ಕಾಳಿ ನದಿಯಲ್ಲಿನ ಮೊಸಳೆಯೊಂದು ದಾಂಡೇಲಿಯಲ್ಲಿ ಬೇಲಿ ಹಾರಿದೆ. ರಕ್ಷಣಾ ಬೇಲಿ ದಾಟಿ ದಟಕ್ಕೆ ಬಂದ ಮೊಸಳೆಗೆ ಮರಳಿ ನದಿಗೆ ಹೋಗಲು ಸಾಧ್ಯವಾಗಿಲ್ಲ.
ADVERTISEMENT
ಹಳೆ ದಾಂಡೇಲಿಯ ಕಾಳಿ ನದಿಗೆ ಅಡ್ಡಲಾಗಿ ರಕ್ಷಣಾ ಬೇಲಿ ನಿರ್ಮಿಸಲಾಗಿದೆ. ಮೊಸಳೆಗಳು ದಡಕ್ಕೆ ಬರುವುದನ್ನು ತಡೆಯಲು ಇಲ್ಲಿ ಬೇಲಿ ನಿರ್ಮಿಸಲಾಗಿದೆ. ಆದರೆ, ಅದನ್ನು ಮೀರಿ ಮೊಸಳೆಯೊಂದು ದಡಕ್ಕೆ ಬಂದಿದ್ದು, ನಂತರ ಆ ಮೊಸಳೆಗೆ ಮತ್ತೆ ನದಿ ಸೇರಲು ಸಾಧ್ಯವಾಗಿಲ್ಲ. ನದಿ ಸೇರಲು ಸಾಹಸ ನಡೆಸಿದ ಮೊಸಳೆಯನ್ನು ವ್ಯಕ್ತಿಯೊಬ್ಬರು ಮೊಬೈಲಿನಲ್ಲಿ ಸೆರೆಹಿಡಿದಿದ್ದಾರೆ.
ADVERTISEMENT
ಕಾಳಿ ನದಿ ತಟದಲ್ಲಿ ಜನ ಬಟ್ಟೆ ಒಗೆಯುವ ಪ್ರದೇಶಕ್ಕೆ ಮೊಸಳೆ ಬಂದಿದೆ. ಕೆಲ ಕಾಲ ಅಲ್ಲಿಯೇ ಅದು ವಿಶ್ರಾಂತಿಪಡೆದಿದೆ. ಅದಾದ ನಂತರ ಮರಳಿ ನದಿಗೆ ತೆರಳುವ ಪ್ರಯತ್ನ ಮಾಡಿದ್ದು, ಗಂಟೆಗಳ ಕಾಲ ಹರಸಾಹಸ ಮಾಡಿದರೂ ನದಿಗೆ ತೆರಳಲು ಆಗಲಿಲ್ಲ. ಈ ವೇಳೆ ಅಲ್ಲಿದ್ದ ವ್ಯಕ್ತಿಯೊಬ್ಬರು ಮೊಸಳೆಯ ವಿಡಿಯೋ ಮಾಡಿದ್ದಾರೆ. ಆ ವಿಡಿಯೋ ಇದೀಗ ವೈರಲ್ ಆಗಿದೆ.
ADVERTISEMENT
ಮಾನವ ಪ್ರವೇಶಿಸುವ ಸ್ಥಳದಲ್ಲಿ ಪದೇ ಪದೇ ಮೊಸಳೆಗಳು ಬರುತ್ತಿರುವುದರಿಂದ ಆ ಭಾಗದ ಜನರ ಆತಂಕ ಹೆಚ್ಚಿದೆ. ಅರಣ್ಯ ಇಲಾಖೆ ಮತ್ತು ನಗರಾಡಳಿತದವರು ನಿರ್ಮಿಸಿದ ಬೇಲಿಯನ್ನು ಮೊಸಳೆ ಹೇಗೆ ದಾಡಿತು? ಎಂಬ ಪ್ರಶ್ನೆಗೂ ಉತ್ತರ ಸಿಕ್ಕಿಲ್ಲ. ಈ ಬೇಲಿಯನ್ನು ಇನ್ನಷ್ಟು ಸುರಕ್ಷಿತವಾಗಿರಿಸಬೇಕು ಎಂದು ಅಲ್ಲಿನವರು ಆಗ್ರಹಿಸಿದ್ದಾರೆ.
ಎರಡು ತಾಸಿನ ನಂತರ ವಿಡಿಯೋ ಮಾಡಿದ ವ್ಯಕ್ತಿ ಮತ್ತೆ ಅಲ್ಲಿ ಬಂದು ನೋಡಿದಾಗ ಮೊಸಳೆ ಕಾಣಲಿಲ್ಲ. ಇನ್ಯಾವುದೋ ದ್ವಾರದ ಮೂಲಕ ಅದು ನದಿ ಸೇರಿದ ಬಗ್ಗೆ ಊಹಿಸಲಾಗಿದೆ. ಬೇಲಿ ದಾಟಿ ದಡಕ್ಕೆ ಬಂದ ಮೊಸಳೆಯ ವಿಡಿಯೋ ಇಲ್ಲಿ ನೋಡಿ..