ಕೆಡಿಸಿಸಿ ಬ್ಯಾಂಕಿನ ಆಡಳಿತ ಮಂಡಳಿ ನಿರ್ದೇಶಕ ಸ್ಥಾನಕ್ಕೆ ಚುನಾವಣಾ ಪ್ರಕ್ರಿಯೆ ಜಾರಿಯಲ್ಲಿದ್ದು, ಉತ್ತರ ಕನ್ನಡ ಜಿಲ್ಲೆಯ ಉಸ್ತುವಾರಿ ಸಚಿವರೂ ಆಗಿರುವ ಮಂಕಾಳು ವೈದ್ಯ ವಿರುದ್ಧ ಈ ಚುನಾವಣೆಯಲ್ಲಿ ಎದುರಾಳಿಗಳಿಲ್ಲ. ಹೀಗಾಗಿ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಮಂಕಾಳು ವೈದ್ಯ ಅವರ ಜೊತೆ ಹೊನ್ನಾವರ ಮತ ಕ್ಷೇತ್ರದ ವಿ ಕೆ ವಿಶಾಲ ಹಾಗೂ ಅಂಕೋಲ ಮತ ಕ್ಷೇತ್ರದಿಂದ ಭೀರಣ್ಣ ಬೊಮ್ಮಯ್ಯ ನಾಯಕ ಅವರು ಸಹ ಅವಿರೋಧವಾಗಿ ಕೆಡಿಸಿಸಿ ಬ್ಯಾಂಕ್ ಪ್ರವೇಶಿಸಿದ್ದಾರೆ.
ಕೆಡಿಸಿಸಿ ಬ್ಯಾಂಕಿನ ಆಡಳಿತ ಮಂಡಳಿ ಚುನಾವಣೆಗಾಗಿ ಸ್ವೀಕೃತಗೊಂಡಿದ್ದ 44 ನಾಮಪತ್ರಗಳಲ್ಲಿ 11 ಅಭ್ಯರ್ಥಿಗಳು ನಾಮಪತ್ರ ಹಿಂಪಡೆದಿದ್ದಾರೆ. ಸದ್ಯ 30 ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದಾರೆ. ಶಿರಸಿ ಮತ ಕ್ಷೇತ್ರದಿಂದ ಎಸ್ ಎನ್ ಹೆಗಡೆ, ಯಲ್ಲಾಪುರ ಮತ ಕ್ಷೇತ್ರದಿಂದ ರಾಮಕೃಷ್ಣ ನಾರಾಯಣ ಹೆಗಡೆ ಹಾಗೂ ಕಾರವಾರ ಮತ ಕ್ಷೇತ್ರದಿಂದ ಸುರೇಶ ರಾಮಾ ಪೆಡ್ನೇಕರ್, ಶಿರಸಿ ಮತ ಕ್ಷೇತ್ರದಿಂದ ಗಣಪತಿ ವೆಂಕಟರಮಣ ಜೋಶಿ, ಜೋಯಿಡಾ ಮತ ಕ್ಷೇತ್ರದಿಂದ ಶ್ರೀಕಾಂತ ಬಾವುರಾವ್ ದೇಸಾಯಿ, ಹೊನ್ನಾವರ ಮತಕ್ಷೇತ್ರದಿಂದ ನಾರಾಯಣ ಮಹಾಭಲೇಶ್ವರ ಹೆಗಡೆ, ತಾಲೂಕು ಒಕ್ಕಲುತನ ಹುಟ್ಟುವಳಿ ಮಾರಾಟ ಸಂಘದಿAದ ರಾಮಚಂದ್ರ ಮಹಾಭಲೇಶ್ವರ ಹೆಗಡೆ, ಅಂಕೋಲ ಮತ ಕ್ಷೇತ್ರದಿಂದ ಗೋಪಾಲಕೃಷ್ಣ ರಾಮಚಂದ್ರ ನಾಯ್ಕ, ಶಿರಸಿ ಮತ ಕ್ಷೇತ್ರದಿಂದ ಬಾಲಚಂದ್ರ ಶಾಂತಾರಾಮ್ ಶಾಸ್ರ‍್ತಿ, ಸಹಕಾರಿ ಸಂಘ ಕ್ಷೇತ್ರದಿಂದ ವಿನಾಯಕ ರಾ ಹೆಗಡೆ ಹಾಗು ಹೊನ್ನಾವರ ಮತ ಕ್ಷೇತ್ರದಿಂದ ಶಿವಾನಂದ ರಾಮಚಂದ್ರ ಹೆಗಡೆ ನಾಮಪತ್ರ ಹಿಂಪಡೆದವರಾಗಿದ್ದಾರೆ.
ಕೆಡಿಸಿಸಿ ಬ್ಯಾಂಕಿಗೆ ಭಟ್ಕಳ ಮತ ಕ್ಷೇತ್ರದಿಂದ ಅವಿರೋಧವಾಗಿ ಮಂಕಾಳು ವೈದ್ಯ ಆಯ್ಕೆಯಾಗಿದ್ದರಿಂದ ಅವರ ಅಭಿಮಾನಿಗಳು ಪಟಾಕಿ ಸಿಡಿಸಿದರು. ವಿ ಕೆ ವಿಶಾಲ ಇವರು ಚುನಾವಣಾಧಿಕಾರಿಗಳಿಂದ ಪ್ರಮಾಣ ಪತ್ರ ಪಡೆದು ಹೊರ ಬಂದು ಸಂಭ್ರಮ ಹಂಚಿಕೊAಡರು. ಅಂಕೋಲಾ ತಾಲೂಕಿನ ವಿವಿಧೋದ್ದೇಶಗಳ ಪ್ರಾಥಮಿಕ ಪತ್ತಿನ ಕೃಷಿ ಸಹಕಾರಿ ಸಂಘದ ಪ್ರತಿನಿಧಿ ಸ್ಥಾನಕ್ಕೆ ಅವಿರೋಧವಾಗಿ ಆಯ್ಕೆಯಾಗಿರುವ ಬೀರಣ್ಣ ಬೊಮ್ಮಯ್ಯ ನಾಯಕ ಅವರಿಗೆ ಶಾಸಕ ಶಿವರಾಮ ಹೆಬ್ಬಾರ್ ಸನ್ಮಾನಿಸಿದರು.