ಯಲ್ಲಾಪುರದಲ್ಲಿ ಹಾದುಹೋದ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತಗಳ ಪ್ರಮಾಣ ಹೆಚ್ಚಾಗಿದೆ. ಒಂದೇ ದಿನ 2-3 ಅವಘಡಗಳು ಇಲ್ಲಿ ನಡೆಯುತ್ತಿದೆ.
ಶನಿವಾರ ಆರತಿಬೈಲ್ ಘಟ್ಟದಲ್ಲಿ ಲಾರಿ ಪಲ್ಟಿಯಾಗಿತ್ತು. ಭಾನುವಾರ ಹಳಿಯಾಳ ತಿರುವಿನಲ್ಲಿ ಬಸ್ ಮರಕ್ಕೆ ಗುದ್ದಿತು. ಭಾನುವಾರ ಸಂಜೆ ಬಳಗಾರ ಕ್ರಾಸಿನ ಬಳಿ ಮತ್ತೊಂದು ಲಾರಿ ಉರುಳಿ ಬಿದ್ದಿದೆ. ಮಂಗಳೂರಿನಿAದ ಕೊಪ್ಪಳಕ್ಕೆ ಕಲ್ಲಿದ್ದಲು ಸಾಗಿಸುತ್ತಿದ್ದ ಲಾರಿ ಇಲ್ಲಿಚಾಲಕನ ನಿಯಂತ್ರಣ ತಪ್ಪಿತು. ಪರಿಣಾಮ ರಾಷ್ಟ್ರೀಯ ಹೆದ್ದಾರಿ ಮಧ್ಯದಲ್ಲಿಯೇ ಆ ವಾಹನ ಪಲ್ಟಿಯಾಯಿತು. ಲಾರಿಯಲ್ಲಿದ್ದ ಕಲ್ಲಿದ್ದಲು ಹೆದ್ದಾರಿಯಲ್ಲಿ ರಾಶಿಯಾಗಿ ಬಿದ್ದಿದ್ದು, ಆ ವೇಳೆಗೆ ಜೋರು ಮಳೆ ಸುರಿಯಿತು.
ಲಾರಿ ಪಲ್ಟಿ ಆಗಿರುವ ಸುದ್ದಿ ಕೇಳಿ ಅಲ್ಲಿಗೆ ಪೊಲೀಸರು ಹೋದರು. ಹೆದ್ದಾರಿ ಮಧ್ಯದಲ್ಲಿಯೇ ಲಾರಿ ಪಲ್ಟಿಯಾದ ಕಾರಣ ವಾಹನಗಳ ಸಂಚಾರ ಸ್ಥಗಿತಗೊಂಡಿತ್ತು. ಎರಡೂ ಕಡೆಗಳಲ್ಲಿ 2ಕಿಮೀ ದೂರದಲ್ಲಿ ವಾಹನಗಳು ನಿಂತಿದ್ದು, ಪ್ರಯಾಣಿಕರು ತೊಂದರೆ ಅನುಭವಿಸಿದರು. ಪೊಲೀಸರು ಲಾರಿ ಹಾಗೂ ರಸ್ತೆಯ ಮೇಲೆ ಬಿದ್ದಿದ್ದ ಕಲ್ಲಿದ್ದಲು ತೆರವು ಮಾಡಿದರು. ಎರಡು ತಾಸಿನ ಬಳಿಕ ಹೆದ್ದಾರಿ ಸಂಚಾರ ಸುಗಮವಾಯಿತು. ಶನಿವಾರ ಸಹ ಹುಬ್ಬಳ್ಳಿ ಕಡೆಯಿಂದ ಅಂಕೋಲಾ ಕಡೆಗೆ ಹೊರಟಿದ್ದ ಲಾರಿ ಇಲ್ಲಿನ ಅನತಿ ದೂರದ ಆರತಿಬೈಲಿನಲ್ಲಿ ಪಲ್ಟಿಯಾಗಿತ್ತು. ಆಗಲೂ, ತಡೆಗೋಡೆಗೆ ಧಕ್ಕೆ ಉಂಟಾಗಿತ್ತು.