ಗಂಟು ನೋವು, ಮಂಡಿ ನೋವು, ಬೆನ್ನು ನೋವು, ಕಾಲು ನೋವು ಸೇರಿ ಎಲುಬು ಹಾಗೂ ನರಗಳಿಗೆ ಸಂಬoಧಿಸಿದ ಸಮಸ್ಯೆಗಳಿಗೆ ಶಿರಸಿಯ ಗಣಪಯ್ಯ ಚೆನ್ನಯ್ಯ ಅವರು ಪರಿಹಾರ ಒದಗಿಸುತ್ತಾರೆ. ಯಾವುದೇ ಔಷಧಿ-ಗಿಡಮೂಲಿಕೆಗಳ ಪ್ರಯೋಗವಿಲ್ಲದೇ ಬರೇ ಮಸಾಜ್ ಮೂಲಕ ಅವರು ನೋವುಗಳನ್ನು ದೂರ ಮಾಡುತ್ತಾರೆ.
ಶಿರಸಿ-ಹುಬ್ಬಳ್ಳಿ ರಸ್ತೆ ಮಾರ್ಗವಾಗಿ 12ಕಿಮೀ ಸಂಚರಿಸಿದರೆ ಸಿಗುವ ಇಸಳೂರಿನ ಬಳಿ ಮಾವಿನಕೊಪ್ಪ ಎಂಬ ಊರಿದೆ. ಅಲ್ಲಿಂದ 2ಕಿಮೀ ಮಣ್ಣಿನ ರಸ್ತೆಯಲ್ಲಿ ಸಿಕ್ಕರೆ ಗಣಪಯ್ಯ ಚೆನ್ನಯ್ಯ ಅವರ ಮನೆ ಕಾಣುತ್ತದೆ. ಮನೆ ಅಂಗಳದಲ್ಲಿಯೇ ಅವರು ತಮ್ಮ ನಾಟಿ ವಿದ್ಯೆ ಪ್ರಯೋಗಿಸುತ್ತಾರೆ. ಏಕಕಾಲಕ್ಕೆ ಆರು ಜನ ಬಂದರೂ ಅವರು ಅಲ್ಲಿ ಚಿಕಿತ್ಸೆ ನೀಡುತ್ತಾರೆ.
ಮಾನವನ ದೇಹ ಹಾಗೂ ನರಗಳ ಬಗ್ಗೆ ಅಧ್ಯಯನ ನಡೆಸಿರುವ ಗಣಪತಿ ಚೆನ್ನಯ್ಯ ಅವರು ದೇಹದಲ್ಲಿ ನೋವಿರುವ ಭಾಗದ ರಕ್ತ ಸಂಚಲನದ ಬಗ್ಗೆ ಅಭ್ಯಯಿಸುತ್ತಾರೆ. ಅದರ ಆಧಾರದಲ್ಲಿ ನರಗಳು ಉಬ್ಬಿರುವ ಭಾಗ ಗುರುತಿಸಿ ಅದನ್ನು ಸರಿ ಮಾಡುತ್ತಾರೆ. ಕಾಲು, ಕೈ ಸೇರಿ ಅಗತ್ಯವಿರುವ ಅಂಗಾoಗಗಳಿಗೆ ಮರದ ಬೆಣೆಗಳನ್ನು ಕಟ್ಟಿ ರಕ್ತ ಸಂಚಲನ ಸರಾಗವಾಗಿ ಸಾಗುವ ರೀತಿ ಮಾಡುತ್ತಾರೆ. ನಂತರ ಇಡೀ ದೇಹವನ್ನು ತಮ್ಮ ಕೈಯಿಂದಪದೇ ಪದೇ ತಿಕ್ಕಿ ನಿಧಾನವಾಗಿ ವ್ಯಾಯಾಮ ಮಾಡಿಸುತ್ತಾರೆ. ಈ ಎಲ್ಲಾ ವಿದ್ಯೆಯನ್ನು ಕೇರಳದಲ್ಲಿ ಕಲಿತಿರುವ ಅವರು 40 ವರ್ಷಗಳಿಂದ ಈ ಕಾಯಕ ಮಾಡುತ್ತ ಬಂದಿದ್ದಾರೆ.
ಸುಮಾರು ಒಂದುವರೆ ತಾಸುಗಳ ಕಾಲದ ಈ ಚಿಕಿತ್ಸೆಯಿಂದ ಅನೇಕರು ನೋವಿನಿಂದ ಮುಕ್ತರಾಗಿದ್ದಾರೆ. ಸಾಮಾನ್ಯವಾಗಿ ವಾರಕ್ಕೆ ಒಮ್ಮೆಯಂತೆ ಮೂರು ವಾರಗಳ ಭೇಟಿಯ ಅವಧಿಯಲ್ಲಿ ನೋವು ದೂರವಾಗುತ್ತದೆ. ಚಿಕಿತ್ಸೆಗೆ ಒಳಗಾಗುವವರು ಪ್ರತಿ ಭೇಟಿಯಲ್ಲಿಯೂ 500ರೂ ಹಣದ ಜೊತೆ ಒಂದು ತೆಂಗಿನಕಾಯಿ ಕೊಡಬೇಕಾಗುತ್ತದೆ. ವಾರದ ಏಳೂ ದಿನವೂ ಗಣಪತಿ ಚೆನ್ನಯ್ಯ ಅವರು ಚಿಕಿತ್ಸೆ ನೀಡುತ್ತಾರೆ. ಅದಾಗಿಯೂ ಫೋನ್ ಮಾಡಿ ತೆರಳುವುದು ಉತ್ತಮ.
ಗಣಪತಿ ಚೆನ್ನಯ್ಯ ಅವರ ಮೊಬೈಲ್ ನಂ: 9480553112