ಅoಕೋಲಾದ ಬೇಲೆಕೇರಿ ಬಂದರಿನಲ್ಲಿ ಲಂಗರು ಹಾಕಿದ್ದ ಮತ್ತೊಂದು ದೋಣಿ ದುರಂತಕ್ಕೀಡಾಗಿದೆ. ಮೊನ್ನೆಯಷ್ಟೇ ದೋಣಿಯೊಂದು ಮುಗುಚಿ ಬಿದ್ದಿದ್ದು, ಶುಕ್ರವಾರ ರಾತ್ರಿ ಮತ್ತೆ ಇಂಥಹುದೇ ಅವಘಡ ನಡೆದಿದೆ. ಮೂರು ದಿನದಲ್ಲಿ ಎರಡು ದೋಣಿ ಮುಳುಗಡೆಯಿಂದಾಗಿ ಮೀನುಗಾರರು ಆತಂಕಕ್ಕೀಡಾಗಿದ್ದಾರೆ.
ಈ ಭಾಗದ ಮೀನುಗಾರರು ಮೊದಲೇ ಆರ್ಥಿಕ ಸಂಕಷ್ಟದಲ್ಲಿದ್ದಾರೆ. ಹೀಗಿರುವಾಗ ಅರಬ್ಬಿ ಸಮುದ್ರದ ಅಲೆಗಳು ಅಲ್ಲಿನವರನ್ನು ಇನ್ನಷ್ಟು ಬಡವರನ್ನಾಗಿಸುತ್ತಿದೆ. ಸಾಲ ಮಾಡಿ ದೋಣಿ ಖರೀದಿಸಿದ ಮೀನುಗಾರರು ನಿರಂತರ ಅವಘಡಗಳಿಂದ ಕೆಂಗಟ್ಟಿದ್ದಾರೆ. ಬಂದರಿನಲ್ಲಿ ಸೂಕ್ತ ಅಲೆ ತಡೆಗೋಡೆ ಇಲ್ಲದಿರುವುದೇ ಈ ಅವಾಂತರಗಳಿಗೆ ಕಾರಣವಾಗಿದೆ. ಶುಕ್ರವಾರ ರಾತ್ರಿ ಶ್ರೀಕಾಂತ ತಾಂಡೇಲ ಅವರಿಗೆ ಸೇರಿದ್ದ ಶ್ರೀ ದುರ್ಗಾಪ್ರಸಾದ ಪರ್ಶೀಯನ್ ಬೋಟು ಮುಳುಗಡೆಯಾಗಿದೆ. ಪರಿಣಾಮ ದೋಣಿ ಮಾಲಕರಿಗೆ ಲಕ್ಷಾಂತರ ರೂ ಹಾನಿಯಾಗಿದೆ.
ಬೇಲೆಕೇರಿ ಬಂದರು ಪ್ರದೇಶದಲ್ಲಿ ಅನೇಕ ವರ್ಷಗಳಿಂದ ಹೂಳು ತೆಗೆದಿಲ್ಲ. ಬಂದರು ಪ್ರದೇಶದಲ್ಲಿ ಹೂಳು ಎತ್ತದಿರುವುದು ದೋಣಿಗಳ ಪಾಲಿಗೆ ಮಾರಕವಾಗಿದೆ. ಹೂಳು ತುಂಬಿದ ಬಂದರಿನಲ್ಲಿ ಆಳ ಕಡಿಮೆಯಿರುವುದರಿಂದ ದೋಣಿಗಳು ಅಲ್ಲಿ ಲಂಗರು ಹಾಕಲು ಸಮಸ್ಯೆ ಅನುಭವಿಸುತ್ತಿವೆ. ಮೀನುಗಾರಿಕಾ ಇಲಾಖೆಯ ವಿರುದ್ಧ ಆ ಭಾಗದ ಜನ ಆಕ್ರೋಶವ್ಯಕ್ತಪಡಿಸಿದ್ದಾರೆ.
ಒಂದು ದೋಣಿಯನ್ನು ಅವಲಂಭಿಸಿ ಅನೇಕ ಕುಟುಂಬಗಳು ಬದುಕುತ್ತಿವೆ. ದೋಣಿ ದುರಂತದಿAದ ದೋಣಿ ಮಾಲಕರಿಗೆ ಮಾತ್ರವಲ್ಲದೇ, ಅದನ್ನು ನಂಬಿದ ಕುಟುಂಬಗಳು ಅತಂತ್ರಕ್ಕೆ ಒಳಗಾಗುತ್ತಿದ್ದಾರೆ. ಹೂಳು ತೆಗೆಯದಿರುವುದು ಹಾಗೂ ಅಲೆ ತಡೆಗೋಡೆ ನಿರ್ಮಿಸಿದ ಕಾರಣ ಒಂದಕೊAದು ದೋಣಿಗಳು ಡಿಕ್ಕಿಯಾಗಿಯೂ ಹಾನಿ ಸಂಭವಿಸುತ್ತಿದೆ. ಮುಳುಗಿದ ದೋಣಿ ಮೇಲೆತ್ತಲು ಕ್ರೋನ್, ಪಂಪ್, ಯಂತ್ರ ಬಳಸುವುದು ಸಹ ಬಡ ಮೀನುಗಾರರ ಪಾಲಿಗೆ ದೊಡ್ಡ ಹೊರೆಯಾಗಿದೆ.