ಮದುವೆಗೆ ಒಪ್ಪದ ರಂಜಿತಾ ಅವರನ್ನು ರಫೀಕ್ ಅವರು ಕೊಲೆ ಮಾಡಿರುವುದನ್ನು ಖಂಡಿಸಿ ಭಾನುವಾರ ಯಲ್ಲಾಪುರ ಬಂದ್’ಗೆ ಕರೆ ನೀಡಲಾಗಿದೆ. ಸ್ವಯಂ ಪ್ರೇರಿತ ಬಂದ್ ಕರೆಗೆ ಹಿಂದು ಸಂಘಟನೆಯವರು ಮನವಿ ಮಾಡಿದ್ದು, ಭಾನುವಾರದ ಸಂತೆಯೂ ದಿಢೀರ್ ಆಗಿ ರದ್ಧಾಗುವ ಸಾಧ್ಯತೆಗಳಿವೆ.
ಶನಿವಾರ ಮಧ್ಯಾಹ್ನ ರಂಜೀತಾ ಅವರ ಕುತ್ತಿಗೆಗೆ ರಫೀಕ್ ಚಾಕು ಇರಿದಿದ್ದಾರೆ. ತಕ್ಷಣ ಸರ್ಕಾರಿ ಆಸ್ಪತ್ರೆಗೆ ರಂಜಿತಾ ಅವರನ್ನು ದಾಖಲಿಸಲಾಗಿದ್ದು, ತುರ್ತು ಚಿಕಿತ್ಸೆ ನೀಡಿ ಹುಬ್ಬಳ್ಳಿಗೆ ಕಳುಹಿಸಿದರೂ ರಂಜಿತಾ ಅವರು ಬದುಕಲಿಲ್ಲ. ರಂಚಿತಾ ಅವರ ಸಾವಿನ ಸುದ್ದಿ ಕೇಳಿ ನೂರಾರು ಜನ ಯಲ್ಲಾಪುರ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿದ್ದಾರೆ. `ಕೊಲೆಗಾರರನ್ನು ಕೂಡಲೇ ಬಂಧಿಸಬೇಕು’ ಎಂದು ಅನೇಕರು ಆಗ್ರಹಿಸಿದ್ದಾರೆ.
`ಹಿಂದೂಗಳ ಮೇಲೆ ನಿರಂತರ ದಾಳಿ ನಡೆಯುತ್ತಿದೆ. ಆದರೆ, ಶಿಕ್ಷೆ ಆಗಿದ್ದು ಮಾತ್ರ ವಿರಳ. ಯಲ್ಲಾಪುರದ ರಂಜಿತಾ ಪ್ರಕರಣವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು’ ಎಂದು ಯಲ್ಲಾಪುರ ಪೊಲೀಸ್ ಠಾಣೆ ಎದುರು ಜನ ಆಕ್ರೋಶದಿಂದ ಮಾತನಾಡಿದರು. `ಕೊಲೆ ನಡೆದು ಐದು ತಾಸು ನಡೆದರೂ ಆರೋಪಿ ಬಂಧನ ನಡೆದಿಲ್ಲ. ಆರೋಪಿ ಯಲ್ಲಾಪುರದಲ್ಲಿಯೇ ಅಡಿಗಿದ್ದರೂ ಪತ್ತೆ ಕಾರ್ಯ ನಡೆದಿಲ್ಲ’ ಎಂದು ಅಸಮಧಾನವ್ಯಕ್ತಪಡಿಸಿದರು. `ಆರೋಪಿ ಬಂಧನ ಆಗುವವರೆಗೂ ಪೊಲೀಸ್ ಠಾಣೆ ಬಿಟ್ಟು ಹೊರಡುವುದಿಲ್ಲ’ ಎಂದು ಜನ ಪಟ್ಟು ಹಿಡಿದರು.
`ಪದೇ ಪದೇ ಹಿಂದುಗಳ ಮೇಲೆ ದಬ್ಬಾಳಿಕೆ ನಡೆಯುತ್ತಿದೆ. ಆಡಳಿತ ವ್ಯವಸ್ಥೆ ಕುಸಿದಿದೆ’ ಎಂದು ಬಿಜೆಪಿ ಮಂಡಳ ಅಧ್ಯಕ್ಷ ಪ್ರಸಾದ ಹೆಗಡೆ ದೂರಿದರು. `ಮಾಹಿತಿ ಬಂದ ತಕ್ಷಣ ಬಂದಿದ್ದೇವೆ. ಕೂಡಲೇ ಕಾನೂನು ಕ್ರಮ ಜರುಗಿಸುತ್ತೇವೆ’ ಎಂದು ಪೊಲೀಸ್ ಅಧೀಕ್ಷಕ ದೀಪನ್ ಎಂ ಎನ್ ಪ್ರತಿಭಟನಾಕಾರರಿಗೆ ಭರವಸೆ ನೀಡಿದರು. ಅದಾಗಿಯೂ, ಭಾನುವಾರ ಯಲ್ಲಾಪುರ ಬಂದ್ ಮಾಡಿ ಸರ್ಕಾರವನ್ನು ಒತ್ತಾಯಿಸಲು ಹಿಂದು ಸಂಘಟನೆಯವರು ನಿರ್ಧರಿಸಿದ್ದಾರೆ. ವಿಶ್ವಹಿಂದೂ ಪರಿಷತ್, ದಲಿತ ಸಂಘಟನೆ ಹಾಗೂ ವಿವಿಧ ಸಂಘಟನೆಯವರು ಬಂದ್ ಕರೆ ನೀಡಿದ್ದಾರೆ. ಬೆಳಗ್ಗೆ 9 ಗಂಟೆಗೆ ಪಟ್ಟಣದಲ್ಲಿ ಪ್ರತಿಭಟನೆಗೂ ಉದ್ದೇಶಿಸಲಾಗಿದ್ದು, ಅಹಿತಕರ ಘಟನೆ ನಡೆಯದಂತೆ ಕಟ್ಟೆಚ್ಚರವಹಿಸಲಾಗಿದೆ.