`ಕುಮಟಾ ಪುರಸಭೆಯಲ್ಲಿ ನಡೆದ ಎಲ್ಲಾ ಅಕ್ರಮ-ಅವ್ಯವಹಾರಗಳ ಬಗ್ಗೆ ಸಮಗ್ರ ತನಿಖೆ ನಡೆಸಬೇಕು’ ಎಂದು ಜನಸಾಮಾನ್ಯರ ಸಮಾಜ ಕಲ್ಯಾಣ ಕೇಂದ್ರ ಆಗ್ರಹಿಸಿದೆ. ಈ ಬಗ್ಗೆ ಸಂಘಟನೆಯವರು ರಾಜ್ಯಪಾಲರಿಗೂ ದೂರು ರವಾನಿಸಿದ್ದಾರೆ.
`ಅಕ್ರಮ ಕಟ್ಟಡವನ್ನು ಸಕ್ರಮ ಮಾಡುವುದಕ್ಕಾಗಿ ಕೆಲ ರಾಜಕಾರಣಿಗಳು ಹಾಗೂ ಅಧಿಕಾರಿಗಳು ದುಡ್ಡಿನ ಹಿಂದೆ ಬಿದ್ದಿದ್ದಾರೆ. ಈ ಬಗ್ಗೆ ಕುಮಟಾ ಪುರಸಭೆ ಕಂದಾಯ ಅಧಿಕಾರಿ ವೆಂಕಟೇಶ್ ಹರಿಜನ ಅವರು ಬರೆದ ಪತ್ರ ಸಾಕ್ಷಿಯಾಗಿದ್ದು, ಈ ಆರೋಪವನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ನಡೆಸಬೇಕು’ ಎಂದು ಕೇಂದ್ರದ ಅಧ್ಯಕ್ಷ ಆಗ್ನೆಲ್ ರೋಡ್ರಿಗಸ್ ಒತ್ತಾಯಿಸಿದ್ದಾರೆ.
`ಕುಮಟಾ ಪುರಸಭೆಯಲ್ಲಿ ಮೊದಲಿನಿಂದಲೂ ವ್ಯಾಪಕ ಭ್ರಷ್ಟಾಚಾರ ನಡೆಯುತ್ತಿದೆ. ರಾಜಕೀಯ ಮುಖಂಡರೊಬ್ಬರು 4ಲಕ್ಷ ರೂಪಾಯಿ ಆಮೀಷ ಒಡ್ಡಿದ ಬಗ್ಗೆ ಪತ್ರದಲ್ಲಿ ಬರೆಯಲಾಗಿದೆ. ರಾಜಕೀಯ ಮುಖಂಡರಿoದ ನೌಕರರ ಮೇಲೆ ದಬ್ಬಾಳಿಕೆ ನಡೆಯುತ್ತಿದೆ. ಭ್ರಷ್ಟ ಅಧಿಕಾರಿಗಳು ಹಾಗೂ ದುಷ್ಟ ರಾಜಕಾರಣಿಗಳ ಒತ್ತಡದಿಂದ ಅಧೀನ ಅಧಿಕಾರಿ ಆತ್ಮಹತ್ಯೆಗೆ ಶರಣಾಗುವ ಸನ್ನಿವೇಶ ಎದುರಾಗಿದೆ’ ಎಂದವರು ವಿವರಿಸಿದರು.
ನಿವೃತ್ತ ಅಧಿಕಾರಿ ನಾಗೇಶ್ ಹುಲಸ್ವಾರ, ಪ್ರಮುಖರಾದ ಸುಧಾಕರ ನಾಯ್ಕ್, ಕೃಷ್ಣ ಪಟಗಾರ, ಶ್ರೀದರ ಹರಿಕಾಂತ್, ಪಾಂಡು ಪಟಗಾರ, ಆನಂದ ಪಟಗಾರ, ಗಜಾನನ ಪಟಗಾರ, ಅಮೀನ್ ಸಯ್ಯದ್, ವಲಿ ಅಹಮದ್, ಮಹಾಬಲಿ, ಕೃಷ್ಣ ಪಟಗಾರ, ಮಂಜುನಾಥ್ ಅಂಬಿಗ, ಕೃಷ್ಣ ಪಟಗಾರ, ಪಾಂಡು ನಾಯ್ಕ್, ಈಶ್ವರ ನಾಯ್ಕ್, ಆನಂದು ಪಟಗಾರ, ದತ್ತ ಪಟಗಾರ ಇದ್ದರು.