ಹೊಟೇಲು, ಹೈನುಗಾರಿಕೆ, ಗುಡಿ ಕೈಗಾರಿಕೆ, ಟಾಕ್ಸಿ ಖರೀದಿ ಸೇರಿ ವಿವಿಧ ವ್ಯಾಪಾರ ವಹಿವಾಟು ನಡೆಸುವ ಬ್ರಾಹ್ಮಣರಿಗೆ ಸರ್ಕಾರ ಸಾಲ ಕೊಡಲು ಆಸಕ್ತಿವಹಿಸಿದೆ. ಈ ಯೋಜನೆಗೆ ಆನ್‌ಲೈನ್ ಮೂಲಕವೇ ಅರ್ಜಿ ಸ್ವೀಕರಿಸಲಾಗುತ್ತದೆ.
ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಈ ಯೋಜನೆಯನ್ನು ಜಾರಿಗೆ ತಂದಿದೆ. ಹಸು ಸಾಕುವವರು ಸಹ ಈ ಯೋಜನೆಗೆ ಅರ್ಜಿ ಸಲ್ಲಿಸಬಹುದಾಗಿದ್ದು, ಸರ್ಕಾರದಿಂದ ನೇರವಾಗಿ ಸಾಲ ಸೌಲಭ್ಯ ಒದಗಿಸಲಾಗುತ್ತದೆ. ಆರ್ಥಿಕವಾಗಿ ಹಿಂದುಳಿದ ಬ್ರಾಹ್ಮಣ ಸಮುದಾಯದವರನ್ನು ಮುಖ್ಯವಾಹಿನಿಗೆ ತರುವುದು ಈ ಯೋಜನೆಯ ಮುಖ್ಯ ಉದ್ದೇಶ. ಅಗತ್ಯವಿರುವವರು ಕನಿಷ್ಟ 1 ಲಕ್ಷ ರೂ ಸಾಲಪಡೆಯಬೇಕು. ಗರಿಷ್ಟ 2 ಲಕ್ಷ ರೂವರೆಗೆ ಸಾಲ ಕೊಡಲಾಗುತ್ತದೆ. ಇದಕ್ಕೆ ಶೇ 4ರ ವಾರ್ಷಿಕ ಬಡ್ಡಿ ವಿಧಿಸಲಾಗುತ್ತಿದ್ದು, ಘಟಕ ವೆಚ್ಚದ ಮೇಲೆ ಸರ್ಕಾರದ ಸಬ್ಸಿಡಿಯೂ ಸಿಗುತ್ತದೆ. ಅರ್ಜಿದಾರರ ಆಧಾರಿಗೆ ಮೊಬೈಲ್ ನಂ ಲಿಂಕ ಆಗಿದ್ದು, ಬ್ಯಾಂಕ್ ಖಾಎ ಸೀಡ್ ಆಗಿದ್ದರೆ ಅನುಕೂಲ.
ಕನಿಷ್ಟ 18 ವರ್ಷ ಮೇಲ್ಪಟ್ಟ ಹಾಗೂ ಗರಿಷ್ಟ 64 ವರ್ಷದೊಳಗಿನವರು ಅರ್ಜಿ ಸಲ್ಲಿಸಲು ಯೋಗ್ಯರು. ಬ್ರಾಹ್ಮಣ ಸಮುದಾಯದ ಸಾಮಾನ್ಯ ವರ್ಗಕ್ಕೆ ಸೇರಿದ ಯಾರೂ ಬೇಕಾದರೂ ಈ ಯೋಜನೆಗೆ ಅರ್ಜಿ ಸಲ್ಲಿಸಲು ಅರ್ಹರು. ಆರ್ಥಿಕವಾಗಿ ಹಿಂದುಳಿದ ಬಗ್ಗೆ ಪ್ರಮಾಣ ಪತ್ರ ಸಲ್ಲಿಸುವುದು ಕಡ್ಡಾಯ. ಒಂದು ಕುಟುಂಬದಿoದ ಒಬ್ಬರಿಗೆ ಮಾತ್ರ ಅರ್ಜಿ ಸ್ವೀಕರಿಸಲು ಅವಕಾಶವಿದ್ದು, ಅದರಲ್ಲಿಯೂ ಮಹಿಳೆಯರಿಗೆ ಶೇ 33ರ ಮೀಸಲಾತಿ ಕೊಡಲಾಗಿದೆ. ದಿವ್ಯಾಂಗರಿಗೆ ಶೇ 5ರ ಮೀಸಲಾತಿ ಇದೆ.
1 ಲಕ್ಷರೂ ಮೌಲ್ಯದ ಘಟಕಕ್ಕೆ 20 ಸಾವಿರ ರೂ ಹಾಗೂ 2 ಲಕ್ಷ ರೂ ಮೌಲ್ಯದ ಘಟಕಕ್ಕೆ 40 ಸಾವಿರ ರೂ ಸಬ್ಸಿಡಿ ಸಿಗಲಿದೆ. ಸ್ವಯಂ ಉದ್ಯೋಗದಲ್ಲಿ ಆಸಕ್ತಿವಿರುವ ಅರ್ಹರು ಇದಕ್ಕೆ ಅರ್ಜಿ ಸಲ್ಲಿಸಬಹುದಾಗಿದ್ದು, ಅರ್ಜಿ ಸಲ್ಲಿಸಲು ಅಕ್ಟೊಬರ್ 31ಕ್ಕೆ ಕೊನೆ ದಿನ. ಇನ್ನೇನಾದರೂ ಮಾಹಿತಿ ಬೇಕಾದರೆ ಇಲ್ಲಿ ಫೋನ್ ಮಾಡಿ: 7975633671