ಮೇಷ ರಾಶಿ: ನಿಮ್ಮೊಳಗಿನ ಬುದ್ದಿವಂತಿಕೆ ಹೂಡಿಕೆ ವಿಷಯದಲ್ಲಿ ಲಾಭ ಕೊಡಲಿದೆ. ವೃತ್ತಿಯಲ್ಲಿ ಗೌರವ ಹಾಗೂ ಸಾಮಾಜಿಕ ಮನ್ನಣೆ ಸಿಗಲಿದೆ. ಸಂಗಾತಿ ಜೊತೆ ಮುಕ್ತವಾಗಿ ನಿಮ್ಮ ಭಾವನೆಯನ್ನು ಹಂಚಿಕೊಳ್ಳಿ.
ವೃಷಭ ರಾಶಿ: ಉದ್ಯೋಗ ಹಾಗೂ ವ್ಯವಹಾರ ಅವಕಾಶಗಳು ವೃದ್ಧಿ ಆಗಲಿದ್ದು, ಆರ್ಥಿಕ ಸ್ಥಿತಿ ಚನ್ನಾಗಿರಲಿದೆ. ಪರಿಶ್ರಮಕ್ಕೆ ತಕ್ಕ ಫಲ ಸಿಗಲಿದೆ. ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಯಶಸ್ಸು ಸಾಧ್ಯವಿದೆ.
ಮಿಥುನ ರಾಶಿ: ಸಾಮಾಜಿಕ ಕೆಲಸಗಳನ್ನು ಉತ್ಸಾಹದಿಂದ ಮಾಡಿ. ಹಣ ಹೂಡಿಕೆ ವಿಷಯದಲ್ಲಿ ಎಚ್ಚರಿಕೆ ಬೇಕು. ಕೆಲಸದ ಒತ್ತಡ ಸಹಜವಾಗಿದ್ದು, ವಾದ-ವಿವಾದ ನಿಮಗೆ ಒಳ್ಳೆಯದಲ್ಲ.
ಕರ್ಕ ರಾಶಿ: ಉದ್ಯೋಗದ ವಿಷಯದಲ್ಲಿ ಯಶಸ್ಸು ಸಿಗಲಿದೆ. ನಿಮ್ಮ ಗೌರವ ಹೆಚ್ಚಾಗಲಿದೆ. ಹೊಸ ಖರೀದಿ ಸಾಧ್ಯವಿದೆ. ನಿಮ್ಮ ಸಂತೋಷ ಹೆಚ್ಚಾಗಲಿದೆ.
ಸಿಂಹ ರಾಶಿ: ನಿಮ್ಮ ಕೆಲಸಕ್ಕೆ ಕುಟುಂಬದವರ ಬೆಂಬಲ ಸಿಗುತ್ತದೆ. ಐಷಾರಾಮಿ ಜೀವನಕ್ಕೆ ಅಗತ್ಯ ವಸ್ತು ಸಿಗಲಿದೆ. ಉದ್ಯೋಗ ಸರಾಗವಾಗಿ ಸಾಗಲಿದೆ. ಪ್ರೀತಿ-ಪ್ರೇಮ ವಿಷಯದಲ್ಲಿ ಪ್ರಗತಿ ಆಗಲಿದೆ.
ಕನ್ಯಾ ರಾಶಿ: ಪ್ರೇಮ ಜೀವನದಲ್ಲಿ ತೊಡಕು ಆಗುವ ಲಕ್ಷಣವಿದ್ದು, ಎಚ್ಚರಿಕೆ ಅಗತ್ಯ. ಪೂಜೆ ಹಾಗೂ ಧಾರ್ಮಿಕ ಕಾರ್ಯದಲ್ಲಿ ಭಾಗವಹಿಸುವುದು ಉತ್ತಮ. ಖರ್ಚು-ವೆಚ್ಚಗಳು ನಿಯಂತ್ರಣದಲ್ಲಿರಲಿ.
ತುಲಾ ರಾಶಿ: ಆಪ್ತರ ಜೊತೆ ಸಮಯ ಕಳೆಯುವುದು ಮುಖ್ಯ. ಆರ್ಥಿಕ ವ್ಯವಸ್ಥೆ ಸರಿಯಾಗಿ ಸಾಗಲಿದ್ದು, ಹೂಡಿಕೆ ಬಗ್ಗೆ ಚಿಂತಿಸಿ. ಹಳೆಯ ಕೆಟ್ಟ ವಿಷಯಗಳನ್ನು ಮರೆಯುವುದು ಆರೋಗ್ಯಕ್ಕೆ ಹಿತ.
ವೃಶ್ಚಿಕ ರಾಶಿ: ನಿಮ್ಮ ಸೃಜನಶೀಲ ಕೆಲಸಗಳಿಗೆ ವೇದಿಕೆ ಸಿಗಲಿದೆ. ಹಣ ಲಾಭ ಆಗಲಿದೆ. ಆಸ್ತಿ ಖರೀದಿ ವಿಷಯಕ್ಕೂ ಯೋಗ್ಯ ಸಮಯ. ನಾಯಕತ್ವ ಗುಣ ಬೆಳಸಿಕೊಳ್ಳಿ.
ಧನು ರಾಶಿ: ಕೌಟುಂಬಿಕ ಜೀವನದಲ್ಲಿ ಶಾಂತಿ ನೆಲೆಸುವುದರಿಂದ ಮಾನಸಿಕ ನೆಮ್ಮದಿ ಸಿಗಲಿದೆ. ಸಾಮಾಜಿಕ ಜೀವನದಲ್ಲಿ ಮನ್ನಣೆ ಸಿಗಲಿದೆ. ಹೊಸ ಬಗೆಯ ಜವಾಬ್ದಾರಿಗಳು ದೊರೆಯಲಿದೆ.
ಮಕರ ರಾಶಿ: ವಾಹನ ಖರೀದಿಗೆ ಸೂಕ್ತ ಸಮಯ ಬಂದಿದೆ. ಹೂಡಿಕೆಗೆ ಈ ದಿನ ಸೂಕ್ತವಲ್ಲ. ಶಾಲೆ ಹಾಗೂ ಶೈಕ್ಷಣಿಕ ಕೆಲಸದ ಬಗ್ಗೆ ಗಮನಹರಿಸಿ.
ಕುಂಭ ರಾಶಿ: ನಿಮ್ಮ ಜೀವನದಲ್ಲಿ ದೊಡ್ಡ ಬದಲಾವಣೆಯ ಸಮಯ ಬಂದಿದ್ದು, ಅವಕಾಶಗಳನ್ನು ಅರೆಸಿ. ಕಾನೂನು ವಿಷಯದಲ್ಲಿ ನಿಮಗೆ ಗೆಲುವು ಸಿಗಲಿದೆ. ಪ್ರವಾಸ ಯೋಜನೆಗಳು ಯಶಸ್ವಿ ಆಗಲಿದೆ.
ಮೀನ ರಾಶಿ: ನಿಮ್ಮ ಅನೇಕ ದಿನದ ಕನಸು ನೆರವೇರುವ ಸಮಯ ಬಂದಿದೆ. ನಿಂತ ಕೆಲಸಗಳು ನಿಧಾನವಾಗಿ ಸಾಗಲಿದೆ. ಹೊಸ ಆದಾಯದ ಮೂಲ ಸಿಗಲಿದೆ.