ಶಿರಸಿ ಕುಮಟಾ ರಸ್ತೆಯ ಹಾರುಗಾರದಲ್ಲಿ ಮಹೇಂದ್ರಾ ಸುಪ್ರೋ ಗೂಡ್ಸ ರಸ್ತೆ ಬದಿಯ ಮೋರಿಗೆ ಗುದ್ದಿದೆ. ಪರಿಣಾಮ ಆ ವಾಹನದಲ್ಲಿದ್ದ ಮಹಾಬಲೇಶ್ವರ ಗೌಡ ಅವರು ಸಾವನಪ್ಪಿದ್ದಾರೆ.
ಅಕ್ಟೊಬರ್ 23ರ ಸಂಜೆ ಸಿದ್ದಾಪುರ ನಡಗಾರಮನೆಯ ಮಹಾಬಲೇಶ್ವರ ತಿಮ್ಮಾ ಗೌಡ (48) ಅವರು ಗೂಡ್ಸ ಓಡಿಸಿಕೊಂಡು ಹೊರಟಿದ್ದರು. ಆ ವಾಹನದಲ್ಲಿ ಕಮಲಾಕರ ತಿಮ್ಮಾ ಗೌಡ ಅವರು ಜೊತೆಯಿದ್ದರು. ಶಿರಸಿ-ಕುಮಟಾ ಮಾರ್ಗವಾಗಿ ಸಂಚರಿಸುತ್ತಿದ್ದ ಗೂಡ್ಸ್ ಹಾರುಗಾರದ ಬಳಿ ರಸ್ತೆ ಅಂಚಿನ ಗೋಡೆಗೆ ಗುದ್ದಿತು.
ಗೂಡ್ಸ್ ಗೋಡೆಗೆ ಡಿಕ್ಕಿಹೊಡೆದ ರಭಸಕ್ಕೆ ಮಹಾಬಲೇಶ್ವರ ಗೌಡ ಅವರು ಅಲ್ಲಿಯೇ ಸಾವನಪ್ಪಿದರು. ಅವರ ಜೊತೆಯಿದ್ದ ಕಮಲಾಕರ ತಿಮ್ಮಾ ಗೌಡ ಅವರು ಕಾಲು ಹಾಗೂ ಮುಖಕ್ಕೆ ಪೆಟ್ಟು ಮಾಡಿಕೊಂಡರು. ಈ ಅಪಘಾತದ ಬಗ್ಗೆ ಕಿಬ್ಬಳ್ಳಿಯ ಭಾಸ್ಕರ ನಾಯ್ಕ ಅವರು ಪೊಲೀಸರಿಗೆ ಮಾಹಿತಿ ನೀಡಿದರು. ಶಿರಸಿ ಸಂಚಾರ ಪೊಲೀಸ್ ಠಾಣೆಯವರು ಪ್ರಕರಣ ದಾಖಲಿಸಿದರು.
`ನಿಧಾನವಾಗಿ ಚಲಿಸಿ.. ವಾಹನ ಓಡಿಸುವಾಗ ಜಾಗೃತೆವಹಿಸಿ’

