ದಾಂಡೇಲಿಯಲ್ಲಿ ಒಂಟಿಯಾಗಿ ಸಂಚರಿಸುವ ಆನೆಯೊಂದು ರಸ್ತೆ ತಡೆ ನಡೆಸಿದೆ. ದಾಂಡೇಲಿ ಅಂಬಿಕಾನಗರದ ಅರಣ್ಯ ಪ್ರದೇಶದಲ್ಲಿನ ಆನೆ ರಸ್ತೆ ಮೇಲೆ ಓಡಾಡಿದೆ.
ಅಂಬಿಕಾನಗರ ಅರಣ್ಯ ಪ್ರದೇಶದಲ್ಲಿ ಕಾಡಾನೆ ರಸ್ತೆ ಮೇಲೆ ಓಡಾಡುತ್ತಿರುವ ದೃಶ್ಯ ಮೊಬೈಲ್ ಕ್ಯಾಮರಾದಲ್ಲಿ ಸೆರೆಯಾಗಿದೆ. ಒಮ್ಮೆಲೆ ರಸ್ತೆಗೆ ಬಂದ ಆನೆ ಸುಮಾರು 10 ನಿಮಿಷಗಳ ಕಾಲ ಅಲ್ಲಿ ಓಡಾಟ ನಡೆಸಿದೆ. ಆನೆ ನೋಡಿದ ಜನ ಭಯಭೀತರಾಗಿದ್ದು, ತಮ್ಮ ವಾಹನ ಸಂಚಾರವನ್ನು ಸ್ಥಗಿತಗೊಳಿಸಿದ್ದಾರೆ. ಅದಾದ ಕೆಲ ಕಾಲದ ನಂತರ ಆ ಆನೆ ಕಾಡಿನ ದಾರಿ ಹಿಡಿದಿದೆ.
ರಸ್ತೆ ಮೇಲೆ ಆನೆ ಓಡಾಡುತ್ತಿರುವುದನ್ನು ಪ್ರವಾಸಿಗರು ಮೊಬೈಲ್ ಮೂಲಕ ಸೆರೆ ಹಿಡಿದಿದ್ದಾರೆ. ಆನೆ ನೋಡಿ ಹೆದರಿದ ಕೆಲ ವಾಹನ ಸವಾರರು ತಮ್ಮ ವಾಹನವನ್ನು ಹಿಂದಕ್ಕೆ ಚಲಾಯಿಸಿ, ಆನೆ ತೆರಳಿದ ನಂತರ ಪ್ರಯಾಣ ಮುಂದುವರೆಸಿದ್ದಾರೆ. ವಿವಿಧ ವಾಹನ ಚಾಲಕರು ವಾಹನಗಳನ್ನು ರಸ್ತೆ ಬದಿಯಲ್ಲಿ ನಿಲ್ಲಿಸಿ, ಎಚ್ಚರಿಕೆಯಿಂದ ಪರಿಸ್ಥಿತಿ ಗಮನಿಸಿದ್ದಾರೆ. ಆನೆ ಕಾಡಿಗೆ ತೆರಳಿದ ನಂತರ ಎಲ್ಲರೂ ನಿಟ್ಟುಸಿರು ಬಿಟ್ಟಿದ್ದಾರೆ.