ಅಕ್ಟೊಬರ್ 13ರಂದು ಯಲ್ಲಾಪುರ ಪೊಲೀಸರು ವಿವಿಧ ವಾಹನಗಳ ಹರಾಜು ನಡೆಸಲಿದ್ದಾರೆ. ಒಂದು ಕಾರು ಹಾಗೂ 13 ಬೈಕುಗಳನ್ನು ಆ ದಿನ ಹರಾಜು ನಡೆಸಲು ನಿರ್ಧರಿಸಲಾಗಿದೆ.
ವಿವಿಧ ಅಪರಾಧ ಪ್ರಕರಣಗಳಲ್ಲಿ ಯಲ್ಲಾಪುರ ಪೊಲೀಸರು ಜಪ್ತು ಮಾಡಿದ ವಾಹನಗಳನ್ನು ಹರಾಜು ಮಾಡಲು ಸಕಾರ ಆಸಕ್ತಿವಹಿಸಿದೆ. ನ್ಯಾಯಾಲಯ ಸಹ ಇದಕ್ಕೆ ಸಮ್ಮತಿ ನೀಡಿದೆ. ಹೀಗಾಗಿ ಅಕ್ಟೋಬರ್ 13ರಂದು ಬೆಳಗ್ಗೆ 10 ಗಂಟೆಗೆ ಹರಾಜು ಪ್ರಕ್ರಿಯೆ ಶುರುವಾಗಲಿದೆ.
ಹರಾಜಿನ ಪೈಕಿ ಕೆಲ ವಾಹನಗಳು ಸುಸ್ಥಿತಿಯಲ್ಲಿದೆ. ಉಳಿದವು ಗುಜುರಿಗೆ ಯೋಗ್ಯವಾಗಿದೆ. ಹೀಗಾಗಿ ಯಥಾ ಸ್ಥಿತಿಯಲ್ಲಿ ವಾಹನಗಳ ಹರಾಜು ನಡೆಯಲಿದ್ದು, ಅತಿ ಹೆಚ್ಚು ಮೊತ್ತ ಕೂಗಿದವರಿಗೆ ಆ ವಾಹನಗಳು ಸಿಗಲಿದೆ. ಯಲ್ಲಾಪುರದ ಪೊಲೀಸ್ ವಸತಿ ಗೃಹದ ಬಳಿ ಹರಾಜು ನಡೆಯಲಿದೆ.
ಆಸಕ್ತ ಖರೀದಿದಾರರು ಆ ದಿನ ಆ ಸಮಯಕ್ಕೆ ಅಲ್ಲಿ ಹಾಜರಿದ್ದರೆ ಸಾಕು. ಇನ್ನೂ ಏನಾದರೂ ಮಾಹಿತಿ ಬೇಕಿದ್ದರೆ ಇಲ್ಲಿ ಫೋನ್ ಮಾಡಿ: 9480805273