ಕಾರವಾರದ ಅಂಬೀಷ್ ವಾಸವನ್ ಹಾಗೂ ರಾಮಕೃಷ್ಣ ನಾರಾಯಣಪ್ಪ ಅವರ ನಡುವೆ ಹೊಡೆದಾಟ ನಡೆದಿದೆ.
ಕಾರವಾರದ ಕದ್ರಾದ ಕೆಪಿಸಿ ಲೇಬರ್ ಕಾಲೋನಿಯಲ್ಲಿ ಅಂಬೀಷ್ ಅವರು ಜರಾಕ್ಸ ಅಂಗಡಿ ನಡೆಸುತ್ತಾರೆ. ಅಲ್ಲಿಯೇ ರಾಮಕೃಷ್ಣ ಅವರು ಕೆಪಿಸಿ ವಾಹನದ ಚಾಲಕರಾಗಿ ದುಡಿಯುತ್ತಿದ್ದಾರೆ. ರಸ್ತೆಯಲ್ಲಿದ್ದ ದನಗಳನ್ನು ಓಡಿಸುವ ವಿಷಯವಾಗಿ ಅವರಿಬ್ಬರ ನಡುವೆ ಜಗಳ ನಡೆದಿದ್ದು, ಅದೇ ತಾರಕಕ್ಕೇರಿದೆ. ಪರಿಣಾಮ ಅವರಿಬ್ಬರು ಮದ್ಯರಾತ್ರಿ ನಡು ರಸ್ತೆಯಲ್ಲಿ ಹೊಡೆದಾಡಿಕೊಂಡಿದ್ದಾರೆ.
ಅಕ್ಟೊಬರ್ 22ರ ರಾತ್ರಿ 12ಗಂಟೆಗೆ ಕೆಪಿಸಿ ಕಾಲೋನಿಯ ಶಾಫಿಂಗ್ ಕಾಂಪ್ಲೆಕ್ಸ ಬಳಿ ದನಗಳಿದ್ದವು. ಆ ದನಗಳ ನಡುವೆ ಜಗಳ ನಡೆಯುತ್ತಿರುವುದನ್ನು ಅಂಬೀಷ ಅವರು ನೋಡಿದರು. ಆ ಜಾನುವಾರುಗಳು ತಮ್ಮ ಅಂಗಡಿ ಒಳಗೆ ಪ್ರವೇಶಿಸುವುದನ್ನು ತಡೆಯುವುದಕ್ಕಾಗಿ ಅವರು ಬೆದರಿಸಿದರು. ದನಗಳನ್ನು ಅವರು ಅಲ್ಲಿಂದ ಓಡಿಸಿದ್ದು, ಇದನ್ನು ರಾಮಕೃಷ್ಣ ಅವರು ಸಹಿಸಲಿಲ್ಲ.
ಅಂಬೀಷ ಅವರನ್ನು ಅಡ್ಡಗಟ್ಟಿದ ರಾಮಕೃಷ್ಣ ಅವರು ಮುಂದೆ ಹೆಜ್ಜೆಯಿಡಲು ಬಿಡಲಿಲ್ಲ. ಅಂಬೀಷ ಅವರ ಎದೆ ಮೇಲೆ ಕೈಯಿಟ್ಟು ರಾಮಕೃಷ್ಣ ಅವರು ಹೊಡೆದರು. ಅಂಬೀಷ ಅವರನ್ನು ನೆಲಕ್ಕೆ ಬೀಳಿಸಿ ದಬಾಯಿಸಿದರು. ಅದಾದ ನಂತರ `ಕೆಪಿಸಿ ವಾಹನದಿಂದ ನಿನಗೆ ಗುದ್ದುವೆ. ನಿನ್ನ ಕೊಲ್ಲುವೆ’ ಎಂದು ಹೆದರಿಸಿದರು. ಆತಂಕಕ್ಕೆ ಒಳಗಾದ ಅಂಬೀಷ ಅವರು ಕದ್ರಾ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದರು.