ಕಾರವಾರದಲ್ಲಿ ಕಳ್ಳತನಕ್ಕೆ ಯತ್ನಿಸಿದ ಯುವಕನಿಗೆ ಜನ ಕೆನ್ನೆಗೆ ಬಾರಿಸಿದ್ದಾರೆ. ಅದಾದ ನಂತರ ಪೊಲೀಸರನ್ನು ಸ್ಥಳಕ್ಕೆ ಕರೆಯಿಸಿ ಕಳ್ಳನನ್ನು ಅವರಿಗೆ ಒಪ್ಪಿಸಿದ್ದಾರೆ.
ಕಾರವಾರದ ಜಾಂಬಾ ಬಳಿಯ ಮನೆಗೆ ಕಳ್ಳನೊಬ್ಬ ನುಗ್ಗಲು ಯತ್ನಿಸಿದ್ದ. ಈ ವೇಳೆ ಮನೆಯಲ್ಲಿದ್ದ ನಾಯಿ ಜೋರಾಗಿ ಬೊಗಳಿದ್ದು, ಆಗ ಊರಿನವರು ಆತನನ್ನು ಹಿಡಿದಿದ್ದಾರೆ. ಒಟ್ಟು ಮೂವರು ಕಳ್ಳರು ಕದಿಯಲು ಬಂದಿದ್ದು, ಇಬ್ಬರು ಓಡಿ ಪರಾರಿಯಾಗಿದ್ದಾರೆ. ಒಬ್ಬ ಮಾತ್ರ ಜನರ ಕೈಗೆ ಸಿಕ್ಕಿ ಬಿದ್ದಿದ್ದರಿಂದ ಎಲ್ಲರೂ ಸೇರಿ ಆತನಿಗೆ ಥಳಿಸಿದ್ದಾರೆ.
ಕಳ್ಳತನಕ್ಕೆ ಯತ್ನಿಸಿದವನನ್ನು ಊರಿನ ಜನ ಕಂಬಕ್ಕೆ ಕಟ್ಟಿ ಹಾಕಿದ್ದಾರೆ. ಅದಾದ ನಂತರ ಪೊಲೀಸರಿಗೆ ಫೋನ್ ಮಾಡಿದ್ದು, ಗ್ರಾಮೀಣ ಠಾಣೆ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದಾರೆ. ಮಾಹಿತಿಗಳ ಪ್ರಕಾರ ಆ ಮೂವರು ಕಳ್ಳರು ಬೇರೆ ರಾಜ್ಯದವರಾಗಿದ್ದು, ಕಳ್ಳತನ ಮಾಡಿಯೇ ಜೀವನ ನಡೆಸುತ್ತಿರುವುದಾಗಿ ಹೇಳಲಾಗಿದೆ.