ಮದುವೆ ಆಗದ ಕಾರಣ ರಂಜಿತಾ ಅವರ ಕತ್ತು ಕೊಯ್ದು ಕೊಲೆ ಮಾಡಿದ್ದ ರಫೀಕ್ ಆತ್ಮಹತ್ಯೆಗೆ ಶರಣಾಗಿದ್ದಾರೆ. ಕೊಲೆ ನಂತರ ಕಾಡಿಗೆ ಪರಾರಿಯಾಗಿದ್ದ ರಫೀಕ್ ಕಾಜಲವಾಡದ ಬಳಿ ಸಾವನಪ್ಪಿದ್ದಾರೆ.
ಯಲ್ಲಾಪುರದ ರಾಮಾಪುರ ಶಾಲೆಯ ಬಿಸಿಯೂಟ ಸಿಬ್ಬಂದಿ ಆಗಿದ್ದ ರಂಜಿತಾ ಅವರನ್ನು ರಫಿಕ್ ಕೊಲೆ ಮಾಡಿದ್ದರು. ಶನಿವಾರ ಮಧ್ಯಾಹ್ನ ಶಾಲೆಯಿಂದ ಮನೆಗೆ ಬರುತ್ತಿದ್ದ ರಂಜಿತಾ ಅವರನ್ನು ಮದುವೆ ಆಗುವಂತೆ ರಫೀಕ್ ಪೀಡಿಸಿದ್ದು, ಒಪ್ಪದ ಕಾರಣ ಕುತ್ತಿಗೆಗೆ ಚಾಕು ಚುಚ್ಚಿದ್ದರು. ಅದಾದ ನಂತರ ರಫೀಕ್ ಕಾಡಿನ ಕಡೆ ಓಡಿದ್ದು, ರಫೀಕ್ ಹುಡುಕಾಟಕ್ಕೆ ಪೊಲೀಸರು ವಿಶೇಷ ತಂಡ ರಚಿಸಿದ್ದರು. ಆದರೆ, ರಫೀಕ್ ಮಾತ್ರ ಯಾರ ಕೈಗೂ ಸಿಕ್ಕಿರಲಿಲ್ಲ.
ರಂಜಿತಾ ಅವರು ಮದುವೆ ಆಗಿ ಗಂಡನಿAದ ಬೇರೆಯಾಗಿದ್ದು, ಮತ್ತೊಂದು ಮದುವೆಗೆ ಮನಸ್ಸು ಮಾಡಿರಲಿಲ್ಲ. ಆದರೆ, ರಫೀಕ್ ಮದುವೆ ಆಗುವಂತೆ ಪೀಡಿಸುವುದನ್ನು ಬಿಟ್ಟಿರಲಿಲ್ಲ. ಮದುವೆ ಆಗಲು ಒಪ್ಪದ ರಂಜಿತಾ ಅವರು ರಫೀಕ್ ಜೊತೆ ಮಾತನಾಡುವುದನ್ನು ನಿಲ್ಲಿಸಿದ್ದರಿಂದ ಆಕ್ರೋಶಗೊಂಡ ರಫೀಕ್, ರಂಚಿತಾ ಅವರ ಕೊಲೆ ಮಾಡಿ ಪರಾರಿಯಾಗಿದ್ದರು. ಭಾನುವಾರ ಬೆಳಗ್ಗೆ ರಫೀಕ್ ಶವವಾಗಿದ್ದಾರೆ.