ಗೋಕರ್ಣದ ನಾಗೇಶ ಅಂಬಿಗ ಅವರು ಭಟ್ಕಳದ ಕಡೆ ಮೀನುಗಾರಿಕೆಗೆ ಹೋದಾಗ ಸಾವನಪ್ಪಿದ್ದಾರೆ. ಮುರುಡೇಶ್ವರದ ಜಲವಿಜಯ ಬೋಟಿನಲ್ಲಿ ಅವರು ಕುಸಿದು ಬಿದ್ದಿದ್ದು, ಅಲ್ಲಿಯೇ ಕೊನೆಯುಸಿರೆಳೆದಿದ್ದಾರೆ.
ಗೋಕರ್ಣ ಬಳಿಯ ಬೇಲಿಹಿತ್ಲದ ನಾಗೇಶ ಮಹಾಬಲೇಶ್ವರ ಅಂಬಿಗ (48) ಅವರು ಮೀನುಗಾರಿಕೆಯಲ್ಲಿ ಪರಿಣಿತಿಪಡೆದಿದ್ದರು. ಅಕ್ಟೊಬರ್ 6ರಂದು ಅವರು ಮುರುಡೇಶ್ವರದ ನಿತ್ಯಾನಂದ ನಾರಾಯಣ ಖಾರ್ವಿ ಅವರ ಬೋಟಿನ ಕೆಲಸಕ್ಕೆ ಹೋಗಿದ್ದರು. ಜಲವಿಜಯ ಎಂಬ ಯಾಂತ್ರಿಕೃತ ಬೋಟಿನಲ್ಲಿ ಅವರು ಅರಬ್ಬಿ ಸಮುದ್ರಕ್ಕೆ ಇಳಿದಿದ್ದರು.
ಆ ಬೋಟು ಎಂಟು ನಾಟಿಕಲ್ ಮೈಲು ದೂರ ಸಾಗಿದಾಗ ನಾಗೇಶ ಅಂಬಿಗ ಅವರು ಕುಸಿದು ಬಿದ್ದರು. ಬೋಟಿನಲ್ಲಿ ಬಿದ್ದ ಅವರನ್ನು ಇನ್ನಿತರ ಮೀನುಗಾರರು ಉಪಚರಿಸಿದ್ದು, ನಂತರ ಆಸ್ಪತ್ರೆಗೆ ಸಾಗಿಸಿದರು. ಆದರೆ, ನಾಗೇಶ ಅಂಬಿಗ ಅವರು ಬದುಕಲಿಲ್ಲ. ಈ ಬಗ್ಗೆ ಅವರ ಸಹೋದರ ಮಂಜುನಾಥ ಅಂಬಿಗ ಅವರು ಪೊಲೀಸರಿಗೆ ತಿಳಿಸಿದರು. ಭಟ್ಕಳ ಗ್ರಾಮೀಣ ಠಾಣೆ ಪೊಲೀಸರು ಪ್ರಕರಣ ದಾಖಲಿಸಿದರು.