದಲ್ಲಿ ಮೆಲಕು ಹಾಕುತ್ತಿವೆ.
ಹಳದಿಪುರಕರ್ ಅವರ ಮನೆಯ ಆವರಣದಲ್ಲಿ ಸೆ 28ರ ಬೆಳಗ್ಗೆ ಗಾಂಧೀಜಿ ಪ್ರಾರ್ಥನೆ ನಡೆಸಿದ್ದರು. ಅದಾದ ನಂತರ ಸಾರ್ವಜನಿಕ ಸಭೆ ನಡೆಸಿದ್ದರು. ನಂತರ ಅವರಿಗೆ ಸ್ಥಳಿಯರು ಸಾಗವಾನಿ ಮರದಿಂದ ಮಾಡಿದ ಹಾಗೂ ನಗರಾಡಳಿತದಿಂದ ಬೆಳ್ಳಿಯಲ್ಲಿ ಸ್ಮರಣಿಕೆ ನೀಡಲಾಯಿತು. ಅದನ್ನು ಸ್ಥಳದಲ್ಲೇ ಗಾಂಧೀಜಿ ಹರಾಜು ಹಾಕಿದರು. ಹಳದಿಪುರಕರ್ ಕುಟುಂಬ ಎರಡನ್ನೂ 532ರೂಪಾಯಿ ನೀಡಿ ಖರೀದಿಸಿತ್ತು. ಗಾಂಧಿಜೀ ಅವರು ಕಾರವಾರಕ್ಕೆ ಬಂದಾಗಿನ ಚಿತ್ರಗಳು. ಅವರಿಗೆ ನೀಡಿದ ಸ್ಮರಣಿಕೆಗಳು ಇಂದಿಗೂ ಹಳದಿಪುರಕರ್ ಮನೆಯಲ್ಲಿ ಕಾಣಸಿಗುತ್ತವೆ.
ಮಹಾತ್ಮಾ ಗಾಂಧೀಜಿ ಕಾರವಾರಕ್ಕೆ ಬಂದು 9 ದಶಕ ಕಳೆದಿವೆ. ಅವರ ಹೆಜ್ಜೆ ಗುರುತುಗಳನ್ನು ರಕ್ಷಿಸುವ ಕಾರ್ಯ ಕಾರವಾರದ ಹಳದಿಪುರಕರ್ ಕುಟುಂಬ ಕುಡಿ ಮಾಡುತ್ತಿದೆ. ಹಳದಿಪುರ ಅವರ ಮನೆಯಲ್ಲಿ ಇಂದಿಗೂ ಗಾಂಧೀಜಿ ಅವರು ಬಂದಿದ್ದ ಸಂದರ್ಭದ ಫೊಟೊಗಳು, ಸ್ಮರಣಿಕೆಗಳನ್ನು ಸಂರಕ್ಷಿಸಿಡಲಾಗಿದೆ.