ದಾಂಡೇಲಿಯಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಹಳಿಯಾಳದ ಕಟ್ಟಡ ಕಾರ್ಮಿಕರೊಬ್ಬರು ಸಾವನಪ್ಪಿದ್ದಾರೆ. ತಿರುವಿನಿಂದ ಕೂಡಿದ ರಸ್ತೆಯಲ್ಲಿ ಬೈಕು ಹಾಗೂ ಕಾರಿನ ನಡುವೆ ಅಪಘಾತ ನಡೆದಿದೆ.
ಹಳಿಯಾಳ ಖಾಮರೊಳ್ಳಿಯಲ್ಲಿ ಗೌಂಡಿ ಕೆಲಸ ಮಾಡುವ ಅಕ್ಷಯ ಪುಂಡಳಿಕ ಧಾರವಾಡಕರ (24) ಅವರು ಅದೇ ಊರಿನ ಗೌಂಡಿ ಸೋಮನಾಥ ಮಲ್ಲೇಶ ಡಿಗಿ (30) ಅವರ ಜೊತೆ ಬೈಕಿನಲ್ಲಿ ಸಂಚರಿಸುತ್ತಿದ್ದರು. ಅಕ್ಟೊಬರ್ 4ರಂದು ಹಳಿಯಾಳದಿಂದ ದಾಂಡೇಲಿ ಕಡೆ ಅಕ್ಷಯ ಧಾರವಾಡಕರ್ ಅವರು ಹೊರಟಿದ್ದರು. ಅವರ ಬೈಕಿನ ವೇಗ ಎಂದಿಗಿAತ ಜಾಸ್ತಿಯಾಗಿದ್ದು, ತಿರುವುಗಳಿಂದ ಕೂಡಿದ ರಸ್ತೆಯಲ್ಲಿ ಸಹ ಬೈಕಿನ ವೇಗ ತಗ್ಗಲಿಲ್ಲ.
ಇದೇ ವೇಳೆ ದಾಂಡೇಲಿಯಿ0ದ ಹಳಿಯಾಳದ ಕಡೆ ಇಕೋ ಕಾರು ಸಂಚರಿಸುತ್ತಿದ್ದು, ರಸ್ತೆಯ ಬಲ ಬದಿಗೆ ಬಂದ ಬೈಕು ಆ ಕಾರಿಗೆ ಡಿಕ್ಕಿ ಹೊಡೆಯಿತು. ಪರಿಣಾಮ ಅಕ್ಷಯ ಧಾರವಾಡಕರ ಅವರ ಕೈ-ಕಾಲಿಗೆ ಪೆಟ್ಟಾಯಿತು. ತೊಡೆಯ ಬಳಿಯೂ ಅವರಿಗೆ ಗಾಯವಾಯಿತು. ಅವರ ಬೈಕಿನಲ್ಲಿ ಹಿಂದೆ ಕೂತಿದ್ದ ಸೋಮನಾಥ ಡಿಗಿ ಅವರ ತಲೆಗೆ ಪೆಟ್ಟಾಗಿತ್ತು. ಹತ್ತಿರ ಹೋಗಿ ನೋಡಿದಾಗ ಸೋಮನಾಥ ಡಿಗಿ ಅವರ ತೊಡೆಗೆ ಆದ ಪೆಟ್ಟಿನಿಂದ ಅವರು ಅಲ್ಲಿಯೇ ಸಾವನಪ್ಪಿದ್ದರು.
ತುಮಕೂರಿನ ಕಾಂತರಾಜ ಅವರು ಈ ಅಪಘಾತ ನೋಡಿದ್ದು, ಅವರು ದಾಂಡೇಲಿ ಪೊಲೀಸರಿಗೆ ಮಾಹಿತಿ ನೀಡಿದರು. ವೇಗವಾಗಿ ಬೈಕ್ ಓಡಿಸಿದ ಅಕ್ಷಯ ಧಾರವಾಡಕರ್ ವಿರುದ್ಧ ದಾಂಡೇಲಿ ಪೊಲೀಸರು ಪ್ರಕರಣ ದಾಖಲಿಸಿ, ಕಾನೂನು ಕ್ರಮ ಜರುಗಿಸಿದರು.