ಬೆಂಗಳೂರಿನಿoದ ಕಾರವಾರಕ್ಕೆ ಬರುವ ಶ್ರೀಕುಮಾರ ಬಸ್ಸು ಬೈಕಿಗೆ ಗುದ್ದಿದೆ. ಪರಿಣಾಮ ಬೈಕ್ ಸವಾರ ಮಂಜುನಾಥ ಗಡಕರ್ ಅವರ ಕಾಲಿಗೆ ಪೆಟ್ಟಾಗಿದೆ.
ಯಲ್ಲಾಪುರದ ನಾಯ್ಕನಕೆರೆ ಸುಧೀಂದ್ರ ಭಟ್ಟ ಅವರು ಭಾನುವಾರ ಶ್ರೀಕುಮಾರ ಬಸ್ಸು ಓಡಿಸುತ್ತಿದ್ದರು. ಸಿದ್ದಾಪುರದ ನೀಡಗೋಡಿನ ಮಂಜುನಾಥ ಗಡಕರ್ ಅವರು ಈ ವೇಳೆ ಬೈಕು ಓಡಿಸುತ್ತಿದ್ದರು. ಮಂಜುನಾಥ ಗಡಕರ್ ಅವರು ಎಲ್ & ಟಿ ಕಂಪನಿಯ ಸುಪ್ರವೈಸರ್ ಆಗಿದ್ದು, ಅವರು
ಕಾರವಾರದಿಂದ ಅರ್ಗಾ ಕಡೆ ಹೊರಟಿರುವಾಗ ಅಂಕೋಲಾದಿAದ ಕಾರವಾರ ಕಡೆ ಬರುತ್ತಿದ್ದ ಬಸ್ಸು ಡಿಕ್ಕಿಯಾಯಿತು.
ಕಾರವಾರದ ಸಂಕ್ರುಭಾಗ ಘಟ್ಟದಲ್ಲಿ ಬೈಕಿಗೆ ಬಸ್ಸಿನ ಹಿಂದಿನ ಭಾಗ ತಾಗಿತು. ಪರಿಣಾಮ ಮಂಜುನಾಥ ಗಡಕರ್ ಅವರು ಬೈಕಿನಿಂದ ಬಿದ್ದರು. ಕಾಲಿಗೆ ಪೆಟ್ಟು ಮಾಡಿಕೊಂಡರು. ಅದಾದ ನಂತರ ಮಂಜುನಾಥ ಗಡಕರ್ ಅವರು ಸುಧೀಂದ್ರ ಭಟ್ಟ ಅವರ ಅತಿಯಾದ ವೇಗದ ಚಾಲನೆ ಅಪಘಾತಕ್ಕೆ ಕಾರಣ ಎಂದು ಪೊಲೀಸ್ ದೂರು ನೀಡಿದರು.