ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಸಹಕಾರಿ ಸಂಸ್ಥೆಗಳು ಕೆಲಸ ಮಾಡಬೇಕು. ಸಹಕಾರಿ ಸಂಘದಲ್ಲಿ ಆ ನಿಟ್ಟಿನಲ್ಲಿ ಕೆಲಸ ಮಾಡಲು ಅವರಿಗೆ ಡಿಸಿಸಿ ಬ್ಯಾಂಕಿನ ಸಹಕಾರಬೇಕು. ಆ ಸಹಕಾರ ಸಿಗಲು ಡಿಸಿಸಿ ಬ್ಯಾಂಕಿನಲ್ಲಿ ಉತ್ತಮ ಆಡಳಿತವಿರಬೇಕು. ಉತ್ತಮ ಆಡಳಿತಕ್ಕಾಗಿ ಅಲ್ಲಿ ಒಳ್ಳೆಯ ನಿರ್ದೇಶಕರಿರಬೇಕು. ಆ ಒಳ್ಳೆಯ ನಿರ್ದೇಶಕರು ವಿದ್ಯಾವಂತರಾಗಿರಬೇಕು. ಅಷ್ಟೇ ಪ್ರಮಾಣದಲ್ಲಿ ಪ್ರಬುದ್ಧರೂ ಆಗಿರಬೇಕು. ಈ ಎಲ್ಲಾ ಅರ್ಹತೆಹೊಂದಿರುವ ಸರಸ್ವತಿ ಎನ್ ರವಿ ಅವರು ಡಿಸಿಸಿ ಬ್ಯಾಂಕಿಗೆ ನಿರ್ದೇಶಕರಾಗಿ ಆಯ್ಕೆಯಾಗಬೇಕು.
ಸರಸ್ವತಿ ಎನ್ ರವಿ ಅವರು ಶಿರಸಿಯ ಸ್ಕೋಡ್‌ವೆಸ್ ಸಹಕಾರಿ ಸಂಸ್ಥೆಯ ಸಾರಥಿ. ಎಂಬಿಎ ಸ್ನಾತಕೋತರ ಪದವಿಧರೆಯಾಗಿರುವ ಅವರು ಹಣಕಾಸು ಮತ್ತು ಆಡಳಿತ ವಿಷಯದಲ್ಲಿ ಸಾಕಷ್ಟು ಅರಿವುಹೊಂದಿದ್ದಾರೆ. ಅವರ ಓದು, ನಿರಂತರ ಅಧ್ಯಯನ, ಪ್ರವಾಸದ ಅನುಭವದ ಆಧಾರದಲ್ಲಿ ಸರಸ್ವತಿ ಎನ್ ರವಿ ಅವರು ಸಹಕಾರಿ ಕ್ಷೇತ್ರದ ದಿಗ್ಗಜರಾಗಿ ಗುರುತಿಸಿಕೊಂಡಿದ್ದಾರೆ. ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿಯ ನಿರ್ದೇಶಕರಾಗಿದ್ದ ಅವರು ಸಹಕಾರಿ ವ್ಯವಸ್ಥೆಯ ಆಳ-ಅಗಲದ ಅರಿವು ಹೊಂದಿದ್ದಾರೆ. ಸಹಕಾರಿ ಸಂರಕ್ಷಣೆಯಲ್ಲಿನ 11 ವರ್ಷ ಅನುಭವ ಅವರನ್ನು ಕೆಡಿಸಿಸಿ ಬ್ಯಾಂಕ್ ನಿರ್ದೇಶಕ ಮಂಡಳಿಯ ಅಂಗಳದವರೆಗೆ ಕರೆತಂದಿದೆ. ಕೆಡಿಸಿಸಿ ಬ್ಯಾಂಕಿನ ನಿರ್ದೇಶಕ ಸ್ಥಾನ ದೊರೆತ ನಂತರ ಬ್ಯಾಂಕ್ ಉನ್ನತಿಗೆ ಹೊಸ ದಿಕ್ಕು ಒದಗಿಸುವ ವಿಶ್ವಾಸದಲ್ಲಿ ಅವರು ಕೆಲಸ ಮಾಡುತ್ತಿದ್ದಾರೆ.
`ಸಹಕಾರಿ ಸಂಸ್ಥೆಗಳು ರೈತರಿಗೆ ಅನುಕೂಲಕರವಾಗಿರಬೇಕು. ಸಮಯಕ್ಕೆ ಸರಿಯಾಗಿ ಸಾಲ ಸಿಗಬೇಕು. ರೈತರ ಕಷ್ಟಗಳ ಬಗ್ಗೆ ಧ್ವನಿಯಾಗಬೇಕು. ಹವಾಮಾನ ಅನಾನುಕೂಲ ಪರಿಸ್ಥಿತಿಯಲ್ಲಿ ಬೆಳೆಗಾರರು ಅನುಭವಿಸುವ ಸಮಸ್ಯೆ, ಸಕಾಲಕ್ಕೆ ಬಾರದ ಬೆಳೆ ವಿಮೆ, ತುರ್ತು ಸನ್ನಿವೇಶಗಳನ್ನು ಎದುರಿಸಬಹುದಾದ ನಾಯಕತ್ವ ಇದ್ದವರು ಕೆಡಿಸಿಸಿ ಬ್ಯಾಂಕಿನ ನಿರ್ದೇಶಕರಾಗಬೇಕು. ಆಗ ಮಾತ್ರ ಸಹಕಾರಿ ವ್ಯವಸ್ಥೆ ಸರಿದಾರಿಯಲ್ಲಿರುತ್ತದೆ’ ಎಂಬುದು ವಿಜಯಲಕ್ಷ್ಮೀ ಹೆಗಡೆ ಡೊಂಬೆಕಾಯಿ ಅವರ ಅನಿಸಿಕೆ.
ಸರಸ್ವತಿ ಎನ್ ರವಿ ಅವರು ಯಾವುದೇ ಬಣದಲ್ಲಿ ಗುರುತಿಸಿಕೊಂಡವರಲ್ಲ. ಸ್ವತಂತ್ರö?? ಅಭ್ಯರ್ಥಿಯಾಗಿ ಸ್ಪರ್ಧಿಸಿದ ಅವರು ಎಲ್ಲರ ಜೊತೆ ಉತ್ತಮ ಸಂಬoಧಹೊoದಿದ್ದು, ಹಿರಿಯರ ಪ್ರೇರಣೆ-ಹಾರೈಕೆಯೇ ಅವರಿಗೆ ಶ್ರೀರಕ್ಷೆಯಾಗಿದೆ. ಕಡಿಮೆ ಬಡ್ಡಿದರದಲ್ಲಿ ಹೆಚ್ಚು ಮೊತ್ತದ ಸಾಲ, ತುರ್ತು ಹಣಕಾಸು ಪರಿಸ್ಥಿತಿ ನಿಭಾಯಿಸುವ ಜಾಣ್ಮೆ, ಸಮಸ್ಯೆಗಳಿಗೆ ತ್ವರಿತವಾಗಿ ಸ್ಪಂದಿಸುವ ನಾಯಕತ್ವ ಗುಣಹೊಂದಿದ ಮಹಿಳಾ ಸಹಕಾರಿ ಸರಸ್ವತಿ ಎನ್ ರವಿ ಅವರು ಡಿಸಿಸಿ ಬ್ಯಾಂಕ್ ನಿರ್ದೇಶಕರಾಗಲಿ ಎಂಬುದು ಕುಮಟಾದ ಸುನಂದಾ ಪೈ ಅವರ ಅಂಬೋಣ.