ಅಂಕೋಲಾ ಪೂಜಗೇರಿ ಕಾಲೇಜು ಉಪನ್ಯಾಸಕ ರಾಮಚಂದ್ರ ಅಂಕೋಲೆಕರ್ ಅವರು ವಿದ್ಯಾರ್ಥಿನಿಯೊಬ್ಬರಿಗೆ ಕಾಮ ಪಾಠ ಮಾಡಿದ್ದಾರೆ. ಇದನ್ನು ವಿರೋಧಿಸಿ ನೂರಾರು ಜನ ಕಾಲೇಜಿನ ಮುಂದೆ ಪ್ರತಿಭಟಿಸಿದ್ದಾರೆ.
Advertisement. Scroll to continue reading.
ರಾಮಚಂದ್ರ ಅಂಕೋಲೇಕರ ಅವರಿಗೆ ಮೊದಲಿನಿಂದಲೂ ವಿದ್ಯಾರ್ಥಿಗಳಿಗಿಂತಲೂ ವಿದ್ಯಾರ್ಥಿನಿಗಳೆಂದರೆ ಅಚ್ಚುಮೆಚ್ಚು. ಕಂಪ್ಯುಟರ್ ಸೈನ್ಸ್ ಪಾಠ ಮಾಡುವ ಅವಧಿಯಲ್ಲಿಯೂ ಅವರು ಕಾಲೇಜು ಕನ್ಯೆಯರ ಸುತ್ತಲೇ ಸುತ್ತುತ್ತಾರೆ ಎಂಬುದು ಅಲ್ಲಿನವರ ಆರೋಪ. ಇದಕ್ಕೆ ಪುಷ್ಟಿ ಎನ್ನುವಂತೆ ಇದೀಗ ಅದೇ ಕಾಲೇಜಿನ ವಿದ್ಯಾರ್ಥಿನಿಯೊಬ್ಬರು ಲೈಂಗಿಕ ಕಿರುಕುಳದ ಆರೋಪ ಮಾಡಿದ್ದಾರೆ. ಪದೇ ಪದೇ ಅಸಭ್ಯವಾಗಿ ವರ್ತಿಸುವ ಉಪನ್ಯಾಸಕನ ವಿರುದ್ಧ ಊರ ಜನ ತಿರುಗಿ ಬಿದ್ದಿದ್ದು, ಮಂಗಳವಾರ ದಿಢೀರ್ ಪ್ರತಿಭಟನೆ ನಡೆಸಿದರು.
ಉಪನ್ಯಾಸಕನ ಕೀಟಲೆಯ ಬಗ್ಗೆ ಮೊದಲೇ ವಿದ್ಯಾರ್ಥಿನಿಯರು ಈ ವಿಷಯವನ್ನು ಪೊಲೀಸರ ಗಮನಕ್ಕೆ ತಂದಿದ್ದರು. ಆದರೂ, ಕ್ರಮವಾಗಿಲ್ಲ ಎಂದು ಪ್ರತಿಭಟನಾಕಾರರು ಆಕ್ರೋಶವ್ಯಕ್ತಪಡಿಸಿದರು. ಕಾಲೇಜು ಆವರಣದಲ್ಲಿ ವಿದ್ಯಾರ್ಥಿನಿಯರು ಪಾಲಕರ ಜೊತೆ ಆಗಮಿಸಿ ಪ್ರತಿಭಟಿಸಿದರು. ಆಡಳಿತ ಮಂಡಳಿಯವರು ಸ್ಥಳಕ್ಕೆ ಬರಬೇಕು ಎಂದು ಪ್ರತಿಭಟನಾಕಾರರು ಪಟ್ಟುಹಿಡಿದರು.
Advertisement. Scroll to continue reading.
ಪೊಲೀಸರು ಪ್ರತಿಭಟನಾಕಾರರನ್ನು ಸಮಾಧಾನ ಮಾಡಿದ್ದು, ತನಿಖೆಯ ಭರವಸೆ ನೀಡಿದರು. ಆರೋಪಿ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯಿಸಿದರು.