ಸುಪ್ರೀo ಕೋರ್ಟಿನ ವಕೀಲ ರಾಕೇಶ ಕಿಶೋರ್ ಅವರು ಸೋಮವಾರ ನ್ಯಾಯಾಧೀಶ ಬಿ ಆರ್ ಗವಾಯಿ ಅವರ ಮೇಲೆ ಚಪ್ಪಲಿ ಎಸೆದಿದ್ದು, ಈ ಕ್ರಮವನ್ನು ಕರ್ನಾಟಕ ಪ್ರಾಂತ ರೈತ ಸಂಘ ಖಂಡಿಸಿದೆ. `ಸನಾತನ ಧರ್ಮ ರಕ್ಷಣೆ ಬಗ್ಗೆ ಮಾತನಾಡುವ ವಕೀಲರೊಬ್ಬರು ನ್ಯಾಯಾಧೀಶರ ಮೇಲೆ ಚಪ್ಪಲಿ ಎಸೆದಿರುವುದು ಸರಿಯಲ್ಲ’ ಎಂದು ಕರ್ನಾಟಕ ಪ್ರಾಂತ ರೈತ ಸಂಘದ ಅಧ್ಯಕ್ಷ ಶಾಂತಾರಾಮ ನಾಯಕ ಅವರು ಹೇಳಿದ್ದಾರೆ.
`ಮುಖ್ಯ ನ್ಯಾಯಮೂರ್ತಿಗಳ ಮೇಲಿನ ದಾಳಿ ಆಘಾತಕಾರಿ, ಆಸಹನೆಯ ಪರಾಕಷ್ಠೆ ಪ್ರತೀಕ’ ಎಂದು ಅವರು ವಿವರಿಸಿದ್ದಾರೆ. `ದೇಶದ ಅತ್ಯುನ್ನತ ನ್ಯಾಯಾಂಗ ಸಂಸ್ಥೆಯಾಗಿರುವ ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಮೂರ್ತಿ ಸ್ಥಾನದಲ್ಲಿ ಪರಿಶಿಷ್ಟ ಜಾತಿಯ ವ್ಯಕ್ತಿ ಒಬ್ಬರು ಕುಳಿತಿರುವುದನ್ನು ಸನಾತನ ಧರ್ಮ ರಕ್ಷಕನ ಅಸಹನೆಗೆ ಮೂಲ ಕಾರಣ. ನರೇಂದ್ರ ಮೋದಿ ಅವರ ಅಧಿಕಾರದ ಅವಧಿಯಲ್ಲಿ ದೇಶದ ಎಲ್ಲಡೆ ಪ್ರತಿ ದಿನ ಇಂಥ ಅಸಹನೆಗಳು ವ್ಯಕ್ತವಾಗುತ್ತಿದ್ದು, ಅದು ಇದೀಗ ಕೋರ್ಟ ಆವರಣವನ್ನು ತಲುಪಿದೆ. ಹಿರಿಯ ವಕೀಲರಾದ ರಾಕೇಶ ಕಿಶೋರ್ ಈ ರೀತಿ ವರ್ತಿಸಿದ್ದು ಸರಿಯಲ್ಲ’ ಎಂದವರು ಬೇಸರವ್ಯಕ್ತಪಡಿಸಿದ್ದಾರೆ.
`ಬಿಜೆಪಿ ಮಖಂಡರು ಈಚೆಗೆ ಜಾತಿವಾದಿ, ಮನುವಾದಿ ಮತ್ತು ಸಮುದಾಯ ವಿರೋಧಿ ಹೇಳಿಕೆ ನೀಡುತ್ತಿದ್ದಾರೆ. ಹೀಗಾಗಿ ಇಂಥ ಕೃತ್ಯ ಮಾಡುವವರಿಗೆ ಧೈರ್ಯ ಹೆಚ್ಚಾಗಿದೆ’ ಎಂದು ರೈತ ಸಂಘದ ಕಾರ್ಯದರ್ಶಿ ಶ್ಯಾಮನಾಥ ನಾಯ್ಕ ಅವರು ಅಭಿಪ್ರಾಯಪಟ್ಟಿದ್ದಾರೆ. `ತಮ್ಮ ಮೇಲೆ ದಾಳಿನಡೆದರೂ ಸಂಯಮದಿAದ ವರ್ತಿಸಿರುವ ನ್ಯಾಯಮೂರ್ತಿಗಳ ನಡೆ ಅಭಿನಂದನಾರ್ಹ. ಪ್ರಜಾಪ್ರಭುತ್ವ ಹಾಗೂ ಸಂವಿಧಾನ ಪ್ರೇಮಿಗಳು ಈ ಮತೀಯ ಮನಸ್ಥಿತಿಯ ಹೀನ ಕೃತ್ಯವನ್ನು ಖಂಡಿಸಬೇಕು’ ಎಂದವರು ಹೇಳಿದ್ದಾರೆ.