ಪ್ರತಿ ಭಾನುವಾರ ಚರ್ಚಿಗೆ ಬಂದರೆ ಮಾತ್ರ ಗ್ರಾಮ ಪಂಚಾಯತದ ಸೌಲಭ್ಯ ಕೊಡಿಸುವುದಾಗಿ ಜನಪ್ರತಿನಿಧಿಯೊಬ್ಬರು ಶಿರಸಿಯ ಬನವಾಸಿ ಬಳಿಯ ಮಹಿಳೆಗೆ ಆಮೀಷ ಒಡ್ಡಿದ್ದಾರೆ. ಇದಕ್ಕೆ ಒಪ್ಪದೇ ಇದ್ದಾಗ ಗುಂಪಿನಲ್ಲಿ ಬಂದು ಮಹಿಳೆ ಕುಟುಂಬದವರ ಮೇಲೆ ಹಲ್ಲೆ ನಡೆಸಿದ್ದಾರೆ!
Advertisement. Scroll to continue reading.
ಶಿರಸಿ ತಾಲೂಕಿನ ವಡಗೇರಿಯಲ್ಲಿ ವಾಸವಾಗಿರುವ ಪರಿಶಿಷ್ಟ ಸಮುದಾಯದ ಸುಜಾತಾ ಲಮಾಣಿ ಅವರು ಕೃಶ್ಚಿಯನ್ ಸಮುದಾಯದ ರಾಜೇಶ್ ಲೂದ್ರಿಂಗ್ ಅವರನ್ನು ವರಿಸಿದ್ದರು. ಸುಜಾತಾ ಅವರ ಇಬ್ಬರು ಮಕ್ಕಳು ಹಾಗೂ ರಾಜೇಶ ಅವರ ಜೊತೆ ಅವರ ತಾಯಿ ರೋಜಿ ಒಟ್ಟಿಗೆ ವಾಸವಿದ್ದರು. ಬೇರೆ ಧರ್ಮದವರನ್ನು ಮದುವೆ ಆದರೂ ಸುಜಾತಾ ಲಮಾಣಿ ಅವರು ಆಚರಣೆ ಬಿಟ್ಟಿರಲಿಲ್ಲ. ಈ ಬಗ್ಗೆ ರಾಜೇಶ ಕುಟುಂಬದವರು ಸಹ ಆಕ್ಷೇಪಣೆ ಸಲ್ಲಿಸಿರಲಿಲ್ಲ. ಗಂಡ-ಹೆoಡತಿಯ ಧರ್ಮ ಬೇರೆ ಆದರೂ ಅವರ ಸಂಸಾರದಲ್ಲಿ ಯಾವ ಸಮಸ್ಯೆ ಬಂದಿರಲಿಲ್ಲ.
ಹೀಗಿರುವಾಗ, ಎಕ್ಕಂಬಿ ಗ್ರಾಮದ ಗ್ರಾ ಪಂ ಸದಸ್ಯರೂ ಆಗಿರುವ ಪ್ರಾನ್ಸಿಸ್ ಫರ್ನಾಂಡಿಸ್ ಅವರು ಸುಜಾತಾ ಅವರ ಕುಟುಂಬಕ್ಕೆ ಕಾಡಲು ಶುರು ಮಾಡಿದರು. ಸುಜಾತಾ ಲಮಾಣಿ ಅವರಿಗೂ ಪದೇ ಪದೇ ಧರ್ಮ ಬದಲಿಸುವಂತೆ ಅವರು ಒತ್ತಡ ಹಾಕಿದರು. ಪ್ರತಿ ಭಾನುವಾರ ಚರ್ಚಿಗೆ ಬರುವಂತೆ ಒತ್ತಾಯಿಸಿದರು. ಆದರೆ, ಸುಜಾತಾ ಲಮಾಣಿ ಅವರು ಇದಕ್ಕೆ ಒಪ್ಪಲಿಲ್ಲ. ಹೀಗಾಗಿ ಪ್ರಾನ್ಸಿಸ್ ಫರ್ನಾಂಡಿಸ್ ರಾಜಕೀಯ ಪ್ರಭಾವ ಬೀರಿ ಅವರ ಕುಟುಂಬಕ್ಕೆ ತೊಂದರೆ ಕೊಡಲು ಶುರು ಮಾಡಿದರು.
Advertisement. Scroll to continue reading.
ಅಕ್ಟೊಬರ್ 18ರಂದು ವಡಗೇರಿಯ ನರ್ಮಲಾ ಕರಂಜಿ ಕ್ರಸ್ತಧರ್ಮದ ಪ್ರಾರ್ಥನೆ ನಡೆಯುತ್ತಿತ್ತು. ಸುಜಾತಾ ಲಮಾಣಿ ಅವರಿಗೂ ಪ್ರಾರ್ಥನೆಗೆ ಬರುವಂತೆ ಆಮಂತ್ರಣ ಬಂದಿತು. ಆದರೆ, ಅವರು ಅಲ್ಲಿಗೆ ಹೋಗಲಿಲ್ಲ. ಇದರಿಂದ ಸಿಟ್ಟಾದ ಪ್ರಾನ್ಸಿಸ್ ಫರ್ನಾಂಡಿಸ್ ಅವರು ಸುಜಾತಾ ಅವರ ಮನೆಗೆ ನುಗ್ಗಿದರು. ಅವರ ಜೊತೆಯಿದ್ದ ಇನಾಸ್ ಫರ್ನಾಂಡೀಸ್, ಪ್ರಾನ್ಸಿಸ್ ಲುದ್ರಿಂಗ್, ಆಗ್ನೆಲ್ ಡಿಸೋಜಾ, ಪ್ರೇಮಾ ಪ್ರಾನ್ಸಿಸ್ ಲುದ್ರಿಂಗ್ ಹಾಗೂ ನರ್ಮಲಾ ಕರಂಜಿ ಸೇರಿ ಸುಜಾತಾ ಅವರ ಕುಟುಂಬದವರ ಮೇಲೆ ದಬ್ಬಾಳಿಕೆ ನಡೆಸಿದರು.
ಈ ವೇಳೆ ಅವರೆಲ್ಲರೂ ಸೇರಿ ಸುಜಾತಾ ಹಾಗೂ ಅವರ ಅತ್ತೆ ರೋಜಿ ಅವರ ಮೇಲೆ ಹಲ್ಲೆ ಮಾಡಿದರು. ಸುಜಾತಾ ಅವರ ಕೂದಲು ಹಿಡಿದು ಎಳೆದರು. ರೋಜಿ ಅವರನ್ನು ಗೋಡೆಗೆ ದೂಡಿ ನೋವು ಮಾಡಿದರು. ಉಳಿದವರು ವಿವಿಧ ವಸ್ತುಗಳಿಂದ ಹೊಡೆದರು. ಈ ವೇಳೆ ಪ್ರೇಮಾ ಅವರು ಸುಜಾತಾ ಅವರಿಗೆ ಚಪ್ಪಲಿಯಿಂದ ಥಳಿಸಿದರು. ನಿರ್ಮಲ ಕರಂಜಿ ಅವರು ರೋಜಿ ಅವರಿಗೆ ದೊಣ್ಣೆಯಿಂದ ಹೊಡೆದರು. ಕೊನೆಗೆ `ನಿಮಗೆ ಗ್ರಾಮ ಪಂಚಾಯತದ ಸೌಲಭ್ಯ ಬೇಕು ಎಂದರೆ ಚರ್ಚಿಗೆ ಬರಬೇಕು’ ಎಂದು ಗ್ರಾ ಪಂ ಸದಸ್ಯ ಪ್ರಾನ್ಸಿಸ್ ಫರ್ನಾಂಡಿಸ್ ಎಚ್ಚರಿಕೆ ನೀಡಿದರು. `ಚರ್ಚಿಗೆ ಬರದೇ ಇದ್ದರೆ ಮಣ್ಣಿನಲ್ಲಿ ಹೂತು ಹಾಕುವೆ’ ಎಂದು ಬೆದರಿಸಿದರು. ಈ ಎಲ್ಲಾ ಘಟನಾವಳಿಗಳ ಬಗ್ಗೆ ಸುಜಾತಾ ಲಮಾಣಿ ಅವರು ಬನವಾಸಿ ಪೊಲೀಸ್ ಠಾಣೆಗೆ ತೆರಳಿ ದೂರಿದ್ದು, ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.