ಅಲ್ಲಿ-ಇಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದ ಯಲ್ಲಾಪುರದ ಮಹೇಶ ಪಟಗಾರ್ ಅವರು ಮಂಗಳವಾರ ನೇಣಿಗೆ ಶರಣಾಗಿದ್ದಾರೆ. ಮಾನಸಿಕ ಚಿಂತೆಯೇ ಅವರ ಅವರ ಆತ್ಮಹತ್ಯೆಗೆ ಕಾರಣ ಎಂದು ಅಂದಾಜಿಸಲಾಗಿದೆ.
ಯಲ್ಲಾಪುರದ ಮಂಚಿಕೇರಿ ಬಳಿಯ ಮಾದನಸರದಲ್ಲಿ ಮಹೇಶ ಜಟ್ಟಿ ಪಟಗಾರ ಅವರು ವಾಸವಾಗಿದ್ದರು. ಕೂಲಿ ಕೆಲಸ ಮಾಡಿಕೊಂಡು ನೆಮ್ಮದಿಯಿಂದ ಇದ್ದ ಅವರು ತಮ್ಮ 29ನೇ ವಯಸ್ಸಿನಲ್ಲಿಯೇ ಸಾವನಪ್ಪಿದರು. ಸೆಪ್ಟೆಂಬರ್ 30ರ ಬೆಳಗ್ಗೆ 8.30ರವರೆಗೆ ಸರಿಯಾಗಿಯೇ ಇದ್ದ ಮಹೇಶ ಪಟಗಾರ ಅವರು 9.30ರ ಅವಧಿಯಲ್ಲಿ ಶವವಾಗಿದ್ದರು.
ಯಾರಿಗೂ ಅರಿಯದ ಯಾವುದೋ ಒಂದು ವಿಷಯದ ಬಗ್ಗೆ ಮಹೇಶ ಪಟಗಾರ ಅವರು ಚಿಂತಿಸುತ್ತಿದ್ದರು. ಆ ಚಿಂತೆಯಲ್ಲಿಯೇ ಅವರು ಮನೆಯ ಕೋಣೆಯೊಳಗೆ ನೇಣಿಗೆ ಶರಣಾಗಿದ್ದಾರೆ. ಮಗನನ್ನು ಕಳೆದುಕೊಂಡ ಜಟ್ಟಿ ಪಟಗಾರ ಅವರು ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಯಲ್ಲಾಪುರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಮಾದನಸರದ ಮಹೇಶ ಜಟ್ಟಿ ಪಟಗಾರ (29) ಮೃತ ಯುವಕ. ಕೂಲಿ ಕೆಲಸ ಮಾಡಿಕೊಂಡಿದ್ದ ಈತ, ಮನೆಯ ಕೊಠಡಿಯೊಳಗಿನ ಜಂತಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಾವಿಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ. ಈ ಕುರಿತು ಅವರ ತಂದೆ ಜಟ್ಟಿ ಪಟಗಾರ ದೂರು ನೀಡಿದ್ದು, ಯಲ್ಲಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.