ಕುಮಟಾದಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದ ವಿನಾಯಕ ನಾಯ್ಕ ಅವರು ಆತ್ಮಹತ್ಯೆಗೆ ಶರಣಾಗಿದ್ದಾರೆ. ವಿಪರೀತ ವ್ಯಸನಕ್ಕೆ ಒಳಗಾಗಿದ್ದ ಅವರು ಮಾನಸಿಕ ಖಿನ್ನತೆಯಿಂದ ನೇಣು ಹಾಕಿಕೊಂಡು ಸಾವನಪ್ಪಿದ್ದಾರೆ.
Advertisement. Scroll to continue reading.
ಕುಮಟಾದ ಮಿರ್ಜಾನಿನ ಜನತಾ ಪ್ಲಾಟಿನಲ್ಲಿ ವಿನಾಯಕ ನಾಯ್ಕ (30) ಅವರು ವಾಸವಾಗಿದ್ದರು. ಕೂಲಿ ಕೆಲಸ ಮಾಡುತ್ತಿದ್ದ ಅವರು ನಿತ್ಯವೂ ಸರಾಯಿ ಸೇವಿಸುತ್ತಿದ್ದರು. ಸರಾಯಿ ಸೇವನೆ ಹೆಚ್ಚಾದ ಪರಿಣಾಮ ಮಾನಸಿಕವಾಗಿ ಅವರು ಕುಗ್ಗಿದ್ದರು. ಸರಾಯಿ ಸೇವನೆ ಬಿಡುವಂತೆ ಅವರ ಪತ್ನಿ ಪ್ರೇಮಾ ನಾಯ್ಕ ಅವರು ತಿಳಿಸಿದರೂ ಅದನ್ನು ವಿನಾಯಕ ನಾಯ್ಕ ಅವರು ಗಂಭೀರವಾಗಿ ಪರಿಗಣಿಸಿರಲಿಲ್ಲ.
ಹೀಗಿರುವಾಗ 16ರ ನಸುಕಿನಲ್ಲಿ ವಿನಾಯಕ ನಾಯ್ಕ ಅವರು ಮಿರ್ಜಾನ್ ದರ್ಗಾ ಕ್ರಾಸ್ ಬಳಿ ಅಂಗಡಿ ಬಳಿ ಹೋಗಿದ್ದರು. ಅಂಗಡಿಗೆ ಬಾಗಿಲು ಹಾಕಿರುವುದನ್ನು ನೋಡಿ ಅಲ್ಲಿರುವ ಜಂತಿಗೆ ಲುಂಗಿ ಬಿಚ್ಚಿ ಕಟ್ಟಿದರು. ನಂತರ ಅದೇ ಲುಂಗಿಯಿAದ ವಿನಾಯಕ ನಾಯ್ಕ ಅವರು ನೇಣು ಹಾಕಿಕೊಂಡರು. ಬೆಳಗ್ಗೆ ಶವ ನೋಡಿದ ಪ್ರೇಮಾ ನಾಯ್ಕ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿದರು. ಕುಮಟಾ ಪಿಎಸ್‌ಐ ಮಂಜುನಾಥ ಗೌಡರ್ ಅವರು ತನಿಖೆ ನಡೆಸುತ್ತಿದ್ದಾರೆ.