ಹೊನ್ನಾವರದ ಮುತೂಡ ಫೈನಾನ್ಸಿನಿಂದ ಚಿನ್ನ ಬಿಡಿಸಿಕೊಂಡು ಮನೆಗೆ ಹೊರಟಿದ್ದ ಮಹಿಳೆಯ ಬ್ಯಾಗ್ ಕಳ್ಳತನವಾಗಿದೆ. ಚಿನ್ನಾಭರಣಗಳ ಜೊತೆ ಬ್ಯಾಗಿನಲ್ಲಿದ್ದ ಹಣವೂ ಕಳ್ಳರ ಪಾಲಾಗಿದೆ.
ಹಳದಿಪುರದ ಬನ್ಸಾಪ್ ಶಾರಿಕ್ ಶೇಖ್ (28) ಅವರು ಅಕ್ಟೊಬರ್ 4ರ ಸಂಜೆ ಮುತೂಡ್ ಫೈನಾನ್ಸಿಗೆ ಹೋಗಿದ್ದರು. ಅಲ್ಲಿಂದ ಚಿನ್ನ ಬಿಡಿಸಿಕೊಂಡು ಮನೆ ಕಡೆ ಹೊರಟಿದ್ದರು. ಶರಾವತಿ ಸರ್ಕಲಿನಲ್ಲಿ ಬಸ್ಸಿಗಾಗಿ ಅವರು ಕಾಯುತ್ತಿದ್ದು, ಬಸ್ಸು ಬಂದ ನಂತರ ಅದನ್ನು ಏರಿದರು. ಬಸ್ಸಿನಲ್ಲಿ ಅವರು ತಮ್ಮ ಬ್ಯಾಗ್ ನೋಡಿದಾಗ ಅದರ ಜಿಪ್ ತೆರೆದಿತ್ತು.
ಬ್ಯಾಗಿನ ಒಳಗೆ ಕೈ ಹಾಕಿ ನೋಡಿದಾಗ ಅದರಲ್ಲಿ ಪರ್ಸ ಇರಲಿಲ್ಲ. ಚಿನ್ನ ಸಹ ಕಾಣಲಿಲ್ಲ. ಬಸ್ಸಿನ ಒಳಗೆ ಪೂರ್ತಿಯಾಗಿ ಅವರು ಹುಡುಕಾಟ ನಡೆಸಿದ್ದು, ಚಿನ್ನ ಸಿಗಲಿಲ್ಲ. 80 ಸಾವಿರ ರೂ ಮೌಲ್ಯದ ಬಂಗಾರದ ಚೈನು, 8 ಸಾವಿರದ ಕಿವಿಯ ರಿಂಗು ಹಾಗೂ 8 ಸಾವಿರ ರೂ ನಗದು
ಕಳ್ಳತನವಾಗಿರುವ ಬಗ್ಗೆ ಅವರು ಪೊಲೀಸ್ ದೂರು ನೀಡಿದರು. ನಿನ್ನೆ ಸಹ ಹೊನ್ನಾವರದಲ್ಲಿ ಸರಗಳ್ಳತನ ನಡೆದಿದ್ದು, ಆ ಬಗ್ಗೆಯೂ ಮಹಿಳೆಯೊಬ್ಬರು ಪೊಲೀಸರ ಮೊರೆ ಹೋಗಿದ್ದರು.