ಕುಮಟಾ ಹಾಗೂ ಗೋಕರ್ಣದಲ್ಲಿ ಗಾಂಜಾ ಸೇವಿಸುವವರ ಸಂಖ್ಯೆ ಹೆಚ್ಚಾಗಿದ್ದು, ಪೊಲೀಸರು ಗಾಂಜಾ ವ್ಯಸನಿಗಳ ಬೆನ್ನು ಬಿದ್ದಿದ್ದಾರೆ. ಅಮಲಿನಲ್ಲಿರುವವರನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಿ ಗಾಂಜಾ ಸೇವನೆ ದೃಢವಾದ ತಕ್ಷಣ ಪ್ರಕರಣ ದಾಖಲಿಸುತ್ತಿದ್ದಾರೆ.
ಗೋಕರ್ಣದ ಸಂತೋಷ ವಿಶ್ವೇಶ್ವರ ಅಡಿ ಅವರು ಗಾಂಜಾ ಸೇವಿಸಿ ಸಿಕ್ಕಿ ಬಿದ್ದಿದ್ದಾರೆ. ಕುಮಟಾದ ಪ್ರಸಾದ ನಾಗಪ್ಪ ಹೊಸಳ್ಳಿ ಅವರು ಗಾಂಜಾ ಅಮಲಿನಲ್ಲಿರುವಾಗ ಪೊಲೀಸರು ದಾಳಿ ಮಾಡಿದ್ದಾರೆ. ಅವರಿಬ್ಬರನ್ನು ವೈದ್ಯಕೀಯ ಪರೀಕ್ಷೆಗೆ ರವಾನಿಸಿದಾಗ `ಪಾಸಿಟಿವ್’ ವರದಿ ಬಂದಿದ್ದು ಇಬ್ಬರ ವಿರುದ್ಧವೂ ಕಾನೂನು ಕ್ರಮ ಜರುಗಿಸಿದ್ದಾರೆ.
ಗೋಕರ್ಣ ಆಲದಕೇರಿಯ ಸಂತೋಷ ವಿಶ್ವೇಶ್ವರ ಅಡಿ ಅವರು ಸೆ 27ರಂದು ಕುಡ್ಲೇ ಹಿಲ್‌ಟಾಪ್ ರಸ್ತೆಯ ಮಹಾಬಲ ವ್ಯಾಲಿ ವಸತಿ ಗೃಹದ ಬಳಿ ಅಮಲು ಪದಾರ್ಥ ಸೇವನೆ ಮಾಡಿದ್ದರು. ಗೋಕರ್ಣ ಪಿಐ ಶ್ರೀಧರ ಎಸ್ ಆರ್ ಅವರು ದಾಳಿ ನಡೆಸಿ ಅವರನ್ನು ವಶಕ್ಕೆಪಡೆದರು. ಕುಮಟಾದ ಅಂಗಡಿಕೇರಿ ಹೊಟೇಲ್ ಕೆಲಸ ಮಾಡುವ ಪ್ರಸಾದ ನಾಗಪ್ಪ ಹೊಸಳ್ಳಿ ಅವರು ಮೂರುರು ಗುಡ್ಡದ ಮೇಲೆ ಹೊಗೆ ಎಳೆಯುತ್ತಿದ್ದರು. ಪೊಲೀಸ್ ಉಪನಿರೀಕ್ಷಕ ಮಯೂರ ಪಟ್ಟಣಶೆಟ್ಟಿ ಅವರು ಅಲ್ಲಿ ದಾಳಿ ಮಾಡಿದರು. ಈ ಇಬ್ಬರಿಗೂ ಪೊಲೀಸರು ಗಾಂಜಾ ಸೇವನೆಯ ದುಷ್ಪರಿಣಾಮದ ಬಗ್ಗೆ ಪಾಠ ಮಾಡಿದ್ದಾರೆ.