ಹಳಿಯಾಳದ ರಾಕೇಶ ವಾಲೇಕರ ಎಂಬಾತರು ರಾಹುಲ್ ಜೆ ವಾಣಿ ಅವರ ವಿರುದ್ಧ ದಾಖಲಿಸಿದ್ದ ಚೆಕ್ ಬೌನ್ಸ್ ಪ್ರಕರಣ ರಾಕೇಶ ವಾಲೇಕರ ಅವರಿಗೆ ಉಲ್ಟಾ ಹೊಡೆದಿದೆ. ಹಳಿಯಾಳದ ನ್ಯಾಯಾಲಯ ರಾಹುಲ್ ವಾಣಿ ಅವರನ್ನು ನಿರ್ದೋಷಿ ಎಂದು ಘೋಷಿಸಿದೆ.
ಹಳಿಯಾಳದಲ್ಲಿ ಅಸ್ತಿತ್ವದಲ್ಲೇ ಇರದ ಹನುಮಾನ ಪೈನಾನ್ಸ ಮೂಲಕ ರಾಹುಲ್ ವಾಣಿ ಎಂಬುವವರು 4.60 ಲಕ್ಷ ರೂ ಹಣಪಡೆದು 6 ಲಕ್ಷ ರೂ ಮೌಲ್ಯದ ಚೆಕ್ ನೀಡಿದ್ದು, ಅದು ಅಮಾನ್ಯವಾದ ಬಗ್ಗೆ ರಾಕೇಶ ವಾಲೇಕರ ಅವರು ಪ್ರಕರಣ ದಾಖಲಿಸಿದ್ದರು. ತಾನು ಪೈನಾನ್ಸ್ ಶಾಖಾಧಿಕಾರಿಯಾಗಿರುವ ಬಗ್ಗೆ ಅವರು ಹೇಳಿಕೊಂಡಿದ್ದರು. 2025ರಲ್ಲಿ ದಾಖಲಾದ ಪ್ರಕರಣವನ್ನು ಹಳಿಯಾಳದ ಜೆಎಂಎಫ್‌ಸಿ ನ್ಯಾಯಾಲಯದ ಹಿರಿಯ ನ್ಯಾಯಾಧೀಶೆ ಸುಜಾತಾ ಪಾಟೀಲ್ ಅವರು ವಿಚಾರಣೆಗೊಳಪಡಿಸಿ ತೀರ್ಪು ಹೊರಡಿಸಿದರು.
ಹನುಮಾನ್ ಫೈನಾನ್ಸ್ ಎಂಬ ಸಂಸ್ಥೆಯನ್ನು 2023ರಲ್ಲಿ ಬಂದ್ ಮಾಡಿರುವುದು ವಿಚಾರಣೆ ವೇಳೆ ಗಮನಕ್ಕೆ ಬಂದಿತು. ಅಲ್ಲಿ ರಾಕೇಶ ವಾಲೇಕರ ಕೆಲಸ ಮಾಡುತ್ತಿರಲಿಲ್ಲ ಎಂಬುದು ಅರಿವಾಯಿತು. ಸುಪ್ರೀಂ ಕೋರ್ಟಿನ ಆದೇಶಗಳನ್ನು ಉಲ್ಲೇಖಿಸಿ ನ್ಯಾಯವಾದಿ ಸಿದ್ದಮ್ಮ ಮಂಜುನಾಥ ಸಾಹುಕಾರ ಅವರು ವಾದ ಮಂಡಿಸಿದ್ದು, ಅದೇ ಆಧಾರದಲ್ಲಿ ರಾಹುಲ್ ವಾಣಿ ಅವರು ಪ್ರಕರಣದಿಂದ ಬಿಡುಗಡೆಯಾದರು.