ಮನೆಯಲ್ಲಿ ನಡೆಯುವ ಮದುವೆಗಾಗಿ ಚಿನ್ನ ಖರೀದಿಗೆ ಭಟ್ಕಳಕ್ಕೆ ಹೋಗಿದ್ದ ಕುಮಟಾದ ಜಾಕೀರ ಬೇಗ್ ಎಂಬಾತರು ನಿಗೂಢವಾಗಿ ಕಾಣೆಯಾಗಿದ್ದಾರೆ. ಅವರ ಕುಟುಂಬದವರು ಸಾಕಷ್ಟು ಹುಡುಕಾಟ ನಡೆಸಿದರೂ ಜಾಗೀರ ಬೇಗ್ ಸಿಕ್ಕಿಲ್ಲ.
Advertisement. Scroll to continue reading.
ಕುಮಟಾದ ಹಳ್ಳಾರ ಚಿತ್ರಗಿಯ ಮದ್ಗುಣಿಯ ಜಾಕೀರ ಬೇಗ್ (32) ಅವರು ವಿದೇಶದಲ್ಲಿ ಉದ್ಯೋಗದಲ್ಲಿದ್ದರು. ಅವರ ಮದುವೆ ನಿಶ್ಚಯವಾಗಿದ್ದರಿಂದ ಈಚೆಗೆ ಭಾರತಕ್ಕೆ ಮರಳಿದ್ದರು. ಎಲ್ಲರೂ ಮದುವೆ ಸಂಭ್ರಮದಲ್ಲಿರುವಾಗ ಜಾಕೀರ ಬೇಗ್ ಅವರು ಚಿನ್ನ ಖರೀದಿಯ ಯೋಚನೆ ಮಾಡಿದರು. ಭಟ್ಕಳದಲ್ಲಿ ಚಿನ್ನ ಖರೀದಿಸಲು ಉದ್ದೇಶಿಸಿದ ಅವರು ಕಳೆದ ಶುಕ್ರವಾರ ಅತ್ತಿಗೆ ಸಾಹಿನ್ ಹಾಗೂ ಅಣ್ಣನ ಮಗಳು ಮಹಿಕ್ ಜೊತೆ ಭಟ್ಕಳಕ್ಕೆ ಹೋದರು.
ಭಟ್ಕಳಕ್ಕೆ ತೆರಳಿದ ನಂತರ ನುಹಾರಿಕ್ ಮಸೀದಿಗೆ ಹೋಗಿ ಶುಕ್ರವಾರದ ವಿಶೇಷ ನಮಾಜ್ ಮಾಡಿ ಬರುವುದಾಗಿ ಅವರು ಹೇಳಿದರು. ಮಧ್ಯಾಹ್ನ 1.15ಕ್ಕೆ ನಮಾಜ್ ಮುಗಿಸಿ ಅಲ್ಲಿಂದ ಹೊರಬಿದ್ದರು. ಆದರೆ, ಭಟ್ಕಳದ ಗುಳ್ಮೆಯಲ್ಲಿರುವ ಮಾವ ಹಸನ್ ಶಬ್ಬಿರ್ ಮನೆಗೆ ಅವರು ಬರಲಿಲ್ಲ. ಕಾದು ಕಾದು ಸುಸ್ತಾದ ಅತ್ತಿಗೆ ಸಾಹಿನ್ ಹಾಗೂ ಮಹಿಕ್ ಮನೆಗೆ ಮರಳಿದರೂ ಜಾಕೀರ್ ಅವರ ಸುಳಿವು ಸಿಗಲಿಲ್ಲ.
ಈ ಎಲ್ಲಾ ಜಿನ್ನಲೆ ತಮ್ಮ ಜಾಕೀರ್ ಅವರು ಕಾಣೆಯಾದ ಬಗ್ಗೆ ಅವರ ಅಣ್ಣ ಗಫೂರ್ ಬೇಗ ಅವರು ಭಟ್ಕಳ ಶಹರ ಪೊಲೀಸ್ ಠಾಣೆಗೆ ಮಾಹಿತಿ ನೀಡಿದರು. ಪೊಲೀಸರು ಪ್ರಕರಣ ದಾಖಲಿಸಿದ್ದು, ಜಾಕೀರ್ ಅವರಿಗಾಗಿ ಹುಡುಕಾಟ ಶುರು ಮಾಡಿದರು.