ಭಟ್ಕಳದಲ್ಲಿ ನಿಧಾನವಾಗಿ ಚಲಿಸುತ್ತಿದ್ದ ಸ್ಕೂಟಿಗೆ ವೇಗವಾಗಿ ಬಂದ ಬಸ್ಸು ಡಿಕ್ಕಿ ಹೊಡೆದಿದೆ. ಅದೇ ಬಸ್ಸಿನ ಚಕ್ರಕ್ಕೆ ಸಿಲುಕಿ ಸ್ಕೂಟಿ ಸವಾರ ಸುಂದರ ಆಚಾರಿ ಅವರು ಸಾವನಪ್ಪಿದ್ದಾರೆ.
ಅಕ್ಟೊಬರ್ 5ರಂದು ಭಟ್ಕಳ ಕೆಬಿ ರಸ್ತೆಯ ಆನಂದ ಮಾಧವ ನಾಯ್ಕ ಅವರು ಕುಂದಾಪುರದಿoದ ಭಟ್ಕಳದ ಕಡೆ ಬಸ್ಸು ಓಡಿಸಿಕೊಂಡು ಬರುತ್ತಿದ್ದರು. ಮುಟ್ಟಳ್ಳಿ ಬೈಪಾಸ್ ಹತ್ತಿರ ಸುಂದರ ಆಚಾರಿ ಅವರು ಸ್ಕೂಟಿ ಓಡಿಸಿಕೊಂಡು ಹೋಗುತ್ತಿದ್ದರು. ವೇಗವಾಗಿ ಬಂದ ಬಸ್ಸು ಸ್ಕೂಟಿಗೆ ಡಿಕ್ಕಿ ಹೊಡೆಯಿತು.
ಪರಿಣಾಮ ಸುಂದರ ಆಚಾರಿ ಅವರು ನೆಲಕ್ಕೆ ಬಿದ್ದರು. ಆಗ, ಬಸ್ಸಿನ ಹಿಂದಿನ ಚಕ್ರ ಸುಂದರ ಆಚಾರಿ ಅವರ ತಲೆಮೇಲೆ ಹತ್ತಿದ್ದು, ಹೆಲ್ಮೆಟ್ ಒಡೆಯಿತು. ತಲೆಯಿಂದ ರಕ್ತ ಚಿಮ್ಮಿ ಅವರು ಸಾವನಪ್ಪಿದರು. ಮುಂಡಳ್ಳಿಯ ಸಿವಿಲ್ ಗುತ್ತಿಗೆದಾರ ಗುರುರಾಜ ಆಚಾರಿ ಅವರು ಈ ಬಗ್ಗೆ ಭಟ್ಕಳ ಪೊಲೀಸರಿಗೆ ಮಾಹಿತಿ ನೀಡಿ, ಪ್ರಕರಣ ದಾಖಲಿಸಿದರು.