ಕರಾವಳಿ ಭಾಗದಲ್ಲಿ ಭಾರೀ ಪ್ರಮಾಣದ ಗಾಳಿ-ಮಳೆಯಾಗುತ್ತಿದ್ದು, ಕಾರವಾರದಲ್ಲಿ ಮಾವಿನ ಮರವೊಂದು ಬಿದ್ದು 15ಕ್ಕೂ ಅಧಿಕ ಬೈಕ್ ಜಖಂ ಆಗಿದೆ. ಈ ಅವಧಿಯಲ್ಲಿ ಮರದ ಅಡಿ ನಿಂತಿದ್ದ ಹಸು ಸಾವನಪ್ಪಿದೆ.
ಶುಕ್ರವಾರ ಮಧ್ಯಾಹ್ನ ಸುರಿದ ಮಳೆಗೆ ಕಾರವಾರದ ಬಿಣಗಾ ಹಾಗೂ ಸುತ್ತಲಿನ ಪ್ರದೇಶದ ಜನ ಸಂಕಷ್ಟ ಅನುಭವಿಸಿದರು. ಲಿಟಲ್ ಬಿಣಗಾ ತೆರಳುವ ಮಾರ್ಗದಲ್ಲಿ ಮರವೊಂದು ಮುರಿದು ಬಿದ್ದಿತು. ನೇವಿ ಗೇಟಿನ ಬಳಿ ನಿಲ್ಲಿಸಿದ್ದ 15ಕ್ಕೂ ಅಧಿಕ ಬೈಕುಗಳು ಮರದ ಅಡಿ ಸಿಲುಕಿದವು. ಆ ಬೈಕುಗಳೆಲ್ಲವೂ ಜಖಂ ಆಗಿದೆ.
ಮರ ಬಿದ್ದಾಗ ಅಲ್ಲಿದ್ದ ಹಸುವೊಂದು ಮೋರಿಗೆ ಬಿದ್ದು ಸಾವನಪ್ಪಿದೆ. ಇನ್ನೊಂದು ಹಸುವಿಗೆ ಗಂಭೀರ ಪ್ರಮಾಣದಲ್ಲಿ ಪೆಟ್ಟಾಗಿದೆ. ಜಖಂ ಆದ ಬೈಕುಗಳು ನೌಕಾನೆಲೆಗೆ ಕೆಲಸಕ್ಕೆ ತೆರಳುವ ಸಿಬ್ಬಂದಿಯದ್ದಾಗಿದೆ. ಅಗ್ನಿಶಾಮಕ ಸಿಬ್ಬಂದಿ, ಪೊಲೀಸರು, ನೌಕಾ ಸಿಬ್ಬಂದಿ ಜೊತೆ ಐಆರ್‌ಬಿ ಕಂಪನಿ ಕೆಲಸಗಾರರು ಸೇರಿ ಮರ ತೆರವು ಕಾರ್ಯಾಚರಣೆ ನಡೆಸಿದ್ದಾರೆ.

