ಕಂಡ ಕಂಡವರ ಬಳಿ ಸಾಲ ಮಾಡಿ ಗೊವಾ ತಿರುಗಾಟ ಮಾಡಿದ ಸರ್ಕಾರಿ ಅಧಿಕಾರಿಯೊಬ್ಬರು ಕೊನೆಗೆ ಕಾಳಿ ನದಿಗೆ ಹಾರಿದ್ದಾರೆ. ನದಿ ಅಂಚಿನ ಗಿಡಗಂಟಿಗಳಲ್ಲಿ ಅವರ ಶವ ಸಿಕ್ಕಿದೆ.
ಬೆಂಗಳೂರು ನೀರು ಸರಬರಾಜು ಒಳಚರಂಡಿ ಮಂಡಳಿಯಲ್ಲಿ ಎಂ ಕೆ ಚಂದ್ರಶೇಖರ್ (49) ಅವರು ವಾಟರ್ ಇನ್ಸಪೆಕ್ಟರ್ ಆಗಿದ್ದರು. ಕೈ ತುಂಬ ಸಂಬಳ ಸಿಕ್ಕರೂ ತಮ್ಮ ಐಷಾರಾಮಿ ಜೀವನಕ್ಕಾಗಿ ಅವರು ವಿವಿಧ ಬ್ಯಾಂಕುಗಳಲ್ಲಿ ಅವರು ಸಾಲ ಮಾಡಿದ್ದರು. ಜೊತೆಗೆ ಸಿಕ್ಕ ಸಿಕ್ಕವರ ಬಳಿ ಅವರು ಸಾಲಪಡೆದಿದ್ದರು.
ಉನ್ನತ ಹುದ್ದೆ ಇದ್ದರೂ ಸರಿಯಾಗಿ ಕೆಲಸಕ್ಕೆ ಹೋಗುತ್ತಿರಲಿಲ್ಲ. ಜೊತೆಗೆ ಎಂ ಕೆ ಚಂದ್ರಶೇಖರ್ ಅವರು ದುಶ್ಚಟಗಳಿಗೆ ದಾಸರಾಗಿದ್ದರು. ತಮ್ಮಲ್ಲಿದ್ದ ಹಣ ಬಳಸಿ ಗೋವಾಗೆ ಹೋದ ಎಂ ಕೆ ಚಂದ್ರಶೇಖರ್ ಅವರು ಅಲ್ಲಿ ಎಲ್ಲಾ ಕಡೆ ತಿರುಗಾಡಿದ್ದರು. ನಾಲ್ಕು ದಿನಗಳ ಹಿಂದೆ ಅವರು ಕಾರವಾರಕ್ಕೆ ಬಂದಿದ್ದು, ಕಾಳಿ ನದಿಗೆ ಹಾರಿದರು. ಸೆ 26ರ ರಾತ್ರಿ ಜನ ಸದಾಶಿವಗಡ ಕಣಸಗೇರಿಯ ಬಂದರವಾಡದಲ್ಲಿ ಅವರ ಶವ ನೋಡಿದರು.
ಗಿಡಗಂಟಿ ನಡುವೆ ಶವ ಸಿಕ್ಕಿಬಿದ್ದಿದ್ದು, ಅದನ್ನು ಎಂ ಕೆ ಚಂದ್ರಶೇಖರ್ ಅವರ ಮಾವ ಆರ್ ಆರ್ ನಾಗರಾಜ ಅವರು ಗುರುತಿಸಿದರು. ತಮ್ಮ ಅಳಿಯನ ಸಾವಿನ ಬಗ್ಗೆ ಅವರು ಚಿತ್ತಾಕುಲ ಪೊಲೀಸರಿಗೆ ವರದಿ ಒಪ್ಪಿಸಿದರು. ಪೊಲೀಸರು ಪ್ರಕರಣ ದಾಖಲಿಸಿದರು.