ಯಲ್ಲಾಪುರ ಹಾಗೂ ಅಣ್ಣಿಗೇರಿಯಲ್ಲಿ ಕೃಷಿ ಉಪಕರಣಗಳ ವಿತರಣಾ ಕೇಂದ್ರ ಹೊಂದಿರುವ ಸುರಕ್ಷಾ ಅಗ್ರೊಟೆಕ್ ಮಾಲಕ ಮಂಜುನಾಥ್ ಹೊನ್ನಣ್ಣನವರ್ ಅವರಿಗೆ ಅಮೆರಿಕ ವಿಡವಮ್ ಪೀಸ್ ಯುನಿವರ್ಸಿಟಿಯು ಗೌರವ ಡಾಕ್ಟರೇಟ್ ಪ್ರಶಸ್ತಿ ಪ್ರದಾನ ಮಾಡಿದೆ.
ಮಂಜುನಾಥ್ ಹೊನ್ನಣ್ಣನವರ್ ಅವರು 15 ವರ್ಷಗಳ ಹಿಂದೆ `ಸುರಕ್ಷಾ ಅಗ್ರೋ ಟೆಕ್’ ಎಂಬ ಕಂಪನಿ ಕಟ್ಟಿ ಕೃಷಿಕರು ಹಾಗೂ ಕಾರ್ಮಿಕರಿಗೆ ನೆರವಾಗಿದ್ದಾರೆ. ರಾಜ್ಯದ ಅನೇಕ ಕಡೆ ತಮ್ಮ ಕಂಪನಿಯ ಮೂಲಕ ಯುವಕರಿಗೆ ಉದ್ಯೋಗ ನೀಡಿದ್ದಾರೆ. ಸರ್ಕಾರದ ಸಬ್ಸಿಡಿ ಜೊತೆ ಟ್ರ‍್ಯಾಕ್ಟರ್, ಟೇಲರ್, ಕಳೆ ತೆಗೆಯುವ ಯಂತ್ರ, ಬಿತ್ತುವ ಕೂರ್ಗಿ ಜೊತೆ ಅಗತ್ಯವಿರುವ ಸಲಕರಣೆಗಳನ್ನು ಸುರಕ್ಷಾ ಅಗ್ರೋ ಟೆಕ್ ಮೂಲಕ ವಿತರಿಸುತ್ತಿದ್ದಾರೆ.
ಯಂತ್ರಗಳ ಸುರಕ್ಷಿತ ಬಳಕೆ, ಅವುಗಳ ನಿರ್ವಹಣೆ ಹಾಗೂ ಆಧುನಿಕ ಕೃಷಿ ಪದ್ಧತಿ ಮೂಲಕ ಕಡಿಮೆ ಬೆಲೆಯಲ್ಲಿ ಅತ್ಯಧಿಕ ಆದಾಯಪಡೆಯುವ ವಿಧಾನಗಳ ಬಗ್ಗೆ ರೈತರಿಗೆ ಅವರು ಕಂಪನಿ ಮೂಲಕ ಮಾಹಿತಿ ನೀಡುತ್ತಿದ್ದಾರೆ. ಸುರಕ್ಷಾ ಅಗ್ರೋ ಟೆಕ್ ಸ್ವತಃ ಯಂತ್ರೋಪಕರಣಗಳನ್ನು ಉತ್ಪಾದಿಸುವ ಘಟಕವನ್ನು ಹೊಂದಿದ್ದು, ಯಂತ್ರೋಪಕರಣಗಳ ಮಾರಾಟದ ಜೊತೆ ಅದರ ದುರಸ್ಥಿ ಸೇವೆಯನ್ನು ಒದಗಿಸುತ್ತಿದೆ.
ಪತ್ರಕರ್ತರಾಗಿಯೂ ಕೆಲಸ ಮಾಡುವ ಮಂಜುನಾಥ್ ಹೊನ್ನಣ್ಣನವರ್ ಅವರ ಈ ಎಲ್ಲಾ ಸಾಧನೆ ಗಮನಿಸಿ ತಮಿಳು ನಾಡಿನ ಹೊಸೂರ್ ಪಟ್ಟಣದಲ್ಲಿರುವ ಹೋಟೆಲ್ ಐಟಿಸಿ ಗ್ರೂಪ್‌ನಲ್ಲಿ ಮಾಜಿ ಶಾಸಕ ಎಸ್ ಪಿ ಜೆ. ಕಮಲ ಕಣ್ಣನ್ ಅವರು ಪ್ರಶಸ್ತಿ ಪ್ರದಾನ ಮಾಡಿದ್ದಾರೆ. ಹಿರಿಯ ವಿಜ್ಞಾನಿ ಕೆ ಎಸ್ ಸುಬ್ರಹ್ಮಣ್ಯಂ, ಉದ್ಯಮಿ ಎ ಶ್ರೀಧರ್, ಹಿರಿಯ ಪತ್ರಕರ್ತ ಗುಣ ಶೇಖರನ್, ಚನೈ ಪ್ರೆಸ್ ಮಿಡಿಯಾ ರಿಪೋರ್ಟ ಯೂನಿನಯ್ ಅಧ್ಯಕ್ಷ ಶಿವಥಮಿಲನ್ ಅವರು ಈ ಸನ್ನಿವೇಶಕ್ಕೆ ಸಾಕ್ಷಿಯಾದರು.