ಶಿರಸಿಯ ಗಲ್ಲಿ ಗಲ್ಲಿಗಳಲ್ಲಿಯೂ ಗಾಂಜಾ ವ್ಯಸನಿಗಳ ಸಂಖ್ಯೆ ಜೋರಾಗಿದ್ದು, ಆಟೋ ಚಾಲಕ ವೆಂಕಟೇಶ ಪಾವಸ್ಕರ್ ಸಹ ಈ ದುಶ್ಚಟದ ದಾಸರಾಗಿದ್ದಾರೆ.
ಟಿಎಸ್‌ಎಸ್ ರಸ್ತೆಯ ಗದ್ದೆವಾಮನ ಅಂಗಡಿ ಬಳಿ ಆಟೋ ಚಾಲಕರಾಗಿರುವ ವೆಂಕಟೇಶ ಶಿವಪ್ಪ ಪಾವಸ್ಕರ್ ಅವರು ಗಾಂಜಾ ಸೇವಿಸಿ ಸಿಕ್ಕಿಬಿದ್ದಿದ್ದಾರೆ. ಕಾನೂನುಬಾಹಿರ ಕೆಲಸ ಮಾಡಿದ ಕಾರಣ ಪೊಲೀಸರು ಅವರ ವಿರುದ್ಧ ಕಠಿಣ ಕ್ರಮ ಜರುಗಿಸಿದ್ದಾರೆ. ಅಕ್ಟೊಬರ್ 23ರಂದು ಆನೆಹೊಂಡ ಕಚ್ಚಾ ರಸ್ತೆಯಲ್ಲಿ ವೆಂಕಟೇಶ ಪಾವಸ್ಕರ್ ಅವರು ಓಡಾಡುತ್ತಿದ್ದರು. ಶಿರಸಿ ನಗರ ಪೊಲೀಸ್ ಠಾಣೆಯ ಪಿಎಸ್‌ಐ ನಾಗಪ್ಪ ಅವರು ತಮ್ಮ ತಂಡದ ಜೊತೆ ಆ ಭಾಗಕ್ಕೆ ಹೋಗಿದ್ದು, ವೆಂಕಟೇಶ ಪಾವಸ್ಕರ್ ಅವರನ್ನು ನೋಡಿದರು.
ವೆಂಕಟೇಶ್ ಪಾವಸ್ಕರ್ ಅವರು ಆ ಅವಧಿಯಲ್ಲಿ ಎಂದಿನAತೆ ಇರಲಿಲ್ಲ. ಹೀಗಾಗಿ ಪೊಲೀಸರು ಅವರನ್ನು ಮಾತನಾಡಿಸಿದರು. ನಂತರ ವೆಂಕಟೇಶ್ ಪಾವಸ್ಕರ್ ಅವರನ್ನು ಆಸ್ಪತ್ರೆಗೆ ಕರೆತಂದು ವೈದ್ಯಕೀಯ ವಿಚಾರಣೆಗೆ ಒಳಪಡಿಸಿದರು. ಆಗ ವೈದ್ಯಾಧಿಕಾರಿಗಳು ಗಾಂಜಾ ಸೇವನೆಯನ್ನು ದೃಢಪಡಿಸಿದರು. ಈ ಹಿನ್ನಲೆ ಆಟೋ ಚಾಲಕ ವೆಂಕಟೇಶ್ ಪಾವಸ್ಕರ್ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದರು.
`ಮಾದಕ ವ್ಯಸನ ಆರೋಗ್ಯಕ್ಕೆ ಹಾನಿಕರ’

