ಯಲ್ಲಾಪುರ-ಅಂಕೋಲಾ ಗಡಿಭಾಗದ ಕೆಳಾಸೆ ಹೊಳೆಯಲ್ಲಿ ಯುವಕನೊಬ್ಬ ಕೊಚ್ಚಿ ಹೋಗಿದ್ದು, ಶೋಧ ಕಾರ್ಯ ನಡೆಯುತ್ತಿದೆ. ಹೊಳೆಯಲ್ಲಿ ಯುವಕ ಮುಳುಗಿದ್ದು, ಆತ ಬದುಕಿದರೆ ಅದೇ ದೊಡ್ಡ ಪವಾಡ!
ಮಂಗಳವಾರ ಸಂಜೆ ಯಲ್ಲಾಪುರದ ಸಬಗೇರಿಯ ಸಾಗರ್ ರಾಮಾ ದೇವಾಡಿಗ (23) ಅವರು ಅರಬೈಲ್ ಬಳಿ ಹೋಗಿದ್ದರು. ಕೆಳಾಸೆ ಹೊಳೆ ಬಳಿ ಅವರು ಬರ್ತಡೆ ಪಾರ್ಟಿ ಮಾಡುತ್ತಿದ್ದರು. ಸ್ನೇಹಿತರಾದ ದಿನೇಶ, ಪುನಿತ್, ವಿನೋದ ಸಹ ಇದ್ದರು. ಮೋಜು-ಮಸ್ತಿಯಲ್ಲಿರುವಾಗ ಸಾಗರ ದೇವಾಡಿಗ ಅವರು ನೀರಿನ ಕಡೆ ಹೋದರು.
ಬರ್ತಡೆ ಅಂಗವಾಗಿ ಹೊಳೆ ಅಂಚಿನ ಕಾಡಿನಲ್ಲಿ ಬರ್ತಡೆ ಪಾರ್ಟಿ ಮಿತಿ ಮೀರಿತ್ತು. ಪರಿಣಾಮ ಆ ಹೊಳೆಯಲ್ಲಿ ಅವರು ಕೊಚ್ಚಿ ಹೋಗಿದ್ದು, ಇದರಿಂದ ಅವರ ಸ್ನೇಹಿತರು ಆತಂಕಕ್ಕೆ ಒಳಗಾದರು. ಸಾಹರ ಕೊಚ್ಚಿಹೋದ ಬಗ್ಗೆ ಅಕ್ಕಪಕ್ಕದವರಿಗೆ ವಿಷಯ ಮುಟ್ಟಿಸಿದರು. ಪೊಲೀಸರು ಸಹ ಸ್ಥಳಕ್ಕೆ ಬಂದು ಶೋಧ ನಡೆಸಿದರು. ಆದರೆ, ಸಾಗರ ಅವರ ಸುಳಿವು ಸಿಗಲಿಲ್ಲ. ರಾತ್ರಿಯವರೆಗೂ ಹುಡುಕಾಟ ಮುಂದುವರೆದಿದೆ.