ಕಂಠಪೂರ್ತಿ ಮದ್ಯ ಸೇವಿಸಿ ಎಣ್ಣೆ ತುಂಬಿದ ಲಾರಿ ಚಾಲಯಿಸಿದ ಚಾಲಕನೊಬ್ಬ ಆ ಲಾರಿಯನ್ನು ಅಂಕೋಲಾದ ಹಾರವಾಡದಲ್ಲಿ ಪಲ್ಟಿ ಮಾಡಿದ್ದು, ರಸ್ತೆ ಪೂರ್ತಿ ಎಣ್ಣೆ ಬಿದ್ದಿದೆ. ರಸ್ತೆಪೂರ್ತಿ ಎಣ್ಣೆ ಚಲ್ಲಾಪಿಲ್ಲಿಯಾಗಿ ಬಿದ್ದಿದ್ದರಿಂದ ಇತರೆ ವಾಹನ ಸವಾರರು ತೊಂದರೆ ಅನುಭವಿಸಿದರು.
ಶುಕ್ರವಾರ ರಾತ್ರಿ 11 ಗಂಟೆ ವೇಳೆಗೆ ಎಣ್ಣೆ ತುಂಬಿದ ಲಾರಿ ಪಲ್ಟಿಯಾಗಿದೆ. ಈ ಲಾರಿ ಮಂಗಳೂರಿನಿAದ ಗೋವಾ ಕಡೆ ಸಂಚರಿಸುತ್ತಿದ್ದು, ಅದರಲ್ಲಿ ಪ್ರಿಯಾ ಆಯಲ್ ಕಂಪನಿಯ ಅಡುಗೆ ಎಣ್ಣೆ ಸಾಗಾಟವಾಗುತ್ತಿತ್ತು. ಏಕಮುಖ ಮಾರ್ಗದಲ್ಲಿ ತಪ್ಪಾಗಿ ಸಂಚರಿಸಿದ ಲಾರಿ ಹಾರವಾಡದ ಬಳಿ ಪಲ್ಟಿಯಾಯಿತು.
ಅಪಘಾತದ ವಿಷಯ ಕೇಳಿ ಆಂಬುಲೆನ್ಸಿನವರು ಅಲ್ಲಿಗೆ ಧಾವಿಸಿದರು. ಪೊಲೀಸರು ಸ್ಥಳಕ್ಕೆ ಬಂದಿದ್ದರು. ಲಾರಿಯಲ್ಲಿದ್ದ ಚಾಲಕ ಹಾಗೂ ನಿರ್ವಾಹಕ ಪ್ರಾಣಾಪಾಯದಿಂದ ಪಾರಾಗಿದನ್ನು ನೋಡಿ ಎಲ್ಲರೂ ನಿಟ್ಟುಸಿರು ಬಿಟ್ಟರು. ಅಪಘಾತದಿಂದ ಲಾರಿಯಲ್ಲಿದ್ದ ಎಣ್ಣೆ ರಸ್ತೆಗೆ ಹರಿದಿದ್ದು, ವಾಹನ ಸಂಚಾರ ಅಸ್ತವ್ಯಸ್ಥವಾಗಿತ್ತು. ಬೆಳಗ್ಗೆ ಅವಧಿಗೆ ಸಂಚಾರ ಸುಗಮವಾಯಿತು.