ದಾoಡೇಲಿ ವೆಸ್ಟಕೋಸ್ಟ್ ಪೆಪರ್‌ಮಿಲ್ಲಿನ ಡಿಲೇಕ್ಸ ಮೈದಾನದಲ್ಲಿ ಗುರುವಾರ ರಾತ್ರಿ ರಾವಣ, ಕುಂಭಕರ್ಣ ಮತ್ತು ಮೇಘನಾಥರ ಪ್ರತಿಕೃತಿಗಳಿಗೆ ಪಟಾಕಿ ಅಂಟಿಸಿ ಸಿಡಿಸಲಾಯಿತು. ಆ ಮೂಲಕ ಆ ಭಾಗದ ದುಷ್ಟಶಕ್ತಿಗಳನ್ನು ಸಂಹಾರ ಮಾಡಿದ ಬಗ್ಗೆ ಅಲ್ಲಿನವರು ಸಂಭ್ರಮಿಸಿದರು.
ಸAಜೆ ರಾಮ ಮಂದಿರದಿoದ ಶ್ರೀ ರಾಮಚಂದ್ರನ ಪಲ್ಲಕಿ ಉತ್ಸವ ಡಿಲಕ್ಸ್ ಮೈದಾನಕ್ಕೆ ಆಗಮಿಸಿದ್ದು, ರಂಗು ರಂಗಿನ ಸಿಡಿಮದ್ದುಗಳು ಸ್ಪೋಟವಾದವು. ಆಕಾಶದ ಕಡೆ ಚಿಮ್ಮಿದ ಸಿಡಿಮದ್ದುಗಳು ಬಾನಂಗಳದಲ್ಲಿ ಬಣ್ಣ ಬಣ್ಣದ ಚಿತ್ತಾರ ಮೂಡಿಸಿದವು. ಆಗ ನೆರೆದಿದ್ದ ಜನ ಹರ್ಷೋದ್ಘಾರದಿಂದ ಕೂಗಿದರು.
ಒಂದು ಗಂಟೆಗೂ ಅಧಿಕ ಕಾಲ ಸಿಡಿಮದ್ದಿನ ಪ್ರದರ್ಶನ ನಡೆಯಿತು. ಹಳಿಯಾಳ, ಜೊಯಿಡಾ, ಯಲ್ಲಾಪುರ, ಧಾರವಾಡ, ಹುಬ್ಬಳ್ಳಿ ಮತ್ತು ಇನ್ನಿತರ ಭಾಗದ ಜನ ರಾಮಲೀಲಾ ಉತ್ಸವ ವೀಕ್ಷಣೆಗೆ ಆಗಮಿಸಿದ್ದರು. 51 ಅಡಿ ಎತ್ತರದ ರಾವಣ ಮತ್ತು 48 ಅಡಿ ಎತ್ತರದ ಕುಂಭಕರ್ಣ ಮತ್ತು ಮೇಘನಾಥರ ಪ್ರತಿಕೃತಿಗಳನ್ನು ಸುಡಲಾಯಿತು. 10 ಸಾವಿರಕ್ಕೂ ಅಧಿಕ ಜನ ಇದಕ್ಕೆ ಸಾಕ್ಷಿಯಾದರು.