ಹೊನ್ನಾವರದ ಹೆರಅಂಗಡಿಯ ಜಾಫರ್ ಮುಕ್ತೇಸರ್ ಅವರು ವಿದೇಶದಲ್ಲಿ ನೌಕರಿ ಕೊಡಿಸುವುದಾಗಿ ನಂಬಿಸಿ ಹಣಪಡೆಯುತ್ತಾರೆ. ಆದರೆ, ಹಣ ಕೊಟ್ಟವರಿಗೆ ನೌಕರಿಯೂ ಸಿಕ್ಕಿಲ್ಲ. ಕೊಟ್ಟ ಹಣವೂ ಮರಳಿ ಬಂದಿಲ್ಲ!
ಜಾಫರ್ ಮುಕ್ತೇಸರ್ ಅವರ ಜೊತೆ ಇನ್ನಿತರರು ಈ ಕೆಲಸದಲ್ಲಿ ಕೈ ಜೋಡಿಸಿದ್ದು, ಈಗಾಗಲೇ ಹಲವರಿಗೆ ಮೋಸ ಮಾಡಿದ್ದಾರೆ. ಹೀಗಾಗಿ `ಉದ್ಯೋಗ ಕೊಡಿಸುವುದಾಗಿ ಹಣಪಡೆದು ವಂಚಿಸುವ ಜಾಲದವರನ್ನು ಬಂಧಿಸಬೇಕು’ ಎಂದು ಮಂಗಳೂರಿನ ಕರ್ನಾಟಕ ಗಡಿನಾಡು ರಕ್ಷಣಾ ವೇದಿಕೆ ಮುಖಂಡ ಸಿದ್ದಿಕ್ ತಲಪಾಡಿ ಆಗ್ರಹಿಸಿದ್ದಾರೆ. `ಹೊನ್ನಾವರದ ಹೆರಂಗಡಿ ಮೂಲದ ಜಾಫರ್ ಹುಸೇನ್ ಮುಕ್ತೇಸರ್, ನೌಶಾದ್ @ ನೌಶಾ ಖ್ವಾಜಾ ದಾವೂದ್ ಹಾಗೂ ಹೈದರಾಬಾದ್ ಮೂಲದ ಸುಜಾತಾ ಜಮ್ಮಿ ಕುಂಟಾ ಸೇರಿ ಕುವೈತ್‌ನಲ್ಲಿ ಉದ್ಯೋಗ ಕೊಡಿಸುವುದಾಗಿ ಉತ್ತರ ಕನ್ನಡ ಸೇರಿದಂತೆ ರಾಜ್ಯ ಹಾಗೂ ಹೊರ ರಾಜ್ಯದ ಹಲವರಿಗೆ ವಂಚನೆ ಮಾಡಿದ್ದಾರೆ. ಈ ಬಗ್ಗೆ ಕೇರಳದ ವಯ್ಯಲಪರಕ್ಕೋಡದ ಬಿಜ್ಜು ದಾಮೋದರನ್ ಉದಯಂತಜಿAತಿಲ್ ಹೊನ್ನಾವರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ’ ಎಂದವರು ಮಾಹಿತಿ ನೀಡಿದರು.
`33ಕ್ಕೂ ಹೆಚ್ಚು ಜನರಿಗೆ ವಂಚನೆ ಮಾಡಿರುವ ಆರೋಪ ಇದ್ದು ಈಗಾಗಲೇ ವಂಚನೆಗೊಳಗಾದವರು ಹೊನ್ನಾವರ ಪೊಲೀಸ್ ಠಾಣೆಗೆ ಹಾಜರಾಗಿ ಸಾಕ್ಷಿಯಾಗುತ್ತಿದ್ದಾರೆ. ಜಾಪರ್ ಮುಕ್ತೆಸರ್ ಕುವೇತ್‌ನಲ್ಲಿ ಡಿಫೆನ್ಸ್ಲ್ಲಿ 48 ಉದ್ಯೋಗಾವಕಾಶಗಳಿವೆ ಎಂದು ತನ್ನ ಪರಿಚಯಸ್ಥರು ಹಾಗೂ ಏಜೆಂಟರುಗಳ ಮೂಲಕ ಜನರನ್ನು ಒಟ್ಟೂಗೂಡಿಸಿ ಹಣ ಹಾಕಿಸಿಕೊಂಡಿದ್ದಾರೆ. ಇದನ್ನು ನಂಬಿದ ಬಿಜ್ಜು ದಾಮೋದರನ್ 33 ಜನರ ಪಾಸ್‌ಪೋರ್ಟ್ ಮತ್ತು ದಾಖಲೆಗಳನ್ನು ಒದಗಿಸಿದ್ದಾರೆ. ಬಳಿಕ ನಕಲಿ ಉದ್ಯೋಗ ಆಫರ್ ಲೆಟರ್‌ಗಳನ್ನು ಕಳುಹಿಸಿ, ಪ್ರತಿಯೊಬ್ಬ ಅಭ್ಯರ್ಥಿಯಿಂದ 3 ಲಕ್ಷ ರೂ ಪಡೆದು ಸುಮಾರು 52 ಲಕ್ಷ ರೂ ಮೋಸ ಮಾಡಿದ್ದಾರೆ’ ಎಂದು ವಿವರಿಸಿದರು.
`ಜಾಫರ್ ಮುಕ್ತೇಸರ್ ಸದ್ಯ ಹೊನ್ನಾವರದಲ್ಲಿದ್ದು, ಕುವೈತ್ ಹಾಗೂ ಕೆನಡಾ ಪೋನ್ ನಂಬರ್ ಬಳಸಿ ವ್ಯವಹಾರ ಮಾಡುತ್ತಾರೆ. ಮತ್ತೆ ಅಮಾಯಕರಿಗೆ ಉದ್ಯೋಗ ಆಸೆ ಹುಟ್ಟಿಸಿ ವಂಚನೆ ಮಾಡುವ ಸಾಧ್ಯತೆ ಹೆಚ್ಚಿರುವುದರಿಂದ ಕೂಡಲೇ ಅವರನ್ನು ಬಂಧಿಸಬೇಕು’ ಎಂದು ಆಗ್ರಹಿಸಿದರು. `ದಾನ-ಧರ್ಮದ ಹೆಸರಿನಲ್ಲಿಯೂ ಜಾಫರ್ ಮುಕ್ತೇಸರ್ ಜನರನ್ನು ಯಾಮಾರಿಸುತ್ತಿದ್ದಾರೆ. ಅಮಾಯಕರಿಗೆ ವಂಚನೆ ಮಾಡಿ ನೀಡುವ ಹಣವನ್ನು ಸ್ಥಳೀಯರು ಧಾರ್ಮಿಕ ಕಾರ್ಯಗಳಿಗೂ ಬಳಸಬಾರದು’ ಎಂದು ಮನವಿ ಮಾಡಿದರು.