ದಾಂಡೇಲಿಯ ಇರ್ಷಾದ್ ಅವರು ಈಜಲು ಬಾರದಿದ್ದರೂ ನದಿಗೆ ಹಾರಿ ಪ್ರಾಣ ಕಳೆದುಕೊಂಡಿದ್ದಾರೆ. ಜೊಯಿಡಾದ ಪಾಂಡ್ರಿ ನದಿಯಲ್ಲಿ ಅವರ ಶವ ತೇಲಾಡಿದ್ದು, ರಕ್ಷಣಾ ತಂಡದವರು ಶವವನ್ನು ದಡಕ್ಕೆ ತಂದಿದ್ದಾರೆ.
ದಾoಡೇಲಿಯ ಗಣೇಶನಗರದ ಇರ್ಷಾದ್ ಅಹ್ಮದ್ ಮುಗುಟಸಾಬ್ ಹುಕ್ಕೇರಿ (33) ಮಂಗಳವಾರ ಇರ್ಷಾದ್ ಅವರು ತಮ್ಮ ಸ್ನೇಹಿತರ ಜೊತೆ ಜೊಯಿಡಾಗೆ ಹೋಗಿದ್ದರು. ಅವರ ಜೊತೆ ಒಟ್ಟು ಎಂಟು ಜನರಿದ್ದರು. ಈ ಎಲ್ಲರೂ ಮಧ್ಯಾಹ್ನ ಊಟದ ನಂತರ ಜೋಯಿಡಾದ ಚಾಂದೇವಾಡಿಗೆ ಹೋಗಿದ್ದರು.
ಅಲ್ಲಿರುವ ಪಾಂಡ್ರಿ ನದಿ ನೋಡಲು ಹೋದ ಸ್ನೇಹಿತರು ಈಜುವುದಕ್ಕಾಗಿ ನೀರಿಗೆ ಹಾರಿದರು. ಆದರೆ, ಈಜು ಬಾರದ ಇರ್ಷಾದ್ ಅವರು ನೀರಿಗಿಳಿದಿದ್ದು, ಅಲ್ಲಿನ ರಭಸಕ್ಕೆ ಕೊಚ್ಚಿ ಹೋದರು. ಅದೇ ನೀರಿನಲ್ಲಿ ಮುಳುಗಿದ ಅವರು ಮತ್ತೆ ಜೀವಂತವಾಗಿ ಮೇಲೆ ಬರಲಿಲ್ಲ. ಶವವಾಗಿ ತೇಲುತ್ತಿದ್ದ ಇರ್ಷಾದ್ ಅವರನ್ನು ನಂತರ ದಡಕ್ಕೆ ತರಲಾಗಿದ್ದು, ಪೊಲೀಸರು ಸದ್ಯ ಸ್ಥಳ ಭೇಟಿ ಮಾಡಿದ್ದಾರೆ.