ಅರಣ್ಯ ಹಕ್ಕು ಕಾಯಿದೆಯ ಮೌಲ್ಯತೆ ಮತ್ತು ತಿರಸ್ಕರಿಸಿದ ಅರ್ಜಿಯ ಒಕ್ಕಲೆಬ್ಬಿಸುವ ಪ್ರಕರಣದ ವಿಷಯವಾಗಿ ವಾದ ಮಂಡಿಸಲು ದೆಹಲಿಗೆ ಹೋಗಿದ್ದ ಶಿರಸಿಯ ನ್ಯಾಯವಾದಿ ರವೀಂದ್ರ ನಾಯ್ಕ ಅವರಿಗೆ ನಿರಾಸೆಯಾಗಿದೆ. ಅಕ್ಟೊಬರ್ 14ರಂದು ನಡೆಯಬೇಕಿದ್ದ ಪ್ರಕರಣದ ವಿಚಾರಣೆಯನ್ನು ತ್ರಿಸದಸ್ಯ ನ್ಯಾಯಮೂರ್ತಿಗಳ ಪೀಠ ಮುಂದೂಡಿದೆ.
ಎಲ್ಲವೂ ಅಂದುಕೊoಡoತೆ ನಡೆದಿದ್ದರೆ, ಈ ದಿನ ಸರ್ವೋಚ್ಛ ನ್ಯಾಯಾಲಯದ ನ್ಯಾಯಮೂರ್ತಿಗಳಾದ ಸೂರ್ಯಕಾಂತ, ಜಾಯಿಮಲ್ಯ ಮತ್ತು ಬಜಾಶಿ ಒಳಗೊಂಡ ತ್ರಿ ಸದಸ್ಯತ್ವ ನ್ಯಾಯಪೀಠದಲ್ಲಿ ವಿಚಾರಣೆ ಆಗಬೇಕಿತ್ತು. ನ್ಯಾಯಪೀಠದಲ್ಲಿ ವಿಚಾರಣೆಯ ಕ್ರಮ ಸಂಖ್ಯೆ ಸಹ ನಿಗಧಿಯಾಗಿದ್ದು, ಸಂಖ್ಯೆ 41ಕ್ಕಾಗಿ ಎಲ್ಲರೂ ಕಾಯುತ್ತಿದ್ದರೂ ಸಮಯದ ಅಭಾವದ ಕಾರಣದಿಂದ ಈ ದಿನ ಆ ಪ್ರಕರಣ ವಿಚಾರಣೆಗೆ ಬರಲಿಲ್ಲ.
ಅರಣ್ಯ ಹಕ್ಕು ಕಾಯಿದೆ ಮೌಲ್ಯತೆ ರದ್ದು ಪಡಿಸುವ ಉದ್ದೇಶದಿಂದ 2008ರಲ್ಲಿ ವೈಲ್ಡ ಲೈಪ್ ಪಸ್ಟ್ ಸೊಸೈಟಿ ಮತ್ತು ಇನ್ನಿತರ 8 ಪರಿಸರ ಸಂಘಟನೆಗಳು ಸುಪ್ರೀಂ ಕೋರ್ಟಗೆ ಅರ್ಜಿ ಸಲ್ಲಿಸಿದ್ದವು. ಕೇಂದ್ರ ಸರ್ಕಾರ ಮತ್ತು ದೇಶದ 31 ರಾಜ್ಯಗಳ ವಿರುದ್ಧ ಸಲ್ಲಿಕೆಯಾದ ಅರ್ಜಿಗೆ ಈ ದಿನ ಅಂತಿಮ ವಿಚಾರಣೆ ನಡೆಸಲು ದಿನಾಂಕ ನಿಗದಿಯಾಗಿತ್ತು. ಸದ್ಯ ವಿಚಾರಣೆಯ ಹೊಸ ದಿನಾಂಕ ಪ್ರಕಟವಾಗಬೇಕಿದೆ.