ಧರ್ಮಸ್ಥಳದ ವಿರುದ್ಧ ಸಂಚು ರೂಪಿಸಿದವರನ್ನು ಯಲ್ಲಾಪುರದ ಸಮಾನ ಮನಸ್ಕರ ತಂಡ ಧರ್ಮ ವಿರೋಧಿ ಎಂದು ಕರೆದಿದೆ. ಆ ಧರ್ಮ ವಿರೋಧಿಗಳ ವಿರುದ್ಧ ಕಠಿಣ ಕ್ರಮಕ್ಕಾಗಿ 501 ಜನ ಸಹಿ ಹಾಕಿ ರಾಷ್ಟçಪತಿಗಳಿಗೆ ಪತ್ರ ಬರೆದಿದ್ದಾರೆ.
Advertisement. Scroll to continue reading.
`ಕರ್ನಾಟಕ ರಾಜ್ಯ ಸರ್ಕಾರ ಧರ್ಮದ್ರೋಹಿಗಳ ಮಾತು ಕೇಳಿ ಧರ್ಮಸ್ಥಳದ ವಿರುದ್ಧ ತನಿಖೆ ನಡೆಸಿತು. ಆದರೆ, ಆ ತನಿಖೆಯಲ್ಲಿ ಏನೂ ಸಿಗಲಿಲ್ಲ. ಹೀಗಾಗಿ ಇದು ಧರ್ಮಸ್ಥಳದ ವಿರುದ್ಧ ನಡೆದ ಷಂಡ್ಯAತ್ರ ಎಂಬುದು ಬಯಲಾಯಿತು. ಆದರೆ, ಈ ತನಿಖೆ ಇಲ್ಲಿಗೆ ಮುಗಿಸದೇ ದೂರು ಕೊಟ್ಟವರ ವಿರುದ್ಧವೂ ತನಿಖೆ ನಡೆಯಬೇಕು’ ಎಂದು ಸಮಾನ ಮನಸ್ಕರು ಆಗ್ರಹಿಸಿದ್ದಾರೆ.
`ನೂರಾರು ಶವ ಹೂತಿರುವುದಾಗಿ ಸುಳ್ಳು ಹೇಳಿದ್ದ ಚನ್ನಯ್ಯ, ತಮ್ಮ ಮಗಳ ಸಾವಿನ ಕಥೆ ಕಟ್ಟಿದ್ದ ಸುಜಾತಾ ಭಟ್ಟ, ಅವರ ಬೆನ್ನೆಲುಬಾಗಿರುವ ಮಹೇಶ ತಿಮ್ಮರೋಡಿ, ಜಂತ ಟಿ, ಗಿರೀಶ ಮಟ್ಟಣ್ಣ ಮಹಮದ್ ಸಮೀರ್ ಹಾಗೂ ದೆಹಲಿಯಿಂದ ಆಟವಾಡಿಸುವ ಹಿಂದು ವಿರೋಧಿ ತಂಡದ ವಿರುದ್ಧ ಕ್ರಮ ಜರುಗಿಸಬೇಕು’ ಎಂದು ಅವರು ಆಗ್ರಹಿಸಿದ್ದಾರೆ. ಎನ್ ಐ ಎ ವತಿಯಿಂದಲೇ ಈ ಎಲ್ಲಾ ತನಿಖೆ ನಡೆಯಬೇಕು ಎಂದು ತಹಶೀಲ್ದಾರರ ಮೂಲಕ ಜನ ಮನವಿ ಸಲ್ಲಿಸಿದ್ದಾರೆ.