ಶಿರಸಿ-ಹುಬ್ಬಳ್ಳಿ ರಸ್ತೆ ಮಾರ್ಗವಾಗಿ ತಾಯಿ-ಮಗಳು ಸಂಚರಿಸುತ್ತಿದ್ದ ಸ್ಕೂಟಿಗೆ ಬೈಕ್ ಡಿಕ್ಕಿಯಾಗಿದೆ. ಪರಿಣಾಮ 28 ವರ್ಷದ ಮಹಿಳೆ ಜೊತೆ ಅವರ ಐದು ವರ್ಷದ ಮಗುವಿಗೆ ಗಾಯವಾಗಿದೆ.
ಅಕ್ಟೊಬರ್ 21ರಂದು ಶಿರಸಿ ಮರಾಠಿಕೊಪ್ಪದ ಸುಮನಾ ಗಂಗೋಳ್ಳಿ (28) ಅವರು ತಮ್ಮ ಮಗಳಾದ ಸಮನ್ವಿ ಗಂಗೊಳ್ಳಿ (5) ಅವರ ಜೊತೆ ಸ್ಕೂಟಿಯಲ್ಲಿ ಹೋಗುತ್ತಿದ್ದರು. ಶಿವಳ್ಳಿಯ ನಾಗರಾಜ ದೇವಾಡಿಗ ಅವರು ಅದೇ ಮಾರ್ಗವಾಗಿ ತಮ್ಮ ಬೈಕು ಓಡಿಸುತ್ತಿದ್ದರು. ಸುಮನಾ ಗಂಗೋಳ್ಳಿ ಅವರು ಚಲಾಯಿಸುತ್ತಿದ್ದ ವಾಹನಕ್ಕೆ ನಾಗರಾಜ ದೇವಾಡಿಗ ಅವರು ಹಿಂದಿನಿAದ ಗುದ್ದಿದರು.
ಪರಿಣಾಮ ಮಗುವಿನ ಜೊತೆಯಿದ್ದ ಸುಮನಾ ಗಂಗೊಳ್ಳಿ ಅವರು ನೆಲಕ್ಕೆ ಬಿದ್ದರು. ಸುಮನಾ ಗಂಗೊಳ್ಳಿ ಅವರ ಬಲಭಾಗದ ಕಾಲು, ಪಾದ, ಕೈಗಳಿಗೆ ಗಾಯವಾಯಿತು. ಅವರ ಕೈ-ಕಾಲಿನಿಂದ ರಕ್ತ ಸುರಿಯಿತು. ಅವರ ಮಗಳು ಸಮನ್ವಿ ಗಂಗೊಳ್ಳಿ ಅವರಿಗೂ ಈ ಅಪಘಾತದಿಂದ ಪೆಟ್ಟಾಯಿತು. ಸಮನ್ವಿ ಗಂಗೊಳ್ಳಿ ಅವರ ಹಣೆಗೆ ಪೆಟ್ಟಾಗಿ ರಕ್ತ ಬಂದಿತು. ಅವರು ಓಡಿಸುತ್ತಿದ್ದ ವಾಹನವೂ ಜಖಂ ಆಯಿತು.
ಅಪಘಾತದ ವಿಷಯ ತಿಳಿದ ನೆಟ್‌ವರ್ಕ ಇಂಜಿನಿಯರ್ ಆಗಿರುವ ಸುಮನಾ ಗಂಗೊಳ್ಳಿ ಅವರ ಪತಿ ಸಂದೇಶ ಗೊಂಗೊಳ್ಳಿ ಅವರು ಅಲ್ಲಿಗೆ ದೌಡಾಯಿಸಿದರು. ಗಾಯಗೊಂಡ ಪತ್ನಿ ಹಾಗೂ ಮಗಳ ಆರೈಕೆ ಮಾಡಿದರು. ಅದಾದ ನಂತರ ಶಿರಸಿ ಸಂಚಾರ ಪೊಲೀಸ್ ಠಾಣೆಗೆ ತೆರಳಿ ಅಪಘಾತಕ್ಕೆ ಕಾರಣರಾದ ನಾಗರಾಜ ದೇವಾಡಿಗ ವಿರುದ್ಧ ದೂರು ನೀಡಿದರು.

